diff --git "a/Data Collected/Kannada/MIT Manipal/Kannada-Scrapped-dta/\340\262\257\340\262\225\340\263\215\340\262\267\340\263\213\340\262\252\340\262\276\340\262\270\340\262\225\340\262\260\340\263\2011.txt" "b/Data Collected/Kannada/MIT Manipal/Kannada-Scrapped-dta/\340\262\257\340\262\225\340\263\215\340\262\267\340\263\213\340\262\252\340\262\276\340\262\270\340\262\225\340\262\260\340\263\2011.txt" new file mode 100644 index 0000000000000000000000000000000000000000..dcb100b70eada39cb80e37817125c9b1309e8dc5 --- /dev/null +++ "b/Data Collected/Kannada/MIT Manipal/Kannada-Scrapped-dta/\340\262\257\340\262\225\340\263\215\340\262\267\340\263\213\340\262\252\340\262\276\340\262\270\340\262\225\340\262\260\340\263\2011.txt" @@ -0,0 +1,3755 @@ +ಲಾಲಿತ್ಯಮಯ ನಾಟ್ಯ ಹಾಗೂ ಮಾತಿನಿಂದ ಸ್ತ್ರೀ ವೇಷ, ಪುಂಡುವೇಷ, ರಾಜವೇಷಗಳ ಮೂಲಕ ಪ್ರತಿಭಾ ಸಂಪನ್ನರಾಗಿ ಬೆಳೆದಿರುವ ಶ್ರೀ ಕುಂಳ್ಳೆ ಶ್ರೀಧರರಾಯರು ಧರ್ಮಸ್ಥಳ ಮೇಳದ ಹಿರಿಯ ಕಲಾವಿದರಾಗಿ ತಿರುಗಾಟವನ್ನು ನಡೆಸುತ್ತಾ ಇದ್ದಾರೆ. +ಕಾಸರಗೋಡು ಜಿಲ್ಲೆಗೆ ಸೇರಿದ ಕುಂಬ್ಳೆ ವ್ಯಾಪ್ತಿಯ ಕೈಪಾಡಿ ಗ್ರಾಮದ ನ್ಯಾಕಾಪು ಎಂಬಲ್ಲಿ ಶ್ರೀ ಮಾಲಿಂಗ ಮತ್ತು ಕಾವೇರಿ ದಂಪತಿಯ ಸುಪುತ್ರರಾಗಿ ಜನಿಸಿದರು. +ಜನಿಸಿದ ದಿನಾಂಕ 27-3-1948. + ಯಕ್ಷಗಾನ ಕಲಾವಿದರಾದ ಕುಂಬ್ಳೆ ಚಂದ್ರಶೇಖರ ಇವರ ಪ್ರಭಾವದ ಮೇರೆಗೆ ಕುಂಬ್ಳೆ ಕಮಲಾಕ್ಷ ನಾಯ್ಕ ಎಂಬವರಲ್ಲಿ ನಾಟ್ಯಾಭ್ಯಾಸ ಮಾಡಿದರು. +ಇಷ್ಟಲ್ಲದೆ ಶೇಣಿ ಗೋಪಾಲಕೃಷ್ಟ ಭಟ್ಟರಿಂದ ಅರ್ಥಗಾರಿಕೆಯ ಬಗ್ಗೆ ಅನುಭವ ಸಂಪಾದನೆ ಮಾಡಿದರು. +ಪ್ರಾಥಮಿಕ ಹಂತದ ಶಾಲಾ ವಿದ್ಯಾಭ್ಯಾಸವನ್ನು ಪಡೆದಿರುವ ಇವರು ಕುಂಡಾವು ಮೇಳ - 1 ವರ್ಷ,ಕೂಡ್ಲು ಮೇಳ - 2 ವರ್ಷ, ಕರ್ನಾಟಕ ಮೇಳ -2 ವರ್ಷ, ಧರ್ಮಸ್ಥಳ ಮೇಳ - 43 ವರ್ಷ. +ಹೀಗೆ ತಿರುಗಾಟದ ಹಿನ್ನೆಲೆ ಇದೆ. +13ನೇ ವರ್ಷದಿಂದಲೇ ಕಲಾ ಸೇವೆಯನ್ನು ಆರಂಭಿಸಿದ ಇವರು 4 ದಶಕಗಳ ಕಾಲ ಮೇಳದ ತಿರುಗಾಟವನ್ನು ಮಾಡಿದ್ದಾರೆ. +ಆರಂಭದಲ್ಲಿ ಸ್ತ್ರೀವೇಷ ಮತ್ತು ಪುಂಡು ವೇಷಗಳಲ್ಲಿ ಮಿಂಚುತ್ತಿದ್ದರು. +ದಮಯಂತಿ, ಚಂದ್ರಮತಿ, ಸೀತೆ, ಶ್ರೀದೇವಿ, ಅಮ್ಮುಬಳ್ಳಾಲ್ತಿ, ಶ್ರೀರಾಮ, ಶ್ರೀಕೃಷ್ಣ ಇತ್ಯಾದಿ ಪಾತ್ರಗಳನ್ನು ಚೆನ್ನಾಗಿ ನಿರ್ವಹಿಸುತ್ತಿದ್ದಾರೆ. +ಇತ್ತೀಚಿನ ವರ್ಷಗಳಿಂದ ರಾಜ ವೇಷದ ಪಾತ್ರಗಳನ್ನೇ ಹೆಚ್ಚಾಗಿ ನಿರ್ವಹಿಸುವುದನ್ನೇ ಕಾಣಬಹುದಾಗಿದೆ. +ಅರ್ಜುನ,ಕರ್ಣ, ಭೀಷ್ಮ ಧರ್ಮರಾಯ ಮೊದಲಾದ ಪಾತ್ರಗಳನ್ನು ಉಲ್ಲೇಖಿಸಬಹುದಾಗಿದೆ. +ಕೃಷಿಗಾರಿಕೆಂಯು ಬಗ್ಗೆಯೂ ಶ್ರಮಿಸಿ ಅನುಭವವಿರುವ ಇವರು ಮಳೆಗಾಲದ ಪ್ರದರ್ಶನಗಳಲ್ಲೂ ಬೇಡಿಕೆ ಕಲಾವಿದರಾಗಿದ್ದಾರೆ. +ಶ್ರೀಮತಿ ಸುಲೋಚನಾ ಎಂಬವರನ್ನು ವರಿಸಿ, ಗಣೇಶ ಎಂ.ಎ.ಪದವೀಧರ, ಕೃಷ್ಣಪ್ರಸಾದ್ ಡಿ.ಎಡ್ ಪದವೀಧರ,ದೇವಿಪ್ರಸಾದ್‌ ಬಿ.ಬಿಎಂ. ವಿದ್ಯಾರ್ಥಿ ಹೀಗೆ ಮೂವರು ಮಕ್ಕಳನ್ನು ಪಡೆದಿದ್ದಾರೆ. +ಹಿಂದೆ ದೆಹಲಿಯಲ್ಲಿ ಶಂಕರ್‌ ದಯಾಳ್‌ಶರ್ಮಾ ಅವರ ಗೌರವಕ್ಕೆ ಪಾತ್ರರಾಗಿರುವ ಕುಂಬ್ಳೆ ಶ್ರೀಧರ ರಾಯರಿಗೆ ದುಬಾಯಿ, ಬೆಹರಿನ್‌,ಕೊಯಮುತ್ತೂರು, ಮೈಸೂರು, ಪುತ್ತೂರು,ಧರ್ಮಸ್ಥಳ, ಎಡನೀರು, ಕಟೀಲು ಮುಂತಾದ ಹಲವೆಡೆಗಳಲ್ಲಿ ಸಂಮಾನಗಳು ಸಂದಿವೆ. +ಕದ್ರಿ ಹವ್ಯಾಸಿ ಬಳಗದ ದಶಮಾನ ಸಂಮಾನ ಶತಕದ ಸಂಮಾನ,ಶ್ರೀ ಕೃಷ್ಣ ಸಭಾ ಮಂಗಳೂರು ಇದರ ಸಂಮಾನ ಇವರಿಗೆ ಲಭಿಸಿದೆ. +ತೀವ್ರಗತಿಯ ನಾಟ್ಯ ವೈಖರಿಯನ್ನು ನಿರಂತರ ಉಳಿಸಿಕೊಳ್ಳುತ್ತಾ ಪುಂಡು ವೇಷದ ಮುಖೇನ ಅಚ್ಚರಿಯ ಪ್ರತಿಭೆಯನ್ನು ತೋರಿ ಮೆರೆದಿರುವ ಪುತ್ತೂರು ಶ್ರೀಧರ ಭಂಡಾರಿಯವರು ಧರ್ಮಸ್ಥಳ ಮೇಳದ ಕಲಾವಿದರಾಗಿ ತಿರುಗಾಟವನ್ನು ನಡೆಸುತ್ತಾ ಇದ್ದಾರೆ. +ಶೀನಪ್ಪ ಭಂಡಾರಿ ಮತ್ತು ಸುಂದರಿ ದಂಪತಿಯ ಸುಪುತ್ರರಾಗಿ ದಿನಾಂಕ 10-1-1945ರಂದು ಪುತ್ತೂರಿನ ಬೇರಿಕೆ ಎಂಬಲ್ಲಿ ಜನಿಸಿದರು. +ತಂದೆಯವರು ಶ್ರೇಷ್ಠ ವೇಷಧಾರಿ, ಅಜ್ಜ ಜತ್ತಪ್ಪರೈಯವರು ಭಾಗವತರು, ವೇಷಧಾರಿಗಳಾಗಿರುವ ಚಂದ್ರಶೇಖರ ಭಂಡಾರಿ, ಗಂಗಾಧರ ಭಂಡಾರಿ ಇವರೆಲ್ಲರೂ ಸಹೋದರರು . +ಹೀಗೆ ಯಕ್ಷಗಾನದ ಮನೆತನದಲ್ಲಿ ಹುಟ್ಟಿದ ಕಾರಣದಿಂದಾಗಿ ಇವರಲ್ಲಿ ಪ್ರತಿಭೆ ರಕ್ತಗತವಾಗಿದೆ. +ಪ್ರಾಥಮಿಕ ಹಂತದ ವಿದ್ಯಾಭ್ಯಾಸವನ್ನು ಪಡೆದಿರುವ ಇವರು 10ನೇ ವರ್ಷದಿಂದಲೇ ಪಾತ್ರ ನಿರ್ವಹಣೆ ಮಾಡಲು ತೊಡಗಿದ್ದಾರೆ. +ತಂದೆಯವರಿಂದ ಮೊದಲ ಮಾರ್ಗದರ್ಶನ, ಕುದ್ಕಾಡಿ ವಿಶ್ವನಾಥ ರೈ ಯವರಿಂದ ಭರತ ನಾಟ್ಯಾಭ್ಯಾಸ,ಕುರಿಯ ವಿಠಲ ಶಾಸ್ತ್ರಿ ಮತ್ತು ಹೊಸಶಿತ್ಲು ಮಹಾಲಿಂಗ ಭಟ್ಟರಿಂದ ಹೆಚ್ಚಿನ ನಾಟ್ಯಾಭ್ಯಾಸ ಹಾಗೂ ರಂಗಾನುಭವವನ್ನು ಸಂಪಾದಿಸಿರುವರು. +ಬಳ್ಳಂಬೆಟ್ಟು ಮೇಳ -2 ವರ್ಷ, ಧರ್ಮಸ್ಥಳಮೇಳ - 18 ವರ್ಷ, ಪುತ್ತೂರು ಮೇಳ - 1ವರ್ಷ, ಕಾಂತಾವರ ಮೇಳ (ಸ್ವಂತ ಮೇಳ) - 3ವರ್ಷ . +ಆ ಮೇಲೆ ಮತ್ತೆ ಧರ್ಮಸ್ಥಳ ಮೇಳ 20ವರ್ಷ ಹೀಗೆ 5 ದಶಕಕ್ಕೂ ಮಿಕ್ಕಿದ ತಿರುಗಾಟವನ್ನು ಮಾಡಿರುವರು. +ಹುಡಿ ನಾಟ್ಯದ ಮೋಡಿ ಮತ್ತು ದಿಗಿಣದ ಆಕರ್ಷಣೀಯ ಶೈಲಿಯಿಂದ ಸಿಡಿಲ ಮರಿಯಂತೆ ಅಬ್ಬರಿಸುತ್ತಾ ಅಭಿಮನ್ಯು ಪಾತ್ರದಲ್ಲಿ ರಂಜಿಸಿ ಜೋಡಾಟ, ಕೂಡಾಟಗಳಲ್ಲಿ ಮೆರೆದ ಕೀರ್ತಿ ಇವರದ್ದಾಗಿದೆ. +ಹನೂಮಂತ, ಬಭ್ರುವಾಹನ,ಅಶ್ವತ್ಥಾಮ, ಕುಶ, ಭಾರ್ಗವ, ಕೃಷ್ಣ ರಾಮ ಮುಂತಾದ ಪಾತ್ರಗಳಲ್ಲೂ ಉತ್ತಮ ಅಭಿನಯವನ್ನು ತೋರುತ್ತಾರೆ. +ಪುಂಡು ವೇಷಗಳಲ್ಲದೆ ಇಂದ್ರಜಿತು, ರಕ್ತಬೀಜ,ಹಿರಣ್ಯಾಕ್ಷ ಇತ್ಯಾದಿ ರಾಜವೇಷದ ಪಾತ್ರಗಳನ್ನು ಕೂಡಾ ಚೆನ್ನಾಗಿ ನಿರ್ವಹಿಸುತ್ತಾರೆ. +ಮಳೆಗಾಲದಲ್ಲಿ ಕಲಾವಿದರ ಬದುಕಿಗೆ ಆಶ್ರಯವಾಗಲಿ ಎಂಬ ಸದುದ್ದೇಶದಿಂದ ಶ್ರೀಮಹಾಲಿಂಗೇಶ್ವರ ಪ್ರವಾಸಿ ಯಕ್ಷಗಾನ ಮಂಡಳಿಯನ್ನು ಸ್ಥಾಪಿಸಿ ಮಳೆಗಾಲದ ತಿರುಗಾಟವನ್ನು ನಡೆಸುತ್ತಾರೆ. +ಮಕ್ಕಳಿಗೆ ಯಕ್ಷಗಾನದ ತರಬೇತಿಯನ್ನು ನೀಡುವುದರ ಮುಖೇನ ನಾಟ್ಯಗುರುವಾಗಿಯೂ ಮನ್ನಣೆಯನ್ನು ಪಡೆದಿದ್ದಾರೆ. +ಶ್ರೀಮತಿ ಉಷಾ ಎಂಬವರನ್ನು ವರಿಸಿ ಕೋಕಿಲ,ಶಾಂತಲ, ದೇವಿಪ್ರಕಾಶ್‌ ಎಂಬ ಮೂವರು ಮಕ್ಕಳನ್ನು ಪಡೆದಿದ್ದಾರೆ. +ಇವರ ಸಾಧನೆಗೆ ಪ್ರತಿಫಲವಾಗಿ ದೆಹಲಿ,ಮಂಗಳೂರು, ಬೆಂಗಳೂರು, ಕಾಂತಾವರ, ಕಟೀಲು,ದುಬಾಯಿ, ಬೆಹರನ್‌, ಜಪಾನ್‌, ಲಂಡನ್‌ಮುಂತಾದೆಡೆಯಲ್ಲಿ ಸಂಮಾನಗಳು ಸಂದಿವೆ. +ಕಟೀಲು ಮೇಳದಲ್ಲಿ ಭಾಗವತರಾಗಿ ತಿರುಗಾಟವನ್ನು ಮಾಡುತ್ತಿರುವ ಶ್ರೀ ಶ್ರೀನಿವಾಸ ಬಳ್ಳಮಂಜ ಇವರು ಪೌರಾಣಿಕ ಪ್ರಸಂಗಗಳ ಪ್ರದರ್ಶನದ ನಿಮಿತ್ತ ಅನುಭವ ಸಂಪಾದನೆ ಮಾಡುತ್ತಾ ಬೆಳೆಯುತ್ತಿದ್ದಾರೆ. +ದಿ. 6-5-1978ರಲ್ಲಿ ಬಾಬುಗೌಡ ಹಾಗೂ ಬೂದಮ್ಮ ದಂಪತಿಯ ಸುಪುತ್ರರಾಗಿ ಬಳ್ಳಮಂಜದಲ್ಲಿ ಜನಿಸಿದರು. +10ನೇ ತರಗತಿಂತು ತನಕ ವಿದ್ಯಾಬ್ಯಾಸವನ್ನು ಪಡೆದಿರುವ ಇವರು ಬಾಲ್ಯದಿಂದಲೇ ಯಕ್ಷಗಾನ ಕಲೆಯತ್ತ ಆಕರ್ಷಿತರಾಗಿ ತಾನೂ ಸಾಧಕನಾಗಿ ಬೆಳೆಯಬೇಕೆಂಬ ಆಸಕ್ತಿಯನ್ನು ತಾಳಿದರು. +ಶ್ರೀಮತಿ ಲೀಲಾವತಿ ಬೈಪಾಡಿತ್ತಾಯ ಇವರಲ್ಲಿ ಭಾಗವತಿಕೆಯ ಅಭ್ಯಾಸವನ್ನು ಮಾಡಿರುವ ಶ್ರೀನಿವಾಸರು ಯಕ್ಷಗಾನದ ಸಂಗೀತವನ್ನು ಮೊದಲಾಗಿ ಕಲಿತು ಕಟೀಲು ಮೇಳವನ್ನು ಸೇರಿದರು. +ಆಮೇಲೆ ಕಟೀಲು ಮೇಳದಲ್ಲಿ ಎಂಟು ವರ್ಷಗಳ ತಿರುಗಾಟವನ್ನು ಪೂರೈಸಿ ಪ್ರಸಂಗ ಪ್ರದರ್ಶನದ ನಿರ್ವಹಣೆಯನ್ನು ಅರಿತು ಪ್ರೌಢಿಮೆಯನ್ನು ಸಾಧಿಸಿದರು. +ಆಮೇಲೆ ಸುಂಕದಕಟ್ಟೆಯ ಮೇಳವನ್ನು ಸೇರಿದ ಅವರು 8 ವರ್ಷಗಳ ತಿರುಗಾಟವನ್ನು ನಡೆಸಿ,ಮತ್ತೆ ಕಟೀಲು ಮೇಳವನ್ನು ಸೇರಿ 1ವರ್ಷದ ತಿರುಗಾಟವನ್ನು ಪೂರೈಸಿದ್ದಾರೆ. +18ನೇ ವಯಸ್ಸಿನಿಂದ ಯಕ್ಷಗಾನದ ಭಾಗವತಿಕೆಯನನ್ನು ಆರಂಬಿಸಿದ ಇವರು ಮಳೆಗಾಲದಲ್ಲಿ ಕೃಷಿಕರಾಗಿ ದುಡಿಯುತ್ತಿದ್ದಾರೆ. +ಇತ್ತೀಚೆಗೆ ಶ್ರೀಮತಿ ಸವಿತಾ ಎಂಬವರನ್ನು ವರಿಸಿರುವರು. +ಪುಂಡು ವೇಷದ +ಮುಖೇನ ಜನಮನ್ನಣೆಯನ್ನು ಪಡೆದಿರುವ ಶ್ರೀ ಶ್ರೀಧರ ಪಂಜಾಜೆಯವರು ಕಟೀಲು ಮೇಳವೊಂದರಲ್ಲೆ ತಿರುಗಾಟವನ್ನು ಮಾಡಿರುವ ಅನುಭವಿ ಕಲಾವಿದರಾಗಿದ್ದಾರೆ. +ಕೋಟ್ಯಪ್ಪ ಬಂಗೇರ ಮತ್ತು ರಾಧಮ್ಮ ದಂಪತಿಯ ಸುಪುತ್ರರಾಗಿರುವ ಶ್ರೀಧರರು 10ನೇ ತರಗತಿಯ ತನಕ ಶೈಕ್ಷಣಿಕವಾಗಿ ಅಧ್ಯಯನವನ್ನು ಮಾಡಿದ್ದಾರೆ. + ದಿ.8-6-1961ರಲ್ಲಿ ಪಂಜಾಜೆ ಮನೆಯಲ್ಲಿ ಜನಿಸಿರುವ ಇವರು ಯಕ್ಷಗಾನ ಪರಿಸರದಲ್ಲಿ ಪ್ರಭಾವಿತರಾಗಿ ಕಲೆಯ ಅಧ್ಯಯನಕ್ಕೆ ಮನ ಮಾಡಿದರು. +ಜೊತೆಗೆ ಅಜ್ಜ ರಾಮಪ್ಪ ಪೂಜಾರಿ ಭಾಗವತಿಕೆ ಮತ್ತು ಹಿಮ್ಮೇಳ ವಾದನದಲ್ಲಿ ಪ್ರೌಢಿಮೆಯನ್ನು ಸಾಧಿಸಿದ್ದು ಇವರ ಉದಯೋನ್ಮುಖ ಬೆಳವಣಿಗೆಗೆ ಪೂರಕವೇ ಆಯಿತು. +ಗೋವಿಂದ ಭಟ್‌ ಸೂರಿಕುಮೇರಿ ಮತ್ತು ದಿವಾನ ಶಿವಶಂಕರ ಭಟ್‌ ಇವರಿಂದ ನಾಟ್ಯಾಬ್ಯಾಸವನ್ನು ಮಾಡಿರುವ ಶ್ರೀಧರ ಪೂಜಾರಿಯವರು ಅಭಿಮನ್ಯು, ಬಭ್ರುವಾಹನ,ಚಂಡ-ಮುಂಡರು, ರಾಮ, ಕೃಷ್ಣ, ಮುಂತಾದ ಪುಂಡುವೇಷಗಳನ್ನು ಉತ್ತಮವಾಗಿ ನಿರ್ವಹಿಸುತ್ತಾ ಇದ್ದಾರೆ. +ಸ್ತ್ರೀ ವೇಷಗಳನ್ನು ಅವಶ್ಯಕತೆಗೆ ಅನುಗುಣವಾಗಿ ಮಾಡಿರುವ ಇವರು ಮಾಲಿನಿ,ಶಶಿಪ್ರಭೆ, ಕಮಲಗಂಧಿನಿ ಮೊದಲಾದ ಪಾತ್ರಗಳನ್ನು ನಿರ್ವಹಿಸಿದ್ದಾರೆ. +ಕೃಷಿಕರಾಗಿಯೂ ಕಾರ್ಯ ಕುಶಲಿಯಾಗಿರುವ ಇವರು ಶ್ರೀಮಶಿ ಶಾರದಾ ಎಂಬವರನ್ನು ವರಿಸಿ ಮನೋಜ್‌ ಕುಮಾರ್‌ (ಐ.ಟಿ.ಐ), ಹರ್ಷಿತಾ ಕುಮಾರಿ (ಪಿ.ಯು.ಸಿ.) ಎಂಬ ಇಬ್ಬರು ಮಕ್ಕಳನ್ನು ಪಡೆದಿರುವರು. + ಇತ್ತೀಚೆಗೆ ಮೇಳದ ಪ್ರಬಂಧಕರಾಗಿಯೂ ಕಾರ್ಯನಿರ್ವಹಣೆ ಮಾಡಿರುವ ಅನುಭವ ಇವರದ್ದಾಗಿದೆ. +ಚೆಂಡೆ-ಮದ್ದಳೆಯ ನುಡಿತ ಬಡಿತಗಳಲ್ಲಿ ಕೈಚಳಕವನ್ನು ತೋರುವ ಶ್ರೀಧರ ಪಡ್ರೆಯವರು ಮಂಗಳಾದೇವಿ ವೇಳದ ಕಲಾವಿದರಾಗಿ ಮನ್ನಣೆಯನ್ನು ಪಡೆದಿದ್ದಾರೆ. +25-10-1975ರಲ್ಲಿ ಕುಂಞಪ್ಪನಯ್ಕ್‌ ಮತ್ತು ಸರಸ್ವತಿ ದಂಪತಿಯ ಸುಪುತ್ರರಾಗಿ ಪಡ್ರೆಯ “ಬದಿ”ಮನೆಯಲ್ಲಿ ಹುಟ್ಟಿದರು. +ಬಿ.ಎ.ಪದವೀಧರಾಗಿರುವ ಇವರು 16ನೇ ವಯಸ್ಸಿನಿಂದಲೇ ಯಕ್ಷಗಾನದ ಕಲಾಸೇವೆಯನ್ನು ಆರಂಬಿಸಿ ಹವ್ಯಾಸಿ ಕಲಾವಿದರೆನಿಸಿದ್ದರು. +ಶ್ರೀಧರ ಪಡ್ರೆಂಯವರ ತಂದೆಯವರು ವೇಷಧಾರಿಯಾಗಿರುವುದರಿ೦ದ ಅವರ ಪ್ರೇರಣೆಯ ಮೇರೆಗೆ ಪಂಡಿಕ್ಯಾ ಕೃಷ್ಣಭಟರಲ್ಲಿ ಚೆಂಡೆ, ಮದ್ದಳೆ,ಮತ್ತು ಭಾಗವತಿಕೆಯ ಅಭ್ಯಾಸವನ್ನು ಮಾಡಿದರು. +ಎಡನೀರು ಮೇಳದಲ್ಲಿ ಎರಡು ವರ್ಷ ಹಾಗೂ ಮಂಗಳಾದೇವಿ ಮೇಳದಲ್ಲಿ 11 ವರ್ಷಗಳ ತಿರುಗಾಟವನ್ನು ಮಾಡಿರುವ ಇವರು ಆರಂಭದಲ್ಲಿ ಪುಂಡು ವೇಷಧಾರಿಯಾಗಿ ಸುದರ್ಶನ, ರಾಮ ಮುಂತಾದ ಪಾತ್ರಗಳನ್ನು ಮಾಡಿದ್ದಾರೆ. +ಅನ್ಯ ಉದ್ಯೋಗವನ್ನು ಬಯಸದೆ ಯಕ್ಷಗಾನದ ಕಲಾಸಾಧಕನಾಗಬೇಕೆಂದು ಮೇಳದ ವೃತ್ತಿಜೀವನವನ್ನು ಸ್ವೀಕರಿಸಿರುವ ಇವರು ಶ್ರೀಮತಿ ಕುಸುಮ ಎಂಬವರನ್ನು ವರಿಸಿದ್ದಾರೆ. +ಪುಂಡು ವೇಷ, ರಾಜವೇಷ ಮತ್ತು ಬಣ್ಣದ ವೇಷಗಳ ಮುಖೇನ ಜನಮನ್ನಣೆ ಪಡೆದಿರುವ ಶೇಖರ ಭಂಡಾರಿಯವರು ಕೊಲ್ಲಂಗಾನ ಮೇಳದ ಕಲಾವಿದರಾಗಿ ಕಲಾ ಸೇವೆಯನ್ನು ಮಾಡುತ್ತಿದ್ದಾರೆ. +1947ನೇ ಆಗಸ್ಟ್‌ ತಿಂಗಳಲ್ಲಿ ಹುಟ್ಟಿರುವ ಇವರು ಪ್ರಾಥಮಿಕ ಹಂತದ ವಿದ್ಯಾಭ್ಯಾಸವನ್ನು ಪಡೆದಿದ್ದಾರೆ. +ಇವರ ತಂದೆ ಹಿರಿಯ ವೇಷಧಾರಿ ಬಿ.ಶೀನಪ್ಪ ಭಂಡಾರಿ, ತಾಯಿ ಸುಂದರಿ. +ಯಕ್ಷಗಾನ ಮನೆತನದಲ್ಲಿ ಹುಟ್ಟಿದ ಇವರು ತಂದೆಯ ಮಾರ್ಗದರ್ಶನದ ಮೇರೆಗೆ ಕಲಾ ಪ್ರವೇಶ ಮಾಡಿದರು. +ಬಳ್ಳಂಬೆಟ್ಟು ಮೇಳ-5 ವರ್ಷ, ಕೂಡ್ಲು ಮೇಳ-11 ವರ್ಷ, ಸುಬ್ರಹ್ಮಣ್ಯ ಮೇಳ-20 ವರ್ಷ, ಪುತ್ತೂರುಮೇಳ-5 ವರ್ಷ, ಕಾ೦ತವರ ಮೇಳ-2 ವರ್ಷ,ಧರ್ಮಸ್ಥಳ ಮೇಳ-4 ವರ್ಷ, ವೇಣೂರುದೇಲಂಪುರಿ ಮೇಳ-5 ವರ್ಷ, ಕೊಲ್ಲಂಗಾನ ಮೇಳ-1 ವರ್ಷ ಹೀಗೆ ತಿರುಗಾಟದ ಹಿನ್ನೆಲೆಯನ್ನು ಹೊಂದಿದ್ದಾರೆ. +ಶುಂಭ, ಚಂಡ-ಮುಂಡರು, ಮಹಿಷಾಸುರ,ದೇವೇಂದ್ರ ದೇವಿ, ಅರ್ಜುನ, ಹಿರಣ್ಯಾಕ್ಸ ಇಂದ್ರಜಿತು,ಶಿಶುಪಾಲ ಮುಂತಾದ ಪಾತ್ರಗಳನ್ನು ನಿರ್ವಹಿಸಿರುವ ಇವರು, ಹವ್ಯಾಸಿ ಕಲಾವಿದರಿಗೆ ತರಬೇತಿಯನ್ನು ನೀಡಿದ್ದಾರೆ. +ಶ್ರೀಧರ ಭಂಡಾರಿ, ಗಂಗಾಧರ ಭಂಡಾರಿ ಸೇರಿದಂತೆ ಇವರ ಸಹೋದರರು ಮತ್ತು ಸಂಬ೦ಧಿಕರು ಯಕ್ಷಗಾನ ಕಲಾವಿದರಾಗಿ ಮನ್ನಣೆ ಪಡೆದಿದ್ದಾರೆ. +ಶ್ರೀಮತಿ ಸರೋಜ ಎಂಬವರನ್ನು ವರಿಸಿರುವ ಇವರು ದಿನೇಶ್‌ ಭಂಡಾರಿ ಮತ್ತು ಗಣೇಶ್‌ ಭಂಡಾರಿ ಎಂಬ ಮಕ್ಕಳನ್ನು ಪಡೆದಿರುವರು. +ಇವರ ಕಲಾಸಾಧನೆಗೆ ಪ್ರತಿಫಲವಾಗಿ ಪುತ್ತೂರು ಮಂಗಳೂರು ಮೊದಲಾದೆಡೆಯಲ್ಲಿ ಸಂಮಾನ ಗೌರವಗಳು ಸಂದಿವೆ. +ಪುಂಡುವೇಷ ಮತ್ತು ರಾಜವೇಷಗಳ ಮುಖೇನ ಕೀರ್ತಿಯನ್ನು ಸಂಪಾದಿಸಿ ಜನಮನ್ನಣೆಗೆ ಕಾರಣವಾಗಿರುವ ಮುಂಡಾಜೆ ಸದಾಶಿವ ಶೆಟ್ಟರು ಪ್ರಸ್ತುತ ಕಟೀಲು ಮೇಳದಲ್ಲಿ ತಿರುಗಾಟವನ್ನು ನಡೆಸುತ್ತಾ ಇದ್ದಾರೆ. +ರಾಮಯ್ಯ ಶೆಟ್ಟಿ ಮತ್ತು ತುಂಗಮ್ಮ ದಂಪತಿಯ ಸುಪುತ್ರರಾಗಿ 6-6-1956ರಂದು ಮುಂಡಾಜೆ ಎಂಬಲ್ಲಿ ಜನಿಸಿದರು. +ಪ್ರಾಥಮಿಕ ಹಂತದ ವಿದ್ಯಾಭ್ಯಾಸವನ್ನು ಪಡೆದಿರುವ ಇವರಿಗೆ ಮನೆತನದ ಆದರ್ಶವೂ ಇದೆ. +ಚಿಕ್ಕಪ್ಪ ಮಂಕುಡೆ ಸಂಜೀವ ಶೆಟ್ಟರು ಸ್ತ್ರೀ ಪಾತ್ರಧಾರಿ, ಅಜ್ಜ ಬೋಳಾರ ನಾರಾಯಣ ಶೆಟ್ಟರು (ಪುರುಷ ಪಾತ್ರಧಾರಿ) ಅಣ್ಣ ಬಾಲಕೃಷ್ಣಶೆಟ್ಟಿ ಮುಂಂಡಾಜೆಯವರು ಉತ್ತಮ ಪುಂಂಡುವೇಷಧಾರಿ. +ಆರಂಭದಲ್ಲಿ ಸದಾಶಿವ ಶೆಟ್ಟರು ಕಡಬ ಶಾಂತಪ್ಪರಲ್ಲಿ ನಾಟ್ಯಾಭ್ಯಾಸ ಮಾಡಿದರು. +ಅನಂತರ ಧರ್ಮಸ್ಥಳ ಕ್ಷೇತ್ರದ ಲಲಿತಕಲಾ ಕೇಂದ್ರದಲ್ಲಿ ವಿಠಲ ಶಾಸ್ತ್ರಿ ಮತ್ತು ಪಡ್ರೆ ಚಂದುರವರಲ್ಲಿ ನಾಟ್ಯಾಭ್ಯಾಸವನ್ನು ಮಾಡಿದರು. +ದಿ।ನಾರಾಯಣ ಕಾಮತರ ಉತ್ತೇಜನದಂತೆ ಮೊದಲಾಗಿ ಧರ್ಮಸ್ಥಳ ಮೇಳವನ್ನು ಸೇರಿದ ಇವರು 11 ವರ್ಷಗಳ ತಿರುಗಾಟ ಪೂರೈಸಿದರು. +ಆನಂತರ ಕದ್ರಿ ಮೇಳ - 9 ವರ್ಷ, ಕುಂಬ್ಳೆ ಮೇಳ - 5ವರ್ಷ, ಬಪ್ಪನಾಡು ಮೇಳ - 5 ವರ್ಷ, ಮಧೂರುಮೇಳ - 1 ವರ್ಷ, ಭಗವತಿ ಮೇಳ - 3 ವರ್ಷಹಾಗೂ ಕಟೀಲು ಮೇಳ - 4 ವರ್ಷ ಹೀಗೆ ತುಳುಪೌರಾಣಿಕ ಪ್ರದರ್ಶನಗಳ ಮೇಳಗಳಲ್ಲಿ ತಿರುಗಾಟವನ್ನು ನಡೆಸಿದ್ದಾರೆ. +ಬ್ರಹ್ಮ ವಿಷ್ಣು, ಶಶಿಪ್ರಭೆ, ಪ್ರಮೀಳೆ, ಶಿಶುಪಾಲ ಅರ್ಜುನ, ಹಿರಣ್ಯಾಕ್ಷ,ಕೋಟಿ, ಚೆನ್ನಯ, ಪೆರುಮಳ,ದೇವುಪೂಂಜ, ಕೋರ್ಪಬ್ಬು ಮುಂತಾದ ಪಾತ್ರಗಳನ್ನು ನಿರ್ವಹಿಸಿದ್ದಾರೆ. +ನಾಟ್ಯಗುರುಗಳಾಗಿಯೂ ಕಾರ್ಯನಿರ್ವಹಿಸಿರುವ ಸಾದಾಶಿವ ಶೆಟ್ಟರು ಮಂಗಳೂರು,ಮಂಗಳಾದೇವಿ ರಾಮಕೃಷ್ಣಾಶ್ರಮದ ಮಕ್ಕಳ ಪ್ರದರ್ಶನಕ್ಕೆ ಒಳ್ಳೆಯ ನಿರ್ದೇಶನವನ್ನು ನೀಡಿದ್ದಾರೆ. +ಇಷ್ಟಲ್ಲದೆ ಹಲವು ಶಾಲಾ ಕಾಲೇಜುಗಳಲ್ಲಿ ಪ್ರದರ್ಶನಗಳನ್ನು ನಡೆಸಿ ಗೌರವ ಪುರಸ್ಕಾರಗಳಿಗೆ ಪಾತ್ರರಾಗಿದ್ದಾರೆ. +ಶ್ರೀಮತಿ ಕಮಲಾಕ್ಷಿ ಎಂಬವರನ್ನು ವರಿಸಿರುವ ಇವರು ಚೇತನ್‌ (ದ್ವಿತೀಯ ಬಿ.ಎ.), ವಾಣಿ(ಎಸ್‌.ಎಸ್‌.ಎಲ್‌.ಸಿ.) - ಲೋಹಿತ್‌(ಎಸ್‌.ಎಸ್‌.ಎಲ್‌.ಸಿ.),ಎಂಬ ಮೂವರು ಮಕ್ಕಳನ್ನು ಪಡೆದಿದ್ದಾರೆ. +ಇವರ ಸಾಧನೆಗೆ ಪ್ರತಿಫಲವಾಗಿ ಮಂಗಳೂರು, ಕಾರ್ಕಳ, ಮುಂಡಾಜೆ, ಕದ್ರಿ ಮುಂತಾದೆಡೆಯಲ್ಲಿ ಸಂಮಾನಗಳು ನಡೆದಿವೆ. +ಕಟೀಲು ಮೇಳದ ಮುಖ್ಯ ಭಾಗವತರಾಗಿ ಕಲಾಸೇವೆಯನ್ನು ಮಾಡುತ್ತಿರುವ ಶ್ರೀ ಪಟ್ಲ ಸತೀಶ ಶೆಟ್ಟರು ಉತ್ತಮವಾದ ಕಂಠಸಿರಿಯಿಂದ ಜನಮನ್ನಣೆಪಡೆದು ಕೀರ್ತಿ ಸಂಪನ್ನರಾಗಿದ್ದಾರೆ. +ಮಹಾಬಲ ಶೆಟ್ಟಿ ಮತ್ತು ಲಲಿತಾ ಶೆಡ್ತಿ ದಂಪತಿಯ ಸುಪುತ್ರರಾಗಿ 1-8-1979 ರಲ್ಲಿ ಜನಿಸಿದ ಸತೀಶ ಶೆಟ್ಟರು ತಂದೆಯವರ ಪ್ರೇರಣೆಯಿಂದ ಕಲಾಸಾಧಕರಾಗಿ ಬೆಳೆದರು. +ಇವರ ತಂದೆ -ಹಿಮ್ಮೇಳದ ಬಗ್ಗೆ ,ಮೇಳದ ಯಜಮಾನಿಕೆಯ ಬಗ್ಗೆ ಅನುಭವವನ್ನು ಸಂಪಾದಿಸಿರುವುದರಿಂದ ತಂದೆಯ ಪ್ರತಿಭೆ ರಕ್ತಗತವಾಗಿ ಇವರಲ್ಲೂ ಬಂದಿದೆ. +ಮಾಂಬಾಡಿ ಸುಬ್ರಹ್ಮಣ್ಯ ಭಟ್‌ ಅವರಿಂದ ಭಾಗವತಿಕೆಯ ಅಭ್ಯಾಸವನ್ನು ಮಾಡಿರುವ ಇವರು ಚೆಂಡೆ- ಮದ್ದಳೆಯ ಬಗ್ಗೆಯೂ ಅಧ್ಯಯನ ಮಾಡಿದ್ದಾರೆ. +ಮುಂದೆ ಬಜೆಕಳ ಗಣಪತಿ ಭಟ್ಟರಿಂದ ಸಂಗೀತದ ಅಭ್ಯಾಸವನ್ನು ಮಾಡಿದ್ದಾರೆ. +ಪದವಿಪೂರ್ವ ಹಂತದ ವಿದ್ಯಾಭ್ಯಾಸವನ್ನು ಪಡೆದ ಇವರು ಭಗವತಿ ಮೇಳ - 1 ವರ್ಷ ಅನಂತರ ಕಟೀಲು ಮೇಳ 10 ವರ್ಷ ಹೀಗೆ ತಿರುಗಾಟದ ಹಿನ್ನೆಲೆಯನ್ನು ಹೊಂದಿದ್ದಾರೆ. +ಬಾಲ್ಯದಿಂದಲೇ ಕಲಾಸಕ್ತರಾಗಿದ್ದು ಹವ್ಯಾಸಿಯಾಗಿ ಕಲಾಸೇವೆ ಮಾಡಿದ ಅನುಭವ ಇವರಿಗಿದೆ. +ಕಾರ್‌ ಸ್ಟ್ರೀಟ್‌, ಮಂಗಳೂರು, ಕುಂಜತ್‌ ಬೈಲು ಮೊದಲಾದೆಡೆ ಗೌರವ ಪುರಸ್ಕಾರಕ್ಕೆ ಒಳಗಾಗಿರುವ ಸತೀಶ್‌ ಶೆಟ್ಟರು ಉತ್ತಮವಾದ ಸ್ವರಭಾರದಿಂದ ಪ್ರೇಕ್ಷಕರ ಮುನಸ್ಸನನ್ನು ತಣಿಸುವ ಯೋಗ್ಯತೆವುಳ್ಳವರಾಗಿದ್ದದರಿಂದಲೇ ಬೇಸಗೆ ಮತ್ತು ಮಳೆಗಾಲದಲ್ಲಿ ಆಟ-ಕೂಟಗಳು ಸೇರಿದಂತೆ ಬೇಡಿಕೆಯ ಕಲಾವಿದರಾಗಿದ್ದಾರೆ. +ಪುಂಡು ವೇಷದ ಮುಖೇನ ಜನಮನ್ನಣೆಗೆ ಒಳಗಾಗಿರುವ ಶ್ರೀ ಎನ್‌ ಸತೀಶ್‌ಕುಮಾರ್‌ ಇವರು ಸುಂಕದಕಟ್ಟೆಯ ಮೇಳದ ಕಲಾವಿದರಾಗಿ ತಿರುಗಾಟವನ್ನು ಮಾಡುತ್ತಿದ್ದಾರೆ. +ಅಚ್ಯುತ ಮತ್ತು ಶಾರದಾ ದಂಪತಿಯ ಸುಪುತ್ರರಾಗಿ ಕಾಸರಗೋಡಿನಲ್ಲಿ 1980ರಲ್ಲಿ ಹುಟ್ಟಿದ ಇವರು ಪ್ರಾಥಮಿಕ ಹಂತದ ವಿದ್ಯಾಭ್ಯಾಸವನ್ನು ಪಡೆದಿದ್ದಾರೆ. + ಶಾಲಾ ಅಧ್ಯಾಪಕರಿಂದ ಯಕ್ಷಗಾನ ಕಲಾವಿದನಾಗುವ ಪ್ರೇರಣೆಗೆ ಒಳಗಾದ ಇವರು ಶಾಲೆಯಲ್ಲಿ ಕುಂಬ್ಳೆ ನಾರಾಯಣ ನಾಯ್ಕ ಎಂಬವರಲ್ಲಿ ನಾಟ್ಯಾಭ್ಯಾಸವನ್ನು ಮಾಡಿದರು. +ಮುಂದೆ ಮೇಳ ತಿರುಗಾಟದಲ್ಲಿ ಹೆಚ್ಚಿನ ಅಭ್ಯಾಸವನ್ನು ನೋಡಿ ಕಲಿತು ಕೇಳಿ ತಿಳಿದು ಪ್ರೌಢಿಮೆಯನ್ನು ಸಾಧಿಸುತ್ತಾ ಬಂದರು. +11ನೇ ವರ್ಷದಿಂದಲೇ ಮೇಳ ತಿರುಗಾಟವನ್ನು ಆರಂಬಿಸಿದ ಇವರು ಸುಂಕದಕಟ್ಟೆಂಯ ಮೇಳವೊಂದಲ್ಲೇ 20 ವರ್ಷಗಳ ತಿರುಗಾಟವನ್ನು ಪೂರೈಸಿದ್ದಾರೆ. +ಚೆಂಡ-ಮುಂಡರು, ಶ್ರೀ ಕೃಷ್ಣ, ರಾಮ, ಲಕ್ಷ್ಮಣ,ಕುಶ, ಅಯ್ಯಪ್ಪ , ಬಭ್ರುವಾಹನ, ಅಭಿಮನ್ಯು,ಭಾರ್ಗವ, ಎಷ್ಟು, ಮುಂತಾದ ಪಾತ್ರಗಳನ್ನು ನಿರ್ವಹಿಸುತ್ತಾ ಇದ್ದಾರೆ. +ಒಂದೇ ಮೇಳದ ವ್ಯವಸ್ಥೆಗೆ ಬದ್ಧರಾಗಿ ತಿರುಗಾಟವನ್ನು ಮಾಡುತ್ತಿರುವ ಇವರು ಶ್ರೀಮತಿ ಸವಿತಾ ಎಂಬವರನ್ನು ವರಿಸಿ ಕುಮಾರ ವಿಘ್ನೇಶ್‌ಎಂಬ ಸುಪುತ್ರನನ್ನು ಪಡೆದಿದ್ದಾರೆ. +ತುಳು ಮತ್ತು ಕನ್ನಡ ಭಾಷೆಯ ಪ್ರಸಂಗಗಳಲ್ಲಿ ತನ್ನದೇ ಆದ ಸ್ವಂತಿಕೆಯ ಶೈಲಿಯಿಂದ ಪ್ರಸಿದ್ಧಿಯನ್ನು ಪಡೆದವರು ಕಾಂಚನ ಸಂಜೀವ ರೈ. + ಪ್ರಸ್ತುತ ಬಪ್ಪನಾಡು ಮೇಳದಲ್ಲಿ ಕಲಾಸೇವೆಯನ್ನು ಮಾಡುತ್ತಾ ಇದ್ದಾರೆ. +24-8-1942ರಂದು ಮುಂಡಪ್ಪ ರೈ ಹಾಗೂ ಮುತ್ತಕ್ಕೆ ದಂಪತಿಯ ಸುಪುತ್ರರಾಗಿ ಬಂಟ್ವಾಳ ಸಜಿಪ ಮೂಡ ಗ್ರಾಮದ ನಗ್ರಿಗುತ್ತುವಿನಲ್ಲಿ ಜನಿಸಿದರು. +ಬಾಲ್ಯದಿಂದಲೇ ಯಕ್ಷಗಾನದತ್ತ ಆಕರ್ಷಿತರಾಗಿದ್ದ ಇವರು ಮಾಣಂಗಾಯಿ ಕೃಷ್ಣ ಭಟ್ಟರಿಂದ ಯಕ್ಷಗಾನದ ನಾಟ್ಯಭ್ಯಾಸವನ್ನು ಮಾಡಿರುವರು. +ಸುಬ್ರಹ್ಮಣ್ಯ , ನಂದಾವರ, ಅರುವ, ಕರ್ನಾಟಕ,ಕದ್ರಿ, ಸುರತ್ಕಲ್‌, ವೇಣೂರು, ಮಂಗಳಾದೇವಿ,ಪುತ್ತೂರು ಮೇಳಗಳಲ್ಲಿ 47 ವರ್ಷಗಳಿಗೂ ಮಿಕ್ಕಿದ ಕಲಾ ಸೇವೆಯನ್ನು ಮಾಡಿದ್ದಾರೆ. +ಇತ್ತೀಚಿನ ವರುಷಗಳಲ್ಲಿ ಹೇಳಿಕೆಯ ಮೇರೆಗೆ ಹವ್ಯಾಸಿ ಕಲಾಕಾರ್ಯ ಕ್ರಮಗಳಲ್ಲಿ ಭಾಗವಹಿಸಿ ಪಾತ್ರ ನಿರ್ವಹಣೆ ಮತ್ತು ಮಾರ್ಗದರ್ಶನವನ್ನು ಮಾಡುತ್ತಾ ಇದ್ದಾರೆ. +ಅಷ್ಟಲ್ಲದೆ ಪ್ರಸ್ತುತ ಬಪ್ಪನಾಡು ಮೇಳದ ಹಿರಿಯ ಕಲಾವಿದರಾಗಿ ತಿರುಗಾಟವನ್ನು ನಡೆಸುತ್ತಾ ಇದ್ದಾರೆ. +ಕಥಾ ನಾಯಕನ ಪಾತ್ರಗಳಲ್ಲಿ ಹಿಡಿತವನ್ನು ಸಾಧಿಸಿರುವ ಇವರು ಕೋಟಿ, ದೇವುಪೂಂಜ,ಅರ್ಜುನ, ಧರ್ಮರಾಯ, ವಿಷ್ಣು, ಕೃಷ್ಣ ಮುಂತಾದ ಪಾತ್ರಗಳನ್ನು ನಿರ್ವಹಿಸಿದ್ದಾರೆ. +ತುಳು ಭಾಷೆಯ ಬಲದಿಂದ ಇವರ ಮಾತಿನ ಶೈಲಿ ಭಾವಪೂರ್ಣವಾಗಿದ್ದು ತುಳು ಪ್ರಸಂಗಗಳ ಪಾತ್ರಗಳಲ್ಲಿ ಜನಾಕರ್ಷಣೆಯನ್ನು ಪಡೆದಿದ್ದಾರೆ. +ಶ್ರೀಮತಿ ಶುಭವತಿ ಎಂಬವರನ್ನು ವರಿಸಿರುವ, ಸಂಜೀವ ರೈವರು ,ಸರೋಜ, ರಘುನಾಥ ರೈ,ಬಾಲಚಂದ್ರ ರೈ (ಅರ್ಥಧಾರಿ), ಚಂದ್ರಾವತಿ ರೈ(ಉಪನ್ಯಾಸಕರು), ವಿಠಲ ರೈ ಎಂಬ ಐವರು ಮಕ್ಕಳನ್ನು ಪಡೆದಿದ್ದಾರೆ. +ಇವರ ಸಾಧನೆಗೆ ಪ್ರತಿಯಾಗಿ ರಾಜ್ಯೋತ್ಸವದ ಜಿಲ್ಲಾ ಪ್ರಶಸ್ತಿ, ತಾಲೂಕು ಸಾಹಿತ್ಯ ಸಮ್ಮೇಳನದ ಪ್ರಶಸ್ತಿ, ಹವ್ಯಾಸಿ ಬಳಗದ ದಶಮಾನ ಸಂಮಾನ,ಮುಂಬಯಿ ಅಭಿಮಾನಿ ಬಳಗದ ಸಂಮಾನಗಳಲ್ಲದೆ ಉಳ್ಳಾಲ, ಕಾಂತಾವರ, ಮದ್ರಾಸು ಮುಂತಾದೆಡೆಯಲ್ಲಿ 30ಕ್ಕೂ ಮಿಕ್ಕಿದ ಸಂಮಾನಗಳು ಸಂದಿವೆ. +ಸ್ತ್ರೀ ವೇಷದ ಮೂಲಕ ಪಸಿದ್ದಿಯನ್ನು ಪಡೆದಿರುವ ಶ್ರೀ ಸಂಜಯ್‌ ಕುಮಾರ್‌ ಶೆಟ್ಟಿಯವರು ಉತ್ತಮ ಸಂಘಟಕರಾಗಿದ್ದು ಪ್ರಸ್ತುತ ಎಡನೀರು ಯಕ್ಷಗಾನ ಮಂಡಳಿಯ ಕಲಾವಿದರಾಗಿದ್ದು ಕಲಾಸೇವೆ ಮಾಡುತ್ತಿದ್ದಾರೆ. +ಐತಪ್ಪ ಶೆಟ್ಟಿ ಮತ್ತು ಸುಂದರಿ ಶೆಟ್ಟಿ ದಂಪತಿಯ ಸುಪುತ್ರರಾಗಿ 10/10/1960ರಂದು ಚಿಕ್ಕಮಗಳೂರಿನ ಗೋಣಿಬೀಡಿನಲಿ ಜನಿಸಿದರು. +10ನೇ ತರಗತಿಯ ತನಕ ಶೈಕ್ಷಣಿಕ ವಿದ್ಯಾಭ್ಯಾಸವನ್ನು ಪಡೆದಿರುವ ಇವರು17ನೇ ವರ್ಷದಿಂದ ಯಕ್ಷಗಾನ ಕಲೆಯತ್ತ ಆಕರ್ಷಕರಾಗಿ ಕಲಿಯುವ ಆಸಕ್ತಿಯನ್ನು ತಳೆದರು. +ಪಡ್ರೆ ಚಂದು ಅವರಿಂದ ನಾಟ್ಯಾಭ್ಯಾಸವನ್ನು ಮಾಡಿದ ಸಂಜಯ ಕುಮಾರರು ಎಂ.ಕೆ.ರಮೇಶಆಚಾರ್ಯ, ಕೋಳ್ಕೂರು ರಾಮಚಂದ್ರ ರಾವ್‌,ಪಾತಾಳ ವೆಂಕಟರಮಣ ಭಟ್‌ ಮೊದಲಾದವರಿಂದ ಸ್ತ್ರೀ ಪಾತ್ರಗಳ ಬಗ್ಗೆ ಅನುಭವವನ್ನು ಪಡೆದಿದ್ದಾರೆ. +ಸ್ತ್ರೀ ಮತ್ತು ಪುಂಡು ವೇಷಗಳನ್ನು ಮಾಡುವ ಇವರು ಶ್ರೀದೇವಿ, ದ್ರೌಪದಿ, ಚಂದ್ರಮತಿ, ದಮಯಂತಿ,ಸುಭದ್ರೆ, ಭ್ರಮರಕುಂತಳೆ, ಮೇನಕೆ, ದಾಕ್ಚಾಯಿಣಿ,ಅಯ್ಯಪ್ಪ, ಕುಶ ಮೊದಲಾದ ಪಾತ್ರಗಳನ್ನು ಮಾಡಿದ್ದಾರೆ. +ಆದಿ ಸುಬ್ರಹ್ಮಣ್ಯ ಮೇಳ-4 ವರ್ಷ, ಪುತ್ತೂರುಮೇಳ-4 ವರ್ಷ, ಸುರತ್ಕಲ್‌ ಮೇಳ-1 ವರ್ಷ,ಕರ್ನಾಟಕ ಮೇಳ-10 ವರ್ಷ, ಗಣೇಶಪುರ ಮೇಳ(ಸ್ವಂತ ಮೇಳ)-3 ವರ್ಷ, ಮಂಗಳಾದೇವಿ ಮೇಳ-5 ವರ್ಷ, ಕುಂಟಾರು ಮೇಳ-2 ವರ್ಷ, ಬಪ್ಪನಾಡುಮೇಳ-1 ವರ್ಷ, ಹೊಸನಗರ ಮೇಳ (ಅತಿಥಿಕಲಾವಿದ) -1 ವರ್ಷ, ಎಡನೀರು ಮೇಳ-2 ವರ್ಷ,ಹೀಗೆ 3 ದಶಕಕ್ಕೂ ಮಿಕ್ಕಿದ ತಿರುಗಾಟವನ್ನು ನಡೆಸಿದ್ದಾರೆ. +ಮಳೆಗಾಲದಲ್ಲಿ ಪ್ರಸಿದ್ಧ ಕೂಡುವಿಕೆಯಲ್ಲಿ ಕಾರ್ಯಕ್ರಮಗಳ ಆಯೋಜಿಸಿರುವ ಇವರು ಪಡ್ರೆ ಚಂದು,ಕೆ.ಗೋವಿಂದ ಭಟ್‌, ಅರುವ ಕೊರಗಪ್ಪ ಶೆಟ್ಟಿ,ಮಿಜಾರು ಅಣ್ಣಪ್ಪ ಮೊದಲಾದ ಹಲವಾರು ಹಿರಿಯ ಕಲಾವಿದರನ್ನು ಸಂಮಾನಿಸಿದ್ದಾರೆ. +ಶ್ರೀಮತಿ ಪ್ರಫುಲ್ಲ ಎಂಬವರನ್ನು ವರಿಸಿರುವ ಇವರು ದೀಕ್ಷಾ ಎಂ.ಬಿ.ಎ, ಎಂ.ಬಿ.ಸಿ (ಉಪನ್ಯಾಸಕಿ ಮಂಗಳೂರು ವಿಶ್ವವಿದ್ಯಾಲಯ), ದರ್ಶನ್‌(ಮೆಕ್ಯಾನಿಕಲ್‌ ಇಂಜಿನಿಯರಿಂಗ್‌ ಅಧ್ಯಯನ) ಎಂಬ ಇಬ್ಬರು ಮಕ್ಕಳನ್ನು ಪಡೆದಿದ್ದಾರೆ. +ಇವರ ಸಾಧನೆಗೆ ಪ್ರತಿಫಲವಾಗಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಮುಂಬಯಿ ಅಭಿಮಾನಿ ಬಳಗದ ಸಂಮಾನ, ಸನಾತನ ಸೇವಾ ಟ್ರಸ್ಟ್‌ (ರಿ)ಮಂಗಳೂರು ಸಂಮಾನ, ಗೋಣಿಬೀಡು ಹುಟ್ಟೂರು ಸಂಮಾನ ಇತ್ಯಾದಿಗಳು ಇವರಿಗೆ ಲಭಿಸಿದೆ. +ಕರುಣ ರಸದ ಪಾತ್ರಗಳನ್ನು ಹೃದಯಕ್ಕೆ ಮುಟ್ಟುವಂತೆ ಚಿತ್ರಿಸಬಲ್ಲ ಶ್ರೀ ಎಸ್‌.ಸಂಜೀವ ಬಳೆಗಾರರು ಕಟೀಲು ಮೇಳದ ಹಿರಿಯ ಕಲಾವಿದರಾಗಿ ತಿರುಗಾಟವನ್ನು ನಡೆಸುತ್ತಾ ಇದ್ದಾರೆ. +ಗೋವಿಂದ ಬಳೆಗಾರ ಮತ್ತು ಮುತ್ತಮ್ಮ ದಂಪತಿಯ ಸುಪುತ್ರರಾಗಿ 18/04/1950 ರಂದು ಶಂಕರನಾರಾಯಣದಲ್ಲಿ ಜನಿಸಿದರು. +9ನೇತರಗತಿಯ ತನಕ ವಿದ್ಯಾಭ್ಯಾಸವನ್ನು ಪಡೆದಿರುವ ಇವರು ಬಾಲ್ಯದಿಂದಲೇ ಯಕ್ಷಗಾನದತ್ತ ಆಕರ್ಷಿತರಾಗಿದ್ದರು . +ಮಾತ್ರವಲ್ಲದೆ ಶಾಲಾಪರಿಸರದಲ್ಲೂ ಉತ್ತೇಜನ ದೊರಕಿತ್ತು. +ಸಹೋದರರಾದ ಗೋಪಾಲಕೃಷ್ಣ ಅವರಿಂದ ಬಡಗುತಿಟ್ಟಿನ ನಾಟ್ಯಾಭ್ಯಾಸವನ್ನು ಮಾಡಿದ್ದಾರೆ. +18ನೇ ವರ್ಷದಿಂದಲೇ ರಂಗಪ್ರವೇಶ ಮಾಡಿರುವ ಇವರು ಒಳ್ಳೆ ಮೇಳದ ನಿರೀಕ್ಷೆಯಲ್ಲಿ ತಿರುಗಾಟ ಮಾಡುವ ಉದ್ದೇಶವನ್ನು ಇಟ್ಟು ತೆಂಕುತಿಟ್ಟಿನ ಮೇಳವನ್ನು ಸೇರಿದ ಕಾರಣ ಇವರಿಗೆ ತೆಂಕುತಿಟ್ಟಿನ ಪರಿಸರದಲ್ಲೇ ಹೆಚ್ಚಿನ ಮನ್ನಣೆ ಇದೆ. +ಇಡಗುಂಜಿ ಮೇಳ- 1 ವರ್ಷ, ಅಮೃತೇಶ್ವರಿ ಮೇಳ- 1 ವರ್ಷ, ಸುರತ್ಕಲ್‌ ಮೇಳ- 3 ವರ್ಷ,ಕಟೀಲು ಮೇಳ- 35 ವರ್ಷ ಹೀಗೆ 4 ದಶಕಗಳ ತಿರುಗಾಟವನ್ನು ಮಾಡಿದ ಅನುಭವ ಇವರಿಗಿದೆ. +ಚಂದ್ರಮತಿ, ಯಶೋಮತಿ, ದಮಯಂತಿ, ರೇಣುಕೆ,ಸುಭದ್ರೆ ಮುಂತಾದ ಪಾತ್ರಗಳನ್ನು ಉತ್ತಮವಾಗಿ ನಿರ್ವಹಿಸುತ್ತಾರೆ. +ಶ್ರೀಮತಿ ಸೀತಾ ಎಂಬವರನ್ನು ವರಿಸಿರುವ ಇವರು ಸುರೇಶ್‌, ಶಾಂತಾ, ಮಮತಾ ಎಂಬ ಮೂವರು ಮಕ್ಕಳನ್ನು ಪಡೆದಿದ್ದಾರೆ. +ಮಳೆಗಾಲದಲ್ಲಿ ತನ್ನ ಊರಲ್ಲೇ ಆಸಕ್ತರಿಗೆ ಯಕ್ಷಗಾನದ ನಾಟ್ಯಾಭ್ಯಾಸವನ್ನು ಮಾಡಿರುವ ಇವರು ಹಲವು ಮಂದಿ ಶಿಷ್ಯರನ್ನು ಹೊಂದಿದ್ದಾರೆ. +ಪೌರಾಣಿಕ ಶೈಲಿಯನ್ನು ಮೈಗೂಡಿಸಿಕೊಂಡಿರುವ ಸಂಜೀವ ಬಳೆಗಾರರ ಸಾಧನೆಗೆ ಪ್ರತಿಫಲವಾಗಿ ಕಟೀಲು, ಅಸ್ರಣ್ಣ ಪ್ರಶಸ್ತಿ,ಕಲ್ಯಾಣ ಯಕ್ಷೋತ್ಸವ ಸಂಮಾನ, ಹವ್ಯಾಸಿ ಬಳಗದ ದಶಮಾನ ಸಂಮಾನ ಅಂಬಲಪಾಡಿಯ ಸಂಮಾನ ಮುಂತಾದವುಗಳಿಗೆ ಭಾಗಿಯಾಗಿದ್ದಾರೆ. +ಕೊರಗ ಶೆಟ್ಟಿ ಮತ್ತು ರೇವತಿ ಕೆ.ಶೆಟ್ಟಿ ದಂಪತಿಯ ಸುಪುತ್ರರಾಗಿ, ಅಜ್ಜಿಬೆಟ್ಟು ಗ್ರಾಮದಲ್ಲಿ 6/7/1965ರಂದು ಜನಿಸಿದರು. +10ನೇ ತರಗತಿಯ ತನಕ ವಿದ್ಯಾಭ್ಯಾಸವನ್ನು ಪಡೆದಿರುವ ಇವರು ಆಟ-ಕೂಟಗಳನ್ನು ನೋಡಿ ಕಲಾ ಪ್ರಭಾವಕ್ಕೆ ಒಳಗಾಗಿ ಕಲಿಯಬೇಕೆಂಬ ಹಂಬಲವನ್ನು ತಾಳಿದರು. +ಜನಾರ್ದನ ಗುಡಿಗಾರ, ದೂರಸಂಬಂಧಿಸಿದ್ಧ ಕಟ್ಟೆ ಚೆನ್ನಪ್ಪ ಶೆಟ್ಟಿ ಇವರೀರ್ವರು ಗುರುಗಳಾಗಿದ್ದು,1987 ರಿಂದ ಯಕ್ಷಗಾನದ ಕಲಾಸೇವೆಯನ್ನು ಪ್ರಾರಂಭಿಸಿದ್ದಾರೆ. +ಇವರ ಅಣ್ಣನಾಗಿರುವ ಸಿದ್ಧಕಟ್ಟೆ ವಿಶ್ವನಾಥ ಶೆಟ್ಟಿಯವರ ಪ್ರಭಾವ ಕೂಡ ಇವರ ಮೇಲೆ ಇದೆ. +ಅಡ್ಯಾರು ಶ್ರೀ ಮಹಾಲಿಂಗೇಶ್ವರ ಮೇಳ-3ವರ್ಷ, ಕರ್ನಾಟಕ ಮೇಳ-8 ವರ್ಷ, ಕದ್ರಿ ಮೇಳ-4 ವರ್ಷ, ಮಂಗಳಾ ದೇವಿ ಮೇಳ-9 ವರ್ಷ ಹೀಗೆ ಮೇಳ ತಿರುಗಾಟವನ್ನು ನಡೆಸಿರುವ ಇವರು ಸೀತೆ, ಚಿತ್ರಾಂಗದೆ, ಸುಭದ್ರೆ, ದಮಯಂತಿ,ಚಂದ್ರಮತಿ, ಕಿನ್ನಿದಾರು, ಸೋಮಲಾದೇವಿ, ಬೋಮ್ಮಕ್ಕೆ ವಿಷ್ಣು, ಕೃಷ್ಣ ಧರ್ಮರಾಯ, ವಿದುರ ಮೊದಲಾದ ಪಾತ್ರಗಳನ್ನು ನಿರ್ವಹಿಸಿದ್ದಾರೆ. +ಮಳೆಗಾಲದಲ್ಲಿ ಕೃಷಿ ಕಾರ್ಯವನ್ನು ಮಾಡುವ ಇವರು ಶ್ರೀಮತಿ ಆಶಾಲತಾ ಎಂಬವರನ್ನು ವರಿಸಿದ್ದಾರೆ. +ಸನ್ನಿಧಿ ಮತ್ತು ಸಾನಿಧ್ಯ ಎಂಬ ಈರ್ವರು ಮಕ್ಕಳಿದ್ದಾರೆ. +ಶ್ರೀ ಮಂಗಳಾದೇವಿ ಮೇಳದ ಕಲಾವಿದರಾಗಿರುವ ಶ್ರೀ.ಕೆ.ಸದಾಶಿವ ಆಚಾರಿ ಇವರು ಪುಂಡು ವೇಷದ ಮುಖೇನ ಮನ್ನಣೆಯನ್ನು ಪಡೆದ ಕಲಾವಿದರಾಗಿದ್ದಾರೆ. +5/6/1968 ರಲ್ಲಿ ಕಿಟ್ಟಣ್ಣ ಆಚಾರಿ ಮತ್ತು ರೇವತಿ ಆಚಾರ್ತಿ ದಂಪತಿಯ ಸುಪುತ್ರರಾಗಿ ಕೋಡ್ಲೆ ಮನೆಯಲ್ಲಿ ಜನಿಸಿದ ಸದಾಶಿವ ಆಚಾರಿಯವರು ಪ್ರಾಥಮಿಕ ಹಂತದ ವಿದ್ಯಾಭ್ಯಾಸವನ್ನು ಪಡೆದಿರುವರು. +ಯಕ್ಷಗಾನ ಕಲೆಗೆ ಇವರು ಆಕರ್ಷಿತರಾಗುತ್ತಿದ್ದಂತೆ ಕೀರ್ತಿಶೇಷ ಹಾಸ್ಯಗಾರ ವೇಣೂರು ಸುಂದರ ಆಚಾರಿ ಇವರ ಪ್ರೇರಣೆಯ ಮೇರೆಗೆ ರಂಗಪ್ರವೇಶ ಮಾಡಿದರು. +ಶ್ರೀ ಕೆ.ಗೋವಿಂದ ಭಟ್‌ ಮತ್ತು ದಿವಾಣ ಶಿವ ಶಂಕರ ಭಟ್‌ ಇವರುಗಳು ಗುರುಗಳಾಗಿದ್ದು ಧರ್ಮಸ್ಥಳದ ಲಲಿತಾ ಕಲಾ ಕೇಂದ್ರದಲ್ಲಿ ನಾಟ್ಯಾಭ್ಯಾಸವನ್ನು ಮಾಡಿರುವರು. +ಆಮೇಲೆ ಸುರತ್ಕಲ್‌ ಮೇಳವನ್ನು ಸೇರಿದವರು 16 ವರ್ಷಗಳ ತಿರುಗಾಟವನ್ನು ಪೂರೈಸಿ, ಮಂಗಳಾದೇವಿ ಮೇಳವನ್ನು ಸೇರಿದರು. +ಈಗಾಗಲೇ 12 ವರ್ಷಗಳ ತಿರುಗಾಟವನ್ನು ಪೊರೈಸುತ್ತಾ ಕಲಾಸೇವೆಯನ್ನು ಮುನ್ನಡೆಸುತ್ತಾ ಇದ್ದಾರೆ. +ಅಭಿಮನ್ಯು, ವೃಷಕೇತು, ಕೋಟಿ-ಚೆನ್ನಯರು, ಚಂಡ-ಮುಂಡರು, ಮಖರ ಮುಖ,ಸಿಂಹಮುಖ ಇತ್ಯಾದಿ ಪುಂಡು ವೇಷಗಳನ್ನು ಮಾಡಿರುವ ಇವರು ದೇವೇಂದ್ರ, ಅರ್ಜುನ, ಕೇಮರ,ಪೆರುಮಳ ಮೊದಲಾದ ರಾಜವೇಷದ ಪಾತ್ರಗಳನ್ನು ಕೂಡಾ ನಿರ್ವಹಿಸುತ್ತಾ ಇದ್ದಾರೆ. +ಶ್ರೀಮತಿ ಶೋಭಾ ಎಂಬವರನ್ನು ವರಿಸಿ ರವಿಚಂದ್ರ ಮತ್ತು ರವಿಕಿರಣ್‌ ಎಂಬ ಇಬ್ಬರು ಮಕ್ಕಳನ್ನು ಪಡೆದಿದ್ದಾರೆ. +ಕಲಾಸಾಧನೆಗಳ ಪ್ರತಿಫಲವಾಗಿ ಮಸ್ಕತ್‌ ಹಾಗೂ ಊರ ಪುರಸ್ಕಾರವನ್ನು ಪಡೆದಿದ್ದಾರೆ. +ಪುಂಡು ವೇಷದ ಮುಖೇನ ಮನ್ನಣೆಗೆ ಒಳಗಾಗಿ ಸಾಧನೆಯ ಸತ್ವವನ್ನು ಉಳಿಸಿಕೊಂಡಿರುವ ಶ್ರೀ ಸದಾಶಿವ ಕುಲಾಲ್‌ ವೇಣೂರು ಪ್ರಸ್ತುತ ಶ್ರೀಹೊಸನಗರ ಮೇಳದಲ್ಲಿ ತಿರುಗಾಟವನ್ನು ನಡೆಸುತ್ತಾ ಇದ್ದಾರೆ. +1960ನೇ ವರ್ಷದಲ್ಲಿ ಕೃಷ್ಣ ಮೂಲ್ಯ ಹಾಗೂ ಅಪ್ಪಿ ಮೂಲೈದಿ ದಂಪತಿಯ ಸುಪುತ್ರರಾಗಿ ವೇಣೂರಿನಲ್ಲಿ ಜನಿಸಿದರು. +ಪ್ರಾಥಮಿಕ ಹಂತದ ವಿದ್ಯಾಭ್ಯಾಸವನ್ನು ಪಡೆದಿರುವ ಇವರು ಕೀರ್ತಿ ಶೇಷಹಾಸ್ಯ ಕಲಾವಿದ ವೇಣೂರು ಸುಂದರ ಆಚಾರ್ಯ ಅವರ ಪ್ರೋತ್ಸಾಹದ ಮೇರೆಗೆ 12ನೇ ವಯಸ್ಸಿನಿಂದಲೇ ಮೇಳಕ್ಕೆ ಸೇರ್ಪಡೆಗೊಂಡರು. +ಪಡ್ರೆ ಚಂದು ಅವರಲ್ಲಿ ನಾಟ್ಯಾಬ್ಯಾಸವನ್ನು ಮಾಡಿರುವ ಸದಾಶಿವ ಕುಲಾಲರು ಸುರತ್ಕಲ್‌ಮೇಳವೊಂದರಲ್ಲೇ 25 ವರ್ಷಗಳ ತಿರುಗಾಟವನ್ನು ಪೂರೈಸಿದ್ದಾರೆ. +ಸುರತ್ಕಲ್‌ ಮೇಳವು ಸ್ಥಗಿತವಾದ ಬಳಿಕ ಮಂಗಳಾದೇವಿ ಮೇಳಕ್ಕೆ ಸೇರಿ 8 ವರ್ಷಗಳ ತಿರುಗಾಟವನ್ನು ಮಾಡಿ ಹೊಸನಗರ ಮೇಳವನ್ನು ಸೇರಿದವರು ಈಗಾಗಲೆ 4 ವರ್ಷಗಳ ತಿರುಗಾಟವನ್ನು ಪೂರೈಸಿದ್ದಾರೆ. +ಪುಂಡು ವೇಷ, ರಾಜ ವೇಷ ಮತ್ತು ನಾಟಕೀಯ ವೇಷಗಳಲ್ಲಿ ಹಿಡಿತವನ್ನು ಸಾಧಿಸಿರುವ ಇವರು ಅಭಿಮನ್ಯು, ಚಂಡ-ಮುಂಡರು,ಭ್ರಮರಕುಂತಳೆ, ಬಭ್ರುವಾಹನ, ಮಧು-ಕೈಟಬರು,ಪರಶುರಾಮ, ಗುಳಿಗ, ವರಾಹ, ಕೋಟಿ ಚೆನ್ನಯ,ದೇವು ಪೂಂಜ, ಕಾಂತಾಬಾರೆ-ಬೂದಾಬಾರೆ ಮುಂತಾದ ಪಾತ್ರಗಳನ್ನು ನಿರ್ವಹಿಸುತ್ತಿದ್ದಾರೆ. +ಪ್ರಮೀಳೆ, ಭ್ರಮರಕುಂತಳೆ ಮೊದಲಾದ ಕಟ್ಟೆ ಸ್ತ್ರೀಪಾತ್ರಗಳನ್ನು ಕೂಡಾ ನಿರ್ವಹಿಸಿದ್ದಾರೆ. +ಹಿರಿಯ ಕಲಾವಿದ ಶ್ರೀ ಶಿವರಾಮ ಜೋಗಿ ಬಿ.ಸಿ.ರೋಡ್‌ ಅವರ ಶೈಲಿಗೆ ಆಕರ್ಷಣೆಗೊಂಡಿರುವ ಇವರು ಆದರ್ಶವನ್ನು ಅನುಸರಿಸಿಕೊಂಡು ಬೆಳೆದು ಬಂದಿದ್ದಾರೆ. +ಶ್ರೀಮತಿ ಸುಜಯಾ ಎಂಬವರನ್ನು ವರಿಸಿರುವ ಇವರು ನಾಗಶ್ರೀ, ಷಣ್ಮುಖ, ನಾಗಲಕ್ಷ್ಮೀ ಎಂಬ ಮೂವರು ಮಕ್ಕಳನ್ನು ಪಡೆದಿದ್ದಾರೆ. +ಇವರ ಸಾಧನೆಗೆ ಪ್ರತಿಫಲವಾಗಿ ಬೆಳಗಾಂ,ಮಸ್ಕತ್‌, ವೇಣೂರಲ್ಲಿ ಸಂಮಾನ ಪುರಸ್ಕಾರಗಳು ಸಂದಿವೆ. +ಬಣ್ಣದ ವೇಷಗಳ ಮುಖೇನ ಪ್ರಸಿದ್ಧಿಯನ್ನು ಪಡೆದಿರುವ ಶ್ರೀ ಸದಾಶಿವ ಶೆಟ್ಟಿಗಾರ್‌ ಸಿದ್ಧಕಟ್ಟೆ ಇವರುಹೊಸ ನಗರ ಮೇಳದ ಕಲಾವಿದರಾಗಿ ತಿರುಗಾಟವನ್ನು ನಡೆಸುತ್ತಾ ಇದ್ದಾರೆ. +ದಿ.17-12-1965ರಲ್ಲಿ ಬಾಬು ಶೆಟ್ಟಿಗಾರ್‌ ಮತ್ತು ಗಿರಿಯಮ್ಮ ದಂಪತಿಯ ಸುಪುತ್ರರಾಗಿ ಸಿದ್ಧಕಟ್ಟೆಯಲ್ಲಿ ಜನಿಸಿದರು. +ಪ್ರಾಥಮಿಕ ಹಂತದ ವಿದ್ಯಾಭ್ಯಾಸವನ್ನು ಪಡೆದ ಇವರು ಯಕ್ಷಗಾನದ ಪರಿಸರದಲ್ಲಿ ಹುಟ್ಟಿ ಬೆಳೆದು ಕಲೆಯ ಆಕರ್ಷಣೆಗೆ ಒಳಗಾದರು. +ಕೀರ್ತಿ ಶೇಷ ಕಲಾವಿದರಾಗಿರುವ ಬಣ್ಣದ ಮಾಲಿಂಗ ಹಾಗೂ ಕಟೀಲು ಮೇಳದ ಕಲಾವಿದ ರೆಂಜಾಳ ರಾಮಕೃಷ್ಣ ಇವರಲ್ಲಿ ಯಕ್ಷಗಾನದ ನಾಟ್ಯಾಭ್ಯಾಸವನ್ನು ಮಾಡಿ 18ನೇ ವಯಸ್ಸಿನಿಂದ ರಂಗಪ್ರವೇಶ ಮಾಡಿದರು. +ಕಟೀಲು ಮೇಳ-8 ವರ್ಷ, ತಲಕಳ ಮೇಳ-2 ವರ್ಷ, ಧರ್ಮಸ್ಥಳ ಮೇಳ-13 ವರ್ಷ, ಹೊಸನಗರ ಮೇಳ-4 ವರ್ಷ ಹೀಗೆ ಮೇಳ ತಿರುಗಾಟವನ್ನು ಮಾಡಿರುವ ಸದಾಶಿವ ಶೆಟ್ಟಿಗಾರರು ಉತ್ತಮವಾದ ಶೈಲಿಯಿಂದ ಬಣ್ಣದ ವೇಷಗಳನ್ನು ನಿರ್ವಹಿಸಿ ಜನಮನ್ನಣೆಗೆ ಪಾತ್ರರಾಗಿದ್ದಾರೆ. +ಮಹಿಷಾಸುರ, ರುದ್ರ, ಭೀಮ, ಸಿಂಹ, ವರಾಹ,ಕುಂಭಕರ್ಣ, ಶೂರ್ಪನಖಿ, ತಾಟಕಿ ಮುಂತಾದ ಪಾತ್ರಗಳಿಗೆ ತನ್ನದೇ ಆದ ಸ್ವಂತಿಕೆಯ ವರ್ಚಸ್ಸನ್ನು ತೋರಿ ಜೀವಕಳೆ ತುಂಬಿದ್ದಾರೆ. +ರಾಜಬಣ್ಣ, ಕಾಟುಬಣ್ಣಗಳೆಂಬ ಎರಡು ರೀತಿಯ ಪಾತ್ರಗಳ ನಿರ್ವಹಣೆಯಲ್ಲಿ ಬಿನ್ನತೆಯನ್ನು ಕಂಡುಕೊಂಡವರಾಗಿದ್ದಾರೆ. +ಶ್ರೀಮತಿ ಕಲಾವತಿ ಎಂಬವರನ್ನು ವರಿಸಿರುವ ಇವರು ದಿಲೀಪ್‌ ಕುಮಾರ್‌ (ಪಿ.ಯು.ಸಿ, ಸೊಸೈಟಿ ಟ್ರೈನಿ೦ಗ್‌), ಸಂದೀಪ್‌ ಕುಮಾರ್‌(ಪಿ.ಯು. ಸಿ,ಐ. ಟಿ.ಐ.) ಎಂಬ ಇಬ್ಬರು ಮಕ್ಕಳಿದ್ದಾರೆ. +ಪುಂಡು ವೇಷ ಮತ್ತು ರಾಜ ವೇಷ ಮುಖೇನ ಜನಮನ್ನಣೆಗೆ ಕಾರಣವಾಗಿರುವ ಶ್ರೀ.ಡಿ.ಕೆ.ಸಂತೋಷ್‌ ಕುಮಾರ್‌ ಇವರು ಮಂಗಳಾದೇವಿ ಮೇಳದ ಕಲಾವಿದರಾಗಿ ತಿರುಗಾಟವನ್ನು ನಡೆಸುತ್ತಾ ಇದ್ದಾರೆ. +1957ರಲ್ಲಿ ನಾರಾಯಣ ಚಿತ್ರಿಗ ಮತ್ತು ನೀಲಮ್ಮ ದಂಪತಿಯ ಸುಪುತ್ರರಾಗಿ ಅಂತರಬೈಲಿನಲ್ಲಿ ಹುಟ್ಟಿರುವ ಶ್ರೀಯುತರು 7ನೇ ತರಗತಿಯ ತನಕ ವಿದ್ಯಾಭ್ಯಾಸವನ್ನು ಪಡೆದಿರುವರು. +ಬಾಲ್ಯದಿಂದಲೇ ಯಕ್ಷಗಾನ ಕಲೆಗೆ ಪ್ರಭಾವಿತರಾದ ಇವರು ದಿ.ಪಡ್ರೆಚಂದು ಇವರಲ್ಲಿ ನಾಟ್ಯಾಭ್ಯಾಸವನ್ನು ಮಾಡಿ ರಂಗಪ್ರವೇಶ ಮಾಡಿದರು. +ಕಟೀಲು ಮೇಳ-1 ವರ್ಷ, ಧರ್ಮಸ್ಥಳಮೇಳ-1 ವರ್ಷ, ಸುಬ್ರಹ್ಮಣ್ಯ ಮೇಳ-5 ವರ್ಷ,ಕುಂಬ್ಳೆ ಮೇಳ-5 ವರ್ಷ, ಮಧೂರು ಮೇಳ-3ವರ್ಷ, ಕದ್ರಿ ಮೇಳ-7 ವರ್ಷ, ಸುರತ್ಕಲ್‌ ಮೇಳ-4 ವರ್ಷ, ಕರ್ನಾಟಕ ಮೇಳ-3 ವರ್ಷ ಅನಂತರ ಮಂಗಳಾದೇವಿ ಮೇಳವನ್ನು ಸೇರಿದರು. +ಈ ವರೆಗೆ ಹಲವು ವರ್ಷಗಳ ತಿರುಗಾಟವನ್ನು ಪೂರೈಸಿದ್ದಾರೆ. +ಅಭಿಮನ್ಯು, ವೃಷಕೇತು, ಬಬ್ರುವಾಹನ, ಕೃಷ್ಣ,ಚೆನ್ನಯ, ಬೂದಾಬಾರೆ, ಮತ್ಸೇಂದ್ರನಾಥ ಮೊದಲಾದ ಪಾತ್ರಗಳನ್ನು ಮಾಡಿರುವ ಇವರು ಅನಿವಾರ್ಯ ಸಂದರ್ಭಗಳಲ್ಲಿ ಸ್ತ್ರೀ ಪಾತ್ರಗಳನ್ನು ಕೂಡಾ ನಿರ್ವಹಿಸಿದ್ದಾರೆ. +ದಿ। ದುರ್ಗಪ್ಪ ಗುಡಿಗಾರ ಮತ್ತು ಜನಾರ್ದನ ಗುಡಿಗಾರ ಇವರ ಸಂಬಂಧಿಕರಾದ ಇವರು ಮುಂಬಯಿ ಜಗದಂಬಾ ಯಕ್ಷಗಾನ ಮಂಡಳಿಯ ಸದಸ್ಯರಿಗೆ ತರಬೇತಿಯನ್ನು ನೀಡಿದ್ದಾರೆ. +ಶ್ರೀಮತಿ ವಿಜಯಲಕ್ಷ್ಮೀ ಎಂಬವರನ್ನು ವರಿಸಿರುವ ಇವರು ಭರತ್‌ ಚಿತ್ರಿಗ ಮತ್ತು ಭವ್ಯಚಿತ್ರಿಗೆ ಎಂಬ ಇಬ್ಬರು ಮಕ್ಕಳನ್ನು ಪಡೆದಿದ್ದಾರೆ. +ಇವರ ಸಾಧನೆಗೆ ಪ್ರತಿಫಲವಾಗಿ ಮುಂಬಯಿ, ಉಜಿರೆ,ಕನ್ಶಾಡಿ ಮೊದಲಾದೆಡೆಯಲ್ಲಿ ಸಂಮಾನಗಳಾಗಿವೆ. +ಬಣ್ಣದ ವೇಷದಲ್ಲಿ ತೀವ್ರಗತಿಯ ನಡೆಯನ್ನು ತೋರಿ ಮನ್ನಣೆಗೆ ಒಳಗಾಗಿರುವ ಶ್ರೀ ಸತೀಶ ನೈನಾಡು ಇವರು ಹೊಸನಗರ ಮೇಳದ ಕಲಾವಿದರಾಗಿ ತಿರುಗಾಟವನ್ನು ನಡೆಸುತ್ತಾ ಇದ್ದಾರೆ. +26-6-1974 ರಲ್ಲಿ ಕುಂಜಾರ ಪೂಜಾರಿ ಮತ್ತು ಸೀತಮ್ಮ ದಂಪತಿಯ ಸುಪುತ್ರರಾಗಿ ನೈನಾಡು ಎಂಬಲ್ಲಿ ಜನಿಸಿದರು. +7ನೇ ತರಗತಿಯ ತನಕ ವಿದ್ಯಾಭ್ಯಾಸವನ್ನು ಪಡೆದಿರುವ ಇವರು ಸ್ವಂತ ಆಸಕ್ತಿಯಿಂದ ಯಕ್ಷಗಾನ ಕಲಾಪ್ರವೇಶ ಮಾಡಿದರು. +ಕೋಳ್ಯೂರು ರಾಮಚಂದ್ರ ಭಟ್‌ ಮತ್ತು ಧರ್ಮಸ್ಥಳ ಗೋಪಾಲ ಭಟ್‌ ಇವರಲ್ಲಿ ನಾಟ್ಯಾಭ್ಯಾಸ ಹಾಗೂ ಬಣ್ಣದ ವೇಷದ ರೀತಿ ನೀತಿಗಳನ್ನು ಅರಿತರು. +ಮೊದಲಿಗೆ ಕಟೀಲು ಮೇಳವನ್ನು ಸೇರಿದವರು 9ವರ್ಷಗಳ ತಿರುಗಾಟವನ್ನು ಪೂರೈಸಿದರು. +ಸುಂಕದಕಟ್ಟೆ ಮೇಳ-1 ವರ್ಷ, ಎಡನೀರು ಮೇಳ-2 ವರ್ಷ ಆಮೇಲೆ ಹೊಸನಗರ ಮೇಳವನ್ನು ಸೇರಿದವರು ಈಗಾಗಲೇ 4 ವರ್ಷಗಳ ತಿರುಗಾಟವನ್ನು ಪೂರೈಸಿದ್ದಾರೆ. +ಬಣ್ಣದ ವೇಷದ ಜೊತೆಗೆ ರಾಜವೇಷವನ್ನು ಮಾಡುವ ಇವರು ಶುಂಭ, ರಾವಣ, ಮೈರಾವಣ,ಮಹಿಷಾಸುರ, ಕುಂಭಕರ್ಣ, ಅನುಸಾಲ್ವ, ಸಿಂಹ,ಅರ್ಜುನ, ದೇವೇಂದ್ರ ಇತ್ಯಾದಿ ಪಾತ್ರಗಳನ್ನು ನಿರ್ವಹಿಸಿದ್ದಾರೆ. +ಕೃಷಿಕಾರ್ಯಾಸಕ್ತಿಯೊಂಂದಿಗೆ, ಯಕ್ಷಗಾನದ ಪ್ರಸಾಧನ ಕಲೆಯಲ್ಲಿ ಶ್ರಮಿಸಿರುವ ಇವರು ಶ್ರೀಮತಿ ಹರಿಣಾಕ್ಷಿ ಎಂಬವರನ್ನು ವರಿಸಿ ಶಶಾಂಕನೆನ್ನುವ ಪುತ್ರನನ್ನು ಪಡೆದಿದ್ದಾರೆ. +ಹಾಸ್ಸ ಪಾತ್ರಗಳ ರಂಜನೀಯ ಶೈಲಿಯಲ್ಲಿ ವಿನೂತನವಾದ ಪ್ರತಿಭೆಯನ್ನು ತೋರಿ ಜನಮನವನ್ನು ಗೆದ್ದು ರಸಿಕ ಪಾತ್ರಧಾರಿಯೆನಿಸಿರುವ ಶ್ರೀ ಸೀತಾರಾಮ ಕುಮಾರ್‌ ಕಟೀಲು ಇವರು ಪ್ರಸ್ತುತ ಹೊಸನಗರ ಮೇಳದಲ್ಲಿ ತಿರುಗಾಟವನ್ನು ನಡೆಸುತ್ತಾ ಇದ್ದಾರೆ. +ಶ್ರೀನಿವಾಸ ಕೋಟ್ಯಾನ್‌ ಮತ್ತು ಕಲ್ಯಾಣಿ ದಂಪತಿಯ ಸುಪುತ್ರರಾಗಿ ಕಟೀಲಿನಲ್ಲಿ 10-10-1955ರಂದು ಜನಿಸಿದರು. +ಪ್ರಾಥಮಿಕ ಹಂತದ ವಿದ್ಯಾಭ್ಯಾಸವನ್ನು ಪೂರೈಸಿರುವ ಇವರು ಮುಂಬಯಿಯ ಗುರುನಾರಾಯಣ ಯಕ್ಷಗಾನ ಮಂಡಳಿಯ ಮೂಲಕ ಯಕ್ಷಗಾನದ ಪ್ರಭಾವ ಮತ್ತು ಪಾತ್ರ ನಿರ್ವಹಣೆಗೆ ಒಳಗಾಗಿ ಬೆಳೆಯತೊಡಗಿದರು. +ಈಗಾಗಲೇ 40 ವರ್ಷಗಳ ಅನುಭವವನ್ನು ಸಂಪಾದಿಸಿರುವ ಸೀತಾರಾಮ ಕುವರಾರರು ಪ್ರದರ್ಶನವನ್ನು ನೋಡುತ್ತಾ ವಿಮರ್ಶಿಸುತ್ತಾ ಸ್ವಂತಸಾಧನೆಯಲ್ಲಿ ಬೆಳೆದು ಬಂದಿರುವರು. +ಮಾತುಗಾರಿಕೆಯ ಹಿನ್ನೆಲೆಯಲ್ಲಿ ಸಿದ್ಧಕಟ್ಟೆ ಚೆನ್ನಪ್ಪಶೆಟ್ಟಿಯವರಿಂದ ಹೆಚ್ಚಿನ ಅನುಭವವನ್ನು ಪಡೆದಿರುವ ಇವರು ಪದ್ಯ, ಗದ್ಯ ಮತ್ತು ಹಾಸ್ಯಮಯ ಸಾಹಿತ್ಯದ ತುಣುಕುಗಳನ್ನು ಮಾತಿನ ರಸೋತ್ಪನ್ನಕ್ಕೆ ಬಳಸಿಕೊಳ್ಳುತ್ತಾರೆ. +ಗುರುನಾರಾಯಣ ಯಕ್ಷಗಾನ ಮಂಡಳಿ ಮುಂಬಯಿ-10 ವರ್ಷ, ಕದ್ರಿ ಮೇಳ-9 ವರ್ಷ,ಮಧೂರು ಮೇಳ-2 ವರ್ಷ, ಪೆರ್ಡೂರು ಮೇಳ-8 ವರ್ಷ, ಮಂಗಳಾದೇವಿ ಮೇಳ-7 ವರ್ಷ,ಪುತ್ತೂರು ಮೇಳ-1 ವರ್ಷ, ಹೊಸನಗರ ಮೇಳ-3 ವರ್ಷ ಹೀಗೆ ತಿರುಗಾಟದ ಹಿನ್ನೆಲೆ ಇದೆ. +ಹಾಸ್ಯಪಾತ್ರಗಳೊಂದಿಗೆ ಪುಂಡು ವೇಷ ಮತ್ತು ಇತರ ವಿಭಿನ್ನ ಶೈಲಿಯ ಪಾತ್ರಗಳನ್ನು ನಿರ್ವಹಿಸಿದ್ದಾರೆ. +ತುಳು, ಕನ್ನಡ ಪ್ರಸಂಗಗಳು ಸೇರಿದಂತೆ ತೆಂಕು ಬಡಗುತಿಟ್ಟುಗಳಲ್ಲಿ ತಿರುಗಾಟ ಮಾಡಿ ಕೀರ್ತಿವಂತರಾಗಿದ್ದಾರೆ. +ಇವರು ಶ್ರೀಮತಿ ಬೇಬಿ ಎಂಬವರನ್ನು ವರಿಸಿ ಜಗದೀಶ (ಮೆಕ್ಯಾನಿಕಲ್‌ ಇಂಜಿನಿಯರ್‌), ಗೌರಿ(ಎಂ.ಬಿ.ಎ), ಸೌಮ್ಯ (ಬಿ.ಎಸ್‌.ಡಬ್ಲ್ಯುು) ಎಂಬ ಮೂವರು ಮಕ್ಕಳನ್ನು ಪಡೆದಿದ್ದಾರೆ. +ಇವರ ಸಾಧನೆ ತಕ್ಕವಾಗಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಆಸ್ರಣ್ಣ ಪ್ರಶಸ್ತಿ,ಸಾಮ ಸೌರಭ ಪ್ರಶಸ್ತಿ ಸೇರಿದಂತೆ 200ಕ್ಕೂ ಮಿಕ್ಕಿದ ಸಂಮಾನಗಳು ಸಂದಿವೆ. +ಅರ್ಥಗಾರಿಕೆಯ ಪ್ರೌಢಿಮೆಯಲ್ಲಿ ಪಾತ್ರಕ್ಕೆ ಜೀವಕಳೆ ತುಂಬುವ ಪ್ರಸಿದ್ಧ ಅರ್ಥಧಾರಿ ಮತ್ತು ವೇಷಧಾರಿಯಾಗಿ ಹಿರಿತನಕ್ಕೆ ಸಂದಿರುವ ಶ್ರೀ ಕುಂಬ್ಳೆ ಸುಂದರರಾಯರು ಪ್ರಸ್ತುತ ಯಕ್ಷಗಾನ ಬಯಲಾಟ ಅಕಾಡೆಮಿ ಬೆಂಗಳೂರು ಇದರ ಅಧ್ಯಕ್ಷರಾಗಿ ಕಲಾಸೇವೆಯನ್ನು ಮಾಡುತ್ತಾ ಇದ್ದಾರೆ. +1934ರ ವರ್ಷ ಕೇರಳದ ಕಾಸರಗೋಡಿಗೆ ಸೇರಿರುವ ಕುಂಬಳೆಯಲ್ಲಿ ಕುಂಞಕಣ್ಣ ಹಾಗೂ ಕಲ್ಯಾಣಿ ದಂಪತಿಯ ಸುಪುತ್ರರಾಗಿ ಇವರು ಜನಿಸಿದರು. +ಪ್ರಾಥಮಿಕ ಹಂತದ ವಿದ್ಯಾಭ್ಯಾಸವನ್ನು ಪಡೆದಿರುವ ಸುಂದರರಾಯರು ಯಕ್ಷಗಾನ ಕಲೆಯ ಮೇಲೆ ಆಕರ್ಷಿತರಾಗಿ ಪರಿಶ್ರಮದ ಮುಖೇನ ಅರ್ಥಗಾರಿಕೆಯ ಸಾಧನೆಯನ್ನು ಮಾಡಿ ಶೇಣಿ, ಸಾಮಗ ಮೊದಲಾದ ಅರ್ಥಧಾರಿಗಳ ಕೂಟದಲ್ಲಿ ಮೆರೆದಿದ್ದಾರೆ. +ಬಣ್ಣದ ಕುಟ್ಯಪ್ಪು ರವರಲ್ಲಿ ಸ್ಥೂಲವಾದ ನಾಟ್ಯಾಭ್ಯಾಸವನ್ನು ಮಾಡಿ ರಂಗಪ್ರವೇಶ ಮಾಡಿರುವ ಇವರು ಕೂಡ್ಲು, ಇರಾ, ಸುರತ್ಕಲ್‌ ಮೇಳಗಳಲ್ಲಿ ಆರಂಭದ ತಿರುಗಾಟವನ್ನು ಮಾಡಿ ಅನಂತರ ಧರ್ಮಸ್ಥಳ ಮೇಳದಲ್ಲಿ ಸುದೀರ್ಫವಾದ ತಿರುಗಾಟವನ್ನು ನಡೆಸಿರುವರು. +1994 ರಿಂದ 1998ರವರೆಗೆ ಶಾಸಕರಾದ ಅವಧಿಯಲ್ಲಿ ಮೇಳ ತಿರುಗಾಟವನ್ನು ನಿಲ್ಲಿಸಿದರೂ ಕೂಡಾ ಹೇಳಿಕೆಯ ಮೇರೆಗೆ ಅತಿಥಿ ಕಲಾವಿದರಾಗಿ ಭಾಗವಹಿಸುತ್ತಾ ಧರ್ಮಸ್ಥಳ ಮೇಳದ ನಂಟನ್ನು ಬಿಡದೆ ಕಲಾ ಸೇವೆಯನ್ನು ಮಾಡುತ್ತಾ ಇದ್ದಾರೆ. +ಭರತ, ಕರ್ಣ, ಬೀಷ್ಮ, ದುಷ್ಕಂತ, ಅಕ್ರೂರ,ಸಂಜಯ ಪರೀಕ್ಷಿತ ಮೊದಲಾದ ಪಾತ್ರಗಳನ್ನು ಮನೋಜ್ಯವಾಗಿ ಜನಮನಕ್ಕೆ ಮುಟ್ಟಿಸುವ ಇವರ ಕ್ರಮ ಶ್ಲಾಘನೀಯವಾಗಿದೆ. +ಪ್ರಾಸಬದ್ಧವಾದ ಮಾತಿನ ಸಾಹಿತ್ಯದೊಂದಿಗೆ ಪಾಂಡಿತ್ಯವನ್ನು ಮೆರೆಸುವ ಇವರು ಆಕರ್ಷಣೀಯವಾದ ಸ್ವರಭಾರವನ್ನು ಹೊಂದಿದ್ದಾರೆ. +ತುಳು ಪ್ರಸಂಗಗಳ ಪ್ರದರ್ಶನದಲ್ಲೂ ಪ್ರೌಢಿಮೆಯನ್ನು ಸಾಧಿಸಿರುವ ಇವರು ಪೆರುಮಳ, ತಿಮ್ಮಣ್ಣಾಜಿಲ ಮುಂತಾದ ಪಾತ್ರಗಳನ್ನು ನಿರ್ವಹಿಸುತ್ತಾರೆ. +ನೂರಾರು ಆಡಿಯೋ-ವೀಡಿಯೋ ಕ್ಯಾಸೆಟ್‌ಗಳಲ್ಲಿ ಇವರ ಪಾತ್ರಗಾರಿಕೆ ಚಿತ್ರಿತವಾಗಿದೆ. +ಇವರು ಸಂಸ್ಕಾರ ಭಾರತಿಯ ರಾಜಾಧ್ಯಕ್ಷರಾಗಿ ಕಾರ್ಯ ನಿರ್ವಹಿಸಿ ಲಲಿತ ಕಲೆಗಳ ಸಂವರ್ಧನೆಗಾಗಿ ಶ್ರಮಿಸಿದ್ದಾರೆ. +ಧಾರ್ಮಿಕ ಮತ್ತು ಸಾಮಾಜಿಕ ಭಾಷಣಗಳ ಸಂಪನ್ಮೂಲ ವ್ಯಕ್ತಿಯಾಗಿ ನಾಡಿನಾದ್ಯಂತ ಮನ್ನಣೆಯನ್ನು ಪಡೆದಿದ್ದಾರೆ. +ಲೇಖಕರಾಗಿಯೂ ಕಾರ್ಯ ನಿರ್ವಹಿಸಿರುವ ಇವರು ಸುಂದರ ಕಾಂಡವೆಂಬ ಇವರ ಅಭಿನಂದನ ಗ್ರಂಥದಲ್ಲಿ ಜೀವನದ ಆತ್ಮ ಕಥನವನ್ನು ನಿರೂಪಿಸಿದ್ದಾರೆ. +ಯಕ್ಷಗಾನ ಅಕಾಡೆಮಿಯ ಮೊದಲ ಅಧ್ಯಕ್ಷರಾಗಿ ಆಯ್ಕೆಯಾದ ಸುಂದರ ರಾಯರು ಸದಸ್ಯರ ಜೊತೆಗೆ ಕ್ರಿಯಾಶೀಲರಾಗಿ ಸ್ಪಂದಿಸಿ ಹತ್ತು-ಹಲವು ಯೋಜನೆಗಳನ್ನು ಮುನ್ಮಡೆಸುತ್ತಾ ಮನ್ಮಣೆಗೆ ಒಳಗಾಗಿದ್ದಾರೆ. +ಶ್ರೀಮತಿ ಸುಶೀಲಾ ಎಂಬವರನ್ನು ವರಿಸಿ ಶಾಂತಾಕುಮಾರಿ, ಸವಿತಾ ಕುಮಾರಿ, ಪ್ರಸನ್ನ ಕುಮಾರ್‌,ಮಮತಾ ಕುಮಾರಿ, ಪ್ರವೀಣ ಕುಮಾರ್‌ ಎಂಬ ಐವರು ಮಕ್ಕಳನ್ನು ಇವರು ಪಡೆದಿದ್ದಾರೆ. +ಇವರ ಸಾಧನೆಗೆ ಪುರಸ್ಕಾರವಾಗಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕೇರಳ ಕಲಾ ಮಂಡಲದ ಪ್ರಶಸ್ಥಿ ಕನ್ನಡ ಶ್ರೀ ಪ್ರಶಸ್ತಿ, ಕರ್ನಾಟಕ ಶ್ರೀ ಪ್ರಶಸ್ತಿ ಇತ್ಯಾದಿ ಹತ್ತಾರು ಪ್ರಶಸ್ತಿಗಳು ದೊರೆತಿರುವುದಲ್ಲದೆ ದೆಹಲಿ,ಮುಂಬಯಿ, ಬೆಹರಿನ್‌ ಮುಂತಾದ ದೇಶ-ವಿದೇಶಗಳ ಗೌರವವು ಸಂದಿರುತ್ತದೆ. +ಕಾಸರಗೋಡು ಜಿಲ್ಲೆಯ ಮೂಡಂಬೈಲಿನಲ್ಲಿ ಶ್ರೀತ್ಯಾಂಪಣ್ಣ ಶೆಟ್ಟಿ ಹಾಗೂ ಶ್ರೀಮತಿ ಮಾಣಕ್ಕೆ ಶೆಡ್ತಿ ದಂಪತಿಯ ಪುತ್ರರಾಗಿ ದಿನಾಂಕ 1940 ರಲ್ಲಿ ಸುಬ್ಬಯ್ಯ ಶೆಟ್ಟರು ಜನಿಸಿದರು. +ಪ್ರಾಥಮಿಕ ಹಂತದ ವಿದ್ಯಾಭ್ಯಾಸವನ್ನು ಪಡೆದಿರುವ ಇವರು ಬೋಳಾರ ಶ್ರೀ ತಿಮ್ಮಯ್ಯ ಸುವರ್ಣ ಎಂಬವರಲ್ಲಿ ನಾಟ್ಯಾಭ್ಯಾಸ ಮಾಡಿರುವರು. +ಅನಂತರ ಬೋಳಾರ ನಾರಾಯಣ ಶೆಟ್ಟರಲ್ಲಿ ಅರ್ಥಗಾರಿಕೆಯ ಬಗ್ಗೆ ಮಾಹಿತಿಯನ್ನು ಪಡೆದಿರುವರು. +ಸುಂಕದ ಕಟ್ಟೆ ಮೇಳ - 5 ವರ್ಷ ,ಕದ್ರಿಮೇಳ -12 ವರ್ಷ ,ಕರ್ನಾಟಕ - 9 ವರ್ಷ ,ಮಧೂರು ಮೇಳ - 2 ವರ್ಷ , ಪುತ್ತೂರು - 1,ವರ್ಷ , ಕುಂಟಾರು - 1 ವರ್ಷ ಹೀಗೆ ಮೇಳ ತಿರುಗಾಟದ ಹಿನ್ನೆಲೆಯನ್ನು ಹೊಂದಿರುವ ಇವರು ಪ್ರಸ್ತುತ ಸುಂಕದ ಕಟ್ಟೆ ಮೇಳದಲ್ಲಿ ತಿರುಗಾಟವನ್ನು ನಡೆಸುತ್ತಾ ಇದ್ದಾರೆ. +ಮಧು - ಕೈಟಭ, ಅರ್ಜುನ , ಶೂರ್ಪನಖ,ಶುಂಭ ಮೊದಲಾದ ಪಾತ್ರಗಳನ್ನು ಮಾಡಿರುವ ಸುಬ್ಬಯ್ಯ ಶೆಟ್ಟರು ಪೀಠಿಕೆ ವೇಷಗಳಲ್ಲಿ ಹಿಡಿತವನ್ನು ಸಾಧಿಸಿದ್ದಾರೆ. +ಪೆರುಮಳ, ತಿಮ್ಮಣ್ಣ ಅಜಿಲ ಮೊದಲಾದ ತುಳು ಪ್ರಸಂಗದ ಪಾತ್ರಗಳನ್ನು ಕೂಡಾ ನಿರ್ವಹಿಸಿದ್ದಾರೆ. +ತುಳು ಪ್ರಸಂಗದ ಪಾತ್ರಗಳ ಅರ್ಥಗಾರಿಕೆಯಲ್ಲಿ ಪೌರಾಣಿಕ ಪಾತ್ರಗಳ ಹಿನ್ನೆಲೆಯನ್ನು ನಿರೂಪಿಸುವ , ನೀತಿಬೋಧನೆಯ ನುಡಿಗಟ್ಟನ್ನು ಹೇಳುವ ಗುಣಧರ್ಮ ಇವರದ್ದಾಗಿದೆ. +ಹವ್ಯಾಸಿ ಕಲಾವಿದರ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿರುವ ಇವರು ಪಾಂಂಡೇಶ್ವರ ಶ್ರೀಮಹಾಲಿಂಗೇಶ್ವರ ಯಕ್ಷಗಾನ ಸಂಘದ ಕಲಾವಿದರಾಗಿ ಕಲಾಸೇವೆಯನ್ನು ಮಾಡಿದ್ದಾರೆ. +ಶ್ರೀಮತಿ ಲೀಲಾವತಿ ಎಂಬುವರನ್ನು ವರಿಸಿರುವ ಇವರು ಐವರು ಗಂಡು ಹಾಗೂ ಹೆಣ್ಣು ಮಗುವನ್ನು ಪಡೆದಿದ್ದಾರೆ. +ಇವರ ಸಾಧನೆಗೆ ಪ್ರತಿಫಲವಾಗಿ ಮುಂಬಯಿ,ಮಂಗಳೂರು, ಮೊದಲಾದೆಡೆಯಲ್ಲಿ ಸಂಮಾನಗಳು ಸಂದಿವೆ. +ಹವ್ಯಾಸಿ ಬಳಗ ಕದ್ರಿಯ ದಶಮಾನದ ಸಂಮನ ಕೂಡಾ ಇವರಿಗೆ ಲಭಿಸಿದೆ. +ರಾಜವೇಷ, ಮತ್ತು ಬಣ್ಣದ ವೇಷಗಳನ್ನು ಮಾಡಿ ಮನ್ನಣೆಗೆ ಒಳಗಾಗಿರುವ ಸುರೇಶಹೆಗ್ಡೆಯವರು ಪ್ರಸ್ತುತ ಮಂಗಳಾದೇವಿ ಮೇಳದ ಕಲಾವಿದರಾಗಿ ತಿರುಗಾಟವನ್ನು ಮಾಡುತ್ತಿದ್ದಾರೆ. +ನಾಗಪ್ಪ ಹೆಗ್ಡೆ ಮತ್ತು ಕಮಲಮ್ಮ ದಂಪತಿಯ ಸುಪುತ್ರರಾಗಿ 25/5/1975ರಂದು ಬಂಗಾಡಿಯಲ್ಲಿ ಜನಿಸಿದರು. +8ನೇ ತರಗತಿಯ ತನಕ ವಿದ್ಯಾಭ್ಯಾಸವನ್ನು ಪಡೆದಿರುವರು. +ಯಕ್ಷಗಾನ ಕಲೆಯಲ್ಲಿ ಬೆರೆತು ಆನಂದಪಡುವ ಮನೆತನದಲ್ಲಿ ಇವರು ಹುಟ್ಟಿದರಿಂದ ಬಾಲ್ಯದಿಂದಲೇ ಯಕ್ಷಗಾನದತ್ತ ಪ್ರಭಾವಿತರಾಗಿದ್ದರು. +ಭಾಸ್ಕರ ಮಡಿವಾಳ ಬಂಗಾಡಿ ಅವರ ಪ್ರೇರಣೆಯ ಮೇರೆಗೆ ಅವರಿಂದಲೇ ನಾಟ್ಯಭ್ಯಾಸವನ್ನು ಮಾಡಿ ಕಲಾ ಸೇವೆಗೆ ಮುಂದಾದರು. +ಕಟೀಲುಮೇಳ-5ವರ್ಷ, ಸುಂಕದಕಟ್ಟೆ ಮೇಳ -2ವರ್ಷ, ಕುಂಟಾರುಮೇಳ - 3ವರ್ಷ, ಭಗವತಿ ಮೇಳ-3ವರ್ಷ,ಮಂಗಳಾದೇವಿ ವೀಳ-1ವರ್ಷ ಹೀಗೆ ತಿರುಗಾಟವನ್ನು ಮಾಡಿದ್ದಾರೆ. +ಅರ್ಜುನ, ದೇವೇಂದ್ರ ಶುಂಭ, ನಿಶುಂಭ, ಭೀಮ,ಶೂರ್ಪನಖಾ ಮುಂತಾದ ಪೌರಾಣಿಕ ಪ್ರಸಂಗದ ಪಾತ್ರಗಳನು ಮಾಡಿರುವ ಇವರು ತುಳು ಪ್ರಸಂಗಗಳಲ್ಲಿ ಪೆರುಮಳ ಬಲ್ಲಾಳ, ಬಂಗರಸು ಮುಂತಾದ ವೇಷಗಳನ್ನು ಮಾಡಿರುವರಲ್ಲದೆ ಪೂರಕವಾಗಿ ಹಾಸ್ಯದ ಪಾತ್ರಗಳನ್ನು ಕೂಡಾ ಇವರು ನಿರ್ವಹಿಸುತ್ತಾ ಬಂದಿದ್ದಾರೆ. +ಚಿಕ್ಕಪ್ಪ ಬಾಬು ಹೆಗ್ಡೆ ಹವ್ಯಾಸಿ ವೇಷಧಾರಿ,ಮಾವಂದಿರಾದ ರಂಜಪ್ಪ ಹೆಗ್ಡೆ ಹವ್ಯಾಸಿ ಭಾಗವತರು,ಜಯಂತ ಹೆಗ್ಡೆ ಅರ್ಥಧಾರಿ ಹೀಗೆ ಇವರೆಲ್ಲರಿಂದ ಪ್ರೋತ್ಸಾಹಕ್ಕೆ ಒಳಗಾದ ಸುರೇಶ ಹೆಗ್ಡೆಯವರು ಭಾಗವತಿಕೆಯಲ್ಲೂ ಪಳಗಿದವರಾಗಿದ್ದಾರೆ. +ಮಳೆಗಾಲದಲ್ಲಿ ಕೃಷಿಕರಾಗಿ ಶ್ರಮಿಸುವ ಇವರು ಶ್ರೀಮತಿ ಲಲಿತಾ ಎಂಬವರನ್ನು ವರಿಸಿ ಕುಮಾರ್‌ಸ್ವರ್ಣಿತ ಮತ್ತು ಕುಮಾರಿ ಸ್ವಾತಿಕ್‌ ಎಂಬ ಇಬ್ಬರು ಮಕ್ಕಳನ್ನು ಪಡೆದಿದ್ದಾರೆ. +ಕೊಲ್ಲಿ ಶ್ರೀದುರ್ಗಾಪರಮೇಶ್ವರಿ ಯಕ್ಷಗಾನ ಮಂಡಳಿಯು ಇವರನ್ನು ದಶಮಾನೋತ್ಸವದ ನಿಮಿತ್ತ ಗೌರವಿಸಿ ಸಂಮಾನಿಸಿದೆ. +ಯಕ್ಷಗಾನದ ಕಲಾಕ್ಷೇತ್ರದಲ್ಲಿ ಹಿಮ್ಮೇಳ ವಾದಕರಾಗಿ ತಿರುಗಾಟವನ್ನು ಮಾಡಿರುವುದರ ಜೊತೆಗೆ ಗುರು ಪರಂಪರೆಯನ್ನು ಮೆರೆಸಿದ ಶ್ರೀಮಾಂಬಾಡಿ ಸುಬ್ರಹ್ಮಣ್ಯ ಭಟ್ಟರು ಜನಮನ್ನಣೆಗೆ ಒಳಗಾಗಿರುವ ಮೇಳದ ನಿವೃತ್ತ ಕಲಾವಿದರಾಗಿದ್ದಾರೆ. +ಮಾಂಬಾಡಿ ಸುಬ್ರಹ್ಮಣ್ಯ ಬಟ್ಟರು ಮಾಂಬಾಡಿ ನಾರಾಯಣ ಭಾಗವತರ ಸುಪುತ್ರರಾಗಿ ತಂದೆಯ ಆದರ್ಶವನ್ನು ಮೆರೆಸಿದರು. +ರಕ್ತಗತವಾಗಿ ಬಂದ ಪ್ರತಿಭೆಯೊಂದಿಗೆ ತಂದೆಯ ಮಾರ್ಗದರ್ಶನದಲ್ಲಿ ಪ್ರತಿಭಾವಂತರಾಗಿ ಬೆಳೆದ ಮಾಂಬಾಡಿ ಸುಬ್ರಹ್ಮಣ್ಯ ಭಟ್ಟರು ಕಟೀಲು, ಕರ್ನಾಟಕ,ಕದ್ರಿ ಮುಂತಾದ ಮೇಳಗಳಲ್ಲಿ ತಿರುಗಾಟವನ್ನು ನಡೆಸಿದ್ದಾರೆ. +ಕಲಾವಿದರ ಮನೋಧರ್ಮಕ್ಕೆ ತಕ್ಕಂತೆ,ರಸಪೋಷಣೆಗೆ ಅನುಗುಣವಾಗಿ ಚೆಂಡೆ-ಮದ್ದಳೆಯನ್ನು ನಯವಾಗಿ ನುಡಿಸುವ ಇವರು ಕಾಸರಗೋಡು, ದಕ್ಷಿಣ ಕನ್ನಡ ಜಿಲ್ಲೆಗಳು ಸೇರಿದಂತೆ ತೆಂಕುತಿಟ್ಟಿನ ಪ್ರಭಾವಲಯದಲ್ಲಿ ಯಕ್ಷಗಾನದ ಹಿಮ್ಮೇಳ ತರಗತಿಗಳನ್ನು ನಡೆಸಿ ನೂರಾರುಶಿಷ್ಯರನ್ನು ಹೊಂದಿದ್ದಾರೆ. +ಅನೇಕರು ವೃತ್ತಿಪರ ಕಲಾವಿದರಾಗಿ ಹಾಗೂ ಇನ್ನು ಅನೇಕರು ಹವ್ಯಾಸಿ ಕಲಾವಿದರಾಗಿ ಪ್ರತಿಭೆಯನ್ನು ಮೆರೆಸುತ್ತಾ ಇವರ ಶಿಷ್ಯರೆನ್ನುವ ಕೀರ್ತಿಗೆ ಪಾತ್ರರಾಗಿದ್ದಾರೆ. +ಶ್ರೀಮತಿ ಲಕ್ಷ್ಮೀ ಎಂಬವರನ್ನು ವರಿಸಿ ವೇಣುಗೋಪಾಲ, ನಾರಾಯಣ ಪ್ರಸನ್ನ ಎನ್ನುವ ಈರ್ವರು ಮಕ್ಕಳನ್ನು ಪಡೆದಿದ್ದಾರೆ. +ಇವರ ಸುಪುತ್ರ ವೇಣುಗೋಪಲ ಎಳವೆಯಲ್ಲೇ ಚೆಂಡೆ-ಮದ್ದಳೆಯನ್ನು ಬಾರಿಸಿ ಬಾಲ ಪ್ರತಿಭೆಯನ್ನು ಮೆರೆಸಿದ್ದಾರೆ. +ಇವರಅದ್ವಿತಿಯವಾದ ಸಾಧನೆಗೆ ಪ್ರತಿಫಲವಾಗಿ ಕೋಳೂರು,ಮಂಗಳೂರು ಮೊದಲಾದೆಡೆಯಲ್ಲಿ ಸಂಮಾನಗಳು ಸಂದಿವೆ. +ಚೆಂಡೆ-ಮದ್ದಳೆಂತು ವಾದಕರಾಗಿ ಕಲಾಸೇವೆಯನ್ನು ಮಾಡಿರುವ ಶ್ರೀ ಸುಬ್ರಹ್ಮಣ್ಯಶಾಸ್ತಿಯವರು ಪ್ರಸ್ತುತ ಮೇಳದ ಕಲಾವಿದರಾಗಿ ತಿರುಗಾಟವನ್ನು ನಡೆಸುತ್ತಾ ಇದ್ದಾರೆ. +26/4/1996 ರಲ್ಲಿ ಸುಬ್ರಹ್ಮಣ್ಯ ಶಾಸ್ತ್ರಿ ಮತ್ತು ರಮಾದೇವಿ ಅವರ ಸುಪುತ್ರರಾಗಿ ಬಣಕಲ್ಲು ಎಂಬಲ್ಲಿ ಶ್ರೀಯುತರು ಜನಿಸಿದರು. +7ನೇ ತರಗತಿಯ ತನಕ ವಿದ್ಯಾಭ್ಯಾಸವನ್ನು ಪಡೆದಿರುವ ಇವರು 14ನೇ ವಯಸ್ಸಿನಿಂದ ಯಕ್ಷಕಲಾ ಸೇವೆಯನ್ನು ಆರಂಭಿಸಿದರು. +ಹಿರಿತನದಲ್ಲಿ ಸಂಬಂಧಿಕರಾಗಿರುವ ಕೆ.ಗೋವಿಂದ ಭಟ್‌ ಅವರಿಂದ ನಾಟ್ಯಾಭ್ಯಾಸ ರಂಗದ ಅನುಭವವನ್ನು ಪಡೆದಿರುವ ಇವರು ನೆಡ್ಡೆ ನರಸಿಂಹ ಭಟ್ಟರಿಂದ ಚೆಂಡೆ-ಮದ್ದಳೆಯ ಅಭ್ಯಾಸವನ್ನು ಮಾಡಿರುವರು. +ಆರಂಭದಲ್ಲಿ ಬಾಲಗೋಪಾಲ,ವರುಣ ಮಾರುತ ಮೊದಲಾದ ಪಗಡೆ ವೇಷಗಳನ್ನು ಮಾಡಿರುವ ಇವರು ಬೆಳೆದಂತೆ ಹಿಮ್ಮೇಳನ ವಾದನದಲ್ಲಿ ಪ್ರೌಢಿಮೆಯನ್ನು ಸಾಧಿಸಿ ಕೀರ್ತಿವಂತರಾದರು. +ಧರ್ಮಸ್ಥಳ ಮೇಳ 18 ವರ್ಷ, ಪುತ್ತೂರುಮೇಳ 2 ವರ್ಷ, ಸುಂಕದಕಟ್ಟೆ ಮೇಳ-1 ವರ್ಷ ಹಾಗೂ ಕಟೀಲು ಮೇಳ 2 ವರ್ಷ ಹೀಗೆ ತಿರುಗಾಟವನ್ನು ನಡೆಸಿರುವರು. +ಹವ್ಯಾಸಿ ಕಲಾವಿದರಿಗೆ ಹಿಮ್ಮೇಳದ ತರಬೇತಿಯನ್ನು ನೀಡಿರುವ ಇವರು ಯಕ್ಷಗಾನದ ಪರಂಪರೆ ಶೈಲಿಂತು ಬಗ್ಗೆ ಕಾಳಜಿವುಳ್ಳವರಾಗಿದ್ದಾರೆ. +ಚೆಂಡೆ-ಮದ್ದಳೆ ಬಾರಿಸುವುದರ ಮುಖೇನ ಕಲಾಸೇವೆ ಮಾಡಿರುವ ಶ್ರೀ ಸುಕುಮಾರ್‌ ಬಲ್ಹಾಳರು ಪ್ರಸ್ತುತ ಕಟೀಲು ಮೇಳದ ಕಲಾವಿದರಾಗಿ ತಿರುಗಾಟವನ್ನು ನಡೆಸುತ್ತಾ ಇದ್ದಾರೆ. +1969ರಲ್ಲಿ ಗೋಪಾಲಕೃಷ್ಣ ಬಲ್ಲಾಳ್‌ ಮತ್ತು ಯಶೋದಮ್ಮ ದಂಪತಿಯ ಸುಪುತ್ರರಾಗಿ ಜನಿಸಿದರು. +ಹತ್ತನೆಯ ತರಗತಿಯ ತನಕ ವಿದ್ಯಾಭ್ಯಾಸವನ್ನು ಮಾಡಿರುವ ಇವರು ಸ್ವಂತಾಸಕ್ತಿಯಿಂದ ಯಕ್ಷಗಾನದ ರಂಗಪ್ರವೇಶ ಮಾಡಿದ್ದಾರೆ. +ದೊಡ್ಡಪ್ಪನಾದ ಚಿಪ್ಪಾರು ಕೃಷ್ಣಯ್ಯ ಬಲ್ಲಾಳರು ಇವರ ಸಾಧನೆಗೆ ಪ್ರೋತ್ಸಾಹವನ್ನು ನೀಡಿ ಬೆಳೆಸಿದ್ದಾರೆ. +ಇಷ್ಟಲ್ಲದೆ ನಾಲುತೋಡು ಮಾಧವ ಎಂಬವರಲ್ಲಿ ಕೂಡಾ ಸುಕುಮಾರ್‌ ಬಲ್ಲಾಳರು ಚೆಂಡೆ-ಮದ್ದಳೆಯ ಅಭ್ಯಾಸವನ್ನು ಮಾಡಿದ್ದಾರೆ. +ಸುಂಕದಕಟ್ಟೆ ಮೇಳ - 14 ವರ್ಷ, ಕುಂಟಾರುಮೇಳ - 2 ವರ್ಷ, ಕಟೀಲು ಮೇಳ - 8 ವರ್ಷಒಟ್ಟು 24 ವರ್ಷಗಳ ತಿರುಗಾಟವನ್ನು ಮಾಡಿರುವ ಇವರಿಗೆ ಹಿಮ್ಮೇಳ ವಾದಕರಾದ ಸಹೋದರ ಮರಿಮಯ್ಯ ಬಲ್ಲಾಳ್‌ ಅವರ ಉತ್ತೇಜನ ಕೂಡ ದೊರೆತಿದೆ. +ಶ್ರೀಮತಿ ಹೇಮಲತಾ ಎಂಬವರನ್ನು ವರಿಸಿರುವ ಸುಕುಮಾರ್‌ ಬಲ್ಲಾಳ್‌ ಯಕ್ಷಗಾನ ಮನೆತನದ -ಹಿನ್ನೆಲೆಯನ್ನು ಹೊಂದಿದವರಾಗಿದ್ದಾರೆ. +ರಾಜವೇಷದ ಮೂಲಕ ತನ್ನದೇ ಆದ ಸ್ವಂತಿಕೆಯನ್ನು ಮೆರೆಸಿರುವ ಶ್ರೀ ಸುಬ್ರಾಯ ಹೊಳ್ಳ ಕಾಸರಗೋಡು ಪ್ರಸ್ತುತ ಕಟೀಲು ಮೇಳದ ಕಲಾವಿದರಾಗಿ ತಿರುಗಾಟವನ್ನು ನಡೆಸುತ್ತಾ ಇದ್ದಾರೆ. +ಕೆ.ಎಸ್‌.ನಾರಾಯಣ ಹೊಳ್ಳ ಮತ್ತು ಪದ್ಮಾವತಿ ಅಮ್ಮ ದಂಪತಿಯ ಸುಪುತ್ರರಾಗಿ ಕಾಸರಗೋಡಿನಲ್ಲಿ 17/2/1965ರಲ್ಲಿ ಜನಿಸಿದರು. +9ನೇ ತರಗತಿಯ ವಿದ್ಯಾಭ್ಯಾಸವನ್ನು ಪಡೆದಿರುವ ಇವರು ಸ್ವಂತಾಸಕ್ತಿಯಿಂದ ಯಕ್ಷಗಾನದ ಕಲಾಸೇವೆಯನ್ನು ಮಾಡಿದರು. +ಕೂಡ್ಲು ಆನಂದ, ಕೂಡ್ಲು ನಾರಾಯಣ ಬಲ್ಯಾಯ ಇವರಲ್ಲಿ ನಾಟ್ಯಾಭ್ಯಾಸವನ್ನು ಮಾಡಿರುವ ಸುಬ್ರಾಯ ಹೊಳ್ಳರು ಮಾಂಬಾಡಿ ಸುಬ್ರಹ್ಮಣ್ಯ ಭಟ್ಟರಲ್ಲಿ ಭಾಗವತಿಕೆಯ ಅಭ್ಯಾಸವನ್ನು ಮಾಡಿದರು. +15ನೇ ವರ್ಷದಿಂದಲೇ ಕಲಾಸೇವೆಯನ್ನು ಆರಂಭಿಸಿದ ಇವರು ಪುಂಡು ವೇಷ, ಸ್ತ್ರೀ ವೇಷ, ರಾಜವೇಷ,ಹೆಣ್ಣು ಬಣ್ಣ ಮತ್ತು ಬಣ್ಣದ ವೇಷಗಳು ಸೇರಿದಂತೆ ಹೆಚ್ಚಿನ ಎಲ್ಲಾ ವೇಷಗಳನ್ನು ಮಾಡಿದ ಅನುಭವವನ್ನು ಹೊಂದಿದ್ದಾರೆ. +ಕಟೀಲು ಮೇಳ-1 ವರ್ಷ, ಪುತ್ತೂರು ಮೇಳ-1 ವರ್ಷ, ಕದ್ರಿ ಮೇಳ-2 ವರ್ಷ, ಕರ್ನಾಟಕ ಮೇಳ-1 ವರ್ಷ, ಮಧೂರು ಮೇಳ-1 ವರ್ಷ, ಬಪ್ಪನಾಡುಮೇಳ-3 ವರ್ಷ, ಮಧೂರು ಮೇಳ-1 ವರ್ಷ,ಕಟೀಲು ಮೇಳ-12 ವರ್ಷ, ಹೊಸನಗರ ಮೇಳ- 1ವರ್ಷ, ಕಟೀಲು ಮೇಳ-3 ವರ್ಷ ಹೀಗೆ ಮೇಳ ತಿರುಗಾಟದ ಹಿನ್ನೆಲೆಯನ್ನು ಹೊಂದಿದ್ದಾರೆ. +ರಕ್ತ ಬೀಜ, ಇಂದ್ರಜಿತು, ಹಿರಣ್ಯಾಕ್ಸ, ಮಧು-ಕೈಟಭ, ಕೌಶಿಕ, ಅರ್ಜುನ, ತಾಮ್ರಧ್ವಜ, ಅತಿಕಾಯ,ಶೂರ್ಪನಖಾ, ಮಹಿಷಾಸುರ, ಶ್ರೀದೇವಿ,ಯಶೋಮತಿ, ಸತ್ಯಭಾಮೆ, ಮುಂತಾದ ಪಾತ್ರಗಳನ್ನು ನಿರ್ವಹಿಸಿದ್ದಾರೆ. +ಕಾರ್ಕಳ, ಮಂಗಳೂರು, ಕೋಳ್ಯೂರು ಮೊದಲಾದೆಡೆ ನಾಟ್ಯ ತರಬೇತಿಯನ್ನು ನೀಡಿರುವ ಇವರು ಶ್ರೀಮತಿ ಶಾರದಾ ಎಂಬವರನ್ನು ವರಿಸಿ,ಹರಿನಾರಾಯಣ (6ನೇ ತರಗತಿ), ಕುಮಾರಿ ಪದ್ಮಶ್ರೀ(4ನೇ ತರಗತಿ) ಎಂಬ ಇಬ್ಬರು ಮಕ್ಕಳನ್ನು ಪಡಿದಿದ್ದಾರೆ. + ಕಲಾವಿದರಾಗಿಯು ರಘುರಾಮ ಹೊಳ್ಳ,ರಾಮಕೃಷ್ಣಮಯ್ಯ ರಾಧಾಕೃಷ್ಣ ನಾವಡ, ಜಿ.ಕೆ.ನಾವಡ ಇವರ ಸಂಬಂಧಿಕರಾಗಿರುವ ಸುಬ್ರಾಯ ಹೊಳ್ಳರ ಸಾಧನೆಗೆ ಪ್ರತಿಫಲವಾಗಿ ಕಾಸರಗೋಡು,ಕೊಯಮುತ್ತೂರು, ಬಹರೈನ್‌ ಮುಂತಾದೆಡೆಯಲ್ಲಿ ಸಂಮಾನಗಳು ಸಂದಿವೆ. +“ಕರ್ನಾಟಕ ಯಕ್ಷಸಿರಿ”ಎಂಬ ಬಿರುದು ಕೂಡ ಇವರಿಗೆ ಲಭಿಸಿದೆ. +ಬಣ್ಣದ ವೇಷದ ಮುಖೇನ ಜನಮನ್ನಣೆಯನ್ನು ಪಡೆದಿರುವ ಶ್ರೀ ಸುರೇಶ ಕುಪ್ಪೆಪದವು ಇವರು ಕಟೀಲು ಮೇಳದ ಹಿರಿಯ ಕಲಾವಿದರಾಗಿ ತಿರುಗಾಟವನ್ನು ನಡೆಸುತ್ತಾ ಇದ್ದಾರೆ. +ಚೆನ್ನಪ್ಪ ಪೂಜಾರಿ ಹಾಗೂ ಶಾರದಾ ದಂಪತಿಯ ಸುಪುತ್ರರಾಗಿ ಕೆಳಿಂಜಾರು ಗ್ರಾಮದಲ್ಲಿ 1963 ರ೦ದು ಜನಿಸಿದರು. +ಪ್ರಾಥಮಿಕ ಹಂತದ ವಿದ್ಯಾಭ್ಯಾಸವನ್ನು ಪಡೆದಿರುವ ಇವರು 24ನೇ ವಯಸ್ಸಿನಿಂದ ಯಕ್ಷಗಾನದಲ್ಲಿ ಪ್ರಭುತ್ವವನ್ನು ಸಾಧಿಸುತ್ತಾ ಬಂದರು. +ಯಕ್ಷಗಾನದ ಪರಿಸರದಲ್ಲಿ ಆಟ-ಕೂಟಗಳನ್ನು ನೋಡಿ ಪ್ರಭಾವಿತರಾಗಿರುವ ಸುರೇಶರು ಬಜಪೆ ದೇರಣ್ಣ, ಮಂಜುನಾಥ ಭಟ್‌, ಕರ್ಗಲ್ಲು ವಿಶ್ವೇಶ್ವರ ಜಟ್‌ ಇವರಿಂದ ನಾಟ್ಯ ಮತ್ತು ರಂಗಮಾಹಿತಿಯ ಬಗ್ಗೆ ಅನುಭವವನ್ನು ಪಡೆದಿರುವರು. +ಆರಂಭದಲ್ಲಿ ಹವ್ಯಾಸಿ ಕಲಾವಿದರಾಗಿ ಪಾತ್ರನಿರ್ವಹಣೆಯನ್ನು ಮಾಡಿ ಅನುಭವವನ್ನು ಸಂಪಾದಿಸಿದರು. +ಆಮೇಲೆ ಕಟೇಲು ಮೇಳವನ್ನು ಸೇರಿದರು. +ಈಗಾಗಲೇ 20 ವರ್ಷಗಳ ತಿರುಗಾಟವನ್ನು ಪೊರೈಸಿದ್ದಾರೆ. +ಕಟೀಲು ಮೇಳದಲ್ಲಿ ಶ್ರೀದೇವಿ ಮಹಾತ್ಮೆಯ ಮಹಿಷಾಸುರನಾಗಿ ಗುರುತಿಸಲ್ಪಟ್ಟಿರುವ ಇವರು ಶುಂಭ, ಶೂರಪದ್ಮ, ರಾವಣ, ಸುಯೋಧನ,ಅರ್ಜುನ, ದೇವೇಂದ್ರ, ಮುಂತಾದ ಪಾತ್ರಗಳನ್ನು ನಿರ್ವಹಿಸುತ್ತಾ ಬಂದಿದ್ದಾರೆ. +ಮಳೆಗಾಲದ ಕೃಷಿಗಾರಿಕೆಯಲ್ಲಿ ಶ್ರಮಿಸುವ ಇವರು ಶ್ರೀಮತಿ ಗೀತಾ ಎಂಬವರನ್ನು ವರಿಸಿ ಶ್ರಾವ್ಯ ಮತ್ತು ರಾಕೇಶ್‌ ಎಂಬ ಇಬ್ಬರು ಮಕ್ಕಳನ್ನು ಪಡೆದಿರುವರು. +ಬಣ್ಣದ ವೇಷದಲ್ಲೇ ಪ್ರಭುತ್ವವನ್ನು ಸಾಧಿಸಿ ಹಳೆಯ ಶೈಲಿಯ ಮಾದರಿಯನ್ನು ಉಳಿಸಿಕೊಂಡು ಪಾತ್ರ ನಿರ್ವಹಣೆ ಮಾಡುವ ಸುಬ್ರಾಯ ಪಾಟಾಳಿ ಸಂಪಾಜೆಯವರು ಕಟೀಲು ಮೇಳದ ಕಲಾವಿದರಾಗಿ ತಿರುಗಾಟವನ್ನು ನಡೆಸಿ ಹಿರಿತನದ ಮನ್ನಣೆಯನ್ನು ಪಡೆದಿದ್ದಾರೆ. +ಯಕ್ಷಗಾನದಲ್ಲಿ ಅಗ್ರ ಪಂಕ್ತಿಯ ಕಲಾವಿದರಾಗಿ ಗೌರವ-ಪುರಸ್ಕಾರಗಳಿಂದ ಮನ್ನಣೆಗೊಳಗಾಗಿ ಕೀರ್ತಿಶೇಷರಾಗಿರುವ ಬಣ್ಣದ ಮಾಲಿಂಗ ಮತ್ತು ದೇವಕಿ ದಂಪತಿಯ ಸುಪುತ್ರರಾಗಿ 1963ನೇ ವರ್ಷ ಸುಳ್ಯದ ಉಬದಡ್ಕದಲ್ಲಿ ಜನಿಸಿದರು. +10ನೇ ತರಗತಿಯ ತನಕ ವಿದ್ಯಾಭ್ಯಾಸವನ್ನು ಪಡೆದಿರುತ್ತಾರೆ. +ತಂದೆಯವರ ಪ್ರೇರಣೆಯ ಮೇರೆಗೆ ಅವರಿಂದಲೇ ನಾಟ್ಯಾಭ್ಯಾಸವನ್ನು ಮಾಡಿದರು. +ಆಮೇಲೆ ಸೂರಿಕುಮೇರು ಗೋವಿಂದ ಭಟ್ಟರಿಂದ ಹೆಚ್ಚಿನ ಅನುಭವವನ್ನು ಪಡೆದರು. +18ನೇ ವರ್ಷದಿಂದಲೇ ಕಲಾಸೇವೆಯನ್ನು ಆರಂಬಿಸಿಕೊಂಡ ಇವರು ಕಟೀಲು ಮೇಳವೊಂದರಲ್ಲೇ 30 ವರ್ಷಗಳ ತಿರುಗಾಟವನ್ನು ಪೂರೈಸಿದ್ದಾರೆ. +ಶುಂಭ, ಮಹಿಷಾಸುರ, ಶೂರಪದ್ಕ,ಶೂರ್ಪನಖಾ, ಭೀಮ, ಯಮ ಇತ್ಯಾದಿ ಬಣ್ಣದ ವೇಷಗಳನ್ನು ನಿರ್ವಹಿಸುತ್ತಿರುವ ಇವರು ಅನಿವಾರ್ಯ ಕಾರಣಗಳಲ್ಲಿ ರಾಜ ವೇಷದ ಪಾತ್ರಗಳನ್ನು ಕೂಡ ನಿರ್ವಹಿಸುತ್ತಾರೆ. +ಇವರ ಮನೆತನವು ಯಕ್ಷಗಾನದ ಮನೆತನವಾಗಿದ್ದು ಸಹೋದರರಾದ ರಾಮ ಮತ್ತು ಕೃಷ್ಣ ಇವರಿಬ್ಬರು ಯಕ್ಷಗಾನದ ಕ್ಷೇತ್ರದಲ್ಲಿ ಕಲಾಸೇವೆಯನ್ನು ಮಾಡಿದ್ದಾರೆ. +ಕಿರಿಯ ಕಲಾವಿದರಿಗೆ ನಾಟ್ಕಾಭ್ಯಾಸ ಮತ್ತು ರಂಗದ ಬಗ್ಗೆ ಮಾಹಿತಿ ನೀಡಿರುವ ಇವರು ಶ್ರೀಮತಿ ಸುಶೀಲ ಎಂಬವರನ್ನು ವರಿಸಿ ಕಲಾವತಿ, ಸೌಮ್ಯ,ಪ್ರಮೋದಿನಿ, ಅವಿನಾಶ್‌ ಎಂಬ ಸುಪುತ್ರರನ್ನು ಪಡೆದಿರುವರು. +ಸ್ರ್ತೀ ಪಾತ್ರಗಳ ನಿರ್ವಣೆಯಲ್ಲಿ ನೂತನ ಶೈಲಿಯನ್ನು ಅಳವಡಿಸಿ ಆಕರ್ಷಣೆಗೆ ಒಳಗಾದ ಸುಬ್ರಹ್ಮಣ್ಯ ವಿಷ್ಣು ಹೆಗಡೆ ಯಲಗುಪ್ಪರವರು ಹೊಸನಗರ ಮೇಳದ ಸ್ತ್ರೀ ಪಾತ್ರಧಾರಿಯಾಗಿ ತಿರುಗಾಟವನ್ನು ನಡೆಸುತ್ತಿದ್ದಾರೆ. +ವಿಷ್ಣು ಹೆಗಡೆ ಮತ್ತು ಇಂದಿರಾ ದಂಪತಿಯ ಸುಪುತ್ರರಾಗಿ ಯಲಗುಪ್ಪ ಎಂಬಲ್ಲಿ 08-06-1973ರಂದು ಜನಿಸಿದರು. +ಕಲಾವಿದರಾಗಿರುವಾಗಲೇ ಸ್ವಂತ ಸಾಧನೆಯ ಮುಖೇನ ಕನ್ನಡದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿರುವ ಇವರು ಯಕ್ಷಗಾನದ ಆಕರ್ಷಣೆಗೆ ಬಾಲ್ಯದಲ್ಲೇ ಒಳಗಾಗಿದ್ದರು. +ಜೊತೆಗೆ ಸೋದರ ಮಾವ ರಾಮ ಹೆಗಡೆ ಚಿಟ್ಟಾಣಿ ಇವರ ಪ್ರೋತ್ಸಾಹ ಕೂಡಾ ದೊರೆತಿತ್ತು. +ಹೆರೆಂಜಾಲು ವೆಂಕಟರಮಣ ಗಾಣಿಗರಲ್ಲಿ ನಾಟ್ಯಾಭ್ಯಾಸವನ್ನು ಮಾಡಿರುವ ಇವರು ಮುಂದೆ ಹೆಚ್ಚಿನ ನಾಟ್ಯಾಭ್ಯಾಸ ಹಾಗೂ ಅನುಭವಕ್ಕಾಗಿ ಹೆರೆಂಜಾಲು ಗೋಪಾಲ ಗಾಣಿಗರಲ್ಲಿ ಅಧ್ಯಯನ ಮಾಡಿ ನಾಟ್ಯದ ಜೊತೆ ಜೊತೆಗೆ ಭಾಗವತಿಕೆಯ ಅಭ್ಯಾಸವನ್ನು ಮಾಡಿದ್ದರು. +ಗುಂಡಿ ಬಾಳ ಮೇಳ-2 ವರ್ಷ, ಮಂದಾರ್ಶಿಮೇಳ-2 ವರ್ಷ, ಕಮಲಶಿಲೆ ಮೇಳ-1 ವರ್ಷ,ಮಾರಣಕಟ್ಟೆ ಮೇಳ-2 ವರ್ಷ, ಕೆರೆಮನೆ ಮೇಳ-3 ವರ್ಷ, ಸಾಲಿಗ್ರಾಮ ಮೇಳ-4 ವರ್ಷ, ಪೆರ್ಡೂರು ಮೇಳ-3 ವರ್ಷ, ಹೊಸನಗರ ಮೇಳ-2 ವರ್ಷ ಹೀಗೆ ತೆಂಕು ಬಡಗು ತಿಟ್ಟಿನ ಮೇಳಗಳಲ್ಲಿ ತಿರುಗಾಟವನ್ನು ನಡೆಸಿ ಜನಮನ್ನಣೆಗೆ ಪಾತ್ರರಾಗಿದ್ದಾರೆ. +ಸ್ತ್ರೀ ವೇಷ ಮತ್ತು ಸಾತ್ವಿಕ ಪುಂಡುವೇಷಗಳನ್ನು ಮಾಡುವ ಇವರು ಸುಭದ್ರೆ, ಕೈಕೆ, ದಾಕ್ಷಾಯಿಣಿ,ಮೋಹಿನಿ, ಪ್ರಭಾವತಿ, ಪದ್ಮಾವತಿ, ಕೃಷ್ಣ ರಾಮ,ವಿಷ್ಣು ಮುಂತಾದ ಪಾತ್ರಗಳನ್ನು ಮಾಡಿರುವರು. +ಹೊಸ ಪ್ರಸಂಗಗಳ ನೂತನ ಪಾತ್ರಗಳ ನಿರ್ವಹಣೆಯಲ್ಲಿ ಯಶಸ್ಸನ್ನು ಪಡೆದ ಸಾಧನೆ ಇವರದ್ದಾಗಿದೆ. +ಕಲಾಸಾಧನೆಗೆ ಪ್ರತಿಫಲವಾಗಿ ಬೆಂಗಳೂರು,ಮುಂಬಯಿ, ಹೈದರಾಬಾದ್‌ ಮುಂತಾದ ಕಡೆಗಳಲ್ಲಿ ಸಂಮಾನ ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ. +ಕೃಷಿಕರಾಗಿರುವ ಇವರು ಶ್ರೀಮತಿ ಲಕ್ಷ್ಮೀ ಎಂಬವರನ್ನು ವರಿಸಿ ವಸುಧಾ ಎಂಬ ಮಗಳನ್ನು ಪಡೆದಿದ್ದಾರೆ. +ಸ್ವಂತ ಆಸಕ್ತಿಯಿಂದಲೇ ಯಕ್ಷಗಾನ ಕ್ಷೇತ್ರಕ್ಕೆ ಬಂದು ಭಾಗವತಿಕೆಯ ಕಂಠಸಿರಿಯಿಂದ ಜನ ಮೆಚ್ಚುಗೆ ಗಳಿಸಿದ ಕಣಿಯೂರು ಸೂರ್ಯನಾರಾಯಣ ಭಟ್‌ಇವರು ಸಸಿಹಿತ್ಸು ಭಗವತಿ ಮೇಳದ ಮುಖ್ಯ ಭಾಗವತರಾಗಿದ್ದಾರೆ. +ಕೃಷ್ಣ ಶಾಸ್ತ್ರಿ ಮತ್ತು ಲಲಿತಮ್ಮ ದಂಪತಿಗೆ ಕಣಿಯೂರಿನಲ್ಲಿ 1-8-1966ರಂದು ಸುಪುತ್ರನಾಗಿ ಜನಿಸಿದ ಇವರು 10ನೇ ತರಗತಿಯ ತನಕ ಶಿಕ್ಷಣವನ್ನು ಪಡೆದಿದ್ದಾರೆ. +17 ವರ್ಷದಲ್ಲಿ ಕೋಡ್ಲ ಗಣಪತಿ ಭಟ್‌ ಅವರಿಂದ ಬಾಗವತಿಕೆಯ ಅಭ್ಯಾಸವನ್ನು ಮಾಡಿ, ನೆಡ್ಡೆ ನರಸಿಂಹಭಟ್‌ ಇವರಿಂದ ಭಾಗವತಿಕೆಗೆ ಪೂರಕವಾದ ಹೆಚ್ಚಿನ ಅನುಭವವನ್ನು ಪಡೆದರು. +ಕುಡಾಣ ಗೋಪಾಲಕೃಷ್ಣ ಭಟ್‌, ಪೆರುವಾಯಕೃಷ್ಣ ಭಟ್‌ ಹಾಗೂ ದೇವಕಾನ ಕೃಷ್ಣ ಆರ್‌.ಇವರುಗಳಿಂದ ಚೆಂಡೆ ಮದ್ದಳೆ ಕಲಿಕೆ ಅಭ್ಯಾಸ ಮಾಡಿರುವ ಸೂರ್ಯನಾರಾಯಣ ಭಟ್ಟರು ಸಮರ್ಥಭಾಗವತರಾಗಿ ಬೆಳೆದು ನಿಂತರು. +ಪುತ್ತೂರು ಮೇಳ - 5 ವರ್ಷ, ಕಾಂತಾವರಮೇಳ -1 ವರ್ಷ, ಬಪ್ಪನಾಡು ಮೇಳ -1 ವರ್ಷಕಾಟಿಪಳ್ಳ ಮೇಳ -1 ವರ್ಷ, ಸುಂಕದಕಟ್ಟೆ ಮೇಳ-5 ವರ್ಷ, ಮಧೂರು ಮೇಳದಲ್ಲಿ -2 ವರ್ಷ ಹಾಗೂ ಪ್ರಸಕ್ತ ವರ್ಷ ಸೇರಿದಂತೆ 5 ವರ್ಷಗಳ ಕಾಲ ಮೇಳ ತಿರುಗಾಟವನ್ನು ಮಾಡಿರುವರು. +ಬಾಲ್ಯದಿಂದಲೇ ವೇಷಗಾರಿಕೆಯಲ್ಲಿ ಆಸಕ್ತಿಯನ್ನು ಹೊಂದಿರುವ ಸೂರ್ಯ ನಾರಾಯಣ ಭಟ್ಟರು ಸ್ತೀವೇಷಗಳಾದ ಸುಭದ್ರೆ ರತಿ ಇತ್ಯಾದಿ ಪಾತ್ರಗಳನ್ನು ನಿರ್ವಹಿಸಿರುತ್ತಾರೆ. +ಶ್ರೀಮತಿ ಆಶಾಪಾರ್ವತಿಯವರನ್ನು ವಿವಾಹವಾಗಿದ್ದುಕೊಂಡು ಶ್ರಿಲತಾ ಹಾಗೂ ಸುಶ್ಮಿತಾ ಎಂಬ ಎರಡು ಮಕ್ಕಳನ್ನು ಪಡೆದು ಕೃತಾರ್ಥರಾಗಿದ್ದಾರೆ. +ಇವರ ಕಲಾ ಸಾಧನೆಗೆ ಪ್ರತಿಫಲವಾಗಿ ಮುಂಬಯಿ, ಹಿಮಾಚಲ ಪ್ರದೇಶ, ಸಸಿಹಿತ್ಸು ಮೇಳ,ಮಿತ್ತಬೈಲ್‌ ಮೂಡಬಿದಿರೆ ಮೊದಲಾದ ಕಡೆಗಳಿಂದ ಸಂಮಾನ ಪುರಸ್ಕಾರಗಳು ಸಂದಿವೆ. +ಬಣ್ಣದ ವೇಷವನ್ನು ಉತ್ತಮವಾದ ಬಣ್ಣಗಾರಿಕೆ ನಾಟ್ಯ ಮತ್ತು ಮಾತಿನ ಶೈಲಿಯಿಂದ ಅಭಿವ್ಯಕ್ತಗೊಳಿಸಿ ಮನ್ನಣೆಗೆ ಪಾತ್ರರಾಗಿರುವ ಶ್ರೀ ಹರಿ ನಾರಾಯಣಭಟ್‌ಎಡನೀರು ಇವರು ಕಟೀಲು ಮೇಳದ ಕಲಾವಿದರಾಗಿ ತಿರುಗಾಟ ನಡೆಸುತ್ತಾ ಇದ್ದಾರೆ. +18-8-1974ರಂದು, ಡಿ.ಕೃಷ್ಣ ಭಟ್‌ ಮತ್ತು ಡಿ.ಇಂದಿರಾ ದಂಪತಿಯ ಸುಪುತ್ರರಾಗಿ ಎಡರೀರಿನಲ್ಲಿ ಜನಿಸಿದರು. +ಪದವಿಪೂರ್ವ ಹಂತದ ವಿದ್ಯಾಭ್ಯಾಸವನ್ನು ಪಡೆದಿರುವ ಇವರು ಯಕ್ಷಗಾನದ ಪ್ರಭಾವಕ್ಕೊಳಗಾಗಿ ಕಲಾಸಾಧನೆಯನ್ನು ಮಾಡಿದ್ದಾರೆ. +ಶ್ರೀ ಕ್ಷೇತ್ರ ಧರ್ಮಸ್ಥಳದ ಲಲಿತ ಕಲಾಕೇಂದ್ರದಲ್ಲಿ, ಶ್ರೀ ಕೋಳ್ಯೂರು ರಾಮಚಂದ್ರರಾವ್‌ ಅವರಿಂದ ನಾಟ್ಯಾಭ್ಯಾಸವನ್ನು ಮಾಡಿದರು. +ಇವರು ಹರಿನಾರಾಯಣ ಬೈಪಡಿತ್ತಾಯರಿಂದ ಹಿಮ್ಮೇಳದ ಅನುಭವವನ್ನು ಪಡೆದಿರುವರು. +ಇಷ್ಟಲ್ಲದೆ ಕೆ.ಗೋವಿಂದ ಭಟ್ಟರಿಂದ ರಂಗದಲ್ಲಿ ಪಾತ್ರವನ್ನು ಮೆರೆಸುವುದಕ್ಕಾಗಿ ಪೂರಕವಾದ ಮಾಹಿತಿಯನ್ನು ಪಡೆದಿರುವರು. +18ನೇ ವಯಸ್ಸಿನಿಂದಲ್ಲೇ ಕಲಾಸೇವೆಯನ್ನು ಅರಂಭಿಸಿದ ಇವರು ಶ್ರೀ ಕಟೀಲು ಮೇಳವೂಂದರಲ್ಲೇ 18ವರ್ಷಗಳ ತಿರುಗಾಟವನ್ನು ಮಾಡಿದ್ದಾರೆ. +ರಾವಣ,ಮೈರಾವಣ, ಮಹಿಷಾಸುರ, ಭೀಮ, ನರಕಾಸುರ,ದೇವೇಂದ್ರ, ಅರ್ಜುನ, ತಾಟಕಿ,ಶೂರ್ಪನಖಿ ಮೊದಲಾದ ಬಣ್ಣ ಹಾಗೂ ಹೆಣ್ಣು ಬಣ್ಣದ ಪಾತ್ರಗಳನ್ನು ನಿರ್ವಹಿಸುತ್ತಿದ್ದಾರೆ. +ರಾಜವೇಷವನ್ನು ಕೂಡಾ ಮಾಡುವ ಇವರು ವೀರವರ್ಮ, ಸಿಂಹ ಮುಂತಾದ ಪಾತ್ರಗಳನ್ನು ಮಾಡುತ್ತಾರೆ. +ಪೂರ್ವರಂಗದ ಬಗ್ಗೆ ಜ್ಞಾನವುಳ್ಳ ಇವರು ಭಾಗವತಿಕೆಯ ಅಭ್ಯಾಸ ಮಾಡಿದ್ದಾರೆ. +ಪೂರ್ವರಂಗದ ವೇಷಗಳನ್ನು ಕುಣಿಸಲು ಸಂಗೀತ ಹಾಡಿರುವ ಅನುಭವ ಇವರಿಗಿದೆ. +ಚೆಂಡೆ-ಮದ್ಧಳೆಯ ನುಡಿತ-ಬಡಿತಗಳಲ್ಲಿ ಪ್ರೌಢಿಮೆಯನ್ನು ಸಾಧಿಸಿರುವ ಶ್ರೀ ಹರಿನಾರಾಯಣ ಬೈಪಾಡಿತ್ತಾಯರು ಗುರುಗಳಾಗಿಯೂ ಮನ್ನಣೆಯನ್ನು ಪಡೆದಿರುವ ಮೇಳದ ನಿವೃತ್ತ ಕಲಾವಿದರಾಗಿದ್ದಾರೆ. +ದಿ 13-11-1947ರಲ್ಲಿ ಕೆ.ರಾಮಕೃಷ್ಣ ಬೈಪಾಡಿತ್ತಾಯ ಮತ್ತು ಪದ್ಮಾವತಿ ದಂಪತಿಯ ಸುಪುತ್ರರಾಗಿ ಪುತ್ತೂರು ತಾಲೂಕಿನ ಕಡಬದಲ್ಲಿ ಜನಿಸಿದರು. +ಬಾಲ್ಯದಿಂದಲೇ ಯಕ್ಷಗಾನ ಕಲೆಯತ್ತ ಅಕರ್ಷಿತರಾದ ಇವರು ಹಿಮ್ಮೇಳದ ಅಧ್ಯಾಯನವನ್ನು ಮಾಡಿ ಕಲಾಸಾಧಕರಾಗಿ ಬೆಳೆದು ಬಂದರು. +ಕೀರ್ತಿಶೇಷ ಕಲಾವಿದರಾದ ನೆಡ್ಡೆ ನರಸಿಂಹ ಭಟ್‌ಮತ್ತು ಮೃದಂಗ ವಿದ್ವಾನ್‌ ಕಾಂಚನ ಕೆ.