From 062ec3f44d4b72b7c43ca6271c0d8b4ddaba476f Mon Sep 17 00:00:00 2001 From: Narendra VG Date: Mon, 17 Apr 2023 15:38:20 +0530 Subject: [PATCH] Upload New File --- ...\340\262\227\340\262\263\340\263\201_.txt" | 2028 +++++++++++++++++ 1 file changed, 2028 insertions(+) create mode 100644 "Data Collected/Kannada/MIT Manipal/Kannada-Scrapped-dta/\340\262\270\340\262\250\340\263\215\340\262\257\340\262\276\340\262\270\340\262\277_\340\262\256\340\262\244\340\263\215\340\262\244\340\263\201_\340\262\207\340\262\244\340\262\260_\340\262\225\340\262\245\340\263\206\340\262\227\340\262\263\340\263\201_.txt" diff --git "a/Data Collected/Kannada/MIT Manipal/Kannada-Scrapped-dta/\340\262\270\340\262\250\340\263\215\340\262\257\340\262\276\340\262\270\340\262\277_\340\262\256\340\262\244\340\263\215\340\262\244\340\263\201_\340\262\207\340\262\244\340\262\260_\340\262\225\340\262\245\340\263\206\340\262\227\340\262\263\340\263\201_.txt" "b/Data Collected/Kannada/MIT Manipal/Kannada-Scrapped-dta/\340\262\270\340\262\250\340\263\215\340\262\257\340\262\276\340\262\270\340\262\277_\340\262\256\340\262\244\340\263\215\340\262\244\340\263\201_\340\262\207\340\262\244\340\262\260_\340\262\225\340\262\245\340\263\206\340\262\227\340\262\263\340\263\201_.txt" new file mode 100644 index 0000000..d06499a --- /dev/null +++ "b/Data Collected/Kannada/MIT Manipal/Kannada-Scrapped-dta/\340\262\270\340\262\250\340\263\215\340\262\257\340\262\276\340\262\270\340\262\277_\340\262\256\340\262\244\340\263\215\340\262\244\340\263\201_\340\262\207\340\262\244\340\262\260_\340\262\225\340\262\245\340\263\206\340\262\227\340\262\263\340\263\201_.txt" @@ -0,0 +1,2028 @@ +ಸನ್ಯಾಸಿ ಮತ್ತು ಇತರ ಕಥೆಗಳು : ಈಶ್ವರನೂ ನಕ್ಕಿರಬೇಕು. +ಆ ದಿನ ಭಾನುವಾರ. +ನಾಗರಾಜನ ಆಫೀಸಿಗೆ ರಜ. +ಏನಾದರೂ ವೃತ್ತಪತ್ರಿಕೆಗಳನ್ನು ಓದಬೇಕೆಂದು ಪ್ರಾತಃಕಾಲ ಮುಂಚಿತವಾಗಿಯೆ ಎದ್ದು ‘ಸುಖನಿವಾಸ’ದಲ್ಲಿ ದೋಸೆ ಕಾಫಿ ತೆಗೆದುಕೊಂಡು ಸಯ್ಯಾಜಿರಾವ್ ರೋಡಿನಲ್ಲಿರುವ ಪಬ್ಲಿಕ್ ಲೈಬ್ರರಿಗೆ ಹೋಗುತ್ತಿದ್ದನು. +ಕೃಷ್ಣರಾಜೇಂದ್ರ ಆಸ್ಪತ್ರೆಯ ಮುಂಭಾಗಕ್ಕೆ ಬರಲು ಒಂದು ಕಾಗೆ ಬಲದಿಂದ ಎಡಕ್ಕೆ ಹಾದುಹೋಯಿತು. +ಅವನಿಗೆ ಶಕುನಗಳಲ್ಲಿ ಅಷ್ಟೇನೂ ಪರಿಚಯವಿರಲಿಲ್ಲ. +ಅಲ್ಲದೆ ಹೆಚ್ಚು ನಂಬುಗೆಯೂ ಇರಲಿಲ್ಲ. +ಕಾಗೆ ಯಾವ ಕಡೆಯಿಂದ ಯಾವ ಕಡೆಗೆ ಹೋದರೆ ಶುಭ, ಯಾವ ಕಡೆಯಿಂದ ಯಾವ ಕಡೆಗೆ ಹೋದರೆ ಅಶುಭ ಎಂಬುದು ಎಷ್ಟು ಪ್ರಯತ್ನಿಸಿದರೂ ಅವನ ಬುದ್ಧಿಗೆ ಹೊಳೆಯಲಿಲ್ಲ. +ಆದ್ದರಿಂದ ನಡೆದ ಸಂಗತಿ ಶುಭವೆಂದೇ ದೃಢ ಮಾಡಿಕೊಂಡು ಮುಂದುವರಿದನು. +ಅವನು ಹೋಗುತ್ತಿದ್ದುದು ಯಾವ ಮಹಾ ಕಾರ್ಯಾರ್ಥವಾಗಿಯೂ ಆಗಿರಲಿಲ್ಲ. +ಸುಮ್ಮನೆ ವೃತ್ತಪತ್ರಿಕೆಗಳನ್ನು ಓದುವುದಷ್ಟೇ. +ಆದರೆ ಶುಭಾಶುಭಗಳನ್ನು ನಿರ್ಣಯಿಸುವುದು ಮನಷ್ಯರಲ್ಲಿ ಸಾಮಾನ್ಯ ಗುಣವಷ್ಟೆ? +ಅದರಂತೆಯೆ ನಾಗರಾಜನೂ ಭಾವಿಸಿ ಲೈಬ್ರರಿಗೆ ಹೋದನು. +ಅಲ್ಲಿ ‘ಹಿಂದೂ’ ಪತ್ರಿಕೆಯನ್ನು ಓದುತ್ತಾ, ಸೈಮನ್ ಸಮಿತಿಯ ವಿಚಾರ, ದಕ್ಷಿಣ ಆಫ್ರಿಕಾದಲ್ಲಿ ಭಾರತೀಯರ ಸ್ಥಿತಿಗತಿಗಳು, ಶಾಸ್ತ್ರಿಗಳ ಉಪನ್ಯಾಸ-ಇವೇ ಮೊದಲಾದವುಗಳನ್ನು ಮುಗಿಸಿ, ಇನ್ನೇನು ಅದನ್ನು ಬಿಟ್ಟು ‘ಸ್ವರಾಜ್ಯ’ ಪತ್ರಿಕೆಗೆ ಹೋಗಬೇಕು ಅಷ್ಟರಲ್ಲಿ ಅವನ ದೃಷ್ಟಿ “ಒಬ್ಬ ವರನು ಬೇಕಾಗಿದೆ” ಎಂದು ದಪ್ಪ ಅಕ್ಷರದಲ್ಲಿ ಬರೆದಿದ್ದ ಒಂದು ಪ್ರಕಟಣೆಯ ಮೇಲೆ ಬಿತ್ತು. +ಅದನ್ನೂ ಓದಿದನು; ಮತ್ತೂ ಓದಿದನು; ಇನ್ನೂ ಓದಿದನು. +ಎಷ್ಟು ಓದಿದರೂ ಅವನಿಗೆ ತೃಪ್ತಿಯೇ ಆದಂತೆ ಕಾಣಲಿಲ್ಲ. +ಅದರಲ್ಲಿ ಸತ್ಕುಲ ಪ್ರಸೂತೆಯಾದ ಒಬ್ಬ ಹನ್ನೆರಡು ವರುಷದ ಬ್ರಾಹ್ಮಣ ಕನ್ಯೆಗೆ ತಿಂಗಳಿಗೆ ೫೦ ರೂಪಾಯಿದೆ ಕಡಿಮೆಯಿಲ್ಲದೆ ಸಂಪಾದನೆ ಮಾಡುವ ವರನು ಬೇಕಾಗಿದೆ ಎಂದು ಬರೆದಿತ್ತು. +ಕನ್ಯೆಯ ಊರು ಧಾರವಾಡ. +ಆಕೆಯ ದಾತಾರನಾದ ಶ್ಯಾಮರಾಯರ ವಿಳಾಸವೂ ಅದರಲ್ಲಿತ್ತು. +ನಾಗರಾಜನ ಎದೆ ಹಿಗ್ಗಿತು. +ಬೇಗಬೇಗನೆ ಶ್ಯಾಮರಾಯರ ವಿಳಾಸವನ್ನು ಡೈರಿಯಲ್ಲಿ ಬರೆದುಕೊಂಡನು. +ಬರೆದುಕೊಳ್ಳುವಾಗ ಯಾರಾದರೂ ನೋಡುವರೋ ಏನೋ ಎಂದು ಅತ್ತ ಇತ್ತ ನೋಡುತ್ತಿದ್ದನು. +ಅಷ್ಟು ಹೊತ್ತಿಗೆ ಲೈಬ್ರರಿಗೆ ಬಂದ ಅವನ ಸ್ನೇಹಿತ ಕೃಷ್ಣರಾಯನು “ಅದೇನು ಬರೆದುಕೊಳುತ್ತಿದ್ದಿಯೋ, ನಾಗರಾಜ?” ಎಂದು ಕೇಳುತ್ತಾ ಹತ್ತಿರ ಬಂದನು. +ನಾಗರಾಜನು ಬೇಗಬೇಗ ಕಾಗದವನ್ನು ಮಡಿಸಿ ಜೇಬಿಗೆ ಹಾಕಿಕೊಂಡು “ಏನೂ ಇಲ್ಲ ಕಣೋ. +ಆಮೇಲೆ ಹೇಳ್ತೀನಿ” ಎಂದನು. +ನಾಗರಾಜನು ಭಿಕ್ಷಾನ್ನದಿಂದ ಹೊಟ್ಟೆ ಹೊರೆದುಕೊಂಡು ವಿದ್ಯಾಭ್ಯಾಸ ಮಾಡಿ ಈಗ ರೆವಿನ್ಯೂ ಇಲಾಖೆಯಲ್ಲಿ ಅರವತ್ತು ರೂಪಾಯಿ ಸಂಬಳದ ಗುಮಾಸ್ತೆಯ ಕೆಲಸದಲ್ಲಿ ಇರುವ ಮೂವತ್ತು ವರುಷದ ತರುಣನು. +ಅವನಿಗೆ ಇನ್ನೂ ಮದುವೆಯಾಗಿರಲಿಲ್ಲ. +ನೋಡುವುದಕ್ಕೆ ಸ್ವಲ್ಪ ಕುರೂಪಿ. +ಅದರ ಜೊತೆಗೆ ಬಲಗಡೆಯ ಕಿವಿಯೇ ಇರಲಿಲ್ಲ. +ಆದ್ದರಿಂದ ಅವನಿಗೆ ಯಾರೂ ಹೆಣ್ಣು ಕೊಡಲಿಲ್ಲ. +ಪಾಪ, ಎಷ್ಟು ದಿನ ತಾನೇ ಏಕಾಂಗಿಯಾಗಿದ್ದಾನು? +ಹುಡುಗನಾಗಿರುವಾಗಂತೂ ಭಿಕ್ಷಾನ್ನ; +ಆಮೇಲೆ ಕೂಡ ಜೀವಮಾನವೆಲ್ಲಾ ಹೋಟಲಿನ ಹಾಳನ್ನ ತಿಂದು ಬದುಕುವುದಾದರೂ ಹೇಗೆ? +ಇದಕ್ಕಾಗಿ ಅವನು ಎಷ್ಟೋಸಾರಿ ಚಿಂತಿಸಿ ವ್ಯಥೆ ಪಟ್ಟಿದ್ದನು. +ಆದ್ದರಿಂದಲೆ ಪತ್ರಿಕೆಯಲ್ಲಿ ಪ್ರಕಟನೆಯನ್ನು ನೋಡಿದಾಗ ಅವನಿಗೆ ನೆಚ್ಚುಮೂಡಿ ಎದೆಯರಳಿದ್ದು! +ಆ ದಿನ ಅವನು ಇನ್ನಾಔ ಪತ್ರಿಕೆಯನ್ನೂ ಓದದೆ ಹಿಂತಿರುಗಿ ತನ್ನ ರೂಮಿಗೆ ಬಂದುಬಿಟ್ಟನು. +ಕೊಠಡಿಯ ಬಾಗಿಲನ್ನು ಹಾಕಿಕೊಂಡು ಮುಂದೆ ಮಾಡಬೇಕಾದ ಕಾರ್ಯಾಲೋಚನೆ ಮಾಡತೊಡಗಿದನು. +ಧಾರವಾಡ ದೂರದ ಊರು. +ಅಲ್ಲಿ ಯಾರಿಗೂ ತನ್ನ ವಿಚಾರ ಗೊತ್ತಿಲ್ಲ. +ತಾನು ಕಿವಿಹರುಕನೆಂಬ ಸಂಗತಿ ಹೆಣ್ಣಿನವರಿಗೆ ಗೊತ್ತಾದರೆ ಹೆಣ್ಣು ದೊರಕುವುದು ಸುಳ್ಳುಮಾತು. +ಹೇಗಾದರೂ ಮಾಡಿ ತನ್ನ ಅವಲಕ್ಷಣವನ್ನು ಮರೆಮಾಚಿಕೊಂಡು ಮದುವೆಗೆ ಸನ್ನಾಹ ಮಾಡಬೇಕು. +ಎಂತಿದ್ದರೂ ಹೆಣ್ಣಿನವರ ಅಪೇಕ್ಷೆಯಮತೆ ತನಗೆ ೫೦ ರೂಪಾಯಿಗಳಿಗೆ ಕಡಮೆಯಿಲ್ಲದಂತೆ ಸಂಪಾದನೆ ಇದೆ. +ಮೊದಲು ಯಾರಿಗೂ ತಿಳಿಯದಂತೆ ಕಾಗದದ ಮೂಲಕ ಹೆಣ್ಣಿನ ಸಾಕುತಂದೆಯಾದ ಶ್ಯಾಮರಾಯರೊಡನೆ ವ್ಯವಹಾರ ನಡೆಸಿ, ಅವರ ಒಪ್ಪಿಗೆಯನ್ನು ಪದೆದುಕೊಂಡು, ತರುವಾಯ ತನ್ನ ಸ್ನೇಹಿತರಿಗೂ ಬಂಧುಗಳಿಗೂ ವಿಷಯವನ್ನು ತಿಳಿಸಿ ವಿವಾಹ ಸಾಂಗವಾಗಿ ನೆರವೇರುವಂತೆ ಮಾಡಬೇಕು. +ಇಲ್ಲದೆ ಇದ್ದರೆ ನಾಚಿಕೆಗೇಡಾಗುವುದು. +ಏನೋ ತನ್ನ ಪ್ರಯತ್ನ ಮಾಡುವುದು; +ಮುಂದೆ ದೈವಚಿತ್ತ: +ನಾಗರಾಜನು ಶ್ಯಾಮರಾಯರಿಗೆ ಒಂದು ಕಾಗದ ಬರೆದ. +ಬರೆದ ಎನ್ನುವುದಕ್ಕಿಂತಲೂ ರಚಿಸಿದ ಎನ್ನುವುದೇ ಮೇಲು. +ಏಕೆಂದರೆ ಕಾಗದ ಬರೆಯುವುದಕ್ಕೆ ಸುಮಾರು ಮೂರು ಗಂಟೆ ಹೊತ್ತಾಯಿತು! +ಆ ಸಂಭ್ರಮದಲ್ಲಿ ಊಟವನ್ನೂ ಮರೆತುಬಿಟ್ಟನು. +ಕಾಗದದಲ್ಲಿ ತನ್ನ ಸಂಬಳ ವಿದ್ಯಾಭ್ಯಾಸ ಮೊದಲಾದ ತನಗೆ ನೆರವಾಗುವ ಸಮಾಚಾರಗಳನ್ನೆಲ್ಲಾ ಬರೆದನು. +ವಯಸ್ಸನ್ನು ಮಾತ್ರ ಮುವತ್ತರಿಂದ ಇಪ್ಪತ್ತೈದಕ್ಕೆ ಇಳಿಸಿಬಿಟ್ಟನು. +ಅಂತೂ ಕಾಗದಕ್ಕೆ ಮಾಡಬೇಕಾದ ಸಂಸ್ಕಾರಗಳನ್ನೆಲ್ಲ ಮಾಡಿ, ದಿಗ್ದೇವತೆಗಳಿಗೆ ನಮಸ್ಕಾರಮಾಡಿ, ಅದನ್ನು ಟಪ್ಪಾಲು ಪೆಟ್ಟಿಗೆಗೆ ಇಳಿಬಿಟ್ಟನು. +ಶ್ಯಾಮರಾಯರ ಉತ್ತರವನ್ನೆ ಹಾರೈಸುತ್ತಾ ಎರಡು ಮೂರು ದಿನಗಳನ್ನು ಕಳೆದನು. +ಒಂದು ಕಡೆ ಆಶಾಭಂಗವಾಗುವುದೇನೊ ಎಂದು ಭಯ. +ಇನ್ನೊಂದು ಕಡೆ ಸಕಲವೂ ಕೈಗೂಡುವುದೆಂಬ ಸವಿಗನಸಿನ ಸಂತೋಷ. +ಹೀಗೆ ದಿನದ ಮೇಲೆ ದಿನ ಕಳೆಯಿತು. +ಶ್ಯಾಮರಾಯರು ಧಾರವಾಡದ ಒಬ್ಬ ಬಡ  ಕುಟುಂಬಿ. +ಮದುವೆಗೆ ಬಂದ ಲಲಿತಮ್ಮನು ಅವರ ಮಗಳು ಅಲ್ಲ; + ಹತ್ತಿರದ ಸಂಬಂಧಿಯೂ ಅಲ್ಲ. +ಆಕೆ ಅವರ ಹೆಂಡತಿಯ ತಂಗಿಯ ಗಂಡನ ತಮ್ಮನ ಪತ್ನಿಯ ನಾದಿನಿ. +ಆಕೆಗೆ ಯಾರೂ ದಿಕ್ಕಿರಲಿಲ್ಲ. +ಆದ್ದರಿಂದ ಚಿಕ್ಕಂದಿನಿಂದಲೂ ಆಕೆಯನ್ನು ಮುದ್ದಿನಿಂದ ಸಾಕಿದರು. +ಹೆಸರು ಲಲಿತಮ್ಮನಾದರೂ ರೂಪ ಅಷ್ಟೇನೂ ಲಲಿತವಾಗಿರಲಿಲ್ಲ. +ಅಲ್ಲದೆ ಆಕೆಯ ಎಡಗೈ ಬಹಳ ಮೋಟಾಗಿ ಡೊಂಕಾಗಿ ದೇಹಕ್ಕೊಂದು ಕೆಲಸಕ್ಕೆ ಬಾರದ ಕೊಂಬೆಯಾಗಿತ್ತು. +ವರಾನ್ವೇಷಣಗಾಗಿ ಅವರು ಎಷ್ಟು ಬಳಲಿದರೂ ಫಲಕಾರಿಯಾಗಲಿಲ್ಲ. +ಆಕೆಯನ್ನು ಮದುವೆಯಾಗಲು ಯಾವ ಯುವಕನೂ ಒಪ್ಪಲಿಲ್ಲ. +ವರದಕ್ಷಿಣೆಯನ್ನು ಹೆಚ್ಚಿಸಿದ್ದರೆ ಯಾರಾದರೂ ಒಪ್ಪುತ್ತಿದ್ದರು, ಆದರೆ ಶ್ಯಾಮರಾಯರಿಗೆ ಅಷ್ಟು ಸಾಮರ್ಥ್ಯವಿರಲಿಲ್ಲ. +ನಾಗರಾಜನ ಕಾಗದ ನೋಡಿದ ಕೂಡಲೆ ಅವರಿಗೆ ಪರಮಾನಂದವಾಯಿತು. +ಹೇಗಾದರೂ ಮಾಡಿ ಹುಡುಗಿಯ ಅವಲಕ್ಷಣ ಹುಡುಗನಿಗೆ ತಿಳಿಯದಂತೆ ಲಗ್ನ ಮಾಡಿಬಿಟ್ಟರೆ ಪುಣ್ಯಕಟ್ಟಿಕೊಂಡ ಹಾಗಾಗುತ್ತದೆ, ಎಂದು ಯೋಚಿಸಿ, ನಾಗರಾಜನಿಗೆ ಕಾಗದ ಬರೆದರು. +ಆ ಕಾಗದದಲ್ಲಿ ಅವರ ಒಪ್ಪಿಗೆಯನ್ನು ಸೂಚಿಸಿ, ನಾಗರಾಜನ ಫೋಟೋವನ್ನು ಲಗ್ನ ನಿಶ್ಚಯ ಮಾಡುವುದಕ್ಕೆ ಮುಂಚೆಯೆ ಕಳುಹಿಸಬೇಕೆಂದೂ, ಹುಡುಗಿಯ ಕಡೆಯವರು ಅದನ್ನು ನೋಡಲಿಚ್ಚಿಸುವರೆಂದೂ ನಾಗರಾಜನಂಥ ಅಳಿಯಂದಿರನ್ನು ಪಡೆಯಲು ಯಾರಿಗೆ ತಾನೆ ಇಷ್ಟವಿರುವುದಿಲ್ಲವೆಂದೂ, ಇನ್ನೂ ಮೊದಲಾದ ನಾನಾ ಉಪಚಾರದ ಮಾತುಗಳನ್ನು ಪೋಣಿಸಿದರು. +ಕಾಗದ ನಾಗರಾಜನ ಕೈ ಸೇರಿತು. +ಮರಭೂಮಿಯಲ್ಲಿ ಬಾಯಾರಿ ನೀರನ್ನು ಹುಡುಕಿ ಹುಡುಕಿ ಬೆಂದು ಬೇಗುದಿಗೊಂಡು ತಿರುಗಾಡುವ ಸಂಚಾರಿಗೆ ದೊಡ್ಡ ತಿಳಿಗೊಳ ಮೈದೋರಿದಂತಾಯಿತು. +ಅವನ ಆನಂದಕ್ಕೆ ಪಾರವೆ ಇಲ್ಲದಂತಾಯಿತು. +ತನ್ನ ಸ್ನೇಹಿತರ ಮನೆಮನೆಗೂ ತಿರುಗಿ ಬೆಲೆಯುಳ್ಳ ಉಡುಪುಗಳನ್ನು ಶೇಖರಿಸಿ ನೀಟಾಗಿ ಪೋಷಾಕು ಹಾಕಿಕೊಂಡನು. +ಬಹಳ ಎಚ್ಚರಿಕೆಯಿಂದ ತನ್ನ ಹರಕು ಕಿವಿ ಕಾಣದಂತೆ ರುಮಾಲನ್ನು ಸುತ್ತಿಕೊಂಡು ಮೈಸೂರಿನಲ್ಲಿ ಪ್ರಸಿದ್ಧರಾದ ತಸ್ಪೀರುಗಾರರೊಬ್ಬರ ಕಾರ್ಯಾಲಯಕ್ಕೆ ಹೋಗಿ ಪೋಟೋ ತೆಗೆಸಿಕೊಂಡನು. +ಪೋಟೋವನ್ನು ಮರುದಿನವೇ ಕೊಡುವಂತೆ ಅವರಿಗೆ ಸಾರಿಸಾರಿ ಹೇಳಿ ಅಲ್ಲಿಂದ ಹೊರಟು ಸ್ವಲ್ಪ ದೂರ ಬಂದಮೇಲೆ ಪುನಃ ಹಿಂದಕ್ಕೆ ಹೋದನು. +ತಸ್ಪೀರುಗಾರನು “ಇನ್ನೇನು?ಮತ್ತೇಕೆ ಬಂದಿರಿ?” ಎಂದನು. +“ಏನು ಇಲ್ಲ. +ಒಂದು ಮಾತು ಹೇಳಬೇಕಾಗಿತ್ತು, ಮರೆತು ಬಿಟ್ಟೆ.” +“ಏನು?” +“ಇನ್ನೇನೂ ಇಲ್ಲ. +ಚಿತ್ರದಲ್ಲಿ ಮುಖದ ಮೇಲೆ ಇರುವ ಕಲೆಗಳೆಲ್ಲಾ ಬಿದ್ದರೆ ವಿಕಾರವಾಗುವುದಿಲ್ಲವೆ?” +“ಅದಕ್ಕೇನು ಮಾಡೋದು, ಸ್ವಾಮಿ? +ಮುಖ ಇದ್ದಹಾಗೆ ಚಿತ್ರ ಬೀಳುತ್ತೆ. +ಕ್ಯಾಮರಾದ ತಪ್ಪೇನು ಅದರಲ್ಲಿ?” +“ಹಾಗಲ್ಲ; ನೀವು ಸ್ವಲ್ಪ ‘ಟಚ್’ ಮಾಡಿಬಿಡಿ.” +“ಅದಕ್ಕೇನು ಬೇಕಾದಹಾಗೆ ಮಾಡುತ್ತೇವೆ!” +ಮರುದಿನವೇ ನಾಗರಾಜನು ತನ್ನ ಫೋಟೊ ತೆಗೆದುಕೊಂಡು ಬರಲು ‘ಸ್ಟೂಡಿಯೊ’ಕ್ಕೆ ಹೋದನು. +ತಸ್ಪೀರುಗಾರನು ತಸ್ಪೀರಿನ ಮುರು ಪ್ರತಿಗಳನ್ನು ನಾಗರಾಜನ ಕೈಲಿಟ್ಟನು. +ನಾಗರಾಜನು “ಸ್ವಾಮಿ, ಫೋಟೋ ಬದಲಾವಣೆಯಾಗಿದೆ ಅಂತ ಕಾಣುತ್ತದೆ” ಎಂದನು. +“ಇಲ್ಲ ಸ್ವಾಮಿ; ಬದಲಾವಣೆಯಾಗಿಲ್ಲ. +‘ಟಚ್’ ಮಾಡಿ ಎಂದು ನೀವೇ ಹೇಳಿದ್ದಿರಲ್ಲ. +ಅದಕ್ಕೆ ಸ್ವಲ್ಪ ಚೆನ್ನಾಗಿಯೆ ‘ಟಚ್’ ಮಾಡಿದ್ದೇನೆ!” + ಅಂತೂ ಫೋಟೋಗೆ ‘ಗೋರ್ಲ್ಡಟಚ್’ ಆಗಿಬಿಟ್ಟಿತ್ತು. +“ಸರಿ ಗೊತ್ತಾಯ್ತು” ಎಂದು ಹೇಳಿ ನಾಗರಾಜ ಹೊರಟನು. +ತನ್ನ ರೂಮಿಗೆ ಹೋದಮೇಲೆ ತಸ್ಪೀರನ್ನು ಮತ್ತೆ ಮತ್ತೆ ನೋಡುತ್ತಾ  ‘ನಾನು ಇಷ್ಟು ಸುಂದರ ಪುರುಷನೆ?’ ಎಂದು ಹಿಗ್ಗಿದನು. +ಕನ್ನಡಿಯಲ್ಲಿ ತನ್ನ ಮುಖವನ್ನು ನೋಡಿ, ಅದನ್ನು ಫೊಟೋದೊಡನೆ ಹೋಲಿಸಿದನು. +ಒಂದಕ್ಕೊಂದು ಸಂಬಂಧವೇ ಇರಲಿಲ್ಲ. +ಕನ್ನಡಿಯೇ ಮೋಸಗಾರನೆಂದು ಅದನ್ನು ಬಯ್ದು, ತಸ್ಪೀರನು ಪೆಟ್ಟಿಗೆಯನ್ನು ಭಕ್ತಿಯಿಂದ ಸ್ತುತಿಸಿ. +ತಸ್ಪೀರನ್ನು ಕಾಗದದೊಡನೆ ಶಾಮ್ಯರಾಯರಿಗೆ ಕಳುಹಿಸಿದನು. +ಪತ್ರದಲ್ಲಿ ಹುಡುಗಿಯ ಚಿತ್ರವನ್ನು ನಾನು ನೋಡಬೇಕು. +ಅವಳ ಫೋಟೋ ಕಳುಹಿಸಿಕೊಡಿ ಎಂದು ‘ಮ.ಮಾ.’ ಬರೆದನು. + (‘ಮ. ಮಾ. ’ ಎಂದರೆ ಮರೆತ ಮಾತು.) + ನಾಗರಾಜನಂತೆಯೆ ಶ್ಯಾಮರಾಯರೂ ಕನ್ಯೆಗೆ ನಾನಾ ವಿಧವಾದ ಅಲಂಕಾರಗಳನ್ನು ತೊಡಿಸಿ, ಪಿತಾಂಬರವನ್ನು ಉಡಿಸಿ, ಆಕೆಯ ಕೈಯ ಕೊರತೆ ಕಾಣದಂತೆ ಅದನ್ನು ಸೀರೆಯ ಸೆರಗಿನಿಂದ ಮುಚ್ಚಿಸಿ, ಫೋಟೋ ತೆಗೆಯಿಸಿ ‘ಟಚ್’ ಮಾಡಿಸಿಯೇ ಕಳುಹಿಸಿದರು. +ನಾಗರಾಜನು ಲಲಿತಮ್ಮನ ಚಿತ್ರಗಳನ್ನು ನೋಡಿ ಮೈಮರೆತುಬಿಟ್ಟನು. +ಅವನು ಕೆಲವು ಕನ್ನಡ ಗ್ರಂಥಗಳಲ್ಲಿ ಸ್ತ್ರೀವರ್ಣನೆಯನ್ನು ಓದಿದ್ದನು. +ಆದರೆ ಯಾವ ವರ್ಣನೆಯೂ ಅವನಿಗೆ ಸಮರ್ಪಕವಾಗಿ ಕಾಣಲಿಲ್ಲ. +ಅವನ ಕಣ್ಣಿಗೆ ಲಲಿತಮ್ಮನು ಸಾಕ್ಷಾತ್ ರತಿಯಂತೆ ರಂಜಿಸಿದಳು. +ಅವನು ಆ ಚಿತ್ರವನ್ನು ಮುದ್ದಿಸಿ, ರವಿಯೂ ಕಾಣದ ಎಷ್ಟೋ ವಿಧವಾದ ಸರಸ ರಸಿಕತೆಯನ್ನು ಪ್ರದರ್ಶಿಸಿ, ತನ್ನ ಭಾಗ್ಯಲಕ್ಷ್ಮಿಯನ್ನು ಕೊಂಡಾಡಿದನು. +ಲಲಿತಮ್ಮನೂ ನಾಗರಾಜನ ಚಿತ್ರವನ್ನು ಕಂಡು ಮೋಹದಿಂದ ಮೈಮರೆತಳು. +ಅವನ ಜರಿಯ ಪೇಟ, ಬೂಟ್ಸ್, ಷರಾಯಿ, ನೆಕ್‌ಟೈ ಮೊದಲಾದವುಗಳನ್ನು ನೋಡಿ, ಮನ್ಮಥನೆಂದೇ ಭಾವಿಸಿ, ತನ್ನನ್ನು ಕೈಹಿಡಿಯಲೊಪ್ಪಿದ ಮಹಾತ್ಮನಿಗೆ ಭಕ್ತಿಯಿಂದ ನಮಸ್ಕರಿಸಿದಳು. +ಮದುವೆ ಧಾರವಾಡದಲ್ಲಿಯೆ ಜರುಗಿತು. +ಗಂಡಿನ ಕಡೆಯವರಿಗೆ ಏನು ಸಮಾಧಾನ ಎಂದರೆ: ಪಾಪ! +ಹುಡುಗನಿಗೆ ಕಿವಿಹರುಕನೆಂದು ಯಾರೂ ಹೆಣ್ಣು ಕೊಡುತ್ತಿರಲಿಲ್ಲ; +ನಿಜಸ್ಥಿತಿಯನ್ನು ಹೊರತುಪಡಿಸಿ ಅವನ ಆಸೆಗೆ ಮಣ್ಣುಹಾಕುವುದು ದೊಡ್ಡ ಪಾಪ; +ಕಲ್ಯಾಣಕ್ಕಾಗಿ ಮೋಸಪಡಿಸಿದರೂ ಪಾಪವಿಲ್ಲ ಎಂದು. +ಹೆಣ್ಣಿನವರಿಗೂ ಹಾಗೆಯೆ. +ಅಂತೂ ಎಲ್ಲರೂ ಗೊತ್ತಿದ್ದರೂ ಗೊತ್ತಿಲ್ಲದವರಂತೆ ಸುಮ್ಮನಾದರು. +ನಾಗರಾಜನೂ ಲಲಿತಮ್ಮನೂ ಒಬ್ಬರನ್ನೊಬ್ಬರು ನೋಡಿದಾಗ ಇಬ್ಬರೂ ಸ್ವಲ್ಪ ಚಕಿತರಾದರು. +ಆದರೆ ಆಗಲೇ ಇಬ್ಬರ ಹೃದಯದಲ್ಲಿಯೂ ಪರಸ್ಪರ ಅನುರಾಗ ಅಂಕುರಿಸಿದ್ದರಿಂದ ಇಬ್ಬರಿಗೂ ಸೌಂದರ್ಯ ತೋರಿತೇ ಹೊರತು ಕುರೂಪ ಕಾಣಲೇ ಇಲ್ಲ. +ಕಣ್ಣಿಗೆ ಕೂಡ ಕನಿಕರವಿಲ್ಲವೆ? +ಅಂತೂ ತನ್ನ ಹೆಂಡತಿಗೆ ಕೈಯಿಲ್ಲ ಎಂಬ ವಿಚಾರವೂ, ತನ್ನ ಗಂಡನಿಗೆ ಕಿವಿಯಿಲ್ಲ ಎಂಬುದೂ ಇಬ್ಬರಿಗೂ ಗೊತ್ತಾಗಲಿಲ್ಲ. +ಪ್ರೇಮಾನುರಾಗವು ಬಲವಾಗಿ ಅಂಕುರಿಸುವುದಕ್ಕೆ ಮುಂಚೆ ಸೌಂದರ್ಯ, ಸೌಭಾಗ್ಯ, ಸುಖ ಇವುಗಳ ಮೇಲೆ ದೃಷ್ಟಿ. +ಅನುರಾಗ ಅಂಕುರಿಸಿತೆಂದರೆ ಕೋಡಗ ಕೂಡ ಕಣ್ಣಿನ ಮುದ್ದಾಗುವುದೇನೂ ಆಶ್ಚರ್ಯವಲ್ಲ. +ಮದುವೆ ಮುಗಿದುಹೋಯಿತು. +ನಾಗರಾಜನು ತಾನು ಧನ್ಯನಾದೆನೆಂದು ಹರ್ಷಚಿತ್ತನಾಗಿ ಮೈಸೂರಿಗೆ ಬಂದನು. +ಲಲಿತಮ್ಮನೂ ತನ್ನ ಪುಣ್ಯಕ್ಕೆ ಎಣೆಯಿಲ್ಲವೆಂದು ತಿಳಿದು ಹೆಮ್ಮೆಯಿಂದ ಹಿಗ್ಗಿಹೋದಳು. +ಗಂಡು ಮತ್ತು ಹೆಣ್ಣಿನ ಕಡೆಯವರಿಗೆ ಒಂದು ಅಸಾಧ್ಯ ಸಾಧನೆಯಾದಂತಾಗಿ ತಂತಮ್ಮ ಮನೆಗಳಿಗೆ ಹೋದರು. +ನಾಗರಾಜನು ಮೈಸೂರಿಗೆ ಬಂದವನು ಕೃಷ್ಣಮೂರ್ತಿಪುರದಲ್ಲಿ ಒಂದು ಸಣ್ಣ ಮನೆಯನ್ನು ಬಾಡಿಗೆಗ ತೆಗೆದುಕೊಂಡು, ಸಂಸಾರಕ್ಕೆ ಬೇಕಾದ ಪದಾರ್ಥಗಳನ್ನೆಲ್ಲಾ ಒದಗಿಸಿದನು. +ಅಂದಿನಿಂದ ಅವನಿಗೆ ಪ್ರಪಂಚದಲ್ಲಿ ಕಾಂತಿ ಹಚ್ಚಿದಂತಾಯಿತು. +ಸೂರ್ಯನೂ ಚಂದ್ರನೂ ಇಮ್ಮಡಿಯಾಗಿ ಪ್ರಕಾಶಿಸತೊಡಗಿದರು. +ಹಕ್ಕಿಗಳ ಗಾನ ಮೊದಲಿಗಿಂತಲೂ ಮಧುರವಾಗಿ ಪರಿಣಮಿಸಿತು. +ಪ್ರಪಂಚದ ಜೀವನವು ನಿಜವಾಗಿಯೂ ಅಷ್ಟೇನೂ ವ್ಯರ್ಥವಲ್ಲ ಎಂದು ಯೋಚಿಸಿದನು. +ತನ್ನ ಫೋಟೋವನ್ನೂ ಲಲಿತಮ್ಮನ ಪೋಟೋವನ್ನೂ ಜೊತೆಜೊತೆಯಾಗಿ ಅಂಟಿಸಿ ಕಟ್ಟುಹಾಕಿಸಿ, ಮಲಗುವ ಮನೆಯ ಗೋಡೆಯ ಮೇಲೆ ಅದನ್ನು ಸ್ಥಾಪಿಸಿದನು. +ಕೆಲವು ದಿನಗಳ ಮೇಲೆ ಲಲಿತಮ್ಮನನ್ನು ಮೈಸೂರಿಗೆ ಕರೆದುಕೊಂಡು ಬಂದನು. +ಆಗಲೂ ಕೂಡ ಲಲಿತಮ್ಮನ ಜೊತೆಯಲ್ಲಿ ಆಕೆಯ ಬಂಧುಗಳು ಇದ್ದುದರಿಂದ ಇಬ್ಬರಿಗೂ ಪರಸ್ಪರ ಅವಲಕ್ಷಣಗಳು ಗೊತ್ತಾಗಲಿಲ್ಲ. +ಆ ದಿನ ಹುಣ್ಣಿಮೆ. +ಅದರಲ್ಲಿಯೂ ವಸಂತಮಾಸ! +ಹೀಗಿರಲು ನವ ನೀರ ನೀರೆಯರ ಸಂತಸಕ್ಕೆ ಮೇರೆಯುಂಟೆ? +ನಾಗರಾಜನೂ ಲಲಿತಮ್ಮನೂ ಮಲಗುವ ಮನೆಯಲ್ಲಿ ಇಬ್ಬರೇ ಕುಳಿತಿದ್ದಾರೆ. +ಜನವಿಹೀನವಾದ ನೀರವ ರಾತ್ರಿ. +ಹಾಲ್ಗಡಲ ತೆರೆಯ ನೊರೆಯಂತೆ ಬಿಳಿದಾಗ ಕೋಮಲವಾದ ಶಾಂತವಾದ ಬೆಳ್ದಿಂಗಳು ದೊಡ್ಡದಾದ ಎರಡು ಕಿಟಕಿಗಳಿಂದ ಕೋಣೆಯೊಳಗೆ ಪ್ರವಾಹದಂತೆ ನುಗ್ಗಿ ಬಂದು ಲಲಿತಮ್ಮನನ್ನೂ ನಾಗರಾಜನನ್ನೂ ಗೋಡೆಯ ಮೇಲಿದ್ದ ಸತಿಪತಿಯರ ಚಿತ್ರಗಳನ್ನೂ ತನ್ನ ಜ್ಯೋತ್ಸ್ನೆಯಿಂದ ಮುಳುಗಿಸಿಬಿಟ್ಟಿತ್ತು. +ಇಬ್ಬರೂ ಮಾತಾಡದೆ ಬಹು ಹೊತ್ತು ಒಬ್ಬರನ್ನೊಬ್ಬರು ನೋಡುತ್ತಾ ಮೌನವಾಗಿದ್ದರು. +ಇಬ್ಬರ ಮನಸ್ಸಿನಲ್ಲಿಯೂ ಏನೇನೋ ಆಲೋಚನೆ. +ಲಲಿತಮ್ಮನಿಗೆ ನಾಗರಾಜನಂಥಾ ಪತಿ ಸಿಕ್ಕಿದನಲ್ಲಾ ಎಂಬ ಸಂತೋಷ ಒಂದು ಕಡೆ. +ಇನ್ನೊಂದು ಕಡೆ ನಿಜಸ್ಥಿತಿಯನ್ನು ತಿಳಿಸದೆ ಅವರನ್ನು ಮೋಸಪಡಿಸಿದರಲ್ಲಾ ಆ ಮೋಸದಲ್ಲಿ ತಾನೂ ಭಾಗಿಯಾಗಿರುವೆನಲ್ಲಾ ಎಂಬ ಎದೆಯ ಯಾತನೆ . +ನಾಗರಾಜನಿಗೆ ತನ್ನ ಮೊಸಕ್ಕೆ ಎಲ್ಲರೂ ಒಳಗಾದರಲ್ಲಾ ಎಂದು ಒಳಗೊಳಗೇ ನಗು. +ಲಲಿತಮ್ಮನಿಗೆ ಇನ್ನೊಂದು ಭೀತಿ. +ಏನೆಂದರೆ, ತನ್ನ ಅವಲಕ್ಷಣ ಗೊತ್ತಾಗದೆ ಮುಂದೆ ಏನಾಗಿಬಿಡುವುದೋ ತಾನು ಬಹಳ ದಿವಸಗಳಿಂದಲೂ ನಿರ್ಮಿಸಿಕೊಂಡಿದ್ದ ಸವಿಗನಸು ಎಲ್ಲಿ ಇಂದು ಬೆಳ್ದಿಂಗಳಲ್ಲಿ ಒಡೆದು ಪುಡಿಯಾಗುವುದೋ ಎಂದು. +ಕಡೆಗೆ ಆಕೆ ಏನಾದರೂ ಆಗಲಿ ನಿಜವನ್ನು ತಿಳಿಸಬಿಡಬೇಕೆಂದು ಮೆಲ್ಲಗೆ ಮಾತಾಡಿದಳು. +“ಅಂತೂ ನೀವು ನನ್ನಂಥ ನಿರ್ಭಾಗ್ಯೆಯನ್ನು ಕೈಹಿಡಿದರಲ್ಲಾ” ಎಂದಳು. +ಅವಳ ಕಣ್ಣಿನಿಂದ ಒಂದೆರಡು ಬಿಂದುಗಳು ಸೂಸಿದುವು. +ನಾಗರಾಜನು ಅದನ್ನು ನೋಡಿ ಸಹಿಸಲಾರದೆ “ಇದೇನು ಲಲಿತಾ, ಈ ಬೆಳ್ದಿಂಗಳಲ್ಲಿ ಅಳುವುದೇ? +ನೀನು ನಿರ್ಭಾಗ್ಯಯಲ್ಲ, ನನ್ನ ಭಾಗ್ಯದ ಲಕ್ಷ್ಮಿ!” ಎಂದನು. +ಲಲಿತಮ್ಮನು ನಾಗರಾಜನನ್ನೆ ನೋಡುತ್ತಾ ಮೆಲ್ಲಗೆ ತನ್ನ ಸೆರಗನ್ನು ಓರೆಮಾಡಿದಳು. +ನಾಗರಾಜನು ಆಕೆಯ ವಕ್ರವಾದ ಕೈಯನ್ನು ನೋಡಿದನು. +ಚಕಿತನಾಗದೆ ತಾನೂ ತನ್ನ ತಲೆಯುಡುಪನ್ನು ಮೆಲ್ಲಗೆ ತೆಗೆದಿಟ್ಟನು. +ಲಲಿತಮ್ಮ ಅವನ ಹರಿದುಹೋದ ಕಿವಿಯನ್ನು ನೋಡಿದಳು. +ಇಬ್ಬರ ಮನಸ್ಸೂ ಏಕೋ ಶಾಂತವಾಯಿತು. +ನಾಗರಾಜ ನಕ್ಕನು. +ಲಲಿತಮ್ಮನೂ ನಕ್ಕಳು. +ಅದನ್ನು ನೋಡಿ ಚಂದ್ರನೂ ನಕ್ಕನು. +ತಾರೆಗಳೂ ನಕ್ಕವು. +ಬಾನ್ದೇವಿ ಮಂದಹಸಿತೆಯಾದಳು. +ಗೋಡೆಯ ಮೇಲೆ ಬೆಳ್ದಿಂಗಳಲ್ಲಿ ವಿರಾಜಿಸುತ್ತಿದ್ದ ದಂಪತಿಗಳ ಚಿತ್ರಪಟಗಳೂ ಗಹಗಹಿಸಿ ನಕ್ಕುಬಿಟ್ಟವು? +ಈಶ್ವರ ಎನ್ನುವ ಪುರುಷೋತ್ತಮನು ಇರುವುದು ಹೌದಾದರೆ ಅವನೂ ನಕ್ಕಿರಬೇಕು! + ಶ್ರೀಮನ್ಮೂಕವಾಗಿತ್ತು! + ಬೈಗಾಗುತ್ತಿತ್ತು. + ಕಾರ್ಮುಗಿಲಿನ ಕರ್ವೆಳಗಿನೊಡನೆ ಸಂಗಮವಾಗುತ್ತಿದ್ದ ಕಗ್ಗತ್ತಲೆಯು ಮುಂಗಪ್ಪು ಮಲೆನಾಡಿನ ಬೆಟ್ಟಗಳ ಮೇಲೆ ಮೆಲ್ಲಮೆಲ್ಲನೆ ಕವಿಯುತ್ತಿತ್ತು. +ಎಡಬಿಡದೆ ಸುರಿವ ಮಳೆಯ ಮಂಜಿನಾವರಣದಲ್ಲಿ ಕಾಡು, ಬೆಟ್ಟ, ತೋಟ, ಗದ್ದೆ ಎಲ್ಲವೂ ಕನಸಿನಲ್ಲಿ ಕರುವಿಟ್ಟ ಚಿತ್ರಗಳ ತೆರದಿ ಮೌನವಾಗಿದ್ದುವು. +ಕಾಲವು ಯಾರೂ ಅರಿಯದ ಯಾವುದೋ ಒಂದು ಮಹಾ ರಹಸ್ಯದಂತಿತ್ತು. +ಸುತ್ತಲೂ ಪಸರಿಸಿದ ಎತ್ತರವಾದ ಗಿರಿವನಗಳ ನಡುವೆ ಇರುವ ಕೆರೆಯೂರ ಕಣಿವೆಯಲ್ಲಿ ಸಣ್ಣದಾದ ಹುಲ್ಲಿನ ಮನೆಯೊಂದು, ಬೇಟೆನಾಯಿಗಳ ಕೈಗೆ ಸಿಕ್ಕದೆ ತಪ್ಪಿಸಿಕೊಂಡು ಪೊದೆಯಲ್ಲಿ ಅಡಗಿದ ಮೊಲದಂತೆ, ಮರಗಳ ಗುಂಪಿನ ನಡುವೆ ತಲೆಮರೆಸಿಕೊಂಡಿತ್ತು. +ಹಳೆಪೈಕದ ರಂಗ ದಿನವೆಲ್ಲಾ ಗದ್ದೆಯ ಅಂಚು ಕೆತ್ತಿ, ಬಳಲಿ, ಹೆಗಲ ಮೇಲೆ ಹಾರೆ ಹಾಕಿಕೊಂಡು ತನ್ನ ಮನೆಗೆ ಬಂದ. +ಅವನ ಹೆಂಡತಿ, ನಾಗಿ, ಗಂಡ ಮನೆಗೆ ಬಂದಕೂಡಲೆ ಕೈಕಾಲು ತೊಳಕೊಳ್ಳುವುದಕ್ಕೆ ಬಿಸಿನೀರು ಸಿದ್ಧಪಡಿಸಿದಳು. +ರಂಗ ಕಂಬಳಿಕೊಪ್ಪೆ ತೆಗೆದು ಹರಡಿ, ಕೈಕಾಲು ತೊಳೆಗುಕೊಂಡು ಮುರುವಿನ ಒಲೆಯಲ್ಲಿ ಬೆಂಕಿ ಕಾಯಿಸಿಕೊಂಡ. +ಅವನ ಮಗ ಸೇಸ ತಾನು ಸುಟ್ಟು ಇಟ್ಟಿದ್ದ ಹಲಸಿನ ಬಿತ್ತಗಳನ್ನು ತಂದುಕೊಟ್ಟ. +ರಂಗ ಅವುಗಳನ್ನು ಒಂದೊಂದಾಗಿ ಸುಲಿದು ತಿಂದ. +ರಂಗನದು ಬಡ ಸಂಸಾರ. +ಅವನ ವಾಸಕ್ಕೆ ಸಣ್ಣ ವಾಸಕ್ಕೆ ಸಣ್ಣ ಹುಲ್ಲುಮನೆ; +ನಾಲ್ಕೈದು ಅಂಕಣದ್ದು. +ಅವನಿಗೆ ಏಳೆಂಟು ಕಾಲ್ನಡೆಗಳಿವೆ. +ಅವನ ಜಮೀನು ಸ್ವಂತದ್ದಲ್ಲ; + ಗಡಿಗುತ್ತಿಗೆ ಮಾಡಿಕೊಂಡು ಒಕ್ಕಲಸಾಗು ಮಾಡುತ್ತಾನೆ. +ಆದರೂ ಹೊಟ್ಟೆಗೆ ಬಟ್ಟೆಗೆ ತಕ್ಕಮಟ್ಟಿಗೆ ದುಡಿದುಕೊಂಡು ನೆಮ್ಮದಿಯಾಗಿದ್ದಾನೆ. +ಸಾಹುಕಾರರಲ್ಲಿ ಸ್ವಲ್ಪ ಸಾಲವಿದೆ. +ಅದೂ ಅವನು ಲಗ್ನವಾಗುವಾಗ ಹೆಣ್ಣಿಗೆ ಕೊಟ್ಟ ತೆರದ ಹಣವಂತೆ. +ಅವನಿಗೆ ನೆರೆಹೊರೆಯವರು ಯಾರೂ ಹತ್ತಿರ ಇಲ್ಲ. +ಸುಮಾರು ಮೂರು ಮೈಲಿಗಳ ಆಚೆ ಒಂದು ಬೆಟ್ಟ ದಾಟಿದರೆ ಅಲ್ಲಿ ಚೌಕಿಮನೆ ಎಂಬ ಮತ್ತೊಂದು ಮನೆಯಿದೆ. +ಮಳೆಗಾಲದಲ್ಲಂತೂ ಒಬ್ಬರಿಗೊಬ್ಬರಿಗೆ ಸಂಪರ್ಕವೇ ಇರುವುದಿಲ್ಲ. +ಏಕೆಂದರೆ ಗೊಂಡಾರಣ್ಯದ ನಡುವೆ ಕಾಲುದಾರಿಯಲ್ಲಿ ಜಿಗಣೆಗಳ ಕಾಟದಲ್ಲಿ ದುಷ್ಟಮೃಗಗಳ ತೊಂದರೆಯಲ್ಲಿ ಊರಿಂದೂರಿಗೆ ಹೋಗುವುದೇ ಪ್ರಯಾಸ. +ಆದರೆ ಅಲ್ಲಿಯವರೆಗೆ ಆ ವಿಧವಾದ ಏಕಾಂತವಾಸ ಅಭ್ಯಾಸವಾಗಿ ಹೋಗಿದೆ. +ಆದ್ದರಿಂದ ಅವರಿಗೆ ಅಷ್ಟು ಬೇಸರ ಕಾಣುವುದಿಲ್ಲ. +ಗಂಡಹೆಂಡರಿಗೆ ಏನೇನೋ ಮಾತುಕತೆಗಳಾದುವು. +ಸ್ವಲ್ಪ ಹೊತ್ತಿನ ಮೇಲೆ ಕತ್ತಲಾಯಿತು. +ಸೇಸ ಚಿಮನಿದೀಪ (ಸೀಮೆ ಎಣ್ಣೆಯ ಬುಡ್ಡಿ ದೀಪ) ಹೊತ್ತಿಸಿ ತಂದ. +ಚಿಮನಿ ದೀಪವೆಂದರೆ ಮಲೆನಾಡಿನಲ್ಲಿರುವ ಬಡವರಿಗೆ ಭಾಗ್ಯವಂತರ ಭೊಗವಸ್ತುವೆಂದೇ ಭಾವನೆ. +ಅವರು ಅದನ್ನು ಸುಮ್ಮನೆ ಉರಿಸುವುದೇ ಇಲ್ಲ. +ಊಟಮಾಡುವಾಗ ಮಾತ್ರ ಹೊತ್ತಿಸುತ್ತಾರೆ. +ಮಿಕ್ಕ ಸಮಯದಲ್ಲಿ ಬೆಂಕಿಯ ಬೆಳಕೇ ದೀಪ. +ನಾಗಿ ಹಸಿದು ಗಂಡನಿಗೆ ಬಳ್ಳೆ ಹಾಕಿದಳು. +ರಂಗ ಅಡಿಗೆ ಮನೆಯ ಒಲೆಯ ಬಳಿ ಕುಳಿತುಕೊಂಡ. +ಸೇಸನೂ ಅಪ್ಪನ ಬಳಿಯೇ ಕುಳಿತುಕೊಂಡ. +ಏಕೆಂದರೆ ಅಪ್ಪನ ಎಲೆಯಲ್ಲಿಯೇ ಊಟಮಾಡುವುದು ಅವನಿಗೆ ವಾಡಿಕೆ. +ರೊಟ್ಟಿ, ಮೀನುಪಲ್ಯ, ಎಲ್ಲಾ ಬಳ್ಳೆಗೆ ಬಂದುವು. +ಚೆನ್ನಾಗಿ ನುಣ್ಣಗೆ ಕೆತ್ತಿ ಲೋಟದಂತೆ ಮಾಡಿದ ತೆಂಗಿನ ಕರಟದಲ್ಲಿ ಒಳ್ಳೆ ಸೊಗಸಾದ ಬಗನಿಯ ಕಳ್ಳು ಬೇರೆ ಇತ್ತು. +ದುಡಿದು ಬಳಲಿ ಹಸಿದ ರಂಗನಿಗೆ ಅವುಗಳೆಲ್ಲಾ ಮೃಷ್ಟಾನ್ನಕಿಂತಲೂ ಹಿತವಾಗಿ, ಅದನ್ನು ಏಳಿಸುವಂತಿದ್ದುವು! +ರಂಗ ಇನ್ನೂ ಊಟ ಮಾಡಲು ಎಲೆಗೆ ಕೈಹಾಕಿರಲಿಲ್ಲ. +ಸೇಸ ಮಾತ್ರ ಎರಡು ತುತ್ತು ಇಳಿಸಿಬಿಟ್ಟಿದ್ದ. +ಅಷ್ಟರಲ್ಲಿ ಸುರಿವ ಮಳೆವ ಕರೆಕರೆಯ ಗಡಿಬಿಡಿಯನ್ನು ಭೇದಿಸಿಕೊಂಡು ಕೊಟ್ಟಿಗೆಯಿಂದ ಒಂದು ಎಮ್ಮೆಯ ಎಳಗರುವಿನ ಕೂಗು ಕೇಳಿಬಂತು. +ರೈತನಿಗೆ ಕಾಲ್ನಡೆಗಳ ಜೀವಾಳ. +ಅವನು ಅವುಗಳ ಸುಖವನ್ನು ತನ್ನ ಸುಖಕ್ಕಿಂತಲೂ ಹೆಚ್ಚಾಗಿ ಬಯಸುತ್ತಾನೆ. +ಅವುಗಳಿಗಾಗಿ ಅನ್ನ ನೀರನ್ನಾದರೂ ತೊರೆದು ಕೆಲಸ ಮಡುತ್ತಾನೆ. +ರಂಗ “ಅದ್ಯಾಕೆ ಎಮ್ಮೆಕರು ಕೂಗ್ತದಲ್ಲಾ?” ಎಂದು ತನ್ನ ಸೇಸನ ಕಡೆ ನೋಡಿ “ಎಲ್ಲಾ ಕೊಟ್ಟಿಗೆಗೆ ಬಂದುವೇನೋ? +ಹುಲಿಕಾಟ ಬೇರೆ ಹೆಚ್ಚಾಗಿದೆ. +ಚೌಕಿಮನೆಯಲ್ಲಿ ನಾಲ್ಕು ದನ ಹೋದುವಂತೆ” ಎಂದನು. +ಸೇಸ “ಸೊಟ್ಟಕೋಡೆಮ್ಮೆ ಬರಲೇ ಇಲ್ಲ. +ಅದಕ್ಕೇ ಎಳಗರು ಕೂಗ್ತದೆ” ಎಂದ. +ರಂಗ ಹೆಂಡತಿಯ ಕಡೆ ನೋಡಿದ. +ಅವಳು “ಹೌದು. +ನಾನು ಇಲ್ಲೆಲ್ಲಾ ಸುತ್ತಮುತ್ತ ಹುಡುಕಿದೆ; ಎಲ್ಲೂ ಕಾಣಲಿಲ್ಲ. +ಅದರ ಕರುವಿಗೆ ಬೇರೆ ಏನೋ ಕಾಯಿಲೆ. +ಮಲಗಿದಲ್ಲಿಂದ ಏಳೋದಿಲ್ಲ. +ಏನು ಕೊಟ್ಟರೂ ತಿನ್ನೋದಿಲ್ಲ.” ಎಂದಳು. +ರಂಗ ಕನಿಕರದಿಂದ ಕೂಡಿದ ಕೋಪದಿಂದ ಹೆಂಡತಿಯನ್ನು ಬಯ್ಯುತ್ತಾ ಮೇಲೆದ್ದು ಒಂದು ದೊಂದಿ (ಅಡಕೆ ಮರವನ್ನು ಸಿಗಿದು ಮಾಡಿದ ಪಂಜು) ಹೊತ್ತಿಸಿಕೊಂಡು ಕೊಟ್ಟಿಗೆಗೆ ಹೋದ. +ಸೇಸ ನಾಗಿಯರಿಗೆ ಏನೂ ತೋರದೆ ಸುಮ್ಮನೆ ಅವನ ಹಿಂದೆಯೆ ಹೋದರು. +ಒಲೆಯ ಮೂಲೆಯಲ್ಲಿದ್ದ ಬೆಕ್ಕು ಎಡೆಗೆ ಬಾಯಿ ಹಾಕಿತು. +ಮಲೆ ಸುರಿಯುತ್ತಲೇ ಇತ್ತು. +ಬೆಳಕನ್ನು ಕಂಡ ಕೂಡಲೆ ಹಿತ್ತಲ ಕಡೆ ಮಲಗಿದ್ದ ಎರಡು ಕಂತ್ರಿ ನಾಯಿಗಳು ಬಗುಳಿದವು. +ರಂಗ ಅವನ್ನು ಬೆದರಿಸಿ ಕೊಟ್ಟಿಗೆಗೆ ಹೋದ. +ಅಲ್ಲಿ ಕೆಲವು ದನಿಗಳು ಮಲಗಿ ಮೆಲುಕು ಹಾಕುತ್ತಿದ್ದುವು. +ಮತ್ತೆ ಕೆಲವು ನಿಂತುಕೊಂಡೇ ಮೆಲುಕುಹಾಕುತ್ತಿದ್ದುವು. +ತಾಯಿಯಗಲಿದ ಎಮ್ಮೆಕರು ಮಾತ್ರ ಒಂದು ಮೂಲೆಯಲ್ಲಿ ಕೊರಗಿ ಕೊರಗಿ ಆಗಾಗ್ಗೆ ಕೂಗುತ್ತಿತ್ತು. +ರಂಗನಿಗೆ ಆ ಭಯಂಕರವಾದ ನಿಬಿಡಾಂಧಕಾರದಲ್ಲಿ, ಆ ಬಲ್ಸರಿಯ ಹೋರಾಟದಲ್ಲಿ, ಆ ದೊಂದಿಯ ಮಸುಕಾದ ಬೆಳಕಿನಲ್ಲಿ ಆ ಎಳೆಗರುವಿನ ಮಾತೃವಿಯೋಗದುಃಖ ಎದೆಯ ಮೇಲೆ ಭಾರವಾದ ಕಲ್ಲಿನಂತೆ ಕೂತುಬಿಟ್ಟಿತು. +ಒಂದು ಸಾರಿ ಅವನಿಗೆ ಹುಲಿಯ ನೆನಪಾಗಿ ಬೆಚ್ಚಿಬಿದ್ದ. +ಎಲ್ಲಾದರೂ ಆ ಎಮ್ಮೆ ಹುಲಿಯ ಪಾಲಾಗಿದ್ದರೆ ಎಳೆಗರುವಿನ ಗತಿಯೇನು? +ಎಂಬ ಯೋಚನೆ ಬಲವಾಗಿ ಪೀಡಿಸತೊಡಗಿತು. +ಹಿಂತಿರುಗಿ ಹೆಂಡತಿಗೆ ಸ್ವಲ್ಪ ಹಾಲು ತರುವಂತೆ ಹೇಳಿದ. +ಆಕೆ ಹಾಗೆಯೆ ಮಾಡಿದಳು. +ನೊಳಗ (ವಾಟೆಯಿಂದ ಮಾಡಿದ ಬಳಲೆ)ದಲ್ಲಿ ಹಾಲು ಹಾಕಿ ಕರುವಿಗೆ ಕುಡಿಸಲು ಯತ್ನಿಸಿದ. +ಆದರೆ ಅವನ ಪ್ರಯತ್ನವೆಲ್ಲ ನೀರಿನಲ್ಲಿ ಹೋಮ ಮಾಡಿದ ಹಾಗಾಯಿತು. +ಕರು ಒಂದು ತೊಟ್ಟು ಹಾಲನ್ನೂ ಕುಡಿಯಲಿಲ್ಲ. +ಮುಂದೇನು ಮಾಡಬೇಕೆಂದು ಸ್ವಲ್ಪ ಯೋಚಿಸಿ, ಎಮ್ಮೆಯನ್ನು ಆಗಲೇ ಹುಡುಕಬೇಕೆಂದು ಮನಸ್ಸು ಮಾಡಿದ. +ಅವನ ಹೆಂಡತಿ ನಾಳೆ ಬೆಳಗಿನ ಜಾವ ಹುಡುಕಿದರಾಯ್ತು ಎಂದಳು. +ಊಟಮಾಡಿಯಾದರೂ ಹೋಗಿ ಎಂದಳು. +ರಂಗ ಅದಾವುದನ್ನೂ ಗಣನೆಗೆ ತಾರದೆ ಕಂಬಳಿ ಕೊಪ್ಪೆಹಾಕಿ, ದೊಂದಿ ಹಿಡಿದು, ತನ್ನೆರಡು ನಾಯಿಗಳನ್ನು ಕರೆದು, ಕೈಯಲ್ಲೊಂದು ಕತ್ತಿ ತೆಗೆದುಕೊಂಡು ಹೊರಟ. +ಅವನು ಹೊರಟುಹೋದ ಮೇಲೆ ನಾಗಿ ಆ ಹಳ್ಳಿಯ ಭೂತನಿಗೆ ಮೂರು ಕಾಸು ಸುಳಿದಿಟ್ಟು, ಎಮ್ಮೆ ಸಿಕ್ಕಿದರೆ ಒಂದು ಕೋಳಿ ಕೊಡುವುದಾಗಿ ಹರಕೆ ಹೊತ್ತುಕೊಂಡಳು. +ರಂಗ ಹೋದಮೇಲೆ ಅವಳು ಸೇಸನೂ ಊಟಮಾಡಿ ಬಹಳ ಹೊತ್ತು ಕಾದರು. +ಆದರೆ ರಂಗ ಬರಲೇ ಇಲ್ಲ. +ನಡುರಾತ್ರಿಯಾಯಿತು ಆದರೂ ಸುಳಿವಿಲ್ಲ; +ಮಲಗಿ ನಿದ್ರಿಸಿದರು. +ಮನೆಯಿಂದ ಹೊರಟ ರಂಗ ಬಹುದೂರ ಹೋಗಿ ಸುತ್ತಲೂ ಅರಸಿದನು. +ಎಮ್ಮೆಯ ಕುರುಹು ಕೂಡ ದೊರಕಲಿಲ್ಲ. +ಎಲ್ಲಿಯಾದರೂ ಚಿಗುರು ಪಯಿರಿನ ತುಡುವಿನಿಂದ ಗದ್ದೆಗೆ ಹೋಗಿದೆಯೇನೋ ಎಂದು ಯೋಚಿಸಿ ಅಲ್ಲಿಗೂ ಹೋಗಿ ನೋಡಿದ. +ಮಳೆ ಬಲವಾಗಿ ಸುರಿಯುತ್ತಿದ್ದುದರಿಂದ ದೊಂದಿ ಉರಿಯುವುದೇ ಕಷ್ಟವಾಗಿತ್ತು. +ಒಂದುಸಾರಿ ನಂದಿಹೋಗುವುದು, ಮತ್ತೊಂದು ಸಾರಿ ಚೆನ್ನಾಗಿ ಹಿಂದಕ್ಕೂ ಮುಂದಕ್ಕೂ ಬೀಸಲು ಮಸುಕಾಗಿ ಉರಿಯುವುದು, ಹೀಗಾಗುತ್ತಿತ್ತು. +ಗದ್ದೆಗೆ ಹೋದಾಗ, ದೂರ ಕತ್ತಲೆಯಲ್ಲಿ ನಾಯಿಗಳು ಬಗುಳಿದುವು. +ರಂಗ ಎಮ್ಮೆಯನ್ನೇ ಕಂಡು ಕೂಗುವುದೆಂದು ಭ್ರಮಿಸಿ ಓಡಿ ನೋಡಲು ಪಯಿರನ್ನು ಹಾಳು ಮಾಡಲು ಬಂದಿದ್ದ ಒಂಟಿಗ ಹಂದಿಯೊಂದು ಹೂಂಕರಿಸುತ್ತಾ ಪರಾರಿಯಾಯಿತು. +ನಿರಾಶೆಯಿಂದ ಹಿಂತಿರುಗಿ ಚೌಕಿಮನೆಯ ಕಡೆಗೆ ಹೋದ. +ಕಾಡು ಬೆಟ್ಟಗಳನ್ನು ದಾಟುವುದು ಬಹಳ ಕಷ್ಟವಾಯಿತು. +ಜಿಗಣೆಗಳು ಅವನ ಕಾಲು ತುಂಬಾ ಮುತ್ತಿ ನೆತ್ತರು ಹೀರಿದುವು. +ಕೈಲಾದಷ್ಟು ಜಿಗಣೆಗಳನ್ನು ಕಿತ್ತು ಹಾಕುತ್ತಾ ಚೌಕಿಮನೆಗೆ ಬಳಿಸಾರಿದನು. +ಅಲ್ಲಿ ಎಲ್ಲರೂ ಗಾಢನಿದ್ದೆಯಲ್ಲಿದ್ದರು. +ಇವನ ನಾಯಿಗಳಿಗೂ ಅವರ ನಾಯಿಗಳಿಗೂ ಬಹಳ ಕತ್ತಾಟವಾಗಿ ಆ ಗಲಭೆ ಸುಬ್ಬೇನಾಯ್ಕರನ್ನು ಎಬ್ಬಿಸಿತು. +ಅಷ್ಟು ಹೊತ್ತಿಗೆ ರಂಗನೂ ಅವರನ್ನು ಗಟ್ಟಿಯಾಗಿ ಕೂಗಿ ಕರೆದ. +ಅವರು ಎದ್ದು ಗಾಬರಿಯಿಂದ ಬಾಗಿಲು ತೆರೆದರು. +ತೆರೆಯುವುದಕ್ಕೆ ಮುನ್ನವೇ ಇವನ ಪರಿಚಯವನ್ನು ಇವನ ಕೇಳಿಕೊಂಡಿದ್ದರು. +ಏಕೆಂದರೆ ದೆವ್ವಗಳೂ ಹಾಗೆ ರಾತ್ರಿ ಬಂದು ಕರೆಯುವುದುಂಟಂತೆ. +ದೆವ್ವವಲ್ಲವೆಂದು ನಿರ್ಧರವಾದ ಮೇಲೆಯೇ ಅವರು ಬಾಗಿಲು ತೆರೆದದ್ದು! +“ಏನೋ!ಈ ನಡುರಾತ್ರಿಯಲ್ಲಿ?”ಯಾರೋ ಸತ್ತಿರಬೇಕೆಂದೇ ಅವರ ಭಾವನೆ! +ರಂಗ “ಏನೂ ಇಲ್ಲ. +ಎಮ್ಮೆ ಹುಡುಕಿಕೊಂಡು ಬಂದೆ. +ಇತ್ತಕಡೆ ಎಲ್ಲಿಯಾದರೂ ಬಂದಿತ್ತೆ? +ಮೊನ್ನೆತಾನೆ ಕರುಹಾಕಿದೆ. +ಅದಕ್ಕೂ ಏನೋ ಕಾಯಿಲೆ” ಎಂದ. +ಸುಬ್ಬೇನಾಯ್ಕರು “ಅಯ್ಯೋ!ನಿನ್ನ ಹುಚ್ಚು ಹಾಳಾಗ! +ನಿನಗೇನು ಗ್ರಹಚಾರ ಹಿಡಿದಿದೆಯೋ ಏನೋ! +ಈ ರಾತ್ರಿ ಎಮ್ಮೆ ಹುಡುಕಿಕೊಂಡು ದೆವ್ವ ತಿರುಗಿದ ಹಾಗೆ ತಿರುಗುವುದಕ್ಕೆ? +ಯಾವ ಗಳಿಗೆ ಹೇಗಿರುತ್ತೆ! +ರಣಪಿಶಾಚ ತಿರುಗುವ ಕಾಲ. +ನಿನಗೇನೊ ಶನಿ ಅಮರಿದೆ” ಎಂದರು. +ರಂಗನನ್ನು ಒಳಗೆ ಕರೆದು ಒಂದು ‘ಎಲೆಯಡಿಕೆ’ ಕೊಟ್ಟರು. +ರಂಗ ಎಲೆ ಹಾಕಿಕೊಳ್ಳುತ್ತಾ “ಎಮ್ಮೆ ಇಲ್ಲಿ ಬಂದಿತ್ತೆ?” ಎಂದ. +“ಎಂಥಾ ಎಮ್ಮೆ ಹೇಳು!” +“ಕೋಡು ಸೊಟ್ಟ; ಹಣೆ ಮೇಲೆ ದಾಸ.” +“ನೋಡು, ಮಧ್ಯಾಹ್ನದ ಹೊತ್ತು, ಒಂದೆಮ್ಮೆ ನಮ್ಮ ಅಗೋಡಿಗೆ ಬಂದಿತ್ತಂತೆ. +ನಮ್ಮ ರಾಮು ಅಟ್ಟಿದಾ ಅಂತಾ ಕಾಣ್ತದೆ” ಹೀಗೆಂದವರು “ರಾಮು!ರಾಮು!” ಎಂದು ಕೂಗಿದರು. +ರಾಮು ಮೈಮುರಿಯುತ್ತಾ “ಹುಂ” ಎಂದ. +“ಆ ಎಮ್ಮೆ ಅಟ್ಟಿದ್ರಲ್ಲಾ, ಎತ್ತ ಮೊಗ ಹೋಯ್ತೇ?” ಎಂದರು ಸುಬ್ಬೇನಾಯ್ಕರು. +ರಾಮು “ಕೀರಣಕೇರಿ ಕಡೆ ಹೋಯ್ತಪ್ಪಾ” ಎಂದವರು ಗೊರಕೆ ಹೊಡೆಯಲು ಆರಂಭಿಸಿದ. +ರಂಗ ಅಲ್ಲಿಂದ ಹೊರಟು ಕೀರಣಕೇರಿಯ ಕಡೆಗೆ ಹೋದ. +ಅವನು ದಾರಿಯುದ್ದಕ್ಕೂ ಎಮ್ಮೆ ಹುಡುಕುತ್ತಾ ಅಲ್ಲಿಗೆ ಹೋಗುವುದರೊಳಗಾಗಿ ಬೆಳಗಾಯಿತು. +ಕೀರಣಕೇರಿ ಶಂಕರ ಶಾಸ್ತ್ರಿ ಪ್ರಸಿದ್ಧ ಜೋಯಿಸರು. +ಸುತ್ತಮುತ್ತಲಿನ ಊರಿನಲ್ಲಿ ಯಾರಿಗೆ ರೋಗ ಬಂದರೂ ಮೊದಲು ಶಾಸ್ತ್ರಿ ಬಳಿಗೆ ಹೋಗಿ ‘ನಿಮಿತ್ತ’ ನೋಡಿಸುತ್ತಾರೆ. +ಅವರು ಕಾಯಿಲೆಗೆ ಕೆಂಪುಚೌಡಿಯ ಕಾಟ, ಮಾರಿಯ ತೊಂದರೆ, ಪಂಜ್ರೊಳ್ಳಿಯ ಕಾಟ, ಹಲಸಿನ ಮರದ ಭೂತದ ಹೊಡೆತ ಮೊದಲಾದ ಸೂಕ್ಷ್ಮ ಕಾರಣಗಳನ್ನು ಹುಡುಕಿ, ಅದಕ್ಕೆ ಪರಿಹಾರವಾಗಿ ಕೊಳಿಯನ್ನಾಗಲಿ ಕುರಿಯನ್ನಾಗಲಿ ಕೊಡಬೇಕೆಂದೂ, ಬ್ರಾಹ್ಮಣರಿಗೆ ದಾನಕೊಡಬೇಕೆಂದು ಹೇಳಿ ಕಳುಹಿಸುವರು. +ಶಂಕರಶಾಸ್ತ್ರಿಗಳ ನಿಮಿತ್ತದಿಂದ ರೋಗ ಗುಣವಾಗದ ರೋಗಿ ಮರಣೋನ್ಮುಖವಾದಾಗ ಆಸ್ಪತ್ರೆಗೆ ಓಡುತ್ತಾರೆ. +ಪ್ರಾಣ ಹೋದರೆ ಡಾಕ್ಟರ ಮೇಲೆ ಭಾರ, ದೂರು, ದನಕರುಗಳು ಮಾಯವಾದರೂ ಅವರ ನಿಮಿತ್ತವೇ ಪ್ರಮಾಣ. +ಶಂಕರಶಾಸ್ತ್ರಿಗಳು ಹಾಸಿಗೆಯಿಂದೆದ್ದು ಅಂಗಲದಲ್ಲಿದ್ದ ತುಳಸಿಕಟ್ಟೆಗೆ ಕೈಮುಗಿಯುವುದಕ್ಕಾಗಿ ಜಗಲಿಗೆ ಬಂದಾಗ ರಂಗ ಅಲ್ಲಿ ಕೂತಿದ್ದವನು ಎದ್ದು ನಮ್ರತೆಯಿಂದ ನಮಸ್ಕಾರ ಮಾಡಿದ. +“ಏನು ಬಂದಿಯೊ ಇಷ್ಟು ಮುಂಜಾನೆ?” ಎಂದರು ಶಾಸ್ತ್ರಿಗಳು. +“ನನ್ನೆಮ್ಮೆಯೊಂದು ಎಲ್ಲಿ ಹೋಯ್ತೊ ಏನೊ! +ಮೊನ್ನೆ ಕರು ಹಾಕಿದ್ದು. +ಎಳಗರು ಗೋಳಾಡ್ತಿದೆ. +ಅದಕ್ಕೇ ನಿಮಿತ್ತ ಕೇಳಿಸೋಣ ಅಂತಾ ಬಂದೆ” ಎಂದ ರಂಗ. +“ಏನೋ ಬರೀ ಕೈಲಿ ಬಂದುಬಿಟ್ಟೆಯಲ್ಲಾ? +ಹಣ್ಣು ತರಕಾರಿ ಏನೂ ಇಲ್ಲವೇನೋ?” +“ಮನೆಯಿಂದ ಬರಲಿಲ್ಲ, ಸ್ವಾಮಿ. +ನಿನ್ನೆ ರಾತ್ರಿಯೆಲ್ಲಾ ಎಮ್ಮೆ ಹುಡುಕಿದೆ. +ಊಟ ಕೂಡ ಮಾಡಿಲ್ಲ.” +“ನಿಮಗೇನು!ಈಗಿನ ಕಾಲದವರಿಗೆ ಭಯ ಭಕ್ತಿ ನಯ ನಡತೆ ಒಂದೂ ಇಲ್ಲ. +ಸರದಾರರಂತೆ ಕೈಬೀಸಿಕೊಂಡು ಬಂದುಬಿಡುತ್ತೀರಿ. +ಹಿಂದೆ ನಮ್ಮ ಮನೆಯ ಮೆಟ್ಟಲು ಹತ್ತಬೇಕಾದರೆ ಏನಾದರೂ ಕೈಗಾಣಿಕೆ ತಂದೇ ತರುತ್ತಿದರು.” +“ನಾಳೆ ಅಥವಾ ನಾಡಿದ್ದು ಏನಾದರೂ ತಂದು ಕೊಡ್ತೀನಿ. +ಏನಾದರೂ ಮಾಡಿ ಇವತ್ತು ನಿಮಿತ್ತ ನೋಡಿ.” +ಶಾಸ್ತ್ರಿಗಳು ಒಂದು ಅಗಲವಾದ ಮಣೆಯನ್ನು ತಂದು ಅದರ ಮೇಲೆ ಸ್ವಲ್ಪ ಅಕ್ಕಿಯ ಕಾಳು ಹಾಕಿಕೊಂಡು ಬಹಳ ಹೊತ್ತು ಭಾಗವಿಭಾಗ ಮಾಡಿದರು. +ಕಡೆಗೆ ಹಾರೈಕೆಯಿಂದ ಕುಳಿತಿದ್ದ ರಂಗನ ಕಡೆ ತಿರುಗಿದರು. +“ನಿಮ್ಮ ಕಡೆ ಹುಲಿಕಾಟ ಇದೆಯೇನೋ?” +ರಂಗನ ಎದೆ ಡಬಡಬ ಎಂದು ಬಡಿದುಕೊಳ್ಳಲಾರಂಭಿಸಿತು. +“ಹೌದು, ಮೊನ್ನೆ ಚೌಕಿಮನೆಯ ನಾಲ್ಕು ದನಗಳು ಹೋದುವು.” +“ಏನೋ ನೋಡಪ್ಪಾ: ಒಂದು ಕೆಂಪು ಚೌಡಿಯ ಕಾಟ. +ಅಂತು ಬದುಕಿರಬಹುದು” ಎಂದರು ಶಾಸ್ತ್ರಿಗಳು. +ಕೆಲವು ಸಾರಿ ನಿಮಿತ್ತಗಾರರು “ಜೀವ ಆಡುತ್ತಿದೆ” ಎಂದು ಹೇಳುವರು. +ಒಂದುವೇಳೆ ದನ ಸತ್ತು ಕೊಳೆತು ಹುಳು ಹಿಡಿದಿದ್ದರೂ, ಅದರ ಮೇಲೆ ಜೀವವಿದ್ದ ಕ್ರಿಮಿಗಳು ಇರುವುದರಿಂದ ನಿಮಿತ್ತದಲ್ಲಿ “ಜೀವ ಆಡುತ್ತಿದೆ” ಎಂದು ಗೊತ್ತಾಯಿತು ಎಂದು ಹೇಳಿ ತಪ್ಪಿಸಿಕೊಳ್ಳುತ್ತಾರೆ. +ಶಾಸ್ತ್ರಿಗಳ ಮಾತು ಕೇಳಿ ರಂಗನಿಗೆ ಸ್ವಲ್ಪ ಧೈರ್ಯ ಉಂಟಾಯಿತು. +ಅವರಿಗೆ ನಮಸ್ಕಾರ ಮಾಡಿ ಅಲ್ಲಿಂದ ಹೊರಟನು. +ಅವರ ಮನೆಯ ಗಡಿಯನ್ನು ದಾಟಿ ಇಪ್ಪತ್ತು ಮೂವತ್ತು ಮಾರು ಹೋಗುವಷ್ಟರಲ್ಲಿಯೆ ನಾಲೂರು ನಾಗಣ್ಣಗೌಡರ ಮನೆಯಲ್ಲಿ ಕೆಲಸಕ್ಕಿದ್ದ ಸುಬ್ಬ ಎದುರಾಗಿ ಬಹಳ ವೇಗದಿಂದ ಬರುತ್ತಿದ್ದ. +ರಂಗನನ್ನು ಕಂಡೊಡನೆ ನಿಂತು “ಎಲ್ಲಿಗೆ ಹೋಗಿದ್ದೆಯೋ ಇಷ್ಟು ಹೊತ್ತಾರೆ?” ಎಂದನು. +“ನನ್ನೆಮ್ಮೆಯೊಂದು ಎಲ್ಲಿ ಹೋಯ್ತೋ ಏನೋ. +ರಾತ್ರಿಯೆಲ್ಲಾ ಹುಡುಕಿದೆ, ಸಿಕ್ಕಲಿಲ್ಲ. +ಅದಕ್ಕೆ ನಿಮಿತ್ತ ನೋಡಿಸೋಕೆ ಬಂದಿದ್ದೆ. +ನಿಮ್ಮ ಕಡೆ ಎಲ್ಲಾದರೂ ಬಂದಿದೆಯೇನು ಮಾರಾಯ?” +“ಹೌದು ಒಂದೆಮ್ಮೆ ಬಂದದೆಯಪ್ಪಾ. +ಗೌಡರ ಕೊಟ್ಟಿಗೆಯಲ್ಲಿ ಕಟ್ಟಿದ್ದಾರೆ; ದೊಡ್ಡಿಗೆ ಹೊಡೆಯುತ್ತಾರಂತೆ. +ನಿನ್ನ ಗದ್ದೆಯನ್ನೆಲ್ಲಾ ಮೇದು ಬಹಳ ನಷ್ಟಮಾಡಿದೆ?” +“ಸೊಟ್ಟ ಕೋಡಿನ ಎಮ್ಮೆ? +ಹಣೆ ಮೇಲೆ ದಾಸ?” +“ನಾನೂ ಸರಿಯಾಗಿ ನೋಡಿಲ್ಲಪ್ಪಾ. +ನಮ್ಮ ಗಡಿಬಿಡಿಯೇ ನಮಗೆ. +ಗೌಡರ ಕಿರಿಮಗ ವಾಸಯ್ಯಗೆ ಪೂರಾ ಕಾಯಿಲೆ. +ಏನು ಉಳಿಯೋದೆ ನಂಬಿಕೆಯಿಲ್ಲ. +ಅದಕ್ಕೇ ನಿಮಿತ್ತ ನೋಡಿಸುವುದಕ್ಕೆ ಶಾಸ್ತ್ರಿಗಳಿಗೆ ಚೀಟಿ ಕೊಟ್ಟು ನನ್ನ ಕಳಿಸಿದ್ದಾರೆ.”ಸುಬ್ಬ ಬೇಗಬೇಗನೆ ಹೋದ. +ರಂಗ ತನ್ನ ಎಮ್ಮೆಯನ್ನು ಎಲ್ಲಿ ದೊಡ್ಡಿಗೆ ಹೊಡೆಯಿಸುತ್ತಾರೆಯೋ ಎಂದು ಚಿಂತಿಸುತ್ತಾ ನಾಲೂರಿಗೆ ಹೋದ. +ತನ್ನ ಎಮ್ಮೆಯನ್ನು ಕಟ್ಟಿಕೊಂಡಿದ್ದಾರೆ ಎಂದೂ, ಅದು ಸುಮ್ಮನೆ ಹಾಲು ಕೊಡದೆ ಒದೆಯುತ್ತಿದ್ದುದರಿಂದ ಹಿಂದಿನ ಎರಡು ಕಾಲುಗಳನ್ನೂ ಕಟ್ಟಿ ಹಾಲು ಕರೆದರೆಂದೂ ನಾಲೂರಿಗೆ ಹೋದ ರಂಗನಿಗೆ ಗೊತ್ತಾಯಿತು. +ನಾಗಣ್ಣಗೌಡರು ಸಾಹುಕಾರರು, ಪಟೇಲರು ಆದ್ದರಿಂದ ಬಡ ರಂಗನು ಒಂದು ಪಡಿ ಮಾತನ್ನೂ ಆಡಲಿಲ್ಲ. +ಆಡಲು ಧೈರ್ಯವೂ ಇರಲಿಲ್ಲ. +ನಾಲೂರು ನಾಗಣ್ಣಗೌಡರ ಮನೆಗೆ ವಾಸುವಿನ ಕಾಯಿಲೆ ನೋಡುವುದಕ್ಕೆ ಬಹಳ ಜನ ನಂಟರು ಬಂದಿದ್ದರು. +ಮನೆಯಲ್ಲಿ ತುಂಬಾ ಗಲಿಬಿಲಿ. +ಅವರ ಹಿರಿಯ ಮಗ ಓಬಯ್ಯಗೌಡರಿಗೆ ಬಹಳ ಓಡಾಟ. +ನಾಗಣ್ಣಗೌಡರು ಮಗನ ಹಾಸಿಗೆಯ ಬಳಿ ಕುಳಿತು ತಲೆಯಮೇಲೆ ಕೈಹೊತ್ತುಕೊಂಡು ಕೊರಗುತ್ತಿದ್ದರು. +ವಾಸು ಏಳೆಂಟು ವರ್ಷದ ಹುಡುಗ. +ಅವನಲ್ಲಿ ಎಲ್ಲರಿಗೂ ಪ್ರೀತಿ. +ಅವನಿಂದ ಮನೆತನ ಬೆಳೆಯುವುದೆಂದು ಎಲ್ಲರಿಗೂ ಹಾರೈಕೆ. +ಈಗ ಅದೆಲ್ಲಾ ಸಿಡಿದೊಡೆದು ಕನಸಿನಂತಾಗುವ ಕಾಲ. +ಎಲ್ಲರಿಗೂ ಉದ್ವೇಗ. +ಯಾರಲ್ಲಿಯೂ ಶಾಂತಿಯ ಸುಳಿವೇ ಇರಲಿಲ್ಲ. +ರಂಗ ಮನೆಗೆ ಹೋಗಿ ಕಿರುಜಗಲಿಯ ಮೇಲೆ ಕುಳಿತಿದ್ದ ಬಡಜನರ ಗುಂಪಿನಲ್ಲಿ ಕುಳಿತುಕೊಂಡ. +ಜಗಲಿಯ ಮೇಲೆ ವಾಸು ಮಲಗಿದ್ದ. +ಸುತ್ತಲೂ ನಂಟರ ಗುಂಪು. +ವಾಸು ಆಗಾಗ್ಗೆ ಬಾಯಲ್ಲಿ ಏನೇನೋ ಹೇಳುವುದು, ತನ್ನ ಸತ್ತ ತಾಯಿಯನ್ನು ಕರೆಯುವುದು, ಹೀಗೆ ಮಾಡುತ್ತಿದ್ದನು. +ಅಲ್ಲಿ ಕುಳಿತು ಇದನ್ನೆಲ್ಲಾ ನೋಡುತ್ತಿದ್ದ ರಂಗನಿಗೆ ಘೋರಾಂಧಕಾರದಲ್ಲಿ ತಾಯಿಯನ್ನು ನೆನೆದು ಕೂಗುತ್ತಿದ್ದ ಬಡ ಎಮ್ಮೆಯ ಕರುವಿನ ನೆನಪಾಯಿತು. +ಅವನ ಕಣ್ಣೆದುರಿನಲ್ಲಿ ಆ ಮೂಗು ಪ್ರಾಣಿಯ ಕನಿಕರಣೀಯವಾದ ಚಿತ್ರ ಮಿಂಚಿತು. +ಅದರ ಆರ್ತನಾದವೂ ಎಲ್ಲಿಯೋ ಬಹು ದೂರದಲ್ಲಿ ಕೇಳಿಸಿದ ಹಾಗಾಯಿತು. +ಅವನ ಮನಸ್ಸಿಗೆ ತನ್ನೆದುರಿನಲ್ಲಿದ್ದ ದುಃಖದ ಚಿತ್ರಕ್ಕೂ, ತಾನು ಹಿಂದಿನ ರಾತ್ರಿ ತನ್ನ ಕೊಟ್ಟಿಗೆಯಲ್ಲಿ ಕಂಡ ಚಿತ್ರಕ್ಕೂ ಯಾವ ವ್ಯತ್ಯಾಸವೂ ಇಲ್ಲವೆಂದು ತೋರಿತು. +ಅವನ ಕಣ್ಣಿನಲ್ಲಿ ನೀರು ತುಂಬಿತು. +ಅಲ್ಲಿದ್ದವರ ಶೋಕವೆಲ್ಲಾ ಒಂದು ಜೀವದ ಯಾತನೆಗಾಗಿತ್ತು. +ರಂಗನದು ಮಾತ್ರ ಎರಡು ಜೀವಗಳ ನೋವಾಗಿತ್ತು. +ಓಬಯ್ಯಗೌಡರು ಹೊರಗೆ ಹೋಗುವ ಸಮಯವನ್ನೇ ಕಾದು ರಂಗ ತನನ ಎಮ್ಮೆಯನ್ನು ಬಿಟ್ಟುಕೊಡಬೇಕೆಂದು ಅವರನ್ನು ಬೇಡಿಕೊಂಡ. +ಅವರು ಸಿಡುಕಿನಿಂದ ದೊಡ್ಡಿಗೆ ಹೊಡೆಯಿಸುತ್ತೇನೆಂದು ಗರ್ಜಿಸಿದರು. +ರಂಗ ಅದರ ಎಳೆಗರು ಸಾಯುತ್ತಿದೆಯೆಂದು ಕಣ್ಣಿನಲ್ಲಿ ನೀರುತಂದ. +ಓಬಯ್ಯಗೌಡರು ಸ್ವಲ್ಪವೂ ಎದೆಗರಗಲಿಲ್ಲ. +ಪೈರನ್ನು ಮೇಯಿಸಿದ ತಪ್ಪಿಗಾಗಿ ಶಿಕ್ಷೆಯನ್ನು ಅನುಭವಿಸಬೇಕೆಂದು ಹೇಳಿಬಿಟ್ಟರು. +ರಂಗ ಅಷ್ಟಕ್ಕೆ ಬಿಡಲಿಲ್ಲ. +ಇನ್ನು ಮುಂದೆ ಎಮ್ಮೆಯನ್ನು ಹಾಗೆ ಬೀಡುವುದಿಲ್ಲವೆಂದೂ, ತನ್ನಿಂದ ತಪ್ಪಾಯಿತೆಂದೂ ಬಹಳವಾಗಿ ಮೊರೆಯಿಟ್ಟ. +ಓಬಯ್ಯಗೌಡರಿಗೆ ತಾಳ್ಮೆತಪ್ಪಿ ಗಟ್ಟಿಯಾಗಿ ಬೈದು ಗದರಿಸತೊಡಗಿದರು. +ಇವರ ಗಲಾಟೆ ನಾಗಣ್ಣಗೌಡರಿಗೂ ಕೇಳಿಸಿತು. +ಅವರು ರಂಗನನ್ನು ಕರೆದು ಕೇಳಿದರು. +ರಂಗ ಎಲ್ಲವನ್ನೂ ವಿಶದವಾಗಿ ಹೇಳಿದ. +ನಾಗಣ್ಣಗೌಡರು ಸಾಯುತ್ತಿರುವ ಎಳಗರುವಿನ ಸಮಾಚಾರವನ್ನು ಕೇಳಿ ತನ್ನ ಮಗನ ಕಡೆ ನೋಡಿ ಕಂಬನಿಗರೆದರು. +ವಾಸು ಇದ್ದಕಿದ್ದ ಹಾಗೆ “ಪಾಪ, ಎಳೆಗರು! +ಎಮ್ಮೆ ಹೊಡಕೊಂಡು ಹೋಗೋ ನೀನು, ರಂಗಾ” ಎಂದ. +ರಂಗ “ಆಗಲಿ ನನ್ನೊಡನೆಯ! +ನನ್ನ ದೇವರು!” ಎಂದು ಕಣ್ಣೀರು ಸುರಿಸಿ, ಮನದಲ್ಲಿಯೆ “ದೇವರೇ ಇವರನ್ನು ಉಳಿಸು” ಎಂದುಕೊಂಡ. +ನಾಗಣ್ಣಗೌಡರು ಆಳೊಬ್ಬನಿಗೆ “ಇವನೆಮ್ಮೆ ತೋರಿಸೋ; ಹೊಡಕೊಂಡು ಹೋಗಲಿ” ಎಂದು ವಾತ್ಸಲ್ಯಪೂರಿತವಾದ ದನಿಯಿಂದ ನುಡಿದರು. +ರಂಗ ಹೊರಡುವಾಗಲೆ ಜೋಯಿಸರ ಮನೆಗೆ ಹೋಗಿದ್ದ ಸುಬ್ಬ ಬಂದು, ಅವರು ಮಂತ್ರಿಸಿಕೊಟ್ಟ ವಿಭೂತಿಯನ್ನು ನಾಗಣ್ಣಗೌಡರ ಕೈಲಿ ಕೊಟ್ಟ. +ಗೌಡರು ಅದನ್ನು ವಾಸುವಿನ ಹಣೆಗೆ ಹಚ್ಚಿ, ಬಾಯಿಗೂ ಸ್ವಲ್ಪ ಹಾಕಿದರು. +ರಂಗನು ಗೌಡರಿಗೆ ನಮಸ್ಕಾರ ಮಾಡಿ, ವಾಸೂಗೂ ಮನಸ್ಸಿನಲ್ಲಿಯೆ ಪುಜ್ಯಬುದ್ದಿಯಿಂದ ವಂದಿಸಿ, ತನ್ನೆಮ್ಮೆ ಹೊಡೆದುಕೊಂಡು ಹೊರಟ. +ಎಮ್ಮೆಯೂ ಕರುವನ್ನು ನೆನೆದುಕೊಂಡು ಕೆರೆಯೂರಿಗೆ ಬೇಗ ಬೇಗನೆ ಹೊರಟಿತು. +ರಂಗನು ಹಸಿವೆಯಿಂದ ಬಳಲಿ ಬೆಂಡಾಗಿದ್ದರೂ ಏನೋ ಒಂದು ಸಂತೋಷ ಅವನ ಎದೆಯಲ್ಲಿ ಸುಳಿದಾಡಿತು. +ರಂಗನು ಎಮ್ಮೆಯೊಡನೆ ತನ್ನೂರಿಗೆ ಹೋಗುವುದರೊಳಗಾಗಿ ನಡು ಹಗಲಾಗಿತ್ತು. +ಎಮ್ಮೆಯನ್ನು ಕೊಟ್ಟಿಗೆಗೆ ಅಟ್ಟಿಕೊಂಡು ಹೋಗಿ ಕಟ್ಟಿದನು. +ಕರು ಮೂಲೆಯಲ್ಲಿ ಬಿದ್ದಿತ್ತು. +ಉಸಿರಾಡುವುದರಿಂದ ಮಾತ್ರವೆ ಅದಕ್ಕೆ ಅದಕ್ಕೆ ಜೀವವಿದೆ ಎಂದು ತೋರಿತು. +ಕಣ್ಣು ಬಿಳುಪೇರಿದ್ದುವು. +ಕರುವನ್ನು ಮೆಲಗೆ ಎತ್ತಿಕೊಂಡು ಬಂದು ಮೊಲೆಯುಣ್ಣುವಂತೆ ಮಾಡಿದನು, ಕರುವಿಗೆ ನಿಲ್ಲುವ ತ್ರಾಣವಿರಲಿಲ್ಲ. +ಅದು ಏನನ್ನೂ ತಿಂದಿಲ್ಲವೆಂದು ನಾಗಿಯೂ ಹೇಳಿದಳು. +ಕರುವನ್ನು ಹಿಡಿದು ಕೊಂಡಿದ್ದಾಗ ಎರಡು ಮೂರಾವರ್ತಿ ಮೊಲೆಯನ್ನು ಚಪ್ಪರಿಸಿತು. +ರಂಗ ಕೈಬಿಟ್ಟ ಕೂಡಲೆ ದೊಪ್ಪನೆ ಕೆಳಗೆ ಬಿದ್ದುಬಿಟ್ಟಿತು. +ಎಮ್ಮೆ ಅದನ್ನು ಮೂಸಿ ನೆಕ್ಕಿತು. +ಅದೇ ಸಮಯದಲ್ಲಿ ನಾಲೂರು ನಾಗಣ್ಣಗೌಡರು ಮಗನ ಹಣೆಯ ಮೇಲೆ ಮರುಕದಿಂದ ಕೈಯ್ಯಾಡುತ್ತಿದ್ದವರು ಜ್ವರ ಇಳಿದುದನ್ನು ನೋಡಿ ಆಶ್ಚರ್ಯದಿಂದ ಹಿಗ್ಗಿ ಅಲ್ಲಿದ್ದವರಿಗೆ ಹೇಳಿದರು. +“ನೋಡಿದರೋ ನಮ್ಮ ಜೋಯಿಸರ ವಿಭೂತಿ ಮಹಿಮೆ? +ಹುಡುಗಗೆ ಜ್ವರ ಬಿಟ್ಟೇ ಹೋಗದೆ!” +ದೂರದ ಕೆರೆಯೂರಿನಲ್ಲಿ ತನ್ನ ಮುದ್ದು ಕರುವನ್ನು ಮೂಸಿ ನೆಕ್ಕುತ್ತಿದ್ದ ಮೂಗುಪ್ರಾಣಿಯ ಆನಂದದ ಆಶೀರ್ವಾದವಿಭೂತಿ ಅದನ್ನಾಲಿಸಿ ಶ್ರೀಮನ್ಮೂಕವಾಗಿತ್ತು! +ಆರಾಣೆ ಮೂರುಕಾಸು. +ಗೋಪಾಲಯ್ಯ, ಮಾಧವರಾಯರು, ನಾನು, ಮುವರೂ ಮನೆಯ ಚಾವಡಿಯಲ್ಲಿ ಕೂತುಕೊಂಡು ಮಾತಾಡುತ್ತಿದ್ದೆವು. +ಕ್ಯಾಲಿಫೋರ್ನಿಯದ ವಿದ್ಯಾಭ್ಯಾಸ ಪದ್ಧತಿ, ಅಮೇರಿಕದ ಐಶ್ವರ್ಯ, ಭಾರತೀಯರ ಗೋಳು, ಆಧುನಿಕರ ನಾಗರಿಕತೆ-ಮೊದಲಾದ ವಿಚಾರಗಳು  ಒಂದನ್ನೊಂದು ಹಿಂಬಾಲಿಸಿ ಕ್ರಮವಾಗಿ ಅಳಿಸಿಹೋದುವು, ನೀರಿನ ಮೇಲೆ ಬರೆದ ಚಿತ್ರಗಳಂತೆ. +ಇದ್ದಕಿದ್ದ ಹಾಗೆ “ಎಲ್ಲಿ, ಆ ಕತೆ ಹೇಳಿ!” ಎಂದರು ಗೋಪಾಲಯ್ಯ ಮಾಧವರಾಯರನ್ನು ಕುರಿತು. +“ಯಾವ ಕತೆ?” ಎಂದರು ಮಾಧವರಾಯರು. +“ಅದೇ, ಆ ‘ಆರಾಣೆ ಮೂರುಕಾಸಿನ ಕತೆ; + ಅಂದು ನೀವು ಹೇಳಿದ್ದಿರಲ್ಲ ನನಗೆ.” + ನನ್ನ ಕಡೆಗೆ ಕೈತೋರಿಸಿ “ಇವರು ನಿಮ್ಮ ಬಾಯಿಂದಲೆ ಕೇಳಬೇಕಂತಪ್ಪಾ ಅದನ್ನು; + ಹೇಳಿ ಎಷ್ಟಂದರೂ ಕತೆಗಾರರು. +ಒಂದು ಕತೆಗೆ ಸಾಮಗ್ರಿಯಾದರೂ ದೊರಕಬಹುದು” ಎಂದರು ಗೋಪಾಲಯ್ಯ. +ಮಾಧವರಾಯರು ಅಂದರೆ ನಮಗೆಲ್ಲಾ ತುಂಬ ಸಲಿಗೆ. +ನಮಗೆ ಮಾತ್ರವೇ ಅಲ್ಲ, ಅವರಲ್ಲಿ ಎಲ್ಲರಿಗೂ ಸಲಿಗೆ. +ಅವರು ವಿದ್ಯಾಭ್ಯಾಸದ ಇಲಾಖೆಯಲ್ಲಿ ಉನ್ನತ ಪದವಿಯಲ್ಲಿರುವವರು. +ಆದರೂ ಬಹಳ ಸರಳಸ್ವಭಾವ ಅವರದು. +ಎಂತಹ ಗಂಭೀರಮುಖದವನಾದರೂ ಅವರೊಡನೆ ಸೇರಿದರೆ ಅಳ್ಳೆಬಿರಿಯುವಯನಕ ನಗದೆ ಇರಲಾರ. +ಈ ‘ಆರಾಣೆ ಮೂರುಕಾಸಿ’ನ ಕತೆ ಅವರ ಜೀವಮಾನದಲ್ಲಿ ಜರುಗಿದ್ದು. +ಅತ್ಯಾಶ್ಚರ್ಯಕರವಾದ ಆ ಸಂಗತಿ ನಡೆದ ಮೇಲೆ ನಮ್ಮ ಅಧೀನದ್ದಲ್ಲದ ದೈವೇಚ್ಛೆಯಲ್ಲಿ ಅವರಿಗೆ ಬಹಳ ನಂಬಿಕೆ ಹುಟ್ಟಿತಂತೆ. +ಕತೆ ಹೇಳುತ್ತಾ  ಹೇಳುತ್ತಾ ಎಷ್ಟೋ ವಿಚಾರ ಹೇಳಿದರು. +ಎಷ್ಟೋ ನೀತಿಗಳನ್ನೂ ಮನಸ್ಸಿನ ಗುಟ್ಟುಗಳನ್ನೂ ಹೊರಗೆಡಹಿದರು. +ಆದರೆ ಅವುಗಳೆಲ್ಲ ಬಹು ಬೆಲೆಯುಳ್ಳವುಗಳಾದರೂ ಅಪ್ರಸ್ತುತವೆಂದು ನಡುವೆ ಸೇರಿಸದೆ ಬಿಡಬೇಕಾಯಿತು. +ಮಾಧವರಾಯರು ಹೇಳಿದರು:ಆ ಕತೆಗೆ ತಳಹದಿ ಸಿಪಾಯಿ ದಂಗೆಯ ಕಾಲ. +ನನಗೆ ಸರಿಯಾಗಿ ನೆನಪಿಲ್ಲ. +ಆದರೂ ಮುಖ್ಯ ವಿಷಯಗಳನ್ನೆಲ್ಲ ಬಿಡದೆ ಹೇಳುತ್ತೇನೆ. +ನಮ್ಮ ತಾತ ಹೈದರಾಬಾದು ಸಂಸ್ಥಾನದಲ್ಲಿ ಕರ್ನೂಲು ನವಾಬರ ಕೈಕೆಳಗೆ ಅಧಿಕಾರಿಗಳಾಗಿದ್ದರಂತೆ. +ನವಾಬರ ಜಹಗೀರಿಯಲ್ಲಿಯೆ ಬಹಳ ಜಮೀನು ಸಂಪಾದನೆ ಮಾಡಿದ್ದರಂತೆ. +ನಮ್ಮ ಮನೆತನಕ್ಕೂ ನವಾಬರ ಮನೆತನಕ್ಕೂ ತುಂಬಾ ಕೇವಲ ನವಾಬರಾದರೂ ಜಾತಿಯಲ್ಲಿ ಸಂಪೂರ್ಣವಾಗಿ ಮಹಮ್ಮದೀಯರಲ್ಲ. +ಹಿಂದೂ ಮಹಮ್ಮದೀಯ ಮತಗಳಿಗೆ ಮಧ್ಯಮತದವರು. +ಅವರಿಗೆ ‘ಸಿಂಗ’ ಎಂಬುದು ಮನೆತನದ ಬಿರುದು. +ನವಾಬರ ಮನೆತನಕ್ಕೆ ಕರ್ನೂಲಿನಲ್ಲಿ ಅನೇಕ ಶ್ರೀಮಂತರು ಸಾಲ ಕೊಟ್ಟಿದ್ದರು. +ನಮ್ಮ ತಂದೆಯೂ ಸಾಲ ಕೊಟ್ಟಿದ್ದರು. +ಎಷ್ಟು ಕೊಟ್ಟಿದ್ದರು ಏನು ಎಂಬುದಕ್ಕೆ ದಾಖಲೆಗಳೇನೂ ಇಲ್ಲ. +ಅಂತೂ ಸುಮಾರು ನಾಲ್ವತ್ತು ಸಾವಿರ ರೂಪಾಯಿಗಳಷ್ಟು ಎಂದು ವದಂತಿ. +ನನಗೆ ಹನ್ನೊಂದು ವರ್ಷವಾಗಿತ್ತು. +ಆಗ ನಮ್ಮ ತಂದೆ ತೀರಿಕೊಂಡರು. +ಅವರು ಹೋದಮೇಲೆ ನಮ್ಮ ಮನೆತನಕ್ಕೆ ತುಂಬಾ ಕಷ್ಟಕಾಲ ಒದಗಿತು. +ನಾನು ಹೇಗೆ ವಿದ್ಯಾಭ್ಯಾಸ ಮಾಡಿದೆ. +ಹೇಗೆ ಈ ಉನ್ನತ ಪದವಿಗೆ ಬಂದೆ, ಎಂಬ ವಿಚಾರಗಳು ಈಗ ಬೇಡ. +ಈ ಕತೆಗೆ ಅವು ಅವಶ್ಯಕವೂ ಇಲ್ಲ. +ಆಗಲೇ ಸರ್ಕಾರದ ಬದಲಾವಣೆಯ ಗಲಿಬಿಲಿ ಬಂದ್ದು. +ಈಸ್ಟ ಇಂಡಿಯಾ ಕಂಪೆನಿ ಬ್ರಿಟಿಷ್ ಸರ್ಕಾರಕ್ಕೆ ಸರ್ವ ಹಕ್ಕನ್ನೂ ವಹಿಸಿತು. +ಆಗ ಹೈದರಾಬಾದು ಸಂಸ್ಥಾನಕ್ಕೆ ಸೇರಿದ್ದ ಕೆಲವು ಪ್ರಾಂತಗಳು ಬ್ರಿಟಿಷ್ ಸರ್ಕಾರಕ್ಕೆ ಕೊಡಲ್ಪಟ್ಟುವು. +ದತ್ತಮಂಡಲವೆಂದು ಕರೆಯಲ್ಪಡುವ ಆ ಪ್ರಾಂತಗಳಲ್ಲಿ ಕರ್ನೂಲು ಒಂದು. +ಅಂದರೆ ನವಾಬರ ಜಹಗೀರಿಯೂ ಇಂಗ್ಲೀಷರ ಆಡಳಿತಕ್ಕೆ ಎಳೆಯಲ್ಪಟ್ಟಿತು. +ಹೀಗಿರಲು ಈ ಕತೆ ನಡೆಯಲು ಸಹಾಯಮಾಡಿದ ಒಂದು ಸಂಗತಿ ಜರುಗಿತು. +ಗೌರ್ನಮೆಂಟಿನವರು ಕರ್ನೂಲಿನಲ್ಲಿ ಯಾವುದೋ ಒಂದೂ ಆಫೀಸಿಗಾಗಿ ಸ್ವಲ್ಪ ಜಾಗವನ್ನು ನವಾಬನಿಂದ ಕೇಳಿದರು. +ಆ ಸ್ಥಳವನ್ನು ಪಡೆಯಬೇಕೆಂದು ಕರ್ನೂಲಿನಲ್ಲಿ ಅನೇಕರಿಗೆ ಕುತೂಹಲವಿತ್ತು. +ಸರ್ಕಾರದ ಪರವಾಗಿ ಕೆಲಸ ಮಾಡುತ್ತಿದ್ದ ಒಬ್ಬ ವಕೀಲನೂ ನವಾಬನಿಂದ ಹಿಂದೆಯೇ ಆ ಸ್ಥಳವನ್ನು ಬೆಲೆಗೆ ಕೇಳಿದ್ದನು. +ನವಾಬನು ಬುದ್ಧಿಯಲ್ಲಿ ಸ್ವಲ್ಪ ಚುರುಕಿಲ್ಲದವನೆಂದು ತಿಳಿದ ಆ ವಕೀಲನು ಆ ಭೂಮಿಯನ್ನು ಎರಡು ಸಾವಿರ ರೂಪಾಯಿಗಳಿಗೆ ಎಗರಿಸಬೇಕೆಂದು ಕಾದಿದ್ದನು. +ಆದರೆ ಸರಕಾರದವರು ಆ ಸ್ಥಳವನ್ನು ಹದಿನೈದು ಸಾವಿರ ರೂಪಾಯಿಗಳಿಗೆ ಕೇಳಿದರು. +ನವಾಬನು ಕೊಡಲು ಒಪ್ಪಿದನು. +ವಕೀಲನಿಗೆ ಅವನ ಮೇಲೆ ದ್ವೇಷ ಹುಟ್ಟಿತು. +ನವಾಬನ ಭೂಮಿಯನ್ನು ಸರ್ಕಾರದವರು ತೆಗೆದುಕೊಳ್ಳಬೇಕಾದರೆ ಕರಾರು ಆಗಬೇಕಷ್ಟೆ. +ಅದಕ್ಕಾಗಿ ನವಾಬನ ಮನೆತನದ ದಾಖಲೆ ಪತ್ರಗಳನ್ನು ಸರ್ಕಾರದವರು ತೆಗೆದುಕೊಂಡು, ಕಾನೂನಿಗೆ ಸರಿಯಾದ ಕರಾರನ್ನು ತಯಾರುಮಾಡಲೋಸುಗ, ನವಾಬನ ದ್ವೇಷಿಯಾದ ವಕೀಲನ ಕೈಲಿ ಕೊಟ್ಟರು. +ಆ ವಕೀಲನು ದಾಖಲೆಗಳನ್ನು ನೋಡುತ್ತಾ ಇರುವಾಗ ಆಗಿನ ನವಾಬನು ಹಿಂದಿನ ನವಾಬನ ಧರ್ಮಪತ್ನಿಯ ಮಗನಲ್ಲ ಎಂಬುದನ್ನು ತಿಳಿದನು. +ತನಗೆ ಮುಯ್ಯಿ ತೀರಿಸಿಕೊಳ್ಳಲು ತಕ್ಕ ಸಮಯ ದೊರಕಿತೆಂದು ತಿಳಿದು, ಅವನು ಆಗಿನ ನವಾಬನು ಜಹಗೀರಿಗೆ ಬಾಧ್ಯಸ್ಥನಲ್ಲವೆಂದು ಸರ್ಕಾರಕ್ಕೆ ತಿಳಿಸಿದನು. +ಕೂಡಲೆ ಸರ್ಕಾರವು ಸಮಸ್ತ ಜಹಗಿರಿಯನ್ನೂ ಅದರ ಐಶ್ವರ್ಯದೊಡನೆ ನವಾಬನಿಂದ ಕಿತ್ತುಕೊಂಡಿತು. +ಅಲ್ಲದೆ ಅದಕ್ಕೆ ಬಾಧ್ಯಸ್ಥರಿದ್ದರೆ ಅದನ್ನು ಕೋರ್ಟು ಮುಖಾಂತರ ಅವರು ಸಾಧಿಸಿ ಜಹಗಿರಿಯನ್ನು ಪಡೆಯಬೇಕೆಂದು ತೀರ್ಮಾನಮಾಡಿ ನೋಟೀಸು ಕೊಟ್ಟಿತು. +ಲಕ್ಷಾಧಿಕಾರಿಯಾದ ನವಾಬನು ಕಣ್ಣು ಮುಚ್ಚಿ ಬಿಡುವುದರಲ್ಲಿಯೆ ಭಿಕ್ಷಾಧಿಕಾರಿಯಾದನು. +ಅತನು ಮೋಟಾರುಗಾಡಿಯಲ್ಲಿಯೂ ಅಂದರೆ ಸಾರೋಟುಗಳಲ್ಲಿಯೂ ಕುಳಿತುಕೊಂಡು ಹಾರಾಡುತ್ತಿದ್ದ ವೈಭವವನ್ನು ನಾನೇ ಕಣ್ಣಾರೆ ಕಂಡಿದ್ದೆ. +ಆತನು ಐಶ್ವರ್ಯದಲ್ಲಿ ಮುಳುಗಿ ತೇಲುವುದನ್ನು ನೋಡಿ ವಿಸ್ಮಯಪಡುತ್ತಿದೆ. +ಅಂಥ ಸಿಂಗನಿಗೆ ಈಗ ತನ್ನ ಘೋಷಾ ಹೆಂಡತಿಯೊಡನೆಯೂ ಮಕ್ಕಳೊಡನೆಯೂ ಬೀದಿಗಳಲ್ಲಿ ಬೇಡುವ ಕಾಲ ಬಂತು. +ಅವನ ಗೆಳೆಯರೆಲ್ಲರೂ ಸಂಪತ್ತಿನೊಂದಿಗೇ ತೊಲಗಿದರು. +ತಾನೇ ಹಿಂದೆ ಆಳುತ್ತಿದ್ದ ಕರ್ನೂಲಿನಲ್ಲಿ ಅವನಿಗೆ ಗಂಜಿ ದೊರಕುವುದು ಕೂಡ ಕಠಿನವಾಯಿತು. +ಮಲಗುವುದಕ್ಕೆ ತಾವಿಲ್ಲ; +ಹೊದೆಯುವುದಕ್ಕೆ ಸರಿಯಾದ ಬಟ್ಟೆಯಿಲ್ಲ. +ಬಂದಿತನಿಗೆ ಈ ದುರವಸ್ಥೆ. +ಜಹಗಿರಿಯಲ್ಲಿ ಜಮೀನುದಾರರಾಗಿದ್ದವರೆಲ್ಲರೂ ಸರ್ಕಾರಕ್ಕೆ ಅರ್ಜಿ ಹಾಕಿಕೊಂಡು ತಮ್ಮ ತಮ್ಮ ಹಕ್ಕನ್ನು ಸ್ಥಿರಪಡಿಸಿಕೊಂಡು. +ಆದರೆ ಜಹಗಿರಿದಾರನಾದ ನವಾಬನಿಗೆ ಮಾತ್ರ ಅದರ ಹಕ್ಕೆ ತಪ್ಪಿತು. +ಇನ್ನು ನಮ್ಮ ತಂದೆ ಅವನಿಗೆ ಕೊಟ್ಟ ಸಾಲವಾದರೂ ಬರುವುದು  ಹೇಗೆ? +ನಾನಂತೂ ಹುಡುಗ; +ನನಗೇನು ಗೊತ್ತು? +ಮನೆಯವರು ಕೊಟ್ಟ ಸಾಲದ ಆಸೆ ಬಿಟ್ಟರು. +ಲೆಕ್ಕಪತ್ರ ಸಿಕ್ಕದೆ ಸಾವಿರದ ಚಿಲ್ಲರೆ ರೂಪಾಯಿಗಳಿಗೆ ಮಾತ್ರ ಸರ್ಕಾರವು ಹೊಣೆಯಾಯಿತು. +ಹೀಗಿರಲು ನವಾಬನಿಗೆ ಸ್ನೇಹಿತನಾಗಿದ್ದ ಒಬ್ಬ ಪುಣ್ಯಾತ್ಮನಾದ ವಕೀಲನು ಸಹಾಯಮಾಡುವುದಾಗಿ ಒಪ್ಪಿಕೊಂಡು ಸರ್ಕಾರಕ್ಕೆ ನವಾಬನ ಪರವಾಗಿ ಅರ್ಜಿ ಹಾಕಿದನು. +ಅದು ಕೋರ್ಟಿನಲ್ಲಿ ನವಾಬನಿಗೆ ವಿರೋಧವಾಗಿ ತೀರ್ಪವಾಯಿತು. +ಪುನಃ ಮೇಲಿನ ಕೋರ್ಟಿಗೆ ಅಪೀಲು ಮಾಡಿದರು. +ಹೀಗೆ ಕೋರ್ಟಿನಿಂದ ಕೋರ್ಟಿಗೆ ಅಲೆಯತೊಡಗಿದರು. +ಹತ್ತು ಹನ್ನೆರಡು ವರ್ಷಗಳು ಸರಿದುಹೋದುವು. +ನಾನು ಮದರಾಸಿನಲ್ಲಿ ಎಂ.