From 08bae11ee144f20be45594879f3764bc06f1516e Mon Sep 17 00:00:00 2001 From: Narendra VG Date: Mon, 17 Apr 2023 15:32:09 +0530 Subject: [PATCH] Upload New File --- ...1\340\262\244\340\263\215\340\262\265.txt" | 198 ++++++++++++++++++ 1 file changed, 198 insertions(+) create mode 100644 "Data Collected/Kannada/MIT Manipal/Kannada-Scrapped-dta/\340\262\225\340\263\215\340\262\260\340\263\200\340\262\241\340\263\206\340\262\257_\340\262\256\340\262\271\340\262\244\340\263\215\340\262\265.txt" diff --git "a/Data Collected/Kannada/MIT Manipal/Kannada-Scrapped-dta/\340\262\225\340\263\215\340\262\260\340\263\200\340\262\241\340\263\206\340\262\257_\340\262\256\340\262\271\340\262\244\340\263\215\340\262\265.txt" "b/Data Collected/Kannada/MIT Manipal/Kannada-Scrapped-dta/\340\262\225\340\263\215\340\262\260\340\263\200\340\262\241\340\263\206\340\262\257_\340\262\256\340\262\271\340\262\244\340\263\215\340\262\265.txt" new file mode 100644 index 0000000..54ab99c --- /dev/null +++ "b/Data Collected/Kannada/MIT Manipal/Kannada-Scrapped-dta/\340\262\225\340\263\215\340\262\260\340\263\200\340\262\241\340\263\206\340\262\257_\340\262\256\340\262\271\340\262\244\340\263\215\340\262\265.txt" @@ -0,0 +1,198 @@ +ಕ್ರೀಡೆಯ ಪ್ರಕಾರಗಳು,ಜನಪದ ಕ್ರೀಡೆಗಳು,ಕ್ರೀಡೆಗಳ ಪಟ್ಟಿ,ರಾಷ್ಟ್ರೀಯ ಕ್ರೀಡೆಗಳು, ಶಿಕ್ಷಣ ಮತ್ತು ಕ್ರೀಡೆ,ಜೀವನದಲ್ಲಿ ಕ್ರೀಡೆಗಳ ಮಹತ್ವ,ವಿದ್ಯಾರ್ಥಿಗಳ ಮಾನಸಿಕ ಬೆಳವಣಿಗೆಗಾಗಿ ಕ್ರೀಡೆ,ಕ್ರೀಡೆ ಕವನಗಳು, ಕ್ರೀಡೆಯಿಂದ ಆಗುವ ಪ್ರಯೋಜನಗಳು,ಕ್ರೀಡೆಯ ಅನಾನುಕೂಲಗಳು. +ಪೀಠಿಕೆ :ಬಾಲ್ಯ ಅಂದ್ರೆ ಅಚ್ಚಳಿಯದ ನೆನಪು. +ಆಗ ನಾವು ಮಾಡಿದ ಆಟ,ತುಂಟಾಟ ಸಂತಸದ ಕ್ಷಣಕ್ಕೆ ಸಾಕ್ಷಿಯಾಗುತ್ತವೆ. +ಹಿಂಡು ಗೆಳೆಯರೊಂದಿಗೆ ಮಾಡಿದ ಕೀಟಲೆ,ತರಲೆ ಎಲ್ಲವೂ ಚೆಂದ. +ಇನ್ನು ಮಕ್ಕಳಿಂದ ಹಿಡಿದು ವೃದ್ಧರವರೆಗೆ ಬೇಕಾದದ್ದು ಆರೋಗ್ಯ. +ಒಳ್ಳೆಯ ಆರೋಗ್ಯಕ್ಕೆ ಬೇಕಾದದ್ದು ದೈಹಿಕ ಹಾಗೂ ಮಾನಸಿಕ ಚಟುವಟಿಕೆ. +ಇಂಥ ಚಟುವಟಿಕೆಯನ್ನ ಕ್ರೀಡೆ ಮತ್ತು ಮನರಂಜನೆ ತಂದು ಕೊಡುತ್ತವೆ. +ಅದಾಗ್ಯೂ ಆಟದಿಂದ ನಮಗೆ ಸಿಗುವ ಜೀವನ ಪಾಠಗಳೂ ಕೂಡ ಅನೇಕ. +ನಾವೆಲ್ಲರೂ ಚಿಕ್ಕವರಿದ್ದಾಗ ಸಾಕಷ್ಟು ಆಟಗಳನ್ನು ಆಡುತ್ತಿದ್ವಿ. +ಹಳ್ಳಿ ಮತ್ತು ಪಟ್ಟಣಗಳಲ್ಲಿ ಆಡುವ ಆಟಗಳು ವಿಭಿನ್ನವಾಗಿರುತ್ತವೆ. +ಹಳ್ಳಿ ಅಂದ್ವೇಲೆ ಸಾಕಷ್ಟು ಹಸಿರಿರುವ ವಾತಾವರಣ,ಹೊಲ,ಗದ್ದೆ ಶಾಲೆಗಳ ಅಂಗಳ,ಮನೆಯಂಗಳದಲ್ಲಿ ಹೀಗೆ ಸಾಕಷ್ಟು ಜಾಗ ಕೂಡ ಆಟಕ್ಕೆ ಸಿಗುತ್ತೆ. +ಗೆಳೆಯ,ಗೆಳತಿಯರೂ ಸಿಗ್ತಾರೆ. +ಹೆಣ್ಣು ಮಕ್ಕಳ ಗ್ಯಾಂಗ್‌ ಒಂದು ರೀತಿಯ ಆಟಗಳನ್ನ ಆಡಿದ್ರೆ,ಗಂಡು ಮಕ್ಕಳ ಆಟವೇ ಬೇರೆ. + ಕ್ರೀಡೆ ಭಾರತೀಯ ಪರಂಪರೆ. +ಆಟ ಬಂದಿದ್ದು ಸಂಸ್ಕೃತಿಯ ಜೊತೆ ಜೊತೆಗೆ. +ಮನರಂಜನೆ,ದೈಹಿಕ ಶ್ರಮ,ದೈಹಿಕ,ಮಾನಸಿಕ ಚಟುವಟಿಕೆ,ಚಲಾಸ್ಯತೆ ಸಾಮರ್ಥ್ಯ ಒಗ್ಗಟ್ಟು,ಸಂಘಟನಾ ಮನೋಭಾವ,ಶಕ್ತಿ-ಯುಕ್ಕ್ತಿಗೆ ಮುಖ್ಯ ಗೇಟ್‌ ವೇ ಆಟ ಅಂದರೆ ತಪ್ಪಾಗಲಿಕ್ಕಿಲ್ಲ. +ಈಗೆಲ್ಲಾ ಮೊಬೈಲ್‌,ಆನ್‌ಲೈನ್ ಗೇಮಿಂಗ್ ಯುಗ ಆರಂಭವಾಗಿದೆ. +ಕುಳಿತಲ್ಲೇ ರಿಮೋಟ್‌ ಹಿಡಿದು ಆಟ ಶುರು ಮಾಡಿದರೆ ಅದರಲ್ಲೇ ಇಡೀ ದಿನ ಕಳೆದು ಹೋಗುತ್ತೆ. +ಆದರೆ ಈ ಹಿಂದೆ ಹಾಗಿರಲಿಲ್ಲ. +ಮಕ್ಕಳು,ವಯಸ್ಕರರು,ವೃದ್ಧರು ಮನೆಯಿಂದಾಚೆ ಬಂದು ಗುಂಪು,ಗುಂಪಾಗಿ ಸೇರಿಕೊಂಡು ಆಟಗಳನ್ನು ಆಡಿ ಮನದಣಿಯೇ ಉಲ್ಲಾಸಮಯ ವಾತಾವರಣದಲ್ಲಿ ಕಾಲ ಕಳೆಯುತ್ತಿದ್ದರು. +ಎಲ್ಲಕ್ಕಿಂತ ಹೆಚ್ಚಾಗಿ ಸೋಲು,ಗೆಲುವಿನ ಪಾಠವನ್ನು ನಗುತ್ತಾ ಸ್ವೀಕರಿಸಿ,ಒಬ್ಬರಿಗೊಬ್ಬರ ಬೆನ್ನು ಚಪ್ಪರಿಸುತ್ತ,ಭಲೇ,ಭೇಷ್‌ ಎಂದು ಹುರಿದುಂಬಿಸುತ್ತಿದ್ದರು. +ಹೀಗೆ ಬದುಕಿನುದ್ದಕ್ಕೂ ಜೀವನ ಮೌಲ್ಯ ಹೇಳಿ ಕೊಡುವ ಆಟದ ಕುರಿತ ಒಂದು ನೋಟ ಇಲ್ಲಿದೆ. + ಕ್ರೀಡೆ ಎಂದರೇನು? +2.ಕ್ರೀಡೆಯ ಪ್ರಕಾರಗಳು +ಗ್ರಾಮೀಣ ಕ್ರೀಡೆಗಳು,ಜನಪದ ಕ್ರೀಡೆಗಳು,ಸಾಹಸ ಕ್ರೀಡೆಗಳು,ಶಿಕ್ಷಣ ಮತ್ತು ಕ್ರೀಡೆ,ಜೀವನದಲ್ಲಿ ಕ್ರೀಡೆಗಳ ಮಹತ್ವ,ವಿಶ್ವದ ಕ್ರೀಡೆಗಳಲ್ಲಿ ಭಾರತದ ಸ್ಥಾನ,ಕ್ರೀಡೆ ಮತ್ತು ಹವ್ಯಾಸ,ಕ್ರೀಡೆ ಮತ್ತು ಆರೋಗ್ಯ,ವಿದ್ಯಾರ್ಥಿಗಳ ಜೀವನದಲ್ಲಿ ಕ್ರೀಡೆ,ಕ್ರೀಡೆ ಕವನಗಳು. +ಅಂದ ಹಾಗೇ ನಾವೆಲ್ಲರೂ ಕ್ರೀಡೆಯ ಬಗ್ಗೆ ತಿಳಿದು ಕೊಂಡಿರುತ್ತೀವಿ. +ಆದ್ರೆ ಸರಿಯಾದ ಅರ್ಥದಲ್ಲಿ ಕ್ರೀಡೆ ಎಂದರೇನು ಅನ್ನೋದನ್ನ ಕಂಡುಕೊಳ್ಳಲು ಸಾಧ್ಯವಾಗಿರುವುದಿಲ್ಲ. +ಸ್ಪರ್ಧಾತ್ಮಕ ಚಟುವಟಿಕೆಯ ತಯಾರಿ. +ಕ್ರೀಡೆ ದೇಹದ ಬೆಳವಣಿಗೆ ಹಾಗೂ ವ್ಯಾಯಾಮದ ಉತ್ತಮ ಸಾಧನ. +ಮನರಂಜನೆ,ಸ್ಪರ್ಧೆಯ ಕೇಂದ್ರ ಭಾಗ ಕ್ರೀಡೆಯಾಗಿರುತ್ತದೆ. +ವ್ಯಕ್ತಿ ಹಾಗೂ ವ್ಯಕ್ತಿತ್ವದ ಬೆಳವಣಿಗೆಯ ಭಾಗ. +“ಆರೋಗ್ಯಕರ ದೇಹದಲ್ಲಿ ಆರೋಗ್ಯಕರ ಮೆದುಳು ಅಭಿವೃದ್ಧಿಗೊಳ್ಳುತ್ತದೆ. +ಆರೋಗ್ಯಕರ ಜೀವನವೇ ಯಶಸ್ಸಿನ ಕೀಲಿಕೈ” ಎಂದು ತಜ್ಞರೊಬ್ಬರು ಹೇಳಿದ್ದಾರೆ. +ಸಕ್ರಿಯ ಜೀವನ,ದೇಹಕ್ಕೆ ಚೈತನ್ಯ,ವ್ಯಕ್ತಿಗೆ ಆತ್ಮವಿಶ್ವಾಸ,ದೇಹ ಮತ್ತು ಮನಸ್ಸಿನ ಸಮತೋಲನ ಕಾಪಾಡುವುದೇ ಕ್ರೀಡೆ. +ಆರೋಗ್ಯಕರ ಜೀವನಶೈಲಿ ಮತ್ತು ಪ್ರತಿರಕ್ಷಣಾ ಪ್ರಬಲತೆಗೆ ಕ್ರೀಡೆ ಪ್ರಮುಖವಾಗಿದೆ. +ಕ್ರೀಡೆಯ ಪ್ರಕಾರಗಳು:ನಮಗೆಲ್ಲಾ ಗೊತ್ತಿರೋ ಹಾಗೇ ಆಟಗಳಲ್ಲಿ ಒಳಾಂಗಣ ಮತ್ತು ಹೊರಾಂಗಣ ಎಂಬ ವಿಧಗಳಿವೆ. +ಮನೆ ಅಥವಾ ನಾಲ್ಕು ಗೋಡೆಯ ಮಧ್ಯೆ ಆಡುವ ಆಟ ಒಳಾಂಗಣ ಆಟ. +ಮನೆಯ ಹೊರಗೆ ಅಂಗಳ,ಸ್ಟೇಡಿಯಂ,ಗ್ರೌಂಡ್‌ ಹೀಗೆ ಪರಿಸರದಲ್ಲಿ ಆಡುವ ಆಟ ಹೊರಾಂಗಣ ಆಟ. +ನಾವು ಭಾರತೀಯರು ಒಳಾಂಗಣ ಮತ್ತು ಹೊರಾಂಗಣ ಆಟಗಳಲ್ಲಿ ನಿಸ್ಸೀಮರು. +ಭಾರತದ ಚತುರ ಆಟ ಚದುರಂಗವಾಗಿದೆ. +ಗುಪ್ತರಕಾಲದಲ್ಲಿ ಪ್ರಥಮ ಬಾರಿಗೆ ಚದುರಂಗ ಆಟ ಚಾಲ್ತಿಗೆ ಬಂದಿತು. +ಗ್ರಾಮೀಣ ಮತ್ತು ದೇಸೀ ಆಟಗಳು ಸಾಕಷ್ಟು ಮನರಂಜನಾತ್ಮಕವಾಗಿವೆ. +ಆದ್ರೆ ಕೆಲ ವರ್ಷಗಳ ಹಿಂದೆ ಹಾಗಿರಲಿಲ್ಲ. +ದೇಸೀ ಕ್ರೀಡೆಗಳು ಅಂದ್ರೆ ಅದರ ಮಜಾನೇ ಬೇರೆ. +ನೆರೆದ ಜನರು ಕೇಕೆ,ಸಿಳ್ಳೆ ಚಪ್ಪಾಳೆ ಹಾಕಿ ಸಂತಸಪಡದಿದ್ದರೆ ಹೇಗೆ ಅಲ್ಲಾ?. +ಕಬಡ್ಡಿ,ವಾಲಿಬಾಲ್‌,ಥ್ರೋ ಬಾಲ್‌,ಖೋ ಖೋ,ಹಾಕಿ,ಕ್ರಿಕೆಟ್‌,ಫುಟ್ಬಾಲ್‌,ಗೋಲಿ,ಟೇಬಲ್‌ ಟೆನ್ನಿಸ್‌,ಕುಂಟೆಬಿಲ್ಲೆ,ಬ್ಯಾಡ್ಮಿಂಡನ್‌,ಚೆಸ್‌,ಹಾವು-ಏಣಿ,ಚೌಕಾಬಾರ,ಮರ ಹತ್ತುವುದು,ಓಟ ಹೀಗೆ ಸಾಕಷ್ಟು ಆಟಗಳಿವೆ. +ಅದರಲ್ಲಿ ನಮ್ಮ ದೇಸೀ ಆಟಗಳ ಗಮ್ಮತ್ತೇ ಗಮ್ಮತ್ತು. +ಕಬಡ್ಡಿ,ಕಬಡ್ಡಿ,ಕಬಡ್ಡಿ ಎಂದು ಉಸಿರು ಬಿಗಿಹಿಡಿದು ಎದುರಾಳಿಯನ್ನು ಔಟ್‌ ಮಾಡಿ ಹೋಗುವ ಕೌಶಲತೆ,ಚಾಕಚಕ್ಯತೆ,ಜಾಣ್ಮೆ ಎಲ್ಲವೂ ಕರಗತವಾಗೋದು ಆಟದಿಂದ. +ಕ್ರೀಡೆ ಜೀವನದಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. +ಮನುಷ್ಯನ ಆರೋಗ್ಯದ ಜತೆಗೆ ಮೌಲ್ಯಗಳ ಕಲಿಕೆಗೂ ಇದು ಸಹಾಯಕವಾಗುತ್ತದೆ. +ನಾವು-ನಮ್ಮದು,ನಾವೆಲ್ಲ ಒಂದು ಎಂಬ ಗಟ್ಟಿ ಭಾವ ಬೇರೂರುತ್ತದೆ. +ಚೌಕಾಬಾರ,ಹಾವು-ಏಣಿ ಚೆಸ್‌,ಬ್ಯಾಡ್ಮಿಂಟನ್‌,ಟೆನ್ನಿಸ್‌,ಬಾಕ್ಸಿಂಗ್‌ ಸೇರಿದಂತೆ ಹಲವು ಆಟಗಳು ಒಳಾಂಗಣ ಆಟಗಳಾಗಿವೆ. +ಇನ್ನು ವಾಲಿಬಾಲ್‌,ಕಬಡ್ಡಿ ಖೋಖೋ,ಥ್ರೋ ಬಾಲ್‌,ಕುಂಟೆ ಬಿಲ್ಲೆ,ಓಟ,ಎತ್ತರ ಜಿಗಿತ,ಉದ್ದ ಜಿಗಿತ,ಚಿನ್ನಿ ದಾಂಡು,ಕಣ್ಣಮುಚ್ಚಾಲೆ,ಬಿಲ್ಲುಬಾಣ,ಕ್ರಿಕೆಟ್‌,ಹಾಕಿ,ಫುಟ್ಜಾಲ್‌,ಬಾಸ್ಕೆಟ್‌ ಬಾಲ್‌ ಹೀಗೆ ಸಾಕಷ್ಟು ಆಟಗಳಿವೆ. +ಎಲ್ಲ ಕ್ರೀಡೆಗಳ ಮೂಲ ಹಳ್ಳಿಗಳು ಎಂದರೆ ಅತಿಶಯೋಕ್ತಿಯೇನಲ್ಲ. +ಹಳ್ಳಿಗಳಲ್ಲಿ ಹುಟ್ಟಿ ಬೆಳೆದು ಜೀವನ ಕಟ್ಟಿಕೊಳ್ಳುವ ಜನ ಗ್ರಾಮದಲ್ಲಿ ಆಡಿ ಕಲಿತ ಕ್ರೀಡೆಗಳು ಗ್ರಾಮೀಣ ಕ್ರೀಡೆಗಳಾಗಿ ಹೆಸರು ಪಡೆದುಕೊಂಡಿವೆ. +ಗ್ರಾಮೀಣ ಕ್ರೀಡೆಗಳು ಭಾರತ ಹಳ್ಳಿಗಳಿಂದ ಕೂಡಿದ ದೇಶ. +ಗ್ರಾಮಗಳೇ ದೇಶದ ಜೀವಾಳ. +ಮನರಂಜನೆ ಹಾಗೂ ಸ್ಪರ್ಧೆ ಎಂಬ ವಿಷಯ ಬಂದಾಗ ಈಜುವುದು,ಕೋಣಗಳನ್ನು ಓಡಿಸುವುದು,ಚಕ್ಕಡಿ ಓಡಿಸುವುದು,ಹೀಗೆ ದೇಸೀ ಸ್ಪರ್ಧೆಗಳು ಮನರಂಜನೆಯ ವಾತಾವರಣಕ್ಕೆ ಕಾರಣವಾಗಿವೆ. +ಕುಸ್ತಿ ಮಲ್ಲಕಂಬದಂಥ ದೇಸೀ ಆಟಗಳು ಕಸರತ್ತಿನ ಪ್ರತೀಕವಾಗಿದ್ದು,ಇವುಗಳು ಗ್ರಾಮೀಣ ಕ್ರೀಡೆಗಳಾಗಿವೆ. +ನಾಡಿನ ಸಂಸ್ಕೃತಿಯನ್ನು ಬಿಂಬಿಸುವ ಗ್ರಾಮೀಣ ಆಟಗಳು ಮನರಂಜನೆಯ ಭಾಗವಾಗಿವೆ. +ಕಣ್ಣಾಮುಚ್ಚಾಲೆ,ಹಗ್ಗ-ಜಗ್ಗಾಟ,ಲಗೋರಿ,ಚಿನ್ನಿದಾಂಡು,ಕುಂಟೆಬಿಲ್ಲೆ,ಮರಕೋತಿ,ಲಗೋರಿ,ಆಣೆಕಲ್ಲು,ಬುಗುರಿ,ಗೋಲಿಗುಂಡ,ಚೌಕಾಬಾರ,ಕೌಲೆತ್ತು,ಗಿಲ್ಲಿದಾಂಡು,ಅಳಿ ಗುಳಿ ಮಣೆಯಂಥ ಗ್ರಾಮೀಣ ಆಟಗಳು ಬಲು ಸೊಗಸು. +ಕೆಲವು ಹಳ್ಳಿ ಪ್ರದೇಶಗಳಲ್ಲಿ ಮಕ್ಕಳು ಈಗಲೂ ಗ್ರಾಮೀಣ ಆಟಗಳನ್ನು ಆಡುವುದನ್ನು ಕಾಣಬಹುದು. +ಆದರೆ ಆಧುನೀಕರಣದ ಭರಾಟೆಯಲ್ಲಿ ಈ ಗ್ರಾಮೀಣ,ದೇಸೀ ಆಟಗಳು ಈಗ ಮೂಲೆ ಗುಂಪಾಗಿವೆ. +ಕೈಗೆ ಮೊಬೈಲ್‌ ಬಂದಾಗಿನಿಂದ ಅದರಲ್ಲೂ ಆಂಡ್ರಾಯ್ಡ್ ಮೊಬೈಲುಗಳ ಹಾವಳಿಯಿಂದ ಜನರು ಇಂತಹ ಆಟಗಳನ್ನು ಆಡುವುದನ್ನೇ ಮರೆತಿದ್ದಾರೆ. +ಯುವ ಪೀಳಿಗೆ,ಮಕ್ಕಳು ಮೊಬೈಲ್‌ ಗೇಮಿಂಗ್‌ ನಲ್ಲೇ ಕಾಲ ಕಳೆಯುತ್ತಾರೆ. +ಹೀಗಾಗಿ ಗ್ರಾಮೀಣ ಆಟಗಳು ಕಣ್ಮರೆಯಾಗುತ್ತಿವೆ. +ಅದಾಗ್ಯೂ ಈಗ ಹಳ್ಳಿಯಿಂದ ಪಟ್ಟಣದವರೆಗೆ ಆಟವೆಂದರೆ ಕ್ರಿಕೆಟ್‌ ಎನ್ನುವಂತಾಗಿದೆ. +ಇತ್ತ ಕ್ರಿಕೆಟ್‌ ಮೇಲಿನ ಮೋಹ,ಉಳಿದ ಕ್ರೀಡೆಗಳನ್ನು