From 2c930dd96dd219c6421474fb07dbdbb26a361003 Mon Sep 17 00:00:00 2001 From: Narendra VG Date: Mon, 17 Apr 2023 15:36:10 +0530 Subject: [PATCH] Upload New File --- ...6\340\262\227\340\262\263\340\263\201.txt" | 2445 +++++++++++++++++ 1 file changed, 2445 insertions(+) create mode 100644 "Data Collected/Kannada/MIT Manipal/Kannada-Scrapped-dta/\340\262\252\340\262\244\340\263\215\340\262\260\340\262\277\340\262\225\340\263\206\340\262\227\340\262\263\340\262\262\340\263\215\340\262\262\340\262\277-\340\262\254\340\262\202\340\262\246-\340\262\234\340\262\250\340\262\252\340\262\246-\340\262\225\340\262\245\340\263\206\340\262\227\340\262\263\340\263\201.txt" diff --git "a/Data Collected/Kannada/MIT Manipal/Kannada-Scrapped-dta/\340\262\252\340\262\244\340\263\215\340\262\260\340\262\277\340\262\225\340\263\206\340\262\227\340\262\263\340\262\262\340\263\215\340\262\262\340\262\277-\340\262\254\340\262\202\340\262\246-\340\262\234\340\262\250\340\262\252\340\262\246-\340\262\225\340\262\245\340\263\206\340\262\227\340\262\263\340\263\201.txt" "b/Data Collected/Kannada/MIT Manipal/Kannada-Scrapped-dta/\340\262\252\340\262\244\340\263\215\340\262\260\340\262\277\340\262\225\340\263\206\340\262\227\340\262\263\340\262\262\340\263\215\340\262\262\340\262\277-\340\262\254\340\262\202\340\262\246-\340\262\234\340\262\250\340\262\252\340\262\246-\340\262\225\340\262\245\340\263\206\340\262\227\340\262\263\340\263\201.txt" new file mode 100644 index 0000000..b7c2bac --- /dev/null +++ "b/Data Collected/Kannada/MIT Manipal/Kannada-Scrapped-dta/\340\262\252\340\262\244\340\263\215\340\262\260\340\262\277\340\262\225\340\263\206\340\262\227\340\262\263\340\262\262\340\263\215\340\262\262\340\262\277-\340\262\254\340\262\202\340\262\246-\340\262\234\340\262\250\340\262\252\340\262\246-\340\262\225\340\262\245\340\263\206\340\262\227\340\262\263\340\263\201.txt" @@ -0,0 +1,2445 @@ +ಸುಮಾರು ನಾಲ್ಕೂವರೆ ವರ್ಷಗಳ ಹಿಂದೆ ಶ್ರೀಮತಿ ರೇಣುಕಾ ರಾಮಕೃಷ್ಣ ಭಟ್‌ ಅವರು ನನಗೆ ಕರೆ ಮಾಡಿ, ತಮ್ಮ ಪರಿಚಯ ಮಾಡಿಕೊಂಡರು. +ನಾನು ಭಾರತವಾಣಿ ಬಹುಭಾಷಾ ಜ್ಞಾನಕೋಶ ಯೋಜನೆಯಲ್ಲಿ ಇರುವುದನ್ನು ತಿಳಿದುಕೊಂಡಿದ್ದ ಅವರು ತಮ್ಮ ತಂದೆ ದಿ.ಎಲ್‌ ಆರ್‌ಹೆಗಡೆಯವರ ಅಪ್ರಕಟಿತ ಜಾನಪದ ಸಂಗ್ರಹಗಳ ಹಸ್ತಪ್ರತಿಗಳನ್ನು ಗಮನಿಸಬಹುದೇ ಎಂದು ಕೇಳಿದರು. +ನಾನು ೧೯೯೦-೯೨ರ ಅವಧಿಯಲ್ಲಿ ಶಿರಸಿಯಲ್ಲಿದ್ದಾಗ ಒಂದೆರಡು ಸಲ ಶ್ರೀ ಎಲ್‌ ಆರ್‌ಹೆಗಡೆಯವರನ್ನು ಬಸ್‌ ನಿಲ್ದಾಣದಲ್ಲಿ ಕಂಡಿದ್ದೆ. +ಮಾತನಾಡಿಸಲು ಧೈರ್ಯ ಇರದವನಾಗಿದ್ದೆ. +ಈಗ ಅವರ ಅಪ್ರಕಟಿತ ಸಂಗ್ರಹವೇ ಇದೆ ಎಂದು ತಿಳಿದಾಗ ಕುತೂಹಲ ಹೆಚ್ಚಾಯಿತು. +ಶ್ರೀಮತಿ ರೇಣಕಾ ಭಟ್‌ ಅವರ ಮನೆಗೇ ಹೋದೆ. +ಅಲ್ಲಿರುವ ಅಪಾರ ಸಂಗ್ರಹವನ್ನು ನೋಡಿ ಅಚ್ಚರಿಯಾಯಿತು. +ಅದಾಗಲೇ ಶ್ರೀ ಎಲ್‌ ಆರ್‌ ಹೆಗಡೆಯವರು ೮೪ ಪುಸ್ತಕಗಳನ್ನು ಪ್ರಕಟಿಸಿದ್ದವರು. +ಆದರೂ ಇಷ್ಟೆಲ್ಲ ಉಳಿದುಕೊಂಡಿದ್ದವು! +ಈಗ ಅವುಗಳಲ್ಲಿ ಆಯ್ದ ಸಂಗ್ರಹಗಳನ್ನು ಒಂದು ಸರಣಿಯಾಗಿ, ಮುಕ್ತ ಮಾಹಿತಿಯಾಗಿ ಪ್ರಕಟಿಸಲಾಗಿದೆ. +ಇದನ್ನು ಕ್ರಿಯೇಟಿವ್‌ ಕಾಮನ್ಸ್‌ ಹಕ್ಕಿನಡಿಯಲ್ಲಿ ಪ್ರಕಟಿಸಿರುವುದರಿಂದ ಇವುಗಳ ಮುದ್ರಿತ ಪ್ರತಿಗಳನ್ನು ಯಾವುದೇ ಆಸಕ್ತರು ಯಾವ ಅನುಮತಿಯೂ ಇಲ್ಲದೆ, ಇದ್ದ ಹಾಗೆಯೇ ಮುದ್ರಿಸಬಹುದು! +ಆನ್‌ಲೈನ್‌ನಲ್ಲಿ ಕೇಂದ್ರ ಸರ್ಕಾರದ `ಭಾರತವಾಣಿ' ಯೋಜನೆ, ರಾಜ್ಯ ಸರ್ಕಾರದ `ಕಣಜ'ಯೋಜನೆಗೆ, ಇನ್ನಾವುದೇ ಮುಕ್ತ ಮಾಹಿತಿಯ ಜಾಲತಾಣಕ್ಕೆ ಉಚಿತವಾಗಿ ಈ ಪ್ರತಿಗಳನ್ನು ನೀಡಲಾಗುತ್ತಿದೆ. +ಜಾನಪದ ಸಾಹಿತ್ಯದ ಮೌಲ್ಯಮಾಪನ ಆಗುವ ಮಾತಿರಲಿ, ಇದ್ದುದನ್ನು ಹೇಗಾದರೂ ಮಾಡಿ ಉಳಿಸಿಕೊಳ್ಳುವ ಕಾಲ ಈಗ ಎದುರಾಗಿದೆ. +ಆಧುನಿಕತೆ, ನಗರೀಕರಣದ ಪ್ರಭಾವದಿಂದ ಭಾಷೆ - ಲಿಪಿ - ಪರಂಪರಾಗತ ಅರಿವು ಎಲ್ಲವೂ ಕಣ್ಮರೆಯಾಗುತ್ತಿವೆ. +ಇಂತಹ ಸಂದರ್ಭದಲ್ಲಿ ಸಿಕ್ಕಿದ್ದನ್ನು ಉಳಿಸಿಕೊಂಡು ಹೋಗುವ ತರಾತುರಿಯಲ್ಲಿ ಇದನ್ನು ಪ್ರಕಟಿಸಲಾಗಿದೆ ಎಂಬುದನ್ನು ಓದುಗರು ಗಮನಿಸಬೇಕಿದೆ. +ಈ ಪುಸ್ತಕದ ಅಕ್ಷರಜೋಡಣೆಗೆ ಸಹಕರಿಸಿದ, ಮುಖಪುಟ ರಚಿಸಿಕೊಟ್ಟ ಫೇಸ್‌ಬುಕ್‌ ಮಿತ್ರಲೋಕಕ್ಕೆ ಮಿತ್ರಮಾಧ್ಯಮದ ಅನಂತ ವಂದನೆಗಳು. +ಡಿಜಿಟಲ್‌ ಜನಪದವು ಪರಂಪರಾಗತ ಜನಪದವನ್ನು ಉಳಿಸಿಕೊಳ್ಳಲು ಮುಂದಾಗಿರುವುದು, ಅದರಲ್ಲೂ ಹಲವು ಯುವ ವಯಸ್ಕರೇ ಈ ಕೆಲಸ ಮಾಡಿರುವುದು ಕೊಂಚ ಸಮಾಧಾನದ ಸಂಗತಿ. +ಇಂತಹ ಜೀವನ್ಮುಖಿ ಯುವಸಮುದಾಯ ವಿಸ್ತಾರವಾಗಲಿ ಎಂದು ಹಾರೈಸುತ್ತೇವೆ. +ಮುಕ್ತಮಾಹಿತಿಗೆ ಪುಟ್ಟ ಹೆಜ್ಜೆ ಇಡುವ ಮಿತ್ರ ಮಾಧ್ಯಮದ ಘೋಷವಾಕ್ಯವನ್ನು ಬೆಂಬಲಿಸುವ ಎಲ್ಲರಿಗೂ ವಂದನೆಗಳು. +ನಮ್ಮ ಪೂಜ್ಯ ತಂದೆಯವರಾದ ಡಾ||ಎಲ್‌.ಆರ್‌.ಹೆಗಡೆಯವರು ಕನ್ನಡ ಜಾನಪದ ಸಾರಸ್ವತ ಲೋಕದಲ್ಲಿ ಚಿರಪರಿಚಿತರು. + ಅವರು ತಮ್ಮ ಪೂರ್ತಿ ಜೀವನವನ್ನು ಉತ್ತರ ಕನ್ನಡದ ನಶಿಸಿಹೋಗುತ್ತಿರುವ ಜಾನಪದ ಸಂಪತ್ತನ್ನು ಸಂಗ್ರಹಿ, ಉಳಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು. +ಯಕ್ಷಗಾನ ಅಕಾಡೆಮಿಯವರು ಪ್ರಕಟಿಸಿದ,ತಮ್ಮ ಕೊನೆಯ ದಿನಗಳಲ್ಲಿ ಅವರೇ ಬರೆದ- 'ಕ್ಷೇತ್ರದಲ್ಲಿ ಕಾರ್ಯದ ನೆನಪುಗಳು'ಗ್ರಂಥವನ್ನು ಓದಿದರೆ ಜಾನಪದ ಕ್ಷೇತ್ರದಲ್ಲಿ ಅವರ ಅಪೂರ್ವ ಸಾಧನೆಯ, ಪಟ್ಟ ಕಷ್ಟಗಳ ಪರಿಚಯವಾಗುತ್ತದೆ. +ಅವರಿರುವಾಗ ಪ್ರಕಟವಾದ ಪುಸ್ತಕಗಳು ಹಾಗೂ ಅವರೇ ಬರೆದ ಪಾಂಡಿತ್ಯಪೂರ್ಣ ಪೀಠಿಕೆಗಳು, ಮುನ್ನುಡಿಗಳು ಜಾನಪದ ಕ್ಷೇತ್ರದಲ್ಲಿ ಅವರ ಅಳವಾದ ಅಧ್ಯಯನವನ್ನು ಎತ್ತಿ ತೋರಿಸುತ್ತವೆ. +ತುಲನಾತ್ಮಕ ವಿಶ್ಲೇಷಣೆಗಳು ನಿಜವಾಗಿಯೂ ಶ್ಲಾಘನೀಯ. +ಉತ್ತರ ಕನ್ನಡದ ಬುಡಕಟ್ಟು ಜನಾಂಗಗಳ ಕುರಿತ ಅಧ್ಯಯನಗಳು ಅನನ್ಯವಾಗಿದೆ. +ಸಂಶೋಧನಾ ಪ್ರಬಂಧಗಳು, ಭಾಷಣಗಳು, ಜಾನಪದ ಲೇಖನಗಳು ಉಲ್ಲೇಖನೀಯ. +ಜಾನಪದ ಅಧ್ಯಯನದ ಜೊತೆಗೆ ಹೋಮಿಯೋಪಥಿ, ಆಯುರ್ವೇದ, ಹಳ್ಳಿಯ ಚಿಕಿತ್ಸಾ ಪದ್ಧತಿಗಳಲ್ಲಿಯೂ ಕೂಡ ಅಪಾರ ಜ್ಞಾನ ಮತ್ತು ಅನುಭವಗಳನ್ನು ಪಡೆದುಕೊಂಡಿದ್ದರು. +ಸಾವಿರಾರು ರೋಗಿಗಳು ಇದರ ಲಾಭವನ್ನು ಪಡೆದುಕೊಂಡಿದ್ದಾರೆ. +ಉಚಿತವಾಗಿ ಔಷಧಿಗಳನ್ನು ಕೊಡುತ್ತಿದ್ದರು. +ಕೆಲಸ ಮಾಡುವ ವೈಖರಿಯನ್ನು ನೋಡಿದಾಗ ಇಂಗ್ಲೀಷಿನ"One man army" ನೆನಪಾಗುತ್ತದೆ. +ನಾವು ನಾಲ್ಕು ಮಕ್ಕಳು ರೇಣುಕಾ, ರಾಮಕೃಷ್ಣ, ಸುನಂದಾ ಹಾಗು ಸವಿತಾ. +ನಾವು ಚಿಕ್ಕವರಿರುವಾಗ, “ಯಾಕಪ್ಪಾ ಈ ಹಳ್ಳಿಗರ ಹಾಡು, ಕಥೆ, ಸಾಹಿತ್ಯಗಳನ್ನಾದರೂ ಸಂಗ್ರಹಿಸುತ್ತಾರೋ” ಏನೂ ಪ್ರಯೋಜನವಿಲ್ಲದ ಉಪಯೋಗವಿಲ್ಲದ ಕೆಲಸವೆಂದೂ,ವೇಳೆ ಹರಣವೆಂದೂ ಅನ್ನಿಸುತ್ತಿತ್ತು. +ಆದರೆ, ಈಗ ಕಷ್ಟಪಟ್ಟು ಸಂಗ್ರಹಿಸಿದ್ದರಲ್ಲಿ ಕೆಲವನ್ನಾದರೂ ಉಳಿಸಬೇಕೆಂಬ ಹಂಬಲದಿಂದ ಕೆಲಸ ಮಾಡತೊಡಗಿದಾಗ ಇದೆಷ್ಟು ಕಷ್ಟತರವಾದ, ಕ್ಲಿಷ್ಟವಾದ ಕೆಲಸವೆಂದು ತಿಳಿಯಹತ್ತಿದೆ. +Absent minded professor ಆದರೂ ಜಾನಪದ ವಿಷಯಗಳನ್ನು ಸಂಗ್ರಹಿಸುವಾಗ ಹೇಳಿದವರ ಹೆಸರು, ಬರೆಸಿಕೊಂಡ ದಿನಾಂಕ, ವಿವಿಧ ವಿಷಯಗಳ ವಿಂಗಡಣೆ, ಸಂಸ್ಕರಣೆಗಳನ್ನು ಅಚ್ಚುಕಟ್ಟಾಗಿ ಮಾಡಿದ್ದಾರೆ,ಅಂದಿನ ದಿನಗಳಲ್ಲಿ ಅಷ್ಟೊಂದು ಶ್ರಮ ವಹಿಸದಿದ್ದರೆ, ಸಂಗ್ರಹಿಸದೆ ಇದ್ದುದ್ದೆಲ್ಲವೂ ನಶಿಸಿಹೋಗುತ್ತಿದ್ದವೆಂಬ ಅನುಭವವಾಗುತ್ತದೆ. +ತಂದೆಯವರ ದೂರದೃಷ್ಟಿ ಮೆಚ್ಚುವಂಥದ್ದು. +ಬಹುಶಃ ನಿರೂಪಕರಾರೂ ಈಗಿಲ್ಲ. +ಅವರ ಸಂಗ್ರಹಗಳೂ ಅವರ ಜೊತೆಯೇ ಆಧುನಿಕತೆಯ ಜೀವನಶೈಲಿಯಲ್ಲಿ ಅಡಗಿಹೋಗಿದೆ. +ಈಗಿನ ತಲೆಮಾರಿನವರ ಹತ್ತಿರ ಸ್ವಲ್ಪವೂ ಸಿಗುವ ಆಸೆಯಿಲ್ಲ. +ಮಾಡಿದ ಸಂಗ್ರಹವನ್ನು ಅವಲೋಕಿಸಿದಾಗ ಜನಪದರ ಮುಗ್ಧ ಮನಸ್ಸು, ಸ್ವಚ್ಛಂದ ವಾತಾವರಣ, ಆಗಿನ ಸಾಮಾಜಿಕ ರೀತಿ-ನೀತಿಗಳ ಕಲ್ಪನೆ,ಜೀವನದ ಸರಳತೆ, ಸರಳ-ಸುಲಭ ಚಿಕಿತ್ಸಾ ಪದ್ಧತಿ ಎಲ್ಲ ತಿಳಿಯ ಹತ್ತಿದೆ. +ತಂದೆಯವರೇ ಹೇಳಿಕೊಂಡಂತೆ ಅವರಿಗೆ ಹಳ್ಳಿಯ ಹಾಡುಗಳನ್ನು ಕಲಿತು, ಹೇಳುವ ಹವ್ಯಾಸ ಚಿಕ್ಕಂದಿನಿಂದೇ ಇತ್ತು. +ಧ್ವನಿ ಬಹಳ ಮಧುರವಾಗಿತ್ತು; +ಸುಶ್ರಾವ್ಯವಾಗಿ ಹೇಳುತ್ತಿದ್ದರು. +ಹವ್ಯಕ ಹೆಂಗಸರಲ್ಲಿ ಹಬ್ಬ-ಹರಿದಿನಗಳಲ್ಲಿ, ಮದುವೆ,ಮುಂಜಿಗಳಲ್ಲಿ,ಮುಂಜಾನೆ, ಸಂಜೆ ಕೆಲಸ ಮಾಡುವಾಗ ಹಾಡುಗಳನ್ನು ಹೇಳುವ ಪರಿಪಾಠವಿತ್ತು. +ಹೀಗಾಗಿ ಅರಿವಿಲ್ಲದಂತೆ ಜಾನಪದದತ್ತ ವಾಲಿದ್ದರು. +ಮೊದಮೊದಲು ಸಮಯದ ಅಭಾವದಿಂದ, ಹೋಮಿಯೋಪಥಿ ಔಷಧಗಳ ಅಭ್ಯಾಸ, ದಿನಾಲೂ ಬರುವ ರೋಗಿಗಳ ಉಪಚಾರ, ಕಾಲೇಜಿನ ಕೆಲಸಗಳ ಮೂಲಕ ಹೆಚ್ಚು ಸಮಯ ಸಿಗುತ್ತಿರಲಿಲ್ಲ. +ಕೆನರಾ ಕಾಲೇಜಿಂದ ಅಧ್ಯಾಪಕ ಕೆಲಸದಿಂದ ನಿವೃತ್ತಿಯ ನಂತರ ಉಳಿದ ಪೂರ್ತಿ ಆಯುಷ್ಯವನ್ನು ಜಾನಪದಕ್ಕಾಗಿಯೇ, ಆದರ ಸಂಗ್ರಹ, ಉಳಿಸುವ ಕೆಲಸಕ್ಕೇ ಮೀಸಲಿಟ್ಟಿದ್ದರು. +ಉತ್ತರಕನ್ನಡದ ಬಹುತೇಕ ಎಲ್ಲ ಹಳ್ಳಿಗಳನ್ನು ತಿರುಗಿ ಸಾಕಷ್ಟು ವೈವಿಧ್ಯ ಪೂರ್ಣ ಜಾನಪದ ಸಾಹಿತ್ಯವನ್ನು ಸಂಗ್ರಹಿಸಿದ್ದರು. +ಸಾಧ್ಯವಾದಷ್ಟು ಪ್ರಕಟಣೆ ಕಂಡಿವೆ. +ಈ ಕ್ಷೇತ್ರದಲ್ಲಿ ಅವರ ಏಳ್ಗೆಯನ್ನು ಕಂಡು ಪ್ರಕಟಣೆಗಳಿಗೆ ತೊಡಕನ್ನು ತಂದು ಒಡ್ಡುವವರೂ ಇದ್ದರು. +ಗಮನಕ್ಕೆ ಬಂದರೂ ಅಷ್ಟಾಗಿ ಹಚ್ಚಿಕೊಳ್ಳದೆ ತಮ್ಮ ಕೈಯಿಂದ ಖರ್ಚುಮಾಡಿ ಹಲವಾರು ಪುಸ್ತಕಗಳನ್ನು ಪ್ರಕಟಿಸಿದ್ದರು. +ಜಾನಪದ ವೈದ್ಯಕೀಯದಲ್ಲಿ, ಅಂದರೆ-ಹಳ್ಳಿಯ ಚಿಕಿತ್ಸಾ ಪದ್ಧತಿಗಳನ್ನು ಅವರಷ್ಟು ಸಂಗ್ರಹಿಸಿ ಪ್ರಕಟಿಸಿದವರು ವಿರಳವೆಂದೇ ನನ್ನ ಭಾವನೆ. +ಆದರೆ, ಕೊನೆಗಾಲದಲ್ಲಿ ಪರಿಷ್ಕರಿಸಿ, ವಿಂಗಡಿಸಿ, ನಾವಿಬ್ಬರೂ ಕೂಡಿ ತಯಾರಿಸಿದ ಹಸ್ತಪ್ರತಿಗಳು- ಸುಮಾರು ಮೂವತ್ತೆದು ಹಸ್ತಪ್ರತಿಗಳು. +ನಮಗಾರಿಗೂ ಅರಿವಿಲ್ಲದಂತೆ ಅವೆಲ್ಲವೂ ಯಾರದೋ ಕೈ ಸೇರಿದೆ; +ಅವೆಲ್ಲ ಅತ್ಯಮೂಲ್ಯವಾಗಿದ್ದವು. +ಎಷ್ಟು ಪ್ರಯತ್ನಿಸಿದರೂ ಲಭ್ಯವಾಗಲಿಲ್ಲ. +ಆದರೆ, ಒಂದು ಮಾತು- ಪರಿಷ್ಕರಿಸಿ,ವಿಂಗಡಿಸುವ ಮೊದಲು ಅವುಗಳ ಎರಡು-ಮೂರು ಮೂಲ ಪ್ರತಿಗಳು ಇರುತ್ತಿದ್ದವು. +ಸಂಗ್ರಹಗಳನ್ನು ನಮ್ಮ ಮನೆಗೆ ತಂದು, ಆ ಮೂಲ ಪ್ರತಿಗಳಿಂದ ಸುಮಾರು ೨೪-೨೫ಹಸ್ತಪ್ರತಿಗಳನ್ನು ತಯಾರಿಸಿ ಅದನ್ನು ಇ-ಪ್ರಕಟಣೆಯ ಮೂಲಕ ಜಾನಪದ ಪ್ರೇಮಿಗಳಿಗೆ ತಲುಪಿಸುವ ಪ್ರಯತ್ನ ಮಾಡಲಾಗಿದೆ. +ನಾವಂತೂ ಈ ಕೆಲಸದ ಆಶೆಯನ್ನೇ ಬಿಟ್ಟಿದ್ದೆವು. +ಅನೇಕ ಜಾನಪದ ಕ್ಷೇತ್ರದಲ್ಲಿದ್ದವರ ಸಂಪರ್ಕ ಮಾಡುವ ಪ್ರಯತ್ನ ಮಾಡಿದರೂ ಏನೂ ಪ್ರಯೋಜನವಾಗಲಿಲ್ಲ. +ಎಲ್ಲರೂ ಹೆಗಡೆಯವರ ಬಗ್ಗೆ ಗೌರವದ ಮಾತನಾಡುವವರೇ ಹೊರತು ಸಹಾಯಕ್ಕೆ ಅಥವಾ ಮಾರ್ಗದರ್ಶನಕ್ಕೆ ಯಾರೂ ಮುಂದೆ ಬರಲಿಲ್ಲ. +ಕೊನೆಯಲ್ಲಿ ಶ್ರೀಯುತ ನಂದಕುಮಾರರ ಪರಿಚಯವಾಗಿ ಅವರು ಶ್ರೀಯುತ ಬೇಳೂರು ಸುದರ್ಶನರ ಬಗ್ಗೆ ಹೇಳಿದರು. +ನಾನು ನಿರಾಸೆಯಿಂದಲೇ ಕೊನೆಯ ಪ್ರಯತ್ನವೆಂದು ಅವರಿಗೆ ಫೋನ್‌ ಮಾಡಿದೆ. +ಅವರು ಸಹಾಯ ಹಾಗೂ ಮಾರ್ಗದರ್ಶನ ಮಾಡಲು ಮುಂದೆ ಬಂದರು. +ಇಂದು ಅವರ ಜೊತೆಯಲ್ಲಿ ಅವರ ಅನೇಕ ಸ್ನೇಹಿತರೂ ಕೈ ಜೋಡಿಸಿದ್ದಾರೆ. +ತಂದೆಯವರೇ ಹೇಳಿಕೊಂಡಂತೆ ೧೫ ಸಾವಿರ ಪುಟಗಳ ಸಂಗ್ರಹದಲ್ಲಿದ್ದ ಸ್ವಲ್ಪ ಭಾಗವನ್ನು ಉಳಿಸುವ ಪ್ರಯತ್ನ ಸಾಗಿದೆ. +ಇಷ್ಟುಉಳಿದರೂ ನಮ್ಮೆಲ್ಲರ ಪ್ರಯತ್ನ ಸಾರ್ಥಕವಾಯಿತೆಂದು ತಿಳಿಯುತ್ತೇನೆ. +ಈ ನಿಟ್ಟಿನಲ್ಲಿ ಸಹಾಯ ಮಾಡಿದ (ಪ್ರತ್ಯಕ್ಷವಾಗಿ, ಅಪ್ರತ್ಯಕ್ಷವಾಗಿ) ಎಲ್ಲರಿಗೂ ನಾವು ಚಿರಖುಣಿಗಳು. +೧.ಅರ್ಧ ರೊಟ್ಟಿ ಪುಣ್ಯ. +ಓಂದು ಊರಿನಲ್ಲಿ ದೊಡ್ಡ ಪಟ್ಟಣಶೆಟ್ಟಿ ವ್ಯಾಪಾರ ಮಾಡುತ್ತಿದ್ದ. +ಯಾರು ಪುಣ್ಯ ಮಾಡಿದ್ದರೂ ಅದನ್ನು ಕ್ರಯಕ್ಕೆ ತಕ್ಕೊಳ್ಳುತ್ತಿದ್ದ. +ಆ ಊರಿನ ಸಮೀಪದ ಊರಿನಲ್ಲಿ ಬಹಳ ಬಡವರಾದ ಗಂಡ-ಹೆಂಡರಿದ್ದರು. +ಈ ಪಟ್ಟಣಶೆಟ್ಟಿ ಪುಣ್ಯವನ್ನು ಕ್ರಯಕ್ಕೆ ತೆಗೆದುಕೊಳ್ಳುವ ಸುದ್ದಿ ತಿಳಿದಿದ್ದ ಆ ಬಡವನ ಹೆಂಡತಿಯು ಒಂದು ದಿನ ಗಂಡನ ಹತ್ತಿರ, “ನೀವು ಮಾಡಿದ ಪುಣ್ಯ ಏನಾದರೂ ಇದ್ದರೆ ಅದನ್ನು ಕ್ರಯಕ್ಕೆ ಕೊಟ್ಟು, ದುಡ್ಡು ತಕ್ಕೊಂಡು ಬಂದಿದ್ದರೆ ನಮ್ಮ ಜೀವನಕ್ಕೆ ಏನಾದರೂ ಉಪಕಾರವಾಗುತ್ತಿತ್ತು” ಅಂದಳು. +ಆಗ ಆ ಬಡವನು, “ನಾನು ಇವತ್ತಿನವರೆಗೆ ಏನೇನೂ ಪುಣ್ಯ ಮಾಡಿದವನಲ್ಲ,ಪುಣ್ಯವೆಂದರೆ ಏನೆಂದು ನನಗೆ ಗೊತ್ತೇ ಇಲ್ಲ” ಎಂದು ಹೆಂಡತಿಗೆ ಹೇಳಿದ. +ಹೆಂಡತಿಯ ಒತ್ತಾಯದಿಂದ, “ಏನಾದರೂ ಪುಣ್ಯ ಇದ್ದರೂ ಇರಬಹುದು,ಅದನ್ನೇ ಮಾರಿ ಬನ್ನಿ” ಎಂದು ಹೇಳಿ ಗಂಡನನ್ನು ಕಳುಹಿಸಿದಳು. +ಅವನಿಗೆ ದಾರಿಯಲ್ಲಿ ತಿನ್ನುವುದಕ್ಕಾಗಿ ಒಂದು ರೊಟ್ಟಿಯನ್ನು ಕೊಟ್ಟು ಕಳುಹಿಸಿದಳು. +ಅವನು ಆ ಪಟ್ಟಣಶೆಟ್ಟಿಯ ಊರ ಸಮೀಪಕ್ಕೆ ಹೋಗುತ್ತಿರುವಾಗ ಒಂದು ಹಳ್ಳ ಸಿಕ್ಕಿತು, "ಇಲ್ಲೇ ಈ ರೊಟ್ಟಿಯನ್ನು ತಿಂದು, ನೀರು ಕುಡಿದು ಹೋಗುವಾ” ಎಂದು ರೊಟ್ಟಿಯನ್ನು ತೆಗೆಯುವಷ್ಟರಲ್ಲಿ ಒಬ್ಬ ಬಡವ ಹಸಿವಿನಿಂದ ಕಂಗಲಾಗಿ ಅಲ್ಲಿಗೆ ಬಂದು,ಅವನ ಹತ್ತಿರ, “ನನಗೆ ತುಂಬಾ ಹಸಿವೆ, ಏನಾದರೂ ಕೊಡು” ಎಂದು ಬೇಡಿದ. +ಆಗ ಬಡವನು ತನ್ನಲ್ಲಿದ್ದ ರೊಟ್ಟಿಯಲ್ಲಿ ಅರ್ಧ ಭಾಗವನ್ನು ಅವನಿಗೆ ಕೊಟ್ಟು, ಉಳಿದ ಅರ್ಧವನ್ನು ತಾನು ತಿಂದ. +ಆಮೇಲೆ ಆ ಪಟ್ಟಣಶೆಟ್ಟಿಯ ಮನೆಗೆ ಬಂದ. +ದಾರಿಯುದ್ದಕ್ಕೂ ತಾನು ಏನು ಪುಣ್ಯ ಮಾಡಿದೆ?ಎಂದು ನೆನಪು ಮಾಡುತ್ತಾ ಬಂದ. +ಶೆಟ್ಟಿಯ ಮನೆಯಲ್ಲಿರುವಲ್ಲಿಗೆ ಬಂದರೂ ತಾನು ಮಾಡಿದ ಪುಣ್ಯ ಯಾವುದೂ ಅವನಿಗೆ ನೆನಪಿಗೆ ಬರಲಿಲ್ಲ. +ಆದ್ದರಿಂದ ಅವನು ಸುಮ್ಮನೆ ನಿಂತುಕೊಂಡಿದ್ದ. +ಆ ಪಟ್ಟಣಶೆಟ್ಟಿಯು,“ಏನು?ನಿನ್ನ ಪುಣ್ಯವನ್ನು ಕ್ರಯಕ್ಕೆ ಕೊಡಲಿಕ್ಕೆ ಬಂದಿದ್ದೀಯ?” ಎಂದು ಕೇಳಿದ. +ಅದಕ್ಕೆ ಬಡವನು, "ನಾನು ಏನು ಪುಣ್ಯ ಮಾಡಿದ್ದೇನೆಂದು ನೆನಪು ಮಾಡಿಕೊಂಡರೂ ನೆನಪೇ ಬರುವುದಿಲ್ಲ, ಪುಣ್ಯವೆಂದರೆ ಏನೆಂಬುದು ಗೊತ್ತಿಲ್ಲ” ಅಂದ. +ಆಗ ಶೆಟ್ಟಿಯು, "ನೀನು ಅನ್ನದಾನ, ವಸ್ತ್ರದಾನ ಇತ್ಯಾದಿ ಯಾವುದಾದರೂ ಒಂದು ದಾನವನ್ನು ಮಾಡಿದ್ದಿಲ್ಲವೋ?"ಎಂದು ಕೇಳಿದ. +ಅದಕ್ಕೆ ಬಡವ, "ಯಾವ ದಾನವನ್ನೂ ನಾನು ಮಾಡಿದ್ದು ಗೊತ್ತಿಲ್ಲ, ದಾರಿಯಲ್ಲಿ ಬರುವಾಗ ಒಬ್ಬನಿಗೆ ಅರ್ಧ ರೊಟ್ಟಿಯನ್ನು ಮಾತ್ರ ಕೊಟ್ಟಿದ್ದೇನೆ” ಎಂದು ಹೇಳಿದ. +ಆಗ, "ಅದೇ ರೀತಿ ಬರೆದು, ಈ ತಕ್ಕಡಿಯಲ್ಲಿ ಇಡು" ಎಂದು ಪಟ್ಟಣಶೆಟ್ಟಿ ಹೇಳಿದ. +ಆ ಶ್ರೀಮಂತ ಪಟ್ಟಣಶೆಟ್ಟಿಯ ಮನೆಯಲ್ಲಿದ್ದ ಎಲ್ಲಾ ದ್ರವ್ಯ ತಂದು ಆ ತಕ್ಕಡಿಯಲ್ಲಿ ಹಾಕಿದರೂ ತೂಕ ಬರಲಿಲ್ಲ. +ಇನ್ನೂ ದ್ರವ್ಯ ಹಾಕುವಾ ಅಂತ ಅವನಿಗೆ ಮನಸ್ಸಿನಲ್ಲಿ ಇದ್ದರೂ ದ್ರವ್ಯ ಅವನ ಮನೆಯಲ್ಲಿ ಇರಲಿಲ್ಲ. +ಲಕ್ಷಾಂತರ ರೂಪಾಯಿ ಇದ್ದರೂ ಆ ಪುಣ್ಯದ ತೂಕಕ್ಕೆ ಬರಲಿಲ್ಲ. +ಆದ್ದರಿಂದ, "ಇನ್ನು ಹೆಚ್ಚಿಗೆ ದ್ರವ್ಯ ಇಲ್ಲ, ಇಷ್ಟಕ್ಕೇ ಇದನ್ನು ಕೊಟ್ಟುಹೋಗು” ಎಂದು ಶೆಟ್ಟಿ ಹೇಳಿದ. +ಇದನ್ನು ನೋಡಿದ ಆ ಬಡವನು ಇದರಲ್ಲಿ ಏನೋ ಮಹತ್ವವಿದೆ ಎಂದು ತಿಳಿದು, ಆ ಪುಣ್ಯವನ್ನು ಕೊಡದೆ ಹಣವನ್ನು ಬಿಟ್ಟು ಮನೆಗೆ ಬಂದ. +ಮನೆಗೆ ಬರುವ ದಾರಿಯಲ್ಲಿ ತನ್ನ ಹೆಂಡತಿಗೆ ಏನಾದರೂ ಮಾಡಿ ಮನಸ್ಸಂತೋಷಪಡಿಸಬೇಕೆಂತ ತನ್ನ ವಸ್ತ್ರದಲ್ಲಿ ದೊಡ್ಡ ದೊಡ್ಡ ಮೂರು ಕಲ್ಲುಗುಂಡುಗಳನ್ನು ಕಟ್ಟಿದ. +ಅದನ್ನು ಹೊತ್ತುಕೊಂಡು ಮನೆಗೆ ಹೋಗಿ ತನ್ನ ಹೆಂಡತಿಯ ಎದುರಿಗೆ ಇಳಿಸಿದ. +ಆಗ ಹೆಂಡತಿಯು ಬಹಳಷ್ಟು ದ್ರವ್ಯವನ್ನು ತಂದಿದ್ದಾರೆ ಎಂದು ಸಂತೋಷಪಟ್ಟು ತನ್ನ ಗಂಡನಿಗೆ ಬೇಗ ಊಟಕ್ಕೆ ಬಡಿಸಿದಳು. +ಊಟಕ್ಕೆ ಬಡಿಸಿ, ಹೊರಗೆ ಬಂದು ಆತುರದಿಂದ ಗಂಟನ್ನು ಬಿಚ್ಚಿ ನೋಡಿದಳು. +ಮೂರು ಕಲ್ಲು ಗುಂಡುಗಳೂ ಬಂಗಾರವಾಗಿದ್ದವು. +ಆಗ ಗಂಡನನ್ನು ಕರೆದು ಹೇಳಿದಳು. +ಗಂಡನು ಬಂದು ನೋಡಿ, "ಅರ್ಧ ರೊಟ್ಟಿಯ ಪುಣ್ಯದ ಮಹತ್ವದಿಂದ ಕಲ್ಲುಗಳು ಬಂಗಾರವಾಗಿವೆ" ಎಂದು ತಿಳಿದ. +ಅದನ್ನು ಮಾರಾಟ ಮಾಡಿ ಶ್ರೀಮಂತನಾದ. +೨.ಅಲ್ಪದರಲ್ಲಿ ಗರ್ವ. +ಒಬ್ಬ ಬಡವಿ ಇದ್ದಳು. +ಅವಳಿಗೆ ಒಬ್ಬ ಮಗ, ಆತ ಒಬ್ಬರ ಮನೆಯಲ್ಲಿ ಸಂಬಳಕ್ಕೆ ಇದ್ದು ದುಡಿದನು. +ಆ ದುಡ್ಡಿನಲ್ಲಿ ಅವನು ಚಿನ್ನದ ಉಂಗುರ ಮಾಡಿಸಿದನು. +ಆ ಉಂಗುರವನ್ನು ಬಟ್ಟಿನಲ್ಲಿ ಇಟ್ಟನು. +ಅವನು ಒಂದು ಪೇಟೆಗೆ ಸಂತೆ ವ್ಯಾಪಾರ ಮಾಡಲು ಹೋದನು. +ಅಂಗಡಿ-ಅಂಗಡಿ ತಿರುಗಿದನು, ಹಣ ವೆಚ್ಚ ಮಾಡುತ್ತಿರಲಿಲ್ಲ, ಹೆಮ್ಮೆಯಿಂದ ಉಂಗುರ ತೋರಿಸುತ್ತಾ ಹೋಗುತ್ತಿದ್ದನು. +ಅದನ್ನು ಒಬ್ಬ ಎಲೆಯಗಾರನು ನೋಡಿದನು, ಅವನಿದ್ದಲ್ಲಿ ಬಂದು, “ಹ್ಯಾಗೆ ಎಲೆ?”ಅಂತ ಉಂಗುರದ ಕೈ ತಿರುಗಿಸುತ್ತಾ ಕೇಳಿದನು. +ಎಲೆ ಹ್ಯಾಗೆಂದು ಕೇಳಿ ಉಂಗುರತೋರಿದಾಗ, “ನಾಲ್ಕಾಣೆಗೆ ನೂರು" ಎಂದು ಎಲೆಯಗಾರನು ಹೇಳುವಾಗ, ಹಲ್ಲು ತೆರೆದುತೋರಿದನು- ಅವನು ಹೆಚ್ಚು ಚಿನ್ನವನ್ನು ಹಲ್ಲುಗಳ ಜಾಗದಲ್ಲಿ ಹಾಕಿಸಿದ್ದನು. +ಪಕ್ಕದಲ್ಲಿದ್ದ ಒಬ್ಬ ಅಡಿಕೆಯಗಾರನು ಬಂದನು. +ಅಡಿಕೆಯಗಾರ ಈ ಇಬ್ಬರಿಗಿಂತ ಹೆಚ್ಚು (ಇಬ್ಬರು ಧರಿಸಿದ್ದಕ್ಕಿಂತ ಹೆಚ್ಚು) ಕಿವಿಗಳಲ್ಲಿ ಧರಿಸಿದ್ದನು. +ಎಲೆಯಗಾರನು ಬಡವಿಯ ಹುಡುಗನು ಉಂಗುರ ತೋರುತ್ತಾ ಇದ್ದಾಗ, “ನಿನ್ನ ಚಿನ್ನ ಯಾರು ಕೇಳಬೇಕು? +ನಾನು ಹಲ್ಲಿನಲ್ಲಿ ಧರಿಸಿರುವ ಚಿನ್ನ ನೋಡು” ಎಂದನು. +ಅಡಿಕೆಗಾರನು, “ನಿಮ್ಮಿಬ್ಬರಿಗಿಂತ ಹೆಚ್ಚು ಚಿನ್ನವನ್ನು ನಾನು ಕಿವಿಗಳಲ್ಲಿ ಧರಿಸಿದ್ದೇನೆ,ನಿಮಗೆ ಹೆಮ್ಮೆ ಬೇಡ” ಎಂದನು. +ಬಡವಿಯ ಮಗನ ಹೆಮ್ಮೆ ಇಳಿದು ಮುಖ ತಗ್ಗಿಸಿ ಮನೆಗೆ ಬಂದನು. +೩.ಅಹಂಕಾರ ತೊಲಗಿತು(. +ವಿಷ್ಣು ಪತ್ನಿಯಾದ ಲಕ್ಷ್ಮಿಯು, 'ಐಶ್ವರ್ಯವೇ ಶ್ರೇಷ್ಠವೆಂದೂ, “ನನ್ನಿಂದಲೇ ಲೋಕದವರಿಗೆ ಸಕಲ ಭೋಗಭಾಗ್ಯವುಂಟು' ಎಂದೂ ಅಭಿಮಾನಪಟ್ಟು ಅಹಂಕಾರ ತಾಳಿದಳು. +ಪಾರ್ವತಿಯು ನಿಶೂನ್ಯಮಯ ಪರಮಾತ್ಮನ ಅರ್ಧಾಂಗಿಯಾಗಿದ್ದರೂ ನಿರಹಂಕಾರಿಯಾಗಿದ್ದಳು. +ಅವಳು ಯಾವುದೇ ಆಭರಣ ಹಾಕಿಕೊಳ್ಳದೆ ಲಕ್ಷ್ಮೀದೇವಿಯ ಮನೆಗೆ ಹೋಗಿದ್ದಳು. +ಲಕ್ಷ್ಮಿಯು ತನ್ನ ಐಶ್ವರ್ಯವು ಈಶ್ವರನಿಂದಲೇ ಪ್ರಾಪ್ತವಾಗಿದ್ದನ್ನು ಮರೆತಳು. +ಪಾರ್ವತಿಯು ಪರಮಾತ್ಮನ ಅರ್ಧನಾರೀಶ್ವರಿ ಎಂಬುದನ್ನು ಮರೆತು, ಯಾವ ಆಭರಣವನ್ನೂ ಧರಿಸದೇ ಬಂದ ಪಾರ್ವತಿಯನ್ನು ಬಹಳ ಹಗುರವಾಗಿ ಕಂಡು ಅವಳಿಗೆ ತಕ್ಕ ಮನ್ನಣೆಯನ್ನು ಮಾಡಲಿಲ್ಲ. +ಪಾರ್ವತಿಯು ತಿರುಗಿ ಹೋಗಿ- ಲಕ್ಷ್ಮಿಯು ತನ್ನನ್ನು ಅಸಡ್ಡೆಯಿಂದ ನೋಡಿದಳೆಂದು ಪರಮಾತ್ಮನಿಗೆ ಹೇಳಿಕೊಂಡಳು. +ಪರಮಾತ್ಮನು, "ಲಕ್ಷ್ಮಿಯ ಎಲ್ಲಾ ಸಂಪತ್ತು ತನ್ನ ಆಶೀರ್ವಾದದಿಂದಲೇ ಪ್ರಾಪ್ತವಾದುದನ್ನು ಮರೆತು ಈ ರೀತಿ ಮಾಡಿದ್ದಾಳ" ಎಂದು ತಿಳಿದು, ಅವಳಿಗೆ ಬುದ್ಧಿಕಲಿಸಬೇಕು ಎಂದು ನಿಶ್ಚಯಿಸಿ ಒಂದು ಸಾಸಿವೆ ಕಾಳಿನಷ್ಟು ಭಸ್ಮವನ್ನು ತೆಗೆದು ತಕ್ಕಡಿಯಲ್ಲಿ ಹಾಕಿ, “ಭಸ್ಮದ ತೂಕದಷ್ಟೇ ಬಂಗಾರ ಕೊಡು” ಎಂದು ಲಕ್ಷ್ಮೀಗೆ ಪಾರ್ವತಿಯೊಡನೆ ಹೇಳಿ ಕಳುಹಿಸಿದನು. +ಲಕ್ಷ್ಮೀದೇವಿಯು, “ಆ ಇದೇನು ದೊಡ್ಡದು” ಎಂದು ಹೇಳಿ, ಪಾರ್ವತಿಯ ಹತ್ತಿರ ಸ್ವಲ್ಪ ಬಂಗಾರವನ್ನು ಕೊಟ್ಟು ಕಳುಹಿಸಿದಳು. +ಆಗ ಪರಮಾತ್ಮನು, "ಇದನ್ನು ತೂಕ ಮಾಡಿಕೊಡಬೇಕು" ಎಂದು ಹೇಳಿದನು. +ಲಕ್ಷ್ಮಿಯು ತಾನು ತಕ್ಕಡಿಯಲ್ಲಿ ಹಾಕಿದ ಬಂಗಾರವು ಭಸ್ಮಕ್ಕೆ ಸರಿಬಾರದಿರಲು, ಅಲ್ಲಿಗೆ ತಾನೇ ಬಂದು ಹೆಚ್ಚು ಬಂಗಾರವನ್ನು ತಕ್ಕಡಿಯಲ್ಲಿ ಹಾಕಿದಳು. +ಭಸ್ಮದ ತೂಕಕ್ಕೆ ಸರಿಹೊಂದಲಿಲ್ಲ. +ಇದರಿಂದ ಲಕ್ಷ್ಮಿಯ ಅಹಂಕಾರವು ಸುಟ್ಟುಬೂದಿಯಂತಾಗಿ ಅವಳು ಶಿವನ ಸನ್ನಿಧಿಗೆ ಕ್ಷಮೆಯನ್ನು ಕೇಳಿ, ಶಿವನ ಪಾದಪೂಜೆಯನ್ನು ಮಾಡಲು ಸಾವಿರ ಕಮಲಗಳನ್ನು ಏರಿಸಬೇಕೆಂದು ಮಾಡಿದಾಗ ಕಮಲವು ಸಂಗ್ರಹ ಕಡಿಮೆಯಾಯಿತು. + ಆಗ ತನ್ನ ಒಂದು ಕುಚವನ್ನೇ ಪಾದಕ್ಕೆ ಅರ್ಪಿಸಬೇಕೆಂದು ತೆಗೆದಾಗ ಅದೇ ಬಿಲ್ವ ವೃಕ್ಷವಾಯಿತು. +ಶಿವನು ಲಕ್ಷ್ಮಿಯ ತಪ್ಪನ್ನು ಮನ್ನಿಸಿ ಅವಳಿಗೆ ಅನುಗ್ರಹ ಮಾಡಿದನು. +“ಒಂದೇ ಬಿಲ್ವ ದಳವನ್ನು ತೆಗೆದುಕೊಂಡು ನನ್ನನ್ನು ಪೂಜಿಸಿದರೂ ಲೋಕದವರ ಎಲ್ಲಾ ಮನೋರಥಗಳು ಸಿದ್ಧಿಸುವುವು” ಎಂದು ಅಪ್ಪಣೆ ಕೊಡಿಸಿದನು. +"ತಮ್ಮ ಪಾಪಗಳಿಗೆ ಪಶ್ಚಾತ್ತಾಪ ಪಟ್ಟು ಬಿಲ್ವದಳದಿಂದ ಪೂಜಿಸಿದಾಗ ಅವರು ಮಾಡಿದ ಸಂಚಿತ, ಆಗಾಮೀ ಮತ್ತು ಪ್ರಾರಬ್ಧ ಪಾಪಗಳಿಂದ ಬಿಡುಗಡೆ ಹೊಂದುತ್ತಾರೆ" ಎಂದು ಆಶ್ವಾಸನೆ ನೀಡಿದನು ಮತ್ತು "ರಕ್ತದ ಒತ್ತಡ, ಮಧುಮೇಹ ಮುಂತಾದ ರೋಗಗಳು ಬಿಲ್ವವೃಕ್ಷದ ವಿವಿಧ ಭಾಗಗಳ ಸೇವನೆಯಿಂದ ಶಮನಿಸುತ್ತವೆ" ಎಂದು ಅನುಗ್ರಹ ಮಾಡಿದನು. +ಒಬ್ಬ ಗೌಡನಿಗೆ ಏಳು ಜನ ಗಂಡು ಮಕ್ಕಳಿದ್ದರು. +ಅವನು ಆರು ಜನರ ಮದುವೆ ಮಾಡಿದ್ದನು. +ಒಬ್ಬನ ಲಗ್ನವನ್ನು ಮಾಡಿರಲಿಲ್ಲ. +ಆ ಕಿರಿ ಮಗನನ್ನು ಶಾಲೆಗೆ ಹಾಕಿದನು. +ಅವನಿಗೆ ಶಾಲೆಗೆ ರಜೆ ಬಿದ್ದ ಸಮಯದಲ್ಲಿ ಗೌಡನ ಗದ್ದೆಗೆ ಅಗೆ ಸಸಿಗಳ ಸಲುವಾಗಿ ಒಂದು ಗದ್ದೆಗೆ ಬೀಜಗಳನ್ನು ಬಿತ್ತಿದ್ದರು. +ಅಗೆ ಸಸಿಗಳು ಇನ್ನೂ ಹುಟ್ಟಿರಲಿಲ್ಲ. +ಹಕ್ಕಿಗಳು ಬಂದು ಭತ್ತದ ಬೀಜಗಳನ್ನು ತಿನ್ನಬಾರದೆಂದು ಗೌಡನ ಕಿರಿ ಮಗನನ್ನು ಕಾಯಲಿಕ್ಕೆ ಕಳಿಸಿದರು. +ಆಚೆಯ ಗದ್ದೆಯಲ್ಲಿ ನೂರಾ ಒಂದು ಜನರು ಹಾಣಿ ಆಟ ಆಡುತ್ತಿದ್ದರು. +ಕಿರಿ ಹುಡುಗನು ಅವರ ಸಂಗಡ ಹಾಣಿ ಆಟ ಆಡಬೇಕೆಂದು ಹೋದನು. +ಅವರು, “ನಾವು ನೂರಾ ಒಂದು ಜನರಿದ್ದೇವೆ, ನೀನೊಬ್ಬ ಬಂದೆ, ನೂರಾ ಎರಡು ಜನರಾದಂತಾಯಿತು, ಐವತ್ತೊಂದು ಜನರು ಆಚೆಗೆ ನಿಲ್ಲುವುದು, ಐವತ್ತೊಂದು ಜನ ಈಚೆಗೆ (ವಿರುದ್ಧ ಪಕ್ಷದಲ್ಲಿ) ನಿಲ್ಲುವುದು ಈ ರೀತಿ ಆಟ ಆಡೋಣ” ಎಂದು ಹೇಳಿದರು. +ಹುಡುಗನು, “ನೀವು ನೂರಾ ಒಂದು ಜನರೂ ಒಂದಾಗಿರಿ, ನಾನೊಬ್ಬನೇ ಒಂದಾಗುತ್ತೇನೆ” ಎಂದನು. +ಅದಕ್ಕೆ ಅವರು ಒಪ್ಪಿದರು. +ಇವನು ಹಾಣಿಯನ್ನು ಕೈಯಲ್ಲಿ ಹಿಡಿದು ಹಾಣಿಯ ಆಟದ ಕುಳಿಯಲ್ಲಿ ಗೆಂಡೆಯನ್ನು ಇಟ್ಟು ಹಾಣಿಯಿಂದ ಗೆಂಡೆಯನ್ನು ಎತ್ತಿಎಸೆದನು. +(ದೂರ ಹಾರಿಸಿದನು) ಹಾಗೆ ಎಸೆಯುವಾಗ ಏನೆಂದು ಹೇಳುತ್ತಾ ಎಸೆದನು? +“ಈ ಗೆಂಡೆ ಭೂಮಿಗೆ ಬೀಳಬಾರದು, ಜನರ ಕೈಯಲ್ಲಿ ಸಿಗಬಾರದು, ಹಕ್ಕಿಯ ಹಾಗೆ ಹಾರಾಡಬೇಕು”ಅದು ಹಕ್ಕಿಯ ಹಾಗೆ ಹಾರಾಡುತ್ತಾ, ಯಾರ್‌ಯಾರ ಕೈಗೂ ಸಿಕ್ಕದೆ ಮೇಲಿಂದ ಮೇಲೆ ಹಾರಾಡುತ್ತಾ ಉಳಿಯಿತು. +ಹುಡುಗನು ಗೆಂಡೆ ಹಾರುವುದನ್ನೇ ನೋಡುತ್ತಾ ಆಟ ಆಡುವಲ್ಲಿಯೇ ಉಳಿದುಬಿಟ್ಟನು. +ಅವನಿಗೆ ಗದ್ದೆ ಕಾಯುವ ಕೆಲಸದ ನೆನಪೇ ಇರಲಿಲ್ಲ. +ಆಗ ಹಕ್ಕಿಗಳೆಲ್ಲ ಬಂದು ಗದ್ದೆಯಲ್ಲಿಳಿದು ಬಿತ್ತಿದ್ದ ಭತ್ತದ ಬೀಜಗಳನ್ನು ತಿನ್ನುತ್ತಿದ್ದವು. +ಆಗ ಅವನ ಅಣ್ಣಂದಿರಲ್ಲಿ ಹಿರಿಯ ಅಣ್ಣನು ಗದ್ದೆಗೆ ಬಂದನು. +ಗದ್ದೆಯಲ್ಲಿ ಹಕ್ಕಿಗಳ ಗೋಲೆ (ಗುಂಪು)ಕವಿದು ಹೋದದ್ದನ್ನು ಅವನು ನೋಡಿದನು. +ಅಲ್ಲಿ ನೋಡಿದವನು ಸೀದಾ ತಮ್ಮನನ್ನು ಅರಸುತ್ತಾ ಅವರು ಹಾಣಿ ಆಡುವಲ್ಲಿ ಹೋಗಿ ಮುಟ್ಟಿದನು. +“ನೀನು ಆಡಲಿಕ್ಕೆ ಬಂದೆ. +ಅಲ್ಲಿ ಹಕ್ಕಿಗಳು ಎಲ್ಲಾ ಬೀಜವನ್ನು ಹೆಕ್ಕಿ ತಿಂದು ತೆಗೆದುಬಿಟ್ಟವು” ಎಂದು ಹೇಳಿ ನಾಲ್ಕು ಪೆಟ್ಟು ಹೊಡೆದನು. +ಮನೆಗೆ ಹೋಗಿ ಮತ್ತೊಬ್ಬ ತಮ್ಮನಿಗೆ ಈ ಸಂಗತಿಯನ್ನು ಹೇಳಿದನು. +ಅವನು, "ಗದ್ದೆಗೆ ಬಂದು, ಗದ್ದೆ ಕಾಯುವುದನ್ನು ಬಿಟ್ಟು ಎಲ್ಲಿಗೆ ಹೋಗಿದ್ದೇ?" ಎಂದು ಹೇಳಿ ಜೋರು ಮಾಡಿ, ಮತ್ತೆ ತಾನೂ ನಾಲ್ಕು ಪೆಟ್ಟುಗಳನ್ನು ಹೊಡೆದನು. +ಅವನು ನಾಲ್ಕು ಹೊಡೆತ ಹೊಡೆದವನು ಮನೆಗೆ ಹೋಗಿ ಮತ್ತೊಬ್ಬ ತಮ್ಮನನ್ನು ಕಳಿಸಿದನು. +ಆರೂ ಮಂದಿ ಅಣ್ಣಂದಿರೂ ಹೊಡೆದು ಹೋದರು. +ಆರನೆಯವನು ಅವನಸಾವಗೋಲೆ (ಸಾಯುವಂತೆ) ಹೊಡೆದು, ಅವನನ್ನು ಕಾರಿಗೆ(ಕಾಲುವೆ)ಯ ನೀರಿನಲ್ಲಿ ಒಗೆದು ನಡೆದನು. +ಕಾಲುವೆಯಲ್ಲಿ ರಾತ್ರಿಯಿಡೀ ಅವನು ಸ್ವಲ್ಪ ನೀರಿನಲ್ಲಿ ಬಿದ್ದಿದ್ದನು. +ಅವನಿಗೆ ತಂಪು ಹತ್ತಿ ಜೀವ ಬಂತು. +ಬೆಳಗಾದ ಮೇಲೆ, “ದೇವರೇ, ಇನ್ನು ನಾನು ಎಲ್ಲಿಗೆ ಹೋಗಲಿ?” ಎಂದುಕೊಂಡು ಮನೆಗೆ ಹೊರಟನು. +ಆಗ ಅವನ ಅಪ್ಪನೆನ್ನುವವನು ಕೊಡಲಿಗೆ ಕಾವನ್ನು ಹಾಕುತ್ತಿದ್ದನು. +ಈ ಮಗನನ್ನು ನೋಡಿ, “ಸತ್ತವನೇ, ಹಕ್ಕಿ ಗೋಲೆಗೆ ಪೂರಾ ಬೀಜವನ್ನು ತಿನ್ನಿಸಿದೆ, ನಿನ್ನನ್ನೂ ಕೊಂದು ಬಂದರೂ ಮತ್ತೂ ಸಾಯಲಿಲ್ಲ, ಮತ್ತು ಎದ್ದು ಬಂದೆಯೋ?” ಎಂದು ಹೇಳಿ ಕೊಡಲಿಯ ಕಾವ(ಕೊಡಲಿಯ ಕಟ್ಟಿಗೆಯ ಕೋಲು)ನ್ನು ಎತ್ತಿದನು. +ಆಗ ಮತ್ತೆ ಓಡಿ ಬಂದು, "ದೇವರೇ. . . ನನ್ನನ್ನು ದಯೆಯಿಂದ ನೋಡುವವರು ಯಾರೂ ಇಲ್ಲ, ಹೆತ್ತ ಕರುಳು ತಾಯಿ.. . ಅವಳಾದರೂ ನೋಡುತ್ತಾಳೆಯೇ ಯಾರ್ಬಲ(ಯಾರು ಬಲ್ಲರು)?" ಎಂದುಕೊಂಡು ತಾಯಿ ಇದ್ದಲ್ಲಿ ಹೋದನು. +ತಾಯಿಯೇನು ಮಾಡುತ್ತಿದ್ದಳು? +ಅಂಗಳ ಕಸ ಗುಡಿಸುತ್ತಿದ್ದಳು. +ಸದೆಯನ್ನು ಗುಡಿಸುತ್ತಿರುವಾಗ, . "ಅವ್ವಾ. . . " . ಎಂದು. ಹೇಳುತ್ತಾ ಹೋದನು. +ಮತ್ತೂ ಅವನನ್ನು ಕರೆಯುತ್ತಾ, "ಬಂದೆಯೋ? ಇನ್ನೂ ಸಾಯಲಿಲ್ಲವೋ?" ಎಂದು ಹೇಳಿ,ಹಿಡಿಕುಂಟೆ(ಕಸಬರಿಗೆ)ಯನ್ನು ತೆಗೆದುಕೊಂಡು ಅವನನ್ನು ತೌರಿಕೊಂಡು ಹೋದಳು. +"ದೇವರೇ, ನನಗೆ ಬಾ."ಎಂದು ಹೇಳುವವರು ಯಾರೂ ಇಲ್ಲ. +ತಾಯಿ-ತಂದೆ ಇಬ್ಬರೂ ಕೊಲ್ಲುವುದಕ್ಕೆ ನೋಡಿದರು. +ಇನ್ನು ಯಾರೂ ಇಲ್ಲ ನನಗೆ. +ನಾನು ಇನ್ನು ಎಲ್ಲಿಗೆ ಹೋಗಲಿ? ಎಂದು ದನಗಳ ಕೊಟ್ಟಿಗೆಗೆ ಹೋದನು. +ಅಲ್ಲಿ ದನಗಳ ನಡುವೆ ಕೂತನು. +ಆಗ ಆತನ ಹಿರಿಯ ಅತ್ತಿಗೆ ಕೊಟ್ಟಿಗೆಗೆ ಬಂದಳು. +ಈ ಮೈದುನನನ್ನು ನೋಡಿ ಬಹಳ ಪಶ್ಚಾತ್ತಾಪ(ಕರುಣಿ)ವಾಯಿತು ಅವಳಿಗೆ. +ಆಗ ಉಳಿದವರಾರಿಗೂ ಕಾಣದ ಹಾಗೆ, ಅವರೆಲ್ಲರಿಗೂ ಊಟವಾದ ಮೇಲೆ ಪಾತ್ರೆ ತಿಕ್ಕುವ ಹೆಳೆ(ನೆವಿಯ ಮೇಲೆ, ಅವಳು ಸ್ವಲ್ಪ ಪದಾರ್ಥಮೇಲೋಗರ)ಗಳನ್ನು ತಂದು ಅವನಿಗೆ ಬಡಿಸಿದಳು. +ಹೊರಟು ಹೋಗಬೇಕಾದರೆ, "ನೀನು ಇಲ್ಲಿ ಹೇಗೆ ಮಲುಗುವೆ? +ನಿನಗೆ ನಿದ್ರೆ ಬರಲಿಕ್ಕೆ ಹೇಗೆ ಸಾಧ್ಯ?" ಎಂದು ಹೇಳಿ, "ನನ್ನ ಪಟ್ಟಿಯನ್ನು ತಂದುಕೊಡುತ್ತೇನೆ, ಒಂದು ಸೆರಗನ್ನು ಹಾಸಿಕೊ, ಒಂದು ಸೆರಗನ್ನು ಹೊದ್ದುಕೊ" ಎಂದುಹೇಳಿ, ತನ್ನ ಧಾರೆ ಪಟ್ಟೆಸೀರೆಯನ್ನು ತಂದುಕೊಟ್ಟಳು. +ಅವನು ಈ ರೀತಿಯಾಗಿ ಎರಡು ದಿವಸ ಅಲ್ಲಿಯೇ ಉಳಿದನು. +"ನಾನು ಇನ್ನು ಇಲ್ಲಿ ಉಳಿಯುವುದಿಲ್ಲ, ನಾನು ಇಲ್ಲಿ ಇದ್ದದ್ದು ಅವರಿಗೆ ತಿಳಿದರೆ ನೀನೂ ಅವರ ಹತ್ತಿರ ಮಾತು ಹೇಳಿಸಿಕೊಳ್ಳಬೇಕಾಗುತ್ತದೆ, ನಾನು ದೇಶಾಂತರ ಹೋಗುತ್ತೇನೆ"ಎಂದು ಹೇಳಿ, "ನನ್ನ ಜೀವ ಇದ್ದದ್ದೇ ಹೌದಾದರೆ ನಿನ್ನನ್ನು ಕಾಣಿಸಿಕೊಂಡು ನಿನಗೆ ತುಪ್ಪಉಣ್ಣಿಸುತ್ತೇನೆ; +ಹಾಲಿನಲ್ಲಿ ನಿನ್ನ ಬಾಯನ್ನು ತೊಳೆಯುತ್ತೇನೆ, ನನ್ನ ಬಲದ ತೊಡೆಯಮೇಲೆ ನಿನ್ನನ್ನು ಕುಳ್ಳಿರಿಸಿಕೊಂಡು ನಿನಗೆ ಪೀತಾಂಬರವನ್ನು ಉಡಿಸುತ್ತೇನೆ" ಎಂದುಹೇಳಿದನು. +ಅಷ್ಟು ಹೇಳಿದವನು ಮರುದಿವಸ ಹೊರಟು ನಡೆದನು. +ಬಹಳ ದೂರ ದೂರನಡೆದು ಒಂದು ಊರಿಗೆ ಹೋಗಿ ಮುಟ್ಟಿದನು. +ಅಲ್ಲಿ ಒಂದು ಕಡೆ ನೂರಾ ಒಂದು ಜನರು ಕೆಲಸಕ್ಕೆ ಹೋಗಿ ಬರುತ್ತಿದ್ದರು. +ಅವರೆಲ್ಲರೂ ಒಂದೇ ಮನೆಯವರೇ, ಇವನು ಅವರ ಮನೆಯ ಪಾಗಾರದ ದಣ(ಹೋಗಿ ಬರುವ ಬಾಗಿಲು)ಯ ಹೊರಗೆ ನಿಂತುಕೊಂಡು, “ಓ. . . ಈ ಬಿದಿರ ಗಿಡದ ಮೇಲೆ ಇರುವ ಛಡಿ(ಸೆಳೆ,ಕೊಂಬು)ಯನ್ನು ಮುರಿದುಕೊಡಿ” ಎಂದು ಕೇಳಿದನು. +ಅವರು ಯಾರೂ ಮುರಿದು ಕೊಡಲಿಲ್ಲ. +ಆದರೆ, ಒಬ್ಬನು ಮಾತ್ರ, “ನಾನು ಮುರಿದು ಕೊಡುತ್ತೇನೆ” ಎಂದು ಹೇಳಿ ಒಂದು ಬಿದಿರಿನ ಛಡಿಯನ್ನು ಮುರಿದುಕೊಟ್ಟನು. +ಅಲ್ಲದೆ, “ನಮ್ಮ ಮನೆಗೆ ಬಾ” ಎಂದು ಅವನನ್ನು ಮನೆಗೆ ಕರೆದುಕೊಂಡು ಹೋಗಿ ಅವನಿಗೆ ಊಟ ಹಾಕಿಸಿದನು. +ಹುಡುಗನು ಊಟ ಮಾಡಿದನು, ಮತ್ತೆ ಅವರ ಸಂಗಡಲೇ ದಾರಿನ ಡೆದನು. +ಅವರು ದಾರಿಯನ್ನು ಹಿಡಿದುಕೊಂಡು ತಮ್ಮ ಕೆಲಸಕ್ಕೆ ಹೋದರು; +ಇವನು ಬೇರೆ ದಾರಿಯನ್ನು ಹಿಡಿದುಕೊಂಡು ಹೋದನು. +ಒಂದು ದಾರಿಯಲ್ಲಿ ಬಹಳ ದೂರ ಹೋದ ಮೇಲೆ ಅವನಿಗೆ ಒಂದು ದೇವಸ್ಥಾನ ಸಿಕ್ಕಿತು. +ಆ ದೇವಸ್ಥಾನವನ್ನು ಹೊಕ್ಕನು. +ದೇವರು, “ಯಾಕೆ ಬಂದೆಯಪ್ಪ ನನ್ನ ಮನೆಯಲ್ಲಿ?”