From 3982c7638680f8bffd5fd148219f8c30d746afbd Mon Sep 17 00:00:00 2001 From: Narendra VG Date: Mon, 17 Apr 2023 15:33:40 +0530 Subject: [PATCH] Upload New File --- ...0\340\262\254\340\262\202\340\262\247.txt" | 133 ++++++++++++++++++ 1 file changed, 133 insertions(+) create mode 100644 "Data Collected/Kannada/MIT Manipal/Kannada-Scrapped-dta/\340\262\256\340\262\271\340\262\277\340\262\263\340\262\276_\340\262\270\340\262\254\340\262\262\340\263\200\340\262\225\340\262\260\340\262\243_\340\262\252\340\263\215\340\262\260\340\262\254\340\262\202\340\262\247.txt" diff --git "a/Data Collected/Kannada/MIT Manipal/Kannada-Scrapped-dta/\340\262\256\340\262\271\340\262\277\340\262\263\340\262\276_\340\262\270\340\262\254\340\262\262\340\263\200\340\262\225\340\262\260\340\262\243_\340\262\252\340\263\215\340\262\260\340\262\254\340\262\202\340\262\247.txt" "b/Data Collected/Kannada/MIT Manipal/Kannada-Scrapped-dta/\340\262\256\340\262\271\340\262\277\340\262\263\340\262\276_\340\262\270\340\262\254\340\262\262\340\263\200\340\262\225\340\262\260\340\262\243_\340\262\252\340\263\215\340\262\260\340\262\254\340\262\202\340\262\247.txt" new file mode 100644 index 0000000..64ef9d4 --- /dev/null +++ "b/Data Collected/Kannada/MIT Manipal/Kannada-Scrapped-dta/\340\262\256\340\262\271\340\262\277\340\262\263\340\262\276_\340\262\270\340\262\254\340\262\262\340\263\200\340\262\225\340\262\260\340\262\243_\340\262\252\340\263\215\340\262\260\340\262\254\340\262\202\340\262\247.txt" @@ -0,0 +1,133 @@ +ಈ ಕಾಲಘಟ್ಟದಲ್ಲೂ ಮಹಿಳಾ ಸಬಲೀಕರಣ ಎಂಬ ಹೆಸರು ಕೇಳಬೇಕಿರುವುದು ನಮ್ಮೆಲ್ಲರ ದುರ್ದೈವ. +ಸರ್ಕಾರಗಳು ಮಹಿಳೆಯರ ಏಳಿಗೆಗೆ ಹಲವಾರು ಯೋಜನೆಗಳನ್ನು ಜಾರಿ ಮಾಡಿದ್ದರೂ ಅವು ಇನ್ನೂ ಸಂಪೂರ್ಣವಾಗಿ ಮಹಿಳೆಯರ ಮನ, ಮನೆ ತಲುಪಿಲ್ಲ. +ಇದಕ್ಕೆ ಸಾಕಷ್ಟು ನಿದರ್ಶನಗಳು ನಮ್ಮ ಮುಂದಿವೆ. +ಪುರುಷರಿಗೆ ಸೇರಿದ ಮತದಾನದಂತಹ ಮೂಲಭೂತವಾದ ಎಲ್ಲ ಹಕ್ಕುಗಳು ಮಹಿಳೆಯರಿಗೂ ಸಿಕ್ಕಿವೆ. +ಆದರೆ ಆಧುನಿಕತೆಯ ಪರದೆಯಲ್ಲಿ ಮಹಿಳೆಯು ನಾಲ್ಕು ಗೋಡೆಗಳ ಮಧ್ಯ ಸಾಮಾಜಿಕ, ಆರ್ಥಿಕ, ಧಾರ್ಮಿಕ, ರಾಜಕೀಯ, +ಶೈಕ್ಷಣಿಕ, ಮೂಢನಂಬಿಕೆ, ಸಾಮಾಜಿಕ ಅಸಮಾನತೆಯಂತಹ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾಳೆ. +ಕಾಲಾನಂತರದಲ್ಲಿ, ಮಹಿಳೆಯರು ತಮ್ಮ ಶಕ್ತಿಯನ್ನು ಅರಿತುಕೊಂಡರು. +ಅಲ್ಲಿಂದ ಮಹಿಳಾ ಸಬಲೀಕರಣಕ್ಕಾಗಿ ಕ್ರಾಂತಿ ಪ್ರಾರಂಭವಾಯಿತು. +ಬನ್ನಿ ಈ ವಿಷಯದ ಆಳ ಅಂತರಾಳವನ್ನು ಕೂಲಂಕಷವಾಗಿ ಚರ್ಚಿಸೋಣ. +ಮಹಿಳಾ ಸಬಲೀಕರಣ ಎಂದರೇನು? +ಮಹಿಳಾ ಸಬಲೀಕರಣದ ಅರ್ಥ: ಮಹಿಳೆಯರಿಗೆ ಸಾಮಾಜಿಕವಾಗಿ, ಆರ್ಥಿಕವಾಗಿ, ರಾಜಿಕೀಯವಾಗಿ, ಶೈಕ್ಷಣಿಕವಾಗಿ,ಬೌದ್ಧಿಕವಾಗಿ ಮತ್ತು ಇತರೆ ಕ್ಷೇತ್ರಗಳಲ್ಲಿ ಅಧಿಕಾರ ನೀಡುವ ಮೂಲಕ ಸ್ತ್ರೀ ಪುರುಷರೆನ್ನದೇ ಸಮಾನತೆಯಿಂದ ಕಾಣುವುದೇ +ಮಹಿಳಾ ಸಬಲೀಕರಣ ಎಂದು ಹೇಳಬಹುದು. +ಮಹಿಳಾ ಸಬಲೀಕರಣವನ್ನು ಮಹಿಳೆಯರ ಸ್ವ-ಮೌಲ್ಯದ ಪ್ರಜ್ಞೆಯನ್ನು ಉತ್ತೇಜಿಸುವುದು ಎಂದು ವ್ಯಾಖ್ಯಾನಿಸಬಹುದು. +ಅವರ ಸ್ವಂತ ಆಯ್ಕೆಗಳನ್ನು ನಿರ್ಧರಿಸುವ ಸಾಮರ್ಥ್ಯ ಹಾಗೂ ತಮ್ಮ ಮತ್ತು ಇತರರ ಸಾಮಾಜಿಕ ಬದಲಾವಣೆಯ ಮೇಲೆ ಪ್ರಭಾವ ಬೀರುವ ಹಕ್ಕನ್ನು ಇದರಲ್ಲಿ ಉಲ್ಲೇಖಿಸಬಹುದು. +ಮಹಿಳಾ ಸಬಲೀಕರಣವು ಜಗತ್ತಿನಲ್ಲಿ ಮಹಿಳೆಯರ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಸ್ಥಿತಿಯನ್ನು ಸುಧಾರಿಸಲು ಕೈಗೊಂಡ ಚಟುವಟಿಕೆಗಳನ್ನು ಸೂಚಿಸುತ್ತದೆ. +ಭಾರತವು