diff --git "a/Data Collected/Kannada/MIT Manipal/\340\262\262\340\263\213\340\262\225\340\262\252\340\262\276\340\262\262_\340\262\256\340\262\270\340\263\202\340\262\246\340\263\206.txt" "b/Data Collected/Kannada/MIT Manipal/\340\262\262\340\263\213\340\262\225\340\262\252\340\262\276\340\262\262_\340\262\256\340\262\270\340\263\202\340\262\246\340\263\206.txt" new file mode 100644 index 0000000000000000000000000000000000000000..e63731d66045c74fc85151ecd226b794c1245b49 --- /dev/null +++ "b/Data Collected/Kannada/MIT Manipal/\340\262\262\340\263\213\340\262\225\340\262\252\340\262\276\340\262\262_\340\262\256\340\262\270\340\263\202\340\262\246\340\263\206.txt" @@ -0,0 +1,9 @@ +ಭಾರತದಲ್ಲಿ ಲೋಕಪಾಲ ಮಸೂದೆ ಭ್ರಷ್ಟಾಚಾರ ವಿರೋಧಿ ಕಾನೂನನ್ನು ಜಾರಿಗೊಳಿಸಲು ಲೋಕಪಾಲರನ್ನು ನೇಮಿಸುವ ಮಸೂದೆ . +ಈ ಲೋಕಪಾಲ ಸಂಸ್ಥೆಯು ಸರ್ಕಾರದ ಅನುಮತಿಯಿಲ್ಲದೆಯೇ ರಾಜಕಾರಣಿಗಳು ಮತ್ತು ಸರ್ಕಾರಿ ಅಧಿಕಾರಿಗಳನ್ನು ವಿಚಾರಣೆ ಹಾಗೂ ಶಿಕ್ಷೆಗೊಳಪಡಿಸುವ ಅಧಿಕಾರಗಳನ್ನು ಹೊಂದಿದ್ದು , ಚುನಾವಣಾ ಆಯೋಗದಂತೆಯೇ ಒಂದು ಸ್ವತಂತ್ರ ಸಂಸ್ಥೆಯಾಗಿರುತ್ತದೆ. +ಭ್ರಷ್ಟಾಚಾರ ವಿರೋಧಿ ಚಳವಳಿ - ಇಂಡಿಯಾ ಅಗೈನ್ಸ್ಟ್ ಕರಪ್ಷನ್ - ಐಏಸಿಯ ಮುಖಂಡರು ಮತ್ತು ನಾಗರಿಕ ಸಮಾಜದವರೊಂದಿಗೆ ಸಮಾಲೋಚಿಸಿ ಮಾಜಿ ಕಾನೂನು ಸಚಿವ ಹಾಗೂ ಹಿರಿಯ ವಕೀಲ ಶಾಂತಿ ಭೂಷಣ್ , ನಿವೃತ್ತ ಭಾರತೀಯ ಆರಕ್ಷಕ ಸೇವೆ ( ಐಪಿಎಸ್ ) ಅಧಿಕಾರಿ ಕಿರಣ್ ಬೇಡಿ , +ಕರ್ನಾಟಕದ ಲೋಕಾಯುಕ್ತ ನ್ಯಾಯಮೂರ್ತಿ ಎನ್ .ಸಂತೋಷ್ ಹೆಗ್ಡೆ , ಹಿರಿಯ ವಕೀಲ ಪ್ರಶಾಂತ್ ಭೂಷಣ್ , ಮಾಜಿ ಮುಖ್ಯ ಚುನಾವಣಾಧಿಕಾರಿ ಜೆ .ಎಂ .ಲಿಂಗ್ಡೋ ಅವರು ರಚಿಸಿರುವ ಈ ಮಸೂದೆಯ ಕರಡು , ರಾಷ್ಟ್ರ ಮಟ್ಟದಲ್ಲಿ ಲೋಕಪಾಲ ಮತ್ತು ರಾಜ್ಯ ಮಟ್ಟದಲ್ಲಿ ಲೋಕಾಯುಕ್ತರನ್ನು ನೇಮಿಸುವ ಪ್ರಸ್ತಾವನೆಯನ್ನು ಹೊಂದಿದೆ . +ಇದು ಭ್ರಷ್ಟಾಚಾರವನ್ನು ನಿಗ್ರಹಿಸುವ ಮತ್ತು ಮಾಹಿತಿದಾರರನ್ನು ಸೂಕ್ತವಾಗಿ ರಕ್ಷಿಸುವ ಸಲುವಾಗಿ ಭ್ರಷ್ಟಾಚಾರ ವಿರೋಧಿ ಮತ್ತು ಮತ್ತು ಅನ್ಯಾಯವನ್ನು ಸರಿಪಡಿಸುವ ವ್ಯವಸ್ಥೆಯನ್ನು ಜಾರಿಗೆ ತರಲು ರೂಪಿಸಲಾಗಿದೆ. +ಲೋಕಪಾಲ ಮಸೂದೆಯನ್ನು ಲೋಕಸಭೆಯಲ್ಲಿ ಮಂಡಿಸುವ ವಿಚಾರಮೊರಾರ್ಜಿ ದೇಸಾಯಿಕಾಲದಿಂದ ಮನಮೋಹನ್ ಸಿಂಗ್ ಕಾಲದವರೆಗೂ ಮುಂದುವರೆದಿದೆ. +೧೯೬೯ರಲ್ಲಿಯೇ ಮೊದಲ ಬಾರಿಗೆ ಲೋಕಪಾಲ ಮಸೂದೆಯನ್ನು ಲೋಕಸಭೆಯಲ್ಲಿ ಮಂಡಿಸಿ ಅಂಗೀಕರಿಸಲಾಗಿತ್ತಾದರೂ , ರಾಜ್ಯಸಭೆಯಲ್ಲಿ ಅದು ಒಪ್ಪಿಗೆ ಪಡೆಯಲಿಲ್ಲ . +ನಂತರ ೧೯೭೧ , ೧೯೭೭ , ೧೯೮೫ , ೧೯೮೯ , ೧೯೯೬ , ೧೯೯೮ , ೨೦೦೧ , ೨೦೦೫ ಮತ್ತು ೨೦೦೮ ರಲ್ಲಿ ಮತ್ತೆ ಮಂಡಿಸಲಾಗಿಯಿತಾದರೂ ಅದು ಅಂಗೀಕಾರವಾಗಿರಲಿಲ್ಲ . +ಅಣ್ಣಾ ಹಜಾರೆಯವರ ನಾಲ್ಕು ದಿನದ ಉಪವಾಸದ ನಂತರ ಪ್ರಧಾನಿ ಮನಮೋಹನ ಸಿಂಗ್‌ರವರು ೨೦೧೧ರ ಮುಂಗಾರು ಅಧಿವೇಶನದಲ್ಲಿ ಇದನ್ನು ಲೋಕಸಭೆಯಲ್ಲಿ ಮಂಡಿಸಲಾಗುವುದೆಂದು ಹೇಳಿದರು .