ಎಂದು ಕೇಳಿತು. +ಅವನು, “ನಾನು ದೇಶಾಂತರವೇ ಗತಿಯಾಗಿ ಬಂದಿದ್ದೇನೆ, ನನ್ನ ಮೇಲೆ ನಿನ್ನ ಕರುಣೆವಿರಬೇಕು. +ನನಗೆ ಒಂದು ವರವನ್ನು ಕೊಡಬೇಕು, ನಾನು ಈ ಬಿದಿರನ ಛಡಿಯಿಂದ ಏನನ್ನು ಮುಟ್ಟುತ್ತೇನೆಯೋ ಅದು ನಾನು ಹೇಳಿದ ಹಾಗೆಯೇ ಆಗಬೇಕು”ಎಂದು ಬೇಡಿಕೊಂಡನು. +ದೇವರು, “ಹಾಗೆಯೇ ಆಗಲಿ” ಎಂದು ವರ ಕೊಟ್ಟಿತು. +ಆಮೇಲೆ ಮತ್ತೆ ಮುಂದೆ ಹೋದನು. +ಹೋಗುತ್ತಾ ಇರಬೇಕಾದರೆ ಒಬ್ಬ ಅಜ್ಜಿಯ ರೂಪದಲ್ಲಿ ಒಬ್ಬ ರಾಕ್ಷಸಿ ಇದ್ದಳು. +“ಮೊಮ್ಮಗನೇ, ನೀನು ಎಲ್ಲಿಗೆ ಹೋಗುವೆ?” ಎಂದುಕೇಳಿದಳು. +ಅವನು, “ಅಜ್ಜವ್ವಾ, ನೀನು ಎಲ್ಲಿಗೆ ಹೊರಟೆ?” ಎಂದು ಕೇಳಿದನು. +“ಅಜ್ಜವ್ವಾ, ನಾನು ದೇಶಾಂತರ ತಿರುಗುತ್ತಾ ಬಂದವನು” ಎಂದನು. +ಅವಳು, “ನಾನೂ ದೇಶಾವರಿಗೆ ಬಂದವಳೇ, ಮೊಮ್ಮಗನೇ, ನಾನೂ ನೀನೂ ಕೂಡಿಕೊಂಡೇ ದೇಶಾವರಿಗೆ ಹೋಗುವಾ” ಎಂದಳು. +ಆಗ ಅವನ ಹತ್ತಿರ ಮುದುಕಿಯೇನೆಂದಳು? +“ಮೊಮ್ಮಗನೆ, ನೀನು ಮುಂದಾಗು ನಾನು ಹಿಂದಿನಿಂದ ನಡೆದುಬರುತ್ತೇನೆ” ಎಂದು ಹೇಳಿದಳು. +“ಅಜ್ಜವ್ವಾ. . . ನೀನೇ ಮುಂದಾಗು, ನಾನು ನಿನ್ನ ಹಿಂದೆ ಬರುವೆ.” ಇಬ್ಬರೂ ದಾರಿ ನಡೆದರು. +ಹೋಗುತ್ತಾ ಇರುವಾಗ, “ಮೊಮ್ಮಗನೆ, ನಾನು ನಿನ್ನನ್ನು ತಿನ್ನುತ್ತೇನೆ, ನನಗೆ ಹಸಿವಾಗಿದೆ” ಎಂದು ಹೇಳಿ ತಿರುಗಿ ನಿಂತಳು. +ಇವನು ಕೂಡಲೇ, “ಅವಳು ಮೂರು ತುಂಡಾಗಿ ಬೀಳಲಿ” ಎಂದು ಹೇಳಿ ಬಿದಿರಿನ ಛಡಿಯಿಂದ ಹೊಡೆದನು. +ಅವಳು ಮೂರು ತುಂಡಾಗಿ ಬಿದ್ದಳು. +ಬಿದ್ದಕೂಡಲೇ ಅವಳ ಕೊರಳಿನಲ್ಲಿದ್ದ ದೊಡ್ಡ ಬೀಗದ ಕಾಯಿಗಳ ತೊಪ್ಪೆ(ಗೊಂಚಲು)ಯನ್ನು ತೆಗೆದುಕೊಂಡನು. +ಅವಳು ಯಾವ ಹಾದಿಯಲ್ಲಿ ಬಂದಿದ್ದಳೋ ಅದೇ ದಾರಿಯಲ್ಲಿ ಹಿಂತಿರುಗಿ ಹೋದನು. +ಅವಳ ಮನೆ ಎಲ್ಲಿದೆಯೆಂದು ನೋಡೋಣವೆಂದು ಹೋಗುತ್ತಾ ಇರುವಾಗ ಅವಳ ಮನೆ ಸಿಕ್ಕಿತು. +ಅವಳ ಮನೆಗೆ ಹೋದನು. +ಅಲ್ಲಿ ಒಬ್ಬಳು ಚೆಂದವಾದ ಹುಡುಗಿಯಿದ್ದಳು. +ಅವಳಿಗೆ ಅವನನ್ನು ನೋಡಿದ ಕೂಡಲೇ ಬಹಳ ಸಂತೋಷವಾಗಿ ಹೋಯಿತು. +ಯಾರೂ ನರಮನುಷ್ಯರ ಸುಳಿವೇ ಅಲ್ಲಿ ಇಲ್ಲವಾಗಿತ್ತು. +'ಇವನು ಎಲ್ಲಿಂದ ಬಂದನೋ, ನನ್ನಪುಣ್ಯಕ್ಕೆ ಸಿಕ್ಕನು' ಎಂದುಕೊಂಡು, ಇವನ ಕೈಯಲ್ಲಿ ಏನೆಂದಳು? +“ನನ್ನ ಅಜ್ಜಿ ಬರುವ ವೇಳೆಯಾಯಿತು, ನೀನು ಬೇಗ ಅಡಗಿಕೋ” ಎಂದಳು. +ಆಗ ಅವನು, “ನಿನ್ನ ಅಜ್ಜಿ ಬರುವುದಾದರೆ ಬರಲಿ, ನೀನು ಅಡುಗೆಯನ್ನು ಮಾಡು”ಎಂದನು. +“ನಿನ್ನ ಅಜ್ಜಿಯ ಕೊರಳಿನಲ್ಲಿ ಏನಿತ್ತು?” ಎಂದು ಕೇಳಿದನು. +“ನನ್ನ ಅಜ್ಜಿಯ ಕೊರಳಿನಲ್ಲಿ ಒಂದು ಬೀಗದ ಕಾಯಿಯ ತೊಪ್ಪೆಯುಂಟು, ಮತ್ತೇನೂ ಇಲ್ಲ” ಎಂದಳು. +“ಇದೋ ನೋಡು, ಈ ಬೀಗದ ಕಾಯಿ ತೊಪ್ಪೆಯೇ ಹೌದೋ, ಅಲ್ಲವೋ ನೋಡು”ಎಂದು ಅದನ್ನು ತೆಗೆದು ಒಗೆದನು. +ಅವಳು, “ಹೌದು. . . ಹಾಗಾದರೆ, ನನ್ನ ಅಜ್ಜಿಯನ್ನು ತೆಗೆದು(ಕೊಂದು) ಬಂದೀರಾ? +ಬಹಳ ಚಲೋದಾಗಿ ಹೋಯಿತು. +ನಾನು-ನೀವೂ ಉಳಿದುಕೊಳ್ಳೋಣ ಎಂದು ಹೇಳಿದ ಹುಡುಗಿ, “ಬೀಗದ ಕಾಯಿ ತೆಗೆದುಕೊಂಡು ಕೋಣೆಯ ಬಾಗಿಲನ್ನು ತೆಗೆ” ಎಂದಳು. +ಕೋಣೆಯ ಬಾಗಿಲನ್ನು ತೆರೆದರು. +ಹುಡುಗಿಯು, “ನನ್ನ ಅಜ್ಜಿ ಇಷ್ಟು ಜನರನ್ನು ತಂದು ತಿಂದುಬಿಟ್ಟಳು, ನನ್ನನ್ನು ಮಾತ್ರ ತಂದರೂ ತಿನ್ನದೆ ಇಷ್ಟು ದೊಡ್ಡವಳನ್ನಾಗಿ ಬೆಳೆಸಿದಳು” ಎಂದು ಹೇಳಿದಳು. +"ಆಗಲಿ,ಈ ಎಲ್ಲಾ ತಲೆಗಳನ್ನು ಹೊರಗೆ ತಂದುಹಾಕು" ಎಂದು ಹೇಳಿ ಮತ್ತೊಂದು ಕೋಣೆಯ ಬೀಗವನ್ನು ತೆಗೆದು ಒಳಗೆ ಹೋದನು. +ಅಲ್ಲಿ ಕೋಣೆಯ ತುಂಬಾ ಹೊನ್ನಿನ ರಾಶಿ ಇತ್ತು,ಇನ್ನೊಂದು ಕೋಣೆಯ ಬೀಗವನ್ನೂ ತೆಗೆದು ನೋಡಿದನು. +ಅಲ್ಲಿ ಜೋಳ, ಗೋಧಿ ಮುಂತಾದ ಸಕಲ ಧಾನ್ಯ ಸಂಗ್ರಹವಿತ್ತು. +ಇನ್ನೊಂದು ಕೋಣೆಯ ಬೀಗವನ್ನು ತೆಗೆದುನೋಡಿದರೆ ಅಲ್ಲೆಲ್ಲಾ ವಸ್ತ್ರಗಳು ತುಂಬಿದ್ದವು. +ರಾಕ್ಷಸಿಯ ಮೊಮ್ಮಗಳು ಆ ತಲೆಗಳನ್ನೆಲ್ಲಾ ಅಂಗಳದಲ್ಲಿ ರಾಶಿ ಹಾಕಿದಳು. +ಆಗ ಬಿದಿರಿನ ಛಡಿಯನ್ನು ಎಳೆದು, “ಇವರು ಎಲ್ಲರೂ ಮನುಷ್ಯರಾಗಿ ನಿಲ್ಲಲಿ” ಎಂದು ಹೇಳಿದ. +ಕೂಡಲೇ ಆ ಎಲ್ಲಾ ತಲೆಗಳು ನೂರಾ ಒಂದು ಮನುಷ್ಯರಾಗಿ ನಿಂತರು ಅವರು ಅವನಿಗೂ,ಹುಡುಗಿಗೂ ನಮಸ್ಕಾರ ಮಾಡಿದರು. +ಗೌಡನ ಕಿರಿಮಗನೂ, ಹುಡುಗಿಯೂ ಮದುವೆಯಾದರು. +ಮದುವೆಯಾದ ಸ್ವಲ್ಪದಿವಸಗಳ ಆನಂತರ, “ನನಗೆ ಎಂಟು ದಿನ ತಿರುಗಾಟವಿದೆ. +ಆದ್ದರಿಂದ, ನೀವೆಲ್ಲರೂ ನನ್ನ ಹೆಂಡತಿಯ ಮನೆಯಲ್ಲೇ ಸ್ವಲ್ಪ ದಿವಸ ಉಳಿಯಿರಿ” ಎಂದು ಆ ನೂರಾ ಒಂದು ಜನರ ಹತ್ತಿರ ಹೇಳಿ ಹೊರಟು ನಡೆದನು. +ಅವನು ದಾರಿಯಲ್ಲಿ ಹೋಗುತ್ತಿರುವಾಗ ಅಲ್ಲಿ ಒಬ್ಬ ರಾಜನ ಅರಮನೆ ಬಂದಿತು. +ಆ ರಾಜನ ಮಗಳು ರಾಜನು ಕರೆತಂದ ಎಲ್ಲಾ ಹುಡುಗರನ್ನು ನೋಡಿ ನೋಡಿ, “ನಾನು ಯಾರನ್ನೂ ಮದುವೆಯಾಗುವುದಿಲ್ಲ, ಯಾರೂ ನನಗೆ ಬೇಡ” ಎಂದು ಹೇಳುತ್ತಿದ್ದಳು. +ರಾಜನ ಹತ್ತಿರ, “ನಾನು ಮೆಚ್ಚಿದವನನ್ನು, ನಾನೇ ನಿನಗೆ ತೋರಿಸುತ್ತೇನೆ, ಆಗ ನೀನು ನನ್ನ ಲಗ್ನ ಮಾಡು” ಎಂದು ಹೇಳಿದ್ದಳು. +ಇವನು ಅಲ್ಲೇ ಹತ್ತಿರ ಒಂದು ಕಟ್ಟೆಯ ಮೇಲೆ ದಣಿವನ್ನಾರಿಸಿಕೊಳ್ಳಬೇಕೆಂದು ಕೂತಿದ್ದನು. +ಅವನ ಮೇಲೆ ಅವಳ ಕಣ್ಣು ಬಿತ್ತು, ಅವಳು ತಂದೆಯ ಹತ್ತಿರ, “ನನಗೆ ಬೇಕಾದ ಗಂಡ ಬಂದಿದ್ದಾನೆ ಅವನನ್ನು ಕರೆತಂದು ನನಗೆ ಲಗ್ನಮಾಡು” ಎಂದು ಹೇಳಿದಳು. +ಆಗ ಆ ರಾಜನು ಅವನ ಹತ್ತಿರ ಇಬ್ಬರು ಆಳುಗಳನ್ನು ಕಳಿಸಿದನು. +ಅವರು ಬಂದು,“ನಮ್ಮ ರಾಜರು ಕರೆದಿದ್ದಾರೆ. +ನೀವು ಅರಮನೆಗೆ ಬರಬೇಕು” ಎಂದರು. +ಗೌಡನ ಕಿರಿಮಗನು, “ನಾನು ರಾಜನ ಕರೆಗೆ ಓ ಕೊಡಲಿಕ್ಕೆ ಬಂದವನಲ್ಲ, ನಾನು ಬರುವುದಿಲ್ಲ ನೀವು ನಡೆಯಿರಿ” ಎಂದು ಹೇಳಿದನು. +ಅವರು ರಾಜನ ಹತ್ತಿರ ಹೋಗಿ, ಅವನು ಹೇಳಿದ ಹಾಗೆಯೇ ಹೇಳಿದರು. +ಕೂಡಲೇ ರಾಜನು ಅವನ ಹತ್ತಿರ ಬಂದನು. +“ನನಗೆ ಒಬ್ಬ ಮಗಳಿದ್ದಾಳೆ, ಅವಳನ್ನು ನಿನಗೆ ಕೊಟ್ಟು ಮದುವೆ ಮಾಡಬೇಕು ಎಂದು ನನ್ನ ಮನಸ್ಸಿನಲ್ಲಿ ಉಂಟು, ಅದನ್ನು ತಿಳಿಸುವುದಕ್ಕಾಗಿಯೇ ನಿನಗೆ ಹೇಳಿ ಕಳಿಸಿದ್ದೆನು, ನೀನು ಬರುವುದಿಲ್ಲವೆಂದು ನಾನೇ ಬಂದಿದ್ದೇನೆ, ನೀನು ಅರಮನೆಗೆ ಬರಬೇಕು” ಎಂದು ಹೇಳಿದನು. +ಆಗ, “ಅಡ್ಡಿಯಿಲ್ಲ, ನಿಮ್ಮ ಮಗಳನ್ನು ಮದುವೆಯಾಗುತ್ತೇನೆ” ಎಂದು ಹೇಳಿ ರಾಜನ ಬೆನ್ನಿಗೆ ಬಂದನು. +ರಾಜನ ಮನೆಯಲ್ಲಿ ಚಪ್ಪರ-ಚಾವಡಿಯನ್ನು ಹಾಕಿ, ಲಗ್ನದ ತಯಾರಿಯನ್ನು ಮಾಡಿದನು. +ಗೌಡನ ಕಿರಿಮಗನು, “ನಾನು ಲಗ್ನವಾದ ಮೇಲೆ ನನಗೆ ನಾಲ್ಕು ದಿನ ತಿರುಗಾಟ ಮಾಡುವುದುಂಟು, ನಾಲ್ಕು ದಿನಗಳ ಮಾತಿಗೆ ನಿಮ್ಮ ಮಗಳು ನಿಮ್ಮ ಮನೆಯಲ್ಲಿಯೇ ಉಳಿಯಬೇಕು” ಎಂದು ಹೇಳಿ ಲಗ್ನವಾದನು. +ಹೆಂಡತಿಯನ್ನು ಅಲ್ಲಿಯೇ ಬಿಟ್ಟು, “ನಾನು ನಾಲ್ಕು ದಿನಗಳಲ್ಲಿ ಬಂದು ನಿಮ್ಮ ಮಗಳನ್ನು ಕರೆದುಕೊಂಡು ಹೋಗುತ್ತೇನೆ, ಅಲ್ಲಿಯ ತನಕ ಅವಳು ಇಲ್ಲಿಯೇ ಇರಲಿ” ಎಂದು ಹೇಳಿ ಹೋದನು. +ಅವನು ಹೋಗುವ ದಾರಿಯಲ್ಲಿ ಒಂದು ಮದಗ[ಕೆರೆ]ವಿತ್ತು. +ಆಗ ಅಚ್ಚಕನ್ನೆ,ದೇವಕನ್ನೆಯರು ಮದಗದಲ್ಲಿ ಮೀಯುತ್ತಾ ಇದ್ದರು. +ಇವನು ಅವರ ದಡದ ಮೇಲೆ ಬಿಚ್ಚಿಟ್ಟಿದ್ದ ಸೀರೆಗಳನ್ನು ತೆಗೆದುಕೊಂಡನು. +ಅಲ್ಲೇ ಒಂದು ಕಟ್ಟೆಯ ಮೇಲೆ ಒಂದು ಅಶ್ವತ್ಥಮರವಿತ್ತು. +ಆ ಮರವನ್ನು ಹತ್ತಿ ಕೂತುಕೊಂಡನು. +ಮದಗದಲ್ಲಿ ಮಿಂದು ಬಂದ ಕನ್ನೆಯರು ತಮ್ಮ ಸೀರೆಗಳನ್ನು ಹುಡುಕಿದರು. +ಕಾಣದೆ ಮೇಲೆ ನೋಡಿದವರು ಅಶ್ವತ್ಥ ಮರದ ಮೇಲೆ ಅವನನ್ನು ನೋಡಿದರು. +ಸೀರೆಗಳನ್ನು ಹಿಡಿದುಕೊಂಡು ಕುಳಿತಿದ್ದು ಅವರಿಗೆ ಕಂಡಿತು. +“ನಮ್ಮ ಸೀರೆಗಳನ್ನು ಕೊಡು” ಎಂದು ಕೇಳಿದರು. +ಅವನು ಕೊಡಲಿಲ್ಲ. +ಮತ್ತೇ ಎಷ್ಟು ಸಲ ಕೇಳಿದರೂ ಸೀರೆಗಳನ್ನು ಕೊಡಲಿಲ್ಲ. +ಕಡೆಗೆ, "ನಾವು ನಮ್ಮ ಕಿರಿ ತಂಗಿಯನ್ನು ನಿನಗೆ ಕೊಡುತ್ತೇವೆ. +ನಮ್ಮ ಸೀರೆಗಳನ್ನು ಕೊಡು" ಎಂದಾಗ ಸೀರೆಗಳನ್ನು ಕೊಟ್ಟನು. +ಅವರು ತಮ್ಮ ತಮ್ಮ ಸೀರೆಗಳನ್ನು ಉಟ್ಟುಕೊಂಡರು. +ಆಮೇಲೆ ಕೆರೆಯ ನೀರನ್ನು ತೆಗೆದು ಆ ತಂಗಿಯ ಕೈಮೇಲೆ ಬಿಟ್ಟು ಅವಳನ್ನು ಅವನಿಗೆ ಲಗ್ನ ಮಾಡಿಕೊಟ್ಟು ಬಿಟ್ಟರು. +ಅವನು ಅವಳನ್ನು ಕರೆದುಕೊಂಡು ರಾಜನ ಮನೆಗೆ ಬಂದು ತನ್ನ ಮೊದಲಿನ ಹೆಂಡತಿಯನ್ನೂ ಸಂಗಡ ಕರೆದುಕೊಂಡು ಅಜ್ಜಮ್ಮನ ಮನೆಗೆ ಹೋದನು. +ಅಲ್ಲಿದ್ದ ಜನರ ಹತ್ತಿರ, “ನಿಮ್ಮ ನಿಮ್ಮ ಮನೆಗಳಿಗೆ ನೀವು ಇನ್ನು ಹೋಗಬಹುದು. +ಹೋಗಬೇಕಾದರೆ ಇಲ್ಲಿಯ ಕೋಣೆಗಳಲ್ಲಿರುವ ದ್ರವ್ಯದ ಒಂದೊಂದು ಹೊರೆಯನ್ನು ನೀವು ಹೊತ್ತುಕೊಂಡು ಹೋಗಿ, ಇಲ್ಲಿನ ದೇವಾಲಯದ ಬಾವಿಯಲ್ಲಿ ಒಗೆಯಿರಿ” ಎಂದು ನೂರಾ ಒಂದು ಮಂದಿಯ ಹತ್ತಿರವೂ ಹೇಳಿದನು. +ಅವರು ಒಂದೊಂದು ಹೊರೆಯನ್ನು ಹೊತ್ತುಕೊಂಡು ಹೋಗಿ ದೇವರ ಬಾವಿಗೆ ಚೆಲ್ಲಿದರು. +ಆದರೆ, ಬಾವಿ ತುಂಬುವಷ್ಟು ಹೊನ್ನನ್ನು ತೆಗೆದುಕೊಂಡು ಹೋದರೂ ಬಾವಿ ತುಂಬಲಿಲ್ಲ. +ಇವನು ಬಾವಿಯನ್ನು ನೋಡಿದವನು, “ನಾನು ಈ ಬಾವಿಯನ್ನು ಹೊನ್ನಿನ್ನಲ್ಲೇ ತುಂಬಿಸಿಕೊಡುತ್ತೇನೆ ಎಂದು ಹೇಳಿಕೊಂಡಿದ್ದೇನೆ, ಆದರೆ ಬಾವಿ ತುಂಬಲಿಲ್ಲ” ಎಂದು ಹೇಳಿ ಕುತ್ತಿಗೆಗೆ ಹಗ್ಗ ಹಾಕಿಕೊಂಡು ಸಾಯಲಿಕ್ಕೆ ತಯಾರಿ ಮಾಡಿದನು. +ಆಗ ದೇವಿ ಅವನ ಕೈಯನ್ನು ತಡೆದಳು. +“ನೀನು ನಿನ್ನ ಜೀವಕ್ಕೆ ಅಪಾಯಮಾಡಿಕೊಳ್ಳಬೇಡ, ನೀನು ಸತ್ಯವಂತ, ಬಾವಿಯನ್ನು ನೋಡು” ಎಂದಳು. +ಅವನು ಆ ಹೊಸ ಬಾವಿಯನ್ನು ನೋಡಿದನು. +ಬಾವಿಯು ತುಂಬಿತ್ತು, ಆ ನೂರಾ ಒಂದು ಜನರ ಹತ್ತಿರ, “ಇನ್ನು ನಿಮ್ಮ ಮನೆಗೆ ಹೋಗಿ” ಎಂದು ಹೇಳಿ, ತನ್ನ ಹೆಂಡರನ್ನು ಕರೆದುಕೊಂಡು ತಮ್ಮ ಮನೆಯ ಸಮೀಪಕ್ಕೆ ಬಂದವನು ತನ್ನ ಬಿದಿರಿನ ಕೋಲಿನಿಂದ ನೆಲವನ್ನು ಬಡಿದು, “ಏಳುಪ್ಪರಿಗೆಯ ಮನೆಯಾಗಿ ಬೀಳಲಿ” ಎಂದು ಹೇಳಿದನು. +ಏಳು ಉಪ್ಪರಿಗೆ ಮನೆಯಾಯಿತು. +ಅದರಲ್ಲಿ ದವಸಧಾನ್ಯ, ಆಳು-ಕಾಳು ಎಲ್ಲ ಸಮೃದ್ಧವಾಗಿದ್ದವು. +ಹೆಂಡಿರನ್ನು ಕರೆದುಕೊಂಡು ಮನೆಗೆ ಬಂದನು. +ಬಂದವನು ಮನೆಯ ಸುತ್ತಲೂ ಯಾರೂ ಬಾರದ ಹಾಗೆ ಮುಳ್ಳು ಬೇಲಿಯಾಯಿತು, “ನನ್ನ ಅಣ್ಣಂದಿರಾಗಲಿ, ತಾಯಿ-ತಂದೆಗಳಾಗಲಿ ಬಂದರೆ ಅವರಿಗೆ ದಾರಿ ಕಾಣಲಿ” ಎಂದು ಹೇಳಿ ಮತ್ತೆ ಹೊಡೆದನು. +ಇತ್ತ ಇವನ ಮನೆಯಲ್ಲಿ, ಇವನು ಮನೆ ಬಿಟ್ಟುಹೋದ ದಿನದಿಂದ ಸಂಪತ್ತೆಲ್ಲಾ ಮಾಯವಾಗಿ ಮನೆಯಲ್ಲಿ ಗಂಜಿತಿಳಿಗೂ ಆಸ್ಪದವಿಲ್ಲದ ಹಾಗಾಯಿತು. +ಅವನ ಅಣ್ಣಂದಿರೂ,ಅತ್ತಿಗೆಯರೂ ಕಟ್ಟಿಗೆ ಹೊರೆ ತಂದು ಮಾರಿ ಜೀವನ ಸಾಗಿಸುತ್ತಿದ್ದರು. +ಒಂದು ದಿನ ಅಣ್ಣಂದಿರು ಆರು ಜನರೂ, ಅತ್ತಿಗೆಯರೂ ಆರು ಜನರೂ ಸೇರಿ ಹನ್ನೆರಡು ಜನರು ಇವನ ಮನೆಗೆ ಕಟ್ಟಿಗೆ ಹೊರೆಗಳನ್ನು ಹೊತ್ತುಕೊಂಡು ಹೋದರು. +ಅವರು ಮೊದಲು ದಿನಾಲು ಒಂದು ಹೊರೆಗೆ ಒಂದು ರೂಪಾಯಿ ದರದಂತೆ ಕಟ್ಟಿಗೆ ಹೊರೆಗಳನ್ನು ಮಾರುತ್ತಿದ್ದರು. +ಇವನು ಎರಡೆರಡು ರೂಪಾಯಿಗಳಂತೆ ಕೊಟ್ಟು ಹೊರೆಗಳನ್ನು ತಕ್ಕೊಂಡನು. +ಅವರ ಹತ್ತಿರ ತನ್ನ ಹಿರಿಯ ಅತ್ತಿಗೆಯನ್ನು ಕೆಲಸಕ್ಕೆ ಕಳುಹಿಸಲು ಕೇಳಿಕೊಂಡು ಅವಳನ್ನು ಕರೆಸಿದನು. +ಕೆಲಸಕ್ಕೆ ಎಂದು ಕರೆಯಿಸಿದ್ದರೂ ಅವಳ ಕೈಯಲ್ಲಿ ಕೆಲಸ ಮಾಡಿಸಲಿಲ್ಲ. +ತನ್ನ ಮೂರು ಜನ ಹೆಂಡಿರ ಹತ್ತಿರ, “ಅವಳ ಹತ್ತಿರ ಕೆಲಸ ಮಾಡಿಸಬಾರದು, ಇಷ್ಟು ನೀರುಕಾಸಿ ಅವಳನ್ನು ಬಚ್ಚಲ ಕಲ್ಲಿನ ಮೇಲೆ ಕುಳ್ಳಿರಿಸಿ, ಅವಳಿಗೆ ನೀರು ಹೊಯ್ದು ಮೀಯಿಸಿರಿ,ಅವಳಿಗೆ ಅನ್ನವನ್ನು ಬಡಿಸಿ, ಅವಳನ್ನು ತೂಗುಮಂಚದ ಮೇಲೆ ಇಟ್ಟು ತೂಗಿರಿ” ಎಂದನು. +ಸಂಜೆಗೆ ಅವಳಿಗೆ ಸಂಬಳವನ್ನು ಕೊಟ್ಟನು. +ಅವಳು, “ಸಂಜೆಯಾಯಿತು, ನಾನು ನನ್ನ ಮನೆಗೆ ಹೋಗಬೇಕು, ಅಲ್ಲದಿದ್ದರೆ ಮನೆಯಲ್ಲಿ ನನಗೆ ಬಯ್ಯಬಹುದು” ಎಂದಳು. +“ಮನೆಗೆಹೋಗು” ಎಂದು ಹೇಳಿ ಕಳಿಸಿದನು. +ಹೀಗೆಯೇ ನಾಲ್ಕು ದಿನ ಕಳೆದವು. +ಆಗ, "ಒಂದು ದೊಡ್ಡ ದೇವಕಾರ್ಯವನ್ನು ಮಾಡಬೇಕು" ಎಂದು ಹೇಳಿ ತಯಾರಿ ಮಾಡಿದನು. +ಕೇಳುವ ಊರಿಗೆ ಡಂಗೂರ ಸಾರಿದನು. +ಕೇಳದ ಊರುಗಳಿಗೆ ಓಲೆ ಬರೆದನು. +“ನಾನು ದೇವಕಾರ್ಯ ಮಾಡಬೇಕೆಂದು ಮಾಡಿದ್ದೇನೆ, ನೀವು ಎಲ್ಲರೂ ಬರಬೇಕು” ಎಂದು ಕರೆದನು. +ಬಹಳ ಜನರು ದೇವಕಾರ್ಯಕ್ಕೆ ಬಂದರು. +ಅವನ ತಂದೆ-ತಾಯಿ, ಅಣ್ಣಂದಿರು-ಅತ್ತಿಗೆಯರು ಎಲ್ಲರೂ ಬಂದರು. +ಬಂದ ಕೂಡಲೇ ಇವನು ದೇವರ ಪೂಜೆ ಮಾಡಿದನು. +ಎಲ್ಲರೂ ಊಟಕ್ಕೆ ಕೂತರು, “ಊಟ ಮಾಡಿದವರು ಎಲ್ಲರೂ ಕೂತು ನನ್ನದೊಂದು ಕತೆಕೇಳಿ ಹೋಗಬೇಕು” ಎಂದು ಹೇಳಿ ಕೈಮುಗಿದು ತಿಳಿಸಿದನು. +ಆನಂತರ ತನ್ನ ಹಿರಿಯ ಅತ್ತಿಗೆಯನ್ನು ತನ್ನ ಬಲ ತೊಡೆಯ ಮೇಲೆ ಕುಳ್ಳಿರಿಸಿಕೊಂಡು ಅವಳಿಗೆ ಪೀತಾಂಬರ ಉಡಿಸಿದನು. +ಅವಳಿಗೆ ತುಪ್ಪ-ಅನ್ನ ಉಣ್ಣಿಸಿ, ಹಾಲಿನಿಂದ ಅವಳ ಬಾಯಿ ತೊಳೆಸಿದನು. +ಎಲ್ಲರಿಗೂ ಹಿಂದಾದ ಎಲ್ಲ ಕತೆಯನ್ನೂ ಹೇಳಿದನು. +ಆಮೇಲೆ ಅಣ್ಣಂದಿರ ಹತ್ತಿರ,"ಇವರೇ ನನ್ನ ಮನೆಯವರು" ಎಂದು ತನ್ನ ಮೂರು ಜನ ಹೆಂಡಿರನ್ನೂ ತೋರಿಸಿದನು. +ನೀವೆಲ್ಲರೂ ಕೆಲಸ ಮಾಡಿಕೊಂಡು ಉಣ್ಣಬೇಕು. +ತಾಯಿ ತಾನು ಮಾಡುವ ಮನೆಕೆಲಸ, ಕೊಟ್ಟಿಗೆ-ಸಂತೆ ಕೆಲಸಗಳನ್ನು ಮಾಡಬೇಕು. +ತಂದೆಯು ಮೊದಲಿನ ಹಾಗೆಯೇ ಗದ್ದೆ-ಹೊಲಗಳ ಕೆಲಸ ಮಾಡಿಕೊಂಡು ಉಣ್ಣಬೇಕು. +ಹಿರಿ ಅತ್ತಿಗೆ ಮಾತ್ರ ಕೆಲಸವನ್ನು ಮಾಡಬಾರದು, ಕೂತುಕೊಂಡು ಉಣ್ಣಬೇಕು. +ಬಾಕಿ ಜನ ಅತ್ತಿಗೆಯರು ಅವಳ ಸೇವೆ ಮಾಡಬೇಕು ಎಂದು ಹೇಳಿ ಸುಖ-ಸಂತೋಷದಲ್ಲಿ ತನ್ನ ಹೆಂಡಿರ ಸಂಗಡ ಉಳಿದನು. + ಹಾಣಿ ಆಟ: ಹಾಣಿ ಆಟದಲ್ಲಿ ಮೊಳದುದ್ದದ ಕೋಲು ಹಾಣಿ, ಗೇಣುದ್ದದ ಕೋಲುಗೆಂಡೆ. +ಕುಳಿಯಲ್ಲಿ ಗೆಂಡೆಯನ್ನಿಟ್ಟು ಹಾಣಿಯನ್ನು ಕುಳಿ(ಕುಣಿ)ಯಲ್ಲಿಟ್ಟು ಗೆಂಡೆಯನ್ನು ಹಾರಿಸುವವರಿಂದ ಆಟ ಪ್ರಾರಂಭವಾಗುತ್ತದೆ. +ಆಮೇಲೆ ಕ್ರಿಕೆಟ್‌ ಚೆಂಡನ್ನು ಒಗೆದ ಹಾಗೆಯೇ ಕುಳಿಯ ಹತ್ತಿರ ಬೀಳುವಂತೆ ಗೆಂಡೆಯನ್ನು ಒಗೆಯುತ್ತಾರೆ. +ಆಡುವವ ಹಾಣಿಯಿಂದ ಹೊಡೆದುಅದನ್ನು ಹಾರಿಸುತ್ತಾನೆ. +೫.ಊರಕೇರಿ ದೇವಾಲಯಗಳ ಕುರಿತ ಆಖ್ಯಾಯಿಕೆ. +ಮಾಂಧಾತ ರಾಜನು ಪ್ರಸಿದ್ಧನಾದ ಒಬ್ಬ ಶಿಲ್ಪಿಯನ್ನು ಕರೆದು, ಜನಾರ್ದನ ದೇವರ ಮೂರ್ತಿಯನ್ನು ಮಾಡಲು ಹೇಳಿದ್ದನು. +ಆದರೆ, ಆ ಪ್ರಸಿದ್ಧ ಶಿಲ್ಪಿ ಮಾಡಿದ ವಿಗ್ರಹ ಜನಾರ್ದನನದಲ್ಲ. +“ಗೋಪಾಲಕೃಷ್ಣನ ವಿಗ್ರಹ ಆಗಿದೆ” ಎಂದನು. +ಎರಡನೆಯ ಮೂರ್ತಿಯನ್ನು ಮಾಡಲು ಕೊಟ್ಟನು. +ಅದೂ ಸಹ ಜನಾರ್ದನ ಮೂರ್ತಿಯಾಗದೇ ಕೇಶವಮೂರ್ತಿಯಾಯಿತು. +ಅದನ್ನು ಕುಂದ್ರಗೋಣಿಯಲ್ಲಿ ಸ್ಥಾಪಿಸಿದರು. +ಮೊದಲನೆಯ ಮೂರ್ತಿಯನ್ನು ಊರಕೇರಿಯ ಪ್ರಸಿದ್ಧ ವೈದ್ಯ ಮನೆತನದ ಭೀಮವೈದ್ಯನು ಸಮುದ್ರದಲ್ಲಿ ಬಿಡಬೇಕೆಂದು ಹೊತ್ತುಕೊಂಡು ಹೋದನು. +ಅಲ್ಲಿ ಆಯಾಸವಾಗಿ ಮೂರ್ತಿಯನ್ನು ಬೆಟ್ಟದಲ್ಲಿನ ಕಳ್ಳಿಹಿಂಡಿನಲ್ಲಿ ಇಟ್ಟನು. +ಅವನಿಗೆ ಆಯಾಸದಿಂದ ನಿದ್ರೆ ಬಂತು. +ಕನಸಿನಲ್ಲಿ ಗೋಪಾಲಕೃಷ್ಣ ದೇವರು ಬಂದು, “ನಾನು ಇಲ್ಲೇ ಇರುವವ (ಗೋವು)ಕೋಡಿನಿಂದ ಕೆರೆದದ್ದರಿಂದ (ಹೊಂಡವಾಗಿ) ಗೋಳಂಗ ತೀರ್ಥವಾಯಿತು. +ಗೋರೆ ಗುಡ್ಡದ ನೆತ್ತಿಯ ಮೇಲೆಯೇ ನೀರು” ಎಂದನು. +ದೇವರ ಮೂರ್ತಿಯನ್ನು ಸಣ್ಣ ಪ್ರಮಾಣದಲ್ಲಿ(ಸಣ್ಣ ದೇವಾಲಯ ಮಾಡಿ) ಸ್ಥಾಪನೆ ಮಾಡಿದರು. +ಅದು ವೈದ್ಯ ಮನೆತನದವರ ಕುಲದೇವರಾಯಿತು. +“ಪ್ರಾರಂಭದಲ್ಲಿ ಗಣಪತಿ ಪೂಜೆ ಮಾಡದೆ, ಮೂರ್ತಿಯನ್ನು ಮಾಡಿದ್ದರಿಂದ ಹೀಗಾಯಿತು. +ಹತ್ತಿರದಲ್ಲೇ ಬಿಲ್ವವನ ಇದೆ. +ಅಲ್ಲಿ ಗೋವು ಸಗಣಿ ಹಾಕಿರುತ್ತದೆ. +ಆ ಗೋಮಯದಿಂದಲೇ ಗಣಪತಿ (ವಿಗ್ರಹ) ಮಾಡಿಕೊಂಡು, ಆನಂತರ ಕೆತ್ತಿಗೆ ಸುರುಮಾಡಬೇಕೆಂದು ಮಾಂಧಾತ ರಾಜನಿಗೆ ಕನಸು ಬಿತ್ತು. +ಅದರಂತೆ ಪೂಜೆ ಮಾಡಿದರು. +ಮರುದಿನ ಗೋಮಯ ಮೂರ್ತಿ ಇಬ್ಭಾಗವಾಗಿ ಗಣಪತಿ (ಮೂರ್ತಿ ಶಿಲೆಯದು) ಆಯಿತು. +ಅದರ ಕಲ್ಲು ವಿಶಿಷ್ಟವಾದದ್ದು. +ಅದರ ವಿಗ್ರಹದ ಮೇಲೆ ಜನಿವಾರದ ಎಳೆಯ ಹಾಗೆ ಕೆಂಪುನೀರು ಇಳಿಯಿತು. +ಮುಂದೆ ಮಾಡಿದ ಶಿಲಾ ವಿಗ್ರಹ ಜನಾರ್ದನ ಮೂರ್ತಿ ಆಯಿತು. +೬.ಎಂದೆಂದೂ ಮುಗಿಯದ ಕತೆ. +ಒಂದು ಊರಿನಲ್ಲಿ ಒಬ್ಬ ರಾಜನಿದ್ದ. +ಅವನಿಗೆ ಕತೆ ಕೇಳಬೇಕೆಂಬ ಗೀಳು ಹಿಡಿದಿತ್ತು. +ಬಹಳ ಮಂದಿ ಬಂದು ಕತೆ ಹೇಳಿದರು. +ಅವನಿಗೆ ಈ ಕತೆಗಳನ್ನು ಕೇಳಿ, "ಇವೆಲ್ಲಾ ಮುಗಿದುಹೋಗುವ ಕಥೆಗಳು, ಇವೆಲ್ಲಾ ಉಪಯೋಗದ್ದಲ್ಲ. +ಎಂದೂ ಮುಗಿಯದ ಕತೆ ಕೇಳಬೇಕು”ಅಂತ ಆಸೆ ಅವನ ಮನಸ್ಸಿನಲ್ಲಿ ಉಂಟಾಯಿತು. +ಅವನು ಮಂತ್ರಿಯ ಹತ್ತಿರ ಹೇಳಿದನು, “ಎಂದೂ ಮುಗಿಯದ ಕತೆ ಕೇಳಬೇಕೆಂಬ ಆಸೆಯಾಗಿದೆ, ನೀನೇ ಆ ಕತೆ ಹೇಳುವವರನ್ನು ಕರೆದು ತಾ, ಇಲ್ಲದಿದ್ದರೆ ನಿನ್ನನ್ನು ಅಧಿಕಾರದಿಂದ ತೆಗೆದುಹಾಕುತ್ತೇನೆ” ಎಂದನು. +ಮಂತ್ರಿಗೆ ಪೇಚಾಟವಾಯಿತು. +ಹೀಗೇ ಕೆಲವು ದಿವಸ ಅವನು ಬಹಳ ಜನರನ್ನು ಕೇಳಿದನು. +ಮುಗಿಯದ ಕತೆ ಹೇಳುವವರು ಸಿಗಲಿಲ್ಲ. +ಅಕಸ್ಮಾತ್‌ ಒಂದು ದಿನ ಒಬ್ಬ ಹಾವಾಡಿಗನು ಅವನ ಮನೆಯ ಮುಂದೆ ಹಾವನ್ನಾಡಿಸಿ ತೋರಿಸಲು ಬಂದನು. +ಬಹಳ ಹೊತ್ತು ಹಾವಿನ ಆಟ ಮಾಡಿಸಿ ತೋರಿಸಿದನು. +ಆದರೆ, ಹಿಂದೆ ಯಾವಾಗಲೂ ಸಂತೋಷದಿಂದ ಹಾವಿನ ಆಟ ನೋಡಿ ಹಣಕೊಡುತ್ತಿದ್ದ ಮಂತ್ರಿ ಸಪ್ಪೆ ಮೋರೆಯಿಂದ ಇರುವುದನ್ನು ನೋಡಿದ ಹಾವಾಡಿಗ ಕೇಳಿದನು,“ಒಡೆಯರೇ, ನಿಮ್ಮ ಮೊರೆ ಯಾಕೆ ಇಷ್ಟು ಸಪ್ಪೆಯಾಗಿದೆ? ನನಗೆ ಸಂಭಾವನೆ ಕೊಡುವುದಿಲ್ಲವೇ. . . ಇದೇನು ಹೀಗೆ?” ಅಂತ ಕೇಳಿದನು. +ಆಗ ಮಂತ್ರಿ ತನ್ನ ಕಷ್ಟವನ್ನು ಅವನ ಹತ್ತಿರ ತೋಡಿಕೊಂಡನು. +“ಓಹೋ ಇಷ್ಟೆಯೋ? ಇದಕ್ಕೆ ಯಾಕೆ ಚಿಂತೆ? +ಇಲ್ಲಿ ನೋಡಿ ಶೇಷನ ಮೇಲೆ ಭೂಮಿ ಉಂಟಲ್ಲ. +ಶೇಷನ ಮೇಲೆ ಭೂಮಿ, ಭೂಮಿಯ ಮೇಲೆ ಬುಟ್ಟಿ, ಬುಟ್ಟಿಯ ಮೇಲೆ ಶೇಷ,ಶೇಷನ ಮೇಲೆ ಭೂಮಿ, ಹೀಗೆ ಸುತ್ತು ಹಾಕುತ್ತಾ ಇದ್ದರಾಯಿತು. +ಈ ಕತೆ ಮುಗಿಯುವುದೇ ಇಲ್ಲ” ಎಂದನು. +ಮಂತ್ರಿಗೆ ಬಹಳ ಸಂತೋಷವಾಯಿತು. +ಆ ಹಾವಾಡಿಗನಿಗೆ ಬಹಳ ಸಂಭಾವನೆ ಕೊಟ್ಟು, ರಾಜನ ಹತ್ತಿರ ಅವನನ್ನು ಕರೆದುಕೊಂಡು ಹೋದನು. +ಹಾವಾಡಿಗನು ರಾಜನ ಮುಂದೆ ತನ್ನ ಹಾವಿನ ಬುಟ್ಟಿಯ ಕತೆಯ ಸುರುಳಿಯನ್ನು ಬಿಚ್ಚಿದನು. +ಒಂದು ಬಿಚ್ಚಿದ ಕತೆಯ ಸುರುಳಿ ಬೇರೆ ಬದಿ ಸುತ್ತುತ್ತ ಉಳಿಯಿತು. +ಕೇಳಿ ಕೇಳಿ ರಾಜನ ತಲೆ ಕೆಟ್ಟು,“ಸಾಕು. . . ನಿನ್ನ ಮುಗಿಯದ ಕತೆ” ಅಂತ ಹೇಳಿದನು. +ಮಂತ್ರಿ 'ಬಚಾವಾದೆ' ಎಂದು ಸಂತೋಷಪಟ್ಟನು. +೭.ಒಬ್ಬೊಬ್ಬರಿಗೆ ಒಂದು ಕೊಡೆ. +ಅಗ ಮಳೆಗಾಲವಿತ್ತು. +ಕಂಬಳಿ ಅಂಗಿ ಮಾರಯ್ಯನು, 'ಬಿಸಿಬಿಸಿ ವಡೆಗಳನ್ನು ತಿನ್ನಬೇಕು'ಅಂತ ಆಸೆ ಮಾಡಿ, ಅದಕ್ಕೆ ಬೇಕಾದ ಉದ್ದು, ಎಣ್ಣೆ, ಅಕ್ಕಿ ಎಲ್ಲವನ್ನೂ ತಂದು ಹೆಂಡತಿಯ ಹತ್ತಿರ ಕೊಟ್ಟು, “ನಾಳೆ ಕಮ್ಮಗಿನ ವಡೆ ಸುಡಬೇಕು ನಾವಿಬ್ಬರೂ ಸೇರಿಕೊಂಡು ವಡೆಕಂಬಳ ಮಾಡುವಾ” ಅಂತ ಹೇಳಿದನು. +ಅವಳು ಅಕ್ಕಿ, ಉದ್ದು ನೆನೆಯಿಸಿ ಇಟ್ಟಳು. +ಮರುದಿನ ಅವಳು ಅಕ್ಕಿಯನ್ನೂ, ಉದ್ದನ್ನೂ ಒರಳಿನಲ್ಲಿ ಹಾಕಿ ಬೀಸಿ ವಾಮಕಾಳು ಅರೆದು ಹಿಟ್ಟಿಗೆ ಸೇರಿಸಿಕೊಂಡು ಒಲೆಯ ಮೇಲೆ ಎಣ್ಣೆ ಬಂಡಿಯನ್ನಿಟ್ಟು ಬೆಂಕಿ ಮಾಡಿದಳು. +ಹದಾ ಮಾಡಿಕೊಂಡು ಹಿಟ್ಟಿನ ಉಂಡೆ ಕಟ್ಟಿಕಾದ ಎಣ್ಣಿ ಬಂಡಿಯ ವೊಲೆ ಹಾಕಿ ಬೇಯಿಸಿ ತೆಗೆದು ವಡೆಗಳನ್ನು ಮಾಡಲು ಎತ್ತುಗಡೆ ಮಾಡಿದಳು. +ಮಾರಯ್ಯನು, 'ವಡೆಗಳು ಚೆನ್ನಾಗಿ ಉಬ್ಬಿ ಬರುತ್ತಿವೆ' ಅಂತ ಮನಸ್ಸಿನಲ್ಲಿಯೇ ಸಂತೋಷಪಟ್ಟು, ಚಹಾ ಮಾಡುವಷ್ಟರಲ್ಲಿ, 'ಸೋರುವ ಗೂಡನ್ನು ದುರಸ್ತಿ ಮಾಡಬೇಕು' ಅಂತ ವಿಚಾರ ಮಾಡಿ, ಅಡಿಕೆ ಕೊನೆ ಹಾಳೆಯನ್ನೂ (ಸೋರುವ ಗುಂಡಿ ಮುಚ್ಚಲು),ಹುಲ್ಲಿನ ಕಟ್ಟನ್ನೂ ತೆಗೆದುಕೊಂಡು ಮಾಡನ್ನು ಹತ್ತಿದನು. +ಅಷ್ಟರಲ್ಲಿ ಶಾಲೆಯನ್ನು ಬಿಡುವ ಸಮಯವಾಯಿತು. +ಶಾಲೆಯ ಮಕ್ಕಳು ಸಣ್ಣಮಳೆ ಬೀಳುತ್ತಿದ್ದರಿಂದ ಕೊಡೆ ಹರಡಿಸಿಕೊಂಡು ತಮ್ಮ ತಮ್ಮ ಮನೆಗಳಿಗೆ ಹೋಗಲು ಹೊರಟು ಬರುತ್ತಿದ್ದರು. +ಮಾಡನ್ನು ರಿಪೇರಿ ಮಾಡುತ್ತಿದ್ದ ಮಾರಯ್ಯನು ಮಕ್ಕಳು ಕೊಡೆಬಿಡಿಸಿಕೊಂಡು ಬರುವುದನ್ನು ನೋಡಿ, 'ಒಬ್ಬೊಬ್ಬರಿಗೆ ಒಂದೊಂದು ಕೊಡೆ' ಅಂತ ಹೇಳಿದನು. +ಕೆಳಗೆ ವಡೆ ಸುಡುತ್ತಿದ್ದ ಹೆಂಡತಿಯು ಗಂಡನು, "ಶಾಲೆಯ ಮಕ್ಕಳಿಗೆ ಒಂದೊಂದು ವಡೆ ಕೊಡು" ಅಂತ ಹೇಳಿದನೆಂದು ತಿಳಿದು, ಹೋಗುತ್ತಿದ್ದ ಮಕ್ಕಳನ್ನು “ಬನ್ನಿ” ಅಂತ ಕರೆದು, ಅವರಿಗೆ ಒಂದೊಂದು ವಡೆ ಕೊಟ್ಟು ಕಳಿಸಿದಳು. +ಮಾರಯ್ಯನು ವಡೆ ಸುಟ್ಟು, ಚಹಾ ಮಾಡಿಕೊಂಡು ತನಗೆ 'ಬನ್ನಿ' ಎಂದು ಕರೆದಳು ಹೆಂಡತಿ ಅಂತ ಎಣಿಸಿಕೊಂಡು ಮಾಡಿನಿಂದ ಇಳಿದು ಬಂದು ಒಳಹೊಕ್ಕನು. +ಆಗ, "ವಡೆಸುಡುತ್ತಿದ್ದ ಪರಿಮಳ ಮಾಡಿನ ಮೇಲೆ ಇದ್ದ ನನ್ನ ಮೂಗಿಗೆ ಬಡಿದಿತ್ತು. +ವಡೆ ಒಂದೂ ಕಾಣುವುದಿಲ್ಲವಲ್ಲ, ಎಲ್ಲಾ ವಡೆಗಳನ್ನು ನೀನೇ ತಿಂದೆಯೋ?" ಅಂತ ಕೇಳಿದನು. +ಹೆಂಡತಿಯು, “ನೀವು ಶಾಲೆಯ ಹುಡುಗರು ಮನೆಗೆ ಹೋಗುತ್ತಿದ್ದಾಗ 'ಒಬ್ಕೊಬ್ಬರಿಗೆಒಂದೊಂದು ಕೊಡೆ' ಅಂತ ಮಾಡಿನ ಮೇಲಿಂದಲೇ ಕೂಗಿ ಹೇಳಿದ್ದಿರಲ್ಲ, ನಾನು ನೀವು ಹೇಳಿದ ಪ್ರಕಾರ ಶಾಲೆಯ ಹುಡುಗರನ್ನು ಕರೆದು, ಒಬ್ಬೊಬ್ಬರಿಗೆ ಒಂದೊಂದು ವಡೆಕೊಟ್ಟು ಕಳಿಸಿದೆ. +ಸುಟ್ಟ ವಡೆಗಳು ಇದ್ದಷ್ಟೇ ಹುಡುಗರು ಇದ್ದರು, ಅವರಿಗೆ ಸುಟ್ಟ ಎಲ್ಲಾ ವಡೆ ಕೊಡಬೇಕಾಯಿತು, ನೀವು ಹೇಳಿದಂತೆ ನಾನು ಮಾಡಿದೆ” ಅಂದಳು. +ಮಾರಯ್ಯನು, “ಹರಹರಾ. . . ನಾನು ಕೊಡೆ ಹಿಡಿದುಕೊಂಡು ಬರುತ್ತಿದ್ದ ಮಕ್ಕಳ ಕೈಯಲ್ಲಿ ಒಂದೊಂದು ಕೊಡೆ ಅಂತ ನೋಡಿದ್ದನ್ನು ಹೇಳಿದರೆ, ನೀನು ಅವರನ್ನು ಕರೆದು ಎಲ್ಲಾ ವಡೆಗಳನ್ನು ದಾನ ಮಾಡಿದೆಯಲ್ಲಾ” ಅಂತ ಅವಳಿಗೆ ಬಯ್ದನು. +೮.ಒಂದಾಣೆ ಸಾವುಕಾರ. +ಒಂದು ಊರಿನಲ್ಲಿ ಒಬ್ಬ ಸಾವುಕಾರನಿದ್ದನು. +ಅವರ ಮನೆಯಲ್ಲಿ ಕೂಲಿಯ ಕೆಲಸಕ್ಕಾಗಿ ಊಟ-ಬಟ್ಟೆ ಕೊಡುವ ಕರಾರಿನ ಮೇಲೆ ಗಂಡ-ಹೆಂಡತಿ ಇಬ್ಬರು ಕೂಲಿ ಮಾಡುತ್ತಾ ಇದ್ದರು. +ಗಂಡನ ಕೆಲಸ ದೀಪ ಹಚ್ಚುವುದು, ಕಂಬಳಿ ಹಾಸುವುದು, ದನ-ಕರುಗಳನ್ನು ಕಟ್ಟಿಹಾಕುವುದು; +ಹೆಂಡತಿಯ ಕೆಲಸ ಸದೆ (ಕಸ) ಗುಡಿಸುವುದು, ದನಗಳಿಗೆ ಅಕ್ಕಚ್ಚು(ಹಿಂಡಿಯನ್ನು ಅದ್ದು ಕದಡಿದ ನೀರು) ಕುಡಿಯಲು ನೀಡುವುದು, ತಟ್ಟೆ-ಬಟ್ಟಲು-ಪಾತ್ರೆ ತಿಕ್ಕುವುದು, ಜಗುಲಿ-ಅಂಗಳ ಸಾರಣಿ ಮಾಡುವುದಾಗಿತ್ತು. +ಒಂದು ದಿನ ಗಂಡ ಹೆಂಡತಿಗೆ ಹೇಳಿದನು, “ನನಗೆ ಒಂದು ಅಣೆ ಸಿಕ್ಕರೆ ನಾನು ಸಾವುಕಾರನಾಗುತ್ತಿದ್ದೆ.” + ಅದನ್ನು ಸಾವುಕಾರ ಕೇಳಿದನು, ಮರುದಿವಸ ಕಸದ ಸಂಗಡ ಒಂದು ಆಣೆಯನ್ನು ಸೇರಿಸಿ ಇಟ್ಟನು ಸಾವುಕಾರ. +ಕಸ ಗುಡಿಸುವಾಗ ಆ ಆಣೆ ಈ ಆಳಿನ ಹೆಂಡತಿಗೆ ಸಿಕ್ಕಿತು, ಅದನ್ನು ಅವಳು ಗಂಡನ ಹತ್ತಿರ ತಂದುಕೊಟ್ಟಳು. +ಅವನು ಆ ಆಣೆ ತಕ್ಕೊಂಡು ಇನ್ನೊಬ್ಬ ಸಾವುಕಾರನ ಹತ್ತಿರ ಹೋದನು. +“ನನಗೆ ಒಂದು ರೂಪಾಯಿ ಬೇಕಾಗಿತ್ತು, ಎಂಟು ದಿನಗಳ ಮಾತಿಗೆ (ವಾಯಿದೆಗೆ),ಒಂದಾಣೆ ಬಡ್ಡಿಯನ್ನು ಮೊದಲೇ ಕೊಡುವೆನು” ಎಂದನು. +ಆ ಸಾವುಕಾರ ಒಂದು ರೂಪಾಯಿ ಕೊಟ್ಟನು ಮತ್ತು ಅದರಂತೆ ಕರಾರು ಬರೆಸಿಕೊಂಡನು. +ಅಲ್ಲಿಂದ ಮುಂದೆ ಹೋಗಿ ಮತ್ತೊಬ್ಬ ಸಾವುಕಾರನ ಹತ್ತಿರ ಹೋದನು. +"ನನಗೆ ಎಂಟು ದಿವಸಗಳ ಮಾತಿಗೆ ಹತ್ತು ರೂಪಾಯಿ ಬೇಕಾಗಿತ್ತು, ಒಂದು ರೂಪಾಯಿ ಬಡ್ಡಿಯನ್ನು ಕೊಡುವೆ" ಅಂತ ಹೇಳಿ ಹತ್ತು ರೂಪಾಯಿ ತಕ್ಕೊಂಡನು. +ಅದರಂತೆ ಕರಾರು ಬರೆದುಕೊಟ್ಟನು. +ಮತ್ತೊಬ್ಬ ಸಾವುಕಾರನ ಹತ್ತಿರ, “ಒಂದು ಸಾವಿರ ರೂಪಾಯಿ ಎಂಟು ದಿನದ ಮಾತಿಗೆ ಬೇಕಾಗಿತ್ತು. +ಒಂದು ನೂರು ರೂಪಾಯಿ ಬಡ್ಡಿಯನ್ನು ಇಂದೇ ತಿರುಗಿ ಬರುವಾಗ ಕೊಡುವೆ” ಎಂದು ಹೇಳಿ ಸಾವಿರ ರೂಪಾಯಿ ತೆಗೆದುಕೊಂಡು, ಕರಾರು ಬರೆದುಕೊಂಡು ಅಲ್ಲಿಂದ ಹೊರಟನು. +ಮಗದೊಬ್ಬ ಸಾವುಕಾರನ ಹತ್ತಿರ ಹೋಗಿ “ನನಗೆ ಎಂಟು ದಿನಗಳ ಮಾತಿಗೆ ಹತ್ತು ಸಾವಿರ ರೂಪಾಯಿ ಬೇಕಾಗಿತ್ತು, ಒಂದು ಸಾವಿರ ರೂಪಾಯಿ ಬಡ್ಡಿಯನ್ನು ತಿರುಗಿ ಬರುವಾಗ ತಂದುಕೊಡುವೆ” ಎಂದು ಹೇಳಿ ಹತ್ತು ಸಾವಿರ ರೂಪಾಯಿ ತೆಗೆದುಕೊಂಡು ಕರಾರು ಬರೆದು ಕೊಟ್ಟು ಅಲ್ಲಿಂದ ಹೊರಟನು. +ಹಿಂದೆ ಬಂದು ಹಣ ಕೊಟ್ಟವರಿಗೆಲ್ಲಾ ಕರಾರಿನ ಪ್ರಕಾರ ಬಡ್ಡಿ ಹಣ, ಒಟ್ಟು ಒಂದುಸಾವಿರದ ನೂರಾ ಹನ್ನೊಂದು ರೂಪಾಯಿ ಮತ್ತೆ ಒಂದಾಣೆ ಕೊಟ್ಟು ಬಡ್ಡಿಯನ್ನು ಚುಕ್ತಾಮಾಡಿ ಜೋಳದ ಗುಡ್ಡಕ್ಕೆ ಹೋದನು. +ಅಲ್ಲಿನ ರೈತರನ್ನು ಕರೆದನು, “ನೀವು ಬೆಳೆದ ಜೋಳದ ಬೆಳೆ ಇನ್ನೊಂದು ತಿಂಗಳಿಗೆ ಕೈಗೆ ಬರುತ್ತದೆ, ಈಗಲೇ ಈ ವರ್ಷದಲ್ಲಿ ಬೆಳೆದ ಜೋಳವನ್ನು ನನಗೊಬ್ಬನಿಗೆ ಕೊಡಬೇಕು, ನಿಮಗೆ ಮುಂಗಡ ಎಷ್ಟು ರೂಪಾಯಿ ಕೊಡಬೇಕು ಎಂದು ಹೇಳಿದರೆ ನಾನು ಮುಂಗಡವಾಗಿ ಈಗಲೇ ಕೊಡುತ್ತೇನೆ” ಎಂದು ಹೇಳಿದನು. +ಅದರಂತೆ, ಒಂದು ನೂರು ರೂಪಾಯಿ, ಇನ್ನೂರು ರೂಪಾಯಿ ಹೀಗೆಲ್ಲಾ ಮಾತುಮಾಡಿ ಎಲ್ಲರಿಗೂ ಮುಂಗಡವಾಗಿ ಕೊಟ್ಟು, “ತಾವು ಬೆಳೆದ ಜೋಳವನ್ನೆಲ್ಲಾ ನಿಮಗೇ ಕೊಡುತ್ತೇವೆ” ಎಂದು ಕರಾರು ಬರೆಸಿಕೊಂಡನು. +ಹಾಗೇ ಅವನು ಮನೆಗೆ ಬಂದನು. +ವರ್ಷಪ್ರಂತಿ ಜೋಳದ ಬೆಳೆಯ ಗುತ್ತಿಗೆ ಪಡೆಯುವ ವ್ಯಾಪಾರಸ್ಥರು ಈ ವರ್ಷ ಸಹ ಜೋಳದ ಗುಡ್ಡಕ್ಕೆ ಹೋದರು. +ಈ ಬೆಳೆಯನ್ನು ಕೊಡುವ ಕುರಿತು ರೈತರನ್ನು ಕೇಳಿದಾಗ ಅವರು, “ನಮ್ಮ ಜೋಳವನ್ನು ಗುಂಡಪ್ಪ ಸಾವುಕಾರರಿಗೆ ಗುತ್ತಿಗೆ ಕೊಟ್ಟಾಗಿದೆ” ಎಂದು ಹೇಳಿದರು. +ಆ ವ್ಯಾಪಾರಿಗಳು ಈ ಗುಂಡಪ್ಪ ಸಾವುಕಾರನ ಮನೆಗೆ ಹೋಗಿ, “ತಾವು ಪ್ರತಿ ವರ್ಷ ಅದೇ ಜೋಳದ ಗುಡ್ಡದಲ್ಲಿ ಬೆಳೆದ ಜೋಳದ ವ್ಯಾಪಾರ ಮಾಡಿ ಹೊಟ್ಟೆ ಹೊರೆದುಕೊಳ್ಳುತ್ತಿದ್ದೆವು, ಈಗ ನೀವು ಆ ಎಲ್ಲಾ ಬೆಳೆಯನ್ನು ಖರೀದಿ ಮಾಡಿದ್ದರಿಂದ ನಮಗೆ ಜೋಳದ ವ್ಯಾಪಾರ ಮಾಡಲಿಕ್ಕೆ ಅವಕಾಶವಿಲ್ಲ. +ಆದ್ದರಿಂದ, ನೀವು ಆ ಗುತ್ತಿಗೆ ಮಾಡಿದ್ದನ್ನು ನಮಗೆ ಬಿಟ್ಟುಕೊಡಬೇಕು” ಎಂದು ಹೇಳಿದರು. +“ನಾನು ಒಬ್ಬೊಬ್ಬ ರೈತನಿಗೆ ನೂರು ಇಲ್ಲವೇ ಇನ್ನೂರು ರೂಪಾಯಿ ಕೊಟ್ಟಿದ್ದೆನು,ಆ ಹಣವನ್ನು ನನಗೆ ಕಮೀಶನ್‌ ಸಹಿತ ಕೊಟ್ಟರೆ ನಾನು ನಿಮಗೆ ಬೆಳೆಯನ್ನು ಬಿಟ್ಟುಕೊಡುವೆನು” ಎಂದು ಗುಂಡಪ್ಪ ಹೇಳಿದನು. +ಅದರಂತೆ ಆ ವ್ಯಾಪಾರಸ್ಥರು ರೈತರಿಗೆ ಕೊಟ್ಟಿದ್ದ ಹಣದ ಜೊತೆಗೆ ಇನ್ನೂರು ಮುನ್ನೂರು ರೂಪಾಯಿಗಳನ್ನು ಒಬ್ಬೊಬ್ಬ ರೈತನ ಬೆಳೆಯ ಸಲುವಾಗಿ ಕೊಟ್ಟು ಅದರಂತೆ ಜೋಳದ ಗುತ್ತಿಗೆಯನ್ನು ಕರಾರು ಮಾಡಿಕೊಂಡು ಪಡೆದುಕೊಂಡರು. +ಈ ವ್ಯಾಪಾರದ ಮುನಾಫೆಯ ಹಣದಿಂದ ತಾನು ಬೇರೆ ಬೇರೆ ಸಾವುಕಾರರ ಹತ್ತಿರಮಾಡಿಕೊಂಡಿದ್ದ ಸಾಲದ ಹಣವನ್ನು ತಿರುಗಿಕೊಟ್ಟು, ಉಳಿದ ಹಣದಿಂದ ದೊಡ್ಡ ಪ್ರಮಾಣದ ವ್ಯಾಪಾರ ಮಾಡಿ ಇವನೇ ದೊಡ್ಡ ಸಾವುಕಾರನಾದನು. +ರೋಖ ವ್ಯಾಪಾರ ಮಾಡಿ ಶ್ರೀಮಂತನಾದನು. +ಮನೆ ಕಟ್ಟಿಸಿಕೊಂಡು, ಹೊಲ ಕೊಂಡು ಹೆಂಡತಿಯೊಡನೆ ಶ್ರೀಮಂತಿಕೆಯಲ್ಲಿ ಉಳಿದನು. + ಕಚ್ಚುವ ದೇವರು. + ಓಂದು ಊರಿನಲ್ಲಿ ಒಬ್ಬ ಬಡ ಬ್ರಾಹ್ಮಣನಿದ್ದನು. +ಅವನ ಮನೆಯ ಸಮೀಪ ಒಬ್ಬ ಮುಸಲ್ಮಾನನಿದ್ದನು. +ತುಳಸೀ ಕಟ್ಟೆಯಲ್ಲಿ ತುಳಸಿ ಗಿಡವನ್ನು ನೆಟ್ಟಹಾಗೆ ಈ ಗಫೂರಸಾಬನು ಕೀಳುತ್ತಿದ್ದನು. +“ನಿಂದು ದೇವರು ಏನು ಮಾಡ್ತಾ ನೋಡ್ರೆ, ತುಳ್ಸಿ ಗಿಡ ಕೀಳ್ತೆ” ಅಂತ ಹೇಳಿ,ಮತ್ತೆ ಮತ್ತೆ ನೆಟ್ಟ ತುಳಸಿ ಗಿಡಗಳನ್ನು ಕೀಳುತ್ತಿದ್ದನು. +ಕೀಳಬೇಡ ಅಂದರೆ, “ನಿಂದು ದೇವ್ರು ಏನು ಕಚ್ತದೆ ನೋಡ್ತೆ” ಅಂತ ಹೇಳಿ ಗಫೂರಸಾಬನು ಮತ್ತೆ ತುಳಸಿ ಗಿಡವನ್ನು ಕಿತ್ತನು. +ಬ್ರಾಹ್ಮಣನು ಮತ್ತೆ ತುಳಸಿ ಗಿಡವನ್ನು ನೆಟ್ಟನು. +ಸೊಣಗಿ (ನಸುಗುನ್ನಿ) ಕಾಯಿಗಳನ್ನು ತಂದು ಅವುಗಳ ಸುಂಗನ್ನು ತುಳಸಿ ಗಿಡದ ಮೇಲೆ ಉದುರಿಸಿದನು. +ಮತ್ತೆ ತುಳಸಿಗಿಡ ಕೀಳಲು ಗಫೂರಸಾಬ ಬಂದನು. +“ಸಾಬಾ, ತುಳಸಿ ಗಿಡಕಚ್ಚುತ್ತದೆ, ನೋಡು. +ಮುಟ್ಟಿ ಕೀಳಬೇಡ” ಅಂದನು. +“ಹೇಗೆ ಕಚ್ಚುತ್ತದೆ” ಅಂತ ಸಾಬಕೇಳಿದನು. +ಮೈಗೆ ತಾಗಿದರೆ ಕಚ್ಚುತ್ತದೆ ಅಂದನು. +“ತಾಗಿಸೂದು ಬಿಟ್ಟು ಮೈಗೆ ತಿಕ್ತೆ, ಏನು ಮಾಡ್ತದೆ ನೋಡ್ತೆ” ಅಂತ ಹೇಳಿ, ಗಿಡವನ್ನು ಕಿತ್ತು ಅದರಿಂದ ಮೈಯನ್ನೆಲ್ಲಾ ತಿಕ್ಕಿದನು. +ನೊಣಗಿ ಸುಂಗು ಮೈಗೆಲ್ಲ ಬಡಿದು ತುರಿಕೆ ವಿಪರೀತವಾಯಿತು. +ಸಾಬನು ತುರಿ ತಡೆಯಲಾರದೆ ಬೊಬ್ಬೆ ಹೊಡೆದನು. +“ಅಯ್ಯಯ್ಯೋ ಬಟ್ಟಾ, ನಿಂದು ದೇವ್ರಿಗೆ ಇನ್ನು ಕೀಳುವುದಿಲ್ಲ, ಕೈಮುಗಿತೆ” ಅಂತ ಕೈಮುಗಿದು ಹೇಳಿದನು. +'ಕರಕುರು ಯಾರಕ್ತ? ಕತ್ತಿ ಮಸೆಯುವವಳು ಯಾರಕ್ಕ?' +ಒಂದು ಊರಿನಲ್ಲಿ ಗಂಡ-ಹೆಂಡತಿ ಎರಡು ಜನ ಮಕ್ಕಳ ಸಂಗಡ ಸಂಸಾರ ಮಾಡಿಕೊಂಡಿದ್ದರು. +ಹಿರಿಯಳಾದ ಹುಡುಗಿಯನ್ನು ಮದುವೆ ಮಾಡಿಕೊಟ್ಟರು. +ಅವಳನ್ನು ತವರುಮನೆಗೆ ಕರೆತರುವುದಕ್ಕಾಗಿ ತಮ್ಮನು ಹೊರಟನು. +ಅವನಿಗೆ ಅಕ್ಕನ ಮನೆಯ ಊರಿಗೆ ಹೋಗುವ ಹಾದಿ ಸಿಕ್ಕಲಿಲ್ಲ. +ದಾರಿ ತಪ್ಪಿ ರಾಕ್ಷಸಿಯ ಮನೆಗೆ ಹೋಗುವಷ್ಟರಲ್ಲಿ ಸಂಜೆಯಾಯಿತು. +ರಾಕ್ಷಸಿ ದೂರದಿಂದ ಅವನನ್ನು ನೋಡಿದಳು. +“ಆಹಾ!ಎಳೇ ಸೌತೆಕಾಯಿ; +ಇವನನ್ನು ನಾನೇ ತಿನ್ನಬೇಕು” ಅಂತ ತನ್ನ ನಿಜರೂಪದಲ್ಲೇ ಬಾಗಿಲಿನಲ್ಲಿ ಬಂದು ಕೇಳಿದಳು. +“ಏ ತಮ್ಮಾ, ಎಲ್ಲಿಂದ ಬಂದೆ? +ಕಾಲು ತೊಳೆದುಕೊಂಡು ಬಾ” ಅಂತ ಹೇಳಿ,ತಂಬಿಗೆಯಲ್ಲಿ ನೀರನ್ನು ತಂದಿಟ್ಟಳು. +ತಮ್ಮನು ಕಾಲು ತೊಳೆದುಕೊಂಡು ಬರುವಷ್ಟರಲ್ಲಿ ದೀಪ ತಂದಿಟ್ಟು ಒಳಗೆ ಅಡುಗೆ ಮಾಡಲಿಕ್ಕೆ ಹೋದಳು. +ಅನ್ನ-ಪಾಯಸ ಮಾಡಿ ಬಡಿಸಿ ಇಟ್ಟು, ತಮ್ಮನನ್ನು ಒಳಗೆ ಕರೆದಳು. +ರಾಕ್ಷಸಿಯ ರೂಪವನ್ನು ನೋಡಿ ತಮ್ಮನು ಇವಳು ತನ್ನನ್ನು ತಿನ್ನುವಳೆಂದು ಹೆದರಿ ಊಟ ಮಾಡಲಿಲ್ಲ. +“ತಮ್ಮಾ, ನಿನಗೆ ಏನು ಬೇಕೋ ಅದನ್ನು ಹಾಕಿಸಿಕೊಂಡು ಬೇಕಷ್ಟು ಊಟ ಮಾಡು,ನಾನು ನಿನ್ನ ಅಕ್ಕನೇ ಹೌದು” ಅಂತ ಹೇಳಿದಳು. +ತಮ್ಮನು ಊಟ ಮಾಡಿದ ಹಾಗೇ ಮಾಡಿ, “ನನಗೆ ಇಷ್ಟೇ ಸಾಕು” ಅಂತ ಹೇಳಿ,ಕೈತೊಳೆದುಕೊಂಡು ಬಂದುಬಿಟ್ಟನು. +ಅವನಿಗೆ ಮಲಗಲಿಕ್ಕೆ ಹಸೆ ಹಾಕಿಕೊಟ್ಟಳು. +"ತಮ್ಮಾ. . . ಹಸೆ ಹಾಕಿದ್ದೇನೆ ಮಲಗು" ಅಂತ ಹೇಳಿದಳು. +ಅವನು ಮಲಗಿದನು. +ಆದರೆ,ಹೆದರಿಕೆಯಿಂದ ನಿದ್ರೆ ಬರಲೇ ಇಲ್ಲ. +ರಾಕ್ಷಸಿ ಅವನನ್ನು ಕಡಿಯಲಿಕ್ಕೆ ಸಾವಕಾಶವಾಗಿ ಕತ್ತಿಯನ್ನು ಮಸೆಯುತ್ತಿದ್ದಳು. +ಆಗ ತಮ್ಮನು, “ಕರ ಕುರು ಯಾರಕ್ಕ? +ಕತ್ತಿ ಮಸೆಯುವವಳು ಯಾರಕ್ಕ?” ಅಂತ ಕೇಳಿದನು. +“ಏ ತಮ್ಮಾ ನಿನಗೆ ನಿದ್ರೆ ಬರಲಿಲ್ಲವೇನೋ? +ನಿನಗೆ ಏನನ್ನು ತಿನ್ನುವ ಆಸೆಯಾಗಿದೆ?” ಅಂತ ಕೇಳಿದಳು. +ಆಗ ಅವನು, “ನನಗೆ ಕೋಳಿ ತುಕಡಿ ಮತ್ತು ಒಡೆ-ರೊಟ್ಟಿ ತಿನ್ನಬೇಕೆಂಬ ಆಸೆಯಾಗುತ್ತಿದೆ” ಎಂದನು. +ಆಗ ಅವಳು ಕೋಳಿಯನ್ನು ಕೊಚ್ಚಿ ತುಕಡಿ ಪದಾರ್ಥ ಮಾಡಿದಳು. +ಒಡೆ-ರೊಟ್ಟಿಸುಟ್ಟು ತಮ್ಮನಿಗೆ ಬಡಿಸಿ ಊಟಕ್ಕೆ ಕರೆದಳು. +ಊಟವಾದ ಕೂಡಲೇ, “ತಮ್ಮಾ, ಈಗ ಮಲಗಿಕೋ” ಎಂದಳು. +ಆಗ ಅವನು ಹೋಗಿ ಹಾಸುಗೆಯಲ್ಲಿ ಮಲಗಿಕೊಂಡನು. +ರಾಕ್ಷಸಿ ಹಿತ್ತಲ ಕಡೆ ಹೋಗಿ ಮತ್ತೆ ಕತ್ತಿ ಮಸೆದಳು. +ಆಗ ಅವನು ಮತ್ತೆ, "ಕರ ಕರು ಯಾರಕ್ಕ? +ಕತ್ತಿ ಮಸೆಯುವವಳು ಯಾರಕ್ಕ?"ಅಂತ ಕೇಳಿದನು. +“ಏ ತಮ್ಮಾ, ನಿನಗೆ ಇನ್ನೂ ನಿದ್ರೆ ಬರಲಿಲ್ಲವೇನೋ? +ನಿನಗೆ ಏನನ್ನು ತಿನ್ನುವ ಆಸೆಯಾಗಿದೆಯೋ?” ಅಂತ ಕೇಳಿದಳು. +“ನನಗೆ ಹೇಲು ಬರುತ್ತಿದೆ, ನಾನು ಹೊರಗಡೆ ಹೋಗಬೇಕು” ಅಂದನು. +ಅವಳು ಅವನನ್ನು ಹಿತ್ತಿಲ ಕಡೆಗಿನ ಬಾಗಿಲಿನಿಂದ ಕರೆದುಕೊಂಡು ಹೋಗಿ, “ತೀರಾ ಮುಂದೆ ಹೋಗಬೇಡ, ನಾನು ನಿನಗೆ ಹೆದರಿಕೆಯಾಗಬಾರದು ಅಂತ ನಿನ್ನ ಹತ್ತಿರವೇ ನಿಂತುಕೊಳ್ಳುತ್ತೇನೆ” ಅಂತ ಅವನು ಓಡಿಹೋಗಬಹುದೆಂಬ ಹೆದರಿಕೆಯಿಂದ ಹತ್ತಿರವೇ ನಿಂತಳು. +ಅವನು ಅಲ್ಲಿ ಕುಳ್ಳಿರದೆ ಮುಂದೆ ಹೋಗಲಿಕ್ಕೆ ಹವಣಿಸುತ್ತಾನೆ. +ಅವಳು, “ಇಲ್ಲೇ ಕುಳಿತುಕೋ, ಮುಂದೆ ಹೋಗಬೇಡ” ಅಂತ ಹೇಳಿ ಅವನನ್ನು ಅಲ್ಲಿ ಕುಳ್ಳಿರಿಸಿದಳು. +ಅವನು, “ನನಗೆ ಇಲ್ಲೇ ನೀರು ತಂದುಕೊಡು” ಅಂದನು. +ಅವಳು, “ಬೇಡ ಒಳಗೆಬಾ, ಅಲ್ಲೇ ಕುಂಡೆ ತೊಳೆದುಕೋ” ಅಂದಳು. +ಅವನು, “ನಾನು ಒಳಗೆ ಬರುವುದಿಲ್ಲ, ಇಲ್ಲಿಗೇ ನೀರನ್ನು ತೆಗೆದುಕೊಂಡು ಬಾ”ಅಂತ ಹೇಳಿದನು. +ಅವಳು ಕೂಡಲೇ ನೀರನ್ನು ತೆಗೆದುಕೊಂಡು ಬರಲಿಕ್ಕೆ ಮನೆಗೆ ಬಂದಳು. +ಅವಳು ನೀರನ್ನು ತರಲಿಕ್ಕೆಂದು ಒಳಗೆ ಬಂದ ಕೂಡಲೇ ಅವನು ಓಡಿ ನಡೆದನು. +ತಿರುಗಿ ಬಂದ ಅವಳು ಅವನು ಓಡಿಹೋದನೆಂದು ತಿಳಿದು, “ಅಯ್ಯೋ, ದೇವರೇ,ಎಳೆಯ ಸೌತೆಕಾಯಿಯಾಗಿತ್ತು. +ನಾನು ತಿನ್ನುತ್ತಿದ್ದೆನಲ್ಲ, ಓಡಿಹೋಗಿಬಿಟ್ಟ” ಅಂತ ಬೊಬ್ಬೆಹೊಡೆದಳು. +ಅವನು ತಿರುಗಿ ಮನೆಗೆ ಬಂದು ಮುಟ್ಟಿದನು. +ಕಸದ ಬುಟ್ಟಿ. +ಶಾಲೆಯಲ್ಲಿ ಮಾಸ್ತರರು ಪಾಠ ಮಾಡುತ್ತಾ ಇದ್ದರು. +ಆಗ ಅವರು, “ನಾಳೆ ಬರುವಾಗ ಎರಡು ಇಂಗ್ಲಿಷ್‌ ಶಬ್ದ ಮತ್ತು ಒಂದು ಕನ್ನಡ ಶಬ್ದ ಬಾಯಿಪಾಠ ಮಾಡಿಕೊಂಡು ಬನ್ನಿ”ಎಂದು ಹೇಳಿದರು. +ಎಲ್ಲಾ ವಿದ್ಯಾರ್ಥಿಗಳು ತಮ್ಮ ತಮ್ಮ ಮನೆಗೆ ಹೋಗಿ ಶಬ್ದಗಳನ್ನು ತಿಳಿದುಕೊಂಡು ಬಾಯಿಪಾಠ ಮಾಡುತ್ತಾ ಇದ್ದರು. +ತಿಮ್ಮ ಎಂಬ ಹೆಡ್ಡನಿಗೆ ಏನೂ ಗೊತ್ತಿರಲಿಲ್ಲ. +ಅವನ ಅಪ್ಪನು ಹೊಲದಿಂದ ಬಂದವನು ಟೀ ಸಹಿತ ಕುಡಿದಿರಲಿಲ್ಲ. +ಆಗ ತಿಮ್ಮನು ಅಪ್ಪನಿಗೆ,“ನನಗೆ ಎರಡು ಇಂಗ್ಲೀಷ್‌ ಶಬ್ದ ಹೇಳಿಕೊಡು, ಮಾಸ್ತರರು ಅದನ್ನು ಬಾಯಿಪಾಠ ಮಾಡಿಕೊಂಡು ಬರಲಿಕ್ಕೆ ಹೇಳಿದ್ದಾರೆ” ಎಂದನು. +ಚಹವನ್ನೂ ಸಹ ಕುಡಿಯದೆ ಗದ್ದೆ ಕೆಲಸ ಮಾಡಿಕೊಂಡು ಬಂದ ಅಪ್ಪನು ಮಗನ ಈ ಪ್ರಶ್ನೆ ಕೇಳಿ ಸಿಟ್ಟಿಗೆದ್ದನು. +ಅವನು, “ಶಟ್‌ಅಪ್‌' ಎಂದು ಮಗನಿಗೆ ಹೇಳಿದನು. +ಹುಡುಗನು,'ಒಂದು ಇಂಗ್ಲಿಷ್‌ ಶಬ್ದ ಸಿಕ್ಕಿತು' ಎಂದು ಹೇಳಿ, ಅದನ್ನು ಬಾಯಿಪಾಠ ಮಾಡುತ್ತಿದ್ದನು. +ಹೊರಗಡೆಯಲ್ಲಿ ವಿದ್ಯಾರ್ಥಿಗಳು ಕ್ರಿಕೆಟ್‌ ಆಟ ಆಡುತ್ತಿದ್ದರು. +ಅವರಲ್ಲಿ ಯಾರೋ ಒಬ್ಬನು ಬ್ಯಾಟ್‌ನಿಂದ ಚೆಂಡನ್ನು ಹೊಡೆದನು. +ಆಗ ಹುಡುಗರೆಲ್ಲರೂ, “ಲವ್ಲಿ ಶಾಟ್‌. . . ಲವ್ಲಿ ಶಾಟ್‌” ಅಂತ ಕೂಗಾಡಿದರು. +ಆ ಕೂಗು ಇವನಿಗೆ ಕೇಳಿತು. +ಇವನು, “ಶಟ್‌ಅಪ್‌. . . ಲವ್ಲಿ ಶಾಟ್‌.. . ” ಅಂತ ಬಾಯಿಪಾಠ ಮಾಡುತ್ತಾ ಮನೆಗೆ ಬಂದನು. +ಮನೆಯ ಮೂಲೆಯಲ್ಲಿ ಒಂದು ಡಸ್ಟ್‌ ಬಿನ್‌ ಇತ್ತು. +ಇವನು, "ತಾಯಿಯ ಹತ್ತಿರ ಅದೇನಮ್ಮಾ?" ಅಂತ ಕೇಳಿದನು. +ತಾಯಿಯು, "ಅದು ಕಸದ ಬುಟ್ಟಿ "ಎಂದು ಹೇಳಿದಳು. +ತಿಮ್ಮನು ಬೆಳಗಾಗುವ ತನಕ ಅದನ್ನು ಬಾಯಿಪಾಠ ಮಾಡಿದನು. +ಹುಡುಗರು ಬೆಳಗ್ಗೆ ಸ್ಕೂಲಿಗೆ ಹೋದರು. +ಎಲ್ಲಾ ಹುಡುಗರು ತಾವು ಗಟ್ಟುಮಾಡಿದ್ದನ್ನು ಗುರುಗಳಿಗೆ ಹೇಳಿದರು. +ತಿಮ್ಮನ ಸರತಿ ಬಂತು. +“ಹೇಳೊ ತಿಮ್ಮ. . . ನೀನೇನು ಗಟ್ಟುಮಾಡಿದ್ದೀ?”ಅಂತ ಮಾಸ್ತರರು ತಿಮ್ಮನ ಹತ್ತಿರ ಕೇಳಿದರು. +ಅವನು, “ಶಟ್‌ಅಪ್‌. . . ” ಎಂದನು. +ಮಾಸ್ತರರಿಗೆ ಸಿಟ್ಟು ಬಂದು, “ನನಗೆ ಶಟ್‌ಅಪ್‌, ಸುಮ್ಮನಿರು ಅನ್ನುತ್ತಿಯಲ್ಲಾ. . . ”ಅಂತ ಹೇಳಿ, ಅವನ ಕೆನ್ನೆಗೆ ಜೋರಾಗಿ ಬಾರಿಸಿದರು. +ಬಾರಿಸಿದ ಕೂಡಲೇ, "ಲವ್ಲಿಶಾಟ್‌. . . !" ಅಂದನು. +ಮಾಸ್ತರರು, “ಶಾಲೆ ಅಂದರೆ ಏನೆಂದು ತಿಳಿದೆ, ನೀನು ಕಲಿತಿದ್ದಾದರೂ ಏನು?”ಅಂತ ಕೇಳಿದರು. +“ಕಸದ ಬುಟ್ಟಿ” ಅಂದನು. +ಹುಡುಗರು ನಗುತ್ತಿದ್ದಂತೆಯೇ ಮಾಸ್ತರರು ತಿಮ್ಮನ ಹೆಡ್ಡತನಕ್ಕೆ ದುಃಖ ಮಾಡಿದರು. +೧೨.ಕಾಚಯ್ಯ ಪೋಚಯ್ಯ ಒಂದು ಉರಿನಲ್ಲಿ ಕಾಚಯ್ಯ ಮತ್ತು ಪೋಚಯ್ಯ ಎಂಬ ಇಬ್ಬರು ಅಣ್ಣ-ತಮ್ಮಂದಿರು ಇದ್ದರು. +ಒಂದಾನೊಂದು ದಿವಸ ಅವರ ಮನಸ್ಸಿನಲ್ಲಿ ಏನು ಆಲೋಚನೆಯಾಯಿತೆಂದರೆ,"ನಮಗೆ ಈ ಕಾಚಯ್ಯ-ಪೋಚಯ್ಯ ಎಂಬ ಹೆಸರು ಬೇಡ, ಬೇರೆ ಹೆಸರನ್ನು ಇಟ್ಟುಕೊಳ್ಳಬೇಕು. + ಈಶ್ವರನ ಹತ್ತಿರ ನಾವು ಹೋಗಬೇಕು. +ಅವನ ಈಶ್ವರ ಎಂಬ ಹೆಸರನ್ನು ತೆಗೆಸಿಬಿಟ್ಟು ನಾವು ಅದನ್ನು ತೆಗೆದುಕೊಂಡು 'ದೊಡ್ಡ ಈಶ್ವರ, ಸಣ್ಣ ಈಶ್ವರ'ಎಂದು ನಮ್ಮ ಹೆಸರು ಇಟ್ಟುಕೊಳ್ಳಬೇಕು" ಎಂದು ಆಲೋಚನೆ ಮಾಡಿದರು. +ಹೀಗೆ ಆಲೋಚನೆ ಮಾಡಿ ಈಶ್ವರನಿದ್ದಲ್ಲಿಗೆ ಹೋದರು. +'ಇವರು ಬರುವುದು ಯಾಕೆ?'ಎಂದು ಈಶ್ವರನಿಗೆ ತಿಳಿಯಿತು. +'ನನ್ನ ಹೆಸರನ್ನು ಪಡೆಯಬೇಕೆಂದು ಬರುತ್ತಿರುವರಲ್ಲ ಇವರು?ಇವರಿಗೆ ಸರಿಯಾಗಿ ಮರ್ಯಾದೆ ಮಾಡಿ ಕಳಿಸಬೇಕು' ಎಂದು ಆಲೋಚನೆ ಮಾಡಿ, ಅವರು ಬರುವ ದಾರಿಯಲ್ಲಿಯೇ ಸೌದೆ ಹೊರೆ ಹೊತ್ತುಕೊಂಡು ಬರುತ್ತಾ ಇದ್ದನು. +"ನೀವು ಎಲ್ಲಿಗೆ ಹೋಗುವವರು?"ಎಂದು ಕೇಳಿದನು. +"ನಾವು ಈಶ್ವರನಿರುವಲ್ಲಿಗೆ ಹೋಗುವವರು" ಎಂದರು. +"ನಾನೇ ಈಶ್ವರ" ಎಂದನು ಈಶ್ವರ. +ಈಶ್ವರನು ಸೌದೆ ಹೊರೆ ಹೊತ್ತಿದ್ದನ್ನು ನೋಡಿಕೊಂಡು, "ಈ ಕೆಲಸ ನಮಗೆ ಬೇಡ, ಈಶ್ವರನ ಹೆಸರನ್ನು ತೆಗೆದುಕೊಂಡರೆ ನಾವು ಸೌದೆ ಹೊರೆ ಹೊರಬೇಕು, ಇದು ಯಾರಿಗೆ ಬೇಕು? +ಆದ್ದರಿಂದ, ನಾವು ಬಹಳ ಶ್ರೀಮಂತನಾದ ಕುಬೇರನ ಹೆಸರನ್ನು ತೆಗೆದುಕೊಳ್ಳಬೇಕು" ಅಂತ ಹೇಳಿ ಕುಬೇರನಿದ್ದಲ್ಲಿಗೆ ಹೋದರು. +ಇವರು ಅಲ್ಲಿಗೆ ಹೊರಟ ವಿಷಯ ಕುಬೇರನಿಗೆ ಗೊತ್ತಾಯಿತು. +'ಇವರಿಗೆ ಸರಿಯಾಗಿ ಮರ್ಯಾದೆ ಮಾಡಬೇಕು'ಎಂದು ಕುಬೇರನ ಮನಸ್ಸಿನಲ್ಲಿ ಬಂತು. +ಅವನು ಕಸಬರಿಕೆಯನ್ನು ಹಿಡಿದುಕೊಂಡು ಕುಪ್ಪೆ(ತಿಪ್ಪ)ಯ ಕಸ ಗುಡಿಸುತ್ತಿದ್ದನು. +ಇವರು ಅಲ್ಲಿಗೆ ಹೋದರು. +"ನೀವು ಎಲ್ಲಿಗೆ ಹೋಗುವವರು?" ಎಂದು ಕುಬೇರನು ಕೇಳಿದನು. +"ನಾವು ಕುಬೇರನಿರುವಲ್ಲಿಗೆ ಹೋಗಲು ಬಂದವರು" ಎಂದು ಹೇಳಿದರು. +"ಕುಬೇರ ನಾನೇ. . . "ಎಂದು ಕುಬೇರ ಹೇಳಿದನು. +“ಕುಬೇರನ ಹೆಸರನ್ನು ತೆಗೆದುಕೊಂಡು ನಾವು ಇಟ್ಟುಕೊಂಡರೆ ನಾವು ಕುಪ್ಪೆ(ತಿಪ್ಪ)ಯ ಕಸ ಗುಡಿಸಬೇಕಾಗುತ್ತದೆ. +ಈ ಕೆಲಸ ನಮಗೆ ಬೇಡ” ಎಂದು ಹೇಳಿದರು. +ಆಲೋಚನೆ ಮಾಡಿಕೊಂಡ ಅವರ ಮನಸ್ಸಿಗೆ- "ನಾವು ಮೃತ್ಯುಂಜಯ ಎಂಬ ಹೆಸರನ್ನು ಇಟ್ಟುಕೊಂಡು ಮೃತ್ಯುವನ್ನೇ ಗೆದ್ದು ಬಿಡಬೇಕು” ಎಂಬ ವಿಚಾರ ಬಂತು. +ಅಲ್ಲಿಂದ ಹೊರಟು ಹೋದರು. +ಸೀದಾ ಮೃತ್ಯುಂಜಯನನ್ನು ಅರಸುತ್ತಾ ಹೋದರು. +ಇವರು ಬರುವುದು ಮೃತ್ಯುಂಜಯನಿಗೆ ಗೊತ್ತಾಯಿತು. +ಈಗ ಸಾಯುವವನೋ, ಇನ್ನೊಂದು ಗಳಿಗೆಗೆ ಸಾಯುವವನೋ ಅನ್ನುವ ಪರಿಸ್ಥಿತಿಯಲ್ಲಿ ಅವನು ಮಲಗಿಕೊಂಡಿದ್ದನು. +ಇವರು ಹೋದವರು, “ಮೃತ್ಯುಂಜಯ ಎಲ್ಲಿದ್ದಾನೆ?” ಅಂತ ಕೇಳಿದರು. +ಮೃತ್ಯುಂಜಯ ಮಾತಾಡಲಿಲ್ಲ. +ಅಲ್ಲಿ 'ಮೃತ್ಯುಂಜಯ' ಎಂದು ಬರೆದ ಹಲಗೆ ತೂಗಾಡುತ್ತಿತ್ತು. +ಆಗ ಅವನೇ ಮೃತ್ಯುಂಜಯ ಎಂದು ಅವರು ಕಂಡುಕೊಂಡರು. +“ಈ ಹೆಸರು ನಮಗೆ ಬೇಡವೇ ಬೇಡ. +ಮೃತ್ಯುಂಜಯ ಎಂದು ಹೆಸರಿಟ್ಟುಕೊಂಡರೆ ಈ ರೀತಿ ನರಳಿ ನರಳಿ ಸಾಯಬೇಕಾಗುತ್ತದೆ, ಈ ಹೆಸರಿಟ್ಟುಕೊಂಡರೆ ಸಾವೂ ಇಲ್ಲ, ಬದುಕೂ ಇಲ್ಲ ಎಂಬ ಪರಿಸ್ಥಿತಿ. +ನಮಗೆ ಹಿಂದೆ ನಮ್ಮ ತಾಯಿ-ತಂದೆ ಏನು ಹೆಸರಿಟ್ಟಿದ್ದಾರೋ ಅದೇ ನಮಗೆ ಅಡ್ಡಿ ಇಲ್ಲ” ಎಂದು ಅವರು ಆಲೋಚನೆ ಮಾಡಿಕೊಂಡು ಪುನಃ ತಿರುಗಿ ತಮ್ಮ ಮನೆಗೆ ಬಂದು ಕಾಚಯ್ಯ-ಪೋಚಯ್ಯ ಎಂಬ ಹೆಸರಿನಿಂದಲೇ ಬಹಳಕಾಲ ಸುಖದಿಂದ ಉಳಿದರು. +೧೩.ಕುಮರೆ ಮುಯಡಾ. +ಒಬ್ಬ ಗೌಡನು ಊರ ಹೊರಗೆ ತಿರುಗಾಡಲಿಕ್ಕೆ ಹೊರಟಿದ್ದನು. +ಒಂದು ಹುಲಿ ಅಡವಿಯಿಂದ ಬಂದದ್ದು ದಾರಿಯ ಮೇಲೆ ಅವನಿಗೆ ಸಿಕ್ಕಿತು. +ಹುಲಿ ಗೌಡನ ಹತ್ತಿರ, "ನನ್ನ ಗದ್ದೆಯ ಸಾಗುವಳಿ ಮಾಡುತ್ತೀಯಾ?" ಅಂತ ಕೇಳಿತು. +ಗೌಡನು 'ಹೂಂ' ಎಂದನು. +ಅವನು ಗದ್ದೆಯನ್ನು ಹೂಡಿ, ರೆಂಟೆಹೊಡೆದು ಸಾಲುಮಾಡಿ ಬಿತ್ತಿ, ಆಳು-ಕಾಳುಗಳನ್ನು ತೆಗೆದುಕೊಂಡು ನೆಟ್ಟಿ (ನಾಟಿ) ಮಾಡಿಸಿದನು. +ಬೆಳೆ ಬಂತು. +ತಾನೂ ಕೊಯ್ದನು. +ಆಳುಗಳನ್ನೂ ಹಚ್ಚಿ ಕೊಯ್ಯಿಸಿದನು. +ಪೈರನ್ನು ಕೊಯ್ದ ಗೊಣಬೆ (ಬಣವೆ) ಹಾಕಿದನು. +ಗೊಣಬೆಯನ್ನು ಮುರಿದು, ಪೈರನ್ನು ಬಡಿದು ಭತ್ತವನ್ನು ಒಕ್ಕಿ ರಾಸಿ ಮಾಡಿದನು. +ರಾಸಿಮಾಡಿ, ಕೊಳಗ ಇಟ್ಟು ಅಳೆಯಬೇಕಾದರೆ ಅವನ ಮೈಯೆಲ್ಲಾ ಬೆವರಿತು. +ಅವನು ಭತ್ತ ಅಳೆಯುವಾಗ ಗದ್ದೆಯ ಒಡೆಯನಾದ ಹುಲಿ ಬಂದು ಕೂತಿತ್ತು. +ಅವನು ಬೆವರನ್ನು ತೆಗೆದು ಒಗೆಯುವಾಗ ಆ ಬೆವರಿನ ನೀರು ಹುಲಿಯ ಬಾಯಲ್ಲಿ ಹೋಗಿ ಬಿತ್ತು. +ಆಗ ಹುಲಿ, 'ಇವನ ಬೆವರೇ ಇಷ್ಟು ರುಚಿ; +ಇವನ ತುಕಡಿ (ಮಾಂಸ)ಎಷ್ಟು ರುಚಿಯಾಗಿರಬಹುದು?' ಅಂತ ಮನಸ್ಸಿನಲ್ಲಿ ವಿಚಾರ ಮಾಡಿತು. +ಪೂರಾ ಭತ್ತದ ಅಳತೆಯಾಯಿತು. +ಹುಲಿಯು ಗೌಡನಿಗೆ ಭತ್ತದ ಪಾಲನ್ನು ಕೊಡಬೇಕಾದರೆ ಹೇಳಿತು,“ಗೌಡ, ಒಂದು ಕೊಳಗ ಭತ್ತ ತಕೊಂಡು ಹೋಗಿ ಅಕ್ಕಿ ಮಾಡಿಕೊಂಡು ತಿಂದುಕೊಂಡು ಬಾ, ನಾನು ನಿನ್ನನ್ನು ತಿನ್ನಬೇಕು ಅಂತ ಆಸೆಯಾಗಿದೆ” ಎಂದಿತು. +ಗೌಡನು ಮನೆಗೆ ಹೋಗಿ ಚಿಂತೆ ಮಾಡುತ್ತಾ ಕೂತುಕೊಂಡನು. +ಅವನು ಚಿಂತೆಮಾಡುತ್ತಾ ಕೂತಿರಬೇಕಾದರೆ ಒಂದು ನರಿ ಬಂತು. +“ಓಹೋ ಗೌಡ, ನೀನು ಬಹಳ ಚಿಂತೆಯ ಮೇಲೆ ಕೂತುಕೊಂಡಿದ್ದೀಯಲ್ಲಾ, ಇದಕ್ಕೆ ಕಾರಣವೇನು?” ಅಂತ ಕೇಳಿತು. +“ಏನಿಲ್ಲ, ನನ್ನ ಒಡೆಯ ಅಂದರೆ ಹುಲಿ, ಒಂದು ಕೊಳಗ ಭತ್ತ ಕೊಟ್ಟು ಇದರ ಅಕ್ಕಿ ಮಾಡಿ,ರೊಟ್ಟಿ ಮಾಡಿ ತಿಂದುಕೊಂಡು ಬಾ, ನಾನು ನಿನ್ನನ್ನು ತಿನ್ನುತ್ತೇನೆ ಅಂತ ಹೇಳಿದ್ದಾನೆ. ” +“ಓಹೋ. . . ಅಷ್ಟೇ ತಾನೆ? +ನೀನೇನೂ ಹೆದರಬೇಡ; +ನಿಮ್ಮ ಮನೆಯಲ್ಲಿ ಗೊಳ್ಳಿಯ ಚಿಪ್ಪು ಉಂಟೋ ಹೇಗೆ?” ಎಂದು ನರಿ ಕೇಳಿತು. +“ಆ ಗೊಳ್ಳಿಯ ಚಿಪ್ಪುಗಳ ಎರಡು ಸರಗಳನ್ನು ತಯಾರು ಮಾಡು.” + ಗೌಡನು ಗೊಳ್ಳಿಯ ಎರಡು ಸರ ಮಾಡಿದನು. +“ಗೌಡ, ನೀನು ಹೆದರಬೇಡ, ನಿಮ್ಮ ಮನೆಯಲ್ಲಿ ಕೋಳಿಗಳಿದ್ದರೆ ನನಗೆ ಒಂದು ಕೋಳಿ ಕೊಡುವಿಯೋ ಹೇಗೆ?” ಅಂತ ಕೇಳಿತು ನರಿ. +“ಓಹೋ. . . ಕೋಳಿಕೊಡುತ್ತೇನೆ” ಅಂತ ಹೇಳಿ ಒಂದು ಕೋಳಿಯನ್ನು ನರಿಗೆ ಕೊಟ್ಟನು. +ನರಿ, “ನಾನು ಈ ಕೋಳಿ ತಿಂದು ಬರುತ್ತೇನೆ, ನೀನು ಅಡುಗೆ ಮಾಡಿ, ಊಟಮಾಡು” ಅಂತ ಹೇಳಿ ನರಿ ಕೋಳಿಯನ್ನು ಬಾಯಲ್ಲಿ ಕಚ್ಚಿಕೊಂಡು ಓಡಿತು. +ಗೌಡನು ಅಡುಗೆ ಮಾಡಿ ಊಟ ಮಾಡಿದನು. +ನರಿ ಕೋಳಿಯನ್ನು ತಿಂದುಕೊಂಡು ಬಂದಿತು. +ಗೌಡನು ಮಾಡಿಟ್ಟ ಗೊಳ್ಳಿ ಚಿಪ್ಪಿನ ಎರಡು ಸರಗಳನ್ನು ಒಂದೊಂದು ಹಿಂಗಾಲಿಗೆ ಕಟ್ಟಿಕೊಂಡಿತು ನರಿ. +“ತೆಂಗಿನ ಗರಿಗಳ ಎರಡು ಸೂಡಿ(ಪಂಜು)ಗಳನ್ನು ಕಟ್ಟು” ಎಂದಿತು. +ಅವನು ಎರಡು ಸೂಡಿಗಳನ್ನು ಕಟ್ಟಿ ತಯಾರು ಮಾಡಿದನು. + “ಗೌಡ. . . ಎರಡು ಸೂಡಿಗಳಿಗೆ ಬೆಂಕಿ ಹಚ್ಚಿ ನನ್ನ ಮುಂಗಾಲುಗಳ ಪಾದಗಳಿಗೆ ಒಂದೊಂದನ್ನು ಕೊಡು” ಅಂದಿತು. +ಅವನು ಅದು ಹೇಳಿದಂತೆ ಕೊಳ್ಳಿ ಮಾಡಿ ಅವನ್ನು ನರಿಯ ಮುಂಗಾಲು ಪಾದಗಳಿಗೆ ಹಿಡಿಸಿದನು. +“ಗೌಡಾ. . . ನನ್ನ ಮುಂದೆ ನೀನು ನಡೆ” ಅಂದಿತು. +ಸರಿ ಆ ಗೊಳ್ಳಿ ಸರಗಳನ್ನು ಹಿಂಗಾಲುಗಳಿಗೆ ಕಟ್ಟಿಕೊಂಡಿತ್ತಲ್ಲ? +ಹಿಂಗಾಲುಗಳ ಮೇಲೆನಿಂತು ಎರಡು ಸೂಡಿ ದೀಪಗಳನ್ನು ಮುಂಗಾಲುಗಳ ಪಾದಗಳಿಂದ ಹಿಡಿದುಕೊಂಡು ಗೌಡನನ್ನು ಮುಂದೆ ಮಾಡಿಕೊಂಡು 'ಗೈಲ್‌ ಗೈಲ್‌' ಅಂತ ಗೊಳ್ಳಿ ಸರದ ಶಬ್ದ ಮಾಡುತ್ತಾ ಹಿಂದಿನಿಂದ ಹೋಯಿತು. +ಹುಲಿ ಗದ್ದೆಯ ಮಾಳದ ಮಂಚಿಕೆಯ ಮೇಲೆ ಕೂತುಕೊಂಡಿತ್ತು. +ಗೌಡನು ಹುಲಿಯ ಹತ್ತಿರ ಕೆಳಗಡೆ ಹೋದನು. +“ಗೌಡಾ, ನಿನಗೆ ಬರಲಿಕ್ಕೆ ಇಷ್ಟು ರಾತ್ರಿಯಾಗಲಿಕ್ಕೆ ಕಾರಣವೇನು?” ಅಂತ ಹುಲಿ ಕೇಳಿತು. +ಗೌಡನು ಹೇಳಿದನು, “ನೀನು ಕೊಟ್ಟ ಭತ್ತವನ್ನುಅಕ್ಕಿ ಮಾಡಿ, ಅಕ್ಕಿ ಹಿಟ್ಟು ಮಾಡಿ, ರೊಟ್ಟಿ ಮಾಡಿ ತಿನ್ನಲಿಕ್ಕೆ ನನಗೆ ಇಷ್ಟು ಹೊತ್ತಾಯಿತು.” +ಹುಲಿ ಆಗ ಗೌಡನ ಹತ್ತಿರ ಕೇಳಿತು, “ನಿನ್ನ ಹಿಂದೆ ಬರುವವರು ಯಾರು? +“ನನ್ನ ಹಿಂದೆ ಬರುವವರು ಕುಮರೆ ಮುಯಡಾ, ಕುಮರೆ ಮುಯಡಾ” ಅಂತ ಹೇಳಿದಗೌಡ. +ಆಗ ಹುಲಿರಾಯ, "ಅರೆ. . . ನನಗಿಂತ ಹೆಚ್ಚಿನ ಯಾವುದೋ ಪ್ರಾಣಿ ಬಂತು" ಅಂತಹೆದರಿ ಹೋಗಿ ಹುಲ್ಲಿನ ಗೊಣಬೆಯನ್ನು ಸೇರಿತು. +ಆಗ ಸರಿ ಹೋಗಿ ಬೆಂಕಿಯಿಂದ ಆ ಹುಲ್ಲಿನ ಗೊಣಬೆ ಸುತ್ತಲೂ ಬೆಂಕಿ ಕೊಟ್ಟುಬಿಟ್ಟಿತು. +ಹುಲ್ಲಿನ ಗೊಣಬೆ ಸುಟ್ಟು ಅದರಲ್ಲಿದ್ದ ಹುಲಿಯೂ ಸತ್ತುಹೋಯಿತು. +ನರಿಯು ಗೌಡರ ಮಕ್ಕಳನ್ನು ಕರೆಯಿತು, “ಏ ಗೌಡರ ಮಕ್ಕಳೇ ನಿಮ್ಮ ಹುಲ್ಲಿನ ಗೋದನೆ (ಬಣಿವೆ) ಬೆಂಕಿ ಬಿದ್ದು ಸುಟ್ಟುಹೋಯಿತು” ಅಂತಕೂಗಿತು. +ಅವರೆಲ್ಲ ಓಡಿಬಂದು ನೀರು ಹಾಕಿ, ಗೋದನೆಯ ಬೆಂಕಿಯನ್ನು ಆರಿಸಿದರು. +ಸತ್ತುಬಿದ್ದ ಹುಲಿಯನ್ನು ದೂರ ಎಳೆದು ಹಾಕಿದರು. +ಈ ರೀತಿಯಾಗಿ ನರಿಯು ಗೌಡನಿಗೆ ಬಂದೊದಗಿದ್ದ ಜೀವದ ಆಪತ್ತನ್ನು ಮರೆಯಾಗಿಸಿತು. + ಕುರುಬನ ಭಾಗ್ಯ. + ಒಂದು ಊರಿನಲ್ಲಿ ಒಬ್ಬ ಕುರುಬರ ಹುಡುಗನು ಮಂದಿಯ ಕುರಿ ಕಾಯ್ದುಕೊಂಡಿದ್ದನು. +ಕುರಿಗಳ ಹಿಕ್ಕೆಯನ್ನು ತೆಗೆದು ಅವುಗಳ ಚಾಕರಿಯನ್ನೂ ಮಾಡುತ್ತಿದ್ದನು. +ಅವು ಅವನಿಗೆ ಹಾಲು ಕೊಡುತ್ತಿದ್ದವು. +ಅಲ್ಲಿಯೇ ಒಂದು ಏಳು ಹೆಡೆಗಳ ಮಹಾಶೇಷನ ಹುತ್ತವಿತ್ತು. +ಅವನು ಕುರಿಯ ಅರ್ಧ ಹಾಲನ್ನು ಮಹಾಶೇಷನ ಹುತ್ತಕ್ಕೆ ಹೊಯ್ಯತ್ತಿದ್ದನು. +ಮಹಾಶೇಷ ಅದನ್ನು ಕುಡಿಯುತ್ತಿತ್ತು. +ಈ ಉಪಕಾರಕ್ಕೆ ಪ್ರತಿಯಾಗಿ ಮಹಾಶೇಷ ತಾನೂ ಅವನಿಗೆ ಉಪಕಾರಮಾಡಬೇಕೆಂದು ಅವನನ್ನು ರಸದ ಬಾವಿಯಲ್ಲಿ ಅದ್ದಿ ತೆಗೆಯಿತು. +ಅವನ ಮೈ ಚಿನ್ನದ ಬಣ್ಣದ ಮೈಯಾಯಿತು. +ಕೂದಲೂ ಚಿನ್ನದ್ದೇ ಆಯಿತು. +ಅವನು ಒಂದು ದಿನ ಹೊಳೆಯಲ್ಲಿ ಮೀಯುವಾಗ ಉದುರಿಬಿದ್ದ ತನ್ನ ಕೂದಲನ್ನು ತೆಗೆದು, ಎಲೆಗಳನ್ನು ಮಡಿಸಿ ಮಾಡಿದ ಕೊಟ್ಟೆಯಲ್ಲಿಟ್ಟು ಅದನ್ನು ತೇಲಿಸಿಬಿಟ್ಟನು. +ಅದು ನೀರಿನ ಪ್ರವಾಹದಲ್ಲಿ ಬಳಿದುಹೋಯಿತು. +ಹೊಳೆಯ ಕೆಳಗಿನ ಭಾಗದಲ್ಲಿ ರಾಜಕುಮಾರಿ ಜಲಕ್ರೀಡೆಯಾಡುತ್ತಿದ್ದಳು. +ಅವಳ ಕೈಗೆ ಅದು ಸಿಕ್ಕಿತು. +'ನಾನು ಚಿನ್ನದ ಕೂದಲಿನವನನ್ನೇ ಮದುವೆಯಾಗಬೇಕು' ಅಂತ ನಿಕ್ಕಿ ಮಾಡಿಕೊಂಡಳು. +ಮನೆಗೆ ಬಂದು ರಾಜನ ಹತ್ತಿರ ಹೇಳಿದಳು. +ರಾಜನು, ಚಿನ್ನದ ಕೂದಲಿನವನು ಎಲ್ಲಿದ್ದರೂ ಬರಬೇಕು, ರಾಜಕುಮಾರಿಯನ್ನು ಮದುವೆ ಮಾಡಿ ಕೊಡುತ್ತೇನೆ" ಎಂದು ಡಂಗುರ ಹೊಡೆಸಿದನು. +ಆದರೆ, ಚಿನ್ನದ ಕೂದಲಿನವನು ಬರಲಿಲ್ಲ. +ರಾಜನು ಆಳುಗಳನ್ನು ದಿಕ್ಕುದಿಕ್ಕಿಗೆ ಕಳಿಸಿದನು. +ಆದರೆ ಎಲ್ಲಿಯೂ ಅಂಥವನು ಸಿಗಲಿಲ್ಲ. +ಹಾಲಕ್ಕಿ ಗೌಡರು ಅಡವಿಗೆ ಬೇಟೆಯಾಡಲಿಕ್ಕೆ ಹೋದವರು ದೂರದಿಂದ ಈ ಚಿನ್ನದ ಕೂದಲಿನ ಹುಡುಗನನ್ನು ಕಂಡರು. +ಅವರು ತಿರುಗಿ ಬಂದವರು ಇದನ್ನು ರಾಜನಿಗೆ ತಿಳಿಸಿದರು. +ರಾಜನು ತಂಡದ ಯಜಮಾನ ಗೌಡನನ್ನೂ, ಅಜ್ಜಿಯನ್ನೂ ಜೊತೆ ಮಾಡಿ ಆ ಹುಡುಗನನ್ನು ಕರೆದುಕೊಂಡು ಬರಲಿಕ್ಕೆ ಕಳಿಸಿದನು. +ಅವರು ಹೋಗಿ ರಾಜರು ಹೇಳಿದ್ದನ್ನು ತಿಳಿಸಿದರು. +ಹುಡುಗನು, "ನಾನು ಎರಡು ಸಾವಿರ ಕುರಿಗಳನ್ನು ಮದುವೆಗೆ ಕರೆತರುತ್ತೇನೆ, ನನ್ನ ಮಹಾಶೇಷನನ್ನೂ ಕರೆದುಕೊಂಡು ಬರುತ್ತೇನೆ, ಅವನಿಗೆ ಪ್ರತ್ಯೇಕ ಆಸನದ ವ್ಯವಸ್ಥೆಯಾಗಬೇಕು ಅಂದರೆ ಅಡ್ಡಿಯಿಲ್ಲ ಎಂದನು. +ಅವರು ತಿರುಗಿ ಬಂದು ರಾಜನಿಗೆ ಹಾಗೆಯೇ ಹೇಳಿದರು. +ರಾಜನು ಒಪ್ಪಿ ಲಗ್ನದ ತಯಾರಿ ಮಾಡಿದನು. +ಲಗ್ನದಲ್ಲಿ ಎರಡು ಸಾವಿರ ಕುರಿಗಳೂ ಬಂದವು. +ಮಹಾಶೇಷನಿಗೆ ಎತ್ತರ ಜಾಗದಲ್ಲಿ ಆಸನ ಮಾಡಿ ಕೂಡ್ರಿಸಿದರು. +ಲಗ್ನ ಕಾರ್ಯ ಮುಗಿಯಿತು. +ಬಂದ ರಾಜರು ಕುರುಬನಿಗೆ ರಾಜಕುಮಾರಿಯನ್ನು ಕೊಟ್ಟಿದ್ದಕ್ಕೆ ಸಿಟ್ಟಾಗಿ, "ಕಪ್ಪು ಕೊಡುತ್ತಿಯೋ, ಯುದ್ಧಕ್ಕೆ ಸಿದ್ಧನಾಗುತ್ತಿಯೋ?" ಎಂದು ಕೇಳಿದರು. +ಹುಡುಗ, "ಯುದ್ಧವನ್ನೇ ಮಾಡುತ್ತೇನೆ" ಎಂದನು. +ಸದ್ದಿನ ಕೋವಿ ಹೊಡೆದರು. +ಯುದ್ಧದಲ್ಲಿ ಮಹಾಶೇಷವು ಏಳುಹೆಡೆಗಳಿಂದ ರಾಜರ ಸೈನ್ಯವನ್ನೆಲ್ಲಾ ಹೊಡೆದು ನಾಶಮಾಡಿತು. +ಕಾಡಿನ ಕುರಿಗಳು ಅವರ ಹೆಣಗಳನ್ನು ಹೊತ್ತುಹಾಕಿದವು. +ರಾಜನು ಅಳಿಯನಿಗೆ ರಾಜಪಟ್ಟವನ್ನು ಕೊಟ್ಟನು. +೧೫.ಕೊಡುವುದಾದರೆ ಕೊಡುಬಿಡುವುದಾದರೆ ಬಿಡು. +ಕಲಿಯುಗದಲ್ಲಿ ದೇವರು ಪ್ರತ್ಯಕ್ಷವಾಗಿ ವರವನ್ನು ಕೊಡುವುದಿಲ್ಲ ಎಂದು ಹೇಳುವುದಿದೆ. +ಆದರೆ, ದೇವರು ಒಂದು ವೇಳೆ ಪ್ರತ್ಯಕ್ಷನಾದರೆ ಅವನಿಗೂ ಧಗ ಹಾಕುವ ಬಹಳ ಬುದ್ಧಿವಂತರಿರುತ್ತಾರೆ. +ಒಬ್ಬ ಭಟ್ಟರಿಗೆ ಒಬ್ಬ ಮಗ ಹುಟ್ಟಿದನು. +ಹುಟ್ಟು ಕುರುಡ, ಅವನಿಗೆ ಕಣ್ಣಿನ ದೃಷ್ಟಿಯೇ ಇರಲಿಲ್ಲ. +ಆಮೇಲೆ ಮತ್ತೆ ಮೂವರು, ನಾಲ್ವರು ಮಕ್ಕಳು ಅವನಿಗೆ ಹುಟ್ಟಿದರು. +ಅವರೆಲ್ಲರಿಗೂ ದೃಷ್ಟಿ ಇತ್ತು. +ಹಿರಿಯ ಮಗನು ಕುರುಡನಾಗಿದ್ದರೂ ಅವನ ತಾಯಿ-ತಂದೆ ಅವನನ್ನು ಬಹಳ ಪ್ರೀತಿಯಿಂದ ಸಂರಕ್ಷಣೆ ಮಾಡಿದರು. +ಉಪನಯನದ ವಯಸ್ಸು ಬಂದಮೇಲೆ ಭಟ್ಟರು ಅವನಿಗೆ ಉಪನಯನ ಮಾಡಿ ಗಾಯತ್ರಿ ಉಪದೇಶ ಕೊಟ್ಟರು. +ಕುರುಡ ಹುಡುಗನು ಪ್ರತಿದಿನವೂ ನೆನಪಿನ ಮೇಲೆ ಹೋಗಿ ಒಂದು ತಂಬಿಗೆ ನೀರನ್ನು ತಕ್ಕೊಂಡು ಬಂದು, ಅವನ ಮನೆಯ ಮುಂದೆ ಒಂದು ಅಶ್ವತ್ಥ ಕಟ್ಟೆಯಿತ್ತು, ಆ ಕಟ್ಟೆಯಲ್ಲಿದ್ದ ಮರದ ಬುಡದಲ್ಲಿ ಆ ತಂಬಿಗೆ ನೀರನ್ನು ಚೆಲ್ಲಿ ಬರುತ್ತಿದ್ದನು. +ಅಲ್ಲಿ ಬ್ರಹ್ಮದೇವರಮೂರ್ತಿಯಿತ್ತು. +ತನ್ನ ಅನುಷ್ಠಾನ ಮಾಡಿಕೊಂಡು ಹುಡುಗ ಇರುತ್ತಿದ್ದನು. +ಹೀಗೇ ಕಾಲ ಕಳೆದುಹೋಗಿ ಅವನ ತಾಯಿ-ತಂದೆ ತೀರಿಹೋದರು. +ತಮ್ಮಂದಿರು ಅವನಿಗೆ ಊಟ-ವಸ್ತ್ರ ಕೊಟ್ಟು ಸಾಕುತ್ತಿದ್ದರು. +ಕುರುಡನಿಗೆ ಎಪ್ಪತ್ತೈದು ವರ್ಷಗಳಾದವು. +ಅಷ್ಟು ವರ್ಷ ವಯಸ್ಸಾದರೂ ಅವನು ಹಿಂದೆ ಪ್ರತಿದಿನವೂ ಕಟ್ಟೆಯ ಮರದ ಬುಡದಲ್ಲಿ ಬಂದು ತಂಬಿಗೆ ನೀರನ್ನು ಹಾಕಿಬರುತ್ತಿದ್ದನು. +ಬ್ರಹ್ಮದೇವರಿಗೆ ಇದರಿಂದ ಬಹಳ ಸಂತೋಷವಾಯಿತು. +'ಹೀಗೆ ಇಷ್ಟು ಕಾಲದಲ್ಲೂ ಉಪನಯನವಾದಾಗಿನಿಂದಲೂ ಒಂದುತಂಬಿಗೆ ನೀರನ್ನು ಹಾಕುತ್ತಾ ಬಂದಿರುವ ಇವನ ಆಯುಷ್ಯದಲ್ಲಿ ಇಂದು ಕೊನೆಯ ದಿನ,ಆಯುಷ್ಯ ತೀರಿತು ಇವನಿಗೆ, ಇಂದಾದರೂ ಇವನಿಗೆ ನಾನು ಅನುಗ್ರಹ ಮಾಡಬೇಕು'ಎಂದು ಬ್ರಹ್ಮದೇವ ಅವನ ಮುಂದೆ ಪ್ರತ್ಯಕ್ಷನಾದನು. +“ಮುದುಕಾ, ನೀನು ಒಂದು ದಿನವೂ ತಪ್ಪದೆಯೇ ನನಗೆ ಒಂದು ತಂಬಿಗೆ ನೀರನ್ನು ಹಾಕುತ್ತಾ ಬಂದವನು, ಅದರಿಂದ ನಾನು ಸಂತುಷ್ಟನಾಗಿ ನಿನ್ನ ಮುಂದೆ ಪ್ರತ್ಯಕ್ಷನಾಗಿದ್ದೇನೆ,ನಿನಗೇನು ಬೇಕು?” ಅಂತ ಕೇಳಿದನು. +“ನೀನು ಯಾರು?” ಅಂತ ಮುದುಕ ಕೇಳಿದನು. +“ನಾನು ಬ್ರಹ್ಮದೇವ. +ಬೇಕಾದುದನ್ನು ಕೇಳು. +ನಾನು ಕೊಡುವೆ” ಅಂದನು. +"ಇವನಿಗೆ ಕಣ್ಣಿಲ್ಲ, ಕುರುಡ, ಕಣ್ಣುಕಾಣುವಂತೆ ಅನುಗ್ರಹ ಮಾಡು' ಅಂತಬೇಡಿಕೊಳ್ಳಬಹುದು ಅಂತ ತಿಳಿದಿದ್ದವು ಬ್ರಹ್ಮದೇವ. +ಕುರುಡ ಮುದುಕ, “ನನಗೆ ಮತ್ತೇನೂ ಬೇಡ, ನನ್ನ ಮನಸ್ಸಿನಲ್ಲಿ ಒಂದು ಆಸೆಯಿದೆ, ನೀನು ಅದನ್ನು ಈಡೇರಿಸಿಕೊಡುವೆ ಎಂದರೆ ಕೇಳುವೆನು” ಅಂದನು. +ಬ್ರಹ್ಮದೇವ, “ಅಡ್ಡಿಯಿಲ್ಲ, ನೀನು ಬೇಡಿಕೋ,ನಾನು ಕೊಡುವೆ” ಎಂದನು. +ಆಗ, “ನನ್ನ ಮರಿಮಗನು ಆನೆಯ ಮೇಲೆ ಅಂಬಾರಿಯಲ್ಲಿ ಕೂತುಕೊಂಡು ಊರಿನಲ್ಲೆಲ್ಲಾ ಮೆರವಣಿಗೆ ಮಾಡಿಕೊಳ್ಳುವುದನ್ನು ಸಾನು ನೋಡಬೇಕು ಎಂಬ ಒಂದೇ ಆಸೆ ನನಗಿದೆ, ನೀನು ಅದನ್ನು ಈಡೇರಿಸಿಕೊಡುವುದಾದರೆ ಕೊಡು,ಬಿಡುವುದಾದರೆ ಬಿಡು” ಎಂದನು. +ಆಗ ಬ್ರಹ್ಮದೇವ ಪೇಚಾಟಕ್ಕೆ ಬಿದ್ದನು. +'ಅಯ್ಯೋ. . . . ಈಗ ಏನು ಮಾಡಬೇಕಾಯಿತು? +ಇವನ ಮರಿಮಗ ಆನೆಯ ಮೇಲೆ ಅಂಬಾರಿಯಲ್ಲಿ ಕೂತು ಮೆರವಣಿಗೆಯಲ್ಲಿ ಬರುವುದನ್ನು ಇವನು ನೋಡುವುದಾದರೇ ಇವನಿಗೆ ಆ ಮರಿಮಗನಿಗಿಂತ ಹಿಂದೆಯೂ ಸಹ ಎಷ್ಟು ವರ ಕೊಡಬೇಕಾಯಿತು. +ಇಂದು ಸಾಯಬೇಕಾದ ಈ ಕುರುಡ ಮುದುಕನಿಗೆ ಯೌವನ, ದೃಷ್ಟಿ ಶಕ್ತಿ, ದೀರ್ಫಾಯುಷ್ಯ, ಹೆಣ್ಣು, ಹೊನ್ನು, ಮಣ್ಣು ಎಲ್ಲವನ್ನೂ ಕೊಡಬೇಕಾಯಿತು. +ಮುಂದೆ ಇವನಿಗೆ ಮಗ, ಸೊಸೆ, ಮೊಮ್ಮಗ, ಅವನ ಹೆಂಡತಿ, ಅವರಿಗೆ ಗಂಡು ಮಗ, ಅವನಿಗೆ ಅರಸುತನ ಎಲ್ಲಾ ಕೊಡ(ಬರ)ಬೇಕಾಯಿತು. +ಕೊಟ್ಟ ಮಾತಿಗೆ ತಪ್ಪಬಾರದು' ಎಂದುಕೊಂಡು, “ನಿನ್ನ ಆಸೆ ಈಡೇರುವ ಹಾಗೆ ನಿನಗೆ ವರ ಕೊಡುತ್ತೇನೆ” ಎಂದು ಹೇಳಿಹೋದನು. +ಆಗಲೇ ಕುರುಡನಿಗೆ ಕಣ್ಣುದೃಷ್ಟಿ ಬಂದು,ಬ್ರಹ್ಮದೇವನಿಗೆ ನಮಸ್ಕಾರ ಮಾಡಿದ್ದನ್ನೂ, ಮುಂದಿನದನ್ನೂ ನಿರೂಪಕ ನಮಗೇ ಊಹೆ ಮಾಡಲು ಬಿಟ್ಟರು. +೧೬.ಗಳಿಸಿದ್ದಕ್ಕಿಂತ ಉಳಿಸಿದ್ದು ಮುಖ್ಯ. +ಎಲ್ಲವ್ವ ಎಂಬುವಳು ಎರಡು ಎಮ್ಮೆ ಸಾಕಿಕೊಂಡು ಅಚ್ಚುಕಟ್ಟಾಗಿ ಕೆಲಸ ಮಾಡಿಕೊಂಡು,ಹಾಲನ್ನು ಮಾರಿದ ಹಣದಲ್ಲಿ ಮಿತಿಯಿಂದ ಖರ್ಚು ಮಾಡಿ, ರೊಕ್ಕಗಳಿಸಿ ಅದರಲ್ಲೇ ಹಣ ಉಳಿಸಿಕೊಂಡಿದ್ದಳು. +ಇನ್ನೊಬ್ಬಳು ಮಲ್ಲವ್ವ ಎಂಟು ಎಮ್ಮೆ ಸಾಕಿದ್ದಳು. +ಅವಳು ಧಾರಾಕಾರವಾಗಿ ಖರ್ಚು ಮಾಡುವವಳು. +ಇವಳ ಹತ್ತಿರ ಬಂದ ರೊಕ್ಕ ಖರ್ಚಿಗೆ ಸಾಲುತ್ತಿರಲಿಲ್ಲ. +ಎಲ್ಲವ್ವನ ಹತ್ತಿರ ಹೋಗಿ ಒಂದು ಸೇರು ಹಾಲನ್ನು ಹಣ ಕೊಡದೆ ಸಾಲದ ರೂಪದಲ್ಲಿ ತಂದಳು. +ಎಲ್ಲವ್ವ ರೊಕ್ಕ ಕೇಳಿದಳು. +ಕೊಡಲು ಇವಳ ಹತ್ತಿರ ಹಣ ಉಳಿಯದಿದ್ದರಿಂದ ಸಾಲದ ಹಣ ಕೊಟ್ಟಿರಲಿಲ್ಲ. +ಎಲ್ಲವ್ವ ಇವಳ ಮೇಲೆ ರಾಜಾಸ್ಥಾನದಲ್ಲಿ ಫಿರ್ಯಾದಿ ಕೊಟ್ಟಳು. +ರಾಜನು ಪ್ರಕರಣವನ್ನು ವಿಚಾರಕ್ಕೆ ಇಟ್ಟನು. +ಒಂದು ಫರ್ಲಾಂಗ್‌ ಜಾಗಕ್ಕೆ ಅರ್ಲು (ಕೆಸರು) ರಾಡಿ ಮಾಡಿಸಿ ಇಬ್ಬರಿಗೂ ಬರುವಂತೆ ಹೇಳಿ ಕಳಿಸಿದನು. +ಮೊದಲು ಎಂಟು ಎಮ್ಮೆ ಸಾಕಿದ್ದ ಮಲ್ಲವ್ವ ಬಂದಳು. +ಎರಡು ಹಂಡೆಗಳಲ್ಲಿ ನೀರನ್ನು ತುಂಬಿ ಇಟ್ಟಿದ್ದರು. +ಮಲ್ಲವ್ವ ರಾಡಿ ಕೆಸರಿನಲ್ಲಿ ಪಾದ ಇಟ್ಟು ಬಂದವಳು ಹಂಡೆ ನೀರು ತುಂಬಿದ್ದನ್ನು ತೆಗೆದುಕೊಂಡು ಬಡಬಡನೆ ಪಾದಗಳಿಗೆ ಹಾಕಿಕೊಂಡು ಕಾಲು ತೊಳೆದುಕೊಂಡು ಸಭೆಗೆ ಹೋಗಿ ಕೂತಳು. +ನಂತರ ಎರಡೆಮ್ಮೆ ಸಾಕಿದ್ದ ಎಲ್ಲವ್ವ ಬಂದಳು. +ಒಂದು ತಂಬಿಗೆ ನೀರನ್ನು ಮತ್ತೊಂದು ಹಂಡೆಯಿಂದ ತಕ್ಕೊಂಡು ಅದರಲ್ಲೇ ಕಾಲು ಸ್ವಚ್ಛವಾಗಿ ತೊಳೆದುಕೊಂಡು ಸಭೆಗೆ ಬಂದುಕೂತಳು. +ರಾಜನು ಮಲ್ಲವ್ವನೊಡನೆ, “ನೀನು ಈ ಎರಡೆಮ್ಮೆ ಸಾಕಿದವಳ ಹತ್ತಿರ ರೊಕ್ಕಕೊಡದೆ ಸೇರು ಹಾಲನ್ನು ಉದ್ರಿಯಾಗಿ ತಂದಿದ್ದೇಯೋ?” ಎಂದು ಕೇಳಿದನು. +ಮಲ್ಲವ್ವ, “ನಾನು ಎಂಟು ಎಮ್ಮೆ ಸಾಕಿದವಳು, ಈ ಎರಡೆಮ್ಮೆ ಸಾಕಿದವಳ ಹತ್ತಿರ ಹಣ ಇಲ್ಲವೆಂದು ಹೇಳಿ ಎಂಟು ದಿನಗಳ ಹಿಂದೆ ಒಂದು ಸೇರು ಹಾಲನ್ನು ಉದ್ರಿಯಾಗಿ ಸಾಲ ಮಾಡಿ ಹಾಲು ತರಲು ಸಾಧ್ಯವಿಲ್ಲ,ತರಲಿಲ್ಲ” ಎಂದಳು. +ಎಂಟೆಮ್ಮೆ ಸಾಕಿದವಳು. +ಒಂದು ಹಂಡೆ ನೀರು ಖರ್ಚು ಮಾಡಿ ಕಾಲು ತೊಳೆದುಕೊಂಡಿದ್ದಳು. +ಎರಡೆಮ್ಮೆ ಸಾಕಿದ ಎಲ್ಲವ್ವ, “ಇವಳು ತನ್ನ ಹತ್ತಿರ ಹಣ ಇಲ್ಲವೆಂದು ಹೇಳಿ ಎಂಟು ದಿನಗಳ ಹಿಂದೆ ಒಂದು ಸೇರು ಹಾಲನ್ನು ತಕ್ಕೊಂಡು ಹಣ ಕೊಡದೇ ಹೋಗಿದ್ದಳು. +ಆದುದರಿಂದಲೇ ಫಿರ್ಯಾದಿ ಕೊಟ್ಟೆ” ಎಂದಳು. +“ಎಂಟೆಮ್ಮೆ ಸಾಕಿದವಳು ಒಂದು ಹಂಡೆ ನೀರು ಖರ್ಚು ಮಾಡಿ ಕಾಲುತೊಳೆದುಕೊಂಡರೂ ಕಾಲುಗಳಲ್ಲಿ ಅರಲು ಹಾಗೇ ಇತ್ತು. +ಎರಡೆಮ್ಮೆ ಸಾಕಿದವಳು ಒಂದು ತಂಬಿಗೆಯಲ್ಲಿ ಸ್ವಚ್ಛವಾಗಿ ಕಾಲು ತೊಳೆದುಕೊಂಡಿದ್ದಳು. +ಆದ್ದರಿಂದ ಅವಳ ಹತ್ತಿರ ಇವಳು ಸಾಲ ಮಾಡಿ ಒಂದು ಸೇರು ಹಾಲು ತಂದದ್ದು ಹೌದು.” ಗಳಿಸಿದ್ದಕ್ಕಿಂತ ಉಳಿಸಿದ್ದುಮುಖ್ಯ. +೧೭.ಗಿಡುವಿಗೆ ನೀರು- ತುರುಬಿಗೆ ಹೂವು. +ಒಂದೂರಿನಲ್ಲಿ ಒಂದು ಮನೆಗೆ ಎರಡು ಬಾಗಿಲುಗಳು, ಅದರಲ್ಲಿ ಎರಡು ಸಂಸಾರಗಳು ಮನೆ ಮಾಡಿಕೊಂಡಿದ್ದವು. +ಆಚೆ ಮನೆಯಲ್ಲಿ ಒಬ್ಬಳು ಹುಡುಗಿ, ಈಚೆ ಮನೆಯಲ್ಲೊಬ್ಬ ಳುಹುಡುಗ. + ಈಚೆ ಮನೆಯ ಹುಡುಗಿಯ ತಾಯಿಯು, “ಸುಮನಾ. . . . ಕಾಡುಕೆಸುವಿನಸೊಪ್ಪಿನ ಕರಗಲಿ(ಒಂದು ಮೇಲೋಗರ)ಯನ್ನು ಮಾಡೋಣ ಹೋಗು, ಆ ಕಡೆ ಯಾವ ಹಿತ್ತಲಿನಲ್ಲಿಯಾದರೂ ಒಳ್ಳೇ ಎಳೆಯ ಕಾಡುಕೆಸುವಿನ ಸೊಪ್ಪಿದ್ದರೆ ಹರಿದು ತೆಗೆದುಕೊಂಡು ಬಾ” ಎಂದು ಕಳಿಸಿದಳು. +ಆಚೆ ಮನೆಯ ಹುಡುಗಿಯ ತಾಯಿಯು ತನ್ನ ಮಗಳನ್ನು ಕರೆದು ಹೇಳಿದಳು,“ಕುಸುಮಾ, ಕಾಡಕೆಸುವಿನ ಸೊಪ್ಪಿನ ಕರಗಲಿ ಉಣ್ಣಲು ಬಹಳ ರುಚಿಯಾಗುತ್ತದೆ. +ಆ ಮನೆಯ ಸುಮನ ಅದನ್ನು ತರಲಿಕ್ಕೆ ಹೋಗಿದ್ದಾಳೆ. +ನೀನೂ ಹೋಗಿ ತೆಗೆದುಕೊಂಡುಬಾ. . . ” ಕುಸುಮ ಸ್ವಲ್ಪ ದೊಡ್ಡ ಹುಡುಗಿ, ಸುಮನ ಚಿಕ್ಕವಳು. +ಕುಸುಮ ಸ್ವಲ್ಪ ದೂರಹೋಗಿ ಒಳ್ಳೆಯ ಕಾಡುಕೆಸುವಿನ ಸೊಪ್ಪನ್ನು ಆಯ್ದುಕೊಂಡು ತಂದಳು. +ಸುಮನ ತಮ್ಮ ಹಿತ್ತಲಿನಲ್ಲಿಯೇ ಬೆಳೆದ ಸೊಪ್ಪನ್ನು ತಂದಳು. +ಸುಮನ ತಂದ ಸೊಪ್ಪು ಚೆನ್ನಾಗಿಲ್ಲವೆಂದು ಹೇಳಿ ಅವಳ ತಾಯಿ ಕಸಬರಿಗೆಯಿಂದ ಮಗಳಿಗೆ ಹೊಡೆಯಲು ಹೋದಳು. +ಸುಮನ ಅಳುತ್ತಾ ಓಡಿಹೋದಳು. +ದಾರಿಯಲ್ಲಿ ಹಬ್ಬಸಿಗೆ ಹೂಗಳ (ಕೆಂಪು ಜಾತಿಯ ಹೂವು)ಗಿಡಗಳ ಓಳಿ(ಗಿಡಗಳ ಎತ್ತರವಾದ ಮಣ್ಣಿನ ಸಾಲು)ಯಿತ್ತು. +ಹಬ್ಬಸಿಗೆ ಓಳಿ ಕೇಳಿತು,"ಸುಮನಾ, ಯಾರು ಹೊಡೆದರು? +ಏನಾಯಿತು? +ಯಾಕೆ ಅಳುವೆ? +"ನನ್ನ ತಾಯಿ ಚೆನ್ನಾದ ಕಾಡು ಕೆಸುವಿನ ಸೊಪ್ಪನ್ನು ತರಲಿಲ್ಲವೆಂದು ನನಗೆ ಕಸಬರಿಗೆಯಿಂದ ಹೊಡೆಯಲಿಕ್ಕೆ ಬಂದಳು. +ನಾನು ಓಡಿಬಂದೆ" ಎಂದಳು. +ಹಬ್ಬಸಿಗೆ ಓಳಿ ಹೇಳಿತು, "ಸುಮನಾ, ನೀನು ಒಳ್ಳೆಯ ಹುಡುಗಿ. . . ನಿನಗೆ ಒಳ್ಳೆಯದಾಗಲಿ,ನನಗೆ ನೀರಿಲ್ಲದೆ ಒಣಗುತ್ತಿದ್ದೇನೆ, ಒಂದು ಕೊಡಪಾನ ನೀರು ಹನಿಸು.” +ಸುಮನ ಕೊಡಪಾನವನ್ನು ತೆಗೆದುಕೊಂಡು ಬಂದು ಹಿತ್ತಿಲಿನ ಹೊಂಡದಿಂದ ನೀರನ್ನು ಮೊಗೆದು ಒಂದು ಕೊಡಪಾನ ನೀರನ್ನು ಹಬ್ಬಸಿಗೆ ಓಳಿಗೆ ಸುರುವಿದಳು. + "ಸುಮನಾ,ಎಂಥ ಉಪಕಾರ ಮಾಡಿದೆ, ನೀನು ತಿರುಗಿ ಬರುವಾಗ ನಾವು ಹೂವುಗಳನ್ನು ಹೊತ್ತುಕೊಂಡು ನಿನಗಾಗಿ ಕಾದಿರುತ್ತೇವೆ. +ಹೂಗಳನ್ನು ಕೊಯ್ದ ದಂಡೆ ಕಟ್ಟಿ ಮುಡಿಯಬಹುದು” ಎಂದವು. +ಮುಂದೆ ಸೇವಂತಿಗೆ ಓಳಿ ಸಿಕ್ಕಿತು. +ಸೇವಂತಿಗೆ ಓಳಿಯೂ, "ಯಾರು ಹೊಡೆದರು?"ಎಂದು ಕೇಳಿತು. +ಅದರ ಹತ್ತಿರವೂ ಸುಮನ ಮೊದಲಿನಂತೆ ಹೇಳಿದಳು. +ಅಲ್ಲಿಯೂ ಒಂದುಕೊಡ ನೀರನ್ನು ತಂದು ಓಳಿಗೆ ನೀರು ಸುರವಿ ಮುಂದೆ ಹೋದಳು. +ಆಗ ಸೇವಂತಿಗೆ ಓಳಿಯು, "ಸುಮನಾ, ನೀನು ತಿರುಗಿ ಬರುವಷ್ಟರಲ್ಲಿ ನಾವು ಹೂಗಳಾಗಿರುವೆವು,ಕೊಯ್ದು ದಂಡೆ ಕಟ್ಟಿ ಮುಡಿದುಕೋ" ಎಂದಿತು. +ಸುಮನ "ಹೂಂ" ಎಂದು ಮುಂದೆ ಹೋದಳು. +ಮುಂದೆ ಹಣ್ಣಿನ ಗಿಡಗಳ ಬನ ಬಂತು. +ಹಲಸಿನ ಹಣ್ಣಿನ ಗಿಡ ಹೇಳಿತು, "ಸುಮನಾ,ಯಾಕೆ ಅಳುವೆ?” + ಸುಮನ ಮೊದಲಿನಂತೆ ಹೇಳಿದಳು. + "ನನಗೆ ಒಂದು ಕೊಡ ನೀರನ್ನು ಹನಿಸು” ಎಂದಿತು ಹಲಸಿನ ಮರ. +ಸುಮನ ಒಂದು ಕೊಡ ನೀರನ್ನು ಹನಿಸಿದಳು. +"ನೀನು ತಿರುಗಿ ಬರುವಷ್ಟರಲ್ಲಿ ನಾನು ಮೈತುಂಬಾ ಹಣ್ಣುಗಳನ್ನು ಧರಿಸುತ್ತೇನೆ. +ನೀನು ಬೇಕಾದಷ್ಟು ಹಣ್ಣುಗಳನ್ನು ತೆಗೆದುಕೊಂಡು ತಿನ್ನು” ಎಂದಿತು. +ಸುಮನ ಮುಂದೆ ಹೋದಳು. +ದಾರಿಯಲ್ಲಿ ಆಕಳು, ಎಮ್ಮೆ, ಕುದುರೆ, ಆನೆಗಳು ಒಂದೊಂದಾಗಿ ಬಂದವು. +ಎಲ್ಲವೂ ಅವಳು ಅಳುವ ಕಾರಣವನ್ನು ಕೇಳಿ ತಿಳಿದು,"ಅಯ್ಯೋ. . . ಪಾಪ" ಎಂದವು. +"ನನಗೆ ಒಂದು ಕೊಡ ನೀರು ಹನಿಸು" ಎಂದವು. +ನೀರನ್ನು ಕುಡಿದ ಮೇಲೆ ಅವು ತೃಪ್ತಿಯಿಂದ, "ಸುಮನಾ, ನೀರಡಿಸಿದ ನಮಗೆ ನೀನು ನೀರನ್ನು ಹನಿಸಿದೆ, ನಿನಗೆ ದೇವರು ಪ್ರಸನ್ನನಾಗಲಿ" ಎಂದು ಹರಸಿದವು. +ಸುಮನ ರಾಗಿಯ ಹಕ್ಕಲಿಗೆ ಬಂದು ನಿಂತಳು. +ಅಲ್ಲಿಯೇ ಅಳುತ್ತ ಒಂದು ಬದಿಗೆ ಕುಳಿತಳು. +ಪಾರ್ವತಿ-ಪರಮೇಶ್ವರರು ಲೋಕ ಸಂಚಾರಕ್ಕಾಗಿ ಆಕಾಶದಲ್ಲಿ ಸವಾರಿ ಮಾಡುತ್ತಾ ಬರುತ್ತಿದ್ದರು. +ಸುಮನ ಅಳುವುದನ್ನು ನೋಡಿ ಅವರು ಕೆಳಗಿಳಿದರು. +"ಸುಮನಾ, ಯಾಕೇ ಅಳುವೆ?" ಎಂದು ಕೇಳಿದರು. +ಸುಮನ ತನ್ನ ವ್ಯಥೆಯ ಕಾರಣವನ್ನು ಹೇಳಿದಳು. +ಪಾರ್ವತಿ-ಪರಮೇಶ್ವರರು ಅವಳಿಗೆ ಚಿನ್ನ-ಬಣ್ಣಗಳನ್ನು ಕೊಟ್ಟು, "ಇನ್ನು ನೀನು ನಿನ್ನ ಮನೆಗೆ ಹೋಗು, ನಿನ್ನ ಕಷ್ಟ ಈಗ ಪರಿಹಾರವಾಯಿತು" ಎಂದು ಹೇಳಿದರು. +ಚಿನ್ನ, ಬಣ್ಣ ರಾಶಿರಾಶಿಯಾಗಿ ಬಿದ್ದಿದ್ದವು. +ಪಾರ್ವತಿ-ಪರಮೇಶ್ವರರು ಹೋಗುವುದೇ ತಡ, ಕುದುರೆ, ಆನೆಗಳು- "ನಮ್ಮ ಮೇಲೆ ಚಿನ್ನಾಭರಣ, ವಸ್ತ್ರ, ಪಾತ್ರೆ ಪಗಡಿ ಎಲ್ಲವನ್ನೂ ಹೇರು, ನನ್ನನ್ನು ಏರಿಕೋ' ಎನ್ನುತ್ತಾ ಬಂದವು. +ಚಿನ್ನ-ಬಣ್ಣಗಳನ್ನೆಲ್ಲಾ ಆನೆ, ಕುದುರೆಗಳ ಮೇಲೆಹೇರಿ, ಸುಮನ ತಾನು ಆನೆಯನ್ನು ಏರಿಕೊಂಡು ಬಂದಳು. +ದಾರಿಯಲ್ಲಿ ಎಮ್ಮೆ, ಆಕಳು, "ನಮ್ಮ ಹಾಲನ್ನು ಕರೆದುಣ್ಣು, ನಾವು ನಿನ್ನ ಸಂಗಡ ಬರುತ್ತೇವೆ" ಎಂದು ಅವಳ ಬೆನ್ನ ಹಿಂದೆ ಬಂದವು. +ದಾರಿಯಲ್ಲಿ ಹಲಸಿನಗಿಡ, "ಹಣ್ಣುಗಳನ್ನು ಕೊಡುವೆನು. . . " ಎಂದಿತು. +ಸೇವಂತಿಗೆ, ಹಬ್ಬಸಿಗೆ ಓಳಿಗಳು,"ಹೂವುಗಳನ್ನು ಕೊಡುವೆವೆಂದವು." +ಹಲಸಿನ ಹಣ್ಣುಗಳನ್ನು ಸೇವಂತಿಗೆ, ಹಬ್ಬಸಿಗೆ ಹೂಗಳನ್ನು ರಾಶಿರಾಶಿಯಾಗಿ ಕೊಯ್ದು ಆನೆಯ ಮೇಲೆ ಬುಟ್ಟಿಯಲ್ಲಿಟ್ಟು ಕೊಂಡಳು. +ಅವಳು ಆನೆಯ ಮೇಲೆ ಕೂತು ಮನೆಯ ಈಡೆಗೆ ಬರುವಾಗ ದಾರಿಯಲ್ಲಿ ಜನರು, "ಇವಳು ಯಾರು?" ಎಂದು ನೋಡಿದರು. +ಚಿನ್ನ, ಹೊಸ ವಸ್ತ್ರಗಳನ್ನು ಧರಿಸಿದ್ದ ಅವಳ ಗುರುತು ಅವರಿಗೆ ಮೊದಲು ತಿಳಿಯಲಿಲ್ಲ. +ಅವರು ಹೆಸರು ಹಿಡಿದು ಕೂಗಿ, ಸುಮನ ತನ್ನ ಹೆಸರನ್ನು ಅವರಿಗೆ ಹೇಳಿದಳು. +ಅವರಲ್ಲಿ ಕೆಲವರು ಸುಮನಳ ತಾಯಿಯ ಹತ್ತಿರ ಬಂದು, "ನಿನ್ನ ಮಗಳು ಆನೆಯ ಮೇಲೆ ಏರಿಕೊಂಡು ಚಿನ್ನಾಭರಣಗಳನ್ನು ಮೈಮೇಲೆ ಹೇರಿಕೊಂಡು,ಹೊಸ ವಸ್ತ್ರ ಧರಿಸಿಕೊಂಡು ರಾಜಕುಮಾರಿಯ ಹಾಗೆ ಬರುತ್ತಿದ್ದಾಳೆ, ಹೊರಗೆ ಬಂದುನೋಡು" ಎಂದು ಹೇಳಿದರು. +ಅವಳ ತಾಯಿ, "ಕಾಡು ಕೆಸುವಿನ ಸೊಪ್ಪನ್ನು ತರಲಾರದವಳು ಇಷ್ಟೆಲ್ಲಾ ಐಶ್ವರ್ಯ ತರುವಳೋ?"ಎಂದು ತಾತ್ಸಾರ ಮಾಡಿದಳು. +ಹತ್ತಿರ ಬರುವುದರೊಳಗೆ ಸುಮನ ತಾಯಿಯನ್ನು ಕರೆದಳು. +ಅವಳು ಹೊರಗೆ ಬಂದು ನೋಡಿದಳು. +ಬೀದಿಯಲ್ಲಿ ಸುಮನ ಆನೆಯಿಂದ ಇಳಿದಳು. +ಅಚೀಚೆಯ ಜನರು ಸುಮನ ತಂದ ಸಂಪತ್ತನ್ನೆಲ್ಲಾ ಅವಳ ಮನೆಗೆ ತಂದು ರಾಶಿಹಾಕಿದರು. +ತಾಯಿಯು ತನ್ನ ಕಣ್ಣು ಉಜ್ಜಿ ಪುನಃ ಅವನ್ನೆಲ್ಲ ನೋಡಿದಳು. +ಹೊಸ ವಸ್ತ್ರ ಧರಿಸಿದ ಮಗಳನ್ನು ಅಪ್ಪಿಕೊಂಡಳು. +ಆಚೆ ಮನೆಯ ಕುಸುಮಳ ತಾಯಿ ಇದನ್ನೆಲ್ಲಾ ನೋಡಿ ಹೊಟ್ಟೆ ಕಿಚ್ಚುಪಟ್ಟಳು. +ಅವಳು ತನ್ನ ಮಗಳನ್ನು ಬಯ್ದು ಕಸಬರಿಗೆಯಿಂದ ಚೆನ್ನಾಗಿ ಹೊಡೆದು ಹೊರಗೆ ಹಾಕಿದಳು. +ದಾರಿಯಲ್ಲಿ ಹಬ್ಬಸಿಗೆ ಓಳಿಗಳು, "ಯಾಕೆ ಅಳುವೆ?" ಎಂದು ಕೇಳಿದವು. +ಹೊಡೆತ ತಿಂದ ಕುಸುಮ ಮಾತಾಡಲಿಲ್ಲ. +"ನೀರಿಲ್ಲದೆ ಒಣಗುತ್ತಿದ್ದೇವೆ ಒಂದು ಕೊಡ ನೀರನ್ನು ಹನಿಸು"ಎಂದವು. +ಸಿಟ್ಟಿನಿಂದ ಕುಸುಮ ನೀರು ಹಾಕದೆ ಮುಂದೆ ಹೋದಳು. +ಸೇವಂತಿಗೆ ಗಿಡಗಳೂ, ಹಲಸಿನ ಮರವು ಹೀಗೆಯೇ ಕೇಳಿದವು. +ಅವಳು ಸಿಟ್ಟಿನಿಂದ ಸುಮ್ಮನೆ ಮುಂದೆ ಹೋದಳು. +ಆಕಳು, ಎಮ್ಮೆ, ಆನೆ, ಕುದುರೆ, "ನೀರನ್ನು ಹನಿಸು" ಎಂದಾಗಲೂ ನೀರುಹಾಕದೆ ಮುಂದೆ ಹೋಗಿ ರಾಗಿ ಹಕ್ಕಲಿನಲ್ಲಿ ಕುಳಿತು ಅಳುತ್ತಾ ಉಳಿದಳು. +ಪಾರ್ವತಿ-ಪರಮೇಶ್ವರರು, "ನೀರು ಬೇಡಿದ ಹೂವಿನ ಗಿಡಗಳಿಗೆ, ದನಕರುಗಳಿಗೆ ನೀರನಿಸದ ಆನೆ-ಕುದುರೆಗಳಿಗೆ ನೀರು ಹಾಕದವಳು ನೀನು" ಎಂದು ತಿರಸ್ಕಾರ ಮಾಡಿ ನಡೆದರು. + ಅವಳು ತಿರುಗಿ ಬರುವಾಗ ಆನೆ,ಕುದುರೆ ಎದುರಾದವು, ಹತ್ತಬೇಕೆಂದು ಹವಣಿಸಿದಾಗ, "ನೀನು ನೀರು ಕೊಡಲಿಲ್ಲ, ದೂರ ಸರಿ" ಎಂದವು. +ಆಕಳು, ಎಮ್ಮೆಗಳು ಹಾಲನ್ನು ಕೊಡಲಿಲ್ಲ, ಅವಳನ್ನು ಹಿಂಬಾಲಿಸಲಿಲ್ಲ. +ಹೂವಿನ ಗಿಡಗಳು ಹೂವುಗಳನ್ನು ಕೊಡಲಿಲ್ಲ. +ಕುಸುಮ ಬರಿಗೈಯಿಂದ ಬಂದಳು. +ತಾಯಿಯು, "ನಾನು ಸುಮ್ಮನೆ ಹುಡುಗಿಗೆ ಹೊಡೆದು ಕಳಿಸಿದೆ" ಎಂದು ವ್ಯಥೆ ಮಾಡಿದಳು. +೧೮.ದಮಡಿ ಸಾಲದ ಕಥೆ. +ಒಂದಲ್ಲ ಒಂದು ಊರಿನಲ್ಲಿ ಕಂಜೂಶಿ ಭಟ್ಟ ಎಂಬ ಒಬ್ಬ ಬ್ರಾಹ್ಮಣನಿದ್ದನು. +ಅವನು ಬಹಳ ಶ್ರೀಮಂತನಾಗಿದ್ದನು. +ಆದರೂ ದಮಡಿ-ದಮಡಿ ತಿಕ್ಕಿ ದುಡ್ಡು ಮಾಡುತ್ತಿದ್ದನು. +ಅವನು ಹೆಂಡತಿಗೆ ದಿನಾ ಒಂದು ಆಣೆಯನ್ನು ಮಾತ್ರ ಕೊಟ್ಟು, ದಮಡಿಗೆ ಎಷ್ಟು ಬರುತ್ತದೆಯೋ ಅಷ್ಟು ಸಾಮಾನು ತರಿಸುತ್ತಿದ್ದನು. +ಅವಳು ಅಷ್ಟೇ ಸಾಮಾನು ಹಾಕಿ ಉಪ್ಪು-ಹುಳಿ ಮೇಲು ಖರ್ಚು ನೋಡಿಕೊಂಡು ಅಡುಗೆ ಮಾಡುತ್ತಿದ್ದಳು. +'ತೆಂಗಿನಕಾಯಿ ಹಾಕಿ ಪದಾರ್ಥ ಮಾಡಬಾರದು' ಎಂದು ಅವಳಿಗೆ ಅವನು ತಾಕೀತು ಮಾಡಿದ್ದನು. +ಒಂದು ದಿನ ತಿರುಪತಿ ಯಾತ್ರೆಗೆ ಹೋಗುವ ಕೆಲವು ಜನರು ಅವನ ಮನೆಗೆ ಬಂದರು. +ಅವರು ಇವ ಶ್ರೀಮಂತ, ಇವನ ಮನೆಯಲ್ಲಿ ಊಟ ಸಿಕ್ಕಬಹುದೆಂದು ಬಂದವರು. +ಅವನು,"ನಿಮಗೆ ಊಟ ಹಾಕಲಿಕ್ಕೆ ಧರ್ಮಾರ್ಥ ಛತ್ರವನ್ನು ಇಡಲಿಲ್ಲ" ಎಂದನು. +"ಹಾಗಾದರೆ, ನಮಗೆ ಸ್ವಲ್ಪ ಜಾಗ ಕೊಡಿ. +ನಾವು ಅಡುಗೆ ಮಾಡಿಕೊಂಡು ಊಟಮಾಡಿ ಹೋಗುತ್ತೇವೆ" ಎಂದರು. +ಭಟ್ಟನ ಹೆಂಡತಿ, "ನನ್ನ ಗಂಡನನ್ನು ಕೇಳಿ. +ಅವರು ಒಪ್ಪಿದರೆ ಅಡ್ಡಿಯಿಲ್ಲ" ಎಂದಳು. +ಕಂಜೂಶಿ ಭಟ್ಟನು, "ಹಾಗಯೇ ಪುಕ್ಕಟೆ ಸಿಕ್ಕಲಿಕ್ಕಿಲ್ಲ,ಬಾಡಿಗೆ ಕೊಡಿ" ಎಂದನು. +"ಆಯ್ತು" ಎಂದು ಹೇಳಿ ಅವರು ಅವನಿಗೆ ಜಾಗಕ್ಕೆ ನಾಲ್ಕಾಣೆ ಬಾಡಿಗೆ ಕೊಟ್ಟು ಅಡುಗೆ ಮಾಡಿ ಉಂಡರು. +ಭಟ್ಟನ ಹೆಂಡತಿ, "ನೀವು ಎಲ್ಲಿಗೆ ಹೋಗಲಿಕ್ಕೆ ಬಂದವರು?" ಎಂದು ಕೇಳಿದಳು. +"ತಿರುಪತಿ ಯಾತ್ರೆಗೆ" ಅಂದರು ಅವರು. +"ನನ್ನ ಗಂಡ ಕಂಜೂಶಿ, ಖರ್ಚುಮಾಡುವುದೆಂದರೆ ಅವರಿಗೆ ಆಗದು. +ನಾನು ನಿಮ್ಮ ಸಂಗಡ ತಿರುಪತಿಗೆ ಬರಲೋ?" ಎಂದು ಕೇಳಿದಳು. +"ಹೂಂ, ಅಡ್ಡಿಯಿಲ್ಲ, ನಾವು ತಲಾ ಒಂದು ರೂಪಾಯಿಯಂತೆ ನಿನ್ನ ಖರ್ಚನ್ನು ಹಂಚಿಹಾಕಿಕೊಳ್ಳುತ್ತೇವೆ" ಎಂದರು. +ಭಟ್ಟನ ಹೆಂಡತಿ ಇದನ್ನು ಗಂಡನಿಗೆ ಹೇಳಿ, ತಾನು "ತಿರುಪತಿಗೆ ಹೋಗಿ ಬರುತ್ತೇನೆ"ಎಂದಳು. +ಭಟ್ಟನು ಕಾಸು ಖರ್ಚಿಲ್ಲದೆ ಕಾಶೀಯಾತ್ರೆ ಮಾಡುವುದಕ್ಕೂ ಸಿದ್ಧನೇ ಆಗಿದ್ದನು. +ಹೆಂಡತಿಯ ಹತ್ತಿರ, “ನನ್ನನ್ನೂ ಕರೆದುಕೊಂಡು ಹೋಗುವರೋ ಏನೆಂದು ಕೇಳು”ಅಂದನು. +ಅವರು 'ಹೂಂ' ಅಂದರು. +ಅವನ ಖರ್ಚನ್ನೂ ಅವರು ಹೊತ್ತುಕೊಳ್ಳಲಿಕ್ಕೆ ತಯಾರಾದರು. +ಭಟ್ಟನು ಎರಡು ಬಿಲ್ಲಿಗಳನ್ನು ತೆಗೆದುಕೊಂಡು ಯಾತ್ರೆಗೆ ಹೊರಟನು. +ತಿರುಪತಿಗೆ ಹೋಗಿ ಮುಟ್ಟಿದರು. +ಅವರೆಲ್ಲರೂ ಪೂಜೆ ಮಾಡಿಸಿದರು, ಸೇವೆ ಮಾಡಿದರು,ಕಾಣಿಕೆ ಹಾಕಿದರು. +ಅಲ್ಲಿಯೇ ಪೂಜಾರಿಗಳಿಗೆ ದಕ್ಷಿಣೆ ಕೊಟ್ಟರು. + ಒಂದು ದಿನ ಮಧ್ಯಾಹ್ನ ಹೊರಡುವುದೆಂದು ನಿಕ್ಕಿ ಮಾಡಿದರು. + ಭಟ್ಟನು ದಾರಿಯಲ್ಲಿಯೂ ದಮಡಿಯನ್ನು ಖರ್ಚು ಮಾಡಲಿಲ್ಲ. + ದೇವರಿಗೂ ಕಾಸನ್ನು ಕಾಣಿಕೆ ಹಾಕಲಿಲ್ಲ. +ಹೊರಡುವಾಗ ದೇವರು ಕೇಳಿದನು, “ಕಂಜೂಶಿ ಭಟ್ಟಾ, ನೀನು ನನಗೆ ಏನೂ ಕೊಡುವುದಿಲ್ಲವೋ? +ಭಟ್ಟನು, “ನಾನು ನಾಳೆ ನಿನಗೆ ಒಂದು ದಮಡಿಯನ್ನು ಕೊಡುವೆ”ಎಂದು ಸುಳ್ಳು ಹೇಳಿದನು. +ಮತ್ತೆ ಒಂದು ತಾಸಿನಲ್ಲಿ ಎಲ್ಲರೂ ಊರ ಕಡೆ ಹೊರಟರು. +ಮತ್ತೇ ದೇವರು ಬಂದು, “ನೀನು ನನಗೆ ಒಂದು ದಮಡಿಯನ್ನು ನಾಳೆ ಕೊಡುವೆ ಅಂದವನು ಈಗಾಗಲೇ ಹೊರಟೆಯಲ್ಲ, ದಮಡಿಯನ್ನು ಕೊಟ್ಟೇ ಹೋಗಬೇಕು” ಎಂದನು. +ಭಟ್ಟನು,“ಈಗ ಕೊಡುವುದಿಲ್ಲ ನನ್ನ ಮನೆಗೆ ಬಾ” ಎಂದನು. +ಎಲ್ಲರೂ ತಮ್ಮ ತಮ್ಮ ಮನೆಗಳಿಗೆ ಬಂದರು. +ಇವನೂ ಮನೆಗೆ ಬಂದ. +ದೇವರು ಅವನ ಹಿಂದೆಯೇ ಬಂದು, “ಈಗಲಾದರೂ ನನಗೆ ಕೊಡುವೆ ಎಂದ ದಮಡಿಯನ್ನು ಕೊಡು” ಎಂದನು. +ಭಟ್ಟನು, “ಇವತ್ತಿಲ್ಲ ಇನ್ನೊಂದು ಬುಧವಾರ ಬಾ” ಎಂದು ಹೇಳಿದನು. +ಮುಂದಿನ ಬುಧವಾರ ದೇವರು ಮತ್ತೆ ಬಂದು ಕೇಳಿದನು. +ಆಗಲೂ ದಮಡಿಯನ್ನು ಕೊಡಲಿಲ್ಲ ಭಟ್ಟ. +ಮತ್ತೊಂದು ದಿನ ದೇವರು ಮತ್ತೆ ದಮಡಿಯನ್ನು ವಸೂಲು ಮಾಡಲಿಕ್ಕೆ ಇವನ ಮನೆಗೆ ಬರುವುದನ್ನು ಭಟ್ಟನು ಕಂಡನು. +ಹೆಂಡತಿಯ ಹತ್ತಿರ, "ದಮಡಿ ಸಾಲದ ವಸೂಲಿಗೆ ಮತ್ತೆ ಬಂದ ಅವ, ನಾನು ಸತ್ತಹಾಗೆ ಬಿದ್ದುಕೊಳ್ಳುತ್ತೇನೆ, ನೀನು ತೆಂಗಿನಕಾಯಿಯನ್ನು ಒಡಿದಿಟ್ಟುಕೊಂಡು ನನ್ನ ತಲೆಯ ಮೇಲುಬದಿಗೆ ದೀಪ ಇಟ್ಟುಕೊಂಡು ತೀಡುತ್ತಾ ಕೂತುಕೋ" ಅಂದು ಹಸೆಯಮೇಲೆ ಮಲಗಿಕೊಂಡನು. +ಅವಳು ಅಳಲಿಲ್ಲ, “ನೀನು ಕೊಡದಿದ್ದರೆ ನಾನು ಬೇಡಿ ತಂದಾದರೂ ಆ ದಮಡಿಯ ಸಾಲವನ್ನು ತೀರಿಸುತ್ತೇನೆ” ಎಂದಳು. +ಭಟ್ಟನು, “ನೀನು ತೀಡದಿದ್ದರೆ ಹೊಡೆದುತೀಡಿಸುತ್ತೇನೆ” ಎಂದನು. +ಅವಳು ಆಗ ತೀಡಲಿಕ್ಕೆ ಸುರುಮಾಡಿದಳು. +“ಏನಾಯಿತು?” ಎಂದು ಕೇಳಿದನು. +ಅವಳು ಮಲಗಿದ್ದ ಗಂಡನ ಕಡೆ ತೋರಿಸಿ, “ಏನು ಹೇಳುವುದು. . . ” ಎಂದು ಮತ್ತೆ ತೀಡಿದಳು. +ಆಗ ತಿಮ್ಮಪ್ಪನು, “ತೀಡಿದರೆ ಏನು ಬಂತು? +ತಡೆ ನಾನು ಹೇಗೂ ಬಂದವನೇ ಇದ್ದೇನೆ ಅವನ ಹೆಣವನ್ನು ಸುಟ್ಟು ಹಾಕಿ ಹೋಗುತ್ತೇನೆ”ಎಂದನು. +ಜನರನ್ನು ಒಟ್ಟುಗೂಡಿಸಿದನು. +ಬರುವಾಗ ಸೌದೆ ಹೊತ್ತುಕೊಂಡೇ ಬಂದರು. +ಅವನನ್ನು ಹೊತ್ತುಕೊಂಡು ಹೋಗಿ ಈಡಿನ ಮೇಲೆ ಮಲಗಿಸಿದರು. +ಈಡಿಗೆ ಬೆಂಕಿಕೊಟ್ಟರು. +ಬೆಂಕಿ ದೊಡ್ಡದಾಗಿ ಅವನ ರೋಮ ಗರಿದಾಗ ನೋವಿನಿಂದ ಮಿಡುಕಾಡಿದನು. +ದೇವರು, “ಎದ್ದು ಕೊಳ್ಳೋ ಕಂಜೂಶೀ” ಅಂದನು. +ಆಗ ಭಟ್ಟನು, “ನೀನು ನನ್ನ ದಮಡಿ ಬಾಕಿಯನ್ನು ಬಿಡುತ್ತಿಯೋ?ಅಂದರೆ ಮಾತ್ರ ಎದ್ದುಕೊಳ್ಳುತ್ತೇನೆ” ಅಂದನು. +ಸತ್ತವನು ಮತ್ತೂ ಮಿಡುಕಾಡುತ್ತಿದ್ದನು. +ದೇವರು, “ಎದ್ದುಕೋ ಜೀವಕ್ಕೆಹಾನಿಮಾಡಿಕೊಳ್ಳಬೇಡ, ಏನು ಮಾಡುವೆ?” ಎಂದು ಕೇಳಿದನು. +ಭಟ್ಟನೂ ಆಗಲೂ ಮೊದಲಿನ ಹಾಗೇ ಹೇಳಿದನು. +ಆಗ, “ನಿನ್ನ ದಮಡಿ ಸಾಲವನ್ನು ಬಿಡುತ್ತೇನೆ ಎದ್ದುಕೋ” ಅಂದನು. +'ಹೂಂ' ಎಂದು ಎದ್ದು ಕಂಜೂಶಿ ಭಟ್ಟನು ಈಡಿನಿಂದಿಳಿದು ಮನೆಗೆ ಹೋದನು. +೧೯.ದುಡುಕಿನಿಂದ ಕೆಡುಕು. +ಒಂದು ಊರಿನಲ್ಲಿ ಒಬ್ಬ ಭಟ್ಟನೂ, ಅವನ ಹೆಂಡತಿಯೂ ಬಡತನದಿಂದ ಸಂಸಾರ ಮಾಡಿಕೊಂಡಿದ್ದರು. +ಅವನ ಹೆಂಡತಿಯು ಗರ್ಭಿಣಿಯಾದಳು. +ಅವಳಿಗೆ ತಿಂಗಳು ತುಂಬುತ್ತಾ ಬಂತು. +ಅವಳಿಗೆ ನವಮಾಸವಾಗಿ ಹಡೆಯುವ ಶೀಕು ಪ್ರಾರಂಭವಾಯಿತು. +ಭಟ್ಟನು ಸೂಲಗಿತ್ತಿಗೆ ಬರುವಂತೆ ಹೇಳಿ ಬಂದನು. +ಅವಳು ಬರುವಷ್ಟರಲ್ಲಿ ಬಡತಿಯ ವೇದನೆಯ ಕೂಗನ್ನು ಕೇಳಿದ ಭಟ್ಟನು ಏನು ಮಾಡಬೇಕೆಂದು ತಿಳಿಯದೆ ಬಹಳ ಕಂಗಲಾದನು. + ಹೆಂಡತಿಯ ಕೂಗುವಿಕೆ ಮತ್ತೂ ಹೆಚ್ಚಾಯಿತು. +ಭಟ್ಟನು ಹೆಂಡತಿಯ ಈ ಕಷ್ಟವನ್ನು ನೋಡಲಾರದೆ, ಕೇಳಲಾರದೆ ಇದಕ್ಕೆ ತನ್ನ ಅಸಲೇ ಕಾರಣ ಎಂದುಕೊಂಡು ಅದರ ಮೇಲೆ ಭಯಂಕರವಾಗಿ ಸಿಟ್ಟಾದನು. +ಬಚ್ಚಲಕಟ್ಟೆಗೆಹೋಗಿ ಬಟ್ಟೆ ಬಿಚ್ಚಿಕೊಂಡು, ಅಸಲನ್ನು ಬಚ್ಚಲಕಟ್ಟೆ ಮೇಲೆ ಇಟ್ಟು ಕತ್ತಿಯಿಂದ ಕಚ್ಚುಹಾಕಿ ಹೊಡೆದು ಬುಡದಲ್ಲೇ ತುಂಡು ಮಾಡಿಕೊಂಡು ಭಯಂಕರ ವೇದನೆಯಿಂದ ಬೊಬ್ಬೆ ಹೊಡೆಯ ಹತ್ತಿದನು. +ಅಷ್ಟರಲ್ಲಿ ಸೂಲಗಿತ್ತಿ ಬಂದಳು. +ಅವನ ಹೆಂಡತಿಗೂ ಗಂಡನು ಮಾಡಿಕೊಂಡ ಅನರ್ಥ ತಿಳಿದು ಅವಳೂ ಗೋಳಾಡಿದಳು; +ಹಣೆ ಬಡಿದುಕೊಂಡಳು. +'ಹಡೆವಾಗ ಎಲ್ಲಾ ಹೆಂಗಸರಿಗೂ ಶೂಲೆಯಾಗುತ್ತದೆ. +ಅದಕ್ಕಾಗಿ ಈ ರೀತಿ ಮೂರ್ಖತನವನ್ನು ಮಾಡಿಕೊಳ್ಳಬೇಕೇ?' ಅಂತ ಹೇಳಿ ಪೇಚಾಡಿದಳು. +ಸೂಲಗಿತ್ತಿಯು ಭೃಂಗರಾಜ ಗಿಡದಸೊಪ್ಪನ್ನು, ನಾಚಿಕೆಗಿಡದ ಸೊಪ್ಪನ್ನು ಅರೆದು ತಂದು, 'ಹಚ್ಚಿಕಟ್ಟಿಕೊಳ್ಳಿ' ಅಂತ ಭಟ್ಟನಿಗೆ ಕೊಟ್ಟಳು. +ಅವನು ಅದನ್ನು ಹಚ್ಚಿಕೊಂಡು ಕಚ್ಚೆ ಉಟ್ಟುಕೊಂಡನು. +ಅವನ ಹೆಂಡತಿಯು ಗಂಡು ಶಿಶುವನ್ನು ಹಡೆದಳು. +ಸೂಲಗಿತ್ತಿಯು ಬಾಣಂತಿ ಮತ್ತು ಶಿಶುವಿಗೆ ಮಾಡಬೇಕಾದ ಕರ್ತವ್ಯವನ್ನು ಮಾಡಿದಳು. +ಹೀಗೆ ಕೆಲವು ದಿವಸ ಕಳೆದ ಮೇಲೆ ಭಟ್ಟನು ಕಡಿದು ಮಾಡಿಕೊಂಡಿದ್ದ ಗಾಯದ ಹುಣ್ಣು ಮಾಯುತ್ತಾ ಬಂತು. +ಭಟ್ಟನ ಹೆಂಡತಿಯು, “ಮೂರ್ಖತನದಿಂದ ನೀವು ಐನ ಕಾರ್ಯಕ್ಕೆ ಬೇಕಾದ ಅಸಲನ್ನು ಕಡಿದುಕೊಂಡಿರಿ. +ಅರಣ್ಯಕ್ಕೆ ಹೋಗಿ ಪಾರ್ವತಿ- ಪರಮೇಶ್ವರರ ಕುರಿತು ತಪಸ್ಸು ಮಾಡಿ,ಅವರ ಅನುಗ್ರಹ ಪಡೆದು ಅವರ ವರದಿಂದ ಅಸಲನ್ನು ಮತ್ತೆ ಪಡೆದು ಬನ್ನಿ” ಅಂತ ಹೇಳಿ ಅವನನ್ನು ಕಳಿಸಿದಳು. +ಭಟ್ಟನು ಅರಣ್ಯಕ್ಕೆ ಹೋಗಿ ಅಲ್ಲಿ ಗಡ್ಡೆ-ಗೆಣಸು ತಿಂದುಕೊಳ್ಳುತ್ತಾ ಪಾರ್ವತಿ-ಪರಮೇಶ್ವರರನ್ನು ನೆನೆಯುತ್ತಾ ಉಳಿದುಕೊಂಡನು. +ಈಶ್ವರನು ಪಾರ್ವತಿ ಸಹಿತವಾಗಿ ಬಂದು ಭಟ್ಟನ ಹತ್ತಿರ, “ಯಾಕೆ ನೀನು ಹೀಗೆ ತಪಸ್ಸು ಮಾಡುತ್ತಿರುವೆ?” ಅಂತ ಕೇಳಿದನು. +ಭಟ್ಟನು ವಿಷಯವನ್ನು ತಿಳಿಸಿದನು. +ಈಶ್ವರನು, “ಇಂತಹ ಮೂರ್ಖತನವನ್ನು ನೀನು ಮಾಡಿದಂತೆ ಮತ್ತೇ ಯಾರೋ ಮಾಡಬಹುದು. +ಆದ್ದರಿಂದ, ನಿನಗೆ ನಿನ್ನ ಅಸಲಿನ ಬದಲು ಎಮ್ಮೆಯ ಮೊಲೆಯನ್ನು ತಂದು ಹಚ್ಚಿಕೊಡುತ್ತೇನೆ ಜನರು ಇದರಿಂದ 'ದುಡುಕಿನಿಂದ ಕೆಡಕಾಗುತ್ತದೆ' ಎಂದು ಬುದ್ಧಿಕಲಿಯಲಿ” ಎಂದು ಹೇಳಿ ಎಮ್ಮೆಯ ಒಂದು ಮೊಲೆಯನ್ನು ಕೊಯ್ದು ತಂದು ಹಚ್ಚಿದನು. +ಭಟ್ಟನು ಮನೆಗೆ ಬಂದನು. +ಬೇಕಾದ ಮಾಲು ಬೇರೆ ರೀತಿಯಿಂದ ಅವರಿಗೆ ಸಿಕ್ಕಿತು. +ಭಟ್ಟನ ಹೆಂಡತಿಯು ಬೆಳಗ್ಗೆ, ಸಂಜೆ ಎಮ್ಮೆಯ ಮೊಲೆಯ ಕರೆದು ತಂಬಿಗೆ ಹಾಲನ್ನು ಪಡೆದುಕೊಳ್ಳಹತ್ತಿದಳು. +ಹಾಲನ್ನು ಮಾರಾಟ ಮಾಡಿ ಅವರ ಬಡತನ ಹೋಗಿ ಅವರು ಶ್ರೀಮಂತರಾದರು. +ಬೇಕಾದಾಗ ಎಮ್ಮೆ ಮೊಲೆ ಅಸಲಿನಂತೆ ಸಹ ಅವರಿಗೆ ಉಪಯೋಗ ಕೊಡುತ್ತಿತ್ತು. +೨೦.ನಶೀಬ ಮತ್ತು ಬುದ್ಧಿ. +ಒಂದು ಊರಿನಲ್ಲಿ ನಶೀಬ ಮತ್ತು ಬುದ್ಧಿ ಒಂದೇ ಕಡೆ ಸೇರಿದ್ದವು. +ಅವರೊಳಗೆ 'ನಾನುಹೆಚ್ಚು', 'ನಾನು ಹೆಚ್ಚು' ಎಂದು ಮಾತಿಗೆ ಮಾತು ಬಂದು ಅವೆರಡೂ ಲಡಾಯಿ ಮಾಡಿದವು. +ನಶೀಬವು, “ನನ್ನ ಶಕ್ತಿಯನ್ನು ನೋಡು. +ತಿಪ್ಪೆಗೌಡನ ಮನೆ ಸೇರಿ ತಿಪ್ಪೆಯಿದ್ದಲ್ಲಿ ಉಪ್ಪರಿಗೆ ಮಾಡುತ್ತೇನೆ” ಎಂದಿತು. +“ಹೆಡ್ಡನ ದುಡ್ಡು ಗುಡ್ಡದ ಕಲ್ಲಿಗೆ ಸಮಾನ” ಎಂದಿತು ಬುದ್ಧಿ. +“ನೋಡೋಣ” ಎಂದು ನಶೀಬ ಹೇಳಿತು. +ತಿಪ್ಪೆಗೌಡನಿಗೆ ಹೆಂಡಿರಿರಲಿಲ್ಲ, ಮಕ್ಕಳಿರಲಿಲ್ಲ, ಒಂದು ಗದ್ದೆ ಮತ್ತು ಒಂದು ಗುಡಿಸಲು ಮಾತ್ರ ಇದ್ದವು. +ಅವನ ಗದ್ದೆಯಲ್ಲಿ ಆಸಲದ ಪಯರಿನಲ್ಲಿ ಮುತ್ತಿನ ತೆನೆಗಳೇ ಬೆಳೆದಿದ್ದವು. +ಒಂದು ದಿನ ಪ್ರಧಾನಿ ಬಂದು, “ಗೌಡನ ಗದ್ದೆಯಲ್ಲಿ ಮುತ್ತು-ರತ್ನ ಬೆಳೆದಿವೆ” ಎಂದುಆಶ್ಚರ್ಯಪಟ್ಟು ಗೌಡನ ಮನೆಗೆ ಹೋದನು. +“ನಿನ್ನ ಗದ್ದೆ ಕೊಯ್ಯಲಿಕ್ಕೆ ಹದವಾಗೆ ಬೆಳೆದಿವೆ,ಯಾಕೆ ಕೊಯ್ಯಲಿಲ್ಲ?” ಎಂದು ಕೇಳಿದನು. +“ಆಳು ಹುಡ್ಕಬೇಕು” ಎಂದ ಗೌಡ. +“ನಾನುಆಳು ಹಚ್ಚಿ ಕೊಯ್ಯಲೋ?” ಎಂದು ಕೇಳಿದ ಪ್ರಧಾನಿ. +“ಹೂಂ” ಅಂದನು ಗೌಡ. +ಪ್ರಧಾನಿಯು ಆಳುಗಳನ್ನು ಹಚ್ಚಿ ಗದ್ದೆ ಕೊಯ್ಯಿಸಿ ಮುತ್ತಿನ ಕಾಳುಗಳನ್ನು ಆಳುಗಳಿಂದ ತಿರಿಯಿಸಿ, ಮುತ್ತನ್ನೆಲ್ಲ ಚೀಲಗಳಲ್ಲಿ ತುಂಬಿಸಿ, ಗಾಡಿಯಲ್ಲಿ ಹೇರಿಸಿ ಮುತ್ತಿನ ವ್ಯಾಪಾರಿಗಳಿಗೆ ಮಾರಿದನು. +ಕೋಟ್ಯಾವಧಿ ರೂಪಾಯಿ ಸಿಕ್ಕಿತು. +ಗೌಡನಿಗೆ ದೊಡ್ಡಮನೆ ಕಟ್ಟಿಸಿ ಕೊಟ್ಟು, ಆತನಿಗೆ ಅಗತ್ಯವಾದ ಸಾಮಾಗ್ರಿಗಳನ್ನು ತರಿಸಿ ಮನೆಯಲ್ಲಿ ತುಂಬಿಟ್ಟನು. +ದೊಡ್ಡ ಶ್ರೀಮಂತರ ಮಗಳನ್ನು ತಂದು ಅವನಿಗೆ ಮದುವೆ ಮಾಡಬೇಕೆಂದು ನಿಶ್ಚಯ ಮಾಡಿ, ಗೌಡನನ್ನು ಕರೆದನು- “ಗೌಡಾ, ನಾನು ನಿನಗೆ ಹೆಣ್ಣು ಕೇಳಿ ಮದುವೆಮಾಡುತ್ತೇನೆ, ನೀನು ಯಾರು ಏನು ಕೇಳಿದರೂ, 'ಹೇಳುವುದಕ್ಕೂ ಕೇಳುವುದಕ್ ಕೂಸಮಯವಲ್ಲ' ಎಂದು ಹೇಳಬೇಕು, ಮತ್ತೆ ಬೇರೆ ಮಾತನ್ನೇ ಆಡಬಾರದು” ಎಂದು ಹೇಳಿ,ಅವನ ಮದುವೆಯನ್ನು ನಿಶ್ಚಯ ಮಾಡಿದನು. +ದಿಬ್ಬಣ ತಕ್ಕೊಂಡು ಹೋಗಿ ಗೌಡನ ಮದುವೆಯಾಯಿತು. +ಅದೇ ದಿವಸರಾತ್ರಿ ಪಲ್ಲಂಗ ತಯಾರು ಮಾಡಿ ಗೌಡನಿಗೂ, ಅವನ ಹೆಂಡತಿಗೂ ಹಸೆ ಹಾಕಿದರು. +ತಲೆದೆಸೆಯಲ್ಲಿ ಬಾಳೆಹಣ್ಣು, ಸಕ್ಕರೆ ಲಾಡು ಎಲ್ಲವನ್ನೂ ಇರಿಸಿದ್ದರು. +ತಿಪ್ಪೇಗೌಡನು ಬಂದವನು ಬಾಳೆಹಣ್ಣುಗಳನ್ನು ಸಿಪ್ಪೆ ಸಹಿತ ತಿಂದನು. +ತಲೆ ಬದಿಗೆಕಾಲು, ಕಾಲಿರುವ ಬದಿಗೆ ತಲೆಹಾಕಿ ಗೋಡೆಗೆ ಮೊಕ ಮಾಡಿ ಮಲಗಿದನು. +ಅವನಹೆಂಡತಿ ಬಂದವಳು ಗೌಡ ಬಾಳೆಹಣ್ಣು ತಿಂದದ್ದನ್ನು ನೋಡಿದಳು. +ಸಿಪ್ಪೆ ಕಾಣುವುದಿಲ್ಲ,'ಬಾಳೆಹಣ್ಣು ಸಿಪ್ಪೆ ಎಲ್ಲಿ ಹೋಯಿತು? +ಸಿಪ್ಟೆಗೂಡಿ ತಿಂದನೋ?' ಎಂದು ಲೆಕ್ಕಹಾಕಿದಳು. +'ಆದರೆ, ಇಟ್ಟ ಹಾಲನ್ನು ಕುಡಿಯಲಿಲ್ಲ. +ನೀರಿನ ಚೊಂಬಿನಿಂದ ನೀರನ್ನಷ್ಟೇ ಕುಡಿದಿದ್ದಾನೆ. +ಹೆಡ್ಡನೋ ಏನೋ, ಹಿಂದುಮುಂದಾಗಿ ಹಾಸಿಗೆಯಲ್ಲಿ ಮಲಗಿದ್ದಾನೆ. +ಕುಶಾಲಿಗೆ ಈ ಎಲ್ಲ ಆಟ ಮಾಡಿರಬೇಕು' ಎಂದು ತಿಳಿದುಕೊಂಡು ಅವನನ್ನು ಎಬ್ಬಿಸಿದಳು. +ಗೌಡನು ಆಗ,"ಹೇಳುವುದಕ್ಕೆ ಕೇಳುವುದಕ್ಕೆ ಸಮಯವಲ್ಲ"ಎಂದು ಹೇಳಿ ಮತ್ತೆ ಹಾಗೇ ಗೋಡೆಗೆ ಮಗ್ಗಲಾಗಿ ಮಲಗಿದನು. +ತಿರುಗಲೇ ಇಲ್ಲ. +ಮರುದಿನ ಚಲೋ ಗಾಯನ ಹಾಡುವ ಹುಡುಗಿಯರನ್ನು ಕರೆಸಿ ಗಾಯನ ಹೇಳಿಸಿದಳು. +ಅವನು ಆಗಲೂ, “ಹೇಳುವುದಕ್ಕೆ ಕೇಳುವುದಕ್ಕೆ ಸಮಯವಲ್ಲ” ಎಂದು ಹೇಳಿ ತಿರುಗಿಯೂ ನೋಡದೆ ಮಲಗಿಕೊಂಡೇ ಇದ್ದನು. +ಮೇಲಾಗಿ ಮುಸುಕನ್ನು ಹಾಕಿಕೊಂಡನು. +ಹೆಂಡತಿಯು- 'ಇವನು ಎಂಥ ಹೆಡ್ಡ. +ಗಾಯನವನ್ನು ಕೇಳಿದರೆ ಇವನಿಗೆ ಆನಂದವಾಗುವುದರ ಬದಲು ಕಿವಿಶೂಲೆಯಾಗುವದೆಂತ ಕಾಣುತ್ತದೆ' ಎಂದು ವ್ಯಥೆ ಮಾಡಿದಳು. +ನೆರೆಮನೆಯ ಅಜ್ಜಿಯ ಕೈಯಲ್ಲಿ ಹೇಳಿದಳು, “ನನ್ನ ಗಂಡ ಹೆಡ್ಡನೋ ಏನೋ ಅವನು ರಾತ್ರಿ ನನ್ನ ಸಂಗಡ ಮಲಗುವುದೇ ಇಲ್ಲ. +ಕಾಲಿರುವಲ್ಲಿ ತಲೆ, ತಲೆಯಿರುವಲ್ಲಿ ಕಾಲು ಹಾಕಿಕೊಂಡು ಗೋಡೆಗೆ ಮೊಕಮಾಡಿ ಮಲಗಿ ಗೊರಕೆ ಹೊಡೆಯುತ್ತಾನೆ. + ಗಂಡಸಲ್ಲವೆಂತ ಕಾಣುತ್ತದೆ. +ನಾನು ಎಷ್ಟು ಚಲೋ ಗಾಯನ ಮಾಡುವ ಹುಡುಗಿಯರನ್ನು ಕರೆದುಕೊಂಡು ಬಂದು ಗಾಯನ ಮಾಡಿಸಿದೆ. +ಅವರನ್ನು ನೋಡುವುದೂ ಇಲ್ಲ, ಗಾಯನ ಕೇಳುವುದಕ್ಕೂ ಅವನಿಗೆ ಮನಸ್ಸಿಲ್ಲ. +ನಾನಾಗಿ ಎಬ್ಬಿಸಲಿಕ್ಕೆ ಪ್ರಯತ್ನ ಮಾಡಿದರೆ,'ಹೇಳುವುದಕ್ಕೂ, ಕೇಳುವುದಕ್ಕೂ ಸಮಯವಲ್ಲ' ಎಂದು ಹೇಳಿ ಮಂಚದ ಕೆಳಗೆ ಹೋಗಿ ಮಲಗಿದರೂ ಮಲಗಿದನೇ. +ಅವನಿಗೆ ನನ್ನ ಮೇಲೆ ಪ್ರೀತಿಯೇ ಇಲ್ಲವೋ? +ಯಾಕೆ ಹಾಗೆ ಮಾಡುತ್ತಾನೆಯೋ ತಿಳಿಯುವುದಿಲ್ಲ” ಎಂದು ಹೇಳಿದಳು. +ಅಜ್ಜಿಯು, “ಅವನಿಗೆ ಬಹಳ ವರಕ (ನಿದ್ರೆ) ಬರುತ್ತದೆಯಂತ ಕಾಣುತ್ತದೆ, ನೀಲಗಿರಿ ಎಣ್ಣೆ ಬಾಟ್ಲೆಯನ್ನು ಇಂದು ತರಿಸು, ಅವನು ನಿದ್ರೆ ಮಾಡಿದಾಗ ಅವನ ಕಣ್ಣಿಗೆ ತಿಕ್ಕು. +ಆಗ ಏನು ಮಾತಾಡುತ್ತಾನೆಯೋ ಎಂದು ನೋಡೋಣ” ಎಂದು ಹೇಳಿಕೊಟ್ಟಳು. +ಮರುದಿನ ರಾತ್ರಿ ಮಲಗಿದಾಗ ಅವಳು ನೀಲಗಿರಿಯೆಣ್ಣೆ ಬಾಟ್ಲಿಯಿಂದ ಎಣ್ಣೆಯನ್ನು ತೆಗೆದು ಅವನ ಕಣ್ಣಿಗೆ ತಿಕ್ಕಿದಳು. +ಗೌಡ ಸಿಟ್ಟಿಗೆ ಬಂದು, “ಯೇ ರಂಡೆ ಚಾಯೆ (ಸಾಯೆ). +ನೀನು ಬಿದ್ಕೋ ಆತ್ಲಾಗಿ” ಎಂದುಬಿಟ್ಟನು. +ಮತ್ತೆ ಮುಸುಕನ್ನು ಎಳೆದುಕೊಂಡನು. +ಇವಳಿಗೆ ಸಿಟ್ಟು ಬಂದುಹೋಯಿತು. +'ಇವನು ನೋಡಲಿಕ್ಕೆ ಚೆಂದ ಕಂಡರೂ ಹೆಡ್ಡಪರದೇಶಿ, ಎರಡು ಕಾಲಿನ ಪಶುವಿಗೂ ಕಡೆ, ಇಂಥ ಗಂಡ ಇದ್ದರೇನು ಸತ್ತರೇನು?' ಎಂದುಹೇಳಿ ಕತ್ತಿ ತಕ್ಕೊಂಡು ಅವನನ್ನು ಕಡೆಯಲಿಕ್ಕೆ ಬಂದಳು. +ಆಗ ನಶೀಬ, “ನಾನು ಸೋತೆಬುದ್ಧಿ, ನೀನೇ ಹೋಗಿ ಅವನ ತಲೆಯಲ್ಲಿ ಸೇರಿಕೋ” ಎಂದು ಹೇಳಿತು. +ಬುದ್ಧಿ ಗೌಡನ ತಲೆಯಲ್ಲಿ ಸೇರಿತು, ಗೌಡ ಎದ್ದು ಕೂತನು. +ಹೆಂಡತಿಯನ್ನು ಪ್ರೀತಿಯಿಂದ ಕರೆದು, ಅವಳ ಹತ್ತಿರ ಪ್ರೀತಿಯ ಮಾತಾಡಿದನು. +ಅವಳು ಎತ್ತಿದ ಕತ್ತಿಯನ್ನು ಅವನ ಕಾಲಿನ ಹತ್ತಿರಇಟ್ಟು, “ನನ್ನದು ಬಹಳ ತಪ್ಪಾಯಿತು, ನನ್ನ ತಪ್ಪನ್ನು ಮನ್ನಿಸಿ ಕಾಪಾಡಿ” ಎಂದು ಹೇಳಿ ಅವನಿಗೆ ನಮಸ್ಕಾರ ಮಾಡಿದಳು. +ಗಂಡ ಹೆಂಡತಿ ಆ ಮೇಲೆ ಚೆಂದವಾಗಿ ಬಾಳಿದರು. +೨೧.ಪಂಚೇಂದ್ರಿಯ ಪ್ರೀತಿ. +ಒಂದು ಊರಿನಲ್ಲಿ ಜಾನಕಿಯೆಂಬ ಪತಿವ್ರತೆ ತನ್ನ ಅತ್ತೆ ಮತ್ತು ಮಾವ ಹಾಗೂ ಗಂಡನ ಸೇವೆ ಮಾಡುತ್ತಾ ಇದ್ದಳು. +ಒಂದು ದಿನ ಅವಳ ಗಂಡನು ಊರ ಮೇಲೆ ಹೋದವನು ಮನೆಗೆ ಬರಲೇ ಇಲ್ಲ. +ಜಾನಕಿಯು ಅತ್ತೆ-ಮಾವಂದಿರಿಗೆ ಊಟಕ್ಕೆ ಬಡಿಸಿ, ತಾನು ಊಟ ಮಾಡದೆ ದೇವರಪೂಜೆ ಮಾಡಿದ ತೀರ್ಥದ ತುಲಸಿ ನೀರನ್ನು ತೆಗೆದುಕೊಂಡು ಉಪವಾಸ ಉಳಿದಳು. +ಗಂಡನು ಊರೂರು ತಿರುಗುತ್ತಾ ಉಳಿದನು. +ಜಾನಕಿಯು ಉಪವಾಸ ಮುಂದುವರೆಸಿದಳು. +ಅವಳಿಗೆ ದಿನದಿನಕ್ಕೆ ಅಶಕ್ತತೆಯಾಗುತ್ತಾ ಬಂತು. +ಅವಳ ಪಂಚೇಂದ್ರಿಯಗಳು ಅವಳ ದೇಹವನ್ನು ಬಿಟ್ಟು ಹಾರಿಹೋದವು. +ಅವು ಐದೂ ಅಂಕೋಲಾದ ಸಾವುಕಾರನ ಮನೆಗೆ ಹೋದವು. +ದೇವಲೋಕದ ಸುಂದರ ಅಪ್ಸರೆಯರ ಹಾಗೆ ಚೆಂದವಾದ ರೂಪಮಾಡಿಕೊಂಡು ಹೋಗಿದ್ದವು. +"ನೀವು ಯಾರು?” ಎಂದು ಸಾವುಕಾರನು ಕೇಳಿದನು. +“ನಾವು ದೂರದಿಂದ ಬಂದವರು. . . ಏನು ಕೆಲಸ ನಮಗೆ ಬಹಳ ಹಸಿವೆಯಾಗಿದೆ, ಚೆನ್ನಾಗಿ ಊಟ ಹಾಕಿ” ಅಂದರು. +ಅವರಿಗೆ ಬೇಕಾದ ರೀತಿಯ ಕಜ್ಜಾಯದೂಟವನ್ನೇ ಹಾಕುತ್ತಾರೆ. +ಊಟ ಮಾಡಿ, “ನಿಮ್ಮ ಉಪಕಾರ ಮರೆಯುವ ಹಾಗಿಲ್ಲ” ಎಂದು ಹೇಳಿ ಐದೂ ಜನಸ್ತ್ರೀಯರೂ ಸುಂದರವಾಗಿ ನರ್ತನ ಮಾಡಿ ತೋರಿದಾದ ಸಾವುಕಾರನು ಬಹಳ ಸಂತೋಷಹೊಂದಿ, ಒಬ್ಬಳ ಹೆಗಲಿಗೆ ಪೀತಾಂಬರ ಸೀರೆಯನ್ನು ಉಡುಗೊರೆಯಾಗಿ ಹಾಕುತ್ತಾನೆ. +ಅವರು ತಿರುಗಿ ಊರಿಗೆ ಬಂದು ಪೀತಾಂಬರವನ್ನು ಗಿಳಿಗೂಟಕ್ಕೆ ಹಾಕಿಟ್ಟು ಜಾನಕಿಯ ಉದರವನ್ನು ಸೇರುತ್ತಾರೆ. +ಅವರು ಉಣ್ಣುವಾಗಲೇ ಜಾನಕಿಗೆ ಹೊಟ್ಟೆ ತುಂಬಿಹೋಗಿತ್ತು. +ಅವರು ಜಾನಕಿಯ ಉದರದಿಂದಲೇ ಬಂದವರು. +ಹದಿನೈದು ದಿವಸ ಕಳೆದವು. +ಮತ್ತೆ ಅದೇ ರೀತಿಯ ಹಸಿವೆ ಕಾಡಹತ್ತಿತ್ತು. +ಮತ್ತೆ ಅವಳ ಪಂಚೇಂದ್ರಿಯಗಳು ಅವಳ ಉದರವನ್ನು ಬಿಟ್ಟು ಹೊರಟವು. +ಹೆಣ್ಣು ರೂಪಾಗಿ ಗೋಕರ್ಣದ ಒಬ್ಬ ಸಾವುಕಾರನ ಮನೆಗೆ ಹೋಗಿ, “ನಮಗೆ ಬಹಳ ಹಸಿವಾಗಿದೆ,ಊಟಕ್ಕೆ ತಯಾರು ಮಾಡಿಸಿ ಹಾಕಿ” ಅಂದರು. +ಊಟ ಮಾಡಿ ತೃಪ್ತಿಯಾಗಿ ಐದುಜನರೂ ಮೊದಲಿಗಿಂತ ಸುಂದರವಾಗಿ ನರ್ತನ ಮಾಡಿದರು. +ಸಾವುಕಾರನು ಬಹಳ ಸಂತೋಷಪಟ್ಟು ಈ ಐದು ಹೆಣ್ಣುಗಳಲ್ಲಿ ಒಬ್ಬಳ ಕೊರಳಿಗೆ ಒಂದು ಮುತ್ತಿನ ಸರವನ್ನು ಹಾಕಿದನು. +ಅವರು ತಿರುಗಿ ಬಂದು ಅಟ್ಟದ ಮೇಲಿನ ಗಿಳಿಗೂಟಕ್ಕೆ ಆ ಮುತ್ತಿನ ಸರವನ್ನು ಹಾಕಿಟ್ಟು ಜಾನಕಿಯ ಉದರವನ್ನು ಸೇರಿದರು. +ಜಾನಕಿಯ ಗಂಡನು ಮತ್ತೆ ಎಂಟು-ಹತ್ತು ದಿನ ಕಳೆದ ಮೇಲೆ ಮನೆಗೆ ಬಂದನು. +ಜಾನಕಿಯು ಬಂದ ಗಂಡನಿಗೆ ಕಾಲು ತೊಳೆಯಲಿಕ್ಕೆ ನೀರು ಕೊಟ್ಟು, ಅವನನ್ನು ದೇವರಕೋಣೆಗೆ ಕರೆದುಕೊಂಡು ಹೋಗಿ ಅವನಿಗೆ ಹೂವು-ಗಂಧ ಹಾಕಿ ಪೂಜೆ ಮಾಡಿ ಅವನಿಗೆ ಊಟಕ್ಕೆ ಬಡಿಸಿದಳು; +ತಾನೂ ಊಟ ಮಾಡಿದಳು. +ರಾತ್ರಿ ಗಂಡ-ಹೆಂಡತಿ ದೀಪತೆಗೆದುಕೊಂಡು ಮಾಳಿಗೆಗೆ ಮಲಗಲಿಕ್ಕೆ ಹೋದರು. +ಅಲ್ಲಿ ಗೂಟಕ್ಕೆ ಇಟ್ಟಿದ್ದ ಪೀತಾಂಬರ,ಮುತ್ತಿನ ಸರಗಳನ್ನು ನೋಡಿ, 'ರಾಜನ ಹುಡುಗನೇ ಇವಳಿಗೆ ಕೊಟ್ಟಿರಬೇಕು. +ಇವಳು ಅವನ ಪ್ರೀತಿ ಮಾಡದೆ ಇಂಥಾ ವಿಪರೀತ ಬೆಲೆಯ ಸಾಮಾನು ಇವಳಿಗೆ ಹೇಗೆ ಬರಬೇಕು?'ಎಂದು ತಿಳಿದು ಅವಳನ್ನು ಬಹಳ ತಿರಸ್ಕಾರ ಮಾಡುತ್ತಾನೆ. +ಅವಳು ಅವನ ಕಾಲಿಗೆ ಬಿದ್ದು, “ಈ ಪೀತಾಂಬರ, ಮುತ್ತಿನ ಸರಗಳನ್ನು ನಾನು ನೋಡಿದ್ದು ಈಗಲೇ, ನಾನು ನೀವು ಬರುವ ತನಕ ಈ ಕೋಣೆಗೆ ಬರಲಿಲ್ಲ, ಅತ್ತೆಯ ಸಂಗಡ ಮಲಗುತ್ತಿದ್ದೆ. . . ” ಎಂದು ಎಷ್ಟು ಹೇಳಿದರೂ ಕೇಳದೆ, ತಾಯಿಯ ಮಾತನ್ನೂ ಧಿಕ್ಕರಿಸಿ ಅವಳನ್ನು ಮನೆಯಿಂದ ಹೊರಗೆ ಹಾಕಿಬಿಟ್ಟನು. +ಆ ರಾತ್ರಿಯಲ್ಲೇ ಅವಳು,'ನನ್ನ ತವರಮನೆಗೆ ಹೋದರೂ ಸುವಾರು (ಹೀನಾಯ)' ಎಂದು ಗಂಡನ ಅಕ್ಕನ ಮನೆಗೆ ಹೋದಳು. +ಬೆಳಗಾಗುವುದರೊಳಗೆ ಅಲ್ಲಿ ಹೋಗಿ ಮುಟ್ಟಿದಳು. +ಅತ್ತಿಗೆ, “ಇಷ್ಟು ಮುಂಬೆಳಗಿನಲ್ಲಿ ಅವಸರದಿಂದ ಬಂದ ಕಾರಣವೇನು?” ಎಂದು ಕೇಳಿದಳು. +ಜಾನಕಿ ಗಂಡ ತನ್ನನ್ನು ಹೊರಗೆ ಹಾಕಿದ ಸಂಗತಿಯನ್ನು ಹೇಳಿದಳು. +ಅವಳ ಅತ್ತಿಗೆ ತನ್ನ ಗಂಡನನ್ನು ಕಳುಹಿಸಿ ತಮ್ಮನನ್ನು ಕರೆಸಿಕೊಂಡಳು. +ಅತ್ತಿಗೆ, ಮೈದುನಿ ಸೇರಿ ಕಜ್ಜಾಯದೂಟಕ್ಕೆ ತಯಾರು ಮಾಡಿದ್ದರು. +ತಮ್ಮ ಸರಿಯಾಗಿ ಮಾತಾಡುವುದಿಲ್ಲ, ಮೋರೆಯ ಮೇಲೆ ಆನಂದವಿಲ್ಲ, ತಾಪದಲ್ಲಿ ಕೂತದನ್ನು ನೋಡಿ, “ಯಾಕೆ ಚಿಂತೆ ಮಾಡುವೆ?” ಎಂದು ಅಕ್ಕ ಕೇಳಿದಳು. +ತಮ್ಮ ನಿಜ ಕಾರಣವನ್ನು ಮರೆಸಿ, "ಹಾಗಲ್ಲ, ಹೀಗಲ್ಲ' ಎಂದು ಹೇಳಿದನು. +ಊಟಕ್ಕೆ ಹಾಕಿದರೂ ಅವನಿಗೆ ಊಟ ಸೇರುವುದಿಲ್ಲ. +ಸರಿಯಾಗಿ ಊಟ ಮಾಡದೆ ಕೈ, ಬಾಯಿ ತೊಳೆದುಕೊಂಡು ಕುಳಿತನು. +ಜಾನಕಿ ಗಂಡ ಬಾಳೆಯಲ್ಲಿ ಮುಟ್ಟದೆ ಬಿಟ್ಟ ಕಜ್ಜಾಯಗಳನ್ನು ತೆಗೆದು ಸೆರಗಿನಲ್ಲಿ ತುಂಬಿಕೊಂಡು ಅದನ್ನೇ ಉಂಡಳು. +ಗಂಡನು ರಾತ್ರಿಯಲ್ಲಿ ಹೊರಗೆ ಮಲಗಿದನು. +ಇವಳು ಒಳಗೆ ಕೆಳಗೆ ಮಲಗಿದಳು. +ಅಲ್ಲೇ ಗೋಡೆಯ ಮೇಲೆ ಗಂಡ ಗೌಳಿ(ಪಲ್ಲಿ), ಹೆಣ್ಣು ಗೌಳಿ ಬಂದಿದ್ದವು. +ಗಂಡು ಗೌಳಿ, “ಹೊತ್ತು ಹೋಗುವ ಹಾಗೆ ಒಂದು ಕತೆ ಹೇಳು” ಎಂದಿತು. +ಹೆಣ್ಣು ಗೌಳಿ ಇದೇ ಕತೆ ಹೇಳಿ, “ಪಂಚೇಂದ್ರಿಯಗಳು ದೇಹ ಬಿಟ್ಟು ಹಾರಿದ್ದು, ಹೆಂಗಸರರೂಪ ಮಾಡಿಕೊಂಡು ಕುಣಿದದ್ದು, ಇದೆಲ್ಲಾ ಆಶ್ಚರ್ಯವಾಗಿ ಕಾಣುತ್ತದೆ” ಎಂದಿತು. +ಗಂಡು ಗೌಳಿ ಅಂಥಾ ಪತಿವ್ರತೆ ಹೆಂಡತಿಯ ಮೇಲೆ ಗಂಡ ಸಂಶಯ ತಾಳಿದ್ದು ಮತ್ತೂ ಆಶ್ಚರ್ಯ ಎಂದಿತು. +ಗಂಡನು ಇದನ್ನೆಲ್ಲಾ ಕೇಳಿ ಅಕ್ಕನನ್ನು ಕರೆದು ದೀಪ ಹಚ್ಚಿ ಸಿಕೊಂಡು ಒಳಗೆ ಹೋಗಿ ಪ್ರೀತಿಯಿಂದ ಹೆಂಡತಿಯನ್ನು ಮಾತಾಡಿಸಿ ಒಳಗೆ ಮಲಗಿದನು. +೨೨.ಫಾರೆಸ್ಟ್‌ ಆಫೀಸರರ ಅಮಲ್ದಾರಿಕೆ. +ಒಂದು ಊರಿನಲ್ಲಿ ವೋಮಗೌಡ ಎಂಬ ಕುಮರಿಮರಾಠಿ ಗೌಡ ಇದ್ದನು. +ಅವನಿಗೆ ಸಾಗು ಮಾಡಲು ಸ್ವಂತ ಜಮೀನಿರಲಿಲ್ಲ. +ಸರಕಾರಕ್ಕೆ ಸೇರಿದ ಖಾಲಿ ಜಾಗ ತಕ್ಕೊಂಡು ತರಕಾರಿಯನ್ನು ಬೆಳೆಯಿಸುತ್ತಿದ್ದನು. +ತಾಳೆ ಮರ ಕಡಿದು ಅದರಿಂದ ತಾಳಿಚಕ್ಕೆ ಎತ್ತಿ ಅದನ್ನು ಒಣಗಿಸಿ ಹಿಟ್ಟು ಮಾಡಿ, ತಾಳಿ ಹಿಟ್ಟಿನ ಅಂಬಲಿ ಮಾಡಿಕೊಂಡು ಉಂಡು ಜೀವನ ಮಾಡುತ್ತಿದ್ದನು. +ಮಳೆಗಾಲದಲ್ಲಿ ತರಕಾರಿ ಗಿಡ ಬಳ್ಳಿ ಬೆಳೆಸಿದನು. +ಫಾರೆಸ್ಟ್‌ ಖಾತೆಯವರು ನೋಡುವ ಪದ್ಧತಿ ಇರುತ್ತದೆ. +ಗಾರ್ಡ್‌ ನೋಡಿಕೊಂಡು ಫಾರೆಸ್ಟ್‌ ಆಫೀಸರನಿಗೆ ಹೇಳಿ ಅವನನ್ನು ಕರೆದುಕೊಂಡು ಬಂದನು. +“ಸರಕಾರಿ ಜಾಗವನ್ನು ಅಪ್ಪಣೆಯಿಲ್ಲದೆ ತರಕಾರಿ ಬೆಳೆಸಲು ಗೌಡ ಬಳಸಿ ಅತಿಕ್ರಮಣ ಮಾಡಿದ್ದಾನೆ. +ಅತಿಕ್ರಮಣಕ್ಕೆ ಶಿಕ್ಷೆ ಮಾಡುತ್ತೇನೆ” ಎಂದು ಕಣ್ಣು ಕೆಂಪು ಮಾಡಿದರು. +ಗಾರ್ಡ್‌ನು ಮರಾಠಿಕೇರಿಗೆ ಹೋಗಿ ಗೌಡನನ್ನು ಕರೆದುಕೊಂಡು ಫಾರೆಸ್ಟ್‌ ಆಫೀಸರನ ಹತ್ತಿರ ಕರೆತಂದನು. +“ಒಡೆಯರಿಗೆ ಕೈಮುಗಿದೆ. . . ಓಹೋ! +ನೀವು ಬಂದಿದ್ದು ಯಾತಕ್ಕೆ ಎಂದು ಗೊತ್ತಾಯಿತು” ಎಂದನು. +“ಏನು ಗೊತ್ತಾಯಿತು” ಎಂದು ಸಿಟ್ಟಿನಿಂದ ಫಾರೆಸ್ಟ್‌ ಆಫೀಸರ್‌ಕೇಳಿದನು. +“ನಾನು ಒಳ್ಳೆ ಹಾಲಸೋರೆ ಕಾಯಿ ಬೆಳೆಸಿದ್ದೆ. +ಅದನ್ನು ತಕ್ಕೊಂಡು ಹೋಗಿ ಪಾಯಸ ಮಾಡಿಸಬೇಕು ಅಂತ ನದರ ಹಾಕಿದಿರಿ. +ನನ್ನ ಬಳ್ಳಿಯಲ್ಲಿ ಆದದ್ದೇ ಎರಡು ಕಾಯಿ. +ನಾನು ಕೊಡುವುದಿಲ್ಲ” ಎಂದನು. +“ತಕ್ಕೊಂಡು ಬಾ” ಎಂದು ಫಾರೆಸ್ಟ್‌ ಆಫೀಸರ್‌ ಜೋರು ಮಾಡಿದನು. +ಅಷ್ಟರಲ್ಲೇ ಒಂದು ಕಾಯಿ ತಂದ ಗೌಡ, “ಇನ್ನು ಒಂದು ಕಾಯ ಹಬ್ಬಗಾಣಿಕೆಗೆ ಒಡೆಯರಿಗೆ ಕೊಡಬೇಕು ಅದನ್ನು ಕೊಡಲಾಗುವುದಿಲ್ಲ” ಅಂದನು. +ಮತ್ತೆ, "ಯಾವ ಕಾಯಿಪಲ್ಲೆ ಬೆಳೆಸಿದ್ದಾನೆ" ಎಂದು ನೋಡಲು ಫಾರೆಸ್ಟ್‌ ಆಫೀಸರ್‌ ತಿರುಗಾಡಿದನು. +“ಗೊತ್ತಾಯ್ತು,ಆ ಬದಿಗೆ ನೋಡಿದಿರಿ. +ಒಳ್ಳೆ ಪುರಸಲ (ಸಣ್ಣ ಜಾತಿ ಕುಂಬಳ) ಬಳ್ಳಿ ಹಬ್ಬಿದೆ. +ಅದರ ಮೇಲೆ ಒಡೆಯರ ನದರು ಬಿದ್ದಿದೆ. +ಆಗಿದ್ದೇ ಒಂದು ಕಾಯಿ ಅದನ್ನು ದೇವರಿಗೆ ಅಂತ ಇಟ್ಟಿದ್ದೇನೆ. +ಅದನ್ನು ಕೊಡಲಾಗುವುದಿಲ್ಲ.” + ಫಾರೆಸ್ಟ್‌ ಆಫೀಸರ್‌, “ದೇವರ ಕಾಣಿಕೆ ಕಡೆಗೆ ಅದನ್ನು ಕೊಯ್ದು ತಂದು ಇಡು” ಎಂದನು. +“ಆಯಿತು, ನೀವು ಕಂಡ ಮೇಲೆ ಆಯಿತಲ್ಲ” ಎಂದ ಗೌಡ. +ಫಾರೆಸ್ಟ್‌ ಆಫೀಸರ್‌ ಮತ್ತೆ ಚೌಕಾಶಿ ಮಾಡಿದ. +ಒಂದು ಕಡೆಗೆ ಇಬ್ಬುಡ್ಡ ಬಳ್ಳಿಯಲ್ಲಿ ಕಾಯಿ ಬಿಟ್ಟು ಹಣ್ಣಾಗಿತ್ತು. +ಆ ದಿಕ್ಕಿನಲ್ಲಿ ಫಾರೆಸ್ಟ್‌ ಆಫೀಸರ್‌ ನೋಡಿದಾಗ ಗೌಡನಿಗೆ ಬಹಳ ಕಸಿವಿಸಿಯಾಯಿತು. +“ರಾಯರೇ, ಆ ಬದಿಗೆ ನೋಡಬೇಡಿ. +ಆಗಿದ್ದೇ ಎರಡು ಮೂರು ಕಾಯಿ. +ದೇವರಿಗೆ ಒಂದು, ಒಡೆಯರಿಗೆ ಒಂದು, ಹಬ್ಬ ಕಾಣಿಕೆಗೆ ಬೇಕು. +ಅದನ್ನು ಮಾತ್ರ ಕೇಳಬೇಡಿ. +ಬೆಳೆದ ನನಗೆ ಒಂದಾದರೂ ಇರಲಿ” ಎಂದು ಹೇಳಿ, “ಬೇರೆ ಹೀರೇಕಾಯಿ, ಬದನೆಕಾಯಿ ಸಹಾ ಬೆಳೆದಿದ್ದೇನೆ. +ಅವನ್ನು ಕೇಳಿದರೆ ಕೊಡುವೆ” ಎಂದನು. +“ಅರೇ. . . ಸರಕಾರಿ ಜಾಗದಲ್ಲಿ ಅತಿಕ್ರಮಣ. + . . ಎರಡು ಕಾಯಿ ತಂದು ಇಡು. +ಗಾರ್ಡ್‌ನಿಗೊಂದು, ಮತ್ತೆ ನನಗೊಂದು. +ಕೊಡದಿದ್ದರೆ ಆರೆಸ್ಟ್‌ ಮಾಡಿ ಕೋಳ ಹಾಕಿಕೊಂಡುಹೋಗುತ್ತೇನೆ, ಹೀರೇಕಾಯಿ ಎಲ್ಲಾ ತಂದಿಡು” ಎಂದನು ಫಾರೆಸ್ಟ್‌ ಆಫೀಸರ್‌. +ಗೌಡ ಹೆದರಿ ಎಲ್ಲಾ ತಂದುಕೊಟ್ಟನು. +“ಇನ್ನಾದರೂ ನಿಮಗೆ ಸಮಾಧಾನ ಆಯಿತೋ ಇಲ್ಲವೋ? +ಬೆಲ್ಲಗೆಣಸು (ಬೆಲ್ಲ, ಗೊಣ್ಣೆ ಗಡ್ಡೆ), ನೇಗಿಲ ಗೆಣಸು (ನೇಗಿಲ ಗೊಣ್ಣೆ ಗಡ್ಡೆ) ಮಾತ್ರ ಕೇಳಬೇಡಿ” ಅಂದನು. +“ಅರೇ ಗೌಡ. . . ನಾವು ನೀನು ಖರೇ ಮನುಷ್ಯ ಎಂದು ತಿಳಿದುಕೊಂಡಿದ್ದೆವು. +ಗೊಣ್ಣೆಗೆಡ್ಡೆ ಬೆಳೆದ ಸುದ್ದಿಯನ್ನೇ ಹೇಳಲಿಲ್ಲ. +ಈಗ ಇವುಗಳ ಎರಡು ವೋಳಿ(ಸಾಲು)ಗಳನ್ನಾದರೂ ಕಿತ್ತು ಗಡ್ಡೆ ತೆಗೆಯಬೇಕು. +ನಮ್ಮ ಮನೆಯಲ್ಲಿ ಮಕ್ಕಳು-ಮರಿ ಬಹಳ ಇದ್ದಾರೆ. +ನಮ್ಮ ರಾಯರಿಗೆ ಈ ಗಡ್ಡೆಗಳೆಂದರೆ ಬಹಳ ಪ್ರೀತಿ” ಎಂದು ಗಾರ್ಡ್‌ ಹೇಳಿದನು. +ಕಿತ್ತು ತಂದುಕೊಟ್ಟನು. +“ಕೈಮುಗಿದೆ, ಇನ್ನಾದರೂ ನಿಮಗೆ ಸಮಾಧಾನ ಆಯಿತೋ ಇಲ್ಲವೋ?” ಫಾರೆಸ್ಟ್‌ ಆಫೀಸರ್‌ ಹ್ಯಾಟ್‌ ಕಳಚಿ ಅಚೇಚೆ ನೋಡಿದನು. +ಈಗ ರಾಯರು ತಲೆ ತುರಿಸಿಕೊಳ್ಳುವುದು ಯಾಕೆ ಎಂದು ಗೊತ್ತಾಯಿತು,"ಸಾಮಾನು ಹಾಕುವ ಚೂಳಿ (ದೊಡ್ಡಬುಟ್ಟಿ) ಕಂಡರು ಅಂತ ಕಾಣುತ್ತದೆ. +ಅದನ್ನು ಮಾತ್ರ ಕೊಡುವುದಿಲ್ಲ. +ನನಗೆ ಗೊಬ್ಬರ ಹಾಕಿಕೊಂಡು ಹೊತ್ತುಕೊಂಡು ಹೋಗಲು ಚೂಳಿ ಬೇಕು. ” +“ಗೌಡಾ. . . ಇಷ್ಟು ಸಾಮಾನು ಕೊಟ್ಟು ಚೂಳಿಯನ್ನು ಕೊಡುವುದಿಲ್ಲ ಅಂದರೆ ನ್ಯಾಯವಾಗುತ್ತದೆಯೋ ಹೇಗೆ?” +“ಹೌದು, ಚೂಳಿಯೂ ಬೇಕೆಂದರೆ ಎಲ್ಲಿಂದ ಕೊಡಲಿ. +ಇರುವುದೇ ಒಂದು ಚೂಳಿ ಅದು. ” +ಫಾರೆಸ್ಟ್‌. ಆಫೀಸರ್‌ ಹೇಳಿದನು. +“ಇಷ್ಟೆಲ್ಲಾ ಹಿತ್ತಿಲ ಕಾಯಿಗಳನ್ನು ನನ್ನ ಮನೆಗೆ ಸಾಗಿಸಲು ಚೂಳಿ ಬೇಕೇ ಬೇಕು. +ಚೂಳಿ ತುಂಬಿಕೊಂಡು ಅಷ್ಟೂ ಕಾಯಿಪಲ್ಲೆ ಸಾಮಾನುಗಳನ್ನು ಫಾರೆಸ್ಟ್‌ ನಾಕಾಕ್ಕೆ ತಂದುಕೊಡದಿದ್ದರೆ ಈಗಿಂದೀಗ ನಿನ್ನನ್ನು ಆರೆಸ್ಟ್‌ಮಾಡಿ, ಕೋಳ ಹಾಕಿಕೊಂಡು ತಕ್ಕೊಂಡು ಹೋಗಿ ಬಂದೀಖಾನೆಗೆ ಸೇರಿಸುತ್ತೇನೆ”ಎಂದು ಜೋರು ಮಾಡಿ ಹೊರಟನು. +ಫಾರೆಸ್ಟ್‌ ಆಫೀಸರನು ಈ ಸಾಮಾನೆಲ್ಲವನ್ನೂ ಗೌಡನ ತಲೆಯ ಮೇಲೆ ಚೂಳಿಯಲ್ಲಿ ಹೊರಿಸಿ, ಆ ದಿನದ ತಮ್ಮ ಡ್ಯೂಟಿ ಮುಗಿಸಿಕೊಂಡು ಫಾರೆಸ್ಟ್‌ ನಾಕೆಯನ್ನು ಸೇರಿದರು. +೨೩.ಬಾಳೆ ಹಣ್ಣು ಮುಳಕ. +ಒಂದಿಲ್ಲೊಂದು ಊರಿನಲ್ಲಿ ಒಬ್ಬ ಭಟ್ಟ ಮತ್ತು ಭಡತಿ (ಭಟ್ಟನ ಹೆಂಡತಿ) ಇದ್ದರು. +ಒಂದುದಿನ ಅವನು ಹೆಂಡತಿಯ ಹತ್ತಿರ, “ಮುಳ್ಕನನ್ನು (ಸಿಹಿ ಎಣ್ಣೆ ಕಜ್ಜಾಯ) ಮಾಡು” ಎಂದು ಹೇಳಿ, “ಬಾಳೆಹಣ್ಣು ಹಾಕಿ ಮುಳ್ಕನನ್ನು ಕರಿ” ಎಂದು ಹೇಳಿ ಬಾಳೆಹಣ್ಣು ಗೊನೆಯನ್ನು ತಂದುಕೊಟ್ಟನು. +“ಅಕ್ಕಿ, ಬೆಲ್ಲ, ಎಣ್ಣೆ ಯಾವುದೂ ಮನೆಯಲ್ಲಿರಲಿಲ್ಲ. +ಸಾಮಾನು ಇಂತಿಂಥದ್ದು ತಂದುಕೊಟ್ಟರೆ ಮುಳ್ಕನನ್ನು ಮಾಡುತ್ತೇನೆ” ಅಂತ ಅವಳು ಹೇಳಿದಳು. +ಅಂಗಡಿಗೆ ಹೋಗಿ ಬೇಕಾದ ಸಾಮಾನು ತಂದುಕೊಟ್ಟನು. +ಅವಳು ಒಂದು ಕೊಳಗ ಅಕ್ಕಿ ಬೀಸಿ, ಬಾಳೆಹಣ್ಣು ಸೇರಿಸಿ ಕಲಸಿ, ಎಣ್ಣೆ ಬಂಡಿಯಲ್ಲಿ ಎಣ್ಣೆ ಹಾಕಿ, ಕಾದ ಮೇಲೆ, ಆ ಹಿಟ್ಟನ್ನು ಕೈಯಿಂದ ಮುದ್ದೆ ಮಾಡಿ ತೆಗೆದು ಎಣ್ಣೆಯಲ್ಲಿ ಹಾಕಿ ಕರಿದು ತೆಗೆದಳು. +ಭಟ್ಟನು, “ನಮ್ಮ ಮನೆಯಲ್ಲಿ ಅಪರೂಪಕ್ಕೆ ಮುಳ್ಕನ ಕಜ್ಜಾಯ ಮಾಡಿದ್ದಾಗಿದೆ. +ಒಬ್ಬ ಭಟ್ಟನನ್ನು ಊಟಕ್ಕೆ ಕರೆಯುತ್ತೇನೆ” ಎಂದು ಹೇಳಿ ಬೇರ ಊರಿಗೆ ಹೋದನು. +ಎರಡು ಮೂರು ತಾಸುಗಳಾದವು. +ಭಟ್ಟ ಬರಲಿಲ್ಲ. +'ತಡವಾಯಿತು' ಅಂತ ಹೇಳಿ, ಅವಳು ಮಾಡಿದ ಮುಳ್ಕಗಳನ್ನು ಮೂರು ಪಾಲು ಮಾಡಿದಳು- 'ಒಂದು ಪಾಲು ಗಂಡನಿಗೆ, ಬರುವ ಭಟ್ಟನಿಗೆ ಒಂದು ಪಾಲು, ತನಗೊಂದು ಪಾಲು' ಎಂದು ಹೇಳಿಕೊಂಡಳು. +ಹಸಿವಾಗಿ, 'ತನ್ನ ಪಾಲನ್ನು ತಾನು ತಿನ್ನಬೇಕು' ಅಂತ ಹೇಳಿ ತಿನ್ನ ಹತ್ತಿದ್ದಳು. +ತನ್ನಪಾಲು ಪೂರಾ ತಿಂದಳು. +ಭಟ್ಟ ಬರಲು ಮತ್ತೂ ತಡವಾಯಿತು. +ಎರಡನೆಯ ಪಾಲಿನ ಮುಳ್ಕಗಳನ್ನು ತಿಂದಳು. +ಆಗಲೂ ಗಂಡ ಬರಲಿಲ್ಲ. +ಮೂರನೆಯ ಪಾಲನ್ನೂ ತಿನ್ನುತ್ತಿದ್ದು ಒಂದು ಮುಳ್ಕನನ್ನು ಮಾತ್ರ ಉಳಿಸಿದಳು. +ಆಗ ಅವಳ ಗಂಡ ಮತ್ತೊಬ್ಬ ಭಟ್ಟನನ್ನು ಕರೆದುಕೊಂಡು ಬಂದನು. +"ಮುಳ್ಕನ ಕಜ್ಜಾಯ ಸುಟ್ಟೆಯೋ?” ಅಂತ ಕೇಳಿದನು. +ಅವಳು, "ಸುಟ್ಟು ಮುಗಿಯಿತು, ನೀವು ಬರಲು ತಡವಾಯಿತು, ನಾನು ಎಲ್ಲಾ ಮುಳ್ಕಗಳನ್ನು ತಿಂದು ಒಂದನ್ನು ಮಾತ್ರ ಉಳಿಸಿದ್ದೇನೆ" ಎಂದಳು. +"ಅಷ್ಟೆಲ್ಲಾ (ಒಂದು ಕೊಳಗ ಅಕ್ಕಿಯ ಮುಳಕಗಳನ್ನೆಲ್ಸಾ) ಹೇಗೆ ತಿಂದೆ?" ಎಂದುಕೇಳಿದನು. +"ಹೀಗೆ ತಿಂದೆ" ಎಂದು ಹೇಳಿ, ಇದ್ದ ಒಂದು ಮುಳ್ಕನನ್ನು ತಿಂದಳು. +ಮುಳ್ಕನ ಕಜ್ಜಾಯ ಗಂಡನಿಗೂ ಸಿಗಲಿಲ್ಲ. +ಭಟ್ಟನಿಗೂ ಸಿಗಲಿಲ್ಲ. +ಒಂದು ಕೊಳಗ ಅಕ್ಕಿಯ ಮುಳ್ಕ ಎಂದು ನಿರೂಪಕಿ ಹೇಳಿದ್ದು ಅತ್ಯುಕ್ತಿ. +ಒಬ್ಬರಿಂದ ಅಷ್ಟು ಮುಳ್ಕ ತಿನ್ನಲು ಸಾಧ್ಯವಾಗದು. +ಕೊಳ್ಗ ಎಂದರೆ ಈಗಿನ ಮಾಪಿನಲ್ಲಿ (ಅಳತೆಯಲ್ಲಿ) ಅಂದಾಜು ಮೂರೂವರೆ ಕೆ.ಜಿ. +೨೪.ಭೀಷ್ಮನ ಅಂತ್ಯಕಾಲದ ಬಯಕೆ. +ಭೀಷ್ಮನು ಮೃತ್ಯುಶಯ್ಯೆಯ ಮೇಲೆ ಇದ್ದಾಗ ಅವನಿಗೆ ಅಸುನೀಗುವ ಹವ್ಯಾಸ ಉಂಟಾಗಿ, ಅರ್ಜುನನನ್ನು ಕೇಳಿದನು, "ಅರ್ಜುನಾ, ನನ್ನ ಜೀವನವನ್ನು ಅಂತ್ಯಗೊಳಿಸುವ ಬಯಕೆಯುಂಟಾಗಿದೆ. +ಆದರೆ, ಇದಕ್ಕೆ ತೊಡಕು ಉಂಟು. +ಅದನ್ನು ಪರಿಹರಿಸಿ ನನಗೆ ಜೀವನದ ಅಂತ್ಯವನ್ನು ಕರುಣಿಸುವವರು ಯಾರು?" ಅಂತ ಕೇಳಿದನು. +"ನಿನ್ನ ಜನ್ಮವನ್ನು ಉಂಟುಮಾಡಿದ ಭಗವಂತನನ್ನೇ ಕೇಳು. +ಕೃಷ್ಣನನ್ನು ಕರೆತರುತ್ತೇನೆ" ಎಂದನು. +ಕೃಷ್ಣನು ಬಂದನು. +"ಕೃಷ್ಣಾ. . . ನನ್ನ ಪ್ರಾಣ ಹೋಗದಿರುವ ಕಾರಣವೇನು?" ಎಂದು ಕೇಳಿದನು. +"ನಿನಗೆ ಏನೋ ಬಯಕೆಯಿರುವಂತಿದೆ, ಅದರಿಂದಲೇ ನಿನ್ನ ಜೀವ ಹೋಗುತ್ತಿಲ್ಲ,ನಿನ್ನ ಅಂತ್ಯದ ಕಾಲದ ಬೇಡಿಕೆಯೇನು?" ಅಂತ ಕೃಷ್ಣನು ಕೇಳಿದನು. +"ನನಗೆ ಮೂರು ವಿಷಯಗಳನ್ನು ಕೇಳುವುದಿದೆ." +“ಅದೇನು ತಿಳಿಸು.” +“ಕೃಷ್ಣಾ, ಕೌರವನು ತಾನು ಸಾಯುವಾಗ ಅಶ್ವತ್ಥಾಮನನ್ನು ಕೌರವ ರಾಜ್ಯದಪಟ್ಟಕ್ಕೆ ಏರಿಸಿದ್ದರೆ, ನೀನು ಹಸ್ತಿನಾವತಿಯ ರಾಜ್ಯವನ್ನು ಹೇಗೆ ಸಾಧಿಸುತ್ತಿದ್ದೆ? ಅವನು ಚಿರಂಜೀವಿ. +ಎರಡನೆಯದಾಗಿ ಶಿಖಂಡಿಯನ್ನು ಸೇನಾಪತಿಯನ್ನಾಗಿ ಮಾಡಿದ್ದ ಪಕ್ಷದಲ್ಲಿ ಕುರುಕ್ಷೇತ್ರ ಯುದ್ಧದಲ್ಲಿ ವಿಜಯವನ್ನು ಹೇಗೆ ಸಾಧಿಸುತ್ತಿದ್ದೆ? +ಮೂರನೆಯದಾಗಿ ಕೌರವನು ದ್ರೋಣಾಚಾರ್ಯನಿಗೆ ಮಂತ್ರಿ ಪದವಿಯನ್ನು ನೀಡಿದಲ್ಲಿ ರಾಜನೀತಿಯ ವಿಜಯ ಸಾಧಿಸುವ ಬಗೆಯಲ್ಲಿ ನೀನೇನು ಮಾಡುತ್ತಿದ್ದ?” +ಕೃಷ್ಣನ ಉತ್ತರ ಹೀಗಿತ್ತು- “ಕೇಳು. . . ಅಶ್ವತ್ಥಾಮನಿಗೆ ಪಟ್ಟಕಟ್ಟಿದ್ದರೆ ನಾನು ಧರ್ಮರಾಜನನ್ನು ಕೋಣನ ಮೇಲೆ ಕೂಡ್ರಿಸಿ ಯುದ್ಧ ಮಾಡುತ್ತಿದ್ದೆ (ಧರ್ಮರಾಜನು ಪ್ರತ್ಯಕ್ಷಯಮನ ಸ್ವರೂಪ ಪಡೆಯುತ್ತಿದ್ದ ಎಂದು ಇದರ ಅರ್ಥ)." +“ಶಿಖಂಡಿಯನ್ನು ಸೇನಾಪತಿಯನ್ನಾಗಿ ಮಾಡಿದ ಪಕ್ಷದಲ್ಲಿ- ದ್ರೌಪದಿಯ ಜಡೆಯನ್ನು ರಣಸ್ತಂಭಕ್ಕೆ ಅಪ್ಪಳಿಸುತ್ತಿದ್ದೆ. +ಆಗ ಬೆಂಕಿ ಪ್ರಜ್ವಲಿಸಿ ಪ್ರಳಯವೇ ಉಂಟಾಗುತ್ತಿತ್ತು. +“ದ್ರೋಣಾಚಾರ್ಯನನ್ನು ಮಂತ್ರಿಯನ್ನಾಗಿ ಮಾಡಿದ್ದರೆ, ಏಕಕಾಲದಲ್ಲಿ ನಕುಲ-ಸಹದೇವಾದಿಗಳನ್ನು ಒಂದೇ ರಥದಲ್ಲಿ ಕೂಡ್ರಿಸುತ್ತಿದ್ದೆ. +ಆಗ ಸಕಲವೂ ಸುಟ್ಟುಬೂದಿಯಾಗುತ್ತಿತ್ತು.” +ಈ ಉತ್ತರಗಳನ್ನು ಕೇಳಿದ ಮೇಲೆ ಭೀಷ್ಮನ ಅಂತ್ಯಕಾಲದ ಬೇಡಿಕೆ ಪೂರೈಸಿದಂತಾಗಿ ಅವನು ಪ್ರಾಣ ನೀಗಿದನು. +೨೫.ಬೂತಾಳ ಪಾಂಡ್ಯ ಕಟ್ಟು. +ಬಾರಕೂರಿನಲ್ಲಿ ಬೂತಾಳ ಪಾಂಡ್ಯರಾಜ ಇದ್ದ. +ಅವನಿಗೆ ವಂದ್‌ ಹೆಂಡ್ತಿ, ಯೇಳ್‌ ಜನ ಗಂಡುಮಕ್ಕು, ಅವ ದೊಡ್ಡ ಹಡ್ಗ ಕಡಿಸಿದ್ದ. +ಈಗಿನ ಕಾಲದಲ್ಲಾದರೆ ಐದು ಕೋಟಿ ರೂಪಾಯಿ ಬೆಲೆಬಾಳುವ ಹಡಗ. +ಅದನ್ನು ಸಮುದ್ರಕ್ಕೆ ಇಳಿಸುವಾಗ ಅದರಲ್ಲಿ ಕುಂಡೋದರ ಎಂಬ ಬೂತ ಕಂಡು ಬಂತು. +ನೀರಿನಲ್ಲಿ ಇಳಿಸಲಿಕ್ಕೆ ಕೊಡಲಿಲ್ಲ. +ನರಬಲಿ ಕೇಳಿ, “ತಾನು ನೀರಿಗೆಬಿಟ್‌ ಕೊಡತ್ತಿಲ್ಲೆ, ನರಬಲಿ ಕೊಡಿ” ಅಂತ ಕೇಳಿತು. +ಅವನಿಗೆ ಒಬ್ಬಳೇ ಹೆಂಡತಿ. +ಏಳು ಜನ ಮಕ್ಕಳಿದ್ದರು. +“ಅದರಲ್ಲಿ ಒಬ್ಬ ನನ್ನ ಬಲಿಕೊಡುವಾ” ಅಂತ ಹೆಂಡತಿ ಹತ್ರ ಕೇಳಿದ. +ಅದಕ್ಕೆ ಧಿಕ್ಕಾರ ಮಾಡಿ, “ಸಾಧ್ಯವಿಲ್ಲ” ಅಂತ ಮಕ್ಕಳು ಎಲ್ಲರನ್ನೂ (ಏಳು ಮಕ್ಕಳು) ಕರೆದುಕೊಂಡು ತಾಯಿ ಮನೆಗೆ ನಡೆದಳು. +ಆಗ ಅರಸು ಚಿಂತೆಯಲ್ಲಿ ಬಿದ್ದ. +ಅವನ ತಂಗಿ ತಾನಾಗಿ ಬಂದು, “ನಿನ್ನ ಚಿಂತೆಯೇನು?”ಅಂತ ವಿಚಾರಿಸಿತು. +ಆಗ ತಂಗಿ ಹತ್ರ ಹೇಳ್ದ, “ಇಂತಾ ಕತಿ ಆಗಿತ್ತು. +ಹೆಂಡ್ತಿ ತೌರಮನಿಗೆ ಮಕ್ಕಳ ಕರೆದುಕೊಂಡು ಹೋದ್ಲು, ಹಡಗ ನೀರಿಗಿಳಿಯಲಿಲ್ಲ, ಬೂತ ನರಬಲಿ ಬೇಡುತ್ತಾ ಇತ್ತ” ಎಂದನು. +ತಂಗಿ, “ನನ್ನ ವಬ್ಬ ಮಗ ಜಯನನ್ನು ಬಲಿಕೊಡುವಾ” ಅಂತ ಹೇಳಿ, ಹುಡುಗನ ಕರೆದುಕೊಂಡು ಹಡಗಿನ ಹತ್ರ ಹೋದ್ಲು, ಆಗ ಬೂತ ಎದ್ದು ಬಂದು, ಮನುಶರ ರೂಪವಾಗಿ(ಮಾತಾಡಲಿಕೆ ಬರಬೇಕಲ್ಲ?) + “ನೀನು ಬಲಿ ಕೊಡುದ ಬೇಡ. +ಆಸ್ತಿ-ಮನೆಯೆಲ್ಲಾ ತಂಗಿಮಗನಿಗೆ ಬರೆದುಕೊಡು, ಹಡಗು ತಾನಾಗಿ ನಡಿತದೆ” ಅಂತ ಹೇಳಿ ಬಿಟ್ಟೋಯ್ತು. +ಬೂತಾಳ ಪಾಂಡ್ಯ ತನ್ನ ರಾಜ್ಯ, ಆಸ್ತಿ, ಮನೆಯನ್ನೆಲ್ಲಾ ತಂಗಿ ಮಗ ಜಯನಿಗೆ ಬರೆದುಕೊಟ್ಟ. +“ಬೂತಾಳ ಪಾಂಡ್ಯ ಕಟ್ಟು ಅಂತ ಆಚರಣೆಯಲ್ಲಿ ಇರಲಿ” ಅಂತ ಹೇಳಿದ. +ಕುಂದಾಪುರ ತಾಲೂಕಿನಲ್ಲಿ ಮಾತ್ರ ಈ ಕಟ್ಟು ಆಚರಣೆ ಇದೆ. +ಇದು ವಾಲೆಕಾರರಿಗಿಲ್ಲ. +ಸೊನಗಾರರಿಗೆ, ಕೊಂಕಣಿಗರಿಗೆ, ಮರಾಟ ಜನರಿಗೆ ಹಾಗೂ ಬ್ರಾಹ್ಮಣರಿಗೆ ಇಲ್ಲ. +೨೬.ಬೂದಗುಂಬಳ ಕಾಯಿ ಹುಳಿ. +ಓಬ್ಬ ಭಟ್ಟನು ಸಂಭಾವನೆಗೆ ತಿರುಗುತ್ತಿದ್ದಾಗ ಅವನಿಗೆ ಒಂದು ಬೂದಗುಂಬಳಕಾಯಿ ದಾನವಾಗಿ ಸಿಕ್ಕಿತು. +ಅದನ್ನು ಮನೆಗೆ ತಂದು, “ಹೌದೇನೇ, ಬೂದಗುಂಬಳ ಕಾಯಿಯ ಹುಳಿಯನ್ನು ಪಸಂದಾಗಿ ಮಾಡು. +ಇಂದು ನನಗೆ ಪರಾನ್ನದ ಊಟವಿಲ್ಲ” ಎಂದು ಹೇಳಿ,ಅದನ್ನು ಹೆಂಡತಿಯ ಹತ್ತಿರ ಕೊಟ್ಟನು. +ಅಪರೂಪಕ್ಕೆ ಬೂದಗುಂಬಳಕಾಯಿ ಸಿಕ್ಕಿದ್ದರಿಂದಅವಳಿಗೆ ಸಂತೋಷವಾಯಿತು. +ಅವಳು ತೆಂಗಿನಕಾಯಿಯನ್ನು ಹೆಚ್ಚು ಹಾಕಿ ಬೀಸಿ,ದಾಲಚಿನ್ನಿ-ಲವಂಗಗಳನ್ನು ಸೇರಿಸಿ ಒಳ್ಳೆ ಘಮಘಮ ಸುವಾಸನೆ ಬೀರುವ ಹುಳಿಯನ್ನು ಮಾಡಿದಳು. +ಭಟ್ಟನು ಹುಳಿಯನ್ನು ಸುರಿಸುರಿದು ಉಂಡು ತೃಪ್ತಿಯ ತೇಗನ್ನು ಕೂಗಿದನು. +ಆಮೇಲೆ, “ಹುಳಿ ಪಸಂದಾಗಿದೆ. +ಅದನ್ನು ಈಗಲೇ ಪೂರಾ ಊಟ ಮಾಡಿ ಶರಿಮಾಡಬೇಡ,ಸಂಜೆಯ ಊಟಕ್ಕೂ ಇರಲಿ. +ಮತ್ತೊಮ್ಮೆ ಗಡದ್ದಾಗಿ ಹುಳಿಯ ಊಟ ಮಾಡುತ್ತೇನೆ”ಎಂದು ಹೇಳಿ ಕೈತೊಳೆಯಲಿಕ್ಕೆ ಎದ್ದನು. +ಆದರೆ, ಅವನ ಬೆನ್ನ ಹಿಂದೆ ಎರಡು ಜನರು,“ಹಹಹಹ ಹಹಹಹ” ಎಂದು ದೊಡ್ಡದಾಗಿ ನಗೆಯಾಡಿದರು. +ಭಟ್ಟನು ಗಕ್ಕನೆ ತಿರುಗಿ ನೋಡಿದನು. +ಇಬ್ಬರು ಕರಿಯ ಟೊಣಪರು ಅವರು, “ನಾವು ನಿನ್ನ ಪ್ರಾಣ ತೆಗೆದುಕೊಂಡು ಹೋಗಲಿಕ್ಕೆ ಬಂದ ಯಮದೂತರು, ಬೂದಗುಂಬಳಕಾಯಿಯ ಹುಳಿಯ ಆಶೆ ಇನ್ನು ನಿನಗೆ ಯಾಕೆ? +ಇನ್ನು ಐದು ನಿಮಿಷಕ್ಕೆ ನೀನು ಸಾಯುವೆ” ಎಂದು ತಮ್ಮ ಕೈಲಿದ್ದ ಪಾಶಗಳನ್ನು ಅವನ ಕುತ್ತಿಗೆಗೆ ಸುತ್ತಿ ಹಾಕಿ ಎಳೆಯಲಿಕ್ಕೆ ಎತ್ತಿದರು. +ಭಟ್ಟನು ಹೆದರಿದರೂ ಅದನ್ನು ತೋರಿಸಿಕೊಳ್ಳದೆ, “ನಿಮ್ಮನ್ನು ಇಲ್ಲಿಗೆ ಕಳಿಸಿದವನು ಯಾರು? +ಹೊಸ ಯಮನೋ, ಹಳೇ ಯಮನೋ ಪ್ರಶ್ನೆಗೆ ಉತ್ತರ ಕೊಟ್ಟು ಆ ಮೇಲೆ ನನ್ನ ಪ್ರಾಣವನ್ನು ತೆಗೆದುಕೊಂಡು ಹೋಗುವ ವಿಚಾರ ಮಾಡಿ" ಎಂದು ಹೇಳಿದನು. +ಯಮದೂತರಿಗೆ ಏನು ಹೇಳಬೇಕೆಂದು ತಿಳಿಯದೆ ಹಾಗೆಯೇ ತಿರುಗಿ ಯಮರಾಯರ ಹತ್ತಿರ ಹೋಗಿ, ಭಟ್ಟನ ಪ್ರಶ್ನೆಯನ್ನು ತಿಳಿಸಿ- “ಇದಕ್ಕೆ ಏನು ಉತ್ತರ ಹೇಳಬೇಕು?”