ಆಧುನಿಕವಾಗಿ ಎಷ್ಟೇ ಮುಂದೆವರೆದರೂ ಸಹ ಹಲವಾರು ಸಾಮಾಜಿಕ ಸಂಪ್ರದಾಯಗಳು ಮಹಿಳೆಯರನ್ನ ಕಗ್ಗತ್ತಲ ಕೋಣೆಗೆ ತಳ್ಳಿವೆ. +ಹಾಗಾಗಿ ಮಹಿಳಾ ಸಬಲೀಕರಣದ ಅವಶ್ಯಕತೆ ಸಾಕಷ್ಟು ಇದೆ. +ಮಹಿಳಾ ಸಬಲೀಕರಣದ ಅವಶ್ಯಕತೆ ಏಕಿದೆ? +ಸಮಾದಲ್ಲಿ ಮಹಿಳಾ ಸಬಲೀಕರಣ ನಿಜವಾಗಿಯೂ ತುಂಬಾನೆ ಅಗತ್ಯವಿದೆ. +ಇದು ಮಹಿಳೆಯರ ಸ್ವಾಭಿಮಾನಕ್ಕೆ ಮತ್ತು ಸಮಾಜಕ್ಕೆ ಅನಿವಾರ್ಯ. +ಮಹಿಳೆಯರ ಸಬಲೀಕರಣವು ಮಹಿಳೆಯರಿಗೆ ಹಕ್ಕನ್ನು ನೀಡುವುದಾಗಿದೆ. +ಕುಟುಂಬಗಳು, ಸಮುದಾಯ ಮತ್ತು ದೇಶದ ಆರೋಗ್ಯ ಮತ್ತು ಸಾಮಾಜಿಕ ಅಭಿವೃದ್ಧಿಗೆ ಮಹಿಳೆಯರ ಸಬಲೀಕರಣವು ಅತ್ಯಗತ್ಯ. +ಮಹಿಳೆಯರು ಸುಂದರವಾದ ಜೀವನವನ್ನು ನಡೆಸಿದಾಗ ಮಾತ್ರ ಅವರ ಸಬಲೀಕರಣದ ಸಂಪೂರ್ಣ ಸಾಮರ್ಥ್ಯ ಯಶಸ್ವಿಯಾಗುತ್ತದೆ. +ನಾವು ಮಹಿಳೆಯರಿಗೆ ತಮ್ಮ ಪರವಾಗಿ ಮಾತನಾಡಲು ಮತ್ತು ಎಂದಿಗೂ ಅನ್ಯಾಯಕ್ಕೆ ಬಲಿಯಾಗದಂತೆ ಅಧಿಕಾರ ನೀಡಬೇಕಾಗಿದೆ. +ಭಾರತದ ಸಂವಿಧಾನವು ಪುರುಷರಿಗೆ ಸಮಾನವಾದ ಸ್ಥಾನಮಾನವನ್ನು ಮಹಿಳೆಗೆ ನೀಡಿದೆಯಾದೂ ಅದು ಸಂವಿಧಾನದ ಪುಟಗಳಿಗಷ್ಟೇ ಸೀಮಿತವಾಗಿದೆ ಎಂದು ಕೆಲವು ಘಟನೆಗಳೆ ಸಾಕ್ಷಿ. +ಈ ಸಮಾನತೆ ಅಸ್ತ್ರವನ್ನು ಬಳಕೆ ಮಾಡಿಕೊಂಡು ಕೆಲವಷ್ಟೇ ಮಹಿಳೆಯರು ತಮ್ಮ ಪ್ರತಿಭೆ ಅನಾವರಣ ಮಾಡಿದ್ದಾರೆ ಹೊರತು ಇನ್ನೂ ಹೆಚ್ಚಿನ ಮಹಿಳೆಯರು ಈ ವ್ಯವಸ್ಥೆಯಲ್ಲಿ ಮುಕ್ತವಾಗಿ ಹೊರಬರಲು ಸಾಧ್ಯವಾಗುತ್ತಿಲ್ಲ. +ಇವೆಲ್ಲಾ ಕಾರಣಗಳು ಮಹಿಳಾ ಸಬಲೀಕರಣದ ಅವಶ್ಯಕತೆಯನ್ನು ಎತ್ತಿ ಹಿಡಿಯುತ್ತವೆ. + ಹಾಗಾದರೆ ಇದರ ಮೂಲ ಉದ್ದೇಶ ಏನು?, ಇದು ಹೇಗೆ ಸಾಧ್ಯ ಎಂಬಿತ್ಯಾದಿ ಮಾಹಿತಿಯನ್ನು ತಿಳಿಯೋಣ. +ಮಹಿಳಾ ಸಬಲೀಕರಣದ ಮೂಲ ಉದ್ದೇಶ ಶಿಕ್ಷಣ: +ಮಹಿಳೆರಿಗೆ ಮಾತ್ರವಲ್ಲ ಪ್ರತಿಯೊಬ್ಬರಿಗೂ ಶಿಕ್ಷಣ ಅತ್ಯಾವಶ್ಯಕ. + ಇದು ಮಾನವನಾಗಿ ಹುಟ್ಟಿದ ಜೀವಿಯನ್ನು ನಿಜವಾದ ಮನುಷ್ಯನನ್ನಾಗಿ ಮಾಡುತ್ತದೆ. +ಮಹಿಳೆಯರು ಶಿಕ್ಷಣ ಪಡೆಯುವುದರಿಂದ ಎಲ್ಲರಂತೆ ದುಡಿಯಬಹುದು, ಪ್ರಶ್ನಿಸಬಹುದು, ಸಮಾನವಾಗಿ ಕೂತು ಮಾತನಾಡಬಹುದು, ಸರಿ-ತಪ್ಪುಗಳ ಬಗ್ಗೆ ವಿವರಣೆ ನೀಡಬಹುದು. +ಹೀಗೆ ಜೀವನದ ಪ್ರಮುಖ ಮೌಲ್ಯಗಳನ್ನು