ಎ. ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ, ಬೆಂಗಳೂರಿಗೆ ಬಂದೆ. +ಅಲ್ಲಿ ವಿದ್ಯಾಭ್ಯಾಸದ ಇಲಾಖೆಯಲ್ಲಿ ತಿಂಗಳಿಗೆ ಒಂದು ನೂರು ರೂಪಾಯಿಗಳ ನೌಕರಿ ಲಭಿಸಿತು. +ನಾನು ಭಾರವಹಿಸಿದ್ದ ಒಬ್ಬ ಸಂಸಾರಿಯಾದೆ. +ಇಲ್ಲಿಂದ ಈ ಕಥೆಯ ಹೊಸ ಅಧ್ಯಾಯ ಪ್ರಾರಂಭವಾಗುತ್ತದೆ. +ನಾನು ಕಾಯಾರ್ಥವಾಗಿ ಒಂದು ದಿನ ಕರ್ನೂಲಿಗೆ ಹೋದೆ. +ಅಲ್ಲಿ ಒಬ್ಬ ಲಾಯರ ಹತ್ತಿರ ಏನೋ ಕೆಲಸವಿತ್ತು. +ನಾನು ಅವರ ಆಫೀಸಿನಲ್ಲಿ ಕುಳಿತಿದ್ದೆ. +ಅಷ್ಟು ಹೊತ್ತಿಗೆ ಭಿಕ್ಕುಕನೊಬ್ಬನು ಒಳಗೆ ಬಂದ. +ಅವನು ಉಟ್ಟಿದ್ದ ಚಿಂದಿಬಟ್ಟೆಗಳಿಂದ ಅಲ್ಲದೆ ಬೇರೆ ಯಾವುದರಿಂದಲೂ ಅವನು ಭಿಕ್ಷುಕನೆಂದು ಬಗೆಯಲಾಗುತ್ತಿರಲಿಲ್ಲ. +ಮೊದಲು ನಾನು ತಿರುಕನೊಬ್ಬನು ತಿರುಪೆಗಾಗಿ ಬಂದನೆಂದು ಆಲೋಚಿಸಿದೆ. +ಆದರೆ ಅವನು ಅಲ್ಲಿಯೇ ಕುಳಿತುದನ್ನು ಕಂಡು ವಕೀಲರಿಗೂ ಭಿಕ್ಷುಕರಿಗೂ ಮತ್ತೇನು ಸಂಬಂಧವುಂಟು ಎಂದು ವಿಸ್ಮಿತನಾದೆ. +ಮತ್ತೆ, ಭಿಕ್ಷುಕನಾದರೇನು ಅವನಿಗೂ ಕೋರ್ಟಿನ ಕೆಲಸವಿಬಾರದೇಕೆ ಎಂದಂದುಕೊಂಡೆ. +ಶಂಕರರಾಯರು (ಆ ವಕೀಲರ ಹೆಸರು) ಮಾತಾಡುತ್ತಾ ಆ ಭಿಕ್ಷುಕನನ್ನು ತೋರಿಸಿ “ಅವರಾರು?ನಿಮಗೆ ಗೊತ್ತೆ?” ಎಂದರು. +“ಗೊತ್ತಿಲ್ಲ” ಎಂದೆ. +ಒಳಗೊಳಗೆ ನನಗೇಕೆ ಭಿಕ್ಷುಕನ ಪರಿಚಯ ಎಂದುಕೊಂಡಿರಬಹುದು. +“ಕರ್ನೂಲ ಜಹಗಿರಿಯ ನವಾಬ್‌ಸಿಂಗರು” ಎಂದರು. +ನಾನು ಭಿಕ್ಷುಕನನ್ನೇ ನೋಡುತ್ತಾ ಮೂಕನಾಗಿ ಕುಳಿತೆ. +ಹಿಂದೆ ನಡೆದುದೆಲ್ಲಾ ಮತ್ತೆ ಮನಸ್ಸಿನಲ್ಲಿ ಮಿಂಚಿತು. +ಅವನ ಈ ದುರ್ಗತಿಯ ವೇಷವನ್ನು ನೋಡಲಾರದೆ ಹೋದೆ. +ಶಂಕರರಾಯರು ಪುನಃ “ನೋಡಿ, ಅವರ ಪರವಾಗಿ ಎಷ್ಟೋ ಕೋರ್ಟುಗಳಲ್ಲಿ ಹೊಡೆದಾಡಿದ್ದಾಯ್ತು. +ಇನ್ನು ಪ್ರೀವಿಕೌನ್ಸಿಲ್ ಒಂದು ಬಾಕಿಯಿದೆ. +ಅಲ್ಲಿಯೂ ಅರ್ಜಿ ಹಾಕಿ ನೋಡಬೇಕೆಂದು ಅವರ ಆಸೆ. +ಆದರೆ ಅದಕ್ಕೆ ಎಂಟುನೂರೈವತ್ತು ರೂಪಾಯಿ ಖರ್ಚುಬೇಕಾಗಿದೆ. +ಎಲ್ಲಾ ಅಚ್ಚುಹಾಕಿಸಿ ಕಳುಹಿಸಬೇಕು. +ಅವರಿಗೆ ಯಾರೂ ಸಹಾಯಕರಿಲ್ಲ. +ಏನು ಮಾಡಬೇಕೋ ನನಗೆ ಬೇರೆ ತೋರುವುದಿಲ್ಲ. +ನಾನೇನು ಸ್ವಾಭಾವಿಕವಾಗಿ ಧರ್ಮಿಷ್ಠನಲ್ಲ. +ನನ್ನ ಹೃದಯ ಬಹಳ ಮೃದು ಎಂಬ ಹೆಮ್ಮೆಯೂ ನನಗೆ ಸಲ್ಲದು. +ಆದ್ದರಿಂದ ಶಂಕರರಾಯರು ಹೇಳಿದ್ದನ್ನೆಲ್ಲಾ ಕೇಳಿ “ಅಯ್ಯೋ ಪಾಪ!” ಎಂದನೇ ಹೊರತು, ಸಹಾಯ ಮಾಡಬೇಕೆಂಬ ಚಿಂತೆಯೇ ಹುಟ್ಟಲಿಲ್ಲ. +ಶಂಕರರಾಯರು ಹೇಳಿ ಮುಗಿಸಲು ಭಿಕ್ಷುಕನಾಗಿದ್ದ ನವಾಬ್‌ಸಿಂಗನು ಬಹಳ ದೈನ್ಯದಿಂದ ಹೇಳತೊಡಗಿದನು: “ಸ್ವಾಮಿ, ನಿಮ್ಮ ಮನೆತನಕ್ಕೂ ನಮ್ಮ ಮನೆತನಕ್ಕೂ ಬಹಳ ಸ್ನೇಹ. +ನೀವು ಮಕ್ಕಳಾಗಿದ್ದಾಗ ನನ್ನನ್ನು ದೇವರು ಉತ್ತಮಸ್ಥಿತಿಯಲ್ಲಿಟ್ಟಿದ್ದ. +ನೀವು ನನ್ನನ್ನು ಮರೆತಿರಬಹುದು. +ನಾನು ಕಾಸಿಲ್ಲದವನಾದೆ. +ಆದರೂ ನನಗಿನ್ನೂ ನಿಮ್ಮ ನೆನಪಿದೆ. +ನನ್ನ ಹೆಂಡತಿ ಮಕ್ಕಳಿಗೆ ಉಡಲು ಬಟ್ಟೆಯಿಲ್ಲ; +ಉಣಲು ಅನ್ನವಿಲ್ಲ; ಮಲಗಲು ತಾವಿಲ್ಲ. +ಭಿಕ್ಷೆಯಿಂದ ಕಾಲಹರಣ ಮಾಡುತ್ತಿದ್ದೇನೆ. +ನೀವು ಇರುವಲ್ಲಿಗಾದರೂ ಕರೆದುಕೊಂಡು ಹೋಗಿ. +ನೀವು ಹೇಳಿದ ಕೆಲಸ ಮಾಡುತ್ತೇವೆ. +ನಮಗೆ ಹೊಟ್ಟೆಗಿಷ್ಟು ಹಾಕಿದರೆ ಸಾಕು.” +ನನ್ನ ಅವಸ್ಥೆಯನ್ನು ನೀವೇ ಊಹಿಸಿಕೊಳ್ಳಿ. +ಯಾರ ಕೈಕೆಳಗೆ ನನ್ನ ತಂದೆ ತಾತಂದಿರು ಇದ್ದು ಅಧಿಕಾರ ನಡೆಸಿದರೋ ಅವನೇ ನನ್ನ ಮುಂದೆ ಹೀಗೆ ಬೇಡಿದರೆ ಮನಸ್ಸಿಗೆ ಹೇಗಾಗಬೇಕು? +ಶಂಕರರಾಯರಾಗಲಿ ನವಾಬ್ ಸಿಂಗನಾಗಲಿ ಧನಸಹಾಯ ಕೇಳಲಿಲ್ಲ. +ಸ್ವಾಭಾವಿಕವಾಗಿ ನಾನು  ಹಾಗೆಲ್ಲಾ ಭಾವಪರವಶನಾಗಿ ಧರ್ಮಮಾಡುವವನೂ ಅಲ್ಲ. +ನನ್ನ ಜೇಬಿನಿಂದ ಚೆಕ್ಕು ಪುಸ್ತಕ ತೆಗೆದು ನವಾಬನನ್ನು ಕುರಿತು “ಪ್ರೀವಿಕೌನ್ಸಿಲಿಗೆ ಅರ್ಜಿ ಹಾಕುವುದಕ್ಕೆ ಎಷ್ಟು ಹಣಬೇಕು?” ಎಂದೆ. +ಅವನು “ಸ್ವಾಮಿ, ಎಂಟನೂರೈವತ್ತು!” ಎಂದ. +ಕೂಡಲೆ ನಾನು ಮದರಾಸಿನಲ್ಲಿರುವ ಒಂದು ಬ್ಯಾಂಕಿಗೆ ಎಂಟುನೂರೈವತ್ತು ರೂಪಾಯಿಗಳ ಚೆಕ್ಕು ಒಂದನ್ನು ಬರೆದು ಸಿಂಗನ ಕೈಲಿ ಕೊಟ್ಟೆ. +ಏತಕ್ಕೆ ಹಾಗೆ ಮಾಡಿದೆನೋ ನನಗೆ ಬೇರೆ ತಿಳಿಯದು. +ನಿಶ್ಚಯವಾಗಿಯೂ ನನ್ನ ಸ್ವಂತ ಪರಾರ್ಥಬುದ್ದಿಯಿಂದ ಮಾತ್ರ ಮಾಡಿದ್ದಲ್ಲ. +ಅವನು ಕರ್ನೂಲಿನಲ್ಲಿ ಕಾಸೂ ಹುಟ್ಟದ ತಿರುಕ. +ನಾನು ನೂರು ರೂಪಾಯಿ ಸಂಬಳದ ಚುಂಗಡಿ ನೌಕರ. +ಮದರಾಸಿನ ಆ ಬ್ಯಾಂಕಿನಲ್ಲಿರುವ ನನ್ನ ಲೆಖ್ಖ ನೂರೈವತ್ತೇ ರೂಪಾಯಿ. +ಅಂತೂ ಕಾರ್ಯ ಮುಗಿದುಹೋಯಿತು. +ಸಿಂಗ್ ಮರುದಿನವೇ ಮದರಾಸಿನಗೆ ಹೋಗಿ ಪ್ರೀವಿಕೌನ್ಸಿಲ್ಲಿಗೆ ಅಪೀಲು ಮಾಡುವೆನೆಂದು ಹೇಳಿ ಹೊರಟುಹೋದನು. +ಆ ಸುದ್ಧಿ ಊರಿನಲೆಲ್ಲ ಹಬ್ಬಿತು. +ಎಲ್ಲರೂ ನನ್ನನ್ನು ಹುಚ್ಚನೆಂದು ಬಯ್ಯತೊಡಗಿದರು. +ಕೆಲವರು “ನಿಮ್ಮ ತಂದೆ ಅವನಿಗೆ ನಾಲ್ವತ್ತು ಸಾವಿರ ಕೊಟ್ಟು ಕಳೆದುಕೊಂಡಿದ್ದಾರೆ. +ಕೈಯಲ್ಲಿ ಕಾಸಿಲ್ಲದ ತಿರುಕನಿಗೆ ಯಾರಾದರೂ ಎಂಟುನೂರೈವತ್ತು ರೂಪಾಯಿ ಏಕಾಏಕಿ ಹಿಂದುಮುಂದು ನೋಡದೆ ಕೊಡುವುದುಂಟೇ? +ಅದಾದರೂ ಹಿಂದಕ್ಕೆ ಬರುವ ಗಂಟೇ?” ಎಂದರು. +ಹಿರಿಯರಾದ ಕೆಲವರು, ನಾನು ಬರಿಯ ಅನುಭವವಿಲ್ಲದ ಹುಡುಗನೆಂದೂ, ಇಂದು ಸಿಂಗನು ಭಿಕ್ಷುಕನಾಗಿದ್ದಾನೆ, ನಾಳೆ ನಾನು ಭಿಕ್ಷುಕನಾಗುವೆನೆಂದೂ, ಬಾಯಿಗೆ ಬಂದಂತೆ ಅಂದರು. +ನನಗೂ ಅವರು ಹೇಳಿದ್ದೆಲ್ಲ ಸರಿ ಎಂದು ತೊರಿತು. +ಅಯ್ಯೋ ನಾನೇಕೆ ಚಿಕ್ಕು ಕೊಟ್ಟೆ? +ಎಂಬ ಪಶ್ಚಾತ್ತಾಪವೂ ಉಂಟಾಯಿತು. +ನಾನಾದರೂ ದೊಡ್ಡ ಹೆಣಗಾರನೆ? +ಅದಿರಲಿ, ನಾನು ದುಡಿಯುವುದು ನನ್ನ ಸಂಸಾರಕ್ಕೇ ಸಾಲದು. +ಮತ್ತೂ ಕೊಟ್ಟ ದುಡ್ಡನ್ನು ವಾಪಸು ತೆಗೆದುಕೊಳ್ಳುವುದಕ್ಕೆ ಬದಲಾಗಿ, ಪತ್ರ ಕರಾರು ಏನೂ ಇಲ್ಲದೆ ತಿರುಕನೊಬ್ಬನಿಗೆ ಹಣ ಕೊಡುವುದುಂಟೆ? +ನನ್ನ ಮನಸ್ಸಿನಲ್ಲಿ ಶಾಂತಿ ತೊಲಗಿತು. +ನಾನು ಮಾಡಿದ್ದು ಅಕಾರ್ಯವೆಂದು ಚಿಂತಿಸತೊಡಗಿದೆ. +ಒಂದು ಸಾರಿ, ಪುನಃ ಸಿಂಗನ ಹತ್ತಿರ ಹೋಗಿ ಚೆಕ್ಕನ್ನು ವಾಪಸು ಕೊಡು ಎಂದು ಕೇಳಿಬರಲೇ ಎಂದು ಮನಸ್ಸಾಯಿತು. +ಅಷ್ಟರಲ್ಲೇ ಬ್ಯಾಂಕಿನಲ್ಲಿ ನನಗಿದ್ದುದು ನೂರೈವತ್ತೇ ರೂಪಾಯಿಗಳು, ಆದ್ದರಿಂದ ಆ ಚೆಕ್ಕು ನಿಷ್ಪ್ರಯೋಜನೆ ಎಂದು ಸಮಾಧಾನವಾಯಿತು. +ಮರುದಿನ ನಾನು ಬೆಂಗಳೂರಿಗೆ ಹೊರಟೆ. +ಅವನು ಮದರಾಸಿಗೆ ಹೊರಟ. +ಇಬ್ಬರೂ ಗುಂತಕಲ್ಲಿತನಕ ಒಂದೇ ಗಾಡಿಯಲ್ಲಿ ಬಂದೆವು. +ನಿಜಸ್ಥಿತಿಯನ್ನು ಹೇಳಿ, ಕೊಟ್ಟ ಚೆಕ್ಕನ್ನು ಹಿಂದಕ್ಕೆ ತೆಗೆದುಕೊಳ್ಳಲೂ ಇಲ್ಲ. +ಅವನು ಮದರಾಸಿಗೂ ನಾನು ಬೆಂಗಳೂರಿಗೂ ಕವಲೊಡೆದೆವು. +ಗಾಡಿಯಲ್ಲಿ ನಾನೊಬ್ಬನೇ ಕುಳಿತಿರಲು ಚಿಂತೆಗೆ ಪ್ರಾರಂಭವಾಯಿತು. +ಜೊತೆಗೆ ಮತ್ತೊಂದು ಭೀತಿಯೂ ಬಂತು. +ಏನೆಂದರೆ, ಬ್ಯಾಂಕಿನಲ್ಲಿ ಹಣವಿಲ್ಲದೆ ನಾನು ಚೆಕ್ಕು ಕೊಟ್ಟಿದ್ದೇನೆ. +ನಾನೆಲ್ಲಿ ಅಪರಾಧಿಯಾಗುವೆನೊ? +ಏನು ಶಿಕ್ಷೆಯಾಗುವುದೋ? +ನನ್ನ ಸರ್ಕಾರಿ ನೌಕರಿಗೆ ಎಲ್ಲಿ ತೊಂದರೆ ಬರುವುದೊ? +ನನಗೆಲ್ಲಿ ಮಾನಭಂಗವಾಗುವುದೊ? ಎಂದು. +ಈ ಭೀತಿ ಬರಬರುತ್ತಾ ಬಲವಾಯಿತು. +ರೈಲು ಬೆಂಗಳೂರಿಗೆ ಬಂತು. +ನಾನು ಮುಂದೆ ಬರಬಹುದಾದ ಕಷ್ಟಗಳನ್ನು ನಿವಾರಿಸುವುದಕ್ಕೆ, ಒಂದು ಸೊಸೈಟಿಯಿಂದ ಏಳುನೂರು ಸಾಲ ತೆಗದು ಮದರಾಸಿನ ಆ ಬ್ಯಾಂಕಿಗೆ ಕಳುಹಿಸಿದೆ. +ಇದೂ ಕೂಡ ನನ್ನ ಸ್ವಂತ ಮರ್ಯಾದೆಯನ್ನು ಕಾಪಾಡಿಕೊಳ್ಳುವುದಕ್ಕೆ ಮಾಡಿದ ಕೆಲಸ. +ನವಾಬ್‌ಸಿಂಗನ ಶುಭಾಶುಭಗಳ ವಿಚಾರವೇ ನನ್ನ ಮನಸ್ಸಿಗೆ ಹೊಳೆಯಲಿಲ್ಲ. +ಇಷ್ಟು ಮಾಡಿದ ಮೇಲೆ ನನಗೆ ಕೊಟ್ಟ ಹಣದ ಚಿಂತೆ ಹಿಡಿಯಿತು. +ಏನು ಮಾಡಿದರೆ ಹಣ ಹಿಂದಕ್ಕೆ ಬರುವುದೆಂದು ಆಲೋಚನೆ ಮಾಡಿದೆ. +ಆ ವಕೀಲನೂ ಸಿಂಗನೂ ಇಬ್ಬರೂ ಸೇರಿ ನನ್ನನ್ನು ಬಲಾತ್ಕರಿಸಿ ಎಂಟುನೂರೈವತ್ತು ರೂಪಾಯಿಗಳ ಚೆಕ್ಕು ಬರೆಯಿಸಿಕೊಂಡರು ಎಂದು ಕೇಸುಹಾಕಲೇ ಎಂದು ಯೋಚಿಸಿದೆ. +ಆದರೆ ಸಾಕ್ಷಿಗಳಾರೂ ಇಲ್ಲ, ಅದಕ್ಕೇ ಸುಮ್ಮನಾದೆ. +ಅಂತೂ ನನ್ನೊಳಗೆ ನಾನೇ ಏನೇನೋ ವಿಧವಾದ ಸಮಾಧಾನಗಳನ್ನು ಕಲ್ಪಿಸಿಕೊಂಡು ಮನಸ್ಸಿನ ಬಾಧೆಯನ್ನು ನಿಲ್ಲಿಸಿದೆ. +ಮನಸ್ಸಿನ ಕಾಟದ ಜೊತೆಗೆ ಮನೆಯವರ ಕರ್ಕಶದ ನುಡಿಗಳ ಕಾಟ ಬೇರೆ. +ಅಂತೂ ಕಾಲ ಕಳೆಯಿತು. +ಎರಡು ವರ್ಷಗಳಾದ ಮೇಲೆ ನನಗೆ ಮೈಸೂರಿಗೆ ವರ್ಗವಾಯಿತು. +ನನ್ನ ಸಂಬಳವೂ ಹೆಚ್ಚಿತು. +ನಾನು ಭಾಗ್ಯವಂತರ ಗುಂಪಿಗೆ ಸೇರುವವನಾದೆ. +ಒಂದು ದಿನ, ಯಾವುದೋ ಒಂದು ವಿದ್ಯಾಭ್ಯಾಸದ ಇಲಾಖೆಯ ಕೆಲಸದ ಸಲುವಾಗಿ ನಾನು ಮದರಾಸಿಗೆ ಹೋಗಬೇಕಾಗಿ ಬಂತು. +ರೈಲು ಹತ್ತಿ ಹೊರಟೆ, ಗುಂತಕಲ್ಲಿನ ಮಾರ್ಗವಾಗಿ, ರೈಲು  ಗುಂತಕಲ್ಲಿನ ಸ್ಟೇಷನ್ನಿನಲ್ಲಿ ನಿಂತಿತ್ತು. +ಸೆಕೆಂಡ್ ಕ್ಲಾಸಿನಲ್ಲಿ ಕುಳಿತು, ಬೂಟ್ಸು, ಷರಾಯಿ, ನೆಕ್‌ಟೈ, ಪೇಟ-ಇವುಗಳಿಂದ ವಿರಾಜಿಸುತ್ತಿದ್ದ ನನಗೆ ಏನೋ ಒಂದು ಹೆಮ್ಮೆ. +ಪ್ಲಾಟ್ ಫಾರಂನಲ್ಲಿ ತಿರುಗಾಡುತ್ತಿದ್ದೆ. +ತಿರುಕನೊಬ್ಬನು ಬಂದು ಸಲಾಂ ಮಾಡಿದನು, ನೋಡುವುದರಲ್ಲಿ ಅವನೇ ನವಾಬ್‌ಸಿಂಗ್‌! +ನನಗೆ ಹಿಂದೆ ನಡೆದ ಸಂಗತಿಗಳೆಲ್ಲ ಎಲ್ಲೊ ದೂರ ಹೋದುವು. +ಅವನು ನನ್ನ ಸಾಲಗಾರ ಎಂಬ ಯೋಚನೆಯೇ ಬರಲಿಲ್ಲ. +ನನಗೆ ಅವನ ನವಾಬತನವಲ್ಲದೆ ತಿರುಕತನ ನೆನಪಿಗೆ ಬರಲೇ ಇಲ್ಲ. +ಆದ್ದರಿಂದ ಬಹಳ ಸಲಿಗೆಯಿಂದ “ಏನೋ ಸಿಂಗ್‌, ಕೇಸು ಏನಾಯಿತೋ?” ಅಂದೆ. +ಅವನು ಬಹಳ ದೀನ ಸ್ವರದಿಂದ “ಅದರ ಆಸೆಯೇ ನನಗಿಲ್ಲ. +ಬಹಳ ಹಸಿವಾಗಿದೆ!” ಎಂದನು. +ನಾನು ಅವನೊಡನೆ ಸರಿಸಮಾನಂತೆ ನುಡಿದರೆ ಅವನು ತಿರುಕನಂತೆಯೇ ಮಾತಾಡಿಬಿಟ್ಟ! +ನನಗೆ ಬಹಳ ಸಂಕೋಚವಾಯಿತು. +ಅವನನ್ನು ಕರೆದುಕೊಂಡು ಹೋಗಿ ಸ್ಟೇಷನ್ನಿನ ಹೋಟೆಲಿನಲ್ಲಿ ಆರಾಣೆ ಕೊಟ್ಟು ಚೆನ್ನಾಗಿ ಊಟ ಹಾಕಿಸಿದೆ. +ಅದೂ ಕೂಡ, ನಾನು ದುಡ್ಡಿವನು ಎಂಬ ಹೆಮ್ಮೆಯಿಂದ ಊಟ ಹಾಕಿಸಿದನೇ ಹೊರತು, ಅವನು ಹೊಟ್ಟೆಗಿಲ್ಲದವನು ಎಂಬ ಮರುಕದಿಂದಲ್ಲ. +ನಾವೆಲ್ಲಾ ಪರೋಪಕಾರ ಮಾಡುವುದು ಶೇಕಡ ತೊಂಬತ್ತೊಂಬತ್ತರಷ್ಟು ನಮ್ಮ ಹೆಮ್ಮೆಗಾಗಿಯೇ ಹೊರತು ಪರರ ಉಪಕಾರಕ್ಕಾಗಿ ಅಲ್ಲ. +ಊಟ ಪೂರೈಸಿದ ಮೇಲೆ ಅವನು ತನ್ನ ಗೋಳನ್ನೆಲ್ಲ ಹೇಳಿಕೊಂಡನು. +ದೂರದಲ್ಲಿ ಅವನ ಐದು ಜನ ಮಕ್ಕಳು, ಘೋಷಾ ಹಾಕಿಕೊಂಡಿದ್ದ ಹೆಂಡತಿ ನಿಂತಿದ್ದರು. +ಇದನ್ನೆಲ್ಲಾ ನೋಡಿ ನನಗೊಂದೂ ಬಗೆ ಹರಿಯಲಿಲ್ಲ. +ಎಂತಹ ಮನೆತನ ಎಂತಹ ಗತಿಗೆ ಇಳಿಯಿತು ಎಂದುಕೊಂಡೆ. +ಇನ್ನೇನು ರೈಲು ಹೊರಡಬೇಕು. +ನವಾಬ್‌ಸಿಂಗನು ನಾನು ಕೂತಿದ್ದ ಗಾಡಿಗೆ ಬಂದು “ಸ್ವಾಮಿ, ಒಂದು ಮೂರು ಕಾಸು ಕೊಡಿ, ಮಕ್ಕಳಿಗೆ ಕಡಲೆ ತೆಗೆದುಕೊಡುತ್ತೇನೆ” ಎಂದು ಮಾರುದ್ದ ದೇಹವನ್ನು ಗೇಣುದ್ದ ಮಾಡಿಕೊಂಡನು. +ನಾನು “ಅಯ್ಯೋ?ಅದಕ್ಕೆಲ್ಲ ಹೀಗೆ ಕೇಳೋದೇನೋ?ತೆಗೆದುಕೋ?” ಎಂದು ಮೂರುಕಾಸನ್ನು ಜೇಬಿನಿಂದ ತೆಗೆದುಕೊಟ್ಟೆ. +ಅದನ್ನು ಕೂಡ ಭಿಕ್ಷುಕನಿಗೆ ದಾನಿ ಕೊಡುವಂತೆ ಕೊಡಲಿಲ್ಲ. +ರೈಲು ಗುಂತಕಲ್ಲನ್ನು ಬಿಟ್ಟು ಮುಂಬರಿತು ನವಾಬ್‌ಸಿಂಗ್‌ನನ್ನು ನೋಡುತ್ತಾ ಇದ್ದೆ. +ರೈಲು ದೂರದೂರ ಸರಿದಹಾಗೆಲ್ಲಾ ಸಿಂಗನು ಮರೆಯಾಗಿ ಆರಾಣೆ ಮೂರು ಕಾಸು ಆದನು. +ಕೆಲವು ತಿಂಗಳ ಹಿಂದೆ ಒಂದು ದಿನ ಮನೆಯಲ್ಲಿ ಸಂಸಾರದೊಂದಿಗೆ ಮಾತಾಡುತ್ತಾ ಕುಳಿತಿದ್ದೆ. +ರತ್ನ, ಕಿಟ್ಟಿ ಎಲ್ಲಾ ಅಲ್ಲೇ ಕುಳಿತು ಆಟ ಆಡುತ್ತಿದ್ದರು. +ನಾನು ಕೊಟ್ಟ ಎಂಟೂನೂರೈವತ್ತು ರೂಪಾಯಿ ಆರಾಣೆ ಮೂರು ಕಾಸು ನನ್ನನ್ನೇನು ಬಡತನಕ್ಕೆ ತರಲಿಲ್ಲ. +ಅದಕ್ಕೆ ಬದಲಾಗಿ ನನ್ನ ಭಾಗ್ಯವು ಹೆಚ್ಚುತ್ತಲೇ ಬಂತು. +ಅಷ್ಟು ಹಣವನ್ನು ಕೊಟ್ಟದ್ದು ಪರೋಪಕಾರಕ್ಕೆ ಎಂದು ಭಗವಂತನೆದುರು ನಾನು ಹೇಳಲಾರೆ. +ಸುಮ್ಮನೆ ಆತ್ಮವಂಚನೆ ಮಾಡಿಕೊಳ್ಳುವುದರಿಂದ ದೇವರನ್ನು ವಂಚಿಸುವುದಕ್ಕೆ ಆಗುತ್ತದೆಯೇ? +ನಾನು ಮೊದಲು ಎಂಟುನೂರೈವತ್ತು ರೂಪಾಯಿ ಕೊಟ್ಟದ್ದು ನಿಜವಾಗಿಯೂ ನನ್ನಿಚ್ಛೆಯಿಂದಲ್ಲ. +ಆರಾಣೆ ಊಟ ಹಾಕಿಸಿದ್ದು ಹೆಮ್ಮೆಯಿಂದ. +ಮೂರುಕಾಸು ಕೊಟ್ಟದ್ದು ಅವನನ್ನು ತೊಲಗಿಸುವುದಕ್ಕೆ. +ಕೊಟ್ಟದ್ದು ಹಿಂದಕ್ಕೆ ಬರುತ್ತದೆ ಎಂಬ ಆಸೆಯೇ ಇಲ್ಲದಿದ್ದುದರಿಂದ ಆಗಲೇ ಅದು ಮನಸ್ಸಿನಿಂದ ದೂರವಾಗುತ್ತಿತ್ತು. +ಹೊರಗಡೆ ಯಾರೋ ಬಂದಂತಾಯಿತು. +“ಕಿಟ್ಟಾ, ಬಾಗಿಲು ತೆರೆಯೋ!” ಎಂದೆ. +ಕಿಟ್ಟ ಎದ್ದು ಬಾಗಿಲು ತೆರೆದ. +ಟಪಾಲಿನವನು ಒಂದು ತಂತೀ ಸಮಾಚಾರದ ಕವರನ್ನು ಕೈಗೆ ಕೊಟ್ಟನು. +ಒಡೆದು ನೋಡಲು ಈ ರೀತಿ ಇತ್ತು. +“ಜಯ-ಪ್ರೀತಿ ಕೌನ್ಸಿಲ್‌ನಿಮ್ಮ ಹಣ ಎಲ್ಲಾ ವಾಪಸ್ಸು ಬರುತ್ತಿದ್ದೆ-ಸಿಂಗ್‌.”ಅದೂ ತಿಲಿಯಲಾರದ ಇಂಗ್ಲೀಷು. +ಅದನ್ನು ಓದಿದ ನನಗೆ ಜುಗುಪ್ಸೆ ಹುಟ್ಟಿತು. +ಎಲ್ಲೋ ಹನ್ನೆರಡಾಣೆ ಸಿಕ್ಕಿತು, ಸುಮ್ಮನೆ ಟೆಲಿಗ್ರಾಂ ಕೊಟ್ಟಿದ್ದಾನೆ. +ಹುಚ್ಚ ಎಂದುಕೊಂಡೆ. +ಆದರೆ ಯಾವುದೋ ಒಂದು ದೂರದಾಸೆ ಮನಸ್ಸಿನಲ್ಲಿ ಇನ್ನೂ, ಕತ್ತಲಲ್ಲಿ ಬಹುದೂರ ಉರಿಯುವ ಹಣತೆಯ ದೀಪದಂತೆ, ಮಿನುಗುತ್ತಿತ್ತು. +ಮರುದಿನ “ಹಿಂದೂ” ಪತ್ರಿಕೆಯಲ್ಲಿ ನಿಜಾಂಶ ಗೊತ್ತಾಯಿತು. +ಇಪ್ಪತ್ತು ವರುಷಗಳಿಂದ ತಿರುಪೆ ಬೇಡುತ್ತಿದ್ದವನು ಪುನಃ ಲಕ್ಷಾಧಿಕಾಯಾದನೆಂದು ನನಗೆ ಸಂತೋಷವಾಯಿತು. +ಏತಕ್ಕೋ ನಾನರಿಯೆ. +ಸಿಂಗನ ಬಾಳಿಗೆ ಬೆಳಕು ಬಂತಲ್ಲಾ, ಅವನ ಹೆಂಡಿರು ಮಕ್ಕಳ ಉದ್ಧಾರವಾಯಿತಲ್ಲಾ ಎಂದು ಮಾತ್ರ ನಾನು ಹೇಳಲಾರೆ. +ಬಹುಶಃ ನಾನು ಕೊಟ್ಟ ಹಣ ಹಿಂದಕ್ಕೆ ಬರಬಹುದು ಎಂಬ ದೂರಾಸೆಯಿಂದ ಇರಬಹುದು. +ಕೂಡಲೆ ನನಗೆ ಕಾಗದಗಳು ಬರತೊಡಗಿದವು. +ಸಿಂಗನ ಮೇಲೆ ದಾವಾಹಾಕಬೇಕೆಂದೂ, ಹಿರಿಯರು ಕೊಟ್ಟಿದ್ದ ಹಣವನ್ನೆಲ್ಲಾ ಮರಳಿ ಪಡೆಯಬೇಕೆಂದೂ ಉಪದೇಶ ಮಾಡತೊಡಗಿದರು. +ನಾನು ಮಾತ್ರ ಅವಸರ ಪಡದೆ ಕಾದೆ. +ಸರಳ ಹೃದಯನಾದ ನವಾಬ್‌ಸಿಂಗನು ನನಗೆ ಸಮಾಚಾರ ಕೊಟ್ಟದ್ದು ವಕೀಲ ಶಂಕರರಾಯರಿಗೆ ತಿಳಿಯಬಂತು. +ಅವರು ಅವನನ್ನು ಬಹಳವಾಗಿ ಬೈದು ಗಾಬರಿಪಡಿಸಿದರು: +ಅವರನ್ನು ಕೇಳದೇ ವರ್ತಮಾನ ಕೊಟ್ಟದ್ದು ತಪ್ಪು ಎಂದು. +ಮುಗ್ಧನಾದ ನವಾಬನು ಆಮೇಲೆ ಶಂಕರರಾಯರ ಹೆದರಿಕೆಯಿಂದ ಕಾಗದ ಬರೆಯಲೇ ಇಲ್ಲ. +ನನಗೆ ಬಂದ ದುಡ್ಡು ಬರಿದಾಯಿತೋ ಏನೋ ಎಂದು ಸಂದೇಹ ಉಂಟಾಯಿತು. +ಆದರೆ ಏತಕ್ಕೋ ಏನೋ ಮುಂದುವರಿಯದೆ ಸುಮ್ಮನಾದೆ. +ಕೆಲವು ತಿಂಗಳ ಹಿಂದೆ ನವಾಬನಿಂದ ನನಗೊಂದು ಕಾಗದ ಬಂತು. +ಅದರಲ್ಲಿ ನನ್ನನ್ನು ಅಲ್ಲಿಗೆ ಬರುವಂತೆ ಬರೆದಿತ್ತು. +ನಾನೂ ಹೋದೆ. +ನನ್ನನ್ನು ಬಹಳ ಮರ್ಯಾದೆಯಿಂದ ಎದುರುಗೊಂಡು, ನನ್ನ ಊಟ ಉಪಚಾರಗಳಿಗೆ ಬೇಕಾದ ಸಲಕರಣೆಗಳನ್ನು ಒದಗಿಸಿದನು. +ಎಲ್ಲಾ ಪೂರೈಸಿದ ಮೇಲೆ, ನವಾಬನು ನನ್ನ ಮುಂದೆ ಎಂಟುನೂರೈವತ್ತು ರೂಪಾಯಿ, ಆರಾಣೆ ಮೂರು ಕಾಸುಗಳನ್ನು ನಗದಾಗಿ ತಂದಿಟ್ಟು “ತಮ್ಮಿಂದ ನನ್ನ ಮನೆತನ ಉಳಿಯಿತು. +ಎಂಟುನೂರೈವತ್ತು ರೂಪಾಯಿಗಳು ತಾವು ಅಪೀಲಿನ ಖರ್ಚಿಗಾಗಿ ಕೊಟ್ಟದ್ದು. +ದಯವಿಟ್ಟು ಸ್ವೀಕರಿಸಬೇಕು.” ಎಂದನು. +ನನಗೆ ಏನು ಮಾಡಬೇಕೋ ಗೊತ್ತಾಗದೆ ಸುಮ್ಮನೆ ನೋಡುತ್ತಾ ಕುಳಿತೆ. +ರೂಪಾಯಿ ನನಗೆ ಬೇಕಾಗಿರಲಿಲ್ಲ ಎಂದಲ್ಲ. +ಇನ್ನೂ ಏನೇನೋ ಆಲೋಚನೆಗಳು ಬಂದುವು. +ನನಗೆ ಕೊಡುವ ಹಣವನ್ನೆಲ್ಲಾ ಇಷ್ಟರಲ್ಲಿಯೇ ಮುಗಿಸಿಬಿಡುವನೆ? +ಬಾಕಿ ಹಣದ ವಿಚಾರ ಕೇಳಲೆ?ಬಿಡಲೆ? +ನಾನು ಇಷ್ಟನ್ನೇ ತೆಗೆದುಕೊಂಡರೆ ನನ್ನ ನಂಟರಿಷ್ಟರು ಏನೆಂದಾರು? +- ಇವೇ ಮೊದಲಾದ ಚಿಂತೆಗಳು ಒಂದಾದ ಮೇಲೊಂದು ಬಂದುವು. +ಆದರೆ ನಾನು ಯಾವ ಮಾತನ್ನೂ ಆಡಲಿಲ್ಲ. +ಯಾರೋ ನನ್ನ ನಾಲಗೆಯನ್ನು ಹಿಡಿದಿದ್ದರು. +ಕಡೆಗೆ ಎಂಟುನೂರೈವತ್ತು ರೂಪಾಯಿಗಳನ್ನು ಎಣಿಸಿ ತೆಗೆದುಕೊಂಡೆ. +ಉಳಿದ ಆರಾಣೆ ಮೂರು ಕಾಸನ್ನು ನೋಡಿ ‘ಇದಾವ ಹಣ?’ ಎಂದೆ. +ಸಿಂಗ್: “ತಾವು ಗುಂತಕಲ್‌ಸ್ಟೇಷನ್ನಿನಲ್ಲಿ ನಾನು ಹೊಟ್ಟೆಗಿಲ್ಲದೆ ಇದ್ದಾಗ ಊಟ ಹಾಕಿಸಿದ್ದರೆ ಬಾಬತು ಆರಾಣೆ. +ಆಮೇಲೆ ನನ್ನ ಮಕ್ಕಳಿಗೆ ತಿಂಡಿಗಾಗಿ ತಾವು ಕೊಟ್ಟಿದ್ದು ಮೂರು ಕಾಸು.” +ನಾವು ದಾರಿಯೆಡೆಯಲ್ಲಿ ಭಿಕ್ಷಹಾಕಿದ ಲೆಖ್ಖ ನೆನಪಿಡಲು ಆಗುತ್ತದೆಯೇ? +ನಾನಾ ಭಾವಗಳಿಂದ ನನ್ನ ಮನಸ್ಸು ಅಲ್ಲೋಲ ಕಲ್ಲೋಲವಾಯಿತು. +ಮರುಮಾತಾಡದೆ ಆರಾಣೆ ಮೂರು ಕಾಸನ್ನು ತೆಗೆದುಕೊಂಡೆ. +ಅಷ್ಟು ಹೊತ್ತಿಗೆ ಶಂಕರರಾಯರೂ ಅಲ್ಲಿಗೆ ಬಂದರು. +ನವಾಬನೂ ಅವನೂ ಏನೋ ಗುಟ್ಟು ಮಾತಾಡಲು ಒಳಗೆ ಹೋದರು. +ನನ್ನ ಎದೆ ಮಾತ್ರ ಮಗುವಿನೆದೆಯಾಯ್ತು. +ಇವೆಲ್ಲಾ ಯಾರು ಮಾಡಿಸುವ ಕೆಲಸ ಎಂದುಕೊಂಡೆ. +ಮಹತ್ತಾದುದನ್ನೊ ಅತ್ಯಂತ ಸುಂದರವಾದುದನ್ನೊ ಪವಿತ್ರವಾದುದನ್ನೊ ನೋಡಿದಾಗ ಅನಿರ್ವಚನೀಯವಾದ ಭಾವದಿಂದ ಪ್ರೇರಿತವಾಗಿ ನಮ್ಮ ಹೃದಯದ ಅಂತರಾಳದಿಂದ ಉಕ್ಕುವ, ಹೆಸರಿಗೆ ಸಿಕ್ಕದ, ಒಂದು ದಿವ್ಯಾನುಭವ ನನ್ನ ಜೀವ ಸರ್ವಸ್ವವನ್ನೂ ತುಂಬಿಬಿಟ್ಟಿತು. +ಸ್ವಲ್ಪ ಹೊತ್ತಿನಮೇಲೆ ನವಾಬನು ಹೊರಗೆ ಬಂದು, ಒಂದು ಕಾರಾರು ಪತ್ರವನ್ನು ನನ್ನ ಕೈಲಿಟ್ಟು “ಸ್ವಾಮಿ, ಬಹುಕಾಲದಿಂದಲೂ ನಮ್ಮ ಮನೆತನಕ್ಕೂ ನಿಮ್ಮ ಮನೆತನಕ್ಕೂ ಲೇವಾದೇವಿ ನಡೆದು ಬಂದಿದೆ. +ಆದರೆ ಈಗ ಯಾವ ದಾಖಲೆಗಳೂ ಇಲ್ಲ. +ತಮಗೆ  ನಾನೆಷ್ಟು ಕೊಡಬೇಕೊ ಏನೋ ತಿಳಿಯದು. +ಈ ಪತ್ರದಲ್ಲಿ ತಮಗೆ ಹನ್ನರಡು ಸಾವಿರ ರೂಪಾಯಿ ಕೊಡುತ್ತೇನೆಂದು ಬರೆದಿದೆ. +ಅಲ್ಲದೆ ಶೇಕಡ ನಾಲ್ಕಾನೆಯಂತೆ ಮೊಬಗಲನ್ನು ಸಲ್ಲಿಸುವವರೆಗೂ ಬಡ್ಡಿ ಕೊಡುವನೆಂದು ಬರೆದಿದೆ. +ನನಗಿನ್ನೂ ಕೈಲಿ ಹಣ ಬಂದಿಲ್ಲ. +ಬರುವ ತಿಂಗಳು ಬಂಗಲೆಗಳನ್ನು ಮಾರಬೇಕೆಂದಿರುವೆನು….” ಎಂದು ಮೊದಲಾಗಿ ಹೇಳಿದನು. +ಆತನ ಭಾಷಣ ಶಂಕರರಾಯರಿಂದ ಸಿದ್ಧಮಾಡಲ್ಪಟ್ಟದ್ದು ಎಂಬುದೇನೋ ನನಗೆ ಚೆನ್ನಾಗಿ ಗೊತ್ತಾಯಿತು. +ಆದರೆ ನನಗೆ ಏನು ಹೇಳಲೂ ಬಾಯೇ ಬರಲಿಲ್ಲ. +ನಡೆದ ಸಂಗತಿಗಳೆಲ್ಲಾ ನನಗೆ ಮಹದಾಶ್ಚರ್ಯಗಳಾಗಿ ಕಂಡುಬಂದವು. +ನಾನು ವಿಸ್ಮಯ ಮೂಕನಾದೆ. +ಈಗ ಪ್ರತಿ ತಿಂಗಳಿಗೆ ಸರಿಯಾಗಿ ಬಡ್ಡಿ ಬರುತ್ತದೆ. +ಯಾವ ಇಚ್ಛೆ ಮೊದಲು ನನ್ನನ್ನು ಪ್ರೇರೇಪಿಸಿತೋ ಅದರ ಮೇಲೆಯೆ ಭಾರ ಹಾಕಿ ನಿಶ್ಚಿಂತನಾಗಿದ್ದೇನೆ. +ನನ್ನ ಗೆಳೆಯರೊಬ್ಬರು ಈ ಕತೆ ಕೇಳಿ “ಅಯ್ಯೋ ನೀವು ಮಾಡಿದ ಕೆಲಸ ತಪ್ಪು. +ಇನ್ನೂ ಸ್ವಲ್ಪ ಪ್ರಯತ್ನ ಮಾಡಿದ್ದರೆ ಅವನಿಂದ ನಾಲ್ವತ್ತು ಸಾವಿರ ರೂಪಾಯಿಗಳನ್ನೂ ವಸೂಲ್ಮಾಡಬಹುದಾಗಿತ್ತು” ಎಂದರು. +ಮತ್ತೆ ಕೆಲವರು ನವಾಬನು ಠಕ್ಕನೆಂದೂ ಮೋಸಗಾರನೆಂದೂ ಎಂಟುನೂರೈವತ್ತು ರೂಪಾಯಿ ಕೊಟ್ಟು ನನ್ನನ್ನು ಮರುಳು ಮಾಡಿರುವನೆಂದೂ ಹೇಳುತ್ತಿರುವರು. +ಅವರೆಲ್ಲಾ ನನ್ನ ಆಪ್ತರೇ ಹೌದು. +ಮಾಧವರಾಯರು ಕತೆ ಹೇಳಿ ಮುಗಿಸಿದ ಮೇಲೆ ನಾವೆಲ್ಲಾ ನಿಟ್ಟುಸಿರುಬಿಟ್ಟೆವು. +ನಮಗೆ ಮಾಧವರಾಯರನ್ನು ಹೊಗಳಬೇಕೋ ನವಾಬನನ್ನು ಹೊಗಳಬೇಕೋ ಗೊತ್ತಾಗಲಿಲ್ಲ. +ಮಾಧವರಾಯರೇನೋ ತಾವು ಮಾಡಿದ ಕಾರ್ಯವೆಲ್ಲ ಸ್ವಾರ್ಥಕ್ಕಾಗಿ ಎಂದು ಹೇಳಿಬಿಟ್ಟರು. +ನವಾಬನಾದರೊ ಏನೂ ತಿಳಿಯದ ಸರಳಹೃದಯನಾದರೂ ಶಂಕರರಾಯರಂಥಾ ಜನರು ಯುಕ್ತಿ ಬೋಧಿಸಿದರೆ ಅಂತೆಯೆ ಹಿಂಜರಿಯುವವನಲ್ಲ. +ಅಂತೂ ಸಮಸ್ಯೆಯನ್ನು ಭೇದಿಸಲು ನಮ್ಮಿಂದಾಗಲಿಲ್ಲ. +“ಕೆಲವು ಕಾರ್ಯಗಳನ್ನು ನಾವೆ ಮಾಡುವೆವಾದರೂ ಮಾಡಿಸುವುದು ನಮ್ಮಿಚ್ಛೆಯಲ್ಲ” ಎಂದರು ಮಾಧವರಾಯರು. +ಅಷ್ಟು ಹೊತ್ತಿಗೆ ಬಿಸಿಲೇರಿ ಊಟದ ಸಮಯವಾಗಿತ್ತು. +ಮಾಧವರಾಯರು ಆಫೀಸಿಗೆ ಹೋಗಲು ಹೊತ್ತಾಗುವುದೆಂದು ಹೇಳಿ ಎದ್ದು ಹೋದರು. + ಯಾರೂ ಅರಿಯದ ವೀರ. + ಆಷಾಢಮಾಸ ಸುಮಾರು ರಾತ್ರಿ ಎಂಟು ಗಂಟೆ ಸಮಯ. +ಕಗ್ಗತ್ತಲು ಕಣ್ಣು ತಿವಿಯುವಂತಿತ್ತು. +ಜಡಿಮಳೆ ಜಿರೆಂದು ಕರೆಕರೆ ಹುಟ್ಟಿಸುತ್ತಿತ್ತು. +ಸುಬ್ಬಣ್ಣಗೌಡರು ಜಗಲಿಯಲ್ಲಿ ಒಂದು ಜಮಖಾನದ ಮೇಲೆ ಕುಳಿತು ಲ್ಯಾಂಪಿನ ಬೆಳಕಿನಲ್ಲಿ ಮನೆಯ ಲೆಕ್ಕಪತ್ರ ನೋಡುತ್ತಿದ್ದರು. +ಲಿಂಗ ಹೊರಗಿನಿಂದ ಕೈಲೊಂದು ಲಾಟೀನು ಹಿಡಿದುಕೊಂಡು ಬಂದು “ಅಯ್ಯಾ, ಹೊಳೇ ನೀರು ಏಳನೇ ಮೆಟ್ಟಲಿಗೇರಿದೆ” ಎಂದ. +ಸುಬ್ಬಣ್ಣಗೌಡರು ಗಾಬರಿಯಿಂದ ತಟಕ್ಕನೆ ಎದ್ದು “ಎಲ್ಲಿ, ನೊಡೋಣ ಬಾ” ಎಂದು ಕಂಬಳಿ ಕೊಪ್ಪೆ ಹಾಕಿಕೊಂಡು ಹೊರಟರು. +ಇಬ್ಬರೂ ಹೊಳೆಗೆ ಹೋಗಿ ಐದಾರು ಮೆಟ್ಟಿಲು ಇಳಿದು ನಿಂತರು. +ನೊರೆಯೆದ್ದ ಕೆಂಬಣ್ಣದ ತೆರೆಗಳು ಅವರ ಕಾಲಿಗೆ ಬಂದು ಬಡಿಯುತ್ತಿದ್ದುವು. +ತುಂಗಾನದಿಯ ಪ್ರವಾಹ ಉಕ್ಕಿಯುಕ್ಕಿ ನೊರೆನೊರೆಯಾಗಿ ಭೋರೆಂದು ಹರಿಯುತ್ತಿತ್ತು. +ಲಾಟೀನಿನ ಬೆಳಕಿನಲ್ಲಿ ಅಲೆಗಳು ಪಳಪಳ ಮಿಂಚುತ್ತಿದ್ದುವು. +ಮಳೆ ನಿರಂತರವಾಗಿ ಸುರಿಯುತ್ತಲೇ ಇತ್ತು. +ಅವರು ಅಲ್ಲಿ ನಿಂತಹಾಗೆಯೆ ಆರನೆಯ ಮೆಟ್ಟಲಿಗೆ ನೀರೇರಿ ಮುಚ್ಚಿತು. +ಐದನೆಯ ಮೆಟ್ಟಲಿಗೆ ಹತ್ತಿ ನಿಂತರು. +ಸುಬ್ಬಣ್ಣಗೌಡರು ಲಿಂಗನ ಕಡೆ ತಿರುಗಿ “ನಿನ್ನೆ ಎಲ್ಲಿಯವರೆಗೆ ಏರಿತ್ತೋ ನೀರು?” ಎಂದರು. +“ನಿನ್ನೆ ಇಷ್ಟು ನೀರು ಬಂದಿರಲಿಲ್ಲ. +ಎಂಟನೆಯ ಮೆಟ್ಟಲಲ್ಲಿಯೇ ಇತ್ತು. +ಆದರೂ ನಿನ್ನೆ ಕೆರೆಹಳ್ಳಿಯೆಲ್ಲಾ ಕೊಚ್ಚಿಕೊಂಡು ಹೋಯಿತಂತೆ. +ಕೆಳಮನೆ ರಂಗಪ್ಪಗೌಡರ ಮಗ ರಾಮು ಸಿಕ್ಕಲೇ ಇಲ್ಲವಂತೆ. +ಬಹಳ ಅನಾಹುತ ಆಯಿತಂತೆ” ಎಂದ ಲಿಂಗ. +ಗೌಡರ ಮುಖವು ಭಯದ ಚಿಹ್ನೆ ತೋರಿ ಗಂಭೀರವಾಯಿತು. +“ಇಂದು ಮೇಲ್ಮಳೆ ಹೇಗಿದೆಯಂತೆ? +ನಿನಗೇನಾದರೂ ಗೊತ್ತೇ?” ಎಂದು ಕೇಳಿ ಕಗ್ಗತ್ತಲಿನ ಕಡೆ ಕುರುಡಾಗಿ ನಿಟ್ಟಿಸುತ್ತಾ ನಿಂತರು. +“ಮೇಲ್ಮಳೆ ಬಹಳ ಜೋರಾಗಿದೆಯಂತೆ. +ಶೃಂಗೇರಿ ಆ ಕಡೆಯಂತೂ ಒಂದು ನಿಮಿಷ ಬಿಡದೆ ಹೊಡೆಯುತ್ತಿದೆಯಂತೆ” ಎಂದು ಹೇಳಿ, ಲಿಂಗನು ಲಾಟೀನಿನ ಬೆಳಕಿನಲ್ಲಿ ಕೆಳಗೆ ನೋಡಿ “ಅಯ್ಯಾ, ಇಲ್ಲಿ ನೋಡಿ! +ನೀರು ಐದನೆ ಮೆಟ್ಟಿಲಿಗೇರುತ್ತಾ ಇದೆ” ಎಂದ. +ಗೌಡರು ಕೆಳಗೆ ನೋಡಿ, ಎದೆ ನಡುಗಿ, ಮುಖ ಕಪ್ಪಾಗಿ, ಸ್ವಲ್ಪ ಪೆಚ್ಚಾದರು. +ಇಬ್ಬರೂ ಹಿಂತಿರುಗಿ ಮನೆಯೊಳಗೆ ಹೋದರು. +ಗೌಡರು ಕಂಬಳಿ ತೆಗೆದು ಹಾಕಿ, ಬಿಸಿನೀರಿನಲ್ಲಿ ಕಾಲು ತೊಳೆದುಕೊಂಡು, ಜಮಖಾನದ ಮೇಲೆ ಕುಳಿತು, ಕೈಗಳನ್ನು ಹಿಂದಕ್ಕೆ ಹಾಕಿ, ಅವುಗಳ ಮೇಲೆ ಒರಗಿಕೊಂಡು ಆಲೋಚನಾಪರರಾದರು. +ಲಿಂಗನು ಲಾಟೀನಿನ ದೀಪವನ್ನು ಸಣ್ಣಗೆ ಮಾಡಿ, ಕಂಬಳಿ ಕೊಡವಿ, ಗಳುವಿನ ಮೇಲೆ ಹರಡಿ, ಅಡಿಗಮನೆಯೊಳಗೆ ಹೋದನು. +ಸುಬ್ಬಣ್ಣಗೌಡರ ಹೆಂಡತಿ ನಾಗಮ್ಮ “ಅದೇನು ಲಿಂಗ? +ಲಾಟೀನು ತೆಗೆದುಕೊಂಡು ಹೊರಗೆ ಹೋಗಿದ್ದರಲ್ಲಾ. +ಹೊಳೆ ಬಹಳ ಬಂದಿದೆಯೇನು?” ಎಂದರು. +ಸುಬ್ಬಣ್ಣಗೌಡರ ಹನ್ನೆರಡು ವರ್ಷದ ಮಗ ತಿಮ್ಮು, ಎಂಟು ವರ್ಷದ ಮಗಳು ಸೀತೆ, ಇಬ್ಬರೂ ಊಟಕ್ಕೆ ಕುಳಿತಿದ್ದರು. +ಹೊಳೆ ಏರುವ ಮಾತು ಕೇಳಿ, ಉಣ್ಣುವುದನ್ನು ಬಿಟ್ಟು, ತೆರೆದ ಬಾಯಿ ಮುಚ್ಚದೆ, ತೆರೆದ ರೆಪ್ಪೆ ಹಾಕದೆ, ಇಟ್ಟ ಕೈ ತೆಗೆಯದೆ ನಾಗಮ್ಮ ಲಿಂಗ ಇವರ ಸಂಭಾಷಣೆ ಕೇಳುತ್ತಾ ಕುಳಿತರು. +“ಹೌದಮ್ಮಾ, ಹೊಳೆ ಯದ್ದೂತದ್ದೂ ಏರುತ್ತಾ ಇದೆ. +ಅದರಲ್ಲಿಯೂ ಮೇಲ್ಮಳೆಯೂ ಇಪರೀತವಂತೆ. +ನಿನ್ನೆಯೇ ಕೆರೆಹಳ್ಳಿಯೆಲ್ಲಾ ತೇಲಿ ಹೋಯಿತಂತೆ. +ಪಾಪ!ಆ ಕೆಳಮನೆ ರಂಗಪ್ಪಗೌಡರ ರಾಮು ಇನ್ನೂ ಸಿಕ್ಕಿಲ್ಲವಂತೆ!”ನಾಗಮ್ಮ ಊಟಕ್ಕೆ ಕುಳಿತ ಮಕ್ಕಳ ಕಡೆ ನೋಡಿದರು. +ಏಕೆ ನೋಡಿದರೋ ಯಾರಿಗೆ ಗೊತ್ತು? +ಅವರು ಉಣದೆ ಕುಳಿತಿದ್ದುದನ್ನು ನೋಡಿ ತಾವೇ ಹೋಗಿ ಅವರ ಹತ್ತಿರ ಕುಳಿತುಕೊಂಡು ಉಣ್ಣಿಸತೊಡಗಿದರು. +ಸೀತೆ ತುತ್ತು ತಿನ್ನುತ್ತಾ “ಅಮ್ಮಾ, ರಾಮು ಏನಾದ?” ಎಂದಳು. +ನಾಗಮ್ಮ “ಏನೂ ಆಗಲಿಲ್ಲ. +ನೀ ಉಣ್ಣು ಸುಮ್ಮನೆ”ತಿಮ್ಮು “ಏನಮ್ಮಾ ಅದು ಲಿಂಗ ಹೇಳಿದ್ದು?” ಎಂದ. +ನಾಗಮ್ಮ “ಏನಿಲ್ಲ ಮಗೂ, ಹೊಳೆಯಲ್ಲಿ ನೀರು ಏರುತ್ತಿದೆಯಂತೆ, ಅಷ್ಟೇ. +ನೀನು ಊಟಮಾಡು” ಎಂದರು. +ಲಿಂಗನ ಕಡೆ ನೋಡಿ “ಅಷ್ಟೇ!ಅಲ್ಲವೇನೊ ಲಿಂಗ?” ಎಂದರು. +ಲಿಂಗ ತಲೆದೂಗಿ ಸಮ್ಮತಿಸಿ “ಅಷ್ಟೇ, ಇನ್ನೇನು! +‘ನೀವು ಉಣ್ಣಿ’ ತಿಮ್ಮಯ್ಯ” ಎಂದ. +ಸುಬ್ಬಣ್ಣಗೌಡರು ಜಗಲಿಯಿಂದ “ಲಿಂಗಾ!” ಎಂದು ಕರೆದರು. +ಲಿಂಗನಿಗೆ ಕಿವಿ ಕೊಂಚ ಮಂದ; ಕೇಳಿಸಲಿಲ್ಲ. +ಮತ್ತೆ ಕರೆದರು. +ಆಗ ನಾಗಮ್ಮ “ಏ ಲಿಂಗ! +ಹೊರಗೆ ಕರೆಯುತ್ತಾರೋ!ಹೋಗೋ!” ಎಂದರು. +ಲಿಂಗನು ತಟಕ್ಕನೆ ಎದ್ದು ತನ್ನ ಚೊಟ್ಟಕಾಲು ಓರೆಯಾಗಿ ಹಾಕುತ್ತಾ ಹೋದ. +ಪಾಪ!ಅವನ ಬಲಗಾಲು ಎಡಗಾಲಿಗಿಂತ ತುಸು ಮೋಟ ಮತ್ತು ಸಣ್ಣ. +ಲಿಂಗನು ಜಗಲಿಗೆ ಹೋಗಿ ಕೇಳಿದನು “ಯಾಕಯ್ಯಾ ಕರೆದದ್ದು?” +ಗೌಡರು ಎಂದರು “ಹೋಗಿ ನೋಡಿಕೊಂಡು ಬಾ. +ನೀರು ಈಗೆಷ್ಟು ಏರಿದೆ?” +ಲಿಂಗನು ಲಾಟೀನಿನ ಬತ್ತಿ ಏರಿಸಿ, ದೀಪ ದೊಡ್ಡದು ಮಾಡಿ, ಕಂಬಳಿ ಕೊಪ್ಪೆ ಹಾಕಿಕೊಂಡು ಹೊಳೆಯ ಕಡೆ ಹೋದನು. +ಅವನು ಹೋದ ಸ್ವಲ್ಪ ಹೊತ್ತಿನಲ್ಲಿಯೆ ಗೌಡರು “ನಾಗಾ!” ಎಂದು ಕೂಗಿದರು. +ಎಂಟು ವರ್ಷದ ಹುಡುಗನೊಬ್ಬನು ಮುರಬೇಯಿಸುವ ಒಲೆಯ ಕಡೆಯಿಂದ ಓಡಿ ಬಂದು, ಮುಂಡಿಗೆಯ ಮರೆಯಲ್ಲಿ ನಿಂತು “ಏನ್ರಯ್ಯಾ?” ಎಂದ. +ಗೌಡರು “ದನ ಎಲ್ಲಾ ಕಟ್ಟಿದ್ದೀರೇನೋ?” ಎಂದರು. +“ಹೌದ್ರಯ್ಯ ಎಲ್ಲಾ ಕಟ್ಟಿದ್ದೇವೆ. +ತುಂಗೆದನ ಪುಟ್ಟಗುಡ್ಡ ಯಲ್ಡು ಮಾತ್ರ ಕೊಟ್ಟಿಗೆಗೆ ಬರಲೇ ಇಲ್ಲ.” +“ಹೋಗಲಿ ಬಿಡು!” ಎಂದು ಗೌಡರು ದಿಂಬಿನಮೇಲೆ ಒರಗಿಕೊಂಡರು. +ನಾಗ ಮೆಲ್ಲಗೆ ಚಳಿಕಾಯಿಸಲು ಮುರುವಿನ ಒಲೆಗೆ ಜಾರಿದ. +ಅಷ್ಟು ಹೊತ್ತಿಗೆ ಹೊಳೆಗೆ ಹೋಗಿದ್ದ ಲಿಂಗ ಬಂದ. +ಗೌಡರು “ನೀರೇರಿದೆಯೇನೊ?” ಎಂದು ಕೇಳಿದರು. +ಲಿಂಗ ಲಾಟೀನು ಕೆಳಗಿಳಿಸಿ, ಕಂಬಳಿ ಕೊಡವುತ್ತಾ “ನಾಲ್ಕನೆ ಮಟ್ಟಿಲಿಗೆ ಮುಟ್ಟ ಮುಟ್ಟ ಬಂದದೆ”“ಹಾಗಾದರೆ ಕೊಟ್ಟಿಗೆಗೆ ಹೋಗಿ ದನಗಳ ಕೊರಳಕಣ್ಣಿ ಎಲ್ಲಾ ಬಿಚ್ಚಿ ಬಾ” ಎಂದು ಗೌಡರು ಚಿಂತಿಸುತ್ತಾ ಕೂತರು. +ಲಿಂಗ ತನ್ನ ಮಗ ನಾಗನನ್ನೂ ಕರೆದುಕೊಂಡು ಕೊಟ್ಟಿಗೆಗೆ ಹೋದ. +ಅಷ್ಟುಹೊತ್ತಿಗೆ ನಾಗಮ್ಮ ನೀರು ತಂದಿಟ್ಟು “ಬಳ್ಳೆಹಾಕಿದೆ” ಎಂದರು. +ಸುಬ್ಬಣ್ಣಗೌಡರು ಎದ್ದು ತಂಬಿಗೆ ತೆಗೆದುಕೊಂಡು ಬಾಯಿ ಮುಕ್ಕಳಿಸಿ ಊಟಕ್ಕೆ ಹೋದರು. +ತಿಮ್ಮು ಸೀತೆ ಇಬ್ಬರೂ ಹೊರಗೆ ಬಂದು ಜಗಲಿಯ ಮೇಲಿನ ಲ್ಯಾಂಪಿನ ಬೆಳಕಿನಲ್ಲಿ ಮಕ್ಕಳಹರಟೆ ಹೊಡೆಯುತ್ತಿದ್ದರು. +ತುಸು ಹೊತ್ತಿನಲ್ಲಿ ಲಿಂಗನೂ ಅವನ ನಾಗನೂ ಕೊಟ್ಟಿಗೆಯಿಂದ ಬಂದು ಕಾಲು ತೊಳೆದುಕೊಂಡು ಜಗಲಿಯ ಕೆಸರಲಿಗೆಯ ಮೇಲೆ ಕೂತರು. +ಲಿಂಗ, ನಾಗ ಇವರೊಡನೆ ತಿಮ್ಮು, ಸೀತೆ ಇಬ್ಬರಿಗೂ ತುಂಬಾ ಸಲಿಗೆ. +ತಿಮ್ಮು “ಲಿಂಗಾ, ಹೊಳೆ ಪೂರಾ ಏರಿದೆಯೇನೋ?” ಎಂದು ಕೇಳಿದ. +ಲಿಂಗನ ಹತ್ತಿರ ಕುಳಿತಿದ್ದ ಸೀತೆ ಇವರ ಸಂಭಾಷಣೆಗೆ ಗಮನ ಕೊಡಲೆ ಇಲ್ಲ. +ಅವಳ ಮನಸ್ಸು ಇನ್ನೇತರ ಮೇಲೋ ಹೋಗಿತ್ತು. +ಒಂದು ಸಲ ಲಿಂಗನ ಕಾಲುಗಂಟುಗಳ ಕಡೆ ನೋಡುತ್ತಿದ್ದಳು; +ಒಂದು ಸಲ ಕೈಗಂಟುಗಳ ಕಡೆ ನೋಡುತ್ತಿದ್ದಳು; ಸೋಜಿಗವಾಯಿತು. +ಕಡೆಗೆ ನಾಚಿಕೆಗಿಂತ ಕುತೂಹಲ ಹೆಚ್ಚಾಗಲು “ಲಿಂಗ, ಇದೇನು ಕಲೆಗಳೋ, ನಿನ್ನ ಕಾಲ್ಗಂಟಿನಲ್ಲಿ ಕೈಗಂಟಿನಲ್ಲಿ” ಎಂದು ಕೇಳಿದಳು. +ಲಿಂಗನ ಮುಖ ಇದ್ದಕಿದ್ದ ಹಾಗೆ ಬಾಡಿತು. +ಬಾಯಿಂದ ಮಾತೆ ಹೊರಡಲಿಲ್ಲ. +ಕಣ್ಣಿನಲ್ಲಿ ನೀರೂ ತುಂಬಿತು. +ಮರುಕೊಳಿಸಿದ ಹಿಂದಿನ ದುಃಖ ತಡೆದುಕೊಂಡು ದೈನ್ಯದಿಂದ “ಅದೆಲ್ಲಾ ಕಟ್ಕೊಂಡು ನಿಮಗೇಕೆ, ಸೀತಮ್ಮಾ?” ಎಂದ. +ತಿಮ್ಮುಗೆ ಲಿಂಗನ ಆ ಸ್ಥಿತಿ ನೋಡಿ ಕನಿಕರದೊಂದಿಗೆ ಅಚ್ಚರಿಯೂ ಆಯಿತು. +ಸೀತೆಗೆ ಬದಲಾಗಿ ಅವನೆ, “ಲಿಂಗಾ, ಸಂಕೋಚವೇಕೊ, ನಮ್ಮೊಡನೆ ಹೇಳಬಾರದೆ?” ಎಂದ. +“ಹೇಳದೆ ಏನು ತಿಮ್ಮಯ್ಯ ನಿಮ್ಮೊಡನೆ? +ಇವು ಜೈಲಿನಲ್ಲಿ ಕೋಳಹಾಕಿದ್ದ ಗುರುತು.” +ಲಿಂಗನಂಥ ಮುಗ್ಧನಿಗೆ ಜೈಲಾದುದನ್ನು ಕೇಳಿ ತಿಮ್ಮುವಿಗೆ ಹೂವಿನಂಥ ಎದೆಗೆ ಸಿಡಿಲು ಬಡಿದಂತಾಗಿ “ಏನು?ನಿನಗೂ ಜೈಲೆ? +ಯಾವ ಪುಣ್ಯಾತ್ಮನಪ್ಪಾ ನಿನಗೂ ಜೈಲು ಮಾಡಿದವನು?” ಎಂದು ಕೇಳಿದ. +“ನಾನು ಮೊದಲು ಮಾವಿನಹಲ್ಲಿ ರಂಗೇನಾಯ್ಕರ ಮನೇಲಿದ್ದೆ ಕೆಲಸಕ್ಕೆ. +ಅಲ್ಲೇ ಐದಾರು ವರ್ಷ ಜೀತಮಾಡಿದೆ. +ತಿಮ್ಮಯ್ಯ ,ಏನು ಮಾಡೋದು. +ಯಾರ್ಯಾರ ಜೊತೆಯಲ್ಲೋ ಸೇರಿಕೊಂಡು ಕಳ್ಳು ಕುಡಿಯೋದು ಕಲಿತೆ. +ಒಂದು ದಿನ ಬೈಗಿನ ಹೊತ್ತು; +ಕಳ್ಳು ಕುಡಿದೆ, ತಲೆಗೇರಿತು. +ಕಳ್ಳಿನವನು ಏನು ಸೇರಿಸಿದ್ದನೋ ಅದಕ್ಕೆ, ಅಮಲು ಬರಲಿ. +ದಾರೀಲಿ ಬರ್ತಾ ಇದ್ದೆ. +ರಂಗೇನಾಯ್ಕರ ಮಗ ಶೇಷನಾಯ್ಕ ಅಂತ ಇದಾರೆ. +ಅವರಿಗೂ ಕುಡಿದು ತಲೆಗೆ ಅಮಲೇರಿತ್ತು. +ಎಲ್ಲಿಂದಲೋ ಹಿಂದಿನಿಂದ ಬಂದು ಬಾಯಿಗೆ ಬಂದಂತೆ ಬೈದರು. +ನನಗೂ ಕುಡಿದ ಮತ್ತಿನಲ್ಲಿ  ಒಡೇರ ಮಕ್ಕಳು ಅಂತ ಗೊತ್ತಾಗಲಿಲ್ಲ. +ಬಾಯಿಗೆ ಬಂದಂತೆ ಬೈದೆ. +ಆಮೇಲೆ ಇಬ್ಬರಿಗೂ ಮಾರಾಮಾರಾಯಾಗಿ ಅವರಿಗೆ ಪೂರಾ ಪೆಟ್ಟಾಯ್ತು. +ನನ್ನ ಮೇಲೆ ಪಿರ್ಯಾದು ಕೊಟ್ಟರು. +ನಾನು ಬಡವ, ಅದರಿಂದ ಜೈಲಾಯ್ತು.” +ಕಡೆಯ ಎರಡು ಮಾತು ಹೇಳುವಾಗ ಅವನ ಕಂಠ ಗದ್ಗದವಾಯಿತು. +ಕಣ್ಣಿನಲ್ಲಿ ನೀರುಕ್ಕಿ ಮಕ್ಕಳಂತೆ ಬಿಕ್ಕಿಬಿಕ್ಕಿ ಅತ್ತ. +ಅದನ್ನು ನೋಡಿ ಅವನ ಮಗ ನಾಗನೂ ಆಳುತ್ತಿದ್ದ. +ಸೀತೆಯ ಕಣ್ಣಿನಲ್ಲಿಯೂ ನೀರು ತುಳುಕಾಡುತ್ತಿತ್ತು. +ತಿಮ್ಮು ಏನನ್ನೋ ಯೋಚಿಸುತ್ತ ಕುಳಿತಿದ್ದ. +ಲಿಂಗನ ಎದೆಯೆಲ್ಲ ಸ್ವಲ್ಪ ತಣಿತ ಮೇಲೆ, ತಿಮ್ಮ ಮಕ್ಕಾಳಾಡುವ ಮುದ್ದು ಮಾತಿನಿಂದ “ಲಿಂಗಾ, ನಿನಗೆ ಜೈಲಿನಲ್ಲಿ ತುಂಬಾ ಕಷ್ಟ ಕೊಟ್ಟರೆ?” ಎಂದು ಕೇಳಿದ. +“ತಿಮ್ಮಯ್ಯಾ. ಈಗ ಅದನ್ನೆಲ್ಲ ಹೇಳಿ ನೆನೆದುಕೊಂಡು ಅತ್ತರೆ ಏನು ಬಂದ ಹಾಗಾಯ್ತು? +ನಾನು ಜೈಲಿನಿಂದ ಬರಬೇಕಾದರೆ ನನ್ನ ಹೆಂಡತಿ ತೀರಿಕೊಂಡಿದ್ದಳು. +ನನ್ನ ಮಗ ಪರದೇಶಿಯಾಗಿ ಯಾರ್ಯಾರ ಕೈಗೆಲ್ಲಾ ಹಾರೈಸಿಕೊಂಡು ಅಲೆದುಕೊಂಡಿದ್ದ. +”“ಹಾಗಾದರೆ ಎಷ್ಟು ವರ್ಷ ಜೈಲಿನಲ್ಲಿದ್ದೆಯೋ, ಲಿಂಗ?” +“ಎರಡು ವರ್ಷ, ತಿಮ್ಮಯ್ಯಾ, ಎರಡು ವರ್ಷ! +ಅದರ ಮೇಲಾದರೂ ಸುಖ ಅಂತೀರೋ! +ಅದೂ ಇಲ್ಲ. +ನಂಟರಿಷ್ಟರೆಲ್ಲ ನನ್ನ ದೂರ ಮಾಡಿದರು. +ಜೈಲಿಗೆ ಹೋಗಿ ಬಂದವನೆಂದು. +ಮಗನನ್ನು ಕಟ್ಟಿಕೊಂಡು ಅಲೆದೂ ಅಲೆದೂ ಸುಟ್ಟು ಸುಣ್ಣಾಗಿದ್ದೆ. +ಕಡೆಗೆ ಯಾರೋ ಶಿವನೂರು ಸುಬ್ಬಣ್ಣ ಗೌಡರಲ್ಲಿಗೆ ಹೋಗು ಎಂದರು. +ಇಲ್ಲಿಗೆ ಬಂದೆ. +ಮಾರಾಯರು, ನಿಮ್ಮ ತಂದೆ, ಅನ್ನ ಬಟ್ಟೆ ಕೊಟ್ಟು ಸತ್ತುಹೋದವನ ಬದುಕಿಸಿದರು. +ಲಿಂಗ ತನ್ನ ಕತೆ ಹೇಳಿ ಮುಗಿಸಲು, ತಿಮ್ಮು ನಿಟ್ಟುಸಿರು ಬಿಟ್ಟು, “ಲಿಂಗಾ, ನೀನಿನ್ನು ನಮ್ಮನೆ ಬಿಟ್ಟು ಹೋಗಲೇ ಬೇಡ. +ನಾಗನೂ ಹಾಂಗೇ.” ಎಂದ. +“ಆಗಲಿ ನನ್ನೊಡೆಯ, ಹಾಂಗೇ ಆಗಲಿ.” +ಸಿಡಿಲು, ಗುಡುಗು, ಮಿಂಚು, ಗಾಳಿ, ಮಳೆ-ಇವುಗಳಿಂದ ರಾತ್ರಿ ಹುಚ್ಚೆದ್ದ ಭೈರವಿಯಾಗಿತ್ತು. +ಮನೆಯಲ್ಲಿ ಎಲ್ಲರೂ ಮಲಗಿದ್ದರು. +ಲಿಂಗ ಸುಬ್ಬಣ್ಣಗೌಡರು ಇಬ್ಬರೇ ಎಚ್ಚರವಾಗಿ ಜಗಲಿಯ ಮೇಲೆ ಕುಳಿತಿದ್ದರು. +ಇಬ್ಬರೂ ಆಗಾಗ್ಗೆ ಹೋಗಿ ಹೊಳೆ ನೋಡಿಕೊಂಡು ಬರುತ್ತಿದ್ದರು. +ಕೆರೆಯ ನೀರು ಬೇಗ ಬೇಗ ಏರುತ್ತಿತ್ತು. +“ಲಿಂಗಾ, ದೋಣಿ ಎಲ್ಲಿ ಕಟ್ಟಿದ್ದೀಯೆ? +ಮನೆ ಬಿಡಬೇಕಾಗಿ ಬರಬಹುದು.” +ಲಿಂಗ ಸ್ವಲ್ಪ ಗಾಬರಿಯಾಗಿ “ಆ ಹುಳಿ ಮಾವಿನಮರದ ಬೇರಿಗೆ ಕಟ್ಟಿದ್ದೆ! +ನೀರೇರೀತೋ ಏನೋ? +ಅಲ್ಲಿಗೆ ಹೋಗುವುದಕ್ಕೆ ಆಗುತ್ತೋ ಇಲ್ಲವೋ? +ಎಂದು ಹೇಳುತ್ತಾ ಲಾಟೀನು ತೆಗೆದುಕೊಂಡು ಹೊರಗೆ ಓಡಿದ. +ಸುಬ್ಬಣ್ಣಗೌಡರೂ ಅವನ ಹಿಂದೆಯೇ ಓಡಿದರು. +ಹೋಗಿ ನೋಡಲು ಲಿಂಗ ಊಹಿಸಿದಂತೆಯೇ ಆಗಿತ್ತು. +ನೆರೆ ಮಾವಿನಮರದ ಬುಡವನ್ನು ಮುಚ್ಚಿಬಿಟ್ಟಿತ್ತು. +ಇಬ್ಬರಿಗೂ ಸ್ವಲ್ಪ ಹೊತ್ತು ಏನೊ ತೋರಲಿಲ್ಲ. +ಸುಮ್ಮನೆ ಹೊಳೆಯ ಕಡೆ ನೋಡುತ್ತಾ ನಿಂತರು. +ಅಷ್ಟರಲ್ಲಿಯೆ ಮನಯೆ ಹಿಂದುಗಡೆ ಏನೋ ಬಿದ್ದ ಹಾಗೆ ದೊಡ್ಡ ಶಬ್ಧವಾಯಿತು. +ಇಬ್ಬರಿಗೂ  ಅಲ್ಲಿಗೆ ಓಡಿದರು. +ಹಿತ್ತಲಕಡೆ ಗೋಡೆ ಬಿದ್ದು ನೀರು ಅಂಗಳಕ್ಕೆ ನುಗ್ಗುತ್ತಿತ್ತು. +ಇನ್ನು ಕಾಲಹರಣ ಮಾಡಿದರೆ ಸರ್ವನಾಶವೆಂದು ಗೌಡರಿಗೆ ತೋರಿತು. +ಕೋಣೆ ಕೋಣೆಗೆ ನುಗ್ಗಿ ಮನೆಯವರನ್ನೆಲ್ಲ ಎಬ್ಬಿಸಿದರು. +ಅವರೆಲ್ಲ ಅರೆ ನಿದ್ದೆಯಲ್ಲಿ ಗಾಬರಿಯಿಂದ ಜಗಲಿಗೆ ನುಗ್ಗಿದರು. +ಗೌಡರು ಅವರಿಗೆ ಗಾಬರಿಪಡಬೇಡಿರೆಂದು ಸಮಾಧಾನ ಹೇಳಿ ಲಿಂಗನಿಗಾಗಿ ಸುತ್ತಲೂ ನೋಡಿದನು. +ಲಿಂಗ ಅಲ್ಲಿರಲಿಲ್ಲ. +“ಲಿಂಗಾ!ಲಿಂಗಾ!ಎಂದು ಕೂಗಿದರು. +ಉತ್ತರ ಬರಲಿಲ್ಲ. +ಅಷ್ಟು ಹೊತ್ತಿಗೆ ಪ್ರಚಂಡವಾಗಿ ಗಾಳಿ ಬೀಸತೊಡಗಿತು. +ಹುಚ್ಚೆದ್ದು ಸರಿ ಸುರಿಯಿತು. +ಹೊರ ಅಂಗಳದಲ್ಲಿದ್ದ ತೆಂಗಿನಮರ ಮುರಿದು ಮನೆಗೆ ಹೊದಿಸಿದ ಸತುವಿನ ತಗಡುಗಳ ಮೇಲೆ ಬಿದ್ದು, ಬಹು ದೊಡ್ಡ ಶಬ್ದವಾಯಿತು. +ತಿಮ್ಮು, ಸೀತೆ, ನಾಗ ಮೂವರು ಕಿಟ್ಟನೆ ಕಿರಿಚಿಕೊಂಡರು. +ನಾಗಮ್ಮನವರೂ “ದೇವರೇ” ಎನ್ನುತ್ತಿದ್ದರು. +ಗೌಡರು ಅವರಿಗೆಲ್ಲ ಧೈರ್ಯ ಹೇಳಿ, ಲಿಂಗನನ್ನು ಹುಡುಕಿಕೊಂಡು ಕರೆಯುತ್ತಾ ಓಡಿದರು. +ಹೋಗಿ ನೋಡಲು ಲಿಂಗ ಮಾವಿನಮರ ಬುಡ ಸೇರಿ ದೋಣಿ ಬಿಚ್ಚುತ್ತಿದ್ದ. +ಮನೆಯ ಬೆಳಕಂಡಿಗೆ ಒಂದು ಕತ್ತದ ಮಿಣಿ ಕಟ್ಟಿ, ಅದನ್ನು ಹಿಡಿದು ಅದರ ಸಹಾಯದಿಂದ ಮಾವಿನ ಮರದ ಬುಡಕ್ಕೆ ಸೇರಿದ್ದ. +ತುಸು ಹೊತ್ತಿನಲ್ಲಿಯೆ ದೋಣಿ ಬಿಚ್ಚಿ. +ಅದರೊಳಗೆ ದಾಟಿದ. +ಬೆಳಕಂಡಿಗೆ ಬಿಗಿದ ಹುರಿಯನ್ನು ಮಾತ್ರ ಕೈಯಲ್ಲಿಯೇ ಹಿಡಿದುಕೊಂಡಿದ್ದ. +ಗಾಳಿಯ ಅಬ್ಬರದಲ್ಲಿ ಲಿಂಗ ಗೌಡರನ್ನು ಕುರಿತು “ಅಯ್ಯಾ, ಹಗ್ಗ ಹಿಡಿದು ಎಳೆಯಿರಿ” ಎಂದು ಗಟ್ಟಿಯಾಗಿ ಕೂಗಿದ. +ಗೌಡರೂ ಹಾಗೆಯೆ ಮಾಡಿದರು. +ದೋಣಿ ದಡ ಸೇರಿತು. +ಅಷ್ಟರಲ್ಲಿ ಒಳಂಗಳದಿಂದ ಏಳೆಂಟು ಜನ ಕಿಟ್ಟನೆ ಚೀತ್ಕರಿಸಿದಂತಾಯಿತು. +ಗೌಡರು “ಲಿಂಗಾ, ದೋಣಿ ಬಾಗಿಲಿಗೆ ತೆಗೆದುಕೊಂಡು ಬಾ!ಬೇಗ!” ಎಂದು ಹೇಳಿ ಒಳಗೆ ನುಗ್ಗಿದರು. +ಹೆಬ್ಬಾಗಿಲು ದಾಟುವುದರೊಳಗಾಗಿಯೆ ಕೆಲಸದ ಹೆಂಗಸು ಸೋಮಕ್ಕ ಬಾಯಿ ಕಳೆದುಕೊಂಡು ಕಣ್ಕಣ್ಣು ಬಿಟ್ಟುಕೊಂಡು ಏದುತ್ತಾ ಓಡಿಬಂದಳು. +ಗೌಡರನ್ನು ಕಂಡೊಡನೆ ಸೋಮಕ್ಕ ಕೂಗಿದಳು: +“ಉಪ್ಪರಿಗೆ ಗೋಡೆ ಬಿದ್ದು ಹೋಯ್ತು! +ಜಗಲಿಗೆ ನೀರೇರ್ತಾ ಇದೆ.” +ಗೌಡರು ಜಗಲಿಗೆ ಬಂದು “ನೀವೆಲ್ಲಾ ಹೆಬ್ಬಾಗಿಲಿಗೆ ಓಡಿ! +ಬೇಗ!” ಲಿಂಗ ದೋಣಿ ತರ್ತಾನೆ! +ಏ, ನಾಗಾ, ನೀನಿಲ್ಲಿ ಬಾರೊ” ಎಂದರು. +ನಾಗ ಗೌಡರ ಸಂಗಡ ಹೋದ. +ನಾಗಮ್ಮ, ತಿಮ್ಮು, ಸೀತೆ, ಲೋಕಮ್ಮ, ಸೋಮಕ್ಕನ ಮಗಳು ದಾಸಮ್ಮ, ಎಲ್ಲರೂ ಹೆಬ್ಬಾಗಿಲಿಗೆ ಓಡಿದರು. +ಸೋಮಕ್ಕ ಮಾತ್ರ ಮಾಣಿಗೆ ಕೋಣೆಯಲ್ಲಿ ತಾನು ಇಟ್ಟಿದ್ದ “ಪುಟ್ಟ ಗಂಟು” ತರಲು ಓಡಿದವಳು ಹಿಂದಕ್ಕೆ ಬರಲೇ ಇಲ್ಲ. +ಗೌಡರು ಜಗಲಿಯ ಮೇಲಿದ್ದ ತಮ್ಮ ದೊಡ್ಡ ಬೀರಿನ ಬಾಗಿಲು ತೆಗೆದು ಎರಡು ಪೆಟ್ಟಿಗೆಗಳನ್ನು ಈಚೆಗೆ ತೆಗೆದಿಟ್ಟು ಬೀರಿನ ಬಾಗಿಲು ಹಾಕಿ ಬೀಗ ಹಾಕಿದರು. +ಅಲ್ಲಿದ್ದ ಕಬ್ಬಿಣದ ಸಂದುಕದ ಬಾಗಿಲನ್ನೂ ತೆರೆದರು. +ಆದರೆ ಮತ್ತೇನನ್ನೋ ಯೋಚಿಸಿ ಅದನ್ನು ಪುನಃ ಹಾಗೆಯೆ ಮುಚ್ಚಿ ಬೀಗ ಹಾಕಿದರು. +“ನಾಗಾ, ಈ ಪೆಟ್ಟಿಗೆ ಹೊತ್ತುಕೊಳ್ಳೊ” ಎಂದರು. +ನಾಗ ಒಂದು ಹೊತ್ತುಕೊಂಡ; + ಗೌಡರು ಮತ್ತೊಂದು ಹೊತ್ತುಕೊಂಡರು. +ಲಿಂಗ ಎಲ್ಲರನ್ನೂ ದೋಣಿಗೆ ಹತ್ತಿಸಿ ಅದರ ತುದಿ ಹಿಡಿದುಕೊಂಡು ನಿಂತಿದ್ದ. +ಗೌಡರು ಓಡಿ ಬಂದು ಎರಡು ಪೆಟ್ಟಿಗೆಗಳನ್ನು ದೋಣಿಯೊಳಗಿಟ್ಟು, ನಾಗನನ್ನೂ ಎತ್ತಿ ದೋಣಿಗೆ ಹಾಕಿ, ತಾವೂ ಒಳಗೆ ದಾಟಿ, ಲಿಂಗನಿಗೆ ದೋಣಿ ಹತ್ತುವಂತೆ ಹೇಳಿ, ಒಂದು ಹುಟ್ಟು ತೆಗೆದುಕೊಂಡು ದೋಣಿಯ ತುದಿಯಲ್ಲಿ ಕುಳಿತರು. +ಅಷ್ಟು ಹೊತ್ತಿಗೆ ಸೀತೆ ನಾಗಮ್ಮನವರನ್ನು ಕುರಿತು “ಅವ್ವಾ ಸೋಮಕ್ಕೆಲ್ಲಿ?” ಎಂದು ಕೇಳಿದಳು. +ಆಗಲೆ ಮನೆ ಮುರಿದು ಬಿದ್ದಂತಾಗಿ ಏನೋ ಒಂದು ಚೀತ್ಕಾರದ ಧ್ವನಿಯೂ ಕೇಳಿಬಂದಿತು. +ಸೋಮಕ್ಕನ ಆಸೆಯನ್ನು ಅವಳ ಮಗಳು ದಾಸಮ್ಮ ಕೂಡ ಬಿಟ್ಟಳು. +ದೋಣಿ ಬಹಳ ಸಣ್ಣದು. +ಐದಾರು ಜನರು ಕೂರುವಂತಾದ್ದು. +ತುಂಬದ ನೆರೆಯಲ್ಲಂತೂ ಇಬ್ಬರೇ ಸರಿ. +ಆಗಲೇ ಅದರೊಳಗೆ ಏಳು ಜನರಿದ್ದರು. +ಸಾಲದಿದ್ದಕ್ಕೆ ಜೊತೆಗೆ ಎರಡು ಪೆಟ್ಟಿಗೆ ಬೇರೆ; +ಲಿಂಗನಿಗೆ ಜಾಗವೇ ತೋರದೆ, ಬಗೆಯೇ ಹರಿಯದೆ ಸುಮ್ಮನೆ ನಿಂತು ದೋಣಿ ಸುರಕ್ಷಿತವಾಗಿ ದಡ ಸೇರುವುದೇ ಎಂದು ಚಿಂತಿಸುತ್ತಿದ್ದ. +ಲಿಂಗ ತಡಮಾಡಿದ್ದನ್ನು ಕಂಡು ಗೌಡರು “ಲಿಂಗಾ, ಹೊತ್ತೇಕೋ?ಹತ್ತೋ!” ಎಂದು ಕಳವಳದಿಂದ ಕೂಗಿ ಗದರಿಸಿದರು. +ಲಿಂಗ “ಅಯ್ಯಾ, ಜಾಗವೇ ಇಲ್ಲವಲ್ಲ. +ಈಗಾಗಲೇ ದೋಣಿಗೆ ಭಾರ ಹೆಚ್ಚಾಗಿದೆ. +ನಾನೂ ಕೂತರೆ ದೋಣಿ ದಡ ಕಾಣುವ ಬಗೆ?” ಎಂದ. +“ಹಾಗಾದರೆ ಈಗ ಮಾಡೋದೇನೊ? +ಏನಾದರೂ ಆಗಲಿ ಹತ್ತು. +ದೇವರು ಮಾಡಿಸಿದ್ದಾಯಿತು” ಎನ್ನುತ್ತಾ ಗೌಡರು ನದಿಯ ಕಡೆ ನೋಡಿದರು. +ಅವರ ಮೈ ಸ್ವಲ್ಪ ನಡುಗಿತು. +ಲಿಂಗ “ಹಾಗಾದರೆ ಅಯ್ಯಾ, ಒಂದು ಕೆಲಸ ಮಾಡಿ; ನೀವೆಲ್ಲಾ ದಡ ಸೇರಿದ ಮೇಲೆ ದೋಣಿ ಕೊಟ್ಟು ಯಾರನ್ನಾದರೂ ಕಳ್ಸಿ. +ಅಲ್ಲೀತನಕ ನಾ ಇಲ್ಲೇ ಇರ್ತೇನೆ. +ನಿಮಗೇನೂ ಭಯ ಬೇಡಿ” ಎಂದ. +ಗೌಡರಿಗೆ ಸಿಟ್ಟು ಬಂತು. +ಲಿಂಗನಿಗೆ ದೋಣಿ ಹತ್ತುವಂತೆ ಗಟ್ಟಿಯಾಗಿ ಕೂಗಿ ಅಪ್ಪಣೆ ಮಾಡಿದರು. +ಲಿಂಗ ಮರುಮಾತಾಡದೆ ದೋಣಿಯ ಮತ್ತೊಂದು ತುದಿಯಲ್ಲಿ ಹುಟ್ಟು ಹಿಡಿದು ಕುಳಿತ. +ಗೌಡರು ತಮ್ಮ ತೋಟಾಕೋವಿಯಿಂದ ಹತ್ತು ಹನ್ನೆರಡು ಬೆದರುಗುಂಡು ಹಾರಿಸಿದರು. +ದೋಣಿ ಹೊರಟಿತು. +ಆ ಗಾಳಿ, ಆ ಮಳೆ, ಆ ಕತ್ತಲು ಇವುಗಳ ನಡುವೇ ಬಂದೂಕಿನ ‘ಢಂ ಢಂ’ ಶಬ್ದಗಳು ಗಂಭೀರವಾಗಿ ಹೊರಟು ಮಲೆನಾಡಿನ ಬೆಟ್ಟಗುಡ್ಡಗಳಿಂದ ಗಂಭೀರವಾಗಿ ಮರುದನಿಯಾದುವು, ದೂರದ ಹಳ್ಳಿಗಳಲ್ಲಿದ್ದ ಜನರು ಎಚ್ಚತ್ತು ಗುಂಡಿನ ಶಬ್ದಗಳನ್ನು ಕೇಳಿ ಬೆರಗಾದರು. +ಶಿವನೂರಿಗೆ ಎರಡು ಮೈಲಿ ದೂರದಲ್ಲಿದ್ದ ನುಗ್ಗೇಹಳ್ಳಿಯಲ್ಲಿ ಮನೆಯ ಜಗಲಿಯ ಮೇಲೆ ಮಲಗಿದ್ದ ರಾಮೇಗೌಡರಿಗೂ ಅವರ ತಮ್ಮ ಸಿದ್ಧೇಗೌಡರಿಗೂ ಈಡಿನ ಶಬ್ದ ಕೇಳಿ ಎಚ್ಚರವಾಗಿ ಬೆರಗಿನಿಂದ ಎದ್ದು ಕುಳಿತರು. +ಸಿದ್ಧೇಗೌಡರು ರಾಮೇಗೌಡರನ್ನು ಕುರಿತು “ಅಣ್ಣಾ, ಅದೇನೋ ಈಡು ಕೇಳಿಸಿದುವಲ್ಲ?” ಎಂದರು. +ರಾಮೇಗೌಡರು “ಎತ್ತ ಮುಖದಿಂದ ಕೇಳಿಸಿದುವೋ?” ಎಂದರು. +“ಕೆಮ್ಮಣ್ಣುಬ್ಬಿನ ಕಡೆಯಿಂದ ಅಂತ ಕಾಣ್ತದಪ್ಪಾ.” +“ಅಲ್ಲಾ ನೋಡಿ, ನಂಗೇಕೋ ಸ್ವಲ್ಪ ಸಂಶಯಾನೆ. +ಶಿವನೂರಿನ ಕಡೆಯಿಂದ ಕೇಳಿಸಿದ ಹಾಂಗಾಯ್ತು. +“ಏನೋ ಸಂಗತಿ ಇರಬೇಕಪ್ಪಾ. ಏನಾದ್ರಾಗಲಿ. +ನಾಲ್ಕೈದು ಜನ ಕರಕೊಂಡು ಹೋಗೋಣ.” +ಸಿದ್ಧೇಗೌಡರು ಅವಸರದಿಂದ ಲಾಟೀನು ಹೊತ್ತಿಸಿದರು. +ರಾಮೇಗೌಡರು ಮೂಲೆ ಹಿಡಿದು ಮಲಗಿ ಕೊರೆಯುತ್ತಿದ್ದ ರಂಗನನ್ನು ಎಬ್ಬಿಸಿ, ನಾಲ್ಕೈದು ಜನ ಗಟ್ಟದ ಕೆಳಗಿನವರನ್ನು ಕರೆತರುವಂತೆ ಹೇಳಿದರು. +“ರಾಮಾ!ರಾಮಾ!” ಎಂದು ಹೆಂಗಸರು ಮಕ್ಕಳ ಗೋಳಾಟ ಪ್ರವಾಹದ ಅಲೆಗಳ ಸೆಳವಿನ ನಡುವೆ ಸಿಕ್ಕಿ ಏಳುತ್ತಾ ಬೀಳುತ್ತ ತೇಲುವ ದೋಣಿಯಿಂದ ಹೊರಟು ಗಾಳಿಯ ಭೋರಾಟದಲ್ಲಿ ಸೇರುತ್ತಿತ್ತು. +ಸುಬ್ಬಣ್ಣಗೌಡರು, ಲಿಂಗ ಇಬ್ಬರೂ ಎದೆಗೆಡದೆ ಹುಟ್ಟು ಹಾಕುತ್ತಿದ್ದರು. +ದೋಣಿಯ ನಡುವೆ ಇದ್ದ ಲಾಟೀನಿನ ಬೆಳಕು, ಕಗ್ಗತ್ತಲೆಗೆ ಹೆದರಿ ಮೂಲೆ ಸೇರೀತೋ ಏನೋ ಹಾಗೆ, ತನ್ನ ಸುತ್ತಲೂ ಒಂದಡಿಯ ಜಾಗವನ್ನು ಮಾತ್ರ ಬೆಳಗುತ್ತಿದ್ದಿತು. +ಭಾರದಿಂದ ದೋಣಿ ಈಗಲೋ  ಆಗಲೋ ಮುಳುಗುವಂತೆ ತೋರುತ್ತಿತ್ತು. +ಗೌಡರು ದೋಣಿಯಲ್ಲಿದ್ದ ಎರಡು ಬೆಲೆಯುಳ್ಳ ಪೆಟ್ಟಿಗೆಗಳನ್ನೂ ತೆಗೆದು ಹೊಳೆಗೆ ಎಸೆದರು. +ಆದರೂ ಭಾರ ಕಡಿಮೆಯಾಗಲಿಲ್ಲ. +ಎಷ್ಟು ಹೇಳಿದರೂ ಕೇಳದೆ ಹೆಂಗಸರು ಮಕ್ಕಳು “ರಾಮಾ, ರಾಮಾ” ಎಂದು ಕೂಗಿ ಗೋಳಾಡುವುದನ್ನು ಬಿಡಲೇ ಇಲ್ಲ. +ದಿಕ್ಕು ಕೆಟ್ಟ ಹುಚ್ಚನಂತೆ ದೋಣಿ ಅಲೆಯತೊಡಗಿತು. +ಒಂದು ಸಾರಿ ಅದು ಮುಳುಗುವಂತಾಗಿ ಸ್ವಲ್ಪ ನೀರು ಒಳಗೆ ನುಗ್ಗಿತು. +ಮತ್ತೆ “ರಾಮಾ ರಾಮಾ” ಎಂದು ಬೊಬ್ಬೆ ಹಾಕಿದರು. +ಹುಟ್ಟು ಹಾಕುತ್ತಲಿದ್ದ ಲಿಂಗನು ಹೆಂಗಸರು ಮಕ್ಕಳ ಗೋಳನ್ನು ಕಂಡು ಎದೆ ಮರುಗಿದನು. +ದೋಣಿ ಭಾರದಿಂದ ಮುಳುಗುವುದು ಖಂಡಿತವೆಂದೇ ಅವನು ನಿಶ್ಚಯಿಸಿದನು. +ಭಾರವನ್ನು ಕಡಮೆ ಮಾಡುವ ದಾರಿಯನ್ನು ಯೋಚಿಸಿದನು; ಬಗೆಯೇ ಹರಿಯಲಿಲ್ಲ. +ಸ್ವಲ್ಪ ಹೊತ್ತಿನ ಮೇಲೆ ಇದ್ದಕಿದ್ದ ಹಾಗೆ ಅವನ ಮುಖ ಗಂಭೀರವಾಯಿತು. +ಹುಟ್ಟುಹಾಕುವುದನ್ನು ನಿಲ್ಲಿಸಿದ. +ಸುತ್ತಲೂ ನೋಡಿದ. +ಮಳೆಯ ಭರದಲ್ಲಿ ಒಬ್ಬರಿಗೊಬ್ಬರು ಕಾಣುತ್ತಲೇ ಇರಲಿಲ್ಲ. +ಕಾಣುವ ಹಾಗಿದ್ದರೂ ಯಾರೂ ನೋಡುವ ಸ್ಥಿತಿಯಲ್ಲಿರಲಿಲ್ಲ. +ತಾನು ಹೊಳೆಗೆ ಹಾರಿದರೆ ಭಾರ ಕಡಿಮೆಯಾಗಿ, ಸುರಕ್ಷಿತವಾಗಿ ದೋಣಿ ದಡಕ್ಕೆ ಹೋಗುವುದೆಂದು ಹಾರೈಸಿದ. +ತನ್ನನ್ನು ಲೋಕವೆಲ್ಲ ಕಳ್ಳನೆಂದು ದೂರಮಾಡಿದಾಗ, ಅನ್ನ  ಬಟ್ಟೆ ಕೊಟ್ಟು ಸಾಕಿದವರ ಬಳಗವನ್ನು ಹೇಗಾದರೂ ಉಳುಹಬೇಕೆಂದು ಮಹಾಲೋಚನೆ ಮಾಡಿದ. +ಹುಟ್ಟನ್ನು ದೋಣಿಯ ಒಳಗಿಟ್ಟು ಹೊಳೆಗೆ ಹಾರಲು ಸಿದ್ಧನಾದ. +ಇನ್ನೇನು ಹಾರಬೇಕು! +ಅಷ್ಟರಲ್ಲಿಯೆ ತನ್ನ ಮಗನ ನೆನಪಾಯಿತು. +ಎದೆ ನಡುಗಿ ಹಿಂಜರಿಯಿತು. +ಹಾಗೆಯೆ ನಿಂತ. +ಅಷ್ಟರಲ್ಲಿಯೆ ದೋಣಿ ಮುಳುಗುವಂತಾಗಿ “ರಾಮ!ರಾಮ!!ಅಯ್ಯೋ!” ಎಂದು ಕೂಗಿಕೊಂಡರು. +ಲಿಂಗ ಬಿಸುಸುಯ್ದ. +ಎಲ್ಲರೂ ಇದ್ದಂತೆಯೇ ದೋಣಿ ದಡವನ್ನು ಸೇರಬಾರದೇಕೆ?ಎಂದು ಯೋಚಿಸಿದ. +ಮತ್ತೆ, ಅದು ಆತ್ಮವಂಚನೆಯ ಆಲೋಚನೆ ಎಂದು ತಿಳಿದ. +“ಅಯ್ಯೋ!” ಎಂದು ಮತ್ತೆ ರೋದಿಸಿದರು. +ಲಿಂಗ ಹಿಂದುಮುಂದು ನೋಡದೆ “ರಾಮ!ರಾಮ!!” ಎಂದುಕೊಂಡು ಹೊಳೆಗೆ ಹಾರಿದ. +ಅವನು ಹಾರಿದ್ದು ಆ ಕಗ್ಗತ್ತಲಲ್ಲಿ, ಆ ಗಾಳಿ ಮಳೆ ಹೊಳೆಗಳ ಭೋರಾಟದಲ್ಲಿ, ಯಾರಿಗೂ ತಿಳಿಯಲಿಲ್ಲ. +ದೋಣಿಯ ಭಾರ ಕಡಮೆಯಾಗಿ ಮೊದಲಿಗಿಂತಲೂ ಸ್ವಲ್ಪ ಸರಾಗವಾಗಿ  ಹೋಗತೊಡಗಿತು. +ಗೌಡರು “ಲಿಂಗಾ, ದೋಣಿ ಸ್ವಲ್ಪ ಸರಾಗವಾಗಿ ಹೋಗುತ್ತದೆಯೋ ಭಗವಂತನ ದಯೆಯಿಂದ” ಎಂದರು. +ಲಿಂಗನ ದಯೆಯೂ ಜೊತೆಗೆ ಸೇರಿತ್ತೆಂದು ಅವರಿಗೆ ತಿಳಿದಿರಲಿಲ್ಲ. +ಅಷ್ಟರಲ್ಲಿ ಹೆಂಗಸರು ಮಕ್ಕಳೆಲ್ಲ “ದೀಪ!ದೀಪ!” ಎಂದು ಕೂಗಿದರು. +ಸುಬ್ಬಣ್ಣಗೌಡರು ತಿರುಗಿ ನೋಡಲು, ಬಿಳಿಯಾದ ಹೊಳೆಯ ದಡದಲ್ಲಿ ಐದಾರು ದೀಪಗಳು ಕಂಡುಬಂದವು. +ದೀಪದ ಬೆಳಕಿನಲ್ಲಿ ಹತ್ತು ಹದಿನೈದು ಜನರು ಸುಳಿದಾಡುತ್ತಿದ್ದುದನ್ನೂ ಕಂಡರು. +ಅಂಚಿನಿಂದ ನಾಲ್ಕೈದು ಬಂದೂಕಿನ ಶಬ್ದಗಳೂ ಕೇಳಿಸಿದುವು. +ಮೆಲ್ಲಮೆಲ್ಲನೆ ತೇಲುತ್ತಾ ದೋಣಿ ದಡ ಮುಟ್ಟಿತು. +ನುಗ್ಗೇಹಳ್ಳಿಯ ರಾಮೇಗೌಡರೂ ಸಿದ್ದೇಗೌಡರೂ ಓಡಿಬಂದು ಹೆಂಗಸರು ಮಕ್ಕಳನ್ನೆಲ್ಲಾ ಎಚ್ಚರಿಕೆಯಿಂದ ದೋಣಿಯಿಂದ ಇಳಿಸಿದರು. +ಸುಬ್ಬಣ್ಣಗೌಡರು ಉಸ್ಸೆಂದು ಇಳಿದರು. +ಎಲ್ಲರಿಗೂ ದಡ ಸೇರಿದೆವಲ್ಲಾ ಬದುಕಿದೆವಲ್ಲಾ ಎಂಬುದೊಂದೇ ಯೋಚನೆ. +ಆ ಆನಂದದ ಸಡಗರದಲ್ಲಿ ಲಿಂಗನ ನೆನಪು ಆಗದಿದ್ದುದು ಏನೂ ಅತಿಶಯವಲ್ಲ. +ಆದರೆ ನಾಗ ಮಾತ್ರ ಅಳುತ್ತಿದ್ದ. +ಅದನ್ನು ನೊಡಿ ನುಗ್ಗೇಹಳ್ಳಿಯ ಸಿದ್ದೇಗೌಡರು “ಯಾಕಪ್ಪಾ ಅಳ್ತೀಯೇ? +ಏನಾಯ್ತೇ?” ಎಂದು ಕೇಳಿದರು. +ಅವನು ಬಿಕ್ಕಿಬಿಕ್ಕಿ ಅಳುತ್ತ “ಅಪ್ಪ!” ಎಂದ. +ಸುಬ್ಬಣ್ಣಗೌಡರು “ಏನದು, ಸಿದ್ದೇಗೌಡ್ರೆ?” ಎಂದರು. +“ಈ ಹುಡುಗ ಅಪ್ಪಾ ಎಂದು ಅಳ್ತಾನೆ! +”ಸುಬ್ಬಣ್ಣಗೌಡರ ಮುಖ ಬೆಳ್ಳಗಾಗಿ ತಟಕ್ಕನೆ ಎದ್ದುನಿಂತು “ಲಿಂಗಾ!ಲಿಂಗಾ!” ಎಂದು ಕರೆದರು. +ಕಾಡಿನಿಂದ “ಲಿಂಗಾ!ಲಿಂಗಾ!” ಎಂದು ಮರುದನಿಯಾಯಿತು. +ಲಿಂಗ ಎಲ್ಲಿಯೂ ಕಾಣಲಿಲ್ಲ. +ದೋಣಿಗೆ ಓಡಿದರು. +ಅಲ್ಲಿಯೂ ಇರಲಿಲ್ಲ. +ಘೋರವಾದ ಕಗ್ಗತ್ತಲನ್ನು ಹೊದೆದುಕೊಂಡು ಗಂಭೀರವಾಗಿಯೂ ಭೀಕರವಾಗಿಯೂ ವಿಶಾಲವಾಗಿಯೂ ಹರಿಯುವ ಕ್ರೂರ ನದಿಯನ್ನು ದಿಟ್ಟಿಸಿ ನೋಡಿದರು. +ಅವರ ಎದೆ ನಡುಗಿತು. +ಕಣ್ಣೀರು ಸುರಿಯಿತು. +“ಲಿಂಗಾ!