ಎಂದು ಕೇಳಿದರು. +ಯಮನೂ ಸಹ ಈ ಪ್ರಶ್ನೆಯಿಂದ ಗೊಂದಲದಲ್ಲಿ ಬಿದ್ದನು. +“ತಡೆಯಿರಿ,ಬ್ರಹ್ಮದೇವನನ್ನು ಕೇಳಿಬಂದು ತಿಳಿಸುತ್ತೇನೆ” ಎಂದು ಬ್ರಹ್ಮಲೋಕಕ್ಕೆ ಹೋದನು. +ಯಮನು ಕೇಳಿದ ಪ್ರಶ್ನೆಗೆ ಬ್ರಹ್ಮನು ಬೆರಗಾಗಿ, ಈ ವಿಷಯ ನನಗೂ ಗೊತ್ತಿಲ್ಲ,ವಿಷ್ಣುವನ್ನೇ ಕೇಳೋಣ” ಎಂದು ಅವನೊಡನೆ ವೈಕುಂಠಕ್ಕೆ ಹೋದನು. +ವಿಷ್ಣುವೂ ಸಹ,“ಹೊಸ ಯಮನನ್ನು ಮಾಡಿದ್ದಿದ್ದರೆ ಸಂಹಾರಕರ್ತನಾದ ಶಿವನಿಗೆ ಆ ಸಂಗತಿ ಗೊತ್ತಿರಬೇಕು,ನಡೆಯಿರಿ ಅವನನ್ನೇ ಕೇಳೋಣ” ಎಂದು ಅವರೊಡನೆ ಕೈಲಾಸಕ್ಕೆ ಹೋದನು. +ವಿಷ್ಣುವು ಶಿವನನ್ನು, “ಈ ಯಮನನ್ನು ನೀನು ಬೇರೆ ಕಡೆ ವರ್ಗ ಮಾಡಿ, ನರಕಕ್ಕೆ ಬೇರೆ ಯಮನನ್ನು ನೇಮಿಸಿದ್ದೇಯೋ?” ಎಂದು ಕೇಳಿದನು. +ಶಿವನು, “ಬೇರೆ ಯಮನನ್ನು ಮಾಡುವ ಅಗತ್ಯ ನನಗೆ ಏನೂ ಕಾಣಲಿಲ್ಲ. +ನೀನು ಈ ವಿಷಯವನ್ನು ಕೇಳುವವರೆಗೆ ನಾನು ಈ ವಿಷಯದ ವಿಚಾರವನ್ನೂ ಸಹ ಮಾಡಲಿಲ್ಲ. +ಕಾರಣವಿಲ್ಲದೆ ವಿಚಾರಸಚಾರವಿಲ್ಲದೆ ಬೇರೆ ಯಮನನ್ನು ಮಾಡಲಿಕ್ಕೆ ನನಗೇನು ತಲೆ ಗಟ್ಟಿಯಾಗಿದೆ? +ನಿಮಗೆ ಈ ಸಂಶಯ ಬಂದದ್ದಾದರೂ ಯಾಕೆ?” ಎಂದು ಕೇಳಿದನು. +ಆಗ ಯಮನು ಭಟ್ಟನು ಕೇಳಿದ ಪ್ರಶ್ನೆಯನ್ನು ತಿಳಿಸಿದನು. +ಶಿವನು, “ಇದು ಆ ಬೂದಿಭಟ್ಟನ ತರಲೆಯೋ? ನಡೆಯಿರಿ. +ಅವನ ಹತ್ತಿರವೇ ಹೋಗಿ, 'ಅವನು ಯಾಕೆ ಈ ಪ್ರಶ್ನೆ ಮಾಡಿದ?' ಎಂದು ಕೇಳೋಣ” ಎಂದು ಹೇಳಿದನು. +ತ್ರಿಮೂರ್ತಿಗಳು ಕೂಡಿ ಯಮನನ್ನು ಕರೆದುಕೊಂಡು ಭಟ್ಟನ ಹತ್ತಿರ ಬಂದು ಕೇಳಿದರು. +ಭಟ್ಟನು, “ಏನಿಲ್ಲ, ನಾನು ಬೂದಗುಂಬಳಕಾಯಿಯ ಪದಾರ್ಥವನ್ನು ಮಾಡಿಸಿದ್ದೆನು. +ಅದು ಬಹಳ ರುಚಿಯಾಗಿತ್ತು. +ಸಂಜೆ ಊಟದಲ್ಲಿಯೂ ಅದನ್ನು ಉಳಿಸಿಡಬೇಕೆಂದು ನನ್ನ ಹೆಂಡತಿಗೆ ಹೇಳಿದ್ದೆನು. +ಆಗ ಯಮದೂತರು, 'ಇನ್ನು ಐದು ನಿಮಿಷಕ್ಕೆ ನಿನಗೆ ಮರಣ,ಬೂದಗುಂಬಳಕಾಯಿ ಆಸೆ ಮಾಡಬೇಡ' ಅಂದರು. +ಆದರೆ, ನನಗೆ ಆಸೆ ಹೋಗಲಿಲ್ಲ. +ಅದಕ್ಕೆ ಒಂದು ಮೋಳನ ಕೊಂಬಿನಂತಹ ಸುಳ್ಳು ಪ್ರಶ್ನೆಯನ್ನು ಹೇಳಿ ಯಮದೂತರನ್ನು ಹಿಂದೆಯೇ ಕಳಿಸಿ, ನನ್ನ ಮರಣದ ಮುಹೂರ್ತವನ್ನು ತಪ್ಪಿಸಿಕೊಂಡೆನು. +ಇನ್ನು ಸಂಜೆಗೆ ಬೂದಗುಂಬಳಕಾಯಿಯ ಹುಳಿಯನ್ನು ತಪ್ಪಿಸಿಕೊಳ್ಳಲಿಲ್ಲ. +ಇನ್ನು ಸಂಜೆಗೆ ಬೂದಗುಂಬಳಕಾಯಿ ಹುಳಿಯನ್ನು ಉಣ್ಣಲಿಕ್ಕೆ ಅಡ್ಡಿಯಿಲ್ಲ” ಎಂದು ನಗೆಯಾಡಿದನು. +ಶಿವನು, “ನೀನು ದೇವತೆಗಳಿಗೇ ವಂಚನೆ ಮಾಡಿದೆ. +ಈ ಅಪರಾಧಕ್ಕಾಗಿ ನಿನಗೆ ನರಕ ಶಿಕ್ಷೆಯನ್ನು ವಿಧಿಸುತ್ತೇನೆ. +ನಿನಗೆ ಯಾವ ನರಕದ ಶಿಕ್ಷೆ ಕೊಡಲಿ? +ರೌರವನರಕವನ್ನೇ ಕೊಡಲೋ? +ಕುಂಭಿಪಾಕನ್ನೇ ಕೊಡಲೋ?” ಎಂದು ಸಿಟ್ಟಿನಿಂದ ಹೇಳಿದನು. +ಭಟ್ಟನು, “ತ್ರಿಮೂರ್ತಿಗಳಲ್ಲಿ ಒಬ್ಬರ ಹೆಸರು ಹೇಳಿದರೂ ಪುಣ್ಯ ಸಿಗುತ್ತದೆ; + ಪ್ರತ್ಯಕ್ಷ ನೋಡಿದರೆ ಮಹಾಪುಣ್ಯವಾಗಬೇಕಲ್ಲ. +ನಾನು ನೀವು ಮೂರು ಜನರನ್ನೂ ನೋಡಿದೆನು. +ಆದರೆ, ಅದರ ದೆಸೆಯಿಂದ ನನಗೆ ನರಕ ಶಿಕ್ಷೆಯಾಗುವುದಾದರೆ ನಾನು ತ್ರಿಮೂರ್ತಿಗಳಲ್ಲಿ ಯಾರ ಹೆಸರು ತೆಗೆದುಕೊಂಡರೂ ಪಾಪ, ನೋಡಿದರಂತೂ ಅಘೋರ ಪಾಪ, ರೌರವನರಕವೇ ಗತಿ ಎಂದು ಭೂಮಿಯಲ್ಲೆಲ್ಲಾ ಪ್ರಚಾರ ಮಾಡುತ್ತೇನೆ” ಎಂದು ಹೇಳಿದನು. +ಆಗ ಮೂವರು ದೇವತೆಗಳು ಒಬ್ಬರೊಬ್ಬರ ಮೊಕ ನೋಡಿಕೊಂಡು, “ನೀನು ಸುಳ್ಳು ಹೇಳಿದ ಪಾಪ ನಮ್ಮನ್ನು ನೋಡಿದ್ದರಿಂದ ನಿವಾರಣೆಯಾಗಿ ಹೋಯಿತು, ನಿನಗೆ ಸ್ವರ್ಗವನ್ನೇ ದಯಪಾಲಿಸಿದ್ದೇವೆ”' ಎಂದು ಹೇಳಿ ತಿರುಗಿದರು. +ಭಟ್ಟನು, “ನನಗೆ ಸ್ವರ್ಗದ ಆಸೆಯಿಂದ ಸಾಯುವ ಆತುರವೇನಿಲ್ಲ. +ಸತ್ತಮೇಲೆ ಸ್ವರ್ಗ ಸಿಗುವುದಾದರೆ ಅದಕ್ಕೆ ನನ್ನ ತಕರಾರಿಲ್ಲ” ಎಂದು ಅವರು ಕೇಳುವ ಹಾಗೆಯೇ ಹೇಳಿದನು. +೨೭. ಬಂಗಾರದ ಕಾಲುದೀಪ. +ಮೂಡಲ ರಾಜ್ಯದ ರಾಜನಿಗೆ ಬಹಳ ಕಾಲ ಮಕ್ಕಳೇ ಆಗಿರಲಿಲ್ಲ. +ಅವನ ರಾಣಿಯು ತನ್ನ ನಲವತ್ತನೆಯ ವರ್ಷದಲ್ಲಿ ಗರ್ಭಿಣಿಯಾದಳು. +ರಾಣಿಗೆ ಎಂಟು ತಿಂಗಳಾಯಿತು. +ಬಡಗಲ ರಾಜ್ಯದ ಸೈನ್ಯವು ಅವನ ಗಡಿನಾಡಿನ ಹಳ್ಳಿಗಳ ಮೇಲೆ ದಾಳಿ ಮಾಡಿತು. +ದಂಡನ್ನು ತೆಗೆದುಕೊಂಡು ರಾಜನು ಅಲ್ಲಿಗೆ ಯುದ್ಧಕ್ಕೆ ಹೋದನು. +ಹೊರಡುವ ಮೊದಲು ತಾಯಿಯ ಹತ್ತಿರ, “ಅಮ್ಮಾ, ಯುದ್ಧದಿಂದ ನಾನು ಮರಳಿ ಬರುವವರೆಗೆ ಅರಮನೆಯ ಆಗುಹೋಗುಗಳ ಜೋಕೆ. + ನೀನು ರಾಣಿಯನ್ನು ನೆಲಮಾಳಿಗೆಯಲ್ಲಿರಿಸಿ ಸಂರಕ್ಷಣೆ ಮಾಡು. + ವಿಶೇಷ ವರ್ತಮಾನವಿದ್ದರೆ ಮಂತ್ರಿಯ ಮೂಲಕ ಚಾರರನ್ನು ಕಳಿಸು” ಎಂದು ಹೇಳಿ ಅರಸನು ಯುದ್ಧಕ್ಕೆ ಹೋದನು. +ರಾಣಿಯು ಒಂಬತ್ತು ತಿಂಗಳು ಒಂಬತ್ತನೆಯ ದಿವಸಕ್ಕೆ ಹೆಣ್ಣು ಕೂಸನ್ನು ಹಡೆದಳು. +ರಾಜನಿಗೆ ನಿರುತ್ಸಾಹವಾಗಬಾರದು ಎಂದು ತಾಯಿಯ, “ರಾಣಿಯ ಗಂಡು ಮಗುವನ್ನುಹಡೆದಳು” ಎಂದು ಮಂತ್ರಿಯ ಮೂಲಕ ಸುದ್ದಿಯನ್ನು ಕಳಿಸಿದಳು. +ಯುದ್ಧವು ಮುಂದುವರೆಯಿತು. +ರಾಜನು ಓಲೆ ಬರೆದ ಪ್ರಕಾರ ಆಗಾಗ ಮಂತ್ರಿಯು ಹೊಸ ದಂಡು ಕಳಿಸುತ್ತಿದ್ದನು. +ವರ್ಷಗಳ ಮೇಲೆ ವರ್ಷಗಳು ಕಳೆದವು. +ರಾಜನು ರಾಜಧಾನಿಗೆ ಹಿಂತಿರುಗಲಿಲ್ಲ. +ರಾಜನ ಮಗಳು ದೊಡ್ಡವಳಾಗಿ ಹನ್ನೆರಡನೆಯ ವಯಸ್ಸಿಗೆ ಮೈನರೆದಳು. +ರಾಣಿಯೂ, ರಾಜಮಾತೆಯೂ- “ಹುಡುಗಿ ಮುದುವೆಯಾಗುವದರೊಳಗೇ ಮೈನರೆದಳು. +ರಾಜನು ಈಗಲಾದರೂ ಯುದ್ಧದಿಂದ ಮರಳಿ ಬರಬಾರದೇ. . . ” ಎಂದು ದುಃಖಿಸಿದರು. + ರಾಜನು ಬಡಗಲ ರಾಜ್ಯದ ರಾಜನ ಸೈನ್ಯವನ್ನೆಲ್ಲಾ ಸೋಲಿಸಿ ಅವನ ರಾಜಧಾನಿಯಯನ್ನು ಹಿಡಿದುಕೊಂಡು ಅವನಿಂದ ಬಹಳ ಕಪ್ಪಕಾಣಿಕೆ ತಕ್ಕೊಂಡು ರಾಜಧಾನಿಗೆ ಹಿಂತಿರುಗಿದನು. +ವಿಜಯದ ಮೆರವಣಿಗೆಯಲ್ಲಿ ಬರುವ ರಾಜನನ್ನು ರಾಣಿಯು ಎದುರುಗೊಂಡಳು. +ಪನ್ನೀರಿನಿಂದ ರಾಜನ ಕಾಲು ತೊಳೆದು ಚಿನ್ನದ ಹರಿವಾಣದಲ್ಲಿ ಹಾನ(ಕುಂಕುಮದ ನೀರು) ತೋರಿ ನಿವಾಳಿಸಿ ತೆಗೆದಳು. +ಅವನನ್ನು ಚಿನ್ನದ ಮಣೆಯ ಮೇಲೆ ಕುಳ್ಳಿರಿಸಿ ಚಿನ್ನದ ಗಿಂಡಿಯಲ್ಲಿ ಕೇಸರಿ ಹಾಲನ್ನು ಕೊಟ್ಟಳು. +ರಾಜನ್ನು ಹಾಲನ್ನು ಕುಡಿಯಲು ಮೋರೆಯೆತ್ತಿದಾಗ ಅರಮನೆಯ ಅಂಗಳದಲ್ಲಿ ಬಿಳಿಯ ಗಳದ ಮೇಲೆ ಒಣಗಿ ಹಾಕಿದ ಪಟ್ಟೆಯ ಜರಿಯ ಸೀರೆಯನ್ನು ನೋಡಿದನು. +ನವಿಲ ಬಣ್ಣದ ಪಟ್ಟೆಯ ಬಂಗಾರದ ಜರಿಗಳು, ನಡುನಡುವೆ ಬೆಳ್ಳಿಯ ಹೂಗಳು, ಬಿಸಿಲಿಗೆ ಮಿನುಗುತ್ತಿದ್ದವು. +ರಾಜನು ಆ ಸೀರೆಯನ್ನು ಉಟ್ಟುಕೊಂಡ ಸುಂದರ ಹೆಣ್ಣನ್ನು ಕಲ್ಪನೆಯಲ್ಲಿ ಚಿತ್ರಿಸಿಕೊಂಡು ಅವಳಿಗೆ ಹಂಬಲಿಸಿ ಹಾರೈಸಿ ಮರುಳಾದನು. +“ಈ ಪೀತಾಂಬರವನ್ನು ಹೇಳಿ ಮಾಡಿಸಿದೆಯಾ?” ಎಂದು ರಾಣಿಯನ್ನು ಕೇಳಿದನು. +ರಾಣಿಯು, “ಹೌದು. . . ಆದರೆ ಅದು ನನ್ನದಲ್ಲ” ಎಂದಳು. +ರಾಜನಿಗೆ ಆಶ್ಚರ್ಯವಾಯಿತು. +"ಇದು ನಿನ್ನದಲ್ಲವೇ? +ನನಗೆ ಬೇರೆ ರಾಣಿಯರೇ ಇಲ್ಲ, ನನ್ನ ಮುದಿ ತಾಯಿಗಾಗಿ ಹೇಳಿ ಮಾಡಿಸಿದೆಯಾ? +ಛೇ. . . ನಿಜಹೇಳು ಯಾರದು ಇದು?” +"ನಿಮ್ಮ ಮಗಳದು. . . " +“ನನ್ನ ಮಗಳು? +ನನಗೆ ಮಗ ಹುಟ್ಟಿದ ವರ್ತಮಾನವನ್ನು ಮಾತ್ರ ಕೇಳಿಬಲ್ಲೆ ಅಥವಾ ಆಗಲೇ ಅವಳಿ ಮಕ್ಕಳ ಜನನವಾಗಿ ಹೆಣ್ಣು ಶಿಶುವಿನ ವಿಷಯವನ್ನು ಗೋಪ್ಯವಾಗಿರಿಸಿದಿರೋ? +ಮುಂದೆ ಹುಟ್ಟಬೇಕಾದ ಮಗಳಿಗೆ ಈಗಲೇ ಪೀತಾಂಬರನೇಯಿಸಿದೆಯೋ? +ರಾಣಿ, "ಹೇಳಲಾರೆ, ಹೇಳದೆ ಉಳಿಯಲಾರೆ. +ನಿಮಗೆ ಗಂಡು ಮಗು ಹುಟ್ಟಿದ ಮಾತು ಸುಳ್ಳು. +ನಿಮಗೆ ನಿರುತ್ಸಾಹವಾಗಬಾರದೆಂದು ಅತ್ತೆಯವರೇ, "ಗಂಡು ಮಗುಹುಟ್ಟಿದೆ" ಎಂದು ನಿಮಗೆ ಹೇಳಿ ಕಳಿಸಿದ್ದರು. +ನಿಮಗೆ ಈಗ ಹನ್ನೆರಡು ವರ್ಷದ ರತಿಯಂಥ ಮಗಳಿದ್ದಾಳೆ. +ನೀವು ನಾನೇ ಚೆಲುವೆ ಎಂದು ಬಣ್ಣಿಸುತ್ತಿದ್ದಿರಿ, ನಿಮ್ಮ ಮಗಳು ನನಗಿಂತ ಹತ್ತು ಪಾಲು ಚೆಲುವೆ" ಎಂದಳು. +ರಾಜನು ಮದುವೆಯಾದ ಕಾಲದಲ್ಲಿನ ರಾಣಿಯ ಚೆಲುವನ್ನು ನೆನೆದನು. +ಅವಳನ್ನು ಮೀರಿಸಿದ ಚೆಲುವೆ ಆ ಪಟ್ಟೆ ಸೀರೆಯಲ್ಲಿ ಇನ್ನೆಷ್ಟು ಸೊಬಗಿನಿಂದ ಕಾಣುವಳೋ ಎಂದು ಕಲ್ಪನೆಯನ್ನು ಕೆಣಕಿಕೊಂಡು ಮೋಹಕ್ಕೆ ವಶವಾದನು. +"ಮಗಳಲ್ಲ, ತಂಗಿ ಅನ್ನು" ಎಂದು ಹೇಳಿದನು. +ಅದೇ ಆಗ ಬಂದ ತಾಯಿ,"ಹಾಗೆಂದರೇನು?" ಎಂದು ಕೇಳಿದಳು. +"ಮಗಳಲ್ಲ ಹೆಂಡತಿ" ಎಂದ ಮಗನ ಮಾತುಕೇಳಿ, "ತಾನು ನೆಟ್ಟ ಗಿಡದ ಫಲವನ್ನು ತಾನೇ ತಿನ್ನಬೇಕೋ? +ಘೋರಪಾಪ ಈ ವಿಕಲ"ಎಂದು ಹೇಳಿದಳು. +"ಅದು ನನ್ನ ಸಂಕಲ್ಪ. +ಅವಳನ್ನು ನನಗೆ ಲಗ್ನ ಮಾಡಿದರೆ ಮಾತ್ರ ನಾನು ಜೀವದಿಂದಿರಬಲ್ಲೆ. +ಆದ್ದರಿಂದ ಈ ಮದುವೆಯಾಗಬೇಕು" ಎಂದನು. +ತಾಯಿ, "ಹಾಗಾದರೆ, ದೊಡ್ಡ ಸಭೆ ಸೇರಿಸು, ಸಭೆಯ ಜನರು 'ಆಗಬಹುದು' ಎಂದರೆ ಮದುವೆಯ ವಿಚಾರ. +ಸಭೆ ಜನ ಸಮ್ಮತಿಸಿದರೆ ನಿನ್ನ ಒಪ್ಪಿಗೆಯೋ?" +"ಹೌದು" ಅಂದನು. +ಸಭೆಯಲ್ಲಿ ರಾಜನು, "ನಾನು ನೆಟ್ಟ ಗಿಡದ ಫಲವನ್ನು ನಾನೇ ತಿನ್ನಬಹುದೋ, ಏನು ನಿಮ್ಮ ಅಭಿಮತ?" ಎಂದು ಕೇಳಿದನು. +"ನೆಟ್ಟ ಗಿಡ ಫಲವನ್ನು ನೆಟ್ಟವನು ತಿನ್ನಬಾರದು ಅನ್ನುವ ಶಾಸ್ತ್ರ ಎಲ್ಲಿಯೂ ಇಲ್ಲ. +ಕಾಯಿಯೇ ಆಗಲಿ, ಹಣ್ಣೇ ಆಗಲಿ ಯಾವುದನ್ನೂ ತಿನ್ನಬಹುದು. +"ರಾಜನು ಸಭೆ ಮುಗಿದ ಮೇಲೆ ತಾಯಿಗೆ, "ಕೊಟ್ಟ ಮಾತನ್ನು ನಡೆಸು. +ನಾಳೆ ಬೆಳಗಾದರೆ ನನ್ನ ಮಗಳ ಸಂಗಡ ನನ್ನ ಲಗ್ನ ಮಾಡು. +ಅವಳನ್ನು ನಾನಿನ್ನೂ ನೋಡಿಲ್ಲ ಅವಳು ಪಟ್ಟೆಯನ್ನುಟ್ಟುಕೊಂಡು ನನ್ನ ಮುಂದೆ ಬರಲಿ" ಎಂದನು. +ತಾಯಿಯು ದುಃಖದಿಂದ, "ಮದುವೆಯಾಗುವ ಮೊದಲೇ ಮೈನೆರೆದದ್ದರಿಂದ ಅವಳು ಹೊರಗೆ ಬರುವುದಕ್ಕೆ ನಾಚುತ್ತಾಳೆ, ಅವಳು ನೆಲಮಾಳಿಗೆಯಲ್ಲಿಯೇ ಇರುತ್ತಾಳೆ. +ಹೇಗೂ ನಿನ್ನ ಕೈಹಿಡಿಯುವುದಕ್ಕೆ ಬರುತ್ತಾಳೆ. +ಮಗಳು ಎಂದು ನೋಡಿ ಹೆಂಡತಿಯನ್ನು ಮಾಡಿಕೊಳ್ಳುವುದಕ್ಕಿಂತ ಹೆಂಡತಿಯನ್ನಾಗಿ ನೋಡಿಕೊಂಡು, ಹೆಂಡತಿಯೆಂದೇ ನೋಡುವುದು ಮೇಲು" ಎಂದು ಹೇಳಿದಳು. +ಮುದುಕಿಯು ಮೊಮ್ಮಗಳ ಬಳಿ ಹೋಗುವಾಗ ಆಳುತ್ತ ಹೋದಳು. +“ಅಜ್ಜಿ. . . ಅಪ್ಪನು ಯುದ್ಧವನ್ನು ಗೆದ್ದು ಹನ್ನೆರಡು ವರ್ಷಗಳ ಆನಂತರ ಬಂದ ಸುದ್ದಿಯನ್ನು ಕೇಳಿದೆ,ಸಂತೋಷದಲ್ಲಿರಬೇಕಾದಾಗ ಅಳುವುದು ಯಾಕೆ?” ಎಂದು ಮೊಮ್ಮಗಳು ಕೇಳಿದಳು. +"ನಿನ್ನ ಅಪ್ಪ ನಿನ್ನನ್ನು ಮದುವೆಯಾಗುತ್ತೇನೆಂದು ಹಠ ಹಿಡಿದಿದ್ದಾನೆ. +ನಾಳೆಯೇ ಮದುವೆಯಾಗಬೇಕಂತೆ. +ಇಂಥ ಪಾಪವನ್ನು ಕಣ್ಣಾರೆ ಕಾಣುವುದಕ್ಕೆ ನಾನು ಬದುಕಿದ್ದೇನೆ." +"ಇದಕ್ಕೊಂದು ಉಪಾಯ ಮಾಡಬೇಕು, 'ಬಂಗಾರದ ಕಾಲುದೀಪ ತರಿಸಿಕೊಟ್ಟರೆ ನಿನ್ನ ಮಗಳು ನಿನ್ನನ್ನು ಲಗ್ನವಾಗಲು ಒಪ್ಪುತ್ತಾಳೆ' ಎಂದು ಹೇಳು" ಎಂದಳು. +ಮುದುಕಿಯು ಹೋಗಿ ಹಾಗೆಯೇ ತಿಳಿಸಿದಳು. +ರಾಜನು ಉದ್ದದ ಚಿನ್ನದ ಕಾಲುದೀಪವನ್ನು ತರಿಸಿದನು. +ಮುದುಕಿ ಅದನ್ನು ತಾನೇ ಹೊತ್ತುಕೊಂಡು ನೆಲಮಾಳಿಗೆಗೆ ಹೋದಳು. +ಮೊಮ್ಮಗಳು, “ಕಾಲುದೀಪದ ಸಹಾಯದಿಂದ ಅಪ್ಪನ ಪಾಪದಿಂದ ಪಾರಾಗುತ್ತೇನೆ” ಎಂದಳು. +ಮುದುಕಿ, “ಏನೆಂದು?” ಕೇಳಿದ್ದಕ್ಕೆ, “ನೀನು ಸಂಜೆ ಬಂದಾಗ ಕಾಣುವೆ” ಎಂದಳು. +ಅಜ್ಜಿ ತಿರುಗಿ ಹೋದ ಮೇಲೆ ಹುಡುಗಿ ಸ್ಥಾನ ಮಾಡಿದಳು, ಆಭರಣ ಹಾಕಿಕೊಂಡಳು. +“ಕಾಲುದೀಪಾ, ಕಾಲುದೀಪಾ. . . ನಾನು ಸತ್ಯದಲ್ಲಿ ಹುಟ್ಟಿದವಳಾದರೆ ಬಾಯಿ ತೆರೆ”ಎಂದಳು. +ಕಾಲುದೀಪ ಬಾಯಿ ತೆರೆಯಿತು. +ಹುಡುಗಿ ಕಾಲುದೀಪದಲ್ಲಿ ಸೇರಿದಳು. +“ಕಾಲುದೀಪಾ, ಕಾಲುದೀಪಾ. . . ನಾನು ಸತ್ಯದಲ್ಲಿದ್ದವಳಾದರೆ ಬಾಗಿಲು ಮುಚ್ಚಿಕೋ.” +ಬಾಗಿಲು ಮುಚ್ಚಿತು. + ಸಂಜೆ ಮೊಮ್ಮಗಳಿಗೆ ಊಟವನ್ನು ತಂದ ಅಜ್ಜಿ ಅವಳನ್ನು ಕಾಣದೆ ನೆಲಮಾಳಿಗೆಯನ್ನೆಲ್ಲಾ ಅರಸಿದಳು. +ಕೂಗಿ ಕರೆದಳು. +ನೆಲಮಾಳಿಗೆಯ ಕಾವಲುಗಾರನಿಂದ ಅವಳು ಹೊರಬಿದ್ದು ಹೋಗಿರಲಿಕ್ಕಿಲ್ಲ ಎಂದು ಕೇಳಿ, ದುಃಖ ಮಾಡುತ್ತ ರಾಜನ ಹತ್ತಿರಹೋಗಿ, “ನಿನ್ನ ಮಗಳು ಇದ್ದಕ್ಕಿದ್ದಲ್ಲೇ ಮಾಯವಾಗಿದ್ದಾಳೆ. . . +ನಿನ್ನ ಪಾಪದ ಕೆಲಸಕ್ಕೆ ಹೇಸಿ ನೆಲವೇ ಬಾಯಿ ತೆರದು ಅವಳನ್ನು ನುಂಗಿತೋ, ಭೂತ ಹೊಡೆದುಕೊಂಡು ಹೋಯಿತೋ. . . . ? +ಏನಾಯಿತೋ ಏನೋ? +ನೆಲಮಾಳಿಗೆಯಲ್ಲಿ ಬಾಗಿಲು ಕಾಯುವವರು,ನನ್ನ ಹೊರತು ಇನ್ನಾರನ್ನೂ ಒಳಗಾಗಲಿ-ಹೊರಗಾಗಲಿ ಬಿಡುವುದಿಲ್ಲ, ಹುಡುಗಿಯ ಗತಿಯೇನಾಯಿತೋ. . . ? ಎಂದು ಅತ್ತಳು. +ರಾಜನು ಕೆರೆ, ಬಾವಿ, ಹೊಳೆ, ಅಡವಿ-ಗುಹೆ ಎಲ್ಲ ಕಡೆಗೂ ಅವಳನ್ನು ಹುಡುಕಲು ಚಾರರನ್ನು ಅಟ್ಟಿದನು. +ಎಲ್ಲಿಯೂ ಅವಳನ್ನು ಕಂಡೆವೆಂದವರೇ ಇಲ್ಲ. +ತಾಯಿ ಅವಳನ್ನು ಹೇಗೋ ದೂರ ದಾಟಿಸಿದಳೆಂಬ ಅನುಮಾನದಿಂದ ಅವಳನ್ನೂ ಕೇಳಿದನು. +ಅವಳು ಆಣೆಮಾಡಿ ತನಗೆ ಏನೂ ತಿಳಿಯದೆಂದು ಹೇಳಿದಳು. +ಅವನು ಸಿಟ್ಟಿನಿಂದ, “ಬಂಗಾರದ ಕಾಲುದೀಪ ಮನೆಗೆ ಬಂದ ಮುಹೂರ್ತವೇ ಕೆಟ್ಟದು, ಅದನ್ನು ರಾಜ್ಯ ದಾಟಿಸಿ ತೆಂಕಣ ರಾಜ್ಯಕ್ಕೆ ತೆಗೆದುಕೊಂಡು ಹೋಗಿ ಸಾವಿರನಾಣ್ಯಕ್ಕೆ ಮಾರಾಟ ಮಾಡಿ ಬನ್ನಿ” ಎಂದು ನಾಲ್ಕು ಜನ ಆಳುಗಳಿಗೆ ಒಪ್ಪಿಸಿದನು. +ಕಾಲುದೀಪ ಹೊತ್ತ ಆಳುಗಳು, “ಕಾಲುದೀಪ ಯಾಕೋ ಬಹಳ ಭಾರವಾಗಿದೆ. . . ”ಎಂದುಕೊಳ್ಳುತ್ತಾ ಅದನ್ನು ಹೊತ್ತುಕೊಂಡು ತೆಂಕಣ ರಾಜ್ಯಕ್ಕೆ ಹೋದರು. +ತೆಂಕಣರಾಜ್ಯದ ರಾಜಕುಮಾರನು ಗಾಳಿ ಸಂಚಾರ ಮಾಡುತ್ತ ಬರುವಾಗ ಜಗಜಗ ಹೊಳೆಯುವ ಕಾಲುದೀಪವನ್ನು ನೋಡಿ, “ಬಂಗಾರದ ಕಾಲುದೀಪ. . . ಬಹಳ ಮಾಟವಾಗಿದೆ, ಇದು ಮಾರಾಟ ಮಾಡುವ ಬದುಕೋ (ಸಾಮಾನು) ಎಂದು ಕೇಳಿದನು. +“ಒಂದು ಸಾವಿರನಾಣ್ಯ ರೂಪಾಯಿ ಇದರ ಬೆಲೆ” ಎಂದರು ಚಾರರು. +ರಾಜಕುಮಾರ ಅವರನ್ನು ಅರಮನೆಗೆ ಕರೆದುಕೊಂಡು ಹೋಗಿ, ಸಾವಿರ ನಾಣ್ಯ ಕೊಡಿಸಿ ಕಾಲುದೀಪವನ್ನು ತಾನು ಮಲಗುವ ಕೋಣೆಯಲ್ಲಿರಿಸಿಕೊಂಡನು. +ರಾಜಕುಮಾರನಿಗೆ ಒಂದು ನಿದ್ದೆಯ ನಂತರ ಮಧ್ಯರಾತ್ರಿಯಲ್ಲಿ ಎದ್ದು ಫಲಹಾರ ಮಾಡುವ ರೂಢಿಯಿತ್ತು. +ಅವನ ತಾಯಿ ಅದಕ್ಕಾಗಿ ತೆಂಗಿನಕಾಯಿ ಸುಳಿ, ಪಂಚಕಜ್ಜಾಯ,ಆರು ರಸಬಾಳೆ ಹಣ್ಣು, ಒಂದು ಸೇರು ಹಾಲು ಹಾಗೂ ಎಲೆ-ಅಡಿಕೆ ತಬಕಗಳನ್ನು ದಿನಾಲು ತಂದು ಇಡುತ್ತಿದ್ದಳು. +ರಾಜಕುಮಾರ ನಿದ್ದೆ ಮಾಡಿದ ಮೇಲೆ ಕಾಲುದೀಪದಲ್ಲಿದ್ದ ರಾಜಕುಮಾರಿ ಹಸಿವೆಯಿಂದ, “ಕಾಲುದೀಪಾ, ಕಾಲುದೀಪಾ. . . ಬಾಗಿಲು ತೆರೆ” ಎಂದಳು. + ಬಾಗಿಲು ತೆರೆಯಿತು. + ಅವಳು ಇಳಿದು ಬಂದು ತಿಂಡಿಯನ್ನೆಲ್ಲ ಸರಿಪಾಲು ಮಾಡಿ ಅರ್ಧದಷ್ಟನ್ನು ತಿಂದಳು. +ಅರ್ಧವನ್ನು ಉಳಿಸಿಟ್ಟು, ಎಲೆಯಡಿಕೆಯನ್ನು ಜಗಿದಳು. +ರಾಜಕುಮಾರ ಬಿಳಿಯವಲ್ಲಿ ಹೊದೆದು ಪಲ್ಲಂಗದ ಮೇಲೆ ಮಲಗಿದ್ದನು. +ಚಿನ್ನದ ದೀಪದ ಪ್ರಭೆ ರಾಜಕುಮಾರನ ಮೇಲೆ ಬಿದ್ದು ಅವನ ಅಂದ-ಚೆಂದ ಕನ್ನಡಿಯಲ್ಲಿ ಪ್ರತಿಬಿಂಬಿಸಿದಂತೆ ಕಾಣುತ್ತಿತ್ತು. +ನಿದ್ದೆ ಮಾಡುತ್ತಿದ್ದ ಅವನ ಕೆಳತುಟಿ ಸ್ವಲ್ಪ ಮುಂದೆ ಬಂದು ತನಗೆ ಏನೋ ಸೂಚನೆ ಮಾಡುತ್ತಿರುವ ಹಾಗೆ ಅನಿಸಿ ರಾಜಕುಮಾರಿ ಅಲ್ಲಿ ಯಾರೂ ಇರದಿದ್ದರೂ ತನ್ನಷ್ಟಕ್ಕೆ ನಾಚಿಕೊಂಡಳು. +“ಕಾಲುದೀಪಕ್ಕಿಂತಲೂ ದೊಡ್ಡವಳಾದ ನಾನು ಅದರಲ್ಲಿ ಸೇರಿಕೊಂಡದ್ದು ಹೇಗೆ? +ಇದೆಲ್ಲ ಸ್ವಪ್ನದ ಹಾಗೆ ಕಾಣುತ್ತದೆ. +ರಾಜಕುಮಾರ ಈಗ ಏನು ಕನಸು ಕಾಣುತ್ತಿರಬಹುದು? +ನನ್ನ ತಂದೆಗೆ ನನ್ನನ್ನು ನೋಡದೆಯೇ ನನ್ನ ಮದುವೆಯಾಗುವ ದುರ್ಬುದ್ಧಿ ಬಂದದ್ದು ಹೇಗೆ? +ನನ್ನನ್ನು ಕಾಣದೆ ತಾಯಿ-ಅಜ್ಜಿ ಎಷ್ಟು ದುಃಖ ಮಾಡುವರೋ, ನಾನಿಲ್ಲಿರುವುದು ಅವರಿಗೆ ಹೇಗೆ ಗೊತ್ತಾಗಬೇಕು? +ಇರಲಿ, ರಾಜಕುಮಾರನಿಗೊಂದು ಗುರುತಿನ ಸೂಚನೆಯನ್ನು ಮಾಡಬೇಕು” ಎಂದು ಅವನ ವಲ್ಲಿಯ ಮೇಲೆ ಬೀಳುವಂತೆ ಸ್ವಲ್ಪ ವೀಳ್ಯದ ಎಂಜಲು ತೂರಿದಳು. +ಆಮೇಲೆ ಕಾಲುದೀಪದಲ್ಲಿ ಹಿಂದಿನಂತೆ ಸೇರಿ ಅಡಗಿ ಹೋದಳು. +ರಾಜಕುಮಾರನು ಮಧ್ಯರಾತ್ರಿಯ ಸುಮಾರಿಗೆ ಎದ್ದನು. +“ತಿಂಡಿಯ ಸಾಮಾನುಗಳಲ್ಲಿ ಅರ್ಧ ಮಾತ್ರ ಉಳಿದಿವೆ. +ಯಾರು ಬಂದಿದ್ದರು? +ಅರ್ಧವನ್ನು ಯಾರು ತಿಂದರು? +ವಲ್ಲಿಯ ಮೇಲೆ ವೀಳ್ಯದ ಕಲೆ ಹೇಗೆ ಬಂತು? +ತಾಯಿಯನ್ನೇ ಕೇಳಬೇಕು?” ಎಂದು ಅರ್ಧ ತಿಂಡಿತಿಂದು ನಿದ್ದೆ ಹೋದನು. +ಮರುದಿನ ಮುಂಜಾನೆ ತಾಯಿಯ ಹತ್ತಿರ ಹೋಗಿ, “ಅಮ್ಮಾ. . . ನಿನ್ನೆ ರಾತ್ರಿ ದಿನದಷ್ಟೆತಿಂಡಿ ತಂದಿಟ್ಟಿದ್ದಿಯಲ್ಲವೇ?” ಎಂದು ಕೇಳಲು ಅವಳು "ಹೌದೆಂದಳು." +ತಾಯಿಗೆ ಏನೂ ಹೇಳದೆ ಸುಮ್ಮನಾಗಿ, “ಇಂದು ರಾತ್ರಿ ಎಚ್ಚರದಿಂದಿದ್ದು ಕಾದು ನೋಡಬೇಕು” ಎಂದು ನಿಶ್ಚಯಿಸಿದನು. +ಹೆಬ್ಬೆಟ್ಟನ್ನು ಸ್ವಲ್ಪ ಕೊರೆದುಕೊಂಡು ನಿಂಬೆರಸವನ್ನು ಅದ್ದಿದ ಬಟ್ಟೆ ಕಟ್ಟಿಕೊಂಡು ರಾತ್ರಿ ಮಲಗಿದನು. +ಗಾಯದ ಉರಿಗೆ ನಿದ್ದೆ ಬಾರದಿದ್ದರೂ ನಿದ್ದೆ ಬಂದಂತೆ ನಟಿಸುತ್ತ ಮಲಗಿಕೊಂಡನು. +ಮಧ್ಯರಾತ್ರಿಗೆ ಮುನ್ನಾ ದಿನದಂತೆಯೇ ಹುಡುಗಿ ದೀಪದ ಕಂಬದಿಂದ ಹೊರಬಂದಳು. +ಅರ್ಧ ತಿಂಡಿ ತಿಂದು, ವೀಳ್ಯ ಹಾಕಿಕೊಂಡು ವೀಳ್ಯವನ್ನು ಅವನ ವಲ್ಲಿಯಮೇಲೆ ತೂರಬೇಕೆಂದು ಹತ್ತಿರ ಬಂದಾಗ ಎದ್ದು ಅವಳ ಕೈಹಿಡಿದನು. +"ನೀನು ಯಾರು? +ಯಾರು ನೀನು? +ಭೂತ-ಪಿಶಾಚಿಯೇ, ನರಮನುಷ್ಯಳೋ? +ನೀನು ಇಲ್ಲಿ ಹೇಗೆ ಬಂದೆ? +ಏಕೆ ಬಂದೆ. . . ?"ಎಂದೆಲ್ಲಾ ಕೇಳಿದನು. +ಆಗ ಅವಳು ತನ್ನ ವೃತ್ತಾಂತವನ್ನು ತಿಳಿಸಿದಳು. +“ನನ್ನ ವಲ್ಲಿಯ ಮೇಲೆ ವೀಳ್ಯವನ್ನು ಉಗಿದಿದ್ದೇಕೆ?” +“ನಾನು ಇಲ್ಲಿರುವ ಗುರುತಿಗೆ ಸಂಕೇತ ಮಾಡಿದೆ. +ನನ್ನ ತಪ್ಪನ್ನು ಮನ್ನಿಸಬೇಕು.” +“ನಿನ್ನ ತಪ್ಪಿಗೆ ನಿನ್ನನ್ನು ನನ್ನ ವಿವಾಹ ಬಂಧನದಲ್ಲಿ ಸೇರಿಸುತ್ತೇನೆ. +ಈಗ ಅರ್ಧಫಲಾಹಾರ ತಿಂದ ತಪ್ಪಿಗೆ ಎಲ್ಲವನ್ನೂ ನೀನೇ ತಿನ್ನಬೇಕು” ಎಂದು ಒತ್ತಾಯದಿಂದ ಅವಳಿಗೆ ತಿಂಡಿ ತಿನ್ನಿಸಿದನು. +ಹುಡುಗಿ, “ನಾನು ದೀಪದಲ್ಲಿ ಪುನಃ ಸೇರಿಕೊಳ್ಳುತ್ತೇನೆ, ನಾಳೆ ರಾತ್ರಿ ಮತ್ತೆ ಹೀಗೆಯೇ ಬರುತ್ತೇನೆ.” +“ನೀನು ದೀಪದಲ್ಲಿ ಸೇರಿದ ಮೇಲೆ ಮತ್ತೆ ನನ್ನ ಹತ್ತಿರ ಬರದೇ ಹೋದರೆ? +ನನ್ನನ್ನು ಮೊದಲು ನೀನು ಮದುವೆಯಾಗಬೇಕು” ಎಂದನು ರಾಜಕುಮಾರ. +“ನಿನ್ನನ್ನು ನಾನು ಮದುವೆಯಾಗಲು ಸಿದ್ಧ. +ಆದರೆ, ನಿನ್ನ ತಂದೆ-ತಾಯಿ ನನ್ನ ಕಥೆಯನ್ನು ನಂಬದೆ, ಅದಕ್ಕೆ ಅಡ್ಡಿಮಾಡಿದರೆ?” +“ಅದೇನು ತೊಂದರೆಯಿಲ್ಲ, ನೀನು ನನ್ನ ಕೋಣೆಯಲ್ಲಿಯೇ ಇರುವಂತೆ, ನನ್ನನ್ನು ಮದುವೆಯಾಗುವಂತೆ ಮಾತು ಕೊಡು” ಎಂದನು ರಾಜಕುಮಾರ. +ಹುಡುಗಿ ಅದರಂತೆ ಆಣೆ-ಭಾಷೆಯನ್ನಿಟ್ಟುಕೊಂಡು, "ಇನ್ನು ನಾನು ನನ್ನ ಬಿಲ ಸೇರುತ್ತೇನೆ” ಎಂದು ಮೊದಲಿನಂತೆ ದೀಪದೊಳಗೆ ಸೇರಿದಳು. +ಅವಳು ಚಿಕ್ಕವಳಾಗುತ್ತ ಕಾಲುದೀಪದಲ್ಲಿ ಸೇರಿಹೋದದ್ದನ್ನು ಅವನು ನೋಡಿದನು. +ಆಮೇಲೆ ರಾತ್ರಿ ಅವನಿಗೆ ನಿದ್ದೆ ಬರಲಿಲ್ಲ. +ಮರುದಿನ ತಾಯಿಗೆ ಎಲ್ಲ ಸಂಗತಿಯನ್ನು ತಿಳಿಸಿದನು. +ಅವಳು ಹುಡುಗಿಯನ್ನು ನೋಡಿ ಒಪ್ಪಿಗೆ ತಿಳಿಸಿದಳು. +ರಾಜನ ಒಪ್ಪಿಗೆಯನ್ನು ಪಡೆದು ರಾಜಕುಮಾರ ಅಡವಿಯಲ್ಲಿ ಸಿಕ್ಕ ಹುಡುಗಿಯನ್ನು ಮದುವೆಯಾಗುವನೆಂದು ಡಂಗುರ ಹೊಡೆಸಿದಳು. +ಮದುವೆ ವೈಭವದಿಂದ ನೆರವೇರಿತು. +ರಾಜಕುಮಾರಿ ತನ್ನ ಮಾನ-ಪ್ರಾಣ ಎರಡನ್ನೂ ಕಾಪಾಡಿ, ತನಗೆ ಅನುರೂಪನಾದ ಪತಿಯನ್ನು ದೊರಕಿಸಿಕೊಟ್ಟ ಬಂಗಾರದ ಕಾಲುದೀಪವನ್ನು ಮದುವೆಯ ದಿನ ಭಕ್ತಿಯಿಂದ ಪೂಜಿಸಿದಳು. +'ದೀಪಕುಮಾರಿ' ಎಂಬ ಹೆಸರನ್ನು ಧರಿಸಿದಳು. +ಒಂದು ದೇವಸ್ಥಾನವನ್ನು ಕಟ್ಟಿಸಿ, ಕಾಲುದೀಪವನ್ನು ಪ್ರತಿಷ್ಠಿಸಿ ನಿತ್ಯದಲ್ಲಿಯೂ ಅದಕ್ಕೆ ಪೂಜೆಯನ್ನು ಸಲ್ಲಿಸುತ್ತಿದ್ದಳು. +ದೀಪದೇವರಿಗೆ ಭೂಮಿ ದಾನ, ಸುವರ್ಣ ದಾನ ಇತ್ಯಾದಿ ಸಲ್ಲಿಸಿದಳು. +ದೀಪಕುಮಾರಿಯ ಸೌಂದರ್ಯವನ್ನೂ, ದೀಪದೇವರ ಮಹಿಮೆಯನ್ನೂ ಕುರಿತುಕವಿಗಳು ಪದಗಳನ್ನು ರಚಿಸಿದರು. +ಗಾಯಕರು ಅವನ್ನು ಹಾಡಿ, ಆ ಹಾಡುಗಳನ್ನು ದೂರದೂರಕ್ಕೆ ಪ್ರಚಾರಪಡಿಸಿದರು. +ದೀಪ ದೇವಸ್ಥಾನ ದೂರದೂರದವರಿಗೆ ಯಾತ್ರಾ ಸ್ಥಳವಾಯಿತು. +ಮೂಡಲ ರಾಜ್ಯದ ರಾಜನೂ, ರಾಣಿಯೂ ಈ ದೀಪದೇವರ ಹಾಗೂ ದೀಪಕುಮಾರಿಯ ವೃತ್ತಾಂತಗಳನ್ನು ಆಶ್ಚರ್ಯದಿಂದ ಕೇಳಿದರು. +ದೀಪಕುಮಾರಿ ತಮ್ಮ ಮಗಳೇ ಆಗಿರಬೇಕೆಂದು ಅವರು ತಿಳಿಸಿದರು. +ರಾಜನು ಮಗಳು ಉಡುತ್ತಿದ್ದ ಪೀತಾಂಬರವನ್ನು ಇತರ ಪಟ್ಟೆಗಳನ್ನೂ ತರಿಸಿ ನಾಲ್ಕು ಜನ ಸೇವಕರಿಗೆ ಕೊಟ್ಟು, “ನೀವು ತೆಂಕಣ ರಾಜ್ಯಕ್ಕೆ ಪಟ್ಟೆಯ ವ್ಯಾಪಾರಿಗಳಂತೆ ಹೋಗಿ, ದೀಪಕುಮಾರಿಗೆ ಈ ಪಟ್ಟೆಗಳನ್ನು ಕಾಣಿಸಿ ಅವಳ ಗುರುತು ತಿಳಿದು ಬನ್ನಿ” ಎಂದು ಕಳಿಸಿದನು. +ಅದರಂತೆ ದೀಪ ಸುಂದರಿಯ ಅರಮನೆಗೆ ಪಟ್ಟೆ ವ್ಯಾಪಾರಿಗಳ ವೇಷದಲ್ಲಿ ಅವರು ಹೋದರು. +ಅವಳು ಪಟ್ಟೆಗಳನ್ನು ಬಿಡಿಸಿ ಒಂದೊಂದಾಗಿ ನೋಡುತ್ತ, ತಾನು ಹಿಂದೆ ಉಡುತ್ತಿದ್ದ ನಕ್ಷತ್ರ ರಾತ್ರಿ ಎಂಬ ಪಟ್ಟೆಯನ್ನು ನೋಡಿ ಹಿಂದಿನ ನೆನಪಿನಿಂದ ಅಳಹತ್ತಿದಳು. +ಮೂಡಲರಾಜನ ಸೇವಕರು ತಮ್ಮ ಗುರುತನ್ನು ಹೇಳಿ, "ರಾಜಕುಮಾರಿ ಕಾಣೆಯಾದರೆಂದು ತಿಳಿದ ಮೇಲೆ ನಿಮ್ಮ ತಾಯಿ ಕೊರಗಿ ಕೊರಗಿ ಸೊರಗಿದ್ದಾರೆ. +ನಿಮ್ಮ ತಂದೆಯವರು ಪಶ್ಚಾತ್ತಾಪದಿಂದ ಬೇಯುತ್ತಿದ್ದಾರೆ. +ನಿಮ್ಮ ವಿಷಯವನ್ನು ಕೇಳಿ ನೀವೇ ಎಂದು ತಿಳಿದು ಬರಲು ನಮ್ಮನ್ನು ಈ ವೇಷದಲ್ಲಿ ಕಳಿಸಿದ್ದಾರೆ. +ನೀವು ನಿಮ್ಮ ಪತಿಯೊಡನೆ ಬಂದು ತಂದೆ-ತಾಯಿ ಅಜ್ಜಿಯವರನ್ನು ಸಮಾಧಾನಗೊಳಿಸಬೇಕು" ಎಂದರು. +ರಾಜಕುಮಾರಿ ಪಟ್ಟೆಯನ್ನು ಅವರಿಂದ ತೆಗೆದುಕೊಂಡು ಅವರಿಗೆ ಯೋಗ್ಯ ಬಹುಮಾನಕೊಟ್ಟು, “ನೀವು ಬೇಗನೆ ಮೂಡಲ ರಾಜ್ಯಕ್ಕೆ ಹೋಗಿ ನಾನು ಕ್ಷೇಮದಲ್ಲಿರುವುದನ್ನು ತಿಳಿಸಿರಿ” ಎಂದು ಕಳಿಸಿದಳು. +ತನ್ನ ಪತಿಗೆ ಈ ಎಲ್ಲ ವರ್ತಮಾನ ತಿಳಿಸಿ ಪಟ್ಟೆಯನ್ನು ತೋರಿದಳು. +ರಾಜಕುಮಾರನು ಆ ಪಟ್ಟೆಯ ಸೌಂದರ್ಯವನ್ನು ನೋಡಿ ಬೆರಗಾಗಿ, "ಇದರಿಂದಲೇ ನಿನಗೆ ಅಂಥ ಮಹಾಸಂಕಟವುಂಟಾದದ್ದು, ನೀಲ ನಾಗರಹಾವಿನಂತೆ ಇದರ ಸೌಂದರ್ಯ ರಮ್ಯ ಭಯಂಕರವಾಯಿತು. +ಇದು ನಿನಗೆ ಕ್ಷೇಮಕರವಲ್ಲ, ಇದನ್ನು ನೀನು ಉಡುವುದು ಚೆನ್ನಲ್ಲ" ಎಂದು ಹೇಳಿದನು. +ಅವಳು, “ಇದು ಸರಿಯಾದ ಮಾತು. +ಇದನ್ನು ನಾನು ದೀಪ ದೇವರಿಗೇ ಉಡಿಸಿಬಿಡುತ್ತೇನೆ” ಎಂದು ಹೇಳಿದಳು. +ಮುಂದಿನ ಶುಕ್ರವಾರ ದೀಪ ದೇವಸ್ಥಾನದಲ್ಲಿ ವಿಶೇಷ ಪೂಜೆ-ಉತ್ಸವಗಳನ್ನು ನಡೆಸಿ ತಾನೇ ದೇವರಿಗೆ ಆ ಪಟ್ಟೆಯನ್ನುಡಿಸಿದಳು. +ಇತ್ತ ಮೂಡಲ ರಾಜನು ಅಳಿಯನಿಗೆ ಪತ್ರ ಬರೆದು, ಅವರು ಗಂಡ-ಹೆಂಡತಿ ಬಂದು ಆ ರಾಜ್ಯವನ್ನು ತೆಗೆದುಕೊಂಡು ಅಲ್ಲಿಯೇ ಆಳಬೇಕೆಂದು ಪತ್ರ ಬರೆದನು. +ಕುಮಾರಿಯನ್ನು ಕನ್ನಿಕಾಪರಮೇಶ್ವರಿ ಎಂದು ತಿಳಿದು ಪೂಜಿಸುವೆನೆಂದೂ ಕಾಣಿಸಿದನು. +ರಾಜಕುಮಾರಿ, “ನಿನ್ನ ರಾಜ್ಯಕ್ಕೆ ಬಂದು ನಾನು ಉಳಿಯಲಾರೆನು. +ನಿಮ್ಮನ್ನೆಲ್ಲಾ ಕಾಣುವ ಹಂಬಲವೇನೋ ಉಂಟು. +ಆದರೆ ಅಲ್ಲಿಗೆ ಬರಲಾರೆ. +ನೀವೆಲ್ಲರೂ ಇಲ್ಲಿಗೇ ಬಂದು ನಮ್ಮ ಅರಮನೆಯಲ್ಲಿಯೇ ಉಳಿಯಬೇಕು. +ಈಗಲೂ ನಾನು ನನ್ನ ಎಚ್ಚರಿಕೆಯಲ್ಲಿಯೇ ಇದ್ದು ನಿನ್ನನ್ನು ಕಾಣುತ್ತೇನೆ ಬೇಸರಿಸಬಾರದು. +ತಂದೆಯಾಗಿ ನೀನು ಮಗಳ ಮನೆಗೆ ಬರಬಹುದು” ಎಂದು ಮಾರೋಲೆ ಬರೆದಳು. +ತಂದೆ-ತಾಯಿ, ಅಜ್ಜಿ ಎಲ್ಲರೂ ಪರಿವಾರ ಸಮೇತ ತೆಂಕಣ ರಾಜ್ಯಕ್ಕೆ ಬಂದರು. +ಅವಳು ಅವರೆಲ್ಲರನ್ನೂ ಪ್ರೀತಿಯಿಂದ ಬರಮಾಡಿಕೊಂಡಳು. +ರಾಜನು ಅಳಿಯ-ಮಗಳನ್ನು ಹರಸಿ, ಮತ್ತೆ ತನ್ನ ರಾಜ್ಯಕ್ಕೆ ಬರುವಂತೆ ಕೇಳಿಕೊಂಡನು. +ಆದರೆ, ದೀಪಕುಮಾರಿ,'ದೀಪ ದೇವರು ಇರುವಲ್ಲಿಂದ ತಾನು, ತನ್ನ ಪತಿದೇವರೂ ಅಗಲಿ ಹೋಗಲಾರೆವು' ಎಂದು ತಿಳಿಸಿ ತಂದೆ-ತಾಯಿಗಳನ್ನು ಕೆಲವು ದಿನಗಳ ಮೇಲೆ ಬೀಳ್ಕೊಟ್ಟಳು. +೨೮.ಬೆಂದವರು ಯಾರು? +ಒಂದು ಊರಿನಲ್ಲಿ ತಾಯಿ-ಮಗ-ಹೆಂಡತಿ ಹೀಗೆ ಮೂರು ಜನ ಇದ್ದರು. +ಮಗನು ಬೇರೆಯವರ ಮನೆಯಲ್ಲಿ ಒಬ್ಬ ಹೆಂಗಸನ್ನು ತನ್ನ ವಶಮಾಡಿ ಇಟ್ಟುಕೊಂಡಿದ್ದನು. +ಪ್ರತಿನಿತ್ಯ ರಾತ್ರಿ ಊಟವಾದ ಆನಂತರ ತನಗೆ ಹಿತವಾದ ಹೆಣ್ಣಿನ ಮನೆಗೆ ಹೋಗುತ್ತಿದ್ದನು. +ಅವನ ಹೆಂಡತಿಯು ತನ್ನ ಅತ್ತೆಯ ಹತ್ತಿರ, 'ತಾನು ಮಲಗುವುದೆಲ್ಲಿ?' ಅಂತಕೇಳಿದಳು. +ಅತ್ತೆ ಮಾತಾಡಲಿಲ್ಲ. +ಮೂರು ದಿನ ಕಳೆದ ಮೇಲೆ ಮತ್ತೊಮ್ಮೆ ಅವಳು,“ತಾನು ಮಲಗುವುದೆಲ್ಲಿ?' ಅಂತ ಕೇಳಿದಾಗ, ಅತ್ತೆಗೆ ಬೇಸರ ಹುಟ್ಟಿ, “ಎಲ್ಲಿಯಾದರೂ ಸುಡುಗಾಡಿನಲ್ಲಿ ಹೋಗಿ ಮಲಗು” ಎಂದು ಹೇಳಿದಳು. +"ಇಂದಿನವರೆಗೆ ನನ್ನ ಅತ್ತೆ ಹೀಗೆ ಹೇಳಿದವಳಲ್ಲ, ಸುಡುಗಾಡಿಗೆ ಹೋಗುವುದಾದರೆ ಎಲ್ಲಿ?" ಅಂತ ಆಲೋಚನೆ ಮಾಡುತ್ತ ನಿಂತಳು. +ಇವಳ ಮನೆಯ ಹತ್ತಿರದ ಬೆಟ್ಟದಲ್ಲಿ ಒಬ್ಬ ಸನ್ಯಾಸಿಯು ಭಿಕ್ಷೆ ಬೇಡಿಕೊಂಡು ಬಂದು ಅಡಿಗೆ ಊಟ ಮಾಡಿ, ಬೆಂಕಿ ಮಾಡಿಕೊಂಡು ಮಲಗಿದ್ದನು. +ಸುತ್ತುಮುತ್ತು ನೋಡುವಾಗ ಆ ಬೆಟ್ಟದಲ್ಲಿ ಬೆಂಕಿ ತೋರಿತು. +ಸುಡುಗಾಡು ಎಂದು ಹೇಳುವುದಾದರೆ ಇದೇ ಆಗಿರಬೇಕು ಎಂದು ತಿಳಿದು, ತನ್ನ ಚಾಪೆಯನ್ನು ತೆಗೆದುಕೊಂಡು ಅಲ್ಲಿಗೆ ಹೋದಳು. +ಆಗ ಆ ಸನ್ಯಾಸಿ ಎದ್ದು, “ಈ ರಾತ್ರಿಯಲ್ಲಿ ಒಂಟಿ ಹೆಂಗಸು ನೀನು ಇಲ್ಲಿ ಬರಲಿಕ್ಕೆ ಕಾರಣವೇನು? +ನೀನು ಎಲ್ಲಿಯವಳು?” ಎಂದು ಕೇಳಿದನು. +“ನಾನು. . . ಅದೋ!ಆ ಮನೆಯವಳು. +ನನ್ನ ಗಂಡ ಮನೆಯಲ್ಲಿ ಮಲಗುವುದಿಲ್ಲ. +ನಾನು ಮಲಗುವುದು ಎಲ್ಲಿ ಎಂದು ಅತ್ತೆಯನ್ನು ಕೇಳಿದಾಗ, 'ಸುಡುಗಾಡಿನಲ್ಲಿ ಮಲಗು'ಎಂದು ಹೇಳಿದಳು. +ಆದ್ದರಿಂದ, ನಾನು ಇಲ್ಲಿಗೆ ಬಂದೆ ಅಜ್ಜಾ” ಎಂದು ಹೇಳಿದಳು. +"ಹಾಗಾದರೆ, ನೀನು ನನಗೆ ಮೊಮ್ಮಗಳಾಗುವೆ, ಈ ಬೆಂಕಿಯಿಂದ ಆಚೆಗೆ ನೀನು ಮಲಗು, ನಾನು ಈಚೆಗೆ ಮಲಗುತ್ತೇನೆ" ಎಂದು ಹೇಳಿದನು. +“ಮತ್ತು ನಾಳೆಯೂ ನೀನು ಇಲ್ಲಿಗೆ ಬಾ. +ನಿನಗೆ ಒಂದು ಒಳ್ಳೆಯ ಸೀರೆಯನ್ನು ತಂದುಕೊಡುತ್ತೇನೆ ಮೊಮ್ಮಗಳೇ. +ಆದ್ದರಿಂದ, ನಾಳೆ ನೀನು ಇಲ್ಲಿಗೆ ಬರಲೇಬೇಕು” ಎಂದು ಸನ್ಯಾಸಿ ಹೇಳಿದನು. +ಬೆಳಗಾದೊಡನೆ ಅವಳು ಎದ್ದು ತನ್ನ ಮನೆಗೆ ಬಂದಳು. +ಬೆಳಗಾದ ಮೇಲೆ ಆ ಸನ್ಯಾಸಿಯು ಪೇಟೆಗೆ ಹೋಗಿ, ಒಂದು ಜವಳಿ ಅಂಗಡಿಯನ್ನು ಹೊಕ್ಕನು. + “ನಿಮ್ಮ ಅಂಗಡಿಯೊಳಗಿರುವ ಸೀರೆಗಳಲ್ಲೆಲ್ಲಾ ಒಂದು ಉತ್ತಮವಾದ ಸೀರೆಯನ್ನು ಕೊಡಿ” ಎಂದು ಕೇಳಿದನು. +ಅನಂತರ ಇವನು ಸೀರೆಯನ್ನು ತೆಗೆದುಕೊಳ್ಳುವಾಗ ಅದೇ ಅಂಗಡಿಯಲ್ಲಿ ಅವಳ ಗಂಡನೂ ಬಂದು ಕೂತಿದ್ದನು. +ಅಗ ಸಾಯಂಕಾಲವಾಯಿತು. +ಊಟ ಮುಗಿಸಿದವರು ಅದೇ ಮನೆಯ ಹತ್ತಿರವಿರುವ ಬೆಟ್ಟಕ್ಕೆ ಸನ್ಯಾಸಿಯಿರುವ ಜಾಗಕ್ಕೆ ನಡೆದಳು. +ಆ ಸನ್ಯಾಸಿ ಇವಳನ್ನು ಕರೆದು, “ನಿನಗಾಗಿ ಮಗಳೇ ಒಂದು ಸೀರೆಯನ್ನುತಂದಿದ್ದೇನೆ. +ಈ ಸೀರೆಯನ್ನು ನೀನು ಉಡು. +ಈ ಸೀರೆಯನ್ನು ಉಟ್ಟು ಮನೆಗೆ ಹೋಗಲಿಕ್ಕೆ ಮನಸ್ಸಿಲ್ಲದಿದ್ದರೆ ಇದೇ ಬೆಂಕಿಗೆ ಹಾಕಿ ಸುಡು” ಎಂದು ಹೇಳಿದನು. +ಅಜ್ಜ ಕೊಟ್ಟ ಸೀರೆ ತನಗೆ ಬೇಡೆಂಬುದಾಗಿ ತಿಳಿದು, ಅದೇ ಬೆಂಕಿಯಲ್ಲಿ ಅದನ್ನು ಹಾಕಿ ಸುಟ್ಟಳು. +ಈ ವಿಷಯವನ್ನೆಲ್ಲ ಅವಳ ಗಂಡನು ನೋಡಿದನು. +ಬೆಳಗಾದೊಡನೆ ಅವಳು ತನ್ನ ಮನೆಯನ್ನು ಸೇರಿದಳು. +ಅಷ್ಟರೊಳಗೆ ಈ ಹೆಣ್ಣಿನ ಗಂಡಸು ಒಬ್ಬ ಅಕ್ಕಸಾಲಿಯ ಮನೆಗೆ ಹೋಗಿ ಒಂದು ಚಿನ್ನದ ಬೆಂಡೋಲಿಯನ್ನು ಮಾಡಿಸಿ ತಂದನು. +ಮರುದಿನ ಸಾಯಂಕಾಲ ಅವನು ಬೇರೆಯವರ ಮನೆಗೆ ಹೋಗಲಿಲ್ಲ. +ತನ್ನ ಮನೆಯಲ್ಲಿಯೇ ಉಳಿದುಕೊಂಡನು. +ಆ ದಿವಸ ಊಟವಾದ ಕೂಡಲೇ ತಾಯಿಯನ್ನು ಕರೆದು ಹೇಳಿದನು, “ನಿನ್ನ ಸೊಸೆಯ ಹತ್ತಿರ ಕೋಣೆಯಲ್ಲಿ ಚಾಪೆ ಹಾಕಲಿಕ್ಕೆ ಹೇಳು.” + ಸೊಸೆಯನ್ನು ಕರೆದು ಅತ್ತೆ,"ಕೋಣೆಯಲ್ಲಿ ಚಾಪೆ ಹಾಕು' ಎಂದು ನಿನ್ನ ಗಂಡ ಹೇಳುತ್ತಾನೆ" ಎಂದು ಹೇಳಿದಳು. +ಸೊಸೆಯು ಕೋಣೆಯಲ್ಲಿ ಚಾಪೆ ಹಾಕಿ, ಬೆಳಕಿಗೆ ದೀಪ ಹಚ್ಚಿಟ್ಟು ಹೊರಗೆ ಬಂದು ನಿಂತಳು. +ಗಂಡನು ತಾನು ತಂದ ಬಂಗಾರವನ್ನು ದೀಪಕ್ಕೆ ತೋರಿಸಿ ಚಾಪೆಯ ಮೇಲೆ ಇಟ್ಟನು. +ಮೂರು ಸರತಿ ಹೀಗೆ ಮಾಡುತ್ತಾ ಇರುವಾಗ ಆ ಹೆಣ್ಣು ಹೇಳಿದಳು. +"ಚಿನ್ನ ಮಾಡಿಸಿ ತರುವುದು ಯಾತಕ್ಕೆ? +ದೀಪಕ್ಕೆ ತೋರಿಸಿ ತಾವು ನೋಡಿ ಚಾಪೆಯ ಮೇಲೆ ಕೆಳಗೆ ಇಡುವುದು ಯಾತಕ್ಕೆ?" ಎಂದು ಕೇಳಿದಳು. +"ಊಟವಾದ ಕೂಡಲೇ ಮನೆಬಿಟ್ಟು ಚಾಪೆ ಹಿಡಿದುಕೊಂಡು ಬೆಟ್ಟದಲ್ಲಿರುವ ಸನ್ಯಾಸಿಯ ಹತ್ತಿರ ಹೋಗುವುದು ಯಾತಕ್ಕೆ? +ಸನ್ಯಾಸಿಯು ತಂದುಕೊಟ್ಟ ಒಳ್ಳೆಯ ಸೀರೆಯನ್ನು ನೀನು ಬೆಂಕಿಯಲ್ಲಿ ಹಾಕಿ ಸುಡುವುದು ಯಾತಕ್ಕೆ?" ಎಂದು ಹೇಳಿ, ಅಲ್ಲಿಂದ ಎದ್ದು ನಿತ್ಯಂಪ್ರತಿ ಅವನು ಹೋಗುವ ಮನೆಗೆ ಹೋದನು. +ಈ ಮಾತನ್ನು ಕೇಳಿದ ಹುಡುಗಿ ಕೋಣೆಯೊಳಗೆ ಹೋಗಿ ಬಾಗಿಲನ್ನು ಹಾಕಿ, “ನನ್ನ ಮರ್ಯಾದೆ ಹೋಯಿತು” ಎಂದು ತಿಳಿದು ಕಲ್ಲಿಗೆ ತಲೆ ಬಡಿದುಕೊಂಡು ತನ್ನ ಪ್ರಾಣವನ್ನು ತೆಗೆದುಕೊಂಡಳು. +ಬೆಳಗಾದೊಡನೆ, ಅತ್ತೆಯು ಸೊಸೆಯನ್ನು ಕರೆದಳು. +ಆ ಹುಡುಗಿ ಮಾತಾಡಲಿಲ್ಲ. +ಅನಂತರ ಗಂಡನು ಮನೆಗೆ ಬಂದನು. +“ನಿನ್ನ ಹೆಂಡತಿ ಕೋಣೆಯಲ್ಲಿದ್ದಾಳೆ ಬಾಗಿಲು ತೆಗೆಯಲಿಲ್ಲ. +ನೀನು ಎಲ್ಲಿ ಹೋಗಿದ್ದಿ?” ಎಂದು ಮಗನನ್ನು ಕೇಳಿದಳು. +ಮಗನು ಹೋಗಿ ಕೋಣೆಯ ಬಾಗಿಲನ್ನು ತೆಗೆದನು. +ಹೆಂಡತಿ ಪ್ರಾಣ ತೆಗೆದುಕೊಂಡು ಸತ್ತು ಬಿದ್ದಿದ್ದಳು. +ಅವನು ಮರ್ಯಾದೆವಂತಳಾದ ಹೆಂಡತಿಯನ್ನು ಸ್ಮಶಾನಕ್ಕೆ ತೆಗೆದುಕೊಂಡು ಹೋಗಿ ಕಟ್ಟಿಗೆಯನ್ನು ಕೂಡಿಸಿ ಬೆಂಕಿಹಾಕಿದನು. +ಬೆಂಕಿ ಹಿಡಿದ ಕೂಡಲೇ, “ನನ್ನ ಹೆಂಡತಿ ನನ್ನಮಾತಿಗೋಸ್ಕರವಾಗಿ ಸತ್ತ ಮೇಲೆ ನಾನು ಉಳಿಯುವುದು ಸರಿಯಲ್ಲ' ಎಂದು ತಿಳಿದು,ಅದೇ ಬೆಂಕಿಗೆ ಹಾರಿದನು. +ಇವನ ಮನೆಯ ಮುಂದಿನ ಬೆಟ್ಟದಲ್ಲಿ ಬೆಂಕಿಯೆದ್ದ ವಿಷಯವನ್ನು ನೋಡಿ ಅವನ ಸೂಳೆಯಾದ ಹೆಂಗಸು ಹೊರಗೆ ಬಂದು ನೋಡುತ್ತಾ ಇದ್ದಳು. +"ಅಲ್ಲಿ ಬೆಂಕಿ ಉರಿಯುವುದೇನು?" ಎಂದು ಕೇಳಿದಳು. +ಅಲ್ಲಿದ್ದ ತಿಳಿದ ಜನರು, “ಗಂಡ-ಹೆಂಡತಿ ಇಲ್ಲಿಯವರೆಗೆ ಸುಖದಲ್ಲಿ ಮನೆಯಲ್ಲಿದ್ದವರು ಈ ದಿವಸ ಒಂದೇ ಬೆಂಕಿಯಲ್ಲಿ ಎರಡೂ ಜನ ಬೇಯುತ್ತಾ ಇದ್ದಾರೆ” ಎಂದು ಹೇಳಿದರು. +ಈ ಮಾತನ್ನು ಕೇಳಿದವಳು,“ನನಗೆ ಹಿತವಂತನಾದವನು ಬೆಂಕಿಯಲ್ಲಿ ಹಾರಿ ಸತ್ತ ಮೇಲೆ ನಾನು ಉಳಿಯುವುದು ಒಳ್ಳೆಯದಲ್ಲವೆಂದು ಅದೇ ಬೆಂಕಿಗೆ ಹಾರಿದಳು. +ಭಿಕ್ಷೆ ಬೇಡುತ್ತಿದ್ದ ಆ ಸನ್ಯಾಸಿ ಬೇಡುತ್ತಾ ಅದೇ ಊರಿನಲ್ಲಿ ಬಂದು, "ಅದು ಎಂಥ ಬೆಂಕಿ?" +ಎಂದು ಊರಿನ ಜನರ ಹತ್ತಿರ ಕೇಳಿದನು. +“ಇಂದಿನವರೆಗೂ ಗಂಡ-ಹೆಂಡತಿ-ಸೂಳೆ ಬಹಳ ಕ್ಷೇಮದಲ್ಲಿದ್ದರು. +ಈ ದಿವಸ ಮೂರುಜನ ಈ ಬೆಂಕಿಯಲ್ಲಿ ಬೇಯುತ್ತಾ ಇದ್ದಾರೆ” ಅವರ ಮಾತನ್ನು ಕೇಳಿದ ಸನ್ಯಾಸಿಯು,“ನಾನು ಸೀರೆ ತಂದುಕೊಟ್ಟ ಆ ಹುಡುಗಿ ಸತ್ತ ಮೇಲೆ ನಾನು ಯಾಕೆ ಉಳಿಯಬೇಕು?”ಎಂದು ತಿಳಿದು ಸನ್ಯಾಸಿಯು ಅದೇ ಬೆಂಕಿಗೆ ಹಾರಿದನು. +ಒಂದೇ ಬೆಂಕಿಯಲ್ಲಿ ನಾಲ್ಕು ವಸ್ತುಗಳು ಬೇಯುವಂಥವು ಯಾವವು? +ಉತ್ತರ: ವೀಳ್ಯಕ್ಕೆ ಹಾಕುವ ಸಾಮಾನುಗಳು - ಎಲೆ, ಅಡಿಕೆ, ಹೊಗೆಸೊಪ್ಪು, ಸುಣ್ಣ. +೨೯.ಮದುವೆ ಪಣ. +ಒಂದು ಊರಿನಲ್ಲಿ ಒಬ್ಬ ಗಂಡ-ಹೆಂಡತಿ ಇದ್ದರು. +ದಿನವಹಿ ಬೆಳಗಿನಲ್ಲಿ ಮುಂಚೆ ಎದ್ದು ಹೆಂಡತಿ ಅಂಗಳದ ಕಸ ತೆಗೆಯಬೇಕಾದರೆ ಅವನು ತನ್ನ ಹೆಂಡತಿಯನ್ನು ಕರದು, “ಅಲ್ಲೇ ನಿಂತುಕೋ” ಎಂದು ಹೇಳುವುದು, ಅವನ ಹೆಂಡತಿಯ ಮೂಗುತಿಯೊಳಗೆ ದಾಟುವ ಹಾಗೆ ಗುರಿಯಿಟ್ಟು ಬಾಣ ಹೊಡೆಯುವುದು. +ಅವಳ ಮೂಗುತಿ ಜಾಲದೀರ ಹೆಂಗಸರ ಮೂಗತಿಯ ಹಾಗೆಯೇ ಸೊಂಡಲ ಮೂಗುತಿ ಅವಳಿಗೆ ಏನೂ ಗಾಯ ಮಾಡದೆ ಬಾಣ ಅವಳ ಮೂಗುತಿಯೊಳಗಿಂದು ಆರುಪಾರಾಗಿ ಹೋದ ಕೂಡಲೇ, “ನನ್ನಷ್ಟು ಪರಾಕ್ರಮಿ ಈ ಊರಲ್ಲಿ ಯಾರಿದ್ದಾರೆ?” ಎಂದು ಕೇಳುವುದು, ದಿನದಿನವೂ ಹೀಗೆಯೇ ನಡೆಯುತ್ತಿತ್ತು. +ಅವನ ಪ್ರಶ್ನೆಗೆ ಅವನ ಹೆಂಡತಿ ಏನು ಹೇಳುತ್ತಾಳೆ? +ಏನೂ ಹೇಳದೆ ಸುಮ್ಮನೆ ಸಹಿಸುತ್ತಾಳೆ. +ಆದರೆ, ಮೂಗುತಿಯೊಳಗೆ ಅಂಬನ್ನು ಹೊಡೆದಾಗ, 'ಅದು ಮುಖಕ್ಕೆ ತಾಕಿದರೆ ತಾನು ಉಳಿಯುವುದು ಹೌದೋ? +ದಿನಾ ಇದೇ ನಮೂನಿ ಪೀಡೆ ನನಗೆ' ಎಂದು ದಿನದಿನವೂ ಇದೇ ವ್ಯಥೆಯಿಂದ ಅವಳು ಜೀರಾಗಿ ಹೋದಳು. +ಆದರೂ ಅವಳ ಗಂಡನಿಗೆ ಅದರ ಬಗ್ಗೆ ಲಕ್ಷ್ಮವೇ ಇಲ್ಲ. +ಬಾಣ ಹೊಡೆದ ಮೇಲೆ ಊರಿನಲ್ಲಿ ತಿರುಗಾಟಕ್ಕೆ ನಡೆದು ಬಿಡುವುದು ಅವನ ಹವ್ಯಾಸ. +ಒಂದಿಲ್ಲೊಂದು ದಿವಸ ಅವಳ ಅಣ್ಣ ಬಂದನಂತೆ. +ಬಂದವನು, “ತಂಗೀ, ನೀನು ಏಕೆ ಜೀರಾಗಿರುವೆ? +ಬಡವಾಗಿ ಹೋಗಿದ್ದೀ” ಎಂದು ತಂಗಿಯ ಹತ್ತಿರ ಕೇಳಿದನು. +ಅವಳು ಅಣ್ಣನ ಹತ್ತಿರ ಹೇಳಿದಳು. +"ನಾನು ಪ್ರತಿದಿನವೂ ಅಂಗಳದ ಕಸ ತೆಗೆಯುವಾಗ ನನ್ನ ಮೂಗಿನ ಮೂಗುತಿಯೊಳಗೆ ಬಿಲ್ಲಿನಿಂದ ಅಂಬನ್ನು ಹೊಡೆಯುತ್ತಾರೆ. +ಹೊಡೆದುಕೊಂಡು, “ನನ್ನಷ್ಟು ಪರಾಕ್ರಮಿ ಯಾರಿದ್ದಾನೆ?"