ಅರ್ಥಮಾಡಿಕೊಳ್ಳಬಹುದಾಗಿದೆ. +ವಿಶ್ವ ಜನಸಂಖ್ಯಾ ವರದಿಯ ಪ್ರಕಾರ ತಾಯಿಯ ಶಿಕ್ಷಣವು ತನ್ನ ಕುಟುಂಬವನ್ನು ಚಿಕ್ಕದಾಗಿ ಮತ್ತು ತನ್ನ ಮಕ್ಕಳನ್ನು ಉತ್ತಮವಾಗಿ ಬೆಳೆಸುವ ಏಕೈಕ ಪ್ರಮುಖ ಅಂಶವಾಗಿದೆ. +ಸಾಂಪ್ರದಾಯಿಕ ಜೀವನಶೈಲಿಯನ್ನೇ ಅನುಸರಿಸಿಕೊಂಡು ಬದುಕಬೇಕು ಎನ್ನುವ ಗೊಡ್ಡು ವ್ಯವಸ್ಥೆಗೆ ಶಿಕ್ಷಣವು ರಕ್ಷಣೆಯ ಮೊದಲ ಪ್ರತಿತಂತ್ರವಾಗಿದೆ. +ಲಿಂಗ ತಾರತಮ್ಯದ ನಿವಾರಣೆ: +ಇದು ಸಹ ಪ್ರಮುಖವಾದ ಅಂಶ. ಭಾರತದಲ್ಲಿ ಇಂದಿಗೂ ಈ ವ್ಯವಸ್ಥೆ ಜೀವಂತ ಇದೆ. +ಮಹಿಳೆಯರು ಎಂದರೆ ಮಕ್ಕಳನ್ನು ಹೆರುವುದಕ್ಕೆ, ಮನೆ ಕೆಲಸ ಮಾಡಿಕೊಂಡು ಮನೆಯಲ್ಲೇ ಇರುವುದಕ್ಕೆ ಎಂಬ ಕಾಲಘಟ್ಟದಲ್ಲಿ ಹಲವಾರು ಮಹಿಳೆಯರು ಅದರಿಂದ ಹೊರಬಂದು ಗಂಡಿನಷ್ಟೇ ಬಲಿಷ್ಠಳು ಎಂದು ತೋರಿಸಿಕೊಟ್ಟ ಅದೆಷ್ಟೋ ವೀರ ವನಿತೆಯರು ನಮ್ಮ ನಡುವೆ ಬಂದು ಹೋಗಿದ್ದಾರೆ. +ಮಹಿಳೆಯರು ತಮ್ಮ ಭವಿಷ್ಯವನ್ನು ಯಶಸ್ವಿಯಾಗಿ ರೂಪಿಸಿಕೊಳ್ಳಲು ಸಮಾಜದಲ್ಲಿ ಅವರಿಗೆ ಅರ್ಹವಾದ ಗೌರವ ಮತ್ತು ಸ್ಥಾನಮಾನವನ್ನು ನೀಡಬೇಕು. + ಸಬಲೀಕರಣದ ಗುರಿಯನ್ನು ಸಾಧಿಸಲು ಎಲ್ಲಾ ಹಂತಗಳಲ್ಲಿ ಮತ್ತು ಪ್ರಮುಖ ನಿರ್ಧಾರ ತೆಗೆದುಕೊಳ್ಳುವಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲು ಅವರಿಗೆ ಅವಕಾಶವನ್ನು ಒದಗಿಸಬೇಕು. +ಮಹಿಳಾ ಅಭಿವೃದ್ಧಿ ಕಾರ್ಯಕ್ರಮ, ಕಾಯಿದೆಗಳ ಅನುಷ್ಠಾನ: +ಮಹಿಳೆಯರ ಸಾಮರ್ಥ್ಯವನ್ನು ಅವರಿಗೆ ಪರಿಚಯಿಸುವದರ ಮೂಲಕ ಸ್ವಯಂ ಉದ್ಯೋಗಿಗಳನ್ನಾಗಿ ಮಾಡಬಹುದು. +ವೃತ್ತಿಪರ ಮತ್ತು ಉದ್ಯಮಶೀಲತೆ ಅಭಿವೃದ್ಧಿ ಕಾರ್ಯಕ್ರಮಗಳ ಅಡಿಯಲ್ಲಿ ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸಬೇಕು. +ಹೆಣ್ಣು ಭ್ರೂಣಹತ್ಯೆ ಮತ್ತು ಶಿಶುಹತ್ಯೆಗಳು, ಮದುವೆ, ವಿಚ್ಛೇದನ, ದತ್ತು ಸ್ವೀಕಾರ, ವರದಕ್ಷಿಣೆ ಮತ್ತು ನೈತಿಕತೆಗೆ ಸಂಬಂಧಿಸಿದ ಇತರ ಕಾನೂನುಗಳನ್ನು ಕಠಿಣಗೊಳಿಸಬೇಕು. +ಭ್ರೂಣ ಲಿಂಗ ಪತ್ತೆ, ಮಹಿಳೆಯರ ವಿಮೋಚನೆಗಾಗಿ ಲೈಂಗಿಕ ಕಿರುಕುಳದ ವಿರುದ್ಧ ರಕ್ಷಣೆ ಅಥವಾ ಕಾನೂನನ್ನು ಇನ್ನಷ್ಟು ಕಠಿಣವಾಗಿ ಜಾರಿಗೊಳಿಸಬೇಕು. +ಜಾಗೃತಿ ಕಾರ್ಯಕ್ರಮಗಳ ಆಯೋಜನೆ: +ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದ ಮಹಿಳಾ ಆಯೋಗಗಳು, 11೦೦, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಕಾರ್ಯಗಳು, ಮಹಿಳಾ ಹಕ್ಕುಗಳು, ಮಾನವ ಹಕ್ಕುಗಳ ಬಗ್ಗೆ ಜಾಗೃತಿ ಅಭಿಯಾನವನ್ನು ಕೈಗೊಳ್ಳಬೇಕು. +ಸಮೂಹ ಮಾಧ್ಯಮಗಳು ಪ್ರಭಾವ: +ಮಹಿಳಾ ಸಬಲೀಕರಣದಲ್ಲಿ ಸಮೂಹ ಮಾಧ್ಯಮಗಳ ಪಾತ್ರ ಪ್ರಮುಖವಾಗಿದೆ. +ಈ ಮೂಲಕ ಸ್ವಾಭಿಮಾನ ಮತ್ತು ಆತ್ಮ ವಿಶ್ವಾಸವನ್ನು ಹೆಚ್ಚಿಸಬಹುದು. +ಇನ್ನು ಇದೆಲ್ಲಾ ಹೇಗೆ ಸಾಧ್ಯ ಎಂಬ ಆಲೋಚನೆ ನಿಮ್ಮ ಮನದಲ್ಲಿ ಖಂಡಿತಾ ಮೂಡಿರುತ್ತದೆ. +ಬನ್ನಿ ಅದರ ಬಗ್ಗೆಯೂ ಒಂದಷ್ಟು ತಿಳಿದುಕೊಳ್ಳೋಣ. +ಮಹಿಳಾ ಸಬಲೀಕರಣ ಹೇಗೆ ಸಾಧ್ಯ? +ಮಹಿಳೆಯರನ್ನು ಸಬಲೀಕರಣಗೊಳಿಸಲು ಹಲವಾರು ಮಾರ್ಗಗಳಿವೆ. +ಅದನ್ನು ನನಸಾಗಿಸಲು ಜನ ಮತ್ತು ಸರ್ಕಾರ ಎರಡೂ ಒಗ್ಗೂಡಬೇಕು. +ಅಂತಹ ಕೆಲವು ಮಾರ್ಗಗಗಳನ್ನೂ ತಿಳಿಯೋಣ. +1.ಕಳಪೆ ಆರೋಗ್ಯ ಮತ್ತು ಯೋಗಕ್ಷೇಮದ ಕಾರಣಗಳ ಕುರಿತು ಜಾಗೃತಿ ಮೂಡಿಸುವುದು. +2.ಜೀವನೋಪಾಯಕ್ಕೆ ಕುರಿತಾದ ತರಬೇತಿ ನೀಡುವುದು. +3.ಶಿಕ್ಷಣದ ಮೂಲಕ ಅವರ ಸಂಪೂರ್ಣ ಸಾಮರ್ಥ್ಯವನ್ನು ತಲುಪುವಂತೆ ಮಾಡುವುದು. +4.ಸಾಮಾಜಿಕ ಸ್ಥಾನಮಾನದಲ್ಲಿ ಮೇಲೇರಲು ಸಮರ್ಥರನ್ನಾಗಿಸುವುದು. +5.ಶಿಕ್ಷಣ, ಅರಿವು, ಸಾಕ್ಷರತೆ ಮತ್ತು ತರಬೇತಿಯ ಮೂಲಕ ಸಬಲೀಕರಣ ಮಾಡಬಹುದು. +6.ಆರ್ಥಿಕವಾಗಿ ಸಬಲೀಕರಣಗೊಳಿಸುವ ಕಡೆಗೆ ಹೆಚ್ಚಿನ ಗಮನ ಹರಿಸಬೇಕು. +7.ಮಹಿಳೆಗೆ ಸಮಾನ ವೇತನ ನೀಡಬೇಕು. +8.ಮಹಿಳೆಯರ ಅಭಿವೃದ್ಧಿಯಲ್ಲಿ ರಾಜಕೀಯವನ್ನು ಮಾಡಬಾರದು. +9.ಮಹಿಳೆಯರ ವಿರುದ್ಧದ ಸಾವಿರಾರು ಪ್ರಕರಣಗಳು ನ್ಯಾಯಾಲಯಗಳಲ್ಲಿ ಬಾಕಿ ಉಳಿದಿವೆ. ಅವುಗಳನ್ನು ಆದಷ್ಟು ಬೇಗ ಮುಗಿಯುವಂತೆ ಮಾಡಬೇಕು. +10.ಕಲಿಯಲು ಸುರಕ್ಷಿತ ವಾತಾವರಣವನ್ನು ನಿರ್ಮಿಸಬೇಕು +ಗ್ರಾಮೀಣ ಮಹಿಳೆಯರ ಸಬಲೀಕರಣ +ಇದು ತುಂಬಾ ಗಮನಾರ್ಹ ವಿಷಯ. +ಗ್ರಾಮೀಣ ಮಹಿಳೆಯರಿಗೂ ಪಟ್ಟಣದ ಮಹಿಳೆಯರಿಗೂ ತುಂಬಾನೆ ವ್ಯತ್ಯಾಸ ಇದೆ. +ಪಟ್ಟಣದ ಮಹಿಳೆಯರ ಸಬಲೀಕರಣಕ್ಕಿಂತ ಗ್ರಾಮಿಣ ಮಹಿಳೆಯರ ಸಬಲೀಕರಣ ಪ್ರಸ್ತುತ ಕಾಲದಲ್ಲಿ ಅತ್ಯವಶ್ಯಕ. +ಅದರಲ್ಲೂ ರಾಜಕೀಯ ಹಾಗೂ ಔದ್ಯೋಗಿಕ ವಿಷಯದಲ್ಲಿ ಮಹಿಳೆಯರು ಇನ್ನೂ ಹೆಚ್ಚಾಗಿ ಸಬಲರಾಗಬೇಕಿದೆ . +ಈಗಾಗಲೇ ರಾಜಕೀಯವಾಗಿ ಕೆಲವು ಮಹಿಳೆಯರು ಮುಖ್ಯವಾಹಿನಿಗೆ ಬಂದಿದ್ದರಾದರೂ ಅವರ ಹಿಂದೆ ಪುರುಷರ ಪರೋಕ್ಷವಾಗಿ ಆಡಳಿತ ಇರುತ್ತದೆ. +ಲಿಂಗ ಸಮಾನತೆಯನ್ನು ಉತ್ತೇಜಿಸಬೇಕು. +ಯೋಗ್ಯವಾದ ಕೆಲಸವನ್ನು ನೀಡುವ ಮೂಲಕ ನಾವು ಅವರನ್ನು ಸಬಲೀಕರಣಗೊಳಿಸಬಹುದು. +ಉತ್ತಮ ಮತ್ತು ಪೌಷ್ಟಿಕಾಂಶಯುಕ್ತ ಆಹಾರ ದೊರೆಯುವಂತೆ ಮಾಡಬೇಕು. +ಗ್ರಾಮೀಣ ಭಾಗದ ಮಹಿಳೆಯರು ಹೆಚ್ಚಾಗಿ ಸಣ್ಣ ಉದ್ಯಮಗಳಲ್ಲಿ ತೊ ಡಗುತ್ತಾರೆ. +ಇದಕ್ಕೆ ಅವರಿಗೆ ಹಣಕಾಸಿನ ಸಹಾಯ ಸರ್ಕಾರದಿಂದ ದೊರೆಯಬೇಕಿದೆ. +ಜೀವನ ಕೌಶಲ್ಯಗಳಿಗೆ ಸಹಾಯ ಮಾಡುವುದು, ಪ್ರಾರಂಭಿಕ ವ್ಯವಹಾರಗಳಿಗೆ ಕಿರು-ಸಾಲಗಳನ್ನು ಒದಗಿಸುವುದು ಅಥವಾ ಮಾರ್ಗದರ್ಶನ ನೀಡುವುದರಿಂದ ಗ್ರಾಮೀಣ ಮಹಿಳೆಯರನ್ನು ಸಬಲರನ್ನಾಗಿ ಮಾಡಬಹುದಾಗಿದೆ. +ಇವೆಲ್ಲಾದರ ಜೊತೆಗೆ ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿಯೂ ಅಷ್ಟೇ ಮುಖ್ಯವಾಗಿದೆ. +ಇದರತ್ತಾ ಗಮನಕೊಡುವುದು ಬಹಳ ಅವಶ್ಯಕವಾಗಿದೆ. +ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ +ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಎಂದರೆ ಮಹಿಳೆಯರ ಸಾಮಾಜಿಕ, ಆರ್ಥಿಕ, ಆರೋಗ್ಯ ಮತ್ತು ಪೌಷ್ಟಿಕಾಂಶದ ಸ್ಥಿತಿಯನ್ನು ಸುಧಾರಿಸಲು ಇದು ಸಹಕಾರಿ. +ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯವು ಮಹಿಳೆಯರಿಗೆ ಸಂಬಂಧಿಸಿದ ವಿವಿಧ ವಿಶೇಷ ಕಾನೂನುಗಳನ್ನು ಜಾರಿಗೆ ತಂದಿದೆ. +* ಕೌಟುಂಬಿಕ ದೌರ್ಜನ್ಯದಿಂದ ಮಹಿಳೆಯರ ರಕ್ಷಣೆ ಕಾಯಿದೆ, 2005. +* ವರದಕ್ಷಿಣೆ ನಿಷೇಧ ಕಾಯಿದೆ +* ಕೆಲಸದ ಸ್ಥಳದಲ್ಲಿ ಮಹಿಳೆಯರ ಲೈಂಗಿಕ ಕಿರುಕುಳ ದೌರ್ಜನ್ಯ ತಡೆ ಕಾಯಿದೆಯನ್ನು ಜಾರಿ ತರುವುದರ ಮೂಲಕ ಸರ್ಕಾರಗಳು ಮಹಿಳೆಯ ಅಭಿವೃದ್ಧಿಗೆ ಮುಂದಾಗಿವೆ. +ಹೆಚ್ಚುತ್ತಿರುವ ಹೆಣ್ಣು ಭ್ರೂಣಹತ್ಯೆ, ಹೆಣ್ಣು ಶಿಶುಹತ್ಯೆ ಮತ್ತು ಹೆಚ್ಚಿನ ಪ್ರಮಾಣದ ಶಿಶು ಮತ್ತು ತಾಯಿಯ ಮರಣದ ವಿರುದ್ಧ ಜಾಗೃತಿ ಅಗತ್ಯ. +ಈ ನಿಟ್ಟಿನಲ್ಲಿ ಈಗಾಗಲೇ ಸರ್ಕಾಗಳು, ಎನ್ಟಿಓಗಳು ತಮ್ಮದೇ ಆತ ರೀತಿಯಲ್ಲಿ ಕೆಲಸ ಮಾಡುತ್ತಿವೆ. +* ಮಹಿಳೆಯರ ಸಾಂವಿಧಾನಿಕ ಹಕ್ಕುಗಳನ್ನು ರಕ್ಷಿಸಲು ಸಮಾನ ಸಂಭಾವನೆ ಕಾಯಿದೆ +* ಸತಿ ಆಯೋಗದ ಕಾಯಿದೆ +* ಹೆರಿಗೆ ಪ್ರಯೋಜನ ಕಾಯಿದೆ +* ವರದಕ್ಷಿಣೆ ನಿಷೇಧ ಕಾಯಿದೆ +ಇಷ್ಟೆಲ್ಲಾ ಸವಲತ್ತು ಮಹಿಳೆಯರಿಗೆ ಸಿಗುತ್ತಿದೆಯಾ? +ಎಂಬ ಬಗ್ಗೆ ನಿಮ್ಮಲ್ಲಿ ಖಂಡಿತಾ ಪ್ರಶ್ನೆ ಮೂಡಿರಬಹುದು. +ಅದಕ್ಕೂ ಸಹ ಒಂದು ವ್ಯವಸ್ಥೆ ಜಾರಿ ಮಾಡಲಾಗಿದೆ. +ಅದುವೇ ಕಾನೂನು ವ್ಯವಸ್ಥೆ. +ಈ ಮೂಲಕ ಮಹಿಳೆಯರು ತಮ್ಮ ಹಕ್ಕನ್ನು ಕೇಳಿ ಪಡೆಯಬಹುದು. +ಬನ್ನಿ ಅದರ ಬಗ್ಗೆ ಅರಿಯೋಣ. +ಮಹಿಳಾ ಸಬಲೀಕರಣದಲ್ಲಿ ಸರಕಾರದ ಪಾತ್ರ +ಭಾರತ ಸರ್ಕಾರವು ವಿಭಿನ್ನ ಯೋಜನೆಗಳು ಮತ್ತು ನೀತಿಗಳನ್ನು ಪರಿಚಯಿಸುವ ಮೂಲಕ ಮಹಿಳಾ ಸಬಲೀಕರಣವನ್ನು ಉತ್ತೇಜಿಸಲು ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದೆ. +1.ಬೆಟಿ ಬಚಾವೋ ಬೆಟಿ ಪಡಾವೊ ಯೋಜನೆ +2.ಬ್ಯಾಂಕ್ಗಳ ಸಹಕಾರದೊಂದಿಗೆ ಸರ್ಕಾರವು ಮಹಿಳೆಯರಿಗೆ ಆರ್ಥಿಕ ಸಹಕಾರ ನೀಡಿ, ಅವರನ್ನು ಅಭಿವೃದ್ಧಿಯತ್ತ ಕೊಂಡೊಯ್ಯುತ್ತಿದೆ. +3.ಮಹಿಳೆಯ ಸಬಲೀಕರಣದ ಉದ್ದೇಶದಿಂದ 1992 ರಲ್ಲಿ ರಾಷ್ಟ್ರೀಯ ಮಹಿಳಾ ಆಯೋಗವನ್ನು ರಚನೆ ಮಾಡಲಾಯಿತು. +4.1999 ರಲ್ಲಿ ಮಹಿಳೆಯರಿಗಾಗಿ ಸ್ವಸಹಾಯ ಗುಂಪುಗಳ ರಚನೆ ಮಾಡಲಾಯಿತು. +5.ಅಲ್ಲದೇ ಪ್ರತಿ ವರ್ಷ ಮಾ.8 ರಂದು ಮಹಿಳಾ ದಿನಾಚರಣೆ ಆಚರಿಸುವ ಮುಖ್ಯ ಉದ್ದೇಶವೇ ಮಹಿಳಾ ಸಬಲೀಕರಣ. +6.2001ನೇ ವರ್ಷವನ್ನು ಮಹಿಳಾ ಸಬಲೀಕರಣ ವರ್ಷವೆಂದು ಆಚರಣೆ ಮಾಡಲಾಯಿತು. +7.ಭಾಗ್ಯಲಕ್ಷ್ಮಿ ಬಾಂಡ್‌ ಯೋಜನೆ +8.ಜನನಿ ಸುರಕ್ಷಾ ಯೋಜನೆ +9.ಮೈತ್ರಿ ಯೋಜನೆ +10.ಮನಸ್ವಿನಿ ಯೋಜನೆ +ಇತ್ಯಾದಿವುಗಳನ್ನು ಸರ್ಕಾರ ಮಹಿಳೆಯರ ಅಭಿವೃದ್ಧಿಗಾಗಿ ಜಾರಿಗೆ ತಂದಿದೆ. +ಮಹಿಳಾ ಸಬಲೀಕರಣ ಯೋಜನೆಗಳು +ಪ್ರಪಂಚದಾದ್ಯಂತದ ಹಲವು ದೇಶಗಳು ಮಹಿಳಾ ಸಬಲೀಕರಣಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳಿಗೆ ಹೆಚ್ಚೆಚ್ಚು ಒತ್ತು ನೀಡುತ್ತಿವೆ. +ಮಹಿಳೆಯರ ಮೇಲಿನ ತಾರತಮ್ಯ ಮತ್ತು ದೌರ್ಜನ್ಯವನ್ನು