ಲಿಂಗಾ!!” ಎಂದು ರೋದಿಸಿದರು. +ನಾಗನೂ ಬಿದ್ದು ಬಿದ್ದು ಅಳುತ್ತಿದ್ದನು. +ತಿಮ್ಮು ಸೀತೆ ಇಬ್ಬರೂ ಅಳಲಾರಂಭಿಸಿದರು. +“ನಮ್ಮ ಮನೆಯ ಒಂದು ಬೆಳಕೇ ಹೋಯಿತು” ಎಂದು ಸುಬ್ಬಣ್ಣಗೌಡರು ಅಲ್ಲಿದ್ದವರೊಡನೆ ಹೇಳಿಕೊಂಡು ಗೋಳಿಟ್ಟರು. +ಲಿಂಗನ ಆಕಸ್ಮಿಕವಾದ ಅನಿರೀಕ್ಷಿತ ಮರಣಕ್ಕಾಗಿ ಎಲ್ಲರೂ ಶೋಕಿಸಿದರು. +ಗೌಡರು ನಾಗನನ್ನು ಬಹಳವಾಗಿ ಸಂತೈಸಿದರೂ ಅವನು ಅಳುವುದನ್ನೂ “ಅಪ್ಪಾ!ಅಪ್ಪಾ!” ಎಂದು ಕರೆಯುವುದನ್ನೂ ಬಿಡಲೇ ಇಲ್ಲ. +ಲಿಂಗ ಹೊಳೆಯ ಪಾಲಾದುದು ಹೇಗೆ ಎಂಬುದು ಮಾತ್ರ ಒಬ್ಬರಿಗೂ ಬಗೆಹರಿಯಲಿಲ್ಲ. +ಸುಬ್ಬಣ್ಣಗೌಡರೂ ಲಿಂಗನ ಸುಳಿವು ಎಲ್ಲಾದರೂ ಕಾಣಬಹುದೋ ಎಂಬ ಆಸೆಯಿಂದ ದಡವನ್ನೆಲ್ಲಾ ಹುಡುಕಲು ಕೆಲವು ಆಳುಗಳನ್ನು ಕಳುಹಿಸಿದರು. +ರಾಮೇಗೌಡರು ಎಲ್ಲರನ್ನೂ ನುಗ್ಗೇಹಳ್ಳಿಗೆ ಬರುವಂತೆ ಪ್ರಾರ್ಥಿಸಿದರು. +ದಾರಿಯಲ್ಲಿ ಲಿಂಗನು ಹಠಾತ್ತಾಗಿ ಮರೆಯಾದ ವಿಚಾರವನ್ನೇ ಪ್ರಸ್ತಾಪಿಸಿ ವಿಸ್ಮಯ ಪಡುತ್ತಾ ಸ್ವಲ್ಪ ಹೊತ್ತಿನಲ್ಲಿಯೇ ಎಲ್ಲರೂ ನುಗ್ಗೇಹಳ್ಳಿಗೆ ಸೇರಿದರು. +ಬೆಳಗಾಯಿತು ಮಳೆ ಇನ್ನೂ ನಿಂತಿರಲಿಲ್ಲ. +ರಾತ್ರಿಯ ಗಡಿಬಿಡಿಯಿಂದ ಬಳಲಿ ಬೆಂಡಾದ ಸುಬ್ಬಣ್ಣಗೌಡರು ಹಾಸಗೆಯ ಮೇಲೆ ಮಲಗಿಕೊಂಡು ರಾಮೇಗೌಡರು ಸಿದ್ಧೇಗೌಡರೊಡನೆ ಹಿಂದಿನ ರಾತ್ರಿ ನಡೆದ ಸಂಗತಿಗಳನ್ನು ಕುರಿತು ಮಾತಾಡುತ್ತಿದ್ದರು. +ಅವರಿಗೆ ಸ್ವಲ್ಪ ದೂರದಲ್ಲಿ, ಆಳುತ್ತಿದ್ದ ನಾಗನನ್ನು ತಿಮ್ಮು ಸೀತೆ ಇಬ್ಬರೂ ಸಮಾಧಾನಪಡಿಸುತ್ತಿದ್ದರು. +ಸೀತೆ “ಅಳಬೇಡ, ನಾಗ: ಅಪ್ಪ ಬರ್ತಾನೆ” ಎಂದು ಅವನ ಕಣ್ಣೀರು ಒರೆಸಿದಳು. +ನಾಗ ಬಿಕ್ಕಿ ಬಿಕ್ಕಿ ಅತ್ತ. +ತಿಮ್ಮು “ಲಿಂಗ ಬರ್ತಾನೋ ನಾಗ” ಅಳೋದ್ಯಾಕೋ? +ಸುಮ್ಮನಿರೊ” ಎಂದು ಸಂತೈಸುತ್ತಿದ್ದ. +ಅಷ್ಟರಲ್ಲಿ ಹೊರಂಗಳದಲ್ಲಿ ಏನೋ ಗದ್ದಲವಗಿ “ಲಿಂಗ ಬಂದಾ!ಲಿಂಗ!” ಎಂಬ ಕೂಗು ಕೇಳಿಸಿತು. +ಸುಬ್ಬಣ್ಣಗೌಡರು ಎದ್ದು ಹೊರಗೆ ಓಡಿದರು. +ರಾಮೇಗೌಡರು ಮೊದಲಾದವರು ಅವರ ಹಿಂದೆಯೆ ನುಗ್ಗಿದರು. +ತಿಮ್ಮು ಸೀತೆ ಇಬ್ಬರೂ ನಾಗನನ್ನು ಎಳೆದುಕೊಂಡು ಅಲ್ಲಿಗೆ ಓಡಿದರು. +ವಾಸ್ತವವಾಗಿಯೂ ಲಿಂಗ ಬಂದಿದ್ದ! +ನಾಗ “ಅಪ್ಪಾ” ಎಂದು ಓಡಿಹೋಗಿ ಅವನನ್ನು ತಬ್ಬಿಕೊಂಡ. +ಲಿಂಗನ ಬಟ್ಟೆ ಬರಿಯೆಲ್ಲಾ ಒದ್ದೆಯಾಗಿ ಮೈಯೆಲ್ಲಾ ಕೆಸರಾಗಿತ್ತು. +ಬಹಳ ಬಳಲಿ ಕಂಗೆಟ್ಟು ನಡುಗುತ್ತಿದ್ದ ಅವನನ್ನು ಒಳಗೆ ಕರೆದುಕೊಂಡು ಹೋಗಿ, ಬೇರೆ ಬಟ್ಟೆ ಉಡಿಸಿ, ಕಾಫಿ ತಿಂಡಿ ಕೊಟ್ಟು, ಬೆಚ್ಚಗೆ ಮಲಗಿಸಿದರು. +ಆಮೇಲೆ ಸುಬ್ಬಣ್ಣಗೌಡರು ಅವನ ಹಾಸಗೆ ಬಳಿ ಕುಳಿತು “ಲಿಂಗ, ಇದೇನು ಸಮಾಚಾರ?” ಎಂದರು. +ಲಿಂಗ ಕಿರುದನಿಯಿಂದ “ಹುಟ್ಟುಹಾಕುತ್ತಾ ಇದ್ದೆ. +ಒಂದುಸಲ ದೋಣಿ ಮೇಲೆಕೆಳಕಾಗಲಿಲ್ಲವೇ? +ಆಗ ಮುಗ್ಗುರಿಸಿ ಹೊಳೆಗೆ ಬಿದ್ದೆ. +ದೋಣಿ ಹಿಡಿಯುವಷ್ಟರಲ್ಲಿಯೇ ಮುಂದಕ್ಕೆ ಹೋಯಿತು. +ನಾನು ಸ್ವಲ್ಪದೂರ ಈಜಿಕೊಂಡು ತೇಲಿಕೊಂಡು ಹೋದೆ. +ಏನೋ ನನ್ನ ಅದೃಷ್ಟದಿಂದ ಕಾಲಿಗೆ ದಿಣ್ಣೆ ಸಿಕ್ಕಿತು. + ನಿಂತೆ ಸೊಂಟದವರೆಗೂ ನೀರಿತ್ತು. +ಹಾಗೇ ನಿಂತಿದ್ದೆ. +ಬೆಳಗಾದ ಮೇಲೆ ಹೊಳೆ ಇಳಿಯಿತು. +ಏನೋ ನಿಮ್ಮನ್ನದ ಋಣ ಇನ್ನೂ ಇತ್ತು.” +ಅದಕ್ಕೆ ಗೌಡರು “ಅಲ್ಲೋ, ಹುಟ್ಟುಹಾಕುತ್ತಿದ್ದವನು ಮುಗ್ಗುರಿಸಿ ಬಿದ್ದರೆ ಹುಟ್ಟು ದೋಣಿಗೆ ಬರುವುದು ಹೇಗೋ?” +“ಏನೋ ಅಯ್ಯಾ, ದೇವರಿಗೇ ಗೊತ್ತು!” +ಮಧ್ಯಾಹ್ನ ಊಟ ಆದಮೇಲೆ ತಿಮ್ಮು ಸೀತೆ ಇಬ್ಬರೂ ನಾನು ಮೊದಲು ಹೇಳಿದ್ದು, ತಾನು ಮೊದಲು ಹೇಳಿದ್ದು ಎಂದು ಚರ್ಚೆಮಾಡುತ್ತಿದ್ದರು. +ನಾಗಮ್ಮ ಅಲ್ಲಿಗೆ ಬಮದು “ಏನ್ರೋ ಅದೂ?” ಎಂದರು. +ತಿಮ್ಮು “ಮೊದಲು ನಾನು ಹೇಳಿದ್ದಮ್ಮ, ಲಿಂಗ ಬರ್ತಾನೆ ಅಂತಾ” ಎಂದನು. +ಸೀತೆ “ಇಲ್ಲಮ್ಮ!ತಿಮ್ಮಣ್ಣಯ್ಯ ಬರೀ ಸುಳ್ಳ! +ನಾನೇ ಮೊದಲು ಹೇಳಿದ್ದು. +ಬೇಕಾದರೆ ನಾಗನ್ನೇ ಕೇಳಮ್ಮ.” +“ಯಾರಾದರೂ ಹೇಳಿದ್ದಾಗಲಿ! +ಅಂತೂ ಲಿಂಗ ಬಂದನಲ್ಲ. +ಅಷ್ಟೇ ಸಾಕು!” ಎಂದು ಹೇಳಿ ನಾಗಮ್ಮ ಒಳಗೆ ಹೋದರು. +ಹೋಳಿಗೆ ಪ್ರತಿಜ್ಞೆ. +ಕೆಲವು ದಿನಗಳ ಹಿಂದೆ ನನ್ನ ಗೆಳೆಯರೊಬ್ಬರ ಮನೆಗೆ ಹೋಗಿದ್ದೆ. +ಪುಣ್ಯವಶದಿಂದ ಆ ದಿನ ಅವರ ಮನೆಯಲ್ಲಿ ಏನೋ ವಿಶೇಷ. +ಅವರು ಸ್ವಲ್ಪ ದುಡ್ಡಿನವರು. +ಹೋಳಿಗೆ ಮೊದಲಾದ ಬಗೆಬಗೆಯ ಭಕ್ಷ್ಯಗಳನ್ನು ಮಾಡಿಸಿದ್ದರು. +ತಿಂಡಿಯೆಂದರೆ ನನಗೆ ಸ್ವಲ್ಪ ಹಾಗೆಹಾಗೆಯೇ-ಹತ್ತಿರದ ಸಂಬಂಧ! +ಎಲ್ಲರೂ ಊಟಕ್ಕೆ ಕುಳಿತಿದ್ದೆವು, ಮೊದಲು ಪಾಯಸ ಬಂತು! +’ಎಲ್ಲರೂ ಊಟ ಮಾಡಬಹುದು’ ಎಂಬ ಸಂಪ್ರದಾಯದ ಅಪ್ಪಣೆಯಾಯಿತು. +ಪಾಯಸ ಸುರಿಯುವುದಕ್ಕೆ ಕೈಕೊಟ್ಟೆವು, ಆ ಭೋರಾಟವನ್ನೇನೆಂದು ಹೇಳಲಿ! +ಆ ಸವಿಯಾದ ಪಾಯಸ ಸುರಿಯುವ ಗಲಿಬಿಲಿಯಲ್ಲಿ ಮರ್ಯಾದೆಯನ್ನು ಕೂಡ ಮರೆತು ಬಿಡುತ್ತೇವೆ! +ನಿಶ್ಯಬ್ದವಾಗಿ ಊಟ ಮಾಡಬೇಕೆಂದು ನಮ್ಮ ತಲೆಗೆ ಬಂದರಲ್ಲವೆ? +ಆದರೆ ನನಗೊಂದು ದೊಡ್ಡ ಸಂದೇಹವಿತ್ತು; +ಅದು ಮಾತ್ರ ನಿವೃತ್ತಿಯಾಯಿತು. +ಅದಾವುದೆಂದರೆ, ಈ ಬ್ರಹ್ಮಾಂಡದಲ್ಲಿ ಸಕಲವೂ ಲಯಬದ್ಧವಾದುದೆಂದು ತತ್ವಶಾಸ್ತ್ರದಲ್ಲಿ ಓದಿದ್ದೆನು. +ಎಷ್ಟೋ ಹುಡುಕಿದ್ದೆನು. +ನಿದರ್ಶನವಾವುದೂ ಸಿಕ್ಕಿಯೇ ಇರಲಿಲ್ಲ. +ಅಂದು ಸಿಕ್ಕಿತು. +ಅಷ್ಟೊಂದು ಜನ ಪಾಯಸ ಸುರಿಯುವುದರಲ್ಲಿ ಒಂದು ವಿಧವಾದ ಛಂದಸ್ಸಿರುವುದೆಂದು ಚೆನ್ನಾಗಿ ಮನಗಂಡೆ! +ಅದು ಹಾಗಿರಲಿ; +ಇನ್ನೊಂದರ ವಿಷಯವಾಗಿ ನನಗೂ ಇತರರಿಗೂ ತುಂಬಾ ವಾದವಿವಾದಗಳು ನಡೆದಿರುತ್ತವೆ. +’ಎಲ್ಲರೂ ಊಟ ಮಾಡಬಹುದು’ ಎಂಬ ಸಂಪ್ರದಾಯದ ಅಪ್ಪಣೆ! +ಈ ವಿಚಾರದಲ್ಲಿ ನನ್ನ ಅಭಿಪ್ರಾಯಗಳೂ ಇತರರ ಅಭಿಪ್ರಾಯಗಳಿಗೂ ತುಂಬಾ ಪ್ರಭೇದ. +ಇದೇ ನನ್ನ ತೀರ್ಪು: +ಆ ಸಂಪ್ರದಾಯದ ಅಪ್ಪಣೆ ಅನಾವಶ್ಯಕವಾದುದೂ ಅಲ್ಲದೆ ನಿಷ್ಪ್ರಯೋಜಕ. +ಅದನ್ನು ಅಜ್ಜಂದಿರ ಅಧಿಕ್ಯವೆಂದರೂ ಎನ್ನಬಹುದು. +ಎಲೆಯ ಮೇಲೆ ಪದಾರ್ಥವನ್ನು ಬಡಿಸಿದ ಮೇಲೆ ಊಟಮಾಡಬಹುದೆಂದೇ ಅರ್ಥವಾಗಲಿಲ್ಲವೆ? +ಆದರೆ ಕೆಲವರು ಹೀಗೆಂದು ಆಕ್ಷೇಪಿಸಬಹುದು: + ಬಹಳ ಜನಗಳು ಕುಳಿತಾಗ ಎಲ್ಲರಿಗೂ ಒಂದೇ ಸಲ ಬಡಿಸಲಾಗುವುದಿಲ್ಲ; + ಆಗ ಒಬ್ಬರು ತಿನ್ನುವುದು ಮತ್ತೊಬ್ಬರು ನೋಡುವುದು ಗೌರವಕ್ಕೆ ಕಡಮೆ; + ಆದ್ದರಿಂದ ಎಲ್ಲರಿಗೂ ಬಡಿಸಿದಮೇಲೆ ಅಪ್ಪಣೆ ಕೊಡುವುದು ಸಕಾರಣವಾದ ಸಂಪ್ರದಾಯ ಎಂದು. +ಇದಕ್ಕೆ ನಾನು ಹೇಳುವುದು ಇಷ್ಟೆ. +ನಾವೇನು ಮಠಗಳಲ್ಲಿ ತಿಂದು ತೇಗುವ ಜಡದೇಹಿಗಳೂ ಸೋಮಾರಿಗಳೂ ಖಂಡಿತವಾಗಿಯೂ ಅಲ್ಲ. +ಉದರ ಪೋಷಣೆಯೊಂದೇ ನಮ್ಮ ಪುರುಷಾರ್ಥವಲ್ಲ. +ಇದು ಕೆಲಸದ ಕಾಲ! +ಎಲ್ಲರಿಗೂ ಬಡಿಸುವತನಕ ಕುಳಿತರೆ ಎಷ್ಟೋ ಕಾಲಹರಣವಾಗುತ್ತದೆ. +ಆಮೇಲೆ ಎಲ್ಲರೂ ಉಂಡು ಪೂರೈಸುವತನಕ ಕುಳಿತರೆ ಸೂರ್ಯಾಸ್ತಮಯವಾಗುವುದೇ ಸರಿ! +ಆದ್ದರಿಂದ ಇದೇ ನನ್ನ ಸಿದ್ಧಾಂತ: +ಈ ಸಂಪ್ರದಾಯ ಸಮಾಜ ಏಳಿಗೆಗೆ ಸರ್ವ ವಿಧದಲ್ಲಿಯೂ ಹಾನಿಕರವಾದುದು! +ಇದು ನನ್ನ ಸ್ವಂತ ಅಭಿಪ್ರಾಯ. +ನಿಮಗೆ ಸರಿಯಾಗಿ ಕಂಡರೆ ಒಪ್ಪಿ; +ಇಲ್ಲದಿದ್ದರೆ ಬಿಡಿ. +ಪಾಯಸ ಪೂರೈಸಿದ ಬಳಿಕ ಹೋಳಿಗೆ ತಂದರು. +ಎಲ್ಲರಿಗೂ ಬಡಿಸಿದನು. +ನನ್ನ ಗೆಳೆಯರಿಗೆ ಮಾತ್ರ ಬಡಿಸಲೇ ಇಲ್ಲ. +ನನಗೆ ತುಂಬಾ ಆಶ್ಚರ್ಯವೂ ದುಃಖವೂ ಉಂಟಾಯಿತು. +ಅದರ ರಹಸ್ಯವನ್ನು ತಿಳಿಯಬೇಕೆಂಬ ಕುತೂಹಲವುಂಟಾಯಿತು. +ಆದರೆ ಅಷ್ಟು ಜನರ ಮಧ್ಯೆ ಅದನ್ನು ಕೇಳುವುದು ಹೇಗೆ? +ಅಂತೂ ಕಡೆಗೆ ಕುತೂಹಲ ದಾಕ್ಷಿಣ್ಯವನ್ನು ಮೀರಿತು. +ನನ್ನ ಗೆಳೆಯರನ್ನು ಕುರಿತು “ಅದೇನು ನೀವು ಹೋಳಿಗೆ ತಿನ್ನುವುದಿಲ್ಲವೆ?” ಎಂದೆ. +ಅವರು ಸ್ವಲ್ಪ ನಕ್ಕರು. +ಅವರ ತಮ್ಮಂದಿರೂ ನಗಲಾರಂಭಿಸಿದರು. +ನಾನು ಮಾತ್ರ ಬೆಪ್ಪು ಬೆರಗಾದೆ. +“ಓಹೋ ನಿಮಗೆ ಆ ಸಮಾಚಾರ ಗೊತ್ತಿಲ್ಲ?” ಎಂದು ಅವರ ತಮ್ಮಂದಿರು ನನ್ನನ್ನು ಕುರಿತು ಪ್ರಶ್ನೆಮಾಡಿದರು. +“ಇಲ್ಲ!” ಎಂದೆ. +“ಅದು ಹುಡುಕಾಟದ ಪ್ರತಿಜ್ಞೆ” ಎಂದರು. +“ಅದೊಂದು ದೊಡ್ಡ ಪುರಾಣ, ಊಟವಾದ ಮೇಲೆ ಹೇಳುತ್ತೇನೆ.” +ಅವರೆಲ್ಲಾ ತೀರ್ಥಹಳ್ಳಿಯ ಪಾಠಶಾಲೆಯಲ್ಲಿ ಓದುತ್ತಿದ್ದಾಗ ಒಂದು ‘ತಮಾಷೆ’ ನಡೆಯಿತಂತೆ. +ನನ್ನ ಗೆಳೆಯರು ತುಂಬಾ ‘ತಿಂಡಿಪೋತ’ರಾಗಿದ್ದರಂತೆ. +ಒಂದು ದಿನ ಶನಿವಾರ, ಬೆಳಿಗ್ಗೆ ಕ್ಲಾಸು. +‘ಹಬ್ಬ ಹೋದರೂ ಹೋಳಿಗೆ ಹೋಗುವುದಿಲ್ಲ; ಹೋಳಿಗೆ ಹೋದರೂ ಹೋಳಿಗೆ ಕಾವಲಿ ಹೋಗುವುದಿಲ್ಲ’ ಎಂಬ ಗಾದೆಯುಂಟಷ್ಟೆ? +ಅದರಂತೆ ಅವರ ಮನೆಯಲ್ಲಿ ಹಬ್ಬ ಮುಗಿದಿದ್ದರೂ ಹೋಳಿಗೆ ಇನ್ನೂ ಇದ್ದಿತು. +ಶಾಲೆಗೆ ಹೋಗುವಾಗ ನನ್ನ ಮಿತ್ರರು ಎರಡು ಜೇಬಿನ ತುಂಬಾ ಹೋಳಿಗೆ ಭರ್ತಿಮಾಡಿದರು. +ದೊಡ್ಡವರಿಗೆ ಅಂಗಿ ಹೊಲಿಸಿಕೊಡುವುದು ದಂಡಕ್ಕೆ; + ಅದರಲ್ಲಿಯೂ ಅವರ ಕೋಟುಗಳಿಗೆ ಜೇಬು ಇಡುವುದು ನಿಷ್ಪ್ರಯೋಜಕವಾದ ಅನ್ಯಾಯ. +ಹುಡುಗರಾದರೆ ಜೇಬುಗಳಿಂದ ಸಂಪೂರ್ಣ ಪ್ರಯೋಜನವನ್ನು ಹೊಂದಿಯೇ ಹೊಂದುತ್ತಾರೆ. +ದೊಡ್ಡವರ ಜೇಬುಗಳೆಲ್ಲ ಅಲಂಕಾರದ ಜೇಬುಗಳು! +ನಿಜವಾದ ಕರ್ಮಯೋಗಿಗಳೆಂದರೆ ಬಾಲಕರ ಜೇಬುಗಳು. +ಅವುಗಳಿಗೆ ಪಕ್ಷಪಾತ ಎಂಬುದೇ ಇಲ್ಲ! +ಭಗವದ್ಗೀತೆಯಲ್ಲಿ ಶ್ರೀ ಕೃಷ್ಣಪರಮಾತ್ಮನು ಬೋಧಿಸಿದಂತೆ ನಡೆದುಕೊಳ್ಳುತ್ತವೆ. +‘ಇದು ಕಲ್ಲು,’ ‘ಇದು ಚಿನ್ನ’ ಎಂಬ ಪ್ರಭೇದಗಳನ್ನು ಗಣನೆಗೆ ತರುವುದೇ ಇಲ್ಲ. +ಹೆಜ್ಜೇನು ಹುಡುಗರ ಜೇಬೇ ಒಂದು ಸಣ್ಣ ಬ್ರಹ್ಮಾಂಡವೆಂದರೂ ಅತಿಶಯೋಕ್ತಿಯಾಗಲಾರದು. +ಅರ್ವವೂ ಅಲ್ಲಿಯೇ ಐಕ್ಯ! +ಎಣ್ಣೆಪದಾರ್ಥವಾಗಲಿ, ಪೆಪ್ಪರಮೆಂಟಾಗಲಿ, ಕಲ್ಲಾಗಲಿ, ಹಣ್ಣಾಗಲಿ, ಮಣ್ಣಾಗಲಿ, ಬಳಪವಾಗಲಿ, ಚೂರಿಯಾಗಲಿ- ಎಲ್ಲಕ್ಕೂ ಸಮದೃಷ್ಟಿಯಿಂದ ಉಪಚಾರ ಸಲ್ಲುತ್ತದೆ. +ಕೆಲವು ಸಾರಿ ಬಾಲಕರ ಕೈಚೇಷ್ಟೆಯ ದೆಸೆಯಿಂದ ಚೇಳು, ಜಿರಲೆ, ಚಿಟ್ಟೆ ಮೊದಲಾದ ಅನಾಥ ಜೀವ ಜಂತುಗಳಿಗೂ ಜೇಬಿನ ಆಶ್ರಯ ಲಭಿಸುವುದುಂಟು! +ನನ್ನ ಸ್ನೇಹಿತರು ಶಾಲೆಗೆ ಹೋಗಿ ಗಂಟೆ ಹೊಡೆಯುವ ತನಕ ಆದಷ್ಟನ್ನು ಮುಕ್ಕಿದರು. +ಯಾರೋ ಇಬ್ಬರು ಮೂವರು ಹುಡುಗರು ಕೇಳಿದರಂತೆ. +ಆದರೆ ಅವರಿಗೆ ಒಂದು ಚೂರನ್ನೂ ಕೊಡಲಿಲ್ಲ. +ನಿರಾಶವಾದ ಆ ಹುಡುಗರು ಇವರನ್ನು ಮೇಷ್ಟರ ಕೈಲಿ ಸಿಕ್ಕಿಸಬೇಕೆಂದು ನಿರ್ಧಾರಮಾಡಿದರು. +ಪಾಪ!ಇವರಿಗೇನು ಗೊತ್ತು? +ಗೊತ್ತಾಗಿದ್ದರೆ ಹೋಳಿಗೆಯನ್ನೆಲ್ಲಾ ಹೊರಗೆ ಎಸೆದಾದರೂ ಬರುತ್ತಿದ್ದರು, ಆಗ ಆ ಹುಡುಗರಿಗೆ ಪಜೀತಿಗಿಟ್ಟುಕೊಳ್ಳುತ್ತಿತ್ತು. +ಗುಂಡಪ್ಪ ಮೇಷ್ಟರು ಬಂದರು. +ಗದ್ದಲವೆಲ್ಲ ನಿಂತುಹೋಯಿತು. +ಹುಡುಗರೆಲ್ಲ ಬೇಗಬೇಗನೆ ತಮ್ಮ ಜಾಗ ಸೇರಿಕೊಂಡರು. +ಮೇಷ್ಟರು ಬಂದವರೇ ಬೆತ್ತವನ್ನು ಮೇಜಿಗೆ ಎರಡು ಮೂರು ಸಾರಿ ಬಡಿದು ಅದನ್ನು ಸಂಭೋಧಿಸಿ ‘ಈ ದಿನ ನಿನಗೆ ಹೋಳಿಹಬ್ಬ’ ಎಂದರು. +ಹುಡುಗರ ಮುಖವೆಲ್ಲ ಗಾಬರಿಯಿಂದ ವಿವರ್ಣವಾಯಿತು. +ಗುಂಡಪ್ಪ ಮೇಷ್ಟರೆಂದರೆ ಪ್ರತ್ಯಕ್ಷ ಯಮ! +ಅವರಿಗೆ ಮಕ್ಕಳು ಮರಿ ಯಾರೂ ಇರಲಿಲ್ಲವೆಂದೇ ತೋರುತ್ತದೆ. +ಹುಡುಗರಿಗೆ ಹೊಡೆಯುವುದೆಂದರೆ ಅವರಿಗೆ ಜೀವನದ ಅತ್ಯಂತಿಕ ಸುಖ! +ಅವರಿಗೆ ತಿಳಿದಿದ್ದ ವಿದ್ಯೆಯೂ ಅಷ್ಟರಲ್ಲಿಯೇ ಇತ್ತು. +ಅದರಲ್ಲಿಯೂ ಅಕ್ಷರ ವಿದ್ಯೆಗಿಂತಲೂ ಅವರು ಮರ್ದನ ವಿದ್ಯೆಯಲ್ಲಿಯ ಪ್ರವೀಣರಾಗಿದ್ದರು. +ಪಾಪ!ಅವರ ವಿಷಯವಾಗಿ ಕನಿಕರಪಡಬೇಕೇ ಹೊರತು ಕೋಪಮಾಡಬಾರದು. +ಮೇಷ್ಟರು ತರಗತಿಯನ್ನು ಸಂಬೋಧಿಸಿ “ಏನ್ರೋ, ಯಾರಾದರೂ ಧರ್ಮಿಷ್ಠರು ಇದಕ್ಕೆ ತಿಂಡಿಗಿಂಡಿ ಕೊಡುತ್ತೀರಾ? +ಬೆತ್ತಕ್ಕೆ ಬಹಳ ಹಸಿವೆಯಾಗಿದೆಯಂತೆ” ಎಂದು ರೂಪಲಂಕಾರವಾಗಿ ನುಡಿದರು. +ನನ್ನ ಸ್ನೇಹಿತರ ಮೇಲೆ ಹೊಟ್ಟೆ ಕಿಚ್ಚಿಟ್ಟಿದ್ದ ಹುಡುಗರಲ್ಲಿ ಒಬ್ಬನು-ಶುದ್ದ ಬೆಪ್ಪುತಕ್ಕಡಿ! +-ಮೇಷ್ಟರ ಅಭಿಪ್ರಾಯಗಳನ್ನು ತಿಳಿಯದೆ ಎದ್ದು ನಿಂತು “ಸಾರ್, ಇವನ ಹತ್ತಿರ ಇದೆ” ಎಂದು ನನ್ನ ಗೆಳೆಯರ ಕಡೆಗೆ ಕೈ ತೋರಿಸಿದನು. +ಗುಂಡಪ್ಪನವರಿಗೆ ಅಷ್ಟೇ ಬೇಕಾಗಿದ್ದುದು. +ನನ್ನ ಸ್ನೇಹಿತರನ್ನು ವಿಚಾರಿಸಲೇ ಇಲ್ಲ. +ಚಾಡಿ ಹೇಳಿದವನನ್ನು ಎಳೆದುಕೊಂಡು ಹೋಗಿ ಚೆನ್ನಾಗಿ ಹೊಡೆದು ‘ಫರಂಗಿಮಣೆ’ ಅಥವಾ ‘ಕುರ್ಚಿ’ ಕೂರಿಸಿದರು. +ಇಷ್ಟೆಲ್ಲ ನಡೆಯುತ್ತಿದ್ದಾಗ ನನ್ನ ಮಿತ್ರರ ಮನಸ್ಸಿನಲ್ಲಿ ಏನೇನೋ ಆಲೋಚನೆಗಳು ಬಂದುವು. +ಮೇಷ್ಟರು ಕ್ಲಾಸಿಗೆ ತಿಂಡಿ ತಂದವರಿಗೆ ‘ದ್ವಾದಶ ಪೂಜೆ’ಯಾಗುತ್ತದೆಂದು ಸಾರಿಸಾರಿ ಹೇಳಿದ್ದರು. +(‘ದ್ವಾದಶಪೂಜೆ’ ಎಂಬುದು ಗುಂಡಪ್ಪನವರ ಪರಿಭಾಷೆ. +ಅದರ ತಾತ್ಪರ್ಯವೇನೆಂದರೆ ಹನ್ನೆರಡು ಏಟು ಬೀಳುವುದು ಎಂದು!) +ಈಗ ತನ್ನ ಹತ್ತಿರ ತಿಂಡಿಯಿದೆಯೆಂದು ಹುಡುಗನು ಹೇಳಿಬಿಟ್ಟಿದ್ದಾನೆ. +ಮೇಷ್ಟರು ಜೇಬು ‘ಜಡ್ತಿ’ ಮಾಡದೆ ಬಿಡುವುದಿಲ್ಲ. +ಅವರ ಕೈಗೆ ಸಿಕ್ಕಿದರೆ ಉಳಿಗಾಲವೇ ಇಲ್ಲ. +ಹೋಳಿಗೆಯನ್ನು ಬಿಸಾಡುವುದಾದರೂ  ಹೇಗೆ! +ಕಡೆಗೊಂದು ಉಪಾಯ ಮನಸ್ಸಿಗೆ ಹೊಳೆಯಿತು. +ಪಕ್ಕದಲ್ಲಿ ಕುಳಿತ ಹುಡುಗನ ಕಡೆ ನೋಡಿದರು. +ಅವನ ಜೇಬು ಹೊಟ್ಟೆಗಿಲ್ಲದೆ ಬಾಯಿ ತೆರೆದುಕೊಂಡಿದೆಯೋ ಎಂಬಂತೆ ಅಗಲವಾಗಿ ತೆರೆದಿದ್ದಿತು. +ಇದ್ದಇದ್ದ ಹೊಳಿಗೆಯನ್ನೆಲ್ಲಾ ಅವನ ಕಿಸಿಬಾಯಿ ಜೇಬಿಗೆ ಹಾಕಿ ಧೈರ್ಯವಾಗಿ ಕುಳಿತುಕೊಂಡರು! +ಮೇಷ್ಟರು ತಮ್ಮ ಖೈದಿಗೆ ವಿಧಿಸಬೇಕಾದ ಶಿಕ್ಷೆಗಳನ್ನೆಲ್ಲಾ ವಿಧಿಸಿ ಕಡೆಗೆ ಅವನನ್ನು ಕುರಿತು “ಇನ್ನು ಮೇಲೆ ಚಾಡಿ ಹೇಳ್ತೀಯೇನೋ?” ಎಂದರು. +ಆ ಹುಡುದನು “ಇಲ್ಲ, ಮೇಷ್ಟ್ರೇ, ಅವನು ಹೋಳಿಗೆ ತಂದಿದ್ದು ಹೌದು!” ಎಂದು ಬಿಕ್ಕಿಬಿಕ್ಕಿ ನುಡಿದನು. +ಆ ಹುಡುಗನು ಚಾಡಿ ಎಂದರೆ ಸುಳ್ಳು ಹೇಳುವುದು ಎಂದು ತಿಳಿದುಕೊಂಡಿದ್ದನೆಂದು ತೋರುತ್ತದೆ. +ಮೇಷ್ಟರು ಅವನನ್ನು ತನ್ನ ಸ್ಥಳಕ್ಕೆ ಹೋಗುವಂತೆ ಹೇಳಿ, ನನ್ನ ಮಿತ್ರರನ್ನು ಕುರಿತು “ಏ ಇಲ್ಲಿ ಬಾರೊ” ಎಂದರು. +ನನ್ನ ಮಿತ್ರರು ನಿರ್ಭಯರಾಗಿ ಹೋದರು. +ಜೇಬನ್ನೆಲ್ಲಾ ಅಜಮಾಯಿಸೆ ಮಾಡಿ “ಗೆದ್ದೆ ಹೋಗು, ಮುಂಡೇದೆ!” ಎಂದರು. +ಉಳಿದ ಹುಡುಗರೆಲ್ಲರೂ ತಮ್ಮ ಹತ್ತಿರ ಎಲ್ಲಿಯಾದರೂ ತಿಂಡಿ ಇದೆಯೋ ಏನೋ ಎಂಬ ಭಯದಿಂದ ತಮ್ಮ ತಮ್ಮ ಜೇಬುಗಳಿಗೆ ಕೈಹಾಕಿ ನೋಡಿಕೊಂಡರು. +ಸಿದ್ದುವೂ ತನ್ನ ಜೇಬಿಗೆ ಕೈ ಹಾಕಿಕೊಂಡ! +ಮುಖ ಬೆಳ್ಳಗಾಯಿತು. +ಕಣ್ಣು ಚಲಿಸಲೇ ಇಲ್ಲ. +ಕಳೆದ ಬಾಯನ್ನು ಮುಚ್ಚಲೇ ಇಲ್ಲ. +ರಾತ್ರಿ ಯಾರಾದರೂ ಒಬ್ಬರೇ ಹೋಗುತ್ತಿದ್ದಾಗ, ಪಿಶಾಚದ ವಿಚಾರ ಯೋಚಿಸಿಕೊಂಡು, ಹಿಂತಿರುಗಿದರೆ ಪಿಶಾಚವನ್ನೆಲ್ಲಿ ನೋಡುವೆನೋ ಏನೋ ಎಂಬ ಭಯದಿಂದ ಹಿಂತಿರುಗಿ ಕೂಡ ನೋಡದೆ ಹೋಗುತ್ತಿರುವರೆಂದು ಭಾವಿಸೋಣ. +ಇದ್ದಕಿದ್ದ ಹಾಗೆ ಏನೋ ಬಂದು ಅವರನ್ನು ಹಿಂದುಗಡೆಯಿಂದ ಹಿಡಿದರೆ ಅವರಿಗೆ ಯಾವ ಅನುಭವ ಉಂಟಾಗುವುದೋ ಅದೇ ಅನುಭವ ನಮ್ಮ ಸಿದ್ದುಗೂ ಆಯಿತು. +ಅವನು ಅಳಲಾರಂಭಿಸಿದ. +ನನ್ನ ಮಿತ್ರರು ಅವನನ್ನು ಸುಮ್ಮನಿರಿಸಲು ಎಷ್ಟೋ ಪ್ರಯತ್ನಪಟ್ಟರು. +ಆದರೆ ಪ್ರಯತ್ನವೆಲ್ಲ ವ್ಯರ್ಥವಾಯಿತುಮೇಷ್ಟರು ಅವನನ್ನು ಕುರಿತು “ಯಾಕೋ ಅಳುತ್ತೀಯಾ?” ಎಂದರು. +ಅವನು ನಡುಕುದನಿಯಿಂದ “ನೋಡಿ ಸಾರ್, ನನ್ನ ಜೇಬಿಗೆ ಹೋಳಿಗೆ ಹಾಕಿ ಬಿಟ್ಟಿದ್ದಾರೆ!” ಎಂದು ಗಟ್ಟಿಯಾಗಿ ಅತ್ತನು. +ನನ್ನ ಮಿತ್ರರೇ ಅದನ್ನು ಮಾಡಿದರೆಂಬುದೇನೋ ರುಜುವಾತಾಯಿತು. +ಸಿದ್ದು ಇನ್ನೂ ಅಳಲಾರಂಭಿಸಿದನು. +ಏಕೆಂದರೆ ನನ್ನ ಸ್ನೇಹಿತರು ಶೂದ್ರರು; +ಅವನು ಸಾಂಪ್ರದಾಯದ ಬ್ರಾಹ್ಮಣ! +ಶೂದ್ರದ ಮನೆಯ ಹೋಳಿಗೆ! +ಅದರಲ್ಲಿಯೂ ಶೂದ್ರನು ತಿಂದು ಬಿಟ್ಟ ಎಂಜಲು! +ಇದನ್ನೆಲ್ಲಾ ಯೋಚಿಸಿಕೊಂಡು ಅವನ ದುಃಖ ಇಮ್ಮಡಿಯಾಯಿತು. +ಬ್ರಾಹ್ಮಣರಾದ ಗುಂಡಪ್ಪವನರಂತೂ ರೌದ್ರಾವೇಶ ಪರವಶರಾದರು! +ಹುಡುಗರೆಲ್ಲ ನನ್ನ ಮಿತ್ರರಿಗಾಗಬಹುದಾದ ಶಿಕ್ಷೆಯ ವಿಚಾರವಾಗಿ ಮಾತನಾಡಲಾರಂಭಿಸಿದನು. +ಶಾಲೆಯನ್ನೆಲ್ಲ ಒಂದು ವಿಧವಾದ ಬೆಬ್ಬರ ಮುಸುಗಿತು! +“ಡಿಸ್‌ಮಿಸ್‌ಆಗಿಯೇ ಹೋಗುತ್ತೆ. +ಬೇಕಾದರೆ ನೋಡು” +“ಹೋಗೊ, ಹೋಗೊ ಇದಕ್ಕೆಲ್ಲಾ ಡಿಸ್‌ಮಿಸ್‌ಅಂತೆ, ‘ದ್ವಾದಶ ಪೂಜೆ’ ಮಾಡಿಬಿಡಬಹುದು.” +“ನೀನೆಲ್ಲೊ ಶುದ್ಧ ಪೂಲ್! +ಫರಂಗಿಮಣೆ ಕೂರಿಸಿ, ಬೆನ್ನಮೇಲೆ ಕಲ್ಲು ಹೊರಿಸದಿದ್ದರೆ ಆಮೇಲೆ ಹೇಳು.” +“ಬೇಕಾದ್ರೆ ಬೆಟ್ ಕಟ್ತೀನಿ, ಕೋಳದಂಡಾನೇ ಹಾಕ್ತಾರೆ.” +“ಇಲ್ಲದೆ ಇದ್ದರೆ ಮೂರು ನಾಮ ಹಾಕಿ ಮೆರವಣಿಗೆ ಮಾಡಿಸುತ್ತಾರೆ.” +“ಓಹೋ ಅದೊಂದು ಭಾರಿ ಶಿಕ್ಷೆಯೋ? +ನನಗೇನೊ ಅದೊಂದು ಆಟ!” +“ದೊಡ್ಡ ಮನುಷ್ಯರ ಮಗ ಅಂತ ಹೇಳಿ ಏನಾದರೂ ರಿಯಾಯಿತಿ ತೋರಿಸಬಹುದು.” +“ಅಲ್ಲೋ ಅವನಿಗೆಷ್ಟು ಧೈರ್ಯ? +ಬ್ರಾಹ್ಮಣನ ಜೇಬಿಗೆ ಎಂಜಲು ಹಾಕೋದೆ!” +ಮುಂದಾದುದನ್ನು ಸಂಕ್ಷೇಪವಾಗಿ ಹೇಳಿಬಿಡುತ್ತೇನೆ. +ನನ್ನ ಮಿತ್ರರಿಗೆ ‘ದ್ವಾದಶ ಪೂಜೆ’ಯೂ ಆಯಿತು. +ಮೂರು ನಾಮ ಎಳೆದು ಮೆರವಣಿಗೆಯೂ ಆಯಿತು. +ಕೇಡಿ ರಿಜಿಸ್ಟರಿಗೂ ಅವರ ಹೆಸರು ದಾಖಲಾಯಿತು! +ಶಾಲೆ ಮುಗಿದ ಬಳಿಕ ಗೆಳೆಯರೆಲ್ಲರೂ ಅವರನ್ನು ಸಮಾಧಾನ ಪಡಿಸಲು ಬಂದರು. +ಕೆಲವರು ಮೇಷ್ಟರನ್ನು ಬೈದರು. +ಕೆಲವರು ಸಿದ್ದುವನ್ನು ನಿಂದಿಸಿದರು. +ಮತ್ತೆ ಕೆಲವರು ‘ಸ್ಕೂಲಿಗೆ ಬೆಂಕಿ ಹಾಕ’ ಎಂದರು. +ನನ್ನ ಮಿತ್ರರು ಮಾತ್ರ ಮೂಲ ಕಾರಣವನ್ನು ವಿವೇಕದಿಂದ ಗ್ರಹಿಸಿ, ಹೋಳಿಗೆಯನ್ನು ಬಾಯಿಗೆ ಬಂದಂತೆ ಬೈದರು. +ರೋಪಾವೇಶದಿಂದ ಹೋಳಿಗೆಯನ್ನು ಇನ್ನು ಮೇಲೆ ತಿನ್ನುವುದೇ ಇಲ್ಲವೆಂದು ಪ್ರತಿಜ್ಞೆಯನ್ನೂ ಮಾಡಿ ಬಿಟ್ಟರು. +ಹುಡುಗರ ಭಾಗಕ್ಕೆ ಅದೇನೂ ಸಾಧಾರಣ ಪ್ರತಿಜ್ಞೆಯಲ್ಲ! +ಈ ಸಂಗತಿ ನಡೆದದ್ದು ನನ್ನ ಮಿತ್ರರು ಏಳೆಂಟು ವರ್ಷದವರಾಗಿದ್ದಾಗ. +ಈಗ ಅವರಿಗೆ ಇಪ್ಪತ್ತೈದು ವಯಸ್ಸಿರಬಹುದು! +ಇನ್ನೂ ಆ ಪ್ರತಿಜ್ಞೆಯನ್ನು ಪರಿಪಾಲಿಸುತ್ತಲೇ ಇದ್ದಾರೆ! +ಇದನ್ನೆಲ್ಲ ಆಲಿಸಿದ ನಾನು ಅವರನ್ನು ಕುರಿತು “ನಿಮಗೊಂದು ಭ್ರಾಂತಿ. +ಹುಡುಕಾಟದ ಪ್ರತಿಜ್ಞೆಯನ್ನು ಕಟ್ಟಿಕೊಂಡು ಹೋಳಿಗೆ ತಿನ್ನುವುದನ್ನು ಬಿಡುವುದೆ?” ಎಂದೆ. +“ಹುಡುಗರಾದರೇನು?ಬಲ್ಲವರಾದರೇನು?ಪ್ರತಿಜ್ಞೆ ಪ್ರತಿಜ್ಞೆಯೇ?” +“ನೀವೇನೋ ಹೇಳ್ತೀರಿ! +ನಾನೇನೋ ಎಂಥಂಥಾ ದೇವರಾಣೆಗಳನ್ನೆಲ್ಲಾ ಹಾಕಿಬಿಟ್ಟಿದ್ದೇನೆ. +ಒಂದನ್ನೂ ಇದುವರೆಗೆ ನಡಿಸಲಿಲ್ಲ.! + ಅದಿರಲಿ ನಿಮ್ಮ ಪ್ರತಿಜ್ಞೆಯಿಂದ ಉಪಯೋಗವಾದರೂ ಏನು?” + “ಹೋಳಿಗೆ ತಿನ್ನುವುದು ಬಿಡುವುದರಲ್ಲಿ ಯಾವ ಮಹತ್ತೂ ಇಲ್ಲ. +ಆದರೆ ಇಂದಿನವರೆಗೆ ಪ್ರತಿಜ್ಞೆಯನ್ನು ಪರಿಪಾಲಿಸಿರುವೆನೆಂಬ ಮನೋಭಾವ ನನ್ನ ಧರ್ಮಬುದ್ಧಿಗೆ ಬಲಕಾರಿಯಾಗಿರುತ್ತದೆ; +ನನ್ನ ಚಿತ್ತಶುದ್ಧಿಗೆ ಸಹಕಾರಿಯಾಗಿರುತ್ತದೆ. +ದೊಡ್ಡಮನಸ್ಸಿನಿಂದ ಮಾಡಿದ ಸಣ್ಣ ಕಾರ್ಯಗಳು ಸಣ್ಣ ಮನಸ್ಸಿನಿಂದ ಮಾಡಿದ ದೊಡ್ಡಕಾರ್ಯಗಳಿಗಿಂತಲೂ ಎಷ್ಟೋ ಶ್ರೇಷ್ಠವಾದುವುಗಳೆಂದು ನನ್ನ ನಿಶ್ಚಲವಾದ ಅಭಿಪ್ರಾಯ. +ಮಹಿಮೆ ಕಾರ್ಯಗಳಲ್ಲಿಲ್ಲ; +ಕಾರ್ಯ ಮಾಡಿಸುವ ಚಿತ್ತವೃತ್ತಿಯಲ್ಲಿದೆ.” +ನಾನು ಆಲೋಚನಾಪರನಾಗಿ ಕುಳಿತೆ. +ಅವರಲ್ಲಿ ನನಗೊಂದು ಗೌರವ ಉಂಟಾಗಿ, ಅವರನ್ನು ಮನದಲ್ಲಿಯೆ ಹೊಗಳಿದೆ. +ಮಾಯದ ಮನೆ. +ಡಾಖಾ ನಗರದ ಪ್ರಧಾನ ವೈದ್ಯನಾದ ಸುರೇಂದ್ರಬಾಬು ತನ್ನ ಮನೆಯ ಆಫೀಸು ಕೋಣೆಯಲ್ಲಿ ಕುಳಿತುಕೊಂಡು ಆ ದಿನ ನಡೆದ ಒಂದು ಸಂಗತಿಯನ್ನು ಕುರಿತು ಆಲೋಚಿಸುತ್ತಿದ್ದನು. +ತನ್ನ ಹಣದಾಸೆಯಿಂದ ಒಬ್ಬ ಬಡ ವಿಧವೆಯ ಮಗನು ಆ ದಿನ ಸತ್ತನೆಂಬ ಚಿಂತೆ ಅವನನ್ನು ಬಾಧಿಸುತ್ತಿತ್ತು. +ಕೈ ಮುಗಿದುಕೊಂಡು ಅಂಗಲಾಚಿ ಮೊರೆಯಿಡುತ್ತಾ ಮನೆಗೆ ಬಂದು ಮಗನನ್ನು ಉಳುಹಬೇಕೆಂದು ತನ್ನನ್ನು ಕರೆಯುತ್ತಾ ನಿಂತಿದ್ದ ಮುದಿಯಳ ಕನಿಕರಣೀಯವಾದ ಮೂರ್ತಿ ಆತನ ಕಣ್ಣಮುಂದೆ ಕಟ್ಟಿದಂತೆ ತೋರುತ್ತಿತ್ತು. +ತಾನು ಮಾತ್ರ ಫೀಜು ಕೊಟ್ಟರೆ ಬರುವೆನೆಂದು ಹೇಳಿ ಆಕೆಯನ್ನು ತಿರಸ್ಕರಿಸಿದ್ದು ಅವನಿಗೆ ಪಶ್ಚಾತ್ತಾಪವನ್ನುಂಟು ಮಾಡುತ್ತಿತ್ತು. +ಸಂಜೆಯಲ್ಲಿ ತಾನು ಮನೆಗೆ ಬರುತ್ತಿದ್ದಾಗ ಆ ವಿಧವೆ ತನ್ನ ಮಗನ ಹೆಣದೊಡನೆ ಗೋಳಾಡುತ್ತಾ ಶ್ಮಶಾನಾಭಿಮುಖವಾಗಿ ಬಂಧುಗಳೊಡನೆ ಹೋಗುತ್ತಿದ್ದುದನ್ನು ನೋಡಿ, ತಾನು ಮಾಡಿದ್ದು ಧರ್ಮ ದೃಷ್ಟಿಯಿಂದ ಅನ್ಯಾಯವಾದುದೆಂದು ಚಿಂತಿಸುತ್ತಿದ್ದನು. +ಅಷ್ಟು ಹೊತ್ತಿಗೆ ಗಡಿಯಾರದಲ್ಲಿ ಗಂಟೆ ಹೊಡೆಯಿತು. +ಬಾಬು ತಲೆಯೆತ್ತಿ ನೋಡಿದನು. +ರಾತ್ರಿ ಹತ್ತು ಘಂಟೆಯಾಗಿತ್ತು. +ತಾನು ಓದಲು ಎದುರಿನಲ್ಲಿ ಬಚ್ಚಿಟ್ಟುಕೊಂಡಿದ್ದ ಪುಸ್ತಕವನ್ನು ಮುಚ್ಚಿ ಮಲಗುವ ಕೊಠಡಿಗೆ ಹೋಗಲು ಅನುವಾಗುತ್ತಿದ್ದನು. +ಅಷ್ಟರಲ್ಲಿ ಆಕಸ್ಮಿಕವಾಗಿ ಅವನ ಕಣ್ಣು ಕೊಠಡಿಯ ಒಂದು ಕಿಟಕಿಯ ಕಡೆಗೆ ಬಿತ್ತು. +ದೂರ ಬೀದಿಯಲ್ಲಿ ತನ್ನ ಮನೆಯ ಕಡೆಗೆ ಬರುತ್ತಿದ್ದ ಒಂದು ಕುದುರೆಗಾಡಿಯ ಎರಡು ದೀಪಗಳು ಹೊಳೆಯುತ್ತಿದ್ದುದನ್ನು ಕಂಡು ಅವುಗಳನ್ನೇ ನೋಡುತ್ತಾ ನಿಂತನು. +ಸ್ವಲ್ಪ ಹೊತ್ತಿನಲ್ಲಿಯೆ ಗಾಡಿ ಮನೆಯ ಮುಂದುಗಡೆ ಬಂದು ನಿಂತಿತು. +ಅದನ್ನು ಕಂಡು ಸುರೇಂದ್ರಬಾಬು ಹಿಂತಿರುಗಿ ಹೋಗಿ ತನ್ನ ಕುರ್ಚಿಯ ಮೇಲೆ ಕುಳಿತುಕೊಂಡನು. +ಸೇವಕನೊಬ್ಬನು ಬಂದು “ಯಾರೋ ಬಂದಿದ್ದಾರೆ” ಎಂದನು. +“ಒಳಕ್ಕೆ ಬರಹೇಳು.” +ಉತ್ತರ ಕ್ಷಣದಲ್ಲಿಯೆ ಉಡುಪಿನಿಂದ ಧನಿಕನೆಂದು ತೋರುತ್ತಿದ್ದ ಮಧ್ಯ ವಯಸ್ಕನಾದ ಪುರುಷನೊಬ್ಬನು ಕೊಠಡಿಯೊಳಗೆ ಬಂದು ನಮಸ್ಕಾರ ಮಾಡಿದನು. +ಬಾಬುವೂ ಕೈಮುಗಿದು ಬಳಿಯಲ್ಲಿದ್ದ ಒಂದು ವೇತ್ರಾಸನದ ಮೇಲೆ ಕೂತುಕೊಳ್ಳುವಂತೆ ಹೇಳಿದನು. +ನೂತನ ಪುರುಷನು ಅಪರಿಚಿತನಿಗೆ ತಕ್ಕ ನಮ್ರತೆಯನ್ನು ಪ್ರದರ್ಶಿಸುವ ಯೋಗ್ಯಾಭಿನಯಗಳಿಂದ ಕುಳಿತುಕೊಂಡನು. +ಬಾಬು ಸುರೇಂದ್ರನು “ತಾವು ಯಾರು? +ಇಷ್ಟು ರಾತ್ರಿಯಲ್ಲಿ ಬಂದ ಕಾರ್ಯವೇನು?” ಎಂದನು. +ಅದಕ್ಕೆ ಆ ಅಪರಿಚಿತ ವ್ಯಕ್ತಿ ಮುಖದಲ್ಲಿ ಶೋಕವನ್ನು ತೋರುತ್ತಾ “ನನ್ನ ಹೆಸರು ವಿಪಿನಚಂದ್ರಬಾಬು. +ನನ್ನ ಪತ್ನಿ ಪ್ರಸವ ವೇದನೆಯಿಂದ ಬಹಳವಾಗಿ ನರಳುತ್ತಿದ್ದಾಳೆ. +ಆಕೆಯ ಸ್ಥಿತಿ ಅತಿ ವಿಷಯವಾಗಿದೆ. +ತಾವು ದಯವಿಟ್ಟು ಬಂದು ನೋಡಬೇಕು. +ತಮ್ಮಿಂದ ಬಹಳ ಉಪಕಾರವಾಗುತ್ತದೆ” ಎಂದನು. +“ಅಯ್ಯೋ ಮಹಾಶಯ. +ಇಷ್ಟು ರಾತ್ರಿ ಹೇಗೆ ಬರುವುದು? +ನಾಳೆ ಪ್ರಾತಃಕಾಲ ಅಷ್ಟು ಹೊತ್ತಿಗೇ ಬಂದು ನೋಡುತ್ತೇನೆ.” +“ವೇದನೆಯ ಸ್ಥಿತಿ ಹಾಗಿಲ್ಲ. +ನೀವು ಕೇಳಿದ ಫೀಜು ಕೊಡುತ್ತೇನೆ. +ಈಗಲೇ ಬಂದು ನೋಡಬೇಕು. +ನೀವು ಇಬ್ಬರನ್ನು ಕಾಪಾಡಿದ ಹಾಗಾಗುತ್ತದೆ.” +“ಹೌದು, ಅದೇನೋ ಸರಿಯೆ” ಹೀಗೆಂದು ಸುರೇಂದ್ರನು ಸ್ವಲ್ಪ ಹೊತ್ತು ಏನನ್ನೊ ಆಲೋಚಿಸುವಂತೆ ನಟಿಸಿ “ಆಗಲಿ, ಇನ್ನೇನು ಮಾಡುವುದು, ಬರುತ್ತೇನೆ” ಎಂದು ಹೇಳಿ ಬೇಗಬೇಗ ತನ್ನ ಪೋಷಾಕು ತೊಟ್ಟು ವೈದ್ಯಕ್ಕೆ ಬೇಕಾದ ಸಾಮಾನುಗಳನ್ನೆಲ್ಲ ತೆಗೆದುಕೊಂಡು, ತನ್ನ ಸೇವಕನನ್ನು ಕೂಗಿದನು. +ಸೇವಕನು ಬಂದನು. +“ಬಾರೋ ಸ್ವಲ್ಪ, ಇವರ ಮನೆಯವರೆಗೆ ಹೋಗಿಬರೋಣ.” +ವಿಪಿನಚಂದ್ರನು ಇದನ್ನು ಕೇಳಿ “ಅವನೇಕೆ? +ನಮ್ಮಲ್ಲಿ ಬೇಕಾದಷ್ಟು ಸೇವಕರಿದ್ದಾರೆ. +ನಿಮಗೆ ಯಾವ ತೊಂದರೆಯೂ ಆಗುವುದಿಲ್ಲ. +ಬೇಕಾದ ಸಹಾಯ ಕೊಡುತ್ತೇನೆ. +ಕುದುರೆ ಗಾಡಿಯೂ ಇದೆ” ಎಂದನು. +“ಹಾಗಾದರೆ ನೀನು ಇರೋ” ಎಂದು ಹೇಳಿ ಸುರೇಂದ್ರಬಾಬು ವಿಪಿನಚಂದ್ರನೊಡನೆ ಮನೆಯಿಂದ ಹೊರಟನು. +ಅಮಾವಾಸ್ಯೆಯ ರಾತ್ರಿ ಕಗ್ಗತ್ತಲು. +ಮುನಿಸಿಪಾಲಿಟಿಯ ದೀಪಗಳು ಅಲ್ಲಲ್ಲಿ ನಾಚಿಕೆಯಿಂದ ಮಿಣುಕುತಿದ್ದುವು. +ಜನವಿಹೀನವಾದ ಬೀದಿಯಲ್ಲಿ ನಿಂತಿದ್ದ ಕುದುರೆಗಾಡಿಯನ್ನು ಹತ್ತಿ ಕುಳಿತರು. +ಪಕ್ಕದ ಮರದಲ್ಲಿ ಒಂದು ಗೂಬೆ ‘ಗೂ ಗೂ’ ಎಂದು ವಿಕಾರ ಧ್ವನಿ ಮಾಡಿತು. +ಗಾಡಿ ಹೊಡೆಯುವವನ ಚಾಟಿಯ ಸದ್ದು; + ಕುದುರೆಯ ಖುರಪುಟ ಧ್ವನಿ; + ಚಕ್ರನೇಮಿಗಳ ಶಬ್ದ,-ಗಾಡಿ ಬಹು ವೇಗವಾಗಿ ಚಲಿಸತೊಡಗಿತು. +ಸುರೇಂದ್ರಬಾಬು ವಿಪಿನಚಂದ್ರನನ್ನು ಕುರಿತು “ತಮ್ಮ ಪತ್ನಿಯವರಿಗೆ ಏನಾದರೂ ರೋಗವಿತ್ತೋ? +ಅಥವಾ ಬರಿಯ ಪ್ರಸವ ವೇದನೆಯೋ?” ಎಂದು ಹೇಳಿದರು. +“ರೋಗವಿತ್ತು. ” +“ಎಷ್ಟು ದಿನಗಳಿಂದ?” +“ಐದಾರು ದಿನಗಳಿಂದ.” +“ಯಾರ ಬಳಿ ಔಷಧಿ ಕೊಡಿಸಿದಿರಿ?” +“ಯಾರಾರೋ ವೈದ್ಯರು ನೋಡಿದರು, ಯಾರಿಂದಲೂ ಗುಣಮುಖವಾಗಲಿಲ್ಲ. +ನಿಮ್ಮ ಖ್ಯಾತಿಯನ್ನು ಕೇಳಿ ಕಡೆಗೆ ನಿಮ್ಮಲ್ಲಿಗೆ ಬಂದೆ.” +“ರೋಗದ ಹೆಸರನ್ನು ಯಾರಾದರೂ ಹೇಳಿದರೇ? ” +“ಹೇಳಿದರು. ಆದರೆ ನನಗೆ ಅದು ಸರಿಯಾಗಿ ನೆನಪಿಲ್ಲ.” +“ಎಷ್ಟು ದೂರ ನಿಮ್ಮ ಮನೆ?” +“ಮೂರುವರೆ ಮೈಲಿ” +“ಯಾವ ಭಾಗದಲ್ಲಿ?” +“ದಕ್ಷಿಣ ಮೋಷಂಡಿಯಲ್ಲಿ.” +ಸುರೇಂದ್ರಬಾಬು ಮಾತಾಡಲಿಲ್ಲ. +ದಕ್ಷಿಣ ಮೋಷಂಡಿಯ ಹೆಸರನ್ನು ಕೇಳಿ ಅವನ ಮನಸ್ಸಿನಲ್ಲಿ ಏನೇನೋ ಚಿಂತೆ ಮೂಡಿದುವು, ಅಲ್ಲಿರುವ ಒಂದು ಮನೆಯ ವಿಚಾರವಾಗಿ ಜನರು ಏನೇನ್ನೋ ಮಾತಾಡಿಕೊಳ್ಳುತ್ತಿದ್ದರು. +“ಭೂತಗಳ ಬೀಡು” ಎಂದು ಅದನ್ನು ಕರೆಯುತ್ತಿದ್ದರು. +ಆ ಮನೆಯಲ್ಲಿ ವಾಸ ಮಾಡಲು ಯಾರೂ ಧೈರ್ಯಮಾಡುತ್ತಿರಲಿಲ್ಲ. +ಅದರಲ್ಲಿಯೂ ರಾತ್ರಿ ದಕ್ಷಿಣ ಮೋಷಂಡಿ ಎಂದರೆ ಜನರ ಬಿಳುಪೇರುತ್ತಿತ್ತು. +ಇವೆಲ್ಲ ಯೋಚನೆಗಳು ಬಂದರೂ ಸುರೇಂದ್ರಬಾಬು ಎದೆಗೆಡಲಿಲ್ಲ. +ಏಕೆಂದರೆ ಜೊತೆಯಲ್ಲಿ ವಿಪಿನಚಂದ್ರನೂ ಗಾಡಿಯವನೂ ಇರುವಾಗ ಅವನಿಗೇಕೆ ಹೆದರಿಕೆ? +ಗಾಡಿ ವೇಗವಾಗಿ ಓಡುತ್ತಿತ್ತು. +ಮನೆಗಳು, ಮರಗಳು, ಬೀದಿಯ ಲಾಂದ್ರದ ಕಂಬಗಳು ಇವುಗಳೆಲ್ಲ ಒಂದನ್ನೊಂದು ಹಿಂಬಾಲಿಸಿ ಪ್ರತಿಕೂಲವಾಗಿ ಹರಿದುವು. +ದಕ್ಷಿಣ ಮೋಷಂಡಿ! +ಗಾಡಿ ನಿಂತಿತು. +“ವೈದ್ಯಮಹಾಶಯ, ಇದೇ ನಮ್ಮ ಮನೆ; ಇಳಿಯಿರಿ” ಎಂದನು ವಿಪಿನಚಂದ್ರ. +ಸುರೇಂದ್ರಬಾಬು ಇಳಿದನು. +ತನಗೆ ಬೇಕಾದ ಸಾಮಾನುಗಳನ್ನೆಲ್ಲ ಗಾಡಿಯಿಂದ ಒಂದೊಂದನ್ನಾಗಿ ತೆಗೆದುಕೊಳ್ಳುತ್ತ ವಿಪಿನಚಂದ್ರನ ಮನೆಯ ಕಡೆ ನೋಡಿದನು. +ದೊಡ್ಡದಾದ ಸೌಧವೊಂದು ವಿಶಾಲವಾದ ಅಂಗಣದ ನಡುವೆ ನಿಶ್ಯಬ್ದವಾಗಿ ನಿಂತಿತ್ತು. +ಅಂಗಣದ ಸುತ್ತಲೂ ಒಂದು ಕುಬ್ಜ ಭಿತ್ತಿ ಇತ್ತು. +ಮನೆಯ ಸುತ್ತಲೂ ಅಲ್ಲಲ್ಲಿ ಫಲವೃಕ್ಷಗಳು ಮೌನವಾಗಿ ನಿಂತು ತಪಸ್ಸು ಮಾಡುತ್ತಿದ್ದುವು. +ಮನೆಯಲ್ಲಿ ಅಲ್ಲಲ್ಲಿ ದೀಪಗಳು ಉರಿಯುತ್ತಿದ್ದು ಕಿಟಕಿಗಳು ಕೆಂಡದ ಕಣ್ಣುಗಳಾಗಿದ್ದುವು. +ಅದೇ ಮನೆಯನ್ನೇ ದೆವ್ವಗಳ ಬೀಡು ಎಂದು ಊರಿನವರೆಲ್ಲ ಕರೆಯುತ್ತಿದ್ದುದು. +ಸುರೇಂದ್ರನ ಎದೆಯಲ್ಲಿ ತಳಮಳ ಉಂಟಾಯಿತು. +ಅದನ್ನು ಪ್ರವೇಶಮಾಡಲು ಅವನಿಗೆ ಇಷ್ಟವೂ ಇರಲಿಲ್ಲ; +ಧೈರ್ಯವೂ ಸಾಲದಾಗಿತ್ತು. +ಏನು ಮಾಡುವುದೆಂದು ಹಿಂದೆ ಮುಂದೆ ನೋಡಲಾರಂಭಿಸಿದನು. +ಅಷ್ಟರಲ್ಲಿ ವಿಪಿನನು “ಮಹಾಶಯ, ಒಳಗೆ ದಯಮಾಡಿಸಿ” ಎಂದು ಅತಿ ವಿನಯದಿಂದ ನುಡಿದು ಮುಂದೆ ನಡೆಯತೊಡಗಿದನು. +ಸುರೇಂದ್ರಬಾಬು ಮನೆಯ ಯಜಮಾನ ವಿಪಿನಬಾಬು ಇರುವನಲ್ಲಾ ಎಂಬ ಧೈರ್ಯದಿಂದ ಅವನೊಡನೆ ಹೋದನು. +ಮನೆಯಲ್ಲಿ ಜನರ ಸುಳಿವೇ ಇರಲಿಲ್ಲ. +ದೀಪಗಳು ಮಾತ್ರ ಉರಿಯುತ್ತಿದ್ದುವು. +ವೈದ್ಯನಿಗೆ ಎಲ್ಲಾ ಏನೋ ವಿಚಿತ್ರವಾಗಿ ಕಂಡಿತು. +ಆದರೆ ರೋಗಿಗಳಿದ್ದ ಮನೆಯಲ್ಲಿ ನಿಶ್ಯಬ್ದವಾಗಿರುವುದು ಸ್ವಾಭಾವಿಕವೆಂದು ಬಗೆದು ಶಾಂತನಾದನು. +ಬಾಗಿಲನ್ನು ದಾಟಿ ಒಳಗಿನ ಮಂದರಕ್ಕೆ ಹೋದನು. +ವಿಪಿನನ ಐಶ್ವರ್ಯಕ್ಕೆ ಅಲ್ಲಿದ್ದ ಒಂದೊಂದು ವಸ್ತವೂ ಸಾಕ್ಷಿಯಾಗಿತ್ತು. +ಆದರೆ ಸೇವಕರ ಸುಳಿವೇ ಅಲ್ಲಿರದಿರುವುದನ್ನು ನೋಡಿ ಸುರೇಂದ್ರಬಾಬುವಿಗೆ ಆಶ್ಚರ್ಯವಾಯಿತು. +ಇದ್ದಕಿದ್ದಂತೆ ವಿಪಿನನು ಅಲ್ಲಿದ್ದ ಒಂದು ಮಹಡಿಯ ಸೋಪಾನಗಳನ್ನು ಏರತೊಡಗಿದನು. +ಸುರೇಂದ್ರನೂ ಹತ್ತಿದನು. +ಇಬ್ಬರೂ ಮಹಡಿಯ ನಿಶ್ಯಬ್ದವಾದ ಒಂದು ಮಂದಿರಕ್ಕೆ ಬಂದರು. +ಅಲ್ಲಿ ರೋಗಿಗಳಿರುವ ಕೊಠಡಿಯ ಯಾವ ಚಿಹ್ನೆಯು ಇರಲಿಲ್ಲ. +ಇನ್ನಾವುದೋ ಬೇರೊಂದು ಚಿಕ್ಕ ಕೋಣೆಗಳಲ್ಲಿ ರೋಗಿ ಮಲಗಿರಬಹುದೆಂದು ವೈದ್ಯನು ಯೋಚಿಸುತ್ತಿದ್ದನು. +ಅಷ್ಟರಲ್ಲಿ ವಿಪಿನನು ಮಂದಿರದಲ್ಲಿದ್ದ ಒಂದು ಮಂಚದ ಬಳಿಗೆ ಹೋಗಿ “ಮಹಾಶಯ, ಈಕೆಯೇ ನನ್ನ ಪತ್ನಿ; +ಬಂದು ನೋಡಿ; ಪರೀಕ್ಷೆಮಾಡಿ” ಎಂದನು. +ಸುರೇಂದ್ರನು ಮಂಚದ ಕಡೆಗೆ ನೋಡಿದನು. +ಯಾವುದೋ ಒಂದು ವ್ಯಕ್ತಿ ಬಿಳಿಯ ಬಟ್ಟೆ ಮುಸುಕು ಹಾಕಿಕೊಂಡು ಮಲಗಿದ್ದಂತೆ ತೋರಿತು. +ಮುಸುಗಿನಿಂದ ನರಳುವ ಧ್ವನಿಯೂ ಹೊರಡತೊಡಗಿತು. +ಧ್ವನಿ ಅತ್ಯಂತ ಕನಿಕರವಾಗಿತ್ತು. +ವೈದ್ಯನು ಮಂಚದ ಬಳಿ ಹೋಗಿ ಮುಸುಕು ತೆರೆದನು. +ಒಬ್ಬ ಸುಂದರಿಯಾದ ಸ್ತ್ರೀವ್ಯಕ್ತಿ ಯಾತನೆಯಿಂದ ನರಳುತ್ತ ಹೊರಳುತ್ತ ಮಲಗಿದ್ದಳು. +ಆಕೆಗೆ ಮಾತನಾಡುವಷ್ಟು ಕೂಡ ಶಕ್ತಿ ಇರಲಿಲ್ಲ. +ಸುರೇಂದ್ರನು ರೋಗಪರೀಕ್ಷೆ ಮಾಡತೊಡಗಿದನು. +ವಿಪಿನಬಾಬು ಬಳಿಯಲ್ಲಿಯೆ ನಿಂತು ಅತ್ಯಂತ ಉದ್ವೇಗ ಕುತೂಹಲಗಳಿಂದ ನೋಡುತ್ತಿದ್ದನು. +ಸ್ವಲ್ಪ ಹೊತ್ತಿನಲ್ಲಿ ವೈದ್ಯನು ತನ್ನ ಪರೀಕ್ಷೆಯನ್ನು ಪೂರೈಸಿ ನಿಟ್ಟುಸಿರು ಬಿಡುತ್ತ ನೆಟ್ಟಗೆ ನಿಂತನು. +“ಮಹಾಶಯ, ರೋಗ ಹೇಗಿದೆ? +ಅಷ್ಟೇನೂ ಗಾಬರಿ ಇಲ್ಲವಷ್ಟೆ?” ಎಂದನು ವಿಪಿನಚಂದ್ರನು. +“ಬಾಬು, ಹಾಗಲ್ಲ, ರೋಗ ಪ್ರಬಲವಾಗಿದೆ. +ಹೆರಿಗೆಯ ವಿಷಯವಾದ್ದರಿಂದ ವೈದ್ಯಳನ್ನು ಆದಷ್ಟು ಜಾಗ್ರತವಾಗಿ ಕರೆದುಕೊಂಡು ಬರುವುದು ಮೇಲು!” +“ಈ ರಾತ್ರಿ ಯಾವ ವೈದ್ಯಳು ಸಿಕ್ಕುತ್ತಾಳೆ? +ನೀವೇನೊ ಮಹಾತ್ಮರಾದ್ದರಿಂದ ಬಂದಿರಿ!” +“ನನ್ನ ಕೈಕೆಳಗಿನ ವೈದ್ಯಳೊಬ್ಬಳಿದ್ದಾಳೆ. +ನಾನು ಹೇಳಿದೆನೆಂದು ಹೇಳಿದರೆ ಆಕೆ ಕೂಡಲೆ ಹೊರಟುಬರುತ್ತಾಳೆ. +“ಆಕೆಯ ಹೆಸರೇನು?ಇರುವುದೆಲ್ಲಿ?” +“ಆಕೆಯ ಹೆಸರು ಶಶಿಮುಖಿ. +ನಾನಿರುವ ಬೀದಿಯಲ್ಲಿಯೆ ೫೭೮ನೆಯ ನಂಬರಿನ ಮನೆಯಲ್ಲಿದ್ದಾಳೆ.” +“ಆಗಲಿ ಆಕೆಯನ್ನು ಕರೆತರುತ್ತೇನೆ. +ತಾವು ಈ ಕೋಣೆಯಲ್ಲಿ ಕೂತುಕೊಂಡಿರಿ.” ಎಂದು ಹೇಳಿ ವಿಪಿನಬಾಬು ಸುರೇಂದ್ರನನ್ನು ಮಂದಿರದ ಬಲದಿಕ್ಕಿನಲ್ಲಿರುವ ಒಂದು ಕೋಣೆಗೆ ಕರೆದುಕೊಂಡು ಹೋದನು. +ಅಲ್ಲಿ ಕುರ್ಚಿ ಮೇಜುಗಳು ಸಾಲುಸಾಲಾಗಿ ಇಡಲ್ಪಟ್ಟಿದ್ದುವು. +ಮೇಜಿನ ಮೇಲೆ ಪುಸ್ತಕಗಳು, ಬರೆಯುವ ಕಾಗದ, ಮಸಿಕುಡಿಕೆ, ಲೇಖನಿ, ಮೊದಲಾದ ಸಲಕರಣೆಗಳೆಲ್ಲವೂ ಸಿದ್ಧವಾಗಿದ್ದುವು. +ವಿಪಿನಚಂದ್ರನು ವೈದ್ಯನನ್ನು ಒಂದು ಆಸನದಲ್ಲಿ ಕೂರಿಸಿ “ತಮಗೆ ಯಾರಾದರೂ ಸೇವಕರು ಬೇಕೇನು?ಕರೆಯುತ್ತೇನೆ” ಎಂದನು. +“ಸೇವಕರೇಕೆ?ಬೇಡ!” ಎಂದನು ಸುರೇಂದ್ರಬಾಬು. +“ಹಾಗಾದರೆ ನಾನು ಬೇಗ ಬರುತ್ತೇನೆ” ಎಂದು ಹೇಳಿ ವಿಪಿನರು ಬಾಗಿಲು ಹಾಕಿಕೊಂಡು ಹೊರಟು ಹೋದನು. +ಸ್ವಲ್ಪ ಹೊತ್ತಿನಲ್ಲಿ ಕುದುರೆಗಾಡಿ ಬೀದಿಯಲ್ಲಿ ಚಲಿಸುವ ಸದ್ದು ಕೇಳಿಸಿತು. +ಸುರೇಂದ್ರನು ಕಿಟಕಿಯಿಂದ ಇಣಿಕಿನೋಡಿದನು. +ತಾನು ಕುಳಿತುಕೊಂಡು ಬಂದಿದ್ದ ಗಾಡಿಯೇ ಪುರಾಭಿಮುಖವಾಗಿ ಅತಿ ವೇಗದಿಂದ ಸಾಗುತ್ತಿತ್ತು. +ಮನೆಯ ಸುತ್ತಲೂ ಕಗ್ಗತ್ತಲೆ. +ನಟ್ಟಿರುಳ ನಿಶ್ಯಬ್ದ! +ನೆರೆಮನೆಗಳು ಎಂದರೆ ಎರಡು ಮೂರು ಫರ್ಲಾಂಗುಗಳ ಆಚೆ. +ಮನೆಯಲ್ಲಿಯೇ ಎಂದರೆ ಪಾಲುಮನೆಯ ನಿಶ್ಯಬ್ದ! +ತಿರುಗಾಡುವ ಹೆಜ್ಜೆಯ ಸದ್ದು ಕೂಡ ಇಲ್ಲ. +ಸುರೇಂದ್ರನು ಮೇಜಿನ ಮೇಲಿದ್ದ ಒಂದು ಪುಸ್ತಕವನ್ನು ತೆಗೆದುಕೊಂಡನು. +ಅದರ ಭಾಷೆ ಅವನಿಗೆ ಅರ್ಥವಾಗಲಿಲ್ಲ. +ಮತ್ತೊಂದನ್ನು ತೆಗೆದುಕೊಂಡನು. +ಅದೂ ಹಾಗೆಯೇ! +ಇನ್ನೊಂದನ್ನು ತೆಗೆದುಕೊಂಡು ನೋಡಿದನು. +ಅದೂ ಯಾವುದೋ ಒಂದು ಲಿಪಿ! +ಕಡೆಗೆ ನಿರಾಶನಾಗಿ ಸುಮ್ಮನೆ ಕುಳಿತನು. +ಅಷ್ಟರಲ್ಲಿ ಮಹಡಿಯ ನಡುಮನೆಯಲ್ಲಿ ಯಾರೋ ತಿರುಗಾಡುವ ಶಬ್ದ ಕೇಳಿಸಿತು. +ಬಳೆಗಳ ಸದ್ದು! +ಹೆಂಗಸರಿರಬೇಕೆಂದು ಬಾಬು ಸುಮ್ಮನಾದನು. +ಯಾರೋ ಬಂದು ರೋಗಿಯನ್ನು ಮಾತನಾಡಿಸುವಂತೆ ಕೇಳಿಸಿತು. +ಕಂಠ ಧ್ವನಿಗಳಿಂದ ಇಬ್ಬರು ಮೂವರು ಸ್ತ್ರೀಯರೆಂದು ಗೊತ್ತಾಯಿತು. +“ಈಗ ಹೇಗಿದೆ, ವಿಮಲೆ?” +“ಮಾತಾಡಿಸಬೇಡ, ಆಕೆಗೆ ಶಕ್ತಿಯಿಲ್ಲ.” +“ಪಾಪ ಬೆಳಗಿನಿಂದ ಏನೂ ಹೊಟ್ಟೆಗಿಲ್ಲ.” +ಇದ್ದಕಿದ್ದ ಹಾಗೆ ಭಾಷೆಯನ್ನು ಬದಲಾಯಿಸಿ ಮಾತನಾಡತೊಡಗಿದರು. +ಸುರೇಂದ್ರನಿಗೆ ಅದರ ತಲೆ ಬುಡ ತಿಳಿಯಲಿಲ್ಲ. +ಅಷ್ಟರಲ್ಲಿ ಯಾರೋ ಮಹಡಿಯ ಕೆಳಗೆ ಗಹಗಹಿಸಿ ನಕ್ಕರು. +ಸುರೇಂದ್ರಬಾಬುವಿಗೆ ಮನೆಯಲ್ಲಿ ಅನೇಕ ಜನರಿದ್ದಾರೆಂದು ಗೊತ್ತಾಯಿತು. +ಹಾಗೆಯೇ ಕುಳಿತಿದ್ದನು. +ಸ್ವಲ್ಪ ಹೊತ್ತಿನಲ್ಲಿ ಶಶಿಮುಖಿಯನ್ನು ತರಲು ಹೋಗಿದ್ದ ಗಾಡಿ ಬಂದಿತು. +ಶಶಿಮುಖಿಯ ಮಾತುಗಳೂ ಕೇಳಿಬಂದುವು. +ವಿಪಿನಚಂದ್ರನು ಅವಳೊಡನೆ ಸೋಪಾನಗಳನ್ನು ಏರುತ್ತಿದ್ದ ಸದ್ದು ಕೇಳಿಸಿತು. +ನಡುಮನೆಯ ಸಂಭಾಷಣೆ ಇದ್ದಕಿದ್ದ ಹಾಗೆ ನಿಂತುಹೋಯಿತು. +ಶಶಿಮುಖಿ ಸುರೇಂದ್ರಬಾಬುವಿಗೆ ನಮಸ್ಕಾರ ಮಾಡಿದಳು. +ವಿಪಿನಚಂದ್ರನು ಆಕೆಯ ಹಿಂಭಾಗದಲ್ಲಿ ಸುರೇಂದ್ರಬಾಬುವಿಗೆ ನಮಸ್ಕಾರ ಮಾಡಿದಳು. +ವಿಪಿನಚಂದ್ರನು ಆಕೆಯ ಹಿಂಭಾಗದಲ್ಲಿ ನಿಂತಿದ್ದನು. +ಸುರೇಂದ್ರಬಾಬು ಶಶಿಮುಖಿಯನ್ನು ಕುರಿತು “ರೋಗಿಯನ್ನು ಸ್ವಲ್ಪ ಪರೀಕ್ಷೆಮಾಡು, ರೋಗ ಬಹಳ ಭಯಂಕರವಾಗಿದೆ ಎಂದು ತೋರುತ್ತದೆ” ಎಂದನು ಇಂಗ್ಲೀಷಿನಲ್ಲಿ. +ಎಲ್ಲರೂ ನಡುಮನೆಯಲ್ಲಿದ್ದ ಮಂಚದ ಬಳಿಗೆ ಹೋದರು. +ಸ್ತ್ರೀ ಬಿಳಿಯ ಮುಸುಕು ಹಾಕಿಕೊಂಡು ಮಲಗಿದ್ದಳು. +ಆದರೆ ನರಳುತ್ತಿರಲಿಲ್ಲ. +ನಿದ್ದೆ ಮಾಡುವಂತಿದ್ದಳು. +ವಿಪಿನಚಂದ್ರನೂ ಸುರೇಂದ್ರಬಾಬುವೂ ಮಂಚದ ಬಳಿ ನಿಂತರು. +ಶಶಿಮುಖಿ ಸ್ವಲ್ಪ ಬಗ್ಗಿ ರೋಗಿಯನ್ನು ಪರೀಕ್ಷೆಮಾಡಲೋಸುಗ ಆಕೆ ಹೊದ್ದುಕೊಂಡಿದ್ದ ಮುಸುಕನ್ನು ಮೆಲ್ಲನೆ ಓಸರಿಸಿದಳು. +ಅಲ್ಲಿ ಯಾವ ರೋಗಿಯೂ ಇರಲಿಲ್ಲ! +ಆಕೆ ಬೆರಗಾಗಿ ನಿಂತಳು! +ಬಳಿಯಿದ್ದ ಸುರೇಂದ್ರನೂ ಬೆಚ್ಚಿದನು. +ಕಣ್ಣುಮುಚ್ಚಿ ಬಿಡುವುದರಲ್ಲಿ ವಿಪಿನಚಂದ್ರನೂ ಕರಗಿ ಮಾಯವಾದನು! +ರೋಗಿ ಮಲಗಿದ್ದ ಮಂಚವೂ ಮಾಯವಾಯಿತು. +ಅಲ್ಲಿದ್ದ ಐಶ್ವರ್ಯಸೂಚಕವಾದ ವಸ್ತುಗಳೆಲ್ಲಾ ಒಂದೊಂದಾಗಿ ಕಣ್ಮರೆಯಾದುವು. +ಸಾವಿರಾರು ಜನರು ಒಂದೇಸಾರಿ  ಗಹಗಹಿಸಿ ನಗುವಂತೆ ಒಂದು ಮಹಾಶಬ್ದವು ಜನಿಸಿ ಸುರೇಂದ್ರ ಶಶಿಮುಖಿಯರ ನೆತ್ತರು ಹೆಪ್ಪುಗಟ್ಟುವಂತಾಯಿತು. +ಅವರಿಬ್ಬರೂ ಭಯದಿಂದ ಚಿಟ್ಟನೆ ಕಿರಿಚಿಕೊಂಡರು. +ಅವರಿಗೆ ಏನು ಮಾಡಬೇಕೆಂಬುದೂ ತೋರಲಿಲ್ಲ. +ನೋಡುತ್ತಿದ್ದ ಹಾಗೆ ಹಾಗೆ ಆ ಮಂದಿರದ ನಾಲ್ಕು ದಿಕ್ಕಿನ ಗೋಡೆಗಳೂ ಚಲಿಸಿದಂತಾಗಿ ಅವುಗಳಿಂದ ಸಾವಿರಾರು ಕೈಗಳು ಮೂಡಿದುವು! +ಪ್ರತಿಯೊಂದು ಹಸ್ತದಲ್ಲಿಯೂ ತುಂಬಾ ರೂಪಾಯಿಗಳು ಝಣಝಣ ಶಬ್ದ ಮಾಡುತ್ತಿದ್ದುವು. +ನಾಲ್ಕು ದಿಕ್ಕಿನ ಭಿತ್ತಿಗಳೂ ನೀಡಿದ ಭಯಂಕರ ಹಸ್ತಗಳನ್ನು ಕಂಡು ಶಶಿಮುಖಿ ಸುರೇಂದ್ರರು ಗಟ್ಟಿಯಾಗಿ ಕೂಗುತ್ತಾ, ಮಹಡಿಯ ಏಣಿಗಂಡಿಯನ್ನು ಹುಡುಕುತ್ತಾ, ಗಾಬರಿಯಲ್ಲಿ ಅದನ್ನು ಕಾಣದೆ ಹುಚ್ಚರಂತೆ ಓಡಾಡತೊಡಗಿದರು. +ಅಷ್ಟರಲ್ಲಿ ಲಕ್ಷಾಂತರ ಜನರು ಒಟ್ಟಿಗೆ “ವೈದ್ಯರೆ ಫೀಜು!ವೈದ್ಯರೆ ಫೀಜು!” ಎಂದು ಕೂಗಿದ ಹಾಗಾಯಿತು. +ಜೊತೆಗೆ ಅಲ್ಲಿ ಉರಿಯುತ್ತಿದ್ದ ದೀಪಗಳೂ ನಂದಿಹೋದುವು. +ಕಗ್ಗತ್ತಲು ಕವಿಯಿತು. +ಶಶಿಮುಖಿ ಭಯದಿಂದ ಕೆಳಗೆ ಧುಮುಕಿದಳು. +ಕೆಳಗೆ ಬಂದು ನೋಡಲು ಮನೆಯ ಎಲ್ಲಾ ಬಾಗಿಲುಗಳೂ ಬಂಧಿಸಲ್ಪಟ್ಟಿದ್ದವು. +ಮನೆ ಶತಮಾನಗಳಿಂದ ಹಾಳುಬಿದ್ದಿದ್ದ ಮನೆಯಂತಿತ್ತು. +ಸುರೇಂದ್ರನೂ ಗಟ್ಟಿಯಾಗಿ ಅರಚಿಕೊಂಡು ಮೂರ್ಛಿತನಾದನು. +ನೆರೆಹೊರೆಯರು ಆ ಗದ್ದಲವನ್ನು ಕೇಳಿ ಓಡಿಬಂದು, ಮನೆಗೆ ಹಾಕಿದ್ದ ಬೀಗಗಳನ್ನು ಒಡೆದು, ಮೂರ್ಛಿತರಾಗಿ ಬಿದ್ದಿದ್ದ ಸುರೇಂದ್ರಬಾಬು ಶಶಿಮುಖಿಯರನ್ನು ಎತ್ತಿಕೊಂಡು ಹೋದರು. +ದೆವ್ವದ ಕಾಟ . +ಪಡುವಣ ಬಾನಕೆರೆಯಲ್ಲಿ ಬೈಗುಗೆಂಪು ಆಗತಾನೆ ಒಯ್ಯೊಯ್ಯನೆ ಇಳಿಯುತ್ತಿತ್ತು. +ಇರುಳದೇವಿಯ ಕರಿಯುಡೆಯ ನೆಳಲ ಜವನಿಕೆ ಗಿಡ ಮರ ಬಳ್ಳಿಗಳಿಂದ ಕಿಕ್ಕಿಂದ ದಟ್ಟವಾದ ಮಲೆನಾಡಿನ ಬನಬೆಟ್ಟಗಳನ್ನು ಮುಸುಗುತ್ತಿತ್ತು. +ಬಿಸಿಲ ಬೇಗೆಯಿಂದ ಬಲಲಿದ ಬೇಸಗೆಯ ಸಮೀರಣನು ಕೆಲಸವಿಲ್ಲದ ಆಲಸಗಾರನಂತೆ ನಿರಿದಳಿರ ನಡುವೆ ಅಲ್ಲಲ್ಲಿ ತೊಳಲುತ್ತಿದ್ದನು. +ಎಲ್ಲೆಲ್ಲಿಯೂ ಸದ್ದಡಗಿ ಮೌನವು ತುಳುಕಾಡುತ್ತಿತ್ತು. +ಇಂತಹ ಹೊತ್ತಿನಲ್ಲಿ ಜೋಡೆತ್ತಿನ ಸಾರೋಟು ಬಂಡಿಯೊಂದು ತೀರ್ಥಹಳ್ಳಿಯಿಂದ ಕೊಪ್ಪಕ್ಕೆ ಹೋಗುವ ಹೆದ್ದಾರಿಯಲ್ಲಿ ಬೇಗ ಬೇಗನೆ ಸಾಗುತ್ತಿತ್ತು. +ಜವ್ವನದ ಜೋರಿನಲ್ಲಿದ್ದ ಎತ್ತುಗಳು ಹಗುರವಾದ ಆ ಬಂಡಿಯನ್ನು ಬಳಲಿಕೆಯಿಲ್ಲದೆ ಎಳೆದುಕೊಂಡು ಓಡುತ್ತಿದ್ದುವು ಎಂಬುದು ಅವುಗಳ ಪದಗತಿಯ ಠೀವಿಯಿಂದ ಗೊತ್ತಾಗುತ್ತಿತ್ತು. +ಆ ಬಂಡಿಯಲ್ಲಿ ಗಾಡಿ ಹೊಡೆಯುವವನಲ್ಲದೆ ಮೂರು ಜನರು ಕುಳಿತಿದ್ದರು. +ಅವರಲ್ಲಿ ಇಬ್ಬರು ಪೋಲಿಸಿನವರು. +ಮೂರನೆಯ ವ್ಯಕ್ತಿ ಉಡುಪಿನಿಂದಲೂ ಮುಖಭಾವದಿಂದಲೂ ಧನಿಕನಾದ ದೊಡ್ಡ ಮನುಷ್ಯನಂತೆ ತೋರುತ್ತಿದ್ದನು. +ಆತನೆ ನವಿಲೂರಿನ ರಂಗರಾಯರು. +ಗಾಡಿ ಹೊಡೆಯುವವನು, ನೋಡುವುದಕ್ಕೆ ಅಷ್ಟೇನೂ ಕೂಲಿಯಾಳಿನಂತೆ ಕಾಣುತ್ತಿರಲಿಲ್ಲ. +ಸಾಧಾರಣವಾದ ಬಟ್ಟೆಗಳನ್ನು ಉಟ್ಟಿದ್ದನು. +ತಲೆಗೆ ಸುತ್ತಿದ್ದ ಅವನ ಕೆಂಪುವಸ್ತ್ರ ಅವನು ದಕ್ಷಿಣಕನ್ನಡ ಜಿಲ್ಲೆಯವನೆಂಬುದನ್ನು ಸಾರಿ ಹೇಳುವಂತ್ತಿತ್ತು. +ಅವನು ಚಪ್ಪರಿಸಿ ಚಾವಟಿಯನ್ನೆತ್ತಿದಂತೆಲ್ಲ ಎತ್ತುಗಳು ಭರದಿಂದ ಸಾಗುತ್ತಿದ್ದುವು. +“ಮುತ್ತಣ್ಣ, ನಿನ್ನೆಯೂ ಕಲ್ಲು ಬಿದ್ದುವೇನು?” +ಪ್ರಶ್ನೆಮಾಡಿದ ರಂಗರಾಯರ ಕಡೆಗೆ, ಬಂಡಿ ಹೊಡೆಯುತ್ತಿದ್ದ ಮುತ್ತಣ್ಣನು ತ್ರಿಕ್ಕನೆ ತಿರುಗಿ “ಹೌದು” ಎಂದನು. +ಇದನ್ನು ಆಲಿಸಿದ ಪೋಲೀಸನೊಬ್ಬನು ಕೇಳಿದನು “ರಾತ್ರಿ ಎಷ್ಟು ಹೊತ್ತಿನಿಂದ ಕಲ್ಲು ಬೀಳಲು ಪ್ರಾರಂಭವಾಗುತ್ತದೆ?” +“ಇಂತಿಷ್ಟೇ ಹೊತ್ತಿಗೆ ಬೀಳುತ್ತವೆಂದು ಹೇಳುವುದಕ್ಕಾಗುವುದಿಲ್ಲ. +ಒಂದು ದಿವಸ ಹತ್ತು ಗಂಟೆಗೆ ಬೀಳುತ್ತವೆ. +ಒಂದು ದಿವಸ ಬೆಳಗಿನ ಜಾವ ನಾಲ್ಕು ಗಂಟೆಗೆ ಬೀಳುತ್ತವೆ. +ನಿನ್ನೆ ಮಾತ್ರ ರಾತ್ರಿ ಎರಡು ಗಂಟೆಗೇ ಷುರುವಾಯ್ತು” ಎಂದು ಮುತ್ತಣ್ಣ ಎತ್ತಿನ ಬೆನ್ನು ಚಪ್ಪರಿಸಿದನು. +“ನೀವೆಲ್ಲಾ ಮಲಗಿದ್ದಿರೋ ಅಥವಾ-” ಎಂದು ರಂಗರಾಯರು ವಾಕ್ಯವನ್ನು ಪೂರ್ತಿಮಾಡುವುದಕ್ಕೆ ಮುನ್ನವೇ ಮುತ್ತಣ್ಣ ನಡುವೆ ಬಾಯಿ ಹಾಕಿ ಹೇಳತೊಡಗಿದನು. +“ಮಲಗುವುದೇ ಸರಿ! +ಮಲಗುವುದಾದರೂ ಹೇಗೆ? +ಕಲ್ಲು ಬೀಳುವ ಹೆದರಿಕೆಯಲ್ಲಿ ನಿದ್ದೆ ಬರುವುದೇ? +ನಾನೇನೋ ನಿನ್ನೆ ರಾತ್ರಿ ಕಣ್ಣು ಮುಚ್ಚಲಿಲ್ಲ. +ಬೇಲರ ಮಾದನಂತೂ ಕೋವಿ ಹಿಡಿದುಕೊಂಡು ಅವನ ಬಿಡಾರದಲ್ಲಿ ಕಾದೇ ಕೂತಿದ್ದ. +ನಿನ್ನೆ ಕಾವಲಿಗೆ ಬಂದಿದ್ದ ಪೋಲೀಸ್ ಸುಬ್ಬಣ್ಣನವರಂತೂ ಕಂಗೆಟ್ಟು ಹೋದರು. +ಅವರಿಗೊಂದೂ ಬಗೆಹರಿಯಲಿಲ್ಲ. +ಕಲ್ಲು ಬೀಳುವುದೆಂದರೇನು? +ಆನೆಗಲ್ಲು ಬಿದ್ದಹಾಗೆ! +ಹೆಂಚುಗಳು ಒಡೆದು ಒಡೆದು ಚೂರು! +ಕಣ್ಣಿಗೆ ಮಾತ್ರ ಒಬ್ಬರೂ ಕಾಣಿಸಲಿಲ್ಲ. +ಅಷ್ಟೆ ಏಕೆ? ಕಲ್ಲು ಎತ್ತ ಕಡೆಯಿಂದ ಬರುತ್ತಿದ್ದವೆಂದು ಗೊತ್ತುಮಾಡಲು ಕೂಡ ನಮ್ಮಿಂದಾಗಲಿಲ್ಲ, ಒಂದು ಸಾರಿ ತೋಟದ ಕಡೆಯಿಂದ ರೊಂಯ್ಯೆಂದು ಸದ್ದು ಬರುತ್ತಿತ್ತು. +ಒಂದು ಸಲ ಕೆಮ್ಮಣ್ಣು ದಿಣ್ಣೆ ಕಡೆಯಿಂದ ಬಂದಂತಾಗುತ್ತಿತ್ತು. +ದೇವರ ದಯದಿಂದ ನಮ್ಮ ಮೈಗೆ ತಗಲಲಿಲ್ಲ. +ಒಂದು ಕಲ್ಲಂತೂ ಪೋಲೀಸು ಸುಬ್ಬಣ್ಣನವರ ತಲೆಯ ಪಕ್ಕದಲ್ಲಿಯೆ ಸವರಿಕೊಂಡು ಹೋಯಿತಂತೆ. +ಆಲಿಸುತ್ತ ಕುಳಿತಿದ್ದ ಪೋಲೀಸು ರಾಮಣ್ಣನಿಗೆ ಸ್ವಲ್ಪ ದಿಗಿಲಾಯಿತು. +ಆತನಿಗೆ ದೆವ್ವಗಳಲ್ಲಿ ನಂಬಿಕೆ ಹೆಚ್ಚು. +ರಂಗರಾಯರ ಮನೆಗೆ ನಿತ್ಯವೂ ರಾತ್ರಿ ಕಲ್ಲು ಎಸೆಯುವುದು. +ಯಾವುದೋ ದೆವ್ವದ ಕಾಟವೆಂದೇ ಅವನ ಮನಸ್ಸಿನಲ್ಲಿ ನಿರ್ಧರಿಸಿಬಿಟ್ಟಿದ್ದನು. +ಆದ್ದರಿಂದ ಪೋಲೀಸಿನವರು ಹೋದರೂ ಒಂದೇ ಬಿಟ್ಟರೂ ಒಂದೇ, ರಂಗರಾಯರ ಮನೆಯೇನೋ, ಅವರು ತಕ್ಕ ಪರಿಹಾರ ಮಾಡದಿದ್ದರೆ, ಉಳಿಯುವುದಿಲ್ಲವೆಂದು ಅವನ ಸೂಕ್ಷ್ಮಚಿತ್ತಕ್ಕೆ ವೇದ್ಯವಾಗಿತ್ತು. +ಆದ್ದರಿಂದ ಅವನು ತನ್ನದೊಂದು ಮಾತನ್ನು ರಾಯರ ಕಿವಿಯ ಮೇಲೆ ಹಾಕಿಬಿಡುವುದೇ ಲೇಸೆಂದು ಬಗೆದು ಹೀಗೆಂದನು:“ರಾಯರು ಸರಕಾರ, ಪೋಲೀಸು ಇವನ್ನೇ ನಂಬಿದರೆ ಆಗದು. +ಮುತ್ತಣ್ಣ ಹೇಳುವುದನ್ನೆಲ್ಲಾ ಕೇಳಿದರೆ ಯಾವುದೋ ಕಲ್ಕುಟಿಗ ದೆವ್ವದ ಕಾಟವಿರಬೇಕೆಂದೇ ತೋರುತ್ತದೆ. +ಏನಾದರೂ ಹರಕೆ ಹೊತ್ತುಕೊಂಡು ಬಲಿಕೊಟ್ಟರೆ ಎಲ್ಲ ಸುಖವಾಗಬಹುದು. +ಇಲ್ಲದಿದ್ದರೆ ಯಾರಾದರೂ ಮಂತ್ರವಾದಿಗಳನ್ನು ಕರೆಸಿ ಆ ದೆವ್ವವನ್ನು ತಡೆಗಟ್ಟಿಸಿದರೆ ಎಲ್ಲ ನಿಲ್ಲುತ್ತದೆ. +ಹಿಂದೆ ಮುಳುಬಾಗಿಲ ಕಿಟ್ಟಯ್ಯನವರ ಮನೆಯಲ್ಲಿ ಹಿಂಗೇ ಆಗುತ್ತಿತ್ತು. +ಆದರೆ ಅವರ ಗೋಳು ನಿಮ್ಮದಕ್ಕಿಂತಲೂ ಸಾವಿರಪಾಲು ಹೆಚ್ಚಾಗಿತ್ತು!” +ಆಗಲೇ ನಿಶಾಚರರ ಕಲ್ಮಳೆಯ ಪೀಡೆಯನ್ನು ಸಹಿಸಿ ಬೇಸತ್ತಿದ್ದ ರಂಗರಾಯರು ಯಾರು ಏನು ಹೇಳಿದರೂ ಕೇಳುವಂತಿದ್ದರು. +ಪೋಲೀಸು ರಾಮಣ್ಣನ ಮಾತುಗಳು ಅವರಿಗೆ ಯಾವುದೋ ಒಂದು ಹೊಸ ಬೆಳಕನ್ನು ತಂದಂತಾಯಿತು. +ಅವರು ಅವನನ್ನು ಕುರಿತು ಕುತೂಹಲದಿಂದ “ಕಿಟ್ಟಯ್ಯನವರ ಮನೆಯಲ್ಲಿ ಏನಾಗಿತ್ತು?” ಎಂದರು. +ರಾಯರು ತನ್ನ ಮಾತಿಗೆ ಕಿವಿಗೊಟ್ಟುರೆಂದು ತಿಳಿದ ರಾಮಣ್ಣ ಉತ್ಸಾಹದಿಂದ ಬಾಯಿತುಂಬಾ ಗಳಪತೊಡಗಿದನು:“ಅವರಿಗೂ ಹೀಂಗೆಯೇ ಒಂದು ಕಲ್ಕುಟಿಗ ದೆವ್ವದ ಕಾಟ ಹಿಡಿದಿತ್ತು. +ಮೊದಮೊದಲು ಹೀಂಗೆಯೇ ಮನೆಗೆ ರಾತ್ರಿಯೆಲ್ಲ ಕಲ್ಲು ಹಾಕುತ್ತಿತ್ತು. +ಕಡೆಗೆ ದಿನವೂ ಅವರ ಕೊಟ್ಟಿಗೆಯ ಕಾಲ್ನಡೆಗಳ ಬಾಲ ಕತ್ತರಿಸತೊಡಗಿತು. +ಕಡೆಗೆ ಮನೆಯಲ್ಲಿಟ್ಟಿದ್ದ ಅರುವೆ ಬಟ್ಟೆಗಳಿಗೆ ಬೆಂಕಿ ಹಾಕತೊಡಗಿತು. +ನೀರಿನಲ್ಲಿ ಆಗತಾನೆ ಅದ್ದಿಟ್ಟ ಬಟ್ಟೆಗಳೂ ಕೂಡ ಸೀಮೆಯೆಣ್ಣೆಯಲ್ಲಿ ಅದ್ದಿದಂತೆ ಉರಿಯತೊಡಗಿದುವು. +ಕಟ್ಟಕಡೆಗೆ ಅವರ ಮನೆಯಲ್ಲಿ ಏನು ಪಾಕ ಮಾಡಿದರೂ ಅದರಲ್ಲಿ ಹೆಸಿಗೆಯನ್ನು ತಂದುಹಾಕತೊಡಗಿತು. +ಹಾಂಗೆಯೇ ಹೇಳುತ್ತಾ ಹೋದರೆ ಪುರಾಣವಾಗುತ್ತದೆ. +ಕಡೆಗೆ ಒಬ್ಬ ಮಲೆಯಾಳದ ಮಂತ್ರವಾದಿಯಿಂದ ಅದರ ಆಟ ನಿಂತಿತು. +ಅಲ್ಲಿಯೂ ದಿನವೂ ಪೋಲೀಸಿನವರ ಹಿಂಡೇ ಕಾಯುತ್ತಿತ್ತು. +ಅವರಿಂದ ಏನೂ ಆಗಲಿಲ್ಲ!”ರಾಯರಿಗೆ ಗಾಬರಿಯಾಯಿತು. +ಮುಂದೆ ತನಗೂ ಎಲ್ಲಿ ಅದೇ ಗತಿಯಾಗುತ್ತದೆಯೋ ಎಂದು ಚಿಂತಿಸತೊಡಗಿದರು. +ರಂಗರಾಯರ ವಾಸಸ್ಥಾನ ತೀರ್ಥಹಳ್ಳಿ. +ಅವರಿಗೆ ನವಿಲೂರಿನಲ್ಲಿ ಒಂದು ದೊಡ್ಡ ಜಮೀನು ಇತ್ತು. +ಅಲ್ಲಿ ಒಂದು ಹೆಂಚಿನ ಮನೆಯೂ ಸಂಸಾರಕ್ಕೆ ಬೇಕಾದ ಸಕಲ ಸಲಕರಣೆಗಳೂ ಇದ್ದವು. +ತೀರ್ಥಹಳ್ಳಿಯಿಂದ ಅವರು ಆಗಾಗ್ಗೆ ಹಳ್ಳಿಗೆ ಹೋಗಿ ಅಲ್ಲಿಯ ಗದ್ದೆ ತೋಟಗಳ ಮೇಲ್ವಿಚಾರಣೆ ನೋಡಿಕೊಳ್ಳುತ್ತಿದ್ದರು. +ಕೆಲವು ಸಮಯಗಳಲ್ಲಿ ಹಳ್ಳಿಯಲ್ಲಿ ಒಂದೆರಡು ದಿನಗಳ ಮಟ್ಟಿಗೆ ಇರುತ್ತಲೂ ಇದ್ದರು. +ಮುತ್ತಣ್ಣ ಅವರ ನೆಚ್ಚಿನ ಆಳು. +ಅವನು ಚಿಕ್ಕಂದಿನಿಂದಲ್ಲಿಯೆ ಕನ್ನಡ ಜಿಲ್ಲೆಯಿಂದ ಘಟ್ಟದ ಮೇಲಕ್ಕೆ ಬಂದು ರಂಗರಾಯರ ಮನೆಯಲ್ಲಿ ಕೆಲಸಕ್ಕೆ ನಿಂತಿದ್ದನು. +ರಂಗರಾಯರು ಅವನ ವಿನಯ ಕುಶಲತೆ ಬುದ್ದಿಗಳನ್ನು ನೋಡಿ ಕ್ರಮ ಕ್ರಮೇಣ ಅವನಿಗೆ ಮನೆಯ ಆಡಳಿತಕ್ಕೆ ಸೇರಿದ್ದ ಜವಾಬ್ದಾರಿಯನ್ನೂ ವಹಿಸತೊಡಗಿದರು. +ಸಂಕ್ಷೇಪವಾಗಿ ಹೇಳುದೆಂದರೆ ಮುತ್ತಣ್ಣನು ಸಾರಥಿತನದಿಂದ ಹಿಡಿದು ನರ್ಮಸಚಿವನಾಗಿ ಕೊನೆಗೆ ಅಮಾತ್ಯಪದವಿಗೂ ಏರಿದನು. +ರಂಗರಾಯರು ನವಿಲೂರಿಗೆ ಹೋಗುವಾಗಲೆಲ್ಲಾ ಮುತ್ತಣ್ಣನೆ ಗಾಡಿ ಹೊಡೆಯುತ್ತಿದ್ದನು. +ರಾಯರಿಗೆ ಗದ್ದೆ ತೋಟಗಳ ವಿಷಯದಲ್ಲಿ ಆಗಾಗ ಸಲಹೆಗಳನ್ನೂ ಕೊಡಲಾರಂಭಿಸಿದನು. +ರಾಯರ ಜಮೀನಿನ ವಿಷಯದಲ್ಲಿ ತುಂಬಾ ಶ್ರದ್ಧೆಯನ್ನೂ ನೈಪುಣ್ಯವನ್ನೂ ತೋರಿದನು. +ಇದನ್ನೆಲ್ಲ ನೋಡಿ ರಾಯರು ಕೃಪಾಪೂರ್ಣರಾಗಿ, ಅವನನ್ನು ತಮ್ಮ ಪ್ರತಿನಿಧಿಯನ್ನಾಗಿ ಮಾಡಿ ನವಿಲೂರಿನ ಎಲ್ಲ ಜಮೀನುಗಳನ್ನೂ ಮುತುವರ್ಜಿಯಿಂದ ನೋಡಿಕೊಳ್ಳುವಂತೆ ನೇಮಿಸಿದರು. +ಅಂತೂ ಮುತ್ತಣ್ಣ ಒಂದು ದೃಷ್ಟಯಿಂದ ನವಿಲೂರಿನ ಜಮೀನುದಾರನೆ ಆಗಿಬಿಟ್ಟನು. +ಹೀಗಿರುತ್ತಿರಲು ಒಂದು ಸಂಗತಿ ನಡೆಯಿತು. +ಒಂದು ಮಾರಿಮಳೆಗಾಲದಲ್ಲಿ ತುಂಗಾನದಿಯ ಪ್ರವಾಹ ಮೇರೆದಪ್ಪಿ ತೀರ್ಥಹಳ್ಳಿ ಕೆಲವು ಮನೆಮಠಗಳನ್ನು ಕೊಚ್ಚಿಬಿಟ್ಟಿತು. +ಆಗ ತೇಲಿಹೋದ ಮನೆಗಳಲ್ಲಿ ರಂಗರಾಯರ ಮನೆಯ ಭಾಗವೂ ಒಂದಾಗಿತ್ತು. +ಇದಾದ ಮೇಲೆ ರಾಯರು ಪಟ್ಟಣವನ್ನು ಬಿಟ್ಟು ಹಳ್ಳಿಯನ್ನೇ ಸೇರುವುದು ಲೇಸೆಂದು ಬಗೆದು ನವಿಲೂರಿನಲ್ಲಿದ್ದ ತಮ್ಮ ಮನೆಗೆ ಸಂಸಾರ ಸಮೇತವಾಗಿ ಒಕ್ಕಲು ಹೋದರು. +ಮುತ್ತಣ್ಣನೇ ಸ್ವತಃ ತೀರ್ಥಹಳ್ಳಿಗೆ ಹೋಗಿ ರಾಯರನ್ನು ಸಂಸಾರದೊಂದಿಗೆ ನವಿಲೂರಿಗೆ ಕರೆತಂದನು. +ಆತನ ವಿನಯವನ್ನು ನೋಡಿ ರಾಯರು ಮುಗ್ಧವಾದರು. +ಇಂತಹ ಸೇವಕನನ್ನು ಪಡೆದ ಧಣಿಯೇ ಧನ್ಯ ಎಂದುಕೊಂಡರು. +ಮುತ್ತಣ್ಣನ ಮೇಲ್ವಿಚಾರಣೆಯ ಪ್ರಭಾವದಿಂದ ನಳನಳಿಸುತ್ತಿದ್ದ ಗದ್ದೆ ತೋಟಗಳನ್ನು ನೋಡಿ ಪ್ರಸನ್ನಚಿತ್ತರಾದರು. +ರಾಯರು ನವಿಲೂರಿಗೆ ಒಕ್ಕಲು ಬಂದ ಎರಡು ದಿನಗಳಲ್ಲಿ ಒಂದು ವಿಚಿತ್ರ ಘಟನೆ ಸಂಭವಿಸಿತು. +ರಾತ್ರಿ ಸುಮಾರು ಗಂಟೆಯ ಸಮಯದಲ್ಲಿ ಮುತ್ತಣ್ಣನು ಅವರ ಕೋಣೆಯ ಬಾಗಿಲನ್ನು ಬಡಿದು “ಅಯ್ಯಾ!ಅಯ್ಯಾ!” ಎಂದು ಕೂಗಿದನು. +ರಾಯರು ಹೊರಗೆ ಬಂದು “ಕರೆದದ್ದೇಕೊ?” ಎಂದು ಕೇಳಿದರು. +ಮುತ್ತಣ್ಣ ಗಾಬರಿಯಿಂದ “ನಿಮಗೆ ಕೇಳಿಸಲಿಲ್ಲವೆ?” ಎಂದನು. +ರಾಯರು “ಏನು?ಏನು?” ಎಂದರು. +“ಯಾರೋ ಮನೆಯ ಮೇಲೆ ಕಲ್ಲು ಹಾಕುತ್ತಿದ್ದಾರೆ!”