ವಿಮೂರ್ತಿಅವರಿಂದ ಕ್ರಮವಾಗಿ ಚೆಂಡೆ-ಮದ್ದಳೆ ಮತ್ತು ಮೃದಂಗಗಳ ನುಡಿತ-ಬಡಿತಗಳ ಅಭ್ಯಾಸವನ್ನು ಮಾಡಿದರು. +ಧರ್ಮಸ್ಥಳ ಮೇಳ 28ವರ್ಷ, ಕುಂಡಾವು ಮೇಳ3ವರ್ಷ, ಕೊಲ್ಲೂರು ಮೇಳ 1ವರ್ಷ, ಕೂಡ್ಲು ಮೇಳ 2ವರ್ಷ, ಕುಂಬೈಮೇಳ 3ವರ್ಷ, ಅರುವಮೇಳ 1ವರ್ಷ, ಬಪ್ಪನಾಡು ಮೇಳ 1ವರ್ಷ, ತಲಕಳ ಮೇಳ 1ವರ್ಷ ಹೀಗೆ ಮೇಳ ತಿರುಗಾಟದ ಹಿನ್ನೆಲೆಯನ್ನು ಹೊಂದಿದ್ದಾರೆ. +ಹಿಮ್ಮೇಳದ ಗುರುವಾಗಿ ಮಾರ್ಗದರ್ಶನವನ್ನು ಮಡಿರುವ ಇವರು ಧರ್ಮಸ್ಥಳದ ಲಲಿತಕಲಾಕೇಂದ್ರ,ಬೆಳಾಲು, ಕಾರ್ಕಳ, ಚೇಳಾರು ಪದವು ಇತ್ಯಾದಿ ಕಡೆಗಳಲ್ಲಿ ತರಬೇತಿಯ ತರಗತಿಗಳನ್ನು ನಡೆಸಿ ಹಲವು ಮಂದಿ ಶಿಷ್ಯರನ್ನು ಹೊಂದಿದ್ದಾರೆ. +ಸಹದರ್ಮಿಣಿಯಾಗಿರುವ ಲೀಲಾವತಿ ಬೈಪಾಡಿತ್ತಾಯರಿಗೆ ಮಾರ್ಗದರ್ಶನವನ್ನು ಮಾಡಿ ಅವರನ್ನು ಅಗ್ರಪಂಕ್ತಿಯ ಭಾಗವತರೆನ್ನುವ ಕೀರ್ತಿಗೆ ಪಾತ್ರರಾಗಿಸಿದ್ದಾರೆ. +ಇಬ್ಬರು ಗಂಡು ಮಕ್ಕಳಾದ ಗುರುಪ್ರಸಾದ್‌ ಬೈಪಾಡಿತ್ತಾಯ ಮತ್ತು ಅವಿನಾಶ್‌ಬೈಪಾಡಿತ್ತಾಯ . +ಇವರಲ್ಲಿ ಅವಿನಾಶ್‌ ಬೈಪಾಡಿತ್ತಾಯ ಚೆಂಡೆ-ಮದ್ದಳೆಯ ವಾದಕರಾಗಿ ಹವ್ಯಾಸ ಬೆಳೆಸಿಕೊಂಡಿದ್ದಾರೆ. +ಇವರ ಕಲಾಸಾಧನೆಗೆ ಪ್ರತಿಫಲವಾಗಿ ಧರ್ಮಸ್ಥಳ, ಬೆಳಾಲು, ಕಾಟಿಪಳ್ಳ, ಬಾಳ ಮೊದಲಾದ ಕಡೆಗಳಲ್ಲಿ ಗೌರವದ ಸಂಮಾನಗಳಾಗಿವೆ. +ಬಡಗುತಿಟ್ಟಿನ ಹಾಸ್ಯ ಕಲಾವಿದರಾಗಿ ಗುರುತಿಸಿಕೊಂಡ ಶಿರೂರು ಅಣ್ಣಪ್ಪ ಕುಲಾಲರು ಸಂಪನ್ಮ ಪ್ರತಿಭೆಯ ಹಿರಿಯ ಕಲಾವಿದರು. +ಬಚ್ಚ ಕುಲಾಲ-ಕೊರತಿ ಕುಲಾಲ ದಂಪತಿಯ ಸುಪುತ್ರರಾದ ಅಣ್ಣಪ್ಪನವರು ಮಂದಾರ್ತಿಯಲ್ಲಿ 12-05-1959ರಲ್ಲಿ ಜನಿಸಿದರು. +ಬಡತನದ ಬೇಗುದಿಯಲ್ಲಿ ಉದರಯಜ್ಞದ ಹವಿಸ್ಸಿಗಾಗಿ ಯಕ್ಷಗಾನ ಕಲೆಯನ್ನೇ ವೃತ್ತಿಯಾಗಿಸಿಕೊಂಡ ಅಣ್ಣಪ್ಪನವರಿಗೆ ಒಂದರ್ಥದಲ್ಲಿ ಬಡತನವೇ ಬಡಗಿನ ವೃತ್ತಿರಂಗ ಭೂಮಿಯ ಕಲಾಸೇವೆಗೆ ಪ್ರೇರಣೆಯೆನ್ನಬಹು-ದಾಗಿದೆ. +7ನೇ ತರಗತಿಗೆ ಅಕ್ಬ್ಷರಾಭ್ಯಾಸವನ್ನು ಮೊಟಕುಗೊಳಿಸಿ, 14ನೇ ವಯಸ್ಸಿನಲ್ಲಿ ಯಕ್ಷಗಾನ ರಂಗವನ್ನು ಪ್ರವೇಶಿಸಿದ ಇವರು ಖ್ಯಾತ ಕಲಾವಿದರಾರದ ಕುಂಜಾಲು ರಾಮಕೃಷ್ಣ,ಕಿನ್ನಿಗೋಳಿ ಮುಖ್ಯಪ್ರಾಣ ಅವರ ಶಿಷ್ಯ ವೃತ್ತಿಯಲ್ಲಿ ವೃತ್ತಿ ಬದುಕಿಗೆ ಬೇಕಾದ ಸಶಕ್ತ ಕಲಾವಿದ್ಯೆಯನ್ನು ಸಂಪಾದಿಸಿದರು. +ಎಲ್ಲಾ ಬಗೆಯ ವೇಷಗಳನ್ನು ನಿರ್ವಹಿಸುವ ಕೌಶಲವನ್ನು ಹೊಂದಿದ ಕಲಾವಿದ ಅಣ್ಣಪ್ಪನವರು, ನಾರದ, ಅಕ್ರೂರ, ಮೇದೋಹೋತ,ವಿದುರ. . . ಮೊದಲಾದ ಭೂಮಿಕೆಗಳನ್ನು ಸಮರ್ಪಕವಾಗಿ ಪೋಷಿಸುವವರು. +ಮಂದಾರ್ತಿ, ಕಮಲಶಿಲೆ, ಸಾಲಿಗ್ರಾಮ,ಪೆರ್ಡೂರು, ಅಮೃತೇಶ್ವರಿ ಮೇಳಗಳಲ್ಲಿ ತಿರುಗಾಟ ನಡೆಸಿದ ಇವರು ಪ್ರಸ್ತುತ ಮಂದಾರ್ತಿ ಮೇಳದ ಹಾಸ್ಯಗಾರರಾಗಿ 35ನೇ ವರ್ಷದ ಕಲಾಕೃಷಿಯಲ್ಲಿದ್ದಾರೆ. +ಗುಲಾಬಿ ಎಂಬುವರೇ ಇವರ ಸಹಧರ್ಮಿಣಿ. +ಸುಖಾನಂದ, ನಿತ್ಯಾನಂದ, ಸದಾನಂದ,ಪ್ರೇಮಾನಂದ, ದಯಾನಂದ ಎಂಬ ಐವರು ಪುತ್ರರ ಸರ್ವಾನಂದ ಪೂರ್ಣ ಸಂಸಾರ ಇವರದ್ದು. +ಸಾಂಪ್ರದಾಯಿಕ ಚೌಕಟ್ಟನಲ್ಲಿದ್ದುಕೊಂಡೇ ಯಕ್ಷಗಾನ ರಂಗ ಬದುಕು ನಡೆಸುವ ಇವರ ಪ್ರಶಿಭೆಯ ಹಿರಿತನ ಗುರುತಿಸಿ ಹಲವು ಸಂಘ ಸಂಸ್ಥೆಗಳು ಸಮ್ಮಾನಿಸಿವೆ. +ಉನ್ನತ ಕಲಾವಂತಿಕೆಯ ಶಿಸ್ತು, ಗತ್ತಿನೊಂದಿಗೆ ಪೌರಾಣಿಕ ಯಕ್ಷಲೋಕದ ಸತ್ವ-ಶ್ರೀಮಂತಿಕೆಯನ್ನು ಸಮರ್ಥವಾಗಿ ಅಭಿವಯಕ್ತಿಗೊಳಿಸುವ ಸುಸಂಸ್ಕೃತ ಯಕ್ಷಾಭಿನೇಶಾ ಕಕ್ಕುಂಜೆ ಅನಂತ ಕುಲಾಲ್‌. +ಉಡುಪಿ ತಾಲೂಕಿನ ಕಕ್ಕುಂಜೆ ಎಂಬಲ್ಲಿ 26-2-1956ರಲ್ಲಿ ಜನಿಸಿದ ಅನಂತ ಕುಲಾಲ್‌ ಅವರು ಬಚ್ಚ ಕುಲಾಲ್‌-ದ್ಯಾವಮ್ಮ ಕುಲಾಲ್ತಿ ದಂಪತಿಯ ಸುಪುತ್ರ. +ಕಕ್ಕುಂಜೆ ಪ್ರಾಥಮಿಕ ಶಾಲೆಯಲ್ಲಿ 6ನೇ ತರಗತಿಯವರೆಗೆ ಅಕ್ಷರಾಭ್ಯಾಸ ಮಾಡಿದ ಅವರು ತನ್ನ 14ರ ಹರೆಯದಲ್ಲೇ ಬಣ್ಣದ ಲೋಕಕ್ಕೆ ಮುಖ ಮಾಡಿದವರು. +ಉಡುಪಿ ಯಕ್ಷಗಾನ ಕೇಂದ್ರದ ವಿದ್ಯಾರ್ಥಿಯಾಗಿ ದಶಾವತಾರಿ ಗುರು ವೀರಭದ್ರ ನಾಯಕರಲ್ಲಿ ಸಾಂಪ್ರದಾಯಿಕ ರಂಗಶಿಕ್ಷಣ ಪಡೆದ ಶ್ರೀಯುತರು ಹಿರಿಯ ವೇಷಧಾರಿ ಹಳ್ಳಾಡಿ ಮಂಜಯ್ಯ ಶೆಟ್ಟರಿಂದ ಅರ್ಥಗಾರಿಕೆಯನ್ನು ಹಳ್ಳಾಡಿ ಕೃಷ್ಣಪ್ಪ ಅವರಲ್ಲಿ ಪೌರಾಣಿಕ ರಂಗ ಮಾಹಿತಿಯನ್ನು ಪಡೆದರು. +ಸಾಹಿತ್ಯಪೂರ್ಣ ಸುಸ್ಪಷ್ಟ ವಾಗ್ವಿಲಾಸ, ಪ್ರಮಾಣ ಪೂರ್ವಕ, ನೃತ್ಯಾಭಿನಯ ಕೌಶಲ, ರಂಗ ಚೌಕಟ್ಟು ಮೀರದ ಪ್ರೌಢ ಕಲಾಭಿವ್ಯಕ್ತಿಯಲ್ಲಿ ಕಂಗೊಳಿಸುವ ಸಮರ್ಥ ಪುರುಷವೇಷದಾರಿಯಾಗಿ ಗುರುತಿಸಲ್ಪಡುವವರು. +ಅಮೃತೇಶ್ವರಿ 2, ಹಿರಿಯಡಕ 1, ಸಾಲಿಗ್ರಾಮ 2, ಪೆರ್ಡೂರು 2, ಹಾಲಾಡಿ 2೨,ಮಾರಣಕಟ್ಟೆ ಮೇಳದಲ್ಲೇ ಮೂರುದಶಕಗಳ ಕಲಾಕೃಷಿಕಂಡವರು. +ಅನಂತಕುಲಾಲರ ಸುದೀರ್ಫ್ಥ ರಂಗವ್ಯವಸಾಯ 39 ವರ್ಷ. +ಕುಲಾಲರ ಕಲಾವಂತಿಕೆಯ ಕುಲುಮೆಯಲ್ಲಿ ಅರಳಿದ ಶ್ರೀಕೃಷ್ಣ,ಶ್ರೀರಾಮ, ಅಭಿಮನ್ಯು, ಬಬ್ರುವಾಹನ, ಸುಧನ್ವ,ಅರ್ಜುನ, ದ್ರೋಣ, ಮಾರ್ತಂಡತೇಜ, ಭರತ, ಪುಷ್ಕಳದುಷ್ಕಂತ ಮೊದಲಾದ ಪೌರಾಣಿಕ ಭೂಮಿಕೆಗಳು ಸೊಗಸಾದ ರಂಗಶಿಲ್ಪಗಳಾಗಿ ಸಚೇತನವಾಗಿವೆ. +ಮಡದಿ ಲೀಲಾ. +ಸುಧೀರ, ಸುದರ್ಶನ,ಸುಬ್ರಹ್ಮಣ್ಯ, ಸುರೇಶ ಮಕ್ಕಳು. +ಶ್ರೀಯುತರಿಗೆ ಸ್ಥಳೀಯ ಸಂಘ-ಸಂಸ್ಥೆಗಳಿಂದ ಸಮ್ಮಾನ, ಕುಂದಾಪುರ ಲಕ್ಷ್ಮೀವೆಂಕಟೇಶ್ವರ ದೇವಳ ವತಿಯಿಂದ ಹಾಗೂ ಉಡುಪಿ ಶ್ರೀಕೃಷ್ಣ ಮಠದ "ಯಕ್ಷಸಂಧ್ಯಾ ಸಪ್ತಾಹ'ವತಿಯಿಂದ ಗೌರವ ದೊರಕಿರುತ್ತದೆ. +ವೇಷ, ಭಾಷೆ, ನೃತ್ಯ ಅಭಿನಯ, ರಂಗನಡೆ ಎಲ್ಲದರಲ್ಲಿಯೂ ಯಕ್ಷಗಾನೀಯತೆಯ ಗರಿಷ್ಠ ಗುಣಮಟ್ಟ ಕಾಯ್ದುಕೊಂಡ ಸಮರ್ಥ ವೇಷಧಾರಿ ಎಚ್‌.ಎಸ್‌.ಅನಂತ ಪದ್ಮನಾಭ. +ಚಿರಪರಿಚಿತ ನಾಮಧೇಯದ ಅಣ್ಣಾಜಿ ರಾವ್‌. +ಚಿಕ್ಕಮಂಗಳೂರು ಜಿಲ್ಲೆಯ ಸೀತೂರು ಅಣ್ಣಾಜಿಯವರ ಜನ್ಮಸ್ಥಳ. +ಎಚ್‌.ಎಸ್‌.ಮಧ್ವರಾಜ್‌ ದ ಸರಸ್ವತಿ ಶ್ರೀಯುತರ ಜನಕ-ಜನನಿ. + ಎಸ್‌.ಎಸ್‌.ಎಲ್‌.ಸಿ ವರೆಗೆ ಇವರ ಶೈಕ್ಷಣಿಕ ಸಂಸ್ಕಾರ. +28ರ ವಯಸ್ಸಿನಲ್ಲಿ ಯಕ್ಷಗಾನ ಸಂಚಾರ. +ಎಳವೆಯಲ್ಲಿಯೇ ಅಣ್ಣಾಜಿಯವರಿಗೆ ಕಲೆ,ಸಂಸ್ಕೃತಿಯಲ್ಲಿ ವಿಶೇಷ ಒಲವಿತ್ತು. +ಯಕ್ಷಗಾನ,ನಾಟಕಗಳನ್ನು ನೋಡುವ ಗೀಳು ತೀವ್ರವಾಗಿತ್ತು. +ಇವರ ದೊಡ್ಡಪ್ಪ ಹಾಗೂ ಸೋದರಮಾವ ಯಕ್ಷಗಾನ ರಂಗದಲ್ಲಿ ವ್ಯವಸಾಯಿಗಳಾಗಿದ್ದರು. +ಇದರಿಂದಾಗಿ ಯಕ್ಷಕಲೆಯ ಸಾಮೀಪ್ಯ, ಸಂಸರ್ಗ ಸುಲಭ ಸಾಧ್ಯವಾಯಿತು. +ಪೇತ್ರಿ ಮಂಜುನಾಥ ಪ್ರಭು ಹೊನ್ನೇಕುಡಿಗೆ ಗೋಪಾಲಕೃಷ್ಣಯ್ಯ ಹಳ್ಳಾಡಿ ಸುಬ್ರಾಯಮಲ್ಯ ಅವರ ಶಿಷ್ಯನಾಗಿ ಯಕ್ಷವಿದ್ಯಾ ಸಂಪನ್ನರಾದ ಅಣ್ಣಾಜಿರಾವ್‌ಶ್ರೀವಿನಾಯಕ ಯಕ್ಷಗಾನ ಮಂಡಳಿ, ಸೀತೂರು ಇಲ್ಲಿ ಹದಿನೈದು ವರ್ಷಗಳ ಕಾಲ ಕಲಾ ತಿರುಗಾಟನಡೆಸಿದವರು. +ಗುತ್ಯಮ್ಮ ಮೇಳ ಹಾಗೂ ಸೋಮವಾರ ಸಂತೆ ಹೊಸಹಳ್ಳಿ ಮೇಳದಲ್ಲಿ ಎರಡು ವರ್ಷ ದುಡಿದಿದ್ದರು. +ಸುಮಾರು 2 ದಶಕಗಳ ಕಾಲ ಶ್ರೀಯುತರ ಕಲಾಸೇವೆ ವೇಷಧಾರಿಯಾಗಿ ನಡೆದಿದೆ. +ಪ್ರಸ್ತುತ ಮೂರು ಮೇಳಗಳು ಸಂಯುಕ್ತವಾಗಿ ಸಂಚರಿಸುತ್ತಿದ್ದು ಅಣ್ಣಾಜಿ ರಾವ್‌ ಅವರು ಈ ಮೇಳಗಳ ಪ್ರಧಾನ ಸೂತ್ರವಾಗಿದ್ದಾರೆ. +ಅಣ್ಣಾಜಿ ರಾವ್‌ ಅವರ ಈಶ್ವರ, ಕಂಸ,ದುಷ್ಟಬುದ್ಧಿ, ಜಾಂಬವ, ಉಗ್ರಸೇನ, ದುರ್ಜಯ,ಯಮ, ಹನುಮಂತ, ವೀರಮಣಿ, ಸುಧನ್ವ ಅರ್ಜುನ,ಸಾಲ್ತ, ರಾವಣ, ಮಧು, ರಕ್ತಜಂಘ, ಮೊದಲಾದ ಪುರಾಣ ಪಾತ್ರಗಳು ಕಲಾರಸಿಕರ ವಿಶೇಷ ಮೆಚ್ಚುಗೆಗೆ ಪಾತ್ರವಾಗಿವೆ. +ಶ್ರೀಯುತರು ಕೈಲಾಸ ಶಾಸ್ತ್ರಿ,ಚಂದಗೋಪ ಮೊದಲಾದ ಗಂಭೀರ ನಡೆಯಹಾಸ್ಯಭೂಮಿಕೆಯನ್ನು ಸವಮುರ್ಥ-ವಾಗಿ ನಿರ್ವಹಿಸಿದವರು. +ಅಣ್ಣಾಜಿ ರಾವ್‌ ಅವರ ಧರ್ಮಪತ್ನಿ ಜಯಲಕ್ಷ್ಮೀ. +ಮಧ್ವರಾಜ್‌, ವಿಜಯರಾಜ್‌ಮತ್ತು ರಂಜಿತಾ ಮಕ್ಕಳು. +ಕನ್ನಡ ಸಾಹಿತ್ಯ ಪರಿಷತ್‌, ಕೆನರಾ ಬ್ಯಾಂಕ್‌ವತಿಯಿಂದ ಹಾಗೂ ಹತ್ತಾರು ಸಂಘ ಸಂಸ್ಥೆಗಳಿಂದ ಅಣ್ಣಾಜಿ ರಾವ್‌ ಅವರಿಗೆ ಸಂಮಾನ ದೊರಕಿರುತ್ತದೆ. +ಯಕ್ಷಗಾನರಂಗದ ಖಳ ಪಾತ್ರಗಳಿಗೆ ವಿಶೇಷ ಜೀವಕಳೆ ನೀಡುವ ಸಂಪನ್ನ ಕಲಾವಿದ ಆಜ್ರಿ ಅರುಣಕುಮಾರ ಶೆಟ್ಟಿ. +ಕುಂದಾಪುರ ತಾಲೂಕಿನ ಆಜ್ರಿ ಎಂಬ ಹಳ್ಳಿಯಲ್ಲಿ 1971ರ ಜನವರಿ 4ರಂದು, ಶೀನಪ್ಪ ಶೆಟ್ಟಿ ಗಿರಿಜಮ್ಮ ಶೆಟ್ಟಿ ದಂಪತಿಯ ಸುಪುತ್ರರಾಗಿ ಜನಿಸಿದ ಅರುಣಕುಮಾರ ಶೆಟ್ಟರು 5ನೇ ಇಯತ್ತೆಗೆ ಶರಣು ಹೊಡೆದು, ತನ್ನ 16ರ ಹರೆಯದಲ್ಲಿ ಕಲಾಜಗತ್ತು ಪ್ರವೇಶಿಸಿದರು. +ಹೊಳಂದೂರು ಸಂಜೀವ ಶೆಟ್ಟಿ, ಆಜ್ರಿ ವಿಠಲಶೆಟ್ಟಿ ಅವರ ಪ್ರೇರಣೆಯನ್ನು ಪಡೆದು ರಂಗ ಬದುಕುಕಂಡ ಶ್ರೀಯುತರು ಆರ್ಗೋಡು ಗೋವಿಂದರಾಯಶೆಣೈ ಅವರಲ್ಲಿ ಸಶಕ್ತ ಯಕ್ಷ ಶಿಕ್ಷಣ ಪಡೆದವರು. +ಕಮಲಶಿಲೆ 5, ಪೆರ್ಡೂರು 2, ಮಡಾಮಕ್ಕಿ 1. ಹಾಲಾಡಿ 2, ಮಂದಾರ್ತಿ 11, ಹೀಗೆ 21 ವರ್ಷಗಳ ಕಲಾವ್ಯವಸಾಯ ಪೂರೈಸಿದ್ದಾರೆ. +ಪಾತ್ರೋಚಿತ ಸ್ವರಭಾರ, ರಂಗವ್ಯವಹಾರ, ನೃತ್ಯ,ಅಭಿನಯ, ಭಾವ ಪ್ರಕಟಣೆಯಲ್ಲಿ ರಂಜಿಸುವ ಶೆಟ್ಟರು ಕಂಸ, ದುಷ್ಟಬುದ್ಧಿ, ಸಾಲ್ವ, ಕೌಂಡ್ಲೀಕ, ಕಾಲನೇಮಿ,ಕೀಚಕ, ಮಹಿಷಾಸುರ, ಮಧು-ಕೈಟಭ ಪಾತ್ರಗಳಲ್ಲಿ ಗುರುತಿಸಿಕೊಂಡು ಅಪಾರ ಜನಮನ್ನಣೆ ಗಳಿಸಿದ್ದಾರೆ. +ಪಶ್ನಿ ಶಾಂತ ಶೆಟ್ಟಿ . +ಅನುಷ, ನಯನ ಮಕ್ಕಳು. +ಶ್ರೀಯುತರ ಪ್ರತಿಭಾ ವರ್ಚಸ್ಸಿಗೆ ತಲೆಬಾಗಿ ಅನೇಕಾನೇಕ ಸಂಘ-ಸಂಸ್ಥೆಗಳು ಸಂಮಾನಿಸಿವೆ. +ಯಕ್ಷಗಾನ ಗುರುಭೋಧಿತ ಮೂಲ ಶೈಕ್ಷಣಿಕ ಸಂಸ್ಕಾರದೊಂದಿಗೆ ಸೃಜನಶೀಲ ಪ್ರತಿಬಾ ವೈಖರಿಯನ್ನು ರಂಗಮಂಚದಲ್ಲಿ ಅಭಿವ್ಯಕ್ತಿಸುವ ಕಲಾವಿದ ಅಶೋಕಭಟ್‌ ಸಿದ್ಧಾಪುರ. +ಉತ್ತರಕನ್ನಡ ಸಿದ್ಧಾಪುರ ಎಂಬಲ್ಲಿ ಜನ್ಮತಾಳಿದ ಅಶೋಕಭಟ್‌ ತಿಮ್ಮಣ್ಣ ಗಣಪತಿ ಭಟ್‌-ಯಶೋಧಾ ಭಟ್‌ ದಂಪತಿಯ ಸುಪುತ್ರ. +17-12-1961ರಲ್ಲಿ ಭಟ್ಟರ ಹುಟ್ಟು. +ಹತ್ತನೇ ಇಯತ್ತೆಯವರೆಗೆ ಅವರ ಅಕ್ಷರ ಪಯಣ. +17ರ ಹರೆಯದಲ್ಲೇ ಯಕ್ಷಗಾನ ರಂಗಜೀವನಯಾನ. +ಇವರ ತಂದೆ, ಅಣ್ಣ,ಸೋದರಮಾವ, ಎಲ್ಲರೂ ಈ ರಂಗಭೂಮಿಯಲ್ಲಿ ಕಲಾವಿದರಾಗಿ ದುಡಿದವರು. +ಹೀಗಾಗಿ ಕೌಟುಂಬಿಕ ಕಲಾ ಹಿನ್ನೆಲೆ ಎಂಬುದು ಅಶೋಕಭಟ್ಟರ ಯಕ್ಷಗಾನ ಕಲಾಸಕ್ತಿಗೆ ನೀರೆರೆದು ಪೋಷಿಸಿತು. +ಉಡುಪಿ ಯಕ್ಷಗಾನ ಕೇಂದ್ರದಲ್ಲಿ ನೀಲಾವರ ರಾಮಕೃಷ್ಣಯ್ಯ,ಮಹಾಬಲ ಕಾರಂತ, ಹೆರಂಜಾಲು ವೆಂಕಟರಮಣ ಗಾಣಿಗ ಮೊದಲಾದ ಸುಯೋಗ್ಯ ಯಕ್ಷಗುರುಗಳಿಂದ ಸಶಕ್ತ ಕಲಾವಿದ್ಯೆಯನ್ನು ಬೊಧಿಸಿಕೊಂಡ ಅಶೋಕಭಟ್ಟರು ಸತತ ಅಧ್ಯಯನ, ವೃತ್ತಿನಿಷ್ಠೆಯಿಂದ ಬಣ್ಣದ ಬದುಕಿನಲ್ಲಿ ಸಮರ್ಥ ಕಲಾವಿದರಾಗಿ ರೂಪುಗೊಂಡರು. +ಪುರುಷವೇಷ, ಪುಂಡುವೇಷ, ಸ್ತ್ರೀವೇಷ, ಹಾಸ್ಯಹೀಗೆ ಭಟ್ಟರು ಭಿನ್ನ ಭಿನ್ನ ಭೂಮಿಕೆಗಳಲ್ಲಿ ತನ್ನತನವನ್ನು ಮೆರೆದು ಕಲಾ ರಸಿಕರ ಮನಮೆಚ್ಚಿಸಿದವರು. +ತೀವ್ರಗತಿಯ ನೃತ್ಯ, ಅಭಿನಯ,ಕೌಶಲದೊಂದಿಗೆ ಪುಂಡುವೇಷದಲ್ಲೂ, ಆಕರ್ಷಕ ರೂಪ, ಲಾಲಿತ್ಯದೊಂದಿಗೆ ಸ್ತ್ರೀಭೂಮಿಕೆಗಳಲ್ಲೂ,ಸದಭಿರುಚಿಯ ವೈನೋದಿಕತೆ-ಯಲ್ಲಿ ಹಾಸ್ಯ ಪಾತ್ರಗಳಲ್ಲೂ ಮೆರೆಯುವ ಅಶೋಕಭಟ್ಟರ ಅಭಿಮನ್ಯು ಶ್ರೀಕೃಷ್ಣ, ಬಬ್ರುವಾಹನ, ಧರ್ಮಾಂಗದ,ಮೀನಾಕ್ಷಿ, ಭ್ರಮರಕುಂತಳೆ, ಯೋಜನಗಂದಧಿ,ಕೈಲಾಸಶಾಸ್ತಿ, ಚಂದಗೋಪ ಮೊದಲಾದ ಪಾತ್ರಗಳು ಜನಪ್ರಿಯವಾಗಿವೆ. +ಉತ್ತಮ ವಾಗ್ಮಿಯಾಗಿರುವ ಅಶೋಕಭಟ್ಟರು ತಾಳಮದ್ದಳೆ ಅರ್ಥಧಾರಿಯೂ ಹೌದು. +ಕೆರೆಮನೆ 6, ಅಮೃತೇಶ್ವರಿ 1. ಸಾಲಿಗ್ರಾಮ 13, ಹೀಗೆ ಯಕ್ಷ ಕ್ಷೇತ್ರದಲ್ಲಿ ಸಾರ್ಥಕ "ವಿಂಶತಿ' ಕಲಾಯಾತ್ರೆ ಇವರದ್ದಾಗಿದೆ. +ಚಿಟ್ಟಾಣಿ, ಯಾಜಿ, ಕೊಂಡದಕುಳಿ,ಕೆರೆಮನೆ, ಸಾಲಿಗ್ರಾಮ, ಮೇಳಗಳ ಅತಿಥಿಕಲಾವಿದರಾಗಿ ಕಲಾಸೇವೆಗೈಯುತ್ತಿದ್ದಾರೆ. +ಪತ್ನಿ ಶೈಲಜಾ, ಪುತ್ರ ಅಪೂರ್ವ ಅವರನ್ನೊಳಗೊಂಡ ಕಿರು ಸಂಸಾರಸ್ಥ ಶ್ರೀಯುತರನ್ನು ಸಿದ್ಧಾಪುರದಲ್ಲಿ "ಯಕ್ಷ ಚಿರಕನ್ಯೆ' ಸಾಗರದಲ್ಲಿ "ಯಕ್ಷ ಪಾದರಸ' ಬಿರುದಿನೊಂದಿಗೆ ಸಂಮಾನಿಸಲಾಗಿದೆ. +ಡಿ. ಜಿ. ಹೆಗಡೆ ಪ್ರತಿಷ್ಠಾನ,ಹಣಜಿಬೈಲು ಮಹಾಗಣಪತಿ ಯಕ್ಷಗಾನ ಮಂಡಳಿ ವತಿಯಿಂದ ಗೌರವಿಸಲಾಗಿದೆ. +ಮಧ್ಯಮ ತಿಟ್ಟಿನ ಗಾಂಬೀರ್ಯಬದ್ಧ ರಂಗನಡೆಯಲ್ಲಿ ವಿಜೃಂಭಿಸುವ ಪ್ರೌಢ ಪ್ರತಿಭಾನ್ವಿತ ಕಲಾವಿದ ಐರಬೈಲು ಆನಂದ ಶೆಟ್ಟಿ,ಕುಂದಾಪುರ ತಾಲೂಕಿನ ಐರಬೈಲು ಎಂಬಲ್ಲಿ ರಾಮಣ್ಣ ಶೆಟ್ಟಿ-ನರಸಮ್ಮ ಶೆಟ್ಟಿ ದಂಪತಿಯ ಸುಪುತ್ರನಾಗಿ 15-10-1961ರಲ್ಲಿ ಜನಿಸಿದರು. +ಆನಂದಶೆಟ್ಟರು, 7ನೇ ಯವರೆಗೆ ಅಕ್ಷರಾಭ್ಯಾಸಮಾಡಿ, 15ನೇ ವಯಸ್ಸಿನಲ್ಲೇ ಕಲಾಜೀವನಕ್ಕೆ ಕಾಲಿಟ್ಟರು. +ಸುತ್ತ-ಮುತ್ತ ನಡೆಯುತ್ತಿದ್ದ ಬಯಲಾಟಗಳಿಂದ ಆಕರ್ಷಿತರಾದ ಶೆಟ್ಟರು ಬಾಲ್ಯದಲ್ಲಿಯೇ ಬಣ್ಣದ ಬದುಕಿನ ರಂಗಿನ ಹೊಂಗನಸು ಕಂಡಿದ್ದರು. +ಹಾರಾಡಿ ಸರ್ವೋತ್ತಮ ಗಾಣಿಗರಿಂದ ನೃತ್ಯಾಭಿನಯ ಕಲೆಯನ್ನು ಬೊಧಿಸಿಕೊಂಡ ಆನಂದ ಶೆಟ್ಟರು ಸ್ವಯಂ ಪ್ರತಿಭೆಗೆ ಸತತ ಪರಿಶ್ರಮದ ಸಾಧನೆಯ ಮೆರುಗು ತುಂಬಿ ಸಶಕ್ತ ಕಲಾವಿದರಾಗಿ ರೂಪುಗೊಂಡರು. +ಎರಡನೇ ವೇಷಕ್ಕೆ ಸಮುಚಿತವಾಗುವಂತಹ ಆಳಂಗ, ಗಂಭೀರ ಸ್ವರತ್ರಾಣ, ಶೈಲೀಕೃತ ನೃತ್ಯ ಅಭಿನಯ ವಿಧಾನ, ಉತ್ಕೃಷ್ಟ ಭಾವಾಭಿವ್ಯಕ್ತಿ,ಪಾಂಡಿತ್ಯಭರಿತ ವಾಕ್‌ಸಂಪತ್ತು ಐರಬೈಲು ಆನಂದಶೆಟ್ಟರಲ್ಲಿ ಗುರುತಿಸಬಹುದಾದ ಕಲಾಸಂಪದ. +ಮಾರಣಕಟ್ಟೆ ಮೇಳವೊಂದರಲ್ಲೇ 32 ವರ್ಷಗಳ ಕಲಾ ವ್ಯವಸಾಯ-ದಲ್ಲಿರುವುದು ಶೆಟ್ಟರ ವೃತ್ತಿಮೇಳದ ನಿಷ್ಠೆಯ ಕಾರ್ಯಕ್ಷಮತೆಗೆ ಸಾಕ್ಷಿಯಾಗುತ್ತದೆ. +ಐರಬೈಲು ಆನಂದ ಶೆಟ್ಟರು ನಿರ್ವಹಿಸಿದ ಕಂಸ,ಶ್ರೀರಾಮ, ರಾವಣ, ಭಸ್ಮಾಸುರ, ದುಷ್ಟಬುದ್ಧಿ, ಕರ್ಣ,ಅರ್ಜುನ, ಹರಿಶ್ಚಂದ್ರ, ಕೀಚಕ, ವೀರಮಣಿ,ದುರ್ಜಯ, ಮೂಕಾಸುರ, ಕಾಲನೇಮಿ, ಮೊದಲಾದ ಭೂಮಿಕೆಗಳು ಕಲಾರಸಿಕರ ಮನಮುದಗೊಳಿಸುವಲ್ಲಿ ವಿಶೇಷ ಯಶಸ್ಸು ಸಾಧಿಸಿವೆ. +ಮಡದಿ ಜಯರಾಣಿ ಶೆಟ್ಟಿ ಅವರಲ್ಲಿ ಶಿಲ್ಪಾ,ಶಿಥಿಲಾ, ಸೀಮಾ, ಎಂಬ ಮೂವರು ಮಕ್ಕಳನ್ನು ಪಡೆದ ಅನುಭವಿ ಯಕ್ಷನಟ ಆನಂದಶೆಟ್ಟರನ್ನು ಅನೇಕ ಸಂಘ-ಸಂಸ್ಥೆಗಳು ಸಮ್ಮಾನಿಸಿವೆ. +ಪಾರಂಪರಿಕ ವರ್ಚಸ್ಸಿನ ಪ್ರಾತಿನಿಧಿಕ ಕಲಾವಿದರಾಗಿ ಗುರುತಿಸಿಕೊಂಡವರು ಮಜ್ಜಿಗೆಬೈಲು ಆನಂದ ಶೆಟ್ಟಿ, +ನಡು ಬಡಗಿನ ಸಾಂಪ್ರದಾಯಿಕ ವೇಷವೈವಿಧ್ಯದಲ್ಲಿ ತನ್ನದೇ ವಿಶಿಷ್ಟ ಛಾಪು ಮೂಡಿಸಿದ ಶೆಟ್ಟರು ಸಮಕಾಲೀನ ರಂಗಭೂಮಿಗೆ ಒಗ್ಗಿಕೊಳ್ಳದೆ ಸನಾತನ ಕಲಾಸಾರವನ್ನೇ ಗಂಭೀರವಾಗಿ ಹೀರಿಕೊಂಡು ಬೆಳೆದ ಶಿಷ್ಟ ಕಲಾವಿದರು. +ಇವರ ತಂದೆ ಪ್ರಸಿದ್ಧ ವೇಷಧಾರಿ ಮಜ್ಜಿಗೆ ಬೈಲು ಚಂದಯ್ಯಶೆಟ್ಟಿ. +ತಾಯಿ ಚಂದಮ್ಮ ಶೆಟ್ಟಿ. +65 ವರ್ಷದ ಆನಂದ ಶೆಟ್ಟರ ವಿದ್ಯಾಭ್ಯಾಸ ಐದನೇ ತರಗತಿಯವರೆಗೆ. +ತಂದೆಯ ವೇಷಗಾರಿಕೆಯೇ ಇವರ ಕಲಾಬದುಕಿಗೆ ಪ್ರೇರಣೆ. +ತೀರ್ಥರೂಪರ ಗುರುತನವೂ ಪುತ್ರನ ಕಲಾಯಾತ್ರೆಗೆ ಸೂತ್ರವಾಗಿ ಸುಸೂತ್ರ-ವಾಯಿತು. +ಆನೆಗುಡ್ಡೆ ವಿನಾಯಕ ದೇವಳದಲ್ಲಿ ಗೆಜ್ಜೆ ಕಟ್ಟಿದ_ ಶೆಟ್ಟರು ತಂದೆಯವರೊಂದಿಗೆ ಕೊಡವೂರು ಮೇಳಕ್ಕೆ ಪಾದಾರ್ಪಣೆ ಮಾಡಿದರು. +ಪ್ರಧಾನ ಪುರುಷವೇಷಗಳಾದ ಅರ್ಜುನ, ಪುಷ್ಕಳ, ಸುಧನ್ವ,ಮಾರ್ತಾಂಡ ಶೇಜ, ಎರಡನೇ ವೇಷಗಳಾದ ಜಾಂಬವ, ಕರ್ಣ, ಯತುಪರ್ಣ, ಬಲರಾಮ,ಕಮಲಭೂಪ, ಯಯಾತಿ, ದಕ್ಷ, ಭೀಷ್ಮ ಮೊದಲಾದ ಭೂಮಿಕೆಗಳಲ್ಲಿ ತನ್ನತನದ ಛಾಪು ಮೂಡಿಸಿದರು. +ಜೋಡಾಟದಲ್ಲಿ ಶ್ರೀಯುತರು ರಂಗಸ್ಥಳದ ಹುಲಿಯಾಗಿ ಫಘರ್ಜಿಸಿದವರು. +ಗತ್ತು ಗಾಂಭೀರ್ಯದ ನಡೆ, ಪ್ರೌಢ ಸಾಹಿತ್ಯಿಕ ವಾಗ್ಸರಣಿ ಯಕ್ಷಗಾನೀಯ ಸೊಗಡು ಮೈವೆತ್ತ ವೇಷ ವೈಭವ ಮುಜ್ಜಿಗೆಬೈಲು ಅವರಲ್ಲಿ ಗುರುತಿಸಬಹುದಾಗಿದೆ. +ಕೊಡವೂರು 2, ಮಾರಣಕಟ್ಟೆ 5, ಅಮೃತೇಶ್ವರಿ 2, ಸಾಲಿಗ್ರಾಮ 1, ಪೆರ್ಡೂರು 8,ಮಂದಾರ್ತಿ 17, ಹೀಗೆ 35 ವರ್ಷಗಳ ಕಾಲ ರಂಗಕೃಷಿನಡಸಿ ಮಂದಾರ್ತಿ ಮೇಳದ ಪ್ರಧಾನವೇಷಧಾರಿಯಾಗಿ ಮುಂದುವರಿಯುತ್ತಿದ್ದಾರೆ. +ರತ್ನಾಶೆಟ್ಟಿ ಇವರ ಬಾಳ ಸಂಗಾತಿ. +ಸವಿತಾ,ಕವಿತಾ, ಸಂತೋಷ ಸೌಮ್ಯಾ ನಾಲ್ವರು ಮಕ್ಕಳು. +ಜಾಗತಿಕ ಬಂಟ ಪ್ರತಿಷ್ಠಾನದ ಪ್ರಶಸ್ತಿ,ಮಸ್ಕತ್‌ನಲ್ಲಿ ಅಭಿಮಾನಿಗಳ ಗೌರವ ಸಂಮಾನವೂ ಇವರಿಗೆ ದೊರಕಿರುತ್ತದೆ. +ಹೆಜ್ಜೇನಿನ ಸ್ವರವಾಹಿನಿಯನ್ನು ಹರಿಸಿ,ರಂಗಮಂಚದ ಕಲಾಭಿನೇತರ ಹೆಜ್ಜೆ-ಗೆಜ್ಜೆಯಲ್ಲಿ ಸಾಂಪ್ರದಾಯಿಕ ರಂಗವೈಭವವನ್ನು ಪ್ರತಿಧ್ವನಿಸುವ ಪ್ರಬುದ್ಧ ಭಾಗವತ ಗೋಪಾಡಿ ಉಮೇಶ ಸುವರ್ಣ. +ಕುಂದಾಪುರ ತಾಲೂಕಿನ ಗೋಪಾಡಿಯ ಕೂಸ ಸುವರ್ಣ-ಗುಲಾಬಿ ದಂಪತಿ ಪುತ್ರ ಉಮೇಶ ಸುವರ್ಣರಿಗೆ 38ರ ಹರೆಯ. +ಎಂಟನೇ ತರಗತಿಯವರೆಗೆ ವಿದ್ಯಾಭ್ಯಾಸ ಮಾಡಿ ಎಳವೆಯಲ್ಲೇ ಯಕ್ಷಗಾನ ಪ್ರಪಂಚವನ್ನು ಪ್ರವೇಶಿಸಿದ ಸುವರ್ಣರಿಗೆ ಗಾನಗಾರುಡಿಗ ಕಾಳಿಂಗನಾವಡರ ಕಂಚಿನ ಕಂಠಸಿರಿಯ ಭಾಗವತಿಕೆಯು ಪ್ರಭಾವವೇ ಕಲಾಜೀವನಕ್ಕೆ ಪ್ರೇರಣೆಯಾಯಿತು. +ಹಿರಿಯ ಭಾಗವತ ಐರೋಡಿ ರಾಮಗಾಣಿಗ ಅವರಲ್ಲಿ ತಾಳಪದ್ಧತಿ ಹಾಗೂ ಹೆಜ್ಜೆಗತಿಯ ಪ್ರಾಥಮಿಕ ಶಿಕ್ಷಣ ಪಡೆದು ಆರಂಭದಲ್ಲಿ ಹವ್ಯಾಸೀ ವೇಷಧಾರಿಯಾಗಿ ರಂಗಮಂಚವೇರಿದರು. +ಹಂಗಾರಕಟ್ಟೆ ಯಕ್ಷಗಾನ ಕಲಾಕೇಂದ್ರದಲ್ಲಿ ಕೆ.ಪಿ.ಹೆಗಡೆಯವರ ಶಿಷ್ಯನಾಗಿ ಸಮರ್ಪಕ ಭಾಗವತಿಕೆ ಅಭ್ಯಸಿಸಿದ ಉಮೇಶ ಸುವರ್ಣ ಅವರು ಪ್ರಸಂಗಕರ್ತ ಡಾ.ವೈ ಚಂದ್ರಶೇಖರ ಶೆಟ್ಟರ ಸಂಪೂರ್ಣ ಸಹಕಾರದೊಂದಿಗೆ ಶ್ರೀ ಮಾರಣಕಟ್ಟೆ ಮೇಳದಲ್ಲಿ ತಾಳ ಹಿಡಿದು ಒಂದು ವರ್ಷ ಸಂಗೀತಗಾರಿಕೆ,ಎರಡುವರ್ಷ ಸಹಭಾಗವತಿಕೆ ಹಾಗೂ ಪ್ರಧಾನಭಾಗವತರಾಗಿ ಜವಾಬ್ದಾರಿಯುತ ಸ್ಥಾನ-ಮಾನ್ಯತೆಯಿಂದ ಅದೇ ಮೇಳದಲ್ಲಿ ಸಾರ್ಥಕ 20ವರ್ಷ ಪೂರೈಸಿದ್ದಾರೆ. +ಶ್ರೀಯುತರಿಗೆ ಹಿರಿಯಭಾಗವತ ಮರವಂತೆ ನರಸಿಂಹದಾಸರು ಅಪಾರ ರಂಗಾನುಭವ,ಪ್ರಸಂಗ ಮಾಹಿತಿಯನ್ನೂ ನೀಡಿದ್ದಾರೆ. +ಎಂ.ಎಂ.ಹೆಗ್ಡೆ, ಚಿತ್ತೂರು ಮಂಜಯ್ಯ ಶೆಟ್ಟರ ಹಾರ್ದಿಕ ಕಲಾಮಾರ್ಗದರ್ಶನದಲ್ಲಿ ಭರವಸೆಯ ಭಾಗವತರಾಗಿ ರೂಪುಗೊಂಡ ಉಮೇಶ ಸುವರ್ಣರ ಇಂಪಿನ ಕಂಠಸಿರಿಯಲ್ಲಿ ಪೌರಾಣಿಕ ಪ್ರಸಂಗಗಳು ಸಚೇತನವಾಗುತ್ತವೆ. +ಸಮಗ್ರಬೀಷ್ಮ, ಶಶಿಪ್ರಭಾ ಪರಿಣಯ,ಕರ್ಣಾರ್ಜುನ, ಚಂದ್ರಹಾಸ ಚರಿತ್ರೆ, ಕೃಷ್ಣಾರ್ಜುನ,ದ್ರೌಪದಿ ಪ್ರತಾಪ ಮೊದಲಾದ ಪುರಾಣ ಕಥಾಭಾಗಗಳಲ್ಲಿ ಶ್ರೀಯುತರ ಗಾನಪ್ರತಿ ಪ್ರಶಂಸನೀಯ. +ಜಿ. ಶಂಕರ್‌ ಫ್ಯಾಮಿಲಿ ಟ್ರಸ್ಟ್‌, ಹೈದರಾಬಾದ್‌ಕರಾವಳಿ ಮೈತ್ರಿ ಸಂಘ,ಬೀಜಾಡಿ ಫಿಶರೀಸ್‌ ಸ್ಕೂಲ್‌,ಆಲೂರು ರಾಮೇಶ್ವರ ಸಂಘ, ಸೇರಿದಂತೆ ಅನೇಕ ಸಂಘ ಸಂಸ್ಥೆಗಳಿಂದ ಸಂಮಾನಿತರಾದ ಪ್ರತಿಭಾವಂತ ಭಾಗವತ ಉಮೇಶ ಸುವರ್ಣರು . +ಪತ್ನಿ ರೇವತಿ. +ಮೋದನ, ಮೋಹನ ಮಕ್ಕಳು. +ಬಡಗುತಿಟ್ಟು ಯಕ್ಷಗಾನ ರಂಗಭೂಮಿಯ ಪರಂಪರೆಯ ಪ್ರಾತಿನಿಧಿಕ ಸ್ತ್ರೀ ವೇಷಧಾರಿ ಮಂದಾರ್ತಿ ಅಣ್ಣು ನಾಯ್ಕ ಯಾನೆ ಎಂ.ಎ.ನಾಯ್ಕ-ಸಮೃದ್ಧ ಕಲಾವಂತಿಕೆಯ ಉಜ್ವಲ ಯಕ್ಷತಾರೆ. +ಮಂದಾರ್ತಿಯ ಕೊತ್ತೂರು ಎಂಬಲ್ಲಿ ಹುಟ್ಟಿ ಬೆಳೆದ ಎಂ.ಎ.ನಾಯ್ಕರು ಕರಿಯ ಮರಕಾಲ-ಬುಡ್ಡು ಮರಕಾಲ್ತಿ ಅವರ ಸುಪುತ್ರರಾಗಿ 14-02-1952ರಲ್ಲಿ ಜನಿಸಿದರು. +ಬಾಲ್ಯದಲ್ಲಿ ಕಾಡುವ ಬಡತನದಿಂದಾಗಿ 6ನೇತರಗತಿಗೇ ಶರಣು ಹೊಡೆದು, ಪರಿಸರದ ಯಕ್ಷಗಾನ ಬಯಲಾಟಗಳಿಂದ ಆಕರ್ಷಿತರಾಗಿ ತನ್ನ 13ನೇ ವಯಸ್ಸಿನಲ್ಲೇ ಯಕ್ಷಗಾನ ಕ್ಷೇತ್ರಕ್ಕೆ ಹೆಜ್ಜೆ ಹಾಕಿದರು. +1964-65ರಲ್ಲಿ ಸುರಗಿಕಟ್ಟೆ ಹೆರಿಯ ಗಾಣಿಗರು ಇವರನ್ನು ಅಮೃತೇಶ್ವರಿ ಮೇಳಕ್ಕೆ ಸೇರಿಸಿದರು. +ನಾರ್ಣಪ್ಪ ಉಪ್ಪೂರ, ಗುರು ವೀರಭದ್ರ ನಾಯಕ್‌,ಶಿರಿಯಾರ ಮಂಜುನಾಯ್ಕರ ಗುರುತನದಲ್ಲಿ ಅಣ್ಣು ನಾಯ್ಕರು ಅನನ್ಯ ಕಲಾವಿದ್ಯೆಯನ್ನು ಆರ್ಜಿಸಿಕೊಂಡು ಸಂಪನ್ನ ಪ್ರತಿಭೆಯಾಗಿ ರೂಪುಗೊಂಡರು. +ಅಮೃತೇಶ್ವರಿ, ಮೂಲ್ಕಿ, ಶಿರಿಸಿ ಪಂಚಲಿಂಗ,ಶಿರಸಿ-ವರಾರಿಕಾಂಬಾ, ಇಡಗಗುಂಜಿ,ಮಂದಾರ್ತಿ ಮೇಳಗಳಲ್ಲಿ ಸುಮಾರು 42 ವರ್ಷಗಳ ಕಲಾಕೃಷಿಯನ್ನು ನಡೆಸಿ ಶ್ರೇಷ್ಠ ಸ್ತ್ರೀವೇಷಧಾರಿಯಾಗಿ ಜನಪ್ರಿಯರಾಗಿದ್ದಾರೆ. +ಕೋಟ ವೃಕುಂಠ-ರೊಂದಿಗೆ ಅಮೃತೇಶ್ವರಿ ಮೇಳದ ವ್ಯವಸ್ಥಾಪಕತ್ವ ನಡೆಸಿದ ಅನುಭವವೂ ಇವರಿಗಿದೆ. +ಪ್ರಸ್ತುತ ಶ್ರೀಯುತರು ಹೃದಯ ನೋವಿನ ತೊಂದರೆಯಿಂದಾಗಿ ವೃತ್ತಿಮೇಳದಿಂದ ದೂರಾಗಿ ವಿಶ್ರಾಂತ ಜೀವನದಲ್ಲಿದ್ದಾರೆ. +ಎಂ.ಎ ನಾಯ್ಕರದು ಸ್ತ್ರೀವೇಷಕ್ಕೊಪ್ಪುವ ಸುಂದರ ಅಂಗಶಿಲ್ಪ ಆಕರ್ಷಕ ಮುಖಮಂಡಲ,ಪರಿಶುದ್ಧ ರಂಗನಡೆ, ಅದ್ಭುತ ಭಾವಾಭಿವ್ಯಕ್ತಿ. +ನಿರದ್ಗಳವಾದ ಮಧುರಕಂಠದ ಪ್ರಗಲ್ಭಪಾಂಡಿತ್ಯದವಚೋವಿಲಾಸ, ಸುಸ್ಪಷ್ಟ ನೃತ್ಯಾಭಿನಯ. +ಪಾತ್ರಗಳ ಮೂಲಕ ಪರಕಾಯ ಪ್ರವೇಶ ಮಾಡಬಲ್ಲ ಕಲಾಜಾಣ್ಮೆಯನ್ನು ಹೊಂದಿದವರಿವರು. +ಇವರ ಶಶಿಪ್ರಭೆ,ಶ್ರೀದೇವಿ, ಸೈರೇಂಧ್ರಿ, ದಮಯಂತಿ, ದಾಕ್ಷಾಯಿಣಿ,ವಿದ್ಯಾಧರೆ, ಅಂಬೆ, ಚಂದ್ರಮತಿ, ಸೀತೆ, ಕಯಾದು,ಚಿತ್ರಾಂಗದೆ ಇಂತಹ ಪೌರಾಣಿಕ ಸ್ತ್ರೀ ಪಾತ್ರಗಳು ರಂಗಸ್ಥಳದಲ್ಲಿ ಕಡೆದಿಟ್ಟ ಜೀವಂತ ಕಲಾಪ್ರತಿಮೆಗಳಾಗಿ ಅಜರಾಮರವಾಗಿವೆ. +ಅಪಾರ ಕಲಾನುಭವವನ್ನು ಹಲವು ಯುವ ಕಲಾವಿದರಿಗೆ ಧಾರೆಯೆರೆದ ಎಂ.ಎ. ನಾಯ್ಕರು ಬಡಗುತಿಟ್ಟಿನ ಸ್ತ್ರೀ ವೇಷದ ಸಾಂಪ್ರದಾಯಿಕತೆಯಲ್ಲಿ ಅಗ್ರಸ್ಥಾನ ಕಂಡವರು. +ಸ್ವಿಟ್ಜರ್‌ಲ್ಯಾಂಡ್‌, ಜರ್ಮನಿ,ಪೋಲೆಂಡ್,ಹಾಂಕಾಂಗ್‌ ಮೊದಲಾದ ವಿದೇಶಗಳಲ್ಲೂ ತನ್ನ ಕಲಾಪ್ರತಿಭೆಯನ್ನು ಮೆರೆದ ಮೇರು ಕಲಾವಿದ ಎಂ.ಎ ನಾಯ್ಕರು. +ಪತ್ನಿ ಗುಲಾಬಿ. +ಪ್ರಕಾಶ್‌, ವಾಣೀಶ್ರೀ, ದೀಪಾ, ಪ್ರೀತಿ ಎಂಬ ನಾಲ್ಕು ಮಂದಿ ಮಕ್ಕಳು. +ಶ್ರೀಯುತರಿಗೆ ಕಾರ್ಕಡ ಶ್ರೀನಿವಾಸ ಉಡುಪ ಪ್ರಶಸ್ಮಿ ದೂರಕಿರುತ್ತದೆ. +ಹೆಗ್ಗೋಡು “ಸಾಕೇತಕಲಾವಿದರು' ತಂಡದಿಂದ ಹಾಗೂ ಬೆಂಗಳೂರು, ಮುಂಬೈ, ಉಡುಪಿ ಮೊಗವೀರ ಸಂಘದ ಸಂಮಾನ, ಡಾ.ಜಿ.ಶಂಕರ್‌ ಫ್ಯಾಮಿಲಿ ಟ್ರಸ್ಟ್‌ನ ಸಮ್ಮಾನವೂ ಸೇರಿದಂತೆ ಹಲವು ಪುರಸ್ಕಾರ ದೊರಕಿರುತ್ತದೆ. +ಬಡಗುತಿಟ್ಟು ಯಕ್ಷಲೋಕ ಕಂಡ ಸಾಂಪ್ರದಾಯಿಕ ಸೊಗಡಿನ ಸುಸಮರ್ಥ ಮೂರನೇ ವೇಷಧಾರಿ ವಾಲ್ತೂರು ಕುಷ್ಠ ಮಡಿವಾಳ. +ಕುಂದಾಪುರ ತಾಲೂಕಿನ ವಾಲ್ತೂರು ಇವರ ಹುಟ್ಟೂರು. +ಗಣಪ ಮಡಿವಾಳ-ಬಚ್ಚಿ ಮಡಿವಾಳ್ತಿ ದಂಪತಿಯ ಪುತ್ರನಾಗಿ 20-6-1941ರಲ್ಲಿ ಜನಿಸಿದ ಕೃಷ್ಣ ಮಡಿವಾಳ ಅವರು ಚಿಕ್ಕಂದಿನಿಂದಲೇ ಯಕ್ಷಗಾನದ ಕುರಿತು ವಿಶೇಷ ಒಲವು ಹೊಂದಿದವರು. +5ನೇ ತರಗತಿವರೆಗಿನ ಅಕ್ಷರ ಶಿಕ್ಷಣ ಪಡೆದು, ವಂಡ್ಸೆ ಮುತ್ತ ಗಾಣಿಗರ ಪ್ರೇರಣೆಯಂತೆ ತನ್ನ 11ರ ಹರೆಯದಲ್ಲಿ ಇವರು ಬಣ್ಣದ ಲೋಕಕ್ಕೆ ಮುಖ ಮಾಡಿದರು. +ದಶಾವತಾರಿ ಗುರು ವೀರಭದ್ರನಾಯಕರ ಶಿಷ್ಯನಾಗಿ ಸಾಂಪ್ರದಾಯಿಕ ಯಕ್ಷ ನೃತ್ಯಕಲೆಯನ್ನು ಪರಿ-ಪೂರ್ಣವಾಗಿ ಸಿದ್ಧಿಸಿಕೊಂಡ ಇವರು ಅನನ್ಯ ಪುರಾಣಜ್ಞಾನವನ್ನು ಹೊಂದಿದವರು. +ಮಾರಣಕಟ್ಟೆ 13, ಸೌಕೂರು 8, ಕಮಲಶಿಲೆ 7, ಗೋಳಿಗರಡಿ 7, ಕಳುವಾಡಿ 5, ಮಂದಾರ್ಶಿ 2,ಕೊಲ್ಲೂರು 2, ಅಮೃತೇಶ್ವರಿ 3, ರಂಜದಕಟ್ಟೆ 3,ಹೀಗೆ ವೃಕ್ತಿರಂಗ ಭೂಮಿಯಲ್ಲಿ ಸುದೀರ್ಫ್ಥ_ಐದು ದಶಕಗಳ ಸಾರ್ಥಕ ಕಲಾವ್ಯವಸಾಯ ಪೂರೈಸಿ ಪ್ರಸ್ತುತ ವಿಶ್ರಾಂತ ಜೀವನದಲ್ಲಿದ್ದಾರೆ. +ಶ್ರೀಯುತರ ಪುಂಡುವೇಷದ ಗಂಡುಗಾರಿಕೆ ಅಸಾಧಾರಣವಾದುದು. +ಬಬ್ರುವಾಹನ, ಲವ-ಕುಶ,ಮೈಂದ-ದ್ವಿವಿದ, ಪ್ರಸೇನ, ಅಭಿಮನ್ಯು ಮೊದಲಾದ ಮೂರನೇ ವೇಷಗಳಲ್ಲಿ ಇವರು ಮೂಡಿಸಿದ ರಂಗಶೌರ್ಯದ ಛಾಪು ಇಂದಿಗೂ ಹಸಿರಾಗಿದೆ. +ಹಾಗೆಯೇ ಶ್ರೀಕೃಷ್ಣ ಬಲರಾಮ, ಕೌರವ, ಮೊದಲಾದ ಭೂಮಿಕೆಗಳಲ್ಲಿ ತೋರಿದ ಕಲಾವಂತಿಕೆ ಸರ್ವದಾ ಸ್ಮರಣೀಯ. +ಶ್ರೀಯುತರು ಮದನಾಕ್ಷಿ, ಭ್ರಮರಕುಂತಳೆ ಮೊದಲಾದ ಗಂಡುಕಳೆಯ ಹೆಣ್ಣು ವೇಷಗಳಲ್ಲೂ ಕಾಣಿಸಿಕೊಂಡಿದ್ದಾರೆ. +ಶ್ರೀಯುತರ ಅನೇಕ ಪ್ರತಿಭಾವಂತ ಶಿಷ್ಯರು ವೃತ್ತಿರಂಗದಲ್ಲಿದ್ದಾರೆ. +ಕುಷ್ಟ ಮಡಿವಾಳರು ಮುತ್ತು ಎಂಬವರನ್ನು ವರಿಸಿ, ಪ್ರಕಾಶ್‌, ಕನಕ, ಗುಲಾಬಿ,ಜ್ಯೋತಿ ಎಂಬ ನಾಲ್ಕು ಮಕ್ಕಳನ್ನು ಪಡೆದಿದ್ದಾರೆ. +ಪ್ರಬುದ್ಧ ಕಲಾವಿದ ವಾಲ್ತೂರು ಕುಷ್ಠ ಮಡಿವಾಳರನ್ನು ಅಂಪಾರು ಹಳೇವಿದ್ಯಾರ್ಥಿ ಸಂಘ, ಬಿಲ್ಲವ ಸಮಾಜ ಬನ್ನಂಜೆ, ಕುಂದಾಪುರ ಮಡಿವಾಳ ಸಂಘ, ಯಶಸ್ವೀ ಕಲಾವೃಂದ ತೆಕ್ಕಟ್ಟೆ ಮೊದಲಾದ ಸಂಘ-ಸಂಸ್ಥೆಗಳು ಗುರುತಿಸಿ ಗೌರವಿಸಿವೆ. +ಬಡಗುತಿಟ್ಟು ಯಕ್ಷಗಾನ ರಂಗದಲ್ಲಿ ವಿಭಿನ್ನ ವೇಷಗಾರಿಕೆಯಲ್ಲಿ ಸಾಂಪ್ರದಾಯಿಕ ಬೆರಗು ಮೂಡಿಸುವ ಹಿರಿಯ ಕಲಾವಿದ ಕೊಡೇರಿ ಕೃಷ್ಣ . +ಕುಂದಾಪುರ ತಾಲೂಕಿನ ಕೊಡೇರಿ ಎಂಬ ಪುಟ್ಟಹಳ್ಳಿಯಲ್ಲಿ ಅಣ್ಣಪ್ಪ ಪೂಜಾರಿ-ಶಾರದಾ ದಂಪತಿಯ ಸುಪುತ್ರರಾಗಿ ಜನಿಸಿದ ಕೃಷ್ಣ ಅವರು ಐವತೈದರಹೊಸ್ತಿಲಲ್ಲಿರುವ ಸಂಪನ್ನ ಪ್ರತಿಭೆ. +ಒಂಭತ್ತನೆ ತರಗತಿಯವರೆಗೆ ವಿದ್ಯಾಭ್ಯಾಸ, ಹದಿನೆಂಟಕ್ಕೆ ಯಕ್ಷಗಾನ ಕಲೆಯ ನೆಂಟತನ ಬಯಸಿದ ಅವರು,ಚಿಕ್ಕಂದಿನಿಂದಲೇ ಈ ರಂಗಭೂಮಿಯ ಕುರಿತು ವಿಶೇಷ ಒಲುಮೆ ಹೊಂದಿದವರು. +ಇವರ ಕಲಾಸಕ್ತಿಯನ್ನು ಗುರುತಿಸಿದ ಹೆರಂಜಾಲು ಪದ್ಮನಾಭ ಉಡುಪರು ಬಣ್ಣದ ಬದುಕಿನ ಹಾದಿ ತೋರಿದರು. +ಹೆರಂಜಾಲು ಸುಬ್ಬಣ್ಣ ಹಾಗೂ ಹೆರಂಜಾಲು ಪದ್ಮನಾಭ ಉಡುಪರ ಗುರುತನದಲ್ಲಿ ಅರಳಿದ ಕೊಡೇರಿಯ ಈ ಕಲಾಕುಸುಮ ಮೂರನೇ ವೇಷಧಾರಿ-ಯಾಗಿ ರಂಗಮಂಚದಲ್ಲಿ ಪರಿಮಳಿಸಿ ಯಕ್ಷರಸಿಕರ ಮನಮುದಗೊಳಿಸಿತು. +ಕಳವಾಡಿ ಮೇಳ 1, ನಾಗರಕೊಡಿಗೆ 2, ಮೂಲ್ಕಿ 2, ಅಮೃತೇಶ್ವರಿ 5,ಗೋಳಿಗರಡಿ 5, ಶಿರಸಿ-ವರಾರಿಕಾಂಬಾ 6,ಮಂದಾರ್ತಿ 3, ಬಚ್ಚಗಾರು 3, ಮಡಾಮಕ್ಕಿ 4,ಹಿರಿಯಡಕ 1 ಹೀಗೆ 34 ವರ್ಷಗಳ ಕಲಾಕೃಷಿಯಲ್ಲಿ ಕೋಡೇರಿಯವರು ಸಂಪದ್ಭರಿತ ಕಲಾವ್ಯಕ್ತಿತ್ವ ರೂಪಿಸಿಕೊಂಡಿದ್ದಾರೆ. +ರಾಜವೇಷ, ಒತ್ತು ಎರಡನೇ ವೇಷ,ಮುಂಡಾಸು ವೇಷಗಳಲ್ಲಿ ಹೆಚ್ಚು ಕಾಣಿಸಿಕೊಳ್ಳುವ ಅವರು ಪ್ರಸಂಗ ಸಂದರ್ಭೋಚಿತವಾಗಿ ಎಲ್ಲಾ ಬಗೆಯ ಗಂಡು ಭೂಮಿಕೆಗಳಿಗೂ ಜೀವ ತುಂಬುತ್ತಾರೆ. +ಶ್ರೀಯುತರ ಶಂತನು, ರುಕ್ಮ ಶಲ್ಯ ಸಾಲ್ವ, ಶತ್ರುಘ್ನ,ಅರ್ಜುನ, ದೇವೇಂದ್ರ, ಬಲರಾಮ, ಭೀಮ, ಕೌರವ,ಭಸ್ಮಾಸುರ ಪೆರುಮಾಳ ಬಲ್ಲಾಳ ಭೂಮಿಕೆಗಳು ಕಲಾರಸಿಕರ ಮನೋಭೂಮಿಕೆಯಲ್ಲಿ ನೆಲೆಯಾಗಿವೆ. +ಉತ್ತಮ ಭಾಷಾಪುಜ್ಞೆ, ಹಿತಮಿತ ನೃತ್ಯಾಭಿನಯ,ಸುಪುಷ್ಟ ರಂಗಮಾಹಿತಿ ಇವರಲ್ಲಿ ಗುರುತಿಸಬಹುದಾಗಿದೆ. +ಮಡದಿ ಲಕ್ಷ್ಮೀ. +ನಾಲ್ಕುಮಂದಿ ಮಕ್ಕಳು. +ಕೊಡೇರಿ ಕೃಷ್ಣ ಅವರು ಹಲವು ಸಂಘ-ಸಂಸ್ಥೆಗಳಿಂದ ಗೌರವ ಸಂಮಾನ ಪಡೆದಿರುತ್ತಾರೆ. +ಖಚಿತ ಲಯಸಿದ್ಧಿಯೊಂದಿಗೆ ಪಾದರಸ ಸದೃಶ ಪಾದಗತಿಯನ್ನು ತೋರುವ ಸ್ಫುಟವಾದ ನೃತ್ಯರೇಖೆಯ ಪ್ರಮಾಣಬದ್ಧ ಅಭಿನಯ ಕೌಶಲದ ಪುರುಷ-ಪುಂಡು ವೇಷಧಾರಿ ಕೊಳಲಿ ಕೃಷ್ಣ. +ಕುಂದಾಪುರ ತಾಲೂಕಿನ ಯಡಮೊಗೆಯ ಕೊಳಲಿ ಎಂಬಲ್ಲಿ ಗೋವಿಂದ ಶೆಟ್ಟಿ- ಸದಿಯಮ್ಮ ಶೆಟ್ಟಿ ದಂಪತಿಯ ಸುಪುತ್ರರಾಗಿ 1-1-1967ರಲ್ಲಿಜನಿಸಿದ ಕೃಷ್ಣ ಶೆಟ್ಟಿಯವರು 5ನೇ ಇಯತ್ತೆಗೆ ಶರಣು ಹೊಡೆದು, ಸುತ್ತ ಮುತ್ತ ನಡೆಯುತ್ತಿದ್ದ ಯಕ್ಷಗಾನ ಬಯಲಾಟಗಳ ಆಕರ್ಷಣೆಯಿಂದ ಬಣ್ಣದ ಬದುಕು ಬಯಸಿ, ತನ್ನ 13ರ ಹರೆಯದಲ್ಲೇ ಯಕ್ಷರಂಗ ಮಂಚವೇರಿದರು. +ವಿಶ್ವೇಶ್ವರ ಸೋಮಯಾಜಿ, ಸುರೇಂದ್ರ ಆಲೂರು ಅವರ ಗುರುತನದಲ್ಲಿ ಸಮರ್ಪಕ ಯಕ್ಷಶಿಕ್ಷಣವನ್ನು ಪಡೆದ ಕೊಳಲಿ ಕೃಷ್ಣ ಅವರು, ಕಮಲಶಿಲೆ, ಸೌಕೂರು,ಮಾರಣಕಟ್ಟೆ, ಮಂದಾರ್ತಿ, ಪೆರ್ಡೂರು ಮೇಳಗಳಲ್ಲಿ ಸಾರ್ಥಕ 27ವರ್ಷ ಪೂರೈಸಿದ್ದಾರೆ. +ಪ್ರಸ್ತುತ ಶ್ರೀಯುತರು ಪೆರ್ಡೂರು ಮೇಳದ ಕಲಾವಿದರು. +ಸುಂದರ ಆಕರ್ಷಕವಾದ ವೇಷಗಾರಿಕೆ,ಶ್ರುತಿಬದ್ಧ ಮಾತುಗಾರಿಕೆ, ಲವಲವಿಕೆಯ ನೃತ್ಯಗಾರಿಕೆ ಮೊದಲಾದವುಗಳಿಂದ ನಿರ್ವಹಣಾ ಭೂಮಿಕೆಗಳ ಅಂತಸ್ಸತ್ವವನ್ನು ಅರಿತು ರಂಗದಲ್ಲಿ ನಿರೂಪಿಸುವ ಕೊಳಲಿಯವರು ಪುರುಷ ಪಾತ್ರಗಳನ್ನೂ-ಪುಂಡುವೇಷಗಳನ್ನು ಸಮರ್ಥವಾಗಿ ಪೋಷಿಸುವವರು. +ಯಾವ ವಿಧದ ಪಾತ್ರ ನಿರೂಪಣೆಯಲ್ಲೂ ಭಾವನಾತ್ಮಕ ತಲ್ಲೀನತೆಯನ್ನು ಕಂಡುಕೊಳ್ಳುವ ಶ್ರೀಯುತರು ಜೋಡಾಟಗಳಲ್ಲಿ ಗಾಯದ ಹುಲಿಯಾಗುವವರು. +ಶ್ರೀಕೃಷ್ಣ, ಅಭಿಮನ್ಯು,ಬಬ್ರುವಾಹನ, ಲವ-ಕುಶ,` ಪುಷ್ಕಳ, ಸುಧನ್ವ,ದೇವವೃತ, ಮೊದಲಾದ ಭೂಮಿಕೆಗಳಲ್ಲಿ ತನ್ನದೇ ಕಲಾವಿಶೇಷತೆಯನ್ನು ಕಾಣಿಸಿ ಜನಪ್ರಿಯತೆ ಕಂಡಕೊಳಲಿ ಕೃಷ್ಣ ಅವರು ಶೀಲಾವತಿ ಎಂಬುವರನ್ನು ವರಿಸಿ, ಪವಿತ್ರ, ಪ್ರಜಾದ ಎಂಬ ಉಭಯ ಮಕ್ಕಳನ್ನು ಪಡೆದಿದ್ದಾರೆ. +ಶ್ರೀಯುತರ ಕಲಾಪ್ರತಿಭೆಯನ್ನು ಗುರುತಿಸಿ ನಾಡಿನ ಹಲವು ಸಂಘ-ಸಂಸ್ಥೆಗಳು ಸಂಮಾನಿಸಿವೆ. +ಮುದ್ದಾದ ವೇಷವೈಖರಿ, ಮಾಧುರ್ಯ ಪೂರ್ಣಕಂಠಸಿರಿ, ಸ್ತ್ರೀ ಲಾಲಿತ್ಯದ ನೃತ್ಯಾಭಿನಯ ವಿನ್ಯಾಸ,ಪಾತ್ರೋಚಿತ, ರಸರಂಜಿತ ವಾಕ್‌ ವಿಧಾನ ಸಂಪನ್ನವಾಗಿ ಸ್ತ್ರೀಭೂಮಿಕೆಗಳಲ್ಲಿ ಕಾಣಿಸುವ ಪ್ರತಿಭಾನ್ವಿತ ಸ್ತ್ರೀವೇಷಧಾರಿ ಹೊಸಂಗಡಿ ಕೃಷ್ಣ ಗಾಣಿಗ. +ಕುಂದಾಪುರ ತಾಲೂಕಿನ ಹೊಸಂಗಡಿ-ತಾರಿಗುಂಡಿ ಎಂಬ ಹಳ್ಳಿಯೇ ಇವರ ಹುಟ್ಟೂರು. +ತಂದೆ ಸಿದ್ಧಗಾಣಿಗ, ತಾಯಿ ಸಿದ್ಧಮ್ಮ ಗಾಣಿಗ. +5ನೇ ಇಯತ್ತೆಯವರೆಗಿನ ಶೈಕ್ಷಣಿಕ ಸಂಸ್ಕಾರದ ಬಳಿಕ 15ರ ಹರೆಯದಲ್ಲೇ ಯಕ್ಷಲೋಕ ಪ್ರವೇಶಿಸಿದ ಕೃಷ್ಣಗಾಣಿಗರು ಹಾಸ್ಯಗಾರ ದೇವಪ್ಪಗಾಣಿಗರ ಪ್ರೇರಣೆಯಂತೆ ಕಲಾಶಿಕ್ಷಣ ಪಡೆಯಲು ಮುಂದಾದರು. + ಆಲೂರು ಸುರೇಂದ್ರನವವರ ಶಿಷ್ಯನಾಗಿ ಉನ್ನತ ಕಲಾ ವಿದ್ಯಾಪಾರಂಗತರಾದ ಗಾಣಿಗರು ವೃತ್ತಿರಂಗದಲ್ಲಿ ಹಂತಹಂತವಾಗಿ ಬೆಳೆದು ಗಳಿಸಿದರು. +ಕಮಲಶಿಲೆ 1, ಸೌಕೂರು 17. ಮಾರಣಕಟ್ಟೆ3, ಮಡಾಮಕ್ಕಿ 1, ಹಾಲಾಡಿ 3. ಹೀಗೆ ರಜತ ಸಂಭ್ರಮವನ್ನು ಯಶಸ್ವಿಯಾಗಿ ವೃತ್ತಿ ಮೇಳಗಳಲ್ಲಿ ಪೂರೈಸಿದ ಕೃಷ್ಣಗಾಣಿಗ ಅವರು ಪ್ರಸ್ತುತ ಸೌಕೂರು ಮೇಳದ ಕಲಾವಿದರಾಗಿ ದುಡಿಯುತ್ತಿದ್ದಾರೆ. +ಶೃಂಗಾರ,ಸೌಮ್ಯ ಸ್ತ್ರೀ ಭೂಮಿಕೆಗೊಪ್ಪುವ ಅವರ ಅಂಗಸೌಷ್ಠವ,ರಂಗಾಭಿವ್ಯಕ್ತಿ, ಕಲಾರಸಿಕರ ಮೆಚ್ಚುಗೆ ಪಡೆದಿದೆ. +ಮದನಾಕ್ಷಿ-ತಾರಾವಳಿ, ಚಿತ್ರಾಂಗದೆ, ಸುಭದ್ರೆ,ಪ್ರಭಾವತಿ, ಸತ್ಯಭಾಮೆ, ಭ್ರಮರಕುಂತಳೆ ಪಾತಗಳಲ್ಲಿ ಅವರ ಅಭಿನಯ ಮನಮುಟ್ಟುವಂತಾದ್ದು. +ಉತ್ತಮ ಪೌರಾಣಿಕ ಅನುಭವವನ್ನು ಸಿದ್ಧಿಸಿಕೊಂಡ ಶ್ರೀಯುತರು ಅಪರೂಪಕ್ಕೆ ಪುರುಷ ಪಾತ್ರಗಳನ್ನು ನಿರ್ವಹಿಸಿ ಪಾತ್ರಕ್ಕೆ ನ್ಯಾಯ ಕಲ್ಪಿಸುತ್ತಾರೆ. +ಪತ್ನಿ ಶ್ಯಾಮಲಾ. +ಸೌಜನ್ಯ, ಅನನ್ಯ ಮಕ್ಕಳು. +ಶ್ರೀಯುತರಿಗೆ ಹುಟ್ಟೂರ ಸಂಮಾನ,ಮುಕ್ಕೋಡಿನಲ್ಲಿ ಗೌರವ ಸಂಮಾನ ದೊರಕಿರುತ್ತದೆ. +ಬಡಗುತಿಟ್ಟಿನ ಯಕ್ಷಗಾನದ ನಡುತಿಟ್ಟಿನ ನಡೆಯನ್ನು ಬಲ್ಲ ಅನುಭವಿ ಕಲಾವಿದ ಚಕ್ರ ಮೈದಾನ ಕೃಷ್ಣ. +ಕುಂದಾಪುರ ತಾಲೂಕಿನ ಬೆಳ್ಳಾಲದ ಕೇಲಾಡಿ-ಕೆಳಮನೆಯ ದುರ್ಗ ಪೂಜಾರಿ - ಸಿದ್ಧು ಪೂಜಾರ್ಮಿ ದಂಪತಿಯ ಸುಪುತ್ರರಾಗಿ 1-2-1960ರಲ್ಲಿ ಹುಟ್ಟಿದ ಕೃಷ್ಣ ಅವರು, 5ನೇ ತರಗತಿಯವರೆಗೆ ಅಕ್ಷರಶಿಕ್ಷಣವನ್ನು ಪಡೆದು, ಆರ್ಥಿಕ ಅನಾನುಕೂಲತೆಯಿಂದ ತನ್ನ 15ನೇ ವಯಸ್ಸಿನಲ್ಲೇ ಯಕ್ಷಗಾನ ಲೋಕದತ್ತ ಹೆಜ್ಜೆ ಹಾಕಿದರು. +ಹೆಬ್ಬೈಲು ರಾಮಪ್ಪನವರ ಚಿಕ್ಕ ಮೇಳದ ಬಾಲಕಲಾವಿದನಾಗಿ, ಎಳವೆಯಲ್ಲೇ ಅರ್ಥಗಾರಿಕೆಯ ಕೌಶಲವನ್ನು ಸಾಧಿಸಿದ ಕೃಷ್ಣ ಅವರಿಗೆ ಹಿರಿಯ ಯಕ್ಷಗಾನ ಕಲಾವಿದ ವಾಲ್ತೂರು ಕುಷ್ಠನವರ ಸಶಕ್ತ ಗುರುಬಲ ದೊರಕಿ, ಸಮರ್ಥ ಕಲಾವಿದನಾಗುವುದಕ್ಕೆ ಸಹಕಾರಿಯಾಯಿತು. +ಚಕ್ರಮೈದಾನ ಅವರು ಆರಂಭಿಕ ವೃತ್ತಿರಂಗದಲ್ಲಿ ಕೋಡಂಗಿ, ಬಾಲ ಗೋಪಾಲ ಪಾತ್ರಗಳನ್ನು ಮಾಡುತ್ತ ಒಂದೆರಡು ವರ್ಷಗಳ ತಿರುಗಾಟದಲ್ಲಿ ಸುಯೋಗ್ಯ ಪುಂಡುವೇಷಧಾರಿಯಾಗಿ ಗುರುತಿಸಿಕೊಂಡರು. +ಲವ-ಕುಶ, ಬಬ್ರುವಾಹನ, ಪುಷ್ಕಳ, ವೃಷಸೇನ,ಅಭಿಮನ್ಯು ಪ್ರಸೇನ ಪಾತ್ರಗಳ ಮೂಲಕ ರಂಗಸ್ಥಳದಲ್ಲಿ ಹುಡಿ ಹಾರಿಸಿದರು. +ತದನಂತರ ಪುರುಷವೇಷ,ಮುಂಡಾಸುವೇಷ, ರಾಜವೇಷ, ಹಾಗೂ ಪ್ರಸಂಗೋಚಿತವಾಗಿ ಬಣ್ಣದ ವೇಷ, ಕಿರಾತವೇಷಗಳನ್ನೂ ನಿರ್ವಹಿಸಿ ವರ್ಣರಂಜಿತ ಕಲಾವ್ಯಕ್ತಿತ್ತದಲ್ಲಿ ಕಂಗೊಳಿಸಿದರು. +ಗೋಳಿಗರಡಿ 9, ಅಮೃತೇಶ್ವರಿ 9,ಶಿವರಾಜಪುರ 3, ಶೃ೦ಗೇರಿ-ಭಕ್ತಂಪುರ 3, ಬಗಾಡಿ2, ನಾಗರಕೊಡಿಗೆ 2, ಕಿಗ್ಗ 1, ಮೂಲ್ಕಿ 1, ಮೇಳಗಳಲ್ಲಿ ಸುಮಾರು 3 ದಶಕಗಳ ಕಾಲ ರಂಗಕೃಷಿ ಮಾಡಿದ ಚಕ್ರಮೈದಾನ ಕೃಷ್ಣ ಅವರು ಮೀನಾಕ್ಷಿ ಕಲ್ಯಾಣದ ಶೂರಸೇನ ನಂದಿ, ವಿಶ್ವಾಮಿತ್ರ, ಕರ್ಣ, ದ್ರೋಣ,ಕೌಂಡ್ಲೀಕ, ಭದ್ರಸೇನ, ದ್ರುಮಿಳಗಂಧರ್ವ, ಕಂಸ,ಅಶ್ವತ್ಥಾಮ, ಶಲ್ಯ, ಕೌರವ ಮೊದಲಾದ ಪಾತ್ರಗಳಿಗೆ ಜೀವ ತುಂಬಿದವರು. +ದೆಹಲಿ ಗಣರಾಜ್ಯೋತ್ಸವ ಸಂಮಾನ, ಉಡುಪಿ ಬೆಂಗಳೂರಿನಲ್ಲಿ ಬಿಲ್ಲವ ಕಲೋತ್ಸವ ಸಮ್ಮಾನ,ಯಶಸ್ವೀ ಕಲಾವೃಂದದ ದಶಮಾನೋತ್ಸವ ಸಂಮಾನ ಪಡೆದಿದ್ದಾರೆ. +ಕೃಷ್ಣ ಅವರ ಪತ್ನಿ ಬೇಬಿ, ಮಕ್ಕಳಾದ ಅಮೃತಾ, ಅನ್ವಿತಾ, ಅಕ್ಷತಾ, ಅಚ್ಯುತ ಅವರೊಂದಿಗೆ ಕುಂದಾಪುರದ ಹೆಸಕುತ್ತೂರು ಎಂಬಲ್ಲಿ ವಾಸವಾಗಿದ್ದಾರೆ. +ಉತ್ತರ ಕನ್ನಡ ಜಿಲ್ಲೆಯ ಸಿದ್ಧಾಪುರದ ಬೇಡ್ಕಣಿ ಎಂಬಲ್ಲಿ ಹುಟ್ಟಿ ಬೆಳೆದ ಕೃಷ್ಣ ಜಿ, ಬೇಡ್ಕಣಿಯವರು ಪ್ರಸ್ತುತ, “ಬೇಡ್ಕಣಿ ಮೇಳ'ದ ಯಜಮಾನರಾಗಿ,ಕಲಾವಿದರಾಗಿ ಕಲಾಸೇವೆಯಲ್ಲಿರುವವರು. +ಗೌರ್ಯ ಚೆನ್ನ ನಾಯ್ಕ-ಶಿವಿ ಗೌರ್ಯನಾಯ್ಕ ದಂಪತಿಯ ಪುತ್ರರಾದ ಕೃಷ್ಣ ಅವರು 1-9-1957ರಲ್ಲಿ ಜನಿಸಿದರು. +10ನೇ ತರಗತಿಯವರೆಗೆ ವಿದ್ಯಾಭ್ಯಾಸ ಮಾಡಿದ ಇವರು 16ನೇ ವಯಸ್ಸಿನಲ್ಲಿ ಬಣ್ಣದಲೋಕದತ್ತ ಮುಖ ಮಾಡಿದರು. +ಕನ್ನಪ್ಪ ಭಾಗವತರು ಇವರ ಮೂಲಗುರುಗಳಾಗಿ ಯಕ್ಷಗಾನ ರಂಗಭೂಮಿಗೆ ಪಾದಾರ್ಪಣೆ ಮಾಡುವುದಕ್ಕೆ ಸಹಕಾರ ನೀಡಿದರು. +ಉಡುಪಿ ಯಕ್ಷಗಾನ ಕೇಂದ್ರದ ವಿದ್ಯಾರ್ಥಿಯಾಗಿ ನೀಲಾವರ ರಾಮಕೃಷ್ಣಯ್ಯ ಮಹಾಬಲ ಕಾರಂತ, ಹೆರಂಜಾಲು ವೆಂಕಟರಮಣ ಗಾಣಿಗರಲ್ಲಿ ಸಶಕ್ತ ಕಲಾಶಿಕ್ಷಣವನ್ನು ಪಡೆದ ಬೇಡ್ಕಣಿಯವರು ಗೋಳಿಗರಡಿ, ಅಮೃತೇಶ್ವರಿ,ಹಿರೇಮಹಾಲಿಂಗೇಶ್ವರ ಮೇಳ ಕೋಟ, ಶಿರಸಿಪಂಚಲಿಂಗೇಶ್ವರ ಮೇಳ, ಶಿರಸಿ ಮಾರಿಕಾಂಬಾಮೇಳ, ಇಡಗುಂಜಿ ಮೇಳ, ಸಾಲಿಗ್ರಾಮ ಮೇಳ,ಪೆರ್ಡೂರು ಮೇಳ ಕುಮಟಾ ಮೇಳಗಳಲ್ಲಿ 14 ವರ್ಷಗಳ ತಿರುಗಾಟ ಪೂರೈಸಿದ್ದಾರೆ. +ಯಾವ ಪಾತ್ರವಾದರೂ ಬೇಡ್ಕಣಿಯವರಿಗೆ ಲೀಲಾಜಾಲ ಅಭಿವ್ಯಕ್ತಿಗೆ ದೊರಕುವುದು ವಿಶೇಷ. +ಪಾತ್ರಗಳಲ್ಲಿ ಅನನ್ಯ ತಾದಾತ್ಮ್ಯವನ್ನು ಹೊಂದಿ,ಅವುಗಳಿಗೆ ನ್ಯಾಯ ಒದಗಿಸುವುದರಲ್ಲಿ ಅವರು ಯಾವತ್ತೂ ಹಿಂದೆ ಬೀಳುವುದಿಲ್ಲ. +ಪಾತ್ರೋಚಿತ ಸ್ವರಭಾರ, ಸುಸಂಸ್ಕೃತ ರಂಗವ್ಯವಹಾರ, ಪ್ರೌಢವಚೋಚಮತ್ಕಾರ, ಬೇಡ್ಕಣಿಯವರ ಕಲಾಗುಣಗಳಾಗಿ ಗುರುತಿಸಲ್ಪಡುತ್ತವೆ. +ಉತ್ತರಕನ್ನಡದ ಖ್ಯಾತನಾಮ ಕಲಾವಿದರೊಂದಿಗೆ ಸಮರ್ಥವಾಗಿ ಪಾತ್ರ ಪೋಷಿಸುವ ಬೇಡ್ಕಣಿಯವರು ಕೀಚಕ, ಭಸ್ಮಾಸುರ, ವೀರಮಣಿ,ರುದ್ರಕೋಪ, ಅರ್ಜುನ, ಶ್ರೀರಾಮ, ಸುಧನ್ವ,ರಕ್ತಜಂಘ, ಶನೀಶ್ವರ, ದುರ್ಜಯ, ಹನುಮಂತ,ಮೊದಲಾದ ಪಾತ್ರಗಳಿಗೆ ಜೀವ ತುಂಬಿದ್ದಾರೆ. +ಮೀನಾಕ್ಷಿ, ಶಶಿಪ್ರಭೆಯಂತಹ ಸ್ತ್ರೀಪಾತ್ರಗಳನ್ನೂ ನಿರ್ವಹಿಸಿ ಸೈ ಅನ್ನಿಸಿಕೊಂಡಿದ್ದಾರೆ. +ಕಾಶೀಮಾಣಿ,ಏಕಲವ್ಯ ಭೂಮಿಕೆಗಳು ಬೇಡ್ಕಣಿಯವರ ಕಲಾಪ್ರಸ್ತುತಿಗೆ ಒಳಗಾಗಿವೆ. +ಪತ್ನಿ ನೇತ್ರಾವತಿ. +ಗಿರಿಧರ, ಸಂತೋಷ ಮಕ್ಕಳು. +ಕೃಷ್ಣ ಜಿ.ಬೇಡ್ಕಣಿಯವರ ಉನ್ನತ ಪ್ರತಿಭೆಯನ್ನು ಗುರುತಿಸಿ ಹೊಸಳ್ಳಿ, ಕಾನಗೋಡ, ಕವಲುಕೊಪ್ಪ,ಅವರುಗುಪ್ಪಾ ಮೊದಲಾದ ಕಡೆಯ ಸಂಘ-ಸಂಸ್ಥೆಗಳು ಸಂಮಾನಿಸಿವೆ. +ಗಾಜನೂರಿನಲ್ಲಿ ಗೌರವ ಪಡೆದ ಶ್ರೀಯುತರನ್ನು ಉಡುಪಿ ಬಿಲ್ಲವ ಕಲಾವಿದರ ಸಮಾವೇಶದಲ್ಲಿ ಗುರುತಿಸಿ ಗೌರವಿಸಲಾಗಿದೆ. +ಮಲೆನಾಡಿನ ಮಡಿಲಿಂದ ಯಕ್ಷಗಾನ ರಂಗಭೂಮಿಗೆ ಬಂದ ಕರಾವಳಿಯ ಕಲಾಕಾರ್ಯ ಕ್ಷೇತ್ರದಲ್ಲಿ ಕ್ರಿಯಾಶೀಲ ವ್ಯಕ್ತಿತ್ವದಿಂದ ಗುರುತಿಸಿಕೊಂಡ ಪ್ರತಿಭಾಶಾಲಿ ಕಲಾವಿದ ತೀರ್ಥಹಳ್ಳಿ ಗೋಪಾಲ ಆಚಾರ್ಯ ಯಕ್ಷಗಾನ ನಡುಬಡಗು ಹಾಗೂ ಬಡಾಬಡಗುಗಳ ಸುಂದರ ಸಂಗಮವಾಗಿರುವ ಗೋಪಾಲ ಆಚಾರ್ಯರು ಯಕ್ಷರಂಗಮಂಚದ "ಸಿಡಿಲಮರಿ' ಬಿರುದಾಂಕಿತ ಕಲಾವಿದರು. +ವಾಸುದೇವ ಆಚಾರ್ಯ ಸುಲೋಚನಾ ದಂಪತಿಯ ಸುಪುತ್ರರಾಗಿ 1956ರ ಫೆಬ್ರವರಿ 24ರಂದು ತೀರ್ಥಹಳ್ಳಿಯಲ್ಲಿ ಜನಿಸಿದ ಗೋಪಾಲ ಆಚಾರ್ಯರು ಕಲಿತದ್ದು ಮೂರಾದರೂ ಯಕ್ಷಗಾನ ರಂಗಭೂಮಿಯ ಕಲಾಕಾರ್ಯ ಕ್ಷಮತೆಗೆ ಗಳಿಸಿದ ಗರಿಷ್ಠ ಅಂಕ ನೂರಕ್ಕೆ ನೂರು. +ತನ್ನ 14ನೇ ವಯಸ್ಸಿಗೆ ಮಲೆನಾಡಿನ ರಂಜದಕಟ್ಟೆ ಮೇಳದಲ್ಲಿ ಬಣ್ಣದ ಬದುಕಿಗೆ ಶ್ರೀಕಾರ ಹಾಡಿದ ಬಾಲಗೋಪಾಲ ಇಂದು ಕಲಾರಂಗಭೂಮಿಯಲ್ಲಿ ಸಿದ್ಧಿ ಸಾಧನೆಯ ತ್ರಿವಿಕ್ರಮನಾಗಿ ಬೆಳೆದು ನಿಂತಿದ್ದಾರೆ. +ಆಕರ್ಷಕ ವೇಷಗಾರಿಕೆ, ಸ್ಫುಟವಾದ ಪ್ರಬುದ್ಧ ಮಾತುಗಾರಿಕೆ, ಅದ್ಭುತ ಲಯಗಾರಿಕೆ, ಪಾದರಸ ಸದಶ್ಯ ನೃತ್ಯಗಾರಿಕೆ, ಅಪ್ರತಿಮ ರಂಗತಾಂತ್ರಿಕತೆ, ಆಚಾರ್ಯರಲ್ಲಿ ಮೇಳೈಸಿದೆ. +ಅಭಿಮನ್ಯು,ಬಬ್ರುವಾಹನ,ಧರ್ಮಾಂಗದ, ಪುಷ್ಕಳ, ಲವ-ಕುಶ, ವೃಷಸೇನ ಮೊದಲಾದ ಪುಂಡುವೇಷಗಳಲ್ಲಿ ಬೆಂಕಿಯ ಚೆಂಡಾಗಬಲ್ಲ ಆಚಾರ್ಯರು, ಸುಧನ್ವ, ಅರ್ಜುನ,ಶ್ರೀಕೃಷ್ಣ ಚಂದ್ರಹಾಸ, ಮಾರ್ತಾಂಡತೇಜ ಹೀಗೆ ಯಾವುದೇ ಪುರುಷ ಪಾತ್ರವಿದ್ದರೂ ಜೀವಂತಿಕೆಯ ಕಳೆ ನೀಡಿ ತನ್ನ ಛಾಪು ಮೂಡಿಸುವವರು. +ರಂಗಮಂಚವೇರಿದರೆ ಹದಿನೆಂಟರ ತರುಣರನ್ನೂ ನಾಚಿಸುವ ಆಚಾರ್ಯರ ನೃತ್ಯ ಕೌಶ್ಯಲ ಬೆರಗುಗೊಳಿಸುವಂತಾದ್ದು. +ರಂಜದ ಕಟ್ಟೆ,ನಾಗರಕೊಡಿಗೆ, ಗೋಳಿಗರಡಿ, ಸಾಲಿಗ್ರಾಮ,ಪೆರ್ಡೂರು ಮೇಳಗಳಲ್ಲಿ ಸುದೀರ್ಘ ನಾಲ್ಕು ದಶಕಗಳ ಕಾಲ ರಂಗವ್ಯವಸಾಯ ನಡೆಸಿದ ಆಚಾರ್ಯರು ಕೃಷ್ಣೋಜಿರಾವ್‌ ತೀರ್ಥಹಳ್ಳಿಯವರ ಶಿಷ್ಯ. +ಪ್ರಸಿದ್ಧ ಪೆರ್ಡೂರು ಮೇಳದಲ್ಲಿ ಸುದೀರ್ಥ ಕಾಲದ ಕಲಾಕೃಷಿಯಲ್ಲಿರುವ ಪ್ರತಿಭಾ ಸಂಪನ್ನ ಕಲಾವಿದ ಗೋಪಾಲ ಆಚಾರ್ಯರು . +ಮಡದಿ ಮಂಜುಳಾ. +ಓರ್ವ ಸುಪುತ್ರ ನಿಧೀಶ. +ಬೆಂಗಳೂರು ರವೀಂದ್ರ ಕಲಾಕ್ಷೇತ್ರದಲ್ಲಿ ಸಾರ್ವಜನಿಕ ನೆಲೆಯಲ್ಲಿ 2007ರ ಆಗಸ್ಟ್‌ 19ರಂದು ಯಕ್ಷಗಾನ ಯೋಗಕ್ಷೇಮ ಅಭಿಯಾನ ಬೆಂಗಳೂರು,ಸೃಷ್ಟಿಯಕ್ಷಮಿತ್ರಮಂಡಳಿ, ಯಕ್ಷಕಲಾಸಾಗರ,ಗಾನಸೌರಭ, ವಿಶ್ವಕರ್ಮ ಪಬ್ಲಿಕ್‌ ಮತ್ತು ಚಾರಿಟೇಬಲ್‌ ಟ್ರಸ್ಟ್‌ ಇದರ ಅಧ್ಯಕ್ಷರಾದ ಏ.ಆರ್‌.ಹೆಗಡೆಯವರ ಸಾರಥ್ಯದಲ್ಲಿ ಕಲಾನಿಧಿ ಪೂರ್ವಕ ಗೌರವಸಮ್ಮಾನ ಅಲ್ಲದೇ ಹಲವಾರು ಸಂಘ-ಸಂಸ್ಥೆಗಳಿಂದ, ಅಭಿಮಾನಿ ಬಳಗದಿಂದ ಸಮ್ಮಾನಗಳು ದೊರಕಿರುತ್ತವೆ. +ಸಾಧನೆ, ಪ್ರತಿಭೆ, ಪ್ರಯತ್ನಗಳಿಂದ ಯಕ್ಷಗಾನ ರಂಗದ ಪ್ರಧಾನ ವೇಷಧಾರಿಯಾಗಿ ರೂಪುಗೊಂಡ ಪ್ರತಿಭಾ ಸಂಪನ್ನ ಕಲಾವಿದ ಆಜ್ರಿಗೋಪಾಲ ಗಾಣಿಗ. +ಕುಂದಾಪುರ ತಾಲೂಕಿನ ಆಜ್ರಿ ಎಂಬಲ್ಲಿ 27-11-1958ರಲ್ಲಿ ಜನಿಸಿದ ಗೋಪಾಲ ಗಾಣಿಗ ಅವರು ಮಂಜಯ್ಯ ಗಾಣಿಗ ಮುತ್ತಮ್ಮ ದಂಪತಿಯ ಸುಪುತ್ರ. +7ನೇ ತರಗತಿಂತು ವಿದ್ಯಾಬ್ಯಾಸದ ತರುವಾಯ, ತನ್ನ 12ರ ಹರೆಯದಲ್ಲೇ ಗೆಜ್ಜೆ ಕಟ್ಟಿಹೆಜ್ಜೆ ಹಾಕಿದ ಗಾಣಿಗರು ಹವ್ಯಾಸಿ ಅರ್ಥಧಾರಿಯಾಗಿದ್ದ ತಂದೆಯವರ ಪ್ರೋತ್ಸಾಹದಿಂದ ಕಲಾಬದುಕಿಗೆ ಪ್ರೇರಣೆ ಕಂಡುಕೊಂಡರು. +1974-75ರಲ್ಲಿ ಉಡುಪಿ ಯಕ್ಷಗಾನ ಕೇಂದ್ರಕ್ಕೆ ವಿದ್ಯಾರ್ಥಿಯಾಗಿ ಸೇರ್ಪಡೆಗೊಂಡು,ಗುರುವೀರಭದ್ರನಾಯಕ್‌, ನೀಲಾವರ ರಾಮಕೃಷ್ಣಯ್ಯ,ಹೆರಂಜಾಲು ವೆಂಕಟರಮಣ, ಹಿರಿಯಡಕ ಗೋಪಾಲರಾಯರ ಶಿಷ್ಯನಾಗಿ ಶಾಸ್ತ್ರೋಕ್ತ ರಂಗಶಿಕ್ಷಣ ಸಂಪನ್ನರಾದರು. +ಆರ್ಲೋಡು ಗೋವಿಂದ ರಾಯಶೆಣೈಯವರು ಇವರನ್ನು ವೃತ್ತಿಮೇಳಕ್ಕೆ ಸೇರಿಸಿದರು. +ಕಮಲಶಿಲೆ 3, ಪೆರ್ಡೂರು 1 ಶೃಂಗೇರಿ 1,ಶಿವರಾಜಮರ 1, ಪೆರ್ಡೂರು 1, ಇಡಗುಂಜಿ 2,ಮೂಲ್ಕಿ 1, ಸೌಕೂರು 2, ಮಂದಾರ್ತಿ 26, ಹೀಗೆ 38 ವರ್ಷಗಳ ಕಲಾಯಾತ್ರೆ ಪೂರೈಸಿದ ಗಾಣಿಗರು ಪ್ರಸ್ತುತ ಮಂದಾರ್ತಿ ಮೇಳದ ಪ್ರಧಾನ ವೇಷಧಾರಿಯಾಗಿ ದುಡಿಯುತ್ತಿದ್ದಾರೆ. +ಯಕ್ಷಗಾನದ ಸಾಂಪ್ರದಾಯಿಕ ಗತ್ತು,ಶಿಸ್ತು,ಶ್ರೀಯುತರ ಪಾತ್ರ ಚಿತ್ರಣದಲ್ಲಿ ಗುರುತಿಸಬಹುದಾಗಿದೆ. +ಅವರ ಗಂಭೀರ ಪೂರ್ಣ ರಂಗನಡೆ, ನಿಲುವು,ಪಾತ್ರನಿಷ್ಠ ನೃತ್ಯ, ಅಭಿನಯ ಕೌಶಲ, ನಿರರ್ಗಳ ಮಾತಿನಶೈಲಿ, ಕಲಾರಸಿಕರ ಮನ ಮೆಚ್ಚಿಸುವಂತಹುದು. +ಹಿರಣ್ಯಕಶಿಪು, ಋತುಪರ್ಣ, ಭೀಷ್ಮ, ಜಾಂಬವ, ಕರ್ಣ,ಕಂಸ, ಶ್ವೇತಕುಮಾರ, ಅರ್ಜುನ, ಮೊದಲಾದ ಪುರಾಣ ಪಾತ್ರಗಳಲ್ಲಿ ವಿಶೇಷವಾಗಿ ಗುರುತಿಸಿಕೊಂಡ ಗಾಣಿಗರ ಕಲಾಪ್ರತಿಭೆ ಸಂಪ್ರದಾಯಪ್ರಿಯ ಕಲಾಸಕ್ತರ ಮನಮುದಗೊಳಿಸಿದೆ. +ಶ್ರೀಯುತರ ಬಾಳಸಂಗಾತಿ ರೋಹಿಣಿ. +ಪವಿತ್ರ,ಪಲ್ಲವಿ, ಪವನ ಇವರ ಮೂವರು ಮಕ್ಕಳು. +ಆರ್ಲೋಡು ರಾಮಚಂದ್ರ ಶಾನುಭಾಗ್‌ ವೇದಿಕೆ,ಕುಂದಾಪುರ ಗಾಣಿಗ ಸಮಾಜ ಶ್ರೀಯುತರನ್ನು ಸಂಮಾನಿಸಲಾಗಿದೆ. +ಶ್ರವಣಮಂಜುಳ ಶಾರೀರದಲ್ಲಿ ಸ್ವಂತಿಕೆಯ ಛಾಪು ಮೊಳಗಿಸುವ ಪ್ರೌಢ ಭಾಗವತ ಹೆರಂಜಾಲು ಗೋಪಾಲ ಗಾಣಿಗ. +ಕುಂದಾಪುರ ತಾಲೂಕಿನ ನಾಗೂರು ಎಂಬಲ್ಲಿ ಹೆರಂಜಾಲು ವೆಂಖಟರಮಣ ಗಾಣಿಗ-ಗಣಪು ಗಾಣಿಗ ದಂಪತಿಯ ಸುಪುತ್ರರಾಗಿ 28-3-1963ರಲ್ಲಿ ಜನಿಸಿದ ಗೋಪಾಲ ಗಾಣಿಗ ಅವರಿಗೆ ಶೈಕ್ಷಣಿಕ ವಿದ್ಯಾಭ್ಯಾಸ ನಾಕಕ್ಕೇ ಸಾಕೆನಿಸಿತು. +ತಂದೆ ಹೆರಂಜಾಲು ವೆಂಕಟರಮಣ ಗಾಣಿಗರು,ಯಕ್ಷಗಾನ ಪರಂಪರೆಯ ಪ್ರಸಿದ್ಧ ವೇಷಧಾರಿ. +ಸಮರ್ಥ ಕಲಾಧ್ಯಾಪಕರೂ ಕೂಡ. +ಹಾಗಾಗಿ ಬಾಲಕ ಗೋಪಾಲನಿಗೆ ಯಕ್ಷವಿದ್ಯೆ ಬಾಲ್ಯದಲ್ಲಿಯೇ ರಕ್ತಗತ ಬಳುವಳಿಯಾಯಿತು. +ಉಡುಪಿ ಯಕ್ಷಗಾನ ಕೇಂದ್ರದಲ್ಲಿ ನೀಲಾವರ ರಾಮಕೃಷ್ಣಯ್ಯನವರಲ್ಲಿ ಭಾಗವತಿಕೆ,ಮಹಾಬಲ ಕಾರಂತರಲ್ಲಿ ಮದ್ಮಳೆಗಾರಿಕೆ,ತಂದೆಯವರಲ್ಲಿ ಹೆಜ್ಜೆಗಾರಿಕೆ ಅಭ್ಯಾಸಮಾಡಿದ ಗೋಪಾಲ ಗಾಣಿಗರಿಗೆ ಕಲಾಲೋಕದ ಯಾತ್ರೆಗೆ ತಂದೆಯೇ ಪ್ರೇರಣಾ ಶಕ್ತಿ. +15ನೇ ವಯಸ್ಸಿನಲ್ಲಿ ವೃತ್ತಿರಂಗ ಪ್ರವೇಶಿಸಿದ ಹೆರಂಜಾಲು ಗೋಪಾಲಗಾಣಿಗರು ಹಳೆತರಮಟ್ಟನ್ನೂ, ಹೊಸತರ ಗುಟ್ಟನ್ನೂ ಬಲ್ಲ ಸಮರ್ಥ ಭಾಗವತರು. +ಅಪಾರ ಪ್ರಸಂಗಾನುಭವ, ರಂಗವನ್ನುಉಠಾವ್‌ಗೊಳಿಸುವ ರಂಗತಂತ್ರ, ಸಶಕ್ತ ಕವಿತಾಶಕ್ತಿ ಶ್ರೀಯುತರಲ್ಲಿ ಮುಪ್ಪುರಿಗೊಂಡಿದೆ. +ಮಾರಣಕಟ್ಟೆ, ಕಮಲಶಿಲೆ, ಮಂದಾರ್ತಿ,ಅಮೃತೇಶ್ವರಿ, ಸಾಲಿಗ್ರಾಮ, ಶಿರಸಿ ಮೇಳಗಳಲ್ಲಿ ಕಲಾವ್ಯವಸಾಯ ಮಾಡಿದ ಗಾಣಿಗರ ರಂಗ ಬದುಕಿಗೆ ರಜತ ಸಂಭ್ರಮ. +ಪ್ರಸ್ತುತ ಮಂದಾರ್ತಿ ಮೇಳದ ಪ್ರಧಾನ ಭಾಗವತರು. +ಎಳವೆಯಲ್ಲಿ ಅಭಿಮನ್ಯು, ಬಬ್ರುವಾಹನ,ಪ್ರಹ್ಲಾದ, ಷಣ್ಮುಖ, ಶ್ರೀಕೃಷ್ಣ, ವೃಷಸೇನ ಮೊದಲಾದ ಪಾತ್ರಗಳನ್ನು ನಿರ್ವಹಿಸಿ ಜನಪ್ರಿಯರಾದ ಗಾಣಿಗರು ಹಿಮ್ಮೇಳ-ಮುಮ್ಮೇಳದ ಸರ್ವಾಂಗ ಪರಿಣತ ಕಲಾವಿದ. +ಪತ್ನಿ ಸಾವಿತ್ರಿ. +ರಮ್ಯ, ಪಲ್ಲವ ಎಂಬ ಈರ್ವರು ಮಕ್ಕಳು. +ಪ್ರತಿಭಾನ್ವಿತ ಕಲಾವಿದ ಗೋಪಾಲ ಗಾಣಿಗರನ್ನು ಹಲವಾರು ಸಂಘ-ಸಂಸ್ಥೆಗಳುಗೌರವಿಸಿವೆ. +ಬಡಗುತಿಟ್ಟು ಯಕ್ಷಗಾನರಂಗದಲ್ಲಿ ಮದ್ದಳೆಯ ಮಾಯಾಲೋಕ ನಿರ್ಮಿಸಿ ಪರಂಪರೆಯ ಅಗ್ರಪಂಕ್ತಿಯಲ್ಲಿ ಎದ್ದು ಕಾಣುವ ಹಿರಿಯ ಮದ್ದಳೆಗಾರ ಹಿರಿಯಡಕ ಗೋಪಾಲ ರಾಯರು. +ತೊಂಬತ್ತು ದಾಟಿದರೂ ಗೋಪಾಲ ರಾಯರ ಕ್ರೀಯಾಶೀಲತ್ವ ಹಾಗೂ ಕಲಾಕಾರ್ಯಕ್ಷಮತೆ ಈಗಲೂ ಮುಪ್ಪಾಗದೆ ಇರುವುದು ಇವರ ಅಪೂರ್ವ ವ್ಯಕ್ತಿತ್ವಕ್ಕೆ ಹಿಡಿದ ಕನ್ನಡಿಯೆಂದೇ ಹೇಳಬಹುದು. +ಗೋಪಾಲರಾಯರ ಹುಟ್ಟೂರು ಹಿರಿಯಡಕ. +ಶೇಷಗಿರಿ ರಾವ್‌ ಹಾಗೂ ಶ್ರೀಮತಿ ಲಕ್ಷ್ಮೀ ಇವರ ತಂದೆ-ತಾಯಿ. +15-12-1919ರಲ್ಲಿ ಶ್ರೀಯುತರ ಹುಟ್ಟು. +ಆರನೇ ಇಯತ್ತೆಯವರೆಗೆ ಅಕ್ಷರ ಜೀವನ. +19ರ ಹರೆಯದಲ್ಲಿ ಯಕ್ಷ ಬದುಕಿನ ಯಾನ. +ಇವರ ತಂದೆ ಶೇಷಗಿರಿ ರಾವ್‌, ಅಜ್ಜ ಲಕ್ಷಣ ರಾವ್‌ ಹವ್ಯಾಸಿ ಮದ್ದಳೆಗಾರರು, ಭಾಗವತರಾಗಿದ್ದರು. +ಹಾಗಾಗಿ ಯಕ್ಷಗಾನ ಕಲಾಸಕ್ತಿಯೆಂಬುದು ಶ್ರೀಯುತರಿಗೆ ಜನ್ಮಜಾತ ಬಳುವಳಿ. +ಕಾರ್ಕಳದ ನೃತ್ಯಗುರು ನಾಗಪ್ಪ ಕಾಮತರಲ್ಲಿ ನಾಟ್ಯಾಬ್ಯಾಸ. +ತಂದೆಯಿಂದಲೇ ಮದ್ದಳೆವಾದನ ಕಲೆ ಕರಗತ. +1934ರಲ್ಲಿ ಹಿರಿಯಡ್ಕ ಮೇಳದಲ್ಲಿ ತನ್ನ 13ನೇವಯಸ್ಸಿನಲ್ಲೇ ಲವ-ಕುಶ, ರತ್ನಾವತಿ ಕಲ್ಯಾಣದಲ್ಲಿ ದೃಢವರ್ಮನ ಪಾತ್ರ ಸಹಿತ ಸ್ತ್ರೀ ವೇಷಗಳನ್ನೂ ಮಾಡಿದವರಿವರು. +1936ರಲ್ಲಿ ಒತ್ತುಮದ್ದಳೆ ಬಾರಿಸತೊಡಗಿದರು. +ಸುಮಾರು 27ವರ್ಷ ಮಂದಾರ್ತಿ ಮೇಳದಲ್ಲಿ ಹಿರಿಯ ಭಾಗವತ ಶೇಷಗಿರಿ ಕಿಣಿಯವರ ಭಾಗವತಿಕೆಗೆ ಇವರ ಮದ್ದಳೆಯ ಸಾಥಿ ಯಕ್ಷಲೋಕ ಮರೆಯಲಾಗದ ನಾದಲೀಲೆಯನ್ನು ಸೃಷ್ಟಿಸಿತ್ತು. +ಯಕ್ಷಗಾನದಲ್ಲಿ ಏರುವುದ್ದಳೆಯ ಕೊಡುಗೆ ನೀಡಿದ ಮಹಾನ್‌ ಪ್ರತಿಭೆ ಗೋಪಾಲರಾಯರದು. +ಹಿರಿಯಡಕ, ಪೆರ್ಡೂರು, ಮಂದಾರ್ತಿ, ಅಮೃತೇಶ್ವರಿ ಮೇಳಗಳಲ್ಲಿ ಸುಮಾರು ಆರು ದಶಕಗಳ ಕಾಲಕಲಾಕೃಷಿ ನಡೆಸಿದ ಮೇರು ಕಲಾವಿದ ಗೋಪಾಲರಾಯರು ಉಡುಪಿ ಯಕ್ಷಗಾನ ಕೇಂದ್ರದ ಆರಂಭದ ಗುರುಗಳಾಗಿ ಅನನ್ಯ ಸೇವೆ ಸಲ್ಲಿಸಿದವರು. +ಡಾ.ಶಿವರಾಮ ಕಾರಂತರ ಕಾರ್ಯಾಗಾರ-ಕಮ್ಮಟಗಳಿಗೆ ಸಂಪದ್ಭರಿತ ಪ್ರತಿಭೆಯಾಗಿ, ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದವರು. +1976ರಲ್ಲಿ ತನ್ನ ಶಿಷ್ಯೆ ಡಾ.ಮಾರ್ತಾ ಅ್ಯಸ್ಟನ್ ನೆರವಿನಿಂದ ಯಕ್ಷಕಲೆಯನ್ನು ಕಡಲಾಚೆಯ ಅಮೆರಿಕಾದಲ್ಲಿ ಪಸರಿಸಿದ ಧೀಮಂತಿಕೆ ಇವರದ್ದಾಗಿದೆ. +ಶೇಣಿ-ಸಾಮುಗರ ಹರಿಕಥೆಗೆ ತಬಲಾ ಬಾರಿಸುವುದರಲ್ಲಂತೂ ಇವರದ್ದು ಎತ್ತಿದ ಕೈ. +ಪರಂಪರೆಯ ಯಕ್ಷಗಾನದ ಪುರಾಣ,ಅನುಭವ ಸಾರವನ್ನು ಪರಿಪೂರ್ಣ ಜೀರ್ಣಿಸಿಕೊಂಡು ವಿಶ್ರಾಂತ ಬದುಕಿನಲ್ಲಿರುವ ಗೋಪಾಲರಾಯರ ಧರ್ಮಪತ್ನಿ ಮೀನಾಕ್ಷಿ ಬಾಯಿ. +ಓರ್ವ ಸುಪುತ್ರ ಎಚ್‌.ರಾಮಮೂರ್ತಿ ರಾವ್‌ ಸಿಂಡಿಕೇಟ್‌ ಬ್ಯಾಂಕ್‌ ಉದ್ಯೋಗಿ. +ಶ್ರೀಯುತರಿಗೆ 1997ರಲ್ಲಿ ಕರ್ನಾಟಕ ಜಾನಪದ ಯಕ್ಷಗಾನ ಅಕಾಡೆಮಿ ಪ್ರಶಸ್ತಿ. +1998ರಲ್ಲಿ ಜಾನಪದಶ್ರೀ, 1972ರಲ್ಲಿ ಕರ್ನಾಟಕ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ. +ದೇರಾಜೆ ಪ್ರಶಸ್ತಿ, ಸೀತಾನದಿ ಪ್ರಶಸ್ತಿ, ಹಾಗೂ ಉಡುಪಿ ಯಕ್ಷಗಾನ ಕಲಾರಂಗದ ಮಾರ್ವಿ ಪ್ರಶಸ್ತಿ ದೊರಕಿರುತ್ತದೆ. +"ಮದ್ದಳೆಯ ಮಾಯಾಲೋಕ' ಡಾ|। ಕೆ. ಎಮ್.ರಾಘವನಂಬಿಯಾರ್‌ ಸಂಪಾದಕತ್ವದಲ್ಲಿ ಇವರ ಕುರಿತಾಗಿ ಪ್ರಕಟಗೊಂಡ ಅಪೂರ್ವ ಗ್ರಂಥ. +ಬಡಗುತಿಟ್ಟಿನ ಸಾಂಪ್ರದಾಯಿಕ ಭವ್ಯತೆಗೆ ನಿಚ್ಚಳ ಸಾಕ್ಷಿಯಾಗುವ ಅಗ್ರಮಾನ್ಯ ಕಲಾವಿದ ಐರೋಡಿ ಗೋವಿಂದಪ್ಪ ಉಡುಪಿ ಜಿಲ್ಲೆಯ ಐರೋಡಿ ಎಂಬಲ್ಲಿ 10-11-1945ರಲ್ಲಿ ಬೂದ ಭಾಗವತ ಹಾಗೂ ಗೌರಿ ದಂಪತಿಂತು ಸುಪುತ್ರರಾಗಿ ಜನಿಸಿದ ಗೋವಿಂದಪ್ಪನವರು ಕಲಿತದ್ದು ಐದನೇ ತರಗತಿಯವರೆಗೆ. +ಇವರ ತಂದೆ ಹೆಸರಾಂತ ಭಾಗವತರಾದುದರಿ೦ಂದ ಯಕ್ಷಕಲೆ ಶ್ರೀಯುತರಿಗೆ ಅಭಿಜಾತವಾಗಿ ಒಲಿಯಿತು. +ತಂದೆಯವರಲ್ಲಿ ಭಾಗವತಿಕೆ, ತೋನ್ರೆ ಕಾಂತಪ್ಪ ಮಾಸ್ತರರಲ್ಲಿ ಹೆಜ್ಜೆಗಾರಿಕೆ ಅಭ್ಯಸಿಸಿದ ಗೋವಿಂದಪ್ಪ ಅವರು ತನ್ನ 12ರ ಹರೆಯದಲ್ಲೇ ಬಣ್ಣದ ಬದುಕು ಆರಂಭಿಸಿದರು. +ಪ್ರಸಿದ್ಧ ಹಾರಾಡಿ ತಿಟ್ಟಿನ ಶೈಲೀಕೃತ ಕಲಾವಿದರಾಗಿ ಗುರುತಿಸಿಕೊಂಡ ಐರೋಡಿಯವರು ಪರಿಶುದ್ಧ ಯಕ್ಷಗಾನ ಪರಂಪರಾಗತ ಕಲಾಭಿವ್ಯಕ್ತಿಗೆ ಪ್ರಸಿದ್ಧರು. +ಕೋಡಂಗಿ, ಬಾಲಗೋಪಾಲ,ಪೀಠಿಕಾ ಸ್ರ್ತೀ ವೇಷ, ಹೀಗೆ ಹಂತ ಹಂತವಾಗಿ ಕಲಾಸೋಪಾನವೇರುತ್ತ ಸಾಗಿದ ಐರೋಡಿಯವರು ಬಹುಬೇಗನೆ ಗಂಡುಕಲೆಯ ಪುಂಡುವೇಷಧಾರಿಯಾದರು. +ಇವರ ಲವ-ಕುಶ,ಅಭಿಮನ್ಯು, ಬಬ್ರುವಾಹನ, ಪುಷ್ಕಳ ಪಾತ್ರಗಳು ಜನಪ್ರಿಯವಾದವು. +ಹಾಗೆಯೇ ಸುಧನ್ವ, ಅರ್ಜುನ,ಮಾರ್ತಾಂಡತೇಜ, ಚಂದ್ರಹಾಸ, ಶ್ವೇತಕುಮಾರ ಮೊದಲಾದ ಭೂಮಿಕೆಗಳು ವಿಶೇಷ ಗೆಲುವು ಕಂಡವು. +ತದನಂತರ ಬಡಗುತಿಟ್ಟಿನ ಸಮರ್ಥ ಎರಡನೇ ವೇಷಧಾರಿಯಾಗಿ ಹಿರಣ್ಯಕಶಿಪು, ಕರ್ಣ, ಭೀಷ್ಮಜಾಂಬವ, ವೀರಮಣಿ, ಉಗ್ರಸೇನ, ತಾಮ್ರಧ್ವಜ,ದಶರಥ, ಯಯಾತಿ,ಕಂಸ, ಮೊದಲಾದ ಭೂಮಿಕೆಗಳನ್ನು ರಂಗನೆಲದಲ್ಲಿ ಜೀವಂತವಾಗಿ ಕಡೆದು ನಿಲ್ಲಿಸಿದರು. +ಗೋಳಿಗರಡಿ ಮೇಳವೊಂದರಲ್ಲೇ ರಜತವರ್ಷದ ರಂಗಕೃಷಿ ನಡೆಸಿದ ಐರೋಡಿಯವರು, ಸಾಲಿಗ್ರಾಮ9, ಮೂಲ್ಕಿ 3, ಕುಂಬಳೆ 2, ಇರಾ 1, ಪೆರ್ಣೂರುತ ಅಮೃತೇಶ್ವರಿ 2. ಹಿರಿಯಡಕ 2, ಹೀಗೆ 49ವರ್ಷ ಪೂರೈಸಿ ವೃತ್ತಿ ಬದುಕಿನ ಸುವರ್ಣ ವರ್ಷಕ್ಕೆ ಸನಿಹವಾಗುತ್ತಿದ್ದಾರೆ. +ಅಪಾರ ಪ್ರಸಂಗಾನುಭವ, ಅನ್ಯಾದೃಶ ಪಾತ್ರ ಪರಿಕಲ್ಪನೆ, ಆಕರ್ಷಕ ವೇಷಾಲಂಕಾರ, ಕಂಠೀರವದ ಕಂಠರವ, ವಿದ್ವತ್‌ ಪೂರ್ಣ ವಾಗ್ದರಣಿ,ಕಾಂತಿಪೂರ್ಣ ಕಣ್ಣುಗಳ ಸೆಳಕು, ಲಯಪೂರ್ಣನೃತ್ಯ, ಅಭಿನಯ, ಗತ್ತು ಗೈರತ್ತಿನ ರಂಗನಡೆಯಲ್ಲಿವಿಶಿಷ್ಟ ಛಾಪು-ರಭಾಪು ಮೂಡಿಸುವ ಕಲಾವಿದ ಐರೋಡಿಯವರು . +ಪತ್ನಿ ಸುಮತಿ. +ವಿಶ್ವನಾಥ, ವಿನಯ ಎಂಬ ಈರ್ವರು ಮಕ್ಕಳು. +ಶ್ರೀಯುತರಿಗೆ ಪ್ರತಿಷ್ಠಿತ ರಾಜ್ಯ ಪ್ರಶಸ್ತಿ, ಯಕ್ಷಗಾನ ಕಲಾರಂಗದ ಮಾರ್ವಿ ಹೆಬ್ಬಾರ ಪ್ರಶಸ್ತಿ, ಪಳ್ಳಿ ಸೋಮನಾಥ ಹೆಗ್ಡೆ ಪ್ರಶಸ್ಥಿ, ನಿಡಂಬೂರು ಪ್ರಶಸ್ತಿ,ಜಾನಪದ ಕಲಾ ಪ್ರಶಸ್ತಿ, ನಿಟ್ಟುರು ಭೋಜಪ್ಪ ಸುವರ್ಣ ಪ್ರಶಸ್ತಿ, ದೋಗ್ರಪೂಜಾರಿ ಪ್ರಶಸ್ತಿಯೂ ದೊರಕಿರುತ್ತದೆ. +ಇವರು ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯ ಸದಸ್ಯರಾಗಿದ್ದರು. +ಬಡಗುತಿಟ್ಟಿನ ಯಕ್ಷಗಾನ ರಂಗಭೂಮಿಯಲ್ಲಿ ಅಗ್ರಪಂಕ್ತಿಯಲ್ಲಿ ಗುರುತಿಸಲ್ಪಡುವ ಪ್ರಸಿದ್ಧ ಹಿರಿಯ ಸ್ತ್ರೀವೇಷಧಾರಿ ಮಾಗೋಳಿ ಗೋವಿಂದ ಶೇರಿಗಾರ್‌. +ಕುಂದಾಪುರ ತಾಲೂಕಿನ ಬಸರೂರು, ಗ್ರಾಮದ ಮಾರ್ಗೋಳಿ ಎಂಬಲ್ಲಿ 1926ರಲ್ಲಿ ಜನಿಸಿದ ಗೋವಿಂದ ಶೇರಿಗಾರರು ನರಸಿಂಹ ಶೇರಿಗಾರ್‌-ಸುಬ್ಬಮ್ಮ ದಂಪತಿಯ ಸುಪುತ್ರ. +ನಾಲ್ಕನೆ ತರಗತಿಯವರೆಗೆ ಅಕ್ಷರಾಭ್ಯಾಸ ಮಾಡಿದ ಇವರು ತಮ್ಮ ಹದಿಮೂರರ ಹರೆಯದಲ್ಲೇ ಬಣ್ಣದ ಬದುಕಿಗೆ ಮುಖ ಮಾಡಿದರು. +ಕೌಟುಂಬಿಕ ಯಕ್ಷಗಾನೀಯ ಹಿನ್ನೆಲೆ ಇವರಿಗಿಲ್ಲವಾದರೂ, ಬಾಲ್ಯದಿಂದಲೇ ವೈಮನ ಆವರಿಸಿದ್ದ ಅನ್ಯಾದೃಶ ಕಲಾಸಕ್ತಿ ರಂಗಬಾಳುವೆಯನ್ನು ಆಲಂಗಿಸುವಂತೆ ಮಾಡಿತು. +ದಶಾವತಾರಿ ಗುರು ವೀರಭದ್ರನಾಯಕ್‌ ಹಾಗೂ ಕೊಕ್ಕರ್ಣೆ ನರಸಿಂಹ ಕಮ್ಮಿಯವರ ಗುರುತನದಲ್ಲಿ ಶಾಸ್ತ್ರೋಕ್ತ ಯಕ್ಷ ಶಿಕ್ಷಣವನ್ನು ಪಡೆದು, ಕೋಡಂಗಿ, ಬಾಲಗೋಪಾಲ,ಪೀಠಿಕಾ ಸ್ತ್ರೀವೇಷ ಹೀಗೆ ಹಂತ-ಹಂತವಾಗಿ ಯಕ್ಷಗಾನ ಬಯಲು ವಿಶ್ವ ವಿದ್ಯಾಲಯದಲ್ಲಿ ತೇರ್ಗಡೆ ಹೊಂದುತ್ತಾ ಸಾಗಿ ಪ್ರಧಾನ ಸ್ತ್ರೀವೇಷಧಾರಿಯಾಗಿ ರಂಗವಾಳಿದರು. +ಸೌಕೂರು, ಮಂದಾರ್ತಿ, ಕೂಡ್ಲು, ಇಡಗುಂಜಿ,ಸಾಲಿಗ್ರಾಮ, ಪೆರ್ಡೂರು, ಮಾರಣಕಟ್ಟೆ, ಅಮೃತೇಶ್ವರಿ ಮೇಳಗಳಲ್ಲಿ ಸುದೀರ್ಥ ಅರ್ಧ ಶತಮಾನದ ಯಕ್ಷಜೀವನ ಸಾಗಿಸಿದ ಮೇರು ಕಲಾವಿದ ಮಾರ್ಗೋಳಿಯವರು ಇದೀಗ 84ರ ವಯೋ ಹಿರಿತನದಲ್ಲಿ ಕುಂದಾಪುರ ಪಡುಕೇರಿಯ ತಮ್ಮ ನಿವಾಸದಲ್ಲಿ ವಿಶ್ರಾಂತ ಜೀವನದಲ್ಲಿದ್ದಾರೆ. +ಶ್ರೀದೇವಿ, ಮೀನಾಕ್ಷಿ, ದ್ರೌಪದಿ, ಶಶಿಪ್ರಭೆ, ಚಿತ್ರಾಂಗದೆ,ಪ್ರಮೀಳೆ, ಮದನಾಕ್ಷಿ, ಕಾಂತಿಮತಿ, ಪ್ರಭಾವತಿ, ದುರ್ದುಂಡಿ ಮೊದಲಾದ ಮುಖ್ಯ ಸ್ತ್ರೀಪಾತ್ರಗಳಿಗೆ ವಿಶೇಷ ಕಲಾವರ್ಚಸ್ಸು ನೀಡಿದ ಮಾರ್ಗೋಳೆಯವರು ಕಸೆ ಸ್ತ್ರೀ ವೇಷಗಳಲ್ಲಂತೂ ಸಾಟಿಯಿಲ್ಲದ ಪ್ರತಿಭೆಯ ಪ್ರಭೆಯಲ್ಲಿ ಪ್ರಜ್ವಲಿಸಿದರು. +ಹಿಂದೆ ತೆಂಕುತಿಟ್ಟಿಗೇ ಮೀಸಲು ಎಂಬಂತಿದ್ದ ದೇವಿ ಮಹಾತ್ಮೆಯ ಶ್ರೀದೇವಿ ಪಾತ್ರವನ್ನು ಬಡಗಿನ ರಂಗಸ್ಥಳದಲ್ಲಿ ಅದ್ಬುತ ನಿರ್ವಹಣಯಿಂದ ಪ್ರತಿಷ್ಠಾಪಿಸಿದ ಹಿರಿಮೆ ಮಾರ್ಗೊಳಿಯವರಿಗಿದೆ. +ವೃತ್ತಿರಂಗದ ಕೊನೆಯ ಹನ್ನೆರಡುವರ್ಷ ಸ್ತ್ರೀಪಾತ್ರ ನಿರ್ವಹಣೆಯನ್ನು ಬಿಟ್ಟು, ಶ್ರೀರಾಮ, ಶ್ರೀಕೃಷ್ಣ, ಸುಧನ್ವ, ತಾಮ್ರಧ್ವಜ, ಹಂಸದ್ಧಜ, ಮಾರ್ತಾಂಡ ತೇಜ,ಕಮಲಭೂಪ ಮೊದಲಾದ ಪುರುಷ ವೇಷಗಳನ್ನು ಧರಿಸಿ ಕಲಾರಸಿಕರ ಅಭಿಮಾನಕ್ಕೆ ಪಾತ್ರಾದವರು. +ಸಾಂಪ್ರದಾಯಿಕ ಶೈಲೀಕೃತ ನೃತ್ಯಾಭಿನಯ, ಅದ್ವಿತೀಯ ಪ್ರತ್ಯುತ್ತನ್ನ ಮತಿತ್ವ, ಅನನ್ಯ ರಂಗ ತಾದಾತ್ಮ್ಯ, ಅಗಾಧ ಪೌರಾಣಿಕ. +ಜ್ಞಾನ ಮಹಾನ್‌ ಕಲಾವಿದ ಮಾರ್ಗೋಳಿಯವರಲ್ಲಿ ನಿಚ್ಚಳವಾಗಿ ಗುರುಕಿಸಬಹುದಾಗಿದ್ದು ಅವರ ತೆರೆ ಕುಣಿತ, ರಥ ಕುಣಿತ, ರಂಗದಲ್ಲಿನ ಚುರುಕುತನ,ನಡೆ-ನುಡಿ, ನಿಲುವು-ನೋಟ ಎಲ್ಲವೂ ಶುದ್ಧ ಯಕ್ಷಗಾನದ ಬದ್ಧ ಕುರುಹು ಪುರಾವೆಗಳಾಗುತ್ತವೆ. +ಕಲಾ ಪ್ರಪಂಚದಲ್ಲಿ ಸಿದ್ಧಿಯ ಶಿಖರವೇರಿದರೂ ಯಾವುದೇ ಅಹಮಿಶೆಯ ಎಳೆಯನ್ನೂ ಶ್ರೀಯುತರ ಸಮಗ್ರ ವ್ಯಕ್ತಿತ್ವದಲ್ಲಿ ಗುಲಗಂಜಿ ಮಾತ್ರಕ್ಕೂ ಹುಡುಕುವುದಕ್ಕೂ ಅಸಾಧ್ಯವೆಂದರೆ ಅತಿಶಯದ ಮಾತಲ್ಲ. +ಸಮರ್ಥ ಕಲಾವಿದರಾದ ಮಾರ್ಗೋಳಿಯವರು ಸುಯೋಗ್ಯ ಗುರುವಾಗಿಯೂ ಅನೇಕಾನೇಕ ಪ್ರತಿಭಾನ್ವಿತ ಶಿಷ್ಯರನ್ನು ರಂಗಭೂಮಿಗೆ ನೀಡಿದ್ದಾರೆ. +ಗುರು ಬನ್ನಂಜೆ ಸಂಜೀವ ಸುವರ್ಣರಂತಹ ಉನ್ನತ ಪ್ರತಿಭಾವಂತರಿಗೆ ಗುರುವಾದ ಗರಿಮೆ ಶೇರಿಗಾರರಲ್ಲಿದೆ. +ಮಾರ್ಗೋಳಿಯವರ ಸಹಧರ್ಮಿಣಿ ಸುಲೋಚನಾ. +ರಾಧಾಕೃಷ್ಣ, ಮಹೇಶ, ಆಶಾಲತಾ, ಇಂದಿರಾ ಇವರ ನಾಲ್ಕುಮಂದಿ ಮಕ್ಕಳು. +ಸರ್ವಶ್ರೇಷ್ಠ ಸ್ರ್ತೀ ವೇಷಧಾರಿಯಾಗಿ ಯುಗಳ ತಿಟ್ಟಿನ ಯಕ್ಷ ಲೋಕದಲ್ಲಿ ಪರಂಪರೆಯ ಹೆಜ್ಜೆ ಮೂಡಿಸಿದ ಹಿರಿಯ ಕಲಾವಿದ . +ಮಾರ್ಗೋಳಿ ಗೋವಿಂದ ಶೇರಿಗಾರರಿಗೆ ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡಮಿ ಪ್ರಶಸ್ತಿ ಕಾರ್ಕಡ ಶ್ರೀನಿವಾಸ ಉಡುಪ ಪ್ರಶಸ್ತಿ ಉಡುಪಿ ಯಕ್ಷಗಾನ ಕಲಾರಂಗದ ಡಾ.ಬಿ.ಬಿ.ಶೆಟ್ಟಿ ಪ್ರಶಸ್ತಿ ಸೇರಿದಂತೆ ನೂರಾರು ಪ್ರತಿಷ್ಠಿತ ಸಂಮಾನ, ಗೌರವಗಳು ದೊರಕಿವೆ. +ಮಾಧುರ್ಯಮಯ ಮದ್ಮಳೆವಾದನದಲ್ಲಿ ಪರಿಪಕ್ಕ ಪ್ರತಿಭೆಯಾಗಿ ಗುರುತಿಸಿ-ಕೊಂಡವರು ಹಾಲಾಡಿ ಚಂದ್ರ ಆಚಾರ್ಯ. +ಮಹಾಬಲ ಆಚಾರ್‌-ಅಕ್ಕಣಿ ಆಚಾರ್ತಿ ದಂಪತಿಯ ಸುಪುತ್ರರಾಗಿ ಹಾಲಾಡಿಯಲ್ಲಿ ಜನಿಸಿದಚಂದ್ರ ಆಚಾರ್ಯರಿಗೆ 45 ವರ್ಷ ಪ್ರಾಯ. +ಆರಕ್ಕೆ ಓದು ನಿಲ್ಲಿಸಿ, 18ರ ಹರಯದಲ್ಲಿ ಯಕ್ಷಗಾನ ರಂಗಕ್ಕೆ ಕಾಲಿರಿಸಿದ ಚಂದ್ರ ಆಚಾರ್ಯರು ಕಲಾವಂತರ ಮನೆತನದ ಹಿನ್ನೆಲೆಯಲ್ಲಿ ಬೆಳೆದು ಬೆಳಗಿದ ಹಿಮ್ಮೇಳ ಕಲಾವಿದರು. +ಇವರ ಅಜ್ಜರಾಮಾಚಾರ್‌ ಹಾಗೂ ತಂದೆ ಮಹಾಬಲ ಆಚಾರ್‌ಹವ್ಯಾಸೀ ಮದ್ದಳೆಗಾರರಾಗಿದ್ದರು. +ನಾರ್ಣಪ್ಪಉಪ್ಪೂರ, ದುರ್ಗಪ್ಪ ಗುಡಿಗಾರ್‌, ಕೆ.ಪಿ.ಹೆಗಡೆ,ಸುರೇಶ ಉಪ್ಪೂರ, ಸದಾನಂದ ಐತಾಳರ ಶಿಷ್ಯರಾದ ಚಂದ್ರ ಆಚಾರ್ಯರು ಅನುಭವೀ ಮದ್ದಳೆಗಾರರಾಗಿ ಪ್ರಸಿದ್ಧಿ ಹೊಂದಿದವರು. +ಕಳುವಾಡಿ-2 (ಸಂಗೀಶಗಾರಿಕೆ), ಕಮಲಶಿಲೆ-2, ಮಂದಾರ್ತಿ-3, ಹಾಲಾಡಿ-2, ಸೌಕೂರು-3,ಸಾಲಿಗ್ರಾಮ-೨2, ಶಿರಸಿ-2, ಗೋಳಿಗರಡಿ-2, ಹೀಗೆ 18 ವರುಷಗಳ ಕಾಲ ಇವರ ಕಲಾಸೇವೆ ನಡೆದಿದೆ. +ಪ್ರಸ್ತುತ ಶ್ರೀಯುತರು ಯಕ್ಷಗಾನ ಸಂಘಸಂಸ್ಥೆಗಳ ಗುರುಗಳಾಗಿಯೂ, ಮದ್ದಳೆಗಾರರಾಗಿಯೂ ಕಲಾ-ಸೇವೆಯಲ್ಲಿದ್ದಾರೆ. +ಆಕಾಶವಾಣಿ, ದೂರದರ್ಶನ ಕಲಾವಿದರಾಗಿಯೂ ಖ್ಯಾತನಾಮರಾದ ಚಂದ್ರಆಚಾರ್ಯರು ಪದ್ಯದ ಸಾಹಿತ್ಯ, ಭಾವಾರ್ಥಕ್ಕೆ ಮಿಡಿತವಾಗುವ ಮದ್ದಳೆಯ ನುಡಿತದಲ್ಲಿ ಸಿದ್ಧಹಸ್ತರು. +ಪತ್ನಿ ಕಲಾವತಿ. +ಮಮತಾ, ವಿನುತಾ,ವಿಜಯಲಕ್ಷ್ಮೀ ಎಂಬ ಮೂರು ಮಂದಿ ಹೆಣ್ಣುಮಕ್ಕಳು. +ಚಂದ್ರ ಆಚಾರ್ಯರು ಉಡುಪಿ ಜಿಲ್ಲಾ ಪಂಚ್ಯಾತ್‌ಯುವಜನ ಸೇವಾ ಮತ್ತು ಕ್ರೀಡಾಇಲಾಖೆ ಹಾಗೂ ಕೊಲ್ಲೂರು ಮೂಕಾಂಬಿಕಾ ದೇವಳ - ಯಕ್ಷಗಾನ ದಶಮಾನೋತ್ಸವ ಸಮಾರಂಭದಂದು ಸಮ್ಮಾನ ಪಡೆದಿರುತ್ತಾರೆ. +ವ್ಯಾಕರಣಬದ್ಧ ಭಾಷಾಶುದ್ಧಿ, ಪರಿಸ್ಫುಟ ನೃತ್ಯಾಭಿನಯ ವೃೆಖರಿ, ಉತ್ಕೃಷ್ಟ ರಂಗವ್ಯವಹಾರಗಳಿಂದ ನಿರ್ವಹಣಾ ಪಾತ್ರಗಳಿಗೆ ಜೀವ ತುಂಬುವ ಕಲಾವಿದ ಚಂದ್ರಕುಮಾರ್‌ನೀರ್ಜಡ್ಡು. +ಉಡುಪಿ ಜಿಲ್ಲೆಯ ಮಂದಾರ್ತಿ ಸನಿಹದ ನೀರ್ಜಡ್ಡು ಎಂಬಲ್ಲಿ ವೀರ ಕುಲಾಲ ಬೆಳಕು ದಂಪತಿಯ ಸುಪುತ್ರರಾಗಿ 13-11-1973ರಲ್ಲಿ ಜನಿಸಿದ ಚಂದ್ರಕುಮಾರ್‌, 5ನೇ ತರಗತಿ ವಿದ್ಯಾಭ್ಯಾಸ ಪೂರೈಸಿ,ತನ್ನ 11ರ ಹರೆಯದಲ್ಲಿ ಯಕ್ಷಗಾನ ರಂಗಭೂಮಿಗೆ ಪದವಿರಿಸಿದರು. +ಸುತ್ತಮುತ್ತ ನಡೆಯುತ್ತಿದ್ದ ಮಂದಾರ್ತಿ ಮೇಳದ ಬಯಲಾಟಗಳೇ ಶ್ರೀಯುತರ ಕಲಾಸಕ್ತಿ ಕುದುರಿಸಿದವು. +ವಂಡಾರು ಬಸವ ನಾಯಿರಿ ಅವರೊಂದಿಗೆ ಹೂವಿನಕೋಲು ತಿರುಗಾಟದ ಬಾಲಕಲಾವಿದನಾಗಿ ಬಾಲ್ಯದಲ್ಲಿಯೇ ವಿಶೇಷ ಪೌರಾಣಿಕ ಜ್ಞಾನಸಂಪಾದಿಸಿದ ಇವರು ಬಸವ ಗಾಣಿಗ ಅವರಲ್ಲಿ ತಾಳಾಭ್ಯಾಸ ಮಾಡಿದರು. +ಮುಂಡಾಡಿ ಬಸವಮರ ಕಾಲರ ಗುರುತನದಲ್ಲಿ ಸಶಕ್ತ ಯಕ್ಷ ನೃತ್ಯಶಿಕ್ಷಣವನ್ನು ಪಡೆದರು. +ಮಂದಾರ್ತಿ 2, ಸಾಲಿಗ್ರಾಮ 18, ಮಂದಾರ್ತಿ5, ಹೀಗೆ ಚಂದ್ರ ಕುಮಾರರು ವೃತ್ತಿರಂಗದಲ್ಲಿ ಸಾರ್ಥಕ ರಜತ ವರ್ಷವನ್ನು ಪೂರೈಸಿದ್ದಾರೆ. +ಪುರಾಣ ಪ್ರಸಂಗಗಳ ಗಂಡು ಪಾತ್ರಗಳಿಗೆ ಜೀವಕಳೆ ನೀಡುವ ಚಂದ್ರಕುಮಾರ್‌ ರಾಜವೇಷ, ಪುರಷವೇಷಗಳನ್ನು ಸಮರ್ಥವಾಗಿ ನಿರ್ವಹಿಸಬಲ್ಲರು. +ಅದ್ವಿತೀಯ ಪಾತ್ರತಾದಾತ್ಮ್ಯ, ನಿರ್ಗಳ ವಚೋಸಂಪತ್ತು,ಪ್ರೌಢ ರಂಗವೈಖರಿ ಕಾಣಿಸುವ ಶ್ರೀಯುತರ ಪೌರಾಣಿಕ ಕಲಾಪ್ರಜ್ಞೆ ಅಗಾಧವಾದುದು. +ಶ್ರೀಕೃಷ್ಣ, ವಿಷ್ಣು, ಅಕ್ರೂರ, ವಿದುರ, ಅರ್ಜುನ,ಹರಿಶ್ಚಂದ್ರ, ಸುಧನ್ವ, ವಿಶ್ವಾಮಿತ್ರ ಮೊದಲಾದ ಅವರ ಪಾತ್ರಗಳು ಸಮೃದ್ಧ ವಾಚಿಕತೆಯೊಂದಿಗೆ ಸೊಗಯಿಸಿವೆ. +ಶ್ರೀಯುತರು ಉತ್ತಮ ಅರ್ಥಧಾರಿಯಾಗಿಯೂ ಗುರುತಿಸಿಕೊಂಡವರು. +ಧರ್ಮಪತ್ನಿ ಲಕ್ಷ್ಮೀ. +ಸಹನಾ,ಸಾತ್ವಿಕ ಮಕ್ಕಳು. +ಕಲಾವಿದ ಚಂದ್ರಕುಮಾರ್‌ ಪ್ರಸ್ತುತ ಮಂದಾರ್ತಿ ಮೇಳದಲ್ಲಿ ಕಲಾಸೇವೆ ನಡೆಸುತ್ತಿದ್ದಾರೆ. +ಶ್ರೀಯುತರಿಗೆ ಹಲವು ಸಂಘ-ಸಂಸ್ಥೆಗಳಿಂದ ಗೌರವ ಸಂಮಾನಗಳು ದೊರಕಿವೆ. +ಪೌರುಷೇಯ ರಂಗಠೀವಿಯ ಪುರುಷಪಾತ್ರಗಳನ್ನೂ, ಸಿಡಿಲಬ್ಬರದ ಚುರುಕುನಡೆಯ ಪುಂಡುವೇಷಗಳನ್ನು ಸಮರ್ಥವಾಗಿ ನಿರ್ವಹಿಸುವ ಯಕ್ಷನಟ ಚಂದ್ರ ಕುಲಾಲ್ ಹಾಲಾಡಿ. +ಕುಂದಾಪುರ ತಾಲೂಕಿನ ಹಾಲಾಡಿ-ಗೋರಾಜೆ ಎಂಬಲ್ಲಿ ಮಂಜುಕುಲಾಲ್‌-ಗಿರಿಜಮ್ಮ ದಂಪತಿಯ ಪುತ್ರನಾಗಿ ಜನಿಸಿದ ಚಂದ್ರಕುಲಾಲ್‌ ಅವರಿಗೀಗ ನಲವತ್ತೊಂದರ ಹರೆಯ. +7ನೇ ಇಯತ್ತೆಯವರೆಗೆ ಪ್ರಾಥಮಿಕ ವಿದ್ಯಾಭ್ಯಾಸ ಪೂರೈಸಿದ ಚಂದ್ರ ಕುಲಾಲ್‌ ಬಣ್ಣದ ಬದುಕು ಕಂಡದ್ದು ವರುಷ ಹನ್ನೆರಡರಲ್ಲಿ. +ಯಕ್ಷಕಲೆಯ ಕುರಿತ ಸಹಜ ಅಭಿರುಚಿಯನ್ನು ಎಳವೆಯಲ್ಲಿಯೇ ಹೊಂದಿದ್ದ ಚಂದ್ರಕುಲಾಲ್‌ ಅವರಿಗೆ ಹಿರಿಯ ಕಲಾವಿದ ಮೊಳವಳ್ಳಿ ಹೆರಿಯನಾಯ್ಕ್‌ ಹಾಗೂ ಹಾಸ್ಯಗಾರ ನಾಗಯ್ಯ ಶೆಟ್ಟಿ ಅವರು ಯಕ್ಷಜೀವನ ಪ್ರವೇಶಕ್ಕೆ ಪ್ರೇರಣೆ ನೀಡಿದರು. +ಮೊಳಹಳ್ಳಿ ಹೆರಿಯ ನಾಯ್ಕ ಹಾಗೂ ಕೆ.ಪಿ ಹೆಗಡೆ ಇವರ ಗುರುಗಳು. +ಸೌಕೂರು ಮೇಳದಲ್ಲಿಯೇ 27ವರ್ಷಗಳ ರಂಗ ತಿರುಗಾಟವನ್ನು ಪೂರೈಸಿದ ಕುಲಾಲರು 1 ವರ್ಷ ಹಾಲಾಡಿ ಮೇಳದಲ್ಲಿ ಸೇವೆ ಸಲ್ಲಿಸಿದ್ದು ಒಟ್ಟು ತಿರುಗಾಟದ ಅವಧಿ 28ವರ್ಷ. + ಚಂದ್ರಕುಲಾಲರ ನೃತ್ಯ, ಅಭಿನಯ, ಯಕ್ಷಗಾನೀಯ ಸೊಗಸಿನಿಂದ ಪಡಿಮೂಡುವಂತಾದ್ದು. +ಅವರ ವೇಷವೂ ಆಕರ್ಷಕ,ಮಾತುಗಾರಿಕೆ ರಂಗಕ್ರಿಯೆ ಪುರಾಣಜ್ಞಾನ ಎಲ್ಲವೂ ಪಾತ್ರದ ಒಟ್ಟು ಕಟ್ಟೋಣಕ್ಕೆ ಔಚಿತ್ಯಪೂರ್ಣವಾಗಿ ಕಾಣುವಂತಾದ್ದು. +ಅಭಿಮನ್ಯು, ಬಬ್ರುವಾಹನ, ಪುಷ್ಕಳ, ಶ್ರೀಕೃಷ್ಣ,ಅರ್ಜುನ, ಕಮಲದ್ದಜ, ಧರ್ಮಾಂಗದ, ಶ್ವೇತಕುಮಾರ,ಚಂದ್ರಹಾಸ ಮೊದಲಾದ ಪೌರಾಣಿಕ ಪಾತ್ರಗಳು ಅವರ ನಿಜ ಪ್ರತಿಭೆಯಿಂದ ನ್ಯಾಯ ಪಡೆದಿವೆ. +ಸಾಂದರ್ಭಿಕವಾಗಿ ಕುಲಾಲರು ಹಾಸ್ಯ ಪಾತ್ರಗಳನ್ನೂ ಮಾಡುವುದಿದೆ. +ಸರೋಜಾ ಶ್ರೀಯುತರ ಪತ್ನಿ,ಶಶಿಧರ, ಸುಧೀರ ಮಕ್ಕಳು. +ಮುಕ್ಕೋಡಿನಲ್ಲಿ ಮತ್ತು ಕಾವ್ರಾಡಿಯಲ್ಲಿ ಇವರಿಗೆ ಗೌರವ ಸಂಮಾನ ದೊರಕಿರುತ್ತದೆ. +ಗತ್ತು-ಗೈರತ್ತಿನ ನೃತ್ಯ, ಅಭಿನಯ ವಿಲಾಸದೊಂದಿಗೆ, ಸಾಹಿತ್ಯಿಕ ವಾಚಿಕ ವೈಖರಿಯನ್ನು ನಿರೂಪಿಸುತ್ತ, ಪಾತ್ರಗಳ ಅಂತರಂಗವನ್ನು ಅರ್ಥೈಸಿಕೊಂಡು ಬಹಿರಂಗಗೊಳಿಸುವ ಕಲಾವಿದ ಚಂದ್ರಗೌಡ ಗೋಳಿಕೆರೆ. +ಕುಂದಾಪುರ ತಾಲೂಕಿನ ಗೋಳಿಕೆರೆ ಎಂಬಲ್ಲಿ15-5-1970ರಲ್ಲಿ ಮಂಜುಗೌಡ-ದಾರು ಗೌಡ್ತಿಯವರ ಸುಪುತ್ರನಾಗಿ ಜನಿಸಿದ ಚಂದ್ರಗೌಡರು 5ನೇ ತರಗತಿಯವರೆಗೆ ಓದು ಮುಗಿಸಿ 14ನೇ ವಯಸ್ಸಿನಲ್ಲೇ ಬಣ್ಣದ ಬದುಕಿಗೆ ಕಾಲಿರಿಸಿದರು. +ಪ್ರಸಿದ್ಧ ಹಾಸ್ಯಗಾರ ಕಮಲಶಿಲೆ ಮಹಾಬಲ ದೇವಾಡಿಗರಲ್ಲಿ ಯಕ್ಷಗಾನ ಶಿಕ್ಷಣ ಪಡೆದ ಚಂದ್ರಗೌಡರು ಹಾಲಾಡಿ 2, ಮಾರಣಕಟ್ಟೆ 23,ಮೇಳಗಳಲ್ಲೇ ರಜತ ಸಂಭ್ರಮ ಆಚರಿಸುತ್ತಿದ್ದಾರೆ. +ಪ್ರಸ್ತುತ ಶ್ರೀಯುತರು ಮಾರಣಕಟ್ಟೆ ಮೇಳದ ಕಲಾವಿದರಾಗಿ ದುಡಿಯುತ್ತಿದ್ದಾರೆ. +ಸದ್ಯಢ ಆಳಂಗ,ಆಕರ್ಷಕ ವೇಷಗಾರಿಕೆ, ಪಾತ್ರೋಚಿತ ನೃತ್ಯಗಾರಿಕೆ,ಸಮೃದ್ಧ ಅರ್ಥಗಾರಿಕೆಯಲ್ಲಿ ಮೆರೆಯುವ ಚಂದ್ರಗೌಡರು ಕಂಸ, ಕೀಚಕ, ವಿಭೀಷಣ, ಕೌರವ,ದುಷ್ಟಬುದ್ಧಿ, ಕಾರ್ತವೀರ್ಯ, ಕರ್ಣ, ವೀರಮಣಿ ಮೊದಲಾದ ಭೂಮಿಕೆಗಳನ್ನು ಸಮರ್ಥವಾಗಿ ಪೋಷಿಸು-ವವರು. +ಶ್ರೀಯುತರು ಪುರುಷವೇಷ, ಮುಂಡಾಸುವೇಷ,ರಾಜವೇಷಗಳಲ್ಲಿ ಕಲಾ-ಭಿವ್ಯಕ್ತಿಯಿಂದ ಸಹೃದಯ ಕಲಾಸಕ್ತರ ಮನ ಮುದಗೊಳಿಸಿದವರು. +ಖಳನಾಯಕ,ಪ್ರತಿನಾಯಕ ಪಾತ್ರಗಳಲ್ಲಂತೂ ಚಂದ್ರಗೌಡರ ಪ್ರತಿಭಾ ಪಾರಮ್ಯದಲ್ಲಿ ಸಮೃದ್ಧರಾಗಿ ಸೊಗಯಿಸುತ್ತವೆ. +ಬಾಳಸಂಗಾತಿ ತುಂಗಾ. +ಪ್ರಹ್ಲಾದ, ಪ್ರಸನ್ನ, ನಯನ ಎಂಬ ಮೂರು ಮಕ್ಕಳನ್ನು ಪಡೆದ ಚಂದ್ರಗೌಡರನ್ನು ಹಲವು ಸಂಘ-ಸಂಸ್ಥೆಗಳು ಆದರಣೀಯ ಸಂಮಾನದಿಂದ ಗೌರವಿಸಿವೆ. +ಸಾಂಪ್ರದಾಯಿಕ ವರ್ಣರಂಜಿತ ವ್ಯಕ್ತಿತ್ವದಿಂದ ಸಮರ್ಥ ಬಣ್ಣದ ವೇಷಧಾರಿಯಾಗಿ ರೂಪುಗೊಂಡ ಹಿರಿಯ ಕಲಾವಿದ ಎಳ್ಳಂಪಳ್ಳಿ ಜಗನ್ನಾಥ ಆಚಾರಿ. +ಉಡುಪಿ ತಾಲೂಕಿನ ಎಳ್ಳಂಪಳ್ಳಿ ಎಂಬ ಹಳ್ಳಿಯಲ್ಲಿ 9-7-1956ರಲ್ಲಿ ಹುಟ್ಟಿ ಬೆಳೆದ ಶ್ರೀಯುತರು ಶೀನ ಆಚಾರ್‌-ಅಕ್ಕಯ್ಯ ದಂಪತಿಯ ಸುಪುತ್ರ. +ಕಡು ಬಡತನದಿಂದಾಗಿ ಐದನೇ ತರಗತಿಗೆ ವಿದ್ಯಾಭ್ಯಾಸ ಮೊಟಕುಗೊಳಿಸಿ ತನ್ನ 14ರ ಹರೆಯದಲ್ಲೇ ಬಣ್ಣದ ಬದುಕು ಕಂಡವರು ಜಗನ್ನಾಥ ಆಚಾರಿ. +ಇವರ ತಂದೆ ಹವ್ಯಾಸಿ ಯಕ್ಷಗಾನ ಕಲಾವಿದರು. +ಮದ್ದಳೆಗಾರಿಕೆ ಹಾಗೂ ಭಾಗವತಿಕೆಯನ್ನೂ ಬಲ್ಲವರಾಗಿದ್ದರು. +ಹಾಗಾಗಿ ಜಗನ್ನಾಥ ಆಚಾರ್ಯರಿಗೆ ಯಕ್ಷ-ಗಾನದ ಮೇಲಣ ಅನ್ಯಾದೃಶ ಆಸಕ್ತಿ ಪ್ರೇರಣೆಗೆ ರಕ್ತಗುಣವೇ ಬಳುವಳಿಯಾಯಿತು. +ಉಡುಪಿ ಯಕ್ಷಗಾನ ಕೇಂದ್ರದಲ್ಲಿ ನೀಲಾವರ ರಾಮಕೃಷ್ಣಯ್ಯ, ವೀರಭದ್ರ ನಾಯಕ್‌, ಹಿರಿಯಡಕ ಗೋಪಾಲರಾವ್‌, ಮಹಾಬಲ ಕಾರಂತ, ಹೆರಂಜಾಲು ವೆಂಕಟರಮಣ ಗಾಣಿಗರಿಂದ ಸಶಕ್ತ ಕಲಾವಿದ್ಯೆಯನ್ನು ಆರ್ಜಿಸಿಕೊಂಡ ಆಚಾರ್ಯರಿಗೆ ಉಡುಪಿ ಬಸವ, ವಂಡ್ಸೆ ನಾರಾಯಣ ಗಾಣಿಗರ ಗುರುತನವೂ ದೊರಕಿದೆ. +ಕೋಟ ಶಿವರಾಮ ಕಾರಂತರ "ಯಕ್ಷರಂಗ'ದ ಕಲಾವಿದರಾಗಿ, ಕಾರಂತರ ಕಟ್ಟುನಿಟ್ಟಿನ ಕ್ರಮಬದ್ಧ ಮಾರ್ಗದರ್ಶನಕ್ಕೆ ಒಳಗಾಗಿ ವಿಶೇಷ ಕಲಾನುಭವ ಸಂಪಾದಿಸಿದರು. +ಕಾರಂತರೊಂದಿಗೆ ಯಕ್ಷರಂಗದ ಮೂಲಕ ಹಾಂಕಾಂಗ್‌, ಸ್ವಿಟ್ಜರ್‌ಲ್ಯಾಂಡ್‌, ರಷ್ಯಾ,ಫ್ರಾನ್ಸ್‌ ಮುಂತಾದ ವಿದೇಶೀ ನೆಲದಲ್ಲೂ ಬಣ್ಣದ ವೈಭವವನ್ನು ತೋರಿದರು. +ಸಾಂಪ್ರದಾಯಿಕ ಶೈಲೀಕೃತ ಮುಖವರ್ಣಿಕೆ,ವೇಷಾಲಂಂಕಾರ, ನೃತ್ಯಾಭಿನಂಯ, ರಂಗನಡೆ,ವಚೋಚಮತ್ಕಾರದಲ್ಲಿ ಬಡಗು ಬಣ್ಣಕ್ಕೆ ರಂಗುತುಂಬಿದ ಶ್ರೀಯುತರು ಮಂದಾರ್ಶಿ 24,ಪೆರ್ಡೂರು 1, ಸಾಲಿಗ್ರಾಮ 3, ಹೀಗೆ 28 ವರ್ಷಮೇಳ ತಿರುಗಾಟ, ಸರಿಸುಮಾರು 38 ವರ್ಷಗಳ ರಂಗಕೃಷಿ ಇವರದ್ದು. +ಶೂರ್ಪನಖೆ, ರಾವಣ, ಹಿಡಿಂಬ, ಹಿಡಿಂಬೆ,ರಕ್ತಜಂಘಾಸುರ, ಕಾಲಜಂಘ, ಕಾಲನೇಮಿ,ಬಕಾಸುರ, ಕಿಮ್ಮೀರ, ವೃತ್ರಜ್ವ್ಞಾಲೆ, ದುರ್ಜಯ ಮೊದಲಾದ ಬಣ್ಣದ ವೇಷಗಳು ಇವರಿಗೆ ಕೀರ್ತಿದೊರಕಿಸಿ ಕೊಟ್ಟಿವೆ. +ಜಗನ್ನಾಥ ಆಚಾರ್ಯರ ಸಹಧರ್ಮಿಣಿ ಜಯಂತಿ. +ನಾಲ್ಕು ಮಂದಿ ಮಕ್ಕಳು. +ಪ್ರಸ್ತುತ ಮಂದಾರ್ತಿವೇಳದ ಬಣ್ಣದ ವೇಷದಾರಿಯಾಗಿ ದುಡಿಯುತ್ತಿದ್ದಾರೆ. +ಶ್ರೀಯುತರ ದೈತ್ಯಪ್ರತಿಭೆಗೆ ರಾಂಪುರ, ಉಡುಪಿ ಮತ್ತು ನೀಲಾವರ ಅಲ್ಲದೆ ಹಲವಾರು ಸಂಘಸಂಸ್ಥೆಗಳು ಗೌರವಿಸಿವೆ. +ಕಲಾವಿದನ ಪಾತ್ರ ಸ್ವಭಾವಪೂರ್ಣ ಅಭಿವ್ಯಕ್ತಿಗೆ ಸ್ಫೂರ್ತಿಯಾಗುವ, ಭಾಗವತರ ಗಾನ ಸಾಹಿತ್ಯ ರಸಭಾವಕ್ಕೆ ಸಾರಥಿಯಾಗುವ ಸಮರ್ಥ ಚೆಂಡೆಗಾರ ಹಳ್ಳಾಡಿ ಜನಾರ್ದನ ಆಚಾರ್ಯ. +ಕುಂದಾಪುರ ತಾಲೂಕಿನ ಹಳ್ಳಾಡಿಯಲ್ಲಿ 1964ರಲ್ಲಿ ಜನಿಸಿದ ಜನಾರ್ದನ ಆಜಾರ್ಯರು ಶ್ರೀನಿವಾಸ ಆಚಾರ್ಯ - ಜಾನಕಿ ಆಚಾರ್ಯ ದಂಪತಿಯ ಪುತ್ರ. +17ನೇ ವರ್ಷದಲ್ಲೇ ಯಕ್ಷಗಾನ ಕ್ಷೇತ್ರವನ್ನು ಪ್ರವೇಶಿಸಿದ ಜನಾರ್ದನ ಅವರಿಗೆ ಖ್ಯಾತ ಚಂಡೆವಾದಕ ರಾಮಕೃಷ್ಣ ಮಂದಾರ್ತಿ ಅವರೇ ಗುರುಗಳು. +ಭಾಗವತರ ಪದ್ಯಗಾರಿಕೆಯೊಂದಿಗೆ ಹದವಾಗಿ ಬೆರೆತ ಸುಮಧುರ ನುಡಿ ತತ್ಕಾರ. +ಹುರುಪು ನೀಡುವ ಸ್ವರ ಝೇಂಕಾರ, ಇವರ ಚೆಂಡೆಗಾರಿಕೆಯಲ್ಲಿ ಕೇಳಬೇಕು. +ಇವರ ಕಲಾನುಭವವೂ ಗರಿಷ್ಠಮಟ್ಟದ್ದು. +ಪ್ರತೀ ಪ್ರಸಂಗಗಳ ನಡೆಯೂ ಇವರಿಗೆ ಪರಿಪೂರ್ಣ ಸಿದ್ಧಿಸಿವೆ ಎಂಬುದರಲ್ಲಿ ಎರಡು ಮಾತಿಲ್ಲ. +ಯಾವ ಪಾತ್ರಗಳನ್ನು ಎಷ್ಟು ಕುಣಿಸಬೇಕು ಗಾನಕರ್ಣ ರಸಾಯನಕಾರಕವಾಗಿ, ಭಾವಪೋಷಕವಾಗಿ ಅಭಿವ್ಯಕ್ತಿಯಾಗಬೇಕಿದ್ದರೆ, ಹಿಮ್ಮೇಳ ಸ್ಥಾನದಲ್ಲಿರುವ ಚಂಡೆವಾದಕ ಹೇಗೆ ವಾದನಾನುಕೂಲಿಯಾಗಬೇಕು,ಎಲ್ಲಿ ಕಥಾನಕವನ್ನು ಏಗ್ಗಿಸಬೇಕು- ಕುಗ್ಗಿಸಬೇಕು,ಹೇಗೆ ರಂಗಸ್ಥಳಕ್ಕೆ ಬಿಸಿ ನೀಡಬೇಕು ಎಂಬೆಲ್ಲಾ ಸಮರ್ಥ ವಾದಕನೊಬ್ಬನ ಧನಾತ್ಮಕ ಗುಣಶೀಲಗಳು ಆಚಾರ್ಯರಲ್ಲಿ ಪ್ರತಿಭಾಪೂರ್ಣವಾಗಿ ಸದೃಢವಾಗಿ ಮೇಳೈಸಿವೆ. +ಮಂದಾರ್ತಿ 1, ಕಳವಾಡಿ 1, ಅಮೃತೇಶ್ವರಿ 1,ಹೀಗೆ ಮೂರು ವಿಭಿನ್ನ ಮೇಳಗಳ ತಿರುಗಾಟವಾದರೆ ಪ್ರಸ್ತುತ ಸೇವೆಯಲ್ಲಿರುವ ಮಾರಣಕಟ್ಟೆ ಮೇಳದಲ್ಲೇ ಇವರ ವ್ಯವಸಾಯದ ರಜತ ಸಂಭ್ರಮವಾಗಿದೆ. +ಒಟ್ಟು 28 ವರ್ಷಗಳ ಕಲಾಸೇವೆ ಆಚಾರ್ಯರದ್ದು. +ಸತಿ ಚಂದ್ರಾವತಿ, ಪ್ರಣಾಮ್‌, ಪವಿತ್ರ ಎಂಬ ಈರ್ವರು ಮಕ್ಕಳ ಕಿರು ಸಂಸಾರ. +ಚಂಡೆ ಮದ್ದಳೆ ವಾದನದಲ್ಲಿ ಅಪಾರ ಕಲಾಸಿದ್ಧಿಯನ್ನು ಕಂಡು ಪಶಿಭೆಗೆ ಸಮುಚಿತವಾದ ಪ್ರಚಾರ ಕಾಣದಿರುವ ಜನಾರ್ದನ ಆಚಾರ್ಯರನ್ನು ಕೆಲವು ಸಂಘಸಂಸ್ಥೆಗಳು ಸಂಮಾನಿಸಿವೆ. +ಉಭಯತಿಟ್ಟುಗಳ ಕಲಾವೈವಿಧ್ಯವನ್ನು ರಂಗಜೀವನದಲ್ಲಿ ಸತ್ವಪೂರ್ಣವಾಗಿ ಜೀರ್ಣಿಸಿಕೊಂಡು ಸಾಂಪ್ರದಾಯಿಕ ಯಕ್ಷವಿಧಾನದಲ್ಲಿ ಸೃಷ್ಟಿಶೀಲ ಪ್ರತಿಭೆಯ ವಿಶಿಷ್ಠ ವಿನ್ಯಾಸ ಮೂಡಿಸುವ ಪ್ರಬುದ್ಧ ಕಲಾವಿದ ಜನಾರ್ದನ ಗುಡಿಗಾರ್‌,ಬಂಗಾಡಿ. +ಬೆಳ್ತಂಗಡಿ ತಾಲೂಕಿನ ಇಂದಬೆಟ್ಟು, ಜನಾರ್ದನ ಗುಡಿಗಾರರು ಹುಟ್ಟಿದ ಸ್ಥಳ. +ಬಾಬು ಗುಡಿಗಾರ -ದಿ.