diff --git "a/Data Collected/Kannada/MIT Manipal/\340\262\255\340\262\276\340\262\260\340\262\244\340\263\200\340\262\257_\340\262\265\340\262\277\340\262\234\340\263\215\340\262\236\340\262\276\340\262\250_\340\262\266\340\262\277\340\262\225\340\263\215\340\262\267\340\262\243_\340\262\256\340\262\244\340\263\215\340\262\244\340\263\201_\340\262\270\340\262\202\340\262\266\340\263\213\340\262\247\340\262\250\340\262\276_\340\262\270\340\262\202\340\262\270\340\263\215\340\262\245\340\263\206__\340\262\254\340\263\215\340\262\260\340\262\271\340\263\215\340\262\256\340\262\276\340\262\252\340\263\201\340\262\260.txt" "b/Data Collected/Kannada/MIT Manipal/\340\262\255\340\262\276\340\262\260\340\262\244\340\263\200\340\262\257_\340\262\265\340\262\277\340\262\234\340\263\215\340\262\236\340\262\276\340\262\250_\340\262\266\340\262\277\340\262\225\340\263\215\340\262\267\340\262\243_\340\262\256\340\262\244\340\263\215\340\262\244\340\263\201_\340\262\270\340\262\202\340\262\266\340\263\213\340\262\247\340\262\250\340\262\276_\340\262\270\340\262\202\340\262\270\340\263\215\340\262\245\340\263\206__\340\262\254\340\263\215\340\262\260\340\262\271\340\263\215\340\262\256\340\262\276\340\262\252\340\263\201\340\262\260.txt" new file mode 100644 index 0000000000000000000000000000000000000000..a780baba8334db46cdf0f5ae1647f859c3709d4e --- /dev/null +++ "b/Data Collected/Kannada/MIT Manipal/\340\262\255\340\262\276\340\262\260\340\262\244\340\263\200\340\262\257_\340\262\265\340\262\277\340\262\234\340\263\215\340\262\236\340\262\276\340\262\250_\340\262\266\340\262\277\340\262\225\340\263\215\340\262\267\340\262\243_\340\262\256\340\262\244\340\263\215\340\262\244\340\263\201_\340\262\270\340\262\202\340\262\266\340\263\213\340\262\247\340\262\250\340\262\276_\340\262\270\340\262\202\340\262\270\340\263\215\340\262\245\340\263\206__\340\262\254\340\263\215\340\262\260\340\262\271\340\263\215\340\262\256\340\262\276\340\262\252\340\263\201\340\262\260.txt" @@ -0,0 +1,13 @@ +ಭಾರತೀಯ ವಿಜ್ಞಾನ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆ , ಬ್ರಹ್ಮಾಪುರ (ಐಐಎಸ್ಇಆರ್ ಬ್ರಹ್ಮಾಪುರ ) ಭಾರತದ ಒಡಿಶಾದ ಬ್ರಹ್ಮಾಪುರದಲ್ಲಿರುವ ಸಾರ್ವಜನಿಕ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಯಾಗಿದೆ . +ಉನ್ನತ ಪದವಿ ಮತ್ತು ಸ್ನಾತಕೋತ್ತರ ಹಂತದ ಶಿಕ್ಷಣದಲ್ಲಿ ವೈಜ್ಞಾನಿಕ ಕಲಿಕೆ ಮತ್ತು ಸಂಶೋಧನೆಯನ್ನು ಉತ್ತೇಜಿಸಲೂ , ಉನ್ನತ ಗುಣಮಟ್ಟದ ವಿಜ್ಞಾನಿಗಳು ಮತ್ತು ಶಿಕ್ಷಣ ತಜ್ಞರನ್ನು ರಚಿಸುವ ಸಲುವಾಗಿ ಇದನ್ನು ಭಾರತದ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯವು ಸ್ಥಾಪಿಸಿತು . +ಐಐಎಸ್ಇಆರ್ ಬ್ರಹ್ಮಾಪುರವನ್ನು ಭಾರತ ಸರ್ಕಾರವು ರಾಷ್ಟ್ರೀಯ ಪ್ರಾಮುಖ್ಯತೆಯ ಸಂಸ್ಥೆಯಾಗಿ ಗುರುತಿಸಿದೆ . +ಈ ಸಂಸ್ಥೆಯು ೨೦೧೬ –೧೭ರ ಶೈಕ್ಷಣಿಕ ಸಾಲಿನ ಆಗಸ್ಟ್ ತಿಂಗಳಿನಿಂದ ಕಾರ್ಯನಿರ್ವಹಿಸಲು ಪ್ರಾರಂಭಿಸಿತು . +ಇದು ಭಾರತದ ೭ ಐಐಎಸ್ಇಆರ್ಗಳಲ್ಲಿ ಒಂದಾಗಿದೆ . +ಮೂಲಭೂತ ವಿಜ್ಞಾನಕ್ಕೆ ಸಂಬಂಧಿಸಿದಂತೆ ಗುಣಮಟ್ಟದ ಶಿಕ್ಷಣ ಮತ್ತು ಸಂಶೋಧನೆಯನ್ನು ಉತ್ತೇಜಿಸಲು ರಾಷ್ಟ್ರೀಯ ಪ್ರಾಮುಖ್ಯತೆಯ ಸಂಸ್ಥೆಗಳ ವಿಭಾಗದಲ್ಲಿ ಭಾರತ ಸರ್ಕಾರದ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯವು ೨೦೦೬ರಲ್ಲಿ ಭಾರತೀಯ ವಿಜ್ಞಾನ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಗಳನ್ನು ( ಐಐಎಸ್ಇಆರ್ ) ರಚಿಸಿತು . +ಮೊದಲ ಎರಡು ಸಂಸ್ಥೆಗಳನ್ನು ೨೦೦೬ರಲ್ಲಿ ಪುಣೆ ಮತ್ತು ಕೋಲ್ಕತ್ತಾದಲ್ಲಿ ಪ್ರಾರಂಭಿಸಲಾಯಿತು . +ಇದರ ನಂತರ ಮೊಹಾಲಿ ( ೨೦೦೭ ),ಭೋಪಾಲ್ ಮತ್ತು ತಿರುವನಂತಪುರ ( ೨೦೦೮ ),ತಿರುಪತಿ (೨೦೧೫ ) ಮತ್ತು ಬ್ರಹ್ಮಾಪುರ (೨೦೧೬ ) ಸಂಸ್ಥೆಗಳನ್ನು ಪ್ರಾರಂಭಿಸಲಾಯಿತು . +ಪ್ರತಿ ಐಐಎಸ್ಇಆರ್ ವಿಜ್ಞಾನ ಶಿಕ್ಷಣ ಮತ್ತು ಸಂಶೋಧನೆಗಳನ್ನು ಸಂಯೋಜಿಸಲು ಮುಖ್ಯ ಗುರಿಯನ್ನು ಹೊಂದಿರುವ ಸ್ವಾಯತ್ತ ಸಂಸ್ಥೆಗಳಾಗಿವೆ. +ಐಐಎಸ್ಇಆರ್ ಬ್ರಹ್ಮಾಪುರವು ಸರ್ಕಾರಿ ಐಟಿಐ ಬ್ರಹ್ಮಾಪುರದ ಕ್ಯಾಂಪಸ್‌ನಲ್ಲಿ ತಾತ್ಕಾಲಿಕವಾಗಿ ಕಾರ್ಯನಿರ್ವಹಿಸುತ್ತಿದೆ . +ಬ್ರಹ್ಮಾಪುರ ಬಳಿಯ ಲಾಡಿಗ್ರಾಮ್‌ನಲ್ಲಿ ಶಾಶ್ವತ ಕ್ಯಾಂಪಸ್ ನಿರ್ಮಾಣ ಹಂತದಲ್ಲಿದೆ . +ಐಐಎಸ್ಇಆರ್ ಬ್ರಹ್ಮಾಪುರ ಆರಂಭದಲ್ಲಿ ಇಂಟಿಗ್ರೇಟೆಡ್ ಬಿಎಸ್ - ಎಂಎಸ್ ಪ್ರೋಗ್ರಾಂ ,ಇಂಟಿಗ್ರೇಟೆಡ್ ಪಿಎಚ್‌ಡಿ ಮತ್ತು ಪಿಎಚ್‌ಡಿ ನೀಡುತ್ತಿದೆ . +ಈ ಕಾರ್ಯಕ್ರಮಕ್ಕೆ ಪ್ರವೇಶವು ಜಂಟಿ ಪ್ರವೇಶ ಕಾರ್ಯಕ್ರಮದ ಮೂಲಕ ಇತರ ಐಐಎಸ್ಇಆರ್‌ಗಳೊಂದಿಗೆ ಸಮನ್ವಯದಲ್ಲಿದೆ.