ಇಬ್ಬರೂ ನಿಂತು ಸ್ವಲ್ಪ ಹೊತ್ತು ಆಲಿಸಿದರು. +ಮಲೆನಾಡಿನ ನಿಬಿಡಾರಣ್ಯ ವೇಷ್ಟಿತ ಗಿರಿಕಂದರಗಳ ಭೀಷಣ ನಿಶ್ಯಬ್ದತೆ ಕರ್ಣಗೋಚರವಾಗುವಂತೆ ಇತ್ತು. +ಹೆಪ್ಪುಗಟ್ಟಿದ ನಟ್ಟಿರುಳ ಅಂಧಕಾರವು ವಿಶ್ವಸಮಸ್ತವನ್ನೂ ಮುಚ್ಚಿಮುಸುಗಿತ್ತು. +ಜಗತ್ತೆಲ್ಲವೂ ಶಬ್ದ ಬ್ರಹ್ಮದೊಡನೆ ತಿಮಿರಬ್ರಹ್ಮದಲ್ಲಿ ಕರಗಿ ಲೀನವಾಗಿ ಹೋಗಿತ್ತು. +ಕಗ್ಗತ್ತಲಲ್ಲಿ ಬಟ್ಟೆಗೆಟ್ಟ ದಾರಿಹೋಕರಂತೆ ತಾರೆಗಳು ಬಾನೆಡೆಯೊಳಲ್ಲಲ್ಲಿ ಕರಗಿ ಲೀನವಾಗಿ ಹೋಗಿತ್ತು. +ಕಗ್ಗತ್ತಲಲ್ಲಿ ಬಟ್ಟೆಗೆಟ್ಟ ದಾರಿಹೋಕರಂತೆ ತಾರೆಗಳು ಬಾನೆಡೆಯೊಳಲ್ಲಲ್ಲಿ ಮಿಣುಕುತ್ತಿದ್ದುವು. +ಮುತ್ತಣ್ಣ ಮನೆಯೊಳಗೆ ಹೋಗಿ ರಾಯರ ತೋಟಾ ಕೋವಿ ಹಿಡಿದುಕೊಂಡು ಬಂದನು. +ರಾಯರು ಲಾಂದರ ತೆಗೆದುಕೊಂಡರು. +ಇಬ್ಬರೂ ಹೆಜ್ಜೆಯ ಮೇಲೆ ಹೆಜ್ಜೆಯಿಡುತ್ತ ಮನೆಯ ಸುತ್ತಮುತ್ತಲೂ ಒಂದು ಸಲ ತಿರುಗಿ ನೋಡಿದರು. +ಯಾರೂ ಕಾಣಿಸಲಿಲ್ಲ; ಯಾವ ಸದ್ದೂ ಕೇಳಿಸಲಿಲ್ಲ. +ದೂರದ ಹಳ್ಳಿಯಲ್ಲಿ ಆಗಾಗ ಬೊಗಳುತ್ತಿದ್ದ ನಾಯಿಯ ಮಬ್ಬು ದನಿಯೊಂದು ಮಾತ್ರ ಘನ ತಿಮಿರವನ್ನು ಭೇದಿಸಲಾರದೆ ತೊಳಲಿ ಸೋತು ಬರುತ್ತಲಿತ್ತು. +ರಾಯರು ಮುತ್ತಣ್ಣನ ಕಡೆಗೆ ನೋಡಿದರು. +ಅವರ ಮುಖದ ಮೇಲೆ ಬಿಚ್ಚಿ ತೋರುತ್ತಿದ್ದ ಪ್ರಶ್ನೆಯ ಭಾಗವನ್ನು ಅರಿತು ಮುತ್ತಣ್ಣನು “ನಾಕ್ಕೈದು ಕಲ್ಲುಗಳು ಹೆಂಚಿನ ಮೇಲೆ ಬಿದ್ದುದನ್ನು ಕಿವಿಯಾರ ಕೇಳಿದೆ!” ಎಂದನು. +ಮತ್ತೊಂದು ಸಾರಿ ಸುತ್ತಲೂ ತಿರುಗಿ ಪರೀಕ್ಷೆ ಮಾಡಿಕೊಂಡು ಬರೋಣ ಎಂದು ಹೇಳಿ ರಾಯರು ಎರಡು ಹೆಜ್ಜೆ ಮುಂದೆ ಸರಿದರು. +ಒಡನೆಯೇ ಎರಡು ದಪ್ಪವಾದ ಕಲ್ಲುಗುಂಡುಗಳು ಹಂಚಿನ ಮೇಲೆ ಬಿದ್ದ ಸದ್ದಾಯಿತು. +ಆ ಘೋರ ನೀರವತೆಯಲ್ಲಿ ಅದು ಭಯಂಕರವಾಗಿತ್ತು. +ರಾಯರ ಹಿಂತಿರುಗಿ ಮುತ್ತಣ್ಣನನ್ನು ನೋಡಿ. +ಕೈಸನ್ನೆ ಮಾಡಿ. +ಕಲ್ಲು ಎತ್ತಕಡೆಯಿಂದ ಬಂದುವೆಂದು ಕೇಳಿದರು. +ಮುತ್ತಣ್ಣನೂ ಗಾಬರಿಯಿಂದ ತೋಟದ ಕಡೆಗೆ ಕೈ ತೋರಿದನು. +ಇಬ್ಬರೂ ಆ ಕಡೆಗೆ ಸರಿದರು. +ಪುನಃ ಕಲ್ಲೊಂದು ಮನೆಗೆ ಹೊದಿಸಿದ ಸತುವಿನ ತಗಡುಗಳ ಮೇಲೆ ಢಣಢಣ ಎಂದು ಉರುಳಿತು. +ಮುತ್ತಣ್ಣ ಸ್ವಲ್ಪವೂ ವಿಳಂಬ ಮಾಡದೆ  ಒಮದು ಬೆದರುಗುಂಡು ಹಾರಿಸಿದನು! +ಆ ಇರುಳಿನ ಮೂಕ ಮೌನದಲ್ಲಿ ಈಡಿನ ಸದ್ದು ಸಿಡಿಲಿಗೆ ನೂರ್ಮಡಿಯಾಗಿ ಮೊಳಗಿ, ಬೆಟ್ಟಗುಡ್ಡಗಳಿಂದ ಪ್ರತಿಧ್ವನಿತವಾಯಿತು. +ನಿಶ್ಯಬ್ದತೆಯಲ್ಲಿ ಮುಳುಗಿದ ಎಲ್ಲರೂ ಎಚ್ಚತ್ತರು. +ಸಮಿಪದ ಬಿಡಾರದಲ್ಲಿ ಮಲಗಿ ನಿದ್ರಿಸುತ್ತಿದ್ದ ಮಾದನು ಓಡಿಬಂದನು. +ಮನೆಯಲ್ಲಿ ಮಲಗಿದ್ದ ಆಳುಗಳೆಲ್ಲರೂ ಕೂಗುತ್ತ ಹೊರಗೆ ನುಗ್ಗಿದರು. +ಹೆಂಗಸರು ಮಕ್ಕಳೆಲ್ಲ ಎಚ್ಚತ್ತು ಗಲಭೆ ಮಾಡಿದರು. +ಕೊಟ್ಟಿಗೆಯಲ್ಲಿ ಶಾಂತಿಯಿಂದ ಮಲಗಿದ್ದ ದನಕರುಗಳೂ ಬೆದರಿ ಗುಡುಗಾಡಿದವು. +ಎರಡು ಮೂರು ಲಾಟೀನು ಬಂದುವು. +ಎಲ್ಲರೂ ಹುಡುಕಿದರು. +ಆದರೆ ಯಾರೊಬ್ಬರೂ ಗೋಚರವಾಗಲಿಲ್ಲ. +ಮರುದಿನ ರಾತ್ರಿಯೂ ಕಲ್ಲು ಬಿದ್ದುವು. +ಅದರ ಮರುದಿನವೂ ಹಿಂದಿನ ದಿನಕ್ಕಿಂತ ಸ್ವಲ್ಪ ಹೆಚ್ಚಾಗಿಯೇ ಕಲ್ಲು ಮಳೆಗೆರೆಯಿತು. +ಹೆಂಗಸರು ಮಕ್ಕಳೆಲ್ಲ ಭಯದಿಂದ ನಿದ್ದೆಮಾಡಲಾರದವರಾದರು. +ಬಳ್ಳಿಯ ಹಳ್ಳಿಯ ಇಬ್ಬರು ಪ್ರಸಿದ್ಧರಾದ ಬೇಟೆಗಾರರು ಮಾದ ಮುತ್ತಣ್ಣ ಇವರೊಡನೆ ಕಾವಲು ಕೂತರು. +ಆದರೂ ಶಿಲಾವರ್ಷ ತಪ್ಪಲಿಲ್ಲ. +ಕಳ್ಳರು ಕಣ್ಣಿಗೆ ಬೀಳಲೂ ಇಲ್ಲ. +ಮುತ್ತಣ್ಣ ಒಂದು ದಿನ ಯಾರೋ ಕಣ್ಣಿಗೆ ಕಾಣಿಸಿದಂತಾಗಲು ಗುಂಡು ಹೊಡೆದನು. +ಆದರೆ ಅದೂ ಗುರಿತಪ್ಪಿ ನಿಷ್ಪ್ರಯೋಜಕವಾಯಿತು. +ದೂರು ಪೋಲೀಸು ಇಲಾಖೆಯವರೆಗೂ ಹೋಯಿತು. +ರಾಯರು ಹೆಂಗಸರು ಮಕ್ಕಳನ್ನೆಲ್ಲ ಮರಳಿ ಪೇಟೆಯ ಮನೆಗೆ ಕಳುಹಿಸಿಬಿಟ್ಟರು. +ಮರುದಿನ ಪೊಲೀಸಿನವನೊಬ್ಬನು ನವಿಲೂರಿಗೆ ಬಂದನು. +ತೀರ್ಥಹಳ್ಳಿಯ ಪೋಲೀಸು ಇನ್‌ಸ್ಪೆಕ್ಟರ ಆಗಿದ್ದ ಮಹಮ್ಮದ್ ಹುಸೇನ್ ಸಾಹೇಬರು ಅವನನ್ನು ಮನೆಯ ಕಾವಲಿಗಾಗಿಯೂ ಕಳ್ಳರ ಪತ್ತೆಗಾಗಿಯೂ ಕಳುಹಿಸಿದ್ದರು. +ರಾಯರು ಪೋಲೀಸಿನವನನ್ನು ಆದರದಿಂದ ಬರಮಾಡಿಕೊಂಡು ಅಂದಿನ ರಾತ್ರಿಗಳಲ್ಲಿ ನಡೆದ ವಿಷಯಗಳನ್ನೆಲ್ಲ ತಿಳಿಸಿದರು. +ಪೋಲೀಸಿನವರಿಗೆ ಅತ್ಯಾಶ್ಚರ್ಯವಾಯಿತು. +ನವಿಲೂರಿನಲ್ಲಿ ಇರುವುದು ರಾಯರ ಮನೆಯೊಂದೆ. +ಸುತ್ತ ಮುತ್ತಲೂ ಕಾಡು ಬೆಟ್ಟ. +ಬೇರೆ ಹಳ್ಳಿಗಳೆಂದರೆ ಬೆಟ್ಟಗಳಾಚೆ ಇರುವುವು. +ನವಿಲೂರಿನಲ್ಲಿ ಇರುವ ಜನಸಂಖ್ಯೆಯೋ, ಕೆಲಸಗಾರರನ್ನು ಗಣನೆಗೆ ತಂದುಕೊಂಡರೂ, ಇಪ್ಪತ್ತಕ್ಕೆ ಮೇಲಾಗುತ್ತಿದ್ದಿಲ್ಲ. +ಹೀಗಿರುವಾಗ ಅಲ್ಲಿಗೆ ಹೊರಗಿನಿಂದ ಯಾವ ಕಳ್ಳನು ಬರಬೇಕು? +ಇದನ್ನೆಲ್ಲ ತನ್ನಲ್ಲಿಯೆ ಚಿಂತಿಸಿ ಪೋಲೀಸಿನವನು “ಸ್ವಾಮಿ, ತಮಗೆ ಆಗದವರು ಯಾರಾದರೂ ಇದ್ದಾರೆಯೆ ಇಲ್ಲಿ?” ಎಂದನು. +“ಹಾಗೆಂದರೇನಯ್ಯಾ? +ಇರುವವರೆಲ್ಲ ನನ್ನ ಆಳುಗಳೇ. +ಅವರಲ್ಲಿ ನನಗೆ ಆಗದವರು ಯಾರಿದ್ದಾರೆ?” +“ತಮಗೆ ಯಾರ ಮೇಲೆಯೂ ಗುಮಾನಿ ಇಲ್ಲವೆ? ” +“ಇಲ್ಲ. ” +“ಬೇಲರ ಮಾದನ ಮೇಲೆ?” +“ಛೇ!ಛೇ!ಬಡಪಾಯಿ!ಅವನು ಬಹಳ ಸಭ್ಯ!” +“ನಿಮ್ಮ ಗಾಡಿಯ ಮುತ್ತಣ್ಣ?” +“ಸರಿಹೋಯ್ತು ಬಿಡಯ್ಯ! +ಇನ್ನು, ನವಿಲೂರು ರಂಗರಾಯರ ಮೇಲೆಯೇ ಏನಾದರೂ ಗುಮಾನಿ ಇದೆಯೇ ಎಂದು ಕೇಳುವಿಯೋ ಏನೋ!” +“ಹಾಗಲ್ಲ, ಸ್ವಾಮಿ ಕಳ್ಳರನ್ನು ಪತ್ತೆ ಮಾಡಬೇಕಾದರೆ ಇಂತಹ ಪ್ರಶ್ನೆಗಳನ್ನೆಲ್ಲ ಕೇಳದಿದ್ದರೆ ಆಗುತ್ತದೆಯೇ?” +“ಅಲ್ಲವಯ್ಯಾ, ಮುತ್ತಣ್ಣನ ಮೇಲೆ ಗುಮಾನಿ ಇದೆಯೇ ಎಂದು ಕೇಳಿಬಿಟ್ಟೆಯಲ್ಲ! +ಮುತ್ತಣ್ಣ ನಮ್ಮ ಮನೆ ಹುಡುಗ. +ಮನೆಯ ಆಡಳಿತವೆಲ್ಲ ಹೆಚ್ಚು ಕಡಿಮೆ ಅವನದೇ ಆಗಿದೆ. +ಹೀಗಿರುವಾಗ ಅವನೆಲ್ಲಿಯಾದರೂ ಅಂಥಾ ಕೆಲಸಕ್ಕೆ ಕೈಹಾಕುವ ಸಂಭವವುಂಟೇ?” +“ಏನಾದರೂ ಆಗಲಿ. +ಈ ದಿನ ರಾತ್ರಿ ನನ್ನ ಕೈಕೆಳಗೆ ಮೂರು ನಾಲ್ಕು ಜನರನ್ನು ಕೊಡಿ, ಕಳ್ಳರನ್ನು ಪತ್ತೆಮಾಡಿಯೇ ಬಿಡುತ್ತೇನೆ. +ಒಬ್ಬೊಬ್ಬರಿಗೆ ಒಂದು ಬಂದೂಕವೂ ಬೇಕು.” +“ಓಹೋ ಅದಕ್ಕೇನು? +ಎಷ್ಟು ಜನ ಬೇಕು ಅಂದರೆ ಅಷ್ಟು ಜನ ಕೊಡುತ್ತೇನೆ. +ನೆರೆಯ ಹಳ್ಳಿಯ ರಾಮಣ್ಣ, ನಾಗಣ್ಣ ಇಬ್ಬರೂ ಸಾಯಂಕಾಲದ ಹೊತ್ತಿಗೆ ಬರುತ್ತಾರೆ. +ಪಾಪ!ಅವರಿಬ್ಬರೂ ರಾತ್ರಿಯೆಲ್ಲ ನಿದ್ದೆಯಿಲ್ಲದೆ ಕಾಯುತ್ತಾರೆ. +ಮುತ್ತಣ್ಣನೂ ಕಾಯುತ್ತಾನೆ. +ಮಾದ ಇದ್ದಾನೆ. +”ಸಂಜೆಯಾಯಿತು. ಪೋಲೀಸಿನವನು ರಾತ್ರಿಯಲ್ಲಿ ಯಾರೂ ಮಾತಾಡದೆ, ದೀಪವಿಲ್ಲದೆ, ಹೊರಗೆ ಸಂಚರಿಸಬಾರದೆಂದು ನವಿಲೂರಿನವರಿಗೆಲ್ಲ ಕಟ್ಟಪ್ಪಣೆ ಮಾಡಿದನು. + ಕತ್ತಲಾಯಿತು,ಮನೆಯ ನಾಲ್ಕು ಭಾಗಗಳಲ್ಲಿ ನಾಲ್ಕು ಜನರು ಕೋವಿಗಳನ್ನು ಹಿಡಿದುಕೊಂಡು ಕುಳಿತರು. +ಪೂರ್ವದಿಕ್ಕಿನ ಮಾವಿನ ಮರದ ಬಳಿ ರಾಮಣ್ಣನೂ, ಪಶ್ಚಿಮ ದಿಕ್ಕಿನ ಕೊಟ್ಟಿಗೆಯ ಅಟ್ಟದಮೇಲೆ ನಾಗಣ್ಣನೂ, ಉತ್ತರದಿಕ್ಕಿನ ಹಿತ್ತಲಬೇಲಿಯ ಬಳಿ ಮಾದನೂ ಅಲ್ಲಿಗೆ ಸ್ವಲ್ಪದೂರದಲ್ಲಿ ಮುತ್ತಣ್ಣನೂ ಕುಳಿತರು. +ಸದ್ದಿಲ್ಲದಿರುಳು ಕಣ್ಣಿರಿನ ಕತ್ತಲೆ ಮಿಣುಕುವ ಅಸಂಖ್ಯ ತಾರೆಗಳ ಮಬ್ಬಾದ ಬೆಳಕು ಕೂಡ, ಮರಗಳ ಕೊಬ್ಬಿದ ತಳಿರ ನಡುವೆ ಸಿಕ್ಕಿ ಎಲ್ಲಿಯೋ ಅಡಗಿಹೋಗಿದೆ. +ಕೊಟ್ಟಿಗೆಯ ಅಟ್ಟದಮೇಲೆ ಕುಳಿತ ರಾಮಣ್ಣನು ಚೀಲವೆಲ್ಲ ಬರಿದಾಗುವ ತನಕ ಎಲೆಯಡಕೆ ಹಾಕಿಬಿಟ್ಟನು. +ಆದರೂ ನಿದ್ರೆ ಹರಿಯಲಿಲ್ಲ. +ಮೆಲ್ಲಗೆ ಮಲಗಿದನು. +ಬೇಲರ ಮಾದನಂತೂ ಕುಡಿದ ಕಳ್ಳಿನ ಮತ್ತಿನಲ್ಲಿ ಮೈಮರೆತು ಬಿಟ್ಟನು. +ಪೋಲೀಸಿನವನು ಮನೆಯ ಚಾವಡಿಯಲ್ಲಿಯೆ ಕುಳಿತಿದ್ದನು. +ಸುಮಾರು ಹನ್ನೆರಡು ಗಂಟೆಯ ಸಮಯವಿರಬಹುದು. +ಆಗ ಸದ್ದಿಲ್ಲದಿರುಳಿನ ಕರುಳನ್ನು ಬಗೆದುಕೊಂಡು ಬಂದೂಕಿನ ‘ಢಂ’ಕಾರವೊಂದು ನಾಡೆಲ್ಲವನ್ನೂ ನಡುಗಿಸಿ ಬಿಟ್ಟಿತು. +ಎಲ್ಲರೂ ಎಚ್ಚತ್ತರು. +ಗುಂಪು ಸೇರಿದರು. +ಗಜಿಬಿಜಿಯಾಯಿತು. +ಕಡೆಗೆ ಮುತ್ತಣ್ಣನು ಎಲ್ಲರನ್ನೂ ಕರೆದುಕೊಂಡು ಒಂದೆಡೆಗೆ ಹೋದನು. +ಲಾಟೀನು ಅವನ ಕೈಯಲ್ಲಿಯೆ ಇತ್ತು. +ಅದರ ಬೆಳಕಿನಲ್ಲಿ ಏನನ್ನೊ ಹುಡುಕಿದನು. +ಸ್ವಲ್ಪ ಗಾಬರಿಯಾಗಿ ಬೆಚ್ಚಿನಿಂತು “ಬನ್ನಿ!ಇಲ್ಲಿ ನೋಡಿ” ಎಂದನು. +ಎಲ್ಲರೂ ಒಬ್ಬರ ಮೇಲೆ ಒಬ್ಬರು ನುಗ್ಗಿ ನೋಡಿದರು. +ರಕ್ತ!ಗುಂಡಿನ ಪೆಟ್ಟಿನಿಂದ ಸೋರಿದ ನೆತ್ತರು. + ತೊಟ್ಟಿಕ್ಕುತ್ತಾ ಹೋಗಿತ್ತು. + ಎಲ್ಲರೂ ಅದರ ಜಾಡನ್ನೇ ಹಿಡಿದು ಮುಂಬರಿದರು. +ನೆತ್ತರು ಸುಮಾರು ಒಂದು ಫರ್ಲಾಂಗಿನವರೆಗೂ ಕಂಡುಬಂದು, ಅಲ್ಲಿ ಹರಿಯುತ್ತಿದ್ದ ತೊರೆಯ ನೀರಿನಲ್ಲಿ ನಿಂತುಬಿಟ್ಟಿತ್ತು. +ಗಾಯವಾದ ಕಳ್ಳನನ್ನು ಉಳಿದ ಕಳ್ಳರು ಹೊತ್ತುಕೊಂಡೇ ಹೋದರೆಂದು ಎಲ್ಲರೂ ಸಿದ್ಧಾಂತಮಾಡಿ ನಿಟ್ಟುಸಿರೆಳೆಯುತ್ತಾ ಹಿಂತಿರುಗುದರು. +ಇನ್ನು ಮೇಲೆ ಕಳ್ಳರ ಗಲಾಟೆ ತಪ್ಪುವುದೆಂದು ಎಲ್ಲರೂ ಊಹಿಸಿದರು. +ಆದರೆ ಮರುದಿನವೂ ಮನೆಯ ಮೇಲೆ ಕಲ್ಲುಬಿತ್ತು. +ದಿನದಿನವೂ ಕಾದರು. +ಬೆದರುಗುಂಡು ಹೊಡೆದರು. +ಪೋಲೀಸಿನವರು ಬಂದರು; ಹೋದರು. +ಕಳ್ಳರು ಮಾತ್ರ ಕಲ್ಲೆಸೆಯುತ್ತಲೇ ಇದ್ದರು. +ಗುಲ್ಲು ಎಲ್ಲೆಲ್ಲಿಯೂ ಹಬ್ಬಿತು. +ಒಂದು ದಿನ ರಾತ್ರಿ. +ಎಲ್ಲರೂ ಕಾವಲು ಕುಳಿತಿದ್ದಾರೆ. +ಬೇಲರ ಮಾದನೂ ತನ್ನ ಗುಡಿಸಲಿನ ಮುಂಭಾಗದಲ್ಲಿ ಎವೆಯಿಕ್ಕದೆ ಕಗ್ಗತ್ತಲನ್ನು ನೋಡುತ್ತಾ ಇದ್ದಾನೆ. +ಕೋವಿಯನ್ನು ಕೆಳಗಿಟ್ಟಿದ್ದಾನೆ. +ಎಲೆಯಡಕೆ ಹಾಕಿಕೊಳ್ಳುವುದಕ್ಕೆಂದು ಚೀಲವನ್ನು ಬಿಚ್ಚುತ್ತದ್ದಾನೆ. +ಇದ್ದಕಿದ್ದ ಹಾಗೆ ಚೀಲವನ್ನು ಕೆಳಗೆಸೆದು ಕೋವಿಯನ್ನು ಕೈಗೆ ತೆಗೆದುಕೊಂಡನು. +ವಿಳಂಬಮಾಡದೆ ಗುರಿಯಿಟ್ಟನು. +“ಯಾರದು?” ಎಂದು ಕೂಗಿದನು. +ಮಾತೇ ಇಲ್ಲ. +ಆದರೆ ಯಾರೋ ಒಂದು ಮರದಡಿ ನಿಂತಹಾಗೆ ತೋರಿತು. +ಪುನಃ “ಯಾರದು?” ಎಂದನು. +ಉತ್ತರವಿಲ್ಲ. + ಹಿಂದೆ ಮುಂದೆ ನೋಡದೆ ಇಡು ಹೊಡೆದೇಬಿಟ್ಟನು. +“ಅಯ್ಯೋ ಕೊಂದೆಯೇನೋ?” ಎಂಬ ಪರಿಚಿತ ಧ್ವನಿಯೊಂದಾಯಿತು. +ಮಾದ ನಡುಗಿದನು. +ಮುಂದೆ ನುಗ್ಗಿ ಓಡಿದನು. +ಅಷ್ಟರಲ್ಲಿ ಅನೇಕರು ದೀಪಗಳನ್ನು ಹೊತ್ತಿಸಿಕೊಂಡು ಅಲ್ಲಿಗೆ ಓಡಿಬಂದರು. +ನೋಡುವಲ್ಲಿ ಕಾಲಿಗೆ ಚರೆಯ ಪೆಟ್ಟುಬಿದ್ದು ಮುತ್ತಣ್ಣನು ನೋವಿನಿಂದ ಕೆಳಗೆ ಬಿದ್ದು ನರಳುತ್ತಿದ್ದಾನೆ! +ರಂಗರಾಯರೂ ಅಲ್ಲಿಗೆ ಬಂದರು. +“ಯಾರೋ ಈಡು ಹೊಡೆದದ್ದು?” ಎಂದರು. +ಮಾದ “ನಾನು ಅಯ್ಯಾ?” ಎಂದನು. +“ನಿನಗೇನು ಕಣ್ಣಿರಲಿಲ್ಲವೇನೋ?” +“ನಾನೇನು ಮಾಡಲಿ, ಅಯ್ಯಾ? +ಎರಡು ಸಾರಿ ಕೂಗಿ ಕರೆದೆ. + ಮಾತಾಡಲಿಲ್ಲ...ಕಳ್ಳರೆಂದೇ ಹೊಡೆದುಬಿಟ್ಟೆ?”ರಾಯರು ಮುತ್ತಣ್ಣನನ್ನು ಗದರಿಸಲಿಲ್ಲ. +ಏಕೆಂದರೆ ಅವನು ಆಗಲೇ ನೋವಿನಿಂದ ನರಳುತ್ತಿದ್ದನು. +ಒಂದು ಕಾಲಿನ ಎಲುಬು ಒಡೆದು ಹೋಗಿತ್ತು. +ರಾಯರು ಮುತ್ತಣ್ಣನನ್ನು ಕರೆದುಕೊಂಡು ಬೆಂಗಳೂರು ವಿಕ್ಟೋರಿಯಾ ಆಸ್ಪತ್ರೆಗೆ ಹೋದರು. +ಅಲ್ಲಿ ಕೆಲವು ದಿನಗಳಿದ್ದು ಅವನ ಕಾಲು ಗುಣವಾದ ಮೇಲೆ ಮರಳಿದರು. +ಈ ಮಧ್ಯೆ ನವಿಲೂರಿನಲ್ಲಿ ಕಳ್ಳರ ಗಲಾಟೆ ಇರಲಿಲ್ಲ. +ಪುನಃ ಮನೆಯ ಮೇಲೆ ಕಲ್ಲಿನ ಮಳೆಗರೆಯಲು ಪ್ರಾರಂಭವಾಯಿತು. +ರಂಗರಾಯರಿಗೆ ಯಾವ ತೋರಲಿಲ್ಲ. +ಎಲ್ಲರೂ ಅಪಾರ್ಥಿವ ಕಾರಣಗಳನ್ನೆ ಕೊಡಲಾರಂಭಿಸಿದರು. +ನವಿಲೂರಿಗೆ ಬಂದ ಪೋಲೀಸಿನವರಂತೂ ಕಲ್ಲೆಸೆಯುವವರು ದೆವ್ವಗಳಲ್ಲದೆ ಮನುಷ್ಯರಲ್ಲವೇ ಅಲ್ಲವೆಂದು ಸಾರಿ ಸಾರಿ ಹೇಳಿದರು. +ಮನುಷ್ಯರಾಗಿದ್ದರೆ ಸರ್ವಾಂರ್ಯಾಮಿಗಳಾದ ಪೋಲೀಸಿನವರಿಂದ ತಪ್ಪಿಸಿಕೊಳ್ಳುವರೇ? +ಏನು ಮಾತು!ಮಂತ್ರವಾದಿಗಳನ್ನು ಕರೆಯಿಸಿ ತಡೆಕಟ್ಟಿಸಿ ನೋಡಿದರು; +ಏನೂ ಪ್ರಯೋಜನವಾಗಲಿಲ್ಲ. +ಕಡೆಗೆ ನೆರೆಯೂರಿನ ಮಂಗನಹಳ್ಳಿಯ ಸಿಂಗಾ ಜೋಯಿಸರು ತಾವು ಮಂತ್ರಬಲದಿಂದ ಕಲ್ಲೆಸೆಯುವ ಕಳ್ಳರನ್ನು ನಿಂತಲ್ಲಿಂದ ಅಲುಗಾಡದಂತೆ ಮಾಡಬಲ್ಲೆನೆಂದು ಹೇಳಿದರು. +ರಂಗರಾಯರುರಿಂದ ಅವರಿಗೆ ಆಗ ತಾನೆ ಸ್ವಲ್ಪ ಸಾಲ ಬೇಕಾಗಿತ್ತು! +ರಾಯರೂ ಒಪ್ಪಿದರು. +ಸರಿ, ಜೋಯಿಸರು ಬಂದರು. +ಆ ದಿನವೇನು ನವಿಲೂರಿನಲ್ಲಿ ಅನೇಕ ಜನರು ನೆರೆದಿದ್ದರು! +ಮುತ್ತಣ್ಣನೇ ಜೋಯಿಸರಿಗೆ ಬೇಕಾದ ಮಂತ್ರದ ರಂಗವಲ್ಲಿಯ ಸಲಕರಣೆಗಳನ್ನೆಲ್ಲಾ ಒದಗಿಸಿಕೊಟ್ಟನು. +ಅದ್ಭುತ ಕಾರ್ಯವನ್ನು ನೋಡುವೆವೆಂದು ಎಲ್ಲರಿಗೂ ಉತ್ಸಾಹ, ಉದ್ವೇಗ! +ಜೋಯಿಸರು ಅಂಗಳದಲ್ಲಿ ರಂಗವಲ್ಲಿ ಬರೆಯತೊಡಗಿದರು. +ವಿಚಿತ್ರ ವಿಚಿತ್ರವಾದ ಚಿತ್ರಜಾಲವನ್ನು ಬರೆದರು. +ಘೋರಾಕೃತಿಗಳನ್ನು ಕೆತ್ತಿದರು. +ಹಣ್ಣು, ತೆಂಗಿನಕಾಯಿ, ಧೂಪಗಳನ್ನು ಹೊತ್ತಿಸಿ ಪೂಜೆ ಮಾಡಿದರು. +ನಿರರ್ಗಳವಾಗಿ, ಹತ್ತಿರವಿದ್ದವರಿಗೆ ಯಾರಿಗೂ ಸ್ಪಷ್ಟವಾಗಿ ಕೇಳದ ರೀತಿಯಿಂದ ಬೇಕಾದಷ್ಟು ಮಂತ್ರಘೋಷಣ ಮಾಡಿದನು. +ಅಲ್ಲಲ್ಲಿ ಸಣ್ಣ ಮೊಳೆಗಳನ್ನು ನೆಲಕ್ಕಿಳಿಸಿದರು. +ಅಂತೂ ನೋಟವೇನೊ ಅದ್ಭುತವಾಗಿಯೆ ಇತ್ತು. +ಹಳ್ಳಿಯ ಜನರು ಬೆಪ್ಪುಬೆರಗಾಗಿ ಹೋದರು. +ಕತ್ತಲಾಯಿತು, ಮುತ್ತಣ್ಣನು ಕೆಂಗೊಳು, ಬಣ್ಣದ ನೀರು, ಕಕ್ಕಡಗಳನ್ನು ತಂದುಕೊಟ್ಟನು. +ಜೋಯಿಸರು ಇದ್ದಕಿದ್ದ ಹಾಗೆ ಗಂಭೀರರಾದರು. +ಅವರ ವಾಣಿ ಮೊಳಗತೊಡಗಿತು. +ಏನೋ ಒಂದು ಮಹಾಕಾರ್ಯವು ನಡೆಯುವುದೆಂದು ಎಲ್ಲರೂ ಮೌನವಾಗಿ ಮೂಕರಾಗಿ ನಿಂತಿದ್ದರು. +ರಾತ್ರಿ ಒಂಬತ್ತು ಗಂಟೆಯಾಯಿತು. +ಎಲ್ಲೆಲ್ಲಿಯೂ ಮುಟ್ಟಿ ಅನುಭವುಸಬಹುದಾದ ಮೌನ ಹಬ್ಬಿತ್ತು. +ನೆರೆದಿದ್ದ ಜನರೆಲ್ಲರೂ ಇದ್ದಕಿದ್ದ ಹಾಗೆ ಬೆಚ್ಚಿದರು. +ನಾಲ್ಕೈದು ಕಲ್ಲುಗಳು ಮನೆಯ ಹೆಂಚುಗಳ ಮೇಲೆ ಬಿದ್ದು ಢಣ್ ಢಣ್ ಢಣ್ ಎಂದು ಸದ್ದುಮಾಡಿದುವು. +ಒಂದು ಕಲ್ಲು ರೊಂಯ್ಯೆಂದು ಬಂದು ಜೋಯಿಸರ ಮುಂದೆಯೇ ಬಿತ್ತು. +ಜೋಯಿಸರು ಎದ್ದುನಿಂತು, ಸುತ್ತಲೂ ಕತ್ತಲು ಮುತ್ತಿದ್ದ ಬಾಂದಳವನ್ನು ನಿಟ್ಟಿಸಿ ನಾಲ್ದೆಸೆಗಳಿಗೂ ಕೈಮುಗಿದು, ಒಂದು ದೊಡ್ಡ ಮೊಳೆಯನ್ನು ತೆಗೆದುಕೊಂಡು ನೆಲದಮೇಲೆ ತಾವು ಬರೆದಿದ್ದ ಒಂದು ಮನುಷ್ಯನ ಎದೆಗೆ ಸರಿಯಾಗಿ ಹೊಡೆದಿಳಿಸಿದರು. +ಬಾಯಲ್ಲಿ ತಮ್ಮಷ್ಟಕ್ಕೆ ತಾವೇ “ಹಾಗೆ!ಅಲ್ಲಿ ನಿಂತಿರು!” ಎಂದು ಹೇಳುತ್ತಿದ್ದರು. +ಸ್ವಲ್ಪ ಹೊತ್ತಾದ ಮೇಲೆ ನೆರೆದಿದ್ದವರ ಕಡೆಗೆ ತಿರುಗಿ “ನೀವಿನ್ನು ಧೈರ್ಯವಾಗಿ ಹೋಗಿ ಮಲಗಿ. +ನಾಳೆ ಹೊತ್ತಾರೆ ಹೋಗಿ ಅವನನ್ನು ಎಳೆದುಕೊಂಡು ಬಂದರಾಯ್ತು! +ಅವನು ಎಲ್ಲಿದ್ದನೋ ಅಲ್ಲಿಂದ ಒಂದು ಹೆಜ್ಜೆಯನ್ನೂ ಕೀಳದಂತೆ ಮಾಡಿಬಿಟ್ಟಿದ್ದೇನೆ” ಎಂದರು. +ರಂಗರಾಯರು ಕುತೂಹಲದಿಂದ “ಜೋಯಿಸರೇ, ಅದಕ್ಕೇನಂತೆ ಈಗಲೇ ಹೋಗಿ ಎಳೆದುಕೊಂಡು ಬರೋಣ” ಎಂದರು. +ಜೋಯಿಸರು ಅಧಿಕಾರವಾಣಿಯಿಂದ “ಬೇಡ” ಎಂದರು. +ಜೋಯಿಸರ ಮಾತೆಂದು ತಿಳಿದು ಎಲ್ಲರೂ ಸುಮ್ಮನಾದರು; +ಮಲಗಿದರು. +ಬೆಳಗಾಯ್ತು ಜೋಯಿಸರು ಪವಾಡ ಮಾಡುವರೆಂಬ ಶುಭವಾರ್ತೆ ಅಕ್ಕಪಕ್ಕದ ಹಳ್ಳಿಗಳಲೆಲ್ಲ ತಂತಿಲಿ ಸುದ್ದಿಯಂತೆ ಹಿಂದಿನ ದಿನವೇ ಹಬ್ಬಿಬಿಟ್ಟಿತ್ತು. +ಆದ್ದರಿಂದ ಹೊತ್ತುಮೂಡುವುದಕ್ಕೆ ಮುಂಚಿತವಾಗಿಯೆ ನವಿಲೂರಿನಲ್ಲಿ ಜನರು ಕಿಕ್ಕಿರಿದರು. +ನಿರುದ್ವಿಗ್ನ ಜೀವಿಗಳಾದ ಗ್ರಾಮನಿವಾಸಿಗಳಿಗೆ ಇಂಥಾದ್ದು ಏನಾದರೊಂದು ನಡೆದರೆ ಪರಮಾನಂದ. +ಸುಮಾರು ಐವತ್ತು ಅರವತ್ತು ಜನರೊಡಗೂಡಿ ರಂಗರಾಯರು ಜೋಯಿಸರನ್ನು ಮುಂದಿಟ್ಟುಕೊಂಡು ಮಂತ್ರಮುಗ್ಧನಾಗಿ ಅಚಲನಾಗಿದ್ದ ಕಳ್ಳನನ್ನು ಎಳೆದುಕೊಂಡು ಬರಲು ಹೊರಟರು. +ಉಳಿದ ಕಡೆಗಳಲ್ಲೆಲ್ಲ ನಿಬಿಡ ಸುಂದರ ಶ್ಯಾಮಲದ್ರುಮಮಯ ಅರಣ್ಯ ಶ್ರೇಣಿ. +ಒಬ್ಬೊಬ್ಬರು ಇಬ್ಬಿಬ್ಬರು ಮೂರು ಮೂರು ಜನರು ಹೀಗೆ ಸಣ್ಣ ಸಣ್ಣ ದೊಡ್ಡ ದೊಡ್ಡ ಗುಂಪುಗಳಾಗಿ ನೆರೆದವರೆಲ್ಲರೂ ಕಳ್ಳರನ್ನು ಹುಡುಕಿದರು. +ಪೊದೆಗಳಲ್ಲಿ, ಬಂಡೆಯ ಸಂದಿಗಳಲ್ಲಿ, ಹೆಮ್ಮರಗಳ ನಿರಿದಳಿರ ಗುಂಪಿನಲ್ಲಿ, ಎಲ್ಲೆಲ್ಲಿಯೂ ಹುಡುಕಿದರು. +ಯಾರೋ ಒಂದಿಬ್ಬರು ಅವರಂತೆಯೇ ಹುಡುಕುತ್ತಿದ್ದ ಮತ್ತಿಬ್ಬರನ್ನು ಕಂಡು ಭ್ರಾಂತಿಯಿಂದ “ಸಿಕ್ಕಿದರು ಕಳ್ಳರು ಸಿಕ್ಕಿದರು!” ಎಂದು ಕೂಗಿಕೊಂಡರು. +ಎಲ್ಲರೂ ಆಯೆಡೆಗೆ ನುಗ್ಗಿದರು. +ಆದರೇನು? +ನಿಷ್ಪ್ರಯೋಜನ! +ಕೆಲವರು ಬೈದರು, ಕೆಲವರು ನಕ್ಕರು, ಕೆಲವರು ಕೈ ಚಪ್ಪಾಳೆ ಹೊಡೆದರು; +ಮತ್ತೆ ಕೆಲವರು ತಮ್ಮ ತಮ್ಮಲ್ಲಿಯೆ ಜೋಯಿಸರು ಮೋಸಗಾರನೆಂದು ಗುಸುಗುಸು ಮಾತಾಡಿಕೊಂಡರು. +ಮನುಷ್ಯರಂತೆಯೇ ಬೇಟೆಯನ್ನು ಹುಡುಕಿಹುಡುಕಿ ಬಳಲಿದ ಬೇಟೆಯ ನಾಯಿಗಳೂ ಜೋಯಿಸರನ್ನೂ ಬೈಯುವಂತೆ ಬೊಗಳಿದುವು. +ಅಂತೂ ಮಧ್ಯಾಹ್ನ ಹನ್ನೆರಡು ಗಂಟೆಯ ಮೇಲೆ ಹೊತ್ತಾಯ್ತು. +ಜೋಯಿಸರು ಜನರನ್ನು ಕಾಡಿನಿಂದ ಕಾಡಿಗೆ ತೊಳಲಿಸಿದರು; ಬಳಲಿಸಿದರು. +ಕಡೆಗೆ ಎಲ್ಲರೂ ಹಸಿದು ಬೇಸತ್ತು ಹಿಂತಿರುಗಿದರು. +ಜೋಯಿಸರು ಮಾತ್ರ “ಕಳ್ಳನು ನಿಜವಾಗಿಯೂ ಬಂದಿಯಾಗಿದ್ದಾನೆ. +ಎಲ್ಲಿಯೋ ನಿಂತಿದ್ದಾನೆ. +ಹುಡುಕುವವರು ಸರಿಯಾಗಿ ಹುಡುಕಲಿಲ್ಲ” ಎಂದು ಗೊಣಗುತ್ತ ಹೋದರು. +ಪೋಲೀಸ್ ಇನ್‌ಸ್ಪೆಕ್ಟರ್ ಮಗಮದ್ ಹುಸೇನ್ ಸಾಹೇಬರಿಗೆ ನವಿಲೂರಿನ ವಿಚಿತ್ರ ವಾರ್ತೆಗಳೆಲ್ಲ ತಲುಪಿದುವು. +ಅವರೂ ಚೋರರೂ ಅಮಾನುಷ ವ್ಯಕ್ತಿಗಳಾಗಿರಬೇಕೆಂದೇ ಊಹಿಸಿದರು. +ಏಕೆಂದರೆ ಇಷ್ಟೊಂದು ಜನ ಪೋಲೀಸಿವನರಿಗೆ, ರಂಗರಾಯರಿಗೆ, ಹಳ್ಳಿಯ ವೀರರಿಗೆ ಎಲ್ಲರಿಗೂ ಮಂಕುಬೂದಿ ಎರಚಿದ ಚೋರರು ಅಸಾಧಾರಣ ವ್ಯಕ್ತಿಗಳಲ್ಲದೆ ಮತ್ತೇನು? +ಆದ್ದರಿಂದ ತಾವೇ ‘ಖುದ್ದಾಗಿ’ ನವಿಲೂರಿಗೆ ಹೋಗಿ ವಿಷಯವನ್ನು ವಿಮರ್ಶೆ ಮಾಡಬೇಕೆಂದು ನಿರ್ಧರಿಸಿದರು. +ಅದನ್ನು ರಂಗರಾಯರಿಗೂ ತಿಳಿಸಿದರು. +ರಾಯರಿಗೆ ಪರಮ ಸಂತೋಷವಾಯಿತು. +ತಮ್ಮ ಜೋಡೆತ್ತಿನ ಸಾರೋಟು ಬಂಡಿಯನ್ನು ಮುತ್ತಣ್ಣನೊಡನೆ ಕಳುಹಿಸಿ ಇನ್‌ಸ್ಪೆಕ್ಟರ್ ಸಾಹೇಬರನ್ನು ಕರೆಯಿಸಿಕೊಂಡರು. +ಮಹಾನಗರವಾದ ತೀರ್ಥಹಳ್ಳಿಯ ಪೋಲೀಸ್ ಇನ್‌ಸ್ಪೆಕ್ಟರ್ ಸಾಹೇಬರು ಕುಗ್ರಾಮವಾದ ನವಿಲೂರಿಗೆ ಬಿಜಯ ಮಾಡುವರೆಂಬ ವರ್ತಮಾನ ನಿದಾಘವನ ವಹ್ನಿಯಂತೆ ಪ್ರಸರಿತು. +ಜನರು ತಂಡೋಪ ತಂಡವಾಗಿ (ಅಂದರೆ ಇಬ್ಬಿಬ್ಬರಾಗಿ, ಮೂವರು ಮೂವರಾಗಿ!) ನವಿಲೂರಿನಲ್ಲಿ ನೆರೆದರು. +ಅವರೆಲ್ಲರೂ ಆ ದಿನ ರಾತ್ರಿ ನವಿಲೂರಿನಲ್ಲಿಯೇ ತಂಗಿಬಿಟ್ಟು ಕಳ್ಳರನ್ನು ಪತ್ತೆ ಮಾಡಬೇಕೆಂದು ನಿಶ್ಚಯಿಸಿದ್ದರು. +ಆದರೆ ಇನ್‌ಸ್ಪೆಕ್ಟರ್ ಸಾಹೇಬರು ಅವರೆಲ್ಲರನ್ನೂ ದಯೆದಾಕ್ಷಿಣ್ಯಗಳಿಲ್ಲದೆ ಹಿಂದಕ್ಕೆ ಕಳುಹಿಸಿಬಿಟ್ಟರು! +ಎಬ್ಬಿ ಬಿಟ್ಟರು!ಎಲ್ಲರೂ, ತಮ್ಮ ತಮ್ಮ ಧೈರ್ಯಸಾಹಸಗಳನ್ನು ತೋರಿ ಸಾಹೇಬರಿಂದ ಸಿಫಾರಸು ಪಡೆಯಬೇಕೆಂದು ಹಾರೈಸಿಕೊಂಡು ಬಂದಿದ್ದ ಅವರೆಲ್ಲರೂ, ಪೆಚ್ಚುಮೋರೆ ಹಾಕಿಕೊಂಡು ಹೊರಟು ಹೋದರು. +ಆ ದಿನ ರಾತ್ರಿ ಮನೆಯ ಮೇಲೆ ಕಲ್ಲು ಬೀಳಲೇ ಇಲ್ಲ! +ಪಾಪ, ಮುಸಲ್ಮಾನರನ್ನು ಕಂಡರೆ ದೆವ್ವಗಳಿಗೆ ಭಯವಿಲ್ಲವೇ? +ಹಾಗೆಂದೇ ಹಳ್ಳಿಯವರೆಲ್ಲಾ ಭಾವಿಸಿದರು. +ಮರುದಿನ ರಾತ್ರಿ ಇನ್‌ಸ್ಪೆಕ್ಟರು ಪಕ್ಕದ ಹಳ್ಳಿಯ ನಾಗಣ್ಣ, ರಾಮಣ್ಣ ಇವರಿಬ್ಬರನ್ನು ಕಾವಲಿರುವಂತೆ ಹೇಳಿ ತಾವು ಮಲಗಿಕೊಂಡರು. +ನಡುರಾತ್ರಿಯ ಹೊತ್ತಿನಲ್ಲಿ ಮನೆಯ ಮೇಲೆ ಕಲ್ಲು ಬೀಳತೊಡಗಿದುವು. +ಇನ್‌ಸ್ಪೆಕ್ಟರು ಎದ್ದರು. +ರಂಗರಾಯರೂ ಎಚ್ಚತ್ತು ಹೊರಗೆ ಬಂದರು. +ಮುತ್ತಣ್ಣ ಲಾಟೀನು ತಂದನು. +ಎಲ್ಲರೂ ಸೇರಿ ಕಲ್ಲು ಬಿದ್ದಕಡೆಗೆ ಹೋದರು. +ಬೇಲರ ಮಾದನೂ ಗುಡಿಸಲ ಕಡೆಯಿಂದ ಬಂದು ಗುಂಪನ್ನು ಸೇರಿದರು. +ಗುಂಪು ಹೋಗುತ್ತಿರುವಾಗಲೇ ಕಲ್ಲೊಂದು ಮನೆಯ ಹೆಂಚಿನ ಮೇಲಿಂದ ಢಣ ಢಣ ಎಂದು ಉರುಳಿತು. +ಎಲ್ಲರೂ ಚಕಿತರಾದರು. +ಇನ್‌ಸ್ಪೆಕ್ಟರು ಸುತ್ತಲೂ ನೋಡಿದರು. +ಎಲ್ಲೆಲ್ಲಿಯೂ ನಿಶ್ಯಬ್ದ! +ಜನ್ಮತಃ ಪತ್ತೆದಾರರಾಗಿದ್ದ ಅವರ ಮನಸ್ಸಿನಲ್ಲಿ ಪ್ರತಿಭೆ ಮಿಂಚಿತು! +“ಎಲ್ಲರೂ ನಿಂತಲ್ಲಿಯೇ ನಿಲ್ಲಿ! +ಅಲುಗಾಡದೆ ನಿಲ್ಲಿ” ಎಂದರು ಇನ್‌ಸ್ಪೆಕ್ಟರು. +ರಂಗರಾಯರು ಬೆಚ್ಚಿದರು. +ರಾಮಣ್ಣ, ನಾಗಣ್ಣ, ಮುತ್ತಣ್ಣ, ಮಾದ ಎಲ್ಲರೂ ನಿಷ್ಪಂದರಾಗಿ ನಿಂತುಬಿಟ್ಟರು. +ಯಾರಿಗೂ ಏನೊಂದೂ ಬಗೆ ಹರಿಯಲಿಲ್ಲ! +“ನಿಮ್ಮೆಲ್ಲರನ್ನೂ ನಾನೀಗ ಜಡ್ತಿಮಾಡಿ ನೋಡಬೇಕು” ಎಂದರು ಇನ್‌ಸ್ಪೆಕ್ಟರ್ ಸಾಹೇಬರು. +ರಂಗರಾಯರು “ಇದೇನು, ಸಾಹೇಬರೆ?” ಎಂದರು. +ನಾಗಣ್ಣನ ಜೇಬನ್ನು ಪೂರೈಸಿ, ಪಕ್ಕದಲ್ಲಿ ಲಾಟೀನು ಹಿಡಿದು ನಿಮತಿದ್ದ ಮುತ್ತಣ್ಣನ ಜೇಬಿಗೆ ಕೈಹಾಕಿದರು. +ಮುತ್ತಣ್ಣನು ಬೆಚ್ಚಿಬಿದ್ದು ಬೆಳ್ಳಗಾಗಿ ಮೈ ಬೆವರಿ ನಡುಗತೊಡಗಿದನು. +ಇನ್‌ಸ್ಪೆಕ್ಟರು ಕೈಯನ್ನು ಹೊರಗೆ ತೆಗೆದು ರಂಗರಾಯರನ್ನು ಸಂಬೋಧಿಸಿ “ಇಲ್ಲಿ ನೋಡಿ, ರಂಗರಾಯರೆ!” ಎಂದರು. +ರಂಗರಾಯರು ನೋಡುತ್ತಾರೆ: ಮುತ್ತಣ್ಣನ ಜೇಬಿನಲ್ಲಿ ಕಲ್ಲಿನ ರಾಶಿ!