ತಡೆಯಲು ಹಲವಾರು ಯೋಜನೆಗಳನ್ನು ಜಾರಿಗೆ ತಂದಿವೆ. +ಹೀಗಾಗಿ, ಭಾರತ ಸರ್ಕಾರವು ಮಹಿಳಾ ಸಬಲೀಕರಣಕ್ಕೆ ಸಂಬಂಧಿಸಿದ ಕೆಲವು ಸಮಸ್ಯೆಗಳನ್ನು ಗುರುತಿಸಿ, ಕೆಲವು ಕಾರ್ಯಕ್ರಮಗಳನ್ನು ಪ್ರಾರಂಭಿಸಿದೆ. +ಅವುಗಳಲ್ಲಿ ಕೆಲವೆಂದರೆ: +* ಬೆಟಿ ಬಚಾವೋ ಬೆಟಿ ಪಡಾವೊ ಯೋಜನೆ: ಹರಿಯಾಣದಲ್ಲಿ ಭಾರತದ ಪ್ರಧಾನ ಮಂತ್ರಿಯವರು 22 ನೇ ಜನವರಿ 2015 ರಂದು ಇದನ್ನು ಪ್ರಾರಂಭಿಸಿದರು. +* ಕೆಲಸ ಮಾಡುವ ಮಹಿಳೆಯರಿಗೆ ಸುರಕ್ಷಿತ ವಸತಿ ಮತ್ತು ಪರಿಸರವನ್ನು ನೀಡುವ ಸಲುವಾಗಿ ವರ್ಕಿಂಗ್‌ ವುಮೆನ್‌ ಹಾಸ್ಟೆಲ್‌ ಗಳನ್ನು ಪ್ರಾರಂಭಿಸಲಾಗಿದೆ. +* OSC ಯನ್ನು ಏಪ್ರಿಲ್‌ 2015 ರಲ್ಲಿ ಪ್ರಾರಂಭಿಸಲಾಯಿತು. +* ಸಾರ್ವಜನಿಕ ಅಥವಾ ಖಾಸಗಿ ಸ್ಥಳದಲ್ಲಿ ದೌರ್ಜನ್ಯಕ್ಕೆ ಒಳಗಾದ ಮಹಿಳೆಯರಿಗೆ ನೆರವು ಮತ್ತು ಬೆಂಬಲ ನೀಡಲು ಇದನ್ನು ಆರಂಭಿಸಲಾಗಿದೆ. +* IRDP - ಸಮಗ್ರ ಗ್ರಾಮೀಣ ಅಭಿವೃದ್ಧಿ ಯೋಜನೆ. +* ಮಹಿಳಾ ಇ-ಹಾತ್‌. +1.ಸ್ತ್ರೀವಾದದ ಅರ್ಥ ಮಹಿಳೆಯರನ್ನು ಬಲಪಡಿಸುವುದು ಎಂದಲ್ಲ, ಮಹಿಳೆಯರು ಈಗಾಗಲೇ ಬಲಶಾಲಿಯಾಗಿದ್ದಾರೆ, ಆದರೆ ಜಗತ್ತು ಆ ಶಕ್ತಿಯನ್ನು ಗ್ರಹಿಸುವ ವಿಧಾನ ಬದಲಾಯಿಸಬೇಕು . +2.ಮನೆಯಿಂದಲೇ ಪುರುಷ ಪ್ರಾಧಾನ್ಯತೆ ಪ್ರಾರಂಭವಾಗುತ್ತದೆ. +ಕಾಲೇಜುಗಳಲ್ಲಿ ಹುಡುಗಿಯರ ಸಂಖ್ಯೆ ಕಡಿಮೆ ಇರುವುದರಿಂದ ರಾಜಕೀಯದಲ್ಲಿ ಕಡಿಮೆ ಮಹಿಳೆಯರಿದ್ದಾರೆ. +ಆರ್ಥಿಕ ಸಶಕ್ತತೆಯಿಂದ ಮಹಿಳಾ ಸಬಲೀಕರಣ ಸಾಧ್ಯ - ಸುಷ್ಮಿತಾ ದೇವ್‌ +ಮಹಿಳಾ ಸಬಲೀಕರಣವಿಲ್ಲದೆ ಯಾವುದೇ ದೇಶವು ಸಂಪೂರ್ಣವಾಗಿ ಅಭಿವೃದ್ಧಿ ಹೊಂದಲು ಸಾಧ್ಯವಿಲ್ಲ. +ಮಹಿಳಾ ಸಬಲೀಕರಣವು ಮಹಿಳೆಗೆ ಹೆಚ್ಚು-ಹೆಚ್ಚು ವಿಷಯಗಳನ್ನು ಕಲಿಯಲು ಮತ್ತು ಆಕೆ ಜೀವನದಲ್ಲಿ ಬಲಶಾಲಿಯಾಗಲು ಸಹಾಯ ಮಾಡುತ್ತದೆ. +ಮಹಿಳೆಯ ಸಬಲೀಕರಣ ಕೇವಲ ಸರಕಾರದ ಹೊಣೆಯಲ್ಲ ಸಮಾಜದ ಪ್ರತಿಯೊಬ್ಬ ವ್ಯಕ್ತಿಯ ಹೊಣೆಯಾಗಿದೆ. +ಮಹಿಳೆ ಅಬಲೆ ಅಲ್ಲ ಸಬಲೆ ಎಂಬುದನ್ನು ಎತ್ತಿಹಿಡಿಯಬೇಕಾಗಿದೆ. +ತೊಟ್ಟಿಲನ್ನು ತೂಗುವ ಕೈಯೊಂದು ಜಗತ್ತನ್ನು ತೂಗಬಲ್ಲದು ಎಂಬ ಮಾತು ಸತ್ಯ ಎಂಬುದನ್ನು ನಾವು ನಿರೂಪಿಸಬೇಕಿದೆ. + + -- GitLab