ಅಂತ ಕೇಳುತ್ತಾರೆ. +ಅದೇ ವ್ಯಥೆ ನನಗೆ ಎಂದಳು. +ಆಗ ಅವಳ ಅಣ್ಣ ಹೇಳಿದನು, "ಊರಲ್ಲಿ ನಿನಗಿಂತ ಹೆಚ್ಚಿನ ಪರಾಕ್ರಮಿ ಇರಬಹುದು ಎಂದು ಹೇಳು"ಹೀಗೆ ಹೇಳಿಕೊಟ್ಟು ಅಣ್ಣನು ಹೋದನು. +ಮರುದಿವಸ ಬೆಳಗಾಯಿತು. +ಮತ್ತೆ ಆ ದಿವಸ ಬೆಳಗು ಮುಂಚೆ ಅವಳನ್ನು ಕರೆದು ನಿಲ್ಲಿಸಿಕೊಂಡು ಅವಳ ಮೂಗುತಿಯ ಒಳ ಮೇಲಿಂದ ಬಿಲ್ಲಿನಿಂದ ಹೊಡೆದನು. +“ನನ್ನಂಥಾ ಪರಾಕ್ರಮಿ ಯಾರು?” ಎಂದು ಹೆಂಡತಿಯನ್ನು ಕೇಳಿದನು. +ಆಗ ಅವಳು ಹೇಳಿದಳು,“ಊರಲ್ಲಿ ನಿನಗಿಂತ ಹೆಚ್ಚಿನ ಪರಾಕ್ರಮಿ ಇರಬಹುದು” ಎಂದಳು. +“ಹಾಂ. . . ಇರಬಹುದೂ?” ಎಂದವನು ಮನೆಯ ಹೊರಬಿದ್ದು ನಡೆದುಬಿಟ್ಟನು. +ಹೊರಬಿದ್ದು ಹೋಗುವುದರೊಳಗೆ ಅವನಿಗೆ ಒಬ್ಬನು ಸಿಕ್ಕನು. +“ನೀನು ಎಲ್ಲಿಗೆ ಹೋಗುವವನು?” ಎಂದು ಅವನ ಹತ್ತಿರ ಕೇಳಿದನು. +ಅವನು, “ನಾನು ತಾಸಿಗೆ ಅರವತ್ತು ಗಾವುದ ನಡೆಯುವವನು. +ನನಗಿಂತ ವೇಗವಾಗಿ ನಡೆಯುವವನು ಲೋಕದಲ್ಲಿ ಇದ್ದಾನೆಯೇ? ಎಂದು ನೋಡಲಿಕ್ಕೆ ಹೊರಟಿದ್ದೇನೆ” ಎಂದನು. +“ನಾನು ನನಗಿಂತಲೂ ಹೆಚ್ಚು ಗುರಿಯನ್ನು ಹೊಡೆಯುವವರು ಇದ್ದಾರೆಯೇ ಎಂದು ನೋಡಲಿಕ್ಕೆ ಹೊರಟಿದ್ದೇನೆ. +ನಾವಿಬ್ಬರೂ ಒಟ್ಟಾಗಿ ಹೋಗೋಣ” ಎಂದು ಹೇಳಿದ ಅಂಬುಬಿಲ್ಲಿನವ. +ಇಬ್ಬರೂ ಒಟ್ಟಾಗಿ ಮುಂದೆ ಹೋದರು. +ಅವರಿಗೆ ದಾರಿಯಲ್ಲಿ ಮತ್ತೊಬ್ಬನು ಸಿಕ್ಕನು. +ಅವನು, “ನೀವು ಎಲ್ಲಿಗೆ ಹೋಗುವವರು?”ಎಂದು ಕೇಳಿದನು. +“ನಾನು ಹೀಗೆ ದೇಶಗಳನ್ನು ನೋಡಲಿಕ್ಕೆ ಹೊರಟವನು” ಎಂದುಹೇಳಿದನು. +ಅಂಬುಬಿಲ್ಲಿನವ- “ನಾನೂ ನಿಮ್ಮ ಸಂಗಡ ಬರುತ್ತೇನೆ.” + “ನಿನ್ನ ಕಸುಬೇನು? ನೀನು ಯಾರು” ಎಂದರು. +“ನನ್ನ ಕಸುಬೆಂದರೆ ಜಗತ್ತಿನಲ್ಲಿ ಎಲ್ಲಿ ಏನು ನಡೆದರೂ ಎಲ್ಲ ಆಗುಹೋಗುಗಳನ್ನು ದುರ್ಬೀನಿನಲ್ಲಿ ನೋಡಿ ಅದನ್ನು ಹೇಳುತ್ತೇನೆ. +ಹಾಗಾದರೆ, ನಾವು ಮೂರು ಜನರು ಒಟ್ಟಾಗಿ ಹೋಗೋಣ” ಎಂದು ಹೇಳಿಕೊಂಡು ಮೂರು ಜನರೂ ಒಟ್ಟಾಗಿ ಹೋದರು. +ಅಲ್ಲಿ ಒಂದು ಊರಿನಲ್ಲಿ ಒಬ್ಬ ಅರಸನ ಹುಡುಗಿ ಪಣ ಇಟ್ಟುಕೊಂಡು ಒಂದು ಬೋರ್ಡನ್ನು ಹಚ್ಚಿ ಇಟ್ಟಿದ್ದಳು. +“ಕೆಂದಾಳಿ ಹೂವನ್ನು ತಂದುಕೊಟ್ಟವನನ್ನೇ ನಾನು ಮದುವೆಯಾಗುತ್ತೇನೆ” ಅಂತ. +ಇವರು ಆ ಬೋರ್ಡನ್ನು ನೋಡಿದರು. +ದುರ್ಬೀನಿನವನು ದುರ್ಬೀನನ್ನು ಹಚ್ಚೆ ನೋಡಿದನು. +ಆಗ ಅವನಿಗೆ ಒಂದು ಕೆಂದಾಳಿ ಹೂವು ಕಾಣಿಸಿತು. +ಆಗ, “ಈ ಕೆಂದಾಳಿ ಹೂವು ಇಂಥಾ ಕಡೆ ಉಂಟು” ಎಂದು ತಾಸಿಗೆ ಅರವತ್ತು ಗಾವುದ ನಡೆಯುವವನ ಹತ್ತಿರ ಹೇಳಿದನು. +ಅವನು ದಾಪುಗಾಲು ಹಾಕಿಕೊಂಡು ಹೂವನ್ನು ತರಲಿಕ್ಕೆ ಹೋದನು. +ಅದನ್ನು ತೆಗೆದುಕೊಂಡು ತಿರುಗಿ ಬಂದವನು ಬಿಸಿಲಿನಲ್ಲಿ ಬಂದವನಾದ್ದರಿಂದ ಬಹಳ ದಣಿದು ಕಟ್ಟೆಯ ಮೇಲೆ ಹೋಗಿ ಮಲಗಿದನು. +ಅವನಿಗೆ ಬಹಳ ಸಾಕಾಗಿದ್ದರಿಂದ ಅಲ್ಲೇ ನಿದ್ರೆ ಬಿದ್ದು ಹೋಯಿತು. +ಆಗ, ಅವನು ಎದ್ದ ಕೂಡಲೆ ಹೊಡೆಯಬೇಕು ಎಂದು ಎಪ್ಪತ್ತು ಹೆಡೆಗಳ ಮಹಾಶೇಷನು ಹೆಡೆಯನ್ನು ಬಿಡಿಸಿಕೊಂಡು ನಿಂತಿತ್ತು. +ಆಗ ಅದನ್ನು ದುರ್ಬೀನಿನಲ್ಲಿ ಕಂಡು, ಅಂಬುಬಿಲ್ಲಿನವನ ಹತ್ತಿರ ಹೇಳಿದನು. + “ಓ. . . ಇಷ್ಟು ದೂರದಲ್ಲಿ ತಾಸಿಗೆ ಅರವತ್ತು ಗಾವುದ ನಡೆವವ ಮಲಗಿದ್ದಾನೆ. +ಅವನನ್ನು ಹೊಡೆಯಲಿಕ್ಕೆ ಎಪ್ಪತ್ತುಹೆಡೆಗಳ ಮಹಾಶೇಷ ಹೆಡೆಗಳನ್ನು ಬಿಡಿಸಿಕೊಂಡು ನಿಂತಿದೆ. +ಅವಕ್ಕೆ ಬಾಣ ಹೊಡೆದು ಅದನ್ನು ಕೊಲ್ಲು.” +ಅಂಬುಬಿಲ್ಲಿನವನು ಅದಕ್ಕೆ ಗುರಿಯಿಟ್ಟು ಬಾಣ ಹೊಡೆದನು. +ಮಹಾಶೇಷನು ಚೂರಾಗಿ ಅಲ್ಲಿ ರಾಸಿಬಿದ್ದು ಸತ್ತುಹೋಯಿತು. +ಆಗ ಅದು ಬಿದ್ದ ಹೊಡೆತಕ್ಕೆ ಎಚ್ಚರಾಗಿ ಅರವತ್ತು ಗಾವುದದವನು ಎದ್ದು ನಡೆದು ಹೂವನ್ನು ತೆಗೆದುಕೊಂಡು ಬಂದನು. +ಮೂರುಜನರು ಒಟ್ಟಾಗಿ ಅರಸನ ಮನೆಗೆ ಹೋದರು. +ಅರಸನ ಹುಡುಗಿಗೆ ಆ ಹೂವನ್ನು ಕೊಟ್ಟರು. +ಅರಸನು ಹುಡುಗಿಯ ಲಗ್ನಕ್ಕೆ ತಯಾರಿ ಮಾಡಿದನು. +ಆಗ ತಾಸಿಗೆ ಅರವತ್ತು ಗಾವುದ ನಡೆಯುವವನು ಹೂವನ್ನು ತಂದುಕೊಟ್ಟಿದ್ದನಲ್ಲ ಅರಸನು ಅವನಿಗೆ ತನ್ನ ಹುಡುಗಿಯನ್ನು ಲಗ್ನವಾಗಬೇಕೆಂದು ಹೇಳಿದನು. +ಆಗಅವನು, 'ಅದು ಹಾಗಾಗಲಾರದು'. +ದುರ್ಬೀನಿನವನು ನೋಡಿ, 'ನನ್ನನ್ನು ಮಹಾಶೇಷ ಕೊಲ್ಲುವುದರಲ್ಲಿತ್ತು' ಎಂದು ಹೇಳಿ, ನನ್ನನ್ನು ಪಾರು ಮಾಡಲು ಸಹಾಯ ಮಾಡಿದನು. +ಅವನಿಲ್ಲವಾದರೆ ಆ ಕೆಂದಾಳಿ ಹೂವು ಎಲ್ಲಿದೆ ಎಂಬುದೇ ನನಗೆ ತಿಳಿಯುತ್ತಿರಲಿಲ್ಲ”ಎಂದನು. + ಆಗ ದುರ್ಬೀನಿನವನು - "ನಾನು ಹೇಗೆ ಲಗ್ನವಾಗಬೇಕು, ಅವನು ತಾಸಿಗೆ ಅರವತ್ತು ಗಾವುದ ನಡೆದು ತರಲಿಲ್ಲಾಂದರೆ ನಾನು ಹೇಗೆ ಅದನ್ನು ತರುತ್ತಿದ್ದೆನು? +ಅವನೇ ಅವಳನ್ನು ಲಗ್ನವಾಗಬೇಕು"ಎಂದನು. +ಅವರವರೊಳಗೆ ತರ್ಕ ಬಿತ್ತು. +ಅರವತ್ತು ಗಾವುದ ಹೋದವನು ಹೇಳಿದನು, “ನಾನು ಕಟ್ಟೆಯ ಮೇಲೆ ನಿದ್ದೆ ಮಾಡುತ್ತಿದ್ದಾಗ ಮಹಾಶೇಷನನ್ನನ್ನು ಕೊಲ್ಲಲಿಕ್ಕೆ ಬಂದಾಗ ಈ ಅಂಬುಬಿಲ್ಲಿನವನು ಬಾಣ ಹೊಡೆದು ಅದನ್ನು ಕೊಂದನು. +ಅವನಿಲ್ಲವಾದರೆ ನಾನು ಸತ್ತುಹೋಗುತ್ತಿದ್ದೆನು” ಎಂದನು. +ಅರಸನು ಅಂಬುಬಿಲ್ಲಿನವನ ಹತ್ತಿರ, “ಲಗ್ನವಾಗು” ಎಂದು ಹೇಳಿದನು. +ಅವನು,“ಹಾಗಾಗುವುದಿಲ್ಲ, ಮಹಾಶೇಷನು ಅವನನ್ನು ಹೊಡೆಯಲಿಕ್ಕೆ ಅನುಕೂಲವಾಗಿ ನಿಂತಿತ್ತಲ್ಲವೋ? ದುರ್ಬೀನಿನವನು ಅದನ್ನು ನೋಡಿಕೊಂಡು 'ಇಂತ ಕಡೆಯಲ್ಲಿ ಮಹಾಶೇಷನು ಅವನನ್ನು ಹೊಡೆಯಲಿಕ್ಕೆ ಅನುಕೂಲವಾಗಿ ನಿಂತಿದೆ, ಅದಕ್ಕೆ ಅಂಬನ್ನು ಹೊಡೆ' ಎಂದು ನನ್ನ ಹತ್ತಿರ ಹೇಳಿದ್ದರಿಂದಲೇ ನಾನು ಮಹಾಶೇಷನನ್ನು ಹೊಡೆದೆನು. +ಆದ್ದರಿಂದ ದುರ್ಬೀನಿನವನಿಗೆ ಅವಳನ್ನು ಕೊಡಬೇಕು” ಎಂದು ಹೇಳಿದನು. +ಆಗ ಅರಸನು, “ನಿಮ್ಮನಿಮ್ಮೊಳಗೆ ಇದೇನು ತರ್ಕ? + ನೀವು. ಯಾಕೆ ಮದುವೆಯಾಗುವುದಿಲ್ಲವೆಂದು ಹೇಳುತ್ತೀರಿ? +ಮೊದಲು ನಿಮ್ಮ ಹರಿಕತೆ ಏನಾಯಿತು? +ಒಬ್ಬರೂ ನನಗೆ ಬೇಡ; +ತನಗೆ ಬೇಡ ಎಂದು ಹೇಳಲಿಕ್ಕೆ ಕಾರಣವೇನು?” ಎಂದುಕೇಳಿದನು. +ಆಗ ಇವರು ಹೇಳಿದರು. +ಅಂಬುಬಿಲ್ಲಿನವನು, “ಪ್ರತಿದಿನವೂ ನಾನು ನನ್ನ ಹೆಂಡತಿಯ ಮೂಗಿನ ಮೂಗುತಿಯೊಳಗೆ ಅಂಬನ್ನು ಹೊಡೆಯುತ್ತಿದ್ದೆನು. +ಹಾಗೆ ಹೊಡೆದುಕೊಂಡು, ನನಗಿಂತ ಪರಾಕ್ರಮಿ ಯಾರು?" ಎಂದು ಕೇಳುತ್ತಿದ್ದೆನು. +ಆಗ ಅವಳು ಇದೇ ಹೆದರಿಕೆಯ ವ್ಯಥೆಯಲ್ಲಿ ಸಾಯಲಿಕ್ಕಾದಳು. +ಅವಳ ಅಣ್ಣನು ಒಂದು ದಿನ ನಮ್ಮ ಮನೆಗೆ ಬಂದಿದ್ದನು. +ಆಗ ತಂಗಿಯ ಹತ್ತಿರ ಹೇಳಿದನು. +'ನೀನು ಯಾಕೆ ಜೀರಾದೆ?' ಅವಳು ಆಕೆಯ ಕಥೆಯನ್ನು ಹೇಳಿದಳು. +"ಅವನು ನಿನಗಿಂತಲೂ ಹೆಚ್ಚಿನವರು ಇರಬಹುದು" ಎಂದುಹೇಳು ಎಂದು ಹೇಳಿಕೊಟ್ಟು ಹೋದನು. +ಮರುದಿನ ಅವಳು ನಾನು ಕೇಳಿದ್ದಕ್ಕೆ ಅಣ್ಣ ಹೇಳಿಕೊಟ್ಟ ಹಾಗೆಯೇ ಹೇಳಿದಳು. +ಆಗ ನಾನು ನನಗಿಂತ ಹೆಚ್ಚಿನವರು ಇದ್ದಾರೆಯೋ ಎಂದು ನೋಡಲಿಕ್ಕಾಗಿ ಹೊರಟು ಬಂದೆನು. +ಇವರು ಇಬ್ಬರೂ ದಾರಿಯಲ್ಲಿ ನನಗೆ ಸಿಕ್ಕರು,ನಾವು ಮೂರು ಜನರೂ ಸೇರಿಕೊಂಡಿದ್ದರಿಂದಲೇ ಆ ಹೂವನ್ನು ತೆಗೆದುಕೊಂಡು ಬಂದದ್ದು”ಎಂದು ಹೇಳಿದನು. +ಅರಸನು- “ನೀವು ಮೂರು ಮಂದಿಯಲ್ಲಿ ಯಾರನ್ನೂ ಅವಳು ಲಗ್ನವಾಗುವುದಿಲ್ಲ. +ಅಂಬುಬಿಲ್ಲಿನವನ ಭಾವನಿಗೇ ಅವಳನ್ನು ಲಗ್ನ ಮಾಡುತ್ತೇನೆ” ಎಂದು ಹೇಳಿ, ಅವನ ಭಾವನನ್ನು ಕರೆಸಿ ಅವನಿಗೆ ತನ್ನ ಮಗಳನ್ನು ಲಗ್ನ ಮಾಡಿಕೊಟ್ಟನು. +ಅರಸನು ಇಂಥವನಿಗೆ ತನ್ನ ಮಗಳನ್ನು ಲಗ್ನ ಮಾಡಿಕೊಟ್ಟನೆಂಬುದನ್ನು ಹೇಳದೆ ಕಥೆ ಹೇಳಿದ ಹೆಗಡೆ ಊರಿನ ಶ್ರೀ ರಾಮ ನಾಯ್ಕರು ಈ ಸಂಗ್ರಾಹಕನಿಗೆ ಲಗ್ನ ಮಾಡುವುದು ಯಾರಿಗೆ?ಎಂದು ಹೇಳಿ ಪ್ರಶ್ನೆಯನ್ನಿಟ್ಟರು. +ಅದನ್ನು ಹೇಳಲು ಸಾಧ್ಯವಾಗದಿದ್ದಾಗ ಹಿಂದಿನ ಘಟನೆಯನ್ನು ಹೀಗೆ ಹೇಳಿದರು. +ಹೆಗಡೆ ಊರಿನ ಗೇರಕಾರ ಮನೆಯ ಬೈರನಾಯ್ಕ ಎಂಬುವರು ಶ್ರೀರಾಮ ನಾಯ್ಕರಿಗೆ ಕಥೆಯನ್ನು ಹೇಳಿದ್ದರು. +ಅವರು ಈ ಕಥೆಯಲ್ಲಿ ಯಾರಿಗೆ ಲಗ್ನವಾಗುವುದೆಂಬ ಕುರಿತು ಪಣವನ್ನು ಇಟ್ಟರು. +'ಸರಿಯಾದ ಉತ್ತರ ಹೇಳಿದವರಿಗೆ, ಐದಾರು ತೆಂಗಿನಕಾಯಿಗಳನ್ನು ತಾನು ಕೊಡುತ್ತೇನೆ' ಎಂದೂ, 'ಹೇಳಲಾಗದವರು ತನಗೆ ಒಬ್ಬೊಬ್ಬರೂ ಅಷ್ಟೇ ತೆಂಗಿನಕಾಯಿಗಳನ್ನು ಕೊಡಬೇಕೆಂದೂ 'ಪಣವನ್ನು ಕಟ್ಟಿದರು. +ಮೂವತ್ತು, ನಲವತ್ತು ಜನರ ಹತ್ತಿರ ಸಹ ಉತ್ತರವನ್ನು ಹೇಳಲಿಕ್ಕೆ ಆಗಲಿಲ್ಲ. +ಅವರು ಮಾಡಿದ ಕರಾರಿನಂತೆ ಅವರಿಗೆ ತೆಂಗಿನಕಾಯಿಗಳನ್ನು ಕೊಟ್ಟರು. +ಅದರ ಉತ್ತರವನ್ನು ದಿ.ಬೈರನಾಯ್ಕರು ಶ್ರೀ ರಾಮ ನಾಯ್ಕರಿಗೆ ಮಾತ್ರ ಹೇಳಿದ್ದರು. +ಅರಸನು, "ಅಂಬುಬಿಲ್ಲಿನ ಭಾವನಿಗೆ ಲಗ್ನ ಮಾಡಿಕೊಡುತ್ತೇನೆ" ಎಂದು ಹೇಳಿ ಅವನಿಗೆ ಹುಡುಗಿಯನ್ನು ಲಗ್ನ ಮಾಡಿಕೊಟ್ಟನು” ಎಂದು ತಿಳಿಸಿದ್ದರು. +ಈ ಸಮಸ್ಯಾತ್ಮಕ ಕಥೆಯ ವಿವರಣೆ ಏನು? +ಈ ಸಂಗ್ರಾಹಕನ ತರ್ಕ ಹೀಗಿದೆ:ಅಂಬುಬಿಲ್ಲಿನವನ ಹೆಂಡತಿಯ ಅಣ್ಣನು ಬಂದು ಅವಳಿಗೆ, 'ಊರಿನಲ್ಲಿ ನಿನಗಿಂತ ಹೆಚ್ಚಿನ ಪರಾಕ್ರಮಿ ಇರಬಹುದು' ಎಂದು ಹೇಳಲು ತಿಳಿಸಿದರು. +ಅಂಬುಬಿಲ್ಲಿನವನು ತನಗಿಂತ ಹೆಚ್ಚಿನವರನ್ನು ಶೋಧಿಸಲಿಕ್ಕಾಗಿ ದೇಶ ಸಂಚಾರವನ್ನು ಕೈಗೊಂಡನು. +ಆಗ ಅವನಿಗೆ ಉಳಿದಿಬ್ಬರು ಭೇಟಿಯಾದರು. +ಅವನು ಹೊರಟು ಮತ್ತಿಬ್ಬರನ್ನು ಸೇರಿಕೊಂಡು ಹೊರಟಿದ್ದರಿಂದಲೇ ಆ ರಾಜಕುಮಾರಿಯ ಪಣವನ್ನು ಗೆಲ್ಲಲು ಸಾಧ್ಯವಾಯಿತು. +ಇದಕ್ಕೆಲ್ಲಾ ಮೂಲಕಾರಣ ಅಂಬುಬಿಲ್ಲಿನವನ ಭಾವನ ಬುದ್ದಿವಂತಿಕೆ. +ಆದ್ದರಿಂದಲೇ ಕೆಂದಾಳಿ ಹೂವನ್ನು ತಂದ ಶ್ರೇಯಸ್ಸು ಅವನಿಗೆ ಸಲ್ಲುವುದಾಯಿತು. +ಆದ್ದರಿಂದ ಅರಸನು ಮಗಳನ್ನು ಅವನಿಗೆ ಮದುವೆ ಮಾಡಿಕೊಟ್ಟನು. +೩೦.ಮಹಾಶೇಷ. +ಒಂದಲ್ಲ ಒಂದು ಊರಿನಲ್ಲಿ ಒಬ್ಬ ಅರಸನಿಗೆ ಏಳು ಜನ ಗಂಡು ಮಕ್ಕಳಿದ್ದರು. +ಇನ್ನೊಂದು ಊರಿನ ಅರಸನಿಗೆ ಏಳು ಜನ ಹೆಣ್ಣುಮಕ್ಕಳಿದ್ದರು. +ಗಂಡು ಮಕ್ಕಳಿದ್ದ ಅರಸನು, 'ತನ್ನ ಗಂಡುಮಕ್ಕಳಿಗೆಲ್ಲ ಒಬ್ಬಳೇ ತಾಯಿಗೆ ಹುಟ್ಟಿದ ಹೆಣ್ಣುಮಕ್ಕಳನ್ನೆಲ್ಲ ಹುಡುಕಿ ಮದುವೆ ಮಾಡಿಕೊಂಡು ಬರಬೇಕು' ಎಂದು ಎಲ್ಲಾ ಕಡೆ ಹೆಣ್ಣುಗಳನ್ನು ಹುಡುಕಿದನು. +ಆಗ ಅವನಿಗೆ ಈ ಅರಸನ ಏಳು ಜನ ಹೆಣ್ಣುಮಕ್ಕಳ ವಿಷಯ ಗೊತ್ತಾಯಿತು. +ರಾಜನು ಆ ಊರಿಗೆ ಹೋಗಿ ಅಲ್ಲಿಯ ಅರಸನನ್ನು ಕಂಡನು. +“ನಮ್ಮ ಮನೆಯಲ್ಲಿ ನನಗೆ ಏಳು ಜನ ಗಂಡು ಮಕ್ಕಳಿದ್ದಾರೆ. +ನಿಮ್ಮ ಮನೆಯಲ್ಲಿ ಏಳು ಜನ ಹುಡುಗಿಯರು ನಿಮಗೆ ಉಂಟು, ನಮ್ಮ ಹುಡುಗರೂ ಒಬ್ಬ ತಾಯಿಯ ಮಕ್ಕಳು- ನಿಮ್ಮ ಹೆಣ್ಣುಮಕ್ಕಳೂ ಒಬ್ಬ ತಾಯಿಯ ಮಕ್ಕಳೇ. +ಅವರನ್ನು ನಮ್ಮ ಹುಡುಗರಿಗೆ ಮದುವೆ ಮಾಡಿಕೊಡಬೇಕು”ಎಂದನು. +ಆಗ ಅಲ್ಲಿಯ ರಾಜನು ಅದಕ್ಕೆ ಒಪ್ಪಿದನು. +ಲಗ್ನವನ್ನು ನಿಶ್ಚಯ ಮಾಡಿ ಎಲ್ಲರ ಮದುವೆಯನ್ನು ಮಾಡಿದರು. +ಹಿರಿಯ ಹುಡುಗನಿಗೆ ಈ ರಾಜನ ಹಿರಿ ಹುಡುಗಿಯನ್ನು ಕೊಟ್ಟರು. +ಕಿರಿಯವನಿಗೆ ಕಿರಿಹುಡುಗಿಯನ್ನು ಕೊಟ್ಟರು. +ಅವರೆಲ್ಲರೂ ಹುಡುಗಿಯರನ್ನು ಮದುವೆ ಮಾಡಿಕೊಂಡು ಬಂದರು. +ದೊಡ್ಡದಾದ ಹುಡುಗಿಯರು ಮನೆಯಲ್ಲಿ ಕೆಲಸ ಮಾಡುತ್ತಿದ್ದರು. +ಆ ಕಿರಿಹುಡುಗಿ ಬಹಳ ಸಣ್ಣವಳು,ಅವಳಿಗೆ ಏನೂ ಕೆಲಸ ಬರುತ್ತಿರಲಿಲ್ಲ. +ಹಾಕಿದರೆ ಇಷ್ಟು ಉಣ್ಣುವುದು, ಆಡಿಕೊಳ್ಳುತ್ತಾ ಉಳಿಯುವುದು. +ಅಕ್ಕಂದಿರು ಅವಳಿಗೆ ಸೀರೆಯನ್ನೂ ಸೆಳೆ(ತೊಳೆ)ದು ಕೊಡುವುದಿಲ್ಲ. +ಒಂದು ಹೊತ್ತು ಇಷ್ಟು ಗಂಜಿ ಹಾಕಿದರೂ ಉಂಡುಕೊಂಡು ಉಳಿಯುತ್ತಿದ್ದಳು. +ಒಂದು ದಿನ ಅವಳಿಗೆ ಬಹಳ ಆಸ್ರ (ನೀರಡಿಕೆ) ಆಗಿತ್ತು. +ದನಗಳಿಗೆ ಅಕ್ಕಚ್ಚು ಹಾಕಿದ ಮರಿಗೆಯಿಂದ ಒಂದು ತೆಂಗಿನ ಗರಟೆ(ಪರಟೆ)ಯಿಂದ ಅಕ್ಕಚ್ಚನ್ನು ತೆಗೆದುಕೊಂಡು ಕುಡಿದಳು. +ಅವಳು ಅದನ್ನು ಕುಡಿಯುವಾಗ ಅವಳ ಗಂಡನು ಸಾಲೆಯಿಂದ ತಿರುಗಿ ಬರುತ್ತಿದ್ದವನು ಅದನ್ನು ನೋಡಿಬಿಟ್ಟನು. +“ಇನ್ನು ಯಾರೂ ಇವಳ ವಾಗಾತಿ (ಯೋಗಕ್ಷೇಮವನ್ನು) ನೋಡುವುದಿಲ್ಲ. +ನನಗೆ ಊರು ಬೇಡ; +ದೇಶವೂ ಬೇಡ, ಮನೆಯೇ ಬೇಡ, ಹೀಗೆ ಇವಳು ಮಾಡುವಾಗ ನನಗೆ ಅದನ್ನು ನೋಡಲಿಕ್ಕೆ ಆಗುವುದಿಲ್ಲ” ಎಂದು ಹೇಳಿ ಕುದುರೆಯ ಸಾಲಿಗೆ ಹೋದನು. +ಅಲ್ಲಿ ಒಂದು ಕುದುರೆಯನ್ನು ಕಟ್ಟಿದ ಜಾಗದಿಂದ ಬಿಡಿಸಿಕೊಂಡು ಅದನ್ನು ಹತ್ತಿ ನಡೆದುಬಿಟ್ಟನು. +ಅವಳ ಗಂಡನು ಊರು ಬಿಟ್ಟು ಹೊರಟುಹೋದದ್ದನ್ನು ನೆರೆಮನೆಯ ಅಜ್ಜಿ ನೋಡಿದಳು. +ಅವಳು ಅವನ ಹೆಂಡತಿಯ ಹತ್ತಿರ ಬಂದಳು. +ಆ ಹುಡುಗಿ ಮಣ್ಣಿನಲ್ಲಿ ಆಟವಾಡುತ್ತಿದ್ದಳು. +“ನಿನ್ನ ಗಂಡ ಊರು ಬಿಟ್ಟುಹೋಗುತ್ತಿದ್ದಾನೆ, ನಿನಗೆ ಇಲ್ಲಿ ಹೊತ್ತಿಗೆ ಸರಿಯಾಗಿ ಯಾರು ಊಟ ಹಾಕುವುದಿಲ್ಲ, ಗಂಡನ ಬೆನ್ನಿಗೆ ಹೊರಟು ನಡೆದುಬಿಡು”ಎಂದು ಹೇಳಿದಳು. +ಅದನ್ನು ಕೇಳಿದ ಕೂಡಲೆ ತಾನು ಹಿಡಿದಿದ್ದ ಗರಟೆಯನ್ನು ತೆಗೆದು ಬಿಸಾಡಿದವಳು ಗಂಡನ ಹಿಂದಿಂದೆ ಓಡಿಹೋದಳು. +ಅವನು ಮುಂದೆ ಹೋದನು. +ಅವಳು ಅವನ ಹಿಂದಿನಿಂದಲೇ ಹೋದಳು. +ಅವನು ಅವಳನ್ನು ಕಾಣದಿದ್ದರೂ ಅವಳು ಓಡಿಬರುವ ಶಬ್ಧವನ್ನು ಕೇಳಿ, ಹಿಂದೆ ತಿರುಗಿ ತಿರುಗಿ ನೋಡಿದನು. +ನೋಡಿ, “ಇವಳು ಯಾಕೆ ಬಂದಳಪ್ಪ? +ಈ ಅಡವಿಯಲ್ಲಿ ಇವಳನ್ನು ಬಿಟ್ಟು ನಾನು ಹೇಗೆ ಹೋಗಲಿ? +ಬಿಟ್ಟುಹೋಗಲಾರೆನು,ಕರೆದುಕೊಂಡು ಹೋಗಲಾರೆನು” ಎಂದು ಹಗುರದಲ್ಲೇ ಕುದುರೆಯನ್ನು ಬಿಟ್ಟುಕೊಂಡು ಹೋದನು. +ಹೆಂಡತಿ ಸಣ್ಣ ಸೀರೆಯನ್ನು ಮಾತ್ರ ಉಟ್ಟುಕೊಂಡು ಬಂದದ್ದನ್ನು ನೋಡಿದವನು, ಅಲ್ಲಿ ಒಬ್ಬ ಸಾಹೇಬರವನು (ಮುಸಲ್ಮಾನ) ಜವಳಿಯನ್ನು ಹೊತ್ತುಕೊಂಡು ಹೋಗುವುದನ್ನು ನೋಡಿದನು. +“ಸಾಹೇಬರೇ, ಅಲ್ಲೊಬ್ಬ ಹುಡುಗಿ ಬರುತ್ತಿದ್ದಾಳೆ. +ಅವಳಿಗೆ ಒಂದು ಒಳ್ಳೆಯ ಸೀರೆಯನ್ನೂ, ಕಣವನ್ನೂ ಕೊಡಿರಪ್ಪ ನಾನು ಹಣ ಕೊಡುತ್ತೇನೆ” ಎಂದು ಹೇಳಿ ಹಣವನ್ನು ಕೊಟ್ಟನು. +ಜವಳಿ ಸಾಹೇಬನು ಅವಳಿಗೆ ಒಂದು ಸೀರೆಯನ್ನೂ, ಕಣವನ್ನು ಕೊಟ್ಟು ಮುಂದೆ ಹೋದನು. +ಹುಡುಗಿಯು ಸೀರೆಯನ್ನು ಮೊಟ್ಟೆ ಕಟ್ಟಿಕೊಂಡು ಮುಂದೆ ಹೋದಳು. +ಮುಂದೆ ದಾರಿಯಲ್ಲಿ ಒಬ್ಬ ಸೊನಗಾರನು ಚಿನ್ನವನ್ನು ಮಾಡಿಕೊಂಡು ಕೂತಿದ್ದನು. +ಆಗ, “ನಿನ್ನ ಕೈಯಲ್ಲಿ ಯಾವ ಯಾವ ಚಿನ್ನದ ಸಾಮಾನುಗಳಿವೆ? +ಒಂದು ಬುಗಡಿಯ ಜೋಡನ್ನು,ಕುಡುಕಿನ ಜೋಡಿಯನ್ನು ಆ ಹುಡುಗಿಗೆ ಕೊಡು. +ಅದಕ್ಕೆ ಸಲ್ಲುವ ಹಣವನ್ನು ನಾನು ಕೊಡುತ್ತೇನೆ” ಎಂದು ಹೇಳಿ ಹಣವನ್ನು ಕೊಟ್ಟನು. +ಹುಡುಗಿ ಸೊನಗಾರನು ಕೊಟ್ಟ ಚಿನ್ನವನ್ನು ತೆಗೆದುಕೊಂಡು ಸೀರೆಯಲ್ಲಿ ಮುಡುಗಿಸಿಕೊಂಡು ಗಂಡನ ಬೆನ್ನಿಗೆ ಹೋದಳು. +ಬೆಂಡಿನ ದಂಡೆಗಳನ್ನು ಮಾಡಿಕೊಂಡು ಒಬ್ಬ ಗುಡಿಗಾರನು ಮುಂದೆ ಹೋಗುತ್ತಿದ್ದನು. +“ಗುಡಿಗಾರ, ಅಲ್ಲಿ ಒಬ್ಬ ಹುಡುಗಿ ಬರುತ್ತಿದ್ದಾಳೆ. +ಅವಳಿಗೆ ಒಂದು ಬೆಂಡಿನ ದಂಡೆಯನ್ನು ಕೊಡು. +ಅದಕ್ಕೆ ಎಷ್ಟು ಹಣವಾಗುತ್ತದೆಯೋ ಅದನ್ನು ನಾನು ಕೊಡುತ್ತೇನೆ” ಎಂದು ಹೇಳಿದನು. +ಗುಡಿಗಾರನು ಅವಳಿಗೆ ಬೆಂಡಿನ ದಂಡೆಯನ್ನು ಕೊಟ್ಟನು. +ಅದಕ್ಕೆ ಸಲ್ಲುವ ಹಣವನ್ನು ಇವನು ಅವನಿಗೆ ಕೊಟ್ಟನು. +ಆ ಹುಡುಗಿ ಅದನ್ನು ತೆಗೆದುಕೊಂಡು ಮುಂದೆ ಹೋದಳು. +ಅಲ್ಲೊಬ್ಬ ಹೆಂಗಸು ಚೊಬ್ಬೆ(ಬುಟ್ಟಿ)ಯನ್ನು ತೆಗೆದುಕೊಂಡು ಹೂಗಳ ದಂಡೆಯನ್ನು ತೆಗೆದುಕೊಂಡು ಬರುತ್ತಿದ್ದಳು. +ಅವನು, “ಹೂ ಮಾರುವವಳೇ, ಅಲ್ಲಿ ಒಬ್ಬ ಹುಡುಗಿ ಬರುತ್ತಿದ್ದಾಳೆ. +ಅವಳಿಗೆ ಒಂದು ಹೂದಂಡೆಯನ್ನು ಕೊಡು. +ಅದಕ್ಕೆ ಸಲುವ ಹಣವನ್ನು ನಾನು ಕೊಡುತ್ತೇನೆ” ಎಂದು ಹೇಳಿ ಹಣವನ್ನು ಕೊಟ್ಟನು. +ಅಷ್ಟರಲ್ಲಿ ಅವನು ಊರಿನ ಸಮೀಪಕ್ಕೆ ಹೋಗಿ ಮುಟ್ಟಿದನು. +ಮುಂದೆ ಒಬ್ಬ ಹಣಿಗೆ ಮಾರುವವನು ಹಣಿಗೆಗಳನ್ನು ತೆಗೆದುಕೊಂಡು ಬರುತ್ತಿದ್ದನು. +"ಆ ಹುಡುಗಿಗೆ ಒಂದು ಹಣಿಗೆಯನ್ನು ಕೊಡು” ಎಂದು ಹೇಳಿ, ಅದಕ್ಕೆ ಸಲುವ ಹಣವನ್ನು ಕೊಟ್ಟನು. +ಅಲ್ಲೊಬ್ಬ ಗಾಣಿಗನು ಎಣ್ಣೆ ಕೊಡವನ್ನು ಹೊತ್ತುಕೊಂಡು ಹೋಗುತ್ತಿದ್ದನು. +“ಗಾಣಿಗರವನೇ. . . ಹಿಂದೆ ಬರುವ ಹುಡುಗಿಗೆ ಒಂದು ತಟ್ಟೆಯಲ್ಲಿ ಎಣ್ಣೆಯನ್ನು ಕೊಡು. +ಅದಕ್ಕೆ ಎಷ್ಟು ಹಣ ಆಗುತ್ತದೆಯೋ ಅದನ್ನು ನಾನು ಕೊಡುತ್ತೇನೆ” ಎಂದು ಹೇಳಿ ಹಣವನ್ನು ಕೊಟ್ಟನು. +ಗಾಣಿಗನು ಒಂದು ತಟ್ಟೆ ಎಣ್ಣೆಯನ್ನು ಅವಳಿಗೆ ಕೊಟ್ಟನು. +ಅವನು ಎಣ್ಣೆಯನ್ನು ಕೊಟ್ಟ ಕೂಡಲೇ ಮಂಡೆಗೆ ಎಣ್ಣೆಯನ್ನು ಹಾಕಿಕೊಂಡಳು. +ಅವಳನ್ನು ಕರೆದುಕೊಂಡು ಮುಂದೆ ಹೋಗುವುದರೊಳಗೆ ಒಂದು ಅಸ್ವಂತೆಳ್ಳಿ(ಅಶ್ವತ್ಥಮರ) ಕಟ್ಟೆ ಸಿಕ್ಕಿತು. +ಕುದುರೆಯಿಂದಿಳಿದು ಅಶ್ವತ್ಥ ಮರದ ಬೇರಿಗೆ ಕುದುರೆಯನ್ನುಕಟ್ಟಿ, ತನ್ನ ಹೆಂಡತಿಯ ಹತ್ತಿರ, “ಕೆರೆಗೆ ಹೋಗಿ ಮಿಂದುಕೊಂಡು ಬಾ, ಮೈಯೆಲ್ಲ ಮಣ್ಣಾಗಿದೆ, ಮಿಂದು ಬಂದು ಆ ಹೊಸ ಸೀರೆ ಉಟ್ಟುಕೋ; +ಹೊಸ ಕಣವನ್ನು ತೊಟ್ಟುಕೋ”ಎಂದು ಹೇಳಿದನು. +ಅವಳು ಕೆರೆಗೆ ಹೋಗಿ ಮಿಂದುಕೊಂಡು ಬಂದಳು. +ಬಂದು ಹೊಸ ಸೀರೆಯನ್ನುಉಟ್ಟಳು. +ಹೊಸ ಕಣವನ್ನು ತೊಟ್ಟಳು. +ಬಾಚಣಿಗೆಯಲ್ಲಿ ಮಂಡೆಯನ್ನು ಬಾಚಿಕಟ್ಟಿಕೊಂಡಳು. +ಕಿವಿಗೆ ಬುಗಡಿಯನ್ನು ಹಾಕಿಕೊಂಡಳು. +ಕುಡುಕನ್ನು ತೊಟ್ಟುಕೊಂಡಳು. +ಬೆಂಡಿನ ದಂಡೆಯನ್ನು, ಹೂವಿನ ದಂಡೆಯನ್ನು ಮುಡಿದುಕೊಂಡಳು. +"ಅಡುಗೆ ಮಾಡಿಕೊಂಡು ಇನ್ನು ಊಟ ಮಾಡಬೇಕಾಯ್ತು" ಎಂದು ಒಂದು ಬಾಡಿಗೆ ಮನೆಯನ್ನು ತೆಗೆದುಕೊಂಡನು. +ಪೇಟೆಗೆ ಹೋಗಿ ಪಾತ್ರೆ-ಗೀತ್ರೆ ಎಲ್ಲಾ ತೆಗೆದುಕೊಂಡು ಬಂದನು. +ಅಕ್ಕಿ, ಬೇಳೆ,ಬೆಲ್ಲ, ಅಡುಗೆ ಮಾಡಿ ಉಣ್ಣಲಿಕ್ಕೆ ಏನು ಬೇಕೋ ಅದೆಲ್ಲವನ್ನೂ ತೆಗೆದುಕೊಂಡು ಬಂದನು. +ಹೆಂಡತಿ ಅಡುಗೆ ಮಾಡಿದಳು. +ಅವನಿಗೆ ಊಟಕ್ಕೆ ಬಡಿಸಿದಳು. +ಬಡಿಸಿದ ಕೂಡಲೇ ಊಟ ಮಾಡಿದನು. +ಕೈಬಾಯಿ ತೊಳೆಯಲಿಕ್ಕೆ ಹೋದನು. +ಇವನು ಬಾಡಿಗೆಗೆ ತೆಗೆದುಕೊಂಡ ಮನೆಯ ಮೊಶಸಾಲೆಯಲ್ಲಿ (ಮುಂದುಗಡೆ)ಪದ್ಮಾಕ್ಷಿ ಸೂಳೆಯ ಮನೆಯಿತ್ತು. +ಅವನು ಅವಳನ್ನು ನೋಡಿಬಿಟ್ಟನು. +ಊಟ ಮಾಡಿ ಕೈತೊಳೆದವನು ಅವಳ ಮನೆಗೆ ನಡೆದನು. +ಅವನ ಹೆಂಡತಿ ಊಟ ಮಾಡಿದಳು,ಪಾತ್ರೆಗಳನ್ನೆಲ್ಲಾ ತೊಳೆದು ಕಮಚಿ ಇಟ್ಟು ಮಲಗಿಕೊಂಡಳು. +ಅವಳ ಗಂಡನು ಹೊತ್ತಾರೆ ಎದ್ದವನು ಆರು ತಾಸಿನ ಹೊತ್ತಿಗೆ ಮನೆಗೆ ಊಟಕ್ಕೆ ಬರುತ್ತಿದ್ದನು. +ಊಟಕ್ಕೆ ಬಡಿಸಿದಾಗ ಸಾಕು-ಬೇಕು ಹೀಗೆ ಏನೂ ಹೇಳುತ್ತಿರಲಿಲ್ಲ. +ಬಡಿಸಿದಷ್ಟು ಊಟ ಮಾಡುವುದು, ಬಾಯಿ ತೊಳೆಯುವುದು, ಸೂಳೆಯ ಮನೆಗೆ ಹೋಗುವುದು ದಿನಾಲು ಇದೇ ರೀತಿ ಮಾಡುತ್ತಿದ್ದನು. +ರಾತ್ರಿ ಸಹ ಒಂದು ತಾಸುರಾತ್ರಿಯಾದ ಕೂಡಲೇ ಮನೆಗೆ ಬರುವುದು ಊಟ ಮಾಡಿದ ಕೂಡಲೇ ಸೂಳೆಮನೆಗೆ ಹೋಗುವುದು. +ಹೀಗೆಯೇ ಏಳೆಂಟು ದಿನಗಳು ಕಳೆದವು. +ನೆರೆಮನೆಯಲ್ಲಿ ಒಬ್ಬ ಅಜ್ಜಿಯಿದ್ದಳು. +ಹುಡುಗಿ ಅಜ್ಜಿಯ ಕೈಯಲ್ಲಿ ಈ ಸಂಗತಿಯನ್ನು ಹೇಳಿದಳು. +“ಅಜ್ಜೀ, ನಾನು ಬಡಿಸಿದರೆಸಾಕು-ಬೇಕು ಎಂದು ಸಹಾ ಕೇಳುವುದಿಲ್ಲ, ಬಡಿಸಿದಷ್ಟನ್ನು ಉಂಡು ಕೈತೊಳೆದುಕೊಂಡು ಸೂಳೆಯ ಮನೆಗೆ ಹೋಗಿಬಿಡುತ್ತಾರೆ. +ಏನು ಮಾಡಬೇಕಾಯಿತು ಅಜ್ಜೀ?” ಎಂದು ಕೇಳಿದಳು. +ಅಜ್ಜಿಯೇನು ಹೇಳಿದಳೆಂದು ಕೇಳಿದರೆ, “ಇಂದು ಸಾರನ್ನು ಮಾಡುತ್ತೀಯಲ್ಲಾ ಅದಕ್ಕೆ ಉಪ್ಪನ್ನು ಹಾಕಬೇಡ, ಚಪ್ಪೆ ಸಾರನ್ನು ಮಾಡಿ ಇರಿಸು, ಅದಕ್ಕೆ, 'ಉಪ್ಪನ್ನು ಹಾಕು' ಎಂದು ಹೇಳುತ್ತಾನೆಯೋ ಏನೋ, ನಿನ್ನ ಕೈಯಲ್ಲಿ ಮಾತಾಡುತ್ತಾನೆಯೋ ಯಾರು ಬಲ್ಲ? ”ಎಂದಳು. +ಆ ದಿನ ಚಪ್ಪೆ ಸಾರನ್ನೇ ಮಾಡಿ ಇಟ್ಟಳು. +ಅವನು ಒಂದು ತುತ್ತು ಉಂಡನು. +ಹಾಗೆಯೇ ಕೈಕೊಡವಿ, ಬಾಯನ್ನು ತೊಳೆದು ಸೂಳೆಯ ಮನೆಗೆ ನಡೆದು ಬಿಟ್ಟನು. +ಅವನು ಹೋದ ಮೇಲೆ ಅಜ್ಜಿಯ ಹತ್ತಿರ ಹೋಗಿ, “ಅಜ್ಜೀ, ನೀನು ಹೇಳಿದ ಹಾಗೆ ಉಪ್ಪನ್ನು ಹಾಕದೆ ಚಪ್ಪೆ ಸಾರನ್ನೇ ಮಾಡಿ ಬಡಿಸಿದೆನು, ಆದರೂ ನನ್ನ ಹತ್ತಿರ ಮಾತಾಡಲಿಲ್ಲ. +ಇನ್ನು ಏನು ಮಾಡಬೇಕಾಯಿತು?' ಎಂದು ಕೇಳಿದಳು. +ಆಗ ಅಜ್ಜಿ ಹೇಳಿದಳು, “ಇಂದು ಏನೂ ಮಾಡಬೇಡ. +ನೀರನ್ನು ಕಾಸಿಡುವಾಗ ಕುದಿಯುವ ಹಾಗೆ ಕಾಸಿ ಇರಿಸು, ಬಾವಿಯ ಹತ್ತಿರ ಕೊಡವನ್ನಾಗಲಿ, ಹಗ್ಗವನ್ನಾಗಲಿ ಇಡಬೇಡ. +ಆಗಲಾದರೂ ಬಿಸಿನೀರಿಗೆ ತಣ್ಣೀರನ್ನು ಬೆರೆಸಿಕೊಡು' ಎಂದು ಹೇಳುವನೋ ಏನೋ” ಎಂದಳು. +ಸೂಳೆಯ ಮನೆಯಿಂದ ಬಂದವನು ಮೀಯಲಿಕ್ಕೆ ಹೋದನು. +ಹಂಡೆಯಲ್ಲಿ ಕೈಹಾಕಿ ನೋಡಿದವನು ಮೀಯಲೇ ಇಲ್ಲ. +ಹಾಗೆಯೇ ಊಟಕ್ಕೆ ಬಂದನು. +ಅವಳ ಕೈಯಲ್ಲಿ ಮಾತನ್ನೇ ಆಡಲಿಲ್ಲ. +ಊಟ ಮಾಡಿ ಕೈತೊಳೆದ ಬೆನ್ನಿಗೆ ಸೂಳೆಯ ಮನೆಗೆ ನಡೆದು ಬಿಟ್ಟನು. +ಕಡೆಗೆ ಅಜ್ಜಿ ಬಂದು, “ನಿನ್ನ ಗಂಡ ಇಂದು ಮಾತಾಡಿದನೇ, ಏನೆಂದನು?” ಎಂದು ಕೇಳಿದಳು. +“ಇಂದೂ ಮಾತಾಡಲಿಲ್ಲ, ಆ ಹಂಡೆಗೆ ಕೈಹಾಕಿ ನೋಡಿಕೊಂಡು, ನೀರನ್ನು ಮೀಯದೆ ಹಾಗೇ ಬಂದು ಊಟ ಮಾಡಿ ಹೋಗಿಬಿಟ್ಟರು. +ಇನ್ನೇನು ಮಾಡಬೇಕು?”ಎಂದಳು. +ಆಗ ಅಜ್ಜಿಯು, “ನೀನು ಇಷ್ಟೆಲ್ಲಾ ಮಾಡಿದರೂ ಯಾವಾಗ ಮಾತಾಡಲಿಲ್ಲ. +ಇಂಥಾ ತಂತ್ರಗಳಿಗೆ ಅವನು ಬಗ್ಗುವವನಲ್ಲ. +ನಾನು ಇಂದು ಅಮೃತದ ಸೊಪ್ಪನ್ನು ಕೊಡುತ್ತೇನೆ. +ಅನ್ನ ಬಡಿಸಿದವಳು ನೀನು ಈ ಸೊಪ್ಪನ್ನು ಅದನ್ನು ಜಜ್ಜಿ ಹಿಂಡಿ ತೆಗೆದು, ಅನ್ನದ ಮೇಲೆಬಿಡು. +ಆಗಲಾದರೂ ಮಾತಾಡುವನೋ ಯಾರು ಬಲ್ಲ?” ಎಂದು ಹೇಳಿದಳು. +ಆ ಸೊಪ್ಪನ್ನು ತೆಗೆದುಕೊಂಡವಳು, 'ಇದು ಎಂಥಾ ಹಾಳು ಸೊಪ್ಪೋ, ಏನೋ. . . ? +ಇದನ್ನು ಅನ್ನದ ಮೇಲೆ ಹಿಂಡಿದರೆ ಅದನ್ನು ಉಂಡುಕೊಂಡು ಸತ್ತುಹೋದರೆ ನಾನೇನು ಮಾಡಲಿ' ಎಂದುಕೊಂಡು ಸೊಪ್ಪನ್ನು ಅವನ ಅನ್ನದ ಮೇಲೆ ಹಿಂಡಲೇ ಇಲ್ಲ, ಅವಳ ಗಂಡನು ಊಟ ಮಾಡಿ ಸೂಳೆಯ ಮನೆಗೆ ನಡೆದನು. +ಆ ಸೊಪ್ಪಿಗೆ ನೀರನ್ನು ಹಾಕಿ ಜಜ್ಜಿ ಹಿಂಡಿ ರಸವನ್ನು ತೆಗೆದಳು, ಅಜ್ಜಿ ಕಾಣದ ಹಾಗೆ ಅದನ್ನು ತೆಗೆದುಕೊಂಡು ಹೋಗಿ ಮಾರ್ಗದ ಕಾರ್ಗೆಗೆ (ಬದಿಯ ಗಟಾರಿಗೆ) ಚೆಲ್ಲಿಬಿಟ್ಟಳು. +ಅಲ್ಲಿ ಒಂದು ಮಹಾಶೇಷನಿಗೆ ಅಮೃತವನ್ನು ಕುಡಿದಷ್ಟು ಆನಂದವಾಗಿ ಹೋಯಿತು. +'ಇದು ಯಾರಪ್ಪ ಪುಣ್ಯಾತ್ಮರು? +ಇಷ್ಟು ವರ್ಷವಾದರೂ ಅಮೃತವನ್ನು ಕುಡಿದ ಹಾಗೆ ಇಷ್ಟು ಆನಂದವನ್ನು ಯಾರೂ ಉಂಟುಮಾಡಿರಲಿಲ್ಲ' ಎಂದು ಅದರ ಮನಸ್ಸಿಗೆ ಕಂಡುಹೋಯಿತು. +ಹುಡುಗಿ ಮೈನರೆದಳು. +ಆದರೆ, ಶೋಭನ ಪ್ರಸ್ಥವನ್ನು ಮಾಡಿಕೊಳ್ಳಲಿಕ್ಕೆ ಅವಳ ಗಂಡ ಬರಲಿಲ್ಲ. +ಎರಡು-ಮೂರು ದಿನಗಳ ಆನಂತರ ನೆರೆಮನೆಯವರೇ ಒತ್ತಾಯ ಮಾಡಿದ್ದರಿಂದ ಹೆಂಡತಿಯ ಸಂಗಡ ಶೋಭನದ ಕಾರ್ಯ ಮಾಡಿಕೊಳ್ಳಲಿಕ್ಕೆ ಒಪ್ಪಿದನು. +ಆದರೆ, ಶೋಭನವಾದ ಮೇಲೆ ಹೆಂಡತಿ ಎಲ್ಲಿದ್ದಾಳೆಂದು ನೋಡಲೇ ಇಲ್ಲ. +ಸೂಳೆಯ ಮನೆಗೆ ಹೋದನು. +ಆ ಅಮೃತದ ಸೊಪ್ಪು ಮಹಾಶೇಷನಿಗೆ ವಶಮದ್ದಿನ ಹಾಗೆ ಪರಿಣಾಮ ಮಾಡಿತು. +ಮನುಷ್ಯನ ರೂಪದಲ್ಲಿ ರಾತ್ರಿ ಇವಳ ಮನೆಗೆ ಬರಲಿಕ್ಕೆ ಹತ್ತಿತ್ತು. +ಅವಳ ಗಂಡನ ರೂಪವನ್ನೇ ತಾಳಿ ಅದು ಬರುತ್ತಿತ್ತು. +ಹುಡುಗಿ ತನ್ನ ಗಂಡನೇ ಬರುವವನು ಎಂದು ತಿಳಿದುಕೊಂಡಿದ್ದಳು. +ಹಾಗೆಯೇ ಬಹಳ ದಿನ ಕಳೆದವು ಹುಡುಗಿ ಗರ್ಭಿಣಿಯಾದಳು. +ದಿನದಂತೆ ಅವಳ ಗಂಡ ಊಟಕ್ಕೆ ಬಂದು ಹೋಗುತ್ತಿದ್ದನು. +ಅವಳಿಗೆ ಒಂಬತ್ತು ತುಂಬುತ್ತಾ ಬಂತು. +ಒಂದಲ್ಲ ಒಂದು ದಿನ, “ನನಗೆ ಜೀವಕ್ಕೆ ಬೇಸರ” ಎಂದು ಗಂಡನ ಹತ್ತಿರ ಹೇಳಿದಳು. +ಅವನು, “ರಾತ್ರಿಯಲ್ಲಿ ಹೇಳು” ಎಂದು ಹೇಳಿಹೋದನು. +ರಾತ್ರಿಯಲ್ಲಿ ಮಹಾಶೇಷನು ಅವಳ ಗಂಡನ ರೂಪಿನಲ್ಲಿ ಬಂತು. +ಆಗ ಮತ್ತೆಹೇಳಿದಳು, “ನನಗೆ ಜೀವನದಲ್ಲಿ ಬೇಜಾರಿಕೆಯಾಗುತ್ತದೆ” ಎಂದಳು. +ಗಂಡನೆಂದೇ ತಿಳಿದುಹೇಳಿದ್ದಳು. +ಮಹಾಶೇಷನು, “ನಿನಗೆ ಏನು ಬೇಕೋ ಅದನ್ನು ನಾನು ತಂದುಕೊಡುತ್ತೇನೆ”ಎಂದನು. +ಅವಳಿಗೆ ಜಂಪಾಲು (ಜಂಪರು, ಬ್ಲೌಸು) ತೊಡುವ, ಪೀತಾಂಬರ ಉಡುವ ಬಯಕೆಯಾದದ್ದನ್ನು ತಿಳಿದ ಮಹಾಶೇಷನು ಮರುದಿನ ರಾತ್ರಿ ಅವನ್ನು ತಂದುಕೊಟ್ಟನು. +ನೆರೆಮನೆಯ ಹೆಂಗಸರು ಅವಳ ಬಯಕೆಯ ಪದಾರ್ಥಗಳನ್ನು ಅವಳಿಗೆ ಮಾಡಿಬಡಿಸಿದರು. +ಅವಳು ಬೇಕಾದ ಕಜ್ಜಾಯದೂಟವನ್ನು ಉಂಡುಕೊಂಡು ಉಳಿದುಕೊಂಡಳು. +ಇವಳು ಪೀತಾಂಬರವನ್ನು ಉಟ್ಟುಕೊಂಡು ಬಿಚ್ಚಿಹಾಕಿದ ಮೇಲೆ ಪೆಟ್ಟಿಗೆಯಲ್ಲಿಟ್ಟಳು. +ಅವಳ ಗಂಡನು ಅವಳು ಪೀತಾಂಬರವನ್ನು ಉಟ್ಟುಕೊಂಡಿದ್ದನ್ನು ನೋಡಿದವನು ಅಲ್ಲಿ ಸೂಳೆಯ ಹತ್ತಿರ ಈ ಸಂಗತಿಯನ್ನು ಹೇಳಿದನು. +ಸೂಳೆ ಮರುದಿನ ಬೆಳಗ್ಗೆ, “ನಿನ್ನ ಹೆಂಡತಿ ಉಟ್ಟುಕೊಂಡ ಪೀತಾಂಬರವನ್ನು ನನಗೆ ತಂದುಕೊಡು. +ಅದನ್ನು ಉಟ್ಟುಕೊಂಡು ನಾನು ಇಂದು ಸಿನೇಮಕ್ಕೆ ಹೋಗಿ ಬರುತ್ತೇನೆ,ನಾಳೆ ತಿರುಗಿ ಕೊಡುತ್ತೇನೆ” ಎಂದು ಹೇಳಿದಳು. +ಗಂಡನು ಬಂದು ಹೆಂಡತಿಯ ಹತ್ತಿರ, “ನಿನ್ನ ಪೀತಾಂಬರವನ್ನು ಒಂದು ದಿನದ ಮಟ್ಟಿಗೆ ಕೊಡು. +ನಾಳೆ ತಂದುಕೊಡುತ್ತೇನೆ” ಎಂದು ಹೇಳಿದನು. +ಅವಳು, “ಪೀತಾಂಬರವನ್ನು ನಾಳೆಗೆ ಕೊಡುತ್ತೇನೆ ಎಂದಳು. +ರಾತ್ರಿ ಮಹಾಶೇಷನು ಬಂದಾಗ. +“ನನಗೆ ಇರುವುದು ಒಂದೇ ಪೀತಾಂಬರ, ಸೂಳೆ ಅದನ್ನು ಉಟ್ಟುಕೊಂಡು ಹಾಳು ಮಾಡಿಬಿಟ್ಟರೆ ನನಗೆ ಏನುಗತಿ?” ಎಂದು ಕೇಳಿದಳು. +ಮಹಾಶೇಷನು, “ಪೀತಾಂಬರ ಒಂದೂ ಕಣ್ಣು (ಛಿದ್ರ) ಆಗದ ಹಾಗೆ ತಿರುಗಿ ಸೂಳೆ ನನಗೆ ಮುಟ್ಟಿಸಬೇಕು. +ಅವಳು ಒಂದೇ ಒಂದು ಕಣ್ಣು ಆಗುವ ಹಾಗೆ ಮಾಡಿ ಪೀತಾಂಬರವನ್ನು ಉಪಯೋಗಿಸಿದರೆ ಅವಳ ಮನೆ-ಮಾರು, ಕಂಚು-ತಾಮ್ರ,ಹಿತ್ತಿಲು-ಬಾಗಿಲು, ಚಿನ್ನ-ಚಿಗುರು ಏನೇನಿದೆಯೋ ಅಷ್ಟನ್ನೂ ನನಗೆ ಬರೆದುಕೊಡಬೇಕು. +ಪಟೇಲ ಶಾನಭಾಗರ ಮುಂದೆ ಹಾಗೆ ಬರೆದುಕೊಟ್ಟು ಪೀತಾಂಬರವನ್ನು ಕೊಡು” ಎಂದನು. +ಮರುದಿನ, “ಹೀಗೆ ಮಾಡಿ ತೆಗೆದುಕೊಂಡು ಹೋಗಲಿಕ್ಕೆ ಅಡ್ಡಿಯಿಲ್ಲ” ಎಂದು ಹೇಳಿದಳು. +ಅವಳ ಗಂಡನು ಈ ಸಂಗತಿಯಯನ್ನು ಸೂಳೆಗೆ ಹೇಳಿದನು. +ಸೂಳೆ,“ನಾನು ಅಷ್ಟು ಬರೆದುಕೊಟ್ಟು ಪಟ್ಟೆಸೀರೆಯನ್ನು ತೆಗೆದುಕೊಂಡು ಹೋಗುತ್ತೇನೆ” ಎಂದುಹೇಳಿ, ಪಟೇಲ ಶಾನುಭೋಗರನ್ನು ಕರೆಸಿ, ಅವರ ಸಮಕ್ಷಮದಲ್ಲಿ ಹಾಗೆ ಬರೆದುಕೊಟ್ಟು ಪೀತಾಂಬರವನ್ನು ತೆಗೆದುಕೊಂಡು ಹೋದಳು. +ಉಟ್ಟು ಸಿನೇಮಕ್ಕೆ ಹೋಗಿ ಬಂದಳು. +ಮರುದಿವಸ ಪೀತಾಂಬರವನ್ನು ಸೂಳೆ ಕೊಟ್ಟ ಮೇಲೆ ನೋಡಿದರೆ ಸಾವಿರ ಚೂರಾಗಿತ್ತು. +ಬರೆದುಕೊಟ್ಟ ಮಾತಿತ್ತಲ್ಲ್ಗ? +ಸೂಳೆಯು ಬರೆದುಕೊಟ್ಟ ಪ್ರಕಾರ ಮನೆ-ಮಾರು ಎಲ್ಲವನ್ನೂ ಕೊಟ್ಟು, “ನನ್ನ ಜೀವವೊಂದು ಬಿಟ್ಟು ಕೊಡು. +ನಾನು ಎಲ್ಲಿಯಾದರೂ ಬೇಡಿಕೊಂಡು ತಿನ್ನುತ್ತೇನೆ” ಎಂದು ಹೇಳಿ ಮನೆ-ಮಾರು, ಊರು-ಕೇರಿ ಎಲ್ಲವನ್ನೂ ಬಿಟ್ಟು ಹೋದಳು. +ಇವಳ ಗಂಡನು, "ಊರು ಬಿಟ್ಟು ನಿರಾಧಾರಿಯಾದ ಸೂಳೆಯ ಸಂಗಡಹೋಗಲಿಕ್ಕೆ ಆಗುತ್ತದೆಯೋ ಹೇಗೆ?" ಎಂದು ಅವನು ಮನೆಗೆ ಬಂದನು. +ಅವನು ಬಂದ ಕೂಡಲೇ ಹೆಂಡತಿ ಜನ್ನೆಯಾದಳು. +ಮಹಾಶೇಷನಿಂದ ಹುಟ್ಟಿದ ಹುಡುಗ ಒಂದು ದಿನದ ಶಿಶುವನ್ನು ನೋಡಿದರೆ ಒಂದು ತಿಂಗಳಿನ ಶಿಶುವನ್ನು ನೋಡಿದ ಹಾಗೆ, ಎರಡು ತಿಂಗಳ ಶಿಶುವನ್ನು ನೋಡಿದರೆ ಒಂದು ವರ್ಷದ ಶಿಶುವಿನ ಹಾಗೆ ದೊಡ್ಡದಾಗಿ ಶಿಶು ಬೆಳೆಯಿತು. +ಗಂಡ-ಹೆಂಡತಿ ಸೂಳೆಮನೆಯಲ್ಲಿ ಉಳಿಯಲಿಕ್ಕೆ ಹತ್ತಿದರು. +ಅವರು ಗಂಡ-ಹೆಂಡತಿ ಮಲಗಿದ ಮೇಲೆ ಮಹಾಶೇಷ ಬಂದು ನೋಡಿತು. +ಅವಳ ಗಂಡನು ಅವಳ ಹತ್ತಿರ ಮಲಗಿದ್ದನ್ನು ನೋಡಿ ಅದಕ್ಕೆ ಸಿಟ್ಟು ಬಂದುಹೋಯಿತು. +'ಶಿಶುವನ್ನೇ ಜಪ್ಪಿಕೊಂದುಬಿಡುತ್ತೇನೆ' ಎಂದು ಹೆಡೆಯನ್ನು ಎತ್ತಿತು. +'ನನಗೆ ಇವಳಲ್ಲಿ ಹುಟ್ಟಿದ ಹುಡುಗ ಇವ. +ಅವನನ್ನು ಬಡಿದು ಕೊಲ್ಲುವುದಿಲ್ಲ' ಎಂದು ಹುಡುಗನನ್ನು ಬಿಟ್ಟು, ಅವಳ ಗಂಡನನ್ನು ಕೊಲ್ಲಲಿಕ್ಕೆ ಹೆಡೆಯನ್ನೆತ್ತಿತು. +ಅವನನ್ನು ಕೊಂದಮೇಲೆ ಅವನ ಹೆಂಡತಿ ರಂಡೆಯಲ್ಲವೋ?'ಎಂದು ಹೇಳಿ ತನ್ನ ಹೆಡೆಯನ್ನು ತಾನೇ ಜಪ್ಪಿಕೊಂಡು ಅಲ್ಲೇ ಪ್ರಾಣ ಕೊಟ್ಟಿತು. +ಆಗ ಅವಳ ಗಂಡನಿಗೆ, 'ಈ ಹುಡುಗನು ಮಹಾಶೇಷನಿಂದಲೇ ಉತ್ಪನ್ನವಾದ ಹುಡುಗನು' ಎಂದು ಗೊತ್ತಾಯಿತು. +ಇಲ್ಲವಾದರೆ ಮಹಾಶೇಷ ತಮ್ಮನ್ನು ಕೊಂದುಬಿಡುತ್ತಿತ್ತು ಉಳಿಸುತ್ತಿರಲಿಲ್ಲ ಎಂದು ಅವನು ತಿಳಿದುಕೊಂಡನು. +ಗಂಡ-ಹೆಂಡತಿ ಮಗನೊಡನೆ ಸುಖ-ಸಂತೋಷದಿಂದ ಉಳಿದರು. +೩೧.ಯಾರಂತೆ ಅಂದರೆ ಊರಂತೆ (ಎಲ್ಲರಂತೆ). +ಒ೦ದು ರಾಜ್ಯದಲ್ಲಿ ರಾಜ, ಅವನ ಹೆಂಡತಿ (ರಾಣಿ) ಇದ್ದರು. +ಅವರು ಪ್ರತಿನಿತ್ಯದಲ್ಲೂ ಒಂದೇ ಹಾಸಿಗೆಯ ಮೇಲೆಯೇ ಮಲಗುತ್ತಿದ್ದರು. +ಒಂದು ದಿನ ರಾತ್ರಿ ರಾಜನ ಹೆಂಡತಿಗೆ ಒಂದು ಹುರಿಕೆ (ವಾಯು) ಬಂತು. +ಆಗ ಅವನಿಗೆ ಸಿಟ್ಟು ಬಂತು. +ಆಗಿಂದಾಗಲೇ ಅವಳನ್ನು ಮನೆಯಿಂದ ಹೊರಗೆ ಹಾಕಿದನು. +ಅವಳು ತೀಡುತ್ತಾ (ಅಳುತ್ತಾ) ಹೋದಳು. +ಎಲ್ಲಿಗೆ? ಋಷಿಯ ಆಶ್ರಮಕ್ಕೆ ಹೋದಳು. +ಅಲ್ಲಿ ಹೋಗಿ ತೀಡಿದಳು. +“ಯಾಕೆ ನೀನು ತೀಡುವೆ?” ಅಂತ ಋಷಿ ಕೇಳಿದನು. +“ಹಾಗಾದರೆ, ಮತ್ತೇನಿಲ್ಲ, ನನ್ನ ಗಂಡ, ನಾನು ಸಹ ಇಷ್ಟು ದಿವಸಗಳವರೆಗೂ ಒಂದೇ ಹಾಸಿಗೆಯಲ್ಲಿ ಮಲಗುತ್ತಾ ಇದ್ದವರು. +ರಾತ್ರಿ ನನಗೊಂದು ಹುರಿಕೆ ಬಂತು. +ಆದ್ದರಿಂದ ನನ್ನನ್ನು ರಾಜ ಮನೆಯಿಂದ ಹೊರಗೆ ಹಾಕಿದ.” +“ಹಾಗಾದರೆ, ನೀನು ಹೆದರಬೇಡ. +ಹದಿನೈದು ದಿವಸ ಇಲ್ಲೇ ಉಳಿ.” ಹೀಗೆ ಹೇಳಿದ ಮೇಲೆ ಅವಳು ಅಲ್ಲೇ ಉಳಿದಳು. +ಒಂದು ದಿವಸ ಋಷಿ ಅವಳ ಹತ್ತಿರ ಹೇಳಿದನು, “ಋಷಿ ಬರುತ್ತಾರೆ ಅಂತ (ರಾಜರ ಹತ್ತಿರ) ಹೇಳಿ, ನಾಳೆ ಜನರನ್ನು ಕೂಡಿಸು ಅಂತ ಹೇಳು. +ನಾಳೆ ಮಧ್ಯಾಹ್ನ ಮೂರು ಗಂಟೆಗೆ ಋಷಿ ಬರುತ್ತಾರೆ ಅಂತ ಹೇಳು” ಅಂದ. +ಅವಳು (ಹೋಗಿ),“ನಾಳೆ ಮಧ್ಯಾಹ್ನ ಮೂರು ಗಂಟೆಗೆ ಜನರನ್ನು ಕೂಡಿಸಬೇಕು. . . ಋಷಿ ಬರುತ್ತಾರಂತೆ”ಅಂತ ಹೇಳಿದಳು. +ಅವನು ಸಭೆ ಕೂಡಿಸಿದ್ದನು. +ಜನ ಅಲ್ಲಿ ಸಭೆಗೆ ಬಂದಿದ್ದರು. +ಋಷಿ ಹೋಗುವಾಗ ಒಂದು ಉಳ್ಳಾಗಡ್ಡೆಯನ್ನು ಹಿಡಿದುಕೊಂಡು ಹೋಗಿದ್ದನು. +“ಜನರನ್ನೆಲ್ಲಾ ಕೂಡಿಸಿದ್ದುಯಾತಕ್ಕೆ?” ಅಂತ ಕೇಳಿದರೆ, “ಇದೇ ಉಳ್ಳಾಗಡ್ಡೆಯನ್ನು ನೆಡಬೇಕು. +ಹೂಸು ಬಾರದವರು ಯಾರಾದರೂ ಇದ್ದರೆ ಕೈಮೇಲೆ ಮಾಡಿರಿ. . . ಬೆಳಗ್ಗೆ ಹೂಸು ಬಾರದವರು ಯಾರದರೂ ನೆಟ್ಟರೆ ಸಂಜೆಗೇ ಮೊಳಕೆ ಬರುತ್ತದೆ” ಅಂತ ಹೇಳಿದನು. +ಬಂದ ಜನರೆಲ್ಲರೂ, “ನನಗೆ ಹೂಸು ಬರುತ್ತದೆ”, “ನನಗೆ ಹೂಸು ಬರುತ್ತದೆ” ಎಂದು ಹೇಳಿದರು. +ಕಡೆಗೆ ಋಷಿ ಹೇಳಿದನು, “ನಮ್ಮ ರಾಜರಿಗೆ ಮಾತ್ರ ಹೂಸು ಬರುವುದಿಲ್ಲ. +ಅವರು ನೆಟ್ಟರೆ ಸಂಜೆ ಮೊಕೆ (ಮೊಗ್ಗೆ, ಮೊಳಕೆ) ಬರುತ್ತದೆ. +ತಕೊಂಡು ಹೋಗಿ ನೆಡಿರಿ”ಎಂದನು. +ಆಗ ರಾಜ ಹೇಳಿದನು, “ನನಗೆ ಹೂಸು ಬರುತ್ತದೆ.” +“ಹಾಗಾದರೆ, ಒಂದು ಹೂಸು ಬಂದಿದ್ದಕ್ಕೆ ನಿನ್ನ ಹೆಂಡತಿಯನ್ನು ಯಾಕೆ ಹೊರಗೆ ಹಾಕಿದ್ದು, ಈ ನಮೂನೆಯಿಂದ ಹೆಂಡತಿಯನ್ನು ಬಿಟ್ಟವರಿಲ್ಲ. . . ” ಹೀಗೆ ಹೇಳಿ ಗಂಡ-ಹೆಂಡತಿ ಒಟ್ಟಿಗೆ ಮಾಡಿ (ಜತೆಗೆ ಸೇರಿಸಿ), ಋಷಿ ಅವನ ಆಶ್ರಮಕ್ಕೆ ಹೋದನು. +ಎ೨.ರಾಗಾಲಾಪನೆ. +ಸಾಕಿದ ಒಂದು ಬೆಕ್ಕು ಇತ್ತು. +ಹೋಗುವಾಗ ಒಂದು ನರಿ ಅದಕ್ಕೆ ಸಿಕ್ಕಿತು. +“ನರಿಯಣ್ಣಾ,ನರಿಯಣ್ಣಾ, ಎಲ್ಲಿಗೆ ಹೋಗುವೆ?” ಅಂತ ಕೇಳಿತು. +ಅದು, “ನನ್ನ ಹೊಟ್ಟೆಗೆ ಏನೂ ಆಹಾರ ಸಿಗಲಿಲ್ಲ. . . ಏನಾದರೂ ತಿನ್ನಲು ಸಿಗುವುದೋ ಅಂತ ಹುಡುಕಲು ಹೋಗುತ್ತೇನೆ”ಎಂದಿತು. +“ಹಾಗಾದರೆ, ನನ್ನ ಸಂಗಡ ಬರುವೆಯೋ?” ಅಂತ ಕೇಳಿತು. +“ನಮ್ಮ ಒಡೆಯನ ಮನೆಯಲ್ಲಿ ದೇವಕಾರ್ಯದಲ್ಲಿ ಕಜ್ಜಾಯ ಮಾಡಿ ಮೆತ್ತಿನ ಮೇಲೆ ತುಂಬಿ ಇಟ್ಟಿದ್ದಾರೆ. +ನಾವು ಹೋಗಿ ತಿಂದರಾಯಿತು” ಅಂದಿತು. +“ನಾನು ಹೇಗೆ ಅವರ ಮನೆಯ ಮೆತ್ತನ್ನು ಹತ್ತಲಿ ಮಹಾರಾಣಿ” ಅಂದಿತು. +"ನೀನು ನನ್ನ ಸಂಗಡ ಬಾ. . . ನಾನು ನಿನಗೆ ಉಪಾಯ ಹೇಳುವೆ” ಅಂದಿತು. +ನರಿಯನ್ನು ಕರೆದುಕೊಂಡು ಹೋಯಿತು. +ಬೆಕ್ಕು ಮನುಷ್ಯರಿಗೆ ಏನೂ ಕಾಣದ ಹಾಗೆ ಎಷ್ಟು ಹೊತ್ತಿಗಾದರೂ ಕಿಡಕಿಯ ಗಂಡಿಯಲ್ಲಿ ಹೊಕ್ಕುಬಿಡುತ್ತದೆ. +ಸಂಜೆ ಕತ್ತಲೆಯಾಗುವಾಗ ನರಿಯನ್ನು ಕರೆದುಕೊಂಡು ಹೋಗಿ ಹಿತ್ತಲ ಕಡೆಯ ಬಾಗಿಲಿನಲ್ಲಿ ಹೊಕ್ಕಿತು ಬೆಕ್ಕು. +ನರಿ ಅಲ್ಲಿ ಒಳಗೆ ಹೋಗಿ ಮೆತ್ತನ್ನು ಸೇರಿ ಬಿಟ್ಟಿತು. +ಆ ಕಜ್ಜಾಯ, ಈ ಕಜ್ಜಾಯ ಬೇಕಾದಷ್ಟು ಸುಟ್ಟು ಇಟ್ಟಿದ್ದರು. +ಬೆಕ್ಕು, ನರಿ ಬೇಕಾದಷ್ಟು ಕಜ್ಜಾಯ ತಿಂದವು . +ಬೆಕ್ಕು, ನರಿಯ ಹತ್ತಿರ ಏನು ಹೇಳಿತು? +“ನನಗೆ ಒಂದು ರಾಗ ಬರುತ್ತದೆಯಲ್ಲೋ. . . ಅಣ್ಣಾ” ಅಂದಿತು. +"ರಾಗ ಬಂದರೆ ರಾಗ ಮಾಡು ನೋಡುವಾ (ಕೇಳುವಾ)"ಅಂದಿತು ನರಿ. +ಬೆಕ್ಕು, “ಮ್ಯಾವ್‌ ಮ್ಯಾವ್‌. . . . ” ಅಂತ ಕೂಗಿತು. +ನರಿ, “ನನಗೂ ಒಂದು ರಾಗ ಬರುತ್ತದೆ (ಆಲಾಪನೆಯ ಮೇಲೆಯೇ ಹೇಳುವೆ)”ಅಂದಿತು. +“ಹಾಗಾದರೆ, ನೀನು ರಾಗಾಲಾಪನೆಯನ್ನೇ ಮಾಡು” ಅಂದಿತು ಬೆಕ್ಕು. +ಅದು,“ಹುಕ್ಕೆ ಹೂಹೂ ಹೂಯ್ಯ. . . ” ಅಂತ ರಾಗ ತೆಗೆಯಿತು. +"ಒಳಗೆ ನರಿ ಹೊಕ್ಕಿದೆ' ಅಂತ ದೊಡ್ಡ ಗೌಜಿ ಬಿದ್ದುಹೋಯಿತು. +ಹಿಂದೆಯೂ ಕಟ್ಟಿ,ಮುಂದೆಯೂ ಕಟ್ಟಿ ತಿರುಗಿದರು. +ಬೆಕ್ಕು ಮೆತ್ತಿನ ಕಿಡಕಿ ಗಿಂಡಿಯಲ್ಲಿ ಹೊಕ್ಕು ಹೊರಬಿದ್ದು ಹೋಯಿತು. +ನರಿಯನ್ನು ಹಿಡಿದು ಹೊಡೆದು-ಬಡಿದು ಮೂಗಿನಲ್ಲಿ ಬಾಯಲ್ಲಿ ನೆತ್ತರ ಸುರಿಯಿತು. +ಆಗ ನರಿಯು ಶ್ವಾಸ ತೆಗೆಯದೆ ಸತ್ತ ಹಾಗೆ ಬಿದ್ದುಕೊಂಡಿತು. +ತಕ್ಕೊಂಡು ಹೋಗಿ ಹೊರಗೆ ಎಳೆದುಹಾಕಿದರು. +ಬೀಸುವ ಗಾಳಿಗೆ ಜೀವ ಬಂದು ನರಿ ಎದ್ದು ಓಡಿಹೋಯಿತು. +೩೩.