ಪಾಪ! +ಅವನದೇನು ತಪ್ಪು? +ಎಲ್ಲಾ ಕಲ್ಲುಕುಟಿಗ ದೆವ್ವದ ಕಾಟ! +ಸರಳಹೃದಯನೂ ವಿನಯಸಂಪನ್ನನೂ ಆಗಿದ್ದ ಮುತ್ತಣ್ಣ ಕೈಗೆ ದರ್ಪ ಸಿಕ್ಕಿದ ಮೇಲೆ ಸ್ವಲ್ಪ ಅಹಂಕಾರಿಯಾಗಿದ್ದನು. +ಹಳ್ಳಿಯಲ್ಲೆಲ್ಲ ಇವನು ಆಡಿದ್ದೇ ಆಟ, ಮಾಡಿದ್ದೇ ಮಾಟ ಎಂಬ ಹಾಗಾಗಿತ್ತು. +ಬರಬರುತ್ತಾ ಗ್ರಾಮ ಚಕ್ರಾಧಿಪತ್ಯದ ರುಚಿ ಬಲವಾಯಿತು. +ಆದ್ದರಿಂದ ರಾಯರು ಹಳ್ಳಿಗೆ ಬಂದು ನೆಲಸುತ್ತಾರೆ ಎಂಬ ವರ್ತಮಾನ ಹಬ್ಬಿದ ಕೂಡಲೆ ಅವನಿಗೆ ಚಿಂತೆ ಹತ್ತಿತು. +ಏಕೆಂದರೆ ರಾಯರು ಹಳ್ಳಿಯಲ್ಲಿಯೆ ನಿಂತುಬಿಟ್ಟರೆ ಇದುವರೆಗೂ ಅರಸಾಗಿದ್ದ ತಾನು ಆಳಾಗಬೇಕಾಗುವುದಲ್ಲಾ ಎಂದು ಬಹಳವಾಗಿ ಚಿಂತಿಸಿ, ಕಡೆಗೆ ಏನಾದರೂ ಒಂದು ಉಪಾಯದಿಂದ ರಾಯರು ನವಿಲೂರಿನಲ್ಲಿ ನೆಲೆಯಾಗಿರದಂತೆ ಮಾಡಿಯೇ ಬಿಡಬೇಕೆಂದು ನಿಶ್ಚಯಿಸಿದ್ದನು. +ಅದಕ್ಕಾಗಿ ಕೋಳಿ ಕೊಯ್ದು ಮನೆಯೆಡೆಯಿಂದ ಹಳ್ಳದ ದಂಡೆಯವರೆಗೆ ನೆತ್ತರು ತೊಟ್ಟಿಕ್ಕಿ ಚೆಲ್ಲುವಂತೆ ಮಾಡಿದ್ದರೂ ಆಶೆ ಕೈಗೂಡಲಿಲ್ಲ! + ಸನ್ಯಾಸಿಸದ್ದಿಲ್ಲದ ಶಾಂತಿ ಎಲ್ಲೆಲ್ಲಿಯೂ ಹಬ್ಬಿತ್ತು. +ಹುಣ್ಣಿಮೆಯ ತಣ್ಗದಿರನ ತುಂಬು ಬಿಂಬವು ಬಿತ್ತರದ ಬಾಂದಳದಲ್ಲಿ ಬೆಳಗಿ ತೇಲುತ್ತ ಮೋಡಗಳ ತೆರೆಮರೆಯಲ್ಲಿ ಮರೆಯಾಗಿ ಮರಳಿ ಮೈದೋರಿ, ತನ್ನ ತುದಿಯರಿಯದ ಚಂಚಲ ಲೀಲೆಯಲ್ಲಿ ತೊಡಗಿತ್ತು. +ಮನೋಹರವಾದ ತಿಂಗಳ ಬೆಳಕು ಗಂಗೆ ಯಮುನೆಯರ ಸಂಗಮದೊಡನೆ ತಾನೂ ಸಂಗಮಿಸಿ ತೆರೆತರೆಗೂ ಹಬ್ಬಿ, ತನ್ನ ಸೊಬಗಿನ ವಯ್ಯಾರಕ್ಕೆ ತಾನೆ ಹಿಗ್ಗಿ, ಹೆಮ್ಮೆಯಿಂದ ನಲಿಯುತ್ತಿತ್ತು. +ಪ್ರಯಾಗ ಕ್ಷೇತ್ರದ ವನಗಳು ಕೌಮುದಿಯ ಕಡಲಿನಲ್ಲಿ ಮುಳುಗಿ ಮಲಗಿದ್ದುವು. +ತಂಬೆಲರು ಮೆಲ್ಲಮೆಲ್ಲನೆ ತಳಿರು ಹೂಗಳನ್ನು ಮುದ್ದಿಸಿ ಅಲ್ಲಲ್ಲಿ ಸುಳಿಸುಳಿದು ತನ್ನಿನಿಯಳನ್ನು ಅರಸುವ ವಿರಹಿಯಂತೆ ತೊಳಲುತ್ತಿತ್ತು. +ಗಂಗೆ ಯಮುನೆಯರ ಸಂಗಮಸ್ಥಳದ ಬಳಿ, ಮರಳಿನಲ್ಲಿ ಮಲಗಿದ್ದ ಒಂದು ದೊಡ್ಡ ಬಂಡೆಯ ಮೇಲೆ ಬ್ರಹ್ಮಚಾರಿ ಚೈತನ್ಯನು ಪದ್ಮಾಸನ ಹಾಕಿ ಕುಳಿತುಕೊಂಡು, ತಿಳಿಯಾಳದಾಗಸದ ವೈಭವ ವೈಚಿತ್ರ್ಯ ಸೌಂದರ್ಯಗಳನ್ನು ದಿಟ್ಟಿಸುತ್ತಿದ್ದನು. +ಆಗತಾನೆ ಧ್ಯಾನವನ್ನು ಪೂರೈಸಿದ್ದ ಆತನ ಮನಸ್ಸು ಹೃದಯ ಎರಡೂ ಹೊರಗಡೆ ಹರಡಿದ್ದ ಶಾಂತಿ ಸೌಂದರ್ಯಗಳನ್ನು ಇಮ್ಮಡಿಯಾಗಿ ಪಡೆದಿದ್ದುವು. +ಗಗನದಲ್ಲಿ ಗಣನೆಯಿಲ್ಲದೆ ಮಿಣುಕುತ್ತಿದ್ದ ಚುಕ್ಕಿಗಳನ್ನೂ, ಮೋಹದ ಮುದ್ದೆಯಂತೆ ರಂಜಿಸುತ್ತಿದ್ದ ತಿಂಗಳನ್ನೂ, ಚಂದ್ರಿಕೆಯಲ್ಲಿ ಕೆನೆಯ ತುಂಡುಗಳಂತೆ ತೇಲುತ್ತಿದ್ದ ಮುಗಿಲಿನ ಗುಂಪನ್ನೂ, ಬಳಸಿದ್ದ ಬನಗಳ ಮಾಲೆಯನ್ನೂ ಗಂಗೆ ಯಮುನೆಯರಿಬ್ಬರೂ ಒಬ್ಬರನೊಬ್ಬರು ಆಲಿಂಗಿಸಿ ಪ್ರವಹಿಸುತ್ತಿದ್ದ ಗಂಭೀರ ಗಮನವನ್ನೂ ನೋಡಿ ನೋಡಿ, ಜಗದೊಡೆಯನ ದೇಹದ ಪೆಂಪು ಸೂಚಿಸುವ ಆತನ ಆತ್ಮದ ಭವ್ಯ ವೈಭವವನನು ನೆನೆದು ಮೈಮರೆಯುತ್ತಿದ್ದನು. +ಕುಳಿತಿದ್ದ ಹಾಗೆಯೆ ಆತನು ಅಂತರ್ಮುಖಿಯಾಗಿ, ಜೀವಮಾನದಲ್ಲಿ ತಾನು ಅಡರಿ ಬಂದ ಮೆಟ್ಟಲುಗಳನ್ನು ಹಿಂತಿರುಗಿ ನೋಡತೊಡಗಿದನು. +ಅನೇಕಾನೇಕ ಚಿತ್ರಗಳು ಚಿತ್ತಭಿತ್ತಿಯಲ್ಲಿ ಹೊಳೆದಳಿದುವು. +ಕೆಲವು ಸ್ಪಷ್ಟವಾಗಿ ತೋರಿದುವು; +ಮತ್ತೆ ಕೆಲವು ಮಬ್ಬು ಮಬ್ಬಾಗಿ ಕಂಡು ಬಂದವು; +ಇನ್ನು ಕೆಲವು ಎಲ್ಲಿಯೋ ಎಂದೋ ನೋಡಿದ ಬಹುದೂರದ ಕನಸುಗಳಂತೆ ಮುಂದೆ ಸುಳಿದವು. +ಎರಡು ವರುಷಗಳಾಚೆ ತಾನು ಮನೆಯನ್ನು ಬಿಟ್ಟು, ಗುರುವನ್ನು ಹುಡುಕಿಕೊಂಡು ಊರಿಂದೂರಿಗೆ ಅಲೆದು, ಪ್ರಯಾಗಕ್ಷೇತ್ರಕ್ಕೆ ಬಂದು, ಸ್ವಾಮಿ ಪ್ರೇಮಾನಂದರ ಶಿಷ್ಯನಾಗಿ ಸನ್ಯಾಸ ಸ್ವೀಕಾರ ಮಾಡಿದ್ದರವರೆಗೂ ಸ್ಮರಿಸಿಕೊಂಡನು. +ಮುಂದೆ ಇನ್ನಾವ ಚಿತ್ರಗಳು ಮನಸ್ಸಿನಲ್ಲಿ ಸುಳಿಯುತ್ತಿದ್ದುವೋ ಏನೋ? +ಅಷ್ಟರಲ್ಲಿ ಯಾರೋ ಹಿಂದಿನಿಂದ ಕೇಳಿದರು: “ಏನು, ಚೈತನ್ಯ,ಬಹಳ ಹೊತ್ತಿನಿಂದ ಕುಳಿತುಬಿಟ್ಟಿದ್ದೀಯೆ?” +ಚೈತನ್ಯನು ದನಿಯಿಂದ ಗುರುತು ಹಿಡಿದು ಮೆಲ್ಲನೆ ಹಿಂತಿರುಗಿ ನೋಡಿ “ಬಾ ಮುಕುಂದಾ!” ಎಂದು ಮುಗುಳುನಗೆ ನಕ್ಕನು. +“ಧ್ಯಾನಮಾಡುತ್ತಿದ್ದಿಯೋ ಏನೋ?” +“ಸೃಷ್ಟಿ ಸೌಂದಯ್ವನ್ನು ನೋಡುತ್ತಿದ್ದೆ. +ಎಷ್ಟು ಶಾಂತವಾಗಿದೆ ಈ ರಾತ್ರಿ?” + “ಹೌದು ಅತ್ಯಂತ ರಮಣೀಯವಾಗಿದೆ. +ಆದರೆ ಸನ್ಯಾಸಿಯಲ್ಲಿ ಕವಿ ಇರುವನೆಂದು ನನಗೆ ಭಾವನೆ ಇರಲಿಲ್ಲ!” +“ಇದೇನು ಹೀಗೆನ್ನುವೆ? +ಸನ್ಯಾಸಿ ಎಂದರೇನು ಕಗ್ಗಲ್ಲೆ?” +“ಯೋಗವೆಂದರೆ ಚಿತ್ತವೃತ್ತಿ ನಿರೋಧ ಎಂದು ನೀನು ಹೇಳಿದೆ.” +“ಚಿತ್ತವೃತ್ತಿ ನಿರೋಧವೆಂದರೆ ಅಭಾವ ಎಂದು ತಿಳಿದೆಯಾ? +ಯೋಗವೆಂದರೆ ಆತ್ಮಹತ್ಯವಲ್ಲ, ಮುಕುಂದ! +ಮೊನ್ನೆ ಗುರುಗಳು ‘ಸಮತ್ವಂ ಯೋಗ ಉಚ್ಯತೇ’ ಎಂಬುದರ ಮೇಲೆ ಮಾಡಿದ ವ್ಯಾಖ್ಯಾನವನ್ನು ಕೇಳಲಿಲ್ಲವೆ ನೀನು? +ನಿಂತುಕೊಂಡಿರುವೆ ಏಕೆ? +ಬಾ, ಕುಳಿತುಕೋ.” +ಮುಕುಂದನು ಬಂದು ಹತ್ತಿರ ಕುಳಿತುಕೊಂಡು ಚೈತನ್ಯನನ್ನೆ ಎವೆಯಿಕ್ಕದೆ ನೋಡತೊಡಗಿದನು. +ಸನ್ಯಾಸಿಯ ಮುಖ ಯಾವುದೊ ಒಂದು ಅಲೋಕಜ್ಯೋತಿಯಿಂದ ಕಂಗೊಳಿಸುತ್ತಿತ್ತು. +ಕಣ್ಣುಗಳು ಅನಂತವನ್ನು ಭೇದಿಸುವಂತೆ ಮಿಂಚುತ್ತಿದ್ದುವು. +ಗುಲಾಬಿ ಬಣ್ಣದ ಕಾವಿಯನ್ನುಟ್ಟಿದ್ದ ಆತನ ಗಂಭೀರಾಕಾರವು ಇಹಲೋಕದ್ದಲ್ಲದ ಸೌಂದರ್ಯದಿಂದ ದಿವ್ಯ ಪುರುಷನ ನೆನಪನ್ನು ತರುತ್ತಿತ್ತು. +ಮುಕುಂದನ ಎದೆ ಹಾರತೊಡಗಿ ಕಣ್ಣುಗಳಿಂದ ಒಂದೆರಡು ಬಿಂದುಗಳು ಸೂಸಿದವು. +ಆದರೆ ಚೈತನ್ಯನು ಕಾಣದಂತೆ ಮುಖವನ್ನು ತಿರುಗಿಸಿಕೊಂಡು ಅವುಗಳನ್ನು ವಸ್ತ್ರದ ಸೆರಗಿನಿಂದ ಒರಸಿಬಿಟ್ಟನು. +ಸ್ವಾಮಿ ಪ್ರೇಮಾನಂದರ ಆಶ್ರಮಕ್ಕೆ ಎಷ್ಟೋ ಜನ ಭಕ್ತರು ಶಾಂತಿಲಾಭಕ್ಕೆ ಬಂದು ಹೋಗುವ ವಾಡಿಕೆ. +ಮುಕುಂದನೂ ಅವರಲ್ಲಿ ಒಬ್ಬನು. +ಚೈತನ್ಯನು ತಾನು ಸನ್ಯಾಸ ಸ್ವೀಕಾರ ಮಾಡಿದ ಒಂದೂವರೆ ವರ್ಷದ ಮೇಲೆ ಮುಕುಂದನನ್ನು ಭಕ್ತರ ಗುಂಪಿನಲ್ಲಿ ಕಂಡನು. +ಅಂದಿನಿಂದ ಅವರಿಬ್ಬರ ಗೆಳೆತನವೂ ಬೆಳೆಯಿತು. +ಆತನು ಎಷ್ಟೋಬಾರಿ ಚೈತನ್ಯನೊಡನೆ ತತ್ತ್ವಶಾಸ್ತ್ರದ ಗಹನ ವಿಚಾರಗಳನ್ನು ಕುರಿತು ಚರ್ಚಿಸಿ ತಿಳಿದುಕೊಂಡಿದ್ದನು. +ಆತನೊಡನೆ ಅನೇಕ ಸಾರಿ ಹೊಳೆಯ ಬಳಿ ಸಂಚಾರ ಮಾಡಿ ವಿನೋದವಾಗಿ ಕಾಲಕಳೆದಿದ್ದನು. +ಆದ್ದರಿಂದಲೆ ಅವರಿಬ್ಬರಿಗೂ ತುಂಬಾ ಸಲಿಗೆ. +ಚೈತನ್ಯನು ಅಸಾಧಾರಣ ವ್ಯಕ್ತಿ ಎಂದು ಮುಕುಂದನಿಗೆ ಗೊತ್ತು. +ಅದರಿಂದ ಅವನಿಗೆ ಆತನಲ್ಲಿ ಬಹಳ ಗೌರವ. +ಚೈತನ್ಯನಿಗೂ ಮುಕುಂದನನ್ನು ಕಂಡಂದಿನಿಂದ ಆತನಲ್ಲಿ ಏನೋ ಅನಿರ್ವಚನೀಯವಾದ ಪ್ರೇಮ. +ಆತನ ಸರಳತೆ ಹೃದಯವನ್ನು ಸೂರೆಗೊಂಡು ಬಿಟ್ಟಿತ್ತು. +ಪ್ರೇಮಾನಂದರಿಗೂ ಮುಕುಂದನಲ್ಲಿ ಬಹಳ ವಿಶ್ವಾಸ: +ಅವನು ಬಹಳ ಕಾಲವನ್ನೆಲ್ಲ ಆಶ್ರಮದಲ್ಲಿಯೆ ಕಳೆಯುತ್ತಿದ್ದನು. +ಚೈತನ್ಯನು ಮುಕುಂದನ ಊರು ತಂದೆತಾಯಿಗಳ ವಿಚಾರ ಕೇಳಿದಾಗಲೆಲ್ಲಾ “ಇಂದು ಬೇಡ; + ಎಂದಾದರೂ ಒಂದು ದಿವಸ ತಿಳಿಸುತ್ತೇನೆ” ಎನ್ನುವರು. +ಆಮೇಲೆ ಚೈತನ್ಯನು ಆ ಪ್ರಸ್ತಾಪವನ್ನೆ ಎತ್ತುತ್ತಿರಲಿಲ್ಲ. +ಏಕೆಂದರೆ, ಆ ಪ್ರಶ್ನೆಯನ್ನು ಕೇಳಿದಾಗಲೆಲ್ಲ ಮುಕುಂದನು ಮಗುವಿನಂತೆ ಅತ್ತು ಬಿಡುತ್ತಿದ್ದನು. +ಪ್ರತಿದಿನವೂ ಸಾಯಂಕಾಲ ಗುರುದೇವನ ಉಪದೇಶವಾದ ಮೇಲೆ ಭಕ್ತ ಮಂಡಲಿಯೆಲ್ಲ ಸಾಧುವರ್ಯನ ಅಡಿದಾವರೆಗಳಿಗೆ ಅಡ್ಡಬಿದ್ದು ಆಶ್ರಮದಿಂದ ಹೊರಟುಹೋಗುವರು. +ಮುಕುಂದನ ಮಾತ್ರ ಚೈತನ್ಯನೊಡೆನೆ ಹೊಳೆಯ ತಡಿಯ ಬನಗಳಲ್ಲಿ ಬಹಳ ಹೊತ್ತು ಅಡ್ಡಾಡಿ ಕತ್ತಲಾದ ಮೇಲೆ ಮನೆಗೆ ಹೋಗುವನು. +ಈ ದಿನ ಚೈತನ್ಯನು ತಿರುಗಾಡಲು ಹೊರಡುವಾಗ ಮುಕುಂದನನ್ನು ಕರೆದನು. +ಆದರೆ ಅವನು ತಾನು ಹಿಂದಿನಿಂದ ಬರುವುದಾಗಿಯೂ, ಗುರುದೇವನೊಡನೆ ಕೆಲವು ರಹಸ್ಯ ಸಂಗತಿಗಳನ್ನು ತಿಳಿದುಕೊಳ್ಳಬೇಕಾಗಿದೆ ಎಂದೂ ಹೇಳಿದನು. +ಚೈತನ್ಯನು ಒಬ್ಬನೆ ಹೊಳೆಯ ಬಳಿ ಅಲ್ಲಲ್ಲಿ ಅಡ್ಡಾಡಿ ಕಡೆಗೆ ಬಂಡೆಯ ಮೇಲೆ ಬಂದು ಕುಳಿತಿದ್ದನು. +ಆ ಪ್ರಶಾಂತವಾದ ರಾತ್ರಿಯಲ್ಲಿ ಬೆಳ್ದಿಂಗಳನ್ನು ಹೊದೆದುಕೊಂಡು ಸುತ್ತಲೂ ಹಬ್ಬಿದ್ದ ವಿಶಾಲವಾದ ಬಿಳಿಯ ಮರಳುರಾಶಿಯ ನಡುವೆ, ಚೈತನ್ಯನೂ ಮುಕುಂದನೂ ಸ್ವಪ್ನವ್ಯಕ್ತಿಗಳಂತೆ ಬಹಳ ಹೊತ್ತು ಮೌನವಾಗಿ ಕುಳಿತರು. +ಬಳಿಯಲ್ಲಿ ಮಂಜುಳ ರವದಿಂದ ನದಿ ನಿರಂತರವಾಗಿ ಪ್ರವಹಿಸುತ್ತಿತ್ತು; +ಮನೋಹರವಾದ ಸಾಂದ್ರಚಂದ್ರಿಕೆಯಲ್ಲಿ ಗಿರಿವನ ಪ್ರದೇಶಗಳೆಲ್ಲ ಜೊನ್ನಿನ ಕಡಲಿನಲ್ಲಿ ಮುಳುಗಿ ಮೈಮರೆಯುತ್ತಿದ್ದುವು; +ಗಗನಾಂಗಣದಲ್ಲಿ ತಾರೆಗಳು ಮಿಣುಕುತ್ತಿದ್ದವು; +ಚಂದಿರನು ಅವಾಙ್ಮನಾತೀತವಾದ ತನ್ನ ಅನಂತ ಪ್ರಯಾಣದಲ್ಲಿ ಮಗ್ನನಾಗಿದ್ದನು. +“ಇದೇನು ಇಷ್ಟು ಮೌನವಾಗಿರುವೆ, ಮುಕುಂದಾ?” +“ಇಂದು ನನ್ನ ಹೃದಯದ ಅಂತರಾಳದಲ್ಲಿ ಇದುವರೆಗೂ ಮಲಗಿ ನಿದ್ರಿಸಿದ್ಧ ಯಾವುದೋ ಒಂದು ಅಪ್ರಮೇಯವಾದ ಯಾತನೆ ಪ್ರಬುದ್ಧವಾಗಿದೆ!” +“ಏನು!ಇಂಥಾ ಶಾಂತ ಸೌಂದರ್ಯದಲ್ಲಿದ್ದರೂ ಯಾತನೆ?” +“ಹೌದು, ಚೈತನ್ಯ, ನನ್ನ ಮನಸ್ಸಿನಲ್ಲಿ ಶಾಂತಿಯಿಲ್ಲ. +ತತ್ತ್ವದಿಂದ ಶಾಂತಿ ಲಭಿಸುತ್ತದೆ ಎಂದು ತಿಳಿದಿದ್ದೆ. +ಆದರೆ ಅದು ಹುಸಿಯಾಯ್ತು. +ಶಾಂತಿ ನನ್ನಿಂದ ದಿನದಿನವೂ ದೂರವಾಗುತ್ತಿದೆ. ” +“ಹಾಗೆನ್ನಬೇಡ ಪರಮಾತ್ಮನಲ್ಲಿ ಭಕ್ತಿಯನ್ನಿಡು. +ಶಾಂತಿ ದೊರಕುತ್ತದೆ. ” +“ಭಕ್ತಿಯನ್ನಿಟ್ಟುರುವೆ ಆದರೂ ದೊರಕಲಿಲ್ಲ! +ನನಗೇನೂ ಕೆಲವು ಸಂದೇಹಗಳಿವೆ. +ನೀನು ಪರಿಹರಿಸಬಲ್ಲೆಯಾ?” +“ಒಂದಲ್ಲದೆ ಎರಡಿಲ್ಲ ಎಂದು ಅನೇಕ ಸಾರಿ ನೀನು ನನಗೆ ಹೇಳಿದೆಯಲ್ಲಾ ಅದರ ಗೂಡಾರ್ಥವೇನು? +ವಿವಿಧ ವಸ್ತುಗಳಿಂದ ತುಂಬಿದ ಈ ಜಗತ್ತು ಒಂದೇ ಎಂದು ಹೇಳುವುದು ಹೇಗೆ? +ಹಾಗೆ ಹೇಳಿದರೆ ನಮ್ಮ ಬುಡಕ್ಕೆ ನಾವು ಕೊಡಲಿ ಹಾಕಿದಂತೆ ಆಗುವುದಿಲ್ಲವೆ?” +“ಮುಕುಂದ, ವಸ್ತುಗಳು ಬೇರೆಬೇರೆಯಾಗಿ ಕಂಡರೂ ಅಂತರ್ಯಾಮಿಯಾಗಿರುವ ಅಂತರಾತ್ಮವು ಒಂದೇ. +ಗುಪ್ತಗಾಮಿಯಾದ ಚೈತನ್ಯವಾಹಿನಿ ಎಲ್ಲೆಲ್ಲಿಯೂ ತುಂಬಿ ಮರೆಯಾಗಿ ಹರಿಯುತ್ತದೆ. +ಇದನ್ನೇ ‘ಏಕಮೇವಾದ್ವಿತೀಯಂ’ ಎನ್ನುವುದು.” +“ಹಾಗಾದರೆ ಸೃಷ್ಟಿಯ ಉದ್ದೇಶವೇನು?” +“ಭಗವಂತನ ಲೀಲೆಗೆ ಉದ್ದೇಶವಿಲ್ಲ. +ಇದ್ದರೂ ಅಸಂವೇದ್ಯ.” +“ಲೀಲೆ ಎಂದ ಮೇಲೆ ನಾವು ವಿರೋಧವಾಗಿ ನಡೆಯುವುದು ತಪ್ಪಲ್ಲವೆ? ” +“ಹೌದು. ” +“ಹಾಗಾದರೆ ‘ಏಕಮೇವಾದ್ವಿತೀಯಂ’ ಎನ್ನುವುದು ಲೀಲೆಯಿಂದ ಹೊರಗೆ ನಿಂತು ನೋಡುವವನಿಗೇ ಹೊರತು ನಮಗಲ್ಲ” +“ನಿಶ್ಚಯ.” +“ಸನ್ಯಾಸ ಎನ್ನುವುದು ಲೀಲೆಗೆ ವಿರೋಧವಾದುದಲ್ಲವೆ?” +“ಇಲ್ಲ, ಅದೊಂದು ಕಠಿನತರವಾದ ಲೀಲೆ?” +“ಹಾಗಾದರೆ ಅದೊಂದು ಬರಿಯ ಸಾಹಸವೆಂದು ಅರ್ಥವೆ?”ಚೈತನ್ಯನು ಮಾತನಾಡಲಿಲ್ಲ. +ವಿಚಾರಮಗ್ನನಾದನು. +ಸ್ವಲ್ಪ ಹೊತ್ತಿನ ಮೇಲೆ “ಮುಕುಂದ, ಸೃಷ್ಟಿಯ ಸಮಸ್ಯೆ ಬರಿಯ ಮಾತಿಗೆ ಸಿಲುಕತಕ್ಕದಲ್ಲ. + ಅನುಭವವೇದ್ಯವಾದದ್ದು ಹೀಗೆಂದು ಗುರುದೇವನ ಉಪದೇಶ” ಎಂದನು. +“ಚೈತನ್ಯ, ಈ ಹುಣ್ಣಿಮೆಯ ರಾತ್ರಿಯ ಸುರಸೌಂದರ್ಯ ನಿಜವಾಗಿಯೂ ನಿನ್ನ ಎದೆಯನ್ನು ಮುಟ್ಟುವುದೆ?” +“ಹೌದು, ಸೌಂದರ್ಯ ಪರಮಾತ್ಮನ ಒಂದು ಅಂಶವಲ್ಲವೆ?” +“ಸಂನ್ಯಾಸಿಯ ಹೃದಯ ಸೌಂದರ್ಯಕ್ಕೆ ಸೆರೆಯಾಗಬಹುದೆ?” +“ಆನಂದಕ್ಕೆ ಸೆರೆಯಾಗಬಹುದಾದರೆ ಸೌಂದರ್ಯಕ್ಕೆ ಸೆರೆಯಾಗಬಾರದೇಕೆ? +ಆದರೆ ಸನ್ಯಾಸಿಯ ಭಾವಕ್ಕೆ ಸೌಂದರ್ಯ ಪರಬ್ರಹ್ಮನ ಅಂಶವೇ ಹೊರತು ಅಹಂಕಾರ ಪೋಷಕವಾದ ಭೋಗವಲ್ಲ! +ಆತನು ಸೊಬಗಿಗೆ ಶರಣಾಗತನಾಗನು; +ಅದರಲ್ಲಿ ತಲ್ಲೀನನಾಗನು!” +“ಹಾಗಾದರೆ ನೀನು ನಿನ್ನ ಮೇಲೆಯೇ ಕೂತಿಲ್ಲವಷ್ಟೆ?” +ಚೈತನ್ಯನು ಕೆಳಗೆ ನೋಡಿ “ಇಲ್ಲ, ನಾನು ಅಚೇತನವಾದ ಶಿಲೆಯಲ್ಲ!” ಎಂದು ಮುಗುಳುನಗೆ ನಕ್ಕನು. +“ನೀನು ಅನೇಕಸಾರಿ ನನ್ನ ಊರು ತಂದೆತಾಯಿಗಳ ವಿಚಾರ ಕೇಳಿದೆ. +ನಾನು ಇದುವರೆಗೂ ಹೇಳಲಿಲ್ಲ.” +“ಏನೊ, ನಿನಗೆ ಮನಸ್ಸು ಬರಲಿಲ್ಲ.” +“ನಿನ್ನ ಊರು ತಂದೆತಾಯಿಗಳ ವಿಚಾರವಾಗಿ ನನ್ನೊಡನೆ ಹೇಳಬಾರದೇಕೆ?” +“ಸನ್ಯಾಸಿ ಪೂರ್ವಾಶ್ರಮದ ವಿಚಾರವನ್ನು ಯಾರೊಡನೆಯೂ ಹೇಳಬಾರದೆಂದು ಕಟ್ಟಪ್ಪಣೆ.” +“ಆಗಲಿ; ಇಂದು ನಾನು ನಿನಗೆಲ್ಲ ಹೇಳಿಬಿಡಲೆ?” +“ನನಗೇನೂ ಕುತೂಹಲವಿದೆ.” +“ಆದರೆ ನನಗೊಂದು ಭಯ.” +“ಯಾಕೆ?” +“ನೀನೆಲ್ಲಿ ನನ್ನನ್ನು ತಿರಸ್ಕರಿಸುವಿಯೋ ಎಂದು.” +“ಸನ್ಯಾಸಿ ಯಾರನ್ನೂ ತಿರಸ್ಕರಿಸನು. +ಅದರಲ್ಲಿಯೂ ಪ್ರಿಯಸ್ನೇಹಿತನನ್ನು ತಿರಸ್ಕರಿಸುವುದು ಹೇಗೆ?” +“ಸನ್ಯಾಸಿ ಯಾರನ್ನೂ ತಿರಸ್ಕರಿಸನೇ? ” +“ಇಲ್ಲ. ” +“ನಿಜವಾಗಿಯೂ?” +“ನಿಜವಾಗಿಯೂ ಇಲ್ಲ.” +“ಕಾಮಿನಿಯನ್ನು?”ಚೈತನ್ಯನು ಸ್ವಲ್ಪಹೊತ್ತು ಸುಮ್ಮನಿದ್ದು “ನಾನು ಆ ಅವಸ್ಥೆಯನ್ನು ದಾಟಿದ್ದೇನೆ?” +“ನಾನಿಂದು ಗುರುದೇವನ ಬಳಿಗೆ ಹೋಗಿದ್ದೆ: ಇಲ್ಲಿಗೆ ಬರುವುದಕ್ಕಿಂತ ಮುಂಚೆ.” +“ಏತಕ್ಕಾಗಿ?” +“ಏನೋ ಒಂದು ಭಿಕ್ಷೆ ಬೇಡಲು.” +“ಸನ್ಯಾಸಿಯ ಹತ್ತಿರ ಭಿಕ್ಷೆ ಬೇಡುವುದೆ?” +“ಹೌದು, ಬೇಡಿದೆ.” +“ನೀಡಿದರೇನು?” +“ನೀಡಿದರು: ಅವರು ಮಹಾತ್ಮರು!” +“ಯಾವ ಭಿಕ್ಷೆ? +ನಿನಗೂ ಸನ್ಯಾಸವನ್ನು ಕೊಡಬೇಕೆಂದೆ?” +“ಆದರೆ ನೀನು ನೀಡದ ಹೊರತು ಅವರ ಭಿಕ್ಷೆ ಸಂಪೂರ್ಣವಾಗಲಾರದು! +ಸಾರ್ಥಕವಾಗಲಾರದು!” +“ಅವರು ನೀಡಿದಮೇಲೆ ನಾನೂ ನೀಡಿದಂತೆಯೇ?” +“ನೀನೂ ನೀಡಿದೆಯಾ?” +“ಹೌದು!ಯಾವ ಭಿಕ್ಷೆ?” +ಆ ದಿನ ಸಾಯಂಕಾಲ ಉಪದೇಶ ಮುಗಿದನಂತರ ಭಕ್ತಮಂಡಲಿಯೆಲ್ಲ ಗುರುವಿಗೆ ನಮಸ್ಕಾರ ಮಾಡಿ ಆಶೀರ್ವಾದ ಪಡೆದು ತೆರಲಿದ ಮೇಲೆ ಆಶ್ರಮದಲ್ಲಿ ಗುರುಗಳು ಒಬ್ಬರೆ ಕುಳಿತ್ತಿದ್ದರು. +ಮುಕುಂದನು ಬಂದು ಅವರಿಗೆ ಸಾಷ್ಟಾಂಗ ನಮಸ್ಕಾರ ಮಾಡಿದನು. +ಗುರುದೇವನು ಆಶೀರ್ವದಿಸಿ ಕೇಳಿದರು: “ಕ್ಷಮವೇ, ಮುಕುಂದಾ?” +ಮುಕುಂದನೆಂದನು “ಹೌದು, ಗುರುದೇವ, ತಮ್ಮ ಕೃಪೆಯಿಂದ.” +“ನಿನ್ನ ಧ್ಯಾನ ಜಪ ಸಾಂಗವಾಗಿ ನಡೆಯುತ್ತಿವೆಯೇ?” +“ಇಲ್ಲ, ಗುರುದೇವ; ಹೃದಯದಲ್ಲಿ ಏನೋ ಅಶಾಂತಿ!” +“ಕಾರಣ?” +“ಅದಕ್ಕಾಗಿ ನನ್ನ ತಪ್ಪನ್ನು ಮನ್ನಿಸಬೇಕೆಂದು ಕೇಳಿಕೊಳ್ಳಲು ಬಂದಿದ್ದೇನೆ.” +“ತಪ್ಪಾದರೂ ಏನು?” +“ನಾನು ಪಾಪಿ.” +“ಏನು ಪಾಪ ನಿನ್ನದು?” +“ನಾನು ಕಪಟವೇಷಧಾರಿ.” +“ನೀನೊಬ್ಬನೇ ಅಲ್ಲ; ಸಮಸ್ತ ಜಗತ್ತೂ ಕಪಟವೇಷಧಾರಿ! +ಭಗವಂತನನ್ನೇ ಕಪಟನಾಟಕಸೂತ್ರಧಾರಿ ಎನ್ನುವುದಿಲ್ಲವೇ?” +“ಹಾಗಲ್ಲ, ಗುರುದೇವ; ನನ್ನ ಕಪಟವೇಷದ ರೀತಿಯೇ ಬೇರೆ.” +“ಅದೇನು ಹೇಳಬಾರದೆ?”ಮುಕುಂದನು ಬಿಕ್ಕಿಬಿಕ್ಕಿ ಅಳತೊಡಗಿದನು. +ಗುರು ಅವನನ್ನು ನಾನಾ ಮಾತುಗಳಿಂದ ಸಂತೈಸಲೆಳಸಿದನು. +ಆದರೆ ಮುಕುಂದನು “ಗುರುದೇವ, ಬರಿಯ ಮಾತುಗಳಿಂದ ನನ್ನ ದುಃಖ ಶಮನವಾಗುವುದಿಲ್ಲ” ಎಂದನು. +“ಹಾಗಾದರೆ ನಿನಗೇನು ಬೇಕು?” +“ಒಂದು ಭಿಕ್ಷೆ ಬೇಡಲು ಬಂದಿದ್ದೇನೆ.” +“ಯಾವ ಭಿಕ್ಷೆ?” +“ಎಲ್ಲ ಭಂಗವಾಗುವುದೋ ಎಂದು ಹೆದರಿಕೆ! +ನಾನು ಹತಾಶನಾದರೆ ನನಗೆ ಮರಣವೇ ಗತಿ.” +“ಹೆದರಬೇಡ, ಧೈರ್ಯವಾಗಿಯೆ ಹೇಳು.” +“ಗುರುದೇವ, ಆರುತಿಂಗಳ ಹಿಂದೆ ನಾನು ಇಲ್ಲಿಗೆ ಬಂದೆ. +ನಿಮ್ಮ ಚರಣ ಸನ್ನಿಧಿಯಲ್ಲಿ ಶಾಂತಿಯನ್ನು ಪಡೆಯಲೆಳೆಸಿದೆ. +ಎಷ್ಟೋ ಪ್ರಯತ್ನ ಮಾಡಿದೆ. +ಆದರೆ ಸಾಧ್ಯವಾಗಲಿಲ್ಲ. +ನನ್ನ ಹೃದಯ ಬಲಶಾಲಿಯಲ್ಲ. +ಬಲು ಹೇಡಿ. +ಇಂದು ತಮ್ಮೆದುರು ನಿಜವನ್ನು ಹೇಳಿ, ನನ್ನ ಜೀವಮಾನದ ಕಡೆಯ ತೀರ್ಪನ್ನು ಪಡೆಯಬೇಕೆಂದು ಬಂದಿದ್ದೇನೆ. +ನೀವು ಅನುಗ್ರಹಿಸಿದರೆ ನಾನು ಉಳಿಯುತ್ತೇನೆ; +ಇಲ್ಲದಿದ್ದರೆ ಅಳಿಯುತ್ತೇನೆ.” +ಗುರುದೇವನು ಪ್ರಸನ್ನ ದೃಷ್ಟಿಯಿಂದ ಮುಕುಂದನನ್ನೆ ನೋಡುತ್ತಾ ಇದ್ದನು. +ಮುಕುಂದನು ಇದ್ದಕಿದ್ದ ಹಾಗೆ ತನ್ನ ರುಮಾಲನ್ನು ಕಳಚಿ ಗುರುವಿಗೆ ಸಾಷ್ಟಾಂಗ ನಮಸ್ಕಾರ ಮಾಡಿದನು. +ನೀಳವಾದ ಕೇಶಪಾಶ, ಬೈತಲೆ! +ಮುಕುಂದನು ಸ್ತ್ರೀಯಂತೆ ತೋರಿದನು. +ಗುರುದೇವನು ಚಕಿತನಾಗದೆ ಶಾಂತಚಿತ್ತದಿಂದ “ಇದೇನು ಮುಕುಂದ?” +“ನಾನು ಮುಕುಂದನಲ್ಲ? +ರಮೇಶನ ಇಂದಿರೆ.” +“ಚೈತನ್ಯ ನಿನಗೇನಾಗಬೇಕು?” +“ಚೈತನ್ಯನಲ್ಲ ರಮೇಶ ನನಗೆ ಪತಿ! +ಗುರುದೇವ, ಆತನು ನನ್ನನ್ನು ಮದುವೆಯಾಗಿ ಸ್ವಲ್ಪ ದಿವಸಗಳಲ್ಲಿಯೆ ಮಾಯವಾದನು. +ಅತ್ತೆ ಮಾವಂದಿರು ಶೋಕದಿಂದ ತೀರಿಹೋದರು. +ಇದು ರಮೇಶನ ತಪ್ಪೆಂದು ನಾನು ಎಣಿಸಲಾರೆ. +ಆತನು ವಿವಾಹಕ್ಕೆ ಒಪ್ಪಿರಲಿಲ್ಲ. +ವಿರಕ್ತಿ ಮಾರ್ಗವೆ ಆತನ ಧ್ಯೇಯವಾಗಿತ್ತು. +ಆದರೆ ಆತನ ತಂದೆತಾಯಿಗಳು ಆತನು ಎಲ್ಲಿ ಸನ್ಯಾಸಿಯಾಗಿಬಿಡುವನೋ ಎಂಬ ಹೆದರಿಕೆಯಿಂದ ಆತನಿಗೆ ಬಲಾತ್ಕಾರವಾಗಿ ಮದುವೆ ಮಾಡಿದರು. +ಆತನು ಹೇಳದೇ ಕೇಳದೆ ಬಂದುಬಿಟ್ಟನು. +ನನ್ನ ಬಾಳು ಮರುಭೂಮಿಯಾಯಿತು. +ಎಲ್ಲರೂ ನನ್ನನ್ನು ಕಡೆಗಣ್ಣಿನಿಂದ ನೋಡತೊಡಗಿದರು. +ನಾನು ರಮೇಶನ ನೆಲೆಯನ್ನು ತಿಳಿಯಬೇಕೆಂದು ಈ ವೇಷವನ್ನು ಧರಿಸಿ ಅಲೆದು ಕಡೆಗೆ ತಮ್ಮ ಸನ್ನಿಧಿಯಲ್ಲಿ ನನ್ನ ಇಷ್ಟದೇವತೆಯನ್ನು ಕಂಡೆ. +ಇಷ್ಟು ದಿನವೂ ಆತನೊಡನೆ ಇದ್ದು ಆತನ ಸ್ನೇಹವನ್ನು ಸಂಪಾದಿಸಿದ್ದೇನೆ. +ಆದರೆ ಆತನು ಈಗ ಗುರುದೇವನ ಚೈತನ್ಯ. +ಮುಕುಂದನ ಗೆಳೆಯ. +ಇಂದಿರೆಯ ಇನಿಯನಾಗಿಲ್ಲ. +ಅನಾಥಳಾದ ನಾನು, ಪತಿಭಿಕ್ಷೆಯನ್ನು ಬೇಡುತ್ತೇನೆ. +ತಾವು ಸರ್ವಜ್ಞರು; ಮಹಾತ್ಮರು; +ನನಗೆ ಜೀವದಾನ ಮಾಡಬೇಕು.” +“ಮಗಳೆ ಚೈತನ್ಯನಿಗೆ ಈ ಸಂಗತಿ ಗೊತ್ತೆ?” +“ಗೊತ್ತಿಲ್ಲ, ಗುರುದೇವ,” +“ಸನ್ಯಾಸಿಯಾದವನು ಪುನಃ ಸಂಸಾರಿಯಾಗುವುದು ಮಹಾ ಪಾಪ! +ಚೈತನ್ಯನಿಗೆ ಅನಿಷ್ಟ.” +“ಕೈಹಿಡಿದವಳನ್ನು ದುಃಖಸಾಗರಕ್ಕೆ ಕಲ್ಲುಕಟ್ಟಿ ಎಸೆಯುವುದಕ್ಕಿಂತ ಮಹಾಪಾಪವೆ? +ಅದಕ್ಕಿಂತ ಹೆಚ್ಚಿನ ಅನಿಷ್ಟವುಂಟಾಗುವುದೆ?” +“ಅಲ್ಲದೆ ಚೈತನ್ಯನು ತೀವ್ರ ವೈರಾಗಿ.” +“ರಮೇಶನ ಹೃದಯವು ಇನ್ನೂ ಕಗ್ಗಲ್ಲಾಗಿಲ್ಲ. +ಗುರುದೇವ, ನಾನು ಬಲ್ಲೆ. +ತಮ್ಮ ಆಜ್ಞೆಯಾದರೆ ಸಾಕು. +ತಮ್ಮ ಆಶೀರ್ವಾದ ಬಲವೊಂದು ಇದ್ದರೆ ಎಂಥಾ ಪಾಪವಾಗಲಿ ಅನಿಷ್ಟವಾಗಲಿ ಎಲ್ಲ ಭಸ್ಮವಾಗುವುದು. +ಭಕಲ್ತಿಯಿಂದ ಸೆರೆಗೊಡ್ಡಿ ಬೇಡುವೆನು.” +“ಮಗಳೆ, ನನ್ನ ಅನುಜ್ಞೆಯಿದೆ. +ನನ್ನ ಆಶೀರ್ವಾದವಿದೆ. +ನಾಣು ಕಗ್ಗಲ್ಲು ಎಂದು ಎಣಿಸಬೇಡ. +ಹೋಗು, ನಿನ್ನ ಸಾಹಸದಿಂದ ನೀನು ಗೆಲ್ಲು. +ನಿನ್ನ ಜೀವಮಾನದ ಮಧುರ ಸ್ವಪ್ನವನ್ನು ನಾನೇಕೆ ಒಡೆದುಹಾಕಲಿ? +ಅದು ತನಗೆ ತಾನೆ ಒಡೆದ ಮೇಲೆಯೆ ನೀವಿಬ್ಬರೂ ನನ್ನೆಡೆಗೆ ಬನ್ನಿ. +ಸ್ವಪ್ನವಾದರೂ ಮಾಧುರ್ಯ ಎಂದಿಗೂ ಮಾಧುರ್ಯವೆ. +ಎಂದು ನೀವು ಸ್ವಪ್ನದಿಂದ ಎಚ್ಚತ್ತಾಗ ಮಾಧುರ್ಯವೂ ಬಿಸಿಲ್ಗುದುರೆಯಾಗಿ ಕಹಿಯಾಗುವುದೋ ಅಂದು ಇಲ್ಲಿಗೆ ಬನ್ನಿ. +ಆಗ ನಿಮ್ಮ ಹೃದಯಮಂದಿರಗಳಲ್ಲಿ ಶಾಂತಿಯನ್ನು ನೆಲೆಗೊಳಿಸುವುದೂ ಸುಲಭ. +ನಿನ್ನ ಸಾಹಸಕ್ಕೆ ನನ್ನ ಸಮ್ಮತವಿದೆ; + ಹೋಗು, ಮಗಳೆ.” + ಇಂದಿರೆ ರುಮಾಲನ್ನು ಸುತ್ತಿಕೊಂಡು ಗುರುದೇವನ ಪಾದಧೂಳಿಯನ್ನು ತನ್ನ ತಿಲಕದಲ್ಲಿಟ್ಟು ಹೊರಕ್ಕೆ ಹೋದಳು. +ಗುರುದೇವನು ಜಗತ್ತಿನ ಮಾಯೆಯನ್ನು ನೆನೆದು ಮಂದಸ್ಮಿತನಾದನು. +“ಆದರೆ ನೀನೂ ನೀಡಿದ ಹೊರತು ಅವರ ಭಿಕ್ಷೆ ಸಂಪೂರ್ಣವಾಗಲಾರದು. +ಸಾರ್ಥಕವಾಗಲಾರದು!” +“ಅವರು ನೀಡಿದ ಮೇಲೆ ನಾನು ನೀಡಿದಂತೆಯೇ!” +“ನೀನೂ ನೀಡಿದೆಯಾ?” +“ಹೌದು, ಯಾವ ಭಿಕ್ಷೆ?” +“ಪ್ರತಿಭಿಕ್ಷೆ!ರಮೇಶನ ಭಿಕ್ಷೆ!ನಿನ್ನ ಭಿಕ್ಷೆ!” +ಹೀಗೆಂದು ಹೇಳಿದ ಮುಕುಂದನು ಇಂದಿರೆಯಾಗಿ ಚೈತನ್ಯನ ಎದುರಿನಲ್ಲಿ ನಿಂತಳು. +ಚೈತನ್ಯನು ಬೆಚ್ಚಿಬಿದ್ದು ಎದ್ದು ನಿಂತು, ತನ್ನೆದುರಿನಲ್ಲಿ ಬಿತ್ತರದ ಮರುಳುರಾಶಿಗೆ ಎದುರಾಗಿ  ಮನೋಹರವಾದ ಕೌಮುದಿಯ ಕಾಂತಿಯಲ್ಲಿ ನಿಂತಿದ್ದ ವ್ಯಕ್ತಿಯನ್ನು ಎವೆಯಿಕ್ಕದೆ ನೋಡಿದನು. +ನೋಡುತ್ತ ನೋಡುತ್ತ ಮುಕುಂದನು ಮನಸ್ಸಿನ ದಿಗಂತದಲ್ಲಿ ದೂರದೂರ ಸರಿದು ಅನಂತದಲ್ಲಿ ಐಕ್ಯವಾದನು. +ಆದರೆ ಮುಕುಂದನಿಗೆ ಬದಲಾಗಿ ಮೊದಮೊದಲು ದರ್ಶನ ಚಿತ್ರದಂತೆ ಮಬ್ಬುಮಬ್ಬಾಗಿ, ಬರಬರುತ್ತಾ ತಿಳಿಯಾಗಿ, ಕಟ್ಟಕಡೆಗೆ ಸ್ಪಷ್ಟವಾಗಿ ಇಂದಿರೆ ಸಮೀಪಕ್ಕೆ ಬಂದು ನಿಂತಳು. +ಆ ಚಂದ್ರಕಾಂತಿಯಲ್ಲಿ, ಆ ರಾತ್ರಿಯ ಮಹಾ ಶಾಂತಿಯಲ್ಲಿ, ಗಂಗೆ ಯಮುನೆಯರ ಆ ದಿವ್ಯ ಸಂಗಮಸ್ಥಳದಲ್ಲಿ, ಆ ವಿಸಾಲವಾದ ಶ್ವೇತಸೈಕತ ರಾಶಿಯಲ್ಲಿ ಅನಂತವು ಸಾಂತವನ್ನೂ ಅವ್ಯಕ್ತವು ವ್ಯಕ್ತವನ್ನೂ ದಿಟ್ಟಿಸುವ ಹಾಗೆ ಚೈತನ್ಯನು ಇಂದಿರೆಯನ್ನು ಎವೆಯಿಕ್ಕದೆ ನೋಡಿದರು. +ಕಾಲವು ಅವರನ್ನೇ ನೊಡುತ್ತಾ ತನ್ನ ಗಮನವನ್ನು ಮರೆತುಬಿಟ್ಟಿತು. +ನಕ್ಷತ್ರಗಳು ಅವರನ್ನೇ ನೋಡಿದುವು. +ಹರಿಯುವ ನದಿಗಳೆರಡೂ ನಿಂತು ನೋಡಿದುವು. +ಚಂದ್ರನೂ ನಿಂತನು. +ಸಮಸ್ತ ವಿಶ್ವವೂ ಮುಂದೇನಾಗುವುದೋ ಎಂದು ಕಾತರಗೊಂಡು ನಿಂತುಬಿಟ್ಟಿತು. +ಸ್ವಲ್ಪ ಹೊತ್ತಾದ ಮೇಲೆ ಇಂದಿರೆ ಕರೆದಳು: “ರಮೇಶ!” +“ಮುಕುಂದ, ನಾನು ರಮೇಶನಲ್ಲ; ಚೈತನ್ಯ!” +“ರಮೇಶ, ನಾನೂ ಮುಕುಂದನಲ್ಲ; ಇಂದಿರೆ! +ಭಿಕ್ಷೆ ಬೇಡಲು ಬಂದಿದ್ದೇನೆ. +ಭಿಕ್ಷೆ ನೀಡಲು ಮಾತು ಕೊಟ್ಟಿದ್ದೀಯೆ!” +“ಭಿಕ್ಷೆ ನೀಡಲು ಎದ್ದು ನಿಂತಿದ್ದೇನೆ! +ಮುಕುಂದನು ಭಿಕ್ಷೆ ಬೇಡಲಿ!” +“ರಮೇಶ ನೀನು ನಿಜವಾಗಿಯೂ ನನ್ನನ್ನು ಪ್ರೀತಿಸುವೆಯಾ?” +“ಹೌದು, ಮುಕುಂದನು ಚೈತನ್ಯನ ಪ್ರಾಣಸ್ನೇಹಿತ.” +“ರಮೇಶ ನಿನಗಾಗಿ ತೊಳಲಿ ತೊಳಲಿ ಬಳಲಿದ್ದೇನೆ. +ನನ್ನವರು ನಿನ್ನನ್ನು ಬಲಾತ್ಕಾರದಿಂದ ಕರೆದುಕೊಂಡು ಹೋಗಲು ಬಂದಾಗ ಅವರನ್ನು ತಡೆದೆ!” +“ಚೈತನ್ಯನ ನಿರ್ಜೀವ ದೇಹವನ್ನು ಸ್ಮಶಾನವಾಗಿ ಎಳೆದೊಯ್ಯುತ್ತಿದ್ದರು! +ಇರಲಿ, ಆ ಸಹಾಯ ಮಾಡಿದ್ದಕ್ಕಾಗಿ ಮುಕುಂದನಿಗೆ ಚೈತನ್ಯನ ಅಭಿನಂದನ!” +“ಸಮಸ್ತ ಪ್ರಪಂಚವೂ ಐಕ್ಯಾಪೇಕ್ಷಿಯಾಗಿರಲು ರಮೇಶನು ಮಾತ್ರ ಕೃಪಣನಂತೆ ಅನೈಕ್ಯಕ್ಕೆ ಎಳಸಬಾರದು. +ಗಂಗೆ ಯಮುನೆಯರ ಸಂಗಮ ಸ್ಥಳವು ರಮೇಶ ಇಂದಿರೆಯರ ಸಂಗಮಸ್ಥಳವಾಗಲಿ!” +“ಸಿದ್ದನಾಗಿದ್ದೇನೆ, ನನಗೆ ಮರಣ ಭೀತಿಯಿಲ್ಲ. +ಚೈತನ್ಯನು, ಮುಕುಂದನು ಇಚ್ಛೆಪಟ್ಟರೆ, ಅವನೊಡನೆ ನದಿಗೆ ಹಾರಲು ಹಿಂಜರಿಯನು.” +“ರಮೇಶ, ಇದೇನು ವಿಪರೀತ? +ನದಿಗೆ ಹಾರುವುದು ನನ್ನ ಭಾವವಲ್ಲ.” +“ಹಾಗಾದರೆ ಮತ್ತೇನು? +ಚೈತನ್ಯನು ಇದುವರೆಗೂ ಮುಕುಂದನನ್ನು ಬೇರೆ ಎಂದು ತಿಳಿದಿರಲಿಲ್ಲ. +ಇನ್ನು ಮುಂದೆಯೆ ಹಾಗೆ ತಿಳಿಯುವುದಿಲ್ಲ.” +“ನಾನು ನಿನ್ನ ಕೈಹಿಡಿದ ಹೆಂಡತಿ!” +“ನೀನು ನನ್ನ ಜೀವನ ಗೆಳೆಯ!” +“ಇಂದಿರೆಯನ್ನು ನೀನು ಪ್ರೀತಿಸಿರಲಿಲ್ಲವೆ?” +“ಇಲ್ಲ ಮುಕುಂದನನ್ನು ಮಾತ್ರ ಪ್ರೀತಿಸುತ್ತಿದ್ದೆ!” +“ರಮೇಶ, ಗುರುವಿನ ಅಪ್ಪಣೆಯನ್ನೂ ಆಶೀರ್ವಾದವನ್ನೂ ಪಡೆದುಕೊಂಡು ಬಂದಿದ್ದೇನೆ.” +“ಏನು?ಗುರುದೇವನೂ ಒಪ್ಪಿದ್ದಾನೇ!” +“ಹೌದು; ಆತನು ಮಹಾತ್ಮನು. +ನೀನು ಒಪ್ಪದಿದ್ದರೆ ನನಗೆ ಸಂಗಮಸ್ಥಳವೇ ಗತಿ.” +“ಆಮೇಲೆ ನನಗೂ ಅದೇ ಗತಿ!” +“ನೋಡು, ರಮೇಶ, ತಿಂಗಳ ಬೆಳಕು ಎಷ್ಟು ರಮಣೀಯವಾಗಿದೆ!” +“ಹೌದು, ಮುಕುಂದ, ಅತ್ಯಂತ ಶಾಂತವಾಗಿದೆ.” +“ನಾನು ಅಬಲೆ!” +“ಮುಕುಂದನು ಹಾಗೆನ್ನುವುದು ಉಚಿತವಲ್ಲ.” +“ರಮೇಶ, ಹತಭಾಗಿನಿಯಾದ ನನ್ನನ್ನು ಕಾಪಾಡು. +ಮರುಭೂಮಿಯಾದ ನನ್ನನ್ನು ಉದ್ಯಾನವನವನ್ನಾಗಿ ಮಾಡು. +ನನ್ನನ್ನು ತಿರಸ್ಕರಿಸಬೇಡ! +ನಾನು ನಿನ್ನ ಸಹಧರ್ಮಿಣಿ! +ನಿನ್ನ ವೀರತ್ವ ನನಗಿಲ್ಲ. +ನಾನು ಅಬಲೆ!ಕಾಪಾಡು!ಕಾಪಾಡು!” +ಹೀಗೆಂದು ಇಂದಿರೆ ಚೈತನ್ಯನಿಗೆ ಅಡ್ಡಬಿದ್ದು, ಕಾಲುಹಿಡಿದುಕೊಂಡು ಕಣ್ಣೀರು ಸುರಿಸಿ ಹೊರಳಾಡಿ ಗೋಳಿಟ್ಟಳು. +ಚೈತನ್ಯನು ಎದೆಯಮೇಲೆ ಕೈಕಟ್ಟಿಕೊಂಡು ವಿಶಾಲವಾದ ಗಗನದೆಡೆ ಶೂನ್ಯದೃಷ್ಟಿಯಿಂದ ನೋಡುತ್ತಾ ಆಲೋಚನಾಮಗ್ನನಾದನು. +ಅವನ ಮನದಿಂದ ಇಂದಿರೆಯ ಹೊರತು ಸಮಸ್ತ ವಿಶ್ವವೂ ಮರೆಯಾಯಿತು. +ಚಂದ್ರ, ತಾರೆ, ಗಗನ, ನದಿ, ವನ ಎಲ್ಲವೂ ಕನಸಿನಂತೆ ಕಂಪಿಸಿ ಅಳಿದುಹೋದವು. +ಅವನ ಭಾಗಕ್ಕೆ ಎಲ್ಲವೂ ಕಗ್ಗತ್ತಲಾಯಿತು. +ತನ್ನಷ್ಟಕ್ಕೆ ತಾನೆ “ಗುರುದೇವ!ಗುರುದೇವ!” ಎಂದು ಗಟ್ಟಿಯಾಗಿ ಕೂಗಿಕೊಂಡನು. +“ಏನು, ಚೈತನ್ಯ?” ಎಂದು ಯಾರೋ ಹೇಳಿದ ಹಾಗಾಯಿತು. +ಹಿಂತಿರುಗಿ ನೋಡಿದನು. +ಪ್ರೇಮಾನಂದಸ್ವಾಮಿ ಮರಳುದಿಣ್ಣೆಯ ಮೇಲೆ ಮೂರ್ತಿಮತ್ತಾದ ಮಹಿಮೆಯಂತೆ ಆಜಾನುಬಾಹುವಾಗಿ ನಿಂತಿದ್ದನು. +“ಏನು, ಚೈತನ್ಯ?” ಎಂದು ಬಳಿಗೆ ಬಂದು ಪದತಳದಲ್ಲಿ ನಿರಾವಲಂಬವಾಗಿ ಬಳ್ಳಿಯಂತೆ ತೋರಿದ ಇಂದಿರೆಯನ್ನೂ, ಯಾವ ಬಿರುಗಾಳಿಗೂ ಕಂಪಿಸಿದೆ ನಿಂತ ಮಹೀರುಹದಂತೆ ಕೈಕಟ್ಟಿಕೊಂಡುನಿಂತಿದ್ದ ಚೈತನ್ಯವನ್ನೂ ನೋಡಿದನು! +ಚೈತನ್ಯನು ಗುರುವಿಗೆ ಕೈಮುಗಿದು ಸ್ವಲ್ಪ ಶೋಕಮಿಶ್ರವಾದ ಧ್ವನಿಯೆಂದ “ಗುರುದೇವ” ಎಂದನು. +ಗುರುದೇವನು “ಚೈತನ್ಯ, ಇದೇ ಸೃಷ್ಟಿಯ ಸಮಸ್ಯೆ: +ಒಬ್ಬನು ಮುಕ್ತ, ಒಬ್ಬನು ಮುಮುಕ್ಷು, ಒಬ್ಬನು ಬುದ್ಧ! +ಒಂದು ಅವ್ಯಕ್ತ, ಒಂದು ವ್ಯಕ್ತ, ಒಂದು ಮಾಯೆ! +ಇದೇ ಭಗವಂತನ ಲೀಲೆ.” +“ಗುರುದೇವ, ಮುಂದೇನು ಮಾಡಲಿ?” +“ನೀನು ಸ್ವತಂತ್ರನು. +ನನ್ನ ಅನುಜ್ಞೆಯಿದೆ. +ನನ್ನ ಆಶೀರ್ವಾದವಿದೆ. +ಏನುಬೇಕಾದರೂ ಮಾಡು! +ಏನು ಮಾಡಿದರೂ ನೀನು ಹಾಳಾಗುವುದಿಲ್ಲ; +ನೀನು ಒಪ್ಪದಿದ್ದರೆ ಇಂದಿರೆಯ ಜನ್ಮ ಸಾರ್ಥಕವಾಗುವುದಿಲ್ಲ!”ಹೀಗೆಂದು ಗುರುದೇವನು ಹಿಂದಿರುಗಿ ಹೊರಟುಹೋದನು. +ಚೈತನ್ಯನು ಕೆಳಗೆ ಬಿದ್ದಿದ್ದ ಇಂದಿರೆಯನ್ನು ನೋಡಿದನು. +ಅವಳನ್ನು ಮೆಲ್ಲಗೆ ಹಿಡಿದೆತ್ತಿ “ಇಂದಿರಾ, ಏಳು?ರಮೇಶ ನಿನ್ನವನು!” ಎಂದನು. +ಗಂಗೆ ಯಮುನೆಯರು ಹರಿಯತೊಡಗಿದರು. +ನಿಂತಿದ್ದ ಚಂದ್ರನು ಇಮ್ಮಡಿಯಾದ ಕಾಂತಿಯಿಂದ ಬೆಳಗಿ ಸಂಚರಿಸತೊಡಗಿದನು. +ತಾರೆಗಳು ಆನಂದದಿಂದ ಮಿಣುಕಿದವು. +ಕೌಮುದಿಯ ಸಾಂದ್ರತೆ ಹೆಚ್ಚಿತು. +ಸೃಷ್ಟಿಚಕ್ರ ಎಂದಿನಂತೆ ತಿರುಗತೊಡಗಿತು. +ಇಂದಿರೆ ಕಂಬನಿಗರೆಯುತ್ತಿದ್ದ ರಮೇಶನನ್ನು ಅಪ್ಪಿ ಹೇಳಿಕೊಂಡಳು: “ನೀನೀಗ ನಿಜವಾಗಿಯೂ ಸನ್ಯಾಸಿ!” -- GitLab