diff --git "a/Data Collected/Kannada/MIT Manipal/\340\262\225\340\263\215\340\262\260\340\262\277\340\262\252\340\263\215\340\262\270\340\263\215__\340\262\206\340\262\257\340\263\213\340\262\227.txt" "b/Data Collected/Kannada/MIT Manipal/\340\262\225\340\263\215\340\262\260\340\262\277\340\262\252\340\263\215\340\262\270\340\263\215__\340\262\206\340\262\257\340\263\213\340\262\227.txt" new file mode 100644 index 0000000000000000000000000000000000000000..0fb500bd4032f008623101b9eac64236741ca5f8 --- /dev/null +++ "b/Data Collected/Kannada/MIT Manipal/\340\262\225\340\263\215\340\262\260\340\262\277\340\262\252\340\263\215\340\262\270\340\263\215__\340\262\206\340\262\257\340\263\213\340\262\227.txt" @@ -0,0 +1,47 @@ +ಕ್ರಿಪ್ಸ್ ಆಯೋಗ ವೆಂಬುದು ಬ್ರಿಟಿಷ್ ಸರ್ಕಾರವು ಎರಡನೇ ಮಹಾಯುದ್ಧದಲ್ಲಿ ಭಾರತೀಯರ ಸಹಕಾರ ಮತ್ತು ಬೆಂಬಲ ಭದ್ರಪಡಿಸಿಕೊಳ್ಳಲು , 1942 ರ ಮಾರ್ಚ್ ನ ಅಂತ್ಯದಲ್ಲಿ ಮಾಡಿದ ಒಂದು ರೂಪದ ಪ್ರಯತ್ನವಾಗಿದೆ . +ಸರ್ ಸ್ಟ್ಯಾಫೋರ್ಡ್ ಕ್ರಿಪ್ಸ್ ರವರು ಈ ಆಯೋಗದ ನಾಯಕತ್ವ ವಹಿಸಿದ್ದರು . +ಇವರು ಹಿರಿಯ ಸಮಾಜವಾದಿ ರಾಜಕಾರಣಿಯಾಗಿದ್ದು , ಪ್ರಧಾನ ಮಂತ್ರಿ ವಿನ್ ಸ್ಟನ್ ಚರ್ಚಿಲ್ ರವರ ವಾರ್ ಕ್ಯಾಬಿನೆಟ್ (ಯುದ್ಧ ಸಂಸತ್ತಿನಲ್ಲಿ ) ನಲ್ಲಿ ಸರ್ಕಾರಿ ಮಂತ್ರಿಯಾಗಿದ್ದರು . +U.S .ನ ಪ್ರವೇಶ ಮತ್ತು ಬ್ಯಾಟಲ್ ಆಫ್ ಬ್ರಿಟನ್ ನೊಂದಿಗೆ , ಎರಡನೇ ಮಹಾಯುದ್ಧ ಬ್ರಿಟನ್ ಮತ್ತು ಯುರೋಪಿಯನ್ ರಾಷ್ಟ್ರಗಳ ಭವಿಷ್ಯದ ಮಟ್ಟಿಗೆ " ಮಾಡು ಇಲ್ಲವೇ ಮಡಿ " ರೀತಿಯದ್ದಾಗಿತ್ತು . +ಬ್ರಿಟಿಷ್ ಸರ್ಕಾರವು , ಬ್ರಿಟಿಷ್ ಭಾರತೀಯ ಸೈನ್ಯಕ್ಕೆ ಅಧಿಕ ಭಾರತೀಯರನ್ನು ಸೇರಿಸುವಲ್ಲಿ ಭಾರತದ ರಾಜಕೀಯ ನಾಯಕರ ಸಂಪೂರ್ಣ ಬೆಂಬಲ ಮತ್ತು ಸಹಕಾರ ಗಳಿಸಲು ಆಶಿಸಿತು . +ಇದು ಆಗ್ನೇಯ ಏಷ್ಯಾದಲ್ಲಿ ಜಪಾನ್ ನ ಸಾಮ್ರಾಜ್ಯಶಾಹಿಯ ವಿರುದ್ಧ , ಯುರೋಪ್ ಮತ್ತು ಉತ್ತರ ಅಮೇರಿಕ ದಲ್ಲಿ ಫ್ಯಾಸಿಸ್ಟ್‌‌‌ ಇಟಲಿ ಮತ್ತು ನಾಜಿ ಜರ್ಮನಿಯ ವಿರುದ್ಧ ಬ್ರಿಟಿಷ್ ಸೇನೆಯೊಂದಿಗೆ ಮತ್ತು ಮಿತ್ರರಾಷ್ಟ್ರಗಳಾದ ಆಸ್ಟ್ರೇಲಿಯನ್ , ನ್ಯೂಜಿಲೆಂಡರ್ ಮತ್ತು ಅಮೇರಿಕನ್ ಸೇನೆಯೊಂದಿಗೆ ಯುದ್ಧಮಾಡಿತ್ತು . +ಆಗ 1939ರಲ್ಲಿ ವೈಸ್ ರಾಯ್ ಆಗಿದ್ದ ಲಾರ್ಡ್ ಲಿನ್ ಲಿತ್ ಗೌ , ಹೋರಾಡುತ್ತಿರುವ ರಾಷ್ಟ್ರವಾದ ಭಾರತ , ಮಿತ್ರ ರಾಷ್ಟ್ರಗಳ ಪರವಾಗಿದೆ ಎಂದು , ಭಾರತೀಯ ರಾಜಕೀಯ ನಾಯಕರನ್ನು ಅಥವಾ ಚುನಾಯಿಸಲ್ಪಟ್ಟ ಪ್ರಾಂತೀಯ ಪ್ರತಿನಿಧಿಗಳೊಂದಿಗೆ ಮಾತುಕತೆ ನಡೆಸದೆಯೇ ಘೋಷಿಸಿದರು . +ಇದು ಭಾರತದಲ್ಲಿ ವ್ಯಾಪಕವಾದ ಮತ್ತು ಗಮನಾರ್ಹ ಕೋಪಕ್ಕೆ ಕಾರಣವಾಯಿತು . +ಅಲ್ಲದೇ ಭಾರತದಲ್ಲಿ ರಾಜಕೀಯ ಅವ್ಯವಸ್ಥೆ ಮತ್ತು ಸಾರ್ವಜನಿಕರ ಬಂಡಾಯವನ್ನು ಹೆಚ್ಚಿಸುವ ಮೂಲಕ ಪ್ರಾಂತೀಯ ಸರ್ಕಾರಗಳ ಚುನಾಯಿಸಲ್ಪಟ್ಟ ಕಾಂಗ್ರೆಸ್ ಪಕ್ಷದಸದಸ್ಯರು ಸಾಮೂಹಿಕ ವಾಗಿ ರಾಜೀನಾಮೆ ಕೊಡುವಂತೆ ಪ್ರಚೋದಿಸಿತು . +ಬ್ರಿಟಿಷರು ಭಾರತದಲ್ಲಿನ ದಂಗೆಯನ್ನು ಅಸ್ಥಿರಗೊಳಿಸುವುದರಿಂದ ಜಪಾನೀಯರ ವಿರುದ್ಧ ಅವರ ಕಾರ್ಯಪಡೆಗೆ ಹಾನಿಯುಂಟಾಗಬಹುದು , ಹಾಗು ಯುರೋಪ್‌‌‌ನಲ್ಲಿ ಯುದ್ಧ ಮಾಡಲು ಬೇಕಾದ ಮಾನವ ಶಕ್ತಿ ಮತ್ತು ಅಗತ್ಯವಿರುವ ಸಂಪನ್ಮೂಲ ದೊರಕದೆ ಇರಬಹುದೆಂದು ಆತಂಕಪಟ್ಟುಕೊಂಡರು . +ಕಾಂಗ್ರೆಸ್ ಪಕ್ಷವು , ಎರಡನೇ ಮಹಾಯುದ್ಧ ದಲ್ಲಿ ಭಾರತದ ಪ್ರವೇಶವನ್ನು ಕುರಿತು ಅದರ ಪ್ರತಿಕ್ರಿಯೆಗಳ ಮೇಲೆ ವಿಂಗಡಣೆಯಾಯಿತು . +ಭಾರತದ ವೈಸ್ ರಾಯ್ ರವರ ನಿರ್ಧಾರದ ಮೇಲೆ ಕೋಪಿಸಿಕೊಂಡು , ಕಾಂಗ್ರೆಸ್‌‌ನ ಕೆಲವು ನಾಯಕರು , ಯುರೋಪ್‌‌ನಲ್ಲಿ ನಡೆಯುತ್ತಿದ್ದ ಯುದ್ಧಕ್ಕೆ ಬೆಂಬಲಕೊಡುವುದರ ಬದಲಿಗೆ ಬ್ರಿಟಿಷರ ವಿರುದ್ಧ ಬಂಡಾಯ ಹೂಡಿದರು . +ಇದು ಬ್ರಿಟಿಷರ ಸ್ವಂತದೇ ಸ್ವತಂತ್ರಕ್ಕೆ ಬೆದರಿಕೆಯನ್ನೊಡಿತು . +ಚಕ್ರವರ್ತಿ ರಾಜಗೋಪಾಲಚಾರಿ ಯಂತಹ ಇತರರು , ಬ್ರಿಟಿಷರಿಗೆ ಸಹಕರಿಸಲು ಸೂಚಿಸಿದರು — ಈ ನಿರ್ಣಾಯಕ ಸಮಯದಲ್ಲಿ ಅವರಿಗೆ ಬೆಂಬಲ ನೀಡುವ ಮೂಲಕ ಯುದ್ಧದ ನಂತರ ಪ್ರತಿಯಾಗಿ ಸ್ವಾತಂತ್ರ್ಯ ಪಡೆಯುವ ನಂಬಿಕೆಯಲ್ಲಿ ಅವರಿಗೆ ಬೆಂಬಲಿಸಲು ಸೂಚಿಸಿದ್ದರು . +ಭಾರತದ ಮತ್ತು ಕಾಂಗ್ರೆಸಿನ ಮುಖ್ಯ ನಾಯಕರಾದ ಮೋಹನ್ ದಾಸ್ ಗಾಂಧಿ ಯವರು , ನೈತಿಕವಾಗಿ ಯುದ್ಧಕ್ಕೆ ಒಪ್ಪಿಗೆ ನೀಡದ ಕಾರಣ , ಯುದ್ಧದಲ್ಲಿ ಭಾರತೀಯರ ಪಾಲ್ಗೊಳ್ಳುವಿಕೆಯನ್ನು ವಿರೋಧಿಸಿದರು — ಸ್ವತಂತ್ರಕ್ಕಾಗಿ ಭಾರತೀಯರ ಹೆಬ್ಬಯಕೆಯ ಬಗ್ಗೆ ಬ್ರಿಟಿಷರು ಪ್ರಾಮಾಣಿಕವಾಗಿಲ್ಲ ಎಂದು ನಂಬುವ ಮೂಲಕ ಅವರು ಬ್ರಿಟಿಷರ ಉದ್ದೇಶಗಳನ್ನು ಕೂಡ ಅನುಮಾನಿಸಿದರು . +ಆದರೆ ಸರ್ದಾರ್ ವಲ್ಲಭಭಾಯ್ ಪಟೇಲ್ , ಮೌಲಾನ ಅಜಾದ್ ಮತ್ತು ಜವಾಹರಲಾಲ್ ನೆಹರು ರವರ ಬೆಂಬಲದೊಂದಿಗೆ ರಾಜಗೋಪಾಲಚಾರಿ ಕ್ರಿಪ್ಸ್ ನೊಂದಿಗೆ ಮಾತುಕತೆ ನಡೆಸಿದರು . +ಅಲ್ಲದೇ ತತ್‌‌ಕ್ಷಣದದ ಸ್ವಯಂ ಸರ್ಕಾರ ರಚನೆ ಮತ್ತು ಅಂತಿಮ ಸ್ವತಂತ್ರದ ಬದಲಿಗೆ ಸಂಪೂರ್ಣ ಬೆಂಬಲ ನೀಡುವುದಾಗಿ ತಿಳಿಸಿದರು . +ಮುಸ್ಲಿಂ ಲೀಗ್‌‌ನ ನಾಯಕರಾಗಿದ್ದ ಮೊಹಮದ್ ಅಲಿ ಜಿನ್ನಾ , ಯುದ್ದಪ್ರಯತ್ನಕ್ಕೆ ಬೆಂಬಲ ನೀಡಿ , ಕಾಂಗ್ರೆಸ್ ನ ನೀತಿಯನ್ನು ಖಂಡಿಸಿದರು . +ಪ್ರತ್ಯೇಕ ಮುಸ್ಲೀಂ ರಾಜ್ಯಕ್ಕೆ ಒತ್ತಾಯಿಸುವ ಮೂಲಕ , ಪ್ಯಾನ್ - ಇಂಡಿಯಾ ಸಹಕಾರಕ್ಕಾಗಿ ಮತ್ತು ತತ್‌‌ಕ್ಷಣದ ಸ್ವತಂತ್ರಕ್ಕಾಗಿ ಕಾಂಗ್ರೆಸ್ ನೀಡಿದ ಕರೆಯನ್ನು ನಿರಾಕರಿಸಿದರು . +ಕ್ರಿಪ್ಸ್ , ಭಾರತಕ್ಕೆ ಆಗಮಿಸಿದ ಅವರ ಉದ್ದೇಶ ಕುರಿತು ಭಾರತೀಯ ನಾಯಕರೊಂದಿಗೆ ಮಾತುಕತೆ ನಡೆಸಿದರು . +ಚರ್ಚಿಲ್ ಮತ್ತು ಲಿಯೋ ಅಮ್ರೆ ( ಅವರ ರಾಷ್ಟ್ರದ ಸೆಕ್ರೆಟರಿ ಆಫ್ ಸ್ಟೇಟ್ ಫಾರ್ ಇಂಡಿಯಾ ) ಯಿಂದ ಕ್ರಿಪ್ಸ್ ಭಾರತದ ರಾಷ್ಟ್ರೀಯ ರಾಜಕಾರಣಿಗಳಿಗೆ ಯಾವ ಅವಕಾಶ ನೀಡಲು ಅನುಮತಿ ಪಡೆದಿದ್ದರು ಎಂಬುದರ ಬಗ್ಗೆ ಗೊಂದಲವಿದೆ.ಅಲ್ಲದೇ ಅವರು ವೈಸ್ ರಾಯ್ ಲಾರ್ಡ್ ಲಿನ್ ಲಿತ್ ಗೌ ರವರ ವಿರೋಧವನ್ನು ಕೂಡ ಎದುರಿಸಿದ್ದರು . +ಅವರು , ಕಾಮನ್ ವೆಲ್ತ್ ನಿಂದ ಪ್ರತ್ಯೇಕವಾಗಿ ಸಂಪೂರ್ಣ ಸ್ವತಂತ್ರದ ಅವಕಾಶದೊಂದಿಗೆ ಯುದ್ಧದ ಕೊನೆಯಲ್ಲಿ ಭಾರತಕ್ಕೆ ಸಂಪೂರ್ಣ ಪರಮಾಧಿಕಾರವನ್ನು ಕೊಡುವುದಾಗಿ ತಮ್ಮ ಮಾತುಕತೆ ಆರಂಭಿಸಿದರು . +ಖಾಸಗಿಯಾಗಿ ಕ್ರಿಪ್ಸ್ , ಬ್ರಿಟಿಷರಿಗಾಗಿ ಕೇವಲ ರಕ್ಷಣಾ ಸಚಿವ ಸಂಪುಟವನ್ನು ಉಳಿಸಿ , ಲಿನ್ ಲಿತ್ ಗೌ ನನ್ನು ಕಳುಹಿಸುವುದಾಗಿ ಮತ್ತು ಭಾರತಕ್ಕೆ ತತ್ ಕ್ಷಣದ ಪರಮಾಧಿಕಾರವನ್ನು ನೀಡುವುದಾಗಿ ಮಾತು ಕೊಟ್ಟಿದ್ದರು . +ಅದೇನೇ ಆದರೂ , ಅವರು ವೈಸ್ ರಾಯ್ ನಿರ್ವಾಹಕ ಸಮಿತಿಯ ಭಾರತೀಯ ಸದಸ್ಯರ ಸಂಖ್ಯೆಯನ್ನು ಹೆಚ್ಚಿಸುವ ಅಸ್ಪಷ್ಟ ಒಪ್ಪಂದದ ಹೊರತಾಗಿ , ಸಾರ್ವಜನಿಕರೆದುರು ಶೀಘ್ರದಲ್ಲಿಯೇ ಸ್ವಯಂ ಸರ್ಕಾರ ರಚಿಸಿಕೊಳ್ಳುವ ಯಾವುದೇ ನಿರ್ದಿಷ್ಟ ಪ್ರಸ್ತಾಪವನ್ನು ನೀಡುವಲ್ಲಿ ವಿಫಲರಾಗಿದ್ದರು . +ಕ್ರಿಪ್ಸ್ ಅವರ ಬಹುಪಾಲು ಸಮಯವನ್ನು , ಸರ್ಕಾರ ಮತ್ತು ಯುದ್ಧಕ್ಕೆ ಬೆಂಬಲ ನೀಡುವಲ್ಲಿ ಒಮ್ಮತದ ಸಾರ್ವಜನಿಕ ಸಿದ್ಧತೆಗಾಗಿ , ಕಾಂಗ್ರೆಸ್ ನ ನಾಯಕರನ್ನು ಮತ್ತು ಜಿನ್ನಾರವರನ್ನು ಪ್ರೋತ್ಸಾಹಿಸುವುದರಲ್ಲೇ ಕಳೆದರು ; ಕಾಂಗ್ರೆಸ್ ನ ನಾಯಕರು ಕ್ರಿಪ್ಸ್ , ಸಾಮೂಹಿಕ ಹೊಣೆಗಾರಿಕೆ ಅಥವಾ ಯುದ್ಧದ ಸಮಯದಲ್ಲಿ ರಕ್ಷಣೆಯ ಮೇಲೆ ಭಾರತೀಯರ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಹೇಳುತ್ತಿರುವರೆಂದು ಭಾವಿಸಿದರು . +ರಾಜಕೀಯದ ಗುರುವಾಗಿದ್ದ ಅಮ್ರೆ , ವೈಸ್ ರಾಯ್ ನಿರ್ವಾಹಕ ಸಮಿತಿಯ ಸಂಪೂರ್ಣ ಭಾರತೀಕರಣವನ್ನು ನೀಡುವುದರ ಬಗ್ಗೆ ಆಸಕ್ತಿ ಹೊಂದಿಲ್ಲ ಎಂಬುದರ ಬಗ್ಗೆಯು ಅವರು ಸಂಶಯ ಹೊಂದಿದ್ದರು . +ಅಲ್ಲದೇ ಇದು ಮುಸ್ಲಿಂ ಲೀಗ್ ಗೆ ಪರಮಾಧಿಕಾರದ ಅವಕಾಶ ನೀಡಿದೆ ಎಂಬುದರ ಬಗ್ಗೆಯು ಸಂದೇಹ ಹೊಂದಿದ್ದರು . +ಈ ಹಂತದಿಂದಾಗಿ ಬ್ರಿಟಿಷರ ಮತ್ತು ಕಾಂಗ್ರೆಸ್ ನಡುವೆ ಹೆಚ್ಚು ವಿಶ್ವಾಸವಿರಲಿಲ್ಲ . +ಅಲ್ಲದೇ ಎರಡು ಕಡೆಗಳಲ್ಲೂ ಮತ್ತೊಂದು ಅದರ ನಿಜವಾದ ಯೋಜನೆಯನ್ನು ರಹಸ್ಯವಾಗಿಡಲು ಪ್ರಯತ್ನಿಸುತ್ತಿದೆ ,ಎಂದು ಭಾವಿಸಿಸಲಾಯಿತು . +ಮೋಹನ್ ದಾಸ್ ಗಾಂಧಿಯವರ ಮಾರ್ಗದರ್ಶನದಿಂದ ಕಾಂಗ್ರೆಸ್ ಕ್ರಿಪ್ಸ್ ನೊಂದಿಗೆ ಮಾತುಕತೆ ನಿಲ್ಲಿಸಿತು . +ರಾಷ್ಟ್ರೀಯ ನಾಯಕತ್ವವು ಯುದ್ಧಕ್ಕೆ ನೀಡುವ ಬೆಂಬಲದ ಬದಲಿಗೆ ತತ್ ಕ್ಷಣದ ಸ್ವಯಂ ಸರ್ಕಾರ ರಚನೆಯ ಬೇಡಿಕೆಯನ್ನಿಟ್ಟಿತ್ತು . +ಬ್ರಿಟಿಷರು ಯಾವ ಪ್ರತಿಕ್ರಿಯೆಯನ್ನೂ ನೀಡದಿದ್ದಾಗ ,ಗಾಂಧಿ ಮತ್ತು ಕಾಂಗ್ರೆಸ್ , ಭಾರತ ಬಿಟ್ಟು ತೊಲಗಿ ಚಳವಳಿ ಎಂದು ಕರೆಯಲಾಗುವ ಸಾರ್ವಜನಿಕರ ಪ್ರಮುಖ ಚಳವಳಿಯನ್ನು ಯೋಜಿಸಲು ಪ್ರಾರಂಭಿಸಿದರು . +ಈ ಚಳವಳಿಯು ಬ್ರಿಟಿಷರು ತಕ್ಷಣವೇ ಭಾರತದಿಂದ ತೆರಳಬೇಕೆಂಬ ಬೇಡಿಕೆಯನ್ನಿಟ್ಟಿತು . +ಇಂಪಿರಿಯಲ್ ಜಪಾನೀಸ್ ಆರ್ಮಿ (ಪರಮಾಧಿಕಾರವುಳ್ಳ ಜಪಾನೀಯರ ಸೈನ್ಯ ), ಬರ್ಮಾದ ಮೇಲೆ ವಿಜಯ ಸಾಧಿಸಿ , ಭಾರತವನ್ನು ಸಮೀಪಿಸುತ್ತಿರುವಂತೆ , ಬ್ರಿಟಿಷರು ಭಾರತೀಯ ಮಣ್ಣನ್ನು ರಕ್ಷಿಸಿಕೊಳ್ಳುವಲ್ಲಿ ಅಸಮರ್ಥರಾಗಿದ್ದಾರೆಂದು ಭಾರತೀಯರು ಭಾವಿಸಿದರು . +ಇದೇ ಸಮಯದಲ್ಲಿ ಸುಭಾಷ್ ಚಂದ್ರ ಬೋಸ್ ರವರು ಸ್ಥಾಪಿಸಿದ ಇಂಡಿಯನ್ ನ್ಯಾಷನಲ್ ಆರ್ಮಿಯ ಉದಯವಾಯಿತು . +ಭಾರತ ಬಿಟ್ಟು ತೊಲಗಿ ಚಳವಳಿಗೆ ಬ್ರಿಟಿಷರು ನೀಡಿದ ಪ್ರತಿಕ್ರಿಯೆಯಾಗಿ , ಕಾಂಗ್ರೆಸ್ ನ ಬಹುಪಾಲು ನಾಯಕರನ್ನು ಸೆರೆಮನೆಗೆ ತಳ್ಳಿತು . +ಜಿನ್ನಾರ ಮುಸ್ಲಿಂ ಲೀಗ್, ಪ್ರಾಂತೀಯ ಸರ್ಕಾರಗಳಲ್ಲಿ ಮತ್ತು ಬ್ರಿಟಿಷ್ ರಾಜ್ ನ ಶಾಸಕಾಂಗ ಸಮಿತಿಯಲ್ಲಿ ಭಾಗವಹಿಸುವ ಮೂಲಕ ಭಾರತ ಬಿಟ್ಟು ತೊಲಗಿ ಚಳವಳಿಯನ್ನು ಖಂಡಿಸಿತು . +ಅಲ್ಲದೇ ಯುದ್ಧದಲ್ಲಿ ಭಾಗವಹಿಸಲು ಮುಸ್ಲೀಮರಿಗೆ ಪ್ರೋತ್ಸಾಹ ನೀಡಿತು . +ಮುಸ್ಲಿಂ ಲೀಗ್ ನಿಂದ ದೊರೆತ ಈ ಸೀಮಿತ ಸಹಕಾರದೊಂದಿಗೆ ಬ್ರಿಟಿಷರು ಯುದ್ಧದ ಸಮಯದವರೆಗೂ ಅಧಿಕಾರಿ ಮತ್ತು ಮಿಲಿಟರಿ ಸಿಬ್ಬಂದಿಗಳನ್ನು ಬಳಸಿ ಭಾರತದಲ್ಲಿ ತಮ್ಮ ಆಡಳಿತ ಮುಂದುವರೆಸಿದರು . +ಈ ಆಡಳಿತದಲ್ಲಿ ಭಾರತೀಯ ರಾಜಕಾರಣಿಗಳು ಕಂಡುಬರುವುದಿಲ್ಲ . +ಆದರೂ ಇದನ್ನು ದೀರ್ಘಕಾಲದ ವರೆಗೆ ನಿರ್ವಹಿಸಲಾಗಲಿಲ್ಲ . +ಕ್ರಿಪ್ಸ್ ಆಯೋಗದ ದೀರ್ಘಾವಧಿಯ ಪ್ರಾಮುಖ್ಯತೆಯು ಕೇವಲ ಯುದ್ಧದ ಪರಿಣಾಮಗಳಲ್ಲಿ ಗೋಚರವಾದವು . +ಸೈನ್ಯವನ್ನು ವಿಘಟಿಸಿ ಹಿಂದಕ್ಕೆ ಕಳುಹಿಸಲಾಯಿತು . +ಕ್ರಿಪ್ಸ್ ನೀಡಿದ ಸ್ವಾತಂತ್ರ್ಯದ ಅವಕಾಶವನ್ನು ಹಿಂದಕ್ಕೆ ತೆಗೆದುಕೊಳ್ಳುವಂತಿಲ್ಲ ಎಂಬುದನ್ನು ಚರ್ಚಿಲ್ ಕೂಡ ಗಮನಿಸಿದ್ದರು , ಹಾಗು ಯುದ್ಧದ ಕೊನೆಯಲ್ಲಿ ಚರ್ಚಿಲ್ ಅಧಿಕಾರದಿಂದ ಕೆಳಗಿಳಿದಿದ್ದರು . +ಅಲ್ಲದೇ ಅವರು ಹೊಸ ಲೇಬರ್ ಸರ್ಕಾರ ಭಾರತಕ್ಕೆ ಸ್ವಾತಂತ್ರ್ಯ ನೀಡುವುದೇ ಎಂಬುದನ್ನು ಕೇವಲ ಕಾಯಬಹುದಾಗಿತ್ತು . +ಕಾಂಗ್ರೆಸ್ ನ ರಾಜಕಾರಣಿಗಳು 1945-46 ರ ಚುನಾವಣೆಗಳಲ್ಲಿ ನಿಂತು ಪ್ರಾಂತೀಯ ಸರ್ಕಾರವನ್ನು ರಚಿಸಿದ್ದರೊಂದಿಗೆ , ಬ್ರಿಟಿಷರು ಶೀಘ್ರದಲ್ಲೆ ತೊಲಗುತ್ತಾರೆ ಎಂಬ ವಿಶ್ವಾಸವೂ ಪ್ರತಿಫಲಿಸಿತು. + ಪೂರ್ವದೃಷ್ಟಿಯಲ್ಲಿ , ತಾತ್ಕಾಲಿಕ ಯುದ್ಧ ಸಮಯದ ಬೆಂಬಲದ ಬದಲಿಗೆ ಕಾಂಗ್ರೆಸ್ ಅನ್ನು ಸಮಾಧಾನ ಪಡಿಸುವ , ಈ ಯಶಸ್ವಿಯಾಗದ ಮತ್ತು ತಪ್ಪಾಗಿ ಯೋಜಿಸಿದ್ದ ಪ್ರಯತ್ನವು , ಯುದ್ಧದ ಅಂತ್ಯದಲ್ಲಿ ಬ್ರಿಟಿಷರು ಭಾರತ ಬಿಟ್ಟು ತೊಲಗುವುದನ್ನು ಅನಿವಾರ್ಯವಾಗಿಸಿತು .