From 354f8039620462a197a448e865a38d0773951fb1 Mon Sep 17 00:00:00 2001 From: Narendra VG Date: Mon, 26 Sep 2022 05:11:00 +0530 Subject: [PATCH] Upload New File --- ...3\340\262\234\340\262\250\340\263\206.txt" | 39 +++++++++++++++++++ 1 file changed, 39 insertions(+) create mode 100644 "Data Collected/Kannada/MIT Manipal/\340\262\206\340\262\257\340\263\201\340\262\267\340\263\215\340\262\256\340\262\276\340\262\250\340\263\215_\340\262\255\340\262\276\340\262\260\340\262\244\340\263\215_\340\262\257\340\263\213\340\262\234\340\262\250\340\263\206.txt" diff --git "a/Data Collected/Kannada/MIT Manipal/\340\262\206\340\262\257\340\263\201\340\262\267\340\263\215\340\262\256\340\262\276\340\262\250\340\263\215_\340\262\255\340\262\276\340\262\260\340\262\244\340\263\215_\340\262\257\340\263\213\340\262\234\340\262\250\340\263\206.txt" "b/Data Collected/Kannada/MIT Manipal/\340\262\206\340\262\257\340\263\201\340\262\267\340\263\215\340\262\256\340\262\276\340\262\250\340\263\215_\340\262\255\340\262\276\340\262\260\340\262\244\340\263\215_\340\262\257\340\263\213\340\262\234\340\262\250\340\263\206.txt" new file mode 100644 index 0000000..28a8648 --- /dev/null +++ "b/Data Collected/Kannada/MIT Manipal/\340\262\206\340\262\257\340\263\201\340\262\267\340\263\215\340\262\256\340\262\276\340\262\250\340\263\215_\340\262\255\340\262\276\340\262\260\340\262\244\340\263\215_\340\262\257\340\263\213\340\262\234\340\262\250\340\263\206.txt" @@ -0,0 +1,39 @@ +ಆಯುಷ್ಮಾನ್ ಭಾರತ್ ಯೋಜನೆ ಅಥವಾ ಪ್ರಧಾನ್ ಮಂತ್ರಿ ಜನಾರೋಗ್ಯ ಯೋಜನೆ (ಪಿಎಂಜೆಎವೈ ) ಅಥವಾ ರಾಷ್ಟ್ರೀಯ ಆರೋಗ್ಯ ಸಂರಕ್ಷಣಾ ಯೋಜನೆ ಭಾರತದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಆಯುಷ್ಮಾನ್ ಭಾರತ್ ಮಿಷನ್ ಅಡಿಯಲ್ಲಿ ೨೦೧೮ ರಲ್ಲಿ ಪ್ರಾರಂಭಿಸಲಾಗಿರುವ ಕೇಂದ್ರ ಪ್ರಾಯೋಜಿತ ಯೋಜನೆಯಾಗಿದೆ. +ಪ್ರಾಥಮಿಕ , ದ್ವಿತೀಯ ಮತ್ತು ತೃತೀಯ ಆರೈಕೆ ವ್ಯವಸ್ಥೆಗಳಲ್ಲಿ ಮಧ್ಯಸ್ಥಿಕೆ ವಹಿಸುವುದು , ತಡೆಗಟ್ಟುವ ಮತ್ತು ಉತ್ತೇಜಿಸುವ ಆರೋಗ್ಯ ಒಳಗೊಂಡಂತೆ , ಆರೋಗ್ಯ ರಕ್ಷಣೆಯನ್ನು ಸಮಗ್ರವಾಗಿ ಪರಿಹರಿಸಲು ಈ ಯೋಜನೆಯು ಉದ್ದೇಶಿಸಿದೆ. +ಇದು ಆರೋಗ್ಯ ಹಾಗೂ ಸ್ವಾಸ್ಥ್ಯ ಕೇಂದ್ರಗಳು ಮತ್ತು ರಾಷ್ಟ್ರೀಯ ಆರೋಗ್ಯ ಸಂರಕ್ಷಣಾ ಯೋಜನೆ (ಎನ್‌ಎಚ್‌ಪಿಎಸ್ ) ಎಂಬ ಎರಡು ಪ್ರಮುಖ ಆರೋಗ್ಯ ಉಪಕ್ರಮಗಳ ಕೆಳಗೆ ಬರುತ್ತದೆ . +ಇಂದೂ ಭೂಷಣ್ ರವರು ಆಯುಷ್ಮಾನ್ ಭಾರತ್ ಯೋಜನೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಆಗಿದ್ದಾರೆ ಮತ್ತು ಉಪ ಸಿಇಒ ಆಗಿ ದಿನೇಶ್ ಅರೋರಾರವರು ಹುದ್ದೆಯನ್ನು ನಿರ್ವಹಿಸುತ್ತಿದ್ದಾರೆ . +ರಾಷ್ಟ್ರೀಯ ಸ್ವಾಸ್ಥ್ಯ ಬಿಮಾ ಯೋಜನೆ , ಹಿರಿಯ ನಾಗರಿಕ ಆರೋಗ್ಯ ವಿಮೆ ಯೋಜನೆ (ಎಸ್‌ಸಿಐಎಸ್ ) , ಕೇಂದ್ರ ಸರ್ಕಾರದ ಆರೋಗ್ಯ ಯೋಜನೆ (ಸಿಜಿಎಚ್‌ಎಸ್ ) , ನೌಕರರ ರಾಜ್ಯ ವಿಮಾ ಯೋಜನೆ (ಇಎಸ್ಐಎಸ್) ಸೇರಿದಂತೆ ಅನೇಕ ಯೋಜನೆಗಳನ್ನು ಒಳಗೊಳ್ಳುವ ಮೂಲಕ ರಾಷ್ಟ್ರೀಯ ಆರೋಗ್ಯ ಸಂರಕ್ಷಣಾ ಯೋಜನೆಯು (ಎನ್‌ಎಚ್‌ಪಿಎಸ್ )ರೂಪುಗೊಂಡಿದೆ . +ಆರೋಗ್ಯ ನೀತಿ , ೨೦೧೭ ಆರೋಗ್ಯ ಮತ್ತು ಸ್ವಾಸ್ಥ್ಯ ಕೇಂದ್ರಗಳನ್ನು ಭಾರತದ ಆರೋಗ್ಯ ವ್ಯವಸ್ಥೆಯ ಅಡಿಪಾಯವಾಗಿ ರೂಪಿಸಿದೆ. +ಕೇಂದ್ರ ಸರ್ಕಾರಿ ನೌಕರರು, ಪಿಂಚಣಿದಾರರು ಮತ್ತು ಸಿಜಿಹೆಚ್ಎಸ್ ವ್ಯಾಪ್ತಿಯ ನಗರಗಳಲ್ಲಿ ವಾಸಿಸುವ ಅವರ ಅವಲಂಬಿತರಿಗೆ ಸಮಗ್ರ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸುವ ಉದ್ದೇಶದಿಂದ ೧೯೫೪ ರಲ್ಲಿ ಕೇಂದ್ರ ಆರೋಗ್ಯ ಯೋಜನೆ (ಸಿಜಿಹೆಚ್ಎಸ್ ) ಅನ್ನು ಭಾರತೀಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಅಡಿಯಲ್ಲಿ ಪ್ರಾರಂಭಿಸಲಾಯಿತು . +ಈ ಆರೋಗ್ಯ ಯೋಜನೆ ಈಗ ಭುವನೇಶ್ವರ , ಭೋಪಾಲ್ , ಚಂಡೀಗಢ್ ಮತ್ತು ಬೆಂಗಳೂರಿನಂತಹ ನಗರಗಳಲ್ಲಿ ಕಾರ್ಯನಿರ್ವಹಿಸುತ್ತಿದೆ . +ಔಷಧಾಲಯವು ಈ ಯೋಜನೆಯ ಬೆನ್ನೆಲುಬಾಗಿದೆ . +ತಜ್ಞರು ಮತ್ತು ವೈದ್ಯಕೀಯ ಅಧಿಕಾರಿಗಳ ಮಾರ್ಗದರ್ಶನಕ್ಕಾಗಿ ಕಾಲಕಾಲಕ್ಕೆ ಈ ವಿವಿಧ ವಿಷಯಗಳ ಬಗ್ಗೆ ಸೂಚನೆಗಳನ್ನು ನೀಡಲಾಗಿದೆ . +ಕೇಂದ್ರ ಸರ್ಕಾರದ ಆರೋಗ್ಯ ಯೋಜನೆಯು ಅಲೋಪತಿ ಮತ್ತು ಹೋಮಿಯೋಪತಿ ವ್ಯವಸ್ಥೆಗಳ ಮೂಲಕ ಹಾಗೂ ಆಯುರ್ವೇದ , ಯುನಾನಿ , ಯೋಗ ಮತ್ತು ಸಿದ್ಧ ಮುಂತಾದ ಸಾಂಪ್ರದಾಯಿಕ ಭಾರತೀಯ ಔಷಧಿಗಳ ಮೂಲಕ ಆರೋಗ್ಯ ಸೇವೆಗಳನ್ನು ಒದಗಿಸುತ್ತದೆ. +ಆಯುಷ್ಮಾನ್ ಭಾರತ್ ಯೋಜನೆಯು ಎರಡು ಪ್ರಮುಖ ಅಂಶಗಳನ್ನು ಒಳಗೊಂಡಿದೆ . +ಆಯುಷ್ಮಾನ್ ಭಾರತ್ ರಾಷ್ಟ್ರೀಯ ಆರೋಗ್ಯ ಸಂರಕ್ಷಣಾ ಯೋಜನೆಯು ಇದು ೧೦ ಕೋಟಿ (ನೂರು ಮಿಲಿಯನ್ ) ಬಡ ಮತ್ತು ದುರ್ಬಲ ಕುಟುಂಬಗಳನ್ನು ( ಸರಿಸುಮಾರು ೫೦ ಕೋಟಿ ( ಐದು ನೂರು ಮಿಲಿಯನ್ ) ಫಲಾನುಭವಿಗಳನ್ನು ಒಳಗೊಂಡಿರುತ್ತದೆ . +ಅದಲ್ಲದೆ ಪ್ರತಿ ಕುಟುಂಬಕ್ಕೆ ವಾರ್ಷಿಕ ೫ ಲಕ್ಷ ರೂಪಾಯಿಗಳವರೆಗೆ ($೭ ,೧೦೦) ನೀಡುವಷ್ಟು ವ್ಯಾಪ್ತಿಯನ್ನು ಹೊಂದಿದೆ ಹಾಗೂ ಆರೈಕೆಗಾಗಿ ಆಸ್ಪತ್ರೆಗೆ ದಾಖಲಿಸಲಾಗುತ್ತದೆ . +ಯೋಜನೆಯ ಪ್ರಯೋಜನಗಳು ದೇಶಾದ್ಯಂತ ಬಳಸಬಹುದಾಗಿದ್ದು , ಈ ಯೋಜನೆಯಡಿ ಬರುವ ಫಲಾನುಭವಿಗೆ ದೇಶಾದ್ಯಂತದ ಯಾವುದೇ ಸಾರ್ವಜನಿಕ ಅಥವಾ ಖಾಸಗಿ ಆಸ್ಪತ್ರೆಗಳಿಂದ ಖರ್ಚಿಲ್ಲದೆ ಪ್ರಯೋಜನಗಳನ್ನು ಪಡೆಯಲು ಅವಕಾಶವಿರುತ್ತದೆ . +ಇದು ಸಾಮಾಜಿಕ - ಆರ್ಥಿಕ ಜಾತಿ ಗಣತಿ (ಎಸ್‌ಸಿಸಿ) ಡೆಟಾಬೇಸ್ ನ ಅಭಾವದ ಮಾನದಂಡಗಳ ಆಧಾರದ ಮೇಲೆ ನಿರ್ಧರಿಸಲ್ಪಟ್ಟ ಅರ್ಹತೆಯೊಂದಿಗೆ ಆಧಾರಿತ ಯೋಜನೆಯಾಗಿದೆ . +ಇದು ಗ್ರಾಮೀಣ ಮತ್ತು ನಗರ ಪ್ರದೇಶಗಳೆರಡನ್ನೂ ಒಳಗೊಂಡಿದೆ . +ಇತ್ತೀಚಿನ ಸಾಮಾಜಿಕ - ಆರ್ಥಿಕ ಜಾತಿ ಗಣತಿ (ಎಸ್‌ಸಿಸಿ ) ದತ್ತಾಂಶದ ಪ್ರಕಾರ ಸುಮಾರು ೧೦.೭೪ ಕೋಟಿ ಬಡ , ಅವಕಾಶ ವಂಚಿತ ಗ್ರಾಮೀಣ ಕುಟುಂಬಗಳನ್ನು ಮತ್ತು ನಗರ ಕಾರ್ಮಿಕರ ಕುಟುಂಬಗಳಲ್ಲಿ ಗುರುತಿಸಲಾದ ಉದ್ಯೋಗ ವರ್ಗವನ್ನು ತಲುಪುವ ಗುರಿಯಿರಿಸಿದೆ . +ಆಯುಷ್ಮಾನ್ ಭಾರತ್ - ರಾಷ್ಟ್ರೀಯ ಆರೋಗ್ಯ ಸಂರಕ್ಷಣಾ ಮಿಷನ್‌ನ ಒಂದು ಪ್ರಮುಖ ತತ್ವವೆಂದರೆ ಸಹಕಾರದ ಸಂಯುಕ್ತತೆ ಮತ್ತು ರಾಜ್ಯಗಳಿಗೆ ನಮ್ಯತೆಯನ್ನು ಒದಗಿಸುವುದಾಗಿದೆ . +ಅದರೊಂದಿಗೆ ನೀತಿ ನಿರ್ದೇಶನಗಳನ್ನು ನೀಡಲು ಮತ್ತು ಕೇಂದ್ರ ಮತ್ತು ರಾಜ್ಯಗಳ ನಡುವೆ ಸಮನ್ವಯವನ್ನು ಹೆಚ್ಚಿಸಲು , ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರ ಅಧ್ಯಕ್ಷತೆಯಲ್ಲಿ ಆಯುಷ್ಮಾನ್ ಭಾರತ್ ರಾಷ್ಟ್ರೀಯ ಆರೋಗ್ಯ ಸಂರಕ್ಷಣಾ ಮಿಷನ್ ಕೌನ್ಸಿಲ್ (ಎಬಿ - ಎನ್‌ಎಚ್‌ಪಿಎಂಸಿ ) ಅನ್ನು ಉನ್ನತ ಮಟ್ಟದಲ್ಲಿ ಸ್ಥಾಪಿಸಲು ಉದ್ದೇಶಿಸಲಾಗಿದೆ . +ಅದಲ್ಲದೆ ಯೋಜನೆಯನ್ನು ಕಾರ್ಯಗತಗೊಳಿಸಲು ಪ್ರತಿ ರಾಜ್ಯದಲ್ಲಿ ರಾಜ್ಯ ಆರೋಗ್ಯ ಸಂಸ್ಥೆ (ಎಸ್‌ಎಚ್‌ಎ ) ಹೊಂದಿರಬೇಕು. +೧.೫ ಲಕ್ಷ ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳಿಗೆ ೧೨೦೦ ಕೋಟಿ ರೂ .($೧೭೦ ಮಿಲಿಯನ್ ) ನಿಗದಿಪಡಿಸಲಾಗಿದೆ . +ಇದರ ಅಡಿಯಲ್ಲಿ ೧.೫ ಲಕ್ಷ ಕೇಂದ್ರಗಳನ್ನು ಪ್ರತಿನಿತ್ಯದ ಅಗತ್ಯಗಳಲ್ಲದೆ , ಸಾಂಕ್ರಾಮಿಕವಲ್ಲದ ಕಾಯಿಲೆಗಳು ಮತ್ತು ತಾಯಿಯ ಮತ್ತು ಮಕ್ಕಳ ಆರೋಗ್ಯ ಸೇವೆಗಳನ್ನೂ ಒಳಗೊಂಡಂತೆ ಸಮಗ್ರ ಆರೋಗ್ಯ ಸೇವೆಯನ್ನು ಉಚಿತವಾಗಿ ಒದಗಿಸಲು ಸ್ಥಾಪಿಸಲಾಗುತ್ತದೆ . +ಔಷಧಗಳು ಮತ್ತು ರೋಗನಿರ್ಣಯ ಸೇವೆಗಳನ್ನು ಒದಗಿಸಲಾಗುತ್ತದೆ. + ಸರ್ಕಾರವು ಅಸ್ತಿತ್ವದಲ್ಲಿರುವ ಸಾರ್ವಜನಿಕ ಆರೋಗ್ಯ ಕೇಂದ್ರಗಳನ್ನು ಸ್ವಾಸ್ಥ್ಯ ಕೇಂದ್ರಗಳಿಗೆ ನವೀಕರಿಸಲಿದೆ . +ಕಲ್ಯಾಣ ಯೋಜನೆಯನ್ನು ಆಗಸ್ಟ್ ೧೫, ೨೦೧೮ ರಂದು ರೂಪಿಸಲಾಗಿತ್ತು. +ಇದಲ್ಲದೆ , ಈ ಕೇಂದ್ರಗಳನ್ನು ಅಳವಡಿಸಿಕೊಳ್ಳುವಲ್ಲಿ ಸಿಎಸ್ಆರ್ ಮತ್ತು ಲೋಕೋಪಕಾರಿ ಸಂಸ್ಥೆಗಳ ಮೂಲಕ ಖಾಸಗಿ ವಲಯದ ಕೊಡುಗೆಯನ್ನು ಸಹ ಊಹಿಸಲಾಗಿದೆ. +ಆರೋಗ್ಯ ಮತ್ತು ಸ್ವಾಸ್ಥ್ಯ ಕೇಂದ್ರದಲ್ಲಿ ಒದಗಿಸಬೇಕಾದ ಸೇವೆಗಳ ಪಟ್ಟಿಯಲ್ಲಿ ಇವು ಸೇರಿವೆ : +ಗರ್ಭಧಾರಣೆಯ ಆರೈಕೆ ಮತ್ತು ತಾಯಿಯ ಆರೋಗ್ಯ ಸೇವೆಗಳು,ನವಜಾತ ಮತ್ತು ಶಿಶು ಆರೋಗ್ಯ ಸೇವೆಗಳು,ಮಕ್ಕಳ ಆರೋಗ್ಯ,ದೀರ್ಘಕಾಲದ ಸಾಂಕ್ರಾಮಿಕ ರೋಗಗಳು,ಸಾಂಕ್ರಾಮಿಕವಲ್ಲದ ರೋಗಗಳು,ಮಾನಸಿಕ ಅಸ್ವಸ್ಥತೆಯ ನಿರ್ವಹಣೆ,ಹಲ್ಲಿನ ಆರೈಕೆ,ಜೆರಿಯಾಟ್ರಿಕ್ ಆರೈಕೆ ಮತ್ತು ತುರ್ತು ಔಷಧದೆಹಲಿ , ಒಡಿಶಾ , ಪಶ್ಚಿಮ ಬಂಗಾಳ ಮತ್ತು ತೆಲಂಗಾಣ ರಾಜ್ಯಗಳನ್ನು ಹೊರತುಪಡಿಸಿ ಉಳಿದ ೨೬ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಈ ಯೋಜನೆಯನ್ನು ಒಪ್ಪಿಕೊಂಡಿವೆ. + ಅಕ್ಟೋಬರ್ ೨೦೧೮ ರವರೆಗೆ ಒಂದು ಲಕ್ಷಕ್ಕೂ ಹೆಚ್ಚು ಜನರು ಯೋಜನೆಯ ಲಾಭವನ್ನು ಪಡೆದಿದ್ದಾರೆ. + ನವೆಂಬರ್ ೨೬ ರ ಹೊತ್ತಿಗೆ ೮೨೫,೦೦೦ ಕ್ಕೂ ಹೆಚ್ಚು ಇ - ಕಾರ್ಡ್‌ಗಳನ್ನು ಉತ್ಪಾದಿಸಲಾಗಿತ್ತು ಮತ್ತು ಈ ಯೋಜನೆಗೆ ಹೆಚ್ಚಿನ ಖಾಸಗಿ ಆಸ್ಪತ್ರೆಗಳನ್ನು ನೇಮಕ ಮಾಡುವ ಒತ್ತಡವೂ ಇತ್ತು. +ಈ ಮೂರು ಆಸ್ಪತ್ರೆಗಳು ಬೇಗನೇ ಈ ಯೋಜನೆಗೆ ಕೈ ಸೇರಿಸಿದ್ದವು : +ನಂಗ್ಲೊಯ್‌ನ ಸಿಗ್ನಸ್ ಸೋನಿಯಾ ಆಸ್ಪತ್ರೆ +ಡಾ .ಶ್ರಾಫ್ ಅವರ ಚಾರಿಟಿ ಐ ಆಸ್ಪತ್ರೆ ಮತ್ತು ಸಿಗ್ನಸ್ ಎಂಎಲ್ಎಸ್ ಸೂಪರ್ - ಸ್ಪೆಷಾಲಿಟಿ ಆಸ್ಪತ್ರೆ. +ನಕಲಿ ವೈದ್ಯಕೀಯ ಮಸೂದೆಗಳನ್ನು ಸಲ್ಲಿಸುವ ಮೂಲಕ ಆಯುಷ್ಮಾನ್ ಭಾರತ್ ಯೋಜನೆಯನ್ನು ಖಾಸಗಿ ಆಸ್ಪತ್ರೆಗಳು ವ್ಯಾಪಕವಾಗಿ ದುರುಪಯೋಗಪಡಿಸಿಕೊಂಡಿದೆ ಎಂಬ ಮಾಧ್ಯಮ ವರದಿಗಳು ಬಂದಿವೆ . +ಯೋಜನೆಯಡಿಯಲ್ಲಿ , ಬಹಳ ಹಿಂದೆಯೇ ಡಿಸ್ಚಾರ್ಜ್ ಆಗಿರುವ ವ್ಯಕ್ತಿಗಳ ಮೇಲೆ ಶಸ್ತ್ರಚಿಕಿತ್ಸೆ ಮಾಡಲಾಗುತ್ತಿದೆ ಎಂದು ಹೇಳಲಾಗಿದೆ ಮತ್ತು ಮೂತ್ರಪಿಂಡ ಕಸಿ ಸೌಲಭ್ಯವಿಲ್ಲದ ಆಸ್ಪತ್ರೆಗಳಲ್ಲಿ ಡಯಾಲಿಸಿಸ್ ನಡೆಸಿದಂತೆ ತೋರಿಸಲಾಗಿದೆ. + ಉತ್ತರಾಖಂಡ ರಾಜ್ಯದಲ್ಲಿ ಮಾತ್ರ ಕನಿಷ್ಠ ೬೯೭ ನಕಲಿ ಪ್ರಕರಣಗಳಿವೆ . +ಈ ಯೋಜನೆಯಡಿಯಲ್ಲಿ ನಡೆದ ವಂಚನೆಗಾಗಿ ಆಸ್ಪತ್ರೆಗಳಿಗೆ ಒಂದು ಕೋಟಿ ರೂ .ದಂಡ ವಿಧಿಸಲಾಗಿದೆ . +ಇದರಡಿಯಲ್ಲಿ ಅನೇಕ ಆಸ್ಪತ್ರೆಗಳನ್ನು ಕಪ್ಪುಪಟ್ಟಿಗೆ ಸೇರಿಸಲಾಗಿದೆ ಮತ್ತು ನಿರಂತರವಾಗಿ ವಿಕಸಿಸುತ್ತಿರುವ ವಂಚನೆ - ನಿಯಂತ್ರಣ ವ್ಯವಸ್ಥೆಯು ಯೋಜನೆ ಬೆಳೆದಂತೆ ಅದನ್ನು ಸುಗಮಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. -- GitLab