diff --git "a/Data Collected/Kannada/MIT Manipal/\340\262\253\340\262\262\340\262\277\340\262\244\340\262\276\340\262\202\340\262\266_\340\262\206\340\262\247\340\262\276\340\262\260\340\262\277\340\262\244_\340\262\266\340\262\277\340\262\225\340\263\215\340\262\267\340\262\243.txt" "b/Data Collected/Kannada/MIT Manipal/\340\262\253\340\262\262\340\262\277\340\262\244\340\262\276\340\262\202\340\262\266_\340\262\206\340\262\247\340\262\276\340\262\260\340\262\277\340\262\244_\340\262\266\340\262\277\340\262\225\340\263\215\340\262\267\340\262\243.txt" new file mode 100644 index 0000000000000000000000000000000000000000..b06346f3b545c852bbbbab0321e5ff1240ad6f6f --- /dev/null +++ "b/Data Collected/Kannada/MIT Manipal/\340\262\253\340\262\262\340\262\277\340\262\244\340\262\276\340\262\202\340\262\266_\340\262\206\340\262\247\340\262\276\340\262\260\340\262\277\340\262\244_\340\262\266\340\262\277\340\262\225\340\263\215\340\262\267\340\262\243.txt" @@ -0,0 +1,86 @@ +ಫಲಿತಾಂಶದ ಆಧಾರಿತ ಶಿಕ್ಷಣ ( Outcome-based education ) ವು ಒಂದು ಶೈಕ್ಷಣಿಕ ಸಿದ್ಧಾಂತವಾಗಿದ್ದು ಶಿಕ್ಷಣ ವ್ಯವಸ್ಥೆಯ ಪ್ರತಿಯೊಂದೂ ಭಾಗವು ಕೆಲವು ಗುರಿಗಳನ್ನು ಹೊಂದಿದೆ . +ಶಿಕ್ಷಣದ ಅನುಭವದ ಕೊನೆಯಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಯು ಈ ಗುರಿಯನ್ನು ಸಾಧಿಸುತ್ತಾನೆ . +ಫಲಿತಾಂಶದ ಆಧಾರಿತ ಶಿಕ್ಷಣದಲ್ಲಿ ಯಾವುದೇ ವಿಶೇಷ ರೀತಿಯ ಬೋಧನೆ ಅಥವಾ ಮೌಲ್ಯಮಾಪನ ಇರುವುದಿಲ್ಲ . +ಬದಲಾಗಿ ತರಗತಿಗಳು ,ಅವಕಾಶಗಳು ಮತ್ತು ಮೌಲ್ಯಮಾಪನ ವಿದ್ಯಾರ್ಥಿಗಳಿಗೆ ನಿರ್ದಿಷ್ಟ ಫಲಿತಾಂಶಗಳನ್ನು ಸಾಧಿಸಲು ಸಹಾಯ ಮಾಡುತ್ತದೆ. +ಫಲಿತಾಂಶದ ಆಧಾರಿತ ಶಿಕ್ಷಣವನ್ನು ವಿಶ್ವದ ಶಿಕ್ಷಣ ವ್ಯವಸ್ಥೆಯಲ್ಲಿ ವಿವಿಧ ಹಂತಗಳಲ್ಲಿ ಅಳವಡಿಸಿಕೊಳ್ಳಲಾಗಿದೆ . +ಆಸ್ಟ್ರೇಲಿಯ ಮತ್ತು ದಕ್ಷಿಣ ಆಫ್ರಿಕಾ ದೇಶಗಳು ಫಲಿತಾಂಶ ಆಧಾರಿತ ಶಿಕ್ಷಣ ನೀತಿಯನ್ನು 1990ರ ಪ್ರಾರಂಭದಲ್ಲಿ ಅಳವಡಿಸಿಕೊಂಡಿದ್ದು ಈಗ ಅದನ್ನು ರದ್ದು ಮಾಡಿದೆ. + ಅಮೇರಿಕಾವು ಫಲಿತಾಂಶ ಆಧಾರಿತ ಶಿಕ್ಷಣವನ್ನು 1994ರಲ್ಲೇ ಹೊಂದಿದ್ದು ಅದನ್ನು ಹಲವಾರು ವರ್ಷಗಳಿಂದ ಅಳವಡಿಸಿಕೊಂಡಿದೆ. +2005ರಲ್ಲಿ ಹಾಂಕಾಂಗ್ ದೇಶವು ತನ್ನ ವಿಶ್ವವಿದ್ಯಾನಿಲಯಗಳಲ್ಲಿ ಫಲಿತಾಂಶ ಆಧಾರಿತ ಮಾರ್ಗವನ್ನು ಅಳವಡಿಸಿಕೊಂಡಿತು. + 2008ರಲ್ಲಿ ಮಲೇಷಿಯಾವು ತನ್ನ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಫಲಿತಾಂಶ ಆಧಾರಿತ ಶಿಕ್ಷಣ ಪದ್ಧತಿಯನ್ನು ಜಾರಿಗೆ ತಂದಿತು. +ಯೂರೋಪ್ ಒಕ್ಕೂಟವು ಶಿಕ್ಷಣವನ್ನು ಫಲಿತಾಂಶ ಕೇಂದ್ರಿತಕ್ಕೆ ಪಲ್ಲಟಗೊಳಿಸುವ ವಿಚಾರವನ್ನು ಯೂರೋಪ್ ಸಂಸ್ಥಾನಗಳ ಮುಂದಿಟ್ಟಿತು. + 1989ರಲ್ಲಿ ಫಲಿತಾಂಶ ಆಧಾರಿತ ಶಿಕ್ಷಣವನ್ನು ಒಪ್ಪಿಕೊಳ್ಳಲು ಅಂತರಾಷ್ಟ್ರೀಯ ಪ್ರಯತ್ನದ ಫಲವಾಗಿ ವಾಷಿಂಗ್ಟನ್ ಅಕಾರ್ಡನ್ನು ಸೃಷ್ಟಿಸಲಾಯಿತು . +ಇದು ಫಲಿತಾಂಶದ ಆಧಾರಿತ ಶಿಕ್ಷಣದ ಮೂಲಕ ಪಡೆದ ಇಂಜಿನಿಯರ್ ಪದವಿಗಳನ್ನು ಸ್ವೀಕರಿಸಲು ಆದ ಒಪ್ಪಂದವಾಗಿದೆ . +2014 ರಂತೆ , ಆಸ್ಟ್ರೇಲಿಯ , ಕೆನಡ , ಥೈವಾನ್ , ಹಾಂಕಾಂಗ್ , ಭಾರತ , ಐರ್ರ್ಲೆಂಡ್ , ಜಪಾನ್ , ಕೊರಿಯಾ , ಮಲೇಶಿಯಾ , ನ್ಯೂಜಿಲೆಂಡ್ , ರಶಿಯಾ , ಸಿಂಗಪೂರ್ , ದಕ್ಷಿಣ ಆಫ್ರಿಕಾ , ಶ್ರೀಲಂಕಾ , ಟರ್ಕಿ , ಬ್ರಿಟನ್ ಮತ್ತು ಅಮೆರಿಕ ಸಂಯುಕ್ತ ಸಂಸ್ಥಾನ ಸಹಿ ಹಾಕಿದ ದೇಶ ಗಳಾಗಿವೆ. +ಸಾಂಪ್ರದಾಯಿಕ ಶಿಕ್ಷಣ ಪದ್ಧತಿಯಲ್ಲಿ ವಿದ್ಯಾರ್ಥಿಗಳಿಗೆ ಗ್ರೇಡ್ ಮತ್ತು ಸ್ಥಾನ ಗಳನ್ನು ನೀಡುತ್ತಿದ್ದು ಅದನ್ನು ಒಬ್ಬರಿಂದ ಒಬ್ಬರಿಗೆ ಹೋಲಿಸಲಾಗುತ್ತಿತ್ತು . +ವಿಷಯ ಮತ್ತು ನಿರೀಕ್ಷಿತ ಕಾರ್ಯ ನಿರ್ವಹಣೆ ಮೂಲಭೂತವಾಗಿ ವಿದ್ಯಾರ್ಥಿಗಳಿಗೆ ಆ ವಯಸ್ಸಿನಲ್ಲಿ ಈ ಹಿಂದೆ ಏನನ್ನು ಕಲಿಸಿರುತ್ತಾರೋ ಅದರ ಮೇಲೆ ನಿರ್ಧಾರವಾಗುತ್ತಿತ್ತು . +ಸಾಂಪ್ರದಾಯಿಕ ಶಿಕ್ಷಣ ಪದ್ಧತಿಯ ಗುರಿ ಬುದ್ಧಿ ಮತ್ತೆ ಮತ್ತು ಕೌಶಲ್ಯ ಗಳನ್ನು ಹಿಂದಿನ ತಲೆಮಾರಿನಿಂದ ಈಗಿನ ತಲೆಮಾರಿನ ವಿದ್ಯಾರ್ಥಿಗಳಿಗೆ ನೀಡುವುದು ಮತ್ತು ವಿದ್ಯಾರ್ಥಿಗಳಿಗೆ ಅವುಗಳನ್ನು ಕಲಿಯುವ ಪರಿಸರವನ್ನು ಸೃಷ್ಟಿಸುವುದು . +ಈ ವಿಧಾನವು ವಿದ್ಯಾರ್ಥಿಗಳಿಗೆ ಯಾವುದೇ ವಿಷಯವನ್ನು ಕಲಿಯುವ ಬಗ್ಗೆ ( ತರಗತಿಯಲ್ಲಿ ನಡೆಯುವ ಬೋಧನೆಯನ್ನು ಮೀರಿ ) ಕಡಿಮೆ ಒತ್ತು ನೀಡುತ್ತಿತ್ತು. +ಫಲಿತಾಂಶ ಕೇಂದ್ರಿತವು ಪಾಠಪ್ರವಚನಗಳ ಸರಣಿಯ ಕೊನೆಗೆ ಯಾವುದನ್ನು ಸಾಧಿಸಲು ಅಗತ್ಯವಿದೆಯೋ ಆ ಸ್ಪಷ್ಟವಾದ ನಿರೀಕ್ಷೆಯನ್ನು ಸೃಷ್ಠಿಸುತ್ತದೆ . +ವಿದ್ಯಾರ್ಥಿಗಳು ಅವುಗಳಿಂದ ಏನು ನಿರೀಕ್ಷಿಸಿರುತ್ತಾರೋ ಅದನ್ನು ಅರ್ಥ ಮಾಡಿಕೊಳ್ಳುತ್ತಾರೆ ಮತ್ತು ಶಿಕ್ಷಕರಿಗೆ ತಾವು ಬೋಧನೆಯ ಸಮಯದಲ್ಲಿ ಏನು ಬೋಧಿಸಬೇಕು ಎಂಬುದು ತಿಳಿಯುತ್ತದೆ . +ತಂಡ ಬೋಧನೆ ಒಳಗೊಂಡಾಗ ಶಾಲೆಗಳಲ್ಲಿ ವರ್ಷಗಳು ಕಳೆದಂತೆ ಸ್ಪಷ್ಟತೆ ತುಂಬಾ ಮುಖ್ಯವಾಗಿರುತ್ತದೆ . +ಪ್ರತೀ ತಂಡದ ಸದಸ್ಯ ಅಥವಾ ಶಾಲೆಯ ವರ್ಷದಲ್ಲಿ ಪ್ರತಿ ತರಗತಿಯಲ್ಲಿ ಅಥವಾ ಪ್ರತಿ ಹಂತದಲ್ಲಿ ವಿದ್ಯಾರ್ಥಿಗಳ ಪ್ರಗತಿಗೆ ಏನನ್ನು ಸಾಧಿಸಬೇಕೋ ಅದನ್ನು ಸ್ಪಷ್ಟವಾಗಿ ಅರ್ಥ ಮಾಡಿಕೊಳ್ಳುತ್ತಾರೆ. +ಯಾರು ಪಠ್ಯದ ರಚನೆ ಮತ್ತು ಯೋಜನೆಯನ್ನು ಮಾಡುತ್ತಾರೋ ಅವರು ಫಲಿತಾಂಶವನ್ನು ನಿರ್ಧರಿಸಿದ ನಂತರ ಹಿಂದಕ್ಕೆ ಹೋಗುವ ಕೆಲಸ ಮಾಡಬೇಕಾಗುತ್ತದೆ . +ಅವರು ಜ್ಞಾನ ಮತ್ತು ಕೌಶಲ್ಯಗಳು ಯಾವುದು ಬೇಕೆಂದು ಫಲಿತಾಂಶವನ್ನು ಪಡೆಯಲು ನಿರ್ಧರಿಸುವರು. +ಏನನ್ನು ಸಾಧಿಸಬೇಕೆನ್ನುವ ಸ್ಪಷ್ಟತೆಯನ್ನಿಟ್ಟುಕೊಂಡು ವಿದ್ಯಾರ್ಥಿಗಳ ಅಗತ್ಯತೆಯ ಸುತ್ತ ತಿಳುವಳಿಕೆಗಳ ಪಾಠಗಳ ರಚನೆ ಮಾಡಲು ಸಾಧ್ಯವಾಗುವುದು . +ಫಲಿತಾಂಶದ ಆಧಾರಿತ ಶಿಕ್ಷಣವು ನಿರ್ಧಿಷ್ಟ ತಿಳುವಳಿಕಾ ವಿಧಾನವನ್ನು ಸೂಚಿಸುವುದಿಲ್ಲ . +ಅವರ ವಿದ್ಯಾರ್ಥಿಗಳಿಗೆ ಯಾವುದೇ ವಿಧಾನವನ್ನು ಉಪಯೋಗಿಸಿ ಬೋಧಿಸಲು ಸ್ವತಂತ್ರರು . +ಬೋಧಕರು ಅವರ ತರಗತಿಯಲ್ಲಿ ಬೋಧನೆ ಮತ್ತು ಮೌಲ್ಯಮಾಪನಾ ತಂತ್ರಗಳನ್ನು ಉಪಯೋಗಿಸಿ ವಿದ್ಯಾರ್ಥಿಗಳಲ್ಲಿ ವಿವಿಧತೆಯನ್ನು ಗುರುತಿಸಲು ಸಮರ್ಥರು . +ಫಲಿತಾಂಶ ಆಧಾರಿತ ಶಿಕ್ಷಣವು ವಿದ್ಯಾರ್ಥಿ ಕೇಂದ್ರೀಕೃತ ಕಲಿಕಾ ಮಾದರಿ ಎಂದು ತಿಳಿಯಲಾಗಿದೆ . +ಶಿಕ್ಷಕರು ವಿದ್ಯಾರ್ಥಿಗಳಿಗೆ ಅವಶ್ಯವಿರುವ ವಿಷಯವನ್ನು ಅರ್ಥ ಮಾಡಿಸಲು ಯಾವುದೇ ರೀತಿಯಲ್ಲಿ ಮಾರ್ಗದರ್ಶನ ಮತ್ತು ಸಹಾಯ ಮಾಡುವರೆಂದು ತಿಳಿಯಲಾಗಿದೆ . +ವಿದ್ಯಾರ್ಥಿಗಳ ಕಲಿಕೆ ಸುಗಮವಾಗಲು ಬೋಧಕರು ಉಪಯೋಗಿಸುವ ಕೆಲವು ವಿಧಾನಗಳೆಂದರೆ ಬೇಕಾದ ಬೋಧನಾ ಮಾರ್ಗದರ್ಶಕ (ಸ್ಟಡೀ ಗೈಡ್ ) ಗಳು ಮತ್ತು ಗುಂಪುಕಾರ್ಯ ( ಗ್ರೂಪ್ ವರ್ಕ ) . +ಫಲಿತಾಂಶ ಆಧಾರಿತ ಶಿಕ್ಷಣವು ಸಂಸ್ಥೆಗಳ ನಡುವೆ ಹೋಲಿಕೆ ಮಾಡಲು ಅವಕಾಶ ಮಾಡಿ ಕೊಡುತ್ತದೆ . +ಒಬ್ಬ ವ್ಯಕ್ತಿಯ ಹಂತದಲ್ಲಿ , ಸಂಸ್ಥೆಗಳು ಹೊಸ ಸಂಸ್ಥೆಯಲ್ಲಿ ಯಾವ ಮಟ್ಟದಲ್ಲಿ ಇರಬೇಕೆಂದು ನಿರ್ಧಾರ ಮಾಡಲು , ಫಲಿತಾಂಶದಿಂದ ವಿದ್ಯಾರ್ಥಿಯು ಯಾವ ಹಂತದಲ್ಲಿ ಏನನ್ನು ಸಾಧಿಸಿರುತ್ತಾನೆ ಎಂಬುದನ್ನು ನೋಡಬಹುದು . +ಸಂಸ್ಥೆಯ ಹಂತದಲ್ಲಿ , ತಮ್ಮ ತಮ್ಮಲ್ಲಿ ಯಾವ ಫಲಿತಾಂಶವು ತಮ್ಮಲ್ಲಿ ಸಾಮಾನ್ಯವಾಗಿದೆ ಎಂಬುದನ್ನು ಹೋಲಿಕೆ ಮಾಡಿಕೊಳ್ಳಬಹುದು ಮತ್ತು ಇತರ ಸಂಸ್ಥೆಗಳ ಫಲಿತಾಂಶದ ಸಾಧನೆಯನ್ನು ನೋಡಿ ಸುಧಾರಣೆಯ ಅಗತ್ಯವಿರುವ ಜಾಗವನ್ನು ಪತ್ತೆ ಮಾಡಬಹುದು . +ಸಂಸ್ಥೆಗಳ ನಡುವೆ ವ್ಯತ್ಯಾಸವನ್ನು ತಿಳಿಯುವ ಶಕ್ತಿಯು ಹೋಲಿಕೆ ಮಾಡಿಕೊಂಡಾಗ ವಿದ್ಯಾರ್ಥಿಗಳಿಗೆ ಸಂಸ್ಥೆಗಳ ನಡುವೆ ಹೋಗುವುದು ಸಾಪೇಕ್ಷವಾಗಿ ಸುಲಭವಾಗುತ್ತದೆ . +ಸಂಸ್ಥೆಗಳು ಫಲಿತಾಂಶಗಳ ಹೋಲಿಕೆ ಮಾಡಿಕೊಳ್ಳುವುದರಿಂದ ವಿದ್ಯಾರ್ಥಿಗಳಿಗೆ ಕೊಡಬಲ್ಲ ಕ್ರೆಡಿಟ್ ನ್ನು ನಿರ್ಧರಿಸಬಹುದು . +ಸ್ಪಷ್ಟವಾದ ಫಲಿತಾಂಶವು ವಿದ್ಯಾರ್ಥಿಗಳ ಸಾಧನೆಯನ್ನು ಸಂಸ್ಥೆಗಳು ವೇಗವಾಗಿ ಅಳೆಯುವಂತಿರಬೇಕು . +ಇದರಿಂದ ವಿದ್ಯಾರ್ಥಿಗಳ ಚಲನೆಗೆ ಅನುವು ಮಾಡಿಕೊಡುವುದು . +ಈ ಫಲಿತಾಂಶಗಳು ಶಾಲೆಗಳಲ್ಲಿ ಬದಲಾವಣೆಯ ಕೆಲಸವನ್ನು ಮಾಡುತ್ತದೆ . +ಶಕ್ತ ಉದ್ಯೋಗದಾತನು ಶಕ್ತ ಉದ್ಯೋಗಿಯ ದಾಖಲೆಗಳನ್ನು ಪರಿಶೀಲಿಸಿ ಯಾವ ಫಲಿತಾಂಶವನ್ನು ಅವನು ಸಾಧಿಸಿರುತ್ತಾನೆ ಎಂದು ನೋಡಬಹುದು . +ಆ ನಂತರ ಶಕ್ತ ಉದ್ಯೋಗಿಯ ಉದ್ಯೋಗಕ್ಕೆ ಅಗತ್ಯವಿರುವ ಕೌಶಲ್ಯಗಳು ಇವೆಯೋ ಎಂದು ತಿಳಿಯಬಹುದು. +ತರಗತಿಯಲ್ಲಿ ವಿದ್ಯಾರ್ಥಿಗಳ ತೊಡಗಿಸಿಕೊಳ್ಳುವಿಕೆಯು ಫಲಿತಾಂಶದ ಆಧಾರಿತ ಶಿಕ್ಷಣದ ಒಂದು ಮುಖ್ಯವಾದ ಭಾಗವಾಗಿದೆ . +ವಿದ್ಯಾರ್ಥಿಗಳು ಕಲಿಕೆಯನ್ನು ತಾವೇ ಸ್ವತಃ ಮಾಡಿಕೊಳ್ಳಬೇಕಾಗುವುದು ಆಪೇಕ್ಷಣೀಯ . +ಇದರಿಂದ ವಸ್ತುಗಳ ಪೂರ್ಣವಾಗಿ ತಿಳುವಳಿಕೆಯ ಲಾಭವಾಗುವುದು . +ವಿದ್ಯಾರ್ಥಿಗಳ ಹೆಚ್ಚಿಗೆ ತೊಡಗಿಸಿಕೊಳ್ಳುವಿಕೆಯು,ಅವರುಗಳಿಗೆ ಅವರ ಕಲಿಕೆಯು ತಾವೇ ಜವಾಬ್ದಾರಿಯೆಂದು ಅನ್ನಿಸುವುದು ಮತ್ತು ಅವರು ಹೆಚ್ಚಾಗಿ ಸ್ವಕಲಿಕೆಯಲ್ಲಿ ಕಲಿಯುವರು. + ಪಠ್ಯದ ರಚನೆಯ ಅಥವಾ ಬದಲಾವಣೆಯಲ್ಲಿ, ಪೋಷಕರ ಮತ್ತು ಸಮುದಾಯದ ತೊಡಗಿಸಿಕೊಳ್ಳುವಿಕೆಯು, ತೊಡಗಿಸಿಕೊಳ್ಳುವಿಕೆಯ ಇನ್ನೊಂದು ಆಯಾಮವಾಗಿದೆ . +ಪೋಷಕರು ಮತ್ತು ಸಮುದಾಯದ ಸದಸ್ಯರುಗಳು ಸಮುದಾಯದ ಒಳಗೆ ಶಿಕ್ಷಣದ ಮಟ್ಟವನ್ನು ಎತ್ತಿಹಿಡಿಯಲು ಮತ್ತು ಶಿಕ್ಷಣದ ನಂತರ ಜೀವನ ನಡೆಸಲು ತಯಾರಿಯನ್ನು ಖಚಿತಪಡಿಸಿಕೊಳ್ಳಲು ಅಭಿಪ್ರಾಯವನ್ನು ಕೇಳಲಾಗುವುದು. +ಫಲಿತಾಂಶದ ವ್ಯಾಖ್ಯಾನಗಳ ತೀರ್ಮಾನಗಳು ಅನುಷ್ಟಾನ ಮಾಡುವವರ ಅರ್ಥವಿವರಣೆಗಳಿಗೆ ಒಳಪಟ್ಟಿರುತ್ತವೆ . +ಒಂದೇ ತರಹದ ಫಲಿತಾಂಶಗಳು ಸಾಧಿಸಲ್ಪಟ್ಟಿವೆ ಎಂದು ಹೇಳಲಾಗಿದ್ದರೂ ಸಹ , ವಿವಿಧ ಕಾರ್ಯಕ್ರಮಗಳಲ್ಲಿ ಅಥವಾ ವಿವಿಧ ಬೋಧಕರುಗಳು ಕೂಡ ಫಲಿತಾಂಶಗಳನ್ನು ವಿವಿಧ ರೀತಿಯಲ್ಲಿ ವಿವರಿಸಿ ಶಿಕ್ಷಣದಲ್ಲಿ ವ್ಯತ್ಯಾಸಕ್ಕೆ ಕಾರಣವಾಗುತ್ತದೆ . +ನಿರ್ದಿಷ್ಟ ಫಲಿತಾಂಶಗಳನ್ನು ರೂಪಿಸುವುದರಿಂದ ಕಲಿಕೆಯ ಸಮಗ್ರ ದೃಷ್ಟಿಯು ಕಾಣೆಯಾಗುವುದು . +ಕಲಿಕೆಯು ನಿರ್ದಿಷ್ಟ , ಅಳೆಯಬಲ್ಲ ಮತ್ತು ಗ್ರಹಿಸಬಲ್ಲ ಕೆಲವೊಂದಕ್ಕೆ ಸೀಮಿತಗೊಳ್ಳಲು ದಾರಿಯಾಗಬಲ್ಲದು . +ಇದರಿಂದಾಗಿ ಫಲಿತಾಂಶಗಳನ್ನು ಯಾವುದನ್ನು ಕಲಿಕೆ ಎನ್ನಲಾಗುವುದೋ ಅದನ್ನು ಪರಿಕಲ್ಪಿಸಲು ವ್ಯಾಪಕವಾದ ಮಾನ್ಯ ಮಾಡುವ ಮಾರ್ಗವಾಗುತ್ತಿಲ್ಲ . +ಫಲಿತಾಂಶ ಸಾಧಿಸಲ್ಪಟ್ಟಿದೆಯೋ ಎಂದು ತಿಳಿಯುವಾಗ ವಿದ್ಯಾರ್ಥಿಯು ಜ್ಞಾನವನ್ನು ಪಡೆದು ಕೊಂಡಿದ್ದಾನೆಯೆ ಎಂದು ನೋಡುವುದರಿಂದ , ಇಂತಹ ಸಂದರ್ಭದಲ್ಲಿ ಮೌಲ್ಯಮಾಪನವು ಯಾಂತ್ರಿಕವಾಗಿರುವುದು . +ವಿವಿಧ ಜ್ಞಾನದ ಉಪಯೋಗ ಮತ್ತು ಅನ್ವಯವಾಗುವ ಸಾಮರ್ಥ್ಯವು ಮೌಲ್ಯಮಾಪನದಲ್ಲಿ ಗಮನಿಸದೇ ಹೋಗಬಹುದು . +ಫಲಿತಾಂಶ ಸಾಧಿಸಲ್ಪಟ್ಟಿದೆಯೋ ಎಂದು ತಿಳಿಯವ ಮೇಲಿನ ಗಮನವು ವಿದ್ಯಾರ್ಥಿಗಳ ತಿಳುವಳಿಕೆ ಮತ್ತು ಕಲಿಕೆಯು ನಷ್ಟವಾಗುವುದಲ್ಲದೆ , ತಾವು ಗಳಿಸಿದ ಜ್ಞಾನವು ಉಪಯೋಗಿಸುವುದು ಹೇಗೆಂದು ತೋರದೆ ಹೋಗುವುದು. +ತಾವು ಒಗ್ಗಿಕೊಂಡಿರುವುದನ್ನು ಬಿಟ್ಟು , ಮೂಲಭೂತವಾಗಿರುವ ಬೇರೆಯೇ ಪರಿಸರವನ್ನು ನಿರ್ವಹಿಸಲು