ಕುಸುಮಾ ದಂಪತಿಯ ಪುತ್ರನಾಗಿ 12-2-1960ರಲ್ಲಿ ಇವರ ಜನನ. +ಹತ್ತನೇ ತರಗತಿಯವರೆಗೆ ವಿದ್ಯಾಭ್ಯಾಸ. +17ರ ಹರೆಯದಲ್ಲೇ ಬಾಲ್ಯದ ಕನಸಿನ ಕಲಾಗುಡಿಯೊಳಗೆ ಗುಡಿಗಾರರ ವಿಹಾರ. +ಹಿರಿಯ ಯಕ್ಷಗಾನ ಕೃತಿಕಾರ ಅನಂತರಾಮ ಬಂಗಾಡಿ ಹಾಗು ರಾಜೀವ ಭಂಡಾರಿಯವರ ಪ್ರೇರಣೆ ಪ್ರೋತ್ಸಾಹದಿಂದ ಬಣ್ಣದ ಬದುಕಿಗೆ ತೆರೆದುಕೊಂಡ ಜನಾರ್ದನ ಗುಡಿಗಾರರು ಬೆಳಾಲು ಶ್ರೀನಿವಾಸ ಆಚಾರ್‌, ಪಡ್ರೆಚಂದು ಅವರ ಶಿಷ್ಯನಾಗಿ ಸಶಕ್ತ ಯಕ್ಷವಿದ್ಯೆಯನ್ನು ಸಂಪಾದಿಸಿಕೊಂಡು ತೆಂಕಣದ ರಂಗಮಂಚಕ್ಕೆ ಹೆಜ್ಜೆಹಾಕಿದರು. +ಹಂತಹಂತವಾಗಿ ಬೆಳೆದು ಸಮಷ್ಟಿ ಕಲೆಯ ಸಮುಜ್ಜಲ ತಾರೆಯಾಗಿ ಬೆಳಗಿದರು. +ಸುಬ್ರಹ್ಮಣ್ಯ ಮೇಳ (ಒಂದುವರೆ ವರ್ಷ),ಸುವರ್ನಾಡು ಮೇಳ (ಒಂದುವರೆ ವರ್ಷ), ಸುರತ್ಕಲ್‌ಮೇಳ 17, ಸಾಲಿಗ್ರಾಮ 4, ಮಂಗಳಾದೇವಿ 3,ಪೆರ್ಡೂರು 3, ಕಮಲಶಿಲೆ 4, ಹೀಗೆ 34 ವರ್ಷಗಳ ಶ್ರೀಯುತರ ರಂಗಕೃಷಿ ಸಾರ್ಥಕ್ಯ ಕಂಡಿದೆ. +ಪ್ರಸ್ತುತ ಗುಡಿಗಾರರು ಕಮಲಶಿಲೆ ಮೇಳದ ಪ್ರಧಾನ ಕಲಾವಿದರು. +ಖಳನಾಯಕ, ಪ್ರತಿನಾಯಕ ಪಾತ್ರಗಳಲ್ಲಿ ಗುಡಿಗಾರರ ಕಲಾಪ್ರತಿಭೆ ಗಮನಾರ್ಹ. +ಕಂಸ,ಜರಾಸಂಧ. ಶಿಶುಪಾಲ, ಭಸ್ಮಾಸುರ, ಶುಂಭಾಸುರ,ಮಹಿಷಾಸುರ, ಅರ್ಜುನ, ಕರ್ಣ, ರಕ್ತಬೀಜಾಸುರ ಪಾತ್ರಗಳ ಮೂಲಕ ಜನ-ಪ್ರಿಯತೆಯ ಉಚ್ಛ್ರಾಯ ಸ್ಥಿತಿ. +ಅಪರೂಪಕ್ಕೆ ಸೀತೆ, ಮಾಯಾ ಶೂರ್ಪನಖೆ-ಯಂತಹ ಸ್ರ್ತೀ ಪಾತ್ರ ಮಾಡಿದ್ದೂ ಇದೆ. +ಶ್ರೀಯುತರ ನೂರಾರು ಶಿಷ್ಯರು ತೆಂಕುತಿಟ್ಟಿನ ಯಕ್ಷಲೋಕದಲ್ಲಿ ಹೆಸರಾಂತ ಕಲಾವಿದರಾಗಿ ದುಡಿಯುತ್ತಿದ್ದಾರೆ. +ಬಾಳಸಂಗಾತಿ ಹರಿಣಾಕ್ಷಿ. +ವಿದ್ಯಾವತಿ, ವಿನೋದ,ವಿನಯಾ, ಹರಿಹರ ಮಕ್ಕಳು ಜನಾರ್ದನ ಗುಡಿಗಾರರು ಅರುವ ಪ್ರತಿಷ್ಠಾನ,ಹಿಂದೂ ಯುವಸೇನೆ ರಥಬೀದಿ, ಶೀರೂರು ಮಠ,ಕಲಾಭಿಮಾನಿ ಬಳಗ ಮುಂಬೈ ಹಾಗೂ ಬಂಗಾಡಿ ಸಂಪೂರ್ಣ ಸುರಕ್ಷಾ ಬಳಗ ವತಿಯಿಂದ ಸಂಮಾನಿತರಾಗಿದ್ದಾರೆ. +ಯಕ್ಷಗಾನ ಪ್ರಪಂಚದಲ್ಲಿ “ಹಳ್ಳಾಡಿ' ಎಂಬಹೆಸರು ಕೇಳಿದಾಕ್ಷಣ ನಗೆಯ ಕುಲುಕಾಟದಿಂದ ಕಲಾ ರಸಿಕರ ಹೊಟ್ಟೆ ಹುಣ್ಣಾಗುತ್ತದೆ. +ಇದಕ್ಕೆ ಕಾರಣ ಆ ಊರಿನಲ್ಲಿ ಹುಟ್ಟಿ ಬೆಳೆದು ಸಮರ್ಥಹಾಸ್ಯಗಾರರಾಗಿ ರೂಪುಗೊಂಡ ಹಿರಿಯ ಕಲಾವಿದ ಹಳ್ಳಾಡಿ ಜಯರಾಮ ಶೆಟ್ಟಿ. +ಕುಂದಾಪುರ ತಾಲೂಕಿನ ಹಳ್ಳಾಡಿ ಅಬ್ಬಿಮನೆ ಎಂಬಲ್ಲಿ 1-2-1956ರಲ್ಲಿ ಜನಿಸಿದ ಜಯರಾಮಶೆಟ್ಟರು ಅಣ್ಣಪ್ಪ ಶೆಟ್ಟಿ-ಅಕ್ಕಮ್ಮ ಶೆಡ್ತಿ ದಂಪತಿಯ ಸುಪುತ್ರ. +ಎಳವೆಯಲ್ಲೇ ಯಕ್ಷಗಾನ ಕಲಾಸಕ್ತಿ ಮೈಗೂಡಿಸಿಗೊಂಡ ಶೆಟ್ಟರು ಐದನೇ ತರಗತಿಗೇ ಮಂಗಳಹಾಡಿ, ತನ್ನ 12ನೇ ವಯಸ್ಸಿನಲ್ಲೇ ಕಲಾಜೀವನ ಆರಂಭಿಸಿದರು. +ಅಮವಾಸೆಬೈಲು ಕಿಟ್ಟಪ್ಪ ಹೆಬ್ಬಾರ್‌ ಅವರು ಹಳ್ಳಾಡಿ ಅವರನ್ನು ವೃಕ್ತಿಮೇಳಕ್ಕೆ ಪರಿಚಯಿಸಿದರೆ,ಹಳ್ಳಾಡಿ ಮಂಜಯ್ಯ ಶೆಟ್ಟರು ಮೇಳದಲ್ಲಿ ಇವರಿಗೆ ಗುರುವಾಗಿ ದೊರೆತರು. +ಸತತ ಪ್ರಯತ್ನ, ಸ್ವಯಂ ಪ್ರತಿಭೆಯು ಮೂಲಕ ರಂಗದಲ್ಲಿ ಸಾರ್ಥಕ ಯಶಸ್ಸು ಕಂಡ ಜಯರಾಮ ಶೆಟ್ಟರು ನಾರ್ಣಪ್ಪ ಉಪ್ಪೂರರ ನಿರ್ದೇಶನದಲ್ಲಿ ಹಾಸ್ಯಭೂಮಿಕೆಯೊಂದನ್ನು ನಿರ್ವಹಿಸಿ ಗೆಲುವು ಕಂಡರು. +ಮೊದಲ ಹಾಸ್ಯವೇಷವೇ ವಿಶೇಷ ಯಶಸ್ಸು ಕಂಡ ನಂತರ ಆ ವಿಭಾಗಕ್ಕೇ ಇವರು ಗಟ್ಟಿಯಾದರು. +ಹಳ್ಳಾಡಿ ಅವರ ಹಾಸ್ಯಗಾರಿಕೆಗೆ ಪಾರಂಪರಿಕತೆ ಹಾಗೂ ಸೃಜನಶೀಲತೆಯ ಸುಂದರ ಮೆರುಗು ಇದೆ. +ಅವರದು ಹಾಸ್ಯಭೂಮಿಕೆಗೆ ಸಮುಚಿತವಾದ ಆಳಂಗ,ನೃತ್ಯ, ಅಭಿನಯ, ವೇಷವೈಖರಿ, ಮಾತುಗಾರಿಕೆ. +ಹಳ್ಳಾಡಿ ಜಯರಾಮ ಶೆಟ್ಟರ ಹಾಸ್ಯ ಪಾತ್ರಗಳಲ್ಲಿ ಹಾಲಾಡಿ ಕೊರ್ಗು ಹಾಸ್ಯಗಾರರ ಛಾಪು, ಕುಂಜಾಲು ಅವರ ರೂಪು, ವಿಟ್ಲ ಜೋಶಿಯವರ ನೆನಪು ಪಡಿಮೂಡುವುದನ್ನು ಕಲಾರಸಿಕರು ಗಮನಿಸಿದ್ದಾರೆ. +ಕಮಲಶಿಲೆ 1, ಮಂದಾರ್ತಿ 6, ಅಮೃತೇಶ್ವರಿ 2, ಮೂಲ್ಕಿ 3, ಪೆರ್ಡೂರು 6, ಕುಂಬಳೆ 2,ಸಾಲಿಗ್ರಾಮ 21, ಹೀಗೆ 41 ವರ್ಷಗಳ ಕಲಾವ್ಯವಸಾಯ ಅವರಿಗೆ ಸಾರ್ಥಕ ಕೀರ್ತಿ ತಂದಿತ್ತಿದೆ. +ಶ್ರೀಯುತರು ಯುಗಳ ತಿಟ್ಟಿನಲ್ಲೂ ವಿಜೃಂಭಿಸಿದ ಶ್ರೇಷ್ಠಹಾಸ್ಯಕಲಾವಿದರು. +ಜಯರಾಮಶೆಟ್ಟರ ಕಂದರ, ಕಾಶೀಮಾಣಿ,ಬಾಹುಕ, ಚಂದಗೋಪ, ವಿಡೂರಥ, ದಾರುಕ,ಬ್ರಾಹ್ಮಣ, ರಜಕ ಮೊದಲಾದ ಭೂಮಿಕೆಗಳು ವಿಶೇಷ ರಂಜನೆಯಲ್ಲಿ ಕಲಾಪ್ರೇಮಿಗಳ ಮನಸಗೆದ್ದಿವೆ. +ಕುಂದಾಪುರ ಕನ್ನಡ ಸೊಗಸನ್ನು ನಾಡಿನಾದ್ಯಂತ ಹಾಸ್ಯ ಪಾತ್ರಗಳಲ್ಲಿ ತೋರಿದ ಅನುಭವಿ ಹಾಸ್ಯಗಾರ ಜಯರಾಮ ಶೆಟ್ಟರ ಮಡದಿ ರೇಣುಕಾ ಶೆಟ್ಟಿ. +ರತೀಶ್‌,ಸೌಮ್ಯಾ ಮಕ್ಕಳು. +ನಾಡಿನಾದ್ಯಂತ ನೂರಾರು ಸಂಮಾನಗಳು ಶ್ರೀಯುತರಿಗೆ ದೊರಕಿದೆ. +ಮುಂಬಯಿ ಬಂಟರಸಂಘ, ಬೆಂಗಳೂರು ನಾಡವರ ಸಂಘ, ಬೆಂಗಳೂರು ಕರ್ನಾಟಕ ರಕ್ಷಣಾ ವೇದಿಕೆಯ ಗೌರವ ಸಂಮಾನವೂ ಇವರಿಗೆ ಲಭಿಸಿದೆ. +ಭಾವಭರಿತ ವಾಕ್‌ಸಂಪತ್ತು,ಸುಸಂಸ್ಕೃತನಾಟ್ಯ, ಅಭಿನಯ ಕಲಾ ಕರಾಮತ್ತು,ಆಕರ್ಷಕ ವೇಷಾಲಂಕಾರ, ಪರಿಣಾಮಕಾರಿ ರಂಗವ್ಯವಹಾರ,ಎಲ್ಲವನ್ನೂ ಸಮರ್ಥ ಸ್ತ್ರೀ ವೇಷಧಾರಿಯಾಗಿ ಕಾಣಿಸುವವರು ಜಯಾನಂದ ಹೊಳೆಕೊಪ್ಪ. +ಜಯಾನಂದರ ಹುಟ್ಟೂರು ಶೃಂಗೇರಿ ತಾಲೂಕಿನ ಹೊಳೆಕೊಪ್ಪ. +19-4-1968ರಲ್ಲಿ ಶ್ರೀಯುತರ ಜನನ. +ದೂಜ ಪೂಜಾರಿ ಜಲಜಮ್ಮ ಇವರ ತಂದೆ ತಾಯಿ. +ಎಂಟನೇ ತರಗತಿಯ ನಂತರ ಯಕ್ಷಗಾನ ಕಲೆಯ ನಂಟು ಅಂಟಿಸಿ ಕೊಂಡ ಜಯಾನಂದ ಹದಿನಾಲ್ಕನೇ ವಯಸ್ಸಿನಲ್ಲಿ ರಂಗವೇರಿದವರು. +ಶಾಲಾ ಉಪಾಧ್ಯಾಯರಾಗಿದ್ದ ಜನಾರ್ದನ ಎಂಬವರು, ಖ್ಯಾತ ಸ್ತ್ರೀವೇಷಧಾರಿ ವೈಕುಂಠನಾಯ್ಕರು ಹಾಗೂ ಐರೋಡಿ ಗೋವಿಂದಪ್ಪನವರು ಜಯಾನಂದರ ಯಕ್ಷಗುರುಗಳಾಗಿ ಕಲಾವಿದ್ಯೆ ಬೋಧಿಸಿದವರು. +ಅಮೃತೇಶ್ವರಿ 15, ಸೌಕೂರು 1,ಹಾಲಾಡಿ 3, ಮಡಾಮಕ್ಕಿ 1, ಮೇಗರವಳ್ಳಿ 2, ಹೀಗೆ 22 ವರ್ಷಗಳ ಯಕ್ಷಗಾನ ವ್ಯವಸಾಯ ಶ್ರೀಯುತರಿಗೆ ಸಾರ್ಥಕ ಹೆಸರು ನೀಡಿದೆ. +ಜಯಾನಂದ ಹೊಳೆಕೊಪ್ಪ ಅವರು ಮಹಾರಾಣಿ ಪಾತ್ರಗಳ ಸೌಮ್ಯ-ಗಂಭೀರ ನಡೆಯನ್ನು ಸಹಜವಾಗಿ ಸ್ತ್ರೀಭೂಮಿಕೆಗಳಲ್ಲಿ ಅಭಿವ್ಯಕ್ತಿಗೊಳಿಸಬಲ್ಲರು. +ಅವರ ಕಸೆ ಸ್ಮೀವೇಷಗಳೂ ನಿರ್ವಹಣಾ ಪಾತ್ರಗಳಿಗೆ ಜೀವ ಕಳೆ ನೀಡಿವೆ. +ಶ್ರೀದೇವಿ, ಅಂಬೆ, ರುಚಿಮತಿ, ದಾಕ್ಷಾಯಿಣಿ,ಗುಣಸುಂದರಿ ಮೊದಲಾದ ಸ್ತೀ ಭೂಮಿಕೆಗಳಲ್ಲಿ ಅವರ ಪ್ರತಿಬಾವಿಲಾಸ ಕಲಾಪ್ರಿಯರ ಮನಮುದಗೊಳಿಸಿದೆ. +ಅಪಾರ ಪ್ರತ್ಯುತ್ಪನ್ನ ಮತಿತ್ವ ಅಗಾಧ ಪೌರಾಣಿಕ ಜ್ಞಾನವನ್ನು ಹೊಂದಿದ ಜಯಾನಂದ ಅವರ ಪಾತ್ರ ನಿರೂಪಣೆ ಸುಂದರ. +ಗೀತಾ ಪತ್ನಿ. ದೀಕ್ಷಿತ್‌. ಶಾಶ್ಚತ್‌ ಮಕ್ಕಳು. +ಪ್ರಬುದ್ಧ ಸ್ತ್ರೀವೇಷಧಾರಿಯಾದ ಜಯಾನಂದ ಹೊಳೆಕೊಪ್ಪ ಅವರು ಪ್ರಸ್ತುತ ಹಾಲಾಡಿ ಮೇಳದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. +ಶ್ರೀಯುತರ ಕಲಾ ಪ್ರೌಢಿಮೆ ಮೆಚ್ಚಿ ಹಲವು ಸಂಘ-ಸಂಸ್ಥೆಗಳು ಗುರುತಿಸಿ ಗೌರವಿಸಿವೆ. +ಬಡಗಿನ ಶಾಸ್ತ್ರ ಸಮನ್ವಿತ ,ನೃತ್ಯ ಅಭಿನಯ,ರಂಗ ವ್ಯವಹಾರ, ವೇಷ ವೈಖರಿಯಿಂದ ಕಲಾರಸಿಕರ ಮನಗೆದ್ದ ಪ್ರತಿಭಾನ್ವಿತ ಕಲಾವಿದ ಶ್ರೀ ಜೋಗು ಕುಲಾಲ್‌. +ಮಂಜು ಕುಲಾಲ್‌-ವೆಂಕಮ್ಮ ದಂಪಶಿಯ ಸುಪುತ್ರರಾಗಿ 26-9-1960ರಲ್ಲಿ ಕುಂದಾಪುರ ತಾಲೂಕಿನ ರಟ್ಟಾಡಿ ಎಂಬ ಪುಟ್ಟ ಹಳ್ಳಿಯಲ್ಲಿ ಹುಟ್ಟಿ ಬೆಳೆದ ಜೋಗು ಕುಲಾಲರು 6ನೇ ತರಗತಿಯವರೆಗೆ ವ್ಯಾಸಂಗ ಮಾಡಿ ಆರ್ಥಿಕ ಅನಾನುಕೂಲತೆಯಿಂದ 15ರ ಹರೆಯದಲ್ಲೇ ಮುಖಕ್ಕೆ ಬಣ್ಣ ಹಚ್ಚಿದವರು. +ಕಟೀಲು ಮೇಳದ ಕಲಾವಿದ ಶಂಕರನಾರಾಯಣ ಸಂಜೀವ ಬಳೆಗಾರರೇ ಇವರಿಗೆ ಬಣ್ಣದ ಬದುಕಿಗೆ ಪ್ರೇರಣೆಯಾದವರು. +ಉಡುಪಿ ಯಕ್ಷಗಾನ ಕೇಂದ್ರದ ವಿದ್ಯಾರ್ಥಿಯಾಗಿ ಹೆರಂಜಾಲು ವೆಂಕಟರಮಣ, ನೀಲಾವರ ರಾಮಕೃಷ್ಣಯ್ಯ,ಹಿರಿಯಡಕ ಗೋಪಾಲ- ರಾವ್‌, ಶ್ರೀಧರ ಹೆಬ್ಬಾರ್‌,ಮೊದಲಾದ ಯಕ್ಷಗುರುವರರಿಂದ ಕಲಾಶಿಕ್ಷಣವನ್ನು ಪಡೆದ ಜೋಗು ಕುಲಾಲರು ಇಡಗುಂಜಿ 3,ಸಾಲಿಗ್ರಾಮ 4, ಮೂಲ್ಕಿ 2, ಮಂದಾರ್ತಿ 10,ಸೌಕೂರು 11, ಕಮಲಶಿಲೆ 1, ಅಮೃತೇಶ್ವರಿ ಮೇಳಗಳಲ್ಲಿ ಬಣ್ಣದ ಬದುಕು ನಡೆಸಿದವರು. +ಸುಮಾರು 32ವರ್ಷಗಳ ಕಾಲದ ಇವರ ರಂಗಜೀವನ ಸಾರ್ಥಕವಾಗಿ ನಡೆದಿದೆ. +ಕೈಕೇಯಿ, ಸೀತೆ, ಮೀನಾಕ್ಷಿ, ಚಿತ್ರಾಂಗದೆ ,ಸುಭದ್ರೆ,ದಮಯಂತಿ, ಕಯಾದು, ದೇವಯಾನಿ, ಮೊದಲಾದ ಸ್ರ್ತೀ ಪಾತ್ರಗಳಿಗೆ ಪ್ರತಿಭಾ ಸಂಪನ್ನತೆಯಿ೦ದ ಪ್ರಾಣಕಳೆ ನೀಡಿದ ಶ್ರಿಯುತರು ಗರತಿ ಪಾತ್ರಗಳನ್ನು ಸಮರ್ಥವಾಗಿ ನಿರ್ವಹಿಸುವವರು. +ಗುಲಾಬಿ ಅವರನ್ನು ವರಿಸಿ ಆದರ್ಶ, ಆಶ್ರಿತ, ಆಮೋದ ಎಂಬ ಮೂವರು ಮಂದಿ ಮಕ್ಕಳನ್ನು ಪಡೆದ ಶ್ರೀಯುತರು ಪ್ರಸ್ತುತ ಮಂದಾರ್ತಿ ಮೇಳದ ಪ್ರಧಾನ ಸ್ರ್ತೀ ಪಾತ್ರಧಾರಿ. +ಜೋಗು ಕುಲಾಲ್‌ ಅವರ ಕಲಾ ಶ್ರೀಮಂತಿಕೆಯನ್ನು ಗುರುತಿಸಿದ ಅನೇಕ ಸಂಘಸಂಸ್ಥೆಗಳು ಗೌರವ ಸಂಮಾನ ನೀಡಿವೆ. +ಬಡಾಬಡಗಿನ ಪರಂಪರೆಯ ಸತ್ವ-ತತ್ವಗಳ ಪರಿಪೂರ್ಣ ಪರಿಪಾಕವಾಗಿ ಕಲಾ ಶ್ರೀಮಂತಿಕೆಯನ್ನು ಮೆರೆಯುವ ಶಿಷ್ಟ ಕಲಾವಿದರಲ್ಲಿ ಶಿರಳಗಿ ತಿಮ್ಮಪ್ಪ ನಾರಾಯಣ ಹೆಗಡೆ ಅವರೂ ಒಬ್ಬರು. +ಉತ್ತರ ಕನ್ನಡದ ಶಿರಳಗಿ ಎಂಬಲ್ಲಿ 1957ರ ಆಗಸ್ಟ್‌ 17 ರಂದು ನಾರಾಯಣ ತಿಮ್ಮಯ್ಯ ಹೆಗಡೆ-ಮಹಾಲಕ್ಷ್ಮೀ ಹೆಗಡೆ ದಂಪತಿಯ ಪುತ್ರರಾಗಿ ಜನಿಸಿದ ತಿಮ್ಮಪ್ಪ ಹೆಗಡೆಯವರು ಹತ್ತನೇ ತರಗತಿಯವರೆಗೆ ಓದು ನಡೆಸಿ, ತನ್ನ 22ನೇ ವರ್ಷದಲ್ಲೇ ಕಲಾ ಬದುಕು ಕಂಡವರು. +ಪರಿಸರದಲ್ಲಿ ನಡೆಯುತ್ತಿದ್ದ ಯಕ್ಷಗಾನ ಬಯಲಾಟಗಳ ನಿರಂತರ ವೀಕ್ಷಣೆಯೇ ತಿಮ್ಮಪ್ಪಹೆಗಡೆಯವರಿಗೆ ಕಲಾಪ್ರೇರಣೆ ನೀಡಿತು. +ಇವರ ತಂದೆ ಪ್ರಸಿದ್ಧ ಹವ್ಯಾಸೀ ವೇಷಧಾರಿಯಾದುದರಿಂದ ಕಲಾವಂತ ಮನೆತನದ ಹಿನ್ನೆಲೆ ಇವರಿಗಿತ್ತು. +ಗೋಡೆ ನಾರಾಯಣ ಹೆಗಡೆಯವರ ಗುರುತನದಲ್ಲಿ ಸಶಕ್ತ ಕಲಾ ವಿದ್ಯಾಪ್ರೌಢಿಮೆ ಹೊಂದಿದ ತಿಮ್ಮಪ್ಪ ಹೆಗಡೆಯವರು,ಗುಂಡಬಾಳ 1, ಇಡಗುಂಜಿ 15, ಸಾಲಿಗ್ರಾಮ 9,ಶಿರಸಿ-ಪಂಚಲಿಂಗ 1, ಹೀಗೆ 26 ವರ್ಷಗಳ ಕಲಾಕೃಷಿ ಪೂರೈಸಿದ್ದಾರೆ. +ಸಾಂಪ್ರದಾಯಿಕ ಕೆತ್ತನೆಯ ಪೌರಾಣಿಕ ಛಾಪಿನ ವೇಷಗಾರಿಕೆ, ಶ್ರುತಿನಿಷ್ಠವಾದ ಪಾಂಡಿತ್ಯಪೂರ್ಣ ನಿರರ್ಗಳ ಮಾತುಗಾರಿಕೆ, ಔಚಿತ್ಯವರಿತ ಪ್ರಮಾಣ ಬದ್ಧ ನೃತ್ಯಗಾರಿಕೆ ಮೈಗೂಡಿಸಿಕೊಂಡು ನಿರ್ವಹಣಾ ಭೂಮಿಕೆಗಳಿಗೆ ಸಮುಚಿತ ರಂಗಸ್ವರೂಪ ನೀಡುವ ತಿಮ್ಮಪ್ಪ ಹೆಗಡೆಯವರು ಪುರಾಣ ಪ್ರಸಂಗಗಳ ಅಗಾಧಜ್ಞಾನ ಸಂಪನ್ನರು. +ಕೃಷ್ಣ ಸಂಧಾನದ ಧರ್ಮರಾಯ, ಕರ್ಣ ಪರ್ವದಕೌರವ, "ರಾಮ ನಿರ್ಯಾಣ'ದ ಲಕ್ಷ್ಮಣ,ಕಾರ್ತವೀರ್ಯ'ದ ಕೃತವೀರ್ಯ, ಸುಭದ್ರಾಕಲ್ಯಾಣದ ಅರ್ಜುನ ಸನ್ಯಾಸಿ, “ಕಂಸವಧೆ'ಯ ನಾರದ, ಅಕ್ರೂರ,"ಹರಿಶ್ಚಂದ್ರ'ದ ನಕ್ಷತ್ರಿಕ, ವಸಿಷ್ಠ ಮೊದಲಾದ ಪೌರಾಣಿಕ ಪಾತ್ರಗಳು ಇಂದಿಗೂ ಶಿರಳಗಿ ತಿಮ್ಮಪ್ಪ ಹೆಗಡೆಯವರ ಸಮರ್ಥ ಕಲಾವಂತಿಕೆಯನ್ನು ನೆನಪಿಸುತ್ತವೆ. +ಬಡಗುತಿಟ್ಟಿನ ಒಬ್ಬ ಸಮರ್ಥ ಪೀಠಿಕಾ ರಾಜವೇಷಧಾರಿಯಾಗಿ ಮೆರೆದ ಶಿರಳಗಿ ಪ್ರತಿಭಾನ್ವಿತ ಕಲಾವಿದರು. +ಪತ್ನಿ ಶಾರದ ಹೆಗಡೆ. +ಅರುಣ,ಅರ್ಚನಾ ಎಂಬ ಈರ್ವರು ಮಕ್ಕಳು. +ಹಲವಾರು ಸಂಘ ಸಂಸ್ಥೆಗಳಿಂದ ಶ್ರೀಯುತರಿಗೆ ಸಂಮಾನ ದೊರಕಿದೆ. +ಸಾಂಪ್ರದಾಯಿಕ ವರ್ಚಸ್ವೀ ಸ್ರ್ತೀ ಪಾತ್ರಧಾರಿ ಶ್ರೀ ದಯಾನಂದ ನಾಗೂರು. +ಕುಂದಾಪುರ ತಾಲೂಕಿನ ಹಳಗೇರಿ-ತೆಂಕಬೆಟ್ಟು ಎಂಬಲ್ಲಿ ಹುಟ್ಟಿ ಬೆಳೆದ ದಯಾನಂದ ನಾಗೂರು ಶ್ರೀ ಮಹಾಬಲ ಬಳೆಗಾರ ಲಕ್ಷ್ಮೀ ಬಳೆಗಾರ್ತಿ ದಂಪತಿಯ ಸುಪುತ್ರ . +25-11-1952ರಲ್ಲಿ ಜನಿಸಿದ ಶ್ರೀಯುತರು ಆರನೇ ತರಗತಿಯವರೆಗೆ ಶಾಲಾ ಶಿಕ್ಷಣವನ್ನು ಪಡೆದವರು. +ಎಳವೆಯಲ್ಲಿಯೇ ಕಲಾಸಕ್ತಿ ಮೈಗೂಡಿಸಿಕೊಂಡ ನಾಗೂರರಿಗೆ ಪರಿಸರದ ಹೂವಿನ ಕೋಲುತಿರುಗಾಟವೇ ಕಲಾಬದುಕಿಗೆ ಹುಮ್ಮಸ್ಸು ನೀಡಿತು. +ಗುರು ಹೆರಂಜಾಲು ವೆಂಕಟರಮಣ ಗಾಣಿಗರೇ ಪ್ರೇರಣಾ ಶಕ್ತಿಯಾದರು. +ತನ್ನು 15ನೇ ವಯಸ್ಸಿನಲ್ಲಿಯೇ ಯಕ್ಷರಂಗಭೂಮಿಗೆ ಚರಣವಿರಿಸಿದ ದಯಾನಂದರಿಗೆ ಉಡುಪಿ ಯಕ್ಷಗಾನ ಕೇಂದ್ರದಲ್ಲಿ ಸಶಕ್ತ ಯಕ್ಷ ಶಿಕ್ಷಣ ದೊರಕಿತು. +ಹೆರಂಜಾಲು ವೆಂಕಟರಮಣ ಗಾಣಿಗ ಹಾಗೂ ದಶಾವತಾರಿ ಗುರು ವೀರಭದ್ರನಾಯಕರ ಪ್ರಬಲ ಗುರುಬಲ ಪ್ರಾಪ್ತವಾಯಿತು. +ಇಡಗುಂಜಿ, ಅಮೃತೇಶ್ವರಿ, ಸಾಲಿಗ್ರಾಮ,ಮಂದಾರ್ತಿ, ಮಾರಣಕಟ್ಟೆ, ಗುಂಡಬಾಳ ಮೇಳಗಳಲ್ಲಿ ವ್ಯವಸ್ಥಿತ ಕಲಾವ್ಯವಸಾಯ ನಡೆಸಿದ ನಾಗೂರರ ಕಲಾಬಾಳುವೆ ನಾಲ್ಕುದಶಕಗಳ ಕಾಲ ನಿಚ್ಚಳವಾಗಿ ನಡೆದಿದೆ. +ಪ್ರೊ.ಬಿ.ವಿ ಆಚಾರ್‌ ತಂಡದೊಂದಿಗೆ ಅಮೆರಿಕಾ, ಜರ್ಮನಿ, ಕೆನಡಾ, ಜಪಾನ್‌ ಹಾಗೂ ಡಾ। ಶಿವರಾಮ ಕಾರಂತರ ಯಕ್ಷಗಾನ ನೃತ್ಯ ನಾಟಕ ತಂಡದೊಂದಿಗೆ ರಷ್ಯಾ, ಲಂಡನ್‌ ದೇಶಗಳನ್ನು ಸಂಚರಿಸಿ ಕಲಾ ಪ್ರತಿಭೆಯನ್ನು ಪಸರಿಸಿದ ಕಲಾವಿದರಿವರು. +ಸ್ತ್ರೀ ವೇಷಕ್ಕೊಪ್ಪುವ ಶರೀರಸೌಷ್ಯವ,ಮಾಧುರ್ಯಮಯ ಕಂಠಸಂಪತ್ತು, ಪ್ರೌಢ ಪಾಂಡಿತ್ಯ,ಸಶಕ್ತ ರಂಗನಡೆ, ಸುಪುಷ್ಟ ಪ್ರಸಂಗಾನುಭವ ಸಂಪನ್ನ ದಯಾನಂದ ನಾಗೂರರ ಸುಭದ್ರೆ, ದ್ರೌಪದಿ, ಅಂಬೆ,ದಾಕ್ಷಾಯಿಣಿ, ದಮಯಂತಿ, ಚಂದ್ರಮತಿ, ಸೀತೆ,ಮಾಯಾ ಹಿಡಿಂಬೆ, ಮೊದಲಾದ ಸ್ಮ್ತೀಪಾತ್ರಗಳು ಇಂದಿಗೂ ರಂಗಲೋಕದಲ್ಲಿ ಹಚ್ಚಹಸುರಾಗಿ ಉಳಿದುಕೊಂಡಿವೆ. +ಪತ್ನಿ ಲಲಿತಾ ಅವರಲ್ಲಿ ಅಚ್ಯುತ, ಗಣೇಶ,ಮಾಧವ, ಮಮತಾ ಎಂಬ ನಾಲ್ಕು ಮಂದಿ ಮಕ್ಕಳನ್ನು ಪಡೆದ ನಾಗೂರರ ಓರ್ವ ಸುಪುತ್ರ ಮಾಧವನಾಗೂರು ಭರವಸೆಯ ಸ್ರ್ತೀ ಪಾತ್ರಧಾರಿಯಾಗಿ ವೃತ್ತಿರಂಗದಲ್ಲಿದ್ದಾರೆ. +ಶ್ರೀಯುತರಿಗೆ ಉಡುಪಿಯ “ಯಕ್ಷಗಾನ ಕಲಾರಂಗದ ಪ್ರಶಸ್ತಿ,' ಕಾರ್ಕಡ ಶ್ರೀನಿವಾಸ ಉಡುಪ ಪ್ರಶಸ್ತಿ ದೊರಕಿರುತ್ತದೆ. +ಬಡಗಿನ ಬೆಡಗಿನ ಯಕ್ಷತಾರೆ ದಿವಾಕರ ಆವರ್ಸೆ. +ಸುಂದರ ರೂಪಸಿರಿ, ಸುಸ್ಪಷ್ಟ ವಾಕ್‌ ವೈಖರಿ,ಲಾಸ್ಯಸೂರ್ಣ ನೃತ್ಯಾಭಿನಯದ ಸೊಬಗು, ಮುಕ್ಕಾಗದರಂಗಾವರಣದ ಮೆರುಗು ಕಲಾವಿದ ದಿವಾಕರ ಆವರ್ಸೆ ಅವರಲ್ಲಿ ಗುರುತಿಸಬಹುದಾಗಿದೆ. +ಆವರ್ಸೆಯ ಕೃಷ್ಣಪೂಜಾರಿ-ಪದ್ದು ಪೂಜಾರ್ತಿದಂಪತಿಂತು ಪುತ್ರರಾಗಿ 14-05-1974ರಲ್ಲಿ ಆವರ್ಸೆಯಲ್ಲಿ ಜನಿಸಿದ ದಿವಾಕರ ಅವರು 7ನೇ ತರಗತಿಗೆ ಶರಣು ಹೊಡೆದು, ತನ್ನ 13ರ ಹರೆಯದಲ್ಲೇ ಕಲಾಬದುಕು ಪ್ರಾರಂಭಿಸಿದರು. +ಪ್ರಸಿದ್ಧ ವೇಷಧಾರಿ ವಂಡಾರು ಬಸವನಾಯಿರಿ ಅವರ ಹೂವಿನ ಕೋಲು ತಿರುಗಾಟದ ಬಾಲಕಲಾವಿದನಾಗಿ ಅರ್ಥಜ್ಞಾನವನ್ನ್ನು ಹೆಚ್ಚಿಸಿಕೊಂಡು ಯಕ್ಷಗಾನರಂಗಕ್ಕೆ ಮುಖಮಾಡಿದ ಆವರ್ಸೆ ದಿವಾಕರ. + ಆವರ್ಸೆ ಚಂದ್ರಕುಲಾಲರ ಗುರುತನದಲ್ಲಿ ಯಕ್ಷ ಶಿಕ್ಷಣ ಪಡೆದರು. +ಅಮೃತೇಶ್ವರಿ ಮೇಳದಲ್ಲಿ ಗೆಜ್ಜೆ ಕಟ್ಟಿ ಹೆಜ್ಜೆ ಹಾಕಿದ ಇವರು ಪ್ರಸ್ತುತ ಅದೇ ಮೇಳದ ಪ್ರಧಾನ ಸ್ತ್ರೀವೇಷಧಾರಿಯಾಗಿ ಕಲಾವ್ಯವಸಾಯದಲ್ಲಿದ್ದಾರೆ. +ಅಮೃತೇಶ್ವರಿ, ಬಚ್ಚಗಾರು,ಸಾಲಿಗ್ರಾಮ, ಗೋಳಿಗರಡಿ, ಪೆರ್ಡೂರು, ಕಳವಾಡಿ,ಮೇಳಗಳಲ್ಲಿ ಇವರ ಕಲಾಕೃಷಿ ನಡೆದಿದೆ. +23ವರ್ಷಗಳ ರಂಗವ್ಯವಸಾಯ ಇವರದ್ದಾಗಿದೆ. +ಪುರಾಣ ಕಥಾನಕಗಳಲ್ಲಿರುವ ಚಿತ್ರಾಂಗದೆ,ಶಶಿಪ್ರಭೆ, ದ್ರೌಪದಿ, ಮೀನಾಕ್ಷಿ, ರುಚಿಮತಿ, ರತ್ನಾವತಿ,ಪ್ರಭಾವತಿ, ರುಕ್ಮಿಣಿ, ಭ್ರಮರಕುಂತಳೆ, ಮೊದಲಾದ ಭೂಮಿಕೆಗಳಿಂದ ಅಪಾರ ಜನಮನ್ನಣೆ ಗಳಿಸಿದ್ದಾರೆ. +ರಂಗಮಂಚದಲ್ಲಿ ಹುರುಪು-ಹುಮ್ಮಸಿನಲ್ಲಿ ಯಕ್ಷಗಾನದ ಹೆಣ್ತನವನ್ನು ಸಾಕಾರಗೊಳಿಸುವ ಅನುಭವಿ ಕಲಾವಿದ ದಿವಾಕರ ಆವರ್ಸೆ ಪತ್ನಿ ಜ್ಯೋತಿ. +ರಂಜಿತ್‌, ರಜತ್‌,ಅಜಿತ್‌ ಮಕ್ಕಳು. +ಪ್ರತಿಭಾವಂತ ಕಲಾವಿದ ದಿವಾಕರ ಆವರ್ಸೆ ಇವರು ಬೆಂಗಳೂರು-ಉಡುಪಿ ಮುಂತಾದೆಡೆ ಹಲವಾರು ಗೌರವ ಸಂಮಾನ ಪಡೆದಿರುತ್ತಾರೆ. +ಬಡಗುತಿಟ್ಟು ದೃಶ್ಯಕಾವ್ಯದ ರಂಗಮಂಚದಲ್ಲಿ ನವೀನತೆ ಹಾಗೂ ಪಾರಂಪರಿಕತೆಯನ್ನ ರಮ್ಯ ರಸಪರಿಪಾಕದ ಸೊಗಸಾದ ಎರಕದಲ್ಲಿ ಸುಶೋಭಿಸುವ ಸಮರ್ಥ ಪುರುಷವೇಷಧಾರಿ ಮಾಳ್ಕೋಡು ಜಗದೀಶ ಹೆಗಡೆ. +ಸುಂದರ ಸದೃಢ ಆಳಂಗ, ಸುಲಲಿತ ಸುಸ್ಪಷ್ಟ ವಾಗ್ಸರಣಿ, ಹೊಸ ಹುರುಪಿನ ರಂಗಪ್ರಕ್ರಿಯೆ, ಅನನ್ಯಪಾತ್ರ ತಾದಾತ್ಮ್ಯ, ಕಣ್ಣೆಳೆಯುವ ವೇಷವಿಧಾನ, ಪ್ರಸಂಗ ಪದ್ಯಗಳನ್ನು ಸಚೇತನವಾಗಿಡುವ ರಮ್ಯಾಕರ್ಷಕ ಅಭಿನಯ, ನರ್ತನ. +ಯಕ್ಷಲೋಕದಲ್ಲಿ ದಕ್ಷಪ್ರತಿಭೆಯಾಗಿ ದರ್ಶಿಸುವ ಜಗದೀಶ ಹೆಗಡೆ,ವಿಶೇಷ ಕಲಾ ಚಾತುರ್ಯದಲ್ಲಿ ಗಮನಾರ್ಹ ವೇಷಧಾರಿಯಾಗಿ ಗುರುತಿಸಲ್ಪಟ್ಟಿದ್ದಾರೆ. +ಉತ್ತರ ಕನ್ನಡದ ಹೊನ್ನಾವರ ತಾಲೂಕಿನ ಮಾಳ್ಕೋಡು ಎಂಬಲ್ಲಿ 8-5-1965ರಲ್ಲಿ ಜನಿಸಿದ ಶ್ರೀಯುತರು, ಗಣೇಶ ಹೆಗಡೆ-ಗಣಪಿ ಹೆಗಡೆಯವರ ಸುಪುತ್ರ. +ಹತ್ತನೇ ತರಗತಿಯ ವಿದ್ಯಾಭ್ಯಾಸದ ಬಳಿಕ,19ರ ಹರೆಯದಲ್ಲಿ ಯಕ್ಷ ಮಾಣಿನೂಪುರಕ್ಕೆ ಮಣಿದ ಹೆಗಡೆಯವರು, ಉಡುಪಿ ಯಕ್ಷಗಾನ ಕೇಂದ್ರಕ್ಕೆ ಸೇರ್ಪಡೆಯಾದರು. +ಅಲ್ಲಿ ಹೆರಂಜಾಲು ವೆಂಕಟರಮಣ, ಮಹಾಬಲ ಕಾರಂತ, ಮೊದಲಾದ ಗುರುಪುಂಗವರಲ್ಲಿ ಯಕ್ಷಗಾನ ಸಾಂಪ್ರದಾಯಿಕ ಶಿಕ್ಷಣ ಪಡೆದು ಹಿಂದಿಕ್ಕದ ಹೆಜ್ಜೆಯಲ್ಲಿ ಯಕ್ಷಪ್ರಪಂಚವನ್ನು ಪ್ರವೇಶಿಸಿದರು. +ಹಿರಿಯ ಚಂಡೆವಾದಕ ಕೃಷ್ಣಯಾಜಿ ಇಡಗುಂಜಿ ಅವರ ಪ್ರೋತ್ಸಾಹ, ಮಾರ್ಗದರ್ಶನವನ್ನು ನೆನಪಿಸಿಕೊಳ್ಳುವ ಜಗದೀಶ ಹೆಗಡೆ ಇಂದು ಕಲಾಭಿಮಾನಿಗಳ ಹಾರ್ದಿಕ ಅಭಿಮಾನ ಉತ್ಕೃಷ್ಟ ಪ್ರತಿಭೆಯಲ್ಲಿ ಗುರುತಿಸಲ್ಪಡುವ ಕಲಾವಿದರಾಗಿದ್ದಾರೆ. +ಗುಂಡಬಾಳ, ಕಮಲಶಿಲೆ, ಅಮೃತೇಶ್ವರಿ, ಕುಮಟಾ,ಕಳವಾಡಿ, ಬಗ್ವಾಡಿ, ಕಮಲಶಿಲೆ ಮೇಳಗಳಲ್ಲಿ ಸುಮಾರು 25 ವರ್ಷಗಳ ಕಲಾಯಾತ್ರೆಯನ್ನು ಸಾರ್ಥಕ ರಂಗಪ್ರಗತಿಯಲ್ಲಿ ಪೂರೈಸಿದ್ದಾರೆ. +ನಾಯಕ, ಪ್ರತಿನಾಯುಕ, ಖಳನಾಯಕ,ಪಾತ್ರಗಳಲ್ಲಿ ಪ್ರತಿಭಾ ಪಾರಮ್ಯವನ್ನು ಪ್ರಕಟಿಸುವ ಜಗದೀಶ ಹೆಗಡೆಯವರು ಖಳ ಭೂಮಿಕೆಗಳಿಗೆ ಕೊಡುವ ಪ್ರತಿಭೆಯ ಕಳೆ ವಿಶಿಷ್ಟವಾದುದು. +ರಾಸಲೀಲೆಯ ಶೃಂಗಾರ ಲಾಸ್ಯದ ಶ್ರೀಕೃಷ್ಣನ ರಂಗವ್ಯವಹಾರ, ರಸಿಕ ಕೀಚಕನ ರಸೋತ್ಕೃಷ್ಟ ಕಲಾಚಮತ್ಕಾರ, ಅರ್ಜುನ, ಸುಧನ್ವ, ದೇವವೃತ,ಚಂದ್ರಹಾಸ, ಭೂಮಿಕೆಗಳ ಪೌರುಷೇಯ ವಿಲಾಸ,ಜರಾಸಂಧ, ಕೌರವ, ಕಂಸ, ದುಷ್ಟಬುದ್ಧಿ, ಕಾರ್ತವೀರ್ಯ ಮೊದಲಾದ ಪಾತ್ರಗಳ ಚಿತ್ರತರ ಸೊಗಸಿನ ಪ್ರತಿಭಾ ವಿಶೇಷ ಜನಮನದಲ್ಲಿ ಸ್ಥಾಯಿಯಾಗಿದೆ. +ಪತ್ನಿ ಸುಜಾತ ಹೆಗಡೆ. +ಗೌರೀಶ ಹೆಗಡೆ ಸುಪುತ್ರ ಮಾಳ್ಕೋಡು ಜಗದೀಶ ಹೆಗಡೆ ನಾಡಿನ ಹಲವಾರು ಸಂಘ-ಸಂಸ್ಕೆಗಳ ಗೌರವ ಸಂಮಾನಕ್ಕೆ ಭಾಜನರಾಗಿದ್ದಾರೆ. +ಯಕ್ಷಗಾನ ಪ್ರಪಂಚದಲ್ಲಿ “ಹಳ್ಳಾಡಿ' ಎಂಬ ಹೆಸರು ಕೇಳಿದಾಕ್ಷಣ ನಗೆಯ ಕುಲುಕಾಟದಿಂದ ಕಲಾರಸಿಕರ ಹೊಟ್ಟೆ ಹುಣ್ಣಾಗುತ್ತದೆ. +ಇದಕ್ಕೆ ಕಾರಣ ಆ ಊರಿನಲ್ಲಿ ಹುಟ್ಟಿ ಬೆಳೆದು ಸಮರ್ಥಹಾಸ್ಯಗಾರರಾಗಿ ರೂಪುಗೊಂಡ ಹಿರಿಯ ಕಲಾವಿದ ಹಳ್ಳಾಡಿ ಜಯರಾಮ ಶೆಟ್ಟಿ. +ಕುಂದಾಪುರ ತಾಲೂಕಿನ ಹಳ್ಳಾಡಿ ಅಬ್ಬಿಮನೆ ಎಂಬಲ್ಲಿ 1-2-1956ರಲ್ಲಿ ಜನಿಸಿದ ಜಯರಾಮ ಶೆಟ್ಟರು ಅಣ್ಣಪ್ಪ ಶೆಟ್ಟಿ-ಅಕ್ಕಮ್ಮ ಶೆಡ್ತಿ ದಂಪತಿಯ ಸುಪುತ್ರ. +ಎಳವೆಯಲ್ಲೇ ಯಕ್ಷಗಾನ ಕಲಾಸಕ್ತಿ ಮೈಗೂಡಿಸಿಗೊಂಡ ಶೆಟ್ಟರು ಐದನೇ ತರಗತಿಗೇ ಮಂಗಳಹಾಡಿ, ತನ್ನ 12ನೇ ವಯಸ್ಸಿನಲ್ಲೇ ಕಲಾಜೀವನ ಆರಂಭಿಸಿದರು. +ಅಮವಾಸೆಬೈಲು ಕಿಟ್ಟಪ್ಪ ಹೆಬ್ಬಾರ್‌ ಅವರು ಹಳ್ಳಾಡಿ ಅವರನ್ನು ವೃಕ್ತಿಮೇಳಕ್ಕೆ ಪರಿಚಯಿಸಿದರೆ,ಹಳ್ಳಾಡಿ ಮಂಜಯ್ಯ ಶೆಟ್ಟರು ಮೇಳದಲ್ಲಿ ಇವರಿಗೆ ಗುರುವಾಗಿ ದೊರೆತರು. +ಸತತ ಪ್ರಯತ್ನ, ಸ್ವಯಂ ಪ್ರತಿಭೆಯು ಮೂಲಕ ರಂಗದಲ್ಲಿ ಸಾರ್ಥಕ ಯಶಸ್ಸು ಕಂಡ ಜಯರಾಮಶೆಟ್ಟರು ನಾರ್ಣಪ್ಪ ಉಪ್ಪೂರರ. +ನಿರ್ದೇಶನದಲ್ಲಿ ಹಾಸ್ಯಭೂಮಿಕೆಯೊಂದನ್ನು ನಿರ್ವಹಿಸಿ ಗೆಲುವು ಕಂಡರು. +ಮೊದಲ ಹಾಸ್ಯವೇಷವೇ ವಿಶೇಷ ಯಶಸ್ಸು ಕಂಡ ನಂತರ ಆ ವಿಭಾಗಕ್ಕೇ ಇವರು ಗಟ್ಟಿಯಾದರು. +ಹಳ್ಳಾಡಿ ಅವರ ಹಾಸ್ಯಗಾರಿಕೆಗೆ ಪಾರಂಪರಿಕತೆ ಹಾಗೂ ಸೃಜನಶೀಲತೆಯ ಸುಂದರ ಮೆರುಗು ಇದೆ. +ಅವರದು ಹಾಸ್ಯಭೂಮಿಕೆಗೆ ಸಮುಚಿತವಾದ ಆಳಂಗ,ನೃತ್ಯ, ಅಭಿನಯ, ವೇಷ ವೈಖರಿ, ಮಾತುಗಾರಿಕೆ. +ಹಳ್ಳಾಡಿ ಜಯರಾಮಶೆಟ್ಟರ ಹಾಸ್ಯ ಪಾತ್ರಗಳಲ್ಲಿ ಹಾಲಾಡಿ ಕೊರ್ಗು ಹಾಸ್ಯಗಾರರ ಛಾಪು, ಕುಂಜಾಲು ಅವರ ರೂಪು, ವಿಟ್ಲ ಜೋಶಿಯವರ ನೆನಪು ಪಡಿಮೂಡುವುದನ್ನು ಕಲಾರಸಿಕರು ಗಮನಿಸಿದ್ದಾರೆ. +ಕಮಲಶಿಲೆ 1, ಮಂದಾರ್ತಿ 6, ಅಮೃತೇಶ್ವರಿ 2, ಮೂಲ್ಕಿ 3, ಪೆರ್ಡೂರು 6, ಕುಂಬಳೆ 2,ಸಾಲಿಗ್ರಾಮ 21, ಹೀಗೆ 41 ವರ್ಷಗಳ ಕಲಾವ್ಯವಸಾಯ ಅವರಿಗೆ ಸಾರ್ಥಕ ಕೀರ್ತಿ ತಂದಿತ್ತಿದೆ. +ಶ್ರೀಯುತರು ಯುಗಳ ತಿಟ್ಟಿನಲ್ಲೂ ವಿಜೃಂಭಿಸಿದ ಶ್ರೇಷ್ಠ ಹಾಸ್ಯ ಕಲಾವಿದರು. +ಜಯರಾಮಶೆಟ್ಟರ ಕಂದರ, ಕಾಶೀಮಾಣಿ,ಬಾಹುಕ, ಚಂದಗೋಪ, ವಿಡೂರಥ, ದಾರುಕ,ಬ್ರಾಹ್ಮಣ, ರಜಕ ಮೊದಲಾದ ಭೂಮಿಕೆಗಳು ವಿಶೇಷ ರಂಜನೆಯಲ್ಲಿ ಕಲಾಪ್ರೇಮಿಗಳ ಮನಸಗೆದ್ದಿವೆ. +ಕುಂದಾಪುರ ಕನ್ನಡ ಸೊಗಸನ್ನು ನಾಡಿನಾದ್ಯಂತ ಹಾಸ್ಯ ಪಾತ್ರಗಳಲ್ಲಿ ತೋರಿದ ಅನುಭವಿ ಹಾಸ್ಯಗಾರ ಜಯರಾಮ ಶೆಟ್ಟರ ಮಡದಿ ರೇಣುಕಾ ಶೆಟ್ಟಿ. +ರತೀಶ್‌,ಸೌಮ್ಯಾ ಮಕ್ಕಳು. +ನಾಡಿನಾದ್ಯಂತ ನೂರಾರು ಸಂಮಾನಗಳು ಶ್ರೀಯುತರಿಗೆ ದೊರಕಿದೆ. +ಮುಂಬಯಿ ಬಂಟರಸಂಘ, ಬೆಂಗಳೂರು ನಾಡವರ ಸಂಘ, ಬೆಂಗಳೂರು ಕರ್ನಾಟಕ ರಕ್ಷಣಾ ವೇದಿಕೆಯ ಗೌರವ ಸಂಮಾನವೂ ಇವರಿಗೆ ಲಭಿಸಿದೆ. + ಬಡಾಬಡಗಿನ ಪರಂಪರೆಯ ಸತ್ವ-ತತ್ವಗಳ ಪರಿಪೂರ್ಣ ಪರಿಪಾಕವಾಗಿ ಕಲಾ ಶ್ರೀಮಂತಿಕೆಯನ್ನು ಮೆರೆಯುವ ಶಿಷ್ಟ ಕಲಾವಿದರಲ್ಲಿ ಶಿರಳಗಿ ತಿಮ್ಮಪ್ಪ ನಾರಾಯಣ ಹೆಗಡೆ ಅವರೂ ಒಬ್ಬರು. +ಉತ್ತರ ಕನ್ನಡದ ಶಿರಳಗಿ ಎಂಬಲ್ಲಿ 1957ರಆಗಸ್ಟ್‌ 17 ರಂದು ನಾರಾಯಣ ತಿಮ್ಮಯ್ಯ ಹೆಗಡೆ-ಮಹಾಲಕ್ಷ್ಮೀ ಹೆಗಡೆ ದಂಪತಿಯ ಪುತ್ರರಾಗಿ ಜನಿಸಿದ ತಿಮ್ಮಪ್ಪ ಹೆಗಡೆಯವರು ಹತ್ತನೇ ತರಗತಿಯವರೆಗೆ ಓದು ನಡೆಸಿ, ತನ್ನ 22ನೇ ವರ್ಷದಲ್ಲೇ ಕಲಾ ಬದುಕು ಕಂಡವರು. +ಪರಿಸರದಲ್ಲಿ ನಡೆಯುತ್ತಿದ್ದ ಯಕ್ಷಗಾನ ಬಯಲಾಟಗಳ ನಿರಂತರ ವೀಕ್ಷಣೆಯೇ ತಿಮ್ಮಪ್ಪ ಹೆಗಡೆಯವರಿಗೆ ಕಲಾಪ್ರೇರಣೆ ನೀಡಿತು. +ಇವರ ತಂದೆ ಪ್ರಸಿದ್ಧ ಹವ್ಯಾಸೀ ವೇಷಧಾರಿಯಾದುದರಿಂದ ಕಲಾವಂತ ಮನೆತನದ ಹಿನ್ನೆಲೆ ಇವರಿಗಿತ್ತು. +ಗೋಡೆ ನಾರಾಯಣ ಹೆಗಡೆಯವರ ಗುರುತನದಲ್ಲಿ ಸಶಕ್ತ ಕಲಾವಿದ್ಯಾ ಪ್ರೌಢಿಮೆ ಹೊಂದಿದ ತಿಮ್ಮಪ್ಪ ಹೆಗಡೆಯವರು,ಗುಂಡಬಾಳ 1, ಇಡಗುಂಜಿ 15, ಸಾಲಿಗ್ರಾಮ 9,ಶಿರಸಿ-ಪಂಚಲಿಂಗ 1, ಹೀಗೆ 26 ವರ್ಷಗಳ ಕಲಾಕೃಷಿ ಪೂರೈಸಿದ್ದಾರೆ. +ಸಾಂಪ್ರದಾಯಿಕ ಕೆತ್ತನೆಯ ಪೌರಾಣಿಕ ಛಾಪಿನ ವೇಷಗಾರಿಕೆ, ಶ್ರುತಿನಿಷ್ಠವಾದ ಪಾಂಡಿತ್ಯಪೂರ್ಣ ನಿರರ್ಗಳ ಮಾತುಗಾರಿಕೆ, ಔಚಿತ್ಯವರಿತ ಪ್ರಮಾಣಬದ್ಧ ನೃತ್ಯಗಾರಿಕೆ ಮೈಗೂಡಿಸಿಕೊಂಡು ನಿರ್ವಹಣಾ ಭೂಮಿಕೆಗಳಿಗೆ ಸಮುಚಿತ ರಂಗಸ್ವರೂಪ ನೀಡುವ ತಿಮ್ಮಪ್ಪ ಹೆಗಡೆಯವರು ಪುರಾಣ ಪ್ರಸಂಗಗಳ ಅಗಾಧ ಜ್ಞಾನ ಸಂಪನ್ನರು. +ಕೃಷ್ಣ ಸಂಧಾನದ ಧರ್ಮರಾಯ, ಕರ್ಣ ಪರ್ವದ ಕೌರವ, "ರಾಮ ನಿರ್ಯಾಣ'ದ ಲಕ್ಷ್ಮಣ,ಕಾರ್ತವೀರ್ಯ'ದ ಕೃತವೀರ್ಯ, ಸುಭದ್ರಾ ಕಲ್ಯಾಣದ ಅರ್ಜುನ ಸನ್ಯಾಸಿ, “ಕಂಸವಧೆ'ಯ ನಾರದ, ಅಕ್ರೂರ,"ಹರಿಶ್ಚಂದ್ರ'ದ ನಕ್ಷತ್ರಿಕ, ವಸಿಷ್ಠ ಮೊದಲಾದ ಪೌರಾಣಿಕ ಪಾತ್ರಗಳು ಇಂದಿಗೂ ಶಿರಳಗಿ ತಿಮ್ಮಪ್ಪ ಹೆಗಡೆಯವರ ಸಮರ್ಥ ಕಲಾವಂತಿಕೆಯನ್ನು ನೆನಪಿಸುತ್ತವೆ. +ಬಡಗುತಿಟ್ಟಿನ ಒಬ್ಬ ಸಮರ್ಥ ಪೀಠಿಕಾ ರಾಜವೇಷಧಾರಿಯಾಗಿ ಮೆರೆದ ಶಿರಳಗಿ ಪ್ರತಿಭಾನ್ವಿತ ಕಲಾವಿದರು. +ಪತ್ನಿ ಶಾರದ ಹೆಗಡೆ. +ಅರುಣ,ಅರ್ಚನಾ ಎಂಬ ಈರ್ವರು ಮಕ್ಕಳು. +ಹಲವಾರು ಸಂಘ ಸಂಸ್ಥೆಗಳಿಂದ ಶ್ರೀಯುತರಿಗೆ ಸಂಮಾನ ದೊರಕಿದೆ. +ಬಡಗುತಿಟ್ಟಿನ ಅನುಭವೆ ಮದ್ದಳೆವಾದನದಲ್ಲಿ ಸಾರ್ಥಕ ಹೆಸರುಗಳಿಸಿದವರು ದೇವದಾಸ ಶೆಣೈ,ಆರ್ಗೋಡು. +ಕುಂದಾಪುರ ತಾಲೂಕಿನ ಆರ್ಗೋಡು ಎಂಬಲ್ಲಿ 27-9-1952ರಲ್ಲಿ ಜನಿಸಿದ ದೇವದಾಸ ಶಣೈ ಅವರು ಹಿರಿಯ ವೇಷಧಾರಿ ನರಸಿಂಹ ಶಾನುಭಾಗ್‌-ಭಾಗೀರಥಿ ದಂಪತಿಯ ಸುಪುತ್ರ. +ಹತ್ತರವರೆಗೆ ಅಕ್ಷರ ಕಲಿಕೆ ನಡೆಸಿ, ಇಪ್ಪತ್ತರಲ್ಲಿ ಯಕ್ಷಗಾನ ಪ್ರಪಂಚವನ್ನು ಪ್ರವೇಶಿಸಿದ ದೇವದಾಸ ,ಶೆಣೈಯವರಿಗೆ ಕೌಟುಂಬಿಕವಾಗಿ ಆನುವಂಶೀಯತೆಯ ಕಲಾ ಬಳುವಳಿಯಿದೆ. +ಇವರ ತಂದೆ ಸಮರ್ಥ ವೇಷಧಾರಿಯಾದರೆ, ಚಿಕ್ಕಪ್ಪ ಗೋವಿಂದರಾಯ ಶೆಣೈ ಪ್ರಬುದ್ಧ ಭಾಗವತರಾಗಿದ್ದರು. +ಹಾಗಾಗಿ ಕಲಾವಂತಿಕೆಯೆಂಬುದು ಶ್ರೀಯುತರಿಗೆ ಎಳವೆಯಲ್ಲೇ ಮೈಗೂಡುವಂತಾಯಿತು. +ಕಮಲಶಿಲೆ 5, ಪೆರ್ಡೂರು 3, ಹಿರಿಯಡಕ 2, ಹಾಲಾಡಿ 1, ಅಮೃತೇಶ್ವರಿ 4, ಸೌಕೂರು 5,ಮಂದಾರ್ತಿ 5, ಹೀಗೆ ರಜತ ವರ್ಷವನ್ನು ಕಲಾಯಾತ್ರೆಯಲ್ಲಿ ಕಳೆದಿದ್ದಾರೆ. +ಪ್ರಸ್ತುತ ಶೆಣೈಯವರು ಮಂದಾರ್ತಿ ಮೇಳದ ಮದ್ದಳೆವಾದಕರಾಗಿ ದುಡಿಯುತ್ತಿದ್ದಾರೆ. +ಪ್ರಸಂಗಗಳ ಪ್ರತೀ ಪಾತ್ರಗಳ,ಸಂದರ್ಭ-ಸನ್ನಿವೇಶಗಳ ಔಚಿತ್ಯವನ್ನು ಮನಸ್ವೀ ಅರಿತು, ಗಾನಪೂರಕವಾಗಿ ಮದ್ದಳೆ ನುಡಿಸುವ ದೇವದಾಸ ಶೆಣೈಯವರು ಅಗಾಧ ಕಲಾನುಭವ ಹೊಂದಿದವರು. +ಶ್ರೀಯುತರು ಚಂಡೆವಾದನ ಕಲೆಯನ್ನೂ ಬಲ್ಲವರು. +ಗೀತಾ ಶೆಣೈ ಎಂಬುವವರು ಇವರ ಧರ್ಮಪತ್ನಿ. +ಗುರುಪ್ರಸಾದ ಶೆಣೈ, ಮಾಧವ ಶೆಣೈ,ಹರ್ಷ, ಭಾಗ್ಯಶ್ರೀ ಇವರ ನಾಲ್ಕು ಮಂದಿ ಮಕ್ಕಳು. +ಶ್ರೀಯುತರನ್ನು ಹಲವಾರು ಸಂಘಸಂಸ್ಥೆಗಳು,ಸಾಂಸ್ಕೃತಿಕ ಸಂಘಟನೆಗಳು ಗುರುತಿಸಿ ಗೌರವಿಸಿವೆ. +ಶ್ಲಾಘ್ಯಯೋಗ್ಯ ಪಾತ್ರ ಚಿತ್ರಣ, ಸದೃಢ ಆಳ್ತನದಲ್ಲಿ ಕಂಗೊಳಿಸುವ ವೇಷಗಾರಿಕೆ, ತೂಕದ ರಸಾತ್ಮಕ ಮಾತುಗಾರಿಕೆ. +ಖಚಿತ ಲಯಗಾರಿಕೆ ಹಾಗೂ ಸುಪುಷ್ಪ ಪ್ರಸಂಗ ನಡೆಯನ್ನು ರಂಗಮುಖದಲ್ಲಿ ನಿಚ್ಚಳವಾಗಿ ಗುರುತಿಸುವಂತೆ ಮಾಡುವ ಅನುಭವಿ ಕಲಾವಿದ ಬೆದ್ರಾಡಿ ನರಸಿಂಹ ನಾಯ್ಕ. +ಕುಂದಾಪುರ ತಾಲೂಕಿನ ಬೆದ್ರಾಡಿ ಎಂಬಲ್ಲಿ ರಾಮನಾಯ್ಕ-ಸಂಕಮ್ಮ ಮೊಗೇರ್ತಿ ದಂಪತಿಯ ಸುಪುತ್ರರಾಗಿ 12-7-1965ರಲ್ಲಿ ಜನಿಸಿದ ನರಸಿಂಹ ನಾಯ್ಕ ಅವರ ಅಕ್ಷರಶಿಕ್ಷಣ ಐದಕ್ಕೇ ಕೈದಾಯಿತು. +15ನೇ ವಯಸ್ಸಿನಲ್ಲೇ ಅವರನ್ನು ಬಣ್ಣದ ಬದುಕು ಕೈಬೀಸಿ ಕರೆಯಿತು. +ಹಿರಿಯ ಕಲಾವಿದ ಆಲೂರು ತೇಜನವರ ಪ್ರೇರಣೆಯಂತೆ ಯಕ್ಷಗಾನ ವೃತ್ತಿರಂಗಭೂಮಿಗೆ ಮನಸ್ವೀ ಅರ್ಪಣೆಯಾದ ಇವರು, ಹಾರಾಡಿ ಸರ್ವೋತ್ತಮ ಗಾಣಿಗರ ಶಿಷ್ಯನಾಗಿ ಸಶಕ್ತ ಕಲಾನುಭವ ದ್ರವ್ಯವನ್ನು ಸಂಪಾದಿಸಿಕೊಂಡರು. +ಯಕ್ಷಗಾನ ಕಥಾನಕಗಳ ಯಾವುದೇ ನಡೆಯ ಗಂಡುಭೂಮಿಕೆಗಳನ್ನು ಸಮರ್ಥವಾಗಿ ಪೋಷಿಸಬಲ್ಲಕ ಲಾವಂಶಿಕೆ ಹೊಂದಿದ ಬೆದ್ರಾಡಿಯವರ ನಾಯಕ,ಪ್ರತಿನಾಯಕ, ಹಾಗೂ ಖಳನಾಯಕ ಪಾತ್ರಗಳ ಯಕ್ಷಗಾನೀಯ ರಂಗ ಚಿತ್ರಣ ಮನ ಮೆಜ್ಜುವಂತಾದ್ದು. +ಮಂದಾರ್ತಿ 8, ಸೌಕೂರು 15, ಹಾಲಾಡಿ 2,ಹೀಗೆ ವೃತ್ತಿ ಜೀವನದಲ್ಲಿ ಶ್ರೀಯುತರ ಸಂಪನ್ನ ಯಕ್ಷಕೃಷಿ ಬೆಳ್ಳಿ ಹಬ್ಬವನ್ನು ಯಶಸ್ವಿಯಾಗಿ ಪೂರೈಸಿದೆ. +ಪ್ರಸ್ತುತ ಬೆದ್ರಾಡಿಯವರು ಮಂದಾರ್ತಿ ಮೇಳದ ಕಲಾವಿದರು. +ಕೀಚಕ, ಭೀಮ, ಅರ್ಜುನ, ಕೌರವ, ಕಂಸ,ಭಸ್ಮಾಸುರ, ದುಷ್ಟಬುದ್ಧಿ, ವಿಭೀಷಣ, ವೀರಮಣಿ,ರಾವಣ, ಬಲರಾಮ ಮೊದಲಾದ ಪೌರಾಣಿಕ ಪಾತ್ರಗಳಲ್ಲಿ ಬೆದ್ರಾಡಿಯವರ ಕಲಾಭಿವ್ಯಕ್ತಿ ಮನೋಜ್ಞ ಧರ್ಮಪತ್ನಿ ಸರೋಜಾ. +ಪ್ರಶಾಂತ, ಪ್ರದೀಪ,ಪ್ರವೀಣ, ಪ್ರಥ್ವಿ ಮಕ್ಕಳು. +ಪ್ರಬುದ್ಧ ಕಲಾವಿದ ಬೆದ್ರಾಡಿ ನರಸಿಂಹ ನಾಯ್ಕರು ಉಡುಪಿ-ಕುಂದಾಪುರದಲ್ಲಿ ಸಂಪನ್ನಗೊಂಡ ಮೊಗವೀರ ಕಲೋತ್ಸವ ಸೇರಿದಂತೆ ಅನೇಕ ಸಮಾರಂಂಭಗಳಲ್ಲಿ ಸಂಘ-ಸಂಸ್ಥೆಗಳಲ್ಲಿ ಸಂಮಾನಿತರಾಗಿದ್ದಾರೆ. +ರಾಜವೇಷ, ಮುಂಡಾಸುವೇಷ, ಕಿರಾತವೇಷ,ಬಣ್ಣದ ವೇಷ, ಹೀಗೆ ವರ್ಣರಂಜಿತ ಕಲಾವ್ಯಕ್ತಿತ್ವದಲ್ಲಿ ವಿಜೃಂಭಿಸುವ ಸಂಪನ್ನ ಕಲಾವಿದ ಮಾನ್ಯ ನರಸಿಂಹ. +ಉಡುಪಿ ತಾಲೂಕಿನ ಮಾನ್ಯ ಎಂಬ ಹಳ್ಳಿಯಲ್ಲಿ ಕುಷ್ಠ ಮರಕಾಲ-ಲಚ್ಚಮ್ಮ ದಂಪತಿಯ ಪುತ್ರನಾಗಿ 12-06-1960ರಲ್ಲಿ ಜನಿಸಿದ ನರಸಿಂಹ ಅವರುಆರನೇ ತರಗತಿಯವರೆಗಿನ ಶೈಕ್ಷಣಿಕ ಹಂತದ ಬಳಿಕ 20ನೇ ವಯಸ್ಸಿನಲ್ಲೇ ಯಕ್ಷಗಾನ ಬಣ್ಣದ ಪ್ರಪಂಚಕ್ಕೆ ಮೊಗವೊಡ್ಡಿದರು. +ಹಿರಿಯ ಸ್ರ್ತೀ ವೇಷಧಾರಿ ವಂಡ್ಸೆ ನಾರಾಯಣ ಗಾಣಿಗರ ಪ್ರೇರಣೆಯನ್ನು ಪಡೆದ ನರಸಿಂಹ ಅವರು 1980ರಲ್ಲಿ ಉಡುಪಿ ಯಕ್ಷಗಾನ ಕೇಂದ್ರದ ವಿದ್ಯಾರ್ಥಿಯಾಗಿ ನೀಲಾವರ ರಾಮಕೃಷ್ಣಯ್ಯ, ಮಹಾಬಲ ಕಾರಂತ,ಶ್ರೀಧರಹೆಬ್ಬಾರರ ಗುರುತನದಲ್ಲಿ ಶಾಸ್ತ್ರೋಕ್ತ ಯಕ್ಷವಿದ್ಯೆಯನ್ನು ಗಳಿಸಿದರು. +ಮಂದಾರ್ತಿ 10, ಪೆರ್ಡೂರು 1. ಇಡಗುಂಜಿ1, ಸೌಕೂರು 8, ಹಾಲಾಡಿ 6, ಮಡಾಮಕ್ಕಿ 2,ಕಮಲಶಿಲೆ 1, ಗೋಳಿಗರಡಿ 1, ಹೀಗೆ ಮೂರು ದಶಕಗಳ ಕಾಲ ರಂಗಕೃಷಿಯಲ್ಲಿ ಸಾರ್ಥಕ್ಕ ಕಂಡ ಶ್ರೀಯುತರು ಪ್ರಸ್ತುತ ಮಂದಾರ್ತಿ ಮೇಳದ ಬಣ್ಣದ ವೇಷಧಾರಿಯಾಗಿ ಕಲಾಸೇವೆ ನಡೆಸುತ್ತಿದ್ದಾರೆ. +ಅನನ್ಯ ಅನುಭವವನ್ನು ಹೊಂದಿದ ಮಾನ್ಯ ಅವರ ಪ್ರತೀ ಪಾತ್ರಗಳೂ ಸಹೃದಯ ಕಲಾಪ್ರೇಮಿಗಳಿಂದ ಮಾನ್ಯತೆ ಪಡೆದಿವೆ. +ಒಂದು ಸುಸೂತ್ರವಾದ ರಂಗ ಚೌಕಟ್ಟಿನಲ್ಲೇ ಯಕ್ಷಗಾನ ಕಲಾಕರ್ಮವನ್ನು ನಡೆಸುವ ಮಾನ್ಯ ನರಸಿಂಹ,ದೇವೇಂದ್ರ, ಧರ್ಮರಾಯ ಮೊದಲಾದ ಪೋಷಕ ರಾಜವೇಷಗಳನ್ನೂ, ಕೌಂಡ್ಲೀಕ, ದಕ್ಷ,ವೀರಮಣಿಯಂತಹ ಮುಂಡಾಸುವೇಷಗಳನ್ನೂ,ವಿಂಧ್ಯಕೇತ, ವಿದ್ಯುಲ್ಲೋಚನ, ಏಕಲವ್ಯ ಮೊದಲಾದ ಪ್ರತಿನಾಯಕ ಪಾತ್ರಗಳನ್ನು, ಬಕಾಸುರ, ಕಿಮ್ಮೀರ,ಹಿಡಿಂಬಾಸುರ, ಶೂರ್ಪನಖಾ, ಹಿಡಿಂಬೆ ವೃತ್ರಜ್ವಾಲೆಯಂತಹ ಗಂಡು-ಹೆಣ್ಣು ಬಣ್ಣದ ವೇಷಗಳನ್ನು ಸಮರ್ಥವಾಗಿ ನಿರ್ವಹಿಸಿ ಗೆಲುವು ಕಂಡವರು. +ಪತ್ನಿ ಗೀತಾ. +ವಸಂತ, ಪ್ರಶಾಂತ, ವಸಂತಿ ಮಕ್ಕಳು. +ಹಿರಿಯ ಪ್ರತಿಭಾಶಾಲಿ ಕಲಾವಿದ ಮಾನ್ಯ ನರಸಿಂಹ ಅವರನ್ನು ಡಾ.ಜಿ.ಶಂಕರ್‌ ಫ್ಯಾಮಿಲಿಟ್ರಸ್ಟ್‌ ವತಿಯಿಂದ ಗೌರವಪೂರ್ವಕವಾಗಿ ಸಮ್ಮಾನಿಸಲಾಗಿದೆ. +ಬಡಗುತಿಟ್ಟಿನ ಸಾಂಪ್ರದಾಯಿಕ ಶೈಲಿಯ ಭಾಗವತರಲ್ಲಿ ಮತ್ಯಾಡಿ ನರಸಿಂಹ ಶೆಟ್ಟಿ ಅವರದು ಬಲು ದೊಡ್ಡ ಹೆಸರು. +40ಕ್ಕೂ ಹೆಚ್ಚು ಪೌರಾಣಿಕ ಪ್ರಸಂಗಗಳನ್ನು ಕಂಠಸ್ಥ ಮಾಡಿಕೊಂಡಿರುವ ಶೆಟ್ಟರು ಈ ತಿಟ್ಟಿನ ಪರಂಪರೆಯ ಪ್ರತಿನಿಧಿಯಂತೆ ಕಾಣುವ ಅನುಭವಿ ಭಾಗವತರು. +27-6-1927ರಂದು ಕುಂದಾಪುರ ತಾಲೂಕಿನ ಯಡಾಡಿ - ಮತ್ಯಾಡಿ ಎಂಬಲ್ಲಿ ಜಿ.ರಾಮಣ್ಣಶೆಟ್ಟಿ-ಮುತ್ತಕ್ಕ ಶೆಡ್ತಿ ದಂಪತಿಯ ಸುಪುತ್ರನಾಗಿ ಜನಿಸಿದ ನರಸಿಂಹ ಶೆಟ್ಟಿ ಅವರಿಗೆ ಬಾಲ್ಯದಿಂದಲೇ ಯಕ್ಷಗಾನದ ಗೀಳು. +8ನೇ ತರಗತಿಗೇ ಅಕ್ಷರ ವಿದ್ಯೆಗೆ ಮಂಗಳಹಾಡಿ, 25ನೇ ವರ್ಷದಲ್ಲಿ ಗಾನ ಬದುಕಿಗೆ ಶ್ರೀಕಾರ ಹಾಡಿದ ಶೆಟರು. +ನಾರ್ಣಪ ಉಪೂರರ ಶಿಷ್ಯರಾಗಿ ಪಾತಾಳದೀಕ್ಷೆ, ಪ್ರಸಂಗನಡ, ರಾಗಾನುಭವ,ರಂಗಪರಿಣತಿಯನ್ನು ಕಲಿತುಕೊಂಡರು. +ಕೊಡವೂರು, ಪೆರ್ಡೂರು, ಅಮೃತೇಶ್ವರಿ,ಮಂದಾರ್ತಿ, ಮಾರಣಕಟ್ಟೆ, ಕಳುವಾಡಿ, ಮೇಳಗಳಲ್ಲಿ ತಿರುಗಾಟ ಮಾಡಿದ ಶೆಟ್ಟರು ವೃತ್ತಿರಂಗದಲ್ಲಿ ಸುದೀರ್ಫ 45 ವರ್ಷ ಪೂರೈಸಿ 1992ರಿಂದ ವಿಶ್ರಾಂತ ಜೀವನ ನಡೆಸುತ್ತಿದ್ದಾರೆ. +ಪತ್ನಿ ಸಾಧಮ್ಮ ಶೆಡ್ತಿ. +ಸುಲೋಚನಾ,ಚಂದ್ರಶೇಖರ,ರತ್ನಾವತಿ, ಜ್ಯೋತಿ ಎಂಬ 4 ಮಂದಿ ಮಕ್ಕಳನ್ನು ಪಡೆದ ಶೆಟ್ಟರು ಅನನ್ಯ ಕಲಾನುಭವವನ್ನು ಹೊಂದಿದ ಪ್ರೌಢ ಭಾಗವತರು. +ಇವರಿಗೆ ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ ಪ್ರಶಸ್ತಿ ದೊರೆತಿದೆ. +ಅಲ್ಲದೆ ಉಡುಪಿ ಯಕ್ಷಗಾನ ಕಲಾರಂಗವು "ಭಾಗವತ ನಾರ್ಣಪ್ಪ ಉಪ್ಪೂರ ಪ್ರಶಸ್ತಿ' ನೀಡಿ ಗೌರವಿಸಿದೆ. +“ನಾರಾಯಣಕಿಲ್ಲೆ' ಪ್ರಶಸ್ತಿ, "ಬಂಟರ ಕಲೋತ್ಸವ' ಸಮ್ಮಾನ ದೊರಕಿರುತ್ತದೆ. +ಬಡಾಬಡಗಿನ ಪಾರಂಪರಿಕ ರಂಗನಡೆಯನ್ನು ಸುಪುಷ್ಟವಾಗಿ ರೂಢಿಸಿಕೊಂಡು, ಪ್ರೌಢ ಪ್ರತಿಭೆಯ ಪ್ರಭಾವಳಿಯಲ್ಲಿ ಪೌರಾಣಿಕ ಯಕ್ಷಜಗತ್ತನ್ನು ಬೆಳಗಿದ ಹಿರಿಯ ವೇಷಧಾರಿ ನಾಗಪ್ಪ ಗೋವಿಂದ ಗೌಡಗುಣವಂತೆ. +ಉತ್ತರ ಕನ್ನಡದ ಹೊನ್ನಾವರ ತಾಲೂಕಿನ ಹೆಬ್ಬಾರ ಹಿತ್ಲು ಎಂಬಲ್ಲಿ 01-10-1944ರಲ್ಲಿ ಗೋವಿಂದ ಗೌಡ-ಗಣಪಿ ಗೌಡ ದಂಪತಿಯ ಮಗನಾಗಿ ಜನಿಸಿದ ನಾಗಪ್ಪ ಗೌಡರು, ಹತ್ತನೇ ಇಯತ್ತೆಯವರೆಗೆ ಅಕ್ಷರ ಕಲಿಕೆ ನಡೆಸಿ, 18ನೇವಯಸ್ಸಿನಲ್ಲಿ ಕಲಾಬದುಕಿಗೆ ಹೆಜ್ಜೆಯಿಟ್ಟರು. +ಕೆರೆಮನೆ ಶಂಭು ಹೆಗಡೆಯವರ ಅಪ್ರತಿಮ ಕಲಾಸಿದ್ಧಿಯೇ ನಾಗಪ್ಪ ಗೌಡರಿಗೆ ಬಣ್ಣದ ಬದುಕಿಗೆ ಪ್ರೇರಣೆಯಾಯಿತು. +ವಿಶೇಷವೆಂದರೆ ಶ್ರೀಯುತರಿಗೆ ಶಂಭು ಹೆಗಡೆಯವರ ಗುರುತನವೂ, ಪ್ರೋತ್ಸಾಹವೂ,ಸಮರ್ಪಕವಾಗಿ ದೊರಕಿತು. +ಮಲಗದ್ದೆ ಗಣೇಶಯ್ಯ ಅವರ ರಂಗ ತರಬೇತಿ ಶ್ರೀಯುತರನ್ನು ಸುಯೋಗ್ಯ ಕಲಾವಿದರನ್ನಾಗಿ ರೂಪಿಸುವಲ್ಲಿ ಶಕ್ತವಾಯಿತು. +ನಾಗಪ್ಪಗೌಡರ ವೇಷಗಾರಿಕೆ, ರಂಗನಡೆ, ನೃತ್ಯಾಭಿನಯ ಹಾಗೂ ಮಾತುಗಾರಿಕೆ ಸಾಮೃದ್ಧಿಕ ಸೊಗಸು ಬಿಂಬಿಸುತ್ತವೆ. +ಸಾಮಾನ್ಯವಾಗಿ ಪೌರಾಣಿಕ ಪ್ರಸಂಗಗಳಲ್ಲಿ ಬರುವ ಎಲ್ಲಾ ವಿಧದ ಪೋಷಕ ಪಾತ್ರಗಳನ್ನೂ ನಿರ್ವಹಿಸಿ ಸೈ ಅನ್ನಿಸಿ ಕೊಂಡಿದ್ದಾರೆ. +ಬಬ್ರುವಾಹನ, ವೃಷಸೇನ, ಧರ್ಮಾಂಗದ ಮೊದಲಾದ ಮೂರನೇ ವೇಷಗಳನ್ನು ಯಶಸ್ವಿಯಾಗಿ ನಿರ್ವಹಿಸಿದವರು ಗೌಡರು. +ನಾಗಪ್ಪ ಗೌಡರಿಗೆ ವಿಶೇಷ ಮಾನ್ಯತೆಯನ್ನು ತಂದಿತ್ತ ವೇಷವೆಂದರೆ ಕಿರಾತ. +ಶಬರ ದೊರೆಯಾಗಿ ವಿಶಿಷ್ಟ ನೃತ್ಯಾಭಿನಯ ವೈಖರಿ, ವಾಕ್‌ಚಮತ್ಕಾರ,ವೇಷಾಲಂಕರಣದಲ್ಲಿ ರಂಗಮಂಜದಲ್ಲಿ ವಿಜೃಂಭಿಸಿ ಜನಪ್ರಿಯತೆ ಕಂಡಿದ್ದಾರೆ. +ಅವರ ಕುಳಿಂದ, ಏಕಲವ್ಯ,ವಿಂಧ್ಯಕೇತ, ಸುನೇತ್ರ, ಮೊದಲಾದ ಭೂಮಿಕೆಗಳು ಜೀವಂತವಾಗಿ ಮೈದಾಳಿವೆ. +ಇಡಗುಂಜಿ ಮೇಳವೊಂದರಲ್ಲೇ ಸುಮಾರು 36 ವರ್ಷಗಳ ರಂಗಸೇವೆಯನ್ನು ಸಲ್ಲಿಸಿ ದಾಖಲಾರ್ಹ ಕಲಾವಿದರಾಗಿ ಕಾಣುವ ಗೌಡರು ಪ್ರಸ್ತುತ ನಿವೃತ್ತ ಜೀವನದಲ್ಲಿದ್ದಾರೆ. +ಪತ್ನಿ ಮಂಜಿ ಗೌಡ. +ರಾಧಾ,ಸದಾನಂದ, ಕಲ್ಪನಾ, ಸವಿತಾ ಮಕ್ಕಳು. +ಸ್ಥಳೀಯ ಸಂಘ-ಸಂಸ್ಥೆಗಳು ಗೌಡರನ್ನು ಗುರುತಿಸಿ ಸಂಮಾನಿಸಿವೆ. + ವಿದೂಷಕರಾಗಿ ಬಡಗುತಿಟ್ಟಿನ ಯಕ್ಷಗಾನ ರಂಗದಲ್ಲಿ ನಗೆ ವ್ಯಂಜನದ ರಂಜನೆಯನ್ನು ಕಲಾರಸಿಕರಿಗೆ ಉಣಬಡಿಸುವ ಹಿರಿಯ ಹಾಸ್ಯ ಕಲಾವಿದ ಹೊಳೆಮಗೆ ನಾಗಪ್ಪ ಹಾಸ್ಯಗಾರ. +ಕುಂದಾಪುರ ತಾಲೂಕಿನ ಕಳವಿನ ಬಾಗಿಲು-ಹೊಳೆವಗೆ ಎಂಬ ಹಳ್ಳಿಯಲ್ಲಿ ದೊಟ್ಟನಾಯ್ಕ-ಚಂದು ಮೊಗೇರ್ತಿ ದಂಪತಿಯ ಮಗನಾಗಿ ಜನಿಸಿದ ನಾಗಪ್ಪಇದೀಗ ಅರವತ್ನಾಲ್ಕರ ಹರಯದಲ್ಲಿರುವ ವೃತ್ತಿನಿಷ್ಠಕಲಾವಿದರು. +ಕಡುಬಡತನದ ಕುಟುಂಬದ ನಾಗಪ್ಪ ಅವರು ಎಳವೆಯಲ್ಲೇ ಅನ್ಯಾದೃಶ ಯಕ್ಷಗಾನ ಕಲಾಸಕ್ತಿ ಹೊಂದಿದವರು. +ಪರಿಸರದಲ್ಲಿ ನಡೆಯುತ್ತಿದ್ದ ಬಯಲಾಟದ ಆಕರ್ಷಣೆಯಿಂದ ಯಕ್ಷಗಾನ ವೃತ್ತಿ ಬದುಕಿಗೆ ಮನ ಮಾಡಿದ ಶ್ರೀಯುತರು, 13ರ ಹರೆಯದಲ್ಲೇ ಕಾಲಿಗೆ ಗೆಜ್ಜೆ ಕಟ್ಟಿದರು. +ನಾಗಪ್ಪ ಅವರಿಗೆ ಬೇಲ್ತೂರು ಕುಷ್ಠ ನಾಯ್ಕ ಅವರು ಪ್ರಥಮ ಹೆಜ್ಜೆ ಗುರುವಾದರು. +ಹಿರಿಯ ಹಾಸ್ಯಗಾರ ವಂಡ್ಸೆ ನಾಗಯ್ಯ ಶೆಟ್ಟರು ಇವರನ್ನು ಮೇಳಕ್ಕೆ ಸೇರಿಸಿದರು. +ಉಡುಪಿ ಯಕ್ಷಗಾನ ಕೇಂದ್ರದ ವಿದ್ಯಾರ್ಥಿಯಾಗಿ ಗುರು ವೀರಭದ್ರನಾಯಕ್‌, ನೀಲಾವರ ರಾಮಕೃಷ್ಣಯ್ಯ ಹಿರಿಯಡಕ ಗೋಪಾಲರಾಯರಲ್ಲಿ ಪಾರಂಪರಿಕ ಯಕ್ಷಶಿಕ್ಷಣ ಪಡೆದು ಸಂಪನ್ನ ಕಲಾವಿದರಾದರು. +ಮಾರಣಕಟ್ಟೆ 11, ಅಮೃತೇಶ್ವರಿ 10, ಸೌಕೂರು 2, ಗೋಳಿಗರಡಿ 7, ಕಮಲಶಿಲೆ 10, ಹಾಲಾಡಿ ೨,ಮೇಗರವಳ್ಳಿ 1, ಕಳವಾಡಿ 1 ಮಡಾಮಕ್ಕಿ 1,ಧರ್ಮಸ್ಥಳ 2. ಪೆರ್ಡೂರು 2, ಬಗ್ಡಾಡಿ 2, ಹೀಗೆ 51 ವರ್ಷಗಳ ಸುದೀರ್ಥ ರಂಗಕೃಷಿಯನ್ನು ಸಾರ್ಥಕವಾಗಿ ಪೂರೈಸಿದ. +ನಾಗಪ್ಪ ಹೊಳೆಮಗೆಯವರು ಯುಗಳ ತಿಟ್ಟಿನ ಸಮರ್ಥ ಹಾಸ್ಕ್ಯಗಾರರಾಗಿ ಜನಪ್ರಿಯರಾಗಿದ್ದಾರೆ. +ಹಾಸ್ಯಭೂಮಿಕೆಗಳಿಗೊಪ್ಪುವ ಆಳಂಗ, ಭಾಷೆ. +ಧ್ವನಿ, ಹಾವ-ಭಾವ, ನೃತ್ಯ-ಅಭಿನಯದಿಂದ ಸೊಗಯಿಸುವ ನಾಗಪ್ಪನವರು ರಂಗವೇರಿದರೆ ಸಾಕು ಅಪಾರ ಪ್ರೇಕ್ಷಕ ವಲಯದೊಂದಿಗೆ ಇದಿರು ಪಾತ್ರಧಾರಿಯೂ ಫಕ್ಕನೆ ತುಟಿಯರಳಿಸಿ ನಕ್ಕು ಬಿಡುವ ಸನ್ನಿವೇಶ ಸೃಷ್ಠಿಯಾಗುತ್ತದೆ. +ಜೋಡಾಟಗಳಲ್ಲೂ ಇವರ ಹಾಸ್ಯಮಯ ರಂಗತಂತ್ರ ವಿಶಿಷ್ಟವಾದದ್ದು. +ಶ್ರೀಯುತರ ಕಂದರ, ವಿಜಯ, ಪಾಪಣ್ಣ,ಕಾಶೀಮಾಣಿ, ಬಾಹುಕ, ಕೊರವಂಜಿ, ಬ್ರಾಹ್ಮಣ,ವಿದ್ಯುಜ್ಜಿಹ್ವ, ಮಂಥರೆ ಪಾತ್ರಗಳು ಜನಪ್ರಿಯ. +ಪತ್ನಿ ಪದ್ದುಮೊಗೇರ್ತಿ. +ಜ್ಯೋತಿ, ಸುಜಾತ ಮಕ್ಕಳು. +ನಾಗಪ್ಪ ಹಾಸ್ಯಗಾರರು ಹಲವು ಸಂಘ-ಸಂಸ್ಥೆಗಳಿಂದ ಸಂಮಾನಿತ-ರಾಗಿದ್ದಾರೆ. +ಡಾ.ಜಿ.ಶಂಕರ್‌ ಫ್ಯಾಮಿಲಿ ಟ್ರಸ್ಟ್‌ ಗೌರವ, ಯಶಸ್ವಿಕಲಾವೃಂದ, ತೆಕ್ಕಟ್ಟೆ ಇದರ ದಶಮಾನೋತ್ಸವ ಪುರಸ್ಕಾರ ಪಡೆದಿರುತ್ತಾರೆ. +ಯಕ್ಷಗಾನ ಪೌರಾಣಿಕ ಪ್ರಪಂಚದ ಸತ್ವನಿಷ್ಠ ಸುಸಂಸ್ಕೃತ ಹಾಸ್ಯಗಾರಿಕೆಗೆ ಪ್ರಜ್ಞಾವಂತ ಯಕ್ಷರಸಿಕರ ತೋರು ಬೆರಳಿನಲ್ಲಿ ತೋರುವ ಹಿರಿಯ ಹಾಸ್ಯಗಾರ ವಂಡ್ಸೆ ನಾಗಯ್ಯ ಶೆಟ್ಟಿ. +ಕುಂದಾಪುರ ತಾಲೂಕಿನ ವಂಡ್ಸೆಯಲ್ಲಿ ರಾಮಣ್ಣಶೆಟ್ಟಿ - ಸದಿಯಮ್ಮ ಶೆಡ್ತಿ ದಂಪತಿಯ ಮಗನಾಗಿ ಜನಿಸಿದ ನಾಗಯ್ಯ ಶೆಟ್ಟರು 81ರ ಹರೆಯದಲ್ಲಿರುವ ಶ್ರೇಷ್ಠ ಕಲಾವಿದರು. +ನಾಗಯ್ಯಶೆಟ್ಟರ ಓದು ಎರಡನೇ ತರಗತಿ. +12ರ ಹರೆಯದಲ್ಲೇ ಯಕ್ಷಗಾನದ ಬಾಳುವೆ ಕಂಡ ಶೆಟ್ಟರು ಸ್ವಯಂ ಇಚ್ಛೆಯಿಂದಲೇ ಈ ಕ್ಷೇತ್ರವನ್ನು ನೆಚ್ಚಿಕೊಂಡರು. +ಬಣ್ಣವನ್ನು ಮುಖಕ್ಕೆ ಹಚ್ಚಿಕೊಂಡರು. +ವೀರಭದ್ರನಾಯಕ್‌ ಹಾಗೂ ಆನಗಳ್ಳಿ ಹಾಸ್ಯಗಾರ ನಾರಾಯಣ ನಾಯ್ಕರ ಶಿಷ್ಕನಾಗಿ ಸಾಂಪ್ರದಾಯಿಕ ಯಕ್ಷಶಿಕ್ಷಣ ಪಡದ ನಾಗಯ್ಯ ಶೆಟ್ಟರು ಹಾಸ್ಯಭೂಮಿಕೆಗಳನ್ನೂ, ಪ್ರಸಂಗದ ಪುರುಷ ಪಾತ್ರಗಳನ್ನೂ ಯಶಸ್ವಿಯಾಗಿ ಚಿತ್ರಿಸಿದವರು. +ಮಾರಣಕಟ್ಟೆ ಮೇಳದಲ್ಲಿ ಗೆಜ್ಜೆಕಟ್ಟಿ ಅಲ್ಲಿ 25 ವರ್ಷಗಳ ಕಾಲ ಕಲಾ ವ್ಯವಸಾಯ ನಡೆಸಿದ ಶೆಟ್ಟರು,ಕೊಡವೂರು ಮೇಳದಲ್ಲಿ 1 ವರ್ಷ, ಹೆಗ್ಗೋಡು ಮೇಳದಲ್ಲಿ 1 ವರ್ಷ, ಅಮೃತೇಶ್ವರಿ ಮೇಳದಲ್ಲಿ 3ವರ್ಷ, ಪೆರ್ಡೂರು ಮೇಳದಲ್ಲಿ 4ವರ್ಷ, ಕಮಲಶಿಲೆ ಮೇಳದಲ್ಲಿ 4ವರ್ಷ, ಸೌಕೂರು ಮೇಳದಲ್ಲಿ 2ವರ್ಷ, ಕೊಲ್ಲೂರು ಮೇಳದಲ್ಲಿ 1 ವರ್ಷ, ಇತರೇ ಮೇಳಗಳಲ್ಲಿ 4 ವರ್ಷ, ಕಲಾ ತಿರುಗಾಟ ನಡೆಸಿದ್ದಾರೆ. +ಹೀಗೆ ಶೆಟ್ಟರ ರಂಗ ಜೀವನ 45 ವರ್ಷ ಕಂಡಿದೆ. +ಪುರಾಣ ಪ್ರಸಂಗಗಳ ಹಾಸ್ಯಭೂಮಿಕೆಗಳನ್ನು ಭಾವಪೂರ್ಣವಾಗಿ ರಂಗದ ಮೇಲೆ ತೆರೆದಿಡುವ ನಾಗಯ್ಯಶೆಟ್ಟರ ಪ್ರಖರ ಪ್ರತಿಭೆಗೆ ಕಪ್ಪ ಕೊಡಲೇಬೇಕು. +ಅವರು ನಿರ್ವಹಿಸಿದ ಬಾಹುಕ, ವಾಲ್ಮೀಕಿ,ತಾಮ್ರದ್ವಜ ಕಾಳಗದ ಬ್ರಾಹ್ಮಣ, ರತಿಕಲ್ಯಾಣದ ದ್ವಾರಪಾಲಕ, ಕಾಶಿಮಾಣಿ, ಮೊದಲಾದ ಪಾತ್ರಗಳು ಅವರದ್ದೇ ವಿಶಿಷ್ಟ ಕಲ್ಪನೆಯಲ್ಲಿ ರಂಗಸ್ಥಳದಲ್ಲಿ ಮೈದಾಳಿ ಕಲಾರಸಿಕರ ಮನ ಮೆಚ್ಚಿಸಿವೆ. +ಅಗಾಧ ಪೌರಾಣಿಕ ಜ್ಞಾನ, ಸಮರ್ಪಕ ರಂಗನಡೆಯನ್ನು ಬಲ್ಲ ಧೀಮಂತ ಕಲಾವಿದ ಶೆಟ್ಟರು,ಅನೇಕಾನೇಕ ಹಾಸ್ಯ ಪಟುಗಳನ್ನು ರಂಗಭೂಮಿಗೆ ನೀಡಿದ್ದಾರೆ. +ಪತ್ನಿ ಪಾರ್ವತಿ ಶೆಡ್ತಿ. +ಕುಶಲ ಶೆಟ್ಟಿ ,ಜಯರಾಮಶೆಟ್ಟಿ, ಮಹಾದೇವಿ, ಚಂದ್ರಮತಿ ಮಕ್ಕಳು. +ನಾಗಯ್ಯಶೆಟ್ಟರು ಪ್ರಸ್ತುತ ವಿಶ್ರಾಂತ ಜೀವನದಲ್ಲಿದ್ದು ಕೃಷಿ ಕಾರ್ಯದಲ್ಲಿ ನಿರತರಾಗಿದ್ದಾರೆ. +ಶ್ರೀಯುತರಿಗೆ ಉಡುಪಿ ಯಕ್ಷಗಾನ ಕಲಾರಂಗದ ಬಿ.ವಿ.ಆಚಾರ್ಯ ಪ್ರಶಸ್ತಿ, ಎಂ.ಎಂ.ಹೆಗ್ಡೆ ಪ್ರಶಸ್ತಿ,ಬೈಂದೂರು ಬಂಟರ ಸಂಘದ ಗೌರವ ಸಹಿತ ಹಲವಾರು ಸಂಘ-ಸಂಸ್ಥೆಗಳಲ್ಲಿ ಸಂಮಾನ ದೊರಕಿದೆ. +ಶುದ್ಧ ಯಕ್ಷಗಾನೀಯ ಶೈಲಿಯಲ್ಲಿ ಕಲಾಸೇವೆಗೆ ಬದ್ಧರಾದ ನಾಗುಗೌಡರು ಕುಂದಾಪುರ ತಾಲೂಕಿನ ಕೆಂಜಿಮನೆಯವರು. +ವೆಂಕಟಯ್ಯಗೌಡ-ಮರ್ಲಿಗೌಡ್ತಿ ದಂಪತಿಯ ಸುಪುತ್ರರಾಗಿ ಕೆಂಜಿಮನೆ ಎಂಬಲ್ಲಿ ಜನಿಸಿದ ನಾಗುಗೌಡರು 62 ವರ್ಷಗಳ ಜೀವನ ರಂಗಸ್ಥಳದಲ್ಲಿದ್ದಾರೆ. +ಕೀರ್ತಿಶೇಷರಾದ ಗುರು ವೀರಭದ್ರ ನಾಯಕ್‌ರ ಶಿಷ್ಯರಾಗಿ ಕಲಾವಿದ್ಯೆಯನ್ನು ಗಳಿಸಿದ ಗೌಡರಿಗೆ ಹಿರಿಯ ಕಲಾವಿದ ಕೊಪ್ಪಾಟೆ ಮುತ್ತ ಗೌಡರು ವೃತ್ತಿಕ್ಷೇತ್ರಕ್ಕೆ ಪ್ರೇರಣಾಶಕ್ತಿಯಾದವರು. +ರಾಜವೇಷ,ಮುಂಡಾಸು ವೇಷಗಳನ್ನು ಸಮರ್ಥವಾಗಿ ಪೋಷಿಸುವ ಇವರ ಕಲಾಬಿವ್ಯಕ್ತಿ ಸಾಂಪ್ರದಾಯಿಕವಾಗಿ ಗಮನೀಯವಾಗುತ್ತದೆ. +ಚಿಕ್ಕಂದಿನಿಂದಲೇ ಯಕ್ಷಗಾನ ಕಲೆಯ ಮೇಲಣ ತೀವ್ರ ಆಸಕ್ತಿ ಮೈಗೂಡಿಸಿ-ಕೊಂಡ ಗೌಡರ ಓದು ಎರಡಕ್ಕೇ ಸೀಮಿತವಾಯಿತು. +16ನೇ ವಯೋಮಾನದಲ್ಲೇ ಯಕ್ಷಗಾನ ಬಣ್ಣದ ಲೋಕದತ್ತ ಆಕರ್ಷಿತರಾದರು. +ಮಾರಣಕಟ್ಟೆ 14, ಗೋಳಿಗರಡಿ 1, ಕಮಲಶಿಲೆ 2, ಹಾಲಾಡಿ 2, ಹಿರಿಯಡಕ (ಹಳೆ)1, ಕಳವಾಡಿ 5, ಬಗ್ವಾಡಿ 5, ಹೀಗೆ 30 ವರ್ಷಗಳ ರಂಗಕೃಷಿ ನಾಗು ಗೌಡರನ್ನು ಸಂಪನ್ನ ಕಲಾವಿದರನ್ನಾಗಿಸಿದೆ. +ಧರ್ಮರಾಯ, ದೇವೇಂದ್ರ, ವಿಭೀಷಣ,ಸುಬುದ್ಧಿ, ಹಂಸದ್ದಜ, ಶುಕ್ರಾಚಾರ್ಯ, ಮೊದಲಾದ ಪೌರಾಣಿಕ ಭೂಮಿಕೆಗಳಿಗೆ ತನ್ನ ತುಂಬು ಪ್ರತಿಭಾ ಪ್ರೌಢಿಮೆಯಲ್ಲಿ ಜೀವ ತುಂಬಿದ ನಾಗು ಗೌಡರು ಪ್ರಸ್ತುತ ಮಾರಣಕಟ್ಟೆ ಮೇಳದ ಕಲಾವಿದರು. +ಸತಿ ಲೀಲಾವತಿ. +ಸುಕಾಂತ, ವಾಸುದೇವ, ಶರಾವತಿ,ಪ್ರದೀಪ ಮಕ್ಕಳು. +ಸಹೃದಯಿ ಕಲಾವಿದ ನಾಗುಗೌಡರು ಹಳತರ ಹಿರಿಮೆಯಲ್ಲಿ ಹಾಗೂ ಸಾಂಪ್ರದಾಯಿಕ ಕಲಾಗರಿಮೆಯಲ್ಲಿ ಬಣ್ಣದ ಬಾಳುವೆಯನ್ನು ಸಾಗಿಸುತ್ತಿರುವವರು. +ಇವರನ್ನುಈಗಾಗಲೇ ಹಲವಾರು ಸಂಘ-ಸಂಸ್ಥೆಗಳು ಸಮ್ಮಾನಿಸಿ ಗೌರವಿಸಿವೆ. +ರಸಪರಿಪ್ಲುತ ಪ್ರಗಲ್ಭ ವಾಕ್‌ಚಾತುರ್ಯ, ಗರಿಷ್ಠಮಟ್ಟದ ಭಾವದರ್ಶನ ಕೌಶಲ, ಪಾತ್ರನಿಷ್ಠ ನೃತ್ಯ,ಅಭಿನಯದ ಅಭಿವ್ಯಕ್ತಿ, ಅನುಭವ ಭರಿತ ರಂಗಮಾಹಿತಿ ಪರಿಪಕ್ವವಾಗಿ ರಂಗನೆಲದಲ್ಲಿ ಕಾಣಿಸುವ ಹಿರಿಯ ಕಲಾವಿದ ಎ.ಎಸ್‌.ನಾಗೇಶ್‌ ಕಮ್ಮರಡಿ. +ಕಮ್ಮರಡಿ-ಅರೆಹಳ್ಳಿ ಎಂಬಲ್ಲಿ ಸಿದ್ದಪ್ಪ-ಮಂಜುಳ ದಂಪತಿಯ ಸುಪುತ್ರರಾಗಿ 1956ರಲ್ಲಿ ಜನಿಸಿದ ನಾಗೇಶ್‌ ನಾಲ್ಕನೇ ತರಗತಿಗೆ ವಿದಾಯ ಹೇಳಿ 16ನೇ ವಯಸ್ಸಿನಲ್ಲಿ ಗೆಜ್ಜೆ ಕಟ್ಟಿದರು. +ಬಾಲ್ಯದಲ್ಲಿಯೇ ಬೆಸೆದುಕೊಂಡ ಯಕ್ಟ್ಷ ಕಲಾಸಕ್ತಿಯೇ ಇವರ ರಂಗಬಾಳುವೆಗೆ ಪ್ರೇರಣಾ ಶಕ್ತಿಯಾಯಿತು. +ಸುಪ್ರಸಿದ್ಧ ಸ್ತ್ರೀವೇಷಧಾರಿ ಎಂ.ಎ.ನಾಯ್ಕ ಹಾಗೂ ಹಿರಿಯ ಅರ್ಥಧಾರಿ ಕಲಾವಿದ ಮಲ್ಪೆ ವಾಸುದೇವ ಸಾಮಗರ ಗುರುತನವನ್ನು ಪಡೆದ ಕಮ್ಮರಡಿ ನಾಗೇಶ್‌ ಅವರು ಯಕ್ಷಗಾನ ರಂಗಭೂಮಿಯಲ್ಲಿ ಹಂತ-ಹಂತವಾಗಿ ಬೆಳೆದು ಬೆಳಗಿದವರು. +ಉತ್ತಮ ಸ್ತ್ರೀವೇಷಧಾರಿಯಾಗಿ ಪ್ರಧಾನ ಸ್ಥಾನ ಮಾನ್ಯತೆಯಲ್ಲಿ ಕಲಾರಸಿಕರ ಮನ ಮೆಚ್ಚಿಸಿದ ಶ್ರೀಯುತರು ತದನಂತರ ಪುರುಷವೇಷ ಸ್ಥಾನದಲ್ಲಿ ನಿಂತು ಕಲಾವಂತಿಕೆಯನ್ನು ಮೆರೆದರು. +ಸೀತೆ,ದ್ರೌಪದಿ, ರುಕ್ಮಿಣಿ, ಶ್ರೀದೇವಿ, ಕಯಾದು, ಸಾವಿತ್ರಿ,ಪ್ರಭಾವತಿ, ಮೊದಲಾದ ಸ್ತ್ರೀ ಪಾತ್ರಗಳಿಗೆ ಜೀವಚೈತನ್ಯ ತುಂಬಿದ ನಾಗೇಶರು ಪುರುಷಪಾತ್ರಧಾರಿಯಾಗಿ ಶ್ರೀರಾಮ, ಭೀಷ್ಮ ದಶರಥ,ದೇವವೃತ, ವತ್ಸಾಖ್ಯ, ಪುಷ್ಕಳ, ಉಗ್ರಸೇನ,ವಿಕ್ರಮಾದಿತ್ಯ, ಪಾತ್ರಗಳನ್ನು ರಂಗಮಂಜದಲ್ಲಿ ಮೆರೆಸಿದವರು. +ಹಾಸ್ಯ ಕಲಾವಿದನಾಗಿ ಬಾಹುಕ,ವಿಜಯ, ಕಾಶೀಮಾಣಿ ಮೊದಲಾದ ಭೂಮಿಕೆಗಳಿಗೆ ವೈನೋದಿಕ ರಂಗು ತುಂಬಿಸಿದವರು. +ಪ್ರಸಂಗಕರ್ತರಾಗಿ ನಾಲ್ಕು ಪ್ರಸಂಗ ರಚಿಸಿದವರು. +ಅಮೃತೇಶ್ವರಿ 4, ಮಂದಾರ್ತಿ 7, ಮಾರಣಕಟ್ಟೆ 6, ಮಡಾಮಕ್ಕಿ 3, ಮೂಲ್ಕಿ 3, ಹಾಲಾಡಿ 6,ಸೌಕೂರು 4, ಶಿವರಾಜಪುರ 3, ಹೀಗೆ 36 ವರ್ಷಗಳ ಕಲಾಯಾತ್ರೆಯಲ್ಲಿ ಸಾರ್ಥಕ ಹೆಸರು ಗಳಿಸಿದ್ದಾರೆ. +ಕಮ್ಮರಡಿ ನಾಗೇಶರ ಕೈ ಹಿಡಿದ ಸಂಗಾತಿ ಗುಣವತಿ. +ಭಾಗ್ಯಲಕ್ಷ್ಮೀ, ಆದಿತ್ಯ ಅವರ ಉಭಯಮಕ್ಕಳು. +ಮಳೆಗಾಲದ ಯಕ್ಷಗಾನ ತಿರುಗಾಟದಲ್ಲಿ ಯಕ್ಷಮ್ಮ ದೇವಿ ಪ್ರವಾಸೀ ಯಕ್ಷಗಾನ ಮಂಡಳಿಯ ಯಜಮಾಾನರಾಗಿಂಯೂ, ಕಲಾವಿದರಾಗಿಯೂ ಶ್ರೀಯುತರು ಯಕ್ಷಕೃಷಿಯಲ್ಲಿ ತೊಡಗುತ್ತಾರೆ. +ಕಮ್ಮರಡಿ, ಹಣಗೇರಿ, ಪೇತ್ರಿ, ಕೀರ್ತಿನಗರ, ಹಾಗೂ ಮಾರಣಕಟ್ಟೆಯಲ್ಲಿ ನಾಗೇಶ್‌ ಅವರನ್ನು ಕಲಾಭಿಮಾನಿಗಳು ಸಂಮಾನಿಸಿದ್ದಾರೆ. +ಸುಖವಾದ ಸ್ವರ ತ್ರಾಣದ ಶ್ರವಣಮಂಜುಳ ಗಾನ ವಿಧಾನದಲ್ಲಿ ಗುರುತಿಸಿಕೊಂಡ ಯುವ ಭಾಗವತ ನಾಗೇಶ ಕುಲಾಲ್‌. +ನಾಗರ ಕೊಡಿಗೆಯೇ ನಾಗೇಶ ಕುಲಾಲರ ಹುಟ್ಟೂರು. +ಶಂಕರ ಕುಲಾಲ-ಲಚ್ಚಮ್ಮ ದಂಪತಿಯ ಸುಪುತ್ರರಾದ ನಾಗೇಶ ಕುಲಾಲರಿಗೆ ಪ್ರಸ್ತುತ 39ರಹರೆಯ. +7ನೇ ತರಗತಿಯ ವಿದ್ಯಾಭ್ಯಾಸದ ಬಳಿಕ ತನ್ನಆಸಕ್ತಿದಾಯಕ ಕ್ಷೇತ್ರವಾದ ಯಕ್ಷಗಾನವನ್ನೇ ಬದುಕಿಗೆ ವೃತ್ತಿಯಾಗಿಸಿ ಕೊಂಡ ನಾಗೇಶ ಕುಲಾಲ ಅವರು 17ನೇ ವಯಸ್ಸಿನಲ್ಲೇ ಯಕ್ಷಗಾಯನ ಲೋಕವನ್ನು ಪ್ರವೇಶಿಸಿದರು. +ನಾಗರಕೊಡಿಗೆ ರಾಮಕೃಷ್ಣಯ್ಯ ಅವರಲ್ಲಿ ಪ್ರಾಥಮಿಕ ಕಲಾಶಿಕ್ಷಣವನ್ನು ಪಡೆದ ಇವರು ಕೆ.ಪಿ.ಹೆಗಡೆ ಅವರಲ್ಲಿ ಭಾಗವತಿಕೆ ಶಿಕ್ಷಣವನ್ನು ಪಡೆದರು. +ಹಿರಿಯ ವೇಷದಾರಿಗಳಾಗಿದ್ದ ನಾಗರಕೊಡಿಗೆಯ ರಾಮಕೃಷ್ಣಯ್ಯ ಅವರೇ ಇವರಿಗೆ ಕಲಾಜೀವನಕ್ಕೆ ಪ್ರೇರಣಾ ಶಕ್ತಿಯಾದರು. +ಉತ್ತಮ ರಂಗತಂತ್ರದೊಂದಿಗೆ ರಂಗನಟನ ಕ್ರಿಯಾಶೀಲ ಕಲಾಭಿವ್ಯಕ್ತಿಗೆ ಗಾನ ಸಾರಥಿಕೆಯನ್ನು ನೀಡುವ ಭಾಗವತ ನಾಗೇಶ ಕುಲಾಲರ ಪೌರಾಣಿಕ ಜ್ಞಾನವೂ ಪ್ರಶಂಸನೀಯ. +ನಾಗರಕೊಡಿಗೆ 2, ಕಮಲಶಿಲೆ 5,ಬಗ್ಡಾಡಿ ಮಾರಣಕಟ್ಟೆ 1, ಹಾಲಾಡಿ 5, ಮಂದಾರ್ತಿ8, ಹೀಗೆ 22 ವರ್ಷಗಳ ಕಲಾವ್ಯವಸಾಯ ಪೂರೈಸಿದ ಕುಲಾಲರು ಪ್ರಸ್ತುತ ಮಂದಾರ್ತಿ ಮೇಳದ ಭಾಗವತರಾಗಿ ಕಲಾಸೇವೆಯಲ್ಲಿದ್ದಾರೆ. +ಪತ್ನಿ ಜ್ಯೋತಿ. +ಸುಮಂತ, ಸುಚೇತಾ ಮಕ್ಕಳು. +ನಾಗೇಶ ಕುಲಾಲರನ್ನು ಹಲವು ಸಂಘ-ಸಂಸ್ಥೆಗಳು ಸಂವರಾನಿಸಿವೆ; +ನಾಗರಕೊಡಿಗೆ ಯಕ್ಷಗಾನ ಕಲಾಸಂಘ ಜಕ್ಕನಗದ್ದೆ ಹತ್ತು ಸಮಸ್ತರು, ಕಾರಣಗಿರಿ ಮಹಾಗಣಪತಿ ದೇವಸ್ಥಾನ, ಮುಂಬೈ ಸಚ್ಚಿದಾನಂದ ಸರಸ್ವತಿ ಸಂಘದ ವತಿಯಿಂದ ಗೌರವ ಸಂಮಾನ ದೊರಕಿದೆ. +ಯಕ್ಷಗಾನದ ರಂಗಾವರಣದ ನಿಚ್ಚಳ ನಿಯಮ,ನಿರ್ದಿಷ್ಟ ನೀತಿ ಪೂರ್ಣತೆ-ಯನ್ನು ಗಾಢವಾಗಿ ಬೆಸೆದುಕೊಂಡು, ಅನುಭವಿ ಬಣ್ಣದ ವೇಷಧಾರಿಯಾಗಿ ಬೆಳೆದವರು ಕೋಣ್ಕಿ ನಾಗೇಶ ಗಾಣಿಗ. +ಕುಂದಾಪುರ ತಾಲೂಕಿನ ಕೋಣ್ಕಿ ಎಂಬಲ್ಲಿಗಣಪಯ್ಯ ಗಾಣಿಗ-ವೆಂಕಮ್ಮ ದಂಪತಿಯ ಸುಪುತ್ರನಾಗಿ 5-3-1950ರಲ್ಲಿ ಜನಿಸಿದ ನಾಗೇಶ ಗಾಣಿಗರು ಚಿಕ್ಕಂದಿನಿಂದಲೇ ಬಣ್ಣದ ಗೀಳುಹೊಂದಿದ್ದರು. +7ನೇ ತರಗತಿಯವರೆಗೆ ವಿದ್ಯಾಭ್ಯಾಸ ಮಾಡಿದ . +ಇವರು ತನ್ನ 23ನೇ ವಯಸ್ಸಿನಲ್ಲಿ ಬಣ್ಣದ ಬದುಕಿಗೆ ಅರ್ಪಣೆಯಾದರು. +ಆಗಿನ ಮಾರಣಕಟ್ಟೆ ಮೇಳದ ಯಜಮಾನರಾಗಿದ್ದ ಕುಶಲ ಹೆಗ್ಡೆಯವರ ಹಾರ್ದಿಕ ಪ್ರೋತ್ಸಾಹ, ನಾಗೇಶ ಗಾಣಿಗರ ಕಲಾಜೀವನ ಯಾನಕ್ಕೆ ಪ್ರೇರಣೆಯಾಯಿತು. +ಪೆರ್ಡೂರು ರಾಮ ಶೇರಿಗಾರರ ಶಿಷ್ಯನಾಗಿ ಅನನ್ಯ ಯಕ್ಷಕಲಾ ವಿದ್ಯಾನುಭವವನ್ನು ಸಿದ್ಧಿಸಿಕೊಂಡ ಗಾಣಿಗರು ಮಾರಣಕಟ್ಟೆ 18, ಪೆರ್ಡೂರು 12,ಸೌಕೂರು 4, ಸಾಲಿಗ್ರಾಮ 2, ಕುಮಟಾ 1 ಹೀಗೆ 37 ವರ್ಷಗಳ ಸಾರ್ಥಕ ಕಲಾಕೃಷಿ ಕಂಡಿದ್ದಾರೆ. +ಮಹಿರಾವಣ, ಮಹಿಷಾಸುರ, ರಾವಣ, ಘಟೋತ್ಕಚ,ಕಾಲಜಂಘ, ಶೂರ್ಪನಖಿ, ಹಿಡಿಂಬೆ, ತಾಟಕಿ,ಮೊದಲಾದ ಗಂಡು-ಹೆಣ್ಣು ಬಣ್ಣಗಳಿಗೆ ಪರಂಪರೆಯ ಬಣ್ಣತುಂಬಿದ ನಾಗೇಶ ಗಾಣಿಗರ ವೇಷವೈಖರಿ,ಪಾತ್ರ ಚಿತ್ರಣ, ವಾಕ್‌ಶೈಲಿ ಪ್ರಶಂಸಾತ್ಮಕ. +ಸಹಧರ್ಮಿಣಿ ಪಾರ್ವತಿ, ಸುರೇಶ, ದಿನೇಶ,ಜಯಂತಿ ಮಕ್ಕಳು. +ಹಿರಿಯ ಬಣ್ಣದ ವೇಷಧಾರಿ ಗಾಣಿಗರು ಪ್ರಸ್ತುತ ಮಾರಣಕಟ್ಟೆ ಮೇಳದಲ್ಲಿ ದುಡಿಯುತ್ತಿದ್ದಾರೆ. +ಶ್ರೀಯುತರಿಗೆ ಹುಟ್ಟೂರ ಸನ್ಮಾನ, ಬೆಂಗಳೂರು ದ.ಕ.ಜಿಲ್ಲಾ ಸೋಮಕ್ಷತ್ರಿಯ ವೈಷ್ಣವ ಸಮಾಜದ ವತಿಯಿಂದ ಗೌರವ, ಹಾರಾಡಿ ರಾಮ ಗಾಣಿಗ ಪ್ರಶಸ್ತಿ ದೊರಕಿರುತ್ತದೆ. +ರಂಗಸ್ಥಳದ ಹುರುಪು-ಹುಮ್ಮನಸ್ಸಿನ ಯಕ್ಷಚೇತನ ಉಪ್ಪುಂದ ನಾಗೇಂದ್ರ ರಾವ್‌. +ಪೌರಾಣಿಕ ಪಾತ್ರಗಳ ಸಾಂಪ್ರದಾಯಿಕ ಅಂತಃಸತ್ವವನ್ನು ಗಂಭೀರವಾಗಿ ಹೀರಿಕೊಂಡು ಸೃಷ್ಟ್ಯಾತ್ಮಕ ರೂಪರೇಖೆಂದುಲ್ಲಿ ಭೂಮಿಕೆಗಳನ್ನು ಸಚೇತನ ಸೌಂದರ್ಯದಿಂದ ರಂಗನೆಲದಲ್ಲಿ ಪ್ರತಿಷ್ಠಾಪಿಸುವ ಪ್ರೌಢ ಪ್ರತಿಭಾಶೀಲತೆ ನಾಗೇಂದ್ರರಾವ್‌ ಅವರಲ್ಲಿ ಗುರುತಿಸಬಹುದಾಗಿದೆ. +ನಡುತಿಟ್ಟಿನ ನವಿರಾದ ರಸಪಾಕ-ತೂಕದಲ್ಲಿ ಬಡಾಬಡಗಿನ ಬೆಡಗನ್ನೂ ಬಡಗಲ್ಲಿ ತೋರುವ ನಾಗೇಂದ್ರರಾವ್‌ ನಾಯುಕ, ಖಳನಾಯಕ ಪಾತ್ರಗಳೆರಡರಲ್ಲೂ ಸಮಾನ ಪ್ರಭುತ್ವ, ಪ್ರಸಿದ್ಧಿ,ಜನಪ್ರಿಯತೆ ಕಂಡವರು. +ಸ್ಪಷ್ಟವಾದ ನೃತ್ಯ, ಅಭಿನಯ ರಂಗನಡೆ, ಯಕ್ಷಗಾನೀಯವಾದ ಸಾಹಿತ್ಯಿಕ ಸ್ವರಭಾರ ನಾಗೇಂದ್ರರಾವ್‌ ಅವರ ಕಲಾಗುಣಗಳಾಗಿ ಗಣನೀಯವಾಗುತ್ತದೆ. +ಕುಂದಾಪುರ ತಾಲೂಕಿನ ಉಪ್ಪುಂದ ಎಂಬಲ್ಲಿ ಪುಟ್ಟಯ್ಯ ಸುಬ್ಬಮ್ಮ ದಂಪತಿಯ ಸುಪುತ್ರರಾಗಿ ಜನಿಸಿದ ನಾಗೇಂದ್ರ ಅವರಿಗೆ ಪ್ರಸ್ತುತ 46ವರ್ಷ ಪ್ರಾಯ. +ಸಣ್ಣತನದಲ್ಲೇ ಬಣ್ಣದ ಗೀಳು ಅಂಟಿಸಿಕೊಂಡ ನಾಗೇಂದ್ರರ ಓದು ಐದಕ್ಕೇ ಕೈದಾಯಿತು. +14ನೇ ವರ್ಷದಲ್ಲೇ ಇವರು ಯಕ್ಷಗಾನ ಬಣ್ಣದ ಲೋಕಕ್ಕೆ ಮುಖ ಮಾಡಿದ್ದರು. +ತಂದೆಯವರ ಪ್ರೇರಣೆ,ಹೆರಂಜಾಲು ಸುಬ್ಬಣ್ಣ ಅವರ ಗುರುಬಲದ ಹಿನ್ನೆಲೆಯಲ್ಲಿ ಯಕ್ಷಬಾಳುವೆ ಕಂಡ ನಾಗೇಂದ್ರರಾವ್‌ಅವರ ಸುಧನ್ವ, ಅರ್ಜುನ, ಕಂಸ, ಸಾಲ್ವ ದಕ್ಷ,ಕೌರವ, ರುದ್ರಕೋಪ, ಜರಾಸಂಧ ಭೂಮಿಕೆಗಳು ಜನಮನದಲ್ಲಿ ಹಚ್ಚ ಹಸುರಾಗಿ ಉಳಿದುಕೊಂಡಿವೆ. +ನಾಗೇಂದ್ರರ ಸದೃಢವಾದ ಆಳಂಗದಲ್ಲಿ ಪರಿಶೋಭಿಸುವ ಪೌರಾಣಿಕ ಪಾತ್ರಗಳ ರಮ್ಯ ಮನೋಹರ ಕಲಾವೈಭವ ಕಲಾರಸಿಕರ ಕಣ್ಮನ ಸೆಳೆದಿದೆ. +ಮಾರಣಕಟ್ಟೆ 2, ಇಡಗುಂಜಿ 2, ಸಾಲಿಗ್ರಾಮ4, ಕಮಲಶಿಲೆ 2, ಮಂದಾರ್ತಿ 8, ಪೆರ್ಡೂರು12, ಹೀಗೆ ಮೂರು ದಶಕಗಳ ಕಾಲದ ಅವರ ಕಲಾಸೇವೆ ಮುಂದುವರಿದಿದೆ. +ಮಡದಿ ಸವಿತಾ. +ವಸುಂಧರಾ, ಮೇಖಲಾ,ವಿದ್ಯಾಶ್ರೀ ಎಂಬ ಮೂವರು ಪುತ್ರಿಯರು. +ಶ್ರೇಷ್ಠ ಯಕ್ಷನಟ ಉಪ್ಪುಂದ ಅವರನ್ನು ನಾಡಿನ ಹಲವು ಸಂಘ-ಸಂಸ್ಥೆಗಳು ಗೌರವಿಸಿವೆ. +ಪರಂಪರೆಯ ಯಕ್ಷಗಾನ ರಂಗ ಸಂವಿಧಾನದಲ್ಲಿ ಪುರಾಣ ಪ್ರಪಂಚದ ಸ್ತ್ರೀಯರನ್ನು ಪಾತ್ರಗಳ ಮೂಲಕ ಸಚೇತನ ರಂಗಶಿಲ್ಪವಾಗಿಸಿದ ಹಿರಿಯ ಕಲಾವಿದ ವಂಡ್ಸೆ ನಾರಾಯಣ ಗಾಣಿಗ. +ಕುಂದಾಪುರ ತಾಲೂಕಿನ ವಂಡ್ಸೆಯ ಶೇಷಗಾಣಿಗ-ಫಣಿಯಮ್ಮ ಗಾಣಿಗ ಇವರ ಸುಪುತ್ರ . +ನಾರಾಯಣ ಗಾಣಿಗರು 1937ನೇ ಇಸವಿಯ ಜೂನ್‌ಆರರಂದು ಜನಿಸಿದರು. +ಎಳವೆಯಲ್ಲಿಯೇ ಯಕ್ಷಗಾನ ಕಲೆಯ ಮೇಲಣ ಅನ್ಯಾದೃಶ ಆಸಕ್ತಿ ಮೈಗೂಡಿಸಿಕೊಂಡಿದ್ದ ನಾರಾಯಣ ಗಾಣಿಗರಿಗೆ ಪ್ರಸಿದ್ದ ಹಿರಿಯ ಕಲಾವಿದ ಅಣ್ಣ ವಂಡ್ಸೆ ಮುತ್ತಗಾಣಿಗರ ಪ್ರೋತ್ಸಾಹವೇ ಕಲಾ ಬದುಕಿಗೆ ಪ್ರೇರಣೆಯಾಯಿತು. +ಊರಿನ ಕಲಾಭಿಮಾನಿಗಳ ಹಾರ್ದಿಕ ಸಹಕಾರ ಸ್ಫೂರ್ತಿ ನೀಡಿತು. +ಗಾಣಿಗರ ಅಕ್ಷರಾಭ್ಯಾಸ ಐದಕ್ಕೇ ಕೈದಾಯಿತು. +12ನೇ ವಯಸ್ಸಿನಲ್ಲೇ ಅವರಿಗೆ ಬಣ್ಣದ ಬದುಕು ಪ್ರಾಪ್ತವಾಯಿತು. +ದಶಾವತಾರಿ ಗುರು ವೀರಭದ್ರನಾಯಕ್‌ ಹಾಗೂ ಮಟಪಾಡಿ ಶ್ರೀನಿವಾಸ ನಾಯಕರ ಗುರುತನದಲ್ಲಿ ಯಕ್ಷಗಾನ ಕಲಾವಿದ್ಯೆಯನ್ನು ಆರ್ಜಿಸಿಕೊಂಡ ನಾರಾಯಣ ಗಾಣಿಗರು, ತನ್ನ ಆಕರ್ಷಕ ರೂಪ,ಸ್ತ್ರೀ ಸಹಜ ಕಂಠಶ್ರೀ, ಪಾಂಡಿತ್ಯಪೂರ್ಣವಚೋವೈಖರಿ, ಲಾಲಿತ್ಯಮಯ ನೃತ್ಯ, ಅಭಿನಯ,ಉತ್ಕೃಷ್ಟ ರಂಗವ್ಯವಹಾರಗಳಿಂದ ಸಮಷ್ಟಿಕಲೆಯ ಸಮರ್ಥ ಸ್ರ್ತೀ ವೇಷಧಾರಿಯಾಗಿ ಸಾರ್ಥಕ ಹೆಸರುಗಳಿಸಿದರು. +ಮಾರಣಕಟ್ಟೆ 9, ಮಂದಾರ್ತಿ 3, ಕೊಲ್ದೂರು 2, ಧರ್ಮಸ್ಥಳ 2, ಕುಂಡಾವು 2, ಕೂಡ್ಲು 2,ಸುರತ್ಕಲ್‌ 2, ಪೆರ್ಡೂರು 1, ಸಾಲಿಗ್ರಾಮ 1,ಇಡಗುಂಜಿ 4 ಮೊದಲಾದ ಮೇಳಗಳಲ್ಲಿ 28ವರುಷಗಳ ಕಾಲ ಕಲಾಕೃಷಿ ನಡೆಸಿದರು. + ಪ್ರಸಿದ್ಧಿಯ ಶೃಂಗಸಾರ್ಥಕ್ಯವನ್ನು ಕಂಡ ವಂಡ್ಸೆ ನಾರಾಯಣ ಗಾಣಿಗರು ಡಾ.ಶಿವರಾಮ ಕಾರಂತರ "ಯಕ್ಷರಂಗ'ದ ಕಲಾವಿದನಾಗಿಯೂ 5ವರ್ಷ ಕಲಾ ಸೇವೆ ನಡೆಸಿದವರು. +ಗಾಣಿಗರ ದ್ರೌಪದಿ, ಶಶಿಪ್ರಭೆ, ಚಿತ್ರಾಂಗದೆ,ದೇವಯಾನಿ, ಚಿತ್ರಾಕ್ಸಿ, ಮಂಡೋದರಿ, ಮೀನಾಕ್ಷಿತಾರೆ, ಸಾವಿತ್ರಿ, ದಮಯಂತಿ, ಸೀತೆ, ಕೈಕೇಯಿ,ಮೊದಲಾದ ಪಾತ್ರಗಳು ಪೌರಾಣಿಕ ಪಾತ್ರ ನ್ಯಾಯದಲ್ಲಿ ಅಜರಾಮರವಾಗಿ ಉಳಿದುಕೊಂಡಿದೆ. +ಯುಗಳ ತಿಟ್ಟಿನ ಪ್ರತಿಭಾ ಸಂಪನ್ನ ಮೇರುಕಲಾವಿದ ವಂಡ್ಸೆ ನಾರಾಯಣ ಗಾಣಿಗರ ಅವರು ಶಕುಂತಲಾ ಗಾಣಿಗ ಅವರನ್ನು ವರಿಸಿ ನಾಲ್ಕು ಮಕ್ಕಳನ್ನು ಪಡೆದಿದ್ದಾರೆ. +ಗಾಣಿಗರ ಕಲಾ ಶ್ರೀಮಂತಿಕೆಗೆ ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ, ಹಾರಾಡಿ ರಾಮಗಾಣಿಗ ಪ್ರಶಸ್ತಿ, "ಯಕ್ಷಗಾನ ಕಲಾರಂಗ'ದ ರಜತೋತ್ಸವ ಪ್ರಶಸ್ತಿಯೂ ಸೇರಿದಂತೆ ಹಲವಾರು ಸಂಮಾನ,ಗೌರವಗಳು ಸಂದಿವೆ. +ಸಾಂಪ್ರದಾಯಿಕ ರಂಗ ಸತ್ವ-ತತ್ವಗಳನ್ನು ಸುಪುಷ್ಟವಾಗಿ ಮೈಗೂಡಿಸಿಕೊಂಡು ಸಮರ್ಥಕಲಾವಿದರಾಗಿ ರೂಪುಗೊಂಡವರು ಚಿತ್ತೂರು ನಾರಾಯಣ ದೇವಾಡಿಗರು. +ಕುಂದಾಪುರ ತಾಲೂಕಿನ ಹಳ್ಳಾಡು ಎಂಬ ಹಳ್ಳಿಯಲ್ಲಿ 26-11-1951ರಲ್ಲಿ ಜನಿಸಿದ ನಾರಾಯಣ ದೇವಾಡಿಗ ಅವರು ಮುತ್ತದೇವಾಡಿಗ-ಶೇಷಮ್ಮ ದಂಪತಿಯ ಸುಪುತ್ರ. +ಐದನೇ ತರಗತಿಯವರೆಗಿನ ಶಿಕ್ಷಣದ ಬಳಿಕ, ಅಂದರೆ ತನ್ನ ಹದಿನಾಲ್ಕರ ಹರೆಯದಲ್ಲೇ ಗೆಜ್ಜೆ ಕಟ್ಟಿ, ರಂಗಮಂಚಕ್ಕೆ ಹೆಜ್ಜೆ ಹಾಕಿದ . +ದೇವಾಡಿಗರು ಸ್ವಯಂ ಕಲಾಸಕ್ತಿಯನ್ನು ಪ್ರವರ್ಧಿಸಿಕೊಂಡು ಅದನ್ನೇ ರಂಗಬಾಳುವೆಗೆ ಪ್ರೇರಣೆಯಾಗಿಸಿ ಮುನ್ನಡೆದರು. +ಉಡುಪಿ ಯಕ್ಷಗಾನ ಕೇಂದ್ರದ ವಿದ್ಯಾರ್ಥಿಯಾಗಿ ಗುರು ವೀರಭದ್ರನಾಯಕ್‌, ನೀಲಾವರ ರಾಮಕೃಷ್ಣಯ್ಯ ,ಹಿರಿಯಡಕ ಗೋಪಾಲರಾವ್‌, ಅವರಲ್ಲಿ ಶಾಸ್ತ್ರೋಕ್ತ ರಂಗಶಿಕ್ಷಣವನ್ನು ಪಡೆದ ನಾರಾಯಣ ದೇವಾಡಿಗರು ಈ ರಂಗಭೂಮಿಯಲ್ಲಿ ಪ್ರಧಾನ ಸ್ರ್ತೀ ವೇಷಧಾರಿಯಾಗಿ ಪ್ರಸಿದ್ಧಿ ಪಡೆದರು. +ಪಾತ್ರೋಚಿತ ನೃತ್ಯ, ಅಭಿನಯ, ಹಾವ-ಭಾವ,ವಾಚಿಕ, ರಂಗವೈಖರಿ, ವೇಷವೈಭವದಲ್ಲಿ ಪೌರಾಣಿಕ ಪಾತ್ರಪ್ರಪಂಚವನ್ನು ಕಣ್ಮುಂದಿರಿಸುವ ಅನುಭವಿ ಕಲಾವಿದ . +ದೇವಾಡಿಗರು ಮಾರಣಕಟ್ಟೆ 4, ಕಮಲಶಿಲೆ12, ಸಾಲಿಗ್ರಾಮ 1, ಕಳವಾಡಿ 1, ಪೆರ್ಡೂರು 1,ಮಡಾಮಕ್ಕಿ 2, ಅಮೃತೇಶ್ವರಿ 1, ಗೋಳಿಗರಡಿ 4,ಸೌಕೂರು 6, ಮಾರಣಕಟ್ಟೆ 10, ಹೀಗೆ 42ವರ್ಷಗಳ ಕಲಾಯಾತ್ರೆ ಗೈದಿದ್ದಾರೆ. +ಪ್ರಸ್ತುತ ಮಾರಣಕಟ್ಟೆ ಮೇಳದ ಕಲಾವಿದರು. +ಅಂಬೆ, ಮೀನಾಕ್ಷಿ, ದ್ರೌಪದಿ, ದಮಯಂತಿ,ಚಿತ್ರಾಂಗದೆ, ಮೊದಲಾದ ಸ್ರ್ತೀ ಭೂಮಿಕೆಗಳನ್ನೂ ಭೀಷ್ಯಕೃಷ್ಣ ದ್ರೋಣ, ರಾಮ, ರಾವಣ, ಈಶ್ವರ, ಅರ್ಜುನ ಮೊದಲಾದ ಪುರುಷ ವೇಷಗಳನ್ನೂ ಚಿತ್ತೂರು ಅವರು ಯಶಸ್ವಿಯಾಗಿ ನಿರ್ವಹಿಸುತ್ತಾರೆ. +ಪತ್ನಿ ಗಿರಿಜಾ. +ನಾಗರತ್ನಾ, ನಾಗೇಂದ್ರ,ನಾಗಾಂಬಿಕಾ ಮಕ್ಕಳು. +ಶ್ರೀಯುತರನ್ನು ಹಲವಾರು ಸಂಘ-ಸಂಸ್ಥೆಗಳು ಸಂಮಾನಿಸಿವೆ. +ಅಗಾಧ ಪೌರಾಣಿಕ ಜ್ಜಾನ ಸಂಪತ್ತಿಕೆಯ ಭಾವಪೂರ್ಣ ಭಾಗವತಿಕೆಯಲ್ಲಿ ಪಾರಂಪರಿಕ ಮೆರುಗು, ಪ್ರಯೋಗಶೀಲ ಬೆರಗು ತೋರುವ ಪ್ರಬುದ್ಧ, ಪ್ರಸಿದ್ಧ ಭಾಗವತ ನೆಬ್ಬೂರು ನಾರಾಯಣ ಹೆಗಡೆ. +ಉತ್ತರ ಕನ್ನಡದ ಶಿರಸಿಯ ನೆಬ್ಬೂರು ಇವರ ಹುಟ್ಟೂರು. +ತಂದೆ ದೇವರು ಹೆಗಡೆ, ತಾಯಿ ಗಣಪಿ ಹೆಗಡೆ. +ಇವರ ಅಕ್ಷರ ಶಿಕ್ಷಣ ನಾಲ್ಕನೇ ತರಗತಿಯವರೆಗೆ ಮಾತ್ರ. +20ನೇ ವಯಸ್ಸಿನಲ್ಲೇ ಶ್ರೀಯುತರು ಗಾನಬದುಕಿಗೆ ಶ್ರೀಕಾರ ಹಾಡಿದವರು. +ಶ್ರೀಯುತರ ತಂದೆ ಭಾಗವತರಾಗಿದ್ದರು ಹಾಗಾಗಿ ಗಾನ ಕಲೆ ಇವರಿಗೆ ಎಳವೆಯಲ್ಲಿಯೇ ದೊರಕುವಂತಾಯಿತು. +ಭಾಗವತ ಗಣಪತಿ ಹೆಗಡೆ ಕೊಡ್ಲಿಪಾಲು ಅವರ ಪ್ರೇರಣೆ ಇವರನ್ನು ಈ ರಂಗಭೂಮಿಗೆ ಎಳೆದು ತಂದಿತು. +ಶ್ರೇಷ್ಠ ಕಲಾವಿದ ಕೆರೆಮನೆ ಶಿವರಾಮ ಹೆಗಡೆಯವರ ಗುರುತನವೂ ಇವರಿಗೆ ದೊರಕಿತು. +ಕೆರೆಮನೆ ಕುಟುಂಬದ ಕಲಾ ಪರಂಪರೆಯಲ್ಲಿ ಶ್ರೀಯುತರ ಗಾನವಾಹಿನಿ ದೇಶ ವಿದೇಶಗಳಲ್ಲಿ ಪಸರಿಸುವಂತಾಗಿದೆ. +ಶ್ರೀಯುತರು ಸಾಲಿಗ್ರಾಮ-2,ಅಮೃತೇಶ್ವರಿ-1, ಪಂಚಲಿಂಗೇಶ್ವರ-1, ಮೂರೂರು ದೇವರು ಹೆಗಡೆ ಮೇಳ-1 ದಲ್ಲಿ ಕಲಾವ್ಯವಸಾಯ ನಡೆಸಿದ್ದಾರೆ. +ಇಡಗುಂಜಿ, ಮೇಳದಲ್ಲೇ ಸುಮಾರು 35 ವರ್ಷಗಳ ಕಾಲ ಭಾಗವತರಾಗಿ ಅನನ್ಯ ಕಲಾಸೇವೆ ಸಲ್ಲಿಸಿದ್ದಾರೆ. +ಒಟ್ಟು ಐದು ದಶಕಗಳ ಸಾರ್ಥಕ ರಂಗಜೀವನ ಶ್ರೀಯುತರದ್ದು. +ನೆಬ್ಬೂರು ನಾರಾಯಣ ಹೆಗಡೆಯವರು ಸುಮಧುರ ಕಂಠಸಿರಿ ಹಾಗೂ ಅಸಾಧಾರಣ ರಂಗತಂತ್ರದಲ್ಲಿ ಮೆರೆದ ಮೇರು ಭಾಗವತರು. +ನೆಬ್ಬೂರರ ಪುರಾಣ ಜ್ಞಾನವಂತೂ ಅಪಾರ. +ಭಾವ ನಿರ್ಬರ ಯಕ್ಷಗಾನ ಭಾಗವತಿಕೆಯಲ್ಲಿ "ನೆಬ್ಬೂರು ಶೈಲಿ'ಯನ್ನು ರಂಗದಲ್ಲಿ ಉದ್ಭಾಟಿಸಿದ ಹಿರಿಮೆ ಇವರದ್ದಾಗಿದೆ. +ನಾರಾಯಣ ಭಾಗವತರ ಅಪ್ರತಿಮ ಕಲಾಶ್ರೀಮಂತಿಕೆಗೆ ಮಾರುಹೋದ ನಾಡಿನ ಅನೇಕಾನೇಕ ಸಂಘ-ಸಂಸ್ಥೆಗಳು ಗುರುತಿಸಿ ಗೌರವಿಸಿವೆ. +ಶ್ರೀಯುತರಿಗೆ ಪ್ರತಿಷ್ಠಿತ ರಾಜ್ಯ ಪ್ರಶಸ್ತಿ, ಜಾನಪದ ಯಕ್ಷಗಾನ ಅಕಾಡೆಮಿ ಪ್ರಶಸ್ತಿ, ಉಡುಪಿ ಯಕ್ಷಗಾನ ಕಲಾರಂಗದ ಪ್ರೊ.ಬಿ.ವಿ ಆಚಾರ್ಯ ಪ್ರಶಸ್ತಿ, ಕೆರೆಮನೆ ಶಿವರಾಮ ಪ್ರಶಸ್ತಿ ದೊರಕಿರುತ್ತದೆ. +“ನೆಬ್ಬೂರು ನಿನಾದ'ಎಂಬ ಅಭಿನಂದನಾ ಗ್ರಂಥವು ಬಿಡುಗಡೆಯಾಗಿದೆ. +ಪತ್ನಿ ಶರಾವತಿ ಹೆಗಡೆ. +ವಿನಾಯಕ, ಶಕುಂತಲಾ ಎಂಬ ಮಕ್ಕಳನ್ನು ಪಡೆದಿದ್ದಾರೆ. +ಉಡುಪಿಯ ಯಕ್ಷಗಾನ ಕಲಾರಂಗ ಸಾಕ್ಷಚಿತ್ರದ ಸಿ.ಡಿ. ಪ್ರಕಟಿಸಿದೆ. +ಬಡಗುತಿಟ್ಟು ಯಕ್ಷಗಾನ ರಂಗಭೂಮಿಯ ಸದಭಿರುಚಿಯ ಹಾಸ್ಯನಟ ಸುಳಗೋಡು ನಾರಾಯಣ ಹಾಸ್ಯಗಾರ, ಔಚಿತ್ಯಪೂರ್ಣ ಕುಣಿತ, ಅಭಿನಯ,ವೈನೋದಿಕ ರಸಪರಿ ಪೂರ್ಣ ಪ್ರಬುದ್ಧ ವಾಗ್ವೈಖರಿ. +ಪಾತ್ರಗಳ ನಾಡಿ ಮಿಡಿತವನ್ನರಿತ ಅನುಭವ ಪೂರ್ಣ ಕಲಾಭಿವ್ಯಕ್ತಿ ಈ ಹಿರಿಯ ಹಾಸ್ಯ ಕಲಾವಿದನ ಪ್ರತಿಭಾ ಸೊತ್ತಾಗಿ ಗಮನೀಯವಾಗುತ್ತವೆ. +ಕುಂದಾಪುರ ತಾಲೂಕಿನ ಸುಳಗೋಡು ಎಂಬ ಪುಟ್ಟ ಹಳ್ಳಿಯಲ್ಲಿ ಹುಟ್ಟಿ ಬೆಳೆದ ನಾರಾಯಣ ಹಾಸ್ಯಗಾರರು ಕುಷ್ಠ ಮರಕಾಲ-ಕೃಷ್ಟಿ ದಂಪತಿಯ ಸುಪುತ್ರ . +ಹಳ್ಳಿ ಹೊಳೆ ಚಕ್ರಮೈದಾನ ಪ್ರಾಥಮಿಕ ಶಾಲೆಯಲ್ಲಿ 5ನೇ ತರಗತಿಯವರೆಗೆ ಅಕ್ಷರಾಭ್ಯಾಸ ಮಾಡಿ, ತನ್ನ 15ರ ಹರೆಯದಲ್ಲೇ ಕಮಲಶಿಲೆ ಮೇಳದಲ್ಲಿ ಗೆಜ್ಜೆ ಕಟ್ಟಿ ಹೆಜ್ಜೆ ಹಾಕಿದರು. +ಹೆರಂಜಾಲುಸುಬ್ಬಣ್ಣ, ಕೋಡಿ ಶಂಕರಗಾಣಿಗ, ಸಕ್ಕಟ್ಟುಲಕ್ಷೀನಾರಾಯಣಯ್ಯನವರ ಗುರುತನ. + ಎಂ.ಎಂ.ಹಗ್ಡೆ ಯವರ ಸಮರ್ಥ ಮಾರ್ಗದರ್ಶನ ಈ ಕಲಾವಿದನ ರಂಗಜೀವನಕ್ಕೆ ಸಮರ್ಪಕ ಪ್ರೇರಣಾ ಶಕ್ತಿಯಾಯಿತು. +ಸುಳಗೋಡು ಅವರು ಹಾಸ್ಯಗಾರನಾಗುವ ಮೊದಲು ವೃತ್ತಿಮೇಳಗಳ ಸಮರ್ಥ ಪುರುಷವೇಷಧಾರಿಯಾಗಿ ವಿಜೃಂಭಿಸಿದ್ದರು. +ಭಸ್ಮಾಸುರ,ಕೌರವ, ಭೀಮ, ಅರ್ಜುನ, ಅಶ್ವತ್ಥಾಮ, ಕೋಟೆಯಕರ್ಣ ಮೊದಲಾದ ಭೂಮಿಕೆಗಳು ಅವರಿಗೆ ಹೆಸರುತಂದಿತ್ತಿವೆ. +ಅದೊಂದು ಸಂದರ್ಭ ಮುತ್ತಯ್ಯ ಹೆಗ್ಡೆಯವರ ಆಶಯದಂತೆ "ರತಿ ಕಲ್ಯಾಣ'ದವಿದೂಷಕನಾಗಿ ರಂಜಿಸಿದ್ದೇ ತಡ ಸುಳಗೋಡು ಹಾಸ್ಯಭೂಮಿಕೆಗಳಿಗೆ ಕಾಯಂ ಆದರು. +ಶ್ರೀಯುತರ ಭೀಷ್ಮ ಪ್ರತಿಜ್ಞೆಯ ಕಂದರ “ವಿಜಯ'ದ ಬ್ರಾಹ್ಮಣ, ಚಂದ ಗೋಪ, ಬಾಹುಕ,ಪಾಪಣ್ಣ, ವಿದ್ಯುಜ್ಜಿಹ್ವ ಮೊದಲಾದ ಭೂಮಿಕೆಗಳು ಜನಪ್ರಿಯವಾಗಿವೆ. +ಕಮಲಶಿಲೆ 1, ಮಾರಣಕಟ್ಟೆ 10,ಸೌಕೂರು 19, ಹಾಲಾಡಿ 3, ಮಂದಾರ್ತಿ 2, ಹೀಗೆ 35ವರ್ಷಗಳ ಕಲಾವ್ಯವಸಾಯ ಇವರದ್ದು. +ಪತ್ನಿ ಗಿರಿಜಾ. +ಉದಯ, ಉಮಾ, ಉಷಾ ಮಕ್ಕಳು. +ಅನುಭವಿ ಹಾಸ್ಯಗಾರ ಸುಳಗೋಡು ಅವರನ್ನು ದೆಹಲಿಯ ಗಣರಾಜ್ಯೋತ್ಸವ ಸಮಾರಂಭದ "ಫೂಲ್‌ವಾಲೋಂಕಿ ವಾರ್‌'ನಲ್ಲಿ ಸಮ್ಮಾನಿಸಲಾಗಿದೆ. +ಜಿ.