ಲಟಕಿನ ಚಪ್ಪರ. +ಇನ್ನೂರು ವರ್ಷಗಳ ಹಿಂದೆ ಹೊನ್ನಾವರ ತಾಲೂಕಿನ ಕೆರೆಕೋಣ ಊರಿನಿಂದ ಹನ್ನೆರಡು ಮೈಲು ದೂರ, ಬೆಟ್ಟದಲ್ಲಿ ತೋಕಾಯ ಗುಡ್ಡ ಎಂಬಲ್ಲಿ ಒಬ್ಬ ಮುಸಲ್ಮಾನ ರಾಜನಿದ್ದನು. +ಅವನ ಮಂತ್ರಿ ಬ್ರಾಹ್ಮಣನಾಗಿದ್ದನು. +ಆ ಬ್ರಾಹ್ಮಣನಿಗೆ ಒಬ್ಬ ಮಗಳಿದ್ದಳು (ಸುಂದರಿಯೇ ಆಗಿದ್ದಿರಬೇಕು). +ರಾಜನಿಗೆ ಒಬ್ಬ ಮಗನಿದ್ದನು. +'ಮಂತ್ರಿಯ ಮಗಳನ್ನು ತನ್ನ ಮಗನಿಗೆ ಮದುವೆ ಮಾಡಿಸಿಕೊಂಡು ತರಬೇಕು' ಎಂದು ರಾಜನು ವಿಚಾರ ಮಾಡಿದನು. +ಮಂತ್ರಿಗೆ ಅದರಂತೆ ಹೇಳಿದನು. +ಮಂತ್ರಿಗೆ ಮಗಳನ್ನು ರಾಜನ ಮಗನಿಗೆ ಕೊಡಲು ಮನಸ್ಸಿರಲಿಲ್ಲ. +ಆದರೆ ರಾಜನೇ,'ಮದುವೆ ಮಾಡಿಕೊಡು' ಅಂತ ಹೇಳಿದ್ದರಿಂದ ಮದುವೆಯ ತಯಾರಿ ಮಾಡಿ ಚಪ್ಪರ ಹಾಕಿಸಿದನು. +ಮುಟ್ಟಿಸಿದರೆ ಬೀಳುವ ಹಾಗೆ ಕಂಬ ಹಾಕಿಸಿದ್ದನು. +ಲಟಕಿನ ಕಂಬಗಳ ಚಪ್ಪರ- ಒಂದು ಕಂಬ ದೂಡಿದರೆ ಇಡೀ ಚಪ್ಪರ ಬೀಳಬೇಕು. +ರಾಜನ ಮಗನ ದಿಬ್ಬಣ ಬಂತು. +ದಿಬ್ಬಣ ಬಂದ ಕೂಡಲೇ ಚಪ್ಪರವನ್ನು ಬೀಳಿಸಿದನು. +ಚಪ್ಪರದ ಮಡಲು, ದಬ್ಬೆ ಎಲ್ಲಾ ದಿಬ್ಬಣದವರ ಮೈಮೇಲೆ ಬಿದ್ದವು. +ಅವರು ಸುಧಾರಿಸಿಕೊಳ್ಳಲು ನೋಡಿದಾಗ ಮಂತ್ರಿ, ಮಂತ್ರಿಯ ಮಗಳು, ಹೆಂಡತಿ, ಮಂತ್ರಿ ಜನರು ಗುಮ್ಮೆಕೇರಿಗೆ ಓಡಿಬಂದರು. +ಅಲ್ಲಿ ಈಶ್ವರ ದೇವಾಲಯದಲ್ಲಿ ಪೂಜೆ ಮಾಡುವವರೇ ಇರಲಿಲ್ಲ. +ಚಪ್ಪರ ಬಿದ್ದ ರಾಜನ ಜನರು ಕೆಲವರು ಸತ್ತುಹೋದರು. +ತೋಕಾಯ ಗುಡ್ಡಸಂಸ್ಥಾನವು ಹಾಳಾಗಿ ಹೋಯಿತು. +೩೪.ಲಾಡಿನ ಮರ. +ಒಂದು ಊರಿನಲ್ಲಿ ತಂದೆ-ಮಗ. +ಅವರು ಮದುವೆಯ ಮನೆಗೆ ಹೋದಾಗ ಮೂರು ಲಾಡು ಕೊಟ್ಟಿದ್ದರು. +ಅಪ್ಪ-ಮಗ ಒಂದೊಂದನ್ನು ತಿಂದರು. +ಮಗನು ಒಂದನ್ನು ತೆಗೆದುಕೊಂಡು ಬಂದು ನೆಟ್ಟನು. +ನೆಟ್ಟು ಏನೆಂದನು? +“ನಾಳೆಗಿಡವಾಗದಿದ್ದರೆ ಅಪ್ಪನ ಚಾಕು ತಂದು ನಿನ್ನನ್ನು ಕೊಯ್ದಹಾಕುತ್ತೇನೆ” ಎಂದು ಹೇಳಿದನು. +ಮರುದಿನ ಬಂದನು. +ಒಂದು ದೊಡ್ಡ ಗಿಡವಾಗಿತ್ತು. +“ನಾಳೆ ನಾನು ಬರುವಷ್ಟರಲ್ಲಿ ಹೂಗಳಾಗದಿದ್ದರೆ ನಮ್ಮ ಅಪ್ಪನ ಚಾಕು ತಂದು ನಿನ್ನನ್ನು ಕತ್ತರಿಸಿಹಾಕುತ್ತೇನೆ” ಅಂದನು. +ಹೂವುಗಳಾದವು. + ಮರುದಿನ ಬಂದು ನೋಡಿದನು. +“ನಾನು ನಾಳೆ ಬರುವಾಗ ಕಾಯಿ ಆಗದಿದ್ದರೆ ನನ್ನ ಅಪ್ಪನ ಚಾಕು ತಂದು ಕೊಯ್ದುಹಾಕುತ್ತೇನೆ” ಎಂದು ಹೇಳಿದನು. +ಮಾರನೇ ದಿನಬಂದಾಗ, “ನಾಳೆ ಬೆಳಗಾಗುವವರೆಗೆ ಹಣ್ಣಾಗದಿದ್ದರೆ ನನ್ನ ಅಪ್ಪನ ಚಾಕು ತಂದು ನಿನ್ನನ್ನು ಕೊಯ್ದಹಾಕುತ್ತೇನೆ” ಎಂದು ಹೇಳಿದನು. +ಮರುದಿನ ಬಂದು ಮರ ಹತ್ತಿಕೊಂಡು ಹಣ್ಣು ಕೊಯ್ದ ತಿನ್ನುತ್ತಾ ಉಳಿದನು. +ಆಗ ಆ ಕಡೆಯಿಂದ ಒಬ್ಬ ರಾಕ್ಷಸಿ ಬಂದಳು. +“ತಮ್ಮ. . . ತಮ್ಮ. . . . ನನಗೆ ಒಂದು ಲಾಡನ್ನು ಒಗೆ” ಅಂದಿತು. +ಒಂದು ಲಾಡನ್ನು ಒಗೆದ. +"ಅದು ಎಂಜಲು ತಿಪ್ಪೆಯಲ್ಲಿ ಬಿದ್ದುಹೋಯಿತು"ಅಂದಳು. +“ಮತ್ತೊಂದು ಹೊತಾಕು(ಒಗೆ)” ಅಂದಳು. +ಮತ್ತೊಂದನ್ನು ಒಗೆದನು. +“ಇದು ಉಚ್ಚೆಯಲ್ಲಿ ಬಿದ್ದುಹೋಯಿತು, ಮತ್ತೊಂದು ಹೊತಾಕು” ಅಂದಳು. +“ಅದು ಸಗಣಿಯಲ್ಲಿ ಬಿದ್ದು ಹೋಯಿತು. + ನೀನು ಲಾಡನ್ನು ನಿನ್ನ ಪಂಚೆಯಲ್ಲಿ ಕಟ್ಟಿ ಬಿಡು” ಅಂದಳು. +ಅವನು ಪಂಚೆಯಲ್ಲಿ ಕಟ್ಟಿ ಬಿಟ್ಟನು. +ಬಿಟ್ಟ ಕೂಡಲೇ ಪಂಚೆ ಎಳೆದು ಅವನನ್ನು ಸೆಳೆದುಕೊಂಡು ಪೆಟ್ಟಿಗೆಯಲ್ಲಿ ಹಾಕಿ ತೆಗೆದುಕೊಂಡು ಹೋದಳು. +ಹೋಗುವಾಗ ಇವಳಿಗೆ ಮೈ ನೀರು (ಉಚ್ಚೆ) ಬಂತು. +ಅಲ್ಲಿ ದನ ಕಾಯುವ ಮಕ್ಕಳಿದ್ದರು. + “ತಮ್ಮ. . . ತಮ್ಮ. . . ಮೈ ನೀರು ಹೊಯ್ಯಲಿಕ್ಕೆ ಇಲ್ಲಿ ಎಲ್ಲಿ ಹೋಗಬೇಕು?” ಅಂತ ಕೇಳಿದಳು. +ಅವರು, “ಏಳು ಸಮುದ್ರಗಳಾಚೆ ಹೋಗಬೇಕು, ಇಲ್ಲೆಲ್ಲೂ ಜಾಗವಿಲ್ಲ” ಎಂದು ಹೇಳಿದರು. +ಅಲ್ಲೇ ಪೆಟ್ಟಿಗೆ ಇಟ್ಟಳು. +“ಪೆಟ್ಟಿಗೆಯಲ್ಲಿ ಹಾವು, ಕಪ್ಪೆ, ಕಲ್ಲು, ಮುಳ್ಳು ಎಲ್ಲಾ ಉಂಟು,ಪೆಟ್ಟಿಗೆ ಮುಚ್ಚಲ ತೆಗೆಯಬೇಡಿ” ಎಂದು ಹೇಳಿದಳು. +ಪೆಟ್ಟಿಗೆ ಅಲ್ಲೇ ಇಟ್ಟು ಏಳು ಸಮುದ್ರಗಳ ಆಚೆ ಹೋದಳು. +ಅವಳು ಹೋಗಿ ಬರುವುದರೊಳಗೆ ದನ ಕಾಯುವ ಹುಡುಗರು ಪೆಟ್ಟಿಗೆಯ ಬಾಗಿಲು ತೆರೆದರು. +ಅದರಲ್ಲಿದ್ದ ಹುಡುಗ ಹೊರಗೆ ಬಂದನು. +ಅದರಲ್ಲಿ ಹಾವು, ಕಪ್ಪೆ, ಕಲ್ಲು,ಮುಳ್ಳು ಎಲ್ಲಾ ತುಂಬಿ ಪೆಟ್ಟಿಗೆಯ ಮುಚ್ಚಲ ಹಾಕಿದರು. +ರಾಕ್ಷಸಿ ಬಂದವಳು ಪೆಟ್ಟಿಗೆಯನ್ನು ಹೊತ್ತುಕೊಂಡು ಮನೆಗೆ ಹೋದಳು. +ಪೆಟ್ಟಿಗೆ ಬಾಗಿಲು ತೆಗೆದು ಅವಳು ನೋಡಿರಲಿಲ್ಲ. +ಅದು ಮೊದಲಿನಷ್ಟೇ ಭಾರವಾಗಿತ್ತು. + “ಮಗಳೇ. . . ಮಗಳೇ. . . ನಾನು ಒಂದು ಹಣ್ಣು ಮಿಡಿ ತೆಗೆದುಕೊಂಡು ಬಂದಿದ್ದೇನೆ. +ಇದರ ಗೊಜ್ಜುಮಾಡು” ಅಂತ ಹೇಳಿದಳು. +ತಾನು ಹುಡುಗನನ್ನು ತಿನ್ನಲಿಕ್ಕೆ ಹಲ್ಲು ಮಸೆದುಕೊಂಡು ಬರಲು ಬಡಿಗನ ಮನೆಗೆ ಹೋದಳು. +ಮಗಳು ಪೆಟ್ಟಿಗೆ ಬಾಗಿಲು ತೆಗೆದು ನೋಡಿದಳು. +ಅದರಲ್ಲಿ ಹಾವು, ಕಪ್ಪೆ, ಕಲ್ಲು,ಮುಳ್ಳು. . . ಎಲ್ಲ ಇತ್ತು. +ಅವನ್ನೆಲ್ಲ ತೆಗೆದು ಒಗೆದಳು. +ತಾಯಿ ಹಲ್ಲು ಮಸೆದುಕೊಂಡು ಬಂದಳು. +ಬರುವದರೊಳಗೆ, “ಅವ್ವಾ. . . ಯಾಕೆ ಹಾವು, ಕಪ್ಪೆ, ಕಲ್ಲು, ಮುಳ್ಳು ಎಲ್ಲ ತೆಗೆದುಕೊಂಡು ಬಂದೆ? +ಬರೇ ಹಾಳು ವಸ್ತು. . . ಗೊಜ್ಜಲ್ಲ,ನಿನ್ನ ಬೊಜ್ಜ (ಶ್ರಾದ್ಧ) ಮಾಡಬೇಕು” ಅಂತ ತಾಯಿಗೆ ಹೇಳಿದಳು. +ರಾಕ್ಷಸಿ, 'ಹುಡುಗ ತಪ್ಪಿಸಿಕೊಂಡು ಹೋದ. +ಮತ್ತೆ ಲಾಡಿನ ಮರದ ಬಳಿಗೆ ಹೋಗಿ ನೋಡೋಣ' ಅಂತ ಹೇಳಿ ಬಂದಳು. +ಅವನು ಅದೇ ಮರದ ಮೇಲೆ ಹತ್ತಿ ಕೂತುಕೊಂಡು ಲಾಡು ತಿನ್ನುತ್ತಿದ್ದನು. +ರಾಕ್ಷಸಿ,“ತಮ್ಮಾ. . . ಒಂದು ಲಾಡನ್ನು ನನಗೆ ಒಗೆ” ಅಂದಳು. +ಅವನು ಒಗೆದನು. +ಮತ್ತೆ ಹಿಂದೆ ಹೇಳಿದ ಹಾಗೆ ಹೇಳುತ್ತ ಬಂದಳು. +ಆಗಿನ ಹಾಗೆಯೇ, “ಪಂಚೆಯಲ್ಲಿ ಲಾಡನ್ನು ಕಟ್ಟಿಬಿಡು” ಎಂದು ಹೇಳಿದಳು. +ಅವನನ್ನು ಎಳೆದುಕೊಂಡು ಪೆಟ್ಟಿಗೆಯಲ್ಲಿ ಹಾಕಿ ಮತ್ತೆ ಹೊತ್ತುಕೊಂಡು ಹೋದಳು. +ಮನೆಗೆ ಬಂದಳು. + “ಮಗಳೇ. . . ಮಗಳೇ. . . ಹಣ್ಣು ಮಿಡಿ ತೆಗೆದುಕೊಂಡು ಬಂದೆ. +ಗೊಜ್ಜು ಮಾಡು”ಅಂದಳು. +“ನಾನು ಆಚಾರಿಯ ಮನೆಗೆ ಹೋಗಿ ಹಲ್ಲು ಮಸೆದುಕೊಂಡು ಬರುತ್ತೇನೆ” ಅಂತ ಹೇಳಿ ಹೋದಳು. +ಹುಡುಗಿ ಪೆಟ್ಟಿಗೆ ಮುಚ್ಚಲ ತೆಗೆದಳು. +ತೆಗೆದ ಕೂಡಲೇ ಹುಡುಗ ಹೊರಗೆ ಬಂದನು. +ಒಳ್ಳೆ ಚೆಂದದ ಹುಡುಗ. +ರಾಕ್ಷಸಿಯ ಹುಡುಗಿ, “ತಮ್ಮ. . . ತಮ್ಮ. . . ಒರಳಿನಲ್ಲಿ ತಲೆಹಾಕು”ಎಂದಳು. +ಅವನು, “ಒರಳಿನಲ್ಲಿ ತಲೆಹಾಕಲಿಕ್ಕೆ ನನಗೆ ತಿಳಿಯುವುದಿಲ್ಲ. . . ನೀನೇ ತಲೆಹಾಕಿ ತೋರಿಸು” ಅಂದನು. +ಅವಳು ಒರಳಿನೊಳಗೆ ತಲೆಹಾಕಿದಳು. +ಅವನು ಒನಿಕೆ ತೆಗೆದುಕೊಂಡು ಕುಟ್ಟಿದನು. +ಅವಳು ಸತ್ತುಹೋದಳು. +ಅವಳನ್ನು ಕೊಚ್ಚಿ ಅಡುಗೆ ಮಾಡಿದನು. +ಅಟ್ಟದ ಮೇಲೆ ಹೋಗಿ ಕೂತುಕೊಂಡನು. +ರಾಕ್ಷಸಿ ಹಲ್ಲು ಮಸೆದುಕೊಂಡು ಬಂದಳು. +"ಮಗಳೇ. . . ಮಗಳೇ. . . ಮಗಳೇ. . . !"ಅಂತ ಕರೆಯುತ್ತ ಬಂದಳು. +ಹುಡುಗ ಮಾತಾಡಲಿಲ್ಲ. +'ಮಗಳು ಎಲ್ಲಿಯೋ ಹೋಗಿರಬೇಕು,ನೀರಿಗೆ ಹೋಗಿದ್ದಾಳೆಯೋ ಏನೋ?' ಅನ್ನುತ್ತ ರಾಕ್ಷಸಿ ಬಂದಳು. +'ಗೊಜ್ಜನ್ನು ತಿನ್ನಬೇಕು'ಅಂತ ಊಟಕ್ಕೆ ಕೂತಳು. +ತಿನ್ನುತ್ತಾಳೆ, 'ಸೊರ ಸೊರ' ಶಬ್ದ ಮಾಡುತ್ತಾ ಉಣ್ಣುತ್ತಾಳೆ. +ಅಟ್ಟದ ಮೇಲೆ ಕೂತುಕೊಂಡೇ ಹೇಳಿದನು, 'ತನ್ನ ಮಗಳ ಪಾಯಸ ತಾನೇ ಸೊರ್‌-ಪೊರಕ್‌. . . ' ಇವಳು ಬಂದು, “ಏ ರಂಡೆ ಪೋರ; ನೀನು ಇಲ್ಲೇ ಇದ್ದೀಯಾ?” ಅಂತ ಅಟ್ಟಹತ್ತಲಿಕ್ಕೆ ಹಣಕಿದಳು. +ಅವನು ಅಟ್ಟದ ಮೇಲಿದ್ದ ತುಪ್ಪದ ಕೊಡ, ಬೆಲ್ಲದ ಕೊಡ, ಎಣ್ಣೆಕೊಡ ಎಲ್ಲವನ್ನೂ ಏಣಿಯ ಮೇಲೆ ಒಗೆದನು. +ರಾಕ್ಷಸಿ ಮೆಟ್ಟಿಲು ಹತ್ತುವಾಗ ಜಾರಿ, ಜಾರಿಬಿದ್ದಳು. +ಒಂದು ಮೆಟ್ಟಿಲು ಹತ್ತಿ ಜಾರಿ ಬಿದ್ದಳು. +ಮತ್ತೇ ಎರಡು ಮೆಟ್ಟಿಲು ಹತ್ತಿ ಜಾರಿ ಬಿದ್ದಳು. +ಐದು ಮೆಟ್ಟಿಲು ಹತ್ತಿ ಜಾರಿ ಬಿದ್ದಳು. +ಮತ್ತೆ ಗಟ್ಟಿಯಾಗಿ ಮೆಟ್ಟಿಲು ಹಿಡಿದುಕೊಂಡು ಮೇಲೆ ಮೇಲೆ ಹತ್ತಿದಳು. +ಹುಡುಗನು ಕೋಳನ್ನು ಬಗೆದು ಮನೆಯ ತುದಿಯನ್ನು ಹತ್ತಿದನು. +ನಾರಾಯಣ ಸ್ವಾಮಿಯ ಹತ್ತಿರ, “ನೂಲನ್ನು ಬಿಡಿ ನಾರಾಯಣ ಸ್ವಾಮಿ. . . ನಾನು ನಿಮ್ಮ ಲೋಕಕ್ಕೆ ಬರುತ್ತೇನೆ” ಅಂದನು. +ಸ್ವಾಮಿ ಗಟ್ಟಿ ನೂಲಿನ ಉಂಡೆಯನ್ನು ಬಿಟ್ಟನು. +ನೂಲನ್ನು ಹಿಡಿದುಕೊಂಡು ಮೇಲಿನ ಲೋಕಕ್ಕೆ ಹೋದನು. +ರಾಕ್ಷಸಿ, “ನನಗೂ ನೂಲು ಬಿಡಿ” ಎಂದು ಹೇಳಿದಳು. +ಆದರೆ ಸ್ವಾಮಿ ಲಡ್ಡು ನೂರನ್ನು ಬಿಟ್ಟನು. +ನೂಲು ಹುಸಿದು ರಾಕ್ಷಸಿ ನೆಲಕ್ಕೆ ಬಿದ್ದು ಸತ್ತೇಹೋದಳು. +ಅವನು ನಾರಾಯಣ ಸ್ವಾಮಿಯ ಹತ್ತಿರ ನೂಲುಂಡೆಯನ್ನು ಮತ್ತೆ ಬಿಡಲಿಕ್ಕೆ ಹೇಳಿ,ಕೆಳಗೆ ಬಂದು ತನ್ನ ಮನೆಯಲ್ಲೇ ಉಳಿದನು. +೩೫.ಶಂಕರತಮ್ಮ. +ಒಂದು ಊರಿನಲ್ಲಿ ಒಬ್ಬ ಕೆಲಸಿ(ಕ್ಷೌರಿಕ)ಯೂ, ಶಂಕರತಮ್ಮ ಎಂಬವವನೂ ಬಹಳ ಮಿತ್ರತ್ವದಿಂದ ಇದ್ದರು. +ಒಂದು ದಿನ, “ಎಲ್ಲಿಗಾದರೂ ತಿರುಗಾಟಕ್ಕೆ ಹೋಗೋಣ' ಅಂತಹೇಳಿ, ಒಂದು ಜೋಳದ ಗದ್ದೆಗೆ ಹೋದರು. +ಜೋಳದ ಕುಂಡಿಗೆಗಳು ಬಿಟ್ಟು ಬಲಿತಿದ್ದವು. +ಜೋಳದ ಗಿಡಗಳನ್ನು ಕೊಯ್ದು ಹಾಕಿದರು. +ಶಂಕರತಮ್ಮನು ಕೆಲಸಿಯನ್ನು ಕೇಳಿದನು,“ನಿನಗೆ ಬುಡದ ತುಂಡುಗಳು ಬೇಕೋ, ತುದಿಯ ತುಂಡುಗಳೋ? +ಬುಡದ ತುಂಡುಗಳನ್ನೇ ಕೊಡುತ್ತೇನೆ” ಅಂದನು. +ಅವನು “ಹೂಂ” ಅಂದನು. +ಅವನಿಗೆ ಜೋಳದ ಗಿಡಗಳ ಬುಡದ ತುಂಡುಗಳನ್ನು ಕೊಟ್ಟು, ತಾನು ಜೋಳದ ಕುಂಡಿಗೆಗಳನ್ನೆಲ್ಲ ತೆಗೆದುಕೊಂಡನು. +ಇಬ್ಬರೂ ತಿರುಗಿ ಬಂದರು. +ಮರುದಿವಸ ಇಬ್ಬರೂ ಗೊಣ್ಣಿಗೆಡ್ಡೆಗಳನ್ನು ಬೆಳೆದ ಹಿತ್ತಲಿಗೆ ಹೋದರು. +"ನಿನಗೆ ಬುಡದ ತುಂಡು ಬೇಕೋ,ತುದಿಯ ತುಂಡೋ?" ಎಂದು ಶಂಕರತಮ್ಮ ಕೇಳಿದನು. +“ನಿನ್ನೆ ಬುಡದ ತುಂಡು ನಿನಗಾಗಿದೆ. +ಇಂದು ನನಗೆ" ಎಂದು ಶಂಕರತಮ್ಮ ಹೇಳಿ ಗೊಣ್ಣಿಗೆಡ್ಡೆಗಳನ್ನು ಅಗೆದನು. +ಗೊಣ್ಣಿಗೆಡ್ಡೆಗಳನ್ನು ತಾನು ತೆಗೆದುಕೊಂಡು ಬಳ್ಳಿಗಳನ್ನು ಅವನಿಗೆ ಕೊಟ್ಟನು. +ಮೂರನೆಯ ದಿನವೂ ಅವರು ಹೋದರು. +ಹಾದಿಯ ಮೇಲೆ ಒಂದು ತತ್ತಿ ಸಿಕ್ಕಿತು. +ಶಂಕರತಮ್ಮ ಅದನ್ನು ತಕ್ಕೊಂಡನು. +ಸ್ವಲ್ಪ ದೂರ ಹೋದಾಗ ಹಗ್ಗ ಸಿಕ್ಕಿತು. +ಮುಂದೆ ಹೋದಾಗ ಸುಣ್ಣದ ಅಳಗೆ ಸಿಕ್ಕಿತು. +ಮುಂದೆ ರಕ್ಕಸಿಯ ಮನೆಗೆ ಹೋದರು. +ರಕ್ಕಸಿ ಇವರನ್ನು ತಿನ್ನಬೇಕೆಂದು ಬಾಯಿ ತೆರೆದುಕೊಂಡು ಬಂದಳು. +ಮುಂದೆ ಒಂದು ಮರವಿತ್ತು ಇಬ್ಬರೂ ಮರ ಹತ್ತಿದರು. +ನಡುಗುತ್ತಿದ್ದ ಕೆಲಸಿಯನ್ನು ಹಗ್ಗದಿಂದ ಮರಕ್ಕೆ ಕಟ್ಟಿದನು. +ರಕ್ಕಸಿಯ ಹತ್ತಿರ ಮರ ಹತ್ತಲು ಬರುತ್ತಿರಲಿಲ್ಲ. +ತನ್ನ ಪೈಕಿ ರಾಕ್ಷಸರನ್ನು ಕರೆದುಕೊಂಡು ಬಂದಳು. +ಅವರಿಗೂ ಮರ ಹತ್ತಲು ಬರುತ್ತಿರಲಿಲ್ಲ. +ರಕ್ಕಸಿಯ ತಲೆಯ ಮೇಲೆ ಒಬ್ಬ, ಅವನ ತಲೆಯ ಮೇಲೆ ಒಬ್ಬ ಈ ಪ್ರಕಾರವಾಗಿ ಒಬ್ಬನ ತಲೆಯ ಮೇಲೆ ಇನ್ನೊಬ್ಬ ಹತ್ತಿದರು. +ತುದಿಗೆ ಇದ್ದವನು ಅವರನ್ನು ಹಿಡಿಯಬೇಕೆಂದು ಕೈಚಾಚಿದನು. +ಆಗ ಶಂಕರತಮ್ಮನು ತನ್ನ ಕೈಯಲ್ಲಿದ್ದ ಸುಣ್ಣದ ಪಾತ್ರೆಯನ್ನು ತೆಗೆದು ನೆಲದ ಮೇಲೆ ನಿಂತಿದ್ದ ರಕ್ಕಸಿಯ ಕಣ್ಣಿಗೆ ಹೊಡೆದನು. +ಕಣ್ಣಿಗೆ ಸುಣ್ಣ ಮೆತ್ತಿದ ಕೂಡಲೆ, ರಕ್ಕಸಿ ಉರಿ ತಡೆಯಲಾರದೆ ಜಾಗ ಬಿಟ್ಟು ಓಡಿಹೋಗುವಾಗ ಶಂಕರತಮ್ಮನು ಕತಿಯನ್ನು ಬೀಸಿ ಒಗೆದನು. +ರಕ್ಕಸಿ ಓಡಿದಾಗ ಮೇಲೆ ಹತ್ತಿದ ರಕ್ಕಸರೆಲ್ಲಾ ನೆಲಕ್ಕೆ ಬಿದ್ದು ಸತ್ತುಹೋದರು. +ಕತ್ತಿಪೆಟ್ಟು ಬಿದ್ದ ರಕ್ಕಸಿಯೂ ಸತ್ತುಹೋದಳು. +ಕಡೆಗೆ ಶಂಕರ ತಮ್ಮನು ಮರದ ಟೊಂಗೆಗೆ ಕಟ್ಟಿದ್ದ ಹಗ್ಗ ಬಿಡಿಸಿ ಕೆಲಸಿ ತಮ್ಮನನ್ನು ಕೆಳಗಿಳಿಸಿದನು. +ಅವರಿಬ್ಬರೂ ಮನೆಗೆ ಹೋದರು. +೩೬.ಸಣ್ಣ ಬೆಳ್ಳ - ದೊಡ ಬೆಳ್ಳ. +ಸಣ್ಣ ಗೌಡ, ದೊಡ್ಡ ಗೌಡ ಗದ್ದೆ ಮಾಡಿದ್ದರು. +ತಮ್ಮನು ಗದ್ದೆ ಹೂಡಲಿಕ್ಕೆ ಹೋಗುತ್ತಿದ್ದನು. +ಅಣ್ಣನು ಬುತ್ತಿ ತಕ್ಕೊಂಡು ಹೋಗುತ್ತಿದ್ದನು. +ಒಂದು ದಿನ ಹೆಂಡತಿಯ ಹತ್ತಿರ, “ನೀನು ಬುತ್ತಿ ತಕ್ಕೊಂಡು ಹೋಗು. . . ನನಗೆ ಸವುಡಿಲ್ಲ. +ಚಾಕರಿ ಇದೆ, ನೀನೇ ತಕ್ಕೊಂಡು ಹೋಗು” ಅಂದನು. +ಹೆಂಡತಿಯು ಗದ್ದೆಯಲ್ಲಿದ್ದ ಮೈದುನನಿಗೆಂದು ಅನ್ನ ತಕ್ಕೊಂಡು ಹೋದಳು. +ಅವನು ಊಟ ಮಾಡಿ ಅತ್ತಿಗೆಯೊಡನೆ ಹೇಳಿದನು, “ಕೋಡ (ಕಾಡು) ಅಮಟೆ ಮರವಿದೆ. . . ತಿನ್ನುವಷ್ಟು ಅಮಟೆಕಾಯಿ ತಿಂದುಹೋಗು, ಮನೆಗೆ ತಕ್ಕೊಂಡು ಹೋಗಬೇಡ” ಅಂದನು. +ತಿನ್ನುವಷ್ಟು ತಿಂದಳು, ಮನೆಗೂ ಇಷ್ಟು ಕಾಯಿ ತಕ್ಕೊಂಡು ಕಟ್ಟಿಕೊಂಡಳು. +ಕೋಡ ಮಂಗಬಂದು ಆಚೆ ಹರಿದು, ಈಚೆ ಹರಿದು ಮೈಯನ್ನೆಲ್ಲಾ ಸೀಳಿ ಮೈಗೆಲ್ಲಾ ರಕ್ತ ಮಾಡಿದವು. +ಮನೆಗೆ ಹೋಗಿ ಮುಚ್ಚಿಕೊಂಡು ಸುಮ್ಮನೆ ಮಲಗಿದಳು. +ಗಂಡನು ಬಂದು, “ಏನಾಯಿತು? +ಯಾಕೆ ಮಲಗಿದ್ದಿ?” ಅಂತ ಕೇಳಿದನು. +“ಏನಾಗಿಲ್ಲ, ನಿಮ್ಮ ತಮ್ಮನ ಭಾಗ್ಯ” ಅಂದಳು. +ಬಂದವನು ಏನನ್ನೂ ಮಾತಾಡದೆ, ಕೇಳದೆ ತಮ್ಮ ಗದ್ದೆ ಹೂಡುವಲ್ಲಿ ಹೋದನು. +ತಮ್ಮ, ಅಣ್ಣ ಬಂದ ಅಂತ ನೋಡಿದನು. +ಹೂಡುವ ನೇಗಿಲಿನ ಗಳ್ಯ (ಎತ್ತುಗಳ ಜತೆ)ನಿಲ್ಲಿಸಿದನು. +ಅಣ್ಣನ ಕಾಲಿಗೆ ಬಿದ್ದನು. +ಅಣ್ಣನು ತಾನು ತೊಟ್ಟಿದ್ದ ಪಟಾಕತ್ತಿ ತೆಗೆದು ತಮ್ಮನ ಕೊರಳನ್ನು ಕಡಿದು ಬಂದುಬಿಟ್ಟನು. +ಏನೂ ವಿಚಾರ ಮಾಡದೆ ಕಡಿದಿದ್ದನು. +ಕೊರಳುಕಡಿದು ತಮ್ಮನ ದೇಹ ಬಿತ್ತಲ್ಲ, ಆಗ ಎರಡು ಎತ್ತುಗಳು ದೊಡ್ಡ ಬೆಳ್ಳ, ಸಣ್ಣ ಬೆಳ್ಳ ದೇಹಕ್ಕೆ ರುಂಡ ರೂಪಿಸಿ ನೊಣ ಬಂದು ಮುಕರದ ಹಾಗೆ ಕಾದುಕೊಂಡು ಉಳಿದವು. +ಕಡಲೇಳು ಸಮುದ್ರದ ಆಚೆ ಹೋಗಿ ಬೆಳ್ಳಿ ಬೆತ್ತ ಮತ್ತು ಮಾಯದ ಕುಂಚ ತೆಗೆದುಕೊಂಡು ಬಂದವು. +ತಂದು ಬೆಳ್ಳಿ ಬೆತ್ತ, ಮಾಯದ ಕುಂಚಗಳನ್ನು ತಮ್ಮನ ದೇಹದ ಮೇಲೆ ಎಳೆದವು. +ತಮ್ಮನು ಹೇಗೆ ನೇಗಿಲಿಗೆ ಗಳ್ಯ ಕಟ್ಟಿದನೋ ಅದೇ ರೀತಿಯಲ್ಲಿ ದೊಡ್ಡಬೆಳ್ಳ - ಸಣ್ಣ ಬೆಳ್ಳ ನಿಂತವು. +ಇವನು ಮೈಮುರಿದು ಎದ್ದು ಕೂತನು. +“ದೇವರೇ. . . ನಾನು ಎಂಥವನಪ್ಪ! +ಎತ್ತುಗಳ ಗಳ್ಯ ನೇಗಿಲಿಗೆ ಕಟ್ಟಿ ಎಷ್ಟು ಹೊತ್ತಾಯಿತು? +ಗಳ್ಯ ಬಿಡಬೇಕು” ಅಂತ ಬಂದು ನೇಗಿಲಿನ ಗಳ್ಯದಲ್ಲಿ ಕಟ್ಟಿಕೊಂಡಿದ್ದ ಎತ್ತುಗಳ ಕೊರಳುಗಳ ಹಗ್ಗ ಬಿಡಿಸಿದನು. +ಬಿಚ್ಚಿ ಕೊಟ್ಟಿಗೆಗೆ ತಕ್ಕೊಂಡು ಹೋಗುವಾ' ಅಂತ ಮಾಡಿದರೆ ಎರಡು ಎತ್ತುಗಳೂ ಕೊಟ್ಟಿಗೆಗೆ ಹೋಗಲಿಲ್ಲ. +"ಸಾಯಲಿ" ಎಂದು ಹೊಡೆದನು. +“ನೀನು ನಮ್ಮನ್ನು ಹೊಡೆಯಬೇಡ. . . ನಿನ್ನ ಅಣ್ಣ, ತನ್ನ ತಮ್ಮನೆಂದು ಕರುಣೆ ತೋರದೆ ಹೆಂಡತಿಯ ಮಾತಿನ ಮೇಲೆ ನಿನ್ನ ಕೊರಳನ್ನು ಕತ್ತರಿಸಿಹೋದನು. +ನಮ್ಮನ್ನು ಅರಿ(ಕಡಿ)ಯುತ್ತಾನೇನೋ? ಕೊಟ್ಟಿಗೆಗೆ ಹೋಗುವುದಿಲ್ಲ.” +೩೭.ಸಮಾ ಆಯಿತು. +ಒಂದು ಊರಿನಲ್ಲಿ ಶಂಕರ ಭಟ್ಟ , ಗೋವಿಂದ ಭಟ್ಟ ಇದ್ದರು. +ಶಂಕರ ಭಟ್ಟ ಶ್ರೀಮಂತ. +ಅವರು ಗಂಡ-ಹೆಂಡತಿ ಇಬ್ಬರೇ- ಅವರಿಗೆ ಮಕ್ಕಳಿರಲಿಲ್ಲ. +ಗೋವಿಂದ ಭಟ್ಟ ಬಡವ, ಅವನಿಗೆ ಐದಾರು ಜನ ಮಕ್ಕಳು, ದಿನಾಲು ಭಿಕ್ಷೆ ಬೇಡಲುಹೋಗಿ, ಬೇಡಿದ ಅಕ್ಕಿ ತಂದು ಸಂಸಾರ ಮಾಡುತ್ತಿದ್ದನು. +ಒಂದು ದಿನ ಬೇಡಲು ಹೋದಾಗ ಅಕ್ಕಿ ಸಿಗಲಿಲ್ಲ. +ಬಿಸಿಲಿನಲ್ಲಿ ತಿರುಗಿ ಸಾಕಾಗಿ (ದಣಿದು) ಮನೆಗೆ ಬಂದನು. +ಆ ದಿನ ಅನ್ನ ಮಾಡಲು ಅಕ್ಕಿಯಿರಲಿಲ್ಲ. +ಮಕ್ಕಳು ಹಸಿವೆಯೆಂದು ಕೂಗುತ್ತಿದ್ದರು. +ಅವನಿಗೆ ಜೀವನವೇ ಬೇಡವೆಂದು ವೈರಾಗ್ಯ ಬಂತು. +ಅಡವಿಗೆ ಹೋಗಿ ಮರ ಹತ್ತಿ ಕೆಳಗೆ ಹಾರಿ ಜೀವ ಬಿಡಲು ತಯಾರಾದನು. +ಪಾರ್ವತಿ-ಪರಮೇಶ್ವರರು ಆಕಾಶದಲ್ಲಿ ಲೋಕ ಸಂಚಾರಣೆಗೆ ಹೋಗುತ್ತಿದ್ದರು. +ಇಬ್ಬರೂ ಕೆಳಗಿಳಿದು ಬಂದು, “ಹೀಗೆ ಯಾಕೆ ಜೀವ ಕೊಡಲು ಮಾಡುವೆ?” ಅಂತ ಕೇಳಿದರು. +(ಅವನ ಕಷ್ಟ ತಿಳಿದು) ಮೂರು ವಿಭೂತಿ ಉಂಡೆ ಕೊಟ್ಟರು. +“ಮಿಂದು ಕೊಂಡುಭಕ್ತಿಯಿಂದ ಬೇಕಾದದ್ದನ್ನು ಧ್ಯಾನಿಸಿ ಉಂಡೆ ಒಡೆ” ಅಂದರು. +ಇವನು ಮನೆಗೆ ಬಂದು ಮಿಂದನು. +ಮನೆ ಅಂದರೇನು? +ಹರಕು ಗುಬ್ಬೆ (ಗುಡಿಸಲು),ಮಿಂದು ಭಕ್ತಿಯಿಂದ ಕೂತು, "ದೊಡ್ಡ ಮನೆಯಾಗಲಿ" ಎಂದು ಹೇಳಿ, ಒಂದು ವಿಭೂತಿ ಉಂಡೆ ಒಡೆದನು. +ದೊಡ್ಡ ಮನೆಯಾಯಿತು. +“ಕೊಟ್ಟಿಗೆ, ದನ-ಕರು ಆಗಲಿ” ಎಂದು ಮತ್ತೊಂದು ಉಂಡೆಯನ್ನು ಒಡೆದನು. +ಕೊಟ್ಟಿಗೆ, ದನ-ಕರು ಆದವು. +“ಬೇಕಾದ ಕಂಚು-ತಾಮ್ರ, ಬೆಳ್ಳಿ-ಬಂಗಾರ, ದುಡ್ಡು, ಸರ್ವ ಸಾಮಾಗ್ರಿ ಅಗಲಿ” ಎಂದು ಮೂರನೇ ಉಂಡೆಯನ್ನು ಒಡೆದನು. +ಅವನ ಬಡತನ ಹೋಗಿ ಶ್ರೀಮಂತಿಕೆ ಬಂತು. +ಮರುದಿನ ಇವನ ಹೆಂಡತಿಯೂ, ಶಂಕರ ಭಟ್ಟನ ಹೆಂಡತಿಯೂ ಬಾವಿ ನೀರಿಗೆ ಹೋಗುತ್ತಿದ್ದರು. +ಶಂಕರ ಭಟ್ಟನ ಹೆಂಡತಿ, “ನಿಮಗೆ ಇಷ್ಟೆಲ್ಲ ಶ್ರೀಮಂತಿಕೆ ಹೇಗೆ ಬಂತು?”ಅಂತ ಕೇಳಿದಳು. +“ತನ್ನ ಗಂಡನಿಗೆ ಅಡವಿಯಲ್ಲಿ ದೇವರು ಸಿಕ್ಕು, ಮೂರು ವಿಭೂತಿ ಉಂಡೆಕೊಟ್ಟು ಕಳಿಸಿದ್ದರು. +ಮೂರು ವಿಭೂತಿ ಉಂಡೆ ವಡೆದದ್ದರಿಂದಲೇ ಇಷ್ಟು ಸಂಪತ್ತಾಯಿತು?”ಅಂತ ಹೇಳಿದಳು. +ಶಂಕರ ಭಟ್ಟನ ಹೆಂಡತಿಯು ಮನೆಗೆ ಬಂದು ಗಂಡನಿಗೆ ಜೋರು ಮಾಡಿದಳು. +“ನೀವು ಸುಮ್ಮನೆ ಕೂತಿದ್ದೀರಿ. . . ಗೋವಿಂದ ಭಟ್ಟ ಬೇಡುತ್ತಿದ್ದವ ದೊಡ್ಡ ಶ್ರೀಮಂತನಾದ. +ಬೆಟ್ಟದಲ್ಲಿ ಹೋಗಿ ತೀಡಿದ. +ಪಾರ್ವತಿ-ಪರಮೇಶ್ವರರು ಬಂದು ಮೂರು ವಿಭೂತಿ ಉಂಡೆಕೊಟ್ಟು ಕಳಿಸಿದರು. +ಅವುಗಳನ್ನು ಒಡೆದದ್ದರಿಂದಲೇ ಅವನಿಗೆ ಇಷ್ಟು ಶ್ರೀಮಂತಿಕೆ ಬಂತು. +ನೀವೂ ಹೋಗಿ ದೇವರನ್ನು ಬೇಡಿಕೊಳ್ಳಿ ಅಂದಳು. +ಇವನು ಬೆಟ್ಟದಲ್ಲಿ ಹೋಗಿ ದುಃಖವಿಲ್ಲದಿದ್ದರೂ ದೊಡ್ಡದಾಗಿ ತೀಡಿದನು. +ಪಾರ್ವತಿ ಪರಮೇಶ್ವರರು ಬಂದರು. +ಮೂರು ವಿಭೂತಿ ಉಂಡೆ ಕೊಟ್ಟು, “ಇವನ್ನು ಒಡೆ ಬೇಕಾದ ಸಾಮಾನು ಆಗುತ್ತೆ” ಅಂತ ಹೇಳಿ ಕಳಿಸಿದರು. +ಅವನು ಬರುವುದನ್ನು ನೋಡಿದ ಅವನ ಹೆಂಡತಿಯು ಆತುರದಿಂದ ಓಡಿ ಬರುವಾಗ ಬಾಗಿಲ ಪಟ್ಟಿಗೆ ತಲೆ ಜಪ್ಪಿ ಹಣೆ ಒಡೆದು ಗಾಯವಾಯಿತು. +ಜಪ್ಪಿದಾಗ ಗಂಡನು, “ಸಮಾ ಆಯಿತು” ಅಂತ ಒಂದು ವಿಭೂತಿ ಉಂಡೆ ಒಡೆದನು. +ಅವಳಿಗೆ ಸಿಟ್ಟು ಬಂದು, “ನಿನ್ನ ಮೈಗೆಲ್ಲಾ ಜೇನುಹುಳು ಕಚ್ಚಲಿ” ಎಂದು ಹೇಳಿದಳು. +ಅವನು ಒಂದು ಉಂಡೆ ಒಡೆದನು. +ಅವನ ಮೈಗೆಲ್ಲಾ ಜೇನುಹುಳುಗಳು ಮುತ್ತಿ ಹೊಡೆದವು. +ಅವನು ವೇದನೆಯಿಂದ ಕೂಗ ಹತ್ತಿದನು. +“ಎಲ್ಲಾ ಹೋಗಲಿ ಎಂದು ವಿಭೂತಿ ಉಂಡೆಒಡೆ” ಎಂದಳು. +ಅವನ ಜೇನುಹುಳುಗಳೂ ಹೋಗಿದ್ದಲ್ಲದೆ ಅವನ ಎಲ್ಲಾ ಸಂಪತ್ತೂ ಹೋಗಿಬಿಟ್ಟಿತು. +೩೮.ಸಾಲಗಾರನ ಮೂರು ವಾರ(ನುಡಿಜೇನು, ಅಂಕೋಲಾ)ಓಬ್ಬನು ಮತ್ತೊಬ್ಬನಿಗೆ ಸಾಲ ಕೊಟ್ಟಿದ್ದನು. +ಅವನು ಸಾಲದ ಹಣದ ವಸೂಲಿಗಾಗಿ ಸಾಲಗಾರನ ಹತ್ತಿರ ಹೋಗಿ ಕೇಳಿದನು. +ಅವನು, “ಮೂರು ವಾರ ಕೂಡಿದಾಗ ಕೊಡುವೆ”ಅಂದನು. +ಎಷ್ಟು ದಿನ ವಸೂಲಿಗೆ ಹೋದಾಗಲೂ “ಮೂರು ವಾರ ಕೂಡಿಲ್ಲ. . . ಮೂರುವಾರ ಕೂಡಿದ ದಿವಸವೇ ಕೊಡುವೆ” ಅನ್ನುತ್ತಿದ್ದನು. +ಸಾಲಗಾರ ಜನರ ಮುಂದೆಯೂ ಸಹ ಹೀಗೇ ಹೇಳಿದ್ದ. +“ಸಾಲ ತಕ್ಕೊಂಡ ಮೂರುವಾರ ಕೂಡಿದಾಗ ಸಾಲ ತಿರುಗಿ ಕೊಡುವೆ ಎನ್ನುತ್ತಾನೆ. +ಮೂರು ವಾರ ಕೂಡುವುದು ಅಂದರೆ ಹೇಗೆ?” ಅಂತ ಒಬ್ಬನ ಹತ್ತಿರ ಕೇಳಿದನು. +ಅವನು ಉಪಾಯ ಹೇಳಿಕೊಟ್ಟನು. +ಏನೆಂದರೆ, “ಶನಿವಾರದ ದಿವಸ ದೇವಸ್ಥಾನಕ್ಕೆ ಕೊಡಲು ಪನವಾರ ಮಾಡು. +ಸಾಲಗಾರನನ್ನು ಆ ದಿನ ದೇವಸ್ಥಾನಕ್ಕೆ ಬರುವಂತೆ ಕರೆ. +ಅವನು ಬರುವನು ಜನಿವಾರ ತೋರಿಸಿ, ಇದು ಏನು?" ಎಂದು ಕೇಳು. +ಆತನು"ಇದು ಜನಿವಾರ" ಎಂದು ಹೇಳುವನು. +"ಇವತ್ತು ಯಾವ ವಾರ?"ಅಂತ ಕೇಳು. +ಅವನು, 'ಶನಿವಾರ' ಅಂತ ಹೇಳುವನು. +ನೀನು ದೇವರ ನೈವೇದ್ಯಕ್ಕೆ ಪನಿವಾರ ಮಾಡಿಸುವೆಯಲ್ಲ. +ಇದು ಏನು? ಅಂತ ಕೇಳು. +ಅವನು, 'ಪನಿವಾರ' ಅಂತ ಎಂದು ಹೇಳುತ್ತಾನೆ. +ಆಗ 'ಮೂರು ವಾರ ಕೂಡಿತು. . . ಸಾಲದ ಹಣ ಕೊಡು' ಎನ್ನು. +ಅವನು ಹಣಕೊಡಲೇ ಬೇಕು." +ಅದರಂತೆ ಅವನು ಸಾಲಗಾರನಿಗೆ ಶನಿವಾರ ದೇವಸ್ಥಾನಕ್ಕೆ ಬರುವಂತೆ ಹೇಳಿದನು. +ಪನಿವಾರ ಮಾಡಿಸಿಕೊಂಡು ಹೋಗಿ ದೇವರ ನೈವೇದ್ಯ ಮಾಡಿಸಿದನು. +ಸಾಲಗಾರನೂ ದೇವಸ್ಥಾನಕ್ಕೆ ಬಂದಿದ್ದನು. +ಪನಿವಾರವನ್ನು ಹಂಚಿದ ಮೇಲೆ ಜನಿವಾರ ತೋರಿಸಿ, "ಇದು ಏನು?" ಅಂತ ಕೇಳಿದನು. +“ಜನಿವಾರ” ಅಂದನು ಸಾಲಗಾರ. +“ಈವತ್ತು ಹಂಚಿದ್ದೇನು?”ಎಂದು ಕೇಳಿದನು. +“ಪನಿವಾರ” ಅಂತ ಹೇಳಿದನು. +“ಇವತ್ತು ಯಾವ ವಾರ?” ಅಂತಕೇಳಿದನು. +"ಶನಿವಾರ" ಎಂದನು. +“ಈಗ ನೋಡು, ಮೂರು ವಾರ ಆದವೋ ಇಲ್ಲವೋ? +ಈಗ ನಿನ್ನ ಮಾತಿನಂತೆ ಸಾಲತಿರುಗಿ ಕೊಡು” ಎಂದು ಕೇಳಿದನು. +ಸಾಲಗಾರ ಸಾಲದ ಹಣ ಕೊಡಲೇ ಬೇಕಾಯಿತು. +೩೯.ಸಿದ್ಧ ಶಿವ ಜೋಗಿ. +ಪಂಪಾತ್ಮ ವನವಾಸಕೆ ಹೋಗುವಂಗೆ ಒಬ್ಬ ಬೇಡು ಸನ್ಯಾಸಿ (ಸನ್ಯಾಸಿ) ಕೈಯಲ್ಲಿ ಜೋಳಿಗೆ ಕುಳ್ಸಕಂಡಿ ಹೋಗುವಾಗ, ಪರಮಾತ್ಮ ಬಟ್ಟರ ಯಾಸವನ್ನು ದರಸಿಗಂಡಿ ಬರತ್ತಿದ್ದ, ಬರವಂತ ಹೊತ್ತಗೆ ಈ ಬೇಡು ಸನ್ನೇಸಿ ಯದರಾದ. +ಪರಮಾತ್ಮ ಹೇಳಿದ, “ಅಯ್ಯೋ ಸನ್ನೇಸಿ. . . ಇಂತ ಯಾಸವನ್ನು ದರಿಸಿಕಂಡಿಹೋತ್ಯಪ್ಪ, ಇದು ನಿನಗೆ ಎಲ್ಲಿಯವರೆಗೆ ಕಾಲ ಸಾವತಿ?(ನರರ ಜಲ್ಮ ಹೇಗೆ ಹೊರದೆಗೋಗ್ತದೆ ಸಾಗಸ್ತದೆ? ಅಂತ ಆಗತದೆ)” ಅಂತ. +ಸನ್ಯಾಸಿಗೆ ಪರಮಾತ್ಮ ಅಂತ ಗೊತ್ತದ್ಯಾ?ಯಲ್ಲಿ? +ಬಟ್ಟರು, “ಪೂರ್ವದಲ್ಲಿ ಪಡೆದ ಪುಣ್ಯ ಇದು ನನ್ನದು. +ಇದಕ್ಕೆ ಯಾಸವನ್ನು ದರ್‌ಸಕಂಡಿ ದೇಸಾಂತ್ರಾಗಿ ನಾನು ದೇ(ಹಿ)ಯಂತ ಬೇಡ್ತ ಹೋಗ್ತೆ.” +“ಅಹಾ ಸನ್ನೇಸಿಯೇ. . . ನಿನಗೆ ಮನೆಯಲ್ಲಿ ಹೆಂಡರು-ಮಕ್ಕಳು ಇದ್ದಾರೇನೋ?” +“ಇಲ್ಲ. . . ಹೆಂಡರಿಲ್ಲ, ಮಕ್ಕಳಿಲ್ಲ, ಮದ್ವೆಯಾದವನಲ್ಲ.” +“ಹಾಂಗಾದ್ರೆ, ಒಂದು ಕೆಲಸ ಮಾಡು, ನಿನಗೊಂದು ವರವನ್ನು ಕೊಟ್ಟು ಹೋಗುತ್ತೇನೆ ನಾನು. +ಒಂದು ಹೆಣ್ಣು, ಒಂದು ಗಂಡು ಮಕ್ಕಳವನ್ನು ಕೊಡುತ್ತೇನೆ ನಿನಗೆ. +ಇದು ನಿನ್ನ ಮಕ್ಕಳಂತೇ ಸಾಕ್ಕಂಡಿ ಇರಬೇಕು. +ಅಂತಿ ಹೇಳು ಪರಮಾತ್ಮ ನಮ್ಮ ಜೇಬಿನಲ್ಲಿರುವಂತಾ ಚಾಕನ್ನ ತೆಗದಿ, ಮೈಯನ್ನ ಬೆಗರ(ಬೆವರು)ವನ್ನು ಹೆರಸಿ, ಯರಡ ಉಂಡಿಯನ್ನು ಮಾಡಿ,ಭೂಮಿಗೆನ್ನು ಹೊಡದಿ, “ಹೆಣ್ಣು ಒಂದು ಗಂಡಾಗಿ ಬರಬೇಕು” ಅಂತ ಹೇಳಿ ಶಾಪವನ್ನು ಕೊಟ್ಟಿದ್ದಾನೆ. + "ಜನ್ಮ ಜನ್ಮಾಂತರದಲ್ಲಿ ಹೆಣ್ಣು ಎಂಬುದು ಹೆಣ್ಣಿಗೆ ಲಗ್ನಾಗಿರಬೇಕು" ಅವರು ಈ ಪರಮಾತ್ಮನ ಬೆಗರಲ್ಲಿ ಜನಿಸಿದರು. +ಹೆಣ್ಣು-ಗಂಡು ಎರಡು ಅಂತ ಅವರಿಗೆ, ವಂದು ಹೆಣ್ಣು, ವಂದು ಗಂಡಾಗಿ ಭೂಮಿಯಲ್ಲಿ ಜನಿಸಿ ಬಂದ ಮೇಲೆ, ಜಗತ್ತಿನಲ್ಲಿ ಯೋಗಿಯೆಂಬ ಕುಲವೇ ವಾಸವಾಗಿತ್ತು. +ಇಲ್ಲ ಅಂತ ಹೇಳಿ. +"ಈ ಜೋಗಿ ಜಂಗಮನ ಯೇಸವನ್ನು ಇವತ್ತಿಗೆ ಕೊಡತೆ ಮಕ್ಕಳಿರಾ, ಇದೇ ಸನ್ಯಾಸಿಯೆಂಬವ ನಿಮಗೆ ಅಜ್ಜನಾಗಿರಬೇಕು. +ದಿನಕು ಮನಕು ಹೆಚ್ಚಾಗಿ ಬೆಳಕಂತೆ ಬರಬೇಕು" ಅಂತೆ ಪರಮಾತ್ಮನ ವರವನ್ನ ಕೊಟ್ಟೆ, ಮುತ್ತಿನ ಅರಮನಿಯ ಕಟ್ಟಿಸಿ,"ಆನಂದದಲ್ಲಿ ಉಳಿಕೊಳ್ಳಿ, ಮಕ್ಕಳಿರಾ. . . " ಹೇಳುತ್ತ ಹೇಳುತ್ತ ಇರುವಾಗ ವನವೆಲ್ಲ ತಿರುಗತ್ತ ರಕ್ಕಸಿಯೆಂಬಳ ಆ ವನು ತಿರುಗಿ, "ನರಮನಸರ ವಾಸನೆಯೇನು ಬರುತ್ತದೆ? +ಇಲ್ಲಿ ಇರುವಂತಾ ನರಮನಸರು ಯಾರು?" ಅಂತ ವಿಚಾರ ಮಾಡಲಾಗಿ ರಕ್ಕಸಿ ಬಂದಳು. +ಆಮೇಲೆ ಪರಮಾತ್ಮನು ಹಿಂದೆ ತಿರುಗಿ ನೋಡುವ ಸಮಯದಲ್ಲಿ, "ಆಹಾ!ರಕ್ಕಸಿ ಬಂದಳಲ್ಲ; +ಯರಡ ಜನ ಮಕ್ಕಳಿಗೆ ಅರಮನಿಯನ್ನ ಕಟ್ಟಿಸಿ ಇಟ್ಟಿ, ನನ್ನ ಕಯ್ಯಂದೇ ನರಕುಲಕ್ಕೇ ಹಾಳಾಗು ಹೊತ್ತು ಬಂತು ಇದು." +ಮಾಯದಿಂದ ಆಶತ್ರವನ್ನು ಬಿಟ್ಟಿದನೆ ಪರಮಾತ್ಮ, ಮೂಗು ಮೊಲೆಯನ್ನೇ ಮಾಯದಿಂದೆ ಕೊಯ್ದೇ ಬಿಟ್ಟಿದ್ದನು. +ಈ ಮಕ್ಕಳಿಗೆ, "ನಾನು ಹಾಗೆ ತಿಂತೆ, ಹೀಗೆ ತಿಂತೆ, ಹಸಿಯೇ ತಿಂತೆ, ಬಿಸಿಯೇ ತಿಂತೇ" ಎಂದು ಹೇಳಿದ ಹೊತ್ತಿಗೆ, ಪರಮಾತ್ಮನು ಯೆದಿಯನ್ನು ಶಿಗದಿ, "ನಾನು ಜನಿಸಿದ ಮಕ್ಕಳಿಗೆ ತಿನ್ನುವ ಯೋಗವೇ ನಿನಗಿಲ್ಲ. +ನಿನ್ನ ರದಿಯಲ್ಲಿರುವ ಕರಳನ್ನು ಬಗಿದೆ. +ಅವನ ಕೊರಳಿಗೆ ಕಾವಿಯ ಕಂತೆಯ ಮಾಡಿರುವೆ. . . +ನಿನ್ನ ಮಲೆಗಳನ್ನ ಯರಡ ಕೊಯ್ದ,ತಂಬೂರಿಗೆ ಬುರುಡೆಯನ್ನು ಮಾಡಿ ಕಟ್ಟಿಡುವೆ." +೪೦.ಸುಳ್ಳಾಡೆ - ಪಾಪ ನೋಡೆ. +ಒಬ್ಬ ಮುದುಕ ಬ್ರಾಹ್ಮಣನಿದ್ದನು. +ಅವನು ಅನುದಿನವೂ ಸಂಕಷ್ಟ ಚೌತಿ ವ್ರತ ಮಾಡುತ್ತಿದ್ದನು. +ಅವನಿಗೆ ಒಬ್ಬ ಹುಡುಗನಿದ್ದನು. +ಅವನು ಬಡವ. +ಮಗನಿಗೆ ವಿದ್ಯೆ ಕಲಿಯುವ ಸಲುವಾಗಿ ಒಬ್ಬೊಬ್ಬರ ಮನೆಯಲ್ಲಿ ಒಂದೊಂದು ದಿನ ವಾರದ ಊಟ ಮಾಡಲು ಗೊತ್ತು ಮಾಡಿದನು. +ರಾಜನ ಮನೆಯಲ್ಲೂ ಒಂದು ದಿನ ವಾರದ ಊಟ ಗೊತ್ತು ಮಾಡಿದನು. +ಮುದುಕ ತೀರಿಹೋದನು. +ಹುಡುಗನು ಖರೇ ಮಾತಾಡುತ್ತಿದ್ದನು. +ಎಲ್ಲರಿಗೂ ಕೈಮುದ್ದಾಗಿದ್ದನು. +ರಾಜನಿಗೆ ಇಬ್ಬರು ಹೆಂಡರಿದ್ದರು. +ಹಿರಿಯ ಹೆಂಡತಿಗೆ ಒಬ್ಬ ಮಗಳು, ಕಿರಿಯ ಹೆಂಡತಿ ಸುರುಚಿ. +ಹುಡುಗನು ರಾಜನ ಮನೆಗೆ ಹೋಗಿ ಕೈಮುಗಿದು ಬರುತ್ತಿದ್ದನು. +ಹಿರಿಯ ಹೆಂಡತಿಯ ಮಗಳು ಹೂವು ಕೊಯ್ಯಲು ತೋಟಕ್ಕೆ ಹೋದಳು. +ಮಂತ್ರಿಯ ಹುಡುಗ ಅವಳನ್ನುನೋಡಿ (ಅವಳ ಅಂದ ಚೆಂದಕ್ಕೆ) ಕಣ್ಣು ಬಿಡುತ್ತ ನಿಂತನು. +ವಾರದ ಹುಡುಗ ನೋಡಿ,ಅಲ್ಲೇ ನಿಂತನು. +ಹುಡುಗಿ ದೂರ್ವ ಕೊಯ್ದು ಮನೆಗೆ ಓಡಿಬಂದಳು. +ಸಂಜೆಗೆ ವಾರದ ಹುಡುಗ ಕೈಮುಗಿಯಲು ರಾಜನ ಹತ್ತಿರ ಬಂದನು. +ಕೈಮುಗಿದು ನಿಂತನು. +“ತಮ್ಮಾ. . . ನನ್ನ ಕಿರೀ ಹೆಂಡತಿಯ ಮಂದಿರದಲ್ಲಿ ಪಟ್ಟಾ ಕತ್ತಿಯಿದೆ. +ಅದನ್ನು ತಕ್ಕೊಂಡು ಬಾ” ಎಂದನು . +ಅಲ್ಲಿ ಮಂತ್ರಿಯೂ, ಸುರುಚಿಯೂ ಕೊಮ್ಮಣೆ (ಪ್ರಣಯದ ಮುರುಕು) ಮಾಡುತ್ತಿದ್ದರು. +'ಅಲ್ಲಿ ಹೋಗಿ ಪಟ್ಟಾ ಕತ್ತಿಯನ್ನು ಹೇಗೆ ತರಲಿ?' ಅಂತ ವಿಚಾರ ಮಾಡಿ, ಮುಖ ಹಣುಕಿಕೊಂಡು ಕತ್ತಿಯನ್ನು ತಂದು ರಾಜನಿಗೆ ಕೊಟ್ಟು, ಕೈಮುಗಿದು ತನ್ನ ವಿಚಾರಕ್ಕೆ ಹೋದನು. +“ಇಂದು ಸಂಕಷ್ಟ ಚೌತಿ ಮಗಳೇ, ನಿನ್ನ ಚಿಕ್ಕಿ(ಚಿಕ್ಕತಾಯಿ)ಯನ್ನು ಕರೆ” ಎಂದನು. +“ಅವಳು ಬರುವುದಿಲ್ಲ” ಎಂದಳು. +ಆಗ ರಾಜನೇ ಎದ್ದು ಅವಳಿದ್ದಲ್ಲಿಗೆ ಬಂದನು. +“ವಾರದ ಹುಡುಗನ ತಲೆ ಹೊಡೆದರೆ ಬರುವೆ” ಎಂದಳು. +ರಾಜ, “ತಲೆ ಹೊಡೆಯುವೆ” ಎಂದನು. +ಸಂಕಷ್ಟ ಚೌತಿಯ ಬ್ರಹ್ಮಚಾರಿಯಾಗಿ ವಾರದ ಹುಡುಗ ಬರಬೇಕಿತ್ತು. +"ನಾಳೆ ಹತ್ತು ಗಂಟೆಯ ವೇಳೆಗೆ ಈ ಮಾರ್ಗದಲ್ಲಿ ಹೋದವರನ್ನು ಪಟಾಗತ್ತಿಯಿಂದ ರುಂಡಹಾರಿಸಿ" ಎಂದು ಹುಕುಂ ಮಾಡಿದನು. +ಹತ್ತು ಗಂಟೆಗೆ ಮಂತ್ರಿಯ ಹುಡುಗ ಆ ಹಾದಿಯಲ್ಲಿ ಹೋಗುತ್ತಿದ್ದನು. +ಕೊಲೆಗಡುಕರು ಅವನ ರುಂಡ ಹಾರಿಸಿ ಗಟಾರದಲ್ಲಿ ಹಾಕಿದರು. +ವಾರದ ಹುಡುಗನು ರಾಜನಿಗೆ ಕೈಮುಗಿಯಲು ಬಂದನು. +“ನಿನ್ನೆ ಏನು ಮಾಡಿದೆ?”ಎಂದು ಕೇಳಿದನು. +ಕೈಮುಗಿದು ಹುಡುಗ ಹೇಳಿದನು, “ನಾನು ಅಪರಾಧ ಮಾಡಿಲ್ಲ. +ಸುಳ್ಳು ಮಾತಾಡೆನು, ಪಾಪ ನೋಡೆನು. +ಕತ್ತಿ ತಾ ಅಂದಿರಿ. +ನಿಮ್ಮ ಹೆಂಡತಿ ಮಂತ್ರಿಯ ಸಂಗಡ ಕೊಮ್ಮಶೆ (ಸರಸ) ಮಾಡುತ್ತಿದ್ದಳು. +ತಲೆ ಹಣುಕಿ ಕತ್ತಿ ತಂದೆ” ಎಂದನು. +ರಾಜನ ಮಗಳು ಅವನ ಮಾತು ಖರೆ ಅಂದಳು. +“ಹುಡುಗಾ, ನೀನು ಹೋದಾಗ ಉಳಿದು ಬಂದೆ” ಎಂದಳು. +ರಾಜ ಸುರುಚಿಯ ರುಂಡ ಹಾರಿಸಲು ಚಂಡಾಲರಿಗೆ ಹುಕುಂ ಕೊಟ್ಟನು. +ಮಗಳ ಹತ್ತಿರ ಹೇಳಿದನು, “ಈ ವಾರದ ಹುಡುಗನಿಗೆ ನಿನ್ನನ್ನು ಕೊಟ್ಟು ಮದುವೆ ಮಾಡುವೆ.” + ಅವಳು, “ಹುಂ” ಅಂದಳು. +೪೧.ಹರಹರ ಹರಹರ ಮಹಾದೇವ. +ಒಂದು ಊರಿನಲ್ಲಿ ಮಾದಾ ಜೋಯಿಸ ಎಂಬ ಬ್ರಾಹ್ಮಣನಿದ್ದನು. +ಅದೇ ಊರಲ್ಲೇ ಅವನು ಹೋಮ, ವ್ರತ ಮುಂತಾದ ವೈದಿಕ ಕರ್ಮ ಮಾಡಿಸುತ್ತ ಸಂಪಾದನೆ ಮಾಡುತ್ತಿದ್ದನು. +ಒಂದು ದಿನ ಸತ್ಯನಾರಾಯಣ ಕಥೆಯ ವ್ರತವನ್ನು ಮಾಡಿಸಿ, ಭಜಕರು ಕೊಟ್ಟಚೊಂಬು, ತಟ್ಟೆ, ಅಕ್ಕಿ, ತೆಂಗಿನಕಾಯಿ, ವಸ್ತ್ರ ಮುಂತಾದವನ್ನು ಕೂಡಿಸಿ ದೊಡ್ಡ ಗಂಟನ್ನು ಕಟ್ಟಿಕೊಂಡು ಅವನು ತಿರುಗಿ ಮನೆಗೆ ಬರುವಾಗ ದಾರಿಯಲ್ಲಿ ಸಂಜೆಯಾಗಿ ಹೋಯಿತು. +ಇವನು ಬರುತ್ತಿರುವಾಗ ನಾಲ್ಕು ಜನ ಕಳ್ಳರು ಸಿಕ್ಕರು. +ಅವರು ಈ ಬ್ರಾಹ್ಮಣನನ್ನು ನೋಡಿದರು. +“ಭಟ್ಟರೇ. . . ನಿಮಗೆ ಯಥೇಚ್ಛ ಉಂಡು ಉಂಡು ನಿಮ್ಮ ಹೊಟ್ಟೆ ಬಹಳ ಭಾರವಾಗಿ ಹೋಗಿದೆ. +ನಾವು ನಿಮ್ಮ ಬೊಕ್ಕಸ ಕಸಿದುಕೊಂಡು, ನಿಮ್ಮ ಈ ಭಾರವನ್ನು ಕಡಿಮೆ ಮಾಡುತ್ತೇವೆ” ಅಂದರು. +“ನೀವು ನನ್ನ ಬೊಕ್ಕಸವನ್ನು ಯಾಕೆ ಕಸಿಯುತ್ತೀರಿ? +ನಿಮ್ಮ ಕಸುಬು ನಿಮಗೆ; +ನನ್ನ ಕಸುಬು ನನಗೆ. +ಹೇಗಾದರೂ ಅದೆ” ಎಂದನು. +ಆಗ ಕಳ್ಳರು, “ನಾವು ಒಂದು ದಿಕ್ಕಿಗೆ ಕಳುವುದಕ್ಕೆ ಹೋಗಬೇಕೆಂದು ಮಾಡಿದ್ದೇವೆ. +ನೀವೂ ನಮ್ಮ ಸಂಗಡ ಬರುವಿರೋ ಹೇಗೆ? +ಬರಲೇಬೇಕು. . . ಇಲ್ಲದೇ ಹೋದರೆ ನಿಮ್ಮಬೊಕ್ಕಸ ಕಸಿಯುತ್ತೇವೆ” ಅಂತ ಹೇಳಿದರು. +ಭಟ್ಟನು, “ನಾನು ನನ್ನ ಬೊಕ್ಕಸವನ್ನು ಮನೆಯಲ್ಲಿ ಇಟ್ಟುಬರುತ್ತೇನೆ” ಅಂತ ಹೇಳಿದನು. +ಕಳ್ಳರು, “ನೀವು ಹೋದ ಮೇಲೆ ತಿರುಗಿ ಬರುವುದಿಲ್ಲ. +ನಿಮ್ಮ ಬೊಕ್ಕಸವನ್ನು ನಾವೇ ಇಟ್ಟುಕೊಳ್ಳುತ್ತೇವೆ” ಎಂದರು. +ಆಗ ಅವನು ತನ್ನ ಬೊಕ್ಕಸವನ್ನು ಅವರ ಹತ್ತಿರ ಕೊಟ್ಟನು. +ಇವನ ಮುಂದೆಯೇ ಅವರು ಅವನ ಬೊಕ್ಕಸವನ್ನು ಒಂದು ಹಿಂಡಿನ ಮರೆಯಲ್ಲಿ ಇಟ್ಟರು. +ರಾತ್ರಿಯಾಯಿತು, ಅವರು ರಾಜನ ಮನೆಗೆ ಕನ್ನ ಹಾಕುವುದಕ್ಕೆ ಭಟ್ಟನನ್ನು ಕರೆದುಕೊಂಡು ಹೋದರು. +ನಾಲ್ಕೂ ಜನ ಕಳ್ಳರು ರಾಜನ ಮನೆಯ ಬೆಳಕಿಂಡಿಯನ್ನು ಕಿತ್ತು ಕನ್ನ ಹೊಡೆದರು. +ಒಬ್ಬನು ಆ ಕಿಂಡಿಯಲ್ಲಿ ಹೊಕ್ಕು ಹೊರಗೆ ಬರುವಷ್ಟು ದೊಡ್ಡ ಕಿಂಡಿಯಾಗಿತ್ತು. +ಅವರು ಮೊದಲುಮಾದಾ ಜೋಯಿಸನನ್ನು ಒಳಗೆ ಹೊಗಿಸಿದರು. +ದೇವರ ಕೋಣೆಯಲ್ಲಿ ಹಿತ್ತಾಳೆಯ ತಂಬಿಗೆಯನ್ನೂ, ಹರಿವಾಣಗಳನ್ನೂ ತಿಕ್ಕಿ ಬೆಳಗಿಸಿ ಇಟ್ಟಿದ್ದರು. +ಅದನ್ನು ಹೊರಗಿನಿಂದ ಕಿಟಕಿಯಲ್ಲಿ ನೋಡಿದ್ದ ಕಳ್ಳರಿಗೆ ಅವು ಚಿನ್ನದ ಸಾಮಾಗ್ರಿಗಳೆಂದೇ ಕಂಡಿದ್ದವು. +ಅದರಿಂದ ದೇವರ ಕೋಣೆಯ ಕಿಟಕಿಯನ್ನೇ ಅವರು ಕಿತ್ತಿದ್ದರು. +ಒಳಗೆ ಹೊಕ್ಕ ಜೋಯಿಸನು ಒಂದೆರಡು ಸಾಮಾನುಗಳನ್ನು ತೆಗೆದು ಕಳ್ಳರ ಕೈಗೆ ಕೊಟ್ಟನು. +ಅವರು ತಕ್ಕೊಂಡರು. +ಆಮೇಲೆ ಜೋಯಿಸನು ದೇವರನ್ನು ಕಂಡನು. +ದೇವರ ಪೂಜೆಯನ್ನು ಮಾಡಿ ಮುಗಿಸಿದ್ದರು. +ದೇವರ ಮುಂದೆ ಕೂಡ್ರಲು ಮಣೆ ಹಾಕಿದ್ದು ಇತ್ತು. +ಜೋಯಿಸನು ಆ ಮಣೆಯ ಮೇಲೆ ಹೋಗಿ ಕೂತನು. +ಗಂಟೆಯನ್ನು ಮೊದಲು ಸಣ್ಣ ಶಬ್ದ ಮಾಡಿ ತೂಗಿ, ಸಣ್ಣ ದನಿಯಲ್ಲೇ ಮಂತ್ರ ಹೇಳಿದನು. +ಕಡೆಗೆ ದೊಡ್ಡದಾಗಿ ಮಂತ್ರ ಹೇಳಹತ್ತಿದನು. +ಅಲ್ಲಿ ಆರತಿ ಇತ್ತು. +ಅದಕ್ಕೆ ನೆಣಿ(ಬತ್ರಿ)ಗಳನ್ನು ಹಾಕಿಕೊಂಡು, ನಂದಾದೀಪದಿಂದ ಆರತಿ ಹಚ್ಚಿ ದೊಡ್ಡ ಶಬ್ಧ ಬರುವಂತೆ ಗಂಟೆ ತೂಗಿ ಮಂಗಳಾರತಿ ಮಾಡಿದನು. +ಅವನಿಗೆ ದೇವರೆಂದರೆ ತುಂಬ ಭಕ್ತಿಯಿತ್ತು. +ಎದ್ದು ದೇವರಿಗೆ ನಮಸ್ಕಾರ ಮಾಡಿ ಏಳುವಾಗ ದೊಡ್ಡದಾಗಿ, “ಹರಹರ ಮಹಾದೇವ”ಎಂದು ಕೂಗಿದನು. +ರಾಜನು ಮಾಳಿಗೆಯ ಮೇಲೆ ಮಲಗಿದ್ದನು. +ಈ ಕೂಗು ಮಾಳಿಗೆಯ ತುದಿಯವರೆಗೂ ಹೋಗಿ ತಲುಪಿತು. +ಮೊದಲು ರಾಜನ ಹೆಂಡತಿ ಎದ್ದು ಇಳಿದು ಬಂದಳು. +ರಾಜನೂ ಎಚ್ಚರ ಹೊಂದಿ ಮೆತ್ತಿನಿಂದ ಇಳಿದು ಬಂದನು. +ರಾಣಿಯು ಜೋಯಿಸರನ್ನುಕಂಡು, “ಎಲಾ ಜೋಯಿಸರೇ! +ನೀವೂ ಇಂಥಾ ರೀತಿ ಕಳ್ಳತನ ಮಾಡಲಿಕ್ಕೆ ಬಂದಿರಾ?”