ಕಲಿಯಬೇಕಾಗುವುದು ಬೋಧಕರು ಎದುರಿಸುವ ಸವಾಲು . +ಮೌಲ್ಯಮಾಪನಾ ಮಾಡುವ ಸಮಯದಲ್ಲಿ , ವಸ್ತುನಿಷ್ಟವಾಗಿ ಇರುವಾಗ , ಆ ವಿದ್ಯಾರ್ಥಿಗಳಿಗೆ ಅವರಿಗೆ ತಿಳಿದಿರುವ ಮಾಹಿತಿಯನ್ನು ಪ್ರದರ್ಶಿಸಲು ಆದರ್ಶಕರವಾಗಿ ಆಗಗೊಡಲು , ವಿಶ್ವಾಸನೀಯ ಮತ್ತು ಸಿಂದುವಾದ ಮೌಲ್ಯಮಾಪನವನ್ನು ಸೃಷ್ಟಿಸಲು ಬೇಕಾದ ಸಮಯವನ್ನು ಕಳೆಯಲು ಸಂಕಲ್ಪಿಸ ಬೇಕಾಗುತ್ತದೆ. +ಶೈಕ್ಷಣಿಕ ಫಲಿತಾಂಶಗಳು ನಿರ್ಬಂಧಿತ ಗುಣವುಳ್ಳ ಬೋಧನೆ ಮತ್ತು ಮೌಲ್ಯಮಾಪನದತ್ತ ಕೊಂಡೊಯ್ಯಬಹುದು . +ಸೃಜನಶೀಲತೆ , ಆತ್ಮ ಗೌರವ , ಬೇರೆಯವರನ್ನು ಗೌರವದಿಂದ ಕಾಣುವುದು , ಜವಾಬ್ದಾರಿ ಮತ್ತು ಸ್ವಯಂಪೂರ್ಣತೆ ಮುಂತಾದ ಉದಾರ ಫಲಿತಾಂಶಗಳ ಮೌಲ್ಯಮಾಪನಮಾಡುವುದು ಸಮಸ್ಯಾತ್ಮಕವಾಗಬಹುದು . +ವಿದ್ಯಾರ್ಥಿಯು ಫಲಿತಾಂಶಗಳನ್ನು ಸಾಧಿಸಿದ್ದರೆ , ಅವುಗಳನ್ನು ಕಂಡುಹಿಡಿಯಲು , ಅಳೆಯಬಹುದಾದ , ಗ್ರಹಿಸಬಹುದಾದ ಮತ್ತು ನಿರ್ದಿಷ್ಟ ಮಾರ್ಗಗಳಿಲ್ಲ . +ನಿರ್ದಿಷ್ಟ ಫಲಿತಾಂಶಗಳ ಗುಣದಿಂದ , ಫಲಿತಾಂಶದ ಆಧಾರಿತ ಶಿಕ್ಷಣ (OBE) ವು ಬಹಳ ಫಲಿತಾಂಶಗಳನ್ನು ಸಾಧಿಸಿದ ಓರ್ವನ ಸೇವೆ ಮಾಡುವ ಮತ್ತು ಸೃಷ್ಟಿಸುವ ಅದರ ಆದರ್ಶಗಳ ವಿರುದ್ಧ ಕೆಲಸ ಮಾಡಬಹುದು. +ಪೋಷಕರ ತೊಡಗಿಸಿಕೊಳ್ಳುವಿಕೆಯು ತೊಡಗಿಸಿಕೊಳ್ಳುವಿಕೆ ವಿಭಾಗದಲ್ಲಿ ಚರ್ಚೆಯಾದಂತೆ,ಕೂಡ ಒಂದು ನ್ಯೂನತೆಯಾಗಿರುವುದು . +ಪೋಷಕರು ಮತ್ತು ಸಮುದಾಯದ ಸದಸ್ಯರುಗಳು ಶೈಕ್ಷಣಿಕ ವ್ಯವಸ್ಥೆಯ ಗುಣಮಟ್ಟದ ಮೇಲೆ ಅಭಿಪ್ರಾಯವನ್ನು ಕೊಡಲು ಇಚ್ಚಿಸದೆ ಇರುವಾಗ ವ್ಯವಸ್ಥೆಯು ಸುಧಾರಣೆಯ ಅವಶ್ಯಕತೆಯನ್ನು ಕಾಣದೆ ಹೋಗಬಹುದು ಮತ್ತು ವಿದ್ಯಾರ್ಥಿಗಳ ಅಗತ್ಯಗಳಿಗೆ ಬದಲಾಯಿಸಲ್ಪಡದಿರಬಹುದು . +ಪೋಷಕರು ಬಹಳವಾಗಿ ತೊಡಗಿಸಿಕೊಳ್ಳುತ್ತಾ ಹೆಚ್ಚಿನ ಬದಲಾವಣೆಗಳನ್ನು ಬೇಡುತ್ತಾ ,ಬೇರೆಯೇ ಬದಲಾವಣೆಗಳಿಗೆ ಸಲಹೆ ಮಾಡುವುದರಿಂದ, ಮುಖ್ಯವಾದ ಸುಧಾರಣೆಗಳು ಕಾಣೆ ಯಾಗಬಹುದು . +ಬೋಧಕರು ತಮ್ಮ ಕೆಲಸವು ಹೆಚ್ಚಾಗುವುದನ್ನು ಮನಗಾಣುವರು : ಅವರು ಮೊದಲು ಫಲಿತಾಂಶವನ್ನು ಅರ್ಥಮಾಡಿಕೊಳ್ಳಲು ಕೆಲಸ ಮಾಡಬೇಕಾಗುವುದು ,ನಂತರ, ಬೇಕಾದ್ದನ್ನು ಪಡೆಯಲು ಪ್ರತಿಯೊಂದು ಫಲಿತಾಂಶದ ಸುತ್ತ ಪಠ್ಯದ ರಚನೆ ಮಾಡಬೇಕಾಗುವುದು . +ಬೋಧಕರು ವಿಶೇಷವಾಗಿ ಪ್ರಾಥಮಿಕ ಶಾಲೆಗಳಲ್ಲಿ ಗುಣನೀಯ ಫಲಿತಾಂಶಗಳನ್ನು ಅಳವಡಿಸಿಕೊಳ್ಳವಿಕೆಯು ಸಮಾನವಾಗಿ ಮಾಡಲು ಕಷ್ಟಕರ ಎಂದು ಕಂಡುಕೊಂಡಿದ್ದಾರೆ . +ಅಲ್ಲದೆ ,ಬೋಧಕರು ವಿದ್ಯಾರ್ಥಿಗಳ ಸಂಪೂರ್ಣವಾಗಿ ಮೌಲ್ಯಮಾಪನ ಮಾಡುವ ಪದ್ದತಿಯನ್ನು ಆಯ್ಕೆ ಮಾಡಿಕೊಂದರೆ , ತಮ್ಮ ಕೆಲಸದ ಹೊರೆ ಹೆಚ್ಚಾಗುವುದನ್ನು ಮನಗಾಣುವರು . +೧೯೯೦ ರ ಪ್ರಾರಂಭದಲ್ಲಿ ಆಸ್ಟ್ರೇಲಿಯದ ಎಲ್ಲಾ ರಾಜ್ಯಗಳು ಮತ್ತು ಪ್ರಧೇಶಗಳು ಅವುಗಳ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ ಬಹಳವಾಗಿ ಫಲಿತಾಂಶದ ಆಧಾರಿತ ಶಿಕ್ಷಣವನ್ನು ಆಧರಿಸಿದ ಉದ್ದೇಶಿಸಿದ ಪಠ್ಯಕ್ರಮ ದಾಖಲೆಗಳನ್ನು ಅಭಿವೃದ್ದಿಪಡಿಸಿದವು. + ಜಾರಿಗೆ ತಂದ ಅಲ್ಪಕಾಲದಲ್ಲಿಯೇ ವಿಮರ್ಶೆಗಳು ಪ್ರಾರಂಭವಾದವು . +ಆಸ್ಟ್ರೇಲಿಯ ಮತ್ತು ಅಮೇರಿಕ ದೇಶಗಳಲ್ಲಿಯೂ,ಫಲಿತಾಂಶ ಆಧಾರಿತ ಶಿಕ್ಷಣವನ್ನು ದೊಡ್ಡ ಪ್ರಮಾಣದಲ್ಲಿ ಯಶಸ್ವಿಯಾಗಿ ಅಳವಡಿಸಿಕೊಳ್ಳಲು ಯಾವುದೇ ಪುರಾವೆಗಳು ಇಲ್ಲವೆಂದು ವಿಮರ್ಶಕರು ವಾದಿಸುತ್ತಾರೆ . +ಆಸ್ಟ್ರೇಲಿಯದ ಶಾಲೆಗಳ ಒಂದು ಮೌಲ್ಯಮಾಪನವು ಫಲಿತಾಂಶದ ಆಧಾರಿತ ಶಿಕ್ಷಣವನ್ನು ಅಳವಡಿಕೆಯು ಕ‍ಷ್ಟ ಎಂದು ಕಂಡುಬಂದಿದೆ . +ಶಿಕ್ಷಕರು ನಿರೀಕ್ಷಿತ ಸಾಧನೆಗಳ ಫಲಿತಾಂಶಗಳ ಒಟ್ಟು ಮೊತ್ತದ ಬಗ್ಗೆ ಭಾವಪರವಶವಾಗುವರು . +ಶಿಕ್ಷಣ ಕೊಡುವವರು ವಿದ್ಯಾರ್ಥಿಗಳ ಮತ್ತು ಶಿಕ್ಷಕರ ಅಗತ್ಯಗಳನ್ನು ಪಠ್ಯಕ್ರಮ ಫಲಿತಾಂಶಗಳು ಪೂರೈಸಲಾರದೆಂದು ನಂಬುವರು . +ಬಹಳವಾಗಿರುವ ನಿರೀಕ್ಷಿತ ಫಲಿತಾಂಶಗಳು,ವಿಷಯಗಳ ಕಡಿಮೆ ತಿಳುವಳಿಕೆಯ ವಿದ್ಯಾರ್ಥಿಗಳನ್ನಾಗಿಸುತ್ತವೆ ಎಂದು ವಿಮರ್ಶಕರು ಭಾವಿಸುವರು . +ಆಸ್ಟ್ರೇಲಿಯದ ಈಗಿನ ಬಹಳ ಶೈಕ್ಷಣಿಕ ತತ್ವಗಳು ಫಲಿತಾಂಶದ ಆಧಾರಿತ ಶಿಕ್ಷಣದಿಂದ ದೂರ ಸರಿಯತೊಡಗಿ ,ಕಡಿಮೆ ತಿಳುವಳಿಕೆಯ ಹೆಚ್ಚಿನ ಅಡಕಗಳಿಗಿಂತಲೂ ,ಅಗತ್ಯ ಅಡಕಗಳನ್ನು ಸಂಪೂರ್ಣವಾಗಿ ತಿಳಿದುಕೊಳ್ಳುವ ಒಂದು ಕೇಂದ್ರೀಕರಿಸುವತ್ತ ಸಾಗುತ್ತಿವೆ. +ಐರೋಪ್ಯ ಒಕ್ಕೂಟದ ಉದ್ದಗಲಕ್ಕು ೨೩ % ಸಮೀಪ ಇರುವ ಯುವ ನಿರುದ್ಯೋಗ ದರವನ್ನು ಕಡಿಮೆ ಮಾಡಲು ಯುರೋಪಿಯನ್ ಕಮೀಷನ್ ( European Commission ) ಒಂದು ಹೊಸ ತಂತ್ರವನ್ನು ಮುಂದಿಟ್ಟಿತು . +ಎಲ್ಲಾ ಐರೋಪ್ಯ ಒಕ್ಕೂಟದಲ್ಲಿ ಯುರೋಪಿಯನ್ ಕ್ವಾಲಿಫಿಕೇಶನ್ ಫ್ರೇಮ್ ವರ್ಕ್ (European