ಶಂಕರ್‌ ಪ್ಯಾಮಿಲಿ ಟ್ರಸ್ಟ್‌ನ ವತಿಯಿಂದ ಗೌರವಿಸಲಾಗಿದೆ. +ಅಪೂರ್ವ ಕಲಾವಂತಿಕೆಯಿಂದ ಬಡಗುತಿಟ್ಟಿನ ಯಕಗಾನ ರಂಗದಲ್ಲಿ ಸಿದ್ದಿಯ ಶಿಖರವೇರಿದ ಶ್ರೇಷ್ಠ ಕಲಾವಿದ ಗೋಡೆ ನಾರಾಯಣ ಹೆಗಡೆ. +ಪ್ರಧಾನ ಪುರುಷ ಪಾತ್ರಕ್ಕೊಪ್ಪುವ ಆಳಂಗ,ನಾಜೂಕಿನ ನೃತ್ಯಾಭಿನಯ ವೈಖರಿ, ಪ್ರೌಢ ಪೌರಾಣಿಕ ಅನುಭವದ ವ್ಯಾಕರಣಬದ್ಧ ರಸಾತ್ಮಕ ವಾಗ್ಮಿತೆ,ಪಾತ್ರಗಳ ನಾಡಿಮಿಡಿತವನ್ನರಿತ ಗರಿಷ್ಠಮಟ್ಟದ ಕಲಾಭಿವ್ಯಕ್ತಿ ಮೈಗೂಡಿಸಿಕೊಂಡ ನಾರಾಯಣಹೆಗಡೆಯವರು, ಉತ್ತರ ಕನ್ನಡ ಸಿದ್ಧಾಪುರ ತಾಲೂಕಿನ ಕೊರ್ಲಕ್ಕೆ ಎಂಬಲ್ಲಿ 1940ರಲ್ಲಿ ಫೆಬ್ರವರಿ 2ರಂದು ಜನಿಸಿದರು. +ಶ್ರೀಯುತರ ತಂದೆ ಗೋಡೆ ತಿಮ್ಮಯ್ಯ ಹೆಗಡೆ ಮತ್ತು ತಾಯಿ ಗೌರಮ್ಮ ತಿಮ್ಮಯ್ಯ ಹೆಗಡೆ. +ಸುತ್ತಮುತ್ತಲಿನ ಯಕ್ಷಗಾನ ಪರಿಸರದ ಪ್ರಭಾವ ಹಾಗೂ ಕೊಳಗಿ ಸೀತಾರಾಮ ಹೆಗಡೆಯವರ ಪ್ರೇರಣೆಯಿಂದ ಕಲಾಬದುಕು ಕಂಡ ಗೋಡೆಯವರು 5ನೇ ತರಗತಿಯವರೆಗಿನ ಅಕ್ಷರ ಶಿಕ್ಷಣದ ಬಳಿಕ ಯಕ್ಷಲೋಕ ಕಂಡವರು. +ಕೊಳಗಿ ಸೀತಾರಾಮ ಹೆಗಡೆ, ಮಲ್ಲದ್ದೆ ಗಣೇಶಯ್ಯ ಅವರ ಗುರುತನವನ್ನು ಪಡೆದ ಗೋಡೆಯವರು, ಆರಂಭಿಕ ವೃತ್ತಿಬದುಕಿನಲ್ಲಿ ಸ್ರ್ತೀ ವೇಷಧಾರಿಯಾಗಿ ಮೆರೆದವರು. +ಶ್ರೀಯುತರ ತಾರೆ,ದಮಯಂತಿ, ಸೈರೇಂಧ್ರಿ, ದಾಕ್ಷಾಯಿಣಿ, ಪ್ರಭಾವತಿ ಪಾತ್ರಗಳು ಜನಮನ ರಂಜಿಸಿವೆ. +ತದನಂತರ ಹಂತ-ಹಂತವಾಗಿ ಪುರುಷವೇಷದಾರಿಯಾಗಿ, ಎರಡನೇವೇಷಧಾರಿಯಾಗಿ ಬೆಳೆಯುತ್ತ ಬಂದ ಗೋಡೆ“ಗದಾಯುದ್ಧ'ದ ಕೌರವನ ಪಾತ್ರದ ಮೂಲಕ ತಾರಾಮೌಲ್ಯದ ವರ್ಚಸ್ಸು ಪಡೆದರು. +ಶ್ರೀಯುತರ ಕೌರವ, ರಾವಣ, ಯತುಪರ್ಣ,ಬ್ರಹ್ಮ, ಲಕ್ಷ್ಮಣ, ಅರ್ಜುನ, ಸಾಲ್ವ, ಜಾಂಬವ,ಕಾರ್ತವೀರ್ಯ, ಕೀಚಕ, ಸುಧನ್ಹ ಪಾತ್ರಗಳು ಯಕ್ಷಗಾನದ ಸೃಜನಶೀಲ ಕಲಾ ಸ್ವರೂಪದ ಜೀವಂತ ಯಕ್ಷಶಿಲ್ಪಗಳಾಗಿವೆ. +ಇಡಗುಂಜಿ 9, ಅಮೃತೇಶ್ವರಿ 6, ಮೂಲ್ಕಿ 1,ಪೆರ್ಡೂರು 1 ಪಂಚಲಿಂಗ 4, ಶಿರಸಿ ಮಾರಿಕಾಂಬಾ 4, ಹೀಗೆ ಗೋಡೆಯವರ ಕಲಾಕೃಷಿಗೆ ಸುವರ್ಣ-ಸಂಬ್ರಮ. +ಪ್ರಸ್ತುತ ಗೋಡೆ ವಿಶ್ರಾಂತ ಜೀವನದಲ್ಲಿದ್ದಾರೆ. +ಧರ್ಮಪತ್ನಿ ಲಕ್ಷ್ಮೀ. +ವತ್ಸಲ, ಪ್ರಶಾಂತ, ಪ್ರಸಾದ,ಭವ್ಯ, ದಿವ್ಯ, ಎಂಬ ಐವರು ಮಕ್ಕಳು. +ಇವರ ಸುಪುತ್ರ ಗೋಡೆ ಪ್ರಸಾದ ಹೆಗಡೆ ಭರವಸೆಯ ಭಾಗವತರು. +ಶ್ರೀಯುತರಿಗೆ “ಕರ್ನಾಟಕ ಜಾನಪದ ಯಕ್ಷಗಾನ ಅಕಾಡೆಮಿ ಪ್ರಶಸ್ತಿ, ರಾಮವಿಠಲ ಪ್ರಶಸ್ತಿ, ಅಖಿಲಹವ್ಯಕ ಮಹಾಸಭಾ ಸಂಮಾನ, ಸಿದ್ಧಾಪುರ ಸಾಹಿತ್ಯ ಸಮ್ಮೇಳನದ ಗೌರವ, ಕಲಾಗಂಗೋತ್ರಿ ಗೌರವ,ಉಡುಪಿ ಯಕ್ಷಗಾನ ಕಲಾರಂಗದ ದಶಾವತಾರಿ ಮಾರ್ವಿಹೆಬ್ಬಾರ್‌ ಪ್ರಶಸ್ತಿಯೂ ಸೇರಿದಂತೆ ಹಲವು ಪುರಸ್ಕಾರಕ್ಕೆ ಸಂದಿದೆ. +ಅಪೂರ್ವ ಯಕ್ಷಗಾನ ವರ್ಚಸ್ಸಿನ ಸಂಪದ್ಭರಿತ ಕಲಾಪ್ರತಿಭೆಯಾಗಿ ರಂಗಸ್ಥಳದಲ್ಲಿ ವಿಜೃಂಭಿಸುವ ಹಿರಿಯ ಕಲಾವಿದ ಬೇಗಾರು ಪದ್ಮನಾಭ ಶೆಟ್ಟಿಗಾರ್‌. +ಉಡುಪಿ ತಾಲೂಕಿನ ಚೇರ್ಕಾಡಿ ಗ್ರಾಮದ ಪಡುವಾರಣಾಸಿಮನೆ ಎಂಬಲ್ಲಿ ಹುಟ್ಟಿ ಬೆಳೆದ ಶೆಟ್ಟಿಗಾರರು ತಿಮ್ಮ ಶೆಟ್ಟಿಗಾರ-ನರಸಮ್ಮ ದಂಪತಿಯ ಸುಪುತ್ರ. +5ನೇ ತರಗತಿಯವರೆಗಿನ ಶಾಲಾ ಕಲಿಕೆಯ ತರುವಾಯ, ಅಂದರೆ ತನ್ನ 16ರ ಹರೆಯದಲ್ಲಿ ಯಕ್ಷಗಾನ ಕ್ಷೇತ್ರಕ್ಕೆ ಅಡಿಯಿರಿಸಿದ ಇವರು ಮತ್ತೆ ಹಿಂದಿರುಗಿ ನೋಡಲಿಲ್ಲ. +ಮಟಪಾಡಿ ಕೃಷ್ಣ ಶೆಟ್ಟಿಗಾರ್‌ಹಾಗೂ ಬ್ರಹ್ಮಾವರ ಶ್ರೀನಿವಾಸ ನಾಯಕ್‌ ಅವರ ಪ್ರೇರಣೆಯಿಂದ ಬಣ್ಣದ ಬಾಳುವೆ ಕಂಡ ಪದ್ಮನಾಭ ಶೆಟ್ಟಿಗಾರರು ಗೋಪಾಲಕೃಷ್ಣ ಮಾಸ್ತರರ ಗುರುತನದಲ್ಲಿ ಯಕ್ಷವಿದ್ಯೆಯನ್ನು ತನ್ನದಾಗಿಸಿ-ಕೊಂಡರು. +ಬೇಗಾರರ ಪಾತ್ರಪೋಷಣೆ ಅಚ್ಚುಕಟ್ಟು. +ರಂಗಾನುಭವ ಗಟ್ಟಿಮುಟ್ಟು ಪ್ರಬುದ್ಧವಾದ ಭಾಷಾಚಮತ್ಕಾರ, ಭಾವಾನುಕೂಲಕರವಾದ ನೃತ್ಯ,ಅಭಿನಯ, ಹಾವ-ಭಾವಗಳ ಸಾಕಾರ. + ಇವರ ಪ್ರತೀಭೂಮಿಕೆಗಳಲ್ಲು ರಸಾತ್ಮಕವಾಗಿ ಗುರುತಿಸಬಹುದಾಗಿದೆ. +ಬಡಗುತಿಟ್ಟಿನ ಒಬ್ಬ ಸರ್ವಶ್ರೇಷ್ಠ ಪುರುಷವೇಷಧಾರಿ-ಯಾಗಿ, ಈ ರಂಗಭೂಮಿಯ ಆಡುನುಡಿಯಲ್ಲಿ ಪ್ರಧಾನ ಕಲಾವಿದ ಸೂಚಿತ ಎರಡನೇ ವೇಷಧಾರಿಯಾಗಿ ಸ್ಥಾನಮಾನ್ಯತೆಯನ್ನು ಕಂಡು ಕೊಂಡ ಕಲಾವಿದರಿವರು. +ಪೆರ್ಡೂರು, ಸಾಲಿಗ್ರಾಮ, ಮಂದಾರ್ತಿ,ಸುರತ್ಕಲ್‌, ಕಮಲಶಿಲೆ, ಶಿರಸಿ, ಕರ್ನಾಟಕ, ಹಾಲಾಡಿ ಹೀಗೆ ತೆಂಕು ಬಡಗಿನ ಮೇಳಗಳ ಸಾರ್ಥಕ ಕಲಾವ್ಯವಸಾಯದಲ್ಲಿ ನಾಲ್ಕು ದಶಕಗಳನ್ನು ಯಶಸ್ವಿಯಾಗಿ ಪೂರೈಸಿ ಇದೀಗ ವಿಶ್ರಾಂತಿ ಜೀವನದಲ್ಲಿದ್ದಾರೆ. +ವರುಷ ಅರವತ್ತನಾಲ್ಕಾದರೂ ಇಂದಿಗೂ ಅವರು ಗೆಜ್ಜೆಕಟ್ಟಿದರೆ ರಂಗಸ್ಥಳದ ದಣಿವರಿಯದ ಧಣಿಯಾಗಿ ಕುಣಿಯಬಲ್ಲ ಕಲೋತ್ಸಾಹ ಮೈಗೂಡಿಸಿಕೊಂಡಿದ್ದಾರೆ. +ಯಾವುದೇ ಪೌರಾಣಿಕ ಪ್ರಸಂಗಗಳಲ್ಲಿ ಅವರ ಸಾಲಿನ ವೇಷಗಳು ರಂಗಮಂಚದಲ್ಲಿ ಪಾರಂಪರಿಕ ವೈಭವ ಮೆರೆದಿವೆ. +ಕೀಚಕ, ಕಂಸ, ಹಿರಣ್ಯಕಶಿಪು,ಕರ್ಣ, ಸುಧನ್ವ ಮೊದಲಾದ ಭೂಮಿಕೆಗಳಿಗೆ ಬೇಗಾರರು ತನ್ನದೇ ಕಲಾವಂತಿಕೆಯ ವಿಶಿಷ್ಟ ಆಯಾಮ ನೀಡಿ ಜನಪ್ರಿಯರಾಗಿದ್ದಾರೆ. +ಪತ್ನಿ ಸುಂದರಿ. +ಮಾಧವ, ದಯಾನಂದ,ಮೋಹನ ಮಕ್ಕಳು. +ಹಿರಿಯ ಕಲಾವಿದ ಪದ್ಮನಾಭ ಶೆಟ್ಟಿಗಾರರನ್ನು ಬೇಗಾರು ಕನ್ನಡ ಸಾಹಿತ್ಯ ಪರಿಷತ್‌ವತಿಯಿಂದ ಸಮ್ಮಾನಿಸಲಾಗಿದೆ. +ಬೆಂಗಳೂರಿನಲ್ಲಿ “ಗಾನ ಸೌರಭ' ಪ್ರಶಸ್ತಿಯೂ ಇವರಿಗೆ ದೊರಕಿರುತ್ತದೆ. +ಸುಶ್ರಾವ್ಯ ಕಂಠಸಿರಿ, ಅನನ್ಯ ರಂಗತಂತ್ರಗಳ ಮೂಲಕ ರಂಗಸ್ಕಳಕ್ಕೆ ಗಾಯನದ ಸಾಥ್‌ ನೀಡುವವರು ಭಾಗವತ ಪರಮೇಶ್ವರ ನಾಯ್ಕ. +ಉತ್ತರ ಕನ್ನಡದ ಮಂಕೋಡ ಎಂಬಲ್ಲಿ 20-10-1969ರಲ್ಲಿ ಜನ್ಮ ತಾಳಿದ ಪರಮೇಶ್ವರ ನಾಯ್ಕರು ಕೆರಿಯನಾಯ್ಕ ಗೌರಿ ದಂಪತಿಯ ಸುಪುತ್ರ. +3ನೇ ತರಗತಿಗೆ ಅಕ್ಷರ ಶಿಕಣಕ್ಕೆ ತಿಲಾಂಜಲಿಯಿತು ತನ್ನ 24ನೇ ವಯಸ್ಸಿನಲ್ಲೇ ಯಕ್ಷಗಾನ ರಂಗವನ್ನು ಪ್ರವೇಶಿಸಿದವರು. +ಸಿದ್ಧಾಪುರ ಮಂಜುನಾಥ ಹೆಗಡೆ ಎನ್ನುವ ಹಿರಿಯ ಹವ್ಯಾಸೀ ಭಾಗವತರ ಪದ್ಯಗಳನ್ನು ಕೇಳಿಸಿಕೊಂಡು ಯಕ್ಷಗಾನದ ಗೀಳು ಹೆಚ್ಚಿಸಿಕೊಂಡ ಪರಮೇಶ್ವರ ನಾಯ್ಕರು ಕಾನ್ಮನೆಯ ಕೃಷ್ಣತಮ್ಮ ಗೌಡಎಂಬ ಹವ್ಯಾಸಿ ಕಲಾವಿದರ ಪ್ರೇರಣೆಯಂತೆ ಕೃಷ್ಣ ಜಿ.ಬೇಡ್ಕಣಿಯವರ ತರಭೇತಿ ಕೇಂದ್ರಕ್ಕೆ ತೆರಳಿ ಅಲ್ಲಿಯೇ ಯಕ್ಷದೀಕ್ಷೆ ಪಡೆದರು. +ಕಾವೂರು ಹನುಮಂತ ಗೌಡರು ಇವರಿಗೆ ಕಲಾಜೀವನ ಪಾದಾರ್ಪಣೆಗೆ ಹಾರ್ದಿಕ ಸಹಕಾರ ನೀಡಿದರು. +ಮುಂದೆ ಹಂಗಾರಕಟ್ಟೆ ಯಕ್ಷಗಾನ ಕೇಂದ್ರವನ್ನು ಸೇರಿ ಅಲ್ಲಿ ಕೆ.ಪಿ.ಹೆಗಡೆಯವರಲ್ಲಿ ಸಮರ್ಪಕ ಭಾಗವತಿಕೆ ಶಿಕ್ಷಣ ಪಡೆದರು. +ಪ್ರಥಮ ವರ್ಷದಲ್ಲೇ ಶಿರಸಿ ಮೇಳದಲ್ಲಿ ಸಂಗೀತಗಾರನಾಗಿ ಅವಕಾಶ ಪಡೆದುಕೊಂಡ ಇವರು ಅಲ್ಲಿ ಸಾಕಷ್ಟು ಪೌರಾಣಿಕ ಜ್ಞಾನ ಸಂಪಾದಿಸಿದರು. +ಅಂತರಂಗದ ಅನನ್ಯ ಗಾನಪ್ರತಿಭೆಯನ್ನು ಸತತ ಪರಿಶ್ರಮ, ಸಾಧನೆಯಿಂದ ಸಾಣೆ ಹಿಡಿದು ಭಾಗವತನಾಗಿ ರೂಪುಗೊಂಡರು. +ಶಿರಸಿ 2, ಅಮೃತೇಶ್ವರಿ 3, ಬಗ್ವಾಡಿ 1,ಮಡಾಮಕ್ಕಿ 5, ಮಂದಾರ್ಶಿ 5, ಹೀಗೆ 1 ವರ್ಷಗಳ ಕಲಾಕೃಷಿ ಇವರದ್ದು. +ಪ್ರಸ್ತುತ ಶ್ರೀಯುತರು ಮಂದಾರ್ತಿ ಮೇಳದ ಬಾಗವತರಾಗಿ ದುಡಿಯುತ್ತಿದ್ದಾರೆ. +ಕಾನಗೋಡು, ಹಳ್ಳಿಬೈಲು,ಕಕ್ಕುಂಜೆ, ಮೊದಲಾದ ಕಡೆಯ ಸಂಘ-ಸಂಸ್ಥೆಗಳಿಂದಲೂ, ಜಿ.ಶಂಕರ್‌ ಫ್ಯಾಮಿಲಿ ಟ್ರಸ್ಟ್‌ವತಿಯಿಂದ ಗೌರವವೂ ದೊರಕಿದೆ. +ಮಡದಿ ಸುಶೀಲಾ. +ನವ್ಯಶ್ರೀ ಮಗಳು. +ಪ್ರತಿಭಾನ್ವಿತ ಭಾಗವತ ಪರಮೇಶ್ವರ ನಾಯ್ಕ ಅವರು ಪೌರಾಣಿಕ ನವ್ಯ ಕಥಾನಕಗಳೆರಡರಲ್ಲೂ ವಿಜೃಂಭಿಸುವ ಭಾಗವತರು. +ರಂಗನಟನ ಚೈತನ್ಯಶೀಲ ಕಲಾಭಿವ್ಯಕ್ತಿಗೆ ಹಾಗೂ ಭಾಗವತರ ಗಾನಾನುಕೂಲಕರವಾದ ಮದ್ದಳೆಯ ಮಸ್ತಕ ನುಡಿಸಾಣಿಕೆಗೆ ಎತ್ತಿದ ಕೈ - ಪರಮೇಶ್ವರ ಪ್ರಭಾಕರ ಭಂಡಾರಿ. +ಮಾಧುರ್ಯ ಮಯವಾದ ನುಡಿತದ ಝೇಂಕಾರದಲ್ಲಿ ಮದ್ದಳೆಯ ಮಸ್ತಕದಲ್ಲಿ ಬೆರಳುಗಳ ನರ್ತನ ಕಾಣಿಸುವ ಸೃಜನಶೀಲ ಸಿದ್ಧಹಸ್ತ ಪರಮೇಶ್ವರ ಭಂಡಾರಿಯವರು. +ಹೆಸರಾಂತ ಮದ್ದಳೆಗಾರ ಕರ್ಕಿ ಪ್ರಭಾಕರ ಭಂಡಾರಿ - ಶಾರದಾ ದಂಪತಿಯ ಸುಪುತ್ರ. +ಉತ್ತರಕನ್ನಡದ ಕರ್ಕಿ ಎಂಬಲ್ಲಿ 2-5-1971ರಲ್ಲಿ ಜನಿಸಿದ ಪರಮೇಶ್ವರ ಅವರಿಗೆ ಮದ್ದಳೆವಾದನದ ವಿದ್ಯೆ, ಯಕ್ಷ ಕಲಾಸಕ್ತಿ ಎಂಬುದು ಮನೆತನದಿಂದ ಬಂದ ಬಳುವಳಿ ಎನ್ನಬಹುದಾಗಿದೆ. +ತಂದೆ ಪ್ರಭಾಕರ ಭಂಡಾರಿಯವರೇ ಇವರ ಮದ್ದಳೆಯ ಗುರುಗಳಾದುದರಿಂದ ಮದ್ದಳೆವಾದನ ಕಲೆ ಎಂಬುದು ಅಭಿಜಾತ. +ಸುಬ್ರಾಯ ಹೆಗಡೆಕಪ್ಪೆಕೆರೆಯವರೂ ಗುರುಸ್ಥಾನದಲ್ಲಿ ನಿಂತು ಪರಮೇಶ್ವರರಿಗೆ ಕಲಾನುಭವ ದ್ರವ್ಯವನ್ನು ಧಾರೆಯೆರೆದರು. +ತೀವ್ರತರವಾದ ನುಡಿಗಾರಿಕೆಯಲ್ಲಿ ಮಿಳಿತವಾದ ಪ್ರಮಾಣ ಪೂರ್ವಕವಾದ ಲಯಗಾರಿಕೆ,ಶ್ರವಣೀಯವಾದ ವಾದನಕಲಾ ಶ್ರೀಮಂತಿಕೆ ಹಸ್ತಗತವಾಗಿಸಿಕೊಂಡ ಪರಮೇಶ್ವರ ಭಂಡಾರಿಯವರು ಮದ್ದಳೆಗಾರಿಕೆಂರುಲ್ಲಿ ತಾರಾಮೌಲ್ಯವನ್ನ್ನು ತಂದುಕೊಡ ವಿದ್ವತ್‌ಶೀಲ ಮದ್ದಳೆವಾದಕರು. +ಗುಂಡಬಾಳ 9, ಶಿರಸಿ 1, ಭಾಸ್ಕರಜೋಶಿ ಮೇಳ 1, ಸಾಲಿಗ್ರಾಮ 12, ಹೀಗೆ 23 ವರ್ಷಗಳ ಕಲಾ ವಸಂತದಲ್ಲಿ ಪರಮೇಶ್ವರರ ಮದ್ದಳೆ ಮಧುರಮಯವಾಗಿ ಮಾತನಾಡಿದೆ. +ಚಂಡೆವಾದನ ಕಲೆಯ ಪರಿಣತಿಯನ್ನೂ ಹೊಂದಿದ ಶ್ರೀಯುತರು ಹಳೆತರ ಮಟ್ಟನ್ನೂ, ಹೊಸತರ ಗುಟ್ಟನ್ನೂ ಮದ್ದಳೆಯ ಪೆಟ್ಟಿನಲ್ಲಿ ಕಾಣಿಸುವವರು. +ಶ್ರಾವಕರಿಗೆ ಕೇಳಿಸುವವರು. +ಬಾಳಸಂಗಾತಿ ಭಾರತಿ. +ಪುನೀತ್‌, ಪ್ರಜ್ಞಾ ಮಕ್ಕಳು. +ಶ್ರೀಯುತರು ಪ್ರಸ್ತುತ ಸಾಲಿಗ್ರಾಮ ಮೇಳದ ಪ್ರಧಾನ ಮದ್ದಳೆವಾದಕರು. +ದಕ್ಷಿಣೋತ್ತರ ಕನ್ನಡಜಿಲ್ಲೆಯ ಹಲವಾರು ಸಂಘ-ಸಂಸ್ಥೆಗಳಲ್ಲಿ ಗೌರವ ಸಮ್ಮಾನವನ್ನು ಪಡೆದ ಪರಮೇಶ್ವರ ಭಂಡಾರಿಯವರನ್ನು ಹೈದರಾಬಾದ್‌ ಕರಾವಳಿ ಕರ್ನಾಟಕ ಸಂಘವು ಗೌರವಿಸಿದೆ. +ಮದ್ದಳೆಯ ಮೃದು ವಧುರ ನುಡಿ ಸಾಣಿಕೆಗೆ ಹೆಸರಾದ ಪ್ರಭಾಕರ ಭಂಡಾರಿ ಅವರು ಬಡಗುತಿಟ್ಟಿನ ಶ್ರೇಷ್ಠ ಮದ್ದಳೆವಾದಕರು. +ಪರಂಪರೆಂಯ ಅಂತಃಸ್ಸತ್ವವನ್ನು ನಾದರೂಪದಲ್ಲಿ ಪ್ರಕಟಿಸುವ ಪ್ರತಿಭಾವಂತರು. +ಕರ್ಕಿಯ ಪಾಂಡುರಂಗ ಭಂಡಾರಿ-ಹೊನ್ನಮ್ಮ ದಂಪತಿಯ ಸುಪುತ್ರರಾದ ಶ್ರೀಯುತರು1942ನೇ ಇಸವಿಯ ಮೇ ಎಂಟರಂದು ಹೊನ್ನಾವರ ತಾಲೂಕಿನ ಕರ್ಕಿ ಎಂಬಲ್ಲಿ ಜನಿಸಿದರು. +5ನೇ ಇಯತ್ತೆಯ ವರೆಗೆ ಅಕ್ಷರಾಭ್ಯಾಸ ಮಾಡಿದ ಭಂಡಾರಿಯವರು 14ರ ಹರೆಯದಲ್ಲೇ ಯಕ್ಷಲೋಕ ಪ್ರವೇಶಿಸಿದರು. +ಪ್ರಭಾಕರ ಭಂಡಾರಿಯವರ ತಂದೆಯವರು ಪ್ರಸಿದ್ಧ ಮದ್ದಳೆಗಾರರಾಗಿದ್ದು, ಮಗನಿಗೆ ಅವರೇ ಗುರುವಾಗಿ ಕಲಾಶಿಕ್ಷಣ ನೀಡಿ ಪ್ರೋತ್ಸಾಹಿಸಿದರು. +ಸ್ಫುಟವಾದ ಪೆಟ್ಟು, ನವಿರಾದ ಸ್ಪಷ್ಟ ಬೆರಳುಗಾರಿಕೆಯ ಹೊರಳಿಕೆ. +ಗಾನ ಪೋಷಕ ವಾದನ ಸಾಂಗತ್ಯದಲ್ಲಿ ನಟನ ಕ್ರಿಯಾಶೀಲ ಅಭಿವ್ಯಕ್ತಿಗೆ ಸಾರಥ್ಯ ನೀಡುವ ಪ್ರಭಾಕರ ಭಂಡಾರಿಯವರು ವಿಶೇಷ ರಂಗಪರಿಣತಿಯನ್ನು ಹೊಂದಿದವರು. +ಗುಂಡಬಾಳ-8, ಕುಮಾಟಾ-4,ಅಮೃತೇಶ್ವರಿ-3, ಕೊಳಗಿಬೀಸ್‌-2, ಇಡಗುಂಜಿ-16, ಸಾಲಿಗ್ರಾಮ-12, ಹೀಗೆ 6 ಮೇಳಗಳಲ್ಲಿ 45ವರ್ಷಗಳ ಸುದೀರ್ಥ ಕಲಾಜೀವನ ನಡೆಸಿ ಅಪಾರ ಜನಮೆಚ್ಚುಗೆ ಗಳಿಸಿದ್ದಾರೆ. +ಮಡದಿ ಶಾರದಾ. +ಮಂಜುನಾಥ,ಪರಮೇಶ್ವರ, ಉಮೇಶ ಎಂಬ ಮೂವರು ಪುತ್ರರು. +ಪ್ರಭಾಕರ ಭಂಡಾರಿಯವರ ಪುತ್ರರೂ ಮದ್ದಳೆಗಾರರಾಗಿ ಹೆಸರು ಗಳಿಸಿದ್ದಾರೆ. +ಮೃಣ್ಮಯ ಗಣಪತಿ ಮೂರ್ತಿ ತಯಾರಿಕೆ ಹಾಗೂ ಶಹನಾಯಿ ನುಡಿಸುವುದು ಸದ್ಯ ಇವರ ಉಪವೃತ್ತಿ. +ಇವರ ಪರಮೋಚ್ಚ ಕಲಾಸಾದನೆಗೆ 2002ರಲ್ಲಿ ಪ್ರತಿಷ್ಠಿತ ರಾಜ್ಯ ಪ್ರಶಸ್ತಿ ದೊರಕಿದೆ. +ಉಡುಪಿ“ಯಕ್ಷಗಾನ ಕಲಾರಂಗ'ದ ಭಾಗವತ ನಾರ್ಣಪ್ಪ ಉಪ್ಪೂರ ಪ್ರಶಸ್ತಿ, ಪಳ್ಳಿ ಸೋಮನಾಥ ಹೆಗ್ಡೆ ಪ್ರಶಸ್ತಿ ಹೀಗೆ ಹಲವು ಪುರಸ್ಕಾರಗಳಿಗೆ ಭಾಜನರು. +ರಂಗಕ್ಕೆ ಕಾವು ನೀಡುವ, ಪ್ರಸಂಗವನ್ನು ಉಠಾವು ಮಾಡುವ ಬಡಗಿನ ಚಂಡೆವಾದನ ಪ್ರವೀಣಪ್ರಶಾಂತ ವೆಂಕಟರಮಣ ಭಂಡಾರಿ. +ಹೊನ್ನಾವರ ತಾಲೂಕಿನ ಹೊಸಾಕುಳಿ ಎಂಬಲ್ಲಿ ಜನಿಸಿದ 35 ಹರೆಯದ ಪ್ರಶಾಂತ ಭಂಡಾರಿ ಅವರು ವೆಂಕಟರಮಣ ಭಂಡಾರಿ ಸರಸ್ವತಿ ದಂಪತಿಯ ಸುಪುತ್ರ. +ಎಸ್‌.ಎಸ್‌.ಎಲ್‌.ಸಿ. ಪ್ರೌಢಶಿಕ್ಷಣ ಪಡೆದ ಶ್ರೀಯುತರು ಚಂಡೆಗಾರರಾಗುವ ಕನಸು ಕಂಡರು. +ಇವರ ತಂದೆ ವೆಂಕಟರಮಣ ಭಂಡಾರಿಯವರು ಯಕ್ಷಗಾನ ವೇಷಧಾರಿಂಯಾಗಿದ್ದರು. +ಹಾಗಾಗಿ ಕಲೆಯೆಂಬುದು ಆನುವಂಶೀಯ ಬಳುವಳಿಯಾಯಿತು. +ತಂದೆಯವರ ಪ್ರೋತ್ಪಾಹ,ಮಾರ್ಗದರ್ಶನ, ಕಲಾ ಬದುಕಿಗೆ ಪ್ರೇರಣೆಯಾಯಿತು. +ಹೆರಂಜಾಲು ವೆಂಕಟರಮಣ ಗಾಣಿಗರ ಶಿಷ್ಯರಾಗಿ ಯಕ್ಷಗಾನ ಶಾಸ್ತ್ರೋಕ್ತ ಶಿಕ್ಷಣವನ್ನು ಪಡೆದು ಯಕ್ಷಲೋಕ ಪ್ರವೇಶಿಸಿದ ಭಂಡಾರಿಯವರು ಸಾಲಿಗ್ರಾಮ 5, ಕಮಲಶಿಲೆ 1 -ಮಂದಾರ್ತಿ 11,ಸೌಕೂರು 1, ಮೇಳಗಳಲ್ಲಿ 18ವರ್ಷಗಳ ಸಾರ್ಥಕ ರಂಗಯಾತ್ರೆ ಪೂರೈಸಿದ್ದಾರೆ. +ಪ್ರಸ್ತುತ ಶ್ರೀಯುತರು ಮಂದಾರ್ತಿ ಮೇಳದ ಪ್ರಧಾನ ಚಂಡೆವಾದಕರು. +ರಂಗನಟನ ಭಾವನುಶೀಲವೂ, ಭಾಗವತರಗಾನಾನುಕೂಲವೂ ಆದಂತಹ ಅವರ ಚಂಡೆವಾದನ ಕೌಶಲ ಪ್ರಶಂಸಾತ್ಮಕವಾದದ್ದು. +ನಯವಾದ ಕಿರುಪೆಟ್ಟು,ದಸ್ತನ್ನೇ ಧ್ವನಿಸುವ ನುಡಿಸಾಣಿಕೆ, ಸ್ಫುಟವಾದ ಹೊರಳಿಕೆ ಅವರ ಚಂಡೆಯ ಗುಂಡಿಗೆಯಿಂದ ಕೇಳಿ ಆಸ್ವಾದಿಸಬಹುದಾಗಿದೆ. +ಸಮರ್ಥ ಚಂಡೆವಾದಕರಾದ ಅವರು ಮದ್ದಳೆಗಾರರೂ ಹೌದು. +ಭಾಗವತಿಕೆಯಲ್ಲೂ ಪ್ರಾವಿಣ್ಯತೆ ಸಾಧಿಸಿದವರು. +ಪ್ರಶಾಂತ ಭಂಡಾರಿಯವರು ಚಂಡಗಾರಿಕೆಯೆಂದರೆ ಅವರ ಹೆಸರಿಗೇ ಅನ್ವರ್ಥವಾದಂತಿದೆ. +ಅವರ ವಾದನಕ್ರಮದಲ್ಲಿ ಕಾರ್ಕಶ್ಯವಿಲ್ಲ. +ಭಾಗವತರ ಪದ್ಯಗಳನ್ನೇ ನುಂಗಿ ಹಾಕುವ ಸ್ಹಯಂಂ ಪ್ರತಿಷ್ಠೆಯ ಹಿಮ್ಮೇಳಬೇಧನಾಗುಣವಿಲ್ಲ. +ಹಾಗಾಗಿ ಅವರು ಚಂಡೆ ಬಾರಿಸತೊಡಗಿದರೆ ಹಿಮ್ಮೇಳಕ್ಕೂ ಸುಖ. +ನಟರಿಗಂತೂ ಪರಮಾನಂದ. +ಪ್ರಶಾಂತ ಭಂಡಾರಿಯವರ ಸಹಧರ್ಮಿಣಿ ವೀಣಾ. +ಸುದೀಪ ಹಾಗೂ ಪ್ರದೀಪ ಮಕ್ಕಳು. +ಶ್ರೀಯುತರ ಉನ್ನತ ಪ್ರತಿಭೆಗೆ ನಾಡಿನ ಅನೇಕ ಸಂಘ-ಸಂಸ್ಥೆಗಳಿಂದ ಗೌರವ ಸಂಮಾನ, ಅಭಿನಂದನೆ ಪ್ರಾಪ್ತವಾಗಿದೆ. +ಪ್ರೌಢ, ಪೌರಾಣಿಕ ಜ್ಞಾನದೊಂದಿಗೆ ಗತ್ತುಗಾಂಭೀರ್ಯದ ನೃತ್ಯ, ಅಭಿನಯ ಶೈಲಿಯನ್ನು ರೂಢಿಸಿಕೊಂಡ, ಹಿರಿಯ ಕಲಾವಿದ ಪುರಂದರ ಹೆಗಡೆ. +ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಹುಕ್ತು ಎಂಬ ಹಳ್ಳಿಯೇ ಪುರಂದರ ಹೆಗಡೆಯವರ ಹುಟ್ಟೂರು. +ಗಣೇಶಯ್ಯ-ಮೂಕಾಂಬಿಕಾ ದಂಪತಿಯ ಸುಪುತ್ರರಾಗಿ 21.5.1958ರಲ್ಲಿ ಜನಿಸಿದ ಹೆಗಡೆಯವರು, ಪಿ.ಯು.ಸಿ. ವ್ಯಾಸಂಗವನ್ನು ಮುಗಿಸಿ,ತನ್ನ 22ರ ಹರೆಯದಲ್ಲೇ ಯಕ್ಷಗಾನ ಲೋಕವನ್ನು ಪ್ರವೇಶಿಸಿದರು. +ಇವರ ತಂದೆ ತಾಳಮದ್ದಳೆ,ಅರ್ಥದಾರಿಂತರಕಾಗಿದ್ದರು. +ಹಾಗಾಗಿ ಕಲಾಗುಣವೆನ್ನುವುದು ಎಳವೆಯಲ್ಲೇ ಮೈಗೂಡಿತು. +ಸಂಪ ಶೇಷಗಿರಿ ರಾಯರ ಪ್ರೇರಣೆಯಂತೆ ಕಲಾಬದುಕು ಕಂಡ ಪುರಂದರ ಹೆಗಡೆಯವರು ಹಿರಿಯ ಕಲಾವಿದ ಗೋಡೆ ನಾರಾಯಣ ಹೆಗಡೆ ಬಿಳಿಯೂರು ಕೃಷ್ಣಮೂರ್ತಿ ಅವರ ಶಿಷ್ಯನಾಗಿ ಕಲಾ ಶಿಕ್ಷಣವನ್ನು ಪಡೆದವರು. +ಪೆರ್ಡೂರು,ನಾಗರಕೊಡಿಗೆ, ಕಳವಾಡಿ, ಗುಂಡಬಾಳ, ಅಮೃತೇಶ್ವರಿ,ಕಮಲಶಿಲೆ, ಮೇಗರವಳ್ಳಿ, ಕುಮಟಾ, ಸಿಗಂಧೂರು,ಮಡಾಮಕ್ಕಿ, ಗುತ್ಕಮ್ಮ ಮೊದಲಾದ ಮೇಳಗಳಲ್ಲಿ ಶ್ರೀಯುತರ 28 ವರ್ಷಗಳ ಸಾರ್ಥಕ ಕಲಾಕೃಷಿ ಸಂಪನ್ನಗೊಂಡಿದೆ. +ಅನುಭವ ಪೂರ್ಣ ರಂಗನಡೆ, ಪ್ರಸಂಗ ಮಾಹಿತಿ,ಅಭಿನಯ ಪ್ರಧಾನ, ಭಾವಾಭಿವ್ಯಕ್ತಿ, ಎರಡನೇ ವೇಷಕ್ಕೊಪ್ಪುವ ಆಳಂಗ, ಗಂಭೀರ ಸ್ವರ, ಉತ್ಕೃಷ್ಟಮಟ್ಟದ ಸಾಹಿತಿಕ ವಚೋಚಮತ್ಕಾರ ಹೆಗಡೆಯವರ ಕಲಾವ್ಯಕ್ತಿತ್ವದಲ್ಲಿ ಕಂಡು ಬರುತ್ತದೆ. +ಬೀಷ್ಮ,ಪರಶುರಾಮ, ವಾಲಿ, ಕರ್ಣ, ಕಮಲಭೂಪ,ಹರಿಶ್ಚಂದ್ರ, ಬಾಹುಕ, ಋತುಪರ್ಣ, ವಿಕ್ರಮಾದಿತ್ಯ,ದುಷ್ಟಬುದ್ಧಿ, ಭೀಮ ಮೊದಲಾದ ಪೌರಾಣಿಕ ಪಾತ್ರಗಳು ಪುರಂದರ ಹೆಗಡೆಯವರಿಗೆ ಕೀರ್ತಿತಂದಿತ್ತಿವೆ. +ಇವರ ಮಡದಿ ಶೈಲಜಾ ಹೆಗಡೆ. +ಅರ್ಪಣಾ,ಅಕ್ಷತಾ ಮಕ್ಕಳು. +ಹುಟ್ಟೂರಿನ ಯವಕ ಮಂಡಲದ ವತಿಯಿಂದ ಶ್ರೀಯುತರಿಗೆ ಗೌರವ ಸಂಮಾನ ದೊರಕಿದೆ. +ಯಕ್ಷಗಾನ ರಂಗದ ಯುಗಳತಿಟ್ಟಿನ ಸನಾತನ-ಸಮಕಾಲೀನ ಸುಸಂಸ್ಕೃತ ಹಾಸ್ಯಗಾರಿಕೆಯಲ್ಲಿ ವಿಶೇಷ ಗೆಲುವು ಕಂಡ ಹಾಸ್ಯಕಲಾವಿದ ಕಡಬ ಪೂವಪ್ಪ ಪುತ್ತೂರು ತಾಲೂಕಿನ ಕಡಬ ಎಂಬ ಊರಿನಲ್ಲಿ 5-5-1965ರಲ್ಲಿ ಗುಡ್ಡಪ್ಪ ಮಡಿವಾಳ-ಮಾಯಿಲು ದಂಪತಿಯ ಸುಪುತ್ರನಾಗಿ ಜನಿಸಿದ ಪೂವಪ್ಪ ಅವರು 8ನೇ ತರಗತಿಯವರೆಗಿನ ಓದಿನ ಬಳಿಕ, ತನ್ನ 18ನೇ ವಯಸ್ಸಿನಲ್ಲೇ ಯಕ್ಷ ಕ್ಷೇತ್ರಕ್ಕೆ ಹೆಜ್ಜೆ ಹಾಕಿದರು. +ಇವರ ಅಣ್ಣ, ಕಡಬ ಈಶ್ವರ ಅವರು ಯಕ್ಷಗಾನ ಮದ್ದಳೆಗಾರರು. +ಅವರ ಸಂಪೂರ್ಣ ಪ್ರೋತ್ಸಾಹ,ಪ್ರೇರಣೆ ಪೂವಪ್ಪನವರ ಕಲಾಬದುಕಿನ ಪಯಣಕ್ಕೆ ದೊರಕಿತು. +ಹಾಗೆಯೇ ಮೋಹನ ಬೈಪಾಡಿತ್ತಾಯ,ಪದ್ಯಾಣ ಗಣಪತಿ ಭಟ್ಟರ ಸಹಕಾರವೂ ಲಭಿಸಿತು. +ಕೆ.ಗೋವಿಂದಭಟ್‌, ಸರಪಾಡಿ ಅಶೋಶಶೆಟ್ಟರ ಗುರುತನದಲ್ಲಿ ಕಲಾವಿದ್ಯೆಯನ್ನು ಗಳಿಸಿದ ಕಡಬ ಪೂವಪ್ಪನವರು ಕದ್ರಿಮೇಳದಲ್ಲಿ 6, ಮದವೂರುಮೇಳದಲ್ಲಿ 2, ಹಾಗೂ ಪ್ರಸ್ತುತ ಸೇವೆ ಸಲ್ಲಿಸುತ್ತಿರುವ ಮಂದಾರ್ತಿ ಮೇಳದಲ್ಲಿ 20 ವರುಷಗಳ ಕಲಾತಿರುಗಾಟವನ್ನು ಯಶಸ್ವಿಯಾಗಿ ಪೂರೈಸಿದ್ದು ಶ್ರೀಯುತರ ಒಟ್ಟು ರಂಗಕೃಷಿ 28ವರ್ಷ. +ಹಾಸ್ಯಭೂಮಿಕೆಗೊಪ್ಪುವ ವಿಭಿನ್ನ ನೃತ್ಯ,ಅಭಿನಯ, ಪಾತ್ರೋಚಿತ ರಂಗನಡೆ, ಅಪಾರ ಪ್ರತ್ಯುತ್ಪನ್ನಮತಿತ್ವದ ರಂಜಿಸುವ ಪೂವಪ್ಪನವರು ಬಾಹುಕ, ಕಂದರ, ವಿದ್ಯುಜ್ಜಿಹ್ವ, ಚಂದಗೋಪ,ಕಾಶೀಮಾಣಿ, ಬ್ರಾಹ್ಮಣ, ಮೊದಲಾದ ಪೌರಾಣಿಕ ಭೂಮಿಕೆಗಳಿಗೆ ಸ್ವಯಂ ಪ್ರತಿಭೆಯ ಮೂಲಕ ವಿಶಿಷ್ಟ ಆಯಾಮ ನೀಡಿದ್ದಾರೆ. +ಪತ್ನಿ ರಾಧಿಕಾ. +ರಂಜಿತಾ, ರಶ್ಮಿತಾ, ಪೂಜಿತಾ ಮಕ್ಕಳು. +ಪೌರಾಣಿಕ ಹಾಸ್ಯ ಪಾತ್ರಗಳನ್ನು ಸಾಂಪ್ರದಾಯಿಕ ಸ್ವರೂಪದಲ್ಲಿಟ್ಟು ಹೊಸತನದ ನವಿರಾದ ಕಳೆಯಲ್ಲಿ ಮೆರೆಯಿಸುವ ಕಲಾವಿದ ಕಡಬ ಪೂವಪ್ಪನವರನ್ನು ಹಲವು ಸಂಘ-ಸಂಸ್ಥೆಗಳು ಗುರುತಿಸಿ ಸಂಮಾನಿಸಿವೆ. +ಸಾಂಪ್ರದಾಯಿಕ ಹಾಗೂ ಸೃಜನಾತ್ಮಕ ನುಡಿಸಾಣಿಕೆಯಲ್ಲಿ ಸುಸಮರ್ಥ ಚಂಡೆ-ಮದ್ದಳೆಗಾರರಾಗಿ ರೂಪುಗೊಂಡ ಸಂಪನ್ನ ಪ್ರತಿಭೆ ಹೆರಂಜಾಲು ಬಾಲಕೃಷ್ಣ ಗಾಣಿಗ. +ಸುಪ್ರಸಿದ್ಧ ಕಲಾವಿದ ಹೆರಂಜಾಲು ವೆಂಕಟರಮಣ ಗಾಣಿಗ ಹಾಗೂ ಶ್ರೀಮತಿ ಗಣಪು ಗಾಣಿಗ ಅವರ ಸುಪುತ್ರರಾಗಿ 17-2-1972ರಲ್ಲಿ ಕುಂದಾಪುರ ತಾಲೂಕಿನ ನಾಗೂರು ಎಂಬಲ್ಲಿ ಜನಿಸಿದ ಬಾಲಕೃಷ್ಣ ಅವರು 8ನೇ ಇಯತ್ತೆಯವರೆಗೆ ಅಕ್ಷರಾಭ್ಯಾಸ ಮಾಡಿದವರು. +ತಂದೆ ವೆಂಕಟರಮಣ ಗಾಣಿಗ ಹಾಗೂ ಅಣ್ಣ ಹೆರಂಜಾಲು ಗೋಪಲ ಗಾಣಿಗ ಅವರಲ್ಲಿ ಕಲಾಶಿಕ್ಷಣವನ್ನು ಪಡೆದ ಅವರು 18ನೇ ವಯಸ್ಸಿನಲ್ಲೇ ಯಕ್ಷಲೋಕ ಪ್ರವೇಶಿಸಿದರು. +ಪ್ರಬುದ್ಧ ಮದ್ದಳೆಗಾರರಾಗಿಯೇ ಕಲಾ ವಲಯಹುದಲ್ಲಿ ಜನಪ್ರಿಯರಾದ ಬಾಲಕೃಷ್ಣ ಗಾಣಿಗರು, ಮಂದಾರ್ತಿ 2, ಸೌಕೂರು 1, ಹಾಲಾಡಿ 1, ಕಮಲಶಿಲೆ 1, ಬಗ್ಡಾಡಿ 1 ಮೇಳಗಳಲ್ಲಿ ಕಲಾವ್ಯವಸಾಯ ನಡೆಸಿ 13 ವರ್ಷಗಳಿಂದ ಮಾರಣಕಟ್ಟೆ ಮೇಳದ ಪ್ರಧಾನ ಮದ್ದಳೆಗಾರರಾಗಿ ರಂಗಸೇವೆಯನ್ನು ಮುಂದುವರಿಸುತ್ತಿದ್ದಾರೆ. +ಬಾಲ್ಯದಿಂದಲೇ ಸಿಕ್ಕ ಪಾರಂಪರಿಕ ರಂಗಶಿಕ್ಷಣದ ನೆರಳಿನಲ್ಲಿ ಸ್ವಯಂ ಪ್ರತಿಭೆಯ ಚಾತುರ್ಯವನ್ನು ವಾದನ ಪದ್ದತಿಯಲ್ಲಿ ಅವರು ಕಾಣಿಸಿದ್ದಾರೆ. +ಸುಮಧುರನಾದದ ಗುಂಗುಗಾನವನ್ನು ರಸಿಕ ಶ್ರಾವಕರಿಗೆ ಕೇಳಿಸಿದ್ದಾರೆ. +ಕಲಾವಿದರ ಚೇತನಪೂರ್ಣ ಕಲಾಭಿವ್ಯಕ್ತಿಗೆ ಅವರ ವಂದ್ದ್ಧಳೆ ವಾದನ ಸುಯೋಗ ಸಾಂಗತ್ಯವಾಗುತ್ತದೆ. +ಭಾಗವತರ ರಸರಂಜಿತ ಭಾಗವತಿಕೆಗೆ ಮದ್ದಳೆಯ ನುಡಿಗಾರಿಕೆ ಸಶಕ್ತ ಸಾರಥ್ಯವಾಗುತ್ತದೆ. +ಉತ್ತಮ ರಂಗತಂತ್ರ, ಪುರಾಣ ಪ್ರಜ್ಞೆಯನ್ನು ಹೊಂದಿದ ಮದ್ದಳೆ-ಚಂಡೆವಾದಕರಾದ ಇವರಿಗೆ ಭಾಗವತಿಕೆಯ ಪರಿಣಿತಿಯೂ ಇದೆ. + ಪತ್ನಿ ಪ್ರೇಮಾ. + ಸೌಜನ್ಯ ಹಾಗೂ ಅಕ್ಷಯ ಮಕ್ಕಳು. +ಬಾಲಕೃಷ್ಣ ಗಾಣಿಗರು ಸಮೃದ್ಧ ರಂಗಪ್ರತಿಭೆಗೆ ಹಲವು ಸಂಘ-ಸಂಸ್ಥೆಗಳು ಗೌರವ ಸಂಮಾನ ನೀಡಿವೆ. +ಸುಮಧುರ ಶಾರೀರ, ಮನೋಹರ ಶರೀರ,ಗರಿಷ್ಠ ರಂಗ ವ್ಯವಹಾರ, ಉತ್ಕೃಷ್ಟ ವಚೋಚವತ್ಕಾರ. +ಸುಪುಷ್ಟ ನೃತ್ಯಾಭಿನಯ ಸಾಕಾರ ಪ್ರಸಿದ್ಧ ಸ್ತ್ರೀಪಾತ್ರಧಾರಿ, ಭಾಸ್ಕರ ಜೋಶಿ ಕರಾವಳಿ ಕಲೆಯ ಕಮನೀಯ ಪ್ರತಿಭೆ. +ಉತ್ತರಕನ್ನಡ ಜಿಲ್ಲೆಯ ಶಿರಳಗಿ ಎಂಬಲ್ಲಿ 30-4-1956ರಲ್ಲಿ ಜನಿಸಿದ ಭಾಸ್ಕರ ಜೋಶಿಯವರು ನಾರಾಯಣ ಸುಬ್ರಾಯಾ ಜೋಶಿ-ಗಂಗಾ ನಾರಾಯಣ ಜೋಶಿಯವರ ಸುಪುತ್ರ. +ಎಸ್‌.ಎಸ್‌.ಎಲ್‌.ಸಿ. ಪೂರೈಸಿ ತನ್ನ 17ರ ಹರಯದಲ್ಲಿ ಕಲಾಲೋಕಕ್ಕೆ ಕಾಲಿರಿಸಿದ ಭಾಸ್ಕರಜೋಶಿಯವರಿಗೆ ಶಾಲಾದಿನಗಳಲ್ಲಿ ನಾಟಕಾಭಿರುಚಿಯಿತ್ತು. +ಅಂತಹ ಬಣ್ಣದ ಗೀಳು ಮುಂದೆ ಬಣ್ಣದ ಲೋಕಕ್ಕೆ ಕಾರಣವಾಯಿತು. +ಕೊಳಗಿ ಅನಂತ ಹೆಗಡೆ, ಕೆರೆಮನೆ ಗಜಾನನ ಹೆಗಡೆಯವರ ಒತ್ತಾಯ, ಪ್ರೋತ್ಸಾಹದಿಂದ ಯಕ್ಷರಂಗಮಂಚದಲ್ಲಿ ,ಹೆಜ್ಜೆ ಹಾಕಿದ ಜೋಶಿ ಅವರಿಗೆ ಹೊಸ್ತೋಟ ಮಂಜುನಾಥ ಭಾಗವತ, ಕೆರೆಮನೆ ಗಜಾನನ ಹೆಗಡೆ ಹಾಗೂ ಡಾ.ಕೋಟ ಶಿವರಾಮ ಕಾರಂತರು ಕಲಾ ಗುರುವರ್ಯರು. +ಇಡಗುಂಜಿ, ಸಾಲಿಗ್ರಾಮ, ಅಮೃತೇಶ್ವರಿ,ಪೆರ್ಡೂರು, ಶಿರಸಿ-ಪಂಚಲಿಂಗ, ಶಿರಸಿ-ಮಾರಿಕಾಂಬಾ ಮೇಳಗಳಲ್ಲಿ ಸುಮಾರು ಮೂವತ್ತೈದು ವರುಷಗಳ ಕಾಲ ಕಲಾ ತಿರುಗಾಟ ಪೂರೈಸಿದ ಜೋಶಿಯವರು ಡಾ.ಕಾರಂತರ "ಯಕ್ಷರಂಗ' ತಂಡದ ಕಲಾವಿದನಾಗಿಯೂ ಎಂಟು ವರ್ಷ ಕಲಾಸೇವೆ ನಡೆಸಿದವರು. +ಭುವನಗಿರಿಯ ಭುವನೇಶ್ವರಿ ಯಕ್ಷಗಾನ ಮೇಳ ಸಂಘಟಿಸಿ ಮೂರು ವರುಷಗಳ ಕಾಲ ಸಮಯಮಿತಿ ಯಕ್ಷಗಾನ ಕಾರ್ಯಕ್ರಮ ನೀಡಿದ ಅನುಭವವೂ ಶ್ರೀಯುತರಿಗಿದೆ. +ಬಾವನಾತ್ಮಕ ಪಾತ್ರಪೋಷಣೆಯಲ್ಲಿ ಜೋಶಿಯವರು ಶಿಖರ ಸ್ಥಾನದಲ್ಲಿ ನಿಲ್ಲುವವರು. +“ಗರತಿ' ಭೂಮಿಕೆಗಳಂತೂ ಅವರಿಗೆ ಸಮುಚಿತವಾಗುತ್ತದೆ. +ದಾಕ್ಷಾಯಿಣಿ, ಅಂಬೆ, ಪ್ರಭಾವತಿ,ದೇವಯಾನಿ, ಕಯಾದು, ಚಂದ್ರಮತಿ, ಶಾರದೆ ಪಾತ್ರಗಳನ್ನು ಯಶಸ್ವಿಯಾಗಿ ನಿರ್ವಹಿಸಿ ಕಲಾರಸಿಕರ ಅಭಿಮಾನಕ್ಕೆ ಪಾತ್ರರಾದವರು. +ಬಾಳಸಂಗಾತಿ ಮಾಲಿನಿ. +ಸ್ಫೂರ್ತಿ, ರಘುರಾಮ ಈರ್ವರು ಮಕ್ಕಳು. +ಶ್ರೇಷ್ಠ ಸ್ತ್ರೀವೇಷಧಾರಿ ಭಾಸ್ಕರಜೋಶಿ ಅವರಿಗೆ ಉತ್ತರ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್‌ವತಿಯಿಂದ ಥಾಣೆ, ಮುಂಬೈ, ಬೆಂಗಳೂರು ಸೇರಿದಂತೆ ಹಲವು ಕಡೆಗಳಲ್ಲಿ ಗೌರವ ಸಂಮಾನ ದೊರಕಿರುತ್ತದೆ. +ಯಕ್ಷಗಾನ ಪೌರಾಣಿಕ ಪ್ರಸಂಗಗಳ ಖಳಭೂಮಿಕೆಗಳನ್ನು ಸುಪುಷ್ಟವಾಗಿ ಪೋಷಿಸುವ ಕಲಾವಂತಿಕೆಯನ್ನು ಹೊಂದಿದ ಪ್ರಬುದ್ಧ ವೇಷಧಾರಿ ಭಾಸ್ಕರ ದೇವಾಡಿಗ. +ಕುಂದಾಪುರ ತಾಲೂಕಿನ ಕುಪ್ಪಾರು ಜಡ್ಡು ಎಂಬಲ್ಲಿ ನಾರಾಯಣ ದೇವಾಡಿಗ ಹಾಗೂ ಪದ್ದು ದಂಪತಿಯ ಪುತ್ರರಾದ ಭಾಸ್ಕರ ದೇವಾಡಿಗ ಅವರು ಇದೀಗ 37ನೇ ವರ್ಷದಲ್ಲಿದ್ದಾರೆ. +ಮೂರನೇ ತರಗತಿಗೆ ಶರಣುಹೊಡೆದು, 12ನೇ ವಯಸ್ಸಿನಲ್ಲೇ ಯಕ್ಷಗಾನ ರಂಗ ಪ್ರವೇಶಿಸಿದ ಶ್ರೀಯುತರು ಜಯಂತ ನಾಯ್ಕರ ಶಿಷ್ಯನಾಗಿ ಸಮರ್ಪಕ ನೃತ್ಯ, ಅಭಿನಯ ರಂಗನಡೆಯನ್ನು ಕಲಿತುಕೊಂಡವರು. +ರಂಜದಕಟ್ಟೆ 2, ಹಾಲಾಡಿ 4, ಮಡಾಮಕ್ಕಿ 3,ಗೋಳಿಗರಡಿ 7, ಮಾರಣಕಟ್ಟೆ 4, ಕಮಲಶಿಲೆ 4,ಹೀಗೆ 24 ವರ್ಷಗಳ ಯಕ್ಷಗಾನದ ಕಲಾ ದುಡಿಮೆಯಲ್ಲಿ ಭಾಸ್ಕರದೇವಾಡಿಗ ಯೋಗ್ಯ ಹೆಸರುಗಳಿಸಿದ್ದಾರೆ. +ಭಾಸ್ಕರ ದೇವಾಡಿಗ ಅವರ ಸಮೃದ್ಧ ವಾಕ್‌ಚಮತ್ಕಾರ, ಹುರುಪುಗೂಡಿದ ನಾಟ್ಯಾಭಿನಯ,ಗಮನೀಯವೆನಿಸಬಹುದಾದ ಪ್ರಸಂಗ ಮಾಹಿತಿ,ಪೌರಾಣಿಕ ಪಾತ್ರಗಳಿಗೆ ಸಮುಚಿತ ನ್ಯಾಯ ಕಲ್ಪಿಸಿಕೊಟ್ಟಿವೆ. +ಕಥಾನಕಗಳ ಎಲ್ಲಾ ಬಗೆಯ ಪಾತ್ರಗಳನ್ನು ನಿರ್ವಹಿಸುವ ಕಲಾಯೋಗ್ಯತೆ ಹೊಂದಿದ ದೇವಾಡಿಗರು ಖಳಭೂಮಿಕೆಗಳಿಗೇ ಹೆಚ್ಚು ಆಪ್ತವಾಗುವವರು. +ಸಾಂದರ್ಭಿಕವಾಗಿ ಅವರು ಹಾಸ್ಯಪಾತ್ರಗಳನ್ನು ರಂಜನೀಯಾವಾಗಿ ಮಾಡಿತೋರಿಸಬಲ್ಲರು. +ಶ್ರೀಯುತರು ಸಾಲ್ವ, ಕಂಸ, ವೃಷಕೇತು, ಶಲ್ಯ,ವಿಭಿಷಣ, ವೀರಮಣಿ, ದಮನ, ದುರ್ಜಯ ಮೊದಲಾದ ಪಾತ್ರಗಳು ಕಲಾರಸಿಕರ ಮನ ಮೆಚ್ಚಿಸಿವೆ. +ಪ್ರಸ್ತುತ ಭಾಸ್ಕರ ದೇವಾಡಿಗರು ಕಮಲಶಿಲೆ ಮೇಳದ ಕಲಾವಿದರಾಗಿ ದುಡಿಯುತ್ತಿದ್ದಾರೆ. +ಪತ್ನಿ ಯಶೋಧಾ. + ರಕ್ಷಕ, ಕೌಶಿಕ, ಆಶಿಕಾ ಮಕ್ಕಳು. +ಪ್ರತಿಭಾನ್ವಿತ ಕಲಾವಿದ ಭಾಸ್ಕರ ದೇವಾಡಿಗರು ಸ್ಥಳೀಯ ಸಂಘ-ಸಂಸ್ಥೆಗಳ ಗೌರವ ಸಂಮಾನ ಪಡೆದಿರುತ್ತಾರೆ. +ಪೌರಾಣಿಕ ಕಲಾ ಜಗತ್ತಿನ ಯಾವುದೇ ನಡೆಯ ಪುರುಷ ರಾಜ, ಮುಂಡಾಸು ವೇಷಗಳನ್ನು ತನ್ನದೇ ಶೈಲಿಯಲ್ಲಿ ನಿರೂಪಿಸುವ ಕಲಾವಿದ ಎಚ್‌.ಬಿ.ಭಾಸ್ಕರ ತುಂಬ್ರಿ. +ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ತುಂಬ್ರಿ-ಹೆಸಿಗೆ ಎಂಬಲ್ಲಿ 13-10-1965ರಲ್ಲಿ ಜನಿಸಿದ ಭಾಸ್ಕರ ಅವರು ಬಸವ ನಾಯ್ಕ ಮತ್ತು ಮಂಜಮ್ಮ ದಂಪತಿಯ ಸುಪುತ್ರ. +7ನೇ ತರಗತಿಯವರೆಗಿನ ವಿದ್ಯಾಭ್ಯಾಸ,ತರುವಾಯ ತನ್ನ ಅಣ್ಣಂದಿರ ಸಹಕಾರ, ಸ್ವಯಂ ಕಲಾಸಕ್ತಿಯಿ೦ದ 18ನೇ ವಯಸ್ಸಿನಲ್ಲೇ ಯಕ್ಷಗಾನ ಪ್ರಪಂಚವನ್ನು ಪ್ರವೇಶ ಮಾಡಿದ ತುಂಬ್ರಿ ಮತ್ತೆ ಹಿಂದಿರುಗಿ ಕಾಣಲಿಲ್ಲ. +ಬಾವ ಪೂರ್ಣ ರಾಜವೇಷಗಳನ್ನ್ನು, ದೀರೋದ್ಧತ ಖಳಭೂಮಿಕೆಗಳನ್ನೂ ಸಮರ್ಥವಾಗಿ ನಿರ್ವಹಿಸುವ ಭಾಸ್ಕರ ತುಂಬ್ರಿ ಉತ್ತಮ ವಾಕ್ವಟುತ್ವವನ್ನು ಹೊಂದಿದವರು. +ಪಾತ್ರೋಚಿತ ನೃತ್ಯಾಭಿನಯ, ವೇಷ ವೈಖರಿಯಲ್ಲೂ ಕಲಾವಂತಿಕೆ ಕಾಣಿಸುವವರು. +ಸೌಕೂರು 1, ಕಮಲಶಿಲೆ 1, ಬಚ್ಚಗಾರು 3,ಕುಮಟಾ 2, ಶಿರಸಿ 3, ಪೆರ್ಡೂರು 15 ಹೀಗೆ ವೃತ್ತಿರಂಗದಲ್ಲಿ ಸಾರ್ಥಕ ರಜತ ಸಂಭ್ರಮ ಕಂಡಿದ್ದಾರೆ. +ಪ್ರಸ್ತುತ ತುಂಬ್ರಿ ಅವರು ಪೆರ್ಡೂರು ಮೇಳದ ಕಲಾವಿದರಾಗಿ ದುಡಿಯುತ್ತಿದ್ದಾರೆ. +ಕೌರವ, ಕರ್ಣ, ಅರ್ಜುನ, ಹನುಮಂತ, ಶಲ್ಯವೀರಮಣಿ, ಜಯದ್ರಥ ಮೊದಲಾದ ಭೂಮಿಕೆಗಳು ಭಾಸ್ಕರ ತುಂಬ್ರಿ ಅವರಿಗೆ ಹೆಸರು ನೀಡಿದ ಪೌರಾಣಿಕ ಪಾತ್ರಗಳು. +ಪತ್ನಿ ಜಯಶ್ರೀ. +ಶ್ರುತಿ, ಶಶಾಂಕ ಮಕ್ಕಳು. +ಶ್ರೀಯುತರನ್ನು ಹಲವಾರು ಸಂಘ-ಸಂಸ್ಥೆಗಳು ಗುರುತಿಸಿ ಗೌರವಿಸಿವೆ. +ಬಡಗುತಿಟ್ಟು ಯಕ್ಷಗಾನದ ಸಾಂಪ್ರದಾಯಿಕ ನಡೆಯನ್ನು ದೃಢವಾಗಿ ಮೈಗೂಡಿಸಿಕೊಂಡು,ಪೌರಾಣಿಕ ಪಾತ್ರ ಪ್ರತಿಮೆಗಳನ್ನು ರಂಗಸ್ಥಳದಲ್ಲಿ ಸಚೇತನವಾಗಿಡುವ ಪ್ರೌಢ ಪ್ರತಿಭೆಯ ಕಲಾವಿದ ನರಾಡಿ ಭೋಜರಾಜ ಶೆಟ್ಟಿ. +ಕುಂದಾಪುರ ತಾಲೂಕಿನ ಅಚ್ಚಾಡಿ ಎಂಬಲ್ಲಿ 1957ನೇ ಇಸವಿಯ ಆಗಸ್ಟ್‌ ಇಪ್ಪತ್ತೊಂಬತ್ತರಂದು ಜನಿಸಿದ ಭೋಜರಾಜ ಶೆಟ್ಟರು ಸುಬ್ಬಣ್ಣ ಶೆಟ್ಟಿ-ನರಸಮ್ಮ ದಂಪತಿಯ ಸುಪುತ್ರ. +5ನೇಇಯತ್ತೆ ಯವರೆಗೆ ಅಕ್ಷರಾಭ್ಯಾಸ ಮಾಡಿ 13ನೇ ವಯಸ್ಸಿನಲ್ಲೇ ಯಕ್ಷ ಕಲಾಲೋಕ ಪ್ರವೇಶಿಸಿದ ಭೋಜರಾಜಶೆಟ್ಟರಿಗೆ ಪರಿಸರದ ಯಕ್ಷಗಾನ ಹೂವಿನಕೋಲು ತಿರುಗಾಟದಲ್ಲಿ ಬಾಲಕಲಾವಿದನಾಗಿ ಅರ್ಥ ಹೇಳಿದ ಅನುಭವವೇ ಕಲಾಸಕ್ತಿಗೆ ಪ್ರೇರಣೆಯಾಯಿತು. +ಕೀರ್ತೀಶೇಷರಾದ ಮೇರು ಕಲಾವಿದ ಶಿರಿಯಾರ ಮಂಜುನಾಯ್ಕ, ಕೋಟ ವೈಕುಂಠ ಅವರ ಗುರುತನದಲ್ಲಿ ಯಕ್ಷವಿದ್ಯೆಯನ್ನು ಗಳಿಸಿದ ಇವರಿಗೆ ಹಳ್ಳಾಡಿ ಮಂಜಯ್ಯ ಶೆಟ್ಟರು ಸುಯೋಗ್ಯ ಕಲಾಮಾರ್ಗದರ್ಶನ ನೀಡಿದರು. +ಅಮೃತೇಶ್ವರಿ ಮೇಳದಲ್ಲಿ ಗೆಜ್ಜೆಕಟ್ಟಿ ಹೆಜ್ಜೆ ಹಾಕಿದ ಶೆಟ್ಟರು ಅಮೃತೇಶ್ವರಿ, ಸಾಲಿಗ್ರಾಮ, ಪೆರ್ಡೂರು,ಶಿರಸಿ, ಹಾಲಾಡಿ, ಸೌಕೂರು, ಕಮಲಶಿಲೆ,ಮಾರಣಕಟ್ಟೆ, ಮಂದಾರ್ತಿ, ಮೇಳಗಳಲ್ಲಿ ಕಲಾಸೇವೆ ಸಲ್ಲಿಸಿ ಯಕ್ಷಗಾನ ರಂಗದಲ್ಲಿ ಸುದೀರ್ಫ ನಾಲ್ಕು ದಶಕಗಳನ್ನು ಯಶಸ್ವಿಯಾಗಿ ಪೂರೈಸಿದ್ದಾರೆ. +1994ರಲ್ಲಿ ಶ್ರೀ ಅಮೃತೇಶ್ವರಿ ಮೇಳದ ಸಂಚಾಲಕತ್ವವನ್ನು ಕೈಗೊಂಡ ಶೆಟ್ಟರು, ಪುರುಷವೇಷ ಹಾಗೂ ಎರಡನೇ ವೇಷವನ್ನು ಸಮರ್ಥವಾಗಿ ನಿರ್ವಹಿಸುವವರು. +ತನ್ನ 25 ನೇ ವರ್ಷದಲ್ಲಿಯೇ ಎರಡನೇ ವೇಷಧಾರಿಯಾದ ಶೆಟ್ಟರು ಸದೃಢ ಆಳಂಗ,ಶ್ರುತಿನಿಷ್ಠ ಗಂಭೀರ-ವಚೋವೈಖರಿ, ಅಪಾರಪ್ರತ್ಯುತ್ತನ್ನಮತಿತ್ವದಿಂದ ಪಾತ್ರಗಳಿಗೆ ಪಾರಂಪರಿಕ ವರ್ಚಸ್ಸು ನೀಡುವರು. +ತೂಕದ ಹೆಜ್ಜೆಗಾರಿಕೆ,ಪಾತ್ರೋಚಿತ ಹಾವಭಾವಗಳಿಂದ ಕಲಾರಸಿಕರ ಮನಸೆಳೆವ ಶೆಟ್ಟರ ಭೀಷ್ಮ ಕರ್ಣ, ಅರ್ಜುನ,ಋತುಪರ್ಣ, ದಶರಥ, ವಾಲಿ, ರಾವಣ,ಮಾರ್ತಾಂಡ ತೇಜ, ಮೊದಲಾದ ಪಾತ್ರಗಳು ಅಭಿಮಾನಿಗಳ ಹಾರ್ದಿಕ ಪ್ರಶಂಸೆಗೆ ಪಾತ್ರವಾಗಿವೆ. +ಪಶ್ನಿ ಚಂದ್ರಮತಿ. +ರೇಖಾ, ವಿವೇಕ, ರೇಶ್ಮಾ ಮಕ್ಕಳು. +ಶ್ರೀಯುತರು ಮಂದಾರ್ತಿ ಮೇಳದ ಪ್ರಧಾನಕಲಾವಿದರಾಗಿ ಕಲಾಸೇವೆ ನಡೆಸುತ್ತಿದ್ದಾರೆ. +ಅನೇಕ ಕಡೆಗಳಲ್ಲಿ ಅಭಿಮಾನಿಗಳಿಂದ ಸಮ್ಮಾನ ಪಡೆದ ನರಾಡಿಯವರಿಗೆ ಮಂಗಳೂರು ಜಾಗತಿಕ ಬಂಟ ಪ್ರತಿಷ್ಠಾನದ ಪ್ರಶಸ್ತಿಯೂ ದೊರಕಿದೆ. +ಹಾರಾಡಿ ರಾಮಗಾಣಿಗ ಪ್ರಶಸ್ತಿ ಪುರಸ್ಕೃತರಾಗಿದ್ದಾರೆ. +ಅಪ್ರತಿಮ ಕಲಾಸಿದ್ಧಿ, ಸಾಧನೆಯಿಂದ ಸುಪ್ರಸಿದ್ಧ ಯಕ್ಷನಟನಾಗಿ ಗುರುತಿಸಿ-ಕೂಂಡವರು ಮಹಾದೇವ ಈಶ್ವರ ಹೆಗಡೆ. +ಹೊನ್ನಾವರ ತಾಲೂಕಿನ ಹಡಿನ ಬಾಳ ಎಂಬಲ್ಲಿ 6-1-1950ರಲ್ಲಿ ಜನಿಸಿದ ಮಹಾದೇವ ಹೆಗಡೆಯವರ ಈಶ್ವರ ಹೆಗಡೆ - ಗೋಪಿ ದಂಪತಿಯ ಸುಪುತ್ರ. +ಹತ್ತನೆ ತರಗತಿಯವರೆಗೆ ಪ್ರೌಢ ಶಿಕ್ಷಣ ಪಡೆದ ಶ್ರೀಯುತರು 18ನೇ ವಯಸ್ಸಿನಲ್ಲಿ ಬಣ್ಣದ ಲೋಕ ಪ್ರವೇಶಿಸಿದ ಗಣ್ಯ ಕಲಾವಿದ. +ಮಹಾದೇವ ಹೆಗಡಯವರ ಮಾತೃ ಕುಟುಂಬ ಯಕ್ಷಕಲಾವಂತಿಕೆಯಿಂದ ಕೂಡಿತ್ತು. +ಇವರ ತಾಯಿಯ ತಂದೆ ಯಕ್ಷಗಾನ ಕಲಾವಿದರಾಗಿದ್ದರು. +ಹಾಗಾಗಿ ಅಜ್ಜನ ಯಕ್ಷ ವರ್ಚಸ್ಸು ಮೊಮ್ಮಗನ ಮೇಲೆ ಗಾಢ ಪ್ರಭಾವ ಬೀರಿತು. +ಮಹಾದೇವ ಹೆಗಡೆ-ಯವರ ಅಣ್ಣ ಹಿರಿಯ ಭಾಗವತ ಕಪ್ಪೆಕೆರೆ ಸುಬ್ರಾಯ ಹೆಗಡೆಯವರು. +ಅವರೇ ಇವರಿಗೆ ಗುರುಗಳು ಹಾಗೂ ರಂಗಜೀವನ ಪ್ರೇರಣಾಶಕ್ತಿ ದಿ. +ಕೆರೆಮನೆ ಮಹಾಬಲ ಹೆಗಡೆಯವರ ಗರಡಿಯಲ್ಲಿ ಪಳಗಿದ ಮಹಾ-ದೇವ ಹೆಗಡೆಯವರು ಗುಂಡಬಾಳ, ಕಮಲಶಿಲೆ, ಅಮೃತೇಶ್ವರಿ, ಇಡಗುಂಜಿ,ಶಿರಸಿ, ಪಂಚಲಿಂಗ ಹಾಗೂ ಮಂದಾರ್ತಿ ಮೇಳಗಳಲ್ಲಿ ಕಲಾಸೇವೆ ನಡೆಸಿ ಸುದೀರ್ಫ 39 ವರ್ಷಗಳನ್ನು ಬಣ್ಣದ ಬದುಕಿನಲ್ಲಿ ಕಳೆದಿದ್ದಾರೆ. +ಶಿರಸಿ ಮೇಳವನ್ನು 2 ವರ್ಷ ವೇಷಧಾರಿಯಾಗಿಯೂ ಸಂಚಾಲಕರಾಗಿಯೂ ನಡೆಸಿದ್ದಾರೆ. +ಪ್ರಸ್ತುತ ಹೆಗಡೆ ಅವರು ವೃತ್ತಿ ಮೇಳಗಳಿಂದ ನಿವೃತ್ತರಾಗಿ ಆಸುಪಾಸಿನ ಯಕ್ಷಗಾನ ಸಂಘ ಸಂಸ್ಥೆಗಳಲ್ಲಿ ಅಪರೂಪಕ್ಕೆ ವೇಷ ಹಾಕುತ್ತಾರೆ. +ಪ್ರಖರ ಪ್ರತ್ಯುತ್ತನ್ನ ಮತಿತ್ವದಿಂದ ರಾರಾಜಿಸುವ ಪ್ರಗಲ್ಭ ಪಾಂಡಿತ್ಯದ ಅಪೂರ್ವ ಅರ್ಥವಿನ್ಯಾಸದಿಂದ ರಂಜಿಸುವ ಹೆಗಡೆಯವರದು ಪಟುತೆ ಕಾಣುವ ಪಟ್ಟು. +ಪಾತ್ರ ಪಂಚಾಂಗ ಗಟ್ಟಿಮುಟ್ಟು,ರಂಗನೈರ್ಮಲ್ಯ ಅಚ್ಚುಕಟ್ಟು, ಪುರಾಣ ಪಾತ್ರಗಳಲ್ಲೂ ಹೊಸ ಹುಟ್ಟು. +ಕಲಾರಸಿಕರ ಮನ ಮೆಚ್ಚಿಸಿದೆ. +ನಾಯಕ, ಪ್ರತಿನಾಯಕ, ಪಾತ್ರಗಳನ್ನು ಯಶಸ್ವಿಯಾಗಿ ನಿರ್ವಹಿಸುವ ಹೆಗಡೆಯವರ ಭೀಮ,ವಲಲ, ಸುಗ್ರೀವ, ವಾಲಿ, ಶ್ರೀರಾಮ, ಶತ್ರುಘ್ನ,ಮಹೋಗ್ರ ಜಮದಗ್ನಿ, ರಾವಣ, ಮಾಗಧ, ಹರಿಶ್ಚಂದ್ರ,ಭೀಷ್ಮ, ವಿಶ್ವಾಮಿತ್ರ ಪಾತ್ರಗಳು ಜನಪ್ರಿಯ. +ಶ್ರೀಯುತರು ಹೆಣ್ಣು ಬಣ್ಣದ ವೇಷಗಳನ್ನು, ಸ್ರ್ತೀ ವೇಷಗಳನ್ನೂ ಮಾಡಿದ್ದಿದೆ. +ಪ್ರಬುದ್ಧ ವೇಷಧಾರಿ ಹೆಗಡೆಯವರು ಗುರುಗಳಾಗಿ ಅನೇಕ ಕಲಾವಿದರನ್ನು ರೂಪಿಸಿ ರಂಗಭೂಮಿಗೆ ನೀಡಿದ್ದಾರೆ. +ಶ್ರೀಮತಿ ಶಾರದೆ ಪತ್ನಿ. +ಗಣಪತಿ, ನಾಗೇಂದ್ರ,ರವೀಂದ್ರ ನರೇಂದ್ರ ಮಕ್ಕಳು. +ಇವರ ನಾಲ್ಕು ಮಂದಿ ಗಂಡುಮಕ್ಕಳು. +ಕಪ್ಪೆಕೆರೆ ಮಹಾದೇವ ಹೆಗಡೆ-ಯವರ ಮಹೋನ್ನತ ಕಲಾಸಿರಿಗೆ ಹಲವು ಸಂಘ-ಸಂಸ್ಥೆಗಳ ಸಂಮಾನದ ಗರಿಯೂ ದೊರಕಿದೆ. +ರಾಜವೇಷ, ಪುರುಷವೇಷ, ಹಾಗೂ ಮುಂಡಾಸುವೇಷಗಳಲ್ಲಿ ವಿಶೇಷ ಪ್ರತಿಭೆಯಿಂದ ಗುರುತಿಸಿಕೊಳ್ಳುವ ಹಿರಿಯ ಕಲಾವಿದ ಮಹಾದೇವ ನಾಯ್ಕ ಅರಳಗೋಡು. +ಸಾಗರ ತಾಲೂಕಿನ ನೆಲ್ಲಿಮಕ್ಕಿ - ಅರಳಗೋಡು ಎಂಬ ಕುಗ್ರಾಮದಲ್ಲಿ ಕೃಷ್ಣನಾಯ್ಕ - ತಿಪ್ಪಮ್ಮ ದಂಪತಿಯ ಸುಪುತ್ರರಾಗಿ ಜನಿಸಿದ ಶ್ರೀಯುತರು 61ರ ಹಿರಿತನದಲ್ಲಿರುವ ಶಿಷ್ಯ ಕಲಾವಿದ. +ಕಡುಬಡತನದ ಕುಟುಂಬದ ಮಹಾದೇವ . +ನಾಯ್ಕರು ಶಾಲಾ ಮೆಟ್ಟಿಲನ್ನೇ ತುಳಿಯದವರು. +ಅವರ ಬಾಲ್ಯದ ಆಸಕ್ತಿ ಕ್ಷೇತ್ರವೇ ಯಕ್ಷಗಾನ ರಂಗವಾಗಿತ್ತು. +18ರ ಹರೆಯದಲ್ಲಿ ಯಕ್ಷಗಾನಕ್ಕೆ ಮುಖ ಮಾಡಿದ ಶ್ರೀಯುತರು ಹಿರಿಯ ಪ್ರಸಂಗಕರ್ತ ಗುಂಡು ಸೀತಾರಾಮ ರಾವ್‌ ತಲವಾಟ ಅವರ ಗುರುತನವನ್ನೂ, ಪ್ರೇರಣೆಯನ್ನೂ ಪಡೆದು ಕಲಾಲೋಕದಲ್ಲಿ ನೆಲೆ ಕಂಡರು. +ಶೇಷಗಿರಿ ಸಂಪ ಎಂಬವರೂ ಇವರಿಗೆ ಯಕ್ಷಕಲಾ ವಿದ್ಯಾ ಬೋಧಕರು. +ಸಾಲಿಗ್ರಾಮ 10, ಮೂಲ್ಕಿ 3, ಹಿರಿಯಡಕ 4,ಅಮೃತೇಶ್ವರಿ 8, ಗೋಳಿಗರಡಿ 7, ರಂಜದಕಟ್ಟೆ 2,ಸಿಗಂಧೂರು 1, ಹೀಗೆ ಯಕ್ಷ ವ್ಯವಸಾಯದಲ್ಲಿ 35ವರ್ಷಗಳನ್ನು ಶ್ರೀಯುತರು ಯಶಸ್ವಿಯಾಗಿ ಪೂರೈಸಿ,ಪ್ರಸ್ತುತ ಸಿಗಂಧೂರು ಮೇಳದ ಕಲಾವಿದರಾಗಿ ದುಡಿಯುತ್ತಿದ್ದಾರೆ. +ಯಕ್ಷಗಾನದ ಪೀಠಿಕಾ ರಾಜ ವೇಷಗಳನ್ನು ಸಮರ್ಥವಾಗಿ ಪೋಷಿಸುವ ಕಲಾ ಸಂಪನ್ನತೆ ಇವರದ್ದು. +ಹಾಗೆಯೇ ಭಿನ್ನ ಭಿನ್ನ ನಡೆಯ ಪಾತ್ರಾಭಿವ್ಯಕ್ತಿಯಲ್ಲೂ ಇವರ ರಂಗ ಹಿರಿಮೆ ಮೆಚ್ಚುವಂತಹುದು. +ಉತ್ತಮ ಅರ್ಥಗಾರಿಕೆಯನ್ನು ಬಲ್ಲ ಶ್ರೀಯುತರು ಕೌರವ, ದೇವೇಂದ್ರ ಹನುಮಂತ,ಶನೀಶ್ವರ, ದಕ್ಷ, ಯಮ, ವಿಭೀಷಣ, ಮೊದಲಾದ ಪಾತ್ರಗಳನ್ನು ಸರ್ವಸಮರ್ಥವಾಗಿ ನಿರ್ವಹಿಸಿರುವರು. +ಪತ್ನಿ ಭಾನುಮತಿ, ಗೋಪಾಲ, ಶೋಭಾ, ಗಣೇಶ ಮಕ್ಕಳು. +ಶ್ರೀಯುತರಿಗೆ ಹವ್ಯಾಸೀ ಸಂಘ-ಸಂಸ್ಥೆಗಳ ಸಂಮಾನ ದೊರಕಿದೆ. +ಸಂಪ್ರದಾಯಶೀಲ ಹಿರಿಯ ಪ್ರತಿಭೆ ನಾವುಂದ ಮಹಾಬಲ ಗಾಣಿಗ. +ಕುಂದಾಪುರ ತಾಲೂಕಿನ ನಾವುಂದ ಇವರ ಹುಟ್ಟೂರು. +ವಾಸು ಗಾಣಿಗ-ಕಾವೇರಿ ದಂಪತಿಯ ಸುಪುತ್ರರಾದ ಗಾಣಿಗರ ಜನನ 12-12-1929ರಲ್ಲಿ. +5ನೇ ಇಯತ್ತೆಯವರೆಗೆ ವಿದ್ಯಾಭ್ಯಾಸ ಮಾಡಿ 17ನೇ ವಯಸ್ಸಿನಲ್ಲಿ ಬಣ್ಣದ ಬಾಳುವೆ ಕಂಡ ಮಹಾಬಲ ಗಾಣಿಗರು ದಶಾವತಾರಿ ಗುರು. +ವೀರಭದ್ರ ನಾಯಕರಲ್ಲಿ ಹೆಜ್ಜೆ ಗಾರಿಕೆ,ಮರವಂತೆ ನರಸಿಂಹದಾಸ ಭಾಗವತರಿಂದ ಅರ್ಥಗಾರಿಕೆ ಕಲಿತು, ನಾವುಂದ ದೇವಪ್ಪ ಗಾಣಿಗರ ಪ್ರೇರಣೆಯೊಂದಿಗೆ ಶ್ರೀ ಸೌಕೂರು ಮೇಳದಲ್ಲಿ ಗೆಜ್ಜೆಕಟ್ಟಿ ಹೆಜ್ಜೆ ಹಾಕಿದರು. +ನಾವುಂದ ಮಹಾಬಲ ಗಾಣಿಗರು ಗಂಡುವೇಷದ ಭಿನ್ನ ಭಿನ್ನ ಸ್ಥಾನಗಳಿಗೂ ನ್ಯಾಯ ಕಲ್ಪಿಸಿ ಕೊಟ್ಟವರು. +ಮೊದಮೊದಲು ದೇವೇಂದ್ರ,ಕೌರವ, ಸತ್ರಾಜಿತನಂತಹ ಪೀಠಿಕಾ ರಾಜವೇಷಗಳನ್ನೂ ವೃಷಸೇನ, ಬಬ್ರುವಾಹನ,ಅಭಿಮನ್ಯು ಮೊದಲಾದ ಮೂರನೇ ವೇಷಗಳನ್ನೂ ತದನಂತರ ಎರಡನೇ ವೇಷಗಳನ್ನೂ ಧರಿಸಿ ಖ್ಯಾತಿವೆತ್ತರು. +ವೀರಮಣಿ, ಅರ್ಜುನ, ಪುಷ್ಕಳ, "ಮೀನಾಕ್ಷಿಕಲ್ಯಾಣ'ದ ನಂದಿ, “ಜಾಂಬವತಿ'ಯ ಕೃಷ್ಣ ಅವರಿಗೆ ಅಪಾರ ಜನಪ್ರಿಯತೆ ತಂದು ಕೊಟ್ಟ ಪಾತ್ರಗಳು. +ಹಾಗೆಯೇ ಶ್ರೀಯುತರ ರಾವಣ, ಕೌಂಡ್ಲೀಕ, ಈಶ್ವರ,ಜಾಂಬವ ಪಾತ್ರಗಳೂ ಜನಮೆಚ್ಚುಗೆ ಗಳಿಸಿವೆ. +ಸೌಕೂರು 4, ಮಾರಣಕಟ್ಟೆ 10, ಅಮೃತೇಶ್ವರಿ 3, ಮಂದಾರ್ತಿ 4, ರಾಜರಾಜೇಶ್ವರಿ 1, ಹಾಲಾಡಿ 1, ಸಾಲಿಗ್ರಾಮ 3, ಮಡಾಮಕ್ಕಿ 2, ಹೊನ್ನೇಸರ 2,ಕೊಲ್ಲೂರು 3, ಕಳವಾಡಿ 2, ಕಮಲಶಿಲೆ 4,ಪೆರ್ಡೂರು 2, ಹಿರಿಯಡಕ 1, ಹೀಗೆ 42 ವರ್ಷಗಳ ವೃತ್ತಿ ಮೇಳದ ರಂಗಕೃಷಿ. +ಡಾ.ಶಿವರಾಮ ಕಾರಂತರ"ಯಕ್ಷರಂಗ' ವ್ಯವಸಾಯಿ ಮೇಳದಲ್ಲಿ 8 ವರ್ಷಕಾಲ ದುಡಿಮೆ. +ಒಟ್ಟು ಐದು ದಶಕಗಳ ಸಾರ್ಥಕ ರಂಗಜೀವನ ಗಾಣಿಗರದ್ದು. +ಕಾರಂತರೊಂದಿಗೆ ಹಾಂಕಾಂಗ್‌, ಜಪಾನ್‌,ಲಂಡನ್‌, ಇಟೆಲಿ, ಬಲ್ಗೇರಿಯಾ, ಮುಂತಾದ ವಿದೇಶಗಳಲ್ಲೂ, ಗಾಣಿಗರ ಉನ್ನತ ಪ್ರತಿಭೆ ಹರಡಿದೆ. +ಪತ್ನಿ ತುಂಗಮ್ಮ ಅವರಲ್ಲಿ 6 ಮಂದಿ ಮಕ್ಕಳನ್ನು ಪಡೆದಿದ್ದಾರೆ. +ಶ್ರೀಯುತರಿಗೆ ಸೋಮಕ್ಷತ್ರಿಯ ಗಾಣಿಗ ಸಮಾಜ ಬೆಂಗಳೂರು, ಅಜಪುರ ಕರ್ನಾಟಕ ಸಂಘ ಬ್ರಹ್ಮಾವರ, ಉಡುಪಿ ಯಕ್ಷಗಾನ ಕಲಾರಂಗದ ಗೌರವಸಂಮಾನ, ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ,ಎರಡನೇಯ ಯಕ್ಷಗಾನ ಸಾಹಿತ್ಯ ಸಮ್ಮೇಳನದ ಸಂಮಾನ ದೊರಕಿರುತ್ತದೆ. +ಪುಂಡುವೇಷದ ಗಂಡುಗಲಿಯೆಂಬ ಖ್ಯಾತಿಗೆ ಪಾತ್ರರಾದ ಬೇಳಂಜೆ ಮಹಾಬಲ ನಾಯ್ಕರು ಗಂಡುಕಲೆಯಲ್ಲಿ ತಮ್ಮ ಕಲಾಪ್ರತಿಭೆಯ ಮೂಲಕ ಪಾತ್ರಗಳಿಗೆ ಜೀವ ತುಂಬುವ ಕಲಾವಿದರು. +ಹಿರಿಯ ಮದ್ದಳೆಗಾರ ಬೇಳಂಜೆ ತಿಮ್ಮಪ್ಪ ನಾಯ್ಕ ಹಾಗೂ ವೇದಾವಶಿ ಅವರ ಸುಪುತ್ರನಾಗಿ 13-7-1958ರಲ್ಲಿ ಕಾರ್ಕಳ ತಾಲೂಕಿನ ಬೇಳಂಜೆ ಎಂಬಲ್ಲಿ ಹುಟ್ಟಿದ ಮಹಾಬಲ ಅವರು ಆರಕ್ಕೇ ಓದು ನಿಲ್ಲಿಸಿ,ಹನ್ನೆರಡರಲ್ಲೇ ಬಣ್ಣದ ಬದುಕು ಕಂಡವರು. +ಉಡುಪಿ ಯಕ್ಷಗಾನ ಕೇಂದ್ರದ ವಿದ್ಯಾರ್ಥಿಯಾಗಿ ದಶಾವತಾರಿ ಗುರು ವೀರಭದ್ರನಾಯಕ್‌, ನೀಲಾವರ ರಾಮಕೃಷ್ಣಯ್ಯ ಹಿರಿಯಡಕ ಗೋಪಾಲರಾಯರ ಶಿಷ್ಯನಾಗಿ ಯಕ್ಷಗಾನ ರಂಗಕಲೆಯ ಪರಿಣತಿ ಸಾಧಿಸಿದ ಮಹಾಬಲ ನಾಯ್ಕರಿಗೆ ಅವರ ತೀರ್ಥರೂಪ-ರಿಂದಲೂ ಅಪಾರ ಅನುಭವ ದೊರಕಿತು. +ಹಿರಿಯಡಕ, ಪೆರ್ಡೂರು 1, ಮಾರಣಕಟ್ಟೆ 10,ಅಮೃತೇಶ್ವರಿ 5, ಸೌಕೂರು 2, ಮಡಾಮಕ್ಕಿ 2,ಮಂದಾರ್ತಿ 19, ಹೀಗೆ ನಾಲ್ಕು ದಶಕಗಳ ನಿರಂತರ ಕಲಾವ್ಯವಸಾಯದಲ್ಲಿ ಸಾರ್ಥಕ ಕಂಡ ಮಹಾಬಲ ನಾಯ್ಕರು ಪರಿಸ್ಫುಟ ನೃತ್ಯಾಭಿನಯ ಬದ್ಧತೆ ಖಚಿತಲಯಗಾರಿಕೆಯ ಶುದ್ಧತೆಯಲ್ಲಿ ಪಾತ್ರಗಳನ್ನು ಪೋಷಿಸುವವರು. +ಆಳಂಗ, ತಾರಕ ಸ್ವರತ್ರಾಣ,ಚುರುಕಿನ ಪದಗತಿ, ಈ ಎಲ್ಲಾ ಅಂಶಗಳಿಂದ ಪುಂಡುವೇಷಗಳಲ್ಲಿ ವಿಜೃಂಭಿಸುವ ಮಹಾಬಲನಾಯ್ಕರ ಬಬ್ರುವಾಹನ, ಅಭಿಮನ್ಯು, ವೃಷಸೇನ,ಲವ-ಕುಶ, ಶ್ರೀಕೃಷ್ಣ, ವಿದ್ಯುನ್ಮಾಲಿ ಆಂಜನೇಯ ಮೊದಲಾದ ಪಾತ್ರಗಳು ಕಲಾಪ್ರೇಕ್ಷಕರಿಂದ ಸೈಅನ್ನಿಸಿಕೊಂಡಿವೆ. +ಸಹಧರ್ಮಿಣಿ ಬೇಬಿ. +ದೀಪಾ, ದಿವ್ಯಾ, ದಿವಾಕರ ಮಕ್ಕಳು. +ಶ್ರೀಯುತರು ಪ್ರಸ್ತುತ ಮಂದಾರ್ಶಿ ಮೇಳದ ಕಲಾವಿದರಾಗಿ ದುಡಿಯುತ್ತಿದ್ದಾರೆ. +ಶ್ರೀಯುತರನ್ನು ಕಾರ್ಕಳ ಜೇಸೀ ಸಪ್ತಾಹ, ಹೆಬ್ರಿ ಮರಾಠಿ ಸಂಘದ ವತಿಯಿಂದ ಸನ್ಮಾನಿಸಲಾಗಿದೆ. +ಬಡಗಿನ ಸಂಪ್ರದಾಯನಿಷ್ಠ ರಾಜ ಹಾಸ್ಯಗಾರಿಕೆಯಲ್ಲಿ ವಿಶೇಷ ಮಾನ್ಯತೆ ಕಂಡುಕೊಂಡ ಹಿರಿಯ ಹಾಸ್ಯಗಾರ ಕಮಲಶಿಲೆ ಮಹಾಬಲ ದೇವಾಡಿಗ. +ಕುಂದಾಪುರ ತಾಲೂಕಿನ ಕಮಲಶಿಲೆಯಲ್ಲಿ ಮಂಜು ದೇವಾಡಿಗ-ಅಕ್ಕಯ್ಯ ದೇವಾಡಿಗ ಅವರ ಪುತ್ರನಾಗಿ ಜನಿಸಿದ ಶ್ರಿಯುತರು 53ರ ಹಿರಿತನಕ್ಕೆ ಬೆಳೆದು ನಿಂತವರು. +ನಾಲ್ಕನೇ ತರಗತಿಗೆ ವಿದಾಯ ಹೇಳಿ, ತನ್ನ 13ರ ಹರೆಯದಲ್ಲಿ ಕಲಾ ಜೀವನ ಆರಂಭಿಸಿದ ಮಹಾಬಲ ದೇವಾಡಿಗರು 1974ರಲ್ಲಿ ಉಡುಪಿ ಯಕ್ಷಗಾನ ಕೇಂದ್ರಕ್ಕೆ ಸೇರಿ ಗುರು ವೀರಭದ್ರನಾಯ್ಯ,ನೀಲಾವರ ರಾಮಕೃಷ್ಣಯ್ಯ ಹಿರಿಯಡಕ ಗೋಪಾಲರಾಯರ ಶಿಷ್ಯನಾಗಿ ಶಾಸ್ತ್ರೀಯ ರಂಗಶಿಕ್ಷಣ ತನ್ನದಾಗಿಸಿಕೊಂಡರು. +ಆ ಕಾಲದಲ್ಲಿ ಕು.ಶಿ.ಹರಿದಾಸ ಭಟ್‌ ಹಾಗೂ ಡಾ.ಶಿವರಾಮ ಕಾರಂತರೊಂದಿಗೆ ದೆಹಲಿಗೆ ಹೋಗಿ ಲವ-ಕುಶ ಕಾಳಗ, ಅಭಿಮನ್ಮು ವಧೆ ಪ್ರಸಂಗಗಳಲ್ಲಿ ಪಾತ್ರ ನಿರ್ವಹಿಸಿ ಸೈ ಅನ್ನಿಸಿಕೊಂಡರು. +ರಸಭಾವ ಪುಷ್ಟಿಕರ ನೃತ್ಯ-ಅಭಿನಯ,ಹಾಸ್ಯಭಾವ ಪರಿಪ್ಲುತ ವಾಗ್ಸರಣಿ, ಅನನ್ಯ ಪಾತ್ರ ತದಾತ್ಮ್ಯ ನೈಚ್ಯ ರಹಿತ ರಂಗವ್ಯವಹಾರದಲ್ಲಿ ತೊಡಗಿಸಿಕೊಳ್ಳುವ ಕಮಲಶಿಲೆ ಮಹಾಬಲ ದೇವಾಡಿಗರು ಹಿರಿಯ ಕಲಾವಿದರಾದ ನಾಗಯ್ಯ ಶೆಟ್ಟಿ, ದೇವಪ್ಪ ಗಾಣಿಗ ಹಾಗೂ ಕಕ್ಕುಂಜೆ ಶಂಕರ ಆಚಾರ್ಯರಿಂದ ಹಾಸ್ಯಗಾರಿಕೆಯ ಸಮಗ್ರ ಮಾಹಿತಿ ಪಡೆದವರು. +ಬಡಗಿನ ಸುಪ್ರಸಿದ್ಧ ಹಾಸ್ಯಕಲಾವಿದ ಹಾಲಾಡಿ ಕೊರ್ಗು ಅವರ "ಛಾಪು' ಉಳಿಸಿಕೊಂಡ ಮಹಾಬಲ ದೇವಾಡಿಗರ "ಬಾಹುಕ'ನ ಪಾತ್ರವಂತೂ ಇಂದಿಗೂ ಅಪಾರ ಜನಪ್ರಿಯತೆ ಉಳಿಸಿಕೊಂಡಿದೆ. +ಹಾಗೆಯೇ ಚಂದಗೋಪ, ಕೈಲಾಸ ಶಾಸ್ತ್ರಿ ಕಂದರ, ದಾರುಕ,ವಿದ್ಯುಜ್ಜಿಹ್ವ ಮೊದಲಾದ ಭೂಮಿಕೆಗಳೂ ಕಲಾರಸಿಕರ ಮನರಂಜಿಸಿವೆ. +ಮಂದಾರ್ತಿ ಮೇಳದಲ್ಲಿ 21 ವರ್ಷ, ಕಮಲಶಿಲೆಮೇಳದಲ್ಲಿ 7 ವರ್ಷ, ಮಾರಣಕಟ್ಟೆ ಮೇಳದಲ್ಲಿ 10ವರ್ಷ, ಹೀಗೆ ಮಹಾಬಲ ದೇವಾಡಿಗರ ಒಟ್ಟು ರಂಗಕೃಷಿಯ ಅವಧಿ 38 ವರ್ಷ. +ಕಮಲಾ ಎಂಬವರನ್ನು ವರಿಸಿ, ಅರುಣ, ವೀಣಾ, ಕಿರಣ,ಎಂಬ ಮೂವರು ಮಕ್ಕಳನ್ನು ಪಡೆದಿದ್ದಾರೆ. +ಶ್ರೀಯುತರನ್ನು ಹಲವಾರು ಸಂಘ-ಸಂಸ್ಥೆಗಳು ಸಂಮಾನಿಸಿವೆ. +ಬಡಗುತಿಟ್ಟು ಯಕ್ಷಗಾನ ರಂಗದಲ್ಲಿ ಸ್ತ್ರೀವೇಷ,ಪುರುಷವೇಷ, ಎರಡನೇ ವೇಷ, ಕಿರಾತ ವೇಷ,ಬಣ್ಣದವೇಷ ಹೀಗೆ ವರ್ಣರಂಜಿತ ಕಲಾವ್ಯಕ್ತಿತ್ವದಲ್ಲಿ ಕಂಗೊಳಿಸುವ ಪರಂಪರೆಯ ಹಿರಿಯ ವೇಷಧಾರಿ ನೀಲಾವರ ಮಹಾಬಲ ಶೆಟ್ಟಿ,ನೀಲಾವರ ಗ್ರಾಮದ ಮಧ್ಯಸ್ಥರಬೆಟ್ಟು ಎಂಬಲ್ಲಿ 1955ರಲ್ಲಿ ಹಂದಾಡಿ ಕೃಷ್ಣಯ್ಯ ಶೆಟಿ-ರಾಧಮ, ಶೆಟ್ಟಯ ದಂಪತಿಯ ಪುತ್ರರಾಗಿ ಜನಿಸಿದ ಇವರು ಓದಿದ್ದು 5ನೇ ತರಗತಿ. +ಇವರ ತಂದೆ ಸುಪ್ರಸಿದ್ಧ ವೇಷಧಾರಿಯಾಗಿದ್ದರು. +ಮಕ್ಕಳು ಯಕ್ಷಗಾನಕ್ಕೆ ಸೇರಬಾರದೆಂಬ ತಂದೆಯ ವಿರೋಧದ ನಡುವೆಯೂ ಅಣ್ಣ ಅನಂತ ಶೆಟ್ಟರ ಪ್ರೇರಣೆಯೊಂದಿಗೆ ಕಲಾಬದುಕಿಗೆ ಹೆಜ್ಜೆ ಹಾಕಿದ ಶೆಟ್ಟರು ಮತ್ತೆ ಹಿಂದಿರುಗಿ ಕಂಡದ್ದಿಲ್ಲ. +ತನ್ನ 16ರ ಹರೆಯದಲ್ಲೇ ಕಲಾಲೋಕ ಪ್ರವೇಶಿಸಿದ ಶೆಟ್ಟರು ಉಡುಪಿ ಯಕ್ಷಗಾನ ಕೇಂಂದ್ರದಲ್ಲಿ ಗುರು ವೀರಭದ್ರನಾಯ್ಕರ ಶಿಷ್ಯನಾಗಿ ಯಕ್ಷಗಾನ ನೃತ್ಯಕಲೆ ಸಿದ್ದಿಸಿಕೊಂಡರು. +ಹಿರಿಯ ಕಲಾವಿದ ಹಳ್ಳಾಡಿ ಕೃಷ್ಣಪ-ನವರಲ್ಲೂ ಶಿಷ್ಯವೃತ್ತಿಯನ್ನು ಕೈಗೊಂಡು ವಿಶೇಷ ರಂಗಾನುಭವವನ್ನು ಗಳಿಸಿದರು. +ಮಾರಣಕಟ್ಟೆ ಮೇಳದಲ್ಲಿ ಎಂ.ಎಂ.ಹೆಗ್ಡೆಯವರ ಸಹಕಾರದಿಂದ ಹಂತ-ಹಂತವಾಗಿ ಮೇಲೇರಿ ಸತತ 28ವರ್ಷಗಳ ಕಾಲ ಪ್ರಸಿದ್ಧ ಸ್ತ್ರೀವೇಷಧಾರಿಯಾಗಿ ರಂಗವಾಳಿದರು. +ಪೆರ್ಡೂರು 3, ಮಂದರ್ತಿ 3,ಸಾಲಿಗ್ರಾಮ 1, ಕಮಲಶಿಲೆ 1, ಮಾರಣಕಟ್ಟೆ 33,ಹಾಲಾಡಿ 1 ಹೀಗೆ 42 ವರುಷಗಳ ಸಾರ್ಥಕ ಯಕ್ಷಕೃಷಿ ಶೆಟ್ಟರದ್ದು. +ಹಾರಾಡಿ-ಮಟಪಾಡಿ ಶೈಲಿಯ ಹದವಾದ ಎರಕವನ್ನು ಶ್ರೀಯುತರಲ್ಲಿ ಗುರುತಿಸಬಹುದಾಗಿದ್ದು,ಆರಂಭದಲ್ಲಿ ಇವರು ಸ್ತ್ರೀವೇಷಧಾರಿಯಾಗಿ ರಂಗದುಡಿಮೆ ನಡೆಸಿದವರು. +ಪ್ರಧಾನ ಕಸೆ ಸ್ರ್ತೀ ವೇಷಗಳಾದ ಮೀನಾಕ್ಷಿ, ದ್ರೌಪದಿ, ಪ್ರಮೀಳೆ,ಮೊದಲಾದ ಇವರ ಭೂಮಿಕೆಗಳು ಜೋಡಾಟಗಳಲ್ಲಿ ವಿಶೇಷ ಗೆಲುವು ಕಂಡಿವೆ. +ಹಾಗೆಯೇ ಇವರ ಶಶಿಪ್ರಭೆ,ಶ್ರೀದೇವಿ, ಭ್ರಮರಕುಂತಳೆ, ಅಂಬೆಯಂತಹ ಪಾತ್ರಗಳೂ ಜನಪ್ರಿಯ. +ವಿರಾಟ, ಸತ್ರಾಜಿತ, ಧರ್ಮರಾಯ, ಕೌರವ,ಪುಷ್ಕಳ,ಅರ್ಜುನ, ಮೂದಲಾದ ಗಂಡುಭೂಮಿಕೆಗಳಿಗೂ ಶ್ರೀಯುತರು ಜೀವತುಂಬಿದ್ದಾರೆ. + ಬಣ್ಣದ ವೇಷಗಳಾದ ಮೈರಾವಣ,ವಿದ್ಯುಲ್ಲೋಚನ, ಕಾಲಜಂಘ, ರಕ್ತಕೇಶಿ, ವೃತ್ರಜ್ಜಾಲೆ ಪಾತ್ರಗಳಲ್ಲೂ ತನ್ನತನವನ್ನು ಮೆರೆದಿದ್ದಾರೆ. +ಉಡುಪಿ ಯಕ್ಷಗಾನ ಕಲಾರಂಗದ ಮೂಲಕ ಅಮೆರಿಕಾದ ವಿಶ್ವಕನ್ನಡ ಸಮ್ಮೇಳನದಲ್ಲೂ ಭಾಗವಹಿಸಿ ಕಲಾಪ್ರತಿಭೆ ಮೆರೆದಿದ್ದಾರೆ. +ಜರ್ಮನ್‌,ಫ್ರಾನ್ಸ್‌, ದೇಶಗಳಲ್ಲೂ ಗೆಜ್ಜೆ ಕಟ್ಟಿ ಹೆಜ್ಜೆ ಹಾಕಿದ್ದಾರೆ. +ಶ್ರೀಯುತರು ಪತ್ನಿ ಗುಲಾಬಿ. +ಪೂರ್ಣಿಮಾ,ಪ್ರತಿಮಾ, ವಸಂತ, ಮಮತಾ ನಾಲ್ಕು ಮಂದಿ ಮಕ್ಕಳು. +ನೀಲಾವರ ಮಹಾಬಲ ಶೆಟ್ಟರಿಗೆ ಸೀತಾನದಿ ಗಣಪಯ್ಯ ಶೆಟ್ಟಿ ಪ್ರತಿಷ್ಠಾನದ ಪ್ರಶಸ್ತಿ, ಎಂ.ಎಂ.ಹೆಗ್ಡೆ ಪ್ರಶಸ್ತಿ ಸೇರಿದಂತೆ ಹಲವಾರು ಗೌರವ ಸಂಮಾನಸಂದಿದೆ. +ಉನ್ನತ ಪ್ರತಿಭಾ ಸಂಪತ್ತಿನಿಂದ ಯಕ್ಷಗಾನರಂಗದಲ್ಲಿ ಸಾಂಪ್ರದಾಯಿಕ ಹೆಜ್ಜೆ ಮೂಡಿಸಿದ ಹಿರಿಯ ಕಲಾವಿದ ಪೇತ್ರಿ ಮಾಧುನಾಯ್ಕ. +ಉಡುಪಿ ತಾಲೂಕಿನ ಹಳುವಳ್ಳಿ ಎಂಬ ಹಳ್ಳಿಯಲ್ಲಿ ವಾಮನ ನಾಯ್ಕ-ಮೈರು ಬಾಯಿ ದಂಪತಿಯ ಸುಪುತ್ರರಾಗಿ 11-9-1940ರಲ್ಲಿ ಜನಿಸಿದ ಮಾಧು ನಾಯ್ಕರು 6ನೇ ತರಗತಿಗೆ ಶರಣು ಹೊಡೆದು,ಪ್ರಸಿದ್ಧ ಮದ್ದಳೆಗಾರ ಸೋದರಮಾವ ಬೇಳಂಜೆ ತಿಮ್ಮಪ್ಪ ನಾಯ್ಕ ಅವರ ಪ್ರೇರಣೆಯಿಂದ ಬಣ್ಣದ ಬದುಕು ಕಂಡರು. +ಗುರು ವೀರಭದ್ರ ನಾಯಕ್‌,ಹೆರಂಜಾಲು ವೆಂಕಟರಮಣ ಗಾಣಿಗ ಅವರ ಶಿಷ್ಯನಾಗಿ ಸಮರ್ಪಕ ಯಕ್ಷಶಿಕ್ಷಣವನ್ನು ಪಡೆದ ನಾಯ್ಕರು ತನ್ನ 14ರ ಹರೆಯದಲ್ಲಿ ಮಾರಣ ಕಟ್ಟೆಮೇಳದಲ್ಲಿ ಗೆಜ್ಜೆ ಕಟ್ಟಿದರು. +ಮಾರಣಕಟ್ಟೆ 1, ಮಂದಾರ್ತಿ 13,ಪೆರ್ಡೂರು 3, ಸಾಲಿಗ್ರಾಮ 2, ಅಮೃತೇಶ್ವರಿ 2,ಕೊಲ್ಲೂರು 1, ಮೂಲ್ಕಿ 1 ಹೀಗೆ ವೃತ್ತಿ ಮೇಳಗಳಲ್ಲಿ ಸುಮಾರು 23ವರ್ಷಗಳ ಕಲಾಕೃಷಿ ನಡೆಸಿದ್ದಾರೆ. +ಉಡುಪಿ ಯಕ್ಷಗಾನ ಕೇಂದ್ರದ "ಯಕ್ಷರಂಗ'ದಕ ಲಾವಿದನಾಗಿ ಡಾ.ಶಿವರಾಮಕಾರಂತರ ಗರಡಿಯಲ್ಲಿ ಪಳಗಿ 30ವರ್ಷಗಳ ಸಾರ್ಥಕ ರಂಗಜೀವನ ನಡೆಸಿದ್ದಾರೆ. +"ಯಕ್ಷರಂಗ' ತಂಡದ ಮೂಲಕ ದುಬೈ,ಕೆನಡಾ, ಜಪಾನ್‌, ರಷ್ಯಾ, ಇಟೆಲಿ ಮೊದಲಾದ ವಿದೇಶಗಳಲ್ಲೂ ತನ್ನ ಕಲಾಪ್ರತಿಭೆಯನ್ನು ಮೆರೆದ ಶ್ರೀಯುತರು 53ವರ್ಷಗಳ ಸಾರ್ಥಕ ಕಲಾವ್ಯವಸಾಯ ಪೂರ್ಣಗೊಳಿಸಿ ಪ್ರಸ್ತುತ ವಿಶ್ರಾಂತ ಜೀವನ ನಡೆಸುತ್ತಿದ್ದಾರೆ. +ಸ್ತ್ರೀವೇಷ ಒಂದನ್ನುಳಿದು ಎಲ್ಲಾ ಬಗೆಯ ವೇಷಗಳನ್ನೂ ನಿರ್ವಹಿಸಿದ ಕಲಾವಿದರಿವರು. +ಬಡಗಿನ ಘಟಾನುಘಟಿ ಕಲಾವಿದರ ಒಡನಾಟದಲ್ಲಿ ವಿಶೇಷ ಕಲಾನುಭವ ಹೊಂದಿದ ಮಾಧು ನಾಯ್ಕರು ರಾಜವೇಷಗಳಾದ ಹಂಸದ್ದಜ, ಶತ್ರುಘ್ನ ಮೊದಲಾದ ಪಾತ್ರಗಳಿಗೆ ಜೀವ ತುಂಬಿದವರು. +ವೃತ್ತಿಮೇಳಗಳಲ್ಲಿ ಇವರ ಮುಂಡಾಸು ವೇಷಗಳು ಅಪಾರ ಜನಪ್ರಿಯತೆ ಕಂಡುಕೊಂಡಿದ್ದವು. +ಇವರ ಬಣ್ಣದವೇಷ ಯಕ್ಷಗಾನ ಕಲಾಜಗತ್ತಿನಲ್ಲಿ ವಿಶೇಷ ಖ್ಯಾತಿ ಪಡೆದಿವೆ. +ರಾವಣ,ಘಟೋತ್ಕಚ, ಹಿಡಿಂಬಾಸುರ, ತಾರಕಾಸುರ,ಮೊದಲಾದ ಗಂಡುಬಣ್ಣ, ಶೂರ್ಪನಬೆ, ಹಿಡಿಂಬೆ ,ಲಂಕಿಣಿ ವೃತ್ರಜ್ವಾಲೆ ಮೊದಲಾದ ಹೆಣ್ಣುಬಣ್ಣ ಶ್ರೀಯುತರ ಅದ್ಭುತ ಕಲಾಪ್ರತಿಭೆಗೆ ಸಾಕ್ಷಿಯಾಗಿವೆ. +ಪತ್ನಿ ನೇತ್ರಾವತಿ. +ಒಬ್ಬಳು ಹೆಣ್ಣು, ಐವರು ಗಂಡು ಮಕ್ಕಳನ್ನು ಪಡೆದಿದ್ದಾರೆ. +ಉಡುಪಿ ತಾಲೂಕು ಸಾಹಿತ್ಯ ಸಮ್ಮೇಳನ ಸಂಮಾನ, ಉಡುಪಿ ಯಕ್ಷಗಾನ ಕೇಂದ್ರದ ಸಂಮಾನ, ಕು.ಶಿ.ಹರಿದಾಸ ಭಟ್ಟ ಜಾನಪದ ಪ್ರಶಸ್ತಿ ಹಾಗೂ"ಯಕ್ಷಗಾನ ಕಲಾರಂಗ'ದ ಪ್ರೊ.ಬಿ.ವಿ.ಆಚಾರ್ಯ ಪ್ರಶಸ್ತಿ ದೊರಕಿರುತ್ತದೆ. +ಉಭಯತಿಟ್ಟಿನ ಹಾಸ್ಯಗಾರಿಕೆಯಲ್ಲಿ ಪ್ರಖ್ಯಾತಿಯನ್ನು ಕಂಡ ಹಿರಿಯ ಕಲಾವಿದ ಕಿನ್ನಿಗೋಳಿ ಮುಖ್ಯಪ್ರಾಣ. +ಸನಾತನ ಯಕ್ಷಗಾನ ಪರಂಪರೆಯ ಮಟ್ಟನ್ನೂ,ಸಮಕಾಲೀನ ರಂಗಭೂಮಿಯ ವಿನೂತನದ ಗುಟ್ಟನ್ನೂ ಬಲ್ಲ ಕಲಾವಿದ ಮುಖ್ಯಪ್ರಾಣ ಅವರು 12-3-1941ರಲ್ಲಿ ರುಕ್ಕಯ್ಯ ಶೆಟ್ಟಿಗಾರ್‌ - ಶೇಷಿ ದಂಪತಿಯ ಸುಪುತ್ರರಾಗಿ ತಾಳಿಪಾಡಿ ಎಂಬಲ್ಲಿ ಜನಿಸಿದರು. +ಐದನೇಯ ತರಗತಿಯವರೆಗೆ ವಿದ್ಯಾಭ್ಯಾಸವನ್ನು ಪೂರೈಸಿರುವ ಇವರು, ಚಿಕ್ಕಂದಿನಿಂದಲೇ ಯಕ್ಷಗಾನಕಲೆಯ ಕುರಿತು ವಿಶೇಷ ಆಸಕ್ತಿ ಹೊಂದಿದವರು. +ಸುಪ್ರಸಿದ್ಧ ಹಾಸ್ಯ ಕಲಾವಿದ ಮಿಜಾರು ಅಣ್ಣಪ್ಪ ಹಾಗೂ ಡಾ.ಎನ್‌.ನಾರಾಯಣ ಶೆಟ್ಟಿ ಅವರ ಶಿಷ್ಯನಾಗಿ ಯಕ್ಷಗಾನ ಕಲಾನುಭವ ದ್ರವ್ಯವನ್ನು ಗಳಿಸಿದ ಮುಖ್ಯ ಪ್ರಾಣರು ತನ್ನ 19ನೇ ವಯಸ್ಸಿನಲ್ಲೇ ಯಕ್ಷಲೋಕದತ್ತ ಹೆಜ್ಜೆ ಹಾಕಿದರು. +ಮುಖ್ಯಪ್ರಾಣ ಅವರ ಆಳಂಗ, ಭಾಷೆ,ಭಾವ,ರಂಗನಡೆ ಎಲ್ಲವೂ ಹಾಸ್ಯಭೂಮಿಕೆಗೆ ಸಮುಚಿತವಾಗಿ ಕಲಾರಸಿಕರ ಮನ ಗೆದ್ದಿದೆ. +ಸುಸಂಂಸ್ಕೃತವಾದ ರಾಜಹಾಸ್ಯಗಾರಿಕೆಯಲ್ಲಿ ಪ್ರೇಕ್ಷಕರ ಮೊಗದಲ್ಲಿ ನಗೆಯ ಚಿತ್ತಾರಬಿಡಿಸುವ ಕಿನ್ನಿಗೋಳಿಯವರು, ಅಪಾರರಂಗಾನುಭವವನ್ನು ಹೊಂದಿ, ಗರಿಷ್ಠಮಟ್ಟದಲ್ಲಿ ಹಾಸ್ಯಪಾತ್ರಗಳನ್ನು ಪೋಷಿಸುವವರು. +ಭೀಷ್ಮಪ್ರತಿಜ್ಜೆಯ ಕಂದರ, ಭೀಷ್ಮವಿಜಯದವೃದ್ಧಭೂಸುರ, ಚಂದ್ರಾವಳಿ ವಿಲಾಸದ ಚಂದಗೋಪ,ಶ್ರೀಕೃಷ್ಣ ಲೀಲೆಯ ವಿಜಯ, ದಮಯಂತಿಯ ಬಾಹುಕ, ಗದಾಯುದ್ಧದ ಬೇಹುಚಾರಕ . +ಹಾಸ್ಯಭೂಮಿಕೆಗಳಿಗೆ ತನ್ನದೇ ಶೈಲೀಕೃತ ವೈನೋದಿಕ ಛಾಪು ಮೂಡಿಸಿದ ಕಿನ್ನಿಗೋಳಿ ಮುಖ್ಯಪ್ರಾಣ ಅವರು ಸಾಂಪ್ರದಾಯಿಕ ಸೊಗಡು, ಸೊಬಗಿಗೆ ಮೊದಲ ಮಣೆ ಹಾಕುವವರು. +ಕಟೀಲು 6, ಇರಾ ಸೋಮನಾಥೇಶ್ವರ 3,ಸುಬ್ರಹ್ಮಣ್ಯ 1, ಮಂತ್ರಾಲಯ 2, ಸಾಲಿಗ್ರಾಮ 14,ಪೆರ್ಡೂರು 8, ಕುಮಟಾ 1, ಕದ್ರಿ 3, ಮಂದಾರ್ತಿ 11, ಹೀಗೆ 9 ಮೇಳಗಳಲ್ಲಿ ಸುದೀರ್ಥವಾದ 49ವರ್ಷಗಳ ಕಲಾವ್ಯವಸಾಯವನ್ನು ಪೂರೈಸಿದ್ದಾರೆ. +ಪ್ರಸ್ತುತ ಕಿನ್ನಿಗೋಳಿಯವರು ಮಂದಾರ್ತಿ ಮೇಳದ ಪ್ರಧಾನ ಹಾಸ್ಯಗಾರರಾಗಿ ಸೇವೆ ಸಲ್ಲಿಸುತ್ತಿರುವವರು. +ಸತಿ ದುರ್ಗಾವತಿ. +ಓರ್ವ ಸುಪುತ್ರ ಯಶವಂತ ಕಂಪ್ಯೂಟರ್‌ ಇಂಜಿನಿಯರ್‌. +ಮೂಡಬಿದ್ರಿ ಅಭಿಮಾನಿಬಳಗ, ಸಿದ್ಧಾಪುರ ಗೆಳೆಯರ ಬಳಗ,ಮಂಗಳೂರು ಸಾಹಿತ್ಯ ಸಮ್ಮೇಳನ, “ಕಲಾರಂಗ'ದ"ನಿಟ್ಟೂರು ಸುಂದರ ಶೆಟ್ಟಿ ಪ್ರಶಸ್ತಿ, ಪದ್ಮಶಾಲಿ ಕೂಟ- ಬೆಂಗಳೂರು ವತಿಯಿಂದ ಗೌರವ, ದ.ಕ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ . +ಡಾ.ಜಿ.ಶಂಕರ್‌ ಟ್ರಸ್ಟ್‌ ಗೌರವ ಸಮ್ಮಾನ, ಯಕ್ಷಗಾನ ಅಕಾಡೆಮಿ ಪ್ರಶಸ್ತಿಯೂ ಶ್ರೀಯುತರಿಗೆ ದೊರಕಿರುತ್ತದೆ. +ಸಾಂಪ್ರದಾಯಿಕ ಆವರಣದಲ್ಲಿ ಪಾತ್ರಗಳನ್ನು ತನ್ನದೇ ವರ್ಚಸ್ಸಿನಿಂದ ಬೆಳಗಿಸುವ ಹಿರಿಯ ಕಲಾವಿದ ಆರ್ಗೋಡು ಮೋಹನದಾಸ ಶೆಣೈ. +ಕುಂದಾಪುರ ತಾಲೂಕಿನ ಆರ್ಗೋಡು ಎಂಬಲ್ಲಿ ಕೆ.ಗೋವಿಂದರಾಯ ಶೆಣೈ, ಮುಕ್ತಾ ಬಾಯಿ ದಂಪತಿಯ ಸುಪುತ್ರರಾಗಿ 10-2-1950ರಂದು ಜನಿಸಿದ ಶೆಣೈಯವರು ಪಿ.ಯು.ಸಿ ವಿದ್ಯಾಭ್ಯಾಸದ ಬಳಿಕ ಅಂದರೆ ತನ್ನ 26ನೇ ವಯಸ್ಸಿನಲ್ಲಿ ತಂದೆಯವರ ಪ್ರೇರಣೆ ಹಾಗೂ ಆಗಿನ ಹಿರಿಯಡಕ ಮೇಳದ ಯಜಮಾನ ಪೆರ್ಡೂರು ಮಹಾಬಲ ಶೆಟ್ಟರ ಒತ್ತಾಯದ ಮೇರೆಗೆ ಸ್ವಯಂ ಆಸಕ್ತಿಯಿಂದ ಯಕ್ಷಗಾನಕ್ಕೆ ಮುಖ ಮಾಡಿದರು. +ಇವರ ತಂದೆ ಗೋವಿಂದರಾಯ ಶೆಣೈ ಪ್ರಸಿದ್ಧ ಭಾಗವತರಾಗಿದ್ದರು. +ದೊಡ್ಡಪ್ಪಂದಿರೀರ್ವರು ಉತ್ತಮ ವೇಷಧಾರಿಗಳು. +ಹಾಗಾಗಿ ಶೆಣೈಯವರಿಗೆ ಕಲಾ ಹಿನ್ನೆಲೆ ಬಲಿಷ್ಠವಾಗಿಯೇ ಸಿಕ್ಕಿತು. +ಹಾಸ್ಯಗಾರ ಕಮಲಶಿಲೆ ಮಹಾಬಲ ದೇವಾಡಿಗರಲ್ಲಿ ಕುಣಿತವನ್ನು ಕಲಿತ ಇವರು ಹವ್ಯಾಸಿಯಾಗಿ 2ವರ್ಷ ಯಕ್ಷಗಾನ ರಂಗಸೇವೆ ಮಾಡಿದ್ದರು. +ಕುಂದಾಪುರ ಲಕ್ಷ್ಮೀವೆಂಕಟೇಶ ಮೇಳದಲ್ಲಿ ಒಂದು ವರ್ಷ, ಹಿರಿಯಡಕ 3, ಹಳೇ ಪೆರ್ಡೂರು 1, ಕಮಲಶಿಲೆ 8, ಸಾಲಿಗ್ರಾಮ 4, ಮೂಲ್ಕಿ 1,ಹೊಸಪೆರ್ಡೂರು 13, ಮಂದಾರ್ತಿ 1 ಶಿರಸಿ ಮೇಳಗಳಲ್ಲಿ ಸೇವೆ ಸಲ್ಲಿಸಿ ಇದೀಗ ಕಮಲಶಿಲೆ ಮೇಳದ ಪ್ರಧಾನ ಕಲಾವಿದರಾಗಿ 35ನೇ ವರ್ಷದ ತಿರುಗಾಟದಲ್ಲಿದ್ದಾರೆ. +ಸಮರ್ಥ ಪುರುಷವೇಷಧಾರಿಯಾಗಿ ಎರಡನೇ ವೇಷಧಾರಿಯಾಗಿ ಪ್ರತಿಭಾ ಪ್ರೌಢತೆಯಿಂದ ಪಾತ್ರಗಳಿಗೆ ನ್ಯಾಯ ಕಲ್ಪಿಸಿದ ಶೆಣೈಯವರು ಶ್ರೀರಾಮ, ಭೀಷ್ಮಸುಧನ್ವ, ಜಾಂಬವ, ಬಲರಾಮ, ಕರ್ಣ, ಅರ್ಜುನ,ಪರಶುರಾಮ, ಹನೂಮಂತ, ವಿಕ್ರಮಾದಿತ್ಯ,ಮೈತ್ರೇಯ, ಕೌರವ, ಭೀಮ, ಋತುಪರ್ಣ ಮೊದಲಾದ ಪೌರಾಣಿಕ ವ್ಯಕ್ತಿ-ಶಕ್ತಿಗಳನ್ನು ಪಾತ್ರಗಳ ಮೂಲಕ ಜೀವಂತವಾಗಿರಿಸಿದ್ದಾರೆ. +ಪ್ರಗಲ್ಫ ಪಾಂಡಿತ್ಯದ ಖಜಾನೆಯಂತಿರುವ ಶೆಣೈಯವರು ಕಸ್ತೂರಿ ಎಂಬುವರನ್ನು ವರಿಸಿ, ಸಾವಿತ್ರಿ,ರಾಧಿಕಾ, ಪೂರ್ಣಿಮಾ ವಾಮನ, ವಿಷ್ಣು ಎಂಬ 5ಮಂದಿ ಮಕ್ಕಳನ್ನು ಪಡೆದಿದ್ದಾರೆ. +ದಿ.ಕೆ.ಎಸ್‌.ನಿಡಂಬೂರು ಪ್ರಶಸ್ತಿಯೂ ಸೇರಿದಂತೆ ಶೆಣೈಯವರನ್ನು ಅನೇಕ ಸಂಘ ಸಂಸ್ಥೆಗಳು ಸಮ್ಮಾನಿಸಿವೆ. +ಬಡಗುತಿಟ್ಟಿನ ಪರಂಪರೆಯ ವರ್ಚಸ್ವೀ ವೇಷಧಾರಿಯಾಗಿ ಗುರುತಿಸಿಕೊಂಡ ಶಿಷ್ಟ ಕಲಾವಿದ ಹಳ್ಳಾಡಿ ಮಂಜಯ್ಯ ಶೆಟ್ಟಿ. +ಕುಂದಾಪುರ ತಾಲೂಕಿನ ಹಳ್ಳಾಡಿ ಎಂಬಲ್ಲಿ 12-4-1932ರಲ್ಲಿ ಜನಿಸಿದ ಮಂಜಯ್ಯ ಶೆಟ್ಟರು ಗೋವಿಂದ ಶೆಟ್ಟಿ-ದೇವಮ್ಮ ದಂಪತಿಯ ಸುಪುತ್ರ. +ಶ್ರೀಯುತರ ವಿದ್ಯಾಭ್ಯಾಸ 5ನೇ ತರಗತಿಯ ವರೆಗೆ ಮಾತ್ರ. +16ರ ಹರೆಯದಲ್ಲೇ ಇವರ ಕಲಾ ಜೀವನ ಆರಂಭ. +ಗುರು ವೀರಭದ್ರನಾಯ್ಕ್ ಹಾಗೂ ಮಾರ್ಗೋಳಿ ಗೋವಿಂದ ಸೇರೆಗಾರ್‌ ಅವರಲ್ಲಿ ನೃತ್ಯಾಭಿನಯ ಶಿಕ್ಷಣ ಪಡೆದ ಮಂಜಯ್ಯ ಶೆಟ್ಟರು ಶಿರಿಯಾರ ಸಂಜೀವ ಅವರಲ್ಲಿ ತಾಳ,ಲಯಗಾರಿಕೆಯನ್ನು ಕಲಿತರು. +ಬೇಳಂಜೆ ತಿಮ್ಮಪ ನೃಾಕ ರಿಂದ ಚೆಂಡೆ, ಮದ್ದಳೆ ವಾದನವನ್ನು ಶ್ರೀಯುತರು ಕರಗತ ಮಾಡಿಕೊಂಡರು. +ಅಮೃತೇಶ್ವರಿ, ಸಾಲಿಗ್ರಾಮ, ಮಾರಣಕಟ್ಟೆ,ಕೊಲ್ಲೂರು, ಪೆರ್ಡೂರು ಸೌಕೂರು ಮೇಳಗಳಲ್ಲಿ ಸುಮಾರು 45 ವರ್ಷ ಕಲಾಸೇವೆ ಸಲ್ಲಿಸಿದವರು. +ವೇಷಗಾರಿಕೆ ಹಾಗೂ ಮಾತುಗಾರಿಕೆಯ ಮೋಡಿಯಲ್ಲಿ ಶಿರಿಯಾರ ಮಂಜುನಾಯ್ಕರ ಶೈಲಿಯನ್ನು ನೆನಪಿಸುವ ಪ್ರಬುದ್ಧ ಕಲಾವಿದ ಮಂಜಯ್ಯ ಶೆಟ್ಟರು. + ಮಟಪಾಡಿ ರಂಗನಡೆಯನ್ನು ಕರಾರುವಾಕ್ಕಾಗಿ ತೋರಿಸುವವರು. +ಪರಿಶುದ್ಧ ವ್ಯಾಕರಣಬದ್ಧ, ಪಾಂಡಿತ್ಯಪೂರ್ಣ ವಾಕ್‌ ವೈಖರಿ, ಪರಿಣಾಮಕಾರಿ ಪಾತ್ರಾಭಿವ್ಯಕ್ತಿಯಲ್ಲಿ ಯಕ್ಷಗಾನೀಯವಾದ ಸೊಗಸು ಮೆರೆಯುವ ಶೆಟ್ಟರ ಸುಧನ್ವ, ಪುಷ್ಕಳ, ಲವ-ಕುಶ, ಯಯಾತಿ, ಅರ್ಜುನ ಪಾತ್ರಗಳು ಜನಪ್ರಿಯ. +ದೇವವೃತ, ಋತುಪರ್ಣ,ಪಾರಿಜಾತದ ಕೃಷ್ಣ, ಧರ್ಮಾಂಗದ ಭೂಮಿಕೆಗಳಿಗೆ ಅವರದ್ದೇ ವಿಶೇಷ ಛಾಪು ಮೂಡಿಸಿದ್ದಾರೆ. +ಮಂಜಯ್ಯಶೆಟ್ಟರ ರಂಗದ ನಡೆ, ನುಡಿ, ನಿಲವು,ವೇಷ, ಎಲ್ಲವೂ ನೂರಕ್ಕೆ ನೂರು ಯಕ್ಷಗಾನೀಯವಾದದ್ದು. +ಪಾತ್ರಗಳ ಅಂತರಂಗದ ಭಾವವನ್ನು ಅರಿತು ವ್ಯವಹರಿಸುವ ಅದ್ಭುತ ಕಲಾಪ್ರತಿಭೆ ಅವರದ್ದು. +ಗುರುವಾಗಿ ಹಲವು ಶಿಷ್ಯರನ್ನು ರಂಗಭೂಮಿಗೆ ನೀಡಿದ ಹಿರಿಮೆಯೂ ಅವರಿಗಿದೆ. +ಶ್ರೀಯುತರ ಸಹಧರ್ಮಿಣಿ ರಾಧಮ್ಮ ಶೆಡ್ತಿ. +ಓರ್ವ ಸುಪುತ್ರ ಹರ್ಷ ಶೆಟ್ಟಿ. +ಪ್ರಸ್ತುತ ಮಂಜಯ್ಯ ಶೆಟ್ಟರು ಚಿತ್ರದುರ್ಗದಲ್ಲಿ ಅಂಗಡಿ ಉದ್ಯಮಿ. +ಶ್ರೀಯುತರಿಗೆ ಹಾರಾಡಿ ರಾಮಗಾಣಿಗ ಪ್ರಶಸ್ತಿ,ಎಂ.ಎಂ.ಹೆಗ್ಡೆ ಪ್ರಶಸ್ತಿ, ಯಕ್ಷಗಾನ ಕಲಾರಂಗದ ಮಾರ್ವಿ ಹೆಬ್ಬಾರ್‌ ಪ್ರಶಸ್ತಿ, ಯಕ್ಷದೇಗುಲ ಪುರಸ್ಕಾರ,ಮಂಗಳೂರು ಬಂಟರಸಂಘದ "ಚೌಟ' ಪ್ರಶಸ್ತಿ,ಯಶಸ್ವೀ ಕಲಾವೃಂದ ತೆಕ್ಕಟ್ಟೆಯ ವತಿಯಿಂದೆ ಗೌರವ ಸಂಮಾನ, ಚಿತ್ರದುರ್ಗದ ವಿವಿಧ ಸಂಘ-ಸಂಸ್ಥೆಗಳಿಂದ ಸಂಮಾನ ದೊರಕಿರುತ್ತದೆ. +ತೆಂಕು-ಬಡಗುತಿಟ್ಟಿನ ಅಗ್ರಮಾನ್ಯ ಸ್ರ್ತೀ ವೇಷಧಾರಿ ಅರಾಟೆ ಮಂಜುನಾಥ. +ಸ್ರ್ತೀ ಭೂಮಿಕೆಗೊಪ್ಪುವ ಅಂಗಸೌಷ್ಠವ, ಕಂಠಸಂಪತ್ತು. +ಲಾಲಿತ್ಯಪೂರ್ಣ ನೃತ್ಯ, ಅಭಿನಯ ಕೌಶಲ, ಸುಪುಷ್ಟ ರಂಗನಡೆ, ಪ್ರಗಲ್ಭ ಪಾಂಡಿತ್ಯದ ವಾಚಿಕ ವಿಲಾಸ ಮೈ ತುಂಬಿಕೊಂಡ ಮೇರು ಕಲಾವಿದ ಅರಾಟೆಯವರು ಯಕ್ಷಗಾನ ಪರಂಪರೆಯ ನಿಜ ಸತ್ವವನ್ನು ಹೀರಿಕೊಂಡು ಬೆಳೆದವರು. +ಕುಂದಾಪುರ ತಾಲೂಕಿನ ಗುಲ್ವಾಡಿ ಎಂಬಲ್ಲಿ ರಾಮನಾಯ್ಕ-ಮಂಜಮ್ಮ ದಂಪತಿಯ ಸುಪುತ್ರರಾಗಿ 1942ರಲ್ಲಿ ಜನಿಸಿದ ಅರಾಟೆಯವರ ಓದು ನಾಲ್ಕಕ್ಕೇ ಸೀಮಿತವಾಯಿತು. +13ನೇ ವಯಸ್ಸಿನಲ್ಲೇ ಅವರು ರಂಗಮಂಚಕ್ಕೆ ಹೆಜ್ಜೆ ಹಾಕಿದರು. +ಹಿರಿಯ ಕಲಾವಿದರಾದ ಮಟಪಾಡಿ ಶ್ರೀನಿವಾಸ ನಾಯಕ್‌ಹಾಗೂ ಗುರು ವೀರಭದ್ರನಾಯ್ಕರ ಶಿಷ್ಯನಾಗಿ ಸಂಪ್ರದಾಯಶೀಲ ಕಲಾಶಿಕ್ಷಣ ಪಡದ ಕಲಾವಿದರಿವರು. +ಸಾಲಿಗ್ರಾಮ, ಮಂದಾರ್ತಿ, ಮಾರಣಕಟ್ಟೆ,ಕಮಲಶಿಲೆ, ಕೆರೆಮನೆ, ರಾಜರಾಜೇಶ್ವರಿ, ಸುರತ್ಕಲ್‌,ಮೂಲ್ಕಿ, ಕೊಲ್ಲೂರು, ಪೊಳಲಿ, ಕುಂಡಾವು ಮೇಳಗಳಲ್ಲಿ ಸುದೀರ್ಥ 55 ವರ್ಷಗಳ ಕಾಲ ಕಲಾ ತಿರುಗಾಟ ನಡೆಸಿದರು. +ಅಪಾರ ಜನಮನ್ನಣೆಯನ್ನು ಪಡೆದರು. +ಅರಾಟೆಯವರು ಓರ್ವ ಅತ್ಯುತ್ತಮ ವೇಷಧಾರಿ ಮಾತ್ರವಲ್ಲದೆ ಸಮರ್ಥ ಸಂಘಟಕರೂ ಹೌದು. +ಗಣೇಶ ಪ್ರವಾಸೀ ಯಕ್ಷಗಾನ ಸಂಸ್ಥೆಯ ಸ್ಥಾಪಕರಾಗಿ ಅನೇಕ ಹಿರಿಯ ಕಲಾವಿದರನ್ನು ಗುರುತಿಸಿ ಗೌರವಿಸಿದವರು. +ಕಿರಿಯ ಕಲಾವಿದರಿಗೆ ಮಾರ್ಗದರ್ಶಿಯಾದವರು. +ಪೌರಾಣಿಕ ಸ್ತ್ರೀಪಾತ್ರಗಳ ಅಂತಸ್ಸತ್ವವನ್ನು ಗಂಭೀರವಾಗಿ ಅರ್ಥೈಸಿಕೊಂಡು ಶಾಸ್ತ್ರೀಯ ಸಂವಿಧಾನದಲ್ಲಿ ಪಾತ್ರಗಳನ್ನು ಕೆತ್ತಿಡುವ ಅದ್ಭುತ ಪ್ರತಿಭೆ. +ಅರಾಟೆಯವರ ಆಂಬೆ, ದಮಯಂತಿ,ಶಶಿಪ್ರಭೆ, ದಾಕ್ಷಾಯಿಣಿ, ಚಂದ್ರಮತಿ, ಸುಭದ್ರೆ, ಸೀತೆ,ಮೀನಾಕ್ಷಿ, ಮೋಹಿನಿ, ಪ್ರಭಾವತಿ, ಶ್ರೀದೇವಿ ಮೊದಲಾದ ಭೂಮಿಕೆಗೆಳು ಇಂದಿಗೂ ಅಜರಾಮರವಾಗಿವೆ. +ಹಾಗೆಯೇ ಶ್ರೀಯುತರ ಕೃಷ್ಣ,ಅಶ್ವತ್ಥಾಮ, ಮೊದಲಾದ ಪುರುಷಪಾತ್ರಗಳೂ ಜನಪ್ರಿಯ. +ಗರತಿ ಪಾತ್ರಗಳಲ್ಲಿ ಕಾಣಿಸುವ ಹೆಣ್ತನದ ಸಹಜ ಲಾಲಿತ್ಯ, ಕಸೆ ಪಾತ್ರಗಳಲ್ಲಿ ತೋರುವ ಗಂಭೀರ ಸ್ತ್ರೀಯ ರಂಗಔಚಿತ್ಯ ಸಾಟಿಯಿಲ್ಲದ್ದು. +ಇವರು ಜಾನಪದ ಮತ್ತುಯಕ್ಷಗಾನ ಅಕಾಡೆಮಿ ಸದಸ್ಯರಾಗಿದ್ದರು. +ಎರಡು ವರ್ಷಗಳ ಹಿಂದೆ ದೈಹಿಕ ಅನಾರೋಗ್ಯಕ್ಕೆ ತುತ್ತಾಗಿದ್ದಾರೆ. +ರಂಗಸಾಧನೆಯ ಶೃಂಗಸಾರ್ಥಕ್ಯ ಕಂಡ ಶ್ರೇಷ್ಠಕಲಾವಿದ ಅರಾಟೆ ಮಂಜುನಾಥರ ಧರ್ಮಪತ್ ನಿಜಲಾಜಾಕ್ಷಿ ಎಮ್‌. ಅರಾಟೆ. +ಶ್ರೀಮತಿ ಜಯಶ್ರೀ,ಗಣೇಶ ಪ್ರಸಾದ್‌ ಅರಾಟೆ, ವಾಣಿಶ್ರೀ ಇವರ ಮೂವರು ಮಕ್ಕಳು. +ಶ್ರೀಯುತರಿಗೆ ಪ್ರತಿಷ್ಠಿತ ರಾಜ್ಯಪ್ರಶಸ್ತಿ, ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ ,ಕರ್ನಾಟಕ ಸಾಹಿತ್ಯ ಪರಿಷತ್‌ ಪ್ರಶಸ್ತಿ, ಉಡುಪಿ ಯಕ್ಷಗಾನ ಕಲಾರಂಗದ ಪ್ರೊ.ಬಿ.ವಿ.ಆಚಾರ್ಯಪ್ರಶಸ್ತಿ, ನಿಟ್ಟೂರು ಭೋಜಪ್ಪ ಸುವರ್ಣ ಪ್ರಶಸ್ತಿ,ರಾಮವಿಠಲ ಪ್ರಶಸ್ತಿ ಸೇರಿದಂತೆ ಅನೇಕ ಸಂಮಾನ ದೊರೆತಿದೆ. +ಬಡಗುತಿಟ್ಟಿನ ಸಾಂಪ್ರದಾಯಿಕ ಯಕ್ಷಶಿಕ್ಷಣವನ್ನು ಪಡೆದು ಯಕ್ಷರಂಗ ಮಂಚದಲ್ಲಿ ಹೆಜ್ಜೆ ಹಾಕಿ, ಗೆಲುವು ಕಂಡ ಪ್ರತಿಭಾಸಂಪನ್ನ ಕಲಾವಿದ ಶ್ರೀ ಎಂ.ರಘುರಾಮ ಮಡಿವಾಳ. +ಕುಷ್ಠ ಮಡಿವಾಳ-ಲಚ್ಚು ಮಡಿವಾಳ್ತಿ ದಂಪತಿಯ ಸುಪುತ್ರರಾದ ರಘುರಾಮ ಮಡಿವಾಳರ ಹುಟ್ಟೂರು ಮಂದಾರ್ತಿ-ಹೆಗ್ಗುಂಜೆ. +ಹಿರಿಯ ಕಲಾವಿದ ಉಡುಪಿ ಬಸವನಾಯ್ಕರ ಪ್ರೇರಣೆ, ಪ್ರೋತ್ಸಾಹವನ್ನು ಪಡೆದು ಯಕ್ಷಗಾನ ರಂಗಕ್ಕೆ ಧುಮುಕಿದ ರಘುರಾಮ ಅವರು ಉಡುಪಿ ಯಕ್ಷಗಾನ ಕೇಂದ್ರದಲ್ಲಿ ಗುರು ವೀರಭದ್ರನಾಯಕ್‌ ಹಿರಿಯಡಕ ಗೋಪಾಲರಾವ್‌, ನೀಲಾವರ ರಾಮಕೃಷ್ಣಯ್ಯ ಅವರ ಶಿಷ್ಯರಾಗಿ ಸಶಕ್ತ ಯಕ್ಷವಿದ್ಯೆಯನ್ನು ಆರ್ಜಿಸಿಕೊಂಡವರು. +5ನೇ ತರಗತಿವರೆಗೆ ವಿದ್ಯಾಭ್ಯಾಸ. +ಬಳಿಕ ಯಕ್ಷಗಾನ ರಂಗಕಲೆಯನ್ನು ಬದುಕಾಗಿಸಿ ಕೊಂಡ ರಘುರಾಮ ಮಡಿವಾಳರು ಪಾತ್ರೋಚಿತ ನೃತ್ಯಾಭಿನಯ, ಪ್ರೌಢ ರಂಗನಡೆ, ಗರಿಷ್ಠಮಟ್ಟದ ಪ್ರಸಂಗಾನುಭವದಲ್ಲಿ ಗುರುತಿಸಲ್ಪಡುವ ಕಲಾವಿದರು. +ಇವರ ನಿರ್ವಹಣೆಯ ವಾಲಿ, ಜಾಂಬವ, ವೀರಮಣಿ,ಕೌಂಡ್ಲೀಕ ,ಕಮಲಭೂಪ, ಕೌರವ, ಅರ್ಜುನ ಮೊದಲಾದ ಪಾತ್ರಗಳು ಕಲಾಭಿಮಾನಿಗಳ ಪ್ರಶಂಸೆಗೆ ಪಾತ್ರವಾಗಿವೆ. +ಕಮಲಶಿಲೆ 5, ಪೆರ್ಡೂರು 2, ಸೌಕೂರು 3,ಇಡಗುಂಜಿ 1, ಕಳವಾಡಿ 1, ಮೇಳಗಳಲ್ಲಿ ಕಲಾಸೇವೆ ಸಲ್ಲಿಸಿದ ರಘುರಾಮ ಅವರು 22 ವರ್ಷಗಳಿಂದ ಮಂದಾರ್ತಿ ಮೇಳದ ಪ್ರಧಾನಕಲಾವಿದರಾಗಿ ಕಲಾರಂಗದಲ್ಲಿ ಸಾರ್ಥಕ 34 ವರ್ಷಗಳನ್ನು ಪೂರೈಸಿ ಜನಪ್ರಿಯರಾಗಿದ್ದಾರೆ. +ಪತ್ನಿ ಬೇಬಿ. +ಸುಪ್ರೀತ, ಸುಚಿತ್ರ, ಸುದರ್ಶನ,ಸುರಾಜ್‌ ಮಕ್ಕಳು. +ಯಕ್ಷಗಾನ ಕ್ಷೇತ್ರದಲ್ಲಿ ವ್ಯವಸ್ಥಿತ ಕಲಾಪ್ರಗತಿ, ಬೆಳವಣಿಗೆಯನ್ನು ಕಂಡ ರಘುರಾಮ ಮಡಿವಾಳರನ್ನು ದೆಹಲಿ ಕನ್ನಡ ಸಂಘ, ಬೆಂಗಳೂರು ಕನ್ನಡ ವಾರ್ತಾ ಇಲಾಖೆ, ಉಡುಪಿ ರಜಕ ಸಂಘ ಸಮ್ಮಾನಿಸಿವೆ. +ತೆಂಕು-ಬಡಗಿನ ಸರ್ವ ಸಮರ್ಥ ಸ್ರ್ತೀ ವೇಷಧಾರಿಯಾಗಿ ಗುರುತಿಸಿಕೊಂಡ ಹಿರಿಯ ಕಲಾವಿದ ಎಂ.ಕೆ. ರಮೇಶ ಆಚಾರ್ಯ. +ಉನ್ನತ ಪ್ರತಿಭಾ ವ್ಯಕ್ತಿತ್ವದಿಂದ ಸಾಂಪ್ರದಾಯಿಕ ಸೀಮೆಯಲ್ಲಿಯೇ ಪುರಾಣ ಭೂಮಿಕೆಗಳನ್ನು ರಂಗನೆಲದಲ್ಲಿ ಕಡೆದಿಡುವ ಕಲಾಕೌಶಲವನ್ನು ಹೊಂದಿದ ರಮೇಶ ಆಚಾರ್ಯರು ಈ ರಂಗ ಭೂಮಿಯ ನಿಚ್ಚಳ ನೀತಿ, ನಿಯಮ ಪೂರ್ಣಬದ್ಧತೆಯನ್ನು ಮೈಗೂಡಿಸಿ-ಕೊಂಡವರು. +1949ರ ಅಕ್ಟೋಬರ್‌ ಮೂವತ್ತರಂದು ಕೃಷ್ಣಯ್ಯ ಆಚಾರ್‌ ಮಂಗಳಗಾರ್‌, ರುಕ್ಕಿಣೀಯಮ್ಮ ದಂಪತಿಯ ಸುಪುತ್ರರಾಗಿ ಆಲ್ಮನೆ ಗ್ರಾಮದ ಮಂಗಳಗಾರ್‌ ಎಂಬಲ್ಲಿ ಹುಟ್ಟಿದ ಆಚಾರ್ಯರು ಐದನೇ ತರಗತಿಯವರೆಗೆ ಅಕ್ಷರಾಭ್ಯಾಸ ನಡೆಸಿ ತನ್ನ 11ನೇ ವಯಸ್ಸಿನಲ್ಲಿ ಯಕ್ಷಗಾನ ಕ್ಷೇತ್ರಕ್ಕೆ ಕಾಲಿರಿಸಿದರು. +ತಂದೆ ಕೃಷ್ಣಯ್ಯ ಆಚಾರ್ಕರು ಶ್ರೀ ಜಗದಂಬಾ ಕೃಪಾಪೋಷಿತ ಯಕ್ಷಗಾನ ಮಂಡಳಿ-ಮಹಿಷಿ ಇದರ ಸಂಸ್ಥಾಪಕರಾಗಿದ್ದರು. +ಇವರ ದೊಡ್ಡ ತಂದೆಯವರ ಮಗ, ಅಣ್ಣ ನರಸಿಂಹ ಆಚಾರ್ಯರು ಶ್ರೀಯುತರ ಅನ್ಯಾದ್ಕಶ ಕಲಾಸಕ್ತಿಗೆ ನೀರೆರೆದರು. +ಕಲಾವಂತರ ಮನೆತನದಲ್ಲಿ ಹುಟ್ಟಿ ಬೆಳೆದ ಆಚಾರ್ಯರಿಗೆ ಇಂತಹ ರಂಗಜೀವನ ಬಾಲ್ಯದಲ್ಲೇ ಬಳುವಳಿಯಾಯಿತು. +ಸ್ರ್ತೀ ಪಾತ್ರಕ್ಕೊಪ್ಪುವ ರೂಪ, ಮಧುರಕಂಠ,ಆಂಗಿಕ ಲಾಲಿತ್ಯ, ಪ್ರಗಲ್ಫ ಪಾಂಡಿತ್ಯ ಸಶಕ್ತ ರಂಗನಡೆ,ಸುಪುಷ್ಟ ಪ್ರಸಂಗ ನಡೆಯನ್ನು ಹೊಂದಿದ ಆಚಾರ್ಯರು ಬಹುಬೇಗನೆ ಸ್ರ್ತೀ ಪಾತ್ರಧಾರಿಯಾಗಿ ಖ್ಯಾತನಾಮವನ್ನು ಗಳಿಸಿದರು. +ಬಡಗುತಿಟ್ಟಿನಲ್ಲಿ ಗುರು ವೀರಭದ್ರನಾಯಕ್‌ರಿಂದಲೂ, ತೆಂಕುತಿಟ್ಟಿನಲ್ಲಿ ಕುರಿಯ ವಿಠಲ ಶಾಸ್ತ್ರಿಗಳಿಂದಲೂ ಯಕ್ಷವಿದ್ಯೆ ಬೋಧಿಸಿಕೊಂಡ ಆಚಾರ್ಯರಿಗೆ ಬಲಿಷ್ಠ ಗುರುಬಲ ದೊರಕುವಂತಾಯಿತು. +ಮಂದಾರ್ತಿ 5, ಧರ್ಮಸ್ಥಳ 3, ಸುರತ್ಕಲ್‌24, ಸಾಲಿಗ್ರಾಮ 3, ಸೌಕೂರು 4, ಪೆರ್ಡೂರು 3,ಮಂಗಳಾದೇವಿ 3, ಹೀಗೆ ವೃತ್ತಿರಂಗದಲ್ಲಿ ಸರಿಸುಮಾರು 45 ವರ್ಷ ತಿರುಗಾಟ ಕಂಡವರು. +ತಂದೆಯವರ ಜಗದಂಬಾ ಮೇಳ ಮಹಿಷಿ ಕೃಪಾ-ಪೋಷಿತ ಯಕ್ಷಗಾನ ಮಂಡಳಿಯಲ್ಲೂ ದುಡಿದ ಶ್ರೀಯುತರು ಪ್ರಸ್ತುತ ಮಂಗಳಾದೇವಿ ಮೇಳದ ಕಲಾವಿದರಾಗಿ ಕಲಾಸೇವೆ ಸಲ್ಲಿಸುತ್ತಿದ್ದಾರೆ. +ಎಂ.ಕೆ.ಆರ್‌ ಅವರ ಚಂದ್ರಮತಿ, ದ್ರೌಪದಿ, ರುಕ್ಮಿಣಿ, ಶಾಂತಲೆ,ಸೀತೆ, ಮೇನಕೆ, ಸೈರೇಂದ್ರಿ ಮೊದಲಾದ ಸ್ರ್ತೀಪಾತ್ರಗಳು ಸಹೃದಯ ಕಲಾರಸಿಕರ ಹಾರ್ದಿಕ ಶ್ಲಾಘನೆಗೆ ಪಾತ್ರವಾಗಿವೆ. +ಉತ್ತಮ ಅರ್ಥಧಾರಿಯಾಗಿಯೂ,ಪ್ರಸಂಗಕರ್ತರಾಗಿಯೂ ಗುರುತಿಸಿಕೊಂಡ ಆಚಾರ್ಯರು ಅಪಾರ ರಂಗಾನುಭವದ ಕಲಾಖಜಾನೆಯಾಗಿ ಗೋಚರಿಸುವವರು. +ಮಡದಿ ವಿಶಾಲಾಕ್ಷಿ. +ಆಶಾಲತಾ, ಮನೋಜ, ತನುಜ ಮಕ್ಕಳು. +ಪ್ರತಿಭಾನ್ವಿತ ಕಲಾವಿದ ಎಂ.ಕೆ.ರಮೇಶ ಆಚಾರ್ಯರಿಗೆ ಪಟ್ಟಾಜೆ ಸ್ಮಾರಕ ಪ್ರಶಸ್ತಿ, ಯಕ್ಷಜ್ಯೋತಿಪ್ರಶಸ್ತಿ, ಶೇಣಿ ಗೋಪಾಲಕೃಷ್ಣ ಭಟ್‌ ವಿಶ್ವಸ್ಥ ಮಂಡಳಿ ಸಂಸ್ಕರಣ ಪ್ರಶಸ್ತಿ, ವಿಠಲಶಾಸ್ತ್ರಿ ಪ್ರಶಸ್ತಿ ಪ್ರತಿಷ್ಠಾನದ ಪ್ರಶಸ್ತಿ ದೊರಕಿರುತ್ತದೆ. +ಯಕ್ಷಗಾನ ಬಯಲಾಟ ಅಕಾಡೆಮಿ ಪ್ರಶಸ್ತಿಯೂ ಶ್ರೀಯುತರ ಮುಡಿಗೇರಿದೆ. +ಬಡಗುತಿಟ್ಟಿನ ಯಕ್ಷಬಾಂದಳದ ಸಿಡಿಲುಮರಿಯಂತೆ ಕಂಗೊಳಿಸುವ ಹಿರಿಯ ಕಲಾವಿದ ಬೇಲ್ತೂರು ರಮೇಶ್‌ ಪರಂಪರೆಯ ರಂಗಸ್ಥಳದಲ್ಲಿ ವಿಸ್ಫುಲಿಂಗದಂತೆ ಮರೆಯುವ ಪ್ರಬುದ್ಧ ಪುಂಡುವೇಷಧಾರಿ. +ಕುಂದಾಪುರ ತಾಲೂಕಿನ ಕಟ್‌ಬೇಲ್ತೂರು ಎಂಬಪುಟ್ಟ ಹಳ್ಳಿಯಲ್ಲಿ ರಾಮ ನಾಯ್ಕ-ರುಕ್ಕು ದಂಪತಿಯ ಸುಪುತ್ರರಾಗಿ ಜನಿಸಿದ ರಮೇಶ್‌ ಇದೀಗ 59ರ ಹರೆಯದಲ್ಲೂ ಕ್ರಿಯಾಶಿಲರಾಗಿ ವೃತ್ತಿರಂಗ ಭೂಮಿಯಲ್ಲಿದ್ದು ಯಕ್ಷಕಲೆಯನ್ನೇ ಬದುಕಿನ ಬಂಡವಾಳವಾಗಿರಿಸಿಕೊಂಡ ಶಿಷ್ಟ ಕಲಾವಿದರು. +ಬೇಲ್ತೂರು ರಮೇಶ ಅವರ ವಿದ್ಯಾರ್ಹತೆ 5ನೇತರಗತಿ ಮಾತ್ರ. +ಬೇಲ್ತೂರು ಬಣ್ಣದ ವೇಷಧಾರಿ ರಾಮ ಬಳೆಗಾರರ ಪ್ರೇರಣೆಯಂತೆ ತನ್ನ 15ರ ಹರೆಯದಲ್ಲೇ ಮುಖಕ್ಕೆ ಬಣ್ಣ ಹಚ್ಚಿದ ಇವರು ಮತ್ತೆ ಹಿಂದಿರುಗಿ ಕಂಡದ್ದಿಲ್ಲ. +ದಶಾವತಾರಿ ಗುರುವೀರಭದ್ರನಾಯಕ್‌, ಶಿರಿಯಾರ ಮಂಜುನಾಯ್ಯ,ಹೆರಂಜಾಲು ವೆಂಕಟರಮಣ ಗಾಣಿಗ ಅವರ ಸಶಕ್ತಗುರು ಬಲವನ್ನು ಪಡೆದ ಬೇಲ್ತೂರು ಅವರು ಡಾ.ಕೋಟ ಶಿವರಾಮ ಕಾರಂತರ ಮಾರ್ಗದರ್ಶನದಲ್ಲಿ ಉನ್ನತ ರಂಗ ಪ್ರಾವೀಣ್ಯತೆ ಪಡೆದವರು. +ಮಾರಣಕಟ್ಟೆ 7, ಹಾಲಾಡಿ 5, ಸಾಲಿಗ್ರಾಮ10, ಕಳವಾಡಿ 4, ಬಗ್ದಾಡಿ 5, ಮಡಾಮಕ್ಕಿ 7,ಮಂದಾರ್ತಿ 3, ಅಮೃತೇಶ್ವರಿ 1, ಆಜ್ರಿ-ಶನೀಶ್ವರಮೇಳ 2, ಹೀಗೆ 44 ವರ್ಷಗಳ ಸುದೀರ್ಥ ರಂಗವ್ಯವಸಾಯದಲ್ಲಿ ಸಾರ್ಥಕ ಕೀರ್ತಿಗಳಿಸಿದ ರಮೇಶ್‌ಪ್ರಸ್ತುತ ಆಜ್ರಿ ಮೇಳದ ಪ್ರಧಾನ ಕಲಾವಿದರಾಗಿ ದುಡಿಯುತ್ತಿದ್ದಾರೆ. +ಶ್ರೀಯುತರ ಆಳಂಗ, ಎತ್ತರದ ಶ್ರುತಿನಿಷ್ಠಸ್ವರ ತ್ರಾಣ, ಖಚಿತ ಲಯಗಾರಿಕೆಯಲ್ಲಿ ಅಭಿವ್ಯಕ್ತವಾಗುವ ಚುರುಕಿನ ನೃತ್ಯಗತಿ, ಪ್ರೌಢ ರಂಗ ಪರಿಣತಿ ಮೂರನೇ ವೇಷಕ್ಕೆ ಸಮುಚಿತವಾಗುತ್ತದೆ. +ಅವರು ನಿರ್ವಹಿಸುವ ಬಬ್ರುವಾಹನ, ಅಭಿಮನ್ಯು,ಪುಷ್ಕಳ, ಶ್ರೀಕೃಷ್ಣ ,ದೇವವೃತ, ಧ್ರುವ, ಮೊದಲಾದ ಭೂಮಿಕೆಗಳಿಗೆ ಅವರಿಗೆ ಅವರೇ ಸರಿಸಾಟಿ. +ರಮೇಶ್‌ಅವರ ಪುರಾಣ ಅನುಭವವಂತೂ ಸಾಮೃದ್ಧಿಕ. +ಇವರ ಅನೇಕ ಶಿಷ್ಯರು ರಂಗಭೂಮಿಯಲ್ಲಿ ವ್ಯವಸಾಯ ನಿರತರು. +ಸಂಪ್ರದಾಯಬದ್ಧ ಬೇಲ್ತೂರು ರಮೇಶ್‌ಅವರು ಭಾರತದಾದ್ಯಂತವಲ್ಲದೆ ದೂರದ ಅಮೆರಿಕಾ,ಜರ್ಮನಿ, ಹಾಂಕಾಂಗ್‌, ಇಸ್ರೇಲ್‌, ಕೆನಡಾ ಮೊದಲಾದ ವಿದೇಶಗಳಲ್ಲೂ ಕಲಾಪ್ರತಿಭೆ ಮೆರೆದು ಕಲಾರಸಿಕರ ಪ್ರೀತಿಗೆ ಪಾತ್ರರಾಗಿದ್ದಾರೆ. +ಧರ್ಮಪತ್ನಿ ಮುತ್ತು. +ನಾಗರತ್ನಾ, ಪ್ರೇಮ, ಪ್ರಮೋದಿನಿ ಮಕ್ಕಳು. +ಶ್ರೀಯುತರಿಗೆ ಡಾ.ಜಿ.ಶಂಕರ್‌ ಫ್ಯಾಮಿಲಿಟ್ರಸ್ಟ್‌ ವತಿಯಿಂದ ಸಂಮಾನ, ಹಿರಿಯಡ್ಕ, ಮಣಿಪುರ,ಬೇಲ್ತೂರು ಸುಳ್ಸೆ ಮೊದಲಾದ ಕಡೆಗಳಲ್ಲಿ ಗೌರವ ಪುರಸ್ಕಾರ ದೊರಕಿರುತ್ತದೆ. +ಬಡಗುತಿಟ್ಟು ಯಕ್ಷಗಾನ ರಂಗಭೂಮಿಯಲ್ಲಿ ಶಾಸ್ತ್ರ ಸಮನ್ವಿತ ಮದ್ದಳೆವಾದನ ವಿದ್ಯೆಯನ್ನು ಗುರುಮುಖೇನ ಶೃದ್ಧೆ, ಸಾಧನೆಯಿಂದ ಸಿದ್ಧಿಸಿಕೊಂಡ ಪ್ರಬುದ್ಧ ಮದ್ದಳೆವಾದಕ ಕಡತೋಕ ರಮೇಶ ಶಂಕರ ಭಂಡಾರಿ. +ಹೊನ್ನಾವರ ತಾಲೂಕಿನ ಕಡತೋಕ ಎಂಬಲ್ಲಿ ಶಂಕರ ಭಂಡಾರಿ ಪಾರ್ವತಿ ದಂಪತಿಯ ಸುಪುತ್ರರಾಗಿ ಜನಿಸಿದ ರಮೇಶ ಭಂಡಾರಿಯವರೆಗೆ ಪ್ರಸ್ತುತ ನಲವತ್ತರ ಹರಯ. +ಎಂಟನೇ ತರಗತಿಯವರೆಗಿನ ಶೈಕ್ಷಣಿಕ ಸಂಸ್ಕಾರ ಪಡೆದ ಶ್ರೀಯುತರು ಉಡುಪಿ ಯಕ್ಷಗಾನ ಕೇಂದ್ರಕ್ಕೆ ಸೇರ್ಪಡೆಯಾಗಿ ಗುರು ಮಹಾಬಲ ಕಾರಂತ,ವಿದ್ವಾನ್‌ ಗಣಪತಿ ಭಟ್ಟರ ಗುರುತನದಲ್ಲಿ ಸಮರ್ಪಕ ಯಕ್ಷ ಶಿಕ್ಷಣ ಸಂಪನ್ನರಾದವರು. +ರಮೇಶ ಭಂಡಾರಿ ಮದ್ದಳೆಯನ್ನ್ನು ತೊಡೆಯೇರಿಸಿ ಕುಳಿತರೆ ಮೂಕಕೋಗಿಲೆಗೆ ಬಾಯಿ ಬಂದ ದಿವ್ಯಾನುಭವ. +ಮದ್ದಳೆಯ ಎಡ-ಬಲದಲ್ಲಿ ಅವರ ಬೆರಳುಗಳ ಕುಣಿತದಿಂದ ಹೊರಹೊಮ್ಮುವ ಸುಮುಧುರ ನಾದಲಹರಿ ರಸಿಕ ಶ್ರಾವಕರನ್ನು ತನ್ಮಯರನ್ನಾಗಿಸಿ ಬಿಡುತ್ತದೆ. +ನವಿರಾದ ಬೆರಳುಗಾರಿಕೆ, ಸಶಕ್ತ ಲಯಗಾರಿಕೆ,ಕಲಾವಿದರ ಹೆಜ್ಜೆ-ಗೆಜ್ಜೆಗೆ ಪೂರಕವಾದ ನುಡಿಸಾಣಿಕೆ,ಗಾನಪೂರಕವಾದ ಹಿಮ್ಮೇಳ ಹೊಂದಾಣಿಕೆ ಇವರ ವಾದನಕ್ರಮದಲ್ಲಿ ಗುರುತಿಸಬಹುದಾಗಿದೆ. +ಸೌಕೂರು 4, ಹಾಲಾಡಿ 1, ಮಂದಾರ್ತಿ 20 ಹೀಗೆ ಯಕ್ಷಲೋಕದಲ್ಲಿ ಬೆಳ್ಳಿಹಬ್ಬದ ತಿರುಗಾಟದಲ್ಲಿ ಯಶಸ್ಸು ಕಂಡವರು ಭಂಡಾರಿಯವರು. +ಪ್ರತಿಭಾನ್ವಿತ ಮದ್ದಳೆಗಾರರಾದ ಅವರಿಗೆ ಚಂಡೆವಾದನದ ಪರಿಣಿತಿಯೂ ಇದೆ. +ಮಾತ್ರವಲ್ಲ ಭಾಗವತಿಕೆಯೂ ತಿಳಿದಿದೆ. +ವೃತ್ತಿಬದುಕಿನ ಬಿಡುವಿನ ವೇಳೆಯಲ್ಲಿ ಮಂಗಲವಾದ್ಯ ಕಲಾವಿದರಾಗಿಯೂ ಅವರು ಭಾಗವಹಿಸುತ್ತಾರೆ. +ಮಡದಿ ಉಷಾ. +ಆಶಿಕಾ, ಅಮೂಲ್ಯ ಮಕ್ಕಳು. +ಶ್ರೀಯುತರ ಎತ್ತರದ ಪ್ರತಿಭಾ ಪ್ರಭಾವಳಿಗೆ ಕೋಟ ಮಹಾಬಲ ಕಾರಂತ ಪ್ರಶಸ್ತಿಯೂ ದೊರಕಿರುತ್ತದೆ. +ಪರಿಶುದ್ಧ ರಾಗ ಪರಿಣತಿ, ಕೋಮಲ ಶಾರೀರ,ಸಶಕ್ತ ರಂಗತಂತ್ರ, ಹಾಗೂ ಸಮರ್ಪಕ ಪೌರಾಣಿಕ ಜ್ಞಾನದೊಂದಿಗೆ ಗುರುತಿಸಿಕೊಂಡ ಬಡಗಿನ ಯುವಭಾಗವತ ಸೂರಾಲು ರವಿಕುಮಾರ್‌. +ಉಡುಪಿ ತಾಲೂಕಿನ ಇತಿಹಾಸ ಪ್ರಸಿದ್ಧ ಸುರಾಲು ಎಂಬಲ್ಲಿ ಗುಂಡು ದೇವಾಡಿಗ - ಕಮಲಾ ದಂಪತಿಯ ಸುಪುತ್ರರಾಗಿ 1972ರಲ್ಲಿ ಜನಿಸಿದ ರವಿಕುಮಾರ್‌ 8ನೇ ತರಗತಿ ಪೂರೈಸಿ, ತನ್ನ 14ನೇ ವಯಸ್ಸಿನಲ್ಲಿ ಯಕ್ಷ ಬದುಕಿಗೆ ಅಂಟಿಕೊಂಡರು. +ಎಳವೇಯಲ್ಲಿ ಯಕ್ಷಗಾನ ಕಲಾಸಕ್ತಿ ಮೈಗೂಡಿಸಿಕೊಂಡಿದ್ದ ಇವರಿಗೆ ತಾಯಿ ಹಾಗೂ ಮಾವನ ಪ್ರೋತ್ಸಾಹ ನೆರವು ನೀಡಿತು. +ಪೇತ್ರಿ ಕೃಷ್ಣರಾಯ ಪ್ರಭು ಅವರಲ್ಲಿ ಆರಂಭಿಕ ಯಕ್ಷ ಶಿಕ್ಷಣಪಡೆದ ರವಿಕುಮಾರ್‌, ಕೆ.ಪಿ.ಹೆಗಡೆ ಅವರಲ್ಲಿ ವ್ಯವಸ್ಥಿತ ಭಾಗವತಿಕೆ ಶಿಕ್ಷಣ ಪಡೆದರು. +ಅಮೃತೇಶ್ವರಿ, ಸಾಲಿಗ್ರಾಮ, ಕುಮಟಾ,ಮಂದಾರ್ತಿ, ಮಾರಣಕಟ್ಟೆ, ಬಗ್ಡಾಡಿ, ಕಮಲಶಿಲೆ,ಸೌಕೂರು ಮೇಳಗಳಲ್ಲಿ ಕಲಾಸೇವೆಗೈದ ರವಿಕುಮಾರರು ಸಾರ್ಥಕ ರಂಗಜೀವನದಲ್ಲಿ ರಜತವರ್ಷಗಳನ್ನು ಕಳೆದಿದ್ದಾರೆ. +ಪ್ರಸ್ತುತ ಶ್ರೀಯುತರು ಸೌಕೂರು ಮೇಳದ ಪ್ರಧಾನ ಭಾಗವತರಾಗಿ ದುಡಿಯುತ್ತಿದ್ದಾರೆ. +ವಾದ್ಯ ಸಂಗೀತದ ಕಲಾವಿದರು ಇವರಾದುದರಿಂದ ಯಕ್ಷಗಾಯನದ ರಾಗ ನಿರೂಪಣೆಯಲ್ಲಿ ಪರಿಶುದ್ಧತೆ ಪ್ರಕಟಿಸುವ ರವಿಕುಮಾರರ ಸುಸ್ವರದಿಂಪಿಗೆ ಯಕ್ಷ ಕಲಾ ರಸಿಕರು ಮನಸ್ವೀ ಮಣಿಯುತ್ತಾರೆ. +ಇವರ ಧರ್ಮ ಪತ್ನಿ ಸುಶೀಲಾ. +ಶಶಾಂಕ ಹಾಗೂ ಶರಣ್ಯ ಇವರ ಉಭಯ ಮಕ್ಕಳು. +ಯಕ್ಷಗಾನ ನೃತ್ಯ ಕಲೆಯನ್ನು ಬಲ್ಲಭಾಗವತರಿವರು. +ಶ್ರೀಯುತರನ್ನು ಅನೇಕ ಸಂಘ-ಸಂಸ್ಥೆಗಳು ಗುರುತಿಸಿ ಗೌರವಿಸಿವೆ. +ಶ್ರವಣಮಂಜುಳಕರ, ರಂಗಸ್ಥಳ ಝೇಂಕಾರದ ನುಡಿತ-ಭಣಿತಗಳ ಚಂಡೆವಾದನದಲ್ಲಿ ಸಿದ್ಧಿ-ಪ್ರಸಿದ್ಧಿಯನ್ನು ಕಂಡ ಯುವ ಚಂಡೆಗಾರ ಹಳ್ಳಾಡಿ ರಾಕೇಶ ಮಲ್ಯ. +ಉಡುಪಿ ಜಿಲ್ಲೆಯ ಹಳ್ಳಾಡಿ ಎಂಬ ಪುಟ್ಟಹಳ್ಳಿಯಲ್ಲಿ ಹುಟ್ಟಿ ಬೆಳೆದ ರಾಕೇಶ ಮಲ್ಯರು, ಹಳ್ಳಾಡಿ ಸುಬ್ರಾಯ ಮಲ್ಯ, ಶೋಭಾ ಮಲ್ಯ ದಂಪತಿಯ ಸುಪುತ್ರರಾಗಿ 18-02-1970ರಲ್ಲಿ ಜನಿಸಿದರು. +ಎಸ್‌.ಎಸ್‌.ಎಲ್‌.ಸಿ. ಪ್ರೌಢಶಿಕ್ಷಣದ ಬಳಿಕ ಯಕ್ಷಗಾನ ರಂಗಕ್ಕೆ ಪಾದಾರ್ಪಣೆ ಮಾಡಿದ ರಾಕೇಶಮಲ್ಯರಿಗೆ ಚಂಡೆ ವಾದನ ಕಲೆ ರಕ್ತಗತವಾಗಿ ಪ್ರಾಪ್ತಿಯಾಯಿತು. +ಇವರ ತಂದೆ ಹಳ್ಳಾಡಿ ಸುಬ್ರಾಯ ಮಲ್ಯರು ಹವ್ಯಾಸೀ ಸಂಘ ಸಂಸ್ಥೆಗಳ ಶ್ರೇಷ್ಠ ಯಕ್ಷಗಾನ ಗುರುಗಳಾದುದರಿಂದ ರಾಕೇಶರಿಗೆ ವಾದನಕಲೆ, ಯಕ್ಷಗಾನ ಬಾಂಧವ್ಯ, ಅಭಿಜಾತವಾಗಿಒಲಿಯಿತು. +16ರ ಹರೆಯದಲ್ಲೇ ಕಲಾಪ್ರಪಂಚ ಪ್ರವೇಶಿಸಿದ ರಾಕೇಶರು ಶಾಲಾದಿನಗಳಲ್ಲೇ ಚಂಡೆವಾದನ ಕಲೆಯನ್ನು ಸಿದ್ಧಿಸಿಕೊಂಡವರು. +ಇವರಿಗೆ ತಂದೆಯವರೇ ಗುರುಗಳು. +ಪದ್ಯ ಸಾಹಿತ್ಯ ಭ್ರಷ್ಠವಾಗದಂತೆ ನುಣುಪು ನವಿರಾದ ನುಡಿಸಾಣಿಕೆಯನ್ನು ಕರಗತ ಮಾಡಿಕೊಂಡ ರಾಕೇಶ ಮಲ್ಯರು ಒಳ್ಳೆಯ ಅನುಭವ ಪೂರ್ಣಕಲಾವಿದ. +ಪ್ರತೀ ಪ್ರಸಂಗಗಳ ನಡೆಯೂ ಅವರಿಗೆ ಲೀಲಾಜಾಲ. +ಪದ್ಯಗಾರಿಕೆಯೂ ಅವರಿಗೆ ತಿಳಿದಿರುವುದರಿಂದ ಚಂಡೆಯ ನುಡಿಗಾರಿಕೆಯೂ ಸುಸಂಬದ್ಧ, ಸಾಂಗ, ಸುಶ್ರಾವ್ಯ. +ಮಾರಿಕಾಂಬಾ-ಶಿರಸಿ 7, ಮಂದಾರ್ತಿ 3,ಸೌಕೂರು 10, ಪೆರ್ಡೂರು 4, ಮೇಳಗಳಲ್ಲಿ ಸುಮಾರು24 ವರ್ಷ ಕಲಾಕೃಷಿ ನಡೆಸಿದ ಶ್ರೀಯುತರು ಹಲವು ಚಂಡೆಗಾರ ಶಿಷ್ಯರನ್ನು ರೂಪಿಸಿದ್ದಾರೆ. +ಪತ್ನಿ ರಶ್ಮಿ ಮಲ್ಯ. +ಸುರಕ್ಷಾ, ಶ್ರೀನಿಧಿ ಮಕ್ಕಳು. +ರಾಕೇಶ ಮಲ್ಯರು ಪ್ರಸ್ತುತ ಪೆರ್ಡೂರು ಮೇಳದ ಪ್ರಧಾನ ಚಂಡೆಗಾರರು. +ಶ್ರೀಯುತರನ್ನು ಹಲವು ಸಂಘ-ಸಂಸ್ಥೆಗಳು ಗುರುತಿಸಿ ಸಂಮಾನಿಸಿವೆ. +ರಾಜ್ಯ, ಹೊರರಾಜ್ಯಗಳ ಹಲವಾರು ಸಾಂಸ್ಕೃತಿಕ ಸಂಘಟನೆಗಳಿಂದಲೂ ರಾಕೇಶ ಮಲ್ಯರು ಸಂಮಾನಿತರಾಗಿದ್ದಾರೆ. +ತುಂಬುಗೊರಳಿನ ಭಾವನಿರ್ಬರ, ರಸಮಧುರ,ಶ್ರವಣಮಂಜುಳ ಯಕ್ಷಗಾಯನದಲ್ಲಿ ಬಡಗುತಿಟ್ಟಿನ ಯಕ್ಷಲೋಕದಲ್ಲಿ ಜನಪ್ರಿಯರಾದ ಭಾಗವತ ಜಿ.ರಾಘವೇಂದ್ರಮಯ್ಯ ಕುಂದಾಪುರ ತಾಲೂಕಿನ ಹಾಲಾಡಿ ಎಂಬಲ್ಲಿ15-10-1968ರಲ್ಲಿ ನಾಗಪ್ಪ ಮಯ್ಯ - ಸರಸ್ವತಿ ಮಯ್ಯ ದಂಪತಿಯ ಸುಪುತ್ರರಾಗಿ ಜನಿಸಿದ ರಾಘವೇಂದ್ರಮಯ್ಯ ಅವರು 10ನೇ ತರಗತಿಯವರೆಗೆ ಶಿಕ್ಷಣಾಭ್ಯಾಸ ಪೂರೈಸಿ, ತನ್ನ 16ರ ಹರಯದಲ್ಲೇ ಯಕ್ಷಬದುಕಿಗೆ ಓಂಕಾರ ಹಾಡಿದವರು. +ಗಾನಗಾರುಡಿಗೆ ಕಾಳಿಂಗ ನಾವಡರ ಭಾಗವತಿಕೆಯೇ ರಾಘವೇಂದ್ರ ಮಯ್ಯ ಅವರಿಗೆ ಯಕ್ಷಗಾನ ಕಲಾ ಆಕರ್ಷಣೆಗೆ ಇಂಬು ನೀಡಿತು. +ಪ್ರೇರಣೆ-ಸ್ಫೂರ್ತಿ ಆಯಿತು. +ಪ್ರಾಚಾರ್ಯ ನಾರ್ಣಪ್ಪ ಉಪ್ಪೂರರಲ್ಲಿ ತಾಳದೀಕ್ಷೆ ಪಡೆದ ಮಯ್ಯ ಅವರಿಗೆ ಕೆ.ಪಿ.ಹೆಗಡೆಯವರ ಗುರುಬಲವೂ ದೊರಕಿ ಸಶಕ್ತ ಭಾಗವತಿಕೆಗೆ ಸಹಕಾರಿಯಾಯಿತು. +ಮಧುರ ಕಂಠದ ಮಯ್ಯ ಅವರ ಯಕ್ಷಗಾಯನದಲ್ಲಿ ಕಲಾಬದುಕಿನ ಸ್ಫೂರ್ತಿಯ ಚಿಲುಮೆ ಕಾಳಿಂಗ ನಾವಡರ ಕಂಠ ಸಿರಿಯ ಭಾವಪೂರ್ಣ ಇಳಿತ-ಮಿಳಿತವಾಗುವುದನ್ನು ಗಮನಿಸಬಹುದಾಗಿದೆ. +ರಂಗ ತುಂಬುವ, ನಟನ,ಕಲಾಭಿವ್ಯಕ್ತಿಗೆ ಆನುಕೂಲ್ಯವಾಗುವ ಅವರ ಭಾಗವತಿಕೆ ಎಂಥವರನ್ನು ಸೆರೆ ಹಿಡಿಯಬಲ್ಲುದು. +ಸ್ಫುಟವಾದ,ಪರಿಶುದ್ಧವಾದ ರಾಗಜ್ಞಾನ, ಖಚಿತ ತಾಳ-ಲಯಗಾರಿಕೆ, ಸಮೃದ್ಧ ಪ್ರಸಂಗಾನುಭವ, ಎಲ್ಲಕ್ಕೂ ಮಿಗಿಲಾಗಿ ಅವರು ಸಾಧಿಸಿದ ರಂಗತಾಂತ್ರಿಕತೆ ರಂಗಸ್ಥಳದಲ್ಲಿ ಎದ್ದು ಕಾಣುತ್ತದೆ. +ಪುರಾಣ ಪ್ರಸಂಗಗಳ ಆಳ ಅನುಭವವನ್ನು ಹೊಂದಿದ, ಸಮಕಾಲೀನ ರಂಗಭೂಮಿಯ ನವೀನ ಪ್ರಸಂಗಗಳಿಗೆ ಅನಿವಾರ್ಯವೆನಿಸುವ ಭಾಗವತ ಮಯ್ಯ ಅವರು ಅತ್ಯಲ್ಪ ಕಾಲದಲ್ಲೇ ತಾರಾಮೌಲ್ಯ ಸಿದ್ಧಿಸಿಕೊಂಡವರು. +ದೂರದರ್ಶನ, ಆಕಾಶವಾಣಿಯ ಕಲಾವಿದರೂ ಆಗಿರುವ ಮಯ್ಯ ಚಲನಚಿತ್ರನಟನಾಗಿಯೂ ಅನೇಕ ಸಿನೇಮಾಗಳಲ್ಲಿ ಪಾತ್ರನಿರ್ವಹಿಸಿದ್ದಾರೆ. +ಯಕ್ಷಗಾನ, 'ಹಾಸ್ಯಯಣ'ಆಡಿಯೋ ವೀಡಿಯೋಗಳ ಮೂಲಕ ಜನಪ್ರಿಯತೆಯ ತುತ್ತತುದಿಗೇರಿದ ಮಯ್ಯ ಕುಂದಗನ್ನಡ ಸೊಗಸನ್ನು ತನ್ನ ಭಾಗವತಿಕೆಯ "ಹಾಸ್ಯಯಣ' ಪ್ರಸಂಗಗಳಲ್ಲಿ ಗೊತ್ತು ಗೊಳಿಸಿ ಗೆಲುವು ಕಂಡವರು. +ಅಮೃತೇಶ್ವರಿ, ಹಾಲಾಡಿ ಪೆರ್ಡೂರು,ಸೌಕೂರು, ಸಾಲಿಗ್ರಾಮ, ಮೇಳಗಳಲ್ಲಿ ಸೇವೆ ಸಲ್ಲಿಸಿದ ಮಯ್ಯ ಅವರ ಕಲಾಬದುಕು 26 ವರ್ಷ ಕಂಡಿದೆ. +ಪತ್ನಿ ಪಲ್ಲವಿ, ಪುತ್ರ ದೀಷಣ್‌ಕುಮಾರ್‌ರನ್ನೊಳಗೊಂಡ ಪುಟ್ಟ ಸಂಸಾರ ಅವರದು. +ಅಪಾರ ಅಭಿಮಾನಿ ಬಳಗವನ್ನು ಹೊಂದಿದ ರಾಘವೇಂದ್ರ ಮಯ್ಯ ಅವರು ರಾಜ್ಯ,ಹೊರರಾಜ್ಯಗಳಲ್ಲಿ ಸಮ್ಮಾನಿತರಾಗಿದ್ದಾರೆ. +ಹೆಂಗಳೆಯರನ್ನೂ ನಾಚಿಸಬಲ್ಲ ಆಕರ್ಷಕ ಮೈಮಾಟ, ಬಾಗು-ಬಳುಕು. +ಮಧುರ ಕಂಠಸಿರಿಯಿಂದ ಮನಮೋಹಕ ಸ್ತ್ರೀವೇಷಧಾರಿಯಾಗಿ ಸಾರ್ಥಕ ಹೆಸರು ಗಳಿಸಿದ ಪ್ರತಿಭಾವಂತ ಕಲಾವಿದ ಹೊಸಂಗಡಿ ರಾಜೀವ ಶೆಟ್ಟಿ. +ಕುಂದಾಪುರ ತಾಲೂಕಿನ ಹಳ್ಳಿ ಹೊಳೆ-ವಾಟೆಬಚ್ಚಲು ಎಂಬ ಗ್ರಾಮೀಣ ಪ್ರದೇಶದಲ್ಲಿ 19-5-1961ರಲ್ಲಿ ಕರಿಯಣ್ಣ ಶೆಟ್ಟಿ-ಶೇಷಮ್ಮ ಶೆಡ್ತಿ ದಂಪತಿಯ ಪುತ್ರನಾಗಿ ಜನಿಸಿದ ರಾಜೀವ ಶೆಟ್ಟರು ಐದನೇ ತರಗತಿಗೆ ಶರಣು ಹೊಡೆದು ತನ್ನ 15ರ ಹರೆಯದಲ್ಲೇ ಬಣ್ಣದ ಬದುಕು ಕಂಡರು. +ಪರಿಸರದ ಯಕ್ಷಗಾನ ಬಯಲಾಟಗಳೇ ಇವರಿಗೆ ಕಲಾ ಆಕರ್ಷಣೆಗೆ ಇಂಬು ನೀಡಿದವು. +ನಾರ್ಣಪ್ಪಉಪ್ಪೂರ, ಕೋಟ ವೈಕುಂಠ ಅವರ ಶಿಷ್ಯನಾದ ರಾಜೀವ ಶೆಟ್ಟರು ಪ್ರಸ್ತುತ ಐವತ್ತು ದಾಟಿದರೂ ಸ್ರ್ತೀ ಸಹಜವಾದ ಎಂದಿನ ರೂಪಸಿರಿ, ಕಂಠಸಿರಿಯನ್ನು ಉಳಿಸಿಕೊಂಡಿರುವುದು ವಿಶೇಷವೆನಿಸುತ್ತದೆ. +ಕಮಲಶಿಲೆ 1, ಪೆರ್ಡೂರು 1 ಅಮೃತೇಶ್ವರಿ3, ಸೌಕೂರು 1, ಸಾಲಿಗ್ರಾಮ 7, ಬಚ್ಚಗಾರು,ಮಂದಾರ್ತಿ, ಮೇಳಗಳಲ್ಲಿ ಸುಮಾರು 35ವರುಷಗಳ ರಂಗವ್ಯವಸಾಯವನ್ನು ಯಶಸ್ವಿಯಾಗಿ ಪೂರೈಸಿದ್ದಾರೆ. +ಶ್ರೀಯುತರು ಮಂದಾರ್ತಿ ಮೇಳದ ಪ್ರಧಾನ ಸ್ತ್ರೀವೇಷಧಾರಿಯಾಗಿ ದುಡಿಯುತ್ತಿದ್ದಾರೆ. +ಶ್ರೀಯುತರ ನೃತ್ಯಾಭಿನಯದ ಲಾಲಿತ್ಯಪೂರ್ಣತೆ,ಮಾಧುರ್ಯ ಸ್ವರ ಭೇದಕ ಮಾತುಗಾರಿಕೆ ಸ್ತ್ರ ಸಹಜ ಕಲಾಭಿವ್ಯಕ್ತಿಗೆ ಪುಷ್ಠಿ ನೀಡುತ್ತದೆ. +ಎಲ್ಲಾ ಗುಣಧರ್ಮದ ಸ್ತ್ರೀ ಭೂಮಿಕೆಗಳನ್ನೂ ಇವರುನಿರ್ವಹಿಸುವವರಾದರೂ ಶೃಂಗಾರ, ಸೌಮ್ಯ, ಸ್ರ್ತೀ ವೇಷಗಳಲ್ಲಿ ಇವರು ಹೆಚ್ಚು ಗಮನೀಯವಾಗುತ್ತಾರೆ. +ಶ್ರೀಯುತರ ಪ್ರಭಾವತಿ, ಸುಗರ್ಭೆ, ಚಿತ್ರಾಂಗದೆ,ಕೈಕೇಯಿ, ಆಲೋಲಿಕೆ, ದ್ರೌಪದಿ, ರುಕ್ಮಿಣಿ,ಯೋಜನಗಂಧಿ, ಸುಭದ್ರೆ, ಶಕುಂತಲೆ ಮೊದಲಾದ ಪಾತ್ರಗಳು ಕಲಾಪ್ರೇಮಿಗಳ ಮನಸೂರೆಗೊಂಡಿವೆ. +ಕುಸುಮಾ ಆರ್ ಶೆಟ್ಟಿ, ಇವರ ಸಹ ಧರ್ಮಿಣಿಯಾಗಿದ್ದಾರೆ. +ಹರೀಶ್‌, ಗಣೇಶ್‌,ಅನುಸೂಯಾ ಇವರ ಮೂವರು ಮಕ್ಕಳು. +ಶ್ರೀಯುತರನ್ನು ಹಲವು ಸಂಘಸಂಸ್ಥೆಗಳು ಸಂಮಾನಿಸಿವೆ. +ಪೌರಾಣಿಕ ಕಲಾ ವಿಗ್ರಹಗಳನ್ನು ಸಾಂಪ್ರದಾಯಿಕ ಸೊಗಡಿನಲ್ಲಿ ಸಚೇತನ-ಗೊಳಿಸಿದ ಶ್ರೀಮಂತ ಯಕ್ಷಪ್ರತಿಭೆ ರಾಧಾಕೃಷ್ಣ ನಾಯ್ಕ ಚೇರ್ಕಾಡಿ. +ಉಡುಪಿ ಜಿಲ್ಲೆಯ ಜೇರ್ಕಾಡಿ-ಬಾಳ್ಕಟ್ಟು ಎಂಬಲ್ಲಿ 2-5-1951ರಲ್ಲಿ ಜನಿಸಿದ ರಾಧಾಕೃಷ್ಣ ನಾಯ್ಕರು ಗೋವಿಂದ ನಾಯ್ಕ-ರಾಧಾ ದಂಪತಿಯ ಸುಪುತ್ರ. +ನಾಕಕ್ಕೇ ಓದು ಸಾಕೆನಿಸಿಕೊಂಡ ನಾಯ್ಕರು 17ನೇ ವಯಸ್ಸಿನಲ್ಲಿ ಗೆಜ್ಜೆ ಕಟ್ಟಿ ಹೆಜ್ಜೆ ಹಾಕಿದವರು. +ಎಳವೆಯಲ್ಲೇ ರಾಧಾಕೃಷ್ಣ ನಾಯ್ಕರಿಗೆ ಅನ್ಯಾದೃಶ ಕಲಾಸಕ್ತಿ. +ತಂದೆಯವರೇ ಶ್ರೀಯುತರ ರಂಗಬದುಕಿಗೆ ಪ್ರೇರಣಾಶಕ್ತಿ. +ನೀಲಾವರ ರಾಮಕೃಷ್ಣಯ್ಯ ಹಿರಿಯಡಕ ಗೋಪಾಲ ರಾವ್‌, ಹಾರಾಡಿ ಕೃಷ್ಟಗಾಣಿಗ, ಹಾಗೂ ಪೇತ್ರಿ ಮಾಧು ನಾಯ್ಕ ಅವರ ಗುರುಬಲವನ್ನು ಸಂಪಾದಿಸಿದ ರಾಧಾಕೃಷ್ಣ ನಾಯ್ಕರು ಸನಾತನ ಯಕ್ಷರಂಗದ ನಿಜಸತ್ವವನ್ನು ಗಂಭೀರವಾಗಿ ಹೀರಿಕೊಂಡು ಬೆಳೆದವರು. +ಮಂದಾರ್ತಿ 14, ಅಮೃತೇಶ್ವರಿ 3, ಸಾಲಿಗ್ರಾಮ1, ಪೆರ್ಡೂರು 1, ಹಿರಿಯಡಕ 1, ಹೀಗೆ ಯಕ್ಷಗಾನ ಬವ್ಯವಸಾಯದಲ್ಲಿ ಸಾರ್ಥಕ ವಿಂಶತಿ ವರ್ಷವನ್ನು ಪೂರೈಸಿದ್ದಾರೆ. +ವೇಷ, ಬಾಷೆ, ನೃತ್ಯ, ಅಭಿನಯ,ಪ್ರಸಂಗಮಾಹಿತಿ ಹಾಗೂ ರಂಗವ್ಯವಹಾರದಲ್ಲಿ ಗರಿಷ್ಠ ಮಟ್ಟವನ್ನು ಕಾಯ್ದುಕೊಂಡ ಶ್ರೀಯುತರು ಪುರುಷವೇಷ, ಮೂರನೇವೇಷ ಹಾಗೂ ಸ್ತ್ರೀವೇಷ ನಿರ್ವಹಣೆಯಲ್ಲಿ ಕಲಾಪ್ರತಿಭೆ ಮೆರೆದವರು. +ಶ್ರೀಕೃಷ್ಣ, ಮೈಂದ, ಲವ, ಲೋಹಿತನೇತ್ರ,ವಾಸಂತಿ, ಕರಾಳನೇತ್ರೆ, ರತ್ನಾವತಿ, ನಾರದ,ಭ್ರಮರಕುಂತಳೆ, ಬಬ್ರುವಾಹನ, ಮೋಹಿನಿ, ಅಯ್ಯಪ್ಪ,ಹೀಗೆ ಎಲ್ಲಾ ವಿಧದ ವೇಷಗಳನ್ನೂ ನಿರ್ವಹಿಸಿ ಕಲಾರಸಿಕರ ಪ್ರಶಂಸೆಗೆ ಪಾತ್ರರಾಗಿದ್ದಾರೆ. +ಮಡದಿ ಯಶೋದಾ. +ಉಮಾಶ್ರೀ, ಸುಮಾಶ್ರೀ ಮಕ್ಕಳು. +ಪ್ರಸ್ತುತ ಮೇಳ ಜೀವನದಿಂದ ನಿವೃತ್ತರಾಗಿದ್ದು ಯಕ್ಷಗಾನ ಪ್ರಸಾಧನ ರಂಗಕರ್ಮಿಯಾಗಿ ಕಲಾಕಾಯಕ ನಡೆಸುತ್ತಾರೆ. +ಶ್ರೀಯುತರನ್ನು ಹಲವಾರು ಸಂಘ ಸಂಸ್ಥೆಗಳು ಸಂಮಾನಿಸಿವೆ. +ಪರಂಪರೆಯ ಪರಿಶುದ್ಧ ಹಾಸ್ಯಗಾರಿಕೆಗೆ “ಕುಂಜಾಲು' ಅನ್ನುವ ಪದ ಪರ್ಯಾಯ ನಾಮವೇ ಆಗಿ ಹೋಗಿದೆ. +ಕಾಲಮಹಿಮೆಯ ಒತ್ತಡದಲ್ಲಿ ಸುಸಂಸ್ಕೃತ ಯಕ್ಷವೈನೋದಿಕತೆ ಸ್ವರೂಪ ಕಳೆದುಕೊಳ್ಳುವ ಮಧ್ಯೆ ಕುಂಜಾಲು ರಾಮಕೃಷ್ಣ ಹಾಸ್ಯಗಾರರು, ಸಾಂಪ್ರದಾಯಿಕ ಸೀಮೆ ತುಳಿದು,ಬಡಗಿನ ಹಾಸ್ಯ ಚಕ್ರವರ್ತಿಯಾಗಿ ಕಂಗೊಳಿಸಿದರು. +ಉಡುಪಿ ಜಿಲ್ಲೆಯ ಕುಂಜಾಲು ಎಂಬಲ್ಲಿ ಪದ್ಮನಾಭ ನಾಯಕ್‌-ಶಾರದಾ ಬಾಯಿ ದಂಪತಿಯ ಸುಪುತ್ರನಾಗಿ ಜನಿಸಿದ ರಾಮಕೃಷ್ಣರು ಇದೀಗ 65ರ ಹರೆಯದಲ್ಲಿರುವ ವಿಶ್ರಾಂತ ಕಲಾವಿದರು. +ಕಡುಬಡತನದ ಕುಟುಂಬದಲ್ಲಿ ಹುಟ್ಟಿ ಬೆಳೆದ ಕುಂಜಾಲು ಅವರಿಗೆ ಬಾಲ್ಯದಿಂದಲೂ ಯಕ್ಷಗಾನ ಕಲಾಸಕ್ತಿ ಏಳನೇ ಇಯತ್ತೆಗೆ ಶರಣುಹೊಡೆದು ತನ್ನ 15ರ ಹರೆಯದಲ್ಲಿ ಯಕ್ಷಗಾನ ಲೋಕ ಪ್ರವೇಶಿಸಿದ ಇವರಿಗೆ ಗೋರ್ಪಾಡಿ ವಿಠಲ ಪಾಟೀಲರ ಪ್ರೇರಣೆ-ಮಾರ್ಗದರ್ಶನ ದೊರಕಿತು. +ಗುರುವೀರಭದ್ರನಾಯಕ್‌, ಹಾಸ್ಯಗಾರ ಹಾಲಾಡಿ ಕೊರಗಪ್ಪದಾಸ್‌ ಅವರ ಗುರುತನವನ್ನು ಪಡೆದ ರಾಮಕೃಷ್ಣ ನಾಯಕ್‌ ಅವರು ಕೊಲ್ಲೂರು,ಮಂದಾರ್ಶಿ, ಮಾರಣಕಟ್ಟೆ, ಅಮೃತೇಶ್ವರಿ,ಸಾಲಿಗ್ರಾಮ, ಇಡಗುಂಜಿ ಮೇಳಗಳಲ್ಲಿ ಸಾರ್ಥಕ 36ವರ್ಷಗಳ ಕಾಲ ಕಲಾಯಾತ್ರೆಯಲ್ಲಿ ಅಪಾರಕೀರ್ತಿಗೆ ಭಾಜನರಾಗಿದ್ದಾರೆ. +ಕುಂಜಾಲು ಅವರ ದೇಹಾಕೃತಿಯೇ ಹಾಸ್ಯಭೂಮಿಕೆಗೆ ಹೇಳಿಸಿದಂತಿದೆ. +ನೃತ್ಯ, ಅಭಿನಯ, ವೇಷ,ಭಾಷೆ, ಅಂಗಚಲನೆ, ರಂಗ ದುಡಿಮೆಂಯಲ್ಲಿ,ಗರಿಷ್ಠಮಟ್ಟದ ಸಾಧ್ಯತೆಯನ್ನು ತೋರಿದ ಹಾಸ್ಯಕಲಾವಿದರಿವರು. +ಪಾತ್ರಗಳ ಆಳಕ್ಕೆ ಇಳಿದು ಅದನ್ನೊಂದು ಸಾಮಾಜಿಕ ಸಂವಹನದ ನೆಲೆಯಾಗಿ,ತನ್ನ ವ್ಯಂಗ್ಯೋಕ್ತಿ, ಚಾಟೂಕ್ತಿಗಳಿಂದ ಭಾವಪೂರ್ಣವಾಗಿ ಕಡೆದು ನಿಲ್ಲಿಸುವುದು ಕುಂಜಾಲು ಅವರ ಅನನ್ಯ ರಂಗಧಾಟಿಯಾಗಿ ಗಮನ ಸೆಳೆಯುತ್ತದೆ. +ಹಾಸ್ಯ ಕಲೆಯ ಕುರಿತು ಸ್ವಯಂಕಲ್ಪನೆ, ಸತತ ಚಿಂತನೆ ನಡೆಸಿ ತನ್ನದೇ ವಿಶಿಷ್ಟ ಶೈಲೀಕೃತ ಮೆರುಗಿನಲ್ಲಿ ಪೌರಾಣಿಕ ಹಾಸ್ಯಭೂಮಿಕೆಗಳಿಗೆ ರಾಜ ಹಾಸ್ಯದ ಪೋಷಾಕು ತೊಡಿಸಿದ ಕುಂಜಾಲು ಅವರ ಹಾಸ್ಯಗಾರಿಕೆಗೆ ಸುಸಂಸ್ಕೃತ ಧರ್ಮವಿದೆ. + ವೈಚಾರಿಕ ಮರ್ಮವಿದೆ. + "ಕಾಶೀಮಾಣಿ' ಪಾತ್ರ ಇಂದಿಗೂ,ಮುಂದೆಂದಿಗೂ ಅವರ ಹೆಸರನ್ನು ನೆನಪಿಸುತ್ತಾ,ಹೋಗುತ್ತದೆ. +ಹಾಗೆಯೇ ಬಾಹುಕ, ಬೇಹುಚಾರಕ,ಗುರುಮಠದ ದಡ್ಡ, ವಿಡೂರಥ, ಭೀಷ್ಮವಿಜಯದ ಬ್ರಾಹ್ಮಣ, ಕಪ್ಪದೂತ, ವಿಜಯ ಮೊದಲಾದ ಪಾತ್ರಗಳಿಗೆ ಕುಂಜಾಲು ಒತ್ತಿದ ಕಲಾಮುದ್ರೆ ಅಜರಾಮರ. +ಪತ್ನಿ ಜಲಜಾ, ಪ್ರಕಾಶ, ಶಶಿಕಲಾ, ಇವರ ಉಭಯ ಮಕ್ಕಳು. +ಶ್ರೀಯುತರಿಗೆ ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಪ್ರಶಸ್ತಿ,ಉಡುಪಿಯ ಯಕ್ಷಗಾನ ಕಲಾರಂಗದ ಡಾ| ಜಿ.ಬಿ.ಶೆಟ್ಟಿ ಪ್ರಶಸ್ತಿ, ಪಳ್ಳಿ ಸೋಮನಾಥ ಹೆಗ್ಡೆ ಪ್ರಶಸ್ತಿ,ಯಕ್ಷದೇಗುಲ ಪ್ರಶಸ್ತಿ ಸೇರಿದಂತೆ ಹಲವಾರು ಸಂಮಾನ, ಪುರಸ್ಕಾರಗಳು ದೊರಕಿವೆ. +ಗಾಯನದ ಭಾವಪೋಷಕ, ರಸಪ್ರೇರಕ,ಸಾಹಿತ್ಯಪೂರಕ, ಚಂಡೆ ವಾದನದಲ್ಲಿ ಪ್ರಸಿದ್ಧಿಯ ಹೆಸರು ರಾಮಕೃಷ್ಣ ಮಂದಾರ್ತಿ. +ಬಡಗುತಿಟ್ಟಿನ ಚಂಡೆಗಾರಿಕೆಯ ತಾರಾಮೌಲ್ಯಪೂರ್ಣ ಕಲಾವಿದರಾದ ರಾಮಕೃಷ್ಣ ಅವರು ಪದ್ಮನಾಭ ಕಾಮತ್‌-ರಾಧಾ ಬಾಯಿ ದಂಪತಿಯ ಸುಪುತ್ರರಾಗಿ 14-07-1960ರಲ್ಲಿ ಮಂದಾರ್ತಿಯಲ್ಲಿ ಹುಟ್ಟಿದರು. +ಇವರ ತಂದೆಯವರಿಗೆ ಬಾಗವತಿಕೆ,ಮದ್ದಳೆಗಾರಿಕೆ ತಿಳಿದಿತ್ತು. +ಆ ಕಾರಣದಿಂದಲೇ ಮಗನಿಗೆ ಇಂತಹ ಕಲಾವಿದ್ಯ ರಕ್ತಗತ ಬಳುವಳಿಯಾಯಿತು. +7ನೇ ತರಗತಿಯವರೆಗೆ ವಿದ್ಯಾಭ್ಯಾಸ ಮಾಡಿದ ರಾಮಕೃಷ್ಣರು ತನ್ನ 12ನೇ ವಯಸ್ಸಿನಲ್ಲೇ ಯಕ್ಷಲೋಕವನ್ನು ಪ್ರವೇಶಿಸಿದರು. + ಶ್ರೀಎಂ.ಎಂ.ಹೆಗ್ಡೆಯವರು ಇವರಿಗೆ ವೃತ್ತಿರಂಗದಲ್ಲಿ ಪ್ರೇರಣಾಶಕ್ತಿಯಾಗಿ ಪ್ರೋತ್ಸಾಹ ನೀಡಿದರು. +ಮಂದಾರ್ತಿ ಮೇಳದಲ್ಲಿ ಕೋಡಂಗಿ,ನಿತ್ಯವೇಷದಲ್ಲಿ ತಿರುಗಾಟ ಆರಂಭಿಸಿದ ರಾಮಕೃಷ್ಣ ಅವರು ಮಾರಣಕಟ್ಟೆ ಮೇಳದಲ್ಲಿ ಚಂಡೆಗಾರರಾಗಿ ಗುರುತಿಸಿಕೊಂಡರು. +ಪ್ರಖ್ಯಾತ ಚಂಡೆಗಾರ ಕೆಮ್ಮಣ್ಣು ಆನಂದ ಅವರಲ್ಲಿ ಚಂಡೆವಾದನ ಶಿಕ್ಷಣವನ್ನು ಪಡೆದ ಇವರಿಗೆ ಕೊಗ್ಗ ಆಚಾರ್ಯರು ವಾದನ ಕಲೆಯ ಅನುಭವವನ್ನು ಬೋಧಿಸಿದರು. +ಸುರಗಿಕಟ್ಟೆ ಬಸವಗಾಣಿಗರೇ ಇವರಿಗೆ ತಾಳ ದೀಕ್ಷೆಯನ್ನು ನೀಡಿದ ಗುರುಗಳು. +ಮಂದಾರ್ತಿ 2, ಮಾರಣಕಟ್ಟೆ 7, ಮತ್ತೆ ಮಂದಾರ್ತಿ 1 ,ಸಾಲಿಗ್ರಾಮ 10, ಮಂದಾರ್ತಿ 5,ಹೀಗೆ ಇವರ ಕಲಾವ್ಯವಸಾಯ. +ವೃತ್ತಿರಂಗ ಭೂಮಿಯಲ್ಲಿ ರಜತವರ್ಷ ಪೂರೈಸಿ ಪ್ರಸ್ತುತ ಮಂದಾರ್ತಿ ಶ್ರೀ ದುರ್ಗಾಪರಮೇಶ್ಟರಿ ದೇವಸ್ಥಾನದ ಸನಿಹವಿರುವ ತನ್ನ ಮನೆಯಲ್ಲಿ ಹಣ್ಣುಕಾಯಿ ಅಂಗಡಿ ವ್ಯವಹಾರ ನಡೆಸುತ್ತಿದ್ದಾರೆ. +ಅನೇಕ ಆಟ-ಕೂಟಗಳಲ್ಲಿ ಭಾಗವಹಿಸುವ ಶ್ರೀಯುತರು ಚಂಡೆಗಾರಿಕೆಯಲ್ಲಿ ಈಗಲೂ ಪ್ರವೃತ್ತರು. +ಮದ್ದಳೆವಾದನದ ಪರಿಣತಿಯೂ ಇರುವ ರಾಮಕೃಷ್ಣರು ಕಾಳಿಂಗ ನಾವಡರ ಮಧುರಕಂಠದ ಯಕ್ಷಗೀತ ಗಾಯನಕ್ಕೆ ಚಂಡೆ ನುಡಿಸಿ ಮನೆಮಾತಾದ ಜನಪ್ರಿಯ ಕಲಾವಿದರು. +ಕೋಟ ಶಿವಾನಂದ, ಹಳ್ಳಾಡಿ ರಾಕೇಶ ಮಲ್ಯ, ಹಳ್ಳಾಡಿ ಜನಾರ್ದನ ಆಚಾರ್‌ ರಂತಹ ಪ್ರಸಿದ್ಧ ಚಂಡೆವಾದಕರ ಗುರುವಾಗಿಯೂ ಗುರುತಿಸಿಕೊಂಡವರು. +ಅಪಾರ ರಂಗತಂತ್ರ, ಪ್ರಸಂಗನಡೆಯಲ್ಲಿ ಗರಿಷ್ಠಮಟ್ಟದ ಅನುಭವವನ್ನು ಹೊಂದಿದ ಇವರು ಚಂಡೆಗಾರಿಕೆಗೆ ಪ್ರತ್ಯೇಕ ಕೇಳುಗ-ಪ್ರೇಕ್ಷಕರನ್ನು ಸೃಷ್ಟಿಸಿದ ಪ್ರತಿಭಾನ್ವಿತ ಚಂಡೆಗಾರರು. +ಬಾಳ ಸಂಗಾತಿ ಸುಮಾ. +ರೂಪಕಲಾ, ರಾಧಿಕಾ,ರಾಜೇಶ್‌ ಎಂಬ ಮೂರು ಮಂದಿ ಮಕ್ಕಳು. +ರಾಮಕೃಷ್ಣ ಮಂದಾರ್ತಿಯವರು ಬೆಂಗಳೂರು ಕನ್ನಡ ಸಾಹಿತ್ಯ ಪರಿಷತ್‌ ಸಂಮಾನ, ಯಕ್ಷಗಾನ ಕಲಾಕ್ಷೇತ್ರ ಗುಂಡಿಬೈಲು ಸಂಸ್ಥೆಯ ನಿಟ್ಟೂರು ಭೋಜಪ್ಪ ಸುವರ್ಣ ಪ್ರಶಸ್ತಿ, ದಿ.ಕಾಳಿಂಗ ನಾವಡ ಸ್ಮಾರಕ ಪ್ರಶಸ್ತಿಯನ್ನು ಪಡೆದ ಶ್ರೇಷ್ಠ ಕಲಾವಿದರು. +ಪುರಾಣಲೋಕದ ರಮಣೀಯ ದೃಶ್ಯಕಾವ್ಯವನ್ನು ವಿದ್ವತ್‌ ಪೂರ್ಣ ಮಾತಿನ ಮಂಟಪದಲ್ಲಿ ದರ್ಶಿಸುವ ವಜೋಸಂಪದ್ಭರಿತ ಹಿರಿಯ ಕಲಾವಿದ ಹೆಮ್ಮಾಡಿ ರಾಮ ಚಂದನ್‌. +ಕುಂದಾಪುರ ತಾಲೂಕಿನ ಹೆಮ್ಮಾಡಿ ಎಂಬ ಊರಿನಲ್ಲಿ 20-6-1950ರಲ್ಲಿ ಜನಿಸಿದ ರಾಮಚಂದನ್‌, ಮಂಜಪೂಜಾರಿ ಹಾಗೂ ಚಿಕ್ಕಮ್ಮ ದಂಪತಿಯ ಸುಪುತ್ರ. +ಹತ್ತನೇ ತರಗತಿಯವರೆಗೆ ಓದಿ,ಹತ್ತೊಂಬತ್ತನೇ ವಯಸ್ಸಿನಲ್ಲಿ ಬಣ್ಣದ ಬದುಕು ಕಂಡ ಇವರಿಗೆ ಕೀರ್ತಿಶೇಷ ರಾಮ ಗಾಣಿಗರ ಅದ್ಭುತ ಕಲಾವಂತಿಕೆಯಲ್ಲಿ ರಂಗದಲ್ಲಿ ಸಾಕಾರಗೊಳ್ಳುತ್ತಿದ್ದ ಪೌರಾಣಿಕ ವೇಷಗಳೇ ಕಲಾಜೀವನದ ಪ್ರೇರಣಾಶಕ್ತಿಯಾಗಿ ಯಕ್ಷಪಥ ತೋರಿದವು. +ಹಿರಿಯ ಕಲಾವಿದ ಐರೋಡಿ ಗೋವಿಂದಪ್ಪನವರ ತುಂಬು ಪ್ರೋತ್ಸಾಹವೂ ಕಲೆಯಲ್ಲಿ ನೆಲೆಯಾಗುವುದಕ್ಕೆ ಸ್ಫೂರ್ತಿಯ ಸೆಲೆಯಾಯಿತು. +ಹೆರಂಜಾಲು ವೆಂಕಟರಮಣ ಗಾಣಿಗ ಹಾಗೂ ಹೆಮ್ಮಾಡಿ ನಡುಬೆಟ್ಟು ಕೃಷ್ಣನವರ ಗುರುತನದ ಹಿರಿಮೆಯಲ್ಲಿ ಸಮೃದ್ಧ ಯಕ್ಷ ಕಲಾವಿದರಾಗಿ ರೂಪು-ಗೊಂಡ ರಾಮ ಚಂದನ್‌ ಬಡಗಿನತಿಟ್ಟು-ಮಟ್ಟುಗಳ ಸಾಂಪ್ರದಾಯಿಕ ಹುಟ್ಬ್ಟು-ಗುಟ್ಟುಗಳನ್ನು ಸಮರ್ಪಕವಾಗಿ ಗಟ್ಟಿಗೊಳಿಸಿಕೊಂಡರು. +ಕಳವಾಡಿ 1. ಗೋಳಿಗರಡಿ 14, ಅಮೃತೇಶ್ವರಿ 1, ಹಾಲಾಡಿ 1, ಕಮಲಶಿಲೆ 1, ಬಗ್ದಾಡಿ 1, ಹೀಗೆ 19ವರ್ಷಗಳನ್ನು ಯಶಸ್ವಿ ತಿರುಗಾಟದಲ್ಲಿ ಪೂರೈಸಿದ ಹೆಮ್ಮಾಡಿ ರಾಮ ಅವರು ಉತ್ತಮ ಅರ್ಥಧಾರಿಯಾಗಿಯೂ ಪ್ರಸಿದ್ಧರು. +ಶ್ರೀಯುತರು ನಿರ್ವಹಿಸುವ ಕರ್ಣ, ಅರ್ಜುನ,ಭೀಷ್ಮ, ಪರಶುರಾಮ, ಪೆರುಮಾಳ ಬಲ್ಲಾಳ, ಯಮ,ಶ್ರೀರಾಮ, ವಿಕ್ರಮಾದಿತ್ಯ, ಖತುಪರ್ಣ, ಪಾತ್ರಗಳು ಅವರದೇ ವಿಶಿಷ್ಟ ಶೈಲಿಯಲ್ಲಿ ನಿರೂಪಿತವಾಗಿ ಜನಮೆಚ್ಚುವ ಯಕ್ಷರಂಗಸ್ಥಳದ ಜೀವಂತ ಕಲಾವಿಗ್ರಹಗಳು. +ಪ್ರಧಾನ ವೇಷಧಾರಿಯಾಗಿ ಅಚ್ಚುಕಟ್ಟಾದ ವೇಷಾಲಂಕಾರದಲ್ಲಿ ಕಾಣಿಸಿಕೊಳ್ಳುವ ಹೆಮ್ಮಾಡಿ ರಾಮ ಕುಣಿತ ವಿಭಾಗವನ್ನು ದ್ವಿತೀಯವಾಗಿಟ್ಟು, ಭಾವಪೂರ್ಣ ಅಭಿನಯ,ವಚೋವಿಲಾಸದಿಂದ ಅದ್ವಿತೀಯ ರಂಗವೈಭವ ಕಾಣಿಸುವವರು. +ಯಕ್ಷಗಾನ ವೇಷಭೂಷಣ ತಯಾರಿ,ಯಕ್ಷಗಾನ ಗೊಂಬೆಗಳ ರಚನೆ, ಗೊಂಬೆಯಾಟಗಳಿಗೆ ಕಂಠದಾನ ನೀಡುವ ಪ್ರವೃತ್ತಿ ಶ್ರೀಯುತರ ಉಪವೃತ್ತಿಯಾಗಿದೆ. +ಮಡದಿ ಸಾಕು. +ವರದ, ವನಜ, ವಸಂತಿ,ವಸಂತ ಮಕ್ಕಳು. +ಶ್ರೀಯುತರು ಹಲವು ಸಂಘ-ಸಂಸ್ಥೆಗಳ ಗೌರವ ಸಂಮಾನ ಪಡೆದಿರುತ್ತಾರೆ. +ಉಡುಪಿ ತಾಲೂಕಿನ ಶಿರಿಯಾರ, ಗ್ರಾಮದ ಜಂಬೂರು ಎಂಬ ಪುಟ್ಟ ಹಳ್ಳಿಯ ರಾಮಚಂದ್ರ ಶಾನುಭಾಗರು ಯಕ್ಷಗಾನ ಬಡಗುತಿಟ್ಟು ಕಂಡ ಪ್ರೌಢಪ್ರತಿಭೆಯ, ಸಾಂಪ್ರದಾಯಿಕ ಶಿಷ್ಟ ಕಲಾವಿದ. +ರಾಮಚಂದ್ರ ಶಾನುಭಾಗರ ತಂದೆ ಶ್ರೀನಿವಾಸ ಶಾನುಭಾಗ, ತಾಯಿ ಲಕ್ಷಿ ಯಮ್ಮ ಎಂಟನೇಯ ತರಗತಿಯ ನಂತರ ಯಕ್ಷಗಾನ ಬಣ್ಣದ ಬದುಕಿಗೆ ಅಂಟಿಕೊಂಡ ಶಾನುಭಾಗರು ಪರಂಪರೆಯ ಪ್ರತಿನಿಧಿಯಂತೆ ಕಾಣುವ ಶ್ರೇಷ್ಠ ಕಲಾವಿದರು. +16ನೇ ವಯಸ್ಸಿಗೆ ಯಕ್ಷಲೋಕ ಪ್ರವೇಶಿಸಿದ ಶಾನುಭೋಗರು ಕೇಳಿ-ತಿಳಿ, ನೋಡಿ-ಕಲಿ ಎಂಬುದನ್ನೇ ವೃತ್ತಿ ಬದುಕಿಗೆ ಪಾಠವಾಗಿಸಿಕೊಂಡು ರಂಗಸ್ಥಳವನ್ನೇ ರಂಗಶಾಲಯಾಗಿಸಿಕೊಂಡು ಕಲಾವಿದ್ಯೆಯನ್ನು ಸಂಪಾದಿಸಿದ ಕಲಾವಿದರು. +ಜಂಬೂರು ರಾಮಚಂಂದ್ರ ಶಾನುಭಾಗರು ಯಕ್ಷಗಾನ ಪುರಾಣಲೋಕದ ಪೋಷಕಃಪಾತ್ರಗಳನ್ನು ಸಮರ್ಥವಾಗಿ ನಿರ್ವಹಿಸಿ ಗೆಲುವು ಕಂಡವರು. +ಇವರ ಅಪಾರ ಅನುಭವ ಪೂರ್ಣತೆ, ರಂಗನೆಲದಲ್ಲಿನ ಗರಿಷ್ಠಮಟ್ಟದ ಕಲಾಭಿವ್ಯಕ್ತತೆ, ಪಾತ್ರನಿಷ್ಟವಾದ ನೃತ್ಯ ಅಭಿನಯಶೀಲತೆ ಮೇಲಾಗಿ ಸಾಹಿತ್ಯ ಶುದ್ಧತೆಯ ವಚೋವೈವಿಧ್ಯತೆ ಕಲಾಭಿಮಾನಿಗಳ ಮನ ಗೆದ್ದಿದೆ. +ಧರ್ಮರಾಯ, ದೇವೇಂದ್ರ, ಶ್ರೀರಾಮ, ವಸಿಷ್ಠ,ಅರ್ಜುನ, ಬಬ್ರುವಾಹನ, ಶ್ರೀಕೃಷ್ಣ, ಪಾತ್ರಗಳಲ್ಲಿ ತನ್ನದೇ ವಿಶಿಷ್ಟವಾದ ಛಾಪು ಮೂಡಿಸಿದ ಜಂಬೂರು ಶಾನುಭಾಗರು, ಅನುಭವದ ಖಜಾನೆಯಾಗಿ ಗುರುತಿಸಲ್ಪಟ್ಟವರು. +ಮಂದಾರ್ತಿ 20, ಮಾರಣಕಟ್ಟೆ 3, ಅಮೃತೇಶ್ವರಿ 2, ಇಡಗುಂಜಿ 12, ಪೆರ್ಡೂರು 2, ಹಾಲಾಡಿ 2,ಬಗ್ದಾಡಿ 2, ಕಮಲಶಿಲೆ 3, ಗುಂಡಬಾಳ 4,ಮೇಳಗಳಲ್ಲಿ ಸುಮಾರು 55 ವರ್ಷಗಳ ಕಾಲ ದೀರ್ಫಕಾಲೀನ ರಂಗವ್ಯವಸಾಯ ನಡೆಸಿ, ಪ್ರಸ್ತುತ ವಿಶ್ರಾಂತ ಜೀವನದಲ್ಲಿದ್ದಾರೆ. +ಶ್ರೀಯುತರಿಗೆ ಈಗ 71ರ ಹರೆಯ. +ಪತ್ನಿ ಶಾರದ. +ಶ್ರೀನಿವಾಸ, ಶ್ರೀಕೃಷ್ಣ, ಸರಸ್ಪತಿ ಮೂವರು ಮಕ್ಕಳು. +ಶ್ರೀಯುತರನ್ನು ಉಡುಪಿ ಯಕ್ಷಗಾನ ಕಲಾರಂಗ,ಯಕ್ಷದೇಗುಲ, ಬೆಂಗಳೂರು, ಹಾಗೂ ಹಲವಾರು ಸಂಘ ಸಂಸ್ಥೆಗಳು ಸಂಮ್ಮಾನಿಸಿವೆ. +ಬಡಗುತಿಟ್ಟಿನ ಪರಿಮಾಣಯುಕ್ತ ನೃತ್ಯಾಭಿನಯ ಸತ್ವ ಸಮನ್ವಿತ, ಪರಿಪುಷ್ಪ ಸಾಹಿತ್ಯಿಕ ವಿಚಾಚೋದಿತ. +ಸರ್ವಾಂಗ ಸುಂದರ ಶ್ರೇಷ್ಠ ಯಕ್ಷನಟ ಕೊಂಡದ ಕುಳಿ ರಾಮಚಂದ್ರ ಹೆಗಡೆ. +ಉತ್ತರ ಕನ್ನಡದ ಹೊನ್ನಾವರ ತಾಲೂಕಿನ ಕೊಂಡದಕುಳಿ ಎಂಬಲ್ಲಿ 26-6-1961ರಲ್ಲಿ ಗಣೇಶ ಹೆಗಡೆ-ಸಮಲಾ ಹೆಗಡೆ ದಂಪತಿಯ ಸುಪುತ್ರನಾಗಿ ಜನಿಸಿದ ಹೆಗಡೆಯವರು ಎಸ್‌.ಎಸ್‌.ಎಲ್‌.ಸಿ ತನಕ ವ್ಯಾಸಂಗ ಮಾಡಿ ತನ್ನ 16ನೇ ವಯಸ್ಸಿನಲ್ಲಿ ಗುಂಡಬಾಳ ಮೇಳಕ್ಕೆ ಪಾದಾರ್ಪಣೆ ಮಾಡುವ ಮೂಲಕ ಯಕ್ಷಪ್ರಪಂಚಕ್ಕೆ ದಾಖಲಾದರು. +ಮೇರು ಕಲಾವಿದರಾದ ಕೊಂಡದ ಕುಳಿ ರಾಮಹೆಗಡೆ-ಲಕ್ಷ್ಮಣ ಹೆಗಡೆ ಅವರು ರಾಮಚಂದ ಹೆಗಡೆಯವರ ಅಜ್ಜಂದಿರು. +ತಂದೆ ಗಣೇಶ ಹೆಗಡೆ ಮಹಾನ್‌ ಯಕ್ಷಕಲಾಭಿಮಾನಿ. +ಹೀಗೆ ಕಲಾವಂತರ ಮನೆತನದಿಂದ ಬಂದ ಕೊಂಡದಕುಳಿ ಅವರಿಗೆ ಯಕ್ಷಕಲೆ ರಕ್ತಗತ ಬಳುವಳಿ. +ಗುಂಡಬಾಳ ಮೇಳ, ಸಾಲಿಗ್ರಾಮ ಮೇಳ, ಶಿರಸಿ ಪಂಚಲಿಂಗ ಮೇಳಗಳಲ್ಲಿ ಸಾರ್ಥಕ ಸೇವೆ ಸಲ್ಲಿಸಿದ ಕೊಂಡದಕುಳಿ ಪ್ರಸ್ತುತ ತಾವೇ ಸ್ಥಾಪಿಸಿದ “ಕುಂಭಾಶಿ ಪೂರ್ಣಚಂದ್ರ ಮೇಳ'ದಲ್ಲಿ ಕಲಾವಿದರಾಗಿ ದುಡಿಯುತ್ತಿದ್ದಾರೆ. +ಒಟ್ಟು ಅವರ ರಂಗ ವ್ಯವಸಾಯ 34 ವರ್ಷ. +ತಾನು ನಿರ್ವಹಿಸುವ ಪ್ರತೀ ಪಾತ್ರಗಳ ಅಂತರಂಗದ ಕಲಾಗೋಳದೊಳಗೆ ಚಕ್ರದೃಷ್ಟಿ ಹರಿಸಿ,ಪಾತ್ರದ ಮೂಲ ಸೊಗಡನ್ನು ಎತ್ತಿ ಹಿಡಿದು ತನ್ನ ಸೃಜನಾತ್ಮಕ ಕಲಾ ವೈಖರಿಯಲ್ಲಿ ಪ್ರಸ್ತುತ ಪಡಿಸುವ ಕೊಂಡದಕುಳಿ ಅವರು ಪೌರಾಣಿಕ ಅಖ್ಯಾನಕ್ಕೂ ಒಪ್ಪುವ, ನವೀನ ಕಥಾನಕಗಳಿಗೂ ಒಗ್ಗುವ ಕಲಾವಿದರು. +ಶ್ರೀಯುತರ ಶ್ರೀ ರಾಮ, ಕೃಷ್ಣ, ರಾವಣ,ಹರಿಶ್ಚಂದ್ರ, ಈಶ್ವರ, ಸುಧನ್ವ ಅರ್ಜುನ, ದಶರಥ,ಹನೂಮಂತ, ವಾಲಿ, ಕಾರ್ತವೀರ್ಯ, ದುಷ್ಟಬುದ್ಧಿ,ಬೀಷ್ಮ, ಮಾಗಧ, ಮೊದಲಾದ ಪಾತ್ರಗಳು ಪರಕಾಯ ಪ್ರವೇಶದ ಪ್ರೌಢ ಕಳೆಯಲ್ಲಿ ಕಲಾರಸಿಕರ ಹೃದಯದಲ್ಲಿ ಚಿರಸ್ಥಾಯಿಯಾಗುಳಿದಿವೆ. +ನಾಯಕ,ಖಳನಾಯಕ, ಪ್ರತಿನಾಯಕ, ಪಾತ್ರಗಳ ಸರದಾರರಾದ ಕೊಂಡದಕುಳಿ ಪಾತ್ರಗಳಿಗೆ ಜೀವ-ಭಾವ ನೀಡುವ ಅಪ್ರತಿಮ ಕಲಾವಿದರು. +ಪತ್ನಿ ಪೂರ್ಣಿಮಾ. +ಅಶ್ವಿನಿ, ಅಕ್ಷತಾ ಎಂಬ ಈರ್ವರು ಮಕ್ಕಳು. +ಶ್ರೀ ಪೇಜಾವರ ಶ್ರೀಪಾದರ ಶ್ರೀರಾಮವಿಠಲ ಪ್ರಶಸ್ತಿ ಸೇರಿದಂತೆ ಕೊಂಡದ ಕುಳಿ ಅವರ ಮಹಾನ್‌ ಪ್ರತಿಭೆಗೆ ಹಲವು ಪುರಸ್ಕಾರಗಳು ಸಂದಿವೆ. +ಬಡಗುತಿಟ್ಟು ಯಕ್ಷಗಾನ ಕಲಾರಂಗದಲ್ಲಿಅದ್ಭುತ ಪ್ರತಿಭಾ ಪಾರಮ್ಯದಲ್ಲಿ ಸಾರ್ವಭೌಮತ್ವ ಸಾಧಿಸಿದ ಮೇರು ಕಲಾವಿದ ಚಿಟ್ಟಾಣಿ ರಾಮಚಂದ್ರ ಹೆಗಡೆ. +ಆರು ದಶಕಗಳ ಸುದೀರ್ಥ ರಂಗಸೇವೆಯಲ್ಲಿ ಸಾಧನೆಯ ಶಿಖರವೇರಿದ ಚಿಟ್ಟಾಣಿಯವರು 76ರ ಇಳಿವಯಸ್ಸಿನಲ್ಲೂ ಗೆಜ್ಜೆಕಟ್ಟಿ ರಂಗಮಂಚವೇರಿದರೆ ಇಪ್ಪತ್ತರ ತರುಣರನ್ನೂ ನಾಚಿಸಿ ಬಿಡುತ್ತಾರೆ. +ಉತ್ತರ ಕನ್ನಡದ ಹೊನ್ನಾವರ-ಹೊಸಾಕುಳಿಯ ಚಿಟ್ಟಾಣಿಯೇ ಅವರ ಹುಟ್ಟೂರು. +ಸುಬ್ರಾಯ ಹೆಗಡೆ-ಗಣಪಿ ಹೆಗಡೆ ದಂಪತಿಗಳ ಸುಪುತ್ರರಾಗಿ 20-3-1934ರಲ್ಲಿ ಜನಿಸಿದರು. +ಚಿಟ್ಟಾಣಿಯವರು ಓದಿದ್ದು ಕೇವಲ ಎರಡನೇ ತರಗತಿ. +ಬಾಳೆಗದ್ದೆ ರಾಮಕೃಷ್ಣಭಟ್‌ ಇವರ ಆರಂಭಿಕ ಗುರುಗಳು. +ಕೊಂಡದಕುಳಿ ರಾಮ ಹೆಗಡೆ-ಲಕ್ಷ್ಮಣ ಹೆಗಡೆ ಅವರಿಂದ ಇವರ ಕಲಾಸಕ್ತಿ ಕುದುರಿತು. +ಮೂಡ್ಮಣಿ ನಾರಾಯಣ ಹೆಗಡೆ ಹಾಗೂ ಕೆರೆಮನೆ ಶಿವರಾಮ ಹೆಗಡೆಯವರ ಕಲಾವರ್ಚಸ್ಸು ಇವರ ಮೇಲೆ ವಿಶೇಷ ಪ್ರಭಾವ ಬೀರಿತು. +ತನ್ನ 14ರ ಹರಯದಲ್ಲಿ "ಶ್ರೀ ಕೃಷ್ಣ ಪಾರಿಜಾತ'ದಅಗ್ನಿ ಪಾತ್ರದಲ್ಲಿ ರಂಗವೇರಿದ ಚಿಟ್ಟಾಣಿ ಮತ್ತೆ ಹಿಂತಿರುಗಿ ನೋಡಲಿಲ್ಲ. +ಯಕ್ಷಲೋಕದಲ್ಲಿ "ಅಗ್ನಿ'ಯಂತೆಯೇ ಬೆಳಗಿದರು. +ಗುಂಡಬಾಳ,ಅಮೃತೇಶ್ವರಿ, ಸಾಲಿಗ್ರಾಮ, ಪಂಚಲಿಂಗ-ಶಿರಸಿ,ಕೊಳಗಿಬೀಸ್‌, ಮೂರೂರು, ಶಿರಸಿ-ಮಾರಿಕಾಂಬಾ,ಬಚ್ಚಗಾರು, ಪೆರ್ಡೂರು ಮೇಳಗಳಲ್ಲಿ ಅರವತ್ತು ವರ್ಷಗಳ ಅವರ ಕಲಾವ್ಯವಸಾಯ ಸಾರ್ಥಕವಾಗಿದೆ. +ಯಕ್ಷಗಾನ ವೇಷಕ್ಕೆ ಹೇಳಿ ಮಾಡಿಸಿದಂತಹ ಮೈಕಟ್ಟು, ವಿಶಾಲ ಹಣೆ, ಹೊಳಪಿನ ಕಣ್ಣುಗಳು ಅವರಿಗೆ ದೈವದತ್ತವಾಗಿದೆ. +ಚಿಟ್ಟಾಣಿಯವರದು ಯಕ್ಷಗಾನ ನೃತ್ಯವೈಖರಿಗೆ ಹೊಸ ಆಯಾಮ ನೀಡಿ,ತನ್ನದೇ “ಶೈಲಿ' ಹುಟ್ಟು ಹಾಕಿದ ಸಂಪನ್ನ ಪ್ರತಿಭೆ. +ಅವರ ಲಯ ಪ್ರಜ್ಞೆ, ರಂಗನಿಲುವು, ಆಂಗಿಕವಿನ್ಯಾಸ,ಮಾತಿನ ಶೈಲಿ ಪಾತ್ರ ಚಿತ್ರಣ ಎಲ್ಲವೂ ವಿಭಿನ್ನ,ಅಸಾಧಾರಣ. +ಶ್ರೀಯುತರ ಪಾತ್ರ ತಾದಾತ್ಮ್ಯ ಅನನ್ಯ. +ರಂಗಕರ್ಮದಲ್ಲೆಲ್ಲೂ ರಾಜಿ ಮಾಡಿಕೊಳ್ಳದ ನಿಷ್ಕಪಟ ಕಲಾವಿದ. +ಚಿಟ್ಟಾಣಿ ನಿರ್ವಹಿಸಿದ ಭಸ್ಮಾಸುರ, ಕೀಚಕ,ಮಾಗಧ, ಕಂಸ, ಕೌರವ, ದುಷ್ಟಬುದ್ಧಿ, ರುದ್ರಕೋಪ ಪಾತ್ರಗಳಿಗೆ ಎಂದೂ ಸಾವಿಲ್ಲ. +ಅವರಿಗೆ ಅವರೇ ಸಾಟಿ. +ಅಮೇರಿಕಾದಲ್ಲೂ ತನ್ನ ಅಪೂರ್ವ ಪ್ರತಿಭೆಯನ್ನ್ನು ಪ್ರಕಟಿಸಿ ರಸಿಕರ ಮನಸೂರೆಗೊಂಡಿದ್ದಾರೆ. +ಚಿಟ್ಟಾಣಿಯವರ ಧರ್ಮಪತ್ನಿ ಸುಶೀಲಾ. +“ಲಲಿತಾ, ಸುಬ್ರಹ್ಮಣ್ಯ, ನಾರಾಯಣ, ನರಸಿಂಹ',ಇವರ ನಾಲ್ವರು ಮಕ್ಕಳು. +ಇವರ ಸುಪುತ್ರರಾದ ಸುಬ್ರಹ್ಮಣ್ಯ ಚಿಟ್ಟಾಣಿ ಹಾಗೂ ನರಸಿಂಹ ಚಿಟ್ಟಾಣಿ ವೃತ್ತಿರಂಗದ ಭರವಸೆಯ ಕಲಾವಿದರಾಗಿ ಗುರುತಿಸಿಕೊಂಡಿದ್ದಾರೆ. +ಶ್ರೀಯುತರ ಮೇರು ಕಲಾಪ್ರತಿಭೆಗೆ ದೊರಕಿದ ಸಂಮಾನ ಗಣಿತಕ್ಕೆ ನಿಲುಕುವುದಿಲ್ಲ. +ಪ್ರತಿಷ್ಠಿತ ರಾಜ್ಯ ಪ್ರಶಸ್ತಿ, ಯಕ್ಷಗಾನ ಅಕಾಡೆಮಿ ಪ್ರಶಸ್ತಿ, ಜಾನಪದಶ್ರೀ ಪ್ರಶಸ್ತಿ ಸೇರಿದಂತೆ ಅನೇಕ ಗೌರವಕ್ಕೆ ಅವರು ಭಾಜನರಾಗಿದ್ದಾರೆ. +“ರಸರಾಜ' ಇವರಿಗೆ ಅರ್ಪಿಸಿದ ಅಭಿನಂದನ ಗ್ರಂಥ. +"ನಮ್ಮ ಚಿಟ್ಟಾಣಿ' ಆತ್ಮಕಥನ. +ಶ್ರೀಯುತರು ಪ್ರಸ್ತುತ ಶ್ರೀವೀರಾಂಜನೇಯ ಯಕ್ಷಮಿತ್ರ ಮಂಡಳಿಯ ಪ್ರಧಾನ ಕಲಾವಿದರಾಗಿ ಕಲಾಸೇವೆಗೈಯುತ್ತಿದ್ದಾರೆ. +ಮದ್ದಳೆ, ಚಂಡೆ, ಭಾಗವತಿಕೆಯೆಂಬ ಹಿಮ್ಮೇಳದ ಸರ್ವಾಂಗೀಣ ಕಲಾ ಪ್ರತಿಭೆಯಾಗಿ ಗುರುತಿಸಿಕೊಂಡ ಅನುಭವಿ ಕಲಾವಿದ ರಾಮದಾಸ್‌ ಮರವಂತೆ. +ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಮರವಂತೆಯ ಹಿರಿಯ ಭಾಗವತ ಶ್ರೀನಿವಾಸ ದಾಸ್‌-ಮಹಾಲಕ್ಷ್ಮೀ ದಾಸ್‌ ದಂಪತಿಯ ಸುಪುತ್ರರಾಗಿ 29-11-1967ರಲ್ಲಿ ಜನಿಸಿದ ರಾಮದಾಸ್‌ ಅವರು ಎಂಟನೇ ತರಗತಿಯವರೆಗಿನ ಅಕ್ಷರ ಶಿಕ್ಷಣದ ಬಳಿಕ ಆಂದರೆ ತನ್ನ ಹನ್ನೆರಡರ ಹರೆಯದಲ್ಲೇ ಯಕ್ಷಗಾನ ರಂಗ ಪ್ರವೇಶಿಸಿದರು. +ಇವರ ತಂದೆ ಹಾಗೂ ದೊಡ್ಡಪ್ಪ ನರಸಿಂಹ ದಾಸರು ಬಡಗುತಿಟ್ಟು ರಂಗಭೂಮಿ ಕಂಡ ಪರಂಪರೆಯ ಶ್ರೇಷ್ಠ ಭಾಗವತರಾಗಿದ್ದರು. +ಅಂತಹ ಕಲಾ ಕುಟುಂಬದ ಕುಡಿಯಾದ ಇವರಿಗೆ ಕಲೆಯೆಂಬುದು ಜನ್ಮಜಾತ ಬಳುವಳಿಯಾಯಿತು. +ಅಪ್ಪ ಹಾಗೂ ದೊಡ್ಡಪ್ಪನವರೇ ಇವರಿಗೆ ಯಕ್ಷಗುರುವರ್ಯರಾಗಿ ಸುಯೋಗ್ಯ ರಂಗಶಿಕ್ಷಣ ನೀಡಿದರು. +ಸೌಕೂರು 5, ಹಾಲಾಡಿ 2, ಕಳುವಾಡಿ 3,ಕಮಲಶಿಲೆ 5, ಮಾರಣಕಟ್ಟೆ 14, ಹೀಗೆ ಕಲಾಯಾತ್ರೆಯಲ್ಲಿ ಸಾರ್ಥಕ 29 ವರ್ಷಗಳನ್ನು ಕಳೆದವರು ರಾಮದಾಸರು. +ರಾಮದಾಸರ ಮದ್ದಳೆವಾದನ ಹಾಗೂ ಚಂಡೆವಾದನ ಶಾಸ್ತ್ರಚೌಕಟ್ಟಿನಲ್ಲಿಯೇ ಇರುವಂತದ್ದು. +ಅವರ ನವಿರಾದ ನುಡಿತ ಭಣಿತಗಳು ಗಾನ ಪೋಷಕವೂ ರಂಗಕಲಾವಿದರ ನೃತ್ಯ, ರಸಭಾವ ಪೂರಕವೂ ಆಗಿದೆ. +ಖಚಿತ ಲಯಸಿದ್ಧಿ, ತೀವ್ರ ವಿಲಂಬಗತಿಯಲ್ಲಿಯ ಬೆರಳುಗಾರಿಕೆಯ ಕೌಶಲ ಅದ್ಭುತವಾದದ್ದು. +ಶ್ರೀಯುತರ ರಂಗಪ್ರಜ್ಞೆಯೂ ಅಸಾಧರಣ. +ಬಿಡುವಿನ ವೇಳೆಯಲ್ಲಿ ಚಂಡೆ-ಮದ್ಬಳೆ ತಯಾರಿಕೆಯ ಕಾಯಕದಲ್ಲಿ ಶ್ರೀರಾಮದಾಸ್ ತೋಡಗಿಕೊಳ್ಳುತ್ತಾರೆ. +ಆ ವಿಭಾಗದಲ್ಲಿ ಸದ್ಯ ಬಡಗುತಿಟ್ಟಿನಲ್ಲಿ ಅವರು ಜನಪ್ರಿಯ ಕಲಾಕರ್ಮಿ,ಮಡದಿ ಸುಗುಣ. +ದರ್ಶನ ಸಿಂಚನ ಮಕ್ಕಳು. +ಇವರ ಉನ್ನತ ಕಲಾವ್ಯಕ್ತಿತ್ತವನ್ನು ಗುರುತಿಸಿದ ನಾಡಿನ ಹಲವು ಸಂಘ-ಸಂಸ್ಥೆಗಳು ಗೌರವಿಸಿವೆ. +ಸ್ಫುಟವಾದ ಹೊರಳಿಕೆ, ನಯವಾದ ನುಡಿಸಾಣಿಕೆಯಲ್ಲಿ ಕಲಾವಿದನ ಭಾವಪೂರ್ಣ ಅಭಿವ್ಯಕ್ತಿಯನ್ನು ಅರ್ಥೈಸಿಕೊಂಡ ಚಂಡೆ ವಾದನ ಶೈಲಿಯಲ್ಲಿ ಗುರುತಿಸಲ್ಪಡುವ ಚಂಡೆಗಾರ ಕರ್ಕಿ ರಾಮಭಂಡಾರಿ. +ಉತ್ತರಕನ್ನಡದ ಕರ್ಕಿ ಎಂಬಲ್ಲಿ 6-7-1966ರಲ್ಲಿ ಸತ್ಯನಾರಾಯಣ ಭಂಡಾರಿ-ಪಾರ್ವತಿ ದಂಪತಿಯ ಸುಪುತ್ರನಾಗಿ ಜನಿಸಿದ ರಾಮಭಂಡಾರಿ ಅವರು 7ನೇಇಯತ್ತೆಯವರೆಗೆ ಅಕ್ಷರಾಭ್ಯಾಸ ನಡೆಸಿ ತನ್ನ 23ನೇ ವಯಸ್ಸಿನಲ್ಲಿ ಯಕ್ಷಲೋಕವನ್ನು ಪ್ರವೇಶಿಸಿದರು. +ಶ್ರೀಯುತರದ್ದು ಕಲಾವಂತ ಮನೆತನ. +ಇವರ ತಂದೆ, ಚಿಕ್ಕಪ್ಪ, ಅಣ್ಣ ತವ್ಮ್ಮು ಎಲ್ಲರೂ ಯಕ್ಷಗಾನ ರಂಗಭೂಮಿಯ ಹಿಮ್ಮೇಳದ ವಾದನ ಕಲಾವಿದರು + ಹಾಗಾಗಿ ಇಂತಹ ಬಲಿಷ್ಠ ಕಲಾಹಿನ್ನೆಲೆಯೊಂದಿಗೆ ಸ್ವಯಂ ಆಸಕ್ತಿಯನ್ನು ಮುಂದಿಟ್ಟು-ಕೊಂಡು ಯಕ್ಷಗಾನ ವಾದನ ಪ್ರಪಂಚವನ್ನು ಸೇರಿ ಗೆಲುವು ಕಂಡರು. +ತಂದೆ ಸತ್ಯನಾರಾಯಣ ಭಂಡಾರಿ ಹಾಗೂ ಚಿಕ್ಕಪ್ಪ ಕರ್ಕಿ ಪ್ರಭಾಕರ ಭಂಡಾರಿ ಅವರು ರಾಮಭಂಡಾರಿಯವರಿಗೆ ಗುರುಗಳಾಗಿ ಸುಯೋಗ್ಯ ಚಂಡೆ ಮದ್ದಳೆವಾದನ ಕಲೆಯನ್ನು ಬೋಧಿಸಿದರು. +ಗೋಳಿಗರಡಿ 1, ಬಚ್ಚಗಾರು 4, ಸೌಕೂರು 4, ಹಾಲಾಡಿ 2, ಮಾರಣಕಟ್ಟೆ 9, ಹೀಗೆ ಕಲಾಪ್ರಪಂಚದಲ್ಲಿ ಸಾರ್ಥಕ "ವಿಂಶತಿ' ವರ್ಷದ ಕಲಾಕೃಷಿ ಪೂರೈಸಿದ್ದಾರೆ. +ಪ್ರಸ್ತುತ ಮಾರಣಕಟ್ಟೆ ಮೇಳದ ಚಂಡೆವಾದಕರಾಗಿ ದುಡಿಯುತ್ತಿದ್ದಾರೆ. +ಉಪವೃತ್ತಿಯಾಗಿ ಮಣ್ಣಿನ ಗಣೇಶ ಮೂರ್ತಿ ರಚನೆ ಹಾಗೂ ಸಮಾರಂಭ-ಗಳಿಗೆ ಮಂಗಲವಾದ್ಯ ಕಲಾವಿದರಾಗಿ ಭಾಗವಹಿಸುತ್ತಿದ್ದಾರೆ. +ಮಡದಿ ಪಾರ್ವತಿ. +ರತನ್‌, ರಮ್ಯ ಮಕ್ಕಳು. +ಶ್ರೀಯುತರನ್ನು ಅನೇಕ ಸಂಘ ಸಂಸ್ಥೆಗಳು ಗುರುತಿಸಿ ಗೌರವಿಸಿವೆ. +ಪೌರಾಣಿಕ ರಂಗಾನುಬವದೊಂದಿಗೆ,ಸದಭಿರುಚಿಯ ಹಾಸ್ಯಗಾರಿಕೆಯಲ್ಲಿ ರಂಜಿಸುವ ಹಿರಿಯ ಹಾಸ್ಯನಟ ಹೊಸಂಗಡಿ ಲಕ್ಷ್ಮಣ ಭಂಡಾರಿ. +ಕುಂದಾಪುರ ತಾಲೂಕಿನ ಹೊಸಂಗಡಿಯ ಬಾಳೆಜಡ್ಡು ಎಂಬ ಪುಟ್ಟ ಹಳಿಯಲ್ಲಿ ಹುಟ್ಟಿ ಬೆಳೆದ ಲಕ್ಷ್ಮಣ ಭಂಡಾರಿಯವರು ಕೊರಗು ಭಂಡಾರಿ-ಕಲ್ಯಾಣಿ ಬಾಯಿ ದಂಪತಿಯ ಸುಪುತ್ರ. +ಶ್ರೀಯುತರ ಪ್ರಾಯ 46. +ಮೂರನೇ ತರಗತಿಯವರೆಗಿನ ಶೈಕ್ಷಣಿಕ ಬಲವನ್ನಷ್ಟೇ ಕಂಡ ಭಂಡಾರಿ ಅವರು ತನ್ನ 13ರ ಕಿರು ಹರೆಯದಲ್ಲೇ ಯಕ್ಷಗಾನ ಬಣ್ಣದ ಬದುಕು ಕಂಡವರು. +ಸುಪ್ರಸಿದ್ಧ ಹಾಸ್ಯಗಾರ ಕುಂಜಾಲು ರಾಮಕೃಷ್ಣ ಅವರು ಇವರಿಗೆ ಸಂಬಂಧದಲ್ಲಿ ಬಾವ. +ಹಾಗಾಗಿ ಕುಂಜಾಲು ಅವರ ಹಾಸ್ಯ ಅನುಭವವೂ ಭಂಡಾರಿಯವರಿಗೆ ದಕ್ಕಿದೆ. +ಕುಂಜಾಲು ಹಾಗೂ ಪದ್ಮನಾಭ ಭಂಡಾರಿ ಅವರು ಲಕ್ಷ್ಮಣ ಭಂಡಾರಿ ಅವರ ಕಲಾಬದುಕಿಗೆ ಪ್ರೇರಣೆಯಾದವರು. +ಹಾರಾಡಿ ಸರ್ವೋತ್ತಮ ಗಾಣಿಗ ಹಾಗೂ ಪದ್ಮನಾಭ ಭಂಡಾರಿ ಅವರಲ್ಲಿ ನೃತ್ಯ, ಅಭಿನಯ, ರಂಗಾನುಭವವನ್ನು ಪಡೆದ ಲಕ್ಷ್ಮಣ ಭಂಡಾರಿ ಅವರು ವೃತ್ತಿರಂಗ ಭೂಮಿಯಲ್ಲಿ ಹಾಸ್ಯಗಾರಿಕೆಯನ್ನು ಆಶ್ರಯಿಸಿ ಗೆಲವು ಕಂಡರು. +ಹಾಲಾಡಿ, ಸೌಕೂರು, ಕಮಲಶಿಲೆ,ಗೋಳಿಗರಡಿ, ಅಮೃತೇಶ್ವರಿ, ಕಳವಾಡಿ, ಶಿರಸಿ,ಹಿರಿಯಡಕ, ಮೇಳಗಳಲ್ಲಿ 29 ವರುಷಗಳ ಕಾಲ ಕಲಾಯಾತ್ರೆ ನಡೆಸಿದ ಭಂಡಾರಿ ಅವರು ಪ್ರಸ್ತುತ ಹಿರಿಯಡಕ ಮೇಳದ ಪ್ರಧಾನ ಹಾಸ್ಕ್ಯಕಲಾವಿದರಾಗಿ ದುಡಿಯುತ್ತಿದ್ದಾರೆ. +ಪೌರಾಣಿಕ ಪ್ರಸಂಗಗಳಲ್ಲಿ ಬರುವ ಪಾಪಣ್ಣ,ಬಾಹುಕ, ಚಂದಗೋಪ, ನಕ್ಷತ್ರಿಕ, ದಾರುಕ, ವಿಜಯ,ಕಾಳಿದಾಸ, ಮೊದಲಾದ ಭೂಮಿಕೆಗಳನ್ನು ಸಮರ್ಥವಾಗಿ ಪೋಷಿಸುವ ಅನುಭವಿ ಹಾಸ್ಯಗಾರ ಲಕ್ಷ್ಮಣ ಭಂಡಾರಿಯವರು. + ವೃತ್ತಿ ಬದುಕಿನ ಬಿಡುವಿನ ವೇಳೆಯಲ್ಲಿ ಯಕ್ಷಗಾನ ವೇಷಭೂಷಣ ತಯಾರಿಕೆಯಲ್ಲಿ ತೊಡಗಿಕೊಳ್ಳುತ್ತಾರೆ. +ಪತ್ನಿ ಸರೋಜ ಭಂಡಾರಿ. +ಸುಬ್ರಹ್ಮಣ್ಯ, ರಾಧಿಕಾ, ವಿಜಯಲಕ್ಷ್ಮೀ ಮಕ್ಕಳು. +ಶ್ರೀಯುತರನ್ನು ಕೋಟ ಅಮೃತೇಶ್ವರಿ ಯಕ್ಷಗಾನ ಮಂಡಳಿ ವತಿಯಿಂದ ಸಮ್ಮಾನಿಸಲಾಗಿದೆ. +ಬಡಗುತಿಟ್ಟಿನ “ಬಣ್ಣದ ವೇಷಕ್ಕೆ ಪರ್ಯಾಯ ಪದ ಸಕ್ಕಟ್ಟು ಲಕ್ಷೀ ನಾರಾಯಣಯ್ಯ. +ಪರಂಪರೆಯ ಬಲಿಷ್ಠ ಚೌಕಟ್ಟಿನಲ್ಲಿ ದೈತ್ಯ ಪ್ರತಿಭೆಯನ್ನು ಪ್ರದರ್ಶಿಸಿ ಅಪಾರ ಪ್ರೇಕ್ಷಕರ ಮನಸೂರೆಗೊಂಡು ಬಣ್ಣಭಯಂಕರನಾಗಿ ಮೆರೆದ ಹಿರಿಯ ಕಲಾವಿದ ಸಕ್ಕಟ್ಟು ಲಕ್ಷೀನಾರಾಯಣಯ್ಯ. +ಉಡುಪಿ ತಾಲೂಕಿನ ಶಿರಿಯಾರ ಗ್ರಾಮದ ಸಕ್ಕಟ್ಟು ಎಂಬಲ್ಲಿ 26-03-1925 ರಂದು ಸಕ್ಕಟ್ಟು ಸುಬ್ಬಣ್ಣಯ್ಯ-ರಾಜಮ್ಮ ದಂಪಶಿಯ ಸುಪುತ್ರರಾಗಿ ಜನಿಸಿದ ಲಕ್ಷೀ ನಾರಾಯಣಯ್ಯನವರಿಗೆ ಓದು ನಾಕಕ್ಕೇ ಸಾಕಾಯಿತು . + ತನ್ನ 13ನೇ ವಯಸ್ಸಿನಲ್ಲೇ ಬಣ್ಣದ ಬದುಕು ಕಂಡ ಸಕ್ಕಟ್ಟು ಅವರಿಗೆ ಸ್ವಯಂಪ್ರೇರಣೆಯೇ ಕಲಾ ಜೀವನಕ್ಕೆ ಕಾರಣವಾಯಿತು. +ಇವರ ತಂದೆ ವೇಷಧಾರಿಯಾಗಿದ್ದುದರಿಂದ ರಂಗಜೀವನಕ್ಕೆ ಅದೇ ರಕ್ತಗುಣವಾಯಿತು. +ಜಂಬೂರು ಶ್ರೀನಿವಾಸ ಬಾಗವತ, ಪಾಂಡೇಶ್ವರ ಸದಾಶಿವಯ್ಯನವರ ಗುರುತನದಲ್ಲಿ ಯಕ್ಷಗಾನ ಕಲಾವಿದ್ಯೆ ಸುಸಾಂಗವಾಗಿ ದೊರಕಿತು. +ಹೂವಿನಕೋಲು ಚಿಕ್ಕಮೇಳ ತಿರುಗಾಟವೂ ಪುರಾಣ ಅನುಭವವಕ್ಕೆ ಪೂರಕ-ಪ್ರೇರಕವಾಯಿತು. +ಮಂದಾರ್ತಿ ಮೇಳದಲ್ಲೇ ಸುದೀರ್ಥ 38ವರ್ಷಗಳ ಕಲಾಸೇವೆಗೈದ ಲಕ್ಷ್ಮೀನಾರಾಯಣಯ್ಯನವರು ಸಾಲಿಗ್ರಾಮ,ಪೆರ್ಡೂರು, ಸೌಕೂರು, ಅಮೃತೇಶ್ವರಿ, ಹೊನ್ನೇಸರ ಮೇಳ ಸೇರಿದಂತೆ ಇವರ ಒಟ್ಟು ಕಲಾ ವ್ಯವಸಾಯ 54 ವರ್ಷ. +ಖ್ಯಾತ ಕಲಾವಿದ ಕೊಳ್ಳೆಬೈಲು ಕುಷ್ಠ ಅವರಿಂದ ಮುಖವರ್ಣಿಕೆಯ ವಿಧಾನವನ್ನು ಕರಗತವಾಗಿಸಿಕೊಂಡ ಸಕ್ಕಟ್ಟು ಅವರು ವೇಷಕಟ್ಟಿ ರಂಗಕ್ಕೆ ಬಂದರೆ ಪ್ರತ್ಯಕ್ಷ "ರಾಕ್ಚಸ'ನೇ ಕಣ್ಣೆದುರು ನಿಂತಂತೆ! +ಇವರು ರಾವಣ, ಮೈರಾವಣ, ವೀರಭದ್ರ,ಫಟೋತ್ಕಚ, ಉಗ್ರನರಸಿಂಹ, ಹಿಡಿಂಬ,ಶೂರಪದ್ಮಾಸುರ ಮೊದಲಾದ ಗಂಡು ಬಣ್ಣದ ವೇಷಗಳನ್ನು ಮಾಡಿದ್ದಾರೆ. +ಶೂರ್ಪನಖಾ, ಹಿಡಿಂಬೆ, ವೃತ್ರಜ್ಜಾಲೆ,ಮೊದಲಾದ ಹೆಣ್ಣುಬಣ್ಣದ ವೇಷಗಳನ್ನೂ ನಿರ್ವಹಿಸಿ ರಸಿಕರನನ್ನು ಬೆರಗುಗೊಳಿಸಿದವರು. +ಬಣ್ಣದ ವೇಷಗಳಲ್ಲದೆ, ದಶರಥ, ಮಯೂರದ್ವಜ,ಹಂಸದ್ದಜ ಮೊದಲಾದ ರಾಜವೇಷಗಳನ್ನು ಧರಿಸಿ ರಂಗವಲ್ಲಿ ಮೆರೆದವರು. +ಪತ್ನಿ ಲಕ್ಷ್ಮೀ. +ಭಾಗೀರಥಿ, ಮಂಜುನಾಥಯ್ಯ,ಜಾನಕಿ, ಜಯರಾಮ, ರಮೇಶ, ಶಾರದಾ, ಶ್ಯಾಮಲ,ಶಕುಂತಲಾ, ರಾಘವೇಂದ್ರ ಎಂಬ 9 ಮಂದಿ ಮಕ್ಕಳನ್ನು ಪಡೆದು ತುಂಬು ಸಂಸಾರಸ್ಥರಾದ ಸಕ್ಕಟ್ಟುಲಕ್ಷ್ಮೀನಾರಾಯಣಯ್ಯ-ನವರ ಕಿರಿಯ ಪುತ್ರ ರಾಘವೇಂದ್ರ ಸಕ್ಕಟ್ಟು ಯುವ ಮದ್ದಳೆವಾದಕರಾಗಿ ಯಕ್ಷಗಾನ ರಂಗಭೂಮಿಯಲ್ಲಿ ಸೇವಾತತ್ಪರರಾಗಿದ್ದಾರೆ. +ಸಕ್ಕಟ್ಟು ಅವರನ್ನು ಅನೇಕಾನೇಕ ಪ್ರಶಸ್ತಿ ಗೌರವಗಳೂ ಅರಸಿ ಬಂದಿವೆ. +ಇವರನ್ನು ಅಂದಿನ ಪ್ರಧಾನಿ ಜವಾಹರ್‌ಲಾಲ್‌ ನೆಹರೂ ಹಾಗೂ ರಾಷ್ಟಪತಿ ರಾಜೇಂದ್ರ ಪ್ರಸಾದ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ. +ಶಿವರಾಮ ಕಾರಂತರ ಯಕ್ಷರಂಗ ತಂಡದ ಮೂಲಕ ದೇಶ-ವಿದೇಶಗಳಲ್ಲಿ ಕಲಾಪ್ರತಿಭೆಯನ್ನು ಮೆರೆದ ಲಕ್ಷ್ಮೀನಾರಾಯಣಯ್ಯನವರಿಗೆ 1986ರಲ್ಲಿ ಕರ್ನಾಟಕ ಜಾನಪದ ಯಕ್ಷಗಾನ ಅಕಾಡೆಮಿ ಪ್ರಶಸ್ತಿ ದೊರೆತಿದೆ. + 1993ರಲ್ಲಿ ಮುಂಬಯಿ ಪದವೀಧರ ಯಕ್ಷಗಾನ ಪ್ರಶಸ್ತಿ,ಶ್ರೀರಾಮ-ವಿಠಲಪ್ರಶಸ್ತಿ, ನಿಟ್ಟುರು ಭೋಜಪ್ಪ,ಸುವರ್ಣ ಪ್ರಶಸ್ತಿ ಸಿಕ್ಕಿದೆ. +ಉಡುಪಿ ಯಕ್ಷಗಾನ ಕಲಾರಂಗದ ಡಾ.ಬಿ.ಬಿ.ಶೆಟ್ಟಿ ಪ್ರಶಸ್ತಿ, ಹಾರಾಡಿ ರಾಮ ಗಾಣಿಗ ಪ್ರಶಸ್ತಿಯೂ ದೊರಕಿರುತ್ತದೆ. +ಪ್ರಸಂಗಗಳ ಸಮಗ್ರಭಾವ ಭಂಗವಾಗದಂತೆ,ಪಾತ್ರಗಳ ಗುಣಧರ್ಮವನ್ನು ಸಂಪೂರ್ಣ ಅರ್ಥೈಸಿಕೊಂಡು ಪದ್ಯಸಾಹಿತ್ಯದ ಕಟ್ಟು ಕೆಡದಂತೆ ಗಾನಪೂರಕವಾಗಿ ಚಂಡೆ ನುಡಿಸುವ ಅನುಭವಿ ಚಂಡೆವಾದಕ ಶ್ರೀ ಎಸ್‌.ವಿ.ಲಕ್ಷ್ಮೀನಾರಾಯಣ ಹೆಗಡೆ. +ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಸಂಪ ಎಂಬಲ್ಲಿ 25-5-1960ರಲ್ಲಿ ಜನಿಸಿದ ಲಕ್ಷ್ಮೀನಾರಾಯಣ ಹೆಗಡೆ ವಿಶ್ವೇಶ್ವರಯ್ಯ-ಲಕ್ಷ್ಮಮ್ಮ ದಂಪತಿಯ ಸುಪುತ್ರ. +7ನೇ ತರಗತಿಯ ವರೆಗಿನ ವಿದ್ಯಾಭ್ಯಾಸದ ತರುವಾಯ, 15ನೇ ವಯಸ್ಸಿನಲ್ಲಿ ಯಕ್ಷಗಾನ ಪ್ರಪಂಚ ಹೊಕ್ಕ ಲಕ್ಷ್ಮೀನಾರಾಯಣ ಹೆಗಡೆ ಸಮರ್ಥ ಚಂಡೆಗಾರರಾಗಿ ಖ್ಯಾತಿ ಪಡೆದವರು. +ಸಂಪ ಲಕ್ಷ್ಮೀ ನಾರಾಯಣ ಅವರ ಅಜ್ಜ ಭಾಗವತರು. + ಚಿಕ್ಕಪ್ಪ ವೇಷಧಾರಿಯಾಗಿದ್ದರು. +ಹಾಗಾಗಿ ಕಲಾಸಂಸ್ಕಾರವೆನ್ನವುದು ಶ್ರೀಯುತರಿಗೆ ಕೌಟುಂಬಿಕ ಹಿನ್ನೆಲೆಯಲ್ಲಿ ಎಳವೆಯಲ್ಲೇ ಮೈಗೂಡಿತು. +ಪ್ರಸಂಗಕರ್ತ ಗುಂಡು ಸೀತಾರಾಮ ತಲವಾಟ ಹಾಗೂ ಮನೆಯವರ ಸಂಪೂರ್ಣ ಸಹಕಾರ,ಪ್ರೇರಣೆಯಿಂದ ಕಲಾಜೀವನದ ಹಾದಿ ಹಿಡಿದ ಸಂಪ ಅವರು ಗೋಡೆ ನಾರಾಯಣ ಹೆಗಡೆಯವರಲ್ಲಿ ನೃತ್ಯ ಕಲೆಯನ್ನು ಗಜಾನನ ಭಂಡಾರಿ ಗುಣವಂತೆ ಅವರಲ್ಲಿ ಚಂಡೆ-ಮದ್ದಳೆ ವಾದನದ ತರಬೇತಿಯನ್ನು ವ್ಯವಸ್ಥಿತವಾಗಿ ಪಡೆದವರು. +ಅಮೃತೇಶ್ವರಿ 2, ಸಾಲಿಗ್ರಾಮ 4, ಹಿರಿಯಡಕ 1, ಮೂಲ್ಕಿ 1, ಶಿರಸಿ-ಪಂಚಲಿಂಗ 2, ಬಚ್ಚಗಾರು 5, ಪೂರ್ಣಚಂದ್ರಮೇಳ 10, ಹೀಗೆ ಕಲಾವ್ಯವಸಾಯದಲ್ಲಿ ಬೆಳ್ಳಿ ವಸಂತವನ್ನು ಕಂಡಿದ್ದಾರೆ. +ಪ್ರತಿಭಾನ್ವಿತ ಕಲಾವಿದರಾದ ಲಕ್ಷ್ಮೀನಾರಾಯಣ ಹೆಗಡೆ ಅವರು ಹಿಮ್ಮೇಳದಲ್ಲಿ ಸಮರ್ಥ ಪ್ರಭುತ್ವ ಕಂಡುಕೊಂಡಂತೆ, ಮುಮ್ಮೇಳದಲ್ಲೂ ಸಮರ್ಥ ಕಲಾವಂತಿಕೆ ಹೊಂದಿದವರು. +ವೃತ್ತಿ ಬದುಕಿನ ಮೊದಲವರ್ಷ ವೇಷಧಾರಿಯಾಗಿಯೇ ಸೇವೆ ಸಲ್ಲಿಸಿರುವವರು. +ಪುಂಡುವೇಷಗಳನ್ನೂ,ಸ್ತ್ರೀವೇಷಗಳನ್ನೂ ಮಾಡಿ ಸೈ ಅನ್ನಿಸಿಕೊಂಡಿದ್ದಾರೆ. +ಸಂಪ ಲಕ್ಷ್ಮೀನಾರಾಯಣ ಬಾಳಿನ ಜೊತೆಗಾತಿ ಸರಸ್ಪತಿ. +ಸೌಮ್ಯ, ಸಂದೇಶ ಮಕ್ಕಳು. +ಶ್ರೀಯುತರಿಗೆ ದಿ.ಕೊಂಡದಕುಳಿ ರಾಮಹೆಗಡೆ ಪ್ರಶಸ್ತಿ ,ರಾಘವೇಶ್ವರಪ್ರಶಸ್ತಿ, ಮಧ್ಯಪ್ರದೇಶದ ನೊರೊನಾದಲ್ಲಿ ಪುರಸ್ಕಾರ ದೊರಕಿರುತ್ತದೆ. +ಪುರಾಣ ಜ್ಞಾನಸಂಪನ್ನ ಹಿರಿಯ ಚಂಡೆವಾದಕ ವಾಸುದೇವ ವಿಷ್ಣು ಭಟ್‌. +ಉತ್ತರಕನ್ನಡದ ಗುಂಡಿಬೈಲು ವಾಸುದೇವ ಭಟ್ಟರ ಹುಟ್ಟೂರು. +15-8-1940ರಲ್ಲಿ ವಿಷ್ಣು ರಾಮ ಭಟ್ಟ-ಭಾಗೀರಥಿ ದಂಪತಿಯ ಪುತ್ರನಾಗಿ ಜನಿಸಿದ ಶ್ರೀಯುತರ ಅಕ್ಷರ ಶಿಕ್ಷಣ ನಾಲ್ಕನೇ ತರಗತಿಯವರೆಗೆ ಮಾತ್ರ. +ವಾಸುದೇವ ಭಟ್ಟರ ಅಜ್ಜ ವೇಷಧಾರಿ. +ಹೀಗಾಗಿ ಯಕ್ಷಗಾನ ಕಲಾಸಕ್ತಿ ಎಳವೆಯಲ್ಲಿಯೇ ಮೈಗೂಡಿತು. +ತನ್ನ 16 ಹರೆಯದಲ್ಲಿ ಬಣ್ಣದ ಬಾಳುವೆಗೆ ಮನಮಾಡಿದ ಭಟ್ಟರು ಹಿಮ್ಮೇಳದ ಚಂಡೆವಾದನ ಕಲಾವಿದರಾಗಿ ಗುರುತಿಸಿಕೊಂಡರು. +ಶ್ರೀಯುತರಿಗೆ ಚಂಡೆವಾದನ ಕಲೆ, "ಏಕಲವ್ಯಪ್ರಯೋಗ'ದಂತೆ ಸ್ವಯಂ ಸಿದ್ಧಿಯಾದುದು ನಿಜಕ್ಕೂ ವಿಶೇಷ ವೆನಿಸುತ್ತದೆ. +ಅಮೃತೇಶ್ವರಿ 1, ಹಾಲಾಡಿ 1, ಮಾರಣಕಟ್ಟೆ19, ಕಮಲಶಿಲೆ 4, ಇಡಗುಂಜಿ 2, ಬಚ್ಚಗಾರು 1,ಸಾಲಿಗ್ರಾಮ 1, ಗುಂಡಬಾಳ 20 ಹೀಗೆ ವಾಸುದೇವಭಟ್ಟರು 49 ವರ್ಷ ಪೂರೈಸಿದ್ದಾರೆ. +ಅನುಭವಿ ಚಂಡೆಗಾರರಾದ ಭಟ್ಟರ ವಾದನ ಪದ್ಧತಿ ಪಾರಂಪರಿಕವಾದದ್ದು. +ಚಂಡೆಯ ಗುಂಡಿಗೆಯಿಂದ ನಾದಪೂರ್ಣ ನುಡಿಮಿಡಿತದಿಂದ ಯಕ್ಷನಟನ ಪಾತ್ರಾಬಿವ್ಯಕ್ತಿಗೆ, ಭಾಗವತರ ಗಾನ ಪ್ರಸ್ತುತಿಗೆ ಸುಯೋಗ್ಯ ಸಾಂಗತ್ಯ ಒದಗಿಸುವ ವಿಶೇಷ ಕಲಾವಂತಿಕೆ ಇವರಲ್ಲಿ ನಿಚ್ಚಳವಾಗಿ ಗುರಿತಿಸಬಹುದಾಗಿದೆ. +ಹಿರಿಯ ಚಂಡೆವಾದಕರಾದ ವಾಸುದೇವ ಭಟ್ಟರ ಗರಡಿಯಲ್ಲಿ ಪಳಗಿದ ಅನೇಕ ಚಂಡೆವಾದಕರು ವೃತ್ತಿರಂಗದಲ್ಲಿ ಪ್ರತಿಭಾವಂತರಾಗಿ ಬೆಳಗುತ್ತಿದ್ದಾರೆ. +ಶ್ರೀಯುತರ ಸಹಧರ್ಮಿಣಿ ಲಕ್ಷ್ಮಿ ಈಗಲೂ ಗುಂಡಬಾಳ. +ಮೇಳದಲ್ಲಿ ಶ್ರೀಯುತರು ಕಲಾಸೇವಾ ತತ್ಪರರು. +ಅನೇಕ ಸಂಘ ಸಂಸ್ಥೆಗಳು ಇವರನ್ನು ಸಂಮಾನಿಸಿವೆ. +ಗಂಡುಕಲೆಯ ಪ್ರಚಂಡ ಕಲಾಪ್ರತಿಭೆ ವಿದ್ಯಾಧರ ಜಲವಳ್ಳಿ ನಿರ್ವಹಣಾ ಭೂಮಿಕೆಗಳಿಗೆ ತನ್ನದೇ ವಿಶಿಷ್ಟಕಲಾ ನೈಪುಣ್ಯದಿಂದ ಜೀವಕಳೆ ನೀಡುವ ಪ್ರಬುದ್ಧ ಕಲಾವಿದ. +ನಾಯಕ, ಖಳನಾಯಕ, ಪಾತ್ರಗಳೆರಡಲ್ಲೂ ಸಮಾನ ಪ್ರಭುತ್ವ ಕಂಡುಕೊಂಡ ವಿದ್ಯಾಧರ ಜಲವಳ್ಳಿ ಅಪಾರ ಅಭಿಮಾನಿಗಳನ್ನು ಸೃಷ್ಟಿಸಿಕೊಂಡ ಸಂಪನ್ನ ಪ್ರತಿಭೆ. +ಉತ್ತರಕನ್ನಡದ ಜಲವಳ್ಳಿಯೇ ಇವರ ಹುಟ್ಟೂರು. +ಪ್ರಖ್ಯಾತ ಕಲಾವಿದ ಜಲವಳ್ಳಿ ವೆಂಕಟೇಶರಾವ್‌ ಇವರ ತಂದೆ. +ತಾಯಿ ಕಲ್ಯಾಣಿ. +12-7-1972ರಲ್ಲಿ ಜನಿಸಿದ ವಿದ್ಯಾಧರ ಜಲವಳ್ಳಿಯವರ ಓದು ಎಂಟನೇ ತರಗತಿಯವರೆಗೆ ಮಾತ್ರ. +16ರ ಹರೆಯದಲ್ಲೇ ಇವರ ರಂಗಪ್ರವೇಶ. +ತಂದೆಯವರ ವೇಷಗಳು ಹಾಗೂ ಪ್ರಸಿದ್ಧಿಯೇ ಅವರಿಗೆ ಕಲಾಪ್ರೇರಣೆ. +ಪಾತ್ರ ಸ್ವಭಾವವನ್ನರಿತ ನೃತ್ಯಾಭಿನಯ, ಗತ್ತು-ಗಾಂಭೀರ್ಯದ ರಂಗವೈಖರಿ,ಆಕರ್ಷಕ ವೇಷಗಾರಿಕೆ, ತೂಕದ ಸ್ವರಭಾರ,ಜಲವಳ್ಳಿಯವರ ಕಲಾಸಂಕೇಶಗಳು. +ಪುರಾಣಪಾತ್ರಗಳ ಪರಿಣಾಮಕಾರಿ ರಂಗಾಭಿವ್ಯಕ್ತಿಯೊಂದಿಗೆ,ವಚೋವೈಭವದ ರಸಗಡಲಿನಲ್ಲಿ ವರ್ತಮಾನದ ವೈಚಾರಿಕತೆಯ ರಂಗ ತರಂಗಗಳನ್ನು ಸೃಷ್ಟಿಸುವ ಸೃಜನಶೀಲ ಕಲಾವಿದ ಜಲವಳ್ಳಿ ವಿದ್ಯಾದರ ಪ್ರತೀಪಾತ್ರಗಳಿಗೂ ಅವರದ್ದೇ ಆದ ಸ್ಪಷ್ಟ ಸ್ವರೂಪ ನೀಡಿದ್ದಾರೆ. +ಸುಧನ್ವ, ಅರ್ಜುನ, ಕೌರವ, ಮಾಗಧ,ವಿಶ್ವಾಮಿತ್ರ, ವೀರಮಣಿ, ಕೀಚಕ, ಬಲರಾಮ,ಭದ್ರಸೇನ, ಕಂಸ, ವತ್ಸಾಖ್ಯ, ಕೌಂಡ್ಲೀಕ ಮೊದಲಾದ ಪೌರಾಣಿಕ ಭೂಮಿಕೆಗಳಿಗೆ ವಿಶಿಷ್ಟ ಮೆರುಗು ನೀಡಿದ ಪ್ರತಿಭಾ ಶಾಲಿ ಕಲಾವಿದರಿವರು. +ಬಾಳಿನ ಜೊತೆಗಾತಿ ಜಾಹ್ನವಿ ಜಲವಳ್ಳಿ. +ಪುತ್ರ ಕಲಾಧರ. +ಬಡಗುತಿಟ್ಟಿನಲ್ಲಿ ನಡುಬಡುಗು ಹಾಗೂ ಬಡಾಬಡಗು ಎರಡೂ ಇವರಲ್ಲಿ ಸುಪುಷ್ಟವಾಗಿ ಮೇಳೈಸಿ ಕಲಾರಸಿಕರಿಗೆ ವಿಶೇಷ ಮುದವನ್ನು ನೀಡಿದೆ. +ಗುಂಡಬಾಳ 1, ಗೋಳಿಗರಡಿ 2, ಕಮಲಶಿಲೆ 5, ಸಾಲಿಗ್ರಾಮ 2, ಪೆರ್ಡೂರು 12, ಹೀಗೆ 22 ವರ್ಷಗಳ ಸಾರ್ಥಕ ಕಲಾ ತಿರುಗಾಟದಲ್ಲಿ ಯಶಸ್ಸು ಸಂಪಾದಿಸಿದ್ದಾರೆ. +ಶ್ರೀಯುತರು ಹಲವು ಸಂಘ-ಸಂಸ್ಥೆಗಳಿಂದ ಸಂಮಾನಿತರಾಗಿದ್ದಾರೆ. +ವರ್ತಮಾನದ ಯಕ್ಷಗಾನ ರಂಗಭೂಮಿಯ ಬಹುಬೇಡಿಕೆಯ ಕಲಾವಿದರಾಗಿ ರೂಪುಗೊಂಡಿದ್ದಾರೆ. +ಮಧ್ಯಮ ಬಡಗಿನ ಸೊಗಸು ತುಂಬಿದ ವೇಷಗಾರಿಕೆ, ಗಂಭೀರ ಸ್ವರಭಾರದ ಅರ್ಥಗಾರಿಕೆ,ಗತ್ತು-ಗೈರತ್ತಿನ ಪರಿಸುಟ ಅಭಿನಯ ಯುಕ್ತ ನೃತ್ಯಗಾರಿಕೆ ಹಾಗೂ ಅಗಾಧ ಪೌರಾಣಿಕ ಜ್ಞಾನ ಪೂರ್ಣತೆ ಕಲಾಬದುಕಿನಲ್ಲಿ ಕಾಣಿಸುವ ಸಂಪನ್ನ ಕಲಾವಿದ ಕೋಡಿ ವಿಶ್ವನಾಥ ಗಾಣಿಗ. +ಕುಂದಾಪುರ ತಾಲೂಕಿನ ಕೋಡಿ ಎಂಬಲ್ಲಿ10-8-1962ರಲ್ಲಿ ಶ್ರೀನಿವಾಸ ಗಾಣಿಗ-ಲಕ್ಷಿ ಗಾಣಿಗ ದಂಪತಿಯ ಸುಪುತ್ರನಾಗಿ ಜನಿಸಿದ ವಿಶ್ವನಾಥ ಗಾಣಿಗರು 5ನೇ ಇಯತ್ತೆಗೆ ಶಿಕ್ಷಣ ಮೊಟಕುಗೊಳಿಸಿ ತನ್ನ 14ರ ಹರೆಯದಲ್ಲೇ ಕಲಾಪ್ರಪಂಚಕ್ಕೆ ಅಡಿಯಿರಿಸಿದರು. +ಹಾರಾಡಿ ರಾಮಗಾಣಿಗ, ಕೃಷ್ಣಗಾಣಿಗ, ನಾರಾಯಣ ಗಾಣಿಗ, ಮೊದಲಾದ ಹಾರಾಡಿ ಮನೆತನದ ಶ್ರೇಷ್ಠ ಕಲಾಪರಂಪರೆಯ ಹಿನ್ನೆಲೆಯನ್ನು ಹೊಂದಿದ ಗಾಣಿಗರು ಪ್ರಸಿದ್ಧ ಕಲಾವಿದ ಕೋಡಿಶಂಕರಗಾಣಿಗರ ಸೋದರಳಿಯ. +ಕೋಡಿ ಶಂಕರಗಾಣಿಗರ ಗುರುತನದಲ್ಲಿ ಸಾರ್ಥಕ ಕಲಾವಿದ್ಯೆಯನ್ನು ಪಡೆದ ಕೋಡಿ ವಿಶ್ವನಾಥ ಗಾಣಿಗರು ಪೌರಾಣಿಕ ಕಥಾನಕಗಳ ನಾಯಕ, ಪ್ರತಿನಾಯಕ, ಖಳನಾಯಕ ಭೂಮಿಕೆಗಳಿಗೆ ಸಮರ್ಪಕ ಪೋಷಣೆ ಒದಗಿಸುವವರು. +ಕಮಲಶಿಲೆ 2, ಹಾಲಾಡಿ 5, ಗೋಳಿಗರಡಿ 2, ಸಾಲಿಗ್ರಾಮ 1, ಅಮೃತೇಶ್ವರಿ 2, ಸೌಕೂರು 22, ಹೀಗೆ ಕಲಾಪ್ರಪಂಚದಲ್ಲಿ 34 ವರ್ಷಗಳ ವ್ಯವಸಾಯ ಪೂರೈಸಿ ಸೌಕೂರು ಮೇಳದ ಪ್ರಧಾನ ವೇಷಧಾರಿಯಾಗಿ ದುಡಿಯುತ್ತಿದ್ದಾರೆ. +ವಿಶ್ವನಾಥಗಾಣಿಗರ ಕರ್ಣ, ಭಸ್ಮಾಸುರ, ಅರ್ಜುನ, ಕೀಚಕ,ವೀರಮಣಿ, ಶನೀಶ್ವರ, ಕೌಂಡ್ಲೀಕ, ಸುಧನ್ವ, ರಾವಣ,ಜಮದಗ್ನಿ ಮೊದಲಾದ ಭೂಮಿಕೆಗಳು ರಸಿಕಜನಮನದಲ್ಲಿ ಚಿರಸ್ಥಾಯಿಯಾಗಿವೆ. +ಹಾರಾಡಿ ಪರಂಪರೆಯ ಮುಂಡಾಸು ವೇಷಗಳನ್ನು ಸರ್ವಾಂಗೀಣ ಶೋಭೆಯಲ್ಲಿ ರಂಗದಲ್ಲಿ ತೆರೆದಿಡುವ ಕಲಾವಿದ ಕೋಡಿಯವರು . +ಪತ್ನಿ ಸುಜಾತ ಗಾಣಿಗ, ನಾಲ್ವರು ಪುತ್ರಿಯರ ತುಂಬಿದ ಸಂತೃಪ್ತ ಕುಟುಂಬ ಹೊಂದಿದವರು. +ಶ್ರೀಯುತರನ್ನು ಹೆಬ್ಬಾಡಿಕೊಂಡಳಬೆಟ್ಟು, ಅನಂತಶಶೆಟ್ಟರ ಸ್ಮರಣಾರ್ಥ ಸಮಾರಂಭದಂದು ಶೀರೂರು ಎಂಬಲ್ಲಿ ಗೌರವಪೂರ್ವಕ ಸಮ್ಮಾನಿಸಲಾಗಿದೆ. +ಬಡಗುತಿಟ್ಟಿನ ಹಿಮ್ಮೇಳದ ಸರ್ವಾಂಗವನ್ನೂ ಸಂಪೂರ್ಣಬಲ್ಲ, ಮುಮ್ಮೇಳದ ಕುರಿತೂ ಪರಿಣತಿ ಹೊಂದಿದ ಹಿರಿಯ ಭಾಗವತ ಎಂ.ವಿಶ್ವೇಶ್ವರ ಸೋಮಯಾಜಿ. +ಕುಂದಾಪುರ ತಾಲೂಕಿನ ಬೆಳ್ಳಾಲ ಗ್ರಾಮದ ಮೋರ್ಟು ಎಂಬಲ್ಲಿ 24-12-1951ರಲ್ಲಿ ಎಂ.ಶಿವರಾಮ ಸೋಮಯಾಜಿ, ಮೀನಾಕ್ಷಿಯಮ್ಮ ದಂಪತಿಯ ಪುತ್ರರಾಗಿ ವೈದಿಕ ಮನೆತನದಲ್ಲಿ ಜನಿಸಿದ ಸೋಮಯಾಜಿಯವರು 5ನೇ ಇಯತ್ತೆಯವರೆಗಿನ ಶೈಕ್ಷಣಿಕ ಹಂತ ಪೂರೈಸಿ, ತನ್ನ 15ನೇ ವರ್ಷದಲ್ಲಿ ಯಕ್ಷಗಾನ ಪ್ರಪಂಚವನ್ನು ಪ್ರವೇಶಿಸಿದವರು. +ಬೆಳ್ಳಾಲ ವೆಂಕಟಾಚಲ ಹೆಬ್ಬಾರ್‌ ಅವರಲ್ಲಿ ತಾಳದೀಕ್ಷೆ ಪಡೆದು, ಜನ್ಸಾಲೆ ನಾಗಪ್ಪಯ್ಯ ಶ್ಯಾನುಭಾಗರು, ಮಾರ್ವಿ ವಾದಿರಾಜ ಹೆಬ್ಬಾರರಿಂದ ಭಾಗವತಿಕೆಯ ತಂತ್ರವನ್ನು ಸಿದ್ಧಿಸಿಕೊಂಡು, ನಾರ್ಣಪ್ಪ ಉಪ್ಪೂರರ ಶಿಷ್ಯನಾಗಿ ಪರಿಪೂರ್ಣ ಗಾನವಿದ್ಯೆಯನ್ನು ತನ್ನದಾಗಿಸಿಕೊಂಡರು. +ಕೊಡವೂರು 1. ಪೆರ್ಡೂರು 2, ಮಾರಣಕಟ್ಟೆ 2, ಶಿವರಾಜಪುರ 2, ಮಂದಾರ್ಶಿ 1, ಹಿರಿಯಡಕ 1, ಕಳವಾಡಿ 1, ಅಮೃತೇಶ್ವರಿ 1, ನಾಗರಕೊಡಿಗೆ 3,ಕಮಲಶಿಲೆ 1, ಸೌಕೂರು 3, ಹಾಲಾಡಿ 1, ಸೀತೂರು 1. +ಹೀಗೆ 30ವರ್ಷ ಸುದೀರ್ಥ ಕಲಾವ್ಯವಸಾಯ ಮಾಡಿದ ಸೋಮಯಾಜಿಯವರು ಪ್ರಸ್ತುತ ವಿಶ್ರಾಂತ ಜೀವನ ನಡೆಸುತ್ತಿದ್ದಾರೆ. +ಹವ್ಯಾಸಿ ಸಂಘ-ಸಂಸ್ಥೆಗಳ ಗುರುಗಳಾಗಿ ಕಲಾಸೇವೆ ಸಲ್ಲಿಸುತ್ತಿದ್ದಾರೆ. +ಸೋಮಯಾಜಿಯವರು ಕೇವಲ ಭಾಗವತರಷ್ಟೇ ಅಲ್ಲದೆ ಮದ್ದಳೆ, ಚಂಡೆ ವಾದಕರೂ ಕೂಡ. +ಪ್ರಾರಂಭಿಕ ವೃತ್ತಿರಂಗ ಭೂಮಿಯ ಕೊಡವೂರು ಮೇಳದಲ್ಲಿ ಒಡ್ಡೋಲಗ ಸಹಿತ ಅನೇಕ ವೇಷಗಳನ್ನೂ ಮಾಡಿದ್ದೂ ಇದೆ. +ಪ್ರಸಂಗಕರ್ತರೂ ಆಗಿರುವ ಸೋಮಯಾಜಿಯವರ “ಕಮಲಶಿಲೆ ಕ್ಷೇತ್ರಮಹಾತ್ಮ್ಯೆ'ಹಾಗೂ "ರಾಜಾ ರತ್ನಸೇನ' ಅಮೂಲ್ಯ ಕಲಾಕೃತಿಗಳಾಗಿ ಗಮನಸೆಳೆಯುತ್ತವೆ. +ಸಹಧರ್ಮಿಣಿ ಸುಶೀಲ. +ಸುಮಶ್ರೀ, ಸೌಮ್ಯಶ್ರೀ ಮಕ್ಕಳು. +ಶ್ರೀಯುತರನ್ನು ಹಲವು ಸಂಘ-ಸಂಸ್ಥೆಗಳು ಗುರುತಿಸಿ ಗೌರವಿಸಿವೆ. +ಪೌರಾಣಿಕ ರಂಗ ಸಿದ್ಧಾಂತದಲ್ಲಿ ಯಕ್ಷಗಾನ ಸ್ರ್ತೀ ಭೂಮಿಕೆಗಳಿಗೆ ಪ್ರಾಣ ಚೈತನ್ಯ ನೀಡುವ ರಂಗಸ್ಥಳದ ಗರತಿ, ಮೂರೂರು ವಿಷ್ಣುಭಟ್‌. +ಉತ್ತರಕನ್ನಡದ ಮೂರೂರು ಎಂಬಲ್ಲಿ ಗಜಾನನ ಪರಮೇಶ್ವರ ಭಟ್ಟ - ಭಾಗೀರಥಿ ದಂಪತಿಯ ಸುಪುತ್ರರಾಗಿ 24-01-1958ರಲ್ಲಿ ಜನಿಸಿದ ವಿಷ್ಣುಭಟ್‌ಎಸ್ಸೆಸ್ಸೆಲ್ಸಿಯ ವರೆಗಿನ ಪ್ರೌಢವ್ಯಾಸಂಗದ ಬಳಿಕ, ತನ್ನ 22ನೇ ವಯಸ್ಸಿನಲ್ಲೇ ಯಕ್ಷಲೋಕದ ಹೆಣ್ಣಾದರು. +ಮೂರೂರು ರಾಮ ಹೆಗಡೆಯವರ ಗುರುತನದಲ್ಲಿ ಪ್ರಬಲ ಕಲಾವಿದ್ಯೆಯನ್ನು ಸಂಪಾದಿಸಿದ ವಿಷ್ಣು ಭಟ್ಟರು ಸಮರ್ಥ ಸ್ತ್ರೀವೇಷಧಾರಿಯಾಗಿ ಖ್ಯಾತನಾಮವನ್ನು ಗಳಿಸಿದರು. +ಪಿ.ವಿ.ಹಾಸ್ಯಗಾರ್‌ ಕರ್ಕಿ, ಅವರು ಶ್ರೀಯತರಿಗೆ ಯಕ್ಷಗಾನ ರಂಗಾನುಭವ ಬೋಧಿಸಿದರು. +ಭಾವನಾತ್ಮಕ ಸ್ರ್ತೀ ಪಾತ್ರಗಳಲ್ಲಿ ತನ್ಮ್ನಯರಾಗುವ ಭಟ್ಟರು, ಸಾತ್ತ್ವಿಕ ಭೂಮಿಕೆಯ ಸಾಮ್ರಾಜ್ಞಿಯಾಗಿ ಗುರುತಿಸಲ್ಪಟ್ಟವರು. +ಭಟ್ಟರ ಸ್ತ್ರೀಪಾತ್ರಗಳಂದರೆ ಗಂಡುಜೀವದಲ್ಲಿ ಹೆಣ್ಣು ಹೊಕ್ಕಂತೆ. +ಅವರ ದಾಕ್ಷಾಯಿಣಿ,ಸೀತೆ, ಅಂಬೆ, ಮಂಡೋದರಿ, ಮೇನಕೆ, ಚಂದ್ರಮತಿ,ದಮಯಂತಿ, ಪ್ರಭಾವತಿ, ಸಾವಿತ್ರಿ, ಶಕುಂತಲೆ,ಮೊದಲಾದ ಭೂಮಿಕೆಗಳು ಈಗಲೂ ಜನಮನದಲ್ಲಿ ಹಸಿರಾಗಿ ಉಳಿದುಕೊಂಡಿದ್ದರೆ, ಅವರ ಮೇರುಪ್ರತಿಭೆಗೆ ಪ್ರತ್ಯೇಕ ಪುರಾವೆ ಬೇಕಾಗಲಾರದು. +ನಿರದ್ಗಳ ವಚೋಸಂಪತ್ತು ಪಾತ್ರೋಚಿತ ಹಾವ-ಭಾವ, ಪ್ರೌಢ ನೃತ್ಯಾಭಿನಯದ ಎರಕದಲ್ಲಿ ಪಾತ್ರಗಳನ್ನು ಕೆತ್ತಿಡುವ ಕಲೆ ವಿಷ್ಣುಭಟ್ಟರನ್ನು ಗಾಢವಾಗಿ ಬೆಸೆದುಕೊಂಡಿದೆ. +ಗುಂಡಬಾಳ-2, ಅಮೃತೇಶ್ವರಿ 2, ಕೋಟಹಿರೇಮಹಾಲಿಂಗೇಶ್ವರ ಮೇಳ 1, ಶಿರಸಿಪಂಚಲಿಂಗೇಶ್ವರ 1, ಪೆರ್ಡೂರು 9, ಇಡಗುಂಜಿ 1 ,ಶಿರಸಿ ಮಾರಿಕಾಂಬಾ 2, ಮಂದಾರ್ತಿ 1, ಸಾಲಿಗ್ರಾಮ 2, ಪೂರ್ಣಚಂದ್ರಮೇಳ 10, ಹೀಗೆ ಕಲಾಲೋಕದಲ್ಲಿ ಭಟ್ಟರ ಯಕ್ಷವ್ಯವಸಾಯ 31 ವರ್ಷ ಸಾರ್ಥಕ ಸಾಧನೆಯಾಗಿ ಪ್ರಶಂಸೆ ಪಡೆದಿದೆ. +ಇವರ ಶ್ರೀಮತಿಯೇ ಶ್ರೀಮತಿ. +ಆದರ್ಶ, ಸೌಮ್ಯ ಶ್ರೀಯುತರ ಈರ್ವರು ಮಕ್ಕಳು. +ಪ್ರಸ್ತುತ ವಿಷ್ಣು ಭಟ್ಟರು ಪೂರ್ಣಚಂದ್ರಮೇಳ, ಕುಂಭಾಶಿ ಇದರ ಕಲಾವಿದರು. +ವಿಷ್ಣುಭಟ್ಟರ ಪ್ರೌಢ ಪ್ರತಿಭೆಗೆ ಬೆಂಗಳೂರಿನ ಅಭಿಮಾನಿ ಬಳಗದಿಂದ ಗೌರವ ಸಂಮಾನ,ಗಂಗೊಳ್ಳಿ, ಮುದ್ರಾಡಿ, ಹಳ್ಳಿಹೊಳೆ ಮೊದಲಾದ ಕಡೆಗಳಲ್ಲಿ ಆದರಣೀಯಗೌರವ ಸಂಮಾನ ದೊರಕಿರುತ್ತದೆ. +ಆಕರ್ಷಕ ಅಂಗಸೌಷ್ಠವ, ಸುಮಧುರ ಸ್ಪರಸಿರಿ,ಲಾಲಿತ್ಯಪೂರ್ಣ ನೃತ್ಯರೇಖೆ, ಅನುಭವ ಬದ್ಧರಂಗವೈಖರಿ, ಕಮನೀಯ ಕಲಾಭಿನಯ, ಗಮನೀಯ ರಸಾನುಭವ ಕಲ್ಪಿಸಿಕೊಡಬಲ್ಲ ಸಮರ್ಥ ಸ್ತ್ರೀವೇಷಧಾರಿಕೆ ಎಸ್‌.ವಿಷ್ಣುಮೂರ್ತಿ ಬಾಸ್ರಿ. +ಉಡುಪಿ ಜಿಲ್ಲೆಯ ಕುಂಜಾಲು ಬಾಸ್ರಿ ಅವರ ಹುಟ್ಟೂರು. +ಇವರ ಜನನ 1968ರಲ್ಲಿ ಕೆ.ವೈಶ್ರೀನಿವಾಸ ಬಾಸ್ರಿ, ಸರಸ್ವತಿ ಅವರ ಸುಪುತ್ರ. +ಶ್ರೀಯುತರು ಎಸ್‌.ಎಸ್‌.ಎಲ್‌.ಸಿ ವ್ಯಾಸಂಗದ ಬಳಿಕ,ತನ್ನ 18ನೇ ವಯಸ್ಸಿನಲ್ಲಿ ಯಕ್ಷಗಾನ ರಂಗಭೂಮಿಗೆ ಹೆಜ್ಜೆಯಿರಿಸಿದರು. +ಉಡುಪಿ ಯಕ್ಷಗಾನ ಕೇಂದ್ರದ ವಿದ್ಯಾರ್ಥಿಯಾಗಿ ನೀಲಾವರ ರಾಮಕೃಷ್ಣಯ್ಯ, ಮಹಾಬಲ ಕಾರಂತ,ಹೆರಂಜಾಲು ವೆಂಕಟರಮಣ ಗಾಣಿಗರ ಶಿಷ್ಯನಾಗಿ ಸದೃಢ ಕಲಾಶಿಕ್ಷಣ ಪಡೆದರು. +ಮೂಲ್ಕಿ 1, ಅಮೃತೇಶ್ವರಿ 2,ಹಿರೇಮಹಾಲಿಂಗೇಶ್ವರ ಕೋಟ 1, ಶಿರಸಿ 5,ಕಮಲಶಿಲೆ 5, ಮಂದಾರ್ತಿ 7, ಸೌಕೂರು 3. ಹೀಗೆ 24 ವರ್ಷಗಳ ಕಲಾ ವ್ಯವಸಾಯ ಯಶಸ್ವಿಯಾಗಿ ಪೂರೈಸಿದ್ದಾರೆ. +ಉತ್ತಮ ಪೌರಾಣಿಕ ಜ್ಞಾನ, ರಂಗಾನುಭವವನ್ನು ಹೊಂದಿದ ಬಾಸ್ರಿ ಅವರು ಹಿಮ್ಮೇಳದಲ್ಲೂ ಪರಿಣತಿ ಸಾಧಿಸಿದವರು. +ಶ್ರೀಯುತರ ಅಂಬೆ, ಚಿತ್ರಾಂಗದೆ, ದ್ರೌಪದಿ, ಸುಭದ್ರೆ, ಶಶಿಪ್ರಭೆ,ಮೋಹಿನಿ, ಮೀನಾಕ್ಷಿ ಮೊದಲಾದ ಸ್ತ್ರೀಪಾತ್ರಗಳು ಜನಾಕರ್ಷಣೆ ಗೊಂಡಿವೆ. +ಇವರ ಧರ್ಮಪತ್ನಿ ಹೇಮಾ. +ಪುತ್ರ ಕಾರ್ತಿಕ್‌ಬಾಸ್ರಿ. +ಪ್ರತಿಭಾನ್ವಿತ ಸ್ತ್ರೀವೇಷಧಾರಿ ವಿಷ್ಣುಮೂರ್ತಿಬಾಸ್ರಿ ಅವರನ್ನು ಹಲವು ಸಂಘಸಂಸ್ಥೆಗಳು ಸಂಮಾನಿಸಿವೆ. +ಯಕ್ಷಗಾನದ ಸಾಂಪ್ರದಾಯಿಕ ನಡೆಯನ್ನು"ಉಪ್ಪೂರ ಶೈಲಿ'ಯಲ್ಲಿ ಪ್ರತಿಧ್ವನಿಸುವ,ಪರಂಪರೆಯನ್ನು ಪ್ರತಿನಿಧಿಸುವ ಮಧುರ ಕಂಠಸಿರಿಯ ಹಿರಿಯ ಭಾಗವತ ವಿಷ್ಣು ಸುಬ್ರಾಯ ಹೆಗಡೆ ಹಿರೇಮಕ್ಕಿ. +ಉತ್ತರಕನ್ನಡ ಜಿಲ್ಲೆಯ ಹಿರೇಮಕ್ಕಿ ಎಂಬಲ್ಲಿ 1949ರಲ್ಲಿ ಸುಬ್ರಾಯ ಮಹಾಬಲೇಶ್ವರ ಹೆಗಡೆ-ಭಾಗೀರಥಿ ಹೆಗಡೆ ದಂಪತಿಯ ಸುಪುತ್ರರಾಗಿ ಜನಿಸಿದ ವಿಷ್ಣು ಹೆಗಡೆಯವರು ಒಂಭತ್ತಕ್ಕೆ ಓದು ಮುಗಿಸಿ,ಯಕ್ಷಗಾನದ ತುಂಬು ಹಂಬಲದಿಂದ ಕಲಾಶಿಕ್ಷಣ ಪಡೆಯಲು ಮುಂದಾದರು. +ತಂದೆ ಸುಬ್ರಾಯಹೆಗಡೆಯವರು ಅರ್ಥಧಾರಿಯಾಗಿದ್ದರು. +ತೀರ್ಥರೂಪರ ಪ್ರೋತ್ಸಾಹ, ಪ್ರೇರಣೆಯಿಂದ 24ನೇ ವರ್ಷದಲ್ಲಿ ಕಲಾವ್ಯವಸಾಯ ಕೈಗೊಂಡ ಹೆಗಡೆಯವರು ನಾರ್ಣಪ್ಪ ಉಪ್ಪೂರ, ಶಪ್ಪೆಕೆರೆ ಭಾಗವತರಿಂದ ಗಾನಕಲೆಯನ್ನು ಸಂಪಾದಿಸಿದರು. +ಪೌರಾಣಿಕ ಪ್ರಸಂಗ ನಡೆಯನ್ನು ಸುಪುಷ್ಟವಾಗಿ ಬಲ್ಲ ಹೆಗಡೆಯವರ ಶೈಲೀಕೃತ ಮಂಜುಳ ಯಕ್ಷರಸಗಾನ ಪ್ರೇಕ್ಷಕ-ಶ್ರಾವಕರ ಮನಗೆದ್ದಿದೆ. +ಹಾಲಾಡಿ, ಕಮಲಶಿಲೆ, ಕಳುವಾಡಿ, ಬಗ್ವಾಡಿ,ಮಾರಣಕಟ್ಟೆ, ಮಂದಾರ್ತಿ, ಪೆರ್ಡೂರು, ಗುಂಡಬಾಳ,ಬಜ್ಚಗಾರು, ಅಮೃತೇಶ್ವರಿ, ಮೇಳಗಳಲ್ಲಿ ಸಾರ್ಥಕ ಕಲಾಸೇವೆ ನಡೆಸಿದ ವಿಷ್ಣು ಹೆಗಡೆಯವರ 22ವರ್ಷದ ತಿರುಗಾಟ ಯಶಸ್ವಿಯಾಗಿದೆ. +ಪ್ರಸ್ತುತ ಹೆಗಡೆಯವರು ಅಮೃತೇಶ್ವರಿ ಮೇಳದ ಪ್ರಧಾನ ಭಾಗವತರಾಗಿದ್ದಾರೆ. +ಸಹಧರ್ಮಿಣಿ ಗಿರಿಜಾ ವಿಷ್ಣುಹೆಗಡೆ. +ಓರ್ವ ಸುಪುತ್ರ ಗಣಪತಿ. +ವಿಷ್ಟು ಹೆಗಡೆಯವರಿಗೆ ಕೋಟ ಅಮೃತೇಶ್ವರಿ ಮೇಳದ ವತಿಯಿಂದ ಹಾಗೂ ಹುಟ್ಟೂರ ಗೌರವ, ಸಂಮಾನ ದೊರಕಿರುತ್ತದೆ. +ಬಡಗುತಿಟ್ಟಿನ ಯಕ್ಷಗಾನ ಕ್ಷೇತ್ರದಲ್ಲಿ ತನ್ನದೇ ವಿಶಿಷ್ಟ ಛಾಷು ಮೂಡಿಸಿ ಗೆಲುವಿನ ಗಿರಿಯೇರಿದ ಧೀಮಂತ ಕಲಾವಿದ ಜಲವಳ್ಳಿ ವೆಂಕಟೇಶ ರಾವ್‌. +ಅಗ್ರಮಾನ್ಯ ಕಲಾವಿದ ಜಲವಳ್ಳಿ ವೆಂಕಟೇಶರಾವ್‌ ಅವರು ಹೊನ್ನಾವರ ತಾಲೂಕಿನ ಜಲವಳ್ಳಿ ಎಂಬ ಪುಟ್ಟ ಹಳ್ಳಿಯಲ್ಲಿ ಬೊಮ್ಮ ಮಡಿವಾಳ -ಶ್ರೀದೇವಿ ದಂಪತಿಯ ಪುತ್ರರಾಗಿ 1-11-1933ರಲ್ಲಿ ಜನಿಸಿದರು. +ಕಾಡುವ ಕಡುಬಡತನದಿಂದ ಎರಡನೇ ಇಯತ್ತೆಗೆ ಶಿಕ್ಷಣ ಮೊಟಕು-ಗೊಳಿಸಿ ತನ್ನ 16ರ ಹರೆಯದಲ್ಲೇ ಕಲಾಲೋಕಕ್ಕೆ ಹೆಜ್ಜೆ ಹಾಕಿದರು. +ರಾಮನಾಗಪ್ಪ ಎಂಬವರ ಭಾಗವತಿಕೆ ಹಾಗೂ ಅರ್ಥಗಾರಿಕೆ ಇವರಿಗೆ ರಂಗಭೂಮಿಗೆ ಪ್ರೇರಣೆಯಾಯಿತು. +ಹಡಿನಬಾಳ ಸತ್ಯನಾರಾಯಣ ಹೆಗಡೆಯವರು ಇವರನ್ನು ಗುಂಡುಬಾಳ ಮೇಳಕ್ಕೆ ಸೇರಿಸಿದವರು. +ಸ್ವಯಂ ಪ್ರತಿಭೆಯನ್ನು ಸತತ ಸಾಧನೆಯ ಮೂಲಕ ಜಾಹೀರು ಗೊಳಿಸಿದ ಜಲವಳ್ಳಿ. +ಈ ರಂಗದಲ್ಲಿ ತನ್ನ ಮೇರು ಕಲಾವಂತಿಕೆಯಿಂದ ಅಪಾರ ಜನಮನ್ನಣೆ ಗಳಿಸಿದರು. +ಗುಂಡಬಾಳ 10, ಇಡಗುಂಜಿ 2, ಕೊಂಡದಕುಳಿ2, ಕೊಳಗಿಬೀಸ್‌ 2, ಸುರತ್ಕಲ್‌ 4, ಸಾಲಿಗ್ರಾಮ24, ಪೆರ್ಡೂರು 4, ಕಮಲಶಿಲೆ 1, ಗೋಳಿಗರಡಿ 1. \ +ಹೀಗೆ ಆರು ದಶಕ ಸುದೀರ್ಥ-ಸಾರ್ಥಕರಂಗಯಾತ್ರೆ ಪೂರೈಸಿದ ಜಲವಳ್ಳಿಯವರು ಪ್ರಸ್ತುತ ಪೆರ್ಡೂರು ಮೇಳದ ಪ್ರಧಾನ ಕಲಾವಿದರಾಗಿ ಈಗಲೂ ಗೆಜ್ಜೆಕಟ್ಟಿ ಹೆಜ್ಜೆ ಹಾಕುತ್ತಿದ್ದಾರೆ. +ಆರಂಭದಲ್ಲಿ ಸ್ತ್ರೀಪಾತ್ರಗಳನ್ನೂ ಇವರು ನಿರ್ವಹಿಸಿದ್ದರು. +ಶನೀಶ್ವರ ಮಹಾತ್ಮೆಯ "ಶನೀಶ್ವರ'ನಪಾತ್ರ ಅವರಿಗೆ ಸಾರ್ಥಕ ಹೆಸರು ತಂದಿತ್ತಿದೆ. +ರಂಗಸ್ಥಳದಲ್ಲಿ “ಎರಡು ಸುತ್ತು-ಮೂರು ಗತ್ತು'ಎಂಬುದು ಜಲವಳ್ಳಿಯವರ ಸೃಷ್ಟಿಶೀಲ-ಯಕ್ಷಗಾನೀಯ ಶೈಲಿಗೆ ಸಂದ ಕಲಾಮರ್ಯಾದೆ. +ಅವರ ಭಾಷಾ ಸಂಪತ್ತು ಅಗಾಧ, ವ್ಯಾಕರಣಬದ್ಧ,ಪಾಂಡಿತ್ಯ ಭರಿತ, ಪಾತ್ರಗಳ ಘನತೆ, ಗೌರವ ಮುಕ್ಕಾಗದಂತೆ ಪೌರಾಣಿಕ ರಂಗಾವರಣದಲ್ಲಿ ನಿರೂಪಿಸುವ ಕಲಾಭಾತಿ ಅವರದ್ದು. +ಭಸ್ಮಾಸುರ,ಶನೀಶ್ವರ, ಈಶ್ವರ, “ಕಾರ್ತವೀರ್ಯ' ದ ರಾವಣ, ಕಂಸ,ಸುಭದ್ರಾ ಕಲ್ಯಾಣದ ಬಲರಾಮ, ವಲಲ ಭೀಮ,ಗದಾಯುದ್ಧದ ಭೀಮ, ದುಷ್ಟಬುದ್ಧಿ, ರಕ್ತಜಂಘ ಅವರದೇ ವಿಶಿಷ್ಟ ಶೈಲಿಯಲ್ಲಿ ಅಮರವಾದ ಪಾತ್ರಗಳು. +ಪತ್ನಿ ಕಲ್ಯಾಣಿ. +ಮಾರುತಿ, ಮಂಜುನಾಥ,ವಿದ್ಯಾಧರ ಇವರ ಮೂವರು ಸುಪುತ್ರರು. +ಇವರ ಪುತ್ರ ವಿದ್ಯಾಧರ ಜಲವಳ್ಳಿ ಸಮರ್ಥ ಕಲಾವಿದ. +ಶ್ರೀಯುತರ ಮೇರು ಪ್ರತಿಭೆಗೆ ಪ್ರತಿಷ್ಠಿತ ರಾಜ್ಯಪ್ರಶಸ್ತಿ, ಜಾನಪದ ಯಕ್ಷಗಾನ ಅಕಾಡೆಮಿ ಪ್ರಶಸ್ತಿ ದೊಕಿದೆ. +ಅಭಿಮಾನಿ ಬಳಗದಿಂದ ಗೌರವ ಅಭಿನಂದನೆಯೂ ಬ್ರಹ್ಮಾವರದಲ್ಲಿ ನಡೆದಿದೆ. +ಯಕ್ಷಗಾನ “ಕಲಾರಂಗ'ದ ಪ್ರೊ.ಬಿ.ವಿ.ಆಚಾರ್ಯ ಪ್ರಶಸ್ತಿ ದೊರಕಿದೆ. +ಬಡಗುತಿಟ್ಟು ಯಕ್ಷಗಾನ ರಂಗಭೂಮಿಯ ಶಾಸ್ತ್ರೋಕ್ತ ಕಲಾಪದ್ಧತಿಯನ್ನು ಪರಿಪೂರ್ಣ ಬಲ್ಲಪರಂಪರೆಯ ಅಗ್ರಮಾನ್ಯ ವೇಷಧಾರಿ ಹೇರಂಜಾಲು ವೆಂಕಟರಮಣ ಗಾಣಿಗ. +ಕುಂದಾಪುರ ತಾಲೂಕಿನ ಹೇರಂಜಾಲು ಎಂಬ ಪುಟ್ಟ ಹಳ್ಳಿಯಲ್ಲಿ 16-2-1930ರಲ್ಲಿ ಜನಿಸಿದ ವೆಂಕಟರಮಣ ಗಾಣಿಗರು ಗಣಪಯ್ಯ ಗಾಣಿಗ ನಾಗಮ್ಮ ಗಾಣಿಗ ದಂಪತಿಯ ಸುಪುತ್ರ. +ಶ್ರೀಯುತರ ವಿದ್ಯಾರ್ಹತೆ 5ನೇ ತರಗತಿಯವರೆಗೆ ಮಾತ್ರ. +ವೆಂಕಟರಮಣ ಗಾಣಿಗರ ತಂದೆ ಯಕ್ಷಗಾನ ವೇಷಧಾರಿಯಾಗಿದ್ದುದರಿಂದ ಕಲೆಯೆಂಬುದು ಇವರಿಗೆ ಜನ್ಮದತ್ತವಾಯಿತು. +ಎಳವೆಯಲ್ಲೇ ಅನ್ಯಾದೃಶ ಕಲಾಸಕ್ತಿ ಮೈ ತುಂಬಿಕೊಂಡಿದ್ದ ಇವರನ್ನು ಶಾಲಾ ಅಧ್ಯಾಪಕರು ನೇರ್ಪುಗೊಳಿಸಿದರು. +ಅದೇ ಇವರ ರಂಗ ಪ್ರಯಾಣಕ್ಕೆ ಪ್ರೇರಣೆ. +14ರ ಹರಯದಲ್ಲಿ ಯಕ್ಷಗಾನ ಲೋಕ ಪ್ರವೇಶಿಸಿದ ಗಾಣಿಗರು ದಶಾವತಾರಿ ಗುರು ವೀರಭದ್ರನಾಯ್ಕ ಹಾಗೂ ಬೇಳಂಜೆ ತಿಮ್ಮಪ್ಪನಾಯ್ಕರನ್ನು ಗುರುಗಳಾಗಿ ಸ್ವೀಕರಿಸಿ ಸಮರ್ಪಕ ಯಕ್ಷವಿದ್ಯಾ ಸಂಪನ್ನರಾದರು. +ಮಾರಣಕಟ್ಟೆ 10, ಕೊಲ್ಲೂರು 2, ಅಮೃತೇಶ್ಟರಿ 5, ಸಾಲಿಗ್ರಾಮ 8, ಕುಂಡವು 1, ಇಡಗುಂಜಿ 7,ಹೀಗೆ 33 ವರ್ಷಗಳ ಕಲಾ ವ್ಯವಸಾಯವನ್ನು ಸುಸಾಂಗವಾಗಿ ಪೂರೈಸಿ ವಿಶ್ರಾಂತ ಜೀವನದಲ್ಲಿದ್ದಾರೆ. +ಉಡುಪಿ ಯಕ್ಷಗಾನ ಕೇಂದ್ರದ ಗುರುಗಳಾಗಿ ಡಾ.ಶಿವರಾಮ ಕಾರಂತರ “ಯಕ್ಷರಂಗ'ದ ಕಲಾವಿದರಾಗಿ ಅನನ್ಯ ಕಲಾಕೈಂಕರ್ಯವನ್ನು ಗೈದ ಹಿರಿಮೆಯೂ ಇವರಿಗಿದೆ. +ದೇಶ-ವಿದೇಶಗಳಲ್ಲಿ ಇವರ ಕಲಾಪ್ರತಿಭೆ ಮೆರೆದಿದೆ. +ಇವರ ನೂರಾರು ಮಂದಿ ಶಿಷ್ಯರು ವೃತ್ತಿರಂಗದಲ್ಲಿ ಹೆಸರಾಂತ ಕಲಾವಿದರಾಗಿ ಖ್ಯಾತಿ ಪಡೆದಿದ್ದಾರೆ. +ಶ್ರೀಯುತರ ನೃತ್ಯಾಭಿನಯ, ರಂಗನಡೆ,ವಾಚಿಕತೆ, ವೇಷಕ್ರಮ, ಎಲ್ಲವೂ ನೂರಕ್ಕೆ ನೂರು ಯಕ್ಷಗಾನೀಯವಾದದ್ದು. +ಸ್ತ್ರೀವೇಷಧಾರಿಯಾಗಿಯೂ,ಪುರುಷವೇಷದಧಾರಿಯಾಗಿಯೂ ಗಾಣಿಗರು ಸುಪ್ರಸಿದ್ಧರು. +ಇವರ ಶಶಿಪ್ರಭಾ, ಮೀನಾಕ್ಷಿ, ದ್ರೌಪದಿ,ದಾಕ್ಷಾಯಿಣಿ, ಮೊದಲಾದ ಸ್ರ್ತೀ ಭೂಮಿಕೆಗಳು ಹಾಗೂ ಸುಧನ್ವ, ಅರ್ಜುನ, ಭೀಷ್ಮ ದ್ರೋಣ, ಮೊದಲಾದ ಗಂಡುವೇಷಗಳು ಜನಪ್ರಿಯ. +ಧರ್ಮಪತ್ನಿ ಗಣಪು. +ಗೋಪಾಲಗಾಣಿಗ,ನಾರಾಯಣ ಗಾಣಿಗ, ಬಾಲಕೃಷ್ಣ ಗಾಣಿಗ ಮಕ್ಕಳು. +ಇವರ ಪುತ್ರರಾದ ಗೋಪಾಲ ಗಾಣಿಗ ಭಾಗವತರು. +ಬಾಲಕೃಷ್ಣ ಗಾಣಿಗ ಮದ್ದಳೆವಾದಕರು. +ಶ್ರೀಯುತರಿಗೆ ರಾಜ್ಯೋತ್ಸವ ಪ್ರಶಸ್ತಿ. +ಕರ್ಗಲ್ಲು ಪ್ರಶಸ್ತಿ, ಶ್ರೀನಿವಾಸ ಉಡುಪ ಪ್ರಶಸ್ತಿ, ಕೋಟ ವೈಕುಂಠ ಪ್ರಶಸ್ತಿ, ಜಿ.ಶಂಕರ್‌ ಗೌರವಧನ ಲಭಿಸಿದೆ. +ಮಾನ್ಯ ಗಾಣಿಗರು ಈ ಗ್ರಂಥ ಅಚ್ಚು ಹಾಕಿಸುವ ಕಾಲಾವಧಿಯಲ್ಲಿ ಕಾಲನಕರೆಗೆ ಓಗೊಟ್ಟು ಜೀವನರಂಗ ಸ್ಥಳದಿಂದ ನಿರ್ಗಮಿಸಿದ್ದಾರೆ. +ಕರಾವಳಿ ಕಲೆಯ ಕಮನೀಯ ಪ್ರತಿಭೆಯಾಗಿ ರಮಣೀಯ ಜೀವ ಪ್ರತಿಮೆಯಾಗಿ, ಗಮನೀಯ ರಂಗವೈಭವದಲ್ಲಿ ಕಂಗೊಳಿಸುವ ಯಕ್ಷಮೋಹಕ ತಾರೆ ಶಶಿಕಾಂತ ಶೆಟ್ಟಿ ಕಾರ್ಕಳ. +ಕಾರ್ಕಳದ ಧರ್ಮಪ್ಪ ಶೆಟ್ಟಿ-ಲಲಿತಾ ದಂಪತಿಯ ಸುಪುತ್ರನಾಗಿ 8-1-1980ರಲ್ಲಿ ಜನಿಸಿದ ಶಶಿಕಾಂಶ ಶೆಟ್ಟರು, ಬಾಲ್ಯದಿಂದ ಬಡತನದಲ್ಲಿ ಬೆಳೆದವರು. +ಹೀಗಾಗಿ ಅವರ ಶಾಲಾ ಶೈಕ್ಷಣಿಕ ಓದು 9ಕ್ಕೇ ಸೀಮಿತವಾಯಿತು. +ಜೀವನೋಪಾಯಕ್ಕಾಗಿ ಟೈಲರಿಂಗ್‌ವೃತ್ತಿ ಹತ್ತಿರ ಕರೆಯಿತು. +ಎಳವೆಯಲ್ಲೇ ಬೇರುಬಿಟ್ಟಿದ್ದ ಯಕ್ಷಗಾನ ಕಲಾಸಕ್ತಿ ಕಾರ್ಕಳದ ಮಾರಿಗುಡಿಯಲ್ಲಿ ನಡೆಯುತ್ತಿದ್ದ ಸಾಪ್ತಾಹಿಕ ಯಕ್ಷಗಾನ ತರಗತಿಗೆ ಎಳೆದು ತಂದಿತು. +ಕಾರ್ಕಳದ ಸತೀಶ್‌ ಎಂ.ಅವರ ಶಿಷ್ಯನಾಗಿ ತೆಂಕುತಿಟ್ಟಿನ ಹೆಜ್ಜೆಗಾರಿಕೆ ಕಲಿತ ಶಶಿಕಾಂತರಿಗೆ ಕಲಾಸಿದ್ಧಿಕ್ಷಿ ಪ್ರಗತಿಯಲ್ಲಿ ಕೈವಶವಾಯಿತು. +ಯಕ್ಷಗಾನದಲ್ಲಿ ಕ್ರಮೇಣ ಬೆಳೆಯುತ್ತಾ ಸಾಗಿದ ಶಶಿಕಾಂತ್‌ ಕರ್ಗಲ್ಲು ವಿಶ್ವೇಶ್ವರ ಭಟ್‌, ಬನ್ನಂಜೆ ಸಂಜೀವಸುವರ್ಣ ಹಾಗೂ ಕೋಳ್ಕೂರು ರಾಮಚಂದ್ರರಾಯರ ಗುರುತನದಲ್ಲಿ ಉನ್ನತ ಕಲಾವಿದ್ಯೆಯನ್ನು ತನ್ನದಾಗಿಸಿಕೊಂಡರು. +ಕರ್ನಾಟಕ, ಬಪ್ಪನಾಡು, ಭಗವತಿ ಮೇಳಗಳಲ್ಲಿ ಹವ್ಯಾಸಿಯಾಗಿ ಮೂರು ವರ್ಷ ಕಲಾಕೃಷಿ ನಡೆಸಿದ ಶೆಟ್ಟರು ಬಡಗಿನ ಮಂದಾರ್ತಿ ಮೇಳಕ್ಕೆ ಸೇರ್ಪಡೆ-ಗೊಂಡು ತನ್ನ ಶ್ರೀಮಂತ ಕಲಾಸಿರಿಯಲ್ಲಿ ಪುರಾಣ ಪಾತ್ರಗಳಿಗೆ ಪ್ರಾಣಪ್ರತಿಷ್ಠೆ ನೀಡಿದರು. +ಅಲ್ಲಿ ಎಂ.ಎ.