ಅಂತ ಕೇಳಿದಳು. +ರಾಜನೂ ಬಂದು ನೋಡಿ, ಆಳು ಮಕ್ಕಳನ್ನೂ ಕರೆದನು. +ಅವರು ಬಂದರು. +“ಜೋಯಿಸರೇ, ನೀವೂ ಇಂಥ ಕೆಲಸ ಮಾಡುವಿರಾ?” ಅಂತ ರಾಜ ಕೇಳಿದನು. +ಆಳುಮಕ್ಕಳು ಬಂದು ಜೋಯಿಸನನ್ನು ಹಿಡಿದರು. +“ನನಗೆ ಹೊಡೆಯಬೇಡಿ. . . ಕಳ್ಳರು ಹೊರಗೆ ಇದ್ದಾರೆ. +ನನ್ನನ್ನು ಹಿಡಿದು ತಂದು, ಇಲ್ಲಿ ಕನ್ನ ಕೊರೆದು ನನ್ನನ್ನು ಕನ್ನದ ಕಿಂಡಿಯಲ್ಲಿ ಇಳಿಸಿದರು. +ನಾನು ದೇವರನ್ನು ನೋಡಿ ಮಂಗಳಾರತಿ ಮಾಡಿದೆ. +ನನಗೆ ಅದೇಅಭ್ಯಾಸ. . . ಕಳುವ ಅಭ್ಯಾಸ ನನಗಿಲ್ಲ. +ನನ್ನ ಬೊಕ್ಕಸವನ್ನೇ ಕಸಿದುಕೊಂಡಿದ್ದಾರೆ ಕಳ್ಳರು. +ಅವರನ್ನು ಹಿಡಿದು ನನ್ನ ಬೊಕ್ಕಸವನ್ನು ನನಗೆ ತಿರುಗಿ ಕೊಡಿಸಿರಿ. . . ಹೊಡೆಯಬೇಡಿ”ಅಂದರು. +ಆಳು ಮಕ್ಕಳು ಜೋಯಿಸರನ್ನು ಬಿಟ್ಟು ಹೊರಗಿದ್ದ ಕಳ್ಳರು ಓಡಿ ಹೋಗುವಾಗ ಅವರನ್ನು ಹಿಡಿದು ಅವರಿಗೆ ಚೆನ್ನಾಗಿ ಹೊಡೆದರು. +ಅಡಗಿಸಿದ್ದ ಜೋಯಿಸರ ಬೊಕ್ಕಸವನ್ನು ಕಳ್ಳರ ಕೈಯಿಂದಲೇ ತರಿಸಿ,ಜೋಯಿಸರದೇನೂ ತಪ್ಪಿಲ್ಲ ಎಂದು ಹೇಳಿ, ಜೋಯಿಸರನ್ನು ಅವರ ಮನೆಯವರೆಗೆ ಮುಟ್ಟಿಸಿ ಬಂದರು. +ಕಳ್ಳರನ್ನು ಬಂದೀಖಾನೆಯಲ್ಲಿ ಹಾಕಿ ಅವರಿಗೆ ಶಿಕ್ಷೆ ಮಾಡಿದರು. +೪೨.ಹಸೆ ಕೆಳಗೆ ನೀವೇ ಆಗಿತ್ತಾ. +ರಾಮ ಭಟ್ಟ, ಸುಬ್ಬಾ ಭಟ್ಟ ಅಣ್ಣ-ತಮ್ಮಂದಿರು. +ರಾಮ ಭಟ್ಟನಿಗೆ ಮಕ್ಕಳಿರಲಿಲ್ಲ. +“ನಿನ್ನ ಗಂಡ ದುಡಿದು ಏನು ಫಲ? +ನಿಮಗೆ ಮಕ್ಕಳಿಲ್ಲ. . . ಯಾತ್ರೆಗೆ ಹೋಗು ಎನ್ನು” ಎಂದು ಸುಬ್ಬಾ ಭಟ್ಟನು ಅತ್ತಿಗೆಯ ಹತ್ತಿರ ಹೇಳಿದನು. +ಅವಳು ಹೇಳಿದಾಗ, “ದುಡ್ಡಿಲ್ಲ” ಅಂದನು. +“ಯಾತ್ರೆಯ ಖರ್ಚಿಗೆ ಕೊಟ್ಟರೆ ಹೋಗದೆ ಏನು?” ಅಂತ ರಾಮ ಭಟ್ಟನ ಹೆಂಡತಿ ಹೇಳಿದಳು. +ಸುಬ್ಬಾ ಭಟ್ಟನು ಅವಳಿಗೆ ಒಂದು ನೂರು ರೂಪಾಯಿ ತಂದುಕೊಟ್ಟನು. +ರಾಮಭಟ್ಟನಿಗೆ ಅದನ್ನು ಅವಳು ಯಾತ್ರೆಗೆ ಹೋಗಲೆಂದು ಕೊಟ್ಟಳು. +ರಾಮ ಭಟ್ಟ ಯಾತ್ರೆಗೆ ಹೋಗಲು ತಯಾರಿ ಮಾಡಿಕೊಂಡು ಬಾಗಿಲಿನಲ್ಲೇ ಅಶ್ವತ್ಥಕಟ್ಟೆಯಿತ್ತು. +“ಅಶ್ವತ್ಥನಾರಾಯಣ. . . ಲಾಭ-ಲುಕ್ಸಾನು ಏನೇ ಆದರೂ ನೀನೇ ಆಬ್ರು(ಮರ್ಯಾದೆ ಕಾಯಿ) ಕಾಯಿ” ಎಂದು ಹೇಳಿ ಹೊರಟನು. +ರಾತ್ರಿ ಸುಬ್ಬಾ ಭಟ್ಟನು ಅಣ್ಣನ ಹೆಂಡತಿಯನ್ನು ಬಳಸಿಕೊಳ್ಳಬೇಕೆಂದು ಬಂದನು. +ಅತ್ತಿಗೆಗೆ ಮಿಂಡ ಬಂದನೆಂದು ತಿಳಿಯಿತು. +ಗಂಡನು ಮಲಗುವ ಮಂಚದ ಮೇಲೆ ಸುಬ್ಬಾಭಟ್ಟನನ್ನು ಮಲಗಿಸಿದಳು. +ಸೋದರಳಿಯ ಅಷ್ಟು ಹೊತ್ತಿಗೆ ಬಂದನು. +“ಅತ್ತೆಗಳೇ, ಆನಬಂಜೆ (ನಾನುಬಂದೆ)” ಎಂದನು. +“ಅಡಿಗೆಯಾಗಲಿಲ್ಲವೋ?” ಅಂತ ಕೇಳಿದನು. +ಉದ್ದಗೊರಟನ್ನು ತಕ್ಕೊಂಡೆ ಬಂದಿದ್ದನು. +ಸೋದರಳಿಯ, “ಮಾವಗಳು ಮಂಚಕ್ಕೆ ಉದ್ದುಗೊರಟನ್ನು ಹಾಕಬೇಕೆಂದಿದ್ದರು” ಎನ್ನುತ್ತಲೇ ಉದ್ದು ಗೊರಟನ್ನು ಉಜ್ಜುತ್ತ ಸುಬ್ಬಾ ಭಟ್ಟನ ಹಣೆ ಕೆತ್ತಿಗಾಯ ಮಾಡಿಬಿಟ್ಟನು. +ಸುಬ್ಬನು ಮಾತಾಡಲಿಲ್ಲ. +ನೋವನ್ನು ಸೈರಿಸಿಕೊಳ್ಳಲಾರದೆ ರಕ್ತಸುರಿವ ಹಣೆಯನ್ನು ಹಿಡಿದುಕೊಂಡು ಮನೆಗೆ ಹೋಗಿ ಉಪಚಾರ ಮಾಡಿಕೊಂಡನು. +“ಅತ್ತೇ ಅನ್ನ ಆಯಿತೋ?” ಅಂತ ಕೇಳಿ ಊಟ ಮಾಡಿ ಮಲಗಿ ಬೆಳಗ್ಗೆ ಎದ್ದುಹೋದನು. +ಅಳಿಯ ಮರುದಿನ ಮೈದುನನ ಗಾಯಕ್ಕೆ ಮದ್ದಿನ ಎಣ್ಣೆ ಹಚ್ಚಿ ವಾಗಾತಿ(ಉಪಚಾರ) ಮಾಡಲು ಅವನ ಮನೆಗೆ ಹೊರಟಳು. +ಮರುದಿನ ರಾತ್ರಿ ಸುಬ್ಬಾ ಭಟ್ಟ ಮತ್ತೆ ಅತ್ತಿಗೆಯನ್ನು ಬಳಸಲು ಬಂದನು. +ಪುಂಡಸೋದರಳಿಯನು ಆ ರಾತ್ರಿಯಲ್ಲೂ ಬಂದನು. + “ಅತ್ತೆಗಳೇ, ಆನಬಂಜೆ” ಅಂದನು. +ಆಗ ಅಳಿಯ ಬಂದನೆಂದು ಸುಬ್ಬಾ ಭಟ್ಟನನ್ನು ಬೇಗ ಬೇಗ ಹಸೆಯಲ್ಲಿ ಹಾಕಿ ಸುತ್ತಿ ಗೋಡೆಗೆ ನಿಲ್ಲಿಸಿ ಇಟ್ಟಳು. +“ಮಾವಗಳು 'ಹಸೆಗೆಲ್ಲ ಬಡಿದು ಧೂಳು ಕೂಡವಿ ಕಸಗುಡಿಸು' ಎಂದಿದ್ದರು”ಎಂದು ಹೇಳಿ, ದೊಣ್ಣೆ ತಕ್ಕೊಂಡು ಸುತ್ತಿ ನಿಲ್ಲಿಸಿದ್ದ ಹಸೆಗೆಲ್ಲ ಬಡಿದನು. +ಸುಬ್ಬಾ ಭಟ್ಟನಿಗೆ ಅರೆ ಜೀವವುಳಿಯಿತು. +ಪುಂಡಳಿಯ ಉಂಡು ಮಲಗಿದನು. +ಅತ್ತಿಗೆಯು ರಾತ್ರಿ ಎದ್ದು ಮೈದುನನಿಗೆ ಎಣ್ಣೆ ತಿಕ್ಕಿ ವಾಗಾತಿ ಮಾಡಿದಳು. +ಸುಬ್ಬಾಭಟ್ಟ ಮನೆಗೆ ಹೋಗಿ ಬಿಸಿ ನೀರು ಮಿಂದನು. +ಮೈ-ಕೈನೋವು ಗುಣವಾಗಲು ಒಂದು ತಿಂಗಳು ಬೇಕಾಯಿತು. +ಗುಣವಾಯಿತೆಂದು ಮತ್ತೆ ರಾತ್ರಿಯಲ್ಲಿ ಅತ್ತಿಗೆಯಿದ್ದಲ್ಲಿ ಹೋದನು. +ಅದೇ ಚಣ(ಕ್ಷಣ)ದಲ್ಲಿ ಪುಂಡಳಿಯನು, “ಅತ್ತೆಗಳೇ ಆನ ಬಂಜೆ” ಅಂತ ಹೇಳುತ್ತಲೇ ಬಂದನು. +ಮೈದುನನನ್ನು ಆಳೆತ್ತರದ ಕೊಳಗತಪ್ಪೇಲಿಯನ್ನು ನೀರು ಹಾಕಿ ಇಟ್ಟಿದ್ದರಲ್ಲಿ ಕೂಡ್ರಿಸಿದಳು. +“ಅತ್ತೆಗಳೇ, ಅನ್ನ ಮಾಡಿ” ಅಂತ ಹೇಳಿ, 'ಕಾಲು ತೊಳೆದುಕೊಂಡು ಬರುವೆ'ಅಂತ ಹೇಳಿ ಕೊಳಗತಪ್ಪಲಿಯ ನೀರನ್ನು ಚಂಬಿನಿಂದ ಮೊಗದು ಅವನ ತಲೆಯ ಮೇಲೆ ಅದರಿಂದಲೇ ಜಪ್ಪಿದನು. +ಕಾಲು ತೊಳೆದುಕೊಂಡು ಅನ್ನ ಆದ ಮೇಲೆ ಉಂಡುಮಲಗಿದನು. +ರಾತ್ರಿಯಲ್ಲೇ ಕೊಳಗತಪ್ಪಲಿಯಿಂದ ಹೊರಬಿದ್ದ ಮೈದುನನ ತಲೆಗೆ ಎಣ್ಣೆ ಹಚ್ಚಿ ತಿಕ್ಕಿ ಉಪಚಾರ ಮಾಡಿದಳು. +ಅವನು ಎದ್ದು ಮನೆಗೆ ಹೋಗಿ ಉಂಡವನು ಮಲಗಿದನು. +ನಾಲ್ಕು ದಿನಗಳ ಮೇಲೆ ಗಂಡನು ಮನೆಗೆ ಬಂದನು. +ಯಾತ್ರೆಗೆ ಹೋಗಿ ಬಂದವನು ಮನೆಯಲ್ಲಿ ನೆಂಟರಿಷ್ಟರನ್ನು ಕರೆದು ಸಮಾರಾಧನೆಯ ಊಟ ಮಾಡಿಸಲು ಸಿದ್ಧತೆ ಮಾಡಿದನು. +ಸುಬ್ಬಾ ಭಟ್ಟನೂ ಊಟಕ್ಕೆ ಹೋದನು. +ಕುಡಿಬಾಳೆ ಹಾಕಿದ, ಪಂಕ್ತಿಯಲ್ಲಿ ಊಟಕ್ಕೆ ಕೂತನು. +ಪುಂಡಳಿಯನೂ ಹೋಗಿದ್ದನು. +ಬೇರೆಯವರ ಬಾಳೆಗಳಿಗೆ ಲಾಡು ಬಡಿಸಿದರೂ ಸುಬ್ಬಾ ಭಟ್ಟನ ಬಾಳೆಗೆ ಅವನು ಲಾಡು ಬಡಿಸಲಿಲ್ಲ. +“ಅವನಿಗೆ ಲಾಡು ಬಡಿಸೋ” ಅಂದಳು ಅತ್ತೆ. +“ಬೇಡ ಅನ್ನುತ್ತಾರೆ (ಸಣ್ಣ ಮಾವಗಳು)” ಅಂದನು. +ಸುಬ್ಬಾ ಭಟ್ಟ ಕೂತಿದ್ದಲ್ಲಿ ಹೋಗಿ ಕೇಳಿದನು, “ಮಂಚದ ಮೇಲೆ ಮಲಗಿದ್ದವರು ನೀವೇ ಆಗಿತ್ತೋ?” ಅಂತ ಕೇಳಿದನು. +ಸುಬ್ಬಾ ಭಟ್ಟ ಮಾತಾಡದೆ ತಲೆ ತೂಗಿದನು. +ಮತ್ತೊಮ್ಮೆ ಹೋಳಿಗೆ ತುಂಬಿದ್ದ ಬುಟ್ಟಿಯ ತಕ್ಕೊಂಡು ಹೋಗಿ, ಬಾಳೆಗಳಿಗೆ ಹೋಳಿಗೆ ಬಡಿಸಿದನು. +ಸುಬ್ಬಾ ಭಟ್ಟನಿಗೆ ಹೋಳಿಗೆ ಬಡಿಸಲಿಲ್ಲ. +“ಅವನಿಗೆ ಹೋಳಿಗೆ ಬಡಿಸೋ” ಎಂದಳು ಅತ್ತೆ. +“ಹೋಳಿಗೆ ಬೇಡ(ಗಾಯಕ್ಕೆ ನಂಜಾಗುತ್ತದೆ) ಅನ್ನುತ್ತಾರೆ”ಎಂದನು. +ಪುಂಡಳಿಯ, “ಹಸೆಯ ಕೆಳಗೆ ಮಲಗಿದ್ದವರು ನೀವೇ ಆಗಿತ್ತಾ?” ಎಂದುಕೇಳಿದನು. +“ಅಲ್ಲ. . . ” ಅಂದನು ಸುಬ್ಬಾ ಭಟ್ಟ. +“ನೀರದಳ್ಳೆಯಲ್ಲಿ ಮಲಗಿದ್ದವರು ನೀವೇ ಆಗಿತ್ತಾ?” ಅಂತಾ ಕೇಳಿದನು. +(ಸುಬ್ಬಾಭಟ್ಟ ತಲೆ ಹಣುಕಿಕೊಂಡು) ಎದ್ದು ಕೈತೊಳೆಯಲು ಹೋದನು. +೪೩.ಹುಲಿ ತಯ್‌ಡ್‌ ಸಿಕ್‌ಚ್ಯಾದ್ದು. +ಹುಲಿ ನಾಟ್ನ ಮೇಗೆ ಮನಿಕಲ್‌ತಿತ್ತು. +ಆಚಾರಿ ಕಂಡಿ(ನಾಟು) ಕೊಯ್ವಲಿ ಬೆನಿ ಹೊಡ್ಡಿಟ್ಟೆದ್ದ. +ಹುಲಿ ಮನಗೂಕ ತರಾಶಾಯಂತ ಬೆಣಿ ಹಲ್ಲಲ್‌ ಕಚ್ಚಿ ಶೊಗಿತು (ಕೂತಲ್ಲಿ). +ಆದ್ರೆ ತಯಡು ಶೇರ್‌ ಹೋಯ್ತಂತೆ. +ಮರಾಟಿ ಬೆಟ್ಟ ತಿರಗೂಕ್‌ ಹೋಗಿದ್ದಂತೆ. +ಇದ್ಯೇನ್‌ಬಾಯ ಬಡ್ಕತದ್ಯಂತೆ ಹುಲಿ. +"ಓ ಗೌಡ” ಹೇಳ್‌ಕಂಡ ಕೂಗ್ತದ್ಯಂತೆ. +ಆಗಿವ್ಗೆ ಪಾಪ ಕಂಡ್ತಂತೆ. +ಹುಲಿಗಾಗ್‌ ಮಾತ ಬರ್‌ತಿತ್ತಂತೆ. +ಆಗ ಆಗೆ ಮರಾಟಿ ಬಂದವ, “ಹುಲ್ಯಣ್ಣಾ,ನಿನ್‌ ಯೇನಾಯ್ತು?” ಕೇಳ್ದನಂತೆ. +ಹಂಗರ್‌ ಮರಾಟೀ, ತನ್‌ಗತಿ ಇಲ್ಲಿಗೇ ಮುಗೀತು,ನೀಯೇನಾರೂ ಉಪಕಾರ ಮಾಡಿದ್ರೆ ತಾನ್‌ ಬದೀಕಲ್ಲುದು ಅಂತಂತೆ.” + ಆಗ ಮರಾಟಿ ಯೇನಂದನಂತೆ? +“ನೀನು ಹುಲಿ. . . ನಾನು ಮನಶಾ. +ನಿನ್‌ಉಪಕಾರ ಮಾಡ್ಲಿಕ ನಾನು ಬಂದರೆ, ನನ್‌ ತಿನ್ನಲಿಕ್ಕೆ ನೀನು ತಯಾರಾದ್ರೆ ನಾನ್‌ ಯೇನ್‌ಮಾಡಬೇಕು? +ಹೌದು. . . ನನ್‌ ಮುರ್‌ದ ನೀ ತಿನವ್ಯಲ್ಲ.” +“ಇಲ್ಲ ನಾನು ಹಾಂಗೆಲ್ಲಾ ಮಾಡೋದಿಲ್ಲ. . . ನನ್‌ ಜೀವ ವಂದ್‌ ಬದಕ್ಸ್‌ ಹಾಕು”ಅಂತಂತೆ. +ಆಗವ ಹೋಗಿ ಆ ಬೆಣಿ ಮತ್ತೆ ಆ ಯೆಜ್ಜಿಗ್‌ (ಸಂದು) ಹಾಕಿ ಹಲಗೆ ಯಜ್‌ ಮಾಡಿ, ಅದ್ದತಪ್ಸದ ಅಂತಾಯ್ತ ಹುಲಿಗೆ. +ಆ ಹುಲಿ ಯೇನ್‌ ಮಾಡ್ತಂತೆ? +ಹಶವಾಗಿದ್ದಿತ್ತಂತೆ, ಮರಾಟಿನೇತಿಂಬೂಕ ಬೆನ್ನಟ್ಟಂತೆ. +ಮರಾಟಿ ಮುಂದೆ ವೋಡ್ದನಂತೆ ಹುಲಿ ಅವ್ನ ಬೆನ್ನಿಗೆ ವೋಡ್ತದ್ಯಂತಅಲ್ಲೇ ಒಂದು ಹೊಲ್ಲಲ್ಲಿ ವಂದ್‌ ನರಿ ಯೆಶಡೀ ಹಿಡೀತೇ ಇದ್ದಿತಂತೆ ತಿನ್‌ಲಿಕ್ಕೆ. “ಯೇಮಾರಾಯಾ. . . ಮರಾಟೀ. . . ಯಾಕ ವೋಡ್ತೆ ನೀನು? +” ಕೇಲ್ಪಂತೆ, “ಬಿದ್ರೆ ಹಲ್ಲಟ್ಟೂ ಮುರ್ದೆಹೋಗೂದು, ನೀ ನಿಲ್ಲು” ಅಂತಂತೆ. +ಆಗ ಮರಾಟಿಗ ಮರೆ ಮಾಡಿ ನರಿ ನಿಂತಂತೆ. +ಅಷ್ಟರಲ್ಲಿ ಹುಲಿ ಹೋಯಂತೆ ಅಲ್ಲಿಗೇಗ. +“ಹಾಗಾದ್ರೆ, ಹುಲಿಯಣ್ಣ ಯೆಲ್ಲಿಗೆ ಹೋಗ್ತೆನೀನು? +” ಕೇಳ್ತಂತೆ ನರಿಯಣ್ಣ, ಆಗದ ಹೇಳ್ತಂತ, “ನನ್ಗ ಹಶವಾಗಿದೆ. +ಮೂರ ನಾಲ್ಕದಿವಸವಾಯ್ತು ಊಟಿಲ್ಲದೀಗ. +ಈ ಮರಾಟಿಗೆ ತಿನ್ನಬೇಕಂತ ಬಂದ್ಯೆ ನಾನು. +” ಆಗ್ಯ ಮರಾಟಿಹತ್ರ ಕೇಳ್ತಂತೆ ನರಿ, “ಹಾಗರ್‌ ಮರಾಟೀ, ನೀ ಯೇನ್‌ ತಪ್‌ ಮಾಡ್ದೆ? +” ಕೇಳ್ಪಂತೆ. +ಈಹುಲಿ ಒಂದ ಕೊಯ್ದಿಟ್‌ ಕಂಡಿ ಮೇಲ್‌ ಮಲಗಿತ್ತು. +ಆ ಹಲ್ಲೆ ಬಿಡ್ಗಲಾಗಿತ್ತು. +ಆದ್ರೆ ಯೆಜ್ಜಿಲ್‌ಇದ್ರ ತೈಡ ಸಿಕ್ಕಿತ್ತು. +ನಾ ತಪ್ಪ ಹಾಕ್ದೆ. +ಅದ್ಕೆ ನನ್‌ ತಿನ್ನೂಕ ಬಂತು” ಅಂದನಂತೆ. +ಆಗ ನರಿ ಹೇಳ್ಪಂತೆ, “ನೋಡ್ವ ಅದ ಹ್ಯಾಂಗ ಸಿಕ್ಕಿತ್ತು? +' ಹೇಳಿ, “ನೀ ಹ್ಯಾಂಗ್‌ತಪ್ಸದೆ ಹೇಲ ನಾ ನೋಡಬೇಕು. +ಹೋಗ್ವಾ, ಅಲ್ಲಿಗೇ ಹೋಗ್ವಾ” ಅಂತ ಬಂದರಂತೆ. +ನರಿಮಾತ ಹುಲಿ ಕೇಲಬೇಕಂತೆ. +ಯವಾಗೂಗ ಅಲ್ಲಿಗೆ ಬಂದ ಹಳಗೆ ಕೊಯ್ವಲ್‌ ಬಂದರಂತೆ. +ಆಗ ನರಿ ಹೇಳುಂತೆ, “ಹುಲಿಯಣ್ಣಾ. . . ನೀನು ಹೇಗೆ ಮಳಗಿದ್ದೆ? +' ಹುಲಿ ಆದ್ರ ಮೇನ್‌ಹೋಗ ಮನ್ಗತು. +“ಅಲ್‌ ಹ್ಯೇಂಗ ಸಿಕ್ತು ನನ್ಗ ತೋರ್ಸು” ಅಂತಂತೆ ನರಿ. +ಬೆಣಿ ಹಾಕದ್ದೇಆ ತಯಡು ಹಲ್ಲೆ ಯೆಜ್ಜಿಲ್‌ ಸಿಕ್ಕಹಾಕ್ತಂತೆ. +೫ ರತ ಹೇಳಿದವರು: ದಿ. +ತೊಲಶಿ ಹನುಮಂತ ಗೌಡ, ದಿವಳ್ಳಿ. +(ಕತೆ ಹಾಲಕ್ಕಿ ಒಕ್ಕಲಿಗರ ಆಡುಭಾಷೆಯಲ್ಲಿದೆ. +)9 ಕೆಲವು ಪದಗಳ ವಿವರಣೆಕೂಗಿ - ಎಳೆಯುವದು. . . ಯೆಜ್ಜಿ ತೂತು, ಸಂದು ತಯಡ್‌ - ತರಡು8ಸಂಗ್ರಹ ೮ / ಪತ್ರಿಕೆಗಳಲ್ಲಿ ಬಂದ ಜನಪದ ಕಥೆಗಳು / ಪುಟ ೧೨೦ +೪೪.ಹೆಡ ಮೊಮ್ಮಗ. +ಒಂದೂರಿನಲ್ಲಿ ಒಬ್ಬ ಮುದುಕಿಯಿದ್ದಳು. +ಅವಳ ಮಗ-ಸೊಸೆ ಇಬ್ಬರೂ ಅವಳ ಮುಂದೆಯೇ ಕಣ್ಣುಮುಚ್ಚಿ ಒಬ್ಬ ಗಂಡು ಮಗುವನ್ನು ಬಿಟ್ಟುಹೋಗಿದ್ದರು. +ಅಜ್ಜಿ ತಮ್ಮಮನೆಯ ದೀಪದ ಕುಡಿ ಅವನೇ ಎಂದು ಪ್ರೀತಿಯಿಂದ ಅವನನ್ನು ಸಾಕಿದಳು. +ಆದರೆ,ಅವಳ ದುರ್ದೈವಕ್ಕೆ ಮೊಮ್ಮಗ ಬರೇ ಹೆಡ್ಡನಾಗಿದ್ದನು. +ಅಜ್ಜಿ ಅವನಿಗೆ ವಿದ್ಯೆ ಕಲಿಸಬೇಕೆಂದು ಮಠದ ಅಯ್ಯನವರ ಶಾಲೆಗೆ ಕಳಿಸಿದಳು. +ಆದರೆ, ಒಂದೂ ಅಕ್ಷರ ಕಲಿಸಲಾರದೆ ಅಯ್ಯನವರು, "ಇವನಿಗೆ ವಿದ್ಯೆ ಹಣೆಯಲ್ಲಿ ಬರೆಯಲಿಲ್ಲ. +ಕೆಲಸ ಕಲಿಸು, ದುಡಿದು ಹೊಟ್ಟೆ ಹೊರಕೊಳ್ಳಲಿ” ಎಂದು ಶಾಲೆ ಬಿಡಿಸಿಬಿಟ್ಟರು. +ಅಜ್ಜಿಯು, “ಮಗನೇ. . . ಶಾಲೆಯ ವಿದ್ಯೆಯಂತೂ ಸೊನ್ನೆಯಾಯಿತು. +ಚೆನ್ನಾಗಿ ಹೊಡೆದು-ಬಡಿದು ಗಟ್ಟಿಮುಟ್ಟಾಗಿ ಬೆಳೆದು, ಕೆಲಸ ಮಾಡಿಕೊಂಡಾದರೂ ಹೊಟ್ಟೆಹೊರೆದುಕೋ” ಎಂದಳು. +ಮೊಮ್ಮಗನು ಚೆನ್ನಾಗಿ ತಿಂದು-ತೇಗಿ ಕೆಲಸ ಮಾಡು ಎಂಬ ಅರ್ಥ ತಿಳಿಯದೆ,ಅಜ್ಜಿಗೆ ಹೊಡೆದು ಬಡಿದು, ಅವಳು ಮಾಡಿಟ್ಟ ಅಡಿಗೆಯನ್ನೆಲ್ಲಾ ತಾನೇ ಬಕ್ಕರಿಸ ಹತ್ತಿದನು. +ಅಜ್ಜಿಯು ಆಚೀಚೆ ಯಾರ ಮನೆಗಾದರೂ ಹೋಗಿ ಉಂಡು ಬರುತ್ತಿದ್ದಳು. +ಒಂದು ದಿನ ಅಜ್ಜಿಯು, “ಬಚ್ಚಲಿಗೆ ಬೆಂಕಿ ಒಟ್ಟಿ ನೀರು ಕಾಯಿಸು” ಎಂದು ಹೇಳಿದಳು. +ಮೊಮ್ಮಗನು ಬಚ್ಚಲಿಗೆ ಬೆಂಕಿ ಹಾಕಿ ಛಾವಣಿಯೆಲ್ಲ ಉರಿಯುತ್ತಿದ್ದಾಗ, “ಅಜ್ಜೀ. . . ಬಚ್ಚಲ ನೀರು ಕಾದಿದೆಯೋ ನೋಡು” ಎಂದೆನ್ನಲು ಬಚ್ಚಲಿಗೆ ಬಂದು ಅಜ್ಜಿ ನೋಡುವಷ್ಟರಲ್ಲಿ ಛಾವಣಿ ಬೆಂದುಹೋಗಿತ್ತು. +ಇನ್ನೊಂದು ದಿನ ಅಜ್ಜಿಗೆ ಜ್ವರ ಬಂದಿತ್ತು. + “ತಮ್ಮ. . . ಒಲೆಗೆ ಬೆಂಕಿ ಮಾಡಿ, ಅದರ ಮೇಲೆ ಅನ್ನಕ್ಕೆ ಇಡು. +ನಾನು ಎಳಲಾರೆ. . . ” ಎಂದಳು. +ಮೊಮ್ಮಗನು ಅಕ್ಕಿಯನ್ನೇ ಉರಿವ ಒಲೆಗೆ ಚಲ್ಲಿ ಕರಿಕಾದ ಅಕ್ಕಿಯನ್ನು ತಂದು ಅಜ್ಜಿಯ ಮುಂದೆ ಇಟ್ಟನು. + “ತಮ್ಮಾ. . . ದುಡ್ಡು ದುಡಿದು ತಂದು ಅಜ್ಜಿಗೆ ಕೊಡುವ ಬದಲಿಗೆ ಇದ್ದ ಸಾಮಗ್ರಿಯನ್ನೂ ಹಾಳು ಮಾಡುತ್ತೀಯಲ್ಲ. +ನೀನೂ ಎಲ್ಲರಂತೆ ಸರಿಯಾಗಿ ದುಡಿದು ತಿನ್ನಲಾರೆಯಾ? +ಎಷ್ಟುದಿನ ನಾನೇ ದುಡಿದು ನಿನ್ನ ಹೊಟ್ಟೆ ತುಂಬಬಹುದು?” ಎಂದು ಅಳಹತ್ತಿದಳು. +ಮೊಮ್ಮಗನು, “ಅಜ್ಜೀ, ನಾನು ಎಲ್ಲಾದರೂ ಹೋಗಿ ದುಡ್ಡು ತಂದುಹಾಕುತ್ತೇನೆ”ಎಂದು ಹೇಳಿ ಹೊರಟನು. +ಮಾರ್ಗದಲ್ಲಿ ಐದು ಜನ ಕಳ್ಳರು ಹೋಗುತ್ತಿದ್ದರು. +ಅವರು ಇವನನ್ನು ನೋಡದೆ ತಮ್ಮಷ್ಟಕ್ಕೆ ಹೋಗುತ್ತಿದ್ದರು. +“ಎಲಾ ಕಳ್ಳರಾ. . . ನನ್ನನ್ನು ನೋಡದೆ ಹೋಗುತ್ತೀರಲ್ಲ, ನಿಲ್ಲಿ. . . ” ಎಂದು ಕೂಗಿಹೇಳಿದನು. +ಕಳ್ಳರು ಹೆದರಿ ನಿಂತು, “ನಮ್ಮ ಗುರುತು ನಿನಗೆ ಹೇಗೆ?” ಎಂದು ಕೇಳಿದರು. +ಅವನು, “ನಾನು ನಿಮ್ಮ ಹಾಗೆಯೇ ದುಡಿಯಲು ಸಿದ್ಧನಾಗಿ ಹೊರಟಿದ್ದೇನೆ. +ನನ್ನನ್ನೂ ನಿಮ್ಮ ಜತೆಗೆ ತೆಗೆದುಕೊಳ್ಳಿ” ಎನ್ನಲು ಕಳ್ಳರು ಒಪ್ಪಿಕೊಂಡರು. +ಆ ದಿನ ರಾತ್ರಿ ಒಬ್ಬ ಶ್ರೀಮಂತನ ಮನೆಗೆ ಹೋಗಿ ಕನ್ನ ಹೊಡೆಯ ಹತ್ತಿದರು. +ಆಗ ಹೆಡ್ಡನು ದೊಡ್ಡದಾಗಿ, “ಗೋಡೆಗೆ ದೊಡ್ಡ ತೂತು ಮಾಡುತ್ತೇನೆ, ಮೊಕದ ಮೇಲೆ ಮಣ್ಣು ಉದುರುತ್ತದೆ, ಅಂಗಾತ ಮಲಗಿದವರು ಕಣ್ಣು ಮುಚ್ಚಿಕೊಳ್ಳಿ. . . ಅಲ್ಲದಿದ್ದರೆ ಬೋರಲಾಗಿ ಮಲಗಿರಿ” ಎಂದು ಹೇಳಿದನು. +ಮನೆಯ ಆಳು-ಕಾಳುಗಳಿಗೆಲ್ಲ ಎಚ್ಚರಾಗಿ, ದೊಣ್ಣೆ ತೆಗೆದುಕೊಂಡು ಕಳ್ಳರನ್ನು ಹಿಡಿಯಲು ಓಡಿ ಬಂದರು. +ಕಳ್ಳರು ಅಷ್ಟರಲ್ಲಿ ಓಡಿಬಿಟ್ಟಿದ್ದರು. +ಹೆಡ್ಡನನ್ನು ಹಿಡಿದು ಹೊಡೆಯಲು ನೋಡಿದಾಗ, “ನನ್ನನ್ನು ಕರೆದುಕೊಂಡು ಬಂದ ಕಳ್ಳರಿಗೆ ಕೊಟ್ಟ ಹೊರತು ನಾನು ಏನನ್ನೂ ತೆಗದುಕೊಳ್ಳುವುದಿಲ್ಲ. +ಅವರನ್ನು ಹುಡುಕಿಕೊಂಡು ತನ್ನಿ” ಎಂದನು. +ಆಗ ದನಿಯ ಮೇಲಿಂದ, 'ಕಳ್ಳರೊಡನೆ ಸೇರಿದ ಹೆಡ್ಡ ಇವನೇ ಮೊದಲು ಕೂಗಿ ನಮಗೆ ಎಬ್ಬಿಸಿದವನು' ಎಂದು ಶ್ರೀಮಂತನಿಗನಿಸಿ ಹೊಡೆಯಲು ಕೊಡದೆ ಹೆಡ್ಡನಿಗೆ ಕಳ್ಳರ ಸುಳಿವು ಕೊಟ್ಟಿದ್ದಕ್ಕೆ ನೂರು ರೂಪಾಯಿ ಬಹುಮಾನ ಕೊಟ್ಟು, “ಇನ್ನು ಇಂಥ ಕೆಲಸಮಾಡಬೇಡ” ಎಂದು ಹೇಳಿ ಕಳಿಸಿದನು. +ಹೆಡ್ಡನು ನೂರು ರೂಪಾಯಿ ತಕ್ಕೊಂಡು ಕಳ್ಳರನ್ನು ಅರಸುತ್ತ ಓಡಿಹೋಗಿ ಅವರನ್ನು ಸಂಧಿಸಿದನು. +ಕಳ್ಳರು, “ಮತ್ತೆ ನಮ್ಮ ಹತ್ತಿರ ಬಂದರೆ ಜೋಕೆ, ಪೊಲೀಸರ ಗುಲಾಮ”ಎಂದು ಗದರಿಸಿದರು. + “ಅಯ್ಯಾ. . . ನಾನೂ ಬರುತ್ತೇನೆ ಎಂದರೂ ಬಿಟ್ಟು ಅವಸರದಲ್ಲಿ ಬರಿಗೈಯಿಂದ ಬಂದು ನನ್ನನ್ನು ಬಯ್ಯಬೇಡಿರಿ. +ನೋಡಿ, ಮನೆಯ ಶ್ರೀಮಂತ ಎಷ್ಟು ಒಳ್ಳೆಯವನು. +ರೂಪಾಯಿ ನೋಟನ್ನು ಕೊಟ್ಟು ಕಳಿಸಿದ್ದಾನೆ” ಎಂದು ನೂರು ರೂಪಾಯಿ ನೋಟುಗಳನ್ನು ಕೊಟ್ಟನು. +ಆ ದಿನದ ಖರ್ಚಿಗೆ ತೊಂದರೆಯಾಗಿದ್ದ ಕಳ್ಳರು ಹೆಡ್ಡನನ್ನು ಕ್ಷಮಿಸಿ ಮತ್ತೆ ತಮ್ಮ ಜತೆಗೆ ಸೇರಿಸಿಕೊಂಡು, “ಇನ್ನು ಮಾತ್ರ ಕಳುವಲ್ಲಿ ಹೋದಾಗ ಕೂಗಬೇಡ” ಎಂದು ಹೇಳಿದರು. +ಆ ದಿನ ರಾತ್ರಿ ಕಳ್ಳರು ಒಬ್ಬ ಶ್ರೀಮಂತನ ಮನೆಗೆ ಕನ್ನ ಕೊರೆದು, “ಇಂದು ಈ ಹೆಡ್ಡನನ್ನೇ ಒಳಗೆ ಕಳಲು ಕಳಿಸುವಾ” ಎಂದು ಮಾತಾನಾಡಿಕೊಂಡು ಅವನಿಗೆ, “ಒಳಗೆ ಹೋಗಿ ಭಾರವಾದ ಸಾಮಾನು ತಕ್ಕೊಂಡು ಬಾ” ಎಂದು ಅವನನ್ನು ಕನ್ನದೊಳಕ್ಕೆ ಕಳಿಸಿದರು. +ಹೆಡ್ಡನು ಪೆಟ್ಟಿಗೆಗಳನ್ನು ಎತ್ತಿ ಎತ್ತಿ ನೋಡುತ್ತ ಇಟ್ಟು ಅಡುಗೆಯ ಮನೆಯೊಳಗಿನ ಒರಳು ಕಲ್ಲನ್ನು ಗುಂಡಿನ ಸಮೇತ ಹಿಡಿದೆತ್ತಿ- 'ಇದು ಭಾರವಾದ ವಸ್ತು' ಎಂದು ಅದನ್ನು ಕಳ್ಳರ ಹತ್ತಿರ ತಕ್ಕೊಂಡು ಬಂದನು. +ಅಷ್ಟರಲ್ಲಿ ಹೆಡ್ಡನ ಭಾರವಾದ ಹೆಜ್ಜೆಯ ಸಪ್ಪಳಕೇಳಿ ಆ ಶ್ರೀಮಂತನ ಮನೆಯವರು ಐಚ್ಛೆತ್ತು ಗದ್ದಲ ಮಾಡಿದ್ದರಿಂದ ಕಳ್ಳರು ಪಲಾಯನ ಮಾಡಿದರು. +ಅಡವಿಯಲ್ಲಿ ಕಳ್ಳರು ಹೆಡ್ಡನನ್ನು ಮನಸ್ವೀ ಬಯ್ದು, “ಇನ್ನು ನೀನು ನಮ್ಮ ಸಂಗಡ ಬರಬೇಡ” ಎಂದು ಹೇಳಿಬಿಟ್ಟರು. +ಹೆಡ್ಡನು, “ಅಯ್ಯಾ. . . ನಾನು ನಿಮ್ಮ ಜತೆಯಲ್ಲಿ ಬಂದದ್ದಕ್ಕೆ ನಿಮಗೆ ಆದ ನಷ್ಟವೇನು? +ನೂರು ರೂಪಾಯಿ ಲಾಭವೇ ಆಗಿದೆ. +ನಿಮಗೆ ನಾನು ಏನೂ ತೊಂದರೆ ಕೊಡುವುದಿಲ್ಲ,ನನ್ನನ್ನು ಬಿಟ್ಟು ಹೋಗಬೇಡಿ” ಎಂದು ಅಂಗಲಾಚಿದನು. +ಕಳ್ಳರು, “ಇದೊಂದು ಸಲ ನಿನ್ನ ಪರೀಕ್ಷೆ ಮಾಡುತ್ತೇವೆ” ಎಂದು ಅವನನ್ನು ತಮ್ಮಸಂಗಡ ಸೇರಿಸಿಕೊಂಡರು. +ಬೇರೆ ಊರಿಗೆ ಹೋಗಿ ರಾತ್ರಿಯಲ್ಲಿ ಒಂದು ದೇವಾಲಯ ಕಳುವುದಕ್ಕೆ ಹೋದರು. +ಅಲ್ಲಿ ಹೊರಗಿನ ಬಾಗಿಲಿನ ಬೀಗ ಮುರಿದು ಒಳಗೆ ಹೋದರು. +ಗರ್ಭಗುಡಿಯಲ್ಲಿ ಬಂಗಾರದ ಉತ್ಸವಮೂರ್ತಿಯನ್ನು ಸ್ಥಿರಮೂರ್ತಿಯ ಮುಂದೆಯೇ ಕೂಡಿಸಿದ್ದರು. +ಕಳ್ಳರಲೊಬ್ಬನು ಉತ್ಸವದ ಮೂರ್ತಿಯನ್ನು ಎತ್ತಿದ್ದನ್ನು ಕಂಡ ಹೆಡ್ಡನು ಡೋಲು ಬಡಿಯ ಹತ್ತಿದನು. +ಸುತ್ತಲಿನ ಜನ ಆ ಡೋಲಿನ ಶಬ್ಧಕ್ಕೆ ಎಚ್ಚೆತ್ತು ಎದ್ದುಬಂದರು. +ಕಳ್ಳರು ಓಡಿದರು. +ಹೆಡ್ಡ ಅವರ ಕೈಗೆ ಸಿಕ್ಕನು. +“ಏನೋ. . . ಅಪರಾತ್ರಿಯಲ್ಲಿ ಡೋಲು ಬಡಿದದ್ದೇಕೆ?” ಎಂದು ಕೇಳಿದರು. +“ನನ್ನ ಸಂಗಡ ಬಂದ ಐದು ಜನ ಕಳ್ಳರು ದೇವರಮೂರ್ತಿಯನ್ನು ಹೊತ್ತುಕೊಂಡು ಹೋಗುತ್ತಿದ್ದರು. +ನಾನು ದೇವರ ಸೇವೆಯೆಂದು ಡೋಲು ಬಡಿದೆನು” ಎಂದ. +ಆಗ ದೇವರ ಅಪಾರ ಚಿನ್ನದ ಆಭರಣಗಳು ಇವನಿಂದಲೇ ಕಳ್ಳರ ಕೈಗೆ ಬೀಳುವುದು ತಪ್ಪಿತೆಂದು ದೇವಾಲಯದ ಮುಖ್ಯರು ಹೆಡ್ಡನಿಗೆ ೨೦೦೦ ರೂಪಾಯಿ ಬಹುಮಾನ ಕೊಟ್ಟರು. +ರೂಪಾಯಿಗಳು ದೇವರ ಡಬ್ಬಿಗೆ ಹಾಕಿದ್ದ ಬೆಳ್ಳಿನಾಣ್ಯಗಳಾಗಿದ್ದವು. +ಹೆಡ್ಡನು ಅವನ್ನು ಹೊತ್ತುಕೊಂಡು ಬರುವಾಗ, 'ಈ ರೂಪಾಯಿಗಳಲ್ಲಿ ಗಟ್ಟಿ ರೂಪಾಯಿ ಯಾವುದು, ಪೊಳ್ಳು ಯಾವುದು ಎಂದು ಈಗಲೇ ಪರೀಕ್ಷೆ ಮಾಡಿಕೊಂಡು ಗಟ್ಟಿ ರೂಪಾಯಿಗಳನ್ನು ಮಾತ್ರ ಅಜ್ಜಿಗೆ ತೆಗೆದುಕೊಂಡು ಹೋಗಿ ಕೊಡಬೇಕು' ಎಂದು ನಿಶ್ಚಯಿಸಿ ಒಂದು ಮನೆಗೆ ಹೋಗಿ ಒಬ್ಬ ಹೆಂಗಸಿನ ಹತ್ತಿರ, “ಇವುಗಳಲ್ಲಿ ಗಟ್ಟಿ ನಾಣ್ಯಯಾವುದು, ಪೊಳ್ಳು ಯಾವುದು ಎಂದು ಗೆರಸಿಯಲ್ಲಿ ಗೇರಿ ಗೊತ್ತು ಮಾಡಿಕೊಡು” ಎಂದು ಹೇಳಿದನು. +ಹೆಂಗಸು ಇವನು ಬರಿಯ ಹೆಡ್ಡನೆಂದು ತಿಳಿದು ಮನಸ್ಸಿನಲ್ಲಿ ನಕ್ಕು, ಒಂದುಗೆರಸಿಯನ್ನು ತಂದು ನಾಣ್ಯಗಳು ಬಹಳಷ್ಟು ಗೆರಸಿಯಿಂದ ಬೀಳುವಂತೆ ಗೇರಿದಳು. +ಕೆಲವೇ ನಾಣ್ಯಗಳನ್ನು ಗೆರೆಸಿಯಲ್ಲಿ ಬಿಟ್ಟು, 'ಉಳಿದವೆಲ್ಲ ಪೊಳ್ಳು' ಎಂದು ಹೇಳಿ,ಅವನ್ನಷ್ಟೇ ಹೆಡ್ಡನಿಗೆ ಕೊಟ್ಟಳು. +ಹೆಡ್ಡನು ಅಜ್ಜಿಯ ಹತ್ತಿರ ಬಂದು ಆ ನಾಣ್ಯಗಳನ್ನು ಅವಳಿಗೆತೋರಿಸಿ, “ಅಜ್ಜೀ, ನಾನು ಮದುವೆಯಾಗಬೇಕು, ಹೆಣ್ಣು ಗೊತ್ತು ಮಾಡು” ಅಂದನು. +ಅಜ್ಜಿಯು, “ಹೆಡ್ಡನಿಗೆ ಯಾರು ಹೆಣ್ಣು ಕೊಡುತ್ತಾರೆ” ಎಂದಳು. +“ಕೊಡದಿದ್ದರೆ ನಾನೇ ಕೈಹಾಕಿ ತೆಗೆದುಕೊಂಡು ಬರುತ್ತೇನೆ” ಎಂದು ಹೇಳಿ ಅಜ್ಜಿ ಬೇಡವೆಂದರೂ ಕೇಳದೆ ಹೊರಟನು. +ಅಂಗಡಿಯಿಂದ ಹತ್ತು ಸೇರು ಭತ್ತ ತೆಗೆದುಕೊಂಡು ಒಬ್ಬ ಅಜ್ಜಿ ಮುದುಕಿಯ ಮನೆಗೆ ಹೋದನು. +ಅಜ್ಜಿ ಅವಳ ಹನ್ನೆರಡು ವರ್ಷದ ಮೊಮ್ಮಗಳು ಇಬ್ಬರೇ ಇದ್ದದ್ದು. +ಅಜ್ಜಿಯ ಹತ್ತಿರ, “ಅಜ್ಜಮ್ಮ. . . ಒಂದು ಸೇರು ಭತ್ತ ಕುಟ್ಟಿ ನನಗೆ ಅನ್ನ ಮಾಡಿಹಾಕು”ಎಂದನು. +ಮೊಮ್ಮಗಳು ಭತ್ತ ಕುಟ್ಟಿ ಅಡಿಗೆ ಮಾಡಿಹಾಕಿದಳು. +ರಾತ್ರಿಯಲ್ಲಿ ಅಜ್ಜಿ ಹೊರಗೆ ಮಲಗು ಅಂದರೂ, “ನನಗೆ ಹೆದರಿಕೆ” ಎಂದು ಹೇಳಿ ಒಳಗೇ ಮಲಗಿದನು. +ಮಧ್ಯರಾತ್ರಿಯಲ್ಲಿ ಎದ್ದು ಮೊಮ್ಮಗಳು ಮಲಗಿದ್ದ ಹಸೆಯನ್ನು ಅವಳ ಸಮೇತ ಸುತ್ತಿ ಕಂಕುಳಲ್ಲಿ ಹಾಕಿಕೊಂಡು ರಾತ್ರೋರಾತ್ರಿ ಹೊರಟನು. +ದಾರಿಯಲ್ಲಿ ಒಬ್ಬನು ಗದ್ದೆ ಉಳುತ್ತಿದ್ದನು. +“ನನಗೆ ಹೊರಗೆ ಹೋಗಬೇಕು, ಎಲ್ಲಿಹೋಗಲಿ?” ಎಂದನು ಹೆಡ್ಡ. +“ನೀರಿದ್ದಲ್ಲಿ ಹೋಗಬೇಕು. +ಓ. . . ಅಲ್ಲಿ ಹೊಳೆ ಕಾಣುತ್ತದೆ ಅಲ್ಲಿಗೆ ಹೋಗು. +ನಿನ್ನ ಮೊಟ್ಟೆಯನ್ನು ನಾನು ಕಾದುಕೊಳ್ಳುತ್ತೇನೆ, ಇಟ್ಟುಹೋಗು” ಒಕ್ಕಲಿಗನು ಹೇಳಿದನು. +ಒಕ್ಕಲಿಗನು ಹೆಡ್ಡನು ಹೋದ ಮೇಲೆ ಹಾಸಿಗೆ ಸುರಳಿ ಬಿಚ್ಚಿ ತೆಗೆದನು. +ಆ ಹುಡುಗಿಯನ್ನು ತನ್ನ ಮನೆಗೆ ಕಳಿಸಿ ಅವಳ ಬದಲಿಗೆ ಒಂದು ನಾಯಿಯನ್ನು ತಂದು ಹಾಸಿಗೆ ಸುರಳಿಯಲ್ಲಿ ಕಟ್ಟಿದನು. +ಹೆಡ್ಡನು ಮರಳಿ ಬಂದು ಹಸೆಯ ಸುರಳಿಯನ್ನು ಹೊತ್ತನು. +ನಾಯಿಯು ಒಳಗೆ ಮುಸಿಮುಸಿ ಶಬ್ದ ಮಾಡುತ್ತಲಿದ್ದರೂ ತಿಳಿಯದೆ ಮನೆಗೆ ಹೊತ್ತುಕೊಂಡು ಬಂದನು. +“ಅಜ್ಜೀ. . . ನಾನು ಹೆಂಡ್ರಿ ತಂದಿದ್ದೇನೆ. +ದೀಪ ಹಚ್ಚಿ ಮಣೆ ತಕ್ಕೊಂಡು ಬಾ” ಎಂದನು. +ಹಸೆ ಬಿಚ್ಚುವುದರೊಳಗೆ ನಾಯಿ 'ಕುಯ್‌'ಗುಡುತ್ತ ಓಡಿಹೋಯಿತು. +ಅಜ್ಜಿಯು, “ಹೆಡ್ಡ,ನೀನು ಎಲ್ಲಿ ಹೋದರೂ ಹೆಡ್ಡನೇ, ಮನೆಯಲ್ಲಿ ಇರು” ಎಂದು ಹಣೆ ಬಡಿದುಕೊಂಡಳು. +೪೫.ಹೆಡ್ಡರು ಎಮ್ಮೆ ಸಾಕಿದರು. +ಭಟ್ಟ ಮತ್ತು ಅವನ ಹೆಂಡತಿ ಭಡತಿ ಇದ್ದರು. +ಅವರಿಗೆ ಏಳು ಜನ ಗಂಡು ಮಕ್ಕಳು. +ಭಟ್ಟನು ಜೀವ ಬಿಡುವಾಗ ಏಳೂ ಜನ ಗಂಡು ಮಕ್ಕಳನ್ನು ಕರೆದನು. +ಏಳೂ ಜನರಿಗೂ ಎಂಟೆಂಟು ವರಹಗಳಂತೆ ಕೊಟ್ಟನು. +ಮತ್ತು ತನ್ನ ಬೊಜ್ಜ(ಕ್ರಿಯಾಚರಣೆ)ದ ಸಲುವಾಗಿ ಎಂಬತ್ತು ವರಹಗಳನ್ನು ಕೊಟ್ಟನು ಹಾಗೂ ಹೆಂಡತಿಯ ಬಗ್ಗೆ ಸಹ ಎಂಬತ್ತು ವರಹಗಳನ್ನು ಕೊಟ್ಟನು. +ಅವನು ಸತ್ತುಹೋದನು. +ಅಪ್ಪನ ಬೊಜ್ಜ ಮಾಡಿದರು. +ತಿಂಗಳೆರಡು ತಿಂಗಳಲ್ಲಿ ತಾಯಿಯೂ ಸತ್ತಳು. +ಅವಳ ಬೊಜ್ಜಕ್ಕೂ ಎಂಬತ್ತು ವರಹ ಖರ್ಚು ಮಾಡಿದರು. +ಮಾಸಿಕ ಹಾಗೂ ವರ್ಷ ಕಳೆದಾಗ ಮಾಡುವ ವರ್ಷಾಂತಿಕ, ಮಾಸಿಕಗಳಿಗೆ ಹಾಲು ಬೇಕಾಗುತ್ತಿತ್ತು; +ಮಜ್ಜೆಗೆಯೂ ಬೇಕಾಗುತ್ತಿತ್ತು. +ಎಮ್ಮೆ ತರಬೇಕೆಂದು ಏಳೂ ಜನರು ಹೊರಟರು. +ಏಳು ಜನರು ಅವರ ಹೆಂಡಿರು,ಮಕ್ಕಳ ಸಹಿತ ಎಮ್ಮೆಯ ಖರೀದಿಗೆ ಹೊರಟರು. +ಹೋಗುತ್ತ ಹೋಗುತ್ತ ಎರಡು ಮೂರು ದಿನ ಕಳೆದರು. +ಮಧ್ಯದಲ್ಲಿ ಒಂದು ಹೊಳೆ ಇತ್ತು. +ರಾತ್ರಿ ಅಲ್ಲಿಯೇ ಸಮೀಪದಲ್ಲಿ ಮಲಗಿಕೊಳ್ಳಬೇಕು ಎಂದಾಯಿತು. +ರಾತ್ರಿಗೆ ಹೊಳೆಗೆ ನಿದ್ರೆ ಬಂದುಬಿಡುತ್ತದೆ. +ಅದಕ್ಕೆ ನಿದ್ರೆ ಬಂದಾಗ ತಮ್ಮನ್ನೆಲ್ಲ ನುಂಗಿಬಿಟ್ಟರೆ ಎಂಬ ಹೆದರಿಕೆ ಅವರಿಗೆ ಇತ್ತು. +ಬೆಳಗಾದ ಮೇಲೆ ಹೊಳೆಯನ್ನು ಹಾಯ್ದು ದಾಟಬೇಕು ಅಂತ ನಿಶ್ಚಯ ಮಾಡಿದರು. +ಹೊಳೆ ದಂಡೆಯ ಮೇಲೆ ತಂಬನ್ನು ಹೊಡೆದರು. +ಬೆಳಕಾಯಿತು, ಹೊಳೆ ದಾಟಿ ಹೋಗಬೇಕಾಯಿತು. +ಹೊಳೆ ಹಾದುಕೊಂಡು ದಾಟಿಹೋಗಿ ಎಲ್ಲರ ಲೆಕ್ಕ ಮಾಡಿದರು. +ಏಳು ಜನ ಇದ್ದರು. +ಹೊಳೆ ನುಂಗಲಿಲ್ಲ ಎಂದು ಆಚೆಹೋಗಿ, ಆ ಊರಲ್ಲಿ ಮೂರು-ನಾಲ್ಕು ದಿನ ತಂಬು ಹೊಡೆದುಕೊಂಡು ಅಲ್ಲೇ ಇದ್ದರು. +ಅಲ್ಲಿ ಸಾವಿರಾರು ಎಮ್ಮೆ ಕಟ್ಟಿ ಹಾಕಿದ್ದರು. +ಎಮ್ಮೆಯ ಮಾಲಿಕನು ಒಂದು ಎಮ್ಮೆಯನ್ನು ಮೇಯಿಸಲು ಹೊಳೆಗೆ ತಕ್ಕೊಂಡು ಹೋಗಿದ್ದನು. +ಮೂರ್ನಾಲ್ಕು ಎಮ್ಮೆಗಳು ಹೊಳೆಯಲ್ಲಿ ಈಸುತ್ತಿದ್ದವು. +ಎಮ್ಮೆಯ ಮಾಲಿಕ ಅಲ್ಲೇ ಮಲಗಿಕೊಂಡಿದ್ದನು. +ಹಿಂಡಿನ ಆಚೆ ಅವನಿದ್ದನು. +ಒಬ್ಬ ಅಂದನು, “ತಮ್ಮಾ. . . ನೋಡೋ, ಈ ಎಮ್ಮೆಯ ನಾಲ್ಕು ಕಾಲುಗಳಿಗೆ ನಾಲ್ಕುವರಹ ಕೊಡಬಹುದು” ಅಂದನು. +ಮತ್ತೊಬ್ಬ, “ನೋಡೋ ಅಣ್ಣ, ಅದರ ಕೆಚ್ಚಲಿಗೆ ನಾಲ್ಕುವರಹ ಕೊಡಬಹುದು” ಅಂದನು. +ಮತ್ತೊಬ್ಬ ತಮ್ಮ, “ಅಣ್ಣ. . . ಅದರ ಕಣ್ಣು ಎಷ್ಟು ಚೆಂದ; +ಕಣ್ಣಿಗೇ ನಾಲ್ಕು ವರಹ ಕೊಡಬಹುದು” ಅಂದನು. +ಮತ್ತೊಬ್ಬ ತಮ್ಮ, “ಅದರ ಕೋಡಿಗೆ ನಾಲ್ಕು ವರಹ ಕೊಡಬಹುದು” ಎಂದನು. +ಎಮ್ಮೆಯ ಮಾಲಿಕ ಎದ್ದು ಬಂದನು. +ಏಳೂ ಜನರು, “ಈ ಎಮ್ಮೆಗೆ ನಾವು ಗಿರಾಕಿಗಳು, ಹೇಗೆ ಕೊಡುವೆ?” ಅಂತ ಕೇಳಿದರು. +“ಸಸಾರಕ್ಕೆ(ಸುಲಭವಾಗಿ) ಸಿಗುವ ಎಮ್ಮೆಯಲ್ಲ. +ಅದರ ಕಾಲಿಗೆ ನಾಲ್ಕು ವರಹ,ಕೆಚ್ಚಲಿಗೆ ನಾಲ್ಕು ವರಹ, ಬಾಲಕ್ಕೆ ನಾಲ್ಕು ವರಹ, ಕಣ್ಣಿಗೆ ನಾಲ್ಕು ವರಹ, ಕೋಡಿಗೆ ನಾಲ್ಕು ವರಹ. . . ಅಂತೂ ಒಟ್ಟು ಇಪ್ಪತ್ತು ವರಹ ಕೊಡಬೇಕು” ಅಂದನು. + ಅದರಂತೆ ಮಾತಾಡಿ ಅಷ್ಟು ವರಹ ಕೊಟ್ಟು ಎಮ್ಮೆಯನ್ನು ತಕ್ಕೊಂಡು ಹೊಡೆದುಕೊಂಡು ಬಂದರು. +ಎಮ್ಮೆಯನ್ನು ಹೊಡೆದುಕೊಂಡು ಬರುವಾಗ ದಾರಿಯಲ್ಲಿ ಹೊಳೆ. + “ಅಣ್ಣ. . . ರಾತ್ರೆ ಹೊಳೆ ಹಾಯಬಾರದು, ಹೊಳೆಗೆ ನಿದ್ರೆ ಬಂದಿರುತ್ತದೆ. +ಬೆಳಗು ಮುಂಜಾನೆ ಹಾಯೋಣ; +ಎಮ್ಮೆಯನ್ನು ಕಟ್ಟಿ ಹಾಕಿ ಇಲ್ಲೇ ಇರೋಣ” ಅಂದನು ಒಬ್ಬ ತಮ್ಮ. +ಬೆಳಗು ಜಾವದಲ್ಲಿ ಏಳು ಮಂದಿ ಗಂಡಸರು, ಏಳು ಹೆಂಗಸರು, ಮಕ್ಕಳೂ ಸಹ ಹೊಳೆಯನ್ನು ಹಾಯ್ದು ಎಮ್ಮೆ ಸಹಿತ ದಾಟಿ ಆಚೆ ಹೋದರು. +ಈಚೆ ದಡಕ್ಕೆ ಬಂದು ಜನರಲೆಕ್ಕ ಮಾಡಿದರು. +ಲೆಕ್ಕ ಮಾಡುವವರು ತನ್ನನ್ನು ಲೆಕ್ಕದಲ್ಲಿ ಹಿಡಿಯದೆ ಲೆಕ್ಕ ಮಾಡಿದರು. +ಪ್ರತಿಯೊಬ್ಬ ಅಣ್ಣ, ತಮ್ಮ ಲೆಕ್ಕ ಮಾಡುವಾಗಲೂ ಹೀಗೆಯೇ ಮಾಡಿದರು. +“ಒಬ್ಬ ಇಲ್ಲ. . . ಅವನನ್ನು ಎಲ್ಲಿ ಅರಸು(ಹುಡುಕು)ವುದು?” ಅಂತ ವಿಚಾರ ಮಾಡಿದರು. +ಅಲ್ಲೊಬ್ಬ ಕುದುರೆ ಕಾಸದಾರನಿದ್ದ. +ಅವನು, “ಏನಾಯಿತು? +ಈ ನಮೂನೆ ಗದ್ದಲ ಮಾಡುತ್ತೀರಿ?” ಅಂತ ಕೇಳಿದನು. +“ಮತ್ತೇನೂ ಇಲ್ಲ. +ನಾವು ಏಳು ಜನ ಅಣ್ಣ-ತಮ್ಮಂದಿರು ಹಳ್ಳ ದಾಟಿ ಬರುವಾಗ ಈ ಹೊಳೆ ಒಬ್ಬನನ್ನು ನುಂಗಿ, ಒಬ್ಬ ಕಮ್ಮಿಯಾದ. +ಅವನನ್ನು ಬಿಟ್ಟು ಮನೆಗೆ ಹೇಗೆ ಹೋಗುವುದು?” ಅಂತ ಕೇಳಿದರು. +ಕಾಸದಾರನು, “ನಾನು ಸರಿಯಾಗಿ ಲೆಕ್ಕ ಮಾಡಿಕೊಡುತ್ತೇನೆ, ನನಗೇನುಕೊಡುತ್ತೀರಿ?” ಅಂತ ಕೇಳಿದನು. +“ಮತ್ತೇನಿಲ್ಲ, ನಾಲ್ಕು ವರಹ ಕೊಡುತ್ತೇವೆ”ಅಂದರು. +ಕುದುರೆಗೆ ಹೊಡೆಯುವ ಚಾಟಿ (ಬಾರಕೋಲು) ತಕ್ಕೊಂಡು ನಿಂತುಕೊಂಡು,ಒಬ್ಬೊಬ್ಬರಿಗಿವ ಒಂದೊಂದು ಬಾರ ಹೊಡೆದು ಆಚೆಗೆ ನೂಕಿದ್ದ. +ಆಗ ಎಲ್ಲಾ ಜನರನ್ನೂ ಸರಿಯಾಗಿ ಲೆಕ್ಕ ಮಾಡಿ(ರಮಿಸಿ)ಕೊಟ್ಟನು. +ಅವನಿಗೆ ನಾಲ್ಕು ವರಹ ಕೊಟ್ಟು ಬಂದರು. +ಹಾಲು, ಮಜ್ಜಿಗೆ ಮಾಡಲು ಮಡಕೆ ಬೇಕು ಅಂತ ಕುಂಬಾರನ ಮನೆಗೆ ಹೋದರು. +ಅಲ್ಲಿ ಹೋಗಿ ಒಂದು ಚೂಳಿ (ರಂಧ್ರವುಳ್ಳ ದೊಡ್ಡ ಬುಟ್ಟಿ), ಪಾತ್ರೆಗಳನ್ನು ಹೆಕ್ಕಿದರು. +ದುಡ್ಡು ಎಷ್ಟು ಅಂತ ಕೇಳಿ, 'ನಾಲ್ಕು ವರಹ ಕೊಡುತ್ತೇವೆ' ಅಂತ ತಾವಾಗಿ ಹೇಳಿಕೊಟ್ಟರು. +ಚೂಳಿಯಲ್ಲಿ ಪಾತ್ರೆಗಳನ್ನು ಹಾಕಿಕೊಂಡು, ಎಮ್ಮೆಯನ್ನು ಹೊಡೆದುಕೊಂಡು ಮನೆಗೆ ಬಂದರು. +ತಕೊಂಡು ಬಂದು ಕೊಟ್ಟಿಗೆಯಲ್ಲಿ ಎಮ್ಮೆಯನ್ನು ಕಟ್ಟಿ ಇಟ್ಟರು. +ಹುಲ್ಲನ್ನು ಹಾಕಲಿಲ್ಲ, ಕರಡ ಸಹ ಹಾಕಲಿಲ್ಲ, ಆಕ್ಕಚ್ಚು ಸಹ ಕೊಡಲಿಲ್ಲ, ಅದರ ಹಾಲನ್ನೂ ಕರೆಯಲಿಲ್ಲ. +ಮಾಸಿಕದ ಮುನ್ನಾ ದಿನ ಹೆಂಗಸರು ಪಾತ್ರೆ ತಕ್ಕೊಂಡು ಎಮ್ಮೆಯ ಹಾಲನ್ನು ಕರೆಯಲು ಹೋದರು. +ಎಮ್ಮೆ ನಿಲ್ಲುತ್ತಿರಲಿಲ್ಲ. +ಅದಕ್ಕೆ ಏಳುವ ತ್ರಾಣವೂ ಇರಲಿಲ್ಲ; +ಹಾಲೂ ಕರೆಯಲಿಲ್ಲ. +ಇಪ್ಪತ್ತು ವರಹ ಕೊಟ್ಟು ತಂದಿದ್ದು. +ಏಳು ಜನ ಅಣ್ಣ-ತಮ್ಮಂದಿರೂ ಬಡತಿಗೆ ತಕ್ಕೊಂಡು ಹೋಗಿ ಎಮ್ಮೆಗೆ ಹೊಡೆಯ ಹತ್ತಿದರು. +ಎಮ್ಮೆ ಮೊದಲೇ ಆಹಾರವಿಲ್ಲದೆ ಸಾಯುವುದರಲ್ಲಿತ್ತು. +ಅದರ ಜೀವ ಹಾರಿಹೋಯಿತು. +ಗೊಬ್ಬರ ಕುಳಿಯಲ್ಲಿ ಎಮ್ಮೆಯನ್ನು ಒಗೆದರು. +ಹಾಲಿಲ್ಲದೆ, ಮಜ್ಜಿಗೆಯಿಲ್ಲದೆ ಮಾಸಿಕ ಸಾಗಿತು. +೪೬.ಹೊಸ ಗಂಡ. +ಮದರಗಿರಿ ಪಟ್ಟಣದಲ್ಲಿ ಒಬ್ಬ ರಾಜ. +ಒಬ್ಬ ಹುಡುಗ ಹತ್ತು ವರ್ಷ ಅವನ ಹತ್ತಿರ ಆಳಾಗಿ ಇದ್ದ. +“ರಾಜಾ. . . ನಾನು ಇನ್ನು ಎಷ್ಟು ದಿನ ಇಲ್ಲಿ ಇರಬೇಕು? +ಒಂದು ರೂಪಾಯಿ ಕೊಡು ಲಗ್ನ ಮಾಡಿಕೊಂಡು ಬರುವೆ” ಅಂದನು. +ರಾಜ ಒಂದು ರೂಪಾಯಿ ಕೊಟ್ಟನು. +ಅವನು ಚೆನ್ನಗಿರಿ ಪಟ್ಟಣಕ್ಕೆ ಹೋದನು. +ಅಲ್ಲಿ ಒಬ್ಬ ಸೂಳೆ. +ಇವನು ಬಹಳ ಚೆಂದ ಇದ್ದನು. +ಅವಳು ನೋಡಿ, “ಬಾ” ಎಂದು ಕರೆದಳು. +“ಯಾ ಊರು?” ಅಂತ ಕೇಳಿದಳು. +“ಮದರಗಿರಿ ಪಟ್ಟಣದ ರಾಜನ ಕಡೆ ನಾನು ಕೆಲಸ ಮಾಡಿಕೊಂಡು ಇರುವೆ” ಅಂದನು. +“ನಿನ್ನ ಹೆಸರೇನು?” ಅಂತ ಕೇಳಿದಳು. +“ಹೋದ ವರ್ಷ” ಅಂತ ಹೇಳಿದನು. +“ಇಲ್ಲೇ ಇದ್ದುಬಿಡು” ಅಂತ ಹೇಳಿದಳು. + “ಸರಿ. ” ನಾಲ್ಕು ತಿಂಗಳಾದವು. +ಸೂಳೆ ಒಂದು ಕಡೆ ರೊಕ್ಕ ವಸೂಲಿ ಮಾಡಲು ಹೋದಳು. +“ಹೋದ ವರ್ಷ, ಮನೆಯನ್ನು ಹುಷಾರಿಂದ ನೋಡಿಕೋ”ಅಂದಳು. +“ನಾನು ನೋಡಿಕೊಳ್ಳುತ್ತೇನೆ” ಅಂತ ಹೇಳಿದನು. +ಸೂಳೆ ಹೋಗಿಬಿಟ್ಟಳು. +ಇವನು ಪೆಟ್ಟಿಗೆಯೊಳಗಿನ ರೊಕ್ಕ ತಕ್ಕೊಂಡು ಬಂದು ಬಿಟ್ಟನು. +ಬಾವಿಗಿಡದ ಮೇಲೆ ಕುಂತುಕೊಂಡಿದ್ದ. +ಕುದುರೆಯ ಮೇಲೆ ಒಬ್ಬ ಬಂದ. +“ಕುದುರೆಯಪ್ಪ” ಅಂತ ಕರೆದನು. +“ನಿನ್ನ ಹೆಸರೇನು?” ಅಂತ ಕೇಳಿದ ಕುದುರೆಕಾರ. +“ಮದರಗಿರಿ ಪಟ್ಟಣದ ರಾಜನ ಆಳು.” + ಮತ್ತೆ, “ನಿನ್ನ ಹೆಸರೇನು?” ಅಂತ ಕೇಳಿದ. +"ಹಳೇ ಉದ್ದರಿಕಾರ" ಅಂದನು. +“ಕುದುರೆಯನ್ನು ಸ್ವಲ್ಪ ಇಟ್ಟುಕೊಂಡಿರು. . . ನೀರು ಕುಡಿದುಬರುವೆ” ಅಂತ ಹೇಳಿ ಹೋದನು. +ನೀರು ಕುಡಿದು ಬರುವಷ್ಟರಲ್ಲಿ ಕುದುರೆ ಹತ್ತಿಕೊಂಡು ರೊಕ್ಕದ ಮೂಟೆ ಇಟ್ಟುಕೊಂಡು ಹೋಗಿಬಿಟ್ಟ. +ಮುದುಕಿ ದೊಡ್ಡವಳಾದ (ಪ್ರಾಯದ) ಹುಡುಗಿಯನ್ನು ಕರೆದುಕೊಂಡು ಬಂದಳು. +“ಯಾವೂರಾಯಿತು?” ಅಂತ ಕೇಳಿದಳು ಮುದುಕಿ. +“ಮದರಗಿರಿ ಪಟ್ಟಣದ ರಾಜನ ಆಳು”ಎಂದನು. +“ನಿನ್ನ ಹೆಸರೇನು?” +“ಹೊಸ ಗಂಡ” ಅಂದನು. +ಮುದುಕಿ, “ಹುಡುಗಿಯನ್ನು ಸ್ವಲ್ಪ ನೋಡಿಕೋ, ನೀರು ಕುಡಿದು ಬರುತ್ತೇನೆ” ಅಂತಹೇಳಿ, ನೀರು ಕುಡಿದು ಬರುವಷ್ಟರಲ್ಲಿ ಹುಡುಗಿಯನ್ನು ಎತ್ತಿ ಕುದುರೆಯ ಮೇಲೆ ಹಾಕಿ ಮದರಗಿರಿ ಪಟ್ಟಣಕ್ಕೆ ಹೋದ. +ಮಾರನೆಯ ದಿನ ಸೂಳೆ ಬಂದಳು. +“ಪೆಟ್ಟಿಗೆಯೊಳಗಿನ ರೊಕ್ಕ ತಕ್ಕೊಂಡು ಹೋದ ಹುಡುಗ” ಅಂತ ರಾಜನ ಕಡೆ ಹೋಗಿ ಹೇಳಿದಳು. +“ಯಾರಂತ?” ಕೇಳಿದ ರಾಜ. +“ಹೋದವರ್ಷ ಅಂತ ಹೇಳಿದ.” +“ಹೋದವರ್ಷ ಹೋಗಿ ಇಷ್ಟು ದಿವಸ ಎಲ್ಲಿ ಹೋದ?”ಅಂತ ಕೇಳಿದ. +ಅವಳನ್ನು ಕಟ್ಟಿ ಹಾಕುವಂತೆ ಹೇಳಿದನು. +'ರೊಕ್ಕ ಬೇಡ, ಏನೂ ಬೇಡ'ಅಂತ ಹೇಳಿ ಸೂಳೆ ಓಡಿಬಿಟ್ಟಳು. +ಮಾರನೆಯ ದಿವಸ ಕುದುರೆಕಾರ ಬಂದು, “ಕುದುರೆ ತಕ್ಕೊಂಡು ಬಂದ ನಿಮ್ಮ ಆಳು”ಅಂತ ಹೇಳಿದ. +“ತಂದವ ಯಾರು?” ಅಂತ ಕೇಳಿದ ರಾಜ. +“ಹಳೆ ಉದ್ದರಿಕಾರ” ಅಂದನು. +“ಇಷ್ಟು ದಿವಸ ಅವನನ್ನು ಯಾಕೆ ತರಲಿಲ್ಲ?” ಹೀಗೆ ಹೇಳಿ, “ಕಟ್ಟಿ ಹಾಕಿ” ಹೇಳಿದ. +'ಕುದುರೆ ಹೋಯ್ತು, ಹೋಗಲಿ' ಅಂತ ಅವನೂ ಹೋಗಿಬಿಟ್ಟ. +ಮಾರನೆಯ ದಿನ ಮುದುಕಿ ಬಂದಳು. +“ನನ್ನ ಹುಡುಗಿಯನ್ನು ಎತ್ತಿಕೊಂಡು ಬಂದುಬಿಟ್ಟ ನಿಮ್ಮ ಆಳು” ಎಂದಳು. +“ಯಾರು?” ಅಂತ ಕೇಳಿದ. +“ಅವ ಹೊಸ ಗಂಡ ಅಂತ ಹೇಳಿದ.” ಎಂದಳು ಮುದುಕಿ. +“ಹೊಸ ಗಂಡ ತನ್ನ ಹೆಂಡತಿಯನ್ನು ಕರೆದುಕೊಂಡು ಹೋದರೆ ಯಾರ ತಪ್ಪು? +ನೀನೂ ಅವನ ಸಂಗಡ ಉಳಿದುಬಿಡು” ಅಂತ ಹೇಳಿದ ರಾಜ. +ಉತ್ತರ ಕನ್ನಡದ ನಶಿಸಿ ಹೋಗುತ್ತಿರುವ ಜಾನಪದ ಸಂಪತ್ತನ್ನು ಸಂಗ್ರಹಿಸಿ,ಉಳಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದ ಮಹಾಚೇತನ. +ಅಧ್ಯಾಪನದಿಂದ ನಿವೃತ್ತಿಯಾದ ನಂತರ ತಮ್ಮೆಲ್ಲಾ ಸಮಯವನ್ನು ಜಾನಪದ ಸಾಹಿತ್ಯ ಸಂಗ್ರಹ ಮತ್ತು ಸಂರಕ್ಷಣೆಯ ಕೆಲಸಕ್ಕೇ ಮೀಸಲಿಟ್ಟಿದ್ದ ಸಮಾಜಜೀವಿ. +ಜಾನಪದ ಕ್ಷೇತ್ರದಲ್ಲಿ ಅವರ ಸಾಧನೆ ಅಪೂರ್ವ. +ಅವರಿರುವಾಗ ಪ್ರಕಟವಾದ ಪುಸ್ತಕಗಳು ಹಾಗೂ ಅವರೇ ಬರೆದ ಪಾಂಡಿತ್ಯ ಪೂರ್ಣ ಪೀಠಿಕೆ, ಮುನ್ನುಡಿಗಳು ಜಾನಪದ ಕ್ಷೇತ್ರದಲ್ಲಿ ಅವರ ಅಳವಾದ ಅಧ್ಯಯನವನ್ನು ಎತ್ತಿ ತೋರಿಸುತ್ತವೆ. +ಉತ್ತರ ಕನ್ನಡದ ಬುಡಕಟ್ಟು ಜನಾಂಗಗಳ ಕುರಿತ ಅವರ ಅಧ್ಯಯನಗಳು ಅನನ್ಯ; +ಸಂಶೋಧನಾ ಪ್ರಬಂಧಗಳು, ಭಾಷಣಗಳು,ಜಾನಪದ ಲೇಖನಗಳು ಅಸಂಖ್ಯ. +ಈಗಾಗಲೇ ಅವರ 84 ಕೃತಿಗಳು ಪ್ರಕಟಣೆ ಕಂಡಿವೆ. +ಅವರ ಅಪಾರ ಸಂಗ್ರಹದಲ್ಲಿ ಪ್ರಕಟವಾಗದ ಜಾನಪದ ಸಾಹಿತ್ಯ ಇನ್ನೂ ಸಾಕಷ್ಟಿದೆ. +ಅವುಗಳಲ್ಲಿ ಕೆಲವನ್ನು ಆಯ್ದು ಅಪ್ರಕಟಿತ ಸಾಹಿತ್ಯ ಸರಣಿಯನ್ನು ಈ ಮೂಲಕ ಆರಂಭಿಸಲಾಗಿದೆ. +ಅವರ ಪುತ್ರಿ ಶ್ರೀಮತಿ ರೇಣುಕಾ ರಾಮಕೃಷ್ಣ ಭಟ್‌ರವರು ಈ ಸಂಗ್ರಹಗಳನ್ನು ನಾಡಿಗಾಗಿ ಸಂರಕ್ಷಿಸಿ,ಸಂಪಾದಿಸಿ ಕೊಟ್ಟಿದ್ದಾರೆ. -- GitLab