diff --git "a/Data Collected/Kannada/MIT Manipal/Kannada-Scrapped-dta/Book6-\340\262\206\340\262\257\340\263\215\340\262\225\340\263\206_\340\262\256\340\262\276\340\262\241\340\262\277\340\262\246_\340\262\234\340\262\250\340\262\252\340\262\246_\340\262\225\340\262\245\340\263\206\340\262\227\340\262\263\340\263\201.txt" "b/Data Collected/Kannada/MIT Manipal/Kannada-Scrapped-dta/Book6-\340\262\206\340\262\257\340\263\215\340\262\225\340\263\206_\340\262\256\340\262\276\340\262\241\340\262\277\340\262\246_\340\262\234\340\262\250\340\262\252\340\262\246_\340\262\225\340\262\245\340\263\206\340\262\227\340\262\263\340\263\201.txt" new file mode 100644 index 0000000000000000000000000000000000000000..c0c6b5b21a76731015060eeede37956cdab19a07 --- /dev/null +++ "b/Data Collected/Kannada/MIT Manipal/Kannada-Scrapped-dta/Book6-\340\262\206\340\262\257\340\263\215\340\262\225\340\263\206_\340\262\256\340\262\276\340\262\241\340\262\277\340\262\246_\340\262\234\340\262\250\340\262\252\340\262\246_\340\262\225\340\262\245\340\263\206\340\262\227\340\262\263\340\263\201.txt" @@ -0,0 +1,6850 @@ +ಸುಮಾರು ಎರಡೂವರೆ ವರ್ಷದ ಹಿಂದೆ ಶ್ರೀಮತಿ ರೇಣುಕಾ ರಾಮಕೃಷ್ಣ ಭಟ್ಟ ಅವರು ನನಗೆ ಕರೆ ಮಾಡಿ, ತಮ್ಮ ಪರಿಚಯ ಮಾಡಿಕೊಂಡರು. +ನಾನು ಭಾರತವಾಣಿ ಬಹುಭಾಷಾ ಜ್ಞಾನಕೋಶ ಯೋಜನೆಯಲ್ಲಿ ಇರುವುದನ್ನು ತಿಳಿದುಕೊಂಡಿದ್ದ ಅವರು ತಮ್ಮ ತಂದೆ ದಿ.ಎಲ್‌ ಆರ್‌ ಹೆಗಡೆಯವರ ಅಪ್ರಕಟಿತ ಜಾನಪದ ಸಂಗ್ರಹಗಳ ಹಸ್ತಪ್ರತಿಗಳನ್ನು ಗಮನಿಸಬಹುದೇ ಎಂದು ಕೇಳಿದರು. +ನಾನು 1990-92ರ ಅವಧಿಯಲ್ಲಿ ಶಿರಸಿಯಲ್ಲಿದ್ದಾಗ ಒಂದೆರಡು ಸಲ ಶ್ರೀ ಎಲ್‌ ಆರ್‌ ಹೆಗಡೆಯವರನ್ನು ಬಸ್‌ ನಿಲ್ದಾಣದಲ್ಲಿ ಕಂಡಿದ್ದೆ. +ಮಾತನಾಡಿಸಲು ಧೈರ್ಯ ಇರದವನಾಗಿದ್ದೆ. +ಈಗ ಅವರ ಅಪ್ರಕಟಿತ ಸಂಗ್ರಹವೇ ಇದೆ ಎಂದು ತಿಳಿದಾಗ ಕುತೂಹಲ ಹೆಚ್ಚಾಯಿತು. +ಶ್ರೀಮತಿ ರೇಣುಕಾ ಭಟ್‌ ಅವರ ಮನೆಗೇ ಹೋದೆ. +ಅಲ್ಲಿರುವ ಅಪಾರ ಸಂಗ್ರಹವನ್ನು ನೋಡಿ ಅಚ್ಚರಿಯಾಯಿತು. +ಅದಾಗಲೇ ಶ್ರೀ ಎಲ್‌ ಆರ್‌ ಹೆಗಡೆಯವರು 83 ಪುಸ್ತಕಗಳನ್ನು ಪ್ರಕಟಿಸಿದ್ದವರು. +ಆದರೂ ಇಷ್ಟೆಲ್ಲ ಉಳಿದುಕೊಂಡಿದ್ದವು! +ಈಗ ಅವುಗಳಲ್ಲಿ ಆಯ್ದ ಸಂಗ್ರಹಗಳನ್ನು ಒಂದು ಸರಣಿಯಾಗಿ, ಮುಕ್ತ ಮಾಹಿತಿಯಾಗಿ ಪ್ರಕಟಿಸಲಾಗಿದೆ. +ಇದನ್ನು ಕ್ರಿಯೇಟಿವ್‌ ಕಾಮನ್ಸ್‌ ಹಕ್ಕಿನಡಿಯಲ್ಲಿ ಪ್ರಕಟಿಸಿರುವುದರಿಂದ ಇವುಗಳ ಮುದ್ರಿತ ಪ್ರತಿಗಳನ್ನು ಯಾವುದೇ ಆಸಕ್ತರು ಯಾವ ಅನುಮತಿಯೂ ಇಲ್ಲದೆ, ಇದ್ದ ಹಾಗೆಯೇ ಮುದ್ರಿಸಬಹುದು! +ಆನ್‌ಲೈನ್‌ನಲ್ಲಿ ಕೇಂದ್ರ ಸರ್ಕಾರದ `ಭಾರತವಾಣಿ’ ಯೋಜನೆ, ರಾಜ್ಯ ಸರ್ಕಾರದ `ಕಣಜ’ ಯೋಜನೆಗೆ, ಇನ್ನಾವುದೇ ಮುಕ್ತ ಮಾಹಿತಿಯ ಜಾಲತಾಣಕ್ಕೆ ಉಚಿತವಾಗಿ ಈ ಪ್ರತಿಗಳನ್ನು ನೀಡಲಾಗುತ್ತಿದೆ. +ಜಾನಪದ ಸಾಹಿತ್ಯದ ಮೌಲ್ಯಮಾಪನ ಆಗುವ ಮಾತಿರಲಿ, ಇದ್ದುದನ್ನು ಹೇಗಾದರೂ ಮಾಡಿ ಉಳಿಸಿಕೊಳ್ಳುವ ಕಾಲ ಈಗ ಎದುರಾಗಿದೆ. +ಆಧುನಿಕತೆ, ನಗರೀಕರಣದ ಪ್ರಭಾವದಿಂದ ಭಾಷೆ - ಲಿಪಿ - ಪರಂಪರಾಗತ ಅರಿವು ಎಲ್ಲವೂ ಕಣ್ಮರೆಯಾಗುತ್ತಿವೆ. +ಇಂತಹ ಸಂದರ್ಭದಲ್ಲಿ ಸಿಕ್ಕಿದ್ದನ್ನು ಉಳಿಸಿಕೊಂಡು ಹೋಗುವ ತರಾತುರಿಯಲ್ಲಿ ಇದನ್ನು ಪ್ರಕಟಿಸಲಾಗಿದೆ ಎಂಬುದನ್ನು ಓದುಗರು ಗಮನಿಸಬೇಕಿದೆ. +ಈ ಪುಸ್ತಕದ ಅಕ್ಷರಜೋಡಣೆಗೆ ಸಹಕರಿಸಿದ,ಮುಖಪುಟ ರಚಿಸಿಕೊಟ್ಟ ಫೇಸ್‌ಬುಕ್‌ ಮಿತ್ರಲೋಕಕ್ಕೆ ಮಿತ್ರಮಾಧ್ಯಮದ ಅನಂತ ವಂದನೆಗಳು. +ಡಿಜಿಟಲ್‌ ಜನಪದವು ಪರಂಪರಾಗತ ಜನಪದವನ್ನು ಉಳಿಸಿಕೊಳ್ಳಲು ಮುಂದಾಗಿರುವುದು, ಅದರಲ್ಲೂ ಹಲವು ಯುವ ವಯಸ್ಕರೇ ಈ ಕೆಲಸ ಮಾಡಿರುವುದು ಕೊಂಚ ಸಮಾಧಾನದ ಸಂಗತಿ. +ಇಂತಹ ಜೀವನ್ಮುಖಿ ಯುವಸಮುದಾಯ ವಿಸ್ತಾರವಾಗಲಿ ಎಂದು ಹಾರೈಸುತ್ತೇವೆ. +ಮುಕ್ತಮಾಹಿತಿಗೆ ಪುಟ್ಟ ಹೆಜ್ಜೆ ಇಡುವ ಮಿತ್ರಮಾಧ್ಯಮದ ಘೋಷವಾಕ್ಯವನ್ನು ಬೆಂಬಲಿಸುವ ಎಲ್ಲರಿಗೂ ವಂದನೆಗಳು. +‘ಶಪಥ’ ಎಂಬ ಕಥೆಯಲ್ಲಿ ಬೇರೆ ಎರಡು-ಮೂರು ಕಥೆಗಳ ಆಶಯಗಳನ್ನು ಒಂದೆಡೆಗೆ ಸೇರಿಸಿದ್ದುಂಟು. +ಸಂತತಿಯ ಅಧಿಕಾರವು ಗಂಡಿಗೇ ಹೊರತು ಹೆಣ್ಣಿಗಿಲ್ಲ ಎಂಬ ತೀರ್ಮಾನವನ್ನು ಅರಸನು ನೀಡಿದುದು ಮುಖ್ಯ ಆಶಯವಾಗಿದೆ. +ಇದು ದಿ.ನಾರಾಯಣ ಗೊಂಡರು ಹೇಳಿದ- ‘ಸುರತಾಳ ದೇವಿಯನ್ನು ಗೆದ್ದಿದ್ದು’ ಎಂಬ ಕಥೆಯ ಪ್ರಾರಂಭವನ್ನು ಹೋಲುತ್ತದೆ. +ಅದರಲ್ಲಿ ಹುರ್ಸಾನ್ ಹಕ್ಕಿ ಗಂಡು-ಹೆಣ್ಣು. +ಅಲ್ಲಿ ಕರಡದ ಬೇಣಕ್ಕೆ ಬೆಂಕಿ ಬಿದ್ದಾಗ ಗಂಡು ಹಕ್ಕಿ ಎತ್ತಿಕೊಳ್ಳದೆ ಮರಿಯನ್ನು ಹೆಣ್ಣು ಎತ್ತಿಕೊಂಡು ಹೋಗಿ ಕಾಪಾಡಿದ್ದು, ‘ಮರಿ ಯಾರ ಹಕ್ಕು’ ಎಂದು ಜಗಳ – ರಾಜನ ಮಗನು ಗಂಡು ಹಕ್ಕಿಯ ಪರವಾಗಿಯೇ ತೀರ್ಪನ್ನು ಕೊಟ್ಟಿದ್ದು. +ಇಲ್ಲಿ, ‘ಕುದುರೆ ಮರಿ - ಗಂಡು ಕುದುರೆ ಸಾಕಿದವರಿಗೆ’ ಎಂದು ಪ್ರಧಾನಿಯ ಮಗಳು ಹೇಳಿ; ಕುದುರೆ ಮರಿಯನ್ನು ಕೊಡಲಿಲ್ಲ. +ಹಿಂದಿನ ಹಕ್ಕಿ ಜಗಳದಲ್ಲಿ ‘ಗಂಡಿಗೇ ಮರಿಯ ಹಕ್ಕು’ ಎಂಬ ಲೇಖಿಯನ್ನು ಪ್ರಧಾನಿಯ ಮಗಳು ತೋರಿಸಿದ್ದು, ರಾಜನ ಮಗನ ಶಪಥಕ್ಕೆ ಕಾರಣವಾಯಿತು. +ಈ ಕಥೆಯಲ್ಲಿ ಅವನನ್ನು ಮದುವೆಯಾಗಬೇಕಾದ ಪ್ರಧಾನಿಯ ಮಗಳು ಸುರತಾಳ ದೇವಿಯನ್ನು ಮೂರು ಮಾತಾಡಿಸಿ ಲಗ್ನವಾದರೆ ದೊಡ್ಡ ಪರಾಕ್ರಮ ಎಂದು ಆಹ್ವಾನ ನೀಡಿದ್ದು ಮಹತ್ವದ್ದು. +‘ಶಪಥ’ ಕಥೆಯಲ್ಲಿ ಹೆಣ್ಣು ಹಕ್ಕಿ, ಗಂಡು ಹಕ್ಕಿ ಜಗಳ ಮಾತ್ರ; +‘ಸುರತಾಳ ದೇವಿಯನ್ನು ಗೆದ್ದಿದ್ದು’ ಕಥೆಯಲ್ಲಿ ಹೊಡೆದಾಟವಾಗಿ ಗಂಡು ಹಕ್ಕಿ ಸೋತು – ರಾಜರ ಹತ್ತಿರ ಪಂಚಾಯತಿ ಮಾಡಿಸಲು ಹೋಯಿತು. +‘ಶಪಥ’ದಲ್ಲಿ ಸಂತಾನದ ಕುದುರೆಮರಿ ಹಕ್ಕು ‘ಗಂಡಿಗೇ. . . ’ ಎಂದುದು, ಎರಡೂ ಕಥೆಗಳಲ್ಲಿ ಲೇಖಿ ಇದ್ದದ್ದು ಮುಖ್ಯ- ಸುರತಾಳ ದೇವಿ ಕಥೆಯಲ್ಲಿ ಪ್ರಧಾನಿಯ ಮಗಳೇ ಲೇಖಿ ಬರೆದಿಟ್ಟುಕೊಂಡಿದ್ದಿದೆ. +ಪಂಚಾಯತಿಯಲ್ಲಿ ‘ಶಪಥ’ ಕಥೆಯಲ್ಲೇ ರಾಜ ತಾಮ್ರದ ತಗಡಿನಲ್ಲಿ ಬರೆದಿಟ್ಟದ್ದು ಎಂದಿರುವುದೇ ಹೆಚ್ಚು. +‘ಶಪಥ’ ಕಥೆಯಲ್ಲಿ ರಾಜ ಪ್ರಧಾನಿಗೆ ಕೋಣನ ಬೆಣ್ಣೆ ತರಲು ಹೇಳಿದ್ದಿದೆ. +ಸುರತಾಳದೇವಿ ಕಥೆಯಲ್ಲಿ ಇಲ್ಲದ ಒಂದು ಸುಂದರ ಆಶಯವು ‘ಶಪಥ’ ಕಥೆಯಲ್ಲಿದೆ. +ಅದೆಂದರೆ, ಬಟ್ಟೆ ತಕ್ಕೊಂಡು ಹೋಗಿ ಕೆರೆಯಲ್ಲಿ ತೊಳೆಯ ಹತ್ತಿದಾಗ ರಾಜ ಬಂದು-- ‘ಇಷ್ಟು ಮುಂಚೆ ಯಾಕೆ ಕೆರೆಯಲ್ಲಿ ತೊಳೆದೆ’ ಎಂದು ಕೇಳಿದಾಗ, ‘ತಂದೆ ಹಡೆದಿದ್ಧಾನೆ, ಅಪ್ಪನ ವಸ್ತು ತೊಳೆದುಕೊಂಡು ಹೋಗಲು ಬಂದೆ’ ಎಂಬ ಚಮತ್ಕಾರದ ಸನ್ನಿವೇಶವಿದೆ. +‘ಕೋಣ ಕರು ಹಾಕುವುದು ಹೌದೋ – ಕೋಣದ ಹಾಲು ಕರೆದು ಮಜ್ಜಿಗೆ ಮಾಡಿ ಬೆಣ್ಣೆ ಬರುವುದು ಹೌದೋ?’ ಎಂದು ಕೇಳಿ ರಾಜರಿಗೆ ಮುಷ್ಕರ ತಂದು ಹಾಕಿದ್ದು; + ‘ಮೇಲ್ತರಗತಿಯವನು ತನ್ನನ್ನು ಮದುವೆಯಾದರೆ ಮಗನ ಕೈಲೇ ನಿಮ್ಮ ರಟ್ಟೆಬಿಗಿಸುವೆ’ ಎಂದು ‘ಶಪಥ’ದಲ್ಲಿ ಮಂತ್ರಿಯ ಮಗಳು ಹೇಳುತ್ತಾಳೆ. +‘ಶಪಥ’ದಲ್ಲಿ ಮುಂಗುಸಿಯ ಸಹಾಯ ನೆಲಮಾಳಿಗೆಯಲ್ಲಿಟ್ಟಾಗ ಸುರಂಗ ತೋಡಲು ಉಂಟು. +ಸುರತಾಳದೇವಿ ಕಥೆಯಲ್ಲಿ ಎರಡು ಇಲಿ ಬಳುವಳಿ ಲೆಕ್ಕದಲ್ಲಿ ಪ್ರಧಾನಿ ಮಗಳು ಕೇಳಿ ಪಡೆದದ್ದು ಉಂಟು. +ಸುರತಾಳದೇವಿ ಪ್ರಸಿದ್ಧ ಕಥೆಯಲ್ಲಿರುವಂತೆ- ಡೊಂಬರ ಸಂಗಡ ಸೇರಿ ಪ್ರಧಾನಿ ಮಗಳು, ರಾಜ ಮಗನನ್ನು ಮೋಹ ಮಾಡಲು ಉಂಗುರ ಪಡೆದು, ದೇಹಸಂಪರ್ಕ ಪಡೆದು ಹುಟ್ಟಿದ್ದು, ಶಪಥ ಪೂರೈಸಿದ್ದು- ಸುರತಾಳ ದೇವಿ ಕಥೆಯಲ್ಲಿ ಈ ವಿಷಯ ಇಲ್ಲವೇ ಇಲ್ಲ. +ಗಂಡನು ದಿಲ್ಲಿಯ ಸುರತಾಳ ದೇವಿಯನ್ನು ಮೂರೇ ಮೂರು ಮಾತಾಡುವಂತೆ ಮಾಡಿ, ‘ಲಗ್ನವಾಗಲಿ’ ಎಂದು ಆಹ್ವಾನ ನೀಡಿದ್ದು, ‘ಶಪಥ’ದಲ್ಲಿ ದೀರ್ಘಕಾಲ ನೆಲಮಾಳಿಗೆಯಲ್ಲಿ ಇರದೆ, ಬೇಗ ಪಾರಾಗುತ್ತಾಳೆ. +ಸುರತಾಳ ದೇವಿ ಕಥೆಯಲ್ಲಿ 12 ವರ್ಷ ನೆಲಮಾಳಿಗೆಯಲ್ಲಿ ಹಾಕಿರುವ ದೀರ್ಘ ಶಿಕ್ಷೆಯಿದೆ. +ಗಂಡ ದಿಲ್ಲಿಗೆ ಹೋಗಿ ಸೋತು; ಅವಳ ಸೇವೆಯಲ್ಲಿದ್ದುದು ತಿಳಿದ ಹೆಂಡತಿ 12 ವರ್ಷ ಕಳೆವ ವೇಳೆಯಲ್ಲಿ ಹೊರಬಿದ್ದು, ಗಂಡನನ್ನು ಬಿಡಿಸಿಕೊಂಡು ಬರಲು ಹೋದುದಿದೆ. +ಈ ದೀರ್ಘಶಿಕ್ಷೆಯನ್ನು ಸಹನೆಯಿಂದ ಇದಿರಿಸಿದ ಸ್ಥೈರ್ಯವು ಬಹುಶಃ ಭಾರತೀಯ (ಹಿಂದೂ) ನಾರಿಯಿಂದಲೇ ಸಾಧ್ಯ (ಅಪವಾದ ಸ್ವರೂಪ ಉದಾಹರಣೆಯೆಂದರೆ-- ಎರಡನೇ ಮಹಾಯುದ್ಧದಲ್ಲಿ ಮಿತ್ರರಾಷ್ಟ್ರ ಸೈನ್ಯಕ್ಕೆ ಗಂಡನು ಸೆರೆಸಿಕ್ಕು, 9 ವರ್ಷಗಳ ನಂತರ ಬಿಡುಗಡೆ ಹೊಂದಿ ಬಂದಾಗ, ಅವನಿಂದ ಹುಟ್ಟಿದ ಮಗಳೊಂದಿಗೆ ಅವನನ್ನು ಎದುರುಗೊಳ್ಳಲು ಬಂದ ಜರ್ಮನ್ ನಾರಿಯ ವಾಸ್ತವಿಕ ಕಥೆ. +ಇಂಥ ಅಚಲ ಪ್ರೇಮವು ಐರೋಪ್ಯರಲ್ಲಿ ಅಪೂರ್ವವೇ ಸರಿ). +ಮುಂದೆ ದಿಲ್ಲಿಗೆ ಹೊರಡುವ ದಾರಿಯಲ್ಲಿ ಒಂದು ಕಾಡಿನಲ್ಲಿ ರಾತ್ರಿ ಕಳೆವ ಸಂದರ್ಭವಿದೆ. +ಈ ಕಥೆಯಲ್ಲಿ ಮಾತ್ರವೇ ಇಂಥ ಅದ್ಭುತ ದೃಶ್ಯ ಯೋಜನೆಯನ್ನು ಕಾಣಬಹುದು. +ಇದರಿಂದಾಗಿ ಮುಂದೆ ಮೂರು ಕಥೆಗಳಲ್ಲಿ ನಿರೂಪಕರು ಒಂದನ್ನು ಮರೆತು, ಇನ್ನೊಂದು ಪ್ರಸಿದ್ಧವಾದ ವಿಷದ ಮಾವಿನಹಣ್ಣಿನ ಕಥೆಯೇ ಎಂದು ನಾನು ಬರೆದುಕೊಳ್ಳದಿದ್ದರೂ ಈ ಕಥೆಗೆ ವಿಶೇಷ ಮಹತ್ವ ಬರುತ್ತದೆ. +ಸಾವಿರಾರು ಭೂತಗಳು ಬಂದು ಅವಳ ಹತ್ತಿರ ಕಟ್ಟೆಯನ್ನು ಬಿಟ್ಟುಕೊಡು ತಮ್ಮ ಪಂಚಾಯತಿ ಸಭೆಗೆ ಎನ್ನುವುದು; +ಈ ಭೂತಗಳಿಗೆ ಕಟ್ಟೆಯನ್ನು ಬಿಟ್ಟು ಕೊಡುವಾಗ ಅವಳು ಸುರತಾಳದೇವಿಯನ್ನು ಮಾತಾಡಿಸಿ ಗೆಲ್ಲಲು ಸಹಾಯ ಕೇಳಿ, ಅವು ಒಪ್ಪಿದ್ದು ಮಹತ್ವದ ಸಂಗತಿ. +ಅವು ಮಂಚ, ಹಾಸಿಗೆ, ಕುದುರೆಮೊಗದಲ್ಲಿ ಸೇರಿ ಸಮಸ್ಯಾತ್ಮಕ ಕಥೆ ಹೇಳಿ ಅವಳು ಮಾತಾಡುವಂತೆ ಮಾಡಿದ ಉಪಾಯ ಬಹಳ ಚಮತ್ಕಾರವಾದುದು. +ಅವು ಒಂದೊಂದು ಈ ದೊಡ್ಡ ಬುಕ್ಕಿ ತನ್ನ ಮೇಲೆ ಕೂತಿದೆ ಎಂದು (ಮಂಚ ಹಾಸಿಗೆ) ಹೇಳುವುದು; +ಸುರತಾಳದೇವಿ ಏಳುವದು ಸ್ವಾರಸ್ಯವಾದ ಆಶಯಗಳಾಗಿವೆ. +ಮೊದಲಿನ ಕಥೆಯು ನಮ್ಮ ಅನೇಕ ಕಥೆಗಳಲ್ಲಿರುವಂತೆ ಬಡಗಿ ಕಟ್ಟಿಗೆಯಿಂದ ಗೊಂಬೆ ಮಾಡುವುದು, ಗುಡಿಗಾರ ಬಣ್ಣ ತೆಗೆಯುವುದು, ಜವಳಿಯವ ಸೀರೆ, ಸೊನಗಾರ ಆಭರಣ ಹಾಕುವುದು. . . ಇಂಥವು ಬೇರೆ ಕಥೆಗಳಲ್ಲೂ ಉಂಟು. +ಆದರೆ, ಬಳೆಗಾರನು ಬಳೆ ಹಾಕುವುದು ಇಲ್ಲಿ ಹೆಚ್ಚಿನದು. +ಗೊಂಬೆಗೆ ಜೀವ ತರಿಸುವವ ಬೇರೆ ಕಡೆ ಮಂತ್ರವಾದಿ-- ಆದರೆ, ಇಲ್ಲಿ ಜೋಯಿಸ. +ಇವನು ಮಂತ್ರಶಕ್ತಿಯಿದ್ದವನೇ. +ಇಲ್ಲಿ ಯಾರಿಗೆ ಸಲ್ಲುವವಳು ಎಂದು ಕೇಳಿದಾಗ, ‘ಮಂಗಲಸೂತ್ರ ಹಾಕಿದ ಸೊನಗಾರನಿಗೆ’ ಎಂದು ಹೇಳಿ ಸುರತಾಳದೇವಿ ಒಂದು ಮಾತು ಆಡಿದ್ದಳು. +ಇಲ್ಲಿ ಗೊಂಡರ ಭಾಷಾಶೈಲಿಯ ವೈಶಿಷ್ಟ್ಯದ ಜತೆಗೆ ಪ್ರಾರಂಭದಿಂದಲೂ ಸಂಭಾಷಣೆಯ ಮಾತುಗಳು ಕಲಾತ್ಮಕವಾಗಿ ನಿರೂಪಿತವಾಗಿವೆ. +ಎರಡನೇ ಕಥೆ ವಿಷದ ಮಾವಿನ ಹಣ್ಣಿನದು. +ಹಾಸಿಗೆಯಲ್ಲಿ ಸೇರಿ ---------------------------------ಇವೇ ಮಾಸ್ತರರ ಕಥೆ ಎತ್ತುಗಡೆ ಮಾಡಿದ್ದು ಮುಂದುವರಿಯಲಿಲ್ಲ. +ಸಮ-------------ಸುರತಾಳದೇವಿ ಮಾತಾಡಿ ಸೋತುಬಿಟ್ಟಳು. +ಗಂಡು ವೇಷದಿಂದ ಬಂದು ತನ್ನನ್ನು ಸೋಲಿಸಿದ ಪ್ರಧಾನಿಯ ಮಗಳನ್ನು ಸುರತಾಳದೇವಿ ಮೋಹಿಸಿದಳು. +ಸುರತಾಳದೇವಿ ಮೋಹ ಮಾಡಿದ್ದರಿಂದ ಅವಳು ಸುರಂಗಕ್ಕೆ ಹೋಗಿದ್ದು, ಬೇಗ ಬಾರದುದಕ್ಕೆ ಇವಳಿಗೆ ದುಃಖವಾದುದು ಸಹಜ. +‘ಶಪಥ’-- ಈ ಕಥೆಯಲ್ಲಿನ ದೇಸಿಯ ಮಾತುಗಳು ಹೆಚ್ಚಿಲ್ಲ, ಕಮ್ಮಿಯಿಲ್ಲ. +ಸೊಗಸಾದ ಸಣ್ಣ ಸಣ್ಣ ವಾಕ್ಯಗಳಿಂದ ಕೂಡಿವೆ. +ಅಪ್ಪನೇ ಹಡೆದ ಎಂದು ಹೇಳಿ ರಾಜನ ಮಗನನ್ನು ಸೋಲಿಸುವ ಚಮತ್ಕಾರದ ದೃಶ್ಯವಂತೂ ಬಹಳ ಶ್ರೇಷ್ಠವಾಗಿದೆ. +ಮಗನೇಕೆ ರಾಜ ಕಳ್ಳನಾದ ಎಂಬ ಬಣ್ಣನೆ ಬೇರೆಡೆಗಳಂತೆ ವಿಸ್ತೃತವಾಗಿಲ್ಲ. +ಆಚಾರಿ ಕಳ್ಳನ ಹಿಡಿಯಲು ಮಾಡಿದ, ಕೇಳಿದಲ್ಲಿ ಓಡಿ ಬಂದ ರಾಜ ಸಿಕ್ಕಿಹಾಕಿಕೊಳ್ಳುವದು, ಮಗ ತಾಯಿಯ ಪ್ರತಿಜ್ಞೆ ಪೂರೈಸಿದ್ದು ಸ್ವಲ್ಪದರಲ್ಲಿ. +ಆದರೆ, ಅವಶ್ಯವಿರುವ ವಿವರಗಳಿಂದ ಮುಕ್ತಾಯ ಪಡೆಯುತ್ತದೆ. +ಸುರತಾಳದೇವಿ ಕಥೆಯಲ್ಲಿಯೂ ವೈಶಿಷ್ಟ್ಯಪೂರ್ಣ ದೇಸಿ ಮಾತು ಇದ್ದರೂ ಸಮಸ್ಯೆಯೊಡ್ಡುವ ಕಥೆಗಳಲ್ಲಿ ಹೊಸತನವಿರದುದು ಒಂದು ಮತ್ತು ದೊಡ್ಡ ಲೋಪವಾದರೂ ಹೇಳಿದ್ದ ಸರಣಿಯು ಉತ್ತಮವೇ ಇದೆ. +ಸುರತಾಳದೇವಿಯ ಕಥೆಯ ಪ್ರಧಾನಿಯ ಮಗಳ ಪಾತ್ರರಚನೆಯು ಭವ್ಯತೆಯ ಮಟ್ಟವನ್ನು ತಲುಪಿರುತ್ತದೆ. +ಸಂಭಾಷಣೆಗಳಲ್ಲಿ ಪ್ರಧಾನಿಯ ಹಾಗೂ ಅವಳ ಸಂಭಾಷಣೆಗಳು ಮೇಲ್ತರಗತಿಯ ಕಥಾನಿರೂಪಣೆಯನ್ನು ತೋರುತ್ತದೆ. +ಭೂತಗಳು ಮಂಚ, ಹಾಸಿಗೆ, ಕುದುರೆಮೊಗಗಳಲ್ಲಿ ಹೊಕ್ಕು ಕಥೆ ಹೇಳುವ ಆಶಯಗಳು ‘ವಿಕ್ರಮಾದಿತ್ಯ ಮತ್ತು ಬೇತಾಳನ ಕಥೆ’ಯ ನೆನಪನ್ನು ತರುತ್ತದೆ. +ಆದರೆ, ಇಲ್ಲಿನ ಸಂಭಾಷಣೆಗಳಲ್ಲಿ ಭೂತಗಳು ಆಡುವ ದೊಡ್ಡ ಬುಕ್ಕಿ(ಬುಕ್ಳು) ಎಂಬುದು ನಮ್ಮ ಕಡೆಯ ದೇಸಿ ಮಾತು. +ಯೋನಿ ಎಂಬ ಅರ್ಥ ಇದಕ್ಕಿದೆ ಎಂದು ಛೇಡಿಸುವುದಂತೂ ಬಹಳ ಸ್ವಾರಸ್ಯವಾಗಿ ಸುರತಾಳದೇವಿ ಅವುಗಳಲ್ಲಿ ಕೂತಲ್ಲಿಂದ ಏಳಲೇಬೇಕಾದ ಒತ್ತಡ ಪರಿಣಾಮ ತರುತ್ತವೆ. +‘ಜೀವ ತಳೆದ ಗೊಂಬೆ ಯಾರ ಹೆಂಡತಿ ಎಂದು ನಿಕ್ಕಿಯಾಗಬೇಕು’ ಎಂದು ಹಾಸಿಗೆ ಎದ್ದು ಮಂಚಕ್ಕೆ ಬಡಿಯುತ್ತದೆ; ಮಂಚ ಹಾಸಿಗೆಗೆ ಬಡಿಯುತ್ತದೆ. +ಮಾಳಿಗೆಯೆಲ್ಲಾ ಗಡಗುಟ್ಟಿ ಹರಿದು ಬೀಳುವ ಪರಿಸ್ಥಿತಿ. . . ಎಂಬ ಬಣ್ಣನೆ ಯಾಕೆ ಅಂದರೆ-- ಸುರತಾಳದೇವಿಯು ಹೆದರಿಕೊಂಡು ಮಾತಾಡಲೇಬೇಕಾದ ಒತ್ತಡ ತರುವ ಉದ್ದೇಶದಿಂದ ಈ ಗಡಬಡೆ. +ಸುರತಾಳದೇವಿಗೆ ಸಮಾಧಾನ ಮಾಡಿ, ‘ತಾನೇ ನಿನ್ನನ್ನು ಗಂಡು ವೇಷದಿಂದ ಬಂದು ಗೆದ್ದೆ. +ನೀನು ನನ್ನ ಗಂಡನನ್ನು ಮದುವೆಯಾಗು’ ಎಂದು ಅಸಾಧಾರಣ ರೀತಿಯ ಔದಾರ್ಯ ತೋರಿದಳು. +ಇಕ್ರಾಮತಿ ರಾಜ:ಈ ಕಥೆಯಲ್ಲಿನ ಚಿನ್ನದ ಕೂದಲಿನ ಹುಡುಗಿಯನ್ನು ಮುದುಕಿಯು ಬೇರೆ ರಾಜಕುಮಾರನ ಸಲುವಾಗಿ ಅಪಹರಿಸಿಕೊಂಡು ಹೋಗುವ ಹಾಗೂ ಬೇರೆ ಬೇರೆ ಗೀತಗಳಲ್ಲಿಯೂ, ಕಥೆಗಳಲ್ಲಿಯೂ ಬರುವಂಥ ಪ್ರಸಿದ್ದ ಕಥೆಯನ್ನೇ ಒಳಗೊಂಡಿದೆ. +ನಮ್ಮ ‘ಅಂಬರದ ರಥ’ ಕಥೆಯಲ್ಲಿ ಮುದುಕಿಯನ್ನೂ, ರಾಜಕುಮಾರನನ್ನೂ, ಮದುವೆ ಸಾಗಿಸಲು ಬಂದ ಪುರೋಹಿತನನ್ನೂ ಇಲ್ಲಿನ ‘ಹಾರುವ ಮಂಟಪ’ದಲ್ಲಿ ಕೂಡ್ರಿಸಿ, ಕೆಳಗೆ ಒಗೆದು ಕೊಲ್ಲುವಂತೆ ಅಂಬರದಲ್ಲಿ ಹಾರುವ ರಥದಲ್ಲಿ ಕೂಡ್ರಿಸಿಕೊಂಡು ಕೆಳಗೆ ನೂಕುವುದು ಉಂಟು. +‘ನಾಮಧಾರಿ ಕಥೆಗಳು’ ಗ್ರಂಥದ ‘ಹಾರುವ ಮಂಟಪ’ ಕಥೆಯಲ್ಲೂ ಇಂಥದೇ ವಸ್ತು ಮತ್ತು ರಚನೆ ಕಂಡುಬರುತ್ತದೆ. +ಗೊಂಡರ ಪದಗಳಲ್ಲಿ ಬರುವ ‘ಇಕ್ರಾಮತಿ ರಾಜ’ ಕಥನಗೀತವು ಈ ಪ್ರಸಿದ್ಧ ಕಥೆಯಿಂದಲೇ ರೂಪುಗೊಂಡಿದ್ದುದಾಗಿದ್ದು, ಜೋಗಿಯರು ಹೇಳುತ್ತಿದ್ದ ಕಥನದಿಂದ ಪ್ರೇರಿತವಾಗಿದ್ದೀತು. +ಇದು ‘ಗೊಂಡರ ಪದಗಳು’ ಗ್ರಂಥದ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಕಟಣೆ, 1977ರಲ್ಲಿ ಪ್ರಥಮ ಮುದ್ರಣವಾದುದು, ಪುಟ 154-158. + ‘ಸೋಮಚಕ್ರವರ್ತಿ-ಭೀಮಚಕ್ರವರ್ತಿ’ ಕಥನಗೀತವನ್ನು ಕೊನೆಯಲ್ಲಿ ಸ್ವಲ್ಪಮಟ್ಟಿಗೆ ಹೋಲುತ್ತದೆ. +‘ತಿಮ್ಮಕ್ಕನ ಪದಗಳು’ ಗ್ರಂಥದ ‘ರಾಮಸ್ವಾಮಿಯ ಮಡದಿ’ ಎಂಬ ಕಥನಗೀತದ ಹೋಲಿಕೆಯೂ ಇದೆ. +ಇನ್ನೂ ಬೇರೆ ಪಾಠಗಳಲ್ಲಿಯೂ ಚಿನ್ನದ ಕೂದಲಿನ ಹೆಣ್ಣನ್ನು ಅಪಹರಿಸುವ ಕಥಾನಕವಿರುತ್ತದೆ. +ಕಬ್ಬೆಯ ತಿಮ್ಮಯ್ಯ ಸೋಮಯ್ಯ ಗೊಂಡ ಹೇಳಿದ್ದ ‘ಇಕ್ರಾಮತಿ ರಾಜನ ಪದ’ ಬಹಳ ಸೊಗಸಾಗಿದೆ. +ಪ್ರಾರಂಭದಲ್ಲಿ ಮೂವರು ಗೆಳೆಯರ ವಿಷಯ ಹೆಚ್ಚಿಲ್ಲ. +ಆದರೆ, ಇಕ್ರಾಮತಿ ದೊರೆ ಮತ್ತು ಹೆರಿದಿಂಡಿ ರಾಕ್ಷಸಿ ಇವರಿಬ್ಬರ ಕುಸ್ತಿ ಹೋರಾಟವನ್ನು ಬಹಳ ಸ್ವಾರಸ್ಯವಾಗಿ ಬಣ್ಣಿಸಲಾಗಿದೆ. +ಅದರಂತೆ ಅವಳ ಮಗಳು (ಸಿಂಗರ ದೇವಿ) ಮತ್ತು ಇಕ್ರಾಮತಿ ಇವರಿಬ್ಬರ ಸಂಭಾಷಣೆ ವಿಶೇಷ ಕಲಾತ್ಮಕವಾಗಿದೆ. +ಮೊದಲು ಆಕೆ, ‘ತಾಯನ್ನು ಕೊಂದವನನ್ನು ತಿನ್ನುವೆ’ ಎಂದು ದುಃಖದಿಂದ ಹೇಳುವುದು ತುಂಬ ಸಹಜವಾದ ಭಾವವಾಗಿದೆ. +ಇಕ್ರಾಮತಿಯು ತಾಯನ್ನು ಕೊಲ್ಲಲು ಸಾಧ್ಯವೇ ಇಲ್ಲ ಎಂದವಳು, ಹೆರಿದಿಂಡಿಯ ಕೊರಳ ಪದಕ ನೋಡಿ ನಂಬುತ್ತಾಳೆ ಮತ್ತು ಅವನನ್ನು ಮದುವೆಯಾಗುತ್ತಾಳೆ. +ಇಲ್ಲಿನ ನಮ್ಮ ನಿರೂಪಕರ ನಿರೂಪಣೆಯಲ್ಲಿ ನಾಲ್ವರು ಗಂಧದ ವನದಲ್ಲಿ ಮಲಗಿ ಮೂವರು ಗೆಳೆಯರಾದ, ಅಲ್ಲಿ ದೊಡ್ಡ ಬೆಂಕಿ ಮಾಡಿಕೊಂಡು ಒಬ್ಬೊಬ್ಬ ಕಾಯಬೇಕೆಂಬ ವಿಷಯ ಚೆನ್ನಾಗಿ ಬಂದಿದೆ. +ಈ ವಿಷಯವನ್ನು ಉಳಿದ ಕಡೆ ಒಳ್ಳೇ ಸುಂದರವಾಗಿ ಕಥೆ ಬೆಳೆಯಿಸಿದುದನ್ನು ಮೆಚ್ಚಬಹುದು. +ಗಂಧದ ಚಕ್ಕೆಯ ಬೆಂಕಿಯಿಂದ ರಾಕ್ಷಸಿ ಇವರ ಇರವನ್ನರಿತು ಬಂದುದು ವಿಶೇಷವಾಗಿ ಮೆಚ್ಚುವಂಥದು. +ರಾಕ್ಷಸಿಯೊಡನೆ ಹೋರಾಟ ಇದೆ. +ಆದರೆ, ಅವಳು ಬರೇ ಬಾಣ ಹೊಡೆದು ಕೊಂದ ಎಂದು ಮಾತ್ರ ಇದೆ. +ಕರಿಮಣಿಯನ್ನು ತೆಗೆದುಕೊಂಡು ಟೊಂಕಕ್ಕೆ ಸಿಕ್ಕಿಸಿದ, ಅದು ಅವನನ್ನು ಅವಳ ಮಗಳ ಬಳಿಗೆ ಕರೆತಂದಿತು ಎಂಬುದು ಚಮತ್ಕಾರವಾಗಿದೆ. +ಮೂವರೂ ಸತ್ತು ಬಿದ್ದಿದ್ದ ರಾಕ್ಷಸಿಯನ್ನು ನೋಡಿ-- ತನ್ನ ರಾಜನನ್ನು ಕೊಂದು ತಿಂದು ಮಲಗಿದ್ದಾಳೆ ಎಂದು ಭಾವಿಸಿ ಕುದುರೆ ಹತ್ತಿ ಓಡಿ. +ಬಟ್ಟೆ ಸುಟ್ಟ ಭಸ್ಮ ಹಚ್ಚಿಕೊಂಡು, ‘ಜೈ ಸೀತಾರಾಮ’ ಎಂದು ಹೇಳುತ್ತ ಊರು ಅರಸಿ ಬಂದುದು ಸ್ವಾರಸ್ಯವಾಗಿದೆ. +ರಾಜನ ಚಿನ್ನದ ಕೂದಲಿನ ಮಡದಿ ಸಮುದ್ರದಲ್ಲಿ ಮೀಯಲು ಹೋದವಳು ಕೂದಲನ್ನು ಕೊಟ್ಟೆ ಮಾಡಿಬಿಟ್ಟುದು, ಮುಂದೆ ಬೇರೆ ರಾಜನ ಮಗ-ಮಂತ್ರಿ ಮಗ ಮಾತಾಡಿದ್ದು ಮುಂದಿನ ವಿಷಯಗಳು. +ಮುದುಕಿ ಬೇಡುತ್ತ ಬಂದವಳು ದುಃಖದಿಂದ ಮಲಗಿದ ರಾಜನೊಡನೆ ಮಾತಾಡುವದು, ಚಿನ್ನದ ಕೂದಲ ಹುಡುಗಿಯನ್ನು ತರಲು ಅವರು ಸಿದ್ಧತೆ ಮಾಡುವುದು. . . ಎಲ್ಲಾ ತುಂಬಾ ಸೊಗಸಾಗಿ ಮೂಡಿಬಂದಿದೆ. +ಸಂಭಾಷಣೆಗಳು ಹೃದ್ಯವಾಗಿವೆ. +ಅಪಹೃತಳಾಗಿ ತರಲ್ಪಟ್ಟ ಮೇಲೆ ಕಥನಗೀತದಲ್ಲಿ ಬಹಳ ವಿವರಗಳು ತುಂಬಾ ಕಲಾತ್ಮಕವಾಗಿವೆ. +ಈ ಕಥೆಯಲ್ಲಿ ಸಂಕ್ಷೇಪದಲ್ಲಿದ್ದರೂ ಚೆನ್ನಾಗಿದೆ. +ಕಥೆಯನ್ನು ಬೆಳೆಯಿಸಿದುದು, ಮುಕ್ತಾಯವೂ ಉತ್ತಮವಾಗಿದೆ. +ಆದರೆ, ಕಥನಗೀತದ ಮದುವೆ ತಯಾರಿ ವಿವರ, ವ್ರತ ವಿವರ, ಕಥೆ ನಿರ್ಮಾಣ ಎರಡು ಹಂತ. . . ಎಲ್ಲವೂ ಬಹಳ ವಿವರವಾಗಿ, ಕಲಾತ್ಮಕವಾಗಿ ಬಣ್ಣಿತವಾಗಿವೆ. +ಇಲ್ಲಿನ ನಮ್ಮ ಕಥೆಯೂ ಒಟ್ಟಿನಲ್ಲಿ ಉತ್ತಮ ನಿರೂಪಣೆಯಿಂದ ಕೂಡಿದೆ. +ರಾಹು-ಕೇತು ಮಹಾರಾಜನ ಕಥೆ:ಈ ಕಥೆಯನ್ನು ಹೇಳಿದ್ದು ಶ್ರೀ ಆಲು ಪಿಲ್ಲು ಕುಮರಿ ಮರಾಠಿ ಅವರು. +ಇದನ್ನು ಬಯಲಾಟದ ರೀತಿಯಿಂದ ಪ್ರದರ್ಶಿಸುತ್ತಿದ್ದರು ಅಂತ ಕಾಣುತ್ತದೆ. +ಮಕ್ಕಳಾಗದ ರಾಜನಿಗೆ ಬಂಜೆ ಎಂದು ತಿರಸ್ಕಾರ ಮಾಡುವುದನ್ನು ಕೇಳಿ, ರಾಜನು ಅಡವಿಯಲ್ಲಿ ತಪಸ್ಸು ಮಾಡಿದ. +ಆಗಲೂ ಶಿವ ಒಲಿಯಲಿಲ್ಲ ಎಂದು ಪ್ರಾಣ ತೆಗೆದುಕೊಳ್ಳುವ ಮೊದಲು ಹೆಂಡತಿಯ ಶಿರವನ್ನು ಕತ್ತರಿಸಿದನು. +ತನ್ನ ಪ್ರಾಣವನ್ನು ಕಳೆದುಕೊಳ್ಳಲು ನೋಡಿದಾಗ ಆಗ ಪರಮಾತ್ಮ ಬಂದು, ಸಂತತಿಯನ್ನು ಅನುಗ್ರಹಿಸುವೆನೆಂದು ಹೇಳಿ ಹೋಗುತ್ತಾನೆ. +ಹುಡುಗ ಹುಟ್ಟಿದ ಎಂಟನೇ ದಿನಕ್ಕೆ ಅವನ ಮದುವೆ. +ಹಿಂದಣ ಕಾಲದಲ್ಲಿ ಶಿಶು ತೊಟ್ಟಿಲಲ್ಲಿರುವಾಗಲೇ ಮದುವೆ ಮಾಡುತ್ತಿದ್ದರು. +ಅದು ಮೇಲ್ಜಾತಿಯವರಲ್ಲಿ ರೂಢವಾಗಿದ್ದು ಎಂಟು ದಿನದ ಶಿಶುವಿಗೆ ದೊಡ್ಡ ಆಕಾರದ ಭಾವಚಿತ್ರ ತೆಗೆಸಿದ್ದರು. +ಇಲ್ಲಿ ಸ್ವಪ್ನ ಬಿದ್ದ ವಿಷಯ ಯಾವುದು ಎಂದು ತಿಳಿಸದಿರುವುದು ಒಂದು ಕೊರತೆ. +ಹುಡುಗಿಗೆ ಕೊರಳಲ್ಲಿಟ್ಟ ಚೀಟಿ ನೋಡಿದ ಮೇಲೆ ಪರಿಸ್ಥಿತಿ ತಿಳಿಯುತ್ತದೆ. +ಹೆಚ್ಚು ವಯಸ್ಸಾದ ಹೆಂಡತಿ, ತೀರ ಶಿಶು ಹುಡುಗ ಗಂಡು. +ಅದರಿಂದ ತನ್ನ ತುಂಬು ಜೀವನವು ಅವನು ದೊಡ್ಡವನಾಗುವುದರೊಳಗೆ ಮುಪ್ಪಿಗೆ ಬರುವದು ಎಂದು ತಿಳಿದು ಹುಡುಗನಿಗೆ ಹದಿನಾರು ವರ್ಷವಾಗುವವರೆಗೆ ಅವನನ್ನು ಕಾಪಾಡಿ, ತಾನು ಈಗಿದ್ದಂತೆಯೇ ಇರಬೇಕು; +ಮುದುಕಿಯಾಗಬಾರದು ಎಂದು ಪರಮಾತ್ಮನನ್ನು ಬೇಡಿ ಅನುಗ್ರಹ ಪಡೆಯುತ್ತಾಳೆ. +ಈ ಆಶಯವು ಅಪೂರ್ವವಾದುದು. +ಕಥೆಯನ್ನು ನಿರೂಪಕರು ಸಂಕ್ಷಿಪ್ತ ಮಾಡಿ ಹೇಳಿದ್ದಾರೆ. +ಹುಡುಗನು ತನ್ನ ಹೆಂಡತಿಯನ್ನು ತಾಯಿ ಅಂತ ತಿಳಿದದ್ದು ಒಂದು ಮುಖ್ಯ ಆಶಯ. +ಅದರಿಂದ ತಾಯಿ ಅನ್ನಬೇಡವೆಂದರೂ ‘ಮಗನ ಮೇಲೆ ಮನಸು ಮಾಡಿದೆಯೇ’ ಎಂದು ಕೇಳಿ ನದಿಯಲ್ಲಿ ಹಾರಿ, ಪ್ರಾಣ ಕಳೆದುಕೊಳ್ಳಲು ನೋಡಿದನು. +ಜಾತಕಫಲದಲ್ಲಿ ತುಂಬಾ ನಿಷ್ಠೆ ನಮ್ಮ ಜನರಿಗೆ. +ಜೋಯಿಸರು, ‘ಹನ್ನೊಂದನೇ ದಿನಕ್ಕೆ ಶಿಶುವಿಗೆ ಮರಣ ಕಂಟಕ. +ಅಷ್ಟರಲ್ಲಿ ಮದುವೆ ಮಾಡಿದರೆ ಕಂಟಕ ತಪ್ಪುವುದು’ ಎಂದುದರಿಂದ ರಾಜನು-- ವಯಸ್ಸಿನಲ್ಲಿ ಹಿರಿಯಳಾದ, ನಿರೂಪಕರು ಹೇಳದಿದ್ದರೂ ‘ಮುತ್ತೈದೆಯಾಗುವ ಫಲವುಳ್ಳ ಜಾತಕವುಳ್ಳವಳನ್ನೇ ಶೋಧಿಸಿ ಮದುವೆ ಮಾಡುವುದರಿಂದ ಗಂಡು ಮಗನ ಮರಣ ತಪ್ಪುವುದು’ ಎಂದು ನಂಬಿ ಶಿಶುವಿಗೆ ಮದುವೆ ಮಾಡಿಬಿಡುವನು. +ತೊಟ್ಟಿಲಲ್ಲಿ ಮದುವೆ ಮಾಡುತ್ತಿದ್ದದ್ದು ಹಿಂದಣ ಕಾಲದಲ್ಲಿ ನಡೆಯಬಹುದಾಗಿದ್ದಂಥದೇ ಆಯಿತು. +ಶಿಶು ಕೊರಳಲ್ಲಿ ಚೀಟಿ ನೋಡಿದವಳು ತನ್ನ ಪತಿಯೆಂದೇ ನಂಬಿ ನಿಷ್ಠೆಯಿಂದ ಅವನನ್ನು ಬೆಳೆಸುತ್ತಾಳೆ. +ಶ್ರೀಮದ್ಭಾಗವತದ ಕಥೆಯಲ್ಲಿ ಮನ್ಮಥನನ್ನು ಕಳೆದುಕೊಂಡ ರತಿಯು– ಪ್ರದ್ಯುಮ್ನ ಶಿಶುವೇ ತನ್ನ ಮೃತ ಪತಿಯ ಅವತಾರ ಎಂದು ಭಾವಿಸಿದಂತೆ ಸಲಹುತ್ತಾಳೆ. +ಇಲ್ಲಿ ಲೀಲಾವತಿಯ ಬೇಡಿಕೆಯಂತೆ ಗಂಡ ಹದಿನಾರು ವರ್ಷದವನು ಆಗುವವರೆಗೆ ತಾನು ಇಷ್ಟೇ ವಯೋಮಾನದಲ್ಲಿ ಉಳಿಯಬೇಕು ಎಂದು ಪರಮಾತ್ಮನಲ್ಲಿ ಬೇಡಿಕೊಂಡು ನವಯೌವನೆಯಾಗಿಯೇ ಉಳಿದಳೆಂದು ಕಥೆಯಲ್ಲಿದೆ. +ಇದು ಕಥೆಯಲ್ಲಿ ನಡೆಯುವಂಥದು. +ಆದರೆ, ಎಳೇ ಪ್ರಾಯದಲ್ಲೇ ಪತಿಯನ್ನು ಕಳೆದುಕೊಂಡು ಪತಿವ್ರತಾಧರ್ಮದಿಂದ ಜೀವನವನ್ನು ಕಳೆದ ಲಕ್ಷಾಂತರ ಭಾರತೀಯ ನಾರಿಯರು ಕಾಲಕಾಲದಲ್ಲಿಯೂ ಇದ್ದರೆಂದು ತಿಳಿವಾಗ-- ‘ಅದ್ವೈತಂ ಸುಖದುಃಖಯೋರನುಗತಂ ಸರ್ವಾಸ್ವವಸ್ಥಾಸು’ ಎಂದು ಮಹಾನಾಟಕಕಾರರಾದ ಭವಭೂತಿಯು ‘ಉತ್ತರ ರಾಮಚರಿತ್ರ’ದಲ್ಲಿ ತಿಳಿಸಿದಂತೆ, ಇಂಥ ತ್ಯಾಗವೂ ಸಹ ಚಿರಯೌವನ ದೊರಕದಿದ್ದರೂ ನಡೆಯಲು (ಆಗಲು) ಸಾಧ್ಯವಿತ್ತು ಎಂದು ಹೇಳಬಹುದು. +ನಂಬಿಕೆ, ನಡವಳಿಕೆ ಎರಡನ್ನೂ ಇಲ್ಲಿ ಕಾಣಬಹುದು. +ಕಿರಿಯನೊಡನೆ ಮದುವೆ ನಡೆದ ಮೇಲೆ, ಅವನು ಶಿಕ್ಷಣ ಪಡೆವಂತೆ ತನ್ನ ದುಡಿತವನ್ನು ನೀಡಿದ ಪತ್ನಿ, ಆ ನಂತರ ಅವನೊಡನೆ ಒಗೆತನ ಮಾಡಿದುದು ಠಾಕೂರರ ಒಂದು ಕಥೆಯಲ್ಲಿದೆ. +ಆನೆ ಗಾಳಕ್ಕೆ ಹಾಕಿ ಮೀನ ಹಿಡಿವವ:ಕಥೆಯ ಹೆಸರೇ ತಿಳಿಸುವಂತೆ ಆನೆ ರಾಜನೇ ಈ ಕಥೆಯ ನಾಯಕ. +ಮೂವರು ಅಸಾಧಾರಣ ಸಂಗಡಿಗರು ಗೆಳೆಯರಾಗಿ ಸೇರಿರುವವರು. +Extra-ordinary Companions ಎಂಬ ಕಥಾವರ್ಗಕ್ಕೆ ಸೇರುವ ಈ ಕಥೆಯು, ಬಹುಮಟ್ಟಿಗೆ ಬೇರೆ ಇಂಥ ಕಥೆಗಳ ವಿವರಗಳನ್ನು ಹೋಲದೆಯೇ ಸ್ವತಂತ್ರವಾಗಿ ನಿಲ್ಲುತ್ತದೆ. +ಕೊನೆಯಲ್ಲಿನ ಮದುವೆಯ ಎರಡು ಪಣಗಳಲ್ಲಿ ನಮ್ಮ ಬೇರೆ ಕಥೆಗಳ ಹೋಲಿಕೆಯಲ್ಲಿ ಇರುವುದಾದರೂ ವಿವರಗಳಲ್ಲಿ ವೈಶಿಷ್ಟ್ಯಗಳನ್ನು ಕಾಣಿಸುತ್ತದೆ. +ಇಲ್ಲಿನ ಮೂವರು ಅಸಾಧಾರಣವಾಗಿ ಕೂಳಬಕ್ಕರಾಗಿ ತಮ್ಮ ರಾಜ ತಂದೆಯಿಂದ ಹೊರಹಾಕಲ್ಪಟ್ಟವರು. +ಮಹಾಕಾಯರು ತಿಂದು ತಿಂದು ತೇಗಿ, ತಂದೆಯ ಬೊಕ್ಕಸವನ್ನು ಬರಿದು ಮಾಡಿದವರು. +ಸಾವೇರ ನಾಯ್ಕ, ಗುಡ್ಡಿ ರಾಜ, ಆನೆಗಾಳಕ್ಕೆ ಹಾಕಿ ಹಿಡಿವ ಆನೆ ರಾಜ ಜತೆಗಾರರಾಗಿ ಮುಂದೆ ಸಾಗುತ್ತಿದ್ದರು. +ರಾಜ ಸಂತಾನವಿಲ್ಲದೆ ಚಿಂತೆಯಲ್ಲಿದ್ದವನಿಗೆ ಮಗ ಹುಟ್ಟಿ ಅವನ ಐಶ್ವರ್ಯವನ್ನೆಲ್ಲಾ ತಿಂದು ತೇಗಿದ ಮೇಲೆ, ‘ಯಾಕೆ ಈ ಕೂಳಬಕ್ಕ ಹುಟ್ಟಿದ?’ ಎಂದು ವ್ಯಥಿಸಿ ಹೊರಗೆ ಹಾಕಿದನು. +ಇವರು ಗಾಳದಲ್ಲಿ ಬಿದ್ದ ಆನೆಯನ್ನು ಸುಡಲು ಬೆಂಕಿಯನ್ನರಸುತ್ತಾ ಹೋದದ್ದು-- ಅಡವಿಯ ಒಬ್ಬ ರಕ್ಕಸಿಯ ಮನೆಗೆ. +ಒಬ್ಬರಾದ ಮೇಲೆ ಒಬ್ಬರಂತೆ ಈ ಶಕ್ತಿಶಾಲಿಗಳನ್ನು ಕಟ್ಟಿ ಹಾಕಿದ ಮುದುಕಿ ತನ್ನ ಅಧ್ಯೋರೆನು ತೆಗೆದು ಕಟ್ಟಬೇಕಾದರೆ-- ಅದು ಎಷ್ಟು ಗಾತ್ರ ಮತ್ತು ಗಟ್ಟಿಮುಟ್ಟು, ಎಷ್ಟು ಥೋರ ಎಂದು ಕಲ್ಪಿಸಬೇಕು. +ಹಳ್ಳಿ ಜನರ ಗ್ರಾಮ್ಯ ಹಾಸ್ಯದ ಮಾದರಿ ಇದೆ. +ನಿರೂಪಕರು ತುದಿವರೆಗೂ ತಾದಾತ್ಮ್ಯದಿಂದ ತಲ್ಲೀನರಾಗಿ, ಕೇಳುವವರೂ ತಲ್ಲೀನರಾಗುವಂತೆ ಕುಮರಿ ಮರಾಟರು ಕನ್ನಡ ದೇಸಿಯ ಸೊಬಗಿನಿಂದ ಕಥೆ ಹೇಳಿದ್ದರು. +ಭೀಮನ ಗದೆಯಂತೆ ಆನೆರಾಜನ ಕೊಡಲಿಯನ್ನು ರಾಕ್ಷಸಿಯ ವಧೆಗೆ ತಲೆ ಮೇಲಿಟ್ಟಿದ್ದೇ ಸಾಕಾಯಿತು. +ಭಯಂಕರ ದೊಡ್ಡ ಹಾವನ್ನು ಆನೆರಾಜ ಕೊಂದು ಬಾಲವನ್ನು ಗುರ್ತಿಗೆ ತಕ್ಕೊಂಡನು. +ಆ ರಾಜನ ಪಟ್ಟೇವಾಲನ ಚರ್ಯೆಯನ್ನು ಬಾಲದ ಮೇಲಿನ ತುಂಡು ಕೊಯ್ದುಕೊಂಡು, ರಾಜನ ಮಗಳನ್ನು ಮದುವೆಯಾಗಲು ಸಿದ್ಧನಾದುದನ್ನು ಒಳ್ಳೇ ಹಾಸ್ಯದಿಂದ ಬಣ್ಣಿಸಿದ್ದು, ಮತ್ತು ಮದುವೆ ತಯಾರಿಯಾದಾಗ ಆನೆರಾಜನು ರಾಜನ ಹತ್ತಿರ ಈ ಬಗ್ಗೆ ವಿಚಾರ ಮಾಡುವ ರೀತಿಯನ್ನು ನಿರೂಪಕರು ಬಹಳ ಅಚ್ಚುಕಟ್ಟಾಗಿ ಸಂಭಾಷಣೆಯಿಂದಲೂ ನೇಯ್ದಿದ್ದಾರೆ. +ಬಕನ ಹಸಿವಿನ ಆನೆರಾಜನ ಮನಸ್ಸು ಬಹಳ ದೊಡ್ಡದ್ದು. +ತಾನೇ ಹಾವನ್ನು ಕೊಂದರೂ ಸಾವೇರನಾಯ್ಕನಿಗೆ ಮತ್ತು ಹುಲಿಯನ್ನು ಕೊಂದಾಗ ಅಲ್ಲಿಯ ರಾಜನ ಮಗಳನ್ನು ಗುಡ್ಡಿರಾಜನಿಗೆ ಮದುವೆ ಮಾಡಿಸಿದ ದೊಡ್ಡತನ ಇವನದು. +ಮಹಾಕಾವ್ಯದಲ್ಲಿ ಇತರ ರಸಗಳಂತೆ ಬೀಭತ್ಸ ರಸಕ್ಕೂ ಅವಕಾಶವಿರುವ ಹಾಗೆ ಮೂವರ ಮೇಲೆ ಮರದ ಮೇಲಿನ ಹದ್ದು, ಮಂಗ ಹೇತು – ಮೈಮುಚ್ಚಿ ತಲೆ ಮಾತ್ರ ಕಾಣುತ್ತದೆ. +ಹಲವರು ಈ ಹೇಲು ಮೈ ಉಜ್ಜಿ ನದಿಯಲ್ಲಿ ಮಿಂದು ಪಣ ಗೆಲ್ಲದೆ ಸೋತರು. +ಈ ಆನೆರಾಜ ಲಿಂಬೆಕಾಯಿ ಕಡಿ ಮಾಡಿ, ಅದರ ಮೇಲಿಂದ ನದಿ ದಾಟಿ ಪಣ ಗೆದ್ದು, ಹುಡುಗಿಯನ್ನು ಮದುವೆಯಾದನು. +ಮುಂದೆ ಈ ಮೂವರು ಮೋಸ ಮಾಡಿ ಹುಡುಗಿಯರನ್ನಪಹರಿಸಿದ್ದು. +ಶೃಂಗಸುಂದರಿ:ಈ ಕಥೆಯು ನಮ್ಮ “ಶೃಂಗ ಬೇರಿಗೆ ಮದ್ದು” ಎಂಬ ಕಥೆಯ ವಿಶಿಷ್ಟವಾದ ಪಾಠಾಂತರವಾಗಿದೆ. +ಇಲ್ಲಿಯೂ ಹಣದ ಚೀಲ, ಹಾರುವ ಕಂಬಳಿ ಮತ್ತು ಟೊಪ್ಪಿಗೆ ಇದ್ದರೂ ಈ ಆಶಯಗಳ ವಿವರಗಳಲ್ಲಿ ಭಿನ್ನತೆಗಳಿವೆ. +ಪ್ರಾರಂಭದಲ್ಲಿಯೇ ಆ ಕಥೆಯಲ್ಲಿ ಭಟ್ಟ ಅವನ ಮೂವರು ಮಕ್ಕಳು, ಇಲ್ಲಿ ಹಾಲಕ್ಕಿ ಗೌಡ ಹಾಗೂ ಅವನ ಮೂವರು ಮಕ್ಕಳು. +ಅಲ್ಲಿನ ಜಮಖಾನ ಇಲ್ಲಿ ಹಾರುವ ಕಂಬಳಿ. +ಹೇಳುವ ವಾಕ್ಯ ಬೇರೆ ಬೇರೆ ಅರ್ಥ ಹೋಲುತ್ತವೆ. +ಇಲ್ಲಿ ‘ಅಂಬಕ್ಕ ಜಾವ’ ಹಾಗೂ ಇಳಿಯಬೇಕಾದಾಗ, ‘ಬೈಟೊ ಕಂಬಳಿ’ ಎನ್ನಬೇಕು. +ಅಲ್ಲಿ ದುರಾಸೆಯ ರಾಜಕುಮಾರಿ ನಾಯಕನಿಂದ ಹಣ ಕಿತ್ತರೆ; + ಇಲ್ಲಿ ರಾಜನೇ, ‘ಮಗಳ ಮದುವೆಗೆ ಇಂತಿಷ್ಟು ಹಣ ಕೊಡಬೇಕು’ ಎಂದು ಇಟ್ಟಿರುತ್ತಾನೆ. +ಟೊಪ್ಪಿ ಹಾಕಿಕೊಂಡರೆ ಏಳುಪ್ಪರಿಗೆ ಮನೆಯಾಗುತ್ತದೆ ಎಂದು ಅಲ್ಲಿ ಇದೆ. +ಆದರೆ, ಟೊಪ್ಪಿಗೆ ಹಾಕಿಕೊಂಡರೆ ಇಲ್ಲಿ ಸೂಕ್ಷ್ಮ ಜೀವಿ – ನುಸಿ ಗುಂಗಾಡಾಗುವುದೇ. +ಪ್ರಸಿದ್ಧ ಕಥೆಯಲ್ಲಿ ಟೊಪ್ಪಿಗೆ ಹಾಕಿಕೊಂಡರೆ ಅದೃಶ್ಯ ಆಗುವುದಿದೆ. +ಇಲ್ಲಿನ ರಾಜಕುಮಾರಿಯು ಕೆಳಗಿನ ವರ್ಗದವನನ್ನು ಮದುವೆಯಾಗಲಾರದವಳು. +ಇಲ್ಲಿನ ಕಥೆಯಲ್ಲಿ ಬಳೆಗಾರನ ವೇಷ ಹಾಕಿಕೊಂಡು ರಾಜಕುಮಾರಿಯನ್ನು ಅಡವಿಗೆ ಒಯ್ಯುವುದು; + ಅವಳು ಮೋಸ ಮಾಡಿ ಅವನನ್ನು ಅಡವಿಯಲ್ಲಿ ಬಿಟ್ಟು ಮನೆಗೆ ಬರುವುದೂ ಎರಡೂ ಕಥೆಗಳಲ್ಲಿವೆ. +ವಿವರಗಳು ಸ್ವಲ್ಪ ಬೇರೆ ರೀತಿ ಇವೆ. +ಮತ್ತು ಅಲ್ಲಿ ಅವನಿಗೆ ಸನ್ಯಾಸಿಯು ಸೂಚನೆ ನೀಡುವುದೂ ಇದೆ. +ಇಲ್ಲಿ ಪಾರ್ವತಿಪರಮೇಶ್ವರರು ಬಂದು ಬಾಳೆ ಹಣ್ಣು, ಕೋಡು ಕಳೆಯುವ ಉಪಾಯ ಹೇಳಿ ಹೋಗುತ್ತಾರೆ. +ಅಲ್ಲಿ ಹೂ ಮೂಸಿ ಹಕ್ಕಿಯಾಗಿ ಹೋಗುವುದಿದೆ. +ಕುಮರಿ ಮರಾಟಿ ಹೇಳಿದ ಕಥೆಯಲ್ಲಿನ ಕನ್ನಡದ ಒಂದು ವಿಶಿಷ್ಟ ದೇಸಿರೂಪದ ಶೈಲಿಯ ಸೊಗಸು ಇಲ್ಲಿದೆ. +‘ದಿಂಬು’ ಎನ್ನಲು ‘ದಿಂಪು’. . . ಬೈಲ ಸೀಮೆಯ ದೇಸಿ ನುಡಿಗಳೂ ಇಲ್ಲಿವೆ . +ಹಾಸ್ಯದ ಬೇರೆ ಸಂದರ್ಭಗಳೂ, ಮಾತುಗಳೂ ಈ ಕಥೆಯ ವೈಶಿಷ್ಟ್ಯಗಳನ್ನು ಹೆಚ್ಚಿಸಿವೆ. +ಬಡಿಗನೂ ಕರಗಾಸಿನವರೂ ರಾಜ ಮತ್ತು ಅವನ ಹೆಂಡತಿಯು ಮಗಳ ಕೋಡು ಕತ್ತರಿಸಲು ಮಾಡಿದ ಪ್ರಯತ್ನ ಹಾಗೂ ರಾಣಿಗೆ ಕೋಣ ಹಾರಿತ್ರೋ ಎಂಬುದಲ್ಲದೆ, ‘ಎಮ್ಮೆ ಹಾರಿತ್ತೋ’ ಎಂದು ಕೇಳಿ ಲೇವಡಿ ಮಾಡುವುದೂ ತುಂಬಾ ಸ್ವಾರಸ್ಯವಾಗಿದೆ. +ಗಫೂರ ಸಾಯ್ಬ:ಈ ಕಥೆಯ ಹೋಲಿಕೆಯ “ಢೋಂಗಿ ಸಾವುಕಾರ” ಕಥೆಯೂ “ಉತ್ತರ ಕನ್ನಡ ಜನಪದ ಕಥೆಗಳು” (ಕ. ವಿ. ವಿ. ಧಾರವಾಡ) ಎಂಬ ಗ್ರಂಥದಲ್ಲಿ ಬಂದಿದೆ (ಪುಟ 215-225). +ಆದರೆ, ಈ ಎರಡೂ ಕಥೆಗಳೂ ಒಂದೇ ಕಥೆಯ ಭಿನ್ನ ಪಾಠಗಳಾದರೂ ಇವುಗಳ ನಿರೂಪಣೆಯಲ್ಲಿ ಬಹಳ ಭಿನ್ನತೆಗಳು ಕಾಣುತ್ತವೆ. +‘ಢೋಂಗಿ ಸಾವುಕಾರ’ ಕಥೆಯ ಪ್ರಾರಂಭದಲ್ಲಿ-- ಹೆಂಡತಿಯ ಮಾತಿನ ಮೇಲೆ ತನ್ನ ತಮ್ಮನನ್ನು ಹೊರಗೆ ಹಾಕಿದ ಮೊದಲ ಕಥಾ ಭಾಗ ಇಲ್ಲವೇ ಇಲ್ಲ. +ಅಲ್ಲಿನ ನಾಯಕನೂ, ಇಲ್ಲಿನ ನಾಯಕನೂ ಕಟ್ಟಿಗೆ ಕಡಿದು ತಂದು ಮಾರುವವರು. +ಢೋಂಗಿ ಸಾವುಕಾರನು ಚಿನ್ನದ ನಾಣ್ಯಗಳಿರುವ ದೊಡ್ಡ ಹಂಡೆಯನ್ನು ಪದ್ಮಾವತಿ ಸೂಳೆಗೆ ಕಳಿಸಿದ್ದನು. +ಆದರೆ, ಗಫೂರ ಸಾಯ್ಬನು ರಾಜನ ಮಗ, ಪ್ರಧಾನಿಯ ಮಗ ಇವರೊಡನೆ ಪದ್ಮಾವತೀ ಸೂಳೆಗೆ ತಲ್ಪಿಸಲು ಕಾರಕೂನನಿಗೆ ಕೊಡುವ ಮೊದಲು-- ಲಕ್ಷ್ಮೀ ಸೂಳೆಯನ್ನು ವರ್ಷಗಟ್ಟಲೆ ನೋಡಲಾರದ ಅವರ ಹತ್ತಿರ ಚಿನ್ನದ ಪಾಲಕಿ ತರಿಸಿ, ತಾನು ಅದನ್ನೇರಿ ಅವರೇ ಬೋವಿಗಳಾಗುವ ಹಾಗೆ ಮಾಡಿ, ಸೂಳೆಯ ಮನೆಗೆ ಹೋದುದು ಬಹಳ ಸ್ವಾರಸ್ಯವಾಗಿದೆ (ಸೂಳೆ ಹೆಸರು ಬೇರೆ ಬೇರೆ. ). +ಎರಡೂ ಕಡೆಗೆ ಸಮಾನವಾದುದೆಂದರೆ-- ನಾಯಕ ಅಡವಿಗೆ ಹೋಗಿ ಕಟ್ಟಿಗೆ ತಂದು ಮಾರುವುದು; +ಬ್ರಾಹ್ಮಣನೊಡನೆ ತನ್ನ ಸಂಬಳ ಕತ್ತಿ, ಕೊಡಲಿ, ಬಳ್ಳಿ ಎಂದು ಹೇಳಿ ಹೋದುದು ಮತ್ತು ಎರಡೂ ಕಡೆ ನಾಣ್ಯದ ಚೀಲ ದೊರೆತು ಸೂಳೆಗೆ ಕೊಡುವುದಕ್ಕೆ ಸಾಯ್ಬನು ಪೊಲೀಸರನ್ನೇ ಲಕ್ಷ್ಮಿ ಸೂಳೆಗೆ ಕೊಟ್ಟುದು; + ಢೋಂಗಿ ಸಾವುಕಾರನು ಡೈರಿ ಹೊತ್ತುಕೊಂಡು ಸೂಳೆ ಮನೆಗೆ ಕಳಿಸಿಕೊಟ್ಟ ವಿವರಗಳಲ್ಲಿ ವ್ಯತ್ಯಾಸಗಳಿವೆ. +ಸಾಯ್ಬನ ಕಥೆಯಲ್ಲಿ ದೇವಕನ್ಯೆಯರು ಏಳುಮಂದಿ ಸೂಳೆಯ ಮನೆಗೆ ಕಸ ತೆಗೆಯಲು ಚಿನ್ನದ ಕಸಬರಿಗೆ ತಂದು ಬಂದ ಆಶಯವೂ ತುಂಬಾ ವಿಶಷ್ಟವೂ, ನವೀನವೂ ಆದುದಾಗಿದೆ. +‘ಢೋಂಗಿ ಸಾವುಕಾರ’ ಕಥೆಯಲ್ಲಿನ ಕಥಾ ನಿರೂಪಕರ ಶೈಲಿಯು ನಾಡವರ ಭಾಷಾ ಸರಣಿಯದು (ಉ. ಕ. ಜನಪದ ಕಥೆಗಳ ಗ್ರಂಥದಲ್ಲಿ ಅದನ್ನು ಶುದ್ಧ ಭಾಷಾ ರೂಪಕ್ಕೆ ತರುವಲ್ಲಿ ಶಬ್ದಗಳನ್ನು ತಕ್ಕಮಟ್ಟಿಗೆ ಉಳಿಸಿಕೊಳ್ಳಲಾಗಿದೆ ). +ಆದರೆ, ‘ಗಫೂರ ನಾಯ್ಕ’ ಕಥೆಯಲ್ಲಿ ನಿರೂಪಕಿಯು ಹೇಳಿದ್ದ ಸರಣಿಯನ್ನೇ ಪೂರ್ತಿಯಾಗಿ ಉಪಯೋಗಿಸಿಕೊಳ್ಳಲಾಗಿದೆ. +ಈ ಶೈಲಿಯ ವ್ಯಾಕರಣ ವಿಕಾರ ಜಾತಿಯ-- ಅನಸೂಯಾ ಪೆಡ್ನೇಕರರು ಕೊಂಕಣಿ ಮನೆಮಾತಿನವರಾಗಿದ್ದು, ಅವರ ಕನ್ನಡದ ವಿಶಿಷ್ಟವಾದ, ಸ್ವಾರಸ್ಯವಾದ ಸರಣಿಯು ಮತ್ತೆಲ್ಲಿಯೂ ಕಾಣದ ದೇಸಿಯ ಸರಣಿಯ ವಿಶಿಷ್ಟತೆಯ ಸುಂದರ ಅಭಿವ್ಯಕ್ತಿಯಾಗಿದೆ ಮತ್ತು ಅವರ ಈ ಕಥೆಯ ಹಾಗೂ ‘ಬೀರಕಲ ಹೆಡ್ಡ’ ಕಥೆಯ ಭಾಷಾರೀತಿಗಳು ಕಥೆಗಳಿಗೆ ಬಹಳ ಮಹತ್ವದ, ವಿಶಿಷ್ಟವಾದ ದೇಸಿ ರೂಪದ ಸ್ಥಾನವನ್ನು ಕೊಡಬಲ್ಲವಾಗಿವೆ. +ನಿರೂಪಣೆಯ ಕಲಾತ್ಮಕತೆಯಿಂದಲೂ ಇವು ಶ್ರೇಷ್ಠ ಪ್ರತಿಯ ಕಥೆಗಳು. +ಮೈಸೂರು ವಿ. ವಿ. ಅಧ್ಯಯನ ಕೇಂದ್ರದ ದಶಮಾನೋತ್ಸವದಲ್ಲಿನ ಮೂರನೆಯ ‘ಜಾನಪದ ಮೌಲ್ಯಮಾಪನ’ದ ಉಪನ್ಯಾಸದಲ್ಲಿ-- ‘ಕಥೆಗಳಲ್ಲಿ ಮೂರು ವಿಶಿಷ್ಟ ಆಶಯಗಳು ಇದ್ದರೆ, ಅವು ಇಲ್ಲವೆ ಇಲ್ಲದಿದ್ದರೂ ವಿಶಿಷ್ಟವಾದ ಆಡುನುಡಿಯ ರೀತಿಗಳು ಮಾತ್ರ ಇದ್ದು, ಬೇರೆ ಕಥೆಯ ಆಶಯಗಳೇ ಅಲ್ಲಿ ಕಾಣಬಹುದಾದರೂ, ಈ ಭಾಷಾಸರಣಿಯಿಂದ ಮಾತ್ರವೇ ಈ ಕಥೆಗಳು ಅಭ್ಯಾಸ ಯೋಗ್ಯವಾಗಿ ಸ್ವತಂತ್ರ ಕಥೆಗಳೆಂದು ಗಣಿಸಲ್ಪಡಬೇಕು’ ಎಂದೂ ನನ್ನ ಅಭಿಪ್ರಾಯಗಳನ್ನು ತಿಳಿಸಿದ್ದೇನೆ. +ಚಿತ್ರಾಂಗಿ:ಈ ಕಥೆಯು ಅಶಿಕ್ಷಿತ ಹರಿಜನ ಮನುಷ್ಯನು ಹೇಳಿದ್ದು. +ಇದರಲ್ಲಿ ಸಾಮಾನ್ಯ ನಿರೂಪಕರ ಶೈಲಿಯಲ್ಲಿರುವುದಕ್ಕಿಂತ ಏಕವಚನ-ಬಹುವಚನ ದೋಷಗಳು, ಸ್ಖಾಲಿತ್ಯಗಳು ಹೆಚ್ಚಿಗಿವೆ. +ಆದರೆ, ಕಥೆಯಲ್ಲಿ ಪರಮಾತ್ಮನು ಒಳ್ಳೆಯವರಿಗೆ ಸಹಾಯ ಮಾಡುವ ಹಾಗೂ ದುಷ್ಟರನ್ನು ದಂಡಿಸುವ ಸರಣಿಯಲ್ಲಿ ಹೊಸತನವಿರುವುದರಿಂದ ಕಷ್ಟಪಟ್ಟು ಇದನ್ನು ಓದಿದರೆ ಪ್ರಯೋಜನವಾಗಬಹುದು. +ಪ್ರಾರಂಭದಲ್ಲಿ ಬರುವ ಅರಸನ ಮಗ ಮತ್ತು ಪ್ರಧಾನಿಯ ಮಗ ಈ ಕಥೆಯಲ್ಲಿ ಪರಮಾತ್ಮನ ಶಕ್ತಿಯುಳ್ಳ ಅವತಾರ ಪುರುಷರು ಎಂದು ತಿಳಿದಿರಬೇಕಾಗುತ್ತದೆ. +ಮೊದಲು- ಒಬ್ಬ ಅಜ್ಜಿ, ಮೊಮ್ಮಗ; +ಎರಡನೆಯದಾಗಿ- ಮತ್ತೊಬ್ಬ ಕಥೆಯಲ್ಲಿ ಬಂದಿರುತ್ತಾರೆ. +ಆದರೆ, ಈ ಅಣ್ಣ-ತಮ್ಮ-- ಮುಖ್ಯವಾಗಿ, ತಮ್ಮ ಪರಮಾತ್ಮ ಎಂದು ನಿರೂಪಕರು ತಿಳಿಸಿರುವುದು ಕಥೆಗೆ ಒಂದು ಏಕಸೂತ್ರತೆ ಈ ಅಣ್ಣ-ತಮ್ಮ ಇವರಿಂದಾಗಿಯೇ. +ಪ್ರಾರಂಭದಲ್ಲಿನ ಭೀಮರಕ್ಷಿ ಎಂಬ ರಾಕ್ಷಸಿಯೊಡನೆ ಸೆಣಸುವ ದೃಶ್ಯ, ಕಥೆಯಲ್ಲಿ ರಾಕ್ಷಸಿಯನ್ನು ತಮ್ಮನು ಕೊಂದ ಬಣ್ಣನೆಯಲ್ಲಿ ವಿಶೇಷತರದ ಭವ್ಯತೆಯ ಅಂಶವನ್ನು ನೋಡಬಹುದು. +ಭೀಮರಕ್ಷಿಯೊಡನೆ ಪಗಡೆ ಆಟವನ್ನು ಆಡುವ ತಮ್ಮ, ‘ಇವನೇ ಕೃಷ್ಣ ಪರಮಾತ್ಮ’ ಎಂದು ನಿರೂಪಕನ ಹೇಳಿಕೆ ಮುಂದೆ ಇದೆ. +ಮೊದಲು ಪಗಡೆ ಆಟದಲ್ಲಿ ಅಣ್ಣ-ತಮ್ಮ ಇಬ್ಬರೂ ಸೋತರು. +ರಾಕ್ಷಸಿಯ ಸಂಗಡ ಕೈ ಕೈ ಹಿಡಿದು, ಕುಣಿದು ಕುಣಿದು ಸುತ್ತು ಮಂಡಲ ತಿರುಗುವ ದೃಶ್ಯವು ಕಥೆಯ ಆಶಯ ವಿಭಾಗವು ವಿಶೇಷಗಳಲ್ಲೊಂದು. +ಒಂಭತ್ತು ಯೋಜನ ಪರ್ಯಂತವಾಗಿ ಇಬ್ಬರೂ ಕೈ ಕೈ ಹಿಡಿದು ಕುಣಿವ ದೃಶ್ಯವನ್ನು ಕಲ್ಪಿಸಬೇಕು. +ಚಕ್ರದಿಂದ ರಾಕ್ಷಸಿಯನ್ನು ಕೊಂದ ಮೇಲೆ, ಬೇರೊಬ್ಬ ರಾಜನ ರಾಜ್ಯದಲ್ಲಿ ಒಬ್ಬ ಅಜ್ಜಿ-ಮೊಮ್ಮಗನನ್ನು ನಾಶಪಡಿಸಲು ರಾಜನು ಹುಲಿ ಹಾಲನ್ನು, ಸಿಂಹದ ಹಾಲನ್ನು ತರಲು ಹೇಳುವುದೂ ಇದೆ. +ಹುಡುಗನನ್ನು ಕೊಲ್ಲುವುದಕ್ಕೆ ರಾಜನಿಗೆ ಇದ್ದ ಕಾರಣವನ್ನು ತಿಳಿಸದಿರುವುದು ಕಥೆಯ ಮುಖ್ಯ ದೋಷ. +ರಾಜನು, “ಇವ ಸಾಯಲಿಲ್ಲ” ಎಂದು ಹೇಳಿ, ಕಲ್ಲು ಕಟ್ಟಿ ಅವನನ್ನು ಬಾವಿಯಲ್ಲಿ ಒಗೆದು ಸಾಯಿಸಲು ಪ್ರಯತ್ನಿಸಿದ. +ಬಾವಿಯಲ್ಲಿ ಬಿದ್ದ ಹುಡುಗ ನಾಣ್ಯದ ಕೊಡ ತಕ್ಕೊಂಡು ಬಂದ. +ಆಗ, ‘ಬಹಳ ನಾಣ್ಯ ಬಾವಿಯಲ್ಲಿರಬಹುದು’ ಎಂದು ಹೇಳಿ, ರಾಜನೇ ಬಾವಿಗೆ ಹಾರಿ ಸತ್ತ ಆಶಯ ಭಾಗವೂ ವಿಶಿಷ್ಟವಾಗಿದೆ. +ಮುಂದೆ ಬೇರೆ ಹುಡುಗ, ‘ತಂದೆಗೆ ಕಣ್ಣು ಕಾಣದು; ಚಿತ್ರಾಂಗಿ ಹೂ ತರಬೇಕು’ ಎಂದು ಹೊರಟ ಕಥೆಯಲ್ಲಿ ಸ್ವಪ್ನದ ವೃತ್ತಾಂತವಿಲ್ಲದೆ ಕಥೆ ಸಾಗಿದೆ. +ಇಲ್ಲೂ ಆ ಚಿತ್ರಾಂಗಿ ಹೂ ಮರದ ಎಲೆ, ಎಲೆಗೊಬ್ಬ ರಕ್ಕಸ ಮತ್ತು ಮಹಾಶೇಷ ಕಾಯಲು ಇದ್ದರು. +ಇಲ್ಲಿ ಆ ಹುಡುಗನಿಗೆ ತನ್ನ ಗರುಡನನ್ನು ಕೊಟ್ಟ. +ತಮ್ಮ ಎಲೆಗೊಂದಿರುವ ರಕ್ಕಸರನ್ನು ಕೊಲ್ಲಲು ಬಾಣ ಪ್ರಯೋಗ ಮಾಡುವುದು ಸಮಂಜಸವೇ. +ಆದರೆ, ಬಿಲ್ಲು-ಬಾಣಗಳನ್ನು ಪ್ರಧಾನಿ ಮಗ (ತಮ್ಮ) ಕೊಟ್ಟುದನ್ನು ತಿಳಿಸದಿರುವುದು ಒಂದು ಮುಖ್ಯ ಲೋಪ. +ಇಲ್ಲಿ ಶಂಕೆರಾಣಿಯು ಹುಡುಗನ ಕೈಯಲ್ಲಿ ಚಕ್ರವಿದ್ದುದನ್ನು ನೋಡಿ ಶರಣಾಗಿ, “ನನ್ನನ್ನು ಮದುವೆಯಾಗು” ಎನ್ನುವುದೂ; +ಪರಮಾತ್ಮ (ಕೃಷ್ಣ) ಮದುವೆ ಮಾಡುವುದೂ ಇನ್ನೊಂದು ಅನಿರೀಕ್ಷಿತ ಬೆಳವಣಿಗೆ. +ಈ ಕಥೆಯನ್ನು ಸರಳವಾಗಿ ಹೇಳಿದರೆ ಮಕ್ಕಳಿಗೆ ಬಹಳ ಮೆಚ್ಚುಗೆಯಾಗುವಂತಿದೆ. +ಓಲೆ ಭಾಗ್ಯ:ಈ ಚಿಕ್ಕ ಕತೆಯು ಸಂಭಾವ್ಯ, ಅಸಂಭಾವ್ಯ ಘಟನೆಗಳಿಂದ ಕೂಡಿ ವೇಗವಾಗಿ ಸಾಗುತ್ತದೆ ಮತ್ತು ಮುಂದಿನ ಘಟನೆಗಳು ಅನಿರೀಕ್ಷಿತ ರೂಪದಲ್ಲಿ ಸಾಗಿ, ಅನಿರೀಕ್ಷಿತವಾದ ಮುಕ್ತಾಯ ಪಡೆದು, ಮುಕ್ತಾಯವು ಸಾಧಿತವಾಗುತ್ತದೆ. +ಒಳ್ಳೇ ವಿಶಿಷ್ಟ ಕತೆ ಇದು. +ಇಲ್ಲಿ ಪರದಾನಿ/ಪ್ರಧಾನಿ/ ಬೇರೆ ರಾಜ್ಯದ ಅರಸನ ಪ್ರಧಾನಿ. +ಅವನ ಹುಡುಗಿ, ಕಾಳಿದಾಸನ ಮಗ, ಕನಕದಾಸನ ಪತ್ನಿ ಅವನಿಗೆ ಗೊತ್ತಾಗದಂತೆ ತಂದೆಯ ಮನೆಗೆ ಕಳಿಸಿರದ ಹುಡುಗಿಯನ್ನು ತಂದು, ತನಗೆ ಬಯ್ಯಲು ಪ್ರಧಾನಿಯ ಮಕ್ಕಳು ಹಂಚಿಕೆ ಹಾಕಿ ಅವಳನ್ನು ತೌರಮನೆಗೆ ತಂದರು. +ಕನಕದಾಸನು ಅಡವಿಯಲ್ಲಿ ಯಾಕೆ ಉಳಿದಿದ್ದ ಎಂಬುದನ್ನು ನಿರೂಪಕರು ಹೇಳದುದು ಕಥೆಯ ಒಂದು ದೋಷ. +ಆದರೆ, ಕನಕದಾಸನು ಬೇಟೆಯಾಡಲು ಅಡವಿಗೆ ಹೋಗಿದ್ದ ಎಂಬುದನ್ನು ಮುಂದೆ ಊಹಿಸಬೇಕು. +ತನ್ನ ಹೆಂಡತಿ ಮನೆಯಲ್ಲಿಲ್ಲ ಎಂದು ತಿಳಿದು, ಮಾವನ ಮನೆಗೆ ಕನಕದಾಸ ಹೋದವನು ಮಾಳಿಗೆ ಮೇಲೆ ಮಲಗಿದ್ದ ಹೆಂಡತಿಯ ಬಳಿ ಪೊಲೀಸರ ಕಣ್ಣು ತಪ್ಪಿಸಿ ಹೋಗಬೇಕಾಗಿತ್ತು. +ಮಾಳಿಗೆ ಹತ್ತಲು ಇಲಿಯನ್ನು ಹಿಡಿಯಲು ಬಂದ ಸರ್ಪದ ಬಾಲ ಹಿಡಿದು ಮಾಳಿಗೆಗೆ ಹತ್ತಿ ಹೋದುದು ಅಸಂಭಾವ್ಯತೆಯ ಪರಮಾವಧಿ. +ಕಲ್ಪನೆಯ ಹೊಸ ತರಹದಿಂದಾಗಿ ಇದು ರಮ್ಯವೆನಿಸುತ್ತದೆ. +ಗಂಡ-ಹೆಂಡತಿಯರ ಚಿಕ್ಕ ಸಂಭಾಷಣೆಯಲ್ಲಿ ಅವನ ಕುರಿತ ಅವಳ ಕಾಳಜಿಯೂ ತನಗಾಗಿ ಅವನು ಗುಂಡು ಹೊಡೆಯಿಸಿಕೊಂಡು ಸಾಯುವ ಗಂಡಾಂತರ ಬರುತ್ತಿತ್ತು ಎಂದು ಊಹಿಸಿ, ಅವಳು ಪಶ್ಚಾತ್ತಾಪದಿಂದ-- ‘ಹೀನ ವಿಚಾರ ಮಾಡಿ ಬಂದಿರಿ. +ಕುಲದೇವರ ಮೇಲೆ ಮೋಹ ಮಾಡಿದರೆ ಉತ್ತಮವಾಗುತ್ತಿತ್ತು’ ಎನ್ನುವಾಗ, ‘ನೀವು ಹಾಕಿದ ಕಾಲ ಮೆಟ್ಟು ನಾನು’ ಎಂಬ ಮಾತಿನಲ್ಲಿ ಅವಳ ಧನ್ಯತೆ ವ್ಯಕ್ತವಾಗಿದೆ. +ಕಾಡಿಗೆ ಹೋಗಿ ರಾಮಧ್ಯಾನ ಮಾಡುವಾಗ-- ಕಾಡಿನ ಪಿಶಾಚಿ ಇಲ್ಲಿ, ಪಿಶಾಚಿಯ ಬೆದರಿಕೆಗೆ ಕನಕದಾಸ ರಾಮನ ಭೇಟಿ ಮಾಡಲು ಮುಂದೆ ಹೋದಾಗ ಹನುಮಂತ ಭೆಟ್ಟಿಯಾದ ಅಸಾಧ್ಯ ಘಟನೆ; + ರಾಮ ವೇಷ ಮರೆಸಿ ಬಂದು, ಮುಂದೆ ನಿಜರೂಪದಲ್ಲಿ ಬಂದು ನಿಂತುದು; + ಪಿಶಾಚಿ ಬೆದರಿಕೆ ಹಾಕಿದ ಕಾರಣ ಭಕ್ತನ ರಕ್ಷಣೆಗೆ ರಾಮ ಬಂದುದು. +“ಮೊದಲಿನಂತೆ ಗಂಡ-ಹೆಂಡಿರಾಗಿ ಉಳಿಯಿರಿ” ಎಂಬ ರಾಮನ ಉಪದೇಶವು ಪಾತಿವ್ರತ್ಯಕ್ಕೆ ಪರಮಾತ್ಮನು ನೀಡಿದ ಅನುಗ್ರಹ ಸೂಚಕವಾದುದು. +‘ಜಗದೇಕವೀರನ ಕಥೆ’ಯಲ್ಲಿ ‘ಅತಿಮಾನುಷ ಸಹಾಯಕರು’ ಮತ್ತು ‘ಪ್ರಾಣಿ ಸಹಾಯಕರು’ ಕಥೆಯ ಬೆಳವಣಿಗೆಗೆ ಸಹಾಯ ಸಲ್ಲಿಸುತ್ತಾರೆ. +ಇಲ್ಲಿ ಅತಿಮಾನುಷ ವಿರೋಧಿ ರಾಕ್ಷಸನಿಗೆ ಶಿವನ ವರವಿತ್ತು. +ಆದರೆ, ಕಾಳಿಕಾದೇವಿಯ ವರವಿರುವ ನಾಯಕ-ನಾಯಕಿಯರಿಗೆ ಈ ವಿರೋಧಿಯನ್ನು ನಾಶಪಡಿಸುವುದು ಬಹಳ ಸುಲಭವಾಗಿರುವುದರಿಂದ ಅವನ ಪಾತ್ರವೂ ಗೌಣವಾಗಿಬಿಡುತ್ತದೆ. +ಇಲ್ಲಿ, ‘ಪತಿಯು ಬದುಕಿರಬೇಕು. +ತನಗೆ ಕಷ್ಟವಾದರೂ ಆಗಲಿ’ ಎಂಬ ಗಂಡನ ಮಾತು ಸುಳ್ಳಾಗುವುದನ್ನು ತಪ್ಪಿಸುವ ಚಂದ್ರಸೇನನ ಹಿರಿರಾಣಿ ಕಲಾವತಿಯ ತ್ಯಾಗವು-- ಮುಂದೆ ಅವಳ ಮಗನಾಗಿ ಹುಟ್ಟಿದ ಜಗದೇಕವೀರನಿಗೆ ಕಾಳಿಕಾದೇವಿಯ ಅನುಗ್ರಹವಾಗಲು ಸಹಾಯವಾಗುತ್ತದೆ. +‘ಪಾತಾಳಕೇತು‘ ಹೆಸರೇ ಸೂಚಿಸುವಂತೆ ನೆಲದ ಕೆಳಗಿನ ರಾಜ್ಯದವ. +ನಾಗಕನ್ನಿಕೆಯೆಂಬ ಸುಂದರಿಯನ್ನು ಪಾತಾಳದಿಂದ ಅಪಹರಿಸಿ ತಂದು ಇಟ್ಟುಕೊಂಡಿದ್ದ. +ಜಗದೇಕವೀರ ತಂದಿದ್ದ ಹರಳನ್ನು ತಾಯಿ ಶೆಟ್ಟಿಗೆ ಕೊಟ್ಟಳು. +ಅದನ್ನು ಅವನು ಚಂದ್ರಸೇನರಾಜನಿಗೆ ಕೊಟ್ಟನು. +ಹರಳು–ಹುಡುಗಿ ಎರಡೂ ಬೇಕೆಂದು ರಾಜ ಕಟ್ಟಾಜ್ಞೆ ಮಾಡಿದ. +ಚಿಕ್ಕಪ್ಪ ಶೆಟ್ಟಿ ಕೊಲ್ಲುವ ತಂತ್ರ ಮಾಡಿ, ಜಗದೇಕವೀರನನ್ನು ಕರೆದುಕೊಂಡು ಹೋದನು. +ಬಾವಿಯಲ್ಲಿಳಿದ ಜಗದೇಕವೀರ, ರಾಕ್ಷಸನ ಜೀವದ ಕಾಯಿ ಇರುವುದನ್ನು ಅವಳು (ನಾಯಕಿ) ಉಪಾಯದಿಂದ ತಿಳಿದಳು. +ಇಲ್ಲಿ ಕಲ್ಪನಾಶಕ್ತಿಯ ಮೇಲ್ಮೆ ತೋರುತ್ತದೆ. +ಗಿಳಿಯ ಹೊಟ್ಟೆಯಲ್ಲಿ ಕೀಲಿಕ್ಕೆ ಇತ್ತು. +ಅದನ್ನು ತಗೊಂಡು, ದೊಡ್ಡ ತಲವಾರ ತಕ್ಕೊಂಡು ಮರದಲ್ಲಿದ್ದ ರಾಕ್ಷಸನ ದೇಹವನ್ನು ನಾಶಮಾಡಬೇಕು. +ಚಿಕ್ಕಪ್ಪ ಶೆಟ್ಟಿ ತಂತ್ರ ಮಾಡಿ, ನಾಯಕ ಬಾವಿಯಲ್ಲಿ ಬೀಳುವಂತೆ ಮಾಡಿ ನಾಗಕನ್ನಿಕೆಯನ್ನು ಅಪಹರಿಸಿ ತಂದು, ಚಂದ್ರಸೇನನಿಗೆ ಕೊಟ್ಟು; + ಮುಂದೆ ಗಂಡಭೇರುಂಡ – ಹೆಣ್ಣುಭೇರುಂಡ - ಶಾಪದಿಂದ ಪಕ್ಷಿಗಳಾದ ಗಂಧರ್ವರು ಇವರು ಹಕ್ಕಿರೂಪದಿಂದ ಕಥೆ ಹೇಳಿ ಮನುಷ್ಯರಾದರು. +ಹೀಗೆ ಅಸಾಮಾನ್ಯ ಘಟನೆಗಳಿಂದ ಕಥೆ ಸುಖಾಂತವಾಗುವಂತೆ ಯೋಜಿಸಿದ ಕಥೆಗಾರನ ಕೌಶಲ್ಯವು ಮೆಚ್ಚುವಂಥದು. +‘ಶಾಪ ಪರಿಹಾರ’ ಕಥೆಯಲ್ಲಿ ಹೆಂಗಸು ತಂಬೂರಿ, ಇಲ್ಲವೆ ವೀಣೆ ಆಗುವ ಪ್ರಸಿದ್ಧ ಆಶಯವು ಮುನಿಗಳು-ಮಾಲಿಕರು ಅವಳನ್ನು ಒಬ್ಬರಾದ ಮೇಲೆ ಒಬ್ಬರು ಆಶಿಸುವ ಆಶಯಗಳೂ ಹೊಸವಲ್ಲ. +ಒಬ್ಬ ಒಂದು ಸೊಟ್ಟೆ (ದೊಣ್ಣೆ) ಕೊಟ್ಟು ತಂಬೂರಿ ಪಡೆದನು. +ಇನ್ನೊಬ್ಬ, ಮಾಟದ ಜೋಳಿಗೆ ಕೊಟ್ಟು ಪಡೆದ. +ಈ ಜೋಳಿಗೆಗೆ ಮುಂದೆ ಕಥೆಯಲ್ಲಿ ಯಾವ ಸ್ಥಾನವೂ ಇಲ್ಲ. +ಇನ್ನೊಬ್ಬ ಹಗ್ಗ ಕೊಟ್ಟು ತಕ್ಕೊಂಡ. +ದೇವಕನ್ನೆ ನರ್ತಿಸಲು ದೇವೇಂದ್ರನ ಬಳಿಯಲ್ಲಿ ತಪ್ಪಿದ್ದರಿಂದ ಮೂರು ಸಾರೆ ಕ್ರಮೇಣ ಮರ, ಶಿಲೆ, ಉಸುಕು ಆಗುವ ಶಾಪಗಳಲ್ಲಿ ಸ್ವಲ್ಪ ವೈಶಿಷ್ಟ್ಯ ಉಂಟು. +ಆದರೆ, ತಂಬೂರಿಯು ಅವೇಳೆಯಲ್ಲಿ ಶಬ್ದ ಮಾಡಲು ಬಂದಳು. +ಮೊದಲು ಹಕ್ಕಿ, ಎರಡನೇ ಸಲ ಹುಡುಗರ ಹಾಣಿ ಕೋಲು, ಮೂರನೇ ಸಲ ಹುಡುಗರ ಚಂಡು ದೇವೇಂದ್ರ ನರ್ತನಕ್ಕೆ ಅಡ್ಡಿಯಾಗಿ, ದೇವೇಂದ್ರನ ಕೋಪಕ್ಕೆ ಕಾರಣವಾಯಿತು. +ಆಗ ಶಾಪ ಕೊಟ್ಟನು ಎಂಬಲ್ಲಿ ಸ್ವಲ್ಪ ಹೊಸತನವಿದೆ. +ಉಳ್ಳವರು ಇಲ್ಲದವರು:ಈ ಕಥೆಯು ಬಡವರು, ಬಲ್ಲಿದರು ಭಿನ್ನರೀತಿಯಿಂದ ವರ್ತಿಸಬಹುದು ಎಂಬ ಲೋಕ ರೀತಿಯನ್ನು ತಿಳಿಸುವ ದೃಷ್ಟಾಂತ ಕಥೆ. +ಇದನ್ನು ನನಗೆ ಬಹಳ ಹಿಂದೆ 1962ರಲ್ಲಿ ಹೇಳಿದವರು ನಮ್ಮ ಕುಟುಂಬವರ್ಗಕ್ಕೆ ಸೇರಿದ್ದ ಹಲಸು ಮಾವು ಎಂಬ ಮಾಸೂರು ಭಾಗದ ಭಾಗೀರಥಿ ಮಂಜ ಹೆಗಡೆ. +ಪ್ರಾರಂಭದಲ್ಲೇ ನಲವತ್ತಕ್ಕಿಂತಲೂ ಹೆಚ್ಚು ಕಥೆಗಳನ್ನು ಬರೆದುಕೊಳ್ಳಲು ಅನುಕೂಲವಾಗುವಂತೆ ಹೇಳಿದ್ದರು. +ಅವಳು ಹೇಳಿದ್ದು ಹವ್ಯಕರ ಮನೆ ಮಾತಿನ ಶೈಲಿಯಲ್ಲಿ. +ಆದರೆ, ನನ್ನ ಪ್ರಾರಂಭಿಕ ಸಂಕಲನ ಕಾರ್ಯದಲ್ಲಿ ಹಲವು ಕಥೆಗಳನ್ನು ಮಾತ್ರ ಶುದ್ಧ ಭಾಷೆಯಲ್ಲಿ ಬರೆದುಕೊಂಡಿದ್ದೆನು. +ಇದಕ್ಕೆ ಒಂದು ಕಾರಣವೆಂದರೆ, ಈ ಆಡು ಮಾತು ನನಗೆ ತುಂಬಾ ಪರಿಚಿತವಾದದ್ದು. +ಯಾವಾಗ ಬೇಕಾದರೂ ಈ ಶುದ್ಧ ಭಾಷಾರೂಪವನ್ನು ಹವ್ಯಕರ ಆಡುಮಾತಿಗೆ ತದ್ವತ್ತಾಗಿ ರೂಪಾಂತರಿಸಬಹುದು. +‘ಬೆಣ್ಣೆಯಿದ್ದರೆ ತುಪ್ಪ ಮಾಡುವುದು ಕಷ್ಟವಲ್ಲ’ ಎಂದ ಹಾಗೆ ಉದಾಹರಣೆಯಿಂದ ತೋರಿಸಲು ಈ ಚಿಕ್ಕ ಕಥೆಯನ್ನೇ ಆರಿಸಿಕೊಂಡುದು. +ಮೂಲ ಹವ್ಯಕರ ಆಡುಮಾತಿನಲ್ಲಿ ಈ ಕಥೆಯ ಸರಣಿಯನ್ನು ಬರೆದು ತಿಳಿಯಪಡಿಸುತ್ತಿದ್ದೇನೆ. +ಇದು ‘ಅತಿಮಾನುಷ ಸಹಾಯಕರು’ ಎಂಬ ಕಥಾವರ್ಗಕ್ಕೆ ಸೇರುತ್ತದೆ. +ಇಲ್ಲಿ ಬರುವ ಈಶ್ವರ–ಪಾರ್ವತಿ ಇವರು ಸಾಮಾನ್ಯರ ರೂಪದಲ್ಲಿ ಬರುತ್ತಾರೆ. +ದೇವರಿಗೆ ಅಸಾಧ್ಯವಾದುದು ಯಾವುದೂ ಇಲ್ಲ. +ತೀರ ಬಡ ಮುದುಕಿಗೆ ಐಶ್ವರ್ಯ ಬರುವಂತೆ ಅವರು ಮಾಡಿದರು. +ಕಥೆಯು ದೊಡ್ಡ ರಾಜನ ಮನೆಯ ಮದುವೆಯ ಸಂದರ್ಭದ ಚಿಕ್ಕ ವರ್ಣನೆಯಿಂದ ಪ್ರಾರಂಭವಾಗುತ್ತದೆ. +ಕಥೆಗಳಲ್ಲಿ ಸಾಮಾನ್ಯವಾಗಿ ಬರುವಂತೆ ಇಲ್ಲಿ ಪಾರ್ವತಿಯು ತನ್ನ ಮಾತನ್ನು ಈಶ್ವರನು ನಡೆಯಿಸುವಂತೆ ಮಾಡಿ, ಸಿರಿವಂತರ ಮನೆಗೆ ಹೋಗಲು ಒಲ್ಲದ ಗಂಡನನ್ನು ಅಲ್ಲಿಗೆ ಕರೆತರುತ್ತಾಳೆ. +ಅವರು ಬಂದುದು ಭಿಕ್ಷುಕರ ವೇಷದಲ್ಲಿ. +ಇವರನ್ನು ಈಶ್ವರನ ನಿರೀಕ್ಷೆಯಂತೆ ಬೇಡುವ ಮುದುಕ-ಮುದುಕಿ ಎಂದು ತಿರಸ್ಕಾರದಿಂದ ಅನಾದರಿಸಿದರು. +‘ಸಟ್ ಮುಡಿ’ ಎಂದರೆ ಹಿಂದಿನ ಕಾಲದಲ್ಲಿ ಮದುವೆಯಲ್ಲಿನ ಕೊನೆಯ (ಆರನೆಯ) ದಿನದಲ್ಲಿ ಗಂಡನ ಮನೆ ಸೇರಿದ ನವವಧು ಅಡುಗೆ ಮಾಡಿ, ಅನ್ನದ ಪಾತ್ರೆಯಲ್ಲಿ ಸಟ್ಟುಗವನ್ನು ತಲೆಕೆಳಗಾಗಿ ಇಕ್ಕುವುದು-- ‘ಸಟ್ಟುಗ ಮುಹೂರ್ತ’. +ಇಲ್ಲಿ, ಆ ದಿನ ಈ ಬೇಡುವವರಿಗೆ ಅನ್ನ ಹಾಕದೆ ಒನಿಕೆ ತಂದು ಹೊಡೆವ ಹೆದರಿಕೆ ಹಾಕಿ ಓಡಿಸಿದರು. +ಭಿಕ್ಷುಕ ವೇಷದವರ ಅನಾದರಣೆಯ ಫಲವೆಂದರೆ ಮನೆಯ ಕೋಳ್ಗಂಬಕ್ಕೆ ಬೆಂಕಿ ಹತ್ತಿದ್ದು, ರಾಜನ ಪರಿವಾರದವರು ಅದನ್ನು ನಂದಿಸಿದುದು. +ಇವರು ಬಡ ಅಜ್ಜಿಯ ಮನೆಗೆ ಹೋದರು. +ಮಗನು ಸತ್ತು ಹೋಗಿದ್ದರೂ ಅಜ್ಜಿಯು ಇವರನ್ನು ಕರೆದಳು. +ಊಟಕ್ಕೆ ಸಹ ಸಿದ್ಧತೆ ಮಾಡಲು ಪಾರ್ವತಿಗೆ ಹೇಳಿದಳು. +ದೇವರ ಮಹಿಮೆಯಿಂದ ಎಲ್ಲ ಶ್ರೀಮಂತಿಕೆ ಅಜ್ಜಿಗೆ ಬಂತು. +18 ವರ್ಷಗಳ ಹಿಂದೆ ಸತ್ತುಹೋಗಿದ್ದ ಅವಳ ಮಗನನ್ನು ಬದುಕಿಸಿದ್ದು ಕಟ್ಟುಕಥೆಯ ಪರಮಾವಧಿ. +ಇಲ್ಲಿ ವಿಶಿಷ್ಟವಾದ ಆಶಯವಿದೆ. +ಏನೆಂದರೆ, ಈಶ್ವರ ಕಮಂಡಲು ನೀರು ತಳಿದು, ಅವ ಹದಿನೆಂಟು ವರ್ಷಗಳ ಹುಡುಗನಾಗಿ ಬಂದುದು. +ಹುಡುಗನಿಗೆ ಹೆಣ್ಣು ಕೊಡಲು ತೌರಮನೆಯ ಅಣ್ಣ-ತಮ್ಮ ಒಪ್ಪಲಿಲ್ಲ. +ಕಿರಿಯನು, ‘ಒಂದು ಹೇರು ರೂಪಾಯಿ ಕೊಟ್ಟರೆ ಮಾತ್ರ ಮಗಳನ್ನು ಕೊಡುವೆ’ ಎಂದನು. +ಕೊನೆಯಲ್ಲಿ ಕಿರಿಯನಿಗೆ ಆ ಕೂಸನ್ನೇ ಮದುವೆ ಮಾಡಿದರು ಎಂಬಲ್ಲಿ ಗೊಂದಲವಿದೆ. +ಅಜ್ಜಿ ಮಗನಿಗೆ ಕಿರಿಯ ತಮ್ಮನ ಮಗಳನ್ನೇ ಕೊಟ್ಟು ಮದುವೆ ಮಾಡಿದರು ಎಂದರೆ ವಿರೋಧವಾಗದು. +ಹಿಂದಣ ಕಾಲದ ಮದುವೆಯ ಕ್ರಮಗಳನ್ನು ಈ ಕಥೆಯಲ್ಲಿ ಕಾಣಬಹುದು. +ಅಲ್ಲಲ್ಲಿ ಅಸಂಭಾವ್ಯವಾಗಿದ್ದುದು ದೊಡ್ಡ ದೋಷ. +“ದೊಡ್ಡವರ ಮನೆಯ ಮಾತು ಚೆಂದ, ಬಡವರ ಮನೆಯ ಊಟ ಚೆಂದ” ಎಂಬ ಗಾದೆಯಿದೆ. +ಆದರೆ, ಈ ಗಾದೆ ಎಲ್ಲ ಸಾರಿಯೂ ಸತ್ಯವಾಗಿರದು. +ಶ್ರೀಮಂತರ ಸೊಕ್ಕು, ಅಟ್ಟಹಾಸ, ಆಡಂಬರ ಪ್ರದರ್ಶನ ಇರುವುದೇ ಹೆಚ್ಚು. +ಬಡವರೊಡನೆ ಅವರ ಮಾತೂ ಗಡಸು. +ಒನಿಕೆ ತಕ್ಕೊಂಡು ಹೊಡೆದು ಓಡಿಸುವಷ್ಟರ ಮಟ್ಟಿಗೂ ಹೋಗಬಲ್ಲರು. + ‘ಪಟ್ಟಣ ಶೆಟ್ಟಿ ಕತೆ’ ಎಂದಿರುವ ಕಥೆಗೆ ‘ವಜ್ರಕುಮಾರ’ ಎಂಬ ಹೆಸರನ್ನು ಇಡಲಾಗಿದೆ. +ಈ ಕಥೆಯಲ್ಲಿ ಮರದ ತುದಿಯ ಮೇಲೆ ಏಳು ಆನೆ ಮೇಯುವ ಆಶಯ ಅಸಮಂಜಸವೆಂದೆನಿಸಿದರೂ ನೆಲದ ಮೇಲಿಂದಲೇ ತಗ್ಗಾಗಿರುವ ಮರದ ತುದಿಯ ಎಲೆಗಳನ್ನು ಮೇಯುತ್ತವೆ ಎಂಬ ವಿವರಣೆಯನ್ನು ಕೊಡಬಹುದು. +ಇಲ್ಲಿ ರಾಣಿಯೇ ಈ ಸುದ್ದಿ ಹೇಳಿದ್ದು -– ರಾಜ ಸುಳ್ಳು ಎಂದು ಹೇಳಿದ್ದಲ್ಲದೆ ಪಂಥಕಟ್ಟಿ ದುಡುಕಿದನು. +ಸಾಧ್ವಿಯಾದ ರಾಣಿಯು ‘ತನ್ನ ತಲೆ ಹೋದರೆ ಹೋಗಲಿ, ರಾಜನು ಸಾಯುವ ಪ್ರಸಂಗ ಬೇಡ’ ಎಂದು ಭಾವಿಸಿ ಬೇರೆ ಕಥೆಯಲ್ಲಿಯಂತೆ ಮಾತನ್ನು ಹಿಂತೆಗೆದುಕೊಳ್ಳುವುದಿಲ್ಲ. +ಆಳುಗಳೇ ಇಲ್ಲಿ ಸಾರಾಸಾರ ವಿಚಾರ ಮಾಡಿ ಸುಳ್ಳು ಹೇಳಿ ರಾಜನ ಪ್ರಾಣ ಉಳಿಸಿದರು. +ಕೊಲೆಗಡುಕರೂ ‘ಕತ್ತಿಯ ಮೇಲೆ ಶಿಶು ಹೊಳೆಯಿತು’ ಎಂದು, ‘ವಧಿಸಿದರೆ ಘೋರ ಪಾಪ’ ಎಂದು ಹೇಳಿ, ಸಿಡಿಲು ಎರಗೆ ಭೂಮಿಯಲ್ಲಿ ಬಾವಿಯ ಕಡೆಗೆ ಬಿಟ್ಟು ಬಂದರು. +ಸಿಡಿಲೆರಗಿದ ಬಾವಿಯಲ್ಲಿ ಶಿಶು ಅತ್ತುದನ್ನು ತಿಳಿದು ಸೇವಕರು ಹೇಳಿದ ಮೇಲೆ ಕರೆದುಕೊಂಡು ಬಂದು ಜೋಪಾನ ಮಾಡಿದನು ಶೆಟ್ಟಿ. +ಮಹಾಶೇಷನ ಮಗಳು ಪಾತಾಳದಿಂದ ಬಂದವಳು, ಈ ವಜ್ರಕುಮಾರನನ್ನು ನೋಡಿ ಗಡಬಡೆಯಿಂದ ಎರಡು ವಜ್ರದ ಹರಳು ಬಿಟ್ಟು ಪಾತಾಳಕ್ಕೆ ಹೋಗಲು ಹಳ್ಳಕ್ಕೆ ಧುಮುಕಿದಳು. +ಶೆಟ್ಟಿ ರಾಜನಿಗೆ ಈ ಹರಳು ನೀಡಿದ ಮೇಲೆ-- ‘ಎಲ್ಲಾ ಹರಳುಗಳನ್ನೂ ಆಮೇಲೆ ಅವುಗಳಿಂದ ಆಡುವ ಹುಡುಗಿಯನ್ನೂ ತಂದು ಕೊಡಬೇಕು’ ಎಂದು ರಾಜ ವಜ್ರಗೆ ಜೋರು ಮಾಡಿದನು. +ಮುಂದೆ, ‘ಶೇಷನನ್ನು ಕೊಂದು ಹುಡುಗಿಯನ್ನು ತರಬೇಕು’ ಎಂಬಲ್ಲಿ ಯಥಾಪ್ರಕಾರ ಶೇಷನ ಜೀವದ ಕಾಯಿ ಕೇಳುವುದು ಮುಂದೆ ಇಲ್ಲಿ ಶೆಟ್ಟಿಯ ಮಕ್ಕಳು, ಹುಡುಗಿಯ ಆಶೆಗೆ ವಜ್ರನನ್ನು ಮೇಲಕ್ಕೆತ್ತದೆ ಅವಳನ್ನು ಕರೆತಂದ ಘಟನೆ ಹೊಸದಲ್ಲ, ಹಲವು ಕಥೆಗಳಲ್ಲಿರುವುದೇ. +ನಿರೂಪಣೆಯಲ್ಲಿ ಅಗತ್ಯ ವಿವರ ತಂದುದರಿಂದ ಕಥೆ ಓದಿಸಿಕೊಂಡು ಹೋಗುತ್ತದೆ. +ಇದು ನಾಡವರ ದೇಸಿ ಮಾತಿನಲ್ಲಿ ಹೇಳಿದ ಕಥೆ. +ತಂತ್ರ ಅತಂತ್ರ:ಈ ಕಥೆಯಲ್ಲಿ ಬರುವ ಗರುಡನಂತಹ ವಿಮಾನದ ಆಶಯವನ್ನು ಹೋಲುವ ಆಶಯವು ಕಥೆಯಲ್ಲೂ ಇದೆ. +ಆದರೆ, ಈ ಕಥೆಯಲ್ಲಿ ಮುಖ್ಯ ವೈಶಿಷ್ಟ್ಯವಿರುವುದು-- ಕೃಷ್ಣನ ಹಾಗೆ ಸೋಗು ಹಾಕಿದ ವಿಠೋಬಾಚಾರಿಗೆ ಕೃಷ್ಣನು ಮುಸಲಾಯುಧ ಬಿಟ್ಟು ಅವನ ಟೊಂಕ ಮುರಿವಂತೆ ಶಿಕ್ಷೆ ಕೊಟ್ಟುದರಲ್ಲಿ. +ಇಲ್ಲಿ ಗರುಡನ ಆಧಾರದ ವಿಮಾನ ತಾಸಿಗೆ ನಾಲ್ವತ್ತು ಯೋಜನ ಹಾರುವಂಥದು. +ಗರುಡನ ಆಕಾರ ಯಾಕೆ ಅಂದರೆ-- ಆಚಾರಿ ಕೃಷ್ಣನೇ ಎಂದು ತಿಳಿದು, ರಾಜನ ಮಗಳು ಒಲಿಯಲಿ ಎಂಬ ಉದ್ದೇಶ. +ರಾಜನ ಮಗಳು ಇವನ ಮಾತಿನಿಂದಲೂ ಗರುಡ ವಿಮಾನ ವಾಹನದಿಂದ ಇವನೇ ಕೃಷ್ಣದೇವ ಎಂದು ತಿಳಿದು, ಇವನಿಗೆ ಈಲಾಗಿ ಗರ್ಭಿಣಿಯಾದಳು. +ಇದಕ್ಕೆ ರಾಜನ ಮಗಳು ಪ್ರಾಯ ಬಂದರೂ ಮದುವೆಯಾಗಲು ಅನುಕೂಲತೆಯನ್ನು ರಾಜ ಮಾಡದಿದ್ದುದು ಆಚಾರಿಯ ಪ್ರೇಮಕ್ಕೆ ಅನುಕೂಲವಾಯಿತು. +ನಾರದನೂ, ಕೃಷ್ಣನೂ ಈ ಕಥೆಯಲ್ಲಿ ಪ್ರವೇಶಿಸುತ್ತಾರೆ. +ಸಾಮಾನ್ಯ ರೂಢಿಯ ಅರ್ಥ ಮಾಡುವುದಾದರೆ-- ಕೃಷ್ಣ ಇಲ್ಲಿ ಪೊಲೀಸರ ಮುಖ್ಯಸ್ಥ. +ಅವನು ಬಲರಾಮನ ಮುಸಲಾಯುಧ ಬಿಟ್ಟಿದ್ದ. +ಅದು ಪೊಲೀಸನ ಲಾಠಿಯಂತೆ ಇದೆ. +ಟೊಂಕಮುರಿದ ವಿಠೋಬಾಚಾರಿಯ ಕಥೆ ಮುಗಿದಂತೆಯೇ. +ಈ ಕಥೆಯ ಮುಕ್ತಾಯದಲ್ಲಿ ಅತಿಶಯ ತಿರುವು ಇದಕ್ಕೆ ಮಹತ್ವವನ್ನು ನೀಡುತ್ತದೆ. +ತನ್ನ ಪ್ರಿಯಕರನಾದ ಮೇಲೆ ತಂದೆಗೆ ಹೇಳಿದ ಅವಳ ನಿರ್ಣಯ, ‘ನನ್ನ ಪ್ರಿಯನ ಟೊಂಕ ಮುರಿದಿರುವುದರಿಂದ ಅವನ ಸೇವೆಯಲ್ಲೇ ಕಾಲ ಕಳೆವೆ’ ಎಂಬುದು ಪ್ರೇಮಪಿಪಾಸೆಯಲ್ಲಿ ಮೆಚ್ಚಿದವನೊಡನೆ ಬೆರೆತ ರಾಜನ ಮಗಳು ಅವನ ಸೇವೆಯಲ್ಲೇ ತನ್ನ ತ್ಯಾಗ ಜೀವನವನ್ನು ಕಳೆದುದು ಕಥೆಗೆ ಅತಿಶಯ ಮಹತ್ವ ನೀಡುತ್ತದೆ. +ಇಲ್ಲಿನ ನಾಡವರ ದೇಸಿ ಮಾತು ಮತ್ತೊಂದು ವೈಶಿಷ್ಟ್ಯ. +ತಕ್ಕ ಶಾಸ್ತಿ:ಈ ಕಥೆಯು ಮಾಂತ್ರಿಕ ಕಥೆಯಾಗಿದೆ. +ಇಲ್ಲಿ ದೇವಕನ್ಯೆಯರು ಮಂತ್ರಶಕ್ತಿಯುಳ್ಳವರು; +ಒಬ್ಬ ಮುದಿ ಸನ್ಯಾಸಿಯೂ ಮಾಂತ್ರಿಕ ಶಕ್ತಿಯುಳ್ಳವನೇ. +ದೇವಕನ್ಯೆಯರು ಏಳು ಮಂದಿ, ರಾಜಕುಮಾರರು ಏಳು ಮಂದಿ. +ಕಿರಿಯ ದೇವಕನ್ಯೆ ಕಿರಿರಾಜಕುಮಾರನನ್ನು ಮೋಹಿಸಿ ಕರೆದುಕೊಂಡು ಹೋಗುವಾಗ ಎಲ್ಲರನ್ನೂ ಕರೆತಂದಳು. +ಇಲ್ಲಿ ಒಬ್ಬೊಬ್ಬ ರಾಜಕುಮಾರರು,ಒಬ್ಬೊಬ್ಬ ದೇವಕನ್ಯೆಯ ರೂಮಿನಲ್ಲಿ ಸಂಗಡ ಇದ್ದು ಸಂಗಸುಖ ಪರಸ್ಪರರು ಪಡೆದ ಮೇಲೆ-- ಹಿರಿ ದೇವಕನ್ಯೆಗೆ ತಾವು ದೇವತೆಗಳು, ಈ ಮಾನವರನ್ನು ಕೊಲ್ಲಬೇಕು ಎಂಬ ಬುದ್ಧಿ ಬಂತು. +ಇಲ್ಲಿ ಈ ಕನ್ಯೆಯರು ಅಪ್ಸರೆಯರಂತೆ ನೀತಿಗೆ ಮಹತ್ವ ಕೊಟ್ಟವರಲ್ಲ ಎಂದು ತಿಳಿಯಬಹುದೇನೋ. +ಕಿರಿಯವಳು ಇದಕ್ಕೆ ಅಪವಾದ. +‘ಬರೇ ಕೇವಲ ದೇಹ ಸುಖಕ್ಕಿಂತ ಪ್ರೇಮ ಸುಖ ಹೆಚ್ಚಿನದು’ ಎಂದು ಇಲ್ಲಿ ಕತೆಗಾರ ನಿರೂಪಿಸಿದಂತಿದೆ. +ಆದರೆ, ಕಿರಿ ತಂಗಿಯ ದೆಸೆಯಿಂದ ಹಿರಿಯಳು ಹಾದಿಗೆ ಬಂದು ತನ್ನ ಸಂಗಡ ಉಳಿದವರೊಡನೆ ಹೊರಟಳು. +ಇಲ್ಲಿ ಆತ್ಮರಕ್ಷಣೆಗಾಗಿ ತಡೆಯೊಡ್ಡಿ ಪಲಾಯನ ಮಾಡುವದು, Obstacle fight ಇಲ್ಲೂ ಇರುತ್ತವೆ ಎಂಬ ವಿವರದಲ್ಲಿ ವೈಶಿಷ್ಟ್ಯಗಳಿವೆ. +ದೇವಕನ್ಯೆಯರು ಇಲ್ಲಿ ಸುರಂಗದಲ್ಲಿ ತೊಟ್ಲಾಟ ಆಡುವಾಗ, ಸರಪಳಿ ಹಿಡಿದು ಏಳೂ ಕುಮಾರರು ಜಗ್ಗಿ, ‘ಕುದುರೆ ಕಟ್ಟಿಯಾದರೂ ಎಳೆಯಬೇಕು’ ಎಂದು ಕಿರಿಯಳು ಹೇಳಿದಂತೆ ಎಳೆಸಿದ ಮೇಲೆ ಹಿರಿಯಳೂ ಈಲಾದಳು. +ಇಲ್ಲಿನ ಸನ್ಯಾಸಿಯು ದುಷ್ಟನಾದರೂ ವಯೋಧರ್ಮದಿಂದ ಕಾಮವಿರಹಿತ ಸೌಂದರ್ಯ, ಪ್ರೇಮ ಮಾಡುವ ಹಂತಕ್ಕೆ ಬಂದವನು. +ಹದಿನಾರು ಸ್ವರ್ಗಗಳಲ್ಲಿ ಒಂದರಲ್ಲಿನ ರಹವಾಸಿ(ದೇವತೆ)ಗಳು, ‘ದೂರದಿಂದ ಸುಂದರ ಹೆಣ್ಣು ನೋಡಿಯೇ ಸುಖ ಪಡುವರು’ ಎಂದು ಇರುವಂತೆ ಈ ಸನ್ಯಾಸಿಯ ಜಾಯಮಾನ. +ಸುಂದರಿಯನ್ನು ತನ್ನ ಮಾಟದ ಶಕ್ತಿಯಿಂದ ನಾಯಿಯ ರೂಪಕ್ಕೆ ಪರಿವರ್ತಿಸಿ ಕರೆದುಕೊಂಡು ಹೋಗುವುದಿದೆ. +‘ಕಲ್ಲ ಮಟ್ಟಿನ ನಾಣ ಜೋಗಿ’ ಮುಂತಾದ ಕಥೆಗಳಲ್ಲಿ ಹೆಣ್ಣನ್ನು ಜಾಲನಾಯನ್ನಾಗಿ ಮಾಡಿಕೊಂಡು ಅಪಹರಿಸುವುದಿದೆ. +ಇಲ್ಲಿನ ಕಥೆಯೂ ಇದೇ ಮಾಂತ್ರಿಕ ಕಥಾವರ್ಗಕ್ಕೆ ಸೇರುತ್ತದೆ. +ಆತ ಅಪಹರಿಸಿದ ಸುದ್ದಿ ತಿಳಿದ ಏಳೂ ಕುಮಾರರು ಅರ್ಧ ಹಾಲನ್ನು ಕುಡಿದು, ಅರ್ಧ ಹಾಲನ್ನು ಬಿಟ್ಟು ಅವನನ್ನು ಕೊಲ್ಲಬೇಕೆಂದು ಕುದುರೆ ಹತ್ತಿ ಹೊರಟವರನ್ನು ಅವನು ಕಲ್ಲು ಮಾಡಿದನು. +ಇಂಥ ಕಥೆಗಳಲ್ಲಿ ಬರುವಂತೆ ಸನ್ಯಾಸಿಯ ಜೀವದ ಕಾಯಿ ಎಲ್ಲಿದೆ ಎಂದು ಹೇಳುವ ಯುಕ್ತಿ ಇಲ್ಲೂ ಇದೆ. +ಆದರೆ, ಸನ್ಯಾಸಿಯ ಜೀವವು ದೇವಲೋಕದ ಏಳು ಬಿಳಿಯಾನೆ ಬಂದು ಮದಗದ ಬಾಗಿಲು ತೆಗೆಯಿಸಿ, ಮೊಸಳೆಯ ತಲೆ ಒಡೆದು ಅದರಲ್ಲಿದ್ದ ಪೆಟ್ಟಿಗೆಯಲ್ಲಿದ್ದ ಗಿಳಿಯನ್ನು ನಾಶ ಮಾಡುವ ಈ ಆಶಯ ಸರಪಳಿ ವಿಶೇಷವಾದದ್ದಾಗಿದೆ. +‘ತಕ್ಕ ಶಾಸ್ತಿ’ ಕಥೆ ಪ್ರಸಿದ್ಧ ಕಥೆಯ ಜಾಡಿನಲ್ಲೇ ಸಾಗಿದರೂ ಅದು ಹೊಂದಿರುವ ವೈಶಿಷ್ಟ್ಯಗಳನ್ನು ನೋಡಿದೆವು. +ಇದನ್ನು ಹೇಳಿದವರು ದಕ್ಷಿಣ ಕನ್ನಡ ಶಿರೂರಿನವರು. +ಆದರೆ, ನಿರೂಪಕರು ಕುಂದಾಪುರದ ಕನ್ನಡ ದೇಸಿ ಮಾತಿನಲ್ಲಿ ಕಥೆ ಹೇಳಿಲಿಲ್ಲ. +ಕೇಂಡ್ಲ, ಹೇಳಿದ್ಲ್, ಹೇಳ್ತು. . . ಮುಂತಾದ ಅಲ್ಲಿಯ ಕೆಲವೇ ಶಬ್ದಗಳು ಇಲ್ಲಿ ಇಣುಕುತ್ತವೆ. +ನಿರೂಪಕರು ಬಹಳ ಎಚ್ಚರಿಕೆಯಿಂದ ಯಾವ ಹಂತದಲ್ಲೂ ತಪ್ಪದೆ ವಿವರ ಹೇಳಿದುದು ಮೆಚ್ಚುವಂತಿದೆ. +‘ಸನ್ಯಾಸಿಯ ಹರಳಿನ ಕರಡಿಗೆ ಹುಗ್ಸ್ ಇಡಬೇಕು. +ಅದು ಇಲ್ಲದಿದ್ದರೆ ಸನ್ಯಾಸಿಯ ಮಾಟ ನಡೆವುದು’ ಎಂಬ ಎಚ್ಚರಿಕೆಯೂ ಉಂಟು. +ಎಚ್ಚರಿಕೆಯ ಒಳ್ಳೇ ಇನ್ನೊಂದು ಉದಾಹರಣೆ- ಕಲ್ಲಾಗಿದ್ದವರು ಏಳೂ ಮಂದಿ ಜೀವ ಬಂದು ಎಚ್ಚತ್ತು, ಹುಡುಗನೇ ಕಿರಿಕನ್ಯೆಯನ್ನು ಕರೆದುಕೊಂಡು ಹೋದವ ಎಂದು ಅವನನ್ನು ಹೊಡೆಯಲು ನೋಡಿದ್ದು; ಇದು ತೀರಾ ಸಹಜವಾದ ರೀತಿಯ ಸೂಕ್ಷ್ಮ ಬಣ್ಣನೆ, ಕಲೆಗಾರಿಕೆ. +ಅಜಾಪ್ತಮಾಸೀ ವಿದ್ಯಾ : ಇದು ಇನ್ನೊಂದು ಮಾಂತ್ರಿಕ ಕಥೆ. +“ಅಜಾಪ್ತಮಾಸೀ ವಿದ್ಯಾ”- ಈ ಹೆಸರಿನ ಅರ್ಥವೇನು ಎಂಬುದನ್ನು ವಿಚಾರ ಮಾಡಬಹುದು. +ಇಲ್ಲಿ ‘ಅಜ’ ಅಂದರೆ- ಬ್ರಹ್ಮ; ನಾಲ್ಕು ಮುಖ ಉಳ್ಳವನು. +ಬ್ರಹ್ಮನ ನಾಲ್ಕು ಮುಖ ಅಂದರೆ ನಾಲ್ಕು ವೇದಗಳು. +ನಾಲ್ಕು ವೇದಗಳ ‘ಆಪ್ತ’ ಅಂದರೆ- ‘ಮಂತ್ರ’. +ಅನಾದಿಕಾಲದಿಂದ ಇರುವ ವೇದಗಳೇ ಮಂತ್ರದ ಆದಿ ರೀತಿಯವು. +ಅಜ ನಾಲ್ಕು ವೇದಗಳ ಆಪ್ತಮಂತ್ರಗಳೇ. +ಮುಂದಿನ ‘ಮಾಸೀ’ ಎಂಬುದು ‘ಮಾಯಾ’ ಎಂಬುದರ ತಿಳಿವಳಿಕೆಯ ಮಾಸಿದ ರೂಪ-- ಮಾಯಿಸು, ಮಾಸು. +‘ಅಜಾಪ್ತಮಾಸೀವಿದ್ಯಾ’-- ‘ಮಂತ್ರಗಳಿಂದ ಮಾಯಾಶಕ್ತಿಯನ್ನು ಪಡೆವ ವಿದ್ಯೆ’. +ಈ ಕಥೆಯಲ್ಲಿ ಒಂದು ರೂಪ ಮಾಯವಾಗಿ, ಬೇರೆ ರೂಪಧಾರಣ ಮಾಡುವ ಜಾದೂ ವಿದ್ಯೆಯ ರೀತಿ ಇರುತ್ತದೆ. +ಚತುರ್ವೇದಗಳಲ್ಲಿ ಅಥರ್ವಣವೇದದಲ್ಲಿ ಮಂತ್ರ-ಮಾಟಗಳ ವಿಷಯವೇ ಇರುತ್ತದೆ. +ಜಾದೂ ವಿದ್ಯೆಯಲ್ಲಿ ಸತ್ಯವನ್ನು ಬೇರೆ ರೀತಿಯಿಂದ ತೋರಿಸುವುದಿರುತ್ತದೆ. +ಆದರೆ, ಈ ಮಾಂತ್ರಿಕ ವಿದ್ಯೆಯಲ್ಲಿ ನಿಶ್ಚಯವಾಗಿಯೇ ರೂಪಪರಿವರ್ತನೆಯಾಗಿ, ಪರಿವರ್ತಿತ ಪ್ರಾಣಿಯ ಸಹಜ ವರ್ತನೆ ಕಾಣಬರುತ್ತದೆ. +ಜಾದೂ, ಇಂದ್ರಜಾಲ-- ಇವು ಮರೆ ಮೋಸದ ಕೃತ್ಯಗಳು. +ಇಲ್ಲಿ (ಕಥೆಯಲ್ಲಿ)ಹೂಬೇಹೂಬು ಪರಿವರ್ತನವಿದೆ. +ಇಲ್ಲಿ ಕಮಲದ ಹೂವಾದ ರಾಜಕುಮಾರನು ನಿಜವಾಗಿಯೇ ಕಮಲವಾಗಿ ಪರಿವರ್ತಿತನಾಗಿದ್ದವನು. +ನಮ್ಮ ಅನೇಕ ಕಥೆಗಳಲ್ಲಿಯಂತೆ ಮಾಂತ್ರಿಕನ ಮಗಳು ಒಬ್ಬ ಸುಂದರ ಪುರುಷನನ್ನು ಪ್ರೇಮಿಸಿ, ಅವನನ್ನುಳಿಸಲು ಮಂತ್ರವಿದ್ಯೆಯನ್ನು ಅವನಿಗೆ ಹೇಳಿಕೊಡುತ್ತಾಳೆ. +ಇಲ್ಲೂ ‘ಕನ್ಯಾ ವರಯತೇ ರೂಪಂ’ ಎಂಬುದಿದೆ. +ವಿದ್ಯೆ ಕಲಿಸಿದ ಮೇಲೆ ಗುರುವಾಗುವುದರಿಂದ ‘ಮದುವೆಯಾದ ಮೇಲೆಯೇ ನಿನ್ನಿಂದ ವಿದ್ಯೆಯನ್ನು ಪಡೆವೆ’ ಎಂದು ರಾಜಕುಮಾರನಿಂದ ಹೇಳಿಸಿದುದು ನಿರೂಪಕರ ನೈಪುಣ್ಯವನ್ನು ತೋರಿಸುತ್ತದೆ. +ಅವ ಸೀಳಿದ ಮಾಂತ್ರಿಕನ ದೇಹದ ಮೂರು ಭಾಗ ಕೂಡಿದರೆ ಮತ್ತೆ ಜೀವಿಸಿ ಬರುತ್ತಿದ್ದುದರಿಂದ ಅವು ಕೂಡದಂತೆ ಮಾಡಿದ. +ಈ ಕಥೆಯಲ್ಲಿ ಅರ್ಧ ಗ್ರಾಂಥಿಕ ಭಾಷೆ, ಅರ್ಧ ಗ್ರಾಮ್ಯ ಭಾಷೆ ಇದೆ. +ಚಿನ್ನದ ಚೀರಣಗಿ, ಬಣ್ಣದ ಬಾಚಣಗಿ ಈ ಕಥೆಯಲ್ಲಿ ಸೂಲಗಿತ್ತಿಗೂ, ಜೋಯಿಸರಿಗೂ ಹಣದಾಸೆ ತೋರಿಸಿ ಶಿಶುಗಳ ನಾಶಕ್ಕೆ ಹಂಚಿಕೆ ಹಾಕುವುದಿದೆ. +ಇಲ್ಲಿ ‘ಉರಿಪಿಂಡ’ ಕಥೆಯ ಸ್ವಾರಸ್ಯ ಇಲ್ಲ. +“ಸೊಸೆಯಂದಿರ ಪ್ರಾಣ ಉಳಿದರೆ ಸಾಕು” ಎಂದು ಮಾತನ್ನು ಹೇಳಿದ್ದವನು ಶಿಶುಗಳಿಗೆ ಆಧಾರವಾಗಿದ್ದ ಬಾಳೆಯ ಹಾಗೂ ಕೌಲಿಯ ನಾಶನಕ್ಕೆ ಕಾರಣವಾದನು. +ಈಶ್ವರ ದೇವಾಲಯದ ಭಟ್ಟರಿಗೆ ದೇವರು ತನ್ನ ನೈವೇದ್ಯದ ಅಕ್ಕಿ, ಅನ್ನ ಶಿಶುಗಳಿಗೆ ಕೊಟ್ಟು ಸಾಕಲು ತಿಳಿಸಿದ್ದು, ದೇವಾಲಯಕ್ಕೆ ಬೆಂಕಿ ಹಾಕಿಸಿದ್ದು ಇಲ್ಲಿ ಸ್ವಲ್ಪ ವಿಶಿಷ್ಟವಾಗಿದೆ. +ಇಲ್ಲಿ ಸವತಿಯರು ದೇವಾಲಯಕ್ಕೆ ಬೆಂಕಿ ಹಾಕಿ ಸುಡುವ ದುಷ್ಟತನ ಮಾಡಿದುದಕ್ಕೆ ನಿರೂಪಕಿಯು ಸ್ತ್ರೀ ಪಾತ್ರಿಗೇ ನಿಂದನೆ ಮಾಡಿದ ವಾಕ್ಯವಿರುವುದು ವಿಶೇಷ. +“ಹೆಂಗ್ಸಿಗಿಂತಾ ದೈತರಿಲ್ಲಾ; ಸ್ವಾಮಿ ಹೆಂಗ್ಸರುಯೇನೂ ಮಾಡೂಕೆ ತಯಾರಿದ್ದವ್ರು” ಎಂದು ಹೇಳಿದುದು ಅರ್ಧಸತ್ಯ ಮಾತ್ರ. +ಈ ಕಥೆಯಲ್ಲಿ ನೂರು ಗಂಡುಮಕ್ಕಳ ಅಕ್ಕನ ಪಾತ್ರವು ಉತ್ತಮವಾಗಿ ನಿರೂಪಿತವಾಗಿದೆ. +ಈಶ್ವರ ದೇವರು ಅವಳ ಹತ್ತಿರ ಹೊರಟುಹೋಗುವಾಗ ದಾರಿಯಲ್ಲಿ ಯಾರಾದರೂ ಏನನ್ನಾದರೂ ಕೊಟ್ಟರೆ ತಿನ್ನಬೇಡ ಎಂದರಂತೆ; +ಹಿರಿ ಹುಡುಗಿ ಆ ಮಾತು ಪಾಲನೆಯಾಗುವಂತೆ ನೋಡಿಕೊಳ್ಳುತ್ತಾಳೆ. +ರೊಟ್ಟಿಗಳನ್ನು ತೊಡೆಸೀಳೆ ತುಂಬುವ ಆಶಯವು ವಿಶಿಷ್ಟವಾದುದಾಗಿದೆ. +ದೇವರು ಮೂರು ಹರಳು ಮಂತ್ರಿಸಿ ಕೊಟ್ಟಿದ್ದು ಕಥೆಯ ಒಂದು ದುರ್ಬಲ ಅಂಶವಾದರೂ, ಮೂರು ಜನ ತಮ್ಮಂದಿರೆಲ್ಲ ದಿಕ್ಕುಪಾಲಾಗಿ ಹೋದ ಕಾರಣ, ಅಳುವ ಹುಡುಗಿಯ ಕಣ್ಣೀರು ಹರಿದುಬಂದ ನೀರನ್ನು ನೀರಡಿಸಿ ಅರಸನ ಪರಿವಾರದವರು ಕುಡಿದರೆಂಬ ಆಶಯವು ವಿಶಿಷ್ಟವಾಗಿದೆ. +ಇಲ್ಲಿ ಅವಳನ್ನು ರಾಜ ಮದುವೆಯಾಗಿ, ಅವಳ ಅಪೇಕ್ಷೆಯಂತೆ ಮುದುಕಿಯನ್ನು ಜತೆಗೆ ಉಳಿಯಲು ಕರೆತಂದುದು ಅವಳ ಅಕ್ಕನೆಯೇ ಎಂಬುದು ಕಥೆಯ ಹೆಣಿಗೆಯಲ್ಲಿ ಒಂದು ಮೆಚ್ಚಬೇಕಾದ ಆಶಯ. +ನೂರೊಂದು ಮಕ್ಕಳನ್ನು ತಂದು ಸಾಕಿದ್ದ ರಾಜನ ಮನೆಯಲ್ಲಿದ್ದವಳು ತನ್ನ ತಂದೆಗೆ ಪತ್ರ ಬರೆದವಳು ಹುಡುಗಿ ಎಂದು ತಿಳಿದುದು ಅವನ ತಪ್ಪು ತಿಳಿವಳಿಕೆ. +ಅವಳು ಬೇರೆ ಯಾವ ಹುಡುಗಿಯಲ್ಲ; ಅವನ ಹುಡುಗಿಯೇ. +ಆದರೆ, ತಾನು ಯಾರೆಂದು ತಿಳಿಸದೆಯೇ ಪತ್ರ ಬರೆದುದರಿಂದ ಅವನು ಹಾಗೆ ತಿಳಿದುದು ಸಹಜವೇ. +ಇದು ಕತೆಗಾರ್ತಿಯ ಜಾಣ್ಮೆಯ ಗುರುತು. +ಮಾಚಿ ಕೊನೆಭಾಗದಲ್ಲಿ ಗೊಂದಲ ಮಾಡಿ ಹೇಳಿದ್ದು ತಪ್ಪು ತಿಳಿವಳಿಕೆಗೆ ಕಾರಣ. +ಮಗಳನ್ನು ಮತ್ತೊಂದು ರಾಜನಿಗೆ ಮದುವೆ ಮಾಡಿ ಕೊಡುತ್ತಾನೆ. +ಶ್ರೇಷ್ಠವಾಗಿರುವ ‘ಪದಕರಾಜ–ಪದ್ಮಾವತಿ’ ಕಥೆಯು ಭವ್ಯತೆಯ ಹಿರಿಮೆಯನ್ನು ಕಥೆಯ ಕೊನೆ ಭಾಗದಲ್ಲಿ ಪಡೆಯುತ್ತದೆ. +ಪ್ರಾರಂಭದ ಭಾಗದಲ್ಲಿ ನಾಟಕೀಯವಾದ ರೀತಿಯಲ್ಲಿ ಪದಕದ ಸರವು ಬಂದು ತಪ್ಪೇಲಿಯಲ್ಲಿ ಬೀಳುತ್ತದೆ. +ಪದಕದ ಸರವು ಒಂಬತ್ತು ತಿಂಗಳ, ಒಂಬತ್ತು ದಿವಸಕ್ಕೆ ಶಿಶುವಾಗಿ ಪರಿಣಮಿಸಿದ್ದು. +ಆದರೆ, ಗರ್ಭಾಶಯದ ಹೊರಗಿನಲ್ಲಿಯೇ ಶಿಶುವಾಗಿ ಪರಿವರ್ತಿತವಾದದ್ದು ತುಂಬಾ ಚಮತ್ಕಾರದ ಆಶಯವಾಗಿದೆ. +ಇಲ್ಲಿ ಪದಕರಾಜನ ಸೋದರತ್ತೆಯು ಶಿಶುವಿಗೆ ಬಾಯಿಗೆ ತಿನ್ನಲು ಹಾಕಿದ್ದ ಸಕ್ಕರೆಯನ್ನು ತಿನ್ನದುದರಿಂದ ಶಿಶು ತನ್ನ ವೈರಿಯೆಂದು ತಿಳಿದು, ಅವಳಿಗೆ ಹುಟ್ಟಿದ ಮಗಳೇ ಕಥಾನಾಯಕಿಯಾಗಿ-- ಪದಕರಾಜನ ಒಡನಾಡಿಯಾಗಿ, ಅತಿಶಯ ಸಾಹಸವನ್ನು ಮೆರೆಯಿಸಿದ ಅಸಾಧಾರಣ ವ್ಯಕ್ತಿತ್ವವನ್ನು ಪ್ರಕಟ ಮಾಡುತ್ತಾಳೆ. +ಇಬ್ಬರೂ ಜತೆಯಲ್ಲಿರುವುದನ್ನು ತಪ್ಪಿಸುವ ಅತ್ತೆಯ ಪ್ರಯತ್ನ, ಪದ್ಮಾವತಿಯ ತಂದೆ ಕೇಳಿದ ಮೂರು ಪ್ರಶ್ನೆಗಳನ್ನು ಸರಿಯಾಗಿ ಉತ್ತರಿಸಿದುದರಿಂದ ಶಿಕ್ಷೆಯನ್ನು ತಪ್ಪಿಸಿಕೊಳ್ಳಲು ಸಹಾಯಕವಾಗುವುದಾದರೂ, ಪ್ರಶ್ನೆ ಹಾಗೂ ಉತ್ತರಗಳನ್ನು ತಿಳಿಸಲು ನಿರೂಪಕರು ಅಸಮರ್ಥರಾದುದು ಕಥೆಯ ದೊಡ್ಡ ಲೋಪವಾಗಿದೆ. +ಇಬ್ಬರೂ ಮನೆ ಬಿಟ್ಟು ಹೊರಟುಹೋದ ಮೇಲೆ, ಪದ್ಮಾವತಿ ನೀರಡಿಸಿದ ಪದಕರಾಜನಿಗೆ ನೀರನ್ನು ತರಲು ಹೋಗಿದ್ದಳು. +ರಾಕ್ಷಸಿ ಮುದುಕಿಯ ಮನೆಗೆ ಮಕ್ಕಳು ಬರುವವರೆಗೆ ಅವಳನ್ನು ಉಳಿಸಿಕೊಳ್ಳಲು ಮಾಡುವ ರಂಧ್ರ ಮಾಡಿ (ಅಡಕಲಿಗೆ) ನೀರನ್ನು ತುಂಬಲು ಹೇಳಿದ ಕಥೆಯ ಸಂದಿನಲ್ಲಿ ಬೇರೆ ಕಡೆ ಕಪ್ಪೆ ಮಾತಿಗೆ ಬಂದು ಕೂತು ಅದನ್ನು ಮುಚ್ಚುವುದು ಉಂಟು. +ಇಲ್ಲಿ ಒಂದು ಬೊಂತೆಯನ್ನು ಪದ್ಮಾವತಿಯೇ ಅಡಕಲಿನ ತೂತಿಗೆ ಹಿಡಿದಳು. +ರಾಕ್ಷಸಿಯು ಪದ್ಮಾವತಿ ತಪ್ಪಿಸಿಕೊಳ್ಳದಂತೆ ನಾಯಿಯನ್ನು ಜತೆಗೆ ಕಳಿಸಿದ ಚಾತುರ್ಯವೂ ಮೆಚ್ಚುವಂಥದು. +ಬುತ್ತಿ ಅನ್ನವನ್ನು ನಾಯಿಗೆ ಹಾಕಿದ ಮೇಲೆ, ಬುತ್ತಿಗೆ ಅದು ಬಾಯಿ ಹಾಕಿದ ಕೂಡಲೇ ಮನುಷ್ಯನಾಗಿ ಪರಿವರ್ತಿಸುವ ಆಶಯವೂ ಆಶ್ಚರ್ಯಕರವಾದುದು. +ರಾಕ್ಷಸಿ ಮಾಟದಿಂದ ಅವನನ್ನು ನಾಯಿಯನ್ನಾಗಿ ಮಾಡಿದ್ದಳು. +‘ಹೋದ ದಾರಿ ತನ್ನ ಮಕ್ಕಳಿಗೆ ತಿಳಿಯಲಿ’ ಎಂದು ತೂತು ಮಾಡಿ ಚೀಲದಲ್ಲಿ ಅರಳನ್ನು ತುಂಬಿಕೊಟ್ಟಿದ್ದಳು-- ಘಾಟೀ ರಾಕ್ಷಸಿ. +ಪದ್ಮಾವತಿ ಆ ಮುದುಕಿಯ ಸೇರಿಗೆ ಸವ್ವಾಸೇರು. +ಉಪಾಯ ತಿಳಿದು ಚೀಲವನ್ನು ಒಗೆದುಕೊಟ್ಟು, ಪದಕರಾಜನ ಬಳಿಗೆ ಬಂದಳು-- ಚಾಣಾಕ್ಷ ಹುಡುಗಿ ಪದ್ಮಾವತಿ. +ರಾಕ್ಷಸಿಯ ಮಕ್ಕಳು ಅವಳನ್ನು ಅರಸುತ್ತಾ ಬಂದ ಮೇಲೆ ಪದ್ಮಾವತಿಯ ಪ್ರಸಂಗಾವಧಾನತೆಯೊಡನೆ ಅಸಾಮಾನ್ಯ ಧೈರ್ಯವನ್ನು ಕಥೆಯಲ್ಲಿ ಚಿತ್ರಿಸಿದುದು ಮೇಲ್ತರಗತಿಯ ರಚನೆಯಾಗಿದೆ. +ಪದಕರಾಜನನ್ನು ಕಡಿದು ಹಾಕಿದ ರಾಕ್ಷಸನಿಗೆ ಜೀವ ಬರುವಂತೆ ಮಾಡಿದ ಅಸಾಧಾರಣ ಸಾಹಸಿ ಅವಳು. +ಮುಂದೆ ಪದಕರಾಜನು ಬಂದು ಊರಿನ ರಾಜನಾದ ಮೇಲೆ, ಏಳು ಜನ ಭಿಕ್ಷೆ ಬೇಡುವ ಮುದುಕಿಯರು ಬಂದ ಮೇಲೆಯೇ ಪದಕರಾಜನು ಕುಣಿತ ಮಾಡುವ ಸಂದರ್ಭವು – ಅವನು ಮೊದಲಿನ ಕಾಳಸರ್ಪವಾಗಿ ಏಳು ಹೆಡೆ ಪಡೆದು ಭವ್ಯವಾಗಿ ಕುಣಿದು ಕುಣಿದು ಪಾತಾಳಕ್ಕೆ ಸೇರಿಬಿಟ್ಟ ದೃಶ್ಯವೂ ಅನಿರೀಕ್ಷಿತವಾಗಿ, ಅದ್ಭುತ ರೀತಿಯಲ್ಲಿ ಬೆಳೆದಿದೆ. +ಕುಣಿದು ಕುಣಿದು ಏಳು ಜನರನ್ನೂ ಪಾತಾಳಕ್ಕೆ ಹೆಡೆಗಳ ಮೇಲಿಟ್ಟುಕೊಂಡು ಒಯ್ದ ಸಂದರ್ಭ ಕುಣಿತವೂ ಪದಕರಾಜನ ಭವ್ಯತೆಯನ್ನು ಸೂಚಿಸುವ ಆಶಯವಾಗಿದೆ. +ಹಾವುಗಳು ನೆಲದ ಬಿಲಗಳಲ್ಲಿ ಆಶ್ರಯ ಪಡೆಯುವುದು ತಿಳಿದ ಸಂಗತಿಯೇ. +ಅದರಿಂದ ಹಾವುಗಳ ಮೂಲ ನಿವಾಸವು ಪಾತಾಳ ಎಂದು ತಿಳಿಯುವ ಕಲ್ಪನೆಯು ರೂಢವಾಯಿತು. +ಗಂಡ ದೊರಕದ ಕಾರಣ ಆತ್ಮಹತ್ಯೆ ಮಾಡಿಕೊಳ್ಳಲು ದರಿಗೆ ಹಾರಿದ ಪದ್ಮಾವತಿಯು ಋಷಿಯ ಕೈಮೇಲೆ ಬಿದ್ದು ಸಾಯದೆ ಉಳಿದಳು. +ಋಷಿಯೇ ಗರುಡಗಳ ಮೂಲಕ ಗಂಡನನ್ನು ಮರಳಿ ಪಡೆವ ಉಪಾಯ ತಿಳಿಯಲು ಹೇಳಿದನು. +ಪಾತಾಳದಿಂದ ಬಂದ ಪದಕರಾಜ ‘ಪದ್ಮಾವತೀ’ ಎಂದು ಹೇಳಿ ಮೂರು ಸಾರಿ ಅರ್ಘ್ಯ ಬಿಟ್ಟದು, ಅವಳಿಗೆ ಗಂಡನ ಗುರುತಿಗೆ ಕಾರಣವಾಯಿತು. +ಪದ್ಮಾವತಿ ಅಸಾಧಾರಣ ಚಾತುರ್ಯವುಳ್ಳ ಧೀರಮಹಿಳೆ. +ಮೂವರು ರಾಕ್ಷಸರನ್ನು ಕೊಂದವಳು. +ನಾಲ್ಕನೆಯವನನ್ನು ತನ್ನ ಖಡ್ಗದ ಮೂಲಕ ಪ್ರಾಣ ಭೀತಿಗೊಳಿಸಿ, ಅವನಿಂದ ತನ್ನ ಗಂಡನ ಪ್ರಾಣ ಉಳಿಯುವಂತೆ ಯುಕ್ತಿ ಮಾಡಿ ಅವನನ್ನು ಕೊಂದವಳು. +ಎಷ್ಟು ಪ್ರತ್ಯುತ್ಪನ್ನ ಮತಿಯುಳ್ಳ ಬಲಶಾಲಿ ಹೆಣ್ಣು. +ಐದು ಬೆರಳ ಪಣ ಇಲ್ಲಿ ಅರ್ಧ ಗ್ರಾಂಥಿಕ ಭಾಷೆ, ಅರ್ಧ ಗ್ರಾಮ್ಯ ಭಾಷೆ ಇದೆ. +‘ಐದು ಬೆರಳ ಪಣ’-- ಈ ಚಿಕ್ಕ ಕಥೆ ಬಹಳ ಕಲಾತ್ಮಕವಾಗಿ ಸುಂದರವಾಗಿದೆ. +ಮೈಸೂರು ರಾಜನು ಬೆಂಗಳೂರ ರಾಜನ ಹೆಂಡತಿಯು ಕೂದಲು ಬಾಚಿಕೊಳ್ಳುತ್ತಿದ್ದಾಗ ನೋಡಿ, ‘ಲವ್ ಎಟ್ ಫಸ್ಟ್ ಸಾಯ್ಟ್’-- ಮೊದಲ ನೋಟದಲ್ಲೇ ಪ್ರೇಮ ಭಾವನೆಗೆ ಗುರಿಯಾಗಿ ರಾಜ್ಯಕ್ಕೆ ಬಂದು, ಮಂತ್ರಿಯ ಹತ್ತಿರ ಅವಳ ವೃತ್ತಾಂತ ತಿಳಿದುಕೊಂಡನು. +ಅವಳನ್ನು ಒಲಿಸಿ, ತನ್ನ ವಶಮಾಡಿಕೊಳ್ಳಲು ಮಂತ್ರಿಯನ್ನು ಒಪ್ಪಿಸಿ ತಾನು ಐದು ಬೆರಳು ಇಟ್ಟುದನ್ನು ತನಗೆ ಕೊಡುವಂತೆ ಪಣ ಮಾಡಲು ಹೇಳಿದನು. +ಇಲ್ಲಿ ಭಟ್ಟರು ‘ಸಂಬಂಧಿಕರು’ ಎಂದು ಹೇಳಿ ವ್ಯಾಪಾರ ಮಾಡಲು ಹತ್ತು ಸಾವಿರ ರೂಪಾಯಿ ಪಡೆದರು. +ಕುಮಟಾ ಸಾಹೇಬನು ಬೆಂಗಳೂರ ರಾಜನ ಹೆಂಡತಿಯ ನೋಡಿ, ‘ಇನ್ನೇನು ಕೊಡಬೇಕು’ ಎಂದು ಕೇಳಿದಾಗ, ಕುದುರೆಗೆ ಎಂದು ತಿಳಿದು, ‘ಐನೂರು ರೂಪಾಯಿ ಕೊಡಬೇಕು’ ಎಂದುದು ಸ್ವಾರಸ್ಯವಾಗಿದೆ. +ಕಷ್ಟ ಪರಿಸ್ಥಿತಿಯಲ್ಲಿ ಸಿಕ್ಕೂ ಬೆಂಗಳೂರ ರಾಜ ತನ್ನ ಸಾಲಗಾರನಾದ ಒಂದೂವರೆ ಪಂಚಾಯತಿದಾರನನ್ನು ಹುಡುಕಿಕೊಂಡು ಹೋದನು. +ಪಂಚಾಯತಿದಾರ ಸಾಹೇಬನ ತಲೆಯನ್ನು ತೋರಿ ದರ ಮಾಡಿದ್ದು ತಿಳಿಯದ ಸಾಹೇಬ, ಕುರಿ ತಲೆ ಕೇಳಿದ್ದ ಎಂದು-- ‘ಐನೂರು ರೂಪಾಯಿ’ ಎಂದಾಗ ‘ನಿಮ್ಮ ತಲೆಗೆ ಬೇಕು’ ಎಂದುದು ಒಳ್ಳೇ ಬುದ್ಧಿವಂತಿಕೆಯ ಉಪಾಯವಾಗಿದೆ. +ಐದು ಬೆರಳು ಇಟ್ಟಿದ್ದನ್ನು ಕೊಡುವ ಸಂದಿಗ್ಧದಲ್ಲಿದ್ದ ಬೆಂಗಳೂರ ರಾಜನಿಗೆ, ಏಣಿ ಮಾಡಿಸಿ ಇಟ್ಟು ಹೆಂಡತಿಯನ್ನು ಅಟ್ಟದ ಮೇಲೆ ಕೂಡ್ರಿಸುವ ಉಪಾಯ ಹೇಳಿಕೊಟ್ಟಿದ್ದು, ಮೈಸೂರು ರಾಜ ಮೊದಲು ಐದು ಬೆರಳುಗಳಿಂದ ಹಿಡಿದದ್ದು ಏಣಿಯಾಗಿ ಫಜೀತಿಗೊಂಡನು. +ಈ ಕಥೆಯ ಕೊನೆಯಲ್ಲಿ ಮಾತ್ರ ನಮ್ಮ “ತಂಜಾವೂರು ಮಂತ್ರ – ತಂತ್ರ” ಕಥೆಯ ಆಶಯದ ಹೋಲಿಕೆ ಇದೆ. +ಕೊನೆಯ ಆಶಯ ಅತಿ ನೂತನವಾಗಿದೆ. +ಮೈಸೂರ ರಾಜನ ಬಲತೊಡೆಯ ಮೇಲೆ ಬೆಂಗಳೂರ ರಾಜನ ಹೆಂಡತಿಯನ್ನು ಕೂಡಿಸಿ, ಅವಳು ಬಲತೊಡೆಯ ಮೇಲೆ ಕೂತಿದ್ದರಿಂದ ಮೈಸೂರ ರಾಜನ ಮಗಳು ಎಂದಾಗ, ಮೈಸೂರ ರಾಜ ಅವನಿಗೆ ಮೈಸೂರಲ್ಲಿ ಮತ್ತೆ ಮದುವೆ ಮಾಡಿದ ಎಂದು-- ಅತಿ ನೂತನ ರೀತಿಯ ತಿರುವನ್ನು ತಂದು ನಿರೂಪಕರು ಜಾಣ್ಮೆಯನ್ನು ಮೆರೆದಿದ್ದಾರೆ. +ಮೈಸೂರ ರಾಜನಿಗೂ ಬೇಸರವಾಗುವುದನ್ನು ತಪ್ಪಿಸಿದ ಜಾಣ್ಮೆ ಇಲ್ಲಿದೆ. +‘ಹರಳು ದೊರೆತು ಕೊರಳು ಉಳಿಯಿತು’ ತೀರಾ ಚಿಕ್ಕ, ಶ್ರೇಷ್ಠ ಕಥೆ. +ಆಶಯ ನೂತನವಾದ ರೀತಿಯ ಕಥೆಯಿದು. +ಹರಿಕೀರ್ತನೆ ಮಾಡುವ ಭಟ್ಟನು ಸೀತಾದೇವಿ ಅಶೋಕವನದಲ್ಲಿ ದುಃಖ ಮಾಡುತ್ತಾ ಇದ್ದಾಳೆ ಎಂದಾಗ-- ‘ಶೋಕವಿಲ್ಲದ ವನದಲ್ಲಿ ರಾಜನ ಹೆಂಡತಿ ಹೇಗೆ ದುಃಖ ಮಾಡುತ್ತಾಳೆ’ ಎಂದು ಕೇಳಿದನು. +ತರಲೆ ಕ್ಷೌರಿಕನು, ‘ಭಟ್ಟರು ತನ್ನ ಅಣ್ಣ; ಅವರನ್ನು ತಲೆಹೊಡೆಯಿಸಿ’ ಎಂದ ಮೇಲೆ, ತಲೆಹೊಡೆದು ಬರಬೇಕು ಎಂದು ರಾಜನು ಕೊಲೆಗಡುಕರೊಡನೆ ಭಟ್ಟರನ್ನು ಕಳಿಸಿದನು. +ದೇವಾಲಯದಲ್ಲಿ ಹರಳು ಬಂದು ಭಟ್ಟರ ಕೈಮೇಲೆ ಬಿದ್ದಿತು. +ಹರಳನ್ನು ದೇವರೇ ಕೊಟ್ಟದ್ದು ಎಂದು ನಿರೂಪಕ ಹೇಳಿದ್ದು; + ದೇವರ ಮೈಮೇಲಿನ ಆಭರಣದ ಹರಳನ್ನು ಇಲಿ ತಕ್ಕೊಂಡು ಹೋಗಿ ಹಲಗೆ ಮೇಲಿಟ್ಟದ್ದು ಬಿತ್ತು ಎಂದು ನಾವು ಊಹಿಸಬಹುದು. +ಕ್ಷೌರಿಕನು ತನ್ನ ಅಣ್ಣ ಎಂದಿದ್ದ ಕಾರಣ, ಭಟ್ಟರು ರಾಜರ ಹತ್ತಿರ ಹರಳನ್ನು ಕೊಂಡು ಹೋಗಿ, ‘ನಾವು ಪಾಲಾಗುವಾಗ ತಮ್ಮ ಕ್ಷೌರಿಕನಿಗೂ ಒಂದು ಹರಳನ್ನು ಕೊಟ್ಟಿದ್ದೆ’ ಎಂದ ಮೇಲೆ ರಾಜನು, ಇಲ್ಲದ ಹರಳನ್ನು ಕ್ಷೌರಿಕನ ಹತ್ತಿರ ತರಲು ಹೇಳಿದನು. +ಈ ಆಶಯ ನೂತನವಾಗಿದೆ. +ಆಗ ಕ್ಷೌರಿಕನು ತನ್ನ ಬಚಾವಿಗಾಗಿ ನಿಜ ಹೇಳಿದನು. +‘ಚಿನ್ನದ ಕಿರೀಟ’ ಕಥೆಯ ‘ಸ್ವರ್ಣಕಾರರು ಅಕ್ಕನ ಚಿನ್ನವನ್ನಾದರೂ ಅಕ್ಕಿಯಷ್ಟನ್ನಾದರೂ ಕಳುತ್ತಾರೆ’ ಎಂಬ ಗಾದೆಯ ವ್ಯಾವಹಾರಿಕ ಸತ್ಯವನ್ನು ಚಮತ್ಕಾರದಿಂದ ನಿರೂಪಿಸುವ ಜಾಣ್ಮೆಯ ಕಥೆಯಾಗಿದೆ. +ಈ ‘ಸ್ವರ್ಣಸ್ತೇಯ’–- ಬಂಗಾರ ಕದಿವುದು, ಇದನ್ನು ಪಂಚಮಹಾಪಾತಕಗಳಲ್ಲಿ ಯಾಕೆ ಸೇರಿಸಿದರೋ ಏನೋ. +ಯಾಕಂದರೆ, ಪ್ರತಿಯೊಂದು ವ್ಯಾಪಾರ-ವ್ಯವಹಾರಗಳಲ್ಲಿ ನ್ಯಾಯಯುತವಾಗಿ ಲಾಭ ತಕ್ಕೊಳ್ಳುವವರಿಗಿಂತ ಮೋಸದಿಂದ ಹೆಚ್ಚು ಲಾಭ ಪಡೆಯುವ ವೃತ್ತಿ ಜನರೇ ಹೆಚ್ಚಾಗಿರುತ್ತಾರೆ. +ಪಕ್ಕಾ ಸೋವರೀನ್ ಚಿನ್ನಕ್ಕೆ ಹದಿನಾರಾಣೆಯ ತೂಕದಲ್ಲಿ ಒಂದಾಣೆ ತೂಕದ ತಾಮ್ರವನ್ನು ಸೇರಿಸಿದಾಗ ಅದು ಪವನ್ ಎಂದೆನಿಸಿಕೊಳ್ಳುತ್ತದೆ; +ಚಿನ್ನದ ಕಾಂತಿ ಹೆಚ್ಚಾಗುತ್ತದೆ; ಮೆದುತನ ಕಡಿಮೆಯಾಗುತ್ತದೆ. +ಇಲ್ಲಿ ಸ್ವರ್ಣಕಾರನು ನಾಲ್ವರು ಮಕ್ಕಳೊಡನೆ ವೃತ್ತಿಯ ಗೌಪ್ಯದ ಕುರಿತು ವಿಚಾರಿಸುವ ಸಂಭಾಷಣೆಯಲ್ಲಿ-- ಮೂವರು ತಾಮ್ರ ಸೇರಿಸಿ ಆಭರಣ ಮಾಡುವಲ್ಲಿ ಸೇರಿಸುವ ತಾಮ್ರದ ತೂಕವನ್ನು ಹೇಳುತ್ತಾರೆ. +ವಯಸ್ಸಿನಲ್ಲಿ ಚಿಕ್ಕವರಾದಂತೆ ತಾಮ್ರ ಸೇರಿಸುವ ಪ್ರಮಾಣ ಹೆಚ್ಚಾಗುತ್ತದೆ. +ತೀರಾ ಕಿರಿಯನು ಬರೇ ತಾಮ್ರದಿಂದ ಕಿರೀಟ ಮಾಡಿ ಚಿನ್ನದ ಕಿರೀಟವೆಂದು ಅದನ್ನು ದೇವರಮೂರ್ತಿಯ ತಲೆಗೆ ಏರಿಸಲು ಹಂಚಿಕೆ ಹೂಡುತ್ತಾನೆ. +ಇವನ ಈ ಜಾದೂ ಪ್ರದರ್ಶನಕ್ಕೆ ಕೆರೆಯಲ್ಲಿ ಮುಳುಗಿಸಿ ಇಟ್ಟ ತಾಮ್ರದ ಕಿರೀಟವನ್ನು ಚಿನ್ನದ ಕಿರೀಟ ಇಟ್ಟು ಬದಲಾಯಿಸುವ ಹಂಚಿಕೆಯು ಚಮತ್ಕಾರದ ಚರಮಹಂತವನ್ನು ತೋರುತ್ತದೆ. +ರಾಜರು ಈ ಮಕ್ಕಳು ಆಡುವ ಮಾತುಗಳನ್ನು ಕೇಳಿ, ಕಿರಿ ಸ್ವರ್ಣಕಾರನಿಗೆ ಕೆಲಸ ನೀಡಿ ಫಲಿತಾಂಶದಿಂದ ಮೋಸಹೋದುದು ತಿಳಿಯುತ್ತದೆ. +ಆದರೆ, ಕಥೆಯ ಅಂತ್ಯ ಎಲ್ಲರಿಗೂ ಒಪ್ಪಿಗೆಯಾಗುವ ಹಾಗೆ ಕಥಾನಿರೂಪಕ ಯೋಚಿಸಿದ್ದಾನೆ. +ನಿರೂಪಕರು ಅತ್ಯಂತ ಸಮರ್ಪಕವಾಗಿ ಯಾವ ಕುಂದೂ ಇಲ್ಲದಂತೆ ಸಂಭಾಷಣೆ ಬೆಳೆಸಿದ್ದಾರೆ. +ಭಟ್ಕಳ ಭಾಗದ ಗೊಂಡರ ದೇಸಿಯ ಉಪಯೋಗದಿಂದ ನಿರೂಪಣೆಯಲ್ಲಿ ಹೃದ್ಯತೆ ಮೂಡಿರುತ್ತದೆ. +ಬಾಲಗೋಪಾಲರ ಕಥೆ:ಈ ಕಥೆಯಲ್ಲಿ–- ಮಕ್ಕಳಾಗಲಿಲ್ಲವೆಂದು ಇನ್ನೊಬ್ಬಳನ್ನು ಮದುವೆಯಾದ ಹಲವು ಕಥೆಗಳಲ್ಲಿ, ಗೀತಗಳಲ್ಲಿ ಕಾಣುವ ಕಥೆಯಿರುವುದಾದರೂ ಇದರಲ್ಲಿ ವೈಶಿಷ್ಟ್ಯಗಳೂ ಉಂಟು; ಲೋಪಗಳೂ ಉಂಟು. +ಹಿರಿಯ ಹೆಂಡತಿಯ ತಂಗಿಯನ್ನೇ ಮದುವೆಯಾದ ರಾಜ. +ಆದರೆ, ಸ್ವಂತ ತಂಗಿಯೇ ಸವತಿಯಾಗಿ ಪರಿಣಮಿಸಿದ ವಾಸ್ತವಿಕ ಘಟನೆಗಳು ಮತ್ತು ತಂಗಿಯನ್ನು ಮದುವೆಯಾದ ಮೇಲೆ ಹಿರಿಯ ಹೆಂಡತಿಯೇ ಗರ್ಭಿಣಿಯಾದುದು. . . ಲೋಕದಲ್ಲಿ ನಡೆದಂಥ ಘಟನೆಗಳೇ ಇಲ್ಲಿ ಜರುಗುತ್ತವೆ. +ಇಲ್ಲಿ ಸವತಿಯಾದ ತಂಗಿ ಅಸೂಯೆಯಿಂದ ಅಕ್ಕನಿಗೆ ಕಷ್ಟಕೊಟ್ಟಳು ಎಂಬುದಿದ್ದರೂ ಹೇಗೆ ಕಷ್ಟಕೊಟ್ಟಳು ಎಂಬುದಿಲ್ಲ. +ನಿರೂಪಕಿಯು ಮರೆತೋ, ಔದಾಸೀನ್ಯದಿಂದಲೋ ಕಷ್ಟ ಕೊಟ್ಟ ವಿವರ ತಿಳಿಸಲಿಲ್ಲ-- ಇದು ದೊಡ್ಡ ಲೋಪ. +ಬೇರೆ ಕಥೆಯಲ್ಲಿದ್ದಂತೆ ಗರ್ಭಿಣಿಯನ್ನು ಕೊಲ್ಲಲು ಕಳಿಸದೆ, ಬಾಣಂತಿಯ ತಲೆ ಹೊಡೆಯಿಸಲು ಕೊಲೆಗಡುಕರಿಗೆ ಹೇಳಿ ಕಳಿಸಿದ್ದು ವಿಶಿಷ್ಟವಾಗಿದೆ. +ರಾಜನು ದುಃಖದಿಂದ ಮನೆ ಬಿಟ್ಟು ಅಡವಿಗೆ ಹೋಗಿ ಕೂತು, ಮೈಮೇಲೆ ಹುತ್ತ ಬೆಳೆದದ್ದು ಇನ್ನೊಂದು ವೈಶಿಷ್ಟ್ಯ. +ಇನ್ನೊಂದು ವೈಶಿಷ್ಟ್ಯವೆಂದರೆ-- ತಾಯಿ ಸತ್ತುಹೋದಳೆಂದು ಅವರ ಹುಡುಗರು ತಿಳಿವಂತೆ ನಾಯನ್ನು ತಂದು ಹಾಕಿ ಸುಟ್ಟು, ತಾಯಿ ಸತ್ತುಹೋದ ಮೇಲೆ ಸುಟ್ಟು ಹಾಕಿದ್ದು ಎಂದು ಅವರಿಗೆ ತಿಳಿಸಿದ್ದು. +ಸುಟ್ಟ ನಾಯಿಯ ಬೂದಿಯನ್ನು ಬಾಯಲ್ಲಿ ಹಾಕಿಕೊಳ್ಳಲು ಮಕ್ಕಳು ಹವಣಿಸಿದಾಗ ಆ ಸುಟ್ಟ ಅಗ್ನಿಯಿಂದ ಋಷಿಯು ಎದ್ದು ಬಂದು, ‘ಸುಟ್ಟಿದ್ದು ನಿಮ್ಮ ತಾಯನ್ನು ಅಲ್ಲ, ನಾಯನ್ನು’ ಎಂದು ಹೇಳಿದ್ದು ಕಥೆಯ ಕಲ್ಪನಾರಮ್ಯತೆಗೆ ಒಂದು ಉತ್ತಮ ಉದಾಹರಣೆ. +ತಪಸ್ಸಿಗೆ ಕುಳಿತಿದ್ದ ಋಷಿ ಎದ್ದು ಬಂದು ಸಹಜತೆಯಿಂದ ಹೇಳುವ ಬದಲು, ಈ ತರದ ಪುರಾಣಕ್ರಮದ ನಾಟಕೀಯ ಆವಿರ್ಭಾವವನ್ನು ತಂದುದು ಚಮತ್ಕಾರವನ್ನು ಹೆಚ್ಚಿಸುತ್ತದೆ. +ಬಾಲಗೋಪಾಲರನ್ನು ವಿದ್ಯೆ ಕಲಿಯಲು ಗುರುಗಳ ಹತ್ತಿರ ಇಡುವ ಕ್ರಮವೂ ಇಲ್ಲಿ ಬಂದಿರುವುದು ಲಕ್ಷಿಸತಕ್ಕದ್ದಾಗಿದೆ. +ಹಿರಿರಾಣಿಯು ಸೂರ್ಯಭಕ್ತೆಯಾದುದರಿಂದಲೋ ಏನೋ ಒಣಗಿಹೋಗಿದ್ದ ಅಶ್ವತ್ಥಮರವು ಅವಳು ಹಾಕಿದ ಒಂದು ಚಂಬು ನೀರೇ ಸಾಕಾಗಿ ಚಿಗುರಿದ ಪವಾಡ ಇಲ್ಲಿದೆ. + ಇವಳು ಹೆಂಗಸಾಗಿದ್ದರಿಂದ-- ಬೇರೆ ರಾಜನಿಗೆ ಇವಳಿಗೆ ತನ್ನ ಮಗಳನ್ನು ಮದುವೆ ಮಾಡಿ ಕೊಡಲು ಸಾಧ್ಯವಾಗಲಿಲ್ಲ ಎಂದು ನಿರೂಪಕಿಯು ಹೇಳಿದ್ದು ಗಮನಿಸತಕ್ಕದ್ದು. +ತನ್ನ ಗಂಡುಮಕ್ಕಳು ಬಾಲಗೋಪಾಲರು ಎಂದು ಹೇಳುತ್ತ ಕಟ್ಟಿದ್ದರಿಂದ, ಅವಳ ಒಬ್ಬ ಮಗನಿಗೆ ತಾಯಿ ಎಂದು ತಿಳಿಯಬಂದುದನ್ನು ತುಂಬಾ ಸರಳ ರೀತಿಯಿಂದ ಇಲ್ಲಿ ತಿಳಿಸಿದುದಿದೆ. +ಇನ್ನೊಬ್ಬ ರಾಜನ ರಾಜ್ಯದಲ್ಲಿ ಹಂದಿಯನ್ನು ಹೊಡೆದವನಿಗೆ ಮಗಳನ್ನು ಕೊಡುವ ಪಣವನ್ನು ರಾಜ ಇಟ್ಟಿದ್ದನು. +ನಿರೂಪಕಿಯು ಹಂದಿ ಹೊಡೆಯಲು ತಮ್ಮ ಬಳಸಿದ್ದು ಯಾವುದೋ ತಲವಾರೋ, ಎಂಥಾ ಸುಡುಗಾಡೋ ಎಂದುದು ಸ್ವಾರಸ್ಯವಾಗಿದೆ. +ಮುಂದೆ ಅಣ್ಣ-ತಮ್ಮ, ತಾಯಿ ಎಲ್ಲರೂ ಒಂದೆಡೆ ಸೇರಿದರು ಎಂದು ಕಥೆಯನ್ನು ಬೇಗನೆ ಮುಗಿಸಿದಂತಿದೆ. +ಆದರೆ, ಚಿಕ್ಕ ತಾಯನ್ನು ಸೀಳಿದ ಅನಂತರ-- ‘ಸತ್ಯವಂತೆಯಾದರೆ ಕೂಡಿ ಜೀವ ಪಡೆದು ಬರುವೆ, ಇಲ್ಲದಿದ್ದರೆ ನರಕಕ್ಕೆ ಹಾರಿಹೋಗಿ ಬೀಳುವೆ’ ಎಂದಂತೆ ದುಷ್ಟಳಾಗಿದ್ದ ಚಿಕ್ಕ ತಾಯಿ ನರಕಕ್ಕೆ ಹೋಗಿಬಿದ್ದಳು ಎಂದು ಕಥೆಯ ಮುಕ್ತಾಯವನ್ನು ತಂದುದು ವಿಶಿಷ್ಟವಾದುದ್ದು. +ತಕ್ಕಮಟ್ಟಿಗೆ ಉತ್ತಮ ಕಥೆ ಇದು. +‘ನೀಲಕಂಠ ರಾಜ’ ಎಂಬ ಕಥೆಯ ಮೊದಲಿನ ಅರ್ಧ ಭಾಗ ನೂತನ ರೀತಿಯ ಕಥಾ ಸರಣಿಯನ್ನು ಹೊಂದಿ ತುಂಬಾ ಸ್ವಾರಸ್ಯವಾಗಿದೆ. +‘ನೀಲಕಂಠರಾಜ’ ಎಂಬ ಹೆಸರಿದ್ದರೂ ಅವನು ಮೀನುಗಾರ. +ಮೀನು ಹಿಡಿದು ಮಾರಾಟ ಮಾಡುವ ಅವನಿಗೆ ‘ನೀಲಕಂಠರಾಜ’ ಎಂಬ ಹೆಸರು ಬರಲು ಏನೋ ಕಾರಣ ಇದ್ದೀತು. +ಆದರೆ, ಅದನ್ನು ನಮ್ಮ ನಿರೂಪಕರು ಹೇಳಲಿಲ್ಲ. +ಹೆಸ್ರು ದೊಡ್ಡದು ಅಂತ ಇಷ್ಟೇ ಹೇಳಿದರು. +ಮುಂದೆ ಅವನು ಬಹಳ ಸುಂದರನಾಗಿದ್ದನೆಂದು ತಿಳಿಸಿದುದುಂಟು. +ಅದರಿಂದ ಬಹುಶಃ ಸುಂದರನಾದ ಇವನು ರಾಜನಾಗಲು ಯೋಗ್ಯ ಎಂಬ ಕಾರಣದಿಂದ ಹಾಗೆ ಅವನನ್ನು ರಾಜ ಎಂದು ಕರೆದಿದ್ದಿರಬಹುದು ಎಂದು ಊಹಿಸಬಹುದಷ್ಟೇ. +ಬಡವನಾದರೂ ನೀಲಕಂಠನದು ಬಹಳ ಉದಾರ ಗುಣ. +ರಾಜನಿಗೆ ಬೇಕಾದ ಮೀನನನ್ನು ಕೊಚ್ಚಿದಾಗ, ಅದರೊಳಗೆ ದೊಡ್ಡ ಬಂಗಾರದ ಗಟ್ಟಿ! +ರಾಜನು ‘ಈ ರಾಜ ತನ್ನ ಶ್ರೀಮಂತಿಕೆ ತಿಳಿಸಲು ಬಂಗಾರದ ಗಟ್ಟಿಯನ್ನು ಹಾಕಿ ಮೀನನ್ನು ಕಳಿಸಿದ’ ಎಂದು ತಿಳಿದು, ತನ್ನ ಮಗಳನ್ನು ಇವನಿಗೆ ಕೊಡಲು ನಿಶ್ಚಯ ಮಾಡಿದನು. +ಒಂದು ಪೆಟ್ಟಿಗೆ ಮಾಡಿಸಿ ಅವಳನ್ನು ಅದರಲ್ಲಿ ಕೂಡ್ರಿಸಿ ಸಕಲ ಸಾಮಗ್ರಿಗಳನ್ನೆಲ್ಲ ಅದರಲ್ಲಿಟ್ಟು ಮೊಹರ್ ಮಾಡಿ, ಹೊನ್ನಾವರ ಬಂದರಕ್ಕೆ ಕಳಿಸಿದನು. +ಇಲ್ಲಿ ಸಾಮಾನ್ಯವಾಗಿ ಕತೆಗಳಲ್ಲಿ ಬರುವಂತೆ ‘ಹೊಳೆಯಲ್ಲಿ ತೇಲಿ ಬಿಡಲಿಲ್ಲ’ ಎಂಬುದು ಗಮನಿಸತಕ್ಕದ್ದಾಗಿದೆ. +“ನೀಲಕಂಠ ರಾಜನ ಹೊರತು ಯಾರೂ ಆ ಪೆಟ್ಟಿಗೆಯನ್ನು ಒಡೆಯಬಾರದು (ಮೊಹರು ಒಡೆದು ಮುಚ್ಚಳ ತೆಗೆಯಬಾರದು.)’’ ಎಂದು ಬರೆದುದು ಇತ್ತು. +ಪೊಲೀಸರು ನೀಲಕಂಠ ರಾಜನನ್ನು ಹುಡುಕುವ ಸಂದರ್ಭದಲ್ಲಿ ಸ್ವಾರಸ್ಯಕರವಾಗಿ ಕಥಾನಕ ನಿರೂಪಣೆಯಿದೆ. +ಅವನು ಯಾವದೋ ಗುಹೆಯಲ್ಲಿ ಅಡಗಿದ್ದಾನೆ ಎಂದುದಕ್ಕೆ ಸರಿಯಾಗಿ ‘ಪೊಲೀಸರು ಹುಡುಕುತ್ತಿದ್ದಾರೆ ನಿನ್ನನ್ನು’ ಎಂದ ಮೇಲೆ ಒಂದು ಗುಹೆಯಲ್ಲಿ ಬೋರಲಾಗಿ ಬಿದ್ದುಬಿಟ್ಟನು. +ಏಳದ ಅವನಿಗೆ ಪೊಲೀಸರು ಅವನಿಗೆ ಹೊಡೆತ ಕೊಟ್ಟ ಮೇಲೆ ಬಾಗಿಲು ತೆಗೆದ ಕೂಡಲೇ ರಾಜನ ಮಗಳು ಎದ್ದು ಅವನಿಗೆ ಹೂಮಾಲೆ ಹಾಕಿದಳು. +ಶೈಲಿ ತುಂಬಾ ಹಾಸ್ಯಪೂರಿತವಾಗಿದೆ. +ನೀಲಕಂಠರಾಜನ ಮೈತಿಕ್ಕಿ ಬಿಸಿನೀರು ಹಾಕಿ ಸ್ನಾನ ಮಾಡಿಸಿ, ಅಲಂಕಾರ ಮಾಡಿದ್ದು ಸ್ವಾರಸ್ಯ. +ಅವನ ಬಿಡಾರದಲ್ಲಿ ಏನೂ ಇರಲಿಲ್ಲ. +ರಾಜನ ಮಗಳು ತಂದೆಗೆ ಫೋನ್ ಮಾಡಿ ಬೇಕಾದ ಹಣ ಸಾಮಾನು ತರಿಸಿಕೊಂಡಳು. +ಫೋನ್ ಹೊಸ ಕಾಲದಲ್ಲಿನ ನಿರೂಪಕರು ಮಾಡಿದ ತಿದ್ದುಪಡಿ; ಹಿಂದಣ ಕಾಲಕ್ಕೆ ತಕ್ಕಂಥದ್ದಲ್ಲ. +ಆದರೂ ಪೇಟೆಗೆ ಹೋಗಿ ಫೋನ್ ಮಾಡಿದರು ಎಂದು ಎಚ್ಚರಿಕೆಯಿಂದ ಹೇಳಿದರು. +ಹಿಂದಣ ಕೆಲವು ಕಥೆಗಳಲ್ಲಿಯಂತೆ ಅಸಹಜ ಘಟನಾವಳಿಗಳನ್ನು ತರುವ ಚಾಪಲ್ಯವು ನಿರೂಪಕರಿಗೆ ಮುಂದಿನ ಕಥಾ ನಿರೂಪಣೆಯಲ್ಲಿ ಬಂತು. +ಕ್ಷೌರಿಕನು ನೀಲಕಂಠರಾಜನ ಹೆಂಡತಿಯ ಸೌಂದರ್ಯವನ್ನು ನೋಡಿ, ರಾಜನಿಗೆ ಚಾಡಿ ಹೇಳಿದನು. +ಬೇರೆ ಕೆಲವು ಕಥೆಗಳಲ್ಲಿ ಬಂದಂತೆಯೇ ಇಲ್ಲಿ ಕ್ಷೌರ ಮಾಡಲು ಹೋದವನು ಸುಂದರಿಯನ್ನು ಕಂಡನೆಂಬುದು ಬಂದಿದೆ. +ಬೇರೆ ಕಥೆಗಳಲ್ಲಿ ಬೇರೆ ಬೇರೆ ರೀತಿ ಕ್ಷೌರಿಕನ ಮಾತಿನ ಸ್ವಾರಸ್ಯವಿರುವುದು; ಇಲ್ಲಿ ಅಷ್ಟಾಗಿ ಇಲ್ಲ. +ಆದರೂ, ‘ನಿಮ್ಮ ಹಿಂಡ್ತಿ ತೆಗ್ದಿ ವಲಿಲ್ ಹಾಕಿ, ನನ್ನ ಹಿಂಡ್ತಿ ಹೊಳಿಲ್ ಹಾಕಿ’ ಎಂಬ ಮಾತುಗಳು ಸ್ವಾರಸ್ಯವಾಗಿವೆ. +ನೀಲಕಂಠ ರಾಜನನ್ನು ಕೊಲ್ಲಿಸುವುದಕ್ಕೆ ರಾಜ ಕ್ಷೌರಿಕನ ಹತ್ತಿರ ಉಪಾಯ ಕೇಳುವಲ್ಲಿ ಆತ ಕೂಗುವ ನೀರು, ಮಾತಾಡುವ (ಮುಂದೆ ನಡೆಯಾಡುವ ಬಣ್ಣನೆಯೂ ಇದೆ) ಮಾವಿನಹಣ್ಣು ತರುವ ಕಠಿಣ ಕಾರ್ಯ ಸೂಚಿಸಿದ್ದು, ‘ಅಗಿಯುವ ನೀರು, ಕೂಗುವ ಮಾವಿನಹಣ್ಣು’ ಎಂಬ ಕಥೆ ನೆನಪಾಗುವಂತಿದೆ. +ಇಲ್ಲಿ ರಾಜನು ಇವನು ಇರುವುದಕ್ಕೆ ನಿಮಿತ್ತ ಹೇಳುವದು, “ಯಾರು ಹೊಸದಾಗಿ ಮದುವೆಯಾಗಿ ಬಂದರೋ ತಾನು ಹೇಳುವ ವಸ್ತು ತರಬೇಕು. +ಇಲ್ಲದಿದ್ದರೆ ಎಂಟು ತಲೆ ಹೊಡೆಸುವೆ” ಎಂದು ಹೇಳಿದ್ದು ವಿಶಿಷ್ಟವಾಗಿದೆ. +ಕೂಗುವ ನೀರಿಗಿಂತ ಮಾತಾಡುವ, ನಗುವ ಮೂರು ಮಾವಿನ ಮರಗಳ ಒಂದೇ ಹಣ್ಣು ತರುವ ಬಣ್ಣನೆ ಹೊಸ ರೀತಿಯಲ್ಲಿದೆ. +ಎಲುಬು ರಾಜನ ಮಗಳು, ಚರ್ಮ ರಾಜನ ಮಗಳು, ಹಿರಿಹೆಂಡತಿ ಜೀವ ರಾಜನ ಮಗಳು. +ಬಿದ್ದು ಚೂರುಚೂರಾದ ಗಂಡನ ದೇಹ, ಎಲುಬು, ಚರ್ಮ ಎಲ್ಲ ಕೂಡಿಸಿ ಜೀವ ಮಾಡಿದರು. +ಗಂಡನಿಗೆ ಆಗುವ ಅಪಾಯ (ಮಗಳು) ತಿಳಿಯಲು ಹೆಂಡಿರು ತುಲಸಿಗಿಡ ನೆಟ್ಟು ಅದು ಬಾಡಿದಾಗ ತಿಳಿವುದು ಬೇರೆ ಕಥೆಗಳಲ್ಲಿಯಂತೆ ಇಲ್ಲೂ ಇದೆ. +ಮುಂದೆ ಆ ಕೊಂಡದಲ್ಲಿ ಹಾಕಿ ಕೊಲ್ಲಲು, ‘ಯಾರ ಸಾವುದೂ ಅವನನ್ನು ಬದುಕಿಸುವ ಉಪಾಯವೂ ಕೆಲಸಿ, ರಾಜನ ಹಿರಿಯರ ಗಡ್ಡ ಮಾಡಲು ಹೋಗಲು ಕೊಂಡದಲ್ಲಿ ಬೀಳಬೇಕು’ ಎಂಬ ಉಪಾಯವೂ ಪ್ರಸಿದ್ಧ ಕಥಾಪರನಿಯಮವೇ ಆಗಿದೆ. +ಒಟ್ಟಿನಲ್ಲಿ ನಿರೂಪಕರು ತಮ್ಮ ವಿಶಿಷ್ಟ ಸರಣಿಯನ್ನು ಹಲವೆಡೆ ತೋರಿಸಿದ್ದರಿಂದ ಮತ್ತು ಹಾಸ್ಯ ದೃಷ್ಟಿಯ ಕಾರಣದಿಂದ ಕಥೆಯು ವಿಶಿಷ್ಟವಾಗಿದೆ. +ಬಂಗಾರದ ತುಲಸಿ ಗಿಡ:ವಿಶಿಷ್ಟ ಕಥೆಯೆಂದು ಗಣಿಸಲು ಅರ್ಹತೆ ಪಡೆಯುತ್ತದೆ ಎನ್ನಲು “ಬಂಗಾರದ ತುಲಸಿ ಗಿಡ” ಎಂಬ ಕಥೆಯು ಒಳ್ಳೇ ಉದಾಹರಣೆಯಾಗಬಲ್ಲುದು. +ಹಲವು ಕಥೆಗಳಲ್ಲಿ ಹೆಣ್ಣು ಗಂಡು ವೇಷ ಧರಿಸಿರುವಾಗ, ಹೆಣ್ಣೋ-ಗಂಡೋ ಎಂಬ ಜಿಜ್ಞಾಸೆಯಿರುವ ಆಶಯ ರೂಪಗಳು ಕಾಣಬರುತ್ತವೆ. +ಅಪೂರ್ವವಾದ ವಸ್ತುವನ್ನು ತರಲು ಶೋಧ ಪ್ರಯಾಣ ಮಾಡುವ ಹಲವಾರು ಕಥೆಗಳಿವೆ. +ಚದುರಂಗಿ ಹೂವು ಸ್ವಪ್ನದಲ್ಲಿ ಕಂಡುಬರುವ ವಿಶಿಷ್ಟ ತರದ ಗಿಡಗಳು, ಅಪೂರ್ವ ವಸ್ತು ತರಲು ಕಳಿಸುವದು ಇದೆ. +ಕೊಲ್ಲಿಸಲು ಏಳು ಸಮುದ್ರ. . . ಮುಂತಾದವನ್ನು ತರುವುದು ಸವತಿ ಮಗನು. +‘ನಮ್ಮ ನಾಮಧಾರಿ ಕಥೆಗಳು’ ಗ್ರಂಥದಲ್ಲಿ ಬಂಗಾರದ ಚೆಂಡು ಬಳಿದು ಬರುತ್ತದೆ. +ಆ ಚೆಂಡು ಬೆಳೆದು ಬಂಗಾರದ ಮರದ ಶೋಧಕ್ಕೆ ಹೋದ ಕಥೆ – ‘ಬಂಗಾರದ ಚೆಂಡಿನ ಮರ’. +ಹೊಳೆಯಲ್ಲಿ ರತ್ನ ಬಳಿದು ಬಂದ ಜಾಡನ್ನು ಹಿಡಿದು ಹುಡುಗಿ ಸಾಗಿ ರಾಕ್ಷಸನ ಗುಹೆಗೆ ಹೋಗುವ ಕಥೆಯಿದೆ (ಅಪೂರ್ವ ಮೃದಂಗ). +ಇನ್ನು ಹುಡುಗಿಯಿಂದ ಮಾತಿನಲ್ಲಿಯೂ, ಕತೆಯಲ್ಲಿಯಾದರೂ ಸೋಲಿಸಲ್ಪಟ್ಟ ಯುವಕನು ಅವಳನ್ನು ಮದುವೆಯಾಗಿ ಅವಳಿಗೆ ಶಿಕ್ಷೆ ಕೊಡುವ ಹಲವು ಕಥೆಗಳಿವೆ. +‘ಸುಣ್ಣದ ಕೋಣೆ ಕಥೆ’ಯಲ್ಲಿ ಸುಣ್ಣದ ಕೋಣೆಯಲ್ಲಿ ಅವಳನ್ನು ಹಾಕಿ ಕೊಲ್ಲಿಸುವ ಉಪಾಯ ಇದೆ. +ಗಾಣಿಗರ ಹುಡುಗಿಯೊಡನೆ ಹುಣಸೆಹಣ್ಣು ಕೆಡಹುವ ಸಂದರ್ಭದಲ್ಲಿ ಅಪಮಾನಿತನಾಗಿ, ಅವಳನ್ನು ಮದುವೆಯಾಗಿ ಶಿಕ್ಷಿಸಬೇಕೆಂಬ ‘ಗಾಣಿಗರ ಹುಡುಗಿ’ ಕಥೆಯಿದೆ. +ಮೇಲೆ ಬರೆದ ಕಥೆಯಲ್ಲಿ ಮೂರು ವರ್ಗಗಳ ಕಥೆಗಳು ಮಿಳಿತವಾಗಿವೆ. +ಬಂಗಾರದ ತುಲಸಿ ಎಲೆ ನದಿಯಲ್ಲಿ ಬೆಳೆದು ಬಂದು, ಅದರ ಗಿಡ ಹುಡುಕುವ ಶೋಧ ಪ್ರಯಾಣ ಇಲ್ಲಿದೆ. +‘ಸ್ವಪ್ನಫಲ’ದಲ್ಲಿ ರಾಜನ ಕಣ್ಣು ಕಾಣದಿರುತ್ತದೆ. +ಅದು ಕಾಣಬೇಕಾದರೆ ತರಬೇಕಾದ ಅಮೂಲ್ಯ ವಸ್ತುಗಳನ್ನು ತರಲು ರಾಜನ ಮಕ್ಕಳು ಹೋಗಿ ಸಾಧ್ಯವಾಗದೆ, ಕಿರಿಮಗ ಇಲ್ಲದೆ ಮಗಳು ಹೋಗಿ ತರುವುದು ಉಂಟು. +ಪ್ರಸ್ತುತ ಕಥೆಯಲ್ಲಿ ಯಾವುದೇ ಸ್ಪರ್ಧೆ ಇಲ್ಲ, ಆಹ್ವಾನವಿಲ್ಲ. +ಮಂತ್ರಿಯ ಮಗಳು, ‘ತಮ್ಮ ರಾಜ್ಯದಲ್ಲಿ ಬಂಗಾರದ ತುಲಸಿ ಗಿಡ ಇಲ್ಲ, ತರಬೇಕು’ ಎಂದು ಗಂಡು ವೇಷದಲ್ಲಿ ಹೊರಡುತ್ತಾಳೆ. +ಅಪ್ರಕಟಿತವಾಗಿರುವ ನಮ್ಮ “ವೀರ ಹೊಸ ಬಂಟ ಶಿಪಾಯಿ ಗೆಳೆಯ” ಕಥೆಯಲ್ಲಿ ಹೆಣ್ಣೋ-ಗಂಡೋ ಎಂದು ನೋಡುವ ಆಶಯಗಳಲ್ಲಿ ಸೂಳೆಯ ಮನೆಗೆ ಹೋಗುವದು ಇದೆ. +ಬೇರೆ ಕಥೆಗಳಲ್ಲಿ ಬಂದಂತೆ ಹುಡುಗಿಯ ಗಿಳಿಯೂ, ರಾಜನ ಗಿಳಿಯೂ ತನ್ನ ಒಡತಿಗೆ, ಒಡೆಯಗೆ ಸಲಹೆ ನೀಡುವ ಚಮತ್ಕಾರವಾದ ಆಶಯ ಸಮೂಹ ಇದರಲ್ಲಿರುತ್ತದೆ. +ಗಂಡು ರೂಪದಲ್ಲಿ ಹೋದ ಹೆಣ್ಣು ಎಂದು ತೊಳಸಿ ರಾಜನ ಗಿಳಿಯು ಹೆಣ್ಣು ಪರೀಕ್ಷಾ ವಿಧಾನಗಳನ್ನು ಒಂದೊಂದನ್ನು ಹೇಳುವುದು. +ಈ ಪರೀಕ್ಷಾ ವಿಧಾನ ಆಶಯಗಳಲ್ಲಿ ಸ್ನಾನ ಮಾಡುವಾಗ ಗಿಳಿಯು ಬಚ್ಚಲಿಗೆ ಬೆಂಕಿ ಹಾಕುವುದೂ ಇದೆ. +ಕೊನೆಯಲ್ಲಿ ಬಂಗಾರದ ತುಲಸಿ ಗಿಡದ ವನಕ್ಕೆ ಹೋದ ಹುಡುಗಿಯಾದರೂ ಹೆಂಗಸಾದಳು ಎಂಬ ಆಶಯವು ಬಹಳ ಚಮತ್ಕಾರವುಳ್ಳದ್ದು ಮತ್ತು ಈ ಕಥೆಗೆ ವಿಶಿಷ್ಟವಾದುದು. +ಇಲ್ಲಿ ಈ ಹುಡುಗಿಯು ಮೊದಲು ಋತುಮತಿಯಾಗಿದ್ದವಳಲ್ಲ. +ವನದಲ್ಲಿ ಬಂದಾಗ ಹೆಣ್ಣಾದಳು. +ರಾಜನು ಅವನೂ ಮದುವೆಯಾಗಿ, ‘ಹೆಣ್ಣು ನೀನು ನನ್ನ ಮದುವೆಯಾದರೆ ನಿನ್ನ ಹೊಟ್ಟೆಯನ್ನು ಬಗಿದು ರಕ್ತವನ್ನು ಕುಡಿವೆ’ ಎಂದು ಪ್ರತಿಜ್ಞೆ ಮಾಡಿದ್ದಕ್ಕೆ ಪ್ರತಿಯಾಗಿ ‘ನಿನ್ನಿಂದ ಹುಟ್ಟಿದ ಹುಡುಗನಿಂದ ನಿನ್ನ ರಟ್ಟೆಯನ್ನು ಬಿಗಿಸುವೆ’ ಎಂದು ಪ್ರತಿಜ್ಞೆಗೈದಳು. +ಹಿಟ್ಟಿನ ರೂಪ ಮಾಡಿಸಿ, ಮಲಗಿಸಿ ಪಾರಾಗುವುದೂ. . . ರಾಜ ಆ ಹಿಟ್ಟಿನ ರೂಪದ ಹೊಟ್ಟೆ ಬಗಿದು ಜೀವವನ್ನು ಹೀರುವುದು. +ಡೊಂಬರ ಸಂಗಡ ಸೇರಿ ಆಟ ಮಾಡಿ ಗಂಡನನ್ನ ಮರುಳು ಮಾಡಿ, ಅವನಿಗೆ ಅರಿಯದೆ ಕೂಡಿದಾಗ ಅವನಿಗೆ ಗರ್ಭವತಿಯಾಗಿ ಪ್ರತಿಜ್ಞೆ ಪೂರೈಸುವ ಆಶಯವೂ ಹೊಸದಲ್ಲ. +ಮುಂದೆ ಹುಡುಗನು ಕಳ್ಳನ ವೇಷದಿಂದ ಕಳುವು ಮಾಡುವುದೂ, ಅಂಗಡಿಯಿಟ್ಟು ಹಳ್ಳದಲ್ಲಿ ದೀಪ ತೇಲಿ ಬಿಡುವುದು, ಬೇರೆ ಕಥೆಗಳಲ್ಲಿ ಬರುವಂಥದೇ. +ಆದರೆ, ರಾಜನು ತನ್ನ ಸೂಳೆಯ ಸೀರೆಯನ್ನು ಉಡುವಂತೆ ಮಾಡಿ, ಅವನೇ ಕಳ್ಳನೆಂದು ಬಂಧಿಸುವ ಉಪಾಯದ ಆಶಯ ತುಂಬ ಚಮತ್ಕಾರವುಳ್ಳದ್ದು ಮತ್ತು ನಮ್ಮ ವಿಶಿಷ್ಟ ಕಥೆಯ ಆಶಯ ಸೂತ್ರದಂತೆ ಮೂರು ಆಶಯ ಮಾತ್ರವಲ್ಲ, ಹೆಚ್ಚು ವಿಶಿಷ್ಟ ಆಶಯಗಳಿರುವುದರಿಂದಾಗಿ ಇದು ಹೋಲಿಕೆಯಿದ್ದರೂ ವಿಶಿಷ್ಟ ಕಥೆ. +ಈ ಕಥೆಯು ‘ಶಪಥ’ ಕಥೆಯೊಡನೆ ‘ಸುರತಾಳ ದೇವಿಯನ್ನು ಗೆದ್ದಿದ್ದು’ ಕಥೆಯೊಡನೆಯೂ ಹೋಲಿಕೆಗೆ ತಕ್ಕುದಾಗಿದೆ. +ಸುರತಾಳದೇವಿ ಕಥೆಯ ನೆಲಮಾಳಿಗೆಯಲ್ಲಿ ಹಾಕುವ ಒಂದು ಆಶಯ ಸಂದರ್ಭವನ್ನು ಮಾತ್ರ ಇಲ್ಲಿ ಹೋಲಿಸಬಹುದು. +ಅದೃಷ್ಟ ಒಲಿದ ಹುಡುಗ ಈ ಕಥೆಯಲ್ಲಿ ಕತೆ ಅಂದರೆ, ಭಟ್ಟರ ಸಲಹೆಯೇ ಕಥೆ. +ಭಟ್ಟರು ಗುಟ್ಟನ್ನು ಹೇಳಬಾರದು ಎಂದುದರಿಂದ ಹೆಣದ ಕೋಟಿನಲ್ಲಿ ಚಿನ್ನದ ಗಟ್ಟಿ ದೊರೆತರೂ ಹುಡುಗನು ಪೊಲೀಸರಿಗೆ ತಿಳಿಸಲಿಲ್ಲ. +ಒಬ್ಬನೇ ಹೋಗಬಾರದು ಎಂದುದರಿಂದ ಏಡಿಯನ್ನು ಜತೆಗೆ ತಕ್ಕೊಂಡನು. +ಭಟ್ಟರು ಹೊಳೆ ದಾಟಿದ ಮೇಲೆ ಹೇಳಿದ ಇನ್ನೊಂದು ಕತೆ (ಉಪದೇಶ) ‘ದಾರಿ ತಪ್ಪಿ ಮಲಗಬಾರದು’ ಎಂದು. +ಅಶ್ವತ್ಥಮರದ ಬದಿ ಮಲಗಿದಾಗ ಭಟ್ಟರು ಹೇಳಿದ್ದ ಎಚ್ಚರಿಕೆ ಗಮನಿಸದೆ- ಗಂಡಾಂತರವಾದುದು ಏಡಿಯಿಂದ ತಪ್ಪುತ್ತದೆ. +ಹಾವು ಕಚ್ಚಿದ ಹುಡುಗನನ್ನು ಮಣಿನಾಗ (ತಲೆಯಲ್ಲಿ ಮಣಿ ಧರಿಸುತ್ತದೆ ಶ್ರೇಷ್ಠ ಸರ್ಪ ಎಂದು ನಂಬಿಕೆಯಿದೆ) ತಾನೇ ಕಚ್ಚಿ, ಬಿಟ್ಟ ವಿಷವನ್ನು ಹೀರಿ ಬದುಕಿಸುತ್ತದೆ; ತಾನು ಸಾಯುತ್ತದೆ ಎಂದು ನಂಬಿಕೆ. +‘ಒಬ್ಬರಿಗಿಂತ ಇಬ್ರು ಲೇಸು’ ಎಂಬ ಗಾದೆಯ ನೆನಪಾಗುತ್ತದೆ. +ಚಿರಕಲ ಹೆಡ್ಡ :ಈ ಕಥೆಯು ತಲೆಬರೆಹದಿಂದ ಹೆಡ್ಡನ ಕಥೆಯಂತೆ ಭಾಸವಾಗುತ್ತದೆ. +ಇಲ್ಲಿನ ಕಥೆಯ ನಾಯಕನು ಓದು-ಬರೆಹ ಕಲಿಯಲಾರದ ಹೆಡ್ಡ ಹೊರತು, ವ್ಯಾವಹಾರಿಕ ವಿಷಯಗಳಲ್ಲಿ ಹೆಡ್ಡನಲ್ಲ. +ಮೂಲಕಥಾನಿರೂಪಕ ಯಾರೇ ಆಗಿರಲಿ, ಆತ (ಆಕೆ) ‘ಚಿರಕಲ ವಡ್ಡ’ ಎಂದು ಈ ಕಥೆಗೆ ಹೆಸರಿಟ್ಟಿದ್ದಿರಬಹುದೇ ಎಂದು ಅನುಮಾನವುಂಟಾಗುತ್ತದೆ. +ಯಾಕೆಂದರೆ, ಇವನು ಕಲ್ಲುವಡ್ಡನಂತೆ, ವಡ್ಡರ ಮುಖಂಡನಂತೆ ಶಿಲೆಗಳನ್ನು ಒಡೆಯಿಸುವುದು ಮುಂದೆ ಕಥೆಯಲ್ಲಿದೆ. +ಮೊದಲಿಗೆ ‘ವಡ್ಡ’ (‘ಒಡ್ಡ’ ಶಬ್ದದ ತದ್ಭವ) ‘ಒಢ್ರ’ ಅಂದರೆ- ಒರಿಸಾ ದೇಶದಿಂದ ತೆಲುಗು ನಾಡಿಗೆ ಬಂದಿದ್ದುದರಿಂದ ‘ವಡ್ಡ’ ಎಂಬ ಹೆಸರು ಈ ಜಾತಿಗೆ ಬಂದಿದ್ದಿರಬಹುದು. +ಆದರೆ, ಕನ್ನಡದಲ್ಲಿ ‘ಕಲ್ಲು ವಡ್ಡ’ ಎಂದರೆ- “ಕಲ್ಲು ಒಡೆವ ಕಸುಬಿನವ” ಎಂದು ಅರ್ಥವಾಗುತ್ತದೆ. +ಬಹಳ ಕಥೆಗಳಲ್ಲಿ ಕಿರಿಯನೇ ನಾಯಕನು, ಕಿರಿಯನೇ ಕಾರ್ಯಸಾದಕನು. +ಆದರೆ, ಈ ಕಥೆಯಲ್ಲಿ ಹಿರಿಯನೇ ಮುಖ್ಯ. +ಕಥೆಯ ಮಧ್ಯದಲ್ಲಿ ದೇವಲೋಕದಿಂದ ಕುದುರೆಗಳು ಬಂದು ಮೇಯುವ ಆಶಯ ಉಂಟು. +ಇದರೊಡನೆ ‘ದೇವಲೋಕದ ಆನೆ’, ‘ದೇವಲೋಕದ ಕುದುರೆ’ ಎಂಬ ನಮ್ಮ ಕಥೆಗಳನ್ನು ಹೋಲಿಸಬಹುದಾಗಿದೆ. +‘ದೇವಲೋಕದ ಆನೆ’ ಕಥೆಯಲ್ಲಿ ಮುತ್ತಿನ ಪೈರನ್ನು ಮೇಯಲು ಆನೆ ಬರುತ್ತಿತ್ತು. +ಕಿರಿಯನು ಎಚ್ಚರಿದ್ದುಕೊಂಡು ಅದನ್ನು ಈಲು ಮಾಡಿಕೊಂಡು ಕೆಲಸ ಸಾಧಿಸಿದನು. +ಈ ಗ್ರಂಥದ ಪೀಠಿಕೆಯಲ್ಲಿ ಬೇರೆ ಬೇರೆ ಗ್ರಂಥಗಳಲ್ಲಿ ಬಂದ ದೇವಲೋಕದ ಕುದುರೆ ಕಥೆಯ ಭಿನ್ನ ಭಿನ್ನ ರೂಪಗಳ ಪ್ರಸ್ತಾವವಿದೆ . +ನನ್ನ ಸಂಗ್ರಹದಲ್ಲಿ- ‘ದೇವಲೋಕದ ಕುದುರೆ’ ಎಂಬ ಅಪ್ರಕಟಿತ ಪಾಠವನ್ನು ದಿ.ಜಟ್ಟು ಜಟ್ಟಿ ಮುಕ್ರಿ ಹರಿಜನ ಹೆಂಗಸು ಹೇಳಿದ್ದಳು. +ಚಿರಕಲ ಹೆಡ್ಡನು ಓದು-ಬರಹ ಬಾರದೆ ಹೆಡ್ಡನೆಂದು ಹೀಗಳೆಯಲ್ಪಟ್ಟವನು. +‘ಶಾಲೆ ಕಲಿತವರೆಲ್ಲ ರಾಜ್ಯಾರ್ಯಾಕೆ ಆಗಿಲ್ಲ’ ಎಂಬ ಚಲಚ್ಚಿತ್ರದ ಗೀತದ ಸಾಲಿನ ಅಭಿಪ್ರಾಯ-- ‘ವಿದ್ಯೆ ಕಲಿತ ಮಾತ್ರದಿಂದ ಬುದ್ಧಿವಂತರಾಗಲಿಕ್ಕಿಲ್ಲ’ ಎಂಬ ಅಭಿಪ್ರಾಯವನ್ನು ಸೂಚಿಸುತ್ತದೆ. +ವಿದ್ಯೆಯಲ್ಲಿ ಹಿಂದುಳಿದ ಹಲವರು ಜಗತ್ತಿನಲ್ಲಿ ಅದ್ಭುತ ಯಶಸ್ಸನ್ನು ಪಡೆದಿದ್ದುದು ತಿಳಿದುಬರುತ್ತದೆ. +ಒಂದು ಉದಾ: ವಿನ್ಸೆಂಟ್ ಚರ್ಚಿಲ್ ಅವರು ಓದು-ಬರಹಗಳಲ್ಲಿ ತೀರಾ ಸಾಮಾನ್ಯ ವಿದ್ಯಾರ್ಥಿಯಾಗಿದ್ದರು. +ಈ ಕಥೆಯ ನಡೆಯಲ್ಲಿ ಮುನ್ನಡೆಯಲ್ಲಿ ಕ್ರಮಬದ್ಧವಾದ ಲಯಗಾರಿಕೆಯ ತಂತ್ರವು ಎದ್ದು ಕಾಣುವಂತಿದೆ. +ಏಳು ಮಂದಿ ಅಣ್ಣಂದಿರು ತಮ್ಮ ತಾಯಿಯೊಡನೆ ಹನ್ನೆರಡು ಗಾಡಿ ರೂಪಾಯಿ. . . ಮುಂತಾದದ್ದು ಬೇಕೆಂದಂತೆಯೇ, ಕಿರಿಯನೂ ತನ್ನ ತಾಯಿಯ ಹತ್ತಿರ ಅದೇ ಉದ್ದೇಶಕ್ಕಾಗಿ ಪ್ರಸ್ತಾಪ ಮಾಡುತ್ತಾನೆ. +ರಾಜನ ಇಬ್ಬರು ಹೆಂಡಿರೂ, ರಾಜನನ್ನು ತಮ್ಮ ಬೇಡಿಕೆಗಾಗಿ ಮಣಿಸಲು ಒಂದೇ ಬಗೆಯ ತಂತ್ರ ಪ್ರಯೋಗಿಸುತ್ತಾರೆ. +ಹಿರಿರಾಣಿ ಹೆಚ್ಚು ಗಡಸುಗಾತಿ. +“ತಾನು ಕೇಳಿದಂತೆ ದ್ರವ್ಯ ನೀಡದಿದ್ದರೆ ನ್ಯಾಯಾಲಯಕ್ಕೆ ಹೋಗುವೆ” ಎಂದು ಬೆದರಿಕೆ ಹಾಕಿ ಕಾರ್ಯಸಾಧನೆ ಮಾಡಿಕೊಳ್ಳುತ್ತಾಳೆ. +ಒಂದಾದ ಮೇಲೆ ಒಂದರಂತೆ ರಾತ್ರಿಯಲ್ಲಿ ಬಿಳಿ ಕುದುರಿ, ಕರಿ ಕುದುರಿ, ಕೆಂದು ಕುದುರಿಗಳು ಬರುವಲ್ಲಿಯೂ ಮುಂದಿನ ಬಣ್ಣನೆಯಲ್ಲಿಯೂ ಲಯಗಾರಿಕೆಯನ್ನು ನೋಡುತ್ತೇವೆ. +ವಾಸ್ತವಿಕ ದೃಷ್ಟಿಯಿಂದ ನೋಡುವುದಾದರೆ ಈ ಕುದುರೆಗಳು ದರೋಡೆಕೋರರ ಪ್ರತಿನಿಧಿಗಳು. +ರೂಪಾಯಿಗಳನ್ನು, ಬಂಗಾರವೂ ಸಹ ಅವು ಕಳುವ ಸಂಗತಿ ನಡೆಯುತ್ತದೆ. +ಏಳು ಮಂದಿ ತಮ್ಮಂದಿರು ತಾವು ಚಾಲಾಕಿಗಳು ಎಂದು ಹೊಗಳಿಸಿಕೊಂಡವರು, ಬೇಕಾದ ಎಚ್ಚರಿಕೆ ವಹಿಸದೆ ನಿದ್ರೆ ಮಾಡಿದರು. +ಅತಿ ಹೊಗಳಿದರೆ ಮಕ್ಕಳು ಮೈಮರೆತು ನಡೆಯಬಹುದು. +ಹಿರಿಯನು ತೆಗಳಿಸಿಕೊಂಡು ಹೆಚ್ಚು ಎಚ್ಚರ ವಹಿಸಿ ಯಶಸ್ವಿಯಾದನು. +ರಾತ್ರಿ ಎಚ್ಚತ್ತು ಕಾಯಲು ಉಪಾಯ ಮಾಡಿ, ತೊಟ್ಟಿಲ ತರಹ ಮಾಡಿಕೊಂಡದ್ದು ಅವನ ಜಾಣ್ಮೆ. +ಕಷ್ಟದಿಂದ ದುಡಿವ ಕೂಲಿಕಾರನಿಗೆ ಪ್ರೋತ್ಸಾಹ ಬಹುಮಾನ ನೀಡುವಲ್ಲಿ ಅತ್ಯುಕ್ತಿಯನ್ನು ಬದಿಗಿರಿಸಿ ನೋಡಿದರೆ ಚಿರಕಲ ಹೆಡ್ಡನು ದುಡಿಮೆಗಾರರ ಯೋಗಕ್ಷೇಮ ನೋಡುವ, ಜನಪರ ರೀತಿಯವ ಎಂಬುದನ್ನು ತಿಳಿಯಬಹುದು. +ರಾಜಕುಮಾರಿಯ ಮದುವೆಯ ಪಣದಲ್ಲಿ ಲಿಂಬೆಕಾಯಿ ಮೊಲೆಯ ಮೇಲೆ ತಾಗುವಂತೆ ಹೊಡೆವುದು ಹೊಸ ಆಶಯ. +ಆದರೆ, ತೊಡೆ ಮೇಲೆ, ಹಣೆಯ ಮೇಲೆ ಹೊಡೆಯಬೇಕೆಂಬ ಪಣದ ಭೇದಗಳು ಕಥೆಯಲ್ಲಿ ವಿಶಿಷ್ಟವಾಗಿರುತ್ತವೆ. +ಈ ಪಣವನ್ನು ಹೆಡ್ಡನು ಪೂರೈಸುವಲ್ಲಿಯೂ ಲಯದ ಕಲೆಗಾರಿಕೆಯು ಸ್ಪಷ್ಟವಾಗಿದೆ. +ಒಂದೊಂದು ಕುದುರೆಯನ್ನೇರಿ ಅದನ್ನು ಸೋಲಿಸುವಲ್ಲಿ ಕಾಣುವ ಪುನರುಕ್ತಿಯು, ಅವುಗಳಿಂದ ಪ್ರಯೋಜನ ಪಡೆವಲ್ಲಿಯೂ ಇರುವುದಾದರೂ ಪಣದ ಒಳಭೇದಗಳಿಂದಾಗಿ ಲಯಗಾರಿಕೆಯು ಸಾಧ್ಯವಾಗಿದೆ. +ರಾಜಕುಮಾರಿಯು ಅಣ್ಣನನ್ನು ವರಿಸಿದ ಮೇಲೆ, ತಮ್ಮಂದಿರು ಅವಳನ್ನು ಪಡೆಯಲು ಮಾಡಿದ ಪ್ರಯತ್ನ, ಬಾವಿಯಲ್ಲಿ ನೂಕುವುದು ಹೊಸದು. +ಆದರೆ, ಹೆಡ್ಡನು ಕುದುರೆಗಳನ್ನು ಸಹಾಯಕ್ಕೆ ತೆಗೆದುಕೊಳ್ಳುವಲ್ಲಿ ಭಿನ್ನತೆಯಿದೆ. +ಕೊನೆಯಲ್ಲಿ ಗೌರೀವ್ರತದ ಉಪಾಯವೂ ಹೊಸದಲ್ಲ. +ಆದರೆ, ನಿರೂಪಕಿಯ ನಿರೂಪಣದಲ್ಲಿನ ಜಾಣ್ಮೆಯು ಸಂಭಾಷಣೆಯಲ್ಲಿಯೂ, ಈ ಕಥೆಯಲ್ಲಿಯೂ ವಿಶಿಷ್ಟ ದೇಸಿಯ ಶಬ್ದಗಳನ್ನು ಬಳಸುವುದರಲ್ಲಿ ಕಾಣುತ್ತದೆ. +ತಮ್ಮಂದಿರ ಸ್ವಾರ್ಥವನ್ನು, ದುಷ್ಟತನವನ್ನು ಅಣ್ಣನ ಔದಾರ್ಯ ಮತ್ತು ಒಳ್ಳೇತನವನ್ನು ವೈರುಧ್ಯ ರೂಪದಿಂದ ಚಿತ್ರಿಸುವಲ್ಲಿ ವೈಶಿಷ್ಟ್ಯಗಳು ಕಾಣುತ್ತವೆ. +ನಿರೂಪಕಿಯು ಕೊಂಕಣಿ ಮನೆಮಾತಿನವಳಾಗಿದ್ದುದರಿಂದ ಅಲ್ಲಲ್ಲಿ ಆ ಭಾಷೆಯ ಶಬ್ದಪ್ರಯೋಗಗಳು ಈ ಕಥೆಯಲ್ಲಿ ಕಾಣುತ್ತದೆ. +‘ಕಲ್ಲು ಮಣ್ಣು ಅಗೆದು ಚಿನ್ನವನ್ನು ಶೋಧಿಸಲು ಸಾಧ್ಯ’ ಎಂಬ ಲೇಖಿಯನ್ನು ಓದಿ ರಾಜಕುಮಾರರು ಅದಕ್ಕಾಗಿ ಪ್ರಯತ್ನ ಪಡುವುದಕ್ಕೆ ಪ್ರೇರಣೆಯಾದ ಫಲಕದ ಬರೆಹದ ಆಶಯದಿಂದ ಈ ಕಥೆಗೆ ಹೆಚ್ಚಿನ ಸೊಗಸು ಬಂದಿರುತ್ತದೆ. +ರಾಣಿಯರ ಪುತ್ರ ಪ್ರೇಮದ ಮಾತು, ಉಪಚಾರಗಳ ಬಣ್ಣನೆಯು ಕಥೆಯ ಸ್ವಾರಸ್ಯವಾದ ಭಾಗಗಳಲ್ಲಿ ಸೇರಿರುತ್ತದೆ. +ಹನ್ನೆರಡು ವರ್ಷದ ಉರಿಪಿಂಡ ಈ ಕಥೆಯು ಬಹಳ ಆಶಯಗಳನ್ನು ಹೊಂದಿದ್ದು ಕಲ್ಪನೆಗಳ ಸಿರಿವಂತಿಕೆಯನ್ನು ಮೆರೆಯುತ್ತದೆ. +ಗಂಡು – ಹೆಣ್ಣು ಕೂಡಿದ ಮಾತ್ರದಿಂದ ಸಂತತಿಯಾಗುವುದಿಲ್ಲ ಎಂಬ ಅನುಭವವು ಹಿಂದಿನವರಿಗಿತ್ತು. +ನಮ್ಮ ಜನಪದ ವೈದ್ಯದಲ್ಲೂ, ಆಯುರ್ವೇದದಲ್ಲೂ ಸಂತಾನ ಪಡೆಯಲು ಪರಿಣಾಮಕಾರಿಯಾದ ಚಿಕಿತ್ಸೆಗಳಿವೆ. +ಆದರೆ, ನಮ್ಮ ಜನರು ದೇವರ ಇಚ್ಛೆಯಂತೆಯೇ ಎಲ್ಲವೂ ನಡೆಯುವುದು ಎಂಬ ತತ್ತ್ವವನ್ನು ನಂಬಿದವರು. +ಅದರಿಂದ ಅವರು ಸಾಮಾನ್ಯವಾಗಿ ಚಿಕಿತ್ಸೆಗಳನ್ನು ಆಶ್ರಯಿಸದೆಯೇ ಸಂತಾನಭಾಗ್ಯವು ದೇವರ ಅನುಗ್ರಹದ ಫಲ. +ಪುಣ್ಯಕಾರ್ಯಗಳಿಂದ ದೇವರನ್ನು ಒಲಿಸಬೇಕು. +ತೀರ್ಥಯಾತ್ರೆ ಮಾಡಿ, ದೇವರ ಸೇವೆ ಮಾಡುವುದರಿಂದ, ಗುರುಹಿರಿಯರ ಆಶೀರ್ವಾದದಿಂದ ಸಂತಾನ ಲಭಿಸುತ್ತದೆ ಎಂಬ ದೃಢನಂಬಿಕೆಯಿಂದ ಇದ್ದ ಕಾರಣ ಈ ಕಥೆಯಲ್ಲಿ ಆ ತೀರ್ಥಯಾತ್ರೆಗಳ ವಿಷಯ ವಿವರವಾಗಿ ಬಂದಿದೆ. +ಮಹಾತ್ಮರು, ಸನ್ಯಾಸಿಗಳು ಹಣ್ಣು, ಹೂ, ತೀರ್ಥ, ಪ್ರಸಾದ ಕೊಟ್ಟು ಮಕ್ಕಳ ಫಲ ಉಂಟಾಗುವ ಕಥೆಗಳು ಹಲವಾರಿವೆ. +ರಾಮಾಯಣದ ಪುತ್ರಕಾಮೇಷ್ಟಿ ಯಜ್ಞವು ಸುಪ್ರಸಿದ್ಧವಾಗಿದೆ. +ಅಲ್ಲಿ ಯಜ್ಞಪುರುಷನು ಯಾಗದ ಮಧ್ಯದಿಂದ ಎದ್ದು ಪಾಯಸವುಳ್ಳ ಪಾತ್ರೆಯನ್ನು ದಶರಥ ರಾಜನಿಗೆ ನೀಡಿದುದು ಪುತ್ರರ ಜನ್ಮವಾಗಲು ಕಾರಣವಾಗುತ್ತದೆ. +ಚಿಕಿತ್ಸಕ ಮನೋಭಾವವುಳ್ಳವರು ಈ ಪಾಯಸವು ವನಸ್ಪತಿಯುಕ್ತವಾಗಿದ್ದು ಸಂತಾನಫಲ ದೊರೆಯಲು ಅನುಕೂಲಕರವಾಯಿತು ಎಂದು ತಿಳಿಯಬಹುದಾಗಿದೆ. +ದೀರ್ಘಕಾಲದ ಪ್ರತೀಕ್ಷೆಯ ಅನಂತರ ರಾಜನಿಗೆ ಬೆಳಗು ಮುನ್ನ ಸ್ವಪ್ನವಾಗುವುದು, ಆ ಸ್ವಪ್ನದಲ್ಲಿ ‘ಮಣ್ಣಿನಲ್ಲಿ ಹುಗಿದು ಬೋರಲಾಗಿ ಬಿದ್ದಿದ್ದ ಎರಡು ದೇವತಾಮೂರ್ತಿಗಳನ್ನು ಪ್ರತಿಷ್ಠೆ ಮಾಡಬೇಕು’ ಎಂದು ದೇವರಿಂದ ಪ್ರೇರಣೆ ಬಂತು. +ಈ ಪ್ರತಿಷ್ಠೆಯ ಕುರಿತಾದ ಸವಿವರ ವರ್ಣನೆಯು ಕೇಳುಗರಿಗೂ ಪ್ರತೀಕ್ಷೆಯನ್ನುಂಟುಮಾಡುತ್ತದೆ. +ಆದರೆ, ನಿರೂಪಣೆಯ ಹಿರಿಮೆಯು ಈ ಪ್ರತೀಕ್ಷೆಯೂ ಹುಸಿಯಾಗಿ ರಾಜನು, ‘ಪುಣ್ಯ ಕಾರ್ಯಗಳಿಂದ ಫಲ ದೊರೆಯಲಿಲ್ಲ; +ಪಾಪ ಕಾರ್ಯ ಮಾಡಬೇಕು’ ಎಂದು ನಿರ್ಣಯ ಮಾಡಿದನು ಎಂಬ ಅನೀರೀಕ್ಷಿತವಾದ; ಆದರೆ ಸಹಜವೆನ್ನಬಹುದಾದ ಬೆಳವಣಿಗೆಯಲ್ಲಿದೆ. +ನನ್ನ ಪೂಜ್ಯ ದೊಡ್ಡಪ್ಪ ಕೈ ತಿಮ್ಮಣ್ಣ ಹೆಗಡೆಯವರು ಎಷ್ಟೋ ಯಾತ್ರೆ, ಪುಣ್ಯಕಾರ್ಯ ಮಾಡಿದರೂ ತನ್ನ ಆಯುರ್ವೇದ ಚಿಕಿತ್ಸೆಗಳು ಫಲ ನೀಡಲಿಲ್ಲ; +ತನ್ನ ರೋಗವೂ ಗುಣವಾಗಲಿಲ್ಲ ಎಂದು ಸಿಟ್ಟಿನಿಂದ ದೇವರುಗಳ ಮೂರ್ತಿಗಳನ್ನು ತಕ್ಕೊಂಡು ಹೋಗಿ ಕೆರೆಯಲ್ಲಿ ಮುಳುಗಿಸಿ ಇಟ್ಟಿದ್ದು ನೆನಪಾಗುತ್ತದೆ. +ತಾತ್ಪೂರ್ತಿಕವಾಗಿದ್ದರೂ ಇಂಥ ದುಡುಕುತನ ನಡೆಯುವುದು ಅಚ್ಚರಿಯನ್ನುಂಟುಮಾಡುತ್ತದೆ. +ಇಲ್ಲಿ ಇನ್ನೊಂದು ಸ್ವಪ್ನದಲ್ಲಿ ದೇವರು-- ಪೂಜಾರಿ ಭಟ್ಟನ ತಲೆದಿಂಬಿಗೆ ಎದ್ದು ಬಂದು ಹೂವನ್ನು ಕೊಟ್ಟಿತು. +ಇದು ಸ್ವಪ್ನದಲ್ಲೇ ಆದ ಘಟನೆಯಾದರೂ ಹೂವು ಮಾತ್ರ ಭಟ್ಟನ ತಲೆದೆಸೆಯಲ್ಲಿ ಇದ್ದಿತು. +ಅಲ್ಲದೆ, ಇಲ್ಲಿ ರಾಜನಿಗೆ ಪ್ರಶ್ನೆ ಮಾಡಿದ್ದು-- ‘ಹನ್ನೆರಡು ವರ್ಷದ ಉರಿಪಿಂಡ ಬೇಕೋ? +ಅರವತ್ತು ವರ್ಷ ಆಯುಷ್ಯ ಇರುವ ಅರೆಮರುಳ ಮಗ ಬೇಕೋ’ ಎಂಬುದು ದೇವರು ತಿಳಿಯಬೇಕಾದ ವಿಷಯ. +ರಾಜನು, ‘ಹನ್ನೆರಡೇ ವರ್ಷ ಆಯುಷ್ಯ ಇದ್ದರೂ ಸಾಕು, ಉರಿಪಿಂಡ (ಪರಾಕ್ರಮಿ) ಮಗನೇ ಬೇಕು’ ಎಂದುದನ್ನು ಮತ್ತೆ ಭಟ್ಟರು ಸ್ವಪ್ನದಲ್ಲೇ ದೇವರಿಗೆ ತಿಳಿಸಿದರು. +ನಮ್ಮ ಜನಪದ ಜೀವನದಲ್ಲಿಯೂ, ಸಾಹಿತ್ಯದಲ್ಲಿಯೂ ಸ್ವಪ್ನಗಳು ಬಹಳ ಮಹತ್ವವನ್ನು ಪಡೆದಿರುತ್ತವೆ. +ಈ ವಿಷಯವು ಬಹಳ ಮಹತ್ವವುಳ್ಳವಾಗಿದ್ದು, ಕುತೂಹಲಕರವೂ ಆಗಿ ಪ್ರತ್ಯೇಕವಾದ ಅಭ್ಯಾಸಕ್ಕೆ ಅರ್ಹವಾಗಿದೆ. +ಗರ್ಭಿಣಿಯಾದ ರಾಣಿಯು ಅತಿಶಯ ಹೊಟ್ಟೆಶೂಲೆಯಿಂದ ಹೊರಳಾಡಿದಾಗ ರಾಜನು, ‘ಪಿಶಾಚಿಯ ಕಾಟವೇ ಇರಬೇಕು’ ಎಂದು ನೋಟ ನೋಡುವ ಗಾಡಿಗರನ್ನು ಕರೆಸಲು ಸಿಪಾಯಿಗಳಿಗೆ ಹೇಳುವ ಮಾತು ತುಂಬಾ ಸ್ವಾರಸ್ಯವಾಗಿದೆ. +‘ಎಲ್ಲೆಲ್ಲಿ ಪುಂಡಗಾರರು ಇದ್ದಾರೆ ಅಲ್ಲೆಲ್ಲ ಹೋಗಿ ಶೋಧಿಸಿ ಅವರೆಲ್ಲರನ್ನೂ ನನ್ನ ಮನೆಗೆ ಕರೆ ತನ್ನಿ’ ಎಂದು ಆಜ್ಞೆ ಮಾಡಿದನು. +ಸೋದಿಕೆ (ದೆವ್ವ, ಪಿಶಾಚಿ ಶೋಧ) ಮಾಡಲು ನೋಟ ಮಾಡುವ ಅನುಭವವು ಇಲ್ಲದ ಪುಂಡಗಾರರು ಹಾರಿ ಹಾರಿ ಬೀಳಹತ್ತಿದ ಕೂಗಾಟ, ಆರ್ಭಟ ಮಾಡಿದ ದೃಶ್ಯವು ಬಹಳ ಮೋಜಿನದಾಗಿದೆ. +ಆ ಮೇಲೆಯೇ ರಾಜನಿಗೆ ಜ್ಷಾನೋದಯವಾಯಿತು. +ಹಡೆದ ಕೋಟಲೆ ತೊಡಗಿದಾಗ ಸೂಲಗಿತ್ತಿಯೇ ಬೇಕು. +ನೋಟ ಮಾಡಿ ಕೂಗಾಡುವ ಗಾಡಿಗರಲ್ಲ ಎಂದು. +ಸೂಲಗಿತ್ತಿ ಎಂಥವಳಿರಬೇಕು ಎಂದರೆ ಮುದುಕಿಯಾಗಿರಬೇಕು. +ರಾಜಾಜ್ಞೆಯಂತೆ ಆಳುಗಳು ಪೇಟೆಯಲ್ಲೆ ಹುಡುಕಿ ನಾಲ್ವತ್ತು ಮುದುಕಿಯರ ಪಟಾಲಮ್ಮನ್ನೇ ತಂದುಬಿಟ್ಟರು. +ಹಡೆದು ಅನುಭವ ಇದ್ದರೂ, ಹಡೆಯಿಸುವ ಅನುಭವ ಇಲ್ಲದ ಮುದುಕಿಯರು ವೀಳ್ಯ ಜಜ್ಜುತ್ತ ಕೂತುಕೊಂಡಾಗ ರಾಜಾಜ್ಞೆ ಆದದ್ದು ಏನೆಂದರೆ-- ‘ಹನ್ನೆರಡು ಜನರು ಹನ್ನೆರಡು ಹೊರೆ ಹುಳಸೆ ಬರ್ಲನ್ನು (ಛಡಿ ಹೊಡೆಯಲು) ತರಬೇಕು’ ಎಂದು. +ಈ ನೋಟ ನೋಡುತ್ತ ಕೂಗುತ್ತ ಮನೆಯ ಮೇಲೆ ಅಕ್ಕಿ ಕಾಳು ಲೆಕ್ಕ ಮಾಡುತ್ತಿದ್ದ ಪುಂಡಗಾರರಿಗೆ ಭೀತಿಯಾಯಿತು. +ಮತ್ತೆ ಭಟ್ಟನಿಗೆ ಸ್ವಪ್ನದಲ್ಲಿ ದೇವರು ಬಂದು ಬಿಳಿ ಹೂ ಮಾಡಿದ ಮೇಲೆ ರಾಣಿಗೆ ಮಗ ಜನಿಸುವ ವಿಷಯ ತಿಳಿಸಿದ್ದು, ‘ಪುಂಡಗಾಡಿಗರಿಗೆ ಹುಳಸೆ ಬರಲಿನ (ಛಡಿಯ) ಪೂಜೆ ಮಾಡದೆ ಮಾಫ್ ಮಾಡಬೇಕು’ ಎಂದು. +ಹುಡುಗನ ಫೋಟೊ ತಕ್ಕೊಂಡು ಪ್ರಧಾನಿಯು ಮೈಸೂರು ರಾಜ್ಯಕ್ಕೆ ಹೋಗಿ ಆ ರಾಜನಿಗೆ ಹುಡುಗನ ಫೋಟೋ ತೊರಿಸಿದ್ದು ವಿಶೇಷವಾದರೆ, ರಾಜನ ಮಗಳು ಆ ಫೋಟೋ ನೋಡಿ ಒಪ್ಪಿಗೆ ಸೂಚಿಸಿದ್ದು ವಿಶೇಷವಾದದ್ದು. +ಲಗ್ನ ನಿಶ್ಚಯವಾದರೂ ಒಬ್ಬ ಮುದುಕ, “ಮೈಸೂರು ರಾಜರಿಗೆ ತಾರು ಕೊಟ್ಟು ದುಡುಕಬೇಡಿ. +ಹುಡುಗನ ಆಯುಷ್ಯ ಇನ್ನು ಮೂರೇ ವರ್ಷ” ಎಂದು ಆ ಸಂಬಂಧ ಮುರಿದು ಹೋಯಿತು. +ಲೋಕದಲ್ಲಿ ಜಾಣಕೋರರು, ವಿಘ್ನ ಮಾಡುವವರು ಇದ್ದೇ ಇರುತ್ತಾರೆ ಎಂಬ ವಾಸ್ತವಿಕ ಸಂಗತಿಯೂ ಈ ಸಂದರ್ಭದಿಂದ ಸ್ಪಷ್ಟವಾಯಿತು. +ಮಗನನ್ನು ಕಾಶೀಯಾತ್ರೆಗೆ ಕಳಿಸುವ ನಿಶ್ಚಯದಲ್ಲಿ ತನ್ನ ಭಾವನನ್ನು ಕರೆಸಿದನು ರಾಜ. +ಆ ಸನ್ನಿವೇಶವೂ ಹಾಸ್ಯದಿಂದಲೇ ವರ್ಣಿತವಾಗಿದೆ. +ಮುಂದೆ ಯಾತ್ರೆಯ ಪಯಣದಲ್ಲಿ ಕೆರೆಯ ಸನ್ನಿವೇಶವೂ ಸ್ವಾರಸ್ಯವಾಗಿದೆ. +ಅದಕ್ಕಿಂತಲೂ ಮುಂದೆ ಚಂದ್ರಾವತೀ ಪಟ್ಟಣದಲ್ಲಿನ ಮದುವೆಗೆ ಹೋಗಿ ತಲ್ಪಿದ ಮೇಲಿನ ಸಂದರ್ಭವಂತೂ ಅತ್ಯಂತ ಸ್ವಾರಸ್ಯವಾದುದಾಗಿದೆ. +ಅಲ್ಲಿ ಕರೆದು ಹೆಣ್ಣು ಕೊಟ್ಟರೆ ಅಳಿಯನಿಗೆ ಮಲರೋಗ ಎಂಬ ಗಾದೆಯಂತೆ ಮದುಮಗನಿಗೆ ಮುಹೂರ್ತ ಸಮಯದಲ್ಲೇ ಮೂರ್ಛೆ. +ಮದುಮಗನ ಬದಲಿಗೆ ಉರಿಪಿಂಡನಿಗೆ ಬಾಸಿಂಗ ಬಲ. +ಈ ಬದಲಿ ಮದುಮಗ ವಧುವಿನೊಡನೆ ಹಾಸಿಗೆಯಲ್ಲಿದ್ದಾಗ ಇವನಿಗೆ ಆಸ್ರಿ(ತೃಷೆ)ಯಾಯಿತು. +ಮದುವೆ ಮಾಡಿಕೊಂಡಿದ್ದರೂ ತನ್ನ ಹೆಂಡತಿಯಲ್ಲಿ ತಂಗಿ ಎಂದು ಕರೆದು ಹೇಳಿದನು. +ಅವಳು ಹಾಲು ಕರೆದು ಕಾಯಿಸಿ ಕೊಟ್ಟಳು. +ಮರುದಿನ ಬೆಳಗಾಗುವಷ್ಟರಲ್ಲಿ ಹೊರಬಿದ್ದ ಉರಿಪಿಂಡ ಮಾವನ ಸಂಗಡ ಮುಂದೆ ಹೋದನು. +ಅಲ್ಲಿ ಅವಳು ನಿಕ್ಕಿಯಾದವನನ್ನೊಲ್ಲದೆ, ಈ ಉರಿಪಿಂಡನಿಗಾಗಿ ಹನ್ನೆರಡು ವರ್ಷ ಕಾಯಲು ನಿಶ್ಚಯಿಸಿದ್ದು ಬಹಳ ವಿಶೇಷ ಮತ್ತು ಅಪೂರ್ವವಾದದ್ದು. +ಮುಂದೆ ಅಮರಾವತಿ ಪಟ್ಟಣದ ಪತಿವ್ರತೆಯ ಮನೆಗೆ ಹೋದ ಅಲ್ಲಿ ಪತಿವ್ರತೆಯ ಪವಾಡ, ಅದೂ ಬತ್ತ ಕುಟ್ಟುವಾಗಿನದು. +ಅದನ್ನು ಓದಿಯೇ ತಿಳಿಯಬೇಕು. +ಅವನು ಎರಡು ಪಾದ ಹಿಡಿದವನೇ ಅವಧಿ ಕಳೆದು ಸತ್ತುಬಿದ್ದನು. +ಇಲ್ಲಿ ಪತಿವ್ರತೆಯ ಅಣ್ಣ ಶಿವರಾಮ, ಗಂಡ ಪರಮೇಶ್ವರ ಮತ್ತು ಮೂವರು ತಮ್ಮ ಆಯುಷ್ಯದ ಭಾಗ ಸೇರಿಸಿ ಉರಿಪಿಂಡನನ್ನು ಬದುಕಿಸಿದ ಅದ್ಭುತ ಆಶಯವು ಅಪೂರ್ವವಾದುದಾಗಿದೆ. +ಮುಂದೆ ಪಾತಾಳಲೋಕ ಸೇರಿದನು ಉರಿಪಿಂಡ. +ಕಥೆಯಲ್ಲಿ ವ್ಯಕ್ತವಾಗುವ ಕೆಲವು ಅನಿರೀಕ್ಷಿತವಾದ ತಿರುವುಗಳಲ್ಲಿ ಪಾತಾಳದಲ್ಲಿ ಇಬ್ಬರು ಅಚ್ಚಕನ್ನೆಯರು ಉರಿಪಿಂಡನನ್ನು ಮೋಹಿಸಿದರು. +ಅವನು, “ನೀವು ನನಗೆ ತಂಗಿಯರಾಗಬೇಕು” ಎಂದು ಸಂಬಂಧ ವಿವರಿಸಿದ ಮೇಲೆ ಇದಕ್ಕೆ ಇಬ್ಬರೂ ಒಪ್ಪಿಕೊಂಡುದು. +ಇಬ್ಬರೂ ‘ಉಂಗುರ ಕೊಡುವೆ’ ಎಂದಾಗ, ಉರಿಪಿಂಡನು ನಿರಾಕರಿಸಿದ ಪರಿಯೂ ವಿಶೇಷದ್ದಾಗಿದೆ. +ಆ ಉಂಗುರದ ಮಹತ್ವ ತಿಳಿಸಿದಾಗ ಒಪ್ಪಿದನು. +ಇಲ್ಲಿ ಕಥೆಯ ಹಿರಿಮೆಗೆ ಕೋಡು ಮೂಡಿದಂತಾಗಿದೆ. +ಉಂಗುರಗಳಲ್ಲಿ ಒಂದು ಕಥೆ ಹೇಳಿದಾಗ, ಇನ್ನೊಂದು ‘ಹೂಂ’ ಎನ್ನುತ್ತದೆ. +ಮಾವನು ಇವನು ಬರುವದನ್ನು ಕಾಯುತ್ತ ಕೂತಿದ್ದು ಕಥೆಯ ಶ್ಲಾಘ್ಯವಾದ ಆಶಯಗಳಲ್ಲಿ ಒಂದು. +ಪದ್ಮಾವತಿ ಸೂಳೆ ಮನೆಯ ಮಾಟದ ಮನೆಯಲ್ಲಿ ಅವಳ ಬೋರ್ಡು ಹಚ್ಚಿಸಿದ್ದರಲ್ಲಿ, ಇಲ್ಲಿ ಬೇರೆ ಕಥೆಗಳ ಹೋಲಿಕೆ ಕಂಡರೂ ಭಿನ್ನ ಅಂಶಗಳು ಉಂಟು. +ಉದಾ: ನಿಂಬೆಹಣ್ಣು ಅರಲಿನ ಮೇಲೆ ಬಾಗಿಲಲ್ಲಿ ಒಗೆದರೂ, ಮುಣುಕಿದ್ದು ಮೇಲೆ ಬಹಳ ದೊಡ್ಡದಾಗಿ ಬರುವಂಥದು. +ಈ ಆಶಯ ಬೇರೆಡೆ ಇಲ್ಲ. +ಇಲ್ಲಿ ತನ್ನ ಪಂಚೆಯ ಸೆರಗನ್ನು ಹರಿದು ಮೊದಲು ಅರಲಿನ ಮೇಲೆ ಒಗೆದು, ಅದು ಆಚೆ ದಾಟಿದ್ದನ್ನು ನೋಡಿ ಪಂಚೆಯ ಮೇಲೆ ನಿಂತು ದಾಟಿ ಹೋಗಿದ್ದು ಇನ್ನೊಂದು ಚಾತುರ್ಯದ ಆಶಯ. +ಪದ್ಮಾವತಿಯ ಬದಲಿಗೆ ಮೂವರು ದಾಸಿಯರು ಅವಳ ಸೀರೆ, ರವಿಕೆ, ಆಭರಣ ಹಾಕಿಕೊಂಡು ಉರಿಪಿಂಡನನ್ನು ಮರುಳು ಮಾಡಲು ಯತ್ನಿಸಿದ ಚಮತ್ಕಾರದ ಆಶಯ ಬೇರೆ ಕಥೆಯಲ್ಲೂ ಉಂಟು. +ಆದರೆ, ಅವನ ಮಾತೂ ಹೊಸ ರೀತಿಯದು. +ಉರಿಪಿಂಡ ಮೊದಲು ಹೇಳಿದ್ದು ತನ್ನದೇ ಕಥೆ. +ಎರಡನೇ ಕಥೆಯ ಪ್ರಾರಂಭದಲ್ಲಿ ಅವಶ್ಯವಿಲ್ಲದೆ ವಿಸ್ತಾರ ಮಾಡಿದಂತಿದೆ. +ಇಲ್ಲಿನ ಆಚಾರಿಯ ಪರಿವಾರದಲ್ಲಿ ಒಬ್ಬ ಕಳ್ಳ ಇರುವುದು ವಿಶಿಷ್ಟವಾದದ್ದು. +ಕಾಗೆ ಹಾಕಿದ ಮೂರು ಮೊಟ್ಟೆ (ತತ್ತಿ)ಗಳ ವಿಷಯವೂ, ಅದನ್ನು ಕಳ್ಳನು ಕದ್ದು ತಂದುದು, ಅವನ್ನು ಪುನಃ ಕಾಗೆಯ ಬಳಿ ಇಟ್ಟುದೂ ವಿಶಿಷ್ಟವೇ. +ರಾಕ್ಷಸಿಯ ಮೊಣಕಾಲಿನ ಮೇಲೆ ಮೂರು ಮಲ್ಲಿಗೆ ತೂಕದ ಹುಡುಗಿ, ಇದು ಹೊಸ ತರದ ಆಶಯ ಭಾಗ. +ಇಲ್ಲಿ ಗಾಡಿಗತನ ಮೈಮೇಲೆ ಬರುವ ವಿಷಯ ಕುತೂಹಲಕರವಾಗಿದೆ. +ಮೈಮೇಲೆ ಆವೇಶ ಬರುವುದು ಮತ್ತು ರಾಕ್ಷಸಿಯ ನದರನ್ನು ಅದಕ್ಕೆ ದೃಷ್ಟಿಯನ್ನು ಕಟ್ಟುವ ಆಶಯಗಳಲ್ಲಿ ಎರಡನೆಯದು ಜಾಗತಿಕ ಆಶಯಗಳಲ್ಲಿ ಅತಿ ಹೊಸ ಆಶಯವೆಂದು ಹೇಳುವಂತಿದೆ. +ಅವ ಕಳ್ಳನು ಮೂರು ಮಲ್ಲಿಗೆ ತೂಕದ ಎಲೆಯನ್ನು ತಕ್ಕೊಂಡು ಹೋಗಿ ರಾಕ್ಷಸಿಯ ಮೊಳಕಾಲಿನ ಮೇಲೆ ಇದ್ದ ಹುಡುಗಿಯ ಹತ್ತಿರ, ರಾಕ್ಷಸಿಯ ಮೊಣಕಾಲಿನ ಮೇಲೆ ಇಟ್ಟು ಹುಡುಗಿಯನ್ನು ಕರೆದುಕೊಂಡು ಬಂದನು. +ಕೂಡಲೇ ರಾಕ್ಷಸಿಯ ನದರನ್ನು ಕಟ್ಟಿದ್ದನ್ನು ತೆಗೆದುಬಿಟ್ಟನು. +ಅದರಿಂದ ರಾಕ್ಷಸಿಗೆ ಎಚ್ಚರವಾಗುವುದರಿಂದ ಹಡಗಿನ ಮೇಲೆ ಹತ್ತಿ ಬಂದರು. +ರಾಕ್ಷಸಿ ಮೂರು ಹೆಜ್ಜೆಗೇ ಸಮುದ್ರ ತೀರಕ್ಕೆ ಬಂದುಬಿಟ್ಟಳು. +ಅವಳ ಅತಿ ದೊಡ್ಡ ದೇಹವು ಸೂರ್ಯನ ಬೆಳಕನ್ನು ಮರೆ ಮಾಡಿ ಕಪ್ಪಾಗಿಹೋಯಿತು. +ಇಲ್ಲಿ ಕೋವಿಕಾರನಿಗೆ-- ಕಪ್ಪು ಬಣ್ಣದ ರಾಕ್ಷಸಿಯು ಇಟ್ಟಿದ್ದ ಹಣೆಯ ಮೇಲಿನ ಬಿಳಿ ಬೊಟ್ಟು ಕಂಡು, ಅದಕ್ಕೇ ಗುರಿ ಇಟ್ಟು ಗುಂಡು ಹೊಡೆದನು. +ರಾಕ್ಷಸಿ ಸಮುದ್ರದಲ್ಲಿ ಅಭಾಂಡ ದೇಹದವಳು ಬಿದ್ದ ಹೊಡೆತಕ್ಕೆ ಸಮುದ್ರದ ನೀರು ಅಲ್ಲೋಲಕಲ್ಲೋಲವಾಗಿ ಕೆರೆ ರಭಸ ಎದ್ದು, ಹಡಗು ಒಡೆದು ಹೋದ ಬಣ್ಣನೆಯು ಪ್ರತಿಭಾವ್ಯಂಜಕವಾಗಿ ಭವ್ಯತೆಯ ಚಿತ್ರಣವಾಗಿದೆ. +ಈ ಕಥೆಯಲ್ಲಿ ಹುಡುಗಿ ಯಾರಿಗೆ ಸಲ್ಲಬೇಕು ಎಂದು ಪ್ರಶ್ನೆ ಬಂತು. +ಆ ಸಮಸ್ಯೆಗೆ ಪದ್ಮಾವತಿ ಉತ್ತರಿಸಿದಳು. +ರಾಕ್ಷಸಿಯನ್ನು ಕೊಂದ ಕೋವಿಕಾರನಿಗೇ ಹುಡುಗಿ ಸಲ್ಲಬೇಕು. +ಮೂರನೇ ಕಥೆಯನ್ನು ಇನ್ನೊಂದು ಉಂಗುರವು ಶಿರಾಳ ಬೆಂಕಿ ಹೆಸರಿನದು ಹೇಳಬೇಕಾಯಿತು. +ಆಚಾರಿ, ಚಿಪಗೇರವ, ಸೊನಗಾರ-- ಮೂವರು ರಾತ್ರಿ ಅಡವಿಯಲ್ಲಿ ಕಟ್ಟಿಗೆ ತರಗೆಲೆ ಬೆಂಕಿ ಮಾಡಿಕೊಂಡು ಒಬ್ಬೊಬ್ಬರು ಮೂರು ತಾಸು ಎಚ್ಚರದಿಂದಿರಬೇಕು ಎಂದು ಕರಾರು ಮಾಡಿಕೊಂಡು, ಉಳಿದಿಬ್ಬರು ಮಲಗಿದರು. +ಚಿಪಗೇರವ ಎರಡನೇ ಬಿದ್ದ. +ಈ ಮೂರನೇ ಕಥೆಯಲ್ಲಿ ಕಟ್ಟಿಗೆಯ ಗೊಂಬೆ ಮಾಡಿದ್ದು ಕತೆ ಪ್ರಚಾರದಲ್ಲಿರುವುದೇ ಆಗಿದೆ. +ಚಿಪಗೇರವ (ಪಟಸಾಲಿ) ಬೆತ್ತಲೆ ಮಾಡಿದ್ದ ಗೊಂಬೆಗೆ ರೇಶ್ಮೆಯ ಸೀರೆ ಮಾಡಿ ಉಡಿಸಿದ್ದು ಇಲ್ಲಿನ ವಿಶೇಷ. +ಆದರೆ, ಸೀರೆ ಕೊಟ್ಟಿದ್ದು ಬೇರೆ. . . . ಇಂಥ ಕಥೆಗಳಲ್ಲಿ ಬರುವುದಿಲ್ಲ. +ಸೊನಗಾರ ಚಿನ್ನ ಮಾಡಿದ. +ಇಲ್ಲಿ ಗೊಂಬೆಗೆ ಜೀವ ತರಿಸುವದೊಂದು ಬೇರೆ ಕಥೆಯಲ್ಲಿದೆ. +ಪಾರ್ವತಿ-ಪರಮೇಶ್ವರರು ಒಂದು ಗೊಂಬೆಗೆ ಜೀವ ಮಾಡಿದ್ದು ವಿಶೇಷ ಆಶಯ ಭಾಗವಾಗಿದೆ. +ಹುಡುಗಿಯನ್ನು ಯಾರು ಲಗ್ನವಾಗಬೇಕು? +ಈ ಸಮಸ್ಯೆ ಈ ಕಥೆಯಲ್ಲೂ ಬರುತ್ತದೆ. +ಪದ್ಮಾವತಿ, ‘ಚಿನ್ನ ಹಾಕಿದ, ಅದರಲ್ಲಿ ಮಂಗಳಸೂತ್ರ ಸಹ ಸೇರಿರುವುದರಿಂದ ಸೊನಗಾರನೇ ಅವಳ ಗಂಡ’ ಎಂದು ಮಾತಾಡಿಬಿಟ್ಟಳು. +ಅವಳು ಸೋಲಿಸಿ ಗುಲಾಮರನ್ನು ಮಾಡಿಕೊಂಡಿದ್ದನ್ನು ತಪ್ಪಿಸಿಹಾಕಿದನು. +ಉರಿಪಿಂಡ ಬೇರೆ ವರನ ಬದಲಿಗೆ-- ಇವ ಮದುವೆಯಾದ ಹುಡುಗಿ, ಬೇರೆ ಹುಡುಗಿಯರನ್ನು ಕರೆದುಕೊಂಡು ಹೊರಡುವ ಮೊದಲು, ‘ನೀನೊಬ್ಬನೇ ಮನೆಗೆ ಹೋಗು ಎಲ್ಲರೂ ಒಮ್ಮೆಲೇ, ಕೂಡಲೇ ಬಂದರೆ-- ‘ದಂಡು ಬಂತು’ ಎಂದು ಹೆದರಿ ಬೆಟ್ಟ ಬೇಣಗಳಿಗೆ ಓಡಿ ಹೋದಾರು’ ಎಂದು ಹಾಸ್ಯದ ಮಾತನ್ನು ಹೇಳುತ್ತಾನೆ. +ಕಥೆಯ ಪ್ರತಿಯೊಂದು ವಿವರವನ್ನು ವರ್ಣನೆ ಮಾಡುವಾಗ ನಿರೂಪಕರು ತಲ್ಲೀನರಾಗಿ ಅವಶ್ಯವಿರುವ ಯಾವುದೇ ಸಂಗತಿಯನ್ನು ಭೀಕರವಾಗಿ ನಿರೂಪಿಸದೆ, ಕಲಾತ್ಮಕವಾಗಿ ಕಥೆಯನ್ನು ನಿರೂಪಿಸಿದ್ದಾರೆ. +ಕೊನೆಯ ಕಥೆಯಲ್ಲಿ ವಿಶೇಷ ಹೊಸತನ ಕಡಿಮೆಯಾಗಿರುವುದೊಂದೇ ಕೊರತೆ. +ನಿರೂಪಕರು ಹಳೇ ಜನರ ನಿರೂಪಣೆಯ ಶೈಲಿಯಲ್ಲಿ ಕಥೆಯನ್ನು ಬೆಳೆಯಿಸಿ ಹೇಳಿದುದು ಪ್ರಶಂಸನೀಯ. +ಸಂಭಾಷಣೆಗಳಲ್ಲಿ ಮುಖ್ಯವಾಗಿ ಉರಿಪಿಂಡನ ಮಾತುಗಳಲ್ಲಿ ವಿಶೇಷ ಜಾಣ್ಮೆಯನ್ನು ತೋರಿಸಿದ್ದಾರೆ. +ಜನರ ನಂಬಿಕೆ, ಜೀವನ ಕ್ರಮಗಳನ್ನು ಚಲಚ್ಚಿತ್ರ ರೂಪದಲ್ಲಿ ಕಣ್ಣಿಗೆ ಕಟ್ಟುವಂತೆ, ಮನಸ್ಸಿಗೆ ತಟ್ಟುವಂತೆ ಬಣ್ಣಿಸಿದ್ದಾರೆ. +ಯೆಯ್ಡ್ ಹುರ್ಸಾನಕ್ಕೀತು ಅಂಬ್ರು. +ವಂದ್ ಗಂಡು, ವಂದ್ ಹೆಣ್ಣು-- ನಂತ್ರ ಅವು ಈ ಗೂಡು ಕಟ್ಟೂದು, ಬಾಳ ಯೆತ್ರ ಮೇನ್ ಕಟ್ಟೂದು. +ಆ ಹಕ್ಕಿ ಯತ್ರದ ಮೇನ್ ಕಟ್ಟ್‌ಲಿಲ್ಲ. +ಸ್ವಲ್ಪ ಕೆಳಗೇ ಕಟ್ಟಿತ್ತು. +ಆವಾಗ, ಕರಡದ ಜೋಳಿಗೆ ಬೆಂಕಿ ಬಂದ್ ಬಿಟ್ತು. +ಅಂಬೂದು ಬೆಂಕಿ ಬಂದ್ ಕೂಡ್ಲೆ, ಆ ಬೆಂಕಿ ಶಕೆ ಗೂಡ್ಗೆ ತಾಗೂಕ್ ಸುರು ಆಯ್ತು. +ಆವಾಗ, ಹೆಣ್ ಹಕ್ಕಿ ಹೇಳ್ತಂಬ್ರು. +ಅದು ಯೇನಂತು? +‘‘ಬೆಂಕಿ ಶಕೆ ತಾಕಿ ಮರಿಗೊಳೆಲ್ಲ ಸುಟ್ ಹೋಗ್‌ ಬಿದ್ದಿವೆ. +ನೀವ್ ವಂದ್ ಯೆತ್ಕಣಿ, ನಾನ್ ವಂದ್ ಯೆತ್ಕಳ್ತೆ” ಅಂತು. +ಆವಾಗಾ ಗಂಡ್ ಹಕ್ಕಿ ಹೇಳ್ತಂಬ್ರು-- ‘‘ನಾವ್ ಯೆತ್ಕಳ್ಳಿಕ್ಕಿಲ್ಲ, ನಿನ್ ಮರಿ ನೀನೇ ಯೆತ್ಕಂಬೇಕು” ಅಂತು. +ಆವಾಗ ಅದು ಹೆಣ್ ಹಕ್ಕಿ ಯೇನ್ ಮಾಡ್ತಂದ್ರೆ, ತನ್ ಮರೀನ ಹಗೂರ್ಕೆ ಬೆಂಕಿ ತಪ್ಸಿ, ಆಚೆ ತಗದಿಟ್ಕಂಡು ಪುನಃ ಮತ್ತೊಂದ್ ಗೂಡ್ ತಯಾರ್ ಮಾಡಿ ಕೂತ್ಕೊಳ್ತು. +ಅವಾಗ ಮಾರನೇ ದಿವಸಾ ಆ ಗಂಡ್ ಹಕ್ಕಿ ಆ ಗೂಡ್ ಸಮೀಪ ಬಂತಂಬ್ರೂ. +ಆವಾಗ ಆಗೂಡ್ನ ಸಮೀಪ ಬಂದ್ ಕೂಡ್ಲೆ, “ನಾನ್ ಸಲ್ಪ ಆ ಗೂಡ್ಗ್ ಬತ್ತೆ. +ನಾನು ಬಪ್ದೊ?” ಕೇಳ್ತು ಹೆಣ್ ಹಕ್ಕಿಗೆ. +ಆವಾಗಾ ಹೆಣ್ ಹಕ್ ಹೇಳ್ತು-- “ನಿಮ್ ಮರಿ ಯೆತ್ಕಳಿ ಅಂದ್ರೆ ನೀವು ಯೆತ್ಕೊಳ್ಳಿಲ್ಲ. +ಆದ್ರಿಂದ, ಈ ಗೂಡ ನಾನು ಸ್ವತಃ ತಯಾರ್ ಮಾಡ್ದ ಗೂಡು. +ಇದ್ಕ್ ಈ ಬರೂದ್ಕ್ ಕೊಡೂದಿಲ್ಲೆ. +ಈ ಮಕ್ಕಳ ಅಧಿಕಾರ ನಿಮಗಿಲ್ಲೆ ಅಂತಾಯ್ತು” ಅಟ್ಟು ಹೆಣ್ಣಕ್ಕಿ ಹೇಳ್ತು. +ಅವಾಗ ಗಂಡ್ ಹಕ್ಕಿ, ಬಲ್ತ್ ಗಾರ್ಕಿಂದಾ ಆ ಗೂಡ್ ಪರವೇಸ್ ಮಾಡ್ತು. +ಪರವೇಸ್ ಮಾಡ್ದ್ ಕೂಡ್ಲ ಆ ಹೆಣ್ ಹಕ್ಕಿಗೂ, ಗಂಡ್ ಹಕ್ಕಿಗೂ ಬೇಕಾದಟ್ ಹೊಡೆದಾಟ ಸುರವಾಯ್ತು. +ಹೊಡೆದಾಟಕ್ ಸುರ್ವಾದ್ ಕೂಡ್ಲೆ ಆ ಹೊಡೆದಾಟದಲ್ಲಿ ಗಂಡ್ ಹಕ್ಕಿ ಸೋತ್ ಹೋಯ್ತು ಅಂತಾಯ್ತು. +ಅವಾಗ ಗಂಡ್ ಹಕ್ ಹೇಳ್ತಂಬ್ರು-- “ಇದ್ಕ್ ತಕ್ಕದ ಗಿರಸ್ತ್ರ ಕೂಡಿ ಪಂಚಾಯ್ತ ಮಾಡಿ, ಈ ಮರಿ ಯೇನದೆ ನಂದ್ ಮಾಡ್ಕಳ್ತೇನೆ” ಅಂಬ ಗಂಡ್ ಹಕ್ಕಿ ಸವಾಲಾಯ್ತಂಬ್ರು. +ಆವಾಗಲ್ ಸಮೀಪ್ಕೆ ವಂದ್ ರಾಜ್ನ ಮನಿತ್ತಂಬ್ರು. +ಅವಾಗಾ ರಾಜನ ಮಗ ವಬ್ಬಿದ್ದಂಬ್ರು. +ಅವ್ನ ಕೂಡೆ ಈ ಗಂಡ್ ಹಕ್ಕಿ ತಮ್ಮ ಗಂಡ-ಹಿಂಡತಿರೆಗೆ ನಡ್ದ ಜಗಳ ತಕೊಂಡ್ ಹೋಗ್ ಹೇಳ್ತು-- “ನನ್ ಹಿಂಡ್ತಿ ನನ್ಗ್ ಗೂಡ್ ಹೊಕ್ಕೂಕ್ ಕೊಡ್ಲಿಲ್ಲೆ. +‘ನಿನ್ಗೂ ಈ ಮರಿ ಸಮಂದೂ ಇಲ್ಲೆ’ ಅಂತ ಹೇಳ್ ನನ್ಗೆ ಇನ್ಕಾರ್ ಮಾಡ್ತು, ನನ್ಗ್ ಬೇಕಟ್ ಪೆಟ್ಟು ಹೊಡೀತು. +ಅದ್ರಿಂದಾ, ನೀವು ಯೇನದೇ ನನ್ದ್ ಮಾಡ್‌ಕೊಡ್ಬೇಕು” ಅಂತ ಹೇಳ್ತು. +ರಾಜನ ಮಗ್ಗೆ ಅದ್ರಿಂದ ಭಯಂಕರ ಸಿಟ್ಟೇ ಬಂತು. +“ಗಂಡು ಅಂತಾದ್ರೆ ನಾನೂ ವಂದೇ, ಹಕ್ಕಿಯಾದ್ರೂ ವಂದೇ. +ಅದ್ರಿಂದ, ಹಿಣತಿ ಯೇನದೆ ‘ಮರಿಹಕ್ಕಿ ಗಂಡಸರಿಗೆ ಇಲ್ಲೆ’ ಅಂತ ಹೇಳೂದು ದೊಡ್ ತಪ್ಪು. +ಅದ್ರಿಂದ ಗಿರಯ್ಸರೆಲ್ಲ ಕೂಡಿ, ನಾನು ಪಂಚಾಯ್ತಿ ಇಟ್ರೆ ನಿನ್ ಹಿಂಡ್ತಿಗೂ ನಾ ಕರಿ ಕಳ್ಗತೆ. +ನೀನೂ ಸಹ ಬರಬೇಕು. +”ಆವಾಗ ಮುಕ್ಕಮುಕ್ಕ ಜನ್ರನೆಲ್ಲಾ ಗಿರಾಯ್ಸರನೆಲ್ಲಾ ಕೂಡಿಸ್ದಾ ಅಂತಾಯ್ತು. +ಗಿರಾಯ್ಸರೆಲ್ಲಾ, ಹೆಣ್ಣು ಮಾರ್ನೆ ದಿವಸ ಪಂಚಾಯ್ತಿಗೆ ಬಂದ್ ಕೂತ್ಕೊಂಡ್ರು. +ಈ ರಾಜನ ಮಗ ಆ ಗಿರಸ್ತಾರ ಸಬೀಲಿ ಈ ಹಕ್ಕೀ ವಳ್ಗ್ ನೆಡ್ದ್ ತಕ್ರಾರ ಹೇಳ್ದ ಅಂತಾಯ್ತು. +ಆವಾಗ ಈ ಹೆಣ್ ಹಕ್ಕಿಗ್‌, “ಗಂಡನ ಕೂಡೆ ಹೊಡದಾಟ ಮಾಡಿ, ಗಂಡನ ಹೆರ್ಗ್ ಹಾಕ್ತು. +ಇದು ಬಾಳ ತಪ್ಪು. +ಅದ್ರಿಂದ, ಈ ಮರಿಗಳ್ಯೇನದೆ ಗಂಡಂಗೇ ಸಂಬಂದಪಟ್ಟಿದ್ದು” ಅಂದ್ ಹೇಳಿ ವಂದ್ ಲೇಕಿ ಮಾಡ್ದನಂಬಗೆ. +ಆವಾಗಾ ಲೇಕಿ ಮಾಡ್ದ ಕೂಡ್ಲೆ ಹೆಣ್ ಹಕ್ಕಿ ಸಿಟ್ ಮಾಡ್ಕೊಂಡ್ ಹೊರಟ್‌ಹೋಯ್ತು. +ಗಂಡ್ ಹಕ್ಕಿ ಮರಿಗೊಳ್ನೆಲ್ಲಾ ಸಾಕ್ತಿ ಉಳಿತು. +ಆವಾಗ ಅದೇ ರಾಜನ ಮನೀಲಿ ವಂದು ಹೆಣ್ ಕುದ್ರಿತ್ತು. +ಪರ್ದಾನಿ ಮನೀಲಿ ವಂದ್ ಗಂಡ್ ಕುದ್ರಿತ್ತು. +ಆವಾಗಾ ಈ ಪಂಚಾಯ್ತಿ ನಿಕಾಲಿ ಮಾಡ್ದಂತಾ ಪರದಾನಿ ಮನಿಗೆ ಹೋದ್ರು. +ಪರದಾನಿಗ್ ವಬ್ಬ ಮಗಳಿದ್ಲು ಅಂಬ್ರು. +“ಅಪ್ಪಾ, ರಾಜಗೊಳ ಮನೀಲಿ ಯೆಂತಾ ಪಂಚಾತ್ಗಿ?” ಅಂತ ಕೇಳ್ತು ಅಂಬ್ರು. +“ಪಂಚಾತ್ಗಿ ಯೆಂತ ಇಲ್ಲೆ. +ಹುರ್ಸಾನಕ್ಕಿ ಪಂಚಾತ್ಗಿ. +ಹಕ್ಕಿ ಮರಿಯೆಯ್ಡೂ ಹೆಣ್ಣ ಹಕ್ಕಿಗಿಲ್ಲೆ. +ಯೆಯ್ಡೂ ಗಂಡ್ ಹಕ್ಕಿಗಾಯ್ತು. +ರಾಜರು ತರಾವ್ ಮಾಡ್ದ್ರು. +ಈ ಹೆಣ್ ಹಕ್ಕಿ ಕಣ್ಣೀರ್ ತೆಗೀತಾ ಯಾವ್ ಕಡೆಗ್ ಹೋಯ್ತೋ ಯೇನೋ. . . ” ಆವಾಗ ಪರ್ದಾನಿ ಮಗಳು, ಅದೇ ತಾರೀಕು-ಪಟ್ಟಿಯೆಲ್ಲಾ ಅದೇ ಸಮನಿ ಬರೆದಿಟ್ಕೊಂಡ್ಳು. +ಆವಾಗ ಆ ರಾಜನ ಮನಿ ಹೆಣ್ ಕುದ್ರಿಗೆ ಮರಗಲ್ ಬಂತು. +ಈ ಪರ್ದಾನಿ ಮನಿ ಗಂಡ್ ಕುದ್ರಿ ಅದ್ಕ್ ಹೋಗ್ ಕೂಡ್ತು. +ಆವಾಗ್ ಅದ್ಕ್ ಯೆಲ್ಲಾ ತಿಂಗಳ ಬರ್ತಿ ಆಗಿ, ದಿವಸ ಆಗಿ, ವಂದಿವ್ಸ ಅದು ಕರು ಹಾಕ್ತು ಅಂತಾಯ್ತು. +ಆವಾಗಾ ಸಾಕಿ ದೊಡ್ಡ ಮಾಡ್‌ದ್ರು, ರಾಜನ ಮನೀಲಿ. +ದೊಡ್ಡ ಮಾಡ್ದ್ ಕೂಡ್ಲೆ ವಂದ್ ದಿವ್ಸ ತಾಯ್ ಸಂತಿ ಅದು ಮೇವೂಕೆ ಬೋಳಿಗೆ ಹೋಯ್ತು. +ಆ ಅರ್ಸನ ಮನಿ ಕುದ್ರಿ ಮೇಯ್ಸೂಕ್ ವಬ್ ಹುಡ್ಗವ್ನೆ; + ಪರ್ದಾನಿ ಮನಿ ಕುದ್ರಿ ಮೇಯಸೂಕೆ ವಬ್ ಹುಡ್ಗವ್ನೆ - ಯೆಯ್ಡ ಜನ. +ಆವಾಗ್ ಸಂಜೆಗ್ಯೆಲ್ಲಾ ಕುದರಿ ಕೊಟ್ಗಿಗ್ ಹೊಡ್ಕಬಂದ್ರು ಹುಡ್ರು. +ಹೊಡ್ಕ ಬಂದವ ಪರ್ದಾನಿ ಮಗಳ ಕೂಡ್ಸಿ ಆ ಹುಡ್ಗ್ ಹೇಳ್ದೆನಂಬ್ರು, “ಅಮಾ, ಮತ್ತೆ ಅರ್ಸನ ಮನೀಲಿ ವಂದ್ ಕುದ್ರಿ ಮರಿ ಹಾಕದೆ. . . ಕುದ್ರಿ ಬೋಳಿಗೆ ಬಂದದೆ. +ಯೆಟ್ ಚಂದ ಅಂತ ಹೇಳೂಕ್ ಸಾದ್ಯಿಲ್ಲೆ” ಅಂದ. +ಆವಾಗ ಅವ್ಳ್ ಹೇಳ್‌ದ್ಲು, “ನಾಳೆ ಆ ಕುದ್ರಿ ಮರಿ ನಮ್ಮನಿಗೆ ಹೊಡ್ಕಬರ್ಬೇಕು ನೀನು” ಹೇಳ್ದ್ಲ ಅವಳು. +ಮಾರ್ನೆ ದಿವಸಾ ಆ ಹುಡ್ಗ ಕುದ್ರಿ ಮೇಯಸೂಕ್ ಹೋದವ, ಆ ಕುದ್ರಿ ಬಲ್ತಾರ್ಕಿಂದ ಹೊಡ್ಕ ಬಂದ. +ರಾಜನ ಮನಿ ಹುಡ್ಗ ಹೆಣ್ ಕುದ್ರಿ ವಂದೇ ಹೊಡ್ಕಂಡಿ ಮರಕ್ತೇ ಹೋದ. +ಮರಕ್ತೆ ಹೋದ ಕೂಡ್ಲೆ ರಾಜನ ಮಗ ಕೇಳ್ದನಂಬ್ರು, “ಮರಕ್ತೆ ಬಂದ ಕಾರಣಯೇನು? +ಕುದ್ರಿ ಮರಿ ಯೆಲ್ಗ್ ಹೋಯ್ತು?” ಅಂತ ಕೇಳ್ದ. +“ಪರ್ದಾನಿ ಮನಿ ಹುಡ್ಗ ಯೇನ್ ಹೇಳ್ದ್ರು ಕೇಳಲಿಲ್ಲ. +ನನ್ಗೂ ಸಹಾ ಹೊಡ್ದಿಕ್ಕಿ ಕುದ್ರಿ ಮರಿ ತಕಂಡ್ ಹೋದ” ಹುಡ್ಗ ಹೇಳ್ದ ಅವ. +ಅಟ್ ಹೇಳ್ದ ಕೂಡ್ಲೆ ರಾಜನ ಮಗ್ಗೆ ಸಿಟ್ ಬಂತು. +ಸಿಟ್ ಬಂದ್ ಕೂಡ್ಲೆ ಅವ ಹೇಳ್ದ, “ಪರ್ದಾನಿ ಕೂಡ್ಲೆ ಕರೀರಿ ಇಲ್ಲಿ” ಅಂತ. +ಪರ್ದಾನಿ ಕರೂಕೇ ವಂದ್ ಜನ ಕಳ್ಸಿರು. +ಹೋದ ಕರೂಕೆ, “ನಮ್ ರಾಜನ ಮಗ ನಿನ್ ಕೂಡ್ ಕೂಡ್ಲೆ ಬರೂಕ್ ಹೇಳರೆ” ಅಂದ್ ಹೇಳ್ ಹೇಳ್ದ‌. +ಇಷ್ಟಾದದ್ದು ಪರದಾನಿಗೆ ಯೇನೂ ಗೊತ್ತಿಲ್ಲೆ. +ಯೇನೂ ಕರ್ದಾರೆ ಅಂದ್ ಮಾಡ್ಕಂಡಿ ರಾಜರ ಮನಿಗೆ ಹೋದ. +ಆವಾಗ ರಾಜ್ನ ಮಗ ಹೇಳ್ದನಂಬ್ರು, “ನೋಡು, ನನ್ ಕುದ್ರಿಮರಿ ನೀ ಹೊಡ್ದ ಹೋಗಿದೆ. +ನಿನ್ಗ್ ಈಗಿಂದೀಗ್ ಪಾಸಿ ಕೊಡ್ತೆ” ಅಂದ್ ಹೆದ್ರ್‌ಸ್ದ ನಂಬ್ರು. +ಆವಾಗಾ ಪರ್ದಾನಿಗೆ ಹೆದ್ರ್ಕ್ಯಾಗ್ ಹೋಯ್ತು. +“ಸ್ವಾಮೀ, ನಾನಲ್ಲ. . . ನಾನ್ ಮನಿಗ್ ಹೋಗ್ ಯಾರಂದಿ ಕೇಳ್ತೆ” ಅಂದ. +ಮನಿಗ್ ಬಂದಿ ಕೇಳೂಕೆ ಹೋದ್ರೆ ಮಗಳು, ‘‘ತಾನು ಹೊಡ್ಕಬರೂಕೆ ಹೇಳ್ದೋಳು, ಈ ಕುದ್ರಿಮರಿ ಅಧಿಕಾರ ತನ್ದೇ ಸೈಯ್” ಅಂತ ಹೇಳ್ದ್ಲು ಅವ್ನ ಕೂಡೆ. +“ಅಡ್ಡಿಲ್ಲ ಮಾರಾಯ್ತಿ, ತಕ್ರಾರ್ ಬೇಡ. +ಆ ರಾಜ್ನ ಮನಿ ಕುದ್ರಿಮರಿ ಕೊಟ್ಬಿಡಿ” ಅಂತ ಹೇಳ್ದ. +ಪರ್ದಾನಿ ಮಗಳ್ ಹೇಳ್ದ್ಲು, “ಕುದ್ರಿಮರಿ ಕೊಡೂದಿಲ್ಲೆ. . . ನೀನ್ ಬೇಕಾರೆ ಕುದ್ರಿಮರಿ ಕೊಡುದಿಲ್ಲೆ ಅಂತ ಹೇಳ್ ಬಾ” ಅಂದ್ಲು. +ಆವಾಗ್ ಪರ್ದಾನ್ ಹೋಗಿ ರಾಜ್ನ ಮಗ್ನ ಕೂಡೆ ಹೇಳ್ತ, “ನಾನಲ್ಲ ಕುದ್ರಿಮರಿ ಹೊಡ್ಕಂಡ್ ಹೋದವ್ಳ್, ನನ್ ಮಗಳು. +ನನ್ನಿಂದ ಯೇನೂ ತಪ್ಪಿಲ್ಲ ಸ್ವಾಮೀ‌. +ನಾನು ಕೊಡುಕ್ ಹೇಳ್ದ್ರೂ ಅವ್ಳು ಕೊಡುದಿಲ್ಲ. +ರಾಜ್ನ ಮಗನಿಗೆ ಹೇಳು ಅಂದ್ ಹೇಳ್ದ್ಲು. +ಆದ್ರಿಂದ ಈ ತಪ್ಪನ್ನು ಮಾಫ್ ಮಾಡಬೇಕು ನೀವು.” +“ಇಲ್ಲಾ, ನಾಳಿಕ್ ನಿನ್ ಮಗಳ ನೀನು ಕರ್ಕಂಡ್ ಬರ್ಬೇಕು. +ನಾನಿಲ್ಲಿ ಅದ್ಕೆ, ‘ಯಾವ ಲೆಕ್ದಲ್ ಕುದ್ರಿಮರಿ ತಕಂಡ್ ಹೋದೆ?’ ಅಂತ ನಿನ್ನ ಮಗಳ ಕೈಲ್ ಕೇಳ್ಬೇಕು” ಅಂತ ಹೇಳ್ದ. +ಕೂಡ್ಲೆ ಪರ್ದಾನಿ ಮನಿಗ್ ಬಂದಾ. +“ಮಗಳೇ, ನಾಳೀಕ್ ರಾಜನ ಮಗ ನಿನ್ ಕೂಡ ಬರ್ಲಿಕ್ ಹೇಳಾನೆ. +ನಾನೂ ಬತ್ತೆ. +ಮತ್ ಇಬ್ರೂ ಹೋಪ ರಾಜ್ನ ಮನೀಲಿ” ಅಂದ‌‌. +ಮಾರನೆ ದಿವ್ಸ ಅಪ್ಪ- ಮಗಳು ಇಬ್ರೂ ರಾಜನ ಮನಿಗೆ ಹೋದ್ರು ಅಂತಾಯ್ತು. +ರಾಜನ ಮಗ ನಾಕ್ ಜನ ಗಿರಾಯಸ್ತರ ವಟ್ಕೂಡಿ ಅಲ್ ಪಂಚಾತ್ಗಿಗೆ ಸುರ್ ಆಯ್ತು. +“ಈ ಪರ್ದಾನಿ ಮಗಳು ನಮ್ ಕುದ್ರಿ ಮರಿ ತಕಂಡ್ ಹೋಗ್ ಕಟ್ ಹಾಕು ಕಾರ್ಣಯೇನಪ್ಪ? +ಅದ್ರ ಬಗ್ಗೆ ಇವಳ್ಗೆ ಜೈಲ್ ಹಾಕಬೇಕು” ಅಂತ ಹೇಳ್ದ. +ಇವಳು ಯೇನ್ ಹೇಳ್ಲಿಲ್ಲ. +ಹುರ್ಸಾನಕ್ಕಿ ಪಂಚಾತ್ಗಿ ಮಾಡಿರಲ್ಲ? +ಆ ಬರ್ದ್ ಇಟ್ಕಂಡ್ ಚೀಟಿಯ ಆ ಸಬೀಲ್ ಇಟ್ಲು. +ಸಬ್ಯೊರೆಲ್ಲಾ ನೋಡ್ತ್ರು ಚೀಟೀನಾ, “ಹೆಣ್ಗೆ ಮಕ್ಕಳು ಸಂಬಂದಿಲ್ಲ. +ಗಂಡ್ಗೇ ಸರಿ” ಹೇಳಿ ಹುರ್ಸಾನಕ್ಕಿ ಪಂಚಾತ್ಗಿಲಿ ಮಾಡ್ದ ತರಾವಿತ್ತು. +“ಆದ್ರಿಂದ್ ನನ್ ಕುದ್ರಿ ಗಂಡು, ನಿನ್ ಕುದ್ರಿ ಹೆಣ್ಣು (ನನ್ ಗಂಡ್ ಕುದ್ರಿ ನಿನ್ ಹೆಣ್ ಕುದ್ರಿ ಕೂಡಿ - ಕುದ್ರಿಮರಿ ಹುಟ್ಟಿದ್ರು). +ನಿನ್ ಕುದ್ರಿಮರಿ ನಾನ್ ಹೊಡ್ಕಹೋಗನೆ. +ಆ ಕುದ್ರಿಮರಿ ನಂದಾಯ್ತು.” +ರಾಜ್ನ ಮಗ್ಗೆ ಯೇನ್ ಮಾತಾಡದಾಕೂ ಉಪಾಯಿಲ್ಲೆ. +“ಅಬ್ಬೋ!ಈ ಪರ್ದಾನಿ ಮಗಳ್ಗೆ ಇಟ್ ಸೊಕ್ ಯೆಲ್ ಬಂತು? +ಇವ್ಳಿಗ್ ಯಾವ ತರದ ಸೀಕ್ಸ್ಯಾ ಕೊಡ್ಬೇಕಾಯ್ತು?” ಅಂತ ಹೇಳಿ ತನ್ನಲ್ಲೆ ತಾನು ಇಚಾರ ಮಾಡೂಕ್ ಹಾಕಂಡ್ನಂಬ್ರು. +ಯೇನ್ ಇಚಾರ ಮಾಡ್ರೂ ತಲೀನ್ ಹೊಕ್ಲಿಲ್ಲ. +“ಇವಳನ್ನೇ ನಾನು ಮದಿಯಾಗಬೇಕು” ಹೇಳೂ ತಲೆ ಹೊತ್ತು, ‘ಇವಳನ್ನ ನಾನ್ ಮದ್ಯಾಗಿ ಇವಳ್ನ ಹನ್ನೆಯ್ದ ವರ್ಸಾ ನೆಲಮಾಳ್ಗಿಲಿ ಇಟ್ಟು ಅವಳ ಜವನ ಅವಳ್ಗ್ ತಿನ್ಸ್ಬೇಕು’ ಅಂತ ಹೇಳಿ ಇಚಾರ ಮಾಡ್ದ. +ಆವಾಗ ಕೂಡ್ದರ್ರೆಲ್ಲಾ ಮನಿಗ್ ಹೋದ್ರು. +ಪರದಾನೀನೂ, ಪರದಾನಿ ಮಗಳೂ ತಮ್ಮ ಮನಿಗ್ ಬಂದ್ರು. +ಗಿರಾಯಸ್ತರೆಲ್ಲಾ ಕೂಡ್ದವ್ರು ತಮ್ ಮನಿಗ್ ಹೋದ್ರು. +ರಾಜನ ಮಗ್ಗೆ ರಾತ್ರಿ ಊಟ ಮಾಡ್ ಮನ್ಗ್‌ದವನಿಗೆ ನಿದ್ರೀನೇ ಬರಲಿಲ್ಲ. +ಸಿಟ್ಟೇ ಹೆಚ್ಚಾಯ್ತು. +ಬೆಳಗಾದ ಕೂಡ್ಲೆ ಪರ್ದಾನಿ ಕರಿ ಬಿಟ್ಟ, “ಪರ್ದಾನಿ ಕೂಡೆ ಬರೂಕ್ ಹೇಳು” ಅಂತ. +ಆ ಮಾತು ಪರ್ದಾನಿಗ್ ಹೋಗ್ ಮುಟ್ತು. +ಪರ್ದಾನಿ ಬಂದ, “ಯೇನಪ್ಪ ಸ್ವಾಮಿ, ಯಾಕೆ ನನ್ ಕರ್ದದ್ದು?” ಕೇಳ್ದ. +“ಯೇನಿಲ್ಲೆ ನಿನ್ ಮಗಳನ್ನ ನನ್ಗೆ ಲಗ್ನಾಗಬೇಕಂತ ಮನ್ಸದೆ. +ನನ್ಗ್ ನಿನ್ ಮಗಳ ಕೊಡತಿಯೋ, ಹೇಗೆ?” ಅಂತ ಕೇಳ್ದ. +ಆವಾಗ ಪರ್ದಾನಿ ಹೇಳ್ದ, “ನೀವಿಂತಾ ರಾಜರು. +ನಾನು ಕನಿಷ್ಟ ಪರ್ದಾನಿ. +ನನ್ನ ಮಗಳ ನೀವ್ ಲಗ್ನಾದ್ರೆ ಯಾರಾದ್ರೂ ನೆಗ್ಯಾಡೂದಿಲ್ಲಾ?” ಅಂತ ಕೇಳ್ದ. +ಅರ್ಸನ ಮಗ ಹೇಳ್ದನಂಬ್ರು--“ಮದ್ಯಾಗವವ ನಾನು, ನೆಗ್ಯಾಡ್ವವ್ನಲ್ಲಾ. +ನಿನ್ಗ್ ಕೊಡೂಕ್ ಅಕ್ಕೋ ಕೂಡವೋ” ಅಂತ ಕೇಳ್ದ. +“ನನ್ ಮಗಳ ಕೇಳ್ತೆ ಸ್ವಾಮ. . . ನನ್ನಿಂದ ಹೇಳೂಕ್ ಸಾದ್ಯಿಲ್ಲ” ಅಂತ ಅಂದ ಪರ್ದಾನಿ. +“ಕೂಡ್ಲೇ ಕೇಳು ಹಂಗರೆ” ಅಂತ ಅರಸೂ ಮಗ ಹೇಳದ. +ಪರ್ದಾನಿ ಮನಿಗೆ ಬಂದಿ, ಮಗಳ ಹತ್ರ ಕೇಳ್ದ-- “ಮಗಳೇ, ರಾಜನ ಮಗ ನಿನ್ನನ್ನ ಮದಿಯಾಗಬೇಕಂತ. +ನಿನ್ಗ್ ಕಬೂಲದ್ಯೋ ಹೇಗೆ?” ಕೇಳ್ದ. +“ನನ್ನ ಕಬೂಲಿಲ್ಲ. +ನೀನ್ ಯೇನಂದ್ ಬಂದೆ ರಾಜ್ನ ಮಗನ ಕೂಡೆ?” ಕೇಳದ್ಲು. +“ನಾನು ಅವ್ನ ಹತ್ರ ಯೇನೂ ಹೇಳ್ಳಿಲ್ಲೆ. +ನೀ ಸ್ವಲ್ಪ ಜೋರನವಳು. +ನಿನ್ ಕೇಳೇ ಹೇಳ್ವ ಅಂತ ಹೇಳಿ ನಿನ್ನ ಕೇಳೂಕ್ ಬಂದೆ” ಅಂತ ಹೇಳ್ದ. +“ನಿನ್ನ ಕಬೂಲಿದ್ದ ಹೇಳ್ಬಿಡು ಮಾರಾಯ್ತಿ” ಹೇಳ್ದ. +ಆವಾಗ್ ಪರ್ದಾನಿ ಮಗಳ ಹೇಳೆದ್ಲು, “ಯೇ ಅವ್ವಾ! +ನಿನ್ಗ್ ಯೇನ್ ಬುದ್ದಿ ಕಡ್ಮಯಾಯ್ತು? +ರಾಜನ ಮಗ್ಗೆ ನನ್ನ ಲಗ್ನ ಮಾಡ್ಕೊಟ್ರೆ, ಅಂತಾ ರಾಜನ ಮಗನೇ ನಿನ್ನಳಿಯ. +ನಾನೇ ಆ ರಾಜಸ್ತಾನಕೆ ಪಟ್ಟದ ರಾಣಿ. +ನಿನ್ಗೆ ಯಾವದೇ ವಂದ್ಕೆ ತಾಪತ್ರಿಲ್ಲೆ. +ಪುನಃ ಮತ್ ಹೋಗಿ ನನ್ನ ಮಗಳ ಕಬೂಲದೆ. +ಲಗ್ನ ಮಾಡ್ ಕೊಡೂದ್ ಯಾವಾಗ್ ಕೇಳ್ಕ ಬಾ” ಅಂತ ಹೇಳ್ದ್ಲು. +ಆವಾಗ ಪರ್ದಾನಿ ಮತ್ ಪುನಃ ಹೋದ. +“ನನ್ನ ಮಗಳೂ ಕುಸ್ಯದೆ. +ಲಗ್ನಾಗೂದ್ ಯಾವಾಗೆ?” ಕೇಳ್ದ. +“ನಾಳೆ ಬರೂ ಸೋಮಾರ ಗನಾ ಮೂರ್ತದೆ. +ಆ ದಿವ್ಸವೇ ಲಗ್ನ ಮಾಡ್ಕಂಬ” ಹೇಳ್ದ ರಾಜನ ಮಗ. +ಪರ್ದಾನಿ ಮನೆಗ್ ಬಂದಾ. +ಚಪ್ರ-ಚಾವಡಿಯೆಲ್ಲಾ ತಯಾರ ಮಾಡ್ದ. +ರಾಜನ ಮಗ ಮದವಿಗೆ ಬಾಸಿಂಗ ಕಟ್ಕಂಡಿ, ಹೆಣ್ನ ಮನಿಗ್ಹೋದ-- ಲಗ್ನಾಯ್ತು. +ಮಾರನೇ ದಿವಸಾ ದಿಬ್ಬಣ ಗಂಡಿನ ಮನಿಗ್ ಬರೂ ಹೊತ್ಗೆ ಪದ್ದತ್ದಂತೆ ಯೇನಾರೂ ಬಳ್ವಳಿ ಕೊಡಬೇಕು. +ಪರ್ದಾನಿ ಯೇನ್ ಕೊಡ್ಬೇಕು ಅಂತ ಹೇಳೂ ಇಚಾರ್ಕೇ ಬರ್ಲಿಲ್ಲೆ. +ಮಗಳ ಕೂಡೆ ಕೇಳ್ತ, “ಮಗಳೇ, ನೀನು ದೊಡ್ ಕುಟುಂಬಕ್ಕೆ ಹೋತೆ. +ನಿನ್ಗ್ ಯೇನ್ ಬಳ್ವಳಿ ಕೊಡ್ಲವಾ ನಾನು?” +ಮಗಳ ಹೇಳ್ದಳಂಬ್ರೂ, “ರಾಜನ ಮನೆ ದೊಡ್ಡ ಸಮುದರ. +ಅದ್ಕೆ ನಾನು ಯೆಲ್ಲಿದಾರೂ ಸ್ವಲ್ಪ ನೀರ್ ತಕಹೋಗ್ ಹಾಕ್ರೆ ಹೆಚ್ಚಾಗ್ವಂಗೂ ಇಲ್ಲೆ. . . ಕಡ್ಮಯಾಗೂ ಹಾಂಗೂ ಇಲ್ಲೆ. +ಅದ್ರಿಂದ, ಯೇನೂ ಬಳ್ವಳಿನೂ ನನ್ಗ್ ಬೇಡ, ಕೊಡೂದಾದ್ರೆ ನಮ್ಮನಿಲಿ ಯೆಯ್ಡ ಸೂರ್ಯೆಲಿ ಮರಿ ಅದೆ. +ಅದನ್ನೇ ನನ್ಗ್ ಕೊಟ್ಬಿಡು” ಅಂತ ಹೇಳಿ ಹೇಳ್ದಳಂಬ್ರು. +ಮಗಳು ಅಪ್ಪನ ಕೂಡಾ ಗಂಡ್ನ ಮನಿಗೇ ದಿಬ್ಬಣ ಬಪ್ಕೆ ತಯಾರಾಯ್ತು. +ಮನಿವಳ್ಗೆ ಆ ಸೂರ್ಯೆಲಿ ಮರಿ ಯೆಯ್ಡನೂ ಕಟ್ಟಿ ಕೊಟ್ಟಂಬ್ರು. +ದಿಬಣ ಮನಿಗ್ ಬಂತು. +ಇಲ್ಲಿ ಮನೀಲಿ ನೋಡ್ದ್ರೆ ನೆಲಮಾಳ್ಗೆಯೆಲ್ಲಾ ಕಡ್ದಿ ಕಂಪ್ಲೀಟಾಗದೆ. +ಹನ್ನೆಯ್ಡ ವರ್ಷಕೆ ಆಗ್ವಟ್ಟು ಆಹಾರ ನೆಲಮಾಳ್ಗಿ ತುಂಬಾರೆ. +ತುಂಬಾದ ಕೂಡ್ಲೆ ಹೇಳ್ದನಂಬ್ರು, “ನೀನೀ ನೆಲಮಾಳ್ಗಿಲ್ ಇಳೀಬೇಕು” ಅಂದಿ. +ಹಿಂಡ್ತಿ ಕೂಡ್ಲೆ, “ನೆಲಮಾಳ್ಗಿಲ್ ಇಳೂದ್ ಯಾಕಪ್ಪಾ ನಾನು?” ಅಂತ ಕೇಳ್ದಲಂಬ್ರೂ. +“ಯಾಕಂದ್ರೆ, ನಾನು ಮಾಡ್ದಂತಾ ಹುರ್ಸಾನಕ್ಕಿ ಪಂಚಾತ್ಗಿ ಅದೇ ನೀನ್ ಗಟ್ಮಾಡ್ ಹಿಡ್ದಿ. +ಅದ್ರಿಂದ ನನ್ ಕುದ್ರಿಮರಿ ಅಧಿಕಾರ ಮಾಡಿ, ನೀನ್ ನಿನ್ ಮನಿಗ್ ಹೊತ್ಕಹೋದೆ. +ಅದ್ರಿಂದ, ನನ್ನ ಪರ್ತಿಜ್ಞ ಹೀಗದೆ. . . ‘ನಿನ್ನ ಲಗ್ನಾಗಿ ಹನ್ನೆಯ್ಡ ವರ್ಸ ನಿನ್ ನೆಲಮಾಳ್ಗಿಲ್ ಹಾಕ್ತೆ’ ಹೇಳಿ - ನೀನಲ್ಲೇ ಸೋತ್ರೆ ಕಂಗಾಲಾಗಿ, ‘ದೇವರೇ, ಈ ರಾಜ್ನ ಮಗನ್ಗೆ ಯಾಕ ಈ ರೀತಿ ನಾನು ಉಪದ್ರ ಕೊಟ್ನಪ?’ ಅಂತ ನಿನ್ ಮನ್ಸ್‌ಗೇ ನಿನ್ಗನ್ಸಬೇಕು.” +“ಆಗ್ಲಿ, ವಳ್ಳೇದು. +ನನ್ನ ಸೋಲ್ಸಿ ಕಂಗಾಲ್ ಮಾಡೂದು ನಿಮ್ಮಂತಾ ರಾಜ್ರ್‌ಗೆ ದೊಡ್ಡ ಕೆಲ್ಸಲ್ಲಾ. +ದಿಲ್ಲಿ ಪಾಚಾಳ್ನ ಮಗಳು ಸುರತಾಳದೇವಿ. +ಅವಳನ್ನಾ ಮೂರೆ ಮಾತಾಡ್ಸಿ ಅವಳ ಲಗ್ನಾ ಕಂಡ್ ಬಂದ್ರೆ ಅದು ದೊಡ್ಡ ಪರಾಕರ್ಮ. +ನನ್ನಂತಾ ಹೆಣ್ ಹೆಂಗ್ಸನ ಸೋಲ್ಸೂದು ದೊಡ್ ಮಾತಲ್ಲ. +ನಿಮ್ ಹಿಣತಿ ನಾನು, ನಾನ್ ನೆಲಮಾಳ್ಗಿಗೆ ಹೋತೆ; ಯೇನ್ ಬೇಜಾರಿಲ್ಲ ನನಗೆ” ನೆಲಮಾಳ್ಗಿ ಇಳ್ದ್ ಹೋದ್ಲಂಬ್ರು. +ಅಲ್ಲೇ ಯೆಲ್ಲಾ ಮುಚ್ಗ್ಯಾಯ್ತು. +ಯೆಲ್ಲೆಲ್ಲೂ ಹೈಟ್ ಹೆರ್ಗ್ ಬರ್ಬಾರ್ದು. +ರಾಜನ ಮಗ ಇಚಾರ ಮಾಡ್ತ, ‘ಇವ್ಳಂತೂ ನೆಲಮಾಳ್ಗಿಗೆ ಹಾಕಾಯ್ತು. +ಸುರತಾಳ ದೇವಿ ಹೇಗಿದಾಳು; ನೋಡ್ಕಂಡೇ ಬರಬೇಕು’ ಅಂತ ಹಂಕಾರ ಬಂದ್ ಹೋಯ್ತು. +ಸೀದಾ ದಿಲ್ಲಿಗೆ ನೆಡ್ದ್ ಬಿಟ್ಟಾ. +ಅಲ್ಹೋಗಿ ರಾತ್ರಿಯಾಯ್ತು. +ಮಾಳ್ಗಿ ಮೇನೆ ರಾಜ್ನ ಮಗಳು ವಬ್ಳೇ ಇರು ಜಾಗಾ. +ಇವ್ ಹೋಗಿ ಅಲ್ ಕೂತ್ಕಂಡ. +ಯೆಷ್ಟ್ ಮಾಡ್ದ್ರೂ ಬೆಳ್ಗಾಗುತನ್ಕ ಅವ್ಳು ಮಾತಾಡ್ಲಿಲ್ಲ. +ಅವಳ ತರಾವ್ ಹೇಗದೆ ಅಂದ್ರೆ, ಬೆಳ್ಗಾಗ್ವಲ್ಲಿವರಿಗ್ ಮಾತಾಡ್ಸ್ದೆ ಇದ್ದವ್ರಿಗೇ ಜೈಲ್ ಮಾಡೂದೂ. +ಅವಳ ಮನಿಕೆಲ್ಸ ಮಾಡ್ಸೂದು. +ಅದ್ರಂತೆ ನೂರಾರ್ ಜನ ಬಿದ್ದರೆ ಅಲ್ಲಿ ಅವಳ ಮನಿ ಕೆಲ್ಸ ಮಾಡ್ತಿ. +ಇವ್ನೂ ಸೋತಿ ಅವರೊಟ್ಟಿಗೆ ಕೆಲ್ಸ ಮಾಡ್ತಾ ಉಳ್ದ. +ಅವನ ಶುದ್ದಿ ನೆಲಮಾಳ್ಗಿಲಿದ್ದ ಪರ್ದಾನಿ ಮಗಳ್ಗೆ ಗೊತ್ತಾಯ್ತು. +“ವಟ್ಟು ನನ್ ಗಂಡ ಸಿಕ್ಕಬಿದ್ದ್ರು. +ನಾನೇ ಹೋಗ್ ಅವ್ರನ ತಪ್ಸಬೇಕು. +ಇಲ್ಲಾ ಅಂದ್ರೆ ಹಿಂದ್ ಬರೂಕೇ ಅವ್ರಿಗೆ ಸಾದ್ದಿಲ್ಲೆ. +”ಆವಾಗ ಯೆಲಿ ಮರಿ ಸಲ್ಪ ತಿಂದಿ ದೊಡ್ ಯೆಲ್ಯಾಯ್ತು. +ಯೆಲಿ ಕೂಡೆ ಅವ್ಳು ಹೇಳ್ದಳಂಬ್ರು. +“ನಿನ್ ಸಣ್ಣಿದ್ಯಲ ನಾನ್ ತಕ ಬಂದಿದೆ. +ಸಾಕಿ-ಸಲಗಿ ಇಟ್ ಮಾಡ್ದೆ. +ನನಗೊಂದ್ ಉಪ್ಕಾರ ಮಾಡ್ತ್ರ ನೀವು?” ಅಂತ ಕೇಳೆದ್ಲು ಅಂಬ್ರು. +ಯೆಲಿ ಹೇಳ್ತು ಅಂಬ್ರು, “ತಾಯೇ, ನೀನು ಯೇನ್ ಹೇಳ್ದ್ರೂ ನಾವ್ ಎಲ್ಲಕ್ಕೂ ತಯಾರಾಗವ್ರೆ” ಅಂತ ಹೇಳ್ದ್ವು. +“ಇಲ್ಲೇ ಸಮೀಪಕೆ ವಂದ್ ಶಣ್ಣ ಕಾಡದೆ. +ಇಲ್ಲಿಂದ ಅಲ್ತಕ ಹೋಗಿ ವಂದ್ ಸುರಂಗ ಮಾಡ್ಬೇಕು” ಅಂತ ಹೇಳ್ದ್ಲು. +‘ಅಕ್ಕು’ ಅಂತ ವಪ್ಕಂಡು ಸುರಂಗ ಮಾಡೂಕೆ ಸುರುಮಾಡದ್ವು. +ಕೂಡ್ಲೇ ಇವಳು ಗಂಡ್ ಯೇಸ ಮಾಡ್ಕಂಡು ಸೀದಾ ಹೊರ್ಗೆ ಬಿದ್ಲು. +ದಿಲ್ಲಿಗೆ ಹೋದ್ಲು. +ಮಧ್ಯ ದಾರಿಯಾಗೆ ರಾತ್ರಿಯಾಯ್ತು. +ಮಾದೊಡ್ ಕಾಡ್ನಲ್ ಹೋತೇ ಇರಬೇಕಿದ್ರೆ ಬಯಂಕರ ಹೆದ್ರಕೀನೂ ಆಯ್ತು ಅವಳಿಗೆ. +ಆ ಕಾಡಲ್ಲಿ ಅಲ್ಲೊಂದು ಗೋಳಿಕಟ್ಟೆ ಸಿಕ್ತಂಬ್ರು. +“ಆ ಕಟ್ಟೆ ಮ್ಯಾಲೆ ಸುಂಗಾರಾದ್ (ಶೃಂಗಾರವಾಗಿ) ಹೊಳೀತದೆ. +ಆದ್ರಿಂದಾ ಇಲ್ಲೇ ನಾನು ಕೂತ್ಕಳಬೇಕು. +ಹೆದ್ರಕೀನೂ ಆತದೆ. +ರಾತ್ರನೂ ಆಗದೆ” ಅಂತ ಹೇಳಿ ಅಲ್ಲೇ ಕೂತ್ಲಂಬ್ರು. +ಅಲ್ಲಿ ಆ ಕಟ್ಟೆ ಸುಂಗಾರ್ ಮಾಡಿ, ಅಲ್ಲಿ ಚಚ್ದಂತಾ (ಇಟ್ಟಂತಾ) ಜನ ಯಾರು? +ಅಲ್ಲಿ ಸಾವ್ರಾರ್ಗಟ್ಲೆ ಬೂತಗಳು ತಂಡತಂಡವಾಗಿ ಅವೆ. +ಅವು ಪರ್ತಿ ದಿವಸಾ ಅಲ್ ಬಂದಿ ಪಂಚಾತ್ಗಿ ಆತದೆ. +ಆ ದಿವ್ಸವೂ ಬೂತಗೊಳ ತಂಡ ಆ ಮೀಟಿಂಗಿಗೆ ಬಂದದೆ. +ದೂರಿಂದಾ ನೋಡ್ತಾ ಅವೆ ಬೂತ. +‘‘ಇದೊಂದು ಪಿರಾಣಿ ದೊಡ್ದು ಯಾವದಪ್ಪಾ? +ಸಲ್ಪ ನಮಗೆ ಈ ಕಟ್ಟಿ ಬಿಟ್ ಕೊಡಬೇಕು” ಅಂತ ಭೂತಗಳು ಹೇಳ್ದ್ರು. +ಆವಾಗ ಈ ಪರ್ದಾನಿ ಮಗಳು ಹೇಳ್ತಳಂಬ್ರೂ, “ಈ ಕಟ್ಟಿ ನನ್ ಹೆರ್ಯೋರ್ದು. +ಅದ್ರಿಂದಾ ಈ ಕಟ್ಟಿ ಅಧಿಕಾರ ಮಾಡೂಕ್ ಈಗ ನಾನು ಬಂದನೆ. +ಈ ಕಟ್ಟಿ ನಿಮ್ಗ್ ಕೊಡುದಿಲ್ಲೆ ನನ್ಗ್ ಬೇಕು.” + “ಈ ಕಟ್ಟಿ ದರ್ಮಸಾಲಿ ನಮ್ಗ್ ಕೊಡಬೇಕು. +ನಿಮಗೆ ಯೇನ್ ಉಪ್ಕಾರ ಮಾಡಬೇಕಾದ್ರೂ ನಾವ್ ತಯಾರಾಗವ್ರೆ. +ಈ ಕಟ್ಟಿ ನೀವ್ ನಮ್ಗ್ ಬಿಟ್ ಕೊಡಬೇಕು. +”ಆವಾಗಾ ಇವ್ಳ್ ಗಂಡ ರೂಪಾಗ್ ಹೋದವ್ಳ್ ಹೇಳ್ದಳಂಬ್ರು, “ನಾನೀಗ ದಿಲ್ಲಿಗೆ ಹೋಗೂಕ್ ಬಂದವ್ಳು. +ಬೆಳ್ಗಾಗೂ ತನ್ಕ ಸುರತಾಳದೇವಿಗೆ ಮೂರ್ ಮಾತಾಡ್ಸುಕಾಗದೆ ಯೆಲ್ಲೊರೂ ಸೋತ್ ಹೋಗರೆ. +ನಾನ್ ಹೋಬೇಕು ಅಂತಾ ಮಾತಾಡ್ಸೂ ಉಪಾಯ ಅದ್ಯೋ ಹೇಗೆ?” ಕೇಳದ್ಲು. +ಆವಾಗ ಬೂತಗೊಳ್ ಹೇಳ್ದ್ರು, “ಅಮ್ಮಾ. . . ಅವ್ಳು ಮಾತಾಡೂದು ಮುಕ್ಕಾಲ್ ಗಳ್ಗಿಲಿ ಮಾತಾಡ್ಸ್ ಕೊಡ್ತ್ರು ನಾವು; +ನೀವು ದಿಲ್ಲಿಗ್ ಹೋಗಿ, ಅಲ್ಲಿ ಮಂಚದ ಮೇಲ್ ಚಾಪಿ ಹಾಕಿ ತಯಾರಾಗಿ ಇರ್ತದೆ. +ನೀವಲ್ ಕೂತ್ಕೊಳ್ಳಿ. +ಸುರತಾಳದೇವಿ ಅಂಬವ್ಳು ದೊಡ್ ಮೌನದ ಮೇನೇ ಗೇಣ್ಯಿತ್ರಿ ಹಾಸ್ಗಿ ಮಾಡ್ಕಂಡು ಸುಮ್ನೆ ಮಲ್ಗ್‌ಬಿಟಿತ್ಲು. +ನಿನ್ ಮಾತಾಡ್ಸೂದಿಲ್ಲೆ. +ಆವಾಗ ನೀನು ಸಲ್ಪ ಹೊತ್ನ ಮೇಲೆ ನೀನ್, ‘ಅಯ್ಯೋ, ರಾಜನ ಮಗಳು ಮಲ್ಗವಂತಾ ಮಂಚವೇ, ವಂದ್ ಕತಿ ಹೇಳು. +ನನ್ಗ್ ಇಲ್ ಇರೂಕ್ ಬೇಜಾರಾಯ್ತು. +ವಂದ್ ಕತಿ ಹೇಳು’ ಅಂತ ಹೇಳಬೇಕು. +ಆ ಕೂಡಲೇ ನಾವು ಮಂಚದೊಳಗೆ ಬೂತ ಬಂದ ಹೊಕ್ಕಂತೊ; ಆ ಮಂಚಾ ಬಿಡ್ತಳವ್ಳು. +ಆವಾಗಾ ನಾನು ಆ ಮಂಚದೊಳ್ಗೆ ಹೊಕ್ಕಂಡಿ, ‘ಅಣ್ಣಾ. . . ನಾ ಕತಿ ಹೇಳ್ತೆ. +ಹೂಂಗುಡ್ವೊರ್ಯಾರು ಕತಿಗೆ?’ ಅಂತ ಹೇಳ್ತೆ. +ಆವಾಗ ಅವಳು ಚಳಿಗೆ ನೆಲ್ದ ಮೇಲೆ ಹಾಸ್ಗಿ ಹಾಕಂಡು ಹಾಸ್ಗಿ ಮೇಲ್ ಕೂಡ್ತ್ಲು. +ಮಂಚಾ ಕತಿ ಹೇಳ್ತದೆ. . . ಹೂಂ ಹಾಕೋರ್ಯಾರಿಲ್ಲೆ. +‘ಹಾಸ್ಗಿ ನೀನಾರೂ ಹೂಂ ಹಾಕವ್ಯಾ?’ ಅಂತ ಕೇಳು. +ಆವಾಗಾ ಈ ಹಾಸ್ಗಿ, ‘ನಾನು ಹೂಂ ಹಾಕೂಕ್ ಸಾದ್ವಿಲ್ಲೆ, ಈ ದೊಡ್ಡ ಬುಕ್ಕಿಪುಂಡಿ ಹಾಸ್ಗಿ ಮೇಲ್ ಕೂತದೆ. +ಅದ್ರಿಂದ, ನನ್ಗ್ ಮರ್ಯಾಗ್ ಹೋಗದೆ. +ಇವ್ಳ್ ಹಾಸ್ಗಿಂದ ಯೆದ್ರೆ ನಾನ್ ಹೂ ಹಾಕ್ತಿದೆ‌’ ಅಂತ ಹೇಳೂದು, ಇಷ್ಟ್ ಹೇಳ್ದ ಕೂಡ್ಲೆ ನಾವು ಅದ್ರಂತೆ ಮೂರ್ ಮಾತ ಆಡ್ಸ್ ಕೊಡತ್ರು” ಆವಾಗ ಅದೇ ಮಾತ್ಗೆ ವಪ್ಪಿ ಕಟ್ಟಿವಳ್ಗೆ ಬಿಟ್ಕೊಟ್ಲು. +ಸೀದಾ ದಿಲ್ಲಿಗೆ ಹೋದ್ಲು, ಹೋಗಿ ಆ ರಾಜದ ಸುರತಾಳದೇವಿ ಇದ್ದಲ್ಲಿ, ಆ ಮಾಳ್ಗಿಗ್ ಹೋಗಿ ಕೂತ್ಲು. +ಅವಳು ಮಾತೇ ಆಡ್ಸಲಿಲ್ಲೆ. +ಸ್ವಲ್ಪ ಹೊತ್ ಕೂತ್ ಕೂಡ್ಲೆ, “ಯೇ ದೇವರೇ, ಯಾಕ್ ಬಂದ್ನವ್ವಾ? +ನಾನು ಈ ಊರ್ಗೆ? +ವಂದ್ ಮಾತಾಡ್ವೋರು ಸಾ ಇಲ್ಲೆ. +ಬಾಳ್ ಬೇಜಾರನ್‌ಸ್ತದೆ. +ರಾಜನ ಮಗಳು ಕೂತ ಮಂಚವೇ ಸಲ್ಪ ಕತಿ ಹೇಳತೀಯಾ?” +ಮಂಚ ಅವಗ್ ಕೇಳ್ತದೆ, “ಅಣ್ಣಾ, ನೀನ್ ಮುದ್ದಾಂ ಕತಿ ಹೇಳಂತಿ. +ಆದ್ರ ಕತೆ ಹೇಳೂಕ್ ಸಾದ್ದಿಲ್ಲ. +ಈ ದೊಡ್ಡ ಬುಕ್ಕಿ ತನ್ ಮೇನ್ ಕೂತದೆ. +ಇವ್ಳ್ ಯೆದ್ರೆ ನಾನ್ ಕತಿ ಹೇಳ್ತೆ. . . ” ಅವಾಗವ್ಳು ಶಿಟ್ ಬಂದಿ ಹಾಸ್ಗಿ ತೆಗೆದು ನೆಲ್ಕ್ ಹೊತಾಯ್ಕಂಡಿ, ಹಾಸ್ಗಿ ಮೇನ್ ಕೂತ್ಲು. +ಆವಾಗ ಮಂಚ ಹೇಳ್ತು, “ಕತಿ ಹೇಳ್ತೆ ಅಣ್ಣಾ, ಹೂಂ ಹಾಕ್ವೋರ್ಯಾರು?” ಕೇಳ್ತು. +“ಹೌದು. . . ಕತಿ ಹೇಳ್ತೆ, ಕೇಳು; ನಾನು ಹೇಳೂಕ್ ಮಂಚಕ್ ‘ಹೂಂ’ ಹಾಕಬೇಕಲ್ವೋ? +ಅದ್ರಿಂದಾ, ರಾಜನ ಮಗಳು ಕೂತ ಹಾಸಿಗ್ಗೆ ‘ಹೂ’ ಕೊಡವಿಯಾ?” ಕೇಳ್ತು. +ಆವಾಗ ಹಾಸ್ಗಿನೂ ಬಿಟ್ಟ ವಂದ್ ಕುರ್ಚಿ ಮೇಲ್ ಹೋಗ್ ಕೂತ್ಕಂಡ್ಲು. +ಆವಾಗ ಮಂಚ ಕತಿ ಹೇಳೂಕೆ ಸುರ್ಮಾಡ್ತು. +ಹಾಗೂ ಹಾಸ್ಗೆ ‘ಹೂಂ’ ಹಾಕೂಕ್ ಸುರುಮಾಡ್ತು. +ಆವಾಗ ಇದು ಮಂಚ ಹೇಳೂ ಕತಿ. +“ವಂದ್ ಊರಲ್ಲಿ ವಂದು ಸಾದಾರ್ಣ ಐವತ್ತರವತ್ ಜನ ವಟ್ಟಾಗಿ ಗಟ್ಟದ ಮೇಲ್ ಕೆಲ್ಸಕ್ ಹೋದ್ರು. +ಹೋಗಿ, ಕೆಲ್ಸ ಮಾಡಿಕ್ಕಿ ಐದಾರೆ ತಿಂಗಳ ಮುಗಿದ ನಂತ್ರ ಮನಿಗ್ ಬತ್ರು. +ಬರು ಹೊತ್ನಲ್ಲಿ ವಂದ್ ಕಾಡ್ಲ್ ಬಂದ್ ಕೂಡ್ಲೆ ರಾತ್ರಿಯಾಯ್ತು. +ರಾತ್ರಿಯಾದ್ರಿಂದ ಅವ್ರಲ್ ಉಳಿಬೇಕಾಯ್ತು. +ಮದಿದಾರಿಗೆ ಉಳದ್ರೆ, ಇವ್ರ ಕೂಡೆ ಬೇಕಟ್ ಕೆಲ್ಸ ಮಾಡ್ದ ದುಡ್ಡದೆ. +ಯೆಲ್ಲವ್ರೂ ಮಲ್ಗ್ ಬಿಟ್ರೆ ಯಾರಾದ್ರೂ ತಕಹೋದ್ರೆ ಯೇನ್ ಮಾಡ್ಬೇಕಾಯ್ತು? +ಹೇಳಿ ಅವ್ರಲ್ಲೇ ತಾಸ್ಗೆ ವಬ್ಬಬ್ಬ ಕೂತ್ಕಳೂದು ಅಂತಾಯ್ತು. +‘‘ಮೊದಲ್ಲಾಗ್ ಕೂತ್ಕಂಬವ ಆಚಾರಿ. +ಅಲ್ಲಿ ಯೆಲ್ಲಾ ಜಾತ್ಯವ್ರೂ ಅವ್ರೆ. +ಯೆಲ್ಲರೂ ಮನ್ಗರೆ. +ಆಚಾರಿ ವಬ್ ಕೂತನೆ. +ಕಾಲಿ ಕೂತ್ ಬೇಜಾರಾಗಿ ವಂದ್ ಗೊಂಬಿ ಮಾಡ್ದ. +ಅವ ಗೊಂಬಿ ಮಾಡ್ ನಿಲ್ಸಿ, ಅದ್ನಂತ್ರ ಅವನ್ದ್ ಮುಗೀತು. +ಮತ್ತೊಬ್ನ ಯೇಳ್ಸದ; ಗುಡಗಾರವ್ನ ಯೇಳ್ಸದ. +ಗುಡಗಾರವ ನೋಡಿ, ಗೊಂಬಿಗೆ ಬಣ್ಣ ತೆಗದ. +ಚಂದಾಗೂದು ಹೇಳಿ, ಶಿಸ್ತಾಗಿ ಬಣ್ಣ ತೆಗೆದ. +ಅವನ್ದ್ ಮುಗೀತು. +ಅವ ಬಳೆಗಾರ್ನ ಯೇಳ್ಸ್ದ. +ಬಳೆಗಾರವ ನೋಡ್ತ. +ಬೊಂಬಿ ಮಾಡ್ ನಿಲ್ಸರೆ, ಬಣ್ಣ ತೆಗೆದಾರೆ. +‘ಇದ್ಕೆ ಬಳಿ ಹಾಕಿದ್ರ ಶಿಸ್ತ್ ಕಾಣತಿತ್ತು’ ಹೇಳಿ, ಬಳಿ ಹಾಕ್ದ. +ಅವಂದ್ ಮುಗಿತು; ಅವ ಜವಳಿ ಸಾಯ್ಬನ ಯೆಬಿಸ್ದ. +ಜವ್ಳಿ ಸಾಯ್ಬ ಯೆದ್ ನೋಡ್ತ. +“ಈಗದೆ ಸೀರಿ-ರೌಕಿನೂ ಹಾಕರೆ ಹೆಣ್ಣಾಗ್ ಕಾಣ್ತಿತ್ತು” ಅಂದ್ ಹೇಳ್ದ. +ಸೇರಿ ಉಡ್ಸ್ದ, ರೌಕಿ ಹಾಕ್ದ. +ಅವನ್ದ್ ಮುಗಿತು. +ಅವ ಸೊನ್ಗಾರವ್ನ ಹೋಗ್ ಯೇಳ್ಸದ‌. +ಸೊನ್ಗಾರವ ಯೆದ್ ನೋಡ್ತ. +“ಯೆಟ್ ಚಂದ ಇದು ಹೇಳೂಕೇ ಸಾದ್ದಿಲ್ಲ” ಆವಾಗ್ ಇದ್ಕೆ ಮೂಗ್‌ಗೆ, ಕೆಮಿಗೆ ಮತ್ ಕೊಳ್ಳಿಗೆ ಯೇನಾರೂ ಮಂಗಲಸೂತ್ರ, ಕಿವಿಗೆ ಮುಗಳು, ಕುಡಕ ಮಾಡ್ ಹಾಕ್ದ ಅಂತಾಯ್ತು. +ಅವಾಗವನ್ದ್ ಮುಗೀತು. +ಜೋತಿಸ್ರ ಯೇಳ್ಸದ. +ಆ ಜ್ಯೋತಿಸ್ರು ಯೆದ್ದಿ ನೋಡ್ತ್ರು. +“ಇದೇನ್ ಆಶ್ಚರಿಯಪ್ಪ! +ಮನ್ಸರ್ ನೋಡ್ದಂಗೇ ಆತದೆ. +ಅಂತೂ ಮನ್ಸರಲ್ಲ. +ಆದ್ರಿಂದ ಇದ್ಕೊಂದು ಜೀವಾ, ಸೋಸ ತುಂಬ್ಬೇಕು ನಾನು‌. +ಸೋಸ ತುಂಬದ್ರೆ ಹೆಣ್ ಹುಡ್ಗಿಯಾಗಿ ತಿರಗಾಡತಿತ್ತು ಅದು. +ನೋಡ್ಲಿಕ್ಕೂ ಚೆಂದ ಕಾಣ್ತಿತ್ತು” ಅಂತ ಹೇಳಿ, ಅದಕೆ ಸೋಸ ತುಂಬ್ದ ಅಂತಾಯ್ತು. +ಅಷ್ಟ್ ಹೊತ್ ಆಗುದೂ, ಬೆಳ್ಗಾಗೂಕೂ ಸರಿಯಾಯ್ತು. +ಹುಡ್ಗಿ ಜೋತಿಸ್ರಾ ಬುಡ್ದಾಗ್ ನಿತ್ಕಂಡದೆ. +ಈ ಆಚೇರಿ, “ತನ್ ಹಿಣ್ತಿ” ಅಂತ. +ಗುಡಿಗಾರ ತಂಗೂ ಬೇಕಂದಾ. +ಬಳೆಗಾರ ತಂಗೂ ಬೇಕಂತಾ. +ಈ ಜವ್ಳಿ ಸಾಯ್ಬನ್ನೂ ತಂಗ್ ಬೇಕಂತಾ, ಸೊನಗಾರವ್ನೂ ತನ್ಗ್ ಬೇಕಂತಾ. . . ಜೋತಿಸ್ರವ್ರೂ ಜೀವ ಮಾಡ್ದೊರಾಯ್ತು. +ಅವ್ರು ತನ್ಗ್ ಬೇಕಂತ್ರು. +“ಇದ್ ಯಾರ್ ಹಿಣತಿ? +ನಿಕ್ಕಿ ಮಾಡ್ ಕೊಡ್ಬೇಕು” ಆ ಹಾಸ್ಗಿಯೆದ್ದಿ ಮಂಚಕೆ ಜಪ್ತದೆ; ಮಂಚ ಯೆದ್ದಿ ಹಾಸ್ಗಿಗ್ ಜಪ್ತದೆ. +ಮಾಳ್ಗಿಯೆಲ್ಲಾ ಗಡಗುಟ್ಟಿ ಹರ್ದ ಬೀಳುವ ಪರಿಸ್ತಿತಿ. +ಆವಾಗ್ ಸುರತಾಳದೇವಿ ಹೇಳ್ತ್ಲು, “ಅಣ್ಣಾ. . . ಸ್ವಲ್ಪ ಸಮದಾನ ಮಾಡು ಮಾರಾಯಾ, ನಿನ್ಗ್ ಕೈಮುಗಿತೆ” ಹೇಳ್ತು. +ಆವಾಗ ಗಂಡ ರೂಪದಾಗಿನ ಪರ್ದಾನಿ ಮಗ್ಳ ಹೇಳ್ತು, “ಯಾರ್ ಹಿಂಡ್ತಿ ಹೇಳಿ ನೀನ್ ನಿಕ್ಕಿ ಮಾಡ್ ಕೊಟ್ರೆ ಸಮದಾನ ಮಾಡ್ತೆ ಈ ರಣಗ್ರವ.’’ + ‘‘ಇದು ಯಾರ್ ಹಿಣ್ತಿನೂ ಅಲ್ಲ, ಮಂಗಲಸೂಸ್ತ್ರ ಕಟಿದವ್ನ ಹೆಂಡತಿ” ಅವಾಗಲ್ಲಿ ಸಮದಾನಾಯ್ತು. +ಅವವ್ರ ತಕ್ರಾರ. +ಮತ್ತೊಂದ್ ತಾಸ್ ಹೋಯ್ತು ಮತ್ತು ಅವನಿಗೆ (ಕೂತದ್ಕೆ) ಬೇಜಾರಾಯ್ತು. +ಬೇಜಾರನ್ಸಿ, “ದೇವರೇ, ಮಂಚ ಕತಿ ಹೇಳ್ತು. +ಹಾಸ್ಗಿ ಹೂಂ ಹಾಕ್ತು. +ವಂತಾಸ್ ನನ್ಗ್ ಕಳುಕೆ ಲಾಯ್ಕಾಯ್ತು. +ರಾಜನ ಮಗಳು ಕೂತ ಕುರ್ಚಿಯೇ. . . ನನ್ಗ್ ವಂದ್ ಕತಿ ಹೇಳತ್ಯಾ?’’ ಅಂತಾ ಕೇಳ್ತು. +“ಅಣ್ಣಾ, ನಿನ್ ಮಾತ್ಗೆ ನಾನು ಕತಿ ಹೇಳತಿದೆ. +ಈ ಬುಕ್ಕಿಪುಂಡಿ ಕೂತದ್ರಿಂದ ನನ್ನ ಬಾರ್ ಬಂದ್ ಹೋಗದೆ. +ಸೋಸವೇ ತಗೂಕಾಗುದಿಲ್ಲ. +ನಾನ್ ಕತಿ ಹೇಳೂಕೆ ಕೂಡಾ” ಅಟ್ ಹೇಳ್ದ ಕೂಡ್ಲೆ ಇವಳಿಗ್ ಸಿಟ್ ಬಂತು. +ಆ ಕುರ್ಚಿ ಬಿಟ್ಟಿ, ಗೋಡಿಗೆ ವಂದು ಕುದ್ರಿಮೊಕ ಮಾಡ್ ಹೊಡ್ದರು. +ಅದ್ರ ಮೇಲ್ ಹೀಗೆ ಕೈಯಿಟ್ಕೊಂಡಿ ನಿತ್ಕೊಂಡ್ಲು. +ಕುರ್ಚಿ ಹೇಳ್ತು, “ಅಣ್ಣಾ, ಕತಿ ಹೇಳ್ತೆ ಕೇಳೂಕ್ ನೀನಾಯ್ತು, ಹೂಂ ಹಾಕ್ವೋರ್ಯಾರಿಲ್ಲ. +”“ರಾಜನ ಮಗಳ ವರಗದ ಕುದ್ರಿಮೊಕವೇ, ಸಲ್ಪ ‘ಹೂಂ’ ಹಾಕ್ವ್ಯಾ?” ಕೇಳ್ದ. +ಆವಾಗಾ ಕುದ್ರಿ ಮೊಕನು, ‘ಹೂಂ’ ಹೇಳ್ತದೆ-- “ಇವ್ಳ್ ವಜ್ಜಿದಿಂದ ಬಾರವಾಗದೆ. +ಹೂಂ ಹಾಕೂದ್ ಸಾದ್ಯಿಲ್ಲೆ. +ಇವ್ಳ್ ಯೆದ್ರೆ ಹೂಂ ಹಾಕ್ವೇ. . . ”ಆ ಕುದ್ರಿ ಮೊಕಾನೂ ಬಿಟ್ಲು. +ನೆಡು ನೆಲಕೇ ಹೋಗ್ ಕೂತ್ಕೊಂಡ್ಲು. +ಯೆಲ್ಲ ಬಿಟ್ಟಿ ಆವಾಗಾ, “ಯಾವದ್ರ್ ಮೇನ್ ಕೂತ್ಕಂಡ್ರೂ ಇದೇ ಗಳಪಾಸು ಯೆಂತದೂ ಬೇಡ” ಅಂದ್ ನೆಲ್ಕ್ ಕೂತ್ಲು ಅಂತಾಯ್ತು. +ಕುರ್ಚಿ ಕತಿ ಹೇಳೂಕ್ ಸುರು ಮಾಡ್ತು. +ಕುದ್ರಿಮೊಕ ‘ಹೂಂ’ ಹಾಕೂಕ್ ಸುರುಮಾಡ್ತು. +“ವಂದೂರಲ್ಲಿ ವಬ್ರ್ ಮಾಸ್ತರ್ರು ಮಕ್ಳಿಗ್ಯೆಲ್ಲ ಬರಕಲ್ಸ್ಯುಕ್ ಸುರು ಮಾಡ್ತ್ರು. . . ”ಇವ್ಳು ಸೋತ್ಲು. +ಮೂರ್ ಮಾತಾಯ್ತಲ್ವೊ? +ಬೆಳ್ಗಾ ಮುಂಚೆ ಕೋಣ್ಯಾಗ ಇದ್ದವ್ರನ ಯೆಲ್ಲಾ ಬಿಡ್ಸ್ ಹಾಕಿ, ಅವಳ ಗಂಡನ ಕರಕಂಡಿ, ಇವಳನೂ ಕರಕಂಡಿ ಬಂದ್ರು. +ಬಂದಿ ಊರಿಗ್ ಬಂದ್ರು. +ಸುರಂಗದ ಹತ್ರ ಬಂದ್ ಕೂಡಲೆ, “ನಾನ್ ವಂದಕ್ ಹೋಗ್ ಬತ್ತೆ, ನೀವು ಸಲ್ಪ ನೆಡಿರಿ” ಹೇಳ್ದ - ಗಂಡ ಯೇಸ್ದವ. +ಆವಾಗೆ ಈ ಸುರತಾಳದೇವಿ ಮತ್ತು ಅವಳ ಗಂಡ (ರಾಜನ ಮಗ) ಸಲ್ಪ ಮುಂದಾದ್ರೂ ಇವ್ಳು ಸುರಂಗಕೆ ಹೋದ್ಲು. +ನೆಲಮಾಳ್ಗಿಗ್ ಹೋಗೇ ಬಿಟ್ಲು. +ಸುರತಾಳದೇವಿ ನೋಡತ್ಲು. +“ಯೆಷ್ಟೋ ಹೊತ್ತಾದ್ರೂ ಇವ ಬರ್ಲಿಲ್ಲೆ. +ದೇವರೇ, ನನ್ನ ಗೆದ್ದಂತಾ ಮನ್ಸ ಯೆಲ್ ಹೋದ? +” ಅಂತ ಹೇಳಿ ಕಣ್ಣೀರ್ ಬಿಡ್ಲಿಕ್ ಸುರುಮಾಡ್ದು. +“ಅವ ಯೆಲ್ಲೂ ಹೋಗ್ಲಿ; ನಾವ್ ಮನಿಗ್ ಹೋಪೊ” ಅಂತ ಹೇಳಿ, ಬಲ್ತಾರ್ಕಿಂದ ಇವ ಯೇಳ್ಕಂಡ್ ಬಂದ. +ಯೇಳ್ಕಂಡ್ ಬಂದಿ, ತನ್ಗ್ ಮದಿಯಾಗಬೇಕು ಅಂದ್ ಹೇಳಿದ್ದೇ ಅವ್ಳು ಕಬೂಲಾಗ್ಲಿಲ್ಲೆ. +ಅಲ್ಲಿಗೆ ಹನ್ನೆಯ್ಡು ವರ್ಸ ಮುಗಿತು. +ನೆಲಮಾಳ್ಗಿಯಿಂದಾ ಹೆರ್ಗೆ ಬಂದ್ಲು ಅವಳು. +ಹೆರ್ಗ್ ಬಂದ್ ನೋಡದ್ರೆ, ಇವಳು ಮರಕ್ತಾ ಅವಳೆ -- ಸುರತಾಳ ದೇವಿ. +“ಯೇನಪ್ಪಾ ತಂಗೀ, ಈ ರೀತಿ ತೀಡುವ ಕಾರಣವೇನು ನೀನು?” +“ಯೇನಿಲ್ಲೆ ಅಕ್ಕಾ. . . ನನ್ ತಂದಂತಾ ಜನ ವಂದಕ್ ಹೋಗಬತ್ತೆ ಅಂತ ಹೇಳ್ದೋರ ಪತ್ತಿನೇ ಇಲ್ಲೆ. +ಆದ್ರಿಂದ ಇವ್ರು ಬಲ್ತ್ಗಾರ್ಕಿಂದ ನನಗ್ ಮದುವೆಯಾಗು ಅಂತ ಹೇಳ್ತ್ರು. +ನನ್ನ್ ಕಬೂಲಿಲ್ಲೆ” ಅಂತ ಹೇಳ್ತು ಸುರತಾಳದೇವಿ. +“ತಂಗಿ, ಅದ್ಕ್ ಬೇಜಾರ್ ಮಾಡ್ಬೇಡ ನೀನು. +ಅವ್ರ್ ನನ್ನ ಗಂಡ. +ನಿನ್ಗ್ ಗಂಡನಾಗ್ವವರೂ ಅವರೇ. +ನಿನ್ನ ಗೆದ್ದ ಬಂದವ್ರ್ ಮತ್ಯಾರಲ್ಲ ನಾನೇ” ಗಂಡನ ಕರದ್ಲು ಅವಳು. +“ಈ ಹೆಂಗ್ಸು ಯೆಲ್ಲಿದು ಇದು? +ಮರಕುವ ಕಾರ್ಣೇನು?” ಕೇಳ್ದ್ಲು. +“ತಾನ್ ಗೆದ್ದಂತಾ ಹೆಂಗ್ಸು ಇಲ್ ಬಂದ್ ಕೂಡ್ಲೆ ನನ್ ಲಗ್ನಾಗುದಿಲ್ಲ ಹೇಳ್ತದೆ.” +“ಲಗ್ನ ಮಾಡ್ಕೊಡು” ಅಂತ ಹೇಳ್ದ. +ಅವ್ಳ್ ಹೇಳ್ತ್ಲು, “ನೀವ್ ಗೆದ್ದದ್ದು ನುಸಿಕೋಣಿಲಿ” ಅಂದ್ ಹೇಳ್ತು. +ಇದು, “ಅದ್ರಿಂದ ನಿಮಗೆ ಸ್ವಲ್ಪ ಪೊಜಿಸನ್ ಬಂತು. +ಈಗ ನಾನು ಗೆದ್ದಿದೆ. +ಈಗ ಬಂದಿದ್ರಿಂದ ಅವಾಗೂ ಅದೇ ರೀತಿ ಬಂದಿತ್ತು ಹುರ್ಸಾನಕ್ಕಿ ಪಂಚಾತ್ಗಿದು. +ಹೆಣ್ಣಿಗೆ ಅಧಿಕಾರಿಲ್ಲ ಮಾಡ್ದ್ ಮಾತು ಗಂಡಿಗ್ ಸಂಬಂಧ” ವಂದ್ ರಾಜ, ರಾಜ್ನ ಹಿಂಡ್ತಿ ಇದ್ದಿದ್ರಂತೆ. +ಅವ್ನಿಗೆ ವಂದ್ ಮಗ. +ಅವನ ಹೆಸ್ರು ಇಕ್ರಾಮತಿ ರಾಜ ಹೇಳಿ. +ಆಗೆ ಅವನಿಗೆ ತಂದೆ ಸಾಲೆಗೆ ಹಾಕ್ದ ಹೇಳಾಯ್ತೂ. +ಸಾಲೆಗೆ ಹಾಕಿ ಅವ ಪೂರ್ಣ ವಿದ್ಯಾ ಕಲ್ತ್ ಮುಗಿತು. +ಆಗೆ ಮಾಸ್ತರ್ ಹತ್ರ, “ಮತ್ತೆ ನೀವ್ ಕಲ್ಸಿದಟ್ ವಿದ್ಯಾ ಕಲ್ತ್ ಮುಗ್ದಾಯ್ತು. +ತಂದೂ ವಂದ್ ವಿದ್ಯಾ ನಿಮಗೆ ಮಾಡ್ ತೋರ್ಸ್ತೆ. +ನೀವೂ ಹಾಗೆ ಮಾಡ್ ತೋರ್ಸತ್ರೊ?” ಕೇಳ್ದ. +“ಅಡ್ಡಿಲ್ಲ” ಹೇಳ್ದ್ರು ಮಾಸ್ತರು. +ಆಗ ಅವ ಬರಿಕಾಲಲ್ಲಿ ಹೀಗೆ ವಂದ ಕಂಬಾ ತಲೆ ಕೆಳ್ಗ್ ಮಾಡ್, ಕಾಲ್ ಮೇಲ್ ಮಾಡ್ ಹತ್ತಿಳ್ದ. +ಆಗ ಮಾಸ್ತರ ಹತ್ರ ‘ಹತ್ತೂ’ ಅಂದ್ ಹೇಳ್ದಾ. +ಯಾರು? +ಇಕ್ರಾಮತಿ ರಾಜ. +ಮಾಸ್ತರ ಕೈಲ್ ಆಗಲೇ ಇಲ್ಲ, ಹತ್ತಿಳೂಕೆ. +ಆಗ, ಆಗಲಿಲ್ಲಾದ ಕೂಡಲೇಯಾ ಮಾಸ್ತರ ಮೂಗ್ ಹಿಡ್ದು-- ಅಚಿ ದವಡೆಗೆ ಯೆರಡು, ಇಚಿ ದವಡೆಗೆ ಯೆರಡು ಕೊಟ್ಟಿ ಬಂದ - ಹೇಳಾಯ್ತು. +ಆಗ ಅವನ ಮನಸ್ಸಲ್ಲಿ, ‘ಇಲ್ಲಿದ್ದಿಯೆಂತಾ ಮಾಡೂದು? +ದೇಶಸಂಚರಣೆಗಾದ್ರೂ ಹೋಗ್ ಬರವಾ ಹೇಳಿ’ ಬಂತು. +ತಾಯಿ ಮತ್ ತಂದೆ ಹೇಳದ್ರು, “ಮತ್ ಬೇಡ. +ತನ್ಗ್ ವಂದೆ ಮಗ ನೀನು. +ಯೆಲ್ಲೂ ಹೋಗೂದ್ ಬೇಡ. +ಇಲ್ಲೇ ಉಳ್ಕಂಬಾ” ಅಂತ. +ಆಗಿವ, “ಅದ್ ಸುದ್ದಿನೇ ಇಲ್ಲ” ಅಂತ ಹೇಳಿ, ಆ ದಿನ ದೇವರ ಪೂಜೆಗೀಜೆಯೆಲ್ಲ ಮಾಡ್ದ, ಮತ್ ಊಟ ಮಾಡ್ದ. +ಮತ್ ವಂದ್ ಕುದ್ರೆ ತಕಂಡ್ ತಾಯಿ-ತಂದೆಗ್ ನಮಸ್ಕಾರ ಮಾಡ್ದ. +ಆಗ ಮತ್, “ತಾನು ದೇಶಸಂಚಾರಣೆಗ್ ಹೋಗ್ತೆ” ಹೇಳ್ದಾ. +ಕುದ್ರೆ ತಕಂಡ್ ಹೊರ್ಟ್ ಬಿಟ್ಟ. +ಹೀಗೆ ಹೋಗ್ತಾ ಹೋಗ್ತಾ ಸಮ್ಯದಲ್ಲಿ ವಂದ್ ಕುಂಬಾರವ್ ಸಿಕ್ದ. +ಮಡ್ಕೆ ಕಲ್ಲಿಲ್ ತುಂಬ್ಕಂಡಿ ಕುಂಬಾರವ ಕಂಡ, ಇಕ್ರಾಮತಿ ರಾಜನ ಕುದ್ರೆ ಬರೂದ. +‘ನಾನು ಈ ಮಡ್ಕೆ ತಕ್ಕಂಡಿ ರಾಜಗೆ ಯೆದರಾದ್ರೆ ಇದ್ ಸಾದ್ಯಾ ಇಲ್ಲ’ ಹೇಳಿ, ಆ ಹೊಸ ಮಡಕೆ ಕಲ್ಲಿಲ್ ತುಂಬಿದ್ದು ಹಾಗೇ ತೆಗ್ದಿ ಹೊತಾಕ್ ಬಿಟ್ಟಾ. +ಅವ ಬತ್ತೆ ಅವನ್ ಕುದ್ರೆ ಮೇನೆ, ಆಗೇ ಅವ ಬಂದ ಕೂಡಲೆಯ ಇಕ್ರಾಮತಿ ರಾಜರುನ “ಯೆಟ್ ದೂರೆ?” ಕೇಳ್ದ ಕುಂಬಾರವ. +“ಮತ್ತೆ ನಾನು ದೇಶ ಸಂಚಾರಣೆಗೆ ಹೋಗ್ತೆ” ಹೇಳ್ದ ರಾಜ, ಕುಂಬಾರವ್ನ ಹತ್ರ. +“ಮತ್ ತಾನೂ ವಬ್ಬವ್ ಬಂದ್ ಬಿಡ್ತೆ ನಿಮ್ ಸಂಗಡೆ” ಹೇಳ್ ಬೆನ್ ಹಿಡ್ದ. +ಮತ್ತೆ ಇಕ್ರಮತಿ ರಾಜ ಹೇಳ್ದಾ, “ನೀನು ಬರೂದ್ ಬೇಡ. +ಇಲ್ಲೇ ಮಡಕೆ ಯಾಪಾರಾ ಮಾಡ್ಕಂಡಿ ಜೀವನ ಮಾಡ್ಕಂಡ್ ಉಳಿ. . . ” ಹೇಳ್ ಹೇಳ್ದಾ, ಯಾರು?-- ರಾಜ. +ಆದ್ರೆ, ಅವ ಕೇಳಲಿಲ್ಲ. +ಅವನ ಸಂಗಡೇ ಅವನ ಕುದ್ರೆ ಮೇಲ್ ಕುಂತ್ಕಂಡ್ ಹೋದ. +ಹಾಗೆ ಮುಂದ್ ಹೋದ್ ತಾಸಿಗೆ ವಂದ್ ಗುಡಗಾರವ ಇಟ್ ಬೆಂಡ ಹೊತ್ಕಂಡ್ ಹೋಗ್ತೀದ. +ಆಗೆ ಅವನೂ ನೋಡ್ಕಂಡಿ, “ಮತೇ ನಮ್ಮೂರ ಇಕ್ರಾಮತಿ ರಾಜರು ಇವರು. . . ಹೋಗಬೇಕಿದ್ರೆ, ಕಟ್ಗೆ ಹೊರೆ ತಕಂಡ್ ರಾಜನಿಗೆ ಯೆದರಾಗುಕಿಲ್ಲ” ಹೇಳಿ ಬೆಂಡಿನ ಹೊರೆ ಹೊತಾಗಿ ಅವ್ನ ಯೆದರಾಗ್ ನಿತ್ತ. +ಆಗೆ, “ಇಕ್ರಾಮತಿ ರಾಜರೇ, ಯೆಟ್ ದೂರೆ?” ಹೇಳ್ ಹೇಳ್ದ. +ಮತ್ತೆ, “ತಾನು ದೇಶಸಂಚಾರಣೇಗ್ ಹೋಗ್ತೆ” ಹೇಳ್ ಹೇಳ್‌ದ್ನಲ ರಾಜ. +ಅವ, “ತಾನೂ ಬರ್ತೆ” ಹೇಳ್ದ. +“ಬೇಡ, ನೀನು ಗುಡಗಾರ ದಂಧೆ ಮಾಡ್ಕಂಡ್ ಯೇನಾದ್ರೂ ಊರಲ್ಲೇ ಉಳಿ” ಅಂತ ಹೇಳಿ ಹೇಳ್ದಾ ಅವ. +ಆಗವನೂವ, “ತಾನೂ ಬರ್ತೆ” ಅಂತ್ ಹೇಳ್ತ, ಅವನೂ ಕುದ್ರೆ ಮೇಲೆ ಹತ್ ಹೋದ. +ಹಾಗೆ ಮುಂದ್ ಹೋದ್ ತಾಸಿಗೆ ವಂದ್ ಆಚಾರಿ ಅವ್ನ ಸಾಮಾನು, ಕರಗಸ, ಮಣ್ಣು, ಬೂದಿ ಯೆಲ್ಲಾವ ಅವ್ನ ಉದ್ಯೋಗದ ಸಾಮಾನು ಹಿಡ್ಕಂಡ ಹೋಗ್ತಾ ನೋಡ್ತ, “ಇಕ್ರಾಮತಿ ರಾಜಗೆ ಕರಗಾಸ ಯೆಲ್ಲಾವ ಯೆದರಾಗ್ ಬಾರ್ದು” ಹೇಳ್ ವಂದ್ ಸಪೂರ್ ಉಳಿ ಸೊಂಟಿಗ್ ಶೆಕ್ಕಂಡಿ, ಬಾಕಿಯೆಲ್ಲಾ ಹೊತಾಕ್ ಬಿಟ್ಟಾ. +ಆಗೇ, “ಇಕ್ರಾಮತಿ ರಾಜರೇ, ಯೆಟ್‌ ದೂರೆ?” ಹೇಳ್ ಕೇಳ್ತ. +“ದೇಶಸಂಚರಣೆಗೆ ಹೋಗ್ತೆ” ಹೇಳ್ದ ಅವ. +ಅವನು, “ತಾನೂ ಬತ್ತೆ ನಿಮ್ ಸಂಗಡ” ಹೇಳ್ ಹೇಳ್ತ. +ಯಾರು?- ಆಚಾರಿ. +ಆಗ ಇಕ್ರಾಮತಿ ರಾಜ ಹೇಳ್ತನಲ, “ನೀನು ಇಲ್ಲೇ ಯೆಲ್ಲಾರೂ ಆಚಾರಿ ದಂದೆ ಮಾಡ್ಕಂಡು ಉಳಿ. +ನನ್ನ ಸಂಗಡ ಬರಬೇಡ” ಹೇಳ್ ಹೇಳ್ತ. +ಆದ್ರೂ ಅವನು ಕೇಳೂದೇ ಇಲ್ಲಾ. +“ತಾನೂ ಬರ್ತೆ” ಹೇಳ್ಕಂಡಿ ಕುದ್ರೆ ಮೇನೇಯ ಕುಂತ್ಕಂಡ್ ಹೋಗ್ತಾ. +ಕುಂಬಾರ ಗುಂಡಣ್ಣ, ಗುಡಗಾರ್ ಹೋವಣ್ಣ, ಆಚಾರ್ ಮಳ್ಳಣ್ಣ ಎಲ್ಲಾರೂ ಹೊರಟ್ರಲ್ಲ. +ಅವರು ಹೋಗ್, ಹೋಗ್, ಹೋಗ್ ಹೋಗಿ ಊರಿಗ್ ಹೋಗು ಹಾದಿ ತಪ್ತು. +ಅಡವಿಗ್ ಹೋಗು ಹಾದೀ ಹಿಡ್ದ್ರು. +ರಾಶಿ ರಾತ್ರ್ಯಾಗ್ ಹೋಯ್ತು. +ಯೆಲ್ಲೆಲ್ ಹೋದ್ರೂ ವಂದ್ ಮನಿಲ್ಲ. +ಮತ್ ಅಡವಿ ಘೋರ್ ಕಪ್ಪು. +ರಾಶಿ ರಾತ್ರ್ಯಾಗ್ ಹೋಯ್ತ್ ಹೇಳ್ಕಂಡಿ, “ಇನ್ನ್ ಇಲ್ಲೇ ಇವತ್ತೆ ಉಳ್ದು ಪಯಣ ಮಾಡುದು” ಹೇಳ್ಕಂಡಿ, ಅಲ್ ಯೆಲ್ಲಾ ಇಳ್ದ್ರು. +ಬೆಂಕಿ ಹಿಡಿಸ್ಕಂಡಿ ದೊಡ್ ಹೊಡಚಲ ಹಾಯ್ಕಂಡ, ಬೆಂಕಿ ಪೆಟ್ಗೆ ನೋಡ್ತ್ರು. +ಯಾರ್ ಕೈಲೂ ಇಲ್ಲ. +ಆಗೆ ಆಚಾರಿ ಕೈಲಿ ವಂದ್ ಉಳಿ ಇದ್ದಿತಲ್ಲ. . . ಮತ್ತೆ ಹುಡ್ಕಿ ವಂದ್ ಬೆಳ್ಕಲ್ ತಯಾರ್ ಮಾಡ್ದಾ. +ಬೆಳ್ಕಲ್ನಲ್ ಕುಟ್ಟಿ ಸಲ್ಪ ಬೆಂಕಿ ಮಾಡ್, ಲಡ್ಡು ಕಟ್ಗೆಯೆಲ್ಲಾ ವಟ್ ಮಾಡಿ, ವಂದ್ ಬೆಂಕಿ ಮಾಡ್ದ್ರು ಹೇಳಾಯ್ತು. +ಆಗೇ ಸಾದ್ರಾಣ ಕುಳ್ಳುಕೆ ಕಾಣ್ತದ್ಯಲ್ಲಾ ಬೆಂಕಿ ಬೆಳಕಿಗೆ ಕುಂಟೆಯೆಲ್ಲಾ ತಂದ್ ರಾಸಿ ಹಾಕಿ, ದೊಡ್ ಬೆಂಕಿ ಮಾಡ್ದ್ರು ಹೇಳಾಯ್ತು. +ಇನ್ ಅವರವರೊಳಗೆ ಮಾತಾಡ್ಕಂಡ್ರು, ಯೇನ್ ಹೇಳಿ? +ಮೂರ್ ಜನ ಮಲಗೂದು, ವಬ್ರ್ ಯೆಚ್ರ ಇರೂದು‌. +ಮೊದಲ್ ಕುಂಬಾರವ ವಳ್ದಾ. +ಅವ್ನ್ ಪಾಳಿಯಾಯ್ತು. +ಮೂರ್ ಜನ ಮಲ್ಗುದ್ರು. +ಕಡೆಗ್ ಕುಂಬಾರವ ಗುಡಗಾರವನ ಯೇಳ್ಸ್ ಹಾಕ್ದ. +ತಾನ್ ಮಲ್ಗ್‌ದ. +ಅದು ಗಂಧದ ವನಾಗಿತ್ತು. +ಆಗೆ, ಗುಡಗಾರವನ ಬಾರಿ ಮುಗಿತು; ಆಚಾರಿ ಯೇಳ್ಸ್ ಹಾಕ್ದ ಬೆಳ್ಗು ಸಾಲಿಗೆ. +ಅದು, ಆ ಗಂದದ ವನ-- ರಾಕೆಸ್ತಿ ಗಂದದ ವನ ಆಗಿತ್ತು. +ಆಗೆ ಅದ್ಕೆ ಪರಮಾಳ ಹೋಯ್ತು ಹೇಳಾಯ್ತು. +ಗಂದದ ವನ ಬೆಂಕಿ ಹಾಕಿದ್ದು. +ಆಗ ರಾಕೆಸ್ತಿಗೆ ವಂದ್ ಮಗಳಿದ್ದಿತ್ತೂ. +ಆಗೆ ಮಗಳ ಹತ್ರೆ ಹೇಳ್ತು ರಾಕೆಸ್ತಿ. +“ಮತ್ತೆ ನಮ್ ಗಂದದ ವನಕೆ ಯಾರೊ ನರ್ಮನ್ಸರು ಬೆಂಕಿ ಹಾಕಾರೆ. +ಯಾರು ಹೇಳಿ ನೋಡ್ಕಂಡ್ ಬರ್ತೆ” ಹೇಳಿ ಮಗಳ ಹತ್ರೆ ಹೇಳ್ತು, ಹೇಳಾಯ್ತು. +ಆಗ ಮಗಳು ತಾಯಿ ಹತ್ರ ಯೇನ್ ಹೇಳ್ತು? +“ತನಗೆ ಚಲೋ ಗಂಡಿದ್ರೆ ತಕಂಡ್ ಬಾ” ಹೇಳ್ ಹೇಳ್ತು, ಯಾರು?- ಮಗಳು. +“ಅಡ್ಡಿಲ್ಲ” ಅಂದ್ ಹೇಳಿ ಅಲ್ಲಿಂದ್ ಹೊರಡ್ತು ರಾಕೆಸ್ತಿ. +ಆಗೆ ಭಯಂಕರ ವಂದ್ ಆವಾಜಾ ಮಾಡ್ತೆ ಬತ್ತಾರೆ, ಬರಬೇಕಿದ್ರೆ ಆ ಆವಾಜ್ ಮಾಡ್ತೀ ಬಂದದ್ದು ರಾಜನಿಗೆ ಕೇಳ್ತು. +ಇಕ್ರಮತಿರಾಜ, “ಹೀಗೆ ಕೂತ್ರೆ ಸಾದ್ದಿಲ್ಲ” ಹೇಳಿ, ಬಿಲ್ಲು ಮತೆ ಬಾಣ ತಕಂಡ್ ನಿತ್ತ ಹೇಳಾಯ್ತು. +ಆಗ ರಾಕೆಸ್ತಿ ಬಂತು, ಇಕ್ರಮತಿರಾಜನ ಹಿಡಿತದೆ ಹೇಳವಾಗ ರಾಕೆಸ್ತಿಗೆ ಬಾಣ ಹೊಡ್ದ. +ಹೊಡ್ದ ಕೂಡ್ಲೆ ಅದು ತಾಟ್ ಬಿತ್ತು ಹೇಳಾಯ್ತು‌, ಆದ್ರ್ ಇಕ್ರಾಮತಿ ರಾಜ್ನ ಮನಸ್ಸಿಗೆ ಸರ್ಯಾಗಲಿಲ್ಲ. +ಮತ್ತೊಂದ್ ಬಾಣ ಹೊಡ್ದ. +ಆಗೆ ಇವರಿಗೆ ಯಾರಿಗೂ ಯೇಳ್ಸಲಿಲ್ಲ - ಅವ ಬಾಕಿ ಇದ್ದರಿಗೆ. +ಅವ ಹೋದ. +ರಾಕೆಸ್ತಿ ಬಿದ್ದಲ್ ಹೋದ ರಾಜ, ಅದ್ರ್ ಕೊಳ್ಳಲ್ಲಿ ವಂದ್ ಕರಿಮಣಿ ಲೆಕ್ದಲ್ ಯೇನೊ ಇದ್ದಿತಂತೆ. +ಅದು ಹೋಗಿ ಇಕ್ರಾಮತಿ ರಾಜ ಹರ್ದ ಹೇಳಾಯ್ತು. +ಹರ್ದಿ ಅದ್ ಸೊಂಟಿಗೆ ಶಿಕ್ಸದ. +ಆ ಕರಿಮಣಿ ಇಕ್ರಾಮತಿ ರಾಜ್ನ ಹಾರ್ಸ್ಕಂಡ್ ಹೋಗಿ, ಆ ರಾಕೆಸ್ತಿ ಮನಿಗ್ ತಕಂಡ್ ಹೋಗ್ ಇಳಿಸ್ತು ಹೇಳಾಯ್ತು. +ಆಗ ಬೆಳಗಾಯ್ತು. +ಅಲ್ ಹೋದ ಕೂಡ್ಲೆಯ ಇಕ್ರಾಮತಿ ರಾಜ ಆ ರಾಕೆಸ್ತಿ ಮಗಳ ಹತ್ರೆ ಹೇಳ್ತಾ ಅಲ್ ಹೋಗ್ ಇಳ್ದ ತಾಸಿಗೆ, “ಅಲ್ಲಿ ಹೊಡಚಲ ಹಾಕಂಡ್ ಮಲ್ಗಿದ್ವು, ರಾಕೆಸ್ತಿ ಬಂದಿತು. +ತಾನು ಅದ್ಕೆ ವಂದ್ ಬಾಣ ಹೊಡ್ದೆ. +ರಾಕೆಸ್ತಿ ಸತ್ ಹೋಯ್ತು. +ತಾನು ಅದ್ರ ಕೊಳ್ಳಲ್ಲಿ ಕರಿಮಣಿ ಹರ್ದು ತಾನೆ ಸೊಂಟೀಗ್ ಸೆಕ್ದೆ, ಅದು ತನ್ನ ಇಲ್ ತಂದ್ ಇಳಿಸ್ತು” ಹೇಳ್ದಾ. +ಆ ರಾಕೆಸ್ತಿ ಮಗಳು ಹೇಳ್ತು, “ನನ್ ತಾಯಿ ಆಗಿತ್ತು. +ತಾಯ್ ಸತ್ರೂ ಅಡ್ಡಿಲ್ಲ. +ನೀನೇ ಗಂಡ, ತಾನೇ ಹಿಂಡ್ತಿಯಾಗ್ಕಂಡ್ ಉಳಿವೆ” ಹೇಳಿ ಇಕ್ರಾಮತಿ ರಾಜನಿಗೆ ಹೇಳ್ತು. +ಅದಲ್ಲೀಗೆ ಉಳೀಲಿ. +ಆಗ ಬೆಳಗಾಯ್ತಲ? +ಇವರು ಆಚಾರಿ, ಕುಂಬಾರ, ಗುಡಗಾರ ಯಲ್ಲಾ ಯೆದ್ರು ಬೆಳಿಗ್ಗೆ. +ಯೆದ್ಕಂಡಿ ಇಕ್ರಮತಿ ರಾಜನ್ನ ಹುಡುಕ್ತ್ರು. +ರಾಜ ಯೆಲ್ಲೂ ಇಲ್ಲ. +ಆಗೆ ಸುಮಾರ ವಂದು ನಾಲ್ಕ್ ಮಾರ್ ದೂರೆ ರಾಕೆಸ್ತಿ ವಂದ್ ದೊಡ್ ಗುಡ್ದಾಂಗ್ ಬಿದ್ಕಂಡದೆ ನೋಡ್ದ್ರು. +ಆಗ ಅವರು-- ಕುಂಬಾರಾ, ಗುಡಗಾರ, ಆಚಾರಿ ಇಷ್ಟೂ ಜನ ರಾಕೆಸ್ತಿ ನೋಡ್ಕಂಡಿ, “ನಮ್ಮ ಇಕ್ರಮತಿ ರಾಜನ ತಿಂದ್ಕಂಡಿ ಅದ್ ಅಲ್ ಮನಿಕಂಡದೆ. +ಇದ್ ನಮಗೂ ತಿನ್ನೂದೇ” ಹೇಳಿ ಅತ್ ಮಾತಾಡ್ದ್ರು. +ಆಗ ಇಕ್ರಮತಿ ರಾಜನ ಕುದ್ರೆ ಇದ್ದಿತಲ್ಲ? +ಆ ಕುದ್ರೆ ತಕಂಡಿ ಹತ್ಕಂಡ್ ಮೂರು ಜನ ಅಡ್ವಿವಳಗೆ ದೊಡ್ಡ ಮೈದಾನಕ್ ಹೋದ್ರು. +ಆ ಮೈದಾನಕ್ಕೆ ಹೋಗಿ ಅಲ್ ವಂದು ಕೊಟ್ಗೆ ಕಟ್ದ್ರು. +ಆ ಕೊಟ್ಗೆವಳ್ಗ್ ಆ ಕುದ್ರೆ ಇಟ್ರು. +ಅದ್ಕ್ ವಂದ್ ನಾಲ್ಕ್ ವರ್ಸ ತಿಂಬವಷ್ಟು ಕರಡ ಕೊಯ್ದಿ ಕೊಟ್ಗೆವಳ್ಗೆ ಸರದ್ರು, ಕದಗಿದಯೆಲ್ಲಾ ಮಾಡ್ ಬಂದಾಬಸ್ತ ಮಾಡ್ದ್ರಲ? +ಇನ್ ಅವರು ಮೂರು ಜನನೂ ಹೋಗ್ತ್ರು. +ಅಡ್ ಹೊದೂಕೆ ವಂದ್ ವಸ್ತ್ರ, ಮತ್ ಸಪೂರೆ ಪಂಚಿ ಉಡೂಕೆ ಇಟ್ಕಂಡ್ರು. +ಬಾಕಿ ವಸ್ತ್ರ ಪೂರಾ ಸುಟ್ರು. +ವಸ್ತ್ರ ಸುಟ್ಟಿ ಆ ಬೂದಿ ಸಲ್ಪ ನಣೂಪಾಯ್ತಲ? +ಯೆಲ್ಲಾ ಸುಟ್ಟಿಹೋಗ್ ಕೈಲ್ ಬಸ್ಮ ತಕಂಡ್ ಪಟ್ಟೆ ಯೆಳ್ಕಂಡ್ರು. +ಮತ್ತೆ ಯೆರಡೆರಡ ವಸ್ತ್ರ ಇಟ್ಕಂಡಿದ್ರಲ? +ಮತ್ತೆ ಯಾವ ಬದಿಗ್ ಊರ್ ಸಿಕ್ತದೆ ಅಂದ್ಕಂಡಿ ನೆಡ್ದ್ರು. +“ಜೈ ಸೀತಾರಾಮ. . . ” ಹೇಳ್ತ. +“ಜೈ ಸೀತಾರಾಮ, ಜೈ ಸೀತಾರಾಮ. . . ” ಹೇಳ್ತಾ ನೆಡ್‌ದಿಬಿಟ್ರು. +ಅವರ್ ಹೋಗ್ತನೇ ಉಳಿಲಿ. +ಅಲ್ಲಿ ಮುಂದಿನ್ದ್ ತಕಳಬೇಕಾಯ್ತಲ್ಲ? +ರಾಕೆಸ್ತಿ ಮಗಳು ಚಿನ್ನದ ಕುದ್ಲ್ನದಾಗಿತ್ತು. +ಅದ್ ವಾರಕ್ ವಂದ್ ಸಲ ಸಮುದ್ರಕ್ ಮೀವಲ್ಕಿ ಹೋಗತಿತ್ತು. +ಇಕ್ರಾಮತಿ ರಾಜನಿಗೆ ಒಳಗಿಟ್ಟು ಸುತ್ತು ಬೀಗ ಹಾಕೇ ಹೋಗತಿತ್ತು. +‘ಇಕ್ರಾಮತಿ ರಾಜ ಇವ ವೋಡ್ ಹೋಗ್ವ’ ಹೇಳಿ. +ವಂದ್ ವಾರದಲ್ಲಿ ಸಮುದ್ರಕ್ ಮೀವ್ಕ್ ಹೋದಾಗ ವಂದ್ ಕೂದ್ಲ್ ಹರ್ದ್ ಹೋಯ್ತು. +ಆವಾಗವ್ಳು, “ಸಮುದ್ರಕ್ ಮೀವ್ಕ್ ಬಂದಾಗ ಕೂದ್ಲು ಹರೂದಿಲ್ಲಾಗಿತ್ತು. +‘‘ಇವತ್ ಕೂದ್ಲು ಹರ್ದ್ ಹೋಯ್ತಲ್ಲಾ” ಹೇಳಿ, ಅದೊಂದು ಯೆಲೆ ಕೊಟ್ಟೆ ಮಾಡ್ತು. +ಆ ಕೂದ್ಲಾ ಕೊಟ್ಟೆಲ್ ಹಾಕಿ, “ನೀ ಯೆಲ್ ಬೇಕ್ ಅಲ್ ಹೋಗು” ಹೇಳ್ತು. +ಸಮುದ್ರದಲ್ ತೇಲ್ ಬಿಟ್ ಬಿಟ್ತು. +ಆಗದು ಮಿಂದ್ಕಂಡ್ ಹೋಯ್ತಲ ಮನೆಗೆ. +ಆ ಕೊಟ್ಟೆ ತೇಲ್ಕೋತ ಹೋಗ್ತಾ ಅದೆ. +ವಂದರಸೂ ಹುಡ್ಗ, ವಂದ್ ಪ್ರಧಾನಿ ಹುಡ್ಗಾ ಸಮುದ್ರ ಬಾಜೂನಲ್ ಹವಾ ತಿಂಬೂಕೆ ಬಂದಿದ್ರು. +ಆಗವರು ಮಾತಾಡ್ಕಂಡ್ರು. +ಪ್ರಧಾನಿ ಹುಡ್ಗ, ಅರಸು ಹುಡ್ಗನ ಕೈಲ್ ಹೇಳ್ದ- “ವೋ. . . ಅಲ್ ತೇಲ್ ಬತ್ತದ್ಯಲ್ಲಾ? +ಅದ್ರಲ್ ಆ ಕೊಟ್ಟೆ ನನಗೆ; ಅದರ ವೊಳಗಿದ್ಯದ್ದು ನಿನಗೆ” ಹೇಳ್ದಾ. +ಆಗೆ ಬಾಜೂನಲ್ ತೇಲ್ ಬಂದ್ ತಾಡ್ತಲಾ ಕೊಟ್ಟೆ, ಅರಸು ಹುಡ್ಗ ಹೋಗಿ ಆ ಕೊಟ್ಟೆಯಲಿದ್ದದ್ದು ಕೂದಲು ತಕಂಡ್ ಬಿಟ್ಟ. +ಪ್ರಧಾನಿ ಹುಡ್ಗ ಆಗ ನೋಡ್ಕಂಡಿ, “ಅರೇ! +ನಿಂಗೆ ಬಂಗಾರ್ ಕೂದ್ಲು, ನನ್ಗೆ ಕೊಟ್ಟೆ?” + ಹೇಳಿ ಅವರವರೊಳಗೇ ಬೇಜಾರ್ ಮಾಡ್ಕಂಡಿ ವಬ್ಬವ ಅತ್ಲಾಗೆ, ವಬ್ಬವ ಇತ್ಲಾಗೆ ಆದ್ರು. +ಆಗ ಅರಸೂ ಹುಡ್ಗ ಮನೆಗ್ಹೋದ, ಹೋಗ್ ಮುಚ್ ಹಾಕ್ಕಂಡ್ ಮನ್ಗ್ ಬಿಟ್ಟ. +ತಂದೆ ಹೋಗಿ ಊಟ್ಕ ಯೇಳ್ಸದ. +ಆಗ್ ಯೇನೇನ್ ಮಾಡ್ದ್ರೂ ಯೇಳೂದಿಲ್ಲ. +ಯಾರು?- ಅರಸು ಹುಡ್ಗಾ. +ಆಗವ ಹೇಳ್ತ, “ನಿನ್ಗ್ ಯೇನ್ ಬೇಕ ಅಂತ ಹೇಳು ತಾನು ನಿನಗೆ ಮಾಡ್ಸ್ ಕೊಟ್ತೆ, ತರ್ಸೂದಿದ್ರೆ ತರ್ಸ್ ಕೊಡ್ತೆ” ಹೇಳ್ತ. +ಆಗ ಮಗ ಅರಸು ಹತ್ರ, “ಚಿನ್ದ ಕೂದ್ಲ ಹುಡ್ಗಿ ತಂದ್ ಲಗ್ನ ಮಾಡಬೇಕು. +ಹಾಗಾದ್ರೆ, ತಾನ್ ಜೀವ ಇಟ್ಕಳ್ತೆ. +ಇಲ್ಲಾದ್ರೆ ಜೀವವೇ ತೆಕ್ಕಂಡ್ ಬಿಡ್ತೆ” ಹೇಳ್ ಹೇಳ್ದ. +“ಅಡ್ಡಿಲ್ಲ, ಯೇಳು. . . ನೀನು ಊಟ ಮಾಡು, ತಾನು ತರ್ಸ್ ಕೊಡ್ತೆ” ಹೇಳ್ದ ಅಪ್ಪ. +ಆಗ ಮಗ ಯೆದ್ದಿ ಊಟ ಮಾಡ್ದ. +ಮಗನಿಗಿಂತ ಹೆಚ್‌ಯತೆ ಅವನಿಗೆ ಹತ್ ಹೋಯ್ತು. +ಅವ ಮುಚ್ ಹಾಕಂಡ್ ಮನ್ಗ್ ಬಿಟ್ಟ. +ಯಾರು?- ಅರಸು. +ಅವರ ಮಲ್ ವಾರ್ ವಾರಕ್ ವಂದ್ ಸಲ ವಂದ್ ಅಜ್ಜಿ ಬರ್ತಿತ್ತು-- ಬೇಡೂಕೆ. +ಆ ಅಜ್ಜಿಗೆ ಮೂರ್ ಶಿದ್ ಅಕ್ಕಿ, ವಂದ್ ತೆಂಗ್ನ್ ಕಾಯಿ, ವಂದ್ ರೂಪಾಯಿ ಕೊಡತಿದ್ದಾ. +ಆ ದಿವ್ಸ್ ಹೋಯ್ತು. +ಅದ್ರ ವಾರ ಬಂತು ಹೋಯ್ತು. +ಆ ದಿವಸ ಹೋಗ್ ಕುಂತ್ತು. +ಆ ದಿನ ಅರಸು ಮಾತಾಡ್ಸೂದೇ ಇಲ್ಲ. +ಅಜ್ಜಿ ಮುದ್ಕಿಗೆ ಆಗೆ ಕೇಳ್ತು ರಾಜ್ನ ಹತ್ರ, “ಯೇನು ಮಾರಾಯ? +ಇವತ್ತು ನೀನು ನನ್ಗ ಯೇನೂ ಕೊಡುದಿಲ್ಲ. +ಯಾಕೆ?” ಹೇಳ್ ಕೇಳ್ತದೆ ಅರಸೂ ಹತ್ರೆ. +ಆಗ ಅರಸೂ ಹೇಳ್ತ ಅಜ್ ಮುದ್ಕಿ ಹತ್ರೆ, “ನಿನ್ದ್ ನಿನಗೇಯ. +ನನ್ಗ್ ಬಂದ್ ಕಷ್ಟ ನೋಡ್ದ್ರೆ ದ್ಯೇವರಿಗ್ ಹೇಳಬೇಕು” ಹೇಳ್ತ ಅರಸು. +“ಹಾಂಗಾರೆ. . . ನಿನ್ಗ್ ಯೆಂತ ಕಷ್ಟ ಬಂತು ಹೇಳು” ಹೇಳಿ ಅಜ್ಜಿ ಮುದ್ಕಿ ಅರಸೂ ಹತ್ರ ಕೇಳತದೆ. +“ನನ್ಗ್ ಕಷ್ಟ ಮತ್ಯೇನಿಲ್ಲ. +ಮತ್ ನನ್ನ ಮಗನಿಗೆ ಚಿನ್ನದ ಕೂದ್ಲ ಹೆಣ್ ತಂದ್ ಲಗ್ನ ಮಾಡಬೇಕು ಹೇಳ್ ಹೇಳ್ತಾ. +ಇಲ್ಲಾದ್ರೆ ಜೀವಾನೆ ತೆಕ್ಕಂಡ್ ಬಿಡ್ತೆ ಹೇಳ್ ಹೇಳ್ತಾ.” +“ಓ!ಅಷ್ಟೇ ಹೌದೊ ಅಲ್ಲೊ? +ತಾ ತರ್ಸ್ ಕೊಡ್ತೆ” ಹೇಳ್ ಹೇಳ್ತದೆ ಅಜ್ಜಿ ಮುದ್ಕಿ. +ಆಗೆ ಅರಸೂ ಯೆದ್ದಿ-- ಆ ಅಜ್ಜಿಮುದ್ಕಿಗೆ ವಂದ್ ಕೊಳಗಕ್ಕಿ, ಐದ್ ರೂಪಾಯಿ, ಯೆರಡ್ ತೆಂಗಿನ ಕಾಯಿ ಯೆಲ್ಲ ಕೊಡ್ತ. +ಆಗೆ ಅರಸೂ ಕೈಲ್ ಹೇಳ್ತದೆ ಅಜ್ಜಿ ಮುದ್ಕಿ, “ವಂದ್ ಮಚ್ವೆಯಾಗಬೇಕು. +ಸಾಮಾನು, ಜವಳಿ, ಮಣ್ಣು-ಮಶಿ. . . ಹೇಳಿ ಎಲ್ಲಾ ತುಂಬಕಂಡಿ ತಾನು ಹೇಳ್ದಾಗೆ ತೆಗೀಬೇಕು-- ಅವ್ರು ಮಚ್ವೆ. +ತಾ ಹೇಳುಹಾಗ್ ತೆಗಿದಿದ್ರೆ ತಾನು ಸಮುದ್ರದಲ್ ಬಿದ್ದ್ ಜೀವಾ ತಕ್ಕಂಡ್ ಬಿಡ್ತೆ” ಹೇಳ್ ಹೇಳ್ತು. +ಆಗೆ ಅರಸು ಮಚ್ವೆ ತೆಗುಕ್ ನಾಲ್ಕ್ ಜನ ತಯಾರ್ ಮಾಡ್ದ. +ಅವರಿಗೆ ಹೇಳ್ದಾ, “ಅಜ್ಜಿ ಮುದ್ಕಿ ಯಾವ ದಿಕ್ಕಿಗ್ ಹೇಳ್ತೊ ಆ ದಿಕ್ಕಿಗ್ ಮಚ್ವೆ ತಕಂಡ್ ಹೋಗಬೇಕು. +ಅಲದಿದ್ರೆ, ನಾಲ್ಕೂ ಜನ್ರಿಗೂ ಪಾಸಿ ಸಿಕ್ಸೆ ಕೊಡ್ತೆ” ಅಂದ. +ಆ ಮಚ್ವೆ ಮೇನಿಟ್ ತಿಂಡಿ ಸಾಮಾನು, ವಂದಿಷ್ಟ ವಸ್ತ್ರ, ವಂದಿಷ್ಟ ತಿಂಬೂಕೆ ತಿಂಡಿ ಸಾಮಾನು ತಕಂಡಿ ಅಜ್ಜಿ ಮುದ್ಕಿ ಕುಳ್ಸ್ಕಂಡಿ, ಮಚ್ವೆ ತೆಗ್ವರ್ ನಾಲ್ಕೂ ಜನ ಮಚ್ವೆ ಬಿಟ್ರು. +ಅದೇ ವಾರದಲ್ ಆ ರಾಕೆಸ್ತಿ ಮಗು ಅಲ್ ಮೀವ್ಕ ಬಂದಿತ್ತೂ. +ಆಗ ಈ ಅಜ್ಜಿ ಮುದ್ಕಿ ದೃಷ್ಟಿಗ್ ಬಿತ್ತು. +ಆಗ ಮಚ್ವೆ ತೆಗ್ವರ್ ಕೈಲ್ ಹೇಳ್ತು. +“ಅದೇದೆ!