Qualifications Framework)ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ಕಲಿಕೆಯ ಫಲಿತಾಂಶಗಳತ್ತ ಬದಲಾವಣೆ ತರುವಂತೆ ಕರೆಯಿತ್ತಿತು . +ವಿದ್ಯಾರ್ಥಿಗಳು ತಮ್ಮ ಶಿಕ್ಷಣವನ್ನು ಮುಗಿಸಿದಾಗ ಅಗತ್ಯವಿರುವ ಕೌಶಲ್ಯಗಳನ್ನು ಕಲಿಯುವುದು ನಿರೀಕ್ಷಿಸಲ್ಪಟ್ಟಿತು . +ಅದು ಕೃತಿ -ಆಧಾರಿತ ಕಲಿಕೆಯ ಮೂಲಕ ಉದ್ಯೋಗಕ್ಕೆ ಬಲವಾಗಿ ಸಂಬಂಧವಿರುವ ಪಾಠಗಳನ್ನು ಹೊಂದುವಂತೆಯೂ ಕರೆ ಇತ್ತಿತು . +ವಿದ್ಯಾರ್ಥಿಗಳ ಕೃತಿ - ಆಧಾರಿತ ಕಲಿಕೆಯ ಈ ವಿದ್ಯಾರ್ಥಿಗಳಿಗೆ ವೃತ್ತಿಪರ ತರಬೇತಿಯ ಅಂಗೀಕಾರಕ್ಕೂ ಕೂಡ ಕಾರಣವಾಗಬೇಕು . +ಕಾರ್ಯಕ್ರಮವು ವಿದೇಶಿ ಭಾಷೆ ಕಲಿಕೆಗೆ ಗುರಿಗಳನ್ನು ಸಹಾ ಇರಿಸುವದಲ್ಲದೆ , ಶಿಕ್ಷಕರಿಗೆ ಮುಂದುವರೆದ ಶಿಕ್ಷಣವಾಗಿರುವುದು . +ಅದು ಕಲಿಕೆಯಲ್ಲಿ ತಂತ್ರಜ್ಞಾನ ಬಳಕೆಯ ಪ್ರಾಮುಖ್ಯತೆಯನ್ನು ,ವಿಶೇಷವಾಗಿ ಅಂತರ್ಜಾಲ ,ವಿದ್ಯಾರ್ಥಿಗಳಿಗೆ ಸಂಗತವಾಗಿಸಲು ಎತ್ತಿ ತೋರಿಸುವುದು. +ಪಾಕಿಸ್ತಾನವು ೨೦೧೦ ರಲ್ಲಿ ವಾಷಿಂಗ್ಟನ್ ಅಕಾರ್ಡಗೆ ಸಹಿಹಾಕುವ ಮೂಲಕ ತಾತ್ಕಾಲಿಕ ಸದಸ್ಯನಾಗಿದ್ದು , ವಿಶ್ವವಿದ್ಯಾನಿಲಯಗಳು ಫಲಿತಾಂಶದ ಆಧಾರಿತ ಶಿಕ್ಷಣವನ್ನು ಅಳವಡಿಸಿಕೊಳ್ಳುವತ್ತ ಕೆಲಸ ಮಾಡುತ್ತಿವೆ . +ಹಾಂಗ್‍ಕಾಂಗ್ ಯುನಿವರ್ಸಿಟಿ ಗ್ರಾಂಟ್ ಕಮಿಟಿ ( Hong Kong ’ s University Grants Committee)ಯು ೨೦೦೫ರಲ್ಲಿ ಫಲಿತಾಂಶದ ಆಧಾರಿತ ಶಿಕ್ಷಣ ವಿಧಾನದ ಬೋಧನೆ ಮತ್ತು ಕಲಿಕೆಯನ್ನು ಅಳವಡಿಸಿಕೊಂಡಿತು . +ಭಾರತವು ೧೩ ಜೂನ್ ೨೦೧೪ ರಂದು ವಾಷಿಂಗ್ಟನ್ ಅಕಾರ್ಡಗೆ ಸಹಿ ಹಾಕಿದ ಶಾಶ್ವತ ಸದಸ್ಯನಾಗಿದೆ. +ಭಾರತವು ತನ್ನ ಡಿಪ್ಲಮೋ ಮತ್ತು ಸ್ನಾತಕ ಪದವಿ ತಾಂತ್ರಿಕ ಶಿಕ್ಷಣದಲ್ಲಿ ಫಲಿತಾಂಶದ ಆಧಾರಿತ ಶಿಕ್ಷಣವನ್ನು ಅಳವಡಿಸಿಕೊಳ್ಳುತ್ತಲಿದೆ . +ಭಾರತದಲ್ಲಿ ತಾಂತ್ರಿಕ ಶಿಕ್ಷಣದಲ್ಲಿ ಅಂತರಾಷ್ರ್ಡೀಯ ಗುಣಮಟ್ಟಕ್ಕೆ ಮೇಲೇರಿಸಲು ಇರುವ ಸಂಸ್ಥೆಯಾದ ನ್ಯಾಶನಲ್ ಬೋರ್ಡ ಆಫ್ ಅಕ್ರಿಡಿಶನ್ (The National Board of Accreditation ) ೨೦೧೭ರಿಂದ ತಾಂತ್ರಿಕ ಶಿಕ್ಷಣದಲ್ಲಿ ಫಲಿತಾಂಶದ ಆಧಾರಿತ ಶಿಕ್ಷಣವನ್ನು ಅಳವಡಿಸಿಕೊಂಡಿರುವ ಡಿಪ್ಲಮೋ ಮತ್ತು ಸ್ನಾತಕ ಪದವಿಗಳನ್ನು ಮಾತ್ರ ಮಾನ್ಯಮಾಡುತ್ತಲಿದೆ.