ನಾಯ್ಕರ ರಂಗಮಾಹಿತಿ, ಅನುಭವವೂ ಶ್ರೀಯುತರಿಗೆ ಸುಪುಷ್ಟವಾಗಿ ದೊರಕಿತು. +ತದನಂತರ ಹೆರಂಜಾಲು ಗೋಪಾಲಗಾಣಿಗರ ಸಹಕಾರದಲ್ಲಿ ಸಾಲಿಗ್ರಾಮ ಮೇಳ ಸೇರಿದರು. +ಅಲ್ಲಿಂದಲೇ ಶಶಿಕಾಂತರ ಶುಕ್ರದೆಸೆ ಪ್ರಾರಂಭ. +ಜನಪ್ರಿಯ ಸ್ತ್ರೀವೇಷಧಾರಿಯಾಗಿ ರಂಗ ಬದುಕಿನ ಶೃಂಗ ಸಾರ್ಥಕ್ಯ ವಿಶೇಷ ತಾರಾಮೌಲ್ಯ ಇಲ್ಲಿ ಸಂಪ್ರಾಪ್ತವಾಯಿತು. +ಶಶಿಪ್ರಭೆಯಾಗಿ, ಅಂಬೆಯಾಗಿ, ದಾಕ್ಷಾಯಿಣಿಯಾಗಿ,ಚಂದ್ರಮತಿಯಾಗಿ, ದಮಯಂತಿಯಾಗಿ,ಶಕುಂತಲೆಯಾಗಿ, ಕೈಕೇಯಿಯಾಗಿ, ಸತ್ಯಭಾಮೆಯಾಗಿ ತನ್ನೆಲ್ಲಾ ಕಲಾ ಸತ್ವವನ್ನು ಪಾತ್ರಗಳ ಮೂಲಕ ರಂಗಮಂಚದಲ್ಲಿ ಹರಳುಗಟ್ಟಿಸಿದರು. +ಸಾಂಪ್ರದಾಯಿಕಕತೆಯೊಂದಿಗೆ ಸೃಜನ ಶೀಲತೆಯನ್ನೂ ಸೇರಿಸಿ ಯಕ್ಷಗಾನೀಯ ಚೌಕಟ್ಟಿನಲ್ಲಿ ಶುದ್ಧ ಹವಳವಾಗಿ ಕಣ್ಣೆಳೆದರು. +ಆಕರ್ಷಕ ವೇಷ, ಪರಿಶುದ್ಧ ವಾಗ್ನಿತೆ,ಸತ್ವಪೂರ್ಣ ನೃತ್ಯಾಭಿನಯು, ಭಾವಯುಕ್ತ ಪಾತ್ರಚಿತ್ರಣದಲ್ಲಿ ವಿಜೃಂಭಿಸುವ ಸಮರ್ಥಸ್ತ್ರೀವೇಷಧಾರಿ ಶಶಿಕಾಂತ ಶೆಟ್ಟರು ಉತ್ತಮ ಅರ್ಥಧಾರಿಯೂ ಹೌದು. +ಈಗಾಗಲೇ ದೇಶ, ವಿದೇಶಗಳಲ್ಲಿ ಶ್ರೀಯುತರ ಕಲಾ ಪ್ರತಿಭೆಯ ಕಂಪು ಸೂಸಿದೆ. +ಬಾಳ ಸಂಗಾತಿ ದೇವಿಕಾ. +ಶಿವರಂಜನ್‌ ಸುಪುತ್ರ. +ಇವರಿಗೆ ಹೈದರಾಬಾದ್‌, ಕಾರ್ಕಳ, ಉಡುಪಿ ಮುಂತಾದೆಡೆ ಸಂಮಾನ ದೊರಕಿದೆ. +ದೂರದ ದುಬಾಯಿಯಲ್ಲೂ ತಮ್ಮ ಕಲಾ ಪ್ರತಿಭೆಯನ್ನು ಪ್ರದರ್ಶಿಸಿದ್ದಾರೆ. +ಸಾಂಪ್ರದಾಯಿಕ ರಂಗ ಸಂವಿಧಾನಕ್ಕೆ ಸ್ವಯಂಪ್ರತಿಭೆಯ ಮೆರುಗು ನೀಡಿ ಪ್ರಸಿದ್ಧ ಹಾರಾಡಿ ತಿಟ್ಟಿನ ಸಮರ್ಥ ಪ್ರತಿಪಾದಕರಾಗಿ ಗುರುತಿಸಿಕೊಂಡ ಹಿರಿಯ ಕಲಾವಿದ ಕೋಡಿ ಶಂಕರ ಗಾಣಿಗ. +31-05-1932ರಲ್ಲಿ ಬಜ್ಚ ಗಾಣಿಗ-ಕಾವೇರಮ್ಮ ದಂಪತಿಯ ಸುಪುತ್ರರಾಗಿ ಉಡುಪಿ ತಾಲೂಕಿನ ಹಾರಾಡಿಯಲ್ಲಿ ಜನಿಸಿದ ಶಂಕರಗಾಣಿಗರು ಬಡಗಿನ ಯಕ್ಷಗಾನದ ದಂತಕತೆ ಹಾರಾಡಿ ರಾಮಗಾಣಿಗರ ಅಣ್ಣನ ಮಗ. +ಹಾರಾಡಿ ಕುಷ್ಠ ಗಾಣಿಗರ ಸೋದರಳಿಯ. +ಹಾಗೂ ಮಗಳ ಗಂಡ. +ಹೀಗಾಗಿ ಹಾರಾಡಿ ಮನೆತನದ ಬಂಧುತ್ವ ಹಾಗೂ ಅಪ್ರತಿಮ ಕಲಾವ್ಯಕ್ತಿತ್ವ ಶಂಕರಗಾಣಿಗ ಅವರಿಗೆ ನಿಚ್ಚಳವಾಗಿ ಒಲಿದು ಒದಗಿತು. +5ನೇ ತರಗತಿಯವರೆಗೆ ಶಾಲಾಭ್ಯಾಸ ಮಾಡಿದ ಗಾಣಿಗರು ದಶಾವತಾರಿ ವರಾರ್ವಿ ರಾಮಕೃಷ್ಣ ಹೆಬ್ಬಾರ್‌ ಹಾಗೂ ಮಾವಂದಿರಾದ ಹಾರಾಡಿ ಕುಷ್ಕ ಗಾಣಿಗ,ನಾರಾಯಣ ಗಾಣಿಗರ ಗುರುತನದಲ್ಲಿ ಪರಂಪರೆಯ ಪರಿಪಕ್ವ ಫಲವಾಗಿ ಯಕ್ಷವೃಕ್ಷದಲ್ಲಿ ನಳನಳಿಸಿದರು. +ಸೌಕೂರು ಮೇಳದಲ್ಲಿ ಗೆಜ್ಜೆ ಕಟ್ಟಿದ ಗಾಣಿಗರು ಅಮೃತೇಶ್ವರಿ, ಮಾರಣಕಟ್ಟೆ, ಕಮಲಶಿಲೆ, ಪೆರ್ಡೂರು,ಇಡಗುಂಜಿ ಮೇಳಗಳಲ್ಲಿ 55 ವರ್ಷಗಳ ಸಾರ್ಥಕ ಕಲಾಬದುಕು ಕಂಡಿದ್ದಾರೆ. +ಪ್ರಸ್ತುತ ಶಂಕರ ಗಾಣಿಗರು ಬೆಂಗಳೂರಿನಲ್ಲಿ ವಿಶ್ರಾಂತ ಜೀವನದಲ್ಲಿದ್ದಾರೆ. +ನಾಯಕ, ಖಳನಾಯಕ ಪಾತ್ರಗಳಲ್ಲಿ ಪೌರಾಣಿಕತೆಯ ಅಂತಃಸತ್ವವನ್ನು ಎತ್ತಿಹಿಡಿಯುವ ಶಂಕರಗಾಣಿಗರು ಎರಡನೇ ವೇಷಧಾರಿಯಾಗಿ ವಿಜೃಂಭಿಸುವ ಪೂರ್ವದಲ್ಲಿ ಸುಮಾರು ಹದಿನೈದು ವರ್ಷ ಪ್ರಧಾನ ಸ್ತ್ರೀವೇಷಧಾರಿಯಾಗಿ ರಂಗಸ್ಥಳವನ್ನು ಬೆಳಗಿದವರು. +ಹಾರಾಡಿ ಶೈಲಿಯಲ್ಲಿ ನಿರೂಪಿತವಾದ ಕರ್ಣ,ಅರ್ಜುನ, ಜಾಂಬವ, ಹಮುತುಪರ್ಣ, ಹಿರಣ್ಯಕಶಿಪು ಮೊದಲಾದ ಪಾತ್ರಗಳ ಶಾಸ್ತ್ರೋಕ್ತ ರಂಗಚಿತ್ರಣ ಸ್ಮರಣೀಯ, ಹಾಗೆಯೇ ಭಸ್ಮಾಸುರ, ಶಬರ, ಕಣ್ಣಪ್ಪ,ವಿಭಿಷಣ, ಯಮ, ಜಮದಗ್ನಿ ಮೊದಲಾದ ಪುರಾಣಪಾತ್ರಗಳನ್ನು ರಂಗದಲ್ಲಿ ಮೆರೆದ ಪರಿ ಅವರ್ಣನೀಯ. +ಮುಂಡಾಸು ಹಾಗೂ ಪಾರ್ಟಿನ ವೇಷಗಳಲ್ಲಿ ಗಾಣೀಗರ ವಿಶೇಷ ಪ್ರತಿಭೆ ರಂಗ ರಮಣೀಯ. +ಕೋಡಿ ಶಂಕರಗಾಣಿಗರ ಅರ್ಧಾಂಗಿ ಶ್ರೀಮತಿ ಕನಕಾಂಗಿ. +ಸುಮಿತ್ರ ದಾಮೋದರ, ಅಂಬಿಕಾ,ಸಂತೋಷ, ಶ್ರೀಧರ ಮಕ್ಕಳು. +ಶ್ರೀ ಶಂಕರ ಗಾಣಿಗರಿಗೆ 2004ರಲ್ಲಿ ಪ್ರತಿಷ್ಠಿತ ರಾಜ್ಯ ಪ್ರಶಸ್ತಿ, ಕಾರ್ಕಡ ಶ್ರೀನಿವಾಸ ಉಡುಪ ಪ್ರಶಸ್ತಿ,ಉಡುಪಿ ಯಕ್ಷಗಾನ "ಕಲಾರಂಗ'ದ ಮಾರ್ವಿ ಹೆಬ್ಬಾರ್‌ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿ-ಪುರಸ್ಕಾರ-ಸಂಮಾನ-ಗೌರವ ದೊರಕಿವೆ. +ಬಳುಕುವ ಲತಾಂಗಿಯಾಗಿ, ಸಾಹಿತ್ಯಪೂರ್ಣ ಸ್ವಚ್ಛಮಾತಿನ ಯಕ್ಷ ಶುಭ್ರಾಂಗಿಯಾಗಿ ಕಾಣುವ ಉಳ್ಳೂರು ಶಂಕರ ದೇವಾಡಿಗರು ಉನ್ನತ ಪ್ರತಿಭೆಯ ಸಮರ್ಥ ಸ್ತ್ರೀವೇಷಧಾರಿ. +ಕುಂದಾಪುರ ತಾಲೂಕಿನ ಉಳ್ಳೂರು ಎಂಬಲ್ಲಿ ನಾರಾಯಣ ದೇವಾಡಿಗ-ಚಂದ್ರಾವತಿ ದಂಪತಿಯ ಸುಪುತ್ರರಾಗಿ ಜನಿಸಿದ ಶಂಕರ ದೇವಾಡಿಗರಿಗೆ ಈಗ ನಲವತ್ತು ವರ್ಷ ಪ್ರಾಯ. +ನಾಕಕ್ಕೇ ಓದು ಸಾಕೆನಿಸಿಕೊಂಡ ಶಂಕರ ಅವರುತನ್ನ 18ರ ಹರೆಯದಲ್ಲೇ ಯಕ್ಷಗಾನಕ್ಕೆ ಮುಖಮಾಡಿದರು. +ಹೆರಂಜಾಲು ಗೋಪಾಲ ಗಾಣಿಗ,ನಾಗೂರು ಶ್ರೀನಿವಾಸ ದೇವಾಡಿಗರೇ ಇವರ ಗುರುಗಳು. +ಶೃಂಗಾರ, ಸೌಜನ್ಯ, ಗರತಿ ಪಾತ್ರಗಳಲ್ಲಿ ತನ್ನ ಕಲಾಪ್ರತಿಭಾ ಸಿರಿವಂತಿಕೆಯನ್ನು ಸಾದರ ಪಡಿಸುವ ಉಳ್ಳೂರು ಅವರ ಸೀತೆ, ಶ್ರೀದೇವಿ, ಸುಭದ್ರೆ, ಕುಂತಿ,ವಿಷಯೆ ಮೊದಲಾದ ಪಾತ್ರಗಳು ಜನ ಮನರಂಜಿಸುವಲ್ಲಿ ಗೆಲುವು ಕಂಡಿವೆ. +ಸುಪುಷ್ಠ ಭಾಷಾ ಚಮತ್ಕಾರ, ಸ್ವೀಸಹಜ ಕಂಠಶ್ರೀ,ಲಾಲಿತ್ಯಪೂರ್ಣ ಹಾವ-ಭಾವ, ನೃತ್ಯ ಅಭಿನಯಕೌಶಲ, ಪಾತ್ರ ತಾದಾತ್ಮ್ಯ, ಆಕರ್ಷಕ ವೇಷ ವೈಭವ ಉಳ್ಳೂರು ಶಂಕರರ ಗಮನೀಯ ಅಂಶರ್ಬಹಿರಂಗದ ಕಲಾಂಶಗಳಾಗಿ ಗುರುತಿಸಲ್ಪಡುತ್ತದೆ. +ಮಾರಣಕಟ್ಟೆ 9, ಶಿರಸಿ -ಮಾರಿಕಾಂಬಾ 1,ಅಮೃತೇಶ್ವರಿ 1, ಬಗ್ದಾಡಿ 1. ಪೆರ್ಡೂರು 10,ಸಾಲಿಗ್ರಾಮ 1, ಹೀಗೆ 23ವರ್ಷಗಳ ರಂಗಕೃಷಿ ಅವರದ್ದು. +ಪ್ರಸ್ತುತ ಶಂಕರ ದೇವಾಡಿಗ ಸಾಲಿಗ್ರಾಮ ಮೇಳದ ಕಲಾವಿದರಾಗಿ ದುಡಿಯುತ್ತಿದ್ದಾರೆ. +ಮಡದಿ ಶಾರದಾ. +ಶಶಾಂಕ, ಶಾರ್ವರಿ, ಶರಣ್ಯ ಮಕ್ಕಳು. +ಕಲಾವಿದ ಶಂಕರ ದೇವಾಡಿಗರನ್ನು ಹಲವು ಸಂಘಸಂಸ್ಥೆಗಳು ಗೌರವಿಸಿವೆ. +ರಾಜ್ಯ, ಹೊರರಾಜ್ಯದ ಅನೇಕ ಸಂಘಟನೆಗಳು ಗುರುತಿಸಿ ಗೌರವಿಸಿವೆ. +ಮದ್ದಳೆಯ ನಾದಲೋಕದ ನಿಧಿಯಂತೆ ಕಂಗೊಳಿಸುವ ಯಲ್ಲಾಪುರ ಶಂಕರ ಭಾಗವತರು ವಿದ್ವತ್‌ಶೀಲ ಪ್ರತಿಭೆಯಾಗಿ ಗುರುತಿಸಿಕೊಂಡ ಸಮರ್ಥ ಮದ್ದಳೆವಾದಕರು. +ಉತ್ತರಕನ್ನಡದ ಯಲ್ಲಾಪುರ ಎಂಬಲ್ಲಿ 1-5-1955ರಲ್ಲಿ ಜನಿಸಿದ ಶಂಕರ ಭಾಗವತರು ರಾಮಚಂದ್ರ ಭಾಗವತ್‌-ಕಮಲಾ ಭಾಗವತ್‌ ದಂಪತಿಯ ಪುತ್ರ. +ಎಳವೆಯಲ್ಲೇ ಕಲಾಸಕ್ತಿಯನ್ನು ಗಂಭೀರವಾಗಿ ಮೈಗೂಡಿಸಿಕೊಂಡಿದ್ದ ಶಂಕರಭಾಗವತ ಅವರಿಗೆ ಖ್ಯಾತ ಮದ್ದಳೆಗಾರ ಬೇಳಂಜೆ ತಿಮ್ಮಪ್ಪ ನಾಯ್ಕರೇ ಬಣ್ಣದ ಬದುಕಿನ ನಾದಲೀಲೆಗೆ ಪ್ರೇರಕ-ಪ್ರೋತ್ಸಾಹಕ ವ್ಯಕ್ತಿ -ಶಕ್ತಿ 7ನೇ ತರಗತಿಯವರೆಗೆ ವಿದ್ಯಾಭ್ಯಾಸ ನಡೆಸಿದ ಶ್ರೀಯುತರು, ಬೇಳಂಜೆ ತಿಮ್ಮಪ್ಪ ನಾಯ್ಕ, ನಾರ್ಣಪ್ಪಉಪ್ಪೂರ, ಗೋರ್ಪಾಡಿ ವಿಠಲ ಪಾಟೀಲ್‌,ವೀರಭದ್ರನಾಯ್ಕ್‌, ಮಹಾಬಲ ಕಾರಂತ, ಮರವಂತೆ ನರಸಿಂಹದಾಸ್‌, ಕಡತೋಕ ಮಂಜುನಾಥ ಭಾಗವತ,ಹೊಸ್ತೋಟ ಮಂಜುನಾಥ ಭಾಗವತ ಮೊದಲಾದವರ ಗುರುತನವನ್ನು ಮನಸ್ವೀ ಸ್ವೀಕರಿಸಿದವರು. +ಶಾಸ್ತ್ರೀಯ ಸಂಗೀತ, ತಬಲಾವಾದನ,ಚಂಡೆವಾದನವನ್ನು ಬಲ್ಲ ಈ ಮದ್ದಳೆಗಾರ ಮದ್ದಳೆಯ ಮೃದು ನುಡಿತ ಗಾನ ಪೋಷಕ. +ನಟನಚೇತನಶೀಲ ಅಭಿವ್ಯಕ್ತಿಗೆ ಪೂರಕವಾದದ್ದು. +ಶಾಸ್ತ್ರೀಯಮಟ್ಟು-ಪೆಟ್ಟುಗಳೂ, ನವ್ಯತೆಯ ಸೃಷ್ಟಿಶೀಲ ನುಡಿತ-ಭಣಿತದ ಗುಟ್ಟುಗಳೂ ಅವರಿಗೆ ಹಸ್ತಗತವಾಗಿದೆ. +ಕಾಳಿಂಗ ನಾವಡರ ಕಂಠಸಿರಿಯಲ್ಲಿ ಶಂಕರಭಾಗವತರ ಮದ್ಧಳೆಯ ಮಾಂತ್ರಿಕ ಶಕ್ತಿ ಯಕ್ಷಲೋಕ ತುಂಬಿಕೊಂಡಿದೆ. +ಭಾವಾನುಕೂಲ್ಯಕರವಾದ ಮದ್ದಳೆಯ ನುಡಿಗಾರಿಕೆ-ನುಡಿಸಾಣಿಕೆಯಲ್ಲಿ ರಂಗಮಂಚಕ್ಕೆ ನಾದಪೂರ್ಣ ಗುಂಗು ತುಂಬಿಸುವ ಶಂಕರ ಭಾಗವತರು ಪೆರ್ಡೂರು 2, ಕೆರೆಮನೆ 1, ಅಮೃತೇಶ್ವರಿಡೇರೆ 4, ಶಿರಸಿ ಪಂಚಲಿಂಗ 4, ಸಾಲಿಗ್ರಾಮ ಮೇಳ ಹೀಗೆ 35ವರ್ಷ ಸೇವೆ ಸಲ್ಲಿಸಿದ್ದಾರೆ. +ದಕ್ಷಿಣೋತ್ತರ ಕನ್ನಡ ಜಿಲ್ಲೆಯ ಹಿರಿ-ಕಿರಿಯ ಶ್ರೇಷ್ಠ ಭಾಗವತರ,ಕಲಾವಿದರ ಹಿಮ್ಮೇಳ-ಮುಮ್ಮೇಳಕ್ಕೆ ಸೂಕ್ತವಾದ ಸಾಂಗತ್ಯ ನೀಡಿದ ಮೇರು ಪ್ರತಿಭಾನ್ವಿತ ಮದ್ದಳೆಗಾರ ಶಂಕರಭಾಗವತರು ಪ್ರಸ್ತುತ ಅತಿಥಿ ಮದ್ದಳೆಗಾರರಾಗಿ ದುಡಿಯುತ್ತಿದ್ದಾರೆ. +ಮದ್ದಳೆಯ ವಾದನಕ್ಕೆ ತಾರಾಮೌಲ್ಯ ತಂದುಕೊಟ್ಟ ಸಂಪನ್ನಶೀಲ ಪ್ರಶಿಭೆ ಶಂಕರಭಾಗವತರು . +ಪತ್ನಿ ವಿನೋದ ಭಾಗವತ್‌. +ದರ್ಶನ್‌, ಪೂಜಾ ಮಕ್ಕಳು. +ಶಿರಸಿ ಟಿ.ಎಸ್‌.ಎಸ್‌ ಅಭಿಮಾನಿ ಸಂಘ,ಬೆಂಗಳೂರು, ಮುಂಬೈ ಅಭಿಮಾನಿಗಳ ಬಳಗದಿಂದಲೂ ಶ್ರೀಯುತರು ಸಂಮಾನ ಪಡೆದಿರುತ್ತಾರೆ. +ಬಡಗುತಿಟ್ಟಿನ ಸಂಪ್ರದಾಯ ಸಾರವನ್ನು ಘನೀಕರಿಸಿಕೊಂಡು ಪೌರಾಣಿಕ ಪಾತ್ರಗಳಲ್ಲಿ ತನ್ನದೇ ವಿಶೇಷ ಕಲಾಪ್ರೌಢಿಮೆ ಕಾಣಿಸುವ ಕಲಾವಿದ ಸಂಪನ್ನಕಟ್ಟಿನ ಬೈಲು ಶಿವರಾಮ ಶೆಟ್ಟಿ . +ಕುಂದಾಪುರ ತಾಲೂಕಿನ ಕಟ್ಟಿನಬೈಲು ಎಂಬ ಹಳ್ಳಿಯಲ್ಲಿ 1963ರಲ್ಲಿ ಜನಿಸಿದ ಶಿವರಾಮ ಶೆಟ್ಟರು,ಕುಷ್ಠಪ್ಪ ಶೆಟ್ಟಿ - ಚಂದಮ್ಮ ಶೆಡ್ತಿ ದಂಪತಿಯ ಸುಪುತ್ರ ಸುತ್ತಮುತ್ತಲಿನ ಬಯಲಾಟಗಳ ಪ್ರೇರಣೆಯಿಂದ ಕಲಾಜೀವನದ ಕನಸುಕಂಡ ಶಿವರಾಮಶೆಟ್ಟರು, 5ನೇ ಇಯತ್ತೆಯ ನಂತರ 14ನೇ ವಯಸ್ಸಿನಲ್ಲೇ ಯಕ್ಷಜಗತ್ತಿಗೆ ಹೆಜ್ಜೆಯೂರಿದರು. +ಐರಬೈಲು ಆನಂದ ಶೆಟ್ಟರ ಪ್ರೇರಣೆಯಿಂದ ಕಲಾಬದುಕಿನ ಮಾರ್ಗವನ್ನು ಸುಸಾಂಗವಾಗಿಸಿಕೊಂಡ ಶಿವರಾಮ ಶೆಟ್ಟರು, ಸರ್ವೋತ್ತಮ ಗಾಣಿಗ ಹಾರಾಡಿ ಹಾಗೂ ಐರಬೈಲು ಆನಂದ ಶೆಟ್ಟರ ಶಿಷ್ಯನಾಗಿ ಉನ್ನತ ಕಲಾವಿದ್ಯೆಯನ್ನು ಮೈಗೂಡಿಸಿಕೊಂಡರು. +ಶ್ರೀಯುತರ ಗತ್ತು-ಗಾಂಭೀರ್ಯದ ರಂಗನಡೆ,ತೂಕದ ವಾಕ್‌ವೈಖರಿ, ನಡುತಿಟ್ಟಿನ ಸೊಗಡು ಮೆರೆಯುವ ವೇಷವೈಭವ ಮನಮೆಚ್ಚುವಂತಹುದು. +ಪಾತ್ರ ಮೆರೆಸುವಂತಾದ್ದು. +ಮುಂಡಾಸು ವೇಷಗಳ ನಿರ್ವಹಣೆಯಲ್ಲಂತೂ ಶ್ರೀಯುತರ ಕಲಾಪ್ರತಿಭೆ ಉತ್ಕೃಷ್ಟಮಟ್ಟದ್ದು ಎನ್ನಬಹುದಾಗಿದೆ. +ಮಾರಣಕಟ್ಟೆ 3, ಕಮಲಶಿಲೆ 7, ಕಳವಾಡಿ 1,ಮಡಾಮಕ್ಕಿ 8, ಸೌಕೂರು 7, ಹಾಲಾಡಿ 6, ಹೀಗೆ 32ವರ್ಷಗಳ ಕಲಾ ವ್ಯವಸಾಯವನ್ನು ಯಶಸ್ವೀಯಾಗಿ ಪೂರೈಸಿದ ಶೆಟ್ಟರು ಪ್ರಸ್ತುತ ಹಾಲಾಡಿ ಮೇಳದ ಕಲಾವಿದರು. +ಶ್ರೀಯುತರ ಕೌಂಡ್ಲೀಕ, ದಮನ, ವೀರಮಣಿ,ಸುಲೋಚನಾ, ವಿಭೀಷಣ, ವೃಷಕೇತು ಮೊದಲಾದ ಮುಂಡಾಸುವೇಷಗಳು ಪ್ರೇಕ್ಷಕರ ಮನೋಭೂಮಿಕೆಗಳಲ್ಲಿ ಗಟ್ಟಿಸ್ಥಾನ ಪಡೆದಿವೆ. +ಕಸ್ತೂರಿಶೆಟ್ಟಿ ಶ್ರೀಯುತರ ಬಾಳ ಸಂಗಾತಿ. +ನವೀನ, ನಯನ ಮಕ್ಕಳು. +ಅನುಭವಪೂರ್ಣ, ಕಲಾವಿದ ಕಟ್ಟಿನಬೈಲು ಶಿವರಾಮ ಶೆಟ್ಟರು ಹಲವು ಸಂಘ-ಸಂಸ್ಥೆಗಳಿಂದ ಸಂಮಾನ ಪಡೆದಿದ್ದಾರೆ. +ಮಂಗಳೂರಿನ ಜಾಗತಿಕ ಬಂಟಪ್ರತಿಷ್ಠಾನದ ಗೌರವ ಪ್ರಶಸ್ತಿಯೂ ಇವರಿಗೆ ದೊರಕಿರುತ್ತದೆ. +ಬಡಗುತಿಟ್ಟು ಯಕ್ಷಗಾನದ ಚಂಡೆವಾದನದಲ್ಲಿ ಸಿದ್ಧಿ ಪ್ರಸಿದ್ಧಿಯನ್ನು ಕಂಡ ಪ್ರಬುದ್ಧ ಚಂಡೆವಾದಕ ಶಿವಾನಂದ ಕೋಟ. +ಉಡುಪಿ ಜಿಲ್ಲೆಯ ಗಿಳಿಯಾರು ಗ್ರಾಮದ ಕೋಟದ ರಾಮಕೃಷ್ಣ ಮೆರಟ-ಜಲಜಾಕ್ಷಿ ದಂಪತಿಯ ಸುಪುತ್ರರಾಗಿ 10-9-1967ರಲ್ಲಿ ಜನಿಸಿದ ಶಿವಾನಂದಕೋಟ ಅವರು 7ನೇ ತರಗತಿಯವರೆಗೆ ಅಕ್ಷರಾಭ್ಯಾಸಮಾಡಿ 13ರ ಹರೆಯದಲ್ಲೇ ಯಕ್ಷಲೋಕ ಪವೇಶಿಸಿದ ಸಂಪನ್ನ ಪ್ರತಿಭೆ. +ಕೋಟದ "ಯಕ್ಷತರಂಗ' ಬಾಲಕರ ಮೇಳದ ಬಾಲಕಲಾವಿದನಾಗಿ ಎಂ.ಎನ್‌.ಮಧ್ಯಸ್ಥರ ಯಕ್ಷಗಾನ ತರಬೇತಿಯ "ಗಣೇಶೋತ್ಪತ್ರಿ' ಪ್ರಸಂಗದಲ್ಲಿ"ಭೃಂಗಿ'ಯಾಗಿ ರಂಗಮಂಚವೇರಿದ ಶಿವಾನಂದ ಮತ್ತೆ ಯಕ್ಷಗಾನವನ್ನೇ ವೃತ್ತಿ-ಯಾಗಿಸಿಕೊಂಡರು. +ಯಕ್ಷಗಾನದ ವೀರವಾದ್ಯವೆನಿಸಿದ ಚಂಡೆಯ ನಾದಮಾಧುರ್ಯಕ್ಕೆ ಮನಸೋತ ಶಿವಾನಂದರಿಗೆ ಎಳವೆಯಲ್ಲಿ “ಹಳೇ ಪಾತ್ರೆ-ಹಳೇ ಡಬ್ಬಿ'ಯೇ ಚಂಡೆಯಾಗಿದ್ದುವು. +ಇಂತಹ ವಾದನಾಸಕ್ತಿ ಮುಂದೆ ಇವರ ಕೈ ಚುರುಕಾಗಿಸಿತು. +ಸುತ್ತಮುತ್ತಲಿನ ಬಯಲಾಟಗಳ ಚಂಡೆಯ ಗಂಡುದ್ದನಿ ಇವರ ಗುಂಡಿಗೆಯನ್ನು ತುಂಬಿಕೊಂಡಿತು. +ಚಂಡೆವಾದನ ಕಲಿಕೆಯಲ್ಲಿ ಇವರದ್ದು ಆರಂಭಿಕ “ಏಕಲವ್ಯ ಪ್ರಯೋಗ'ವಾಯಿತು. +ತದನಂತರ ಸುಪ್ರಸಿದ್ಧ ಚಂಡೆಗಾರ ಮಂದಾರ್ತಿ ರಾಮಕೃಷ್ಣರ ಗುರುತನ, ಹೊಳೆಗದ್ದೆ ಗಜಾನನ ಭಂಡಾರಿಯವರ ಮಾರ್ಗದರ್ಶನ ದೊರಕಿ,ಚಂಡೆಗಾರಿಕೆಯಲ್ಲಿ ಸ್ಪಷ್ಟ ಆಯಾಮವನ್ನು ಕಂಡುಕೊಳ್ಳುವುದಕ್ಕೆ ಸುಲಭ ಸಾಧ್ಯವಾಯಿತು. +ಮೊದಲು ವೃತ್ತಿರಂಗಭೂಮಿಯಲ್ಲಿ ವೇಷಧಾರಿಯಾಗಿ ಗುರುತಿಸಿಕೊಂಡ ಶಿವಾನಂದರನ್ನು ಹಿರಿಯ ಭಾವಗವತ ನಾರ್ಣಪ್ಪ ಉಪ್ಪೂರರೇ ಅಮೃತೇಶ್ವರಿ ಮೇಳಕ್ಕೆ ಸೇರ್ಪಡೆ ಗೊಳಿಸಿದರು. +ಆ ಮೇಳದಲ್ಲಿ ಬಾಲಗೋಪಾಲನಾಗಿ ಕುಣಿಯುತ್ತಿದ್ದ ಶಿವಣ್ಣ ಮುಂದೆ ಶಿರಸಿ ಪಂಚಲಿಂಗೇಶ್ವರ ಮೇಳದಲ್ಲಿ ಸಹ ಚಂಡೆವಾದಕರಾಗಿ ಕಲಾವಿದರನ್ನು ಕುಣಿಸಿ,ಜನಮನ ತಣಿಸಿದರು. +ಅಮೃತೇರ್ಶವರಿ ಮೇಳದಲ್ಲಿ 3ವರ್ಷ ವೇಷಧಾರಿಯಾಗಿ, ಶಿರಸಿ ಪಂಚಲಿಂಗ 1, ಕೋಟ ಹಿರೇಮಹಾಲಿಂಗೇಶ್ವರ ಮೇಳ 1, ಸಾಲಿಗ್ರಾಮ ಮೇಳ 25 ಹೀಗೆ 30ವರ್ಷಗಳ ಕಲಾ ತಿರುಗಾಟದಲ್ಲಿ ಶಿವಾನಂದ ಕೋಟ ಅನುಭವಿ ಚಂಡೆಗಾರರಾಗಿ ಖ್ಯಾತಿ ಪಡೆದಿದ್ದಾರೆ. +ಪ್ರಸಂಗದ ಅಂತರಂಗ ಭಾವ, ಪಾತ್ರಗಳಸ್ವಭಾವ, ಸನ್ನಿವೇಶ ಅರ್ಥೈಸಿಕೊಂಡು ನವಿರಾದ ನುಡಿಸಾಣಿಕೆಯಲ್ಲಿ ಮೆರೆಯುವ ಶಿವಾನಂದ ಕೋಟಅವರ ಕಾಶೀಮಾಣಿ ಪಾತ್ರ ಜನಪ್ರಿಯ. + ಪತ್ನಿ ಸುರೇಖಾ. + ಸಂಧ್ಯಾ, ಶಶಿಧರ ಮಕ್ಕಳು. +ಉತ್ಸಾಹಿ ಚಂಡೆವಾದಕ ಕೋಟ ಶಿವಾನಂದ ಅವರು ನವದೆಹಲಿಂಗುಲ್ಲಿ 1992ರಲ್ಲಿ ನಡೆದ"ಪೂಲ್‌ವಾಲೋಂಕಿ ಸೈರ್‌' ಮಹೋತ್ಸವದಲ್ಲಿ ಗೌರವ ಸಂಮಾನ ಸ್ವೀಕರಿಸಿದ್ದಾರೆ. +ಹೈದರಾಬಾದ್‌-ಕರ್ನಾಟಕ ಸಂಘವತಿಯಿಂದ ಬೆಂಗಳೂರು, ಮುಂಬೈ, ಕುಮಟಾ,ಮೊದಲಾದ ಕಡೆಗಳಲ್ಲಿ ಗೌರವ ಸಂಮಾನ ಪಡೆದಿದ್ದಾರೆ. +ಬಡಾಬಡಗಿನ ಪ್ರಸಿದ್ಧ ಕೆರೆಮನೆಯ,ಕಲಾಕುಟುಂಬದ ಮೂರನೇ ಪೀಳಿಗೆಯ ಪ್ರಬುದ್ಧ ಕಲಾವಿದ ಕೆರೆಮನೆ ಶಿವಾನಂದ ಹೆಗಡೆ. +ಉತ್ತರ ಕನ್ನಡದ ಹೊನ್ನಾವರ ತಾಲೂಕಿನ ಗುಣವಂತೆಯಲ್ಲಿ 24-10-1961ರಲ್ಲಿ ಜನಿಸಿದ ಶಿವಾನಂದ ಹೆಗಡೆ, ಯಕ್ಷಗಾನ ವರನಟ ಕೆರೆಮನೆ ಶಂಭು ಹೆಗಡೆ ಹಾಗೂ ಗೌರಿ ಶಂಭು ಹೆಗಡೆ ದಂಪತಿಯ ಸುಪುತ್ರ. +ಮನೆತನದ ಕಲಾಪರಂಪರೆಯ ಪ್ರಭಾವದಿಂದ ತನ್ನ 12ರ ಹರೆಯದಲ್ಲೇ ಇವರು ಬಣ್ಣ ಹಚ್ಚಿದರು. +ಅಪ್ರತಿಮ ಕಲಾವಿದ ಅಜ್ಜ ಶಿವರಾಮ ಹೆಗಡೆ ಹಾಗೂ ತಂದೆ ಶಂಭು ಹೆಗಡೆಯವರ ಸಮರ್ಥ ಮಾರ್ಗದರ್ಶನ ಇವರನ್ನು ಸಮರ್ಥ ಕಲಾವಿದನನ್ನಾಗಿ ರೂಪಿಸುವಲ್ಲಿ ಶಕ್ತವಾಯಿತು. +ಅಜ್ಜ, ತಂದೆ, ದೊಡ್ಡಪ್ಪ (ಕೆರೆಮನೆ ಮಹಾಬಲ ಹೆಗಡೆ), ಚಿಕ್ಕಪ್ಪ (ಕೆರೆಮನೆ ಗಜಾನನ ಹೆಗಡೆ),ಎಲ್ಲರೂ ಈ ರಂಗದ ಶ್ರೇಷ್ಠ ಕಲಾವಿದರಾಗಿ ಸಾರ್ಥಕ ಕೀರ್ತಿ ಸಂಪಾದಿಸಿದ್ದರು. +ಹಾಗಾಗಿ ಆನುವಂಶೀಯ ಕಲಾಬಳುವಳಿ ಇವರನ್ನು ಗಾಡವಾಗಿ ಬೆಸೆದುಕೊಂಡಿದೆ. +ಅಜ್ಜ ಶಿವರಾಮಹೆಗಡೆ ಹಾಗೂ ಕುಟುಂಬದ ಎಲ್ಲಾ ಹಿರಿಯ ಕಲಾವಿದರು, ಹೊಸ್ತೋಟ ಮಂಜುನಾಥ ಬಾಗವತರು, ಹೆರಂಜಾಲು ವೆಂಕಟರಮಣ, ಮಲ್ಗದ್ದೆ ಗಣೇಶ ಹೆಗಡೆ, ಕರ್ಕಿ ನಾರಾಯಣ ಹಾಸ್ಯಗಾರ್‌ ಇವರಿಗೆ ಗುರುಬಲವಾದರು. +ಶಿವಾನಂದ ಹೆಗಡೆಯವರು ಪುರುಷ ವೇಷ ಹಾಗೂ ಸ್ತ್ರೀವೇಷಗಳನ್ನು ಸಮರ್ಥವಾಗಿ ನಿರ್ವಹಿಸುವವರು. +ಶ್ರೀಯುತರ ಶ್ರೀಕೃಷ್ಣ ಕಾರ್ತವೀರ್ಯ ರಾವಣ, ಸುಧೇಷ್ಟೆ, ದ್ರೌಪದಿ, ಕೌರವ, ಜರಾಸಂಧ,ಭೀಮ, ಬಲರಾಮ, ಶ್ರೀರಾಮ, ಸಾಲ್ವ, ಭೀಷ್ಯ ಸುಧನ್ವ,ಅರ್ಜುನ, ಧರ್ಮಾಂಗದ, ಹನುಮಂತ ಪಾತ್ರಗಳು ಜನಪ್ರಿಯ. +ಗುಂಡಬಾಳ ಮೇಳದಲ್ಲಿ 2 ವರ್ಷ,ಪಂಚಲಿಂಗ-ಇಡಗುಂಜಿ ಮೇಳದಲ್ಲಿ ಕಲಾ ಸೇವೆ ನಡೆಸಿದ ಶಿವಾನಂದ ಹೆಗಡೆ ಸ್ವಯಂ ಸಂಚಾಲಕತ್ವದ ಇಡಗುಂಜಿ ಮೇಳದ ಪ್ರಧಾನ ಕಲಾವಿದರು. +ಇಡಗುಂಜಿ ಯಕ್ಷಗಾನ ಕೇಂದ್ರದ ನಿರ್ದೇಶಕರು. +ದೇಶ-ವಿದೇಶಗಳಲ್ಲಿ ಇವರ ಕಲಾಪ್ರತಿಭೆ ಮೆರೆದಿದೆ. +ಬಿ.ಎ.ಪೂರೈಸಿದ ಇವರು ಶ್ರೀಮತಿ ಮಾಯಾರಾವ್‌ ಅವರ ನಿರ್ದೇಶನದಲ್ಲಿ ಕೊರಿಯೋಗ್ರಫಿ ಡಿಪ್ಲೋಮಾ ಮಾಡಿದರು. +ಕಥಕ್‌ಮತ್ತಿತರ ಜಾನಪದ ನೃತ್ಯಕಲೆಯನ್ನು ಬಲ್ಲರು. +ಶ್ರೀಯುತರು ಅನೇಕ ದಾರವಾಹಿಗಳಲ್ಲಿ ಅಭಿನಯಿಸಿದ್ದಾರೆ. +ಅನೇಕ ನಾಟಕಗಳನ್ನು ನಿರ್ದೇಶಿಸಿದ್ದಾರೆ. +ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. +ಇವರ ಧರ್ಮಪತ್ನಿ ರಾಜೇಶ್ವರಿ ಹೆಗಡೆ. +ಶ್ರೀಧರ ಹೆಗಡೆ, ಶಶಿಧರ ಹೆಗಡೆ ಇವರ ಮಕ್ಕಳು. +ಇವರಿಗೆ ಭಾರತ ಸರಕಾರದ ಶಿಷ್ಯವೇತನ ಹಾಗೂ ನೂರಾರು ಸಂಮಾನ ದೊರಕಿದೆ. +ಹಲವು ಬಾರಿ ವಿದೇಶ ಪ್ರಯಾಣ ಮಾಡಿ ಅಲ್ಲೂ ಕಲೆಯ ಪ್ರಸಾರಕ್ಕೆ ನೆರವಾಗಿದ್ದಾರೆ. +ನೀಳವಾದ ಆಳಂಗ, ಗತ್ತು ಗೈರತ್ತಿನ ನೃತ್ಯವೈಖರಿ, ಗಂಭೀರ ಸ್ವರಭಾರ, ಸಾಂಪ್ರದಾಯಿಕ ಪಾತ್ರ ಕಟ್ಟೋಣ. +ಇಂತಹ ರಂಗಾಂಗ ಶೋಭಿತ ಹಿರಿಯ ವೇಷಧಾರಿ ಶೀನ ಕುಲಾಲ್‌ ಗಾವಳಿ. +ಕುಂದಾಪುರ ತಾಲೂಕಿನ ಪುಟ್ಟ ಹಳ್ಳಿಯೆನಿಸಿದ ಗಾವಳಿ ಎಂಬಲ್ಲಿ 19-3-1949ರಲ್ಲಿ ಬಚ್ಚ ಕುಲಾಲ್‌-ಕೊಲ್ಲು ಕುಲಾಲ್ತಿ ದಂಪತಿಯ ಸುಪುತ್ರನಾಗಿ ಜನಿಸಿದ ಶೀನ ಕುಲಾಲರು 2ನೇ ತರಗತಿಗೆ ಶರಣು ಹೊಡೆದು,ತನ್ನ 25ನೇ ವಯಸ್ಸಿನಲ್ಲಿ ಯಕ್ಷಗಾನ ರಂಗ ಜೀವನಕ್ಕೆ ಮುಂದಾದರು. +ಆರ್ಥಿಕ ಅನಾನುಕೂಲತೆಯಿಂದ ಸಂಕಟಪಡುತ್ತಿದ್ದ ಕುಟುಂಬ ನಿರ್ವಹಣೆಗೆ ಯಕ್ಷಗಾನ ಬಣ್ಣ-ನೂಪುರದ ಸಾಂಗತ್ಯ ಲೇಸೆಂದು ಬಗೆದ ಶೀನಕುಲಾಲರು ಸ್ವಯಂ ಪ್ರೇರಣೆ ಆಸಕ್ತಿಯಿಂದ ಈ ರಂಗಬದುಕಿಗೆ ಜೊತೆಯಾದರು. +ಬಾಬು ಕುಲಾಲಗಾವಳಿ ಹಾಗೂ ಮಜ್ಜಿಗೆ ಬೈಲು ಚಂದಯ್ಯ ಶೆಟ್ಟರ ಗುರುತನದಲ್ಲಿ ವ್ಯವಸ್ಥಿತ ಕಲಾವಿದ್ಯೆಯನ್ನು ಗಳಿಸಿದ ಶ್ರೀಯುತರು ಹಂತ ಹಂತವಾಗಿ ಬೆಳೆದು ಸುಯೋಗ್ಯ ಕಲಾವಿದರಾಗಿ ರೂಪುಗೊಂಡರು. +ಮಾರಣಕಟ್ಟೆ 7, ಕಮಲಶಿಲೆ 7, ಹಾಲಾಡಿ 7,ಬಗ್ಡಾಡಿ 1! ಮಂದಾರ್ತಿ 8, ಕಳವಾಡಿ 1, ಸೌಕೂರು1, ಪೆರ್ಡೂರು 1, ಅಮೃತೇಶ್ವರಿ, ಸಾಲಿಗ್ರಾಮ 1,ಹೀಗೆ 35 ವರ್ಷಗಳ ನಿರಂತರ ಕಲಾ ವ್ಯವಸಾಯದಲ್ಲಿ ಯಶಸ್ಸು ಸಂಪಾದಿಸಿದರು. +ಪೌರಾಣಿಕ ಕಥಾನಕಗಳ ಪ್ರಧಾನರಾಜವೇಷಗಳನ್ನೂ ಮುಂಡಾಸು ವೇಷಗಳನ್ನು ಸುಪುಷ್ಟವಾಗಿ ಪೋಷಿಸುವ ಶ್ರೀಯುತರ ರಂಗವಾಗ್ಮಿತೆ ಪ್ರೌಢವಾದುದು. +ಕರ್ಣ, ಶಲ್ಯ, ಶಂತನು, ಕೌರವ, ಜಾಂಬವ,ಬಲರಾಮ, ವೀರಮಣಿ ಶತ್ರುಘ್ನ, ಭಗದತ್ತ, ಶನೀಶ್ವರ ಮೊದಲಾದ ಪಾತ್ರಗಳಿಗೆ ತನ್ನದೇ ಕಲಾಮೆರುಗು ನೀಡಿರುವರು. +ಪತ್ನಿ ಪಾರ್ವತಿ. +ಸೌಮ್ಯ, ಗೀತಾ, ಉದಯ,ಸುರೇಂದ್ರ ಮಕ್ಕಳು. +ಹಿರಿಯ ಕಲಾವಿದ ಶೀನಕುಲಾಲರನ್ನು ಡಾ.ಜಿ.ಶಂಕರ್‌ ಫ್ಯಾಮಿಲಿ ಟ್ರಸ್ಟ್‌,ಯಶಸ್ವೀ ಕಲಾವೃಂದ ತೆಕ್ಕಟ್ಟಿ ಮೊದಲಾದ ಸಂಘ-ಸಂಸ್ಥೆಗಳು ಗುರುತಿಸಿ ಗೌರವಿಸಿವೆ. +ಬಡಗುತಿಟ್ಟಿನ ಯಕ್ಷಗಾನ ರಂಗದ ಪೂರ್ವಾನುಗತವಾದ ಕಲಾಶೈಲಿಯನ್ನು ಬಣ್ಣದ ಬದುಕಿನುದ್ದಕ್ಕೂ ಪಾಲಿಸಕೊಂಡು ಬಂದ ಅಗ್ರಮಾನ್ಯ ವೇಷಧಾರಿ ಜಮದಗ್ನಿ ಶೀನ ನಾಯ್ಕ್‌. +“ಜಮದಗ್ನಿ ಶೀನ' ಅನ್ನುವ ಅನ್ವರ್ಥ ನಾಮದಿಂದಲೇ ಚಿರಪರಿಚಿತರಾದ ಶ್ರೀಯುತರು ಇದೀಗ 69ರ ಹರೆಯದಲ್ಲಿರುವ ಹಿರಿಯ ಪ್ರತಿಭೆ. +ಇವರ ಹುಟ್ಟೂರು ಕುಂದಾಪುರ ತಾಲೂಕಿನ ಜನ್ನಾಡಿ. +ತಂದೆ ಕುಷ್ಠ ಮೊಗವೀರ, ತಾಯಿ ಶ್ರೀಮತಿ ಲಚ್ಚಿ. +ಮನೆಯಲ್ಲಿ ಕಿತ್ತು ತಿನ್ನುವ ಬಡತನ ಶೀನ ಅವರನ್ನು ಶಾಲಾ ಶಿಕ್ಷಣವನ್ನು ಎರಡನೇ ತರಗತಿಗಷ್ಟೇ ಸೀಮಿತಗೊಳಿಸಿತು. +ಸುತ್ತಮುತ್ತ ನಡೆಯುತ್ತಿದ್ದ ಯಕ್ಷಗಾನ ಆಟ-ಕೂಟಗಳ ಆಕರ್ಷಣೆ ವೃತ್ತಿ ಬದುಕಿಗೆ ಪ್ರೇರೇಪಿಸಿತು. +ಬಣ್ಣದ ಸಂಜೀವಯ್ಯನವರಲ್ಲಿ ಪ್ರಾಥಮಿಕ ಯಕ್ಷ ಶಿಕ್ಷಣ ಪಡೆದ ಅವರು ತನ್ನ 13ರ ಹರೆಯದಲ್ಲೇ ರಂಗಮಂಚಕ್ಕೆ ಹೆಜ್ಜೆ ಹಾಕಿದರು. +ಗುರುವೀರಭದ್ರ ನಾಯಕ್‌, ಬಿ. ಶ್ರೀನಿವಾಸ ನಾಯ್ಕ,ವಂಡಾರು ಬಸವ ಹಾಗೂ ಪೆರ್ಡೂರು ರಾಮನವರ ಶಿಷ್ಯನಾಗಿ ಶಾಸ್ತ್ರೀಯ ಕಲಾವಿದ್ಯೆಂತುನನ್ನು ಸಮರ್ಪಕವಾಗಿ ಸಂಪಾದಿಸಿದ ಜಮದಗ್ನಿ ಶೀನನಾಯ್ಕರಿಗೆ ವೃತ್ತಿ ಮೇಳದಲ್ಲಿ ಶೇಷಗಿರಿ ಭಾಗವತರು, ಹಿರಿಯಡಕ ಗೋಪಾಲರಾಯರು ಹಾಗೂ ಚಂಡೆ ಕಿಟ್ಟನವರ ಪ್ರೋತ್ಸಹ, ಮಾರ್ಗದರ್ಶನ ಸುಪುಷ್ಟವಾಗಿ ದೊರಕಿತು. +ಮಂದಾರ್ತಿ, ಮಾರಣಕಟ್ಟೆ, ಪೆರ್ಡೂರು,ಅಮೃತೇಶ್ವರಿ, ಸಾಲಿಗ್ರಾಮ, ಪೊಳಲಿ, ಕೊಡವೂರು,ಗೋಳಿಗರಡಿ, ಹಾಲಾಡಿ, ಬಗ್ದಾಡಿ, ಕಮಲಶಿಲೆ,ಮೇಳಗಳಲ್ಲಿ ಸುದೀರ್ಫ್ಥ ಐವತ್ತು ವರುಷಗಳ ಕಾಲ ಕಲಾಸೇವೆ ನಡೆಸಿದ ಶೀನನಾಯ್ಕರು ಉಭಯತಿಟ್ಟುಗಳಲ್ಲೂ ವಿಜೃಂಭಿಸಿ ಗೆಲುವು ಕಂಡವರು. +ಶೀನನಾಯ್ಕರು ಆರಂಭಿಕ ವೃತ್ತಿಬದುಕಿನಲ್ಲಿ ಪ್ರಧಾನ ಸ್ರ್ತೀ ವೇಷಧಾರಿಯಾಗಿ ಖ್ಯಾತನಾಮರಾದವರು. +ಇವರ ಶಶಿಪ್ರಭೆ, ಮೀನಾಕ್ಷಿ, ದ್ರೌಪದಿ, ಸೀತೆ,ಚಿತ್ರಾಂಗದೆ, ಪ್ರಮೀಳೆ, ಮಂಡೋದರಿ, ಪಾತ್ರಗಳು ಜನಪ್ರಿಯವಾಗಿವೆ. +ಒಮ್ಮೆ ಮಾರಣಕಟ್ಟೆ ಮೇಳದಲ್ಲಿ ಪರಿಸ್ಥಿತಿಯ ಒತ್ತಡದಿಂದ "ರೇಣುಕಾ ಮಹಾತ್ಮ್ಯೆ'ಯ ಜಮದಗ್ನಿ ಪಾತ್ರ ನಿರ್ವಹಿಸಬೇಕಾಗಿ ಬಂದಿತು. +ಅಂದು ನಿರ್ವಹಿಸಿದ ಆ ಪಾತ್ರ ಅದೆಷ್ಟು ಜನ ಮೆಚ್ಚುಗೆಗಳಿಸಿತೆಂದರೆ ರಾತ್ರಿ ಬೆಳಗಾಗುವುದರೊಳಗೆ ಜನ್ನಾಡಿ ಶೀನನಾಯ್ಕರು “ಜಮದಗ್ನಿ ಶೀನ'ರಾಗಿ ಬಿಟ್ಟರು . +ಆನಂತರ ಪ್ರರುಷವೇಷಧಾರಿಯಾಗಿ, ಎರಡನೇವೇಷಧಾರಿಯಾಗಿ ಪೌರಾಣಿಕ ಭೂಮಿಕೆಗಳಿಗೆ ಜೀವತುಂಬಿದರು. +ಅರ್ಜುನ, ಜಾಂಬವ, ಭೀಮ, ಕೌರವ,ವಿಶ್ವಾಮಿತ್ರ, ಋತುಪರ್ಣ, ಪಾತ್ರಗಳಿಗೆ ತನ್ನದೇ ಶೈಲೀಕೃತ ವಿಶೇಷ ಮೆರುಗು ನೀಡಿದರು. +ಮಡದಿ ಕೊಲ್ಲು ಮೊಗೇರ್ಶಿ. +ಪ್ರಕಾಶ, ಪ್ರತಾಪ,ಮಹೇಶ, ದಿನೇಶ, ಮಾಲಿನಿ, ಶಾಲಿನಿ ಮಕ್ಕಳು. +ಪ್ರಬದ್ಧ ಕಲಾವಿದ ಜಮದಗ್ನಿ ಶೀನನಾಯ್ಕರು,ಹಲವಾರು ಸಂಘ ಸಂಸ್ಥೆಗಳ ಸಂಮಾನ ಪಡೆದಿದ್ದಾರೆ. +ಪಾರಂಪರಿಕ ಶೈಲಿಯಲ್ಲಿ ಬಣ್ಣಗಾರಿಕೆ,ನಾಟ್ಯಗಾರಿಕೆ, ಹಾಗೂ ಮಾತುಗಾರಿಕೆಯನ್ನು ರೂಢಿಸಿಕೊಂಡು ಮಾರಣಕಟ್ಟೆ ಮೇಳದ ಬಣ್ಣದ ವೇಷಧಾರಿಯಾಗಿ ಮನ್ನಣೆಯನ್ನು ಪಡೆದ ಹಿರಿಯ ಕಲಾವಿದರು ಶ್ರೀ ಬ್ರಹ್ಮೇರಿ ಶೀನನಾಯ್ಕ. +ಸುಬ್ಬಯ್ಯ ನಾಯ್ಕ-ಗಿರಿಜಾ ದಂಪತಿಯ ಪುತ್ರರಾಗಿ ಕುಂದಾಪುರ ತಾಲೂಕಿನ ಬ್ರಹ್ಮೇರಿ ಎಂಬಲ್ಲಿ ಜನಿಸಿದ ಶೀನನಾಯ್ಕರು 52ವರ್ಷದ ಹಿರಿತನದ ಕಲಾವಂತರು. +ಎಳವೆಯಲ್ಲಿ ಮೈಮನ ತುಂಬಿದ ಅನ್ಯಾದೃಶ ಯಕ್ಷಗಾನ ಕಲಾಸಕ್ತಿಯೇ ಇವರ ವೃತ್ತಿರಂಗಭೂಮಿಗೆ ಪ್ರೇರಣೆಯಾಯಿತೆನ್ನಬಹುದಾಗಿದೆ. +ಗುರುವೀರಭದ್ರನಾಯಕರ ಶಿಷ್ಯರಾದ ಬ್ರಹ್ಮೇರಿ ಶೀನನಾಯ್ಕರು ಯಕ್ಷಕಥಾನಕಗಳ ರಾಜವೇಷ,ಮುಂಡಾಸುವೇಷಗಳನ್ನು ನಿರ್ವಹಿಸುತ್ತಾ ಬಣ್ಣದವೇಷದಲ್ಲಿ ಖ್ಯಾತನಾಮವನ್ನು ಪಡೆದವರು. +ಶೀನನಾಯ್ಕರು 4ನೇ ತರಗತಿಗೆ ಶರಣು ಹೊಡೆದು, ತನ್ನ 18ನೇ ವಯಸ್ಸಿನಲ್ಲಿ ಯಕ್ಷಗಾನ ಪ್ರಪಂಚವನ್ನು ಪ್ರವೇಶಿಸಿದವರು. +ಮಾರಣಕಟ್ಟೆ ಮೇಳ 12, ಸೌಕೂರು 8, ಕಮಲಶಿಲೆ 4, ಹಾಲಾಡಿ 6,ಹೀಗೆ ಇವರ ಕಲಾವ್ಯವಸಾಯದ ಒಟ್ಟು ತಿರುಗಾಟ ಮೂವತ್ತು . +ಮಹಿಷಾಸುರ, ಹಿಡಿಂಬಾಸುರ, ಕೌಂಡ್ಲೀಕ,ಶೂರಸೇನ, ಶೂರ್ಪನಖಾ, ಘಟೋತ್ಕಚ ಮೊದಲಾದ ಭೂಮಿಕೆಗಳು ಶೀನನಾಯ್ಕರ ಉನ್ನತ ಪ್ರತಿಭೆಯಿಂದ ರಂಗಸ್ಥಳದಲ್ಲಿ ಮೆರೆದು ಕಲಾರಸಿಕರ ಶ್ಲಾಘನೆಗೆ ಪಾತ್ರವಾಗಿವೆ. +ಇವರ ಶ್ರೀಮತಿ ರತ್ನನಾಯ್ಕ. +ಮಂಜುನಾಥ,ವಿಶ್ವನಾಥ, ಜಗನ್ನಾಥ ಎಂಬ ಮೂವರು ಗಂಡುಮಕ್ಕಳು . +ಪ್ರಸ್ತುತ ಮಾರಣಕಟ್ಟೆ ಮೇಳದ ಬಣ್ಣದವೇಷಧಾರಿ-ಯಾಗಿ ಸಾರ್ಥಕ ಹೆಸರು ಗಳಿಸಿದ್ದಾರೆ. +ಪ್ರೌಢ ಕಲಾನುಭವದೊಂದಿಗೆ ಸಾಂಪ್ರದಾಯಿಕ ಆವರಣದಲ್ಲಿ ವಿಜೃಂಭಿಸುವ ಬ್ರಹ್ಮೇರಿ ಶೀನನಾಯ್ಕ ಅವರನ್ನು ಹಲವಾರು ಸಂಘಸಂಸ್ಥೆಗಳು ಗುರುತಿಸಿ ಸಂಮಾನಿಸಿವೆ. +ಪೌರಾಣಿಕ ಜ್ಞಾನ ಸಂಪತ್ತಿನಲ್ಲಿ ವ್ಯಾಕರಣ ಶುದ್ಧವಾಗಿ ಹೊರಹೊಮ್ಮುವ ಮಾತುಗಾರಿಕೆ,ಪಾತ್ರೋಚಿತವಾದ ನಾಟ್ಯ, ಅಭಿನಯ ಪದ್ಧತಿ,ಸುಂದರವಾದ ವೇಷವಿನ್ಯಾಸ, ಹೃದಯಸ್ಪರ್ಶಿ ಭಾವವಿಲಾಸ ನಿರ್ವಹಣಾ ಭೂಮಿಕೆಗಳಲ್ಲಿ ಸಮೃದ್ಧವಾಗಿ ಸಾಕಾರಗೊಳಿಸುವ ಪುರುಷವೇಷಧಾರಿ ಶ್ರೀಕಂಠ ಭಟ್‌ಎಚ್‌.ಎಸ್‌. +ಚಿಕ್ಕಮಂಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ಎಡ್ಲುಕುಡಿಗೆ ಎಂಬಲ್ಲಿ 30-7-1961ರಲ್ಲಿ ಶೇಷಗಿರಿ ಅಯ್ಯ-ವಿಶಾಲಾಕ್ಷಮ್ಮ ದಂಪತಿಯ ಸುಪುತ್ರರಾಗಿ ಜನಿಸಿದ ಶ್ರೀಕಂಠ ಭಟ್‌ ಅವರು, 7ನೇ ತರಗತಿಯವರೆಗಿನ ಅಕ್ಷರಾಭ್ಯಾಸದ ಬಳಿಕ, ತನ್ನ 15ರ ಹರೆಯದಲ್ಲಿ ಯಕ್ಷಗಾನ ರಂಗ ಪ್ರವೇಶಿಸಿದರು. +ಚಿಕ್ಕಂದಿನಿಂದಲೇ ಯಕ್ಷಗಾನ ಕಲೆಯ ಕುರಿತ ವಿಶೇಷ ಆಸಕ್ತಿ ಆಕರ್ಷಣೆ ಹೊಂದಿದ ಶ್ರೀಕಂಠಭಟ್ಟರು ಉಡುಪಿ ಯಕ್ಷಗಾನ ಕೇಂದ್ರದಲ್ಲಿ ನೀಲಾವರ ರಾಮ ಕೃಷ್ಣಯ್ಯ, ಶ್ರೀಧರ ಹೆಬ್ಬಾರ್‌ ಅವರ ಗುರುತನದಲ್ಲಿ ಸಶಕ್ತ ಯಕ್ಷಶಿಕ್ಷಣ ಪಡೆದವರು. +ಎಚ್‌.ಎಸ್‌.ಗೋಪಾಲ ಕೃಷ್ಣಯ್ಯನವರಲ್ಲಿ ಪ್ರಸಂಗಮಾಹಿತಿ ರಂಗನಡೆಯನ್ನು ಸುಪುಷಯವಾಗಿ ಸಂಪಾದಿಸಿದರು. +ಸಾಲಿಗ್ರಾಮ 1, ಪೆರ್ಡೂರು 1 ಶೃಂಗೇರಿ 1,ಕಮಲಶಿಲೆ 2, ಸೌಕೂರು 1, ಮಾರಣಕಟ್ಟೆ 4,ಅಮೃತೇಶ್ವರಿ 2, ನಾಗರಕೊಡಿಗೆ 1. ಮಂದಾರ್ತಿ13, ಗುತ್ತಿಯೆಡೆ ಹಳ್ಳಿ 4, ಹೀಗೆ ಮೂರು ದಶಕಗಳ ಕಲಾಯಾತ್ರೆಯಲ್ಲಿ ಶ್ರೀಕಂಠ ಭಟ್ಟರು ಸಾರ್ಥಕ ಕೀರ್ತಿ ಸಂಪಾದಿಸಿದ್ದಾರೆ. +ಪ್ರಸ್ತುತ ಹಿರಿಯಡಕ ಮೇಳದ ಕಲಾವಿದರಾಗಿ ಸೇವೆ ಸಲ್ಲಿಸುತ್ತಿದ್ದಾರೆ. +ಎಲ್ಲಾಬಗೆಯ ಗಂಡು ಪಾತ್ರಗಳನ್ನು ಭಟ್ಟರು ನಿರ್ವಹಿಸಬಲ್ಲರು. +ಸುಧನ್ವ, ಅರ್ಜುನ, ಬಬ್ರುವಾಹನ,ಶ್ವೇತಕುಮಾರ, ಶ್ರೀರಾಮ, ಶ್ರೀಕೃಷ್ಣ, ವಿಷ್ಣು ಚಂಡ-ಮುಂಡ, ಮಹಿಷಾಸುರ ಹನುಮಂತ, ಪರಶುರಾಮ ಮೊದಲಾದ ಪಾತ್ರಗಳು ಶ್ರೀಯುತರಿಗೆ ಜನಪ್ರಿಯತೆ ತಂದಿತ್ತಿವೆ. +ಅನೇಕ ಶಿಷ್ಯರಿಗೆ ನೃತ್ಯಶಿಕ್ಷಣ ನೀಡಿ ಕಲಾ-ವಿದರನ್ನಾಗಿ ರೂಪಿಸಿದ ಶ್ರೀಕಂಠಭಟ್ಟರಿಗೆ ಚಂಡೆಮದ್ದಳೆವಾದನ ಪರಿಣತಿಯೂ ಇದೆ. +ಪತ್ನಿ ಶಕುಂತಲಾ. +ಶ್ರೀರಕ್ಷಾ, ಶ್ರೀಲತಾ, ಶ್ರೀನಿಧಿ ಮಕ್ಕಳು. +ಹಲವಾರು ಸಂಘ ಸಂಸ್ಥೆಗಳು ಶ್ರೀಯುತರನ್ನು ಸಂಮಾನಿಸಿವೆ. +ಯಕ್ಷಗಾನದ ಕಲಾರಸಿಕರು ಚಪ್ಪರಿಸಿ ಚೇತೋಹಾರಿಗೊಳ್ಳಬಹುದಾದ ವಿನೋದ ವ್ಯಂಜನವನ್ನುಣಿಸುವ ದಕ್ಷ ಹಾಸ್ಯನಟ ಚಪ್ಪರಮನೆ ಶ್ರೀಧರ ನಾರಾಯಣ ಹೆಗಡೆ. +ಸಾಂಪ್ರದಾಯಿಕ ಸಮಕಾಲೀನ ಸ್ಥಿತಿ-ಗತಿಗನುಸಾರವಾದ ಪ್ರೌಢಹಾಸ್ಯಗಾರಿಕೆ ಶ್ರೀಧರ ಹೆಗಡೆಯವರ ಹೆಚ್ಚುಗಾರಿಕೆ. +6-11-1965ರಲ್ಲಿ ಸಿದ್ಧಾಮರದ ಚಪ್ಪರಮನೆ ಎಂಬಲ್ಲಿ ನಾರಾಯಣ ಹೆಗಡೆ-ಸೀತಾ ಹೆಗಡೆ ದಂಪತಿಯ ಮಗನಾಗಿ ಜನಿಸಿದ ಶ್ರೀಧರಹೆಗಡೆಯವರು ಎಂಟರ ಅಕ್ಷರ ಶಿಕ್ಷಣದ ತರುವಾಯ ಹದಿನೆಂಟಕ್ಕೇ ಯಕ್ಷಗಾನ ಕಲೆಯ ನೆಂಟತನ ಬಯಸಿದರು. +ಇವರ ತಂದೆ ವೇಷಧಾರಿ. +ಚಿಕ್ಕತಂದೆ ಭಾಗವತರು, ಹಾಗಾಗಿ ಶ್ರೀಧರ ಹೆಗಡೆಯವರಿಗೆ ಕಲೆ ಅಭಿಜಾತವಾಗಿ ಒದಗಿತು. +ಸಾಲಿಗ್ರಾಮ 2, ನಾಗರಕೊಡಿಗೆ 3, ಶಿರಸಿ 4,ಪೆರ್ಡೂರು 1, ಹೀಗೆ ಕಲಾಲೋಕದಲ್ಲಿ 10ವರುಷ ಸೇವೆ ಸಲ್ಲಿಸಿದವರು. +ಅನೇಕಾನೇಕ ವೃಶ್ತಿಮೇಳಗಳ ಅತಿಥಿ ಕಲಾವಿದರಾಗಿಯೂ ಕಲಾ ಕಾರ್ಯ ತತ್ಪರರು. +ಕುಂಜಾಲು ರಾಮಕೃಷ್ಣಯ್ಯ ಅವರ ಶಿಷ್ಯನಾದ ಶ್ರೀಧರ ಹೆಗಡೆಯವರಿಗೆ ಕುಂಜಾಲು ಅವರೊಂದಿಗೆ 4 ವರ್ಷಗಳ ಒಡನಾಟವೂ ಇದೆ. +ಹಾಗಾಗಿ ಕುಂಜಾಲು ಅವರ ಹಾಸ್ಯದ ಛಾಪು ಇವರ ಕೆಲವು ಪಾತ್ರಗಳಲ್ಲಿ ನಿಚ್ಚಳವಾಗಿ ಪಡಿ ಮೂಡುವುದನನ್ನು ಗುರುತಿಸಬಹುದಾಗಿದೆ. +ಹವ್ಯಾಸಿ ತಾಳಮದ್ದಳೆ ಅರ್ಥಧಾರಿಯೂ ಆಗಿರುವ ಶ್ರೀಧರ ಹೆಗಡೆಯವರ ಪ್ರಹ್ಲಾದ ಚರಿತ್ರೆಯ ದಡ್ಡ, ದಮಯಂತಿಯ ಬಾಹುಕ,ಚಂದ್ರಾವಳಿಯ ಚಂದಗೋಪ, ಬೇಡರಕಣ್ಣಪ್ಪದ ಕಾಶೀಮಾಣಿ ಗದಾಯುದ್ಧದ ಬೇಹುಚಾರಕ ಕಲಾಪ್ರಿಯರ ಮನ ಮೆಚ್ಚಿಸಿವೆ. +ಸುಸಂಸ್ಕೃತವಾದ ಹಾಸ್ಯಗಾರಿಕೆಯಲ್ಲಿ ಪೌರಾಣಿಕ ವೈಚಾರಿಕತೆಯ ರಸವೈಶಿಷ್ಟತೆಗಳನ್ನು ನವಿರಾಗಿ ಪ್ರಸ್ನುತಿಸುವ ಶ್ರೀಧರ ಹೆಗಡೆಯವರು ಕಲಾವರಣ ಮೀರದ ಸಮರ್ಥ ಹಾಸ್ಯಗಾರ. +ಪತ್ನಿ ಸಾವಿತ್ರಿ. +ಶ್ರೀಪಾದ, ಸಂದೇಶ ಈರ್ವರು ಪುತ್ರರು. +ಇವರನ್ನು ಕನ್ನಡ ಸಾಹಿತ್ಯ ಸಮ್ಮೇಳನ,ಹಲವಾರು ಸಂಘ ಸಂಸ್ಥೆಗಳು ಇವರನ್ನು ಗೌರವಿಸಿವೆ. +ಞರಾಣ ಭೂಮಿಕೆಗಳಲ್ಲಿ ತನ್ನದೇ ಗತ್ತು ಗಾಂಭೀರ್ಯಪೂರ್ಣ ಕಲಾವೈಭವವನ್ನು ಮೆರೆಯುವ ಪ್ರತಿಭಾವಂತ ಕಲಾವಿದ ನಾಗೂರು ಶ್ರೀನಿವಾಸ ದೇವಾಡಿಗ. +ಕುಂದಾಪುರ ತಾಲೂಕಿನ ನಾಗೂರು ಎಂಬಲ್ಲಿ ತಿಮ್ಮ ದೇವಾಡಿಗ-ಕಾವೇರಿ ದಂಪತಿಯ ಸುಪುತ್ರರಾಗಿ ಜನಿಸಿದ ಶ್ರೀಯುತರಿಗೆ ಪ್ರಾಯ ನಲವತ್ನಾಲ್ಕು. +ಎಂಟರ ವಿದ್ಯಾಭ್ಯಾಸ ಬಳಿಕ ಹದಿನೆಂಟರ ಹರೆಯದಲ್ಲೇ ಬಣ್ಣದ ಲೋಕದ ನಂಟು ಅಂಟಿಸಿಕೊಂಡ ಶ್ರೀನಿವಾಸ ದೇವಾಡಿಗರು ಗುರುವೆಂಕಟರಮಣ ಗಾಣಿಗರ ಶಿಷ್ಯನಾಗಿ ಸಾಂಪ್ರದಾಯಿಕ ಕಲಾ ಶಿಕ್ಷಣವನ್ನು ಪಡೆದರು. +ಯಾವುದೇ ಪುರುಷ ಪಾತ್ರಗಳಿಗೆ ಜೀವ ಚೈತನ್ಯ ನೀಡುವ ಕಲಾವಂತಿಕೆ ಹೊಂದಿದ ದೇವಾಡಿಗರು ಖಳಪಾತ್ರಗಳಲ್ಲೂ ವಿಶೇಷವಾಗಿ ಗುರುತಿಸಲ್ಪಡುತ್ತಾರೆ. +ಮುಂಡಾಸು ವೇಷಗಳಲ್ಲೂ ಇವರ ಕಲಾಪ್ರತಿಭೆ ಗಮನೀಯವಾದ್ದೇ. +ಸ್ವರಭಾರ, ನೃತ್ಯ, ಅಭಿನಯ,ರಂಗನಡೆ, ವೇಷಗಾರಿಕೆ, ಎಲ್ಲದರಲ್ಲೂ ಯಕ್ಷಗಾನೀಯ, ಸೊಗಡು ತೋರುವ ಶ್ರೀಯುತರ ಕರ್ಣ, ಶಲ್ಯ, ಭೀಮ, ಕೌರವ, ಕಂಸ, ಕಾಲನೇಮಿ,ರಾವಣ, ವಿಭೀಷಣ, ವೀರಮಣಿ ಪಾತ್ರಗಳು ಕಲಾರಸಿಕರ ಪ್ರೀತಿಗೆ ಪಾತ್ರವಾಗಿವೆ. +ಮಾರಣಕಟ್ಟೆ ಮೇಳವೊಂದರಲ್ಲೇ 26 ವರ್ಷಗಳ ಕಾಲ ರಂಗ ವ್ಯವಸಾಯ ಪೂರೈಸಿ ಅದೇ ಮೇಳದಲ್ಲಿ ಸಾರ್ಥಕ ಕಲಾ ಬದುಕು ನಡೆಸಿ ಪ್ರೇಕ್ಷಕರ ಮೆಚ್ಚುಗೆ ಗಳಿಸಿರುತ್ತಾರೆ. + ಪತ್ನಿ ಪಾರ್ವತಿ. +ಕಿರಣ್‌, ಕೀರ್ತನ್‌ ಮಕ್ಕಳು. +ಶ್ರೀಯುತರನ್ನು ಹಲವಾರು ಸಂಘ ಸಂಸ್ಥೆಗಳು ಗುರುತಿಸಿ ಗೌರವಿಸಿವೆ. +ಆಕರ್ಷಣೀಯ ರೂಪ, ಮಾಧುರ್ಯತೆಯ ಕಂಠ,ಲಾಲಿತ್ಯಪೂರ್ಣ ಹಾವ-ಭಾವ, ಸ್ಫುಟವಾದ ನೃತ್ಯಾಭಿನಯ ಸುಸಂಸ್ಕೃತ ವಾಚಿಕವೈಖರಿ. +ಇವೆಲ್ಲವನ್ನೂ ಸುಪುಷ್ಟವಾಗಿ ಮೈತುಂಬಿಕೊಂಡು ಯಕ್ಷಗಾನ ರಂಗಮಂಚದ ಹೆಣ್ಣಾಗಿ ಕಣ್ಮನ ಸೆಳೆಯುವ ಪ್ರಬುದ್ಧ ಸ್ತ್ರೀವೇಷಧಾರಿ ಶ್ರೀನಿವಾಸಭಟ್‌ನಾಗರಕೊಡಿಗೆ. +ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ನಾಗರಕೊಡಿಗೆಯೇ ಶ್ರೀನಿವಾಸಭಟ್ಟರ ಹುಟ್ಟೂರು. +ದಿನಾಂಕ 1-6-1969ರಲ್ಲಿ ಜನಿಸಿದ ಭಟ್ಟರು ಶ್ರೀ ಶಂಕರಯ್ಯ-ಜಯಮ್ಮ ದಂಪತಿಯ ಸುಪುತ್ರ . +7ನೇತರಗತಿಯವರೆಗೆ ವಿದ್ಯಾಭ್ಯಾಸ ಪೂರೈಸಿ, ಯಕ್ಷಗಾನ ರಂಗಭೂಮಿಗೆ ಧುಮುಕಿದ ಶ್ರೀನಿವಾಸಭಟ್ಟರಿಗೆ ನಾಗರಕೊಡಿಗೆ ರಾಮಕೃಷ್ಣಮೂರ್ತಿಯವರೇ ರಂಗಪ್ರೇರಣಾಶಕ್ತಿ. +ನಾಗರಕೊಡಿಗೆ ರಾಮಕೃಷ್ಣಮೂರ್ತಿ-ಬೆಳಿಯಾರು ಕೃಷ್ಣಮೂರ್ತಿ ಇವರ ಯಕ್ಷಗುರುಗಳು. +ಪೆರ್ಡೂರು 1, ಹಾಲಾಡಿ 1 ಕಳವಾಡಿ 1,ನಾಗರಕೊಡಿಗೆ 5, ಕಮಲಶಿಲೆ 7, ಸೌಕೂರು 6,ಸಾಲಿಗ್ರಾಮ 1, ಮಾರಣಕಟ್ಟೆ 5, ಹೀಗೆ 27ವರ್ಷಗಳ ಕಲಾಕೃಷಿಯಲ್ಲಿ ಭಟ್ಟರು ಧನ್ಯತೆ ಕಂಡವರು. +ಯಾವುದೇ ಗುಣಸ್ವಭಾವದ ಸ್ತ್ರೀಭೂಮಿಕೆಗಳನ್ನು ತನ್ನ ಪ್ರತಿಭಾ ಶಕ್ತಿಯಿಂದ ಸಂಪನ್ನಶೀಲಗೊಳಿಸುವ ಕಲಾವಂತಿಕೆ ಹೊಂದಿದ ಶ್ರೀನಿವಾಸ ಭಟ್ಟರು ನಿರ್ವಹಿಸಿದ ದ್ರೌಪದಿ, ಮೀನಾಕ್ಷಿ, ಶಶಿಪ್ರಭೆ, ಕಯಾದು,ಚಂದ್ರಾವಳಿ, ತಿಲೋತ್ತಮೆ, ದೇವಯಾನಿ ಮೊದಲಾದ ಪಾತ್ರಗಳು ಕಲಾರಸಿಕೆ ಜನಮನವನ್ನು ಸಂತೃಪ್ತಿಗೊಳಿಸುವಲ್ಲಿ ಯಶಸ್ವಿಯಾಗಿವೆ. +ಪತ್ನಿ ಶೈಲಜಾ. +ನಾಗೇಂದ್ರ, ನರೇಂದ್ರ ಮಕ್ಕಳು. +ಪ್ರಸ್ತುತ ಪ್ರಧಾನ ಸ್ತ್ರೀವೇಷಧಾರಿಯಾಗಿ ಮಾರಣಕಟ್ಟೆ ಮೇಳದಲ್ಲಿ ಸೇವಾನಿರತರಾಗಿದ್ದಾರೆ. +ಶ್ರೀಯುತರನ್ನು ಹಲವು ಸಂಘ-ಸಂಸ್ಥೆಗಳು ಗುರುತಿಸಿ ಸಂಮಾನಿಸಿವೆ. +ಯಕ್ಷಕಲಾ ಶ್ರೀಮದ್ಗಾಂಭೀರ್ಯದ ಸಂಪನ್ನ ಪ್ರತಿಭೆ ಥಂಡಿಮನೆ ಶ್ರೀಪಾದ ಭಟ್‌. +ಉತ್ತರ ಕನ್ನಡದ ಶಿರಸಿಯ ಕೋಳಿಗಾರ್‌ ಇವರ ಹುಟ್ಟೂರು. +ತಂದೆ ತಿಮ್ಮಣ್ಣಭಟ್ಟ ಥಂಡಿಮನೆ ತಾಯಿ ಗಿರಿಜಾ ತಿಮ್ಮ ಭಟ್ಟ,20-07-1963ರಲ್ಲಿ ಜನಿಸಿದ ಶ್ರೀಪಾದ ಭಟ್ಟರು ಬಾಲ್ಯದಲ್ಲಿಯೇ ಯಕ್ಷಕಲೆಗೆ ವಶವಾದರು. +ತನ್ನ 20ನೇ ವಯಸ್ಸಿನಲ್ಲಿಯೇ ಯಕ್ಷರಂಗಕ್ಕೆ ಹೆಜ್ಜೆ ಹಾಕಿದ ಭಟ್ಟರಿಗೆ ವೇಷಧಾರಿಯಾಗಿದ್ದ ತಂದೆ ತಿಮ್ಮಣ್ಣ ಭಟ್ಟರೇ ಪ್ರೋತ್ಸಾಹಕ ಚೈತನ್ಯವಾದರು. +ಹಿರಿಯಭಾಗವತ, ಯಕ್ಷಗಾನ ರಸಋಷಿ ಹೊಸ್ತೋಟ ಮಂಜುನಾಥ ಭಾಗವತರ ಬಲಿಷ್ಠವಾದ ಗುರುತನ ಇವರನ್ನು ಕಲಾವಿದನನ್ನಾಗಿ ರೂಪಿಸಿತು. +ಯಾವುದೇ ಪಾತ್ರಗಳ ಆಂತರಿಕ ಭಾವ ವೈವಿಧ್ಯವನ್ನು ಸಮೂಲ ಅರ್ಥೈಕ್ಯೆಯೊಂದಿಗೆ ಪ್ರೌಢ ಪ್ರತಿಭಾವಿಲಾಸದಲ್ಲಿ ರಂಗಸ್ಥಳದಲ್ಲಿ ಪ್ರಸ್ತುತ ಪಡಿಸುವ ಥಂಡಿಮನೆಯವರು ಪಾತ್ರನಿಷ್ಠೆಯಲ್ಲಿ ಎದ್ದು ಕಾಣುವ ಕಲಾವ್ಯಕ್ತಿತ್ವವನ್ನು ರೂಢಿಸಿಕೊಂಡವರು. +ಅವರ ಗತ್ತು-ಗೈರತ್ತು,ವಜೋವೈಖರಿ ಸುಪುಷ್ಟ ನೃತ್ಯಾಭಿನಯದ ಹದವಾದ ಎರಕ ಪೌರಾಣಿಕ ಭೂಮಿಕೆಗಳನ್ನು ಸಚೇತನವಾಗಿ ರಂಗದಲ್ಲಿ ತೆರೆದಿಡುತ್ತದೆ. +ನಾಯಕ, ಪ್ರತಿನಾಯಕ,ಖಳನಾಯಕ ಭೂಮಿಕೆಗಳನ್ನು ಸಾಂಪ್ರದಾಯಿಕ ಹೊಳಪು, ಸೃಜನಶೀಲ ಛಾಪಿನೊಂದಿಗೆ ಕಾಣಿಸುವ ಥಂಡಿಮನೆಯವರು ರಂಗವೇರಿದರೆ ಯಾವತ್ತೂ ಥಂಡಿಯಲ್ಲ. +ಬಿಸುಪು ಬಿರುಸಿನ ಉಠಾವು, ಕಾವು. +ಶಿರಸಿ-ಪಂಚಲಿಂಗ ಮೇಳ 5, ಶಿರಸಿ-ಮಾರಿಕಾಂಬಾ ಮೇಳ 3, ಸಾಲಿಗ್ರಾಮ 8,ಮಂದಾರ್ತಿ 6, ಪೆರ್ಡೂರು 3, ಹೀಗೆ ರಜತವರ್ಷದ ಸುದೀರ್ಥ ತಿರುಗಾಟ ಥಂಡಿಮನೆಯವರದ್ದು. +ಈಶ್ವರ,ದಶರಥ, ಭೀಷ್ಯ ಸಾಲ್ವ, ಕಾರ್ತವೀರ್ಯ, ಯಯಾತಿ,ಅರ್ಜುನ, ಕೀಚಕ, ಕಂಸ, ಭರತ, ತ್ರಿಶಂಕು, ರಾವಣ,ವಾಲಿ, ಭಸ್ಮಾಸುರ, ಶುಂಭಾಸುರ, ದುರ್ಜಯ,ಮಾಗಧ, ಕೌರವ ಹೀಗೆ ಪೌರಾಣಿಕ ವ್ಯಕ್ತಿ-ಶಕ್ತಿಗಳ ರಮ್ಯಾ ದ್ಭುತ ಕಲಾಸಂಪನ್ಮತೆ ಥಂಡಿಮನೆಯವರಲ್ಲಿ ಕಾಣಬಹುದಾಗಿದೆ. +ಪತ್ನಿ ಸುನೀತಾ ಶ್ರೀಪಾದ ಭ. + ಪುತ್ರ ಶ್ರೀಕಾಂತಭ. + ಸಂತೃಪ್ತ ಕಿರು ಸಂಸಾರ. +ಬೆಂಗಳೂರು ಸೇರಿ ಹಲವೆಡೆ ಇವರನ್ನು ಅಭಿಮಾನಿಗಳು ಸಮ್ಮಾನಿಸಿದ್ದಾರೆ. +ಪ್ರಗಲ್ಫ ಪಾಂಡಿತ್ಯಪೂರ್ಣ ಪ್ರೌಢ ಪ್ರತಿಭೆಯಲ್ಲಿ ವಿಜೃಂಭಿಸುವ ಹಿರಿಯ ಕಲಾವಿದ ಶ್ರೀಪಾದಹೆಗಡೆಯವರುಉತ್ತರ ಕನ್ನಡದ ಮಾಳಕೋಡು ಎಂಬಲ್ಲಿ ಹುಟ್ಟಿಬೆಳೆದ ಧೀಮಂತರು. +ಇವರ ತಂದೆ ಗಣೇಶ ಹೆಗಡೆ,ತಾಯಿ ಮಹಾಲಕ್ಷೀ ಹೆಗಡೆ. +30-9-1953ರಲ್ಲಿ ಜನಿಸಿದ ಶ್ರೀಪಾದ ಹೆಗಡೆಯವರು, 10ನೇ ತರಗತಿಯ ಬಳಿಕ ಯಕ್ಷಗಾನ ರಂಗ ಪ್ರವೇಶಿಸಿದರು. +26ನೇ ವಯಸ್ಸಿನಲ್ಲಿ ಬಣ್ಣದ ಬದುಕು ಕಂಡ ಶ್ರೀಪಾದ ಹೆಗಡೆಯವರಿಗೆ ಶ್ರೀ ಕ್ಷೇತ್ರ ಗುಂಡಬಾಳದಲ್ಲಿ ಬಾಲ್ಯದಲ್ಲಿ ನೋಡಿದ ಆಟಗಳು, ಮೇರು ತಾರೆಗಳಾದ ಕೆರೆಮನೆ ಮಹಾಬಲ ಹೆಗಡೆ, ಚಿಟ್ಟಾಣಿ, ಜಲವಳ್ಳಿಯವರ ವೇಷಗಳು ಪ್ರೇರಣೆ ನೀಡಿದುವು. +ಕೆರೆಮನೆ ಮಹಾಬಲ ಹೆಗಡೆಯವರ ಶಿಷ್ಯರಾದ ಇವರಿಗೆ ಸೋದರ ಮಾವ ಸತ್ಯ ಹೆಗಡೆ ಹಡಿನಬಾಳ ಅವರೂ ಗುರುವಾದರು. +ಗುಂಡಬಾಳ, ಅಮೃತೇಶ್ವರಿ,ಹಿರೇಮಹಾಲಿಂಗೇಶ್ವರ ಮೇಳ ಕೋಟ, ಪೆರ್ಡೂರು,ಬಚ್ಚಗಾರು, ಸಾಲಿಗ್ರಾಮ ಕೆರೆಮನೆ ಮಂದಾರ್ತಿಮೇಳಗಳಲ್ಲಿ ಸಾರ್ಥಕ ಕಲಾಕೃಷಿ ಸಾಗಿಸಿದ ಹಡಿನಬಾಳ ಅವರು ಈ ರಂಗಭೂಮಿಯಲ್ಲಿ 31ವರ್ಷ ತಿರುಗಾಟ ನಡೆಸಿದ್ದಾರೆ. +ಪಟ್ಟು ತೋರುವ ಮಾತಿನ ಪಟುತ್ವ,ಪಾತ್ರಕ್ಕೊಪ್ಪುವ ಕಲಾಬಿವ್ಯಕ್ತಿಯ ಸತ್ವ-ತತ್ವ,ನ್ಯಾಯೋಚಿತ ನೃತ್ಯಾಭಿನಯದ ಸಶಕ್ತತೆ, ಗಂಭೀರಕಳೆಯಲ್ಲಿ ಪುರಾಣ ವ್ಯಕ್ತಿ-ಶಕ್ತಿಗಳ ಅನಾವರಣ. +ವೈಶಿಷ್ಟ್ಯತೆ ಹಡಿನಬಾಳ ಅವರಲ್ಲಿ ನಿಚ್ಚಳವಾಗಿ ಗುರುತಿಸಬಹುದಾಗುತ್ತದೆ. + ದಕ್ಷ, ಈಶ್ವರ, ಶ್ರೀರಾಮ, ಆಂಜನೇಯ,ಅರ್ಜುನ, ಭೀಮ, ರಕ್ತಜಂಘ, ಮಾಗಧ, ಕಂಸ,ಶತ್ರುಘ್ನ, ಭೀಷ್ಮ ಪರಶುರಾಮ ಮೊದಲಾದ ಪಾತ್ರಗಳಿಗೆ ತನ್ನದೇ ಛಾಪು ನೀಡಿದ ಶ್ರೀಯುತರು ಅಂಬೆ, ಚಿತ್ರಾಂಗದೆಯಂತಹ ಸ್ತ್ರೀಭೂಮಿಕೆಗಳನ್ನೂ ನಿರ್ವಹಿಸಿದ್ದಾರೆ. +ಕೈಲಾಸ ಶಾಸ್ತ್ರಿಯೂ ಹೆಗಡೆಯವರ ಲಲಿತ ಗಂಭೀರ ಪಾತ್ರಗಳಲ್ಹೊಂದಾಗಿ ಜನಪ್ರಿಯತೆ ಪಡೆದಿದೆ. +ಉಪವೃತ್ತಿಯಾಗಿ ಮೃಣ್ಮಯ ಗಣೇಶಮೂರ್ತಿ ರಚನೆಯಲ್ಲಿ ತೊಡಗಿ-ಕೊಳ್ಳುವ ಹೆಗಡೆಯವರು ವಿಜಯಲಕ್ಷ್ಮೀ ಹೆಗಡೆಯವರನ್ನು ವರಿಸಿ, ಶ್ರೀಶ,ಜಗದೀಶ ಈರ್ವರು ಪುತ್ರರನ್ನೂ ಪಡೆದಿದ್ದಾರೆ. +ಮೇರು ಪ್ರತಿಭೆಯ ಹಡಿನಬಾಳ ಶ್ರೀಪಾದಹೆಗಡೆಯವರನ್ನು ಬೆಂಗಳೂರಿನ ಅಗ್ನಿಸೇವಾಟ್ರಸ್ಟ್‌ನ ಯಕ್ಷಗಾನ ಯೋಗಕ್ಷೇಮ ಸಂಸ್ಥೆಯವತಿಯಿಂದ ಗೌರವ ಪೂರ್ಣವಾಗಿಸ ವತ್ಮಾನಿಸಲಾಗಿದೆ. +ಯಾಜಿ ಯಕ್ಷ ಮಿತ್ರಮಂಡಳಿಯಿಂದ ಸಮ್ಮಾನಿಸಲ್ಪಟ್ಟಿದ್ದಾರೆ. +ಹಲವು ಸಂಘಸಂಸ್ಥೆಗಳು ಇವರನ್ನು ಗೌರವಿಸಿವೆ. +ಪ್ರಸನ್ನ ಚಿತ್ತದ ಮಡಿಮನಸ್ಸಿನ ಸುಂದರಲಕ್ಷಣವಾಗಿ ಮನುಷ್ಯನಿಗೆ ಸಹಜಧರ್ಮವಾದ ನಗುವನ್ನು ಸೊಗಸಾಗಿ ಕಲಾರಸಿಕರ ಮೊಗದಲ್ಲಿ ಅರಳಿಸುವ ಬಗೆಯನ್ನು ಬಲ್ಲ ಯಕ್ಷ ವಿನೋದ ವಿಶಾರದ ಶೇಖರ ಶೆಟ್ಟಿ ಎಳಬೇರು. +ಕುಂದಾಪುರ ತಾಲೂಕಿನ ಎಳಬೇರು ಎಂಬ ಹಳ್ಳಿಯಲ್ಲಿ 28-12-1968ರಲ್ಲಿ ಜನಿಸಿದ ಶೇಖರಶೆಟ್ಟರು ಗಣಪಯ್ಯ ಶೆಟ್ಟಿ-ಲಚ್ಚಮ್ಮ ಶೆಡ್ತಿ ದಂಪತಿಯ ಸುಪುತ್ರ. +ಎಳವೆಯಲ್ಲಿಯೇ ಯಕ್ಷಲೋಕದ ನಗೆಗಾರರಾಗುವ ಕನಸು ಕಂಡ ಶ್ರೀಯುತರು 7ನೇಇಯತ್ತೆಗೆ ಶರಣು ಹೊಡೆದು ಹಿರಿಯ ಹಾಸ್ಯಕಲಾವಿದ ಕಮಲಶಿಲೆ ಮಹಾಬಲ ದೇವಾಡಿಗರ ಶಿಷ್ಯತ್ವ ಸ್ವೀಕರಿಸಿ 12ನೇ ವಯಸ್ಸಿನಲ್ಲೇ ಗೆಜ್ಜೆ ಕಟ್ಟಿ ರಂಗಮಂಚದಲ್ಲಿ ಹೆಜ್ಜೆ ಹಾಕಿದರು. +ಖಚಿತ ಲಯಗಾರಿಕೆ, ಉಚಿತ ಮಾತುಗಾರಿಕೆ,ಹಾಸ್ಯಯುಕ್ತ ನೃತ್ಯಗಾರಿಕೆ, ಗಂಭೀರತೆಯ ರೂಕ್ಷವಿಜಾರ-ವೈವಿಧ್ಯತೆಯನ್ನು ರಂಜನೀಯವಾಗಿ ನಿರೂಪಿಸುವ ರಂಗಪ್ರಾವೀಣ್ಯತೆ, ಪಾತ್ರವರಿತು ನಡೆವ ಕಲಾ ಪ್ರೌಢತೆ ಶೇಖರ ಶೆಟ್ಟರಲ್ಲಿ ಹಾಸುಹೊಕ್ಕಾಗಿದೆಯೆನ್ನಬಹುದು. +ಬಗಾಡಿ ಮೇಳದಲ್ಲಿ 2ವರ್ಷ ಕಲಾವ್ಯವಸಾಯ ನಡೆಸಿದ ಶ್ರೀಯುತರು ಮಾರಣಕಟ್ಟೆ ಮೇಳದಲ್ಲಿ 24ವರ್ಷಗಳಿಂದ ರಂಗಕೃಷಿಯಲ್ಲಿದ್ದಾರೆ. +ಶೆಟ್ಟರ ಒಟ್ಟು ತಿರುಗಾಟದ ಅವಧಿ ಇಪ್ಪತ್ತಾರು ವರ್ಷ. +ಬಾಹುಕ, ಪಾಪಣ್ಣ, ಚಂದಗೋಪ, ವಿಜಯ,ನಂದಿಶೆಟ್ಟಿ, ದಾರುಕ, ಕಂದರ, ಮೊದಲಾದ ಪಾತ್ರಗಳಿಗೆ ಎಳಬೇರು ಅವರು ಯಕ್ಷಗಾನದ ಹಳೆಬೇರಿನಲ್ಲಿ ಹೊಸಚಿಗುರು ಮೂಡಿಸಿದ್ದಾರೆ. +ಶ್ರೀಯುತರ ಬಾಳ ಸಂಗಾತಿ ಸರಸ್ಪತಿ ಶೆಟ್ಟಿ. +ಪ್ರಸನ್ನ ಹಾಗೂ ಪ್ರಗತಿ ಮಕ್ಕಳು. +ಪ್ರತಿಭಾನ್ವಿತ ಹಾಸ್ಯಗಾರ, ಎಳಬೇರು ಶೇಖರ ಶೆಟ್ಟರನ್ನು ನಾಡಿನ ಹಲವಾರು ಸಂಘ-ಸಂಸ್ಥೆಗಳು ಗುರುತಿಸಿ ಗೌರವಿಸಿವೆ. +ಸುಪುಷ್ಟ ಯಕ್ಷ ಕಲಾನುಭವ ದ್ರವ್ಯವನ್ನು ಗಂಭೀರವಾಗಿ ಹೀರಿಕೊಂಡು ಸಂಪನ್ನ ಪ್ರತಿಭೆಯಾಗಿ ರೂಪುಗೊಂಡ ಹಿರಿಯ ಚೆಂಡೆವಾದಕ ಸತ್ಯನಾರಾಯಣ ಭಂಡಾರಿ. +ಉತ್ತರಕನ್ನಡದ ಹೊನ್ನಾವರ ತಾಲೂಕಿನ ಕರ್ಕಿ ಎಂಬಲ್ಲಿ 14-5-1934ರಲ್ಲಿ ಜನಿಸಿದ ಶ್ರೀಯುತರು ಅವರು ಪಾಂಡುರಂಗ ಭಂಡಾರಿ - ಹೊನ್ನಮ್ಮ ದಂಪತಿಯ ಸುಪುತ್ರ. +ಕುಟುಂಬ ನಿರ್ವಹಣೆಯ ಗುರುತರವಾದ ಹೊಣೆಗಾರಿಕೆ ಸತ್ಯನಾರಾಯಣಭಂಡಾರಿ ಅವರಿಗೆ ಎಳವೆಯಲ್ಲೇ ಹೆಗಲೇರಿ ಇವರ ಓದು ಒಂದನೇ ತರಗತಿಗಷ್ಟೇ ಸೀಮಿತವಾಯಿತು. +ಮದ್ದಳೆಗಾರರಾಗಿದ್ದ ತಂದೆ ಪಾಂಡುರಂಗಭಂಡಾರಿಯವರೇ ಇವರಿಗೆ ಗುರುವಾಗಿ ಶಸ್ರ್ತೋಕ್ತ ಚಂಡೆವಾದನ ಕಲೆಯನ್ನು ಬೋಧಿಸಿದರು. +ತಂದೆಯವರ ಪ್ರೋತ್ಸಾಹ ಪ್ರೇರಣೆಯಂತೆ ತನ್ನ 14ರ ಹರೆಯದಲ್ಲಿ ವೃತ್ತಿ ಬದುಕಿಗೆ ಯಕ್ಷಗಾನ ರಂಗವನ್ನು ಆಯ್ದುಕೊಂಡ ಭಂಡಾರಿಯವರು ಚಂಡೆವಾದನದಲ್ಲಿ ಬಹುಬೇಗನೆ ಕಲಾಸಿದ್ಧಿ ಪಡೆದರು. +ಕರ್ಕಿ ಹಾಸ್ಯಗಾರರ ಮೇಳದಲ್ಲಿ 10 ವರ್ಷ,ಕುಮಟಾ ಮೇಳದಲ್ಲಿ 5ವರ್ಷ, ಕೊಳಗಿಬೀಸ್‌ಮೇಳದಲ್ಲಿ 3 ವರ್ಷ, ಅಮೃತೇಶ್ವರಿ ಮೇಳದಲ್ಲಿ 7ವರ್ಷ, ಇಡಗುಂಜಿ ಮೇಳದಲ್ಲಿ 10 ವರ್ಷ,ಗುಂಡಬಾಳ ಮೇಳದಲ್ಲಿ 6 ವರ್ಷ, ಹೀಗೆ 41ವರ್ಷಗಳ ಸುದೀರ್ಥ ವೃತ್ತಿ ತಿರುಗಾಟದಲ್ಲಿ ಭಂಡಾರಿಯವರ ಕಲಾಬದುಕು ಸಾರ್ಥಕ್ಯವನ್ನು ಕಂಡುಕೊಂಡಿದೆ. +ಸಂಪ್ರದಾಯಶೀಲ ರಂಗಪದ್ದತಿಗೆ ಶ್ರೀಯುತರ ಚಂಡೆಗಾರಿಕೆ ಪರಿಪೂರ್ಣ ಸಾಂಗತ್ಯ ನೀಡಿದೆ. +ಸ್ಪಷ್ಟವಾದ ಹೊರಳಿಕೆಯಲ್ಲಿ ಅವರು ಚಂಡೆಯಲ್ಲಿ ನಾದ ಹೊಮ್ಮಿಸುವ ಪರಿ ಅಸಾಧಾರಣ. + ಉತ್ತಮರಂಗತಂತ್ರ,ಸಶಕ್ತ ಪ್ರಸಂಗ ಮಾಹಿತಿಯನ್ನು ಬಲ್ಲಸತ್ಯನಾರಾಯಣ ಭಂಡಾರಿಯವರು ಸಮರ್ಥಮದ್ದಳೆಗಾರರೂ ಆಗಿದ್ದಾರೆ. +ಇವರ ಮಡದಿ ಪಾರ್ವತಿ. +ಗಜಾನನ ಭಂಡಾರಿ,ರಾಮ ಭಂಡಾರಿ, ಹೊನ್ನಮ್ಮ ರಮೇಶ ಭಂಡಾರಿ ಇವರ ನಾಲ್ಕು ಮಂದಿ ಮಕ್ಕಳು. +ಇವರ ಪುತ್ರರಾದ ಗಜಾನನ ಭಂಡಾರಿ, ರಾಮ ಭಂಡಾರಿ, ವೃತ್ತಿಮೇಳದಲ್ಲಿ ಜಂಡೆ-ಮುದ್ದಳೆಗಾರರಾಗಿ ಗುರುತಿಸಿಕೊಂಡಿದ್ದಾರೆ. +ಇವರನ್ನು ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಪ್ರಶಸ್ತಿ ನೀಡಿ ಗೌರವಿಸಿವೆ. +ಉಡುಪಿ ಯಕ್ಷಗಾನ ಕಲಾರಂಗದ ಪ್ರಶಸ್ತಿಯನ್ನು ಪಡೆದಿರುತ್ತಾರೆ ಅಲ್ಲದೇ ಹಲವಾರು ಸಂಘಸಂಸ್ಥೆಗಳು ಇವರನ್ನು ಗೌರವಿಸಿವೆ. +ಸಾಂಪ್ರದಾಯಿಕ ಚಂಡೆ-ಮದ್ದಳೆ ವಾದನಕಲೆಯನ್ನು ಪರಿಪುಷ್ಪವಾಗಿ ಕರಗತ ಮಾಡಿಕೊಂಡ ಹಿರಿಯ ಹಿಮ್ಮೇಳ ಕಲಾವಿದ ವೈ.ಸದಾನಂದ ಪ್ರಭು. +ಕುಂದಾಪುರ ತಾಲೂಕಿನ ಏಳಜಿತ ಎಂಬ ಹಳ್ಳಿಯಲ್ಲಿ ವೈ ರಾಮಚಂದ್ರ ಪ್ರಭು-ಸರಸ್ವತಿ ಬೃಾ ದಂಪತಿಯ ಪುತ್ರರಾಗಿ 9-10-1935ರಲ್ಲಿ ಜನಿಸಿದ ಸದಾನಂದ ಪ್ರಭು ಅವರು ಎಂಟನೇ ಇಯತ್ತೆಯವರೆಗೆ ಶೈಕ್ಷಣಿಕ ಸಂಸ್ಕಾರ ಪಡೆದು, ತನ್ನ ಹದಿನಾರರ ಹರೆಯದಲ್ಲಿಯೇ ಯಕ್ಷಗಾನ ವಲಯವನ್ನು ಪ್ರವೇಶಿಸಿದರು. +ಶ್ರೀಯುತರ ತಂದೆ ಅರ್ಥಧಾರಿಯಾಗಿದ್ದರು. +ದೊಡ್ಮಪ್ಪ ದಾಸಪ್ಪ ಪ್ರಭು ಅವರು ಮದ್ದಳೆವಾದಕರಾಗಿದ್ದರು. +ಹಾಗಾಗಿ ಕಲಾವಂಶ ಮನೆತನದ ಹಿನ್ನಲೆ ಇವರನ್ನು ಗಾಢವಾಗಿ ಬೆಸೆದುಕೊಂಡಿತು. +ಗುರು ವೀರಭದ್ರನಾಯಕ್‌ರಿಂದ ನೃತ್ಯ,ಅಭಿನಯ, ಕೆಮ್ಮಣ್ಣು ಆನಂದ ಅವರಲ್ಲಿ ಚೆಂಡೆವಾದನ,ನಾರ್ಣಪ್ಪ ಉಪ್ಪೂರರಲ್ಲಿ ಭಾಗವತಿಕೆ, ಬೇಳಂಜೆ ತಿಮ್ಮಪ್ಪ ನಾಯ್ಕರಲ್ಲಿ ಮದ್ದಳೆಗಾರಿಕೆ ಶಿಕ್ಷಣ ಪಡೆದ ಸಶಕ್ತ ಕಲಾವಿದ. +ಕೊಲ್ಲೂರು 6, ಮಾರಣಕಟ್ಟೆ 6, ಅಮೃತೇಶ್ವರಿ 3, ಕಮಲಶಿಲೆ 6, ಚಿಕ್ಕ ಹೊನ್ನೆಸರ 3, ಕಳವಾಡಿ 3,ಹೀಗೆ 27 ವರ್ಷಗಳ ಸಾರ್ಥಕ ಕಲಾವ್ಯವಸಾಯ ಪೂರೈಸಿದ ಪ್ರಭುಗಳು ಪ್ರಸ್ತುತ ವೃತ್ತಿಜೀವನದಿಂದ ನಿವೃತ್ತರಾಗಿದ್ದಾರೆ. +ಯಕ್ಷಗಾನ ಕಲಿಕಾಸ್ತಕರಿಗೆ ಗುರುವಾಗಿ ತನ್ನು ಕಲಾವಿದ್ಯೆಯನ್ನು ಧಾರೆಯೆರೆಯುತ್ತಿದ್ದಾರೆ. +ಶ್ರೀಯುತರ ಚಂಡೆ-ಮದ್ದಳೆ ವಾದನ ಪದ್ಧತಿ ಸಾಂಪ್ರದಾಯಿಕ ರಂಗ ಪದ್ಯತಿಯಲ್ಲೇ ನಿರೂಪಣೆಗೊಳ್ಳುವಂತಾದ್ದು. +ನಾದೋತ್ಪಾದಕ ಹೂರಳಿಕೆ, ಸ್ಫುಟವಾದ ಪೆಟ್ಟು ಇವರ ಮದ್ದಳೆವಾದನದಲ್ಲಿ ಗುರುತಿಸಬಹುದಾಗಿದೆ. +ನುಣುಪು ನವಿರಾದ ಗಾನ ಪೋಷಕ ಚಂಡೆವಾದನ ಕಲೆ ಇವರಿಗೆ ಪರಿಪೂರ್ಣವಾಗಿ ಸಿದ್ಧಿಸಿದೆ. +ಬಡಗುತಿಟ್ಟಿನ ಅನೇಕಾನೇಕ ಯಕ್ಷದಿಗ್ಗಜರನ್ನು ರಂಗಸ್ಥಳದಲ್ಲಿ ಕುಣಿಸಿದ ಅನುಭವಿ ಹಿಮ್ಮೇಳದ ಕಲಾವಿದ ಸದಾನಂದ ಪ್ರಭು . +ಅವರ ಪತ್ನಿ ಪದ್ಮಾವತಿ ಬೃಾ. +ಗೋದಾವರಿ, ಆಶಾಲತ, ಮಮತಾ, ಗಣಪತಿ ಎಂಬ ನಾಲ್ಕು ಮಂದಿ ಮಕ್ಕಳು. +ಶ್ರೀಯುತರಿಗೆ ನಾಲ್ಕು ವರುಷಗಳಿಂದ ಸರಕಾರದ ಮಾಸಾಶನ ಸಿಗುತ್ತಿದೆ. +ಡಾ.ಜಿ.ಶಂಕರ್‌ಫ್ಯಾಮಿಲಿ ಟ್ರಸ್ಟ್‌ನ ಗೌರವ ಪುರಸ್ಕಾರವೂ ಲಭಿಸಿದೆ. +ಚುರುಕಿನ ನೃತ್ಯವಿಧಾನ, ಭಾವಪೂರ್ಣ ಪಾತ್ರಚಿತ್ರಣ, ಉತ್ತಮ ಭಾಷಾಪ್ರಜ್ಞೆ, ಆಕರ್ಷಣೀಯ ವೇಷಗಾರಿಕೆ ಸುಪುಷ್ಟವಾಗಿ ರಂಗಮಂಚದಲ್ಲಿ ದರ್ಶಿಸುವ ಪ್ರಬುದ್ಧ ಪುರುಷವೇಷಧಾರಿ ಇಳಲಿ ಸದಾಶಿವ ಹೆಗ್ಡೆ. +ಕುಂದಾಪುರ ತಾಲೂಕಿನ ಆಜ್ರಿ, ಸನಿಹದ ಇಳಲಿ ಎಂಬಲ್ಲಿ 22-8-1967ರಲ್ಲಿ ಜನಿಸಿದ ಸದಾಶಿವ ಹೆಗ್ಡೆ ಅವರು ದಿ.ಶ್ರೀನಿವಾಸ ಹೆಗ್ಡೆ - ಇಂದಿರಾ ಹೆಗ್ಡೆ ದಂಪತಿಯ ಸುಪುತ್ರ. +8ನೇ ತರಗತಿಯವರೆಗೆ ವಿದ್ಯಾಬ್ಯಾಸ ಮಾಡಿದ ಹೆಗ್ಡೆಯವರು 15ನೇವಯಸ್ಸಿನಲ್ಲೇ ರಂಗಲೋಕ ಪವೇಶಿಸಿದರು. +ಯಕ್ಷಗಾನ ಕಲೆಯ ಕುರಿತು ತೀವ್ರ ಆಸಕ್ತಿಯನ್ನು ಎಳವೆಯಲ್ಲೇ ಮೈ-ಗೂಡಿಸಿಕೊಂಡ ಅವರು,ಆರ್ಗೋಡು ಗೋವಿಂದರಾಯ ಶೆಣೈಯವರ ಶಿಷ್ಯನಾಗಿ ಸಶಕ್ತ ಕಲಾಶಿಕ್ಷಣ ಪಡೆದರು. +ಶೆಣೈಯವರ ಪ್ರೋತ್ಸಾಹ, ಪ್ರೇರಣೆಯಂತೆ ವೃತ್ತಿ ಜೀವನಕ್ಕೆ ಹೆಜ್ಜೆಯಿರಿಸಿದರು. +ಪೆರ್ಡೂರು 2, ಸೌಕೂರು 4, ಕಮಲಶಿಲೆ 7,ಮಡಾಮಕ್ಕಿ 2, ಅಮೃತೇಶ್ವರಿ 5, ಕಳವಾಡಿ 1,ಮಂದಾರ್ತಿ 1, ಬಗ್ಡಾಡಿ 1, ಹಾಲಾಡಿ 3, ಸಿಗಂಧೂರು 2, ಹೀಗೆ 28 ವರ್ಷಗಳ ಯಕ್ಷತಿರುಗಾಟ ಇಳಲಿಯವರಿಗೆ ಸಾರ್ಥಕ ಹೆಸರು ತಂದಿತ್ತಿದೆ. +ಮೂರನೇ ವೇಷಧಾರಿಯಾಗಿಯೂ, ಪುರುಷವೇಷಧಾರಿಯಾಗಿಯೂ ಇಳಲಿಯವರು ಪ್ರಸಿದ್ಧರು. +ಇವರ ಬಬ್ರುವಾಹನ, ಅಭಿಮನ್ಯು, ಸುಧನ್ವ, ಶ್ರೀಕೃಷ್ಣ,ಧರ್ಮಾಂಗದ ಪಾತ್ರಗಳ ರಂಗಚಿತ್ರಣ ಕಲಾರಸಿಕರ ಹಾರ್ದಿಕ ಮೆಚ್ಚುಗೆ ಗಳಿಸಿರುತ್ತದೆ. +ಜೋಡಾಟಗಳಲ್ಲಿ ಇವರ ಬಿರುಸಿನ ಮಂಡಿಕುಣಿತ ಬೆರಗು ಹುಟ್ಟಿಸುತ್ತದೆ. +ಪೌರಾಣಿಕತೆಯ ಅಂತಸಶ್ವವನ್ನು ಅರ್ಥಗಾರಿಕೆಯಲ್ಲಿ ಮನಮುಟ್ಟುವಂತೆ ನಿರೂಪಿಸುವ ಕಲಾವಂತಿಕೆ ಇವರಿಗಿದೆ. +ಶ್ರೀಯುತರು ಪ್ರಸ್ತುತ ಮಡಾಮುಕ್ಕಿ ಮೇಳದ ಪುರುಷವೇಷಧಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. +ಹಲವು ಸಂಘ-ಸಂಸ್ಥೆಗಳ ಗೌರವ ಸಂಮಾನಕ್ಕೆ ಭಾಜನರಾಗಿದ್ದಾರೆ. +ಸುಪ್ರಸಿದ್ದ ಹಾರಾಡಿಯ ಯಕ್ಷಕಲಾಕುಟುಂಬದ ಸಮೃದ್ಧ ಪ್ರತಿಭೆಯಾಗಿ ಬೆಳಗುತ್ತಿರುವ ಅನುಭವಿ ಕಲಾವಿದ ಹಾರಾಡಿ ಸರ್ವೋತ್ತಮ ಗಾಣಿಗ. +ಉಡುಪಿ ತಾಲೂಕಿನ ಹಾರಾಡಿ ಎಂಬ ಹಳ್ಳಿಯಲ್ಲಿ 7-7-1955ರಲ್ಲಿ ಜನಿಸಿದ ಸರ್ವೋತ್ತಮಗಾಣಿಗರು ಕೃಷ್ಣ ಗಾಣಿಗ-ಗೋಪಮ್ಮ ದಂಪತಿಯ ಸುಪುತ್ರ. +ಇವರ ವಿದ್ಯಾರ್ಹತೆ ನಾಲ್ಕನೇ ತರಗತಿ. +ಆರ್ಥಿಕ ಅನಾನುಕೂಲತೆಯೇ ಶ್ರೀಯುತರಿಗೆ ಬಣ್ಣದ ಬದುಕಿನ ದಾರಿ ತೋರಿಸಿತು. +ಮಾವ ಹಾರಾಡಿಮಹಾಬಲ ಗಾಣಿಗರ ಕಲಾ ಪ್ರೋತ್ಸಾಹ, ಪ್ರೇರಣೆಯೂ ದೊರಕಿತು. +14ನೇ ವರ್ಷದಲ್ಲಿ ರಂಗಪ್ರವೇಶ ಮಾಡಿದ ಸರ್ವೋತ್ತಮ ಗಾಣಿಗರು ಉಡುಪಿ ಯಕ್ಷಗಾನಕೇಂದ್ರದ ವಿದ್ಯಾರ್ಥಿಯಾಗಿ, ದಶಾವತಾರಿ ಗುರು ವೀರಭದ್ರ ನಾಯ್ಕ, ನೀಲಾವರ ರಾಮಕೃಷ್ಣಯ್ಯ,ಹಿರಿಯಡಕ ಗೋಪಾಲ ರಾಯರ ಶಿಷ್ಯವೃತ್ತಿಯಲ್ಲಿ ಶಾಸ್ತ್ರೋಕ್ತ ರಂಗ ಶಿಕ್ಷಣ ಪಡೆದುಕೊಂಡರು. +ಯಕ್ಷಲೋಕದ ದಂತಕತೆಗಳಾದ ಹಾರಾಡಿ ರಾಮಗಾಣಿಗ ಹಾಗೂ ಕುಷ್ಠ ಗಾಣಿಗರು ಶ್ರೀಯುತರಿಗೆ ಸಂಬಂಧದಲ್ಲಿ ಮಾವಂದಿರು. +ಹಾಗಾಗಿ ಯಕ್ಷಕಲೆ ಎಂಬುದು ಇವರಿಗೆ ಜನ್ಮಜಾತವಾಗಿ ಒಲಿದುಬಂದಿದೆ. +ಬಡಗುತಿಟ್ಟಿನ ಸಂಪ್ರದಾಯ ಚೌಕಟ್ಟಿನಲ್ಲೇ ಪೌರಾಣಿಕ ಪಾತ್ರಗಳನ್ನು ಸಹಜ ಕಲಾ ಸತ್ವಗಳಿಂದ ಕಡೆದಿಡುವ ವಿಶೇಷ ಕಲಾವಂತಿಕೆಯನ್ನು ಹೊಂದಿದ ಗಾಣಿಗರು ಮನೆತನದ ಹಾರಾಡಿ ತಿಟ್ಟನ್ನು, ಗುರುತನದ ಮಟಪಾಡಿತಿಟ್ಟನ್ನೂ ಸುಪುಷ್ಟವಾಗಿ ಕಲಾವ್ಯಕ್ತಿತ್ವದಲ್ಲಿ ನಿರೂಪಿಸುವ ಅಪರೂಪದ ಕಲಾವಿದರು. +ಆಕರ್ಷಕ ವೇಷಾಲಂಕಾರ, ಪರಿಶುದ್ಧ ಭಾಷಾಪ್ರೌಢಿಮೆ, ಗರಿಷ್ಠ ರಂಗಾ-ನುಭವ, ಸಶಕ್ತ ಪುರಾಣಪ್ರಜ್ಞೆ,ಖಚಿತ ಲಯಗಾರಿಕೆ, ಪಾರಂಪರಿಕ ನೃತ್ಯಾಭಿನಯ ಕೌಶಲದಿಂದ, ಕಂಗೊಳಿಸುವ ಬಡಗಿನ ಶ್ರೇಷ್ಠಪುರುಷವೇಷಧಾರಿಯಾದ ಶ್ರೀಯುತರು ಅಮೃತೇಶ್ವರಿ1, ಮಂದಾರ್ತಿ 3, ಮಾರಣಕಟ್ಟೆ 5, ಮಂದಾರ್ತಿ8, ಹೀಗೆ ನಾಲ್ಕು ದಶಕಗಳ ರಂಗ ಕೃಷಿ ಮಾಡಿದ್ದಾರೆ. +ಶ್ರೀಯುತರ ಸುಧನ್ವ, ಪುಷ್ಕಳ, ಬಲರಾಮ, ಶ್ರೀಕೃಷ್ಣ,ಅರ್ಜುನ, ಕಂಸ, ಕೌರವ, ಮೊದಲಾದ ಭೂಮಿಕೆಗಳು ಜನಪ್ರಿಯ. +ವೃತ್ತಿರಂಗದಲ್ಲಿ ಶ್ರೀಯುತರ ನೂರಾರು ಶಿಷ್ಯರು ಕಲಾಸೇವೆ ಗೈಯುತ್ತಿದ್ದಾರೆ. +ಮಡದಿ ಲಲಿತಾ. +ಪಯಸ್ವಿನಿ, ತೇಜಸ್ವಿನಿ, ಅಕ್ಷಯ, ಅಕ್ಷತಾ, ಅಜಯ ಮಕ್ಕಳು. +ಹಲವಾರು ಸಂಘಸಂಸ್ಥೆಗಳು ಇವರನ್ನು ಗೌರವಿಸಿವೆ. +ಲಲಿತ-ಗಂಭೀರ ಹಾಸ್ಯಗಾರಿಕೆಯಲ್ಲಿ ಕಲಾರಸಿಕರ ಮನಮುದಗೊಳಿಸುವ ಶಿಷ್ಟ ಕಲಾವಿದ ಶ್ರೀ ಸಂಜೀವ ಕೊಠಾರಿ. +1958ರ ಜನವರಿ 21ರಂದು ಕುಂದಾಪುರ ತಾಲೂಕಿನ ಮೂಡುಬಗೆ ಅಂಪಾರು ಎಂಬಲ್ಲಿ ಬಡಿಯಕೊಠಾರಿ-ಗಂಗಾ ದಂಪತಿಯ ಸುಪುತ್ರರಾಗಿ ಜನಿಸಿದ ಸಂಜೀವ ಕೊಠಾರಿಯವರು ಆರಕ್ಕೆ ಓದು ಮುಗಿಸಿ 15ನೇ ವಯಸ್ಸಿನಲ್ಲೇ ಬಣ್ಣದ ಬದುಕು ಕಂಡವರು. +ಹಾಸ್ಯ ದಿಗ್ಗಜ ಕುಂಜಾಲು ರಾಮಕೃಷ್ಣ ಅವರ ಶಿಷ್ಯರಾದ ಸಂಜೀವ ಕೊಠಾರಿಯವರು ಸಮರ್ಪಕ ರಂಗ ತಾಂತ್ರಿಕತೆಯಲ್ಲಿ ವೈನೋದಿಕತೆಯನ್ನು ಸೃಷ್ಟಿಸುವ ಕಲಾವಿದರು. +ಪ್ರೌಢ ಅಭಿನಯವನ್ನು ಬೆಳಗುವ ಸಂಪನ್ನಶೀಲತೆಯನ್ನು ಮೈಗೂಡಿಸಿಕೊಂಡವರು. +ನೈಚ್ಯವಿಲ್ಲದ ಸುಸಂಸ್ಕೃತ ರಂಗಧರ್ಮದೊಂದಿಗೆ ಹಾಸ್ಯಗಾರಿಕೆಯಲ್ಲಿ ವೈಚಾರಿಕತೆ ಪಡಿಮೂಡಿಸುವ ಸಂಜೀವ ಕೊಠಾರಿಯವರ ಶ್ರೀ ಕೃಷ್ಣ ಲೀಲೆಯ ವಿಜಯ, ದಮಯಂತಿಯ ಬಾಹುಕ, ಶ್ರೀರಾಮಪಟ್ಟಾಭಿಷೇಕದ ಮಂಥರೆ, ಕಾಶಿಮಾಣಿ, ಶಕುನಿ,ಸುದೇವ, ಕಂದರ ಮೊದಲಾದ ಭೂಮಿಕೆಗಳು ಕಲಾಭಿಮಾನಿಗಳ ಹೃನ್ಮನಸೂರೆಗೊಂಡು ನಗೆಯ ರಸವ್ಯಂಜನವನ್ನು ಪುಷ್ಕಳವಾಗಿ ಉಣಿಸಿವೆ. +ಕಮಲಶಿಲೆ, ಹಾಲಾಡಿ, ಹಿರಿಯಡಕ,ಪೆರ್ಡೂರು ಶಿರಸಿ, ಸೌಕೂರು, ಮಾರಣಕಟ್ಟೆ ,ಮಂದಾರ್ತಿ ಮೇಳಗಳಲ್ಲಿ ಸಾರ್ಥಕ 36ವರ್ಷಗಳ ಕಾಲ ಸಮರ್ಥ ಹಾಸ್ಯ ಕಲಾವಿದರಾಗಿ ಮೆರೆದ ಶ್ರೀಯುತರು ಪ್ರಸ್ತುತ ಮಂದಾರ್ತಿ ಮೇಳದ ಪ್ರಧಾನ ಹಾಸ್ಯಗಾರರು. +ಧರ್ಮಪತ್ನಿ ಜಲಜಾ. +ಪ್ರತಿಮಾ, ಪ್ರಮೀಳಾ,ಮಾಧವಿ, ಪ್ರಸನ್ನ ಮಕ್ಕಳು. +ಶ್ರೀಯುತರು ಸಮರ್ಥಹಾಸ್ಯ ಕಲಾವಿದರೂ ಮಾತ್ರವಲ್ಲ. +ಸೃಜನಶೀಲ ಪೌರಾಣಿಕ ಪ್ರಸಂಗ ಸಂಯೋಜಕರೂ ಹೌದು. +ಕಲಾರಸಿಕ ಮನಮೋಹಕ ವೇಷಗಾರಿಕೆ,ಶ್ರುತಿನಿಷ್ಠ ಸುಮಧುರ ಅರ್ಥಗಾರಿಕೆ, ಒನಪು ತುಂಬಿದ ಸುಲಲಿತ ನೃತ್ಯಗಾರಿಕೆ. +ಯಕ್ಷಗಾನ ಸ್ರ್ತೀ ಯಾಗಿ ದರ್ಶಿಸುವ ಪ್ರತಿಭಾಶಾಲಿ ಕಲಾವಿದ ಹೆನ್ನಾಬೈಲು ಸಂಜೀವ ಶೆಟ್ಟಿ ಕುಂದಾಪುರ ತಾಲೂಕಿನ ಹೆನ್ನಾಬೈಲು ಎಂಬ ಹಳ್ಳಿಯಲ್ಲಿ 20-6-1972ರಲ್ಲಿ ಜನಿಸಿದ ಸಂಜೀವ ಶೆಟ್ಟರು ಅಂತಯ್ಯ ಶೆಟ್ಟಿ-ಪಾರ್ವತಿ ಶೆಟ್ಟಿ ದಂಪತಿಯ ಸುಪುತ್ರ. +ಐದನೇ ಇಯತ್ತೆಯ ಬಳಿಕ,ಅಂದರೆ ತನ್ನ 11ರ ಹರೆಯದಲ್ಲೇ ಬಣ್ಣದ ಬಾಳುವೆಯನ್ನು ಸ್ವೀಕರಿಸಿದ ಶೆಟ್ಟರು, ಹಿರಿಯ ಸ್ತ್ರೀವೇಷಧಾರಿ ಅರಾಟೆ ಮಂಜುನಾಥ ಅವರ ಶಿಷ್ಯನಾಗಿ ನೃತ್ಯ, ಅಭಿನಯ, ಅರ್ಥಗಾರಿಕೆ,ರಂಗನಡೆಯನ್ನು ಅಭ್ಯಸಿದರು. +ಆರ್ಗೋಡು ಮೋಹನದಾಸ ಶೆಣೈ ಅವರ ಗುರುತನವನ್ನೂ ಶ್ರೀಯುತರು ಪಡೆದು ಸುಯೋಗ್ಯ ಕಲಾವಿದನಾಗಿ ಗುರುತಿಸಿಕೊಂಡರು. +ಹಾಲಾಡಿ 1, ಕಮಲಶಿಲೆ 20, ಮಂದಾರ್ತಿ2, ಸೌಕೂರು 2, ಹೀಗೆ ಯಕ್ಷಗಾನ ಯಾನದಲ್ಲಿ ಸಾರ್ಥಕ ಬೆಳ್ಳಿ ಹಬ್ಬವನ್ನು ಪೂರೈಸಿ, ಕಮಲಶಿಲೆ ಮೇಳದ ಸ್ತ್ರೀವೇಷಧಾರಿಯಾಗಿ ದುಡಿಯುತ್ತಿದ್ದಾರೆ. +ಪೌರಾಣಿಕ ಸ್ತ್ರೀಭೂಮಿಕೆಗಳ ಲಲಿತ-ಗಂಭೀರ ನಡೆಯ ಭಾವಾಭಿವ್ಯಕ್ತಿಯಲ್ಲಿ ಗರಿಷ್ಠಮಟ್ಟದ ಪ್ರತಿಭೆಯನ್ನು ಮೆರೆಯುವ ಸಂಜೀವಶೆಟ್ಟರ ದ್ರೌಪದಿ, ಸುಭದ್ರೆ,ಚಿತ್ರಾಂಗದೆ, ಶಶಿಪ್ರಭೆ, ಮೀನಾಕ್ಷಿ, ಮೋಹಿನಿ, ಭ್ರಮರಕುಂತಳೆ, ಮೊದಲಾದ ಪಾತ್ರಗಳು ಕಲಾಪ್ರೇಕ್ಷಕರ ಮನಸೂರೆಗೊಂಡಿವೆ. +ಇವರ ಮಡದಿ ಕುಸುಮಾ ಶೆಟ್ಟಿ. +ಪ್ರಶಾಂತ,ಪ್ರದೀಪ, ಪ್ರತೀಕ ಮಕ್ಕಳು. +ಶ್ರೀಯುತರು ರಾಜ್ಯ ಹೊರರಾಜ್ಯಗಳ ಅನೇಕ ಸಂಘ-ಸಂಸ್ಥೆಗಳಿಂದ ಸಂಮಾನಿತರಾಗಿದ್ದಾರೆ. +ಯಕ್ಷಗಾನ ರಂಗಧರ್ಮಕ್ಕೆ ಚ್ಯುತಿ ಬಾರದಂತೆ ತನ್ನದೇ ವೈಶಿಷ್ಟ್ಯ ಪೂರ್ಣ ರಂಗನಡೆಯಲ್ಲಿ ಪೌರಾಣಿಕ ಪಾತ್ರಗಳಿಗೆ ಜೀವ ತುಂಬುವ ಸಮರ್ಥ ಕಲಾವಿದ ಸಿ.ಸಾಧುಕುಮಾರ್‌. +ಉಡುಪಿ ಜಿಲ್ಲೆಯ ಬಾರ್ಕೂರು-ಹೇರಾಡಿಯ ನಾರಾಯಣ ಕೊಠಾರಿ-ರಾಧಾಕೊಠಾರಿ ದಂಪತಿಯ ಪುತ್ರರಾಗಿ 1960ರಲ್ಲಿ ಹೇರಾಡಿಯಲ್ಲಿ ಜನಿಸಿದ ಸಾಧುಕುಮಾರ್‌ 5ನೇ ತರಗತಿಯವರೆಗೆ ಅಕ್ಷರಾಭ್ಯಾಸಮಾಡಿ, ತನ್ನ 15ನೇ ವಯಸ್ಸಿನಲ್ಲೇ ಮುಖಕ್ಕೆ ಬಣ್ಣಹಚ್ಚಿದವರು. +ಬಿದ್ರಗೋಡು ವಾಸುದೇವ ಆಚಾರ್ಯರ ಚಿಕ್ಕ ಮೇಳ, ಹೂವಿನಕೋಲು ತಿರುಗಾಟವೇ ಇವರಿಗೆ ಈ ರಂಗಭೂಮಿಂದು ಹೆಜ್ಜೆ ಗೆಜ್ಜೆಗೆ ಕಾರಣ,ಪ್ರೇರಣೆಯಾಯಿತು. +ಪ್ರಸಂಗಕರ್ತರೂ, ಭಾಗವತರೂ ಆಗಿದ್ದ ವಾಸುದೇವ ಆಚಾರ್ಕರ ಸಶಕ್ತ ಗುರುತನ ಇವರನ್ನು ಸುಯೋಗ್ಯ ಕಲಾವಿದನನ್ನಾಗಿ ರೂಪಿಸಿತು. +ಸುದೃಢ ಶರೀರ, ಗಂಭೀರ ಶಾರೀರ,ರಸಪರಿಷ್ಣುತ ವಚೋಚಮತ್ಕಾರ, ಪಾತ್ರೋಚಿತ ರಂಗವ್ಯವಹಾರ, ಸುಪುಷ್ಟ ನೃತ್ಯ ಅಭಿನಯ ಸಾಕಾರ ಶ್ರೀಯುತರಲ್ಲಿ ನಾವು ಗುರುತಿಸಬಹುದಾಗಿದೆ. +ಯಾವುದೇ ಪೌರಾಣಿಕ ಪ್ರಸಂಗಗಳ ಖಳಭೂಮಿಕೆಗಳಿಗೆ ಸಾಧು ಕುಮಾರರು ನೀಡುವ ಕಲಾವರ್ಚಸ್ಸು ಅವರದೇ ಶೈಲೀಕೃತ ಸೊಗಡಿನದ್ದು. +ವೈನೋದಿಕವಾದ ಪಾತ್ರ ಚಿತ್ರಣ ಅವರ ವಿಶೇಷ ಕಲಾಚಾತುರ್ಯಕ್ಕೆ ಸಾಕ್ಷಿಯಾಗಿದೆ. +ಕೌಂಡ್ಲೀಕ್ಕ ಕಮಲಭೂಪ, ಹನುಮಂತ,ಘಟೋತ್ಕಚ, ಬಲರಾಮ, ಕೌರವ, ರಕ್ತಜಂಘಾಸುರ,ಸುಂದರರಾವಣ, ಸಾಲ್ವ, ಭೀಮ ಶಲ್ಯ, ಅರ್ಜುನ,ಮೊದಲಾದ ಭೂಮಿಕೆಗಳಲ್ಲಿ ಸಾಧುಕುಮಾರರ ವಿಶಿಷ್ಟ ಛಾಪು ಪಡಿಮೂಡುತ್ತದೆ. +ಈಗಾಗಲೇ ಗೋಳಿಗರಡಿ,ಸೌಕೂರು, ಕಳವಾಡಿ, ಕಮಲಶಿಲೆ, ಶಿವರಾಜಪುರ-ತೀರ್ಥಹಳ್ಳಿ, ಹಾಲಾಡಿ, ಅಮೃತೇಶ್ವರಿ ಸಾಲಿಗ್ರಾಮ ಮೇಳಗಳಲ್ಲಿ ಸೇವೆ ಸಲ್ಲಿಸಿದ ಇವರು 19ವರ್ಷಗಳಿಂದ ಮಂದಾರ್ತಿ ಮೇಳದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. +ಒಟ್ಟು ರಂಗಕೃಷಿ 35 ವರ್ಷ. +ಬಿಡುವಿನ ವೇಳೆಯಲ್ಲಿ ಶಾಲಾ ಮಕ್ಕಳಿಗೆ ತನ್ನ ಕಲಾವಿದ್ಯೆಯನ್ನು ನಿಸ್ವಾರ್ಥವಾಗಿ ಧಾರೆಯೆರೆಯುವ ಸಾಧುಕುಮಾರ್‌ ತನ್ನ ಜೀವನರಂಗದಲ್ಲಿ ಸುವರ್ಣ ವರ್ಷಕ್ಕೆ ನಿಕಟವಾಗಿದ್ದಾರೆ. +ಧರ್ಮಪತ್ನಿ ಶಕುಂತಲಾ. +ಮಿಥುನ್‌, ಮಿಲಾಕ್ಷ,ಮಾಧುರಿ ಮೂರು ಮಂದಿ ಮಕ್ಕಳು. +ಶ್ರೀಯುತರು ಹಲವಾರು ಸಂಘಸಂಸ್ಥೆಗಳ ಗೌರವ ಸಂಮಾನ ಪಡೆದಿದ್ದಾರೆ. +ಪುರಾಣಾಂತರಂಗದ ಸಾರ-ಸತ್ವವನ್ನು ಎತ್ತಿಹಿಡಿಯುವ ವೈಚಾರಿಕ ಅರ್ಥಗಾರಿಕೆ, ಹಸ್ತ,ಗ್ರೀವಾರೇಚಕದ ಸೊಗಸಿನಲ್ಲಿ ನಿರೂಪಿತವಾಗುವ ನೃತ್ಯಗಾರಿಕೆ, ಪ್ರಸಂಗ ಪದ್ಯಗಳ ಸಮಗ್ರ ಭಾವವನ್ನರಿತ ಜೀವಂತಿಕೆಯು ಅಭಿನಯ ಕಲಾವಂತಿಕೆ,ಹಿಮ್ಮೇಳೈಸುವ ಖಚಿತ ಲಯಗಾರಿಕೆ, ಧನಾತ್ಮಕವಾಗಿ ಯಕ್ಷರಂಗದಲ್ಲಿ ತೋರಿ ಗೊಡುವ ಅನುಭವಿ ಯಕ್ಷನಟ ಸೀತಾರಾಮ ಹೆಗಡೆ. +ಉತ್ತರಕನ್ನಡದ ಶಿರಸಿ ತಾಲೂಕಿನ ಶಿರಗುಣಿ ಎಂಬಲ್ಲಿ 2-11-1967ರಲ್ಲಿ ಜನಿಸಿದ ಸೀತಾರಾಮಹೆಗಡೆಯವರು, ಶ್ರೀಧರ ನಾರಾಯಣ ಹೆಗಡೆ ಹಾಗೂ ಮಹಾಂಕಾಳೀ ಹೆಗಡೆ ದಂಪತಿಯ ಸುಪುತ್ರ. +6ನೇ ತರಗತಿವರೆಗೆ ಓದಿದ ಶ್ರೀಯುತರು ಕೆರೆಮನೆ ಶಂಭುಹೆಗಡೆಯವರ ಗುರುತನ ಹಾಗೂ ಮಾರ್ಗ-ದರ್ಶನವನ್ನು ಪಡೆದು 22ನೇ ವಯಸ್ಸಿನಲ್ಲೇ ಯಕ್ಷಗಾನರಂಗ ಪ್ರವೇಶಿಸಿದರು. +ಸೀತಾರಾಮ ಹೆಗಡೆಯವರ ದೊಡ್ಡಪ್ಪ ವೇಷಧಾರಿ ಹಾಗೂ ಭಾಗವತರು. +ಕೆರೆಮನೆ ಶ್ರೀ ಮಾಯಾ ಕಲಾಕೇ೦ದ್ರದಲ್ಲಿ ಹೆರಂಜಾಲು ವೆಂಕಟರಮಗಾಣಿಗರಲ್ಲಿ ಸುಸಂಬದ್ಧ ನೃತ್ಯ ಶಿಕ್ಷಣ ಪಡೆದ ಶ್ರೀಯುತರು ಅಲ್ಲಿ ಹಿರಿಯ ಚಂಡೆವಾದಕ ಕೃಷ್ಣಯಾಜಿ (ಕುಟ್ಟುಯಾಜಿ) ಇಡಗುಂಜಿ ಹಾಗೂ ಗುರುರಾಜ ಮಾರ್ಪಳ್ಳಿ ಅವರಿಂದ ಸಮರ್ಪಕರಂಗ ಮಾಹಿತಿ ಪಡೆದರು. +ಕಳವಾಡಿ, ಪೆರ್ಡೂರು, ಗುಂಡಬಾಳ,ಗೋಳಿಗರಡಿ, ಅಮೃತೇಶ್ವರಿ ಮೇಳಗಳಲ್ಲಿ ಶ್ರೀಯುತರ ವಿಂಶತಿ ಕಲಾವ್ಯವಸಾಯ ಸಾರ್ಥಕ ಕೀರ್ತಿ ತಂದಿತ್ತಿದೆ. +ವೈವಿಧ್ಯಮಯ ನಡೆ, ಭಾವಗಳ ಗಂಡುಭೂಮಿಕೆಗಳಿಗೆ ಇವರು ಜೀವ ತುಂಬ ಬಲ್ಲರು. +ರಾಜವೇಷ,ಮುಂಡಾಸುವೇಷ, ಪುರುಷವೇಷ, ಪುಂಡುವೇಷ,ಹೀಗೆ ಯಾವುದೇ ಪಾತ್ರಗಳಲ್ಲೂ ಅವರು ತನ್ನತನವನ್ನು ತೋರಬಲ್ಲರು. +ಶತ್ರುಘ್ನ, ರಾವಣ, ವಿಷ್ಣು, ಶಿವ,ಕೌಂಡ್ಲೀಕ, ಕಮಲಭೂಪ, ವಿಕ್ರಮಾದಿತ್ಯ ಮೊದಲಾದ ಪಾತ್ರಗಳ ನಿರ್ವಹಣೆ ಅವರಿಗೆ ತೃಪ್ತಿ ನೀಡಿದೆ. +ಪ್ರೇಕ್ಷಕರಮನ ಮೆಚ್ಚಿಸಿದೆ. +ಇವರು ಹಲವು ಸಂಘ-ಸಂಸ್ಥೆಗಳ ಗೌರವ ಸಂಮಾನ ಪಡೆದಿದ್ದಾರೆ. +ಪೌರಾಣಿಕತೆಯ ಗರ್ಭದಲ್ಲಿ ಅಡಗಿರುವ ಸತ್ವಾಂಶಗಳನ್ನು ಯಕ್ಷಗಾನ ಪಾತ್ರಗಳ ಮೂಲಕ ಗೊತ್ತುಗೊಳಿಸುವ ಸಮರ್ಥ ಸ್ತ್ರೀವೇಷಧಾರಿ ಬೇಳಂಜೆ ಸುಂದರ ನಾಯ್ಕ. +ಕಾಮಿ ನಾಯ್ಕ-ಸುಶೀಲಾ ಬಾಯಿ ದಂಪತಿಯ ಸುಪುತ್ರರಾದ ಸುಂದರ ನಾಯ್ಕರು 1963ರಲ್ಲಿ ಬೇಳಂಜೆ ಎಂಬಲ್ಲಿ ಜನಿಸಿದರು. +5ನೇ ತರಗತಿಯ ವರೆಗಿನ ಶೈಕ್ಷಣಿಕ ಹಂತ ಮುಗಿಸಿದ ಇವರು ತಂದೆಯವರ ಪ್ರೋತ್ಸಾಹ, ಶಂಕರನಾರಾಯಣ ಸಾಮಗರ ಪ್ರೇರಣೆಯಂತೆ ತನ್ನ 13ರ ಹರಯದಲ್ಲೇ ಯಕ್ಷಗಾನ ವೃತ್ತಿ ಜೀವನ ಆರಂಭಿಸಿದರು. +ಇವರ ತಂದೆ ಕಾವಿ ನಾಯ್ಕರು ಮದ್ದಳೆವಾದಕರು. +ದೊಡ್ಡಪ್ಪ ಬೇಳಂಜೆ ತಿಮ್ಮಪ್ಪನಾಯ್ಕರು ಯಕ್ಷಲೋಕದ ಚಿರಪರಿಚಿತ ಮದ್ದಳೆಗಾರರು. +ಸಂಬಂಧದಲ್ಲಿ ಬಾವನಾಗಿರುವ ಪೇತ್ರಿ ಮಾಧುನಾಯ್ಕರು ಉತ್ತಮ ವೇಷಧಾರಿ. +ಹೀಗಾಗಿ ಮನೆತನದ ಕಲಾವಂತಿಕೆ ಶ್ರೀಯುತರ ಕಲಾ ಬದುಕಿಗೆ ನಿಚ್ಚಳ ಸ್ಫೂರ್ತಿ ನೀಡಿತು. +ಇವರಿಗೆ ತಂದೆಯವರು ಹಾಗೂ ಬುಕ್ಕಿಗುಡ್ಡೆ ಮಹಾಬಲ ನಾಯ್ಕರು ಗುರುಗಳು. +ಮಂದಾರ್ತಿ18, ಪೆರ್ಡೂರು 9, ಸಾಲಿಗ್ರಾಮ 3, ಹಾಲಾಡಿ 2,ಕಮಲಶಿಲೆ 1, ಹಿರಿಯಡಕ 2, ಹೀಗೆ 35 ವರ್ಷಗಳ ಕಲಾವ್ಯವಸಾಯವನ್ನು ಯಶಸ್ವಿಯಾಗಿ ಪೂರೈಸಿದ್ದಾರೆ. +ಗಂಭೀರ ಭಾವಾಭಿವ್ಯಕ್ತಿಯ ಸ್ತ್ರೀಭೂಮಿಕೆಗಳಲ್ಲಿ ಶ್ರೀಯುತರ ಪ್ರತಿಭೆ ಗಮನೀಯ. +ಶ್ರೀಯುತರ ಆಂಗಿಕವಿನ್ಯಾಸ, ಸ್ವರ ನಿರೂಪಣೆ, ರಂಗನಡೆ,ಸ್ತೀವೇಷದ ಬಿರುಸು, ಸೆಡಕುಗಳಿಗೆ ಸಮುಚಿತವಾಗಿ ಪಾತ್ರವನ್ನು ಗೆಲ್ಲಿಸುತ್ತವೆ. +ಕಸೆ ಸ್ರ್ತೀ ವೇಷಗಳ ವೀರತನದ ಕೆಚ್ಚು ಇವರಲ್ಲಿ ವಿಶೇಷವಾಗಿ ಗುರುತಿಸಲ್ಪಡುತ್ತದೆ. +ಮೀನಾಕ್ಷಿ, ಪ್ರಮೀಳೆ, ದ್ರೌಪದಿ, ಶಶಿಪ್ರಭೆಯಂತಹ ಇವರ ಪಾತ್ರಗಳು ಜನಪ್ರಿಯ. +ಅಂತೆಯೇ ದಮಯಂತಿ, ಅಂಬೆ, ಶ್ರೀದೇವಿ, ದೇವಯಾನಿ,ಕೈಕೇಯಿ ಪಾತ್ರಗಳೂ ಪ್ರಸಿದ್ಧ. +ಶ್ರೀಯುತರು ಅನೇಕ ಪುರುಷವೇಷಗಳನ್ನೂ ನಿರ್ವಹಿಸಿದ್ದಾರೆ. +ಪತ್ನಿ ಆಶಾ. +ಸತೀಶ್‌, ಶ್ಯಾಮಲಾ, ಅನಿಲ ಮಕ್ಕಳು. +ಹಲವಾರು ಸಂಘಸಂಸ್ಥೆಗಳು ಇವರನ್ನು ಸಂಮಾನಿಸಿವೆ. +ಸಾಂಪ್ರದಾಯಿಕ ಯಕ್ಷಗಾಯನದ ಗಟ್ಟಿಹಿಡಿತದೊಂದಿಗೆ ಭಾಗವತಿಕೆಯಲ್ಲಿ ಪ್ರಯೋಗಶೀಲತೆಯನ್ನು ತಂದ ಹಿರಿಯ ಭಾಗವತ ಸುಬ್ರಹ್ಮಣ್ಯ ಧಾರೇಶ್ವರ. +ಪವಿತ್ರಕ್ಷೇತ್ರ ಗೋಕರ್ಣ ಧಾರೇಶ್ವರರ ಹುಟ್ಟೂರು. +ಇವರ ತಂದೆ ಲಕ್ಷಿ ನಾರಾಯಣ ಭಟ್‌, ತಾಯಿಲಕ್ಷ್ಮೀ. +ಯಕ್ಷಗಾನದ ಯುಗಪ್ರವರ್ತಕ ಜಿ.ಆರ್‌.ಕಾಳಿಂಗ ನಾವಡರ ಪದ್ಯಗಾರಿಕೆ ಹಾಗೂ ಅವರ ಗಾಯನದಲ್ಲಿ ಇವರು ಕಂಡ ಹಿಂದೂಸ್ಥಾನೀ ಸಂಗೀತದ ಬೀಜಗುಣವೆನ್ನುವುದು ಇವರನ್ನು ಗಾನಲೋಕಕ್ಕೆ ಎಳೆದು ತಂದಿತು. + ಪಿ.ಯು.ಸಿ. ವ್ಯಾಸಂಗದ ಬಳಿಕ, ತನ್ನ 21ನೇ ವಯಸ್ಸಿನಲ್ಲೇ ಯಕ್ಷಗಾನ ರಂಗವನ್ನು ಪ್ರವೇಶಿಸಿದ ಸುಬ್ರಹ್ಮಣ್ಮ ಧಾರೇಶ್ವರರು ನಾರ್ಣಪ್ಪ ಉಪೂರರ ಶಿಷ್ಯನಾಗಿ ಗಾನದೀಕ್ಷೆಯನ್ನು ಪಡೆದರು. +ಯುವಕರಾಗಿದ್ದಾಗಲೇ ಸುಗಮ ಸಂಗೀತ ಗಾಯನದ ಪರಿಣತಿ ಹೊಂದಿದ್ದ ಧಾರೇಶ್ವರರಿಗೆ ತಂದೆ ಹವ್ಯಾಸೀ ಯಕ್ಷಗಾನ ವೇಷಧಾರಿಯಾಗಿದ್ದುದರಿಂದ ಯಕ್ಷಗಾನ ರಂಗದ ನಿಕಟ ಬಾಂಧವ್ಯ ಸಾಧ್ಯವಾಯಿತು. +ಸುಗಮ ಸಂಗೀತ ಶೈಲಿ, ಶಾಸ್ತ್ರೀಯ ಶೈಲಿಯನ್ನುಯಕ್ಷಗಾನ ಭಾಗವತಿಕೆಯಲ್ಲಿ ನಿರೂಪಿಸುವ ಧಾರೇಶ್ವರರು ನವರಸಗಳನ್ನು ತನ್ನ ಸುಖ ಶಾರೀರದ ಮೂಲಕ ಸುಶ್ರಾವ್ಯವಾಗಿ ಭಾವಪೂರ್ಣವಾಗಿ ಹಾಡಿತೋರಿಸಬಲ್ಲರು. +ರಂಗದ ಮೇಲೆ ಪ್ರಬಲ ಹಿಡಿತವನ್ನು ಸಾಧಿಸಿದ ಧಾರೇಶ್ವರರ ಪೌರಾಣಿಕ ರಂಗಪ್ರಜ್ಞೆ ಅಪಾರ. +ಕತೆಯ ಶಾಖೋಪಶಾಖೆಗಳಲ್ಲಿ ವಿಹರಿಸಬಲ್ಲ ಕವಿತಾಶಕ್ತಿಯೂ ಹಾಗೆಯೇ ಖಚಿತ ಲಯಗಾರಿಕೆ, ತಾಳಪದ್ಧತಿ, ಸ್ಫುಟವಾದ ಸಾಹಿತ್ಯ ನಿರೂಪಣೆ, ಮಂಜುಳ ಸ್ವರಾಲಾಪನೆಯಿಂದ ಭಾಗವತಿಕೆಯಲ್ಲಿ ವಿಶೇಷ ಸಂಚಲನ ಮೂಡಿಸಿ,ಶಾಸ್ತೋಕ್ತ ಸಂಗೀತದ ಕವಚ ತೊಡಿಸಿ ಅಪಾರ ಪ್ರೇಕ್ಷಕ ವಲಯವನ್ನು ಸೃಷ್ಟಿಸಿಕೊಂಡ ಪ್ರಬುದ್ಧ ಭಾಗವತರಿವರು. +ಪುರಾಣ ಪ್ರಸಂಗಗಳ ಪದ್ಯಗಳ ತಿಟ್ಟು, ಮಟ್ಟುಗಳ ಗುಟ್ಟನ್ನು ಸಂಪೂರ್ಣ ಬಲ್ಲ ಶ್ರೀಯುತರು ಭಾಗವತಿಕೆಯ ಪಾರಂಪರಿಕತೆಗೆ ಹೊಸತನದ ಸ್ಪರ್ಶನೀಡಿ ಕ್ರಾಂತಿ ಮಾಡಿದವರು. +ನಾವಡರ ನಿಧನ ಯಕ್ಷಗಾನ ಕ್ಷೇತ್ರದಲ್ಲಿ ಒಂದು ನಿರ್ವಾತವನ್ನೇ ಸೃಷ್ಟಿಸಿತ್ತು. +ಧಾರೇಶ್ವರರ ಪ್ರಯೋಗಶೀಲತೆ ಆ ಕೊರತೆ ನೀಗಿಸಿತು. +ಧಾರೇಶ್ವರರು ಅಮೃತೇಶ್ವರಿ,ಹಿರೇಮಹಾಲಿಂಗೇಶ್ವರ ಮೇಳ ಕೋಟ, ಶಿರಸಿ ಪಂಚಲಿಂಗ ಮೇಳಗಳಲ್ಲಿ ಸೇವೆ ಸಲ್ಲಿಸಿದ್ದಾರೆ. +ಸುಮಾರು 24 ವರ್ಷಗಳಿಂದ ಪೆರ್ಡೂರು ಮೇಳದ ಪ್ರಧಾನಭಾಗವತರಾಗಿ ದುಡಿಯುತ್ತಿದ್ದಾರೆ. +ಧಾರೇಶ್ವರರಒಟ್ಟು ರಂಗಕೃಷಿ 33 ವರ್ಷ. +ಪತ್ನಿ ಸುಧಾ. +ಕಾರ್ತಿಕೇಯ, ತೇಜಶ್ರೀ ಈರ್ವರು ಮಕ್ಕಳು. +ನಾಡಿನಾದ್ಯಂತ ಇವರಿಗೆ ಅಭಿಮಾನಿಗಳಿಂದ ಅಗಣಿತ ಸಂಖ್ಯೆಯ ಅಭಿನಂದನೆ, ಸಂಮಾನಗಳು ಅರ್ಹವಾಗಿ ಲಭಿಸಿವೆ. +ಬಲಿಷ್ಠವಾದ ಗುರುಪರಂಪರೆಯ ಯಕ್ಷಶ್ಶೈಕ್ಷಣಿಕ ಸಂಸ್ಕಾರ ಸಿದ್ಧಾಂತಗಳಿಗೆ ಬದ್ಧರಾಗಿ, ಗರಿಷ್ಠಮಟ್ಟದ ಕಲಾಭಿವ್ಯಕ್ತಿಯಲ್ಲಿ ವಿಜೃಂಭಿಸುವ ಉತ್ಕೃಷ್ಟ ಪ್ರತಿಭೆಯ ಶಿಷ್ಟ ಕಲಾವಿದ ಸುಬ್ರಹ್ಮಣ್ಯ ಭಟ್ಟ, ಗುಡ್ಡೆಹಿತ್ಲು. +ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ನಿಟ್ಟೂರು - ಗುಡ್ಡೆಹಿತ್ಲು ಎಂಬಲ್ಲಿ ಮಹಾಬಲ ಭಟ್‌-ಪರಮಮ್ಮ ದಂಪತಿಯ ಪುತ್ರರಾಗಿ ಹುಟ್ಟಿದ ಭಟ್ಟರು 55ರ ಹಿರಿತನದಲ್ಲಿರುವ ಪ್ರತಿಭಾನ್ವಿತ ಕಲಾವಿದರು. +ಏಳನೇ ತರಗತಿಗೆ ಶಾಲಾ ವಿದ್ಯಾಭ್ಯಾಸಕ್ಕೆ ಮಂಗಳ. +ಹದಿನೆಂಟರ ಹರೆಯದಲ್ಲೇ ಯಕ್ಷಲೋಕಕ್ಕೆ ಗಮನ. +ಬಾಲ್ಯದಲ್ಲಿ ಬಯಲಾಟಗಳನ್ನು ನೋಡಿ, ತಾಳಮದ್ದಳೆ ಅರ್ಥವನ್ನು ಕೇಳಿ ತಾನೂ ಕಲಾವಿದನಾಗಬೇಕೆಂಬ ಕನಸು ಕಟ್ಟಿಕೊಂಡ ಭಟ್ಟರು. +ಸ್ವಯಂ ಆಸಕ್ತಿ, ಶ್ರದ್ಧೆ,ಪರಿಶ್ರಮ, ಅಧ್ಯಯನ ಶೀಲತೆಯಿಂದ ಬಾಲ್ಯದ ಕನಸುಗಳಿಗೆ ಬಣ್ಣ ತುಂಬಿದರು. +ದಶಾವತಾರಿ ಗುರು ವೀರಭದ್ರನಾಯಕ ಹಾಗೂ ನಾರ್ಣಪ್ಪ ಉಪ್ಪೂರರ ಗರಡಿಯಲ್ಲಿ ಪಳಗಿ ಶಾಸ್ತ್ರೀಯ ಯಕ್ಷ ವಿದ್ಯಾಸಂಪತ್ತನ್ನು ಸೂರೆ ಗೈದರು. +ಶಿವರಾಜಪುರ, ಅಮೃತೇಶ್ವರಿ, ಪೆರ್ಡೂರು,ಸಾಲಿಗ್ರಾಮ, ಕಮಲಶಿಲೆ, ಸೌಕೂರು, ಮಾರಣಕಟ್ಟೆ,ಮಂದಾರ್ತಿ, ಗುಂಡಬಾಳ, ಸೋಮವಾರ ಸಂತೆ,ಹಾಗೂ ಮಡಾಮಕ್ಕಿ ಮೇಳಗಳಲ್ಲಿ ಸುಬ್ರಹ್ಮಣ್ಯ ಭಟ್ಟರ ಯಶಸ್ವಿ ತಿರುಗಾಟ ಮೂರು ದಶಕ ಕಂಡಿದೆ. +ಖಳನಾಯಕ, ಪ್ರತಿನಾಯಕ, ನಾಯಕ ಹಾಗೂ ಹಾಸ್ಯಭೂಮಿಕೆಗಳನ್ನು ನಿರ್ವಹಿಸುವ ಅಪೂರ್ವ ಕಲಾವ್ಯಕ್ತಿತ್ವ ಭಟ್ಟರದ್ದು. +ಗತ್ತು ಗೈರತ್ತಿನ ರಂಗನಡೆ,ಸ್ಫುಟವಾದ ಅಭಿನಂತು ಕೌಶಲ, ಪ್ರಧಾನಭೂಮಿಕೆಗಳಿ-ಗೊಪ್ಪುವ ಆಳ್ತನ, ವೇಷ ವೈಖರಿ ಎಲ್ಲಕ್ಕೂ ಪ್ರಮುಖವಾಗಿ ವಿಶೇಷ ವಾಕ್‌ಸಿದ್ಧಿ ಸುಬ್ರಹ್ಮಣ್ಯ ಭಟ್ಬರ ಪ್ರಖರ ಪ್ರತಿಭೆಗೆ ಪುರಾವೆಯಾಗುತ್ತವೆ. +ವಿಜಯದ ಭೀಷ್ಮ ಕಪಾಲದ ಬ್ರಹ್ಮ ವೀರಮಣಿ,ಯಯಾತಿ, ಬಲರಾಮ, ಜಾಂಬವ, ದಕ್ಷ, ಅರ್ಜುನ,ದುರ್ಜಯ, ಹನುಮಂತ, ರಾವಣ, ಚಂದಗೋಪ,ಕಾಳಿದಾಸ, ಕಂದರ, ಬಾಹುಕ, ಮೊದಲಾದ ಪಾತ್ರಗಳಿಗೆ ತನ್ನದೇ ವಿಶೇಷ ಮೆರುಗು ನೀಡಿ ಜನಪ್ರಿಯರಾಗಿದ್ದಾರೆ. +ಶ್ರೀಯುತರ ನೂರಾರು ಶಿಷ್ಯರು ವೃತ್ತಿರಂಗದಲ್ಲಿದ್ದಾರೆ. +ಶ್ರೀಯುತರು ವೇಷಧಾರಿಯೂ ಹೌದು. +ಭಾಗವತರೂ ಹೌದು ಅರ್ಥಧಾರಿಯೂ ಹೌದು. +ಬಾಳ ಸಂಗಾತಿ ಸಾವಿತ್ರಿ . +ಗುರುದತ್‌ ಹಾಗೂ ವೃಂದಾ ಮಕ್ಕಳು. +ಅನೇಕ ಸಂಘ ಸಂಸ್ಥೆಗಳಿಂದ ಗೌರವ ಸಂಮಾನ ಪಡೆದಿರುತ್ತಾರೆ. +ಬಡಾಬಡಗಿನ ಯಕ್ಷ ಸಾಮೃದ್ಧಿಕತೆಯ ಸಹಜ ಕಲಾಪ್ರತಿಭೆ ಚಿಟ್ಟಾಣಿ ಸುಬ್ರಹ್ಮಣ್ಯ ಹೆಗಡೆ. +ಸುಪ್ರಸಿದ್ಧ ಯಕ್ಷಗಾನ ಕಲಾವಿದ ಚಿಟ್ಟಾಣಿ ರಾಮಚಂದ್ರ ಹೆಗಡೆ - ಸುಶೀಲಾ ಹೆಗಡೆ ಅವರ ಸುಪುತ್ರರಾದ ಸುಬ್ರಹ್ಮಣ್ಯ ಹೆಗಡೆ 25-3-1962ರಲ್ಲಿ ಚಿಟ್ಟಾಣಿಯಲ್ಲಿ ಜನಿಸಿದರು. +ಬಾಲ್ಯದಿಂದಲೇ ಯಕ್ಷಗಾನ ಕಲೆಯ ಮೇಲಣ ಅತೀವ ಆಸಕ್ತಿ ಹೊಂದಿದ್ದ ಸುಬ್ರಹ್ಮಣ್ಯ ಹೆಗಡೆಯವರಿಗೆ ತಂದೆಯವರ ಕಲಾಸಿದ್ಧಿ, ಪ್ರಸಿದ್ಧಿಯೇ ಪ್ರೇರಣೆಯಾಯಿತು. +ರಕ್ತಗತವಾದ ಕಲಾವಿದ್ಯೆ ಹತ್ತನೇ ತರಗತಿಯ ಅಕ್ಷರವಿದ್ಯೆಗೆ ಶರಣು ಹೊಡೆಸಿತು. +ತನ್ನ 13ನೇ ವರ್ಷದಲ್ಲಿ ಕಲಾಭ್ಯಾಸಕ್ಕೆ ತೊಡಗಿದ ಸುಬ್ರಹ್ಮಣ್ಯ ಹೆಗಡೆಯವರು 16ರ ಹರೆಯದಲ್ಲಿ ಯಕ್ಷಲೋಕಕ್ಕೆ ಚರಣವಿರಿಸಿದರು. +ಹೊನ್ನಾವರದ ಗೋವಿಂದ ಭಟ್‌ ಎಂಬವರ ಗುರುತನವನ್ನು ಹೊಂದಿದ ಸುಬ್ರಹ್ಮಣ್ಯ ಹೆಗಡೆಯವರು ಪರಿಶ್ರಮಿಕ ರಂಗಾಧ್ಯಯನದಿಂದ ಪರಿಪಕ್ವತೆಯನ್ನು ಸಾಧಿಸಿದವರು. +ಸರ್ವಸಮರ್ಥ ಪುರುಷವೇಷಧಾರಿಯಾಗಿ ಗಮನ ಸೆಳೆದರು. +ಗುಂಡುಬಾಳ 3, ಸಾಲಿಗ್ರಾಮ 5, ಹಿರೇಮಹಾಲಿಂಗೇಶ್ವರ 2, ಶಿರಸಿ-ಪಂಚಲಿಂಗ 3,ಪೆರ್ಡೂರು 2, ಬಚ್ಚಗಾರು 5, ಶಿರಸಿ-ಮಾರಿಕಾಂಬಾ 2, ಮಂದಾರ್ತಿ 3, ವೀರಾಂಜನೇಯ 5, ಹೀಗೆ ಮೂರು ದಶಕಗಳ ಯಶಸ್ವೀ ತಿರುಗಾಟದಲ್ಲಿ ಸುಯೋಗ್ಯ ಹೆಸರು ಗಳಿಸಿದ್ದಾರೆ. +ಯಕ್ಷಗಾನ ಕಥಾನಾಯಕ, ಖಳನಾಯಕ,ಪ್ರತಿನಾಯಕ, ಹಾಗೂ ಪೋಷಕ ಪಾತ್ರಗಳನ್ನು ಪರಿಣಾಮಕಾರಿಯಾಗಿ ನಿರೂಪಿಸುವ ಶ್ರೀಯುತರ ನೃತ್ಯಾಭಿನಯ ಸ್ಪಷ್ಟತೆ, ಪಾತ್ರ ತಲ್ಲೀನತೆ, ಆಕರ್ಷಕ ವೇಷಗಾರಿಕೆ, ಸಾಹಿತ್ಯಪೂರ್ಣ ಮಾಚಿಕತೆ ಗುರುತಿಸಲ್ಪಡುವಂತಹುದು. +ಧರ್ಮಾಂಗದ, ಶ್ರೀಕೃಷ್ಣ,ಅರ್ಜುನ, ಕಲಾಧರ, ಕೌರವ, ಕಂಸ, ವತ್ಸಾಖ್ಯ,ಹರಿಶ್ಚಂದ್ರ ಪಾತ್ರಗಳು ಜನಪ್ರಿಯ. +ಪ್ರಸ್ತುತ ಬಂಗಾರಮಕ್ಕಿ ವೀರಾಂಜನೇಯ ಯಕ್ಷಮಿತ್ರ ಮಂಡಳಿಯ ನಿರ್ದೇಶಕರು. +ಶ್ರೀಯುತರ ಬಾಳ ಸಂಗಾತಿ ಪಾರ್ವತಿ ಹೆಗಡೆ. +ಪ್ರೀತಿ ಹೆಗಡೆ, ಕಾರ್ತಿಕ ಹೆಗಡೆ ಮಕ್ಕಳು. +ಹಲವಾರು ಸಂಘ-ಸಂಸ್ಥೆಗಳ, ಅಭಿಮಾನಿ ಬಳಗದಿಂದ ಸಂಮಾನ ದೊರಕಿರುತ್ತದೆ. +ಪೂರ್ವ ಯಕ್ಷಗಾನದ ಗಾನ ಘರಾನವನ್ನು ಸಮೃದ್ಧವಾಗಿ ಪೋಷಿಸಿಕೊಂಡು, ಸಂಪನ್ನ ಪ್ರತಿಭೆಯಾಗಿ ಬೆಳೆದ ಹಿರಿಯ ತಲೆಮಾರಿನ ಅಗ್ರಮಾನ್ಯ ಭಾಗವತ ಕಪ್ಪೆಕೆರೆ ಸುಬ್ರಾಯ ಹೆಗಡೆ. +ಉತ್ತರ ಕನ್ನಡದ ಹೊನ್ನಾವರ ತಾಲೂಕಿನ ಹಡಿನಬಾಳ ಎಂಬಲ್ಲಿ 1-8-1947ರಲ್ಲಿ ಈಶ್ವರ ಹೆಗಡೆ-ಗೋಪಿ ಹೆಗಡೆ ದಂಪತಿಯ ಸುಪುತ್ರರಾಗಿ ಜನಿಸಿದ ಸುಬ್ರಾಯ ಹೆಗಡೆಯವರ ವಿದ್ಯಾಭ್ಯಾಸ ಹತ್ತನೆ ತರಗತಿಯವರೆಗೆ. +ಹದಿನಾರರ ಹರೆಯದಲ್ಲೇ ಯಕ್ಷಗಾನದ ಗಾನಬದುಕಿಗೆ ಮನ ಮಾಡಿದರು. +ತಂದೆ ತಾಯಿಗಳ ಪ್ರೋತ್ಸಾಹ-ಪ್ರೇರಣೆಯೇ ಸುಬ್ರಾಯ ಹೆಗಡೆಯವರ ರಂಗಜೀವನಕ್ಕೆ ಮಾರ್ಗಮಣಿ ದೀಪವಾಯಿತು. +ವೃತ್ತಿ ಬದುಕಿನ ಗಾಯನ ದ್ರುಮಕ್ಕೆ ಮರವಂತೆ ನರಸಿಂಹದಾಸರು,ನಾರ್ಣಪ್ಪ ಉಪ್ಪೂರರು ಹಾಗೂ ಶಿವರಾಮ ಹೆಗಡೆಯವರು ನೀರೆರೆದು ಪೋಷಿಸಿದರು. +ಗಣಪತಿ ಹೆಗಡೆ ಹಾಗೂ ಕೆರೆಮನೆ ಮಹಾಬಲ ಹೆಗಡೆಯವರು ಇವರಿಗೆ ಗುರುಗಳಾಗಿ ಬೆಂಬಲಿಸಿದರು. +ಗುಂಡುಬಾಳ 18, ಇಡಗುಂಜಿ 12, ಅಮೃತೇಶ್ವರಿ8, ಕಮಲಶಿಲೆ 1, ಸಾಲಿಗ್ರಾಮ 1, ಬಚ್ಚಗಾರು 1,ಪಂಚಲಿಂಗ 4, ಹೀಗೆ 45 ವರ್ಷಗಳ ಸುದೀರ್ಥ ಕಲಾವ್ಯವಸಾಯದಲ್ಲಿ ಸುಬ್ರಾಯ ಹೆಗಡೆಯವರು ವಿಶೇಷ ಕೀರ್ತಿಗೆ ಭಾಜನ-ರಾಗಿದ್ದಾರೆ. +ಶ್ರೀಯುತರು ಒಬ್ಬ ಶ್ರೇಷ್ಠ ಭಾಗವತ ಮಾತ್ರವಲ್ಲ. +ಇವರಿಗೆ ಚಂಡೆ-ಮದ್ಧಳೆವಾದನದ ಪರಿಣಿತಿಯೂ ಇದೆ. +ನೃತ್ಯಾಭಿನಯದ ಕಲೆಯೂ ತಿಳಿದಿದೆ. +ಹಾಗಾಗಿ ಇವರು ಯಕ್ಷಗಾನ ರಂಗದ ಸರ್ವಾಂಗೀಣ ಕಲಾವಿದರು. +ವೇಷದಾರಿಯಾಗಿ ಅರ್ಜುನ, ಬಲರಾಮ,ವಿಜಯವರ್ಮ, ನಾರದ ಮೊದಲಾದ ಪಾತ್ರಗಳನ್ನೂ ನಿರ್ವಹಿಸಿದವರು. +ಸುಬ್ರಾಯ ಹೆಗಡೆಯವರ ತಾಳಗತಿಯಲ್ಲಿನ ಪರಿಶುದ್ಧತೆ, ಎದ್ದು ಕಾಣುವ ಲಯಬದ್ಧತೆ,ಕಲಾವಿದರನ್ನು ರಂಗದಲ್ಲಿ ಬಳಸಿಕೊಳ್ಳುವ ಕಲಾತಾಂತ್ರಿಕತೆ, ಪ್ರಸಂಗ ನಿರ್ದೇಶನ ಶಕ್ತತೆ ಸುಯೋಗ್ಯ ಭಾಗವತನ ಸ್ಥಾನ-ಮಾನ್ಯತೆಯನ್ನು ಗೊತ್ತುಪಡಿಸುತ್ತದೆ. +ಇವರ ಪೌರಾಣಿಕ ಜ್ಞಾನ ಅಪಾರ. +ಗಂಭೀರ ಸ್ವರಸಂಚಾರದಲ್ಲಿ ರಂಗಕ್ಕೆ ಬಿಸಿ ತುಂಬುವ ಅದ್ಭುತ ಚೈತನ್ಯ ಇವರಿಗಿದೆ. +ಸುಬ್ರಾಯ ಭಾಗವತರ ನೂರಾರು ಶಿಷ್ಯರು ಯಕ್ಷಗಾನ ಕ್ಷೇತ್ರದಲ್ಲಿ ಮಹೋನ್ನತ ಪ್ರತಿಭೆಗಳಾಗಿ ವಿಜೃಂಭಿಸುತ್ತಿದ್ದಾರೆ. +ಪ್ರಸ್ತುತ ಶ್ರೀಯುತರು ಉಮಾಮಹೇಶ್ವರ ಹಾಗೂ ಸದ್ಗುರು ದಯಾಶ್ರಿತ ಯಕ್ಷಗಾನ ಸಂಸ್ಥೆಗಳಲ್ಲಿ ತಾಳಮದ್ದಳೆ ಭಾಗವತರಾಗಿ ಸೇವೆ ಸಲ್ಲಿಸುತ್ತಿದ್ದಾರೆ. +ಧರ್ಮಪತ್ನಿ ಹೇಮಾ. +ಈಶ್ವರಚಂದ್ರ, ಫಣೇಂದ್ರ ಮಕ್ಕಳು. +ಶ್ರೀಯುತರನ್ನು ಹಲವಾರು ಸಂಘ-ಸಂಸ್ಥೆಗಳು ಗುರುತಿಸಿ ಗೌರವಿಸಿವೆ. +ಉಡುಪಿ ಯಕ್ಷಗಾನ“ಕಲಾರಂಗ'ದ ಭಾಗವತ ನಾರ್ಣಪ್ಪ ಉಪ್ಪೂರು ಪ್ರಶಸ್ತಿ ಸೇರಿದಂತೆ ಹಲವು ಸಮ್ಮಾನ ದೊರಕಿರುತ್ತದೆ. +ಯಕ್ಷಲೋಕದ ವೀರ ವಾದ್ಯವೆನಿಸಿದ ಚಂಡೆಯ ಮಾಧುರ್ಯ ಪೂರ್ಣ ನುಡಿತದಲ್ಲಿ ಸಿದ್ಧ ಹಸ್ತರಾದ ಅನುಭವಿ ಹಿರಿಯ ಚಂಡೆವಾದಕ ಬಾಡ ಸುಕ್ರಪ್ಪ ನಾಯ್ಕ . +ಉತ್ತರ ಕನ್ನಡದ ಬಾಡ-ಹುಬ್ಬಣಗೇರಿ ಎಂಬಲ್ಲಿ 23-3-1945ರಲ್ಲಿ ನಾರಾಯಣ ನಾಯ್ಕ - ಮಹಾಸತಿ ದಂಪತಿಯ ಸುಪುತ್ರರಾಗಿ ಜನಿಸಿದ ಇವರು ಬಾಲ್ಯದಿಂದಲೇ ಕಲಾಸಕ್ತಿಯನ್ನ್ನು ಮೈ ಗೂಡಿಸಿಕೊಂಡವರು. +ಏಳನೇ ತರಗತಿಯ ವರೆಗಿನ ಶೈಕ್ಷಣಿಕ ಹಂತವನ್ನು ಪೂರೈಸಿ ಕಡುಬಡತನದ ರೈತಾಪಿ ಕುಟುಂಬದ ಸುಕ್ರಪ್ಪನವರು 24ನೇ ವಯಸ್ಸಿನಲ್ಲಿ ಬಣ್ಣದ ಜೀವನಕ್ಕೆ ಮುಂದಾದರು. +ಇವರ ತಂದೆಯವರು ಹಾಗೂ ಅಣ್ಣ ಚಂಡೆಮದ್ದಳೆ ವಾದಕರಾಗಿದ್ದರು. +ಅವರೇ ಇವರಿಗೆ ರಂಗಬದುಕಿಗೆ ಪ್ರೇರಣೆ ಪ್ರೋತ್ಸಾಹ ನೀಡಿದರು. +ತಂದೆಯಿಂದಲೇ ಚಂಡೆವಾದನ ಕಲಿತ ಸುಕ್ರಪ್ಪನವರು 1973ರಲ್ಲಿ ಕೋಟ ಹಿರೇ ಮಹಾಲಿಂಗೇಶ್ವರ ದೇವಳದ ಕಲಾಗರಡಿಯನ್ನು ಸೇರಿ ಭಾಗವತ ನಾರ್ಣಪ್ಪಉಪ್ಪೂರ, ದುರ್ಗಪ್ಪ ಗುಡಿಗಾರರಿಂದ ಹೆಚ್ಚಿನ ರಂಗ ಪರಿಣತಿ ಸಾಧಿಸಿದರು. +ಕಾಳಿಂಗ ನಾವಡರ ಮೂಲಕ ವೃತ್ತಿಮೇಳಕ್ಕೆ ಸೇರ್ಪಡೆಯಾದರು. +ಕುಮಟಾ 12, ಮೂಲ್ಕಿ 3, ಬಜ್ಚಗಾರು 3,ಕುಮಟಾ (ಡೇರೆ) 2, ಹಾಲಾಡಿ 2, ಕಮಲಶಿಲೆ 1,ಬಗ್ವಾಡಿ 3. ಗೋಳಿಗರಡಿ 2, ಕಳವಾಡಿ 3,ನಾಗರಕೊಡಿಗೆ 2, ಅಮೃತೇಶ್ವರಿ 7, ಹೀಗೆ ನಾಲ್ಕು ದಶಕಗಳ ಅವರ ರಂಗವ್ಯವಸಾಯ ಸಾರ್ಥಕವಾಗಿದೆ. +ನಯವಾದ ನುಡಿತ ಶೈಲಿ, ಪ್ರಸಂಗದ ಸನ್ನಿವೇಶ -ಸಂದರ್ಭ, ಕಾಲ-ಪಾತ್ರವರಿತ ಅವರ ವಾದನ ಕ್ರಮ,ಪದ್ಯಸಾಹಿತ್ಯ ಸ್ಪಷ್ಟವಾಗಿ ಕೇಳಿಸುವಂತೆ ಚಂಡೆಬಾರಿಸುವ ಗುಣ ಅವರ ಕಲಾವ್ಯಕ್ತಿತ್ವದಲ್ಲಿ ಕಂಡು ಬರುತ್ತದೆ. +ಗಾಯನ ಹಾಗೂ ಮದ್ದಳೆವಾದನಕ್ಕೆ ನ್ಯೂನವಾಗದಂತೆ ಪೂರಕವಾಗಿದ್ದು, ಮಾರ್ದವತೆಯ ನರುಗಂಪು ಹೊರಸೂಸುವ ಅವರ ಚಂಡೆಗಾರಿಕೆ ಆನುಭವಿಕವಾದದ್ದು. +ಉತ್ತಮ ಚಂಡೆವಾದಕರಾದ ಸುಕ್ರಪ್ಪನವರಿಗೆ ಮದ್ದಳೆಗಾರಿಕೆಯೂ ಗೊತ್ತು. +ವೃತ್ತಿಜೀವನದ ಬಿಡುವಿನ ಅವಧಿಯಲ್ಲಿ ಅವರು ಕೃಷಿಕರ್ಮದಲ್ಲಿ ತೊಡಗುತ್ತಾರೆ. +ಮಡದಿ ಮಹಾದೇವಿ. +ರವಿಕಾಂತ, ವೀಣಾ, ವಿದ್ಯಾಸರೋಜಾ, ಶ್ರೀಧರ ಮಕ್ಕಳು. +ಶ್ರೀಯುತರು ಹುಟ್ಟೂರ ಸಂಮಾನ, ಅಮೃತೇಶ್ವರಿ ಮೇಳದಲ್ಲಿ ಗೌರವ ಪುರಸ್ಕಾರ ಪಡೆದಿರುತ್ತಾರೆ. +ಬಡಗುತಿಟ್ಟನ ಸಾಂಪ್ರದಾಯಿಕ ಶೈಲೀಕೃತ ಭವ್ಯತೆಯನ್ನು ಪಾತ್ರಗಳ ಮೂಲಕ ಜೀವಂತವಾಗಿ ತೆರೆದಿಡುವ ಮಧ್ಯಮತಿಟ್ಟಿನ ಸಮರ್ಥ ಕಲಾವಿದ ಕೋಟ ಸುರೇಶ ಬಂಗೇರ. +ಉಡುಪಿ ತಾಲೂಕಿನ ಮಣೂರು-ಪಡುಕರೆ ಎಂಬಲ್ಲಿ 1965ರಲ್ಲಿ ಜನಿಸಿದ ಸುರೇಶ ಬಂಗೇರ ಅವರು ಮಣೂರು ಬೇಡು ಮರಕಾಲ-ಅಕ್ಕಮ್ಮ ದಂಪತಿಯ ಸುಪುತ್ರ. +5ನೇ ಇಯತ್ತೆಯವರೆಗೆ ಅಕ್ಷರಾಭ್ಯಾಸ ಮಾಡಿದ ಸುರೇಶ ಬಂಗೇರ ಅವರು ತನ್ನ 16ನ ಹರೆಯದಲ್ಲೇ ಬಣ್ಣದ ಬದುಕು ಕಂಡರು. +ಪ್ರಸಿದ್ಧ ಕಲಾವಿದ ಶಿರಿಯಾರ ಮಂಜುನಾಯ್ಕರ ಹೂವಿನಕೋಲು ತಿರುಗಾಟದ ಬಾಲಕಲಾವಿದನಾಗಿ ಶಿರಿಯಾರರ ನಿಕಟಸಂಪರ್ಕವನ್ನು ಸಾಧಿಸಿ ಪ್ರೌಢ ಅರ್ಥಗಾರಿಕೆ, ರಂಗನಡೆ, ನೃತ್ಯಾಭಿನಯ ಕೌಶಲವನ್ನು ಕಂಡುಕೊಂಡು ತನ್ನ ಕಲಾನುಭವವನ್ನು ಗರಿಷ್ಠಮಟ್ಟದಲ್ಲಿಟ್ಟು ಕೊಂಡ ಕಲಾವಿದ. +ಮೊಳಹಳ್ಳಿ ಹೆರಿಯನಾಯ್ಕರ ಗುರುತನವೂ ಶ್ರೀಯುತರನ್ನು ಸುಯೋಗ್ಯ ಕಲಾವಿದನನ್ನಾಗಿ ರೂಪಿಸುವಲ್ಲಿ ಶಕ್ತವಾಗಿದೆ. +ಮಂದಾರ್ತಿ 7, ಸೌಕೂರು17, ಸಾಲಿಗ್ರಾಮ 2, ಕಮಲಶಿಲೆ 3, ಅಮೃತೇಶ್ವರಿ 2, ಪೆರ್ಡೂರು 2, ಹೀಗೆ ಬಂಗೇರರ ಕಲಾವ್ಯವಸಾಯ 33 ವರ್ಷ ಪ್ರಸ್ತುತ ಸುರೇಶ ಬಂಗೇರರು ಸೌಕೂರುಮೇಳದ ಕಲಾವಿದರು. +ಬಡಗುತಿಟ್ಟಿನ ಪುರುಷವೇಷಗಳ ಸಾಂಪ್ರದಾಯಿಕ ಸೊಗಸು ಮೈತುಂಬಿ- ಕೊಂಡಸುರೇಶ ಅವರ ಪರಿಶುದ್ಧವಾದ ನೃತ್ಯಾಭಿನಯ ವೈಖರಿ, ಆಕರ್ಷಕ ಆಳಂಗ, ಪ್ರಗಲ್ಫ ಪಾಂಡಿತ್ಯ,ನಿರರ್ಗಳ ವಚೋವಿಲಾಸ, ನಿರ್ವಹಣಾ ಭೂಮಿಕೆಗಳಿಗೆ ಪ್ರಾಣ ಶಕ್ತಿ ನೀಡುತ್ತವೆ. +ಶ್ರೀಯುತರ ಸುಧನ್ವ, ಪುಷ್ಕಳ,ಮಾರ್ತಾಂಡತೇಜ, ಅರ್ಜುನ, ದೇವವೃತ, ವತ್ಸಾಖ್ಯ,ಚಂದ್ರಹಾಸ ಮೊದಲಾದ ಭೂಮಿಕೆಗಳು ಪೌರಾಣಿಕತೆಯ ಸಚೇತನ ರಂಗಪ್ರತಿಮೆಗಳಾಗುತ್ತವೆ. +ಪತ್ನಿ ಸುಶೀಲಾ, ಪುತ್ರ ಸುರಕ್ಷಾ ಅವರೊಂದಿಗೆ ಕೋಟ ಪಡುಕರೆಯಲ್ಲಿ ವಾಸವಾಗಿರುವ ಅನುಭವಿಯುವ ಕಲಾವಿದ ಸುರೇಶ ಬಂಗೇರ ಇವರಿಗೆ ಹಲವು ಸಂಮಾನಗಳು ದೊರಕಿವೆ. +ಇಂಪಾದ ಸುಖಸ್ವರಸಂಪತ್ತಿಕೆಯಲ್ಲಿ ಮುಮ್ಮೇಳದ ಕಲಾಭಿವ್ಯಕ್ತಿಗೆ ಸೊಂಪಾದ ಕಳೆನೀಡುವ ಯುವ ಭಾಗವತ ಸುರೇಶ ಶೆಟ್ಟಿ ಶಂಕರನಾರಾಯಣ. +ಕುಂದಾಪುರ ತಾಲೂಕಿನ ಶಂಕರನಾರಾಯಣ ಎಂಬ ಪುಟ್ಟ ಹಳ್ಳಿಯಲ್ಲಿ 17-02-1967 ರಲ್ಲಿ ಜನಿಸಿದ ಸುರೇಶ ಶೆಟ್ಟರು ಶಿವರಾಮಶೆಟ್ಟಿ-ಕುಸುಮಾವತಿ ದಂಪತಿಯ ಸುಪುತ್ರ. +8ನೇ ಇಯತ್ತೆಗೆ, ಅಕ್ಷರ ಮಂಗಳಹಾಡಿ, 14ನೇ ವಯಸ್ಸಿನಲ್ಲೇ ಯಕ್ಷಗಾನ ಲೋಕದ ಜೀವನಯಾತ್ರೆಗೆ ಶ್ರೀಕಾರ ಹಾಡಿದ ಶೆಟ್ಟರು ಉಡುಪಿ ಯಕ್ಷಗಾನ ಕೇಂದ್ರದ ವಿದ್ಯಾರ್ಥಿಯಾಗಿ ಸಶಕ್ತ ಶಿಕ್ಷಣವನ್ನು ಪಡೆದರು. +ತಂದೆ ತಾಳಮದ್ದಳೆ ಅರ್ಥಧಾರಿಯಾಗಿರುವುದರಿಂದ ಬಾಲಕ ಸುರೇಶನಿಗೆ ಎಳವೆಯಲ್ಲೇ ಕಲಾಜ್ಞಾನ ಪ್ರಾಪ್ತವಾಯಿತು. +ಹಿರಿಯಭಾಗವತ ಕೆ.ಪಿ.ಹೆಗಡೆಯವರ ಗುರುತನ,ಮಾರ್ಗದರ್ಶನದಲ್ಲಿ ಶ್ರೀಯುತರು ಸಮರ್ಥಭಾಗವತರಾಗಿ ರೂಪುಗೊಂಡರು. +ಉತ್ತಮ ನೃತ್ಯಪಟುವೂ ಆಗಿರುವ ಸುರೇಶ ಶೆಟ್ಟರು ವೇಷ-ಧಾರಿಯಾಗಿ ರಂಗಮಂಚದಲ್ಲಿ ಕುಣಿದು ಮೆರೆದವರು. +ಯಾವುದೇ ಶ್ರುತಿಯಲ್ಲೂ ಭಾವಪೂರ್ಣವಾಗಿ,ಲೀಲಾಜಾಲವಾಗಿ ಶಾರೀರ ತೊಡಗಿಸುವ ಶೆಟ್ಟರ ಮಧುರ ಗಾನಾಮೃತಧಾರೆ ನಾಡಿನಾದ್ಯಂತ ಪಸರಿಸಿದೆ. +ಪೌರಾಣಿಕವಿರಲಿ, ನವ್ಯವಿರಲಿ ಸುರೇಶ ಶೆಟ್ಟರ ಭಾಗವತಿಕೆಯ ವೈಖರಿ ರಸಾತ್ಮಕವಾಗಿ ಸಾಗುತ್ತದೆ. +ಕಮಲಶಿಲೆ 2, ಸಾಲಿಗ್ರಾಮ 2, ಹಾಲಾಡಿ 1,ಪೆರ್ಡೂರು 20, ಹೀಗೆ ಬಣ್ಣದ ಲೋಕದಲ್ಲಿ ಬೆಳ್ಳಿಹಬ್ಬವನ್ನು ಯಶಸ್ವಿಯಾಗಿ ಪೂರೈಸಿ ಪ್ರಸ್ತುತ ಅತಿಥಿ ಭಾಗವತರಾಗಿ ಕಲಾಸೇವೆ ಮುಂದುವರಿಸುತ್ತಿದ್ದಾರೆ. +ಪತ್ನಿ ಶೃಂಗಾರಿ. +ಚಿರಾಗ್‌, ವಿಪುಲ್‌ ಮಕ್ಕಳು. +ಪ್ರತಿಭಾನ್ವಿತ ಭಾಗವತ ಸುರೇಶ ಶೆಟ್ಟರನ್ನು ಹಲವಾರು ಸಂಘ-ಸಂಸ್ಥೆಗಳು ಗುರುತಿಸಿ ಸಂಮಾನಿಸಿವೆ. +ಶಾಸ್ತೋಕ್ತ ಯಕ್ಷವಿದ್ಯಾ ಪ್ರೌಢಿಮೆಯಲ್ಲಿ ನಡುತಿಟ್ಟಿನ ದೃಢವಾದ ಶೈಲಿಯನ್ನು ರಂಗಮಂಚದಲ್ಲಿ ಪಡಿಮೂಡಿಸುವ ಪ್ರತಿಭಾನ್ವಿತ ಯಕ್ಷನಟ ಆಲೂರು ಸುರೇಂದ್ರ. +ಬಡಗಿನ ಸಮರ್ಥ ಪುರುಷವೇಷಧಾರಿಯಾಗಿ,ಪುಂಡು ವೇಷಧಾರೆಯಾಗಿ ಪೌರಾಣಿಕ ಪಾತ್ರ ಪ್ರಪಂಚವನ್ನು ಬೆಳಗಿದ ಆಲೂರು ಸುರೇಂದ್ರ ಅವರು ಅಪಾರ ಕಲಾನುಭವವನ್ನು ಕಲಾವ್ಯಕ್ತಿತ್ವದಲ್ಲಿ ಹರಳುಗಟ್ಟಿಸಿಕೊಂಡು ಪ್ರತೀ ಪಾತ್ರಗಳ ಜೀವನಾಡಿ ಮಿಡಿತವನ್ನು ಸಮಗ್ರವಾಗಿ ಅರಿತು ವ್ಯವಹರಿಸುವ ಸಂಪನ್ನ ಪ್ರತಿಭೆ. +ಕುಂದಾಪುರ ತಾಲೂಕಿನ ಆಲೂರು ಎಂಬಲ್ಲಿ 1960ರಲ್ಲಿ ಗೋಪಾಲ-ಸಿದ್ಧು ದಂಪತಿಯ ಸುಕುಮಾರನಾಗಿ ಜನಿಸಿದ ಸುರೇಂದ್ರ ಬಾಲ್ಯದಲ್ಲಿಯೇ ಯಕ್ಷಕಲಾಸಕ್ತಿಯನ್ನು ಅನ್ಯಾದೃಶವಾಗಿ,ಮೈತುಂಬಿಸಿ ಕೊಂಡವರು. +ಹಿರಿಯ ಕಲಾವಿದ ಕೊಪ್ಪಾಟೆ ಮುತ್ತಗೌಡರಗುರುತನ ಹಾಗೂ ಪ್ರೇರಣೆ ಪಡೆದು ತನ್ನ 13ರ ಹರೆಯದಲ್ಲೇ ಯಕ್ಷಗಾನ ಬಣ್ಣ-ನೂಪುರದ ಬೆಡಗಿಗೆ ಮನಸೋತ ಇವರ ಸೋದರ ಮಾವ ಆಲೂರು ತೇಜ ಅವರು. +ಹಾರ್ದಿಕ ಪ್ರೋತ್ಸಾಹ,ರಂಗ ಮಾರ್ಗದರ್ಶನದಲ್ಲಿ ಸಮರ್ಥ ಕಲಾವಿದನಾಗಿ ರೂಪು-ಗೊಂಡವರು. +ಮಾರಣಕಟ್ಟೆ 24, ಕಮಲಶಿಲೆ 8, ಸೌಕೂರು3, ಹೀಗೆ ಮೂರು ಮೇಳಗಳಲ್ಲೇ 35 ವರ್ಷ ಕಲಾವ್ಯವಸಾಯ ಪೂರೈಸಿದ್ದಾರೆ. +ಪ್ರಸ್ತುತ ಮಾರಣಕಟ್ಟೆ ಮೇಳದಲ್ಲಿ ದುಡಿಯುತ್ತಿದ್ದಾರೆ. +ಐವತ್ತರ ವಯಸ್ಸಿನ ಆಲೂರು ಸುರೇಂದ್ರ ವೇಷ ಹಾಕಿದರೆ ರಂಗಮಂಚದಲ್ ಲಿಹದಿನೆಂಟರ ತರುಣನಾಗಿ ಬೆರಗು ಹುಟ್ಟಿಸುತ್ತಾರೆ. +ಪುಂಡುವೇಷಗಳಲ್ಲಿ ಅವರು ಕಾಣಿಸುವ ವಿಶೇಷ ಚುರುಕು ನಡೆಯ ನೃತ್ಯವೈಖರಿ, ಪುರುಷ ಪಾತ್ರಗಳಲ್ಲಿ ತೋರುವ ಪೌರುಷೇಯ ವರ್ಚಸ್ಸು ಕಲಾರಸಿಕರ ಮನ ತುಂಬಿದೆ. +ಶ್ರೀಯುತರ ಸುಧನ್ವ, ಪುಷ್ಕಳ, ದೇವವೃತ,ಬಬ್ರುವಾಹನ, ಅಭಿಮನ್ಯು, ಯಯಾತಿ, ಪಾತ್ರಗಳು ಜನಪ್ರಿಯ. +ಸುಸಮರ್ಥ ಗುರುವಾಗಿಯೂ ಅನೇಕ ಪ್ರತಿಭಾವಂತ ಶಿಷ್ಯಕಲಾವಿದರನ್ನು ಯಕ್ಷಲೋಕಕ್ಕೆ ನೀಡಿದ ಇವರ ಬಾಳ ಸಂಗಾತಿ ಸಿಂಗಾರಿ. +ನಾಲ್ವರು ಮಕ್ಕಳು. +ಆಲೂರು ಸುರೇಂದ್ರ ಅವರನ್ನು ಹಲವು ಸಂಘ ಸಂಸ್ಥೆಗಳು ಗೌರವಿಸಿವೆ. +ಕಲಾರಾಧನೆಯನ್ನೇ ಉಸಿರಾಗಿಸಿ, ಛಲವನ್ನೇ ಬದುಕಿನ ಬಂಡವಾಳ -ವಾರಿಸಿಕೊಂಡು ವರ್ಣರಂಜಿತ ವೇಷವೈವಿಧ್ಯದಲ್ಲಿ ಗುರುತಿಸಲ್ಪಟ್ಟ ಹಿರಿಯ ಕಲಾವಿದ ಮೊಗೆಬೆಟ್ಟು ಹೆರಿಯ ನಾಯ್ಕ. +ಯಕ್ಷಗಾನದ ಆಡುಂಬೊಲವಾದ ಕುಂದಾಪುರ ತಾಲೂಕಿನ ಬೇಳೂರು ಗ್ರಾಮವಾದ ಮೊಗೆಬೆಟ್ಟು ಎಂಬಲ್ಲಿ ಜನಿಸಿದ ಶ್ರೀಯುತರು 58ರ ಹಿರಿತನದಲ್ಲಿ ಬೆಳೆದು ನಿಂತಿದ್ದಾರೆ. +ಇವರ ತಂದೆ ಮೊಗೆಬೆಟ್ಟು ವೀರ ನಾಯ್ಕ ತಾಯಿ ಚಂದಮ್ಮ ಮೊಗೇರ್ತಿ. +ಹೆರಿಯ ನಾಯ್ಕ ಅವರ ಹಸಿದಹೊಟ್ಟೆ ಅವರನ್ನು 3ನೇ ತರಗತಿಯಿಂದ ಹೊರದಬ್ಬಿತು. +ಸುತ್ತ ಮುತ್ತ ಜರುಗುತ್ತಿದ್ದ ಯಕ್ಷಗಾನ ದೀವಟಿಗೆ ಬೆಳಕಿನಾಟ ಕೈಬೀಸಿ ಹತ್ತಿರ ಕರೆಯಿತು. +ತನ್ನ 16ನೇ ವಯಸ್ಸಿನಲ್ಲೇ ಬಣ್ಣದ ಬದುಕು ಕಂಡ ನಾಯ್ಕರು 1970ರ ದಶಕದಲ್ಲಿ ಕೋಟದ ಯಕ್ಷಗಾನ ಕಲಿಕಾ ಕೇಂದ್ರಕ್ಕೆ ಸೇರಿ ಅಲ್ಲಿನಾರ್ಣಪ್ಪ ಉಪ್ಪೂರರಿಂದ ತಾಳದೀಕ್ಷೆ ಪಡೆದರು. +ಹಿರಿಯ ಮದ್ದಳೆಗಾರ ತಿಮ್ಮಪ್ಪ ನಾಯ್ಕರಲ್ಲಿ ಸಂಪ್ರದಾಯ ನೃತ್ಯ ಶಿಕ್ಷಣ ಹೊಂದಿದರು. +ಕಿರಿಯ ವಯಸ್ಸಿನಲ್ಲೇ ಮಂದಾರ್ತಿ ಮೇಳಕ್ಕೆ ಸೇರಿದ ಹಿರಿಯನವರು ಅಲ್ಲಿ ಸಂಗೀತಗಾರರಾಗಿ ರಾಜವೇಷಧಾರಿಯಾಗಿ ಸೇವೆ ಸಲ್ಲಿಸಿದರು. +ಮಂದಾರ್ತಿ 4, ಮಾರಣಕಟ್ಟೆ 4, ಅಮೃತೇಶ್ವರಿ 5, ರಂಜದಕಟ್ಟೆ 3, ಹೀಗೆ 16 ವರ್ಷಗಳ ಕಾಲ ರಂಗಕೃಷಿ ನಡೆಸಿ ಪ್ರಸ್ತುತ ವಿಶ್ರಾಂತ ಜೀವನದಲ್ಲಿದ್ದಾರೆ. +ದೈಹಿಕ ಅನಾರೋಗ್ಯದ ನಿಮಿತ್ತ ವೃತ್ತಿಮೇಳ ತೊರೆದ ನಾಯ್ಕರು ಕಲೆಯನ್ನು ಕೈ ಬಿಡಲಿಲ್ಲ. +ಸುತ್ತ ಮುತ್ತಲಿನ ಕಲಾಸಕ್ತರನ್ನು ಸಂಘಟಿಸಿ, ಕಲಾಪ್ರತಿಭೆಯನ್ನು ನೇರ್ಪುಗೊಳಸಿದರು. +ಚಿಕ್ಕುಹ್ಯಾಗುಳಿ ಯಕ್ಷಗಾನಸಂಘ, ಮೊಗೆಬೆಟ್ಟು, ಸಕ್ಕಟ್ಟು ಮಹಾಗಣಪತಿ ಯಕ್ಷಗಾನ ಮಂಡಳಿ, ಚಟ್ಟರೆ ಕಲ್ಲು-ನೂಜಿ ಸಿದ್ಧಿವಿನಾಯಕ ಕಲಾಸಂಘ ಸ್ಥಾಫಿಸಿ ಅನೇಕ ಕಲಾವಿದರನ್ನು ಬೆಳಕಿಗೆ ತಂದರು. +ಯಕ್ಷಗಾನ ರಂಗಭೂಮಿಯಲ್ಲಿ ರಾಜವೇಷ,ಪುರುಷವೇಷ, ಬಣ್ಣದ ವೇಷ, ಸ್ರ್ತೀವೇಷ, ಕಿರಾತವೇಷ,ಹಾಸ್ಯ ಸೇರಿದಂತೆ ಸರ್ವವೇಷ ವೈವಿಧ್ಯದಲ್ಲೂ ಕಾಣಿಸಿಕೊಂಡ ನಾಯ್ಕರು ಶತ್ರುಘ್ನ, ದೇವೆಂದ್ರ,ಮಹಿಷಾಸುರ, ಶ್ರೀಕೃಷ್ಣ ಅರ್ಜುನ, ಕರಾಳನೇತ್ರೆ,ವೃತ್ರ ಜ್ವಾಲೆ, ಶೂರಪದ್ಮಾಸುರ, ಕುಳಿಂದ,ಕಮಲಭೂಪ, ಪರಶುರಾಮ ಮೊದಲಾದ ಪುರಾಣ ಭೂಮಿಕೆಗಳಿಗೆ ತನ್ನದೇ ಕಲಾವರ್ಚಸ್ಸು ನೀಡಿದ್ದಾರೆ. +ಶ್ರೀಯುತರು ಸುಮಾರು 15 ಯಕ್ಷಗಾನ ಪ್ರಸಂಗಗಳನ್ನು ರಚಿಸಿ ಕಲಾತ್ಮಕ ಪ್ರಸಂಗಕರ್ತರಾಗಿಯೂ ಪ್ರಸಿದ್ಧರು. +ಶ್ರೀಯುತರ ಧರ್ಮಪತ್ನಿ ಗುಲಾಬಿ. +ಓರ್ವ ಸುಪುತ್ರ ಎಂ.ಎಚ್‌.ಪ್ರಸಾದ್‌ಕುಮಾರ್‌ . +ಇವರು ಉಡುಪಿ ಯಕ್ಷಗಾನ ಕೇಂದ್ರದಲ್ಲಿ ಪ್ರತಿಭಾನ್ವಿತ ಕಲಾವಿದನಾಗಿ ಸೇವೆ ಸಲ್ಲಿಸುತ್ತಿದ್ದಾರೆ. +ಡಾ|ಜಿ.ಶಂಕರ್‌ ಟ್ರಸ್ಟ್‌ ಪ್ರಶಸ್ತಿಯು ಸೇರಿ ಹಲವು ಗೌರವ ಸಂಮಾನ ದೊರಕಿರುತ್ತದೆ. +ಬಡಗುತಿಟ್ಟು ಯಕ್ಷಗಾನ ರಂಗಭೂಮಿಯ ಪರಂಪರೆಯ ಹಿರಿತನದಲ್ಲಿ ಮೆರೆಯುವ ಪ್ರತಿಭಾ ಸಂಪನ್ನ ಹಿರಿಯ ಕಲಾವಿದ ಮೊಳಹಳ್ಳಿ ಹೆರಿಯ ನಾಯ್ಕ. +ಸಾಂಪ್ರದಾಯಿಕತೆಯ ಸೊಗಡಿನಲ್ಲಿ ಪುರಾಣ ಪಾತ್ರಗಳಿಗೆ ಪ್ರಾಣಪ್ರತಿಷ್ಠೆ ನೀಡುವ ಮೊಳಹಳ್ಳಿ ಹೆರಿಯನಾಯ್ಕರು, ಚಿಕ್ಕ ಮರಕಾಲ-ಮುತ್ತು ಮರಕಾಲ್ವಿ ದಂಪತಿಯ ಸುಪುತ್ರರಾಗಿ, ಕುಂದಾಪುರದ ಮೊಳಹಳ್ಳಿ ಎಂಬ ಪುಟ್ಟ ಹಳ್ಳಿಯಲ್ಲಿ ಹುಟ್ಟಿ ಬೆಳೆದು ಇದೀಗ 73ವರ್ಷದ ಹಿರಿಯನಾಗಿ ಕಲಾಸೇವೆಯಲ್ಲಿದ್ದಾರೆ. +ಶ್ರೀಯುತರ ಶೈಕ್ಷಣಿಕ ಹಂತ ಮೂರು. +ಆದರೆ ಯಕ್ಷಗಾನ ರಂಗಭೂಮಿಯ ಇವರ ಮೇರು ಪತಿಭೆಗೆ ಸಲ್ಲುವ ಅಂಕ ನಿಜಕ್ಕೂ ನೂರಕ್ಕೆ ನೂರು. +ಬಾಲ್ಯದಿಂದಲೇ ಕಲೆಂತು ನಂಟನ್ನು ಅಂಟಿಸಿಕೊಂಡ ಹೆರಿಯ ನಾಯ್ಕರಿಗೆ ಬಡತನವೇ ಕಲಾಬಾಳುವೆಗೆ ಪ್ರೇರಣೆಯಾಯಿತು. +ಹಿರಿಯ ಭಾಗವತ ನಾರ್ಣಪ್ಪ ಉಪ್ಪೂರ, ಮದ್ದಳೆಗಾರ ಬೇಳಂಜೆ ತಿಮ್ಮಪ್ಪನಾಯ್ಕರ ಗುರುತನದಲ್ಲಿ ಕಲಾಮಾರ್ಗದರ್ಶನವಾಯಿತು. +ತನ್ನ 16ನೇ ವಯಸ್ಸಿನಲ್ಲೇ ಬಣ್ಣದ ಬದುಕುಕಂಡ ನಾಯ್ಕರು ಮತ್ತೆ ಹಿಂತಿರುಗಿ ಕಂಡದ್ದಿಲ್ಲ. +ಮಂದಾರ್ತಿ (20) ಮಾರಣಕಟ್ಟೆ (16) ಸೌಕೂರು(3), ಹಾಲಾಡಿ (3) ಕಮಲಶಿಲೆ(1), ಅಮೃತೇಶ್ವರಿ(5), ಸಾಲಿಗ್ರಾಮ (1, ಪೆರ್ಡೂರು (1),ರಾಜರಾಜೇಶ್ವರಿ (1), ಕೊಲ್ಲೂರು (1), ಗೋಳಿಗರಡಿ(1), ಒಟ್ಟು ಇವರ ಮೇಳದ ತಿರುಗಾಟ ಸುಮಾರು 57 ವರ್ಷ. +ಈಗಲೂ ಮಾರಣಕಟ್ಟೆ ಮೇಳದಲ್ಲಿ ಗೆಜ್ಜೆ ಕಟ್ಟಿ ಹೆಜ್ಜೆ ಹಾಕುತ್ತಿರುವ ವೃತ್ತಿನಿಷ್ಠ ಶ್ರೇಷ್ಠಕಲಾವಿದ. +ಬಡಗಿನ ಘಟಾನುಘಟಿ ಕಲಾವಿದರ ಒಡನಾಟವನ್ನು ಹೊಂದಿದ ನಾಯ್ಕರು ಅಪಾರ ಕಲಾನುಭವದ ಯಕ್ಷಕಲಾ ಕಣಜ. +ಇವರ ಸುಧನ್ವ,ಅರ್ಜುನ, ಯಯಾತಿ, ತಾಮ್ರಧ್ವಜ, ಯತುಪರ್ಣ,ಶ್ವೇತಕುಮಾರ, ಮಾರ್ತಾಂಡತೇಜ, ಮೊದಲಾದ ಪಾತ್ರಗಳು ಇಂದಿಗೂ ಅವರ ಛಾಪು ಮುದ್ರೆಯಲ್ಲಿ ಕಲಾಲೋಕದಲ್ಲಿ ಚಿರಸ್ಥಾಯಿ-ಯಾಗುಳದಿವೆ. +ಯಕ್ಷಗಾನ ಪ್ರಪಂಚದಲ್ಲಿ “ಹಳ್ಳಾಡಿ' ಎಂಬ ಹೆಸರು ಕೇಳಿದಾಕ್ಷಣ ನಗೆಯ ಕುಲುಕಾಟದಿಂದ ಕಲಾರಸಿಕರ ಹೊಟ್ಟೆ ಹುಣ್ಣಾಗುತ್ತದೆ. +ಇದಕ್ಕೆ ಕಾರಣ ಆ ಊರಿನಲ್ಲಿ ಹುಟ್ಟಿ ಬೆಳೆದು ಸಮರ್ಥಹಾಸ್ಯಗಾರರಾಗಿ ರೂಪುಗೊಂಡ ಹಿರಿಯ ಕಲಾವಿದ ಹಳ್ಳಾಡಿ ಜಯರಾಮ ಶೆಟ್ಟಿ. +ಕುಂದಾಪುರ ತಾಲೂಕಿನ ಹಳ್ಳಾಡಿ ಅಬ್ಬಿಮನೆ ಎಂಬಲ್ಲಿ 1-2-1956ರಲ್ಲಿ ಜನಿಸಿದ ಜಯರಾಮ ಶೆಟ್ಟರು ಅಣ್ಣಪ್ಪ ಶೆಟ್ಟಿ-ಅಕ್ಕಮ್ಮ ಶೆಡ್ತಿ ದಂಪತಿಯ ಸುಪುತ್ರ. +ಎಳವೆಯಲ್ಲೇ ಯಕ್ಷಗಾನ ಕಲಾಸಕ್ತಿ ಮೈಗೂಡಿಸಿಗೊಂಡ ಶೆಟ್ಟರು ಐದನೇ ತರಗತಿಗೇ ಮಂಗಳಹಾಡಿ, ತನ್ನ 12ನೇ ವಯಸ್ಸಿನಲ್ಲೇ ಕಲಾಜೀವನ ಆರಂಭಿಸಿದರು. +ಅಮವಾಸೆಬೈಲು ಕಿಟ್ಟಪ್ಪ ಹೆಬ್ಬಾರ್‌ ಅವರು ಹಳ್ಳಾಡಿ ಅವರನ್ನು ವೃಕ್ತಿಮೇಳಕ್ಕೆ ಪರಿಚಯಿಸಿದರೆ,ಹಳ್ಳಾಡಿ ಮಂಜಯ್ಯ ಶೆಟ್ಟರು ಮೇಳದಲ್ಲಿ ಇವರಿಗೆ ಗುರುವಾಗಿ ದೊರೆತರು. +ಸತತ ಪ್ರಯತ್ನ, ಸ್ವಯಂ ಪ್ರತಿಭೆಯು ಮೂಲಕ ರಂಗದಲ್ಲಿ ಸಾರ್ಥಕ ಯಶಸ್ಸು ಕಂಡ ಜಯರಾಮಶೆಟ್ಟರು ನಾರ್ಣಪ್ಪ ಉಪ್ಪೂರರ. +ನಿರ್ದೇಶನದಲ್ಲಿ ಹಾಸ್ಯಭೂಮಿಕೆಯೊಂದನ್ನು ನಿರ್ವಹಿಸಿ ಗೆಲುವು ಕಂಡರು. +ಮೊದಲ ಹಾಸ್ಯವೇಷವೇ ವಿಶೇಷ ಯಶಸ್ಸು ಕಂಡ ನಂತರ ಆ ವಿಭಾಗಕ್ಕೇ ಇವರು ಗಟ್ಟಿಯಾದರು. +ಹಳ್ಳಾಡಿ ಅವರ ಹಾಸ್ಯಗಾರಿಕೆಗೆ ಪಾರಂಪರಿಕತೆ ಹಾಗೂ ಸೃಜನಶೀಲತೆಯ ಸುಂದರ ಮೆರುಗು ಇದೆ. +ಅವರದು ಹಾಸ್ಯಭೂಮಿಕೆಗೆ ಸಮುಚಿತವಾದ ಆಳಂಗ,ನೃತ್ಯ, ಅಭಿನಯ, ವೇಷ ವೈಖರಿ, ಮಾತುಗಾರಿಕೆ. +ಹಳ್ಳಾಡಿ ಜಯರಾಮಶೆಟ್ಟರ ಹಾಸ್ಯ ಪಾತ್ರಗಳಲ್ಲಿ ಹಾಲಾಡಿ ಕೊರ್ಗು ಹಾಸ್ಯಗಾರರ ಛಾಪು, ಕುಂಜಾಲು ಅವರ ರೂಪು, ವಿಟ್ಲ ಜೋಶಿಯವರ ನೆನಪು ಪಡಿಮೂಡುವುದನ್ನು ಕಲಾರಸಿಕರು ಗಮನಿಸಿದ್ದಾರೆ. +ಕಮಲಶಿಲೆ 1, ಮಂದಾರ್ತಿ 6, ಅಮೃತೇಶ್ವರಿ 2, ಮೂಲ್ಕಿ 3, ಪೆರ್ಡೂರು 6, ಕುಂಬಳೆ 2,ಸಾಲಿಗ್ರಾಮ 21, ಹೀಗೆ 41 ವರ್ಷಗಳ ಕಲಾವ್ಯವಸಾಯ ಅವರಿಗೆ ಸಾರ್ಥಕ ಕೀರ್ತಿ ತಂದಿತ್ತಿದೆ. +ಶ್ರೀಯುತರು ಯುಗಳ ತಿಟ್ಟಿನಲ್ಲೂ ವಿಜೃಂಭಿಸಿದ ಶ್ರೇಷ್ಠ ಹಾಸ್ಯ ಕಲಾವಿದರು. +ಜಯರಾಮಶೆಟ್ಟರ ಕಂದರ, ಕಾಶೀಮಾಣಿ,ಬಾಹುಕ, ಚಂದಗೋಪ, ವಿಡೂರಥ, ದಾರುಕ,ಬ್ರಾಹ್ಮಣ, ರಜಕ ಮೊದಲಾದ ಭೂಮಿಕೆಗಳು ವಿಶೇಷ ರಂಜನೆಯಲ್ಲಿ ಕಲಾಪ್ರೇಮಿಗಳ ಮನಸಗೆದ್ದಿವೆ. +ಕುಂದಾಪುರ ಕನ್ನಡ ಸೊಗಸನ್ನು ನಾಡಿನಾದ್ಯಂತ ಹಾಸ್ಯ ಪಾತ್ರಗಳಲ್ಲಿ ತೋರಿದ ಅನುಭವಿ ಹಾಸ್ಯಗಾರ ಜಯರಾಮ ಶೆಟ್ಟರ ಮಡದಿ ರೇಣುಕಾ ಶೆಟ್ಟಿ. +ರತೀಶ್‌,ಸೌಮ್ಯಾ ಮಕ್ಕಳು. +ನಾಡಿನಾದ್ಯಂತ ನೂರಾರು ಸಂಮಾನಗಳು ಶ್ರೀಯುತರಿಗೆ ದೊರಕಿದೆ. +ಮುಂಬಯಿ ಬಂಟರಸಂಘ, ಬೆಂಗಳೂರು ನಾಡವರ ಸಂಘ, ಬೆಂಗಳೂರು ಕರ್ನಾಟಕ ರಕ್ಷಣಾ ವೇದಿಕೆಯ ಗೌರವ ಸಂಮಾನವೂ ಇವರಿಗೆ ಲಭಿಸಿದೆ. + ಬಡಾಬಡಗಿನ ಪರಂಪರೆಯ ಸತ್ವ-ತತ್ವಗಳ ಪರಿಪೂರ್ಣ ಪರಿಪಾಕವಾಗಿ ಕಲಾ ಶ್ರೀಮಂತಿಕೆಯನ್ನು ಮೆರೆಯುವ ಶಿಷ್ಟ ಕಲಾವಿದರಲ್ಲಿ ಶಿರಳಗಿ ತಿಮ್ಮಪ್ಪ ನಾರಾಯಣ ಹೆಗಡೆ ಅವರೂ ಒಬ್ಬರು. +ಉತ್ತರ ಕನ್ನಡದ ಶಿರಳಗಿ ಎಂಬಲ್ಲಿ 1957ರಆಗಸ್ಟ್‌ 17 ರಂದು ನಾರಾಯಣ ತಿಮ್ಮಯ್ಯ ಹೆಗಡೆ-ಮಹಾಲಕ್ಷ್ಮೀ ಹೆಗಡೆ ದಂಪತಿಯ ಪುತ್ರರಾಗಿ ಜನಿಸಿದ ತಿಮ್ಮಪ್ಪ ಹೆಗಡೆಯವರು ಹತ್ತನೇ ತರಗತಿಯವರೆಗೆ ಓದು ನಡೆಸಿ, ತನ್ನ 22ನೇ ವರ್ಷದಲ್ಲೇ ಕಲಾ ಬದುಕು ಕಂಡವರು. +ಪರಿಸರದಲ್ಲಿ ನಡೆಯುತ್ತಿದ್ದ ಯಕ್ಷಗಾನ ಬಯಲಾಟಗಳ ನಿರಂತರ ವೀಕ್ಷಣೆಯೇ ತಿಮ್ಮಪ್ಪ ಹೆಗಡೆಯವರಿಗೆ ಕಲಾಪ್ರೇರಣೆ ನೀಡಿತು. +ಇವರ ತಂದೆ ಪ್ರಸಿದ್ಧ ಹವ್ಯಾಸೀ ವೇಷಧಾರಿಯಾದುದರಿಂದ ಕಲಾವಂತ ಮನೆತನದ ಹಿನ್ನೆಲೆ ಇವರಿಗಿತ್ತು. +ಗೋಡೆ ನಾರಾಯಣ ಹೆಗಡೆಯವರ ಗುರುತನದಲ್ಲಿ ಸಶಕ್ತ ಕಲಾವಿದ್ಯಾ ಪ್ರೌಢಿಮೆ ಹೊಂದಿದ ತಿಮ್ಮಪ್ಪ ಹೆಗಡೆಯವರು,ಗುಂಡಬಾಳ 1, ಇಡಗುಂಜಿ 15, ಸಾಲಿಗ್ರಾಮ 9,ಶಿರಸಿ-ಪಂಚಲಿಂಗ 1, ಹೀಗೆ 26 ವರ್ಷಗಳ ಕಲಾಕೃಷಿ ಪೂರೈಸಿದ್ದಾರೆ. +ಸಾಂಪ್ರದಾಯಿಕ ಕೆತ್ತನೆಯ ಪೌರಾಣಿಕ ಛಾಪಿನ ವೇಷಗಾರಿಕೆ, ಶ್ರುತಿನಿಷ್ಠವಾದ ಪಾಂಡಿತ್ಯಪೂರ್ಣ ನಿರರ್ಗಳ ಮಾತುಗಾರಿಕೆ, ಔಚಿತ್ಯವರಿತ ಪ್ರಮಾಣಬದ್ಧ ನೃತ್ಯಗಾರಿಕೆ ಮೈಗೂಡಿಸಿಕೊಂಡು ನಿರ್ವಹಣಾ ಭೂಮಿಕೆಗಳಿಗೆ ಸಮುಚಿತ ರಂಗಸ್ವರೂಪ ನೀಡುವ ತಿಮ್ಮಪ್ಪ ಹೆಗಡೆಯವರು ಪುರಾಣ ಪ್ರಸಂಗಗಳ ಅಗಾಧ ಜ್ಞಾನ ಸಂಪನ್ನರು. +ಕೃಷ್ಣ ಸಂಧಾನದ ಧರ್ಮರಾಯ, ಕರ್ಣ ಪರ್ವದ ಕೌರವ, "ರಾಮ ನಿರ್ಯಾಣ'ದ ಲಕ್ಷ್ಮಣ,ಕಾರ್ತವೀರ್ಯ'ದ ಕೃತವೀರ್ಯ, ಸುಭದ್ರಾ ಕಲ್ಯಾಣದ ಅರ್ಜುನ ಸನ್ಯಾಸಿ, “ಕಂಸವಧೆ'ಯ ನಾರದ, ಅಕ್ರೂರ,"ಹರಿಶ್ಚಂದ್ರ'ದ ನಕ್ಷತ್ರಿಕ, ವಸಿಷ್ಠ ಮೊದಲಾದ ಪೌರಾಣಿಕ ಪಾತ್ರಗಳು ಇಂದಿಗೂ ಶಿರಳಗಿ ತಿಮ್ಮಪ್ಪ ಹೆಗಡೆಯವರ ಸಮರ್ಥ ಕಲಾವಂತಿಕೆಯನ್ನು ನೆನಪಿಸುತ್ತವೆ. +ಬಡಗುತಿಟ್ಟಿನ ಒಬ್ಬ ಸಮರ್ಥ ಪೀಠಿಕಾ ರಾಜವೇಷಧಾರಿಯಾಗಿ ಮೆರೆದ ಶಿರಳಗಿ ಪ್ರತಿಭಾನ್ವಿತ ಕಲಾವಿದರು. +ಪತ್ನಿ ಶಾರದ ಹೆಗಡೆ. +ಅರುಣ,ಅರ್ಚನಾ ಎಂಬ ಈರ್ವರು ಮಕ್ಕಳು. +ಹಲವಾರು ಸಂಘ ಸಂಸ್ಥೆಗಳಿಂದ ಶ್ರೀಯುತರಿಗೆ ಸಂಮಾನ ದೊರಕಿದೆ. +ಬಡಗುತಿಟ್ಟಿನ ಅನುಭವೆ ಮದ್ದಳೆವಾದನದಲ್ಲಿ ಸಾರ್ಥಕ ಹೆಸರುಗಳಿಸಿದವರು ದೇವದಾಸ ಶೆಣೈ,ಆರ್ಗೋಡು. +ಕುಂದಾಪುರ ತಾಲೂಕಿನ ಆರ್ಗೋಡು ಎಂಬಲ್ಲಿ 27-9-1952ರಲ್ಲಿ ಜನಿಸಿದ ದೇವದಾಸ ಶಣೈ ಅವರು ಹಿರಿಯ ವೇಷಧಾರಿ ನರಸಿಂಹ ಶಾನುಭಾಗ್‌-ಭಾಗೀರಥಿ ದಂಪತಿಯ ಸುಪುತ್ರ. +ಹತ್ತರವರೆಗೆ ಅಕ್ಷರ ಕಲಿಕೆ ನಡೆಸಿ, ಇಪ್ಪತ್ತರಲ್ಲಿ ಯಕ್ಷಗಾನ ಪ್ರಪಂಚವನ್ನು ಪ್ರವೇಶಿಸಿದ ದೇವದಾಸ ,ಶೆಣೈಯವರಿಗೆ ಕೌಟುಂಬಿಕವಾಗಿ ಆನುವಂಶೀಯತೆಯ ಕಲಾ ಬಳುವಳಿಯಿದೆ. +ಇವರ ತಂದೆ ಸಮರ್ಥ ವೇಷಧಾರಿಯಾದರೆ, ಚಿಕ್ಕಪ್ಪ ಗೋವಿಂದರಾಯ ಶೆಣೈ ಪ್ರಬುದ್ಧ ಭಾಗವತರಾಗಿದ್ದರು. +ಹಾಗಾಗಿ ಕಲಾವಂತಿಕೆಯೆಂಬುದು ಶ್ರೀಯುತರಿಗೆ ಎಳವೆಯಲ್ಲೇ ಮೈಗೂಡುವಂತಾಯಿತು. +ಕಮಲಶಿಲೆ 5, ಪೆರ್ಡೂರು 3, ಹಿರಿಯಡಕ 2, ಹಾಲಾಡಿ 1, ಅಮೃತೇಶ್ವರಿ 4, ಸೌಕೂರು 5,ಮಂದಾರ್ತಿ 5, ಹೀಗೆ ರಜತ ವರ್ಷವನ್ನು ಕಲಾಯಾತ್ರೆಯಲ್ಲಿ ಕಳೆದಿದ್ದಾರೆ. +ಪ್ರಸ್ತುತ ಶೆಣೈಯವರು ಮಂದಾರ್ತಿ ಮೇಳದ ಮದ್ದಳೆವಾದಕರಾಗಿ ದುಡಿಯುತ್ತಿದ್ದಾರೆ. +ಪ್ರಸಂಗಗಳ ಪ್ರತೀ ಪಾತ್ರಗಳ,ಸಂದರ್ಭ-ಸನ್ನಿವೇಶಗಳ ಔಚಿತ್ಯವನ್ನು ಮನಸ್ವೀ ಅರಿತು, ಗಾನಪೂರಕವಾಗಿ ಮದ್ದಳೆ ನುಡಿಸುವ ದೇವದಾಸ ಶೆಣೈಯವರು ಅಗಾಧ ಕಲಾನುಭವ ಹೊಂದಿದವರು. +ಶ್ರೀಯುತರು ಚಂಡೆವಾದನ ಕಲೆಯನ್ನೂ ಬಲ್ಲವರು. +ಗೀತಾ ಶೆಣೈ ಎಂಬುವವರು ಇವರ ಧರ್ಮಪತ್ನಿ. +ಗುರುಪ್ರಸಾದ ಶೆಣೈ, ಮಾಧವ ಶೆಣೈ,ಹರ್ಷ, ಭಾಗ್ಯಶ್ರೀ ಇವರ ನಾಲ್ಕು ಮಂದಿ ಮಕ್ಕಳು. +ಶ್ರೀಯುತರನ್ನು ಹಲವಾರು ಸಂಘಸಂಸ್ಥೆಗಳು,ಸಾಂಸ್ಕೃತಿಕ ಸಂಘಟನೆಗಳು ಗುರುತಿಸಿ ಗೌರವಿಸಿವೆ. +ಶ್ಲಾಘ್ಯಯೋಗ್ಯ ಪಾತ್ರ ಚಿತ್ರಣ, ಸದೃಢ ಆಳ್ತನದಲ್ಲಿ ಕಂಗೊಳಿಸುವ ವೇಷಗಾರಿಕೆ, ತೂಕದ ರಸಾತ್ಮಕ ಮಾತುಗಾರಿಕೆ. +ಖಚಿತ ಲಯಗಾರಿಕೆ ಹಾಗೂ ಸುಪುಷ್ಪ ಪ್ರಸಂಗ ನಡೆಯನ್ನು ರಂಗಮುಖದಲ್ಲಿ ನಿಚ್ಚಳವಾಗಿ ಗುರುತಿಸುವಂತೆ ಮಾಡುವ ಅನುಭವಿ ಕಲಾವಿದ ಬೆದ್ರಾಡಿ ನರಸಿಂಹ ನಾಯ್ಕ. +ಕುಂದಾಪುರ ತಾಲೂಕಿನ ಬೆದ್ರಾಡಿ ಎಂಬಲ್ಲಿ ರಾಮನಾಯ್ಕ-ಸಂಕಮ್ಮ ಮೊಗೇರ್ತಿ ದಂಪತಿಯ ಸುಪುತ್ರರಾಗಿ 12-7-1965ರಲ್ಲಿ ಜನಿಸಿದ ನರಸಿಂಹ ನಾಯ್ಕ ಅವರ ಅಕ್ಷರಶಿಕ್ಷಣ ಐದಕ್ಕೇ ಕೈದಾಯಿತು. +15ನೇ ವಯಸ್ಸಿನಲ್ಲೇ ಅವರನ್ನು ಬಣ್ಣದ ಬದುಕು ಕೈಬೀಸಿ ಕರೆಯಿತು. +ಹಿರಿಯ ಕಲಾವಿದ ಆಲೂರು ತೇಜನವರ ಪ್ರೇರಣೆಯಂತೆ ಯಕ್ಷಗಾನ ವೃತ್ತಿರಂಗಭೂಮಿಗೆ ಮನಸ್ವೀ ಅರ್ಪಣೆಯಾದ ಇವರು, ಹಾರಾಡಿ ಸರ್ವೋತ್ತಮ ಗಾಣಿಗರ ಶಿಷ್ಯನಾಗಿ ಸಶಕ್ತ ಕಲಾನುಭವ ದ್ರವ್ಯವನ್ನು ಸಂಪಾದಿಸಿಕೊಂಡರು. +ಯಕ್ಷಗಾನ ಕಥಾನಕಗಳ ಯಾವುದೇ ನಡೆಯ ಗಂಡುಭೂಮಿಕೆಗಳನ್ನು ಸಮರ್ಥವಾಗಿ ಪೋಷಿಸಬಲ್ಲಕ ಲಾವಂಶಿಕೆ ಹೊಂದಿದ ಬೆದ್ರಾಡಿಯವರ ನಾಯಕ,ಪ್ರತಿನಾಯಕ, ಹಾಗೂ ಖಳನಾಯಕ ಪಾತ್ರಗಳ ಯಕ್ಷಗಾನೀಯ ರಂಗ ಚಿತ್ರಣ ಮನ ಮೆಜ್ಜುವಂತಾದ್ದು. +ಮಂದಾರ್ತಿ 8, ಸೌಕೂರು 15, ಹಾಲಾಡಿ 2,ಹೀಗೆ ವೃತ್ತಿ ಜೀವನದಲ್ಲಿ ಶ್ರೀಯುತರ ಸಂಪನ್ನ ಯಕ್ಷಕೃಷಿ ಬೆಳ್ಳಿ ಹಬ್ಬವನ್ನು ಯಶಸ್ವಿಯಾಗಿ ಪೂರೈಸಿದೆ. +ಪ್ರಸ್ತುತ ಬೆದ್ರಾಡಿಯವರು ಮಂದಾರ್ತಿ ಮೇಳದ ಕಲಾವಿದರು. +ಕೀಚಕ, ಭೀಮ, ಅರ್ಜುನ, ಕೌರವ, ಕಂಸ,ಭಸ್ಮಾಸುರ, ದುಷ್ಟಬುದ್ಧಿ, ವಿಭೀಷಣ, ವೀರಮಣಿ,ರಾವಣ, ಬಲರಾಮ ಮೊದಲಾದ ಪೌರಾಣಿಕ ಪಾತ್ರಗಳಲ್ಲಿ ಬೆದ್ರಾಡಿಯವರ ಕಲಾಭಿವ್ಯಕ್ತಿ ಮನೋಜ್ಞ ಧರ್ಮಪತ್ನಿ ಸರೋಜಾ. +ಪ್ರಶಾಂತ, ಪ್ರದೀಪ,ಪ್ರವೀಣ, ಪ್ರಥ್ವಿ ಮಕ್ಕಳು. +ಪ್ರಬುದ್ಧ ಕಲಾವಿದ ಬೆದ್ರಾಡಿ ನರಸಿಂಹ ನಾಯ್ಕರು ಉಡುಪಿ-ಕುಂದಾಪುರದಲ್ಲಿ ಸಂಪನ್ನಗೊಂಡ ಮೊಗವೀರ ಕಲೋತ್ಸವ ಸೇರಿದಂತೆ ಅನೇಕ ಸಮಾರಂಂಭಗಳಲ್ಲಿ ಸಂಘ-ಸಂಸ್ಥೆಗಳಲ್ಲಿ ಸಂಮಾನಿತರಾಗಿದ್ದಾರೆ. +ರಾಜವೇಷ, ಮುಂಡಾಸುವೇಷ, ಕಿರಾತವೇಷ,ಬಣ್ಣದ ವೇಷ, ಹೀಗೆ ವರ್ಣರಂಜಿತ ಕಲಾವ್ಯಕ್ತಿತ್ವದಲ್ಲಿ ವಿಜೃಂಭಿಸುವ ಸಂಪನ್ನ ಕಲಾವಿದ ಮಾನ್ಯ ನರಸಿಂಹ. +ಉಡುಪಿ ತಾಲೂಕಿನ ಮಾನ್ಯ ಎಂಬ ಹಳ್ಳಿಯಲ್ಲಿ ಕುಷ್ಠ ಮರಕಾಲ-ಲಚ್ಚಮ್ಮ ದಂಪತಿಯ ಪುತ್ರನಾಗಿ 12-06-1960ರಲ್ಲಿ ಜನಿಸಿದ ನರಸಿಂಹ ಅವರುಆರನೇ ತರಗತಿಯವರೆಗಿನ ಶೈಕ್ಷಣಿಕ ಹಂತದ ಬಳಿಕ 20ನೇ ವಯಸ್ಸಿನಲ್ಲೇ ಯಕ್ಷಗಾನ ಬಣ್ಣದ ಪ್ರಪಂಚಕ್ಕೆ ಮೊಗವೊಡ್ಡಿದರು. +ಹಿರಿಯ ಸ್ರ್ತೀ ವೇಷಧಾರಿ ವಂಡ್ಸೆ ನಾರಾಯಣ ಗಾಣಿಗರ ಪ್ರೇರಣೆಯನ್ನು ಪಡೆದ ನರಸಿಂಹ ಅವರು 1980ರಲ್ಲಿ ಉಡುಪಿ ಯಕ್ಷಗಾನ ಕೇಂದ್ರದ ವಿದ್ಯಾರ್ಥಿಯಾಗಿ ನೀಲಾವರ ರಾಮಕೃಷ್ಣಯ್ಯ, ಮಹಾಬಲ ಕಾರಂತ,ಶ್ರೀಧರಹೆಬ್ಬಾರರ ಗುರುತನದಲ್ಲಿ ಶಾಸ್ತ್ರೋಕ್ತ ಯಕ್ಷವಿದ್ಯೆಯನ್ನು ಗಳಿಸಿದರು. +ಮಂದಾರ್ತಿ 10, ಪೆರ್ಡೂರು 1. ಇಡಗುಂಜಿ1, ಸೌಕೂರು 8, ಹಾಲಾಡಿ 6, ಮಡಾಮಕ್ಕಿ 2,ಕಮಲಶಿಲೆ 1, ಗೋಳಿಗರಡಿ 1, ಹೀಗೆ ಮೂರು ದಶಕಗಳ ಕಾಲ ರಂಗಕೃಷಿಯಲ್ಲಿ ಸಾರ್ಥಕ್ಕ ಕಂಡ ಶ್ರೀಯುತರು ಪ್ರಸ್ತುತ ಮಂದಾರ್ತಿ ಮೇಳದ ಬಣ್ಣದ ವೇಷಧಾರಿಯಾಗಿ ಕಲಾಸೇವೆ ನಡೆಸುತ್ತಿದ್ದಾರೆ. +ಅನನ್ಯ ಅನುಭವವನ್ನು ಹೊಂದಿದ ಮಾನ್ಯ ಅವರ ಪ್ರತೀ ಪಾತ್ರಗಳೂ ಸಹೃದಯ ಕಲಾಪ್ರೇಮಿಗಳಿಂದ ಮಾನ್ಯತೆ ಪಡೆದಿವೆ. +ಒಂದು ಸುಸೂತ್ರವಾದ ರಂಗ ಚೌಕಟ್ಟಿನಲ್ಲೇ ಯಕ್ಷಗಾನ ಕಲಾಕರ್ಮವನ್ನು ನಡೆಸುವ ಮಾನ್ಯ ನರಸಿಂಹ,ದೇವೇಂದ್ರ, ಧರ್ಮರಾಯ ಮೊದಲಾದ ಪೋಷಕ ರಾಜವೇಷಗಳನ್ನೂ, ಕೌಂಡ್ಲೀಕ, ದಕ್ಷ,ವೀರಮಣಿಯಂತಹ ಮುಂಡಾಸುವೇಷಗಳನ್ನೂ,ವಿಂಧ್ಯಕೇತ, ವಿದ್ಯುಲ್ಲೋಚನ, ಏಕಲವ್ಯ ಮೊದಲಾದ ಪ್ರತಿನಾಯಕ ಪಾತ್ರಗಳನ್ನು, ಬಕಾಸುರ, ಕಿಮ್ಮೀರ,ಹಿಡಿಂಬಾಸುರ, ಶೂರ್ಪನಖಾ, ಹಿಡಿಂಬೆ ವೃತ್ರಜ್ವಾಲೆಯಂತಹ ಗಂಡು-ಹೆಣ್ಣು ಬಣ್ಣದ ವೇಷಗಳನ್ನು ಸಮರ್ಥವಾಗಿ ನಿರ್ವಹಿಸಿ ಗೆಲುವು ಕಂಡವರು. +ಪತ್ನಿ ಗೀತಾ. +ವಸಂತ, ಪ್ರಶಾಂತ, ವಸಂತಿ ಮಕ್ಕಳು. +ಹಿರಿಯ ಪ್ರತಿಭಾಶಾಲಿ ಕಲಾವಿದ ಮಾನ್ಯ ನರಸಿಂಹ ಅವರನ್ನು ಡಾ.ಜಿ.ಶಂಕರ್‌ ಫ್ಯಾಮಿಲಿಟ್ರಸ್ಟ್‌ ವತಿಯಿಂದ ಗೌರವಪೂರ್ವಕವಾಗಿ ಸಮ್ಮಾನಿಸಲಾಗಿದೆ. +ಬಡಗುತಿಟ್ಟಿನ ಸಾಂಪ್ರದಾಯಿಕ ಶೈಲಿಯ ಭಾಗವತರಲ್ಲಿ ಮತ್ಯಾಡಿ ನರಸಿಂಹ ಶೆಟ್ಟಿ ಅವರದು ಬಲು ದೊಡ್ಡ ಹೆಸರು. +40ಕ್ಕೂ ಹೆಚ್ಚು ಪೌರಾಣಿಕ ಪ್ರಸಂಗಗಳನ್ನು ಕಂಠಸ್ಥ ಮಾಡಿಕೊಂಡಿರುವ ಶೆಟ್ಟರು ಈ ತಿಟ್ಟಿನ ಪರಂಪರೆಯ ಪ್ರತಿನಿಧಿಯಂತೆ ಕಾಣುವ ಅನುಭವಿ ಭಾಗವತರು. +27-6-1927ರಂದು ಕುಂದಾಪುರ ತಾಲೂಕಿನ ಯಡಾಡಿ - ಮತ್ಯಾಡಿ ಎಂಬಲ್ಲಿ ಜಿ.ರಾಮಣ್ಣಶೆಟ್ಟಿ-ಮುತ್ತಕ್ಕ ಶೆಡ್ತಿ ದಂಪತಿಯ ಸುಪುತ್ರನಾಗಿ ಜನಿಸಿದ ನರಸಿಂಹ ಶೆಟ್ಟಿ ಅವರಿಗೆ ಬಾಲ್ಯದಿಂದಲೇ ಯಕ್ಷಗಾನದ ಗೀಳು. +8ನೇ ತರಗತಿಗೇ ಅಕ್ಷರ ವಿದ್ಯೆಗೆ ಮಂಗಳಹಾಡಿ, 25ನೇ ವರ್ಷದಲ್ಲಿ ಗಾನ ಬದುಕಿಗೆ ಶ್ರೀಕಾರ ಹಾಡಿದ ಶೆಟರು. +ನಾರ್ಣಪ ಉಪೂರರ ಶಿಷ್ಯರಾಗಿ ಪಾತಾಳದೀಕ್ಷೆ, ಪ್ರಸಂಗನಡ, ರಾಗಾನುಭವ,ರಂಗಪರಿಣತಿಯನ್ನು ಕಲಿತುಕೊಂಡರು. +ಕೊಡವೂರು, ಪೆರ್ಡೂರು, ಅಮೃತೇಶ್ವರಿ,ಮಂದಾರ್ತಿ, ಮಾರಣಕಟ್ಟೆ, ಕಳುವಾಡಿ, ಮೇಳಗಳಲ್ಲಿ ತಿರುಗಾಟ ಮಾಡಿದ ಶೆಟ್ಟರು ವೃತ್ತಿರಂಗದಲ್ಲಿ ಸುದೀರ್ಫ 45 ವರ್ಷ ಪೂರೈಸಿ 1992ರಿಂದ ವಿಶ್ರಾಂತ ಜೀವನ ನಡೆಸುತ್ತಿದ್ದಾರೆ. +ಪತ್ನಿ ಸಾಧಮ್ಮ ಶೆಡ್ತಿ. +ಸುಲೋಚನಾ,ಚಂದ್ರಶೇಖರ,ರತ್ನಾವತಿ, ಜ್ಯೋತಿ ಎಂಬ 4 ಮಂದಿ ಮಕ್ಕಳನ್ನು ಪಡೆದ ಶೆಟ್ಟರು ಅನನ್ಯ ಕಲಾನುಭವವನ್ನು ಹೊಂದಿದ ಪ್ರೌಢ ಭಾಗವತರು. +ಇವರಿಗೆ ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ ಪ್ರಶಸ್ತಿ ದೊರೆತಿದೆ. +ಅಲ್ಲದೆ ಉಡುಪಿ ಯಕ್ಷಗಾನ ಕಲಾರಂಗವು "ಭಾಗವತ ನಾರ್ಣಪ್ಪ ಉಪ್ಪೂರ ಪ್ರಶಸ್ತಿ' ನೀಡಿ ಗೌರವಿಸಿದೆ. +“ನಾರಾಯಣಕಿಲ್ಲೆ' ಪ್ರಶಸ್ತಿ, "ಬಂಟರ ಕಲೋತ್ಸವ' ಸಮ್ಮಾನ ದೊರಕಿರುತ್ತದೆ. +ಬಡಾಬಡಗಿನ ಪಾರಂಪರಿಕ ರಂಗನಡೆಯನ್ನು ಸುಪುಷ್ಟವಾಗಿ ರೂಢಿಸಿಕೊಂಡು, ಪ್ರೌಢ ಪ್ರತಿಭೆಯ ಪ್ರಭಾವಳಿಯಲ್ಲಿ ಪೌರಾಣಿಕ ಯಕ್ಷಜಗತ್ತನ್ನು ಬೆಳಗಿದ ಹಿರಿಯ ವೇಷಧಾರಿ ನಾಗಪ್ಪ ಗೋವಿಂದ ಗೌಡಗುಣವಂತೆ. +ಉತ್ತರ ಕನ್ನಡದ ಹೊನ್ನಾವರ ತಾಲೂಕಿನ ಹೆಬ್ಬಾರ ಹಿತ್ಲು ಎಂಬಲ್ಲಿ 01-10-1944ರಲ್ಲಿ ಗೋವಿಂದ ಗೌಡ-ಗಣಪಿ ಗೌಡ ದಂಪತಿಯ ಮಗನಾಗಿ ಜನಿಸಿದ ನಾಗಪ್ಪ ಗೌಡರು, ಹತ್ತನೇ ಇಯತ್ತೆಯವರೆಗೆ ಅಕ್ಷರ ಕಲಿಕೆ ನಡೆಸಿ, 18ನೇವಯಸ್ಸಿನಲ್ಲಿ ಕಲಾಬದುಕಿಗೆ ಹೆಜ್ಜೆಯಿಟ್ಟರು. +ಕೆರೆಮನೆ ಶಂಭು ಹೆಗಡೆಯವರ ಅಪ್ರತಿಮ ಕಲಾಸಿದ್ಧಿಯೇ ನಾಗಪ್ಪ ಗೌಡರಿಗೆ ಬಣ್ಣದ ಬದುಕಿಗೆ ಪ್ರೇರಣೆಯಾಯಿತು. +ವಿಶೇಷವೆಂದರೆ ಶ್ರೀಯುತರಿಗೆ ಶಂಭು ಹೆಗಡೆಯವರ ಗುರುತನವೂ, ಪ್ರೋತ್ಸಾಹವೂ,ಸಮರ್ಪಕವಾಗಿ ದೊರಕಿತು. +ಮಲಗದ್ದೆ ಗಣೇಶಯ್ಯ ಅವರ ರಂಗ ತರಬೇತಿ ಶ್ರೀಯುತರನ್ನು ಸುಯೋಗ್ಯ ಕಲಾವಿದರನ್ನಾಗಿ ರೂಪಿಸುವಲ್ಲಿ ಶಕ್ತವಾಯಿತು. +ನಾಗಪ್ಪಗೌಡರ ವೇಷಗಾರಿಕೆ, ರಂಗನಡೆ, ನೃತ್ಯಾಭಿನಯ ಹಾಗೂ ಮಾತುಗಾರಿಕೆ ಸಾಮೃದ್ಧಿಕ ಸೊಗಸು ಬಿಂಬಿಸುತ್ತವೆ. +ಸಾಮಾನ್ಯವಾಗಿ ಪೌರಾಣಿಕ ಪ್ರಸಂಗಗಳಲ್ಲಿ ಬರುವ ಎಲ್ಲಾ ವಿಧದ ಪೋಷಕ ಪಾತ್ರಗಳನ್ನೂ ನಿರ್ವಹಿಸಿ ಸೈ ಅನ್ನಿಸಿ ಕೊಂಡಿದ್ದಾರೆ. +ಬಬ್ರುವಾಹನ, ವೃಷಸೇನ, ಧರ್ಮಾಂಗದ ಮೊದಲಾದ ಮೂರನೇ ವೇಷಗಳನ್ನು ಯಶಸ್ವಿಯಾಗಿ ನಿರ್ವಹಿಸಿದವರು ಗೌಡರು. +ನಾಗಪ್ಪ ಗೌಡರಿಗೆ ವಿಶೇಷ ಮಾನ್ಯತೆಯನ್ನು ತಂದಿತ್ತ ವೇಷವೆಂದರೆ ಕಿರಾತ. +ಶಬರ ದೊರೆಯಾಗಿ ವಿಶಿಷ್ಟ ನೃತ್ಯಾಭಿನಯ ವೈಖರಿ, ವಾಕ್‌ಚಮತ್ಕಾರ,ವೇಷಾಲಂಕರಣದಲ್ಲಿ ರಂಗಮಂಜದಲ್ಲಿ ವಿಜೃಂಭಿಸಿ ಜನಪ್ರಿಯತೆ ಕಂಡಿದ್ದಾರೆ. +ಅವರ ಕುಳಿಂದ, ಏಕಲವ್ಯ,ವಿಂಧ್ಯಕೇತ, ಸುನೇತ್ರ, ಮೊದಲಾದ ಭೂಮಿಕೆಗಳು ಜೀವಂತವಾಗಿ ಮೈದಾಳಿವೆ. +ಇಡಗುಂಜಿ ಮೇಳವೊಂದರಲ್ಲೇ ಸುಮಾರು 36 ವರ್ಷಗಳ ರಂಗಸೇವೆಯನ್ನು ಸಲ್ಲಿಸಿ ದಾಖಲಾರ್ಹ ಕಲಾವಿದರಾಗಿ ಕಾಣುವ ಗೌಡರು ಪ್ರಸ್ತುತ ನಿವೃತ್ತ ಜೀವನದಲ್ಲಿದ್ದಾರೆ. +ಪತ್ನಿ ಮಂಜಿ ಗೌಡ. +ರಾಧಾ,ಸದಾನಂದ, ಕಲ್ಪನಾ, ಸವಿತಾ ಮಕ್ಕಳು. +ಸ್ಥಳೀಯ ಸಂಘ-ಸಂಸ್ಥೆಗಳು ಗೌಡರನ್ನು ಗುರುತಿಸಿ ಸಂಮಾನಿಸಿವೆ. + ವಿದೂಷಕರಾಗಿ ಬಡಗುತಿಟ್ಟಿನ ಯಕ್ಷಗಾನ ರಂಗದಲ್ಲಿ ನಗೆ ವ್ಯಂಜನದ ರಂಜನೆಯನ್ನು ಕಲಾರಸಿಕರಿಗೆ ಉಣಬಡಿಸುವ ಹಿರಿಯ ಹಾಸ್ಯ ಕಲಾವಿದ ಹೊಳೆಮಗೆ ನಾಗಪ್ಪ ಹಾಸ್ಯಗಾರ. +ಕುಂದಾಪುರ ತಾಲೂಕಿನ ಕಳವಿನ ಬಾಗಿಲು-ಹೊಳೆವಗೆ ಎಂಬ ಹಳ್ಳಿಯಲ್ಲಿ ದೊಟ್ಟನಾಯ್ಕ-ಚಂದು ಮೊಗೇರ್ತಿ ದಂಪತಿಯ ಮಗನಾಗಿ ಜನಿಸಿದ ನಾಗಪ್ಪಇದೀಗ ಅರವತ್ನಾಲ್ಕರ ಹರಯದಲ್ಲಿರುವ ವೃತ್ತಿನಿಷ್ಠಕಲಾವಿದರು. +ಕಡುಬಡತನದ ಕುಟುಂಬದ ನಾಗಪ್ಪ ಅವರು ಎಳವೆಯಲ್ಲೇ ಅನ್ಯಾದೃಶ ಯಕ್ಷಗಾನ ಕಲಾಸಕ್ತಿ ಹೊಂದಿದವರು. +ಪರಿಸರದಲ್ಲಿ ನಡೆಯುತ್ತಿದ್ದ ಬಯಲಾಟದ ಆಕರ್ಷಣೆಯಿಂದ ಯಕ್ಷಗಾನ ವೃತ್ತಿ ಬದುಕಿಗೆ ಮನ ಮಾಡಿದ ಶ್ರೀಯುತರು, 13ರ ಹರೆಯದಲ್ಲೇ ಕಾಲಿಗೆ ಗೆಜ್ಜೆ ಕಟ್ಟಿದರು. +ನಾಗಪ್ಪ ಅವರಿಗೆ ಬೇಲ್ತೂರು ಕುಷ್ಠ ನಾಯ್ಕ ಅವರು ಪ್ರಥಮ ಹೆಜ್ಜೆ ಗುರುವಾದರು. +ಹಿರಿಯ ಹಾಸ್ಯಗಾರ ವಂಡ್ಸೆ ನಾಗಯ್ಯ ಶೆಟ್ಟರು ಇವರನ್ನು ಮೇಳಕ್ಕೆ ಸೇರಿಸಿದರು. +ಉಡುಪಿ ಯಕ್ಷಗಾನ ಕೇಂದ್ರದ ವಿದ್ಯಾರ್ಥಿಯಾಗಿ ಗುರು ವೀರಭದ್ರನಾಯಕ್‌, ನೀಲಾವರ ರಾಮಕೃಷ್ಣಯ್ಯ ಹಿರಿಯಡಕ ಗೋಪಾಲರಾಯರಲ್ಲಿ ಪಾರಂಪರಿಕ ಯಕ್ಷಶಿಕ್ಷಣ ಪಡೆದು ಸಂಪನ್ನ ಕಲಾವಿದರಾದರು. +ಮಾರಣಕಟ್ಟೆ 11, ಅಮೃತೇಶ್ವರಿ 10, ಸೌಕೂರು 2, ಗೋಳಿಗರಡಿ 7, ಕಮಲಶಿಲೆ 10, ಹಾಲಾಡಿ ೨,ಮೇಗರವಳ್ಳಿ 1, ಕಳವಾಡಿ 1 ಮಡಾಮಕ್ಕಿ 1,ಧರ್ಮಸ್ಥಳ 2. ಪೆರ್ಡೂರು 2, ಬಗ್ಡಾಡಿ 2, ಹೀಗೆ 51 ವರ್ಷಗಳ ಸುದೀರ್ಥ ರಂಗಕೃಷಿಯನ್ನು ಸಾರ್ಥಕವಾಗಿ ಪೂರೈಸಿದ. +ನಾಗಪ್ಪ ಹೊಳೆಮಗೆಯವರು ಯುಗಳ ತಿಟ್ಟಿನ ಸಮರ್ಥ ಹಾಸ್ಕ್ಯಗಾರರಾಗಿ ಜನಪ್ರಿಯರಾಗಿದ್ದಾರೆ. +ಹಾಸ್ಯಭೂಮಿಕೆಗಳಿಗೊಪ್ಪುವ ಆಳಂಗ, ಭಾಷೆ. +ಧ್ವನಿ, ಹಾವ-ಭಾವ, ನೃತ್ಯ-ಅಭಿನಯದಿಂದ ಸೊಗಯಿಸುವ ನಾಗಪ್ಪನವರು ರಂಗವೇರಿದರೆ ಸಾಕು ಅಪಾರ ಪ್ರೇಕ್ಷಕ ವಲಯದೊಂದಿಗೆ ಇದಿರು ಪಾತ್ರಧಾರಿಯೂ ಫಕ್ಕನೆ ತುಟಿಯರಳಿಸಿ ನಕ್ಕು ಬಿಡುವ ಸನ್ನಿವೇಶ ಸೃಷ್ಠಿಯಾಗುತ್ತದೆ. +ಜೋಡಾಟಗಳಲ್ಲೂ ಇವರ ಹಾಸ್ಯಮಯ ರಂಗತಂತ್ರ ವಿಶಿಷ್ಟವಾದದ್ದು. +ಶ್ರೀಯುತರ ಕಂದರ, ವಿಜಯ, ಪಾಪಣ್ಣ,ಕಾಶೀಮಾಣಿ, ಬಾಹುಕ, ಕೊರವಂಜಿ, ಬ್ರಾಹ್ಮಣ,ವಿದ್ಯುಜ್ಜಿಹ್ವ, ಮಂಥರೆ ಪಾತ್ರಗಳು ಜನಪ್ರಿಯ. +ಪತ್ನಿ ಪದ್ದುಮೊಗೇರ್ತಿ. +ಜ್ಯೋತಿ, ಸುಜಾತ ಮಕ್ಕಳು. +ನಾಗಪ್ಪ ಹಾಸ್ಯಗಾರರು ಹಲವು ಸಂಘ-ಸಂಸ್ಥೆಗಳಿಂದ ಸಂಮಾನಿತ-ರಾಗಿದ್ದಾರೆ. +ಡಾ.ಜಿ.ಶಂಕರ್‌ ಫ್ಯಾಮಿಲಿ ಟ್ರಸ್ಟ್‌ ಗೌರವ, ಯಶಸ್ವಿಕಲಾವೃಂದ, ತೆಕ್ಕಟ್ಟೆ ಇದರ ದಶಮಾನೋತ್ಸವ ಪುರಸ್ಕಾರ ಪಡೆದಿರುತ್ತಾರೆ. +ಯಕ್ಷಗಾನ ಪೌರಾಣಿಕ ಪ್ರಪಂಚದ ಸತ್ವನಿಷ್ಠ ಸುಸಂಸ್ಕೃತ ಹಾಸ್ಯಗಾರಿಕೆಗೆ ಪ್ರಜ್ಞಾವಂತ ಯಕ್ಷರಸಿಕರ ತೋರು ಬೆರಳಿನಲ್ಲಿ ತೋರುವ ಹಿರಿಯ ಹಾಸ್ಯಗಾರ ವಂಡ್ಸೆ ನಾಗಯ್ಯ ಶೆಟ್ಟಿ. +ಕುಂದಾಪುರ ತಾಲೂಕಿನ ವಂಡ್ಸೆಯಲ್ಲಿ ರಾಮಣ್ಣಶೆಟ್ಟಿ - ಸದಿಯಮ್ಮ ಶೆಡ್ತಿ ದಂಪತಿಯ ಮಗನಾಗಿ ಜನಿಸಿದ ನಾಗಯ್ಯ ಶೆಟ್ಟರು 81ರ ಹರೆಯದಲ್ಲಿರುವ ಶ್ರೇಷ್ಠ ಕಲಾವಿದರು. +ನಾಗಯ್ಯಶೆಟ್ಟರ ಓದು ಎರಡನೇ ತರಗತಿ. +12ರ ಹರೆಯದಲ್ಲೇ ಯಕ್ಷಗಾನದ ಬಾಳುವೆ ಕಂಡ ಶೆಟ್ಟರು ಸ್ವಯಂ ಇಚ್ಛೆಯಿಂದಲೇ ಈ ಕ್ಷೇತ್ರವನ್ನು ನೆಚ್ಚಿಕೊಂಡರು. +ಬಣ್ಣವನ್ನು ಮುಖಕ್ಕೆ ಹಚ್ಚಿಕೊಂಡರು. +ವೀರಭದ್ರನಾಯಕ್‌ ಹಾಗೂ ಆನಗಳ್ಳಿ ಹಾಸ್ಯಗಾರ ನಾರಾಯಣ ನಾಯ್ಕರ ಶಿಷ್ಕನಾಗಿ ಸಾಂಪ್ರದಾಯಿಕ ಯಕ್ಷಶಿಕ್ಷಣ ಪಡದ ನಾಗಯ್ಯ ಶೆಟ್ಟರು ಹಾಸ್ಯಭೂಮಿಕೆಗಳನ್ನೂ, ಪ್ರಸಂಗದ ಪುರುಷ ಪಾತ್ರಗಳನ್ನೂ ಯಶಸ್ವಿಯಾಗಿ ಚಿತ್ರಿಸಿದವರು. +ಮಾರಣಕಟ್ಟೆ ಮೇಳದಲ್ಲಿ ಗೆಜ್ಜೆಕಟ್ಟಿ ಅಲ್ಲಿ 25 ವರ್ಷಗಳ ಕಾಲ ಕಲಾ ವ್ಯವಸಾಯ ನಡೆಸಿದ ಶೆಟ್ಟರು,ಕೊಡವೂರು ಮೇಳದಲ್ಲಿ 1 ವರ್ಷ, ಹೆಗ್ಗೋಡು ಮೇಳದಲ್ಲಿ 1 ವರ್ಷ, ಅಮೃತೇಶ್ವರಿ ಮೇಳದಲ್ಲಿ 3ವರ್ಷ, ಪೆರ್ಡೂರು ಮೇಳದಲ್ಲಿ 4ವರ್ಷ, ಕಮಲಶಿಲೆ ಮೇಳದಲ್ಲಿ 4ವರ್ಷ, ಸೌಕೂರು ಮೇಳದಲ್ಲಿ 2ವರ್ಷ, ಕೊಲ್ಲೂರು ಮೇಳದಲ್ಲಿ 1 ವರ್ಷ, ಇತರೇ ಮೇಳಗಳಲ್ಲಿ 4 ವರ್ಷ, ಕಲಾ ತಿರುಗಾಟ ನಡೆಸಿದ್ದಾರೆ. +ಹೀಗೆ ಶೆಟ್ಟರ ರಂಗ ಜೀವನ 45 ವರ್ಷ ಕಂಡಿದೆ. +ಪುರಾಣ ಪ್ರಸಂಗಗಳ ಹಾಸ್ಯಭೂಮಿಕೆಗಳನ್ನು ಭಾವಪೂರ್ಣವಾಗಿ ರಂಗದ ಮೇಲೆ ತೆರೆದಿಡುವ ನಾಗಯ್ಯಶೆಟ್ಟರ ಪ್ರಖರ ಪ್ರತಿಭೆಗೆ ಕಪ್ಪ ಕೊಡಲೇಬೇಕು. +ಅವರು ನಿರ್ವಹಿಸಿದ ಬಾಹುಕ, ವಾಲ್ಮೀಕಿ,ತಾಮ್ರದ್ವಜ ಕಾಳಗದ ಬ್ರಾಹ್ಮಣ, ರತಿಕಲ್ಯಾಣದ ದ್ವಾರಪಾಲಕ, ಕಾಶಿಮಾಣಿ, ಮೊದಲಾದ ಪಾತ್ರಗಳು ಅವರದ್ದೇ ವಿಶಿಷ್ಟ ಕಲ್ಪನೆಯಲ್ಲಿ ರಂಗಸ್ಥಳದಲ್ಲಿ ಮೈದಾಳಿ ಕಲಾರಸಿಕರ ಮನ ಮೆಚ್ಚಿಸಿವೆ. +ಅಗಾಧ ಪೌರಾಣಿಕ ಜ್ಞಾನ, ಸಮರ್ಪಕ ರಂಗನಡೆಯನ್ನು ಬಲ್ಲ ಧೀಮಂತ ಕಲಾವಿದ ಶೆಟ್ಟರು,ಅನೇಕಾನೇಕ ಹಾಸ್ಯ ಪಟುಗಳನ್ನು ರಂಗಭೂಮಿಗೆ ನೀಡಿದ್ದಾರೆ. +ಪತ್ನಿ ಪಾರ್ವತಿ ಶೆಡ್ತಿ. +ಕುಶಲ ಶೆಟ್ಟಿ ,ಜಯರಾಮಶೆಟ್ಟಿ, ಮಹಾದೇವಿ, ಚಂದ್ರಮತಿ ಮಕ್ಕಳು. +ನಾಗಯ್ಯಶೆಟ್ಟರು ಪ್ರಸ್ತುತ ವಿಶ್ರಾಂತ ಜೀವನದಲ್ಲಿದ್ದು ಕೃಷಿ ಕಾರ್ಯದಲ್ಲಿ ನಿರತರಾಗಿದ್ದಾರೆ. +ಶ್ರೀಯುತರಿಗೆ ಉಡುಪಿ ಯಕ್ಷಗಾನ ಕಲಾರಂಗದ ಬಿ.ವಿ.ಆಚಾರ್ಯ ಪ್ರಶಸ್ತಿ, ಎಂ.ಎಂ.ಹೆಗ್ಡೆ ಪ್ರಶಸ್ತಿ,ಬೈಂದೂರು ಬಂಟರ ಸಂಘದ ಗೌರವ ಸಹಿತ ಹಲವಾರು ಸಂಘ-ಸಂಸ್ಥೆಗಳಲ್ಲಿ ಸಂಮಾನ ದೊರಕಿದೆ. +ಶುದ್ಧ ಯಕ್ಷಗಾನೀಯ ಶೈಲಿಯಲ್ಲಿ ಕಲಾಸೇವೆಗೆ ಬದ್ಧರಾದ ನಾಗುಗೌಡರು ಕುಂದಾಪುರ ತಾಲೂಕಿನ ಕೆಂಜಿಮನೆಯವರು. +ವೆಂಕಟಯ್ಯಗೌಡ-ಮರ್ಲಿಗೌಡ್ತಿ ದಂಪತಿಯ ಸುಪುತ್ರರಾಗಿ ಕೆಂಜಿಮನೆ ಎಂಬಲ್ಲಿ ಜನಿಸಿದ ನಾಗುಗೌಡರು 62 ವರ್ಷಗಳ ಜೀವನ ರಂಗಸ್ಥಳದಲ್ಲಿದ್ದಾರೆ. +ಕೀರ್ತಿಶೇಷರಾದ ಗುರು ವೀರಭದ್ರ ನಾಯಕ್‌ರ ಶಿಷ್ಯರಾಗಿ ಕಲಾವಿದ್ಯೆಯನ್ನು ಗಳಿಸಿದ ಗೌಡರಿಗೆ ಹಿರಿಯ ಕಲಾವಿದ ಕೊಪ್ಪಾಟೆ ಮುತ್ತ ಗೌಡರು ವೃತ್ತಿಕ್ಷೇತ್ರಕ್ಕೆ ಪ್ರೇರಣಾಶಕ್ತಿಯಾದವರು. +ರಾಜವೇಷ,ಮುಂಡಾಸು ವೇಷಗಳನ್ನು ಸಮರ್ಥವಾಗಿ ಪೋಷಿಸುವ ಇವರ ಕಲಾಬಿವ್ಯಕ್ತಿ ಸಾಂಪ್ರದಾಯಿಕವಾಗಿ ಗಮನೀಯವಾಗುತ್ತದೆ. +ಚಿಕ್ಕಂದಿನಿಂದಲೇ ಯಕ್ಷಗಾನ ಕಲೆಯ ಮೇಲಣ ತೀವ್ರ ಆಸಕ್ತಿ ಮೈಗೂಡಿಸಿ-ಕೊಂಡ ಗೌಡರ ಓದು ಎರಡಕ್ಕೇ ಸೀಮಿತವಾಯಿತು. +16ನೇ ವಯೋಮಾನದಲ್ಲೇ ಯಕ್ಷಗಾನ ಬಣ್ಣದ ಲೋಕದತ್ತ ಆಕರ್ಷಿತರಾದರು. +ಮಾರಣಕಟ್ಟೆ 14, ಗೋಳಿಗರಡಿ 1, ಕಮಲಶಿಲೆ 2, ಹಾಲಾಡಿ 2, ಹಿರಿಯಡಕ (ಹಳೆ)1, ಕಳವಾಡಿ 5, ಬಗ್ವಾಡಿ 5, ಹೀಗೆ 30 ವರ್ಷಗಳ ರಂಗಕೃಷಿ ನಾಗು ಗೌಡರನ್ನು ಸಂಪನ್ನ ಕಲಾವಿದರನ್ನಾಗಿಸಿದೆ. +ಧರ್ಮರಾಯ, ದೇವೇಂದ್ರ, ವಿಭೀಷಣ,ಸುಬುದ್ಧಿ, ಹಂಸದ್ದಜ, ಶುಕ್ರಾಚಾರ್ಯ, ಮೊದಲಾದ ಪೌರಾಣಿಕ ಭೂಮಿಕೆಗಳಿಗೆ ತನ್ನ ತುಂಬು ಪ್ರತಿಭಾ ಪ್ರೌಢಿಮೆಯಲ್ಲಿ ಜೀವ ತುಂಬಿದ ನಾಗು ಗೌಡರು ಪ್ರಸ್ತುತ ಮಾರಣಕಟ್ಟೆ ಮೇಳದ ಕಲಾವಿದರು. +ಸತಿ ಲೀಲಾವತಿ. +ಸುಕಾಂತ, ವಾಸುದೇವ, ಶರಾವತಿ,ಪ್ರದೀಪ ಮಕ್ಕಳು. +ಸಹೃದಯಿ ಕಲಾವಿದ ನಾಗುಗೌಡರು ಹಳತರ ಹಿರಿಮೆಯಲ್ಲಿ ಹಾಗೂ ಸಾಂಪ್ರದಾಯಿಕ ಕಲಾಗರಿಮೆಯಲ್ಲಿ ಬಣ್ಣದ ಬಾಳುವೆಯನ್ನು ಸಾಗಿಸುತ್ತಿರುವವರು. +ಇವರನ್ನುಈಗಾಗಲೇ ಹಲವಾರು ಸಂಘ-ಸಂಸ್ಥೆಗಳು ಸಮ್ಮಾನಿಸಿ ಗೌರವಿಸಿವೆ. +ರಸಪರಿಪ್ಲುತ ಪ್ರಗಲ್ಭ ವಾಕ್‌ಚಾತುರ್ಯ, ಗರಿಷ್ಠಮಟ್ಟದ ಭಾವದರ್ಶನ ಕೌಶಲ, ಪಾತ್ರನಿಷ್ಠ ನೃತ್ಯ,ಅಭಿನಯದ ಅಭಿವ್ಯಕ್ತಿ, ಅನುಭವ ಭರಿತ ರಂಗಮಾಹಿತಿ ಪರಿಪಕ್ವವಾಗಿ ರಂಗನೆಲದಲ್ಲಿ ಕಾಣಿಸುವ ಹಿರಿಯ ಕಲಾವಿದ ಎ.ಎಸ್‌.ನಾಗೇಶ್‌ ಕಮ್ಮರಡಿ. +ಕಮ್ಮರಡಿ-ಅರೆಹಳ್ಳಿ ಎಂಬಲ್ಲಿ ಸಿದ್ದಪ್ಪ-ಮಂಜುಳ ದಂಪತಿಯ ಸುಪುತ್ರರಾಗಿ 1956ರಲ್ಲಿ ಜನಿಸಿದ ನಾಗೇಶ್‌ ನಾಲ್ಕನೇ ತರಗತಿಗೆ ವಿದಾಯ ಹೇಳಿ 16ನೇ ವಯಸ್ಸಿನಲ್ಲಿ ಗೆಜ್ಜೆ ಕಟ್ಟಿದರು. +ಬಾಲ್ಯದಲ್ಲಿಯೇ ಬೆಸೆದುಕೊಂಡ ಯಕ್ಟ್ಷ ಕಲಾಸಕ್ತಿಯೇ ಇವರ ರಂಗಬಾಳುವೆಗೆ ಪ್ರೇರಣಾ ಶಕ್ತಿಯಾಯಿತು. +ಸುಪ್ರಸಿದ್ಧ ಸ್ತ್ರೀವೇಷಧಾರಿ ಎಂ.ಎ.ನಾಯ್ಕ ಹಾಗೂ ಹಿರಿಯ ಅರ್ಥಧಾರಿ ಕಲಾವಿದ ಮಲ್ಪೆ ವಾಸುದೇವ ಸಾಮಗರ ಗುರುತನವನ್ನು ಪಡೆದ ಕಮ್ಮರಡಿ ನಾಗೇಶ್‌ ಅವರು ಯಕ್ಷಗಾನ ರಂಗಭೂಮಿಯಲ್ಲಿ ಹಂತ-ಹಂತವಾಗಿ ಬೆಳೆದು ಬೆಳಗಿದವರು. +ಉತ್ತಮ ಸ್ತ್ರೀವೇಷಧಾರಿಯಾಗಿ ಪ್ರಧಾನ ಸ್ಥಾನ ಮಾನ್ಯತೆಯಲ್ಲಿ ಕಲಾರಸಿಕರ ಮನ ಮೆಚ್ಚಿಸಿದ ಶ್ರೀಯುತರು ತದನಂತರ ಪುರುಷವೇಷ ಸ್ಥಾನದಲ್ಲಿ ನಿಂತು ಕಲಾವಂತಿಕೆಯನ್ನು ಮೆರೆದರು. +ಸೀತೆ,ದ್ರೌಪದಿ, ರುಕ್ಮಿಣಿ, ಶ್ರೀದೇವಿ, ಕಯಾದು, ಸಾವಿತ್ರಿ,ಪ್ರಭಾವತಿ, ಮೊದಲಾದ ಸ್ತ್ರೀ ಪಾತ್ರಗಳಿಗೆ ಜೀವಚೈತನ್ಯ ತುಂಬಿದ ನಾಗೇಶರು ಪುರುಷಪಾತ್ರಧಾರಿಯಾಗಿ ಶ್ರೀರಾಮ, ಭೀಷ್ಮ ದಶರಥ,ದೇವವೃತ, ವತ್ಸಾಖ್ಯ, ಪುಷ್ಕಳ, ಉಗ್ರಸೇನ,ವಿಕ್ರಮಾದಿತ್ಯ, ಪಾತ್ರಗಳನ್ನು ರಂಗಮಂಜದಲ್ಲಿ ಮೆರೆಸಿದವರು. +ಹಾಸ್ಯ ಕಲಾವಿದನಾಗಿ ಬಾಹುಕ,ವಿಜಯ, ಕಾಶೀಮಾಣಿ ಮೊದಲಾದ ಭೂಮಿಕೆಗಳಿಗೆ ವೈನೋದಿಕ ರಂಗು ತುಂಬಿಸಿದವರು. +ಪ್ರಸಂಗಕರ್ತರಾಗಿ ನಾಲ್ಕು ಪ್ರಸಂಗ ರಚಿಸಿದವರು. +ಅಮೃತೇಶ್ವರಿ 4, ಮಂದಾರ್ತಿ 7, ಮಾರಣಕಟ್ಟೆ 6, ಮಡಾಮಕ್ಕಿ 3, ಮೂಲ್ಕಿ 3, ಹಾಲಾಡಿ 6,ಸೌಕೂರು 4, ಶಿವರಾಜಪುರ 3, ಹೀಗೆ 36 ವರ್ಷಗಳ ಕಲಾಯಾತ್ರೆಯಲ್ಲಿ ಸಾರ್ಥಕ ಹೆಸರು ಗಳಿಸಿದ್ದಾರೆ. +ಕಮ್ಮರಡಿ ನಾಗೇಶರ ಕೈ ಹಿಡಿದ ಸಂಗಾತಿ ಗುಣವತಿ. +ಭಾಗ್ಯಲಕ್ಷ್ಮೀ, ಆದಿತ್ಯ ಅವರ ಉಭಯಮಕ್ಕಳು. +ಮಳೆಗಾಲದ ಯಕ್ಷಗಾನ ತಿರುಗಾಟದಲ್ಲಿ ಯಕ್ಷಮ್ಮ ದೇವಿ ಪ್ರವಾಸೀ ಯಕ್ಷಗಾನ ಮಂಡಳಿಯ ಯಜಮಾಾನರಾಗಿಂಯೂ, ಕಲಾವಿದರಾಗಿಯೂ ಶ್ರೀಯುತರು ಯಕ್ಷಕೃಷಿಯಲ್ಲಿ ತೊಡಗುತ್ತಾರೆ. +ಕಮ್ಮರಡಿ, ಹಣಗೇರಿ, ಪೇತ್ರಿ, ಕೀರ್ತಿನಗರ, ಹಾಗೂ ಮಾರಣಕಟ್ಟೆಯಲ್ಲಿ ನಾಗೇಶ್‌ ಅವರನ್ನು ಕಲಾಭಿಮಾನಿಗಳು ಸಂಮಾನಿಸಿದ್ದಾರೆ. +ಸುಖವಾದ ಸ್ವರ ತ್ರಾಣದ ಶ್ರವಣಮಂಜುಳ ಗಾನ ವಿಧಾನದಲ್ಲಿ ಗುರುತಿಸಿಕೊಂಡ ಯುವ ಭಾಗವತ ನಾಗೇಶ ಕುಲಾಲ್‌. +ನಾಗರ ಕೊಡಿಗೆಯೇ ನಾಗೇಶ ಕುಲಾಲರ ಹುಟ್ಟೂರು. +ಶಂಕರ ಕುಲಾಲ-ಲಚ್ಚಮ್ಮ ದಂಪತಿಯ ಸುಪುತ್ರರಾದ ನಾಗೇಶ ಕುಲಾಲರಿಗೆ ಪ್ರಸ್ತುತ 39ರಹರೆಯ. +7ನೇ ತರಗತಿಯ ವಿದ್ಯಾಭ್ಯಾಸದ ಬಳಿಕ ತನ್ನಆಸಕ್ತಿದಾಯಕ ಕ್ಷೇತ್ರವಾದ ಯಕ್ಷಗಾನವನ್ನೇ ಬದುಕಿಗೆ ವೃತ್ತಿಯಾಗಿಸಿ ಕೊಂಡ ನಾಗೇಶ ಕುಲಾಲ ಅವರು 17ನೇ ವಯಸ್ಸಿನಲ್ಲೇ ಯಕ್ಷಗಾಯನ ಲೋಕವನ್ನು ಪ್ರವೇಶಿಸಿದರು. +ನಾಗರಕೊಡಿಗೆ ರಾಮಕೃಷ್ಣಯ್ಯ ಅವರಲ್ಲಿ ಪ್ರಾಥಮಿಕ ಕಲಾಶಿಕ್ಷಣವನ್ನು ಪಡೆದ ಇವರು ಕೆ.ಪಿ.ಹೆಗಡೆ ಅವರಲ್ಲಿ ಭಾಗವತಿಕೆ ಶಿಕ್ಷಣವನ್ನು ಪಡೆದರು. +ಹಿರಿಯ ವೇಷದಾರಿಗಳಾಗಿದ್ದ ನಾಗರಕೊಡಿಗೆಯ ರಾಮಕೃಷ್ಣಯ್ಯ ಅವರೇ ಇವರಿಗೆ ಕಲಾಜೀವನಕ್ಕೆ ಪ್ರೇರಣಾ ಶಕ್ತಿಯಾದರು. +ಉತ್ತಮ ರಂಗತಂತ್ರದೊಂದಿಗೆ ರಂಗನಟನ ಕ್ರಿಯಾಶೀಲ ಕಲಾಭಿವ್ಯಕ್ತಿಗೆ ಗಾನ ಸಾರಥಿಕೆಯನ್ನು ನೀಡುವ ಭಾಗವತ ನಾಗೇಶ ಕುಲಾಲರ ಪೌರಾಣಿಕ ಜ್ಞಾನವೂ ಪ್ರಶಂಸನೀಯ. +ನಾಗರಕೊಡಿಗೆ 2, ಕಮಲಶಿಲೆ 5,ಬಗ್ಡಾಡಿ ಮಾರಣಕಟ್ಟೆ 1, ಹಾಲಾಡಿ 5, ಮಂದಾರ್ತಿ8, ಹೀಗೆ 22 ವರ್ಷಗಳ ಕಲಾವ್ಯವಸಾಯ ಪೂರೈಸಿದ ಕುಲಾಲರು ಪ್ರಸ್ತುತ ಮಂದಾರ್ತಿ ಮೇಳದ ಭಾಗವತರಾಗಿ ಕಲಾಸೇವೆಯಲ್ಲಿದ್ದಾರೆ. +ಪತ್ನಿ ಜ್ಯೋತಿ. +ಸುಮಂತ, ಸುಚೇತಾ ಮಕ್ಕಳು. +ನಾಗೇಶ ಕುಲಾಲರನ್ನು ಹಲವು ಸಂಘ-ಸಂಸ್ಥೆಗಳು ಸಂವರಾನಿಸಿವೆ; +ನಾಗರಕೊಡಿಗೆ ಯಕ್ಷಗಾನ ಕಲಾಸಂಘ ಜಕ್ಕನಗದ್ದೆ ಹತ್ತು ಸಮಸ್ತರು, ಕಾರಣಗಿರಿ ಮಹಾಗಣಪತಿ ದೇವಸ್ಥಾನ, ಮುಂಬೈ ಸಚ್ಚಿದಾನಂದ ಸರಸ್ವತಿ ಸಂಘದ ವತಿಯಿಂದ ಗೌರವ ಸಂಮಾನ ದೊರಕಿದೆ. +ಯಕ್ಷಗಾನದ ರಂಗಾವರಣದ ನಿಚ್ಚಳ ನಿಯಮ,ನಿರ್ದಿಷ್ಟ ನೀತಿ ಪೂರ್ಣತೆ-ಯನ್ನು ಗಾಢವಾಗಿ ಬೆಸೆದುಕೊಂಡು, ಅನುಭವಿ ಬಣ್ಣದ ವೇಷಧಾರಿಯಾಗಿ ಬೆಳೆದವರು ಕೋಣ್ಕಿ ನಾಗೇಶ ಗಾಣಿಗ. +ಕುಂದಾಪುರ ತಾಲೂಕಿನ ಕೋಣ್ಕಿ ಎಂಬಲ್ಲಿಗಣಪಯ್ಯ ಗಾಣಿಗ-ವೆಂಕಮ್ಮ ದಂಪತಿಯ ಸುಪುತ್ರನಾಗಿ 5-3-1950ರಲ್ಲಿ ಜನಿಸಿದ ನಾಗೇಶ ಗಾಣಿಗರು ಚಿಕ್ಕಂದಿನಿಂದಲೇ ಬಣ್ಣದ ಗೀಳುಹೊಂದಿದ್ದರು. +7ನೇ ತರಗತಿಯವರೆಗೆ ವಿದ್ಯಾಭ್ಯಾಸ ಮಾಡಿದ . +ಇವರು ತನ್ನ 23ನೇ ವಯಸ್ಸಿನಲ್ಲಿ ಬಣ್ಣದ ಬದುಕಿಗೆ ಅರ್ಪಣೆಯಾದರು. +ಆಗಿನ ಮಾರಣಕಟ್ಟೆ ಮೇಳದ ಯಜಮಾನರಾಗಿದ್ದ ಕುಶಲ ಹೆಗ್ಡೆಯವರ ಹಾರ್ದಿಕ ಪ್ರೋತ್ಸಾಹ, ನಾಗೇಶ ಗಾಣಿಗರ ಕಲಾಜೀವನ ಯಾನಕ್ಕೆ ಪ್ರೇರಣೆಯಾಯಿತು. +ಪೆರ್ಡೂರು ರಾಮ ಶೇರಿಗಾರರ ಶಿಷ್ಯನಾಗಿ ಅನನ್ಯ ಯಕ್ಷಕಲಾ ವಿದ್ಯಾನುಭವವನ್ನು ಸಿದ್ಧಿಸಿಕೊಂಡ ಗಾಣಿಗರು ಮಾರಣಕಟ್ಟೆ 18, ಪೆರ್ಡೂರು 12,ಸೌಕೂರು 4, ಸಾಲಿಗ್ರಾಮ 2, ಕುಮಟಾ 1 ಹೀಗೆ 37 ವರ್ಷಗಳ ಸಾರ್ಥಕ ಕಲಾಕೃಷಿ ಕಂಡಿದ್ದಾರೆ. +ಮಹಿರಾವಣ, ಮಹಿಷಾಸುರ, ರಾವಣ, ಘಟೋತ್ಕಚ,ಕಾಲಜಂಘ, ಶೂರ್ಪನಖಿ, ಹಿಡಿಂಬೆ, ತಾಟಕಿ,ಮೊದಲಾದ ಗಂಡು-ಹೆಣ್ಣು ಬಣ್ಣಗಳಿಗೆ ಪರಂಪರೆಯ ಬಣ್ಣತುಂಬಿದ ನಾಗೇಶ ಗಾಣಿಗರ ವೇಷವೈಖರಿ,ಪಾತ್ರ ಚಿತ್ರಣ, ವಾಕ್‌ಶೈಲಿ ಪ್ರಶಂಸಾತ್ಮಕ. +ಸಹಧರ್ಮಿಣಿ ಪಾರ್ವತಿ, ಸುರೇಶ, ದಿನೇಶ,ಜಯಂತಿ ಮಕ್ಕಳು. +ಹಿರಿಯ ಬಣ್ಣದ ವೇಷಧಾರಿ ಗಾಣಿಗರು ಪ್ರಸ್ತುತ ಮಾರಣಕಟ್ಟೆ ಮೇಳದಲ್ಲಿ ದುಡಿಯುತ್ತಿದ್ದಾರೆ. +ಶ್ರೀಯುತರಿಗೆ ಹುಟ್ಟೂರ ಸನ್ಮಾನ, ಬೆಂಗಳೂರು ದ.ಕ.ಜಿಲ್ಲಾ ಸೋಮಕ್ಷತ್ರಿಯ ವೈಷ್ಣವ ಸಮಾಜದ ವತಿಯಿಂದ ಗೌರವ, ಹಾರಾಡಿ ರಾಮ ಗಾಣಿಗ ಪ್ರಶಸ್ತಿ ದೊರಕಿರುತ್ತದೆ. +ರಂಗಸ್ಥಳದ ಹುರುಪು-ಹುಮ್ಮನಸ್ಸಿನ ಯಕ್ಷಚೇತನ ಉಪ್ಪುಂದ ನಾಗೇಂದ್ರ ರಾವ್‌. +ಪೌರಾಣಿಕ ಪಾತ್ರಗಳ ಸಾಂಪ್ರದಾಯಿಕ ಅಂತಃಸತ್ವವನ್ನು ಗಂಭೀರವಾಗಿ ಹೀರಿಕೊಂಡು ಸೃಷ್ಟ್ಯಾತ್ಮಕ ರೂಪರೇಖೆಂದುಲ್ಲಿ ಭೂಮಿಕೆಗಳನ್ನು ಸಚೇತನ ಸೌಂದರ್ಯದಿಂದ ರಂಗನೆಲದಲ್ಲಿ ಪ್ರತಿಷ್ಠಾಪಿಸುವ ಪ್ರೌಢ ಪ್ರತಿಭಾಶೀಲತೆ ನಾಗೇಂದ್ರರಾವ್‌ ಅವರಲ್ಲಿ ಗುರುತಿಸಬಹುದಾಗಿದೆ. +ನಡುತಿಟ್ಟಿನ ನವಿರಾದ ರಸಪಾಕ-ತೂಕದಲ್ಲಿ ಬಡಾಬಡಗಿನ ಬೆಡಗನ್ನೂ ಬಡಗಲ್ಲಿ ತೋರುವ ನಾಗೇಂದ್ರರಾವ್‌ ನಾಯುಕ, ಖಳನಾಯಕ ಪಾತ್ರಗಳೆರಡರಲ್ಲೂ ಸಮಾನ ಪ್ರಭುತ್ವ, ಪ್ರಸಿದ್ಧಿ,ಜನಪ್ರಿಯತೆ ಕಂಡವರು. +ಸ್ಪಷ್ಟವಾದ ನೃತ್ಯ, ಅಭಿನಯ ರಂಗನಡೆ, ಯಕ್ಷಗಾನೀಯವಾದ ಸಾಹಿತ್ಯಿಕ ಸ್ವರಭಾರ ನಾಗೇಂದ್ರರಾವ್‌ ಅವರ ಕಲಾಗುಣಗಳಾಗಿ ಗಣನೀಯವಾಗುತ್ತದೆ. +ಕುಂದಾಪುರ ತಾಲೂಕಿನ ಉಪ್ಪುಂದ ಎಂಬಲ್ಲಿ ಪುಟ್ಟಯ್ಯ ಸುಬ್ಬಮ್ಮ ದಂಪತಿಯ ಸುಪುತ್ರರಾಗಿ ಜನಿಸಿದ ನಾಗೇಂದ್ರ ಅವರಿಗೆ ಪ್ರಸ್ತುತ 46ವರ್ಷ ಪ್ರಾಯ. +ಸಣ್ಣತನದಲ್ಲೇ ಬಣ್ಣದ ಗೀಳು ಅಂಟಿಸಿಕೊಂಡ ನಾಗೇಂದ್ರರ ಓದು ಐದಕ್ಕೇ ಕೈದಾಯಿತು. +14ನೇ ವರ್ಷದಲ್ಲೇ ಇವರು ಯಕ್ಷಗಾನ ಬಣ್ಣದ ಲೋಕಕ್ಕೆ ಮುಖ ಮಾಡಿದ್ದರು. +ತಂದೆಯವರ ಪ್ರೇರಣೆ,ಹೆರಂಜಾಲು ಸುಬ್ಬಣ್ಣ ಅವರ ಗುರುಬಲದ ಹಿನ್ನೆಲೆಯಲ್ಲಿ ಯಕ್ಷಬಾಳುವೆ ಕಂಡ ನಾಗೇಂದ್ರರಾವ್‌ಅವರ ಸುಧನ್ವ, ಅರ್ಜುನ, ಕಂಸ, ಸಾಲ್ವ ದಕ್ಷ,ಕೌರವ, ರುದ್ರಕೋಪ, ಜರಾಸಂಧ ಭೂಮಿಕೆಗಳು ಜನಮನದಲ್ಲಿ ಹಚ್ಚ ಹಸುರಾಗಿ ಉಳಿದುಕೊಂಡಿವೆ. +ನಾಗೇಂದ್ರರ ಸದೃಢವಾದ ಆಳಂಗದಲ್ಲಿ ಪರಿಶೋಭಿಸುವ ಪೌರಾಣಿಕ ಪಾತ್ರಗಳ ರಮ್ಯ ಮನೋಹರ ಕಲಾವೈಭವ ಕಲಾರಸಿಕರ ಕಣ್ಮನ ಸೆಳೆದಿದೆ. +ಮಾರಣಕಟ್ಟೆ 2, ಇಡಗುಂಜಿ 2, ಸಾಲಿಗ್ರಾಮ4, ಕಮಲಶಿಲೆ 2, ಮಂದಾರ್ತಿ 8, ಪೆರ್ಡೂರು12, ಹೀಗೆ ಮೂರು ದಶಕಗಳ ಕಾಲದ ಅವರ ಕಲಾಸೇವೆ ಮುಂದುವರಿದಿದೆ. +ಮಡದಿ ಸವಿತಾ. +ವಸುಂಧರಾ, ಮೇಖಲಾ,ವಿದ್ಯಾಶ್ರೀ ಎಂಬ ಮೂವರು ಪುತ್ರಿಯರು. +ಶ್ರೇಷ್ಠ ಯಕ್ಷನಟ ಉಪ್ಪುಂದ ಅವರನ್ನು ನಾಡಿನ ಹಲವು ಸಂಘ-ಸಂಸ್ಥೆಗಳು ಗೌರವಿಸಿವೆ. +ಪರಂಪರೆಯ ಯಕ್ಷಗಾನ ರಂಗ ಸಂವಿಧಾನದಲ್ಲಿ ಪುರಾಣ ಪ್ರಪಂಚದ ಸ್ತ್ರೀಯರನ್ನು ಪಾತ್ರಗಳ ಮೂಲಕ ಸಚೇತನ ರಂಗಶಿಲ್ಪವಾಗಿಸಿದ ಹಿರಿಯ ಕಲಾವಿದ ವಂಡ್ಸೆ ನಾರಾಯಣ ಗಾಣಿಗ. +ಕುಂದಾಪುರ ತಾಲೂಕಿನ ವಂಡ್ಸೆಯ ಶೇಷಗಾಣಿಗ-ಫಣಿಯಮ್ಮ ಗಾಣಿಗ ಇವರ ಸುಪುತ್ರ . +ನಾರಾಯಣ ಗಾಣಿಗರು 1937ನೇ ಇಸವಿಯ ಜೂನ್‌ಆರರಂದು ಜನಿಸಿದರು. +ಎಳವೆಯಲ್ಲಿಯೇ ಯಕ್ಷಗಾನ ಕಲೆಯ ಮೇಲಣ ಅನ್ಯಾದೃಶ ಆಸಕ್ತಿ ಮೈಗೂಡಿಸಿಕೊಂಡಿದ್ದ ನಾರಾಯಣ ಗಾಣಿಗರಿಗೆ ಪ್ರಸಿದ್ದ ಹಿರಿಯ ಕಲಾವಿದ ಅಣ್ಣ ವಂಡ್ಸೆ ಮುತ್ತಗಾಣಿಗರ ಪ್ರೋತ್ಸಾಹವೇ ಕಲಾ ಬದುಕಿಗೆ ಪ್ರೇರಣೆಯಾಯಿತು. +ಊರಿನ ಕಲಾಭಿಮಾನಿಗಳ ಹಾರ್ದಿಕ ಸಹಕಾರ ಸ್ಫೂರ್ತಿ ನೀಡಿತು. +ಗಾಣಿಗರ ಅಕ್ಷರಾಭ್ಯಾಸ ಐದಕ್ಕೇ ಕೈದಾಯಿತು. +12ನೇ ವಯಸ್ಸಿನಲ್ಲೇ ಅವರಿಗೆ ಬಣ್ಣದ ಬದುಕು ಪ್ರಾಪ್ತವಾಯಿತು. +ದಶಾವತಾರಿ ಗುರು ವೀರಭದ್ರನಾಯಕ್‌ ಹಾಗೂ ಮಟಪಾಡಿ ಶ್ರೀನಿವಾಸ ನಾಯಕರ ಗುರುತನದಲ್ಲಿ ಯಕ್ಷಗಾನ ಕಲಾವಿದ್ಯೆಯನ್ನು ಆರ್ಜಿಸಿಕೊಂಡ ನಾರಾಯಣ ಗಾಣಿಗರು, ತನ್ನ ಆಕರ್ಷಕ ರೂಪ,ಸ್ತ್ರೀ ಸಹಜ ಕಂಠಶ್ರೀ, ಪಾಂಡಿತ್ಯಪೂರ್ಣವಚೋವೈಖರಿ, ಲಾಲಿತ್ಯಮಯ ನೃತ್ಯ, ಅಭಿನಯ,ಉತ್ಕೃಷ್ಟ ರಂಗವ್ಯವಹಾರಗಳಿಂದ ಸಮಷ್ಟಿಕಲೆಯ ಸಮರ್ಥ ಸ್ರ್ತೀ ವೇಷಧಾರಿಯಾಗಿ ಸಾರ್ಥಕ ಹೆಸರುಗಳಿಸಿದರು. +ಮಾರಣಕಟ್ಟೆ 9, ಮಂದಾರ್ತಿ 3, ಕೊಲ್ದೂರು 2, ಧರ್ಮಸ್ಥಳ 2, ಕುಂಡಾವು 2, ಕೂಡ್ಲು 2,ಸುರತ್ಕಲ್‌ 2, ಪೆರ್ಡೂರು 1, ಸಾಲಿಗ್ರಾಮ 1,ಇಡಗುಂಜಿ 4 ಮೊದಲಾದ ಮೇಳಗಳಲ್ಲಿ 28ವರುಷಗಳ ಕಾಲ ಕಲಾಕೃಷಿ ನಡೆಸಿದರು. + ಪ್ರಸಿದ್ಧಿಯ ಶೃಂಗಸಾರ್ಥಕ್ಯವನ್ನು ಕಂಡ ವಂಡ್ಸೆ ನಾರಾಯಣ ಗಾಣಿಗರು ಡಾ.ಶಿವರಾಮ ಕಾರಂತರ "ಯಕ್ಷರಂಗ'ದ ಕಲಾವಿದನಾಗಿಯೂ 5ವರ್ಷ ಕಲಾ ಸೇವೆ ನಡೆಸಿದವರು. +ಗಾಣಿಗರ ದ್ರೌಪದಿ, ಶಶಿಪ್ರಭೆ, ಚಿತ್ರಾಂಗದೆ,ದೇವಯಾನಿ, ಚಿತ್ರಾಕ್ಸಿ, ಮಂಡೋದರಿ, ಮೀನಾಕ್ಷಿತಾರೆ, ಸಾವಿತ್ರಿ, ದಮಯಂತಿ, ಸೀತೆ, ಕೈಕೇಯಿ,ಮೊದಲಾದ ಪಾತ್ರಗಳು ಪೌರಾಣಿಕ ಪಾತ್ರ ನ್ಯಾಯದಲ್ಲಿ ಅಜರಾಮರವಾಗಿ ಉಳಿದುಕೊಂಡಿದೆ. +ಯುಗಳ ತಿಟ್ಟಿನ ಪ್ರತಿಭಾ ಸಂಪನ್ನ ಮೇರುಕಲಾವಿದ ವಂಡ್ಸೆ ನಾರಾಯಣ ಗಾಣಿಗರ ಅವರು ಶಕುಂತಲಾ ಗಾಣಿಗ ಅವರನ್ನು ವರಿಸಿ ನಾಲ್ಕು ಮಕ್ಕಳನ್ನು ಪಡೆದಿದ್ದಾರೆ. +ಗಾಣಿಗರ ಕಲಾ ಶ್ರೀಮಂತಿಕೆಗೆ ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ, ಹಾರಾಡಿ ರಾಮಗಾಣಿಗ ಪ್ರಶಸ್ತಿ, "ಯಕ್ಷಗಾನ ಕಲಾರಂಗ'ದ ರಜತೋತ್ಸವ ಪ್ರಶಸ್ತಿಯೂ ಸೇರಿದಂತೆ ಹಲವಾರು ಸಂಮಾನ,ಗೌರವಗಳು ಸಂದಿವೆ. +ಸಾಂಪ್ರದಾಯಿಕ ರಂಗ ಸತ್ವ-ತತ್ವಗಳನ್ನು ಸುಪುಷ್ಟವಾಗಿ ಮೈಗೂಡಿಸಿಕೊಂಡು ಸಮರ್ಥಕಲಾವಿದರಾಗಿ ರೂಪುಗೊಂಡವರು ಚಿತ್ತೂರು ನಾರಾಯಣ ದೇವಾಡಿಗರು. +ಕುಂದಾಪುರ ತಾಲೂಕಿನ ಹಳ್ಳಾಡು ಎಂಬ ಹಳ್ಳಿಯಲ್ಲಿ 26-11-1951ರಲ್ಲಿ ಜನಿಸಿದ ನಾರಾಯಣ ದೇವಾಡಿಗ ಅವರು ಮುತ್ತದೇವಾಡಿಗ-ಶೇಷಮ್ಮ ದಂಪತಿಯ ಸುಪುತ್ರ. +ಐದನೇ ತರಗತಿಯವರೆಗಿನ ಶಿಕ್ಷಣದ ಬಳಿಕ, ಅಂದರೆ ತನ್ನ ಹದಿನಾಲ್ಕರ ಹರೆಯದಲ್ಲೇ ಗೆಜ್ಜೆ ಕಟ್ಟಿ, ರಂಗಮಂಚಕ್ಕೆ ಹೆಜ್ಜೆ ಹಾಕಿದ . +ದೇವಾಡಿಗರು ಸ್ವಯಂ ಕಲಾಸಕ್ತಿಯನ್ನು ಪ್ರವರ್ಧಿಸಿಕೊಂಡು ಅದನ್ನೇ ರಂಗಬಾಳುವೆಗೆ ಪ್ರೇರಣೆಯಾಗಿಸಿ ಮುನ್ನಡೆದರು. +ಉಡುಪಿ ಯಕ್ಷಗಾನ ಕೇಂದ್ರದ ವಿದ್ಯಾರ್ಥಿಯಾಗಿ ಗುರು ವೀರಭದ್ರನಾಯಕ್‌, ನೀಲಾವರ ರಾಮಕೃಷ್ಣಯ್ಯ ,ಹಿರಿಯಡಕ ಗೋಪಾಲರಾವ್‌, ಅವರಲ್ಲಿ ಶಾಸ್ತ್ರೋಕ್ತ ರಂಗಶಿಕ್ಷಣವನ್ನು ಪಡೆದ ನಾರಾಯಣ ದೇವಾಡಿಗರು ಈ ರಂಗಭೂಮಿಯಲ್ಲಿ ಪ್ರಧಾನ ಸ್ರ್ತೀ ವೇಷಧಾರಿಯಾಗಿ ಪ್ರಸಿದ್ಧಿ ಪಡೆದರು. +ಪಾತ್ರೋಚಿತ ನೃತ್ಯ, ಅಭಿನಯ, ಹಾವ-ಭಾವ,ವಾಚಿಕ, ರಂಗವೈಖರಿ, ವೇಷವೈಭವದಲ್ಲಿ ಪೌರಾಣಿಕ ಪಾತ್ರಪ್ರಪಂಚವನ್ನು ಕಣ್ಮುಂದಿರಿಸುವ ಅನುಭವಿ ಕಲಾವಿದ . +ದೇವಾಡಿಗರು ಮಾರಣಕಟ್ಟೆ 4, ಕಮಲಶಿಲೆ12, ಸಾಲಿಗ್ರಾಮ 1, ಕಳವಾಡಿ 1, ಪೆರ್ಡೂರು 1,ಮಡಾಮಕ್ಕಿ 2, ಅಮೃತೇಶ್ವರಿ 1, ಗೋಳಿಗರಡಿ 4,ಸೌಕೂರು 6, ಮಾರಣಕಟ್ಟೆ 10, ಹೀಗೆ 42ವರ್ಷಗಳ ಕಲಾಯಾತ್ರೆ ಗೈದಿದ್ದಾರೆ. +ಪ್ರಸ್ತುತ ಮಾರಣಕಟ್ಟೆ ಮೇಳದ ಕಲಾವಿದರು. +ಅಂಬೆ, ಮೀನಾಕ್ಷಿ, ದ್ರೌಪದಿ, ದಮಯಂತಿ,ಚಿತ್ರಾಂಗದೆ, ಮೊದಲಾದ ಸ್ರ್ತೀ ಭೂಮಿಕೆಗಳನ್ನೂ ಭೀಷ್ಯಕೃಷ್ಣ ದ್ರೋಣ, ರಾಮ, ರಾವಣ, ಈಶ್ವರ, ಅರ್ಜುನ ಮೊದಲಾದ ಪುರುಷ ವೇಷಗಳನ್ನೂ ಚಿತ್ತೂರು ಅವರು ಯಶಸ್ವಿಯಾಗಿ ನಿರ್ವಹಿಸುತ್ತಾರೆ. +ಪತ್ನಿ ಗಿರಿಜಾ. +ನಾಗರತ್ನಾ, ನಾಗೇಂದ್ರ,ನಾಗಾಂಬಿಕಾ ಮಕ್ಕಳು. +ಶ್ರೀಯುತರನ್ನು ಹಲವಾರು ಸಂಘ-ಸಂಸ್ಥೆಗಳು ಸಂಮಾನಿಸಿವೆ. +ಅಗಾಧ ಪೌರಾಣಿಕ ಜ್ಜಾನ ಸಂಪತ್ತಿಕೆಯ ಭಾವಪೂರ್ಣ ಭಾಗವತಿಕೆಯಲ್ಲಿ ಪಾರಂಪರಿಕ ಮೆರುಗು, ಪ್ರಯೋಗಶೀಲ ಬೆರಗು ತೋರುವ ಪ್ರಬುದ್ಧ, ಪ್ರಸಿದ್ಧ ಭಾಗವತ ನೆಬ್ಬೂರು ನಾರಾಯಣ ಹೆಗಡೆ. +ಉತ್ತರ ಕನ್ನಡದ ಶಿರಸಿಯ ನೆಬ್ಬೂರು ಇವರ ಹುಟ್ಟೂರು. +ತಂದೆ ದೇವರು ಹೆಗಡೆ, ತಾಯಿ ಗಣಪಿ ಹೆಗಡೆ. +ಇವರ ಅಕ್ಷರ ಶಿಕ್ಷಣ ನಾಲ್ಕನೇ ತರಗತಿಯವರೆಗೆ ಮಾತ್ರ. +20ನೇ ವಯಸ್ಸಿನಲ್ಲೇ ಶ್ರೀಯುತರು ಗಾನಬದುಕಿಗೆ ಶ್ರೀಕಾರ ಹಾಡಿದವರು. +ಶ್ರೀಯುತರ ತಂದೆ ಭಾಗವತರಾಗಿದ್ದರು ಹಾಗಾಗಿ ಗಾನ ಕಲೆ ಇವರಿಗೆ ಎಳವೆಯಲ್ಲಿಯೇ ದೊರಕುವಂತಾಯಿತು. +ಭಾಗವತ ಗಣಪತಿ ಹೆಗಡೆ ಕೊಡ್ಲಿಪಾಲು ಅವರ ಪ್ರೇರಣೆ ಇವರನ್ನು ಈ ರಂಗಭೂಮಿಗೆ ಎಳೆದು ತಂದಿತು. +ಶ್ರೇಷ್ಠ ಕಲಾವಿದ ಕೆರೆಮನೆ ಶಿವರಾಮ ಹೆಗಡೆಯವರ ಗುರುತನವೂ ಇವರಿಗೆ ದೊರಕಿತು. +ಕೆರೆಮನೆ ಕುಟುಂಬದ ಕಲಾ ಪರಂಪರೆಯಲ್ಲಿ ಶ್ರೀಯುತರ ಗಾನವಾಹಿನಿ ದೇಶ ವಿದೇಶಗಳಲ್ಲಿ ಪಸರಿಸುವಂತಾಗಿದೆ. +ಶ್ರೀಯುತರು ಸಾಲಿಗ್ರಾಮ-2,ಅಮೃತೇಶ್ವರಿ-1, ಪಂಚಲಿಂಗೇಶ್ವರ-1, ಮೂರೂರು ದೇವರು ಹೆಗಡೆ ಮೇಳ-1 ದಲ್ಲಿ ಕಲಾವ್ಯವಸಾಯ ನಡೆಸಿದ್ದಾರೆ. +ಇಡಗುಂಜಿ, ಮೇಳದಲ್ಲೇ ಸುಮಾರು 35 ವರ್ಷಗಳ ಕಾಲ ಭಾಗವತರಾಗಿ ಅನನ್ಯ ಕಲಾಸೇವೆ ಸಲ್ಲಿಸಿದ್ದಾರೆ. +ಒಟ್ಟು ಐದು ದಶಕಗಳ ಸಾರ್ಥಕ ರಂಗಜೀವನ ಶ್ರೀಯುತರದ್ದು. +ನೆಬ್ಬೂರು ನಾರಾಯಣ ಹೆಗಡೆಯವರು ಸುಮಧುರ ಕಂಠಸಿರಿ ಹಾಗೂ ಅಸಾಧಾರಣ ರಂಗತಂತ್ರದಲ್ಲಿ ಮೆರೆದ ಮೇರು ಭಾಗವತರು. +ನೆಬ್ಬೂರರ ಪುರಾಣ ಜ್ಞಾನವಂತೂ ಅಪಾರ. +ಭಾವ ನಿರ್ಬರ ಯಕ್ಷಗಾನ ಭಾಗವತಿಕೆಯಲ್ಲಿ "ನೆಬ್ಬೂರು ಶೈಲಿ'ಯನ್ನು ರಂಗದಲ್ಲಿ ಉದ್ಭಾಟಿಸಿದ ಹಿರಿಮೆ ಇವರದ್ದಾಗಿದೆ. +ನಾರಾಯಣ ಭಾಗವತರ ಅಪ್ರತಿಮ ಕಲಾಶ್ರೀಮಂತಿಕೆಗೆ ಮಾರುಹೋದ ನಾಡಿನ ಅನೇಕಾನೇಕ ಸಂಘ-ಸಂಸ್ಥೆಗಳು ಗುರುತಿಸಿ ಗೌರವಿಸಿವೆ. +ಶ್ರೀಯುತರಿಗೆ ಪ್ರತಿಷ್ಠಿತ ರಾಜ್ಯ ಪ್ರಶಸ್ತಿ, ಜಾನಪದ ಯಕ್ಷಗಾನ ಅಕಾಡೆಮಿ ಪ್ರಶಸ್ತಿ, ಉಡುಪಿ ಯಕ್ಷಗಾನ ಕಲಾರಂಗದ ಪ್ರೊ.ಬಿ.ವಿ ಆಚಾರ್ಯ ಪ್ರಶಸ್ತಿ, ಕೆರೆಮನೆ ಶಿವರಾಮ ಪ್ರಶಸ್ತಿ ದೊರಕಿರುತ್ತದೆ. +“ನೆಬ್ಬೂರು ನಿನಾದ'ಎಂಬ ಅಭಿನಂದನಾ ಗ್ರಂಥವು ಬಿಡುಗಡೆಯಾಗಿದೆ. +ಪತ್ನಿ ಶರಾವತಿ ಹೆಗಡೆ. +ವಿನಾಯಕ, ಶಕುಂತಲಾ ಎಂಬ ಮಕ್ಕಳನ್ನು ಪಡೆದಿದ್ದಾರೆ. +ಉಡುಪಿಯ ಯಕ್ಷಗಾನ ಕಲಾರಂಗ ಸಾಕ್ಷಚಿತ್ರದ ಸಿ.ಡಿ. ಪ್ರಕಟಿಸಿದೆ. +ಬಡಗುತಿಟ್ಟು ಯಕ್ಷಗಾನ ರಂಗಭೂಮಿಯ ಸದಭಿರುಚಿಯ ಹಾಸ್ಯನಟ ಸುಳಗೋಡು ನಾರಾಯಣ ಹಾಸ್ಯಗಾರ, ಔಚಿತ್ಯಪೂರ್ಣ ಕುಣಿತ, ಅಭಿನಯ,ವೈನೋದಿಕ ರಸಪರಿ ಪೂರ್ಣ ಪ್ರಬುದ್ಧ ವಾಗ್ವೈಖರಿ. +ಪಾತ್ರಗಳ ನಾಡಿ ಮಿಡಿತವನ್ನರಿತ ಅನುಭವ ಪೂರ್ಣ ಕಲಾಭಿವ್ಯಕ್ತಿ ಈ ಹಿರಿಯ ಹಾಸ್ಯ ಕಲಾವಿದನ ಪ್ರತಿಭಾ ಸೊತ್ತಾಗಿ ಗಮನೀಯವಾಗುತ್ತವೆ. +ಕುಂದಾಪುರ ತಾಲೂಕಿನ ಸುಳಗೋಡು ಎಂಬ ಪುಟ್ಟ ಹಳ್ಳಿಯಲ್ಲಿ ಹುಟ್ಟಿ ಬೆಳೆದ ನಾರಾಯಣ ಹಾಸ್ಯಗಾರರು ಕುಷ್ಠ ಮರಕಾಲ-ಕೃಷ್ಟಿ ದಂಪತಿಯ ಸುಪುತ್ರ . +ಹಳ್ಳಿ ಹೊಳೆ ಚಕ್ರಮೈದಾನ ಪ್ರಾಥಮಿಕ ಶಾಲೆಯಲ್ಲಿ 5ನೇ ತರಗತಿಯವರೆಗೆ ಅಕ್ಷರಾಭ್ಯಾಸ ಮಾಡಿ, ತನ್ನ 15ರ ಹರೆಯದಲ್ಲೇ ಕಮಲಶಿಲೆ ಮೇಳದಲ್ಲಿ ಗೆಜ್ಜೆ ಕಟ್ಟಿ ಹೆಜ್ಜೆ ಹಾಕಿದರು. +ಹೆರಂಜಾಲುಸುಬ್ಬಣ್ಣ, ಕೋಡಿ ಶಂಕರಗಾಣಿಗ, ಸಕ್ಕಟ್ಟುಲಕ್ಷೀನಾರಾಯಣಯ್ಯನವರ ಗುರುತನ. + ಎಂ.ಎಂ.ಹಗ್ಡೆ ಯವರ ಸಮರ್ಥ ಮಾರ್ಗದರ್ಶನ ಈ ಕಲಾವಿದನ ರಂಗಜೀವನಕ್ಕೆ ಸಮರ್ಪಕ ಪ್ರೇರಣಾ ಶಕ್ತಿಯಾಯಿತು. +ಸುಳಗೋಡು ಅವರು ಹಾಸ್ಯಗಾರನಾಗುವ ಮೊದಲು ವೃತ್ತಿಮೇಳಗಳ ಸಮರ್ಥ ಪುರುಷವೇಷಧಾರಿಯಾಗಿ ವಿಜೃಂಭಿಸಿದ್ದರು. +ಭಸ್ಮಾಸುರ,ಕೌರವ, ಭೀಮ, ಅರ್ಜುನ, ಅಶ್ವತ್ಥಾಮ, ಕೋಟೆಯಕರ್ಣ ಮೊದಲಾದ ಭೂಮಿಕೆಗಳು ಅವರಿಗೆ ಹೆಸರುತಂದಿತ್ತಿವೆ. +ಅದೊಂದು ಸಂದರ್ಭ ಮುತ್ತಯ್ಯ ಹೆಗ್ಡೆಯವರ ಆಶಯದಂತೆ "ರತಿ ಕಲ್ಯಾಣ'ದವಿದೂಷಕನಾಗಿ ರಂಜಿಸಿದ್ದೇ ತಡ ಸುಳಗೋಡು ಹಾಸ್ಯಭೂಮಿಕೆಗಳಿಗೆ ಕಾಯಂ ಆದರು. +ಶ್ರೀಯುತರ ಭೀಷ್ಮ ಪ್ರತಿಜ್ಞೆಯ ಕಂದರ “ವಿಜಯ'ದ ಬ್ರಾಹ್ಮಣ, ಚಂದ ಗೋಪ, ಬಾಹುಕ,ಪಾಪಣ್ಣ, ವಿದ್ಯುಜ್ಜಿಹ್ವ ಮೊದಲಾದ ಭೂಮಿಕೆಗಳು ಜನಪ್ರಿಯವಾಗಿವೆ. +ಕಮಲಶಿಲೆ 1, ಮಾರಣಕಟ್ಟೆ 10,ಸೌಕೂರು 19, ಹಾಲಾಡಿ 3, ಮಂದಾರ್ತಿ 2, ಹೀಗೆ 35ವರ್ಷಗಳ ಕಲಾವ್ಯವಸಾಯ ಇವರದ್ದು. +ಪತ್ನಿ ಗಿರಿಜಾ. +ಉದಯ, ಉಮಾ, ಉಷಾ ಮಕ್ಕಳು. +ಅನುಭವಿ ಹಾಸ್ಯಗಾರ ಸುಳಗೋಡು ಅವರನ್ನು ದೆಹಲಿಯ ಗಣರಾಜ್ಯೋತ್ಸವ ಸಮಾರಂಭದ "ಫೂಲ್‌ವಾಲೋಂಕಿ ವಾರ್‌'ನಲ್ಲಿ ಸಮ್ಮಾನಿಸಲಾಗಿದೆ. +ಜಿ.ಶಂಕರ್‌ ಪ್ಯಾಮಿಲಿ ಟ್ರಸ್ಟ್‌ನ ವತಿಯಿಂದ ಗೌರವಿಸಲಾಗಿದೆ. +ಅಪೂರ್ವ ಕಲಾವಂತಿಕೆಯಿಂದ ಬಡಗುತಿಟ್ಟಿನ ಯಕಗಾನ ರಂಗದಲ್ಲಿ ಸಿದ್ದಿಯ ಶಿಖರವೇರಿದ ಶ್ರೇಷ್ಠ ಕಲಾವಿದ ಗೋಡೆ ನಾರಾಯಣ ಹೆಗಡೆ. +ಪ್ರಧಾನ ಪುರುಷ ಪಾತ್ರಕ್ಕೊಪ್ಪುವ ಆಳಂಗ,ನಾಜೂಕಿನ ನೃತ್ಯಾಭಿನಯ ವೈಖರಿ, ಪ್ರೌಢ ಪೌರಾಣಿಕ ಅನುಭವದ ವ್ಯಾಕರಣಬದ್ಧ ರಸಾತ್ಮಕ ವಾಗ್ಮಿತೆ,ಪಾತ್ರಗಳ ನಾಡಿಮಿಡಿತವನ್ನರಿತ ಗರಿಷ್ಠಮಟ್ಟದ ಕಲಾಭಿವ್ಯಕ್ತಿ ಮೈಗೂಡಿಸಿಕೊಂಡ ನಾರಾಯಣಹೆಗಡೆಯವರು, ಉತ್ತರ ಕನ್ನಡ ಸಿದ್ಧಾಪುರ ತಾಲೂಕಿನ ಕೊರ್ಲಕ್ಕೆ ಎಂಬಲ್ಲಿ 1940ರಲ್ಲಿ ಫೆಬ್ರವರಿ 2ರಂದು ಜನಿಸಿದರು. +ಶ್ರೀಯುತರ ತಂದೆ ಗೋಡೆ ತಿಮ್ಮಯ್ಯ ಹೆಗಡೆ ಮತ್ತು ತಾಯಿ ಗೌರಮ್ಮ ತಿಮ್ಮಯ್ಯ ಹೆಗಡೆ. +ಸುತ್ತಮುತ್ತಲಿನ ಯಕ್ಷಗಾನ ಪರಿಸರದ ಪ್ರಭಾವ ಹಾಗೂ ಕೊಳಗಿ ಸೀತಾರಾಮ ಹೆಗಡೆಯವರ ಪ್ರೇರಣೆಯಿಂದ ಕಲಾಬದುಕು ಕಂಡ ಗೋಡೆಯವರು 5ನೇ ತರಗತಿಯವರೆಗಿನ ಅಕ್ಷರ ಶಿಕ್ಷಣದ ಬಳಿಕ ಯಕ್ಷಲೋಕ ಕಂಡವರು. +ಕೊಳಗಿ ಸೀತಾರಾಮ ಹೆಗಡೆ, ಮಲ್ಲದ್ದೆ ಗಣೇಶಯ್ಯ ಅವರ ಗುರುತನವನ್ನು ಪಡೆದ ಗೋಡೆಯವರು, ಆರಂಭಿಕ ವೃತ್ತಿಬದುಕಿನಲ್ಲಿ ಸ್ರ್ತೀ ವೇಷಧಾರಿಯಾಗಿ ಮೆರೆದವರು. +ಶ್ರೀಯುತರ ತಾರೆ,ದಮಯಂತಿ, ಸೈರೇಂಧ್ರಿ, ದಾಕ್ಷಾಯಿಣಿ, ಪ್ರಭಾವತಿ ಪಾತ್ರಗಳು ಜನಮನ ರಂಜಿಸಿವೆ. +ತದನಂತರ ಹಂತ-ಹಂತವಾಗಿ ಪುರುಷವೇಷದಾರಿಯಾಗಿ, ಎರಡನೇವೇಷಧಾರಿಯಾಗಿ ಬೆಳೆಯುತ್ತ ಬಂದ ಗೋಡೆ“ಗದಾಯುದ್ಧ'ದ ಕೌರವನ ಪಾತ್ರದ ಮೂಲಕ ತಾರಾಮೌಲ್ಯದ ವರ್ಚಸ್ಸು ಪಡೆದರು. +ಶ್ರೀಯುತರ ಕೌರವ, ರಾವಣ, ಯತುಪರ್ಣ,ಬ್ರಹ್ಮ, ಲಕ್ಷ್ಮಣ, ಅರ್ಜುನ, ಸಾಲ್ವ, ಜಾಂಬವ,ಕಾರ್ತವೀರ್ಯ, ಕೀಚಕ, ಸುಧನ್ಹ ಪಾತ್ರಗಳು ಯಕ್ಷಗಾನದ ಸೃಜನಶೀಲ ಕಲಾ ಸ್ವರೂಪದ ಜೀವಂತ ಯಕ್ಷಶಿಲ್ಪಗಳಾಗಿವೆ. +ಇಡಗುಂಜಿ 9, ಅಮೃತೇಶ್ವರಿ 6, ಮೂಲ್ಕಿ 1,ಪೆರ್ಡೂರು 1 ಪಂಚಲಿಂಗ 4, ಶಿರಸಿ ಮಾರಿಕಾಂಬಾ 4, ಹೀಗೆ ಗೋಡೆಯವರ ಕಲಾಕೃಷಿಗೆ ಸುವರ್ಣ-ಸಂಬ್ರಮ. +ಪ್ರಸ್ತುತ ಗೋಡೆ ವಿಶ್ರಾಂತ ಜೀವನದಲ್ಲಿದ್ದಾರೆ. +ಧರ್ಮಪತ್ನಿ ಲಕ್ಷ್ಮೀ. +ವತ್ಸಲ, ಪ್ರಶಾಂತ, ಪ್ರಸಾದ,ಭವ್ಯ, ದಿವ್ಯ, ಎಂಬ ಐವರು ಮಕ್ಕಳು. +ಇವರ ಸುಪುತ್ರ ಗೋಡೆ ಪ್ರಸಾದ ಹೆಗಡೆ ಭರವಸೆಯ ಭಾಗವತರು. +ಶ್ರೀಯುತರಿಗೆ “ಕರ್ನಾಟಕ ಜಾನಪದ ಯಕ್ಷಗಾನ ಅಕಾಡೆಮಿ ಪ್ರಶಸ್ತಿ, ರಾಮವಿಠಲ ಪ್ರಶಸ್ತಿ, ಅಖಿಲಹವ್ಯಕ ಮಹಾಸಭಾ ಸಂಮಾನ, ಸಿದ್ಧಾಪುರ ಸಾಹಿತ್ಯ ಸಮ್ಮೇಳನದ ಗೌರವ, ಕಲಾಗಂಗೋತ್ರಿ ಗೌರವ,ಉಡುಪಿ ಯಕ್ಷಗಾನ ಕಲಾರಂಗದ ದಶಾವತಾರಿ ಮಾರ್ವಿಹೆಬ್ಬಾರ್‌ ಪ್ರಶಸ್ತಿಯೂ ಸೇರಿದಂತೆ ಹಲವು ಪುರಸ್ಕಾರಕ್ಕೆ ಸಂದಿದೆ. +ಅಪೂರ್ವ ಯಕ್ಷಗಾನ ವರ್ಚಸ್ಸಿನ ಸಂಪದ್ಭರಿತ ಕಲಾಪ್ರತಿಭೆಯಾಗಿ ರಂಗಸ್ಥಳದಲ್ಲಿ ವಿಜೃಂಭಿಸುವ ಹಿರಿಯ ಕಲಾವಿದ ಬೇಗಾರು ಪದ್ಮನಾಭ ಶೆಟ್ಟಿಗಾರ್‌. +ಉಡುಪಿ ತಾಲೂಕಿನ ಚೇರ್ಕಾಡಿ ಗ್ರಾಮದ ಪಡುವಾರಣಾಸಿಮನೆ ಎಂಬಲ್ಲಿ ಹುಟ್ಟಿ ಬೆಳೆದ ಶೆಟ್ಟಿಗಾರರು ತಿಮ್ಮ ಶೆಟ್ಟಿಗಾರ-ನರಸಮ್ಮ ದಂಪತಿಯ ಸುಪುತ್ರ. +5ನೇ ತರಗತಿಯವರೆಗಿನ ಶಾಲಾ ಕಲಿಕೆಯ ತರುವಾಯ, ಅಂದರೆ ತನ್ನ 16ರ ಹರೆಯದಲ್ಲಿ ಯಕ್ಷಗಾನ ಕ್ಷೇತ್ರಕ್ಕೆ ಅಡಿಯಿರಿಸಿದ ಇವರು ಮತ್ತೆ ಹಿಂದಿರುಗಿ ನೋಡಲಿಲ್ಲ. +ಮಟಪಾಡಿ ಕೃಷ್ಣ ಶೆಟ್ಟಿಗಾರ್‌ಹಾಗೂ ಬ್ರಹ್ಮಾವರ ಶ್ರೀನಿವಾಸ ನಾಯಕ್‌ ಅವರ ಪ್ರೇರಣೆಯಿಂದ ಬಣ್ಣದ ಬಾಳುವೆ ಕಂಡ ಪದ್ಮನಾಭ ಶೆಟ್ಟಿಗಾರರು ಗೋಪಾಲಕೃಷ್ಣ ಮಾಸ್ತರರ ಗುರುತನದಲ್ಲಿ ಯಕ್ಷವಿದ್ಯೆಯನ್ನು ತನ್ನದಾಗಿಸಿ-ಕೊಂಡರು. +ಬೇಗಾರರ ಪಾತ್ರಪೋಷಣೆ ಅಚ್ಚುಕಟ್ಟು. +ರಂಗಾನುಭವ ಗಟ್ಟಿಮುಟ್ಟು ಪ್ರಬುದ್ಧವಾದ ಭಾಷಾಚಮತ್ಕಾರ, ಭಾವಾನುಕೂಲಕರವಾದ ನೃತ್ಯ,ಅಭಿನಯ, ಹಾವ-ಭಾವಗಳ ಸಾಕಾರ. + ಇವರ ಪ್ರತೀಭೂಮಿಕೆಗಳಲ್ಲು ರಸಾತ್ಮಕವಾಗಿ ಗುರುತಿಸಬಹುದಾಗಿದೆ. +ಬಡಗುತಿಟ್ಟಿನ ಒಬ್ಬ ಸರ್ವಶ್ರೇಷ್ಠ ಪುರುಷವೇಷಧಾರಿ-ಯಾಗಿ, ಈ ರಂಗಭೂಮಿಯ ಆಡುನುಡಿಯಲ್ಲಿ ಪ್ರಧಾನ ಕಲಾವಿದ ಸೂಚಿತ ಎರಡನೇ ವೇಷಧಾರಿಯಾಗಿ ಸ್ಥಾನಮಾನ್ಯತೆಯನ್ನು ಕಂಡು ಕೊಂಡ ಕಲಾವಿದರಿವರು. +ಪೆರ್ಡೂರು, ಸಾಲಿಗ್ರಾಮ, ಮಂದಾರ್ತಿ,ಸುರತ್ಕಲ್‌, ಕಮಲಶಿಲೆ, ಶಿರಸಿ, ಕರ್ನಾಟಕ, ಹಾಲಾಡಿ ಹೀಗೆ ತೆಂಕು ಬಡಗಿನ ಮೇಳಗಳ ಸಾರ್ಥಕ ಕಲಾವ್ಯವಸಾಯದಲ್ಲಿ ನಾಲ್ಕು ದಶಕಗಳನ್ನು ಯಶಸ್ವಿಯಾಗಿ ಪೂರೈಸಿ ಇದೀಗ ವಿಶ್ರಾಂತಿ ಜೀವನದಲ್ಲಿದ್ದಾರೆ. +ವರುಷ ಅರವತ್ತನಾಲ್ಕಾದರೂ ಇಂದಿಗೂ ಅವರು ಗೆಜ್ಜೆಕಟ್ಟಿದರೆ ರಂಗಸ್ಥಳದ ದಣಿವರಿಯದ ಧಣಿಯಾಗಿ ಕುಣಿಯಬಲ್ಲ ಕಲೋತ್ಸಾಹ ಮೈಗೂಡಿಸಿಕೊಂಡಿದ್ದಾರೆ. +ಯಾವುದೇ ಪೌರಾಣಿಕ ಪ್ರಸಂಗಗಳಲ್ಲಿ ಅವರ ಸಾಲಿನ ವೇಷಗಳು ರಂಗಮಂಚದಲ್ಲಿ ಪಾರಂಪರಿಕ ವೈಭವ ಮೆರೆದಿವೆ. +ಕೀಚಕ, ಕಂಸ, ಹಿರಣ್ಯಕಶಿಪು,ಕರ್ಣ, ಸುಧನ್ವ ಮೊದಲಾದ ಭೂಮಿಕೆಗಳಿಗೆ ಬೇಗಾರರು ತನ್ನದೇ ಕಲಾವಂತಿಕೆಯ ವಿಶಿಷ್ಟ ಆಯಾಮ ನೀಡಿ ಜನಪ್ರಿಯರಾಗಿದ್ದಾರೆ. +ಪತ್ನಿ ಸುಂದರಿ. +ಮಾಧವ, ದಯಾನಂದ,ಮೋಹನ ಮಕ್ಕಳು. +ಹಿರಿಯ ಕಲಾವಿದ ಪದ್ಮನಾಭ ಶೆಟ್ಟಿಗಾರರನ್ನು ಬೇಗಾರು ಕನ್ನಡ ಸಾಹಿತ್ಯ ಪರಿಷತ್‌ವತಿಯಿಂದ ಸಮ್ಮಾನಿಸಲಾಗಿದೆ. +ಬೆಂಗಳೂರಿನಲ್ಲಿ “ಗಾನ ಸೌರಭ' ಪ್ರಶಸ್ತಿಯೂ ಇವರಿಗೆ ದೊರಕಿರುತ್ತದೆ. +ಸುಶ್ರಾವ್ಯ ಕಂಠಸಿರಿ, ಅನನ್ಯ ರಂಗತಂತ್ರಗಳ ಮೂಲಕ ರಂಗಸ್ಕಳಕ್ಕೆ ಗಾಯನದ ಸಾಥ್‌ ನೀಡುವವರು ಭಾಗವತ ಪರಮೇಶ್ವರ ನಾಯ್ಕ. +ಉತ್ತರ ಕನ್ನಡದ ಮಂಕೋಡ ಎಂಬಲ್ಲಿ 20-10-1969ರಲ್ಲಿ ಜನ್ಮ ತಾಳಿದ ಪರಮೇಶ್ವರ ನಾಯ್ಕರು ಕೆರಿಯನಾಯ್ಕ ಗೌರಿ ದಂಪತಿಯ ಸುಪುತ್ರ. +3ನೇ ತರಗತಿಗೆ ಅಕ್ಷರ ಶಿಕಣಕ್ಕೆ ತಿಲಾಂಜಲಿಯಿತು ತನ್ನ 24ನೇ ವಯಸ್ಸಿನಲ್ಲೇ ಯಕ್ಷಗಾನ ರಂಗವನ್ನು ಪ್ರವೇಶಿಸಿದವರು. +ಸಿದ್ಧಾಪುರ ಮಂಜುನಾಥ ಹೆಗಡೆ ಎನ್ನುವ ಹಿರಿಯ ಹವ್ಯಾಸೀ ಭಾಗವತರ ಪದ್ಯಗಳನ್ನು ಕೇಳಿಸಿಕೊಂಡು ಯಕ್ಷಗಾನದ ಗೀಳು ಹೆಚ್ಚಿಸಿಕೊಂಡ ಪರಮೇಶ್ವರ ನಾಯ್ಕರು ಕಾನ್ಮನೆಯ ಕೃಷ್ಣತಮ್ಮ ಗೌಡಎಂಬ ಹವ್ಯಾಸಿ ಕಲಾವಿದರ ಪ್ರೇರಣೆಯಂತೆ ಕೃಷ್ಣ ಜಿ.