ಅಲ್ ವಂದ್ ಹುಡ್ಗಿ ಮೀಯ್ತದೆ, ಅಲ್ಲೆ ಮಚ್ವೆ ತಕಂಡ್ ಹೋಗಬೇಕು. +” ಸಾದ್ರಾಣ ಸಮೀಪ ಬತ್ತೆಯ ರಾಕೆಸ್ತಿ ಮಗಳು ಮೀವದ್ ಬಿಟ್ಕಂಡಿ ನಿತ್ಕಂಡ್ ಬಿಟ್ತೂ. +ಮಚ್ವೆ ಹೋಗ್ ತಾಡ್ತು ದಿಡಕ್ಕೆ‌. +ಆಗಜ್ಜಿಮುದ್ಕಿ ಕೆಳಗಿಳ್ದು ಬಂತು. +ಆಗೆ ಆ ಹುಡ್ಗಿ ಹತ್ರೆ ಮಾತಾಡ್ತೂ, “ನೀನು ತನ್ ಅಕ್ನ ಹುಡ್ಗಿಯಾಗಿತ್ತು. +ನನ್ನಕ್ಕ ಇದ್ದಾಗ ತಾ ಬಂದಿದ್ದೆ ನಿಮ್ಮನಿಗೆ” ಹೇಳ್ ಹೇಳ್ತು, “ಮತ್ತೆ ನನ್ನಕ್ ಅದ್ಯೊ? +ತೀರಕಂಡ್ತೊ?” ಹೇಳಿ ಆ ಹುಡ್ಗಿ ಹತ್ರ ಕೇಳ್ತದೆ. +ಆಗೆ ಅದು, “ಹಗರೆ ತಾಯಿ ಇಲ್ಲ. +ತೀರ್ಕಂಡ್ತು” ಹೇಳಿ ಅಜ್ಜಿಮುದ್ಕಿ ಹತ್ರ ಹೇಳ್ತು. +ಆಗ ಅಜ್ಜಿ ಮುದ್ಕಿ ಬಾಳ ದುಕ್ಕಾ ಮಾಡಿ, ಹೋಯ್ಗಿ ಬೇಲಿ ಮೇಲ್ ಬಾಳ್ ಹೊಳ್ಳಾಡ್ ಬಿಟ್ತು. +‘ಅಕ್ ಸತ್ ಹೋಯ್ತು’ ಹೇಳಿ. +ಈ ಹುಡ್ಗಿಗೂ, “ಹೌದು” ಹೇಳ್ಕಂಡ್ ಕಂಡ್‌ಹೋಯ್ತು. +ಇದ್ ತನ್ ಚಿಕ್ಕಿ ಹೇಳ್ ತೆಳ್ಕಂಡ್ತು‌. +ಆಗಾ ಹುಡ್ಗಿ ಹತ್ರೆ ಹೇಳ್ತದೆ ಆ ಅಜ್ಜಿ ಮುದ್ಕಿ, “ನೋಡು. . . ನಿನ್ನ ಅಣ್ಣಂದಿಕ್ಳು ಬೇಕಾದ್ ವಸ್ತ್ರಾ ನಿನ್ಗೆ ಕಳ್ಸ್ ಕೊಟ್ಟಾರೇ. +ಹಡ್ಗ್ ವಂದ್ ಸಲ ಹತ್ ನೋಡು. . . ” ಹೇಳಿ ಹುಡ್ಗಿ ಕೈಲ್ ಹೇಳ್ತದೆ. +ಆಗ ಹತ್ತುದಿಲ್ಲ ಅದು. +ಯೇನ್ ಮಾಡ್ದ್ರೂ ಹಡ್ಗ್ ಹತ್ ನೋಡುದಿಲ್ಲ. +ಈ ಅಜ್ಜಿಮುದ್ಕಿ ಕಾಟ ತಡೂಕಾಗದಿದ್ದೇಯ ವಂದ್ ಕಾಲ ಆ ಮಚ್ವೆ ಮೇಲಿಟ್ಕಂಡಿ, ಹೀಗೆ ಮಚ್ವೆ ಹಿಡಕ್ಕಂಡಿ, ಆ ಮಚ್ವೆ ಯೆರ್ಗ್ ನೋಡ್ತು. +ಅಜ್ಜಿ ಮುದ್ಕಿ ಕಣ್ ಚೆಡ್ದ ಬಿಟ್ತೂ, “ಮಚ್ವೆ ಬಿಟ್ ಬಿಡಿ” ಹೇಳಿ. +ಆಗೆ ಅದ್ ಮನ್ದನಲ್ ಮಾಡ್ಕಂಡ್ತೂ, ‘ಅಜ್ಜಿ ಮುದ್ಕಿ ನನ್ಗೆ ಕೊಟ್ತು ಕಲ್ಲು’ ಹೇಳಿ ಮೇನ್ ಹತ್ಬೇಕಾಯ್ತು. +ಮೇನ್ ಹತ್ ಕುಂತ್ಕಂಡ್ತು. +ಮಚ್ವೆ ಬಿಟ್ಟೆ ಬಿಟ್ರು ಅವರು. +ಮಚ್ವೆ ಹೋಗ್ ಆಚೆ ದಿಂಬಕೆ ತಾಡ್ತೂ ಹೇಳಾಯ್ತು. +ಆಗಾ ಮಗು ಕರಕಂಡಿ ರಾಜ್ನ ಮನಿಗೆ ಹೋಯ್ತು ಹೇಳಾಯ್ತು. +ರಾಜ್ನ ಹತ್ರ ಹೇಳ್ತು, “ನೋಡು ಮಾರಾಯ. . . ‘ನಾ ತಂದ್ ಕೊಡ್ತೆ’ ಹೇಳ್ದ್ ಮಾತಿಗೆ ತಂದ್‌ಕೊಟ್ಟೆ.. . ಇನ್ ಬೇಕಾದ್ರೆ ನಿನ್ ಮಗನ ಮದಿ ಮಾಡ್ಕ” ಅಂದ್ ಹೇಳ್ತು‌. +ಆಗ ಅಜ್ಜಿ ಮುದ್ಕಿ ಆ ರಾಜ್ನ ಮಗನಿಗೆ ತೋರ್ಸತು, “ಮಗಳೆ. . . ಇದೆ, ಇವನೇ ಹೌದು ನಿನ ಗಂಡ” ಹೇಳ್ತು‌. +ಆಗಾ ಹುಡ್ಗಿ ಹೇಳ್ತು ಅಜ್ಜಿ ಮುದ್ಕಿ ಹತ್ರ, “ಮತ್ ಅವನ ಲಗ್ನಾಗುದಿದ್ರೆ ಲಗ್ನಾಗುಕಡ್ಡಿಲ್ಲ. +ಮೂರ್ ವರ್ಸನವರಿಗೆ ವಂದ್ ಕಟ್ಟೆ ಮೇಲಿಪ್ಪ. . . ಅನ್ನ ಬೇಡ್ದವ್ರಿಗೆ ಅನ್ನ ಕೊಡಬೇಕು, ವಸ್ತ್ರ ಬೇಡ್ದವ್ರಿಗ್ ವಸ್ತ್ರ ಕೊಡಬೇಕು. +” ಅಂದ್ ಹೇಳ್ತಲ್ಲ, ಅದು ರಾಜ್ನ ಹತ್ರ ಹೇಳ್ತು ಅಜ್ಮುದ್ಕಿ ಅವಳು ಹೀಗ್ ಹೇಳ್ತು ಹೇಳಿ. +ಆಗ “ಅಡ್ಡಿಲ್ಲ” ಹೇಳಿ ಸಮೀಪ್ದಲ್ ವಂದ್ ಕಟ್ಟೆದ್ದಿತ್ತು. +ಅದಕ್ಕೆ ವಂದ್ ಚಪ್ಪರ ಹಾಕಿ ವಸ್ತ್ರದಾನ, ಅನ್ನದಾನ ಯೆಲ್ಲಾ ಇಟ್ರು. +ಹುಡ್ಗಿ ಹೋಗ್ ಅಲ್ಲೆ ಉಳ್ಕೊಳ್ತದೆ. +ಯಾರ್ ಅನ್ನ ಬೇಡ್ದ್ರು ಅನ್ನ ಕೊಡುದು; +ವಸ್ತ್ರ ಬೇಡ್ದ್ರೂ ವಸ್ತ್ರ ಕೊಡುದು ಶುರುವಾಗ್ ಹೋಯ್ತು ಅದ್ರದ್ದು. +ಇವರು ಕುಂಬಾರ, ಗುಡಗಾರ, ಆಚಾರಿ ಮೂರ್ ಜನ ಇದ್ದಿದ್ರಲ? +ಇವರಿಗ್ ಆ ದಿನ ಊರ್ ಸಿಕ್ತು. +ವಂದ್ ಮನೇಲ್ ಹೋಕಂಡಿ, “ನಮ್ಗೆ ಮೂರ್ ಜನ್ನಿಗೆ ಯೇನಾದ್ರೂ ಸಲ್ಪ ಅನ್ನ ಹಾಕಿ, ಆರ್ ತಿಂಗಳಾಯ್ತು. +ನಮ್ಗೆ ಹೊಟ್ಟೆಗ್ ಯೇನೂ ಇಲ್ಲ. +ಯೇನಾದ್ರೂ ಹೊಟ್ಟೆಗ್ ಕೊಡ್ರಪಾ” ಅಂತ ಹೇಳ್ ಹೇಳ್ದ್ರು. +“ಹಾಂಗಾದ್ರ್ ಇಲ್ಲೇ ಸಮೀಪದಲ್ ವಂದ್ ಕಟ್ಟೆ ಅದೆ. +ಆ ಕಟ್ಟೆ ಮೇಲೆ ವಂದ್ ಹುಡ್ಗಿ ದಾನ-ಧರ್ಮ ಮಾಡ್ತದೆ. +ಅಲ್ಲೇ ಹೋಗಿ” ಅಂತ ಹೇಳಿ ದಾರಿ ತೋರ್ಸಿಕೊಟ್ರು, ಆ ಮನೆಯವರು. +ಆಗವ್ರಲ್ಲೇ ಬಂದ್ರು. +ಅವ್ರ್‌ ಬಂದ್ ಕೂಡಲೇ ಅವರಿಗ್ ಮೀವುಕೆ, ಉಡುಕೆ ವಸ್ತ್ರ ಯೆಲ್ಲಾ ಕೊಟ್ರು. +ಆಗೆ ಅವರಿಗೆ ಮೂರೂ ಜನ್ರಿಗೂ ಆ ಹುಡ್ಗಿ ಬಡ್ಸ್ತು. +ಅವ್ರ್ ಬೇಕಟ್ ಊಟ ಮಾಡ್ದ್ರು. +ಮೂರು ಜನನೂವ ಆಗ್ ಬಾಳೆ ತೆಕ್ಕಂಡಿ ಹೊತಾಕುಕ್ ಹೋದಾಗೆ ಆಚಾರಿ ಯೇನ್ ಹೇಳ್ದಾ-- ಕುಂಬಾರ್ನ ಹತ್ರೆ, ಗುಡಗಾರ್ನ್ ಹತ್ರೆ, “ನಮ್ಮ ಇಕ್ರಮತಿ ರಾಜನ ಉಗರು ಈ ಹುಡ್ಗಿ ಮೊಲೆ ಮೇನ್ ಕಪ್ಪದೆ” ಹೇಳ್ ಹೇಳ್ದ. +ಆ ಹುಡ್ಗಿಗ್ ಕೇಳ್ ಬಿಡ್ತು. +ಆಗೆ ಅವ್ರ್ ಊಟ ಮಾಡ್ ಬಾಳೆಗೀಳೆ ತೆಗದಿ ಕೈತೊಳೂಕ್‌ ಬಂದ್ ಕೂಡ್ಲೆಯಾ, ಆ ಹುಡ್ಗಿ ಕೇಳ್ತದೆ ಅವ್ರ್ ಹತ್ರ, “ನೀವ್ ಯೇನ್ ಮಾತಾಡ್ದ್ರೀ?” ಅಂದ್ ಹೇಳ್ ಕೇಳ್ತದೆ. +ಆಗವ್ರ್ ಮನ್ಸಿಗ್ ಹೆದ್ರ್ಕಿ ಹುಟ್ಟಿ, “ತಾವ್ ಯೇನೂ ಹೇಳಲಿಲ್ಲ” ಹೇಳ್ ಹೇಳ್ತ್ರು ಅವರು. +ಆಗದ್ ಹೇಳ್ತು, “ನೀವ್ ಯೇನೂ ಹೆದ್ರೂದ್ ಬೇಡಾ. +ಇದ್ ಸಂಗ್ತಿ ಇದ್ ಹಾಂಗ್ ಹೇಳೂಕಡ್ಡಿಲ್ಲ” ಹೇಳಿ. +ಆಗೆ ಆಚಾರಿ ಹೇಳ್ತ, “ಮತ್ ಹೇಳ್ದ್ರೆ ಯೇನೂ ಇಲ್ಲ. . . ನಮ್ಮ ಇಕ್ರಮತಿರಾಜ್ನ ಉಗರು ನಿಮ್ಮ ಮೈಮೇನ್ ಕಪ್ಪದೆ” ಹೇಳ್ ಹೇಳ್ತ. +ಆ ಹುಡ್ಗಿ ತೇಳ್ಕಂಡ್ತಲ್ಲ, “ಇಕ್ರಮತಿ ರಾಜ ಹೇಳನೆ, ಮೂರ್ ಜನ ನಮ್ ಸಂಗಡ್ ಬಂದವ್ರು ಅಲ್ ಅವ್ರೆ ಅಡವಿಲಿ. +ನಾ ಬಿಟ್ ಹಾಕ್ ಬಂದನೇ” ಹೇಳ್ ಹೇಳಿದ್ದು. +ಆಗ ಅವ್ರ್ ಮೂರೂ ಜನ ಅದ್ರ್ ಹತ್ರ ಕೇಳ್ತ್ರು. +“ಯೆಲ್ಲಾಯ್ದು ನಿನಗೆ? +ನೀ ಯೆಲ್ಲಿಂದ್ ಬಂದೆ?” ಹೇಳ್ಯೆಲ್ಲಾ ಕೇಳ್ತ್ರು. +ಆಗ ಹುಡ್ಗಿ ಹೇಳ್ತದೆ, “ನಾನು ವಾರಕ್ ವಂದ್ ಸಲ ಸಮುದ್ರ ಮೀವಕ್ ಬರ್ತಿದೆ. +ವಂದ್ ಅಜ್ಜಿ ಮುದ್ಕಿ ಯಾನಮನಿ ಯೇಸ ಮಾಡಿ, ನನ್ಗೆ ಇಲ್ ಕರ್ಕಂಬಂತು. +ನಿಮ್ ಇಕ್ರಮತಿ ರಾಜ ಯೆಲ್ಲೂ ಹೋಗಲಿಲ್ಲ. +ಅಲ್ ತಮ್ಮ ಮನೆಲೇ ಅವನೆ. . . ” ಹೇಳ್ ಹೇಳ್ತದೆ. +ಆಗ್ ಅವ್ರ್ ಮೂರೂ ಜನ ಯೇನ್ ಹೇಳ್ತ್ರು? +“ನಮ್ಮ ಇಕ್ರಮತಿ ರಾಜನಿಗೆ ನೀವು ತೋರ್ಸ್ಕೊಟ್ರೆ ವಳ್ಳೆದಾಯ್ತು. +ಇಲ್ಲದಿದ್ರೆ ತಾವ್ ಮೂರು ಜನ ನಿಮ್ಮ ಮುಂದೆ ಜೀವಾ ತೆಕ್ಕಳ್‌ತೀರು” ಹೇಳ್ ಹೇಳ್ದ್ರು. +ಕಡಿಗೆ, “ಹಾಂಗಾದ್ರೆ, ಇವ್ನ ಯೇನ್ ಮಾಡಬೇಕಾಯ್ತು ರಾಜ್ನ ಮಗನಿಗೆ ಮದಿ ಮಾಡುಕೆ?” ಹೇಳಿ ಮೂರು ಜನ್ರು ಇವರಿವರೊಳಗೆ ಮಾತಾಡ್ಕಂಡ್ರು. +ಆಗಾ ಹುಡ್ಗೀ ಹತ್ರಾ ಹೇಳದ್ರು, “ರಾಜನ ಮಗನಿಗೆ ಮದಿಯಾಗೂಕಡ್ಡಿಲ್ಲ ಅಂತರಾಟಕಿ ಮಂಟಪವಾಗಬೇಕು ಅಂತ ಹೇಳ್ ಹೇಳ್ಕಳ್ಸು’’ ಅಂತ ಹೇಳ್ದ್ರು. +ಆಗ ರಾಜ ಅವರ ಅಂತರಾಟಕಿ ಮಂಟಪ ಯಾರ್ ಮಾಡತ್ರು ಹೇಳಿ ಊರಲ್ಲಿದ್ ಆಚಾರಿಕ್ಕೋಳ್ ಅಟ್ ಜನ್ರ ಹತ್ರೂ ಕೇಳ್ತ. +ಆಗ ಅವರು, “ಯಾರಿಗೂ ತೆಳುದಿಲ್ಲ” ಹೇಳ್ ಹೇಳ್ಬಿಟ್ರು. +ಆಗೇ ಯಾರಿಗೂ ತಿಳಿದಿದ್ದೆ ಕುಂಬಾರ, ಗುಡಗಾರ, ಆಚಾರಿ ಮೂರ್ ಜನ ಇದ್ದಿದ್ರಲ್ಲ? +ಇವರ್, “ತಾವ್ ಬೇಕಾದ್ರ್ ಮಾಡ್ ಕೊಡ್ತೆ” ಹೇಳ್ ಹೇಳ್ದ್ರು. +ಆಗ, “ಅಡ್ಡಿಲ್ಲ”, ಅವರು ಐದಾರ್ ಸಾವರಗುತ್ಗಿ ಮಾಡ್ಕಂಡಿ ಮೂರೂ ಜನ ಅಂತರಾಟಕಿ ಮಂಟಪ ಮಾಡದ್ರು ಹೇಳಾಯ್ತು. +ಅಂತರಾಟಕಿ ಮಂಟಪ ಮಾಡ್ಕಂಡಿ ಹುಡ್ಗಿ ಕುಳ್ಸ್ಕಂಡಿ ಮೂರೂ ಜನ ಅರಸೂ ಮನಿಗ್ ಹಾರ್ಸ್ಕಂಡ್ ಬರ್ತ್ರು. +ಮುಂದೆ ಆ ಹುಡ್ಗಿ ಅಜ್ಜಿಮುದ್ಕಿ ಹತ್ರೆ, “ಇನ್ಬೇಕಾದ್ರೆ ನೀವ್ ಮದ್ವಿ ತಯಾರಿ ಮಾಡೂಕಡ್ಡಿಲ್ಲ” ಹೇಳ್ತದೆ. +ಆಗೇ ರಾಜ ಚಪ್ಪರ-ಗಿಪ್ಪರ ಯೆಲ್ಲಾ ಹಾಕಿ ಊರೂರ್ ಯೆಲ್ಲಾ ಕರದಿ ಮದಿಗ್ ತಯಾರಿ ಮಾಡ್ದ ಹೇಳಾಯ್ತು. +ಮದಿಗ್ ತಯಾರಾಗಿ, ಮದ್ಮಗನಿಗ್ ಬಾಸಿಂಗ್ ಕಟ್ಕಂಡಿ ಆ ಮಂಟಪದಲ್ ತಂದ್ ಕುಳ್‌ಸುದ್ರು. +ಹುಡುಗಿ ಯೆರಡೂ ಜನಾನೂ ಕುಂತ್ರು ಹೇಳಾಯ್ತು. +ಅಜ್ಜಿ ಮುದ್ಕಿನೂ ಕುಳ್ಸದ್ರು. +ಪುರೈತ ಬಟ್ರನ್ನ ಕುಳ್ಸದ್ರು. +ಕುಂಬಾರ, ಗುಡಗಾರ, ಆಚಾರಿ ಇವ್ರ್ ಮೂರು ಜನನೂವ ಕುಂತ್ಕಂಡ್ರು. +ಆಗೆ ವಂದ್ ಸಲ ಆಚಾರಿ ಮೊಳೆ ತಿರ್‌ಸ್ ಬಿಟ್ಟ. +ಆ ಮಂಟಪ ಸಾದಾರ್ಣ ಯೆರಡ್ ಆಳ ಮೇಲ್ ಹೋಯ್ತು. +ಯೆರ್ಡ್ ಆಳ್ ಮೇಲ್ ಹೋಗ್ ಮತ್ ಹಿಂದೇ ಬಂದ್ ಕುಂತ್ಶಿ ಅಲ್ಲೇಯ ಮತ್ತೊಂದ್ ಸಲ ತಿರ್‌ಗ್‌ದಾಗೆಗೆ ಮೇಲ್ ಹೋಯ್ತು. +ಮೇಲ್ ಹೋಗ್ ನೆಡ್ದ್ ಬಿಟ್ತು. +ಕೆಳಗಿನವ್ರು ಇವ್ರ್ ಮತ್ ಹಿಂದೇ ಬಂದ್ ಅಲ್ ಕುಳ್ತರೆ ಹೇಳ್ ತೆಳ್ಕಂಡ್ರು. +ಆವಾಗ್ ಈ ಆಚಾರಿ, ಕುಂಬಾರ, ಗುಡಿಗಾರ. . . ಮೂರ್ ಜನ ಕೂಡ್ಕಂಡಿ ಅಜ್ಜಿ ಮುದ್ಕಿ ಸಾವಕಾಸ ಕೆಳ್ಗ್ ಬಿಟ್ರು. +ಮದಿಯಾಗುವವನಿಗ್ ವಂದು ನೆಗ್ದ್ ಹೊತಾಕತ್ರು. +ಹೊತಾಕ್ ಬಿಟ್ರೂ ಕಡಿಗಾ ಪುರೈತ್ ಬಟ್ರಿಗೂ, ಲಾಸ್ಟ್ ತೆಗ್ದ್ ಹೊತಾಕ್ ಬಿಟ್ರೂ. +ಆಗೆ ಮಂಟಪ ರಾಕೆಸ್ತಿ ಮನಿಗ್ ತಕಂಡ್ ಹೋಗಿ ಇಳಿಸ್ತ್ರು. +ಆಗ ಕದ ತೆಗ್ದಿ ನೋಡದ್ರೆ ಇಕ್ರಮತಿರಾಜ ಇಲ್ಲೆ ಇಲ್ಲ. +ಮಾದೊಡ್ ಹುತ್ ಬೆಳ್ದ್ ಹೋಗದೆ. +ಆಗ್ ಇವ್ರ್ ಮೂರೂ ಜನ ಆ ಹುಡ್ಗಿ ಹತ್ರೆ ಹೇಳತ್ರು, “ನಮ್ ಇಕ್ರಾಮತಿ ರಾಜ ಯೆಲ್ಲವ್ನೆ ಹೇಳ್ ಈಗಿಂದೀಗೆ ತೋರ್ಸ್ಕೊಡಿ” ಹೇಳ್ ಕೇಳ್ತ್ರು. +ಆ ಹುಡ್ಗಿ ಕದ ತೆಗ್ದಿ ವಳ್ಗ್ ನೋಡ್ತದೆ. +ವಳ್ಗೆ ಪೂರಾ ವರ್ಲೆ ಹುತ್ ಬೆಳ್ದ್ ಹೋಗದೆ. +ಆಗದು ಪಿಕಾಸ್ ತಕಂಡ್ ವರ್ಲೆ ಹುತ್ ಅಗಿತದೆ. +ರಾಜನ ಯೆಲಗ್ ಯೆಷ್ಟದ್ಯೊ ಸಂಪೂರ್ಣವಾಗ್ ವಂದೊಂದಾಗ್ ತೆಗಿತು. +ತಲೆ ಯೆಲಗೂನೂ ಪೂರಾ ಕಂಪ್ಲೀಟ್ ತೆಗಿತಪ್ಪ ಅದು. +ಅದು ಪಾದದ ಬದಿಯೆಲ್ಗ್ ಪಾದದ ಬದಿಗ್ ಇಟ್ತು. +ತಲೆ ಬದಿ ಯೆಲ್ಗ್ ತಲೆ ಬದಿಗ್ ಇಟ್ತು. +ಕೈಕಾಲ್ ಬದಿ ಯೆಲ್ಗ್ ಕೈಕಾಲ್ ಬದಿಗ್ ಇಟ್ತು. +ಸಂಪೂರ್ಣವಾಗಿಟ್ಟು, ಅದೇ ವರ್ಲೆ ಹುತ್ನ ಮಣ್ ಸಲ್ಪ ಕಲಸಿ ಆ ಯೆಲ್ಗಿಗ್ಯೆಲ್ಲಾ ಕೂಡುಸ್ತು. +ಕೂಡ್ಸಾದ ನಂತ್ರೆ ಅದ್ರ ಹತ್ರ ವಂದ್ ಬೆತ್ತ ಇರ್ತದೆ. +ನಾಗ ಬೆತ್ತವೊ, ಯಾವ ಬೆತ್ತವೊ ಆ ಬೆತ್ತಾ ತಲಿಂದ ಪಾದದವರಿಗೂ ಮೂರ್ಸಲ ಯೆಳಿತದೆ. +ಆಗ ಇಕ್ರಮತಿ ರಾಜ “ತನ್ಗ್ ಯೆಂತ ನಿದ್ರೆ ಬಿದ್ ಹೋಯ್ತಪ್ಪಾ!” ಹೇಳಿ ಮಲಗ್ದವ ಯೆದ್ ಕೂತ್ಹಾಂಗ್ ಯೆದ್ ಕುಳ್ತ. +ಆಗೆ ಇವರು ಕುಂಬಾರ, ಗುಡಿಗಾರ, ಆಚಾರಿಯೆಲ್ಲಾ ಮಾತಾಡ್ಕಂಡಿ, ಅಲ್ಲಿ ಕುದ್ರೆ ವಂದದ್ಯಲ್ಲ? +ಮನೆ ಕಟ್ಟಿಟ್ಟಿದ್ದ್ರಲ್ಲ? +ಅಲ್ಲಿ ಅಂತರಾಟಕಿ ಮಂಟಪ ಹತ್ಕಂಡೇ ಬಂದ್ರು. +ಅಲ್ ಬಂದಿ, ಆ ಕುದ್ರೆ ಕೊಟ್ಗೆ ನೋಡುದ್ರೊಳೂಗ್ ಆ ಇಕ್ರಮತಿ ರಾಜನ ಯತಿಲಿ ಆ ರಾಜನ ಕುದರೆ ಅಲ್ಲೇ ವರ್ಲೇ ಹುತ್ತಾಗ್ ಹೋಗದೆ. +ಆಗೇ ಅದೇ ರಾಕೆಸ್ತಿ ಹುಡುಗಿ ಪಿಕಾಸ್ನಲ್ ಅಗ್ದಿ ತಗದಿ, ಯೆಲ್ಗ್ ಯೆಲ್ಲಾ ಕೂಡ್‌ಸ್ತದೆ. +ಆಗದೆ ವರ್ಲೆ ಹುತ್ನ ಮಣ್ ಸಲ್ಪ ಕಲ್ಸಿ ಯೆಲ್ಗಿಗ್ಯೆಲ್ಲಾ ಕೂಡ್ಸಿ ಕುದ್ರೆ ತಲಿಂದ್ ಬಾಲದ್ವರಿಗೂ ಮೂರ್ ಸಲ ಯೆಳೀತದೆ. +ಆಗಾ ಕುದ್ರೆಗ್ ಜೀವಾಯ್ತು. +ಕುದ್ರೆ ತಕಂಡಿ ಇವರೈದ್ ಜನ ಊರಿಗ್ ಹೋಗಬೇಕು ಹೇಳಿ, ಮಂಟಪದ ಮೇಲೆ ಬತ್ರು. +ಇಕ್ರಮತಿ ರಾಜನ ಮನೆಗ್ ಬಂದ್ರು. +ಬರವಲ್ಲಿವರಿಗೆ ರಾಜನ ತಾಯಿ-ತಂದೆ ಮಗನ ಯತಿಲಿ ಯೆರಡೂ ಜನನೂ ಹುತ್ತಾಗ್ ಹೋಗರೇ. +ಯೆರಡ ಹುತ್ತಾಗದೆ. +ಆಗಾ ರಾಕೆಸ್ತಿ ಹುಡಗಿ ಯೆರಡು ಹುತ್ತಾಗೆದು, ಯೆರಡೂ ಹುತ್ನ ಯೆಲ್ಗ್ ಬೇರೆ ಬೇರೆ ತೆಗದಿ ಸಂಪೂರ್ಣವಾಗಿ ಅದೇ ವರ್ಲೆ ಹುತ್ನ ಮಣ್ ಕಲ್ಸಿ ಕೂಡುಸ್ತು ಹೇಳಾಯ್ತು. +ಅದೇ ಯೆರಡೂ ಜನ್ರಿಗೂ ನಾಗಬೆತ್ತ ಯೆಳ್ದ್ ಜೀವ್ ಮಾಡ್ತು ಹೇಳಾಯ್ತು. +ಮಗ ಬಂದ ಅಂತ ಹೇಳ್ ಬಾರಿ ಸಂತೋಶಾಯ್ತು ತಾಯಿ-ತಂದೆಗೆ. +ಊರೂರೆಲ್ಲಾ ಕರದಿ ರಾಜ ರಾಕೆಸ್ತಿ ಹುಡಗಿಗೆ-ಮಗಗೆ ಲಗ್ನಾ ಮಾಡ್ದ. +ಇವರಿಗೂ ಮೂರು ಜನ್ರಿಗ್ ಮದಿವೆ ಮಾಡ್ಸ್ ಅವ, ಅವರಿಗ್ ವನಂದ್ ಮನಿಕಟ್ ಕೊಟ್ಟ, ಲಗ್ನ ಮಾಡಿ ಮೂರ್ ಮನಿ ಮಾಡಿಟ್ಟ. +ಮಂತ್ರಿ ಬರತಾನೆ. +“ಮಂತ್ರೀ, ನನ್ನ ರಾಜ್ಯದಲ್ಲಿ ಚಾತುರ್ವರ್ಣ ಹೀಗೆ ನೇಮದಂತೆ ನಡಿಯುತ್ತಿರುವರೇ? ” +“ಅಯ್ಯಾ. . . ಅಲ್ಲದೆ, ಕಾಲಕಾಲಕ್ಕೆ ಸರಿಯಾಗಿ ಮಳೆ ಬೀಳುವದಷ್ಟೇ? +ಬೆಳೆಗಳು ಬೆಳದು ಚನ್ನಾಗಿ ಫಲಿಸುತ್ತಿರುವವೇನು? +ಮತ್ತು ನನ್ನ ರಾಜಸ್ತಿತಿಯು ಸರಿಯಾಗಿ ನಡೆದಿರುವದೇ?” +“ಪ್ರಭುಗಳೇ, ತಮ್ಮ ವಿಸ್ತರದಂತೆ ರಾಜ್ಯ ಪರಿಪಾಲಿಸುತ್ತಿರುವೆ ಮಹಾನ್, ಕಾಲಕಾಲಕ್ಕೆ ಮಳೆ-ಬೆಳೆಗಳು ಸಂಪಾಗುತ್ತಿರುವವು. +ಪ್ರಭೂ, ಪ್ರಜೆಗಳು ಕಪ್ಪ-ಕಾಣಿಕೆಗಳನ್ನು ತಪ್ಪದೇ ತಂದು ಸಲೈಸುತಿರುವರು ಪ್ರಭೂ. +”ಕಂತುಹರನ ರಾಜ, “ಮಂತ್ರೀ, ಕಂತುಹರನ ಧೈರ್ಯದಿಂದ ಸಂತೋಷದ ಸುದ್ದಿಯನ್ನು ಮಂತ್ರನಿಪುಣನಾದ ನಿನ್ನಿಂದ ತಿಳಿದು ನನ್ನ ಮನಸ್ಸಿಗೆ ಬಾಳ ಸಂತೋಷವಾಯಿತು. +ಇಂತಾ ಸಂತೋಷದ ಸಮಯದಲ್ಲಿ ದಾನ, ಪರೋಪಕಾರಗಳನ್ನು ಮಾಡಿ ಸತ್ಕೀರ್ತಿ ಪಡೆಯುವೆನು”ಜೋಯಿಸರನ್ನು ಕರಿಯ ಕಳಸ್ತಾನೆ. +ಮಕ್ಕಳಾಗಿರುವದಿಲ್ಲ ರಾಜಗೆ. +ಜೋಯಿಸರೇನಂತಾರೆ? +“ಬಂಜೆ ರಾಜನಿಂದ ನಾನು ದಾನ-ಧರ್ಮ ಸ್ವೀಕಾರ ಮಾಡ್ಲಿಕ್ಕೆ ಸಾದ್ಯಿಲ್ಲ. ಬರುದಿಲ್ಲ. ” ಹೇಳತಾರೆ. +ಮಂತ್ರಿ ಬಂದು ಹೇಳತಾನೆ. +“ಯಾಕೆ ಆಹಾ! ದುರ್ದೈವವೇ. . . ಬಂಜೆಯೆಂಬ ಶಬ್ದ ನನಗೇ ಪ್ರಾಪ್ತವಾಯಿತು. +ಯನಗೆ ಗತಿಯೇನು ಮಾಡಲಿ ದುಕ್ಕ” ಹೇಳಿ ಬಿದ್ದ. +ಮಂತ್ರಿ, “ಚಿಂತಿ ಮಾಡಬೇಡ್ರಿ. ಉಪಾಯೈತಿ. ಅಡವಿಗೆ ಗಂಡ-ಹಿಂಡ್ತಿ ಹೋಗಿ ಪರಮಾತ್ಮನ ಸ್ತೋತ್ರ ಮಾಡಿ. +ಪಲ ಕೊಡತಾನೆ” ಹೋದ್ರ ತಪಸ್ ಬಯಂಕರ ಪರಿ. +ಪರಮಾತ್ಮ ಪ್ರತ್ಯಕ್ಷಾಗಲಿಲ್ಲ. +“ನಾವಿಂತಾ ಕರ್ಮಿಗಳು” ಹೇಳಿ “ಪ್ರಾಣ ತಕ್ಕಂಡ ಬಿಡತೇನೆ!” ಅಂತಾನೆ. +ಹಿಂಡ್ತಿ, “ಬ್ಯಾಡ, ನನ್ನ ಗತಿಯೇನು? +ನನ್ನ ಪ್ರಾಣ ಮೊದಲ ತೆಗಿದು ಸಾಯಿರಿ. +ನಾ ರಂಡೆ ಆಗೂದು ಬೇಡ” ಅಂದ್ಲು. +‘ಆಗಲೂ’ ಆಗ ಹೆಂಡ್ತಿ ಶಿರ ಕಡ್ದೇ ಬಿಡತಾನೆ. +ತನ್ನ ಪ್ರಾಣ ತೆಗದುಕೊಳ್ವ ಹೊತ್ತಿನಲ್ಲಿ, “ದೇವಾ!ಕನಿಕರ ಬರಲಿಲ್ಲವೇ?” ಪರಮಾತ್ಮ ಬರತಾನೆ. +ಬಂದವ, “ಛೇ!ಯೆಂತಾ ಅನರ್ಥವಿದು? +ಇಂತಾ ಅನಾಹುತ ಮಾಡಲಿಕ್ಕೆ ಕಾರಣಯೇನು?” ಬಯ್ಯತಾನೆ, “ಪಾಪಿ! +ಹಿಂಡ್ತಿ ಕಡಿದೀ ಚಾಂಡಾಲ!” ರಾಜ ಇದ್ ಹಕಿಕತ್ ಹೇಳತಾನೆ. +“ನನ್ನ ತಪ್ಪಲ್ಲ. +ಹೆಣ್ಣು ಹೀಗೇ ಹೇಳಿ ಆಕಿ ಪಾಪಕ್ ವಪ್ಸಕಂಡಾಳೆ” “ಯಾತಕ್ಕಾಗಿ?” ‘‘ಸಿರಿಸಂಪತ್ತೈತಿ. . . ಮಕ್ಕಳಿಲ್ಲ. ಬಂಜಿ ಶಬ್ದ ತಪ್ಪಬೇಕು” ಹಿಂಡ್ತಿ ಜನ್ಮಪಡೀತಾನೆ. +ಪರಮಾತ್ಮ ಮಕ್ಕಳ ಫಲ (ಗಂಡು) ಕೊಡತಾನೆ. +ಬಾಯಿಂದ ಆಶೀರ್ವಾದ ಮಾಡತಾನೆ, “ಹುಟ್ಟಿದ ನಂತ್ರ ಕಷ್ಟ ಐತಿ” ಅಂದ್ ಹೇಳಿ ಹೋಗತಾನೆ. +‘ರಾಜವಾಡಕ್ಕೆ ಗರ್ಭ. +ಜನನಾಕ್ತಾಳೆ’ ಹೇಳಿ ಹೋಗತಾನೆ. +ತೊಟ್ಟಿಲ ಹಾಕತಾರೆ. +ಜೋಯಿಸರ ಕರಸತಾರೆ, ಬರತಾರೆ. +“ಜಾತಕ ಟಾಯ್ಮ್‌ನಲ್ಲಿ ಮೂಲಾ ನಕ್ಷತ್ರ. +11 ದಿವಸಕ್ಕೆ ಮರಣೈತಿ” ಅಂತ ಹೇಳತಾರೆ. +‘‘ಲಗ್ನ ಮಾಡಬೇಕು. . . ’’ ಜೋಯಿಸರು ಹೇಳಿದರು. +“ಹೆಣ್ಯಾರ ಕೊಡತಾರೆ?” ಮಂತ್ರಿ, “ನಾನ ತರತೇನಿ” ಅಂತ. +“ನಿಮ್ಮ ಮಗ” ಅಂತ ಮಂತ್ರಿಗೆ ವಪ್ಪಸ್ತಾರೆ. +ತಿರಗತ ತಿರಗತ ಮಂತ್ರಿ ನೀಲಾವತಿ ಪಟ್ಣಕ್ ಹೋಗತಾನೆ. +ನೀಲಸೇನ ರಾಜನ ಮಗಳು ಲೀಲಾವತಿ ಕನ್ಯೆ. +ಆಕೆ ರುತವಾಗಿ 14 ವರ್ಷ, ಹುಡಗಗೆ 8ನೇ ದಿನ. +ಹುಡಗನ ಭಾವಚಿತ್ರ ದೊಡ್ದಕೆ ಮಾಡಿ ತೆಗೆದದ್ದು. +16 ವಯದ ಪೋಟೊ. +ಅವನ ಮಗಳು ಪೋಟೋ ನೋಡಿ ಮಾಡಿತು. ವಪ್ಗಿಕೊಡತಾಳ. + ನಿಶ್ಚಯ ಮಾಡಿದರು, ಲಗ್ನ ಮಾಡಬೇಕು. +ಹುಡ್ಗ ಬೇಕಲ್ಲ. . . ಪರಿವಾರ ಕರಕಂಡ್ ಹೋಗತಾನೆ. +ರಾಜವಾಡೆ ಕಡ್ಗ ವರ. +“ರಾಜಕುಮಾರ ಬರಲಿಲ್ಲ” ಅಂತ ಹೇಳಿದನು. +“ಹೋಗಿ ಲಗ್ನಾಗಬೇಕು” ಅಂದ. +ಲಗ್ನಾ ಮಾಡಿದ. +ಹುಡಗಿ ಕಳ್ಸ್ ಬಿಡತಾರೆ. +ಮಂತ್ರಿ ಕರಕಂಡು ಅಡವಿಗೆ ಬರತಾನೆ. +ನಡದಾರೀಲಿ ಕಪ್ಪಾಗ ಬಿಡ್ತದೆ. +ವಸ್ತಿ ಮಾಡ್ ಹೋಗೋಣಂತ ಡೇರೆ ಹೂಡತಾನೆ. +ಸುತ್ಲೂ ಪಾರೆ ಇಟ್ಟು ಮಲ್ಕಂತಾನೆ. +ಇವ್ನಿಗೆ ಸಪ್ನದೊಳಗೆ ಪರಮಾತ್ಮ ಹೇಳತಾನೆ ಮಂತ್ರಿಗೆ, “ನೀನು ಮಲಿಕಂಡ್ರೆ ಯಾರೂ ಯೇನೂ ಮಾಡೂಕಾಗುದಿಲ್ಲ. +ಶಿಸು ತಂದು ಆಕಿ ಮಗ್ಗಲದಲ್ ಮಲಗಿಸಿ ಪರಾರ್ಯಾಗು” ಹೇಳ್ ಆಕಾಸವಾಣಿ. +ಅವ ಹುಡ್ಗೀನ ಬಿಟ್ಟು ಒಬ್ಬನೇ ಕುದರಿ ಹತ್ತಿ ಬರತಾನೆ. +ಇಲ್ ಬಂದು ರಾಜ, ರಾಜನ ಹಿಂಡ್ತಿಗೆ ಬೆಟ್ಯಾಗತಾನೆ, “ಶಿಸು ನನ್ನ ಕೈಲಿ ಕೊಡಿ. . . ” ‘‘ಆಕಿ ಹೇಗೆ ಜೀವನ ಮಾಡತಾಳೆ?” ಕೇಳತಾರೆ. +“ಸಪ್ನ ಬಿದ್ದೈತಿ. +ಪತಿವ್ರತಾ ಆಕಿ ಕಾಪಾಡತಾಳೆ” +“ಆತು” ಅಂತ ಕೊಡತಾರೆ. +ಮಗ್ಗಲದಲ್ ಮಲಗಿಸಿ ಶಿಶು ಕುಳ್ಳಿಸಿ ಚೀಟಿ ಕಟ್ಟತಾನೆ. +“ಇವನೇ ನಿನ್ನ ಗಂಡಾ. +ಜೋಪಾನ ಮಾಡು. +ಧರ್ಮ ಕಾಪಾಡಿಕೊ” ಅಂತ, ಬಂದ ಬಿಡತಾರೆ. +ರಾತ್ರಿ - ಬೆಳಗಾಯ್ತು. +ಯಾರೂ ಇರೊದಿಲ್ಲ. +ಯಡಕಲಕೆ ನೋಡುದರಾಗೆ ಶಿಸು. +ಯಾರಿಲ್ಲೆ ಇಲ್ಲ. +ಹುಡಗನ ನೋಡಿ ಕಯ್ಯಗನ ಚೀಟಿ ಬಿಚ್ ವೋದಕೊಳತಾಳ. +ಗಂಡ ಅಂತ ಇರವದ. +ಮುರ್ಚ್ ಬಿದ್ ಹೋಗಿ ‘ಹೇಗೆ ಬದುಕಿಸಬೇಕು? +ಹಾಲಿಲ್ಲ, ಹೈನಿಲ್ಲ. +ಧರ್ಮ ಹಿಡಕೊತಾಳೆ. +ಮುತ್ತಿನ ಸೆರಗನಲ್ ಕಟ್ಕಂಡು ತಂದಿ ಯೇನ ಮಾಡದವ ಮಂತ್ರಿನ್ನ ನೋಡಕ ಕಳಸತಾನೆ. +ನಮ್ಮ ರಾಜನ ಮಗಳು ಕಾನನದಲ್ಲಿ ಶಿಸು ಇಟ್ಕಂಡು, ಆ ಮಂತ್ರಿ ಇಲ್ ಅಂತ್ ನೋಡ್ಕಂಡು ಶೋಕ ಮಾಡತಾಳೆ. +“ಹೊಟ್ಟೆಲಿದ್ದಿದ್ದೊ” ಮೊದಲಿಗೆ ಯೇನಂತ ಮಾತಾಡ್ಸತಾನೆ. +ರೋದನ, “ಹೀಗೆ ಮಾಡವ್ರಲ್ಲ.” +ಈ ರಾಜನ ಮಂತ್ರಿಗೆ ಬಯ್ಯತಾನೆ. +ಇವಳ ತಂದಿಗೆ ಹೇಳತಾನೆ. +ನೀಲವತಿ ರಾಜ ಬರತಾನೆ, “ಶಿಶು ಕಡೀತೇನೆ” ಅಂತ ತಂದಿ ಹೇಳತಾನೆ. +“ತಾನು ಊರಿಗೆ ಬರಾದಿಲ್ಲ. +ಗಂಡನ ಬದುಕಿಸಿಕೊಂತೆನಿ” ಅಂತ ಮಗಳ್ ಹೇಳತಾಳೆ. +ತಂದಿ ವಾಪಸ್ ಹೋಗಿ ಬಿಡತಾನೆ. +ಅಡವಿಲಿ ಬಿಕ್ಸಾ ಬೇಡತ ಹೋಗಿಬಿಡತಾಳೆ-- ಹಣ್ಣರಸ ಕುಡಿಸಿಕೊಂತ. +ಪರಮಾತ್ಮಗ ನೆನೆತಾಳೆ. +ಪರಮಾತ್ಮ ಪ್ರತ್ಯಕ್ಷ ಆಗತಾನೆ. +ಹುಡಗನಿಗೆ ಅಮೃತ ನೀರ ಕೊಡತಾನೆ. +ದಿವಸ ದಿವಸ ಬೆಳಿದು ಅಮೃತಪಾನ. +ವರ ಕೇಳ್ಕಂತಾಳೆ. +“ಅಮೃತ ಕೊಟ್ ಹೋದ್ರಿ. . . ಹುಡಗ ವಯಸ್ಸಿಗೆ ಬರವಾಗ ನಾನು ಮುದ್ಕಿಯಾಗತೇನಲ್ಲಾ? +ಪರಮಾತ್ಮಾ, ಈ ಹುಡಗ ಹದ್ನಾರ್ ವಯಸ್ಸಿನಮಟ ಹೇಗಿದನೆ ಹಾಂಗೆ ನಾನು ಇರಬೇಕು” ಕೇಳ್ಕಂತಾಳೆ. +ಆತಂತ ವರಕೊಡತಾನೆ. +ದಿನಾ ದಿನಾ ಬೆಳಿತಾ ಹೊಂಟ. ‘ತಾಯಿ. . . ’ ಅನ್ನಾಕ ಹತ್ ಬಿಟ್ಟ. +“ನೀವು ನನಗೆ ಪತಿ; ಹಾಗನ್ನಬೇಡ್ರಿ” +“ಮಗನ ಮೇಲೆ ಮನಶ ಮಾಡಿದಿ, ಯೆಂತಾ ತಾಯಿ” ಅಂತ ತರ್ಕ್ ಬಿತ್. +ಹುಡ್ಗ ನದಿ ಹಾರತೇನಂತ ವೋಡಿ ಹೋಗ್ ಬಿಡತಾನೆ. +ಹುಡಗನ ಹಿಂಬಾಲಿಸಿ ಬೆನ್ನತ್ ಬರತಾಳೆ. +ಗಂಗಾ ಸ್ತೋತ್ರ ಮಾಡತಾನೆ, ಹಾರಾಕೆ. +ಮತ್ ತರತಾಳೆ ಗಂಡನ್ನ. +ಅಷ್ಟ ಹೊತ್ತಿಗೆ ಪರಮಾತ್ಮ ಬಂದ ಕರದ. +ಲೀಲಾವತಿ ಹೇಳತಾಳ, “ಕಷ್ಟ ಕೊಡಬೇಡಿ” ಹುಡಗಗ ತಿಳಿಸಿ ಹೇಳತಾನೆ ಪರಮಾತ್ಮ, “ನಿನ್ನ ಹಿಣತಿ ತಂದಿಕೊಡತೇನೆ. +ಬರ ಹಂಗೆ ಮಾಡತೇನೆ” ಅಂದ. +ವಂದ್ ಊರ್‌ನಲ್ಲಿ ವಂದ್ ರಾಜಿದ್ದ. +ಹುಡಗರಿಲ್ಲದೇ ಭಾಳ ಯತೀಲಿದ್ದ. +ಆಗ ದೇವರು ವಂದ್ ಹುಡ್ಗ್ನ ಕೊಟ್ಟ. +ಆ ಹುಡ್ಗಾ ಚನ್ನಾಗಿ ಬೆಳೀತಿ ಬಂದ. +ಆಗವ ಆಯಾರೂ ತಕಳ್ಲಿಕ್ ಸುರುಮಾಡ್ದ. +ಆಗ ಶಣ್ಣ ಮಗು ಇರಬೇಕಾದ್ರೇಯ ಶಿದ್ದಕ್ಕಿ ಅನ್ನ ಉಣಲಿಕ್ ಶುರುಮಾಡ್ದ. +ಆಗ ರಾಜ, “ಮಕ್ಕಳಿಲ್ಲದ್ದೇ ತಂಗೊಂದೇ ಯತಿ ಇತ್ತು. +ತಿಂದರೇನ್ ದೊಡ್ ಮಾತಲ್ಲ ತನ್ಗೆ. +ರಾಶಿ ಐಶ್ವರ್ಯದೆ ತನ್ಗೆ” ಅಂತ ಹೇಳಲಿಕ್ ಶುರುಮಾಡ್ದ. +ಆಗ ಅದೇ ವಂದೇ ಹುಡ್ಗನಿಂದ ಅದೇ ಪರ್ಕಾರ ಅವನ ತಿನಾಸವೆ ಹೆಚ್ಚಾಗಿ ಪೂರಾ ಇವನ್ದ ಐಸ್ವರಿ ತಿಂದ್ ತೇಗ್ದ. +ಚೊಕ್ಕಾಯ್ತು ಸುಮಾರು. +ಆಗ ಮಗನ ಮೇಲ್ ಬಗಿಲ್ ಉದಾಸ್ನ ಮಾಡ್ದ ಅವ. +“ಹುಡಗರಿಲ್ಲದೇಯ ಇದ್ದರೂ ಮತ್ ಯಾವ ತೊಂದ್ರೆ ಇಲ್ಲಾಗಿತ್ತು ತನ್ಗೆ. +ಈಗ ಜೀವನ ಮಾಡ್ಕಂಬೂಕೂ ತೊಂದ್ರೆಯಾಯ್ತು ತನ್ಗೆ” ಅಂತ ಹುಡ್ಗಗೆ, “ನೀ ಯೆಲ್ಲೂ ಹೋಗ್ ಜೀವನ ಮಾಡು” ಅಂತ ತೌರದ. +ಹೋಕಾರೆ ವಂದ್ ಶಿದ್ ಅಕ್ಕಿ, ವಂದ್ ಮಣ್ಣ ಪಾತ್ರ ಕೊಟ್ಟು ಊರ ಹೊರಗೆ ಮಾಡ್ದ. +ಆಗ ಹೋದ ವಂದು ರಾಜ್ಯದ ಬದಿಗ್ ಮೊಕ ಮಾಡ್ಕಂಡು ಊರ ಬಿಟ್ಟ. +ಆಗೆ, ಅಲ್ಲೂ ವಂದ್ ರಾಜನ ಹುಡ್ಗ ಅದೇ ನಮೂನೀಲಿ ಮನಿ ಬಿಟ್ ಬಂದವನೇಯ. +ಆಗ ಅವಗೆ ಹೆರ್ಗ್ ಬಿದ್ಬರಬೇಕಾರೆ ವಂದ್ ಕೊಡ್ಲಿ ಹಿಡ್ಕಂಡಿ ಅವನೂ ಬಂದ. +ಆಗೆ ಅವರವರೊಳಗೆ ಮಾತಾಡ್ಕಂಡಿ, ಹೆಸ್ರಿಟ್ಕಂಡ್ರು. +ಮೊದಾಲೆ ಬಂದವಾ-- ಸಾವ್ರನಾಯ್ಕ ಅಂತ ಹೆಸರಿಟ್ರು. +ಕಡಿಗೆ ಬಂದವ-- ಗುಡ್ಡಿರಾಜ ಅಂತ ಹೆಸ್ರ್ ಬಂತು. +ಹಾಗೇ ವಟ್ಟಾಗಿ, ಮುಂದ್ ಹೋಗ್ತಾ ಇರಬೇಕಾದ್ರೆ ಅಲ್ಲಿ ವಂದು ರಾಜನ ಹುಡಗಾ, ಅವನೂ ಅದೇ ರೂಪ್ ಮಾಡ್ಕಂಡಿ ಹೆರ್ಗ್ ಬಿದ್, ಮನಿಬಿಟ್ ಬರಬೇಕಾದ್ರೆ ವಂದ ಗಾಳ, ಮೀನ ಗಾಳ ಹಿಡ್ಕಂಡಿ ಬಂದಿದ್ದ. +ಆಗ ಅವಂದು ಆನಿ ಹೊಡದಿ, ಆ ಗಾಳಕ್ ಸೂರಿ ಮೀನ ಹಿಡೂಕೇ ಅಂತ ಗುಂಡೀಲಿ ಗಾಳ ವಗದಿ ಕೂತ್ಕೊಂಡಿದ್ದ. +ಆಗಿವ್ರ್ ಯೆರಡೂ ಜನ್ರು ವಟ್ಟಾಗಿ ಅಲ್ ಹೋದ್ರು. +ಆಗ, “ಹೋಯ್” ಅಂದ ಅವ ಇವರ್ಗೆ. +“ಯೆಲ್ ಹೋಗ್ತ್ರೀ ನೀವು?” ಕೇಳ್ದ. +ಆಗೆ ಅವರು, “ಮನಿಬಿಟ್ ಬಂದವ್ರು ತಾವು. +ಊರ ಬಿಟ್ಟು ದೇಸಂತ್ರ ಲೆಕ್ಕದ್ದು ಹೊರಡವವರು ತಾವು” ಅಂದ್ರು. +ಆಗಿವ, “ನಿಲ್ಲಿ, ತಾನೂ ಅದೇ ತೆರದಲ್ಲೇ ಬಂದವನೇಯ. +ಸಂಗತಿಗೆ ಜನ ಆಯ್ತು. +ತಾ ವಬ್ಬನೇ ಇದ್ದಿದ್ದೆ ಇಲ್ಲಿ”ಆಗ ಅದೇ ಗಾಳಕ್ ವಂದ್ ಮೀನ ತೆಗ್ದ ಅವ. +ಆನಿ ಸೂರಿವಗ್ದ್ ಮೇಲೆ ಮೀನ ಯೆಷ್ಟ್ ದೊಡ್ಡ ಬರಬೇಕು ಅಂತಾ ದೊಡ್ಡ ಮೀನ ತೆಗ್ದ್ ಅವ. +ಆಗ ಬಾಲ ಹಿಡ್ಕಂಡ. +ಮೂರು ಜನರೂ ವಟ್ಟಾದ್ರು; ವಟ್ಟಾಗಿ ಮಾತಾಡ್ಕಂಡ್ರು. +“ಯೇನೇನ್ ತಂದಿದ್ರಿ ನೀವು?” +ಅಂದ್ ಸಾವೆರನಾಯ್ಕನ ಕೂಡೆ ಕೇಳ್ದ್ರು. +“ತಾನ್ ವಂದ್ ಶಿದ್ದೆ ಅಕ್ಕಿ, ವಂದ್ ಮಣ್ ಪಾತ್ರ ತಂದಿದ್ದೆ” ಅಂದಾ. +ಗುಡ್ಡಿ ರಾಜನ ಕೂಡೆ ಕೇಳೂವರಿಗೆ “ತನ್ ವಂದ್ ಕೊಡ್ಲಿ ತಂದಿದೆ” ಅಂದ. +ಆನಿ ರಾಜನ ಕೂಡ ಕೇಳುವರಿಗೆ, “ತಾನು ಮೀನ ಹಿಡ್ದಿದೆ” ಅಂದ. +ಆಗ “ಅಡ್ಡಿಲ್ಲಾ, ವಂದಂದ್ ವಬ್ಬಬ್ರದ್ ಆಯ್ತು‌“ ಅಂತ ಕೆಲುಮುಂದೆ ದಾರಿ ಸಾಗ್ದರು. +ಮುಂದೆ ಹೋದ ಮೇಲೆ ಹೊಟ್ಟಿಗ್ ಹಸ್ವಾಯ್ತು. +“ಅಡಗಿ ಮಾಡ್ವ” ಅಂದ್ ಆಲೋಚ್ನಿ ಮಾಡ್ದ್ರು. +ಆಗ ಅಡಗಿ ಮಾಡಲಿಕ್ ಬೆಂಕಿ ಇವರ ಹತ್ರ ಇಲ್ಲ. +ಆಗಲ್ಲಿ ಸಮೀಪಕ್ ಮನಿ ಯೆಲ್ಲೂ ಕಾಂಬೂದಿಲ್ಲ. +ಸಾವೆರನಾಯ್ಕಗೆ ವಂದ್ ಮರ ಹತ್‌ಸದ್ರು. +“ಮರ ಹತ್ತಿ ಸುತ್ತೂ ನೋಡು ನೀನು. +ಯೆಲ್ಲಾರೂ ಊರ್ ಅದ್ಯಾ, ಹೊಗಿ ಕಾಣತದ್ಯೊ? +ನೋಡು. . . ” ಹೇಳ್ ಇವ್ರ್ ಹೇಳ್ದ್ರು. +ಆಗ ಮರಹತ್ ನೋಡುವರಿಗೆ ವಂದ್ ಬೆಟ್ಟದ ಮೂಲಿ ಬದಿಗೆ ಸಣ್ಣ್ ಹೊಗೆ ಕಾಣ್ತದೆ ಇವರಿಗೆ. + “ಅಣ್ಣಾ. . . ” ಅಂದ ಇವರಿಗೆ, “ವಂದ್ ಬದಿಗಿ ಸ್ವಲ್ಪ ಹೊಗಿ ಕಾಣ್ತದೆ.” +“ಹಗರ್ ಇಳಿ” ಅಂದ್ರು. +ಆಗ ಇಳ್ದ ಅವ. +“ಅದೇ ಸಾಯ್ಡಿಗೆ ನೀನ್ ಹೋಗಿ ಬೆಂಕಿ ತಕಂಡ್ಬಾ” ಅಂದ್ರು. +ಆಗ ಅವ ನೆಡದ. +ಅದು ರಾಕ್ಕಸ್ರಮನೆ. +ರಾಕ್ಸಸರು ಯಾರೂ ಇಲ್ಲಾಗಿರು. +ವಂದು ಬಡ ಮುದ್ಕಿ (ರಾಕ್ಸಸಿ) ಇತ್ತು. +ಆಗ ಯೇನ್ ಅಂದ ಇವ ಮನಿ ಬಾಗ್ಲಗ್ ಹೋಗ್ ನಿತ್ಕಂಡಿ? +“ಬೆಂಕಿ ಸಲ್ಪ ಕೊಡು” ಅಂದ. +ಆಗ, “ಮಗನೇ, ತನಕೂಡ್ ಯೇಳಲಿಕ್ಕಾಗುದಿಲ್ಲ. +ಜರ ಬಂದದೆ. +ವಲಿಲ್ ಬೆಂಕಿ ಅದೆ. +ತಕಂಡ್ ಹೋಗು” ಅಂತು. +ಆಗ ಬೆಂಕಿ ತರುಕೆ ವಳಾ ಹೊಕ್ದಾ. +ಬೆಂಕಿ ತಕಂಬೇಕಾದ್ರೆ ಮುದ್ಕಿ ಸಟಕ್ನಯೆದ್ದಿ ಶಪ್ಪಹರದಿ ಕೈಕಾಲ್ ಕಟ್ಟಿ ವಂದ್ ಮೂಲಿಗ್ ಹೊತಾಕ್ತು. +ಆಗ ಇವರ ಬರ ನೋಡಿ, ಗುಡ್ಡಿರಾಜನಿಗೆ ಕಳಸ್ಕೊಟ್ಟ ಆನಿರಾಜ. +ಆಗವನೂ ಅದೇ ದಾರೀಲಿ, ಅದೇ ಮನಿಗ್ ಬಂದ. +“ಅಜ್ಜಿ ಬೆಂಕಿ ಕೊಡು” ಅಂದ. +“ವಲಿಲ್ ಬೆಂಕ್ಯದೆ, ತಕಂಡ್ ಹೋಗು. +ನನ್ಗೆ ಜರಬಂದದೆ ಏಳೂಕಾಗುದಿಲ್ಲ” ಅಂತು. +ಆಗಿವ ಬಿಂಕಿ ತಕಳ್ಬೇಕಾದ್ರೆ ಸಟಕ್ನೆ ಯೆದ್ಕಂಡಿ ಶಪ್ಪ ಹರದಿ ಕೈಕಾಲ್ ಕಟ್ಟಿ ಅವಗೂ ವಂದ್ ಮೂಲೀಲ್ ಹೊತಾಕ್ ಬಿಟ್ತು. +ಆಗ, ಇವ ನೋಡ್ಕಂಡಿ, ಸುಮಾರ್ ಹೊತ್ ಕಳ್ದ್ ಮೇಲೆ-- ವಂದ್ ಕೊಡ್ಲಿ, ಆ ವಂದ್ ಶಿದ್ದೆ ಅಕ್ಕಿ, ಕಡಿಗಾ ಮಣ್ಣಪಾತ್ರ ಹಿಡ್ಕಂಡಿ ಅದೇ ದಾರೀಲ್ ಬಂದ. +ಬರುವರಿಗೆ ಮನಿಬಾಗ್ಲಲ್ ನಿತ್ಕಂಡಿ, ಬಗಿಲ್ ದೊಡ್ಡಕ್ ಕರದಾ “ಅಜ್ಜೀ” ಅಂದ. +“ಬೆಂಕಿ ಕೊಡು” ಅಂದ. +ಆಗ, “ಇವ ಬಗಿಲಿ ದೊಡ್ಡವನೆ ಅವನೆ” ಅಂದ್ಕಂಡಿ, ನಾಕೈದ್ ಶಪ್ಪಾ ಹರದಿ ಹುರಿಮಾಡ್ತು. +ಮಾಡ್ಕಂಡಿ ಮನಿಕಂತು. +“ಅಜ್ಜಿ, ಬೆಂಕಿ ಕೊಡು” ಅಂದ. +“ವಲಿಲ್ ಬೆಂಕ್ಯದೆ ತಕಂಡ್ ಹೋಗು. +ನನ್ಗೆ ಜರಬಂದದೆ ಏಳೂಕಾಗುದಿಲ್ಲ” ಅಂತು. +ಆಗಿವ ಬೆಂಕಿ ತಕಳಬೇಕಾದ್ರೆ ಈ ಮುದ್ಕಿ ಅವ್ನ ಹಿಡಿಬೇಕಂತ ಕೈಹಾಕ್ತು. +ಅವ ಕೈಯಲ್ಲಿದ್ದ ವಂದ್ ಕೊಡ್ಲಿ ಮುದ್ಕಿ ತಲಿಮೇಲ್ ಇಟ್ಟಾ. +ಮುದ್ಕಿ ಸತ್‌ಹೋಯ್ತು. +“ರಂಡಿ ಮುದ್ಕಿ! +ಇದಾ ಆಟ ನಿಂದು?” ಕೇಳ್ದಾ. +ಮುದ್ಕಿ ಕೆಲ್ಸ ಮುಗಿಸ್ದ. +ಮನಿಹುಡಕಿ ಇವ್ರ ಗತಿ ಯಂತ ಆಯ್ತು ನೋಡುವರಿಗೆ, ಯೆರಡ ಮೂಲಲ್ ಯೆರಡ ಜನರು ಮೊಕಕಟ್ಟಿ, ಕೈಕಟ್ಟಿ, ಕಾಲ್ ಕಟ್ಟಿ ಹೊತಾಕ್ ಬಿಟ್ಟದೆ. +ಆಗ ಇವ ನೋಡಿ ಅವರೆಲ್ಲಾ ಬಿಡಸ್ದಾ - ಬಿಡ್ಸುವರಿಗ್, “ಅಣ್ಣಾ. . . ನಾವ್ ಸತ್ ಹೋಗಿದ್ರು. +ಈ ಕೆಲ್ಸ ಮಾಡ್ತು” ಅಂದಿ ಅವರ ಹತ್ರ ಹೇಳ್ದ್ರು. +ಆಗ, “ನೀವ್ ಸತ್ರಿ, ಯಾಕ್ ಹುಟ್ಟಿರಿ? +ಆ ಪಾಪಿ ಮುದ್ಕಿ ಕೂಡೆ ಶೆರೆಲ್ ಬಿದ್ರಿ ನೀವು?” +ಹೇಳಿ ಅವರ ಕರಕಂಡೀ ಅಲ್ಲಿದ್ದ ವಸ್ತುಯೆಲ್ಲಾ ಸುಮಾರ್ ಕಟ್ಕಂಡಿ ಹೊರಟ್ರೂ ಅಲ್ಲಿಂದ. +ಆಗ ಮುಂದ್ ಹೋಗಿ ವಂದ್ ಜಾಗದಲ್ಲಿ ಅಡಗಿ ಮಾಡ್ವ ಅಂತಾ ತಯಾರ್ ಮಾಡ್ದ್ರು. +ಅಕ್ಕಿ ತೊಳದಿ ವಲೀಮೇಲ ಇಟ್ರು. +ಮೀನು ಮೂರ್ ತುಂಡ್ ಮಾಡ್ದ್ರು‌. +ಮಾಡಿ ವಂದ್ ಪಾತ್ರದಲ್ ಬೇಯಿಶ್ರು. +ಬೆಯ್ಸಕಂಡಿ ಮೂರು ಜನರೂ ಬಡ್ಸಕಂಡ್ರು. +ಮೀನದ ಮೂರ ತುಂಡು ಮೂರಜನ ಹಾಯ್ಕಂಡ್ರು. +ಕಡಿಗೆ, ಅವ್ರೆಲ್ಲರೂ ಚೂರ್ಚೂರ್ ಸಣಸಣದು ತಿಂದ್ರು ಪೂರಾ ಪೂರಾ ಊಟಾ ಮಾಡಕಾಗಲಿಲ್ಲ ಅವರ ಕೂಡೆ. +ಆಗ ಆನಿರಾಜ ಅವ್ರ್ ಬಿಟ್ಟದ್ದು, ತನ್ದು ಯೆಲ್ಲಾ ಊಟಾ ಮಾಡ್ದ. +ಊಟಾ ಮಾಡಿ, ಅಲ್ಲಿಂದಾ ‘ಮತ್ತೂ ಮುಂದ್ ಹೋಗವಾ’ ಅಂತಾ ಹೊಂಟ್ರು. +ಅದೇ ಊಟದಿಂದ ಯೆಲ್ಲರಿಗೂ ಹೆಚ್ಚುಂಬೂದೆಲ್ಲಾ ಸರೀ ಊಟ ಮಾಡುದ ಬಂತು. +ಆಗ ವಟ್ಟಾಗಿ ಅಲ್ಲೇ ವಂದ್ ರಾಜನ ಮನೆಗ್ ಹೋದ್ರು. +ಆ ರಾಜನ ಊರ್ನಲ್ಲಿ ವಂದು ದೊಡ್ಡ ಹಾವು ರಾತ್ರಿ ಇಷ್ಟ ಹೊತ್ತಿಗೆ (ಎರಡ್ ಗಂಟೆ) ಬಂದಿ, ಊರ್ನಲ್ಲಿ ಮನಸರ ತಿನ್ನೂದು; +ಗಂಟಿ ಕರು ಹಿಡ್ಕಂಡ್ ತಿನ್ನೂದು. . . ಹೀಗೆ ಭಯಂಕರ ಧಾಂದಲಿ ಮಾಡತಿತ್ತು. +ಅದಕ್ ಹೊಡೂಕೆ ಯಾರ ಕೂಡು ಆಗುದಿಲ್ಲ. +ಯೆಟ್ ಹೊತ್ಗ್ ಬರತದೆ, ಹೋಗ್ತದೆ ಅಂತ ಕಾಣ್ಸುಕೂ ಆಗುದಿಲ್ಲ. +ಆಗ ರಾಜ ಡಂಗ್ರಿ ಸಾರ್ದ ಇಡೀ ಊರ್ಗೆ-- “ಈ ಹಾವ ಯಾರ್ ಹೊಡ್ದ್ರು ತನ್ನ ಹುಡಗಿ ಕೊಡ್ತೆ. +”ವಬ್ಬ ಪಟವಾಲ, “ಹಾವ್ಗ್ ಹೊಡೀತೆ” ಅಂತ, “ರಾಜನ ಹುಡಗಿ ಲಗ್ನವಾಗ್ತೆ” ಅಂತ (‘ಕೊಡ್ತ್ಯೊ?’ ಅಂತ ಕೇಳಿ) ಕಡಿಗೆ ಅದೇ ಕೆಲ್ಸ ಅವನ್ದು ತಿರಗೂದು, ನೆಡೂದು, ಹಾವ್ ಬೆಟ್ಟಕ್ ಹೋದ ಮೇಲೆ ತಿರಗೂದು. +ಹಾವ್ ಹೊಡೂಕೇ ಆಗುದಿಲ್ಲ ಇವನ ಕೂಡೆ. +ಆಗ ಊರ್‌ನ ಸಮೀಪದಲ್ ಹೋಗಿ ಇವರು ವಸ್ತಿ ಮಾಡ್ದ್ರು. +ವಂದು ಬೆಂಕಿ ಹೊಡನಲ ಮಾಡ್ಕಂಡಿ ಮನಿಕಂಡ್ರು-- ಸುತ್ತು ಮೂರ್ ಜನ್ರು ಮೂರ್ ಗುಟ್ಟೆ (ಬದಿ). +ಆಗ, ಇವ ಆನೆರಾಜಾ ಯೆಚ್ಚರಗೇ ಇದ್ದ. +ಆಗ ಹಾವು ಬಂತು. +ಆಗೆ, “ಮನಿಕಂಡವ್ರ್ಗೆ ತಿಂತೇ” ಅಂತಾ ಹಾವ್ ಹೇಳಲಿಕ್ ಸುರು ಮಾಡ್ತು. +ಆಗಾ, “ಮನಿಕಂಡೆಲ್ಲರ್ ತಿನ್ನೂದ್ ಬೇಡಾ, ತನ್ಗ್ ತಿನ್ನು” ಅಂದಾ ಇವಾ. +ಆಗಾ, “ನಿನ್ಗಾದ್ರ್ ನಿನ್ನ್ ತಿಂತೆ” ಅಂತು. +ಬಂತು ಮುಂದೆ. +“ಹಾಂಗ್ ತಿನ್ನುದಲ್ಲ ಅದು, ನೀ ತಗ್ನಲ್ ಉಳಿಬೇಕು. +ತಾ ಯೆತ್ರದ್ ಮೇಲ್ ಉಳೀತೆ. +ನೀ ಬಾಯ್ ಕಳ್ಕಂಡ್ ಉಳಿ. +ನಿನ್ನ್ ಬಾಯ್ಲಿ ತಾ ಬೀಳ್ತೆ. +ಆಗ ನುಂಗೂಕೆ ಲಾಯ್ಕಾಯ್ತು ನಿನ್ಗೆ” ಅಂದ್ ಹೇಳ್ದಾ. +ಅದ್ಕೆ, “ಅಡ್ಡಿಲ್ಲಾ” ಅಂತ ವಪ್ತು ಹಾವು. +ವಂದ್ ಗದ್ದೆಹಾಳಿ ತಗ್ನಲ್ಲಿ ಹಾವ್ ಉಳಿತು. +ಇವ ಹೋಗಬೇಕಾದ್ರೆ ಕೊಡ್ಲಿ ಹಾವ್ಗ್ ಕಾಣ್ಸ್‌ಕಳ್ಳದೆ ಸುಮ್ಮಗ ತಕಂಡ ಹೋಗಿದ್ದಾ. +ಆಗ ಯೆತ್ರ ಮೇಲೆ ಇವ ನಿತ್ಕಂಡಾ, “ತಾ ಬೀಳ್ತೆ ನಿನ್ನ ಬಾಯ್ಲಿ” ಅಂದ್ ಹೇಳ್ದಾ. +ಅದ್ ಹೌದಂತ ಕಣ್ಮುಚ್ಕಂಡಿ ಬಾಯ್ಕಳ್ಕಂಡಿ ಇದ್ದದ್ದು, ಆಗ ಕೊಡ್ಲಿ ನೆಗದಿ ಸಮಾ ತಲಿ ಮೇಲಿಟ್ಟಾ. +ಹಾವ್ನ ತಲೆ ಭಗ್ತಾಗಿ ಯರಡ ದೊಡ್ಡ ರಾಶಿಯಾಗ್ ಬಿತ್ತು. +ಆಗ ಹಾವಿನ್ದ್ ಬಾಲಾ, ಶನ್ ಚೂರ್ ಕೊಯ್ದಿ ಬಂದ. +ಅವರಲ್ಲಿ ಬಂದ್ ಮನಿಕಂಡ-- ಗುರ್ತ ತಕಂಡಿ ಹಾವಿನ್ದು. +ಬೆಳಗ್ಗೆ ಆ ಪಟಾವಾಲ ಕತ್ತಿ ತಕಂಡ ಬಂದಾ ಹಾವ ಹೊಡೂಕೆ. +ಆಗ ದೂರಿಂದ ನೋಡ್ದಾ. . . ಹಾವ ಕಂಡಾ.. . . ಮತ್ತೊಂದ್ ಹತ್ತಿಪ್ಪತಮಾರ್ ಹಿಂದ್ ಹೋಗ್ ನಿತ್ತಾ. +ಆಗ ಧೈರ್ಯದಿಂದ ನೋಡ್ದಾ ಮತ್ತೆ. +ಆಗ ಹಾವ ಹರದಾಡುದಿಲ್ಲ. +ಚಪ್ಪಲ್ಲ ಬಾರ್ಸ್ದ. +ಆಗ “ಹೂಯ್” ಹಾಕ್ದ. +ಆಗ ಬಗಿಲ್ ಧೈರ್ಯ ಬಂತು ಇವಗೆ. +“ಯೇನೊ ಆಗದೆ” ಅಂತ ಸಲ್ಪ ಮುಂದೆ ಬಂದ. +ಬಂದ್ ನೋಡ್ದಾ. +ಆಗೆ ಹಾವ್ ಯಾರು ಹೊಡ್ದ್ ಹಾಕದ್ದು ಅಂತ ಗುತ್ ಮಾಡ್ದ. +ಅದೇ ಕತ್ತಿ ತಕಂಡಿ ಹಾವ್ಗೆ ಮೂರ್ ನಾಕ್ ಕಪ್ ಹಾಕ್ದ್ ಕತ್ತಿಗೆ ಮತ್ತೆ ಮೈಗೆ ಪೂರಾ ನೆತ್ರ ಮಾಡ್ಕಂಡಿ ಹಾಗೆಯಾ ಅವ ಕೊಯ್ದ ಬಾಲದ ಮೋಟು ಕೊಯ್ಕಂಡಾ. +ಹೋದ ಅಲ್ಲಿ ರಾಜನ ಮನೆಗ್, “ಹಾಗ್ ಕೆಟ್ಟ ಪ್ರಾಣಿ ಬೂದಿ ಮಾಡ್ಬೇಕು ಮಾರಾಯಾ ಅವತ್ತೆ” ಅಂದಾ. +“ಕೋಟಿ ಕೊಟಿ ರಾಶಿ ಹಾಕ್ತದೆ. +ಪರ್ವತದ ಹಾಂಗ್ ಬಿದ್ದ ಬಿಟದೆ” ಅಂದಾ. +ರಾಜನ ಊರಿನವರು ಎಲ್ಲಾ ಜನ ಬಂದು ಹಾವ್ ನೋಡ್ದ್ರು. +ಆಗ ಸಂತೋಸಾದ್ರು ಅವರು. +ಅವರೆಲ್ಲಾ “ಹೋಯ್ತು” ಅಂತಾ; “ಇದೊಂದ್ ಮಾರಿ.” + ಕಡಿಗೆ ಪಟಾವಾಲ ಹೇಳಲಿಕ್ ಸುರು ಮಾಡ್ದಾ, “ನಿನ್ನ ಹುಡ್ಗಿ ಯಾವಾಗ ಲಗ್ನ ಮಾಡ್ಕೊಡ್ತೆ?” ಅಂತಾ. +“ಮಾತಿಗ್ ತಪ್ಪುದಿಲ್ಲಾ ನಾಳಿಗ್ ಲಗ್ನಾ ಮಾಡ್ಕೊಡ್ತೆ. +ಅವ ದಿಬ್ಣ ತಕಂಡ್ ಬರೂಕಡ್ಡಿಲ್ಲ” ಅಂದ್ ಮಾತ್ಕತ್ಯೆಲ್ಲಾ ಮುಗೀತು ಅವರದು. +ಆಗೆ ಇವರು ಈ ಮೂರ ಜನರ ಮೇಳ ಊರ್‌ನ ಸಮೀಪದಲ್ಲೇ ಅವರಿಗೆಯೆಲ್ಲಾ ಕಥಿ ಗೊತ್ತಾಯ್ತು. +ಆದರೂ ಅಲ್ಲೆ ಉಳ್ದ್ರು ಅವರು. +ಆಗ ಮೂರ್ತ-ಬೀರ್ತಯೆಲ್ಲಾ ನಿಕ್ಕಿಯಾಯ್ತು. +ಪಟವಾಲನ್ದು ದಿಬಣ ಬಂತು. +ಆಗ ಊರ ಜನಯೆಲ್ಲಾ ಕರದು ಯೆಲ್ಲಾ ವಟ್ಟಾದ್ರು. +ಈ ಮೂರಜನರ ಪಂಗಡ ಸಮೀಪದಲ್ಲಿ ಇವರ ಕಾಣ್ಸಕಂಡಿ ಸಲ್ಪ ದೂರ ಗದ್ದಿಲ್ ಬಂದ್ ಮಲಿಕಂಡ್ರು-- ಕಾಣ್ತದೆ ಇವರ್ಗೆ. +ಆಗವ್ರು ಯಾರೊ ರಾಜನ ಹುಡಗ್ರೆ ಆಗಿರಬೇಕು ಅಂತಾ ನೋಡ್ಕಂಡಿ, “ರಾಜ ಅವರನ್ನಿಲ್ಗೆ ಕರಕಂಡ್ ಬನಿ” ಅಂತಾ ಕಳ್ಸ್ ಕೊಟ್ಟಾ. +“ಮದವಿಗ್ ಬನ್ನಿ” ಅಂತ, ಬಂದರು ಅವರು. +ಕರುಕ್ ಹೋದವರು, “ನಮ್ ರಾಜನ ಹುಡ್ಗಿ ಲಗ್ನಾ, ರಾಜ ಬರೂಕ್ ಹೇಳಾನೆ” ಅಂದರು. +“ಯಾವ ಲೆಕ್ಕದ ಲಗ್ನವೋ?” ಅಂತ ಕೇಳಿದ್ರೂ ಅವರು. +“ಅದೇ ಪಟವಾಲಗೆ ರಾಜನ ಹುಡಗಿ ಕೊಡ್ತಾ. +ವಂದ್ ದೊಡ್ಡ ಹಾವಿತ್ತು. +ಅದು ಅವ ಹೊಡದ. +ಹೊಡದವರ್ಗ್ ಲಗ್ನ ಮಾಡ್ಕೊಡ್ತೆ ಅಂತ ರಾಜನ ಪಣ ಇತ್ತು” ಅಂದ್ರು. +“ಅಡ್ಡಿಲ್ಲ, ತಾವ್ ಬತ್ರು” ಅಂದ್ರು. +ಅವರ ಸಂಗಾತ ಮದವಿ ಚಪ್ಪರಕ್ ಬಂದ್ರು. +ಆಗೆ ಹೀಗ್ ತಿರಗಾಡು ದಾರಿ ಬದಿಗೆ ಒಬ್ಬ ಕೊಡ್ಲಿ ಹೊತಾಕ್ದ. +ಹೀಗೆ ಕೂತ್ರೂ ವಂದ್ ಬದಿಗೆ. +ಆಗ ತಿರಗಾಡಬೇಕಾದ್ರೆ ಆ ಕೊಡ್ಲೀಗ್ ದಡಸ್ಕಂಡಿ ಬೀಳ್ತ್ರು. +ಕೊಡ್ಲಿ ನೆಗ್ದ್ ವಂದ್ ಬದಿಗ್ ಹಾಕುಕೆ ವಬ್ರ ಕೂಡೂ ಆಗುದಿಲ್ಲ. +ಎಳದ್ರು ಕೊಡ್ಲಿ, ಅಪ್ ಹಾಕುದ್ರೂ. . . ನೆಗುಕಾಗುದಿಲ್ಲ; ಹೋಗುದಕಾಗುದಿಲ್ಲ. +ಆಗ ಹಾಗೆ ಯೆಷ್ಟು ಜನಾರೂ ಬಿದ್ರು, ಯೆದ್ರು. +ಕಡಿಗೆ ಆನಿರಾಜ ಈ ಸಾವೇರನಾಯ್ಕನ ಕೂಡೆ, “ತಮಾ” ಅಂದ. +“ಮದಮಗ ಮಂಚದ ಮೇಲೆ ಕೂತ್ಕಂಡಾನೆ, ಮಂಟಪದಲ್ಲಿ. +ಆಗೇ ಕೊಡ್ಲಿ ವಂದ್ ಬದೀಗ್ ಹೊತಾಕೂ ನೆಗದಿ ಅವ್ರೆಲ್ಲಾ ದಾರೀಲಿ ಬೀಳತ್ರು” ಅಂದಾ ತಮ್ಮನ ಕೂಡೆ. +ಆಗಾ ಸಾವೇರನಾಯ್ಕ ಯೆರಡ ಕೈಲಿ ಕೊಡ್ಲಿ ಹಿಡದಿ, ಆ ಮದಮಗ ಕೂತ ಮಂಚದ ಅಡಿಗೆ ಕೊಡ್ಲಿ ವಗದಾ. +ಆ ಕೊಡ್ಲಿ ವಗದ ಶಬ್ದಾ ವಂದ್ ದೊಡ್ಡ ಗರ್ನಾಲ್ ಹೊಡ್ದ ಸಬ್ದಾಯ್ತು. +ಮದಮಗಾ ವಂದ್ ಸಾರಿಗ್ ಹೆದ್ರಿಹಾರ್ಬಿದ್ದಾ. +ನೆಡ್ಕು ಸುರುವಾಯ್ತವಗೆ ಹೆದರಿ. +“ಬಂತು ಈಗ ತನ್ಗೆ ಚಕ್ರ” ಅಂತಾ. +ಆಗಾ ಆನಿರಾಜಾ ಈ ಹೆಣ್ ಕೊಡ್ವ ರಾಜಗೆ ಕರದಾ, “ದಾರಿ ಯೆರೂಕ್ ಸಲ್ಪ ತಡಾ ಅದೆ. +ಮಾತಾಡ್ವಾ ಬಾ ಇಲ್ಲಿ” ಅಂದಾ. +ಆಗ ರಾಜ ಬಂದ. +“ಯೇನ್ರೀ?” ಕೇಳ್ದಾ. +“ಹಗರ್ ನಿನ್ನ್ ಹುಡಗೀ ಪಟವಾಲಗೆ ಯಾಕ್ ಕೊಡ್ತ್ರಪ್ಪಾ? +ಯಾರೂ ಊರ್ನಲ್ ಗಂಡ್ ಹುಡಗ್ರ್ ಇಲ್ಲಾಗಿದ್ರೊ?” ಕೇಳ್ದಾ. +ಆಗ್ ರಾಜ ಯೆಂತ ಅಂದಾ? “ಹುಡಗರಿದ್ರು. . . ಆದ್ರೆ, ತನ್ಗ್ ಊರಿನಲ್ಲಿ ವಂದ್ ಹಾವು ಬಹಳ ಪೀಡೆ ಕೊಡತಿತ್ತು. +ಅದು ಯಾರ ಹೊಡದರೊ ತನ್ನ ಹುಡ್ಗಿ ಲಗ್ನ ಮಾಡ್ಕೊಡ್ತೆ ಅಂತ ತಾನ್ ಹೇಳಿದ್ದೆ. +ಅದಕಾಗಿ ಈ ಪಟವಾಲ ಹಾವ್ ಹೊಡ್ದಾ. +ಇವತ್ ದಾರಿಯೆರ್ದ್ ಕೊಡ್ತೆ ತನ್ ಹುಡಗೀಗೆ.” + “ಹಾಗರ್ ಬರೀ ಹಾವ್ ಹೊಡ್ದರೆ ದಾರಿಯೆರ್ದ್ ಕೊಡ್ತ್ಯೋ? +ಗುರ್ತ ಬಿರ್ತಾ ಅದ್ಯೊ?” ಕೇಳ್ದಾ ಆನಿರಾಜಾ. +“ಗುರ್ತ ಅದೆ” ಅಂದಾ. +“ಯಾವ ಗುರ್ತಾ? +ತಕಂಡ್ ಬಾ ನೋಡ್ವಾ” ಅಂದಾ. +ಆಗ ಹಾವಿನ ಮೋಟ ಬಾಲ ಕೊಯ್ದದ್ದು ತಂದ್ ತೋರ್ಸ್ದಾ. +“ಈ ತುದಿ ಬಾಲಾ ಯಾರ್ ತಕಂಡ್ ಹೋದ್ರು? +ಇದು ಮೋಟ. . . ” ಅಂದಾ ರಾಜನ ಕೂಡೆ. +ಆಗಲ್ಲಿ ಮದಿವಿಗ್ ಬಂದ ಜನ ಯೆಲ್ಲಾ ವಟ್ಟಾದ್ರು. +ವಟ್ಟಾಗಿ ನೋಡುವರಿಗೆ, “ಹೌದು, ಮೋಟು ಇದು. +ಇದರ ತುದಿ ಯಾರ ಕೂಡೆ ಉಳಿಬೇಕು?” ಅಂದರು. +ಆಗ ಇವ ಹೊಡದದ್ ಸುಳ್ಳು ಅಂತಾಯ್ತು. +ಹೊಡ್ದವರು ಯಾರಂತ ಅವರವರೊಳಗೆ ಹೇಳುವರಿಗೆ, “ತಮ್ಮ ಕೂಡೆ ವಂದ್ ಸಣ್ಣ ಗುರ್ತದೆ, ಇದ್ನೋಡಿ” ಅಂದಾ ಆನಿರಾಜಾ. +ಸಾಬೂತ್ ಬಾಲಾ ತೋರ್ಸ್ದ-- “ಹಾವ ಹೊಡದವ ತಾನು, ಸತ್ ಬಿದ್ದದ್ ಹಾವ ಹೊಡದವ ಅವಗ್ ಲಗ್ನ ಮಾಡ್ಕೊಡತ್ಯೋ? +ತನ್ಗ್ ಕೊಡತ್ಯೊ?” ಕೇಳ್ದಾ. +ಆಗಟ್ಟೂ ಜನರು ದಡ್(ದೊಡ್ಡ) ಗೌಜಿಟ್ಕಿ ಬಿತ್ತು. +“ಇವರಿಗೆ ಹೆಣ್ ಕೊಡಬೇಕು. +ಅವಗ್ ಸೊಗ್ದ ಹಾಕಬೇಕು” ಅಂದಾಯ್ತು. +ಬಾಚಿಂಗ ಕಟ್ಕಂಡ್ ಕೂತನೆ ಅವಾ. +ಆಗಾ ರಾಜಾ, “ಹೀಗ್ ಮೋಸ ಮಾಡ್ದಾ” ಅಂತಾ ಹೇಳಿ, ಪಾಶೀ ಹುಕುಂ ಕೊಟ್ಟ ಅವಗೆ. +“ಮೂರ್ ಜನರವಳಗೆ ನೀವ್ ನೀವ್ ಯಾರಾದ್ರು ಲಗ್ನಾಗುಕ್ ತಯಾರಾಗುಕಡ್ಡಿಲ್ಲ” ಅಂದ ರಾಜಾ. +ಆನಿರಾಜ ಇವಗೆ, “ಯೇಳು ತಮ್ಮ ನೀನು. . . ನೀನೆ ಲಗ್ನಾಗು” ಅಂದಿ, ಕಡಿಗೆ ಸಾವೇರನಾಯ್ಕಗ್ ಲಗ್ನ ಮಾಡ್ಸುಕ್ ತಯಾರಾದ. +ಅವಗೇ ಹೆಣ್ ಕೊಟ್ಟಿ ದಾರಿ ಯೆರದಾ ಸಾವೇರನಾಯ್ಕಗೆ. +ಮದ್ವಿ ಮುಗೀತು. +ನಾಕೈದ್ ದಿವ್ಸ್ ಉಳ್ದ್ರು ಅಲ್ಲಿ. +ಕಡಿಗವಗೆ, “ಇಲ್ಲೆ ಉಳಿ ನೀನು. . . ನಾವ್ ಸಲ್ಪ ಮುಂದ್ ಹೋಗ್ ಬತ್ರು” ಅಂತ ಅವಗೆ ಬಿಟ್ ಹಾಕ್ದ್ರು. +ಮುಂದೆ ಇಬ್ಬರು ಆನಿರಾಜ, ಗುಡ್ಡಿರಾಜ ಕೂಡಿ ಮತ್ತೊಂದ್ ರಾಜ್ನ ಊರಿಗ್ ಹೋದ್ರು. +ಅಲ್ಲಿ ಹುಲಿ ಉಪಟಳ. +ಕೊಡ್ಲಿಲೆ ಹೊಡಿತ, ಬಾಲದ ತುದಿ, ಕೆಮಿ, ಉಗರು ತುದಿ ಕೊಯ್ತಾ. +ಅಲ್ಲಿ ಪಟ್ಟೆವಾಲ, ‘ಹುಲಿ ಹೊಡ್ದಿದೆ’ ಹೇಳ್ತ. +ರಾಜ ಹುಡಗಿ ಕೊಡುಕ್ ತಯಾರ್ ಮಾಡ್ತಾ (ಅದೇ ನಮೂನೀಲಿವ ಕೊಡ್ಲಿ ವಗೂದು). +ಗುಡ್ಡಿರಾಜಗೆ ಲಗ್ನ ಮಾಡ್ಕೊಡ್ತ ರಾಜ. +ಗುಡ್ಡಿರಾಜಗೆ, “ಇಲ್ಲೆ ಉಳಿ. . . . ” ಹೇಳಿ, ಆನಿರಾಜ ಹೋಗ್ತ. +ಹೋಗತೆ ಇರಬೇಕಾದ್ರೆ ಅಲ್ಲಿ ವಂದ್ ಮರದಡಿಗೆ ಮೂರ್ ಸಂಜಿಗ್ ಮೂರ್‌ ಜನ ಉಳಿತ್ರು. +ಸಂಜಾಯ್ತು, ಮರದ ಬುಡಕೆ ಆ ಹುಡಗಿ ಲಗ್ನಾಯ್ತೆ ಅಂದ ಬಂದವ್ರು. +ಕಡಿಗೆ ರಾತ್ರಿ ಆಗುವರಿಗೆ ಹದ್ದು, ಮಂಗ ಮೇಲೆ ಕೂತ್ಕಂಡಿತ್ತು. +ಕೂತ್ಕಂಡ್ರೆ, ಅದು ಇಡೀ ರಾತ್ರೆ ಬೆಳಗಾಗುವರಿಗೆ ಹೇತಿ, ಇದರ ಇಡೀ ಮೈಯೆಲ್ಲಾ ಹೇಲ್ನಲ್ಲಿ ಮುಚ್ಚಿ ತಲಿ ವಂದ್ ಕಾಣ್ತದೆ. +ನನೆಸಿವರ್ಲಿ ಹುತ್ನಲ್ಲಿ ಇರು ನಮೂನಿಲಿ ಕಣ್ ಕಾಣ್ತದೆ. +ಆಗಿವಗೆ ಹೋಗಬೇಕಾದ್ರೆ ನೋಡ್ದ್ರು. +ಆನಿರಾಜಗೆ, “ಇವ ಹುಡಗಿ ಲಗ್ನಾಗು ಲೆಕ್ಕಕೇ ಹೋಗ್ತಾನೆ” ಅಂದಿ ಗುತ್ ಮಾಡ್ದ್ರು. “ಅಣ್ಣಾ. . . ” ಅಂದ್ರು. +“ನಿನ್ನ ಕಾರ್ಯ ಜಯಾದ್ರೆ, ಹಿಂದೆ ಬರಬೇಕಾದ್ರೆ ಆ ಹೆಣ್ಣಿನ ಕೂಡೆ ಮೂರುಗೆಯಟಿ ನೀರು ತಮ್ಮ ಮೂರಜನರ ತಲೆ ಮೇಲೆ ಹಾಕಬೇಕು” ಅಂದ್ರು. +ಅವ, “ಅಡ್ಡಿಲ್ಲ” ಅಂತ ವಪ್ಕಂಡಿ ಮುಂದ್ ಹೋದ. +ಆಗೆ ಆ ರಾಜನ ಮನಿ ಬುಡ್ಕ್ ಹೋದಾ. +ಆಗ ರಾಜನ ಹುಡಗಿ, “ತಾನು ಮಿಂದ ನೀರು ಯಾರು ಈಚಿಂದ ಆಚಿ ದಾಟ್ ಹೋಗ್ತ್ರು ಅವರ್ಗೆ ಲಗ್ನಾಗ್ತೆ” ಅಂತ ಪಣ ಮಾಡ್ಕಂಡಿದ್ದಿತ್ತು. +ಬಾಕಿ ಜನರೆಲ್ಲಾ ಲಗ್ನಾಗುಕ್ ಹೋದೋರು ಮೊದ್ಲೆ ನದಿಲ್ ಮೀವುದು ಚೊಕ್ ಮಾಡ್ಕಂಡ್ ಹೋಗ್ತ್ರು. +ಆ ನೀರೀಗ್ ಅಷ್ಟು ಪರಮಳ. +ಅವರಿಗೆ ಯಾರೂ ಲಗ್ನಾಗದೆ ಆ ಹುಡಗಿ ಇತ್ತು. +ಆಗ ನದಿ ಬುಡ್ಕ್ ಹೋಗಿ ನಿತ್ತ ಇವ. +ಆಗೆಲ್ಲಾ ಗುತ್ ಮಾಡ್ದಾ, “ಇದು ಯೇನೋ ಇರಬೇಕು” ಅಂತ. +ನಿಂಬೆಹಣ್ ವಂದಿತ್ತು ಇವ್ನ ಹತ್ರ. +ಆ ನಿಂಬೆಹಣ್ಣು ಕೊಯ್ದ. +ನಿಂಬೆಹಣ್ಣ ಯೆಯ್ಡ ಕಡಿ ಮಾಡ್ಕಂಡಿ ಆ ನೀರ್ನಲ್ಲಿಟ್ಟು ಅದ್ರ ಮೇಲೆ ದಾಟಿ, ಆಚಿಗ್ ಹೋದಾ. +ಆಗಾಚಿಗ್ ನೆಡ್ದಾ ಅವ ದಾಟಿ. +ಆ ಹುಡ್ಗಿ ನೋಡ್ತೇ ಇತ್ತು. +ನೋಡಿ ಅಪ್ಪಗ್ ಕರೀತು ಅದು. +“ಬಾ ನೋಡು, ಅವ ಅಲ್ ಹೋಗ್ತಾ. +ತನ್ದು ಪಣ ಇವತ್ತಿಗ್ ಮುಗೀತು. +ಅವನ ಲಗ್ನಾಗ್ತೆ” ಅಂತು. +ಆಗ ಶಿಪಾಯಿ ಕಳಶಿ ಇವನಿಗೆ ಕರಕಂಡ್ ಬಂದು, ಆನಿರಾಜಗೆ ಬಂದಿ ರಾಜ ಹೇಳ್ದ- “ತನ್ನ ಹುಡಗಿ ಪಣ ಇಟ್ಟಿತ್ತು. +‘ನದಿದಾಟ್ ಹೋದವಗೆ ತಾ ಲಗ್ನಾಗ್ತೆ, ಮಿಂದೋರ್ಗೆ ಲಗ್ನಾಗುದಿಲ್ಲ’ ಅಂತ. +ಇವತ್ ನೀ ದಾಟ್ ಹೋದೆ. +ಅದ್ರಂತೆ ನಿನ್ಗ್ ಲಗ್ನ ಮಾಡ್ತೆ ತಾನು” ಅಂದ್, ಎಲ್ಲಾ ವಟ್ ಮಾಡ್ಬಿಟ್ಟು ರಾಜನಿಗೆ ಏನೂ ತೊಂದ್ರೆ ಇಲ್ಲ, ಲಗ್ನ ಮಾಡ್ಸ್‌ದಾ. +ಕೆಲುದಿವಸ ಅಲ್ ಉಳ್ದಾ ಅವ. +ಆಗ, “ಮನಿಗ್ ಹೋಗ್ತೆ ತಾನು” ಅಂತ ಮಾವನ ಕೂಡೆ ಹೇಳಿ, ಹಿಣತಿ ಕರಕಂಡಿ ಬಂದಾ. +ಬರುವರಿಗೆ ಹದ್ ಹೇಲ್ ಮುಚ್ ಹಾಕದ್ಯಲ್ಲಾ. . . ಅಲ್ಲಿಗ್ ಬಂದಾ - ಹಿಂಡ್ತಿ ಕೂಡ ಹೇಳ್ದಾ, “ಆ ಮರದ ಅಡಿಗೆ ಮೂರ್ ಹುತ್ತದೆ. +ಮೂರ್ ಸಾರಿ ಗೆಯಟಿಲಿ ನೀರ್ ಹಾಕು” ಅಂದ. +ನೀರ್ ಹಾಕ್ತು ಅದು. +ಆಗವರು ಯೆದ್ ಬಂದ್ರು. ಹುತ್ನಲ್ಲಿದ್ದವರು. ಆಗ, “ನಿನ್ ಬೆನ್ನಿಗೆ ತಾವೂ ಬತ್ರು” ಅಂದ್ರು. +“ತಾವಿಲ್ಲಿ ಸತ್ ಹೋಗ್ತಿರು. +ನಿಮ್ಮ ಸಂಗಾಡೇ ತಾವ್ ಉಳೀತ್ರು” ಅಂದ್ರು. +ಬೆನ್ಗೇ ಬಂದ್ರು. +ಅಲ್ ವಂದ್ ನದಿಯದೆ. +ದಾಟಬೇಕಾದ್ರೆ ವಂದ್ ಹಡ್ಗ್ ಹತ್ದ್ರು. +ಮೂರ ಯೆರಡು ಐದ್ ಜನ ಹತ್ದ್ರು. +ಆಗಾ ಸಮಾ ಮದ್ದ್ಯಿ ನದೀಲಿ ಬರಬೇಕಾದ್ರೆ, ಈ ಹೇಲ್ನಲ್ಲಿ ಮುಚ್ ಬಿದ್ದವರು, “ಇಲ್ಲೆ ಇವಗ್ ಮೋಸ ಮಾಡಬೇಕು” ಅಂತ ಮಾತಾಡ್ದ್ರು. +ಆಗ ಸಮಾನ್ ನದಿಲ್ ಬರಬೇಕಾದ್ರೆ ಸರಕ್ನೆ ದಬ್ಬಿ ದೂಡ್ ಹಾಕ್ಬಿಟ್ರು ನೀರ್ನಲ್ಲಿ. +ಆಗ ನೀರ್ಗ್ ಬಿದ್ದಾ ಅವ- ಹಡ್ಗ ಬಿಟ್ಟು. +ಆಗ ನೀರಲ್ ಬಿದ್ದವ ಆನಿರಾಜ ವಂದ್ ಕೂಮ ಹತ್ಕಂಡಾ. +ಹತ್ಕಂಡಿ ಇಚಿ ದಡ ದಾಟ್ದಾ-- ಸಾಯಲಿಲ್ಲ ಅವ. +ಇವರು ನೆಡ್ದ್ರು ಮುಂದೆ ನದೀಲೇಯ. +ಆಗ ಅವರೊಳ್ಗ ಗುದ್ದಾಟ ಬಿತ್ತು. +“ತಾ ಮದಿಯಾಯ್ತೆ. . . ತಾ ಮದಿಯಾಯ್ತೆ. . . ” ಅಂತಾ ಗುದ್ದಾಟ ಬಿಟ್ಕಂಡಿ ದಬ್ಬುಕ್ ಸುರುಮಾಡ್ದ್ರು. +ವಬ್ಬಬ್ರೇ ಬೀಳೂಕೆ ಸುರುಮಾಡ್ದ್ರು. +ಯೆಯ್ಡ್ ಜನರು ನೀರ್ನಲ್ಲಿ ಬಿದ್ರು; ಸತ್ ಹೋದ್ರು. +ವಬ್ಬ ಉಳ್ದಾ. +ಈಗ ಹುಡ್ಗಿ ತನ್ನ ವಸಿಗಾಯ್ತು ಅಂತ ಹೋದಾ ತಕಂಡಿ ವಂದೂರಿಗೆ. +ಹೋಗಿ, ಲಗ್ನಾಗಬೇಕು ಅಂದಾ ಅವ ಹುಡಗೀಗೆ. +ಆ ಹುಡಗಿ ಲಗ್ನಾಗುದಾದ್ರೆ ಹನ್ನೆಯ್ಡ ವರ್ಸನ ಪಣ ಇಟ್ತು. +ಸಾವೆರನಾಯ್ಕ ಮತ್ತು ಗುಡ್ಡಿ ರಾಜಗೆ ತುಳಸಿಗಿಡ ನೆಟ್ಟು - ‘ಬಾಡದ್ರೆ ತನ್ನ ಹುಡ್ಕಕೆ ಬನಿ’ ಅಂತಾ ಹೇಳ್ ಹೋಗಿದ್ದಾ ಆನಿರಾಜಾ ವಂದ್ ಅಜ್ಜಿಮುದ್ಕಿ ಮನಿಗ್ ಶೇರ್ದ. +ಅದೇ ಊರಲ್ಲಿ. +ಆಗ, ಅಲ್ಲಿ ಪತ್ತಿ ತಕಂಡಾ ಅವ. +ಅಜ್ಜಿ ಮುದ್ಕಿಯೆಲ್ಲಾ ಪತ್ತಿ ಕೊಟ್ತು. +“ಇಂತಾ ಜಾಗದಲ್ಲಿ ರಾಜ ಹೆಣ್ ತಕಂಡ್ ಬಂದಾನೆ.” +ಮತ್ ಆ ಹೆಣ್ಗೇಯ ಅಜ್ಜಿಮುದ್ಕಿ ದಿನಾ ಹೂಗ ಕಟ್ಟಿ ತಕಂಡು ಹೋಗ್ ಕೊಡುದು; ಅದರಿಂದ ಜೀವನ ಮಾಡೂದು ಮಾಡತಿತ್ತು. +“ಹಾಗರ್ ಇಂತಾ ಹೆಣ್‌ಗೆ ಹೂಗಿನ ದಂಡಿ ತಾನು ಕಟ್ತಿ” ಅಂದ. +ವಂದಿವ್ಸೆ ಕಟಬೇಕಾದ್ರೆ ವಂದ್ ಚೀಟಿ ಬರದಿ ಹೂವಿನ ದಂಡಿ ವಳ್ಗ್ ಹಾಕಿ ಕಟ್ದ. +ಮುದ್ಕಿ ಕೂಡ ಕೊಟ್ಟ, “ಬಿಚ್ಚಿ ಗನಾ ಮಾಡ್ ನೋಡ್ಕಂಡೆ ಮುಡುಕ್ ಹೇಳು. +ಮೊಮ್ಮಗಳ ಕೂಡೆ” ಅಂದ. +ಆಗೆ ತಕಂಡ ಹೋಗ ಕೊಟ್ತು ಮುದ್ಕಿ. +ಅದು ಬಿಚ್ಚಿ ನೋಡ್ತು ಚೀಟಿ. +“ಇಂತಾ ಜಾಗದಲ್ ಬಂದ ವಳ್ದಿದೆ. ಸಾಯ್ಲಿಲ್ಲ. ನೀನು ನಿನ್ನ ಪತ್ತಿ ಕೊಡು” ಅಂತ. +ಅದರ ಪತ್ತಿ ಕೊಟ್ತು. +“ಶರಮನೇಲಿ ಇದ್ದೆ ತಾನು.” +ಇವ ಮತ್ತು ಚೀಟಿ ಬರದ, “ಲಗ್ನಕ್ಕೆ ವಪ್ಗ. +ಯೆಲ್ಲಾ ಜನವಟ್ಟಾಗ್ಲಿ” ಅಂತ. +ಲಗ್ನಕ್ ತಯಾರಾಯ್ತು. +ಯೆಲ್ಲಾ ಜನ ವಟ್ಟಾದ್ರು. +ತಮ್ಮದಿರು ಹುಡ್ಕುಕ್ ಬಂದಿ ವಟ್ಟಾದ್ರು. +ಲಗ್ನಕ್ ತಯಾರಿ ಆಗ್ತ ಅದೆ. +“ಬಡ್ಸುಕ್ ತಾನ್ ಉಳಿತೆ” ಅಂತು. +ಜನರಗೆ ರಾಜನ ಮಗಳು ಬಡ್ಸತ ಬಂತು ಅದು. +ಬರಬೇಕಾದ್ರೆ ಗಂಡಗೆ - ಅದು ಕಪ್ಪು ಮಶಿ ಹಿಡ್ಕಂಡ್ ಬಂದಿತ್ತು. +ಅದು ಕೈಗೆ ಬಡ್ಸತಿರಬೇಕಾದ್ರೆ ಅವಗೆ ಗುರ್ತಮಾಡ್ಕಂಡ ನೆಡೀತು-- ಅವಗ್ ಗುತ್ತಾಗದೆ. +ಊಟಯೆಲ್ಲಾ ಪೂರೈಸರು. +ಹುಡ್ಗಿ ನಿತ್ ಹೇಳ್ತು, “ಲಗ್ನಾಗಬೇಕಾದ್ರೆ ವಂದ್ ಪಣ ಅದೆ ತನ್ದು” ಅಂತು. +“ಯೆಂತಾ ಪಣ?” ಅಂತ ಕೇಳುವರಿಗೆ, “ತನ್ನ ಗಂಡಗೆ ಲಗ್ನಾಗಿದೆ ತಾನು. +ಇಂತವರು ಮೋಸ ಮಾಡಾರೆ. +ಸಬೇಲಿದ್ರೆ ಯೇಳಬೇಕು” ಅಂತು. +ಅವ ಯೆದ್ದ. +ಮೂರೂ ಜನರೂ ಯೆದ್ರು. +ಸಬಿಯೊರೆಲ್ಲಾ ವಟ್ಟಾದ್ರು. +ಇವಗೆ ಮೋಸ ಮಾಡ್ದವಗೆ ಪಾಶಿ ಕೊಟ್ರು. +ಅವ್ರೆಲ್ಲಾ ಕತಿ ಹೇಳ್ದ್ರು. +ಹಿಂಡ್ತಿ ಕರಕಂಡಿ ತಮ್ಮ ತಮ್ಮ ಮನಿಗೆ ಹೋದ್ರು. +‌ವಂದಲ್ಲಾ ವಂದೂರ್ನಲ್ಲಿ ವಂದು ಗೋಯಿಂದ ಗೌಡ ಹೇಳಿ ಹಾಲಕ್ಕಿಗೌಡ ಇದ್ನಂತೆ. +ಅವನಿಗೆ ಮೂರು ಮಕ್ಕಳು-- ಮೂರ್ಗಂಡ ಮಕ್ಳೀರು. +ಕಿರಿಮಗ ಸಣ್ಣಕೂಸಾ ಹೇಳಿ, ದೊಡ್ಡ ಯೆರಡು ಜನರ ಹೆಸರಿಲ್ಲ. +ಆ ಊರಿಗೆ ಅವನಕಿಂತ ದೊಡ್ಡ ಸಾವಕಾರ ಯಾರೂ ಇಲ್ಲ. +ಹಾಂಗಿದ್ರೆ, ಸುಮಾರವನಿಗೆ ವಯಸ್ಸಾಗ್ ಹೋಯ್ತು. +ತಂದೆ ತೀರಲಿಕ್ಕೆ ಯಂಟ್ ದಿವಸ ಇರುವಾಗ ಸಣ್ಣ ಕೂಸ, ತಂದೆ ಕೂಡೆ ಯೇನಂದಾ? +ವಬ್ಬವನೇ ಇದ್ದಾಗ, “ಯರಡು ಜನರ ಮದ್ವಿಯಾತು. +ನಾ ಕಿರಿಯವ. +ಅಪ್ಪ. . . ನನ್ಗೆ ಮದವಿ ಹಬ್ಬ ಆಗಲಿಲ್ಲ. +ನನಗ್ಯೇನ ಆಸ್ತಿ ಮಾಡ್ತಿ ಹೇಳು.” +“ಹೇಳತೇನೆ ಮಗನೇ, ಹೇಳ್ತೇನೆ ಕೇಳು. +ವಂದು ಗೋಣಿಚೀಲ ಐತೆ. +ಅದ್ಕೆ ಮೂರು ತೂತಾಗೈತೆ. +ಅದ್ ಸಂಜಿಕಡಿಗ್ ವಂದ್ ರೂಪಾಯಿ ಹಾಕಿಡಬೇಕು. +ಬೆಳ್ಗಾಮುಂಚೆ ಯದ್ ಮೊಕಾ ತೊಳೆದು ಸಾವಿರದ ಮೇಲೆ ವಂದು ರೂಪಾಯಿ ಬೀಳಬೇಕು. +ಮೊಕ ಕೆಳ್ಗ್ ಮಾಡಿಕ್ ಕೊಡ್ಗಬೇಕು. . . ಬೀಳತೈತೆ. ಕಡಿಗೆ ಒಂದ್ ಕಂಬಳಿ ಚಪ್ಪೈತೆ ಲಟ್ಟ ಲಟ್ಟ ಕಂಬಳಿ” . +“ಅದ್ ಯಾತಕ್ ಬರ್ತೈತೆ?” ಹೇಳಿ ಕೇಳ್ದ ಸಣ್ಣ ಕೂಸ. +“ಆ ಕಂಬಳಿ ಮೇಲ್ ಕೂತ್ರೆ ಇಡೀ ಜಗತ್ಕಾರೂ ತಕ್‌ಹೋಗ್ತೈತೆ ಕಂಬಳಿ. +ಆ ಕಂಬಳಿ ಮೇಲೆ ಕೂತ್ ಹೋಗಬೇಕಾದ್ರೆ ಯೇನ್ ಹೇಳಬೇಕು? +‘ಅಂಬರ್ಕ ಜಾವ’ ಅಂತ ಹೇಳಬೇಕು. +ತಕೊಂಡು ಅಂಬರ್ಕ ಹೋಗತೈತೆ. +ಇಳಿಬೇಕಾದ್ರೆ, ‘ಬೈಟೊ ಕಂಬಳಿ’ ಅಂತ ಹೇಳಬೇಕು. +ಅಲ್ಲೇ ಇಳೀತು. . . ಮನಿಗ್ ಬರಲಿಕ್ ಮತ್ತ್ ಹಾಗೇ ಹೇಳಬೇಕು, ಬರತೈತೆ ಮನಿಗೆ.” +“ಕಡಿಗೆ. . . ವಂದ್ ತಲಿಗ್ ಹಾಕು ವಂದ್ ತೊಪ್ಪಿ ಐತೆ. +ನನ್ ಮಗ್ನೆ, ಆ ತೊಪ್ಪಿ ತಲಿಗೆ ಹಾಕಿದ್ರೆ ಮನಶಾ ಅಂಬದೆ ನುಶಿ ಆಗತೈತೆ. +ಆಗಿ, ಯಾ ದೇಶಕ್ ಹೋಗಿ ಹನ್ನೆರಡಂಕಣದ ಮನೆಯಾದ್ರೂ ಕಳುಮಾಡಿ ಯೇನಾದ್ರೂ ತಕಬರೂಕ್ ಅಡ್ಡಿಲ್ಲ. +”ಕಡೀಗೆ ಹಾಗೇ ಉಳೀತು. +ಯಂಟ್ ದಿವಸಕ್ ತಂದೆ ಗೋಯಿಂದ ಗೌಡ ತೀರ್ ಹೋಯ್ತ. +ಅಣ್ಣದಿರು ಯೇನ್ ಮಾಡದ್ರು? +“ನಮ್ಮ ನಮ್ಮ ಹೆಂಡಿರ ತಕ್ಕೊಂಡು ಗುಡ್ಡೆ ಕುಂಬರಿ ಮಾಡಾಕ್ ಹೋಗೋಣ” ಅಂದ್ರು. +ಅವರು ಹೋಗಬೇಕಾದ್ರೆ ತಮ್ಮ ಹೇಳ್ದ, “ಹಾಗೆ ಹೋಗಬೇಕಾದ್ರೆ ಮನೆ ಹಿಸೆ ಆಗಬೇಕು” ಹೇಳಿ ಹೇಳ್ದ. +ಆವಾಗೆ ದೊಡ್ಡ ಗೋಯಿಂದ ಗೌಡನ ಮನೆ ಹಿಸೆ ಆಗಬೇಕು ಹೇಳಿ ಶಾನಬಾಗರು, ಮಾವನ(ಮಾಲೆ)ದಾರರು ಯೆಲ್ಲಾ ಬಂದ್ರು. +ಕಂಚು, ತಾಂಬ್ರ ಇದ್ದಿದ್ ಬಾಕಿ ವಸ್ತು ಹಿಸೆ ಮಾಡಿದ್ರು. +“ದುಡ್ಡಿನ ಕಪಾಟು ವಡಾನ” ಹೇಳಿ ವಡ್ದ ಬಿಟ್ರು. +ಅದ್ರಾಗ ಯೇನಿಲ್ಲ-- ವಂದ್ ಕಂಬಳಿ ಚಪ್ಪ, ವಂದ್ ಗೋಣೀಚೀಲ, ವಂದ್ ತೊಪ್ಪಿ. . . ಮೂರೇ ವಸ್ತು. +ಅದ್ ಐತ್ ಹೇಳಿ, ದೊಡ್ಡ ಮಕ್ಕಳಿಗೆ ಹೇಳಲಿಲ್ಲ ಇಂತಿಂತಾದಕೆ ಬರ್ತೈತ್ ಹೇಳಿ. +ಕಿರಿಯವನಿಗೆ ಮಾತ್ರ ಹೇಳಾನೆ ತಂದೆ. +ಕಡಿಗೆ, ಪಾಲ್ ಹಾಕುತಂಕಾ ವಬ್ಬನ ವಂದ್ ತೊಪ್ಪಿ ತಕೊಂಡ‌. +ವಬ್ಬವ ವಂದ್ ಕಂಬಳಿ ಚಪ್ಪ ತಕಂಡ. +ಸಣ್ಣ ಕೂಸ ಗೋಣಿಚೀಲ ತಕೊಂಡಾ. +ಆ ಊರಾಗಲ್ಲಿ ಬಲೇ ದೊಡ್ಡ ಲಕೋಪತಿ ವಂದ್ ಸಾವಕಾರಿದ್ದ. +ಅವನಿಗ್ ವಂದೇ ಮಗಳು. +ಸಾವಕಾರನ ಪಣ ಯೇನದೆ ಅಂದ್ರೆ, ‘‘ಯಾವನು ವಂದ್ ವರ್ಸಾಗುವರಿಗೆ ತನಗೆ ದಿವಸಕೆ ವಂದೊಂದು ಸಾವ್ರ ರೂಪಾಯ್ ಕೊಡ್ತಾ. . . ತನ್ನ ಮಗಳು ದರ್ಮದಾರಿ ಎರೆದು ಕೊಟ್ಟು, ತನ್ನ ಮನೆ ಭೂಮಿ, ಜಮೀನ್ಯೆಲ್ಲಾ ಅವನಿಗೆ ಬರಕೊಡ್ತೇನೆ. +”ಆ ಊರಾಗಿದ್ದ ಯೆಲ್ಲಾ ಸಾವಕಾರರು ಬೂಮಿ, ಮನೆ ಮಾರಾಟ ಮಾಡಿ ಅವನಿಗೆ ದಿವಸಾ ಸಾವಿರ ರೂಪಾಯ್ ಕೊಟ್ರು- ತಿಂಗಳು, ಹದಿನೈದ್ ದಿವಸಾ ಕಮ್ಮಿ. +ಕಡಿಗೆ, ಗೋಯಿಂದ ಗೌಡನ ಹುಡ್ಗ ಯೇನ್ ಮಾಡ್ದಾ? +ಗೋಣಿಚೀಲದಾಗ್ ವಂದ್ ರೂಪಾಯ್ ಹಾಕಿಟ್ಟ ಸಂಜಿಕಡಿಗೆ. +ಬೆಳಗಾಗೆ ಕೊಡಗ್ದ. +ಸಾವ್ರದ ಮೇಲ್ ವಂದ್ ರೂಪಾಯ್ ಬಿತ್ತು. +ಪೇಟಿಗ್ ಹೋದಾ ತನ್ಗೆ ಬೇಕಾದ ಯೆಲ್ಲಾ ದುಸ್ತು, ಕುದುರೆ ಯೆಲ್ಲಾ ತಂದ. +ಮರ್ದಿವಸಾ ಬೆಳಗಾಗಿ ಅದರಂತೆ ಮಾಡಿ, ಕೊಡ್ಗುಕ್ ಸುರುಮಾಡ್ದ. +ವಂದ್ ವರ್ಸಕಿನ್ ಮೂರು ದಿವ್ಸ ಐತೆ ಅನ್ನಾವರಿಗ್ ಕೊಟ್ಟ. +ಮೂರ್ ದಿವ್ಸ ಇದ್ದಾಂಗ, ವಂದಿವ್ಸ ದುಡ್ ಕೊಟ್ ಬರಬೇಕಾದ್ರೆ ಹುಡ್ಗ್ ಹೇಳ್ತು, “ಅಪ್ಪಾ, ನನ್ಗೆ ಇಂತಾ ಸಾವ್ಕಾರಿಗೆ ಹೆಣ್ ಕೊಡ್ಲಿಲ್ಲ. . . ನೀನೂ ಅವರ ಮನಿ ದುಡ್ ಯೆಲ್ಲಾ ತಂದ್ ತುಂಬ್ದೆ. +ಈಗ ಹಾಲಕ್ಕಿಗೌಡಗೊಳ್ಗೆ ನೀನ್ ಕೊಡೂದ್ ಮಾಡ್ದೆ.” +“ಅಯ್ಯೋ ನನ್ನ ಮಗಳೇ, ಇಂತಿಂತಾ ಸಾವಕಾರ್ಯೆಲ್ಲಾ ಸೋತ್ರು. +ಬೂಮಿ ಮೇಲೆ ಯಾರೂ ಇಲ್ಲ. +” “ದೊಡ್ಡ ಹಾಲಕ್ಕಿಗೌಡಗೋಳು ಅಂತ ಹೇಳತೀ. +ಇಂದು ಊಟಕ್ ಹೇಳು” ಹೇಳಿ, ಹಿಕ್ಮತ್ ಹೇಳಿ ಕೊಟ್ತು ತಂದಿಗೆ, “ಹಾಲಕ್ಕಿಗೌಡ ಹೌದೋ, ಅಲ್ಲವೋ ಹೇಳತೇನೆ” ಅಂತು. +ದುಡ್ಕೊಟ್ಟು ಹೋಗಬೇಕಾದ್ರೆ ತಂದೆ ಕೈರಟ್ಟೆ ಹಿಡ್ದು ಊಟಕೆ ಉಳಿಸಿದಾ. . . ಕಡಿಗೆ ಊಟಕ್ ತಯಾರಾತು. +“ಶಾನಕೆ, ಬೋಜಣಕೆ ಯೇಳು” ಅಂದಾ. +ಯೆಲ್ಲಾ ಬಟ್ಟೆ ಚೀಲ ಅಲ್ಲಿ ತಂದಿಟ್ಟಾ. +ಸಾನಕ್ ಹೋದ್ರು ಯೆರಡೂ ಜನ ಮಾವ-ಅಳಿಯ. +ಯೆರಡೂ ಜನ ಊಟಕ್ ಹೋಗ್ತಲೆಯ ಈ ಹುಡುಗಿ ಯೇನ್ ಮಾಡ್ತು? +ಮೆತ್ತಿನ ಮೇಲಿಂದ ಬಂದು, ಅವನ ಚೀಲ- ರೂಪಾಯ್ ಹಾಕ್ದ ಚೀಲ ತಕೊಂಡ್ ಮೆತ್ತಿನ ಮೇಲೆ ಹೋಯ್ತು. +ಇವ ಊಟ ಮಾಡ್ ಬಂದ್ಕೊಂಡ್ ಕವಳ-ಬಿವಳ ಹಾಕಿ, ಯೆಲ್ಲಾ ಹುಡ್ಕದ. +“ಮಾವಾ, ನನ್ನ ರೂಪಾಯ್ ಕಟ್ಕಬರು ಚೀಲ ಇಲ್ಲಿ ಇಟ್ಟಿದ್ದೆ. . . ಇಲ್ಲ. . . ” ಹೇಳ್ದ. +“ಯೆಲ್ಲೋ ತಮ್ಮ, ಬಿದ್ ಹೋತು. +ನನ್ ಹತ್ರ ಹೊರೆ ಚೀಲ ಪಿಂಡಿ ಐತೆ. +ಬೇಕಷ್ಟ್ ತಕಂಡ್ ಹೋಗು” ಹೇಳ್ ಹೇಳ್ದ. +ಇವ, “ಆಗೋದಿಲ್ಲ. +ನಂದೇ ಬೇಕು” ಹೇಳ್ ಹೇಳ್ದ. +ಅವನಿಗೆ ಇವನಿಗೆ ಮಾತ್ ಬಂತು. +ಅವ ವಂದ್ ಹೇಳ್ದ; ಇವ ವಂದ್ ಹೇಳ್ದ. +ಜಗಳದ ಮಾತ್ ಬಂತು. +“ಹೇ!ನೀನು ಫೋಕ್ರಿ. . . ಹಾಲಕ್ಕಿ ಗೌಡ ನೀನು, ಸಾವಕಾರ್ರ ಮಗಲ್ಲ” ಹೇಳಿ ಹೆಣ್ ಕೊಡು ಮಾವ ಹೇಳ್ದ. +ಹಂಗೇ ಮೊಕಾ ಸಣ್ಣ ಮಾಡಿ ಮನಿಗ್ ಬಂದಾ ಸಣಕೂಸ. +ಹಿರೇ ಅಣ್ಣನ ಕೂಡ ಹೇಳ್ದ, “ನನ್ನ ಗೋಣಿ ಚೀಲ ಇತ್ತು. +ದನಕಾವು ಹುಡ್ಗರು ಯಾರೊ ತಕೊಂಡು ಹೋದ್ರೋ. +ನಿನ್ನ ತೊಪ್ಪೀನಾ ತಲಿಗಾರು ಹಾಕ್ತೀನಿ ಕೊಡು” ಅಂದ ಅಣ್ಣನ ಕೂಡೆ. +“ತಕೊಂಡ್ ಹೋಗು. +ನನಗೆ ಕೆಲಸಕ್ಕೆ ಬರೋದಿಲ್ಲ. . . ಹಿರಿಯೋರ ಬದ್ಕು” ಹೇಳಿ, “ಅಲ್ಲಿ ಇಟ್ಟಿದೆ. . . ” ಅಂದ. +ಆವಾಗ ತಕೊಂಡು ಮನಿಗ್ ಬಂದ. +ಸಂಜೆ ಕಡಿಗೆ ಮೂರು ಕಪ್ಪಿಗೆ ಯೇನ್ ಮಾಡ್ದಾ? +ಆ ತೊಪ್ಪಿ ತಲಿಗ್ ಹಾಕ್ದ, ನುಶಿಯಾದ! ನುಶಿಯಾಗಿ. . . ಆ ಹುಡ್ಗಿ ಮೇಲುಪ್ಪರ್ಗಿ ಮೇಲಿತ್ತಲ್ಲ.. . ಅಲ್ಲಿ ನುಸಿಯಾಗಿ ಹೋದ. +ಮನ್ಗಬೇಕಾರೆ, ತಲಿಗ್ ದಿಮ್ಮಿ ಮಾಡಿಹಾಕಿತ್ತು ಹುಡ್ಗಿ. +ಆವಾಗ ಯೇನ್ ಮಾಡ್ದಾ. +ಹಗೂರ್ಕ ನುಶಿಯಾಗಿ ತಲೆವಳ್ಗ್ ಕೈ ಹಾಕತಂಕೇ ಹುಡ್ಗಿ ಯೆಚ್ಚರಾತು. +ಹೀಗೆ ಕೈ ಹಿಂಗ್ ಮಾಡ್ತು ಹುಡ್ಗಿ. +ತೊಪ್ಪಿ ಕಳ್ಚ್ ಬಿತ್ತು, ಇವ ಮನಶಾದ. +ಹುಡ್ಗಿ ಕೂಗ್ಬಿಟ್ತು, “ಯಾರೋ ಬಂದೊ” ಹೇಳಿ ಕೂಗಿದ ಗಳಿಗೆಗೆ ತೊಪ್ಪಿ ಹುಡ್ಗಿಗಾತು. +ಪಾರೆಗಾರ್ರು ಬಂದು ಅವನ ಹಿಡಿದದ್ದು, ಹೊಡ್ದ್ ಹೊಡ್ದು ಜೀವ ವಂದ್ ಬಿಟ್ರು. +ಮತ್ ಮನಿಗ್ ಬಂದಾ. +ಬಂದ್ಕೊಂಡು ಕಿರೇ ಅಣ್ಣ ಇದ್ನಲ್ಲ? +ಅಲ್ ಹೋದ. “ಅಣ್ಣ. . . ” ಅಂದ, “ಹಗರೆ ನನ್ಗ್ ಯೇನಿಲ್ಲ. +ಚೀಲ ಇತ್ತು ಯಾರೋ ತಕಹೋದ್ರು. +ತೊಪ್ಪಿ ಇತ್ತು. +ಅದೂ ಯಾರೋ ತಕೋ ಹೋದ್ರು. +ನಿನ್ನ ಹರ್ಕ ಕಂಬಳಿಚಪ್ಪಾರೂ ನನ್ಗೆ ಕೊಡು, ಕುಂದ್ರಕಾರು ಅಕ್ಕು. . . ” ಅಂದ. +ಅವ ಕೊಟ್ಟ, “ತಕೊಂಡ್ ಹೋಗು” ಹೇಳಿ. +ಅದ್ ತಕೊಂಡ್ ಮನಿಗ್ ಬಂದ. +ಬಂದ್ಕೊಂಡ್ ಐನೂರು ರೂಪಾಯ್ ತಕ್ಕೊಂಡು ಪೇಟೆಗ್ ಹೋದ. +ಬೇಕಾದ ಬಣ್ಣದ ಬಳೆ ಐನೂರು ರೂಪಾಯಿಗೆ ತಕೊಂಡ. +ದೊಡ್ಡ ಬಳೇಸಾಬ್ರ ಮಾಡಕೊಂಡು, ಹಾಂಗೇ ಶಾವಕಾರ್ರ ಮನಿಗೆ ಬಳೆ ತಕೊಂಡ್ ಹೋದಾ. +“ವಡಿಯಾ, ನಾನು ತೋಲ ವರ್ಸಾತು ಬರಲಿಲ್ಲ. +ನಿಮ್ಮ ಮನಿಗೆ. +ನಿಮ್ಮ ಮಗಳಿಗೆ, ನಿಮ್ಮ ಹೆಂಡ್ತಿಗೆ ಬೇಕಾದಂತಾ ಬಳೆ ಇಡಿ. +ಬಂಗಾರದಂತಾ ಬಳೆ ತಂದೀನಿ. +ಬೇಕಷ್ಟು ಇಡಿ. . . ” ಅಂದ. +ಆವಾಗ ರಾಜನ ಹೆಂಡ್ತಿ ಬಂತು. +ಬೇಕಾದಂತಾ ಬಳೆ ಇಡ್ತು; ಮಗಳಿಗೆ ಕರಕೊ ಬಂತು. +ಬಂದು ಆ ಕಂಬ್ಳಿಚಪ್ಪ ಹೀಗ್ ಹಾಸಾನೆ. +ಬಳೆ ಕಂಬ್ಳಿಮೇಲ್ ಇಟ್ಕೊಂಡಾನೆ. +ಹುಡ್ಗಿ ನೆಲ್ಕ ಕುಂತೆಬಿಡ್ತು. +ಗಟ್ಟಿ ನೋಡಿ ಎರಡು ಬಳೆ ಕೈಗ್ ಇಟ್ಟ ಅವ. +ಕೈಗ್ ಹತ್ತದಿಲ್ಲ ಬಳೆ. +ಕಡಿಗ್, “ಅಮ್ಮಾ, ನಿಮ್ಮ ಮಗಳು ನನ್ನ ಕಂಬಳಿ ಮೇಲೆ ಕುಂತ್ರೆ ಕೈ ಸಲ್ಪ ಸುಸರಾಗತೈತೆ” ಅಂದ. +ಆವಾಗ ಕುಂತಬಿಡ್ತು. “ಅಮ್ಮಾ. . . ನಿಮ್ಮ ಮಗಳಿಗೆ ಕೈ ಗಟ್ಟಿ ಐತೆ.. . ವಳ್ಗ್ ಹೋಗಿ ಸಲ್ಪ ಬೆಣ್ಣೆ ತಕೊಬರ್ರಿ. . . ” ಅಮ್ಮ ವಳ್ಗ್ ಹೋತು. +ವಳ್ಗ್ ಹೋಗಿದ್ ಗಳಿಗಿಗೆ ಇವ, “ಬೆಟ್ಟಕು ಜಾವ್ ಕಂಬಳಿ. . . ” ಅಂದಾ. +ಬಳೆ, ಈ ಹುಡ್ಗಿ, ಇವ, ಕಡಿಗೆ ಕಂಬಳಿ ಯೆಲ್ಲಾ ದೇಸಾಂತ್ರ ಹೋತ್ರು. +ಅಡವಿ ವಳಗೆ ಸುಮಾರ್ ಹೋಗತನಕ ಇವ, “ಬೈಟೋ ಕಂಬಳಿ” ಅಂದಾ. +ಕಂಬಳಿ ಇಳೀತು. +ಹುಡ್ಗಿ ಹೇಳ್ತು, “ಮೆತ್ನಲ್ಲಿ ಇದ್ಕೊಂಡು ಬೇಕಾಗಿದ್ದ ಹಾಲು, ಮೊಸರು ತಿಂದಂತಾ ಹುಡ್ಗಿ ನಾನು. . . ನನ್ನ ಜೀವನದಲ್ಲಿ ಗಾಸಿಯಾತು. +ಸಲ್ಪ ನೀರ್ ತಂದ್ ಕೊಡಿ” ಅಂತು. +ಇವ ನೀರ್ ಹುಡುಕ್ತಾ ಅಡವಿವಳ್ಗ್ ಹೋದ. +ಅದ್ರ ಮೇಲೆ ಹುಡುಗಿ, “ಗರಕು ಜಾವ್ ಕಂಬಳಿ” ಅಂತು. +ಬಳೆ, ಹುಡುಗಿ ತಕ್ಕೊಂಡು ಬಂತು ಅಂಬರದ ಮೇಲೆ ಕಂಬಳಿ ಸುಮಾರ ಮನೆ ಗುರ್ತಾ ಕಂಡ್ಕೊಂಡು. +“ಮೈತ್ತಿಕು ಬೈಟೊ” ಅಂದ ಆ ಹುಡ್ಗಿ ಮೆತ್ತಿನ ಮೇಲಿಳಿತು. +ಕಂಬಳಿ ತಕ್ಕೊಂಡು ಬಳೆ ತಕ್ಕೊಂಡ್ತು. +ಸ್ವಸ್ತ ಕೂತ್ಕೊಂಡ್ತು. +ಇವ ಸುಮಾರ್ ಹೊತ್ತಿನ ಮೇಲೆ ಬಂದ್ಕೊಂಡ್, “ಹರಹರಾ, ಇದ್ದಿದ್ ಬದಕು ಕಳಕೊಂಡು ಇನ್ ಸಾಯಂಕಾಲ ಬಂತು. +” ಆವಾಗ ವಂದ್ ದಾರಿ ಹಿಡ್ಕೊಂಡ್ ಮುಂದಕ್ ಹೋದಾ. +ಅಲ್ ವಂದ್ ಸಣ್ಣ ಕೆರೆ, ಕೆರೆ ಬುಡ್ಕೆ ಯೇನಾಗೈತೆ? +ಅಲ್ ಯೆರಡ್ ಬಾಳೆಕೊನೆ ಇತ್ತು. +ಇವನಿಗೆ ವಳ್ಳೇ ಹಸ್ವಾಗಿತ್ತು. +ಮುರಿದಾ ವಂದ್ ಹಣ್ ತಿಂದಾ, ವಂದ್ ಕೋಡ್ ಬಂತು. +ಯೇಲಲಿಲ್ಲ.. ಹೋಗಕಾಗದೆ ಅಡ್ಡ ಬಿದ್ದ. +ಆವಾಗ ಪಾರ್ವತಿ-ಪರಮೇಶ್ವರ ಹೇಳೂ ವಂದೇ ವಾಕ್ಯ, ಬಾಕಿ ಯೇನಿಲ್ಲ. +ಗಂಡ - ಹೆಂಡ್ತಿ ರಾಜಸಂಚಾರ ಮಾಡಕ್ ಹೋಗಬೇಕಾದ್ರೆ ಹೆಂಡ್ತಿ ಕೇಳ್ತು- ಗಂಡನ ಹತ್ರ, “ಇಂತಾ ಗೋರಾರಣ್ಯದಲ್ಲಿ ಯಾರೋ ನಮ್ಮ ಬಾಳ ಸ್ಮರಣೆ ಮಾಡ್ತಾರೆ. +ಅಲ್ ಹೋಗ್ವೋ” ಅಂತು. +ಗಂಡ ಹೇಳ್ದಾ, “ಬೇಡಾ, ಅದ್ಯಲ್ಲಾ ಕೇಳ್ತಾ ಹೋದ್ರೆ ಸಾದ್ಯಿಲ್ಲ. . . ಹೋಗೋಣ” ಅಂತ ಗಂಡ. +ಹೆಂಡ್ತಿ ಯೇನ್ ಮಾಡದ್ರೂ ಕೇಳೂದಿಲ್ಲ. +ಹೋಗಲೇ ಬೇಕಂತ ಬಂದ್ರು. +ಬಂದ್ ನೋಡತನಕಾ ಕೋಡ ಬಂದಿ ಇವ ಬಿದ್ದನೆ. +ಗಂಡ ಇಷ್ಟ್ ಅದೇ ಕೆರೆ ನೀರ ತಂದ, ಸಲ್ಪ ಬಾಯಾಗ್ ಹಾಕ್ದ. +ಸಲ್ಪ ಕೋಡ ಮೇಲೆ ಬಿಟ್ಟಾ. +ಕೋಡ್ ಕರ್ಗ್ ಹೋಯ್ತು. +ಸಾಪಿದ್ (ಸಾಬೀತ್) ಮನ್ಶಾದ. +“ಅದೇ ಕೆರೆನೀರು ಸಲ್ಪ ಬಾಯಾಗ್ ಹಾಕಬೇಕು. +ಸಲ್ಪ ಕೋಡಿನ ಮೇಲೆ ಬಿಡಬೇಕು” ಅಂತ ಹೇಳ್ದ ಪರಮೇಶ್ವರ. +ಅವ್ರ್ ಗಂಡಾ-ಹೆಂಡ್ತಿ ಹೋಗಬಿಟ್ರು. +ಇವ ಯೇನ್ ಮಾಡ್ದ? +ಚಾಕಿತು ಅವನ ಕಯ್ಯಾಗೆ. +ಕಾಯಿದ್ದುದು ಬಾಳೆಕೊನೆ ಕಡ್ಕೊಂಡ. +ಅದೇ ಕೆರೆನೀರು ವಂದ್ ವಾಟೆ ಅಂಡೇಲಿ ತುಂಬ್ಕೊಂಡಾ ಮನೆಗ್ ಬಂದಾ. +ಬಂದ್, ಬಾಳೆಕೊನೆ ಹುಲ್ ಹಾಕ್ಕಂಡು ಹಣ್ ಹಾಕ್ದ. +ಯೆಂಟ್ ದಿವ್ಸಕ್ ಬಾಳೆಕೊನೆ ಹಣ್ಣಾಗಿ ಯೇನ್ ಗಮಗುಟ್ತು. +ಆವಾಗ ಬೆಳ್ಗಾ ಮುಂಚೆ ಗನಾದೊಂದ್ ಕತ್ತಿಕೊಕ್ಕೆ ಸೊಂಟಕ್ ಕಟ್ದಾ. +ಆ ಬಾಳೆಹಣ್ಣ ಕೊನೆ ಹೆಗ್ಲ ಮೇಲ್ ತಕ್ಕೊಂಡಾ ರಾಜನ (ಸಾವಕಾರ) ಮನಿಗೆ ಹೋದಾ. +“ಓ ವಡ್ಯಾ. . . ” ಅಂದಾ. +“ಯೇನ್ ಹೇಳದು ವಡ್ಯಾ. +ನಾನ್ ಗಟ್ಟಕ್ ಹೋಗಿದ್ದೆ. +ಅಲ್ ವಂದ್ ಗನಾ ರಸಬಾಳೆಕೊನೆ ಇತ್ತು ವಡ್ಯಾ. +ಹತ್ ರೂಪಾಯ್ ಕೊಟ್ ತಕೊಬಂದೆ. +ನಮ್ಮಂತಾರ್ ತಿಂಬುದಲ್ಲ ವಡ್ಯಾ. +ನಿಮ್ಗೆ ಹೇಳ್ ತಕೊಂಡ್ ಬಂದೆ” ಹೇಳ್ದ. +ಆವಾಗ ಸಾವಕಾರ್ರು ಹತ್ ರೂಪಾಯ್ಕೊಟ್ಟು ಮನಿಗ್ ತಕೊಂಡ್ ಬಂದಾ. +ಪರಮಾಳಕೆ ಯೆಲ್ಲಾ ಬಂದ್ರು. +ಯೆರಡೆರಡು ಹಣ್ಣ ಮುರ್ದಾ, ಯೆಲ್ಲಾರಿಗ್ ಯೆರಡೆರ್ಡ್ ಹಣ್ ಕೊಟ್ಟಾ. +ಯೆಲ್ಲಾ ಸೊಲದಿ ತಿಂದ್ರು ಯಲ್ಲಾರೂವಾ. +ತಲೆಮೇಲೆ ಇಂತಿಂತಾ ಯೆರಡೆರಡು ಕೋಡ್ ಬಂತು. +ರಾಜ ಹೇಳ್ದ, “ಆಗ ಬೇಕಾದ್ರೆ. . . ಈ ಕೋಡ ತೆಗ್ದ ಹಾಕದ್ರೆ ಯಾರಾದ್ರೂವ ತನ್ನ ಮನೆಮಾರು, ದುಡ್ಡು, ದುರುವೆಯೆಲ್ಲಾ ಅರ್ಧ ಕೊಡ್ತೀನಿ, ಮಗಳ ದಾರೆಯೆರ್ದ ಕೊಡ್ತೇನಿ” ಹೇಳಿ ದಂಗ್ರ ಸಾರ್ದಾ ಲೋಕಕ್ಕೆ. +ಆವಾಗ ಆಚಾರ್ರು ಸುದ್ದಿ ಕೇಳ್ದ, “ನಾವು ಮರ ಕಡ್ದು ಸಪಾಯ್ ಮಾಡ್ತೀವಿ. . . ” ಅಂತ ಹೇಳಿ- ಉಳಿ, ಬಾಚಿ, ಕೊಡ್ಲಿ ಯೆಲ್ಲಾ ತಕೊಬಂದ್ರು. +ಹೊಡ್ದ ಗಳಿಗೆಗೆ ಉಳಿ, ಬಾಚಿ ಬಾಯ್ ಹೋಗತೈತೆ, ಕೊಡ್ಲಿ ಮುರ್ದ್ ಹೋಗತೈತೆ. +ಕಡಿಗೆ, ಕರಗಾಸ್ನರು, ಮರಕೊಯ್ವರು ಅವರ್ಗ್ ಸುದ್ದಿಯಾಯ್ತು. +ಅವ್ರು ಬಂದ್ರು. +ಕೋಡಿಗ್ ಹಾಕಿ ಉಗುತನಕಾ ಕರಗಾಸಿನ ಹಲ್ ಮುರ್ದ್ ಹೋತು. +ಇವ್ ಕೂಗ್ತವೆ. +ಕಡಿಗ್ ನಾಲ್ಕ್ ದಿವ್ಸದ ಮೇಲೆ ಸಣ್ಣಕೂಸ ದೊಡ್ಡ ಸನ್ನೇಸಿ ಬಾವಾಜಿ ಮಾಡ್ದ. +ಆ ಸಂಜಿ ಕಡಿಗೆ ರಾಜನ ಪೇಟೀಗ್ ಬಂದಾ. +ವಂದಜ್ಜಿ ಮುದ್ಕಿ ಮನೆಗ್ ವಂದೇ ಮಗಿದ್ದ. +ಅದ್ಕ ಥಂಡಿಯಾಗಿ ಅಡ್ಡ ಬಿದ್ದಾನೆ. +ಪರಾಣ ಹೋಗ್ತಿತ್ತು. +ಅಲ್ಲಿ ಅವ, “ಅಜ್ಜವ್ವಾ ಹೆದ್ರಬೇಡಾ” ಹೇಳ್, ಸಲ್ಪ ಕೆರೆನೀರು ಬಾಯಿಗ್ ಹಾಕ್ದ. +ಕಡಿಗ್ ಬೆಳ್ಗಾಗ ಗುಲ್ ಬಿದಹೋತ್‌. +“ಅಜ್ಜಿ ಮುದ್ಕಿ ಮನಿಗೆ ವಂದ್ ಬಾವಾಜಿ ಬಂದಾನೆ. +ಅಜ್ಜಿಮುದ್ಕಿ ಮಗನಿಗೆ ಸಾಯುವವನಿಗೆ ಗುಣ ಮಾಡ್ದ. +ಅವ ಕೋಡ ತೆಗೆದಾನು” ಹೇಳಿ ಸುದ್ದಿ ಬಿತ್ತು. +ಸಾವಕಾರಿಗೆ ಸುದ್ದಿಯಾಗಿ ಪೇಟೇಲಿದ್ ಜನರಿಗೆ, “ಕರಕೊಂಡ್ ಬಾ” ಹೇಳಿ ಕಳ್ಸಕೊಟ್ಟ. +ಕಡಿಗೆ ಅವನ ಕೂಡ ಹೇಳುತನಕ ಇವ ಹೇಳತಾನೆ, “ಯೆಮ್ಮಿಕರವಿಗೆ, ಗಮಯಗೆ ಕೋಡ್ ಬರ್ತಾದೆ. +ಮನ್ಸರಿಗೆ ಬರೋದಿಲ್ಲ ಅಲ್ಲಾ! +ರಾಜನ ಹೆಂಡ್ತಿಗೆ ಕೋಣ ಹಾರಿತ್ತೊ? +ಯೆಮ್ ಹಾರಿತ್ತೊ? +” ಕೇಳ್ತಾನೆ ಅವ. +ಅವ್ರ್ ಬಂದ್ ಹಾಗೇ ರಾಜ್ನ ಕಯ್ಯಾಗ್ ಹೇಳಿದ್ರು. +ಮತ್ ಯೇನ್ ಹೇಳ್ದ ರಾಜ? +“ಹಾಗಲ್ಲ, ನೀನ್ ಹೋಗಿ ಕೋಡ್ ತಗದರೆ ಅರ್ದ ರಾಜಿ, ಮನೆಮಾರು, ತನ್ನ ಮಗಳ ಯೆಲ್ಲಾ ಕೊಡ್ತೇನಿ. +ಅವರ ಕರಕೊಬರಬೇಕು” ಹೇಳ್ ಹೇಳ್ದ. +ಆವಾಗಿವ ರಾಜರ ಮನಿಗ್ ಹೋದಾ. +ರಾಜರ ಕೇಳಿದ್ರು, “ಈ ಕೋಡ ತಗಿತ್ಯೋ ಯೇನು?” “ತಗಿಲಿಕ್ಕೆ ಅಡ್ಡಿಲ್ಲ. +ವಂದ್ ವರ್ಸಾಬೇಕು. +ವಂದ್ ಸಾವ್ರ ಜನ ಬೇಕು. +ಕೋಟಿಕಟ್ಲೆ ದುಡ್ ಬೇಕು. +ಆದ್ರೆ ತಗೀತೇನಿ.” +“ಅಡ್ಡಿಲ್ಲಾ, ಯೆಷ್ಟೂ ದುಡ್ ತಾಗ್ಲಿ. +ಯೆಷ್ಟೂ ಜನ ಬೇಕಾದ್ರೂ ಕೊಡ್ತೇನೆ” ಹೇಳಿ, ರಾಜ ವಂದ್ ಸಾವ್ರ ಜನ, ಯೆರಡ ಕೊಪ್ಪರಗಿ ಹೊನ್ನ ಕೊಟ್ಟ. +ಇವ ಹೋಗಿ ಆಳು ಯೆಲ್ಲಾ ಮರನ ಬೇರ ಕೀಳೋದು, ಕೊಪ್ಪರಿಗಿಲ್ ಬತ್ಸೋದು. +ಬೆಳಗಾಮುಂಚೆ ಕಾಯಿಶಿಪ್ಪೆ ತಕೊಂಡು ಬರೋದು, ಆ ನೀರಾಗದ್ದೋದು, ತಕಂಡು ತಿಕ್ಕೋದು “ಅಯ್ಯಯ್ಯೋ!” ಹೇಳ್ ಕೂಗ್ತಾರೆ. +ಅವನಿಗ್ ಬಯ್ತಾರೆ ಅವ್ರು. +ಅವ ಲೆಕ್ಕದಂತೆಯ ಸುಮಾರ್ ವರ್ಸಕ್ ಬಂತು ರಾಜನ ಅರ್ದ ದುಡ್ ನಿಕಾಲ್ಯಾತು, ಕೋಡು ಹೋಗೋದಿಲ್ಲ. +ಕಡಿಗ್ ವಂದಿವ್ಸ ರಾಜನ ಹೆಂಡತಿಗೆ, ರಾಜನಿಗೆ, ಬಾಕಿ ಜನರಿಗೆ ನೀರ್ ಹಾಕ್ದ ಬಾಯಾಗೆ, ಕೋಡಿನ ಮೇಲೆ ಬಿಟ್ಟ. +ಕೋಡ್ ಯೆಲ್ಲಾ ಕರ್ಗ ಹೋಯ್ತು. +ಹುಡ್ಗಿಗ್ ಯೇನ್ ಮಾಡ್ದ? +ರಾಜನ ಬರವಸ್ಗಿಲ್ಲ. +ಅವನೊಂದ್ ಮೊಳ ಕೋಡ್ ಬಿಟ್ಟು ಮೇಲಗೇ ಕತ್ತರ್ಸಿದ. +ಕಡಿಗೆ ರಾಜ ಹೇಳ್ತಾನೆ, “ನನ್ನ ಮಗಳಿಗೆ ಪೂರ್ಣ ತೆಗಿ.” +“ನನ್ನ ಹೆಂಡ್ತಿಗೆ ನಾ ಯಾವಾಗೂ ತಗೇತೀನಿ, ಯಾವಾಗೂ ಬಿಡ್ತೇನಿ. +ನನ್ಗ್ ಮದ್ವಿ ಮಾಡಕೊಡು. +ನಿನ್ನ ಮಗಳ. . . ” ಹಾಂಗೆ ನಾಕ ದಿವಸಕ್ ಯೆಲ್ಲಾ ತಯಾರ್ ಮಾಡಿ ಬಂದ್-ಬಳಗಯೆಲ್ಲಾ ಕರಸಿ, ಮದವಿಗ್ ತಯಾರು ಮಾಡಿದ. +ಆವಾಗ ಐದು ದಿವ್ಸ ಮಾವನ ಮನ್ಯಲ್ಲಿ ಉಳ್ದ. +ಮೂರು ದಿವ್ಸ ಇತ್ತು ವಂದ್ ವರ್ಸಕೆ. +“ಆವಾಗ ಮಗಳ ಮಾತ ಕೇಳಿ, ಊಟಕೆ ಉಳ್ಸಿದ್ದಿ ತನಗೆ. +ನಾನು ಸಾನಕ್ ಹೋಗ್ತಲೇ ನನ್ನ ಗೋಣಿಚೀಲ ಕದಕೊಂಡ್ ಹೋತು ನಿನ್ನ ಮಗಳು. +ಅದೇ ರೀತಿಯಂತೆ ಅಂತ ಹೇಳಿದ್ದಿ ನನಗೆ. +ಈಗ ಯಾರಿಗೆ ಮದ್ವಿ ಮಾಡಿಕೊಟ್ಟೆ? +ಗೋಣಿಚೀಲ, ವಂದ್ ತೊಪ್ಪಿ ಕಂಬಳಿಯೆಲ್ಲಾ ತಂದ್ ಕೊಡಿ. . . ” ಹೇಳ್ದ ಅಳಿಯ. +ಕಡಿಗೆ ಅರ್ದ ರಾಜಿ, ನೆಮಾರು ಇದ್ದದ್ದೆಲ್ಲಾ ಕೊಟ್ಟು, ಮಗಳ ಕೈದಾರಿಯೆರೆದು ಕೊಟ್ಟ. +ಸಣ ಕೂಸಾ ರಾಜನ ಮಗಳ ಕೋಡ ನೀರ ಹಾಕಿ ಕರಗಿಸಿಬಿಟ್ಟ. +ಯೆಲ್ಲಾ ಕೊಟ್ಟ ನಂತರ ಅವನ ಮನಿಗೆ ದಿಬ್ಬಣ ಮಾಡ್ ಕಳ್ಸದ. +ಗೋಯಿಂದ ಗೌಡನ ಮಗ ಸಣಕೂಸ ಲಕೋಪತಿಯಾಗಿ ಅಣ್ಣದಿಕ್ಳಯೆಲ್ಲಾ ಕರ್ಸ್ಕೊಂಡು ಉಳಿದ. +ವಂದೂರಲ್ ವಂದು ಗಫೂರ ಸಾಯ್ಬ ಹೇಳಿದ್ದ. +ಸಾಯ್ಬಗೆ ಯಾರಿಲ್ಲ- ಒಬ್ಬನೇ‌. +ಮೂರು ಬಳ್ಳಿ, ವಂದ್ ಕತ್ತಿ, ವಂದ್ ಕೊಡ್ಲಿ, ವಂದ್ ಕಂಬ್ಳಿ, ಹರ್ಕ ಜಡ್ಡಿ, ಹರ್ಕ ಬನಿಯನ್ ಅಷ್ಟೇ ಅವನ ಕೂಡೆ ಬಂದಿದ್ದದ್ದು. +ಅವ ದಿವಸಾ ಕಟ್ಗಿ ತರುಕ್ ಬೆಟ್ಟದಲ್ ಹೋಗುದು. . . ದಿವಸಾ ಬೆಳಿಗ್ ವಂದ್ ಹೊರಿ ತಂದ್ಕಂಡಿ ಮಾರಕಂಡ್-- ಅರ್ಧ ಪಾಲು ಹಜಾಮಂಗ್ ಕೊಡುದು, ಅರ್ದ ಪಾಲು ಹೊಟ್ಟಿಗ್ ತಿಂಬುದು‌, ಅರ್ದ ಪಾಲಿದ್ದದ್ದ ಧೋಬ್ಯರಿಗೆ ಕೊಡುದು- ಬೂಟ್, ಪೇಂಟ್, ಸೂಟ್ ಯೆಲ್ಲಾ ಹಾಕಿ, ಬೈಸ್ರ್ ಹೊತ್ತಿಗೆ ತಿರ್ಗೂಕ್ ಹೋಗೂದು. +ದಿವಸಾ ಇದೇ ದಂದಿ ಅವನ್ದು. +ಹೀಗೇ ನೋಡಿ ನೋಡಿ-- ಮೂರ್ ನಾಲ್ಕ್ ಹುಡ್ಗರಿಗಿ ಹೊಟ್ಟೆ ಕಿಚ್ ಬಿತ್ತು. +ಬೆಳಿಗ್ಗಿ ಕಟ್ಗಿ ಹೊರಿ ತಂದ್ಕಂಡ್, ಬೈಸ್ರ್ ಹೊತ್ತಿಗ್ ತಿರ್ಗುಕ್ ಹೊಂಟ್ಯ ಇವ. +ವಂದಿವ್ಸ ಯೇನ್ ಮಾಡ್ದರವರು? +ಬೈಸಿರ್ಗ್ ಅವ ತಿರಗೂಕ್ ಹೋದಾಗಿ-- ಕೊಡ್ಲಿ, ಕತ್ತಿ ನೆಕ್ಕಂಡದ್ದು, ಅವ್ನ ಕೊಟಗಿಗ್ ಬೆಂಕಿ ಹಾಕದ್ದು. +ಬಂದವರು ಅವ್ರ ಮನಿಗ್ ಹೋದ್ರು. +ಊರ್ ತಿರ್ಗೂಕ್ ಹೋದವ ಇವ ಬಂದಾ. +ಇವ್ನ ಬನ್ಯನ್, ಚಡ್ಡಿ ಯೆಲ್ಲ ಸುಟ್ ಹೋಯ್ತು. +ತೀಡಿ ತೀಡಿ, ಆ ಬೂದಿಲೇ ಹೊರಳಾಡೂಕ್ ಹಣ್ಕಾದ. +ಆಗ ವಂದ್ ರಾತ್ರಿ ಅಲ್ ಕಳದಿ, ಹೀಗೇ ಗಟ್ಟದ ಬದಿಗ್ ನೆಡ್ದ. +ವಂದ್ ಅಂಗಡಿಗ್ ಹೋದ, ವಂದ್ ಬ್ರಾಹ್ಮಣ ಶಿಕ್ದ- “ಅಪಾ. . . ನೀ ಯೆಲ್ಗ್ ಹೋಕ್ ಬಂದವ? +ವಂದ್ ತಿಂಗಳ ಕೆಲ್ಸ ಕೊಟ್ಟಿ, ಹೊಟ್ಟಿ ತುಂಬ್ವೊಟ್ ಅನ್ನ ಹಾಕ್ತಿ ನಿನ್ಗೆ ನಾನು. . . ” “ಕಟ್ಗಿ ಹೊರಿ ತರು ಕೆಲ್ಸಾ ಮಾಡ್ತಿದ್ದೆ ನಾನು” ಆ ಬ್ರಾಹ್ಮಣಂಗ್ ಯೇನಾಯ್ತು? +“ಹಾ! ಆಗ್ಲಿ. . . ” ಹೇಳ್ದ. +ಅವನಿಗೆ ಕರಕಂಡ್ ಹೋದ. +ಅವರ ಮನ್ಗ್ ಕಟ್ಗಿ ವಡೂದು ಆ ಕೆಲ್ಸ ಮಾಡ್ತೇ ವಳ್ದ. +ಆಯ್ತು ಹದ್ನೈದ ದಿವ್ಸ ಅವರ ಮನೆಗಾಡಿಗಿದ್ದ. +ವಂದು ಆಳು ಅವನಿಗ್ ಆರಾಮಿಲ್ಲಾಗಿತ್ತು. +ಅದ್ರ ನಂತ್ರ ಬ್ರಾಹ್ಮಣ, “ಮತ್ ನಿನ್ಗ್ ಯಾವ ಕೆಲ್ಸ ಕೊಡುದೆಲ್ಲ ಹೇಳದ್ ಖರೆ, ನನ್ದ್ ವಂದ್ ಕೆಲ್ಸ ಮಾಡಬೇಕು” “ಯಾವ ಕೆಲ್ಸ. . . ?” +“ರಾಶಿ ಗಾಡಿ ಹೋಗೂದಿತ್ತು, ಗಾಡಿ ನೆಡ್ಗ್ ಗಾಡಿ ಹಾಕಂಡಿ ನಿನ್ಗ್ ಕೊಡ್ತಿ. . . ಬೆಂಗಳೂರಿಗ್ ಹೋಗಬೇಕು. ” +“ಶೀ. . . ಶೀ!ಅದಾಗುದಿಲ್ಲಪ್ಪ ನನ್ ಕೂಡೆ. . . ನಿನ್ಗ್ ಹೇಳಿದ್ದೇನು ಬುಡ್ದಲ್ಲಿ? +ನನ್ ಕೂಡ್ ಆಗೂ ಕೆಲ್ಸವೇ ಇಲ್ಲ. . . ” ಬ್ರಾಹ್ಮಣ ಇವನಿಗ್ ಯೇನು ವತ್ತಾಯಿಸ್ತ, “ಹೋಗು.. . ” ಹೇಳಿ. +ಇವ್ನಿಗೆ ಕಡೇಗೆ ಹಾಂಗೇ ನೆನ್ಪ್ ಬಂತು-- “ಹೋಗೂದ್ ಸಾಯ್ಲಿ, ಊರಾದ್ರೂ ನೋಡ್ಕಂಡಿ ಬಂದ ಹಾಗಾಯ್ತು” ಆ ಬ್ರಾಹ್ಮಣಗೆ ಪುಗ್ಸ್ದ್ ಹಾಗ್ ಮಾಡ್ದ. +“ನಿಮ್ಮ ಮನೇಲ್ ಇದ್ದ ಮೇಲೆ ನೀವ್ ಹೇಳ್ದ ಕೆಲ್ಸ ಮಾಡ್ಬೇಕಾಯ್ತಲ, ನಾ ಹೋಗ್ತಿ. . . ” ಹೇಳ್ಕಂಡಿ, ಗಾಡಿ ನೆಡುಗ್ ಹಾಕ್ಕಂಡ್ ಇವ್ನ್ ಕಳ್ಸ್ ಕೊಟ್ರು. +ಕಳಿಸಿ ಕೊಟ್ಟ ಮೇಲೆ ಬೆಂಗಳೂರ್‌ಗೆ ಹೋಗ್ ಮುಟ್ತು ಗಾಡಿ. +ಗಾಡಿ ಮೇನಂದ್ ಶಾಮಾನ ಯೆಲ್ಲೆಲ್ ಸೊರ್ಗುದಿದ್ಯೋ ಅಲ್ಲಲ್ ಸೊರ್ಗದ್ರು. +ಸೊರಗಿ ಕಟ್ಟೆ ಮೇನ್ ಕೂತ ನಂತ್ರ. . . ಯೆರಡ್ ಮಂದಿ ಅರಸೂ ಮಗ, ಮತ್ ಪರ್ದಾನಿ ಮಗ ಮ್ಯಾನ್ ಮೊಕದಲ್ ನೋಡ್ತೇ ಇದ್ರು. +ಅವರು ಅತ್ಲಾಗಿತ್ಲಾಗ್ ಯೆಲ್ಲೂ ನೋಡೂದಿಲ್ಲ. “ಏ. . . ! +ನೀವ್ ಯೇನ್ ನೋಡ್ತಿರು?” ಹೇಳ್ ಕೇಳ್ತ್ಯ ಇವ. +“ಯೇ. . . ನೀ ಹೋಗೋ.. . ನಮ್ಗ್ ಯೇನ್ ಕೇಳ್ತಿ ನೀನು?” ಕೇಳ್ತಿರು ಇವರು. + “ಯೇ. . . ನನ್ನ ಕೂಡ್ ಹೇಳು. . . ನಾ ನಿಮ್ಮ ಕೆಲ್ಸ ಮಾಡ್ಕೊಡ್ತಿ” ಹೇಳ್ದ ಇವ. +“ಮಾಡ್ ಕೊಡ್ತ್ಯ?” “ಹಾ!” ಹೇಳ್ದ ಇವ. +“ನಾವು ಈ ಲಕ್ಸ್ಮ್ ಸೋಳಿಗೆ ನೋಡಾಕಿ ಬರೂಕ್ ತಾಗಿ ನಾಲ್ಕ್ ವರ್ಶಾಯ್ತು. +ಇನ್ನೂ ನಮ್ ದೃಷ್ಟಿಗ್ ಬೀಳಲಿಲ್ಲ. +ಹಾಗ್ ಹೇಳ್ದ್ ನಾವು ಯೇನ್ ಪಾಪ ಮಾಡೇವಿ” ಹೇಳ್‌ದ್ರು. +“ಈ ಹೊತ್ತು ದೇವ್ರ ಕೂಡೆ ಪ್ರಾರ್ತನೆ ಮಾಡ್ಯಾರು ಯೇನ್ ಹೇಳಿ? +‘ವಂದ್ ವರ್ಶ ಬೇಕಾರ್ ಆಗ್ ಹೋಗ್ಲಿ. +ಅದ್ಕ್ ನೋಡ್ದ್ ಶಿವಾಯ್ ನಾವ್ ಬರೂದಿಲ್ಲ. +’ ಅಟ್ ಹೇಳ್ ನಾವ್ ದೇವ್ರ ಕೂಡೆ ಪ್ರಾರ್ತನೆ ಮಾಡ್ ಬಂದೀರು” ಹೇಳ್ದರು ರಾಜ್ನ ಮಕ್ಕಳು. +“ಹಾಗಾರ್. . . ನಾ ವಂದ್ ಕೆಲ್ಸ ಹೇಳ್ತೆ ನಿಮಗೆ, ನಿಮ್ಮ ಅಪ್ಪಂದು ರಾಜಂದು ಯೆಲ್ಲ ಪೋಶಕ್ ತರಬೇಕು. +ಚಿನ್ನದ ಪಾಲ್ಕಿ ತರಬೇಕು. +ಪಾಲ್ಕಿಯಲ್ ತನ್ ಕುಳ್ಸ್ ಬೇಕು. +ಸೂಳೆ ಮನ್ಗ್ ಹೋಗಬೇಕು-- ನೀವು ಬೋವಿಯಾಗಬೇಕು. +ಕಡೆಗೆ ನೀವ್ ಕಣ್ ತುಂಬಾ ನೋಡಿರಿ. . . ಯೇಷ್ಟ್ ನೋಡ್ತಿ ನೋಡ್ಬಿಡಿ’’ ಆ ರಾಜ ಮನ್ಗೆ ಇವ್ರು ವೊಡದ್ರು. +ಅದ್ ಯೆಲ್ಲಾ ವಸ್ತ್ರ ಮುಡಿಕಂಡು ಆ ಚಿನ್ನದ ಪಾಲ್ಕಿಯಾ ತೆಕಂಡ್, ಪಾಲ್ಕಿ ಹೊತ್ ಮುಟ್ಸದ್ರು. +ಇವ್ ಯೇನ್ ಮಾಡ್ದ ಹೇಳ್ದಿರಿ? +ಹಜಮತ್ ಮಾಡ್ಸಕ್ ಹೋಗಿ-- ಗಡ್ಡ ಮಾಡಿ, ಪೌಡರು, ಸ್ನೋ ಯೆಲ್ಲ ಹಚ್ಕಂಡಿ ಚೆಂದಾಗ್ ಕೂತ್ಯ. +ಅದ್ನಂತ್ರ, ಆ ಪಾಲ್ಕಿಯಲ್ ಕೂತ ಇವ ಗಫೂರ್ ಸಾಯ್ಬ ಅವರಿಗೆ ಯೇನ್ ಹೇಳ್ತ? +ಅರಸು ಮಗಗ್ ಮತ್ ಪರ್ದಾನಿ ಮಗಗ್ ಹೇಳ್ದ, “ನೀವ್ ಹೊಕ್ಕಂಡ್ ಕುಳ್ವದ ಖರೆ, ನಾನು ಫುಕಟ್ (ಸುಮ್ನೆ) ಹೇಳಿವೆ. +ತಾನು ಹಾಗೆ ಹೇಳದಾಗಿ ನೀವು ಅಲ್ ಸ್ವಲ್ಪ ಹೊತ್ತು ಸಹಾ ತಡೂಕಿಲ್ಲ. +ಈ ಪಾಲ್ಕಿ ಹಿಂದೇ ಹೊತ್ಕಂಡಿ ಬರುದು.” +ಆಗ ಹಾಗ್ ಹೊತ್ಕಂಡಿ, “ಹೋಯೋ. . . ಭೋಯೋ. . . ’’ ಮಾಡ್ಕಂಡ್ ತಂದ್ರು. +ಚೆನ್ನಾಗಿ ಪಾಲ್ಕಲ್ ಬತ್ಯ್. +ಆಗ ಪೊಲೀಸ್ರು ಯೆಲ್ಲಾ ನೋಡ್ಕಂಡಿ ನಮಸ್ಕಾರ ಹಾಕದ್ರು. +ಕಡೆಗಾ ಸೂಳಿ ಪಲಂಗ್-ಬಿಲಂಗ್‌ಯೆಲ್ಲಾ ಶೃಂಗಾರ್ಸಿ ಇಟ್ತು. +ಆ ರಾಜನ ಮಗ, ಪ್ರಧಾನಿ ಮಗ ನೆಲದ ಮೇಲ್ ಕೂತ್ರು. +ಇವ ಸೊಂಪನ ಮೇಲ್ ಕೂತ. +ಆಗ ವಂದು ಕೋಣನ ಹಾಗೆ ಆ ಬದಿಗ್, ಈ ಬದಿಗ್ ಕಣ್ ಮಣಿಸ್ತರು. +ಆ ಸೂಳಿಗ್ ಯೇನಾಯ್ತು? +“ಯೇ ರಾಮ! +ಚಿನ್ನದ ಪಲ್ಕಯಲ್ ಬಂದ್ಯ, ಇವ್ನಗ್ ಯೇನ್ ಕೊಟ್ಟಿದ್ ಕಡ್ಮ್ ಯಾಯ್ತು?” ಈ ಸೂಳಿಗ್ ಜೀವದಲ್ಲಿ ಘಾಬ್ರಿಯಾಗ್ ಹೋಯ್ತು. +ರಾಜನ ಮಗ, ಪ್ರಧಾನಿ ಮಗ ಕಣ್ ತುಂಬ ನೋಡ್ದ್ರು. +ಬೇಕಂತಾ ಕಾಣ್ (ತಿಂಡಿ) ತಂದು ಅವನ ಮುಂದ್ ಇಕ್ಕಿದು. +ಅದು ‘ಪುಕ್ಕಟೆ’ ಹೇಳ್ದ ಇವ. +ಪುಕ್ಕಟೆ ಹೇಳ್ದ ಮೇನ್ ಪಲ್ಕಿ ಅವರು ವಕ್ಕಂಡ್ ಬಂದ್ರು. +ಅವನಿಗ್ ಕಟ್ಟಿದ ಮೇನ್ ಬಿಟ್ಕಂಡಿ, ಅವರ ಪಲ್ಕಿ ಅವ್ರ್ ತಕ್ಕಂಡ್ ಹೋದ್ರು. +ಆ ಗಾಡಿ ಯೆಬ್ಕಂಡಿ ಆ ಬ್ರಾಹ್ಮಣನ ಮನ್ಗ್ ಬಂದ ಅವ. +ವಂದ್ ತಿಂಗಳಾಯ್ತು. +ಅವರ್ ಕೆಲ್ಸ ಮಾಡಿ, “ಅಪಾ, ನಿನ್ ಸಂಬ್ಳ ಯೆಷ್ಟು? +” “ನನ್ ಸಂಬಳ ಯೇನ್ ಹೆಚ್ಚೇನಿಲ್ಲ, ಮೂರ್ ಬಳ್ಳಿ, ವಂದ್ ಕತ್ತಿ, ವಂದ್ ಕೊಡ್ಲಿ, ವಂದ್ ಕಂಬ್ಳಿ, ವಂದ್ ಬನ್ಯನು, ವಂದ್ ಚಡ್ಡಿ. +” ಆ ಬ್ರಾಹ್ಮಣ ಯೇನ್ ಹೇಳ್ದ? +“ಇದು ಇಷ್ಟ್ ಕೊಟ್ಟಿ, ನಿನ್ಗ್ ವಂದ್ ಐವತ್ ರೂಪಾಯ್ ಕೊಡ್ತಿ ನಾನು. +ಮತ್ತೊಂದ್ ತಿಂಗ್ಳ್ ಉಳಿ.” “ಛೇ. . . ಛೇ. . . ! +ಅಟ್ ನನ್ಗ್ ಬೇಡ, ವಂದ್ ತಿಂಗ್ಳದ್ದೇ ನನ್ಗ್ ಹೊತಾಕು, ನಾ ಹೋಗ್ತೆ ಮನ್ಗಿ. +”ಅವ್ನ ಕೆಲ್ಸ ನೋಡಿ ಆ ಬ್ರಾಹ್ಮಣ ಕತ್ತಿ ರಾಶಿ, ಕೊಡ್ಲಿ ರಾಶಿ, ಬಳ್ಳಿ ರಾಶಿ, ಬನ್ಯನ್ನು ರಾಶಿ, ಚಡ್ಡಿ ರಾಶಿ. . . ಯೆಲ್ಲಾ ತಂದ್ ಅವ್ನ ಮುಂದ್ ವಗ್ದ. +“ಯೇನ್ ಬೇಕಾದ್ ನೀ ತಕೋ” ಹೇಳಿ. +ಅದುನ್ ವಂದೊಂದ್ ಹೆಕ್ಕಂಡ್ ತಕಂಡಿ-- ಕಂಬ್ಳಿ, ಕೊಡ್ಲಿ, ಕತ್ತಿ, ಬಳ್ಳಿ, ಬನ್ಯನ್ನು, ಚಡ್ಡಿ ಯೆಲ್ಲಾ ತಕಂಡಿ ತನ್ ಊರಿಗ್ ಹೋದ. . . . ಯಲ್ಲಾಪುರಕ್ ಹೋದ. +ಆಗ ದಿವಸಾ ಅದೇ ರೀತಿ ಅವನ್ದ ಬೆಳ್ಗಾ ಹೊತ್ತಿಗ್ ಕಟ್ಗಿಗ್ ಹೋಗುದು, ಬೈಸಿರ್ಗ್ ತಿರ್ಗೂಕ್ ಹೋಗುದು. +ಆಗ ವಂದ್ ದಿವಸ ಯೇನಾಯ್ತು? +ಆ ಬೆಟ್ದಾಗ್ ಅವನಿಗ್ ಕಟ್ಗೆ ಶಿಗಲೇ ಇಲ್ಲ. +ದೋರ ಬೆಟ್ಟಕ್ ಹೋದ. +ಹೋಗು ಹೊತ್ತಿಗ್ ರಸ್ತೆ ಮೇನ್ ಯೇನಾಗಿತ್ತು ಹೇಳ್ದ್ರಿ? +ವಂದ್ ರುಪಾಯ್ ಚೀಲ ಬಿದ್ದಿತ್, ಹೀಗ್ ಕಯಲ್ ಹನಸ್ದ, ಅದ್ ಝಣಕ್ ಆಯ್ತು. +“ಪಾಪ!ಯಾರದು ಚೀಲ ಇದು? +ಸಾಯ್ಲಿ ನನ್ಗ್ ಯಾಕಪ್ಪಾ?” ಹೇಳ್ಕಂಡಿ ಮುಂದ್ ನೆಡ್ದ. +ಯೆರ್ಡ್ ಹೆಜ್ಜಿ, “ಉಹ್! ಶಿಕ್ಕದ್ ಯಾಕ್ ಬಿಡಬೇಕು?” ಹೇಳ್ದ, ಮತ್ ಹಿಂದೇ ಬಂದಾ. +ಬಂದ್ಕಂಡ್ ಆ ಚೀಲ ವಗ್ದಿ ವಗ್ದಿ ವಗ್ದಿ, ಅಲ್ಲೆ ವಂದು ಕಾಲ್ಗಿದ್ದಿತ್ತು. +ಕಾಲ್ಗೆಲ್ ಹಾಕಿ ಯೆಯ್ಡ ಸೊಪ್ಪಿನ ಗೊಲ್ಗಿ ಅದ್ರ ಮೇನ್ ಮುಚ್ದ್, ಮತ್ ಹೋದ. +ದೊಡ್ ಬೆಟ್ಕ ಹೋಗಿ ಕಟ್ಗಿ ಮಾಡ್ ಬರುವಟ್ಕ ಸಲ್ಪ ಹೊತಾಯ್ತು. +ಹೊತ್ತಾಗಿ ತಂದು ಕಟ್ಗಿ ಮಾರಿ, ಹಣ ತೆಕಂಡ. +ಯೆಷ್ಟೋ ಮಂದಿ ತಮ್ಮ ಮನಿಗ್ ಹೋಗಿದ್ರು. +ವಬ್ ಹೇಳತ್ಯ, “ಯೆರ್ಡ್ ರೂಪಾಯ್ ಕೊಡ್ತ್ಯ ಆದ್ರೆ ಅದು ಐದ್ ರೂಪಾಯ್ಗ್ ಮಾರಿ ಹೋಯ್ತು” ಆ ದಿನ ಆಗವ ಯೇನ್ ಮಾಡ್ದ ಹೇಳ್ದ್ರಿ? +ಆ ಹೊರಿ ಹಾಕಿ ಕಿಲೋ ಅಕ್ಕಿ ತಕಂಡ್, ಯೆಲ್ಲಾ ಸಾಮಾನ್ ತಕಂಡ್, ಅಡ್ಗಿ ಮಾಡಿ ಊಟ ಮಾಡ್ತ. +ಗಡ್ ಬಿದ್ದ. +ಹಜಾಮ ಶಾಪ್ಕೆ(ಅಂಗಡಿ) ಹೋಗ್ ಗಡ್ಡ ಮಾಡಿ, ಧೋಬೇರ ಮನ್ಗ್ ಹೋದ. +ಧೋಬೀಗ್ ಯೇನ್ ಹೇಳ್ದ ಅಂದ್ರ, ‘‘ದಿವಸಾ ಕೊಡೂಕಿಂತ ಹೆಚ್ಚಿ ನಾಲ್ಕಾಣಿ ಕೊಟ್ಟು ನಿನ್ ಚೈನ್ ಉಂಗ್ಲ ಯೆಲ್ಲಾ ಕೊಡ್ಬೇಕ್ ನೀನು.’’ +ಚೈನು ಉಂಗ್ಲ ಹಾಕಿ, ಅದ್ಯೆಲ್ಲಾ ಡ್ರೆಸ್ ಮಾಡಿ ಹೀಗ್ ತಿರಗೂಕ್ ಬಂದಾಗೆ-- ಸುಮಾರ್ ವಂದ್ ಇಪ್ಪತ್ ಬಂಡಿಗಾಡಿ ಅಲ್ಲಿ ನಿಂತ್ಯಾವು. +ವಂದ್ ಚಕಡಿ ಗಾಡಿಗ್ ಹೋಗಿ ಹೇಳ್ದಾ, “ನಿನ್ ಗಾಡಿ ಯೆಲ್ಲಿಂದಪ್ಪ? +ನಿನ್ ಊರ್ ಯಾವುದು?’’ ಹೇಳ್ ಕೇಳ್ದಾ. +ಆ ವಬ್ಬ ಯೇನ್ ಹೇಳ್ದ ಹೇಳ್ದಾರಿ? +“ಬೆಂಗಳೂರು ನನ್ ಊರು.” +“ನಿನ್ನ ಬೆಂಗಳೂರಲಿ ಹ್ಯಾಂಗ ನೆಡಿತಿರಿ?” ಹೇಳ್ ಕೇಳ್ದ, ಲಕ್ಷ್ಮಿ ಸೂಳಿ ಬಗ್ ವದಂತಿ ಯೇನು?ಅಂತ ಕೇಳಿದ್ದಿರಬೇಕು. +ಆಗವ ಹೇಳ್ದ, “ಲಕ್ಷ್ಮಿ ಸೂಳಿ ಬಯಂಕರ ಸೋಳಿದ್ದು, ದಲಿತರಿಗ್ ಹೊಟ್ಟಿಗ್ ಕೊಡ್ತೀದ್, ಗನಾ ಸೋಳಿ. +ಅದ್ರ ಇದ್ದಲ್ಲಿ ಕಚರಾಪಟ್ಟಿ ಅಂತೋರು ಯಾರ್ ಹೋಗುದಿಲ್ಲ. . . ರಾಜರಂತೋರು ಹೋಗುದು” ಅಂತ ಹೇಳ್ದ. +ಅದ್ರ ನಂತ್ರ, “ಹೌದು! +ಅಂತಾ ಸೋಳಿಗ್ ನಾ ವಂದ್ ವಸ್ತು ಕೊಡ್ತಿ. +ನೀ ತಕಂಡ್ ಹೋಗ್ ಕೊಡ್ತ್ಯಾ?” ಕೇಳ್ದ. +“ಹ. . . ಹಾ!ನಾವ್ ತಕಂಡ್ ಹೋಗ್ ಕೊಡ್ತಿರು” ಹೇಳ್ದರು. +ಆಗ ಚೀಲ ಯೆಲ್ ಮುಜ್ಜಿಕ್ಯ, ಅವ ಅಲ್ ವಂದ್ ಗಾಡಿ ತಕಂಡ್ ಹೋದ್ರು. +ಇಬ್ಬರೂ ಹಿಡ್ಕಂಡಿ ಹೇಗೋ ತ್ರಾಸ್ ಮಾಡಿ ಆ ಚೀಲ ಗಾಡಿ ಮೇಲ್ ಹಾಕ್ದರು. +ಚೀಟಿ ಮೇಲ್ ಯೇನ್ ಬರದ ಅವ? +“ನಿನ್ ಮನಿ ನೋಡ ಬಂದವ. . . ಆ ದಿವ್ಸ ಬಂಗಾರದ ಪಲ್ಕಿ ಮೇಲ್ ಹೋಗಿದೆ. + ನಾನು. ”ಗಾಡಿಕಾರ ಗಾಡಿ ತಕಂಡ್ ಬೆಂಗಳೂರಿಗೆ ಹೋಗ್ ಮುಟ್ಟ, ಕಡೆಗ್ ಶಿಪಾಯ್‌ಗ ಆ ಚೀಟಿ ತೋರ್ಸಿ, ಶಿಪಾಯ್ ಆ ಲಕ್ಷ್ಮಿ ಸೋಳಿಗ್ ತಕಂಡ್ ಹೋಗ್ ಕೊಟ್ಟ. +ಕಡೆಗಾ ಲಕ್ಷ್ಮೀ ಸೋಳಿ ಆ ಚೀಟಿ ವೋದಿ, “ಆ ಚೀಲ ಗಾಡಿಕಾರ ಸಮೇತ ವಳ್ಗ್ ತಕಂಡ್ ಬರ್ಸಿ” ಅಂತ ಹೇಳ್ಳು. +ಚೀಲ ಹೊತ್ಕಂಡ್ ವಳ್ಗೆ ಹೋಗ್ ಹಾಕರು. +“ಆ ದಿವ್ಸ ಮನಿ ನೋಡ್ ಬಂದೆ ನಾನು. . . ಮತ್ ನಿಂಗೇ ನೋಡ ಬಂದೆ. +ಯೇನ್ ನಿಂಗ್ ಯೆಲಿ-ಅಡ್ಕಿ ತಿಂಬೂಕ್ ಕೊಟ್ದು ಇದು. ” +“ಅಯ್ಯೋ. . . ” ಆ ಸೋಳಿಗ್ ದಿಗಿಲ್ ತಪ್ ಹೋಯ್ತು. +“ಯೇಗ ಇವನಿಗ್ ಯೇನ್ ಕೊಡಬೇಕಾಯ್ತು ನಾನು? +ಯೆಟ್ ದುಡ್ ಅರಸು ಇವರು. . . ” ಆ ವಿಚಾರ ಮಾಡ್ ಮಾಡ್ ಮಾಡಿ, ಅಷ್ಟು ನಕ್ಸೆ ಬರು ಸೊನಗಾರನಿಗ್ ತಕಂಡ್ ಬಂದ್ರು. +ಬಂದಿ ಯೆಷ್ಟ ಚೆಂದ ನಕ್ಷಿ ವಂದ್ ಯೆರಡ್ ಮಣ ಚಿನ್ನ ಹೊಯ್ದ ವಂದ್ ತಾಟ ಜಪ್ಕಾಗ್ ಮಾಡ್ದ್ರು. +ತಾಟ್ನ ಮೇನೆ ಚೆಂದ ಚೆಂದ ನಕ್ಷಿ ತೆಗೆದ್ರು. +ತೆಗದಿ ವಂದ್ ಕಟ್ಗಿ ಪೆಟ್ಗಿ ಮಾಡಿ, ಆ ಪೆಟ್ಟಿಗ್ಯಲ್ ಆ ತಾಟ ಹಾಕ್ದ್ರು. +ಆ ಚೀಟಿ ಸಮೇತ ರೂಪಾಯಿ ಚೀಲ ತಂದ ಗಾಡಿಕಾರನಿಗೇ ತಂದಿ ಗಾಡಿ ಮೇಲ್ ಹಾಕ್ ಕೊಟ್ರು. +ಆ ಹೊತ್ತಿಗ್ ಸೌದಿ ಹೊರಿ ತಕಂಡ್ ಬತ್ಯ ಇವ ಆಗ ಗಾಡಿಕಾರ ಕೇಳ್ತೆ ಬಂದ. +“ಸಿರ್ಸಿ ಗಫೂರ್ ಸಾಯ್ಬನ ಮನೆಯೆಲ್ಲಿ?” ಕಡೆಗಿವ ವಂದ್ ಅಂಗಡಿಗ್ ಹೊರಿ ಸೌದಿ ಹೊತಾಕಿ ಊಟಾ-ಭೀಟಾ ಮಾಡೂಕ್ ಹೋಗಲಿಲ್ಲ. +ಆ ಧೊಬ್ಯೋರ ಮನ್ಗೆ ನೇಡ್ದ. +ಧೋಬ್ಯೋರ ಮನ್ಗ್ ಹೋಗಿ, “ನಾಕಾಣಿ ಹೆಚ್ಚು ಬೇಕಾರ್ ತಕ, ನಿನ್ ಪೋಶಾಕ್ಯಲ್ಲ ಕೊಡು ನನ್ಗೆ. . . ” ಹೇಳಿ ಆ ಗಾಡಿಕಾರಗ್ ಬೆಟ್ಯಾದ. +“ಏನು ಏನ್ ಸಮಾಚಾರ ನಿಂದು? +ಯಾರ್ ಬೇಕಾಗಿದ್ದ ನಿನ್ಗೆ?” ಹೇಳ್ ಕೇಳ್ದ. +“ಹಾಗಾದ್ರೆ ನಮ್ ಲಕ್ಷ್ಮಿ ಸೋಳಿ ನಿಮ್ಗ್ ವಂದ್ ವಸ್ತು ಕಳ್ಸಕೊಟ್ಟದೆ.” +ಅದು ಪೆಟ್ಗಿ ತಕಂಡ್ ಹೋಗ್ ಕಾಲ್ಗೆಲ್ ಹಾಕಿ, ನಾಕ್ ಸಪ್ಪಿನ ಗೊಲ್ಲೆಲ್ ಅಡ್ಸಿಕ್ಯ ಅಗೀ, ಹಾಗೇ ಅತ್ಲಾಗ್ ಮತ್ತೊಂದ್ ನಾಕು ಗಾಡಿ ಇದ್ದು, ಅವ್ರಗ್ ಕೇಳ್ದ, “ನಿಮ್ಮ ಊರ್ ಯಲ್ಲಪ್ಪ? +ನಿಮ್ಮ ಗಾಡಿ ಯಲ್ಗ್ ಹೋತು? ” “ನಮ್ಮ ಗಾಡಿ ಮೈಸೂರಿಂದ್ ಬಂದದು.’’ +‘‘ನಿಮ್ಮ ಊರ ವದಂತಿ ಹೇಗಿತ್ತು?” ಕೇಳ್ದ. +“ನಮ್ಮ ಮೈಸೂರ್ ರಾಜ ಸಾಮಾನ್ನಿ ರಾಜಲ್ಲ. +ಬಯಂಕರ ರಾಜ. +ಹೊಟ್ಟಿಗಿಲ್ದೆ ಹೋದ್ರೆ ನಮ್ಗ್ ಹೊಟ್ಟಿಗ್ ಕೊಡ್ತಿರು” ಹೇಳ್ದ. +“ಹಾಗಾದ್ರೆ, ನಿಮ್ಮ ರಾಜಂಗ್ ವಂದ್ ವಸ್ತು ಕೊಡ್ತಿ. +ತಕಂಡ್ ಹೋಗ್ ಕೊಡು” ಹೇಳ್ದ. +ಅಗೀ ವಂದ್ ಚೀಟಿ ಬರ್ದ-- “ನನ್ದು-ನಿನ್ದು ದೋಸ್ತಿ ಹೀಗೆ ಇರಬೇಕು” ಹೇಳಿ. +ಆಗ ಆ ಪೆಟ್ಗಿ ಹಾಕಂಡ್ ಆ ಗಾಡಿ ಮೇನ್ ಕಳ್ಸ ಕೊಟ್ಟ. +ಮೈಸೂರ್ ರಾಜಿದಲ್ ಹೋಗಿ ಮುಟ್ಸದ್ರು ಅವರು. +ಆ ರಾಜಗ್ ತಕಂಡ್ ಹೋಕಂಡ್ ಆ ಚೀಟಿ ಕಾಣ್ಸಿದ್ರು. +ಅವರು ರಾಜ ಸದ್ರೆ ಮೇನ್ ಕುಂತಾಗಿ ಆ ಪೆಟ್ಗಿ ಚಾವಿ ತಕಂಡ್ ನೋಡ್ದ್ರು. +ಆ ರಾಜಗೆ ಕಣಿಗ್ ಕತ್ಲೆ ಬಂದಿ, ರಾಜ ಕುರ್ಚೆ ಬುಡ್ಕೆ ಚಕ್ಕರ್ ಬಂದ್ಕಂಡಿ ಬಿದ್ದ. +ಬುಡ್ಕ್ ಬಿದ್ ಬರಾಬರಿ ಆ ಪ್ರಧಾನಿ ಕಣ್ಣಿಗೆ ನೀರ್-ಬೀರ್ ಹಾಕ್ ಮದ್ದು ಮಾಡ್ದ. +ಕಣ್ ತೆಗ್ದ್ ನೋಡಿ, “ಅಬಾ! +ಇದ್ ಹ್ಯಾಂಗ್ ಅವ ನಕ್ಸಿ ತಗನೆ? +ಅವ ಯೆಷ್ಟ (ದೊಡ್ಡ) ಸಾವಕಾರಿರಬೇಕು? +ಯೆಂಟ್ ಮಣ ಚಿನ್ನ ಹೇಳ್ದರ್ ತೋಡಿ ಆಯ್ತಾ?” ಹೇಳಿ ಆ ರಾಜಗ್ ದೊಡ್ಡ ಇಚಿತ್ರ ಆಗ್ಹೋಯ್ತು. +ಪ್ರಧಾನಿ ಕೇಳ್ದ ರಾಜ, “ಅವ ಚಿನ್ನದಲ್ಲಿ ಸಂಪಿವ. . . ಯೆಲ್ಲಾ ಬದ್ಕಿಗ್ ಸಂಪ್ ಯೇವ ಅವನಿಗ್ ಕಳ್ಸ್ ಕೊಡುದ್ ಯೇನಾಯ್ತು ನಾವು? +ನೀ ಹೇಳ್ದ್ರೆ ಗನಾ ಆಯ್ತು. +ಅಲ್ದಿದ್ರೆ ನಾಳೆಗ್ ನಾನ್ ನಿನ್ ತಲೆ ತೆಗ್ದ್ ಬಿಡ್ತಿ. +”ಕಡೆಗಾ ಪರ್ದಾನಿ, “ಪರಮೇಶ್ವರ ಯೇನ್ ಹುಡ್ಕಲಿ? +” ಹೇಳಿ, ಅವನಿಗ್ ಇಡೀ ರಾತ್ರಿ ನಿದ್ರೆ ಬೀಳ್ಲಿಲ್ಲ. +ಪ್ರಧಾನಿಗ್ ವಂದ್ ಹುಕ್ಲ್ ಬಂತು. +ಆಗ ಓಡೇ ಬಂದ ರಾಜನ ಮನಿಗಿ, “ಐನೂರ್ ಪೊಲೀಸ್ರ ಕಳ್ಸ್ ಕೊಟ್ ಬನಿ, ಐನೂರ್ ಸಾಂಬ್ರಾ ಪೊಲೀಸ್ರ್ ಕಳ್ಸ್ ಕೊಟ್ಟಿ, ಪಗಾರ್ ನಾವ್ ಕಳ್ಸ್ ಕೊಡ್ಬೇಕು.” +“ಹೌದ್. . . ಹೌದ್. . . ನನ್ ಪರ್ದಾನಿ ಹುಶಾರ್!” ಹೇಳಿ ಸಾಂಬ್ರಾ ಪೊಲೀಸ್ರಗೆ ಐನೂರಗ್ ಕರ್ದ್-- “ನೀವ್ ಹೋಗಿ ಶಿರ್ಶಿ ಗಫೂರ ಸಾಯ್ಬರ ಮನೆಗೆ ಹೋಗಬೇಕು. +ತಿಂಗಳಾದ ಮೇಲೆ ನನ್ನ ಕೂಡ ಪಗಾರ ತಕಂಡ್ ಹೋಗ್ ನನ್ನ ಇದ್ದಲ್ ಬರಬೇಕು. +ಅವ ಯೇನ್ ಕೆಲ್ಸ ಹೇಳೆತ ಆ ಕೆಲ್ಸ ನೀವ್ ಮಾಡುದು ಆಯ್ತ.” +ಪರ್ದಾನಿ ಕೂಡೆ ಇದ್ದಿ ಇದ್ದಿ ಅವರಿಗ್ ಬೇಜಾರ್ ಬಂದಿತ್ತು. +ಅವರಿಗ್ ಬಾಳಷ್ಟು ಉಮೇದ್ ಬಂತು. +ವನಂದ್ ಬಂದೂಕ್ ವನಂದ್ ಪೊಲೀಸ್ರ ಕೂಡಿ ಕಳ್ಸ್ ಕೊಟ್ಟಿ, ಯೆಲ್ಲಾಪುರಕ್ ಬಂದ ಮುಟ್ದ್ರು. +ಅಂಗಡಿ, ಅಂಗಡಿ ಕೇಳೂತ್ ಸಾಗ್ದ್ರು. +“ಶಿರ್ಶಿ ಗಫೂರ್ ಸಾಯ್ಬನ ಮನೆ ಯಾವದು?” +“ಶಿರ್ಶಿ ಗಫೂರ್ ಸಾಯ್ಬ್ ಯೆಲ್ಲ?” +‘‘ಶಿರ್ಶಿಲ ವಂದ್ ಗರೀಬ ಕಟ್ಗಿ ತರ್ವವ ವಂದ್ ಗಫೂರ ಸಾಯ್ಬಿ ಯೇವ” ಈ ಗಫೂರ್ ಸಾಯ್ಬ ಕಟ್ಗಿ ಹೊರಿ ಹೊತಾಕಿ ಬಂದ್, ಸಾಮಾನ್ ತಕಳ್ತೇ ಇದ್ದ-- ಅದ್ನ ಕೇಳ್ದಾ, ಅವ ಆ ಸಾಮಾನ್ಯೆಲ್ಲಾ ದೋಬ್ಯೋರ್ ಮನಿಗ್ ಹಾಕಿ ಪೋಶಾಕ್ ಹಾಕಿ ನೆಡ್ದ ಮುಂದೆ-- ಅವರಕಿಂತಾ ಮುಂದೆ ಹೋದ. +“ಏ. . . ಯಾಕ್ ಬಂದೀರ್ ನೀವು?” ಕೇಳ್ದ. +“ಹಂಗಾರ ಶಿರ್ಶಿ ಗಫೂರ್ ಸಾಯ್ಬನ ಮನಿ ಯೆಲ್ಲಿ? +” “ಸಾಯ್ಬ ಯೇನ್ ಬೇಕಾಗಿದ ನಿನ್ಗೆ? +” ಗಫೂರ್ ಸಾಯ್ಬನೇ ಕೇಳ್ದ. +“ಹಾಂಗಾರ್. . . ಮೈಸೂರ್ ರಾಜ ಐನೂರ್ ಸಾಂಬ್ರಾ ಪೊಲೀಸ್ರ ಕಳ್ಸಕೊಟ್ಟ.” + “ಹಾಂಗಾದ್ರಿ ನಾನೇ ಹೌದ್ ಯಲ್ಲಾಪುರ ಗಫೂರ್ ಸಾಯ್ಬ. +ಅಷ್ಟೂ ಮಂದಿ ಬರ್ರಿ ಇಲ್ಲಿ. . . ” ಹೇಳ್ದ. + “ಹಾಂಗಾದ್ರ್. . . ನೀವ್ ಹೋಗ್ ಯೇನ್ ಮಾಡಬೇಕು? +ಬೆಂಗಳೂರು ಲಕ್ಷ್ಮಿ ನಾಯಕಿಣಿ ಸೋಳೀ ಇದ್ದಲ್ ಹೋಗಿ, ‘ಯಲ್ಲಾಪುರ ಗಫೂರ್ ಸಾಯ್ಬ ನಮ್ಗ್ ಕಳ್ಸ್ ಕೊಟ್ಯ’ ಹೇಳ್ಕ ಹೇಳ್ಬೇಕು. +ಹೋಗಿರಿ. . . ” ಹೇಳ್ದ. +ಹೋದ್ರು ಯೆಲ್ಲ ಬೆಂಗಳೂರ್‌ಗ ಹೋಗಿ ಅದ್ರ ಕೂಡ್ ಹೇಳ್ದ್ರು, “ಯಲ್ಲಾಪುರ ಗಫೂರ್ ಸಾಯ್ಬ ನಮ್ಗ್ ಕಳ್ಸ್ ಕೊಟ್ಟ. +ಮೈಸುರ್ ರಾಜ ಪಗಾರ್ ಕೊಡಾವ. +”“ಅಯ್ಯೋ ರಾಮ!” ಆ ಸೂಳಿಗ್ ಚಂಚಲ ಆಗಹೋಯ್ತು. +ಊಟಾನೂ ಬಿಟ್ಬಿಡ್ತು. +“ಮೊದ್ಲ್ ಬಂದಾಗ್ ಫುಕಟ್ ಹೇಳ್ ಹೋದ. +ಕಡೆಗೆ ವಂದ್ ಚೀಲ ರೊಕ್ಕ ಕಳ್ಸ್ ಕೊಟ್ಟ, ಮೇಲೆ ಅದ್ಕೆ ಯೇಗ ಐನೂರ್ ಸಾಂಬ್ರಾ ಪೋಲೀಸ್ ಕಳ್ಸ್ ಕೊಟ್ಯ; ಪಗಾರ್ ಮೈಸೂರ್ ರಾಜ ಕೊಡ್ತ ಹೇಳ್ತ್ಯ. +ಅಂದ ಮೇಲೆ ಯೆಷ್ಟ ದೊಡ್ಡ ರಾಜ ಇರಬೇಕವ?” ಅದ್ರ್ ದ್ವಾರಪಾಲಕ ಮಾಡಿ ಅಲ್ಲೇ ಉಳ್ದ್ರು. +ಆಗಿ, ಅದು ದೊಡ್ ಮನ ಚಂಚಲಾಗಿ ಅದ್ರ ಕೈಕೆಳಗಿವ್ರಲ? +ಯೆಲ್ಲರ್ಗೂ ಆಮಂತ್ರಣ ಕೊಟ್ ಬಿಡ್ತು, “ಯಲ್ಲಾಪುರ್ಕ್ ಹೊಗ್ವ ಬನ್ನಿ. . . ” ಹೇಳಿ. +ಯೆಲ್ಲರೂ ಕಾರ್ ಮೇನ್ ಕೂತಿ ಲಕ್ಷ್ಮಿ ಸೋಳಿ ಕಾರ್‌ಗ ನೆಡ್ಗ್ ಹಾಕಂಡಿ‌‌, ಯಲ್ಲಾಪುರ್ಕ್ ಬಂದ್ ಮುಟ್ರು. +ಲಕ್ಷ್ಮಿ ಸೋಳಿ ನೆಡ್ಗ್ ಇಟ್ಕಂಡಿ, ತಂಬ್ ಹೊಡ್ಕಂಡ್ ವಳ್‌ದ್ರು. +ಆಗಿವ ಕಟ್ಗಿ ಹೊರಿ ತಕಂಡಿ ಮಾತ್ರ ಇಳ್ದ್ಯ. +ಅಂಗಡಿಗ್ ಹೋಕಂಡ್ ಹೊತಾಕ್ಲಿಲ್ಲ. +ಅವ್ರಿಗ್ ನೋಡದ್ದೇ-- ಹೊರಿ ಹೊತಾಕದ್ದು, ಮತ್ ಮೇನ್ ಗುಡ್ಡಿ ಹತ್ದ. +ಹತ್ದ ಬರಾಬರಿ ಅಲ್ಲಿ ವಂದು ಮಡಗಿ ವೋಡಿದ್ದಿತ್ತು. +ಆ ಮಡಗಿ ವೋಡ್ದಲ್ ಹೊಕ್ಕಂಡ. +ಹೊಕ್ಕಿತ್ರ ವಂದ್ ಮೂರ್ ತಾಸ್ನ ಮೇನಿ ತಲಿ ಬಗಿಲ್ ನೆಗ್ ನೋಡ್ತ್ಯ, ಕಡಿಗ್ ತಲಿ ಹೆಟ್ಕಂತ್ಯ. +ಆ ಹಾದಿ ದೇವಕನ್ಯರ್ ಹೋಗ್ವ ಹಾದ್ಯಾಗಿತ್ತು. +ಯೋಳ್ ಮಂದಿ ದೇವ್‌ಕನ್ಯರು ಮೇಲ ಬಂದಿದ್ದು, ಹೋಗುವಾಗಿ ವಬ್ಬಳ ಕೈ ಹಿಡ್ದೇಬಿಟ್ಟ ಗಟ್ಟಿ, “ನರಮನಶಾ ಬಿಡಿ. . . ” ಹೇಳ್ದರವರು. + “ಶೀ. . . !ನನ್ನ ಜೀವ ಹೊದ್ರೂ ನಾ ನಿನ್ ಕೈ ಬಿಡೂದಿಲ್ಲ. +” “ಯೇಗೆ ನಿನ್ ಬಸ್ಮ ಮಾಡ್ತೆ” ಹೇಳ್ತು. +“ಬಸ್ಮ ಮಾಡು, ಯಲ್ಲ ನನ್ ತಿಂದ್ಕ. +ಕೆಳ್ಗ್ ನೋಡ್. . . ಅಲ್ ದಂಡು ನೋಡು.. . . ಅವ್ರ ಕೈಯಲ್ಲಿ ಸಾವದು ನಿನ್ ಕೈಲೇ ಸತ್ತ ಹಾಗಾಯ್ತು. +”ಆಗೇ ಅವ್ರಿಗ್ ಪಾಪ ಕಂಡಂಗಾಯ್ತು. +“ಹಾಂಗಾದ್ರ್ ನಿನ್ಗ್ ಯೆಂತಾ ಕಷ್ಟ ಬಂತು? +ನಿನ್ ಕಷ್ಟ ನಾವ್ ನಿರ್ಮಾಣ ಮಾಡ್ತಿರು.” +“ಮಾಡ್ತೆ ಹೇಳ್ ನನ್ಗ್ ಬಾಶೆ ಕೊಡಬೇಕು. . . ”‌ +“ಯೆಲ್ಲ್ರಂತೆ ನಿಮ್ಗ್ ಬಿಡ್ವರಲ್ಲ?ಕೊಟ್ಟೇ ಬಿಡ್ತಿರು.” +“ವಂದ್ ತಾಶಿನ್ ಮಾತಿಗ್ ನನ್ನ ದಾಶ್ಯರಾಗಬೇಕು ನೀವು.” + “ಯೇ ರಾಮ!ನಾವ್ ದೇವ್ಕನ್ಯರ್. . . ನರಮನ್ಸರ ದಾಸ್ಯರಾಗುದು? +ಈ ಮಾತ್ ಹೇಳಬೇಡ ನೀನು. . . ಯೇನ್ ಐಶಿರ್ಯ ಬೇಕ್ ಅದ್ ನಾವ್ ಕೊಡ್ತೆರು.” +“ನಿಮ್ ಐಶಿರ್ಯ ಬೇಡ. +ಯೇನ್ ಬೇಡ ನನ್ಗೆ. +ಕೆಲ್ಸ ಆಗ್ಲೇ ಬೇಕ್.” +“ಹಾಗಾದ್ರಿ, ಆ ಲಕ್ಷ್ಮೀ ಸೋಳಿ ಬೆಳಿಗ್ಗಿ ಐದ್ ಗಂಟೆಗ್ ಸಂದಾಸ್ಕ್ ಹೋಗೂಕೆ ಬರ್ತಿದ್. . . ಸಂಡಾಸ್ಕ್ ಹೋಗವಾಗ ಅಗೆ ನೀವು ಇಂದ್ರದೇವರ್ ಕೂಡಂದು ಜಾಡು (ಕಸ ಬರ್ಗಿ) ತಕೊಂಡು ಇಚಿಗಿ ನಾಕ್ ಮಂದಿ, ಅಚಿಗ್ ವಂದ್ ಮೂರ್ ಮಂದಿ ಕಸ ಗುಡಿಸ್ತೇ ಬರಬೇಕ್ ಮುಂದಿ. +ಆ ಲಕ್ಷ್ಮಿ ಸೋಳಿ ನಿಂತ್ ‘ಯಾರು?’ ಕೇಳ್‌ದ್ರೆ, ‘ನಾವು ಗಫೂರ್ ಸಾಯ್ಬನ್ದ್ ದಾಸ್ಯರು. . . ಗಫೂರ್ ಸಾಯ್ಬ ನಮ್ಗೆ ಇಲ್ ಕಸ ತೆಗ್ಯೂಕ್ ಕಳಸ್ಕೊಟ್ಯ’ ಇಷ್ಟ ಮಾಡ್ದ್ರ ಸಾಕು.’’ ಹಾಗಂದಿ ಕೈಬಿಟ್ಟ. +ಅಲ್ಲಿ ರಾತ್ರಿಗ್ ಇಂದ್ರ ಕೂಡ್ ಹೋಗಿ ದೇವಲೋಕದ್ದು ಕಸಬರ್ಗಿ ತಂದು, ಬೆಳಿಗ್ಗೆ ಐದ್ ಗಂಟೆ ಕೂಡಿ ಆ ಕಸ ಬರ್ಗಿ ಹೊಡೀತೆ ಬಂದ್ರು. +ಕಡೆಗೆ ಆ ಲಕ್ಷ್ಮಿ ಸೋಳಿ ಬರು ಹೊತ್ತು, ಇವ್ರ್ ಬರು ಹೊತ್ತು ಸಮಾ ಆಯ್ತು. +ಆ ಲಕ್ಷ್ಮಿ ಸೋಳಿ ಇವ್ರಿಗ್ ಕೇಳ್ತು, “ನೀವ್ಯಾರು? +ಇಲ್ ಯಾಕ ಬಂದ್ರು?” ಹೇಳ್ ಕೇಳ್ತು. +“ತಾವ್ ಗಫೂರ್ ಸಾಯ್ಬನ ದಾಸ್ಯರು. . . ” ಹೇಳ್ದರು ಅವರು. +“ಗಫೂರ್ ಸಾಯ್ಬ ನಮ್ಗ್ ಕಸ ಹೊಡೂಕ್ ಇಲ್ ಕಳ್ಸ್ ಕೊಟ್ಯ.” “ಅವ ಪುಕಟೆ” ಹೇಳ್ದ, ಯೇಗ ಅದ್ಕ್ ಖರೆ ಕಂಡತು. +‘ದಾಸ್ಯರೇ ಇಟ್ ಚೆಂದ ಯೇವ್ರು ಅವನ ಹಿಂಡ್ತಿ ಯೆಟ್ ಚೆಂದ ಇರಬೇಡಾ?’ ಕಡೆಗ್ ಲಕ್ಷ್ಮಿ ಸೋಳಿ ಕೊಳ್ಳಿಸ್ (ಉರುಳು) ಹಾಕಂಡ್ ಸತ್ಯಹೋಯ್ತು. +ಅದ್ರ ನಂತ್ರ, ಇವ ವೋಟ್ಲದಂದೇ (ವೋಟ್ಲನಿಂದ) ಬಂದಿ ಆ ಧೋಬ್ಯರ್ ಮನ್ಗ್ ಹೋದಾ. +ಧೋಬ್ಯರ ಮನ್ಗ್ ಹೋಗಿ ಎಲ್ಲಾ ಡ್ರೆಸ್ ಹಾಕಂಡ ಅಲ್ ಬಂದಾ. +ಆ ಹೆಣ ಕಾರ್ ಮೇನ್ ಅಲ್ಲೇ ಹಾಕ್ದ. +ಕಡೆಗಾ ಪೊಲೀಸ್ರು ಯೆಲ್ಲಾ ಬಂದಿ, ಬೆಂಗಳೂರ್ಗ್ ತಂದು ಅಗ್ನಿಗ್ ಹಾಕ್ದ್ರು ಅದ್ಕೆ. +ಇವ್ ಬೆಂಗಳೂರದಲ್ಲೇ ವಳ್ಕಂಡು ಸೋಳಿ ಮನ್ಯಲ್ಲೇ ರಾಜ್ಯ ಮಾಡ್ಕಂಡೀವ. +ಧೋಬ್ಯರವ ರಾಜನ ವಸ್ತ್ರ ಅರ್ಧ ತಾಸ್ನ ಮಾತಿಗ್ ಬಾಡ್ಗಿಗ್ ಕೊಟ್ಟಿದ್ದ. +ಆ ವಸ್ತ್ರ ಇವ ಹಾಕ್ದವ ತಿರ್ಗ್ ಬರಲೇ ಇಲ್ಲ. +ಅವ ರಾಜನ ವಸ್ತ್ರ ಕೊಟ್ಟದ್ ಕೊಡ್ಲಿಲ್ಲ ಹೇಳ್ಕಂಡು ಧೋಬಿ ಜೈಲಲ್ ಹಾಕದ್ರು. +ಆರ ತಿಂಗ್ಳ ಸಜಾ ಮಾಡ್ ಬಿಟ್ರು. +ಇವ್ನಿಗ್ ವಂದಿವ್ಸ ನೆನ್ಪಿಗ್ ಬಂತು-- ಗಪೂರ ಸಾಯ್ಬನಿಗೆ. +“ಹೋ!ನಾ ವಂದ್ ವಸ್ತರ ತಂದಿದ್ದೆ. +ಕೊಡಲಿಲ್ಲ. . . ” ಆಗ ವಂದ್ ಕಾರ್ ಮೇಲೆ ಕೂತ ಅವ ಅಲ್ಲೇ ಬಂದ.. . ಯೆಲ್ಲಿ? + ಯಲ್ಲಾಪುರಕೆ. ಅದೇ ದಿನ ಬಿಡ್ಗಡ್ಯಾಗಿ ಧೋಬೀರವ ಮನೀಗ್ ಬರವ. +ಧೋಬ್ಯರವ್ನ ಗಫೂರ್ ಸಾಯ್ಬ ಕರಸ್ದ. +ಅವ ಹಿಂಡ್ತಿ ಹತ್ರ ಯಲ್ಲ ಹೇಳ್ ಹೇಳ್ ಹೇಳ್ತ್ಯ. +“ನಾನು ಗಫೂರ್ ಸಾಯ್ಬ ಬಂದ್ಯ. . . ” ಹೇಳು ಹೇಳದ್ಯ, ಇವ ಆಗ ಅವನ ವಸ್ತ್ರ ಅವನಿಗೆ ಕೊಟ್ಟ. +ಮತ್ತಂದಿ, ನಾಕ್ ಸಾವ್ರ ರುಪ್ಯಾ ಕೊಟ್ಟ. +ದೊಡ್ಡ ರಾಜನ ಮಗಳ ತಂದಿ ಮದಿಯಾದ. +ದೊಡ್ ರಾಜಾ ಕಂಡ್ ವಳ್ದ್ಯ. +ವಂದ್ ಬೀಮರಕ್ಷಿದ್ದಿತು. +ಬೀಮರಕ್ಷಿದ್ದಾಗ ಅಲ್ಲಿ ಅರಸೂ ಹುಡ್ - ಪರದಾನಿ ಹುಡ್ಗ, ಅಲ್ಲಿ ಅಣ್ಣ-ತಮ್ಮ ಯೆರಡೂ ಜನ ಹೀಗೇ ಹೋಗತಿದ್ರು. +ಸ್ವಾರಿಗೆ ಜನವಂದ್ ಕೊದ್ರಿ ಹೇರಿ ಹೋಗ ವಟ್ರೊಳಗೆ ಹೋಗ ಹೋಗ್ ಹೋಗ್ ಅಲ್ಲಿ ಶಂಜಿಯಾಗ್ ಹೋಯ್ತು. +ಹೋಗಿ ಅಸ್ವಂತೆಳ್ಳಿ ಕಟ್ಟಿ ಮೇನ್ ಮನ್ಗ್‌ದ್ರು. +ಅಗ ಮನ್ಗತೆ ಇರಬೇಕಾದ್ರೆ ಸುಮಾರು ಸಮರಾತ್ರಿ ಯೇಳಿಲಿ-- ಬೀಮರಕ್ಷಿ, “ಯಾರಪ್ಪಾ. . . ನರೆಮನಶ ವಾಸಣಿ ಇಲ್ಲಿ ಬರತದೆ. . . ಯಾರಪ್ಪಾ?” ಹೇಳ್ ಕೂಗ್ತ ಬಂತು ಅಲ್ಲಿ. +“ಯಾವಗೂ ನರಮನ್ಸರ ಮಾಂಸ ತಿನ್ನದೆ ಬಾಳಷ್ಟ ದಿವ್ಸವಾಯ್ತು. +ಇಂದಿನ ದಿವ್ಸದಲ್ಲಿ ನರಮಾಂಸ ತಿನಬೇಕು ಅಂದಿ ಅಪೇಕ್ಸಿ ಆಗದೆ, ಯಾರಯ್ಯಾ?” ಅಂತು. +“ಯಾರಲ್ಲಾ, ನಾವು. . . ನಾವು ಅರಸತಾನದಿಂದ ಇಲ್ಲಿಗೆ ಸ್ವಾರಿಗೆ ಬಂದಿದ್ದೇವೆ. +ಆಗ ನೀನು ತಿನ್ನುದಾರ್ ತಿನ್ಲಕ್ಕೂ, ನಮ್ಮೊಳಗೆ ನಾಕು ಜೂಜಪಂತವನ್ನು ಆಡಿ ತಿನ್ನು.” +ಆಗ ಅರಸೂ ಹುಡಗ, ಬೀಮರಕ್ಷಿ ಕೂಡಿ ಪಗಡಿ ಆಡೂಕ್ ಕುಂತ್ರು. +ಯೇಳಯೆಳ್ ಹದ್ನಲ್ಕ್ ದಿವಸ ಪರಿಯಂತ್ರ ಪಗಡಿ ಆಡೂಕ್ ಕುಂತ್ರು. +ಆ ಹೆಂಗ್ಸು ಹತ್ರ ಗೆಲ್ಲಲಿಕ್ಕೇ ಆಗ್ಲಿಲ್ಲ. +ಆಗ, “ಅಣ್ಣಯ್ಯಾ, ನೀನು ಬಿಟ್ ಬಿಡು. +ತಾನು ಕುಳ್ತೆನೇ ಪಗಡಿ ಆಡಲಿಕ್ಕೆ. . . ” ಪರ್ದಾನಿ ಹುಡ್ಗ ಹೋಗಿ ಕುಂತ. +ಮೂರದಿವ್ಸನ ಪರ್ಯಂತವಾಗಿ ಆಡಿ, “ತಾನು ಸೋತೆ. . . ಆಹಾ ಬೀಮರಕ್ಷಿಯೇ! +ಇದೇ ವಂದ್ ಆಟಲ್ಲ. +ಮತ್ತೊಂದ್ ನಮನಿ ಆಟದೆ. +ನಾನು ಜೂಜ ಪಗಡಿಂದ ಸೋತೆ ಅಂತ ಹೆಮ್ಮಿಂದ ಮೆರಿಯಬೇಡಾ.” +ಇನ್ನೊಂದ್ ನಮನಿ ಆಟವನ್ನ ಆಡಿ, ಆಗ ಯೆರಡೂ ಜನ ಕೂಡಿ ಕೈಯ ಕೈಯ ಹಿಡಿದರು. +ಹಿಡದಿ. . . ಹಿಡದಿ. . . ಹಿಡದಿ. . . ಸುತ್ತುಮಂಡಲ ತಿರಗೂದು; ಕೊಣೂದು, ಕೊಣದಿ. . . ಕೊಣದಿ. . . ಕೊಣದಿ ಯೇಳ ಯೋಜ್ನ ಪರ್ಯಂತರವಾಗಿ ಕುಣಿದರು. +ಯೇಳಯೋಜ್ನ ಬಿಟ್ಟಿ, ವಂಬತ್ತನೆ ಯೋಜ್ನ ಪರ್ಯಂತ್ರವಾಗಿ ಹಾರಿದರು. +ಪರ್ದಾನಿ ಹುಡ್ಗ ಚಕ್ರದಿಂದ ರಕ್ಕಸಿಯನ್ನು ಹೊಡಿದನು. +ಆಗ ಅದ್ರ ತಲ್ಯ ಮೇಲಿದ್ದ ಮಾಣ್ಕಹಳ್ಳು ಕೈಲಿ ಶಿಕ್ತು. +ಅವ ಕೈಯಲ್ಲಿ ಹಿಡದಿ ಹಾಗೇ ಬೆಳಗಾಗುವಂತಾ ಆಯ್ತು. +“ಅಣ್ಣಾ, ರಕ್ಷಸಿಯನ್ನು ಕೊಂದಂತಾಯ್ತು. +ಇನ್ನ್ ನಾವು ಹಿಂದಕಾಗ್ ಹೋಗ್ವಾ; ಕುದ್ರಿ ಹೇರು” ಹಾಗೆ ಮುಂದ್ಕ್ ಹೋದ್ರು. +ಹೋಗಿ ವಂದ್ ಅರಣ್ಯದಲ್ ಹೋಗ್ವಲ್ಲಿವರಿಗೆ ಶಂಜಿಯಾಯ್ತು. +ಅಲ್ಲಿ, “ಹುಲಿ, ಕರಡಿ, ಸಿಂಹ, ಸಾರ್ದೂಲ. . . ನಡಗ್ ನಾವು ಹ್ಯಾಗ್ ಬಚಾವಾಗೂರು?” ಅದ್ಕೆ, “ಅಣ್ಣಯ್ಯಾ, ಹೆದರೂದ್ ಬೇಡಾ. +ನಮಗೆ ಪರಮಾತ್ಮ ಹಿಂದ್ ಕೊಟ್ ವರುವದೆಯಲ್ಲ. +ಅದರಿಂದ ನಾವು ಅದರನ ವಟ್ಟೂ ನಾಸ ಮಾಡತೇನೆ, ಅದಕಾಗಿ ಬಯಪಡುವದು ಬೇಡಾ. +”ಆಗ ಅಲ್ಲಿ ವಂದು ಅರಸೂ ಹುಡ್ಗ ಇದ್ದಿದ್ದು. +ಅಲ್ಲಿ ವಂದ ಅಜ್ಜಿಮಮ್ಮಗ, ಆ ಅರಸು ಹುಡ್ಗ ಪರದಾನಿ ಹುಡ್ಕನ ಮಲ್ಲಿ ಕೆಲ್ಸಕಿದ್ದಿದ್ದ, “ಹುಡಗಾ. . . ನೀನು ನಮಗೆ ಇಂದಿನ ದಿವ್ಸವೆ ಹೋಗಿ ನಮಗ್ ವಂದ್ ಸಲ್ಪ ಹುಲಿ ಹಾಲ ತರಬೇಕು” ಅಂದ್ರು. +ಆಗೆ ಆ ಹುಡ್ಗ ಯೇನ ಮಾಡ್ದ? +“ಯೇನ ಮಾಡಬೇಕಪ್ಪಾ?” ಹೇಳ್ತ, ಅಲಚ್ನಿ ಮಾಡ್ಕಂತಿ ಅರಣ್ಯದಲ್ಲಿ ಹೊಟ್ ಹೋದ. +ಅಣ್ಣ-ತಮ್ಮ ಇವರ್ ಯೆರಡೂ ಜನ ಆ ಅರಣ್ಯದಲ್ಲಿ ಕುಂತಿದ್ರು. +“ಆಹಾ ಸ್ವಾಮೀ, ಯಾವಲ್ಲಾಯ್ತು ನಿಮಗೆ? +ಇಲ್ಲಿ ಕುಳ್ಳುವ ಕಾರಣವೇನು?” +ಹೇಳ್ದ ಹುಡಗಾ, ‘‘ಹೇಳತೇನೆ, ನಾವು ದುಷ್ಟರನ್ನು, ಹುಲಿ, ಕರಡಿ, ಸಿಂಹ, ಸಾರ್ದೂಲರನ್ನು ನಾಸ ಮಾಡುಬಗ್ಗಾಗಿ ಬಂದಿದ್ದೇವೆ ಅರಣ್ಯಕ್ಕೆ.” +“ಹಾಂಗಾದ್ರೆ ಸ್ವಾಮೀ, ನನ್ಗ್ ಸಲ್ಪ ಹುಲಿಹಾಲ್ ಬೇಕಾಗಿತ್ತಲ. . . ” “ಇಟ್ಟೇಯೋ? +ನಾವು ಹುಲಿ, ಕರಡಿ, ಸಿಂಹ, ಸಾರ್ದೂಲ, ಆನಿ ಸಾಲಂತೆ ದನ ಕಟ್ದ ಹಾಂಗ್ ಕಟ್ ಇಟ್ಟೇವೆ. +ಸಲ್ಪ ಬೇಕಾರ ಕರಕಂಡ ಹೋಗು, ಅಡ್ಡಿಲ್ಲ.” + ಅಲ್ಲಿಗಾಗಿ ತಂಬಿಗಿನ್ನ ಹಿಡದು ಅಲ್ಲಿ ಹೋಗುವಂತವನಾದ; + ಅಲ್ಲಿ ಹೋಗುವಂತವರಿಗೆ ಅಲ್ಲಿ ನೋಡಿ ಇವನು ಕಳೆತಪ್ಪಿ ಬಿದ್ದಿದಾನ. +“ನಾವು ಕಳ್ಸದಂತಾ ಹುಡಗನು ಇನ್ನುವರಿಗೂ ಬರಲಿಲ್ಲ. +ತಮ್ಮ. . . ಇಂದ್ ನಾವ್ ಅಲ್ಲಿಗಾಗಿ ಹೋಗಿ ಬರವ.” +ಆಗ ಅಣ್ಣ-ತಮ್ಮನು ಅಲ್ಲಿಗಾಗಿ ಹೋಗಿದ್ದಾರೆ. +“ಹುಡಗಾ, ನಿನ್ಗ್ ಯೇನಾಯ್ತು?” +“ಸ್ವಾಮಿ. . . ಅದ್ರ ನೋಡಿದ್ದೆ ಪರ್ಯಂತ್ರ ನನ್ನ ಕಯವನ್ನ ಹಾರಿಹೋಯ್ತಲ್ಲಾ?” +“ಅದಕ್ಕಾಗಿ ಯೇಗೆ ಇಲ್ಲೇ ಕುಂತಿರು. +ನಾವೇ ಹೋಗ್ ತಂದ್ ಕೊಡತೇವೆ. +”ಆ ಚಂಬನ್ನ ಹಿಡಿದು ಅಲ್ಲಿ ಹೋಗಿ ಶಲ್ಪ ಹುಲಿ ಹಾಲನ್ನ ಕರದು ತಂದಿಕೊಟ್ಟಿದ್ದಾರೆ. +ಆಗ ಅದರನ್ನ ತಗದಕೊಂಡು ಆ ಅರಸನಿಗೆ ತಂದುಕೊಡವಂತನಾದ. +“ಇನ್ನು ಯೇನ್ ಮಾಡಿದ್ರೂ ಇವ ಸಾವುದಿಲ್ಲ. +ಇವ್ನ ಯಾವ ತರದಲ್ಲಿ ಕೊಲ್ಲಬೇಕಾಯ್ತು?”ಅದ್ಕೆ ಆಗ ಅವ ಹೋದ. +ಇನ್ ಯೇನ್ ತರ ಮಾಡಬೇಕಾಯ್ತು ಇವನಿಗೆ? +ಹೇಳಿ ಅಲಚ್ನಿ ಹುಡ್ಕದ. +“ಹೀಗೆ ಹೋಗಿ ನಮಗೆ ಸಿಂಹನದ ವಂದ್ ಸಲ್ಪ ಹಾಲ ತಕಂಡ ಬಾ” ಸಿಂಹದ ಹಾಲು, ಕರಡಿಹಾಲು ಒಟ್ಟು ತರತ. +ಕಡಿಗೆ ಹೋಗಿ ತಂದ್ ಮುಗಿಸ್ತ. +“ಅವ ಯಾವದರಿಂದಲೂ ಸಾವುದಿಲ್ಲ” ಹೇಳಿ, ಅವ್ನ ಕಲ್ಕಟ್ ಬಾವಿಲ್ ಹೊತಾಕತ್ರು. +ಹೊತಾಕ್ದ ಕೂಡ್ಲೆ ಅವ ಯೇನ ಮಾಡ್ತ? +ಅವ ಸತ್ಯದಲ್ಲೆ ಇದ್ದವ, ಸಾವುದೆಲ್ಲ. +ಬರಬೇಕಾರೆ ವಂದ್ ಕೊಡಪಾನ ತುಂಬ ನಾಣಿಯ ಹೊತ್ಕಂಬಂದ. +ಹೊತ್ಕಬಂದ ಪೆಟ್ಟಿಗೆ ರಾಜ್ನ ಕೂಡೆ ಕೊಟ್ಟ. +ಅಗೆ ಇದ್ರಲ್ಲೂ ಸಾಯಲೆಲ್ಲ; ಇವ ನಾಣಿ ಹೊತ್ಕಬಂದ. +‘‘ಯೆಟ್ ಅದ್ಯೊ ಯಾರ ಬಲ. . . ಅಲ್ಲಿ ತಾವೆ ಹೋಗವಾ ಬಾವಿಗೆ. . . ” ಹೇಳಿ, ಹೇಳ್ಕಂತಿ ಅರಸೂವೆ ಬಾವಿ ಗುದ್ಕತ. +ಗುದ್ಕದ ಅಂತ್ರ ಅವ ಬರಬೇಕಾರೆ ದುಡ್ಡಯಲ್ಲ, ಯೇನಿಲ್ಲ. . . ಸತ್ತೇಹೋದ‌. +ತೇಲಾಡ್ತ ಬತ್ತ.ಆಗ ಬರಬೇಕಾರೆ ಸತ್ಯದಲ್ ಇದ್ದರಿಂದ ಇವಗ್ ಸಾವೆಲ್ಲ‌; ಅವನ ದುಡ್ಡೂ ಇವಗೆ ಆಯ್ತು. +ಅಗ್ ಈ ಹುಡ್ಗ ಆಳಕಾಳನ್ನ ಗೈಶಕಂತ ಇದ್ದಿದ, ಆಗ್ ಈ ಅರಣ್ಯದಗಿದ್ದ ಅರಸು ಹುಡ್ಗ, ಪರ್ದಾನಿ ಹುಡ್ಗನೂವ ಇಲ್ಲಿಗಾಗ್ ಬಂದ್ರು‌. +ಬಂದಿ, “ಆಹಾ ಹುಡಗಾ, ಇದೇನಿದ್ ಮಳ್ತನವೋ” ಕೇಳಿದ್ರು ಅಣ್ಣ. +“ಸ್ವಾಮೀ, ಈ ಅರ್ಸತನದಲ್ಲಿ ಇದ್ದ ಅರಸೂ ನನ್ನನ್ನ ಕೊಲೆ ಮಾಡಬೇಕಂತಾ ಮಾಡಿದ್ದ ಪಾಪಕ್ಕಾಗಿ ಅವನೇ ಮುಖ್ಯವಾದ (ಮೋಕ್ಷವಾದ).” +“ಈಗ ನಿಮ್ಮ ಇದ್ರಿಂದ ನಾನು ಇದೆ ಅರಸತಾನ ತೂಗ್ಸ್ಕಂಡಿ ಹೋಗಬೇಕಾಯ್ತು.” ಆಗೆ, “ಇದೇ ಸಂತೋಸದಿಂದ ಅರಸತಾನ ತೂಗ್ಸ್ಕಂತೆ ವಳಿ. +ನಾವು ಹೋಗತೇವೆ.” +ಅಲ್ಲಿ ಹೋಗಬೇಕಿದ್ರೆ, ಹೋಗತಾ ಹೋಗ್ತವಳದ್ರು ಯೆರಡೂ ಜನ. +ಕೂಡಿ ಹೋಗಬೇಕಿದ್ರೆ ವಂದ್ ಹುಡ್ಗ ಪರಮೇಸ್ವರನ ಜಾನ ಮಾಡ್ತ ಇದ್ದಿದ್ದ. +“ಹುಡಗಾ, ಯೆಲ್ಲಿಗ್ ಹೋಗತಿ?” ಕೇಳದ್ರು, ಇವರೂ ಹೋದರು‌. +“ಆಹಾ ಸ್ವಾಮೀ, ನಾನ?” ಕೇಳ್ದ. +“ನಾನು ಯೇಳ ಸಂದ್ರದಾಚೆ ಚಿತ್ರಮಾಲಿಯ ತರಬೇಕೆಂದ ಹೋಗತೇನೆ. . . ” “ಅದ್ಯೆಂತಕೆ?”“ಅದಟ್ಟೆಯೊ ಸ್ವಾಮೀ? +ನನ್ನ ತಂದೆಯಾದ ಅವನಿಗೆ ಯರಡ ಕಣ್ಣವಿಲ್ಲ. +ಅದನ್ನ ತಂದ ಕಣ್ಣಿಗೆ ಹಾಕಬೇಕಂತ ಬಂದಿದ್ದೇನೆ.” +ಅಣ್ಣ-ತಮ್ಮ (ಪರಮಾತ್ಮನೆ), “ಅದು ಹೋಗುದಂದ್ರೆ ಸಾಮಾನ್ಯಲ್ಲ. +ಅಲ್ಲಿ ಯೆಲೆಯೆಲೆಗೊಂದ್ ರಕ್ಕಸರವರೆ, ಮೇಲ್ತಾಗ್ ಅದ್ಕೆ ಮಾಸೇಸ್ನ ಕಾವಲದೆ.” +“ಹಾಂಗಾದ್ರ?ಹ್ಯೇಂಗ್ ಹೋಗಬೇಕು?” +“ಇಲ್ಲಿ ನಾ ಹೇಗ್ ಹೋಗಬೇಕು ಕೇಳ್ದ್ಯಲ್ಲ. +ಪರಮೇಸ್ವರನ ಜಾನ ಮಾಡ್ತ ಇದ್ನಲ್ಲ. +ಅದಕಾಗಿ ಅವನೆ ಬಂದ್ ಹೇಳ್ತಾನೆ.” ಆಗ ಇವ್ರು ಮಾಯಾಗೋದ್ರು. +ಕಣ್ಗ್ ಯಾರೂ ಕಾಣುದೆಲ್ಲ. +ಅಗಿವ ದುಕ್ಕ ಮಾಡ್ತವಳಿತ ವಳ್ದ. +ಅಂತ್ರ ಅಶಿರಿ ಕಿಟ್ಣ ಸ್ವಾಮಿಯು ಗರಡಹೇರಿ ಅಲ್ಲಿಗಾಸ್ ಬಂದ. +ಆಗೆ ಬಂದ್ಕಂಡ್ ಕೇಳ್ದ, “ಆಹಾ! +ಹುಡ್ಗ ದುಕ್ಕ ಮಾಡತಾ ಯಾಕ್ ಕುಂತಿದೆ?” ಕೇಳ್ದ. +“ಆ ಹೂಂಗ್ ತರುಕ್ ತಾನು ಹೋಗಬೇಕು ಮಾಡಿದೆ” ಅಂತ. +“ನೀನು ಐದ್ ವರ್ಸನ ಹುಡ್ಗಾ; ಆ ಹೂಂಗ ತರುಕ ಹೋಗೂದ್ ಹೌದೊ?” “ಆಹಾ ಸ್ವಾಮಿ! +ನಾನು ಐದ್ ವರ್ಸ ಅಲ್ಲದೆ ಪರಮಾತ್ಮನ ವಲಿಸಿ, ಯಾವ ಪ್ರಾಯಕೆ ತರುದು ಸ್ವಾಮಿ? +ನಿಮ್ಮ ಅನುಗ್ರವೇ ಇದ್ರೆ ತಾನ್ ಹೋಗತೇನೆ. +”ಆಗ, “ಹೋಗುದಿದ್ರೆ ತಾನು ಹೇರುವ ವಾಹನವನ್ನು ಕೊಡುತೇನೆ. +ನೀನು ಹೋಗಬವದು.” +ಆಗೆ ಆ ಗರಡನನ್ನ ಕೊಟ್ಟಿ ಅವರು ಮಾಯವಾಗುವವರಾದರು. +“ಆಹಾ ಗರಡಾ; ನಾವಿನ್ನ್ ಆ ಶಂಕೆರಾಣಿ ರಾಜಕೆ ಹೋಗವಾ.” +ಅಲ್ಲಿಗಾಗಿ ಗರಡನ್ನ ಹತ್ತಿ ಹೋಗವಂತವನಾದ. +ಹೋಗಿ, ಆ ರಾಜಿದಲ್ಲಿ ಇಳಿವಂತವನಾದ. +ಅಲ್ಲಿ ದೂರಿಂದಾ ನೋಡಿದ ಕೂಡಲೆ ಯೆಲೆಯೆಲೆಗೊಂದ್ ರಕ್ಷಸರವರೆ; ದೋರಿಂದ ಕಾಣತದೆ. +ಆಗೆ ಹೆದರತೆ ಹೆದರತೆ ಹೋಗವಂತವನಾದ. +ಇಳ್ದ. . . ಹೋದ ಮುಂದೆ. +ಹಿಂದೆ ಅಲ್ಲಿ ನೋಡುವರಿಗೆ ಮಾಶೇಶನ ಕಾವಲದೆ. +ಹಿಂದೆ ವಮ್ಮೆ ನೋಡಿ ಬಂದವನೆ ಆಗ, “ಆಹಾ ಗರಡಾ! +ಮಾಶೇಶನ ಬಾದೆಗಾಗಿ ಹೆದರಿ ಹಿಂದೆ ಬಂದಿದೆ.” +“ಆಹಾ ಹುಡಗಾ!ಅದಕಾಗಿ ಹೆದರಬೇಡ. +ಮಾಶೇಶ ಅಂದರೆ ನನಗೆ ಬಾರಿ ಆನಂದ.” +ಅಲ್ಲಿಗಾಗಿ ಗರಡವನ್ನು ಕೂಡಿ ಹೋಗುವವರಾದರು. +ಆಗ ಮಾಶೇಶನು ಗರಡನ ಅಬ್ರಾಟವನ್ನ ನೋಡಿ ಪಾತಾಳಕ್ಕೆ ಹೋಗವಂತದಾಯ್ತು. +ಆಗ ಆ ರಕ್ಕಸರನ್ನು ಬಾಣದಿಂದ ವಬ್ಬಬ್ಬರನ್ನ ಹೊಡಿಲಿಕ್ಕೆ ಹಣ್ಕದಾ. +ಅದರಲ್ಲಿ ಒಬ್ಬರನ್ನ ಬಿಟ್ಟಿದ‌. +(ವಡತಿಗ್ ತಿಳಿಸಬೇಕಲ್ಲ?) ಆಗೆ, “ನೀನು ವಡತಿಗಾಗಿ ತಿಳಿಸು. +ನೋಡು. . . ನಮ್ಮ ರಾಜನನ್ನು ಪೂರಾ ನಾಶ ಮಾಡಿದ.’’ +ಸುರಗಿ, ಸಾವಂತಿ, ಜೂಜಿ, ಜಾಜಿ, ಕಸ್ತರಿ, ಮಲ್ಗಿ, ದಾಳಿಂಬ. . . ಹೀಗಿದ್ ರಾಶಿಗಿಡ ಇರ್ತದೆ. +ಅಟ್ಟೂ ಗಿಡ ಕೊಚ್ಚಿ ರಾಶಿ ಮಾಡ್ತನೆ. +ಅದ್ಕೆ ಮಾಯ್ದ ನಿದ್ರೆ ಬರವವ ಕೃಷ್ಣನೇಯ. +ಆಗ ಆ ರಾಕಸ್ತ ಹೋಗಿ ಶಂಕೆರಾಣಿಗೆ ಏಳ್ಸವಂತವನಾದ (ಹೋಗು), “ಅಮ್ಮಾ, ನಿಮಗಾದ್ರೂ ಯೇನ ಮಾಯ್ದ ನಿದ್ರಿ ಬಿದ್ ಹೋಯ್ತು. +ಅಂದ್ರೆ ಯಾವದೊ ವಂದ್ ರಾಟ್ಟ್ರದ ವಂದ್ ಹುಡ್ಗ ನಮ್ಮವರೆಲ್ಲ ಪೂರಾ ಕೊಂದೂ ನಮ್ಮಲ್ಲಿದ್ದ ಜಾಜಿ, ಜೂಜಿ, ಕಸ್ತೂರಿ, ಮಲ್ಗಿ, ದಾಳಿಂಬ ಅಟ್ಟೂ ನಾಸಮಾಡಿ ಚಿತ್ರಾಂಗಿ ಹೂವನ್ನು ಕೊಯ್ದ. +ಗರಡ ಹೇರಿ ಬಂದಿದಾನೆ.” +ಆಗೆ ಆ ಹುಡಗಿ ಮುಂದಕೆ ಬರುವಂತವಳಾದಳು. +ಬರತೆ. . . ಬರತೆ ಇರವಾಗೆ, “ನೀ ಯಾರು? +ಇಲ್ಲಿಗೆ ಬಂದ ಕಾರಣವೇನು? +ನಿಲ್ಲು; ಯಾರು ಅಂತ ವಿಚಾರ ಮಾಡುವಾ.” +ಆಗ ಅದ್ಕೆ ಇವಗೆ ಲಡಾಯಿ ಬೀಳ್ತದೆ. +ಲಡಾಯಿ ಬೀಳಬೇಕಿದ್ರೆ ಇವ ಅಸ್ತ್ರ ಬಿಡತ‌. +ಬಿಡಬೇಕಿದ್ರೆ ಅವನದು ಇದಕೆ ತಾಗುದಿಲ್ಲ; ಇದರದು ಅವಗೆ ತಾಗುದಿಲ್ಲ. +ಆಗೆ ಇವನ ಇದ್ದಂತಾ ಚಕ್ರವನ್ನ ನೋಡ್ತು. +ಅದು, “ಸ್ವಾಮಿ, ನಾನು ನಿಮ್ಮ ಹತ್ರ ಯುದ್ಧ ಮಾಡ್ದು ಸರ್ವ ತಪ್ಪು” ಹೇಳಿ ತಾನು ಇದ್ದಂತಾ ಪಟವನ್ನ ಇಟ್ಟು, ‘‘ನಿಮ್ಮನ್ ತಾನು ನಗ್ನವನ್ನು ಆಗತೆನೆ” ಹೇಳತಾ ಇರಬೇಕಿದ್ರೆ, ಪರಮಾತ್ಮ ಹೋಗತಾ ಕೃಷ್ಣ. +“ಆಹಾ ಹುಡಗಾ!ಅದಾದ್ರೂ ಸಾಮಾನ್ಯ ಹೆಣ್ಣಲ್ಲ. +ನಿನ್ನಲ್ಲೆ ಬಂದು ಸರಣಾಗತ ಆದದ್ದು ವಂದು ಪರಮಾತ್ಮನ ಇದರಿಂದೆ ವಿನಾ ಬೇರೆ ಅಲ್ಲ. +ಯೇಗ್ ಅವ ನಗ್ನ ಆಗಬೇಕು ಅಂತ ಹೇಳತಿದಿಯಲ್ಲವೊ? +ನಿನ್ನ ಅಬಪ್ರಾಯವೇನು?” +“ಅಡ್ಡಿಯಿಲ್ಲ; ನಿಮ್ಮ ಅನುಗ್ರಹ ಇದ್ರೆ ಅಡ್ಡಿಲ್ಲ” ಹೇಳ್ತ ಅವ. +ಆಗೆ ಆ ಪರಮಾತ್ಮ ಅಲ್ಲೆ ನಗ್ನ ಮಾಡಿ, ಹೂಂಗ್ನ ಮಾಲಿಹಾಕಿ ಮನಿಗ್ ಬತ್ರು. +ಬಂದಿ, “ತಂದೆ, ನಾನು ಹೋಗಿ ಚಿತ್ರಾಂಗಿ ಹೂವ್ನ ತಂದಿ. . . ನಿಮ್ಮ ಕಣ್ಣ ಬರಬೇಕಂತಾ ಪರಮೇಸ್ವರನ ಅನುಗ್ರದಿಂದ ತಂದಿದ್ದೇನೆ. +ಅದೇ ಹೊರ್ತು ಅವನ ಅನುಗ್ರಹದಿಂದ ವಂದ್ ಹುಡಿಗಿನ್ನ ನಗ್ನಾಗಿ ಬಂದಿದೇನೆ.” +ಹೂವನ್ನ ತಂದು ಕಣ್ಮೇಲೆ ಇಟ್ಕೂಡ್ಲೆ ಕಣ್ ಬರ್ತದೆ ಅವನಿಗೆ. +ಆಗೆ ಮನತಾನವಾಗಿ ಚಲೊತಾಗಿ ವಳ್ದ್ರು ಅವರು. +ಕಾಳಿದಾಸನ ಮಗ ಕನಕದಾಸ; ಮಗನಿಗೆ ವಿದ್ಯೆಯೆಲ್ಲಾ ಕಲಿಸಿ ನಿಪುಣ ಮಾಡಿಬಿಟ್ಯ; +ಯೋಗ್ಯಾದ ನಗ್ನ ಮಾಡು ಬಗ್ಗೆ ಪ್ರೇತ್ನಪಟ್ಟಿ ಪರದಾನಿ ಹುಡಗಿಯ ನಂಟಸ್ತನ ಮಾಡಿ ನಗ್ನಾಯ್ತು. +ಒಂದೇ ಹುಡುಗಿ, ಪರದಾನಿ ತಮ್ಮ ಮತ್ತೊಬ್ಬ ಇದ್ದ. +ಮೂರು ಗಂಡು ಮಕ್ಕಳು. +ಅಪ್ಪನ ಮನಿಗೆ ಹುಡುಗಿಯನ್ನು ಕಳಿಸಲಿಲ್ಲ. +ಪರದಾನಿ ಹಿಂಡ್ತಿ, “ಯೆರಡ ಮೂರ್ ವರ್ಸಾಯ್ತು. +ಅಳಿಯನೂ ಬರುದಿಲ್ಲ. +ಯಾವ ದಿನ (ಮಗಳ) ಕರೂದಾಯ್ತು?” ಅಂತ. +“ಚಲೋ ಅವ್ರೆ ಕಳಿ ಕೊಡುಕ್ ತಯಾರಿಲ್ಲ ಬರುದಿನ ಬರಲಿ” ಅಂದ ಪರದಾನಿ. +ಪರದಾನಿ ತಮ್ಮನ ಮಕ್ಕಳು ಪಾಯ ಹಾಕಿದರು. +“ಬಾವನ ಮನಿಗ್ ಹೋಗಿ ಶಿಕಾರಿಗ್ ಕರಕಂಡ್ ಹೋಗ್ತೇವೆ. +ಸಂಜಿ ಮುಂದೆ, ಬೇರೆ ಆಳ ಕೊಟ್ಟು ರಥದ ಮೇನೆ ಹುಡುಗಿ ತರೂದು. +ಬೆಳಗಾ ಮುಂಚೆ ಅವಳ ತಿರಗಿ ಕಳಿಸೂದು” ಅಂದರು. +ವಂಬತ್ ತಾಸಿಗೆ ಬಂದು, “ಶಿಕಾರಿಗೆ ಹೋಗಬೇಕು” ಹೇಳಿ ಬಂದರು. +ಭಾವ ಉಪಚಾರ ಮಾಡ್ಯ. +ಅಡವಿಗೆ ಹೋದ್ರು. +ಮನಿಯಲಿ ಅಪ್ಪ ರಥ ತಕ್ಕೊಂಡು ಹುಡುಗಿ ಕರಕಂಡ್ ಹೋಗುಕೆ ಬಂದ. +ಕಾಳಿದಾಸನಿಗೆ ಹೇಳಿದರು, “ಸೊಸಿಯ ರಾತ್ರಿ ಬೆಳಗುವಳಗೆ ಮುಟ್ಟಿಸ್ತೇವೆ. +ಸೊಸಿಯ ಇವತ್ತು ಕಳಿಸಿ. +ಮಗಗೆ ಗೊತ್ತಾಗಬಾರದು” ಅಂದರು. +ಅಡವಿಲಿ ಪ್ರಾಣಿ ಕಾಣಲಿಲ್ಲ. +ಹೊಡೀಲಿಕ್ಕೆ ಅಡವೀಲಿ ಮಲಗಿದರು. +ವಿಚಾರ ಏನು ಬಂತು ಕನಕದಾಸಗೆ, ಜೊತೇಲಿ ಮನಗುವಾಗ? +ಅಡವೀಲಿ ಒಬ್ಬ ಮನಗು ಹೊತ್ತು ಬಂತು, ‘‘ಸೀದಾ ಮನೆಗೆ ಹೋಗಬೇಕು” ಹೇಳಿ ಬಂದ. +ತಾಯಿ ಬಿಸಿ ನೀರು ಎಲ್ಲಾ ಸಿದ್ದ ಮಾಡದೆ, “ಹೆರಗೆ ಕಳಿಸಬಾರ” ಎಂದು ಹೇಳಿ ಹೋಗಿದ್ದ; ಹೆರಗೆ ಕಳಿಸಿದರು. +“ಗುಂಡು ಹೊಡೆವೆ” ಹೇಳಿದ್ದ. +ಹೆಂಡತಿ ಸಲುವಾಗಿ ಹೇಳದೆ ಸ್ವಪ್ನ ಬಿತ್ತು. +“ತಾಯಿ-ತಂದೆ ಬಾವಿಗ್ ಬಿದ್ರು” ಹೇಳಿ, “ನಿಲ್ಲುಕಿಲ್ಲ, ಹೋಗ್ವ” ಹೇಳ್ದ. +“ಬೆಳಗಾ ಮುಂಚೆ ನೀವು ಅಡವಿಲಿ ಚೌಕಶಿ ಮಾಡಿ” ಹೇಳಿ, ಒಬ್ಬನೇ ಮನೆಗೆ ಬಂದ; ಮೀವೂಕೆ ಹೋದ. +“ಹೆಂಡತಿ ಕಳಿಸಿ ಕೊಡಿ. . . ” ಹೇಳ್ದ. +ತಾಯಿ “ಯಾಕೆ ಹೆಂಡ್ತಿ?” ಕೇಳಿತು. +“ಎಲ್ಲ ಸಮ ಮಾಡ್ತಿ” ಅಂತು. +“ಹೆಂಡತಿ ಯಾಕೆ ಬರಲಿಲ್ಲಾ?” +“ಹೆಣ್ಣು ಹುಟ್ಟಿದ ಮನೆಲಿ ಬಿಡತಾರೋ? +ಅಪ್ಪ ಕರಕಂಡ್ ಹೋದ್ಯಾ” ಹೇಳ್ತು. +“ತಾಯಿ-ತಂದೆ ಯಾಕೆ ಕಳಿಸಿಲ್ಲ ಹೇಳಿ ಅಪವಾದ ತಪ್ಪಿತು” ಹೇಳಿ ಮನಗಿದನು. +ಅವ ವಿಚಾರ ಮಾಡಿದ, “ಜೊತೆ ಮನಗಬೇಕು ಅಂದಿ ಬಂದೆ. +ಕಾರಣದಿಂದ ಹೋಗಿದು” ಹೇಳಿ ಯೇಕದಮ್ಮ (ಕೂಡಲೇ) ಅತ್ತೆ ಮನೆ ಊರಿಗೆ ಹೊರಟು ಬಿಟ್ಟ. +ಯೇಳ ಜನ ಪೊಲೀಸರ ಪಾರ ಮಾಳಿಗಿ ಮೇನೆ ಮನಗಿದೆ. +ಸದ್ ಮಾಡಿದರೆ ಬಾರ್ ಮಾಡೂದೇ ಹುಕುಮದೆ. +ಬೆಟ್ರೆ ಹೊಡೆದು ಮನಿ ಪ್ರವೇಶ ಮಾಡಿದ. +ಜುಗಿಬೇಕಂದಿ ವಿಚಾರ ಹಾಕ್ದ. +ಸರ್ಪ ಇಲಿ ಬಾಯೊಳಗೆ ನುಂಕೊಂಡು ಕೆಳಗೆ ಬಾಲ ಬಿಟ್ಟು ಪೌಳಿ ಮೇನೆ, ತಾಮ್ರ ಹೊದ್ಕಿ ಮೇನೆ ಎಳ ಸಾರಾಗಿ ಬಿಟ್ಟದೆ. +ಬಾಲ ಹಿಡಿದು ಹತ್ತಿ ಮೇನೆ ಪ್ರವೇಸ ಮಾಡಿದ. +ತಗಡ ಕಳಚಿ ಒಳ್ಗೆ ಗುದಕದ. +ಒಬ್ಬಳೇ ಸುಮ್ಗೆ ಮನ್ಗದೆ. +ತಲೆ ಹಿಂಬದಿ ಕುಳಿತಕೊಂಡ. +ಹಗೂರಕೆ ಊಬಿದ ಕಿವಿವಳಗೆ. +ಎದ್ದು, “ಯಾರು?ಯಾರು?” ಕೇಳಿತು. +ಅಪ್ಪಗೆ ಗೊತ್ತಾಯ್ತು. +“ಗುಂಡು ಹಾಕಿ” ಅಂದ್ಯ. +“ನಮ್ಮನೆಯವರೇ” ಅಂತು. +ಅವ, “ರಾತ್ರಿ ನಿಮ್ ಮನಿಗ್ ಬಂದದ್ಕೆ ಗುಂಡ್ ಹೊಡೆದೆ. +ನಾ ಬಂದ್ದೇ ತಪ್ಪಾಯ್ತೋ?” ಕೇಳಿದ. +“ಯಾವ ರಸ್ತಿಂದ ಬಂದ್ರಿ?” +“ಬಂದೂಕಲ್ ಹೊಡೆದರೆ ನನ್ನ ಪರಿಣಾಮ ಏನು? +ಜಾಗ ತೋರಿ” ಅಂತು. +“ಹಗ್ಗ ತುಂಡು ನೋಡು” ಅಂದ. +‘ಸರ್ಪ!’ ಗುಲ್ ಬಿತ್ತು. +“ಏನು?” ಸರ್ಪ ಹೊಡೆದು ಕೆಡಗಿದ್ರು. +ಗಾಯವೇ ಆಗಲಿಲ್ಲ. +ಅದು ಕೇಳ್ತು, “ನೀವು ಹಾಕಿದ ಕಾಲ್ ಮೆಟ್ಟು ನಾನು. +ನೀವು ನನ್ನ ಸಲುವಾಗಿ ಬೆಟ್ಟಕ್ಕೆ ಹೋಗುಕಾಗ್ಲಿಲ್ಲ. +ಮನಿಲ್ ಬಂದ್ರಿ. +ಹೀನಾಯದ ವಿಚಾರ್ ಮಾಡ್ ಇಲ್ ಬಂದ್ರಿ. +ಅದೇ ಇಷ್ಟ್ ಮೋಹ ಮಾಡುದಲ್ಲ. +ಈ ಮೋಹ ಕುಲದೇವರ ಮೇಲೆ ಮಾಡಿದರೆ ಚಲೋ ಹಾದಿ ಆದೀತು” ಅಂತು. +ಹಿಂಡ್ತಿ ಕಾಲ ಹಿಡಿದು ಅಲ್ಲಂದೇ ಹಾದಿ ಹಿಡಿದು ಮನಿ ಬಿಟ್ ಹೋಗಿ ಬಿಟ್ಟ - ಅಡವಿಗೆ. +ಅದು ಮನಿಗೆ ಬಂತು; ಗಂಡಿಲ್ಲ. +ಕುಲದೇವರ ಕೋಣೆಯ ಒಳಗೆ ಮನಗಿತು. +ಕನಕದಾಸ ಅಡವಿ ಮರ ಬುಡದಲ್ಲಿ ಕುಳಿತುಕೊಂಡ. +ಕಾಡಪತ್ರಿ ಮರ ಏನ ಹೇಳ್ತಾನೆ? +“ರಾಮ ರಾಮ” ಅಂದ ಹೇಳ್ತಾನೆ. +ಕಾಡು ಪತ್ರಿ ಮರದೊಳಗೆ ಕಾಡ ಪಿಶಾಚಿ ಉಂಟು. +“ನಿನಗೆ ಪಿಶಾಚಿ ಅಂಟಿಸಿ ಊರನೆ ಬಿಡಿಸುವೆ” ಅಂತು. +“ರಾಮ ಕಂಡರೆ ನೂಕ ಬಿಡುವೆ.” +“ರಾಮ ದೇವರು ಬೆಟ್ಟಯಾಗುವರೊ ಕೇಳು” ಅಂತು. +“ಇಲ್ಲ, ಇಲ್ಲ” ಅಂದ. +ಸೀದಾ ಹೋಗಿ ಹನುಮಂತಗೆ ಬೆಟ್ಟಿಯಾಯ್ತು. +ಹನುಮಂತ ರಾಮಗೆ ಭೆಟ್ಟಿಯಾದ. +“ನಿಮ್ಮ ಧ್ಯಾನ ಮಾಡುತಾನೆ. +ಒಬ್ಬ ಕಾಡಪಿಶಾಚಿ ಹೀಗೀಗೆ ಹೇಳದೆ. +ಹೀಗೆ ಕೇಳ್ತದೆ. +ಮುಕ್ಕಾಲ್ ಗಳಿಗೇಲಿ ಊರು ಬಿಡಿಸತದೆ, ದರ್ಸನಾಗದಿರೆ” ಅಂದ. + “ಬತ್ಯ. . . ” ರಾಮ, “ಹೋಗು” ಅಂದಿ ಹೇಳಿ ಕಳಿಸಿದ. +ಭಾವಾಜಿ ರೂಪದಿಂದ ಬತ್ಯ ರಾಮ. +ಕನಕದಾಸ “ಬಾವಾಜಿ” ಅಂತ ಹೇಳಿ ‘ಸುಳ್ಳು’ ಅಂತ ತಿಳಿದ. +ಮತ್ತೆ ಬಂದ, “ರಾಮ ರಾಮ ರಾಮ” ಅಂದ್ಯ. +“ರಾಮ ಸಿಕ್ಕನ್ಯೋ ಇಲ್ವೊ ನಿನ್ಗೆ?” ಕೇಳಿತು. +“ಬಾವಾಜಿ ಬಂದಿದ್ದ ಅವರೇ ರಾಮ ದೇವರೋ ಗೊತ್ತಾಗ್ಲಿಲ್ಲ. +” ರಾಮನ ಹತ್ತರ ನಾರದ ಕೇಳಿದ‌, “ದರ್ಸನಾತಿ?” “ಆಗೂದು” ಅಂದ ರಾಮ. +ಅದೇ ಜಾಗದಲ್ಲಿ ಮತ್ತೆ ನಿಂತ ರಾಮ. +ರಾಮ ಬೇಡುವವನ ವೇಸದಲ್ಲಿ ಬರತಾನೆ, ಕನಕದಾಸ ನೋಡ್ತಾನೆ, “ರಾಮ ಅಲ್ಲ. + ಸುಳ್ಳು. . . ” ಅಂದಿ ರಾಮ ಜಪ ಮಾಡಿದ. +ರಾಮ “ಗುತ್ತಾಗು ಹಂಗಿಲ್ಲ” ಹೇಳಿ, ನಿಜರೂಪ ತಾಳಿದರು. +ಪಾದಕ್ಕೆ ಬಿದ್ದ, “ಯಾಕೆ ಬಂದೆ? +ಏನು ಕಷ್ಟ. . . ” ಕೇಳಿ ಅಂದ. +“ಅದರ ಓಲೆಭಾಗ್ಯ ಇರುದಕಾಗಿ ನೀನು ಬದ್ಕಿ ಬಂದೆ. +ಇಲ್ಲ ಸಾಯ್ತಿದ್ದೆ. +ಅದು ಮಹಾಪತವ್ರತೆ. +ಪಾದ ಹಿಡಿದ ಬಂದೆಯಲ್ವೊ ನೀನು? +ನಾ ನಿನಗೆ ಸಿಕ್ಕತಿದ್ನೋ? +ಯಾವ ರೀತೀಲಿ ಉಳಿದಿದ್ದೆ ಮೊದಲಿನ ರೀತೀಲೇ ಉಳೀಬೇಕು” ಅಂದ್ಯ, “ಸಿಟ್ಟು ಬಿಡು, ಅಂತ ಕಷ್ಟದಲ್ಲಿ ನನ್ನ ದ್ಯಾನ ಮಾಡು” ಅಂದ, “ಸುಖದಿಂದುಳಿ” ಅಂದ. +ರಾಜನಿಗೊಂದ್ ಹುಡುಗ, ಪರದಾನಿಗೊಂದ್ ಹುಡುಗ ಬೇಕಾದ್ ಬರಸರ ಅಭ್ಯಾಸ, ಬೇಕಾದ್ ಕಲಿತರು. +ತಾಯಿ-ತಂದೆ ಮುಪ್ಪಿನ ಕಾಲ ಬಂದಿತ್ತು. +ಒಂದಿನ ಪೇಟಿ ತಿರುಗಿ ಬರುವರೆಗೆ ಅರಸು ಹುಡ್ಗ, ಪರದಾನಿ ಹುಡ್ಗ ಮಾತಾಡಿಕೊಂಡರು. +“ನಾವು ತಾಯಿ-ತಂದೆ ಇರಬೇಕಾದ್ರೆ ರಾಜಸ್ತಾನ ನೋಡ್ಕಂಡ್ ಬರಬೇಕು” ಹೇಳ್ ಮಾತಾಡ್ಕಂಡ್ರು. +“ತಂದೆ ಹತ್ರ ಕೇಳ್ವ.” +ಮನಿಗೆ ಬಂದ್ರು, ಊಟ ಮಾಡದ್ರು. +ತಂದೆ ಕೇಳ್ದ್ರು, “ನಿಮ್ಮ ಜೀವ ಇರುವ ತನಕ ರಾಜಸ್ತಾನ ನೋಡ್ಕಬರಬೇಕು. +ನಿಮಗೆ ಮುಪ್ಪಿನ ಕಾಲ. . . ” ಎಂದು ಹೇಳಿದರು-- “ಹೋಗ ಬತ್ರು.” + “ಅಡ್ಡಿಲ್ಲ. . . ” ಹೇಳಿ ತಂದೆ ಹುಕುಂ ಕೊಟ್ಟ. +ಇಬ್ಬರೂ ತಯಾರಾದರು, ಖರ್ಚಿಗೆ ತಕಂಡಿ ಹೆರಬಿದ್ದರು. +ಅಡವಿ ದಾರಿ ಹಿಡ್ಕಂಡು ಹೋತಾರೆ. +ಹೋಗಿ ಆಸ್ರಿ – ಊಟಿಲ್ಲ - ಉಣಿಸಿಲ್ಲ ಗೋರಂಬು ಅಡವಿ ವಳಗೆ ವಂದ್ ಮನಿ ಸಿಕ್ತೂ ಇವರಿಗೆ. +ಮನಿ ಯೇಟ್ಗಿ ಮೇಲೆ ಹೋಗಿ ಕೂತ್ಕಂಡ್ರು-- ಇಬ್ಬರೂವ. +ರಾಜನ ಹುಡಗ “ಇಷ್ಟ್ ಆಸ್ರಿಗಾರು ಕುಡಿವ ಅಂದ್ರೆ ಯಾರಾರೂ ಈ ಮನಿವಳಗೆ ಕಾಂಬೂದಿಲ್ಲ. +ಒಬ್ಬರೂ ಇಲ್ಲ ಮನಿಲಿ” - ಹೇಳುವರಿಗೆ ಎರಡು ತಟ್ಟಿವಳಗೆ ಹಾಲು-ಹಣ್ಣು ತನ್ನಾರೆ ಬಂದ್ ಕೂತ್ ಹೋಯ್ತು ಅವರ ಬಳಿಗೆ. +ಹಾಲ ಕುಡಿದು, ಹಣ್ಣ ತಿಂದ್ರು. +ರಾಜನ ಹುಡಗ ಹೇಳ್ತ- “ಸಾಕಾಗದೇ ನಡೆದು. . . ನಡೆದು. . . ಒಂದು ಹಂಡಿ ನೀರಿದ್ರೆ ಮೀಯುಕ್ಕಾಗಿತಲ್ವೋ” ಅಂದಾ. +ಅವ್ರ್ ಹೇಳುರೊಳಗೆ ಎರಡ ಹಂಡಿ ನೀರು ಕಾದ್ಬಿದ್ ಹೋಯ್ತು. +ಎರಡು ಜನರು ಸಾನಮಾಡಿದರು. +ಮಂಚದ ಮೇನ್ ಕೂತ್ರು. +ಯಣ್ಣದ (ವಿಚಾರ ಮಾಡಿದ ಮೇಲೆ) ‘‘ಆಸ್ರಿಗಾಯ್ತು, ಸಾನಾಯ್ತು, ಕೂಳಿದ್ದರೆ ಹೊಟ್ಟಿಗೆ ಬಹಳ ಆನಂದಾತಿತಲ್ಲೊ. . . ” ಅಟ ಹೇಳಿದ ಕೂಡಲೆ, ಬೆಳ್ಳಿ ಹರಿವಾಣದೊಳಗೆ ಬೇಕಾದ್ದು ತಯಾರಾಗೋಯ್ತು. +ಕೂತ್ರು; ಊಟ ಮಾಡ್ದ್ರು. +ಮೊಕತೊಳೆದು ಕುಂತಕಂಡ್ರು. +ಆಯ್ತು ಇನ್ನೇನು? +“ಮನಿಕಳ್ಳಿಕ್ಕೆ ಹತ್ತಿ ಹಾಸಿದ್ರೆ ಬಹಳ ಆನಂದಾತಿತ್ತೂ, ನೋಡು” ಪರದಾನಿ ಹುಡಗ, “ನಮ್ಮ ಮನಿಯೆ ಮಾರೆ? +ಕೊಡುವವರ್ಯಾರು?” ಎಂದು ಕೇಳಿದ. +ಎರಡು ಬದಿ ಎರಡು ತಡಿಹಾಸಿಗೆ ತಯಾರಾಗ್ ಹೋಯ್ತು-- ಮಂಚದ ಮೇನೆ ಮನಿಕಂಡ್ರು. +ಬೆಳ್ಗು ಜಾವಕೆ ಪರದಾನಿ ಹುಡ್ಗಗೆ ಸಪ್ನ ಬಿತ್ತು‌. +“ನಾ ಅನುಕೂಲ ಮಾಡಿಕೊಟ್ಟೆ. +ಬೆಳಗಾರುವರಿಗೆ ಜಾಗ್ ಬಿಟ್ ಹೋಗಬೇಕು” ಅಂತು. +ರಾಜನ ಹುಡಗನ್ನ ಎಬ್ಬಿಸಿದ. +“ಈಗಿದೀಗ ನಾವು ಎದ್ ಹೋಗಬೇಕು ಅಂದು ಸಪ್ನ ಬಿತ್ತು ಏಳು.” + “ತಡಿಯೊ ಮಾರಾಯ, ರಾತ್ರಿಯದೆ ಎಬ್ಬಿಸಬೇಡ” ಅಂದ. +ಎಬ್ಬಿಸಿ ಕುಳ್ಳುವರಿಗೆ ಹೆರಗೋಗಿ ಬಂದಿ ತಯಾರಾಗುವರಿಗೆ ಕಾಕಿ ಯೆಲ್ಲ ಕಾಗೆಡಿತ ಬಂತು. +ಇವ, “ಏಳು ಹೋಗ್ವ” ಅಂದ. +ಎಬ್ಬಿ‌ಸಿಕಂಡಿ ದಾರಿ ಹಿಡಿದು ಹೋಗ್ತಾ ಇದ್ರು. +ರಾಜನ ಹುಡಗ ಅರ್ಧ ಪರ್ಲಾಂಗ ಹಿಂದೆ, ಪರದಾನಿ ಹುಡಗ ಅರ್ಧಪರ್ಲಾಂಗ ಮುಂದೆ ಹೋಗಬೇಕಿದ್ರೆ ಇವನಿಗೆ ಹಿಂದ ಬದಿಹೋಗಿ ಯಾರೋ ಕರದ ಹಾಗ್ ಆಗ್ ಹೋಯ್ತು-- ರಾಜನ ಹುಡಗನಿಗೆ. +ಹಿಂದೆ ತಿರಗಿ ನೋಡ್ದ; ಸುಟ್ ಬೂದಿಯಾಗಿ ಬಿದ್ ಬಿಟ್ಟು ಇವ. +ಇವರಿಗೆಲ್ಲ ಅನುಕೂಲ ಮಾಡಿತ್ತಲ್ವೋ ಅದು ಬಂದು ಅವನಿಗೆ ಜೀವ ಮಾಡಿತು. +ಏಳು ಜನ ಅಚ್ಚಕನ್ನೆ, ದೇವಕನ್ನೆ ಅವರಲ್ಲಿ ಹೇರೀದ್ ಬಂದು ಜೀವ ಮಾಡ್ತು. +ಎಲ್ಲಾ ನೋಡ್ದ‌- ‘‘ಏನ್ ಹೆಣ್ಣು, ಹಿಂದೆ ನೋಡಲಿಕ್ಕೂ ಇಲ್ಲ. . . ಮುಂದೆ ನೋಡಲಿಕ್ಕೂ ಇಲ್ಲ.’’ ಅಂದ. +‘‘ಇನ್ನು ಊರಿಗೆ ಹೋಗಿ. . . ” ಅಂತು. +“ತಾ ಹರ್ಗಿಸ ಹೋಗವನಲ್ಲ. +ನಿನ್ನ ಬಿಟ್ಟಿ; ಜೀವ ಮಾಡಿದ್ಯಾಕೆ? +ನಿನ್ ಬೆನ್ನಹತ್ತಿ ನಾ ಬಂದ್ ಬಿಡ್ತೇನೆ. . . ” ಹಟ ಹಿಡಿದು ಕೂತ; ಹೇಳ್ದ್ರೂ ಕೇಳುದಿಲ್ಲ. +“ಇವನ ಕೈಲಿ ಶಿಕ್ಕಬಿದ್ನಲ್ಲ. . . ಆಗಲಿ” ಅಂತು. +ತಂಬೂರಿ ಬುಯ್ಡೆ ಇದು ಆಯ್ತು. +‘‘ನಾ ತಪ್ಪುದಿಲ್ಲ. +ತಂಬೂರಿ ಬುಯ್ಡೆ ಮಾಡ್ ಕೊಡ್ತೇ.” +ಮಂಡ್ಸ ನಿಗರ ತೆಗೆದು, ತಂಬೂರಿ ಮಾಡ್ ಕೊಟ್ತು. +ಹೇಳ್ತು ಏನಂತಿ? +“ಹನ್ನೆರಡ ಗಂಟಿಗೆ ರಾತ್ರಿಗೆ ಈ ತಂಬೂರಿ ಬಾರಿಸಬೇಕು” ಅಂತಾ ಹೇಳಿ - ತಂಬೂರಿ ಅವನ್ ಕೈಲಿ ಕೊಟ್ತು. +ಮನಿಗೆ ನಡದ ಬಿಟ್ತು ಅದು. +ದೇವೇಂದ್ರ ನಿದ್ದೆಲ್ ಹೋಗಿ ಗೆಜ್ಜಿ ಕಟ್ಕಂಡ್ ನಾಚ್ ಮಾಡುಕ್ಹೋಯ್ತು. +ರಾತ್ರಿಗೆ ಅಲ್ಲೇ ವಳದ. +ಹನ್ನೆರಡ ಗಂಟೆ ರಾತ್ರಿಗೆ ಅವ ತಂಬೂರಿ ಬಾರಸದ. +ದೇವಲೋಕದಿಂದ ವಂದ್ ಹರಿವಾಣದಲ್ ಯೇನ ಬೇಕೋ ಯಲ್ಲಾ ತಕಂಡಿ ಬಂತು. +ಊಟ ಮಾಡಿದ; ಮಾತುಕತಿಯಾಡಿದರು. +“ದೇವೇಂದ್ರನಿದ್ದಲ್ಲಿ ಹೋಗಿ ಗೆಜ್ಜೆ ಕಟ್ಕಂಡ್ ನಾಚ್ ಮಾಡಬೇಕು. +ವಂದ್ ಗಳಿಗ್‌ ತಪ್ಪಿದರೆ ದೇವೇಂದ್ರ ಸಾಪ ಕೊಡ್ತ” ಹೇಳಿ ಹೋಯ್ತು. +ಹೋಯ್ತು ಹೇಳಿ ಬದಿ ಬಂದ. +ದೊಡ್ಡ ಹಾಸರಗಲ್ಲಮೇನೆ ಕೂತ್ಕಂಡಿದ್ದ ಅವ. +ವಂದ್ ರಾತ್ರಿ ವೇಳೆದಲ್ಲಿ ಇವ ತಂಬೂರಿ ಬಾರಸತ. +ಇವ್ರು ಮಾತೂಕತಿ ಆಡಬೇಕಿದ್ರೆ, ಕಲ್ಲಶಿಲಿಯೊಳಗೆ ನೆಲಮಾಳಿಗಿವಳಗೆ ಒಬ್ಬ ಮುನಿ ತಪಸಿಗೆ ಕೂತಕಂಡಿದ್ದ. +ಹನ್ನೆರಡ ಗಂಟೆ ದಾತ್ರಿ ಇವ ಯೆಲ್ಲ ನೋಡಕಂಡ, “ಹನ್ನೆರಡ ವರ್ಸ ತಪಸ ಮಾಡದರೂ ನಮ್ಮಿಂದ ಇಂತಾದೆಲ್ಲ ಪಡೂಕಾಗಲಿಲ್ಲ. +ಇವ ಪಡೆದ. +ಇವನನ್ನ ಬೆಳಗಾಗ ಮಾತಾಡಿಸಬೇಕು” ಹೇಳಿ ನಿಚ್ಚಯ ಮಾಡ್ದ. +ರಾಜನ ಹುಡಗನಿದ್ದಲ್ ಬಂದ, “ಹಗಲಿಡೀ ನೀನು ಒಬ್ಬನೇ ಕುಂತ್ಕಬಿಡ್ತೆ. +ದಾತ್ರೆ ನೋಡುವರೊಳಗೆ ಹೆಣ್ ಬಂತು. +ಆಶ್ಚಿರ್ಯಾಯ್ತು. +ನೀನು ಅವಳ ಹೇಗೆ ಕರಿಸ್ವೆ?” ಎಂದ ಹೇಳಿ ಇಚಾರ ಮಾಡ್ದ. +“ಅಯ್ಯೋ ಮುನಿಯೇ, ಇದ್ ವಂದ್ ತಂಬೂರಿ ಇರುಕಾಗಿ ಮಾತ್ರ ನನ್ನ ಹೊಟ್ಟೆ ಸಂಸಾರ ನಡಿತದೇ. +ಇಲ್ಲದಿದ್ದರೆ ಉಪಾಸ ಬೀಳುದೇಯ” ಹೇಳ್ದ. +“ಆಗ್ಲಿ, ತಾನೂ ಹನ್ನೆರಡ್ ವರ್ಸ ತಪಸಿಗೆ ಕೂತು ಪಡಿಲಿಕಾಗಲಿಲ್ಲ. +ಮರ್ದಿನ ದಾತ್ರೆಗೆ ನನಗೆ ಈ ತಂಬೂರಿ ಕೊಡತೆಯೊ?” ಕೇಳಿದ ಮುನಿ. +“ಕೊಡಲಿಕಡ್ಡಿಲ್ಲ, ನೀ ಯೇನ್ ಕೊಡತ್ಯಪ್ಪ ನನಗೆ?” +“ವಂದ್ ಸೊಟ್ಟಿ ನಾ ಪಡಕೊಂಡಿದ್ದೆ; +ಹೋಗು ಅಂದ್ರ ಹೋಗ್ತದೇ, ಹೊಡೆ ಅಂದ್ರೆ ಹೊಡಿತದೆ. +ಅದ್ನ ಕೊಡ್ತೆ” ಅಂದ. +ತಂದಿ ಇವನಿಗೆ ಕೊಟ್ಟ; ತಂಬೂರಿ ಮುನಿ ಇಟ್ಕಂಡ. +ಅಲ್ಲಿಂದ ಸೊಟ್ಟಿ ಹಿಡ್ಕಂಡ ಹೋದ ಕೆಳಗೆ. +ಯತ್ತರ ಕಲ್ ಮೇನ್ ಹೋಗಿ ಕುಂತ ಇವ ಸಂಜಿಯಾಗತ ಬಂತೂ. +ಹಸವಾಗೂಕ್ ಸುರುವಾಯ್ತದೆ. +ತಂಬೂರಿನೂ ಕೊಟ್ಟಬಿಟ್ಟನೆ. +ಸೊಟ್ಟನ ಕೈಲಿ ಹೇಳ್ದ, “ಸೊಟ್ಟ, ನೀ ಹೋಗಿ ತಂಬೂರಿ ವಂದ್ ತರಬೇಕಿತ್ತಲ್ಲ; ಇಲ್ಲದಿದ್ದರೆ ಸಾದ್ಯವಿಲ್ಲ” ಅಂದ. +ಸೊಟ್ಟ ಅಷ್ಟ್ ಮಾತ ಕೇಳಕಂಡಿ ಮುನಿದ್ದಲ್ಲೆ ಹೋಯ್ತು. +“ಮುನೀಸ್ವರರೇ, ನಿಮ್ಮ ತಂಬೂರಿ ತಕಂಬಾ ಹೇಳಿ ಕಳಿಸಾರೆ, ಕೊಡಿ!” ಅಂದ. +“ಅಯ್ಯ. . . ತಂಬೂರಿ ಕೊಡಲಿಕ್ಕೆ ಬರುದಿಲ್ಲ. +ಗನಾ ಬಾರಿಸಲಿಲ್ಲ” ಎಂದ, “ಸೊಟ್ಟನ ಕೊಟ್ ತಕಂಡಿದ್ದೆ” ಅಂದ. +“ಆಗ ನನ್ನ ಒಡ್ಯ ನೀನಾಗಿದ್ದೆ. +ಈಗ ನನ್ನ ಒಡ್ಯ ಅವಾಗನೆ. +ಈಗ ಕೊಡದಿದ್ರೆ ಬಿಡುದಿಲ್ಲ” ಹೇಳತಾನೆ. +“ಕೊಡುದಿಲ್ಲ” ಹೇಳ್ತ. +ಗಡ್ಡ ಹಿಡಕಂಡು ತಲಿಮೇನೆ ಎರಡ ಕೊಟ್ಟ, “ಮಾರಾಯಾ. . . ದಮ್ಮಯ್ಯಕ್ಕು, ತಕಂಡ್ ಹೋಗು” ಅಂದ. +ತಂಬೂರಿ ತಕಂಡ, ರಾಜನ ಹುಡಗನ ಹತ್ರ ಕೊಟ್ಟ. +ಹನ್ನೆರಡ ಗಂಟೆ ರಾತ್ರಿಗೆ ತಂಬೂರಿ ಬಾರಿಸಿದ್ದ. +ಅಲ್ಲೇನಾಗದೆ ಅಲ್ಲೂ ವಂದ್ ಮುನಿ ತಪಸಿಗೆ ಕೂತ್ಕಂಡಿ ರಾತ್ರಿಗೆ ನೋಡತಾನೆ. +“ಹಗಲಿಡೀ ವಬ್ಬ ಕೂತ್ಕಂಡಿದ್ದ. +ಈಗ ದೇವಲೋಕವೇ ಬಂತು” ಅಂತ ಆಚಿರ್ಯ ಮಾಡ್ತ ಮುನಿ. +ಮುನಿ ಬೆಳಗಾಮುಂದೆ ಮಾಳಿಗಿಂದ ಹೆರಗಬಿದ್ದಿ ಹುಡಗನ ಹತ್ರ ಕೇಳತಾನೆ. +“ಹಾಗಾರೆ ದಾತ್ರಿಗೆ ಹೆಣ್ ಬಂದಿತ್ತು. +ಎಲ್ಲಿಂದ ಕರಿಸಿದ್ದೆ?” ಹೇಳಿ ಇಚಾರ ಮಾಡತಾನೆ. +“ತಂಬೂರಿ ಬಾರಿಸಿದ ಕೂಡ್ಲೆ ಹೆಣ್ ಬತ್ತದೆ. +ಅದರಿಂದ ಜೀವನ.” +“ಹಾಗಾರೆ, ದಾತ್ರೆ ನನಗೆ ತಂಬೂರಿ ಕೊಡು.” +“ಅಡ್ಡಿಲ್ಲ, ನೀಯೇನ ಕೊಡ್ತಿ ನನಗೆ?” +“ತಾನು ಹನ್ನೆರಡ ವರ್ಸ ತಪಸಮಾಡಿ ವಂದ್ ಯಕ್ಸಿ ಜೋಳ್ಗಿ ಪಡ್ಕಂಡಿದ್ದೆ. +ಜೋಳ್ಗಿ ನಿನಗೆ ಕೊಡತೇನೆ. +ತಂಬೂರಿ ಕೊಡು” ಅಂದ. +ಕೊಟ್ಟ; ಜೋಳ್ಗಿ ತಕಂಡ. +ತಕಂಡ ಹಾಗೆ ತುಂಬಿ ರೊಕ್ಕ ಬರೂದು. +ವಂದ್ ಮೈಲಾಚಿ ಹೋಗಿ ಹೊಳಿಬದಿ ಕುಂತಬಿಟ್ಟ. +ಸಾಯಂಕಾಲ ಆಯ್ತು - ಸೊಟ್ಟನ ಕೈಲೆ ಹೇಳತಾನೆ, “ತಂಬೂರಿ ತಾ” ಹೇಳ್ತ. +ತಂದ ತಂಬೂರಿಯ. +ಹನ್ನೆರಡ ಗಂಟೆಗೆ ತಂಬೂರಿ ಬಾರಿಸಿದ. +ಬಂತು. .ದೇವೇಂದ್ರನಿದ್ದಲ್ಲಿ ನಾಚ ಮಾಡ್ತು. +ಹನ್ನೆರಡ ಗಂಟೆ ರಾತ್ರಿಗೆ ಮತ್ತೆ ತಂಬೂರಿ ಬಾರಿಸಿದ. +ಮೂರನೆ ಮುನಿ ತಪಸಿಗೆ ಕುಂತಿದ್ದ. +ನೋಡ್ತ.. ಇವನಿದ್ದಲ್ಲಿಗೆ ಬಂದ. +“ರಾತ್ರಿ ಹೆಣ್ ಬಂದಿತ್ತು. +ಎಲ್ಲಿಂದ?” +“ತಂಬೂರಿ ಬಾರ್ಸಿದ್ರೆ ಬತ್ತದೆ” ಅಂತ. +ತಂಬೂರಿ ವಂದ್ ರಾತ್ರಿಗೆ ಕೊಡಂತ. +“ನೀಯೇನ್ ಕೊಡ್ತಿ?” + “ಹಗ್ಗ ಕೊಡ್ತೆ ಬಿಗಿ ಅಂದರೆ ಬಿಗಿತದೆ.” + ಕೊಟ್ಟ ಹಗ್ಗ ಹಿಡಕಂಡಿ ಬಂದ, ಕುಂತ. +ಸಾಯಂಕಾಲ ಕೂಡೆ ಹಂಬಲಾಯ್ತು. +“ಕಟ್ ಬಳ್ಳಿ ಹೂಯ್ದೊಣ್ಣೆ; ಯೆರಡ ಜನ ತಂಬೂರಿ ತಕಂಡ್ ಬರಬೇಕು” ಹೇಳ್ದ. +“ಅಯ್ತು” ಹೇಳಿ ಹೋದರು. +ಮುನಿ ಕೇಳ್ತದೆ‌- “ಹುಕುಂ; ತಂಬೂರಿ ಕೊಡು. +ಈಗಿಂದೀಗೆ ಕಟ್ಬಳ್ಳಿ ಕೊಟ್ಟಿ ಇಟ್ಟದ್ದು ಹೇಳು ಒಡೆಯನ ಕೈಲಿ. . . ” “ಹಿಂದೆ ಹೋಗಿ ಹೇಳುಕ್ ಬಂದರಲ್ಲ.” +“ಚಲೋ ಮಾತಿಂದ ತಂಬೂರಿ ಕೊಡು.” +“ಇಲ್ಲದರೆ ಏನ್ ಮಾಡ್ತಿ?” + “ಕಟ್ ಹಾಕಿ ತಕಹೋಗದಿರೆ ಸೊಟ್ಟನಲ್ಲ. +ಕಟ್ ಬಳ್ಳಿ, ಯೇನ್ ನೋಡ್ತೆ?” ದೊಣ್ಣಿ ಹೊಡೆದು ಹಗ್ಗ ಕಟ್ಟಿದ ಮೇಲೆ, ‘ಜಲ್ಮವಂದ್ ಬಿಡಪ್ಪ’ ಅಂದ. +ತಂಬೂರಿ ಕೊಟ್ಟ. +‘ಹಗ್ಗ ಬಿಚ್ಚು’ ಅಂದ. +ತಂಬೂರಿ ತಕಂಡ್ ಹೋಗಿ ಕೊಟ್ತು. +ಎದ್ದಿ ನೀಲಕೋಡ ಹಾಗೆ ಬಂದು ಅಸ್ವತ್ತ ಕಟ್ಟಿಮೇಲ್ ಬಂದಿ ಕುಂತ್ಕಂಡ ಇವ. +ಅಲ್ಲಿ ಕಟ್ಟಿ ಮುಂದೆ ಕಿರಾಣಿ ಅಂಗಡಿ; ಹನ್ನೆರಡ ಗಂಟೆ ರಾತ್ರಿ ತಂಬೂರಿ ಬಾರಿಸಿದ. +ಅಂಗಡಿಶೆಟ್ಟಿ ನೆಕ್ಕ ಪತ್ರ ತಕಂಡ್ ಓದ್ಕಂತೆ ಇದ್ದ. +ತಂಬೂರಿ ದೇವಲೋಕದಿಂದ ಬೇಕಾದ ತಕಂಡ್ಬಂತು. +ಅಂಗಡಿಶೆಟ್ಟಿ ಯೆಲ್ಲ ನೋಡ್ದ. +“ಅರೆರೆರೆ!ದೇವಲೋಕದ ಹೆಣ್ ಬರಬೇಕಾದ್ರೆ ಎಷ್ಟ ಇರಬೇಕು.” +ಬೆಳ್ಗಮುಂಚೆ ಹೊಯ್ಟ ಶೆಟ್ಟಿ. +“ಯೆಲ್ಲಾಯ್ತು?ಯಾವೂರಿಂದ ಬಂದೆ? +ಹೆಣ್ ಎಲ್ ಹೋಯ್ತು? +ಹ್ಯಾಂಗ್ ಕರಿಸ್ತೆ ನೀನು?” ಎಲ್ಲಾ ವಿಚಾರ ಮಾಡ್ದ. +“ತಂಬೂರಿ ಬಾರಿಸಿದ ಕೂಡಲೆ ಬತ್ತದೆ. +ಅಟ್ಟೇ ಹೊತ್ತಿಗೆ ಬತ್ತದೆ, ಬಾಕಿ ಹೊತ್ತಿಗೆ ಬರೂದಿಲ್ಲ.” +“ತಂಬೂರಿ ವಂದ್ ದಾತ್ರಿಗೆ ಕೊಡತಿಯೋ? +ಹೇಗೆ?” “ನೀ ಯೇನ್ ಕೊಡ್ತೆ?” + “ಮುಂಚೆ ತಪಸ್ ಮಾಡಿ ವಂದ್ ಮಂಚ ಪಡಕಂಡಿದ್ದೆ. +ಮಂಚದ ಮೇಲೆ ಕುಂತ್ಕಂಬಿಟ್ರೆ ಹಾರಿ ಹೋಗತದೆ. +ಅದರ ಕೊಡ್ತೆ ನಾನು” ಅಂದ. +ತಂಬೂರಿ ತಕಂಡ್ ಅವ ಮಂಚದ ಮೇಲೆ ಕುಂತ. +ಇವ ಅಲ್ಲಿಂದ ಬೇರೆ ಜಾಗಕ್ ಹೋಗಿ ಸಂಗ್ರಹ ಇಟ್ಕಂಡಿ ಮನಿಕಂಡ. +ಸಾಯಂಕಾಲ, “ಸೊಟ್ಟ, ತಂಬೂರಿ ತಕಂಬಾ” ಅಂದ. ಬಂದ. . . ಶೆಟ್ಟಿದಲ್ಲಿ ಬಂದು, “ಶೆಟ್ರೆ, ತಂಬೂರಿ ಕೊಡಿ” ಅಂದ. +“ಶೇಶೆಶೆಶೇ!ಕೊಡಲಿಕ್ಕೆ ಬರುದಿಲ್ಲ.” +“ಹಾಗೆ ಹೇಳ್ಲಿಕ್ಕೆ ಬರುದಿಲ್ಲ. +ತಕಂಡ್ ಹೋಗಬೇಕು. +ಇಲ್ಲ, ಕಂಬಕ್ ಬಿಗಿದ್ ಹಾಕಿ ಹೊಡೆದು ತಂಬೂರಿ ತಕಂಡ್ ಹೋಗ್ತ್ರು. +ಕಟ್ ಬಳ್ಳಿ ಬಿಗಿ. . . ” ಅಂದ. +ಹೊಡೆತ ಹೊಡೆಯಿತು. +“ತಕಂಡ್ ಹೋಗು” ಅಂದ. +“ಕಟ್ ಬಳ್ಳಿ, ಬಿಚ್ ಬಳ್ಳಿ” ಅಂದ. +ತಕಂಡ್ ಹೋಗಿ ಕೊಡ್ತು. +ಹನ್ನೆರಡ ಗಂಟೆ ರಾತ್ರಿ ಬಾರಿಸಿದ. +ಬದಿಗಿಟ್ಟು ಬೆಳಗಾಗ ಮನಿಕಂಡ. +ಆಲದ ಮರದ ಹಕ್ಕಿ ಆಲದ ಹಣ್ ತಿಂಬೇಕಿದ್ರೆ ಹಕ್ಕಿ ಕೂತ ಬತ್ ಮುರಿದು ಆ ತಂತಿಮೇನೆ ಬಿದ್ ಹೋಯ್ತು. +ತಂತಿ ಬಾರಿಸಿತು- “ಟಣ್. . . ” ಅಂತು. +ಅದು ನರ್ತನ ಮಾಡತೆ ಇತ್ತು. +ತಯಾರ್ ಮಾಡಿತ್ತು. +“ಹರಹರಾ!ಮೋಸಾಯ್ತು ಸಾಯ್ಲಿ” ಅಂತು. +ಅಂತೂ ಬಂದ್ ಹೇಳತದೆ, “ಏನ್ ಆರ ತಾಸ ಹಗಲ್ದಲ್ಲಿ ಬಾರಿಸಿದೆ?” +“ನಾ ಬಾರಸದಲ್ಲ. +ಪರಾಮೋಸಿಂದ ಹಕ್ಕಿ ತಿಂಬಾಗ್ ಬಿತ್ತು.” +ದೇವೇಂದ್ರನ ಹತ್ರ ಗೆಜ್ಜೆ ಕಟ್ ನಾಚ ಮಾಡ್ತು. +ಬರಲಿಕ್ಕೆ ಚಣ ಹೆಚ್ ಕಮ್ಮಿಯಾಯ್ತು. +“ಮೂರ ಖಂಡ್ಗ ಹೊಲದಲ್ಲಿ ಆಲದ ಮರ ಆಗು” ಹೇಳ್ ಶಾಪ ಕೊಟ್ಟ. +ಬೇಡಿಕಂಡ್ತು. ಉರಶಾಪ- “ಯಾವ ಮನಶ ಮರ ಕಡಿಸಿ ವಂದೇ ದಿನದಲ್ಲಿ ಹೆಗ್ಗಿ ಸಮುದ್ರದಲ್ಲಿ ಹಾಕತಾನೋ ಅವಾಗ ನೀನು ಗೆಜ್ಜೆ ಕಟ್ಕಂಡು ಬಂದ್ ನಾಚ್ ಮಾಡ್ಲಿಕಡ್ಡಿಲ್ಲ” ಹೇಳ್ದ. +“ಆಯ್ತು” ಅಂತು. +ರಾಜನ ಹುಡಗಿದ್ದಲ್ಲಿ ಬಂತು. +ಹೇಳ್ತು- ‘‘ದೇವೇಂದ್ರ ಶಾಪಕೊಟ್ಟ. +ಎರ ಶಾಪ ಬೇಡ್ದೆ. +‘ವಂದ್ ದಿನಕೆ ಮನಶ ಮರಕಡಿಸಿ ಸಮುದ್ರಕ್ಕೆ ಹಾಕಿದಾಗ ಬಿಡಗಡೆ’.’’ +ಹೋಗಿ ಮೂರ ಖಂಡ್ಗ ಹೊಲಕೆ ಆಲದ ಮರ ಆಯ್ತು. +“ನಾನು ಏನ್ ತಿಂದಿದ್ನೊ, ಏನ್ ಬಿಟ್ಟದ್ನೊ ಯೋಗ್ಯಲ್ಲ. ಕೂಡೂದು. . . ” ಜನರ ವಟ್ಟು ಮಾಡ್ತ. +ಮರ ಕಡಿಸ್ಬೇಕು ಹೇಳ್ ತಿರಗಿದ. +ಪಗಾರ್ ನಿಕ್ಕಿ ಮಾಡಿ ಸಾವ್ರ ಜನ ಒಟ್ಟ ಮಾಡಿ ಬೆಳಗಾಗುತನ ಜನರ ನಿಲ್ಲಿಸಿದ. +ಇಪ್ಪತ್ತೈದು ರೂಪಾಯ್ ಆದ್ರೂ ದಿನ ಕೊಡತ. +ಸಾಯಂಕಾಲದ ಒಳಗೆ ಕಡಿದು ಸಮುದ್ರಕ್ಕೆ ಹಾಕಿಸ್ದ. +ಪಗಾರ ಕೊಟ್ಟ. +ಮನಿಗ್ ಹೋದ. +ಹನ್ನೆರಡ್ ಗಂಟೆ ಅದು ದೇವೇಂದ್ರನ ಹತ್ರ ಗೆಜ್ಜೆ ಕಟ್ಟಿತು. +ಹನ್ನೆರಡು ಗಂಟೆ ರಾತ್ರಿ ತಂಬೂರಿ ಬಾರಸದ. +ಬೇಕಾದ್ ತಕಂಡ್ ಕೆಳಗೆ ಬಂತು. +“ನನ್ನ ಜನ್ಮ ಕಾದಿರಿ, ಋಣ ಅದೆ” ಅಂತು. +ಮರದಿನ ಬೇರೆ ಜಾಗದಲ್ ಮನಗಿದ. +ಹನ್ನೆರಡ ಗಂಟೆ ಹಗಲಿಗೆ ಹಾಣಿ ಆಟ ಆಡವ ಹುಡಗರ ಹಾಣಿಗೆಂಡೆ ಆವಾಜಾಯ್ತು ಬಿತ್ತು. +ಅದು, “ಇಂದೂ ಮೋಸಾಯ್ತು” ಅಂತು, ಬಂತು. +“ನಾ ಬಾರಿಸಿದ್ದಲ್ಲ. . . ಮಕ್ಕಳು ಆಡಬೇಕಿದ್ರೆ ಹಾಣಿಗೆಂಡೆ ಬಿತ್ತು.’’ +ಹೋಯ್ತು. . . ದೇವೇಂದ್ರ ಸಾಪ ಕೊಟ್ಟ. +“ಮೂರ್ ಕಂಡ್ಗ ಹೊಲಕೆ ಕರಿಶಿಲೆಯಾಗು.” +ಮರಸಾಪ ಬೇಡಿತು ‘‘ಕಡಿಸಿ ಸಮುದ್ರಕೆ ಹಾಕಿದರೆ ಅಡ್ಡಿಲ್ಲ” ಅಂದ. +“ಶಿಲಿಯಾಗು. . . ” ಅಂದ. +“ಕಡಿಸೂದು ಸಾದ್ಯವೇ?ಹೊರಿಸೂದು ಸಾದ್ಯವೇ?” ಅಂತು ಹೋಯ್ತು. +ಕರಿಶಿಲೆಯಾಯ್ತ್. ಪಚ್ಚಾತ್ತಾಪ ಮಾಡಿದ. +“ಇಂತಾ ಅವಸ್ಥಿ ಬಂತು. +ಪುನಃ ಬಿಡಲಿಕ್ಕೆ ಬರುದಿಲ್ಲ” ಅಂದ. +ಮಂಚದ ಮೇಲೆ ಕೂತು ಕಲ್ ಕಡುವಟ್ ಜನ ವಟ್ ಮಾಡಿದ. +ಯೆರಡ್ ಸಾವಿರ ಜನ ತಂದು ಕಡಿದರು. +ಕಪ್ಪಿಲ್ ಸುರು ಮಾಡರೆ ಚೊಕ್ಕ ಮಾಡಿ ಹೊರಿಸಿದ ಸಮುದ್ರಕ್ಕೆ ಸಂಜಿವಳಗೆ ನಿಕಾಲಿ. +ಹಣ ಅಳೆದು ಕೊಟ್ಟ. . . ಹೋದ್ರು. ದಾತ್ರಿ ಹನ್ನೆರಡ ಗಂಟೆಗೆ ಬಾರಿಸಿದ, ಬಂತು. +“ಸಾಬಾಸ್!ಯಾವ ತಾಯ್ ಹೊಟ್ಟಿಲ್ ಹುಟ್ಟಿದ್ದೆ?” ಪಚ್ಚಾತ್ತಾಪ ಬಿಟ್ತು‌. +ದೇವೇಂದ್ರನ ಹತ್ರ ನಾಚ್ ಮಾಡಿತು. +ಮಂಚದ ಮೇಲೆ ಕೂತು, “ಜಾವ್” ಅಂದ. +ಹೆಬಾನಕೆರಿಗ್ ಹೋದ. +ಅಲ್ಲಿ ಮನಗಿದ್ದ. +ಚಂಡಿನಾಟ ಹುಡಗರ ಚೆಂಡು ಹನ್ನೆರಡ ಗಂಟೆಗೆ ತಂತಿ ಮೇನೆ ಬಿತ್ತು. + “ಟಣ್. . . ” ಅಂತು. +“ಮತ್ತೆ ಮೋಸಾಯ್ತು” ಅಂದಿ ಬಂತು. +“ಈ ಕಂತನಲ್ ಶಾಪ ಏನ್ ಕೊಡತ್ನೋ ತಿಳಿಯ” ಅಂತು. +ದೇವೇಂದ್ರ, “ಮೋಸ ಮಾಡೂಕ್ ಹಣ್ಕಿದೆ” ಹೇಳಿ ಶಾಪ ಕೊಟ್ಟ. +“ಸಮುದ್ರದೊಳಗೆ ಬಿಳಿ ಹೊಯ್ಗಿಲಿ ಕರಿ ಹೊಯ್ಗಿಯಾಗಿ ಬೀಳಬೇಕು. . . ” ಸಾಪ. +‘‘ಕಣ್ಣಿಗೆ ಕಾಂಬೂದಲ್ಲ, ಕೈಗೆ ಸಿಕ್ಕುದಲ್ಲ. +ವಂದ್ ದಿನಕೆ ಕರಿಹೊಯ್ಗಿ ಬೇರೆ ಮಾಡಬೇಕು. +ಇಲ್ಲಿ ಬಂತು‌. +‘‘ಬಚಾವ್ ಅಂದ್ರ್‌ ಈಗ ಸಾದ್ಯಿಲ್ಲ.” +“ಅಕೇರಿ ಋಣ. . . ” ಅಂತು. +ಕರಿ ಹೊಯ್ಗಿಯಾಗಿ ಬಿತ್ತು. +“ಹರಹರ!ದೇವರೆ!ಆಗ ಸುಕದಲ್ಲಿದ್ದೆ. +ಈಗ ಕಷ್ಟ. . . ” ಎಲ್ಲಾ ಕಡೆ ತಿರುಗಿ ಅಕ್ಕಿ, ಜೋಳ, ರಾಗಿ ಎಲ್ಲ ಸಟ್ಟೆ ಹೊಡ್ದು ಬೇಲೇಲ್ ರಾಶಿ ಕೊಟ್ರು. +ತಡಿ ಹೊಡಿಸಿ ಹಾಕಿದ. +ಲಕ್ಷಗಟ್ಲೆ ಚೀಲ. +ಬೇಲಿಲಿ ಮಂಚದ ಮೇಲೆ ಕೂತ. +ಹಕ್ಕಿ ಗೋಲೆ ಬಂತು. +ಗೀಜಗನ ಹಕ್ಕಿ, ‘‘ಬುದವಂತ ಹಕ್ಕಿ ಕಲಿ ಸಮುದ್ರ ಬೇಲಿ ಮೇನೆ ತಂದದ್ಯಾಕೋ ಇನ್ನುವರೆಗೆ ಹೀಗಿರಲಿಲ್ಲ” ಅಂದಿ ಕೇಳ್ತು. +ಬುದವಂತ ಹಕ್ಕಿ ಹೇಳತದೆ. +“ರಾಜನ ಹುಡಗಗೆ ಕಷ್ಟ, ಈ ನಮೂನಿ ಹಾಕನೆ ತಿನ್ಲಿಕಡ್ಡಿಲ್ಲ. +ಕಷ್ಟ ಪರಿಹಾರ ಮಾಡೂದಾರೆ ತಿನ್ನಿ; ಇಲ್ಲಾರೆ ಮುಟ್ಟುಕಾಗ. +ಈ ಸಮುದ್ರ ಒಳಗೆ ಕರಿಹೊಯ್ಗಿಯಾಗಿ ಬೆರಸಬಿದ್ದದೆ. +ಅದರ ಸಮುದ್ರದಲ್ ಬಿದ್ದಂತಾ ಕರಿಹೊಯ್ಗಿ ಪೂರಾ ರಾಶಿ ಹಾಕತ್ರೊ? +ಮುಟ್ಟಿ ಇಲ್ಲ, ಮುಟ್ಟುಕಾಗ” ಅಂತು. +“ಅಡ್ಡಿಲ್ಲ” ಕೋಟಿಗಟ್ಲೆ ಹಕ್ಕಿ ಕರಿಹೊಯ್ಗಿ ಕಚ್ಕಬಂದಿ ಬೇಲಿಗೆ ಹಾಕತ್ರು. +ಅವು, ‘‘ನಮಗೆ ಏನು ಈಡು’’ ಹೇಳಿ ಸಂದರದಲ್ಲಿ ಮುಳುಗಿದವು. +ಕಚ್ಕಬಂದಿ ಬೇಲಿಗೆ ಹಾಕಿರು. +ಎರಡನೇ ಬಾರಿ ಕೆಲಹಕ್ಕಿಗ್ ಮಾತ್ರ ಕರಿ ಉಸ್ಕ ಸಿಕ್ಕಿತು. +ಎಲ್ಲ ದಾನ್ನಿ ತಿಂದ ನಿಕಾಲಿ. +ದೇವೇಂದ್ರನಿದ್ದಲ್ ನಾಚ್ ಮಾಡಿತು ಅದು. +“ಹುಟ್ಟರೆ ಹುಟ್ಬೇಕು, ಸಿಕ್ಕರೆ ಸಿಕಬೇಕ. +ಮೂರ್ ಸಾಪ ಕೊಟ್ಟೆ ಅಂತಾರಲ್ ಬಂದೆ. +ಅವನ್ನ ಕರಕಂಬಾ, ಅವನಿಗೇ ನಗ್ನ ಮಾಡ್ ಕೊಡ್ತೆ” ಅಂದ. +ಇವನಿದ್ದಲ್ ಬಂದು, “ದೇವೇಂದ್ರ ನಗ್ನ ಮಾಡ್ತೆ ಹೇಳವ್ನೆ. . . ” ಅಂತು. + “ಜಾವ್. . . ” ಅಂದ. +ದೇವೇಂದ್ರ ಮುಂದ್ ಬದಿ ಗಜ್ಜನೆ ಕೂತ್ತು ಮಂಚ. +ದೇವೇಂದ್ರ, “ಶಾಬಾಸ್” ಅಂದ. +“ಸಿಕುಬಹುದು, ನಿನ್ನಂತವ” ಹೇಳಿ, ತಂಗದಿರ ಕಣ್ ಮುಂತೆ ಅವರಿಗೆ ನಗ್ನ ಮಾಡಿ ಕಳಿಸಿದ. +ಗಂಡ-ಹೆಣತಿ ಕೂತರು - “ಜಾವ್. . . ” ಅಂದ ಊರಿಗೆ. +ಬಾಗಿಲಲ್ ಬಂತು. +ಪರದಾನಿ ಹುಡಗ ಊರಿಗೆ ಹೋಗಿದ್ದ. +ಸೂರ್ಯಶೇಖರ ರಾಜ, ಚಂದ್ರಶೇಖರ ಮಂತ್ರಿ. +ರಾಜನ ಮಗ ವಬ್ಬ. +ರಾಜಂಗೆ ವಯಸ್ಸಾದವ ಹೇಳಿ, ಹುಡುಗನ ಲಗ್ನ ಮಾಡಿದ. +ಹಗಲಿಗೆ ಇರುತುಮ್ಮಣ ಸಟ್ ಮುಡಿ. +ಅಂಬರದಲ್ಲಿ ಪಾರ್ವತಿ-ಪರಮೇಶ್ವರರು. +ಕೋಡು, ಕೊಳಗ, ಸುರಬಾಣ ಬಿಡ್ತಿದ್ದೊ. +ಪಾರ್ವತಿ, “ದೊಡ್ಡವರ ಮನೆ ಮದ್ವೆ ನೋಡ್ಕಂಡ್ ಹೋಪೋ” ಅಂತು. +“ಬೇಡ ಹೋಗೂದು. +ಬಡವರ ಮನೆಗೆ ಹೋಗೊ ಹೊರ್ತು ಶ್ರೀಮಂತರ ಮನೆಗೆ ಹೋಪದಲ್ಲ.” +ಆದ್ರೆ ಪಾರ್ವತಿ ಚಂಡಿ, ಅಲ್ಲಿಂದ ಹೋಜೇ ಇಲ್ಲೆ. +ಕಡೆಗೆ, ಬಿಕ್ಕೆ ಬೇಡ್ವರ ವೇಶದಲ್ಲಿ ಪಾರ್ವತಿ-ಪರಮೇಶ್ವರರು ಹೋಗಿದ್ದೊ. +ದಿಬ್ಬಣದಲ್ಲಿ ಲಾಡು ಇಂತಾದ ಹಂಚಿದೊ. +“ಯೆಲ್ಲಿಂದ ಬಂದ್ರಿ. . . ” ಹೇಳಿ ಕೇಳಿವಿಲ್ಲೆ, ಲಾಡನೂ ಹಂಚಿದ್ವಿಲ್ಲೆ. +ಸಟ್ಮುಡಿ ದಿಬ್ಬಾಣದಲ್ಲೂ ಹಾಗೇಯ, “ಏಳಿ. . . ” ಹೇಳ್ದೊ. +ಬಾಳೆ ಹಾಕೂಲಕ್ ತಯಾರಾತು. +ಬೇಡ್ವವು ಯೆದ್ದಿವೇ ಇಲ್ಲೆ. +ವನಕೆ ಹಿಡಕಂಡ್ ಬಂದೊ. +ಆಗ ಎದ್ಬಂದು ತಿರ್ಗಿ ಹೋದೊ. +“ಪಾರ್ವತಿ. . . ನಾ ಯೇನ್ ಹೇಳಿದ್ದೆ?” (ಕೇಳ್ದ ಪರಮೇಶ್ವರ, ಅಂತರ್ಧಾನವಾದೊ). +ಮದ್ವೆ ಮನೆಯಲ್ಲಿ ಕೋಳ ಮೇಲೆ ಬೆಂಕಿ (ಬಿತ್ತು). +ಇವೇ (ಹೀಗ್) ಮಾಡ್ ಹೋದವ್ ಇರೊ (ಅಲ್ಲಲ್ಲಿ) ಹುಡ್ಕದೊ, (ಶಿಕ್ಕಿವಿಲ್ಲೆ) (ನೀರ ಚೆಲ್ಲಿ) ಬೆಂಕಿ ನಂದ್ಸ್ಕಂಡೊ. +ತಿಂಗಳ ನಂತ್ರ ಬಡ ಅಜ್ಜಿಮನೆಗ್ ಹೋದೊ. +ಹದ್ನೆಂಟ್‌ ವರ್ಶದ ಹಿಂದೆ ಪಾಗಾರದ ಹತ್ರ ಮಗ ಸತ್ತಿದ್ದ. +ಅಜ್ಜಿ ಮುದ್ಕಿ, “ತಮ, ತಂಗೀ. . . ಬನ್ನಿ. . . ಇಲ್ಲಿ ನಮ್ಮನೆ” ಅಂತು. +“ಆಸ್ರಿಗೆ ಬೇಕೋ?” ಕೇಳ್ತು. +“ಬೇಡ” (ಅಂದೊ). +“ತಂಗೀ, ನೀನು ಅಡಿಗೆ ಮಾಡು. +ಕೊಡದಲ್ಲಿ ಅಕ್ಕಿದ್ದು. +ದೋಸೆ ಮಾಡು. +ಬಾಳೆ ತತ್ತೆ. . . ” ಹೇಳಿ ಹೋತು. +“ಮಿಂದ್ಕಂಡ್ ಬತ್ತೆ” ಹೇಳಿ ಹೋಗಿ ಕಮಂಡಲ ನೀರ ಈಶ್ವರ ಚಿಮಕ್ಸಿದ. +ಬಂಗಾರ್ದ ಹರಿವೆ, ಬಚ್ಲ ಕೊಟ್ಗೆ (ಆತು). +ವಳ್ಗ್ ಹೋಪಾಗ ಕಮಂಡಲ ನೀರ ಚಿಮಕ್ಸಿಸಿದ, ದೇವರು. +ಎಲ್ಲಾ ಸಿದ್ಧಾತು. +ಪಾರ್ವತಿ, ‘‘ಕೊಡದಲ್ಲಿ ಅಕ್ಕಿ ಇದ್ದದ್ದ ಇಷ್ಟೇ ಇದ್ದು” ಅಂತು. +ಈಶ್ವರ, “ಮೂರ ಪಾಲು ಅನ್ನಕ್ಕೆ, ವಂದ್ ಪಾಲು ದೋಸೆಗೆ” ಅಂದ. +ಅಜ್ಜಮ್ಮ ಗದ್ದೆಗ್ ಬಂದು, “ಅತೊ! +ಮನ್ಯೇ ಇಲ್ಲೆ. +ಇಲ್ಲಿ ಯಾರೂ ಮನೆ ಕಟ್ಟಿದ್ವೇ?” ಹೇಳಿ ಕಾಕಳಿಸ್ತು. +ಪಾರ್ವತಿ, “ಅಜ್ಜಮ್ಮ. . . ” ಮನೆ ಹುಡುಕ್ತು. +“ಬಾರೆ ಅಜ್ಜಿ. . . ’’ ‘‘ನನ್ದು ಹೆಡೆಪಂಟೆ ಗುಬ್ಬೆ. . . ” “ಇಲ್ಲೇ ಬಾ ಅಜ್ಜೀ.” +“ಬಂಗಾರದ ಹರಿವೆ”, ಅಜ್ಜಿಗೆ ಆಶ್ಚರ್ಯಾತು. +ಮೂರು ಬಾಳೆ ಹಾಕ್ದೊ. +“ಮೂರ್ ಬಾಳೆ ಹಾಕೂದ್ ಬೇಡ. +ಹದ್ನೆಂಟ್ ವರ್ಶದ ಹಿಂದೆ ನನ್ನ ಮಗ ಸತ್ತ. +ವಂದ್ ಎಡೆಯ ಮಗ್ನ ಹುಗಿದಲ್ಲಿ ಹೋಗಿ ಇಟ್ಟು ಬತ್ತೆ. . . ” ಹೇಳ್ತು. +ವಟ್ಟಿಗೇ ಕೂತು ಉಂಡೋ. +ಈಶ್ವರಂಗ್ ಉಂಡಾತು. +“ಬಾ ಹೊರಗ” ಅಂದ. +ಹೊರಗೆ ಅಜ್ಜಿಯ ಕರಕಂಡ್ ಬಂದೊ. +ಹರಿವಾಣ ಹಾಕ್ದೊ. +“ಹುಳ ಶಿಕದ್ರೆ ತಕಂಡ್ ಬಾ” ಹೇಳಿ ಕೊಟ್ಟೊ ಹರಿವಾಣವ. +ಕರಿಮಣಿಹುಳ ಜೀವಿದ್ದದ್ದು ಶಿಕ್ತು. +ಕಮಂಡಲ ನೀರ ಚಿಮಕ್ಸ್‌ದಾಗ ಹದ್ನೆಂಟ್ ವರ್ಶದ (ಅಜ್ಜಿಯ) ಮಗ! “ಅಜ್ಜೀ. . . ನಿನ್ನ ಮಗನೋ?” ಕಾಲ್ ಹಿಡಿಕಂಡು ಗೋಳ್ಗುಟ್ತು ಅಜ್ಜಿ. +“ಕಷ್ಟ ಕೊಟ್ಟವ ನಾನೇಯ. . . ’’ ‘‘ತೀಡಡ. . . ” +“ಅಪ್ಪನ ಮನೇಲಿ ಅಣ್ಣ-ತಮ್ಮ ಇದ್ವಾ?”, “ಹೌದು, ಅವು ಬತ್ವಿಲ್ಲೆ.” +“ಅಪ್ಪನ ಮನೇಲಿ ಮಕ್ಕೋ ಇದ್ವೋ?” + “ಹೌದು; ಶ್ರೀಮಂತ್ರು. +ಮಕ್ಕೊ ಇದ್ದೊ. . . ” “ಅಪ್ಪನ ಮನೆಗ್ ಹೋಗಿ ಮಗಂಗೆ ಹೆಣ್ ಕೇಳು” ಹೋತು. + ಕೊಟ್ಟಿದ್ವಿಲ್ಲೆ. “ನನ್ನ ಮಗಂಗೆ ಕೂಸ್ ಕೊಡ್ತ್ಯೋ?” ಕೇಳ್ತು. +“ಮಂಗರಂಡೆ” ಹೇಳಿ ಹೊಡೆತ ಕೊಟ್ಟ. +“ತಲೆಗೆ ವನ್ಕೆ ಸುತ್ತವೋ?” ಹೇಳಿ ಕೇಳ್ದ. +“ಸಣ್ಣಣ್ಣಾ, ಹೆಣ್ ಕೊಡ್ತ್ಯೊ. . . ” ವನಕೆಲಿ ಹೊಡೆತ ಕೊಟ್ಟ. +ಹಾಗೇ ತೀಡ್ತಾ ಮನೆಗೆ ಬಂತು. +“ಏನ್ ಹೇಳ್ದೊ?” ಈಶ್ವರ ಕೇಳ್ದ. +“ಮಗಂಗೆ ಪಟ್ಟೆ ಉಡಿಸು, ಚಿನ್ನದ ಸರ ಹಾಕಿ ಕರಕಂಡ್ ಹೋಗು.” +ಹಾಗೆ ಅಲಂಕಾರ ಮಾಡಿ, ದೊಡ್ಡ ಅಣ್ಣನ ಹತ್ರ ಕೇಳ್ತು. +“ಮಂಗ ಅಜ್ಜೀ, ಯಾರು ಇವ?” ಹೇಳಿ ಕೇಳ್ದ, “ಹೆಣ್ ಕೊಡತ್ನಿಲ್ಲೆ. . . ” ಅಂದ. +ತೀರ ಕಿರಿತಮ್ಮ, “ವಂದ್ ಸಟ್ಟೆ ರೂಪಾಯ್ ಆಗೊ (ಅಂದ್ರ) ಕೊಡ್ತೆ, ಸೂಳೆರ ಮ್ಯೇಳ ತಮಜಾಲು ಹಾಕಿ ತಕಂಡ್ ಬಾ, ಹೆಣ್ಣ ಕೊಡ್ತೆ” ಅಂದ. +“ಕರಿ ಬುಧವಾರ ಮುಹೂರ್ತ. . . ” ಹೇಳ್ದ. +ಈಶ್ವರಂಗೆ ಬಂದು ಹೇಳ್ತು, ದೇವಲೋಕದ ಹೆಣ್ಣು, ಗಂಡು ಎಲ್ಲಾ ವಾಲಗ ಸಮೇತ ಬಂದೊ. +ಮದ್ವೆ ಹೇಳದ್ದೇಯ ಏನೇನೂ ಸಂವರಿಸಿದ್ವಿಲ್ಲೆ. +ಮೂರನೆಯವ ರಾತ್ರಿ ಉಚ್ಚಿ ಹೊಯ್ಯೂಲೆ ಬಂದಿದ್ದ. +ವಾದ್ಯ ಕೇಳಿ, “ದೊಡ್ಡವರ ಮನೆ ದಿಬ್ಬಾಣ, ಹೋದ್ರೆ ದಕ್ಷಿಣೆ ಶಿಕತಿತ್ತು” ಹೇಳಿ ವಿಚಾರ ಮಾಡ್ದ. +“ಅಕ್ಕ ಬಂದಿತ್ತು. +ಅದೇ ದಿಬ್ಬಾಣ ತಂತೋ?ಸುಳ್ಳು” ಹೇಳಿ ಅಣ್ಣದಿಕ್ಕಳ ಯೆಬ್ಬಿಸ್ದ. +ಎದ್ ನೋಡ್ತೋ ಆಚೆ ಮನೆ ಮಂಚ ತಂದು, ಹಸೆ ಇಲ್ಲೆ, ದಿಬ್ಬಾಣ ಬಂತು, ಪರಮೇಶ್ವರ ಸಟ್ಟೆ ರೂಪಾಯ್ ತಂ‍ದ್ ಕೂತಿದ್ದ. +ಅಣ್ಣ, “ಮೊದ್ಲೆ ದಕ್ಷಿಣೆ ಹಂಚೂಲೆ ಅವರಿಂದ ಹಣ ತಕ್ಕೊಳ್ವೊ” ಅಂದ. +“ವಾಗ್ದಾನಕ್ಕೆ ಹೋಗುವಾಗೇ ದಕ್ಷಿಣೆ ಬೇಕು” ಅಂದ. +ಹರಿವಾಣದಲ್ಲಿ ಮೊಗೆಮೊಗೆದು ದುಡ್ಡ ಹಾಕಿ ಕೊಟ್ಟ. +ಕೊಟ್ಟು ಸಾಕಾಗಿ, “ಸಾಕು” ಅಂದ. +“ನಿಮ್ಮ ದಕ್ಷಿಣೆ ತೆಗೇರಿ. . . ” ಈಶ್ವರ, “ಇಬ್ಬರಿಗೆ ಕೊಡುಲು ಸಾಲ” ಅಂದ. +ಯಜಮಾನ ಕೈ ಮುಗಿದಾ, “ನಮ್ಮ ಬಂಡವಲಿಷ್ಟೆ” ಹೇಳಿ ಕೂಗ್ದ. +“ನಿನ್ನ ಕೂಸು ಸಣ್ಣವಳು. +ನನ್ನ ಕೂಸ್ನೇ ಕೊಡ್ತೆ” ಹೇಳಿ ಕಿರಿಯವಂಗೆ ಹೇಳ್ದ. +ಆ ಕೂಸ್ನೇ ಮದ್ವೆ ಮಾಡ್ದೋ. +ಮದುವೆ ಮುಗುತ್ತು. +ದಿಬ್ಬಾಣ ತಿರ್ಗಿ ಬಂತು. +ಮದುವೆಯಾಗಿ ಯೆಂಟ್ ದಿನಾತು. +ಪಾರ್ವತಿ- ಪರಮೇಶ್ವರರು “ಅಜ್ಜಿ ಸುಖದಲ್ಲಿರು” ಹೇಳ್ದೊ. +ಅಜ್ಜಿ, “ನೀನು ಅವರ ಕಾಲ ಹಿಡಿ ತಂಗಿ, ಅವರ ಕಾಲ ಹಿಡಿ. . . ” ಹೇಳ್ದಾಗ ಹೋದೊ ಅಂತರ್ಧಾನವಾದೊ. +ಕೆಲವು ಪದಗಳ ವಿವರಣೆಹವ್ಯಕರ ದೇಸಿಶೈಲಿಯ ಕಥೆ. +ಒಂದು ರಾಜನ ಹೆಂಡ್ತಿ, ಸಂತತಿಲ್ಲ. +ಬಹಳ ಪ್ರಯತ್ನ ಮಾಡ್ದ್ರು. +ದೇವ್ರು ದಿಂಡ್ರು ಎಲ್ಲ ತಿದ್ಪಡಿಮಾಡ್ದ್ರು. + ದಾನ-ಧರ್ಮ. ಆದದ್ದಾಗ್ಲಿ - ದೇವ್ರಿಗೆ ಹೋಗಬೇಕಂದಿ ಮಾಡ್ದ್ರು. +ದೇವರಿಗ್ ಹೋದ್ರು. +ಯಾತ್ರಿ ಮಾಡ್ ತಿರ್ಗಿ ಬರವಂತ ಹೊತ್ನಗೆ - ತ್ರಾಸಾಗಿ ಅಸ್ವತ್‌ಕಟ್ಟೆ ಮೇಲೆ ಕುಳ್ತರು. +ಅವನಿಗೆ ಗಾಳಿಂದ ದಿಂಬು (ನಿದ್ರೆ) ಹತ್ತು. +ಅವನ ಹಿಂಡತಿ ಕಟ್ಟೆ ಮೇಲೆ ಮಲಗಿತು. +ಈಳಿಮರದ ತುದಿಮೇಲೆ ಆನಿ ಮೆಯ್ಯತಾವೆ. +ಗಂಡನ ಎಬ್ಬಿಸಿತು. +“ಮನಿಗೆ ಹೋಗ್ವ, ಏಳಿ. . . ” ಹೇಳಿ. +ಮನಿಗ್ ಬಂದ್ರು. +ಬಂದಂತಾ ಹೊತ್ನಲ್ಲಿ ಅದು ಏನು ಪ್ರಶ್ನಿ ಇಡ್ತದೆ ಗಂಡನಿಗೆ, “ಎಲ್ಲಾ ನೋಡ್ಕಂಡಿ ಕಟ್ಟೆ ಮೇನ್ ಏನ್ ನೋಡ್ದ್ರಿ?” - “ತಾಯೇನೂ ನೋಡಿಲ್ಲಲ್ಲ” ಅಂದ ರಾಜ. +“ಹಂಗರಿಲ್ಲ. . . ” “ಏನ್ ಹಂಗಾರೆ?” +‘‘ಮನಗ್ದಂತಾ ಹೊತ್ನಲ್ಲಿ - ಏಳ್ ಆನಿ ಮೇಯ್ತು. . . ” “ಸುಳ್ಳೇ. . . ” ಅಂದ ಅವ. +ವಾಟಾಕಾಟ ಬಿತ್ತು ಅವರಿಗೆ. +ಹೌದಂತದೆ, ಅಲ್ಲಂತ್ಯಾ. +“ಒಂದಾನು ವೇಳ್ಯ ಮೆಂದದ್ದೆ ಹೌದಾದ್ರೆ ತನ್ ತಲಿಕಡೂದು. +ಯೆಲ್ದೆ ಇದ್ದಲ್ಲಿ ನಿನ್ ತಲಿಕಡೂದು. +ಪ್ರತಿಜ್ಞೆ” ಅಂದ ಅವ. +ನಾಲ್ಕು ಆಳ ಕಳಸಿದ ನೋಡೂಕೆ. +“ಅಸ್ವತ್ತಿಳಿಕಟ್ಟಿ ಮೇಲೆ ಏಳ ಆನಿ ಮೆಯ್ತವೋ ಹೇಗೆ? ನೋಡಿ. . . ” ಹೇಳ್ ಕಳಸಕೊಟ್ಟ. +ನೋಡಿದರೆ ಅವರ ಕಣ್ಣಿಗೂ ಹಾಗೇ ಕಾಣಸತದೆ. +ಏಳ ಆನೆ ತುದಿಮೇಲೆ ಈವು. +ನಾಕು ಜನ ಮಾತಾಡಿದರು. +“ಸಾಕಿ ಸಲಗಿದ ತಾಯಿ, ಸಲಗಿದ ವಡೆಯ. . . ಹಾಗೂ ಪೇಚು, ಹೀಗೂ ಪೇಚು. . . ” ಒಬ್ಬ ಏನಂತ್ಯ, “ಏಳ ಆನಿ ಅಲ್ಲ, ಏಳ ಸರ್ಪ ಹೇಳ್ವ” ಅಂದ. +‘ಏಳ ಪಾರಿವಾಳ ಹೇಳ್ವ’ ಅಂದ. +ನಾಲ್ಕನೇವ ‘ಗುಬ್ಬಕ್ಕಿ ಹೇಳ್ವ್.’ ಒಂದನೇಯವ, ‘‘ಒಡತಿ ಸತ್ತರೂ ಬೇಜಾರಿಲ್ಲ. +ಒಡೆಯನೇ ಸಾಯಲಿ ಹೇಳಿದರೆ ಮತ್ತೊಂದ್ ಗಂಡನ ಮಾಡ್ಕಂಬೂದು. +ನಮಗೆ ತ್ರಾಸು’’ ಹೇಳ್ಕಂಡಿ, “ಯೇಳ್ ಸರ್ಪ ಮೇಯ್ತದೆ ಹೇಳ್ವ” ಅಂದ್ ಬಂದ್ರು. +ಹಾದಿ ನೋಡ್ತ ಇದ್ದ ರಾಜ. +“ಸತ್ಯಸಗತಿ ಹೇಳ್ರಿ ಪಣಬಿದ್ ಹೋಗಿಬಿಟ್ಟಿದು. +ನಿರ್ಧಾರಾಗ್ ಹೇಳಿ” ಅಂದ. +“ಯೇಳ್ ಆನಿ ಮೇವದಿಲ್ಲ. +ಯೇಳ್ ಸರ್ಪ ಮೇಯತವೆ” ಅಂದ. +ಸುಳ್ಳು ಹೇಳ್ ಬಿಟ್ಟ. +“ತಾನ್ ಊಟ ಮಾಡಬೇಕಾದ್ರೆ ಇದರ ತಲಿ ಹೊಡೆದು ರಕ್ತ ತರಬೇಕು” ಅಂದಿ ಪೊಲೀಸರ ಹತ್ರ ಕೊಟ್ಬಿಟ್ಯ. +ತಕಂಡ್ ಹೋಗ್ ಬಿಟ್ರು ಚಂಡಾಲ್ರು. +ಅರಣ್ದಲ್ಲಿ ಇದರ ಹತ್ರ “ಹಣ್ಕ್” ಅಂದ್ ಹೇಳ್ದ್ರು. +“ತಲಿ ಹೊಡೆರಿ” ಅಂತು. +ತಲಿ ಬಗ್ಗ್‌ಸತು. +ತಲವಾರ ಹೊಡೆವಂತ ಹೊತ್ನಲ್ಲಿ ಮತ್ತೊಬ್ ಯೇನ ಅಂತ್ಯ? +‘‘ತಲವಾರಬಾಯ ಮೇನೆ - ಶಿಶು ಆಕಾರದಲ್ ಕಂಡ್ತು.’’ +ತಡಿಸ್ದ ಆಗ ಗರ್ಬಿಣಿ. +ವಂದ್ ಜೀವಲ್ಲ, ಯೆರಡ್ ಜೀವ. . . ನಮಗೆ ಮಹಾಪಾಪ!’’ ಚಲೋದಾಗ ಹೇಳಿ, ಶಿಡ್ಲ ಅರಗಿದ ಬಾವಿಗ್ ತಕಂಡ್ ಹೋಗಿ ಬಾವಿ ವಳಗೆ ದೂಡ್ ಬಿಟ್ರು. +ಹೊತಾಕಿ ಬರಬೇಕಾದ್ರೆ ಹೊನ್ನಿಮರಕೆ ಕಪ್ ಹೊಡ್ದಿ, ಹೊನ್ನಿರಕ್ತ ರಸ ಬಡ್ಕಬಂದ್ರು. +ಅವ್ರು ಉಳದ (ರಾಜ). +ದಿವಸ ಹೋದ ಕೂಡ್ಲೆ ಆ ಬಾವಿವಳಗೆ ಹುಡ್ಗ ಹುಟ್ದ. +ಊರಲ್ಲಿ ಪಟ್ಟಣಶೆಟ್ಟಿಗೆ ಶಿಕಾರಿ ಹುಚ್ಚು. +ಆವಾಗ ಎಲ್ಲ ಗೌಡಕೊಳ ಬರಮಾಡಿಕೊಂಡು-- ಜೀವಾದಿಗಳ ಕಾಟ ಹೆಚ್ಚಾಗದೆ ಅಂದ್ಕಂಡು ಬೆಟ್ಟಕ್ಕೆ ಹೋದ್ರು. +ಅಲ್ಲಿಲ್ಲವ ಬಂದೂಕದವರು ಜೋಪಡಿ ಮಾಡಿಕೊಂಡು ಕದ್ ಅಡಗಿಕೊಳ್ತ್ರು. +ಜೀವಾದಿ ಎಬ್ಬಿಕೊಂಡ್ ಬರವಂತಾ ಹೊತ್ನಲ್ಲಿ -- ಪಟ್ಟಣ್ ಶೆಟ್ಟಿಗೆ, ‘ಬಾಲಿಶಿಶು ತೀಡ್ದ ಹಾಂಗ್ ಆತಿದಲ್ಲ. . . ಹಕ್ಕಿದನಿಯಲ್ಲ. . . . ಹುಲಿ, ಕರಡಿ ಗರಜನೆಯಲ್ಲ.’ +“ಥಂಡ್ ಉಳಿರಿ. . . ” ಹೇಳಿ ಜಜ್ ಮಾಡ್ದ. +ಎಲ್ಲಾ ಥಂಡಾದ್ರು. +ಹೇಳ್ದ, “ಈ ದಿಕ್ನೊಳಗೆ ಪಕ್ಕಾ ನೋಡಬೇಕು. +ಪಕ್ಕಾ ಕಾರಣ ಯೇನು ಹೇಳಿ ಚೌಕಸಿ ಮಾಡಿ. . . ” ಅಂದ್ ಹೇಳಿ ಜಾಗ್ರತಿಕೊಟ್ಟ. +ಇವ್ರು ನೋಡುಕ್ ಹತುದ್ರು-- ಗಿಡಬಿಡ ಎಲ್ಲ. +“ಹಾಳ ಬಾವಿವಳಗೆ ಶಿಶು ತೀಡ್ತದೆ. . . ” ಅಂದಿ ಬೊಬ್ಬಿಕೊಟ್ರು. +ಇಳುಕ್ ದೈರ್ಯ ಬರಲಿಲ್ಲ. + “ಯಾರು. . . ?” ಕೇಳದ್ರು. +ಎಲ್ಲಾ ಪರಿಸ್ಥಿತಿ ಹೇಳ್ತು. +ಹಿಂಡು-ಬಿಂಡು ಕಡಿಸಿ, ಮುಂಡ ಪಂಜಿ ಸುತ್ತಿ ಕಟ್ಟಿ ಹಗ್ಗ ಮಾಡಿ ಕೆಳಗೆ ಬಿಟ್ರು. +ಶಿಶು ಕಟ್ ಕೊಟ್ತು. +ಅವರು ಹುಡಗಿ ಮೇಲೆ ನೆಗದ್ರು. +ಪಟ್ಟಣ ಶೆಟ್ಟಿಗೆ ನಿಟ್ಟಿಲ್ಲ. +ಅಟ್ಕೆ ಹೇಳಿದ, “ಆರ್ ಜನ ಹೆಂಡ್ರು ಮೇಲ್ ನೀವೊಂದು ಏಳನೇದು. . . . ’’ ಬೇರೆ ಬೇರೆ ಇಕ್ಕಿ - ‘ನಿನಗೂ ಬೇರೆಮನೆ’ ಅಂದ. +ತಂದು ಇಡಿಸಿದ. +ಶಿಶುಗೆ ಆರೈಕೆ ಮಾಡೂಕ್ ಇಡಿಸಿದ. +ಬಾವಿಕೇರಿ ರಾಮಬಟ್ಟರ ಮನೆಗೆ ಹೋಗ್‌ ಕೇಳಿದರು-- “ಅಡವಿ ವಳಗೆ ಬಾಳ ಸಿಕ್ಕದೆ. . . ಪಾಯಿದೆಯೋ ಹೇಗೆ? +ಹುಡಗನ ಹೆಸ್ರು ಯಾವದು ಬಂದದೆ? +ದಿವ್ಸ ಕರೆವ ಹೆಸರು ಯಾವದು?” ಕೇಳಿದ. +“ಹುಟ್ ಹೆಸರು ಕುಬೇರ. +ದಿವ್ಸ ಕರೆವ ಹೆಸರು ವಜ್ರ.’’ +ಉತ್ಪತ್ತಿಂದ ಸಾಕಷ್ಟ ಹೇಳ್ದ್ರು. +ಮನಿಗೆ ಬಂದು ಬಾಳಂತನ - ಆರೈಕೆಗೆ ಇಟ್ಟ. +ಈ ಹುಡಗನ ತಾಯಿ ಮೇನೇ ಪ್ರೇಮ. +ವಂದಿವಸಲ್ಲ ವಂದಿವ್ಸ ಹೀಗ ವಿಚಾರ ಬಂತ ಅವನಿಗೆ-- ಆರ್ ಜನ್ಕ್ ಆರ್ ಹಡಗ ಮಾಡಿ ದೊಡ್ ದೊಡ್ ಊರಿಗೆ ಕಳಿಸಿಬಿಡೂದು. +ಅವಳು ಪತಿವ್ರತಾಧರ್ಮದಿಂದೆ ಉಳಿದಳು. +ಈ ಹುಡಗ ತಾಯಿ ಹತ್ರ ಹೇಳತ್ಯ-- “ನಾನೂ ಹೋತಿ ಹಡಗಿಗೆ. . . ” ಅಂದಿ ಬಹಳ ತ್ರಾಸ್ ಕೊಡತ್ಯ. +“ಯಾವಲ್ ಹುಟಬೇಕು. . . ಯಾವಲ್ ಬರಬೇಕು. . . . ಯಾರ ಹತ್ತರ ಹೇಳಬೇಕು?” ನಾಕೈದ್ ವರ್ಷದವನಾದ. +ಮೊದಲ ಹಿಂಡರು - “ಆ ಹುಡಗನಿಗೆ ಗೆಯ್ಸ ಕೊಡಿ. +ಕರ್ಕರಿಕೊಡ್ತ್ಯ” ಹೇಳಿ ಶೆಟ್ಟಿಗೆ ಹೇಳಿದರು. +ಅವನಿಗೆ ಮನಸಿಲ್ಲ. +ಸುಮಾರ ದಿವ್ಸ ಕಳದ ಬಿಟ್ಯ; ಹೋಗಲಿಕೆ ಬೇಕಂದ್ ಹಟ ಹಿಡದ. +ಕತ್ತದ ಬಳ್ಳಿ ಹಡಗ ತುಂಬಿದ್ದು ಕಳಿಸಿದ. +ಶೆಟ್ಟಿ ಕಾಲ ಹಿಡದು, ತಾಯಿ ಕಾಲ ಹಿಡದು ಹೋದ. +ತಾಯಿ ಬಹಳ ದುಕ್ಕ ಮಾಡತದೆ, ಕೇಳುದಿಲ್ಲ. +ಇವನ ಹಡಗ ವಂದ್ ದಿಕ್ಕಿಗೆ ಹೋಯ್ತು. +ಹೀಗೆ ಒಂದ್ ಊರ ಬದಿಗ್ ತಾಗ್ ಬಿಟ್ತು. +ಆ ಊರಲ್ಲಿ ಏನಾಗದೆ? +ಬೆಂಕ್ ಬಿದ್ ಸುಟ್ ಹೋಗಿ, ಬಳ್ಳಿಗ್ ಹರಾಮಾಗದೆ. +ಹಾದಿಕಾಯ್ತೆ ಬಿದ್ದಾರೆ. +ಮಚವಿ ಕಾರೀಗ್ ತಾಡಿತು. +“ಯಾವೂರವ?” ಶಣ್ಣ ಪ್ರಾಯದ ಹುಡಗ ಅಂದಿ, ಬಂದಿ ಕೇಳ್ದ್ರು. +“ಇಷ್ಟೇ ರೇವಲ್ ಅವೆ ಆಟ್ಟೇ ರೂಪಾಯ್ ತುಂಬ್ ಕೊಡಬೇಕು. +ಹಾಗಾದರೆ ಮಾತ್ರ ನಾವ್ ಕಿಟ್ಟೂದು ಇಲದಿರೆ ಬಳ್ಳಿ ಕೊಡೂದಿಲ್ಲ. . . ” ಹೇಳ್ದ್ಯ. +‘ಆಗೂದು’ ಅಂದಿ ಎಲ್ಲ ರೂಪಾಯಿ ರಾಶಿ ತಂದ್ ತುಂಬ್ದ್ರು. +ನಾಲ್ಕೈದ್ ದಿನ ಉಳಿದ. +ಆರು ಹಡಗು ಖಾಲಿ ಬಂತು. +ಬಾಯಿ ಸಮಿತಿಂದು, ಲಾಡು-ಹೋಳ್ಗಿ ತಿಂದು ಖಾಲಿ ಮಾಡಿ ಬಂದ್ರು. +‌ ಹೊಟ್ಟಿಗೇ ಸಾಕಾಗ್ಲಿಲ್ಲ. +ಕಾಲಿ ಹಡಗಗಳು ಬಂತು. +ತಾಮ್ರ, ಬೆಳ್ಳಿ ತಗಂಡ್ ಹೋದೋರು ಕಾಲಿ ಬಂದ್ರು. +ಅವ ರೂಪಾಯಿ ತುಂಬಲಿಕೆ ನೆಲಮಾಳಿಗಿ ಕಟ್ಟಿಸಹತ್ಯ. +ಅವ ಇವರು ತಂದಟ್ಟೇ ತಂದ. +‘‘ಅವ ಹೇಗ್ ತರವ?” ಅಂದ. +ಅವ ಹಡಗ ಬೆಟ್ಟ ನಡೂ ಸಮದರದಲ್ಲಿ ನಾಕೈದ್ ಮೈಲ್ ಹೊರಗೆ. . . ಅರಿಯದೆ ಮಾಸೇಸನ ಮಗಳು ಪಾತಾಳದಲ್ಲಿ ಬಂದು ಬಿಟ್ಟು ಅರಿಮೇನೆ ವಜ್ರದ ಹಳ್ಳ, ಹನ್ನೆರಡು ಹಳ್ಳು ಬಿಟ್ ಆಡತದೆ. +ಇವನ ದೃಟ್ಟಿ ಹುಡಗಿ ಮೇನೆ ಬಿತ್ತು. +ಕೂಡಲೆ, “ನಿದ್‌ಮದ್ ಸಮುದ್ರದಲ್ಲಿ ಈ ಹುಡಗೆ ಯಂತಾದಾಗಿರೂದು? +ಬಿಟ್ ಹೋಗೂಕಿಲ್ಲ” ಅಂದಿ ಅಡ್ಡತಕಂಡ್ ಕೋರಿಮೇಲ್ ಬಂದ. +‘ಬೆನ್ ಹಿಂದೆ ಬರತ್ಯ. . . ’ ಅದು ಹಳ್ ಆಟದ ಮೇನೇ ಬಿದ್ದಿದು. +‘ಬಿಟ್ ಬಿಟ್ರೆ’ ಹೇಳಿ ಹಿಂದಿಂದ ಬಂದ. +ನೀರ್ ಆಡೂಕಿಲ್ಲ. +ಹಾರ್ ಬೀಳು ಹೊಡತಕೆ ಹತ್ ಹಳ್ಳ ತಕಂಡ್ ಹಳ್ಳಕ್ ಬಿದ್ ಬಿಟ್ತು. +ಯೆರಡ್ ಹಳ್ಳ ಕೈಗೆ ಸಿಕ್ ಹೋಯ್ತು. +ಬಹಳ ಪಶ್ಚಾತ್ತಾಪ ಮಾಡ್ತೆ ಬಂದ. +ನೆಡೂಗ್ ರುಪಾಯ್‌ ರಾಶಿಮೇನ್ ಇಟ್ಯ. +ಹಡಗ ಬೆಟ್ಟದ್ದು (ಬಿಟ್ಟದ್ದು), “ಅಪ್ಪ!” ಅಂದ್ಯ. +“ರೂಪಾಯಿ ಒಳಗೆ ಹೊಯ್ಲ” ಅಂದ್ ಬಿಟ್ಯ. +‘‘ಇವಗೆ ವಜ್ರ ಹೆಸರು ಇಕ್ಕರೂ ಇಕ್ಕಬಹುದು. +ಕತ್ತದ ಮುಂಡಗೆ ಇಕ್ರೂ ಇಪರಿ ರೂಪಾಯಿ ರಾಸಿ ತಂದ್ಯ. . . ” ಅಂದ್ ನಮೂನಿ ಮಾಡ್ದ. +“ಯೆರಡ ವಜ್ರದ ಹಳ್ಳ ಇಟ್ಕೊಳಿ. . . ” ಅಂದ. +ಅವಗೆ ಅಹಂಕಾರ ಬಂತು. +ಊರ ರಾಜ ಯೇವ (ಹುಡಗನ ಅಪ್ಪ) ವರ್ಸಕೆ ಕಪ್ಪಕೊಡವ. +ಇವ ರಾಜಗೆ ಕೊಟ್ಟ-- ಆನಂದಾಯ್ತು. ‘‘ಶೆಟ್ಟಿ. . . . ಹನ್ನೆರಡ ಹಳ್ಳು. . . ಎರಡು ಬಂತು. +ಹತ್ ಹಳ್ಳ ತಂದ್ ಕೊಟ್ರೆ ಒಳ್ಳೆದಾಯ್ತು. +ಇಲ್ಲ, ನಿನ್ನ ತಲಿ ಕಡಿಸ್ ಬಿಟ್ತೆ.’’ +‘ಒಂದು ತಿಂಗಳ ಅವದಿ ಒಳಗೆ ತರಬೇಕು’ ಅಂದ. +ಬಂದ ಮನಗು ಸಿಂಹಾಸನದ ಮೇನೆ ಮನಗಿಬಿಟ್ಟ. +ಹಿಂಡ್ರು ಕರಿತಾರೆ ಊಟಕ್ಕೆ, ಮಾತಾಡುದಿಲ್ಲ. +ಕಡಿಗೆ ಹುಡಗ ಬಂದ, “ಯಾಕಪ್ಪ? +ಏನಾಯ್ತು?” ಶೆಟ್ಟಿ, “ವಜ್ರ. . . ಹಳ್ಳ ಕೊಟ್ಟೆ. . . ‘ಹತ್ತು ಹಳ್ಳು ಈತು’ ಅಂದ್ಯ ಹೌದೋ?” +“ಹೌದು, ಹತ್ತು ಹಳ್ಳ ಪರಬಾರೆಯಾಗ್ ಬಿಟ್ತು” ಅಂದ. +“ತಲಿ ಹೊಡೆತ್ತೆ” ಅಂದ್ಯ. +ರಾಜಗೆ ಹೇಳು, “ಬೆಳ್ಳಿ ಹಗ್ಗ, ಚಿನ್ನ ತೊಟ್ಲ ಹದ್ನೈದ್ ದಿನದೊಳಗೆ ಗೆಯ್ಯಕೊಡು ಅನ್ನು” ಶೆಟ್ಟಿ ಹೋಗಿ ಹೇಳಿದ. +“ನಾ ತಂದ್ ಕೊಡ್ತೆ. . . ” ಅಂದ. +ಅವ ಎಂಟು ದಿನದೊಳಗೆ ತಯಾರ್ ಮಾಡಿಸಿಕೊಟ್ಟ. +ಶೆಟ್ಟಿಗೆ ಹೇಳಿದ ಆರೂ ಅಣ್ಣದಿರ್ ಕರಕಹೋಗಿ-- ‘‘ಇವರಿಗೆ ಹೋಗು ಉಮೀದ.’’ +ಹೋಗು ಹೊತ್ಗೆ ಹುಡಗಿ ಹಳ್ಳಾಡೂಕ್ ಬಂದದೆ. +ನೋಡಿ, ಅಟ್ಟೂ ಹಳ್ಳ ತಕಂಡ್ ಹೋಯ್ತು. +ಅಣ್ಣದಿರ ಹತ್ತ್ರ ಹೇಳಿದ, ‘‘ಹಗ್ಗ ಬಿಡೂಕಿಲ್ಲ. +ನಾ ಮೇಲೆ ಬರೂದಾದ್ರೆ ಮೂರ್ ಜೋಪು ಹೊಡಿತೆ. +ನಾಕ ಸಲ ಜೋಪ ಹೊಡಿಬೇಕಾದ್ರೆ ತೆಗಿರಿ. . . ” ಅಂದ. +“ಹೆಣ್ಣ್ ವಂದ್ ಉಳಿದ್ ಬಿಟ್ರೆ ಸಾಕು. . . ” ಹೀಗಂದಿ ಮಾತಾಡ್ಕಂಡ್ರು. +ಅವ ಪಾತಾಳಲೋಕಕ್ ಹೋದ. +ವಿಸ್ತಾರ ಮನೆ. +ಬಾಗಿಲ ಮನೆ. +ವಿಸ್ತಾರ ಸುವರ್ಣದ ಮನೆ. +ಮೂರ್ ಬಾಗಿಲ ದಾಟಿ ಪ್ರವೇಸಾದ. +ನಾಲ್ಕನೇ ಬಾಗಿಲ ಕದ ತೆಗೆದ ಕೂಡ್ಲೆ ಸಿಂಹಾಸನದ ಮೇಲೆ ಮಲಗದೆ ಹುಡಗಿ. +ಅವ ಅದ್ಯೇನ್ ಮಾಡದ? +ತಲೆದಿಂಬಿಗೆ ಹಳ್ಳದೆ. +ಹತ್ ಹಳ್ ಬಾಚಿ ಹಿಂದೆ ಬಂದ; ನಾಕ್ ಸದ್ ಮಾಡಿದ-- ಉಗಿದರು. +ನೆಗಿದ್ ಬಿಟ್ರು. +ತಕಂಡ್ ಬಂದು ಹತ್ ಹಳ್ಳಕೊಟ್ಟು, “ರಾಜಗೆ ಕೊಟ್ ಬಾ” ಅಂದ್ರು. +‘‘ಹನ್ನೆರ್ಡ್ ಹಳ್ಳ ಆಡ್ವಂತ ಹೆಣ್ ತರಬೇಕು’’ ಅಂತಿರು, ‘‘ವಂದ್ ತಿಂಗ್ಳ್ ಒಳಗೆ; ಇಲ್ಲ ರುಂಡ ತೆಗಿಸ್ ಬಿಡ್ತೆ” ಅಂದ. +ಮತ್ತೆ ಮಲಗಿದ‌. +“ಏನಪ್ಪ?” ಕೇಳಿದರು. +‘‘ಹನ್ನೆರಡ್ ಹಳ್ಳಾಡು ಹೆಣ್ ಬೇಕಂತೆ.” +ಕಿರಿಯವ ವಜ್ರ, “ದೈರಿ ಮಾಡು. . . ಹೆದರಬೇಡ” ಅಂದ್ಯ. +ಅಣ್ಣದಿರ್ ಕರಕಂಡ್ ಹಡಗಿನ ಮೇಲ್ ಹೋದ್ಯ. +ಹಾಗೇ ಮುಳಕಿದ. +ಚಿನ್ನ ತೊಟ್ಲ ಪಾತಾಳಕ್ ಹೋಗಿ ಏಳಿಸಿದ. +ಬರುವರು ಯಾರು? +ಮಾಶೇಸ ಹೋಗ್ಯ ಊರ ಸಂಚಾರಕೆ. . . ಮನಶರ ನುಂಗುವವ. +ಹಿಡಿದ್ರೆ ಬಿದ್ ಹೋಯ್ತು. +ನೋಡಿ ಅದಕೆ ಸಿಟ್ಟಿಲ್ಲ. +“ಅಪ್ಪ ತಿಂದ್ ಬಿಡ್ವ. . . ” ಅಂದಿ. +“ನನ್ ನಗ್ನಾಗ್ವೋರು ನೀವೇ. . . ” ಅಂದಿ ಉಪಚಾರ ಮಾಡ್ತು. +ಗಂದದ ಮರನ ಓಡ್ನಲ್ಲಿ ನಿಲಿಸಿ-- ಬಿಳಿಮೇಣಬುತ್ತಿ, ಸೌದಿ ತುಂಬಿ ಬಂತು ಅದು. +ತಾಟಿ ಇಟ್ತು; ಮರೆಗೆ ಚಾಚಿಟ್ತು. +ಸಂಜೆ ವಂದ್ ಮೈಲು ಹೆರಗಿರುವಾಗ್, “ನರಮನಶರ ವಾಸನಿ ಯಾರಲೆ?” ಅಂದ್ಯ. +“ಸಿಕ್ ಸಿಕ್ ಪ್ರಾಣಿ ತಿಂತ ಬತ್ತೆ. +ಅದೆ ವಾಸನಿ. . . ” ಅಂದಿತು. +ನಾಕೈದ್ ಕುಳಗ ಅಕ್ಕಿ ಅನ್ನ ಮಾಡಿ, ಕಾವಲಿ ವಳಗೆ ಅನ್ನ ಹಾಕಿಡುದು. +ಬೆಳಗ್ಗೆ ಯೆಂಟ್ ಹತ್ ಮೈಲ್ ಹೋತ್ಯ ಅವ ಮಾಶೇಸ. +ಬೆಳ್ಳಗ್ ಇವನ (ವಜ್ರನ್ನ) ಕರಕಬಂದು ಮೀಸಿ ಸಂಮ್ರಾಜೆ ಮಾಡಿ ಕುಸಾಲ್ದಿಂದ ಉಳಿತು ಕೇಳ್ತು, “ನಿನ್ನಪ್ಪ ಹೊಡೆವ. . . ” ಅಂದ. +“ರಾತ್ರೆ ಪಕ್ಕಾ ಕೇಳಬೇಕು.” +‘‘ರಾತ್ರಿ ಊರ ಮೇಲೆ ಸಂಚಾರ ಹೋತಿ. +ನಾಳೆ ನೀ ಸತ್ಹೋದ್ರೆ ನನ್ ಪರಿಣಾಮೇನು? +ಯಾರಿಂದ ಮರಣ?ಕೇಳು” ಅಂದ. +“ಹೋಗ ಬಿಡುವೆ” ಅಂದ. +ಅವನ ಗಂದದ ಮರನೊಳಗೇ ಇಟ್ಬಂತು. +‘ಗೋಳ್ ಗೋಳ್. . . ಗೋಳ್ ಗೋಳ್. . . ’ ಅಂತ್ಯ ಬತ್ಯ. +“ನರಮನುಶರ ವಾಸನಿ. . . ” ಅಂದ ಹೇಳತ್ಯ. +ಅದು ಸಮಾದಾನ ಮಾಡಿ ರಾತ್ರಿಗ್ ಹೇಳ್ತು. +“ಸತ್ಗೆಟ್ ಹೋದ್ರೆ ನನ್ ಪರಿಣಾಮ ಯೇನು?” ಅವ ಹೇಳ್ತ್ಯ, “ಮಗಳೇ, ಯಾರಿಂದೂ ಸಾವಮಾನಕ ಇಲ್ಲ. . . . ಮನಶ್ಯನಿಂದ ಹತ್‌.” +“ಯಾರು?” “ವಜ್ರ ಅಂಬವ ಈವ. . . ” “ಹೇಗೆ ನಿನಗೆ ಹತ್‌. . . ?” “ಏಳ ಸಮುದ್ರದಾಚೆ ತಾಳೀ ಮಡಗಿ ಈತು. +ಅದರ ನೆಡಗೆ ಮೇನೆ ಗಿಳಿ ಈತು. +ಅದರ ಯಾರಿಂದೂ ಹಿಡೂಕ್ ಸಾದ್ಯಿಲ್ಲ. +ವಜ್ರ ಹೋಗೇ ಹಿಡಿಬೇಕು. +ಕಾಲ್ ಮುರಿದರೆ ಕಾಲು, ರಟ್ಟೆ ಮುರಿದರೆ ರಟ್ಟಿ, ಕುತ್ಗೆ ಮುರಿದರೆ ಕುತ್ಗಿ ನಂದು ಮುರೂದು.” ಅಂದ. + “ಆಗಲಪ್ಪ. . . ”ಇವ ಬೆಳ್ಗ್ ಮುಂಚ್ ಹೋದ. +ಅವನ್ನ ಕರಕಬಂತು. +‘‘ವಜ್ರನಿಂದ ಸಾವ್ ಈತು. +ಗಿಳಿ ಈತ್ಕಂಡ. +ವಜ್ರಗೆ ಸಿಕ್ತಿದಿಕ್ಷಣ. +ಅವನೇ ಜೀವಕೆ ದೋಣಿಯಾಗೀವ” ಅಂದ. +“ವಜ್ರ ಯಾರು?” “ಯಾರಾರು ಈವ. +ಉಪಾಯ ಮಾಡ್ವ, ನಾ ಬತ್ತಿ ಕರಕಹೋಗ್‌ಕ್ ಬತ್ತಿ” ಅಂದ. +“ಕರಕ ಹೋಗು; ಬಿಟ್ ಉಳಿಯೆ” ಅಂತು‌. +ತೊಟ್ಲದಾಗ್ ಹತ್ತಿ ಕುಳಿತ ಬಿಟ್ಟ, ವಗಿದ್ ಬಿಟ್ರು. +ಹಡಗಿದ್ದಲ್ ಬಂದ. +“ಆರು ಜನ ಕೂತ್ಕಳಿ. +ಎರಡು ತಾಸಿನಲ್ಲಿ ಬರ್ತಿ” ಹೇಳಿ, ತಾಳೀಮರಕೆ ಹೋತ್ಯ. +ಐದು ನಿಮಿಶದಲ್ಲಿ ಬಿಟ್ಟ ಮೊಟರ್ ಬಿಟ್ ಹಾಗೇ. +ಶೇಶಗೆ ಶೀಕಿಗೆ ಶುರವಾಯ್ತು. +ಮರಹತ್ತಿ ಗಿಳಿ ವಗಿದ ಕೆಡ್ಗದ್ದ. +ಹಡಗಿನ ಮೇನೆ ಇಳಿಸಿದ. +ಬತ್ತ ಬತ್ತ ಕಾಲ ತುಂಡ್ ಮಾಡಿದ. +ಅವನ ಬಾಜು ಹೋಯ್ತು. +“ಮಗಳಿಂದೆ ಆಯ್ತು. . . ” ಅಂತ್ಯ. +ಮತ್ತಂದ್ ಮುರಿದ ಬಿಟ್ಯ. +ರೆಟ್ಟಿ ಮುರ್ದ ಹೋಯ್ತು. +ಕಲಾಸ್ ಸಮುದ್ರದಲ್ ಬಿಸಾಕ್ ಬಂದ. +ರೊಂಡ ಮುರಿತು. +“ಹುಡ್ಗಿ ತತ್ತಿ. +ಪಾತಾಳಕ್ ಹೋಗಿ ಇಬ್ಬರೂ ಕುಳಿತ ಬತ್ತೆರೂ” ಅಂದ. +‘‘ಅವ ಬೇಡಾಗಿದು. +ತಾವು ನಗ್ನಾಗ್ವ’’ ಹೇಳಿ, ‘‘ಪಾಂಡವರ ಐದು ಜನ ಆಳ್ತಾರೆ. +ನಾವು ಆರು ಜನ ಯಾಕ್ ಆಳುಕಾಗ” ಹೇಳಿ. +ಅವ ಪಾತಾಳಕ್ ಬಂದ, “ಅಪ್ಪ ಸತ್ ಬಿದ್ಯ. . . ” ಅಂತು. +ಸಾವ್ರ ಸೌದೆಹೊರೆ ತಂದ್ ಬೂದಿ ಮಾಡ್ದ್ಯ. +‘‘ಹೊರಡು” ಅಂದ. +ಮಾಶೇಸನ ಮನಿಮುಂದೆ ಗಂದದ ಮರ ಈತು. +ಗರುಡ - ಮಾಶೇಸನ ಇವನ ಸ್ವಾಸದ ಸುಂಯಲಿಗೆ ಐದಾರು ಗೂಡು ಕಲಾಸ್ ಮಾಡ್ ಬಿಟ್ಯ. +ಗರುಡಗೆ ಪಶಾತಾಪಾಗದೆ. +ಯಾವಾಗ ಸಾಯ್ವ? ಹೇಳಿ. +ಇವ ವಜ್ರ ಹುಡ್ಗಿ ತೊಟ್ಲಲ್ ಕುಳ್ಳಿಸಿದ, ವಗಿದರು. +ಇವ ಪಾತಾಳದಲ್ಲಿ, “ಕುಳ್ಳು, ಕುಳ್ಳು” ಹೇಳಿ ಹಡಗಿನ ಮೇನೆ ಕುಳ್ಳಿಸಿ ತಂದ್ರು. +ಅಪ್ಪನ ಹತ್ರ ಹೇಳತಾರೆ, “ನಾವು ಹೆಣ್ ತಕಬಂದ್ರು. . . ” ಅಂತ. +ಅದು, “ಅಪಘಾತ ಮಾಡಿದರಿ. +ಯಜಮಾನರು ಪಾತಾಳದಲ್ ಈವ್ರು. +ನನ್ನ ಮಾತಿಗೆ ಬಂದ್ರೆ ಯಾಪಾರ ಹೇಸಿಕೆಯಾಗೂದು” ಅಂತು. +ಇವ ದುಕ್ಕ ಮಾಡ್ತೆ ಕುಳ್ವಂತಾ ಹೊತ್ನಲ್ಲಿ ಗರುಡ ಹೇಳಿತು. +“ನನ್ ಮರಿಗ್ ಸುಕಾಯ್ತು. +ನನ್ ರಟ್ಟಿಮೇನ್ ನೀ ಕುಳ್ಳು. +ತಕ ಹೋಗ್ಬಿಡ್ತೆ” ಅಂದಿ ಹೊತ್ಕಂಡ್ ದಂಡಿ ಮೇನ್ ಇಟ್ತು. +ಮನಿಗ್ ಬಂದ. +ಅದು ಇವನ ಬಂದ್ ಗೋತ್ಬೆಡ್ತು. +“ಅಪ್ಪ. . . ” ಅಂದ. +ಶೆಟ್ಟಿಗೆ, “ಗಾತ ಮಾಡ್ದ್ರು” ಹೇಳಿ ರಾಜನ ಹತ್ತರ ಕಳಿಸಿಕೊಟ್ಟ. +ಹುಡಗಿ ನೋಡ್ದ. +ನೋಡಿ, “ಶೆಟಿ” ಅಂದ ರಾಜ. +“ಸುಳ್ ಹೇಳವ್ಯೊ, ಕರೆ ಹೇಳವ್ಯೋ?” ಕೇಳಿದ. +“ನಿನ್ನ ಮಗನೆ ತಂದದ್ದೊ?ಬೇರೆ ಹುಡಗನೋ?” ಆವಾಗ ಹೇಳಿದ, “ನನಗೆ ಹುಟ್ಟಿದ ಮಕ್ಕಳಲ್ಲ. . . ನನ್ನದೇನಲ್ಲ. +ನಗ್ನಾದೊಳಲ್ಲ. ಅಡವಿ ವಳಗೆ ಸಿಕ್ಕೆ ಸಾಕಿ ಸಲಗೆ ಕರಕ ಬಂದೆ. +ಪತಿವ್ರತಾಧರ್ಮದಿಂದ ಈತು” ಅಂದ. +ಪೊಲೀಸರ ಕರೆಸಿದ ರಾಜ, “ಕರೆ ಹೇಳಿ, ಶೀಕ್ಸಿಲ್ಲ ದೀಕ್ಸಿಲ್ಲ. +ತಲೆಹೊಡದೆರೋ ಹೇಗೆ?” ಹೇಳಿ. +“ತಲಿ ಹೊಡೆ ಹೊತ್ನಲ್ಲಿ ಶಿಶು ಆಕಾರ ಕಂಡ್ತು. +ತಲಿ ಹೊಡಿಲಿಲ್ಲ. +ಬಾವಿಲ್ ಬಿಟ್ ಬಂದೆ” ಅಂದ. +ಬಂದ್ ಹೆಂಗಸುವ, ಮಗನ್ನುವ ಕರಕಂಡ್ ಹೋದ. +ರಾಜಪುತ್ರ, ಹೆಂಡತಿ ಪಶ್ಚಾತ್ತಾಪಾಯ್ತು. +“ಬಡ್ವ ಸಾದ್ನಿಂದೆ ತಲಿ ಹೊಡೆದ್ ಬಿಟ್ರೆ ಗತಿ?” ಅಂದ. +“ಶೆಟ್ಟಿ, ವರ್ಸಕೊಂದ್ ಕಪ್ಪ ಕೊಡುದ್ ಬೇಡ” ಅಂದ. +ಪೋಲಿಸರಿಗೆ ಹುಡ್ಗಿ ಉಳಿಸಿದಕ್ ಬಹುಮಾನ. +ಹುಡ್ಗಿ ನಗ್ನ ಮಾಡ್ದ್ರು ವಜ್ರಗೆ. +ನಗ್ನಾಗಿ ಎಲ್ಲ ಸುಕದಿಂದ ವಳಿದ್ರು. +ಇಟೋಬಾಚಾರಿ, ಗುಡಗಾರ ಮಂಜನಾಥ ದೋಸ್ತರು; ಜೊತೆಯವರು. +ಗುಡಗಾರ ಮಂಜನಾಥನ ದೇವಕಾರ್ಯ ಬಂತು. +ಬೇರೆ ಜಾತಿಯವರು ಇವನ ಬಿಟ್ಟೇ ಹರಿದಿನಕೆ ಹೋಗೂದು ಮಾಡಿದ. +ಗುಡಿಗಾರ ಅವ, “ನಾನೂ ಬತ್ತೆ” ಹೇಳಿದ. +ಇಟೋಬಾಚಾರಿ, ಗುಡಿಗಾರ ಮಂಜನಾಥ ಹೋದರು ಇಬ್ಬರೂ. +“ನಾ ಸಬಿಲಿ ಉಳಿತೆ. +ಊರಲ್ಲಿ ಅಡ್ಡಾಡು” ಅಂದ. +ಬೆಣಿಲಿ ರಾಜನ ಹುಡಗಿ ಒಂದು ಮಾಳಿಗಿಲಿ ಪೆಯಾನು ತಬಲಿ ಬಾರಿಸಿ ಪದ ಹೇಳ್ತದೆ‌. +ಅವ ಪದಕೆ ಹುಚ್ಚಾಗಿ ಅದರ ನೋಡಿದ. +ತಲಿ ಚಕ್ಕರ ಆಯ್ತು. +ದಿಟ್ಟೆಲ್ಲ, ಮೆಟ್ಟಿಲ್ಲ. +ಜನ ಕೂತ ಜಾಗಕ್ಕೆ ಹರಿದಿನಾಗ್ವಲಿ ಬಂದ. +ಮಂಜನಾಥನ ಕಾಲ ಮೇಲೆ ಬಿದ್ದ “ಯಾಕೆ?” ಕೇಳ್ತ, ಹೇಳೂದಿಲ್ಲ. +“ಕೆಟ್ಟಕಾಲದಲ್ಲಿ ನಾನೀವೆ” ಅಂತ್ಯ. +“ನಿನ್ ಕೂಡೆ ಆದ್ದಲ್ಲ” ಅಂದ. +“ಈ ಕೆಲಸ ನನ್ನ ಕೂಡೆ ಆಗದಿದ್ದಲ್ಲಿ ಇಂಥದೇ ಹರಿದಿನ ಮಾಡಿಸುವೆ” ಎಂದ. +ಬದಿ ಕರೆದು, “ಈ ಹುಡಗಿ ಮಾಡಿಸಿ ಕೊಡು. . . ಇಲ್ಲ ಸಾಯ್ತೆ” ಅಂದ. +“ಏನ ಮಾಡೂದು?’’ ಚಿಂತಿ (ಮೇಲೆ) ಮನಿಗೆ ಕರಕ ಬಂದ. +ಗುಡಗಾರ ಮಂಜುನಾಥನ ಅಣ್ಣ ಪೂನಾದಲ್ಲಿದ್ದ. +ತಾರು ರಾತ್ರಿಗೆ ಮಾಡಿದ-- “ವಂದ್ ಚೀಲ ಚಂದನ ಚಕ್ಕಿ ಬೆಳಗಾಗುವರಿಗೆ ಇಲ್ಲಿ ಮುಟ್ಸಬೇಕ್” ಅಂದಿ. +ಇವ ಆಚಾರಿ, ಅವ ಗುಡಗಾರ. +ಗುಡಗಾರ ಚಂದನ ಸಪ್ಲಾಯ್ ಮಾಡಿ ಗರುಡನ ಮಾಡಿದ-- ನಲ್ವತ್ತು ಯೋಜನ ಹಾರೂದು-- ಚಾವಿ ಕೊಟ್ಟಾ ಎಣ್ಣೆ ಹಾಕಿ. +ಅದಕೆ ರಾಜ ಕಾವಲಕಿಟ್ಯ ನಗ್ನಾಗಿಲ್ಲ. +ರಾಜಸ್ತಾನದ ಹುಡಗೆ ಗುಡಗಾರ ಮಂಜುನಾಥ ಹೇಳಿ ಕೊಟ್ಯ. +ಬಣ್ಣ ತೆಗದಿ ಗರುಡನ ಹತ್ತಿಸಿಯೇ ಹುಡಗಿ ಮನೆಗೆ ಕಳಿಸಿದ. +ಅದು ಕಿಡಕಿ ತೆಗಿದಿಟ್ಟದೆ. +ಹಾರಿಸಿ ಒಳಗೆ ಜಿಗಿದು ನಿಂತ್ಯ ಆಚಾರಿ. +ಅದು ಮೊಕ ಮೊಕ ನೋಡತದೆ. +‘ಚಂದ ಕಾಣ್ತ ಯಾರು? +’ ಅವ, ‘‘ಗರುಡ ಏರಿ ಊರ ತಿರುಗಿ, ಯೆಂಬತ್ ಕೋಳಿ ಪ್ರದಕ್ಷಿಣೆ ಮಾಡವಾಗ ಬಂದೆ. +ಅಕ್ಕನ ಪ್ರೇಮವಿತ್ತು. +ಅದು ಯಾರೊ ಏನೋ ವಿಚಾರಿಲ್ಲ. +ಸತ್ಯಬಾಮಿ, ರುಕ್ಮಿಣಿಗೆ ಗುತ್ತಾದರೆ ಕಟ್ಟ” ಅಂದಿ ಮತ್ತೆ ಹಾರಿ ಬಂದು ಉಳಿದ ಅವ. +ಅದು, “ಗರುಡವಾಹನ. . . ಕೃಷ್ಣ. . . ಸತ್ಯಬಾಮಿ. . . ರುಕ್ಮಿಣಿ. . . ಹೇಳ್ತ್ಯ. ಅಕ್ಕ ಸತ್ ಹೋದ್ದು ಹೌದು. +ಪರಮಾತ್ಮ ನನ್ ಮೇನ್ ಮನಸ್ ಮಾಡ್ಯ” ಅಂದಿ ಪಚ್ಚಾತಾಪ ಮಾಡಿ ಚಿಂತೆ ಮಾಡಿ, “ಕಾಪಾಡು ದೇವರೇ” ಅಂತಿದು. +ಆಚಾರಿ ಅಂದಿ ಗುತ್ತಿಲ್ಲ. +ಅಡಗಿ ಬಟ್ಟನ ಕೂಡೆ ಸಾಮಗ್ರಿ ಮಾಡಿಸಿ, ಬಂಗೀ ಪಾನಕ ಮಾಡಿ (ಕುಡಿಸಿ) ಪೊಲೀಸರು ನಿದ್ರಿಸುವಂತೆ ಮಾಡಿತು. +ಮದ್ರಾತ್ರಿಗೆ ಬೇರೆ ಡ್ರೆಸ್ ಮಾಡಿ ಬಂದ. +ಮತ್ತೆ ಶಬ್ದಾತಿದು. . . ವಿಮಾನ ಇಳ್ಸಿ ಕೂತ್ಯ, “ಗುತ್ತಾದರೆ ಪಜೀತಿ. . . ” ಅಂದ. +“ನಾರದ ಬಂದರೆ ಪಜೀತೆ” ಹೇಳ್ತ್ಯ. +ಅದು ನಮಸ್ಕಾರ ಮಾಡಿದು-- “ನಾ ಬಡ ಪಾಪೆ. +ನೀವು ಯಾರೆಂಬುದು ನಾ ಏಗ್ ಕಂಡ್ ಹಿಡಿದೆ. +ನಿನ್ನ ನೀತಿಯಿಂದೇ ಯಾರ ಮದಿಯಾಗಲೂ ಕೊಡಲಿಲ್ಲ. +ಅಕ್ಕ ಸತ್ತದ್ದು ಹೌದೇಯ. . . ಪ್ರೇಮ ಮಾಡಿ” ಹೇಳಿ ಅವನ ಕಾಲ ಹೆಡ್ಕಂ ಬಿಟ್ತು. +“ನೀ ತಿಳಿದ ಹಾಗೆ ನಾಯಿಲ್ಲ. . . ನಿನ್ನ ನಗ್ನಾಗಬೇಕಂದಿ ಇಲ್ಲ” ಅಂದ ಹೊಂಟ. +ಹಾರಿಸಿದ ಉಗಿದ ಹಿಡಿದರೂ ಕೇಳ್ಳಿಲ್ಲ ಅವ. +ಅದು ಪಜೀತಿ, “ನಾಳೆಗೆ ಮಾಡ್ತೆ ತಡಿ” ಅಂತಿದು. +ಮಾರನೆ ದಿನ ಬೇರೆ ಡ್ರೆಸ್ ಮಾಡಿ ಹೊರಟ, ಹೋದಕೂಡ್ಲೆ, “ತಿನ್ನಿ” ಅಂದಿ ಗಾಳಿ ಹಾಕ್ತಿದು. +ಪ್ರೇಮ ಬಿತ್ತು. +ಏಳು ತಿಂಗಳ ಗರ್ಬಿಣಿಯಾಯಿತು‌. +ಗುಡಗಾರ ಮಂಜನಾಥ, “ಹೋಗಬೇಡ‌, ಪಜಿತೆಯಾದೀತು” ಅಂದ. +“ನಾ ಸತ್ತರೂ ಹರ್ಕತ್ತಿಲ್ಲ. . . ” ಅಂದ. +ಹುಡಗಿ ಅಪ್ಪಗೂ, ದಾಯಾದರಿಗೂ ಜಗಳ ಬಿತ್ತು. +ನಾಕ್ ನಾಟಿಸಿದರು. +“ಅಪ್ಪಾ, ಕೃಷ್ಣ ನನ್ನ ನಗ್ನಾಗಿ ಬಿಟ್ಯ. +ಅವರ ಕುಲ ನಾಶ ಮಾಡಿ ಮುಶಲಾಯುದ ಬಿಟ್ಟಿ.” ಅಂತದು. +ಅವ, “ಹೂ. . . ” ಅಂದ. +ಅದು ಹೇಳಿತು ಆಚಾರಿಗೆ, “ಮುಶಲಾಯುದ ಬಿಡಿ” ಅಂತು. +ವಿಚಾರ ಮಾಡವೆ, “ಇಂತಾ ದಿವಸ ಹೇಳು. . . . ” “ಮಂಗಳವಾರ ನಾಡದು ಮಾಡುವ” ಅಂದ. +ಬಂದ ವಿಮಾನ ಮೇನೆ. +ಗುರು ನಾರದರಿಗೆ ಗೊತ್ತಾಗಿ ಬಂದರು. +ಪರಮಾತ್ಮ, ರುಕ್ಮಿಣಿ, ಸತ್ಯಬಾಮಿ ತೊಡಿ ಮೇನೆ ಕಾಲಿಟ್ಟೇ ಮನಗಿಬಿಟ್ಯ. +ನಾರದ ಎಬ್ಬಿಸಿ, ಹೀಗೆ ಹೇಳಿದ-- “ವಿಮಾನ ತಿರಗತದೆ” ಎಂದ. +“ಅವ ಇಲ್ಲದಿರೆ ಸಾಯ್ತ್ಯ. . . ” ಅಂದ. + “ನಾರದಾ. . . ” ಅಂದ. +‘‘ಆ ಗರುಡನ ಸೇರಿಕೋ ನಾ ಮುಸಲಾಯುದ ಬಿಡ್ತೆ” ಅಂದ. +ನಾರದ ಆಚಾರಿ ಗರುಡನ ಬಿಂಬಿ ಆಕಾರದಲ್ಲಿ ಸೇರಿದ. +ಇವ ಮುಶಲಾಯುದ ಬಿಟ್ಟ. +ಗರಗರ ತಿರುಗಿ ರಕ್ತಪಾನ ಮಾಡಿತು. +ನಾರದ ಪಾರಾದ. +“ರಾಜಂಗಳದ ಮುಂದೆ ವೈವಸ್ತಿ ಮಾಡಿ ಕೃಷ್ಣನ ಸೇವೆ ಮಾಡಿ. . . ” ಅಂದ. +ಗಂದ ಚಕ್ಕಿಲ್ಲ, ಗರುಡನೂ ಇಲ್ಲ. +ಇಟೋಬನ ಸೊಂಟ ಮುರಿಯಿತು. +ಆಚಾರಿ ಇಟೋಬ ಅವನಿಗೆ ಕೃಷ್ಣ, “ಸತ್ತವನೇ, ನನ್ನ ಹೆಸರ ಹಾಳು ಮಾಡಿದೆ. +ಸತ್ತೆ ನೀನು. . . ” ಅಂದ. +ದುಃಖ ಮಾಡಿದ. +“ನಾನೇ ಮುಶಲಾಯುದ ಬಿಟ್ಟೆ. +ನಿನ್ನ ಕುಲ ನಾಶ ಮಾಡಿದೆ” ಅಂದ. +ಮಾಳಿಗೆಯಲ್ಲಿ ಅಪ್ಪಗೆ ಅಂತು, “ನಾನು ಸೇವೆ ಮಾಡ್ತ ಉಳಿವೆ. +ಮಾಳಿಗೆಯಲ್ಲಿ ಹಾಕಿ. . . ” ಅಂತು. +ವಂದಲ್ಲಾ ವಂದ್ ಊರನಗೆ ವಬ್ ರಾಜಿದ್ದ. +ಆ ರಾಜನಿಗೆ ಯೇಳ ಜನ್ ಗಂಡ್ ಹುಡ್ಗರು. +ಯೇಳ್ ಜನ ಗಂಡಹುಡಗ್ರಂತಾದ್ರೆ ಅವ್ರ ಆಸಿ ಯೇನು? +“ನಾವು ವಂದ್ ತಾಯಿ ಮಕ್ಕಳು. +ನಾವು ಯೇಳ ಜನ್ರಿಗೂ ವಂತಾಯ್ ಹಡ್ದ ಹೆಣ್ ಶಿಕಬೇಕ್. . . ” ಅಂತ ಅವರಾಸೆ. +ಅವರ ತಂದೆ ತೀರಿಕೊಂಡ. +ವಂತಾಯ್ ಹಡ್ದ ಹೆಣ್ ಗುತ್ ಮಾಡ್ಲಿಕ್ಕಾಗ್ಲಿಲ್ಲ. +ಅವರ ತಂದೆ ತೀರ್ಕೊಂಡ ಕೂಡ್ಲೆ ಈ ಮಕ್ಕಳು ಕೆಲು ದಿವ್ಸದಾಗೆ ತಮ್ಮ ತಾಯಿ ಹತ್ರ, “ವಂದೇ ಮನಿ ಹೆಣ್ ಯಾವ ದಿವಸ ಸಿಕ್ತೋ ಆ ದಿವಸ ಮನಿಗ್ ಬರ್ತೇವೆ ನಾವು. . . ” ಅಂತ ಹೇಳಿಕ್ ಹೋದ್ರು ಅವರು. +ಹೋದ ಕೂಡಲೆ ಯೇಳ ಹಗಲು, ಯೇಳ ರಾತ್ರಿ ಕುದ್ರಿ ಹೊಡ್ದ ಬಿಟ್ಟವ್ರು. +ಅಲ್ಲಿ ಯೇಳನೆ ದಿವಸ ವಂದ್ ಹಳ್ಳ ಸಿಕ್ತು. +ಅಲ್ ಹನ್ನೆರಡ ಗಂಟೆ ಸುಮಾರ ಇವರು ಆಯಾಸ ಪಟ್ಟವರು ಸ್ನಾನ ಮಾಡ್ಕೊಂಡು, ಅಲ್ಲೇ ಸ್ವಲ್ಪ ಆರಾಮ ತಕಂಬ್ಕೆ ಮಲಗದ್ರು ಅಂತಾಯ್ತು. +ಮಲಗಿದ ಕೂಡ್ಲೆ ಅಚ್ಚಕನ್ನಿ ದೇವಕನ್ಯೋರು ಯೇಳ ಮಂದಿ ಅದೇ ಹೊಳಿಗೆ ಸ್ನಾನ ಮಾಡ್ಲಿಕ್ ಬರತಾ ಇದ್ರು. +ಸ್ನಾನ ಮಾಡ್ಲಿಕ್ ಬಂದ ಕೂಡ್ಲೆ ಅದ್ರೊಳ್ಗೆ ಕಿರಿಹುಡ್ಗನ್ ನೋಡಿ ಆ ಕಿರಿಯವಳಿಗೆ ಮನಸ್ಸಾಗ್ ಹೋಯ್ತು. +ಮನಸ್ಸಾದ್ ಕೂಡ್ಲೆ ಅವನನ್ನೆ ತನ್ನ ಗಂಡನನ್ನಾಗ್ ಮಾಡ್ಕೊಳಬೇಕಂತ ಅವಳಿಗ್ ಆಸಿ ಹುಟ್ಬಿಡ್ತು. +ಆಸಿ ಹುಟ್ದ್ ಕೂಡ್ಲೆ ಅವಳು ಅವನ ಹತ್ರ ಬಂದ್ಲು. +ಬಂದೀಗ, “ನೀವು ನಮ್ಮನಿಗಾಗಿ ಬನ್ನಿ. . . ” ಅವ್ನ ಯೆಬ್ಸಿ ಅವನ ಹತ್ತರ, “ನಿಮ್ಗ್ ಯಾವೂರಾಯ್ತು?ಯೇನು?” ಯೆಲ್ಲ ಕೇಳಿದ್ಲ್ ಅವಳು. +“ನೀವ್ ನಮ್ಮನಿಗಾಗಿ ಬನ್ನಿ. . . . ವಂದ್ ತಾಯಿಗ್ ನಾವು ಯೇಳ ಮಂದಿ ಅಕ್ಕ-ತಂಗ್ಯವ್ರು. +ನಿಮ್ಮನ್ನೇ ಲಗ್ನಾಗತೇವೆ ನಾವು. +ಮತ್ ತನ್ನ ಹಿರಿಯಕ್ಕನಿಗೆ ಮಾಯ-ಮಂತ್ರ ಪ್ರತಿಯೊಂದು ಗೊತ್ತಿತ್ತು‌. +ಆ ಹೆರಿಯಕ್ಕ ಯಾವ ಮಾಯ-ಮಂತ್ರ ಮಾಡಿದರೂ ಬಾಕಿಯವರ ಮುಂದೆ ನೆಡೀತದೆ. +ಆದರೆ, ನನ್ನ ವಬ್ಳ್ ಮುಂದೆ ನೆಡೂದಿಲ್ಲ ಅದು. +ನಿಮ್ಮನ್ನ ಉಳಸ್ತೇನೆ ನಾನು. . . . ನಮ್ಮನೆ ಇಂತಾ ಜಾಗ್ದಲ್ ಉಂಟು. . . ” ಅಂತ ಹೇಳಿ ಅವಾಗ ಅವಳು ಹೋದ್ಲು. +ಯೋಳು ಮಂದಿ ಇವರು ಅವರ ಮನಿಗಾಗಿ ಹೋದ್ರು. +ಹೋದ ಕೂಡ್ಲೆ ಅಲ್ಲಿ ಹೆರಿಯವಳು ವಿಚಾರ ಮಾಡ್ಲು. +“ನೋಡು. . . ನಮ್ಮನಿಯಲ್ಲಿ ಯೋಳು ರೂಮುಂಟು. +ನಾವು ಅಕ್ಕ-ತಂಗಿ ಯೋಳ್ ಮಂದಿ ರೂಮಿಗೆ ನಂಬ್ರವುಂಟು. +ವಂದನೇ ರೂಮೇ ನಮ್ಮ ಹೆರಿಯವಳದು. +ಹೀಗೇ ನೀನ್ ಹೆರಿಯವ ವಂದನೆ ರೂಮಿಗೆ ಹೋಗಬೇಕು-- ನಾನೇ ನಿನ್ನ ಹೆಂಡತಿ. +ಯೆರಡನೆ ರೂಮಿಗೆ ನಿನ್ನೊತ್ತಿನವ ಹೋಗಬೇಕು; +ಅವಳೇ ನಿನ್ನ ವತ್ತಿನವನ ಹೆಂಡತಿ. . . ” ಅಂತು. +ಇದೇ ಪ್ರಕಾರ ಯೇಳ ಜನ್ರಿಗೂ ಇದೇ ನಮೂನ್ಯಂತೆ ಹೇಳ್ಳು. +ಅವಳು ಅದರಂತೆ ಅವ್ರ್ ಯೇಳ್ ಜನರ ರೂಮಿಗೆ ಹೋದ್ರು. +ಅಲ್ ಊಟ ವಗೈರೆ ಅವರೀಗೆ ಯೇನೂ ತೊಂದ್ರೆಯಾಗಲಿಲ್ಲ. +ಅಲ್ಲಿ ಯೆರಡ್ ಮೂರ್ ದಿವಸ ಅವರೀಗ್ ಕಳೀತ್ರು. +ತಂಗ್ದಿಕ್ಳಿಗೆಲ್ಲ ನಾಕನೇ ದಿವಸಕ್ಕೆ ಹೆರಿಯವಳು ಹೇಳ್ಳು-- “ಇವರು ನರಮನ್ಸರು. +ನಾವು ದೇವ್ರುಗಳು. +ಇವರನ್ನು ಇನ್ ಇಟ್ಕೊಳಬಾರ್ದು. . . ಕೊಲ್ಲಲೇಬೇಕು ನಾವು. +ಮತ್ತೆ ಇವತ್ ಸಾಯಂಕಾಲ ಸುಮಾರ ರಾತ್ರಿ ಟೈಮಿಗೆ ಇವರನ್ ಕೊಂದೇ ಬಿಡಬೇಕು ನೋಡಿ. . . ” ಅಂದ್ ಹೇಳಿ ಆರ್ಡರ್ ಮಾಡಿಬಿಟ್ಲು. +ಅದನ್ ಕೇಳಿ ಬಾಕಿ ಐದ್ ಮಂದಿಗೆ ಅವರನ್ನ ಕೊಲ್ಲುಕೆ ಮನಸ್ಸಿತ್ತು. +ಇಲ್ಲಿಂದ ಹೇಳಿ ಕರಕಂಡ್ ಹೋಗಿದ್ಲಲ್ಲ ಕಿರಿಯವಳು? +ಅವಳೀಗ್ ಕೊಲ್ಲು ಮನಸ್ಸಿಲ್ಲ. +ಅಕ್ಕನ ಹತ್ರ ಹೇಳಿ, ‘ತಾವು ಇವರನ್ನು ಕೊಲ್ಲುದಲ್ಲ. +ಇವರೀಗ್ ಸುಲಭ ಉಪಾಯ ಹೇಳ್ಕೊಡಬೇಕ್ ನಾವು. . . ’ ಅಂತ ಹೇಳಿ, ಮನ್ಸನಲ್ ಮಾಡ್ಕೊಂಡ್ತು. +ಮನ್ಸನಲ್ ಮಾಡ್ಕೊಂಡ ಅವತ್ ಸಾಯಂಕಾಲ ಅವಳ ಮಂಚದ ಮೇಲೆ ಮಲಗಿದ್ಲು. +ಇವರು ಕೆಳಗೆ ಮನಗಿದ್ದು ಆ ಕಿರಿಕನ್ನೆಯಂಬವಳ ಕಣ್ಣಗ್ ನೀರು ಬಂದು, ಅವನ ಚಾಪಿ ಅಷ್ಟು ಅದ್ ಹೋಗ್ಬಿಟ್ತು. +ಆವಾಗವ ಕಿರಿಯವ ಪಟ್ನೆ ಯೆಚ್ಚರ ಮಾಡ್ಕೊಂಡು, “ನಾವ್ ಬಂದಿ ಇವತ್ತಿಗ್ ನಾಲ್ಕ್ ದಿವಸಾಯ್ತು. +ಇವತ್ತಿಗೂ ಹೀಗಾಗಲಿಲ್ಲ. +ಇವತ್ತಿಗ್ ಹೀಗಾಗ್ಲಿಕ್ ಕಾರಣ್ಯೇನು?” ಅಂತ ಆ ಕಿರಿಯವಳ ಹತ್ರ ಕೇಳ್ದ ಅವ. +ಕೇಳಿದ ಕೂಡ್ಲೆ ಅವಳ ಹೇಳತ್ಲು ಕಿರಿಯಳು, “ಇವತ್ ನಿಮ್ಮನ್ನ ನಮ್ಮ ಅಕ್ಕದಿಕ್ಳ್ ಕೊಲ್ತಾರಂತೆ. +ಈಗ ನೀವು ಯೇಳು ಮಂದೀನೂ ಇಲ್ಲಿಂದ ಯೆದ್ ಹೋಗಬೇಕು. +ಯೆದ್ ಹೋಗಿ. . . ಹೋದವರು, ಆವಾಗ ನಮ್ಮ ಅಕ್ಕದಿಕ್ಳು ನಿಮ್ಮ ಬೆನ್ ಹಿಡೀತಾರೆ. +ಬಿಡುದಿಲ್ಲ ನಿಮ್ಮ ಅವರು. . . ”“ಆವಾಗ್ ನಾನು‌ ಮೂರ್ಕಲ್ ಹರಳ ಮಂತ್ರಿಸಿ ಕೊಡ್ತೇನೆ. +ಮಂತರ್ಸ್ ಕೊಟ್ಕೂಡ್ಲೆ ನೀವ್ ಹೋದ್ದ್ ಅವರೀಗ್ ಗೊತ್ತಾಗ್ತದೆ. +ನಿಮ್ಮ ಬೆನ್‌ಹತತಾರೆ ಅವರು. +ಬೆನ್ ಹತ್ತದ್ ಕೂಡ್ಲೆ ನೀವು ಕುದ್ರಿ ಹತ್ಕೊಂಡ್ ಹೋದವರು ನಿಮ್ಮ ಹತ್ರ ಅವರು ಬಂದ್ರು ಅಂದ್ ಕೂಡಲೆ, ನೀವ್ ವಂದ್ ಕಲ್ ಹರಳ್ ಹೊತಾಕ್ಬೇಕು. +‘ಆಕಾಸಕ್ಕೂ, ಬೂಮಿಗೂ ಸಮನಾದ ಬೆದ್ರಮಟ್ಟಿಯಾಗಬೇಕ್. . . ’ ಹೇಳಿ. +ಆ ಬೆದ್ರ್ ಮಟ್ಟಿ ಹತ್ ಅವ್ರ್ ಮತ್ ಬರ್ತಾರೆ. +ನಿಮ್ಮ ಬೆನ್ ಹಿಡೀಲಿಕ್ಕೆ. +ಆ ಬೆನ್ನ ಹಿಡಿಯುದಕ್ ಬಂದ್ರೆ, ಬಂದ್ರ್ ಅಂದ ಕೂಡ್ಲೆ ಇನ್ನೊಂದು ಕಲ್ ಹರಳ್ ಹೊತಾಕಿ, ‘ಬೂಮಿಗೂ, ಆಕಾಸಕ್ಕೂ ಸಮನಾಗಿ ವಂದ್ ಗುಡ್ಡ ಆಗಬೇಕು’ ಹೇಳಿ. +‘ಗುಡ್ಡದ ಅಂಚಿಗೆ ಹೆಂಗಸರು ಗುಡ್ಡದಾಚೀಗೆ ಗಂಡಸರು ಇರಬೇಕು’ ಅನ್ವ ಹಾಗೆ ಕಲ್ ಹಳ್ಳನ ಹೊತಾಕ್‌ಬೇಕು. +ಹಾಗೆ ಹೇಳ್ದ ಕೂಡ್ಲೆ, ‘ಮಹಂತಾದ ವಂದ್ ನದಿಯಾಗಲಿ’ ಅಂತ ಮತ್ ವಂದ್ ಹಳ್ಳ ಹೊತಾಕ್ ಬಿಡು” ಅಂತ ಹೇಳ್ತು. +“ಆವಾಗೆ ಅದನ್ನ ದಾಟಿ ಬಂದ ಕೂಡಲೆ ನೀವು ಆ ಹಳ್ಳದ ಆಚೆ ಹೋಗಿ ನಿಂತ ಬಿಡಿ. +ಅವರಿಗೆ ಋಷಿಗಳ ಶಾಪವಂಟು. +ಆಚಿಗೆ ಅವರ ಮಾಟ ನಡುದಿಲ್ಲ. +ಅಲ್ ಅವ್ರ್ ಬರುದಿಲ್ಲ” ಆಯ್ತು ಆವಾಗ ಈ ಹೆರಿಯವಳು ತಂಗೀಗ್ ಹೇಳ್ಳು, “ಅವರಿಗೆ ನೀನು ಇಷ್ಟೆಲ್ಲಾ ಬುದ್ದಿವಂತಿ ಹೇಳ್ ಕೊಟ್ಟವ್ಳು. . . ” ಅಂತ ಹೇಳಿ ಅವಳಿಗೆ ಜೋರ್ ಮಾಡದ್ಲು ಅಂತಾಯ್ತು‌. +ಅವತ್ ಸಾಯಂಕಾಲ ಕಿರಿಯವಳು ವಂದ್ ಯೆಲಿ ಸಾಕಿತ್ತು. +ಯಲಿ ಹತ್ರ ಹಳ್ಳದವರಿಗೂ, ಅವಳ ಕೋಣೆದ್ವರಿಗೂ ಸುರಂಗ ಮಾಡ್ಲಿಕ್ ಹೇಳ್ಳು. +ಇಲಿ ಅದರಂತೆ ಸುರಂಗ ಮಾಡ್ತು. +ಆ ಸುರಂಗದಲ್ಲಿ ಆ ಕಿರಿಯವಳು ಹಳ್ಳದಲಿದೆ ಇವರ ಹತ್ರ ಬಂದ್ ಬಿಟ್ಲು. +“ನಾಳೆಗ್ ನಾವು ಸುರಂಗದಲ್ ತೊಟ್ಲಾಟ ಆಡ್ತೇವೆ. +ಯೇಳೂ ಮಂದಿ ಕೂಡಿ ಈ ಸರಪಳಿ ನೀವ್ ಹಿಡ್ಕಳ್ಬೇಕ್. +ಸರಪಳಿ ಯಾವಾಗ ನಿಮ್ಮ ಕಯ್ಲಿ ಸಿಕ್ ಬಂತೊ, ಯೇಳೂ ಜನರು ಕಸುವಿನಿಂದ ಯೆಳೀಬೇಕು. +ನಿಮ್ಮ ಹತ್ರ ಆಗದಿದ್ರೆ ನಿಮ್ಮ ಕುದ್ರಿ ಕಟ್ಟಿಯಾದರೂ ಯೆಳಿಸಬೇಕ್. +ಕಟ್ಟಿ ಯೆಳ್ಸಿದ ಕೂಡ್ಲೆ ತಾವು ಯೇಳು ಮಂದಿ ಆಚೀಗ್ ಬರತೇವೆ. +ಆಚಿಗ್ ಬಂದ ಕೂಡ್ಲೆ ಅವರ ಯೆಷ್ಟ್ ಜಾದೂ ವಿದ್ಯ ಇದ್ರೂ ಆಚೀಗ್ ನೆಡೂದಿಲ್ಲ - ಅವರದು.” +“ಆಗ ನೀವು ಮೊದಲ್ ಯಾರಾರ್ ನಿಮ್ಗ್ ಹೆಂಡ್ರಂದ್ ಹೇಳಿ ನನ್ನ ಅಕ್ಕ ಹೇಳಿದ್ಲೋ ಅವರನ್ನೇ ನಿಮ್ಮ ಕುದ್ರಿಗ್ ಹಾಯ್ಕೊಂಡ್, ಕುದ್ರಿ ಹಾರ್ಸ್ ಬಿಡಿ- ನಿಮ್ಮ ಮನಿಗೆ. +ಅಂತಾದ ಮೇಲೆ ನಿಮ್ಮ ನಿಮ್ಮ ಮನಿಗ್ ಹೋಗಿ. . . ನಿಮ್ಮ ನಿಮ್ಮ ಹೆಂಡ್ರನ್ನ ನೀವು ಲಗ್ನ ಆಯ್ಕೊಳ್ತೀರೋ, ಹಾಗೆ ಇಟ್ಕೊಳ್ತೀರೋ. . . ” ಹೇಳಿ ಅವಳ ಅಷ್ಟ್ ಹೇಳಿಕ್ ಹೋದ್ಲು. +ಅನಂತರ ಮಾರಣಿ(ನೆ) ದಿವಸೆ ಇವ್ರ್ ತೊಟ್ಲಾಟ ಆಡೂಕ್ ಪ್ರಾರಂಭ ಮಾಡ್ರು. +ಆಡ್ದವರು ಇಲ್ಲಿ ಈ ಮಿಣ (ಸರಪಳಿ)ಸೈಲ್ ಬಂದ್ ಕೂಡ್ಲೆ ಇವ್ರ್ ಯೆಳೀಲಿಕ್ ಹಣ್ಕಿ ಬಿಟ್ರು. +ಅವರ ಹತ್ರ ಆಗದಿದ್ದರೂ ಕೂಡ ಅವ್ರ್ ಕುದ್ರಿಯನ್ನು ಕಟ್ಟಿ ಅಂತೂ ಯೆಳ್ದ್ರು ಅಂತಾಯ್ತು. +ಹೆಂಗ್ಸರು ಯೇಳ ಮಂದಿ ಹಳ್ಳದ ಆಚೆಗೆ ಬಂದ್ರು. +ತಮ್ಮ ತಮ್ಮ ಹೆಂಡ್ರನ ತಾವ್ ತಾವ್ ಕುದ್ರಿ ಮೇನ್ ಹಾಯ್ಕೊಂಡು, ತಮ್ಮ ಮನಿಗ್ ನೆಡ್ದ್‌ ಬಿಟ್ರು. +ಮನ್ಯಲ್ಲಿ ಹೋಗಿ ತಮ್ಮ ಹೆಂಡ್ರನ ಆಯ್ಕೊಂಡು ಸುಕದಲ್ಲಿ ಇದ್ರು. +ಆವಾಗ ಇವ್ರ್ ಪ್ರತಿನಿತ್ಯ ಯೇಳೂ ಮಂದಿನೂ ಮೃಗಬೇಟಿ ಆಡ್ಲಿಕ್ ಹೋಗ್ತಾರೆ. +ಹೋಗವಾಗ ಅದೇ ಊರಿನಲ್ಲಿ ಜಾದು ಸನ್ಯಾಸಿ ಹೇಳಿ ವಬ್ಬ ಇದ್ದ. +ಅವರ ಉದ್ಯೋಗವೇನಂದ್ರೆ ಮನಿ ಮನಿ ಬೇಡೂದು. +ಯಾರ್ ಮನಿ ಹೆಣ್ ಹುಡ್ಗರು ಚಲೋ ಇದ್ರು ಅಂದ್ ಹೇಳ್ ನೋಡಿ-- ವಂದ್ ಸಲ್ಪ ದೂರ ನಾಯಿಯಾಗಲಿ, ಬೆಕ್ಕಿನ ರೂಪದಲ್ ಮಾಡ್ಕೊಂಡು ತಕ್ಕಂಡ್ ಹೋಗೂದು. +ಯಾರಾದ್ರೂ ಹೊಡೀಲಿಕ್ ಬಂದ್ರೆ ಅವರನ್ನ ಕಲ್ ಮಾಡಿ ಬಿಟ್ ಬಿಡೂದು. +ತನ್ನ ಮಂತ್ರಶಕ್ತಿಂದ ಆ ದಿವಸ ಇವರ ಮನೀಗೆ ಬೇಡ್ಲಿಕ್ ಸನ್ಯಾಸಿ ಬಂದ. +ಬಂದ ಕೂಡ್ಲೆ ಇವರೇಳ್ ಮಂದಿ ಮೃಗಬೇಟೆ ಆಡ್ಲಿಕ್ ಕಾನಿಗ್ ಹೋಗಿದ್ರು. +ಇವ್ರ್ ಕಾನಿಗ್ ಹೋದ ಕೂಡಲೆ ಈ ಸನ್ಯಾಸಿ, “ಭಿಕ್ಷಾಂ ದೇಹಿ. . . ” ಅಂದ್ ಬೇಡಲಿಕ್ ಬಂದ ಕೂಡ್ಲೆ ಕಿರಿಯವಳ್ ಬಿಕ್ಸಾ ತಕಂಡ್ ಹೋದ್ಲು. +ಆವಾಗ, “ನೀವು ಬಾಗ್ಲ ವಳ್ಗ್ ನಿತ್ಕಂಡ್ ಪಡಿ ಹಾಕದ್ರೆ ಪಡಿ ತಕಂಡ್ ಹೋಗೂದಿಲ್ಲ ನಾನು. +ನೀವು ಬಾಗ್ಲ ಹೆರಗೇ ಬಂದು ಪಡಿ ಹಾಕಿದ್ರೆ ಪಡಿ ತಕಂಡ್ ಹೋಗ್ತೆ ನಾನು. . . ” ಅಂತ ಹೇಳ್ದ ಸನ್ಯಾಸಿ. +ಅಷ್ಟ್ ಹೇಳ್ದ ಕೂಡ್ಲೆ ಸತ್ಯ ನಂಬಿ ಅವಳ್ ಹೊರಗ್ ಹೋದ್ಲು. +ರೂಪ-ಗೀಪ ನೋಡಿ ಇವಳನ್ನೇ ಮನೆಗ್ ತಕೊಂಡ್ ಹೋಗಬೇಕಂತ ಹೇಳಿ ನಾಯಿ ರೂಪ ಮಾಡ್ಕೊಂಡ್ ತಕೊಂಡ್ ಹೋಗಬಿಟ್ಟ. +ತಕಂಡ್ ಹೋದ ಕೂಡ್ಲೆ ಬಾಕಿಯವರೆಲ್ಲ ಗಲಾಟೆ ಕೊಟ್ರು. +ಅದೇ ಟಾಯ್ಮಿಗೆ ಅವರ ಗಂಡ್ರು ಯೇಳ ಮಂದಿ ಮೃಗ ಬೇಟೆ ಆಡಿ ಬಂದ್ರು. +ಆಡಿ ಬಂದ ಕೂಡಲೆ ವಂದ್ ತಟ್ಟಿ ಹಾಲ, ವಂದ್ ತಂಬ್ಗಿ ನೀರು ಅವರವರ ಗಂಡರಿಗೆ ಅವರವರು ಕೊಡ್ತಾ ಇದ್ರು. +ಹಿರಿಯವ ಮುಂದ್ ಬಂದವ ಕಾಲ್ ತೊಳದ ಬಂದ. +ಅಷ್ಟರವಳಗೆ ಈ ಹೆಂಗಸರು ಈ ವಿಷಯ ಹೇಳ್ಬಿಟ್ರು. +‘ಕಿರಿಯವಳನ್ನು ನಾಯಿ ರೂಪ ಮಾಡಿ. . . ಈ ರೂಪ್ದಲ್ ತಕ್ಕೊಂಡ್ ಹೋದ. . . ’ ಅಂತ ಹೇಳ್ ಬಿಟ್ರು. +ಅರ್ಧ ಹಾಲ್ ಕುಡ್ದ್ ಅರ್ಧ ಹಾಲ್ ಅಲ್ಲೇ ಇಟ್ಟು ಇವ್ರ್ ಯೇಳೂ ಜನರು ಸನ್ಯಾಸಿ ಕೊಲ್ಬೇಕಂದ್ ಹೇಳಿ, ಪರತ್ ಕುದ್ರಿ ಹತ್ಕಂಡ್ ಹೋಗುವಾಗ ವಂದ್ ಮೈಲ್ ಅಷ್ಟ್ ದೂರ ಹೋಗುವಷ್ಟರ ವಳಗೆ ಸನ್ಯಾಸಿ ಇವಳನ್ನ ಮನ್ಸರೂಪವೇ ಮಾಡ್ಕೊಂಡ್ ಹೋಗ್ತಾ ಇದ್ದ. +ಹೊಳಿ ಈಚೆ ಬಂದ್ರೆ ಇವಳಿಗೂ ಜಾದೂ ಇಲ್ಲ. +ಋಷಿ ಶಾಪವುಂಟು. +ಅವಳನ್ನ ನೋಡ್ದ ಕೂಡ್ಲೆ ಇವ್ರ ಯೇಳೂ ಮಂದಿ ಬೇಗ ಕುದ್ರಿ ಹಾರ್ಸ್ ಬಿಟ್ರು-- ಅವನ್ನ ಕೊಂದ್ ಬಿಡಬೇಕು ಹೇಳಿ. . . ಕಲ್ ಮಾಡ್ ಬಿಟ್ಟ. +ಆವಾಗ ಅವಳನ್ನ ತಕಂಡ್ ತನ್ನ ಮನಿಗೆ ತಾ ಹೋದ ಅವ. +ಅವ ಹೋದ ಕೂಡಲೆ ಇಲ್ಲಿ ಆ ಹಿರಿಯವಳಿಗೆ ಅರ್ದ ಹಾಲ್ ಕುಡ್ದರಿಂದ ಅದರಂದೇ ಗರ್ಬ ಉತ್ಪನ್ಯಾಗ್ ಹೋಯ್ತವಳಿಗೆ. +ಗರ್ಭ ಉತ್ಪನ್ನಾಗಿ ವಂದ್ ಹುಡ್ಗ ಹುಟ್ ಬಿಟ್ಟ. +ಹುಡ್ಗ ಹುಟ್ದ ಕೂಡಲೆ ಅವನಿಗೆ ಆರೆಂಟ್ ವರ್ಸಕೆ ವಿದ್ಯಾಭ್ಯಾಸ ಕಲ್ಸ್ರು. +ಮುದ್ಕ ಅವ. +ಸೇವೆ ಬಗ್ಗೆ ತಕ್ಕೊಂಡ್ ಹೋದ್ದು. +ಆ ನಂತ್ರ ಈ ಹುಡ್ಗನಿಗೆ ಪ್ರತಿಯೊಬ್ಬರೂ ‘ತಂದೆ ಇಲ್ದಿ ಹುಟ್ದ ಹುಡ್ಗ. . . ’ ಹೀಗೆ ಹೇಳಿ ಚೇಷ್ಟಿ ಮಾಡ್ದ ಕೂಡ್ಲೆ ತಾಯಿ ಹತ್ರ ಕೇಳ್ದ ಇವ. +“ತನ್ನ ತಂದೆ ಯೆಲ್ಲಿಗ್ ಹೋದ. +ಯೇನು?” ಹೇಳಿ ಕೇಳ್ದ. +ಆವಾಗಷ್ಟೂ ಯೆಲ್ಲಾ ಹಕಿಕತಿ ಹೇಳ್ತು. +ಹೇಳ್ದ ಕೂಡ್ಲೆ, “ಹಾಂಗಾದ್ರೆ ನನ್ ತಂದಿಯವರನ್ನ ಕರ್ಕ್ ಬತ್ತಿ. . . ” ಅಂದ್ ಹೇಳ್ ಹೋದ ಇವ. +ಸಾಮಾನ್ಯ ವಂದ್ ಮೈಲ್ ಹೋದ ಕೂಡಲೆ ಕಲ್ ತಂದೆಯವರ ಹತ್ತರವೇ ನಿಂತ. +ಅಲ್ಲೇ ನಿಂತ ಕೂಡಲೆ ಈ ಸನ್ಯಾಸಿ ಹೇಳವವ ಸಾಮಾನ್ಯ ಸನ್ಯಾಸಿಯಲ್ಲ-- ಜಾದುವುಂಟವನಲ್ಲಿ. +ಇಲ್ದ್ರೆ ಇದ್ರೆ ತಂದೆಯವರ್ನ ಕಲ್ ಮಾಡ್ಲಿಕ್ ಆಗತದ್ಯೋ? +ಹುಡ್ಗ ಹಾಗೆ ಆ ಊರಿಗಾಗಿ ಕೇಳ್ತಾ ಕೇಳ್ತಾ ಅಲ್ಲಿಂದಿಲ್ಲಿಗೆ ಹಾಗೇ ಹೋದ. +ಆ ಊರಿಗ್ ಹೋದವ ವಂದ್ ಅಜ್ಜಿಮನೆ ತಾವ್ ಉಳ್ಕಂಡ. +ಉಳ್ಕೊಂಡವ ಆ ಊರ ಇಚಾರಾ ಎಲ್ಲಾ ಕೇಳ್ಕೊಂಡ ಅಜ್ಜಿ ಕೈಲಿ. +ಯೆಲ್ಲಾ ಕೇಳ್ದ. +ಸುದ್ದಿಯೆಲ್ಲ ಕೇಳ್ದವ, ಯಾವ ರೀತಿಂದ ತಾನು ಇವನನ್ನು ಕೊಲ್ಬೇಕು ಅಂತ ಆಲೋಚ್ನಿ ಮಾಡ್ಲಿಕ್ ಪ್ರಾರಂಭ ಮಾಡ್ದ. +ನಾಲ್ಕ್ ದಿವ್ಸಕ್ ವಂದ್ ಸರ್ತಿ ಈ ಹೆಂಗ್ಸ್ ಇದೇ ಅಜ್ಜಿಮನ್ಗೆ ಬೆಂಕಿಗ್ ಬತ್ತದೆ. +ಬೆಂಕಿಗೆ ಬಂದ ಕೂಡಲೆ ಅಜ್ಜಿ ಅವಳ ಹತ್ರ ಯೆಲ್ಲಾ ಕೇಳ್ತಾಳೆ. +“ನೀ ಯಾವೂರವಳು?ಯೇನು?” ಅಂತ. +ಮೊಮ್ಮಗ, “ಯೆಲ್ಲಾ ಕೇಳು” ಅಂತ ಹೇಳ್ ಕೊಟ್ಟಾನೆ. +ಆವಾಗವಳೆ ತಾನು ಇಂತಾ ಊರವಳು. . . ಇಂತಾ ಹಕಿಕತ್. . . ಯೆಲ್ಲಾ ಹೇಳ್ತು. +ಇವ ‘ಅವನ ಕೊಲ್ಲು ಬಗೆ ಹೇಗೆ’ ಅಂತ ಅಂದಾಜ ಮಾಡ್ಲಿಕ್ಕೆ ಪ್ರಾರಂಭ ಮಾಡ್ದ. +ಹಾಗೇ ಮಾರಣಿ(ನೆ) ದಿವಸ ಅಜ್ಜಿ ಹತ್ರ ಹೇಳ್ ಕೊಟ್ಟ. +‘‘ಹೆಂಗ್ಸ್ ನಿಮ್ಮನಿಗ್ ಬರತದ್ಯಲ್ಲಾ ಆಗೆ ‘ನಿನ್ನ ಯಾರಾದ್ರೂ ಪಕ್ನೆ ಕೊಂದ್ ಬಿಟ್ರೆ ನನ್ ಜೀವಮಾನಕ್ ಯೇನ ದಾರಿ’ ಅಂತ ಕೇಳು” ಅಂದ್ ಹೇಳ್ತು. +ಮಾರಣಿ ದಿವಸ ಹೆಂಗ್ಸ್ ಬೆಂಕಿಗ್ ಬಂತು. +ಬಂದ ಕೂಡ್ಲೆ “ಮೊಮ್ಮಗಳೇ, ಅಕಸ್ಮಾತ್ ನಿನ್ನ ತಕ ಹೋದವ ವಂದೊಮ್ಮೆ ಸತ್ ಹೋದ್ರೆ ಗತ್ಯೇನು? +ಕೇಳು” ಅಂತ ಅಜ್ಜಿ ಬುದ್ದಿವಂತ್ಕಿ ಹೇಳ್ ಕೊಟ್ಲು. +ಹೇಳ್ ಕೊಟ್ ಕೂಡ್ಲೆ ಆ ಹೆಂಗ್ಸಂದ್ ಹೇಳೂದು. +ಅಜ್ಜನ ಬಾಳ ಕುಶಿಮಾಡ್ಕೊಂಡು ಸಾಯಂಕಾಲ ಅಜ್ಜನಿಗೆ ಯೆಣ್ಣೆ ಹಚ್ವಾಗ, “ಅಜಾ, ಈಗ ಅಕಸ್ಮಾತ್ತಾಗಿ ನಿನ್ನ ಯಾರೂ ಕೊಲ್ವೊರಿಲ್ಲ. +ವಾಪಕ್ಸ (ಒಂದು ವೇಳೆ) ಯಾರಾದ್ರೂ ನಿನ್ ಕೊಂದ್ ಬಿಟ್ರೆ ನನ್ನ ಗತಿ ಯೇನು? +ನಾ ಹೆಂಗ್ಸಲ್ವೊ ಯೆಷ್ಟಾದ್ರೂ?” ಅಂದ್ ಹೇಳ್ತು. +“ಮೊಮ್ಮಗಳೇ, ಹಾಗ್ ನನ್ ಕೊಲ್ವೊರ್ ಯಾರೂ ಇಲ್ಲ. ನೋಡು. . . ಈ ಕರಡಗೆ ಹರಳು ಕರಡಗೇಲ್ ಇದ್ದದ್ದು. +ಈ ಹರಳ ವಂದ್ ಹರಳ ಹಿಡ್ದ್ ಬೂಮಿಗ್ ಹೊತಾಕ್ರೆ ಹೇಳ್ದ್ಹಾಂಗ್ ಆಗ್ತದೆ. +ಯೆರಡನೆ ಈ ಕೆಂದಾಳಿಮರ ಯೇಳ ಕಡಿಲ್ಲದೆ ವಂದೇ ಬಿಲ್ ಹೊಡ್ದ್ ಆ ಯೇಳ್ ಮರ್ನ ತರಿ ಹಾಕ್ಸ್ ಬೇಕ್. . . ಅಂತಾ ಶೂರ ಯಾರು ಭೂಮಿಯೊಳ್ಗ ಹಡ್ದವ ಯಾವನಿದ್ದ? +ಅದೂ ಅಲ್ಲದೆ, ಅದನ್ನೂ ಮಾಡ್ ಬಿಟ್ರೆ ನೋಡು. +ಈ ತೋರುವ ಮೂಡಾಯನ (ಪೂರ್ವ) ದಿಕ್ನಲ್ಲಿ ವಂದ್ ದೊಡ್ಡ ಕೆರಿ (ಮದಗ) ಉಂಟು. +ಆ ಕೆರಿ ತೂಬ ಕೀಳಬೇಕಿದ್ರೆ ದೇವಲೋಕದ ಯೇಳು ಬೆಳಿಯಾನಿ ಬೇಕು. +ಆ ಬೆಳಿಯಾನಿ ಯೇಳು ಬಂದು ತೂಬ ಕಿತ್ತ ಕೂಡಲೆ ಅದರೊಳಗೆ ವಂದ್ ಮೊಸಳೆ ಉಂಟು. +ಮೊಸಳಿ ತಲಿಯೊಳ್ಗ್ ವಂದ್ ಪೆಟಗಿ ಉಂಟು. . . ಆ ಪೆಟಗಿವಳ್ಗ್ ವಂದ್ ಗಿಣಿ ಉಂಟು. . . ಆ ಗಿಳಿನ್ ಕೊಂದ್ರೆ ನಾ ಸತ್ತ್ ಹಾಂಗೆ. +ಇಷ್ಟಲ್ಲಾ ಮಾಡವೋರ್ ಯಾರಿದ್ರು? +ಯಾವ ಸೂರ ಹುಟ್ಟಿದಾ? +ಅದಲ್ಲದೆ, ಆ ಮೊಸಳಿ ಕೊಲ್ಲಬೇಕಾದ್ರೆ ವಂದ್ ಮಣ ತೂಕದ ವಜ್ಜಿ ಗುಂಡ್ ಬೇಕು. +ಅದಕೂ ಹಗರಾಗ್ ಬಿಟ್ರೆ ಮೊಸಳಿ ತಲಿ ವಡೂದಿಲ್ಲ. +ಕೋವಿಯಾಗ್ ಹೊಡೂದು, ಅದ್ಕ್ ದೊಡ್ ಕೋವೀನೇ ಬೇಕು. . . ” ಅಂತ ಹೇಳಿ ಹಿಗ್ಗಿ, ಮೊಮ್ಮಗಳ ಕೈಲ್ ಹೇಳ್ದ ಅಂತಾಯ್ತು. +ಹೇಳ್ದ್ ಕೂಡ್ಲೆ ಈ ಮೊಮ್ಮಗ್ಳ ಅದನ್ನ ಕೇಳ್ಕಂಡ್‌ ಬಂದ್ ಈ ಅಜ್ಜಿ ಕೂಡೆ ಮಾರಣಿ ದಿವಸ ಹೇಳ್ಳು. +ಹೇಳ್ದ ಕೂಡ್ಲೆ ಈ ಹುಡ್ಗ ಅಲ್ಲೇ ಕುಂತವ. +ಆವಾಗ್ ಹೇಳು ಟೈಮಿಗೆ ಅವಳ ಮೊಲೆ ಹಾಲು ಇವನ ಮೊಕಕ್ ಹಾರ್ ಬಿಟ್ತು. +ಮೊಕಕ್ ಹಾರ್ದ್ ಕೂಡ್ಲೆ, “ಎ ಹೆಂಗ್ಸೇ, ನಿನ್ಗ್ ಮರ್ಯಾದಿಲ್ಲ. +ನಿನ್ ಮೊಲಿಹಾಲ್ ನನ್ ಮೊಕಕ್ ಹಾರ್ತಲ್ಲೇ. +ರವ್ಕಿವಳಗಿಂದೇಯ?” ಅದೊಂದ್ ಗೂಡಾರ್ತ. +ಅಂದ್ ಕೂಡಲೆ ಅವಳಿಗ್ ಮನ್ಸಿಗ್ ಬಾಳ ಪಸಾತಾಪಾಯ್ತು. +ಈ ಹುಡ್ಗ ಹೀಗ್ ಹೇಳ್ಬಿಟ್ನಲ್ಲಾ. . . ಆವಾಗವಳ್ ತನ್ ಚರಿತ್ರೆ ಪೂರಾ ಹೇಳ್ಳು. +ಆವಾಗೆ ಹೇಳ್ದ ಕೂಡಲೆ ಇವ ಅವಳಿಗೆ ತಾನು ಹುಟ್ಟದ್ ಇಂತಾ ಜಾಗ. . . ಯೆಲ್ಲಾ ಹೇಳ್ ಬಿಟ್ಟ. +“ನೀನು ಹೆದ್ರಬೇಡಾ. +ನಾನು ನಿನ್ನ ಮಗ. +ಆದ್ರಿಂದ ನಿನ್ ಮಲಿಹಾಲು ನನ್ಗ್ ಹಾರ್ತು ಅದು. +ಅದ್ರ ಬಗ್ಗೆ ಬೇಜಾರ ಮಾಡ್ಕಳಬೇಡ. +ತಾನಾಡಿದ ಮಾತ್ ತಪ್ಪಾಯ್ತು‌. +ಪರತ್ ತಕೊಂಡೆ ತಾನು” ಅಂತ ಹೇಳಿ ಅವಳಿಗೆ ಬುದ್ಧಿ ಹೇಳಿ, “ನಾನ್ ಯಾವ ದಿವಸ ಹೇಳ್ತೆ ಹೇಳ್ದ ದಿವಸ ಆ ಹಳ್ಳ ಕರಡಗೆ ಹುಗ್ಸ್ ಇಟ್ ಬಿಡಬೇಕ್ ನೀನು. +ತಾನ್ ಯಾರಂದ್ ಆ ಅಜ್ಜನಿಗೆ ಹೇಳಬೇಡ ನೀನು” ಅಂದ್ ಬಿಟ್ಟ. +ಸೀದಾ ಅವ ದೇವಲೋಕಕ್ ಹೋದ‌. +ದೇವಲೋಕಕ್ ಹೋದವ ದೇವೇಂದ್ರನಲ್ಲಿಗ್ ಹೋಗಿ ಉಳ್ದ. +ಆವಾಗ ದೇವೇಂದ್ರನ ಹತ್ರ ಕ್ಷಮೆ ಬೇಡ್ದ. +“ತಾನು ಇಂತವರ ಹುಡ್ಗ” ಅಂದಿ ಯೆಲ್ಲ ಸತ್ಯಸ್ತಿತಿ ಹೇಳಿ, ‘ವಂದ್ ಕ್ಷಣವಾದ್ರೂ ನಿನ್ದು ಯೋಳ ಬೆಳಿಯಾನಿ ತನ್ಗ್ ಕಳ್ಸಬೇಕು. +ಕಳ್ಸದೇ ಇದ್ರೆ ದೇವಲೋಕನ ಸುಟ್ ಬಿಡ್ತೆ” ಅಂದ. +ಅದ್ಕೆ ವಪ್ಕಂಡ. +ಬಂದವ ವಂದ್ ಮಣ ತೂಕದ ಗುಂಡ ತಂದ ಅಂತಾಯ್ತು. +ಬಂದವ ವಂದ್ ಮಣ ತೂಕದ ಗುಂಡ ಮಾಡ್ಸ್ಕೊಂಡ‌. +ಅದ್ಕ್ ಸರಿಯಾದ ಬಂದೂಕ ಯಾವದ್ ಬೇಕು ಅದ್ನ ಮಾಡ್ಸಕೊಂಡು, ತನ್ನ ತಾಯಿ ಹತ್ರ ಹೇಳ್ದ- “ನಾಳೆ ದಿವಸ ಆ ಹರಳಿನ ಕರಡಗಿ ಬದಿಗಿಟ್ ಬಿಡು. +ಅದ್ ವಂದಿದ್ರೆ ಅವನ ಜಾದು ನಡೀತದೆ. +ಇಲ್ಲದಿದ್ರೆ ಜಾದು ನಡಿಯೂದಿಲ್ಲ. +” ಅವಾಗೆ ಅವಳು ಕರಡಗೆ ಹುಗ್ಸ್ ಇಟ್ಬಿಟ್ಲು. +ಇವ ಬೆಳಗ್ಗೆ ಯೆದ್ದವನೇ ಸೂರ್ಯ ಉದಯವಾಗಬೇಕಿದ್ರೆ ವಂದೇ ಬಾಣ ಹೊಡ್ದ್ ಯೇಳ ಕೆಂದಾಳೆ ಮರ ಕತ್ತರ್ಸ್ ಬಿಟ್ಟ. +ಅವಾಗ ಸನ್ಯಾಸಿಗೆ ಸಲ್ಪ ಮೈಕೈಯಲ್ ನೋವಾದಾಗಾಯ್ತು, “ಇದೇನು ಯಾಕೋ ನನ್ನ ಮೈಕೈ ನೋಯ್ತಪ್ಪ” ಅಂದ. +ಅವಾಗ ದೇವೇಂದ್ರನ ದ್ಯಾನ ಮಾಡಿ ಯೇಳ ಬೆಳಿಯಾನೆ ತರ್ಸ್ಕೊಂಡ. +ತರ್ಸ್ಕೊಂಡ ಕೂಡ್ಲೆ ಆ ಮದಗದ ಬಾಗ್ಲ್ ಆನೆ ಹತ್ರ ತೆಗ್ಸಿಬಿಟ್ಟ. +ಬಾಗ್ಲ ತಗ್ದ ಕೂಡಲೆ ಆ ಮೊಸಳೆ ಯೆದ್ ಬಂದ್ ಬಿಡ್ತು. +ಮೊಸಳಿಗೆ ಕೋವಿಂದ ವಂದ್ ಮಣನ ಗುಂಡ್ ತಾಗ್ಸದ. +ಮಸಳಿ ತಲಿ ವಡ್ದ್ ಹೋಯ್ತು. +ಆವಾಗ ತಲಿಯೊಳಗಿದ್ದ ಪೆಟ್ಗಿ ವಡ್ದ. +ಈ ಗಿಳಿ ಕಯ್ಯಲ್ ಶಿಗಿಸಿ ಹಿಡ್ಕೊಂಡ. +ಈಗ ಹಿಡ್ಕೊಂಡ್ ಕೂಡ್ಲೆ ಅವನಿಗ್ ಗೊತ್ತಾಗ್ ಹೋಯ್ತು. +“ತನ್ನನ್ ಯಾರೋ ಕೊಲ್ತ್ರು. +ಈಗ ಆ ಹರಳಿನ ಪೆಟ್ಗಿ ತಕೊಂಡ ಬಾ” ಅಂದ. +ಮೊಮ್ಮಗಳ ಹತ್ರ ಕೂಗ್ತಾ ಇದ್ದ. +ಕೂಡ್ಲೆ ಇವ ಗಿಳಿ ಹಿಡ್ಕೊಂಡ್ ಹತ್ರ ಬಂದ. +ಆವಾಗ ವಂದ್ ರೆಕ್ಕೆ ಮುರ್ದ್ ಬಿಟ್ಟ. +ಇವನ್ದ್ ವಂದ್ ಕೈ ಮುರ್ದ್ ಹೋಯ್ತು. +ಮತ್ತೊಂದ್ ರೆಕ್ಕೆ ಮುರ್ದ್ ಯೆರಡ ಕೈ ಹೋಯ್ತು. +ಯೆರಡ ಕಾಲ್ ಮುರ್ದ. . . ಯೆರ್ಡ್ ಕಾಲ್ ಹೋಯ್ತು. +ಅಲ್ಲಿಗ್ ಕುತ್ಗಿ ಮುರ್ದ. +ಅವ ಕಲಾಸ್. +ಅವಾಗ ಹರಳಪೆಟ್ಗಿ ತಾಯ್ ಹತ್ರ ಕೊಡು ಅಂದ. +ತಕ್ಕೊಂಡ್ ತಾನು ಅವನ ಮನೆಗಿದ್ದ ಯೆಂತ ಮುಟ್ಲಿಲ್ಲ. +ಅಲ್ಲೇ ವಂದಿವ್ಸ ಮುದ್ಕಿ ಮನೆಗ್ ಇದ್ಕೊಂಡು ಸನ್ಯಾಸಿ ಮನೆಗಿದ್ದದ್ದ ಅಜ್ಜಿಗೆ, “ನೀನೆ ತಕೊ ನಮಗೇನೂ ಬೇಡ. . . ” ಹೇಳಿ ಕೊಟ್, ತಾನು ಹೊಂಟ್ ನೆಡ್ದ. +ತನ್ ತಾಯ್ ಇದ್ದಲ್ಲಿ ಅಲ್ಲಿಗಾಗಿ ಹೋದ. +ಈಗ ವಂದ್ ಹರಳ ಹೊತಾಕ್ದ. +“ಯೇಳೂ ಜನ ಜೀವಾಗ್ಲಿ” ಅಂತ ಹೇಳಿದ. +ಕೂಡ್ಲೆ ಯೇಳೂ ಮಂದಿ ಜೀವಾಗಿ, “ಓಹೋ. . . ಇವನೇ ತನ್ನ ತಮ್ಮನ ಹೆಂಡ್ತಿ ಕದ್ಕೊಂಡ್ ಹೋದವ. +(ಈ ಹೆಂಡ್ತಿ ಕುದ್ರಿ ಮೇಲ್ ಇದ್ಲಲ್ಲ?)” +ನೋಡ್ದ್ ಕೂಡ್ಲೆ ಹೊಡಿಬೇಕಂದ ಹೇಳಿಕೆ ಪ್ರಾರಂಭ ಮಾಡ್ದ್ರು ಅವ್ರು. +ಪ್ರಾರಂಭ ಮಾಡ್ದ್ ಕೂಡಲೆ ಅವಳು, “ತಡಿರಿ ಹೊಡಿಬೇಡ್ರಿ, ತನ್ನ ಮಗ ಇವ. +ಈ ಮಗನೇ ನಿಮ್ಮನ್ನೆಲ್ಲ ಜೀವವಾಗ್ಸ್‌ದವ. +ಇದು ನಮ್ಮ ಹೆರಿಯವರ ಮಗ. . . ” ಹೇಳ್ಯೆಲ್ಲಾ ಹೇಳಿ ತಮ್ಮ ಮನಿಗ್ ಬಂದ್ ಸುಕವಾಗಿದ್ರು. +ಸೂರ್ಯಸೇನ ಹೇಳವಂತಾ ರಾಜ; ಚಂದ್ರವರ್ಮ ಹೇಳವಂತಾ ಪ್ರದಾನಿ. +ಆನೆ, ಕುದ್ರೆ, ಮಂದಿ ಮಾರ್ಬಲ, ಅಷ್ಟೈಶ್ವರ್ಯ ಸಂಪನ್ನನಾಗಿ ರಾಜ್ಯಕಾರಭಾರ ಮಾಡ್ತಾ ಇದ್ದ. +ರಾಜಂಗ್ ವಂದೇ ಹುಡ್ಗ. +ಆ ಹುಡ್ಗಂಗ್ ವಿದ್ಯಾಭ್ಯಾಸ ಯೆಲ್ಲಾ ಮುಗ್ದ ನಂತರ ಧನುರ್ವಿದ್ಯೆಗಾಗಿ ಗುರುಕುಲಕ್ ಕಳ್ಸಿದ್ದ. +ಅಲ್ ಅನೇಕ್ ಹುಡ್ಗರು ಕೂಡಿದ್ರು. +ಅವರಲ್ಲಿ ವಬ್ಬ ಹುಡುಗನು ರಾಜನ ಹುಡ್ಗನ ಹತ್ರ, “ನೀ ಯೆಲ್ಲಾ ವಿದ್ಯಾವನ್ನ ಕಲ್ತದ್‌ ಹೌದು. +ಆದ್ರೆ, ಅಜಾಪ್ತಮಾಸೀ ವಿದ್ಯಾವನ್ನು ಕಲ್ತದ್‌ ಸುಳ್ಳು. . . ” +‘‘ಅದನ್ನು ಯಾರ್ ಕಲಿಸ್ತಾರೆ?” ಎಂದ್ ಹುಡ್ಗ ಕೇಳಿದ. +“ಅಲ್ ಯಾರೋ ಕಲ್ಸುತ್ತಾರಂತೆ. . . ನಮ್ಗ್ ಯೇನೂ ಗೊತ್ತಿಲ್ಲ. +” ಆನಂತ್ರ ದನುರ್ವಿದ್ಯವನ್ನು ಮುಗಿಸಿ ಮನೆಗೆ ಬಂದವ ತನ್ನ ತಾಯಿಯ ಹತ್ತರ, “ಅಮ್ಮಾ. . . ನಾನು ಅಜಾಪ್ತಮಾಸೀ ವಿದ್ಯೆ ಕಲಿಯಲು ಬೇರೆ ಕಡೆಗೆ ಹೋಗುತ್ತೇನೆ” ಯೆಂದು ಹಟ ಹಿಡಿದ ಕುಳಿತ. +ತಾಯಿಯ ಹತ್ತರ ರೊಕ್ಕವನ್ನು ತಗದಕಂಡ, ತಂದೆಗೆ ಗೊತ್ತಿಲ್ಲದಂತೆ ನಡೆದ. +ದಾರಿಯುದ್ದಕ್ಕ “ಅಜಾಪ್ತಮಾಸೀ ವಿದ್ಯವನ್ನು ಯಾರು ಕಲಿಸುತ್ತಾರೆ? +” ಅಂತ ಕಂಡಕಂಡವರ ಹತ್ರ ಕೇಳುತ್ತಾ ಹೋದ. +“ನಮಗೇನೂ ಗೊತ್ತಿಲ್ಲ. +ಮುಂದಕ್ಕೆ ಹೋಗಪ್ಪಾ” ಅಂತ ಪ್ರತಿಯೊಬ್ಬರೂ ಹೇಳುತ್ತಾ ಹೋದರು. +ಹೀಗೇ ತಿರುಗಾಡಿ, ತಿರುಗಾಡಿ ವಂದ ಬೆಟ್ಟದ ಹತ್ತರ ವಂದು ಉಪ್ಪರದ ಮನೆ. . . ಅದರ ಸುತ್ತಲೂ ಬಂದೋಬಸ್ತಾದ ಪಾಗಾರ, ಯೆದುರುಗಡೆಗೆ ವಂದ್ ಸಣ್ಣ ಚಾವಡಿ ಇತ್ತು. +ಅಲ್ಲಿ ವಂದ ಯಪ್ಪತ್ ವರ್ಷದ ಮುದುಕ ವ್ಯಾಪಾರ ಮಾಡುತ್ತಾ ಇರುತ್ತಿದ್ದ. +ಆಗ ಈ ಹುಡುಗ ಚಾ ಕುಡಿದು, ಚಾ ಬಿಲ್ಲ ಕೊಟ್ಟು- “ಅಜ್ಜಾ. . . ಈ ಊರಲ್ಲಿ ಅಜಾಪ್ತಮಾಸೀ ವಿದ್ಯವನು ಯಾರು ಕಲಿಸುತ್ತಾರೆ” ಎಂದು ಕೇಳಿದ. +ಆಗಾ ಮುದುಕ, “ನನಗೇನೂ ಗೊತ್ತಿಲ್ಲಪ್ಪಾ, ಮುಂದೆ ಹೋಗಪ್ಪಾ” ಯೆಂದು ನುಡಿದ. +ಆತನು ಮುಂದಕ್ಕೆ ಹೋಗಲು ಕುದುರೆಯನ್ನು ಹತ್ತಿದ ಕ್ಷಣವೇ ಒಂದು ಕಲ್ಲನ್ನು ಮಂತ್ರಿಸಿ ಒಗೆದು ಆತನು ಕಲ್ಲ ಕುದುರೆಯಾಗಿ ನಿಂತ. +ಆ ಕುದುರೆಯನ್ನು ತಂದಿ ತನ್ನ ಮನೆಯ ಕಂಪೌಂಡಿನೊಳಗೆ ಇಟ್ಟಿದ್ದ. +ಅವನಿಗೆ ವಂದು ಮಗಳು ಇದ್ದಿದ್ದಳು. +ಆ ಮಗುವಿಗೆ ತನ್ನ ಸಕಲವಿದ್ಯೆಗಳನ್ನು ಕಲಿಸಿದ್ದಾನೆ ಮುದುಕ. +ಆ ಹುಡಗಿಯು ರಾತ್ರೆ ಆ ಕುದುರೆಯನ್ನು ಜೀವಮಾಡಿ ನೋಡಿದಳು. +“ಏನು ಸುಂದರವಾದ ಪುರುಷ ಈತ! +ತನ್ನ ತಂದೆಯ ಕೈಗೆ ಸಿಕ್ಕಿ ಹಾಳಾಗುತ್ತಾನಲ್ಲಾ” ಎಂದು ಪಶ್ಚಾತ್ತಾಪ ಪಟ್ಟಿ, ಆತನ ಹತ್ತಿರ ಕೇಳುತ್ತಾಳೆ- “ನೀನು ಯಾವ ದೇಶದ ರಾಜಕುಮಾರನಪ್ಪಾ? +ನನ್ನ ತಂದೆಯು ಅಜಾಪ್ತಮಾಸೀ ವಿದ್ಯವನ್ನು ಕಲಿತಂತಾ ಮುದುಕ. +ನಿನ್ನ ‌ಹಾಗೆಯೇ ಇನ್ನೂರು-ಮುನ್ನೂರು ಮಂದಿ ರಾಜಕುಮಾರರು ಇಲ್ಲಿ ಬಂದು ಹಾಳಾಗಿದ್ದಾರೆ. +ನೀನು ದಾಟಿ ಹೋಗಲು ದಾರಿನೇ ಇಲ್ಲ.” +“ನೀನು ತನ್ನನ್ನು ಮದುವೆಯಾಗುತ್ತೇನೆ ಎಂದು ವಚನ ಕೊಟ್ಟರೆ, ನಾನು ನಿನಗೆ ಸಕಲ ವಿದ್ಯೆಗಳನ್ನು ಕಲಿಸುತ್ತೇನೆ. ” +“ನೋಡಮ್ಮ. . . ನೀನು ನನಗೆ ವಿದ್ಯೆ ಕಲಿಸುವದು ಖರೆ. +ವಿದ್ಯೆ ಕಲಿಸಿದಂಥಾ ಗುರುವನ್ನು ಲಗ್ನವಾದ ಹಾಗಾಗುತ್ತದೆ. +ಹಾಗಾಗಿ, ಬಹಳ ಕಷ್ಟ ನನಗೆ. +ಅದಕ್ಕಾಗಿ ನಮ್ಮಿಬ್ಬರ ಲಗ್ನ ಮೊದಲೇ ಮಾಡಿಕೊಂಡು ಅನಂತರ ನಾನು ವಿದ್ಯೆಯನ್ನು ಕಲಿಯಲು ಪ್ರಾರಂಭ ಮಾಡುತ್ತೇನೆ.’’ +ಅದೇ ಪ್ರಕಾರ ಗಾಂಧರ್ವ ಲಗ್ನವಾಗಿ ಇದ್ದರು. +ವಿದ್ಯೆಯನ್ನು ಕಲಿಯಲು ಪ್ರಾರಂಭ ಮಾಡಿದ. +ಒಂದು ವರ್ಷದ ವಳಗೆ ಸಕಲವಿದ್ಯವನ್ನೂ ಕಲಿತು, ಆಕೆಯ ಮುಂದೆ ಸಕಲ ವಿದ್ಯವನ್ನೂ ಪ್ರದರ್ಶನ ಮಾಡಿದ. +ಹೆಂಡತಿಯು ಹೇಳಿದಳು ಗಂಡನ ಹತ್ತರ: “ನಿಮಗೆ ಎಲ್ಲ ವಿದ್ಯವೂ ಫಲಿಸಿತು. +ನಮ್ಮ ಮನೆಯಿಂದ ಪಾರಾಗುವದು ಬಹಳ ಕಷ್ಟ. +ಇದು ಮಂತ್ರಶಕ್ತಿಯಿಂದ ನಿರ್ಮಿತವಾದ ಮನೆ. +ಯಾರಾದರೂ ಪಾರಾಗುವದಾದರೆ ನಮ್ಮ ಮಹಾದ್ವಾರದಲ್ಲಿ ನಮ್ಮ ತಂದೆಯೆದುರಿಗೆ ಪಾರಾಗಬೇಕಾಗುತ್ತದೆ. +ಆತನ ಗುರು ಆತನಿಗೆ ಆಶೀರ್ವಾದ ಮಾಡಿದ್ದಾನೆ. +ಅವನಿಗೆ ಮರಣ ಬಹಳ ಕಷ್ಟ. +ಆತನ ದೇಹವನ್ನು ಮೂರು ತುಂಡು ಮಾಡಿ ಸುಡಬೇಕು. +ತಿತಿ ಮಾಡಿ ಸುಟ್ಟರೆ- ಮೂರು ಹೊಗೆ ಕೂಡಿದರೂ ಆತನಿಗೆ ಪುನಃ ಜೀವ ಬರುತ್ತದೆ. +ಅವನ ಕೊಂದ ವಿನಹಾ ನಿಮ್ಮ ಜೀವವನ್ನು ಆತ ಇಡುವದಿಲ್ಲ. +ಅದಕ್ಕಾಗಿ ಯಾವ ಉಪಾಯ ಮಾಡುತ್ತೀರೋ ನೋಡಿಕೊಳ್ಳಿ” ಎಂದು ನುಡಿದು ಹೊರಟುಹೋದಳು. +ಆ ತಂದೆಯು ಪ್ರತಿನಿತ್ಯವೂ ಎಲ್ಲಾ ಕುದುರೆಗಳನ್ನು ಪರೀಕ್ಷೆ ಮಾಡುತ್ತಲೇ ಇರುತ್ತಿದ್ದ. +“ಎಲ್ಲಾ ಕುದುರೆಗಳು ಜೀರಾಗುತ್ತಾ ಹೋಗುತ್ತವೆ. +ಈ ಕುದುರೆ ಮಾತ್ರ ಬಲವಾಗುತ್ತಾ ಹೋಗುತ್ತದೆ. +ಯಾಕೆ?” ಎಂದು ಕೇಳಿದ. +“ನನಗೇನೂ ಗೊತ್ತಿಲ್ಲಪ್ಪಾ. . . ಯಾತಕ್ಕಾಗಿ ಬಲವಾಗುತ್ತದೆ?” ಅಂತ ಹೇಳಿದಳು. +ತಂದೆಗೆ ಮಗಳ ಮೇಲೆ ಯಾವಾಗಲೂ ಸಂಶಯವಿತ್ತು. +ಆ ದಿನವನ್ನು ಕಾಯುತ್ತಾ ಕುಳಿತಿದ್ದ. +ಒಂದು ದಿನ ಬೆಳಗ್ಗೆ ಈತನು ಅಂಗಡಿಯಲ್ಲಿ ಕುಳಿತಂತಾ ಸಂದರ್ಬದಲ್ಲಿ ಈ ರಾಜಕುಮಾರನು ಒಂದು ನಾಯಿಯ ವೇಷದಿಂದ ಮಹಾದ್ವಾರದಲ್ಲಿ ಹೆರಗೆ ಬಿದ್ದು ಹೊರಟುಹೋದ-- ಆತನು ಅದನ್ನು ಗ್ರಹಿಸಲಿಲ್ಲ. +ಹೊರಗೆ ಬಿದ್ದಂತಾ ರಾಜಕುಮಾರನು ತನ್ನ ವೇಷಗಳನ್ನು ಬದಲು ಮಾಡುತ್ತಾ ನಾಯಿ, ಗಿಳಿ, ಹದ್ದು. . . ಹೀಗೆ ತನ್ನ ದೇಶದ ಕಡೆಗೆ ಹೊರಟುಹೋದ. +ಆ ಮುದುಕನು ಮಧ್ಯಾನ್ನ ಪೂಜೆ ಮಾಡಿ, ಕುದುರೆಗಳನ್ನು ನೋಡಿದಾಗ ವಂದು ಕುದುರೆ ಕಾಣಿಸಲಿಲ್ಲ. +ಮಗಳ ಹತ್ತಿರ ಕೇಳಿದ-- “ನೀನು ವಿದ್ಯವನ್ನು ಯಾರಿಗೆ ಕಲಿಸಿದೆ?” ಎಂದು. +“ನನಗೇನೂ ಗೊತ್ತಿಲ್ಲಪ್ಪಾ. . . ನಾನು ಯಾರಿಗೂ ಕಲಿಸಲಿಲ್ಲ” ಎಂದು ಮಗಳು ಉತ್ತರ ಕೊಟ್ಟಳು. +ಕೂಡಲೇ ತನ್ನ ದೇವಸ್ತಾನಕ್ಕೆ ಹೋಗಿ ಮಂತ್ರಕನ್ನಡಿಯಲ್ಲಿ ಪರೀಕ್ಷೆ ಮಾಡಲಾಗಿ-- ಆ ಹುಡುಗನು ಒಂದು ಎಮ್ಮೆಯ ವೇಷದಿಂದ ತನ್ನ ರಾಜ್ಯದ ತನ್ ಗಡಿ ರಾಜ್ಯದಲ್ಲಿ ಹರಾಜು ಮಾಡಿಸುತ್ತಲೇ ಇದ್ದ. +ಕೂಡಲೇ ಈ ಮುದುಕನು ಗಿಳಿ ರೂಪದಿಂದ ಎಮ್ಮೆ ಹತ್ತಿರ ಹೋಗಿ ಮನುಷ್ಯ ರೂಪ ಮಾಡಿ, ಸವಾಲಿನಲ್ಲಿ ಎಮ್ಮೆಯನ್ನು ತಾನು ಕೊಂಡ. +ಅದರ ಹಗ್ಗವನ್ನು ಹಿಡಿದುಕೊಂಡು ಬರುವಾಗ ಎಮ್ಮೆಯ ರೂಪದಲ್ಲಿದ್ದಂತಾ ರಾಜಕುಮಾರನಿಗೆ ಈ ಮುದುಕನೇ ಬಂದಿದ್ದಾನೆಂದು ತಿಳಿದು, ದುಕ್ಕ ಮಾಡುತ್ತ ಆತನ ಸಂಗಡ ಹೊರಟುಹೋದ. +ಹೋಗುವಾಗ ದಾರಿಯಲ್ಲಿ ಒಂದು ಹಳ್ಳವಿತ್ತು. +ಆ ಹಳ್ಳದೊಳಗೆ ಕೂಡಲೆ ಒಂದು ಮೀನಿನ ರೂಪ ತಾಳಿದ. +ಆಮೇಲೆ ಎಮ್ಮೆ ಕಾಣಿಸಲಿಲ್ಲ ಅಂತ ಆತನು ಹಳ್ಳದೊಳಗೆ ಮೊಸಳೆಯ ವೇಷದಿಂದ ಹೊರಟ. +ಆನಂತರ ಬಹಳ ದೂರ ಹೋಗಿ ನದಿಯೊಳಗೆ ಈ ಹುಡುಗನು ಗಿಳಿ ರೂಪವನ್ನು ಮಾಡಿಕೊಂಡು ಬಂದ. +ಆತನು ಅವನ ಬೆನ್ನಿಗೆ ಆ ಗಿಳಿಯ ರೂಪದಿಂದಲೇ ಬೆನ್ನನ್ನು ಹಿಡಿದುಕೊಂಡು ಬಂದ. +ಈತನ, ಹುಡುಗನ ತಂದೆಯು ಮಗನು ಮನೆಬಿಟ್ಟು ಹೋಗಿದ್ದಾನೆಂದು ವ್ಯತೆ ಮಾಡುತ್ತಾ ಸಿಂಹಾಸನದಲ್ಲಿ ಕುಳಿತಂಥಾ ಸಂದರ್ಭದಲ್ಲಿ- ಒಂದು ಕಮಲದ ಹೂವಾಗಿ ತಂದೆಯ ಕೈಯಲ್ಲಿ ಬಂದು ಕುಳಿತ. +ಆಗ ರಾಜನು- ‘ದೇವಲೋಕದಿಂದ ಈ ಹೂವು ಬಂದಿರಬಹುದು’ ಎಂಬ ಬಾವನೆಯಿಂದ ಹೂವನ್ನು ಹಿಡಿದುಕೊಂಡು ಬಹಳ ಸಂತೋಷವಾಗಿ ಕುಳಿತುಕೊಂಡ. +ಆ ಮುದುಕನು ಕೂಡಲೆ ಒಂದು ಬೇಡರ ಗಂಡ-ಹೆಂಡತಿ ವೇಷವನ್ನು, ಎರಡು ಜನ ಮಕ್ಕಳ ವೇಷವನ್ನು ಮಾಡಿಕೊಂಡು ರಾಜನ ಆಸ್ತಾನಕ್ಕೆ ಬಂದು ನಮಸ್ಕಾರ ಮಾಡಿ, “ನನ್ನ ಮಕ್ಕಳನ್ನು ಇಲ್ಲೇ ಬಿಟ್ಟು ಹೋಗುತ್ತೇನೆ ರಾಜರೇ. . . ಸಂಜೆಗೆ ಬರುವ ತನಕಾ ನನ್ನ ಹೆಂಡತಿ, ಮಕ್ಕಳು ಇಲ್ಲೇ ಇರಲಿ” ಎಂದು ಬೇಡಿಕೊಂಡ. +ಅದಕ್ಕೆ ರಾಜ ಯಾವದೋ ಆಲೋಚನೆಯಿಂದ, “ಆಗುವದು” ಎಂದು ಉತ್ತರ ಕೊಟ್ಟು, ಹೂವನ್ನು ನೋಡುತ್ತಾ ಕುಳಿತುಕೊಂಡ. +ಮಂತ್ರಶಕ್ತಿಯಿಂದ ನಿರ್ಮಿತವಾದ ಆ ಬೇಡರ ಮಕ್ಕಳು, ಆತನ ಹೆಂಡತಿ ಮಾಯವಾಗಿ ಹೋದರು. +ಇತ್ತಲಾಗಿ ಆ ಹುಡುಗಿಯು ತನ್ನ ತಂದೆ ಹೊರಟುಹೋದ ನಂತರ ದೇವರ ಮುಂದೆ, “ತನ್ನ ಗಂಡನನ್ನ ಬದುಕಿಸಿಕೊಡಿಪ್ಪಾ. . . ” ಎಂದು ಪೂಜೆ ಮಾಡುತ್ತ ಕುಳಿತುಕೊಂಡಳು. +ಈ ಬೇಡನು ಸಂಜೆಗೆ ಬಂದು ರಾಜರ ಹತ್ತಿರ, “ನನ್ನ ಮಕ್ಕಳು, ಹೆಂಡತಿ ಎಲ್ಲಿಗೆ ಹೋಗಿದ್ದಾರೆ?” ಎಂದು ಕೇಳಿದ. +ರಾಜನು, “ಅದು ನನಗೇನು ಗೊತ್ತಿಲ್ಲಪ್ಪಾ, ಇಲ್ಯೆಲ್ಲಾರೂ ಇರಬಹುದು. +ನೋಡಿಕೋ” ಎಂದು ಉತ್ತರ ಕೊಟ್ಟ. +ಅತ್ತಿತ್ತ ಹುಡುಕಿ, “ನೀವು ನನಗೆ ಮೋಸ ಮಾಡಿದಿರಿ ರಾಜರೇ. . . ” ಎಂದು ಅಳುತ್ತಲೇ ಕುಳಿತುಕೊಂಡ. +ಕೂಡಲೇ ರಾಜನು, “ನೀನು ಏನು ಬೇಕಾದರೂ ಬೇಡಿಕೊಳ್ಳಪ್ಪಾ. . . ನಿನ್ನ ಹೆಂಡತಿ, ಮಕ್ಕಳನ್ನು ಮಾತ್ರ ಕೊಡಲು ಶಕ್ಯಿಲ್ಲ. +ಇಲ್ಲಿ ಉಳಿದ ಯಾವದೇ ವಸ್ತುವನ್ನು ಬೇಡಿಕೊಂಡರೂ ಕೊಡುತ್ತೇನೆ” ಎಂದು ಹೇಳಿದ ತಕ್ಷಣವೇ, “ನಿಮ್ಮ ಕಯ್ಯಲ್ಲಿ ಇದ್ದ ಹೂವನ್ನು ಕೊಡಬೇಕು” ಎಂದು ಕೇಳಿಕೊಂಡ. +ಅದಕ್ಕೆ ರಾಜನು ನೊಂದ ಹೃದಯದಿಂದ ಹೂವನ್ನು ಕೊಡಲು ಎದ್ದು ನಿಂತಾಗ-- ಆ ಹೂವು ತಕ್ಷಣ ರಾಜಕುಮಾರನ ವೇಷವನ್ನು ಧರಿಸಿ, ತನ್ನ ತಂದೆಯ ಕಯ್ಯಲ್ಲಿದ್ದ ಕತ್ತಿಯಿಂದ ಆ ಬೇಡನನ್ನು ಮೂರು ತುಂಡು ಮಾಡಿ, ಮೂರು ಚಿತೆ ಮಾಡಿ ಸುಟ್ಟಿ, ಆ ಹೊಗೆಯು ಕೂಡದಂತೆ ನೋಡಿಕೊಂಡ. +ಆ ಕ್ಷಣವೇ ತಂದೆಯು, “ಇದೆಲ್ಲಾ ಏನಪ್ಪಾ ಮಗನೇ?” ಎಂದು ಕೇಳಿದಾಗ, ‘‘ಇದು ಅಜಾಪ್ತಮಾಸಿಯ ವಿದ್ಯ. +ಇದು ಅರವತ್ನಾಲ್ಕು ವಿದ್ಯೆಗಳಲಿ ಇರುತ್ತದೆ. +ಈ ಹೂವಿನ ರೂಪ ಎನ್ನುವದು ನನ್ನ ನೈಪುಣ್ಯದಿಂದ ಮಾಡಿಕೊಂಡಿದ್ದು. +ಪುನಃ ತನ್ನ ರೂಪವನ್ನು ಚೇಂಜು ಮಾಡಲು ಇದಕ್ಕೆ ಮೂರು ಗಂಟೆ ಕಾಲಾವಕಾಶ ಬೇಕಾಗುತ್ತದೆ. +ಈ ವಿದ್ಯ ಈ ಮುದುಕನಿಗೆ ಸಕಲವೂ ಗೊತ್ತಿರುತ್ತದೆ‌. +ಇವನ ಜೀವವಿರುವತನಕ ಈ ವಿದ್ಯೆಯನ್ನು ಬೇರೆಯವರಿಗೆ ಹೇಳುವಂಥಾ ಅವಕಾಶವು ಇಲ್ಲ. +ಈ ವಿದ್ಯೆಯ ಮಹತ್ವವೆಂದರ, ಎರಡು ಮಂದಿಗೆ ಮಾತ್ರ ಗೊತ್ತಾಗಿ ಇರಬೇಕಾಗುತ್ತದೆ. +ಇವನ ಮಗಳಿಗೆ ಈ ವಿದ್ಯೆಯು ಬರುತ್ತದೆ. +ಅವಳನ್ನು ಮದುವೆಯಾಗಿ ನಾನು ಸಕಲ ವಿದ್ಯವನ್ನೂ ಕಲಿತುಕೊಂಡು ಇಲ್ಲಿಗೆ ಬಂದು ಇವನನ್ನು ಕೊಂದಿರುತ್ತೇನೆ. +ಈಗ ಅವಳನ್ನು ನನ್ನ ಮಂತ್ರಶಕ್ತಿಯಿಂದ ಇಲ್ಲಿಗೆ ಕರೆಸಿಕೊಂಡು ನಾನು ರಾಜರ ಪದ್ಧತಿಯಿಂತೆ ಲಗ್ನವಾಗಿಕೊಂಡು, ಸುಕವಾಗಿ ಕಾಲಮಾಡುತ್ತೇನೆ” ಎಂದು ತಂದೆಯ ಹತ್ತಿರ ಹೇಳಿಕೊಂಡು, ಹುಡುಗಿಯನ್ನು ತರಿಸಿ ಲಗ್ನವಾಗಿ ಕಾಲಕಳೆಯುತ್ತಾ ಇದ್ದನು. +ವಂದರಸು-ಆ ಅರಸಿಗೆ ವಬ್ಬ ಮಗ. +ಅವ ಹುಟ್ಟಿ ಹನ್ನೆರಡ ವರ್ಸಾಗೂರೊಳಗೆ ಆಗೆ ಅವ ಯೇನ ಮಾಡ್ದ? +ವಂದ ತಾಯಿಗೆ ವಬ್ಬ ಮಗ. +ಬರೂಕ್ ಹೋತ. +ವಂದ್ ತಾಯಿಗೆ ಏಳ್ ಜನ ಹೆಣ್ಣು. +ಯೇಳ್ ಜನ ಹೆಣ್ಮಕ್ಕಳಿದ್ದ ಮನಿ ಬಾಗ್ಲಾಗೆ ಅವ ಇಸ್ಕೂಲಿಗ್ ಹೋಗಬೇಕು. +ಆಗ ಯೇಳ್ ಜನ ಬೆಳಗಾಗ್ ಯೆದ್ ಬಂದ್ರು. +ಯೆಲ್ಲಾ ಚೆಡಿ ಮೇನ್ ಕೂತ್ರು. +ಅವರವರೊಳ್ಗೆ ವಂದ್ ಪಂತಾ ಮಾಡ್ದ್ರು. +“ಅಕ್ಕಾ, ವಂದ್ ಗೋದಿಕಾಳಿದ್ರೆ, ವಂದ್ ಇನ್ನೂರ್ ಜನಿಗೆ ಬೇಕಾದ ಕಜ್ಜಯ ಮಾಡಿ ಬಡಿಸವೆ” ಅಂದ್ಲು. +ಆಗೆ ಅದ್ಕೆ ಮತ್ತೊಬ್ಳ ಹೇಳ್‌ದ್ಲು; “ಅಕ್ಕ, ವಂದ್ ಕಾಯಿದ್ರೆ ನೂರ್ ಜನಿಗೆ ಕಾಯ್ ಯೆಣ್ಣಿ ವಳಗೆ ವಡೆ ಸುಡತೆ” ಅಂದ್ಲು. +‘‘ವಂದ್ ಅಕ್ಕಿ ಇದ್ರೆ ನಾನೂರ ಜನಿಗೆ ಅಡಿಗಿ ಮಾಡಿ ನಾನಿಕ್ತಿ” ಅಂದ್ಲು ಮತ್ತೊಬ್ಬಳು. +ಮತ್ತೊಬ್ಬಳ್ ಹೇಳ್ತು- “ವಂದ್ ಹುಂಡ್ ತುಪ್ಪ ಇದ್ರೆ ವಂದ್‌ನ್ನೂರ್ ಜನಿಗೆ ತುಪ್ಪದೊಳಗೆ ಅಡ್ಗಿ ಮಾಡಿ. +ಅಷ್ಟೂ ಜನಿಗೆ ಉಂಬ್ಕೆ ಹಾಕ್ತೆ” ಅಂತು. +ಆಗ ವಬ್ಳು ಹೇಳ್ತ, “ವಂದ ಹುಂಡ್ ಹಾಲಿದ್ರೆ ವಂದ್ ಸಾವ್ರ ಜನಿಗೆ ಹಾಲಾಗೆ ಅಡ್ಗಿ ಮಾಡಿ ಹಾಕವೆ” ಅಂದ್ಲು. +ಇನ್ನೊಬ್ಳು, “ವಂದ್ ಕೊಡಪಾನ ನೀರಿನೊಳಗೆ ಅಷ್ಟೂ ಜನಿಗೆ ಬೇಕಾದ ಕಜ್ಜಯ ಮಾಡಿ ಬಡಿಸವೆ” ಅಂದ್ಲು. +ಇಷ್ಟೆಲ್ಲಾ ಜನ ಪಂತ ಮಾಡ್ರು ಹೆರಿಯಳ್ ಮಾತಾಡಲಿಲ್ಲ. +“ನಾವಿಷ್ಟು ಜನ ಇಷ್ಟೆಲ್ಲ ಮಾತಾಡ್ರು. . . ಅಕ್ಕಾ! +ನೀ ಮಾತಾಡ್ಲಿಲ್ಲ.” +“ಈಗ ನೀವೆಲ್ಲ ಆಡಿಕಳ್ದ್ರಿ. +ನಾನು ಆಡೂದಿಲ್ಲ” ಅಂದ್ಲು. +“ಅದಲ್ಲ, ನೀ ಹೇಳಬೇಕು” ಅಂದ್ರು. +ಆಗೆ, “ವಂದ್ ಬಸ್ರಿಗೆ ನೂರೊಂದ ಮಕ್ಕಳ ಹಡಿತೆ” ಅಂದ್ಲು. +ಅಷ್ಟು ಹೇಳದ್ದು ಅರಸನ ಮಗ ಕೇಳತಾ ಹೋದ. +ಕೇಳತಾ ಹೋದೋನು ಮನಿಗ್ ಬಂದ. +ಬರಿಲೂ ಇಲ್ಲ; ಉಣಲೂ ಇಲ್ಲ. +ಬಂದ ಸೊಮ್ಮನೆ ಮನ್ಗಿಬಿಟ್ಟ. +ಆಗ ಅಪ್ಪ-ಅವ್ವಿ, “ನಿನ್ಗ್ ಯೇನಾಯ್ತು ಮಾರಾಯ? +ಉಂಬೂಕ್ ಯೇಳ್ಲಿಲ್ಲ. +ಸಾನಕೆ ಯೇಳ್ಲಿಲ್ಲ. +ನಿಂಗೇನಾಯ್ತು?” + “ನನ್ಗೆ ಯೇನಾಲೂ ಇಲ್ಲ. +ನನ್ಗ್ ಈ ಮನ್ಯೇ ಬೇಡ, ನಾ ದೇಸಾಂತ್ರ ಹೋತೆ” ಅಂದ. +“ಅಷ್ಟ ನಿನ್ಗೆ ಚಿಂತೆ ಯಾಕೆ? +ಯೇನಿದ್ರೂ ಹೇಳು ಕೇಳ್ಕಂತೆ” ಅಂದ ಅಪ್ಪ. +“ನನ್ಗೆ ಮತ್ಯೇನಲ್ಲ. . . ಅನಪತ್ತಯಲ್ಲ. . . ನಾ ಬರೂಕ್ ಹೋಪಲ್ಲಿ ವಂದ್ ಅರಸಿನ ಮನ್ಯಲ್ಲಿ ಯೇಳ ಜನ ಹೆಣ್ ಮಕ್ಕಳಿದ್ರು. . . ಅವರ್ನ ಯೇಳ ಜನ ಹೆಣ್ಮಕ್ಕಳ್ನ ನನ್ಗೆ ಲಗ್ನ ಮಾಡ್ರ್ ಮಾತ್ರ ನಾನು ಮನೀಲಿರ್ತೆ. +ಈ ರಾಜಪಟ್ಟನೂ ಆಳ್ತೆ. +ಇಲ್ಲದಿದ್ದರೆ ನಾ ದೇಸಾವರಿ ಹೋತೆ.” +ಅಂದಗತೀಲಿ, “ಹಾಗಾರೆ, ನಾನು ಹೇಳೂಕಡ್ಡಿಲ್ಲ. +ಅವ್ರು ಹೆಣ್ಕೊಟ್ರ್‌ ಆಯ್ತು. . . ಕೊಡದಿದ್ರ?” +“ಹೆಣ್ ಕೊಡುದಾರೆ ನನ್ಗ್ ಲಗ್ನ ಮಾಡಿ. +ಕೊಡದಿದ್ರೆ, ನಾನು ಯೆಲ್ಲಿಗ್ ಹೋಗೂದೂ ಇಲ್ಲ. +ನಿಮ್ಮ ಜೊತ್ಯಲ್ಲೇ ಇರ್ತೆ.” ಅಷ್ಟ ಹೇಳ್ದನು. +ತಂದೆ ಊಟ ಮಾಡ್ಕಂಡ. +ಆ ಅರಸಿನ ಮನಿಗ್ ಹೋದ. +“ಯೆಂದೂ ಬಾರದಿದ್ ಅರಸುಗೊಳು ಈವತ್ ಬಂದ್ರಿ. . . ಸದ್ರಿಗೆ ಬನ್ನಿ” ಹೇಳ್ರು. +ಹಾಗ್ ಹೇಳ್ದ್ ಗತಿಲಿ ಆ ಅರಸನ ಮನಿಗ್ ಹೋಗ್ ಕೇಳ್ದ, “ಯೇನಿಲ್ಲ. . . ನಿಮ್ ಹೆಣ್ ಹುಡ್ಗರ ಲಗ್ನ ಮಾಡತಿರಾ? +ಇಲ್ಲಾ?” ಅಂದಿ ಕೇಳ್ದ. +“ಹೀಗೆ ನಿಮ್ಮಂತರ್ ಬಂದದ್ ಆದ್ರೆ ನಾನ ಯಿಚಾರ ಮಾಡ್ತೆ. +ನಾನು ಯೇಳ ಜನರಿಗೂ ಲಗ್ನ ಮಾಡ್ತೆ. . . ” ಅಂದ. +ಆಗ, “ಯೇಳ ಜನ ಹೆಣ್ ಮಕ್ಕಳನೂ ನನ್ ವಬ್ಬ ಮಗಗ್ ಲಗ್ನ ಮಾಡ್ಕೊಡತ್ರೊ?” ಕೇಳ್ದ. +“ನಿಮ್ಮಂತಾ ಅರಸಗಳ ಮಗ ಏಳ ಜನರ ಮದಿಯಾಗಿ ಆಳ್ತ ಅಂದರೆ ನಾವು ಕೊಡ್ತೊ” ಅಂದ್ರು. +ಆಗ- ಇಂತಾ ದಿವ್ಸ ದಾರಿ ಮೂರ್ತ ಅಂದಿ ಇಟ್ರು ಅವರು. +ಯೇಳ್ ಜನಿಗೂ ಲಗ್ನಾದ. +ಆಗೆ ಹೆರೀ ಹುಡ್ಗಿ ವಬ್ಳು ನೆರದಳು. +ಮದಿಯಾಗಿ ಅವರು ಗಂಡ-ಹಿಂಡ್ತಿ ಚೆಂದ ಇದ್ರೂ. +ಇವ್ರಕ್ಕ ತಂಗದಿಕ್ಳು ಆರ್ ಜನವೂ ಹಾಗೇ ವಳ್ಕಂಡಿದ್ರು. +ಅಷ್ಟ ಆದ ಗತಿಲಿ ಆರ್ ಜನವೂ ವಂದು, ಅವಳ ವಬ್ಬಳೇ ವಂದಾಕಂತು. +ಹೆರಿದು ಹೆಣ್ಣು, ನೂರಮಕ್ಕಳು ಗಂಡು ವಂದ್ ಬಸ್ರಲಿ. +ಆಗೆ ಇವ ದಂಡಿಗ್ ಹೋದ. +ಗಂಡ ದಂಡಿಗ್ ಹೋಪದಂಕೂ, ಇವ್ಳಿಗೆ ಹಡ್ಯು ತಿಂಗಳ ಬಪ್ಪದಕೂ ಸರಿಹೋಯ್ತು. +“ನನ್ಗೆ ಹೊಟ್ಟೆ ನೋವು. . . ಸೂಲಗಿತ್ತಿ ಕರಕಬನ್ನಿ” ಅಂತು. +ಆಗೆ ಇವರು ಸೂಲಗಿತ್ತಿ ಕರೂಕ್ ಹೋರು. +ಆಗೆ ಹೋದ ಗತಿಲ್ ಯೇನಂದ್ರು? +“ಸೂಲಗಿತ್ತೀ, ನಾವು ಆರ್ ಜನ. . . ಆರ್ ಮೊರ ಹೊನ್ನ ತಂದ್ ಕೊಡ್ತ್ರು. +‘ಅವಳು ನೂರೊಂದ ಮಕ್ಕಳ ಹಡಿತೆ’ ಅಂತು. +ನಾವು ನೂರೊಂದ್ ಮರ್ದ ಗೊಂಬಿ ತಂದ್ಕೊಡ್ತ್ರು. +ಅವಳ ಕಣ್ಣಿಗೆ ಆರವಿ ಕಟ್ಟಿ, ಅವಳ ಬೆನ್ನಿಗೆ ಮುಂಡಗಿ ಕಂಬ ಹೇರಬೇಕು” ಅಂದ್ ಹೇಳ್ದ್ರು. +ಆಗವಳ್ ಹಡದ್ಲು. +ನೂರೊಂದ ಮಕ್ಕಳನ ಹಡಿವಾಗ್ ಹೆರಿದ್‌ ಹೆಣ್ಣು ಕಡಿಗ್ ನೂರ್ ಮಕ್ಕಳು ಗಂಡು. +ಹಡದಾಗೆ ಆ ಸೂಲಗಿತ್ತಿಗೆ ದುಡ್ ಕೊಟ್ರಲ್ಲಾ? +ಕಣ್ ಕಟ್ಟಿ ಮಕ್ಕಳ ಯೆಲ್ಲಾ ತುಂಬಿಟ್ಟು ನೂರೊಂದ್ ಮರ್ನ ಗೊಂಬಿ ತಂದಿಕ್ಕಿತು. +ರಾಜಂಗೆ ಪತ್ರ ಬರೆದು, ಆಗ ಆ ಹುಡ್ಗರ ತಕಂಡಿ ಹೋಗಿ ಬಾಳಿ ಹಿಂಡಿನೊಳಗೆ ಹುಗಿದ್ರು. +ಹುಗದು, ಹೆರಿ ಹುಡಗಿಗೆ ಬಗಿಲ್ ಬುದ್ದಿ ಪರಕಾರ ಆಯ್ದ ಬಂತು‌. +ಅವ್ಕೆ ಆಯಾರ ಬೇಕಾಯ್ತಲ? +ಶಿಶಗಳ ಅಲ್ಲೆ ಹಾಕವಾಗೆ ಬಾಳಿಯೆಲ್ಲಾ ಕೊನಿ ಹಾಕಿರು. +ಬಾಳಿ ಕುಂಡ್ಗಿಯೊಳಗೆ ಆ ಹುಡ್ಗರಿಗೆ ಹಾಲ ಬಿಡತಾ ಇತ್ತು. +ಆ ದೇವ್ರು ಅವರಿಗ ಅದನ್ನೇ ಜೀವನ ಕೊಟ್ಟ ಬಿಟ್ಟ. +ಕೊಟ್ಟಗತಿಲ್ ಹಾಗೇ ಇದ್ದೊ. +ಈ ಸರ ಆರಜನ ಹಿಂಡ್ರು ದಿನೀತ್ಯ ಬಾಳಿಕೊನಿ ಕುಂಡ್ಗಿ ಹೂಗ ಶೀಬತಾ ಇದ್ರು. +ಇಂದು ಶೀಬದ ಹಾಲು ನಾಳಿಕ್ ಶಿಕ್ಕುಕಿಲ್ಲ. +ನಾಳಿಕ್ ಶೀಬ್ದ ಹಾಲು ನಾಡದಿಗೆ ಶಿಕ್ಕುಕಿಲ್ಲ. +ಅವರವರೊಳಗೆ ಆರ್ ಜನ ಯೋಚನೆ ಮಾಡ್ರು. +“ನೋಡಕ್ಕಾ, ನಿನ್ನೆ ನಾವ್ ಶೀಬ್ದ ಹಾಲು ಈ ಹೊತ್ತಿಲ್ಲ. +ಇದ್ಕ್ ಯೇನ್ ಮಸ್ಲಪ್ ಮಾಡಬೇಕ್ ನಾವು?” ಅಂತ ಯೋಚನಿ ಮಾಡ್ರು. +“ಹೀಗಲ್ಲ, ನಾವು ವಂದ್ ಜೋಯಿಸರ ಮನಿಗ್ ಹೋಪೊ. . . ’’ ಮತ್ತೆ ಜೋಯಿಸರಿಗೆ ಇಷ್ಟ್ ದುಡ್ಗಿಡ್ ಕೊಟ್ಕಂಡ್ರು- “ನಾವು ನೂರೊಂದ್ ಮಕ್ಕಳ್ನ ವಂದ್ ಬಾಳಿ ಕಣಿಯೊಳಗ್ ಹುಗಿದೀರು. +ನಾವ್ ಹುಗಿದ ಹುಡ್ಗರಿಗೆ ಬಾಳಿಕುಂಡಗಿ ತುಪ್ಪು ನಾವ್ ತಿನ್ತಾ ಇದ್ರು. +ಇಂದ್ ತಿಂದ್ ಹಾಲು ನಾಳಿಗಿಲ್ಲ. +ಅದ್ರಿಂದಾ ಆ ಹುಡ್ಗರ ಜೀವಾ ಇತ್ತೋ ಇಲ್ಲಂದೂ ಇಲ್ಲ. +ಹುಡ್ಗರಿಗೇ ಬಾಳಿ ಹಾಲ್ ಕೊಡ್ತಾ ಇತ್ವೋ?” ಅಂದ ಯೋಚನಿ ಮಾಡ್ರು. +ಆಗಾ ಜೋಯಿಸರು ಹೇಳ್ರು. +“ಮತ್ತಾ ಹುಡ್ಗರ್ಗ್ ಆಸ್ಯಾ ಹೋಗಿಲ್ಲ. +ನೂರು ವಂದ್ ಜನ ಅಲ್ಲಿ ಇದ್ದೊ. . . ” ಅಷ್ಟ ಹೇಳೂಕೂ- “ಹಗರ್ ಇಲ್ಲಿ ಯೇನ್ ಮಾಡ್ಬೇಕು?” ಅಂದ್ ಕೇಳ್ದ್ರು. +ಅದ್ಕೆ, ‘‘ನೀವ್ ಹೇಳ್ದ ಹಾಂಗೆ ನಾವ್ ಕೊಡತೊ. +ಆ ಹುಡ್ಗರಿಗೆ ಗಾಸಿ ಮಾಡಬೇಕು,’’ “ಹೇಳಬೇಕು ನಿಮ್ ಮಾವನ ಹತ್ರ.’’ + ‘‘ಅದ್ ಹೇಂಗ್ ಹೇಳಬೇಕಾಯ್ತು?’’ + ‘‘ನಮ್ಗ್ ಆರ್ ಜನ್ರಿಗೂ ಹೊಟ್ಟಿ ಮುರಿತು ಅಂತ ಹೊಡ್ಚಬೇಕು. +ಆಗೆ ಮಾವಗೆ ನೋಟ ನೋಡುಕ್ ನಮ್ಮನಿಗ್ ಹೋಗಿ ಅಂದ್ ಹೇಳಬೇಕು. +”ಆಗೆ ಮಾವಯ್ಯ ಹೋದ ಅಂತ ಆಯ್ತು. +“ಏನಪ್ಪಾ?” + “ಯೇನಿಲ್ಲ. . . ನನ್ನ ಸೊಸದಿಕ್ಕಳಗ ಆರ್ ಜನಿಗೂ ಹೊಟ್ಟಿನೋವಂದ್ ಹೊಡಕ್ತಾ ಇದ್ರು. +ಅವರಿಗೆ ಹುಸಾರಾಗುದಿಲ್ಲ. +ಇದ್ಕ ಯೇನ್ ಮಾಡ್ಕು?” ಅಂತ ಕೇಳ್ದ. +“ಮತ್ಯೇನಲ್ಲ. ಆ ಮನಿ ಹಿಂದಕಿದ್ದ ಬಾಳಿ ಅಷ್ಟೂ ಸೌರ್ ಹಾಕಬೇಕು” ಅಂದ್ ಹೇಳ್ರು. +ಅಷ್ಟ್ ಹೇಳ್ದ ಗತಿಲಿ, ಹೆರಿಸೊಸೆ ಅಂಬವ್ಳಿಗೆ ಕುದುರಿಗ್ ಹಾಕು ಹುರುಳಿನೀರ ಕಜ್ಜಕ್ಕಿ ಅನ್ನ ಮಾಡಿ, ಕುದರಿ ಸಾಲಾಗಿದ್ಲು ಅವಳಿಗ್ ಹಾಕತ್ರು. +ಅದ್ನ ತಿಂದ್ಕತ ಅವಳ ಜೀವನ ಇತ್ತು. +ಆಗೆ ಇವ್ರು ಇಷ್ಟೆಲ್ಲಾ ಮಾಡುದ್ಕೂ ಅದ್ಕೆ ಇನ್ಯೇನ ಮಾಡೂದಂದ್ರೆ? +ಬಾಳಿ ಖುಷಿಯಲ್ಲವಾ? +ಹುಗಿದ ಶಿಸಗಳಿಗೆ ಆರತಿಂಗಳ ಆಯ್ತು. +“ನಾನು ತುಪ್ಪುಕೊಟ್ಟಿ ಆ ಹುಡ್ಗರನ್ ಬಾಳ್ (ಬಾಳೆ) ಸಾಕಿತ್ತು. +ಈಗ ಈ ಮಕ್ಕಳನ ನಾಸ ಪಡ್ಸು ದಿನ ಬಂತಲ್ಲಾ” ಅಂತ ಬಾಳು (ಬಾಳೆ) ಯಸನದಲ್ ಇತ್ತು. + “ಬಾಳಿ. . . ನಿನಗ್ ಇಷ್ಟ್ ಚಿಂತೆ ಯಾಕೆ? +ಬಾಳಿ ಕಡ್ದ್ ಹಾಕತ್ರ ನಿನ್ಗ್ ಯಸನ ಬೇಡ, ತಾನು ಆ ಹುಡ್ಗರಿಗೆ ಆಯಾರ ಕೊಡತಿ. +ನಿನ್ನ ಕಡದಿ ಹಾಕಲಿ” ಅಂತ ಕೌವ್ಲಿದನ ಹೇಳ್ತು. +ಹೇಳ್ದ ಗತಿಲಿ, “ಬಾಳಿ ಕುಣ್ಯಾಗಿದ್ದ ಹುಡ್ಗರ ತಂದಿ ಕೊಟ್ಗೆ ಹೆರಗೆ ಗೊಬ್ಬರ ಹೊಂಡದಲ್ಲಿ ಇರಲಿ, ನಾನು ಅವರಿಗೆ ಹೊಟ್ಟಿಗೆ ಆಯರ ಕೊಡ್ತೆ” ಅಂತ ಕೌವ್ಲಿದನ ಹೇಳ್ತು. +ಆಗ, ಆ ಕೌಲಿ ಅಷ್ಟ ಹೇಳೂಕೂ ನೂರೊಂದ್ ಹುಡ್ಗರ್ ಯೆದ್ ಹೋಗಿ ಆ ಗೊಬ್ಬರ ಹೊಂಡ್ದಲ್ ಉಳ್ಕಂಡ್ರು. +ಉಳ್ಕಂಡ ಗತೀಲಿ ಕೌಲಿದನ ಆರ್ ತಿಂಗ್ಳ ಸಾಕ್ತು. +ಆರ್ ತಿಂಗಳ ಸಾಕ್ದ ಗತಿಲಿ, ಆಗೆ ಇವರು ದನ ಕರುಕ್ ಹೋದ್ರು. +ನಾಕ್ ಸೇರ್ ಹಾಲಾ ಕೊಡ್ವಲ್ಲಿ ಯೆಯ್ಡ ಸೇರ್ ಹಾಲ್ ಕೊಟ್ತು ದನ. +ಯೆಯ್ಡ ಸೇರ್ ಕೊಟ್ಗತಿಲಿ ವಬ್ಬಳ ಜಾಣಿದ್ಲು- “ಇಂದು ಯೆರಡ ಸೇರ ಕಮ್ಮಿ ನಮ್ಗ ಕೊಟ್ತು ದನ. +ಇದ್ಕ್ ಯೇನ ಉಪಾಯ ಮಾಡುದು?” ಅಂದ್ ಆಲೋಚ್ನಿ ಮಾಡ್ತು. +ಆಲೋಚ್ನಿ ಮಾಡ್ದ ಗತಿಲಿ, “ಮತ್ತೇನಲ್ಲ. +ನಾವಿಂದೂ ಹೊಟ್ಟಿನೋವು ಅಂತ ಹೊಡ್ಕ್ ಬಿಡೂದು. . . ಮಾವಯ್ಯ ಇಂದೂ ಜೋಯಿಸರ ಮನೇಗೆ ಹೋಗ್ತುರು.” +ಹೋಗಿ ನೋಡವಾಗೆ, ಇಂದೂ ಅದೇ ನಮೂನಿ ಹೊಟ್ಟಿ ನೋವಂದ್ ಹೇಳ್ರು. +ಆಗೆ, ‘‘ನಾನ್ ಹೋತೆ’’ ಅಂದ ಹೋದ್ರು. +“ಮತ್ಯೇನಲ್ಲ ಅರ್ಸಗೂಳೇ, ನಿಮ್ಮ ಮನಿಲಿ ವಂದ್ ಕೌಲ್ ದನ ಅದ್ಯೋ?” ಕೇಳ್ದ ಬಟ್ಟ. + “ಹೌದು. . . ” ಅಂದ ರಾಜ. +ಹೌದಂದ್ ಹೇಳುಕೂ, “ಮತ್ತ್ಯೇನ್ ಕಾಣೂದಿಲ್ಲ. +ನಿಮ್ಮ ಕೊಟ್‌ಗ್ಯನ ಕೌಲಿ ತಗದು, ಅದ್ರ್ ಕಡ್ದ್ ಬಿಟ್ರೆ ನಿಮ್ ಸೊಸ್ಕಕ್ಳು ಕಷ್ಟ ಪರಿಯಾರ ಆಗ್ತದೆ.” +“ಅಂತಾದೇನು?ನೂರಾರ್ ತಕಂಡ್ ಬಪ್ಪೆ ನಾನು. +ನನ್ ಸೊಸದಿಕ್ಕಳ ಜೀವವೊಂದ್ ಉಳಿಲಿ” ಅಂದ. +ಅಷ್ಟ್ ಹೇಳೂಕೂ ಮೇವ್ಕ್ ಹೋದ ಕೌಲಿ ಹುಲ್ನೀರ್ ಮುಟ್ಟೂದಿಲ್ಲ. +“ಆರ್ ತಿಂಗಳ ಬಾಳಿ ಸಾಕ್ತು; ನಾನು ಆರ್ ತಿಂಗಳ ಹುಡ್ಗರ ಸಾಕ್ದೆ‌. +ಈಗ ಯೇನ್ ಮಾಡುದು?” ಅಂತ ಯೋಚನಿಯೊಳಗ್ ಈಸ್ವರ ದೇವಸ್ತಾನಕ್ ಹೋಯ್ತು ದೆನ. +ಅಲ್ಲಿ ಹೋಗಿ ನಿತ್ತಿ ಹೆಜೆಮೇನ್ ನಿತ್ತ್ಕಂಡಿ, “ದೇವರೇ, ನೂರೊಂದ ಮಕ್ಕಳ ಕೊಲ್ಲುದಾಯ್ತಲ್ಲ” ಅಂತ ಬಾಳ ಯಸನ ಮಾಡ್ತು. +ಆಗ್ ಈಸ್ವರ್ ದೇವ್ರ್ ಹೇಳ್ದ್ರು. +“ಆರ್ ತಿಂಗಳ ಬಾಳಿ ಸಾಕ್ತು. . . ಆರ್ ತಿಂಗಳ ನೀನು ಸಾಕ್ದೆ. +ಈಗ ನನ್ನಲ್ಲಿಗ್ ಬಂದೆ. +ನನ್ನ ಬಲ ಪೂರ್ತಿ ಅವ್ಕೆ, ನೀನು ನೂರೊಂದ ಮಕ್ಕಳ ತಂದ್ಕೊಡು. +ನಾನು ಸಾಕ್ತೆ. . . ” “ಅವ್ರ ಹೊಟ್ಟಿಗ್ಯೇನೂ?” +“ನನ್ಗ್ ಹಾಲು-ಹಣ್ಣು, ಅಕ್ಕಿ ನೇವಿದ್ಯ ಮಾಡ್ ಇಕ್ತ್ರಲ? +ಅವ್ರು ತಮ್ಗ್ ಯಷ್ಟ್ ಬೇಕಂಬ್ದಾಯ್ತೊ ಅಷ್ಟೂ ಕಯ್ಯಾಗ್ ತಕಂಡು ತಿನ್ನೂದು. +ಅವ್ರ್ ಜೀವ ನಾನಿಟ್ಕಂತೆ” ಅಂತ ಈಸುರ ದೇವ್ರು ಹೇಳ್ರು. +ಆಗ ವಂದೂವರ್ ವರ್ಸವಾಯ್ತು. +ಆಗೆ ಈಸುರ ದೇವರಲ್ಲಿ ವಂದ್ ಸೇರಕ್ಕಿ ನೇವೇದ್ದಿ ಮಾಡ್ರೆ ಅಲ್ಲಿ ಬಟ್ಟಂಗ್ ಸಿಕ್ಕೂದೂ ಯೆಯ್ಡೇ ಪಾವಕ್ಕಿ. +ಆಗ ಬಟ್ರೇನಂದ್ರು? +ಹೆಂಗ್ಸರ ಹತ್ರ? +‘‘ಈಗ ಹಾಲ-ಹಣ್ಣ ನೇವೆದ್ದಿ ಮಾಡದ್ದು ಸಿಕ್ಕೂದಿಲ್ಲ. . . ಯೆಯ್ಡ ಪಾವ್ ಅಕ್ಕಿ ನೇವೆದ್ದಿ ಮಾಡ್ದು ಸಿಕ್ಕೂದಿಲ್ಲ. + ’’“ಹಂಗಾರ್. . . ಇನ್ ಮುಂದೆ ವಂದ್ ಆಲಚ್ನಿ ಮಾಡ್ವೊ” ಅಂತಾಯ್ತು. +“ಇನ್ನೇನ್ ಮಾಡ್ಕಾಯ್ತು?” ಅಂದ್ರು. +“ಈಸುರ ದೇವಸ್ತಾನಕ್ಕ ನಾವ್ ಬೆಂಕಿ ಹಾಕಿ ಸುಡವ’’ ಅಂದ್ ಹೇಳ್ದ್ರು. +ಹೆಂಗ್ಸಿನಂತಾ ದೈತರಿಲ್ಲಾ ಸ್ವಾಮಿ! +ಹೆಂಗ್ಸರು ಯೇನೂ ಮಾಡೂಕ್ ತಯಾರಿದ್ದವ್ರು. +ಆಗೆ ಯೇನಾಯ್ತು? “ಮಾವಯ್ಯ. . . ಮತ್ತೆ ಅದೇ ನಮೂನಿ ಸೂಲಿ ಸುರುವಾಯ್ತು ನಮ್ಗೆ. +ನಮ್ಮ ಜೀವಾರು ಹೋಗ್ಲಿ. +ಕರ್ಚ್ ಮಾಡುದ್ ಬೇಡ ನೀವು” ಅಂದ್ರು. +“ಹಗಾರ್ ಯೇನ್ ಮಾಡುದು?” +“ಬಟ್ರ್ ಹೇಳ್ಕೊಟ್ರು, ದೇವಸ್ತಾನಕ್ಕೆ ಬಿಂಕಿ ಹಾಕೂದು. . . ” ಅಂತ ಹೇಳಕೊಟ್ರು. +ಆಗ, “ಹುಲ್ ಮನಿ. +ಬಟ್ರೆ ಹಂಚಿನ ಮನಿ ಕಟ್ಸ್‌ತ. +ನಾಳಿಕ್ ಹುಲ್ಮನೆ ಸುಟ್ ಹಾಕ್ಬಿಡ್ತೆ ದೇವ್ರೇ” ಅಂದಿ ಅದ್ಕೆ ಬೆಂಕಿ ಹಾಕ್ರು. +ಬಿಂಕಿ ಹಾಕವಾಗೆ ಈಸುರದೇವ್ರು ಹುಡ್ಗರ ಕೈಲಿ ಯೇನಂದ್ರು? +ಹೆರಿ ಹುಡ್ಗಿ ಕರ್ದ್ರು-- “ನೂರೊಂದ್ ಮಕ್ಕಳೂ ಯೆದ್ ಬನ್ನಿ” ಅಂದ್ರು. +“ಆರ್ ತಿಂಗ್ಳ ಬಾಳ್ ಸಾಕ್ತು. +ಆರ್ ತಿಂಗ್ಳ ಕವ್ಲಿ ಸಾಕ್ತು. +ಆರ್ ತಿಂಗಳು ನಾನ್ ಸಾಕ್ದೆ. +ಇನ್ನೆ ನೀವು ದೇಸಾವರಿ ಹೋಗಿ” ಅಂತ ಹೇಳ್ರು ಈಸುರದೇವ್ರು. +“ನಿಮ್ಮ ಅಪ್ಪಣಿ ಪರಕಾರ ತಮ್ಮದಿಕ್ಕಳ ತಕಂಡಿ ನಾನು ದೇಸಾವರಿ ಹೊರಟೆ” ಅಂತ ಆ ಹೆಣ್ ಹೇಳ್ತು. +ಆಗೆ, “ನೀವ್ ಹೋಗುವಾಗ ಹೇಗ್ ಹೋಗುರಿ? +ಹೀಗೇ ಆಡ್ಕಂತ ಆಡ್ಕಂತ ದೇಸದ ಮೇನ್ ಬೇಡ್ಕಂಡಿನ್ ಹೋಗೂರು” ಅಂತು. +“ಹಂಗಾರ್ ವಂದ್ ಮಾಡಿ ನೀವು ನೂರೊಂದ ಜನಿಗೂ ನಾನು ಆಸ್ರ ಕೊಡ್ತ, ಯೇನಂದ್ರೆ ನೀವು ನೂರೊಂದ್ ಜನ ಹೈಟ್ ಹೋಗ್ವಾಗೆ, ನಿಮಗೆ ಹಾದಿ ಮೇಲೆ ಹಾಲ್ಕೊಡ್ತಾ ಬತ್ತರೆ. . . ರೊಟ್ಟಿ ತಕಣಿ ಅಂತಾರೆ. . . ಹಣ್ ತಿನ್ನಿ ಅಂತಾರೆ. . . ಆದ್ರ, ನೀವು ಕಯ್ಯಲ್ಲಿ ಮುಟ್ಟೂಕಾಗ. +ಹಿಡ್ಕಂಡು ಹೋಗಿ. +ಉಪಾಸ ಹಿಡ್ಕಂಡು ಹೋಗುವಾಗ ವಂದ್ ಹೊಳಿಸಿಕ್ಕತ್ತು. +ಆ ಹೊಳ್ಯಲ್ಲಿ ಹೋಗಿ ಆ ಹುಡ್ಗರ ಕೈಲಿದ್ದದ್ದ ಯೆಲ್ಲಾ ತಕ್ಕಂಡಿ, ಕೈ ಬೆರಳಲ್ಲಿ ತೊಡಿಶಿಗ್ದಿ ಅಡ್ಸರ್ ಸೈ. . . ಗಾಯ ಅಂಬ್ದು ಮುಚ್ಚಿ ಹಾಕುದು.’’ + ಮೂರ್ ಹಳ್ಳ ಮಂತ್ರಿಸಿ ಹೆರಿ ಹುಡ್ಗಿ ಕೈಲ್ ಕೊಟ್ರು. +“ನಿನ್ನ ಬಲದನ ತೊಡ್ಯಲ್ ಹಾಕ್ಕೊಡ್ತಿ” ಅಂದ ಅವರು. +ಚೆರಲಿಲ್ ತೊಡಿಶಿಗದು ತೊಡ್ಯಲ್ ಹಾಕ್ರು. +“ಹಾದಿ ಮೇನ್ ನಡಿತೇ ಇರಿ ನೀವು” ಅಂದ್ರು. +‘‘ಹೋದ್ರು ಅಡವಿ ಕೂಡಿ ಹೋಗಿ ಹೋಗಿ ಹೋಗಿ ಹೋಗಿ. . . ಘೋರ ಹೊಲಕ್ ಹೋಗ್ ಬಿಟ್ರು. +ಹೋಗವಾಗೆ, ವಂದ್ ಮರ ರಾಮರಾಜಕ್ಕೆ ಸಾಕು; ಸುತ್ ಹಾಕರೆ ಮರಕ್ ಬಳ್ಳಿ ಮುಟ್ಟುದಿಲ್ಲ-- ಅಂತಾ ಮರ. +ಮರದ ಬುಡದೊಳಗೆ ಹೋಗ್ ನಿತ್ಕೊ” ಹೆಣ್ ಹುಡ್ಗಿ ಕೈಲ್ ಹೇಳ್ದ್ರು. +ಆಗ ಈ ಹುಡುಗಿ ಮರನ ಬೇರಿನ ಮೇನೆ ನಿತ್ಕಂಡ್ಲು. +ಆಗ ತೊಡ್ಯಾಗಿದ್ ವಂದ್ ಹರಳ್ ತಗದ್ದು ನೂರಜನ ತಮ್ಮದಿಕ್ಕಳು. +‘‘ಹುಲಿ, ಕಯಡಿ, ಶಿಂಗಿಶೀನಾಯಿ, ವನಮನಸ್ಯರು ಅಷ್ಟೂ ವೋಡ್ ಹೋಗ್ಲಿ” ಅಂದಿ ವಂದ್ ಹಳ್ಳ ಹೊಡದ್ಲು. +ನೂರ್ ಜನವೂ ದಿಕ್ ದೇ‌ಸ ಹೋಗ್ಬಿಟ್ರು. +ಆಗ ಇವಳು ಬಾಳ ಯತಿಗ ದುಕ್ಕಾ ಮಾಡ್ಲು. +“ಅಯ್ಯೋ ದೇವರೇ, ನನ್ ತಮ್ಮದಿಕ್ಳು ನೂರು ಜನ ಹೋಗ್ ಬಿಟ್ರಲ್ಲಾ. . . ” ಹುಡ್ಗಿ ಮರನಡಿಗ್ ನಿತ್ಕಂಡು ಸೋಕ ಮಾಡ್ತು. +ಅವಳ ಸೋಕು ಕಾಣಲಾರದೆ ದೊಡ್ಡ ಮರ ಬಿದ್ ಬಿಟ್ತು. +ನಡಗತಿ ಓಡಿ ಹೋಗಿ ಆ ಮರನ ಚಕ್ರ ವಳಗೆ ನಿತ್ಲು‌. +ನಿತ್ಗತಿಲಿ ಮರ ಸಮಾ ಕೂಡ ಬಿಟ್ತು. +ಮರದ ವಳಗೆ ಈ ಹುಡ್ಗಿ ಆಯ್ತು. +ಆಗ ಇವಳ ಕಣ್ಣ ನೀರಂಬ್ದೂ ಮರನ ಬೇರಿನೊಳಗೆ ಹರದು ಹಳ್ಳವಾಗಿ ಹೋತು. +ಈ ದೊಡ್ಡ ದೊಡ್ಡ ಅರಸುಗೊಳಲ್ಲ ಬೇಟಿಗ್ ಹೋದ್ರು. +ಯೆಲ್ಲೆಲ್ ಹೋರೂ ಕುಡ್ವಾ ಅಂದ್ರೆ ವಂದ್ ಹುಂಡ್ ನೀರಿಲ್ಲ. +‘ನಾವ್ ಯೇನ್ ಮಾಡ್ಕಾಯ್ತು?’ ಅಂದ್ ವಬ್ಬಬ್ರೂ ಮರ ಹತ್ ಕಂಡ್ರು ಕಾಂಬಾಗೆ-- ಈ ಮರನ ಬೇರಿನೊಳಗೆ ವಂದ್ ಬೊಬ್ಬಿತೋರಿನ ನೀರು ಹೋತ್ತು‌. +ಮರನ ಬೇರಿನೊಳಗ ಸಲ್ಪ ನೀರ್ ಹೋತು. +ಎಲಿಗಿಳಕಿ ಮಾಡಿ ವಂದಂದ್ ಗಿಳ್ಕ್ ನೀರ್ ಕುಡ್ವ ಅಂತಾಯ್ತು. +ವಬಬ್ರನ್ ವಬಬ್ರು ಹಿಡ್ದ್ ಕುಡ್ದ್ರು. +“ಇಷ್ಟು ಸವಿಯಾದ ನೀರ್ ನಾವ್ ಕುಡಿಲಿಲ್ಲ. +ಇದ್ಯೇನಿಚಿತ್ರ?” ಅಂದು ಅವರೊಳಗೆಲ್ಲಾ ಬಾಳ ಆಲಚ್ನಿ ಹಾಕ್ರು. +ವಬ್ರಿಗೊಬ್ರ್ ಆಲೈಸ್ ನೋಡವಾಗೆ ಆ ಮರನ ವಳಗೆ ಇವಳ ‘ಈ. . . ಈ. . . ’ ಅಂದ್ ಅಳುತಾಳೆ ನೋಡಿ, ‘‘ಈ ಮರನಲ್ ನರಮನಸ್ಯರ ಸಬ್ದ ಕೇಳತ್ತ್. +ಅದ್ರಿಂದ ನಾವಿಷ್ಟೂ ಜನ ಈ ಮರ ಕಡೀಬೇಕು‌.’’ +ಆಗ ಅಷ್ಟೂ ಜನ ಮರ ಕಡ್ದ್ರು. +ಮರ ಕಡ್ದ್ ಗತಿಲಿ ಮರ ಅಂಬ್ದು ನೆಗದು ಆಚಿ ಮುಂದಿಕ್ ಹಾರಿಹೋಗ್ಬಿಟ್ತು‌. +ಹುಡಗಿ ನೆಡವಲ್ಲಿ ನಿತ್ ಬಿಟ್ಲು. +ಇನ್ನೆ ವಬ್ರಿಗೊಬ್ಬರು, “ಈ ಹುಡ್ಗಿ ನನ್ಗೆ, ನನ್ಗೆ. . . ” ಅಂತ ಹುಡ್ಗಿ ಯತ್ಕಂಡ್ರು. +ಯೆತ್ಕಂಡಿ ವಂದ್ ರಾಜನ ಮನ್ಯಲ್ ಹೋಯಿ, ಆ ಹುಡ್ಗಿ ಸಾಕರು. +ಆಗವ್ಳಿಗೆ ಉಂಬಕೆ, ತೊಡೂಕೆ ಚಿನ್ನ, ಬಂಗಾರ ಯಾವದಕ್ಕೂ ಕಮ್ಮಿ ಮಾಡ್ಲಿಲ್ಲ. +ಯೆತ್ಕಂಡ್ ಹೋದ ಅರಸು, ‘ಅವಳ ನಾ ಲಗ್ನಾಗಬೇಕು’ ಅಂತ, ಅವಳಿಗೆ ಚಾಕ್ರಿಗೆ ಜನ ಇಟ್ಟು ಅವಳ ಸಾಕತಾ ಇದ್ರು. +ಸಾಕ್ದ ಜನಿನ್ ಹತ್ರ ರಾಜ ಕೇಳ್ತಾ ಇದ್ದ- “ಆ ಹುಡ್ಗಿಯೆಂತಾ ಹೇಳ್ತ್? +ಆ ಹುಡಗಿ ಯಿಚಾರ ಕೇಳಿ ಹೇಳಿ. . . ” ಅಂದ್ ಹೇಳ್ದ್. +“ನನ್ಗ್ ಯೇಗ್ ಊಟ್ಕೆ ತಿಂಬಕೆ, ಚಿನ್ನ ತೊಡ್ಗಿ ಯಾವದಕೂ ನಂಗ್ ತೊಂದ್ರಿ ಇಲ್ಲ. +ನನ್ಗ್ ಮನೋರೋಗದಿಂದ ತಗುಕ್ ಯಾರ್ ಕೈಲೂ ಸಾದ್ದಿಲ್ಲ” ಅಂತು. +‘ಆಗ ಯೇನ್ ಮಾಡುದು?’ ಕೇಳಿ, “ರಾಜ ಹೇಳು ಅಂದ್ರೇ ನಾನ್ ಹೇಳ್ತೆ. +ಅಷ್ಟರೊಳಗೆ ನಾನು ಹೇಳೂದಿಲ್ಲ. +”ಆಗ್ಯೇನ್ ಮಾಡ್ದ? +ರಾಜ ಬಂದ್ ಕೇಳ್ದ. +“ನಿನ್ಗ್ ಯೇನ್ ಕಷ್ಟ ಬಂದ್ರೂ ನಾನು ಅನಬಯಸ್ತೆ ಹೇಳು” ಅಂದ. +“ನನ್ ಯೆಲ್ಲಿಂದ ತಕಂಡ್ ಬಂದಿರಿ ಆ ಕಾನಗೊಡ್ಡಿಗ್ ಹೋಗಿ ನೂರ ಹುಡ್ಗರಿಗೆ ಯೇನೇನ ಅಂಗಿ, ತೊಪ್ಪಿ, ಬಟ್ಟೆಯೆಲ್ಲಾ ಬೇಕು, ಅಲ್ಲಿ ಕರಕಂಡ್ ಹೋಗಿ. +ಚೌರದೋನು, ಮಡಿವಾಳ. . . ಯೆಲ್ಲಾ ಕರಕಂಡ್ ಹೋಗಿ; ಚೌರ ಮಾಡ್ಸಿ ಕರಕಂಡಿ ಬನ್ನಿ. . . ” “ಹುಲಿ, ಶಿಂಗಿ, ಶೀನಾಯಿ, ಕಯಡಿ ಹೋಗಿದ ನನ್ನ ತಮ್ಮದಿಕ್ಳು ಯೆಲ್ಲಾ ಓಡ್ ಬನಿ” ಅಂದ್ ವಂದ್ ಹಳ್ಳ ಹೊಡ್ದ ಬಿಟ್ಲು. +ನೂರ್ ಮಕ್ಕಳು ವೋಡ್ ಬಂದೊ. +“ಅಕ್ಕಾ. . . ಅಕ್ಕಾ. . . ” ಹೇಳಿ ಅಕ್ಕನ ತೊಕ್ ಹಾಕ್ಕಂಡು, ಅಳುಕ್ ಹಾಯ್ಕಂಡೋ. + “ಹೆದ್ರಬೇಡಿ. ನಿಮ್ಗ್ ಯೇನ್ ಕಷ್ಟ ಬಂದ್ರೂ ನಾನಿದ್ದೆ” ಹೇಳಿ, ಆ ರಾಜ ಬಾಶಿಕೊಟ್ಬಿಟ್ಟ. +ಬಾಶಿ ಕೊಟ್ಟ ಅಂತ್ರ ಕರಕಂಡ ಚೌರಗಿವ್ರ ಮಾಡ್ಸಿ, ಸಾನ ಮಾಡ್ಸೀ ಹುಡ್ಗರ ತಕಂಡ್ ತನ್ ಮನಿಗ್ ಬಂದ. +ಕರಕಂಡ್ ಬರೂಕೂ ಅಪ್ಪ ಅಲ್ಲೇ ಪರ್ಲಾಂಗ್ನಕಿಂದ್ ಮುಂದೆ ಇದ್ದ. +ಕಿರಿ ಹಿಂಡ್ರು, “ನಿನ್ ಹಿಣತಿ ನೂರೊಂದ್ ಮಕ್ಕಳನ ಹಡಿತೆ ಅಂದ್ ಗತಿಲ್ ನೀವ್ ಲಗ್ನ ಆರಿ. +ನೂರೊಂದ್ ಮರನ ಗೊಂಬಿ ಹಡದ್ಲು. +ಈಗ ನೋಡ್ಕಂಡ್ ಹೋಗಿ. . . ” ಅಂದ್ ಹೇಳೂಕೂ ಅವನಿಗ್ ಬಾಳ ನಾಚ್ಕಯಾಯ್ತು. +“ನಾನಾ ಮನಿ ಹೊಕ್ಕೂದಿಲ್ಲ” ಅಂದ. +ಅಲ್ಲೇ ಉಳ್ಕಂಡು, ಅಲ್ಲೇ ವಂದ್ ಬೇರೆ ಲಗ್ನಾದ. +ಆ ಹಿಂಡ್ರ ಬಿಟ್ಟ ಲೆಕ್ಕ. +ಅವ ಬಾರಿ ದೊಡ್ಡ ಸಬಿಗೆ ಹೋಗವವ, ಯೆಲ್ ಹೋದ್ರೂ ಆ ಕಿರಿ ಹಿಂಡ್ತಿ ಮನ್ಯಾಗೆ ವಬ್ಬಳು ಉಳೂದು. +ಆಗ, “ಸ್ವಾಮೀ. . . ನೀವ್ ದಿಕ್ಕು-ದೇಸ್ಕ್ ಹೋಗ ಬಿಟ್ರೆ ನಾನು ಇರವವಳು ವಬ್ಬಳು. +ನನ್ಗ್ ಬಾಳ ಹೆದ್ರ್ಕಿ. +ಯಾರಾರೂ ಮುದಕ್ಯಾರೂ ಅಕ್ಕು, ಹುಡುಗ್ಯಾರೂ ಅಕ್ಕು; ನನ್ ಜತ್ಯಲ್ಲಿರೂಕೆ ನಂದ್ ಜನ ಬೇಕು. . . ” ಅಂದ್ ಹೇಳೂಕೂ, “ವೋ. . . ಅಲ್ ವಂದ್ ಊರಾಗೆ ಕುದ್ರಿ ಸಾಲಲ್ ವಂದ್ ಹೆಂಗ್ಸಿತ್ತು. +ಅದ್ರ ತಂದ್ ನಿನ್ ಜೊತ್ಯಲ್ಲಿ ಬಿಡವ್ ಅಂದ್ರ ನೀವ್ ಜಗಳ ಮಾಡ್ಕತ್ತಿಯೇನೋ” ಅಂದ. +“ಅವಳೇ ಅಡಗಿ ಮಾಡಿ ಬಡ್ಸಿದ್ರೆ ನಾನು ಸಂತೋಸದಲ್ ಉಳಿತೇ. +ಅವಳ ನನ್ನ ಜೊತ್ಯಲ್ಲಿ ತಂದ್ ಹಾಕಿ” ಅಂದ್ಲು. +ಆಗ್ ಅಷ್ಟ್ ಹೇಳೂಕೂ ಅವಳಿಗ್ ಕಾದಗ ಹಾಕಿ, ಗಂಡ ಅವಳ ಕರ್ಸ್ದ. +ಆ ಮನ್ಯಲ್ ಬಂದ್ ಇದ್ದು ಅವಳು. +ಗಂಡ ಅಂದ್ ಇವಳಿಗ್ ಗುತ್ತಿಲ್ಲ; ಹಿಣತಿ ಅಂದ್ ಅವನಿಗ್ ಗುತ್ತದೆ. +ಆಗೆ ವಂದಲ್ಲ ವಂದ್ ದಿವಸೆ ಅಡಗಿ ಮಾಡಿ ಚೆಂದದಲ್ಲಿರವಾಗ “ಅಕ್ಕಾ, ನಾನು ಊಟಕ್ ಹಾಕ್ತಾ ಇದ್ದೆ. +ಯೆಲೆ ಹರವಾಣ ತಕಂಡ್ ಅವರು ಇರುವ ಸದರಿಗೆ ಕೊಟ್ಟಿ ಬಾ” ಅಂದ್ಲು. +ಅಂದ್ ಹೇಳುಕೂ ಇವ ಯೇನ್ ಮಾಡ್ದ? +ಯೆಲ್ಲಿ ಹರವಾಣ್ ತಂದ ಇಡೂಕೂ ಇವ ಅವಳ ರಟ್ಟಿ ಹಿಡ್ದ‌. +ಆಗವ್ಳು ಅಳುಕ್ ಹಾಯ್ಕಂಡಲಿಲ್ಲ. +ಬಾಳ ದುಕ್ಕ ಮಾಳ್ಳು-- “ನಾನು ಕಂಡರಮನಿಯಲ್ಲಿ ಕುದ್ರಿ ಸಾಲಗ್ ಹಾಯ್ಕಂಡು ಬಾಳ ಅದ್ವಾನದಲ್ಲಿದ್ದೆ. +ಈ ಪುಣ್ಯಾತ್ಗಿತ್ತಿ ಮನಿಗೆ ಶೇರ್ದ ಮೇನೆ ನಾನು ಬಾಳ ಸುಕದಲ್ಲಿದ್ದೆ. +ಈಗ ನಾ ದೇಸಾಂತರ ಹೋಗು ಶಮಿ ಬಂತು. +ಅವಳ ಗಂಡ ನನ್ನ ರಟ್ಟಿ ಹಿಡ್ದ ಮೇನೆ ನಾನು ಇರೂದುಳೀತಾ?” ಅಂದ ಹೇಳ್ಳು. +ಆಗೆ ರಟ್ಟಿ ಹಿಡ್ಕಂಡೇ ಇದ್ದ. +ಇವ್ಳ್ ವಳಗಿಂದ ತಪ್ಪನೆ ಹೆರ್ಗ ಬಂದ್ಳು. +ಕಿರೀಹಿಂಡ್ತಿ, “ನಾನು ‘ಯೆಲೆಹರವಣ ತಕಂಡ್ ಹೋಗ್ ಕೊಟ್ಟಿಕ್ ಬಾ’ ಅಂದ ಕಳಿಸಿದ್ರೆ ನೀವು ಅವಳ ರಟ್ಟಿ ಹಿಡ್ದ್ ನಿಲ್ಸಿರ್ಯಾ? +ಯಾಕೆ?” ಅಂದ ಜೋರ್ ಮಾಳ್ಳು. +“ನೀ ಜೋರ್ ಮಾಡ. . . ” ಅಂದ್ ಹೇಳ್ದ ಅವ, ರಟ್ಟಿ ಬಿಟ್ ಹಾಕ್ದ. +“ಇನ್ ನೀವ್ ಚೆಂದಾಗಿರಿ” ಅಂದ. +ಮತ್ತೂ ಸುಮ್ನೆ ಉಳ್ಕಂಡ. +ಯೆಯ್ಡ ಮೂರ್ ತಿಂಗಳ ಹಾಗೇ ಕಾಲ ಕಳದರು‌. +ಮತ್ತು ವಂದಿವ್ಸ ಹಾಂಗೇ, “ಯೆಲಿ ಹರವಣ ತಾಂಡ್ ಹೋಗಿ ಇಡುಕೂ ಅಲ್ ಇಟ್ಟಿ ಬಾ. . . ” ಅಂದ್ ಹೇಳೂಕೂ ಹಾಗೇ ರಟ್ಟೆ ಹಿಡ್ದ. +ಆಗ ಮತ್ತೂ ಹಾಗೇ ಬಂದ್ ನೋಳ್ಳು. +“ನಾನು ಆ ಸಾರ್ ಹೇಳ್ದ ಗತಿ ಇನ್ ಹಾಗ್ ಮಾಡೂಕಾಗ ಅಂದ್ ನಾ ಹೇಳೀನಲ? +ಈಗೂ ಮತ್ ಹೀಗೇ ಮಾಡ್ರಾ?” ಅಂದ್ ಹೇಳ್ಳು. +ಆಗವ ಹೇಳ್ದ, “ಮಳ್ ಜನ ನೀನು. +ನಿನ್ಗ್ ತಲಿಯಿಲ್ಲ. +ನನ್ನ ಹೆರಿ ಹಿಂಡತಿ ಇವಳು” ಅಂದ. +“ಈ ಕತ್ಯೆಲ್ಲಾ ಹೇಳ್ತೆ” ಅಂದ್ ಹೇಳ್ದ. +ಹೆರಿ ಹಿಂಡ್ತಿ ಬಂದಿ ತನ್ ಬಲ ತೊಡಿ ಮೇನ್ ಕುಳ್ಸಕಂಡಾ. +ಕಿರಿ ಹಿಂಡ್ತಿ ಯೆಡದ ತೊಡಿ ಮೇನ್ ಕುಳ್ಸಕಂಡಾ. +ಇವಳಿಗ್ ಬಾಳ ಕಣ್ಣನ್ ನೀರ್ ಹರ್ದ ಹೋತದೆ. +ಆಗ ಹೆರಿ ಹಿಂಡ್ತಿ ಕೈಲ್ ಹೇಳ್ದ, “ಚಿನ್ನದ ಚೀರಣಗಿ, ಬಣ್ಣದ ಬಾಚಣಗಿ ಕೊಟ್ಟೆನಲ್ಲ? +ಅದ್ ಯೆಲ್ಲ ಹೋಯ್ತು?” ಕೇಳ್ದ. +ಆಗೆ ಚಿನ್ನದ ಚೀರಣಗಿ, ಬಣ್ಣದ ಬಾಚಣಗಿ, ಉಂಗ್ಲ ತಕ್ಕಂಡ ಗಂಡನ ಕೈಲ್ ಕೊಟ್ಲು. +ಆಗ, “ನೂರೊಂದ್ ಮಕ್ಕಳ ಹಡಿತೆ ಅಂದ್ಯಲ್ಲಾ ನೀನು? +ನೀನು ಪಂತ ಮಾಡ್ರಿಂದ ನಿನ್ ಲಗ್ನಾದೆ ನಾನು. +ನೀನ ಹಡದ್ದು ನೂರೊಂದ ಮರ್ನ ಗೊಂಬಿ ಹಡ್ದಿ. +ಅಂದಿಕ್ಕಿ ನನ್ಗ ಪತ್ರ ಬಂತು. +ಅದ್ರೆ, ಅದ್ಕೆ ನಾನು ಇಲ್ ವಂದ್ ಲಗ್ನಾಯ್ಕ ಇಲ್ ಉಳ್ದ ಬಿಟ್ಟೆ. +ಉಳ್ದ್ ಬಿಟ್ರೆ, ನೀನ್ ಹಡದ್ ನೂರೊಂದ್ ಮರ್ನ ಗೊಂಬ್ಯೋ? +ನೂರೊಂದ್ ಶಿಸಗೋಳೊ?” ಕೇಳ್ದ. +ಆಗೆ, “ನಾನ್ ನೋಡ್ಲಿಲ್ಲ ಸ್ವಾಮೀ, ನನ್ ಕಣ್ಣಿಗೆ ಚಂಪಿ ಅರವಿ ಕಟ್ರು. +ಬೆನ್ನಿಗ್ ದಡ್ಡ ಮುಂಡಗಿ ಕಂಬ ತಗಂಡ್ ನನ್ನ ಮಯ್ಯಲ್ಲಿಟ್ರು. +ಅಷ್ಟೂ ಯೆಲ್ಲಾ ಆದ ಗತಿಲಿ ‘ಮರ್ನ ಗೊಂಬಿ ಹಡದ್ಲು’ ಹೇಳಿ ನನ್ ಮುಂದೆ ಯೆಲ್ಲಾ ತೋರ್ರು. . . ಆಗ ನನ್ನ ಕುದ್ರಿ ಸಾಲಿಗ್ ಬಿಟ್ರು. +ಕುದ್ರಿಗ್ ಹಾಕುವ ಹುಳ್ಳಿ ನೀರು, ಕಜ್ಜಕ್ಕಿ ಅನ್ನ ಮಾಡಿ ನಂಗ್ ಹಾಕ್ರು. +ಅದನ್ನೂ ತಿಂದ್ಕಂಡ್ ನಾನಿದ್ದೆ ಸ್ವಾಮಿ.” +“ಅಯ್ಯೋ ನಮ್ಮ ಅವಸ್ತಿ” ಅಂದ ಗಂಡ - ಹಿಂಡತಿ ವಟ್ಟೂ ಮೂರ ಜನವೂ ಬಾಳ ಸೋಕ ಮಾಡ್ರು. +ಅಳೂಕ್ ಹಾಯ್ಕಂಡ್ರು. +ಆಗೆ ಆ ನೂರೊಂದ್ ಮಕ್ಕಳಗೂ ತಕಂಡ್ ಬಂದ ರಾಜನ ಮನೆಯೊಳಗಿತ್ತಲ್ಲಾ? +ಅವಳು ಆ ರಾಜನ ಕೈಲ್ ಹೇಳ್ಳು. +“ಮತ್ತೆ ಸ್ವಾಮೀ, ಇಟ್ ಈ ಊರೊಳಗೆ ವಂದ್ ಅರ್ಸಗೊಳ್ ಇದ್ರು. +ಅವ್ರಿಗ್ ನೀವೆ ವಂದ್ ಪತ್ರ ಬರೀತ್ರಾ? +ಅಲ್ಲಾ ನಾನೇ ಬರಿಲಾ?” ಕೇಳ್ಳು. +ಕೇಳ್ದ್ ಗತಿಲಿ, “ನೀನೇ ಬರಿ” ಅಂದ ರಾಜ. +“ಈ ಊರೊಳಗೆ ನಿಮ್ಗೆ ನಾನು ಒಂದು ಕಾರಣದಿಂದ ಪತ್ರ ಕಳ್ಗತೇನೆ. +ಈ ಪತ್ರ ಕಂಡು, ವಂದ್ ಚಣ ನನ್ನ ಈ ಮನಿಗೆ ಬಂದು ಈ ರಾಜನ ಕೈಲ್ ಮಾತಾಡಿ ಹೋಗಬೇಕು.” +ಆಗೆ ಅವ ಪತ್ರ ವೋದಿಕಂಡ. +“ಅಬಾ!ಅಂತಾ ರಾಜನ ಮನ್ಯಲ್ಲಿದ್ದ ಹುಡಗಿ ನನ್ಗ್ ಪತ್ರ ಬರದು ನಾನು ಹೋದ್ರೆ, ಯೇನಂದಾರು? +ಈ ಹುಡಗಿ ಪತ್ರ ನೋಡ್ಕಂಡ್ ಬಂದ ಅಂತ ಬೇಜಾರು ಮಾಡುರು.” +ಆದ್ದರಿಂದ ಕಾದಗಕ್ಕ ಜವಾಬ್ ಹಾಕಲೂ ಇಲ್ಲ; ಕಾಗದ ಕೊಡಲೂ ಇಲ್ಲ. +ಯೆಯ್ಡ್ ಮೂರ್ ತಿಂಗಳ ಹಾಗೇ ಸಂದ್ ಹೋಯ್ತು. +ಆಗ ಮತ್ತೂ ವಂದ್ ಸಾರ್ ಹೇಳ್ಳು. +“ನೋಡಿ. . . ಆ ಸಾರೆ ಪತ್ರ ನಾನೇ ಕಳಸ್ದೆ. + ಬರಲಿಲ್ಲ. ಈಗ ನೀವೇ ಹೋಗಿ ಹೇಳ್ತೀರ್ಯಾ? +ನಾನೇ ಹೋಗಲೊ?” ಕೇಳ್ತು. +‘‘ಯೇನ್ ಪತ್ರ ಬರೆದಿದ್ಯೋ?’’ ಅಂದ. + “ಅಯ್ಯ. . . ನಾನ್ ಹೋಗೂದಿಲ್ಲ. +ನೀನೇ ಹೋಗ್ ಕೇಳ್ಕ ಬಾ” ಅಂದ. +ಆಗೆ ಊಟ ಮಾಡಿ ಮಜ್ಜಾನ ಹೊತ್ತಿಗ್ ಹೋಳ್ಳು. +ಹೋಗವಾಗ ಹೆರಿ ಹಿಂಡ್ತಿ, ಕಿರಿ ಹಿಂಡ್ತಿ, ಆ ರಾಜರು ವಟ್ಟು ಮೂರ್ ಜನ ಪಗಡಿ ಆಡ್ತಾ ಕೂತಿದ್ರು. +ಆಗ ಹೋದವಳು ಅನಮಾನ ಮಾಡ್ಲೇ ಇಲ್ಲ. +ರಾಜನ ಬಲದ ತೊಡಿ ಮೇನ್ ಕೂತೇ ಬಿಟ್ಲು. +ಆಗ ಈ ತಾಯಿ ಚಿಕ್ಕಮ್ಮ ಇಬ್ಬರನೂ ಚಕ್ಕಲ ಹಾಕಿ ಹುಡುಗಿ ಕುಂದ್ರನ್ಗಂಡ್ಲು. +ಅಷ್ಟಾರೂ ಇವಳಿಗ್ ಮಗಳು ಅಂಬ್ದು ಗುತ್ತಿಲ್ಲ; ಇವನಿಗೂ ತನ್ ಮಗಳಂತ ಗುತ್ತಿಲ್ಲ. +“ಅರಸುಗಳೇ, ಇನ್ನೊಂದ್ ಯೆಂಟ್ ದಿವಸ ವಳಗೆ ಊರೂರ ರೈತರ್ಗ್ಯೆಲ್ಲಾ ಪತ್ರ ಕಳಸ್ತೇನೆ. +ಆ ಪತ್ರಕ್ಕೆ ಅವರ್ಯೆಲ್ಲಾ ಬರ್ತಾರೆ. +ಆಗ ನೀವು ಮೂರೂ ಜನ ಬರಬೇಕು ಅಂದು. +ನಾನು ಬಹಳ ಅನುಕೂಲನೂ ಮಾಡಸ್ತೇ. +ಈ ಪತ್ರವ ಕೆಮಿಲ್ ಕೇಂಡವರು, ಕಣ್ಣಲ್ ಕಂಡೆ ಅಂದವರು ಬರಬೇಕು ಅಂದ್ ಕಾಗ್ದ ಬರಿತೆ. +ಅದ್ಕೆ ನೀವು ಕೂಡ್ಲೆ ಬರಬೇಕು” ಅಂದ್, “ನಾನು ಹೋತೆ” ಅಂದ ಇವ್ಳ್ ಯೆದ್ಲು. +ಆಗೆ ಇಷ್ಟೂ ಮಾತು ಯಲ್ಲ ಹೇಳವಾಗೆ, “ನೀನು ಹಾಲ ಕುಡ್ದ್ ಹೋಗು” ಅಂದಿ ಅಪ್ಪ ಹೇಳ್ದ. +“ಅಪ್ಪಾ. . . ” ಅಂದಿ ಅವಳು ಬಾಯಿಬಿಟ್ ಹೇಳಲಿಲ್ಲ. +ಇಲ್ಲ, “ನಾನು ಹಾಲ್ ಕುಡುದಾರೆ ಸಮಯದೆ. +ಈಗ ನಾ ಕುಡೂದಿಲ್ಲ” ಅಂದಿಕ್ ಹೋದ್ಲು. +ಬಂದ್ಕಂಡು, “ನಾವಿನ್ನೊಂದು ಹದಿನೈದು ದಿವ್ಸದ ನಂತರ ವಂದ್ ಸಬಿ ಕೂಡ್ಸವ” ಅಂದ್ಲು ರಾಜನ ಕೈಲಿ. +ಅದರಂತೆ ಸಬೆ ಕೂಡ್ತು. +ಅಷ್ಟೂ ಜನ ಬರವಾಗ ಇವರೂ ಮೂರೂ ಜನ ಬಂದ್ರು. +ಸಬಿಯೋರಿಗೆಲ್ಲಾ ಹಾಲೋ, ಹಣ್ಣೋ ಬೇಕಾದ ಕೊಟ್ಟು ಅನುಮಾಡ್ಕೊಟ್ಲು. +ನೂರ್ಜನ ತಮ್ಮದಿಕ್ಳ ಕರದ್ಲು. +ಕರಕಂಡು, ‘ನಾವಿರ ಸಬಿಗೆ ಸರಣಂ’ತ ಹೇಳಿ ಕೂತ್ಕಂಡ್ರು ಅಂತಾಯ್ತು. +ಇವಳೂ ಸಬಿಗೆ ಸರಣ ಮಾಡಿ ಕೂತ್ಲು. +ಕೂತಕಂಡು ಹಿಂದಿನ ಸಂಗ್ತಿ ಪೂರಾ ಹೇಳ್ಳು‌. +“ಆಗೆ ನೂರೊಂದ್ ಜನನ ಹಡೀತೆ ಅಂದಗತಿ ಅವನು ರಾಜ ಮದಿಯಾಗ್ ಬಿಟ್ಟ. +ನೂರೊಂದ ಜನನೆ ಹಡಿದ್ಲು. +ಇಲ್ಲಿ ಇವರು ಮೋಸಗಾರ್ಕಿ ಮಾಡಿರು. +ನಾನು ಮಕ್ಕಳನ ಸಾಯ್ಕಂಡಿದ್ದೆ. +ಇನ್ನಾದರೂ ನಿಮ್ಮ ಮಕ್ಕಳ ಹಾಯ್ಕಂಡು, ನನ್ನೊಬ್ಬಳ ಅರಸಿಗೆ ದಾರಿಯೆರ್ದ್ ಕೊಟ್ಕಂಡು ಸುಕದಿಂದಿರಬೇಕು” ಅಂತು. +ರಾಜ ಬಾಳ ದುಕ್ಕ ಮಾಡ್ಬಿಟ್ಯ. +“ಅಯ್ಯೋ. . . ನನ್ ಮಗಳಿಗ ಇಷ್ಟ ಕಷ್ಟ ಸಿಕ್ತಲ” ಅಂದ. +ಜನರು ಆನಂದದಿಂದ ‘ಮದಿಯಾಲಿ’ ಅಂದ್ರು. +“ನಾನ್ ಮನಿಗೆ ಬತ್ತೆ” ಅಂದಿ, ಇಬ್ರು ಹಿಂಡತೀರನ್ನೂ, ೧೦೦ ಜನ ಗಂಡಮಕ್ಕಳ್ನೂ ಕರಕಂಡ್‌ ಬಂದ. +ಮಗಳ್ನೂ, ಗಂಡಮಕ್ಕಳ್ನೂ ಸಾಕಿದ. +ರಾಜಂಗೆ ಮಗಳ ಕೈದಾರಿ ಎರೆದ್‌ ಕೊಟ್ಟ. +ಎಲ್ಲರೂ ಸುಖ-ಸಂತೋಶವಾಗಿ ವಳದ್ರು. +ವಂದಲ್ಲಾ ವಂದ್ ರಾಜ್ಯದಲ್ ವಂದ್ ರಾಜಿದ್ದಿದ್ದ. +ಅವನಿಗೆ ಹುಡ್ಗರಿಲ್ಲ. +ಲಗ್ನಾಗಿ ಇಪ್ಪತೈದ್ ವರ್ಷ ಸುಮಾರಾಯ್ತು. +ಹುಡ್ಗರಾಗಲಿಲ್ಲ ಅವನಿಗೆ. +ಆವಾಗವ ರಾಜ್ಯ ಆಳ್ತೇ ಇರಬೇಕಿದ್ರೆ-- ಒಂದಾನೊಂದು ದಿವಸ ಯೆರಡು ಜನ ಬೇಡ್ವವರು-- ವಂದ್ ಮುದ್ಕ, ವಂದ್ ಮುದ್ಕಿ ಅವನ ಮನೆಗ್ ಬಂದ್ರು. +ಆ ಟಾಯ್ಮ್‌ದಲ್ ರಾಜಿರಲಿಲ್ಲ. +ರಾಜನ ಹೆಂಡತಿ ವಂದೇ ಇತ್ತು. +ಆಳ ಮಂದಿ ಇದ್ರು. +ಅವ್ಕೆ ಬಿಕ್ಸಾ ಕೊಟ್ತು. +ತಕಂಡಿ ಹಿಂದೇ ತಿರ್ಗ್ದ್ರು. +ಹೋದ್ರು ಸುಮಾರು ವಂದು ಹತ್ ಮಾರು; ಅಲ್ಲಿ ವಂದ್ ಕೆರೆ ಇತ್ತು; ವಂದ್ ಅಳ್ಳಿ ಮರ ಇತ್ತು. +“ಅಲ್ಲಿ ಬೇಯ್ಸಕೊಂಡ್ ಊಟ ಮಾಡೇ ಹೋಗ್ವ. . . ” ಹೇಳಿ ಅಲ್ಲೇ ಉಳ್ದ್ರು. +ಹೆಂಡತಿ ತಪ್ಲೇಲ್ ಅಕ್ಕಿ ಹಾಕ್ಕಂಡಿ ಹೊರಗ್ ಹೋಯ್ತು. +ಅಕ್ಕಿ ತೊಳೂಕೆ ಹೋಗಿ, ಅಕ್ಕಿ ತೊಳದಿ ನೀರ್ ಮೊಕ್ಕಂಡ್ ಬರಬೇಕಿದ್ರೆ-- ಕೆರೆ ನೀರ ವಳಗಿಂದ ಪದಕದ ಸರ ವಂದ್ ತಪ್ಲೆವಳ್ಗ್ ಬಂದ್ ಬಿತ್ತು (ಪದಕದ ಸರ). +ಆವಾಗ ಸರ ತಂದಿ ಗಂಡನ ಹತ್ರ ತೋರ್ಸ್ತು. +“ಚಲೋ ಸರ, ಯೆಷ್ಟ್ ಕಿಮ್ಮತ್ತು ಹೇಳ್ ಬೆಲೆ ಮಾಡ್ಲಿಕ್ಕೇ ಸಾದ್ಯಿಲ್ಲ” ಹೇಳ್ತು. +ಆವಾಗೆ, “ಇದ ಬಹಳ ಕಿಮತ್ನ ವಸ್ತು. +ತಮಗೆ ಬೇಡ. . . ರಾಜರಿಗೆ ಕೊಟ್ ಬಿಡ್ವ. +ತಮ್ಗ ಬಿಡಾರಿಲ್ಲ. . . ಮನಿಲ್ಲ. . . ಜೀವಕ್ ಬರೂದು ನಿನಗೆ ಶಿಕ್ಕದ್ದು; +ನೀನೇ ತಕಂಡ್ ಹೋಗಿ ಕೊಟ್ ಬಾ” ಹೇಳಿ ಹಿಂಡ್ತಿ ಕೂಡ ಹೇಳ್ದ. +ಹೆಂಡ್ತಿ ಸರ ತಕೊಂಡ್ ರಾಜನ ಮನೇಗ್ ಹೋಯ್ತು. +ಆ ರಾಜನ ಹೆಂಡ್ತಿ, “ಅಬಾ! +ಆಗ ಬಂದಿದ್ದೆ ಕೊಟ್ಟದ್ ತಕಂಡ್ ಹೋಗಿದ್ದೆ. +ಮತ್ಯಾಕ್ ಬಂದೇ?” ಆವಾಗ, “ಅಮ್ಮ. . . ನಿಮ್ಮ ಕೆರಿವಳಗೆ ನೀರೊಳಗಿಂದ ವಂದ್ ಪದಕದ ಸರ. . . ಈ ಸರ ಬಂದ್ ತಮ್ಮ ತಪ್ಲೇಲಿ ಬಿತ್ತು. +ಇದು ನೀವೇ ತಕಳಿ. . . ನಮ್ಗ್ ಯೀಗ ಕುಶಿಂದ ಕೊಟ್ರೆ ನಾವ್ ತಕಂಡ್ ಹೋಗುತ್ರು. . . ” ಹೇಳ್ತು. +ಆವಾಗ ಪದಕದ ಸರ ತೆಗದಿ ರಾಜನ ಹೆಣತಿ ಕೈಲ್ ಕೊಟ್ತು. +ರಾಣಿ ದುಡ್ನ ಕೋಣೆ ಬಾಗ್ಲಾ ತೆರದ ವಂದ್ ಚೀಲ ಕೊಟ್ಟಿ, “ನೀ ಯೆಟ್ ಬೇಕಾರ್ ತುಂಬ್ಕೋ” ಹೇಳ್ತು. +ಆವಾಗದ್ ಹೊರವಟ್ ರೊಕ್ಕವ ಚೀಲ್ದಲ್ ತುಂಬ್ಕಂಡ್ತು. +ತುಂಬ್ಗಂಡಿದ್ದಟ್ ತಕ್ಕಂಡ್ ಬಂತು. +ಆವಾಗವ್ರು ಇಬ್ಬರೂವ ರೊಕ್ಕ ತಕಂಡ್ ಬೇಡ್ಕತ್ತೇ ಹೋದ್ರು. +ಈ ಸರವ ರಾಣಿ ವಂದ್ ಹಾಳ್ ಪೆಟ್ಗೆವಳ್ಗ್ ಹಾಕಿ, ಚಾವಿ ಹಾಕ್ ಇಟ್ಬಿಡ್ತು. +ಗಂಡನ ಹತ್ರ ಹೇಳುಕ್ ಮರತೇ ಹೋಯ್ತು. +ಹಾಗೇ ಉಳೀತು ಅದು. +ವಂಬತ್ ತಿಂಗ್ಳ, ವಂಬತ್ ದಿವಸ ತುಂಬಿದ ದಿವಸ ಅದ್ಕೆ ನೆಂಪಿಗೆ ಬಂತು. +“ಓಹೋ! ತಾ ಗಂಡನ ಹತ್ರ ಹೇಳಲೇ ಇಲ್ಲ. +ಪದ್ಕದ ಸರ ತಕಂಡದ್ದು. . . ” ಹೇಳಿ ನೆನಪಿಗ್ ಬಂದು ಆವಾಗ ಗಂಡನ ಹತ್ರ ಹೇಳ್ತು-- “ತಾ ವಂದ್ ಸರ ತೆಕಂಡಿದ್ದೇ ನಿಮ್ಮ ಹತ್ರ ಹೇಳಲಿಕ್ ಮರತೇ ಹೋಯ್ತು” ಹೇಳಿ, ಪೆಟ್ಗೆ ಬೀಗ ತೆಗದು ಪರತ್ ನೋಡೂತನ ಅಲ್ಲಿ ಸರ ಇರಲಿಲ್ಲ. +ವಂದ ಶಿಸ ಇದ್ದಾ. +ಆವಾಗೆ, “ಓಹೋ!ಇದ್ಕೊಂಡ್ ಯೇನದೆ ಹೇಳ್ ತಾನು ಸರ ಹಾಕಿಟ್ಟಿದ್ದೆ. . . ” ಹೇಳ್ ಕರೇತು. +ಆವಾಗ ಗಂಡ ಬಂದ್ ನೋಡಿ, ಶಿಶು ಯೆತ್ಕಂಡು ಹೋಗಿ ನಾಮಕರಣ ಮಾಡ್ದ. +ತನ್ಗೆ ಹುಟ್ಟಿದ್ದ ಹೇಳಿ, ಪದಕದಿಂದ ಹುಟ್ಟವ ಹೇಳ್ ‘ಪದಕರಾಜ’ ಹೇಳ್ ಹೆಸರಿಟ್ರು. +ಊಟ-ಉಪಚಾರಕ್ಕೆ ನೆಂಟ್ರಯೆಲ್ಲ ಕರ್ಯ ಮಾಡಿದ್ರು. +ಹುಡಗರಿಗೆ ಸೋದರತ್ತೆ ಅಂಬದು, ಅದ್ಕೂ ಕರ್ಯ ಮಾಡ್ದ್ರು, ‘ಬಾ. . . ’ ಹೇಳಿ. +ಆವಾಗದು ಟಾಯ್ಮ್ ಸಲ್ಪ ವ್ಯತ್ಯಾಸಾಗಿ ತಡ ಆಗಿ ಬಂತು. +ಇವರು ಸಕ್ರೆ, ತುಪ್ಪ ಶಿಶುವಿಗೆ ತಿನ್ಸದೊರ್ ತಿನ್ಸತಾ ಉಳ್ದ್ರು. +ಆವಾಗ ಅದ್ ಬಂದ್ ಕೂಡ್ಲೇಯ, “ನೀನೂ ತಿನ್ಸವಾ. . . ” ಹೇಳಿ ಅವ್ರ್ ಹೇಳ್ದ್ರು. +ಆವಾಗದು ಹುಡ್ಗನಿಗ್ ಕಾಲ ಮೇಲಿರ್ಸ್ಕಂಡಿ ತುಪ್ಪ, ಸಕ್ರೆ ಶಿಶು ಬಾಯಿಗೆ ಹಾಕ್ತು. +ಬಾಯ್ಗ್ ಹಾಕ್ದಂತಾ ತುಪ್ಪ, ಸಕ್ರೆ ಆ ಶಿಶು ತಿನ್ನಲೇ ಇಲ್ಲ. +ಪುಚಕರ್ಸ್ ಉಗ್ದ್ ಬಿಟ್ತು. +ಇದರಂತೆಲೇ ಮೂರ್ ಬಾರಿ ಹಾಕ್ತು. +ಮೂರ್ ಬಾರಿಗೂ ಅದ್ ಉಗ್ಳೇ ಬಿಟ್ತು-- ತಿನ್ಲಿಲ್ಲ ಶಿಶು. +ಆವಾಗಿದ್ಕ್ ಶಿಟ್ ಬಂತು. +“ಇಟ್ ಶಣ್ ಶಿಶು ಯೆಲ್ಲೋರೂ ಬಾಯಲ್ಲಿ ಹಾಕಿದ್ದು ತಿಂತು. +ತಾ ಹಾಕದ್ದೇ ಮೂರ್ಸಲ ಹಾಕದ್ರೂ ತಿನ್ಲಿಲ್ಲಲ್ವೋ? +ಇದು ತನ್ ವೈರಿ” ಹೇಳಿ ಅದ್ ಶಿಟ್ ಬಂದ್ ತನ್ ಮನಿಗೆ ನೆಡ್ದ್ ಬಿಟ್ತು. +ಆವಾಗ ಅದು ಗರ್ಭಿಣಿತ್ತಾಗೆ ಅತ್ತೆ. +ಅದ್ಕೆ ಹಾಂಗೆ ಮೂರ್- ನಾಲ್ಕ್ ದಿವ್ಸದಲ್ಲಿ ಜನ್ಯಾಯ್ತು. +ಅದ್ಕೆ ವಂದು ಹುಡ್ಗಿ ಹುಟ್ತು. +ಆ ಹುಡುಗಿಗೆ ‘ಪದ್ಮಾವತಿ’ ಹೇಳ್ ಹೆಸರಿಟ್ರು. +ಅದೂ, ಮತ್ತೆ ಪದಕರಾಜ ದೊಡ್ಡಾಗ್ತ ವಳ್ದ್ರು‌. +ವಿದ್ಯಾ ಕಲಿಸಲಿಕ್ಕೆ ಇಬ್ಬರಿಗೂ ತಾಯಿ-ತಂದೆ ಸಾಲೆಗ್ ಹಾಕ್ದ್ರು. +ಅವ್ರು ಸಾಲಿಗ್ ಹೋದ್ರೆ ಸಾಲೆ ಕಲೂದೇ ಇಲ್ಲ. +ಇಬ್ರೂ ವಂದ್ ಜೋಡ್ಯಾಗಿ-- ಆ ಮರ, ಈ ಮರ, ಹಲ್ಸನ‌ ಮರ, ಹಣ್ನ ಮರ ತರಗತೇ ಮಜ್ಜಾನಕ್ಕೆ ಊಟಕ್ಕೆ ಆಸ್ರಿಗೆ ಮನಿಗ್ ಬರತಾರೆ. +ಹೀಗೇ ವಂದ್ ಯೆರಡ ದಿವ್ಸ ಮಾಡ್ದ್ರು. +ಮಾಸ್ತರ, “ಈ ಹುಡ್ಗರ ಇಬ್ರೂ ಯಾಕ್ ಸಾಲೆಗ್ ಬರಲಿಲ್ಲ? +ನೋಡ್ ಬರಬೇಕಾಯ್ತು. . . ” ಹೇಳ್ ಮಾಸ್ತರರೇ ಸ್ವತಃ ಇವ್ರ ಮನಿಗ್ ಬಂದ್ರು. +ಇಲ್ ಬಂದು ಪದ್ಕರಾಜ್ನ ತಂದೆ ಹತ್ರ, “ನಿಮ್ ಹುಡ್ಗನ ಯಾಕ್ ಸಾಲಿಗೆ ಕಳ್ಸುದಿಲ್ಲ? +ಶೀಕಾಯ್ತೋ?ನೆಂಟರ ಮನಿಗ್ ಹೋಗಾರ್ಯೋ? +ಯೆಂಟ್ ದಿವಸಾಯ್ತು. +ಇನ್ನೂ ಸಾಲಿಗೇ ಬರಲಿಲ್ಲ” ಹೇಳ್ ಕೇಳ್ದ್ರು. +ಆವಾಗ್ ರಾಜ ಹೇಳ್ತಾನೆ, “ದಿವಸಾನೂ ಸಾಲೆಗೆ ಹೋಗ್ತೇ ಇದ್ದಾನೆ.” ಯೇನ್ ಹೇಳದ್ರೂ? +“ಸಾಲೀಗ್ ಬರಲೇ ಇಲ್ಲ.” ಹೇಳ್ತಾರೆ ಮಾಸ್ತರು. +ಅಲ್ಲಿಂದ ಪದ್ಮಾವತಿ ಮನಿಗ್ ಬಂದ್ರು. +ಹಾಗೇ ಹೇಳ್ದ್ರು. +ಆವಾಗ ಪದ್ಮಾವತಿ ತಾಯಿಗೆ ಗೊತ್ತಾಯ್ತು. . . . ಇಬ್ರೂ ಆವಾಗ ಸಾಲಿಗ್ ಹೋಗಲಿಲ್ಲ. +ಅವ್ರಿಬ್ರೂ ಜೋಡಿಯಾದ್ರು ಹೇಳ್ ಗೊತ್ತಾಯ್ತು. +‘‘ಅವ ತನ್ ವೈರಿ ಅಂದ್ರೆ ಅಂತವನ್ನೇ ದೋಸ್ತಿ ಇದ್ ಮಾಡ್ಕಂಡಿ ಅವ್ರಿಬ್ರೂ ವಳ್ದ್ರಲ್ವೋ?” +ಅಂದ ಮೇಲೀಗ ಇದ್ ತಪ್ಸೂ ತಜವಿಜಿ ಮಾಡಬೇಕಾದ್ರೆ ಹುಡ್ಗಿ ಬಂದ್ ಕೂಡ್ಲೆ ಪೆಟ್ ಹಾಕ್ತು. +ಹೇಳ್ತು, “ನೀ ಅವನ ಸಂಗಡ ಹೋಗಬೇಡ” ಹೇಳಿ ಪೆಟ್ ಹಾಕ್ದ್ ಕೂಡ್ಲೇಯ ತಂದೆ ಹೇಳುದ್ರು, “ಪೆಟ್ ಹಾಕಬೇಡ. +ತಾನು ಅದ್ಕೆ ಮೂರ್ ಪರಸ್ನೆ ಕೇಳ್ತೇನೆ. +ಆ ಪರಸ್ನೆಗೆ ಅದು ತಕ್ಕ ಉತ್ತರ ಕೊಟ್ರೆ ಕೊಡಲಿ. +ಇಲ್ಲದಿದ್ದರೆ ತಾನು ಅದ್ಕೆ ಶಿಕ್ಷೆ ಕೊಡ್ತೇನೆ” ಹೇಳಿ ಹೇಳ್ದ. +ಆವಾಗದ್ ಸಾಲಿಗೆ ಬಂತು. +ಆ ದಿವಸಾವೂ ಅದು ಕ್ಲಾಸ್ನಲ್ಲಿರತಿತ್ತು. +ಆ ದಿವ್ಸ ಕುಂದು ಅದು. +ಆವಾಗ ಪದಕರಾಜ ಕೇಳ್ದ, “ಪದ್ಮಾವತೀ, ದಿವಸಾ ನೀನು ಬಹಳ ರಂಗ್ನಲ್ಲಿದ್ದೆ. +ಇಂದೂ ಬಹಳ ಯತಿಮೇನೆ ಇದ್ದ ಹಾಗ್ ಕಾಣ್‌ಸ್ತದೆ. . . ಯೇನ್ ಯತೆ ಬಂತ ನಿನ್ಗೆ?” +‘‘ತಾಯ್ ನಿನ್ನ ಸಂಗ್ತಿಗೆ ತಾ ಹೋಗ್ತೆ ಹೇಳಿ, ತಾಯ್ ತನ್ಗ್ ಹೊಡಿತು. +ಅಪ್ಪ, ‘ಹೊಡಿಬೇಡ; ಮೂರ್ ಪರಸ್ನೆ ಕೇಳ್ತೆ. . . ’ ಹೇಳಿದ್ದ. +ಆದ್ರೆ, ಯಾವ ಪರಸ್ನೆ ಕೇಳ್ತನ್ಯೋ ನನಗೇನ್ ಗೊತ್ತಿಲ್ಲ. +ಅದ್ಕೆ ಸರ್ಯಾದ ಉತ್ತರ ತಾನ್ ಕೊಡಬೇಕು. +ಕೊಡದೆಗಿದ್ರೆ ತನ್ಗೆ ಶಿಕ್ಸೆ ಕೊಡ್ತಾನೆ ಅದ್ದೇ ನನ್ಗ್ ಬಾಳ ಚಿಂತೆಯಾದ್ದು.” ಅಂತು. +ಆವಾಗೆ ಪದಕರಾಜ ಹೇಳ್ದ, ಇವ್ಳ ಕೈಲಿ-- “ಹೆದ್ರೂದೇ ಬೇಡ. ಯೇಳು. . . ” ಹೇಳಿ ತಿರಗಾಟಕ್ ಕರ್ಕಂಡ್ ಹೋದ. +ಮನೆಗ್ ಬರಬೇಕಿದ್ರೆ, “ಇವತ್ ನೀನು ದೇವ್ರ ಪೂಜೆ ಮಾಡಿ ಕಾಯ್ ವಡೀಬೇಕು. +ವಡಿಬೇಕಿದ್ರೆ ‘ಪದ್ಕರಾಜಾ, ಪದ್ಕರಾಜಾ’ ಹೇಳಿ ದೊಡ್ಡಾಕೆ ನೀನು ಕಾಯ್ ವಡಿಬೇಕು. +ನಿನ್ನ ತಂದೆ ಹೇಳ್ದ ಪರಸ್ನೆಗೆ ಸರಿಯಾದ ಉತ್ತರ ನೀ ಕೊಡ್ತೆ.” + ಇದ್ರಂತೆ ಸಂಜಿಗ್ ಬಂದ್‌ ಅದ್ರಂತೇ ಮಾಡ್ತು. +ಆವಾಗ, “ಪದ್ಕರಾಜಾ, ಪದ್ಕರಾಜಾ. . . ” ಹೇಳವಾಗೆ ತಾಯಿಗೆ ಶಿಟ್ಬಂದು, ದೊಡ್ಡ ಗರ್ಜನಿಂದ ಅದ್ ಹೇಳ್ತು, “ಮತ್ತೂ ಅವಂದೇ ಸುದ್ದೀ ಹೇಳ್ತ್ಯೋ?” ಅದ್ರ ನಂತರದಲ್ಲಿ ಅಪ್ಪ ಮೂರ್ ಪರಸ್ನೆ ಕೇಳ್ದ. +ಆ ಪರಸ್ನೆಗೆ ಸರಿಯಾದ ಉತ್ತರವ ಹೇಳ್ತು (ಪರ್ಸ್ನೆ ಹೇಳಲೇ ಇಲ್ಲಾ, ಕತೆ ಹೇಳ್ದವಾ. ). +ಆವಾಗೆ ಮಾರನೆ ದಿವಸ ಬೆಳಿಗ್ಗೆ ಬಂದ ಕೂಡ್ಲೆ ಪದ್ಕರಾಜ-ಪದ್ಮಾವತಿ ಅವರವರೊಳಗೆ ಮಾತಾಡ್ಕಂಡ್ರು. +‘‘ಈಗ ತಾವಿಲ್ಲಿದ್ರೆ, ತಮಗೆ ಇವ್ರು ವಂದು ಕಡೆ ಇರುಕೆ ಕೊಡುದಿಲ್ಲ ತಂದೆ-ತಾಯಿ. +ನಾವು ಈ ಊರ್ ಬಿಟ್ಟಿ ಪರಾರಿಯಾಗಿ ನಡಿವಾ, ರಾತ್ರಿ ಬೆಳಗಾಗೂವರೆಗೆ.” +ಆವಾಗೆ “ಅಡ್ಡೆಲ್ಲಾ. . . ” ಬೇಕಾದ್ದು ಸಾಮಗ್ರಿಯೆಲ್ಲ ತಕಂಡಿ, ಕುದ್ರೆ ಹತ್ಕಂಡಿ ರಾತ್ರಿ ಬೆಳಗಾಗುವರಿಗೆ ಹೊಂಟ್ ಬಿಟ್ರು. +ಹೋಗ್ತಾ ಇರಬೇಕಿದ್ರೆ ಸಾದಾರಣ ಹನ್ನಂದ್ ಗಂಟೆ ಮಜ್ಜಾನ ಟಾಯ್ಮ್ ಆಯ್ತು. +ದೊಡ್ಡ ಗೋರಂಕಾರ ಅಡವ್ಯಲ್ಲಿ ಹೋಗ್ತೇ ವಳದ್ರು ಅವರು. +ಆವಾಗವನಿಗೆ ತಲೆತಿರ್ಗ್ದ ಹಾಗಾಗಿ, ಅವ್ನ ಕುದ್ರೆ ಕೆಳಗಿಳಿಸ್ತು ಕುದ್ರೆ ಮೇಲಿಂದ. +ಆವಾಗ್ ಯೇನಾಯ್ತು? +ಯೇನೈತದಂದ್ ಕೇಳೂದ್ರೊಳ್ಗೆ-- “ನನ್ಗೆ ಸಲ್ಪ ನೀರ್ ತಂದ್ ಕೊಡು” ಹೇಳ್ ಹೇಳ್ದ ಅವ. +ಆವಾಗಲ್ ಆಜ್ಬಾಜ್ ಕುದ್ರೆ ತಕಂಡಿ ಸುತ್ತಲು ವಂದ್ ಪರ್ಲಾಂಗ್ವರಿಗೂವ ನೋಡ್ತು; ಯೆಲ್ಲೆಲ್ಲೂ ನೀರಿಲ್ಲ. +ಆವಾಗಿನ್ಯೇನ್ ಮಾಡಬೇಕಾಯ್ತು? +ಹೇಳ್ ಅವನ ಹತ್ರ ಬಂದಿ ಯೆತ್ತರವಾದಂತ ಮರಹತ್ತಿ ನಾಕೂ ಕಡೇಲೂ ನೋಡ್ತು. +ಯೆಲ್ಲೆಲ್ಲೂ ಊರ್ ಬಿಟ್ಟಿ. . . ವಂದ್ ಹಳ್ಳ ಬಿಟ್ಟಿ. . . ಕೆರೆ - ಬಾವಿ ಬಿಟ್ಟಿ ಯೇನೇನೂ ಕಾಣೂದಿಲ್ಲ. +ಅದು ವಂದ್ ದಿಕ್ನಲ್ಲಿ ವಂದ್ ಸೂಜಿಯಟ್ಟು ಹೊಗೆ ಯೇಳೂದ ವಂದ್ ಕಾಣ್ತದೆ. +ಮತ್ಯೇನೂ ಕಾಣೂದಿಲ್ಲ. +ಅದ ಮರ ಇಳದಿ, ಆ ದಿಕ್ಕ ಹಿಡ್ದ ಸೀದಾ ಹೋಯ್ತದು‌. +ಅಲ್ ಹೋಗೂವರಿಗೆ ಮನೆ ಸಿಕ್ತದ್ಕೆ. +ರಾಕ್ಷಸಿ ಮುದ್ಕಿ ಇತ್ತಲ್ಲಿ. +ಆವಾಗೆ ಮುದ್ಕಿ ಹತ್ರೆ, “ಸಲ್ಪ್ ನೀರ್ ಕೊಡು” ಹೇಳಿ ಇದ್ ಹೇಳ್ತು. +ಇದ್ರ ನೋಡ್ದ ಕೂಡ್ಲೆ ಮುದ್ಕಿಗೆ, ‘ತನ್ ಹುಡ್ಗರಿದ್ರೆ ಬಾಳ ಲಾಯ್ಕಾಗತಿತ್ತು. +ಯೆಳೇ ಸೌತಿ ಮಿಡಿಯ ತಿಂದ್ ಹಾಗಾಗತಿತ್ತು’ ಹೇಳಿ ಮನಸ್ನಲ್ಲೇ ಹೇಳ್ಕಂತದೆ ಅದು ತನ್ನಟ್ಟಕ್ಕೇಯ. +ಈ ಹುಡ್ಗಿ ಹತ್ರ, “ಅಡಕಲಿಗೆ ನೀರ್ ಹಾಕು. +ವಲೇಲ್ ಬೆಂಕಿ ಹಾಕು. . . ” ಹೇಳ್ತು. +ಆ ಅಡಕಲಿಗೆ ವಂದ್ ತೂತ ಮಾಡಿಟ್ತು. +ಇದ್ ಯೆಟ್ ನೀರ್ ತಂದ್ ಹೊಯ್ದರೂವ ವಂದ್ ಕೊಡ ತಂದ್ ಹೊಯ್ದಟ್ಟೂ ಯೇನಾಯ್ತು? +ನೋಡೂವರಿಗೆ ವಂದ್ ತೂತಾಗದೆ ಅದ್ಕೆ ವಂದ್ ಬೊಂತೆ (ಗಿಡಕು) ಹಾಕಿ ಬಂದ್ ಮಾಡ್ತು ಅದು. +ನೀರ್ ಹೋವುದ ಬಂದ್ ಮಾಡ್ ನೀರ್ ತುಂಬ್ತು. +“ವಲಿಗ್ ಬೆಂಕಿ ಹಾಕಿ ನನ್ಗೆ ನೀರ್ ಕೊಡು ತಾ ಹೋಗ್ತೆ” ಅಂತು. +ಆವಾಗದ್ ಹೇಳ್ತು, “ತನ್ ಹುಡ್ಗರ್ ಬರಲಿಲ್ಲ. +ಹೊಲಕ್ ಹೋಗರೆ. +ಹೊಲಕ್ ಹೋಗಿ ಅವ್ರಿಗೆ ಊಟ ಕೊಟ್ಟಿ ಬಾ” ಅಂದ್ ಹೇಳ್ತು. +ಆವಾಗ, “ತನ್ಗ್ ದಾರಿ ಗುತ್ತಿಲ್ಲ. . . ಯಲ್ಲಿ ಯಲ್ಲಿ ಅವರಿದ್ದಾರೋ” ಹೇಳಿ ಈ ಹುಡ್ಗಿ ಹೇಳ್ತು. +“ಹಾಗಾದ್ರೆ ದಾರಿ ಕಾಣ್ಸಕ್ ದಾಸಿ ಕುನ್ನಿ ಇದ್ದು, ಅದು ದಾರಿ ಕಾಣ್ಸತದೆ. +ಅದ್ರ ಸಂಗ್ತಿಗೆ ಹೋಗಿ ನೀ ಕೊಟ್ ಬಾ. . . ” ಆವಾಗ ಬುತ್ತಿ ಕಟ್ ಕೊಟ್ತು. +ಬುತ್ತಿ ತಕಂಡು ಇದ್ ಹೋಯ್ತು. +ದಾಸಿ ಕುನ್ನಿ ಮುಂದೇ, ಇದ್ ಹಿಂದೆ‌. +‘ಬೌ. . . ಬೌ. . . ’ ಗುಡೂದ್ರು ಹೋಗ್ಬೇಕಿದ್ರೆ ದಾಸಿಕುನ್ನಿ ನಾಕ್ ಮಾರ್ ಹೋಗೂದು ಹಿಂದೆ ತಿರ್ಗ್ಕಂಡಿ, “ಕುಂಯ್ ಕುಂಯ್” ಮಾಡೂದು. +ಆವಾಗ ಇದ್ ಯೇನ್ ಆಲೋಚ್ನೆ ಮಾಡ್ತು? +ಆವಾಗ ಇದ್ಯೇನ್ ಆಲೋಚ್ನೆ ಹಾಕ್ತು? +“ಇದ್ ಯಾಕ್ ಹೀಗ್ ಮಾಡ್ತದೆ? +ಇದ್ಕ್ ಹಸ್ವಾಗೇ ಹೀಗ್ ಮಾಡ್ತದೆ. +ಬುತ್ತಿ ಕೊಡ್ತೆ” ಹೇಳಿ, ಕಡೆಗಿದ್ ಬುತ್ತಿ ಬಿಡ್ಸಿ ಆ ಕುನ್ನಿಗ್ ಸಲ್ಪ ಕೊಟ್ತು. +ಕುನ್ನಿ ಹೋಗಿ ಆ ಬುತ್ತಿಗೆ ಬಾಯ್ ಹಾಕ್ದ ಕೂಡ್ಲೇಯ ಮನುಶಾಗಿ ಅವ ಆ ಹುಡಗಿ ಹತ್ರ ಹೇಳ್ತಾನೆ, “ನೋಡು. . . ತನ್ ತಂದಿ ಈ ರೀತಿ ಮಾಡ್ ಇಟ್ಕಂಡರೆ ತನ್ಗೆ. +ಅವ್ರು ದೈತ್ಯರು, ರಾಕ್ಕೆಸರು. +ಮಾಯ ಗೊತ್ತದೆ ಅವರಿಗೆ.” +“ಇನ್ನ ತನ್ ಯಾವ ರೀತಿ ಮಾಡ್ತಾರೋ ಯೇನೋ?” +“ನೀ ಅಲ್ ಮಗದಿರಿದ್ದಲ್ ಹೋಗೂದೇ ಬೇಡ. +ಆ ಬುತ್ತಿ ಅಟ್ಟೂ ತನ್ಗ್ ಕೊಡು. +ತಾ ಊಟ ಮಾಡ್ತೆ. +ಅಲ್ ಕೇಳಿರೆ ತಾ ಬುತ್ತಿ ಕೊಟ್ಬಂದೆ ಹೇಳ ಹೇಳೀರಾಯ್ತು ನೀನು. . . ” ಹೇಳ್ತ. +ಬುತ್ತಿ ಕೊಟ್ಟು, ಬುತ್ತಿ ತಿಂದಿ ಮತ್ ನಾಯಾಗಿ ಅವ ಹೋದ. +ಅದ್ರ ಸಂತಿಗೆ ನಾಯೂ ಹೋಯ್ತು. +ಅಲ್ ಹೋದ್ ಕೂಡ್ಲೆ, “ಬುತ್ತಿ ಕೊಟ್ಟ ಬಂದ್ಯೋ?” ಕೇಳ್ತು ಮುದ್ಕಿ. +“ಹೌದು, ಕೊಟ್ಟ ಬಂದೆ ತಾನು” ಹೇಳ್ ಹೇಳ್ತು. +‘ಅಬಾ!ತನ್ ಹುಡ್ಗರು ಇಟ್ ಸೌತಿ ಮಿಡ್ಯಂತಾ ಹೆಣ್ಣ ಹ್ಯಾಂಗ್ ಬಿಟ್ರು? +ಪರತ್ತ ಬಿಡ್ವವ್ರಲ್ಲ ಅವರು. +ದಾಸಿಕುನ್ನಿನೇ ಮೋಸ ಮಾಡ್ತೇ? +ಯಾವದೇ ಇರಲಿ. +ಮೋಸ ಮಾಡ್ಲಿ, ಯೇನೇ ಆಗ್ಲಿ‌. +ಇನ್ ವಂದ್ ಉಪಾಯ ಮಾಡ್ತೆ.’ ತಾನು ವಂದ್ ಪಿಶ್ವಿಲ್ಲಿ ವಂದಿಟ್ ಹೊದ್ಲ ತುಂಬಿ, ಅದ್ಕ್ ವಂದ್ ತೂತ್ ಮಾಡಿ ಆ ಪಿಶ್ವಿನೇ ಕೊಟ್ಟಿತ್ತು. +ವಂದು ಕೈಯಲ್ ಪಿಶ್ವಿ, ವಂದು ಕೆಯ್ಯಲ್ ನೀರು ಹಿಡ್ಕಂಡಿ ಆ ಹುಡ್ಗಿ ಪದ್ಕರಾಜನಿದ್ದಲ್ ಬಂತು. +ಬರತಾ ಉಳೀತು. +ಆವಾಗೆ ಆ ಪಿಶ್ವಿಲ್ಲಿಂದ ಹೊದ್ಲು ದಾರಿಗುಂಟ ಬೀರತಾ ಬಂತು. +ಆವಾಗದ್, “ಇದ್ಯೇನು ಹೀಗೆ. . . ಹೊದ್ಲು ಬೀಳ್ತದ್ಯಲ್ಲಾ? + ಓಹೋ. . . ಇದು ಬಹಳ ಮಾಡಿ, ತನ್ಗ್ ಮೋಸಮಾಡು ಬಗಿನೇಯ. +ಹುಡ್ಗರಿಗೆ ಕುರುಹು ಕಾಣ್ಸು ಬಗ್ಗಾಗಿ ತೂತ ಮಾಡಿ, ಪಿಶ್ವಲ್ ಹೊದ್ಲ ತುಂಬ್ ಕೊಟ್ತು ಮುದ್ಕಿ. . . ” ಸಲ್ಪ ದೂರ ಬಂದಿ ಪಿಶ್ವಿ ನೋಡಿ, ಆ ಪಿಶ್ವಿ ತುಳ್ದ್ ಅಲ್ಲೇ ವಂದ್ ಹೊಂಡಕೆ ಹಾಕ್ ಮುಚ್ತು. +ಹಾಗೇ ತಕಂಡ್ ಬಂದು ಪದ್ಕರಾಜನಿಗೆ ನೀರ್ ಕೊಟ್ತು. +ಆವಾಗ ರಾಕ್ಷಸರು ಮನಿಗ್‌ ಬಂದರು. +ಮನಿಗ್ ಬಂದ್ರು ಕೂಡ್ಲೆ ತಾಯಿ ಹೇಳ್ತು, “ತಾನು ಯೆಳೇ ಸೌತಿ ಮಿಡ್ಯಂತಾ ಹೆಣ್ಣು ಬುತ್ತಿ ಕೊಟ್ ಕಳ್ಸಿದ್ದೆ. . . ನೀವ್ ಯಾಕ್ ಬಿಟ್ ಕೊಟ್ರಿ?” ಹೇಳ್ ಕೇಳ್ತು. +ಆವಾಗವ್ರ್ ಹೇಳ್ದ್ರು, “ತಮ್ಮಿದ್ದಲ್ ಹೋಗ್ಲೇ ಇಲ್ಲ ಅದು. +ಯೇನೋ ದಾಸಿ ಕುನ್ನಿನೇಯ ಅದ್ಕೆ ಹೇಳಿ, ಅಲ್ ಹೋಗದ ರೀತಿ ಮಾಡಿ ಪರತ ಕರ್ಕಂಡ್ ಬಂತು. . . ” +“ಹಾಗಾದ ಮೇಲೆ ತಾನ್ ವಂದ್ ಹೊದ್ಲ ಪಿಶ್ವಿಯ ತೂತ್ ಮಾಡ್ ಕಳ್ಸಿದೆ (ಹೊದ್ಲ ತುಂಬಿ). +ಅದು ಬೀರ್ದು ನೋಡ್ತಾ ಹೋಗ್ಬಿಟ್ರೆ, ನಿಮಗೆ ಅದು ಹೋದ ದಾರಿ ಶಿಗ್ತದೆ. . . ” ತಾಯಿ ಹೇಳ್ತು. +ಆಗ ಮೂರು ಜನ ರಾಕ್ಷಸರು ಹೋದರು. +ಹೊದ್ಲು ಬೀಳತಾ ಹೋದ್ದ ನೋಡ್ತೇ ಹೋದ್ರು. +ಮುಂದ್ ಹೋಗೂವರಿಗೆ ಪಿಶ್ವಿ ಹುಗ್ದ್ ಹಾಕಿತ್ತಲ್ಲ? +ಮುಂದ್ ಯೇನೂ ಕಾಣೂದಿಲ್ಲ; ಹೊದ್ಲು ಬಿದ್ದದ್ದು ಯಾವ ಬದಿಗೂ ಕಾಣೂದಿಲ್ಲ. +“ಇನ್ ತಾವು ಮೂರು ಜನನೂ ವಂದೇ ದಿಕ್ಕಿಗ್ ಹೋದ್ರೆ ಅದ್ ಶಿಕ್ವಾಂಗಿಲ್ಲ. +ನಾವ್ ಮೂರ್ ಜನ ಮೂರ್ ದಿಕ್ಯಿಂದಾ ಅರಸ್ತಾ ಹೋಗಬೇಕು.” + ಮೂರು ಜನ ಮೂರ್ ದಿಕ್ಕಿಂದ್ ಅರಸ್ತಾ ಹೋದ್ರು. +ಈ ಪದ್ಕರಾಜ, ಪದ್ಮಾವತಿ ಅಲ್ಲಿಂದ ಕುದ್ರೆ ಹತ್ತಿ ಹೋಗ್ತಾ ಇದ್ದಾರ್ ದಾರಿ ಮೇಲೆ. +ಆವಾಗ ವಬ್ಬವ ಅವರು ಹೋಗೂದು ಕಂಡ. . . ರಾಕ್ಸಸ ಹುಡ್ಗಿ ಕುದ್ರೆನ ಹಿಡದಿ, ಅವ ಪದ್ಕರಾಜ ಮುಂದೆ ಹೋಗ್ತಾ ಇರ್ತಾನೆ. +ವಂದ್ ಪರ್ಲಾಂಗ್ ಹಿಂದ್ ತಿರಸ್ಕಂಡ್ ಬರಬೇಕಿದ್ರೆ, ಇದು ವಂದ್ ತಲವಾರಿನಿಂದ ಅವನ ರುಂಡ ಹಾರ್ಸ್ತು. +ಆವಾಗೆ ಅಲ್ಲಿಂದ ಪರತ್ ಕುದ್ರೆ ತಿರ್ಗ್ಸಿ, ಕುದ್ರೆಯ ತಕಂಡ್ ಪದ್ಕರಾಜ ಹೋಗ್ತೇ ಇರವಲ್ಲಿ ಕುದ್ರೆ ವೋಡ್ಸ್ಕಂಡ್ ಬಂತು. +ಇನ್ನೊಬ್ಬನೂ ಹಿಂದೇ ಬಂದು ಇದ್ರಂತೇ ಮಾಡ್ದ. +ಆಗ ಯೆರಡನೆಯವನ ಕುತ್ಗಿನೂ ಹೀಗೇ ಕಡಿತು. +ಆವಾಗ ಮೂರನೆಯವ ಇಬ್ಬರನೂ ಕಡ್ದದ್ದ ಕಂಡ. +ಆವಾಗೆ, “ತಾನು ಹೀಗೇ ಹೋದ್ರೆ ತನ್ನನ್ನೂ ಇದೇ ರೀತಿ ಮಾಡ್ತದೆ. . . ” ಹೇಳಿ, ಅವ ಮಾಯದಿಂದ ಬೇಡ್ವವನ ಯೇಸಾದ. +ಆಗ ಅವ ಅದ್ರ ಬೆನ್ನಿಗ್ ಹೋಗ್ತಾ ವಳ್ದ. +ಅವ್ರ್ ಹೋಗ್ ವಂದ್ ಊರಿಗ್ ಮುಟ್ದ್ರು. +ಅಲ್ಲಿ ವಂದ್ ಇಳ್ಳಿಕಟ್ಟೆ ಸಿಕ್ತು‌. +ಆ ಇಳ್ಳಿ ಕಟ್ಟೆ ಮೇಲೆ ಅವ್ರು ಉಳ್ವದು. +ಪದ್ಕರಾಜ-ಪದ್ಮಾವತಿ ಉಳ್ದ್ರು. +“ಅಡ್ಗೆ ಊಟ ಮಾಡ್ ಬೆಳಿಗ್ಗೆ ತಾವ್ ಹೋಗ್ವ. . . ” ಹೇಳ್ತು-- ಆ ಕಟ್ಟಿ ಮೇಲೇ ಉಳ್ದ್ರು. +ಆವಾಗ ಅಲ್ಲೇ ವಲೆಬಿಲೆ ಹಾಕಂಡಿ, ವ್ಯವಸ್ತಿ ಮಾಡಬೇಕಿದ್ರೆ ರಾಕ್ಷಸ ಬೇಡ್ವವನ ರೂಪಾದವ ಅಲ್ಲೇ ಹೋದ. +ಆವಾಗೆ ಪದ್ಕರಾಜ ಮತ್ತು ಆ ಬೇಡ್ವ ರೂಪದವ ರಾಕ್ಷಸ ಇಬ್ಬರೂ ಪೇಟಿನ್ದ್ ಸಾಮಾನ ತರಲಿಕ್ಕೆ ಹೋದರು. +ತಮಗೆ ಬೇಕಾದ್ದ ಸಾಮಾನ ತಕಂಡ್ ಬಂದು ಅಡ್ಗೆ ಮಾಡ್, ಮೂರೂ ಮಂದಿ ಕೂಡಿ ಊಟ ಮಾಡ್ ಮಲಿಕಂಡ್ರು. +ಬೇಡ್ವವ ಆಚೆಬದಿ ಮಲ್ಗದ. +ಇವ್ರು ಮರನ ಇಚೆಗೆ. +ಅವ ಮರದ ಆಚೆಗೆ ಮಲ್ಗದ್ರೂ. +ಪದ್ಮಾವತಿಗೆ ನಿದ್ರೇನೆ ಬರಲಿಲ್ಲ. +ಆವಾಗೆ ಪದ್ಕರಾಜನಿಗೆ ನಿದ್ರೆ ಬಂದ್ ಹೋಯ್ತು. +ನಿದ್ದೆ ಮಾಡ್ತೆ ವಳ್ದ ಅವ. +ಮದ್ರಾತ್ರಿಗೆ ಇದ್ಕೆ ಸಲ್ಪ ನಿದ್ರೆ ಬಂತು ಪದ್ಮಾವತಿಗೆ. +ಆ ಟಾಯ್‌ಮಲ್ ಆ ರಾಕ್ಷಸ ಯದ್ದಿ ಪದ್ಕರಾಜನ ತಲೆ ಹೊಡ್ದ. +ನಿದ್ರೆ ಹತ್ತಂದೇ ಸೊಂಟದಲ್ಲಿದ್ದ ಖಡ್ಗ ತೆಗದಿ ಪದ್ಕರಾಜನ ತಲೆ ಹೊಡ್ದ. +ಆವಾಗ ಕತ್ತಿಲೆ ಹೊಡ್ದ್ ಕೂಡಲೇಯ ಪದ್ಕಾ ಹೇಳೂದು ಬರ್ರನೆ ಬೀರ್‌ಹೊಯ್ತು. +ಆವಾಜ್ ಬಂತು. +ಆ ಆವಾಜಿಗೆ ಪದ್ಮಾವತಿ ಯೆದ್ತು. +ಯೆದ್ ನೋಡೂವರಿಗೆ ಪದ್ಮಾವತಿ ಹಿಡ್ದಿ ಕುದ್ರೆ ಮೇಲೆ ಹತ್ಸಿ ಕಂಡಿ ರಾಕ್ಷಸ ಹೋದಾ. +ಹೋಗಬೇಕಿದ್ರೆ ದಾರಿ ಮೇಲೆ ಇದ್ರ ಹತ್ರ ಇದ್ದ ಮತ್ತೊಂದ್ ತಲವಾರ್ ತೆಗದಿ, ಯೆಡಗೈಯಲ್ (ಅವನಿಗ್ ಗುತ್ತಿಲ್ಲ.) ಜುಟ್ಟ ಹಿಡ್ದಿ ಬಲಕೈಯಲ್ ತಲವಾರ ನೆಗ್ದಿ ಅವನ ಕುತ್ಗಿಗೆ ತಲವಾರ ಹಾಕಿ, “ನಿನ್ಗ್ ಜೀವ ಬೇಕೋ? +ಯೇನ ತೆಗಿಬೇಕೋ ನಿನ್ ಜೀಮಾವಾ? +ಬದ್ಕು ಆಶೆ ಇದ್ರೆ ಕುದ್ರೆ ಹಿಂದ್ ಪರತ ತಿರ್ಗ್ಸು” ಹೇಳ್ದ ಕೂಡ್ಲೆ, ಅವ ಪರತ್ ತಿರಗ್ಸದ ಕುದ್ರೆಯ-- ಪದ್ಕರಾಜನ್ ಹೊಡ್ದಲ್ಲೇ ಬಂದ್ರು. +ಕುದ್ರೆ ಕೆಳ್ಗಿಳ್ದ. +ಆ ಪದ್ಕ ಅಟ್ಟೂ ಹೆಕ್ಕೂಕ್ ಹೇಳ್ತು ಅವನ ಹತ್ರೆ. +“ಪೂರಾ ಹೆಕ್ಕಿ, ಅದು ಹ್ಯಾಗಿತ್ತೋ ಹಾಂಗೇ ಜೋಡ್‌ಸ್ಬೇಕು. +ಇಲ್ದೆ ಇದ್ರೆ ನಿನ್ ರುಂಡ ತಾ ಕಡ್ದ್ ಹಾಕ್ತೆ. +ಜೋಡ್ಸಿ ಜೀವ ಕೊಟ್ರೆ ನಿನ್ ಜೀವ ಬಿಡ್ತೆ. +ಜೋಡ್ಸಿ ಜೀವ ಮಾಡ್ಕೊಡ್ಬೇಕು” ಅಂತು. +ಆವಾಗೆ ಅವ ಪೂರಾ ಜೋಡ್ಸಿ ಸಂದ್ ಆದ್ಯೆಲ್ಲ, ಯಾವದೂ ಸಂದ್ ಯೆಲ್ಲೆಲ್ಲಿ ಹೇಳಿ ಸಮಿನಾಗ್ ಕೂಡಸ್ದ, ಜೀವಮಾಡ್ದ. +ಪದ್ಕರಾಜ ಯೆದ್ ಕೂತದ್ದೇ, “ಯೇನೇ ಪದ್ಮಾವತಿ?” ಹೇಳ್ ಹೇಳ್ದ. +ಆವಾಗೆ ಆ ರಾಕ್ಷಸನ ರುಂಡ ಹಾರ್ಸ್ಬಿಟ್ತತು. +ಅದೇ ಊರಲ್ಲಿ ರಾಜ ಸತ್ ಹದ್ನಾಲ್ಕ್ನೇ ದಿವಸಾಗಿತ್ತು. +ರಾಜ ಪಟ್ಟ ಕಟ್ಬೇಕು ಹೇಳಿ ಆನೆ ಹತ್ರ ಮಾಲೆ ಕೊಟ್ಟು, “ನಿನಗೀ ರಾಜ್ಯಕೆ ಯಾರ್ ರಾಜಾಗಬಹುದು? +ಹೇಳಿ ಅವನಿಗೆ ಮಾಲೆ ಹಾಕಿ ತಂದಿ ರಾಜಪಟ್ಟಕ್ ಯೇರ್ಸು. . . ” ಹೇಳಿ ಆನೆ ಹತ್ರ ಮಾಲೆ ಕೊಟ್ಟರೆ. +ಆವಾಗೆ ವಳ್ಗೆ ಸಬೇಲಿ ಅಟ್ಟೂ ತಿರಗಿ (ಈ ಪದ್ಕರಾಜ-ಪದ್ಮಾವತಿನೂ ಅಲ್ಲೇ ಹೋಗಿ ಕುಂತಿದ್ರು) ಪದ್ಕರಾಜನಿಗೆ ಬಂದ್ ಮಾಲೆ ಹಾಕಿ ತಕಂಡ್ ಹೋಗಿ ರಾಜಸಿಂಹಾಸನ ಯೇರ್ಸ್ತು. +ಆವಾಗೆ ಈ ಪದ್ಮಾವತಿ ಮತ್ತು ರಾಜನ ಮಗಳೊಂದಿತ್ತು. +ಇಬ್ಬರೂವ ಅವನಿಗ್ ಮಾಲೆ ಹಾಕಿ ಲಗ್ನಾದ್ರು. +ಲಗ್ನಾಗಿ ಸುಕದಲ್ ರಾಜ್ಯ ಆಳ್ತಾ ವಳದ್ರು. +ರಾಜ್ಯ ಆಳ್ತಾ ಇರಬೇಕಿದ್ರೆ ವಂದಾನೊಂದು ದಿವಸ ಯೇಳ ಜನ ಬೇಡೂ ಮುದ್ಕುಯರಾಗಿ ಬಂದ್ರು. +ಬಂದಿ ಬಿಕ್ಸಾ ಕೊಡುಕೆ ಪದ್ಮಾವತಿ ಹೋಯ್ತು. +“ಬಿಕ್ಸಾ ಬೇಡಲಿಕ್ ಬಂದವ್ರಲ್ಲ. . . ” +“ಹಗರೆ, ನೀವ್ ಯಾಕ್ ಬಂದವ್ರಪ್ಪಾ?” ಕೇಳ್ತು. +‘‘ನಾವು ನಿಮ್ಮ ಗಂಡದಿರ್ ಕೊಣತಾ ನೋಡಲಿಕ್ ಬಂದವ್ರು. +ಬಾಳ ವರ್ಶದ ಹಿಂದೆ ನಾವು ನೋಡದ್ದ. +ಅದಕಾಗಿ ಈಗ ವಂದ್ ಸರ್ತಿ ನೋಡ್ ಹೋಗ್ವಾ ಹೇಳಿ ಬಂದವ್ರು. . . ” +“ಅಬ್ಬಾ. . . ಸುಳ್ಳೇಯ!” ಅಂತಿದು. +“ತಾ ಹುಟ್ದಾಗಿಂದ ನನ್ನ ಗಂಡನ ಹತ್ರೇ ವಡನಾಡಿದವಳು. +ತನ್ಗ್ ಗುತ್ತಿಲ್ಲ, ತಾನ್ ನೋಡಿಲ್ಲ. +ನೀವ್ ಹೇಳೂದೇ ಸುಳ್ಳು. . . ” ಹೇಳಿ ಪದ್ಮಾವತಿ ಹೇಳ್ತು. +ಆಗ ಅವರು, “ನಿನ್ಗ್ ಗುತ್ತಿಲ್ಲ ಅದು. . . ತಾವ್ ನೋಡಿದು ಸುಳ್ಳಾದ್ರ್ ಕೇಳ್ ನೋಡಿ ನಿಮ್ಮ ಗಂಡದಿರ ಹತ್ರೇಯ” ಅಂದ್ರು. +“ತಾವ್ ನಾಳೆ ಬರ್ತೇವೆ. +ನೀವ್ ಕೇಳಿ. . . ” ಹೇಳಿ ಹೋದ್ರು. +“ನಾನೇ ಕೇಳ್ತೆ. . ” (ಕೇಳಿದ್ಲು) ಆವಾಗವ, “ಸುಳ್ಳೇ. . . ” ಹೇಳ್ ಹಾರ್ಸತ. +ಆದ್ರೂ ಅದ್ ಕೇಳೂದಿಲ್ಲ. +ಆವಾಗ ಅವ್ ಹೇಳ್ತಾನೆ, “ತಾನು ಕುಣುದ್ ಹೌದು. +ಆದ್ರೆ, ನಿನ್ನ ಕೈಗೆ ಸಿಕ್ವ ಹಾಂಗಿಲ್ಲ ಕುಣಿದ್ರೆ. +ತನ್ ಆಸೆ ನೀ ಬಿಡೂದೇಯ” ಅಂದ. +ಆವಾಗ, “ಅದ್ಕೆ ಯಾವದೇ ಉಪಾಯ ಇಲ್ವೋ?” ಹೇಳ್ ಅದ್ ಕೇಳ್ತು. +ಆವಾಗೆ, “ಉಪಾಯಿದ್ದು, ಅದರಂತೆ ನೀ ಮಾಡಿರೆ ಇದ್ದು. +ದೈರ್ಯ ಇದ್ರೆ ಮಾಡು, ತಪ್ಪೂದಕ್ಕಾಗ. . . ” ಅಂದ. +“ಹೇಳು, ತಾ ಮಾಡ್ತೆ” ಹೇಳ್ ದೈರ್ಯ ಕೊಟ್ತು ಅದು. +“ಹಾಂಗಾದ್ರೆ, ನಾಳೇಗ್ ಅವರಿಗೆ ಕುಣೀತೆ ಹೇಳಿ ಹೇಳು; ಬರಲಿಕ್ ಹೇಳು. +ವಂದ್ ಚೀಲ ಕೂಕುಮ ತಂದಿ ವಳ್ಗ ಹೊಯ್ಬೇಕು. +ಯೋಳ ಬಾಗ್ಲ ಆಚಿಗೆ, ಅರಮನೆಗೆ ಯೇಳ ಬಾಗ್ಲು ವಂದೇ ರೇಖೆಲದೆ. +ಮೂರ್ ಹಳ್ ಮಂತ್ರಿಸಿ ಕೊಡ್ತೆ. +ಇದು ನೀ ಕಯ್ಯಲ್ ಇಟ್ಕಂಡ್ ಕುಳ್ಳಬೇಕು. +ನಾನು ಕಾಳಾಸರ್ಪಾಗ್ವೆ. . . ಕುಣೂಕ್ ಹಣ್ಕವೆ. +ಆವಾಗೆ ವಂದ್ ಹಳ್ ಹೊಡಿಬೇಕ್. +‘ನೀನು ಸಮಾಧಾನದಿಂದ ಕುಣಿಬೇಕು’ ಹೇಳಿ ವಂದ್ ಹಳ್ಳಹೊಡೆ” ಹೇಳಿ ಹೇಳ್ದ. +“ಇದರಂತೆಲೆ ಇನ್ನೊಂದ್ ಹಳ್ಳ ಅರ್ದ ಕೂಕುಮ ಶರಿಯಾದ ಕೂಡ್ಲೇಯ, ‘ಮೊದ್ಲು ಯಾವ ರೀತಿಲಿದ್ದಿದ್ದೆ ಅದೇ ರೀತಿಲೇ ಮನ್ಶನ ರೂಪನೇ ಆಗು’ ಹೇಳ್ ಮತ್ತೊಂದ್ ಹಳ್ಳ ಹೊಡೆ. . . ” ಹೇಳಿ ಮೂರ್ ಹಳ್ಳ ಮಂತ್ರಿಸಿ ಕೊಟ್ಟ. +ಮರುದಿನ ಏಳ ಮಂದಿ ಬಂದಿ ಅಂಗಳದಲ್ ಕುಂತ್ರು. +ಆವಾಗಿವ ಮಿಂದ್ ಮಡಿಯಾಗಿ ಹೋಗಿ, ಆ ಕೂಕುಮದ ರಾಸಿ ಮೇಲೆ ನಿಂತಿ-- “ಜೈ ಕಾಳಿದಾಸಾ. . . !” ಹೇಳಿ ಕಾಳಾಸರ್ಪನಾದ-- ಏಳ್ ಹೆಡೆ. +ಆವಾಗಿವ್ನ ರೂಪ ನೋಡಿ, ಯೆರಡೂ ಜನ ಹಿಣತ್ಯಕ್ಕಳೂ ಬೋರೇ ತಪ್ಪಿಬಿದ್ದರು. +ಆವಾಗಿವ ಕುಣ್ದ ಕುಣ್ದ. +ಕುಣ್ದಿ ಕೂಕುಮ ಪೂರಾ ಕರ್ಚಾಯ್ತು. +ಕರ್ಚಾದ ಕೂಡ್ಲೆ ಬಾಗ್ಲ ಹೆರಬಿದ್ ಬಂದು ಅಂಗಳದಲ್ಲಿದ್ದ ಯೇಳೂ ಜನ್ರನ್ನೂ ಕುಳ್ಸಕಂಡಿ. . . ಯೇಳ್ ಹೆಡ್ಮೇಲೆ ಕುಳ್ಸಕಂಡಿ ಪಾತಾಳಲೋಕಕ್ ನೆಡ್ದ. +ಇವರೀಗ್ ಯೆಚರಾಯ್ತು; ನೋಡೂವರಿಗೆ ಅಲ್ಲಿ ಅವನೂ ಇಲ್ಲ; ಯೇಳ ಜನನೂ ಇಲ್ಲ. +ಹಳ್ ಮಂತ್ರಿಸ್ ಕೊಟ್ಟದ್ದು ಕೈವಳಗೇ ಅದೆ. +“ಆವಾಗ್ ಹೇಳ್ ಕೊಟ್ಟದ್ದ ತಾನು ತಪ್ದನಲೋ. . . ” ಈಗ ತಂಗಿ ಹತ್ರ ಹೇಳ್ತದೆ. +ತಾನು ನಿನ್ಗೆ ವಳ್ಗ್ ವಂದ ತೊಳ್ಸಿಗಿಡ ನೆಡತೇನೆ. +ಇದ್ಕೆ ದಿವಸಾನು ನೀನು ನೀರ ಹಾಕು ಅದು ಬಾಡ್ತೇ ತನ್ಗ್ ಸೀಕಾಯ್ತು ಹೇಳ್ ತಿಳ್ಕೋ. +ಬಾಡಲಿಲ್ಲದ್ರೆ ತನ್ಗ್ ಶೀಕಾಗ್ಲಿಲ್ಲ ಹೇಳ್ ತಿಳ್ಕೊ” ಹೇಳಿ ನೆಟ್ಟಿ, ಇದು-- “ಗಂಡನ ತಂದ್ರೆ ಮನಿಗ್ ಬರ್ತೇನೆ. +ಗಂಡ ಶಿಕ್ಕದಿದ್ದರೆ ಬರುದಿಲ್ಲ” ಹೇಳ್ ಹೇಳಿಕ್ ಹೋಗ್ತದೆ ತಂಗಿ ಹತ್ರೆ. +ಬೆಟ್ಟ ಹಿಡ್ಕಂಡ್ ಕಂಡ ಕಂಡವರ ಕೂಡೆ ಕೇಳ್ತೇ ಹೋಯ್ತು. +ಕೇಳ್ತಾ ಕೇಳ್ತಾ ಹೋಗ್ ಹೋಗ್ ಹೋಗ್ ಹೋಗಿ ಊಟಿಲ್ಲ, ನಿದ್ರಿಲ್ಲ, ಯೇನಿಲ್ಲ. . . ದೊಡ್ಡ ಆರಣ ಅಡವಿಗೆ ಹೋಗ್ ಮುಟ್ತು. +“ಬಂದಾರ ದಿವಸಾಯ್ತು. +ತನ್ನ ಪ್ರಾಣನೇ ತೆಕ್ಕಳಬೇಕು” ಹೇಳಿ ಮನ್ಸನಲ್ ನಿಚ್ಚಯ ಮಾಡ್ಕಂಡ್ತು. +ಇಲ್ಲಿ ತೊಳ್ಸಿಗಿಡ ಸಲ್ಪ ಬಾಡ್ತು. +ಅಲ್ಲಿ ಕೆಳಗೋ ಕಪ್ಪು ಅಂದಕಾರದಲ್ ದೊಡ್ಡ ಹೊಂಡ ಇತ್ತು. +ಹೊಂಡದಲ್ ಹಾರ್ ಬಿಟ್ತು. +ಹಾರ್ದ ನಂತ್ರದಲ್, ಕೆಳಗೆ ವಂದ್ ಋಷಿ ತಪಶಿಗ್ ಕುಂತಿದ್ದ. +ಆವಾಗ ಋಷಿ ಕೈಹೀಂಗ್ ಮಾಡ್ ಕುಂತಿದ್ದ. +ಕೈ ಬಿಟ್ಟಿ ಸಮಾ ಅವ್ನ ಕೈ ಮೇಲೆ ಮೇಲಿಂದ ಹಾರಿ ಕೆಳ್ಗ್ ಬಿತ್ತು. +ಹಾಂಗಾಗಿ ಅದ್ಕೆ ಅವ್ರ ಕೈ ಮೇಲ್ ಬಂದಿ ಬೀಳೂಕ್ ಹೋಗಿ ಪೆಟ್ಟಾಗಿ ಆವಾಗೆ ತಪಸ್ಸಿಗ್ ಕೂತ ಋಷಿ, “ಇದ್ಯೇನು?ಬಿತ್ತು?” +ಹೇಳ್ ನೋಡೂರೊಳಗೆ “ಹುಡ್ಗಿ!ಯಾಕ್ ಬಂದೆ? +ನರಮನ್ಸರ್ ಬರುವಂಥ ಸ್ಥಳವೇ ಅಲ್ಲ ಇದು. +ದೊಡ್ಡ ಗಟಾರಲ್ವೋ ಇದು? +ಕಾಲ್ ಜಾರ್ ಬಿದ್ಯೋ? +ಬೇಕ್ ಹೇಳ್ ಜಾರ್ದ್ಯೊ?” ಕೇಳ್ದ ಅದ್ರ ಹತ್ರೆ. +ಆವಾಗದ್ ಹಿಂದಾದ ಸಂಪೂರ್ಣ ಕತೆ ಋಷಿ ಹತ್ರ ಹೇಳ್ತು. +“ತನ್ ಗಂಡ ಯೆಲ್ ಸಿಕ್ಕೂನಪ್ಪಾ? +ನೀವೇ ಕಾಣ್ಸ್ ಕೊಡೂದೇಯ. +ನೀವ್ ಕಂಡಿದ್ರೋ ಹೇಗೆ?” ಹೇಳ್ ಕೇಳ್ತು. +“ನಿನ್ನ ಗಂಡನ ವಿಷಯ ನನ್ ಹತ್ರ ಸಾದ್ಯಿಲ್ಲ. +ಮುಂದೆ ಹಣ್ನ ಮರದೆ. +ಹಣ್ ತಿಂಬೂಕೆ ಬೆಳಿಗ್ಗೆ ನಸ್ಕಿಗೆ ಯೆರ್ಡ್ ಗರಡ ಬರ್ತದೆ. +ಅದ್ರ ಹತ್ರೆ ಕೇಳಿದ್ರೆ ಅವ್ ಹೇಳ್ತವೆ. +ನೀ ಹೋಗಿ ಬೆಳಗಾಗುವವರಿಗೆ ಅಲ್ಲಿರಬೇಕು. +ಹಣ್ನ ಮರಕೆ ಬರೊವರಿಗೆ, ಬಂದ ನಂತ್ರದಲ್ಲಿ ಅದ್ರ ಹಿಡ್ದಿ ಅವರ ಹತ್ರ ನೀನ್ ಕೇಳಬೇಕು. +‘ತನ್ನ ಗಂಡನ ಕಂಡಿರೋ ಹೇಗೆ? +ಇದ್ದ ಸಂಗ್ತಿ ಹೇಳಿ ಯೆಲ್ಲಿದ್ದಾನೆ?’ ಕೇಳಬೇಕು. +ಅವಾಗವ್ರು ನಿನ್ಗ್ ಹೇಳತಾರೆ.” +ಆಗ ಅದು ಅದ್ರಂತೆ ಅಲ್ ಹೋಗಿ ಮಾರನೆ ದಿವ್ಸ ಬೆಳಿಗ್ಗೆ ಆ ಗರಡನ ಹಿಡ್ದು ಕೇಳ್ತು. +ಆವಾಗ ಗರಡ ಹೇಳ್ತದೆ-- “ನಿನ್ನ ಗಂಡ ಇದ್ದದ್ ಹೌದು. +ಆದ್ರೆ ಇಲ್ಲಿಲ್ಲ. +ಅವನ ರಾಜ್ಯವೇ ಬೇರೆ. +ಪಾತಾಳಕ ಹೋಗಿ ನಿನ್ ಕೂಡ ತರೂಕ್ ಸಾದ್ಯದ್ಯೋ?” ಹೇಳಿ ಹೇಳ್ತು ಹೋಯ್ತು. +ಗರಡಂಗೆ ಪಾತಾಳದಲ್ ಮುಂದ್ ಹೋಗಲಿಕ್ಕೆ ಅವಕಾಶ ಇಲ್ಲ. +ಹಾಗಾಗಿ, ಅವರಿಗ್ ಪತ್ತ (ಉಪಾಯ) ಇಲ್ಲದೆ, ಹುಡ್ಗಿ ತಕಂಡ್ ಅಲ್ ವಂದ್ ಬಯಲಿತ್ತು ಅಲ್ಲಿಗೆ ಕರ್ಕ ಬಂದು, ಮುಂದ್ ಹೋಗ್ದೇಯ ಕಲ್ ವಟ್ಟೆಲಿ ಆ ಹುಡ್ಗಿಗೆ ಜಾಗ ತೋರ್ಸಿ, “ಇಲ್ಲೇ ಕುಳ್ಳು. +ಈ ಬಯಲಿಂದನಲ್ ಕೆರಿ ಈದು. +ಅಲ್ಲಿಯ ಅಟ್ಟೂ ಪ್ರಾಣಿ ನೀರ್ ಕುಡಿಲಿಕ್ಕೆ ಇಲ್ ಬರ್ತದೆ. +ಅದ್ರಲ್ ನಿನ್ ಗಂಡ ಇದ್ದಾನೋ ಹೇಗೆ ಅಂದು ನೋಡಿಟ್ಕೋ. +ಅವರಿಗ್ ಮಾತ್ರ ನೀನು ಕಾಣಸ್ಕೊಳಬೇಡ. +ನಾವು ಯೆರ್ಡೂ ಹಕ್ಕಿ ನಾಳೆ ಬೆಳಿಗ್ಗೆ ಬರತೇವೆ” ಹೇಳಿ ಹೋದ್ರು ಅವರು. +ಅವ್ರ್ ಹೋದ ನಂತ್ರದಲ್ಲಿ ಸಾದಾರಣ ಹತ್ ಗಂಟೆ ಟಾಯ್ಮಿಗೆ ಈ ಸರ್ಪ ಅಟ್ಟೂ ನೀರ್ ಕುಡೀಲಿಕ್ಕೆ ಬರಲಿಕ್ಕೆ ಹಣ್ಕಿದ್ರು. +ಬಂದಿ ನೀರ್ ಕುಡ್ದಿ ಹೋಗ್ತಾರೆ ಸಾವ್ರಗಟ್ಲೆ. +ಇದು “ತನ್ ಗಂಡ ಯಾರು? +ಹೇಳಿ ಪರಾಕ್ಸಿ ಹಿಡಿಬೇಕು” ಹೇಳಿ ನೋಡ್ತಾ ಅದೆ. +ಆವಾಗಾ ಯಾವದ ನೋಡೀರೂ ಗಂಡನ ನಮೂನಿ ರೂಪಾನೇ ಕಾಣೂದಿಲ್ಲ. +ಪರ್ತಿಯೊಂದೂ ವಂದೇ ನಮೂನಿ ಬಣ್ಣ, ದೊಡ್ಡ, ಶಣ್ಣ. . . ಏಳ್ ಹೆಡೆ ಮಾಶೇಶ ಕೊನೆಗೆ ಅದು ವಂದೇ ಬಂತು. +ಯೆಲ್ಲ ಬಂದೂ ನೀರ್ ಕುಡ್ದು ಹೋದ ನಂತ್ರದಲ್ಲಿ ಅದು ಆವಾಗೆ ಅದು ನೋಡ್ತಾ ಉಳೀತು. +ಹಾವ್ ಹೋಗಿ ಸೊಂಡಿ ಹಚ್ದ ಕೂಡ್ಲೇಯ ಪದಕರಾಜಾದ ಅವ. +ಆವಾಗವ ಯೇನ್ ಮಾಡ್ತ ಕೇಳ್ದ್ರೆ, ಮೂರು ಬಾರಿ ನೀರ್ ಮೊಗದಿ ಮೇಲಿಂದ ಬಿಟ್ತ. + “ಪದ್ಮಾವತೀ. . . ” ಹೇಳ್ ಮೂರ್ ಬಾರಿನೂ ನೀರ್ ಬಿಟ್ಟ. +ಅದ್ರ ನಂತ್ರದಲ್ ಅವ ನೀರ್ ಕುಡ್ಕಂಡಿ, ಮತ್ತದೇ ರೂಪ ಹಾವಿಂದೇ ರೂಪಾಗಿ ಹೋದ ಅವ. +ಯೇಳ ಹೆಡೆ ಇತ್ತು. +ಮಾರನೇ ದಿವಸ ಬೆಳಿಗ ಕಪ್ ಬಿಡಬೇಕಿದ್ರೆ ಗರಡ ಯೆರಡೂ ಅಲ್ ಬಂತು. +ಆವಾಗ ಕೇಳ್ದ್ರು, “ನಿನ್ ಗಂಡನ ಗುರ್ತ ಹಿಡಿದಿದ್ಯೋ ಹೇಗೆ?” ಆವಾಗ, “ಹೌದು. +ಇದ್ದಿದ್ ಹೌದು. . . ” ಹೇಳಿ ಹೇಳ್ತದೆ. +“ಹಾಗೇ ಯೇನೇನ್ ಮಾಡ್ದ ಅವ? +ಹೇಗ್ ನೀನು ಗುರ್ತ ಹಿಡ್ದೆ?” ಹೇಳ್ ಕೇಳ್ತು ಗರಡ. +ಆವಾಗಿದ್ ಆಗ ಆದ ಹಾಂಗೇಯ ಹೇಳ್ತು. +“ಹಾಗಾದ್ರೆ, ನೀ ಇವತ್ತೇ ವಂದ್ ಕೆಲ್ಸ ಮಾಡು. +ಯೇನಪ್ಪಾ ಅಂದ್ರೆ. . . ಅವ ಬರುದು ಲಾಸ್ಟ್. . . ಕಡಿಗೆ ಅಲ್ವೋ? +ವಂದೇ ಬರತದಲ್ಲೋ? +ಅವ ಮನಶ ಆಗಿ ಯಾವಾಗ ನೀರ ಬಿಡ್ತ, ಆ ಟಾಯ್ಮ್‌ನಲ್ ನೀನು ಹೋಗಿ ಅವನಿಗೆ ಪತ್ತೆಯಿಲ್ಲದೆ ಹೋಗಿ ತಕ್ಲ ಹೊಡೀಬೇಕು ಅವನಿಗೆ. +ಆವಾಗ್ ಅವ್ನ ಹತ್ರೆ ಕೇಳಬೇಕು. +ಹೇಳ್ಕಂಡೇಯ ಅವನ ತಕಂಡ್ ಹೋಗೂಕೆ ಸಾದ್ಯಾಗತದೆ. +ಹೀಗ್ ಮಾಡಬೇಕು” ಹೇಳಿ, ಅಟ್ ಹೇಳಿ ಗರಡ ಹಾರ್ ಹೋಯ್ತು. +ಆವಾಗಿದು ಅದೇ ರೀತಿಯ ಮಾಡ್ತು. +ಆವಾಗವನ ಹತ್ರೆ ಕೇಳ್ದ ಕೂಡಲೇಯ ಅವ ಹೇಳ್ದ, “ನೀನು ಆ ಯೋಳ ಹೆಡೇ ಮಾಸೇಸ ರಾಜಿದ್ದ. +ಅಲ್ಲಿ ರಾಜ್ನ ಕಲ್ ಹೋಗಿ ನೀನು ತಂದೊಂದ ಮಾಲು ಅದೆ ಇಲ್ಲಿ. +ಆ ವಸ್ತು ದಯವಿಟ್ಟು ತನ್ಗ್ ಕೊಡಬೇಕ ಹೇಳಿ ನೀನು ಅವ್ನ ಹತ್ರ ಕೇಳಬೇಕು. +ನೀ ಹೋಗಬೇಕಿದ್ರೆ ವಂದ್ ಹಿಡಿ ಕಡ್ಡಿಯಂತಾದ ಸಾಮನ ಕಿಟ್ಟುಕ್ಕಿಲ್ಲ, ಮೆಟ್ಟೂಕೂ ಇಲ್ಲ. . . ದಾಟ್ ಹೋದ್ರೂ ಅಡ್ಡಿಲ್ಲ. +ಈ ರೀತಿಂದಾ ಹೋಗ್ ರಾಜ್ನ ಹತ್ರ ಕೇಳ್ಕಂಡಿ, ರಾಜ ಯೇನ ಹೇಳ್ತಾನೆ ಹೇಳಿ ತನ್ಗ್ ನೀ ನಾಳಿಗೆ ತೆಳೆಸ್ಬೇಕು” ಅಂದ. +“ಆಗೂದು. . . ” ಅಂತು ಇದು. +ಆವಾಗಲ್ಲಿಂದ ಅದು ಹಾದೀ ಹಿಡೀತು. +ತಡ ಮಾಡಲಿಲ್ಲ-- ರಾಜ್ನ ಮನಿಗ್ ಹೋಗುಕೇ. +ವಂದ್ ಮಾರ್ ಹೋಗೂವರಿಗೆ ವಂದಿಪ್ಪತ್ತೈದ್ ಸರ್ಪ ಬಂತು. +ಅದ್ನ ತಪ್ಸ್ಕಂಡ್ ಅದ್ಕೆ ಯೆಲ್ಲೆಲ್ಲೂ ತಟ್ಟದೆ ಹಾರಿತ್ತು. +ಆವಾಗ ರಾಜನಿದ್ದಲ್ ಹೋಗಿ, “ತನ್ನ ವಂದು ವಸ್ತದೆ ನಿಮ್ಮ ಹತ್ರ. +ಮತ್ ತನ್ ವಸ್ತು ತನ್ಗ್ ಕೊಡಬೇಕು” ಹೇಳ್ ಕೇಳ್ಕಂಡ್ತು‌. +ಆವಾಗ ರಾಜ ಹೇಳ್ದ, “ನಿನ್ನ ವಸ್ತು ನೀ ತಕಂಡ್ ಹೋಗೂಕಡ್ಡಿಲ್ಲ. +ನರಮನ್ಸರು ಯಾರೂ ಇಲ್ ಬಂದರೇ ಇಲ್ಲ. +ನೀನ್ ಬಂದೆ. +ಬಾಳ ಪುಣ್ಯಾತ್ಮಾ. +ನಿನ್ನ ಸ್ವಂತದ್ ಯಾವದು ಹೇಳ್ ಅದೇಯ ‘ನೀ ತಂದು ಹೇಳಿ’ ಕೈಯಲ್ ಕಿಟಬೇಕು. +ಬೇರೇದ್ ಮಾತ್ರ ನೀನು ಯಾವದೂ ಮುಟ್ಟೂಕಿಲ್ಲ” ಹೇಳಿ ಹೇಳ್ದ. +ಆವಾಗದ ತಾ ಇದ್ದ ಕಲ್ಲ ವಟ್ಟಿಗೇ ಬಂತು. +“ನಾಳೆ ಹನ್ನೆರಡ್ ಗಂಟಿ ಮೇಲ್ ನೀ ಇಲ್ಲಿಗ್ ಬರಬೇಕು. +ಬಂದಿ ತಕಂಡ್ ಹೋಗಬೇಕು. . . ” ಹೇಳಿದ. +“ಕರಸ್ತೆ ಯೆಲ್ಲಾವ” ಹೇಳಿ. +ಮಾರನೆ ದಿವ್ಸ ಹನ್ನೆರಡ ಗಂಟೆ ನಂತ್ರ ಬಂತು. +ಬೆಳಿಗ್ಗೆ ನೀರ ಕುಡಿಲಿಕೆ ಬಂದಾಗ ಹೇಳ್ತು ಪದ್ಕರಾಜ ಹತ್ರ. +“ಹಗರೆ ರಾಜ ಹೀಗ್ ಹೇಳಿದ, ‘ತಕಂಡ್ ಹೋಗೂಕ್ ಅಡ್ಡಿಲ್ಲ, ಆದ್ರೆ ಬೇರೇದ ಕಿಟ್ಟುಕಿಲ್ಲ. +ನಿಂದ್ ಯಾವ್ದ ಹೇಳಿ ಅದ ಮಾತ್ರ ಕೈಯಲ್ ಹಿಡೂಕ ಅಡ್ಡಿಲ್ಲ. +ನೀನು ತಕಂಡ್ ಹೋಗೂಕಡ್ಡಿಲ್ಲ’ ಹೇಳಿ ರಾಜ ಹೇಳನೆ. . . ” ಅಂತು. +“ತಾ ಯಾವ್ದೂ ಹೇಳಿ ಹಿಡೀಬೇಕು? +ಯೆಲ್ಲವ್ದು ವಂದೇ ನಮೂನಿಲದೆ. . . ”ಆಗ ಪದ್ಕರಾಜ ಹೇಳ್ತಾನೆ, “ಹೀಗೆ ಸಾಲಾಗಿ ನಿಲ್‌ಸ್ವ ರಾಜ ಆ ಸಾಲ್ನಲ್ ನೀ ನೆಡ್ದ್ ಹೋಗಬೇಕು. +ಬಲಬದಿಗೆ ಚಕಚಕಚಕ್ನೆ ಹೊಳುದು ನಿನ್ಗ್ ಕಾಣೂದು. +ಅದ್ನೇ ನೀ ಕಿಟಬೇಕು. +‘ಇದೇ ಹೌದು ತನ್ದು. . . ’ ಹೇಳಿ.’’ ಅಟ್ ಹೇಳಿ ಅವ ಹೋದ. +ಹಾಗೆ ಮಜ್ಜಾನ ಮೇಲೆ ಅವ ಹೋದದ್ದೇಯ, ಇದೂ ಬಂದ್ಕಂಡ್ ಸೀದಾ ಹೋಯ್ತು. +ಇದು ಚಕಚಕಚಕ್ನೆ ಹೊಳ್ವೆಲ್ ನೋಡ್ತು. +ಅದೇ ತಂದು ಹೇಳಿ ಹೋಗಿ ಕಿಟ್ತು. +ಅವಳಿಗ್ ವಪ್ಸ್‌ತ ಯೇಳ್ ಹೆಡಿ ಮಾಶೇಶ, “ಶಾಬಾಸ್!ಹುಟ್ರೆ ಹುಟ್ಬವದು” ಹೇಳಿ, “ನಿನ್ನ ಗಂಡನ ನೀ ತಕಂಡ್ ಹೋಗು” ಹೇಳ್ ಕೊಟ್ಟ. +ಕಲ್ಸವಟ್ಟಿಗೆ ಗಂಡನ್ನೂ ಕರಕಂಡು, ಮನ್ಸರೂಪಾದಲ್ ವಟ್ಟುಕೂಡಿ, ಯೆರಡ ಗರಡ ಬೆಳಿಗ್ಗೆ ಬಂದು, ಗರಡ ರಕ್ಕೆ ಮೇಲೆ ಹತ್ತಿ ತಮ್ಮ ಮನೆಗೆ ಬಂದರು. +ಅವರಿಗೆ ಹಾಲು-ಹಣ್ಣು ಕೊಟ್ಟು ಕಳ್ಸದ್ರು. +ಸುಕದಲ್ ರಾಜ್ಯ ಆಳ್ತ ವಳುದ್ರು. +ಮೈಸೂರ ರಾಜ, ಬೆಂಗಳೂರ ರಾಜ (ಇದ್ದರು). +ಮೈಸೂರ ರಾಜ ಕುದ್ರಿ ಹತ್ಕಂಡ್ ಬೆಂಗಳೂರಿಗೆ ಬಂದ. +ಬೆಂಗಳೂರ ರಾಜನ ಹೆಂಡತಿ ತಲೆ ಬಾಚ್ತಾ ಇದ್ದಳು. +‘ಇವಳನ್ನು ಹೇಗೆ ವಲಿಸಲಿ?’ ಮೈಸೂರಿಗೆ ಹೋಗಿ, ಮಂತ್ರಿಗೆ ಹೇಳಿದ. +“ಬೆಂಗಳೂರಲ್ಲಿ ಒಂದು ಹೆಣ್ಣನ್ನು ನೋಡಿದೆ. +ತಲೆ ಬಾಚ್ತಾ ಇದ್ದಳು. +ಯಾರು?ಯೆಲ್ಲಾಯ್ತು?ಹಕಿಕತ್ ತಿಳಿದು ಬಾ. . . ” ಅಂದ. +ಮಂತ್ರಿ ಹೋಗಿ ಚೌಕಶಿ ಮಾಡಿದ. +ಹೆಣ್ಣು ರಾಜನ ಹೆಂಡತಿ ತಿಳಕಂಡು, ಈ ರಾಜನ ಕೈಲಿ ಹೇಳಿದ. +ರಾಜ, “ಅದರ ಹೇಗೆ ತರಬೇಕು?” ಮಂತ್ರಿ ಕೈಲಿ ಕೇಳಿದ. +ಮಂತ್ರಿ, “ಉಪಾಯ ಹೇಳುವೆ, ಜೂಜಾಟ ಮಾಡತಾರೆ. +ಈ ಪಣ ಮಾಡಿದ. . . ಸೋತವ ಗೆದ್ದವ ಐದ್ ಬೆರಳ ಇಟ್ಟದ್ದ ಕೊಡೂದು‌. +ಇದೇ ಪಣ ಹೇಳು. . . ” ಬೆಂಗಳೂರ ರಾಜಗೆ ಹೇಳಿ ಕಳಿಸಿದ (ಜೂಜಾಟ ಮಾಡಬೇಕು). +“ಗೆದ್ದವ ಐದು ಬೆರಳಿಟ್ಟಿದ್ದು ಕೊಡೂದು. +ಇದೇ ಪಣ. . . ” ಹೇಳಿದ. + “ಹೂಂ. . . ” ಅಂದ ಬೆಂಗಳೂರ ರಾಜ. +ಕುಮಟಾದ ಬಟ್ಟರು ಬಡವರು-- ಬುದ್ವಂತ್ರು. +ಹೆಂಡತಿ ಜರಿತು. +ಇವ, “ನಾಳೆ ನಾ ಬೆಂಗಳೂರಿಗೆ ಹೋಗ್ತೆ, ಹೆದರಬೇಡ. . . ” ಅಂದ ಹೋದ್ರು. +(ಬೆಂಗಳೂರ ರಾಜನ ಮನೆಗೆ ಬಂದರು.) ಮೇನೆ ಕುರ್ಚಿ ಮೇನೆ ಕೂತಬಿಟ್ಟರು. +ಬಟ್ಟರು ಹೆಂಡತಿಗೆ ಸಂಬಂಧ ಹೇಳಿ ಸತ್ಕಾರ ಮಾಡಿದ. +ಹೆಂಡತಿ, “ಗಂಡನ ಸಂಬಂಧ ತನಗೆ ಗುರ್ತಿಲ್ಲ. . . ” ಹೇಳಿ ಸತ್ಕಾರ ಮಾಡಿದಳು. +ರಾಜ ಊಟ ನಂತರ, “ಯಾಕೆ ಬಂದಿರಿ?” ಕೇಳಿದ. +“ಹತ್ತು ಸಾವಿರ ರೂಪಾಯ್ ಬೇಕಿತ್ತು.” +“ಯಾಕೆ?” +“ಯಾಪಾರ ಮಾಡಲಿಕ್ಕೆ.” ಹಿಂಡ್ತಿ ಸಂಬಂಧಿಕರೆಂತ ಕೊಟ್ಟ. +“ಯಾರು ಅವರು?” ಕೇಳಿದ, “ನಿನ್ನ ಸಂಬಂಧ ಹೇಳಿ ಹತ್ತು ಸಾವಿರ ರೂಪಾಯ್ ಕೊಟ್ಟೆ” ಅಂದ ರಾಜ. +ಪೊಲೀಸರ ಕರೆತರಲು ಕಳಿಸಿದ. ‘ಕರಕಬರಬೇಕು. ’ ಪೋಲೀಸರು ಹೋದಾಗ ದೊಡ್ಡ ರುಮಾಲ, ಬಸ್ ಸ್ಟಂಡ್‌ನಲ್ಲಿದ್ದರು. +ಇದ್ದ ಹಕೀಕತ್ ಹೇಳಿದರು. +ಬಂದು ಕುರ್ಚಿ ಮೇಲ್ ಕೂತ್ರು. +“ಊರೆಲ್ಲಿ?ಹೆಸರೇನು?” “ಕುಮಟಾ, ನನ್ ಹೆಸ್ರು ಬಂದೂವರೆ ಪಂಚಾಯತದಾರ. +ಸ್ವಲ್ಪ ದಿನದಲ್ ತಿರುಗಿ ಕೊಡತೇನೆ” ಅಂದ್ರು. +ಮೈಸೂರ ರಾಜ ಪಗಡಿ ಆಡಲಿಕ್ಕೆ ಬಂದ. +ಬೆಂಗಳೂರ ರಾಜ ಸೋತ. +ಕೈಬೆರಳಿಟ್ಟಿದ್ ಕೊಡುವ ಪಣ. +“ಸ್ವಲ್ಪ ದಿನದಲ್ ಕೊಡತೇನೆ” ಅಂದು ಬೆಂಗಳೂರ ರಾಜ ಕಳಿಸಿದ. +ಹಿಂಡ್ತಿ ಕೈಲ್, “ಐದ ಬೆರಳ ಯಾವದರ ಮೇಲೆ ಇರಿಸುವ? +ತ್ರಿಜೋರಿ ಮೇಲ್ ಇರಿಸಿದರೆ ಕೊಡುವ” ಅಂದ. +“ನನ್ ಮೇನೇ ಕೈಯಿಟ್ರೆ ನನ್ ಕೊಡಬೇಡವೋ? +” ಅಂತು. “ಹೌದು. . . ” +“ಊರೇ ಬಿಟ್ ಬಿಡ್ವ” ಹೇಳಿ, “ಕುದ್ರಿ ತಕಂಡಿ ನೆಡೆವನಾ. . . ” ಅಂತು. +ಗಂಡ-ಹೆಂಡ್ತಿ ಕುದ್ರಿ ಹತ್ತಿ ಹಳ್ದಿಪುರಕ್ಕೆ ಬಂದರು. +ಕುಮಟಾದ ಸಾಯಬ ಐನೂರು ರೂಪಾಯ್ ತಕಂಡಿ ಬಟಕಳಕೆ ಹೋಗು ಹಾದಿ ಮೇನೆ ಈ ಹೆಣ್ಣ ನೋಡಿ ಮನಸ್ಸಾಯ್ತು. +“ಇದ್ಕೆ ಏನ್ ಕೊಡಬೇಕ್ರೀ?” ಕೇಳಿದ. +‘ಕುದ್ರಿ ಕೇಳತಾನೆ’ ಅಂತ ತಿಳಿದು, “ಇದ್ಕೆ ಐನೂರ ರೂಪಾಯ್ ಕೊಡಬೇಕ್” ಅಂದ. +ಕೆಳಗಿಳಿದರು ಗಂಡ-ಹಿಂಡ್ತಿ. “ಛೇ. . ಛೇ. . ಇವಳನ್ನೇ ಕೇಳಿದೆ” ಅಂದ. +“ಮಾತಲ್ಲ ಹೇಳಿ ಇಲ್ಲಾದ್ರೆ. . . ” ಅಂದ. +ಹೆಂಡತಿ ಕೊಟ್ಟ. +ಅದರ ಕುರಿ ಅಂಗಡಿ ವಳಗೆ ಕೂರಿಸಿದ. +ವ್ಯಾಪಾರಕ್ಕೆ ರಾಜ ಎಲ್ಲಿ ಹೋಗಬೇಕು? +‘ಕುಮಟಾದಲ್ಲಿ ಒಂದೂವರೆ ಪಂಚಾಯತದಾರ ಅವನೆ. +ಹತ್ತು ಸಾವಿರ ರೂಪಾಯ್ ಕೊಟ್ಟಿದ್ದೆ’ ಹೇಳಿ ಹೋದ. +ಮೂರು ನಾಲ್ಕು ಹುಡುಗರು ದನ ಕಾಯ್ತ ಇದ್ರು. +ಕೇಳಿದ, “ಒಂದೂವರೆ ಪಂಚಾಯತದಾರನ ಮನೆ ಯಾವದು?” + “ಒಂದೂವರೆ ಪಂಚಾಯತದಾರನ ಕಾಣಿಸಿಕೊಟ್ಟರೆ ಏನು ಕೊಡತೆ?” ಅವರು ಮೊದಲೇ ಕೇಳಿದ್ದರು. +“ವಂದೂವರೆ ಪಂಚಾಯತದಾರನ ಮನೆ ವೋ. . . ಅಲ್ಲಿ. . . ಶಿಮೀಟಿನ್ ಕಟ್ಟೆ ಕಾಣುವಲ್ಲಿ. . . ಹೆಮಾ ಬೆಲ್ಲ ತರಬೇಕು” ಅಂದರು ಹುಡುಗರು. +ಅವಗೆ ಅರ್ಥಾಗಲಿಲ್ಲ. +“ಅಂಗಡಿಯಲ್ಲಿ ಬೆಲ್ಲ ಕೊಡಿ” ಅಂದ. + “ಅದಲ್ಲ. . . ” ಅಂದ ಹಠ ಹಿಡಿದರು. +ವಂದೂವರೆ ಪಂಚಾಯತದಾರ, “ಏನು ಗದ್ದಲ?” ಕೇಳಿದ‌. +“ಹೆಮಾ ಬೆಲ್ಲ” ಅಂದರು. +‘ಹೆಮಾ ಬೆಲ್ಲ ಯಾವುದು?’ ಕೇಳಿದಾಗ ತಟ್ಟೆ ತೋರಿದರು. +ಮಾರು ತಟ್ಟೆವಳಗೆ ಬೆಲ್ಲ ಹಾಕಿ ಜಾಗದಲ್ಲಿಟ್ರು, ತಕಂಡ ಹೋದರು. +“ನೀವು ಒಬ್ರೇ ಬಂದ್ರಿ ಬೆಂಗಳೂರ ರಾಜ. . . ” +“ಕುಮಟೆ ಸಾಯ್ಬ, ಇದಕ್ಕೆ ಯೇನು ಕೊಡಬೇಕು?’’ ಕೇಳಿದ. +‘‘ಐನೂರು ರೂಪಾಯಿ. . . ’’ ಅಂದಿ ಸಾಯಬ. +‘ಆಯ್ತು’ ಅಂದ. +ಕುರಿತಲೆ ತೂಗ್ ಹಾಕಿದ್ರು, ಕುರಿತಲೆ ಬಿಡಿಸಲಿಕ್ಕೆ ಸಾಯಬ ನೋಡಿದ. +‘‘ನಾ ಹೇಳಿದ್ದು ಕುರಿತಲೆ ಅಲ್ಲ. . . ನಿಮ್ಮ ತಲೆ. . . ಅದ್ನೇ ಕೊಡಿ.’’ ‘‘ನೀವು ರಾಜನ ಹೆಂಡತಿ ತಂದಿದ್ರಲ್ರೀ. +ನಾನು ಒಂದೂವರೆ ಪಂಚಾಯತದಾರ ಮಾತು ಪ್ರಕಾರ ಕೊಡಿ. . . ” +“ತಪ್ಪಾಯ್ತು!ಛೇ. . . ಛೇ. . . !ನೀವು ಬೆಂಗಳೂರ ರಾಜನ ಹೆಂಡತಿ ತಕ್ಕಂಡ್ಹೋಗಿ” ಅಂದ ಸಾಯಬ. +“ಎರಡು ಸಾವಿರ ರೂಪಾಯ್ ದುಡ್ಕೊಡು” ಅಂದ, ಕೊಟ್ಟ. +ರಾಜ ಪೇಟೆ ನೋಡೂಕ್ ಬಂದ. +ಕುರುಡಿ, ಅವಳಿಗೆ ಮೂರು ಮಕ್ಕಳು. +ಯಾರಾದರೂ ಸಿಕ್ಕರೆ ಆಧಾರ ಆಗತಿತ್ತು ಅಂತ. +ಕುರುಡಿ ಬಂದು ಅವನನ್ನು ಹಿಡಿದು ಒದರತದೆ. +“ನನ್ನ ಗಂಡ ಇವ. . . ಎಲ್ ಹೋಗಿದ್ದೆ ವರ್ಸಗಟ್ಲೆ?” ಹೇಳಿ ಬೊಬ್ಬಿ ಹೊಡೆದಳು. +ಜನ್ರು ಅವನ್ನ ಹೊಡೆದರು. +ಕುಂತ ಬಿಟ್ಟ. +ಮನಿಗ್ ಕರಕಂಡ್ ಹೋದ. . . ಪೇಟೆಯಲ್ಲಿ ಒಂದೂವರೆ ಪಂಚಾಯತದಾರ್‌ನ ಹುಡುಕತ ಬಂದ. +‘‘ಈ ಮುದ್ಕಿ ತನ್ ಗಂಡ ಅಂತದಲ್ಲೊ?’’ ಬಂದವರೆ ಪಂಚಾಯತದಾರ ಮುದಕಿ ಮನೆಗೆ-- ಅವನ ಅವಸ್ಥೆ ಕೇಳಿ. +ಅವಳ ಮನೆಗೆ ಒಂದು ಬಾಗಿಲಲ್ಲಿ ಡಂಗರ ಹೊಡಿತಾರೆ. +ಅವ ಕಳಿಸಿದ ಯೆರಡು ಹುಡುಗರು, ತಂದೆಗೆ ಇರುವ ಮೂರು ಹುಡುಗರನ್ನು ಕೊಟ್ಟರೆ ಐದು ಸಾವಿರ ರೂಪಾಯ್ ಕೊಡ್ತೆ. . . ಹೇಳಿ ಡಂಗರ ಹೊಡೆಸ್ರು. +ಮೊದಲೇ ಸೂಚನೆ ಕೊಟ್ಟಿದು, ‘‘ಮೂರು ಹುಡುಗರ ತಾ ಕೊಡ್ತೆ” ಅಂದ ರಾಜ. +“ಎಲ್ಲಿದ್ದಾ ಗಂಡ?ಯಂತದು? +ನಾ ಸಾಕಿದ ನನ್ನ ಮಕ್ಕಳು. . . ” ಅಂದಳು. +ಒಂದೂವರೆ ಪಂಚಾಯತದಾರ ರಟ್ಟಿ ಹಿಡಿದ, “ಯಾಕೆ ಕೆಟ್ಟವರ ಮಾಡಲಿಕ್ಕೆ ಬಂದೆ? +ಪಡಪೋಶಿ ಮಾಡಿದೆ? +ಗಂಡಲ್ಲ ಅಂತ ಈಗ ಹೇಳತೆ. +ಹುಡುಗರು ಮಾತ್ರ ನಿನ್ನವರೋ?” ಅಂತ ವದ್ದ. +“ಆಧಾರವಾಗಲಿ ಅಂತ ಹೇಳಿದೆ. . . ” ಅಂದು ಅತ್ತಳು. +ಗಂಡನ ಕರದು ಗಂಡ - ಹೆಂಡತಿ ಒಟ್ಟಾದರು. +ಬೆಂಗಳೂರ ರಾಜಗೆ, “ಇಲ್ಲಿ ಯಾಕೆ ಬಂದಿರಿ? +ನನಗೆ ಕೊಟ್ಟ ಹತ್ತು ಸಾವಿರ ರೂಪಾಯ್ ತಕಂಡ್ ಹೋಗುಕ್ಕೇ ಬಂದೀರೋ?ಯಾಕೆ?” ಕೇಳಿದ. +“ಜೂಜಾಡಿದೆವು (ಮೈಸೂರ ರಾಜನೂ, ನಾನೂ) ಸೋತವರು ಗೆದ್ದವರು ಬೆರಳಿಟ್ಟಿದ್ದು ಕೊಡಬೇಕು. +ಹೆಂಡತಿ ಮೇಲೆ ಕೈ ಮಾಡಿದರೆ ಅಂತ ಊರ ಬಿಟ್ಟು ಬಂದೆ” ಅಂದ. +“ಪೋನೋ ಮಾಡಿರಿ. . . ಮೈಸೂರ ರಾಜನಿಗೆ ಹೇಳಿದ ಪ್ರಕಾರ ನಾನು ಕೊಡತೇ” ಅಂತ ಹೇಳಿದ. +ಬೆಂಗಳೂರಿಗೆ ಬೆಂಗಳೂರ ರಾಜ ಮನೆಗೆ ಬಂದ (ಉಪಾಯ ಹೇಳಿಕೊಟ್ಟು ಕಳಿಸಿದ). +ಆಚಾರಿ ಕರದಿ, “ಏಣಿ ಮಾಡಿಕೊಡು” ಅಂದ. +“ಮೂರ ಹರಿ (ಮೆಟ್ಟಿಲು) ಹತ್ತಿದ ಕೂಡ್ಲೆ ಅದು ಗರ್ಕನೆ ತಿರಗಬೇಕು. +ನೂರು ರೂಪಾಯ್ ಕೊಡ್ತೇನೆ. +ಯೆರಡ ತಾಸಿನೊಳಗೆ ಮಾಡಿಕೊಡಬೇಕು” ಅಂದ. +ಸ್ಪ್ರಿಂಗ್ ಹಾಕಿ ನಾಲ್ಕೈದು ಹರಿ ಮಾಡಿದ. +ಮಾಳಿಗಿ ಮೇಲೆ ಬೆಂಗಳೂರ ರಾಜನ ಹೆಂಡತಿ ಕೂರಿಸಿದ. +ಮೈಸೂರ ರಾಜ ಬಂದ. +ಎಲ್ಲಾ ನೋಡಿದ. +ಎಲ್ಲೂ ಬೆಂಗಳೂರ ರಾಜನ ಹೆಂಡತಿ ಕಾಣಿಸಲಿಲ್ಲ. +ಮೆತ್ತಿನ ಮೇಲೆ ಅದೆ. +ಮೂರ ಹರೆ ಹತ್ತಿದ ಕೂಡಲೆ ಗರ್ರನೆ ತಿರಗಿಬಿಡ್ತು. +ಏಣಿ ಪಟ್ಟಿ ಹಿಡಿದ. +ಒಂದೂವರೆ ಪಂಚಾಯತದಾರ ಅಲ್ಲೇ ಕೂತಿದ್ದ. +ಅವನ ರಟ್ಟೆ ಹಿಡಿದ, “ನೀವು ಕೈ ಇಟ್ಟಿದ್ದು ಏಣಿ ಮೇಲೆ. +ತಕಂಡ್ ಹೋಗಿ. . . ಮಾತಿನಂತೆ” ಅಂದ. +ಮೈಸೂರ್ ರಾಜ ಗೆದ್ದಕಂಡಿ ಕೈಮುಗ್ದ. +ಏಣಿ ತಕಂಡ್ ಹೋಗುದು ಸುಮಾರಲ್ವ? +ಒಂದೂವರೆ ಪಂಚಾಯ್ತದಾರಗೆ ಕೈ ಮುಗಿದ, “ನಾ ಹೋಗ್ತೆ. . . ” ಅಂದ. + “ಕೂತಕಳ್ಳಿ. ಏನೂ ಬೇಡದಿದ್ದರೆ ನಿಲ್ಲಿ.” + ಆಸ್ರಿ ತರಸಿ ಬೆಂಗಳೂರ ರಾಜನ ಹೆಂಡತಿಗೆ ಬಲತೊಡಿ ಮೇಲೆ ಕೂರಿಸಿದ. +ಮೊದಲಿನ್ ಪದ್ಧತಿ ಎಡತೊಡೆ ಮೇಲೆ ಹೆಂಡತಿ, ಬಲ ತೊಡೆ ಮೇಲೆ ಹುಡಗಿ. +ಮೈಸೂರ ರಾಜ, “ನನ್ನ ಮಗಳಾಗಿದಾಳೆ. +ಅವರಿಗೆ ಮದಿವೆ ಮಾಡಿಸುವೆ” ಅಂದ. +ಮೈಸೂರಲ್ಲಿ (ಬೆಂಗಳೂರ ರಾಜನಿಗೂ, ಅವನ ಹೆಂಡತಿಗೂ) ಮದುವೆ ಮಾಡಿದ. +ಒಂದೂವರೆ ಪಂಚಾಯತ್ದಾರ ಬಂದಿದ್ದ. +ಬೆಂಗಳೂರ ರಾಜ ಒಂದೂವರೆ ಪಂಚಾಯತ್ದಾರನಿಗೆ ಬಹುಮಾನ ಕೊಟ್ಟ್ ಇಟ್ಕಂಡ. +ರಾಜ ಹರಿಕೀರ್ತನೆ ಮಾಡ್ಲಿಕ್ಕೆ ನಾಲ್ಕು ಭಟ್ಟರು (ಅವರಿಗೆ) ಉಂಬಳಿ ಕೊಟ್ರು. +ಒಂದಿನ ಒಂದು ಬಟ್ಟ, “ಸೀತಾದೇವಿ ಅಶೋಕವನದಲ್ಲಿ ದುಕ್ಕ ಮಾಡತದೆ” ಅಂದ. +“ಶೋಕವಿಲ್ಲದ ವನದಲ್ಲಿ ರಾಜನ ಹೆಂಡತಿ ಹೇಗೆ ದುಕ್ಕ ಮಾಡ್ತದೆ?” ಕೇಳಿದ. +“ನಿರ್ದಿಷ್ಟ ಮಾಡಿ ಹೇಳಬೇಕು” ಅಂದ. +ಯಾರಿಗೂ ಹೇಳಲಿಕ್ಕೆ ಆಗಲಿಲ್ಲ. +ರಾಜ ಊರೂರಿಗೆಲ್ಲ ಡಂಗ್ರ ಹೊಡೆದ. +“ಯಾರು ಇದನ್ನು ಖಂಡನೆ ಮಾಡ್ತ್ರೋ ಅವರನ್ನು ಹರಿಕೀರ್ತನೆಗೆ ಇಟ್ಕಳ್ತೆ” ಅಂದ‌. +“ಸಬೆಯೊಳಗೆ ಕೈನೆಗಿಬೇಕು” ಅಂದ. +ಕೈನೆಗಿಬೇಕು, ಯಾರೂ ಏಳಲೇ ಇಲ್ಲ. +ಚಪ್ಪರದ ಹೆರಗೆ ಮುದಿಹಪ್ಪು ಬ್ರಾಹ್ಮಣರಿಗೆ ಸುದ್ದಿಯಾಯ್ತು. +ಬಾಳ ವಿದ್ವಾಂಸರು ಕಟ್ಟೆಮೇನೆ ಮನಗಿದ್ದರು. +“ತಾನು ತನಗೆ ತಿಳಿದಷ್ಟರ ಮಟ್ಟಿಗೆ ಹೇಳ್ತೆ” ಹೇಳಿ ಕೈನೆಗೆದರು. +ಕೈ ಮುಕ್ಕಂಡಿ “ಆ ಅಸೋಕವನದಲ್ಲಿ ಸೀತಾದೇವಿ ದುಕ್ಕ ಮಾಡ್ತಾ ಇದೆ. +ಆದರೆ, ಪಾಪ. . . ಆ ಅಸೋಕ ಅಂತ ವನದಲ್ಲಿ ಸೀತಾದೇವಿ ದುಃಕ ಮಾಡ್ತದೆ” ನಾಕ ಜನ ಬಟ್ಟರ ಬಿಟ್ಟು ಅವರನ್ನೇ ನೇಮಿಸಿಕೊಂಡರು‌. +ಇವರೂ ನಾಲ್ಕು ಜನ ಬಟ್ಟರಿಗೆ ಊಟಕ್ಕಿಲ್ಲ. +ದಾಡಿ ನೆರೆದು ಉದ್ದ ಆಗ್ತದೆ. +ಚೌರಕ್ಕೆ ರಾಜರ ಮನೇಲಿಂದೆ ಆಗತಿತ್ತು. +ರಾಜನ ಗಡ್ಡ ಮಾಡೂಕೆ ಕೆಲಸಿ ಗಣಪಯ್ಯ ಬಂದ. +“ಬಟ್ರೆ, ಆ ಹೊಸ ಬಟ್ರಿಗೆ ಹೆರಗೆ ಹಾಕಿಕೊಟ್ರೆ ನನಗೇನು ಕೊಡ್ತ್ರಿ?” ಕೇಳ್ದ. +“ಉಂಬಳಿ ಬರು ಜಾಗದಲ್ಲಿ ಅರ್ದ ಬಾಗ ನಿನಗೆ ಕೊಡ್ತ್ರು” ಅಂದರು. +ಬಂದ ಗಳಿಗಿಗೊಂದ ಸರ್ತಿ ಅವರ ಸೊಕ (ಸುಮ್ನೆ) ನೋಡ್ತ ಇವ. +“ಯಾರು?” ಅವರು ಕೇಳಿದ್ರು. +“ನನ್ನಣ್ಣ ಅವ” ಅಂದ. +“ಪಕ್ಕಾ ಗುರ್ತಾಗಲಿಲ್ಲಾ” ಅಂದ. +ನಾಲ್ಕು ಜನ ಚಂಡಾಲರ ಕರಿಸಿ, ‘‘ಇವನ ತಲಿ ಹೊಡೆದು ಬರಬೇಕು” ಅಂದ ರಾಜ. +ಬ್ರಾಹ್ಮಣನಿಗೆ ಹೆದರಿಕೆ. +ಸಿಂದು ಮಾಡುಕೆ ಯೆಲ್ಲಿ ಹೋಗಬೇಕು ಹೇಳಿ. +ಯೇನೂ ಮಾತೇ ಆಡಲಿಲ್ಲಾ. +ಚಾಂಡಾಲರು ಅವರನ್ನು ತಕಂಡಿ ಹೋದ್ರು. +ಸುಮಾರು ದೂರ ಅಮ್ಮನವರ ದೇವಸ್ಥಾನವಿತ್ತು. +“ನಾನು ಕೆರಿವಳಗೆ ಸ್ವಲ್ಪ ಸ್ನಾನ ಮಾಡ್ಕಳ್ತೆ” ಹೇಳಿದರು. +ಸ್ನಾನ ಮಾಡಿ ದೇವರ ಮುಂದೆ ಕೈಮುಕ್ಕಂಡ್ ನಿತ್ರು. +ವಂದ್ ಹರಳು ಬಂದು ದಡಕ್ಕನೆ ಕೈಗೆ ಬಿತ್ತು. +ಹೀಗೆ ನೋಡಿದರು. +“ನನಗೆ ತಲೆ ಹೊಡಿತ್ರು. +ನನಗೆ ಯಾಕೆ ಕೊಟ್ಟೆ?” ಕೇಳ್ದರು. +ದೇವರ ಹತ್ರೇ ಅವ ಅಕಟಿಸಿದ. +ಮತ್ತೊಂದು ಕಲ್ಪನೆ ಹೊಳಿತು. +“ಪರತ್ ತಕಂಡ್ ಹೋಗಿ ರಾಜನ ಕೈಲಿ ಕೊಡಬೇಕು. +ಪಾಲಾಗಬೇಕಾರೆ ನನ್ನ ಪಾಲಿಗೊಂದು, ತಮ್ಮನ ಪಾಲಿಗೊಂದು ಇದ್ದಿತ್ತು.” ಚಾಂಡಾಲರ ಕೈಲಿ ಹೇಳಿದ್ರು. +“ನನ್ನ ಹತ್ತರೆ ಬಾಳ ಅಮೂಲ್ಯ ವಸ್ತು ಅದೆ. +ಅದು ರಾಜಗೆ ಕೊಡಬೇಕು” ಅಂದ್ರು. +ಅವರನ್ನ ಚಾಂಡಾಲರು ಪರತ್‌ ಕರಕೊಂಡ್ ಬಂದ್ರು. +ಅದನ್ನೂ ರಾಜನ ಮುಂದೆ ಇಟ್ಟ್ರು. +ರಾಜ ಕೇಳಿದ, “ಎಲ್ಲಿತ್ತು?” +“ಕೆಲಸಿ ಗಣಪಯ್ಯ, ನಾನು ಪಾಲಾಗಬೇಕಾದ್ರೆ ಒಂದು ನನ್ನ ಪಾಲಿಗೆ, ಇನ್ನೊಂದು ಅವನ ಪಾಲಿಗೆ ಬಂತು. +ನಿಮಗೆ ಕೊಡ್ವ ಅಂದೆ ಬಂದೆ” ಅಂದ್ರು ತಲೆ ಹೊಡೆವುದು ನಾಳೆಗಿಟ್ರು. +ಗಣಪಯ್ಯನ ಕರಸಿ, “ಎಷ್ಟು ಕಿಮ್ಮತ್ತಾದರೂ ಕೊಡ್ತೆ. +ಹುಡಗಿಯ ಕೆಮಿಗೆ ಹಾಕಿದರೆ ಬಹಳ ಚಲೋದು. +ನಿನ್ನ ಅಣ್ಣ ಹೇಳಿದ, ‘ನಿನ್ನ ಹತ್ತಿರ ಒಂದದೆ’ ಹೇಳಿ’’ ಅಂದ, “ಇಲ್ಲದಿದ್ದರೆ ತಲೆ ಹೊಡಿಸ್ತೆ” ಅಂದ ರಾಜ. +“ವಡೆಯಾ, ಅವನು ನಿಜವಾಗಿ ನನ್ನಣ್ಣನಲ್ಲ. . . ” + “ಹಾಗಾದರೆ, ಯಾಕೆ ಹೇಳಿದೆ ನೀನು?” + “ನಾ ಗಡ್ಡ ಮಾಡುಕೆ ಅವರ ಮನೆ ದಾರೆ ಬಂದೆ. +ಅವರು ತೀಡತಿದ್ದರು. +ಇದ್ದ ಹಕೀಕತಿದು. +ನನ್ನ ಪಾಲಿಗೆ ಬರಲಿಲ್ಲ” ಅಂದ. +ರಾಜನಿಗೆ ಪಶ್ಚಾತ್ತಾಪ ಬಹಳವಾಗಿ ಪಾದಕ್ಕೆ ಬಿದ್ದು ಅವರನ್ನು ಹರಿಕೀರ್ತನೆಗೆ ಇಟ್ಟುಕೊಂಡ. +ನಾಕ್ ಜನ ಮಕ್ಕಳು. +ನಾಕ್ ಜನ ಮಕ್ಕಳಾದ್ರೆ ಅವ ಮಕ್ಕಳ ಸಾಕ್ವಲ್ಲಿವರೆಗೆ ಸಾಕ್ದಾ. +ತನ್ ಹತ್ರೆ ಸಾದ್ಯಿಲೆ ಅಂಬಟ್ ಹೊತ್ಗೆ, ಆ ಮಕ್ಕಳ ನಾಕ್ ಜನ್ರ ಕರಿಸಿ-- ಕತ್ಲಿಗೆ ಊಟಾದ ಕೂಡ್ಲೆ ಅಪ್ಪ-ಮಕ್ಕಳು ಕೂತ್ಕಂಡ್ ಮಾತಾಡತ್ರು. +ಯೇನಂತ ಮಾತಾಡುತ್ರು ಅಂದ್ರೆ, “ಇಲ್‌ವರಿಗೆ ನಾನು ನಿಮ್ಮ ಸಾಕಿ-ಸಲಗಿ ದೊಡ್ಡ ಮಾಡ್ದೆ. +ಇನ್ನೆ ನನ್ ಹತ್ರೇನ್ ಸಾದ್ಯಾದ್ದಲ್ಲ.’’ +ಹೆರಿ ಮಗ್ನ ಕರ್ಯಕಂಡ್ ಹೇಳ್ತ, “ಯಾವ ತರದಲ್ ನೀನು ನಾ ದುಡ್ದಂತೇ ದುಡ್ದಿ. . . ತಮ್ಮಂದಿರು, ನೀನು ವಟ್ಟೂವಾ ಹೊಟ್ಟಿ ಹೊರಿತಿ?” ಕೇಳ್ದ. +ಹೆರಿಮಗ ಹೇಳ್ತ, ಯೇನಂದ್ರೆ-- “ನೀ ದುಡ್ದಂತೇ ನಾನೂ ದುಡೀತೆ; ಯೇನೂ ಹೆದ್ರೂದ್ ಬೇಡ. +ನೀನು ಸಾಕ್ದಂತೆ ನಾ ಸಾಕ್ತೆ ತಮ್ಮದಿರ?” ಅಂತಿ ಹೇಳ್ದ. +“ಯಾವ ಲೆಕ್ಕದಾಗ್ ನೀ ದುಡಿತೆ ಹೇಳು ತನ್ಗೆ?” ಹೇಳ್ದ. +ಅವಾಗ, “ಮತ್ತೇನಲ್ಲ, ವಂದ್ ತೊಲಿ ಬಂಗಾರ ಯಾರಾದ್ರೂ ಕೊಟ್ರೆ, ವಂದ್ ಚೂರು ಬಂಗಾರ ಜಪ್ಪಿ ನಾಲ್ಕಾಣಿ ತೂಕದ ಚಿನ್ನ ತಗದಿ, ಅದ್ರಿಂದ್ ಕದ್ದಿ ಇಟ್ಕಂಡಿ, ನಾಲ್ಕಣಿ ತೂಕದ ತಾಮ್ರ ಹಾಕಿ, ವಂದ್ ತೊಲಿಗ್ ವಂದ್ ತೊಲಿ ಬರಾಬ್ಬರಿ ಮಾಡಿ, ತಾನವರ್ಗ್ ಕೊಡ್ತೆ” ಅಂತ್ ಹೇಳ್ ಹೇಳ್ದ. +“ಅದ್ರ ಮೇನ ತಾನ್ ಮಾಡ್ವಂತ ಉಜ್ಜೋಗ ಯೇನದೆ ನಿಂಗ್ ಗೊತ್ತಾಯ್ತು” ಹೇಳಿ ಮಗನ ಕೂಡಾ ಹೇಳ್ದಾ. +ಅವಾಗೆ, ಮತ್ತೊಬ್ಬ ಮಗನ ಕರ್ದ. +ಕರದಿ ಹೇಳ್ತ ಮಗ್ನ ಕೂಡೆ. +ಯೇನಂದ್ ಹೇಳ್ದ್ರೆ- “ನಿನ್ನ ಪಕ್ಕನೆ ಬೇರೆ ವಂದ್ (ಮದುವೆ) ಹಬ್ಬಾದ್ ಕೂಡೆ ಅಣ್ಣ ಬೇರೆ ಹಾಕ್ ಬಿಟ್ನಪ್ಪ. +ನೀನ್ ಹೇಂಗ್ ಮಾಡ್ ಹೊಟ್ಟೆ ಹೊರ್ಕಂತೆ?” ಕೇಳ್ದ. + “ಅಪ್ಪಾ. . . ತನ್ನ ಇಸಯಾ ನೀನ್ ಯತಿ ಮಾಡೂದೇ ಬೇಡ. +ವಂದ್ ತೊಲಿ ಬಂಗಾರ ಯಾರಾದ್ರೂ ನನ್ ಕೂಡೆ ಕೊಟ್ರೆ, ಯೆಂಟಾಣಿ ತೂಕ್ದ ಚಿನ್ನ ಅದ್ರಿಂದ ತಗ್ದ, ಯೆಂಟಾಣಿ ತೂಕ್ದ ತಾಮ್ರ ಹಾಕಿ ವಂದ್ ತೊಲಿಗ್ ಬರಾಬರಿ ಮಾಡಿ, ತಾನವ್ರ್ಗೆಚಿನ್ನಕೆ ಚಿನ್ನ ತೋರ್ಸ್ ಮಾಡ್ ಕೂಡ್ತೆ” ಅಂದ. +ಆವಾಗೆ ಹೇಳ್ದ ಅಪ್ಪ, “ಹಾಂಗಾದ್ರೆ, ನನ್ನ ಹಾಂಗ್ ದುಡೀತೆ ನೀನು. +ನಿನ್ ಮೇನ್ ಯೇನ್ ಬೇಜಾರಿಲ್ಲೆ” ಅಂದ. +ಇನ್ನಿಬ್ಬರು ಮಗದೀರುಳದ್ರು. +ಆ ಮಗದೀರಲ್ಲಿ ಮತ್ತೊಬ್ಬ ಮಗನ ಕರದ. +ಕರದಿ ಹೇಳ್ದ, “ಮಗನೇ. . . ಅಣದಿರ್ ಯೆಯ್ಡ ಜನ ದೊಡ್ಡವ್ರಾದ್ರು. +ಮತ್ತೆ ನೀನು ಶಣ್ಣವನಾಗಿದ್ದೆ. +ಯಾವ ಲೆಕ್ಕದಾಗ್ ಹೊಟ್ಟಿಹೊರಿತೆ ಹೇಳಬೇಕು” ಅಂತ ಹೇಳ್ದ. +“ತಾನು ಯಾವ ಲೆಕ್ಕದಗಾರೂ ತನ್ ಜೀವನ ಹೊರಿತೆ ಹ್ಯಾಂಗೂ ಇರ್ಲಿ. . . ” ಅಂದ. +“ಹ್ಯಾಂಗ್ ಮಾಡ್ತೆ ನೀನು?” ಕೇಳ್ದ. +“ವಂದ್ ತೊಲಿ ಬಂಗಾರ ಯಾರಾದ್ರೂ ಕೊಟ್ರೆ ಹನ್ನೆಯ್ಡ್ ಆಣಿ ತೂಕದ ಚಿನ್ನ ತೆಗದಿ, ಹನ್ನೆರಡಾಣಿ ತೂಕದ ತಾಮ್ರ ಬೆರಕಿ ಮಾಡಿ, ವಂದ್ ತೊಲಿಗ್ ಬರಾಬರಿ ಮಾಡಿ, ಅದ್ಕೆ ಚಿನ್ನಕ್ ಚಿನ್ನಾನೇ ಮಾಡಿ ಕೊಡ್ತೆ ತಾನು” ಅಂದ. +“ನಿನ್ ಮೇನೆ ನನ್ಗೆ ಹೆದ್ರಕಿಲ್ಲೆ” ಅಂದ. +ಇನ್ನೊಬ್ಬ ಕಿರ್ ಮಗ ಉಳ್ದ, ಅವ್ನ ಕರದಿ ಮಾತಾಡ್ಸಬೇಕಂದ್ ಕರದ. +ಕರದ ಕೂಡ್ಲೆ ಮಗ ಬಂದ. +“ಅಣ್ಣದಿರೆಲ್ಲಾ ಅವರವರ್ ಇದ್ದಿ ಅವರವ್ರು ಮಾಡ್ತ್ರು. +ನೀನು ಶಣ್ಣವನಾಗಿದ್ದೆ. . . ನಿನ್ ಹೊಟ್ಟಿ ನೀನು ಹೊರಕಂಬೇಕು ಮಗನೇ.” ಅಂದ. +“ಅಪ್ಪಾ. . . ತನ್ ಇಸಯ ಹೇಳೂದೇ ಬೇಡ. +ಅಣದಿರ್ ಮಾಡ್ದಕಿಂತೂ ಮೂರ್ ಪಟ್ ಮಾಡತೋರತೆ” ಅಂದ, “ನನ್ ಬಗ್ಗಾಗಿ ನೀನು ಆಲಚ್ನಿನೇ ಮಾಡೂದ್ ಬೇಡ” ಅಂದ. +“ಹ್ಯಾಂಗ್ ಮಾಡ್ತೆ ಮಗನೇ?ಹೇಳಲೇಬೇಕು” ಅಂದ. +“ವಂದ್ ತೊಲಿ ಬಂಗಾರ ಚಿನ್ನ ಮಾಡು ಅಂತ ನನ್ನ ಕೈಲಿ ಕೊಟ್ರೆ. . . ವಂದ್ ತೊಲಿನೂ ನಾನು ಹುಗ್ಸಿ ಇಟ್ಕಂಡಿ, ವಂದ್ ತೊಲಿ ತಾಮ್ರನೇ ಹಾಕಿ ಚಿನ್ನಕ್ ಚಿನ್ನ ಮಾಡ್ ತೋರ್ಸಿ ತಪ್ಪಿ ಹಾಕ್ತೇನೆ ತಾನು” ಅಂದ. +ಅಪ್ಪಗೆ ಬಾಳಷ್ಟ್ ಸಂತೋಸಾಗ್ ಹೋಯ್ತು. +ಅಪ್ಪ, ಮಕ್ಕಳು ರಾತ್ರಿಗ್ ಮಲಿಕಂಡ್ರು. +ಅಲ್ ಯೇನಾಗಿತ್ ಅಂತ್ ಹೇಳದ್ರೆ. . . ಆ ಊರನ ವಬ್ಬ ರಾಜ, ಅವ್ನ ಮಂತ್ರಿ ಹಾದಿಗಳ್ದ ಹೋಪಾಕ ಅದು ಇಷ್ಟು ಮಾತೂ ಕೇಳಿ ಮನಿ ಬದಿಗೆ ಬಂದ್ಕಂಡಿ, ‘ಈ ಸೊನಗಾರ ಶೆಟ್ಟಿ ಯಾವನ್ಗೂ ಮಾಡೂದೆ ಇದೇ ತರದ ಕೆಲಸ. +ಇವರಿಗೆ ಯಾವ ತರದಗ್ ಸೊಕ್ ಮುರಿಸ್ಬೇಕಾಯ್ತು? +’ ಅಂದ್ ಹೇಳಿ ಆಲೋಚ್ನಿ ಮಾಡೂತ ಹಾಯ್ಕಂಡ(ರಾಜ). +ಆಲಚ್ನಿ ಮಾಡಿ, ಮಾಡಿ-- ‘ತಮಗೊಂದ ದೇವರ ತಲಿಗೆ ಕಿರೀಟಿಲ್ಲೆ. +ಚಿನ್ನ ಬಂಗಾರ ಯೇನ್ ತಮ್ಗ್ ಬರಗಾಲಿಲ್ಲೆ. +ಈ ಸೊನಗಾರ ಶೆಟ್ಟಿ ಮಗನ ಕಿರಿಯವ್ನ ಕರಕಂಡ್ ಹೋಗಿ ತಮ್ಮ ಮದ್ಯಲ್ಲೇ ಇಟ್ಕಂಡಿ ಬೆಳಗಾ ಮುಂಚೆ ಯೆಂಟ್ ಗಂಟಿಗೆ ತಾನು ನಮ್ಮ ಮನ್ಯಲೆ ಕೆಲ್ಸ ಮಾಡೂದು, ಸಂಜಿಗೆ ಆರ್ ಗಂಟಿಗೆ ಮನ್ಯಲೆ ಅವ್ನ ಬಿಟ್ ಹಾಕೂದು. +ವಳ್ಗೆ ಹೊಕ್ ಬೇಕಂದ್ರೆ-- ಅವನ ಸೊಲ್ಗಿ ಮಾಡಿ ವಳ್ಗ ತಕಂಬ್ದು, ಹೆರ್ಗ್ ಹೆಯ್ದೆಬೇಕಿದ್ರೆ ಮೈ ಮೇನ್ ಯೇನೂ ಇಲ್ಲದಾಂಗ್ ಮಾಡಿ ಅವ್ನ ಹೆರಗ್ ಬಿಡೂದು. +ಇದ್ರಂತೆ ಮಾಡಿ, ಅವನ ಹತ್ರ ದೇವ್ರ ತಲಿಗೊಂದ್ ಕಿರೀಟ ಮಾಡ್ಸಬೇಕು. +ಕೆಳಿ (ಕಳು) ಉಜ್ಜಾಗದಲ್ಲಿ ಯಾವ ರೀತಿಲ್ ಕಳತಾ ಅಂತ ಹೇಳದು ತಾ ಕಾಣಬೇಕ್‌’ ಅಂತ್ಹೇಳಿ ರಾಜರು ತಲಿಯಲಿ ಆಲೋಚ್ನಿ ಮಾಡ್ಬಿಟ್ರು. +ಮಾಡ್ಕಂಡ್ ಮನಿಗ್ ಹೋದ್ರು. +ಬೆಳಗಾದ ಕೂಡ್ಲ ಮಂತ್ರಿ ಕಳ್ಸ್ ಕೊಟ್ರು, “ಆ ಸೊನಗಾರ ಶೆಟ್ಟಿ ಕಿರಿಮಗನ ಕೂಡೆ ತಮ್ಮನ್ಗ್ ಬಂದ್ ಹೋಗು ಅಂತ ಹೇಳು. . . ” ಅಂದಿ ಕಳ್ಸ್ ಕೊಟ್ರು. +ಮಂತ್ರಿ ಬಂದವ ಸೊನ್ಗಾರ್ ಶೆಟ್ಟಿ ಕಿರಿ ಮಗ್ನ ಕೂಡೆ ಹೇಳ್ತ, “ಸೊನಗಿರ್ ಶೆಟ್ರೇ. . . ನಮ್ ರಾಜ್ರ ಒಂದಪ ನಿನಗೆ ಕೂಡೆ ಬರೂಕ್ ಹೇಳರೆ. . . ” ಅಂದ. +ಅಷ್ಟ್ ಕೇಳ್ದ ಕೂಡ್ಲೆ ತಡಮಾಡಲೆಲ್ಲ, ದಡಬಡ ಯೆದ್ದೇ ಬಿಟ್ಟು. +ರಾಜರ ಅಪ್ಪಣೆಯಾದ ಮೇಲೆ ಬಂದ ಚಣವೇ ಇವ ಉಳೂಲ್ ಪರವಾನ್ಗಿ ಹೇಳ್ದ. +ಸರ್ನೆ ಯೆದ್ದ ರಾಜ್ರ ಮನಿಗೊಗಿ ಹೆಬ್ಬಾಗ್ಲಲ್ ನಿತ್ತ ಕೈ ಮುಗ್ದ. + “ರಾಜರೇ. . . ನಮ್ ಕರ್ದ ಕರಿ ಯಾಕೆ?” ಅಂದ್ ಹೇಳ್ ಕೇಳ್ದ. +“ಮತ್ ಕರ್ದ ಕರಿ ಯೇನಿಲ್ಲೆ, ದೇವ್ರ ತಲಿಗೆ ಕಿರೀಟಿಲ್ಲೆ, ಅದಕಾಗಿ ನಿನ್ ಕೂಡ ಬಪ್ಕ ಹೇಳಿದ್ದು, ತಾನೂ ಬಂಗಾರ ಕೊಡ್ತೆ” ಅಂದ, “ಯೆಷ್ಟ ಬಂಗಾರ ತಾಗ್ತದೆ ಅಂದಿ ತಾನ್‌ ಕೊಡ್ತೆ. . . ತಾನ್ ಹೇಳ್ದಂಗ್ ದೇವ್ರ ತಲಿಗೆ ಕಿರೀಟ ಮಾಡ್ ಕೊಡ್ಬೇಕು” ಅಂದ್ ಅಷ್ಟ್‌ ಹೇಳಿದ ಕೂಡ್ಲೆ, “ನಮನಮೂನಿ ಹಳ್ಳ್ ನಿಮ್ಗ್ ನಾನು ತಂದ್ ಕೊಡ್ತೆ” ಅಂದ. +“ಬೆಳಗಾದ ಕೂಡ್ಲೆ ಯೆಂಟ್ ಗಂಟೆಗೆ ನಮ್ಮನಿ ವಳ್ಗೆ ನೀನು ಬಂದ್ ಹೊಗ್ಬೇಕು. +ಸಂಜಿಗ್ ಆರ್ ಗಂಟಿಗೆ ನಿನ್ ಜಬತಿ ಮಾಡಿ, ನಾನು ನಿನ್ನ ಹೆರ್ಗ್ ಬಿಡ್ತೆ. +ನಿನ್ ಯೇನ್ ಸಾಯತ್ ಬೇಕು ಯಲ್ಲಾ ಹೊತ್ಕಂಡಿ, ನೀನು ನಾಳಿಕ್ ಯೆಂಟ್ ಗಂಟೆಗೆ ಬರಬೇಕು” ಹೇಳ್ದ. +ಅವಾಗ ಅವನ ಬೇಕಾದ ಹತಾರ ಹಿಡ್ಕಂಡ, ಯೆಲ್ಲಾ ಹಿಡ್ಕಂಡಿ ಮಾರದಿವ್ಸೆ ಯೆಂಟ್ ಗಂಟೆಗೆ ಸೀದಾ ರಾಜರ ಮನಿಗ್ ಬಂದ. +ಆವಾಗ ರಾಜರು ವಂದ್ ಮಣ ಬಂಗಾರ ಕೊಟ್ರು. +‘ಅದ್ಕೆ ಯೆಲ್ಲೆಲ್ಲಿ ಯೇನೇನ್ ಹಳ್ ಬೇಕ ಅಂತ ಹೇಳು. . . ’ ಹೇಳ್ದ್ರು. +ವಂದಿವ್ಸಕೆ ಯೆಟ್ ಕೆಲ್ಸ ಮಾಡೂನೋ ಅಷ್ಟ ಕೆಲ್ಸ ಆ ದಿವ್ಸ ಮಾಡ್ದ. +ಹಸರು, ನೀಲಿ, ಹಳನಲ್ಲ್ ಚೀಟಿ ಮಾಡಿ ಅವ ಕೊಟ್ಟ. +ಸಂಜಿ ಆರ್ ಗಂಟ್ಯಾಯ್ತು. +ಜಬತಿ ಮಾಡಿ ಅವ್ನ ಹರ್ಗ್ ಬಿಟ್ರು. +ಅಲ್ಯೇನ್ ಕೆಲ್ಸ ಮಾಡ್ತಾನೆ ಹೇಳದ್ರೆ-- ಅವ ರಾತ್ರಿಗೆ ಮನಿಗ್ ಹೋದವ ವಂದ್ ಮಣ ತಾಮ್ರ ತಕಂಡ. +ಅಲ್ಲಿ ಯೆಟ್ ಕೆಲ್ಸ ಮಾಡಿದ್ದು, ಇಲ್ಲಿ ರಾತ್ರಿಗೆ ಅಷ್ಟೇ ಕೆಲಸ ಮಾಡ್ದ. +ಮಾಡ್ತಿರವಾಗೆ ಬೆಳಗಾಗಿ ಯೆಂಟ್ ಗಂಟೆಯಾಯ್ತು. +ರಾಜರ ಮನಿಗೆ ಸೀದಾ ಬಂದ್, ವಂದಿವ್ಸ ಯೇನು ಕೆಲ್ಸ ಮಾಡುಕಾಗ್ತದೆ ಅಟ್ ಕೆಲ್ಸ ಮಾಡ್ದ. +ಸಂಜಿ ಆರ್ ಗಂಟ್ಯಾಯ್ತು. +“ತನ್ ಮನಿಗೆ ತಾನ್ ಹೋತೆ” ಅಂದ್‌ ಹೇಳ್ದ. +ಜಪ್ತಿ ಮಾಡ್ ಬಿಟ್ರು. +ಚಿನ್ನದ ಕೆಲಸ ಯೆಟ್ ಮಾಡಿದ್ದ ಮನಿಲ್ ತಾಮ್ರದ ಕೆಲ್ಸ ಅಟ್ ಮಾಡ್ದ. +ಕಿರೀಟ ಮುಗಿತು. +ಯೆಲ್ಲೆಲ್ಲಿ ಹಳ್ಳಿಡಬೇಕೋ ಚಿನ್ನದ ಕಿರೀಟಗೆ ಇಟ್ಟ. +ಮನೀಲೂ ಇದ್ದತಾನೆ. +ಮನಿಲ್ ಬಳಿವೋಡ್ನ ಹಳ್ಳ ಅದೇ ನಮೂನಿ ಮಾಡ್ದ. +ಇಲ್ಲಿ ಯೆಲ್ಲೆಲ್ ಹಳ್ ಇಟ್ಟಿದ್ದ ಕಿರೀಟಕಾ ತದ್‌ರೆತೆ (ತದ್‌ರೂಪ) ಹಳ್ಳಿಟ್ಟ. +ಅಲ್ಲಿದೂ ಮುಗ್ದ್ ಹೋಯ್ತು; ಇಲ್ಲಿದೂ ಮುಗ್ದ್ ಹೋಯ್ತು. +ಆವಾಗೆ ಅಷ್ಟಂದ ನಂತ್ರ ರಾಜರ ಕೂಡ ಹೇಳ್ದ ಯೇನಂತಂದ್ರೆ, “ನಮ್ಮ ಕಿರೀಟ ಈ ಹೊತ್ಗೆ ಮುಗೀತು ರಾಜರೇ. . . ನನ್ಗೆ ಸಲ್ಪ ಹಣ ಕೊಟ್ಬಿಡುಬೇಕು ರಾಜರೇ” ಅಂದ. +ಆವಾಗ ರಾಜರು ಹೇಳ್ದ್ರು, “ನಾಳಿಕ್ ದೇವರ ತಲಿಗೆ ಕಿರೀಟ ಯೇರ್ಸೂದು. +ನೀನು ಬರಲೇಬೇಕು. +ನನ್ನ ಲೆಕ್ಕಾಚಾರ ನಾಳಿಕ್ ಮಾಡಕೊಡು” ಅಂತ ಹೇಳ್ದ್ರು. +ತನ್ನ ಮನಿಗೆ ತಾನ್ ಹೋದ. +ಆ ದೇವಸ್ಥಾನದ ಬಾಗ್ಲ ಮುಂದೆ ವಂದ್ ಕೆರಿತ್ತು. +ತಾಮ್ರದ ಕಿರೀಟ ಮನ್ಯಂದ ತಕಂಬಂದಿ ಆ ಕೆರಿಯೊಳಗೆ ಹುಗ್ಸ್ ಇಟ್ಟ. +ಆವಗೆ ಬೆಳಗಾಯ್ತು. +ಸೀದಾ ರಾಜನ ಮನಿಗ್ ಬಂದ. +ರಾಜರ ಮನಿಗ್ ಬಂದಿ, ರಾಜರು ಅಷ್ಟು ಬಟ್ರಗೆಲ್ಲಾ ಹೇಳಿ, ದೊಡ್ ಹೋಮ ನಿಯಮಾದ ಮೇನ್ ಆ ಸೊನಗಾರ ಶೆಟ್ಟಿ ಕೂಡೆ ಅದೇ ಬಂಗಾರ್ದ ಕಿರೀಟ ಕೊಟ್ರು. +‘‘ಆ ದೇವರ ಕಿರೀಟ ಕೈಲಿ ಚಂದ ಮಾಡ್ ತೊಳ್ದಿ ಬಟ್ರ ಕೂಡ್ ಕೊಡು’’ ಅಂತ ಹೇಳಿ ರಾಜ್ರು ಕೊಟ್ರು. +“ಅಡ್ಡಿಲ್ಲ ಸ್ವಾಮೀ. . . ” ಅಂತ ಹೇಳ್ ಕೈಮುಗ್ದ. +ರಾಜರು ಮತ್ ಸೊನ್ಗಾರ ಶೆಟ್ಟಿ ಬರ್ವಂತಾ ಜನ ಯೆಲ್ಲವ್ರೂ ಯೆದ್ದಿ ಬಂದ್ರು. +ದೇವಸ್ಥಾನಕ್ಕೆ ಬಂದ್ರು. +ಆವಗೆ ಸೊನಗಾರ ಶೆಟ್ಟಿ ಆ ಕೆರಿವಳಗೆ ಕಿರೀಟ ತೊಳೂಕ್ ಹಾಕಂಡ. +ತೊಳವಾಗ ಬಂಗಾರ್‌ದ ಕಿರೀಟ ಅಲ್ಲೇ ಒಳ್ಗ ಬಿಟ್ಟು, ತಾಮ್ರದ ಕಿರೀಟ ಮೇನ್ ಹೆಕ್ದಾ. +ಹೆಕ್ಕಂಡಿ, ಬಟ್ರ ಕೂಡ್ ತೆಗ್ದ್ ಕೊಟ್ಟ. +ಬಟ್ರು ತೆಗ್ದಿ ಹೋಮ ನಿಯಮಾದ ಮೇನೆ ದೇವ್ರ ತಲಿಗೆ ಯೇರ್ಸರು ಅಂತಾಯ್ತು. +ದೇವ್ರ ತಲಿಗ್ ಯೇರ್ಸದ ಕೂಡ್ಲೆ ರಾಜರು ಆವಾಗ ಇದ್ರು. +ಹೋಮ-ನೇಮ ಯೆಲ್ಲಾ ಬಟ್ರದು ಮುಗ್ದ ಮೇಲೆ ಕೊಡೂದ್ ಯೇನದೆ ಅದಟ್ ಹಣ ಅವ್ರಗ್ ಯೆಲ್ಲಾ ಕೊಟ್ರು. +ಸೊನಗಾರ ಶೆಟ್ಟಿ ಲೆಕ್ಕಾಚಾರ ಮಾಡ್ಬೇಕಂತಾಯ್ತು. +“ಮುಂದ್ ಬಾ. . . ” ಅಂತ್ ಹೇಳ್ದ್ರು ರಾಜರು. +ಈ ಬಟ್ರು, ಅವ್ರು, ಇವರು ಯೆಲ್ಲಾ ಮೇಜ್ನ ಮೇನ್ ಸುತ್ತು ಕೂತ್ ಕಂಡ್ರು. +ಸೊನಗಾರ ಶೆಟ್ರು ನಿತ್ಕಂಡ್ರು. +ಶೆಟ್ಟಿ ಕೂಡ ರಾಜ್ರು ಕೇಳ್ತ್ರು, ಯೇನಂತ ಹೇಳದ್ರೆ-- “ವಂದ್ ದಿವಸ ರಾತ್ರಿ, ನಾನ್ ಬರ್ವಂತಾ ಸಮಿದಲ್ಲಿ ನೀವಪ್ಪ ಮಕ್ಕಳು ಐದ್ ಜನ ಕೂಡಿ ಮಾತಾಡ್ತ ಇದ್ರಲ್ಲ? +ನೀವ್ ಯೆಂತಾ ಮಾತಾಡದ್ರಿ?” ಅಂತ ಕೇಳ್ದ. +“ಯೆಂತ ಮಾತೂ. . . ?ತಿಂಗಳಗಟ್ಲೆ ಆಯ್ತು. +ತನಗೇನ್ ನೆನಪಿಲ್ಲೆ” ಹೇಳ್ದ. +“ಯೆಂತಾ ಮಾತಲ್ಲ. +ನಾನ್ ಹೇಳ್ತೆ, ನನಗೇನು ನೆನ್ಪ್ ಹೋಗಲಿಲ್ಲ. +” ಅಂದು ಅವ್ರ್ ಹೇಳ್ದ್ ಮಾತಟ್ಟೂ ರಾಜ್ರು ಹೇಳ್ ಬಿಟ್ತ್ರು. +“ನಿನ್ ಲೆಕ್ಕಾಚಾರ ಮಾಡ್ಬೇಕಿದ್ರೆ. . . ನೀನು ಚಿನ್ನ ಕದ್ದದ್ದೂ ಈ ಹೊತ್ಗೆ ದೇವ್ರ ಮುಂದೆ ನಿತ್ತ್ ಹೇಳಬೇಕ್. +ನೀನು ಕಳವಂತಾ ಉಪಾಯ ಹೇಳದ್ರೆ-- ಈ ನಾನ್ ಕೊಟ್ಟಂತಾ ಬಂಗಾರ ನೀನ್ ವಂದಾಣಿ ತೂಕ್ದ ಚಿನ್ನ ಕದ್ಕಂಡ್ ಹೋದ್ದಿದ್ರೆ ನಿನಗೇನೂ ತೊಂದ್ರಿಲ್ಲೆ ಹೇಳುಕಡ್ಡಿಲ್ಲೆ. . . ನೀನು ಕಳದೆ ಇದ್ದಂಗಾದ್ ಮಾತ್ರೆ ನಿನ್ ಕುಟುಂಬ್ಕೇ ನಾನು ಬಿಡುದಿಲ್ಲೆ.” ಹೇಳ್ದ್ರು ರಾಜರು. +“ಕದ್ದಂಗಾದ್ರೆ ನಿನ್ ಮನಿಗಂಟಿ ನಾನ್ ಮೇಯ್ಸತೆ ನನ್ ಆಸ್ತಿ, ಮನಿನೂ ನಿಂಗ್ ಕೊಡ್ತೆ. +ನಾನು ನಿನ್ ಕೈತೆಳ್ಗೆ ಕೆಲ್ಸ ಮಾಡ್ತೆ” ಹೇಳದ್ರು ರಾಜರು. +‘‘ಕದ್ದದ್ದೇ ಹೌದಂತಿದ್ರೆ ತೋರ್ಸರೆ ನಿನಗೇನು ಇಲ್ಲೆ ಅಂತಾಯ್ತು.’’ಆವಾಗ ಸೊನಗರ ಶೆಟ್ಟಿ ಹೇಳ್ತ, “ಯೆಂತಾ ಮಾತು ಅದೆಲ್ಲಾ ಸಾದ್ಯಿಲ್ಲೆ. . . ನಿಮ್ ಹತ್ರ. +ತಾವು ಅಪ್ಪ ಮಕ್ಳು ಸೈವಾಗೆ ಹೇಳ್ದ್ ಹೌದು.” +‘‘ಹಾಗಾಗುದಿಲ್ಲೆ; ಸೊನಗಾರ ಶೆಟ್ಟಿ ಕದ್ರೆ ನಿನ್ನ ಮನಿಗಂಟಿ ನಾನ ಮೇಯ್ಸತೆ, ಕಳ್ದೆ ಇದ್ರ್ ನಿನ್ ಕುಟುಂಬ ಬಿಡುದಿಲ್ಲೆ. . . ” ಹೇಳ್ಬಿಟ್ರು. +ಅಷ್ಟ ಮಾತಾಡ್ದ್ ಕೂಡ್ಲೆ, “ದೇವರ ತಲಿಮೇನ್ ಕಿರೀಟ ತಗಿ” ಅಂದ. +“ಅದು ಬಂಗಾರವೋ, ತಾಮ್ರವೋ ಹೇಳೂಕಾಣಿ” ಅಂದ. +ಆವಾಗ ಏನಾ ತಂದ್ರೆ-- ‘‘ತಾಮ್ರ. . . ಪಕ್ಕಾ ತಾಮ್ರ!’’ “ಚಿನ್ನದ ಕಿರೀಟ ಯೆಲ್ಲದೇ?” ಕೇಳ್ರು. +ಕೆರೆಯಿಂದ ಕಿರೀಟ ಹೆಕ್ದ. +“ಇದು ಚಿನ್ನವೋ, ತಾಮ್ರ ಕಾಣಿ. . . ” ಅಂದ. +ಆವಾಗ, “ಪಕ್ಕಾ ಚಿನ್ನ” ಅಂದ್ರು. +“ತಾನ್ ಕದ್ದ ಇಸಯ, ನಿಮ್ ಚಿನ್ನದ ಕಿರೀಟ ಕೊಟ್ದ ಇಲ್ಲೇ ಕೆರೀಲ್ ಕಂತ್ಸಿದ್ದೆ. +ತಾಮ್ರದ್ ಕಿರೀಟ ನಾನ್ ಕೆರೀಲ್ ಕಂತ್ಸದ್ದ ತೆಗ್ದ್ ಕೊಟ್ಟೆ ನಿಮ್ಗೆ.” + “ನಮ್ ಮಾತ್ನಂತೆ ಎಲ್ಲ ನಿನಗೇ ಆಯ್ತು” ಅಂದ್‌ ರಾಜ್ರು ಹೇಳ್ತ್ರು. +“ನಿಮ್ಮ ಮಾತ್ ನಿಮ್ಮ ಕೂಡಿರ್ಲಿ. +ಮನ್ ಮಾರೆ ತಮ್ ಕೂಡಿರ್ಲಿ.” ಹೇಳ್ದ. +ಅವನಿಗ್ ಬಹುಮಾನ ಕೊಟ್ರು. +ರಾಜ, ರಾಜ್ನ ಹೆಂಡ್ತಿ ಇದ್ರು. + ಇದ್ರೆ. . . ಅವರಿಗೆ ಹುಡ್ಗರಿಲ್ಲ. +ಇಲ್ದೆ ಯೆಷ್ಟೋ ಕಾಲ ಕಳ್ದ್ ಹೋಯ್ತು. +ಅವರಿಗ್ ಸಾದ್ರಣ ಅರ್ದಪ್ರಾಯ ಕಳ್ದ್ ಹೋಯ್ತು. +ರಾಜನ ಹಿಂಡ್ತಿಗೆ- ಗಂಡನಿಗ್ ಮತ್ತೊಂದ್ ನಗ್ನ ಮಾಡಬೇಕು ಹೇಳಿ ಆಶಿಯಾಯ್ತು. +ತನ್ನ ತಂಗಿನೇ ಮದ್ವೆ ಮಾಡ್ತು. +ಮಾಡ್ದ ಕೂಡ್ಲೇಯ ಅಕ್ಕನೇಯ ಗರ್ಬಿಣಿ ವಳಿತು. +ವಳದು ಸಾದ್ರಾಣ ವಂಬತ್ ತಿಂಗ್ಳ ತುಂಬ್ದಾವಾಗ, ರಾಜನಿಗೆ ಯುದ್ಧಕ್ಕೆ ಕರೆ ಬಂತು. +ಸಣ್ ಹಿಣತಿ ಕೈಲಿ ಹೇಳ್ ಹೋದ. +“ನಿನ್ನಕ್ಕನಿಗೆ ಚಲೋ ಮಾಡ್ ನೋಡ್ಕೊಂಡು ಉಳೀಬೇಕು” ಹೇಳಿ ಹೋದ. +ಇದು ಬಾಳಂತಿ ಆಗವಾಗ, “ತನಗೇನೋ ತ್ರಾಸಾಗ್ತದೆ. +ಸಲ್ಪ ಬಿಸಿನೀರ್ ಮಾಡಿಕೊಡು” ಅಂತ ಹೇಳಿತು. +ತಂಗಿ ಅದ್ಕೆ ಬಾಯಿಗೆ ಬಂದ ಹಾಗೆ ಮಾತಾಡ್ತು. +“ತಾಯೇನ್ ನಿನ್ ದಾಸಿಯಲ್ಲ, ಹೇಳ್ದಹಾಂಗ್ ಮಾಡ್ಲಿಕ್ಕೆ. +ಗಂಡ್ನ ಹತ್ರ ಹೇಳಬೇಕಿತ್ತು-- ಆಳ ಮಾಡು ಹೇಳಿ. +ತಾನೇನ್ ಮಾಡ್ ಕೊಡೂದಿಲ್ಲ” ಹೇಳ್ತು. +ಎರಡಜನ ದಾಸಿರ್ ಕರ್ದ್ ತಾಯಿ ಮನಿಗ್ ದಾಸಿ ಕಳ್ಸತು. +ಅಣ್ಣನಿಗೆ, ‘ಅತ್ತಿಗೆ ತಕ್ಕೊಂಡ್ ಬಾ’ ಹೇಳಿ ಹೇಳ್ ಕಳ್ಸತು. +ಆವರ್ ಹೋಗಿ ಕರಕಂಡ್ ಬಂದ್ರು. ಬಾಳಂತಿಯಾಯ್ತು. +ವಂದ್ ಹುಡ್ಗ ಹುಟ್ದ. +ಯುದ್ದಕ್‌ ಹೋದ ಗಂಡ ಬಂದ. +ಅವನಿಗೆ ಬಾಳ ಸಂತೋಷಾಯ್ತು-- ಮಗ ಹುಟ್ಟಿದ ಹೇಳಿ. +ವರ್ಸ-ಯೆರಡ್ ವರ್ಸ ಕಳ್ದ ನಂತ್ರ, ಮತ್ ಗರ್ಬಿಣಿ ಉಳಿತು-- ಹೆರಿದೇಯ. +ತಂಗಿಗ್ ಮತ್ ಹೊಟ್ಟೆಕಿಚ್ ಬಂತು-- ‘ಅಕ್ಕನಿಗೆ ಪ್ರಯತ್ನ ಮಾಡಿ ಕೊಲ್ಲಬೇಕು’ ಹೇಳಿ. +ಮತ್ ಜನ್ಯಾಗು ಟಾಯ್ಮಿಗೆ ಗಂಡನಿಗೆ ಯುದ್ದಕ್ ಹೋಗು ಕರೆ ಬತ್ತದೆ. +ತಂಗಿ ತ್ರಾಸ್ ಕೊಡ್ತದೆ ಹೇಳಿ ಗಂಡನ ಹತ್ರ ಹೇಳುದಿಲ್ಲ. +ಅವ ಹೋದ‌. +ಮತ್ತಿದ್ಕೆ ಕೋಟ್ಲೆ ಸುರವಾಯ್ತು. + “ತಂಗಿ. . . ತನ್ಗ್ ಹೀಗೆ ತ್ರಾಸಾಗ್ತದೆ. +ಯೇನಾದ್ರೂ ಮಾಡ್ಕೊಡು” ಹೇಳಿ ಹೇಳ್ತು. +“ಯಾರ ಉಪಕಾರ್ಕೆ ನೀನ್ ಬಸ್ರಾಗ್ಲಿಲ್ಲ. +ಗಂಡ್ನ ಹತ್ರೆ, ಆಳ್ ಮಾಡ್ ಹೋಗು ಹೇಳಬೇಕಾಗಿತ್ತು. +ತಾ ಮಾಡುದಿಲ್ಲ” ಅಂತು. +ಮತ್ತೆ ಅಣ್ಣ-ಅತ್ಗಿಗೆ ಕರೆ ಕಳುಸ್ತು. +ಅವರ್ ಬಂದ್ ಬಾಳಂತನ ಮಾಡ್ದ್ರು. +ವಂದ್ ಹುಡ್ಗ ಹುಟ್ದ. +ರಾಜ ಬಂದ. +ಮತ್ತೊಂದ್ ಹುಡ್ಗನೇ ಹುಟ್ದ ಹೇಳಿ, ಬಾಳ ಸಂತೋಶಾಯ್ತು. +ಹೆಂಡ್ತಿ ಅಣ್ಣನ ತಕ್ಕೊಂಡು ಬಟ್ರ ಹತ್ರ ಅವರ ಜಾತಕ ಮಾಡ್ಸೂಕ್ ಹೋದ. +ಇಬ್ಬರಿಗೂ ‘ಬಾಳಗೋಪಾಳ್ರು’ ಹೇಳ್ ಹೆಸ್ರು ಬಂತು; ಆ ಹೆಸ್ರಿಟ್ಟ. +ಹುಡ್ಗರಿಗೆ ಐದಾರ್ ವರ್ಸಾಯ್ತು. +ರಾಣಿಗೆ ಯೇನಾಯ್ತು? +‘ತನ್ ಹುಡ್ಗರಿಗೆ ಚಲೋ ಇದ್ದೆ ಕಲಿಸಬೇಕು’ ಹೇಳಾಯ್ತು. +ಗುರಗೋಳ ಕರಸಿ, ಅವರ ಬೆನ್ನಿಗೆ ದೂರ ಕಳ್ಸದ. +ಅವರಲ್ಲಿ ಕಲಿತ ವಳ್ದ್ರು. +ಇತ್ಲಾಗೆ ಗಂಡನಿಗೆ ಯೆರಡಮೂರ್ ತಿಂಗಳ ಯುದ್ಧಕ್ಕೆ ಹೋಗಿ ಅತ್ಲಾಗೇಯ ವಳುದು ಬಂತು. +ಅವ ಯೆರಡೂ ಹಿಂಡ್ರಿಗ, “ಚಲೋ ಮಾಡ್ಕಂಡ್ ವಳಿರಿ. +ಯುದ್ಧಕ್ಕೆ ಹೋಗಿ ಬರ್ತೆ” ಹೇಳ್ ಹೋದ. +ಇತ್ಲಾಗೆ ಅಕ್ಕ ದಿವಸಾ ತಂಗಿಗೆ ಜಳಕ ಮಾಡ್ಸೂದು, ಊಟ, ತಲೆಗಿಲೆ ಬಾಚೂದು ಯೆಲ್ಲಾ ಮಾಡ್ತು. +ಗಂಡ ಯಾವಾಗ ಬತ್ತ ಹೇಳಿ ತಂಗಿಗ್ ಗುತ್ತಿತ್ತು. +ಬರುದಿವ್ಸ ತಂಗಿ ತಲೆಯೆಲ್ಲಾ ಹರಡ್ಕಂಡು, ಕೈನ ಬಳೆಗಿಳೆ ವಡ್ಕಂಡು, ಮೈಕೈಯೆಲ್ಲಾ ಗೀರಕಂಡತು. +ರಾಜ ಬಂದ. +“ತಂಗಿ ಯೆಲ್ ಹೋತು?” ಹೇಳ್ ಹಿಂಡ್ತಿ ಹತ್ರ ಕೇಳ್ತ. +ಮಾಳ್ಗೆ ಮೇಲೆ ಇರತಿತ್ತು ತಂಗಿ. +ಮಾಳ್ಗೆ ಮೇಲ್ ಹೋದ್ರೆ ತಂಗಿಲ್ಲೆ. +ಯೆಲ್ ಹುಡ್ಕಿರೂ ತಂಗೀನೇ ಇಲ್ಲೆ. +ಗಂಡ್ನ ಹತ್ರ ಹೇಳ್ತು, “ತಂಗಿ ಹುಡ್ಕ್ ತಂದ್ ಕೊಡಿ. +”ಅವ ಹೇಳಿದ್ದ- ಲಗ್ನ ಮಾಡಬೇಕಾದ್ರೆಯ, “ನಿನ್ನ ತಂಗಿಂದ ಯೇನಾದ್ರೂ ತೊಂದ್ರೆ ಬಂದ್ರೆ ಅದ್ಕೆ ತಾನೇನ ಜವಾಬ್ದಾರಿಯಲ್ಲ. +ಕರಡ್ಗಿಲ್ ಬೀಸ್ ಮಡಗಿದ್ ಔಸದಿ. . . ನೀನೇ ಕುಡಿಬೇಕಾಗುದು” ಹೇಳಿದ್ದ. +ಹಾಗೇ ಹೇಳ್ದ. +ಆವಾಗ ಗಂಡ್ನ ಹತ್ರ, “ಹಣ ಬೇಕಷ್ಟು ಬೇಕಾದ್ರು ತಂಗಿ ಹುಡಿಕೊಡಿ” ಹೇಳ್ತು. +ಅವ ಹುಡ್ಕಲಿಕ್ ಹೋದ. +ಅಡವ್ಯಲ್ ಹೋಗಿ ಹುಡ್ಕಿಕಂಡ್ ಹಿಂಡ್ತಿ ಹತ್ರ ಕೇಳ್ದ, “ನೀನಿಲ್ ಯಾಕ್ ಬಂದ ಕೂತಿದ್ದಿ?ಯಂತಾ ಆಯ್ತು?” ಕೇಳ್ದ. +“ಅಕ್ಕ ಯಾವ ತ್ರಾಸ್ ಕೊಟ್ತು?” ಕೇಳ್ದ. +“ಅಕ್ಕ ಯಾವ ತ್ರಾಸ್ ಕೊಟ್ರೂ ಹೇಳಲಿಕ್ ಅಡ್ಡಿಲ್ಲ. +ನೀವ್ ಮೊದಲೇ ತನ್ನ ಮಾತ ನಡಿಸಿಕೊಡ್ತೆ ಹೇಳಿ ಬಾಸೆ ಕೊಟ್ರೆ ತಾ ಹೇಳ್ತೆ.” ಅಂತು. +ಅವ ಬಾಸೆ ಕೊಟ್ಟ. +ಕೊಟ್ ಮೇಲೆ ಹೇಳ್ತು-- “ನಿಮ್ಮ ಹಿಂಡ್ತಿ ತನ್ ಹೊಡ್ದು, ಬಡ್ದು ಮನಿಂದ ಹೊರ್ಗ್ ಹಾಕ್ತು. +ನೀವ್ ಬರ್ಲಿ. . . ನಿಮ್ಮ ಹತ್ರ ಹೇಳ್ಬೇಕು ಹೇಳಿ, ಅಡವಿಲ್ ಬಂದ್ ಕೂತಿದ್ದೆ” ಹೇಳಿ ಗಂಡ್ನ ಹತ್ರ ಹೇಳ್ತು. +“ನಿನ್ನ ಅಕ್ಕಂಗೆ ಯೇನ್ ಮಾಡ್ಬೇಕು?” ಹೇಳಿ ಹಿಂಡ್ತಿ ಹತ್ರ ಕೇಳ್ದ. +“ನಿಮ್ ಹೆರಿ ಹಿಂಡ್ತಿಯ ದೊಡ್ಡ ಅಡವ್ಯಲ್ ತಕಂಡ ಹೋಗಿ ತಲೆ ಹೊಡ್ದು, ಅದ್ರ ನೆತ್ರ ತಂದ್‌ ಕೊಡಬೇಕು. +ಅಟ್ಟಾದ್ರೆ ತಾ ಮನೆಗೆ ಬರ್ತೆ; ಅಡ್ಡಿಲ್ಲ. . . ” +“ಅದ್ರ ತಕಂಡ್ ಹೋಗಿ ತಲೆ ಹೊಡಿಸ್ತೆ. +ನೆತ್ರ ತಂದ್ ತೋರ್ಸತೆ. . . ” ಹೇಳಿ ಅದ್ರ ಕರ್ಕಂಡ್ ಹೋದ. +ಅಕ್ನ ಹತ್ರ ಮಾತಾಡ್ಲಿಲ್ಲ ಅದು. +ಗಂಡನಿಗೆ ‘ಹಿರಿ ಹೆಂಡ್ತಿಗ್ ಹ್ಯಾಗ ಮಾಡ್ ತಕಂಡ್ ಹೋಗಿ ತಲೆ ಹೊಡಿಸ್ಲಿ. . . ’ ಹೇಳಿ ಪಚ್ಚಾತಾಪದಿಂದ ಮಂಚದ ಮೇಲ್ ಹೋಗಿ ಮನ್ಗ್ ಬಿಟ್ಟ. +“ಯಾಕ್ ಇಟ್ ಪಚ್ಚೆತಾಪ ಮಾಡ್ತ್ರಿ?” ಕೇಳ್ತು. +ಆವಾಗವ ಯೆಟ್ ಹೇಳ್ದ. +“ನಿಂಗ್ ನಗ್ನಾಗಬೇಕಾದ್ರೆ ಹೇಳಿದ್ದೆ. . . ನಿನ್ನ ತಂಗಿಂದ ಯೇನಾದ್ರೂ ತೊಂದ್ರೆ ಬಂದ್ರ ತಾನೇನ್ ಜವಾಬ್ದಾರಿಯಲ್ಲ. +ಅದ್ ಹೀಗ್ ಹೇಳ್ತು. +ಯೇನ್ಮಾಡ್ಲಿ?ತಂಗಿ, ‘ನಿನ್ನ ಅಡವ್ಯಲ್ ತಕಂಡ್ ಹೋಗಿ ತಲೆ ಹೊಡಿಸಿ ನಿನ್ನ ನೆತ್ರ ತಂದ್ ತೋರ್ಸ್ಬೇಕು’ ಹೇಳಿತ್ತು. +ಹ್ಯಾಗ್ ನಿನ್ನ ತಲೆ ಹೊಡಿಸ್ಲಿ?” ಕೇಳ್ದ. +“ನೀವೇನೂ ಚಿಂತೆ ಮಾಡ್ಬೇಡಿ. +ಆಳ್ ತಯಾರಿ ಮಾಡಿ; ತಾನೆ ಹೋಗ್ತೆ” ಹೇಳ್ತು. +ಗಂಡ ನಾಲ್ಕ್ ಜನ ಆಳ್‌ಗಳಿಗ್ ತಯಾರ್ ಮಾಡ್ದ-- ಹಿಂಡ್ತಿ ತಲಿ ಹೊಡಿಲಿಕ್ಕೆ. +ಅವರು ಅಡವಿಗ್ ಕರಕಂಡ್ ಹೋದ್ರು; ಅವರು ನಾಲ್ಕೂ ಜನ ಸಣ್ಣಿದ್ದಾವಾಗಿಂದ ರಾಜ್ನ ಹಿಂಡ್ತಿನೇಯ ತನಗೂ ಹುಡ್ಗರಿಲ್ಲ ಹೇಳಿ ದೊಡ್ಡ ಮಾಡಿತ್ತು. +ಅವ್ರು ಹೇಳ್ದ್ರೂ, “ಅಮ್ಮಾ. . . ನಾವ್ ಸಣ್ಣಿರಬೇಕಾದ್ರು ನಿನ್ನ ಕೈಲಿ ಉಂಡು, ತಿಂದು ದೊಡ್ದಾಗಿ ಹೇಂಗ್ ತಲೆ ಹೊಡಿಯೂದು? +ನೀನು ಬೇರೆ ರಾಜ್ಯಕ್ ಹೋಗ್ ಸೇರ್ಕೊ” ಹೇಳಿ, ವಂದ್ ಹೊನ್ನೆ ಮರ ಕಡ್ದು, ಅದ್ರ ನೆತ್ರ ತಂದ್ ರಾಜನಿಗ್ ಕೊಟ್ರು. +ನೆತ್ರ ಕಿರಿಹೆಂಡ್ತಿಗ್ ಕೊಟ್ಟು ರಾಜ ಮನೆ ಬಿಟ್ಟು ಆಸ್ರಮದಲ್ ಹೋಗ್ ಕುಂತಕಂಡ. +ತಿರ್ಗ್ ಮನೆಗೆ ಬರಲಿಲ್ಲ. +‘ತನ್ನ ಗಂಡ ಇಂದ್ ಬರ್ವ; ನಾಳೆ ಬರ್ವ’ ಹೇಳಿ ಬಾಳ ಸಂತೋಷದಿಂದ ಉಳೀತು. +ಅವ ಕುಂತಿ ಕುಂತಿ ಆಹಾರ ಇಲ್ದೆಯ ಮೈಮೇಲೆ ಹುತ್ತ ಬೆಳ್ದು ಅಲ್ಲೆ ಉಳ್ದ. +ಆವಾಗೀ ಹುಡಗ್ರು, ‘ತಾವು ಮನಿಗ್ ಬತ್ತೇವೆ. . . ತಾಯ ರುಣ ತೀರ್ಸೂ ಆಸ್ಯಾಗದೆ, ಸೊಮಾರ ದಿವ್ಸ ಮನಿಗ್ ಬತ್ತೇವೆ’ ಅಂದಿ ತಾಯಿ ತಂಗಿಗ್ ಪತ್ರ ಹಾಕ್ದ್ರು. +ಆ ಪತ್ರ ಚಿಕ್‌ ತಾಯಿಗೆ ಸಿಕ್ತು. +ಪತ್ರ ತಕಂಡ್ ಹೋಗಿ ವಲೇಲ್ ಹಾಕಿ ಬಸ್ಮ ಮಾಡಿ ಉಳಿತು. +ಸೋಮವಾರ ದಿವಸ ಆ ಋಷಿ, ಹುಡುಗರೀಗ್ ತಕೊಂಡ್ ಬಂದು ಬಿಟ್ಟಿ ಹೋಗಿಬಿಟ್ಟ. +ಹುಡುಗರು ಬರ್ತಾರೆ ಹೇಳಿ ಅದ್ಕ್ ಗುತ್ತಿತ್ತು. +ಮನೆ ಮುಂದ್ ಬದಿಗೆ ತಟ್ಟಿ ವಟ್ ಮಾಡಿ, ಬೆಂಕಿ ಹಾಕಿ ಅದ್ರಲ್ಲಿ ವಂದ್ ನಾಯಿ ಸುಟ್ಟು ಬೂದಿ ಮಾಡದೆ; +ಹುಡ್ಗ್ರು ಬಂದು, “ತಾಯೇ, ತಾಯೀ” ಅಂದ್ ಬಾಗ್ಲಲ್ ನಿತ್ಕೊಂಡ್ ಕರೀತ್ರು. +ಇದು ವಳಗದೆ.. ಮಾತಾಡುದಿಲ್ಲ.. ಬಾಗ್ಲ ತೆಗ್ಯೂದಿಲ್ಲ. +ಹುಡ್ಗರಿಗೆ ಕರ್ದು ಕರ್ದು ಬೇಜಾರ್ ಬಂದು, ದೊಡ್ ಹುಡ್ಗ ಬಾಗ್ಲ ವದ್ದು ಮುರ್ದು ವಳ್ಗಹೋದ; +ಹೋಕಂಡು ಚಿಕ್ ತಾಯ ಹತ್ರ ಕೇಳ್ದ, “ತಾಯಿ-ತಂದಿ ಯೆಲ್ಲಿಗ್ ಹೋಗಾರೆ? +ತಾಯಿ ರುಣ ತೀರ್ಶಬೇಕು. . . ” ಹೇಳಿ ಅಂದ್ ಚಿಕ್ ತಾಯಿ ಕೇಳ್ದ. +ಅದು ಹೇಳ್ತು, “ಅಯ್ಯೋ ಮಗನೇ, ತನ್ಗ್ ಯೆನ್ ಹೇಳ್ಲಿಕೂ ಬಾಯ್ ಬರುದಿಲ್ಲ. +ನಿನ್ನ ತಂದ್ಯವ್ರು ಯುದ್ಧಕ್ ಹೋದೋರು ಬರಲಿಲ್ಲ. +ನಿನ್ನ ತಾಯಿ ನಿನ್ನೆ ಸತ್ ಹೋಯ್ತು. +ಊರವ್ರ ಕರಕಂಬಂದು ಸುಟ್ ಬಸ್ಮ ಮಾಡ್ಸಿದ್ದೆ” ಹೇಳ್ತು. +ಆವಾಗ್ ಹುಡಗ್ರು, “ತಮ್ಗ್ ವಂದ್ ತಂಬ್ಗೆ ಕೊಡು” ಅದ್ರ ಹತ್ರ ಬೇಡ್ದ್ರು. +ಆ ಹುಡಗ್ರಿಗೆ ವಂದ್ ವಡಕ ಚಂಬು, ಯೆರಡ್ ಕಣ್ ಕರಟ ಕೊಟ್ತು. +ಬಾವಿಲಿ ಚಂಬ್ ಹಾಕಿ ಕಣ್ ಕರಟದಲ್ ನೀರ್ ಹಾಯ್ಕೊಂಡು, “ತಾಯಿ ಸುಟ್ಟ ಬಸ್ಮಾನಾದ್ರೂ ಕರಡ್ಕೊಂಡ್ ಕುಡೀಬೇಕು” ಹೇಳ್ ಹೋದ್ರು. +ಬಸ್ಮ ಹಾಕಿ ಅಣ್ಣ-ತಮ್ಮ ವಂದ್ ಸಲ ಬಾಯ್ಲ್ ಹಾಕಬೇಕು ಹೇಳಿ ಬಾಯ್ಲ್ ಹಾಕೂಕ್ ಮಾಡ್ದಾವಾಗ-- ಆ ಅಗ್ನಿಂದ ವಂದ್ ಋಷಿ ಯೆದ್ ಬಂದ. +“ಮಕ್ಕಳೇ, ಈ ಬಸ್ಮ ಕುಡಿಬೇಡಿ; ನಿಮ್ ತಾಯಲ್ಲ. +ನಾಯಿ ಸುಟ್ಟು ಬೂದಿ ಮಾಡ್ದು. +ತಾಯಿ ಸಾಯಲಿಲ್ಲಾ, ನಿಮ್ಮ ತಾಯಿ ಸಿಕ್ತದೆ” ಹೇಳಿ ಆ ಋಷಿ ಹೇಳ್ದ. +ತಾಯಿ ಹುಡ್ಕಬೇಕು ಹೇಳಿ ಯೆಲ್ಲೂ ಹುಂಡ್ ನೀರ್ ಮುಟಲೆಲ್ಲ. +ತಾಯಿ ಹುಡಕ್ತೇಯ ಹೋದ್ರು. +“ತಾಯೀ” ಹೀಗೆ ಅಡವಿಂದಾ ಹುಡಿಕಂತಾ ಹುಡಿಕಂತಾ ಬೇರೆ ರಾಜ್ಯ ಹೋಗ್ ಸೇರ್ರು. +ಅಲ್ಲಿ ಯೇನಾಗದೆ?ವಂದ್ ರಾಜನಿಗೆ ಒಂದೇ ಹುಡ್ಗಿ. +ದನಕರ ಯಾವ ಪ್ರಾಣೀನೂ ಅಸ್ವತ್ ಮರದ ನೆರಳಿಗೇ ಬರೂದು. +ಆವಾಗ ಆ ಅಸ್ವತ್ ಮರ ಬತ್ತಾಗಿ ಹೋಗಿತ್ತು. +ಆವಾಗಾ ಅಸ್ವತ್ ಮರಕ್ ಸಾವ್ರಾರ್ ಜನ ಆಳ್‌ ಮಕ್ಳು ನೀರ್ ಹಾಕದ್ರೂ ಆ ಮರ ಚಿಗ್ರೂದೆಲ್ಲ, ಬತ್ತಾಗ್ ಹೋಗದೆ. +ಈ ಹೆಂಗ್ಸೂ ಅಲ್ಲಿಗೇ ಹೋಯ್ತು. +ಆಸ್ರಾ ಹಸ್ವಾಗಿ ತನ್ಗ್ ವಂದ್ ತಂಬ್ಗೆ ನೀರ್ ಕೊಡಿ ಹೇಳ್ತು. +ಆಳ್ ಯೇನ್ ಹೇಳ್ದ್ರು ಅದ್ರ ಹತ್ರ? +“ನಾವು ನಿನ್ಗ್ ನೀರ್ ಕೊಡಲಿಕ್ಕೆ ಬಂದವ್ರಲ್ಲ. +ಮರಕ್ ನೀರ್ ಹಾಕ್ ಹಾಕ್ ನಾವು ಸೋತ್ಹೋದ್ರು” ಹೇಳಿ ಜೋರ ಮಾಡಿದ್ರು. +ಆವಾಗೀ ರಾಜನಿಗೆ ಅದ್ನ ಕಂಡು ಪಚ್ಚಾತಾಪಾಗಿ, ರಾಜನೇ ತಂಬ್ಗಿ ತಂದ್ ಕೊಟ್ಟ, “ಬೇಕಟ್ ನೀರ್ ಯೆತ್ಕಂಡಿ ಕುಡಿ” ಹೇಳ್ ಕೊಟ್ಟ, ಬಾಮಿತ್ತು. +ಅದ್ ವಂದ್ ತಂಬ್ಗಿ ನೀರ್ ತೆಗದು ಕೈಕಾಲ್, ಮೋರೆ ತೊಳ್ಕಂಡು, ಸೂರ್ಯಗೆ ನಮಸ್ಕಾರ ಮಾಡಿತ್ತು. +ಸೂರ್ಯಗೆ ನಮಸ್ಕಾರ ಮಾಡ್ಕಂಡು ಕೈಕಾಲ್ ಮುಕ ತೊಳ್ದದ್ದೇಯ ಮತ್ತೊಂದ್ ತಂಬಿಗೆ ನೀರ್ ತೆಗೆದ್ಕೊಂಡು ಮರದ ಬುಡ್ಕ್ ಬಂತು. +ಅದು ವಂದ್ ಚಂಬ್ ನೀರ್ ಚೆಲ್ದ್ ಕೂಡ್ಲೆಯ ಮರ ಚಿಗರಿ, ರಾಜನಿಗೆ-- “ತಾನ್ ಇದ್ಕ್ ಸಾವ್ರಾರ್ ಆಳ್‌ ಕೈಲ್‌ ನೀರ ಹಾಕ್ಸಿರೂ ಮರ ಚಿಗ್ರಲೆಲ್ಲ; ಇದ್ ವಂದ್ ಚಂಬ್ ನೀರ್ ಹಾಕೂರೊಳ್ಗ್ ಮರ ಚಿಗ್ರ್ಹೋಯ್ತು. +ಬಾಳ ಪತಿವರ್ತಿ” ಹೇಳ್, ಆಳ ಮಕ್ಕಳ ಕೈಲ್ ಅದ್ರ ಹೊರ್ಸ್ಕಂಡ್ (ಪಲ್ಕೆಮೇಲೆ) ಹೋದ. +ಹುಡ್ಗಿ ನಗ್ನ ಮಾಡೂಕೂ ಅದ್ ಹೆಂಗ್ಸು. +ಅದ್ಕೆ ಹಾಲು-ಹಣ್ಣು ಯೆಲ್ಲಾ ಕೊಟ್ರು. +“ತಾನು ಹಾಲು-ಹಣ್ಣು ಯೇನೂ ಊಟ ಮಾಡುದೆಲ್ಲ. +ತನ್ಗೆ ಯೆರಡ ಜನ ಬಾಲಗೋಪಾಲ್ರು ಹುಡ್ಗರಿದ್ರು. +ಅವರ ಶಿಕ್ದ್ ಹೊರ್ತೂ ತಾನು ವಂದ್ ಹುಂಡ್ ನೀರೂ ಮುಟ್ಟೂದಿಲ್ಲ. +ತನ್ಗ್ ಕೂತ್ಕೊಳ್ಲಿಕ್ ವಂದ್ ಜಾಗಾ ಕೊಟ್ರ್ ಸಾಕು. +ತನ್ ಹುಡ್ಗರ್ ತನ್ಗ್ ಶಿಕ್ಕೂವರಿಗೂವ” ಹೇಳಿ ರಾಜ್ನ ಹತ್ರ ಹೇಳ್ತು. +ಆವಾಗಾ ರಾಜಾ ಅದ್ರ ಮಾತಿಗ್ ವಪ್ಗೆ ಕೊಟ್ಕಂಡು, ಅದ್ಕೆ ಯೇಳುಪ್ಪರಿಗೆ ಮಾಳ್ಗೆ ಮೇಲೆ ಉಳೀಲಿಕ್ಕ ಜಾಗಾ ಕೊಟ್ಟ. +ಆವಾಗಾದ್ ಹುಡ್ಗರಿಗೆ ಜಾನಸ್ಕೊಂತ ಅಲ್ಲೇ ಉಳೀತು. +“ನನ್ನ ಬಾಳಗೋಪಾಲ್ರೇ, ಯಾವಾಗ್ ಬಂದು ತಾಯ ರುಣ ಕುಡಿತ್ರೀ?” ಹೇಳ್ ದುಃಕಮಾಡ್ತು. +ಇತ್ಲಾಗೆ ಹುಡ್ಗರು ಅದೇ ಊರಿಗ್ ಹೋಗ್ ಮುಟ್ಟಾರೆ ಅಣ್ಣ-ತಮ್ಮ. +ಅಲ್ ಅತ್ಲಾಗ್ ವಂದ್ ರೋಡ್ ಹೋಗದೆ, ಇತ್ಲಾಗ್ ವಂದ್ ರೋಡ್ ಹೋಗದೆ. +ಅಲ್ಲಿ ನಿತ್ಕಂಡು ಅಣ್ಣ, “ತಮ್ಮ. . . ಇತ್ಲಾಗ್ ನೀ ಹೋಗು, ಅತ್ಲಾಗ್ ರೋಡ್ನಲ್ ತಾ ಹೋಗ್ತೆ. +ಯಾರಿಗೆ ಮೊದ್ಲು ತಾಯಿ ಸಿಕ್ದ್ರೂವ ಇನ್ನೊಬ್ಬ ಬಂದ ಹೊರ್ತೂ ತಾಯಿ ರುಣ ಕುಡ್ಯೂದಲ್ಲ. +ಇಬ್ರೂ ಕೂಡೇ ಕುಡೀಬೇಕು” ಹೇಳಿ, ಅಣ್ಣ-ತಮ್ಮ ಕೂಡ್ ಮಾತಾಡಿ, ಅತ್ಲಾಗೊಬ್ಬ ಇತ್ಲ್ಯಾಗೊಬ್ಬ ಹೋದ್ರು. +ಅಣ್ಣ ಹೇಳವನು ತಾಯಿದ್ದ ರೋಡಿಗ್ ಹೋದ; ತಮ್ಮ ಮತ್ತೊಂದ್ ರೋಡಿಗ್‌ ಹೋದ. +ಇದ್ ರಸ್ತಿ ಅಂಚಿಗೆ ರಾಜ್ನ ಮನೆ. +ಇದ್ ಯೇನ್ ಮಾಡದೆ? +ರಾಜ್ನ ಮಾಳ್ಗಿ ಮೇಲ್ ಕೂತ್ಕಂಡು, “ನನ್ನ ಮಗದಿರು ಬಾಳಗೋಪಾಲ್ರು. . . ” ಹೇಳ್ತ ಕೂತ್ಕಂಡದೆ ಅದು. +ಹೇಳ್ತ ಕೂತ್ಕೊಂಡಾಗ, ಹೆರಿಮಗ ರಸ್ತೆಲಿ ಅಲ್ಲೇ ಹೋಗಿ ನಿತಕಂಡ, ಕೇಳ್ದ-- “ಬಾಳಗೋಪಾಳ್ರ ಮಗದೀರು ಹೇಳ್ದ್ರೆ ತಾವೇಯ್. . . ಯೇನೇ ಆಗ್ಲಿ ಈ ಮನೆ ವಳ್ಗ್ ಹೊಕ್ಕಿ, ಯಾರು ಹೇಳಿ ತಾ ನೋಡ್ ಬರಬೇಕ್. . . ” ಹೇಳಿ ಹೋದ ಅವ ಮಾಳ್ಗೆ ಹತ್ತಿ-- ಅವ್ರ್ ಯಾರ್ನೂ ಕೇಳಲಿಲ್ಲ. +ಹೋಗ್ ನೋಡ್ದ್ರೆ ತಾಯಿ! +ಹುಡ್ಗನ ಕಂಡದ್ದೇ ಆಸ್ರ-ಹಸುಯೆಲ್ಲಾ ತಂಪಾಗ್ ಹೋಯ್ತ. +‘‘ಇಲ್ ತಮ್ಮ ಹೇಳಿದ, ‘ತಾನ್ ಬಂದ್ ಹೊರ್ತು ತಾಯ ರುಣ ಕುಡ್ಯೊಕಿಲ್ಲ’ ಹೇಳಿ. +ತಾನು ತಮ್ಮನ ಹುಡ್ಕಂಬರ್ತೆ. +ನೀ ಇಲ್ಲೇ ಇರು. . . ” ಹೇಳಿ ಎಡ ರಸ್ತಿ ಹೋದಲ್ಲಿ ಬಂದು ನಿತ್ಕಂಡ, ತಮ್ಮನ ದಾರಿ ನೋಡ್ತ. +ಅತ್ಲಾಗ್ ತಮ್ಮನಿಗ್ ಯೇನಾಗದೆ? +ಅಲ್ಲೊಂದ್ ರಾಜ. . . ಯಾವಾಗ್ಲೂವ ಅವನ ರಾಜ್ಯದಲ್ಲಿ ಕಬ್ನ ಹಿತ್ಲ ಹಾಕೂದ್ ಹೆಚ್ಚು ಅವ. +ಆ ಕಬ್ನ ಹಿತ್ಲ ಯಾವಾಗ್ಲೂ ಹಾಕ್ರೆ ಹಂದಿ ವರ್ಸಾನ್ವರ್ಸ ತಿಂದ್ಕಂಡ್ ಹೋಗ್ತದೆ. +ಬೆಲ್ಲ ಮಾಡೂಕ್ ಕೊಡೂದಿಲ್ಲ. +ಅವ ಅಲ್ ಯೇನ್ ಪಣ ಮಾಡನೆ ಕೇಳ್ದ್ರೆ, ‘ಕಬ್ನ ಹಿತ್ಲ ಹಾಳ್ ಮಾಡೂ ಹಂದಿ ಯಾರು ಹೊಡ್ದ್ ಕೊಲ್ತಾನೆ ಅವನಿಗೆ ಅರ್ದ ರಾಜ್ಯ ಕೊಟ್ಟು, ತನ್ನ ಹುಡ್ಗಿನೂ ಕೊಟ್ ಲಗ್ನ ಮಾಡ್ತೆ. . . ’ ಅಂದ್ ವಂದ್ ಬೋರ್ಡ್ ಬರ್ಸ್ ಹಚ್ಚಾನೆ. +ಈ ಹುಡ್ಗ ಹೋದವ ಆ ಬೋರ್ಡ್ ವೋದ್ ನೋಡ್ದ. +ಅಲ್ಲೇ ಉಳ್ದ. +ಅವ ಉಳದು, ಹನ್ನೆರಡ ಗಂಟೆ ಲಾಗ್ವಗೆ ಕಬ್ನಹಕ್ಲ ವಳಗೆ ಹೋದ. +ಅವ ನೋಡ್ದ್ರೆ ಹಂದಿ ಬಂದು ಕಬ್ನ ತಿನ್ನಲಿಕ್ಕೆ ಸುರುಮಾಡದೆ. +ತಲವಾರೋ, ಯೆಂತಾ ಸುಡಗಾಡೋ (ಬಿಲ್ಲು-ಬಾಣವೋ) ಅವನ ಕೈಯಲ್ಲಿತ್ತು. +ಬಾಣ ಹೊಡಿತ ಅವ. +ಬಾಣ ತಾಗಿ ಹಂದಿ ಸತ್ ಬಿತ್ತು. +ಆಳ್‌ ಮಕ್ಕಳು ಹೋಗಿ ನೋಡ್ದ್ರೆ, ಹಂದಿ ಹೊಡ್ಕಂಡು ಅಲ್ಲೊಂದ ಮಾಳ ಮಾಡ್ಸಿದ್ದ ರಾಜ-- ಅದ್ರ ಮೇಲ್ ಶಿಸ್ತಿನಿಂದ ಹೋಗ್ ಮಲಿಕಂಡಿದ್ದಾವಾಗ, ಈ ಆಳ್‌ ಮಕ್ಕಳು ಹೋಗ್ ನೋಡ್ದ್ರು. +“ಇವ ಯಾವ ತಾಯ ಹೊಟ್ಟಿಲ್ ಹುಟ್ದವನಪ್ಪಾ. . . ಯೆಷ್ಟೋ ಜನ ಬಂದು ಈ ಹಂದಿ ಹೊಡಿಲಿಕ್ಕಾಗದೆ ಸೋತ್ ಹೋಗರೆ” ಹೇಳಿ, ರಾಜನ ಮನಿಗೆ ಕರಕಂಡ್ ಹೋದ್ರು. +ಅದು ತೆಳ್ಕುಂಡು ರಾಜ ಬಹಳ ಸಂತೋಸಾದ. +ಅರ್ದ ರಾಜ್ಯ ಅವನ ಹೆಸರಿಗ್ ಮಾಡಿಕೊಟ್ಟ; ಹುಡ್ಗಿನೂ ಕೊಟ್ ನಗ್ನ ಮಾಡ್ದ. +ಮಾಡ್ದ್ ಮೇಲೆ ಮೂರ್ ನಾಕ್ ದಿವ್ಸ ಮಾವ್ನ ಮನಿಲ್ ವಳ್ಕಂಡು, ಇದ್ಯೆಲ್ಲಾ ಕತೆ ಹೇಳ್ದ. +“ತನ್ನ ಅಣ್ಣ, ತಾನೂ ತಾಯಿ ಹುಡ್ಕಲಿಕ್ ಬಂದವ್ರು. +ತನ್ನ ಹಿಂಡ್ತಿ ಇಲ್ಲೇ ಉಳಿಲಿ; ತಾನಿನ್ ಯೆಂಟ್ ದಿವ್ಸನ ಮೇನ ಬಂದು ಹಿಂಡ್ತಿ ತಕಂಡ್ ಹೋಗ್ತೆ” ಹೇಳಿ ಅವ ಬಂದ. +ರಸ್ತೀಲೆ ಅಣ್ಣ ತಮ್ಮನ ಕಾದ್ಕೊಣ್ತೀ ಇದ್ದ. +ಅಣ್ಣ-ತಮ್ಮ ಬೆಟ್ಯಾಗಿ ಮಾತಾಡ್ದ್ರು. +ತಾಯ ಬಳಿಗೆ ತಮ್ಮನ ಕರಕಂಡ್ ಹೋದಾ. +ಅಣ್ಣನಿಗೂ ಈ ರಾಜನ ಹುಡ್ಗಿ ಕೊಟ್ ನಗ್ನ ಮಾಡ್ದ ರಾಜ. +ತಮ್ಮ ಅಣ್ಣನ ಹತ್ರ, ತಾಯ ಹತ್ರ ಹೇಳ್ದ, “ನೀವು ಬಂದ ರಸ್ತೇಲಿ ಉಳಕಳಿ. +ತಾನು ತನ್ ಹಿಂಡ್ತಿ ತಕಂಡ್ ಬರ್ತೆ” ಹೇಳಿ, ತನ್ ಮಾವನ ಮನಿಗ್ ಹೋದ. +ಆವಾಗ ಇಬ್ರೂ ಹಿಂಡ್ತಿಗೆ, ತಾಯಿಗೆ ಕರಕಂಡ್ ಹೋಗಿ ಮನಿ ಬಾಗ್ಲದಲ್ ನಿಲ್ಸಿ, ಅಣ್ಣ-ತಮ್ಮ ತಂದಿ ಆಸ್ರಮಕ್ ಹೋದ್ರು. +ಹೋದಲ್ ಅಪ್ಪ ಹುತ್ ಮಾಟ, ಅಪ್ನ ತಲೆ ಮಾತ್ರ ಕಾಣತಿತ್ತು. +ಹುತ್ ವಡದು ಅಪ್ಪನಿಗೆ ತೆಗ್ದ್ರು. +ಮನಿಗ್ ತಕಂಡ್ ಹೋದ್ರು. +ಕಡಿಗೆ ತಾಯಿ-ತಂದಿ ಹಿಂಡ್ತಿಗ್ಯೆಲ್ಲಾ ನಿಲ್ಸಕಂಡು, ಬಾಗ್ಲದಲ್ ಹೋದ್ರು ಅಣ್ಣ-ತಮ್ಮ. +ಚಿಕ್ಕ ತಾಯಿನ ಕೈರಟ್ಟೆ ಹಿಡ್ದು ಯೆಳ್ಕೊಂಡ್ ಬಂದ್ರು. +ಇಬ್ಬರ ಕೈಲೂ ಇದ್ದಿತ್ತು (ಕತ್ತಿ), ಆ ಚಿಕ್ ತಾಯಿನ ನೆಟ್ಟಂಗೆ ಯೆರಡ ಬಗತಿ ಮಾಡ್ದ್ರು. +ಶಿಗದ ಬಗ್ತಿ ಮಾಡ್ಸಿ-- ಅಣ್ಣ ವಂದ್ ಬಗತಿ, ಬಲಕೈ ಮೇನೆ ತಕಂಡ. +ತಮ್ಮ ವಂದ ಬಗತಿ ಯೆಡಕೈಮೇನ್ ತಕಂಡ. ತಕಂಡು. . . ಗುರು ನೆನಕಂಡು, ಅವರು ಚಿಕ್ಕ ತಾಯಿಗೆ ಹೇಳ್ದ್ರು, “ನೀನು ಬುಡದಿಂದ ಪುಣ್ಯ ಮಾಡಿದ್ ಹೌದಾದ್ರೆ ಯೆರಡೂ ಬಗತಿ ಕೂಡಿ ನೀನು ಜೀವಾಗಿ ಯೆದ್ ಬತ್ತೆ. +ಇಲ್ಲಾದ್ರೆ, ನಮ್ಮ ಕೈ ತಳದ ಮೇಲಿಂದ ಹಾರ್ ಹೋಗಿ ನರಕದಲ್ ಹೋಗಿ ಬೀಳ್ತೆ. . . ” ಹೇಳಿ ಹೇಳ್ದ್ರು. +ಮುಂದಾ ಚಿಕ್ ತಾಯಿ ಅವ್ರ ಕೈತಳದ ಮೇಲಿಂದ ಹಾರ್ ಹೋಗಿ ನರಕ್ದಲ್ ಹೋಗ್ ಬಿತ್ತು. +ಇವ್ರು ತಾಯಿ-ತಂದಿ, ಇಬ್ಬರ ಹೆಂಡರು, ಸೊಸೆದಿರು ಚಲೋ ಮಾಡಿ ಉಳ್ದ್ರು. +ಕಾಡಲಿ ಗರಡಪಕ್ಸಿ ಉಳಿತು. +ಕುಂಬ್ರಿ ಕಡಿದು ಹಾಕಿದ್ರು. +ಗುತ್ಗೆ ಮಾಡ್ದಂತಾ ಕುಮರಿಗೌಡ - ಅವನ ಹೆಸರು; ಉಗಾದಿ ಟಾಯ್ಮ್‌ನಲ್ಲಿ ಗರಡ ಅಲ್ಲೇ ಮರಿ ಹಾಕ್ಕಂಡಿತ್ತು. +ಗೌಡ, “ನಾವು ಕಾಡಿಗೆ ಬೆಂಕಿ ಕೊಡತ್ರು. . . ಯಾವದೇ ಇದ್ದರೂ ಹೊರಗೆ ಹೋಗಬೇಕು” ಅಂತ ಕೂಗಿದ. +ಕೂಗವಲಿ ವರೆಗೆ ಕೇಳ್ತು. +“ಹೆರಗ್ ಹೋಗಬೇಕಲ್ಲ. . . ” ಹೆಣ್ ಹಕ್ಕಿಗಂದ. +ಗಂಡ್ ಹಕ್ಕಿ ಕಾಡಿನೊಳಗೆ ಮೇವು ತರುಕೆ ಹೋಯ್ತು. +ಮೇವೇ ಶಿಕ್ಲಿಲ್ಲ, ಅಕ್ಕಿ ಶಿಕ್ಲಿಲ್ಲ. +ಇವ ಕಾಡಿಗೆ ಬೆಂಕಿ ಕೊಟ್ಟ. +ಹೆಣ್‌ ಹಕ್ಕಿ ಎಲ್ಲಾ ಮರಿಗೋಳ ಕಚ್ಕಂಡ್ ಹೋಗಿ ಬೇರೆ ಕಡೆ ಕುಂತ್ಕಂತ್ತು. +ಗಂಡ್ ಹಕ್ಕಿ ಹುಡಕೂಕೆ ಬಿತ್ತು. +ಗಂಡ್ ಹಕ್ಕಿಗೆ ಮರಿ ‘ಕೆಂವ್. . . ಕೆಂವ್. . . ’ ಕೂಗಿದ್ ಕೇಳ್ತು. +ಅಲ್ಲಿ ಹೋಗಿದ್ದ ಕೂಡಲೇ ಅವರಿವರೊಳಗೆ ಜಗಳ. +“ಮೇವು ತರುಕ್ ಹೋದಾ ಟಾಯ್ಮ್ ಗೆ ಬಿಟ್ಬಂದೆ. +ನೀನು ಹೆರಗ್ ಹೋಗು. +ಮರಿನೂ ಕೊಡುದಿಲ್ಲ ಉಳೂದೇ.” ಜಗಳ ಬಿತ್ತ. +“ವಂದು ನನಗೆ ಕೊಡು, ವಂದ ನೀ ಇಟ್ಕೊ. +ನಾನು ಹೋಗ್ತೆ. . . ” ಅಂತ. +“ಸಂತಿಗೆ ನೀ ಇರೂದ್ ಬೇಡ” ಹೇಳ್ತು. +‘‘ರಾಜರ ಮನಿಗ್ ಹೋಗಿ ಪಂಚಾತ್ಗೆ ಮಾಡ್ವಣ” ಅಂದಾ ಬಲ್ಲಾದೋರ್ ಮಾತ ಕೇಳ್ಕಂಡು. +‘‘ತಾಪತ್ರಿ ಕೊಟ್ಟ ಅಂತಾದ್ರೆ ನಾನಿನ್ ಮರಿ ಬಿಟ್ ಹೋಗ್ತೆ’’ ಅಂತು. +ರಾಜರು ದೊಡ್ಡ ಅರಸರಾಗಿದ್ರು. +ಹೆಣ್ ಹಕ್ಕಿ ಹೇಳ್ತು, “ಏನ್ ಹೇಳ್ತ್ರಿ ಹೇಳಿ. . . ” ಅಂತು. +ಗಂಡ್ ಹಕ್ಕಿನೂ ಹೇಳ್ತು. +ಕೇಳ್ವಲಿವರಿಗೆ ಆ ಅರಸರು ಯೇನ್ ಹೇಳ್ದ್ರು ಕೇಳ್ದ್ರೆ, “ಹೆಣ್ಣು ಮನೆವಳ್ಗೆ ಜೊಪಾನನ ಮಾಡೂದು ಬಿಟ್ರೆ ಗಂಡಿಗೇ ಮರಿ ಸಲತಕ್ಕದ್ದು. . . ಹೆಣ್ಣಿಗೆ ಸಲತಕ್ಕದ್ದಲ್ಲ” ಹೇಳ್ ಬಿಟ್ರು. +ಗಂಡಿಗೆ ಮರಿ ಕೊಟ್ರು. +ಹೆಣ್ ಹಕ್ಕಿ, “ತಗಡಿನ ಮೇನೆ ಚೀಟಿ ಬರ್ದ್ ಕೊಡಿ” ಅಂತು. +ಹೆಣ್ ಹಕ್ಕಿ ಕೈಲ್ ಬರ್ದ್ ಕೊಟ್ ಬಿಟ್ರು. +‘ಯಾವದೇ ಪ್ರಾಣಿ ಹೆತ್ರೂ, ಹಕ್ಕು ಗಂಡಿಗೆ ಹೊರ್ತು ಹೆಣ್ಣಿಗಲ್ಲ’ ಅಂತ ಹೇಳಿ ರಾಜ್ರು ತಗಡ ಬರದ್ ಕೊಟ್ಬಿಟ್ರು. +ಅಲ್ಲೇ ಪರದಾನರು ಉಳೀತ್ರಲ್ಲ? +ಹಕ್ಕಿ ತಗಡ ತಕಂಡ್ ಹೋಗಿ ಮನೆ ಬಾಗ್ಲಲ್ಲಿ ದಾರಂದದ ಮೇನ್ ಇಟ್ತು. +ಪ್ರಾಣ ಬಿಟ್ ಬಿಟ್ತು. +ಪರದಾನರಿಗೆ ವಂದ್ ಮಗಳಿದ್ದಿತ್ತು. +ಪರದಾನಿ ಮಗಳು ದಾರಂದದ ಚಾವಡೀ ಗುಡಿಸ್ತಾ ಬಂತು. +ಬರಬೇಕಿದ್ರ್ ದಾರಂದದ ತಗಡು ಕೆಳಗ್ ಬಿತ್ತು, ಮಗಳಿಗೆ ಶಿಕ್ತು. +ಮೇನಿಟ್ಟ ಬರಕಂಡಿತ್ತು ಅಂದ್ರೆ. . . “ಯಾವುದೇ ಪ್ರಾಣಿ ಹೆತ್ ಹಕ್ಕು ಗಂಡಿಗೆ ಹೊರ್ತು ಹೆಣ್ಣಿಗೆ ಸಮಂದಿಲ್ಲ” ಹೇಳಿ ತಾಮ್ರದ ತಗಡಿನ ಮೇಲೆ ಇತ್ತು, ಓದ್ತು. +ಹುಡುಗಿ, “ಇದು ರಾಜರು ಬರದದ್ದು” ಹೇಳಿ ಪರದಾನಿಗೆ ತಕಂಡ್ ಹೋಗಿ ತೋರ್ಸತು. +ತೋರ್ಸಿ ಯೇನೇಳ್ತು ಅಂದ್ರೆ-- “ಅಪಯ್ಯಾ. . . ನಮ್ಮಲಿದ್ದ ದನ ಯೆಲ್ಲಾ ಗಂಡು. +ಅಲ್ಲಿದ್ದದ್ ಹೆಣ್ಣು. +ಪರದಾನಿ ಮಲ್ಲಿ ಗಂಡು ದನ ಇದ್ರೆ, ಹಾಂಗಿದ್ದಾಗೆ ರಾಜ್ನ ಮಲ್ಲಿ ಗಂಡು ಹೇಳುವಂತಾದೇ ಇಲ್ಲ. +ನಮ್ಮ ದನ ಗಂಡ ದನ. +ನಿಮ್ಮಲ್ ಹೆಣ್ ದನ. +ಅಲ್ ಹೋಗಿ, ‘ಗಂಡ್ ದನ ನಮ್ಮಲ್ಲಿ, ನಿಮ್ಮಲ್ ಹೆಣ್ ದನ.’ ತಾಮ್ರದ ತಗಡ್ನಲ್ ಇದ್ದಂತೆ ಆದ್ರೆ ನಿಮ್ಮಲ್ಲಿದ್ದ ಹೆಣ್ದನ ಆ ಕರು ಮರಿ ಯೆಲ್ಲಿ ನಮ್ಗೆ ಸಲ್ಲುದಾಗ್ತದೆ. +” ಹೇಳ್ತು“ಹಾಂಗ್ ಹ್ಯಾಂಗ್ ಹೇಳ್ತ್ರಿ?” ಕೇಳ್ದ್ರು. +“ನಿಮಗೆ ಆಕಳು ಮಾತ್ರ ಸಮಂದ. +ನಮಗೆ ಆ ಕರುಮರಿ ಯೆಲ್ಲಾ ಕೊಡ್ರಿ. . . ” ಅಂತ ಹೇಳ್ತು. +ಅರಸರು ಯೇನ್ ಹೇಳದ್ರಪಾ ಅಂದ್ರೆ, “ನಿಮಗೆ ಕೊಡಬೇಕಿದ್ರೆ, ನಿನ್ನ ಅಪ್ಪನ ಹತ್ರ ನಮಗೆ ಕೋಣನ ಬೆಣ್ಣೆ ತಂದ್ ಕೊಡು ಹೇಳು. +ಕೋಣನ ಬೆಣ್ಣೆ ತಂದ್ ಕೊಟ್ರೆ ನಿಮಗೆ ಕರುಮರಿ ಕೊಡುಕಡ್ಡಿಲ್ಲ” ಅಂದರು. +ಆವಾಗಾ ಮಗಳು ಹೋಗಿ ಹಾಗೇ ಹೇಳ್ತು-- “ಅಪಾ. . . ನಿಮಗೆ ಆಕಳು ಮಾತ್ರ ಸಮಂದು. +ನಮಗೆ ಆ ಕರು ಮರಿ ಯೆಲ್ಲಾ ಕೊಡ್ರಿ ಅಂತ ಕೇಳ್ದೆ. +ಅರಸರು ಯೇನ್ ಹೇಳದ್ರಪಾ ಅಂದ್ರೆ, ‘ನಿಮಗೆ ಕೊಡಬೇಕಿದ್ರೆ, ನಿನ್ನ ಅಪ್ಪನ ಹತ್ರ ನಮಗೆ ಕೋಣನ ಬೆಣ್ಣೆ ತಂದ್ ಕೊಡು ಹೇಳು. +ಕೋಣನ ಬೆಣ್ಣೆ ತಂದ್ ಕೊಟ್ರೆ, ನಿಮಗೆ ಕರುಮರಿ ಕೊಡುಕಡ್ಡಿಲ್ಲ’ ಹೇಳದ್ರು” ಅಂತು. +“ನಾವು ಬಡವರಾಗಿದ್ದಕ್ಕೆ ಹಾಗ್ ಹೇಳಬಾರದಿತ್ತು” ಅಂದ ಮಗಳಿಗೆ. +ಮಗಳು ಮತ್ ತಿರಸಿ, “ಹಾಗತ್ ಅಪ್ಪಯ್ಯಾ. . . ನಾಳೆ ನಾನು ಕೋಣನ ಬೆಣ್ಣೆ ತಂದ್ ಕೊಡ್ತೆ ಅಂತ ಹೇಳಿ ಬಾ. . . ” ಅಂತ ಹೇಳಿದ್ದು. +ಮರುದಿವ್ಸೆ ಯೆಂತಾ ಮಾಡ್ತಪಾ ಅಂದ್ರೆ, ವಸ್ತ್ರ ಯೆಲ್ಲಾ ತಕಂಡು ಅರಸರ ಕೆರಿಗ್ ಹೋಯ್ತು. +ಅರಸರು ದಿವಸಾ ಅಲ್ಲಿ ಮೊಕಾ ತೊಳಿಲಿಕ್ಕೆ ಕೆರಿಗೆ ಹೋಗತಿದ್ರು. +ಬೆಳಿಗ್ಗೆ ದಿವಸಾಲೂ ಆ ಟಾಯ್ಮ್‌ನಲ್ಲಿ ಆ ಹುಡಗಿ ಕೆರಿಲಿ ವಸ್ತ್ರ ತೊಳ್ಕಂತ ಇತ್ತು. +ವಸ್ತ್ರ ತೊಳ್ಕಂತ ಇರುವರಿಗೆ ಅರಸರು ಬೆಳಿಗ್ಗೆ ಅಲ್ ಬಂದ್ರು, “ಯೇನೆ ಹುಡುಗಿ? +ಇಷ್ಟು ಬೆಳಿಗ್ಗೆ ಮುಂಚೆ ವಸ್ತ್ರ ತೊಳಿತಾ ಇದ್ದೆ?” ಅಂತ ಕೇಳಿದ್ರು. +ಕೇಳ್ವಲಿವರಿಗೆ ಹುಡಗಿ ಯೇನಂತು? +ಅಂದ್ರೆ, “ಯೇನಲ್ಲ; ಅಪ್ಪ ಹಡೆದಾನೆ. +ಹಾಂಗೇ ನಾನು ಬಂದು ಅಪ್ಪನ ವಸ್ತ್ರ ತೊಳ್ಕಂಡ್ ಬರಬೇಕಂತ ವಸ್ತ್ರ ತೊಳಿಲಿಕ್ ಬಂದೆ. . . ” ಆವಾಗ ಅರಸರು, “ಹೋಗೆ ಮಳ್ ಹುಡ್ಗಿ, ಅಪ್ಪ ಯೆಂತಾ ಹಡಿತಾನೆ? +ಅವ್ವ ಹಡ್ದಿರಬಹುದು” ಅಂದ್ರು. +“ಇಲ್ಲಾ ಇಲ್ಲ. . . ಅಪ್ಪನೇ ಹಡದಾನ” ಅಂತು. +‘‘ಮಳ್ಳಿ, ಅವ್ವನೇ ಹಡದಾಳೆ’’ ಅಂದ್ರು. +ಕಡಿಗೆ ಹಾಂಗೇ, “ಅರಸರೇ. . . ನೀವು ಅಪ್ಪ ಹಡಿಲಿಲ್ಲ ಅಂದ್ರಲ್ಲಾ. . . ಹಾಂಗಿದ್ರೆ, ಕೋಣ ಕರು ಹಾಕೂದ್ ಹೌದೋ? +ಕೋಣ್ನ ಹಾಲು ಕರೆದು ಮಜ್ಗಿ ಮಾಡಿ, ಬೆಣ್ಣೆ ಬರುದ್ ಹೌದೋ?” ಕೇಳ್ತು ಆ ಹುಡುಗಿ. +‘ಬಪ್ಪರೆ ಹುಡುಗಿ. . . ! +ನಾನು ಹೇಳಿದ್ದು ನನ್ನ ಮಾತನ್ನೇ ನನಗೆ ತಿರುಗಸ್ತು’ ಅಂತ ಮನ್ಸಿಗ್ ಮಾಡ್ಕಂಡ್ ಮನಿಗ್ ಹೋದ್ರು. +ಆಳುಗಳು ಇತ್ತಾರಲ್ಲಿ. +ಅವರಿಗೆ ವಬ್ಬನ ಕಳಿಸಿ, “ಪ್ರದಾನಿಗೆ ಕರೆದ್ ಬಾ” ಅಂತ ಹೇಳಿದ್ರು ಅಂತಾಯ್ತು. +ಆ ಹುಡಗಿ ರಾಜ್ರು ಮದಿಯಾಗ್ತಾರೆ. +ಮದ್ವಿಯಾಗಬೇಕಾದ್ರೆ ಆ ಹುಡಗಿ ಹೇಳ್ತು. +ಯೇನಂದರೆ, “ನನ್ನ ಮದ್ವೆಯಾಗಲಿಕ್ಕೆ ಅಡ್ಡಿಲ್ಲ. . . ಆದ್ರೆ, ನನ್ನ ಮಗನ ಕೈಲೇ ನಿನ್ನ ರಟ್ಟೆ ಬಿಗಿಸಹಾಕ್ತೆ. +ವಪ್ಕಳ್ವ ಹಾಗಿದ್ರೆ ನಿನ್ ಮದ್ವೆಯಾಗ್ತೆ” ಅಂತು. +ಮದ್ವಿಯಾದ ಕೂಡ್ಲೆ ನೆಲಮಾಳ್ಗಿಲ್ (ಇರಸ್ತ ಅರಸು) ಮುಂಗ್ರಿ ತಕಂಡ್ ಹೋಗಿ ಸುರಂಗ ಹಾಕ್ಸ್‌ತು. +ಅಲ್ಲಿಂದ ಅದು ತನ್ನ ಮನಿಗ್ ಹೋಗ್ವಲಿವರಿಗೆ ದಾರಿ ಮಾಡ್ಕಂತು. +ಡೊಂಬರಾಟದವರ ಸಂತಿಗೆ ಡ್ಯಾನ್ಸ್ ಮಾಡುಕೆ ಅರಸರ ಮನಿಗೆ ಹೋಗಿತ್ತು. +ಹೋದಾಗ ಅರಸರಿಗೆ ಅವಳ ಮೇನೆ ಮನಸಾಗಿ, “ಆ ಹುಡ್ಗಿನ ಕಳ್‌ಸ್ಕೊಡು. . . ” ಹೇಳ್ತಾರೆ ಹೆಂಗಸ್ರ ಹತ್ರ. +“ಅಡ್ಡಿಲ್ಲ. . . ಹುಡ್ಗಿ ಕೇಳ್ಕಂಡ್ ಹೇಳ್ತೆ” ಅಂದಿ, ಕೇಳಿ ಅರಸರ ಮನಿಗೆ ಕಳ್ಸ್ರು. +“ವಂದುಂಗ್ರ ಕೊಡಬೇಕು. +ಹಾಗಿದ್ರೆ ರಾತ್ರಿ ಬರಾಕಡ್ಡಿಲ್ಲ” ಅಂತು. +ಉಂಗ್ರ ಕೊಟ್ಟಿದ ಮೇಲೆ ಆ ರಾತ್ರೆ ಅರಸರ ಮನಿಗ್ ಹೋಗ್ ಉಳಿತು. +ಮರುದಿನ ಬೆಳಿಗ್ಗೆ ಹೋಗಿ ಬಿಡ್ತು. +ಅರಸಂಗೆ, ಪರ್ದಾನಿ ಮಗಳಿಗೆ ಸಂಪರ್ಕಾತಲ್ಲ. +ಹುಡ್ಗ ಹುಟ್ತಾನೆ. +ಅವ ರಾಜ ಕಳ್ಳಾಗ್ತಾನೆ. +ವಂದಿವ್ಸ ಅರಸನ ಮನಿಗೇ ಹೋಗ್ ಕಳ್ತಾನೆ ಅವ. +ಆವಾಗೆ, ಆಚಾರಿ ಆ ರಾಜದ ಗಡಿಲಿ, ರಸ್ತೆ ದಾಟ್ವಲ್ಲಿ ಒಂದ್‌ ಕೋಳ ಮಾಡಿಟ್ಟಿದ್ದ. +ಈ ಹುಡ್ಗ ಅದ್ರ ನೋಡ್ತಾನೆ. +ಅರಸರ ಮನಿಂದ ಕದ್ಗಂಡು ಅದೇ ದಾರೀಲಿ ಓಡ ಹೋಪೆಕಾರೆ ಅರಸಗೋಳು, ‘‘ಕಳ್ ಯಾರು ಹೇಳಿ ಹುಡ್ಕ್ ಕೊಟ್ಟವರಿಗೆ ವಂದ್ ಸಾವ್ರ ಕೊಡ್ತೆ’’ ಹೇಳಿ ಅರಸ ಆಚಾರಿ ಹತ್ರ ಹೇಳಿದ್ನಂತೆ. +ಅರಸಗೊಳು ‘‘ಕಳಾ. . . ಕಳ್ಳಾ. . . ಬಂದ್ ಶಿಗ್ತಾನೆ’’ ಅಂತ ಓಡ್ ಬಂದು ಕೋಳದಲ್ ಶಿಕ್ಕಬಿದ್ರು. +ಶಿಕ್ಕ ಬೀಳ್ವಲಿವರಿಗೆ, ಕಳ್ಳ ಹುಡ್ಗ ಅವರ ವಸ್ತ್ರ ಯೆಲ್ಲಾ ಕಳಚದ, “ಯಾರಾದ್ರೂ ಹಾಂಗಲ್ಲ, ಹೀಂಗಲ್ಲ ಹೇಳಿ ಬಂದ್ರೆ ಅವನ್ನ ಕಟ್ಟಿ ಹಾಕಿ ಬಿಡಿ. . . ” ಹೇಳಿ ಆಳುಗಳ ಹತ್ರ ಹೇಳ್ತಾ. +ಅವ್ರು ಅರಸರಿಗೆ ಹಿಡ್ಕಂಡ್ ಬಂದು ಕಂಬಕ್ ಕಟ್ ಹಾಕಿ ಬೆಳಗವರಿಗೂ ನಿಲ್ಸುದ್ರು. +ಬೆಳ್ಗಾ ಮುಂಚೆ ಆ ಹುಡ್ಗ ತನ್ನ ತಾಯಿಗೆ ಕರ್ಸಬಿಟ, “ನಾನು ಯೇನ ಮಾಡ್ದೆ ಅಂದ್ರೆ, ನನ್ನ ತಂದೆ ರಟ್ಟೆ ನಾನು ಬಿಗ್ದ್ ಇಟ್ಟಾನೆ. +ಬಂದಿ, ಯೇನು ಹೇಳ್ತಿ ಹೇಳು. . . ” ಅಂತ ಹೇಳ್ದಾ. +ತಾಯಿ ಬ‌ರತದೆ. +ತಾಯಿ ಬಂದು ಅರಸರ ಹತ್ರ, “ಅರಸಗೊಳೇ. . . ‘ನಿಮ್ಮ ಮಗನ್ ಹತ್ರೇ ನಿಮ್ಮ ರಟ್ಟೆ ಬಿಗಿಸ್ತೆ’ ಹೇಳಿದ್ದೆ, ತನ್ನ ಮದ್ವೆಯಾಗಬೇಕಿದ್ರೆ. +ನಾನ್ ಈ ರಟ್ಟೆ ಬಿಗಿಸಿದ್ನೋ?” ಕೇಳ್ತು. +“ಹೇಂಗ್ ಬಿಗಿಸ್ದೆ? +ನಾನ್ ನಿನ್ನ ಮದಿಯಾಗಬೇಕಿದ್ರೆ ನನ್ನ ನೆಲಮಾಳ್ಗಿ ವಳ್ಗೆ ಹಾಕಿಟ್ಟಿದ್ದೆ. . . ” “ಊರಿಂದ ಮುಂಗ್ರಿ ತಂದು ಸುರಂಗ ತೋಡ್ಸಿ ತಂದೆ ಮನಿಗೆ ಹೋದೆ. +(ಡೊಂಬರಾಟದವರ ಸಂಗಡ) ಡೊಂಬರಾಟದವರ ಸಂಗ್ತಿಗೆ ಹೋಗಿ ಡ್ಯಾನ್ಸ್ ಮಾಡತಾ, ಆಡಕಂತ ನಿಮ್ಮ ಕೂಡ್ದೆ. +ನಿಮ್ಮ ಮುದ್ರೆದುಂಗಲ ಕೊಟ್ಟಿದ್ರಿ.” +“ಇಂತಾ ಮಾತೆಲ್ಲಾ ತನ್ನದು ತಪ್ಪು. . . ” ಅಂತ ಯರಡೂ ಜನರ ಕರಕೊಂಡ್ ಹೋದ. +ವಂದಲ್ಲಾವಂದೂರಲ್ಲಿ ನೀಲಕಂಠರಾಜ ಹೇಳಿದ್ದನಂತೆ. +ಅವ ಮಾಡು ಧಂದೆ ಯಾವದಪ್ಪ? +ಅವಂದು ಪಕತ್ನ ಮೀನ್ ಹಿಡ್ಯೂದು, ಹಶಿಮೀನ್ ಹಿಡ್ಯೂದು-- ಸಂದ್ರದಲ್ಲಿ ಹಳ್ಳದಲ್ಲ. +ಹಶಿಮೀನ ತಿನ್ನೂದು. +ಹೆಸ್ರ್ ದೊಡ್ಡದು-- ರಾಜ (ನೀಲಕಂಠರಾಜ). +ಅಲ್ ಸಲ್ಪ ಮುಂದ್ ಕಾಯಿರಾಜ ಹೇಳಿದ್ನಂತೆ. +ಅವನಿಗೆ ಬೋಟಿತ್ತಂತೆ ಬೋಟಿ. +ಆ ರಾಜಗೆ ಯೇನಾಯ್ತಪ್ಪ? +ವಂದಿವ್ಸೆ ಅವಂಗ್ ಆ ಊರಲ್ಲಿ ಯೆಲ್ಲೂ ಮೀನಿಲ್ಲಾಯ್ತು. +ಅಕಸ್ಮಾತ ಅವನ ಬೋಟಿ ಹೊನ್ನಾವರ ಬಂದರಕ್ ಬರುದಿತ್ತಂತೆ. +ಆಗಾ ಬೋಟಿ ಡಾಯವರನ ಕೈಲಿ, “ಅಲ್ ಬಂದ್ರದಲ್ಲಿ ಗನಾ ಹಶಿಮೀನ ಬಂದ್ರೆ ತಕಂಡ್ ಬಾ. . . ” ಅಂದ್ ಹೇಳ್ದನಂತೆ. +ಆಗೆ ಆ ಬೋಟಿ ಅಲ್ ಬಂದ್ ನಿಲ್ಲುರುಗೆ, ನೀಲಕಂಠ ರಾಜ ನನ್ನಂತಾ ವಂದ್ ಭರ್ಜರಿ ಮೀನ ಹಿಡ್ದಬಿಟ್ಟ ಗಾಳದಲ್ಲಿ. +ನಂತ್ರೆ ರಾಜ ಹೇಳ್ ಕಳಿಸಿದನಲ್ಲ? +“ಮಾರಾಯಾ, ಯಾರಿಗೂ ಕೊಡಬೇಡ. +ನಾ ತಕಳ್ತೆ. . . ” ಹೇಳ್ತನೆ ಬಂದ ಅವ. +ಆಗಿವ ಯೇನ್ ಮಾಡ್ದ? ತಡಮಾಡಲಿಲ್ಲ. +ಇವ ತಗದ ಅವನಿಗೆ ಕೊಟ್ಟ. +ಅವರು ರೊಕ್ಕ ಕೊಡುಕ್ ಮಾಡ್ದ್ರು. +“ತಂಗ್ ಆ ರೊಕ್ಕ ಬೇಡ” ಅಂದ ಅವ. +ಆಗಿವ್ರು, “ನಿನ್ ಹೆಸ್ರ್ ಯೇನು?” ಕೇಳ್ದ್ರು, ಅವನ ಕೈಲಿ. +“ತನ್ ಹೆಸ್ರ್ ನೀಲಕಂಠರಾಜ. . . ” ಅಂದ ಅವ. +ಆಗೆ ಆ ಮೀನ ತಕಂಡವ್ರು ಹೋದ್ರು ಬಂದ್ರದಲ್ಲೆ ಬೋಟಿ ತಕಂಡ್ ಹೋದ್ರು (ಸಾಮಾನ್ ಕಾಲಿಮಾಡಿ), ಕಾಯರಾಜ ಇದ್ದಲ್ಲಿ ಬೇಗನೆ ಹೋದ್ರು. +ಅಲ್ ಹೋಗುರಗೆಯ ಆ ರಾಜನ ಮೀನ ನೋಡ್ ಬಾಳ ಆಶ್ಚಿರ್ಯಾಯ್ತು ಅವಗೆ-- ‘ಇಟ್ ದೊಡ್ ಮೀನ ಯೆಲ್ ಶಿಕ್ತು?’ ಹೇಳಿ. +ಆಗ, ‘‘ಇಂತವ. . . ವಂದ್ ನೀಲಕಂಠರಾಜ ಹೇಳವನು ತನ್ಗ್ ಕೊಟ್ಟ’’ ಅಂದ. +ಆಗ ಅವನ ಆಶ್ಚಿರ್ಯಯ್ತು, “ರೊಕ್ಕಾ ಯೆಟ್ ಕೊಟ್ಟಿ?” ಕೇಳ್ದ. +“ರೊಕ್ಕ ಕೊಡಲಿಲ್ಲ. +ಪುಕ್ಕಟ ಕೊಟ್ಟಾನೆ” ಅಂತ ಹೇಳ್ದ್ರು. +ಕಡಿಗಾ ಮೀನ್ ಕೊಚ್ಬೇಕಾಯ್ತಲ? +ಆಗ ಅಲ್ಲಿ ಗೌಡತೀರಿದ್ರಂತೆ. +ಆ ಗೌಡತೀರ್ ಕೈಲಿ, “ಆ ಮೀನ ಕೊಚ್ಚಿ. . . ” ಅಂತ ಹೇಳ್ದ ಕಾಯರಾಜ. +ಆಗಾ ಮೀನ ಶಿಗದ್ರೂ ಅಂದಾಯ್ತು ಇಟ್ ದೊಡ್ ತೋಪನಲ್ಲಿ. +ಅದ್ರ ಹೊಟ್ಟಿಲಿ ವಂದ್ ದಡೆ ಆಗ್ವಟ್ಟು ಬಂಗಾರಿತ್ತು. +ಆಗ ರಾಜಗೆ ಬಾಳ ಆಶ್ಚಿರ್ಯಾಯ್ತು. +“ಇವ ದೊಡ್ಡ ರಾಜ. . . ಪುಕ್ಕಟೆ ಕೊಟ್ಟ. +ಬೇಕಂದೇ ಅದು ಹೊಟ್ಟಿವಳ್ಗೆ ಬಂಗಾರ ಹಾಕ್ ಕೊಟ್ಟನೆ. +ತನ್ ಶ್ರೀಮಂತ್ಕೆ ಪತ್ತೆ ಮಾಡು ಬಗ್ಗೆ ಹೇಳಿ. . . ” ಆಗವ ತಡಾ ಮಾಡಲಿಲ್ಲ. +ತನ್ನ ಮಗಳ ಕೈಲಿ ಹೇಳ್ದ, “ತನ್ನ ಪರಿಕ್ಸಿ ಮಾಡಬೇಕು ಹೇಳಿ ಇಟ್ಟೊಂದ ಬಂಗಾರ ಮೀನ್ನ ಹೊಟ್ಟಿಲಿ ಹಾಕಿ ಕಳ್ಸನೆ. +ನೀನ್ ವಂದ್ ಮಾತ ಕೇಳ್ಬೇಕು” ಅಂದ್ ಹೇಳ್ದ, “ಅವನಿಗೆ ಲಗ್ನಾಗಬೇಕು. . . ” ಅಂತ ಹೇಳ್ತಾ. +“ಅಡ್ಡಿಲ್ಲ” ಹೇಳ್ತು ಆ ಹುಡ್ಗಿ. +ಬೆನ್ಮೇನೆಲ್ಲಾ ಚಿಪ್ಪಿ ಬೆಳದಿ ಇರ್ತದೆ. +ನೀಲಕಂಠರಾಜನ ಬೆನ್ನ ಮೇಗ್ ಇರ್ತದೆ. +ಸಾನಗೀನ ಯೆಂತದೂ ಇಲ್ಲ. +ಸಣ್ಣ ಗುಡಿಸಲು ಮಾಡ್ಕಂಡ ಇರವವ. +ನಂತ್ರೆ ಆಗೆ ಸೀದಾ ಗುಡಗಾರ ಇದ್ದಲ್ ಹೋಗಿ, ದೊಡ್ಡದೊಂದ ಪೆಟ್ಗಿ ಮಾಡ್ಸಿದ ಇವ. +ಆಗೆ ಪೆಟ್ಗಿ ತಕಂಬಂದು ಹುಡ್ಗಿಗೆ ಬಂಗಾರ ಯೆಲ್ಲ ಆ ಪೆಟ್ಗಿವಳ್ಗ್ ಹಾಕಿ, ಗವರ್ಮೆಂಟ್ ಚಪ್ಪಿ ಹೊಡ್ದು (ರಾಜಮುದ್ರೆ) ಪಾರ್ಸಲ್ ಮಾಡಿ, ಸೀದಾ ಹೊನ್ನಾವರ ಬಂದರಕ್ಕೆ ಕಳಸ್ದ. +ಅಲ್ಲಿಂದಾ ಪೋಲೀಸ್ರ ಕಚೇರಿಗ್ ಸುದ್ಯಾಯ್ತು. +ಪೋಲೀಸ್ರು ಬಂದ್ ನೋಡದ್ರು ಆ ಪೆಟ್ಗಿಯ. ನೋಡ್ದ್ರು. . . ನೋಡಿದ್ರೆ ಹಾಗೆಯ ಕಚೇರಿಲ್ ತಂದಿಟ್ರು. +ಪೆಟ್ಗಿ ಚಪ್ಪಿ ಮೇಲೆ, “ನೀಲಕಂಠರಾಜನ ಹೊರ್ತು ಯಾರೂ ಆ ಪೆಟ್ಗಿ ವಡಿಬಾರದು. . . ” ಹೇಳಿತ್ತು. +ನಂತ್ರ ಪೋಲೀಸ್ರು ಕಚೇರಿಲ್ ಇಟ್ಕಂಡ್ರು. +ನೀಲಕಂಠರಾಜನ ಹುಡ್ಕುಕ್ ಹಣ್ಕಿದ್ರು. +ಯೆಲ್ ಹುಡ್ಕರೂ ಇಲ್ಲ ಅವ. +ಆಗೆ, ಹೀಗೇ ವಬ್ಬವ ದಾರಿಮೇನ್ ಶಿಕ್ ಹೇಳ್ದ, “ಊರಮೇನ್ ಹುಡ್ಕದ್ರ್ ಅವ ಶಿಕ್ಕುದಿಲ್ಲ. . . ಯೆಲ್ಲಿ ಕಲ್ ಅಂಟೆ, ಕಲ್ ಪಡಸಲ (ಗುವೆ), ಮಡಸಲು (ಗುವೆ), ಹುಡ್ಕರೆ ಶಿಕ್ವ ಅವ. . . ” ಅಂತ ಹೇಳ್ದ ವಬ್ಬ. +ಅಲ್ಲೀಗ್ಯೇನಾಯ್ತು ಅಂತ ಹೇಳದ್ರೆ, ಹೇಳ್ದವನೀಗೇಯ ನೀಲಕಂಠರಾಜ ಕೆಲುದೂರ್ನಲ್ಲಿ ಶಿಕ್ದ. +ಆಗೆ, “ಯೇ ಮಾರಾಯಾ. . . ನೀ ಯಾವ್ ಬದಿಗಿದ್ದೆ. +ಪೋಲಿಸ್ರು ನಿನ್ನ ಹುಡ್ಕಂತ ಬಿದ್ದರೆ. +ನಿನ್ನ ಹೆಸ್ರಲ್ಲಿ ವಂದ್ ಪೆಟ್ಗಿ ಮೋರಾಗ್ ಬಂದದ್ಯಂತೆ. +ನೀ ಕಚೇರಿಗ್ ಹೋಗಿ ಪೋಲೀಸ್ರಗ್ ಶಿಕ್ಕು” ಅಂತ ಹೇಳ್ದ. +ಆಗೆ, ಇವ ಮತ್ತೂ ಕಂಗಾಲಾದ. +ಈ ನೀಲಕಂಠರಾಜ, ‘ಇದೆಂತಾ ಬನಾವಟು ತನ್ಗ್ ಗೆಂಟ್ ಬಿತ್ತು. . . ’ ಹೇಳಿ ವೋಡ್ ಹೋಗ್ ಮತ್ ಕಲ್ ಮಡಸಲವಳ್ಗ ಹೋಗಿ, ಅಪ್ಪರಸಕಂಡಿ ಬಿದ್ಬಿಟ್ಟ-- ಪೋಲೀಸ್ರು ಹುಡ್ಕತ್ರು ಹೇಳಿ. +ಯೆಲ್ ಹುಡ್ಕುದ್ರೂ ಇಲ್ಲ. +ನಂತ್ರ ಪೋಲೀಸ್ರು, ಇವ ಹೇಳ್ದಂತೆಯ ಯೆಲ್ಲಾ ಕಲ್ ಮಡಸಲ ಹೊಳಿ ಬದಿಗೆ, ಸಮ್ಮದ್ರ ಬದಿಗ್ ನೋಡ್ದ್ರೂ ಅಡ್ಡಿಲ್ಲ-- ಹುಡಕಂತ ಹೋದ್ರು. +ವಂದ್ ಕಲ್ಲ ಮಡಸಲ ವಳಗೆ ಕಮಚಿ ಬಿದ್ದನೆ ಇವ. +‘‘ಏ ಏಳೊ ಬೋಸಡೀಕೇ, ನಿನ್ನ ಹೆಸ್ರಲ್ ವಂದ್ ಪೆಟಿಗಿ ಬಂದದೆ ಮೊರಾಗಿ. +ಇಲ್ಲೆಂತಾ ಸಾಯ್ತೆ? ಯೇಳ್. . . ” ಅಂದ್ ಹೇಳದ್ರು. +“ಅಯ್ಯೋ ಸ್ವಾಮಿ. . . ನಿಮ್ಗ್ ಕೈ ಮುಗಿತೆ. +ನನ್ಗ್ ಬೇಡಾ. . . ನೀವೆ ತಕ್ಕೊಳ್ಳಿ. . . ” ಅಂದ್ ಹೇಳ್ದ, ಅವ್ರ ಕೈಲಿ. +ವಂದ್ ಕೊಟ್ಟೇ ಕೊಟ್ರು ಅವನೀಗೆ. +“ನಾವ್ ತಕ್ಕೊಳ್ಳೂದಲ್ಲ. +ನೀ ತಕ್ಕೊಳ್ಳುದೇಯ” ಅಂದ್ರು. +ನಂತ್ರೆ ಅವ ಕಚೇರಿಯಲ್ ಬಂದ-- ಪೆಟ್ಗಿ ತಕೊಳ್ಳೂಕ್ ಕಡಿಗೆ. +“ವಡಿ ಪೆಟ್ಗೆ” ಅಂದ್ರು. +“ನೀನು ವಡಿ. . . ‘ನೀಲಕಂಠರಾಜ ಅಂದ್ರೆ ತಾನೇ ಸೈ’ ಅಂತ ಹೇಳಿ, ಅದ್ರ ಮೇನೆ ವಂದ್ ಗುದ್ ಹೊಡಿ” ಅಂದ್ರು. +“ನೀಲಕಂಠ ರಾಜ ತಾನೇ ಸೈ. . . ” ಅಂದಿ ವಂದ್ ಗುದ್ ಹೊಡ್ದ ಅವ. +ಹೊಡ್ದೇ ಸೈ, ಆಗಿಂದಾಗ ಅದು ಪೆಟ್ಗಿ ಬಾಗ್ಲ ತೆಕಂಡ್ (ವಳಬದಿ ಬೀಗ ತಕಂಡು) ಬಂದು ಇವನಿಗೆ, “ನೀನೆ ಗಂಡ, ನಾನೇ ಹಿಂಡ್ತಿ. . . ” ಹೇಳಿ ಹೂಂಗ್ನ ಮಾಲಿ ಹಾಕ್ತು. + “ಅಯ್ಯಯ್ಯಾ. . . ನಂಗ್ ಬೇಡ” ಅಂತ. +ಪೋಲೀಸ್ರು ವಂದ್ ಲತ್ತಿಕೊಟ್ರು. +“ಅಯ್ಯಯ್ಯಾ, ತಾನ್ ಅದ್ರ ಕರಕಂಡ್ ಹೋಗ್ತೆ” ಅಂದ. +ಆಗ ಅದ್ರ ಕರಕಂಡು ಸೀದಾ ಅವನ ಬಿಡಾರ್ಕ ಹೋದ. +ವಂದ್ ಸಣ್ಣ ಗುಡಿಸಲ, ಮಡ್ಲ ಕಟ್ಟದ್ದು. +ಯೆಯ್ಡ ಮಣ್ ಪಾತ್ರ ಅದೆ, ಮತ್ ಯೆಂತದೂ ಇಲ್ಲ. +ನಂತ್ರೆ ಆಗಿದ್ಯೆಲ್ಲಾ ನೋಡ್ತು ಅಲ್ಲಿ, “ದೇವ್ರೇ. . . ನನ್ಗೆ ಪಾಲಿಗ್ ಬಂದದ್ ಪಂಚಾಮ್ರತ ಶಿಕದಂತಾದ್ ಅಂತ ಬಯ್ಯಬೇಕಾಯ್ತಲ. . . ” ಅಂತ ಹೇಳಿ ಉಳಿತು ಅಲ್ಲಿ. +ಆಗೆ ಕಡಿಗೆ ಸೀದಾ ಪೇಟೀಗ್ ಹೋಗಿ ಅಪ್ಪನೀಗ್ ಫೋನ್ ಮಾಡ್ತು ಅದು‌. +“ಮತ್ ತನ್ಗೆ ವಂದ್ ಯೆಯ್ಡಮೂರ್ ಜನ ಮುಟ್ಗೌಡತೀರ ಕಳ್ಸಕೊಡಬೇಕು. +ಮತ್ ನನ್ಗೆ ವಂದ್ ಯೆಮ್ಮೆ (ಕರು) ಮತ್ ಯೆಂಟಹತ್ ಸಾವ್ರ ರುಪಾಯಿ ಕೂಡ್ಲೆ ಕಳ್ಸ್ ಕೊಡಬೇಕು” ಹೇಳ್ ಫೋನ್ ಮಾಡ್ತು. +ಅಟ್ ಅವ ಕಳ್ಸದ. +ಕಳ್ಸವಲ್ಲಿವರಿಗೂ ಎದ್ರು ಯೆಲ್ಲಾ ತಂದ್ರು. +ಆಗ ಇದು ಸೀದಾ ಪೇಟಿಗ್ ಹೋಯ್ತು. +ಅಕ್ಕಿ, ಬೇಳೆ, ಪೂರಾ ಪಾತ್ರ ಪಗಡಿ, ದೊಡ್ ಹಂಡಿ ತಕಂಬಂತು. +ನೀರ್ ಕಾಸ್ ಮೀಸ್ತು. +ದೊಡ್ಮನಿ ಕಟ್ಟೂಕ್ ಹಾಕ್ತು. +ಆ ಮುಟ್ ಗೌಡತೀರು ಅವನಿಗೆ ಕತ್ತದ ಕರಿಹಾಕಿ ತಿಕ್ಕದ್ರು ಬೆನ್ನ. +ಯೇಕ್ದಂ ಬಿಸನೀರ ಹಾಕ್ ಮೀಸೂದು. +“ಅಯ್ಯಯ್ಯೊ. . . ” ಅಂದ್ರೂ ಬಿಡೂದಿಲ್ಲ. + “ಅಪ್ಪಪ್ಪ. . . ” ಅಂದ್ರೂ ಬಿಡೂದಿಲ್ಲ-- ಮೀಸದ್ರು. +ಅವನಿಗೆ ಡ್ರೆಸ್ ಹಾಕಿ ತಯಾರ್ ಮಾಡದ್ರು. +ಕಾಣಲಿಕ್ಕೆ ಸುಂದರವೇ ಯಿದ್ದ. +ಅಲ್ಲೊಬ್ಬ ಕೆಲ್ಸಿ ಸುಬ್ರಾಯ ಅಂತ ಹೇಳಿ. +ಅಲ್ಲಿ ಬೇರೆ ವಬ್ಬ ರಾಜನ ಮನಿಗೆ ಗಡ್ಡಕ್ ಬತ್ತಿದ್ದ, ದಾಡಿ ಮಾಡೂಕೆ ಯೆಂಟೆಂಟ ದಿನಕೆ. +ಆಗೆ ಇವ ನೋಡ್ದ. +‘ಆ ಹುಡಗೀಯ ಯಾರು?’ ಕೆಲ್ಸಿ, ರಾಜನ ಕೈಲಿ ಹೋಕಂಡ್ ಹೇಳ್ದ. +“ನಿಮ್ಮ ಹೆಂಡ್ತಿ ಯೆಂತದು? +ನಿಮ್ಮ ಹಿಂಡ್ತಿ ತೆಗ್ದಿ ವಲಿಲ್ಹಾಕಿ. +ನನ್ನ ಹಿಂಡ್ತಿ ಹೊಳಿಲ್ ಹಾಕಿ. +ಆ ನೀಲಕಂಠರಾಜ ಅಷ್ಟ ಸುಂದರ ಹೆಣ್ ತಂದನೆ. . . ” ಅವ ಹೇಳ್ದ. +“ನೀನ್ ಕಲ್ತಂತಾದ್ ಯೇನಾರೂ ಉಪಾಯ ಇದ್ರೆ ಮಾಡಿ ಅವ್ನ ತಗೀಬೇಕು. +ಆ ಹುಡ್ಗಿ ತರಬೇಕು” ಅಂದ. +ಇವ ಅವನ ನೀಲಕಂಠರಾಜ್ನ ಕರಿಸ್ದ. +ಕರಿಸಿ ಅವ್ನ ಕೈಲ ಹೇಳ್ದ. +“ಈ ಊರಲ್ಲಿ ಯಾರ್ ಹೊಸ್ತಾಗ್ ಲಗ್ನಾಗ್ ಬಂದರ್ಯೋ ತಾನ್ ಹೇಳ್ದಂತಾ ವಸ್ತ ತರಬೇಕು. +ನಿನ್ಗ್ ಹೊಸ್ತಾಗ್ ಲಗ್ನಾಗಿದೆ ತರಬೇಕು. +ಇಲ್ಲಾದ್ರೆ ನಿನ್ ತಲಿ ಹೊಡಿತೆ” ಅಂದ್ ಹೇಳ್ತ. +“ಯೆಂಟ್ ದಿವ್ಸನ್ ವಳ್ಗೆ ತರಬೇಕು” ಹೇಳ್ ಅವನ ಪಣ. +ಅಲ್ಲಿಗೆ “ಅಡ್ಡಿಲ್ಲ ತಾನ್ ತರ್ತೆ” ಅಂತ ಹೇಳ್ದ. +“ಕೂಗು ನೀರು, ಮಾತಾಡು ಮಾಯ್ನ ಹಣ್ಣು ತರಬೇಕು” ಅಂತ ಹೇಳ್ದ. +ಆಗೆ ಅಟ್ ಕೇಳ್ಕೊಂಡು ಸೀದಾ ಮನಿಗ್ ಬಂದ ಅವ. +ಬಂದವನೆ ಮುಚ್ ಹಾಕಂಡ್ ಸೂಮ್ನ ಮನ್ಗ್ ಬಿಟ್ಟ. +ಆಗಾ ಹಿಣತಿ, “ಯೆಂತಕ್ ಮುಚ್ ಹಾಕೊಂಡ್ ಮನ್ಗಿದೆ, ಯೇನಾಯ್ತು? +ರಾಜ ಯೆಂತ ಹೇಳ್ದ. . . ” ಹೇಳ್ ಕೇಳ್ದು. +ಆಗೆ, ಇವ ಹೇಳ್ದ, “ಮತ್ತೆ ಯೇನಲ್ಲ. +ರಾಜ ಇಲ್ ಹೊಸದಾಗಿ ಲಗ್ನಾಗ್ ಯಾರ್ ಬಂದರ್ಯೋ ತಾನ್ ಹೇಳ್ದ್ ವಸ್ತು-- ಕೂಗು ನೀರು, ಮಾತಾಡು ಮಾಯ್ನ ಹಣ್ಣು ತರಬೇಕು. +ತರದೆ ಹೋದ್ರೆ ಇವತ್ತಿಗ್ ಯೆಂಟ್ ದಿವ್ಸಕೆ ತಲಿ ಹೊಡಿತೆ ಹೇಳವ್ನೆ” ಅಂದ. +“ಅಟ್ಟೆ ಹೌದಲ್ಲೊ?ನೀನ್ ಹೆದ್ರೂದ್ ಬೇಡಾ. +ಊಟಾಗೀಟ ಮಾಡಿ. . . ” ಹೇಳ್ ಹೇಳ್ತು. +ಊಟಕ್ ಬಂದಾ, ಊಟ ಮಾಡ್ದಾ. +ಗಂಡನ್ ಕೈಲ್ ಹೇಳ್ತು ಅದು, “ಸೀದಾ ನೀವು ಉತ್ತರ ದಿಕ್ಕಿಗ್ ಹೋಗಿ ಕೆಲವಷ್ಟ ದೂರ ಹೋಗ್ವಲ್ಲಿವರಿಗೂ ವಂದೆ ಕಡಿಗೆ ಮೂರ್ ಹಾದಿ ಕೂಡದೆ. +ಆ ಹಾದಿ ಯೆಡ್ಕೆ, ಬಲ್ಕೆ ಬಿಟ್ಟಿ ಮದ್ಯ ಹಾದಿಲ್ ಹೋಗಿ. +ನಿಮ್ಮ ಕೂಗು ನೀರು ಅದೇ ಹಾದಿವಳ್ಗೆ ಮೊದ್ಲೇ ಶಿಕ್ತದೆ. +ಬಾಟ್ಲಿಲ್ ಹಾಯ್ಕಂಡ್ರಾಯ್ತ. +ಅಲ್ಲಿಂದ ಮುಂದ್ ಹೋಗೂದ್ರೊಳ್ಗೆ ಮೂರ್ ಮರ ಅದೆ. +ಮೂರೂ ಮರಕೂ ವಂದ್ ಹಣ್ಣು ತಿರಗಾಡ್ತಾ ಇರ್ತದೆ. +ಅದ್ ಹಿಡೂದ್ ಮಾತ್ರ ಕಷ್ಟದೆ.”ಹೇಳೂದ್ರೊಳ್ಗೆ ಇವ ನೆಡ್ದ. +ಅಲ್ಲೊಂದು- ಕೆಲವಷ್ಟು ದೂರ ಹೋಗುವರಿಗೊ ಮೂರ್ ಹಾದಿ ಕೂಡಿದ್ ಶಿಕ್ತು ಇವಗೆ. +ಆಚಿಚಿ ಹಾದಿ ಬಿಟ್ಟ. +ಮದ್ಯ ಹಾದಿ ಹಿಡ್ದ್ ಹೋದ. +ಇವತ್ಲಾಗ್ ಹೋಗ್ವಲ್ಲಿವರ್ಗೆ ಹಿಂಡ್ತಿ ವಂದ್ ತೊಳಚಿಗಿಡ ಕಿತ್ಕಂಡ್ ಬಂದಕಂಡಿ-- ನೆಟ್ಟ ಅದ್ಕ್ ನೀರ್ ಹಾಕ್ತಾ ಉಳಿತು ಅದು. +ನಂತ್ರ ಮದ್ಯ ಹಾದಿ ಹಿಡ್ಕಂಡ್ ಕೆಲುದೂರ ಹೋಗೂದ್ರೊಳ್ಗೆ ವಂದು ಯಲ್ಗ್ ರಾಜನ ಮನಿ ಇತ್ತು. +ಇದ್ರೆ ಅವನಿಗೂ ವಂದ್ ಹುಡ್ಗಿ ಇತ್ತು. +ಅದು ಆತನ ಕೈಲ್ ಹೇಳ್ತು, “ಯೆಲ್ಲೂ ನೆಂಟಸ್ತನ ಮಾಡೂದ್ಬೇಡ. +ತನ್ಗ್ ಬೇಕಾದ್ ಗಂಡ್ನ ತಾನ್ ತೋರ್ಸತೆ; ಅವನಿಗೆ ಲಗ್ನ ಮಾಡ್ಕೊಡು” ಹೇಳಿಟ್ಟಿತ್ತು ಅಪ್ಪನ ಕೈಲಿ ಮೊದ್ಲೆಯ. +ಅಕಸ್ಮಾತ್ರ ಇವ ಬಯ್ಲಲ್ ಹೋಗೂದು ಕಂಡ್ ಹೋಯ್ತು ಅದ್ಕೆ. +ಮಾಳ್ಗಿ ಮೇನಿತ್ತು ಅದು. +ಕೂಡ್ಲೆ ಅಪ್ಪನ ಕೈಲ್ ಹೇಳ್ತು, “ನೋಡು, ತನ್ಗ್ ತಕ್ಕಾದ ಗಂಡ ಅಲ್ ಹೋಗ್ತ, ಅವನ್ಗೆ ತಕಂಡ್ ಬಂದ್ ಲಗ್ನ ಮಾಡಬೇಕು” ಅಂತು. +ತಡಮಾಡಲಿಲ್ಲ ಅದರಪ್ಪ. +ಚಾರಕರಿರತ್ರಲ್ಲ ಅವರ್ನ ಕಳ್ಸಿ ಅವ್ನ ಕರ್ಕಂಬಂದ್ರು. +“ನಮ್ ರಾಜರು ನಿಮ್ಮ ಸರಿ ವಂದ್ ಮಾತಾಡೂದದ್ಯಂತೆ. +ವಂದ್ ಸರ್ತಿ ಬಂದ್ ಹೋಗಿ” ಅಂತ ಹೇಳ್ದ್ರು. +ಆಗ ಬಂದ.ಬರ್ವಲ್ಲಿವರಿಗೂವ, “ಯೆಂತಕ್ ನನ್ನ ಕರಿಸ್ದ್ರಪ್ಪ?” ಅಂತ ಕೇಳ್ದ ರಾಜ್ರ ಕೈಲಿ. +“ಮತ್ತೇನಿಲ್ಲ. ನಿನ್ಗ್ ಕರಿಸಿದ್ದು ಅಂದ್ರೆ - ವಂದ್ ಹುಡ್ಗಿ ಅದೆ ತಂದು. +ತನ್ದ್ ವಂದ್ ಹುಡ್ಗಿ ಲಗ್ನಾಗಬೇಕು ನೀನು” ಹೇಳ್ದ. +ಆಗೆ ಇವ ಹೇಳ್ದ, “ಸ್ವಾಮಿ, ತನ್ಗ್ ವಂದ್ ಲಗ್ನಾಗದೆ. +ತನ್ಗ್ ಯೆಂತಕಪ್ಪ ಲಗ್ನ?” ಹೇಳ್ ಬಾಳ ಹೇಳ್ದ. +“ಅದ್ರ ಸಂಗಡ ತನ್ನ ವಂದ ಹುಡ್ಗಿ ಲಗ್ನಾಗೂ” ಅಂದ ರಾಜ ಹೇಳ್ದ. +“ತನ್ಗ್ ಕೂಗೂ ನೀರು, ಮಾತಾಡೂ ಮಾಯ್ನಹಣ್ಣು ತರುಕ್ ಹೋಗಬೇಕು. +ಇದೇ ದೇಸನಲ್ಗೆ ನನ್ಗ್ ಹೂಂಗ್ನ ಮಾಲಿ ಹಾಕ್ ಕೊಡಬೇಕು. +ಕಡಿಗ್ ಬಂದ್ ಲಗ್ನ ಮಾಡ್ಕಳ್ತೆ” ಅಂದ. +ಲಗ್ನ ಮಾಡ್ ಕೊಟ್ಟ ರಾಜ. +ಅದ್ರ ಲಗ್ನಾಕ್ಕೊಂಡು ನೆಡ್ದ. +“ಪರತ್ ಬರಬೇಕಾರ್ ಕರಕೊಂಡ ಹೋಗ್ತೆ” ಹೇಳಿ ನೆಡ್ದ. +ಆ ಹೆಣ್ತೀನೂ ವಂದ್ ತೊಳಚಿ ಗಿಡ ನೆಟ್ಕೊಂಡು ನೀರ್ ಹಾಕ್ತ ಉಳಿತು. +ಮುಂದ್ ಹೋದ. +ಮುಂದ್ ಹೋಗುವರಿಗೂ ಚರ್ಮರಾಜನ ಹುಡ್ಗಿನೂ ಹಾಗೇ ಹೇಳಿತ್ತು. +“ವಂದ್ ಲಗ್ನ ಯೆರಡಾಗದೆ ಬೇಡ” ಹೇಳ್ತ. +ಅವನೂ ಲಗ್ನ ಮಾಡಕೊಟ್ಟ. +ಅದೂ ವಂದ್ ತೊಳಚಿ ಗಿಡ ನೆಟ್ಕಂಡು ನೀರ್ ಹಾಕ್ತಾ ಉಳಿತು. +ನಂತ್ರೆ ಇವ ಮುಂದ್ ಹೋದ. +ಯೆಲ್ ಹೋದಾ? ಕೂಗು ನೀರಿದ್ದಲ್ ಹೋದಾ. +ಕೂಗೂ ನೀರ್ವಂದ್ ಹಿಡ್ದ್ ಬಾಟ್ಲಿಲ್ ತುಂಬಕಂಡ. +ನಂತ್ರೆ ಕೆಲು ಮುಂದ್ಹೋದ. +ಮುಂದೆ ಮೂರೂ ಮಾಯ್ನಮರ ಜೊಯಂಟಿಗದೆ. +ಅಲ್ ವಂದ್ ಮಾಯ್ನ ಹಣ್ಣದೆ. +ವಂದ್ಸಾರೆ ಬುಡದಲ್ ಬರ್ತದೆ. +ವಂದ್ ಸಾರೆ ತುದಿಗ್ ಹೋಗಿ ಯೆಲ್ಲಾ ಹೆಣೀನೂ ತಿರ್ಗ್ತದೆ. +ವಂದ್ ಸಾರೆ ನೆಗ್ಯಾಡ್ತದೆ, ಮಾತಾಡ್ತದೆ. +ಹೀಗಿದ್ದೆಲ್ಲಾ ಯೇನ ಮಾಡ್ತದೆ. +ಆಗೆ, ಇವ ವಸ್ತ್ರಯೆಲ್ಲಾ ಬಿಚ್ಚಿಟ್ಟ. +ಬಿಚ್ಚಿಟ್ಟಿ ಹತ್ದ ಮಾಯ್ನ ಮರವ. +ವಂದ್ ಸಾರಿ ಆ ಮರ ಹತ್ದ. +ಈ ಮರ,ಈ ಮರ ಹತ್ತುರೊಳ್ಗ್ ಆ ಮರ. +ಆ ಮರ ಹತ್ತುರೊಳ್ಗ್ ಈ ಮರ ಹತ್ತದ. +ವಂದ್ ಸಾರಿ ಕೈಶಿಕ್ಕುರೊಳ್ಗೆ ಆಚಿ ಮರ್ಕ್ ದಾಟ್ತದೆ ಹೇಳೂರೊಳ್ಗೆ ಹಾರ್ಬಿಟ್ಟ-- ಹಣ್ ಹಿಡ್ದ್ ಮುಷ್ಟಿವಳ್ಗೆ ಗಟ್ಟಿ ಹಿಡ್ದ. +ಬಿದ್ ಚೂರ್ ಹೊಡಿಯಾಗಿ ಬಿದ್ಬಿಟ್ಟ. +ನೀರ್ಗುನ್ನಿ ವಂದ್ ಬದಿ. +ನಾಯಿ ನರಿ ವಂದ್ ಬದಿ. +ಇಂತಾದ್ಯೆಲ್ಲಾ ತಿಂದಿ, ಯೆಲ್ಗ್ ವಂದ್ ಬದಿಗೆ ಮಾಯ್ನ ಹಣ್ ವಂದ್ ಬದಿಗೆ ಆಗ್ ಹೋಯ್ತು. +ಅಲ್ಲಿ ತೊಳಚಿ ಗಿಡ ಬಾಡಿದ್ ಹೆರಿಹೆಂಡ್ತಿ ನೋಡ್ತು. ತಡಮಾಡಲಿಲ್ಲ. ಗೌಡ್ತಿರ್ ಕೈಲ್ ಹೇಳ್ತು -- “ತನ್ ಹುಡ್ಕೂದ್ ಬೇಡ. +ಯೆಲ್ಲೊ ಹೋಗರೆ ಬರತ್ರು ಹೇಳಿ” ವೋಡ್ ಹೋಯ್ತು. +ಬಿದ್ದಾಕೊಟ್ಟಿ, “ನನಗಂಡ ಅಯ್ಯೋ. . . ” ಹೇಳಿ ವೋಡಬೇಕಾದ್ರೆ, ಯೆಲ್ಗರಾಯನ ಹುಡ್ಗಿ ವೋಡ್ ಬಂದು, “ಅಕ್ಕಾ. . . ಯೆಲ್ಲಾಯ್ತು ನಿನ್ಗೆ?” ಕೇಳ್ತು. +“ತನ್ನ ಗಂಡ ಕೂಗು ನೀರು, ಮಾತಾಡು ಮಾಯ್ನಹಣ್ ತರುಕ್ ಹೋಗಿದ್ರು. +ತೊಳಚಿ ಗಿಡ ನೆಟ್ಟಿದ್ದೆ ಬಾಡ ಹೋಯ್ತು ಅಂತ ಹೇಳಿ ತಾನೂ ವೋಡ್ತಾ ಇದ್ದೆ” ಅಂತ ಹೇಳ್ತು. +ಆಗ ಅದೂ ವೋಡ್ ಹೋಗ್ ತೊಳಚಿ ಗಿಡ ನೋಡ್ತದೆ. +ತನ ಗಂಡನೂ ಹೀಗೇ ಹೇಳಿ ಅದ್ರ ತೊಳಚಿ ಗಿಡವೂ ಬಾಡಿತ್ತು. +ಅದೂ ವೋಡ್ತು, ‘ಅಯ್ಯೋ. . . ’ ಹೇಳ್ಕಂತ. +ಚೊರ್ಮರಾಯನ ಹುಡ್ಗಿನೂ ಕೇಳ್ತು. +ಅದ್ರ ಕೈಲೂ ಹೀಗೆ ಹೇಳ್ತು. +ಅದೂ ಹಾಗೇ ಹೇಳ್ಕಂಡ್ ಇವ್ರ್ ಸಂತಿಗೆ ಬಂತು. +ಮೂರೂ ಜನ ವಟ್ಗೂಡ್ಕಂಡ್ ವೋಡೂಕ್ ಹಣ್ಕಿದ್ರು. +ಹಳ್ಳದಲ್ ಇವ್ನ ಹೆಜ್ಜಿ ಅದೆ. +ಅಚಿಗ ಕಳ್ದನೆ ಹೇಳಾಯ್ತು. +ಮುಂದೆ ಮಾಯ್ನ ಮರ, ಅಡತಾಗೆ ಹೋಗಿ ನೋಡದ್ರು ಮೂರು ಜನ್ರು. +ಅಲ್ಲಿ ವಸ್ತ್ರಯೆಲ್ಲಾ ಕಂಡು ಆಜಬಾಜು ನೋಡುದ್ರೊಳ್ಗೆ ಚೊಮ್ಮ ವಂದ್ ಬದಿಗೆ ಯೆಲ್ಗ್ ವಂದ್ ಬದಿಗೆ ಆಗಿ ಬಿದ್ಬಿಟ್ಟರೆ. +ಮೂರ್ ಜನವೂ, “ಅಯ್ಯೋ ನನ್ನ ಗಂಡ. . . ”, “ಅಯ್ಯೋ ನನ್ನ ಗಂಡ. . . ”, “ಅಯ್ಯೋ ನನ ಗಂಡ ಅಯ್ಯೋ!” ಅಂತಾರೆ. +“ನಿನ್ನ ಗಂಡನಲ್ಲ, ನನ್ನ ಗಂಡ. . . ” ಅಂತಾ ಹೆರಿಹಿಂಡ್ತಿ ಕೇಳ್ತು. +ಆಗ್ಯೆಲ್ಲಾ ಹೇಳ್ದ್ರು. +ನಂತ್ರ ಹೆರಿಹಿಂಡ್ತಿ, “ನಿನ್ನ ತಂದಿ ಹೆಸ್ರ ಯೆಂತದು?” ಕೇಳ್ತು. +“ಯೆಲ್ಗ ರಾಜ” ಅಂತು. +“ಹೌದಾದ್ರೆ, ಯೆಲ್ಗ್ ತಂದ್ ವಟ್ಮಾಡ ಕೊಡವ್ಯೊ?” ಕೇಳ್ತು. + “ಹೋಹೋ. . . ತಾನ್ ಯೆಲ್ಲಾ ಕೂಡ್ಸ್ ಕೊಡ್ತೆ” ಅಂತು. +ಯೆಲ್ಗ್ ಯೆಲ್ಲಾ ವಟ್ ಮಾಡಿ ಯೆಲ್ಗೆಲ್ ಸಂದ್ ಅದ್ಯೊ ಅಲ್ಲೆಲ್ಲಾ ಕೂಡ್ಸಿ ವಟ್ಮಾಡ್ಕೊಟ್ತು. +ಚೊರ್ಮರಾಯನ ಹುಡ್ಗಿ ಕೈಲ್ ಕೇಳ್ತು. +“ನೀನು ಚೊರ್ಮನ ಕಂಡ ಬಂದ್ ಕೂಡೂಸ್ದ್ಯೊ?” ಕೇಳ್ತು. +ಚೊರ್ಮರಾಯನ ಹುಡ್ಗಿ ಕೈಲ್ ಕೇಳ್ತು. ಕೂಡುಸ್ತು. + ಕಾಯರಾಜನ ಹುಡ್ಗಿ, “ತಾನು ಕಾಯ ತಕಂಬಂದೆ ಕೊಡ್ತೆ” ಅಂತು. +ಕೂಡಸ್ಕಂಡು, ಜೀವಬಂತು‌. +ಯೆಚ್ರಾಯ್ತು ಅವನಿಗೆ. ಕೇಳದ್ರು. +“ಹೀಗೀಗಾಯ್ತು. . . ” ಹೇಳ್ದ. +ಚೊರ್ಮರಾಜನ ಮನಿಗ್ ಬಂದ್ರು. +ಚಾಯ್ ಗೀಯ ಕುಡಿಕಂಡ್ರು. +ಯೆಲ್ಗ್ ರಾಜನ ಮನಿಗ್ ಬಂದ್ರು. +ಕಾಯರಾಜನ ಮನಿಗ್ ಬರಲಿಲ್ಲ. +ಇವನ ಮನಿಗೇ ಬಂದ್ರು. +ಯೆಂಟ ದಿನದೊಳ್ಗೆ ಬರಬೇಕಲ್ಲ, ಅದ್ರಂತೆ ಅವನ ಕೈಲ್ ಕೊಟ್ ಕಳ್ಸದ್ರು. +ಕೂಗು ನೀರು, ನೆಗ್ಯಾಡೂ ಮಾಯ್ನ ಹಣ್ ತಕಂಡ್ ಹೋಗ್ ಕೊಟ್ಟ. +ಕೆಲ್ಸಿ ಬಂದನಲ್ಲಿ. +ಕೇಳ್ದ, ‘‘ಹೇಳಿದ್ ವಸ್ತು ತಂದಕೊಟ್ರೋ ಹೇಗೆ?’’ +“ಹೌದು. . . ಆ ಹೆಣ್ ಸಾಯ್ಲ. . . ಮತ್ ಯೆಯ್ಡ ತಂದನೆ. +ತಂಗೆ ಮುಟ್ ಗೌಡ್ತಿ ವಂದೇ ಸಾಕು. +ಮೂರೂ ಜನ ನೀನೇ ಮದ್ಯಾಗ್ ಅಂತಂದ. +ಅಲ್ಲಿಗೆ ಬೇರೆ ಇಲ್ಲ.’’ ‘‘ದೊಡ್ ಹೊಂಡ ಕಡುದು ಗುಡ್ಸಗಟ್ಲೆ ಸೌದೆ ಹಾಕಿ ಬೆಂಕಿ ಕೊಡುದು. +ಇವ್ನ ಕೈಲಿ ತನ್ನವ್ರ್ನ ನೋಡ್ಕಂಡ್ ಬಾ ಅಂದ್ ಕಳ್ಸೂದು.” +“ದೊಡ್ಡ ಹೊಂಡ ಕಡ್ದಿ, ಸೌದಿ ಹಾಕಿ ಬೆಂಕಿ ಕೊಟ್ಟು ಕೊಲ್ತಾರೆ. +ಅವ್ನ ಅಪ್ನ ನೋಡ್ಕಂಡ್ ಬರಬೇಕಂತೆ. . . ” ಹಿಂಡ್ರ ಕೈಲ್ ಬಂದ್ಕಂಡ ಹೇಳ್ದ ಅವ. +“ಬೆಂಕಿಲಿ ತನ್ನ ಹಾಕಿ ಕಡಿದ್ ಸೌದಿ ಹೊತಾಕ್ತ್ರಂತೆ ತನ್ ಮೈಮೇನೇ. +ಈಗಂತೂ ಬಚಾವಾಗು ಉಪಾಯ ಕಾಣುದಿಲ್ಲ” ಅಂದ. +ಹೆರಿಹೆಂಡ್ತಿ, “ಹೊಂಡ ತೋರ್ಸ್ಬನಿ” ಅಂತು‌. +ರಾತ್ರಿಗ್ ಹೋಗಿ ಹೊಂಡ ನೋಡ್ಕಂಡ್ ಬಂದ್ರು ಇವರು. +ಯೆರಡ ಜನ ದೊಡ್ ದೊಡ್ಡ ಹೆಗ್ಳನ ಸಾಕಿದ್ರು. +ವಬ್ಳ್ ಮುಂಗ್ರಿ, ‘‘ನೀವು ಹೊಂಡದಿಂದ ವಳ್ಗನ ಕೋಣಿವರಿಗೂ ಸುರಂಗ ತೋಡಿ.’’ +ಅವ್ರು, “ಅಡ್ಡಿಲ್ಲ” ಅಂದು ಸುರಂಗ ತೋಡದ್ರು ಮೂರೂ ಕುಳಿಹೊಡಿತು. +ಮಾಳ್ಗಿಗೂ ಅವ್ರ ಸುರಂಗ ಹೊಡ್ದ್ರು. +ವಂದ್ ಮನಶ ಹೋಗ್ಬಟ್ ತೋಡ್ದ್ರು. +ಇವ್ನಕೈಲ್ ಹೇಳ್ ಕಳ್ಸದ್ರು. +“ನಾಲ್ಕ್ ದಿಕ್ನಲ್ ಕುಳಿವಳ್ಗ್ ಕೂತ್ಕಳವಾ ಜಾಗ ಇಟ್, ಸೌದಿ ರಾಶಿ ತುಂಬಬೇಕು ಹೇಳ್ ಹೇಳು. . . ” ಹೇಳಿ ಗಂಡ್ನ ಕೈಲ್ ಹೇಳದ್ರು. +ಅವ್ರಂತೆ ಹೇಳ್ದ. +ಅದ್ರಂತೆಯೂ ರಾಜ - ಕೆಲ್ಸಿ ಯೆಲ್ಲಾ ಕೂಡಿ ಮಾಡಿದ್ರು. +ಸೌದಿ ರಾಶಿ ಕೊಟ್ಬಿಟ್ರು. +ವದ್ಬಿಟ್ರ - ದೋಬಿ ಬಿತ್ತು. +ಮನಿಗ್ ಬಂದ್ ಬಿಟ್ಟ ಅವ. +ಅವ್ರಲ್ ಬೆಂಕಿ ಕೊಟ್ಬಿಟ್ರು. +ಯೆರ್ಡಮೂರ್ದಿವ್ಸ ಬಿಟ್ಟು ರಾಜ್ನ ಮನಿಗೆ ಹಿಂಡ್ರು ಕಳ್ಸುದ್ರು. +ಯೇನ ಹೇಳಕಳ್ಸದ್ರವ್ರು? +“ನಿಮ್ಮಪ್ಪ ಹುಸಾರವ್ರೆ ‘ಗಡ್ಡಮಂದೆ ಬಂದು ಹೇನು ಚಿಗಾರಾಗ್ ತುಂಬ್ ಹೋಗದೆ‌. +ಕೆಲ್ಸಿ ಕೈಲಿ ವಂದಿನ ಬಂದ್ ಗಡ್ಡ ಮಂಡಿ ತೆಗ್ದ ಕೊಟ್ ಹೋಗು ಹೇಳ್ತು’ ಹೇಳಾರೆ.” +ಅದ್ರಂತೆ ಹೇಳ್ದ. +ಹೆಗ್ಳ, ಮುಂಗ್ರಿ ದೊಂಬ ಬಂದ್ ಮಾಡಬಿಟ್ರು‌. +ಕೆಲ್ಸಿ ಕೈಲ್ ಹಾಂಗೆ ಹೇಳ್ದ ರಾಜ. +“ಅಯ್ಯಾ ಸ್ವಾಮಿ. . . ನಾನೂವ” ಅಂದ. +‘‘ರಾಜ ಅಲ್ ಹೋಗ ಬರಲ್ವೇನು? ಹೋಗು. . . ” ಹೇಳಿದ ರಾಜ. +ಅವನ ಬೆಂಕಿ ಕೊಟ್ಬಿಟ್ತ್ರು. +ಸುಟ್ ಸತ್ ಹೋದ. +2-3 ದಿವ್ಸದಲ್ಲಾ ರಾಜನಿಗ್ ಎಲ್ಲ ಗೊತ್ತಾಗಿ, ಇವರ ಮನಿಗ್ ಬಂದು-- “ಸರ್ವೂ ತಪ್ಪಾಯ್ತು” ಹೇಳಿ ಕಾಲ್ಗ್ ಬಿದ್ದ. +ವಂದಲ್ಲಾ ವಂದೂರಿನಲ್ಲಿ ವಂದ ಇಪ್ಪತ್ ವರ್ಷ ಹಿಂದೆ ರಾಜ ಇದ್ದ. +ಹೌದು. . . ಅವನಿಗೆ ವಬ್ಳೆ ಮಗಳಿದ್ಲು. +ಪ್ರತೀ ದಿವಸ ಅವಳು ನದಿಯಲ್ಲಿ ಸ್ನಾನ ಮಾಡ್ತಾ ಇದ್ಲು. +ಮಾಡ್ತಾ ಇರವಾಗ ವಂದಲ್ಲಾ ವಂದ ದಿವಸ, ಬಂಗಾರದ ವಂದ ತೊಳಶೀಯೆಲೆ ಬಳ್ದೆ ಬಂತ ಆ ನದಿಯಲ್ಲಿ. +ಹೌದು, ಬಂದ ಕೂಡ್ಲೆ. . . ಆವಾಗವಳ ಮನಸ್ಸಿಗೆ ಇಷ್ಟ. . . ‘ದೊಡ್ಡ ರಾಜರ ನಾವು. . . ಆದ್ರ್, ನಮ್ಮಲ್ಲಿ ಬಂಗಾರದ ತೊಳಶಿಗಿಡ ಇಲ್ಲ. +ಅದು ಯಾವ ರಾಜ್ಯದಿಂದ ಬಂತೋ, ಎನೋ ಯೆಂದು ತನ್ನ ತಂದೆಯವರ ಹತ್ರ ಹೇಳಿ, ಈ ಗಿಡವನ್ನು ತಂದ ಕೊಳ್ವ ಹಾಗೆ ಮಾಡ್ಕಳಬೇಕು ನಾನು’ ಯಂದು, ತನ್ನ ಮನಸಿನಲ್ಲಿ ತಿಳಿದಕೊಂಡು ಮನೆಗೆ ಹೋದವಳು ಊಟ-ಗೀಟಯಲ್ಲ ಬಿಟ್ಟು ಮನಗಿದ್ದಳು. +ಆವಾಗವಳ ತಂದೆ, ತನ್ನ ಮಗಳ ಊಟಾಹಾಟ ಬಿಟ್ ಮನಗಿದಾಳೆ “ಇದೇನು?” ಯಂತ ವಿಚಾರ ಮಾಡಿದ ಅವಳನ್ನು. +ಅವಾಗ ಮಗಳು, ‘‘ಬಂಗಾರದ ತೊಳಶಿಗಿಡ ತಂದ್‌ ಕೊಟ್ರೆ ತಾನು ಊಟ ಮಾಡ್ತೆ. +ಇಲ್ದೆಗಿದ್ರ ತಾನು ಊಟ ಮಾಡುದಿಲ್ಲ” ಅಂದ್ಲು. +ಅವಾಗವನು ತನ್ನ ಮಂತ್ರಿಯನ್ನು ಕರದು ಬೇಕಾದಷ್ಟು ದ್ರವ್ಯವನ್ನು ಕೊಟ್ಟು, ಬಂಗಾರದ ತೊಳಶಿಗಿಡ ತರವ ಹಾಗೆ ಹೇಳಿದನು. +ಮಂತ್ರಿಗೆ ಯೆಷ್ಟ ಊರು ತಿರುಗಿದರೂ ಬಂಗಾರದ ತೊಳಶಿಗಿಡ ಸಿಗಲಿಲ್ಲ ಅವಾಗ ಮಂತ್ರಿನು ತನ್ನ ಮನೆಯಲ್ಲಿ ಬಂದು ಊಟ, ಅದ್ರ ಬಿಟ್ಟು ಮನಗಿದನು -- ‘ರಾಜ ನಾಳೆಗೆ ತನ್ನ ತಲೆಯನ್ನು ಕಡಿಯುವನು’ ಯಂತ ಮನಸಿನಲಿ ತಿಳಿದುಕೊಂಡನು. +ಆವಾಗವನ ಮಗಳು, “ತಂದೆಯವರೇ. . . ಊಟ ಮಾಡಿ. +ಬಂಗಾರದ ತೊಳಶಿಗಿಡವನ್ನು ನಾನ ತಂದ ಕೊಡುತ್ತೇನೆ” ಎಂತ ಹೇಳಿದಳು. +ಮಂತ್ರಿಯೂ ಮಗಳೂ ಕೂಡಿ ಊಟ ಮಾಡಿದರು. +ಮಂತ್ರಿಯು ಮಗಳಿಗೆ ಬೇಕಾದಷ್ಟು ಹಣವನ್ನು ಕೊಟ್ಟು, ಆವಳಿಗೆ ಕುದುರೆಯನ್ನು ಕೊಟ್ಟು, ಗಂಡಸರ ಊಡುಗೆಯನ್ನು ಕೊಟ್ಟು, ವಂದು ಮಣ ಹತ್ತಿಯನ್ನು ಕೊಟ್ಟನು. +ಅವಾಗ ಅವಳು ಗಂಡಸರ ರೂಪದಲ್ಲಿ ಕುದುರೆಯನ್ನು ಹತ್ತಿ ನಡೆದಳು. +ಆವಾಗ ತುಳಸರಾಜನ ರಾಜ್ಯಕ್ಕೆ ಹೋದಳು, ಹೋಗಿ ಅಜ್ಜಿ ಮುದುಕಿಯ ಮನೆಯಲ್ಲಿ ಉಳಿದಳು. +ಆವಾಗ ಅಜ್ಜಿಯ ಹತ್ತಿರ ಊಟಕೆ ಅನುಕೂಲ ಮಾಡುವಂತೆ ಹೇಳಿದಳು. +‘‘ಯಾರಾದರೂ ಕೇಳಿದರೆ ‘ತನ್ನ ಮಾಮ್ಮಗಳು’ ಅಂತ ಹೇಳು’’ ಅಂತ ಹೇಳಿದಳು. +ಆವಾಗ ತುಳಸರಾಜನು ವಂದ ಗಿಳಿಯನ್ನು ಸಾಕಿದ್ದನು. +ಆ ತುಳಸರಾಜನ ಗಿಳಿ ತುಳಸರಾಜನಿಗೆ ಹೋಗಿ, “ಅಜ್ಜಿಯ ಮನಿಗೆ ವಂದು ಹುಡುಗಿ ಬಂದಿದ್ದಾಳೆ” ಅಂತ ಹೇಳಿತು. +ಆಗ ರಾಜನು ಅಜ್ಜಿಯ ಹತ್ತಿರ ಆ ಹುಡಗಿಯನ್ನು ಬರಲಿಕ್ಕೆ (ಕಳಸಲಿಕ್ಕೆ) ಹೇಳಿದನು. +ಆ ಹುಡುಗಿ ವಂದು ಗಿಳಿಯನ್ನು ಸಾಕಿದ್ದಳು. +ಆ ಗಿಳಿಯು ಬಂದು ಹುಡಗಿಗೆ ಈ ರಾಜನ ವರ್ತಮಾನ ತಿಳಿಸಿತು. +ಆವಾಗ,‘‘ನಾಳೆ ನೀನು ಗಂಡೊ, ಹೆಣ್ಣೊ ಅಂತ ಪರೀಕ್ಷೆ ಮಾಡುತ್ತಾನೆ ರಾಜ.” +ಆವಾಗ ರಾಜನು ಅಜ್ಜಿಯ ಹತ್ತಿರ ಹುಡುಗಿಯನ್ನು ಕರೆ ಕಳಿಸಿದನು. +ಹುಡುಗಿಯು ಮಾರನೆ ದಿವಸ ರಾಜನ ಸಭೆಯಲ್ಲಿ ಕುಳಿತುಕೊಂಡು ವೀಳ್ಯ ಹಾಕಿದಳು. +ಹಾಗೆ ಮದ್ಯಾಹ್ನ ಕಳೆದುಕೊಂಡು ಅಜ್ಜಿಯ ಮನೆಗೆ ಬಂದಳು (ವೀಳ್ಯ ಹಾಕೊಂಡು ಬಂದಳು). +ರಾಜನ ಗಿಳಿ ಈ ರಾಜನ ಹತ್ತಿರ, ‘‘ನಿಜವಾಗಿ ಅವಳು ಹುಡುಗಿ ಹೌದು. +ನಾಳೆ ಆ ಹುಡುಗಿಯನ್ನು ಕರೆಸಿ, ಬಿಸಲಲ್ಲಿ ಆಕಳ ಕರ ಕಟ್ಟೆಬೇಕು; ದಾರಿ ಮೇಲೆ ಕುಂಕುಮ ಚೆಲ್ಲಬೇಕು. +ಹುಡಗಿಯಾದರೆ ‘ಆಕಳ ಕರ ತಂಪಿನಲ್ಲಿ’ ಅಂತಾಳೆ. +‘ಈ ದಾರೆ ಮೇನೆ ಕುಂಕುಮ ಯಾರು ಚೆಲ್ಲಿದ್ದರು‘ ಅಂತ ಅವಳಿಗೆ ಬಾಳ ಮನಸಿನಲ್ಲಿ ಪಸ್ತಾತ್ತಾಪ ಆಗ್ತದೆ. +ಅವಾಗ ಹುಡಗನೋ, ಹುಡಗೆಯಂತೆ ನೀವು ತಿಳಿದುಕೊಳ್ಳಬಹುದು.’’ ಹೀಗೆ ಗಿಳಿ ಹೇಳಿತು. +ಈ ಹುಡುಗಿಯ ಗಿಳಿಯು ರಾಜನಿಗೆ ಈ ಗಿಳಿ ಮಾತನ್ನು ಹೇಳುವದನ್ನು ಕೇಳಿ, ತನ್ನ ಅಕ್ಕನ ಹತ್ತಿರ ಬಂದು, ಈ ಗಿಳಿ ಹೇಳಿದ ಮಾತನ್ನು ತಿಳಿಸಿತು, ‘‘ನಾಳೆ ದಿವಸ ನಿನ್ನ ರಾಜನು ಕರೆಯುತ್ತಾನೆ. +ದಾರಿ ಮೇನೆ ಮೆಟ್ಕಂತೇ ಹೋಗ ಚಲೋ ರೀತಿಂದ. +ರಾಜನ ಹತ್ರ ಮಾತಾಡಿ ಬಂದೆ ಬಿಡು’’ ಯೆಂದು ಗಿಳಿ ಹೇಳಿತು. +ರಾಜನು ಮಾರನೆ ದಿವಸ ಅಜ್ಜಿಯ ಹತ್ತಿರ ಆ ಹುಡುಗಿಯನ್ನು ಕರೆ ಕಳಿಸಿದನು. +ಆವಾಗ ಹುಡುಗಿಯು ರಾಜನ ಮನೆಗೆ ಹೋದಳು. +ಮದ್ಯಾನ್ನ ಹನ್ನೊಂದು ಗಂಟೆ ಭಯದ ಬಿಸಿಲಿನಲ್ಲಿ ಆಕಳಕರ ಕಟ್ಟಿದ್ದಾರೆ. +ಆ ಕಡೆಗೂ ನೋಡಲಿಲ್ಲಾ, ಕುಂಕುಮವನ್ನು ಮೆಟ್ಟಿಕೊಂಡು ರಾಜನಲ್ಲಿ ಹೋಗಿ, ವೀಳ್ಯವನ್ನು ಹಾಕಿಕೂಂಡು ತೆರಳಿ ಬಂದಳು. +ಆವಾಗ ರಾಜನಿಗೆ ನಿಜವಾಗಿ ಇವನು ಹುಡುಗ ಯೆಂದು ಮನಸಿನಲ್ಲಿ ತಿಳಿದುಕೊಂಡನು. +ಆವಾಗ ರಾಜನ ಗಿಳಿಯು ಬಂದು ರಾಜನಿಗೆ ಮತ್ತು ಬುದ್ಧಿ ಹೇಳಿತು, ‘‘ನಿಜವಾಗಿ ಅವಳು ಹುಡುಗಿ. +ಅವಳನ್ನು ಪರೀಕ್ಷೆ ಮಾಡಬೇಕಾದರೇ ವಳ್ಳೇ ಬಳೆ, ಆರಿಸಿ, ವಳ್ಳೊಳ್ಳೆ ಸೀರೆ, ವಳ್ಳೊಳ್ಳೆ ಜಂಪರು. . . ಈ ಗಡಿಯನ್ನು ತೆಗೆದು ಅವಳನ್ನು ಕರೆಯಬೇಕು.’’ +ಆಗ ಈ ಹುಡುಗಿಯ ಗಿಳಿಯು ರಾಜನ ಗಿಳಿ ರಾಜನಿಗೆ ಹೇಳ್ದ ಮಾತು ತಿಳಿಸ ಹೇಳಿತು. +‘‘ನಾಳೆ ನಿನ್ನನ್ನು ಪರೀಕ್ಷೆ ಮಾಡುತ್ತಾರೆ. +ಬಳೆ, ಜಂಪರು. . . ಇದನ್ನೆಲ್ಲ ಹುಡುಗಿಯಾದರೆ ಆಸೆಪಡುತ್ತಾಳೆ. +ಎಂತ ನೀನು ರಾಜನ ಹತ್ತಿರ ಹೋದವಳು- ‘ಇದೆಲ್ಲ ಹೆಂಗಸರಿಗೆ ಬೇಕಾಗುವ ಸಾಮಾನು ಗಂಡಸರಿಗೆ ಬೇಕಾಗುವ ಸಾಮಾನಲ್ಲ’ ಅಂತ ಹೇಳು.’’ + ಮಾರನೆ ದಿವಸ ರಾಜನು ವಳ್ಳೆವಂದು ಅಂಗಡಿಯನ್ನು ತೆಗೆದು ಬಳೆ, ಶೀರೆ. . . ಇವೆಲ್ಲ ಇಟ್ಕೊಂಡು ಈ ಹುಡುಗಿಯನ್ನು ಕರೆಸಿದನು. +ಹುಡುಗಿಯು ಬಂದವಳು ರಾಜನ ಹತ್ತಿರ, ‘‘ರಾಜರೇ, ಈ ಅಂಗಡಿ ನೋಡುವವರ್ಯಾರು? +ಹೆಂಗಸರಿಗೆ ಬೇಕಾಗುವ ಸಾಮಾನು. . . ನಮ್ಮಂತ ಗಂಡಸರಿಗೆ ಬೇಕಾಗುವದಲ್ಲ ಇದು’’ ಅಂತ ರಾಜನ ಹತ್ತರ ಹೇಳಿ, ಮನೆಗೆ ಹೋದಳು. +ರಾಜನ ಗಿಳಿಯು ಬಂದು, ‘‘ನಿಜವಾಗಿ ಅವಳು ಹುಡುಗಿ. +ಅವಳಿಗೆ ಪರೀಕ್ಷೆ ಮಾಡುವದಾದರೆ ವಂದ್ ಪ್ರಸಾದ ಊಟ ಮಾಡಿಸಬೇಕು. +ಪ್ರತಿಯೊಬ್ಬರೂ ಸ್ನಾನ ಮಾಡದೇ ಊಟ ಮಾಡುವ ಹಾಗಿಲ್ಲ, ಬಹಳ ಕಷ್ಟ, ಆವಾಗ ನಿನ್ನ ದಾಸಿಯರಿಗೆ ಇವಳು ಸ್ನಾನಕ್ಕೆ ಹೋದಾಗ ಇವಳನ್ನು ಗುರ್ತಿಸಬೇಕು ಆವಾಗಲೇ. . . (ಮೈ ತಿಕ್ಕುವದು ಅಂತ ಮಾಡಿದರೂ ಅಡ್ಡಿಲ್ಲ. . . )’’ ಯಂತ ಹೇಳಿತು. +ಆಗ ಹುಡುಗಿಯ ಗಿಳಿ ಈ ಮಾತನು ಕೇಳಿ, ಹುಡುಗಿ ಹತ್ತಿರ ಬಂದು, ‘‘ನಾಳೆ ನಿನ್ನನ್ನು ಪರೀಕ್ಷೆ ಮಾಡುತ್ತಾರೆ ಹಿಂದೆ ಪರೀಕ್ಷೆ ಮಾಡಿದ ಹಾಗಲ್ಲ. . . ಬಹಳ ಕಷ್ಟ. +ವಸ್ತ್ರವನ್ನು ಕಳೆದುಕೊಂಡು ಸ್ನಾನ ಮಾಡುವಾಗ ಬಹಳ ಕಷ್ಟದ ಕೆಲಸ. . . ನಾಳೆ ನಿನ್ನ ವಿಷಯ ಸಂಪೂರ್ಣ ಗೊತ್ತಾಗತ್ತದೆ. +ಆದರೆ, ನೀನೊಂದ ಕೆಲಸ ಮಾಡಬೇಕು. +ನಾಳೇ ನೀನು ಬಚ್ಚಲವಳಗೆ ಹೋದ ಕೊಡಲೇ ನಾನು ಬಚ್ಚಲ ಮನೆಗೆ ಬೆಂಕಿಹಾಕುತ್ತೇನೆ. +ಬೆಂಕಿಹಾಕಿದ ಕೂಡಲೆ ಯೆಲ್ಲರೂ ಬೆಂಕಿ ನಂದಿಸುವ ಗಲಾಟೆಯಲ್ಲಿ ಇರುತ್ತಾರೆ. +ವಸ್ತ್ರವನ್ನು ತೆಗೆಯದೆ ವದ್ದಿ ಅರಿವಿಯಿಂದ ಮೈಯನ್ನು ವರಿಸಿಕೊಂಡು ‘ತಾನು ಮಿಂದಿದ್ದೇನೆ’ ಅಂತ ಹೇಳಿ ಹೊರಗೆ ಬಂದ್ ಬಿಡು.” ಯೆಂದು ಗಿಳಿ ಹೇಳಿತು. +ರಾಜನು ಮಾರನೆ ದಿವಸ ಹುಡುಗೀಗೆ ಕರೆ ಕಳಿಸಿದನು. +ಹುಡುಗಿಯು ಬಂದಿತು ರಾಜನ ಮನೆಗೆ. +ಆವಾಗ ರಾಜನು, ‘‘ಸ್ನಾನಕ್ಕೆ ಹೋಗು”ವಂತೆ ಹೇಳಿದನು. +‘‘ಇಂದು ನಮ್ಮಲ್ಲಿ ವಳ್ಳೆಪ್ರಸ್ತದ ಊಟ. . . ಪ್ರತಿಯೊಬ್ಬರೂ ಸ್ನಾನ ಮಾಡದೆ ಊಟ ಮಾಡುವ ಹಾಗಿಲ್ಲ.’’ ಆವಾಗ ಈ ಹುಡುಗಿಯು ಬಚ್ಚಲಿಗೆ ನಡೆದಳು. +ಹೋದಾಗ ಗಿಳಿಯು ಬಚ್ಚಲ ಮನೆಗೆ ಬೆಂಕಿ ಹಾಕಿಬಿಟ್ಟಿತು. +ಹಾಕಿದ ಕೂಡಲೆ ಅವರೆಲ್ಲಾ ಬೆಂಕಿ ನಂದಿಸುವ ಗದ್ದಲದಲ್ಲಿ ಉಳಿದರು. +ಹುಡುಗಿಯು ಮೈಕೈಯನ್ನು ವದ್ದಿ ಅರಿವಿಯಲ್ಲಿ ವರೆಸಿಕೊಂಡು ಬಚ್ಚಲ ಹೊರಗೆ ಬಂದಳು. +ಆವಾಗೇ ಊಟವನ್ನು ಮುಗಿಸಿಕೊಂಡು, ಅಜ್ಜಿಯ ಮನೆಗೆ ತಾನು ಬಂದಳು. +ಆಗ ರಾಜನಿಗೆ ಸಿಟ್ಟು ಬಂದಿತು. +ಗಿಣಿಯನ್ನು ಹಿಡಿದು ಬೇಕಾದಷ್ಟು ಹೊಡೆದನು. +ಆರೆಂಟು ಸಾವಿರ ರೂಪಾಯನ್ನು ಕರ್ಚುಮಾಡಿ ಜವಳಿ ಅಂಗಡಿ ಹಾಕಿಯಾಯ್ತು. . . ಆದರಲ್ಲಿ ಹುಡುಗಿಯನ್ನು ಪರೀಕ್ಷೆ ಮಾಡಲು ಆಗಲಿಲ್ಲ. +ಮೂರುನಾಕು ಸಾವಿರ ರೂಪಾಯಿ ಕರ್ಚುಮಾಡಿ ವಳ್ಯಿಪ್ರಸ್ತದ ಊಟ ಮಾಡಿಯಾಯ್ತ. +ಅದರಲ್ಲಿ ಬಚ್ಚಲ ಮನೆ ಸುಟ್ಟಿಸಕಂಡ ಹಾಗಾಯ್ತು.’’ಅಂದಕತ್ನ ಈ ಗಿಳಿಗೆ ಬೇಕಾದಷ್ಟು ಹೊಡೆದನು. +ಆಗ ಗಿಳಿಯು ಅಳ್ತಾ ಹೇಳಿತು, ‘‘ರಾಜರೇ. . . ನಿಜವಾಗಿ ಅವಳು ಹುಡುಗಿ. +ಅವಳನ್ನು ಪರೀಕ್ಷೆ ಮಾಡುವದು ಅಂತಿದ್ದರೆ. +ನಮ್ಮ ಬಂಗಾರದ ತೊಳಶಿವನಕ್ಕೆ ಅವಳನ್ನು ಕರೆದುಕೊಂಡು ಹೋದರೆ ಸಣ್ಣ ಹುಡುಗಿಯಾದರೂ ಹೆಣ್ಣಾಗ್ತಾಳೆ. . . ದೊಡ್ಡವಳಾದರೆ ಮುಟ್ಟಾಗ್ತಾಳೆ. +ಅವಾಗವಳನ್ನು ಅಲ್ಲೆ ಪರಿಕ್ಸಿ ಮಾಡಲು ಆಗ್ತದೆ.’’ ಯಂತ ಗಿಳಿ ಹೇಳಿತು. +ಈ ಮಾತನು ಕೇಳಿ ಹುಡುಗಿಯ ಗಿಳಿಯು ತನ್ನಕ್ಕನಿಗೆ ಯೆಲ್ಲಾ ವಿಶಯವನ್ನು ತಿಳಿಸಿತು. +‘‘ನಾಳೆ ವಂದೇ ದಿವಸ ನಾವು ಇಲ್ಲಿ ಉಳಿಯುವದು. +ಬಂಗಾರದ ತೊಳಶಿವನಕ್ಕೆ ಹೋಗಿ, ಬೇಕಾದ ಗಿಡವನ್ನು ತೆಗೆದುಕೊಂಡು ನಾಳೆಗೆ ನಮ್ಮೂರಿಗೆ ಹೋಗುವಾ. . . ನಾಳೆ ಬೆಳಿಗ್ಗೆ ರಾಜನು ನಿನ್ನನ್ನು ಕರೆಯ ಕಳಿಸುತ್ತಾನೆ. +ಬಂಗಾರದ ತೊಳಶಿವನವೆಂದರೆ ಯೇಳ ಗುಡ್ಡವುಂಟು. +ವಂದ್‌ ಯೆರಡು ಗುಡ್ಡ ದಾಟುವ ತನಕ ನೀನು ಹೆಣ್ಣಾಗುತ್ತಿ. . . ನಿನ್ನ ಹುಶಾರಿಯಲ್ಲಿಟ್ಟಕೋ. +ನಿನ್ನ ರಾಜನು ಯಿಲ್ಲೇ ಪರೀಕ್ಷೆ ಮಾಡುತ್ತಾನೆ” ಯೆಂದು ಗಿಳಿ ಹೇಳಿತು. +ಮಾರನೆ ದಿವಸ ರಾಜನ ಕರೆಬಂತು. +‘ತಮ್ಮ ಬಂಗಾರದ ತೊಳಶಿಯ ವನಕ್ಕೆ ಹೋಗುವಾ’ ಎಂದು ಹೇಳ ಕಳಿಸಿದನು. +ಹುಡುಗಿಯು ತನ್ನ ಕುದುರೆಯನ್ನು ಹತ್ತಿಕೊಂಡು, ಗಿಳಿಯನ್ನು ಕರೆದುಕೊಂಡು ಹೊಂಟಿತ್ತು. +ಆಗ ರಾಜನು ತನ್ನ ಕುದುರೆಯನ್ನು ಹತ್ತಿಕೊಂಡು ಬಂಗಾರದ ತೊಳಶಿಯ ವನಕ್ಕಾಗಿ ಹೋದನು. +ತೊಳಶಿಯ ವನಕ್ಕೆ ಹೋಗುವಾಗ ಬಲು ಜೋರಿನಿಂದ ಕುದುರೆಯನ್ನು ಹಾರಿಸಿದನು. +ರಾಜನು ಹುಡುಗೀಗಿಂತ ಜೋರು ಕುದುರೆಯನ್ನು ಹಾರಿಸಿದನು. +ರಾಜನಿಗಿಂತ ಹುಡುಗಿಗೆ ಜೋರು ಕುದುರೆಯನ್ನು ಹಾರಿಸಲು ಆಗಲಿಲ್ಲ. +ಆಗ ಯೆರಡು ಗುಡ್ಡ ಕಳೆಯಿತು. . . ಹುಡುಗಿ ಹೆಣ್ಣಾದಳು. +ರಾಜನು ನಾಲ್ಕನೆ ಗುಡ್ಡದ ತಲೆಗೆ ಹಾರಿಸಿದನು ಕುದುರೆಯನ್ನು. +ಈ ಹುಡುಗಿಯು ಕುದುರೆಯ ಕೆಳಗೆ ಇಳಿದು, ಬಂಗಾರದ ತೊಳಶಿಗಿಡವನ್ನು ವಂದು ಕಿತ್ತು, ಹಿಂದಕ್ಕೆ ಕುದುರೆಯನ್ನು ಹಾರಿಸಿದಳು. +ಆಗ ತನ್ನ ಮನೆಗೆ ಕುದುರೆಯನ್ನು ವೇಗದಿಂದ ಹೊಡೆದಳು. +ರಾಜನು ಇದನ್ನು ನೋಡಿ, ‘ಇವಳು ನಿಜವಾಗಿ ಹೆಂಗಸು ಹೌದು. +ಇವಳನ್ನೇ ಹಿಡಿದು, ಇವಳನ್ನೇ ಮದುವೆಯಾಗಬೇಕು’ ಯೆಂದು ವೇಗದಿಂದ ಕುದುರೆಯನ್ನು ಹಿಂದಕ್ಕೆ, ಅವಳ ಹಿಂದೆಯೇ ಹೊಡೆದುಕೊಂಡು ಬಂದನು. +ಈ ಹುಡುಗಿಯ ಹಿಂಬಾಲಿಸಿ ಕುದುರೆಯನ್ನು ತಂದನು. +ಅಷ್ಟರತನಕ ಈ ಹುಡುಗಿಗೆ, ‘ಇವನು ತನ್ನನ್ನು ಹಿಡಿಯುತ್ತಾನೆ’ ಯೆಂದು ತಿಳಿದುಕೊಂಡ್ಲು. +ಅಲ್ಲಿ ಸಣ್ಣ ನದಿಯಿತ್ತು-- ‘ಗಂಗೇ. . . ಇವತ್ತು ನನ್ನ ಮಾನವನ್ನು ಕಾದು ಕೊಡಬೇಕ’ ಯೆಂದು ನೀರಿನ ಮೇಲೆ ಉದ್ದಕ್ಕೆ ಬಿದ್ದಳು. +ಆವಾಗ ದೊಡ್ಡ ನದಿಯಾಯಿತು. +ಆಚೆ ದೆಬ್ಬದಲ್ಲಿ ರಾಜನು, ಈಚೆ ಕಾಲಬದಲ್ಲಿ ಹುಡುಗಿಯು. +ಆವಾಗ ರಾಜನಿಗೆ ಶಿಟ್ ಬಂದ್ ಹೊಯ್ತು. +‘‘ನಿನ್ನೂರಿಗೆ ಬಂದು ನಿನ್ನನ್ನೇ ಲಗ್ನಾಗುತ್ತೇನೆ” ಅಂತ ಬಾಶೆ ಮಾಡಿದನು. +‘‘ನಿನ್ನ ಹೊಟ್ಟೆಯ ರಕ್ತವನ್ನು ಕುಡಿಯುತ್ತೇನೆ’’ ಅಂತ ಭಾಶೆ ಮಾಡಿಬಿಟ್ಟ, ಆವಾಗೆ, ಈ ಹುಡುಗಿ ಹೇಳ್ತು, ‘‘ನಾನೂ ಸಹಾ ನಿನ್ನನ್ನೇ ಲಗ್ನಾಗಿ, ನಿನಗೆ ಹುಟ್ಟಿದ ಮಗನ ಹತ್ರ ವಂದು ತಾಸಾದರೂ ನಿನ್ನ ಹಿಂದ್ ರಟ್ಟಿ ಕಟ್ಟಿಸ್ತೇನೆ’’ ಯಂತ ಬಾಶೆ ಮಾಡಿ ಕುದುರೆಯನ್ನು ಹತ್ತಿಕೊಂಡು ಮನಿಗೆ ಬಂದಳು. +ರಾಜನು ಹಿಂತಿರುಗಿ ತನ್ನ ಮನಿಗೆ ತಾನು ಹೋದನು. +ಈ ಹುಡುಗಿಯು ಈ ಬಂಗಾರದ ತೊಳಶಿಗಿಡವನ್ನು ತಂದು, ತನ್ನ ತಂದೆಯವರ ಹತ್ತಿರ ಕೊಟ್ಟಳು. +ಮಂತ್ರಿಯು ರಾಜನ ಹತ್ತಿರ ತೆಗೆದಕೊಂಡು ಹೋಗಿ ಈ ಗಿಡವನ್ನು ಕೊಟ್ಟನು. +ಇಲ್ಲಿ ತುಳಸರಾಜನು ಈ ಹುಡುಗಿಯನ್ನು ಲಗ್ನವಾಗುವ ಉದ್ದೇಶಕ್ಕಾಗಿ ಕುದುರೆಯನ್ನು ಹತ್ತಿಕೊಂಡು ಈ ಊರಿಗಾಗಿ ಬಂದನು. +ಬಂದು ಅಲ್ಲಿ, ಇಲ್ಲಿ ಕೇಳಿ ಅದೇ ಮಂತ್ರಿಯ ಮಗಳನ್ನೇ ಮದುವೆಯಾದನು. +ಕಡೆಗೆ ಮದುವೆಯಾದ ನಂತರ, ಅವರನ್ನು ಸೋಬಾನ ಮಾಡಿದರು. +ಅದೇ ದಿವಸ ತಂದೆಯವರ ಹತ್ತಿರ ಅವಳು, ‘‘ವಂದು ಚೀಲ ಗೋದಿ ಹಿಟ್ಟು, ವಂದು ಡಬ್ಬಿ ಜೇನುತುಪ್ಪ ತನಗೆ ಬೇಕು’’ ಅಂದ್ಲು. +ಆ ಗೋದಿಹಿಟ್ಟ ಚೆನ್ನಾಗಿ ತಿಕ್ಕಿ, ತನ್ನಷ್ಟ ದೊಡ್ಡ ಹಿಟ್ಟಿನ ಉರುವನ್ನು ಮಾಡಿದಳು. +ಅದರ ಹೊಟ್ಟೆವಳಗೆ ಜೇನುತುಪ್ಪವನ್ನು ಹಾಕಿದಳು. +ಸಾಯಂಕಾಲ ಇವರ ಗಂಡ-ಹೆಂಡತಿಯನ್ನು ಕೋಣೆಯಲ್ಲಿ ಇಟ್ಟರು. +ಸುಮಾರೆ ಹತ್ತು ಗಂಟೆ ರಾತ್ರಿಯಲ್ಲಿ ಇವಳು ಮೆತ್ತನ್ನು ಹತ್ತಿದಳು, ಅವನಿಗೆ ವಳ್ಳೆ ನಿದ್ರೆ ಬಂದಿತ್ತು. +ಅವನ ಹತ್ತಿರ ಈ ಹಿಟ್ಟಿನ ಉರವನ್ನು ಇಟ್ಟು, ಇವಳು ಬದಿಗೆ ನಿಂತಳು. +ಇವನು ಎಚ್ಚರಾದವನು ಚೂರಿಯನ್ನು ಹಿಡಿದು, ಅವಳ ಉರುವಿನ ಹೊಟ್ಟೆಯನ್ನು ಬಗಿದು ರಕ್ತವನು (ಜೇನುತುಪ್ಪವನ್ನು) ಸುರಿದನು. +ಆವಾಗ ಯೆಷ್ಟು ‘ಶೇ. . . ’ ಯೆಂದು ನಗುತ್ತಾ ಸುರಿದನು ಜೇನತುಪ್ಪ. +ಆ ಕೂಡಲೇ ಕುದುರೆಯನ್ನು ಹತ್ತಿ ತನ್ನೂರಿಗೆ ಹೋದನು. +‘ತನ್ನ ಬಾಸೆ ಇಂದು ತೀರಿತು’ ಯೆಂದು ಹೇಳಿದನು. +ಬೆಳಗಾದ ಕೂಡಲೆ ಈ ಹುಡುಗಿಯು ತನ್ನ ತಂದೆಯನ್ನು ಕರೆದು, ‘‘ತನಗೆ ದೊಂಬರಾಟದವರನ್ನು ಕರಿಸಿ ಕೋಡಬೇಕು. +ದೊಂಬರ ವಿದ್ಯೆಯನ್ನು ನಾನು ಕಲಿಯಬೇಕು’’ ಅಂತ ಹೇಳಿದಳು. +ಅವಳ ತಂದೆಯು ದೊಂಬರಾಟದವರನ್ನು ಕರಸಿಕೊಟ್ಟ. +ದೊಂಬರಾಟ ಕಲಿತಳು. +ಅವರ ಜೊತೆಯಲ್ಲಿ ಕಲಿತುಕೊಂಡು ದೊಂಬರಾಟದವರ ಹತ್ತಿರ ಹೇಳಿದಳು, ‘‘ತೊಳಶಿ ರಾಜನ ಊರಿಗೆ ಹೋಗಬೇಕು. +ನಮ್ಮ ವಳ್ಳೊಳ್ಳೆ ಆಟವನ್ನು ಆಡಬೇಕು. +ಆವಾಗ ರಾಜನಿಗೆ ನನ್ನ ಮೇಲೆ ಮನಸ್ಸಾದರೆ, ವಂದ್ ಸಾವಿರ ರೂಪೈಗಳನ್ನು ಕೊಂಡು, ನನ್ನನ್ನು ಅವರ ತಾಬೆ ಬಿಡಬೇಕ್’’ ಯೆಂತ ಮುಂಚಿತವಾಗಿ ಆ ಯಜಮಾನಗೆ ಹೇಳಿ ಕೊಟ್ಟಳು. +ಹೇಳಿ ಕೊಟ್ಟ ಕೊಡಲೇ ಸೀದಾ ತುಳಸರಾಜನ ಊರಿಗೆ ಹೋದರು. +ತುಳಸರಾಜನ ಊರಿನಲ್ಲಿ ದೊಂಬರಾಟವನ್ನು ಆಡಿದರು. +ಅಲ್ಲಿಯ ಜನರು ಈ ಆಟವನ್ನು ನೋಡಿ, ‘‘ನಮ್ಮ ರಾಜರ ಮನೆಯಲ್ಲಿ ಸಹಾ ಇಂತ ದೊಂಬರಾಟವನ್ನು ಆಡಿಸಬೇಕು. +ಯೆಷ್ಟು ವಳ್ಳೆಹುಡುಗಿ. . . ಯೆಂತಾ ಆಟ ಆಡ್ತಾಳೆ’’ ಅಂತ ಈ ಮಾತೆಲ್ಲಾ ಹೇಳಿದರು. +ಈ ಮಾತನ್ನು ಕೇಳಿದ ರಾಜನು, ‘‘ಇವರ ಆಟವನ್ನು ನೋಡಬೇಕು. . . ತಮ್ ಮನೆಯಲ್ಲಿ ಅವರನ್ನು ಕರ್ಸಕೊಳಬೇಕು” ಯಂತ ಕರೆಯ ಮಾಡಿದನು. +ಈ ಹುಡುಗಿಯನ್ನು ನೋಡಿದಾಕ್ಷಣ ರಾಜನಿಗೆ, ‘‘ನಮ್ಮೂರ ಜನ ಹೇಳಿದ್ದು ಸತ್ಯ. +ನಮ್ಮ ರಾಜಸ್ತಾನದಲ್ಲಿ ಸಹಾ ಇಂತ ಹುಡುಗಿಯಿಲ್ಲ. +ಆದರೆ, ಇವಳನ್ನೇ ನನ್ನ ರಾಣಿಯಾಗಿ ವಂದು ಸಲ ಮಾಡಬೇಕು.” ಅಂತ ಆಸೆ ಹುಟ್ಟಿತು. +ಆಸೆಯಲ್ಲಿ ಆ ಯಜಮಾನನನ್ನು ಕೇಳಿದನು. +ಯಜಮಾನನು, ‘‘ತನಗೆ ವಂದು ಸಾವಿರ ರುಪಾಯನ್ನು ಕೊಟ್ಟರೆ ವಂದಿವ್ಸ ಬಿಡುತ್ತೇನೆ ನಿಮ್ಮಲ್ಲಿ. . . ’’ ಯಂತ ಹೇಳಿದನು. +ಅವರಲ್ಲಿ ಮಾತುಕತೆ ಆಡಿಕೊಂಡು, ವಂದು ದೊಂಬರಾಟವನ್ನು ಆಡಿ, ಅಂದಿನ ರಾತ್ರಿ ಅಲ್ಲೇ ಉಳಿದರು. +ಇವರಿಬ್ಬರೂ ಒಂದಾದರು-- ರಾಜನು, ಹುಡುಗಿಯು. +ಆವಾಗ ಹುಡುಗಿಯು ಅವನ ಹತ್ತಿರ, ‘‘ನಿನ್ನ ರೂಪೈ ಬೇಡ, ಬಂಗಾರ ಬೇಡ, ಯಾವುದೂ ಬೇಡ. . . ನಿನ್ನ ಮುದ್ರೆದ ಉಂಗುಲಬೇಕು’’ ಯಂತ ಹೇಳಿ ಬೇಡಿಕೂಂಡಳು. +ಮಾರನೆ ದಿವಸ ಬೆಳಗಾದ ಕೂಡಲೆ ಅಲ್ಲಿಂದ ಹೊರಟರು. +ದೊಂಬರಾಟದವರು ತಮ್ಮೂರಿಗೆ ಹೋದರು. +ಈ ಹುಡುಗಿಯು ತಮ್ಮೂರಿಗೆ ಮನೆಗೆ ಹೋಯಿತು. +ಆವಾಗಾ ಹುಡುಗಿಗೆ ಗರ್ಬನಿತ್ತಿತ್ತು. +ಹಾಗೇ ಮೂರು ನಾಲ್ಕು ತಿಂಗಳಾಯ್ತು. +ನವಮಾಸ ತುಂಬಿತು. +ವಳ್ಳೇ ಹುಡುಗನನ್ನು ಹಡೆದಳು, ಆವಾಗ ಹುಡುಗನನ್ನು ಸಾಕಿ, ಹುಡುಗನಿಗೆ ಮೂರು ವರ್ಶ ಕಳೆಯಿತು. +ಕಳೆದ ನಂತರ ಶಾಲೆಗೆ ಹಾಕಿದರು. +ಶಾಲೆಯಲ್ಲಿ ಯೆರಡ ಮೂರು ವರ್ಶ ಕಳೆಯಿತು. +ವಿದ್ಯಾಬ್ಯಾಸದಲ್ಲಿ ಪ್ರತಿ ವಂದು ಹುಡುಗರು, ತಂದೆಯಿಲ್ಲದೆ ಹುಟ್ಟಿದ ಮಗ ಅಂತ ಚ್ಯಾಷ್ಟಿ ಮಾಡಿದರು. +ವಂದು ದಿವಸ ಆ ಹುಡುಗನು ತನ್ನ ತಾಯಿಯ ಹತ್ತಿರ, ‘‘ನನ್ನ ತಂದೆ ಯಾರು?’’ ಅಂತ ಕೇಳಿದನು. +ಆಗ ತಾಯಿಯು, “ಮಗನೇ, ನಿನಗೆ ಈಗ ಹತ್ತನ್ನೆರಡ ವರ್ಶದ ಪ್ರಾಯ. +ಈ ವಿಶಯವನ್ನು (ನಿನ್ನ ತಂದೆಯ-) ನಿನಗೆ ಹೇಳಿದರೆ ನಿನಗೆ ಏನು ಮಾಡಲಾದೀತು?’’ ಯಂತ ಹೇಳಿದಳು. +ಆಗ ಹುಡುಗ, ತಾಯಿಯನ್ನು ವತ್ತಾಯದಿಂದ ಕೇಳಿದನು. +ಆಗ ತಾಯಿ ಹಿಂದಿನ ಕತೆಯನ್ನು ಹೇಳಿದಳು. +‘‘ನಿನ್ನ ತಂದೆಯವರು ‘ತನ್ನನ್ನು ಲಗ್ನವಾಗಿ, ತನ್ನ ಹೊಟ್ಟೆಯನ್ನು ಶಿಗಿದು ರಕ್ತವನ್ನ ಕುಡಿಯುತ್ತೇನೆ’ ಯಂತ ಬಾಶೆಯನ್ನು ಮಾಡಿದ್ದಾರೆ. +ನಾನೂ ಸಹಾ ನಿನ್ನ ತಂದೆಯವರ ಹತ್ತರ ಬಾಶೆ ಮಾಡಿದ್ದೇನೆ. +‘ನಿಮ್ಮನ್ನೇ ಲಗ್ನವಾಗಿ ನಿಮಗೆ ಹುಟ್ಟಿದ ಮಗನ ಹತ್ತಿರ ನಿಮ್ಮ ಹಿಂದೆ ಕಟ್ಟಿಸುತ್ತೇನೆ’ ಯಂತ ಬಾಶೆ ಮಾಡಿದ್ದೇನೆ. ಮಗನೆ. . . ನೀನೀಗ ಸಣ್ಣವನಿದ್ದೀ. +ನಿನ್ನ ಹತ್ತಿರ ಈ ಕೆಲಸ ಸಾದ್ಯಾಗುದೆಲ್ಲ” ಯೆಂತ ತಾಯಿ ಮಗನಿಗೆ ಬುದ್ಧಿ ಹೇಳಿದಳು. +ಮಗನಿಗೆ ಈ ಮಾತು ಕೇಳಿ ಸಿಟ್ಟುಬಂತು. +‘‘ನನಗೆ ಇಂದೇ ಬುತ್ತಿ ರೊಟ್ಟಿ ಕಟ್ಟು. +ನಾನು ಈಗಲೇ ಹೊರಡುತ್ತೇನೆ, ನಿನ್ನ ಬಾಸೆಯನ್ನು ತೀರಿಸಿ ಬರುತ್ತೇನೆ” ಯೆಂದು ಪಣವನ್ನು ಮಾಡಿದನು. +ತಾಯಿ ಮಾತನ್ನು ಕೇಳದೆ ತುಳಸರಾಜನ ಊರಿಗಾಗಿ ತೆರಳಿದನು. +ಅಲ್ಲಿ ಹೋದವನು- ವಂದು ಅಜ್ಜಿಯ ಮನೆಯಲ್ಲಿ ತಾನು ತೆಗೆದುಕೊಂಡು ಹೋದ ರುಪಾಯನ್ನು ಅಜ್ಜಿ ಹತ್ತಿರ ಕೊಟ್ಟು, ತನಗೆ ನಿತ್ಯಾ ಊಟಕ್ಕೆ ಹಾಕುವ ಹಾಗೆ ಮಾಡಿಕೊಂಡನು. +ಅನಂತರ, ‘‘ಯಾರಾದರೂ ಕೇಳಿದರೆ ತನ್ನ ಮೊಮ್ಮಗ ಯಂತ ಹೇಳು.’’ ವಂದೆರಡು ದಿವಸದಲ್ಲೇ ಈ ರಾಜನ ಊರಿನ ವಿಶಯವನ್ನೆಲ್ಲಾ ತಿಳಿದುಕೊಂಡನು. +ರಾಜನಿಗೆ ಇಬ್ಬರು ಸೂಳೆಯವರು. +ಕಣ್ಣಿ-ಕಾಳಿ ಯೆಂಬುವರು. +ರಾಜನು ಮಲಗುವ ಮಂಚಕೆ ಬಂಗಾರದ್ನ ಕಾಲು. +ಈ ಹುಡುಗನ ಮನಸ್ಸಿಗೆ ಬಂಗಾರದ ಕಾಲನ್ನೆ ತೆಗೆದು, ಮರನ ಕಾಲನ್ನು ಹಾಕಬೇಕು ಯೆನ್ನುವ ಮನಸ್ಸನ್ನು ಮಾಡಿದನು. +ಆಗ ರಾತ್ರಿ ಸುಮಾರು ಹತ್ತು ಗಂಟೆ ಟೈಮಿನಲ್ಲಿ ರಾಜನು ಮಂಚವನ್ನು ಬಿಟ್ಟು ಸೂಳೆ ಕಣ್ಣಿಯ ಮನೆಗೆ ಹೋಗುತ್ತಾನೆ. +ಅದೇ ಸಮಯವನ್ನು ಸಾಧಿಸಿ, ಆ ಕಾಲನ್ನು ತೆಗೆಯಬೇಕೆಂದು ನಾಲ್ಕು ಮರನ ಕಾಲನ್ನು ಮಾಡಿದನು. +ಮೂರು ಸಂಜೆಯ ವೇಳೆಯಲ್ಲಿ ರಾಜನ ಮನೆಗೆ ಬಂದು ಆಡಗಿಕೊಂಡು ನಿಂತನು. +ರಾಜನು ಹತ್ತು ಗಂಟೆ ಸಮಯಕ್ಕೆ ಸೂಳೆಮನೆಗಾಗಿ ನಡೆದನು. +ಅದೇ ಸಮಯದಲ್ಲಿ ಅವನು ಮರನ ಕಾಲನ್ನು ಹಾಕಿ, ಬಂಗಾರದ ಕಾಲನ್ನು ತೆಗೆದನು. +ಬಂಗಾರದ ಕಾಲನ್ನು ಕದ್ದುಕೊಂಡು ಹೋಗಿ, ಯಾರೂ ಕಾಣದ ಜಾಗದಲ್ಲಿ ಹುಗಿಸಿಟ್ಟನು. +ಅಜ್ಜಿಯ ಮನೆಯಲ್ಲಿ ಉಳಿದುಕೊಂಡನು. +ಮಾರನೇ ದಿವಸ ಬೆಳಗಾದ ಕೂಡಲೆ ರಾಜನ ಮನೆಯಲ್ಲಿ ರಾಜನು ಮಲಗುವ ಮಂಚದ ಬಂಗಾರದ ಕಾಲನ್ನು ಯಾರೋ ಕದ್ದಿದ್ದು ತಿಳಿತು. +ಗಲಾಟೆಯೇ ಗಲಾಟೆ. +ರಾಜನು ತನ್ನ ಸೈನ್ಯದವರನ್ನು ಕರೆದು, ಈ ಕಳ್ಳನನ್ನು ಹಿಡಿದುಕೊಟ್ಟವರಿಗೆ ಬಹುಮಾನ ಕೂಡುತ್ತೇನೆಂತ ಡಂಗುರ ಸಾರಿದನು. +ಆವಾಗ ಅವರಲ್ಲಿ ವಂದು ಯೆಂಟು ಹತ್ತು ಜನ ತಾವು ಹಿಡಿದು ಕೊಡುತ್ತೇವಂತ ರಾಜನಿಗೆ ಬರವಸೆ ಕೊಟ್ಟು ಬೇಕಾದಷ್ಟು ಹಣವನ್ನು ತೆಗೆದುಕೊಂಡರು. +ಆ ರಾಜನ ಸೈನ್ಯದವರು ಗುಡ್ಡದ ಮೇಲೆ, ಬೆಟ್ಟದ ಮೇಲೆ, ಹೊಳೆಯ ಬುಡದಲ್ಲಿ ಯೆಲ್ಲ ಅಡಗಡಗಿ ನಿಂತರು. +ಇದನ್ನು ನೋಡಿ ಈ ಹುಡುಗನು, ‘ಇಂದು ಇವರಿಗೆ ಬುದ್ಧಿ ಕಲಿಸಬೇಕು.’ ಎಂದು ಹತ್ತಿಪ್ಪತ್ತು ಹಳಿ ವಸ್ತ್ರ, ವಂದರ್ದ ಬಾರ ಶಾಬು, ವಂದು ಮೇಣದ ಬತ್ತಿ, ವಂದೆ ಗೆಯ್ಟೆ, ವಂದ ಹತ್ತಿಪ್ಪತ್ತು ಮಾರು ನುಗಲ ತಕಂಡ್‌ ಹೋಗಿ. . . ವಂದ್‌ ಹತ್ತಿಪ್ಪತ್ತಾಳು ಗುಂಡಿ ಇದ್ದಲ್ಲಿ ಆ ಗೆಯ್ಟೆಗೆ ವಂದ ಮೇಣದ ಬತ್ತಿ ಹಚ್ಚಿ, ಗೆಯ್ಟ ಮುಕಳಿಗೆ ನುಗಲ ಕಟ್ಟಿ ತಾನೇ ವಸ್ತ್ರವನ್ನು ತೊಳಿಯುತ್ತಾ ಕುಳಿತನು. +ರಾಜನ ಸೈನ್ಯ ಜನರು ಬೆಳಕನ್ನ ನೋಡಿ, ‘ಇಷ್ಟು ರಾತ್ರಿ ಸಮಯದಲ್ಲಿ ಯಾರೊ ಬರತ್ತಾರೆ. +ಕಳ್ಳರೆ ಇವರು. . . ’ ಯಂತ ಹೊಳೆಯ ಹತ್ತಿರ ಬಂದರು. +ಅವರು ಆವಾಗ ಈ ಹುಡುಗನು ರಾಜನ ಸೈನ್ಯದವರ ಹತ್ತಿರ, ‘‘ದೊಡ್‌ ಮಾತಾಡಬೇಡ್ರಿ. +ರಾಜನ ಮನೆಗೆ ಕಳುಕೆ ಹೋಪ ಕಳ್ಳರೆ ಇವರೆ ಆ ಬೆಳ್ಕ ತಕಂಡ್‌ ಆಚೆ ಬರ್ತಾರೆ. +ನೋಡಿ. . . ನನ್ನ ಹತ್ತಿರ ವಸ್ತ್ರವನ್ನು ಕೊಟ್‌ ಹೋಗಿದ್ದಾರೆ. +ಈಗ ನೀವು ಸುಮ್ಮನೆ ಇಲ್ಲೇ ನಿಲ್ಲಿರಿ. +ನಾನು ಹೇಳಿದಾವಾಗ ಹೊಳೆಯನ್ನು ಹಾರಿ ಅವರನ್ನು ಹಿಡಿದು ಬಿಡಿರಿ.’’ ಯಂತ ಅವರಿಗೆ ಹೇಳಿದಾಗ, ತನ್ನ ಕಾಲಿನಲ್ಲಿ ಆ ನುಗಲನ್ನು ಹಗೂರ ಎಳೆದನು. +ದೊಡ್ಡ ಗುಂಡಿ ಬಂದ ಕೂಡಲೆ ಇವರ ಹತ್ತರ, ‘‘ಈಗ ಕಳ್ಳರು ಬಂದರು. +ಹಾರಿ. . . ’’ ಅಂತ ಹೇಳಿದನು. +ಇವರೆಲ್ಲ ಹಾರಿದರು. +ಇವರೆಲ್ಲಾ ಹೊಳಿ ಹಾರ್ದ ಕೂಡಲೆ ಕೆಲವರ ಸತ್‌ ಹೋದ್ರು. +ಕೆಲವರು ಯೆದ್‌ ಬಂದ್ರು. +ಅವರವರೊಳಗೇ ಹಿಡಿಕೊಂಡ ಹೊಡದಾಡಿ ಕೆಲವರು ಸತ್ತೇಹೋದ್ರು. +ಈ ಹುಡುಗನು ಅಜ್ಜಿಮನೆಯಲ್ಲಿ ಬಂದು ಉಳಿದುಕೊಂಡನು. +ಮಾರನೇ ದಿವಸ ಬೆಳಗಾದ ಕೂಡಲೇ ಆವಾಗ ತನ್ನ ಸೈನ್ಯದವರಿಗೆಲ್ಲ ಕಳ್ಳರು ಹೊಡದು, ಕೆಲವರು ಸತ್ತಹೋದ್ರು. +ಆವಾಗ ಪೋಲೀಸನವರನ್ನ ಕರಸಿ, ‘‘ಬೇಕಾದ ಆಯುಧ ಕೊಡತೇನೆ. +ಆ ಕಳ್ಳನನ್ನ ಹಿಡಕೊಂಡು ಬರಲೇಬೇಕು’’ ಅಂತ ಆರ್ಡರ್ ಮಾಡಿದನು. +ಆಗ ಈ ಹುಡುಗನು ಈ ವರ್ತಮಾನವನ್ನ ಕೇಳಿ, ಅರಮನೆಯ ಮೇಲೆ ಗುಡ್ಡೆಯ ಮೇಲೆ ವಂದೆ ಸಣ್ಣ ಅಂಗಡಿ ಮಾಡಕೊಂಡ. +ಸುಮಾರ್‌ ಹತ್‌ ಗಂಟೆ ರಾತ್ರಿಯಲ್ಲಿ ಮಂಡಕ್ಕಿ, ಕಡ್ಲೆ ಬೀಜ, ಬೀಡಿ, ಬೆಂಕಿಪಟ್ಟ್ಗೆ ಮಾಡಿಕೊಂಡ. +ಈ ಹುಡುಗ ಹತ್ತಿರ ವಂದ್‌ ಇಪ್ಪತೈದ್‌ ಗೋಣಿಚೀಲ, ವಂದ್‌ ಲಾಟನು ಮಾಡ್ಕಂಡ್‌ ಅಂಗಡಿಲೆ ಕೂತ. +ಆಗ ಈ ಪೋಲೀಸನವರು ಈ ಲಾಟನ್ ನೋಡಿ, ಈ ಹುಡುಗನ ಬುಡಕಾಗಿ ಬಂದರು. +‘‘ನೀ ಇಲ್‌ ಅಂಗಡಿ ಹಾಯ್ಯ್‌ಕಂಡ್ ಕುಂತ್ಕಂಡ್ ಕಾರಣ್ಯೇನೋ?’’ +‘‘ಪೋಲೀಸನವರೇ, ನಿನ್ನೆ ರಾತ್ರೆ ನಮ್ಮ ರಾಜನ ಸೈನ್ಯದವರನ್ನೆಲ್ಲಾ ಕಳ್ಳರು ಹೊಡೆದು ಕೊಂದಿದ್ದಾರೆ. +ನಿನ್ನೆ ಮದ್ಯಾಹ್ನ ನನ್ನ ಹತ್ರ ಅವರೇ ಹೇಳಿದ್ದಾರೆ. . . ನೀನು ವಂದು ಅಂಗಡಿ ಮಾಡ್ಕಂಡ್‌ ಉಳಿ. +ತಿನ್ನುವ ಸಾಮಾನಂದು. . . ನಾವು ಬೇಕಾದಷ್ಟ ರುಪೈಕೊಡ್ತೇವೆ. +ರಾತ್ರಿ ನಮಗೆ ತಿಂಡಿ ಸಾಮಾನ ಕೊಡಂತೆ ಹೇಳಿರು.’’ ಈ ಮಾತ್ನ ರಾಜನಿಗೆ ತಿಳಿಸಿ ಬಂದಿದೆ. +‘‘ನಿಮ್ಮ ಜನರನ್ನ ಇಲ್ಲೆವರೆಗಾಗಿ ಕಳಿಸಿ ನಾಕಾರ ಜನರ್ನ. +ತನ್ನ ವಬ್ಬನ ಹತ್ರರ ಹಿಡಿಲಿಕೆ ಆಗುವುದಿಲ್ಲ ಯಂತ ಹೇಳಿದ್ದೇನೆ. +ಈಗ ನೀವು ಬಂದದ್ದು ಚಲೋ ಆಯ್ತು. . . ಗುಡ್ಡಿಯ ಜಾಗವಿದು. +ನಿಮನ್ನೆಲ್ಲಾ ನೋಡಿ, ಕಳ್ಳರು ಬರದೇ ಇದ್ರೆ ಯೇನ್ ಮಾಡೂದು? +ಈಗ ನೀವು ಈ ಗೋಣಿ ಚೀಲ್ದಲ್ಲಿ ವಬ್ಬೆಬ್ರು ಇಳಕೋಳ್ರಿ. . . ನಾನು ಯೆಲ್ಲಾ ಇಲ್ಗೇ ಕೂಡಿಡ್ತೆ. +ಕಳ್ಳರು ಬಂದ ಕೊಡಲೆ ನಾ ನಿಮಗೆ ಹೇಳೆ ಬಿಡ್ತೆ. +ನೀವೆಲ್ಲ ಯೆದ್ದ ಅವರನ್ನು ಹಿಂಡ್ಕಂಡ್‌ ಹೋಗ್ ಬಿಡಿ. . . . ’’ ಆವಾಗೆ ಎಲ್ಲರ್ನೂ ಕೂಡಿ ಗೋಣಿಚೀಲ್ಕ ಹಾಕಿ ಬಾಯ್ ಕಟ್ದ. +ಬಾಯ್ ಕಟ್ದವ್ನೇ ಯೆಲ್ಲ ಗುಡ್ಡಿ ಮೇಲಿಂದ ಕೆಳ್ಗೆ ಹೊಡ್‌ ಬಿಟ್ಟ. +ರಾಜನ ಮನೆ ಬಾಗಿಲಿಗೆ ಯೆಲ್ಲರ ಗೋಣಿಚೀಲ ಬಂದ್‌ ಬಿತ್ತು. +ಕೆಲವರ ಕೈಮುರ್ದೆ ಹೋಯ್ತು, ಕೆಲವರ್ದು ಕಾಲ್ ಮುರ್ದ ಹೋಯ್ತು. +ಕೆಲವರು ಸತ್ತೇಹೋದ್ರು. +ಇದನ್ನೆಲ್ಲ ನೋಡ ರಾಜನಿಗೆ ಶಿಟ್‌ ಬಂತು, ‘‘ಇನ್ನು ಯಾರಗೂ ಕಳಸೂದು ಬರೊಬರಲ್ಲ. +ತಾನೆ ಹಿಡಿತೇನೆ’’ ಅಂತ ಹೋದಾ. +ಈ ಮಾತು ಕೇಳಿ ಈ ಹುಡುಗನು, ರಾಜನ ಮನಿ ಹತ್ತರನೇ ಇದ್ದ. +ಸುಮಾರ್‌ ಯೆಂಟ್‌ ಗಂಟೆ ಸುಮಾರಿಗೆ ರಾಜನ ಸೂಳಿ ಕಣ್ಣಿ ಮನಿಗೆ ಹೋಗಿ, ‘‘ನಿನ್ನ ಸೀರೆಯನ್ನು ರಾಜರು ಕೊಡಲಿಕ್ಕೆ ಹೇಳಿದ್ದಾರೆ’’ ಯಂತ ಅವಳ ಹತ್ರ ಶೀರೆ ಬೇಡಕೊಂಡು ಬಂದನು. +ಆವಾಗ ವಂದು ಸೀರೆಯನ್ನು ತಾನುಟ್ಕೊಂಡು, ವಂದು ಸೀರೆಯನ್ನು ಕೈಯಲ್ಲೆ ಹಿಡಿದುಕೊಂಡು ರಾಜನ ಮನೆಯ ಬಾಗ್ಲಲ್ಲಿ ಬಂದು ನಿಂತನು. +ಆಗ ರಾಜನು ಕಳ್ಳರನ್ನು ಹಿಡಿಯಲಿಕ್ಕೆ ಸಿದ್ಧನಾದನು. +ಸೈನ್ಯದವರೆಲ್ಲಾ ಮುಂದೆ ಹೋದರು. +ರಾಜನು ಹಿಂದಿನಿಂದ ವಳಗಿನಿಂದ ಹೊರಗೆ ಬಿದ್ದನು. +ಆಗ ಈ ಹುಡುಗನು ಕಣ್ಣಿಯ ರೂಪದಲ್ಲಿ ಹೋಗಿ, ‘‘ರಾಜರೇ, ಈ ಡ್ರೆಸ್ಸಿನಲ್ಲಿ ಹೋದರೆ ನೀವು. . . ಕಳ್ಳನು ನಿಮಗೆ ಶಿಗುತ್ತಾನೋ? +ಈ ಸೀರೆಯನ್ನು ಉಟ್ಟಿಕೊಳ್ಳಿ, ನನಗೆ ಆ ಡ್ರೆಸ್ಸನ್ನೆಲ್ಲ ನನ್ನ ಹತ್ರಕೊಡಿ. +ನಾನು ಮನೆಯಲ್ಲಿಡುತ್ತೇನೆ. +ನಾನು ನಿಮ್ಮ ಸೂಳೆಯಲ್ಲವಾ? +ನನ್ನ ಮಾತ ಕೇಳ್ರಿ. . . ’’ ಯಂತ ಹೇಳಿದಳು. +ಕಣ್ಣಿಯ ಮಾತನ್ನೇ ನಂಬಿ, ಕಣ್ಣಿ ಸೀರೆಯನ್ನು ಉಟ್ಟುಕೊಂಡು ತನ್ನ ಡ್ರೆಸ್ಸನ್ನು ತೆಗೆದು ಹುಡುಗನ ಹತ್ತರ ಕೊಟ್ಟನು. +ಹುಡುಗನು ಆ ಡ್ರೆಸ್ಸನ್ನು ತಾನು ಹಾಕಿಕೊಂಡು-- ಅವನನ್ನೇ ಅಪ್ಪಿಹಿಡಿದು, “ಕಳ್ಳನನ್ನು ಹಿಡಿದಿದ್ದೇನೆ ಬನ್ನಿ” ಅಂತ ಗಲಾಟೆ ಮಾಡಿದನು. +ಸೈನ್ಯದವರೆಲ್ಲ ಓಡಿ ಬಂದರು. +‘ಕಳ್ಳನಲ್ಲ ತಾನು ರಾಜ’ ಅಂತ ಕೂಗುತ್ತಾನೆ. +ಇವನು ಕೂಗಿದರೂ ಕೇಳದೆ, ಈ ಹುಡುಗನು ರಾಜನ ಡ್ರೆಸ್ಸಿನಲ್ಲಿ ಪ್ರಜೆಗಳಿಗೆ ಹೇಳಿದನು-- ‘‘ಇವನ ತೆಗೆದುಕೊಂಡು ಹೋಗಿ ನಮ್ಮ ಮನೆಯ ಹೊರಗೆ ಹಿಂದೆ ರಟ್ಟೆ ಮಾಡಿ ಕಟ್ಟಿಸಿ’’ ಯಂತ ಹೇಳಿದನು. +ಪ್ರಜೆಗಳು ಈ ಹುಡುಗನ ಮಾತಿನ ಮೇಲೆ ಕಟ್ಟಿದರು. +ಈ ಹುಡುಗನು ತನ್ನ ತಾಯಿಗೆ ಹೇಳಿ ಕಳಿಸಿದನು. +ತಾಯಿ ಬಂದು, ರಾಜನನ್ನ ಹಿಂದೆ ರಟ್ಟೆಕಟ್ಟಿದವನನ್ನು ಬಿಚ್ಚಿ, ‘‘ಇಂದು ನನ್ನ ಬಾಸೆ ತೀರಿತು. +ಇನ್ನು ನೀವೇ ಗಂಡ. . . ತಾನೇ ಹಿಂಡತಿ. . . ಈತನೇ ಮಗ’’ ಯೆಂದು ಹೇಳಿದಳು. +ಆ ರಾಜ್ಯವನ್ನು ಸುಕಸಂತೋಸದಿಂದ ಆಳುತ್ತಿದ್ದರು. +ಊರಲ್ಲಿ ಐದ್ ಜನ ಅಣ್ಣ-ತಮ್ಮಂದಿರು. +ಕಿರಿಯವ ದಿವಸಾ ಮನಿ ಕೆಲಸ ಮಾಡುದೆಲ್ಲ ಅವ. +ಅವನ ಅಣ್ಣಂದಿರ ಹಿಂಡತಿಯರು ಗಂಡಂದಿರ ಕೈಲಿ, “ಇವನ್ ಕೂತಲ್ ಹೊಟ್ಟಿ ಹೊರಿಬೇಕು. +ಬೇರ್ ಹಾಕ್ ಬಿಡಿ” ಅಂದ್ ಹೇಳತ್ರು. +ಬೇರ್ ಹಾಕ್ವರು ಅಂತ ಹೇಳಿ ಯೇನ್ ಮಾಡ್ ಬಿಟ್ಟ ಕಿರಿಯವ? +ಹಿಂಡ್ತಿಯ ತನ್ ನೆಂಟರ ಮನೇಲ್ ಹೋಗ್ಬಿಟ್ಟ. +ಮನಿಯಲ್ಲಿ ಅವಗೆ ವಂದ್ ಸಾವಿರ ರೂಪಾಯ್ ಉತ್ಪನ್ನಾಗಿತ್ತು. +ವಂದ್ ಸಾವಿರ ರೂಪಾಯ್ ತಕಂಡ್ ಕಿರಿಯವ ಹೆರಗ್ ಬಿದ್ದ. +ಹೆರಗ್ ಬಿದ್ದ ಗತ್ಲೆ ವಂದ್ ಚಂಬ್ ಸಿಕ್ತು ಅವಗ-- ಕಾಲಿ ಚಂಬು. +ವಂದ್ ಸಾವಿರ ರೂಪಾಯ್ ಅದ್ರಲ್ ಹಾಕಂಡ. +ಇವನಕಿಂದ್ ಮುಂದಾಗಿ ವಂದ್ ಬಟ್ರು ಹೋಯ್ತರೆ ಪೂಜೆಕೆ. + “ಬಟ್ರೆ. . . ಬಟ್ರೆ. . . ವಂದ್ ಕತೆ ಹೇಳಿ” ಅಂತ ಅವ ಬಟ್ರ ಕೈಲಿ. +ಆವಾಗ, “ಕತಿ ಹೇಳೂಕ್ ಬಾರಿ ಹೊತ್ತಾಗ್ ಹೋಯ್ತು. +ದೇವರ ಪೂಜಿಕೆ ಹೋಪ್ಕೆ ಹೊತ್ತಾಗ್ ಹೋಯ್ತು. . . ಆಗೂದಿಲ್ಲ” ಅಂತಾರೆ ಬಟ್ರು. +ಯೇನ್ ಹೇಳದ್ದೂ ಕೇಂಬದಿಲ್ಲ. +“ವಂದ್ ಕತಿ ಹೇಳಬೇಕು” ಅಂತ ಬಟ್ರ ಕೈಲಿ. +“ನಾನು ಕತಿ ಹೇಳೂಕಡ್ಡಿಲ್ಲ. +ವಂದ್ ಕತಿಗೆ ಐನೂರ್ ರೂಪಾಯ್ ಬೇಕು” ಅಂತ್ರು. +“ಆಯ್ತು” ಅಂದ. +ಅವರು ವಂದ್ ಕತಿ ತಕಂಡ್ರು, “ನಿನ್ ಮನ್ಯಂದ್ ಹೆರಗ್ ಬಿದ್ ಹೋಗಬೇಕಾರೆ ಯಾರೊಬ್ಬರಿಗೂ ವಂದ್ ಮಾತ್ ಹೇಳೂಕಾಗ. +ಅವಾಗೆ ಹಾಗೆ ಮುಂದ್ ಹೋದ ಗತ್ಲಿ ವಂದ್ ಮಾದೊಡ್ಡ ಹೊಳಿ ಸಿಕ್ತದೆ. +ಹೊಳಿ ಸಿಕ್ದ ಗತ್ಲಿ, ಹಿಂದಿನ ಜನ ಕಂಡ್ರೆ ಹೊಳಿಹಾಯ್ಬೇಕು. +ಯಾವದೂ ಜನ ಸಿಕ್ಕದಿದ್ರೂ ನಡುಮಧ್ಯ ಹೊಳಿಗ್ ಹೋಗ್ ವಂದ್ ಕಲ್ ಹೊತ್ಕಂಡಾರೂ ಹೊಳಿ ಹಾಯ್ಬೇಕು. . . ” ಬಟ್ರು ಅಂದ್ರು. +ಹಾಂಗಾರ್ ಕಲ್ ಹೊತ್ಕಂಡ್ ಹೊಳಿ ಹಾಯ್ಬೇಕಾರೆ ವಂದ್ ಏಡಿ ಶಿಕ್ತು ಅವಗೆ. +“ತೆಗೆ ಐನೂರ್ ರೂಪಾಯಿ” ಅಂತ್ರು ಬಟ್ರು. +ತಗದಿ ಕೊಟ್ಟ ಅವ. +“ಬಟ್ರೆ. . . ಬಟ್ರೆ. . . ಮತ್ತೊಂದ್ ಕತಿ ಹೇಳಿ” ಅಂದ. +ಆವಾಗ್ ಮತ್ತೊಂದ್ ಕತಿ ತಗದ್ರು ಅವ್ರು-- ಹೊಳಿದಾಟ್ ಹೋದ್ ಗತಿಲಿ. +ಯಾವುದೋ ಒಬ್ಬ ರಾಜರು. . . ಯೆಲ್ಯೋರೋ? +ಹಾದಿ ಮೇಲ್ ಹೋಗುವಾಂಗೆ, ರಸ್ತ್ಯೇಗ ಜೀವಬಿಟ್ಟರೆ. +ಆವಾಗ ಯೆಯ್ಡ್ ಜನ ಪೋಲೀಸರು ಅವನ ಕೈಲಿ ಆ ಸಬ ತೆಗೆದ ಹಾಕು ಹೇಳ್ತಾರೆ. +ಆವಾಗ, ತಗ್ದ್ ಹಾಕೂಕೆ ಹೋದಾಗೆ ಸಬದ (ಶವದ) ಕೋಟಂಗಿ ವಳಗೆ ವಂದ್ ಚಿನ್ನದ ಗಟ್ಟಿ ಸಿಕ್ತು ಅವಗೆ. +ಚಿನ್ನದ ಗಟ್ಟಿ ಪೋಲೀಸರಿಗ್ ತೋರ್ಸಲಿಲ್ಲ ಅವ. +ಸುಮ್ನೆ ಹಿಡ್ಕಂಡ ಅವ. +ಆವಾಗೆ, ಹಾಗೇ ಮುಂದ್ ಹೋದಗತ್ಲಿ ‘ಅವರ ಮೈಮೇಲಿನ ಅಂಗಿ ತಾ ಹಾಕಂತೆ’ ಅಂದ, ಪೋಲೀಸರ ಕೈಲಿ. +“ಅಡ್ಡಿಲ್ಲ” ಅಂದ್ರು ಪೋಲೀಸರು ಅವ್ನ ಕೈಲಿ. +ಅವನ ಹತ್ರೆ ಸಬಾ ತಗದ್ ಹಾಕ್ಸಿ ಹೋದ್ರು.’’ಬಟ್ರು ಹೇಳ್ದ್ರು, ‘‘ಮುಂದ್ ಹೋದ ಗತ್ಲೆ, ಅಲ್ಲೊಂದು ಯೆಳ್ಳಿ ಮರ ಕಟ್ಟಿ ಸಿಕ್ತದೆ, ದಾರಿ ಬದಿ. +ಮನ್ಗಬೇಕಾರೆ ಸ್ವಲ್ಪ ಇನ್ನೂ ಜಾಗ್ರತಿಂದ ಮನ್ಗ್ಬೇಕು. . . ” ಅಂದ್ರು. +ಬಟ್ರು ಐನೂರ್ ರೂಪಾಯ್ ತಕಂಡ್ ನೆಡ್ದ್ರು. +ಯೆಳ್ಳಿ ಕಟ್ಟಿ ಮೇನ್ ಅವ ಮನ್ಗ್ ಬಿಟ್ಟ. +ಇವಗೆ ನಿದ್ರೆ ಬಂದ್ ಹೋಯ್ತದೆ. +ಮಹಾದೊಡ್ಡ ಮಣಿನಾಗ (ಸರ್ಪ) ಬಂದಿ ಅವಗೆ ಕಚ್ಚಿಕ್ಕಿ ಹೋಗ್ತದೆ. +ಯೆರಡು ಕಾಕಿ ಮರದ ಮೇನ್ ಕೂತ್ಕಂದೆ ಕೂಗ್ತದೆ. +ಆ ಹಾವು ಕೂಗು ಸಬ್ದ ಕೇಳ್ಕಂಡಿ, ಹಾವು ಮೇನ್ ಬತ್ತದೆ. +ಬಂದಿ ಅವ್ನ ಕಚ್ಚಿಕ್ ಹೋಯ್ತು ಅದು. +ಕಾಕಿ ಯೆಯ್ಡ್ ಬಂದಿ, ಅವನ ಕಣ್ಬೇಳಿ ತೋಡೂಕ್ ಬತ್ತದೆ. +ಸತ್ತ ಸಬಂದ (ಸತ್ತದ್ದಕ್ಕಾಗಿ) ಆವಾಗ್ ಕಣ್ಬೇಳಿ ತಿಂಬೂಕ್ ಬಂದು ಕಾಕಿ ಸಬ ಕಿಟ್ಲಿಲ್ಲ. +ಚಂಬಿನ ವಳ್ಗೆ ಯೋಡಿ ಹಾಕಂಡಿತ್ತು. +ಚಂಬಿನ ವಳ್ಗೆ ಮೂಜ (ಸುಂಡಿ) ಹಾಕ್ಬಿಡ್ತು. +ಕಾಕಿ ಮೂಜ ಯೇಡಿ ಹಿಡಿದ್ ಬಿಟ್ತು. +ಕಾಕ್ ‘ಬಡ. . . ಬಡ. . . ’ ಬಡ್ಕಂಬ ಹೊತ್ನಲ್ಲಿ ಮಣಿನಾಗ ಬೋರ ಗುಡ್ತಾ ಬತ್ತದೆ. +“ಮತ್ತೇನಾಯ್ತು?” ಅಂದಿ, ಕಾಕಿಗೆ ಹೇಳ್ತದೆ. +‘‘ಯೇಡಿ ನರಮನ್ಸನ್ ಕೊಂದಿ. . . ” ಕಾಕಿ ಹೇಳೂರು. +“ನೀನು ಹೊಟ್ಟಿ ಹೊರೂಕ್ ಇದ್ಯೋ? +ಮಣಿನಾಗನ ಬಿಟ್ಟಿ ಮಣಿನಾಗ್ನ ಅಪ್ಪ ಬಂದ್ರೂ ನಿನ್ ಬಿಡೂದಿಲ್ಲ” ಅಂದಿ ಕಾಕಿಗ್ ಹೇಳ್ತದೆ ಯೇಡಿ. +ಆವಾಗ ಹಾವ್ ಬಂದಿ ಯೇಡಿ ಕೈಲಿ ಹೇಳ್ತದೆ, “ನಿನ್ನ ನರಮನ್ಸನ ತಾ ಜೀವ ಮಾಡಿ ಬಿಡ್ತೆ. +ಮತ್ತೆ ತಾನು ಜೀವ ತಕಣ್ತಿ. +ಪಕ್ನೆ ಮತ್ತ ತನ್ನ ಸುಟ್ಟಿ ಬಸ್ಮಾಂಕಾರ ಮಾಡಿ ಕಾಸಿ ರಾಮೇಸ್ವರದಲ್ಲಿ ಹೊಳಿಲ್ ತನ್ನ ವಿಬೂತಿ ಬಿಡಬೇಕು” ಹೇಳಿ ನರಮನಸನ ಕೈಲಿ ಹೇಳ್ತು ಹಾವು. +ಆವಗ್ ಜೀವ ಮಾಡಿಕ್ ಹಾವು ಸತ್ತಹೋಯ್ತು. +ಅದ್ರ ಸುಟ್ಟು ಬಸ್ಮಾಂಕಾರ ಮಾಡಿ, ಬೂದಿ ತಕಂಡ್ ಹೋಗಿ, ಕಾಸಿ ರಾಮೇಸ್ರ ಹೊಳಿಲ್ ಬಿಟ್ರು. +ಗಂಟ ತಕಂಡೋಗಿ, ಹೆಂಡ್ತಿ ಕರಕಂಡ್ ಬಂದಿ ಮನಿಗೆ ಹೋಗಿ ಸುಕದಲ್ ವಳ್ದ. +ವಂದೂರಲ್ ವಂದ್ ರಾಜ ಇದ್ದಿದ್ದ. ಸೋಮಶೇಕರರಾಜ. ಅವನಿಗ್ ಯೆರಡು ಹಿಂಡ್ತಿರು. +ವಂದು ಹೆರಿ ಹೆಂಡ್ತಿಗೆ ಚೀರಕಲ್ ಪೆದ್ದ; ಕಿರಿ ಹಿಂಡ್ತಿಗಿ ಯೋಳ್ ಮಂದಿ ಹುಡ್ಗರು. +ಆದ್ರೆ, ವಬ್ರಿಕಿಂತಾ ವಬ್ರ್ ಹುಶಾರು- ಚಲಾಕಿ. +ಇವಗೆ ಅಷ್ಟ್ ಮಾಡ್ತ ಮಾಡ್ತೆ ಶಾಲಿಗೆ ಹಾಕ್ರು. +ಯೇನೂ ಬರುದಿಲ್ಲ. +ಆಡ್ತ, ಕಷ್ಟ ಮಾಡಿ ಅವರು ವಳದ್ರು. +ಇವಗ್ ಯೇನೂ ಇಲ್ಲ. . . ತಿಂಬೂದು ಹೊರಡೂದು ಅಷ್ಟೆ ಮಾಡ್ತ. +ಸಣ್ ಹುಡ್ಗರು ಯೋಳ ಮಂದಿ ತಾಯಿಗೆ ತಂದಿಗೆ ಯೇನ್ ಹೇಳದ್ರು? +“ನಾವ್ ಹುಟ್ ಇಷ್ಟ ದೊಡ್ಡಾದ್ರೂ ಊರ್ ನೋಡಲಿಲ್ಲ. +ಊರ್ ನೋಡುಕ್ ಹೋತರು” ಹೇಳಿ. +ತಂದೆ, ‘ಹಾ. . . ’ ಹೇಳ್ದ. +ತಾಯಿದಲ್ ಬಂದ್ರು, ತಾಯಿಗೆ ಹೇಳದ್ರು. +“ವಂದ್ ನಾವು ಊರ್ ನೋಡೂಕ ಹೋಗೋರು.” + ತಾಯಿ ‘ಹಾ. . . ’ ಹೇಳ್ತು. +ಕಡೆಗೆ ಅವರಿಗ್ ಹಾದಿಗ್ ಊಟಬೀಟ ಬೇಕಲ್ಲ? +ಅದ್ಯೆಲ್ಲ ತಾಯಿ ಕಟ್ಕೊಟ್ತು. +ಅವರು ಊರಿಗ್ ಹೋಗ್ವದಲ್ಲಿ; ಬೆಟ್ಟದ್ ದಾರಿ ಹಿಡದ್ರು. +ಹಿಡ್ಕಂಡ್ ದೊಡ್ ಕಾನ್ದಲ ಹೋಗ್ ಮುಟ್ಟಿದ್ರು. +ಅಲ್ಲಿ ಯೇನಾಗಿದಿ ಹೇಳದ್ರೆ, “ಅಯ್ಯಾ ದೇವ್ರೆ!” ಹೆದ್ರಕ್ಯಣಿ, ಕಡ್ಕೆ ಆ ದಾರಿ ಬಿಟ್ಕಂಡ್ ಬೆಟ್ದಲ್ಲೇ ತಿರ್ಗತಿ ಮತ್ತೊಂದ್ ದಾರಿಗ್ ಹೋದ್ರು. +ಅಲ್ ಯೇನಾಗಿದು? +ಅಲ್ ವಂದ್ ಬರಾಬರ್ದ್ ಇಕ್ಯರ (ಇಟ್ಟಿದ್ದಾರೆ), ಯೇನ್ ಹೇಳ್ ಬರ್ದಿಕ್ಯರು? +“ಈ ಗುಡ್ಡಿವಡ್ಡಿ, ಈ ಕಲ್ಲು ವಡ್ಡಿ, ಇಲ್ಲಿ ಯಾರ್ ಹನ್ನೈಡ್ ಗಾಡಿ ರುಪಾಯ್ ತಂದ್ಕಣಿ ಹೊಯ್ದ್ರು. +ಇಲ್ ಗಿಡ, ಕಲ್ಲು, ಮಣ್ಣು. . . ಯೆಲ್ಲಾ ಈ ಬೋಳಿಗೆ ಯೇನ ಈತು ಅದ್ಯೆಲ್ಲಾ ಚಿನ್ನ, ಅಲ್ಲಿದ್ ಮಣ್ ಅಗದ್ರೂ ಸುದ್ದಾನೇ ಚಿನ್ನ ಆತಿದಲ್ಲಿ. . . ” ಹೇಳ್ಕಂಡ್ ಅಲ್ ಬರದೇರು. +ಅಲ್ ಬಂದ್ ಮುಟ್ಕಂಡಿ ಅದ ವೋದದ್ರು. +ವೋದ್ಕಂಡಿ ಅದೆ ನೋಡ್ಕಂಡಿ, “ಹನ್ನೈಡ್ ಗಾಡಿ, ನಮ್ ಅಪ್ಗ ಯೇನ್ ಕಡ್ಮಿ. . . ” ಅಂತ ಹೇಳಿ, ಅಲ್ಲಿಂದೇ ಬಂದ್ ಕುದ್ರಿ ಹೊಡ್ಕಂಡ್ ಬಂದ್ರು. +ವಬ್ಬಬ್ ವನ್ನಂದ್ ಕುದ್ರಿ ತಕಣ್ ಹೋಗಿರು. +ಬಂದ್ಕಂಡಿ, “ನನ್ ಮಗದಿರ್ ಊರ್ ನೋಡ್ಬಂದ್ರು” ಹೇಳ್ಕಂಡಿ, ಮೇನ ಮೇನೇ ಮಾಡ್ತಿದ್ರಿ ತಾಯಿ. +“ಅಯ್ಯೊ ಮಗನೇ!ಯೆಟ್ ಊರ್ ನೋಡ್ಕಂಡ್ ಬಂದ್ರಿ? +ಯೇನ್ ಯೇನ್ ಮಾಡಿದ್ರಿ” ಕಡೆಗಿ ಕೇಳದೆ, ‘‘ಅದ್ಯೆಲ್ಲ ಸಾಯ್ಲಿ, ಮುಂಚೆ ಉಣ್ಣಿರಿ. +ಯಾವಾಗ್ ಉಂಡದ್ರೊ ಯಾರ್ಬಲ. . . ” ಹೇಳ್ಕಂಡ್ ದಾಸ್ಯರಿಗ್, “ಯೆಣ್ಣಿ ತಕಣ್ ಬಾ. . . ” ಹೇಳಿ ಕರಿತು. +“ನಿನ್ ಯೆಣ್ಣಿ ಬೇಡಾ. +ಊಟಾ ಬೇಡಾ, ಗೀಟಾ ಬೇಡ. +ಯೇನ್ ಬೇಡಾ. +ಹೇಳ್ದ ಕೆಲ್ಸ ಮಾಡಬೇಕು.” + “ನಮ್ಮ ರಾಜ ದರಬಾರದಲ್ ಯೇನೂ ಕಡ್ಮೆಲ್ಲ ಮಗನೇ. . . ” ಹೇಳ್ತು ರಾಜನ ಹಿಣ್ತಿ. +“ನಿನ್ನಪ್ಪ ಇಟ್ ದೊಡ್ ರಾಜ ಯೇವಾ, ಯೆಣ್ಣಿ ತಾಗ್ಸಿ ಮಿಂದ್ಕಣಿ” ಹೇಳ್ತು. +ಯೆಣ್ಣಿ-ಬಿಣ್ಣೆ ತಾಗ್ಸ್ ಕಂಡಿ ಮಿಂದ್ರು. +ನೀರ್ ಮಿಂದಿ ಊಟ ಮಾಡಿ, ಆಗ ತಾಯಿಗ್ ಹೇಳ್ರು, ‘‘ಹನ್ನೈಯ್ಡ್‌ ಗಾಡಿ ರುಪಾಯ್ ಬೇಕ್ ನಮಗೆ. +ಅಲ್ ಕಾನದಲ್ ಆ ರೂಪಾಯ್ ಚೆಲ್ಲಿದ್ರೆ, ಎಲ್ಲಾ ಬಂಗಾರಾತಿದಿ” ಹೇಳ್ದ್ರು. +ತಾಯಿ, “ನಮ್ಗ ಯೇನ್ ಕಡ್ಮೆ?” ಹೇಳತಿದಿ. +ಆ ದಿವ್ಸೆ ರಾಜ ಕಿರಿಹಿಣತಿ ಮಂಚಕೆ ಬರ್ವದಿದ್ದ. +ಕಡಿಗಿ ರಾಜನ ಬದಿಗಿ ಬೆನ್ ಹಾಕ್ಕಂಡಿ ಮನುಗ್ತು. +“ನನ್ನ ಮಡದೀ, ನಿನ್ಗ್ ಯೇನ್ ಬೇಕು ಅದ್ಯೆಲ್ಲಾ ಕೊಡ್ತಿ. +ಯಾಕ್ ಇಷ್ಟು ಬೇಸರ ಮಾಡ್ದಿ ನೀನು?” ಆಗ ಅದ್ ಹೇಳ್ತು, “ಹನ್ನೈಯ್ಡ್‌ ಗಾಡಿ ರುಪಾಯಿ ನನ್ ಮಗದಿರ್ಗ್ ಕೊಡಬೇಕು. +ವಂದ್ ಸಾವ್ರ ಆಳು, ಅವರದು ನಾಕ ನಾಕ್ ರುಪಾಯಂತೆ ಪಗಾರು, ಮತ್ ಅವ್ರಿಗ್ ಹೊಟ್ಟೆಗ್ ಕೊಡಬೇಕು” ಹೇಳ್ತು. +ಅವನಿಗ್ ದಾತ್ ತಪ್ಪಿತು. +ವಂದ್ ನಯಾಪೈಸಾ ತೆಗ್ಯು ರಾಜಲ್ಲ ಅವ. +“ಅಯ್ಯೊ ರಂಡೇ! +ಹನ್ನೈಡ್ ಗಾಡಿ ಅಂದ್ರೆ ತೋಡೆ ಆಯ್ತಾ? +ಮತ್ತೇ ಆಳಿನ ಪಗಾರ ಕೊಡಬೇಕು. . . ” ದಾತ್ ತಪ್ಪಬಿದ್ದ. +ಕಡೆಗ್, “ಕೊಡ್ತೆ” ಹೇಳ್ಕಂಡ್ ವಚನ ಕೊಟ್ಟ. +ಪರುದಾನಿಗ್ ಹೇಳ್ದ. +ಮರದಿವ್ಸ ಬೆಳಿಗ್ಗಿ ಪರದಾನಿ ಕರದು, ತಾನು ಕೊಡಾಕೆಲ್ಲ, ಕಣ್ ಮುಚ್ಕವಳ್ದ. +ಪರದಾನಿಗ್, “ಕೊಡು” ಹೇಳ್ದ. +ಪರದಾನಿ ಕೊಟ್ಟ. +ಪರದಾನಿ ಹನ್ನೈಡ್ ಗಾಡಿ ದುಡ್ಡು ತುಂಬ್ ಕಣ್ ಕೊಟ್ಟ. +ಸಾವ್ರ ಮಂದಿ ಅವ್ರಿಗ್ ಹೊಟ್ಟಿಗಿ, ಅವ್ರ ಪಗಾರ ಸಮೇತು ಕಳ್ಸ್ ಕೊಟ್ಟ. +ಹೋಗ್ತೇ ಹೋಗ್ತೇ ಆ ಬೆಟ್ಟದಲ್ ಹೋಗ್ ಮುಟದ್ರು. +ವಂದೇ ದಿವ್ಸಕ್ಕೆ ವಡ್ದ್ ಮೋಕಳೀಕ ಮಾಡಬೇಕು. +ಆಗಲ್ ಹೋಗ್ ಮುಟ್ಟಿ, ವಂದ್ ಊಟ ಹಾಕುದು ಅವರಿಗೆ! +ಅವ್ರಿಗ್ ಹೊಟ್ಟಿಗ್ ತಳಮಳಿ ಬಿದ್ದಿ, ಅವರ ಮನ್ಸು, “ಇವ್ರು ಬಂಗಾರ ಬೆಳಿಸ್ದೇ ಹೋಗ್ಲಿ” ಹೇಳ್ತ್ಯಿರು. +ಫನ್ ಕಲ್ (ಶಿಲೆ) ವಡಿತಿರು, ಫಣಿಲ್ (ಸುತ್ತಿಗೆ) ವಡದಿ ಅದ್ರ ತುಂಡ ಮಾಡಿ ಹನ್ನೈಡ್ ಗಾಡಿ ಅಲ್ಲಿ ಆ ರುಪಾಯ್ ಹಾಸಿ ಆಳಿಗ್ ಬಿಟ್ ಬಿಡ್ತಿರು. +ಅವರು, “ಹೋಗಿ ನೀವು ಮನಿಗೆ. . . ” ಕಡೆಗೆ ಅವ್ರ ಹಾದ್ಯಲ್ ಬರುಹೊತ್ತಿಗ್ ಯೇನ್ ಹೇಳ್ದ್ರು ಅವರು, ‘‘ಬಂಗಾರಲ್ಲ. . . ಇವ ನಮ್ ಹೊಟ್ಟಿಗ್ ತರಾಸ ಕೊಟ್ಟು, ಬಂಗಾರ ಬೆಳಿಸ್ತ್ಯ ಇವ. . . ”ಇವ್ರು ಯೇಳೂ ಮಂದಿ ಅಲ್ ವಳದ್ರು. +ಇವ್ರಿಗ್ ಬಿಸಿಲ್ ಹೊಡ್ದಿ ಸಾಕ್ ಸಂಸಾರಾಗ್ ಹೋಯ್ತು. +ಅವ್ರು ಸಪ್ಪಿನ್ದ ವಂದ್ ಚಪ್ರ ಹಾಕ್, ಚಪ್ರದಲ್ ಮನ್ಗಿದ್ರು. +ದೇವಲೋಕದ ಕುದ್ರಿ ಬಂದದ್ದು ಅಷ್ಟು ರುಪಾಯ್ ವಕ್ಕಂಡ್ ಹೋದ್ದು. +ಕಡಗೆ ಕಲ್ಲು ವಡ್ದಿದ್ದು ಕಲ್ಲು ಇದ್ ಹಾಂಗೇ ಜೊಯಂಟಾಗ್ ಬಿದ್ದಿದು. +ಅದೂ ನಂತ್ರ ಬೆಳಿಗ್ಗಿ ರಾಜಿ ಕಟಾರ್ ಬಿದ್ ಗುಡ್ಸು ಯಲ್ಲಾ ತಕಂಡ್ ಬಂದ್ರು. +ಅಲ್ಲಿ ಕಲ್ಗೇ ಈವು ಬಂಗಾರ ಯೆಲ್ ಈದು? +ಹಿಂತಿರ್ಗ್ ಹೋದ್ರು. +ಇವ್ರಿಗೆ ಹುಸ್ಕ್ಯಾಯ್ತು (ನಾಚಿಕೆಯಾಯ್ತು). +ಯೋಳೂ ಮಂದಿ, “ಮನಿಗೇ ಬರುದೆಲ್ಲ” ಅಂದ್ರು. +“ಸಾಯ್ಲಿ ಮಗನೇ, ಹೋಗುದ್ ಹೋಯ್ತು. + ಹೋಗಲಿ. . . ಈಗ ನೀವ್ ಚಿಂತಿ ಮಾಡಿ ಯೇನ್ ಫಲ ಇಲ್ಲ. +ಬನ್ನಿ ಮನೆಗ್” ಅಂತ್ ಕರ್ಕಂಡ್ ಹೋದ್ರು. +ಮತ್ತು ಸಲ್ಪದಿವಸಕೆ ಚೀರಕಲ ಹೆಡ್ಡ, ಅವ್ನ ದೋಸ್ತ ವಬ್ಬ ಇದ್ದ. +“ಏ ದೋಸ್ತಾ, ಅಲ್ಲಿ ಬಂಗಾರ ಬೆಳಿತಾರ್ ಕಣ. +ನಾವ್ ಹೋಗ್ವನಾ?” + “ನೀ ಹೋಗ್ತ್ಯಾದ್ರ್ ಹೋಗ್ ಸಾಯ್ಲಪ. +ನಾ ಬರಕೆಲ. +ನಿಮ್ಮ ತಮ್ಮದಿರು ಚಿನ್ನ ಬೆಳಿಸೋರೆ. . . ” +“ನೀ ಬರೂದಿಲ್ಲಾದ್ರೆ ಯೆಲ್ಲಾ, ನಾ ಹೋತೆ” ಹೇಳ್ಕಂಡಿ, ಅವನೇ ಹೋದ ಚೀರಕಲ ಹೆಡ್ಡ. +ಹೋಕಣ್ ಓದ್ದರ್ ಹೌದು. +‘‘ ‘ಚಿನ್ನ ಬೆಳಿತಿರಿ’ ಅಂದ್ಕಂಡ್ ಬರದದ್ ಹೌದು. +ನಾನು ಹನ್ನೈಡ್ ಗಾಡಿ ರುಪಾಯಿ ತಕಣ್ (ಡ್) ಬರಬೇಕು” ಹೇಳಾಯ್ತು, ಅವಾಗೆ ಮನ್ಗ್ ಹೋದಾ‌. +ಸುಮ್ನ್ ಕುತ್ಕಂಡ ಯಾರ ಕೂಡೂ ಮಾತಾಡುದೆಲ್ಲ. +ಅವ್ನ ತಾಯಿ ಬಂತು ಹೆರಿದು, “ಮಗನೇ. . . ಯಾರ್ ಯೇನ್ ಮಾಡ್ದ್ರ್ ನಿನ್ಗೆ? +ಯಾರೇನ್ ಬಯ್ದ್ರು?” ಹೇಳ್ ತಾಯಿ ಚರ್ಚೆ ಮಾಡ್ತು. +“ಯಾರೂ ಯೇನ್ ಹೇಳ್ಳಿ ಊಟಕ್ ಮುಂಚ್ ಯೇಳು” ಹೇಳ್ತು. +“ಯಾರೂ ಯೇನ್ ಹೇಳ್ಳಿ. . . ಊಟಕ್ ಯೇಳು ಹೇಳ್ಕಂಡ್ ನೀ ಹೇಳತ್ಯಲ್ಲ? +ತನ್ಗ್ ಬೇಕಾದದ್ ನೀ ಕೊಡ್ತೆ ಹೇಳ್ಕಂಡಿ ನೀ ವಚನ ಕೊಡು. . . ” +“ಅಯ್ಯೊ ಮಗನೇ!ನಾ ವಚನ ಕೊಡ್ತೆ. +ನಾ ರಾಜನ ಹೆರಿ ಹೆಂಡ್ತಿ. +ಬದ್ಕಲ್ಲಾ ತನ್ದು, ನನಗೇನ್ ಭಯ?” +“ಹಾಗಾದ್ರ್, ತನ್ಗೆ ಹನ್ನೈಡ್ ಗಾಡಿ ರುಪಾಯ್ ಬೇಕು. +ಐನೂರು ಮಂದಿ ಬೇಕ್. +ಮಂದಿಗಿ ಮನಶಾಗ್ ಐದ್ರಂತೆ ರುಪಾಯಿ ಬೇಕು” ಅಂದಾ, “ಅವರಿಗೆ ಹೊಟ್ಟಿಗಿ ಸಾಮಗ್ರಿ ಬೇಕು” ಹೇಳ್ದ. +“ಹಾ ಮಗನೇ!ನಂಗ್ಯೆಂತ ಭಯ, ನೀ ಸುಮ್ನಿರು” ಅಂದ್ ತಾಯ್ ಹೇಳ್ತು. +ಆ ದಿವ್ಸ ಹೆರಿಹಿಂಡ್ತಿದು ಪಾಳಿ. +ರಾಜಾ ಬರೂದು; ರಾಜಾ, ರಾಣಿ ಮಂಚಕೆ ಹೋದಾ. +ಹೋಗಿ ರಾಣಿ ಮಾತಾಡ್ಸುದೆಲ್ಲ, ರಾಜನ ಬದಿಗೆ ನೋಡೂದೆಲ್ಲ. +ಮಡದಿಗೆ ಕೇಳ್ದ, “ನಿನ್ಗ್ ಮತ್ತೆ ಯೇನಾಯ್ತು?” ಆಗ ಹೇಳ್ತು ಇದು. +“ತನ್ಗ್ ಯೇನಾಗ್ಲಿ ಯೇನ್ ಹೋಗ್ಲಿ, ತನ್ಗ್ ವಚನ ಕೊಡ್ರಿ ಮೊದ್ಲು. . . ” +“ದೊಡ್ದ್ (ದುಡ್ಡು ಮಾತ್ರ) ಮತ್ ಬೇಡ್ಬೇಡಾ” ಹೇಳ್ದಾ. +“ದೊಡ್ದ್ ಬೇಡುದೆಲ್ಲ.” ವಚನ ಕೊಟ್ಟ. +“ಹನ್ನೈಡ್ ಗಾಡಿ ರೂಪಾಯಿ. . . ಐನೂರು ಮಂದಿ. . . ವಂದೊಂದ್ ಮನಶಾಗ್ ಐದೈದ್ ರೂಪಾಯಂತೆ ಪಗಾರ, ಊಟಕ್ಕೆ ಸಾಮಗ್ರಿ ಕೊಡಬೇಕು.” +“ನನ್ಗ್ ಹಿಂಡ್ತೇ ಬೇಡಾ. +ನಾ ವಚನ್ ಕೊಟ್ಟಿದ್ದೇ ಅಲ್ಲ.” ರಾಜಾ ಹೇಳ್ದ. +“ಹಾಗಾದ್ರ್. . . ನಾ ನಾಳೆಗಿ ಕೋರ್ಟಗ ಹಾಕಂಡಿ ಅರ್ದಭಾಗ ತಕಣ್ತಿ.” +ಅಷ್ಟ ಹಿಣ್ತಿ ಕಾದಾಡ್ದ ಮೇನೆ ರಾಜ, ‘ಹೂ. . . ’ ಹೇಳ್ಲೆಲ್ಲ, ‘ಹಾ. . . ’ ಹೇಳ್ಲೆಲ್ಲ. +ಮರುದಿನ ಬೆಳಿಗೆ ಅರಸ ಹಿಂಡ್ತಿ ಪರದಾನಿ ಕರದು, “ಹನ್ನೈಯ್ಡ್‌ ಗಾಡಿ ರೂಪಾಯ್ ತುಂಬ್ಸು” ಹೇಳ್ತು. +ಪರದಾನಿ ತುಂಬ್ ಕೊಟ್ಟ. +ಐನೂರ್ ಮಂದಿ, ಐದೈದ್ ರೂಪಾಯಂತೆ ಅವರಿಗ್ ಪಗಾರು, ಊಟಕ್ ವ್ಯವಸ್ತಿ ಅಟ್ಟೂ ತುಂಬ್ದ್ರು. +ಅವರು ಗಾಡಿ ತುಂಬ್ಕಣ್ ಹೋದ್ರು‌. +ತಾಸ್ ತಾಸಿಗಿ ಅವರಿಗ್ ಹೊಟ್ಟೆಗೆ ಕೊಡ್ತೀವ. +ತಿಂಡಿ ಅದೂ, ಇದೂ ತಿಂತೇ. . . ತಿಂತೇ. . . ತಿಂತೇ. . . ಆ ಜಾಗಕ್ ಹೋಗ್ ಮುಟ್ದ್ರು. +ಆಗಾ ಕಲ್ ಮೇನೆ ಅಷ್ಟು ಮಂದಿ ನಿಂತ್ಕಂಡಿ ವಡೂಕೆ ತಾಗೆದ್ರು. +ವಡೂಕಿಂತಾ ಮುಂಚೆ ಅವ್ರಿಗೆ ಯೇನ್ ಹೇಳ್ದಾ ಇವ? +“ಇಲ್ ಬಂಗರಾದ್ರ್ ಬೆಳಿದಿರಿ, ನಿಮ್ಗ್ ವಂದೊಂದ್ ಗಾಡಿ ಬಂಗರಾ ಉಚಿಷ್ಟ ನಾ ಕೊಡ್ತೆ” ಹೇಳ್ಕಂಡ್ ಹೇಳ್ದ ಅವರಿಗಿ. +ಅವರ್ ವಂದಂದ್ ಫೆಣಾ ಹೊಡಿವರ್ ಕಲ್ಲಿಗೆ, “ದೇವ್ರೇ, ಜೀನ್ ಬೀರಪ್ಪಾ. . . ಬಂಗಾರ ಬೆಳಿಯೋ. . . ” ಹೇಳ್ದ್ರು. +ದೇವ್ರ ಹೆಸ್ರ್ ತೆಕತೀರು, ಫೆಣಾ ಹೊಡಿತೇರ್. . . ಯೆಯ್ಡ ತಾಸ್ ಹೊತ್ ಇರವಾಗಿ ಕಲ್ಲ್ ವಡ್ದ್ ಮೋಕಳೀಕಾಯ್ತು. +ಅವರಿಗ್ ಅವರ ಪಗಾರ ಕೊಟ್ಟಿ, ಇದ್ ತಿಂಡಿನೂ ಅವ್ರಿಗೆ ಕೊಟ್ಟಿ ಅವ್ರಿಗ್ ಮನ್ಗೆ ಕಳ್ಸ್ ಕೊಟ್ಟಾ. +ಮಡ್ಗಿ ಹೀಂಗ್ ಬಗ್ಗ್ ಬಂದೀದ್: ಆ ರುಪಾಯ್ ಹೊಯ್ತು. +ಆಗವ್ ಯೇನ್ ಮಾಡ್ದಾ ಹೇಳ್ದ್ರಿ. . . ಪಂಜೇದ ಆ ಮಡಗೀಗ ವಂದ್ ತೊಟ್ಲ ಹಾಂಗ್ ಮಾಡ್ದಾ. +ಪಂಜೀ ತೊಟ್ಲದಲ್ ಕೂತ. +ಸುಮಾರ್ ಮದ್ ರಾತ್ರಿಗಿ ಬೆಳಿ ಕುದ್ರಿ ಬಂತು. +ಆ ರುಪಾಯ್ ವಗೂಕ್ (ಸೊಂಡ್ಲದಲ್ಲೇ ವಗಿತಿದು) ತಂಗ್ತು. +ಆಗಿವ, “ಬುಡೆ ಸಮಾ ಬಂತು” ಹೇಳಿ, ಅದ್ರ ಬೇನ್ ಮೇನ್ ಹಾರ್ ಕೂತಾ. +ಹಾರ್ ಕೂತ ಬರೋಬರಿ. +ಆ ಕುದ್ರಿ ಇವ್ನ ತಕಂಡ್ ಆಕಾಶಕ್ ಹಾರ್ತು. +ಹಾರಿ ನೆಲ್ಕ್ ಬಿತ್ತು, ಬಿದ್ ಬರಾಬರ್ ಮತ್ ಹಾರ್ತು. +ಮೂರ್ ಸಲ ಹಾರಿ, ಮೂರ್ ಸಲ ಇಳೀತು. +ಅದ್ರ ನಂತ್ರ ಕುದ್ರಿ ಸೋತು, “ನರಮನಶಾ, ನಿನ್ ಕೂಡಿ ಈಗ ನಾ ಸೋತಿ. +ನಿಂಗ ಬೇಡಿದ್ದು ಕೊಡ್ತಿ ನಾನು.” +“ನಂಗ್ ಯೇನೊ ಕೊಡೂದೆ ಬೇಡಾ. +ನಾ ಕರದಾಗ್ ಬಾ” ಹೇಳ್ ಹೇಳ್ದ. +ಹಾಗೇ ಮತ್ ಕುಳಿತ. +ಆ ಕುದ್ರಿ ಹೋಯ್ತು. +ಕರಿಕುದ್ರಿ ಬಂತು. +ಇದು ಹನ್ನೆರಡ್ ಗಂಟಿಗೆ ಬಂತು. +ಅದೂ ಹಾಂಗೆ ಮಾಡಿ ಬೆನ್ನ ಮೇನ್ ಕೂತ. +ಹಾಂಗೇ ವರ ಕೊಟ್ ಹೋಯ್ತು. +ಕೆಂಪಕುದ್ರಿ ಯೆರ್ಡ್ ಗಂಟಿಗ್ ಬಂತು. +ಅದೂ ಹಾಗೆ ವರಕೊಟ್ ಹೋಯ್ತು. + ಬೆಳಗಾಯ್ತು. . . ಆದ್ರೆ, ಮೇನ್ ನೋಡ್ದದಲ್ಲಿ ಗುಡ್ಡೀನೆ ಬಂಗಾರದ್ದು. +ಮುಂದ್ ಹೋಗ್ ನಿಂತಾ, ಯಾರು? +ಚೀರ್ಕಲ ಹೆಡ್ಡ. +ಕಲ್ ವಡ್ದರಿವರು, ಅವರಿಗ್, “ನೀವು ವನ್ನಂದ್ ಗಾಡಿ ತುಂಬ್ಕಂಣ್ ಹೋಗೀ. . . ” ಹೇಳ್ದಾ. +ಅವ್ರು ವನಂದ್ ಗಾಡಿ ತುಂಬ್ಕಂಣ್ ಹೋದ್ರು. +ಅಪ್ಪ ಗುಡ್ಸು ತಕಂಡ್ ಬಂದ್ಯ. +ಯೆಲ್ಲಾ ತುಂಬಕ ತಕಂಡ್ ಹೋದಾ. +ಮನಿ-ಮಾಳ್ಗಿ ಯೆಲ್ಲಾ ತುಂಬ್ದಾ. +ಆ ಯೇಳ ಮಂದಿಗಿ ಹೊಟ್ಟೆಕಿಚ್ ಬಿತ್ತು. +“ನಮಕೂಡೆ ಬಂಗಾರ ಬೆಳ್ಯೂದಾಗಲಿಲ್ಲಾ.’’ ಅವ್ನಿಗ್, ಚೀರ್ಕಲ ಹೆಡ್ಡಗೆ ಯೇಳ ಮಂದಿ ತಕೊಂಡ್ ಹೋಗೂದಿಲ್ಲ; ಹೋಗಿ ಅವ್ನ ಕೂಡ ಮಾತು ಆಡ್ಲೆಲ್ಲ. +ಆಗಿ, ವಂದಲ್ಲಾ ವಂದಿವ್ಸ ಯೇನಾಯ್ತು ಹೇಳದ್ರೆ, ವಂದ್ ರಾಜನ ಮಗಳು ಅದ್ ಯೇನ್ ಪಣ ಹಾಕ ಕೂತಿದು? +ಅದ್ರ ವಂದು ಲಿಂಬೆಕಾಯಿ ಹಣೆ ಮೇನೆ, ವಂದ್ ತೊಡೆ ಮೇನೆ, ವಂದು ಯೆದೆ ಮೇನೆ. . . ಮೂರ್ ಲಿಂಬೆಕಾಯ್ ದಿವ್ಸಕ್ ವಂದು ಯಾರ್ ಹೊಡೆತಿರು ಅವ್ನಿಗೆ ಮಾಲೆ ಹಾಕ್ತಿ. . . ಹೇಳಿ ಊರ ಊರಿಗ್ಯೆಲ್ಲ ಡಂಗ್ರ ಹೊಡ್ದೊ. +ಆಗ್ ಆ ಸುದ್ದಿ ಇವ್ರಿಗ್ ಗುತ್ತಾಯ್ತು. +ವಂದೊಂದ್ ವಬ್ಬೊಬ್ರು ಲಿಂಬೆಕಾಯಾ ತಕಣ್ ಹೋಗೂಕ್ ಯೆದ್ರು. +ಆನಂತ್ರ ಚೀರಕಲ ಹೆಡ್ಡಾ ಯೇನ್ ಹೇಳತ್ಯಾ? + “ತಮ್ಮ. . . ನಾನೂ ಬತ್ತೆ ನಿಮ್ ಸಂತಿಗೆ.” + “ಬೇಡ, ಬೇಡ. . . ನೀ ಮತ್ ಯೆಲ್ಲಿ? +ನಮ್ ಸಂಗ್ತಿಗೆ ನೀ ಬರುದ್ ಬೇಡ.” + ಆಗಿವ ಯೇನ್ ಹೇಳ್ದ, “ತಮ್ಮ. . . ನಾ ಬತ್ತೆ ನಿಮ್ ಸಂಗ್ತಿಗೆ, ನಿಮ್ಗ್ ಅಡ್ಗಿಯಾದ್ರು ಮಾಡ್ ಹಾಕ್ವೆ. . . ” ವಬ್ಬವ್ನಿಗೆ ಪಾಪ ಕಂಡ್ತು. +“ಬಂದ್ ಸಾಯ್ಲೋ; ನಮ್ಗ್ ಅಲ್ ಹೋಗ್ ಬಂದ್ಕಂಡಿ ಅಡ್ಗಿ ಮಾಡೂದ್ ಬೇಜಾರಲ್ಲ?” +ಆಗ “ಬಾ” ಹೇಳ್ದರು ಅವಗೆ. +ಯೆಂಟು ಮಂದಿ ಆಕಣಿ ಹೋದ್ರು. +ಹೋತೇ, ಹೋತೆ, ಹೋತೆ. . . ವಂದಲ್ಲಾ ವಂದ್ ಊರ ತೆಗೀತೇ, ತೆಗೀತೇ. . . ಆ ಊರ್ಗ್ ಹೋಗ್ ಮುಟುದ್ರು. +ಹೋಗ್ ಮುಟ್ಟಿ, ಅಲ್ ವಂದ್ ತಂಬ್ ಹೊಡ್ದ್ರು ಅವರು. +ಚೀರಕಲ ಹೆಡ್ಡಗೆ ಆ ಬಿಡಾರದಲ್ ಇಕ್ಕಿ, ಆ ಯೇಳೂ ಮಂದಿ ಅಲ್ ಹೋದ್ರು. +ಅಲ್ ವಂದು ಹತ್ತ್ ಸಾವ್ರ ಮಂದಿ ಲಿಂಬಿಕಾಯಿ ಹೊಡೂಕ್ ನಿಂತರ್‌ ಈವ್ರು. +ಇವ್ರು ಹೊಡದರು ವಂದೂ ತಾಗೂದೆಲ್ಲ. +ಇವಾಗಿ ಆ ಕರಿ ಕುದ್ರಿದ್ ಹೆಸ್ರ್ ತಕಂಡಿ ಕರ್ದ. +ಕರಿ ಕುದ್ರಿ ಬಂತು-- ದೇವಲೋಕನ್ದು. +“ವಸ್ತ್ರ ಮತ್ತು ಲಿಂಬೆಕಾಯಿ ನೀ ತಂದ್ ಕೊಡಬೇಕ್ ನನ್ಗೆ. +ಇಲ್ಲಿಂದ ಅರಸೂ ಅಂಗಳದಲ್ ತಕಣ್ ಹೋಕಣ್ ನಿಲ್ಸ್‌ಬೇಕು” ಅಲ್ಲಿಂದ ವಸ್ತ್ರ ಮತ್ತು ಲಿಂಬೇಕಾಯ್ ತಕಣ್ ಬಂತು‌. +ಮೈಗೆ ಹಾಕಿ, ಚೀರಕಲ ಹೆಡ್ಡಗೆ ಆ ರಾಜನ ಅಂಗಳದಲ್ ತಕಣ್ ಹೋಗ್ ನಿಲುಸ್ತು. +ಆ ಹುಡ್ಗಿ ಹಣಿಮೇನ್ ಬೊಟ್ ಕಾಣುಸ್ತು. +ಚೀರಕಲ್ ಹೆಡ್ಡ ಲಿಂಬಿಹಣ್ ಹೊಡ್ದದ್ದು ಹಣಿ ಮೇನ್ ಬಿತ್ತು. +ಆಗೆ, ಅದೇ ಆ ಕುದ್ರೆ ಮೇನ್ ಕೂತ್ಕಂಡಿ ಚೀರಕಲ ಹೆಡ್ಡ ತನ್ ಬಿಡಾರಕ್ ಹೋದ. +ಅವ್ನ ವಸ್ತ್ರ ಕರಿ ಕುದ್ರಿಗ್ ತೆಗ್ದ್ ಕೊಟ್ಟ. +ಕರಿ ಕುದ್ರಿ ಹೋಯ್ತು. +ಕಡೆಗ್ ಮತ್ ಇವರು ತಮ್ಮದಿರು ಯೇಳೂ ಮಂದಿ ಬಂದ್ರು. +“ತಮ್ಮಾ. . . ಅವ ದೇವಲೋಕದಿಂದ ಬಂದನ್ಯೆನೊ? +ಅವ್ರ ಮನಸ್ಯರಲ್ಲ. . . ” ಇವ ಕೇಳ್ದ, “ತಮ್ಮ. . . ಯೇನದು? +ನಿವ್ ಯೇನ್ ಮಾತಾಡತೆರು?” +‘‘ಅಡ್ಗಿ ಮಾಡಿದ್ ಇಷ್ಟೇ ಗುತ್ತು ನಿನ್ಗೆ. +ಹೆಚ್ ಮಾತಾಡ್ಬೇಡಾ. . . ” ಸುಮ್ನ್ ವಳ್ಕಂಡ್ ಅವ. +ಆ ರಾತ್ರೆ ಕಳೀತು. +ಮಾರನೆ ದಿವ್ಸ ಬಂತಲ್ಲಾ? +ಇವ್ರು ಬಿಡಾರ್ದು ಚಾ ಕುಡಿಲೆಲ್ಲ ಹೇಳ್ ಮಾಡ್ಕಣಿ ಹೋದ್ರು. +ವಂದ್ ಸಲ್ಪ ಹೊತ್ತಿಂದ ಇವ ಬೆಳಿ ಕುದ್ರಿ ಹೆಸ್ರ್ ಕರದಾ. +ಬೆಳಿ ಕುದ್ರಿ ಬಂತು. +“ನರಮನಶಾ. . . ನಂಗ್ ಯಾಕ್ ಕರ್ದೆ ನೀನು?” +“ದೇವಲೋಕನ್ದ್ಯೇ ಪೋಶಾಕ್ ತಂದ್ ಕೊಟ್ಟಿ, ವಂದ್ ಲಿಂಬೆಕಾಯ್ ತಂದ್ ಕೊಡು” ಹೇಳ್ ಹೇಳ್ದಾ. +ಆ ಬೆಳಿ ಕುದ್ರೆ ತಕಣ್ ಬಂತು. +ಪೋಶಾಕ್ ಹಾಕ್ತಾ. +ಹೋಗಿ ಆ ಕುದ್ರೆ ಮೇನ್ ಕೂತಿ ಕುದ್ರೆ ಹಾರ್ತು. +ಆ ರಾಜಂಗಣಕ್ ಹೋಗಿ ಇಳೀತು. +ಆಗ ತೊಡಿ ಕಾಣುಸ್ತು. +ಅದು ನೆಗ್ದ್ ಲಿಂಬೆಕಾಯ್ ಹೊಡ್ದಿದ್ದ ಇವ. +ತೊಡಿವಡ್ದ್ ಹೋದ ಹಾಗಾಯ್ತು. +ಆಗೇ ಅದೇ ಕುದ್ರೆ ಮೇನ್ ಕೂತಿ ತಂಬ್ ಹಾಕಿದ್ರಲ್ಲ, ಆ ತಂಬ್ನಲ್ ಇಳಿಸಿ, ಅದ್ರ ಪೋಶಾಕ್ ಯೆಲ್ಲಾ ಕೊಟ್ಟಿ ಕುದ್ರಿ ತಕಣ್ ಹೋಯ್ತು. +ಮತ್ ಬಂದ. +ಅವರ್ಗ್ ಇದೆ ಹಾಡು-- “ಅಬಬಬಬ! +ನಿನ್ನೆಕಿಂತಾ ಇಂದ್ ಚೆಂದಾ. . . ಅವ ದೇವರೇ. . . ” +“ತಮಾ. . . ಯೇನೋ? +ಅಲ್ ಯೇನಾಗಿತ್ತೂ?” + “ನಿನ್ಗ್ ಬೇಡಾ ಪಂಚಾತಿ; ಅಡ್ಗ್ಯಿನೇ ಮಾಡ್ ನೀನು.” +ಯೆಯ್ಡ ದಿವ್ಸ ಕಳಿತು. +ಮಾರನೆ ದಿವ್ಸ ಬೆಳಿಗ್ಗೆ ಯೆದ್ಕಣ್ ಹೋದ್ರು. +ಆಗ ತಾಸಿನ್ ಮೇನ್ ಕೆಂಪ್ ಕುದ್ರಿ ಕರ್ದ-- ಬಂತು. +“ತನ್ ಹೀಂಗೇ ಇದೇ ವಸ್ತ್ರದ ಮೇನೇ ತಕಣ್ ರಾಜಂಗಣಕ್ ಮುಟಸಿಕಂಡ್ ನೀ ಹೋಗಬೇಕ್, ಅಲ್ ಇರ್ವದ್ ಬೇಡಾ” ಆ ಕುದ್ರೆ ಮೇನ್ ಕೂತಾ. +ಕುದ್ರೆ ಹಾರ್ ಹೋಗಿ ರಾಜಾಂಗಣಕ್ ಇಳ್ಸ್ ಹಾಕ್ತು. +ಕಡಿಗೆ ಮೊಲಿ ಕಾಣುಸ್ತು. +ಅದ್ರ ಪಣ ಅದ್ಕ್ ಖರೆ ಮಾಡ್ಬೇಕಲ್ಲ? +“ಮೊಲೆ ಕಾಣುಸ್ತು?” +ಹೇಳು ಪ್ರಶ್ನೆಗೆ - ಹೌದು ಆಗವ ಮೊಲಿ ಮೇನ್ ಲಿಂಬಿಕಾಯ್ ಹೊಡ್ದಾ. +ಅದ್ರ ನಂತ್ರ, ಮಾಲಿ ತಕಂಡ್ ಹಾಕಿ, ಅವ್ನ ಕರಕಂಡ್ ಯೇಳುಪ್ಪರ್ಗಿ ಮಾಳ್ಗಿಗ್ ಹತಸ್ಕಣ್ ತಕಂಡ್ ಹೋಯ್ತು. +ಮತ್ ತಮ್ಮ ಅಣ್ಣ ಹೇಳಿ ಇವರಿಗ್ ಗುತ್ತಾಯ್ತು. +ಇವರಿಗ್ ಕಡೆಗ್ ಹೊಟ್ಟೆಲ್ ಅಗ್ನಿ ಬೀಳುಕ ಸುರವಾಯ್ತು. +ಹೊಟ್ಟೆಕಿಚ್ಗೆ. ಆದ ನಂತ್ರವ ವಂದೆರಡ್ ದಿವ್ಸ ಹೋಯ್ತು. +ಅವರು ಮತ್ತೊಂದ್ ಉಪಾಯ ತೆಗ್ದರು. +ಚೀರಕಲ ಹೆಡ್ಡ ಇದ್ದಲ್ ಯೆರಡ್ ಮಂದಿ ತಮ್ಮದಿರಿಗೆ ಕಳುಸ್ಕೊಟ್ರು. +“ನಾವು ಈಗ್ ಹೋಗ್ತೇರ್ ಮನಿಗಿ. . . ನೀ ಬರ್ತೆ ಇಲ್ಲಾ?’’ ಹೆಡ್ಡನಿಗೆ ಕಳುಸ್ಕೊಟ್ರು. +ಅವ, “ನಾ ಬರ್ತೆ. . . ” ಹೇಳ್ಕಣ್ ಹೇಳ್ದ. +ಈ ಹೆಣ್ತಿಯೇನ್ ಹೇಳ್ತು? +“ತಾನೂ ಬರ್ತೆ. . . ” ಹೇಳ್ತು. +ಈ ರಾಜ ಯೇನ್ ಮಾಡ್ದಾ? +ಆನಿ, ವಂಟೆ, ಕುದರಿ ಯೆಲ್ಲಾ ಕೊಡುಕ್ ಸುರ್ ಮಾಡ್ದಾ. +ಬಳವಳಿ. . . ಅವ್ರ ಯೇಳಮಂದಿ ಮತ್ ಯೇನ್ ಹೆಳ್ಕಣ್ ಕಳ್ಸ್ಕೊಟ್ರು? +“ನಾವು ಆನೆ, ವಂಟೆ ಮೇನ್ ಕುಳ್ವರಲ್ಲಾ, ನಾವ್ ಊರ್ ನೋಡಲೆಲ್ಲಾ. +ಊರ ನೆಡದೇ. . . ನೆಡದೇ. . . ಊರ್ ನೋಡ್ತೇ ಹೋಗಬೇಕು.” + ಕಡೆಗ್ ಮಗಳ್ ಹೇಳ್ತು, “ಅಪ್ಪಾ. . . ನಾನೂ ಅವ್ರ ಸಂತೀಗ್ ಊರ್ ನೋಡ್ತೇ ನೆಡ್ದ್ ಹೋಗ್ತೆ. . . ಕೊಡೂದ್ಯೆಲ್ಲಾ ಹಿಂದಂದೇ ಕೊಡ್ಲಕ್ಕು.” + ಅಷ್ಟ ಹೇಳ್ದ ಮೇನ್, ಯೆಂಟ ಮಂದಿ ಆಗಿರಲಾ? +ವಂಬತ್ ಮಂದ್ಯಾಕಣ್ ನೆಡುಕ್ ತಾಗ್ದ್ರು. +ವಂದಲ್ಲಾ ವಂದ್ ಅಡವಿಲ್ ಹೋದ ಮೇನೆ, ಅಲ್ ದೊಡ್ಡ ಬಾವಿದ್ದಿತ್. +ಇವ್ರ ಯೇಳೂ ಮಂದಿ ವೋಡೀ ಹೋದ್ರು. +ಬಾವಿ ಕೂಡ, “ಅಪಾಪಾ! +ಈ ಬಾವಿಲ್ ಯೇನೊ ಇದೂ?” ಹೇಳ್ತೆ, ಅಟ್ಟೂ ಮಂದಿ ಅರ್ಗ್ ನೋಡ್ತೇ ಇದ್ರು. +ಇವನೂ ಚೀರಕಲ ಹೆಡ್ಡನೂ ಬಂದಾ-- ಅವ ಅರ್ಗ್ ನೋಡ್ದಾಗ, ಅವನಿಗ್ ದೂಡ್ ಹಾಕ್ ಬಿಟ್ರೂ. +ಇಲ್ ಬಂದಿ, “ನನ್ ಹಿಣ್ತಿ. . . ”, “ನನ್ ಹಿಣ್ತಿ. . . ” ಅಂದ್ಕಂಡಿ-- ಅವನೂ ಅಪ್ಪಿ ಹೊಡಿತಾ, ಇವನೂ ಅಪ್ಪಿ ಹೊಡೀತಾ. . . ಯೇಳುಮಂದಿ ಅಪ್ಪಿ ಹೊಡೂಕ್ ತಾಂಗದ್ರು. +“ನಂಗ್ ಅಪ್ಪಿ ಹೊಡ್ದ್ರಿ. +ನನ್ದ್ ಯೇನ್ ಸುಕ ಹೋಗುದು? +ವಂದ್ ಕೆಲ್ಸ ಮಾಡೂದು. +(ವಂದಂದ್ ರಾತ್ರಿಗ್) ರಾತ್ರಿ ವಬ್ರ್ ವಬ್ರ್ ಹಿಂಡ್ತಿ ಹೀಗೆ ಮಾಡ್ವನಿ. . . ” ಹಾಂಗೇ ಹೌದಾಯ್ತದು. +ಹೆರೀ ಅಣ್ಣಂದು ಮೊದ್ಲಿನ ರಾತ್ರಿಗ್ ಆಗ್ ಹೋಯ್ತದು. +ಸಪ್ಪಿನ್ದ್ ಮನಿ ಮಾಡ್ಕಂಡಿ ಅವರು ವಸ್ತಿಗ್ ತಯಾರ್ ಮಾಡದ್ರು. +ಅದು- ಇದು ಪಂಚಾಯ್ತಿ ತೆಗದಿ, ಅದು ನೇನ್ (ನೆವನ) ಹೇಳಿ ಆ ರಾತ್ರ ಕಳಿತು. +ಮೈ ಮುಟ್ಲಿಲ್ಲ. +(ಯೇನೇನೋ ಹೇಳ್ತು ರಾತ್ರ್ ಮುಗ್ಸ್ ಬಿಡ್ತು). +ಅದು, “ಗಂಡಗಾದ್ರೂ ತಾನ್ ಇನ್ನೂ ಮುಟ್ಲೆಲ್ಲ. +ನನ್ಗೆ ಚಲೋ ಯೇಳ ಮಂದಿ ಗಂಡದೀರು ಶಿಕ್ಬೇಕು ಅಂದಿ ತಾ ಗೌರೀವ್ರತ ವಂದ್ ವರ್ಶಮಟು ಮಾಡ್ತೆ. . . ’’ ಹೇಳ್ಕಂಡಿ ಹೇಳ್ಕಂಡಿದೆ. +ಕಡಿಗ್, ‘‘ನಿಮ್ಮದೇ ಹಿಂಡ್ತಿ ನಾನು. . . ’’ ಹೇಳ್ಕಂಡಿ, ‘‘ವಂದ್ ವರ್ಶ ಮುಟ್ಟೂಕಾಗ” ಅಂತು. +ಬೆಳಿಗ್ಗೆ ಅವ ಹೆರ್ಗ್ ಬಂದಾ ಅಣ್ಣಾರಾ, “ಯೇನು?” +“ಯೇನ್ ಸಾಯ್ಲಾ ಅದು. +ಪುಕಟೆ” ಹೇಳ್ದ ಅವ. +ಹಾಂಗೇ ಯೇಳು ರಾತ್ರೆ ಹೋಯ್ತು. +ಬೆಟ್ದಲ್ಲಿ ಹೊರಟರು ಮನಿಗೆ. +ಹಾಂಗೇ ಅವರ ಮನಿ ಸನೀಪಾಗ್ತೇ ಬಂತು. +ಹೋಗ್ ಮುಟ್ದ್ರು. +ಅಪ್ಪಗ್ ಯೇನ್ ಹೇಳ್ದ್ರು? +“ನಮ್ಗೀ ಈ ಹೆಣ್ಣ ಯೇಳು ಮಂದಿಗಿ ಲಗ್ನ ಮಾಡಬೇಕು. +ನಮ್ಗ್ ಯೇಳೂ ಮಂದಿ ಈ ಹೆಣ್ಣೇ ಮದಿಮಾಡ್ಬೇಕು.” ಆಗೀ ಹೆಣ್ಣು ಮುಂದ್ ಹೋಗಿ, “ಮಾವಾ. . . ” ಹೇಳ್ತು, “ ನಾ ಮದಿ ಆಯ್ತೆ. +ತನ್ದ್ ವಂದ್ ಪಣ ಕರೆ ಮಾಡಬೇಕು.” +“ಯೇನು?” ಹೇಳ್ ಕೇಳ್ದ ಅವ. +“ವಂದ್ ವರ್ಶನಂದ್ ಗೌರೀವ್ರತ ಈತು. +ಆ ಗೌರೀವ್ರತ ಮುಗ್ದ್ ಶಿವಾಯ್ ತಾನ್ ಯಾರೀಗೂ ಮದ್ವ್ಯಾಗುದೆಲ್ಲ.” +ರಾಜನ್ದ್ ದೊಡ್ ಬಂಗ್ಲಿದ್ದಿತ್ತು-- ಹಾದೀಮೇನೆ ಆ ಬಂಗ್ಲದಲ್ಲಿ ಆ ಕನ್ನಿ ತಂದ್ಕಂಡ್ ಇರ್ಸರು. +ಇದೀಗ ಇಲ್ಲೇ ಇರಲಿ. +ಆ ಚೀರಕಲ ಹೆಡ್ಡ ಈಗ ಜೀವ ಹೋತಿದಿ ಹೇಳೂ ಹೊತ್ನಲ್ಲಿ, “ಏ ನನ್ನ ಕೆಂಪು ಕುದರೀ, ನನ್ ಪ್ರಾಣ್ ಕಾಯೆಲ್ಲಿ” ಹೇಳ್ದಾ. +ಆಗಾ ಕೆಂಪ್ ಕುದ್ರಿ ವೋಡ್ ಬಂತು. +ಬಾವಿಯಲ್ಲಿ ಹೋಗುಕಾದ್ರೂ ಆಗುದೆಲ್ಲ. +ಕೆಂಪ್ ಕುದ್ರಿ ದೇವಲೋಕಕ್ ಹೋಗಿ, ದೊಡ್ ಹಗ್ಗವಂದ್ ತಕಂಡ ಬಂತು. +ಹಗ್ಗ ತಂದು ಬಾವಿಗ್ ಹಾಕ್ತು. +“ನರಮನಶಾ. . . ನೀನ್ ಹಗ್ಗ ಹಿಡಿ, ನಾ ವಗೀತೆ, ಮೇನ್ ಬಾ. . . ” ಮೇನ್ ತೆಗಿತು ಆಗೆ. +“ನನ್ಗೆ ನೀನು ದೇವಲೋಕಕ್ ಹೋಗಿ ವಸ್ತ್ರ ತಂದ್ ಕೊಡಬೇಕು. +ವಸ್ತ್ರ ಹಾಕಿ ನನ್ ಹಿಂಡ್ತಿಯೆಲ್ಲೀ ನೋಡು. +ಅಲ್ಲೇ ತಂದ್ಕಣ್ ನನ್ ಮುಟ್ಸಬೇಕು.” ವಸ್ತ್ರ ಕೊಟ್ತು. +ವಸ್ತ್ರ ಹಾಕಂಡಿ, ಆ ಕುದ್ರಿ ಅವನಿಗ್ ಕುಳ್ಸ್ ಕಂಡಿ, ಅವನ ಹಿಣತಿ ಇದ್ದಲ್ ತಕಂಡ್ ಹೋಗ್ ಇಳೀಸ್ತು. +ಅದು ಆ ಹೆಣ್ಣು ಯೋಳ ಉಪ್ಪರ್ಗಿ ಮೇನ್ದೇ ನೋಡ್ತು. +ಕೆಳ್ಗ್ ಇಳ್ದ್ ಬಂತು. +ಕದ ತೆಗ್ದಿ ಇವನಿಗ್ ಕೈಹಿಡ್ಕಂಡಿ ತೆಕಂಣ್ ಹೋಯ್ತು. +ಅವನಿಗ್ ಹುಗ್ಸಕಣ್ ಇಕ್ತು. +ದಿವ್ಸಕ್ ವಬ್ಬಬ್ಬ ಹತ್ಸಲ ಬರತ್ಯ, “ನಿನ್ ಗೌರೀವ್ರತ ಮುಗೀತು?’’ ಕೇಳತ್. +“ಆಯ್ತು” ಹೇಳ್ತಿದು. +“ವಂದ್ ವರ್ಶ ಮುಗಿತು. +ಆಯ್ತು ನನ್ ಗೌರೀವ್ರತ ಆಯ್ತು.” ಈಗ ವೋಡ್ ವೋಡ್ ಹೋಗಿ ಅಪ್ಪಗ್ ಹೇಳ್ತು. +ಮದವಿಗಿ ಚಪ್ರ ಹಾಕೂಕ್ ಸುರು ಮಾಡ್ದ್ರು. +ಕಡೆಗೆ ಹೆಣ್ಣಿಗ ತಕಣ್ ಹೋದ್ರು. +ಯೋಳ ಮಂದಿ ನಿಂತಿರು. +“ಮೊದ್ಲ ಯಾರಿಗ್ ಮಾಲೆ ಹಾಕ್ತಿ ನೋಡು. . . ” ಹೇಳ್ತಿರು. +ಆಗೀ ಕದ ತೆಗ್ದಿ ಹಾಕಂಡಿ ಹೋಗಿದು, “ನೀವು ಬಂದ್ ಬಿಡಿ ತಾ ಮಾಲಿ ಹಿಡ್ದ್ಹಾಂಗೆ” ಹೇಳಿ ಹೋದಿದು. +ಕಡೆಗದ್ ಮಾಲಿ ಹಿಡಿತು. +ಇವ್ರ್ ವನಂದ್ ಮೊಳ ತಲಿ ಮೇನ್ ಮಾಡ್ತಿರ್, “ತನ್ಗ್ ಹಾಕು. . . ” +“ತನ್ಗ್ ಹಾಕು. . . ” ತಿರ್ಗತಿ. . . ತಿರ್ಗತಿ. . . ಗಂಡಗೆ ಮಾಲಿ ಹಾಕತು. +ಮಾಲಿ ಹಾಕಿ ದೊಡ್ ಪತ್ರ ಬರದಿದ ಅವ, “ಇವ್ರ್ ಇಷ್ಟ್ ಮಾಡ್ದ್ರು. . . ” ಚೀರಕಲ ಹೆಡ್ಡ ಮಂದಿ ಬಂದಿರಲ? +ಅವ್ರ ಸಬೆ ಕೂಡೆ ಆ ಪತ್ರ ಕೊಟ್ಟ. +ಆ ಮಂದಿ ಕೇಳತಿರು. . . ವಂದ್ ಬರಿ ತೀಡ್ತಿರು. . . ಆಗೆ ಯೋಳೂ ಮಂದಿ ಮಗದಿರ್ಗ ತಕಂಡ್ ಹೋಗಿ ಶಿಗದಿ ತೋರಣ ಮಾಡಿ ಈ ಮಗಂದ ದಿಬಣ ತಕಂಡ್ ಹೋದ. +ಆ ಅರಸನು ಬಂದ. +ಕತೆ ಮುಗಿತು. +ವಂದಲ್ಲಾ ವಂದ್ ರಾಜ್ಯದಲ್ಲಿ ವಂದ ಚಂದ್ರಶೇಖರ ರಾಜಾ ಹೇಳಿದ್ದಾ. +ಅವನಲ್ಲಿ ಸರ್ವ್ ಸಂಪತ್, ಯಾವದೂ ವಂದ್ ಕೊರತಿಲ್ಲದೇಯ ಬಾಳ ಆನಂದದಲ್ ಇರ್ವೊನಾಗಿದ್ದಾ. +ಅವನಿಗೊಂದ್ ಚಿಂತೆ ಪರವತ್ಯಾಯ್ತು. +ಆಗೆ, ಯಾತರ ಚಿಂತೆಯೋ ಕೇಳದ್ರೆ-- ಪುತ್ರಸಂತಾನಿಲ್ಲಾದೊಂದು ಬಾಳ ಚಿಂತಿದಲ್ಲಿದ್ದಿದ್ದ. +ಅವ ಚಿಂತೆಯಲ್ಲೇ ಇರು ವೇಳಿದಲ್ಲಿ, ಇತ್ಲಾಗ್ ಗೋಕರ್ಣದಲ್ಲಿ ಶಿವರಾತ್ರಿ ವೇಳ್ಯಾಗಿತ್ತು. +ಶಿವರಾತ್ರಿ ವೇಳ್ಯಾದ್ರೆ ನಾಲ್ಕ ಜನ ಹವೀಕ್ರು ಕೂಡಾ ಯಾಣದಲ್ ಹೋಗಲಿಕ್ಕೆ, ಅವನ ಮನೆ ಹಾದೀಲೇ ಬರುವಂತೋರಾದ್ರು. +ಆಶ್ರಾಗಿ, ಆರ್ ತಾಸ್ ಬಿಸಲಿಗೆ, “ಇಲ್ಲೆ ಯಾವದೊ ವಂದು ರಾಜರ ಮನೆಯಿರಬಹುದು. . . ” ಅಂದ್ ಹೊಕ್ಕಿದ್ರು ಅವರು. +ಆಗೆ ಯೇನಾಯ್ತೋ ಕೇಳದ್ರೆ, ಆಸ್ರಿಬೀಸ್ರಿ ಯೆಲ್ಲ ಕುಡಿದಾಯ್ತು. +ರಾಜನಾದರೂ ದೇವರ ಅತೀ ಬಕ್ತ. +ಇನ್ ಪುಣ್ಯಾಂಸು ಮಾಡಲಿಕ್ಕೆ ಅವನ ಮುಂದೆ ಯಾರೂ ಇಲ್ಲ. +“ಪುತ್ರಸಂತಾನ ಬೇಕು” ಹೇಳತ್ ಹೇಳಿ, ಅವ ಬೇಡ್ಕಳ್ತೆ ಇದ್ದಿದ್ದ. +ಯಾವದೂ ದೇವರು ಅವನಿಗೆ ಪುತ್ರಸಂತಾನದ ಬಗ್ಗಾಗಿ ಕಣ್ಣಿತ್ತಿ ನೋಡಿದ್ದೇ ಇಲ್ಲಾಗಿತ್ತು. +ಅಷ್ಟೊತ್ತಿಗೆ ಇವ್ರ್ ಹೋಗಿದ್ದರಲ್ಲ? +ನಾಲ್ಕ ಜನ ಬಿರಾಮಣರು ಕೂಡಾ, “ನೀವು ಬಾಳ ಚಿಂತೆದಲ್ಲಿದ್ದ ಹಾಗೇ ಕಾಣತದೆ. +ಯೇನು ನಿನ್ನ ಚಿಂತೆ?” ಕೇಳ್ದ್ರು. +ಕೇಳೂದ್ರೊಳ್ಗೆ ಅರಸೂ ಕೂಡಾ ಯೇನ್ ಹೇಳ್ದ್ ಕೇಳಿದ್ರೆ, “ಚಿಂತೆದಲ್ಲಿರವದು ಹೌದು. . . ಆದ್ರೆ, ನೀವು ಯೆಲ್ಲಿಗ್ ಹೋಗ್ಲಿಕ್ಕೆ ಬಂದವ್ರೂ?” ಕೇಳ್ದ. +“ನಾವು ಯಾಣದ ಯಾತ್ರಿಗ್ ಹೋಗಲಿಕ್ ಬಂದವ್ರು.” +“ಹಾಗಾದ್ರ್, ನಿಮ್ಗ ಅಲ್ ಹೋದ್ರೆ ಯಾತರ ಫಲ ಸಿಗತ್ಯದಪ್ಪ?” +“ಫಲ ಶಿಕ್ಕೂದ್ಯೇನಿಲ್ಲ. . . ನಮ್ಮ ಕೈಯಿಂದ್ ಕರ್ಚು. +ಆದ್ರೆ, ದೇವರ ದರ್ಶನ ಮಾಡ್ಕಂಡ್ ಬಂದ್ರೆ ಪುಣ್ಯಾಂಶ ಸಿಕ್ತದೆ” ಅಂಬೂ ವಿಚಾರ ಅವ್ರ್ ಹೇಳ್ದ್ರೂ. +ಆಗ್ ಅಟ್ಟೊತ್ತಿಗೆ ರಾಜನೂ ಕೂಡಾ ಯೇನ ಹೇಳ್ದಾ ಅಂದ್ರೆ, “ತಾವೂ ಕೂಡಾ ಬರತಿದ್ರು ನಿಮ್ಮ ಸಂಗಡೆಯೇಯ” ಅಂದ್ ಹೇಳ್ದ. +ಕೂಡ್ಲೇ, “ನಿಮ್ಮ ಖರ್ಚ್ ನೀವ್ ಹಾಕಂಡಿ ನಿಮ್ಮ ಕಾಲಲ್ ನೀವ್ ಬರಬೇಕಿದ್ರೆ ತಮ್ಮದೇನ್ ಅಡ್ಡಿಲ್ಲ” ಅಂದ್ರು. +ಇವ್ ಯೇನ್ ಹೇಳ್‌ದ್ನೊ ಕೇಳ್ದ್ರೆ, ಅವನ ಪರದಾನಿ ಇದ್ದನಲ್ಲಾ, ಅವ್ನಿಗೆ ಆ ಕೂಡ್ಲೆ ಕರಿಸ್ದ ಅವ. +ಮಂತ್ರಿ ಕರೆಸಿ, ಅವಾ, “ತನ್ ಯಾಕ್ ಕರಿಸಿರಿ?” ಅಂತ ಮಂತ್ರಿ ಕೇಳ್ವಂತೋನಾದ. +ಕೇಳ್ದ್ ಕೂಡ್ಲೆ ರಾಜ ಯೇನ್ ಹೇಳ್‌ದ್ನೊ ಕೇಳ್ದ್ರೆ, “ತಾನು ಯಾಣದ ಯಾತ್ರೆಗೆ ಹೋಗ್ ಬರ್ತೆ. +ತಾನು ಬರ್ವಲ್ಲಿವರಿಗೆ, ವಂದೂ ತನ್ನ ರಾಜಸ್ತಾನದಲ್ ಆಡಳತೆ ನೋಡಬೇಕು.” +“ನಿಮ್ಮ ಹುಕುಮಾದ್ರೆ ತಾನು ನೀವ್ ಆಳ್ದಂತೆ ಸುದಾರ್ಸ್ಕಂಡ್ ಬರಲಿಕ್ಕಡ್ಡಿಲ್ಲ” ಅಂದ. +ಮಂತ್ರಿ ಅಂಬವ ರಾಜ್ನ ಮನೇಲಿ ಬಂದ್ ನಿತ್ತಿ, ರಾಜನೂ ಕೂಡಾ ಯಾಣದ ಯಾತ್ರೆಗೆ ಹೋಗುವಂತೋನಾದ. +ಅಲ್ಹೋಗಿ ಅವ ದೇವರ ದರ್ಶನ, ಅರ್ಚನ ವಟ್ಟು ಮಾಡಿ; ಗೋಕರ್ಣದಲ್ಲೂ ದೇವರ ದರ್ಶನ ಮಾಡಿ, ಹಾಗೇಯ ಅವರು ತಮ್ಮ ಮನೆಗೆ ಹೋಗವಂತೋರಾದ್ರು. +ಅರಸ ಈವ ತನ್ನ ಮನೆಗೆ ಬಂದು ಸುಕದಲ್ ವಳಿವಂತೋನಾದ. +ವಂದ್ ವರ್ಸ್ ಹಾಗೇ ಕಳಿತು. +ಆದ್ರೂವ ಅವಗೆ ದೇವರ ದರ್ಶನ ಮಾಡ್ದು ಫಲ ಸಿಕ್ಲಿಲ್ಲ. +ಹಾಗೇ ಉಳಿತಾವ ಯೇನಾಯ್ತೋ ಕೇಳ್ದ್ರೆ, ವರ್ಷೊಪ್ಪತ್ ಕಳ್ದ ನಂತ್ರ ಮತ್ತು ನಾಲ್ಕ್ ಜನ ಬ್ರಾಹ್ಮಣರೂ ಕೂಡ ಅವನ ಮನೆ ಹಾದೀಲ್ ಕಾಸಿಯಾತ್ರೇ ಹೋಗಲಿಕ್ಕಾಗಿ ಬರುವಂತೋರಾದ್ರು. +ಅವರು ಕಾಸಿಯಾತ್ರೆಗೆ ಹೋಗಲಿಕ್ಕೆ ದರ್ಸನ ಕಟ್ಟಿ ಅಲ್ ಹೋಗಲಿಕ್ಕೆ, “ಗೋವಿಂದ. . . ” ಹಾಕ್ತೇಯ ಊರ ಮೇನೆ ಬಿಕ್ಸದ ಮೇನೇಯಾ ಹೋಗವೋರು, ಅವರು ವನಂದ್ ಗಂಟೆ ಕಟ್ಕಂಡ್ ಹೋಗುವೋರಲ್ಲ. +ಆಗ ಮುಂಚಿನ ಕಾಲದಲ್ಲಿ ನಡ್ದ್ ಹೋಗುದು, ನಡ್ದ್ ಬರೂದು ಆಗಿತ್ತು. +ಆರತಿಂಗಳ ಹೋಗಲಿಕ್ಕೆ, ಆರ ತಿಂಗಳ ಬರಲಿಕ್ಕೆ ಬೇಕಾಗತಿತ್ತು. +ಆದ್ರೆ, ರಾಜನೂವ ಯೇನ ಕೇಳ್ತಾನೆ ಅಂದ್ರೆ, “ನೀವು ಅಲ್ಲಿಗೆ ಹೋದ್ರೆ ನಿಮಗೆ ಯೇನು ಸಿಕ್ತದೆ?” ಅಂತ ಕೇಳತಾನೆ. +“ಅಲ್ ಹೋದವರಿಗೆ ಯೇನು ಅನೋಪತ್ತಾಗಿ ಬಚಾವಾಗುದಿಲ್ಲ. +ಅವ್ನವಾಗೇ ಹರಕೆ ಹೇಳ್ಕಂಡು (ಗುಣ ಆದಮೇಲೆ) ಅಲ್ ಹೋದ್ರೆ ಗುಣ ಆದ್ದದೆ. +ಇನ್ನದಲ್ಲ, ಪುತ್ರಸಂತಾನಿಲ್ಲಾದವರಿಗೆ ಪುತ್ರಸಂತಾನ ಆದ್ರೆ, ನಿನ್ನಲ್ಲಿಗ್ ಕಳೆಸತೇ ಅಂದವರಿಗೆ ಪುತ್ರಸಂತಾನ ಆದ್ದದೆ. +ಈ ಪುಣ್ಯಾಂಶ ಇದ್ದದು ಜಗತ್ಕೇಯ ಕಾಸೀ ತೀರ್ಥದಲ್ಲಿ ಹೇಳುದು ಹೆಚ್ಚಿನದು ಅಂತಾಯ್ತು.” +ಆಗೆ ರಾಜನೂ ಕೇಳ್ತ, “ಆ ದೇವರಿಗೊಂದು ಪೂಜೆ-ಪುನಸ್ಕಾರ ಮಾಡಿ ಸೇವೆ ಮಾಡ್ಲಿಲ್ಲಾಗಿತ್ತು.” +ಆಗ ರಾಜನೂ ಕೇಳ್ದಾ, ಯೇನೂ ಅಂತ್ ಹೇಳ್ದ್ರೆ-- “ಹಾಂಗಾರ್, ನಾನೂ ಬರತಿದ್ದೆ ನಿಮ್ಮ ಸಂಗಾಡೆ” ಅಂತ ಹೇಳ್ದಾ ಅವ. +ಅಟ್ ಹೇಳೂದ್ರೊಳ್ಗೆ, “ಯೇನಡ್ಡಿಲ್ಲ. . . ನಿನ್ನ ಕಾಲಲ್ಲಿ ನೀನು ನೆಡ್ದ್ ಹೋಗ್ ಬರಲಿಕ್ಕೆ. . . ನಮ್ಮ ಸಂಗಾಡ ನೀನ್ ಬಂದ್ರೆ ನಮ್ಗ್ ಹನಿ ಬೇಜಾರಿಲ್ಲ. +ನಿನ್ನ ಕಾಲಲ್ ನೀ ನಡ್ದ್ ಹೋಗಬೇಕಿದ್ರೆ ಯೇನ್ ಅಡ್ಡಿಲ್ಲ.” +ಆಗ ರಾಜ ಯೇನ್ ಹೇಳ್ತಾನೆ ಕೇಳ್ದ್ರೆ, “ನೀವು ಬಿಕ್ಸದ ಮೇನೆ ಬಂದವ್ರು. +ನಿಮ್ಗ್ ಯೇನೇನ್ ಕೊಡ್ತ್ರಪ್ಪಾ?” ಕೇಳ್ದಾ. +ಕೇಳುರೊಳ್ಗ್ ಅವ್ರ್ ಯೆನೇನ್ ಹೇಳ್ತಾರೆ ಕೇಳ್ದ್ರೆ, “ಅವರವರ ಯತಾನುಸಕ್ತಿ ನಾಲ್ಕ್ ರುಪಾಯ್ ಕೊಟ್ರೂ ನಾವ್ ತಕಂಡ್ ಹೋಗ್ತ್ರು. +ಯೆಂಟಾಣಿ ಕೊಟ್ರೂ ನಾವ್ ತಕಂಡ್ ಹೋಗ್ತ್ರು. +ಅದಿಂತಿಷ್ಟೇ ಕೊಡ್ಬೇಕು ಅಂದ್ ಕಟ್ಟಿಲ್ಲ.” +ಆಗ ರಾಜನೂ ಕೂಡ ವಳ್ಗ್ ಹೋಗಿ ಇಪ್ಪತೈದ್ ರುಪಾಯ್ ತಂದ್ ಮಡಚಿ ಅವರಿಗೆ ಕೊಡವಂತೋನಾದ. +“ನಾವು ಯೆರಡೂ ಜನ. . . ಗಂಡಾ-ಹಿಂಡ್ತೀನೂ ನಿಮ್ಮ ಸಂಗಡ ಬರ್ತ್ರು” ಅಂದ್ ಹೇಳ್ದಾ ರಾಜ, ಕಾಸೀ ಯಾತ್ರೆ ಹೋಗಲಿಕ್ಕೆ. +ಆಗವರೇನಡ್ಡಿಲ್ಲ ಅಂತ್ ಹೇಳವಂತವರಾದ್ರು. +ಅದ್ ಹೇಳೂರೊಳ್ಗೆ ಅವನ ಮಂತ್ರಿ ಇದ್ದಿವ್ನಲ್ಲಿ? +ಆಗಿಂದಾಗ ಅವನ ಕರಸಿದ. +ಅವ ಕರೆಸಿ, ಅವನ ಕೈಲ್ ಹೇಳವಂತೋನಾದ-- “ತಾನ್ ಬರ್ವಲ್ಲಿವರೆಗೆ ತನ್ನ ರಾಜಸ್ತಾನ ನೀನೇ ತಾನೇ ರಾಜ ಅಂದ್ ಆಳಬೇಕು. +ತಾನ್ ಹೋಗಬರ್ತೆ” ಅಂದ್ ಹೇಳಿ, ಅವನಿಗೆ ಖರ್ಚಿಗೆ ಯೆಷ್ಟ ಅನುಕೂಲದೆ ಅಷ್ಟ್ ತಕಂಡ್, ಇವ್ರ್ ಹೋಗವಂತೋರಾದ್ರು ಗಂಡ- ಹಿಂಡ್ತಿ. +ಆಗೆ ಇತ್ಲಾಗ್ ಕಾಶೀಯಾತ್ರೆಗೆ ಇವರು ಇಬ್ಬರಾಳು, ಅವ್ರು ನಾಲ್ಕ್ ಜನ. . . ಹೀಗೇ ಕಾಶೀಯಾತ್ರೆಗೆ ಹೋಗವಂತೋರಾದ್ರು. +ಅಲ್ಲಿ ಹೋಗೀ, ದೇವರ ಆರತಿ-ಬೀರತಿ ವಟ್ಟು ಮುಗಿಸಿ ಅಲ್ಲಿ ದರ್ಸನ ಪೂರಾ ಮಾಡ್ಕಂಡಿ ಸೀದಾ ಅವರ ಸಂಗಾಡೇ ವಟ್ಟು ಜನಾನೂ ಕೂಡಿ ಗೋಕರ್ಣಕ್ ಬರವಂತೋರಾದ್ರು. +ಗೋಕರ್ಣಕ್ ಬಂದಿ, ತೀರ್ತಪರಸಾದ ಆಗಿ ಮಂಗಳಾರತಿ ಅಟ್ಟೂ ಮುಗಿಸ್ಕಂಡಿ ಹಾಗೇ ಮನೆಗೆ ಬರವಂತೋರಾದ್ರು. +ಆದ ಕೂಡ್ಲೆ ಮನೆಗೆ ಪರವೇಸ ಮಾಡಲಿಕ್ಕಾಗಲಿಲ್ಲ ಅವರದು ಅಂದ್ರೆ, ದೇವಕಾರ್ಯದ ಕೆಲಸ ವಂದ್ ಉಳ್ದ್ ಹೋಯ್ತು. +ಮನೆ ಮುಂಗಡೆಯಲ್ಲಿ ಮೂರ್ ಖಂಡ್ಗದ ಹೊಲಕೆ ವಂದು ಜಿಗ್ಗೋಳಿ ಮಾಯ್ನಮರ ಹೇಳಿತ್ತು. +ಅದ್ರು ತುಂಬಾ ಚಪ್ರ ಈಗೇ ಹಾಕ್ ಬಿಟ್ರವರು ಮನೆ ಮುಂದ್ ಬದಿಗೆ ಪುರೈಸುದಿಲ್ಲ ಹೇಳಿ. +ರಾಜನ ಮನೆ ದೇವಕಾರ್ಯಪ್ಪ! +ಯೆಟ್ ಜನ ಕೂಡ್ತ್ರೋ, ಯೆಟ್ ಜನ ಬಿಡ್ತ್ರೋ ಹೇಳಿ ಬೆಲೆಕಟ್ಲಿಕ್ ಸಾಧ್ಯಿಲ್ಲ ಹೇಳಿ, ಅಲ್ಲಿಟ್ಟೀದ ಅವ. +ಆಗೆ ಯೆಲ್ಲಾ ಶಿಪಾಯ ಮಕ್ಕಳ ಹಚ್ಚಿ ತನ್ನ ಪಟ್ಣಕ್ ಯೆಲ್ಲಾ ಕರೆ ಬಿಟ್ಟ. +“ತೊಟ್ಲನ ಶಿಶುವೊಂದ್ ಬಿಟ್ಟು, ಅಟ್ಟೂ ಜನರೂ ಬರಬೇಕು. . . ದೇವಕಾರ್ಯ” ಅಂದ ಹೇಳಿ. +ಯೆಲ್ಲಾ ಜನ್ರು-ಬಿನ್ರು ಯೆಲ್ಲಾ ಬಂದಿ, ಊಟುಪಚಾರ ಕಾರಿ ಮುಗಿತು. +ಮುಗಿದ ನಂತರ ಹತ್ತತ್ರವರೆಲ್ಲಾ ಮನೇಗ್ ಹೋದ್ರು. +ದೂರದವರೆಲ್ಲಾ ಉಳ್ದ್ರು-- ಅಲ್ಲಿ ಊಟಾದ ಅನಂತ್ರವೂ ಸುಕದಲ್ ಉಳ್ದ್ರು. +ಸುಮಾರ್ ವಂದ್ ವರ್ಸ ಕಳ್ದ್ ಹೋಯ್ತು. +ಆದ್ರೂವ್ ಅವನಿಗೆ ಪುತ್ರಪಲ ಆಗಲೇ ಇಲ್ಲ, ಸಿಕ್ಕಲೂ ಇಲ್ಲ. +ಅದ್ರ ನಂತ್ರವ ಭಾಳ ಪಚಾತಾಪ್ದ ಮೇನ್ ಉಳದ ಅವ, ಯಾರು? ರಾಜ. +ಹಿಂಗೆ ಉಳಿತಾ. . . ಉಳಿತಾ. . . ವಂದಲ್ಲಾ ವಂದಿವ್ಸ ಯೇನಾಯ್ತೋ ಕೇಳ್ದ್ರೆ, ಬೆಳ್ಗೂಜಾಮದಲ್ ವಂದ್ ಸಪ್ನಾಯ್ತವನಿಗೆ. +ಸಪ್ನ ಆದ್ರೆ, “ಎಲೇ ರಾಜನೇ. . . ನೀನು ಇಡೀ ಲೋಕಯೆಲ್ಲಾ ತಿರಗಿದೆ, ಬಹಾಳ ಖರ್ಚು ವಗೈರೆ. . . ಮಾಡಿದೆ ನೀನು. +ಆದ್ರೆ, ಪುತ್ರ ಸಂತಾನ ನಿನ್ನ ಕಾಲ ಬುಡ್ಕೇ ಇದ್ದಿತು. +ನಿನ್ಗೆ ಯಾಕೆ ಗೊತ್ತಾಗಲಿಲ್ಲ?” +ಆಗ, “ನಂಗ್ ಗೊತ್ತಾಗಲಿಲ್ಲ. . . ಅಂದ್ ಹೇಳದ್ರೆ, ಅದ್ ಹ್ಯಾಂಗ್ ಸಿಗ್ತದ್ಯಪ್ಪ? +ಯೇನು?” ಅಂದ್ ರಾಜನೂ ಕೂಡಾ ಕೇಳವಂತೋನಾದ. +ಆನಂತ್ರ, “ನಿನ್ನ ಮನೆ ಮೇಲ್ಬದಿಗೆ ಮೂರ್ ಖಂಡ್ಗದ ಹೊಲ ವಂದ್ ಬೈಲಿದ್ದಿತ್ತು. +ಆ ಬೈಲ್ ಪೂರಾ ಶೀಗೇ ಮಟ್ಟಿ (ಪಲ್ಲೆ) ಬೆಳ್ದ್ ಹೋಗದೆ. +ಅದು ನೀನು ಪೂರಾ ಸವ್ರಿಸಿ ಮೂರಾಳ್ಕಂತ ಅಗಿಸಬೇಕು. +ಅಗಿಸಾದ ನಂತ್ರ ಅದ್ನವ ಯೆಯ್ಡ್ ದೇವ್ರ್ ಮೂರ್ತಿ ಮೊಕ ಅಡಿಗಾಗ್ ಬಿದ್ಹೋಗದೆ. +ಅದು ಬಿದ್ ಹೋದ್ರೆ ಮಂಕಾಳಮ್ಮ ಕಲ್ಲೆ ನಿಂಗ ಹೇಳ್ ದೇವ್ರ್ ಹೆಸರು. +ಆ ದೇವರಿಗೆ ಯೆಡಕೊಂದು, ಬಲಕೊಂದು ದುರ್ವೆ (ದ್ರವ್ಯಚರಿಗಿ) ಅದೆ. +ಅದ ತೆಗದಿ, ನೀನು ಬಟ್ಟರೀಗೆ ಹೋಮನೇಮ ಹಾಕಿಸಿ, ನಿತ್ಯ ಪೂಜೆ ಇಟ್ರೆ ನಿನ್ಗ್ ಪುತ್ರ ಸಂತತಿ ಆಗ್ತದೆ.” +ಅಟ್ಟು ಹೇಳ್ದ್ ನಂತ್ರವ, ಸಪ್ನದಲ್ ಬೆಳಗಾಯ್ತು ಅವನಿಗೆ ನಿದ್ರೆ ಬರಲಿಲ್ಲ - ಸಪ್ನದ ನಂತ್ರ. +ಆಗೆ ಬೆಳ್ಗಾ ಮುಂಚ್ಯೆದ್ ಮೊಕ-ಬಿಕ ತೊಳ್ಕಂಡಿ ಆಲೊಚ್ನೆ ಮಾಡ್ದ-- “ಉಹ್! +ಈ ಸಪ್ನದಲ್ಲೆಲ್ಲಾ ಪುತ್ರಸಂತಾನ ಆದ್ರೆ ಈ ಜಗತ್ತೇ ಹೀಗಿರುದಿಲ್ಲಾಗಿತ್ತು. +ತಾನೂ ಹನನ್ಕೆ (ಆಲೋಚ್ನೆ) ಮೇನ್ ಇರಬೇಕಿದ್ರೆ ಸಪ್ನ್ ಬಿತ್ತು.” +ಆ ಸಪ್ನದ ಕಾರಣ ಅವ ಮುಂದ್ ಹರಿಸ್ಲೇ ಇಲ್ಲ. +“ತಾನ್ ಕಾಸಿಗೆ, ಯಾಣ ಅಲ್ಲೆಲ್ಲಾ ಹೋಗ್ ಬಂದ್ರೂ ತನ್ಗೆ ಪುತ್ರಸಂತಾನ ಆಗಲಿಲ್ಲ.” +ಹಾಗೇ ವಂದು ಮೂರ್ ನಾಲ್ಕ್ ತಿಂಗಳ ಕಳ್ದ್ ಹೋಗಬಿಟ್ತು ಅಲ್ಲಿಗೆ. +ಆವಾಗವ ಯೇನ್ ಮಾಡುದ್ನೋ ಕೇಳ್ದ್ರೆ, “ಯೆಲ್ಲಾ ಮಾಡ್ ನೋಡಾಯ್ತು. +ಈ ಸಪ್ನ ಬಿದ್ದದೊಂದು ಮಾಡೇ ನೋಡ್ಬೇಕಾಯ್ತು. +” ಅದಟ್ ಕೆಲ್ಸ ಮಾಡಿ, ಅವನದೊಂದ್ ಸೇವಕ್ ಇದ್ದಿದ್ದ ರಾಜನ್ದು-- ತಾಸಿಗ್ ಅರವತ್ ಮೈಲ್ ಹಾದಿ ನಡೆತಿದ್ದ ಅವ. +ಅವನಿಗ್ ಕರಸ್ವಂತೋನಾದ. +ಆಗವ ಬಂದ್ ಕೇಳ್ತಾನ, “ಯಾಕ್ ಕರ್ಸಿದ್ರೆ ತನಗೆ” ಅಂದಿ. +“ಆದ್ರೆ ತಾನ್ವಂದ್ ಚೀಟಿ ಬರಕೊಡ್ತೆ ತಕಂಡೋಗಿ ಗೋವೆ ರಾಜನಿಗ್ ಕೊಡಬೇಕು. +ಈ ಚೀಟಿ ನೋಡ್ದ್ ಕೂಡ್ಲೆ, ಗೋವೆ ರಾಜ್ನು ಮುನ್ನೂರ್ ಜನ್ರಿಗೆ ಮಣ್ ಕೆಲ್ಸದವರಿಗೆ ಕಳಸ್ತಾನೆ.” +ಆಗಾ ಚೀಟಿನೂ ಗೂಡಾ ಆ ಸೇವಕನ ಕೈಲ್ ಕೊಡವಂತೋನಾದ. +ಬೆಳಿಗ್ಗೆ ಯೋಳ್ ಗಂಟೆಗ್ ಹೋಗವಂತೋನಾದ ಸೇವಕ. +ಹನ್ನೆರಡ ಗಂಟೆಗೆ ಗೋವೆ ರಾಜ್ನ ಮನೆಗೇ ಹೋಗ್ ಮುಟ್ದ. +ಆಗ, ಗೋವೆ ರಾಜ್ನು ಚಂಬ್ ತಕಂಡ್ ಬಚ್ಲಿಗೆ ಮೀಯಲಿಕ್ಕೆ ನಿಂತಿದ್ದ. +ಆಗಾ ಚೀಟಿ ಕೂಡು ಅವ ಮೀಯಲಿಕ್ ಬಚ್ಲ ಕಟ್ನ ಮೇನ್ ನಿಂತಾಗೇ ಅವ್ನ ಕೈಲ್ ಕೊಟ್ಟ. +ಆಗೆ, “ಮನೆ ಕೂಡ್ ಹೋಗು ನೀನು. +ಆಸ್ರಬೀಸ್ರ ಕುಡಿ. +ನಾನು ಮಿಂದ್ಕಂಡ್ ಬತ್ತೆ” ಹೇಳ್ದ. +ಆಗ ಅವ ಮಿಂದ್ಕಂಡಿ ಮನೆಗ್ ಹೋಗಿ, ವಳ್ಗ್ ಹೋಗ್ ಊಟಾಬೀಟಾ ಯೆಲ್ಲಾ ಮುಗಿತು-- ಹೆಂಗಸರ ಕೈಲಿ ಅವನಿಗ್ ಊಟ-ಬೀಟ ಯೆಲ್ಲ ಬಡ್ಸಿ (ಮುಗಿತು). +ನಂತ್ರವ, ಅವ ತನ್ನ ಕಡೆ ಸಿಪಾಯರಿಗ್ ಕಳಿಸವಂತೋನಾದ; ಯಾರು? ಗೋವೆರಾಜ. +ಕರಸಿದ ಕೂಡ್ಲೆಯ ತನ್ನ ಮತ್ತು “ಕೆಲಸದವರಿಗೆ ಮುನ್ನೂರ್ ಜನರಿಗೆ ಬಾ ಅಂದ್ ಹೇಳು” ಅಂದ್ ಕಳ್ಸದ್‌ ಅವ. +ಕಳ್ಸದ್ ಕೂಡ್ಲೆಯಾ ಅವ ಮುನ್ನೂರ್ ಜನ್ರ ಕರಕಂಡ್ ಬಂದತೇ ಆವಾಗ ಅವ್ರ್ ಕೇಳ್ದ್ರು, “ಯಾಕ್ ಕರ್ಸ್ದ್ರಿ?” ಅಂತ. +ಆಗವ್ರುಗ್ ರಾಜ್ನೂ ಹೇಳ್ದಾ, “ನೀವು ಅವ್ನ ಸಂಗಡ ಹೋಗಿ” ಅಂದ. +ಅವ ಸಂಗಡ ಕರಕಂಬಂದ. +ಅಲ್ಲಿದ್ದ ಜನರಿಗ್ ವಂದೋಪ್ಪತ್ತಿಗ್ ಹೋಗಿದ ಅವ-- ಈಗ ಯೆಂಟ್ ದಿವಸ ಬೇಕಾಯ್ತು ಬಂದ ಮುಟ್ಲಿಕ್ಕೆ ಇಲ್ಲಿ. +ಆ ರಾಜ್ನೂ ಕೂಡಾ ಅವ್ರಿಗ್ ಹತ್ಯಾರ್ ಕೊಡಬೇಕಾಯ್ತಲ್ಲಾ? +ಕತ್ತಿ, ಕೊಡ್ಲಿ, ಪಿಕಾಸು, ಜನಕೊಂದೊಂದ್ ಹತ್ಯಾರ್ ಕೊಡವಂತೋನಾದ; ಆಶೀಗೆ ಮಟ್ಟಿ ಆಗಿಂದಾಗೇ ಅವ್ರ್ ಕರಕಂಡ್ ಹೋಗಿ ಸವ್ರಸ್ದ್ ಅವ. +ಅರ್ಧ ಗಂಟೆವಳ್ಗ್ ಸವ್ರ್ ಮುಗಿತು. +ಮುಗ್ದ್ ನಂತ್ರ ಅವ ಪೇಟೇಲಿದ್ ತಕಂಡ್ ಹೋದ. +ಆಯ್ದ ಯೆಲ್ಲಾ ಕೊಟ್ಟಿ ತಾನೇ ನಿತ್ತಿ ಅಗಿಸ್ದ. +ಅಗಿಸ್ದ್ರೆ ಅವ ಇಡೀತೂ ಆಗಿಸ್ಲಿಲ್ಲ. +ಮದ್ದಿಕೆ ಅಗಿಸ್ದ್ ಕಡಿಕೆ ಯೆರಡೂ ಬಾಜೂನಲ್ಲಿ ಅಗಿಸಕಾಯ್ತು ಹೇಳಿ. +ಅಗಿಸ್ದ ಕೂಡ್ಲೆ ದೇವ್ರ್ ಮೂರ್ತಿ ಸಿಕ್ತು ಅವನಿಗೆ-- ಅಲ್ಗೇಯ ದೇವರ ಮೂರ್ತಿ ಮೊಕಡಿಗಾಗ್ ಇದ್ದದೂ ಹೌದು. +ಯೆರಡು ದುರ್ವೆ ಯೆಡಕೊಂದು, ಬಲಕೊಂದು ಇದ್ದದೂ ಹೌದು. +ಆಗದ್ ತಂದಿ ಮೇಲಿಟ್ಟಿ, ಬಟ್ರಿಗ್ ತಂದಿ ಹೋಮ-ನೇಮ ಹಾಕ್ಸಿ, ನಿಚ್ಚ ಪೂಜಿಕೆ ಇರ್ಸವಂತೋನಾದ ನಂತ್ರ. +ಆನಂತ್ರ ಯೇನಾಯ್ತೋ ಕೇಳ್ದ್ರೆ, ಇವ ಸಾದಾರ್ಣ ವಂದ್ವರ್ಸ ಕಳೀತು. +ವರ್ಸ ಕಳ್ದ್ರೆ ಪುತ್ರಸಂತಾನ ಇಲ್ಲ ಅವಗೆ, ಯಾವಾಗೂವ. +ಪುತ್ರಸಂತಾನ ಇಲ್ಲಾಗೂದ್ರೊಳ್ಗೆ ಇವ ಯೇನ್ ಮಾಡ್ದ ಕೇಳ್ದ್ರೆ, ಇನ್ ತನ್ಗ್ ದೇವರಾದ್ರೂ ಮುಂದ್ ತಂದಿರ್ಸ್ಲಿ, ಅಂಬೂ ಆಸೆ ತೋರ್ಸಿ, ಪುತ್ರಸಂತಾನ ಸಿಕ್ತದೆ ಅಂದ್ ತನ್ಗ್ ಹೇಳ್ತಲ. . . ವಂದ್ ವರ್ಸಾದ್ರೂ ಪುತ್ರಸಂತಾನ ಆಗಲೆಲ್ಲ. +ದೇವ್ರ್ ಹೇಳ್ದು ಹೆಚ್ಚಲ್ವ? +ಮಾಡಗಾಗಿ ಇರುದಾಗಿತ್ತು ಅವ. +ಊಟಬೀಟ ಮಾಡಿ, “ಇಟ್ ವರ್ಸಾನವರೆಗೆ ಯೆಲ್ಲಾ ಪುಣ್ಯಾಂಶ ಮಾಡಿ ಮುಗಿಸ್ದೆ. +ಆದ್ರೂ ಪುತ್ರಸಂತಾನ ಕೈಗೂಡಲಿಲ್ಲ. +ಇನ್ನು ಪಾಪದ ಕೆಲ್ಸಕೆ ಕೈಹಚ್ತೆ. +ಬೆಳಗಾದ್ರೆ. . . ” ಅಂದ್ ಹೇಳಿ, ಬಾಯ್ ವಡ್ದ್ ಹೇಳ್ಬಿಟ್ಟ ಅವ. +ಯಾರು? ರಾಜ. +ಆ ದೇವಸ್ತಾನದಲ್ಲಾದ್ರೂ ಅವ ಯೇನ್ ಮಾಡಾನೆ? +ಮತ್ ಇಷ್ಟೂ ಆಗಿ, ಪೂಜ್ಯಾದ ಕೂಡ್ಲೆ ವಂದ್ ಕೊಳ್ಗ ಅಜಿಮಾಸು ದುರ್ವೆ ಉಕ್ ಚೆಲ್ತದೆ. +ದುರ್ವೆ ಸಿಕ್ದು. +ಅದ್ ಕಣಜಕ್ ಹಾಕೂದು, ಕಣಜಕ್ ಹಾಕದ್ನಂತ್ರ ರಾಜ ಉಪಯೋಗ ಮಾಡೂಕಡ್ಡಿಲ್ಲ. +ಬಟ್ರಿಗೂ ಇನ್ ಆ ದುರ್ವೆ ತಾವ್ ಖರ್ಚ ಮಾಡಬೇಕು ಅಂಬೂ ಆಶ್ಯಿಲ್ಲದಿದ್ದಾಂಗೆ, ವಸ್ತ್ರ ಬೇರೆ ಇಟ್ಟು ಯೆಷ್ಟ್ ಚಾಪೆಟ್ಗೆ ಬೇಕೋ ಅಷ್ಟೂ ಸಂಪ್ ಮಾಡಿಟ್ ಬಿಟ್ಟನೆ. +ಆಗವ ರಾತ್ರಿಗೆ ಹೇಳ್ ಮನ್ಗ್ ಬಿಟ್ಟಿದ್ನಲ್ಲ? +ದೇವರಿಗೆ ಗೊತ್ತಾಗ್ ಹೋಯ್ತು ಅದು. +ತನಗೆ ಮೊದಾಲ್ ಕಿತ್ ಹೊತಾಕಿ, ಬಾಕಿ ಕೆಲ್ಸಕ್ ಕೈಹಾಕ್ದ್ರೆ ಅಂದ್ ಹೇಳ್ ಹೆದ್ರಕ್ಯಾಗಿ ಪೂಜಾರಿ ಬಟ್ನ ತಲ್ದಿಂಬಿಗೆ ರಾತ್ರಿಗೇ ಯೆದ್ಬಂತು. +ವಂದ್ ಬೆಳ್ಳಿ ಹೂಂಗ್ ತನ್ ತಲೆಮೇಲುನ್ದು ಕೈಗೆ ಹಿಡ್ಕಂಡೇ ಬಂದದೆ ಅದು. +(ಸಪ್ನದಲ್ಲಿ ಮಾತ್ರ) ಆವಾಗ್ ಯೆದ್ ಬಂದ್ಕಂಡಿ, ಯೇನ್ ಹೇಳ್ತದ್ಯೋ ಕೇಳ್‌ದ್ರೆ. . . ‘‘ಬೆಳಗಾನಸ್ಕೀಲ್ ನೀನು ರಾಜನ ಮನೆಕೂಡ್ ಹೋಗ್ಬರಬೇಕು. +ಅಂದ್ರೆ, ಇಷ್ಟ್ ದಿವ್ಸನವರೆಗೆ ಪುಣ್ಯದ ಕೆಲ್ಸ ಮಾಡ್ದವ ಪಾಪದ ಕೆಲ್ಸಕ್ ಕೈಹಚ್ತಿ ಅಂದ್ ಹೇಳಾನೆ ರಾತ್ರೆ. +ಆದ್ರೆ, ಪಾಪದ ಕೆಲ್ಸಕ್ ಕೈಹಚ್ಚುದ್ ಬೇಡಾ. +ನಿನ್ಗ್ ಪುತ್ರ ಸಂತಾನಾಗ್ತದೆ ಹೇಳಬೇಕು. +ಈ ಹೂಂಗ್ ತಕಂಡ್ ಹೋಗಿ ಅವಗೆ ಕೊಡಿ. +ಹರು ಜಲದೀಲ್ ಹೋಗಿ ಗಂಡ-ಹಿಂಡ್ತಿ ಇಬ್ಬರೂ ತಣ್ಣೀರ ತಾನ ಮಾಡ್ಬರ್ಬೇಕು; ಅದು ಮುಡ್ಕಳ್ಬೇಕು-- ಪುತ್ರಸಂತಾನಾಗ್ತದೆ. +ಆದ್ರೆ, ಅವನೀಗೆ ಹನ್ನೆರಡ ವರ್ಸನ ಉರಿಪಿಂಡ ಬೇಕೋ? +ಅರವತ್ವರ್ಸನ ಅರಮಳ್ ಬೇಕೋ ಹೇಳ್ ಕೇಳು. +ಅಟ್ ಬಂದ್ ತನ್ಗೆ ನಾಳೆ ರಾತ್ರೆಗ್ ತೆಳಿಸು. . . ” ಅಂದ್ ಬಟ್ರ ಕೈಲ್ ಬಂದ್ ಹೇಳ್ತು ಅಂಬದಾಯ್ತು. +ಅಟ್ಟೊತ್ತಿಗೆ ಬೆಳ್ಗಾ ಮುಂಚ್ ನಸ್ಕೀಲೆ ಬಂದ್ರು, ಬಂದೇ ಬಂದ್ರೂ, ರಾಜನಿದ್ದಲ್ಲಿ; + “ಓಹೋ! ಬಟ್ರು. . . ಇಟ್ ಮುಂಚೆ ಬರ್ವೋರಲ್ಲಾಗಿತ್ತು. +ಯೇನೋ ವಂದ್ ಗಡಬಡೆ ಮೇಲೇ ಬಂದ್ರು ಹಾಂಗ್ ಕಾಣ್ತದೆ ತನ್ಗೆ” ಅಂದ್ಹೇಳ್ದ. +“ಹಾಂಗಾದ್ರೆ, ನೀವು ನಿನ್ನಾಗ್ನ ರಾತ್ರೆದಲ್ಲಿ ಪಾಪದ ಕೆಲ್ಸಕ್ಕೆ ಕೈಹಚ್ತೆ ಅಂದ್ ಹೇಳಿದ್ರಂತೆ; +ನೀವ್ ಹಾಗ್ ಪಾಪದ ಕೆಲ್ಸ ಮಾಡೂದ್ ಬೇಡ; ನಿನ್ಗ್ ಪುತ್ರಸಂತಾನ ಆಗ್ತದಂತೆ. +ನಿನ್ಗ್ ದೇವ್ರು ಹೇಳದೆ. +“ನೀವ್ ಗಂಡ ಹಿಂಡ್ತಿ ಹರೂ ಜಲದೀಲ್ ತಣ್ಣೀರತಾನ ಮಾಡ್ಕಂಡ ಬರುವಾಗ ನೀರ್ ತುಂಬ್ಕಂಡ್ ಬರಬೇಕು ಕೊಡ್ನಲ್ಲಿ. +ಮನೆಗ್ ಬಂದು ಈ ಹೂಂಗ್ ನಿಮ್ ಹಿಂಡ್ತಿ ರಾಜನ್ದು ಮುಡಿಬೇಕು. +‘ನಿನ್ಗ್ ಹನ್ನರಡ ವರ್ಶನ ಉರಿಪಿಂಡ ಬೇಕೋ? +ಅರವತ್ವರ್ಸನ ಅರಮಳ್ ಬೇಕೋ?’ ಕೇಳ್ಕಂಡ್ ಬಾ ಹೇಳದೆ. +ತನ್ ಕೈಲಿ” ಅಂದ. +ಬಟ್ರ ಕೈಲಿ ರಾಜ ಯೇನ್ ಹೇಳ್ದ ಕೇಳ್ದ್ರೆ, “ಹನ್ನೆರಡ ವರ್ಸನ ಉರಿಪಿಂಡ ಹೇಳದ್ರ ಅವ ಹನ್ನೆರಡೇ ವರ್ಸ ಉಳಿತಾನಲ್ಲ ಅವ? +ಅಂದ ಮೇಲೆ, ಅರವತ್ ವರ್ಸನ ಅರಮಳ್ಳ ಅಂದ್ರೆ. . . ಅರವತ್ ವರ್ಸ ಉಳಿತ ಅವ. +ಅವನಿಗ್ ಬೇಕಾದ್ ಮದ್ವೆಮನಕಾಲ ಆಗ್ತದೆ. +ಹನ್ನರಡ ವರ್ಸನ ಉರಿಪಿಂಡ ಅಂದ್ರೆ ಅವನಿಗ್ ಪರಾಯವೇ ಬರುದಿಲ್ಲ. +ಅವನಿಗ್ ಮದ್ವೆಮನಕಾಲ ಆಗೂದ್ಯೆಲ್ಲಿ?” ಅಂದ್ ತೆಳ್ಕಂಡ. +ಬಟ್ರ ಕೈಲಿ ಹೇಳ್ತಾನೆ ಅವ ಯೇನಂದಿ? +ಕೇಳ್ದ್ರೆ, “ಅರವತ್ ವರ್ಸನ ಅರಮಳ್ನೇ ಆಗೂದು ತನ್ಗೆ. +ಹನ್ನೆರಡ ವರ್ಸನ ಉರಿಪಿಂಡ ಬೇಡ ತನ್ಗೆ” ಹೇಳ್ ಹೇಳ್ದ. +ಹೇಳ್ದಕೂಡ್ಲೆ, ರಾಜನ ಹಿಂಡ್ತಿ ಕೇಳ್ತು. +ಅದ್ ಯೇನಂತು ಅಂದ್ರೆ, “ಸ್ವಾಮೀ. . . ಅರವತ್ ವರ್ಸನ ಅರಮಳ್ಳ ಬೇಡಾಗಿತ್ತು. +ಹನ್ನೆರಡ ವರ್ಸನ ಉರಿಪಿಂಡನೇ ಆಗ್ತಿತ್ತು. +ಯೆಂಟ ವರ್ಸನಾಗೆ ಅವನಿಗೆ ಲಗ್ನ ಮಾಡಿದ್ರೆ, ಹನ್ನೆರಡ ವರ್ಸನಾಗಿ ಅವನಿಗೆ ಪುತ್ರ-ಬಿತ್ರ - ಮತ್ ನಾಲ್ಕ್ ವರ್ಸನ ವಳಗೆ ಯೆಲ್ಲಾ ಆಗತಿತ್ತು. . . ಅವನೇ ಆಗತಿತ್ತು. +ಅರವತ್ ವರ್ಸನ ಅರಮಳ್ಳ ಬೇಡ” ಅಂದ್ ತೀಡ್ಕತ್ತ ನೆಡಿತು ಅದು. +“ಯೇನ್ ಹೇಳತ್ನೋ ಯಾರ ಬಲ?” ಹೇಳಿ. +ಅದ್ ಹೇಳತ್ಲಾಗ್ ಹೋದ್ ಕೂಡ್ಲೆ ಇತ್ಲಾಗ್ ಯೇನಾಯ್ತಂದ್ರೆ ಇವ್ನಿಗೂ ಅದ್ ಹೌದಂತ್ ಕಂಡ್ತು. +ಬಟ್ರ ತರಸುವಂತೋನಾದ. +ಬಟ್ರು ಕೂಡಾ ಬರುವಂತೋರಾದ್ರು. +ಅಂಗಳದ ಹೆರ್ಗ್ ಹೋಗಿದ್ರು. +“ಹಾಂಗಾದ್ರೆ ಅರವತ್ ವರ್ಸನ ಅರಮಳ್ ಆಗುದು ಅಂದ್ ಹೇಳಿದ್ದೆ. +ಆದ್ರೆ, ಅರವತ್ ವರ್ಸನ ಅರಮಳ್ ಬೇಡ. +ತನ್ಗೆ ಹನ್ನೆರಡ ವರ್ಸನ ಉರಿಪಿಂಡನೇ ಆಗೂದು. . . ” ಅಂದ್ ಹೇಳ್ದ. +ಅಟ್ ಹೇಳೂರೊಳ್ಗೆ ಬಟ್ರು ಬಂದ್ರು. +ಬಂದ್ರು, ರಾತ್ರೆಗ್ ಮತ್ತೆ ಸಪ್ನದಲ್ ಬಂದ ಬಟ್ರ ಕೈಲ್ ಕೇಳ್ತದೆ ದೇವ್ರು. +“ಹಾಂಗಾದ್ರ್ ಅವನಿಗ್ ಅರವತ್ ವರ್ಸನ ಅರಮಳ ಬೇಡಂತೆ. +ಹನ್ನೆರಡ ವರ್ಸನ ಉರಿಪಿಂಡ ಆಗುದು.” + ಆಗೆ ರಾಜನೂ ಕೂಡಾ ಸುಖದಲ್ಲಿ ಉಳವಂತೋನಾದ. +ಉಳಿಬೇಕಿದ್ರೆ ಮೂರ್ ತಿಂಗ್ಳ ಕಳೀತು. +ರಾಜನ ಹೆಂಡತಿನು ಗರ್ಬಿಣ್ಯಾಯ್ತು ಅಲ್ಲಿಗೆ. +ರಾಜನ ಹಿಣತಿಗೆ ವರ್ಸ ಐವತ್ತೂ, ರಾಜನಿಗೆ ಅರವತ್ತು ನಡೀತದೆ. +ಸಾದಾರಣ ಯೆಂಟ ತಿಂಗಳ ಆಯ್ತು. +ರಾಜ್ನ ಹೆಂಡತಿಗೆ ಗರ್ಬಿಣಿ ಆದ ನಂತ್ರ ಅದ್ಕೆ ಹೊಟ್ಟೆ ಬೇನೆಗ್ ಸುರವಾಯ್ತು. +ಸೂಲಕ್ಕೆ ಅಂಗ್ಳದಲ್ ಬಿದ್ ಹೊಡಿಯಾಡ್ತದೆ, ಅದು. +“ತನ್ ಕೈಲ್ ತಡ್ಕೊಳ್ಳುಕಾಗುದಿಲ್ಲ” ಅಂದ್ ಬಿದ್ ಹೊಳ್ಳಾಡತದೆ. +ಆವಾಗ, ರಾಜನೂ ಕೂಡ ಹೋಗ್ ಆಲೋಚ್ನಿ ಮಾಡ್ದ. +‘ಇದ್ ವಂದ ಪಿಶಾತೆ ಬಾದೆನೆ ಇರಬವ್ದು’ ಅಂದ್ ಹೇಳ್ ಮಾಡ್ದ ಅವ. +ಆವಾಗಾ ರಾಜನೂ ಕೂಡ ಅವನ ಸಿಪಾಯರಿಗೆ ಕರದಿ, ಯೇನ ಹೇಳ್ತಾನೋ ಕೇಳ್ದ್ರೆ, “ಶಿಪಾಯಿರೆ, ಹೋಗಿ ವಂದ್ ನಾಕ್ ಜನ ಗಾಡಿಗ್ರೀಗ್ ತಕಂಡ ಬನಿ” ಅಂದ ಹೇಳ್ದ ಅವ. +ಆಟ ಹೇಳುರೊಳ್ಗೆ ಶಿಪಾಯ್ರು ಹೋಗ್ ಕೇಳ್ದ್ರು. +ರಾಜನ ಕೂಡೆ, ‘ಹಂಗಾರ್ ಹೇಂಗನವರಾಗಬೇಕು?’ ಕೇಳ್ದ್ರು. +ರಾಜನೂ ಯೇನ್ ಹೇಳ್ದ ಕೇಳ್ದ್ರೆ, “ಚಲ್ಚಲೋ ಪುಂಡಗಾರರಿಗೆ ಹೇಳೊ” ಹೇಳ್ ಕಳ್ಸದ. +ಆಗವ್ರು ಯೆಲ್ಲೆಲ್ ಪುಂಡಗಾರ್ರ ಅವರೆ ನೋಡಿ, ಪೇಟಿಲ್ ಈ ತುದಿಂದ್ ಆ ತುದಿವರೆಗೆ ಯೆಲ್ಲೆಲ್ ಪುಂಡಗಾರ್ರವ್ರೆ ಅವರಗ್ಯೆಲ್ಲಾ, “ರಾಜರ ಮಲ್ಲಿ ಬರುಕೆ ನಿಮ್ಗ್ ಕರ್ಯಾಗದೆ” ಅಂದ್ ಹೇಳ್ತೇ ಹೋದ್ರು. +ಬರಬೇಕಾದ್ರ ನಲವತ್ ಜನ್ರ ವಟ್ಮಾಡ್ ಕರಕಬಂದ್ರು ರಾಜ್ನಮನಿಗೆ. +ಅಂಗಳದಲ್ಲಿ ಕುಂದರ್ಸದ್ರು. +ಆಸ್ರ, ಕವಳ ಯೆಲ್ಲಾ ಕೊಟ್ಟ. +ಹತ್ ಹನ್ನೆರಡ್ ಅಕ್ಕಿ ಮಣಿ ತಂದ್ಕೊಟ್ರು ಅವರ್ಗೆ. +ರಾಜ ಯೇನ್ ಹೇಳ್ತಾನೆ ಕೇಳದ್ರೆ, ‘‘ಹತ್ ಹನ್ನೆರಡ ಜನ ಸೋದ್ಕಿ ನೋಡಿ, ಬಾಕಿಯವರೆಲ್ಲಾ ನೋಟಕ್ ಕುಳ್ಳಿ” ಅಂದ್ ಹೇಳಿದ್ರು. +ಅದ್ರಲ್ ನೋಟ ಮಾಡ್ವವ್ರ್ ವಬ್ಬರೂ ಇಲ್ಲ. +ರಾಜ್ನ ಮನೆಲ್ ನೋಟ ಮಾಡಬೇಕಾಯ್ತೋ ಇಲ್ವೊ? +ಹಾಗೇ ಹೇಳ್ದ್ರೆ ರಾಜ ತಮ್ಗೆ ಶಿಕ್ಸೆ ಮಾಡ್ಬಿಟ್ರೆ - ಕಷ್ಟ ಬರ್ತದ್ಯಲ್ಲ ಅಂದ ಹೇಳಿ, ಅವ್ರು ನೋಟಕೆ ಕುಂತ್ರು ಬಾಕಿ ಇದ್ದವ್ರು ಮಣಿ ತಂದ್ಕೊಟ್ಟರು. +ಸೋದ್ಕಿ ನೋಡೂಕ್ ಹಣ್ಕುದ್ರು; ಇವ್ರ್ ವೋಟಾ ಮಾಡೂಕ್ ಹಣ್ಕುದ್ರು. +ನೋಟ ಮಾಡ್ದ್ರು ಅಂದ್ರೇನು? +“ಸಾದ್ರಾಣ ನೋಟ ಮಾಡ್ರೋ; ನಿಮ್ಮ ಮೈಯ್ಲ ಸಂಪದೆ. +ಮೈಹಂದೂ(ಅಲಗಾಡ್ಸೂ)ದಿಲ್ಲಲ್ಲ ನೀವು. . . ’’ ಹೇಳ್ತ್ರು ಹೇಳಿ. +ಜೋರ್ ನೋಟ ಮಾಡ್ವೊರು ಅಂದ್ ಹೇಳಿ, ಹಾರ್ ಹಾರಿ ಬೀಳೂಕ್ ಹತ್ಕಂಡ್ರು. +ಸೋದ್ಕಿಯವರು ವಬ್ಬರೂ ವಬ್ಬರೂ. . . ‘ದೆವ್ವದೆ, ಇಲ್ಲ’ ಅಂದ್ ಹೇಳವೋರೇ ಇಲ್ಲ. +ಅನುಬವವಿದ್ದವರು ಯಾರೂ ಇಲ್ಲ. +ಆಗಟ್ಟಾದ ಕೂಡಲೇಯ ನೋಡಿ. . . ನೋಡಿ. . . ನೋಡಿ. . . ಬೇಜಾರ ಬಂತು. +ಬಾಳ ಹೊತ್ತಾಯ್ತು. +ಹತ್ ಗೆಂಟಿಂದ ಹನ್ನೆರಡ ಗಂಟ್ಯಾಯ್ತು. +ಆದ್ರೂ ರಾಜ್ನ ಮನೆ ಗೌಜ್ ಯೇನ್ ಕಮ್ಮಿಲ್ಲ. +ಇವಳಿಗೆ ಹೊಟ್ಟಿ ಸೂಲೆ ಕಮ್ಮಿಲ್ಲ. +ಅವ್ರ ಕೊಣಿಲ್ ತಕಂಡ್ಹೋಗ್ ಕೂಡ್ರು. +ಅಟ್ಟೊತ್ತೀಗ್ ರಾಜ ಯೇನ್ ಹೇಳ್ತಾ ಕೇಳಿದ್ರೆ, “ನಾಳೆಗ್ ಹನ್ನಂದ್ ಹನ್ನೆರಡ ಗಂಟೆಗೆ ವಿಚಾರ ಮಾಡ್ವ” ಅಂದ. +ಕಡೆಗ್ ನಂತ್ರ ಅವನಿಗ್ ಮತ್ತೊಂದ್ ಆಲೋಚ್ನೆಯಾಯ್ತು. +“ಅದ್ ತಿಂಗಳ ತುಂಬ್ತೊ, ಯಾರ್ಬಲ ಹಡ್ಯು ದಿವ್ಸ ಬಂತೋ. . . ” ಹೇಳಿ ಆಗೆ ಶಿಪಾಯನ್ನೇ ಕರ್ದ ಅವ. +ಕರದಿ ಯೇನ ಹೇಳುದ್ನೋ ಕೇಳದ್ರೆ, “ಅವ್ಳ ಹಡೂ ದಿವ್ಸ ಬಂತೊ ಯಾರ್ ಬಲ? +ನೀವು ನಾಕ್ ಜನ ಹೋಗಿ, ನಾಕ ಜನ ಸೂಲಗಿತ್ತಿರ್ನ ಕರ್ಕಂಡ್ ಬನಿ” ಅಂದ್ ಹೇಳಿ ಹೇಳ್ದ. +ಆ ಶಿಪಾಯ್ರು ಯೇನ್ ಕೇಳ್ದ್ರು ರಾಜನ ಕೂಡೆ? +“ಹೇಂಗೆ ಹೇಂಗ್ನವರ್ಗೆ ಹೇಳಬೇಕು?” +ಕೇಳೂರೊಳ್ಗೆ, “ವಂದ್ ಮುದ್ಕ್ಯಂತವರು ಕರ್ಕಂಬಾರೊ” ಹೇಳಿ ರಾಜ ಹೇಳ್ದ. +ಆಗಿಟ್ಟೊತ್ತಿಗೆ ಅವ್ರ್ ಹೋದ್ರು. +ಈ ಪೇಟೆ ತುದಿಗ್ ವಬ್ಬರನೂ ಬಿಡಲಿಲ್ಲ, “ರಾಜರ ಹುಕುಂ ಆಗದೆ ಬನಿ” ಅಂದ್ ಹೇಳಿ. +ಬರಬೇಕಾರ್ ನಲವತ್ಜನ್ರ ಮುದ್ಕಿರ ಕರ್ಕಂಬಂದ್ ರಾಜ್ನಮನೆ ಅಂಗ್ಳದಲ್ ಕುಳ್ಸುದ್ರು ಅವ್ರು. +ಕುಳ್ಸದ್‌ ಕೂಡ್ಲೆಯ ಆಸ್ರಿಗ್, ಬಿಸ್ರಿಗ್ ರಾಜ ಕೊಟ್ಟ. +ಕವಳಕ್ ಕೊಟ್ಟು ಜಪ್ಕಂತ ಕೂತ್ಕಂಡಾರೆ ಅವರು. +ಅವಳು ಹೊಡಿಯಾಡ್ತೇ ಅದೆ. +ಹೋದವರಲ್ಲಿ ಹುಟ್ ಸೂಲಗಿತ್ತಿರೂ ವಬ್ರೂ ಇಲ್ಲ. +ವಬ್ಬರಿಗೂ ಅನುಬವ ಇಲ್ಲ. +ಕೂತ್ಕಂಬಿಟ್ಟಾರೆ ಕವಳ ಜಪ್ತಿ. +“ಹಾಲಿ ಹೆರು ಕೋಟ್ಲೆ ಯಲ್ಲ, ಯೇನಾರೂ ಕಸಾಯ-ಬಿಸಾಯ ಮಾಡ್ ಕೊಡಿ” ಅಂದ್ ಹೇಳ್ದಾ. +ಸುಮ್ಮಂಗ್ ಕುಂತ್ ಬಿಟ್ರು. +ಅಟ್ ಹೇಳುದ್ರೊಳ್ಗೆ ರಾಜಂಗ್ ನೋಡಿ. . . ನೋಡಿ. . . ನೋಡಿ. . . ಬೇಜಾರ್ ಬಂತು. +“ತನ್ನಂಗಳದಲ್ಲಿ ಜಾಗದೆ ಅಂದಿ ತಂದ್ ಹಾಕ್ಕಂಡ ಹಾಂಗಾಯ್ತು ಇದು. +ಇವ್ರಟ್ಟೂ ಜನರ ತಕಂಡ್ ಹೋಗಿ ವಂದ್ ಕೋಣಿಗ್ ಕೂಡು. +ನಾಳಿಗ್ ಹನ್ನೆರಡ ಗಂಟೆಗ್ ವಿಚಾರ ಮಾಡ್ವ. . . ” ಶಿಪಾಯ್ರ ಕೈಲ್ ಯೇನ್ ಹೇಳುದ್ನೋ ಕೇಳ್ದ್ರೆ, “ನೀವ್ ಹನ್ನೆರಡ ಜನ ಊಟಾ ಮಾಡ್ಕಂಡಿ, ಹನ್ನರಡ ಹೊರೆ ಹುಳ್ಸೆ ಬರ್ಲ ತಂದ್ ಅಂಗಳದಲ್ ಹೊತಾಕಿ.” +ಊಟಬೀಟ ಮಾಡ್ಕಂಡಿ ಹನ್ನೆರಡ ಜನ ಹೋಗಿ ವಂದ್ ಮರ ಪೂರಾ ಕಡ್ದಿ, ಚೊಕ್ ಮಾಡದ್ರು; ಹನ್ನೆರಡು ಹೊರ್ಯಾಗಬೇಡ್ವಾ? +ಹಾಂಗೇ ಅವ್ರು ಹನ್ನೆರಡ ಹೊರೆ ಬರ್ಜರಿ ಕಟ್ಕಂಡ್ ಬಂದ್ರು. +ಈ ಗಾಡ್ಗರಿದ್ದರಲ್ಲ. +ಲೆಕ್ಕ ಮಾಡ್ತೇ ಇದ್ದವ್ರು, “ಹರಹರಾ! +ನಾವು ಸತ್ರು ನಾಳಿಗ್” ಹೇಳ್ ಮಾಡ್ದ್ರು. +“ಹನ್ನೆರಡ ಹೊರೆ ಹುಳಸೆ ಬರ್ಲಲ್ ಹೊಡ್ದ್ರೆ ತಾವೇನ್ ಬಚಾವಾಗುರೋ?” +ಅಟ್ಟಾಗುರೊಳಗೆ - ಊಟಬೀಟ ಮಾಡ್ಕಂಡ ರಾಜ ಮನಿಕಂಡ. +ಅವನ ದೇವರಿಗೆ ಗೊತ್ತಾಯ್ತು. +‘ನಾಳೆಕೆ ಯೆಂಬತ ಜನ್ರಿಗೆ ಹುಳ್ಸೆಬರ್ಲಲ್ ಹೊಡದಿ, ನಾನಾಚಾರ ಬಂದನ ಮಾಡ್ತ. . . ’ ಹೇಳಿ. +“ಅದು ಮಾಡೂದ್ ಸರ್ವತಾ ಬೇಡ. +ಅವ್ರಿಗ್ ಮಾಪ್ ಮಾಡಿಬಿಡು” ಹೇಳಿ ಹೇಳು, ಹೇಳಿ ಸಪ್ನದಲ್ ಬಂದು ದೇವ್ರು ಹೇಳ್ತು ಬಟ್ಟನ ಕೈಲಿ. +ಆಗ ಬಟ್ರು ಬಂದಿ ರಾಜ್ನ ಕೈಲ್ ಹೇಳ್ದ್ರು. +“ಮತ್ತೆ ಹನ್ನೆರಡ ವರ್ಷನ ಉರಿಪಿಂಡ ನಾಳಿಗೆ ಹುಟ್ತನಂತೆ ಮತ್ತು ಆ ಸೂಲಗಿತ್ಯರು, ನಲ್ವತ್ ಜನ ಗಾಡಿಗ್ರು ಅವರಿಗೆ ಹಾಗೆ ಮಾಫ್ ಮಾಡಬಿಡ್ಬೇಕು ಹೇಳಿ ದೇವ್ರು ಹೇಳದೆ. +ಬೆಳಿ ಹೂಂಗ್ ಕೊಟ್ಟರೆ. +ಈ ಹೂಂಗ್ ಮುಡ್ಕಂಡ್ ಕೂಡ್ಲೆ ಹನ್ನೆರಡವರ್ಷನ ಉರಿಪಿಂಡ ಹುಟ್ತಾನಂತೆ.” +ಅಟ್ಟಾಗುರೊಳಗೆ ಬಟ್ರು ನಸ್ಕಿಲೆ ಬಂದ್ ಇಲ್ ತೆಳಿಸ್ದ್ರು ಅವರ್ಗೆ. +“ಮೈಮುಟ್ಟದೆ ಬಿಡಬೇಕು. . . ” ಹೇಳ್ದ. +ಆ ಹೂಂಗ್ ತಲೆಮೇಲಿಟ್ ಕೂಡ್ಲೆ ಹನ್ನೆರಡ ವರ್ಷನ ಉರಿಪಿಂಡ ಹುಟ್ತ ರಾಜ್ನಿಗೆ. +ಹುಟ್ದ ಕೂಡ್ಲೆಯ ರಾಜನು ತನ್ಗ ಪಂಡಿತರ ಮನೆಗ್ ಹೋದ, “ಹುಟ್ದಗಳ್ಗೆ ಚಲೊ ಅದ್ಯೋ ಹೇಗೆ?” +ನಾಮಕರಣ ಕೇಳಲಿಕ್ಕೆ ಪಂಡಿತರ ಮನೆಗ ಹೋದ. +ಪಂಡಿತ್ರ ಕೈಲ್ ಕೇಳವಂತೋನಾದ, “ಗಳ್ಗೆ ಹೇಗದೆ? +ಹೆಸ್ರು ಯೇನ್ ಬಂದದೆ?” +ಆಗ, “ಹುಟ್ದ ಗಳ್ಗಿ ಬಿಳ್ಗಿಯೆಲ್ಲಾ ಲಾಯ್ಕ್ ಬಂದದೆ. +ನಾಮಕರಣ ಇಟ್ಕಂಡೇ ಬಂದನೆ. . . ಬೇರೆ ಹೆಸರಿಲ್ಲ. +ಹನ್ನೆರಡ ವರ್ಸನ ಉರಿಪಿಂಡ.” +ಹುಡ್ಗನಿಗೆ ಚಲೋ ರೀತಿಂದಿ ಅವ್ರ್ ಸಂರಕ್ಷಣಿ ಮಾಡ್ದ್ರು. +ಹುಟ್ ಹನ್ನೆಡದ್ನೆ ದಿನಕೆ ರಾಜನಾದರೂ ಬಹಳ ಖರ್ಚು ಮಾಡ್ದ-- ಬಂದು-ಬಳಗ ಕರಸಿ. +ಹುಡ್ಗನಿಗ್ ಕುಡಸೂಕ್ ತಾಯಿಗ್ ಹಾಲಿಲ್ಲ. +ಕುಡಸೂಕೆ ಹಾಲದಾಸಿಯ ತಂದಿಟ್ಕಂಡ. +ಅವ್ನ ಸಾಕಿಸಲಗಿ ಮೂರ್ ವರ್ಸ ಕಳೀತು. +ಹಾಂಗೇ ಯೆಂಟ ವರ್ಸ ಕಳೀತು. +ಯೆಂಟ್ ವರ್ಸ ಕಳ್ದ ನಂತ್ರ ಪರದಾನಿ ಕರ್ಸವಂತೋನಾದ. +ಕರ್ಸಕೂಡ್ಲೆ ಅವ ಬಂದ. +“ಯೇನಪ ಕರಸಿದ್ದು?” +“ಯೇನಿಲ್ಲ, ತನ್ನ ಮಗನಿಗ್ ನಂಟಸ್ತನಕೆ ಹತ್ ಗಂಟಿಗೆ ಊಟ ಮಾಡ್ಕಂಡಿ ಹೋಗಬೇಕು” ಅಂದ್ ಹೇಳ ರಾಜ ಹೇಳ್ದ. +ಅಟ್ ಹೇಳುದ್ರೊಳ್ಗೆ ಪರ್ದಾನ ಯೇನ್ ಹೇಳ್ತಾನೆ ಕೇಳ್ದ್ರೆ, “ಹುಡ್ಗನಿಗೆ ಹನ್ನೆರಡ ವರ್ಸ ಆಯಿಸ್ ಹೇಳಿ ಜಗತಕೇ ಗೊತ್ತದೆ. +ಹಾಗಿರುವಾಗ ಅವನಿಗ್ ಯೆಂಟ ವರ್ಸ ಕಳ್ದದೆ. +ನಾಲ್ಕ ವರ್ಸ ಬಾಳತಾ ಅವ. +ಅವನಿಗ್ ಯೆಲ್ಲೂ, ಯಾರೂ ಹೆಣ್‌ ಕೊಡ್ವಾಗಿಲ್ಲ.” +ರಾಜ ಯೇನ ಹೇಳ್ತಾ ಕೇಳದ್ರೆ, “ಇಲ್ಲಿ ಸುದ್ ಅಲ್ಲಿ ಗೂತ್ತಿಲ್ಲ; ಅಲ್ಲಿ ಸುದ್ ಇಲ್ಲಾಗುದಿಲ್ಲ. +ಅಟ ದೂರ್ಕ್ ಹೋಗಿ ನಂಟಸ್ತಾನ ಮಾಡಬೇಕು.” +“ಅಡ್ಡಿಲ್ಲ” ಅಂದ್ ಹೇಳಿ, ಮಾರ ದಿವ್ಸ ಊಟ ಮುಗಿಸಿ ಸೀದಾ ಮೈಸೂರ್ ರಾಜ್ಯಕ್ ಹೋದ್ರು. +ಆಗ ಅಲ್ ಹೋಗಬೇಕಾರೆ ಇವನ ಪೊಟೋ ತಕಂಡ ಹೋಗಾರೆ. +ಸಾಯಂಕಾಲದ ಹೊತ್ತಿಗೆ ಅಲ್ ಹೋಗ್ ಮುಟ್ದ್ರು‌. +ಅಲ್ ಬಾಳ ಉಪಚಾರ ಮಾಡದ್ರು. +ಊಟಬೀಟ ಯೆಲ್ಲಾ ಮುಗಿತು ರಾತ್ರಕೆ. +ಊಟ ಮುಗ್ದ್ ನಂತ್ರ ಅವ್ ಕೇಳವಂತೋನಾದ. +ಮೈಸೂರು ರಾಜ; “ಯೆಲ್ಲಾಯ್ತಾ ನಿಮಗೆ? +ಯೇನ್ ಬಂದಿದ್ರಿ? +ಯೇನತಾನೆ?” ಅಂದಿ. +“ಹುಡುಗನಿಗೊಂದ್ ನೆಂಟಸ್ತಾನಕ್ ಬಂದಿದೆ. +ನಿಮಗೊಂದ ಹುಡ್ಗಿ ಅದೆ ಹೇಳ ಕೇಳ್ಕಂಡ್ ಬಂದಿದೆ.” + ಮೈಸೂರ್ ರಾಜ ಯೇನ್ ಕೇಳ್ತಾನೆ ಕೇಳದ್ರೆ, “ಪೋಟೋ ತಂದಿರೋ ಆ ಹುಡ್ಗಂದು?” + “ಹೌದು; ತಂದಿದೆ” ಅಂದ ಹೇಳ್ ಪೋಟೋ ಕೊಡ್ತಾನೆ ಈ ಹುಡ್ಗಂದು. +ಅವ ರಾಜ ನೋಡ್ಕಂಡಿ, ಹುಡ್ಗಿಗ್ ತೋರ್ಸ್ ಹುಡ್ಗೀನೂ “ಅಡ್ಡಿಲ್ಲಾ. . . ” ಅಂತು. +ಹೆಣ್-ಗಂಡ್ಗೆ ಹೊಂದ್ತು ಅಲ್ಲಿ. +ಆವಾಗ್ಯೆಲ್ಲ ಬಾಯ್ ಸಿಯಾಬಿಯಾ ಮಾಡಿ, “ನಾಕನೇ ದಿವ್ಸಕೆ ನಾವ್ ದಿಬಣ ತಕಂಡ್ ಬರ್ತ್ರು, ನೀವು ಇಲ್ಯೆಲ್ಲಾ ಅನಕೂಲ ಮಾಡ್ಕಳಿ” ಅಂದ್ ಹೇಳಿ ಬಂದ್ರು. +ಆಗೆ ಇಲ್ ಬಂದ ಮಾರನ್ ದಿವಸೇಯಾ ಅಲ್ಲಿ ನೆರದುರಲ್ ವಂದ್ ಮುದ್ಕ ದಬ್ಬಲ್ ತಾರ ಮಾಡ್ದ ಮೈಸೂರು ರಾಜಗೆ. +ಆಗೆ, “ಯೇಲೆ ಮೈಸೂರ ರಾಜನೇ! +ನೀನು ಮಳ್ ಬಿದ್ದೆ. +ನಿನ್ನಾಗೆ ರಾತ್ರಿಗೆ ವಂದ್ ನೆಂಟಸ್ತಾನ ಆಗಿತ್ತು. +ಮುಂದಿನ ಪರಿಸ್ತಿತಿ ಯೇನು ಅಂದ್ ಗೊತ್ತಿಲ್ದೆ ನೀನು ಲಗ್ನಕೆ ತಯಾರ್ ಮಾಡದ್ಯಲ್ಲ? +ನಿನ್ನ ಹುಡ್ಗಿ ಕೊಡ್ತೆ ಅಂದ್ ಹೇಳಿ? +ಆ ಹುಡ್ಗನೀಗೆ ಹನ್ನೆರಡ ವರ್ಸನ ಉರಿಪಿಂಡಾಗಿತ್ತು. +ಈಗ ಅವನಿಗೆ ವಂಬತ್ ವರ್ಸ ನಡೀತದೆ; ಇನ್ ಮೂರ್ ವರ್ಸ ಇರ್ತ ಅವ. +ನಿನ್ ಹುಡ್ಗಿ ಕೆಟ್ ಹೋಗ್ತದೆ. +ಮುಂದಿನ ವಿಚಾರ ನೋಡ್ಕಂಡಿ ನೀನ್ ಕೆಲ್ಸ ಮಾಡು” ಅಂದಿ ತಾರ್ ಮಾಡ್ಬಿಟ್ಟ ಅವ. +ಆಗ ಮೈಸೂರ ರಾಜ ಯೇನ ಮಾಡದ್ನೊ ಕೇಳ್ದ್ರೆ, “ಓಹೋ! +ತನ್ಗ್ ಮೋಸ ಮಾಡದ್ಯಲ್ಲಾ” ಅಂದ್ ಹೇಳಿ, “ತನ್ನ ಹುಡ್ಗಿ ಸಲ್ವಾಗಿ ದಿಬ್ಣ ನೀನ್ ತರುದ್ ಬೇಡ, ತನ್ ಹುಡ್ಗಿ ಕೊಡುದಿಲ್ಲ” ಅಂದ್ ಹೇಳ ತಾರ್ ಮಾಡ್ದ. +ಅಲ್ಲಿಗೆ ಹತ್ ವರ್ಸಾಯ್ತು ಆ ಹುಡ್ಗನಿಗೆ. +ಇನ್ ಯೆರಡ ವರ್ಸ ಅದೆ. +ಆವಾಗೆ ಮತ್ತೆ ಪರ್ದಾನಿ ಕರ್ದ ಅವ. +ನೆಂಟಸ್ತನದ ಬಗ್ಗೆ ಹೋಗೂಕೇಯಾ. +ಪರ್ದಾನಿ ಹೋಗಿ, ಶಂಪಗೆ ರಾಜ ಅವ್ ಹೇಳ್ ಬಾಳ ದೂರ ಅದು. +ಅಲ್ ಹೋಗ್ ಪೋಟೋಗೀಟೋ ತೋರ್ಸಿ ನೆಂಟಸ್ತನ ನಿಚ್ಚಯ ಮಾಡ್ಬಿಡ್ತ್ರು. +ಮಾಡ್ ಮನೆಗ್ ಬಂದ್ಬಿಡ್ರು. +ಮುಂಚೆ ತಾರ್ ಮಾಡ್ದ್ ಮುದ್ಕ ಗುತ್ತಾಗಿ ಮತ್ ತಾರ್ ಮಾಡ್ದ ಅವ. +ಅಲ್ಲಿಗ್ ಹನ್ನೊಂದ್ ವರ್ಸಾಯ್ತು - ವಂದ್ ವರ್ಸ ಉಳಿತೀಗೆ. +ಆಗೆ ರಾಜ ಅವನಿಗ್ ಮದವಿ ಮಾಡುವ್ ಆಸಿ ಬಿಟ್ಟ. +ಯೆರಡ್ ನೆಂಟಸ್ತನ ಮುರೀತು. +ಆಗೆ ಅವ ಹೋಗ್ ಆಲೋಚ್ನಿ ಹಾಕ್ದ. +ಯೇನ್ ಮಾಡುದ್ನೋ, ಯೇನ ಬಿಟ್ನೊ ಯಾರ್ ಮಾತ್ನೂ ಕೇಳ್ವನಲ್ಲ ಅವ. +ತನ್ ಸ್ವತಂತ್ರ ಹೇಳಿ, ಮಾತ್ನ ಯಾವದೂ ಕೇಳ್ವನಲ್ಲ ಅವ. +“ನಮ್ ಕಣ್ ಮುಂದೆ ಹನ್ನೆರಡ ವರ್ಸಾಗೂತ್ನೆ ಸತ್ತೇ ಹೋಗ್ ಬಿಟ್ರೆ, ಬಾವಿ ಬಿದ್ದಾದ್ರೂ ತಾವ್ ಜೀವಾ ಕಳ್ ಕಳ್ಬೇಕಾಯ್ತು.” +ಆವಾಗವ ವಂದ್ ಆಲೋಚ್ನಿ ಹಾಕ್ದ. +ಅವನಿಗ್ ಕಾಸೀಯಾತ್ರೆಗ್ ಕಳ್ಸಬೇಕು. +ಹೋಗೂದ್‌ ಆರ್ ತಿಂಗ್ಳ. . . ಬರೂದ್ ಆರ್ ತಿಂಗ್ಳ. +“ಹಾದೀಲಾದ್ರೂ ಬಿದ್ ಸತ್ರು ಕೂಡಾ - ನಮ್ ಕಣ್ ಮುಂದ್ ಸತ್ತಿದ್ದೇನ ನಾವ್ ನೋಡೂದಿಲ್ಲಲ್ಲ. +ಅಂದ್ ಮೇಲ್ ನಾವು ಅಷ್ಟು ಪಚ್ಚಾತಾಪ ಬಿಡೂದಿಲ್ಲಲ್ಲಾ” ಅಂದ ಹೇಳಿ. +ಅವನ ಬಾವನೆಂಟದೇರು ಯೇಳ ಜನರಾಗಿತ್ತು. +ಯೇಳ ಜನರ ಮೇಲೆ ತಂಗಿ ಹುಟ್ಟಿತು. +ಇವ್ನಿಗ್ ಕೊಟ್ಟಿದ್ರು. +ಅವ ಯೇನ ಹೇಳ ಕಳ್ಸದ ಹೇಳದ್ರೆ, “ತನ್ ಕಿರೀ ಬಾವಗೆ ಕರಕಂಡ್ ಬಾ ಬರ್ಲಿಕ್ ಹೇಳನೆ. . . ” ಅಂದಿ ಹೇಳಿ ಹೇಳ್ ಕಳ್ಸದ. +ಕಂಗಾಲ್ ಬಿದ್ ಹೋದ್ರು ಅವರು. +ಕಿರಿಯವ ಬರಲಿಕ ಹಣ್ಕದ. +ಬರಬೇಕಾದ್ರೆ ಅಣ್ಣ ಅಂಬವ ಕೇಳ್ದಾ, “ಯಾವಾಗ ಬರ್ತೆ ತಮ್ಮ ನೀನು?” ಅಂದ್ ಹೇಳಿ. +“ಯೆಂತಕೊ ಯೇನತಾನ, ತನಗೇನ್ ಗೊತ್ತಿಲ್ಲ. +ಆದ್ರೆ, ತಾನ್ ಬಂದ ಮೇಲೆ ಮನೆಗ್ ತಮ್ಮ ಬಂದ ಅಂತ ತೆಳ್ಕಳಿ” ಅಂದ, ಅಗೆ ಕರ್ಕಬಂದ. +ಅವಾಗ್ ಹೆದರ್ಕ್ಯಾಗಿ ಯೇನ ಹೇಳ್ತ, ಯೇನ ಬಿಡ್ತಾ ಹೇಳ ತಿಳಿದೇಯ ಸಿಪಾಯ ಮುಂದೇ ಇವ ಹತ್ತಿಪತ್ ಮಾರ್ ಹಿಂದೆ ಅಲೋಚ್ನೆ ಹಾಕ್ತೆ ಬತ್ತಾ. +ಸುಮಾರ್ ದೂರ್ ಇರಬೇಕಾರೆ, “ಬಾವ. . . ಬಾವ. . . ” ಕರದ. +ತನ್ನ ಬಾವ ಅಂಬವ ತನ್ ಬಿತಿಗಾಗಿ ಹೆದ್ರಕಂಡಿ ಬರ್ತ, “ಬಾವಾ. . . ಹೆದ್ರ್ ಬೇಡವೋ, ನಿನ್ ತಲೆ-ಬಿಲೆ ಕಡ್ಸೂದಿಲ್ಲ” ಹೇಳ್ತಾ. +ಆಗ ದಡ್ದಡಿ ಹೋದ ಅವ, ತನ್ನ ಜೀವಕೇನ್ ಹೈಗಯ್ಯಾಗುದಿಲ್ಲ ಅಂದ್ ಹೇಳ್ತಾ. +“ಯಾಕ್ ಕರ್ಸಿದ್ರಪ್ಪ ತನ್ಗೆ?” ಆಗವ ಹೇಳ್ತಾ, “ಬಾವಾ. . . ಹೆಚ್ಗಿ ಯೆಂತದೂ ಇಲ್ಲೊ. . . ನಿನ್ ಅಳಿನಿಗೆ ಕಾಸಿಯಾತ್ರೆಗ್ ಕರ್ಕಂಡ್ ಹೋಗಿ, ಕರ್ಕಂಡ್ ಬಂದ್ ಬಿಡೂ. +ಅವ ಯೆಲ್ ಹಸ್ವಾಗ್ತದೆ ಅಂದ, ಅಲ್ಲಿಟ್ ಅವಗ್ ಅನ್ನ ಮಾಡ್ ಹಾಕು ಊಟಕ್ಕೆ.” +ಆವಾಗ, ‘ಆಗೂದು. . . ’ ಅಂದ್ ಹೇಳಿ ಅಳಿಯನ ಕರ್ಕಂಡು ಹೋದ. +ಯೆಯಡೂ ಜನ ಕಾಸಿಯಾತ್ರೆಗೆ ಹೋಗವಂತೋರಾದ್ರು. +ಆಗ ಹೋಗ್. . . ಹೋಗ್. . . ಹೋಗಿ. . . ಸಾದಾರಣ ಹನಮಂತೀ ಕೆರೆ ಬುಡ್ಕ್ ಹೋದ್ರು. +ಆಗೆ, ಹೋಗಿ ಸಾದಾರಣ ಯೇನ್ ಹೇಳದ್ನೊ ಕೇಳ್ದ್ರೆ, ‘‘ಈ ಕಟ್ಟೆ ನೋಡ್ ಯೆಟ ಚೆಂದದೆ! +ಈ ಕೆರೆವಳಗ್ನ ನೀರ್ ಯೆಟ್ ಚೆಂದೆದೆ ನೋಡು. . . ” ಅಂದ ಅಟ್ಟತ್ತಿಗೆ ಮಾವಯ್ಯ, ‘‘ಕಟ್ಟೆ ಚೆಂದ ಹೌದು, ನೀರ್ ಚೆಂದ ಹೌದು; ಕೆರೆ ಬದಿಗ್ ಹೋಗಬೇಡ ನೀನು. . . ” ಅಂದ. +ಅವ ಯೇನ್ ಹೇಳ್ದ ಕೇಳ್ದ್ರೆ, “ಕೆರೆ ಅಂದ್ರೆ ಹೆದ್ರುಕ್ಯೋ ನಿನ್ಗೆ?” ಅಂದ್ ಕೇಳ್ದ ಮಾವನಿಗೆ. +ಕೆರೆ ಇಳ್ದ - ಕೈ ಕಾಲ್ ತೊಳ್ಕಂಡ್ ಬಂದ. +ಅಟ್ಟಾದ ಕೂಡ್ಲೆಯ, “ಮಾವಯ್ಯಾ. . . ತಾನ್ ಮುಂದೇಗ್ ಬರ್ನಾರೆ, ಹಸ್ವಾಗ್ತದೆ. +ಇಟ್ ಅನ್ನ ಮಾಡು; ತಾ ಬಗೆಲ್ ಬಿದ್ಕಳ್ತೆ” ಅಂದು ಸುಮ್ನ ಬಿದ್ಕಂಡ. +ಮಾವಯ್ಯನಿಗೆ ಕೆರೆ ಬದಿಗ್ ಹೋಗೂಕೇ ಹೆದ್ರಿಕಿ, ನೀರ್ ತರ್ತಾ ಹೇಗೆ? +ಅನ್ನ ಮಾಡ್ತಾ ಹೇಗೆ? +ಕಟ್ ಬಂತೀಗೆ. +ಯೇನ ಮಾಡಬೇಕಾಯ್ತು? +ಮಾತ ಮೀರೂಕ್ ಉಪಾಯೆಲ್ಲ - ಆರ ಮೊಳ್ಳನ ವಂಜಿತ್ತು ಅವನ ಕೈಲಿ. +ಚಂಬೀಗ್ ಉಳ್ಳ ಮಾಡ್ ಹಾಕ್ದ ತುದಿ ಕೈಲಿ ಹಿಡ್ಕಂಡ ಕಂಮ್ಚ್ ಬಿದ್ಕಂಡಿ ಚಂಬಗಿ ಉಳ್ಸ್ ಬಿಟ್ಟ. +ಕೆರೆ ವಳ್ಗ್ ಬಿತ್ತು. . . ಬುಡುಬುಡು ತುಂಬಿದ ಸಬ್ದ ಕೇಳ್ತಿವಂಗೆ ಯೆಳ್ಕಂಡ. +ಆ ಚಂಬ್ಗಿ ನೀರು ಹೇಗಾರು ಮಾಡಿ, ಮೈವಂದ್ ವದ್ದ್ಯೆ ಮಾಡ್ಕಂಡ. +ಹಾಗೆ ಮತ್ತೊಂದ್ ಚಂಬ್ ಕೆರೆಗ್ ಬಿಟ್ಟ. +ಮತ್ತೊಂದ್ ಚಂಬ್ಗ ನೀರ್ ತೆಗ್ದ - ವಂದ್ ಚಂಬಗಿ ನೀರ್ನಲ್ಲೆ ಅಕ್ಕಿ ತೊಳ್ದ, ಯೆಸರಿಟ್ ತಪ್ಪಲೆ ಯೆತ್‌ ಬಿಟ್ಟ. +ಮಾತ್ರ ಕೊದ್ ಬಂದಿತ್ತು ಬರಲಿಲ್ಲಾ ಇವ್ನಿಗೆ ಮನ್ಗದವನಿಗೆ ಯೆಚ್ಚೆರರ್ಯಾಯ್ತು. +ಆಗೆ ಕಟ್ಟೆ ಕೆಳಗಿಳ್ದ್ ಬಂದ್ ಬಿಟ್ಟ ಅವ. + “ಮಾವಯ್ಯೋ‌. . . ’’ ಕೇಳ್ದ, “ಹಾಗಾದ್ರಿಲ್ಲಿ ಚಂದ್ರಾವತಿ ಪಟ್ಣದಲ್ಲಿ ಮದವಿ. +ತಾನ್ ಹೋಗಿ ಮದವಿ ನೋಡ್ಕಂಡಿ, ಚಂದ್ರಾವತಿ ಪಟ್ಣ ನೋಡ್ಕಂಡ್ ಬಂದ್ ಬಿಡ್ತೆ” ಅಂದ. +ಆಗೆ ಅವ, “ಏಹೇ! +ನಾವ್ ಕಾಸೀಯಾತ್ರಿಗ್ ಹೋಗೂಕ್ ಬಂದೊರು, ಹೋಗೂದ್ ಬೇಡ” ಅಂದ ಕೈ ತಡೆದ. +ಕೇಳ್ತ್ನ? +ನೆಡ್ದ್ ಬಿಟ್ಟ ಅವಾ. . . ಚಂದ್ರಾವತೀ ಪಟ್ಣಕ್ ಹೋದ. +ಚಂದ್ರಾವತಿ ಪಟ್ಣಕ್ ಹೋಗ್ ಮುಟ್ದ. +ಅಲ್ದೆ, ಮದಿ ಚಪ್ಪರಕೇ ಹೋದ. +ಮದಿಯೀತ್ತು ಹೌದು. +ಅಲ್ಲಿ ಯೇನ್ ಹರ್ಕತ್ತಾಗ್ ಹೋಗದೆ ಕೇಳ್ದ್ರೆ, ಆ ಮದಿಯಾಗು ಮದ್ಮಗನಿಗ್ ಯಚ್ರ್ ತಪ್ ಹೋಗದೆ. +ಈ ಮದಿಸಾಗ್ಸು ಬಟ್ರ್ ಯೇನ್ ಹೇಳ್ತ್ರು ಕೇಳ್ದ್ರೆ, “ಎಲೆ ರಾಜನೇ. . . ಮದಿ ಮೂರ್ತ ಇಟ್ಟದ್ದು ಅಮೃತ ಗಳಗಿ ತಪ್ ಹೋಗ್ತದೆ. +ಇಲ್ ವಂದ್ ತಾಸ್ನ ಮಾತಿಗ್ ಯಾರ ಕೂಡಾದ್ರೂ ಬಂದ್ ಬಾಸಿಂಗ ಕಟ್ಕೊ ಹೇಳು. +ದಾರೆ ವಂದ್ ಯೆರ್ದ್ ಆದ್ ಮೇಲೆ ಬಾಕಿ ಚಡಂಗ ಮಾಡ್ಕಂಡಿ, ಅವ್ನ ಹಿಂಡತೀಗ್ ಅವ ಕರ್ಕಂಡ್ ಹೋಗ್ಲಿ. +”ಅವ ವಬ್ಬೊಬ್ಬರಗಾಗ್ ಕೇಳ್ತ. +ಯಾರೂ ‘ನಾನ್ ಕಟ್ಕಂಬೂದಿಲ್ಲ. . . ತಾನ್ ಕಟ್ಕಂಬೂದಿಲ್ಲ’ ಅಂದ್ ಯೆಲ್ಲರೂ ಹೇಳವವರೇಯಾ. +ಆಗಟ್ಟೊತ್ತಿಗೆ ಅಷ್ಟೂ ಜನ್ರಿಗೂ ಕೇಳಿ ಬಾಗ್ಲಿಗ್ ಬಂದಿದ್ದ ಅವ. +ಅವ ಬಾಗ್ಲಿಗ್ ಬರೂ ಅಟ್ಟೊತ್ತಿಗೆ, ಈ ಹನ್ನೆರಡ ವರ್ಸನ ಉರಿಪಿಂಡನೂ ಅಲ್ ಚಪ್ಪರಕೇ ಹೋಗ್ ಹೊಕ್ದ. +ಬಾಕಿ ಜನರು, ‘‘ಈಗ ವಬ್ಬ ಬಂದ, ಅವ್ನ ಕೈಲ್ ಬಾಸಿಂಗ ಕಟ್ಕೊ ಹೇಳು ನಾವೊಬ್ರೂ ಕಟ್ಕಂಡ್ದಿಲ್ಲ. +ಅವ ಕೈಲ್ ವಂದ್ ಕೇಳ ನೋಡು ನೀನು” ಅಂದ್ರು ಅವರು. +ಆಗಟ್ಟೊತ್ತಿಗೆ ಇವನ ಕೈಲಿ ಚಂದ್ರಾವತಿರಾಜ ಕೇಳ್ದಾ, “ಯೆಲ್ಲಾಯ್ತು ನಿನಗೆ? +” “ದೂರದೇಸಾಯ್ತು” ತನಗೆ ಅಂದ ಅವ. +“ಹಾಂಗಾದ್ರೆ, ಈಗ ವಂದ್ ಕೆಲ್ಸಕ್ ಹರ್ಕತಾಗದೆ ಈಗೊಂದ ಗಳಗಿ ಮಾತ್ಗೆ ಬಾಸಿಂಗ ಕಟ್ಕಂಬ್ಯೋ ಹೇಗೆ? +ಕಡೆಗ್ ನಾಳಿಗ್ ಅವ್ನ ಹಿಂಡ್ತಿಗ ಅವ ಕರಕಂಡ್ ಹೋಗ್ಲಿ, ತುರ್ತಕೆ” ಕೇಳ್ದ. +ಕೇಳೂರೊಳ್ಗೆ ಅವ ಯೇನ ಹೇಳದ್ನೊ ಕೇಳದ್ರೆ, “ಬಾಶಿಂಗ ಅಂದ್ರ್ ಯೇನ್ ಬಾಳ ದೊಡ್ಡ ಹೊರೆಯೋ? +ಕಟ್ಟಿ ತನಗೆ. . . ” ಅಂದ್ ಹೇಳ್ದ. +ಆಗಟ್ಟೊತ್ತಿಗೆ ಇವರು ಯೆಲ್ಲಾ ವಾದಿದವರಿಗೆ ರಾಜ, “ವಾದ್ಯ ಮಾಡಿ. . . ” ಹೇಳ್ದಾ. +ಅವರ ಗಳಿಗಿ ತಪ್ ಅರ್ದತಾಸಾಗ್ ಹೋಗದೇ. +ಅವ್ರ ಪಂಡಿತರು ಮದ್ವಿ ಸಾಗ್ಸೂಕ್ ಬಂದವರು, “ತಪ್ಲಿಲ್ಲ. . . ” ಅಂತ್ರು. +ಅಟ್ಟೊತ್ತಿಗೆ ಇವ್ನಿಗ್ ತಕಂಡ್ ಹೋಗ ಮಂಟಪದಲ್ ಕುಳ್ಸಿದ್ರೂ; ಹೆಣ್ ಹೆರ್ಗೆ ತಂದ್ರು ದಾರೆಯೆರ್ದ್ರು. +ಊಟೂಪಚಾರಯೆಲ್ಲಾ ಮುಗೀತು. +ಅವ್ರ ಪದ್ದತ ಯೇನಿತೊ ಕೇಳ್ದ್ರೆ, ಮದ್ವಿ ಆದ ದಿವ್ಸ ರಾತ್ರಿಗೆ ಮದಮಗನಿಗೂ-ಮದವಳ್ತಿಗೂ ವಂದೇ ಮಂಚದ ಮೇಲೆ ತಕಂಡ್ ಹೋಗ್ ಮಲ್ಗಸುದೂ ರಿವಾಜಿತ್ತು. +ಅಲ್ ತಕಂಡ್ ಹೋಗ್ ಮಲಗ್ಸದ್ರು. +ಆವಾಗ, ಕೂಡ್ಲೆ ಮದ್ ರಾತ್ರಿ ಕಳ್ದ್ ಬೆಳ್ಗುಂಜಾವದಲ್ಲಿ ಇವ್ನಿಗೆ ಯೇನಾತೊ ಕೇಳ್ದ್ರೆ, ಅಸರಾಗ್ ಹೋಯ್ತು. +ಕೂಡ್ಲೆಯಾ ಇವನಿಗೆ ಅಸ್ರಿಗ್ ತಂದ್ ಕೊಡ್ವೊರ್‌ ಯಾರಾಯ್ತು? +ಹುಡ್ಗಿ ಕೈಲ್ ಹೇಳೂಕೆ ತನ್ನ ಹಿಂಡ್ತಿಯಲ್ಲಾ - “ತಂಗಿ. . . ತಂದ್ ಕೊಡು” ಅಂದ. + ದಾರೆಯೆರ್ಕಂಡಾಗದೆ. ಗೊತ್ತಾಗತದೆ ಆಗುದಿಲ್ಲ. +ಇವ್ನ ಕೈಲ್ ಆಸ್ರಿ ತಡೂಕಾಗುದಿಲ್ಲ. +ಹಾಗ ತೆಳ್ಕಂಡ ಆಗೆ ವಂದ್ ಹುಂಡ್‌ಗುತ್ಗಿ ಹೇಳ್ ಬಿಟ್ಟಾ, “ನಂಗ್ ರಾಶಿ ಆಸ್ರಾಗ್ತದೆ” ಹೇಳ್ ಬಿಟ್ಟ, ಆಗದು ತೆಳ್ಕಂಡ್ತು. +ಸಟ್ನ ಯೆತ್ತು; ಬುಯ್ಡೆ ಹಚ್ತು. +ಬುಯ್ಡೆ ಹಚ್ಚಿ ಕೊಟ್ಗೆಗ್ ಹೋಗಿ ಸಿರ್ಕವಲಿ ಹಾಲ್ ಕರಿತು. +ಕರದಿ ತಕಂಡ್ ಬಂತು ಅದು. +ಅದ್ರಲ್ಲಿ ಸಕ್ರೆ ಹಾಕ್, ದೀಪದ ಕೊಡಿ ಮೇಲ್ ಹಾಲ್ ಕಾಸ್ತು. +ಹಾಲ್ ಕಾಸಿ ಅವನ ಬುಡ್ಕ್ ಇಟ್ ಬಿಡ್ತದೂ, ‘ಕುಡಿ. . . ’ ಅಂದ್ ಹೇಳಲಿಲ್ಲ. +ಕುಡ್ಕಂಡಿ ತಟ್ಟೆ ಆಚೆ ಇಡು ಹೇಳೂಕೂ ತನ್ ಹಿಂಡ್ತ್ಯಲ್ಲ. +ಯೇನ ಹೇಳಬೇಕು ಕರದಿ ಅಂದ್ ಹೇಳೂಕೂ ತೆಳಿಲಿಲ್ಲ. +ತಟ್ಟೆಯ ದಾರಿಂದದ ಮೇಲ್ ಇಟ್ಬಿಟ್ಟು. +ಇಟ್ರೆ ತಟ್ಟೆ ಇಂತಲ್ಲದೆ ಅಂದ್ ಅದ್ಕ್ ಗೊತ್ತಾಗಬೇಕಾಯ್ತಲ್ಲ? +ಏನ, ‘ಆಯ್ಕಳ್ಳಿ. . . ’ ಅಂದ್ ಹೇಳಿ, “ಆಸ್ರಿ ಕುಡ್ದ್ ತಟ್ಟೆವಂದ್ ದಾರಿಂದದ ಮೇಲ್ ಉಳಿತಲ್ಲ” ಅಂದ್ ಹೇಳ್ದ. +ಅದ್ಕೆ ಯೆಚ್ಚರ್ಕಿದ್ದಿತ್ತು, ಅದ್ ಹೇಳ್ತು. +ಆವಾಗೇ ಸುಮಾರ್ ಬೆಳಬೆಳಕಾಯ್ತು, ಆ ಬೆಳಕಾಗು ವೇಳ್ಯಂಲ್ಲಿ ಅವರ ಪದ್ಧತಿ ಯೇನಿತ್ತೊ ಕೇಳ್ದ್ರೇ, ಮದವಳತಿ ಮೊಕತೊಳ್ಕಂಡ ಬಂದಿ, ಅವನಿಗೆ ಕೈಹಿಡ್ದ್ (ಮೈಮುಟ್ಟಿ) ಯೇಳ್ಸು ಪದ್ಧತಿತ್ತು. +ಆಗೆ, ಅದು ಯೆದ್ದಿ ಮೊಕ ತೊಳಿಬೇಕು ಅಂದಿ ಯೆದ್ ಬಿಟ್ತೂ. +ಇವನೂ ಯೆದ್ದ. . . ಅವಗೆ ಹೆರ್ಗ ಬಿದ್ ಹೋಗೂಕ್ ದಾರಿ ತಿಳಿದೇಯ ಸುಮ್ನೆ ಇದ್ದ. +ಆಗೇ ಇದ್ ಹೆರ್ಗೆ ಬೀಳ್ಲಿಕ್ಕೆ ವಂದ್ ಕದನ ತಾಳಿ ತೆಗಿತು ಅದು. +ಅದ್ರ ಸಂತಿಗೇಯ ಇವನೂ ಹೆರ್ಗೆ ಬಿದ್ದ್ ಬಿಟ್ಟ. +ಅದು ಹೆರ್ಗೆ ಬಿದ್ದಿ, ಹೆರ್ಗ್ ಶಿಲ್ಕ ಶಿಕ್ಸ್ ಬಿಡ್ತು ಅದು. +ಇವ, “ಹೇಂಗ್ ಹೆರ್ಗೆ ಹೋಗ್ವ?” ಅಂದಿ. +ಇವ ಹೆರ್ಗೆ ಬಿದ್ದು, ಮಾವನ ಬುಡ್ಕ ನೆಡ್ದ ವೋಡಿ. +ಇದ್ ಮೊಕ ತೊಳ್ಕ ಬಂದಿ, ವಳ್ಗ್ ಬಂದ್ಕಂಡಿ ಇವ್ನ ಹುಡ್ಕತದೇ, ಇವನ ಪತ್ತೇನೇ ಇಲ್ಲ. +ಆಗೇ, “ಓಹೋ! +ತಾನ್ ಹೋಗಬೇಕಾರೇ ಯೇನೋ ಯೇನೋ ಮಾಡಿ ಅವ ಹೆರ್ಗ್ ಬಿದ್ ನೆಡ್ದ” ಹೇಳ ಮಾಡ್ತು. +ಮಾರನ್ ದಿವಸೆ ಯೇನಾಯ್ತೋ ಕೇಳದ್ರೆ, ಅವ ಯೆಚ್ಚರ್ಯಾಗ್ ಹೋಗನೆ-- ಯೆಚ್ರ ತಪೆದವಾ. +ಅರಸೂ, “ಬಾಕಿ ಚಡಂಗ ಮಾಡ್ ಅವನಿಗ್ ದಿಬ್ಬಣ ಕಳ್ಸಬೇಕು” ಅಂತ ಹೇಳಿ ಆಲೋಚ್ನಿ ಮಾಡ್ದ. +ಈ ಹುಡ್ಗಿ ಯೇನ್ ಹೇಳ್ತು ಕೇಳ್ದ್ರೆ, “ಸರ್ವತಾ ಬಾಕಿ ಚಡಂಗ ಮಾಡೂಕಾಗ, ತನ್ನ ಕೈಹಿಡ್ದವ ಬೇರೆ. +ಹನ್ನೈಡ್ ವರ್ಸನವರಿಗೆ ತಾನು ಅವನ ಬರಕಾಯ್ತೆ. +ಅಲ್ಲೆವರಿಗೂ ಅವ ಶಿಕ್ಕದೆ ಇದ್ದಾಗಾ, ಇವನಿಗ್ ನೀನು ಬಾಕಿ ಚಡಂಗ ಮಾಡಿ ಅವ್ನ ಕಳ್ಸಲಿಕ್ ಅಡ್ಡಿಲ್ಲ” ಅಂತು. +‘‘ಆಗ ಹನ್ನೆರಡ ವರ್ಸನವರಿಗೆ ತಾನು ಅವನ ಬರಕಾವೂದ್ ಆಗೂದಿಲ್ಲದ್ರೆ ತಾನು ಅವ್ನ ಸಂಗ್ತಿಗೆ ಹನ್ನೆರಡ ವರ್ಸನ ವಳಗೇಯ ಕಳ್ಸೂದಾದ್ರೆ ತಾನು ಜೀವ ಇಟ್ಕೊಳೂದಿಲ್ಲ. +ತಾನೂ ಯೇಳುಪ್ಪರಗಿ ಮೇಲ್ ಕುಂತು ಅವನ ಬರ ಕಾಯ್ತೆ ಉಳೀತೆ.” +ಆಗಿವ ಯೆಂತಾ ಮಾಡ್ಬೇಕಾಯ್ತೀಗೆ? +ಅವ ಹನ್ನೆರಡ ವರ್ಸನವರೆಗೆ ಉಳಿಬೇಕಾಯ್ತೊ? +ನಂತರಾ, “ತಾನು ನಿಮ್ಮ ಮನೇಲಿ ಉಳ್ಯೂಕೆ ಸಾದ್ಯಿಲ್ಲ. +ಹನ್ನೆರಡ ವರ್ಸನ ಮೇಲಾದ್ರೂ ಇವಳ್ ಇವನೀಗೆ ಸಿಕ್ತಾಳ ಅಂಬೂದ್ ಯಾವ ಕಾತ್ರಿ? +ಅಷ್ಟರೊಳಗೇ ಅವ ಬಂದ್ರೆ? +ಯೆಂತಾ ಮಾಡುಕ್ ಬತ್ತಾದೆ?” ಅಂದಿ, ಹುಡ್ಗಿ ಮತ ತಂದೆ ಕೇಳ್ದ. +ಅವ ದಿಬ್ಬಣ ತೆಕಂಡಿ ಹೋದ, ಹೋಗಬೇಕಾರೆ ವಂದ್ ರಾಜನ ಮನೇಲಿದ್ದಿ ವಂದ್ ಹುಡ್ಗಿ ಮದ್ವೆ ಮಾಡ್ಕಂಡೇ ಮನಿಗ್ ಹೋದ. +ಇತ್ಲಾಗಿವ ಮಾವನ ಬುಡ್ಕ್ ಬಂದು, “ಮಾವಯ್ಯೋ, ಬಡ್ಸು” ಅಂದ. +ಅವ ಉಪಾಸೇ. +ಅವನು ಕೂತಲ್ಲೇ ಅವನೆ, ಇವ ರಾತ್ರಿಗೆ ಮದವೀಲಿ ಬೇಕಾದಷ್ಟ ಕಜ್ಜಾಯ ಹಿಡ್ಕಂಬಂದನೇ. +ಊಟಾಯ್ತು, ಊಟಾಗಿ ಮುಂದೆ ಮಾವಾ, ಅಳಿಯಾ ಕಾಸೀಯಾತ್ರೆಗ್ ಹೋಗುಕೆ ತಯಾರಾದ್ರು. +ಆಗೆ ಹೋಗ್. . . ಹೋಗ್. . . ಹೋಗ್. . . ಹೋಗೀ ದೇವೀಕೆರೆ ಬುಡ್ಕ್ ಹೋಗ್ ಮುಟ್ದ್ರು. +ಆಗೆ ಕಟ್ಟೆ ಬುಡ್ಕ್, “ಮಾವಯ್ಯೋ. . . ಕಟ್ಟೆ ಯೆಟ್ ಚೆಂದದೆ. +ಕೆರೆವಳಗ ನೀರ್‌ಯೆಟ್ಟು ಚೆಂದದೆ! ನೋಡು. . . ” ಅಂದ. +ಮಾವ, “ಕಟ್ಟೆ ಚೆಂದ ಹೌದು, ನೀರ್ ಚೆಂದ ಹೌದು. . . ” +ಆಗ ಹೇಳ್ದಾಂಗೇ ಹೇಳ್ದ ಮಾವ, “ಕೆರೆ ಬದಿಗ್ ಹೋಗಬೇಡಾ ನೀನು” ಹೇಳ್ದಾ. +ಅವ ಯೇನ್ ಹೇಳ್ದ ಕೇಳ್ದ್ರೆ, “ಕೆರೆ ಅಂದ್ರೆ ಹೆದ್ರುಕ್ಯೋ ನಿನ್ಗೆ?” ಅಂದ್ ಕೇಳ್ದ ಮಾವನಿಗೆ. +ಕೆರೆ ಇಳ್ದ್ ಕೈಕಾಲ್ ತೊಳ್ಕಂಡ್ ಬಂದ. +ಕೆರೆ ಇಳ್ದ್ ಹೋಗಿ (ಪಾಚಿ ಅದೆ) ಕೈಕಾಲ ಮೊಕ ತೊಳ್ಕಂಡ್ ಬಂದ್, ‘‘ಮಾವಯ್ಯಾ. . . ಇಲ್ಲೇ ಅಡ್ಗಿಗ್ ಯೆತ್ ಬಿಡು” ಅಂದ. +ಕಟ್ಟೆ ಮೇಲೆ ಮಲ್ಗ್ ಬಿಟ್ಟ. +ಹಿಂದ್ ಮಾಡ್ಕಂತೇ ಮಾಡ್ಕಂಡ ವಲೆಗ್ ಬೆಂಕಿ ಹಿಡಿಸ್ಕಂಡ್ ಕುಂತ್ಕಂಡ. +ವಂದ್ ಗಳಗ್ನಲ್ಲಿ ಯೆದ್ಕಂಡ್ ಕಟ್ಟೆ ಕೇಳಗಿಳ್ದ್ ಬಂದಾ ಅವಾ. +“ಹಗರಿಲ್ಲಿ ಮಾವಯ್ಯಾ, ಅಮರಾವತಿ ಪಟ್ಣಂತೆ ಪತುವ್ರತಿ ಹೆಣ್ಣಂತೆ ನೋಡ್ಕಂಡ್ ಬಂದ್ ಬಿಡ್ತೆ ಮಾವಯ್ಯ. . . ” ಅಂದಾ. +“ಕಾಸೀಯಾತ್ರೆಗ್ ಹೋಗುಕೆ ನಾವ್ ಬಂದೋರು. +ಹೋಗುದ್ ಬೇಡ” ಅಂದ. +ಅಪ್ಹಾಕ್ ಹಿಡ್ದ(ತಳ್ಹಾಕಿ ಹಿಡ್ದ) ಆದ್ರೂ ಕೇಳಲಿಲ್ಲ ಅವ. +ನೆಡ್ದ್ ಬಿಟ್ಟ ಅಮರಾವತಿ ಪಟ್ನಕ್ಕೆ. +ಪತುರತಿ ಮನಿಗೇ ಹೋದ. +ಅದ್ ಬತ್ತಾ ಮೆರೀತೇ ಇತ್ತು ವಳಗೆ. +ಇವ ಹೋಗ್ ಅಂಗಳ ಇಳ್ದ್ ಬಿಟ್ಟ. +ಇಳೂದ್ರೊಳ್ಗೆ ಇವ್ನ ಪಾದಾ ವಂದ್ ನೋಡಿತ್ತು ಅದು. +ಇವ ಹೋಗ್ ಹೊಳ್ಳಿ ಜಗಲಿ ಹತ್ದು, ಅಲ್ ಮೇಲ್ ವಂದ್ ಮಂಚ ಇತ್ತು. +ಹೋಗಿ ಮಂಚ ಹತ್ ಸುಮ್ನೆ ಮಂಚದ ಮೇಲೆ ಕುಂತ್ಕಂಡ್ ಬಿಟ್ಟ. +ಆವಾಗೆ ಅಲ್ಲಿ ಯೇನಾಗಿತ್ತೊ ಕೇಳ್ದ್ರೆ, ಪತುರತಿ ಗಂಡ ಪರಮೇಸ್ವರ, ಅವ ಯರ್ಗ್ ಯೆಂಬತ್ ಕೋಟಿಗೆ ಪಡಿ ಅಳೆಲಿಕ್ಕೆ ಹೋಗಿದ್ದ; ದೇಸಸಂಚಾರಕೆ ಹೋಗಿದ್ದ. +ಅವ ಆರ್ ತಾಸಿಗೆ ಮನೆಗ್ ಬರ್ತ. +ತಾನ ಮಾಡ್ಕಂಡೇ ಬರ್ತಾ ಬರ್ಬೇಕಾರೆಯ ಮನೆ ವಳ್ಗ್ ಹೊಕ್ಕದವನೇಯ ಬಂದಿ. . . ಸಂದ್ಯಾವಂದನೆ ಮಾಡಿ, ದೇವರ ಪೂಜೆ ಮಾಡಿ ಇವ ಹೋಗ್ ಕೂತ. +ಬರ್ವಲ್ಲಿವರಿಗೆ ಇವ ಕೂಡ್ಲೆ ಹೋಗ್ ಕೂತ. +ಕೂಡ್ಲ ಇದು ಬತ್ತಾ ಮೆರೀತೆ ಇತ್ತು. +ಮೆರೀತು ವನ್ಕೆ ಮೇಲ್ ಮಾಡ್ದ್ ಕೈಬಿಟ್ಬಿಡ್ತು. +ಮೇಲೂ ಯೆಂತದ್ಕೂ ತಾಗಲಿಲ್ಲ; ತಟ್ಲಿಲ್ಲ, ಕೆಳಗೂ ಬೀಳಲಿಲ್ಲ. +ವಳ್ ಬಾಗ್ಲಲ್ಲೇಯ ಅದು ಗೆರ್ಸಿಲಿಟ್ ಅಕ್ಕಿ ಹಾಕ್ತು. +ಗೇರೂ; ಕೈಬಿಟ್ಬಿಡ್ತು. +ಗೆರಸಿ ಕೆಳ್ಗ್ ಬೀಳ್ಲಿಲ್ಲ. +ಹಾಂಗೇ ವಳ್ಗ್ ನೆಡಿತು, ಅದು ಪರಮೇಸರಗೆ ಬಡ್ಸಲಿಕ್ಕೆ. +ಬಡ್ಸಿಬಿಟ್ತು, ಅವ ದೇವ್ರಪೂಜೆ ಮಾಡ್ದವ ಹಾಂಗೇ ಊಟಕೆ ಕೂತಬಿಟ್ಟ ಅಲ್ಲೇಯ. +ಆಗೆ, ಇದ್ ಹೆರ್ಗ್ ಬಂತು. +ಆಗ ಇದ್ಕೆ ಹಂಬಲಾಯ್ತು, “ಬಾಗ್ಲ ಮೆಟ್ಲಮೇಲೇ ನಿಂತಕೊಂಡು ತಾನು ಬತ್ತಾ ಮೆರವಾಗೆ ಅಂಗಳದಲ್ ಯೆರಡ ಪಾದ ಕಂಡಿದ್ದೆ. +ಅವ ಯೆಲ್ ಹೋದಾ ಅಂದ್ ನೋಡಬೇಕು. . . ” ಅಂದ್ ಹೇಳಿ. +ಬಾಗ್ಲಪಟ್ಟಿ ಹಿಡ್ಕಂಡಿ ಅವ ಕುಂತ್ಕಂಡೇ ಇದ್ದ. +ಅವ್ನ ನೋಡ್ ಬಿಡ್ತು. +ನೋಡ್ದ್ ಕೂಡ್ಲೆ ಅವ ಯೇನ್ ಮಾಡ್ಬಿಟ್ಟ. +ಪಟ್ನೆ ಯೆದ್ದಿ ಬಂದಿ, ಅವ್ರ ಯೆಯ್ಡೂಪಾದ ಹಿಡ್ಕಂಡ ಕಮ್ಚ್ ಬಿದ್ದ. . . ಸತ್ತೇ ಹೋದ! +ಹನ್ನೈಡ್ ವರ್ಸಾಗ್ಹೋಯ್ತು. . . ಸತ್ತ. ಆವಾಗೆ ಅವ ಊಟ ಮಾಡ್ಕಂಡಿ, ಹೆರ್ಗ್ ಬಂದ್ ಬಿಟ. +ಹೆರ್ಗೆ ಬರೂರೊಳ್ಗೆ ಇದ್ಕೆ ಕಾಲ್ ತಪ್ಸ್‌ಕಂಡ ಹೋಗುಕಾಗಲಿಲ್ಲ. +ಇದು ಮೆಟ್ಲಪಟ್ಟಿ ಹಿಡ್ಕಂಡೇ ಅದೆ. +ಪರಮೇಸ್ವರ ಹೆರ್ಗ್ ಬರೂಕ್ ಬಂದವ ಯೇನೇನೊ ಪರ್ಯತ್ನ ಮಾಡಿ ಹೆರ್ಗ್ ಬಿದ್ದ. +ಹೆರ್ಗ್ ಬಿದ್ಕಂಡಿ ಕೇಳ್ದ, “ಪತುರತೆ ಇದ್ಯೇನೇ?” +ಮತ್ತೊಂದ್ ಮಾತ್ ಯೇನ್ ಹೇಳದ್ನೋ ಕೇಳದ್ರೆ, “ಅವನ ಕಾಲಲ್ ಅವ ನೆಡ್ದ್ ಹೋಗ್ವಂಗ್ ಮಾಡ್ದ್ರೇ ಆಯ್ತು. +ಇಲ್ಲದಿದ್ರೆ, ನಾನು ಸಂಜೆ ಬಂದವ ನಿನ್ಗ್ ಸಣ್ ಹಿಡ್ಕ್ ಕೊಚ್ಚಿ ಚಪ್ಪನ್ನಾರ್ ದೇಸಕ್ಕೆ ಹರ್ಡ್‌ಬಿಡ್ತೆ” ಅಂದ್ ಬಿಟ್ಟ. +ಕೂಡಲೆ ಅಲ್ಲಿ ಬರೋಬರ್ ಹನ್ನೆರಡ ಗಂಟೆಗೆ ಪರಮೇಸ್ವರನೂಟ. +ಅದು ಮನೇಲ್ ಊಟ ಮಾಡುದಿಲ್ಲ. . . ಸಲ್ಪ ದೂರೆ ಅಣ್ಣ ಸಿವರಾಯ ಅವನೆ. +ಅಣ್ಣ-ತಂಗಿ ವಂದೇ ಬಾಳೆ ಮೇಲ್ ಕೂತ ವಂದ್ ಗಂಟೆಗೆ ಊಟ ಮಾಡವವರು. +ಹನ್ನೆಯ್ಡ ಗಂಟೆಗೆ ಬಾಳೆ ಹಾಕಂಡಿ, ‘ತಂಗಿ ಬರಲಿ. . . ’ ಅಂದ್ ಸಿವರಾಯ ಅಂಬವ ಬರಕಾಯ್ತ ಉಳಿತ. +ಆ ದಿವ್ಸೆ ವಂದ್ ಗಂಟೆ ಬಿಟ್ಟಿ, ಯೆಯ್ಡ ಗಂಟೆ ಆಯ್ತು. +ಇಲ್ಲಿ ತೀಡ್ತ ನಿತ್ಬಿಟ್ಟದೆ. +ಅವ ಬರಕಾದಿ ಸಾಕಾಗಿ ವಬ್ನಿಗ್ ಸಿಪಾಯ್ನ ಕಳ್ಸ್‌ದ. +‘‘ತಂಗಿ ಬಾಳ ಹೊತ್ತಾಯ್ತು ಬರಲಿಲ್ಲ. +ಯೆಯ್ಡ್ ಗಂಟೆ ಆದ್ರೂ ಬರಲಿಲ್ಲ. . . ಹೋಗ್ ನೋಡು” ಅಂದ್ ಹೇಳ್ ಕಳ್ಗದ. +ಅವ ಶಿಪಾಯ್ ಓಡ್ಬಂದ. +ಗೋಳ್ಗುಟ್ಕಂಡ್ ತೀಡ್ತದೆ. +“ನನ್ನಣ್ಣನ ಕೈಲಿ. . . ‘ಕಣ್ಣಲ್ ನೋಡುದಾದ್ರೆ ಬಂದ್ ನೋಡ್ಕಂಡ್ ಹೋಗು’ ಅಂದ್ ಹೇಳು. . ಇಲ್ಲಿ ಇವ ಯಾವ ದೇಸದವನೋ, ಇಲ್ಲಿ ತನ್ ಕಾಲ್ ಹಿಡ್ಕಂಡಿ ಪರಾಣ ಬಿಟ್ಬಿಟ್ಟವ್ನೆ ಮತ್ತು ಸಂಜಿಗೆ ಅವನ ಕಾಲಲ್ ಅವನೆದ್ದ್ ಹೋಗ್ವಹಾಗ್ ಮಾಡಬೇಕು. +ಇಲ್ಲದಿರೆ, ತನ್ನ ಕೊಚ್ ಛಪ್ಪನಾರ್ ದೇಸ ಹರಡತೆ ಅಂದನೆ. +ತನ್ ತಂಗಿನ್ ನೋಡ್ಕಂಡ್ ಹೋಗುದಾದ್ರೆ ಅಣ್ಣನ ಕೈಲ್ ಬಾ ಅಂದ್ ಹೇಳು. . . ” ಅಂತು. +ಆಗೆ ಅವ ಸುದ್ದಿ ಕೇಳ್ದ ಕೂಡ್ಲೆ ತಡ ಮಾಡಲೇ ಇಲ್ಲ. +ಯೆಯ್ಡ ಜನ ಪಂಡಿತರಿಗ್ ಕರಕಂಡಿ, ಪಂಚಾಂಗ ಹಿಡ್ಕಂಡಿ ಬಂದ. +ಇದ್ ಗೋಳ್ಗುಟ್ಕಂಡ್, “ಅಣ್ಣಾ, ಹೇಗಿದ್ ಸಂಗ್ತಿ ಹಿಂಗಾಯ್ತು. +ನನ್ ಪರಿಸ್ಥಿತಿ ಹೀಗಾಗ್ತದೆ. . . ” +ಅಂದಿ ಹೇಳ ಗೋಳ ಗುಟ್ಕಂಡ್ ತೀಡ್ತದೆ. +ಅಣ್ಣ ಸಿವರಾಯ ಪಂಡಿತರ ಕೂಡ ಕೇಳ್ದ. +“ಅವನ ಜೀವದ ಕಾಯ ಯೆಲ್ಲದೆ ಅಂದ್ ಹೇಳ್ ನೋಡಿ, ವಂದ್ ವಾಲೆ ಬಿಡದೆ ನೋಡಿ” ಅಂದ್ ಹೇಳ್ದ. +ಆಗ ವಂದ್ ವಾಲೆಬಿಡದೆ ಮರ್ಚ ಹಾಕಿ ನೋಡ್ದ್ರು ಅವರು. +‘‘ಹನ್ನೆರಡ ವರ್ಸನ ಉರಿಪಿಂಡ ಆಗಿತ್ತು. +ನಿನ್ನ ತಂಗಿ ಕಾಲ ಹಿಡ್ದ ಕೂಡ್ಲೆ ಪರಾಣ ಬಿಟ್ಟನೆ. +ತಂದ್ ಆಯಸವೇ ಅಷ್ಟು. +ಜೀವದ ಕಾಯ ಇಲ್ಲ” ಅಂದ್ರು. +“ಯೇನ ಮಾಡ್ಬೇಕಾಯ್ತು?” +ಆಗ ಕೇಳ್ದ- ಪಂಡಿತರ ಕೈಲಿ, “ಈಗ ಯೇನ ಮಾಡ್ಬೇಕು?” ಅವ್ರ ಹೇಳದ್ರು. +“ನೀನು ಹೇಳ್ದ ಹಾಗೆ ಮಾಡುಕಡ್ಡಿಲ್ಲ” ಅಂದ್ರು. +ಆಗ ಅವ ಸಿವರಾಯ ಯೇನ್ ಹೇಳ್ದ ಕೇಳ್ದ್ರೆ, ‘‘ನಿಮ್ಮ ಆಯ್ಸದಾಗಿನ್ನು ಯೆಯ್ಡ ಅಕ್ಕಿ ಆಯ್ಸ ವಬ್ಬಬ್ರದು ತೆಗಿರಿ ನಾಲ್ಕಾಯ್ತು. +ತನ್ದ್ ಯೆಯ್ಡ್ ಆಯವ ತೆಗ್ದ್ ಕೊಡ್ತೆ.’’ +ಆರ್ ಅಕ್ಕಿ ಆಯ್ಸ ತೆಗದಿ ಅವನ ಜೀವದ ಕಾಯಕ್ ಹಾಕ್ದ್ರು. +ಹಾಕ್ದ್ ಕೂಡ್ಲೆ ಪಟ್ನ ಯೆದ್ ಪತುರತಿ ಕಾಲ್ ಬಿಟ್ಟು ನೆಡ್ದ್ ಅತ್ಲಾಗ್. +“ನೋಡಬೇಡಿ. . . ನೋಡಬೇಡ್ರಿ. . . ಮತ್ತೆಲ್ಲದಾದ್ರೂ ಅವ ಬಿದ್ಬಿಟ್ರೆ ಮಲಾಮತ್ಯಾಗೂದು” ಅಂದ. +ಅವ ಮಾವನಿದ್ದಲ್ ನೆಡ್ದ. +ಅವನಿಗ್ ಆಗ ವಜ್ರಾಯಸ ಬಿತ್ತು. +ಆಯ್ಸ ಹಾಕದ್ದಂಬೂದು ಯಾವತ್ತೂ ಸಾಯುದಿಲ್ಲ ಅವ; ಸತ್ ಹುಟ್ದ ಅವ. +ಬೂಮಿ ಇರೂವರಿಗೂ ಇರ್ತ. +ಅಲ್ ಹೋಗಿ, “ಮಾವಯ್ಯೋ. . . ” ಅಂದ. +“ಬಡ್ಸು, ಬಾಳೆ ಮೇಲ್ ಹಾಕು” ಅಂದ. +“ಮಾವಯ್ಯ, ನಾನು ಮೀವ್ಕೆ ಹೋಗ್ಬತ್ತೆ” ಅಂದ. +ಯೆಯ್ಡ ಬಾಳೆ ಮೇಲ್ ಯೆಯ್ಡ್ ಹುಟ್ಟ ಹಾಕ್ದ ಅವ ಕೆರೆಗ್ ಹಾರ್ಬಿಟ್ಟ. +ಮಾವ, “ಇವ ಈಗ ಸತ್ತ” ಅಂದ್ ಹೇಳಿ, ಸೊಟ್ಗ ಕಯ್ಯಲ್ಲೇ ಉಳಿತು; ಬಾಕಿ ಅನ್ನ ಬಾಳೆಗ್ ಹಾಕ್ಲೇ ಇಲ್ಲ. +ಆಗ್ ಕೆರೇಲಿ ಮುಳ್ಕ್ ನೆಡ್ದ್ ಬಿಟ್ಟ. +ಕೆರೇಲಿ ಅಡಿಗೇ ಅಡಗ್ ಬಿಟ್ಟ. +ವಂದ್ ತಾಸಾಯ್ತು. +ಅಡ್ಗ್ ಹೋದಲ್ಲಿ ಅವನಿಗ್ ಆಲೋಚ್ನೆಯಾಯ್ತು. +‘ನಾನ್ ಸಾವದಿಲ್ಲ. . . ಮಾವ ಹಾರಿ ಸಾಯ್ತ’ ಅಂದಿ ಯೇನ್ ಮಾಡೂದು ಅಂದಿ ಯೆದ್ ಬಿಟ್ಟ. +“ಮಾವಯ್ಯೋ, ಹೆದ್ರದ್ಯೊ?” ಕೇಳ್ದ ಅವ. +“ಇಲ್ಲ ಮಾರಾಯ. . . ” ಅಂದ. +ಅವ “ಇವ ಯೆಟ್ಟ್ ಹೊತ್ತಾದ್ರೂ ಸಾವದಿಲ್ಲ” ಅಂದ್ ತೆಳ್ದ. +ಇವ ಮತ್ತೊಂದ್ ಮುಳ್ಕ ಹೊಡ್ದ. +ಹೊಡ್ದವ ಸೇದ ಪಾತಾಳಕೆ ಹೋಗ್ಬಿಟ್ಟ. +ಅಲ್ ಹೋಗುರೊಳ್ಗ್ ಪಾತಾಳಲೋಕದಲ್ಲಿ ಯೆಯ್ಡ ಜನ ಅಚ್ಚಕನ್ನೆರವರೆ. +ಅವರು ಅಕ್ಕ-ತಂಗಿ ಚಿಕ್ಕಪರಾಯದಲ್ಲವ್ರೆ. +ಹನ್ನೆಯ್ಡ ವರ್ಸನವರು-- ವಂದೇ ರೂಪದಲ್ಲಿವರೆ. +ಹೂಗ್ನ ಬನಕೆ ನೀರ್ ಹೊಯ್ಕಂಡ್ ಅವರೆ, ಸುಕದಲ್ ಅವರೆ. +ಅಲ್ಲೇ ಉಳಿತ್ರು. +ಇವ ಅಲ್ಲಿಗ್ ಹೋಗ್ ಮುಟ್ದ. +ಮುಟ್ದ ಕೂಡ್ಲೆ ಇವನ ನೋಡಿ ಅವರಿಗೆ ಬಾಳ ಆನಂದಾಗ್ಹೋಯ್ತು. +ಇವ ಗುಡಗಾರ ಮಾಡ್ದ ಬೊಂಬೆಯಂತೇ ಅವನೆ-- ಅಟ್ ಚಂದದಲ್ಲವ್ನೆ. +ಆಗಾ ರೀತಿ ಇರಬೇಕಾದ್ರೆ, ಆಗ ಯೆಂತಾ ಮಾಡ್‌ದ್ರು ಕೇಳ್ದ್ರೆ, ಯೆಯ್ಡೂ ಜನ ಹುಡ್ಗೀರು, ‘ತಾನ್ ನಗ್ನಾಗಬೇಕು. . . ತಾನ್ ನಗ್ನಾಗಬೇಕು. . . ’ ಅಂದ್ ಕೈಹಿಡ್ಕಂಡ್ಬಿಟ್ಟರೆ ಅವರು. +ಕಡೆಗೆ ಯೇನಾಯ್ತು ಕೇಳ್ದ್ರೆ; ಯೆಯಡೂ ಜನ, ‘‘ನಾ ನಗ್ನಾಗ್ತೆ, ನಾ ನಗ್ನಾಗ್ತೆ. . . ’’ ಹೇಳದ್ರೆ ಹೇಗೆ ನಗ್ನಾಗತದೆ? +“ಇವನ ತಕಂಡ್ ಹೋಗಿ ತಾಯಿ- ತಂದೆ ಕೈಲ್ ಕೊಡುದು, ಯಾರ್ ನಗ್ನಾಗಬೇಕು ಹೇಳ್ತ್ರೊ ಅವ್ರ್ ನಗ್ನಾಗೂದು. . . ತಂದೆ-ತಾಯಿ ಕೈಲ್ ತಕಂಡ್ ಹೋಗ್ ಕೊಡ್ವ. . . ” ಹೇಳಿ ತಕಂಡ್ ಹೋದ್ರು. +ಹನ್ನೆರಡ ವರ್ಸನ ಉರಿಪಿಂಡಗೆ ಕರ್ಕಂಡ್ ಬಂದಿ ತಾಯಿ ಕೈಲ್ ಹೇಳ್ದ್ರು, ‘‘ನಮ್ಮ ವನದಲ್ ವಂದ್ ಹುಡ್ಗ ಬಂದಿದ. +ನಮ್ಗ್ ನಗ್ನ ಮಾಡ್ಕೊಡಬೇಕು.” +ತಾಯ್ ಹೋಗಿ ಗಂಡ್ನ ಹತ್ರ ಹೇಳ್ತು. +“ನಿಮ್ಮ ಹುಡ್ಗರ ವಂದ್ ಹುಡ್ಗನ ತಂದರೆ, ತನ್ ನಗ್ನ ಮಾಡ್ಕೊಡಬೇಕು ಅಂತಾರೆ. +ಬಂದ್ ನೋಡಿ. . . ” ಅಂತು. +“ಅವನಿಗ್ ಯಾಕ್ ಕರಕ್ ಬಂದೀರೆ. +ನಗ್ನಾಗೂಕ್ ನಮ್ಮಂದಾಗ್ತಾರೆ. . . ನಗ್ನಾಗೂಕಾಗೂದಿಲ್ಲ. ’’ +‘‘ನಗ್ನಾಗೂಕೆಲ್ಲ ಹೇಗೆ?” ಕೇಳದ್ರು ಅವರು. +“ನಿನ್ನಕ್ನ ಪಾದ ಹಿಡ್ದು ಪರಾಣ ಬಿಟ್ಟಿದ. +ನನ್ದ್ ಯೆರ್ಡ್ ಅಕ್ಕಿ ಆಯ್ಸ, ಪಂಡಿತರದು ಯೆಯಡು. . . ಹೀಗೇ ನಾಲ್ಕಕ್ಕಿ ಆಯ್ಸ ಹಾಕ್ ಜೀವ ಪಡದಾಗದೆ. +ನಿಮಗೆ ಅಣ್ಣನಾದ, ನನ್ಗೆ ಮಗಾದ. +ನೀವ್ ಯಾಕೆ ನಗ್ನಾಗ್ತೆ ಹೇಳ್ತ್ರಿ?” ಕೇಳ್ದ. +ಆಗ ಅವ ಹೇಳ್ದ, “ಯೆಲ್ಲಿಂದ ಬಂದಿದ ನೋಡಿ ಅವನಿಗ್ ಅಲ್ ತಕಂಡ್ ಹೋಗ್ ವಂದ್ ಸರ್ತಬಿಟ್ಟ ಬನಿ” ಅಂದ ಹೇಳ್ದ. +ಆಗವರು ಪಾತಾಳಲೋಕದಿಂದ ಕರ್ಕಂಬಂದ್ರು ಅವನಿಗೆ ಬಂದಲ್ಲಿಗೇ ತಕಂಡ್ ಹೋಗ್ ಬಿಟ್ರು. +ಅಲ್ಲಿ ಕರ್ಕಂಡ್ ಹೋದ್ರು. +ಹೇಳ್ದ್ರು, “ಅಣ್ಣಾ. . . ನೀನು ಈಗ ಹೋಗು. +ನಾವು ನಿನ್ನ ತಂಗದೀರು ಪಾತಾಳಲೋಕದಲ್ಲಿ ಉಳಿತ್ರು. +ಹೋಗಬೇಕಾರೆ. . . ಬರಬೇಕಾರೆ ನೀ ಹೊಕ್ಕಿ ನಮ್ಮ ಮಾತಾಡ್ಸ್ಕಂಡ್ ಹೋಗು ನೀನು. +ಭಾಗ (ಭಾಗ್ಯ) ನಿನ್ಗ್ ಯೇನಾದ್ರೂ ಕೊಡ್ವ ಅಂದ್ರೆ ನಮ್ಮ ಕೈಲ್ ಯೇನೂ ಇಲ್ಲ.’’ +ಆಗ ಅವ್ರ್, “ನಮ್ಮ ಕೈಲ್ ವಬ್ಬೊಬ್ರ ಕೈಲ್ ವಂದ್ ಉಂಗ್ಲದೆ. +ಆ ಉಂಗ್ಲ ತಕಂಡ್ ಹೋಗು ನೀನು.” +ಅವ, “ತನ್ಗ್ ಸರ್ವತಾ ಬೇಡ” ಅಂದ. +“ತಾನು ರಾಜಪುತ್ರನಲ್ಲವೋ? +‘ನನ್ಗ್ ವಂದ್ ಉಂಗ್ಲ ಮಾಡ್ಸಕಂಡ ಹಾಕಂಬೂ ತಾಕತ್ತಿಲ್ಲವೊ ನನಗೆ? +ಹೆಂಗ್ಸರ ಉಂಗ್ಲ ಕೈಗ್ ಹಾಕಂಡ್ ಬಂದಿದೆ’ ಅಂದ್ ಹೇಳಿ, ನೆಗ್ಯಾಡೂರು ಬೇಡ” ಅಂದ. +ಅವ್ರ ಯೇನ್ ಹೇಳ್ದ್ರು? +ಕೇಳದ್ರೆ, “ಈ ಉಂಗ್ಲದಲ್ಲಿ ಬಾಳ ಮಾತ್ವದೆ. +ಈ ಯೆರಡೂ ಉಂಗ್ಲ ಕೈಗ್ ಹಾಕ್ಕಂಡ್ ಹೋದ್ರೆ, ನಿನ್ನ ಸಂಗಡ ಯೆಯಡ ಜನ ನಾವಿಬ್ರೂ ಅವರೆ ಅಂದ್ ಹೇಳ್ ನೀ ತೆಳ್ಕಂಬೂಕಡ್ಡಿಲ್ಲ. +ಆ ಉಂಗ್ಲ ಯೆರಡೂ ಮಾತಾಡ್ತದೆ. +ಆ ಉಂಗ್ಲದ ಹೆಸರು ‘ರಾಜೇಸ್ರ. . . ’ ‘ಶರಾಳ ಬೆಂಕಿ. . . ’ ಹೇಳಿ, ಅಕ್ಕ-ತಂಗಿ ಅವರು. +ವಬ್ಬನೇ ವಂದ್ ಹಾದಿ ಕೂಡ ಹೋಗುದಾದ್ರೆ ಬೇಜಾರ ಬಂತಪಾ ಆಗೆ ವಬ್ಬನೇ ಹೋಗವೆ, ಬೇಜಾರಾದ್ರೆ ವಂದ್ ಉಂಗ್ಲ ಕತೆ ಹೇಳ್ತದೆ. +ವಂದ್ ಉಂಗ್ಲ ‘ಹೂಂ. . . ’ ಅಂತದೆ‌. +ನೀ ಕೇಳ್ತ ಹೋಗು. . . ” ಅಟ್ ಹೇಳುರೊಳ್ಗೆ, “ಹಾಂಗಾದ್ರಡ್ಡಿಲ್ಲ ಕೊಡಿ” ಅಂದಾ‌. +ಜನ ವನಂದ ಉಂಗ್ಲ ಕೊಟ್ರು. +ಕೈಯಾಗೆ‌ (ಕೈಗೆ) ಹಾಕ್ಕಂಡ ಯೆರಡೂವ ಏಕ್ದಂ ಮಾವನ ಬುಡಕ್ ಬಂದ. +ಮಾವ ಬಾಳೆ ಮೇಲ್ ಅನ್ನ ಹಾಕಂಡ್ ಕಾಯ್ತೇ ಕುತ್ಕಂಬಿಟ್ಟನೆ, ಅವನ ಬರಕಾಯ್ತೆ ಅವ ಸಾವದಿಲ್ಲ ಗೊತ್ತದೆ, ಯೆರಡೂ ಜನ ಊಟ ಮಾಡ್ದ್ರು. +ಕೈ-ಬಾಯ್ ತೊಳ್ಕಂದ್ರು. +ಮುಂದ್ ಹೋಗೂದ್ ಪಯಣ ಅದ್ಯಲ್ಲ ಮತ್ತೆ, ಯೆಯಡೂ ಜನ ಸಂತಿಗೆ ಕೂಡ್ಕಂಡಿ ಹೋದ್ರು. +ಬುದ್ನಾಪುರ (ಗುಡ್ನಾಪುರ) ಕೆರೆ ಬುಡ್ಕ್ ಹೋದ್ರು. +ಕಟ್ಟೆ ನೋಡ್ಕಂಡಿ ಅವ ಹೇಳ್ದ, “ಮಾವಯ್ಯಾ. . . ಕೆರೆ ಯೆಟ್ ಲಾಯ್ಕಂದು ನೋಡು. . . ಕಟ್ಟೆ ಚೆಂದದೆ, ಈ ಕೆರೆ ಒಳಗ್ನ ನೀರೆ ಯೆಟ್ ಚೆಂದದೆ‌ ನೋಡು. . . ” ಅಂದ. +ಮಾವ, “ಕಟ್ಟೆ ಚೆಂದ ಹೌದು. . . ನೀರ ಚೆಂದ ಹೌದು. +ಕೆರೆ ಬುಡ್ದಲ್ ಹೋಗಬೇಡ” ಅಂದ. +ಇವ, “ಕೆರೆಕಂಡಲ್ ಹೆದ್ರುಕ್ಯೋ?” ಕೇಳ್ದಾ. +ಮಾವ ಮೊದ್ಲನ ಹಾಗೇ ಮೈವದ್ದೆ ಮಾಡ್ಕಂಡಿ ವಲೆ ಮೇಲ್ ಅನ್ನಕ್ ಇಟ್ಟ್ ಕುಂತಿದ್ದ. +ಇವ್ನೂ ಸಟ್ನೆಯೆದ್ದ, ಹಾಗೇ ಮೈವದ್ದೆ ಮಾಡ್ಕಂಡ್ ಬಂದ. +‘‘ಮಾವಯ್ಯೋ. . . ’’ ಅಂದ. + ‘‘ವೋಯಿ. . . ’’ ಅಂದಾ. +‘‘ಇಲ್ಲಿ ಬೀಮಾವತಿ ಪಟ್ಣಂತೆ, ಪದ್ಮಾವತಿ ಸೂಳ್ಯಂತೆ, ನೋಡ್ಕಂಬಂದ ಬಿಡ್ತೆ-- ಪಟ್ಣಾನೂವ, ಪದ್ಮಾವತಿ ಸೂಳೆಯಾ. . . ” ಅಂದ ಬಂದ್ ಬಿಡ್ತ ಅವ. +ಆಗೆ ಇಲ್ ಬಂದ-- ಅವ ಪಟ್ಣ ನೋಡು ತಂಕಾವಾ ಅದ್ ಬೋರ್ಡ್ ಹಚ್ವದೆ - ಏನ ಬೋರ್ಡು? +ಅಲ್ಲೊಂದ ಅರ್ಲ ಹೊಂಡ ತೆಗ್ದಿಟ್ಟದೆ. +ತೆಗ್ದಿ ಶಗಣಿ ತಂದ್ ರಾಶಿ ಹಾಕಿ ಶಗಣಿ ಕಯಡಿ ದೋಸೆ ಹಿಟ್ನದ್ ದಪ್ಪ ಮಾಡಿ ಇಟ್ಬಿಟ್ಟದೆ. +ಆಚೆ ಬದಿಗ್ ಚಂಬ್ ಇಟ್ಟದೆ. +ಅಲ್ ಬೋರ್ಯ್ಡ್ ಹಚ್ಚದೆ-- ಯೇನಂದಿ ಕೇಳದ್ರೇ, “ಅರ್ಲ ಹನಿನೂ ಕೈಕಾಲುಗೆ ತಾಗೂಕಾಗ, ಆ ಚಂಬ್ಲಾಗ್ನ ನೀರು ಮುಟ್ದೇನೂ ಬರೂಕಿಲ್ಲ. . . ” ಅದ್ರ ಮನೆಲ್ ಯೇನ್ ಮಾಡದೆ ಇದು? +ಯೆರಡ ಮಂಚ ಆಚಿಗೊಂದು, ಇಚಿಗೊಂದು ಇಟ್ಟದೆ. +ನೆಡಮದ್ದಿಲಿ ವಂಬತ್ ಪರದಿ ಇಳಿಬಿಟ್ಟದೆ ಅದು. +‘‘ಮಂತ್ರಸಕ್ತಿ ಮೇಲೆ ಆ ಮಂಚ ತೆಗದಿ, ಈ ಮಂಚಕ್ ಕೂಡ್ಸಬೇಕು, ಯೆರಡೂ ಕೂಡ್ಸೂಕಿಲ್ಲ; ನೆಗದೂ ಕೂಡ್ಸೂಕಿಲ್ಲ” ಅಂದಿ ಬೋರ್ಡ ಹಚ್ಚದೆ. +“ಅರ್ಲ ಹೊಂಡದಲ್ಲೂ ಬಿದ್ದಿ ಚಂಬ್ನಲ್ ಕೈಕಾಲ ಮೊಕತೊಳೂಕ್ ಸಾಕಾಗದೇಯ. +ವಂಬತ್ ಪರದೆ, ಯೆರಡ ಮಂಚನೂ ಮಂತ್ರಸಕ್ತಿಂದ ಕೂಡುಕಾಗದೆ ಇದ್ದಾಗ-- ನಿಂದೆಲ್ಲಾ ಸಂಪತ್ತು ನನಗೇಯ. +ಜೀವಮಾನ ಇರೂತನ್ಗ ಕೈಕೆಳಗೆ ಗುಲಾಮ ಚಾಕ್ರಿ ಮಾಡ್ತ ಇರಬೇಕು. . . ಮನೆಗ್ ಹೋಗಾಗಿಲ್ಲ. +ಗೆದ್ದರೆ, ಅರಲು ಹನಿನೂ ಬಡ್ಕಳದೇಯಾ, ಕಾಲಿಗೆ ಅರ್ಲ್ ತಾಂಗಸ್ಕಳದೇಯ ಬಂದು, ವಂಬತ್ ಪರದೆ, ಮಂಚ. . . ಆ ಮಂಚ - ಈ ಮಂಚ ಕೂಡ್ಸಿದರೆ ತನ್ನ ಪಟ್ಣನೇ, ಆಳುಕಾಳು ವಟ್ಟೂ ಬಂತು ಹೀಗೆ ಮಾಡ್ದ ಅವನಿಗೇ’’ ಹೇಳಿ ಬರಸದೆ ಅದು. +ಲಕ್ಸಗಟ್ಲೆ ಜನ ಸೋತ್ ಬಿದ್ದರೆ. +ಆ ದಿವಸ ಇವ ಹೋಗ್ ಅಲ್ ಗಂಟ್‌ಬಿದ್ದ. +ನಿಂಬೆಹಣ್ ವಂದ್ ರುಪಾಯಾಗದೆ‌ ನೀರಲ್ ಹಾಕ್ದ್ರ ತೆಲತದೆಯಲ್ಲ? +ಆದ್ರೆ, ಆ ಪಾಶಾದಲ್ ಹಾಕ್ದ್ರೆ ಅಡಿಗ್ ಹೋಗ್ ಬಿಡ್ತದೆ. +ವಂದ್ ಅಕ್ಕಿ ಮಾನ್ಗ್ ಯಟ ದೊಡ್ಡಾಗ್ ತನ್ನಟ್ಕೇ ಮೇಲ್ ಬರ್ತದೆ ಅದು. +ಬೋರ್ಡ್ ವೋದ್ ನೋಡ್ಕಂಡ್, ನಿಂಬೆಹಣ್ಣ ವಂದ್ ರುಪಾಯ್ ಕೊಟ್ ತಕಂಡ. +ಅದ್ ಯೇಳುಷ್ಟರಗೆ ಮೇಲ್ ಕುಂತ್ಕಂಡ್ ನೋಡ್ತೇ ಅದೆ. +ನಿಂಬೆಹಣ್ಣ ಅರ್ಲಲ್ ಹೊತಾಕಬಿಟ್ಟ. +ದಾರಿಲಿ ಪಾರೆ ಮಾಡಿಟ್ಟಿದೆಯಲ್ಲ-- ಮುಳ್ಕ್ ನೆಡಿತು. +ವಂದ್ ಮಾನ್ಗೆಯಟ ದೊಡ್ದಾಗಿ ಮೇನ್ ಬಂತು. +ಇವ ಯೇನ ಮಾಡಬೇಕಾಯ್ತು. . . ಈಗ ಹೇಳ್ದಾ ಅವ್ನ ಕೈಲಿ ಹಗಲ ಮೇಲೆ ವಂಬತ್ ಮೊಳದ ಪಂಜಿದ್ದಿತ್ತೂ. +ಆ ಪಂಜಿ ಹಗಲ ಮೇಲಿಂದ ತಗದ. +ವಂದ್ ಸೆರ್ಗ ಕೈಲ್ ಹಿಡ್ಕಂಡ, ವಂದ್ ಸೆರಗ ಆಚಿಲ್ ಹೊತಾಕ್ ಬಿಟ್ಟ. . . ಅರ್ಲ ಮೆಲೇಯಾ ಅಚಿಗ್ ಹೋಗ್ ಬಿತ್ತೂ. +ಕಡೆಗೆ ಏನಾಯ್ತೋ ಕೇಳ್ದ್ರೆ-- ಅವ ಆ ಪಂಜಿ ಮೇಲೆ ನೆಡ್ದ್ ಹೋಗ್ ಬಿಟ್ಟ. +ಪಂಜಿಗೂ ಅರ್ಲ್ ಬಡಿಲಿಲ್ಲ, ಕಾಲಿಗೂ ಬಡಿಲಿಲ್ಲ. +ಆ ಚಂಬ್ನ ನೀರ ಮುಟ್ದೇಯಾ ಬರೂಕಿಲ್ಲ; ಪೂರಾ ಖರ್ಚ ಮಾಡೂ ಬರುಕಿಲ್ಲ ಹೇಳಿತ್ತೂ. +ಆಗ ಚಂಬ್ನಲಿ ನೀರಲ್ ಕೈ ಅದ್‌ಬಿಟ್ಟ. . . ನೆಡ್ದ್ ಬಿಟ್ಟ. +“ಓಹೋ!ಇಂದು ಕಲಿಪುರಶ ಬಂದ. +ಇನ್ ತನ್ನ ಪಟ್ಣ ಪೂರಾ ಗೆಲ್ತ” ಅಂದ, ‘‘ಮಂಚನೂ ಮಂತ್ರಸಕ್ತಿ ಮೇನ್ ಕೂಡುಸ್ತ’’ ಅಂದ್‌ ತೆಳ್ದಹೋಯ್ತದಕೆ. +ಚಿಂತೇ ಮಾಡ್ತೆ ಉಳಿತು‍. +ಇವ ಹೋದವ್ನೇ ಇಚೆ ಬದಿ ಮಂಚದ ಮೇನ್ ಕುಂತ್‌ ಬಿಟ್ಟ. +ಯಾರಿಲ್ಲ ಮಾತಾಡ್ಸವವರು. . . ಯಾರೂ ಇಲ್ಲ ಹಾಗೂ ಇಲ್ಲ, ಹೀಗೂ ಇಲ್ಲ. +ಪಟ್ಣ ಹೋಗುದ ಅಂದಿ ಚಿಂತಿಲ್ ಸುಮ್ನೆ ಕೂತದೆ. +ಅದ್ಕ್ ಮೂರ್ ದಾಸ್ಯೊರವ್ರೆ ಕೆಲ್ಸಕೆ. +ಆವಾಗೆ ಸುಮಾರ್ ಹೊತ್ನ ಮೇಲೆ ವಂದ್ ದಾಸಿ ಪದ್ಮಾವತಿ ಸೂಳೆ ಬುಡ್ಕ್ ಹೋಯ್ತು. +ಹೋಯ್ಕಂಡಿ ಕೇಳ್ತು-- “ಅಮ್ಮಾ, ಪದ್ಮಾವತೀ. . . ನೀನ ಯಾವ ಚಿಂತಿ ಮೇನೆ ಕೂತಿದೇ?” ಕೇಳ್ತು. +ಕೇಳುರೊಳಗೆ ಅದ್ ಹೇಳ್ತು, “ಇಟ್ ದಿವ್ಸದವಳಗೆ ತಾನು ಇಲ್ಲಿ ರಾಜತನ ಆಳ್ದನಲವೋ? +ಈಗಾ ಬೇರೆ ವಬ್ಬ ಬಂದಿ ರಾಜ್ಯ ಗೆಲ್ತನಲವೊ?” ಅಂತು. +“ಛೇ!ಗೆಲ್ಲೂದ್ ಹೌದು. . . ಈ ಮಂಚ, ಆ ಮಂಚ ಕೂಡ್ಸವವನೇಯ, ಹೌದು.” ಅಂತು. +ದಾಸಿ, “ಹಾಂಗಾದ್ರಮಾ. . . ವಂದ್ ಕೆಲ್ಸ ಮಾಡಿ. +ನನ್ಗೆ ವಂದ್ ಮಣ ಬಂಗಾರ ಕೊಡಿ. +ವಂದು ಬಂಗಾರದ ಹರವಾಣ ಕೊಡಿ, ವಂದ್ ಪಟ್ಟಿ, ವಂದ್ ಕಾಕಿ ಕೊಡಿ. . . ತಾನು ಪಟ್ಟೆ-ಗಿಟ್ಟೆ, ಚಿನ್ನ-ಬಿನ್ನ ಹಾಕಂಡಿ, ಆರ್ತಿ ತಕಂಡ್ ಹೋಗಿ ಅವ ತನ್ಗೆ ಮಳ್ ಬೀಳ್ವಂತೆ ಮಾಡಿ, ಸೋಲ್ಸಿ. . . ಆವಗ ನಿಮ್ಮ ರಾಜತನ ನಿಮಗೇ ಉಳಿಬೇಕು, ಅವ ಸೋತುಹೋಗ್ವಾ ಹಾಗೆ ಮಾಡ್ತೇನೆ’’ ಹೇಳ್ತು. +ಪದ್ಮಾವತಿ ಬಂಗಾರದ ಹರವಾಣ, ಪಟ್ಟೆ ರವ್ಕಿ. . . ಇಷ್ಟೂ ಕೊಟ್ತು ಅದು. +ಆರತಿ ತಕಂಡಿ, ಹರವಾಣ ತಕಂಡ್. . . ಇವ್ನಿದ್ದಲ್ ಬಳು ತೋರ್ಸೂಕ್ ಬಂತು ಇದು. +ಇವನಿಗೆ ದಾಸಿಯೇ ಇದು ಅಂದ್ ಹೇಳ್ ಗೊತ್ತದೆ. +ಮನ್ಸನಲ್ಲಿ, ‘ಬಾ. . . ವಂದ್ ಯೆರಡ ಲತ್ತೆ ತಿಂದ್ಕಂಡ್ ಹೋಗ್ಲಕ್ಕ್’ ಅಂದ್ ಅಲೋಚ್ನೆ ಮಾಡ್ಕಂಡ್ ಸುಮ್ಮನಿದ್ದಿದ್ದ. +ಅದು ಅವ್ನ ಹತ್ರ ಬರುರೊಳಗೇ ಹೇಳ್ತಾ ಅವ, “ಓಹೋ! +ಇದು ಬೀಮಾಪಟ್ನಂತೆ. . . ಬೀಮಾವತಿ ಸೂಳೆಯಂತೆ. . . ” ಕೇಳ್ತು. +“ಕುದ್ರೆಗೆ ಹುಲ್ಲು, ನೀರಿಲ್ಲದೇಯ ಬಾಯೆಳೆತ ಸತ್ ಬಿದ್ದದೆ. +ಅದೆ ಕುದ್ರೆ ಕೆಲ್ಸ ಮಾಡು ದಾಸಿ ಯೆಲ್ ಸತ್ ಬಿತ್ತೊ ಯೇನೊ. . . ” ಅಂದ. +ಅದಕೆ ತಾಗ್ತು, ಇನ್ಸಲ್ಟಾಯ್ತು ಅದ್ಕೆ. +“ಅಬಾ. . . !ಇವ ಈಗ ಬಂದವ ಯಾವ ರಾಜ್ಯದವನೋ ಏನೋ. . . ಇವನಿಗೆ ನಾನು ಯಾವ ದಂದೆ ಮೇಲಿದ್ದವಳು ಇವನಿಗ್ ಹೇಗ್ ಗುತ್ತಾಯ್ತು?” ಅಂದ ಹೇಳಿ, ವಜ್ರದ ಮುಂಡ್ಗೆ ಕಂಬಿದ್ದಿತ್ತು. +ಅಲ್ ಹೋಗಿ ಮರೆ ಸೇರಿ ನಿತ್ತಿತ್ತು ಅದು. +ಇವ ಬಾರಕೋಲಲ್ ನಾಕ್ ಬಾರ್ಸ್ ಬಿಟ್ಟ ಅದ್ಕೆ. +ಅದ್ ವೋಡ್ ನೆಡಿತು. +ಚಿನ್ನ, ಬಣ್ಣ ಯೆಲ್ಲಾ ತಕಂಡೇ ಪದ್ಮಾವತಿ ಮನೆಬಿಟ್ಟೇ ಹೋಯ್ತು. +ಮತ್ತೊಂದ್ ಗಳಗೇಲಿ ಮತ್ತೊಂದ್ ದಾಸಿ ಹೋಯ್ತು. . . ಅದೂ ಹೀಗೆ ಹೇಳ್ತು. +ಅಟ್ ಕೊಟ್ ಕಳ್ಸುದ್ರೊಳಗೆ ಮುಂದ್ ಹೋಯ್ತು. +ಇವ ಮನ್ಗದಲ್ ಹಾಗೇ ಆಲೋಚ್ನೆ ಮಾಡ್ಕಂತ, “ಓಹೋಹೋ. . . !ಬೀಮಾವತಿ ಪಟ್ಣಂತೆ, ಪದ್ಮಾವತಿ ಸೂಳ್ಯಂತೆ. . . ಅಡಕೆ ಹರವಣದಲ್ಲಿ ವಂದಡಕೆಯಿಲ್ಲ. +ಈ ಹರಿವಾಣದಲಿ ಕವಳದ ತಬಕಡಿ ತಯಾರ್ ಮಾಡೂ ದಾಸಿ ಯೆಲ್ ಹೋಗ್ ಸತ್‌ತೇನೋ. . . ” ಅಂದ ಹೇಳಿ ಹೇಳ್ದ. +ಅದೇ ಆಗಿತ್ತು ಕವಳದ ತಬಕಡಿ ತಯಾರ್ ಮಾಡೂ ದಾಸಿ. +ವಂದ ಮುಂಡ್ಗೆ ಕಂಬ್ದ ಮರೆ ಸೇರ್‌ನಿತ್ತತು. +ಅದ್ಕೂ ನಾಕ್ ಬಾರ್ಕೋಲ ಹೊಡ್ತ ಕೊಟ್ಟ, ಅದೂ ಯೆಲ್ಲಾ ತಕಂಡೇ ವೋಡ್ ನೆಡಿತು. +ಕಡೆಗ್ ಮತ್ತೊಂದ್ ದಾಸಿ ಲಾಸ್ಟ್‌ಗೆ ಉಳಿತಲ್ಲ. . . ಅದೂ ಹೋಗ್ ಹಾಗೆ ಹೇಳ್ತು. +ಇಷ್ಟ ಕೊಡಿ ಹೇಳ್ತು. +ರಾಜ್ಯದಾಶೆ ಬಗ್ಗೆ ಅದ್ಕೂ ಕೊಟ್ತು. +ಆರ್ತಿ ಹಚ್ಕಂಡ ಅದೂ ಬಂತು. +‘ಯೆಯ್ಡಜನ ತಿಂದ್ಕಂಡ್ ಹೋಗರೆ, ಇದು ಬಂತು. . . ’ ಹೇಳಿ, ಮನ್ಗ್ನಲ್ ಹೇಳ್ಕಂಡ. +‘‘ಬೀಮಾವತಿ ಪಟ್ಣಂತೆ. . . ಪದ್ಮಾವತಿ ಸೂಳ್ಯಂತೆ. . . ಇಲ್ಲಿ ಸದೆ ರಾಶ್ಯಾಗ್ ಬಿದ್ದದೆ. +ಸದೆ ತೆಗು ಜಾಡಮಲ್ಲಿ ದಾಸಿ ಯೆಲ್ ಹೋಗ್ ಸತ್‌ತೇನೊ. . . ” ಅಂದ ಅವ. +ವಜ್ರಮಂಡ್ಗೆಕಂಬ ಮರೆಸೇರ್ ನಿತ್‌ತ್ತು. +ನಾಕ್ ಹೊಡ್ದ. +ಅದೂ ಪಟ್ಟೆ ಉಟ್ಕಂಡೇ ಚಿನ್ನದ ಮೇಲ್ ಹರಿವಾಣ ಸಮೇತ ವೋಡ್ ನೆಡಿತು. +ಅವ ಕಡೆಗೆ ಮಧ್ಯಾನ ಮೇಲೆ ಸುಮ್ನಾಗ್ ಕುತ್ಕಂಡ. +ಯೆರಡ ತಾಸ್ ಸುಮಾರೆ ಕುಂತ. +ಕುಂತ್ಕೊಳ್ಳುರೊಳ್ಗೆ ಅವನಿಗೆ ಹೀಗೆ ಆಲೋಚ್ನೆಯಾಯ್ತು-- ‘ಹೋಗ್ಬಿಡ್ವ. . . ’ ಹೇಳಿ. +ಕಡಿಕೆ ಅವನಿಗೆ ತಾನು ಹೀಗೇ ಹೋಗುದಾದ್ರೆ ಸೋತಿ ಹೋದ ಹೇಳಾಗ್ತದೆ. +ಹೀಗೇಯ ನೋಡ್ಬಿಟ್ಟ ಹೇಳ್ ಮತ್ತೊಂದ್ ಆಲೋಚ್ನೆ ತೆಗ್ದ. +ಉಂಗ್ಲ ಕೈಲ್ ಹೇಳ್ದ-- “ಕುಂತಕುಂತ ಬೇಜಾರ ಬರ್ತದೆ. +ವಂದ್ ಕತೆ ಹೇಳು” ಅಂದ. +ಆ ಉಂಗ್ಲ ಯೇನ್ ಹೇಳ್ತು, “ಅಣ್ಣನ ಕತೆ ಮುಂಚೇ ಆಗಬೇಕು. +ನಾವ್ ತಂಗದಿರು. . . ನಿನ್ದೆ ಕತೆ ಮುಂಚೆ ಆಗಬೇಕು” ಅಂದ್ರು. +ಆಗ್ ಇವ ಯೇನ್ ಹೇಳ್ದ? +“ತನ್ಗ್ ಕತ್ಯೇ ಬರುದಿಲ್ಲ. +ತಾ ಯೆಂತಾ ಕತೆ ಹೇಳ್ಲಿ?” ಕೇಳ್ದ. +ಕಡೆಗವ್ರು ಯೇನ್ ಹೇಳ್ದ್ರು. +‘‘ಕತೆ ಬರದಿದ್ರೂವ ಲೋಕದಲ್ ಯೇನಾದ್ರೂ ವಂದ್ ನಡದದ್ ಸಂಗ್ತಿಯ ಕೂತ್ಕಂಡ ಹೇಳದ್ರೆ ತಮ್ಗೆ ಅದು ಕತೆ ಸ್ವರೂಪದಲ್ಲೇ ಆಗತದೆ. . . ” ಹೇಳ್ದ್ರು. +ಆಮೇಲವ ಯೇನ್ ಹೇಳ್ದ ಕೇಳ್ದ್ರೆ, “ತಾನು ಹೇಳತೇನೆ ರಾಜೇಸ್ರ. . . ‘ಹೂ. . . ’ ಹಾಕು” ಅಂದ. +ಕಡೆಗೆ ಇವ ಕತೆ ಹೇಳ್ತ. +‘‘ವಂದಲ್ಲಾ ವಂದ್ ರಾಜ್ಯದಲ್ಲಿ ಮದವೆಗ್ ತಯಾರಿದ್ರು. +ಆ ಮದಮಗನಿಗೆ ಯೆಚ್ಚರ ತಪ್ಹೋಯ್ತು. +ಆಮೇಲೆ ಅಲ್ಲಿ ರಾಜ ಯೇನ್ ಹೇಳ್ತಾನೆ ಕೇಳ್ದ್ರೆ, ‘ವಂದ್ ತಾಸಿನ ಮಾತಿಗೆ ಯಾರಾದ್ರೂ ಬಾಶಿಂಗ ಕಟ್ಕಳಿ’ ಅಂದ. +‘ಮರದಿವಸ ಯೆಚ್ಚರಿಕೆಯಾಗಿ ಹಿಂಡ್ತಿ ಕರ್ಕಂಡ್ ಹೋಯ್ಕಳ್ಳಿ’ ಹೇಳ್ದ. +ರಾಜನೂ ಕೂಡ ಯೆಲ್ಲ ಜನ್ರ ಕೈಲ್ ಕೇಳ್ತಾನೆ. +ಯಾರೂ ವಬ್ರೂ ಕಟ್ಕೊಳ್ವೋರಿಲ್ಲ. +ಆ ಹೊತ್ತಿಗೆ ಯಾವದೋ ವಂದ್ ರಾಜನ ಹುಡ್ಗ ಅಲ್ ಹೋದ. +ತಾನು ಅಂದ್ ಹೇಳುದಿಲ್ಲ. +ಆ ರಾಜ ಕೂಸ ಕೂಡ ರಾಜ ಹೇಳ್ದ ಯೇನ್ ಹೇಳ್ದ ಕೇಳಿರೆ-- ಮೊದ್ಲನ ಹಾಗೇ ಹೇಳಿದ ಅಂತ ಹೇಳ್ದ ಅಂಬದಾಯ್ತು. +ಕಡೆಗವ, ‘ಬಾಶಿಂಗ ಅಂದ್ರ ಅಷ್ಟ್‌ ದೊಡ್ಡ ಹೊರ್ಯೇನು. . . ಕಟ್ಟಿ ತನ್ಗೆ’ ಅಂದ. +ಮೊದ್ಲನವಗೆ ಸಲ್ಲು ಆ ಹುಡ್ಗಿಯ ದಾರೆಯೆರದ್ರು ಅಲ್ಲಿ. +ಆದಕೂಡ್ಲೆ-- ಅವ ಊಟ ಮುಗಿಸ್ಕಂಡಿ, ತನ್ನೂರಿಗ್ ಬಂದ್ಬಿಟ್ಟ. +ಅಲ್ಲ್ ಉಳಿಲೇ ಇಲ್ಲ. +ಕಡಿಗಾ ಹುಡ್ಗಿ ಮಾತ್ರ ಯಾರಿಗ್ ಸಲ್ಲತದ್ಯೊ? +‘ಕೈಹಿಡ್ದ್ ದಾರೆಯೆರ ಕಂಡವ್ನಿಗೆ ಸಲ್ತದ್ಯೊ. . . ’ ಹೇಳುದು ಪತ್ತಿ ಇಲ್ಲ. . . ” ಅಂದ. +ಅಟ್ ಹೇಳೂದ್ರೊಳ್ಗೆ ಆಗೆ ಪದ್ಮಾವತಿ ಸೂಳೆ ಇದ್ದಿತ್ತಲ್ಲ ಮಂಚದ ಮೇಲೆ. +‘‘ಆ ಹುಡ್ಗಿಯೆಚ್ರ ತಪ್‌ದವನಿಗೆ ಸಲ್ಲುದಿಲ್ಲ. +ಕೈಹಿಡಿದ್ದಿ ದಾರೆಯೆರ್ಕಂಡವನಿಗೆ ಸಲ್ತದೆ. . . ’’ ಅಂದ್ ಹೇಳಿ ಹೇಳ್ತು ಅದು. +ನಿಜವಾದ ಮಾತಾಯ್ತು. +ಆವಾಗ ಯೇನಾಯ್ತೋ ಕೇಳ್ದ್ರೆ, ಮೂರ್ಮೊಳ ಮಂಚ ಅವನ ಬದಿಗ್ ಬಂತು ತನ್ನಟ್ಕೇಯ. +ಆಮೇಲೆ ಇವ ಹೇಳ್ದ, “ಹಂಗಾರೆ ತನ್ ಕತೆ ಮುಗೀತು. . . ನೀವಿಬ್ರೂ ಕತೆ ಹೇಳಿ” ಅಂದ. +‘‘ಆಗೂದು ಅಣ್ಣ. . . ವಬ್ಬ್ರ ಕತೆ ಹೇಳ್ತ್ರು. . . ವಬ್ರು ‘ಹೂಂ. . . ’ ಹಾಕ್ತ್ರು. . . ನೀ ಕತೆ ಕೇಳು. . . ” ಅಂದ್ರು. +ಆಮೇಲೆ ರಾಜೇಸ್ರ ‘ಹೂಂ. . . ’ ಹಾಕ್ತು. +ಶಿರಾಳ ಬೆಂಕಿ ಕತೆ ಹೇಳ್ತು-- “ಆವಾಗ ವಂದಲ್ಲಾ ವಂದ್ ರಾಜ್ಯದಲ್ಲಿ ವಂದಾಚಾರಿ ಇದ್ನಂತೆ. +ವಂದ್ ಬಡಗಿ (ಬೇರೆ), ಆರಮಂದಿ ಬೇಕಾಗ್ತದೆ ಅಲ್ಲಿ. +ಕಡಿಗೊಬ್ಬ ಗಾಡ್ಗ, ವಬ್ಬ ಕೋವಿಕಾರ, ವಂದು ಕಳ್ಳ, ವಂದ ಸೊನಗಾರ. . . ಅಟ್ಟೂ ಜನ ವಂದ್ ಪೇಟಿಲ್ ಕೂಡ್ದ್ರು. +ಯೆಲ್ಲಾ ಕಸ್ಬೀರೇಯ. +‘ನಾಳಿನ ದಿವ್ಸ ನಾವಟ್ಟೂ ಜನನೂವ ಕೂಡ್ಕಂಡ್ ವಂದ್ ತಿರಗಾಟ್ಕ ನೆಡ್ದ್ ಬಿಡ್ವಾ’ ಅಂದ್ ಅವರೆಲ್ಲಾ ಮಾತಾಡ್ಕೊಂಡ್ರು. +ಅಟ್ ಮಾತಾಡ್ಕಂಡಿ, ‘ನಿಮ್ಮ ನಿಮ್ಮ ಹತ್ಯಾರ ಯೇನದ್ಯೊ ಅಟ್ಟೂ ತಕಂಡ್ಬನಿ. +ಯೆಲ್ಲಾದ್ರೂ ವಂದ್ ಕೆಲ್ಸ ಸಿಕ್ಕರೆ ಪೂರೈಸಬಿಡ್ವ’ ಅಂದ್ರು. +‘ನಾಳಿನ ದಿನ ಹತ್ಗಂಟೆಗೆ ಅಲ್ಲಿ ಮಾತಾಡಿದ್ರಲ್ಲ, ಆ ಜಾಗದಲ್ಲಿ ಬಂದ್ ವಟ್ಟಾಗಿ ನೀವು. . . ’ ಆಗ ವಟ್ಟಾದ ನಂತ್ರ, ಮಾರನ ದಿವ್ಸೆ ಆರೂ ಜನ ಬೆಟ್ಟದಾಗ ಹೋಗ್ ಹೊಕ್ಬಿಟ್ರು. +ಹುಡಿಕಂತ ಹೋಗುದ್ರೊಳ್ಗೆ ಬೆಟ್ಟದಾಗೆ ಯೇನೇನೂ ಸಿಕಲಿಲ್ಲ. +ಕೋವಿ-ಬೀವಿ ಇತ್ತು‌. +ಯಾವದೂ ಜೀವಾತ್ಮ ಸಿಕಲಿಲ್ಲ. +ಹೋಗ್ಹೋಗಿ ಸಮದ್ರದ ತಡಿಗ್ ಹೋಗಿ ಕುಂತ್ರು ಅವರು. +‘ಮನಿಂದ ಹೊರಟ್ ಮೂರ್ತನೇ ಗನಾದ್ ಸಿಕಲಿಲ್ಲ ಅಂದ್ ಕಾಣತದೆ‌. +ಅದಕಾಗಿ ನಮ್ಗ್ ಯೇನೂ ಸಿಕಲಿಲ್ಲ’ ಅಂದಿ, ಕವಳ ಹಾಕ್ತ ಕುಂತ್ಕಂಡ್ರು. +ಆಗ ಕವಳ ಮುಗ್ದ ಕೂಡ್ಲೆಯ, ‘ಓ ಆಚಾರಿ. . . ಈಗೆ ನೀನು ವಂದ್ ಕೆಲ್ಸ ಮಾಡಬೇಕು. +ನಿಮ್ ಕಸ್ಬಾರೂ ನೋಡ್ವ. . . ’ ಅಂದ ಅವ. +ಆಚಾರ್, ‘ಅಡ್ಡಿಲ್ಲ. . . ’ ಅಂದ್ ಹೇಳ್ದ. +‘ವಂದ್ ಕಟ್ ಹೊಡಿಬೇಕು, ವಂದ್ ಮಚ್ದಲ್ಲಿ ಯೋಳ ಮರ ತಲಬುಡ ತುಂಡಾಗಬೇಕು’ ಅಂದ. +‘ಯೇನಡ್ಡಿಲ್ಲ. . . ’ ಅಂದ ಅವ. +ನಿತ್ತ ಮಚ್ಚನ ಕಾವ್ ಸಿಕ್ಸಕಂಡಿ ಯೇಳ ಮರ ಇದ್ದ ಸಾಲ್ನಲ್ ಸಮಾನಿತ್ಕಂಡ ವಂದ ಕಚ್ ಹೊಡ್ದ್ ಬಿಟ್ಟ. +ಯೇಳ ಮರನೂ ತುಂಡಾಗ್ ಸಾಲಾಗ್ ಬಿದ್ಬಿಟ್ತು. +ಮತ್ತೊಬ್ಬ ಯೇನ್ ಹೇಳ್ದ, ‘ಬಡಗೀ, ನೀನು ಕಸಬಿ ವಂದ್ ಬಾಚಿ ಹೊಡಿಬೇಕು. +ಹದ್ನಾಲ್ಕ್ ಹಲ್ಗಿ ತೆಗೆಬೇಕು’ ಅಂದ. +ಆಗ ‘ಅಡ್ಡಿಲ್ಲ’ ಅಂದ ಅವ. +ಯೇಳೂ ಮರನೂ ಸಮಾ ಇಟ್ಕಂಡಿ, ವಂದ್ ಬಾಚಿ ತೆಗ್ದ್ ಹೊಡ್ದ್ ಬಿಟ್ಟ. +ಹದ್ನಾಲ್ಕ್ ಹಲ್ಗಿಯಾಯ್ತು ವಂದ್ ಕಚ್ನಲ್ಲಿ. +ಆವಾಗ ಸೊನ್ಗಾರಿದ್ದಿದ್ದ. +ಸೊನ್ಗಾರ್ನ ಕೈಲ್ ಹೇಳ್ದ, ‘ನೀನು ವಂದ್ ಸುತ್ಗಿ ಹೊಡಿಬೇಕು. +ವಂದ್ ಹಡ್ಗ್ ಕಟ್ಬೇಕು. +(ಹದ್ನಾಲ್ಕ್ ಹಲಗೇನೂ ಕೂಡ್ಸ್ ಕಟ್ಬೇಕು)’ ‘ಹೋ. . . !ತಾನೀಗೆ ಈಗಿಂದೀಗೇ ಕಟ್ತೆ’ ಅಂದಿ ತಯಾರಾಗ್ಬಿಟ್ಟ ಅವ. +ವಂದ್ ಸುತ್ಗಿ ಹೊಡ್ದ. +ವಂದ್ ಹಡ್ಗ್ ಕಟ್ಟಿ ತಯಾರಾಗ್ಹೋಯ್ತು, ಕೂಡ್ ಹೋಯ್ತದು. +ಆವಾಗಾ- ಹಡ್ಗ್ ಯೆಳ್ದ ಸಮದ್ರಕ್ ಹಾಕ್ದ್ರು, ಅವರು ಕುಂತ್ಕಂಡ್ ಹೋಗಲಿಕ್ಕೆ. +ಆ ಹಡ್ಗನ ವಳ್ಗ್ ಕುಂತ್ಕಂಡಿ ಸಮ್ದರದವಳ್ ನೆಡಿದ್ಬಿಟ್ರು ಅವ್ರು. +ಬಿಟ್ಕಂಡ್ ಯೆಟ್ ಪೋರ್ಸನ ಮೇಲೆ ಹೋಗರೆ! +ಹಡ್ಗಹೋಗಿ ಬಗವಾದದ್ದು ಮೂರ್ ಮೈಲ್ ಹಿಂದ್ ಕೂಡ್ಕಂತ ಸಾಬೀತಾಗ್ತ ಬತ್ತದೆ. +ಅಲ್ ಆಚಿ ಸಮ್ದ್ರದ್ ತಡಿಗ್ ಹೋಗಿ ಹಡ್ಗ್ ತಾಡ್ತು. +ಮತ್ತೆ ತಾಡ್ದ್ ನಂತ್ರವ ಯೇನಾಯ್ತು ಆಗ್ ಹೇಳ್ದ್ರೆ. . . ಅವರವರ ಹತ್ಯಾರ ತಕಂಡಿ ಬೆಟ್ಟಹೊಕ್ಬಿಟ್ರು. +ಮೂರ್ ಮೈಲ್ ದೂರ ಹೋದ್ರು. +ಆದ್ರೂ ಯೇನ್ ಸಿಕಲಿಲ್ಲ ಅವರ್ಗೆ ಅಡವಿವಳ್ಗೆ. +ಆವಾಗೆ, “ಯೆಲ್ಲಾ ಕುಂತಕಳ್ವ. +ನಮಗೆ ಮನಿಂದ ಹೊರಟ ಗಳಗೀನೇ ಚಲೋ ಶಿಕಲಿಲ್ಲ. +ವಂದ್ ಕವಳ ಹಾಕಂಡ್ ಮುಂದ್ ಹೋಗ್ವ’’ ಅಂದ್ರು. +ಕವಳ ಮುಗ್ದ್ ಕೂಡ್ಲೆಯ ಅಲ್ ಹೇಳ್ದ, “ಇದೇನೋ ನಮಗೆ ಗಿರಾಚಾರ ಕಟ್ ಬಂದದೆ. . . ” ಹೇಳ್ದ ಅಲ್ ಗಾಡಿಗ ಇದ್ದಿದ್ದ. +ಅವ, “ಯೇನಡ್ಡಿಲ್ಲ, ನೋಡ್ಬಿಡ್ತೆ” ಅಂದ. +ಅವಗೆ ಮೈಮೇಲ್ ಬಂದೇ ಹೋಯ್ತು. +ಆವಾಗೆ ಹೇಳ್ದ ಅವ. +ಯೇನಂದ್ ಹೇಳ್ದನೂ ಅಂದ್ರೆ, “ಇಲ್ಲಿ ಮೂರ್ ಪರ್ಲಾಂಗ್ದ್ ವಳ್ಗೆ ವಂದ್ ರಾಕ್ಷಸಿ ಅದೆ. +ರಾಕ್ಷಸಿ ಮೊಳಕಾಲ ಸಂದ್ನ ಮೇಲೆ ಮೂರ್ ಮಲ್ಗಿ ತೂಕದ ಹುಡ್ಗಿ ಅದೆ‌. +ಅದ್ರ ಹೇನ ನೋಡ್ತ ಅದೆ ತಾಯಿ (ರಾಕ್ಷಸಿ). +ಅದ್ರ ತಂದ್ಕಳಿಬೇಕಾದ್ರೆ ನೀವು. . . ” ಅಂದ ಹೇಳ್ದ. +ಮತ್ ಯೆರಡನೆಯವನ ಯೇನ ಹೇಳ್ದ ಕೇಳ್ದ್ರೆ, “ವಂದ್ ಕಾಕಿ ಅವ್ರ ಕುಂತಲ್ಲೇ ಮರದ ಮೇಲೆ ಮೂರ್ ಮೊಟ್ಟೆ ಹಾಕ್ ಕಾವ್ಕೆ ಕುಂತಿತ್ತು” ಅಂದ‌. +ಇವ್ನ ಮೈಮೆಲ್ ಬಂದದ್ ನಿತ್ಹೋಯ್ತು ಅಲ್ಲಿ. +ಆವಾಗ ಅವರವರೊಳ್ಗ್ ಮಾತಾಡ್ಕೊಂಡ್ರು. + “ನೋಡ್ವನೊ. . . ಕಾಕೆ ಮೂರ್ ಮೊಟ್ಟೆ ಹಾಕದ್ದು ಹೌದೋ ಅಲ್ಲವೋ ನೋಡ್ವ. . . ಗಾಡ್ಗ ಸುಳ್ ಹೇಳದ್ನೊ, ಕರೆ ಹೇಳದ್ನೊ ನೋಡ್ವ. . . ” ಅಂದ. +“ಕಳ್ಳನೆ ಹೋಗಬೇಕು ಮತ್ ಯಾರ್ ಕೈಲೂ ಆಗ” ಅಂದ್ ಹೇಳ್ಬಿಟ್ಟನೆ. +ಆ ಕೂಡಲೆ ಅವ, ‘‘ಹತ್ತೊಂದ್‌ ಕೈ ನೋಡ್ಕಂಡ್ ಬಾರೊ. . . ” ಅಂದ. +“ಕಾಕೆ ಗೂಡ್ನಲ್ ಮೂರ್ ಮೊಟ್ಟೆ ಹಾಕದ್ ಹೌದು.’’ +ಇವ ಅಡಿಗ್ ಗೂಡ್ನಲ್ ಕನ್ನ ಮಾಡಿ ವಂದ್ ಮೊಟ್ಟೆ ತೆಗ್ದಬಿಟ್ಟ. +ಕಾಕೆಗ್ ಗೊತ್ತೇ ಇಲ್ಲ. +ತೆಕ್ಕಂಡ ಬಂದವ ಅಲ್ಲಿ ವಂದ್ ಮರ ತೋರ್ಸದ ಅವ, “ಮತ್ತೆರಡ ಮೊಟ್ಟೆ ಅದೆ. . . ” ಅಂದ. +ಇಪ್ಪತ್ ಮೆಟ್ಟು ದೂರ ಮೊಟ್ಟೆ ಇಟ್ರು ನೆಲ್ಕೆ. +ಕೋವಿ ಇದ್ದವ್ನ ಕೈಲ್, “ಮೊಟ್ಟೆಗ್ ಕೋವಿ ಗುಂಡ್ ಹೊಡೆಬೇಕು. +ಸಮಾ ಯೆಯ್ಡ ಕಡಿಮಾಡ್ ಇರ್ಸ್ ಬೇಕು. +ಚೂರ್ ಮಾಡ್ದ್ರೆ ಕತ್ತಿಲ್ಕೊಯ್ದ ಹಾಗೆ ಮಾಡಿ.” +ಆಮೇಲೆ ಅವ ಯೇನ್ ಮಾಡದ್ನೊ ಕೇಳ್ರೆ, “ಆಗೂದು ಇಲ್ಲಿ. . . ” ಅಂದ. +ಕೋವಿಕಾರ ತಡ ಮಾಡಲೇ ಇಲ್ಲ. +ಗುಂಡ ಹೊಡ್ದಬಿಟ್ಟ. +ಮೊಟ್ಟೆ ಸಮಾಮಾಡಿ ಬಾಗ ಮಾಡಿಬಿಟ್ಟ. +ಕಡೆಗೆ ಅವ್ನ ಕಸಬೊಂದಾದಾಗಾಯ್ತು. +‘‘ಮತ್ತೆ ಸೊನಗಾರನ್ನ ಕೈಲ್ ಮೊಟ್ಟೆ ಕೂಡ್ಸಬಿಡೊ. +ನೀನು ಸೊನಗಾರ್ನ್ ಬೆನ್ಗೆ ಹಾಕಲಿಕ್ಕೆ ಬಾಳ ಬುದ್ವಂತ್ರಿರ್‌ತ್ರು, ಬೆನ್ಗೆ ಹಾಕ್ಬಿಡೊ” ಅಂದ ಅವ. +ಅವ ಕೂಡಸ್ದ. +ಕಳ್ಳನ್ ಕೈಲ್ ಹೇಳ್ದ, “ಅದ್ರ ಮೊಟ್ಟೆ ಯಾಕ್ ಹಾಳಮಾಡಬೇಕು. +ಗೂಡ್ನವಳ್ಗ್ ಇಟ್ಬಂದ್ಬಿಡು.” +ಕಳ್ಳ ಮರಹತ್ತಿ ಮೊಟ್ಟೆ ಅಲ್ ಇಟ್ ಬಂದ. +ಕಾಕೆ ಅಲ್ಲೆ ಅದೆ. +ಗೊತ್ತೇ ಇಲ್ಲ ಅದ್ಕೆ, ಕೆಳಗಿಳ್ದ್ ಬಂದ. +“ಯೇಳೆ ಮೂರ್ ಪರ್ಲಾಂಗ್ನ ವಳ್ಗೆ ರಾಕ್ಷಸಿ ಅದೆ. +ಅದ್ರ ಮೊಳಕಾಲ ಮೇಲೆ ಹುಡ್ಗಿ ಅದೆ ಅಂದನಲವೋ? +ಯೇಳಿ ಹೋಗ್ವ, ನೋಡ್ವ. . . ” ಅಂದ. + ಹೊರಟ್ರು. . . ಹುಡ್ಕೂಕ್ ಬಿದ್ರು ಅವರು. +ಮುಂದ್ ಹೋದ್ರು ಅವರು. +ಆರ್ ಪರ್ಲಾಂಗ್ದ್ ವಳ್ಗ್ ಹುಡ್ಕುದ್ರೂ ಸಿಕಲೇ ಇಲ್ಲ ಅವರ್ಗೆ. +ಮಾ ಪರ್ವತ ರಾಕ್ಷಸಿ ಅದು. +ಅದ್ರ ಬುಡಕಿದ್ ಹೋದ್ರೂ ಇವರ್ಗೆ ಗೊತ್ತಾಗಲಿಲ್ಲ. +ಆವಾಗೆ ಅವಯೇನ್ ಹೇಳದ್ನೊ ಕೇಳ್ದ್ರೆ, “ನೀನ ಗಾಡಿಗತನ ಮಾಡುದೇ ಸುಳ್ಳು. +ಯಕ್ಷೀ (ಗಾಡ್ಗ) ಹೇಳೂದೇ ಸುಳ್ಳು. . . ’’ ಆಗ್‌ ಹುಡ್ಕುದ್ರೂವ ಸಿಕ್ಕಲಿಲ್ಲ. +‘ಗಾಡ್ಗ ಹೇಳುದೇ ಸುಳ್ಳು ಅಂದ್ಬಿಟ್ರು.’ +ಆವಾಗವ್ನಿಗ್ ಮೈಮೇಲ್ ಬಂದೇ ಬಂತು, “ಏಲೇ ಮಗನೇ. . . ಯೇನಂತ ತಿಳಿದೀದೆ? +ಸುಳ್ಳು ಅಂದ್ ಹೇಳ್ ತೆಳದಿದ್ಯೊ? +ವಂದ್ ಪರ್ಲಾಂಗ್ನವಳಗೆ ರಾಕ್ಷಸಿ ಅದೆ. +ಅದ್ರ ಹುಡ್ಗಿ ಅದೆ. +ತಂದ್ಕೊ ಮಗನೇ. . . ” ಅಂದ್ ಹೇಳ್ದ. +“ನುಡಿ ಹಾಕ್ತೆ” ಅಂದ. +ನುಡಿ ಹಾಕ್ಬಿಟ್ಟಾನೆ, ಯೆಚ್ಚರ್ಕಿ ಇಲ್ಲ. +‘ಮತ್ ಯಾರ ಕೈಲೂ ಸಾದ್ಯಿಲ್ಲ. +ಕಳ್ಳನೆ ತರಬೇಕ’ ಅಂದ್‌ ಹೇಳ್ದ. +ಆಗ, “ಹೋಗೊ. . . ಹೋಗೊ ಕಳ್ಳ. . . ಹೋಗ್ ತಕಂಡಬಾರೊ” ಇವನಿಗ್ ಮೈಮೇಲ್ ಬಂದದ್ ನಿಲ್ಲಲೇ ಇಲ್ಲ. +ನಿಂತ್ರೆ ನುಡಿ ಕಡ್ದ್ ಹೋಗ್ತದೆ. +ರಾಕ್ಷಸಿ ಬೆರ್ಸ್ತ ಬರ್ತದ್ಯಲ್ಲ ಇವನಿಗೆ? +ಅದ್ರ್ ಯೆಚ್ಚರ್ಕಯಿಲ್ಲ ಈಗ ನದ್ರ್ಕಟ್ಬಿಟನೆ ಇವ. +ಆಗೆ ಕಳ್ಳ ಹೋದ. . . ವಂದ್ ಮೂರ್ ಮಲ್ಗೆ ತೂಕದ ಯೆಲೆ ಕೈಲ್ ಹಿಡ್ಕಂಡೇ ಹೋದ. +ಆಗಲ್ ಹೋಗುರೊಳ್ಗೆ ರಾಕ್ಷಸಿ ಮೊಳಕಾಲಸಂದ್ನ ಮೇಲೆ ಹುಡ್ಗಿ ಇದ್ದದ್ ಹೌದು. +ಆಗ ಯೇನ್ ಮಾಡ್ದ? +ರಾಕ್ಷಸಿ ಕೈ ಹುಡ್ಗಿ ತಲೆ ಮೇಲಿತ್ತು. +ಹುಡ್ಗಿಗೆ ಇತ್ಲಾಗ್ ತಕಂಡ್ ಮೊಳಕಾಲ ಸಂದ್ನ ಮೇಲೆ ಮೂರ್ ಮಲ್ಗೆ ತೂಕದ ಯೆಲೆ ಇಟ್ಟ. +ಹುಡ್ಗಿ ಕರ್ಕಂಡ್ಬಂದ್ಬಿಟ್ಟ. +ಕೂಡ್ಲೆ ಅವ ನುಡಿ ಕಡ್ದೆ ಬಿಟ್ಟ. +ಅವಳಿಗೆ ಯೆಚ್ರಾಗ್ ಹೋಯ್ತು. +ಯೆಚರಾಗಿ ಯೇನ್ ನಿತ್ಬಿಡ್ತು? ‘ಯೇಳಿ. . . ಹಡ್ಗ ತಕಂಡ್ ಹೋಗ್ವ’ ಅಂದ್ರು. +ಆರ್‌ಜನ ಮತ್ತು ಹುಡ್ಗಿ ಸಮೇತ ಯೇಳ ಜನ ಹಡ್ಗನ ಮೇಲ್ ಕುಂತ ಹಡ್ಗ್ ಬಿಟ್ಕಂಡ್ ತಾಬಡತೋಬ ಬಂದ್ಬಿಟ್ರು. +ಆರ ಮೈಲ್ ಹಿಂದೆ ನೀರ್ ಕುಡ್ಕಂತ ಬರ್ತದೆ ಜಾಗ್ರತ ಹೋಗು ಪರಸಂಗ ಬಂತು. +ಕದ್ಕೊಂಬಂದದ್ದು ರಾಕ್ಸಸಿ ಕೈಯಿಂದ. +ರಾಕ್ಷಸಿಗೆ ಯೆಚ್ರಾಗ್ ಹೋಯ್ತು. +ರಾಕ್ಷಸಿಗೆ ಯೆಚ್ರಾಗ್ ಯೆದ್ ನಿತ್ಬಿಡ್ತು. +ರಾಕ್ಷಸಿಗ್ ಯೆದ್ನಿತ್ ಬಿಟ್ರೆ ಜಗತ್ ಪೂರ್ಣ ಕಾಣ್ತದೆ. +ಆಗ ನೋಡ್ತು. +ಸಮದ್ರದ್ ಬೇಲೆ ಮೇಲೆ ಯೇಳ ಜನ ವೋಡ್ತಾರೆ ಹಡ್ಗ ಹತ್ತುಕೆ. +ಹತ್ ಹಡ್ಗ್ ಬಿಟ್ಬಿಟ್ರು. +ರಾಕ್ಷಸಿ ಮೂರ್ ಹೆಜ್ಜೆ ಇರ್ಸ್ತು. +ಸಮದ್ರದ ಬೇಲೆಗೇ ಬಂದ್ ಮುಟ್ಬಿಡ್ತು. +ಇವ್ರ ಹಡ್ಗ ಅದ್ ಸಮದ್ರ ಕಳ್ದ್ ಹೋಗ್ ಬಿಟ್ತು. +ಆವಾಗದ್ ಯೇನ್ ಮಾಡ್ ಬಿಟ್ತೊ ಕೇಳದ್ರೆ ಹಡ್ಗೇ ನುಂಗ್ಬೇಕಂದಿ ಹೋಗ್ ಹಣ್ಕ್ ಬಿಡ್ತು. +ಕೂಡ್ಲೆ ಯೇನಾಯ್ತು ಕೇಳದ್ರೆ, ಬಿಶಲಿತ್ತು ಧಪ್ನೆ ಕಪ್ಪಾಗ್ ಹೋಯ್ತು. +ಹಣ್ಕದ ಹೊತ್ತಿಗೆ ನೆಳಲಾಗ್ಹೋಯ್ತು. +ಅಲ್ಲಿವರೆಗ್ ಇವ್ರ್ ನೋಡ್ಲೆ ಇಲ್ಲಾಗಿತ್ತು. +ಆಗ ವಬ್ ನೋಡ್ದ. +ಕೋವಿಕಾರನಿಗೆ ಸುಂಕಾಣಿಗಿಟ್ಟಿದ್ರು. +ಮುಂದೆ ಅವರೇ ಹೇಳ್ದ್ರು, “ಮಾರಾಯ್ನೆ, ಕೋವಿಕಾರ. . . ರಾಕ್ಷಸಿ ನಮ ತೆಗಿತ್ಯದ್ಯಲೊ ಕೋವಿ ಹಿಡ್ಕಂಡ ಯೆಂತಾ ಮಣ್ತಿಂತ್ಯೊ” ಕೇಳ್ಬಿಟ್ಟ, ಅವಂಗೆ ಶಿಟ್ಬಂತು. +ಆ ಕೂಡ್ಲೆ ಅವ ತಡಮಾಡ್ಲೇ ಇಲ್ಲ. +ಕೋವಿ ತಕಂಡಿ ರಾಕ್ಷಸಿ ಹೊಡಿಬೇಕು. +ನೋಡ್ದ್ರೆ, ಪರ್ವತದ ಹಾಗ್ ಕಾಣ್ತದೆ. +ಯೆಲ್ಲಿ ಅಂದ್‌ ಹೊಡಿತ? +ಅದ್ ನಿಚ್ಚ ಮೊಕತೊಳ್ದ ಕೂಡ್ಲೇಯ ವಂದ್ ಶೇಡಿ ಬಟ್ಟು ಹಣೆ ಮೇಲಿರ್ಸ್ತಿತ್ತು ಅದು. +ಆ ಬಟ್ಟು ವಂದ್ ಹೇಳದ್ರೆ ವಂದ್ ತಾಳಿ ಕೊಡ್ಯಟ್ ಆಕಾರದಲ್ಲಿ ಇರತಿತ್ತು. +ವಂದೇ ಬಟ್ ಇಡತಿತ್ತು. +ಕೋವಿಕಾರ ಬಿಳಿಕದ್ದದ್ ಕಂಡ. . . ಆ ಬಟ್ಟಿಗೇ ಗುರಿ ಇಟ್ ಹೊಡ್ದ. +ಶೇಡಿ ಬಟ್ಟಿಗೇ ಹೋಯ್ತದು. +ಆಗ ಹೊಡ್ದ ಕೂಡ್ಲೆ ರಾಕ್ಷಸಿ ಸಮುದ್ರದಲ್ಲೆ ಬಿತ್ತು. +ಹಡಗಿಗೆ ನಾಲ್ಕ ಅಂಗ್ಲ (ಇಂಚು) ತಪ್ ಬಿತ್ತು. +ಯೆಲ್ಲದಿರೆ ಹಡ್ಗ ಮುಳ್ಗೊ ಹೋಗತಿತ್ತು. +ಅದು ಸಮುದ್ರದಲ್ಲ ಬಿದ್ದಂಬುದು ನೀರ ಜಾಸ್ತಿ ಆಗ ಹೋಯ್ತು. +ನಾಲ್ಕೈದ್ ಆಳ ನೀರ್ ಜಾಸ್ತಿ ಆಗ್ ಹೋಯ್ತು. +ಆಗಕೂಡ್ಲೆ ಹೊಳೆಲಿದ್ದಂತಾದು ದೊಡ್ ಮಚವೆ ವಟ್ಟು ತುಪಾನಾಗ್ ಚೂರಾಗೋಯ್ತು. +ಇವರು ಜಾಗ್ರತಿನಲ್ ಬಿಡೂ ಸಮೇದಲ್ ಸಪ್ತೂ ಸಮುದ್ರದ ಬೇಲೆಗೆ ಇವ್ರ್ ಹಡ್ಗ್ ಬಂದ್ ತಾಡಲಿಕ್ಕೆ ಮೂರ್ ಪರ್ಲಾಂಗ್ ಇರಬೇಕಾದ್ರೆ ಇವರಿಗೂ ಬಂದ್ ಬಡ್ದ್ ಬಿಡ್ತು. +ಇವ್ರ ಹಡ್ಗು ವಡ್ದ್ ಹೋಯ್ತು. +ಆಗ ಮತ್ತೊಬ್ಬವ ಯೇನ್ ಹೇಳ್ದ, “ಯೇ ಸೊನಗಾರನ್ನೇ. . . ಬಿಟ್ಟಿ ಕೆಲ್ಸ ಮಾಡ್ದ್ಯಲೊ. . . ಹಡ್ಗು ವಡ್ದ್ ಹೋಯ್ತಲೊ. . . ” ಅಂದ. +ಅಟ್ಟಾದ ಕೂಡ್ಲೆ ಸೊನಗಾರವ ತಡ ಮಾಡ್ಲೇ ಇಲ್ಲ. +ವಡ್ದ ಹೋದ ಚೂರೆಲ್ಲ ವಟ್ ಮಾಡ್ ವಂದ್ ಸುತ್ಗೆ ಹೊಡ್ದ್ ಬಿಟ್ಟ. +ವಂದ್ ಸಂದ್ ಕೂಡ್ ಹೋಯ್ತು. +ಬಡ್ದ್ ತೆರೆ ಸಮುದ್ರದಲ್ ಮುಂದ್ ಹೋಗ್ ಬಿಟ್ತು‌. +ದಿಡಕೆ ಬೇಲೆ ಅಂಚಿನ ಮನೆ ನಾಕ್ ಪರ್ಲಾಂಗ್ನ ಮನೆ ಯೆಲ್ಲ ಸಮದ್ರದ್ ಪಾಲಾಗ್ ಹೋಗದೆ. +ಹಿತ್ಲಿಗೆ-ಬಿತ್ಲಿಗೆ ಯೆಲ್ಲಾ ನೀರೇ ಆಗ್ ಹೋಗದೆ. +ಆವಾಗೀ ಹಡಗು ಯೆಳದಿ ಮೇಲ್ ದಡಕ್ ಹೋಗ್ ತಂದು ಹಾಕ್ಕಂಡಿ ಮಾತಾಡ್ತ್ರು, ಅವರು ಈಗ ಹುಡ್ಗಿ ಇವರಿಗ್ ಕೂಡ್ ಬರುದಿಲ್ಲ. +ಅದ್ರತ್ರ ಎಲ್ಲ ಜನ, ‘ತಾನ್ ಲಗ್ನಾಗಬೇಕು. . . ’ ‘ನಾ ಲಗ್ನಾಗಬೇಕು. . . ’ ಅಂದ್ ಹೇಳ್ತ್ರು. +ಆಚಾರಿ, “ನಾನು ಮರ ಕಡೂಕಾಗ್ ನೀವು ಹಡ್ಗ ಕಟ್ದ್ರಿ” ಅಂದ್ ಹೇಳ್ತ. +ಬಡಗಿ, “ನಾನು ಹಡ್ಗ ಕಟ್ಟೂಕಾಗ್ ನೀವು ಆಚಿಲ್ ಹೋದ್ರಲ್ವೊ? +ಹುಡ್ಗಿ ತರುಕೆ? +ತಾನೇ ಮದ್ಯಾಗಬೇಕು” ಅಂತ ಅವ. +ಗಾಡ್ಗ, “ನಾ ನುಡಿಹಾಕ್ದಿದ್ರ್ ನೀವ್ ಆ ಹುಡ್ಗಿ ತರತಿದ್ರೊ?” ಕೇಳ್ತ. +ಕಳ್ಳ, “ತಾನ್ ಹೋಗ್ ತರದಿದ್ರೆ, ನಿಮ್ ಕೈಲ್ ತರುಕಾಗತಿತ್ತೊ ಹುಡ್ಗಿಯ?” ಕೇಳ್ದ. +ಸೊನಗಾರ, “ತಾನು ಸುತ್ಗಿ ಹೊಡ್ದ್ ಹಡ್ಗ ಕಟ್ಟಿದೆ (ಯೆರ್ಡಸರ್ತಿ)” ಕೋವಿಕಾರ, “ರಾಕ್ಷಸಿ ಕೊಂದಿದೆ. . . ನಾನ್ ಹುಡ್ಗಿ ಮದ್ವಿಯಾತೆ” ಅಂತ. +ವಟ್ನ ಮೇನ್ ಕಡಿಗೆ ಆ ಹುಡ್ಗಿ ಯಾರೀಗ್ ಸಲ್ತದೇ ಅಂದಿ ಯಾರ್ಗೂ ಪತ್ತೆ ಇಲ್ಲ.’’ +ಈಗೆ ಪದ್ಮಾವತಿ ಸೂಳೆ ಅರ್ತ ಮಾಡ್ತದೆ. +ಯೇನ ಹೇಳ್ತದೆ ಕೇಳ್ದ್ರೆ, “ಯಾರ್ಗೂ ಸಲ್ಲುದಿಲ್ಲ. . . ಅದು ಸಲ್ಲುದು ಕೋವಿಕಾರನಿಗೆ. +ಅವ ಆ ರಾಕ್ಷಸಿ ಕೊಲ್ಲದಿದ್ರೆ, ಹುಡ್ಗಿ ಯಾರ್ಗೂ ಶಿಕ್ಕೂದಿಲ್ಲ. +ಯಾರೂ ಜೀವಂತ ವಳೂದಿಲ್ಲ. +ಹಡ್ಗ ನುಂಗತದ್ಯಲ್ಲ ಅದು. . . ಅಂತಾದ ಕೋವಿ ಹೊಡ್ದ್ ಅವ ತಪ್ಸಾನ್ಯಲ್ವೊ? +ಕೋವಿಕಾರನಗೇ ಸಲ್ತದೆ.” +ಹೇಳ್ ಪದ್ಮಾವತಿ ಸೂಳೆ ಹೇಳ್ತು. +ಹೇಳ್ದ ಕೂಡ್ಲೆಯ ಮೂರ್ ಮೊಳ ಮಂಚ ಬಂತು ಇವನ ಬದಿಗೆ. +ಆಗ, ಅದೆ ಶಿರಾಳ ಬೆಂಕಿ ಕತೆ ಹೇಳಿತ್ತಲ್ವೊ? +“ಈಗ ರಾಜೇಸ್ರ ಕತೆ ಹೇಳ್ತ. +ಶಿರಾಳ ಬೆಂಕೀ ‘ಹೂಂ’ ಹಾಕ್ತು.’’ +ರಾಜೇಸ್ರ ಕತೆ ಹೇಳೂಕ ಪಾರಂಬ ಮಾಡ್ತು. . . “ವಂದಲ್ಲಾ ವಂದಿವ್ಸೆ ಪೇಟಿಲ್ ಹೋದಾಗೆ, ಕಸಬದಾರರು ಅಚಾರಿ ವಬ್ಬ, ಯೆರಡನೆ ಚಿಪ್ಗೇರವಾ, ಸೊನಗಾರ. . . ಮೂರ್ ಜನ ಪೇಟೆವಳ್ಗೆ ಕೂಡ್ದ್ರು. +ಅವ್ರ್ ಮಾತಾಡ್ದ್ರೂ. +ವಬ್ಬ, “ನಾಳಿನ ದಿವಸ ನಾವ್ ತಿರ್ಗಾಟ್ಕ್ ಹೋಗ್ವನೊ. +ನಿಮ್ ನಿಮ್ ಹತಾರ ತಕೊಂಡ್ ಬನ್ನಿ, ಹತ್ಗೆಂಟೆ ವಳ್ಗ್ ಬಂದ್ ಬೇಟ್ಯಾಗಿ.” ಹೇಳ್ದ. +ಕೂಡ್ದ ನಂತ್ರ ಯೇನಂತ್ತೋ ಕೇಳ್ದ್ರೆ. . . ಅವ್ನ್ ಅಟ್ಟೂ ಜನ ಬೆಟ್ಟ ಬಿದ್ ನೆಡ್ದ್ ಬಿಟ್ರೂ. + ಹೋಗ್. . . ಹೋಗ್. . . ಹೋಗ್. . . ಹೋಗಿ. . . ಪೇಟೆ, ಪಟ್ಣ, ಊರುಕೇರಿ, ಮನೆ-ಮಠಾ ಯೇನೂ ಶಿಕ್ಲೇ ಇಲ್ಲ. +ಅಡವಿವಳಗೇ ಹೋದ್ರು. +ಆವಾಗ ಸಾಯಂಕಾಲಯ್ತು. ಕಪ್ಪಾಗ್ಹೋಯ್ತು. +ಕಪ್ ಆದ ನಂತ್ರಾ ಯೇನ ಮಾಡಬೇಕಾಯ್ತು? +ತಾಮ್ ಅಡವಿದಲ್ ಶಿಕಾಕಂಡ್ರು. +‘ಸಿಂಹ, ಶಾರ್ದೂಲಾ ಹಿಡ್ಕಂಡ್ ಮುರ್ಕಂಡ್ ತಿಂದ್ ಬಿಟ್ರೆ ನಮ್ ಗತ್ಯೇನಾಯ್ತು?’ ಹೇಳ್ ಮಾತಾಡ್ಕೊಂಡ್ರು. +ಕಡೆಗವ್ರ್‌ ಯೇನ್ ಮಾಡ್ದ್ರೂ? +‘ವಂದ್ ಹೊಡಚಲ ಹಾಕ್ವನೋ. . . ಕುಂತಿ ಬೆಳ್ಗ್ ಮಾಡ್ವನೊ’ ಅಂದ್ರು. +ಹೊಡಚಲ ಹಾಕ್ದ್ರು. +ಹೊಡಚಲ ಹಾಕಂಡಿ ಮಾತಾಡ್ದ್ರೂ. +ಅಟ್ಟೂ ಜನ ಯೆಚ್ಚರ್ಕ ಉಳ್ದ್ರೆ ವಟ್ಟೂ ಜನರ ನಿದ್ರಿ ಹಾಳಾಗ್ತದಲ್ಲ? +‘ವಬ್ಬಬ್ರು ಯೆಚ್ಚರ್ಕಿಲಿರಬೇಕು. +ಬಾಕಿಯವರ್ ವರ್ಗ್‌ಬೇಕು’ ಹೇಳದ್ರು. +ಆಗ ರಾತ್ರೆ ಹನ್ನೆರಡ ತಾಸ್ ರಾತ್ರ್ಯಲ್ಲ? +ಅವರಿಗೆ ಸೂಚನೆಯಾಗಲೇ ಇಲ್ಲ. +ಮೂರ್ ಮೂರ್ ತಾಸ್ ರಾತ್ರೆ ಪಾಳಿ ಹಾಕ್ದ್ರು ಅವರು. +ಆಚಾರಿ, ‘ತಾನೇ ಮೊದುಲ್ ಯೆಚ್ಚರ್ಕಿ ಉಳಿತೇ’ ಅಂದ. +ಎಚ್ಚರ್ಕಿ ಉಳ್ದಾ. +ಇವ್ರ್ ಯೆರಡಜನ ಮನಿಕಂಡ್ರು‌-- ಸೊನಗಾರ, ಚಿಪ್ಗೇರವ. +ಅವ ತಾಸಿನ ತನಕ ಕೂತಕಂಡು ತಂದ್ ಹಾಕ್ದ ತುಂಡಿತ್ತು. +ಬಾಚಿ ತಕಂಡ ಕೆತ್ದ. +ಕೆತ್ತಿ ವಂದ್ ಹೆಣ್ ಬೊಂಬೆ ರೂಪ ಮಾಡ್ದ. +ಆದನಂತ್ರವ ಅವನಿಗೆ ಮೂರ್ ತಾಸ್ ಆಯ್ತು. +ಅವ ಚಿಪ್ಗೇರವನಿಗೆ ಯೆಚ್ಚರ್ಸ್‌ದಾ (ಪಟಸಾಲಿ), ಇವ ಮನಿಕಂಡ. . . ವರೆಕಂಡ ಬಿಟ್ಟ. +ಅವ ಬೊಂಬೆ ಮಾಡ್ವಂದ ಮರಕೆ ಚಾಚಿಟ್ಟದ್ದ. +ಅಲ್ಲಿ ಹೊಡಚಲ ಬುಡಕೇಯ ಅದೆ. +ಅವ ಹೋಗ್ ನೋಡ್ದ. . . ಬೊಂಬೆ ಚಾಚಿಟಿದ ನೋಡ್ದ, ‘ನಿರ್ವಾಣ್ಯದೆ. . . ’ ಅಂದ. +ಅವ್ನ ಕೈಚೀಲದಲ್ ವಳ್ಗೆ ರಶ್ಮಿದ್ದಿತ್ತು. +ತೆಗದು ಅದರಿಂದ ಶೀರೆ ಮಾಡ್ದ, ವಂದ ರವಕೆ ಮಾಡ್ದ. +ಶೀರೆ ಆ ಬೊಂಬೆಗುಡ್ಸ್‌ದ ಅವ. +ರವ್ಕಿನೂ ಮೈಗ್ ಹಾಕ್ದ‌. +ಅನಂತ್ರ ಅವನಿಗ್ ಮೂರ್ ತಾಸ ರಾತ್ರೆ ಆಯ್ತು. +ಅವ್ನ ಪಾಳಿ ಆಯ್ತು. +ಸೊನಾರವನ್ಗ್ ಯೇಳ್ಸ್‌ದ, ತಾನ್ ಮನಗದ. +ಆಗೆ ಸೊನಗಾರವ ಯೆದ್ದಾ ಕುಂತ್ಕಂಡಿ ಸುಮಾರ್ ನೋಡ್ದ. . . ಬೊಂಬೆ ಬುಡ್ಕ್ ಹೋಗಿ ನೋಡ್ದ. +ಚಿನ್ನಾ ಅಂಬ್ದು ಯೆಂತೆಂತದೂ ಇಲ್ಲ. +ಮೂಗಿನ್ ನತ್ತಿಲ್ಲ, ಕಾಲಿಗೆ ಉಂಗ್ಲ ಇಲ್ಲ, ಸೊಂಟ ಪಟ್ಟಿ ಇಲ್ಲ, ಕೈ ಬಳೆ ಇಲ್ಲ. . . ವಟ್ಟೂ ಚಿನ್ನದ ನತ್ತೂ, ಸರ, ಬುಗಡಿ ಮಾಡ್ದ. +ಸೊಂಟ ಪಟ್ಟಿ, ಕಾಲುಂಗ್ಲ, ಬೆಳ್ಳಿ ಬಳೆ ಮಾಡ್ದ. +ಆವಾಗೆ ಆ ಬೊಂಬೆಗ್ಯೆಲ್ಲ ಹಾಕ್ದ ಅವ; ಮೂರ್ ತಾಸ್ ರಾತ್ರೆ ಆಯ್ತು. +ಅಲ್ಲಿಗೆ ಯಾರ್ಗ್ ಯೇಳ್ಸತ ಅವ? +ಆವಾಗೆ ಅವನೂ ಸುಮ್ಗೆ ಮನಿಕಂಡ್ ಬಿಟ್ಟ. +ಹೊಡಚಲ್ಕೆ ನಾಕ ಸೌದಿ ತುಂಡ್ ಜಾಸ್ತಿ ಹಾಕ್ಬಿಟ್ಟ, ಮನಿಕಂಡ್ ಬಿಟ್ಟ. +ಮೂರ್ಗಂಟೆ ರಾತ್ರೆಗೆ ಪಾರ್ವತ-ಪರಮೇಶ್ವರರು ರತ ಹತ್ತಿ ದೇವಲೋಕಕೆ ಹೋಗ್ವೊರಾಗಿದ್ರು. +ಅಲ್ಲಿ ರತ‌ ತಕಂಡಿ ಬಂದವ್ರು ಬರಬೇಕಾದ್ರೆ ಪಾರ್ವತಿ ನೋಡ್ತು-- ಹೇಳ್ತು, ‘ಸ್ವಾಮೀ, ಅಡವಿವಳಗೆ ಯಾರೊ ನರಮನ್ಸರು ಇರಬಹುದು-- ಬೆಂಕಿ ಹಾಕ್ದ ಲೆಕ್ಕದಲ್ಲಿ. +ನೋಡ್ಕಂಡ್ ಬರ್ವಾ.’ +ಅಂದ ಹೇಳುದ್ರೊಳ್ಗೆ, ರತ ಮೇಲಿಂದ ಇಳ್ದ ಬಂದಿರು ಅವರು. +ಮೂರು ಜನರೂ ವರ್ಕ ಬಂದ್ ಹೋಗದೇ. +‘ಸ್ವಾಮೀ. . . ಇವರಿಗ್ ಜೀವ ಅದ್ಯೊ ಇಲ್ವೊ?’ ಕೇಳ್ತು. +ಪರಮೇಸ್ವರ, ‘ಅವರ ಜೀವಕೆ ಯೇನೂ ಹೈ ಗೈ ಆಗಲಿಲ್ಲ. +ಲೆಕ್ಕಾಚಾರ ಹೆಚ್ ಕಮ್ಮಿಯಾಗಿ ಮೂರ್ ತಾಸ ರಾತ್ರೆ ಪಾಳಿ ಹಾಕಂಡಿದ್ರೂ. +ಮೂರ್ ತಾಸ್ ರಾತ್ರೆ ಮಿಕ್ಕದ್ದಿತ್ತು. . . ’ ‘ಅವ್ರ ಮೂರು ಜನ ವರ್ಗ್ ಬಿಟ್ಟಾರೆ. +ಅವರಿಗೆ ರಾತ್ರೆ ಹೊತ್ತಿಗ್ ಬಂದಿ ಹುಲಿ, ಕರಡಿ ಪ್ರಾಣಿಗಳಿರ್ತವೆ. . . ಅವ್ರ ಬಂದಿ ತಿಂದ್ಕಂಡ್ ಹೋಗ್ ಬಿಟ್ರೆ ಯೇನಾಗೂದು?’ ಕೇಳ್ತು ಪಾರ್ವತಿ. +ಹಗರೆ ಪರಮೇಶ್ವರ ಹೇಳ್ದ, ‘ವಂದ ಪರ್ಲಾಂಗದ ವಳಗೆ ಕಡ್ತ ಕಟ್ ಹೋಗ್ವ. +ಯಾವದೂ ಪ್ರಾಣಿ ಸುಳೂಕಾಗ. . . ” ಹೇಳಿ. +ಪಾರ್ವತಿ ಈ ಬೊಂಬೆ ನೋಡ್ಬಿಟ್ತೂ-- ‘ಸ್ವಾಮೀ. . . ಈ ಬೊಂಬೆ ನನ್ನಂತೆ ಅದೇ. +ಅಟ್ ಲಾಯ್ಕದೆ‌. +ಇದ್ಕ್ ಜೀವ ಮಾಡಿಟ್ ಹೋಗಬೇಕು’ ಅಂತು ಅದ್ಕೆ. +ಆ ಬೊಂಬೆಗ್ ಜೀವದ ಕಳಾ ತುಂಬ್ದ್ರೂ ಅವರು. +‘ಬೆಳ್ಳ್ ಮೂಡಿ ಬೆಳಗಾಗು ಸಮ್ಯಲ್ಲಿ ವೋಡಾಡ್ವ ಹಾಗ್ ಆಗ್ಲಿ. . . ’ ಹೇಳ್ ವರ ಕೊಟ್ಬಿಟ್ರು. +ಆವಾಗದು, ಕೂಡಲೇಯ ದೇವಲೋಕಕ್ಕೆ ರತ ಹತ್ ನೆಡ್ದ್ ಬಿಟ್ರು ದೇವ್ರು. +ಬೆಳಗಾಗುದ್ರೊಳ್ಗೆ ಇವ್ರ್ ಮೂರು ಜನ ಯೆದ್ ಕೂತ್ರು. +ಈ ಹುಡ್ಗಿ ವೋಡಾಡ್ತದೆ. +ಕೂಡ್ಲೆ ಇವ್ರ ಮೂರ್ ಜನ ನೋಡದ್ರು. +ಕೈಹಿಡ್ಕಂಬಂದ ವಬ್ಬ ಆಚಾರಿಗೆ, ‘ಹುಡ್ಗಿ ತಾನೇ ಲಗ್ನಾಗಬೇಕು” ಅಂತ, “ತಾನೇ ಬೊಂಬೆ ಕೆತ್ತಿದೆ. . . ” ಅಂದ. +“ತಾನು ಅದ್ಕೆ ಶೀರೆ-ಬೀರೆ ಹಾಕ್ದವ ನಾನೇ. . . ” ಚಿಪ್ಗೇರವ, “ತಾನೇ ಲಗ್ನಾಗಬೇಕು” ಅಂತ. +ಸೊನ್ಗಾರವ, “ಚಿನ್ನಾವಟ್ಟು ಮಾಡ ಹಾಕ್ದವ ತಾನೇ ಲಗ್ನಾಗಬೇಕು” ಅಂತ. +ಹುಡಿಗಿ ಯಾರಿಗ್ ಸಲ್ತು ಅಂದ ಹೇಳಿ ಯಾರ್ಗೂ ಪತ್ತೆ ಇಲ್ಲ ಅಂತು.’’ ಪದ್ಮಾವತಿ ಸೂಳೆ ಅರ್ತ ಮಾಡ್ತದೆ. +ಸೂಳೆಯೇನ್ ಹೇಳ್ತದೆ ಅಂದ್ರೆ- ‘‘ಆಚಾರಿ ತಂದೆಯಾಗ್ತ. . . ಗಂಡನಾಗುದಿಲ್ಲ. +ಚಿಪ್ಪಗೇರವನಿಗೆ ಸೊಸೆಯಾಗ್ತದೆ; ಸೊನಗಾರನಿಗೆ ಹುಡ್ಗಿ ಸಲ್ಲುದು’’ ಹೇಳ್ತದೇ ಅದು. +ಆವಾಗ, ಮೂರ್ ಮೊಳ ಮಂಚನೂ ಬಂದಿ, ವಂಬತ್ ಮೊಳ ಬಂದಿ ಇವನ ಮಂಚಕ್ ಕೂಡ್ತದು. +ಅಟ್ಟಾದ ಕೂಡಲೆಯ, ಪದ್ಮಾವತಿ ಸೂಳೆ ವಳಗ್ಹೋಗಿ ಬಂಗಾರ್ನ ಹರವಾಣದಲ್ಲಿ ತುಪ್ಪದ ನೆಣೆ ಹಾಕಿ, ಆರತಿ ತಕಂಡ ಬಂತು ಇವನಿಗ್ ತೋರಲಿಕ್ಕೆ. +ಕಣ್ಣಿಲ್ ನೀರ್ ಸೊರಿಸ್ಕಂತ ಬಂತು. . . ರಾಜ್ಯ ಬಿಟ್ ಕೊಡಬೇಕಲ್ವಾ? +ಅವನಿಗೆ ಆರತಿ ತಳಿತು. +“ತನ್ನ ಪಟ್ಟ ಇವತ್ತಿಗ್ ನಿನ್ಗ್ ಬಿಟ್ ಕೊಟ್ಟೆ. +ಇಟ್ ದಿವ್ಸ ತನಕಾ ತಾನು ಪಟ್ಟ ಆಳಿದೆ. +ತನ್ನಾ ಹಾದಿ ಮೇಲ್ ಹಾಕ್ತ್ಯೊ? +ಯೇನ ಮಾಡ್ತೆ ನೋಡು. . . ” ಅಂದ್ ಹೇಳಿ, ಅವನ ಮುಂದೆ ಕಣ್ಣೀರ್ ಬಿಟ್ ತೀಡ್ ಬಿಡ್ತು ಅದು. +ತೀಡ್ದ ಕೂಡ್ಲೆಯಾ ಅವ ಯೇನ್ ಹೇಳ್ದಾ ಕೇಳ್ದ್ರೆ, “ನಿನ್ಗ ಹಾಳ ಮಾಡಬೇಕು ಹೇಳ್ ನಾನ್ ಬಂದಿದ್ದಲ್ಲ. +ಇಷ್ಟೆಲ್ಲಾ ಜನ ಸೋಲ್ಸಿ ಅವರ ಕೈಬಳಕಿ ಮಾಡ್ಕಂಡಿದ್ದೆ. +ಅವರ ಬಿಡ್ಸ್ ಹಾಕಬೇಕು ಹೇಳಿ ನಾನೀ ಪಟ್ಣಕ್ ಬಂದದ್ದು.” +ಆವಾಗವ ಐವತ್ ಜನರಿಗೆ ಅಡ್ಗೆ ಮಾಡುಕ್ ತರ್ಸ್ದ. . . ಇಪ್ಪತೈದ್ ಜನರಿಗೆ ಹಜಾಮ್ರಿಗ್ ತರ್ಸ್ದ. . . ಅಲ್ ಶಿಕ್ದಾಗಿದ್ದು ಅವನಿಗೆ ಚೌರ ಆಗಲಿಲ್ಲಾಗಿತ್ತು. +ಗಡ್ಡ ಬೆಳ್ದ ಮೊಳಕಾಲಿಗ್ ಜೋತಿ ತಾಗ್ತದೆ. +ಕೂದ್ಲು, ಸೊಂಟದಕಿಂತ ಕೆಳ್ಗ್ ಬಂದ್ ಹೋಗದೆ. +ಹಜಾಮರ ಕರಸಿ ಅವರಿಗೆ ಮೊಕಚೌರ ಮಾಡ್ಸದ. +ಸಾನ ಮಾಡ್ಸಿ, ಕೂಡ್ಲೆ ಬಾಳೆ ಹಾಕಿ ಅವರಿಗ್ ಬಡ್ಸವಂತೆ ಮಾಡ್ದ. +ಒಟ್ಟು ಆರುಸಾವ್ರ ಚಿಲ್ಲರೆ ಜನರಿಗೆ. . . ಅವಂಗ್ ಅಟ್ಟೂ ಊಟ-ಬೀಟ ಯೆಲ್ಲ ಆದ ನಂತ್ರ ಅವ ಬಾಸಣ ಮಾಡ್ದ ಯೆನಂದ್ ಕೇಳ್ದ್ರೆ, “ನೀವ್ ಇಲ್ ಬಂದ್ ಸೇರಬೇಕಾದ್ರೆ ಯೇನೇನ್ ತಂದ್ರಿ ಅಟ್ಟೂ ತಕಂಡ್ ನಿಮ್ಮ ನಿಮ್ಮ ಮನೆಗ್ ಹೋಗ್ಲಕ್ಕೆ ನಿಮಗಪ್ಪಣೆ” ಹೇಳ ಬಿಟ್ಟ ಅವ. +ಆವಾಗೆ ಅವ್ರು ಅಟ್ಟೂ ಜನರೂವ, “ನಮಗ್ ನಾವು ಏನೂ ತಂದಿದ್ ನೆನಪಿಲ್ಲ” ಹೇಳಿ, ಅಷ್ಟು ಜನ ಹೋಗವಂತೋರಾದ್ರು. +ಅವ್ರ ಆರ ಸಾವ್ರ ಜನರ್ನೂ ಕಳ್ಗ್‌ಬಿಟ್ರು‌. +ಕಡೆಗೆ ಇದ್ರ ಕಾಸಗಿ ಜನರವರೆ ಮೂರ್ ಸಾವ್ರ ಚಿಲ್ಲರೆ ಜನರು. . . ಕೂಡ್ಲೆ, ಮನೆವಳಗಿದ್ದಂತಾ ಸಾಮಾನ, ಬೆಳ್ಳಿ ಬಂಗಾರ, ಕಂಚೊ, ತಾಮ್ರ, ಯೆಲ್ಲ ಕುಲ್ಲ ಮಾಡ್ಸ್‌ದ. +ಹೋಗಬೇಕಲ್ಲ ಮನೆಗೆಲ್ಲಾ ದೊಡದೊಡ್ ಸಾಮಾನ ಯೆಲ್ಲಾ ಲಿಲಾವ ಮಾಡ ಬಿಟ್ಟ ಅವ. +ಬಾಕಿ ಇದ್ ಸಾಮಾನ್ನೆಲ್ಲಾ ಯೆತ್ತಿನ ಗಾಡಿ ಮೇಲೆ ತುಂಬ್ಸದಾ. +ನೂರಾರು ದನ ಇತ್ತೂ. +ಯೆಲ್ಲ ಪಾಳಿ ಕಟ್ಟಿ, ವೋಡ್ಸ್‌ದಾ, ಆನೆ, ಕುದುರೆ, ಒಂಟೆ, ದನ ಅವ್ನೂ ಹೊಡ್ಕಂಡ ಬಂದ. +ಬೆಳಿಕುದ್ರೆ ಇತ್ತು. +‘‘ಬೆಳಿಕುದ್ರೆ ಮೇಲೆ ಹತ್ಕೊ ನೀನು’’ ಅಂದ. +ಇವ ಕೆಂಪ ಕುದ್ರೆ ಹತ್ಕಂಡ, ತಕಂಡ ಬಂದ. +ಮಾವನಿದ್ದಲ್ ಬಂದ. +ಅಡ್ಗೆ ತಪ್ಲೆ ಯೆತ್ಕಂಡಿ ಅವನೆ. +ಊಟಾನೂ ಮಾಡ್ಲಿಲ್ಲ. +ಅನ್ನ ಬುಡಕ್ಕೆ ಬಂದಿ, ಅವ್ನ ಕೈಲಂದ, “ಮಂಜಗುದರೆ (ಕೌಲಬಣ್ಣದ್ದು) ಹತ್ಕೊ. . . ” ಅಂದ. +ಆಗೆ ಕಾಸಿಯಾತ್ರೆಗೆ ಹೋಗುದು ಮುಗೀತು-- ಹೋಗಲಿಲ್ಲ. +ಸುದ್ದೀನೆ ಬಿಟ್ರು ಅವರು. +ಅಟ್ಟಾದ ಕೂಡ್ಲೆಯ ಬಂದ್ರು, ದಾರೆಯೆರ ಕಂಡಿದ್ರಲ್ಲ ಆ ಸಮಕ್ ಬಂದ್ರು. +ಆ ಹುಡ್ಗಿ ಯೇಳುಪ್ಪರ್ಗೆ ಮೇಲೆ ನೋಡ್ತೆ ಕುಂತಿತ್ತು. +“ಕಟ್ಟೆ ಬಿಟ್ಟೆ ಚಂದಾಗದ್ಯಲ್ಲ. . . ಇಲ್ಲೇ ಅಡ್ಗಿ ಮಾಡಿ. . . ” ಅಂದಾ. +ಆ ಚಂದ್ರಾವತಿ ರಾಜನ ಹುಡ್ಗಿ ತಂದೆ ಕೈಲ್ ಯೇನಂತು-- ಕೆಳಗಿಳ್ದ್ ಬಂದ ಹೇಳ್ತೂ, “ಕೈ ಹಿಡ್ದ್ ದಾರೆಯೆರಕಂಡ್ ಹುಡ್ಗ ಬರ್ತಾನೆ. . . ಅವ್ನ ಕರಕಂಡ್ ಬಾ” ಅಂತೂ. +ಆವಾಗೆ, “ಮೂರು ಸಾವಿರ ಚಿಲ್ಲರಿ ಜನರವರೇ, ನಿನ್ನ ನಗ್ನಾದ ಹುಡ್ಗನೇ ಅಂದಿ ನಾ ಹೇಗೆ ಗುರ್ತು ಮಾಡ್ಲಿ?” ಅಂದ ಅವ. +ಅಟ್ಟೊತ್ತಿಗೆ ಹುಡ್ಗಿ, “ಗುರ್ತ ತಾ ಹೇಳ್ತೆ. +ಮೂರ್ಜನ ಕುದ್ರೆ ಹತ್ಕಾಂಡ್ ಬಂದ್ರು, ‘‘ಕೆಂಪ್ ಕುದ್ರೆ ಹತ್ಕಂಡ್ ಬಂದವ ಹೌದು. +ಅವನ್ನೇ ಕರಕಂಡ ಬಾ” ಅಂತು ಅದು. +ಬಂದ ಕೂಡ್ಲೆಯ ವೋಡಿ ಬಂದ ಕುದ್ರೆ ಹತ್ಕಂಡಿ ಅರಸು ಬಂದ್ರೆ, ಬಂದವ್ನಿಗೆ ಸಲಾಮ ಹೊಡ್ದ. +ಅವನೂ ಪರ್ತಿ ಸಲಾಮ ಹೊಡ್ದ. +“ತಮ್ಮಲ್ಲ್ ಬಂದ್ ಹೋಗಬೇಕು ನೀವು. . . ” ಅಂದ ಹುಡ್ಗನ ಕೈಲಿ. +ಹುಡ್ಗ, “ಅಡ್ಗೆ ಮಾಡಿ, ಊಟ ಮಾಡಿ ಇಲ್ಲಿ. +ತಾನಿವರ ಸಂಗಡ ಹೋಗ್ ಬರ್ತೆ” ಹೇಳ್ದ‌. +ಅರಸೂ ಸಂತಿಗೇ ಬಂದ. +ಬಂದ ಕೂಡ್ಲೆಯ ಹುಡ್ಗಿ ಕೆಳ್ಗ್ ಇಳ್ದ್ ಬಂದಿ‌. +ಯೆರಡ್ ಬೆಳ್ಳಿ ಚಂಬ್ನಲ್ ನೀರ್ ತಂದಿ ತಂದೆ ಪಾದ ಮೊದ್ಲ್ ತೊಳಿತು. +ನಂತ್ರ ಇವ್ನ ಪಾದಾನೂ ತೊಳಿತು. +ವಳ್ಗ್ ಮಂಚದ ಮೇಲ್ ಕುಳ್ಸಿ, ಹಾಲು-ಹಣ್ಣು, ಸಕ್ರಿ ಇಂತಾದ್ಯೆಲ್ಲ ಕೊಟ್ತು. +ಅದಟ್ಟೂ ತಿಂದಾಯ್ತು. . . ಹಾಲು ಕುಡ್ದಾಯ್ತು. +ಅರಸೂ ಅವ ಮಾತಾಡ್ತ ಕೂತ್ರೂ, ವಳ್ಗ್ ಊಟಾಯ್ತು. +ಆ ಹುಡಗಿ ಯೆಣ್ಣೆ ತಟ್ಟಿ ತಕಂಡಿ ತಂದೆ ಕೈಲ್ ಹೇಳ್ತೂ, “ಯೆಣ್ಣೆ ಹಚ್ಕಂಡಿ ಮೀವಕಡ್ಡಿಲ್ಲ. +ಊಟಕಾಯ್ತು” ಹೇಳ್ತು. +ಹೋಗಿ ಮಿಂದ್ಕಂಡಿ ವಳ್ಗ ಊಟ್ಕ್ ನೆಡ್ದ್ರು ಅವರು. +ಮಾವ, ಅಳಿಯಾಂದೂವ ಊಟ ಮುಗಿತು, ಈಳ್ಯ ತಿಂದ ಅವ. +ಮನೆಗ್ ಹೊಗೂಕ್ ತಯಾರಾದ. +“ನೀವ್ ಕರದ್ ಯೆಂತಕಪ್ಪ?” ಕೇಳ್ದಾ. +“ನಿಮ್ಮ ಕರ್ಸದ್ ಮತ್ಯೇನಲ್ಲಾಗಿತ್ತು. +ಸೈನ್ಯ್ ಯೆಲ್ಲಾ ನೋಡಿ ಕಂಗಾಲಾಗ್ ಬಿಟ್ಟೆರೆ” ಅವ ಹೇಳ್ದ. +“ತಂದೊಂದ್ ಹುಡಗಿ ನಿಮ್ಮ ಸಂಗಡ ಬರ್ತೆ ಅಂತದೆ ನೀನ್ ಕರಕಂಡ್ ಹೋಗ್ತ್ಯೊ ಯೇನು?” ಕೇಳ್ತು ಹುಡ್ಗನ ಕೈಲ್. +ಆ ಹುಡ್ಗ ಯೇನ ಹೇಳ್ತಾನೆ, “ತಾನ್ ಮೂರ್ ಸಾವರ ಚಿಲ್ಲರೆ ಜನ್ರ ತಂದಿದೇನೆ. +ನಿಂದೊಂದ್ ಹುಡ್ಗಿ ಹೆಚ್ಚೊ? +ಬಂದ್ರೆ ಕರ್ಕಂಡ್ ಹೋಗುಕಡ್ಡಿಲ್ಲಾ” ಅಂದ. +ಆಮೇಲೆ ಮತ್ತರಸು ಹೇಳ್ತಾನೆ, “ನಾ ನನ್ನ ಹುಡ್ಗಿ ಹೆಸರಲ್ಲಿ ಸಲ್ಪ ಬಳವಳಿ ಕೊಡುದಿತ್ತು. +ತಕಂಡ್ ಹೋಗ್ತ್ಯೊ ಹೇಗೆ?” ಕೇಳ್ದ. +“ಕೊಟ್ರ್ ತಕಂಡ್ ಹೋಕ್ಕಡ್ಡಿಲ್ಲ. +ಬೇಕಾದಟ್ ತಂದನೆ, ಅದ್ರೂ ಕೊಡ್ತೆ ಅಂದ್ ಹೇಳಬೇಕಾರೆ ತಕಂಡ್ ಹೋಕ್ಕಡ್ಡಿಲ್ಲ” ಅಂದಾ. +ಏನ ಕೊಡಬೇಕಂದ್ ಇಚ್ಯದೊ ಹೇಳಿ ಜನರು, ಕಂಚು, ತಾಮ್ರ, ದನಕರಯೆಲ್ಲಾ ಕೊಡುವಂತೋನಾದ ಬಳವಳಿ. +ಅಟ್ಟೂ ಕರ್ಕಂಡ್ ಬಂದ. +ಇಲ್ಲಿ ಇವಂದಿದ್ರಲ್ಲ ಅಲ್ಲಿ ಕರ್ಕಂಡ್ ಬಂದ. +“ಹೋಗ್ವ. . . ” ಹೇಳಿ ಮನಿಗ್ ಬರುಕ ತಯಾರಾದ್ರು. +ಇವನಿಗ್ ಆಲೋಚ್ನಿಯಾಯ್ತು. +ಹೇಗೆ, ‘ಮತ್ ನಾವು ಇಟ್ಟೆಲಾ ಜನರ ತಕಂಡ್ ಹೋದ್ರೆ ಮನಿ ಕೂಡ್ ತೊಂದರ್ಯಾಗು ಪರಿಸ್ತಿತಿ. . . ’ ಹೇಳ್ ಅವನಿಗ್ ಕಂಡ್ತು. +ಕೂಡ್ಲೆ ಅವ ಮಾವನ ಕೈಲ್ ಹೇಳ್ದ, “ನೀನ್ ವಂದ್ ಕೆಲ್ಸ ಮಾಡಬೇಕು. +ನೀನು ಮನೆಗ್ ಹೋಗ್ ಬರ್ಬೇಕು” ಹೇಳ್ದ. +‘ಯಾಕೊ ಹಾಗೆ’ ಕೇಳದ್ರೆ? +‘‘ಇಷ್ಟಲ್ಲಾ ಜನರು ಹೋಗಬೇಕಾದ್ರೆ ದಂಡೇ ಬಂತು ಹೇಳ್ ಹೆದ್ರಕಂಡಿ ಮನೆಮಾರೆಲ್ಲಾ ಬಿಟ್ಟು, ಅಲ್ಲಿದ್ದವರು ಬೆಟ್ಟಬೇಣಯೆಲ್ಲಾ ಹೊಕ್ಕಿ ವೋಡು ಪ್ರಸಂಗ ಬಂದರೆ ಹೇಳಿ ಹೇಳ್ದೆ. +ಕೂಡ್ಲೆ ನೀನ್ ಹೋಗಿ ತಂದ್ಕೈಲಿ ತಿಳಿಸಬೇಕು, ‘ನಿನ್ನ ಹುಡ್ಗನ ನಗ್ನಾಗಿ ದಿಬ್ಬಣ ಬರ್ತದೆ’ ಅಂತ ಇಟ್ ಹೇಳಿ ಪರತ್ ಬಂದ್ ಬಿಡಬೇಕು. +ದಿಬ್ಬಣ ಸಂತಿಗೇ ಶಿಕ್ಕು” ಹೇಳ್ ಹೇಳ್ದ. +ಅವ ಹೋಗಿ ಅವನ ತಂದೆ ಕೈಲ್ ಹೇಳ್ದ. +ಹುಡ್ಗ ಹೋದಾಗ್ನಿಂದಾವ ಊಟ ಇಲ್ಲದೆ ಬಾಳ ನಾನಾಚಾರ ಆಗ್ ಹೋಗದೆ. +ಪಚ್ಚಾತ್ತಾಪದ ಮೇಲೆ ಇದ್ದ. +ಹೋಗ್ ಮುಟ್ದ. +“ಯಾರು?” ಕೇಳ್ದ. +“ಕಾಸಿಯಾತ್ರೆಗೆ ನಿನ್ನ ಮಗನ ಕರ್ಕಂಡ್ ಹೋದವ ಬಂದನೆ, ನಿನ್ನ ಬಾವ” ಅಂದ. +“ನಾನ್ ಬಂದ ಕಾರಣ ಯೇನು ಕೇಳ್ದ್ರೆ. . . ನಿನ್ನ ಹುಡ್ಗನ ದಿಬ್ಬಣ ಬರ್ತದೆ ಚಪ್ಪರವೊ, ಚಾವಡಿಯೋ ಹಾಕು ಹೇಳುಕ್ ಬಂದನೆ’’ ಅಂದ. + “ಚಪ್ಪರ. . . ಚಾವಡಿ ಹಾಕಿ, ಗುಡಗಾರಿಗ್ ಕರಕಂಡ್ ಬಂದ್ ಮಂಟಪ-ಗಿಂಟಪ ಹಾಕ್ಸಿ ತಯಾರ್ ಮಾಡ್ಕ್. . . ಹಾದಿ ತೋರಣ, ಬೀ ತೋರಣ ಕಟ್ಸು. . . ” “ಚಿಗ್ಗೊಳ್ಳಿ ಮಾರ್ನೊಮಿ ಬಯ್ಲಕೆ ಚಪ್ಪರ ಹಾಕ್ಸಿ ಅಲ್ಲಿ ಊಟಕ್ಕಿಡಬೇಕು” ಹೇಳಿ ಹೇಳೂಕೆ ಹಂಬ್ಲಿಲ್ಲ. +ಇಲ್ ಬಂದಿ, “ಮಾವ ಶಿಕ್ದ, ಹೇಳ್ ಬಂದೆ” ಅಂದ, “ಆಯ್ತು. . . ” ಅಂದ. +ಹಾದಿ ಮೇಲ್ ನೆನಪಾಯ್ತು. +“ಏಹೇ. . . ತಂದೀಗೆ ಹೀಗ್ ಹೇಳ ಕಳ್ಗಬೇಕಾಗಿತ್ತು. +ತಪ್ಪದೆ ಹೇಳಿ. +”ತಂದೆ ಚಿಗ್ಗೊಳ್ಳಿ ಮಾಯ್ನಮರನ ಬುಡಕೆ ಚಪ್ಪರ ಹಾಕ್ಸಿ ಮಾಡ್ಬಿಟ್ಟ. +ಅಲ್ಲಿಗೇ ಹೋಯ್ತು ದಿಬ್ಬಣ-- ಚಪ್ಪರಕೇಯ. +ಅಲ್ ಆಸ್ರ ಸಂತೆಯೆಲ್ಲಾ ಮುಗಿಸದ್ರು. +ಸಕ್ರೆ ಬಾಳೆಹಣ್ಣ ಹಚ್ಚಾಗಿ ಊಟ ಮುಗಿತು. +ಮುಗ್ದಿ ಚಡಂಗದ ಕೆಲ್ಸ. +ಮಾರನೆ ದಿವಸ ಇಟ್ರು. +ಅವರು ಹುಡ್ಗನಿಗ್, ಮದವಳ್ತಿಗೆ ಕಳ್ಸಿ ಚಡಂಗ ಮುಗಿಸಿ, ಕೋಳ್ಗೆಬಾಸಿಂಗ ಕಟ್ಟುದ್ರು. +ಬಂದು-ಬಾಂದವರೆಲ್ಲಾ ತಮ್ಮ ತಮ್ಮ ಮನೆಗ್ ಹೋಗ್ವಂತೋರಾದ್ರು. +ಸುಕದಲ್ ರಾಜ್ಯ ಆಳ್ಕಂಡಿರು ಸಮ್ಯದಲ್ಲಿ. . . ಪದ್ಮಾವತಿ ಸೂಳೆಗೆ ಹಿತ್ಲೊಳ್ಗ್ ಮನೆ ಕಟ್ಸಿ, ಅದ್ಕೆ ಇರ್ಸ್ವಂತೋರಾದ್ರು. +ಸುಕಸಂತೋಸದಲ್ ಉಳ್ದ್ರು. +ಸೂರ್ಯಶೇಖರ ರಾಜ, ಚಂದ್ರಶೇಖರ ಮಂತ್ರಿ. +ರಾಜನ ಮಗ ಒಬ್ಬ. +ರಾಜನಿಗೆ ವಯಸ್ಸಾದವನೆಂದು ಹುಡುಗನ ಲಗ್ನ ಮಾಡಿದ. +ಹಗಲಿಗೆ ಇರುತುಮ್ಮಣ ಸಟ್ ಮುಡಿ. +ಅಂಬರದಲ್ಲಿ ಪಾರ್ವತಿ-ಪರಮೇಶ್ವರರು ಕೋಡು, ಕೊಳಗ, ಬಾಣ ಬಿಡುತ್ತಿದ್ದರು. +“ದೊಡ್ಡವರ ಮನೆ ಮದುವೆ ನೋಡಿಕೊಂಡು ಹೋಗೋಣ. . . ” ಎಂದಳು. +“ಬೇಡ ಹೋಗುವದು. +ಬಡವರ ಮನೆಗೆ ಹೋಗಬೇಕಲ್ಲವೇ? +ಶ್ರೀಮಂತರ ಮನೆಗಲ್ಲ.” +ಪಾರ್ವತಿ ಚಂಡಿ ಹೋಗಲಿಲ್ಲ. +ಭಿಕ್ಷುಕ ವೇಷದಲ್ಲಿ ಪಾರ್ವತಿ-ಪರಮೇಶ್ವರರು ಹೋಗಿದ್ದರು. +ದಿಬ್ಬಣದಲ್ಲಿ ಲಾಡು ಇಂತಾದ್ದ್ ಹಂಚಿದರು. +ಎಲ್ಲಿಂದ ಬಂದಿದ್ದಿರಿ ಕೇಳಲಿಲ್ಲ, ಲಾಡು ಹಂಚಲಿಲ್ಲ. +ಸಟ್ ಮುಡಿ ದಿಬ್ಬಣದಲ್ಲೂ ಹಾಗೇಯ, “ಏಳಿ. . . ” ಎಂದರು. +ಬಾಳೆ ಹಾಕಲು ತಯಾರಾಯಿತು. +ಈ ಭಿಕ್ಷುಕರು ಏಳಲಿಲ್ಲ. +ಒನಿಕೆ ಹಿಡಕೊಂಡು ಬಂದರು. +ಎದ್ದುಬಂದು ತಿರುಗಿ ಹೋದರು. +“ಪಾರ್ವತಿ, ಏನು ಹೇಳಿದ್ದೆ?” ಅಂತರ್ಧಾನವಾದರು. +“ಕೋಳ ಮೇಲೆ ಬೆಂಕಿ. . . ” “ಇವರೇ ಇರಬೇಕು” ಹುಡುಕಿದರು, ನಂದಿಸಿಕೊಂಡರು. +ತಿಂಗಳ ನಂತ್ರ ಬಡ ಅಜ್ಜಿಮನೆಗೆ ಹೋದರು. +ಪಾಗಾರ ಬಳಿ ಮಗ ಸತ್ತಿದ್ದ. +ಅಜ್ಜಿ ಮುದುಕಿ, “ತಮಾ. . . ತಂಗಿ ಬನ್ನಿ. . . ಇಲ್ಲಿ ನಮ್ಮನೆ” ಎಂದಳು. +“ಆಸ್ರಿಗೆ ಬೇಕೋ?” ಕೇಳಿದಳು. +“ಬೇಡ.” +“ತಂಗಿ, ನೀನು ಅಡಿಗೆ ಮಾಡು. +ಕೊಡದಲ್ಲಿ ಅಕ್ಕಿಯಿದೆ. +ದೋಸೆ ಮಾಡು. . . ಬಾಳೆ ತರುವೆ” ಎಂದು ಹೋದಳು. +“ಮಿಂದು ಬರುವೆ” ಎಂದು ಹೋಗಿ ಕಮಂಡಲು ನೀರನ್ನು ಈಶ್ವರ ತಳಿದ. +ಬಂಗಾರದ ಹರಿವೆ ಬಚ್ಚಲ ಕೊಟ್ಗೆ (ಆದವು). +ಒಳಗೆ ಹೋಗುವಾಗ ಕಮಂಡಲು ನೀರು ತಳಿದ ದೇವರು. +ಎಲ್ಲಾ ಸಿದ್ಧ. +ಪಾರ್ವತಿ, ‘‘ಕೊಡದಲ್ಲಿ ಅಕ್ಕಿ ಇದೆ, ಇಷ್ಟೇ ಇದೆ.” +ಈಶ್ವರ, “ಮೂರು ಪಾಲು ಅನ್ನಕ್ಕೆ, ವಂದ್ ಪಾಲು ದೋಸೆಗೆ. . . ” (ಅಂದ). +ಅಜ್ಜಮ್ಮ ಗದ್ದೆಗೆ ಬಂದು ‘ಮನೆಯೇ ಇಲ್ಲ. . . ’ ಎಂದು, ‘ಯಾರೂ ಮನೆ ಕಟ್ಟಿದರೆ?’ ಎಂದು ಕಾಕಳಿಸಿದಳು. +ಪಾರ್ವತಿ, “ಅಜ್ಜಮ್ಮ. . . ” ಮನೆ ಹುಡುಕಿದಳು. +“ಬಾರೆ ಅಜ್ಜಿ. . . ’’ ‘‘ನನ್ನದು ಹೆಡೆಪಂಟೆಗುಬ್ಬೆ. . . ” “ಇಲ್ಲಿಯೇ ಬಾ ಅಜ್ಜಿ.” +“ಬಂಗಾರದ ಹರಿವೆ. . . ” ಅಜ್ಜಿಗೆ ಆಶ್ಚರ್ಯ. +ಮೂರು ಬಾಳೆ ಹಾಕಿದರು. +“ಮೂರು ಬಾಳೆ ಹಾಕಬೇಡ. +ಹದಿನೆಂಟು ವರ್ಷ ಹಿಂದೆ ಮಗ ಸತ್ತ. +ವಂದು ಎಡೆ ಮಗನ ಹುಗಿದಲ್ಲಿ ಹೋಗಿ ಇಟ್ಟು ಬರುವೆ.” ಒಟ್ಟಿಗೆ ಕೂತು ಉಂಡರು. +ಈಶ್ವರಗೆ ಉಂಡಾಯ್ತು. +“ಬಾ ಹೊರಗೆ. . . ” ಹೊರಗೆ ಕರಕೊಂಡು ಬಂದರು. +ಹರಿವಾಣ ಹಾಕಿದರು. +“ಹುಳವಿದ್ದರೆ ಹಾಕ್ಕೊಂಡು ತಕ್ಕೊಂಬಾ” ಎಂದು ಕೊಟ್ಟರು. +ಕರಿಮಣಿ ಹುಳ ಜೀವವಿದ್ದದ್ದು ಸಿಕ್ಕಿತು. +ಕಮಂಡಲ ನೀರು ತಳಿವಾಗ ಹದಿನೆಂಟು ವರ್ಷದ ಮಗ. + “ಅಜ್ಜಿ. . . ನಿನ್ನ ಮಗನೊ?” ಕಾಲ್ಹಿಡಿದು ಗೋಳ್ಗುಟ್ಟಳು. +“ಕಷ್ಟಕೊಟ್ಟವ ನಾನೇ, ಅಳಬೇಡ. . . ” +“ಅಪ್ಪನ ಮನೆಯಲ್ಲಿ ಅಣ್ಣ-ತಮ್ಮಂದಿರುಂಟೊ?” + “ಹೌದು, ಅವರು ಬಾರರು. . . ” “ಅಪ್ಪನ ಮನೆಯಲ್ಲಿ ಮಕ್ಕಳುಂಟೊ?” + “ಹೌದು; ಶ್ರೀಮಂತರು ಮಕ್ಕಳಿದ್ದಾರೆ.” + “ಅಪ್ಪನ ಮನೆಗೋಗಿ ಹೆಣ್ಣು ಕೇಳು” ಹೋದಳು. + ಕೊಡ್ಲಿಲ್ಲ. “ಕೂಸನ್ನು ನನ್ನ ಮಗಗೆ ಕೊಡುತಿಯೋ?” + “ಮಂಗರಂಡೆ. . . ” ಅಂದಿ ಹೊಡೆತ ಕೊಟ್ಟ. +“ತಲೆಗೆ ಒನಕೆ ಸುತ್ತಬೇಕೋ. . . ” (ಕೇಳಿದ). +“ಸಣ್ಣಣ್ನ ಹೆಣ್ಣು ಕೊಡು” ಒನಕೆಯಲ್ಲಿ ಹೊಡೆತ ಕೊಟ್ಟ. +ಹಾಗೆ ಅಳುತ ಮನೆಗೆ ಬಂದಳು. +“ಏನೆಂದರು?” ಈಶ್ವರ ಕೇಳಿದ. +“ಮಗನಿಗೆ ಪಟ್ಟೆ ಉಡಿಸು, ಚಿನ್ನದ ನೇವಳ ಹಾಕಿ ತಕ್ಕೊಂಡು ಹೋಗು.” +ಹಾಗೆ ಅಲಂಕರಿಸಿ, ದೊಡ್ಡ ಅಣ್ಣನ ಹತ್ತರ ಕೇಳಿದಳು. +“ಮಂಗ ಅಜ್ಜಿ, ಯಾರಿವನು?” ಕೇಳಿದನು. +“ಕೊಡುವದಿಲ್ಲ. . . ” ಎಂದ. +ತೀರ ಕಿರಿತಮ್ಮ, “ವಂದ್ ಸಟ್ಟೆ ರೂಪಾಯಿ ಆಗಬೇಕು ಕೊಡುವೆ, ಸೂಳೆಮೇಳ, ತಮಜಾಲು ಹಾಕಿ ತಗೊಂಬಾ – ಹೆಣ್ಣು ಕೊಡುವೆ” ಅಂದ. +“ಕರಿ ಬುಧವಾರ ಮುಹೂರ್ತ” ಎಂದ. +ಈಶ್ವರಗೆ ಹೇಳಲು, ದೇವಲೋಕದ ಹೆಣ್ಣು-ಗಂಡು ಎಲ್ಲಾ ವಾಲಗ ಸಮೇತ ಬಂದರು. +ಮದುವೆ ಎಂದದ್ದೇ ಏನೂ ಸಂವರಿಸಲಿಲ್ಲ. +ಮೂರನೆಯವ ಉಚ್ಚಿ ಹೊಯ್ಯಲು ರಾತ್ರಿ ಬಂದಿದ್ದ. +ವಾದ್ಯ ಕೇಳಿ ದೊಡ್ಡವರ ಮನೆ ದಿಬ್ಬಣ, ದಕ್ಷಿಣೆ ಸಿಗುತ್ತಿತ್ತು ವಿಚಾರ. +‘ಅಕ್ಕ ಬಂದಿದ್ಧಳು. +ಅವಳೆ ದಿಬ್ಬಣ ತಂದಳೆ? +ಸುಳ್ಳು’ ಎಂದು ಅಣ್ಣಂದಿರನ್ನೆಬ್ಬಿಸಿದ. +ಎದ್ದು ನೋಡುತ್ತಾರೆ ಆಚೆಮನೆ ಮಂಚ ತಂದರು. +ಹಸೆಯಿಲ್ಲ, ದಿಬ್ಬಣ ಬಂತು. +ಪರಮೇಶ್ವರರು ಸಟ್ಟೆ ರೂಪಾಯ್ ತಂದ ಕೂತಿದ್ದರು. +ಅಣ್ಣ, “ಮೊದಲೆ ದಕ್ಷಿಣೆ ಹಂಚಲು ಅವರಿಂದ ಹಣ ತಕ್ಕೊಳೋಣ” ಎಂದ. +“ವಾಗ್ದಾನಕೆ ಹೋಗುವಾಗಲೆ ದಕ್ಷಿಣೆ ಬೇಕು” ಎಂದ. +ಹರಿವಾಣದಲ್ಲಿ ಮೊಗೆಮೊಗೆದು ದುಡ್ಡು ಹಾಕಿ ಕೊಟ್ಟು ಕೊಟ್ಟು ಸಾಕಾಗಿ, ಸಾಕೆಂದ. +“ನಿಮ್ಮ ದಕ್ಷಿಣೆ ತೆಗೆಯಿರಿ. . . ” ಈಶ್ವರ, “ಇಬ್ಬರಿಗೂ ಕೊಡಲು ಸಾಲದು. +”ಯಜಮಾನ ಕೈಮುಗಿದು, “ನಮ್ಮ ಬಂಡವಲಿಷ್ಟೆ” ಎಂದು ಕೂಗಿದ. +“ನಿನ್ನ ಕೂಸು ಸಣ್ಣವಲೆ. +ನನ್ನ ಕೂಸ್ನೆ ಕೊಡುವೆ” ಎಂದ. +ಕಿರಿಯನಿಗೆ ಆ ಕೂಸನ್ನೆ ಮದುವೆ ಮಾಡಿದರು. +ಮದುವೆ ಮುಗಿಯಿತು. +ದಿಬ್ಬಣ ಬಂತು. +ಮದುವೆಯಾಗಿ ಯೆಂಟು ದಿನವಾಯ್ತು. +ಪಾರ್ವತಿ- ಪರಮೇಶ್ವರರು, “ಅಜ್ಜಿ. . . ಸುಖದಲ್ಲಿರು” ಎಂದರು. +ಅಜ್ಜಿ, “ನೀನು ಅವರ ಕಾಲು ಹಿಡಿ ತಂಗಿ, ಅವರ ಕಾಲು ಹಿಡಿ” ಎನ್ನಲು ಹೋಗಿ ಹಿಡಿಯಲು ಅಂತರ್ಧಾನವಾದರು.