ಅವನತಿಯತ್ತ ಸಾಗಿಸಿದೆ. +ಟಿವಿ,ಕಂಪ್ಯೂಟರ್‌,ಎಲೆಕ್ಟ್ರಾನಿಕ್‌ ವಸ್ತುಗಳು,ಆನ್‌ಲೈನ್ ಗೇಮಿಂಗ್‌ ಗಳು ಗ್ರಾಮೀಣ ಕ್ರೀಡೆಗಳಿಗೆ ಕಂಟಕವಾಗಿ ಪರಿಣಮಿಸಿವೆ. +ಪರಿಣಾಮ ಮಕ್ಕಳು ಮನೆಯಿಂದಾಚೆ ಹೋಗುವುದಿಲ್ಲ. +ನಾಲ್ಕು ಗೋಡೆಯ ಮಧ್ಯೆಯೇ ಕೈ ತುದಿ ಬೆರಳಲ್ಲಿ ರಿಮೋಟ್‌ ಒತ್ತುತ್ತಾ ಮೈಮರೆಯುತ್ತಾರೆ. +ಹೀಗಾದಾಗ ಮಕ್ಕಳ ಆರೋಗ್ಯ,ಕಣ್ಣು,ಮಾನಸಿಕ ಹಾಗೂ ದೈಹಿಕ ಬೆಳವಣಿಗೆ ಕುಂಠಿತಗೊಳ್ಳುವ ಸಾಧ್ಯತೆಗಳೇ ಹೆಚ್ಚು. +ಮಕ್ಕಳ ಸರ್ವಾಂಗೀಣ ಬೆಳವಣಿಗೆಯ ಗುಟ್ಟು ಆಟಗಳಲ್ಲಿದೆ ಎಂಬುದನ್ನು ಅರಿತಾಗ ಮಾತ್ರ ಗ್ರಾಮೀಣ ಆಟಗಳ ಉಳಿವಿಗೆ ಒಂದು ಹೆಜ್ಜೆಯ ಶ್ರಮ ವಹಿಸಲು ಸಾಧ್ಯವಾದೀತೇನೋ. . .? +ಇನ್ನು ಯುವ ಸಬಲೀಕರಣ,ದಸರಾ ಕ್ರೀಡಾಕೂಟ,ನಗರ ಹಾಗೂ ಗ್ರಾಮೀಣ ಕ್ರೀಡಾಕೂಟಗಳು ನಡೆಯುತ್ತವೆ. +ಆದರೆ ಅವು ಬಹುಮಾನ ಹಾಗೂ ಸ್ಪರ್ಧೆಗೆ ಮಾತ್ರ ಮೀಸಲಾಗುತ್ತಿವೆ. +ಹೋಬಳಿ,ತಾಲೂಕು,ಜಿಲ್ಲಾ ಮಟ್ಟಕ್ಕೆ ಮಾತ್ರ ಸೀಮಿತವಾಗಿವೆ. +ಸಂಸ್ಕೃತಿ,ಪರಂಪರೆಯ ಪ್ರತೀಕವಾಗಿರುವ ಗ್ರಾಮೀಣ ಆಟಗಳನ್ನು ಆಡುವ ಹಾಗೂ ಆಡಿಸುವ ಮೂಲಕ ಉಳಿಸುವ ಕೆಲಸವಾಗಬೇಕಿದೆ. +ಜನಪದ ಕ್ರೀಡೆಗಳು:ಇನ್ನೂ ಗ್ರಾಮೀಣ ಹಾಗೂ ಜನಪದ ಕ್ರೀಡೆಗಳಿಗೆ ಒಂದಕ್ಕೊಂದು ನಂಟಿದೆ. +ಮೇಲೆ ಉಲ್ಲೇಖಿಸಲಾದ ಗ್ರಾಮೀಣ ಆಟಗಳೇ ಜನಪದ ಆಟಗಳಾಗಿವೆ. +ಜನರಿಂದ ಜನರಿಗೆ ರೂಢಿಗತವಾಗಿ ಬಂದಿರುವ ಆಟಗಳು. +ಈ ಆಟಗಳಿಗೆ ಆಟಗಾರನ ಕ್ರಿಯಾತ್ಮಕ ಚಾಕಚಕ್ಯತೆಯೇ ಪ್ರಮುಖ ಆಕರ್ಷಣೆಯಾಗಿರುತ್ತದೆ. +ಆಟವೆಂದ ಮೇಲೆ ನಿಯಮಗಳು ಇದ್ದೇ ಇರುತ್ತವೆ. +ಜನಪದ ಆಟಗಳಲ್ಲಿ ನಿಯಮಗಳು ಕಠಿಣವಲ್ಲದೇ ಸರಳವಾಗಿರುತ್ತವೆ. +ಮನರಂಜನೆ,ಚಟುವಟಿಕೆ,ಸಂತಸದ ಕ್ಷಣಗಳನ್ನು ಜನಪದ ಆಟಗಳು ಕಟ್ಟಿಕೊಡುತ್ತವೆ. +ಬುಗುರಿ,ಚಿನ್ನಿದಾಂಡು,ಕಣ್ಣಾಮುಚ್ಚಾಲೆ,ಕುಂಟೆಬಿಲ್ಲೆ,ಮರಕೋತಿ,ಲಗೋರಿ,ಚೌಕಾಬಾರ,ಹಾವುಏಣಿ,ಗೋಲಿಗುಂಡ,ಹಗ್ಗದಾಟ,ಹಗ್ಗ-ಜಗ್ಗಾಟ,ಕೆರೆ ದಂಡೆ,ಆಣೆಕಲ್ಲು ಇವೇ ಜನಪದ ಆಟಗಳಾಗಿವೆ. +ಕರ್ನಾಟಕದ ಆಟಗಳು:ದೇಶದ ಪ್ರತಿ ರಾಜ್ಯಗಳೂ ಆಟಗಳಲ್ಲಿ ವೈವಿಧ್ಯತೆ ಹೊಂದಿವೆ. +ಕರ್ನಾಟಕ ಕೂಡ ಆಟೋಟಗಳಲ್ಲಿ ತನ್ನತನ ಮೆರೆದಿದೆ. +ಕರ್ನಾಟಕದ ಕ್ರೀಡೆಗಳು ಎಂದಾಗ ಮತ್ತೆ ಗ್ರಾಮೀಣ ಮತ್ತು ಜನಪದ ಕ್ರೀಡೆಗಳೇ ಎದುರುಗೊಳ್ಳುತ್ತವೆ. +ಆನೆ-ಕುರಿ ಆಟದಲ್ಲಿ ಸರಳ ಹಾಗೂ ಜಾಣ್ಮೆಯಿಂದ ಆಡಬೇಕಾಗುತ್ತದೆ. +ಒಬ್ಬರಿಗೆ ಮೂರು ಆನೆ ಮತ್ತೊಬ್ಬರಿಗೆ 20 ಕುರಿ ಕಲ್ಲಿನ ಮೇಲೆ ಘಟ್ಟಾಭಾರದ ರೀತಿ ಮನೆಗಳನ್ನ ಕೊರೆದು ಆಡಲಾಗುತ್ತದೆ. +ಮಕ್ಕಳಿಗಾಗಿ ಟೋಪಿಯಾಟ,ಹಗ್ಗದಾಟ,ಬುಗುರಿ ಈ ಆಟದಲ್ಲಿ ಇಬ್ಬರು ಎದುರು ಬದುರು ನಿಂತು ಕೈ-ಕೈ ಹಿಡಿದುಕೊಳ್ಳುತ್ತಾರೆ. +ಉಳಿದವರು ಹಾಡು ಹೇಳುತ್ತ ಸಾಲಾಗಿ ಬಗ್ಗಿ ನಿಂತವರ ಮಧ್ಯೆ ಹಾದು ಹೋಗುತ್ತಾರೆ. +ಕುಂಟಾಟ ಒಂದು ಕಾಲನ್ನು ಮೇಲಕ್ಕೆ ಎತ್ತಿ ಇನ್ನೊಂದು ಕಾಲಿನಿಂದ ಒಂದು ಗೆರೆಯಿಂದ ಮತ್ತೊಂದು ಗೆರೆಯನ್ನು ತಲುಪುವುದು. +ಇನ್ನು ಕರ್ನಾಟಕದಲ್ಲಿ ಮನರಂಜನೆ ಮತ್ತು ಜನಪದ ಕಲೆಗೆ ಸಾಕ್ಷಿಯಾಗಿ ಗೊಂಬೆಯಾಟ ಆಡಿಸುವುದು ಪ್ರಾಧಾನ್ಯತೆ ಪಡೆದುಕೊಂಡಿದೆ. +ಬಣ್ಣ ಬಣ್ಣದ ಗೊಂಬೆಗಳನ್ನು ತಾಳಕ್ಕೆ ತಕ್ಕಂತೆ ಕುಣಿಸುವ ಪರಿಯೇ ಮನಮೋಹಕ. +ಕರ್ನಾಟಕದ ಚೆನ್ನಪಟ್ಟಣ ಗೊಂಬೆಗಳ ತಯಾರಿಕೆಯಲ್ಲಿ ಪ್ರಸಿದ್ಧಿ ಪಡೆದಿದೆ. +ಪ್ರಾಚೀನ ಹಾಗೂ ಮಹಾಕಾವ್ಯಗಳ ಸನ್ನಿವೇಶಗಳನ್ನು,ಕಥೆ,ಹಾಡುಗಳು ಗೊಂಬೆಯಾಟದ ವಿಷಯ ವಸ್ತುಗಳಾಗಿವೆ. +ಉತ್ಸವಗಳಲ್ಲಿ ಗೊಂಬೆಯಾಟಗಳ ಪ್ರದರ್ಶನ ನೋಡಬಹುದು. +ಸಾಹಸ ಕ್ರೀಡೆಗಳು:ಕ್ರೀಡೆಗಳಲ್ಲಿ ನಾನಾ ಬಗೆಗಳಿವೆ. +ಅದರಲ್ಲಿ ಸಾಹಸ ಕ್ರೀಡೆಗಳೆಂಬ ವಿಭಾಗವೂ ಇದೆ. +ಸಾಹಸ ತೋರಿಸುವ ಕ್ರೀಡೆಗಳೇ ಸಾಹಸ ಕ್ರೀಡೆಗಳು. +ಇದರಲ್ಲಿ ಜಲ ಕ್ರೀಡೆಗಳು ಹೆಚ್ಚು ಪ್ರಚಲಿತವಾಗಿವೆ. +ದೋಣಿ ಸ್ಪರ್ಧೆ,ಈಜುವುದು,ರಿವರ್‌ ರಾಫ್ಟಿಂಗ್‌ ಮುಂತಾದವು. +ಇತ್ತ ಸೈಕ್ಲಿಂಗ್‌,ಕೋಣಗಳ ಓಟ,ಮಲ್ಲಕಂಬ,ಕುಸ್ಥಿ,ಬಾಕ್ಸಿಂಗ್‌,ವೇಟ್‌ ಲಿಫ್ಟಿಂಗ್‌,ಬೈಕ್‌ ಹಾಗೂ ಕಾರ್‌ ರೇಸ್‌,ಪರ್ವತಗಳನ್ನ ಏರುವುದು ಸಾಹಸ ಆಟಗಳಾಗಿವೆ. +ಉತ್ಸವಗಳಲ್ಲಿ ಅದರಲ್ಲೂ ದಸರಾ ಉತ್ಸವದಲ್ಲಿ ಸಾಹಸ ಕ್ರೀಡೆಗಳ ಆಯೋಜನೆ ನಡೆಸಲಾಗುತ್ತದೆ. +ರಾಷ್ಟ್ರೀಯ ಕ್ರೀಡೆ ಹಾಕಿ. +ಶ್ರೇಷ್ಠ ಹಾಕಿ ಆಟಗಾರ ಮೇಜರ್‌ ಧ್ಯಾನ್‌ ಚಂದ್‌ ಅವರ ಸ್ಮರಣಾರ್ಥ ಆಗಸ್ಟ್,29ನ್ನು ಪ್ರತಿ ವರ್ಷ ರಾಷ್ಟ್ರೀಯ ಕ್ರೀಡಾ ದಿನವನ್ನಾಗಿ ಆಚರಿಸಲಾಗುತ್ತದೆ. +ಈ ದಿನದಂದು ಭಾರತ ಸರ್ಕಾರ ಕ್ರೀಡೆಯಲ್ಲಿ ಅತ್ಯುನ್ನತ ಸಾಧನೆಗೈದ ಆಟಗಾರರಿಗೆ ರಾಷ್ಟ್ರಪತಿ ಭವನದಲ್ಲಿ ಪ್ರಶಸ್ತಿ ನೀಡಿ ಗೌರವಿಸುತ್ತದೆ. +ಮೇಜರ್‌ ಧ್ಯಾನ್‌ ಚಂದ್‌ ಖೇಲ್‌ ರತ್ನ ಪ್ರಶಸ್ತಿ,ಅರ್ಜುನ ಪ್ರಶಸ್ತಿ,ದ್ರೋಣಾಚಾರ್ಯ ಪ್ರಶಸ್ತಿ ನೀಡಲಾಗುತ್ತದೆ. +ಕರ್ನಾಟಕದಲ್ಲಿ ಏಕಲವ್ಯ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ. +ಶಿಕ್ಷಣ ಮತ್ತು ಕ್ರೀಡೆ:ಶಿಕ್ಷಣದ ಜೊತೆ ಜೊತೆಗೆ ಮಗುವಿನ ಸರ್ವತೋಮುಖ ಅಭಿವೃದ್ಧಿಗೆ ಆಟ ಕೂಡ ಮುಖ್ಯ. +ಪಠ್ಯ ಚಟುವಟಿಕೆಯ ಜೊತೆಗೆ ಪಠ್ಯೇತರ ಚಟುವಟಿಕೆಯೂ ಮಕ್ಕಳ ಬೆಳವಣಿಗೆಗೆ ಅತೀ ಅವಶ್ಯಕ. +ಆರೋಗ್ಯ ಮತ್ತು ದೈಹಿಕ ಶಿಕ್ಷಣ ಜೀವನದಲ್ಲಿ ಬರುವ ಅನಾರೋಗ್ಯವನ್ನು ತಡೆಯುತ್ತದೆ. +ಶಿಕ್ಷಣದಲ್ಲಿ ಕ್ರೀಡೆ ರಚನಾತ್ಮಕ ಚಟುವಟಿಕೆಯಾಗಿದೆ. +ಮನುಷ್ಯನ ಬೌದ್ಧಿಕ,ಸಾಮಾಜಿಕ,ಭಾವನಾತ್ಮಕ ಮತ್ತು ಸರ್ಧಾತ್ಮಕ,ಆರೋಗ್ಯಕರ ವಾತಾವರಣವನ್ನು ನಿರ್ಮಾಣ ಮಾಡುತ್ತದೆ. +ಕ್ರೀಡೆ ಮುಂದೆ ದೈಹಿಕ ಶಿಕ್ಷಕ ವೃತ್ತಿ ಟ್ರೇನರ್‌ ಹಾಗೂ ಇತರೆ ಉದ್ಯೋಗಾವಕಾಶಕ್ಕೂ ಸಹಕಾರಿಯಾಗಿದೆ. +ಜೀವನದಲ್ಲಿ ಕ್ರೀಡೆಗಳ ಮಹತ್ವ:ಬದುಕಿನಲ್ಲಿ ಆಟೋಟಗಳು,ಚಟುವಟಿಕೆ ಇಲ್ಲದಿದ್ದರೆ ಮನುಷ್ಯ ಶವದಂತಾಗುತ್ತಾನೆ. +ನಿರುತ್ಸಾಹಿಯಾಗಿ,ಅನಾರೋಗ್ಯಕರ ಜೀವನ ಕಳೆಯುತ್ತಾನೆ. +ತುಂಬು ಜೀವನ ನಡೆಸಬೇಕಾದರೆ ಒಳ್ಳೆಯ ಆರೋಗ್ಯ ಮುಖ್ಯ. +ಮನುಷ್ಯ ಆರೋಗ್ಯವಾಗಿದ್ದಾಗ ಬದುಕು ಸುಂದರವಾಗಿ ರೂಪುಗೊಳ್ಳುತ್ತದೆ. +ಕ್ರೀಡೆ ಮನುಷ್ಯನ ಜೀವನ ಹಾಗೂ ದೈಹಿಕ,ಮಾನಸಿಕ ಸಂಪೂರ್ಣ ಬೆಳವಣಿಗೆಗೆ ಅತ್ಯವಶ್ಯಕ. +ಧೀರ್ಘಕಾಲದ ಆರೋಗ್ಯ ಭಾಗ್ಯಕ್ಕೆ ಹಾಗೂ ಮಾನಸಿಕ ಆರೋಗ್ಯಕ್ಕೆ ಕ್ರೀಡೆ ಪ್ರಧಾನವಾಗಿದೆ. +ದೇಹವು ಶಕ್ತಿಯುತವಾಗಿರಲು,ಮೆದುಳಿನ ಬೆಳವಣಿಗೆಗೆ ಕ್ರೀಡೆ ಪ್ರಯೋಜನಕಾರಿ. +ಮೂಳೆಗಳ ಬಲವರ್ಧನೆ,ರಕ್ತಪರಿಚಲನೆ,ಸೋಮಾರಿತನವನ್ನು ಹೋಗಲಾಡಿಸಿ,ನಮ್ಮ ದಿನವನ್ನು ಸಂತೋಷ ಮತ್ತು ಉಲ್ಲಾಸಮಯವಾಗಿಸಲು ಕ್ರೀಡೆ ಬೇಕೇ ಬೇಕು. +ಕ್ರೀಡೆ ಕೇವಲ ವ್ಯಕ್ತಿಯ ಆರೋಗ್ಯ ಅಥವಾ ಮನರಂಜನೆಯ ಭಾಗ ಮಾತ್ರವಲ್ಲ. +ಅದು ಒಂದು ಊರು,ಒಂದು ನಾಡು,ದೇಶದ ಸಂಸ್ಕೃತಿ,ಪರಂಪರೆಯನ್ನು ಜಗತ್ತಿಗೆ ತೋರಿಸುವಂಥದ್ದು. +ಅಂತರ್‌ ಮಟ್ಟ,ಜಿಲ್ಲಾ ಮಟ್ಟ,ರಾಜ್ಯ ಹಾಗೂ ರಾಷ್ಟ್ರ ಮಟ್ಟಗಳಲ್ಲಿ ಕ್ರೀಡಾಕೂಟವನ್ನು ಏರ್ಪಡಿಸಿ ಗೆದ್ದ ತಂಡಗಳನ್ನ ಗೌರವಿಸಲಾಗುತ್ತದೆ. +ಒಂದು ಭಾಗದ ಜನ ಇನ್ನೊಂದು ಭಾಗದ ಜನರೊಂದಿಗೆ ಬೆರೆಯುವ,ಪರಸ್ಪರ ಸ್ಪರ್ಧಾತ್ಮಕ ಭಾವನೆಯೊಂದಿಗೆ ತಮ್ಮ ಶ್ರೇಷ್ಠತೆ,ಗಟ್ಟಿತನವನ್ನು ತೋರಿಸುವ ಪ್ರಕ್ರಿಯೆಯೂ ಕೂಡ ನಡೆಯುತ್ತದೆ. +ಹಾಗಾಗಿ ವಿಶ್ವ ಮಟ್ಟದಲ್ಲಿ ವಿವಿಧ ದೇಶಗಳು ಸ್ಪರ್ಧೆಯನ್ನು ನಡೆಸುತ್ತವೆ. +ಒಲಿಂಪಿಕ್‌,ಕಾಮನ್‌ ವೆಲ್ಫ್‌ ಏಷ್ಯನ್‌ ಕ್ರೀಡಾಕೂಟಗಳಲ್ಲಿ ಭಾತೀಯರು ಗೆದ್ದು,ಸಾಧನೆಗೈದು ತಮ್ಮ ತಾಕತ್ತಿನ ಪರಾಕಾಷ್ಠೆ ಮೆರೆದಿದ್ದಾರೆ. +ಬಾಕ್ಸಿಂಗ್‌,ಕ್ರಿಕೆಟ್‌,ಕಬಡ್ಡಿ,ಕುಸ್ತಿ,ವೇಟ್‌ ಲಿಫ್ಟಿಂಗ್‌,ಶಾರ್ಪ್‌ ಶೂಟಿಂಗ್‌,ವೆಸ್ಲಿಂಗ್‌,ಹಾಕಿ,ಚೆಸ್‌,ಬ್ಯಾಡ್ಮಿಂಟನ್‌,ಟೆನ್ನಿಸ್‌ ಹೀಗೆ ಹಲವಾರು ಆಟಗಳಲ್ಲಿ ದೇಶವನ್ನು ಪ್ರತಿನಿಧಿಸಿ ಗೆದ್ದು ಬೀಗಿದ ಆಟಗಾರರ ದೊಡ್ಡ ಪಟ್ಟಿಯೇ ಇದ್ದು,ಇವರೆಲ್ಲಾ ವಿಶ್ವಮಟ್ಟದಲ್ಲಿ ದೇಶಕ್ಕೆ ಕೀರ್ತಿ ತಂದಿದ್ದಾರೆ. +ಕೀಡೆ ಮತು ಹವ್ಯಾಸ:ಇನ್ನು ಕ್ರೀಡೆಯನ್ನು ಹವ್ಯಾಸವಾಗಿಯೂ ಆಯ್ಕೆ ಮಾಡಿಕೊಳ್ಳಬಹುದು. +ಕ್ರೀಡೆ ದೈನಂದಿನ ಜೀವನದ ಭಾಗವಾಗಿರುವುದೇ ಹೆಚ್ಚು. +ತಾವೇ ಮಾಡಿದ ರೆಕಾರ್ಡ್​​ಗಳನ್ನು ಮತ್ತೆ ತಾವೇ ಬ್ರೆಕ್‌ ಮಾಡುವ ಸಾಹಸಿಗರೂ ಇದ್ದಾರೆ. +ಇದೆಲ್ಲಾ ಸಾಧನೆ ಸಾಧವಾಗೋದು ದಿನನಿತ್ಯದ ಪ್ರಯತ್ನ,ಕಠಿಣ ಪರಿಶ್ರಮ,ಛಲ ಹಾಗೂ ಧೃಢ ನಿರ್ಧಾರದಿಂದ. +ಆದರೆ ಯಾರೂ ಕ್ರೀಡೆಯನ್ನೇ ವೃತ್ತಿಯನ್ನಾಗಿ ಸ್ವೀಕರಿಸುತ್ತಾರೋ ಅದೇ ಅವರ ಜೀವನವಾಗುತ್ತದೆ. +ಯಾರು ಕೀಡೆಯನ್ನು ಪ್ರವೃತ್ತಿಯನ್ನಾಗಿ ಆಯ್ಕೆ ಮಾಡಿಕೊಳ್ಳುತ್ತಾರೋ ಅವರಿಗೆ ಕ್ರೀಡೆ ಹವ್ಯಾಸವಾಗುತ್ತದೆ. +ಜೀವನವನ್ನೇ ಕ್ರೀಡೆಗಾಗಿ ಮೀಸಲಿಡುವುದಕ್ಕೂ,ಒಂದೆರಡು ಗಂಟೆ ಕ್ರೀಡೆಗಾಗಿ ಮೀಸಲಿಡುವುದಕ್ಕೂ ತುಂಬಾ ವ್ಯತ್ಯಾಸವಿದೆ. +ಹಾಗಾಗಿ ಕ್ರೀಡೆ ಜೀವನದಲ್ಲಿ ಯಾವುದೇ ಭಾಗವಾದರೂ,ಅದರಿಂದ ಲಾಭವೇ ಹೊರತು ನಷ್ಟವಂತೂ ಖಂಡಿತ ಇಲ್ಲ. +ಕೀಡೆ ಮತು ಆರೋಗ್ಯ:ಹಲವು ರೋಗಗಳಿಗೆ ಮದ್ದು ಯೋಗ ಅಂತಾ ಹೇಳ್ತಾರೆ. +ಹಾಗೇ ಹಲವು ಕಾಯಿಲೆಗಳಿಗೆ ಆಟವೇ ರಾಮಬಾಣ. +ನಾವು ಆಡುವ ಪ್ರತಿಯೊಂದು ಆಟವೂ ನಮ್ಮ ದೈನಂದಿನ ಹಾಗೂ ದೈಹಿಕ,ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. +ಮೆದುಳು ಚುರುಕಾಗುವುದು,ಮೂಳೆಗಳ ಬಲಿಷ್ಠತೆ,ಮಧುಮೇಹ ತಡೆಯಲು,ಕಣ್ಣಿನ ದೋಷ ನಿವಾರಣೆ,ಮಂಡಿ,ಕೈಕಾಲು ನೋವುಗಳಿಗೆ ವಾಕಿಂಗ್‌,ರನ್ನಿಂಗ್‌ ಮಾಡುವುದು,ಗ್ರಹಿಕಾ ಶಕ್ತಿಯನ್ನು ಹೆಚ್ಚಿಸುತ್ತದೆ. +ಉಸಿರಾಟ,ರಕ್ತನಾಳ,ನರಗಳ ಒತ್ತಡ ನಿವಾರಣೆಗೆ ಕ್ರೀಡೆ ಮದ್ದು. +ಜಲ ಕ್ರೀಡೆ,ಏರೋಬಿಕ್ಸ್‌,ಜಿಮ್ನಾಸ್ಟಿಕ್‌,ಸ್ಕೇಟಿಂಗ್‌,ಎತ್ತರ ಜಿಗಿತ,ಉದ್ದ ಜಿಗಿತ,ವಾಲಿಬಾಲ್‌,ಬಾಸ್ಕೆಟ್‌ ಬಾಲ್‌,ಫುಟ್ಜಾಲ್‌ ,ಗುಂಡು ಎಸೆತ,ಕುಸ್ತಿ,ಕಬಡ್ಡಿ ಮುಂತಾದ ಆಟಗಳು ಸ್ನಾಯುಗಳನ್ನು ಬಲಪಡಿಸಿ,ದೈಹಿಕ, ಮಾನಸಿಕ ಆರೋಗ್ಯಕ್ಕೆ ಸಹಕರಿಸುತ್ತವೆ. +ದೇಹ ಮತ್ತು ಮನಸ್ಸಿನ ಸಮತೋಲನವನ್ನು ಕಾಪಾಡುತ್ತದೆ. +ವಿದ್ಯಾರ್ಥಿಗಳ ಜೀವನದಲ್ಲಿ ಕ್ರೀಡೆ +"ಬೆಳೆಯುವ ಸಿರಿ ಮೊಳಕೆಯಲ್ಲಿ' ಅನ್ನೋ ಗಾದೆಯನ್ನು ನಾವೆಲ್ಲರೂ ಕೇಳಿದ್ದೀವಿ. +ಒಂದು ಮರ ಆರೋಗ್ಯವಾಗಿ ಬೆಳೆದು,ಸೊಗಸಾದ ಫಲ ನೀಡಬೇಕಾದರೆ ಅದು ಮೊಳಕೆಯಲ್ಲಿದ್ದಾಗಿನಿಂದ ಆರೈಕೆ ಚೆನ್ನಾಗಿ ಆಗಬೇಕು. +ಹಾಗೇ ಮನುಷ್ಯನ ಬೆಳವಣಿಗೆ,ಆರೋಗ್ಯಕರ ಜೀವನಶೈಲಿ ರೂಢಿಯಾಗಬೇಕಾದರೆ ಬಾಲ್ಯದಿಂದಲೇ ಉತ್ತಮ ಚಟುವಟಿಕೆಗಳನ್ನು ರೂಢಿ ಮಾಡಿಸಬೇಕಾಗುತ್ತದೆ. +ಅದಕ್ಕೆ ಪಠ್ಯದ ಜೊತೆಗೆ ಆಟ ಮತ್ತು ಪಠ್ಯೇತರ ಚಟುವಟಿಕೆಗಳನ್ನು ಕಲಿಸಬೇಕಾಗುತ್ತದೆ. +"ಆಡಿ ಬಾ ಎನಕಂದ ಅಂಗಾಲು ತೊಳದೇನ"ಎಂಬ ಜಾನಪದ ಗೀತೆ ಮಗು ಆಡಿದರೆ ಸಮರ್ಪಕವಾಗಿ ಬೆಳೆಯುತ್ತದೆ ಎಂಬ ಅಂಶವನ್ನೂ ತಿಳಿಸಿದೆ. +ಗಟ್ಟಿಯಾದ ಶರೀರ ಆರೋಗ್ಯಕ್ಕೆ ಬುನಾದಿಯಾಗಬಲ್ಲದು. +ಮಕ್ಕಳ ಬುದ್ಧಿಶಕ್ತಿ ಹೆಚ್ಚಳ,ಬೆಳವಣಿಗೆ,ದೈಹಿಕ ಮತ್ತು ಮಾನಸಿಕ ಸಮತೋಲನ ಕಾಯ್ದುಕೊಳ್ಳುವುದಕ್ಕೆ ಕ್ರೀಡೆ ವಿದ್ಯಾರ್ಥಿಗಳ ಜೀವನದಲ್ಲಿ ಬಹುಮುಖ್ಯ ಪಾತ್ರ ವಹಿಸುತ್ತದೆ. +ಸಂಘಟಿತ,ಸ್ಪರ್ಧಾತ್ಮಕ ಮನೋಭಾವ ಬೆಳೆಯಲು,ಒಗ್ಗಟ್ಟು,ಜೀವನದಲ್ಲಿ ಸೋಲು-ಗೆಲುವನ್ನು ಸಮನಾಗಿ ಸೀಕರಿಸುತ್ತ ಭವಿಷ್ಯವನ್ನು ಉಜ್ವಲವಾಗಿ ರೂಪಿಸಿಕೊಳ್ಳಲು ಕ್ರೀಡೆ ಸಹಕಾರಿಯಾಗಿದೆ. +ಕ್ರೀಡೆ ಕವನಗಳು:ಇನ್ನು ನಮ್ಮ ಮನಸ್ಸು ಚೇತೋಹಾರಿಯಾಗಿದ್ದಾಗ ಹಾಡು,ಕವಿತೆ,ಕವನ,ಚುಟುಕು ಬರೆಯಲು ಈಸಿಯಾಗುತ್ತದೆ. +ವಿಶಾಲವಾದ ಆಟದ ಮೈದಾನ ಹೇಳುವ ಸಾಲು ಸಾಲು ನುಡಿಗಳ ಕಲ್ಪನೆ ಕವನ ಕಟ್ಟಲು ಮುದ ನೀಡುತ್ತದೆ. +ಆಟದೊಂದಿಗೆ ಪಾಠ:ಹಾಗೆಯೇ ಆಟವೇ ಬೌದ್ಧಿಕ ವಿಕಸನದ ಅಡಿಪಾಯ. +ಮೆದುಳು ಚುರುಕಾದಾಗ,ಮನಸ್ಸು ಮಿಡಿದಾಗ,ಒಂದು ಅನುಭವಿಕ,ಪರಿಪೂರ್ಣ ಕವನ ಕಟ್ಟಲು ಸಾಧ್ಯ. +ಅಂಥಹ ಆರೋಗ್ಯ ಇರಬೇಕಾದರೆ ಮನುಷ್ಯ ಕ್ರೀಡೆಯಲ್ಲಿ ಸಕ್ರಿಯನಾಗಿರಬೇಕು. +ಕ್ರೀಡೆ ಕುರಿತ ಕೆಲವು ಕವನದ ಸಾಲುಗಳು ಇಲ್ಲಿವೆ;(ಆರೋಗ್ಯ ಭಾಗ್ಯ ಎಂಬುದ ಅರಿಯೋ ಮಂಕು ತಿಮ್ಮಣ್ಣ ಆರೋಗ್ಯಕ್ಕೆ ಆಟೋಟವೇ ಬೆಸ್ಟ್ ಮದ್ದು ತಿಳಿಯೋ ಎಮ್ಮೆತಮಣರೆ ಆಟ,ಬೆಳಗಾಗುತ್ತಲೇ ಬೇಗ ನೀ ಏಳು,ಕೈಕಾಲುಗಳ ಹುರಿಗೊಳಿಸಿ ಓಡು ಜಿಗಿಯುತ,ಕುಣಿಯುತ,ಬಗ್ಗುತ,ಏಳುತ ದೇಹವ ಅಲ್ಲಾಡಿಸು ಇದುವೇ ವ್ಯಾಯಾಮ,ಇದುವೇ ಆಟೋಟ,ಸುಖಮಯ ಜೀವನಕೆ ಬೇಕೇ ಬೇಕು ಆರೋಗ್ಯ,ಅದಕ್ಕೆ ನೀ ಓಡಬೇಕು ದಿನನಿತ್ಯ. +ಶಾಲೆಯ ಬಯಲಿದು ಮಕ್ಕಳ ಆಟೋಟವಿಲ್ಲಿ ಚೆಂದ,ನೀ ನಗು,ಬೇಕಾದಂತೆ ಆಟವಾಡು,ಬಣ್ಣದ ಬುಗುರಿ,ಚೆಂದನೆಯ ತುತ್ತೂರಿ ಇಲ್ಲಿವೆ ನೋಡು ಅಕ್ಕಂದಿರು,ಅಣ್ಣಂದಿರ ಗುಂಪಿದೆ,ಕಣ್ಣಾಮುಚ್ಚಾಲೆ,ಚಿನ್ನಿ ದಾಂಡು,ಚೆಂಗನೆ ನೆಗೆಯುತ,ಅಡಗಿದವರ ಹಿಡಿಯಲು ಕಳ್ಳೆಜ್ಜೆ ಇಡುತಿಹರು,ಹೀಗೆ ಕ್ರೀಡೆಯ ಬಗೆಗಿನ ಕವನಗಳು ಬಾಲ್ಯ ಹಾಗೂ ಸಾಂಪ್ರದಾಯಿಕ ಆಟಗಳನ್ನು ಕಣ್ಣಿಗೆ ಕಟ್ಟುವಂತೆ ಮಾಡುತ್ತವೆ. +ಮಗುವೊಂದು ಆಡುತ್ತ ಕುಣಿಯುತ್ತ ಬೆಳೆದರೆ ಅಂದದ ಬಾಲ್ಯ. + ಚೆಂದದ ಭವಿಷ್ಯ ಸಿಗುವ ಆಶಯವನ್ನೂ ಸಹ ಕ್ರೀಡೆ ಬಗೆಗಿನ ಕವಿತೆಗಳು ಕಟ್ಟಿ ಕೊಟ್ಟಿವೆ. +ಇನ್ನು ಕ್ರೀಡೆ ಮನುಷ್ಯನಿಗೆ ಎಷ್ಟೊಂದು ಪ್ರಯೋಜನಕಾರಿಯಾಗಿದೆಯೋ ಕೆಲವೊಮ್ಮೆ ಅಷ್ಟೇ ಹಾನಿಯನ್ನುಂಟು ಮಾಡುತ್ತದೆ. +ನಿಯಮಿತವಾಗಿ ನಾವು ಆಟೋಟಗಳಲ್ಲಿ ತೊಡಗಿದ್ದನ್ನು ಬಿಟ್ಟಾಗ ದೇಹದಲ್ಲಿ ಹಲವು ತೊಂದರೆಗಳು ಕಾಣಿಸಿಕೊಳ್ಳುತ್ತವೆ. +ಹಾಗಿದ್ದರೆ ಕ್ರೀಡೆಯಿಂದ ಯಾವೆಲ್ಲಾ ಪ್ರಯೋಜನಗಳಿವೆ ಮತ್ತು ಯಾವೆಲ್ಲಾ ಅನಾನೂಕೂಲತೆಗಳಿವೆ ಎಂಬುದರ ಪಟ್ಟಿ ಇಲ್ಲಿದೆ. +ದೇಹಕ್ಕೆ ನಿಯಮಿತ ವ್ಯಾಯಾಮವಾಗುತ್ತದೆ +ಗಂಭೀರ ಗಾಯಗಳಾಗಬಹುದು +ಹೆಚ್ಚಿನ ತೂಕವನ್ನು ತೊಡೆದು ಹಾಕುತ್ತದೆ +ಅಂಗಾಂಗಗಳಿಗೆ ಪೆಟ್ಟು ಬೀಳಬಹುದು +ಹೆಚ್ಚು ಸಮಯ ಆಟೋಟದಲ್ಲಿ ಭಾಗಿಯಾಗವುದರಿಂದ ಮನಸ್ಸು ಮತ್ತು ದೇಹವನ್ನು ಚೈತನ್ಯಮಯವಾಗಿಸುತ್ತದೆ +ಮೂಳೆಗಳಿಗೆ ಧಕ್ಕೆಯಾಗಬಹುದು +ಹೆಚ್ಚಿನ ಕ್ರೀಡಾ ಚಟುವಟಿಕೆಗಳು ಹೆಚ್ಚು ಸಮಯವನ್ನು ನುಂಗುತ್ತವೆ. +ಜನರಲ್ಲಿ ಶಿಸ್ತು, ಒಗ್ಗಟ್ಟು, ಸಂಘಟನಾ ಶಕ್ತಿಯನ್ನು ಬೆಳೆಸುತ್ತದೆ +ಉತ್ತಮ ಕ್ರೀಡಾಪಟುವಾಗಲು ತರಬೇತುದಾರರ ಅವಶ್ಯಕತೆ +ಕ್ರೀಡಾಪಟುವಿನ ಯಶಸು ವಯಕ್ತಿಕ ಪ್ರತಿಭೆಯ ಮೇಲೆಹೆ +ನಿದ್ರಾಹೀನತೆ, ಒತ್ತಡವನ್ನು ತೆಗೆದು ಹಾಕುತ್ತದೆ ಅವಲಂಬಿತವಾಗಿರುತ್ತದೆ. +ಆರೋಗ್ಗದ ಸಮತೋಲನ ಕಾಯುಕೊಳಲುಶೆ ಜಿ ೪ಸಹಕಾರಿಹಹಗಿಕೆ ಕ್ರೀಡಾ ಸಾಮಗ್ರಿಗಳು ದುಬಾರಿಯಾಗಬಹುದು +ಒಟ್ಟಿನಲ್ಲಿ ಕ್ರೀಡೆಗಳು ಪರಂಪರೆಯ ಜೊತೆಗೆ ಸಾಗಿ ಬಂದಿದ್ದು, ಜಗತ್ತಿನ ತುಂಬ ವಿಸ್ತಾರಗೊಂಡಿವೆ. +ಆಯಾ ದೇಶಗಳು ಒಂದೊಂದುಕ್ರೀಡೆಗಳನ್ನು ಹೊಂದಿದ್ದು, ರಾಷ್ಟ್ರೀಯ ಕ್ರೀಡೆಯನ್ನಾಗಿ ಮಾಡಿ ಕೊಂಡಿವೆ. +ಆಧುನಿಕ ಜಗತ್ತಿನ ಭರಾಟೆ, ಮೊಬೈಲ್‌ ಆವಿಷ್ಕಾರ, ಆನ್ಕೆನ್‌ ಗೇಮಿಂಗ್‌ ಗಳ ಹಾವಳಿ ಮಧ್ಯೆಯೂ ಕೆಲಕ್ರೀಡೆಗಳು ತನ್ನದೇ ಪರಾಕಾಷ್ಠೆತಲುಪಿವೆ. +ಮಾನವನ ಹಾಗೂ ಒಂದು ಜನಾಂಗದ, ಊರಿನ, ದೇಶದ ಸಂಸ್ಕೃತಿಯ ಪ್ರತೀಕವಾಗಿಯೂ ಕ್ರೀಡೆಗಳು ಹೆಸರು ಗಳಿಸಿವೆ. +ಗಂಡು-ಹೆಣ್ಣಿನ ಸರ್ವತೋಮುಖ ಅಭಿವೃದ್ಧಿಗೆ ಮತ್ತು ಆರೋಗ್ಯಕರ ಜೀವನಕ್ಕೆ ಕ್ರೀಡೆಗಳು ಅಡಿಪಾಯ ಹಾಕಿ ಕೊಟ್ಟಿದ್ದು, ಪಾರಂಪರಿಕ ಆಟಗಳನ್ನು ಆಡುತ್ತ ಅವುಗಳ ಉಳಿವಿಗೆ ಎಲ್ಲರೂ ಶ್ರಮಿಸಬೇಕಿದೆ. + ಭಾರತೀಯ ಪುರಾತನ ಕ್ರೀಡೆ ಯಾವುದು? +ಚದುರಂಗವನ್ನು ಭಾರತದ ಪುರಾತನ ಕ್ರೀಡೆಗಳಲ್ಲಿ ಪ್ರಮುಖ ಕ್ರೀಡೆ ಎಂದು ಪರಿಗಣಿಸಲಾಗುತ್ತದೆ. +ಆದರೆ ನಮ್ಮ ಭಾರದದಲ್ಲಿ ಕಬಡ್ಡಿ ಖೋಖೋ ಕುಸ್ತಿ ಹೀಗೆ ಹಲವಾರು ಪುರಾತನ ಕ್ರೀಡಾಗಳಿವೆ. +ಭಾರತದ ರಾಷ್ಟೀಯ ಕ್ರೀಡೆ ಯಾವುದು? +ಭಾರತಕ್ಕೆ ರಾಷ್ಟೀಯ ಕ್ರೀಡೆ ಎಂದು ಯಾವುದು ಇಲ್ಲ. +ಹಾಕಿಯಲ್ಲಿ ಬಹು ಹಿಂದೆ ನಾವು ಉನ್ನತ ಮಟ್ಟದಲ್ಲಿ ಆಡುತ್ತಿದೆವು. +ಹಾಗಾಗಿ ಸ್ವಲ್ಪ ಜನ ಅದೇ ನಮ್ಮ ರಾಷ್ಟ್ರ ಕ್ರೀಡೆ ಎಂದು ಭಾವಿಸಿದ್ದಾರೆ. +ಆದರೆ 2012ರಲ್ಲಿ RTI ಮೂಲಕ ಕೇಳಿದ ಪ್ರಶ್ನೆಗೆ ಕೇಂದ್ರ ಸರ್ಕಾರದ ಮಂತ್ರಿ ಮಂಡಲ ಹೀಗೆ ಉತ್ತರಿಸಿದೆ . +“ಭಾರತಕ್ಕೆ ಯಾವುದೇ ರಾಷ್ಟ್ರ ಕ್ರೀಡೆ ಇಲ್ಲ. +ಯಾವುದೇ ಕ್ರೀಡೆಯನ್ನು ರಾಷ್ಟ್ರ ಕ್ರೀಡೆ ಎಂದು ಘೋಷಿಸಿಲ್ಲ". +ರಾಷ್ಟ್ರೀಯ ಕ್ರೀಡಾ ಸಂಸ್ಥೆ NIS ಎಲ್ಲಿ ಪ್ರಾರಂಭವಾಯಿತು? +ನೇತಾಜಿ ಸುಭಾಷ್‌ ನ್ಯಾಷನಲ್‌ ಇನ್ಸಿಟ್ಯೂಟ್‌ ಆಫ್‌ ಸ್ಪೋರ್ಟ್ಸ್‌ ಅನ್ನು National Institute of Sports ಎಂದು ಕರೆಯಲಾಗುತ್ತದೆ. +ಇದನ್ನು 1961 ಮೇ 7 ರಂದು ಪಂಜಾಬಿನ ಪಟಿಯಾಲಾದಲ್ಲಿ ಸ್ಥಾಪಿಸಲಾಯಿತು. +ಈ ಲೇಖನದ ಕುರಿತು ನಿಮ್ಮ ಸಲಹೆ, ಸೂಚನೆ ಅಥವಾ ದೂರಗಳಿದ್ದರೆ ದಯವಿಟ್ಟು comment ಮಾಡುವುದರ ಮೂಲಕ ತಿಳಿಸಿ. -- GitLab