ಬೇಡ್ಕಣಿಯವರ ತರಭೇತಿ ಕೇಂದ್ರಕ್ಕೆ ತೆರಳಿ ಅಲ್ಲಿಯೇ ಯಕ್ಷದೀಕ್ಷೆ ಪಡೆದರು. +ಕಾವೂರು ಹನುಮಂತ ಗೌಡರು ಇವರಿಗೆ ಕಲಾಜೀವನ ಪಾದಾರ್ಪಣೆಗೆ ಹಾರ್ದಿಕ ಸಹಕಾರ ನೀಡಿದರು. +ಮುಂದೆ ಹಂಗಾರಕಟ್ಟೆ ಯಕ್ಷಗಾನ ಕೇಂದ್ರವನ್ನು ಸೇರಿ ಅಲ್ಲಿ ಕೆ.ಪಿ.ಹೆಗಡೆಯವರಲ್ಲಿ ಸಮರ್ಪಕ ಭಾಗವತಿಕೆ ಶಿಕ್ಷಣ ಪಡೆದರು. +ಪ್ರಥಮ ವರ್ಷದಲ್ಲೇ ಶಿರಸಿ ಮೇಳದಲ್ಲಿ ಸಂಗೀತಗಾರನಾಗಿ ಅವಕಾಶ ಪಡೆದುಕೊಂಡ ಇವರು ಅಲ್ಲಿ ಸಾಕಷ್ಟು ಪೌರಾಣಿಕ ಜ್ಞಾನ ಸಂಪಾದಿಸಿದರು. +ಅಂತರಂಗದ ಅನನ್ಯ ಗಾನಪ್ರತಿಭೆಯನ್ನು ಸತತ ಪರಿಶ್ರಮ, ಸಾಧನೆಯಿಂದ ಸಾಣೆ ಹಿಡಿದು ಭಾಗವತನಾಗಿ ರೂಪುಗೊಂಡರು. +ಶಿರಸಿ 2, ಅಮೃತೇಶ್ವರಿ 3, ಬಗ್ವಾಡಿ 1,ಮಡಾಮಕ್ಕಿ 5, ಮಂದಾರ್ಶಿ 5, ಹೀಗೆ 1 ವರ್ಷಗಳ ಕಲಾಕೃಷಿ ಇವರದ್ದು. +ಪ್ರಸ್ತುತ ಶ್ರೀಯುತರು ಮಂದಾರ್ತಿ ಮೇಳದ ಬಾಗವತರಾಗಿ ದುಡಿಯುತ್ತಿದ್ದಾರೆ. +ಕಾನಗೋಡು, ಹಳ್ಳಿಬೈಲು,ಕಕ್ಕುಂಜೆ, ಮೊದಲಾದ ಕಡೆಯ ಸಂಘ-ಸಂಸ್ಥೆಗಳಿಂದಲೂ, ಜಿ.ಶಂಕರ್‌ ಫ್ಯಾಮಿಲಿ ಟ್ರಸ್ಟ್‌ವತಿಯಿಂದ ಗೌರವವೂ ದೊರಕಿದೆ. +ಮಡದಿ ಸುಶೀಲಾ. +ನವ್ಯಶ್ರೀ ಮಗಳು. +ಪ್ರತಿಭಾನ್ವಿತ ಭಾಗವತ ಪರಮೇಶ್ವರ ನಾಯ್ಕ ಅವರು ಪೌರಾಣಿಕ ನವ್ಯ ಕಥಾನಕಗಳೆರಡರಲ್ಲೂ ವಿಜೃಂಭಿಸುವ ಭಾಗವತರು. +ರಂಗನಟನ ಚೈತನ್ಯಶೀಲ ಕಲಾಭಿವ್ಯಕ್ತಿಗೆ ಹಾಗೂ ಭಾಗವತರ ಗಾನಾನುಕೂಲಕರವಾದ ಮದ್ದಳೆಯ ಮಸ್ತಕ ನುಡಿಸಾಣಿಕೆಗೆ ಎತ್ತಿದ ಕೈ - ಪರಮೇಶ್ವರ ಪ್ರಭಾಕರ ಭಂಡಾರಿ. +ಮಾಧುರ್ಯ ಮಯವಾದ ನುಡಿತದ ಝೇಂಕಾರದಲ್ಲಿ ಮದ್ದಳೆಯ ಮಸ್ತಕದಲ್ಲಿ ಬೆರಳುಗಳ ನರ್ತನ ಕಾಣಿಸುವ ಸೃಜನಶೀಲ ಸಿದ್ಧಹಸ್ತ ಪರಮೇಶ್ವರ ಭಂಡಾರಿಯವರು. +ಹೆಸರಾಂತ ಮದ್ದಳೆಗಾರ ಕರ್ಕಿ ಪ್ರಭಾಕರ ಭಂಡಾರಿ - ಶಾರದಾ ದಂಪತಿಯ ಸುಪುತ್ರ. +ಉತ್ತರಕನ್ನಡದ ಕರ್ಕಿ ಎಂಬಲ್ಲಿ 2-5-1971ರಲ್ಲಿ ಜನಿಸಿದ ಪರಮೇಶ್ವರ ಅವರಿಗೆ ಮದ್ದಳೆವಾದನದ ವಿದ್ಯೆ, ಯಕ್ಷ ಕಲಾಸಕ್ತಿ ಎಂಬುದು ಮನೆತನದಿಂದ ಬಂದ ಬಳುವಳಿ ಎನ್ನಬಹುದಾಗಿದೆ. +ತಂದೆ ಪ್ರಭಾಕರ ಭಂಡಾರಿಯವರೇ ಇವರ ಮದ್ದಳೆಯ ಗುರುಗಳಾದುದರಿಂದ ಮದ್ದಳೆವಾದನ ಕಲೆ ಎಂಬುದು ಅಭಿಜಾತ. +ಸುಬ್ರಾಯ ಹೆಗಡೆಕಪ್ಪೆಕೆರೆಯವರೂ ಗುರುಸ್ಥಾನದಲ್ಲಿ ನಿಂತು ಪರಮೇಶ್ವರರಿಗೆ ಕಲಾನುಭವ ದ್ರವ್ಯವನ್ನು ಧಾರೆಯೆರೆದರು. +ತೀವ್ರತರವಾದ ನುಡಿಗಾರಿಕೆಯಲ್ಲಿ ಮಿಳಿತವಾದ ಪ್ರಮಾಣ ಪೂರ್ವಕವಾದ ಲಯಗಾರಿಕೆ,ಶ್ರವಣೀಯವಾದ ವಾದನಕಲಾ ಶ್ರೀಮಂತಿಕೆ ಹಸ್ತಗತವಾಗಿಸಿಕೊಂಡ ಪರಮೇಶ್ವರ ಭಂಡಾರಿಯವರು ಮದ್ದಳೆಗಾರಿಕೆಂರುಲ್ಲಿ ತಾರಾಮೌಲ್ಯವನ್ನ್ನು ತಂದುಕೊಡ ವಿದ್ವತ್‌ಶೀಲ ಮದ್ದಳೆವಾದಕರು. +ಗುಂಡಬಾಳ 9, ಶಿರಸಿ 1, ಭಾಸ್ಕರಜೋಶಿ ಮೇಳ 1, ಸಾಲಿಗ್ರಾಮ 12, ಹೀಗೆ 23 ವರ್ಷಗಳ ಕಲಾ ವಸಂತದಲ್ಲಿ ಪರಮೇಶ್ವರರ ಮದ್ದಳೆ ಮಧುರಮಯವಾಗಿ ಮಾತನಾಡಿದೆ. +ಚಂಡೆವಾದನ ಕಲೆಯ ಪರಿಣತಿಯನ್ನೂ ಹೊಂದಿದ ಶ್ರೀಯುತರು ಹಳೆತರ ಮಟ್ಟನ್ನೂ, ಹೊಸತರ ಗುಟ್ಟನ್ನೂ ಮದ್ದಳೆಯ ಪೆಟ್ಟಿನಲ್ಲಿ ಕಾಣಿಸುವವರು. +ಶ್ರಾವಕರಿಗೆ ಕೇಳಿಸುವವರು. +ಬಾಳಸಂಗಾತಿ ಭಾರತಿ. +ಪುನೀತ್‌, ಪ್ರಜ್ಞಾ ಮಕ್ಕಳು. +ಶ್ರೀಯುತರು ಪ್ರಸ್ತುತ ಸಾಲಿಗ್ರಾಮ ಮೇಳದ ಪ್ರಧಾನ ಮದ್ದಳೆವಾದಕರು. +ದಕ್ಷಿಣೋತ್ತರ ಕನ್ನಡಜಿಲ್ಲೆಯ ಹಲವಾರು ಸಂಘ-ಸಂಸ್ಥೆಗಳಲ್ಲಿ ಗೌರವ ಸಮ್ಮಾನವನ್ನು ಪಡೆದ ಪರಮೇಶ್ವರ ಭಂಡಾರಿಯವರನ್ನು ಹೈದರಾಬಾದ್‌ ಕರಾವಳಿ ಕರ್ನಾಟಕ ಸಂಘವು ಗೌರವಿಸಿದೆ. +ಮದ್ದಳೆಯ ಮೃದು ವಧುರ ನುಡಿ ಸಾಣಿಕೆಗೆ ಹೆಸರಾದ ಪ್ರಭಾಕರ ಭಂಡಾರಿ ಅವರು ಬಡಗುತಿಟ್ಟಿನ ಶ್ರೇಷ್ಠ ಮದ್ದಳೆವಾದಕರು. +ಪರಂಪರೆಂಯ ಅಂತಃಸ್ಸತ್ವವನ್ನು ನಾದರೂಪದಲ್ಲಿ ಪ್ರಕಟಿಸುವ ಪ್ರತಿಭಾವಂತರು. +ಕರ್ಕಿಯ ಪಾಂಡುರಂಗ ಭಂಡಾರಿ-ಹೊನ್ನಮ್ಮ ದಂಪತಿಯ ಸುಪುತ್ರರಾದ ಶ್ರೀಯುತರು1942ನೇ ಇಸವಿಯ ಮೇ ಎಂಟರಂದು ಹೊನ್ನಾವರ ತಾಲೂಕಿನ ಕರ್ಕಿ ಎಂಬಲ್ಲಿ ಜನಿಸಿದರು. +5ನೇ ಇಯತ್ತೆಯ ವರೆಗೆ ಅಕ್ಷರಾಭ್ಯಾಸ ಮಾಡಿದ ಭಂಡಾರಿಯವರು 14ರ ಹರೆಯದಲ್ಲೇ ಯಕ್ಷಲೋಕ ಪ್ರವೇಶಿಸಿದರು. +ಪ್ರಭಾಕರ ಭಂಡಾರಿಯವರ ತಂದೆಯವರು ಪ್ರಸಿದ್ಧ ಮದ್ದಳೆಗಾರರಾಗಿದ್ದು, ಮಗನಿಗೆ ಅವರೇ ಗುರುವಾಗಿ ಕಲಾಶಿಕ್ಷಣ ನೀಡಿ ಪ್ರೋತ್ಸಾಹಿಸಿದರು. +ಸ್ಫುಟವಾದ ಪೆಟ್ಟು, ನವಿರಾದ ಸ್ಪಷ್ಟ ಬೆರಳುಗಾರಿಕೆಯ ಹೊರಳಿಕೆ. +ಗಾನ ಪೋಷಕ ವಾದನ ಸಾಂಗತ್ಯದಲ್ಲಿ ನಟನ ಕ್ರಿಯಾಶೀಲ ಅಭಿವ್ಯಕ್ತಿಗೆ ಸಾರಥ್ಯ ನೀಡುವ ಪ್ರಭಾಕರ ಭಂಡಾರಿಯವರು ವಿಶೇಷ ರಂಗಪರಿಣತಿಯನ್ನು ಹೊಂದಿದವರು. +ಗುಂಡಬಾಳ-8, ಕುಮಾಟಾ-4,ಅಮೃತೇಶ್ವರಿ-3, ಕೊಳಗಿಬೀಸ್‌-2, ಇಡಗುಂಜಿ-16, ಸಾಲಿಗ್ರಾಮ-12, ಹೀಗೆ 6 ಮೇಳಗಳಲ್ಲಿ 45ವರ್ಷಗಳ ಸುದೀರ್ಥ ಕಲಾಜೀವನ ನಡೆಸಿ ಅಪಾರ ಜನಮೆಚ್ಚುಗೆ ಗಳಿಸಿದ್ದಾರೆ. +ಮಡದಿ ಶಾರದಾ. +ಮಂಜುನಾಥ,ಪರಮೇಶ್ವರ, ಉಮೇಶ ಎಂಬ ಮೂವರು ಪುತ್ರರು. +ಪ್ರಭಾಕರ ಭಂಡಾರಿಯವರ ಪುತ್ರರೂ ಮದ್ದಳೆಗಾರರಾಗಿ ಹೆಸರು ಗಳಿಸಿದ್ದಾರೆ. +ಮೃಣ್ಮಯ ಗಣಪತಿ ಮೂರ್ತಿ ತಯಾರಿಕೆ ಹಾಗೂ ಶಹನಾಯಿ ನುಡಿಸುವುದು ಸದ್ಯ ಇವರ ಉಪವೃತ್ತಿ. +ಇವರ ಪರಮೋಚ್ಚ ಕಲಾಸಾದನೆಗೆ 2002ರಲ್ಲಿ ಪ್ರತಿಷ್ಠಿತ ರಾಜ್ಯ ಪ್ರಶಸ್ತಿ ದೊರಕಿದೆ. +ಉಡುಪಿ“ಯಕ್ಷಗಾನ ಕಲಾರಂಗ'ದ ಭಾಗವತ ನಾರ್ಣಪ್ಪ ಉಪ್ಪೂರ ಪ್ರಶಸ್ತಿ, ಪಳ್ಳಿ ಸೋಮನಾಥ ಹೆಗ್ಡೆ ಪ್ರಶಸ್ತಿ ಹೀಗೆ ಹಲವು ಪುರಸ್ಕಾರಗಳಿಗೆ ಭಾಜನರು. +ರಂಗಕ್ಕೆ ಕಾವು ನೀಡುವ, ಪ್ರಸಂಗವನ್ನು ಉಠಾವು ಮಾಡುವ ಬಡಗಿನ ಚಂಡೆವಾದನ ಪ್ರವೀಣಪ್ರಶಾಂತ ವೆಂಕಟರಮಣ ಭಂಡಾರಿ. +ಹೊನ್ನಾವರ ತಾಲೂಕಿನ ಹೊಸಾಕುಳಿ ಎಂಬಲ್ಲಿ ಜನಿಸಿದ 35 ಹರೆಯದ ಪ್ರಶಾಂತ ಭಂಡಾರಿ ಅವರು ವೆಂಕಟರಮಣ ಭಂಡಾರಿ ಸರಸ್ವತಿ ದಂಪತಿಯ ಸುಪುತ್ರ. +ಎಸ್‌.ಎಸ್‌.ಎಲ್‌.ಸಿ. ಪ್ರೌಢಶಿಕ್ಷಣ ಪಡೆದ ಶ್ರೀಯುತರು ಚಂಡೆಗಾರರಾಗುವ ಕನಸು ಕಂಡರು. +ಇವರ ತಂದೆ ವೆಂಕಟರಮಣ ಭಂಡಾರಿಯವರು ಯಕ್ಷಗಾನ ವೇಷಧಾರಿಂಯಾಗಿದ್ದರು. +ಹಾಗಾಗಿ ಕಲೆಯೆಂಬುದು ಆನುವಂಶೀಯ ಬಳುವಳಿಯಾಯಿತು. +ತಂದೆಯವರ ಪ್ರೋತ್ಪಾಹ,ಮಾರ್ಗದರ್ಶನ, ಕಲಾ ಬದುಕಿಗೆ ಪ್ರೇರಣೆಯಾಯಿತು. +ಹೆರಂಜಾಲು ವೆಂಕಟರಮಣ ಗಾಣಿಗರ ಶಿಷ್ಯರಾಗಿ ಯಕ್ಷಗಾನ ಶಾಸ್ತ್ರೋಕ್ತ ಶಿಕ್ಷಣವನ್ನು ಪಡೆದು ಯಕ್ಷಲೋಕ ಪ್ರವೇಶಿಸಿದ ಭಂಡಾರಿಯವರು ಸಾಲಿಗ್ರಾಮ 5, ಕಮಲಶಿಲೆ 1 -ಮಂದಾರ್ತಿ 11,ಸೌಕೂರು 1, ಮೇಳಗಳಲ್ಲಿ 18ವರ್ಷಗಳ ಸಾರ್ಥಕ ರಂಗಯಾತ್ರೆ ಪೂರೈಸಿದ್ದಾರೆ. +ಪ್ರಸ್ತುತ ಶ್ರೀಯುತರು ಮಂದಾರ್ತಿ ಮೇಳದ ಪ್ರಧಾನ ಚಂಡೆವಾದಕರು. +ರಂಗನಟನ ಭಾವನುಶೀಲವೂ, ಭಾಗವತರಗಾನಾನುಕೂಲವೂ ಆದಂತಹ ಅವರ ಚಂಡೆವಾದನ ಕೌಶಲ ಪ್ರಶಂಸಾತ್ಮಕವಾದದ್ದು. +ನಯವಾದ ಕಿರುಪೆಟ್ಟು,ದಸ್ತನ್ನೇ ಧ್ವನಿಸುವ ನುಡಿಸಾಣಿಕೆ, ಸ್ಫುಟವಾದ ಹೊರಳಿಕೆ ಅವರ ಚಂಡೆಯ ಗುಂಡಿಗೆಯಿಂದ ಕೇಳಿ ಆಸ್ವಾದಿಸಬಹುದಾಗಿದೆ. +ಸಮರ್ಥ ಚಂಡೆವಾದಕರಾದ ಅವರು ಮದ್ದಳೆಗಾರರೂ ಹೌದು. +ಭಾಗವತಿಕೆಯಲ್ಲೂ ಪ್ರಾವಿಣ್ಯತೆ ಸಾಧಿಸಿದವರು. +ಪ್ರಶಾಂತ ಭಂಡಾರಿಯವರು ಚಂಡಗಾರಿಕೆಯೆಂದರೆ ಅವರ ಹೆಸರಿಗೇ ಅನ್ವರ್ಥವಾದಂತಿದೆ. +ಅವರ ವಾದನಕ್ರಮದಲ್ಲಿ ಕಾರ್ಕಶ್ಯವಿಲ್ಲ. +ಭಾಗವತರ ಪದ್ಯಗಳನ್ನೇ ನುಂಗಿ ಹಾಕುವ ಸ್ಹಯಂಂ ಪ್ರತಿಷ್ಠೆಯ ಹಿಮ್ಮೇಳಬೇಧನಾಗುಣವಿಲ್ಲ. +ಹಾಗಾಗಿ ಅವರು ಚಂಡೆ ಬಾರಿಸತೊಡಗಿದರೆ ಹಿಮ್ಮೇಳಕ್ಕೂ ಸುಖ. +ನಟರಿಗಂತೂ ಪರಮಾನಂದ. +ಪ್ರಶಾಂತ ಭಂಡಾರಿಯವರ ಸಹಧರ್ಮಿಣಿ ವೀಣಾ. +ಸುದೀಪ ಹಾಗೂ ಪ್ರದೀಪ ಮಕ್ಕಳು. +ಶ್ರೀಯುತರ ಉನ್ನತ ಪ್ರತಿಭೆಗೆ ನಾಡಿನ ಅನೇಕ ಸಂಘ-ಸಂಸ್ಥೆಗಳಿಂದ ಗೌರವ ಸಂಮಾನ, ಅಭಿನಂದನೆ ಪ್ರಾಪ್ತವಾಗಿದೆ. +ಪ್ರೌಢ, ಪೌರಾಣಿಕ ಜ್ಞಾನದೊಂದಿಗೆ ಗತ್ತುಗಾಂಭೀರ್ಯದ ನೃತ್ಯ, ಅಭಿನಯ ಶೈಲಿಯನ್ನು ರೂಢಿಸಿಕೊಂಡ, ಹಿರಿಯ ಕಲಾವಿದ ಪುರಂದರ ಹೆಗಡೆ. +ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಹುಕ್ತು ಎಂಬ ಹಳ್ಳಿಯೇ ಪುರಂದರ ಹೆಗಡೆಯವರ ಹುಟ್ಟೂರು. +ಗಣೇಶಯ್ಯ-ಮೂಕಾಂಬಿಕಾ ದಂಪತಿಯ ಸುಪುತ್ರರಾಗಿ 21.5.1958ರಲ್ಲಿ ಜನಿಸಿದ ಹೆಗಡೆಯವರು, ಪಿ.ಯು.ಸಿ. ವ್ಯಾಸಂಗವನ್ನು ಮುಗಿಸಿ,ತನ್ನ 22ರ ಹರೆಯದಲ್ಲೇ ಯಕ್ಷಗಾನ ಲೋಕವನ್ನು ಪ್ರವೇಶಿಸಿದರು. +ಇವರ ತಂದೆ ತಾಳಮದ್ದಳೆ,ಅರ್ಥದಾರಿಂತರಕಾಗಿದ್ದರು. +ಹಾಗಾಗಿ ಕಲಾಗುಣವೆನ್ನುವುದು ಎಳವೆಯಲ್ಲೇ ಮೈಗೂಡಿತು. +ಸಂಪ ಶೇಷಗಿರಿ ರಾಯರ ಪ್ರೇರಣೆಯಂತೆ ಕಲಾಬದುಕು ಕಂಡ ಪುರಂದರ ಹೆಗಡೆಯವರು ಹಿರಿಯ ಕಲಾವಿದ ಗೋಡೆ ನಾರಾಯಣ ಹೆಗಡೆ ಬಿಳಿಯೂರು ಕೃಷ್ಣಮೂರ್ತಿ ಅವರ ಶಿಷ್ಯನಾಗಿ ಕಲಾ ಶಿಕ್ಷಣವನ್ನು ಪಡೆದವರು. +ಪೆರ್ಡೂರು,ನಾಗರಕೊಡಿಗೆ, ಕಳವಾಡಿ, ಗುಂಡಬಾಳ, ಅಮೃತೇಶ್ವರಿ,ಕಮಲಶಿಲೆ, ಮೇಗರವಳ್ಳಿ, ಕುಮಟಾ, ಸಿಗಂಧೂರು,ಮಡಾಮಕ್ಕಿ, ಗುತ್ಕಮ್ಮ ಮೊದಲಾದ ಮೇಳಗಳಲ್ಲಿ ಶ್ರೀಯುತರ 28 ವರ್ಷಗಳ ಸಾರ್ಥಕ ಕಲಾಕೃಷಿ ಸಂಪನ್ನಗೊಂಡಿದೆ. +ಅನುಭವ ಪೂರ್ಣ ರಂಗನಡೆ, ಪ್ರಸಂಗ ಮಾಹಿತಿ,ಅಭಿನಯ ಪ್ರಧಾನ, ಭಾವಾಭಿವ್ಯಕ್ತಿ, ಎರಡನೇ ವೇಷಕ್ಕೊಪ್ಪುವ ಆಳಂಗ, ಗಂಭೀರ ಸ್ವರ, ಉತ್ಕೃಷ್ಟಮಟ್ಟದ ಸಾಹಿತಿಕ ವಚೋಚಮತ್ಕಾರ ಹೆಗಡೆಯವರ ಕಲಾವ್ಯಕ್ತಿತ್ವದಲ್ಲಿ ಕಂಡು ಬರುತ್ತದೆ. +ಬೀಷ್ಮ,ಪರಶುರಾಮ, ವಾಲಿ, ಕರ್ಣ, ಕಮಲಭೂಪ,ಹರಿಶ್ಚಂದ್ರ, ಬಾಹುಕ, ಋತುಪರ್ಣ, ವಿಕ್ರಮಾದಿತ್ಯ,ದುಷ್ಟಬುದ್ಧಿ, ಭೀಮ ಮೊದಲಾದ ಪೌರಾಣಿಕ ಪಾತ್ರಗಳು ಪುರಂದರ ಹೆಗಡೆಯವರಿಗೆ ಕೀರ್ತಿತಂದಿತ್ತಿವೆ. +ಇವರ ಮಡದಿ ಶೈಲಜಾ ಹೆಗಡೆ. +ಅರ್ಪಣಾ,ಅಕ್ಷತಾ ಮಕ್ಕಳು. +ಹುಟ್ಟೂರಿನ ಯವಕ ಮಂಡಲದ ವತಿಯಿಂದ ಶ್ರೀಯುತರಿಗೆ ಗೌರವ ಸಂಮಾನ ದೊರಕಿದೆ. +ಯಕ್ಷಗಾನ ರಂಗದ ಯುಗಳತಿಟ್ಟಿನ ಸನಾತನ-ಸಮಕಾಲೀನ ಸುಸಂಸ್ಕೃತ ಹಾಸ್ಯಗಾರಿಕೆಯಲ್ಲಿ ವಿಶೇಷ ಗೆಲುವು ಕಂಡ ಹಾಸ್ಯಕಲಾವಿದ ಕಡಬ ಪೂವಪ್ಪ ಪುತ್ತೂರು ತಾಲೂಕಿನ ಕಡಬ ಎಂಬ ಊರಿನಲ್ಲಿ 5-5-1965ರಲ್ಲಿ ಗುಡ್ಡಪ್ಪ ಮಡಿವಾಳ-ಮಾಯಿಲು ದಂಪತಿಯ ಸುಪುತ್ರನಾಗಿ ಜನಿಸಿದ ಪೂವಪ್ಪ ಅವರು 8ನೇ ತರಗತಿಯವರೆಗಿನ ಓದಿನ ಬಳಿಕ, ತನ್ನ 18ನೇ ವಯಸ್ಸಿನಲ್ಲೇ ಯಕ್ಷ ಕ್ಷೇತ್ರಕ್ಕೆ ಹೆಜ್ಜೆ ಹಾಕಿದರು. +ಇವರ ಅಣ್ಣ, ಕಡಬ ಈಶ್ವರ ಅವರು ಯಕ್ಷಗಾನ ಮದ್ದಳೆಗಾರರು. +ಅವರ ಸಂಪೂರ್ಣ ಪ್ರೋತ್ಸಾಹ,ಪ್ರೇರಣೆ ಪೂವಪ್ಪನವರ ಕಲಾಬದುಕಿನ ಪಯಣಕ್ಕೆ ದೊರಕಿತು. +ಹಾಗೆಯೇ ಮೋಹನ ಬೈಪಾಡಿತ್ತಾಯ,ಪದ್ಯಾಣ ಗಣಪತಿ ಭಟ್ಟರ ಸಹಕಾರವೂ ಲಭಿಸಿತು. +ಕೆ.ಗೋವಿಂದಭಟ್‌, ಸರಪಾಡಿ ಅಶೋಶಶೆಟ್ಟರ ಗುರುತನದಲ್ಲಿ ಕಲಾವಿದ್ಯೆಯನ್ನು ಗಳಿಸಿದ ಕಡಬ ಪೂವಪ್ಪನವರು ಕದ್ರಿಮೇಳದಲ್ಲಿ 6, ಮದವೂರುಮೇಳದಲ್ಲಿ 2, ಹಾಗೂ ಪ್ರಸ್ತುತ ಸೇವೆ ಸಲ್ಲಿಸುತ್ತಿರುವ ಮಂದಾರ್ತಿ ಮೇಳದಲ್ಲಿ 20 ವರುಷಗಳ ಕಲಾತಿರುಗಾಟವನ್ನು ಯಶಸ್ವಿಯಾಗಿ ಪೂರೈಸಿದ್ದು ಶ್ರೀಯುತರ ಒಟ್ಟು ರಂಗಕೃಷಿ 28ವರ್ಷ. +ಹಾಸ್ಯಭೂಮಿಕೆಗೊಪ್ಪುವ ವಿಭಿನ್ನ ನೃತ್ಯ,ಅಭಿನಯ, ಪಾತ್ರೋಚಿತ ರಂಗನಡೆ, ಅಪಾರ ಪ್ರತ್ಯುತ್ಪನ್ನಮತಿತ್ವದ ರಂಜಿಸುವ ಪೂವಪ್ಪನವರು ಬಾಹುಕ, ಕಂದರ, ವಿದ್ಯುಜ್ಜಿಹ್ವ, ಚಂದಗೋಪ,ಕಾಶೀಮಾಣಿ, ಬ್ರಾಹ್ಮಣ, ಮೊದಲಾದ ಪೌರಾಣಿಕ ಭೂಮಿಕೆಗಳಿಗೆ ಸ್ವಯಂ ಪ್ರತಿಭೆಯ ಮೂಲಕ ವಿಶಿಷ್ಟ ಆಯಾಮ ನೀಡಿದ್ದಾರೆ. +ಪತ್ನಿ ರಾಧಿಕಾ. +ರಂಜಿತಾ, ರಶ್ಮಿತಾ, ಪೂಜಿತಾ ಮಕ್ಕಳು. +ಪೌರಾಣಿಕ ಹಾಸ್ಯ ಪಾತ್ರಗಳನ್ನು ಸಾಂಪ್ರದಾಯಿಕ ಸ್ವರೂಪದಲ್ಲಿಟ್ಟು ಹೊಸತನದ ನವಿರಾದ ಕಳೆಯಲ್ಲಿ ಮೆರೆಯಿಸುವ ಕಲಾವಿದ ಕಡಬ ಪೂವಪ್ಪನವರನ್ನು ಹಲವು ಸಂಘ-ಸಂಸ್ಥೆಗಳು ಗುರುತಿಸಿ ಸಂಮಾನಿಸಿವೆ. +ಸಾಂಪ್ರದಾಯಿಕ ಹಾಗೂ ಸೃಜನಾತ್ಮಕ ನುಡಿಸಾಣಿಕೆಯಲ್ಲಿ ಸುಸಮರ್ಥ ಚಂಡೆ-ಮದ್ದಳೆಗಾರರಾಗಿ ರೂಪುಗೊಂಡ ಸಂಪನ್ನ ಪ್ರತಿಭೆ ಹೆರಂಜಾಲು ಬಾಲಕೃಷ್ಣ ಗಾಣಿಗ. +ಸುಪ್ರಸಿದ್ಧ ಕಲಾವಿದ ಹೆರಂಜಾಲು ವೆಂಕಟರಮಣ ಗಾಣಿಗ ಹಾಗೂ ಶ್ರೀಮತಿ ಗಣಪು ಗಾಣಿಗ ಅವರ ಸುಪುತ್ರರಾಗಿ 17-2-1972ರಲ್ಲಿ ಕುಂದಾಪುರ ತಾಲೂಕಿನ ನಾಗೂರು ಎಂಬಲ್ಲಿ ಜನಿಸಿದ ಬಾಲಕೃಷ್ಣ ಅವರು 8ನೇ ಇಯತ್ತೆಯವರೆಗೆ ಅಕ್ಷರಾಭ್ಯಾಸ ಮಾಡಿದವರು. +ತಂದೆ ವೆಂಕಟರಮಣ ಗಾಣಿಗ ಹಾಗೂ ಅಣ್ಣ ಹೆರಂಜಾಲು ಗೋಪಲ ಗಾಣಿಗ ಅವರಲ್ಲಿ ಕಲಾಶಿಕ್ಷಣವನ್ನು ಪಡೆದ ಅವರು 18ನೇ ವಯಸ್ಸಿನಲ್ಲೇ ಯಕ್ಷಲೋಕ ಪ್ರವೇಶಿಸಿದರು. +ಪ್ರಬುದ್ಧ ಮದ್ದಳೆಗಾರರಾಗಿಯೇ ಕಲಾ ವಲಯಹುದಲ್ಲಿ ಜನಪ್ರಿಯರಾದ ಬಾಲಕೃಷ್ಣ ಗಾಣಿಗರು, ಮಂದಾರ್ತಿ 2, ಸೌಕೂರು 1, ಹಾಲಾಡಿ 1, ಕಮಲಶಿಲೆ 1, ಬಗ್ಡಾಡಿ 1 ಮೇಳಗಳಲ್ಲಿ ಕಲಾವ್ಯವಸಾಯ ನಡೆಸಿ 13 ವರ್ಷಗಳಿಂದ ಮಾರಣಕಟ್ಟೆ ಮೇಳದ ಪ್ರಧಾನ ಮದ್ದಳೆಗಾರರಾಗಿ ರಂಗಸೇವೆಯನ್ನು ಮುಂದುವರಿಸುತ್ತಿದ್ದಾರೆ. +ಬಾಲ್ಯದಿಂದಲೇ ಸಿಕ್ಕ ಪಾರಂಪರಿಕ ರಂಗಶಿಕ್ಷಣದ ನೆರಳಿನಲ್ಲಿ ಸ್ವಯಂ ಪ್ರತಿಭೆಯ ಚಾತುರ್ಯವನ್ನು ವಾದನ ಪದ್ದತಿಯಲ್ಲಿ ಅವರು ಕಾಣಿಸಿದ್ದಾರೆ. +ಸುಮಧುರನಾದದ ಗುಂಗುಗಾನವನ್ನು ರಸಿಕ ಶ್ರಾವಕರಿಗೆ ಕೇಳಿಸಿದ್ದಾರೆ. +ಕಲಾವಿದರ ಚೇತನಪೂರ್ಣ ಕಲಾಭಿವ್ಯಕ್ತಿಗೆ ಅವರ ವಂದ್ದ್ಧಳೆ ವಾದನ ಸುಯೋಗ ಸಾಂಗತ್ಯವಾಗುತ್ತದೆ. +ಭಾಗವತರ ರಸರಂಜಿತ ಭಾಗವತಿಕೆಗೆ ಮದ್ದಳೆಯ ನುಡಿಗಾರಿಕೆ ಸಶಕ್ತ ಸಾರಥ್ಯವಾಗುತ್ತದೆ. +ಉತ್ತಮ ರಂಗತಂತ್ರ, ಪುರಾಣ ಪ್ರಜ್ಞೆಯನ್ನು ಹೊಂದಿದ ಮದ್ದಳೆ-ಚಂಡೆವಾದಕರಾದ ಇವರಿಗೆ ಭಾಗವತಿಕೆಯ ಪರಿಣಿತಿಯೂ ಇದೆ. + ಪತ್ನಿ ಪ್ರೇಮಾ. + ಸೌಜನ್ಯ ಹಾಗೂ ಅಕ್ಷಯ ಮಕ್ಕಳು. +ಬಾಲಕೃಷ್ಣ ಗಾಣಿಗರು ಸಮೃದ್ಧ ರಂಗಪ್ರತಿಭೆಗೆ ಹಲವು ಸಂಘ-ಸಂಸ್ಥೆಗಳು ಗೌರವ ಸಂಮಾನ ನೀಡಿವೆ. +ಸುಮಧುರ ಶಾರೀರ, ಮನೋಹರ ಶರೀರ,ಗರಿಷ್ಠ ರಂಗ ವ್ಯವಹಾರ, ಉತ್ಕೃಷ್ಟ ವಚೋಚವತ್ಕಾರ. +ಸುಪುಷ್ಟ ನೃತ್ಯಾಭಿನಯ ಸಾಕಾರ ಪ್ರಸಿದ್ಧ ಸ್ತ್ರೀಪಾತ್ರಧಾರಿ, ಭಾಸ್ಕರ ಜೋಶಿ ಕರಾವಳಿ ಕಲೆಯ ಕಮನೀಯ ಪ್ರತಿಭೆ. +ಉತ್ತರಕನ್ನಡ ಜಿಲ್ಲೆಯ ಶಿರಳಗಿ ಎಂಬಲ್ಲಿ 30-4-1956ರಲ್ಲಿ ಜನಿಸಿದ ಭಾಸ್ಕರ ಜೋಶಿಯವರು ನಾರಾಯಣ ಸುಬ್ರಾಯಾ ಜೋಶಿ-ಗಂಗಾ ನಾರಾಯಣ ಜೋಶಿಯವರ ಸುಪುತ್ರ. +ಎಸ್‌.ಎಸ್‌.ಎಲ್‌.ಸಿ. ಪೂರೈಸಿ ತನ್ನ 17ರ ಹರಯದಲ್ಲಿ ಕಲಾಲೋಕಕ್ಕೆ ಕಾಲಿರಿಸಿದ ಭಾಸ್ಕರಜೋಶಿಯವರಿಗೆ ಶಾಲಾದಿನಗಳಲ್ಲಿ ನಾಟಕಾಭಿರುಚಿಯಿತ್ತು. +ಅಂತಹ ಬಣ್ಣದ ಗೀಳು ಮುಂದೆ ಬಣ್ಣದ ಲೋಕಕ್ಕೆ ಕಾರಣವಾಯಿತು. +ಕೊಳಗಿ ಅನಂತ ಹೆಗಡೆ, ಕೆರೆಮನೆ ಗಜಾನನ ಹೆಗಡೆಯವರ ಒತ್ತಾಯ, ಪ್ರೋತ್ಸಾಹದಿಂದ ಯಕ್ಷರಂಗಮಂಚದಲ್ಲಿ ,ಹೆಜ್ಜೆ ಹಾಕಿದ ಜೋಶಿ ಅವರಿಗೆ ಹೊಸ್ತೋಟ ಮಂಜುನಾಥ ಭಾಗವತ, ಕೆರೆಮನೆ ಗಜಾನನ ಹೆಗಡೆ ಹಾಗೂ ಡಾ.ಕೋಟ ಶಿವರಾಮ ಕಾರಂತರು ಕಲಾ ಗುರುವರ್ಯರು. +ಇಡಗುಂಜಿ, ಸಾಲಿಗ್ರಾಮ, ಅಮೃತೇಶ್ವರಿ,ಪೆರ್ಡೂರು, ಶಿರಸಿ-ಪಂಚಲಿಂಗ, ಶಿರಸಿ-ಮಾರಿಕಾಂಬಾ ಮೇಳಗಳಲ್ಲಿ ಸುಮಾರು ಮೂವತ್ತೈದು ವರುಷಗಳ ಕಾಲ ಕಲಾ ತಿರುಗಾಟ ಪೂರೈಸಿದ ಜೋಶಿಯವರು ಡಾ.ಕಾರಂತರ "ಯಕ್ಷರಂಗ' ತಂಡದ ಕಲಾವಿದನಾಗಿಯೂ ಎಂಟು ವರ್ಷ ಕಲಾಸೇವೆ ನಡೆಸಿದವರು. +ಭುವನಗಿರಿಯ ಭುವನೇಶ್ವರಿ ಯಕ್ಷಗಾನ ಮೇಳ ಸಂಘಟಿಸಿ ಮೂರು ವರುಷಗಳ ಕಾಲ ಸಮಯಮಿತಿ ಯಕ್ಷಗಾನ ಕಾರ್ಯಕ್ರಮ ನೀಡಿದ ಅನುಭವವೂ ಶ್ರೀಯುತರಿಗಿದೆ. +ಬಾವನಾತ್ಮಕ ಪಾತ್ರಪೋಷಣೆಯಲ್ಲಿ ಜೋಶಿಯವರು ಶಿಖರ ಸ್ಥಾನದಲ್ಲಿ ನಿಲ್ಲುವವರು. +“ಗರತಿ' ಭೂಮಿಕೆಗಳಂತೂ ಅವರಿಗೆ ಸಮುಚಿತವಾಗುತ್ತದೆ. +ದಾಕ್ಷಾಯಿಣಿ, ಅಂಬೆ, ಪ್ರಭಾವತಿ,ದೇವಯಾನಿ, ಕಯಾದು, ಚಂದ್ರಮತಿ, ಶಾರದೆ ಪಾತ್ರಗಳನ್ನು ಯಶಸ್ವಿಯಾಗಿ ನಿರ್ವಹಿಸಿ ಕಲಾರಸಿಕರ ಅಭಿಮಾನಕ್ಕೆ ಪಾತ್ರರಾದವರು. +ಬಾಳಸಂಗಾತಿ ಮಾಲಿನಿ. +ಸ್ಫೂರ್ತಿ, ರಘುರಾಮ ಈರ್ವರು ಮಕ್ಕಳು. +ಶ್ರೇಷ್ಠ ಸ್ತ್ರೀವೇಷಧಾರಿ ಭಾಸ್ಕರಜೋಶಿ ಅವರಿಗೆ ಉತ್ತರ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್‌ವತಿಯಿಂದ ಥಾಣೆ, ಮುಂಬೈ, ಬೆಂಗಳೂರು ಸೇರಿದಂತೆ ಹಲವು ಕಡೆಗಳಲ್ಲಿ ಗೌರವ ಸಂಮಾನ ದೊರಕಿರುತ್ತದೆ. +ಯಕ್ಷಗಾನ ಪೌರಾಣಿಕ ಪ್ರಸಂಗಗಳ ಖಳಭೂಮಿಕೆಗಳನ್ನು ಸುಪುಷ್ಟವಾಗಿ ಪೋಷಿಸುವ ಕಲಾವಂತಿಕೆಯನ್ನು ಹೊಂದಿದ ಪ್ರಬುದ್ಧ ವೇಷಧಾರಿ ಭಾಸ್ಕರ ದೇವಾಡಿಗ. +ಕುಂದಾಪುರ ತಾಲೂಕಿನ ಕುಪ್ಪಾರು ಜಡ್ಡು ಎಂಬಲ್ಲಿ ನಾರಾಯಣ ದೇವಾಡಿಗ ಹಾಗೂ ಪದ್ದು ದಂಪತಿಯ ಪುತ್ರರಾದ ಭಾಸ್ಕರ ದೇವಾಡಿಗ ಅವರು ಇದೀಗ 37ನೇ ವರ್ಷದಲ್ಲಿದ್ದಾರೆ. +ಮೂರನೇ ತರಗತಿಗೆ ಶರಣುಹೊಡೆದು, 12ನೇ ವಯಸ್ಸಿನಲ್ಲೇ ಯಕ್ಷಗಾನ ರಂಗ ಪ್ರವೇಶಿಸಿದ ಶ್ರೀಯುತರು ಜಯಂತ ನಾಯ್ಕರ ಶಿಷ್ಯನಾಗಿ ಸಮರ್ಪಕ ನೃತ್ಯ, ಅಭಿನಯ ರಂಗನಡೆಯನ್ನು ಕಲಿತುಕೊಂಡವರು. +ರಂಜದಕಟ್ಟೆ 2, ಹಾಲಾಡಿ 4, ಮಡಾಮಕ್ಕಿ 3,ಗೋಳಿಗರಡಿ 7, ಮಾರಣಕಟ್ಟೆ 4, ಕಮಲಶಿಲೆ 4,ಹೀಗೆ 24 ವರ್ಷಗಳ ಯಕ್ಷಗಾನದ ಕಲಾ ದುಡಿಮೆಯಲ್ಲಿ ಭಾಸ್ಕರದೇವಾಡಿಗ ಯೋಗ್ಯ ಹೆಸರುಗಳಿಸಿದ್ದಾರೆ. +ಭಾಸ್ಕರ ದೇವಾಡಿಗ ಅವರ ಸಮೃದ್ಧ ವಾಕ್‌ಚಮತ್ಕಾರ, ಹುರುಪುಗೂಡಿದ ನಾಟ್ಯಾಭಿನಯ,ಗಮನೀಯವೆನಿಸಬಹುದಾದ ಪ್ರಸಂಗ ಮಾಹಿತಿ,ಪೌರಾಣಿಕ ಪಾತ್ರಗಳಿಗೆ ಸಮುಚಿತ ನ್ಯಾಯ ಕಲ್ಪಿಸಿಕೊಟ್ಟಿವೆ. +ಕಥಾನಕಗಳ ಎಲ್ಲಾ ಬಗೆಯ ಪಾತ್ರಗಳನ್ನು ನಿರ್ವಹಿಸುವ ಕಲಾಯೋಗ್ಯತೆ ಹೊಂದಿದ ದೇವಾಡಿಗರು ಖಳಭೂಮಿಕೆಗಳಿಗೇ ಹೆಚ್ಚು ಆಪ್ತವಾಗುವವರು. +ಸಾಂದರ್ಭಿಕವಾಗಿ ಅವರು ಹಾಸ್ಯಪಾತ್ರಗಳನ್ನು ರಂಜನೀಯಾವಾಗಿ ಮಾಡಿತೋರಿಸಬಲ್ಲರು. +ಶ್ರೀಯುತರು ಸಾಲ್ವ, ಕಂಸ, ವೃಷಕೇತು, ಶಲ್ಯ,ವಿಭಿಷಣ, ವೀರಮಣಿ, ದಮನ, ದುರ್ಜಯ ಮೊದಲಾದ ಪಾತ್ರಗಳು ಕಲಾರಸಿಕರ ಮನ ಮೆಚ್ಚಿಸಿವೆ. +ಪ್ರಸ್ತುತ ಭಾಸ್ಕರ ದೇವಾಡಿಗರು ಕಮಲಶಿಲೆ ಮೇಳದ ಕಲಾವಿದರಾಗಿ ದುಡಿಯುತ್ತಿದ್ದಾರೆ. +ಪತ್ನಿ ಯಶೋಧಾ. + ರಕ್ಷಕ, ಕೌಶಿಕ, ಆಶಿಕಾ ಮಕ್ಕಳು. +ಪ್ರತಿಭಾನ್ವಿತ ಕಲಾವಿದ ಭಾಸ್ಕರ ದೇವಾಡಿಗರು ಸ್ಥಳೀಯ ಸಂಘ-ಸಂಸ್ಥೆಗಳ ಗೌರವ ಸಂಮಾನ ಪಡೆದಿರುತ್ತಾರೆ. +ಪೌರಾಣಿಕ ಕಲಾ ಜಗತ್ತಿನ ಯಾವುದೇ ನಡೆಯ ಪುರುಷ ರಾಜ, ಮುಂಡಾಸು ವೇಷಗಳನ್ನು ತನ್ನದೇ ಶೈಲಿಯಲ್ಲಿ ನಿರೂಪಿಸುವ ಕಲಾವಿದ ಎಚ್‌.ಬಿ.ಭಾಸ್ಕರ ತುಂಬ್ರಿ. +ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ತುಂಬ್ರಿ-ಹೆಸಿಗೆ ಎಂಬಲ್ಲಿ 13-10-1965ರಲ್ಲಿ ಜನಿಸಿದ ಭಾಸ್ಕರ ಅವರು ಬಸವ ನಾಯ್ಕ ಮತ್ತು ಮಂಜಮ್ಮ ದಂಪತಿಯ ಸುಪುತ್ರ. +7ನೇ ತರಗತಿಯವರೆಗಿನ ವಿದ್ಯಾಭ್ಯಾಸ,ತರುವಾಯ ತನ್ನ ಅಣ್ಣಂದಿರ ಸಹಕಾರ, ಸ್ವಯಂ ಕಲಾಸಕ್ತಿಯಿ೦ದ 18ನೇ ವಯಸ್ಸಿನಲ್ಲೇ ಯಕ್ಷಗಾನ ಪ್ರಪಂಚವನ್ನು ಪ್ರವೇಶ ಮಾಡಿದ ತುಂಬ್ರಿ ಮತ್ತೆ ಹಿಂದಿರುಗಿ ಕಾಣಲಿಲ್ಲ. +ಬಾವ ಪೂರ್ಣ ರಾಜವೇಷಗಳನ್ನ್ನು, ದೀರೋದ್ಧತ ಖಳಭೂಮಿಕೆಗಳನ್ನೂ ಸಮರ್ಥವಾಗಿ ನಿರ್ವಹಿಸುವ ಭಾಸ್ಕರ ತುಂಬ್ರಿ ಉತ್ತಮ ವಾಕ್ವಟುತ್ವವನ್ನು ಹೊಂದಿದವರು. +ಪಾತ್ರೋಚಿತ ನೃತ್ಯಾಭಿನಯ, ವೇಷ ವೈಖರಿಯಲ್ಲೂ ಕಲಾವಂತಿಕೆ ಕಾಣಿಸುವವರು. +ಸೌಕೂರು 1, ಕಮಲಶಿಲೆ 1, ಬಚ್ಚಗಾರು 3,ಕುಮಟಾ 2, ಶಿರಸಿ 3, ಪೆರ್ಡೂರು 15 ಹೀಗೆ ವೃತ್ತಿರಂಗದಲ್ಲಿ ಸಾರ್ಥಕ ರಜತ ಸಂಭ್ರಮ ಕಂಡಿದ್ದಾರೆ. +ಪ್ರಸ್ತುತ ತುಂಬ್ರಿ ಅವರು ಪೆರ್ಡೂರು ಮೇಳದ ಕಲಾವಿದರಾಗಿ ದುಡಿಯುತ್ತಿದ್ದಾರೆ. +ಕೌರವ, ಕರ್ಣ, ಅರ್ಜುನ, ಹನುಮಂತ, ಶಲ್ಯವೀರಮಣಿ, ಜಯದ್ರಥ ಮೊದಲಾದ ಭೂಮಿಕೆಗಳು ಭಾಸ್ಕರ ತುಂಬ್ರಿ ಅವರಿಗೆ ಹೆಸರು ನೀಡಿದ ಪೌರಾಣಿಕ ಪಾತ್ರಗಳು. +ಪತ್ನಿ ಜಯಶ್ರೀ. +ಶ್ರುತಿ, ಶಶಾಂಕ ಮಕ್ಕಳು. +ಶ್ರೀಯುತರನ್ನು ಹಲವಾರು ಸಂಘ-ಸಂಸ್ಥೆಗಳು ಗುರುತಿಸಿ ಗೌರವಿಸಿವೆ. +ಬಡಗುತಿಟ್ಟು ಯಕ್ಷಗಾನದ ಸಾಂಪ್ರದಾಯಿಕ ನಡೆಯನ್ನು ದೃಢವಾಗಿ ಮೈಗೂಡಿಸಿಕೊಂಡು,ಪೌರಾಣಿಕ ಪಾತ್ರ ಪ್ರತಿಮೆಗಳನ್ನು ರಂಗಸ್ಥಳದಲ್ಲಿ ಸಚೇತನವಾಗಿಡುವ ಪ್ರೌಢ ಪ್ರತಿಭೆಯ ಕಲಾವಿದ ನರಾಡಿ ಭೋಜರಾಜ ಶೆಟ್ಟಿ. +ಕುಂದಾಪುರ ತಾಲೂಕಿನ ಅಚ್ಚಾಡಿ ಎಂಬಲ್ಲಿ 1957ನೇ ಇಸವಿಯ ಆಗಸ್ಟ್‌ ಇಪ್ಪತ್ತೊಂಬತ್ತರಂದು ಜನಿಸಿದ ಭೋಜರಾಜ ಶೆಟ್ಟರು ಸುಬ್ಬಣ್ಣ ಶೆಟ್ಟಿ-ನರಸಮ್ಮ ದಂಪತಿಯ ಸುಪುತ್ರ. +5ನೇಇಯತ್ತೆ ಯವರೆಗೆ ಅಕ್ಷರಾಭ್ಯಾಸ ಮಾಡಿ 13ನೇ ವಯಸ್ಸಿನಲ್ಲೇ ಯಕ್ಷ ಕಲಾಲೋಕ ಪ್ರವೇಶಿಸಿದ ಭೋಜರಾಜಶೆಟ್ಟರಿಗೆ ಪರಿಸರದ ಯಕ್ಷಗಾನ ಹೂವಿನಕೋಲು ತಿರುಗಾಟದಲ್ಲಿ ಬಾಲಕಲಾವಿದನಾಗಿ ಅರ್ಥ ಹೇಳಿದ ಅನುಭವವೇ ಕಲಾಸಕ್ತಿಗೆ ಪ್ರೇರಣೆಯಾಯಿತು. +ಕೀರ್ತೀಶೇಷರಾದ ಮೇರು ಕಲಾವಿದ ಶಿರಿಯಾರ ಮಂಜುನಾಯ್ಕ, ಕೋಟ ವೈಕುಂಠ ಅವರ ಗುರುತನದಲ್ಲಿ ಯಕ್ಷವಿದ್ಯೆಯನ್ನು ಗಳಿಸಿದ ಇವರಿಗೆ ಹಳ್ಳಾಡಿ ಮಂಜಯ್ಯ ಶೆಟ್ಟರು ಸುಯೋಗ್ಯ ಕಲಾಮಾರ್ಗದರ್ಶನ ನೀಡಿದರು. +ಅಮೃತೇಶ್ವರಿ ಮೇಳದಲ್ಲಿ ಗೆಜ್ಜೆಕಟ್ಟಿ ಹೆಜ್ಜೆ ಹಾಕಿದ ಶೆಟ್ಟರು ಅಮೃತೇಶ್ವರಿ, ಸಾಲಿಗ್ರಾಮ, ಪೆರ್ಡೂರು,ಶಿರಸಿ, ಹಾಲಾಡಿ, ಸೌಕೂರು, ಕಮಲಶಿಲೆ,ಮಾರಣಕಟ್ಟೆ, ಮಂದಾರ್ತಿ, ಮೇಳಗಳಲ್ಲಿ ಕಲಾಸೇವೆ ಸಲ್ಲಿಸಿ ಯಕ್ಷಗಾನ ರಂಗದಲ್ಲಿ ಸುದೀರ್ಫ ನಾಲ್ಕು ದಶಕಗಳನ್ನು ಯಶಸ್ವಿಯಾಗಿ ಪೂರೈಸಿದ್ದಾರೆ. +1994ರಲ್ಲಿ ಶ್ರೀ ಅಮೃತೇಶ್ವರಿ ಮೇಳದ ಸಂಚಾಲಕತ್ವವನ್ನು ಕೈಗೊಂಡ ಶೆಟ್ಟರು, ಪುರುಷವೇಷ ಹಾಗೂ ಎರಡನೇ ವೇಷವನ್ನು ಸಮರ್ಥವಾಗಿ ನಿರ್ವಹಿಸುವವರು. +ತನ್ನ 25 ನೇ ವರ್ಷದಲ್ಲಿಯೇ ಎರಡನೇ ವೇಷಧಾರಿಯಾದ ಶೆಟ್ಟರು ಸದೃಢ ಆಳಂಗ,ಶ್ರುತಿನಿಷ್ಠ ಗಂಭೀರ-ವಚೋವೈಖರಿ, ಅಪಾರಪ್ರತ್ಯುತ್ತನ್ನಮತಿತ್ವದಿಂದ ಪಾತ್ರಗಳಿಗೆ ಪಾರಂಪರಿಕ ವರ್ಚಸ್ಸು ನೀಡುವರು. +ತೂಕದ ಹೆಜ್ಜೆಗಾರಿಕೆ,ಪಾತ್ರೋಚಿತ ಹಾವಭಾವಗಳಿಂದ ಕಲಾರಸಿಕರ ಮನಸೆಳೆವ ಶೆಟ್ಟರ ಭೀಷ್ಮ ಕರ್ಣ, ಅರ್ಜುನ,ಋತುಪರ್ಣ, ದಶರಥ, ವಾಲಿ, ರಾವಣ,ಮಾರ್ತಾಂಡ ತೇಜ, ಮೊದಲಾದ ಪಾತ್ರಗಳು ಅಭಿಮಾನಿಗಳ ಹಾರ್ದಿಕ ಪ್ರಶಂಸೆಗೆ ಪಾತ್ರವಾಗಿವೆ. +ಪಶ್ನಿ ಚಂದ್ರಮತಿ. +ರೇಖಾ, ವಿವೇಕ, ರೇಶ್ಮಾ ಮಕ್ಕಳು. +ಶ್ರೀಯುತರು ಮಂದಾರ್ತಿ ಮೇಳದ ಪ್ರಧಾನಕಲಾವಿದರಾಗಿ ಕಲಾಸೇವೆ ನಡೆಸುತ್ತಿದ್ದಾರೆ. +ಅನೇಕ ಕಡೆಗಳಲ್ಲಿ ಅಭಿಮಾನಿಗಳಿಂದ ಸಮ್ಮಾನ ಪಡೆದ ನರಾಡಿಯವರಿಗೆ ಮಂಗಳೂರು ಜಾಗತಿಕ ಬಂಟ ಪ್ರತಿಷ್ಠಾನದ ಪ್ರಶಸ್ತಿಯೂ ದೊರಕಿದೆ. +ಹಾರಾಡಿ ರಾಮಗಾಣಿಗ ಪ್ರಶಸ್ತಿ ಪುರಸ್ಕೃತರಾಗಿದ್ದಾರೆ. +ಅಪ್ರತಿಮ ಕಲಾಸಿದ್ಧಿ, ಸಾಧನೆಯಿಂದ ಸುಪ್ರಸಿದ್ಧ ಯಕ್ಷನಟನಾಗಿ ಗುರುತಿಸಿ-ಕೂಂಡವರು ಮಹಾದೇವ ಈಶ್ವರ ಹೆಗಡೆ. +ಹೊನ್ನಾವರ ತಾಲೂಕಿನ ಹಡಿನ ಬಾಳ ಎಂಬಲ್ಲಿ 6-1-1950ರಲ್ಲಿ ಜನಿಸಿದ ಮಹಾದೇವ ಹೆಗಡೆಯವರ ಈಶ್ವರ ಹೆಗಡೆ - ಗೋಪಿ ದಂಪತಿಯ ಸುಪುತ್ರ. +ಹತ್ತನೆ ತರಗತಿಯವರೆಗೆ ಪ್ರೌಢ ಶಿಕ್ಷಣ ಪಡೆದ ಶ್ರೀಯುತರು 18ನೇ ವಯಸ್ಸಿನಲ್ಲಿ ಬಣ್ಣದ ಲೋಕ ಪ್ರವೇಶಿಸಿದ ಗಣ್ಯ ಕಲಾವಿದ. +ಮಹಾದೇವ ಹೆಗಡಯವರ ಮಾತೃ ಕುಟುಂಬ ಯಕ್ಷಕಲಾವಂತಿಕೆಯಿಂದ ಕೂಡಿತ್ತು. +ಇವರ ತಾಯಿಯ ತಂದೆ ಯಕ್ಷಗಾನ ಕಲಾವಿದರಾಗಿದ್ದರು. +ಹಾಗಾಗಿ ಅಜ್ಜನ ಯಕ್ಷ ವರ್ಚಸ್ಸು ಮೊಮ್ಮಗನ ಮೇಲೆ ಗಾಢ ಪ್ರಭಾವ ಬೀರಿತು. +ಮಹಾದೇವ ಹೆಗಡೆ-ಯವರ ಅಣ್ಣ ಹಿರಿಯ ಭಾಗವತ ಕಪ್ಪೆಕೆರೆ ಸುಬ್ರಾಯ ಹೆಗಡೆಯವರು. +ಅವರೇ ಇವರಿಗೆ ಗುರುಗಳು ಹಾಗೂ ರಂಗಜೀವನ ಪ್ರೇರಣಾಶಕ್ತಿ ದಿ. +ಕೆರೆಮನೆ ಮಹಾಬಲ ಹೆಗಡೆಯವರ ಗರಡಿಯಲ್ಲಿ ಪಳಗಿದ ಮಹಾ-ದೇವ ಹೆಗಡೆಯವರು ಗುಂಡಬಾಳ, ಕಮಲಶಿಲೆ, ಅಮೃತೇಶ್ವರಿ, ಇಡಗುಂಜಿ,ಶಿರಸಿ, ಪಂಚಲಿಂಗ ಹಾಗೂ ಮಂದಾರ್ತಿ ಮೇಳಗಳಲ್ಲಿ ಕಲಾಸೇವೆ ನಡೆಸಿ ಸುದೀರ್ಫ 39 ವರ್ಷಗಳನ್ನು ಬಣ್ಣದ ಬದುಕಿನಲ್ಲಿ ಕಳೆದಿದ್ದಾರೆ. +ಶಿರಸಿ ಮೇಳವನ್ನು 2 ವರ್ಷ ವೇಷಧಾರಿಯಾಗಿಯೂ ಸಂಚಾಲಕರಾಗಿಯೂ ನಡೆಸಿದ್ದಾರೆ. +ಪ್ರಸ್ತುತ ಹೆಗಡೆ ಅವರು ವೃತ್ತಿ ಮೇಳಗಳಿಂದ ನಿವೃತ್ತರಾಗಿ ಆಸುಪಾಸಿನ ಯಕ್ಷಗಾನ ಸಂಘ ಸಂಸ್ಥೆಗಳಲ್ಲಿ ಅಪರೂಪಕ್ಕೆ ವೇಷ ಹಾಕುತ್ತಾರೆ. +ಪ್ರಖರ ಪ್ರತ್ಯುತ್ತನ್ನ ಮತಿತ್ವದಿಂದ ರಾರಾಜಿಸುವ ಪ್ರಗಲ್ಭ ಪಾಂಡಿತ್ಯದ ಅಪೂರ್ವ ಅರ್ಥವಿನ್ಯಾಸದಿಂದ ರಂಜಿಸುವ ಹೆಗಡೆಯವರದು ಪಟುತೆ ಕಾಣುವ ಪಟ್ಟು. +ಪಾತ್ರ ಪಂಚಾಂಗ ಗಟ್ಟಿಮುಟ್ಟು,ರಂಗನೈರ್ಮಲ್ಯ ಅಚ್ಚುಕಟ್ಟು, ಪುರಾಣ ಪಾತ್ರಗಳಲ್ಲೂ ಹೊಸ ಹುಟ್ಟು. +ಕಲಾರಸಿಕರ ಮನ ಮೆಚ್ಚಿಸಿದೆ. +ನಾಯಕ, ಪ್ರತಿನಾಯಕ, ಪಾತ್ರಗಳನ್ನು ಯಶಸ್ವಿಯಾಗಿ ನಿರ್ವಹಿಸುವ ಹೆಗಡೆಯವರ ಭೀಮ,ವಲಲ, ಸುಗ್ರೀವ, ವಾಲಿ, ಶ್ರೀರಾಮ, ಶತ್ರುಘ್ನ,ಮಹೋಗ್ರ ಜಮದಗ್ನಿ, ರಾವಣ, ಮಾಗಧ, ಹರಿಶ್ಚಂದ್ರ,ಭೀಷ್ಮ, ವಿಶ್ವಾಮಿತ್ರ ಪಾತ್ರಗಳು ಜನಪ್ರಿಯ. +ಶ್ರೀಯುತರು ಹೆಣ್ಣು ಬಣ್ಣದ ವೇಷಗಳನ್ನು, ಸ್ರ್ತೀ ವೇಷಗಳನ್ನೂ ಮಾಡಿದ್ದಿದೆ. +ಪ್ರಬುದ್ಧ ವೇಷಧಾರಿ ಹೆಗಡೆಯವರು ಗುರುಗಳಾಗಿ ಅನೇಕ ಕಲಾವಿದರನ್ನು ರೂಪಿಸಿ ರಂಗಭೂಮಿಗೆ ನೀಡಿದ್ದಾರೆ. +ಶ್ರೀಮತಿ ಶಾರದೆ ಪತ್ನಿ. +ಗಣಪತಿ, ನಾಗೇಂದ್ರ,ರವೀಂದ್ರ ನರೇಂದ್ರ ಮಕ್ಕಳು. +ಇವರ ನಾಲ್ಕು ಮಂದಿ ಗಂಡುಮಕ್ಕಳು. +ಕಪ್ಪೆಕೆರೆ ಮಹಾದೇವ ಹೆಗಡೆ-ಯವರ ಮಹೋನ್ನತ ಕಲಾಸಿರಿಗೆ ಹಲವು ಸಂಘ-ಸಂಸ್ಥೆಗಳ ಸಂಮಾನದ ಗರಿಯೂ ದೊರಕಿದೆ. +ರಾಜವೇಷ, ಪುರುಷವೇಷ, ಹಾಗೂ ಮುಂಡಾಸುವೇಷಗಳಲ್ಲಿ ವಿಶೇಷ ಪ್ರತಿಭೆಯಿಂದ ಗುರುತಿಸಿಕೊಳ್ಳುವ ಹಿರಿಯ ಕಲಾವಿದ ಮಹಾದೇವ ನಾಯ್ಕ ಅರಳಗೋಡು. +ಸಾಗರ ತಾಲೂಕಿನ ನೆಲ್ಲಿಮಕ್ಕಿ - ಅರಳಗೋಡು ಎಂಬ ಕುಗ್ರಾಮದಲ್ಲಿ ಕೃಷ್ಣನಾಯ್ಕ - ತಿಪ್ಪಮ್ಮ ದಂಪತಿಯ ಸುಪುತ್ರರಾಗಿ ಜನಿಸಿದ ಶ್ರೀಯುತರು 61ರ ಹಿರಿತನದಲ್ಲಿರುವ ಶಿಷ್ಯ ಕಲಾವಿದ. +ಕಡುಬಡತನದ ಕುಟುಂಬದ ಮಹಾದೇವ . +ನಾಯ್ಕರು ಶಾಲಾ ಮೆಟ್ಟಿಲನ್ನೇ ತುಳಿಯದವರು. +ಅವರ ಬಾಲ್ಯದ ಆಸಕ್ತಿ ಕ್ಷೇತ್ರವೇ ಯಕ್ಷಗಾನ ರಂಗವಾಗಿತ್ತು. +18ರ ಹರೆಯದಲ್ಲಿ ಯಕ್ಷಗಾನಕ್ಕೆ ಮುಖ ಮಾಡಿದ ಶ್ರೀಯುತರು ಹಿರಿಯ ಪ್ರಸಂಗಕರ್ತ ಗುಂಡು ಸೀತಾರಾಮ ರಾವ್‌ ತಲವಾಟ ಅವರ ಗುರುತನವನ್ನೂ, ಪ್ರೇರಣೆಯನ್ನೂ ಪಡೆದು ಕಲಾಲೋಕದಲ್ಲಿ ನೆಲೆ ಕಂಡರು. +ಶೇಷಗಿರಿ ಸಂಪ ಎಂಬವರೂ ಇವರಿಗೆ ಯಕ್ಷಕಲಾ ವಿದ್ಯಾ ಬೋಧಕರು. +ಸಾಲಿಗ್ರಾಮ 10, ಮೂಲ್ಕಿ 3, ಹಿರಿಯಡಕ 4,ಅಮೃತೇಶ್ವರಿ 8, ಗೋಳಿಗರಡಿ 7, ರಂಜದಕಟ್ಟೆ 2,ಸಿಗಂಧೂರು 1, ಹೀಗೆ ಯಕ್ಷ ವ್ಯವಸಾಯದಲ್ಲಿ 35ವರ್ಷಗಳನ್ನು ಶ್ರೀಯುತರು ಯಶಸ್ವಿಯಾಗಿ ಪೂರೈಸಿ,ಪ್ರಸ್ತುತ ಸಿಗಂಧೂರು ಮೇಳದ ಕಲಾವಿದರಾಗಿ ದುಡಿಯುತ್ತಿದ್ದಾರೆ. +ಯಕ್ಷಗಾನದ ಪೀಠಿಕಾ ರಾಜ ವೇಷಗಳನ್ನು ಸಮರ್ಥವಾಗಿ ಪೋಷಿಸುವ ಕಲಾ ಸಂಪನ್ನತೆ ಇವರದ್ದು. +ಹಾಗೆಯೇ ಭಿನ್ನ ಭಿನ್ನ ನಡೆಯ ಪಾತ್ರಾಭಿವ್ಯಕ್ತಿಯಲ್ಲೂ ಇವರ ರಂಗ ಹಿರಿಮೆ ಮೆಚ್ಚುವಂತಹುದು. +ಉತ್ತಮ ಅರ್ಥಗಾರಿಕೆಯನ್ನು ಬಲ್ಲ ಶ್ರೀಯುತರು ಕೌರವ, ದೇವೇಂದ್ರ ಹನುಮಂತ,ಶನೀಶ್ವರ, ದಕ್ಷ, ಯಮ, ವಿಭೀಷಣ, ಮೊದಲಾದ ಪಾತ್ರಗಳನ್ನು ಸರ್ವಸಮರ್ಥವಾಗಿ ನಿರ್ವಹಿಸಿರುವರು. +ಪತ್ನಿ ಭಾನುಮತಿ, ಗೋಪಾಲ, ಶೋಭಾ, ಗಣೇಶ ಮಕ್ಕಳು. +ಶ್ರೀಯುತರಿಗೆ ಹವ್ಯಾಸೀ ಸಂಘ-ಸಂಸ್ಥೆಗಳ ಸಂಮಾನ ದೊರಕಿದೆ. +ಸಂಪ್ರದಾಯಶೀಲ ಹಿರಿಯ ಪ್ರತಿಭೆ ನಾವುಂದ ಮಹಾಬಲ ಗಾಣಿಗ. +ಕುಂದಾಪುರ ತಾಲೂಕಿನ ನಾವುಂದ ಇವರ ಹುಟ್ಟೂರು. +ವಾಸು ಗಾಣಿಗ-ಕಾವೇರಿ ದಂಪತಿಯ ಸುಪುತ್ರರಾದ ಗಾಣಿಗರ ಜನನ 12-12-1929ರಲ್ಲಿ. +5ನೇ ಇಯತ್ತೆಯವರೆಗೆ ವಿದ್ಯಾಭ್ಯಾಸ ಮಾಡಿ 17ನೇ ವಯಸ್ಸಿನಲ್ಲಿ ಬಣ್ಣದ ಬಾಳುವೆ ಕಂಡ ಮಹಾಬಲ ಗಾಣಿಗರು ದಶಾವತಾರಿ ಗುರು. +ವೀರಭದ್ರ ನಾಯಕರಲ್ಲಿ ಹೆಜ್ಜೆ ಗಾರಿಕೆ,ಮರವಂತೆ ನರಸಿಂಹದಾಸ ಭಾಗವತರಿಂದ ಅರ್ಥಗಾರಿಕೆ ಕಲಿತು, ನಾವುಂದ ದೇವಪ್ಪ ಗಾಣಿಗರ ಪ್ರೇರಣೆಯೊಂದಿಗೆ ಶ್ರೀ ಸೌಕೂರು ಮೇಳದಲ್ಲಿ ಗೆಜ್ಜೆಕಟ್ಟಿ ಹೆಜ್ಜೆ ಹಾಕಿದರು. +ನಾವುಂದ ಮಹಾಬಲ ಗಾಣಿಗರು ಗಂಡುವೇಷದ ಭಿನ್ನ ಭಿನ್ನ ಸ್ಥಾನಗಳಿಗೂ ನ್ಯಾಯ ಕಲ್ಪಿಸಿ ಕೊಟ್ಟವರು. +ಮೊದಮೊದಲು ದೇವೇಂದ್ರ,ಕೌರವ, ಸತ್ರಾಜಿತನಂತಹ ಪೀಠಿಕಾ ರಾಜವೇಷಗಳನ್ನೂ ವೃಷಸೇನ, ಬಬ್ರುವಾಹನ,ಅಭಿಮನ್ಯು ಮೊದಲಾದ ಮೂರನೇ ವೇಷಗಳನ್ನೂ ತದನಂತರ ಎರಡನೇ ವೇಷಗಳನ್ನೂ ಧರಿಸಿ ಖ್ಯಾತಿವೆತ್ತರು. +ವೀರಮಣಿ, ಅರ್ಜುನ, ಪುಷ್ಕಳ, "ಮೀನಾಕ್ಷಿಕಲ್ಯಾಣ'ದ ನಂದಿ, “ಜಾಂಬವತಿ'ಯ ಕೃಷ್ಣ ಅವರಿಗೆ ಅಪಾರ ಜನಪ್ರಿಯತೆ ತಂದು ಕೊಟ್ಟ ಪಾತ್ರಗಳು. +ಹಾಗೆಯೇ ಶ್ರೀಯುತರ ರಾವಣ, ಕೌಂಡ್ಲೀಕ, ಈಶ್ವರ,ಜಾಂಬವ ಪಾತ್ರಗಳೂ ಜನಮೆಚ್ಚುಗೆ ಗಳಿಸಿವೆ. +ಸೌಕೂರು 4, ಮಾರಣಕಟ್ಟೆ 10, ಅಮೃತೇಶ್ವರಿ 3, ಮಂದಾರ್ತಿ 4, ರಾಜರಾಜೇಶ್ವರಿ 1, ಹಾಲಾಡಿ 1, ಸಾಲಿಗ್ರಾಮ 3, ಮಡಾಮಕ್ಕಿ 2, ಹೊನ್ನೇಸರ 2,ಕೊಲ್ಲೂರು 3, ಕಳವಾಡಿ 2, ಕಮಲಶಿಲೆ 4,ಪೆರ್ಡೂರು 2, ಹಿರಿಯಡಕ 1, ಹೀಗೆ 42 ವರ್ಷಗಳ ವೃತ್ತಿ ಮೇಳದ ರಂಗಕೃಷಿ. +ಡಾ.ಶಿವರಾಮ ಕಾರಂತರ"ಯಕ್ಷರಂಗ' ವ್ಯವಸಾಯಿ ಮೇಳದಲ್ಲಿ 8 ವರ್ಷಕಾಲ ದುಡಿಮೆ. +ಒಟ್ಟು ಐದು ದಶಕಗಳ ಸಾರ್ಥಕ ರಂಗಜೀವನ ಗಾಣಿಗರದ್ದು. +ಕಾರಂತರೊಂದಿಗೆ ಹಾಂಕಾಂಗ್‌, ಜಪಾನ್‌,ಲಂಡನ್‌, ಇಟೆಲಿ, ಬಲ್ಗೇರಿಯಾ, ಮುಂತಾದ ವಿದೇಶಗಳಲ್ಲೂ, ಗಾಣಿಗರ ಉನ್ನತ ಪ್ರತಿಭೆ ಹರಡಿದೆ. +ಪತ್ನಿ ತುಂಗಮ್ಮ ಅವರಲ್ಲಿ 6 ಮಂದಿ ಮಕ್ಕಳನ್ನು ಪಡೆದಿದ್ದಾರೆ. +ಶ್ರೀಯುತರಿಗೆ ಸೋಮಕ್ಷತ್ರಿಯ ಗಾಣಿಗ ಸಮಾಜ ಬೆಂಗಳೂರು, ಅಜಪುರ ಕರ್ನಾಟಕ ಸಂಘ ಬ್ರಹ್ಮಾವರ, ಉಡುಪಿ ಯಕ್ಷಗಾನ ಕಲಾರಂಗದ ಗೌರವಸಂಮಾನ, ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ,ಎರಡನೇಯ ಯಕ್ಷಗಾನ ಸಾಹಿತ್ಯ ಸಮ್ಮೇಳನದ ಸಂಮಾನ ದೊರಕಿರುತ್ತದೆ. +ಪುಂಡುವೇಷದ ಗಂಡುಗಲಿಯೆಂಬ ಖ್ಯಾತಿಗೆ ಪಾತ್ರರಾದ ಬೇಳಂಜೆ ಮಹಾಬಲ ನಾಯ್ಕರು ಗಂಡುಕಲೆಯಲ್ಲಿ ತಮ್ಮ ಕಲಾಪ್ರತಿಭೆಯ ಮೂಲಕ ಪಾತ್ರಗಳಿಗೆ ಜೀವ ತುಂಬುವ ಕಲಾವಿದರು. +ಹಿರಿಯ ಮದ್ದಳೆಗಾರ ಬೇಳಂಜೆ ತಿಮ್ಮಪ್ಪ ನಾಯ್ಕ ಹಾಗೂ ವೇದಾವಶಿ ಅವರ ಸುಪುತ್ರನಾಗಿ 13-7-1958ರಲ್ಲಿ ಕಾರ್ಕಳ ತಾಲೂಕಿನ ಬೇಳಂಜೆ ಎಂಬಲ್ಲಿ ಹುಟ್ಟಿದ ಮಹಾಬಲ ಅವರು ಆರಕ್ಕೇ ಓದು ನಿಲ್ಲಿಸಿ,ಹನ್ನೆರಡರಲ್ಲೇ ಬಣ್ಣದ ಬದುಕು ಕಂಡವರು. +ಉಡುಪಿ ಯಕ್ಷಗಾನ ಕೇಂದ್ರದ ವಿದ್ಯಾರ್ಥಿಯಾಗಿ ದಶಾವತಾರಿ ಗುರು ವೀರಭದ್ರನಾಯಕ್‌, ನೀಲಾವರ ರಾಮಕೃಷ್ಣಯ್ಯ ಹಿರಿಯಡಕ ಗೋಪಾಲರಾಯರ ಶಿಷ್ಯನಾಗಿ ಯಕ್ಷಗಾನ ರಂಗಕಲೆಯ ಪರಿಣತಿ ಸಾಧಿಸಿದ ಮಹಾಬಲ ನಾಯ್ಕರಿಗೆ ಅವರ ತೀರ್ಥರೂಪ-ರಿಂದಲೂ ಅಪಾರ ಅನುಭವ ದೊರಕಿತು. +ಹಿರಿಯಡಕ, ಪೆರ್ಡೂರು 1, ಮಾರಣಕಟ್ಟೆ 10,ಅಮೃತೇಶ್ವರಿ 5, ಸೌಕೂರು 2, ಮಡಾಮಕ್ಕಿ 2,ಮಂದಾರ್ತಿ 19, ಹೀಗೆ ನಾಲ್ಕು ದಶಕಗಳ ನಿರಂತರ ಕಲಾವ್ಯವಸಾಯದಲ್ಲಿ ಸಾರ್ಥಕ ಕಂಡ ಮಹಾಬಲ ನಾಯ್ಕರು ಪರಿಸ್ಫುಟ ನೃತ್ಯಾಭಿನಯ ಬದ್ಧತೆ ಖಚಿತಲಯಗಾರಿಕೆಯ ಶುದ್ಧತೆಯಲ್ಲಿ ಪಾತ್ರಗಳನ್ನು ಪೋಷಿಸುವವರು. +ಆಳಂಗ, ತಾರಕ ಸ್ವರತ್ರಾಣ,ಚುರುಕಿನ ಪದಗತಿ, ಈ ಎಲ್ಲಾ ಅಂಶಗಳಿಂದ ಪುಂಡುವೇಷಗಳಲ್ಲಿ ವಿಜೃಂಭಿಸುವ ಮಹಾಬಲನಾಯ್ಕರ ಬಬ್ರುವಾಹನ, ಅಭಿಮನ್ಯು, ವೃಷಸೇನ,ಲವ-ಕುಶ, ಶ್ರೀಕೃಷ್ಣ, ವಿದ್ಯುನ್ಮಾಲಿ ಆಂಜನೇಯ ಮೊದಲಾದ ಪಾತ್ರಗಳು ಕಲಾಪ್ರೇಕ್ಷಕರಿಂದ ಸೈಅನ್ನಿಸಿಕೊಂಡಿವೆ. +ಸಹಧರ್ಮಿಣಿ ಬೇಬಿ. +ದೀಪಾ, ದಿವ್ಯಾ, ದಿವಾಕರ ಮಕ್ಕಳು. +ಶ್ರೀಯುತರು ಪ್ರಸ್ತುತ ಮಂದಾರ್ಶಿ ಮೇಳದ ಕಲಾವಿದರಾಗಿ ದುಡಿಯುತ್ತಿದ್ದಾರೆ. +ಶ್ರೀಯುತರನ್ನು ಕಾರ್ಕಳ ಜೇಸೀ ಸಪ್ತಾಹ, ಹೆಬ್ರಿ ಮರಾಠಿ ಸಂಘದ ವತಿಯಿಂದ ಸನ್ಮಾನಿಸಲಾಗಿದೆ. +ಬಡಗಿನ ಸಂಪ್ರದಾಯನಿಷ್ಠ ರಾಜ ಹಾಸ್ಯಗಾರಿಕೆಯಲ್ಲಿ ವಿಶೇಷ ಮಾನ್ಯತೆ ಕಂಡುಕೊಂಡ ಹಿರಿಯ ಹಾಸ್ಯಗಾರ ಕಮಲಶಿಲೆ ಮಹಾಬಲ ದೇವಾಡಿಗ. +ಕುಂದಾಪುರ ತಾಲೂಕಿನ ಕಮಲಶಿಲೆಯಲ್ಲಿ ಮಂಜು ದೇವಾಡಿಗ-ಅಕ್ಕಯ್ಯ ದೇವಾಡಿಗ ಅವರ ಪುತ್ರನಾಗಿ ಜನಿಸಿದ ಶ್ರಿಯುತರು 53ರ ಹಿರಿತನಕ್ಕೆ ಬೆಳೆದು ನಿಂತವರು. +ನಾಲ್ಕನೇ ತರಗತಿಗೆ ವಿದಾಯ ಹೇಳಿ, ತನ್ನ 13ರ ಹರೆಯದಲ್ಲಿ ಕಲಾ ಜೀವನ ಆರಂಭಿಸಿದ ಮಹಾಬಲ ದೇವಾಡಿಗರು 1974ರಲ್ಲಿ ಉಡುಪಿ ಯಕ್ಷಗಾನ ಕೇಂದ್ರಕ್ಕೆ ಸೇರಿ ಗುರು ವೀರಭದ್ರನಾಯ್ಯ,ನೀಲಾವರ ರಾಮಕೃಷ್ಣಯ್ಯ ಹಿರಿಯಡಕ ಗೋಪಾಲರಾಯರ ಶಿಷ್ಯನಾಗಿ ಶಾಸ್ತ್ರೀಯ ರಂಗಶಿಕ್ಷಣ ತನ್ನದಾಗಿಸಿಕೊಂಡರು. +ಆ ಕಾಲದಲ್ಲಿ ಕು.ಶಿ.ಹರಿದಾಸ ಭಟ್‌ ಹಾಗೂ ಡಾ.ಶಿವರಾಮ ಕಾರಂತರೊಂದಿಗೆ ದೆಹಲಿಗೆ ಹೋಗಿ ಲವ-ಕುಶ ಕಾಳಗ, ಅಭಿಮನ್ಮು ವಧೆ ಪ್ರಸಂಗಗಳಲ್ಲಿ ಪಾತ್ರ ನಿರ್ವಹಿಸಿ ಸೈ ಅನ್ನಿಸಿಕೊಂಡರು. +ರಸಭಾವ ಪುಷ್ಟಿಕರ ನೃತ್ಯ-ಅಭಿನಯ,ಹಾಸ್ಯಭಾವ ಪರಿಪ್ಲುತ ವಾಗ್ಸರಣಿ, ಅನನ್ಯ ಪಾತ್ರ ತದಾತ್ಮ್ಯ ನೈಚ್ಯ ರಹಿತ ರಂಗವ್ಯವಹಾರದಲ್ಲಿ ತೊಡಗಿಸಿಕೊಳ್ಳುವ ಕಮಲಶಿಲೆ ಮಹಾಬಲ ದೇವಾಡಿಗರು ಹಿರಿಯ ಕಲಾವಿದರಾದ ನಾಗಯ್ಯ ಶೆಟ್ಟಿ, ದೇವಪ್ಪ ಗಾಣಿಗ ಹಾಗೂ ಕಕ್ಕುಂಜೆ ಶಂಕರ ಆಚಾರ್ಯರಿಂದ ಹಾಸ್ಯಗಾರಿಕೆಯ ಸಮಗ್ರ ಮಾಹಿತಿ ಪಡೆದವರು. +ಬಡಗಿನ ಸುಪ್ರಸಿದ್ಧ ಹಾಸ್ಯಕಲಾವಿದ ಹಾಲಾಡಿ ಕೊರ್ಗು ಅವರ "ಛಾಪು' ಉಳಿಸಿಕೊಂಡ ಮಹಾಬಲ ದೇವಾಡಿಗರ "ಬಾಹುಕ'ನ ಪಾತ್ರವಂತೂ ಇಂದಿಗೂ ಅಪಾರ ಜನಪ್ರಿಯತೆ ಉಳಿಸಿಕೊಂಡಿದೆ. +ಹಾಗೆಯೇ ಚಂದಗೋಪ, ಕೈಲಾಸ ಶಾಸ್ತ್ರಿ ಕಂದರ, ದಾರುಕ,ವಿದ್ಯುಜ್ಜಿಹ್ವ ಮೊದಲಾದ ಭೂಮಿಕೆಗಳೂ ಕಲಾರಸಿಕರ ಮನರಂಜಿಸಿವೆ. +ಮಂದಾರ್ತಿ ಮೇಳದಲ್ಲಿ 21 ವರ್ಷ, ಕಮಲಶಿಲೆಮೇಳದಲ್ಲಿ 7 ವರ್ಷ, ಮಾರಣಕಟ್ಟೆ ಮೇಳದಲ್ಲಿ 10ವರ್ಷ, ಹೀಗೆ ಮಹಾಬಲ ದೇವಾಡಿಗರ ಒಟ್ಟು ರಂಗಕೃಷಿಯ ಅವಧಿ 38 ವರ್ಷ. +ಕಮಲಾ ಎಂಬವರನ್ನು ವರಿಸಿ, ಅರುಣ, ವೀಣಾ, ಕಿರಣ,ಎಂಬ ಮೂವರು ಮಕ್ಕಳನ್ನು ಪಡೆದಿದ್ದಾರೆ. +ಶ್ರೀಯುತರನ್ನು ಹಲವಾರು ಸಂಘ-ಸಂಸ್ಥೆಗಳು ಸಂಮಾನಿಸಿವೆ. +ಬಡಗುತಿಟ್ಟು ಯಕ್ಷಗಾನ ರಂಗದಲ್ಲಿ ಸ್ತ್ರೀವೇಷ,ಪುರುಷವೇಷ, ಎರಡನೇ ವೇಷ, ಕಿರಾತ ವೇಷ,ಬಣ್ಣದವೇಷ ಹೀಗೆ ವರ್ಣರಂಜಿತ ಕಲಾವ್ಯಕ್ತಿತ್ವದಲ್ಲಿ ಕಂಗೊಳಿಸುವ ಪರಂಪರೆಯ ಹಿರಿಯ ವೇಷಧಾರಿ ನೀಲಾವರ ಮಹಾಬಲ ಶೆಟ್ಟಿ,ನೀಲಾವರ ಗ್ರಾಮದ ಮಧ್ಯಸ್ಥರಬೆಟ್ಟು ಎಂಬಲ್ಲಿ 1955ರಲ್ಲಿ ಹಂದಾಡಿ ಕೃಷ್ಣಯ್ಯ ಶೆಟಿ-ರಾಧಮ, ಶೆಟ್ಟಯ ದಂಪತಿಯ ಪುತ್ರರಾಗಿ ಜನಿಸಿದ ಇವರು ಓದಿದ್ದು 5ನೇ ತರಗತಿ. +ಇವರ ತಂದೆ ಸುಪ್ರಸಿದ್ಧ ವೇಷಧಾರಿಯಾಗಿದ್ದರು. +ಮಕ್ಕಳು ಯಕ್ಷಗಾನಕ್ಕೆ ಸೇರಬಾರದೆಂಬ ತಂದೆಯ ವಿರೋಧದ ನಡುವೆಯೂ ಅಣ್ಣ ಅನಂತ ಶೆಟ್ಟರ ಪ್ರೇರಣೆಯೊಂದಿಗೆ ಕಲಾಬದುಕಿಗೆ ಹೆಜ್ಜೆ ಹಾಕಿದ ಶೆಟ್ಟರು ಮತ್ತೆ ಹಿಂದಿರುಗಿ ಕಂಡದ್ದಿಲ್ಲ. +ತನ್ನ 16ರ ಹರೆಯದಲ್ಲೇ ಕಲಾಲೋಕ ಪ್ರವೇಶಿಸಿದ ಶೆಟ್ಟರು ಉಡುಪಿ ಯಕ್ಷಗಾನ ಕೇಂಂದ್ರದಲ್ಲಿ ಗುರು ವೀರಭದ್ರನಾಯ್ಕರ ಶಿಷ್ಯನಾಗಿ ಯಕ್ಷಗಾನ ನೃತ್ಯಕಲೆ ಸಿದ್ದಿಸಿಕೊಂಡರು. +ಹಿರಿಯ ಕಲಾವಿದ ಹಳ್ಳಾಡಿ ಕೃಷ್ಣಪ-ನವರಲ್ಲೂ ಶಿಷ್ಯವೃತ್ತಿಯನ್ನು ಕೈಗೊಂಡು ವಿಶೇಷ ರಂಗಾನುಭವವನ್ನು ಗಳಿಸಿದರು. +ಮಾರಣಕಟ್ಟೆ ಮೇಳದಲ್ಲಿ ಎಂ.ಎಂ.ಹೆಗ್ಡೆಯವರ ಸಹಕಾರದಿಂದ ಹಂತ-ಹಂತವಾಗಿ ಮೇಲೇರಿ ಸತತ 28ವರ್ಷಗಳ ಕಾಲ ಪ್ರಸಿದ್ಧ ಸ್ತ್ರೀವೇಷಧಾರಿಯಾಗಿ ರಂಗವಾಳಿದರು. +ಪೆರ್ಡೂರು 3, ಮಂದರ್ತಿ 3,ಸಾಲಿಗ್ರಾಮ 1, ಕಮಲಶಿಲೆ 1, ಮಾರಣಕಟ್ಟೆ 33,ಹಾಲಾಡಿ 1 ಹೀಗೆ 42 ವರುಷಗಳ ಸಾರ್ಥಕ ಯಕ್ಷಕೃಷಿ ಶೆಟ್ಟರದ್ದು. +ಹಾರಾಡಿ-ಮಟಪಾಡಿ ಶೈಲಿಯ ಹದವಾದ ಎರಕವನ್ನು ಶ್ರೀಯುತರಲ್ಲಿ ಗುರುತಿಸಬಹುದಾಗಿದ್ದು,ಆರಂಭದಲ್ಲಿ ಇವರು ಸ್ತ್ರೀವೇಷಧಾರಿಯಾಗಿ ರಂಗದುಡಿಮೆ ನಡೆಸಿದವರು. +ಪ್ರಧಾನ ಕಸೆ ಸ್ರ್ತೀ ವೇಷಗಳಾದ ಮೀನಾಕ್ಷಿ, ದ್ರೌಪದಿ, ಪ್ರಮೀಳೆ,ಮೊದಲಾದ ಇವರ ಭೂಮಿಕೆಗಳು ಜೋಡಾಟಗಳಲ್ಲಿ ವಿಶೇಷ ಗೆಲುವು ಕಂಡಿವೆ. +ಹಾಗೆಯೇ ಇವರ ಶಶಿಪ್ರಭೆ,ಶ್ರೀದೇವಿ, ಭ್ರಮರಕುಂತಳೆ, ಅಂಬೆಯಂತಹ ಪಾತ್ರಗಳೂ ಜನಪ್ರಿಯ. +ವಿರಾಟ, ಸತ್ರಾಜಿತ, ಧರ್ಮರಾಯ, ಕೌರವ,ಪುಷ್ಕಳ,ಅರ್ಜುನ, ಮೂದಲಾದ ಗಂಡುಭೂಮಿಕೆಗಳಿಗೂ ಶ್ರೀಯುತರು ಜೀವತುಂಬಿದ್ದಾರೆ. + ಬಣ್ಣದ ವೇಷಗಳಾದ ಮೈರಾವಣ,ವಿದ್ಯುಲ್ಲೋಚನ, ಕಾಲಜಂಘ, ರಕ್ತಕೇಶಿ, ವೃತ್ರಜ್ಜಾಲೆ ಪಾತ್ರಗಳಲ್ಲೂ ತನ್ನತನವನ್ನು ಮೆರೆದಿದ್ದಾರೆ. +ಉಡುಪಿ ಯಕ್ಷಗಾನ ಕಲಾರಂಗದ ಮೂಲಕ ಅಮೆರಿಕಾದ ವಿಶ್ವಕನ್ನಡ ಸಮ್ಮೇಳನದಲ್ಲೂ ಭಾಗವಹಿಸಿ ಕಲಾಪ್ರತಿಭೆ ಮೆರೆದಿದ್ದಾರೆ. +ಜರ್ಮನ್‌,ಫ್ರಾನ್ಸ್‌, ದೇಶಗಳಲ್ಲೂ ಗೆಜ್ಜೆ ಕಟ್ಟಿ ಹೆಜ್ಜೆ ಹಾಕಿದ್ದಾರೆ. +ಶ್ರೀಯುತರು ಪತ್ನಿ ಗುಲಾಬಿ. +ಪೂರ್ಣಿಮಾ,ಪ್ರತಿಮಾ, ವಸಂತ, ಮಮತಾ ನಾಲ್ಕು ಮಂದಿ ಮಕ್ಕಳು. +ನೀಲಾವರ ಮಹಾಬಲ ಶೆಟ್ಟರಿಗೆ ಸೀತಾನದಿ ಗಣಪಯ್ಯ ಶೆಟ್ಟಿ ಪ್ರತಿಷ್ಠಾನದ ಪ್ರಶಸ್ತಿ, ಎಂ.ಎಂ.ಹೆಗ್ಡೆ ಪ್ರಶಸ್ತಿ ಸೇರಿದಂತೆ ಹಲವಾರು ಗೌರವ ಸಂಮಾನಸಂದಿದೆ. +ಉನ್ನತ ಪ್ರತಿಭಾ ಸಂಪತ್ತಿನಿಂದ ಯಕ್ಷಗಾನರಂಗದಲ್ಲಿ ಸಾಂಪ್ರದಾಯಿಕ ಹೆಜ್ಜೆ ಮೂಡಿಸಿದ ಹಿರಿಯ ಕಲಾವಿದ ಪೇತ್ರಿ ಮಾಧುನಾಯ್ಕ. +ಉಡುಪಿ ತಾಲೂಕಿನ ಹಳುವಳ್ಳಿ ಎಂಬ ಹಳ್ಳಿಯಲ್ಲಿ ವಾಮನ ನಾಯ್ಕ-ಮೈರು ಬಾಯಿ ದಂಪತಿಯ ಸುಪುತ್ರರಾಗಿ 11-9-1940ರಲ್ಲಿ ಜನಿಸಿದ ಮಾಧು ನಾಯ್ಕರು 6ನೇ ತರಗತಿಗೆ ಶರಣು ಹೊಡೆದು,ಪ್ರಸಿದ್ಧ ಮದ್ದಳೆಗಾರ ಸೋದರಮಾವ ಬೇಳಂಜೆ ತಿಮ್ಮಪ್ಪ ನಾಯ್ಕ ಅವರ ಪ್ರೇರಣೆಯಿಂದ ಬಣ್ಣದ ಬದುಕು ಕಂಡರು. +ಗುರು ವೀರಭದ್ರ ನಾಯಕ್‌,ಹೆರಂಜಾಲು ವೆಂಕಟರಮಣ ಗಾಣಿಗ ಅವರ ಶಿಷ್ಯನಾಗಿ ಸಮರ್ಪಕ ಯಕ್ಷಶಿಕ್ಷಣವನ್ನು ಪಡೆದ ನಾಯ್ಕರು ತನ್ನ 14ರ ಹರೆಯದಲ್ಲಿ ಮಾರಣ ಕಟ್ಟೆಮೇಳದಲ್ಲಿ ಗೆಜ್ಜೆ ಕಟ್ಟಿದರು. +ಮಾರಣಕಟ್ಟೆ 1, ಮಂದಾರ್ತಿ 13,ಪೆರ್ಡೂರು 3, ಸಾಲಿಗ್ರಾಮ 2, ಅಮೃತೇಶ್ವರಿ 2,ಕೊಲ್ಲೂರು 1, ಮೂಲ್ಕಿ 1 ಹೀಗೆ ವೃತ್ತಿ ಮೇಳಗಳಲ್ಲಿ ಸುಮಾರು 23ವರ್ಷಗಳ ಕಲಾಕೃಷಿ ನಡೆಸಿದ್ದಾರೆ. +ಉಡುಪಿ ಯಕ್ಷಗಾನ ಕೇಂದ್ರದ "ಯಕ್ಷರಂಗ'ದಕ ಲಾವಿದನಾಗಿ ಡಾ.ಶಿವರಾಮಕಾರಂತರ ಗರಡಿಯಲ್ಲಿ ಪಳಗಿ 30ವರ್ಷಗಳ ಸಾರ್ಥಕ ರಂಗಜೀವನ ನಡೆಸಿದ್ದಾರೆ. +"ಯಕ್ಷರಂಗ' ತಂಡದ ಮೂಲಕ ದುಬೈ,ಕೆನಡಾ, ಜಪಾನ್‌, ರಷ್ಯಾ, ಇಟೆಲಿ ಮೊದಲಾದ ವಿದೇಶಗಳಲ್ಲೂ ತನ್ನ ಕಲಾಪ್ರತಿಭೆಯನ್ನು ಮೆರೆದ ಶ್ರೀಯುತರು 53ವರ್ಷಗಳ ಸಾರ್ಥಕ ಕಲಾವ್ಯವಸಾಯ ಪೂರ್ಣಗೊಳಿಸಿ ಪ್ರಸ್ತುತ ವಿಶ್ರಾಂತ ಜೀವನ ನಡೆಸುತ್ತಿದ್ದಾರೆ. +ಸ್ತ್ರೀವೇಷ ಒಂದನ್ನುಳಿದು ಎಲ್ಲಾ ಬಗೆಯ ವೇಷಗಳನ್ನೂ ನಿರ್ವಹಿಸಿದ ಕಲಾವಿದರಿವರು. +ಬಡಗಿನ ಘಟಾನುಘಟಿ ಕಲಾವಿದರ ಒಡನಾಟದಲ್ಲಿ ವಿಶೇಷ ಕಲಾನುಭವ ಹೊಂದಿದ ಮಾಧು ನಾಯ್ಕರು ರಾಜವೇಷಗಳಾದ ಹಂಸದ್ದಜ, ಶತ್ರುಘ್ನ ಮೊದಲಾದ ಪಾತ್ರಗಳಿಗೆ ಜೀವ ತುಂಬಿದವರು. +ವೃತ್ತಿಮೇಳಗಳಲ್ಲಿ ಇವರ ಮುಂಡಾಸು ವೇಷಗಳು ಅಪಾರ ಜನಪ್ರಿಯತೆ ಕಂಡುಕೊಂಡಿದ್ದವು. +ಇವರ ಬಣ್ಣದವೇಷ ಯಕ್ಷಗಾನ ಕಲಾಜಗತ್ತಿನಲ್ಲಿ ವಿಶೇಷ ಖ್ಯಾತಿ ಪಡೆದಿವೆ. +ರಾವಣ,ಘಟೋತ್ಕಚ, ಹಿಡಿಂಬಾಸುರ, ತಾರಕಾಸುರ,ಮೊದಲಾದ ಗಂಡುಬಣ್ಣ, ಶೂರ್ಪನಬೆ, ಹಿಡಿಂಬೆ ,ಲಂಕಿಣಿ ವೃತ್ರಜ್ವಾಲೆ ಮೊದಲಾದ ಹೆಣ್ಣುಬಣ್ಣ ಶ್ರೀಯುತರ ಅದ್ಭುತ ಕಲಾಪ್ರತಿಭೆಗೆ ಸಾಕ್ಷಿಯಾಗಿವೆ. +ಪತ್ನಿ ನೇತ್ರಾವತಿ. +ಒಬ್ಬಳು ಹೆಣ್ಣು, ಐವರು ಗಂಡು ಮಕ್ಕಳನ್ನು ಪಡೆದಿದ್ದಾರೆ. +ಉಡುಪಿ ತಾಲೂಕು ಸಾಹಿತ್ಯ ಸಮ್ಮೇಳನ ಸಂಮಾನ, ಉಡುಪಿ ಯಕ್ಷಗಾನ ಕೇಂದ್ರದ ಸಂಮಾನ, ಕು.ಶಿ.ಹರಿದಾಸ ಭಟ್ಟ ಜಾನಪದ ಪ್ರಶಸ್ತಿ ಹಾಗೂ"ಯಕ್ಷಗಾನ ಕಲಾರಂಗ'ದ ಪ್ರೊ.ಬಿ.ವಿ.ಆಚಾರ್ಯ ಪ್ರಶಸ್ತಿ ದೊರಕಿರುತ್ತದೆ. +ಉಭಯತಿಟ್ಟಿನ ಹಾಸ್ಯಗಾರಿಕೆಯಲ್ಲಿ ಪ್ರಖ್ಯಾತಿಯನ್ನು ಕಂಡ ಹಿರಿಯ ಕಲಾವಿದ ಕಿನ್ನಿಗೋಳಿ ಮುಖ್ಯಪ್ರಾಣ. +ಸನಾತನ ಯಕ್ಷಗಾನ ಪರಂಪರೆಯ ಮಟ್ಟನ್ನೂ,ಸಮಕಾಲೀನ ರಂಗಭೂಮಿಯ ವಿನೂತನದ ಗುಟ್ಟನ್ನೂ ಬಲ್ಲ ಕಲಾವಿದ ಮುಖ್ಯಪ್ರಾಣ ಅವರು 12-3-1941ರಲ್ಲಿ ರುಕ್ಕಯ್ಯ ಶೆಟ್ಟಿಗಾರ್‌ - ಶೇಷಿ ದಂಪತಿಯ ಸುಪುತ್ರರಾಗಿ ತಾಳಿಪಾಡಿ ಎಂಬಲ್ಲಿ ಜನಿಸಿದರು. +ಐದನೇಯ ತರಗತಿಯವರೆಗೆ ವಿದ್ಯಾಭ್ಯಾಸವನ್ನು ಪೂರೈಸಿರುವ ಇವರು, ಚಿಕ್ಕಂದಿನಿಂದಲೇ ಯಕ್ಷಗಾನಕಲೆಯ ಕುರಿತು ವಿಶೇಷ ಆಸಕ್ತಿ ಹೊಂದಿದವರು. +ಸುಪ್ರಸಿದ್ಧ ಹಾಸ್ಯ ಕಲಾವಿದ ಮಿಜಾರು ಅಣ್ಣಪ್ಪ ಹಾಗೂ ಡಾ.ಎನ್‌.ನಾರಾಯಣ ಶೆಟ್ಟಿ ಅವರ ಶಿಷ್ಯನಾಗಿ ಯಕ್ಷಗಾನ ಕಲಾನುಭವ ದ್ರವ್ಯವನ್ನು ಗಳಿಸಿದ ಮುಖ್ಯ ಪ್ರಾಣರು ತನ್ನ 19ನೇ ವಯಸ್ಸಿನಲ್ಲೇ ಯಕ್ಷಲೋಕದತ್ತ ಹೆಜ್ಜೆ ಹಾಕಿದರು. +ಮುಖ್ಯಪ್ರಾಣ ಅವರ ಆಳಂಗ, ಭಾಷೆ,ಭಾವ,ರಂಗನಡೆ ಎಲ್ಲವೂ ಹಾಸ್ಯಭೂಮಿಕೆಗೆ ಸಮುಚಿತವಾಗಿ ಕಲಾರಸಿಕರ ಮನ ಗೆದ್ದಿದೆ. +ಸುಸಂಂಸ್ಕೃತವಾದ ರಾಜಹಾಸ್ಯಗಾರಿಕೆಯಲ್ಲಿ ಪ್ರೇಕ್ಷಕರ ಮೊಗದಲ್ಲಿ ನಗೆಯ ಚಿತ್ತಾರಬಿಡಿಸುವ ಕಿನ್ನಿಗೋಳಿಯವರು, ಅಪಾರರಂಗಾನುಭವವನ್ನು ಹೊಂದಿ, ಗರಿಷ್ಠಮಟ್ಟದಲ್ಲಿ ಹಾಸ್ಯಪಾತ್ರಗಳನ್ನು ಪೋಷಿಸುವವರು. +ಭೀಷ್ಮಪ್ರತಿಜ್ಜೆಯ ಕಂದರ, ಭೀಷ್ಮವಿಜಯದವೃದ್ಧಭೂಸುರ, ಚಂದ್ರಾವಳಿ ವಿಲಾಸದ ಚಂದಗೋಪ,ಶ್ರೀಕೃಷ್ಣ ಲೀಲೆಯ ವಿಜಯ, ದಮಯಂತಿಯ ಬಾಹುಕ, ಗದಾಯುದ್ಧದ ಬೇಹುಚಾರಕ . +ಹಾಸ್ಯಭೂಮಿಕೆಗಳಿಗೆ ತನ್ನದೇ ಶೈಲೀಕೃತ ವೈನೋದಿಕ ಛಾಪು ಮೂಡಿಸಿದ ಕಿನ್ನಿಗೋಳಿ ಮುಖ್ಯಪ್ರಾಣ ಅವರು ಸಾಂಪ್ರದಾಯಿಕ ಸೊಗಡು, ಸೊಬಗಿಗೆ ಮೊದಲ ಮಣೆ ಹಾಕುವವರು. +ಕಟೀಲು 6, ಇರಾ ಸೋಮನಾಥೇಶ್ವರ 3,ಸುಬ್ರಹ್ಮಣ್ಯ 1, ಮಂತ್ರಾಲಯ 2, ಸಾಲಿಗ್ರಾಮ 14,ಪೆರ್ಡೂರು 8, ಕುಮಟಾ 1, ಕದ್ರಿ 3, ಮಂದಾರ್ತಿ 11, ಹೀಗೆ 9 ಮೇಳಗಳಲ್ಲಿ ಸುದೀರ್ಥವಾದ 49ವರ್ಷಗಳ ಕಲಾವ್ಯವಸಾಯವನ್ನು ಪೂರೈಸಿದ್ದಾರೆ. +ಪ್ರಸ್ತುತ ಕಿನ್ನಿಗೋಳಿಯವರು ಮಂದಾರ್ತಿ ಮೇಳದ ಪ್ರಧಾನ ಹಾಸ್ಯಗಾರರಾಗಿ ಸೇವೆ ಸಲ್ಲಿಸುತ್ತಿರುವವರು. +ಸತಿ ದುರ್ಗಾವತಿ. +ಓರ್ವ ಸುಪುತ್ರ ಯಶವಂತ ಕಂಪ್ಯೂಟರ್‌ ಇಂಜಿನಿಯರ್‌. +ಮೂಡಬಿದ್ರಿ ಅಭಿಮಾನಿಬಳಗ, ಸಿದ್ಧಾಪುರ ಗೆಳೆಯರ ಬಳಗ,ಮಂಗಳೂರು ಸಾಹಿತ್ಯ ಸಮ್ಮೇಳನ, “ಕಲಾರಂಗ'ದ"ನಿಟ್ಟೂರು ಸುಂದರ ಶೆಟ್ಟಿ ಪ್ರಶಸ್ತಿ, ಪದ್ಮಶಾಲಿ ಕೂಟ- ಬೆಂಗಳೂರು ವತಿಯಿಂದ ಗೌರವ, ದ.ಕ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ . +ಡಾ.ಜಿ.ಶಂಕರ್‌ ಟ್ರಸ್ಟ್‌ ಗೌರವ ಸಮ್ಮಾನ, ಯಕ್ಷಗಾನ ಅಕಾಡೆಮಿ ಪ್ರಶಸ್ತಿಯೂ ಶ್ರೀಯುತರಿಗೆ ದೊರಕಿರುತ್ತದೆ. +ಸಾಂಪ್ರದಾಯಿಕ ಆವರಣದಲ್ಲಿ ಪಾತ್ರಗಳನ್ನು ತನ್ನದೇ ವರ್ಚಸ್ಸಿನಿಂದ ಬೆಳಗಿಸುವ ಹಿರಿಯ ಕಲಾವಿದ ಆರ್ಗೋಡು ಮೋಹನದಾಸ ಶೆಣೈ. +ಕುಂದಾಪುರ ತಾಲೂಕಿನ ಆರ್ಗೋಡು ಎಂಬಲ್ಲಿ ಕೆ.ಗೋವಿಂದರಾಯ ಶೆಣೈ, ಮುಕ್ತಾ ಬಾಯಿ ದಂಪತಿಯ ಸುಪುತ್ರರಾಗಿ 10-2-1950ರಂದು ಜನಿಸಿದ ಶೆಣೈಯವರು ಪಿ.ಯು.ಸಿ ವಿದ್ಯಾಭ್ಯಾಸದ ಬಳಿಕ ಅಂದರೆ ತನ್ನ 26ನೇ ವಯಸ್ಸಿನಲ್ಲಿ ತಂದೆಯವರ ಪ್ರೇರಣೆ ಹಾಗೂ ಆಗಿನ ಹಿರಿಯಡಕ ಮೇಳದ ಯಜಮಾನ ಪೆರ್ಡೂರು ಮಹಾಬಲ ಶೆಟ್ಟರ ಒತ್ತಾಯದ ಮೇರೆಗೆ ಸ್ವಯಂ ಆಸಕ್ತಿಯಿಂದ ಯಕ್ಷಗಾನಕ್ಕೆ ಮುಖ ಮಾಡಿದರು. +ಇವರ ತಂದೆ ಗೋವಿಂದರಾಯ ಶೆಣೈ ಪ್ರಸಿದ್ಧ ಭಾಗವತರಾಗಿದ್ದರು. +ದೊಡ್ಡಪ್ಪಂದಿರೀರ್ವರು ಉತ್ತಮ ವೇಷಧಾರಿಗಳು. +ಹಾಗಾಗಿ ಶೆಣೈಯವರಿಗೆ ಕಲಾ ಹಿನ್ನೆಲೆ ಬಲಿಷ್ಠವಾಗಿಯೇ ಸಿಕ್ಕಿತು. +ಹಾಸ್ಯಗಾರ ಕಮಲಶಿಲೆ ಮಹಾಬಲ ದೇವಾಡಿಗರಲ್ಲಿ ಕುಣಿತವನ್ನು ಕಲಿತ ಇವರು ಹವ್ಯಾಸಿಯಾಗಿ 2ವರ್ಷ ಯಕ್ಷಗಾನ ರಂಗಸೇವೆ ಮಾಡಿದ್ದರು. +ಕುಂದಾಪುರ ಲಕ್ಷ್ಮೀವೆಂಕಟೇಶ ಮೇಳದಲ್ಲಿ ಒಂದು ವರ್ಷ, ಹಿರಿಯಡಕ 3, ಹಳೇ ಪೆರ್ಡೂರು 1, ಕಮಲಶಿಲೆ 8, ಸಾಲಿಗ್ರಾಮ 4, ಮೂಲ್ಕಿ 1,ಹೊಸಪೆರ್ಡೂರು 13, ಮಂದಾರ್ತಿ 1 ಶಿರಸಿ ಮೇಳಗಳಲ್ಲಿ ಸೇವೆ ಸಲ್ಲಿಸಿ ಇದೀಗ ಕಮಲಶಿಲೆ ಮೇಳದ ಪ್ರಧಾನ ಕಲಾವಿದರಾಗಿ 35ನೇ ವರ್ಷದ ತಿರುಗಾಟದಲ್ಲಿದ್ದಾರೆ. +ಸಮರ್ಥ ಪುರುಷವೇಷಧಾರಿಯಾಗಿ ಎರಡನೇ ವೇಷಧಾರಿಯಾಗಿ ಪ್ರತಿಭಾ ಪ್ರೌಢತೆಯಿಂದ ಪಾತ್ರಗಳಿಗೆ ನ್ಯಾಯ ಕಲ್ಪಿಸಿದ ಶೆಣೈಯವರು ಶ್ರೀರಾಮ, ಭೀಷ್ಮಸುಧನ್ವ, ಜಾಂಬವ, ಬಲರಾಮ, ಕರ್ಣ, ಅರ್ಜುನ,ಪರಶುರಾಮ, ಹನೂಮಂತ, ವಿಕ್ರಮಾದಿತ್ಯ,ಮೈತ್ರೇಯ, ಕೌರವ, ಭೀಮ, ಋತುಪರ್ಣ ಮೊದಲಾದ ಪೌರಾಣಿಕ ವ್ಯಕ್ತಿ-ಶಕ್ತಿಗಳನ್ನು ಪಾತ್ರಗಳ ಮೂಲಕ ಜೀವಂತವಾಗಿರಿಸಿದ್ದಾರೆ. +ಪ್ರಗಲ್ಫ ಪಾಂಡಿತ್ಯದ ಖಜಾನೆಯಂತಿರುವ ಶೆಣೈಯವರು ಕಸ್ತೂರಿ ಎಂಬುವರನ್ನು ವರಿಸಿ, ಸಾವಿತ್ರಿ,ರಾಧಿಕಾ, ಪೂರ್ಣಿಮಾ ವಾಮನ, ವಿಷ್ಣು ಎಂಬ 5ಮಂದಿ ಮಕ್ಕಳನ್ನು ಪಡೆದಿದ್ದಾರೆ. +ದಿ.ಕೆ.ಎಸ್‌.ನಿಡಂಬೂರು ಪ್ರಶಸ್ತಿಯೂ ಸೇರಿದಂತೆ ಶೆಣೈಯವರನ್ನು ಅನೇಕ ಸಂಘ ಸಂಸ್ಥೆಗಳು ಸಮ್ಮಾನಿಸಿವೆ. +ಬಡಗುತಿಟ್ಟಿನ ಪರಂಪರೆಯ ವರ್ಚಸ್ವೀ ವೇಷಧಾರಿಯಾಗಿ ಗುರುತಿಸಿಕೊಂಡ ಶಿಷ್ಟ ಕಲಾವಿದ ಹಳ್ಳಾಡಿ ಮಂಜಯ್ಯ ಶೆಟ್ಟಿ. +ಕುಂದಾಪುರ ತಾಲೂಕಿನ ಹಳ್ಳಾಡಿ ಎಂಬಲ್ಲಿ 12-4-1932ರಲ್ಲಿ ಜನಿಸಿದ ಮಂಜಯ್ಯ ಶೆಟ್ಟರು ಗೋವಿಂದ ಶೆಟ್ಟಿ-ದೇವಮ್ಮ ದಂಪತಿಯ ಸುಪುತ್ರ. +ಶ್ರೀಯುತರ ವಿದ್ಯಾಭ್ಯಾಸ 5ನೇ ತರಗತಿಯ ವರೆಗೆ ಮಾತ್ರ. +16ರ ಹರೆಯದಲ್ಲೇ ಇವರ ಕಲಾ ಜೀವನ ಆರಂಭ. +ಗುರು ವೀರಭದ್ರನಾಯ್ಕ್ ಹಾಗೂ ಮಾರ್ಗೋಳಿ ಗೋವಿಂದ ಸೇರೆಗಾರ್‌ ಅವರಲ್ಲಿ ನೃತ್ಯಾಭಿನಯ ಶಿಕ್ಷಣ ಪಡೆದ ಮಂಜಯ್ಯ ಶೆಟ್ಟರು ಶಿರಿಯಾರ ಸಂಜೀವ ಅವರಲ್ಲಿ ತಾಳ,ಲಯಗಾರಿಕೆಯನ್ನು ಕಲಿತರು. +ಬೇಳಂಜೆ ತಿಮ್ಮಪ ನೃಾಕ ರಿಂದ ಚೆಂಡೆ, ಮದ್ದಳೆ ವಾದನವನ್ನು ಶ್ರೀಯುತರು ಕರಗತ ಮಾಡಿಕೊಂಡರು. +ಅಮೃತೇಶ್ವರಿ, ಸಾಲಿಗ್ರಾಮ, ಮಾರಣಕಟ್ಟೆ,ಕೊಲ್ಲೂರು, ಪೆರ್ಡೂರು ಸೌಕೂರು ಮೇಳಗಳಲ್ಲಿ ಸುಮಾರು 45 ವರ್ಷ ಕಲಾಸೇವೆ ಸಲ್ಲಿಸಿದವರು. +ವೇಷಗಾರಿಕೆ ಹಾಗೂ ಮಾತುಗಾರಿಕೆಯ ಮೋಡಿಯಲ್ಲಿ ಶಿರಿಯಾರ ಮಂಜುನಾಯ್ಕರ ಶೈಲಿಯನ್ನು ನೆನಪಿಸುವ ಪ್ರಬುದ್ಧ ಕಲಾವಿದ ಮಂಜಯ್ಯ ಶೆಟ್ಟರು. + ಮಟಪಾಡಿ ರಂಗನಡೆಯನ್ನು ಕರಾರುವಾಕ್ಕಾಗಿ ತೋರಿಸುವವರು. +ಪರಿಶುದ್ಧ ವ್ಯಾಕರಣಬದ್ಧ, ಪಾಂಡಿತ್ಯಪೂರ್ಣ ವಾಕ್‌ ವೈಖರಿ, ಪರಿಣಾಮಕಾರಿ ಪಾತ್ರಾಭಿವ್ಯಕ್ತಿಯಲ್ಲಿ ಯಕ್ಷಗಾನೀಯವಾದ ಸೊಗಸು ಮೆರೆಯುವ ಶೆಟ್ಟರ ಸುಧನ್ವ, ಪುಷ್ಕಳ, ಲವ-ಕುಶ, ಯಯಾತಿ, ಅರ್ಜುನ ಪಾತ್ರಗಳು ಜನಪ್ರಿಯ. +ದೇವವೃತ, ಋತುಪರ್ಣ,ಪಾರಿಜಾತದ ಕೃಷ್ಣ, ಧರ್ಮಾಂಗದ ಭೂಮಿಕೆಗಳಿಗೆ ಅವರದ್ದೇ ವಿಶೇಷ ಛಾಪು ಮೂಡಿಸಿದ್ದಾರೆ. +ಮಂಜಯ್ಯಶೆಟ್ಟರ ರಂಗದ ನಡೆ, ನುಡಿ, ನಿಲವು,ವೇಷ, ಎಲ್ಲವೂ ನೂರಕ್ಕೆ ನೂರು ಯಕ್ಷಗಾನೀಯವಾದದ್ದು. +ಪಾತ್ರಗಳ ಅಂತರಂಗದ ಭಾವವನ್ನು ಅರಿತು ವ್ಯವಹರಿಸುವ ಅದ್ಭುತ ಕಲಾಪ್ರತಿಭೆ ಅವರದ್ದು. +ಗುರುವಾಗಿ ಹಲವು ಶಿಷ್ಯರನ್ನು ರಂಗಭೂಮಿಗೆ ನೀಡಿದ ಹಿರಿಮೆಯೂ ಅವರಿಗಿದೆ. +ಶ್ರೀಯುತರ ಸಹಧರ್ಮಿಣಿ ರಾಧಮ್ಮ ಶೆಡ್ತಿ. +ಓರ್ವ ಸುಪುತ್ರ ಹರ್ಷ ಶೆಟ್ಟಿ. +ಪ್ರಸ್ತುತ ಮಂಜಯ್ಯ ಶೆಟ್ಟರು ಚಿತ್ರದುರ್ಗದಲ್ಲಿ ಅಂಗಡಿ ಉದ್ಯಮಿ. +ಶ್ರೀಯುತರಿಗೆ ಹಾರಾಡಿ ರಾಮಗಾಣಿಗ ಪ್ರಶಸ್ತಿ,ಎಂ.ಎಂ.ಹೆಗ್ಡೆ ಪ್ರಶಸ್ತಿ, ಯಕ್ಷಗಾನ ಕಲಾರಂಗದ ಮಾರ್ವಿ ಹೆಬ್ಬಾರ್‌ ಪ್ರಶಸ್ತಿ, ಯಕ್ಷದೇಗುಲ ಪುರಸ್ಕಾರ,ಮಂಗಳೂರು ಬಂಟರಸಂಘದ "ಚೌಟ' ಪ್ರಶಸ್ತಿ,ಯಶಸ್ವೀ ಕಲಾವೃಂದ ತೆಕ್ಕಟ್ಟೆಯ ವತಿಯಿಂದೆ ಗೌರವ ಸಂಮಾನ, ಚಿತ್ರದುರ್ಗದ ವಿವಿಧ ಸಂಘ-ಸಂಸ್ಥೆಗಳಿಂದ ಸಂಮಾನ ದೊರಕಿರುತ್ತದೆ. +ತೆಂಕು-ಬಡಗುತಿಟ್ಟಿನ ಅಗ್ರಮಾನ್ಯ ಸ್ರ್ತೀ ವೇಷಧಾರಿ ಅರಾಟೆ ಮಂಜುನಾಥ. +ಸ್ರ್ತೀ ಭೂಮಿಕೆಗೊಪ್ಪುವ ಅಂಗಸೌಷ್ಠವ, ಕಂಠಸಂಪತ್ತು. +ಲಾಲಿತ್ಯಪೂರ್ಣ ನೃತ್ಯ, ಅಭಿನಯ ಕೌಶಲ, ಸುಪುಷ್ಟ ರಂಗನಡೆ, ಪ್ರಗಲ್ಭ ಪಾಂಡಿತ್ಯದ ವಾಚಿಕ ವಿಲಾಸ ಮೈ ತುಂಬಿಕೊಂಡ ಮೇರು ಕಲಾವಿದ ಅರಾಟೆಯವರು ಯಕ್ಷಗಾನ ಪರಂಪರೆಯ ನಿಜ ಸತ್ವವನ್ನು ಹೀರಿಕೊಂಡು ಬೆಳೆದವರು. +ಕುಂದಾಪುರ ತಾಲೂಕಿನ ಗುಲ್ವಾಡಿ ಎಂಬಲ್ಲಿ ರಾಮನಾಯ್ಕ-ಮಂಜಮ್ಮ ದಂಪತಿಯ ಸುಪುತ್ರರಾಗಿ 1942ರಲ್ಲಿ ಜನಿಸಿದ ಅರಾಟೆಯವರ ಓದು ನಾಲ್ಕಕ್ಕೇ ಸೀಮಿತವಾಯಿತು. +13ನೇ ವಯಸ್ಸಿನಲ್ಲೇ ಅವರು ರಂಗಮಂಚಕ್ಕೆ ಹೆಜ್ಜೆ ಹಾಕಿದರು. +ಹಿರಿಯ ಕಲಾವಿದರಾದ ಮಟಪಾಡಿ ಶ್ರೀನಿವಾಸ ನಾಯಕ್‌ಹಾಗೂ ಗುರು ವೀರಭದ್ರನಾಯ್ಕರ ಶಿಷ್ಯನಾಗಿ ಸಂಪ್ರದಾಯಶೀಲ ಕಲಾಶಿಕ್ಷಣ ಪಡದ ಕಲಾವಿದರಿವರು. +ಸಾಲಿಗ್ರಾಮ, ಮಂದಾರ್ತಿ, ಮಾರಣಕಟ್ಟೆ,ಕಮಲಶಿಲೆ, ಕೆರೆಮನೆ, ರಾಜರಾಜೇಶ್ವರಿ, ಸುರತ್ಕಲ್‌,ಮೂಲ್ಕಿ, ಕೊಲ್ಲೂರು, ಪೊಳಲಿ, ಕುಂಡಾವು ಮೇಳಗಳಲ್ಲಿ ಸುದೀರ್ಥ 55 ವರ್ಷಗಳ ಕಾಲ ಕಲಾ ತಿರುಗಾಟ ನಡೆಸಿದರು. +ಅಪಾರ ಜನಮನ್ನಣೆಯನ್ನು ಪಡೆದರು. +ಅರಾಟೆಯವರು ಓರ್ವ ಅತ್ಯುತ್ತಮ ವೇಷಧಾರಿ ಮಾತ್ರವಲ್ಲದೆ ಸಮರ್ಥ ಸಂಘಟಕರೂ ಹೌದು. +ಗಣೇಶ ಪ್ರವಾಸೀ ಯಕ್ಷಗಾನ ಸಂಸ್ಥೆಯ ಸ್ಥಾಪಕರಾಗಿ ಅನೇಕ ಹಿರಿಯ ಕಲಾವಿದರನ್ನು ಗುರುತಿಸಿ ಗೌರವಿಸಿದವರು. +ಕಿರಿಯ ಕಲಾವಿದರಿಗೆ ಮಾರ್ಗದರ್ಶಿಯಾದವರು. +ಪೌರಾಣಿಕ ಸ್ತ್ರೀಪಾತ್ರಗಳ ಅಂತಸ್ಸತ್ವವನ್ನು ಗಂಭೀರವಾಗಿ ಅರ್ಥೈಸಿಕೊಂಡು ಶಾಸ್ತ್ರೀಯ ಸಂವಿಧಾನದಲ್ಲಿ ಪಾತ್ರಗಳನ್ನು ಕೆತ್ತಿಡುವ ಅದ್ಭುತ ಪ್ರತಿಭೆ. +ಅರಾಟೆಯವರ ಆಂಬೆ, ದಮಯಂತಿ,ಶಶಿಪ್ರಭೆ, ದಾಕ್ಷಾಯಿಣಿ, ಚಂದ್ರಮತಿ, ಸುಭದ್ರೆ, ಸೀತೆ,ಮೀನಾಕ್ಷಿ, ಮೋಹಿನಿ, ಪ್ರಭಾವತಿ, ಶ್ರೀದೇವಿ ಮೊದಲಾದ ಭೂಮಿಕೆಗೆಳು ಇಂದಿಗೂ ಅಜರಾಮರವಾಗಿವೆ. +ಹಾಗೆಯೇ ಶ್ರೀಯುತರ ಕೃಷ್ಣ,ಅಶ್ವತ್ಥಾಮ, ಮೊದಲಾದ ಪುರುಷಪಾತ್ರಗಳೂ ಜನಪ್ರಿಯ. +ಗರತಿ ಪಾತ್ರಗಳಲ್ಲಿ ಕಾಣಿಸುವ ಹೆಣ್ತನದ ಸಹಜ ಲಾಲಿತ್ಯ, ಕಸೆ ಪಾತ್ರಗಳಲ್ಲಿ ತೋರುವ ಗಂಭೀರ ಸ್ತ್ರೀಯ ರಂಗಔಚಿತ್ಯ ಸಾಟಿಯಿಲ್ಲದ್ದು. +ಇವರು ಜಾನಪದ ಮತ್ತುಯಕ್ಷಗಾನ ಅಕಾಡೆಮಿ ಸದಸ್ಯರಾಗಿದ್ದರು. +ಎರಡು ವರ್ಷಗಳ ಹಿಂದೆ ದೈಹಿಕ ಅನಾರೋಗ್ಯಕ್ಕೆ ತುತ್ತಾಗಿದ್ದಾರೆ. +ರಂಗಸಾಧನೆಯ ಶೃಂಗಸಾರ್ಥಕ್ಯ ಕಂಡ ಶ್ರೇಷ್ಠಕಲಾವಿದ ಅರಾಟೆ ಮಂಜುನಾಥರ ಧರ್ಮಪತ್ ನಿಜಲಾಜಾಕ್ಷಿ ಎಮ್‌. ಅರಾಟೆ. +ಶ್ರೀಮತಿ ಜಯಶ್ರೀ,ಗಣೇಶ ಪ್ರಸಾದ್‌ ಅರಾಟೆ, ವಾಣಿಶ್ರೀ ಇವರ ಮೂವರು ಮಕ್ಕಳು. +ಶ್ರೀಯುತರಿಗೆ ಪ್ರತಿಷ್ಠಿತ ರಾಜ್ಯಪ್ರಶಸ್ತಿ, ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ ,ಕರ್ನಾಟಕ ಸಾಹಿತ್ಯ ಪರಿಷತ್‌ ಪ್ರಶಸ್ತಿ, ಉಡುಪಿ ಯಕ್ಷಗಾನ ಕಲಾರಂಗದ ಪ್ರೊ.ಬಿ.ವಿ.ಆಚಾರ್ಯಪ್ರಶಸ್ತಿ, ನಿಟ್ಟೂರು ಭೋಜಪ್ಪ ಸುವರ್ಣ ಪ್ರಶಸ್ತಿ,ರಾಮವಿಠಲ ಪ್ರಶಸ್ತಿ ಸೇರಿದಂತೆ ಅನೇಕ ಸಂಮಾನ ದೊರೆತಿದೆ. +ಬಡಗುತಿಟ್ಟಿನ ಸಾಂಪ್ರದಾಯಿಕ ಯಕ್ಷಶಿಕ್ಷಣವನ್ನು ಪಡೆದು ಯಕ್ಷರಂಗ ಮಂಚದಲ್ಲಿ ಹೆಜ್ಜೆ ಹಾಕಿ, ಗೆಲುವು ಕಂಡ ಪ್ರತಿಭಾಸಂಪನ್ನ ಕಲಾವಿದ ಶ್ರೀ ಎಂ.ರಘುರಾಮ ಮಡಿವಾಳ. +ಕುಷ್ಠ ಮಡಿವಾಳ-ಲಚ್ಚು ಮಡಿವಾಳ್ತಿ ದಂಪತಿಯ ಸುಪುತ್ರರಾದ ರಘುರಾಮ ಮಡಿವಾಳರ ಹುಟ್ಟೂರು ಮಂದಾರ್ತಿ-ಹೆಗ್ಗುಂಜೆ. +ಹಿರಿಯ ಕಲಾವಿದ ಉಡುಪಿ ಬಸವನಾಯ್ಕರ ಪ್ರೇರಣೆ, ಪ್ರೋತ್ಸಾಹವನ್ನು ಪಡೆದು ಯಕ್ಷಗಾನ ರಂಗಕ್ಕೆ ಧುಮುಕಿದ ರಘುರಾಮ ಅವರು ಉಡುಪಿ ಯಕ್ಷಗಾನ ಕೇಂದ್ರದಲ್ಲಿ ಗುರು ವೀರಭದ್ರನಾಯಕ್‌ ಹಿರಿಯಡಕ ಗೋಪಾಲರಾವ್‌, ನೀಲಾವರ ರಾಮಕೃಷ್ಣಯ್ಯ ಅವರ ಶಿಷ್ಯರಾಗಿ ಸಶಕ್ತ ಯಕ್ಷವಿದ್ಯೆಯನ್ನು ಆರ್ಜಿಸಿಕೊಂಡವರು. +5ನೇ ತರಗತಿವರೆಗೆ ವಿದ್ಯಾಭ್ಯಾಸ. +ಬಳಿಕ ಯಕ್ಷಗಾನ ರಂಗಕಲೆಯನ್ನು ಬದುಕಾಗಿಸಿ ಕೊಂಡ ರಘುರಾಮ ಮಡಿವಾಳರು ಪಾತ್ರೋಚಿತ ನೃತ್ಯಾಭಿನಯ, ಪ್ರೌಢ ರಂಗನಡೆ, ಗರಿಷ್ಠಮಟ್ಟದ ಪ್ರಸಂಗಾನುಭವದಲ್ಲಿ ಗುರುತಿಸಲ್ಪಡುವ ಕಲಾವಿದರು. +ಇವರ ನಿರ್ವಹಣೆಯ ವಾಲಿ, ಜಾಂಬವ, ವೀರಮಣಿ,ಕೌಂಡ್ಲೀಕ ,ಕಮಲಭೂಪ, ಕೌರವ, ಅರ್ಜುನ ಮೊದಲಾದ ಪಾತ್ರಗಳು ಕಲಾಭಿಮಾನಿಗಳ ಪ್ರಶಂಸೆಗೆ ಪಾತ್ರವಾಗಿವೆ. +ಕಮಲಶಿಲೆ 5, ಪೆರ್ಡೂರು 2, ಸೌಕೂರು 3,ಇಡಗುಂಜಿ 1, ಕಳವಾಡಿ 1, ಮೇಳಗಳಲ್ಲಿ ಕಲಾಸೇವೆ ಸಲ್ಲಿಸಿದ ರಘುರಾಮ ಅವರು 22 ವರ್ಷಗಳಿಂದ ಮಂದಾರ್ತಿ ಮೇಳದ ಪ್ರಧಾನಕಲಾವಿದರಾಗಿ ಕಲಾರಂಗದಲ್ಲಿ ಸಾರ್ಥಕ 34 ವರ್ಷಗಳನ್ನು ಪೂರೈಸಿ ಜನಪ್ರಿಯರಾಗಿದ್ದಾರೆ. +ಪತ್ನಿ ಬೇಬಿ. +ಸುಪ್ರೀತ, ಸುಚಿತ್ರ, ಸುದರ್ಶನ,ಸುರಾಜ್‌ ಮಕ್ಕಳು. +ಯಕ್ಷಗಾನ ಕ್ಷೇತ್ರದಲ್ಲಿ ವ್ಯವಸ್ಥಿತ ಕಲಾಪ್ರಗತಿ, ಬೆಳವಣಿಗೆಯನ್ನು ಕಂಡ ರಘುರಾಮ ಮಡಿವಾಳರನ್ನು ದೆಹಲಿ ಕನ್ನಡ ಸಂಘ, ಬೆಂಗಳೂರು ಕನ್ನಡ ವಾರ್ತಾ ಇಲಾಖೆ, ಉಡುಪಿ ರಜಕ ಸಂಘ ಸಮ್ಮಾನಿಸಿವೆ. +ತೆಂಕು-ಬಡಗಿನ ಸರ್ವ ಸಮರ್ಥ ಸ್ರ್ತೀ ವೇಷಧಾರಿಯಾಗಿ ಗುರುತಿಸಿಕೊಂಡ ಹಿರಿಯ ಕಲಾವಿದ ಎಂ.ಕೆ. ರಮೇಶ ಆಚಾರ್ಯ. +ಉನ್ನತ ಪ್ರತಿಭಾ ವ್ಯಕ್ತಿತ್ವದಿಂದ ಸಾಂಪ್ರದಾಯಿಕ ಸೀಮೆಯಲ್ಲಿಯೇ ಪುರಾಣ ಭೂಮಿಕೆಗಳನ್ನು ರಂಗನೆಲದಲ್ಲಿ ಕಡೆದಿಡುವ ಕಲಾಕೌಶಲವನ್ನು ಹೊಂದಿದ ರಮೇಶ ಆಚಾರ್ಯರು ಈ ರಂಗ ಭೂಮಿಯ ನಿಚ್ಚಳ ನೀತಿ, ನಿಯಮ ಪೂರ್ಣಬದ್ಧತೆಯನ್ನು ಮೈಗೂಡಿಸಿ-ಕೊಂಡವರು. +1949ರ ಅಕ್ಟೋಬರ್‌ ಮೂವತ್ತರಂದು ಕೃಷ್ಣಯ್ಯ ಆಚಾರ್‌ ಮಂಗಳಗಾರ್‌, ರುಕ್ಕಿಣೀಯಮ್ಮ ದಂಪತಿಯ ಸುಪುತ್ರರಾಗಿ ಆಲ್ಮನೆ ಗ್ರಾಮದ ಮಂಗಳಗಾರ್‌ ಎಂಬಲ್ಲಿ ಹುಟ್ಟಿದ ಆಚಾರ್ಯರು ಐದನೇ ತರಗತಿಯವರೆಗೆ ಅಕ್ಷರಾಭ್ಯಾಸ ನಡೆಸಿ ತನ್ನ 11ನೇ ವಯಸ್ಸಿನಲ್ಲಿ ಯಕ್ಷಗಾನ ಕ್ಷೇತ್ರಕ್ಕೆ ಕಾಲಿರಿಸಿದರು. +ತಂದೆ ಕೃಷ್ಣಯ್ಯ ಆಚಾರ್ಕರು ಶ್ರೀ ಜಗದಂಬಾ ಕೃಪಾಪೋಷಿತ ಯಕ್ಷಗಾನ ಮಂಡಳಿ-ಮಹಿಷಿ ಇದರ ಸಂಸ್ಥಾಪಕರಾಗಿದ್ದರು. +ಇವರ ದೊಡ್ಡ ತಂದೆಯವರ ಮಗ, ಅಣ್ಣ ನರಸಿಂಹ ಆಚಾರ್ಯರು ಶ್ರೀಯುತರ ಅನ್ಯಾದ್ಕಶ ಕಲಾಸಕ್ತಿಗೆ ನೀರೆರೆದರು. +ಕಲಾವಂತರ ಮನೆತನದಲ್ಲಿ ಹುಟ್ಟಿ ಬೆಳೆದ ಆಚಾರ್ಯರಿಗೆ ಇಂತಹ ರಂಗಜೀವನ ಬಾಲ್ಯದಲ್ಲೇ ಬಳುವಳಿಯಾಯಿತು. +ಸ್ರ್ತೀ ಪಾತ್ರಕ್ಕೊಪ್ಪುವ ರೂಪ, ಮಧುರಕಂಠ,ಆಂಗಿಕ ಲಾಲಿತ್ಯ, ಪ್ರಗಲ್ಫ ಪಾಂಡಿತ್ಯ ಸಶಕ್ತ ರಂಗನಡೆ,ಸುಪುಷ್ಟ ಪ್ರಸಂಗ ನಡೆಯನ್ನು ಹೊಂದಿದ ಆಚಾರ್ಯರು ಬಹುಬೇಗನೆ ಸ್ರ್ತೀ ಪಾತ್ರಧಾರಿಯಾಗಿ ಖ್ಯಾತನಾಮವನ್ನು ಗಳಿಸಿದರು. +ಬಡಗುತಿಟ್ಟಿನಲ್ಲಿ ಗುರು ವೀರಭದ್ರನಾಯಕ್‌ರಿಂದಲೂ, ತೆಂಕುತಿಟ್ಟಿನಲ್ಲಿ ಕುರಿಯ ವಿಠಲ ಶಾಸ್ತ್ರಿಗಳಿಂದಲೂ ಯಕ್ಷವಿದ್ಯೆ ಬೋಧಿಸಿಕೊಂಡ ಆಚಾರ್ಯರಿಗೆ ಬಲಿಷ್ಠ ಗುರುಬಲ ದೊರಕುವಂತಾಯಿತು. +ಮಂದಾರ್ತಿ 5, ಧರ್ಮಸ್ಥಳ 3, ಸುರತ್ಕಲ್‌24, ಸಾಲಿಗ್ರಾಮ 3, ಸೌಕೂರು 4, ಪೆರ್ಡೂರು 3,ಮಂಗಳಾದೇವಿ 3, ಹೀಗೆ ವೃತ್ತಿರಂಗದಲ್ಲಿ ಸರಿಸುಮಾರು 45 ವರ್ಷ ತಿರುಗಾಟ ಕಂಡವರು. +ತಂದೆಯವರ ಜಗದಂಬಾ ಮೇಳ ಮಹಿಷಿ ಕೃಪಾ-ಪೋಷಿತ ಯಕ್ಷಗಾನ ಮಂಡಳಿಯಲ್ಲೂ ದುಡಿದ ಶ್ರೀಯುತರು ಪ್ರಸ್ತುತ ಮಂಗಳಾದೇವಿ ಮೇಳದ ಕಲಾವಿದರಾಗಿ ಕಲಾಸೇವೆ ಸಲ್ಲಿಸುತ್ತಿದ್ದಾರೆ. +ಎಂ.ಕೆ.ಆರ್‌ ಅವರ ಚಂದ್ರಮತಿ, ದ್ರೌಪದಿ, ರುಕ್ಮಿಣಿ, ಶಾಂತಲೆ,ಸೀತೆ, ಮೇನಕೆ, ಸೈರೇಂದ್ರಿ ಮೊದಲಾದ ಸ್ರ್ತೀಪಾತ್ರಗಳು ಸಹೃದಯ ಕಲಾರಸಿಕರ ಹಾರ್ದಿಕ ಶ್ಲಾಘನೆಗೆ ಪಾತ್ರವಾಗಿವೆ. +ಉತ್ತಮ ಅರ್ಥಧಾರಿಯಾಗಿಯೂ,ಪ್ರಸಂಗಕರ್ತರಾಗಿಯೂ ಗುರುತಿಸಿಕೊಂಡ ಆಚಾರ್ಯರು ಅಪಾರ ರಂಗಾನುಭವದ ಕಲಾಖಜಾನೆಯಾಗಿ ಗೋಚರಿಸುವವರು. +ಮಡದಿ ವಿಶಾಲಾಕ್ಷಿ. +ಆಶಾಲತಾ, ಮನೋಜ, ತನುಜ ಮಕ್ಕಳು. +ಪ್ರತಿಭಾನ್ವಿತ ಕಲಾವಿದ ಎಂ.ಕೆ.ರಮೇಶ ಆಚಾರ್ಯರಿಗೆ ಪಟ್ಟಾಜೆ ಸ್ಮಾರಕ ಪ್ರಶಸ್ತಿ, ಯಕ್ಷಜ್ಯೋತಿಪ್ರಶಸ್ತಿ, ಶೇಣಿ ಗೋಪಾಲಕೃಷ್ಣ ಭಟ್‌ ವಿಶ್ವಸ್ಥ ಮಂಡಳಿ ಸಂಸ್ಕರಣ ಪ್ರಶಸ್ತಿ, ವಿಠಲಶಾಸ್ತ್ರಿ ಪ್ರಶಸ್ತಿ ಪ್ರತಿಷ್ಠಾನದ ಪ್ರಶಸ್ತಿ ದೊರಕಿರುತ್ತದೆ. +ಯಕ್ಷಗಾನ ಬಯಲಾಟ ಅಕಾಡೆಮಿ ಪ್ರಶಸ್ತಿಯೂ ಶ್ರೀಯುತರ ಮುಡಿಗೇರಿದೆ. +ಬಡಗುತಿಟ್ಟಿನ ಯಕ್ಷಬಾಂದಳದ ಸಿಡಿಲುಮರಿಯಂತೆ ಕಂಗೊಳಿಸುವ ಹಿರಿಯ ಕಲಾವಿದ ಬೇಲ್ತೂರು ರಮೇಶ್‌ ಪರಂಪರೆಯ ರಂಗಸ್ಥಳದಲ್ಲಿ ವಿಸ್ಫುಲಿಂಗದಂತೆ ಮರೆಯುವ ಪ್ರಬುದ್ಧ ಪುಂಡುವೇಷಧಾರಿ. +ಕುಂದಾಪುರ ತಾಲೂಕಿನ ಕಟ್‌ಬೇಲ್ತೂರು ಎಂಬಪುಟ್ಟ ಹಳ್ಳಿಯಲ್ಲಿ ರಾಮ ನಾಯ್ಕ-ರುಕ್ಕು ದಂಪತಿಯ ಸುಪುತ್ರರಾಗಿ ಜನಿಸಿದ ರಮೇಶ್‌ ಇದೀಗ 59ರ ಹರೆಯದಲ್ಲೂ ಕ್ರಿಯಾಶಿಲರಾಗಿ ವೃತ್ತಿರಂಗ ಭೂಮಿಯಲ್ಲಿದ್ದು ಯಕ್ಷಕಲೆಯನ್ನೇ ಬದುಕಿನ ಬಂಡವಾಳವಾಗಿರಿಸಿಕೊಂಡ ಶಿಷ್ಟ ಕಲಾವಿದರು. +ಬೇಲ್ತೂರು ರಮೇಶ ಅವರ ವಿದ್ಯಾರ್ಹತೆ 5ನೇತರಗತಿ ಮಾತ್ರ. +ಬೇಲ್ತೂರು ಬಣ್ಣದ ವೇಷಧಾರಿ ರಾಮ ಬಳೆಗಾರರ ಪ್ರೇರಣೆಯಂತೆ ತನ್ನ 15ರ ಹರೆಯದಲ್ಲೇ ಮುಖಕ್ಕೆ ಬಣ್ಣ ಹಚ್ಚಿದ ಇವರು ಮತ್ತೆ ಹಿಂದಿರುಗಿ ಕಂಡದ್ದಿಲ್ಲ. +ದಶಾವತಾರಿ ಗುರುವೀರಭದ್ರನಾಯಕ್‌, ಶಿರಿಯಾರ ಮಂಜುನಾಯ್ಯ,ಹೆರಂಜಾಲು ವೆಂಕಟರಮಣ ಗಾಣಿಗ ಅವರ ಸಶಕ್ತಗುರು ಬಲವನ್ನು ಪಡೆದ ಬೇಲ್ತೂರು ಅವರು ಡಾ.ಕೋಟ ಶಿವರಾಮ ಕಾರಂತರ ಮಾರ್ಗದರ್ಶನದಲ್ಲಿ ಉನ್ನತ ರಂಗ ಪ್ರಾವೀಣ್ಯತೆ ಪಡೆದವರು. +ಮಾರಣಕಟ್ಟೆ 7, ಹಾಲಾಡಿ 5, ಸಾಲಿಗ್ರಾಮ10, ಕಳವಾಡಿ 4, ಬಗ್ದಾಡಿ 5, ಮಡಾಮಕ್ಕಿ 7,ಮಂದಾರ್ತಿ 3, ಅಮೃತೇಶ್ವರಿ 1, ಆಜ್ರಿ-ಶನೀಶ್ವರಮೇಳ 2, ಹೀಗೆ 44 ವರ್ಷಗಳ ಸುದೀರ್ಥ ರಂಗವ್ಯವಸಾಯದಲ್ಲಿ ಸಾರ್ಥಕ ಕೀರ್ತಿಗಳಿಸಿದ ರಮೇಶ್‌ಪ್ರಸ್ತುತ ಆಜ್ರಿ ಮೇಳದ ಪ್ರಧಾನ ಕಲಾವಿದರಾಗಿ ದುಡಿಯುತ್ತಿದ್ದಾರೆ. +ಶ್ರೀಯುತರ ಆಳಂಗ, ಎತ್ತರದ ಶ್ರುತಿನಿಷ್ಠಸ್ವರ ತ್ರಾಣ, ಖಚಿತ ಲಯಗಾರಿಕೆಯಲ್ಲಿ ಅಭಿವ್ಯಕ್ತವಾಗುವ ಚುರುಕಿನ ನೃತ್ಯಗತಿ, ಪ್ರೌಢ ರಂಗ ಪರಿಣತಿ ಮೂರನೇ ವೇಷಕ್ಕೆ ಸಮುಚಿತವಾಗುತ್ತದೆ. +ಅವರು ನಿರ್ವಹಿಸುವ ಬಬ್ರುವಾಹನ, ಅಭಿಮನ್ಯು,ಪುಷ್ಕಳ, ಶ್ರೀಕೃಷ್ಣ ,ದೇವವೃತ, ಧ್ರುವ, ಮೊದಲಾದ ಭೂಮಿಕೆಗಳಿಗೆ ಅವರಿಗೆ ಅವರೇ ಸರಿಸಾಟಿ. +ರಮೇಶ್‌ಅವರ ಪುರಾಣ ಅನುಭವವಂತೂ ಸಾಮೃದ್ಧಿಕ. +ಇವರ ಅನೇಕ ಶಿಷ್ಯರು ರಂಗಭೂಮಿಯಲ್ಲಿ ವ್ಯವಸಾಯ ನಿರತರು. +ಸಂಪ್ರದಾಯಬದ್ಧ ಬೇಲ್ತೂರು ರಮೇಶ್‌ಅವರು ಭಾರತದಾದ್ಯಂತವಲ್ಲದೆ ದೂರದ ಅಮೆರಿಕಾ,ಜರ್ಮನಿ, ಹಾಂಕಾಂಗ್‌, ಇಸ್ರೇಲ್‌, ಕೆನಡಾ ಮೊದಲಾದ ವಿದೇಶಗಳಲ್ಲೂ ಕಲಾಪ್ರತಿಭೆ ಮೆರೆದು ಕಲಾರಸಿಕರ ಪ್ರೀತಿಗೆ ಪಾತ್ರರಾಗಿದ್ದಾರೆ. +ಧರ್ಮಪತ್ನಿ ಮುತ್ತು. +ನಾಗರತ್ನಾ, ಪ್ರೇಮ, ಪ್ರಮೋದಿನಿ ಮಕ್ಕಳು. +ಶ್ರೀಯುತರಿಗೆ ಡಾ.ಜಿ.ಶಂಕರ್‌ ಫ್ಯಾಮಿಲಿಟ್ರಸ್ಟ್‌ ವತಿಯಿಂದ ಸಂಮಾನ, ಹಿರಿಯಡ್ಕ, ಮಣಿಪುರ,ಬೇಲ್ತೂರು ಸುಳ್ಸೆ ಮೊದಲಾದ ಕಡೆಗಳಲ್ಲಿ ಗೌರವ ಪುರಸ್ಕಾರ ದೊರಕಿರುತ್ತದೆ. +ಬಡಗುತಿಟ್ಟು ಯಕ್ಷಗಾನ ರಂಗಭೂಮಿಯಲ್ಲಿ ಶಾಸ್ತ್ರ ಸಮನ್ವಿತ ಮದ್ದಳೆವಾದನ ವಿದ್ಯೆಯನ್ನು ಗುರುಮುಖೇನ ಶೃದ್ಧೆ, ಸಾಧನೆಯಿಂದ ಸಿದ್ಧಿಸಿಕೊಂಡ ಪ್ರಬುದ್ಧ ಮದ್ದಳೆವಾದಕ ಕಡತೋಕ ರಮೇಶ ಶಂಕರ ಭಂಡಾರಿ. +ಹೊನ್ನಾವರ ತಾಲೂಕಿನ ಕಡತೋಕ ಎಂಬಲ್ಲಿ ಶಂಕರ ಭಂಡಾರಿ ಪಾರ್ವತಿ ದಂಪತಿಯ ಸುಪುತ್ರರಾಗಿ ಜನಿಸಿದ ರಮೇಶ ಭಂಡಾರಿಯವರೆಗೆ ಪ್ರಸ್ತುತ ನಲವತ್ತರ ಹರಯ. +ಎಂಟನೇ ತರಗತಿಯವರೆಗಿನ ಶೈಕ್ಷಣಿಕ ಸಂಸ್ಕಾರ ಪಡೆದ ಶ್ರೀಯುತರು ಉಡುಪಿ ಯಕ್ಷಗಾನ ಕೇಂದ್ರಕ್ಕೆ ಸೇರ್ಪಡೆಯಾಗಿ ಗುರು ಮಹಾಬಲ ಕಾರಂತ,ವಿದ್ವಾನ್‌ ಗಣಪತಿ ಭಟ್ಟರ ಗುರುತನದಲ್ಲಿ ಸಮರ್ಪಕ ಯಕ್ಷ ಶಿಕ್ಷಣ ಸಂಪನ್ನರಾದವರು. +ರಮೇಶ ಭಂಡಾರಿ ಮದ್ದಳೆಯನ್ನ್ನು ತೊಡೆಯೇರಿಸಿ ಕುಳಿತರೆ ಮೂಕಕೋಗಿಲೆಗೆ ಬಾಯಿ ಬಂದ ದಿವ್ಯಾನುಭವ. +ಮದ್ದಳೆಯ ಎಡ-ಬಲದಲ್ಲಿ ಅವರ ಬೆರಳುಗಳ ಕುಣಿತದಿಂದ ಹೊರಹೊಮ್ಮುವ ಸುಮುಧುರ ನಾದಲಹರಿ ರಸಿಕ ಶ್ರಾವಕರನ್ನು ತನ್ಮಯರನ್ನಾಗಿಸಿ ಬಿಡುತ್ತದೆ. +ನವಿರಾದ ಬೆರಳುಗಾರಿಕೆ, ಸಶಕ್ತ ಲಯಗಾರಿಕೆ,ಕಲಾವಿದರ ಹೆಜ್ಜೆ-ಗೆಜ್ಜೆಗೆ ಪೂರಕವಾದ ನುಡಿಸಾಣಿಕೆ,ಗಾನಪೂರಕವಾದ ಹಿಮ್ಮೇಳ ಹೊಂದಾಣಿಕೆ ಇವರ ವಾದನಕ್ರಮದಲ್ಲಿ ಗುರುತಿಸಬಹುದಾಗಿದೆ. +ಸೌಕೂರು 4, ಹಾಲಾಡಿ 1, ಮಂದಾರ್ತಿ 20 ಹೀಗೆ ಯಕ್ಷಲೋಕದಲ್ಲಿ ಬೆಳ್ಳಿಹಬ್ಬದ ತಿರುಗಾಟದಲ್ಲಿ ಯಶಸ್ಸು ಕಂಡವರು ಭಂಡಾರಿಯವರು. +ಪ್ರತಿಭಾನ್ವಿತ ಮದ್ದಳೆಗಾರರಾದ ಅವರಿಗೆ ಚಂಡೆವಾದನದ ಪರಿಣಿತಿಯೂ ಇದೆ. +ಮಾತ್ರವಲ್ಲ ಭಾಗವತಿಕೆಯೂ ತಿಳಿದಿದೆ. +ವೃತ್ತಿಬದುಕಿನ ಬಿಡುವಿನ ವೇಳೆಯಲ್ಲಿ ಮಂಗಲವಾದ್ಯ ಕಲಾವಿದರಾಗಿಯೂ ಅವರು ಭಾಗವಹಿಸುತ್ತಾರೆ. +ಮಡದಿ ಉಷಾ. +ಆಶಿಕಾ, ಅಮೂಲ್ಯ ಮಕ್ಕಳು. +ಶ್ರೀಯುತರ ಎತ್ತರದ ಪ್ರತಿಭಾ ಪ್ರಭಾವಳಿಗೆ ಕೋಟ ಮಹಾಬಲ ಕಾರಂತ ಪ್ರಶಸ್ತಿಯೂ ದೊರಕಿರುತ್ತದೆ. +ಪರಿಶುದ್ಧ ರಾಗ ಪರಿಣತಿ, ಕೋಮಲ ಶಾರೀರ,ಸಶಕ್ತ ರಂಗತಂತ್ರ, ಹಾಗೂ ಸಮರ್ಪಕ ಪೌರಾಣಿಕ ಜ್ಞಾನದೊಂದಿಗೆ ಗುರುತಿಸಿಕೊಂಡ ಬಡಗಿನ ಯುವಭಾಗವತ ಸೂರಾಲು ರವಿಕುಮಾರ್‌. +ಉಡುಪಿ ತಾಲೂಕಿನ ಇತಿಹಾಸ ಪ್ರಸಿದ್ಧ ಸುರಾಲು ಎಂಬಲ್ಲಿ ಗುಂಡು ದೇವಾಡಿಗ - ಕಮಲಾ ದಂಪತಿಯ ಸುಪುತ್ರರಾಗಿ 1972ರಲ್ಲಿ ಜನಿಸಿದ ರವಿಕುಮಾರ್‌ 8ನೇ ತರಗತಿ ಪೂರೈಸಿ, ತನ್ನ 14ನೇ ವಯಸ್ಸಿನಲ್ಲಿ ಯಕ್ಷ ಬದುಕಿಗೆ ಅಂಟಿಕೊಂಡರು. +ಎಳವೇಯಲ್ಲಿ ಯಕ್ಷಗಾನ ಕಲಾಸಕ್ತಿ ಮೈಗೂಡಿಸಿಕೊಂಡಿದ್ದ ಇವರಿಗೆ ತಾಯಿ ಹಾಗೂ ಮಾವನ ಪ್ರೋತ್ಸಾಹ ನೆರವು ನೀಡಿತು. +ಪೇತ್ರಿ ಕೃಷ್ಣರಾಯ ಪ್ರಭು ಅವರಲ್ಲಿ ಆರಂಭಿಕ ಯಕ್ಷ ಶಿಕ್ಷಣಪಡೆದ ರವಿಕುಮಾರ್‌, ಕೆ.ಪಿ.ಹೆಗಡೆ ಅವರಲ್ಲಿ ವ್ಯವಸ್ಥಿತ ಭಾಗವತಿಕೆ ಶಿಕ್ಷಣ ಪಡೆದರು. +ಅಮೃತೇಶ್ವರಿ, ಸಾಲಿಗ್ರಾಮ, ಕುಮಟಾ,ಮಂದಾರ್ತಿ, ಮಾರಣಕಟ್ಟೆ, ಬಗ್ಡಾಡಿ, ಕಮಲಶಿಲೆ,ಸೌಕೂರು ಮೇಳಗಳಲ್ಲಿ ಕಲಾಸೇವೆಗೈದ ರವಿಕುಮಾರರು ಸಾರ್ಥಕ ರಂಗಜೀವನದಲ್ಲಿ ರಜತವರ್ಷಗಳನ್ನು ಕಳೆದಿದ್ದಾರೆ. +ಪ್ರಸ್ತುತ ಶ್ರೀಯುತರು ಸೌಕೂರು ಮೇಳದ ಪ್ರಧಾನ ಭಾಗವತರಾಗಿ ದುಡಿಯುತ್ತಿದ್ದಾರೆ. +ವಾದ್ಯ ಸಂಗೀತದ ಕಲಾವಿದರು ಇವರಾದುದರಿಂದ ಯಕ್ಷಗಾಯನದ ರಾಗ ನಿರೂಪಣೆಯಲ್ಲಿ ಪರಿಶುದ್ಧತೆ ಪ್ರಕಟಿಸುವ ರವಿಕುಮಾರರ ಸುಸ್ವರದಿಂಪಿಗೆ ಯಕ್ಷ ಕಲಾ ರಸಿಕರು ಮನಸ್ವೀ ಮಣಿಯುತ್ತಾರೆ. +ಇವರ ಧರ್ಮ ಪತ್ನಿ ಸುಶೀಲಾ. +ಶಶಾಂಕ ಹಾಗೂ ಶರಣ್ಯ ಇವರ ಉಭಯ ಮಕ್ಕಳು. +ಯಕ್ಷಗಾನ ನೃತ್ಯ ಕಲೆಯನ್ನು ಬಲ್ಲಭಾಗವತರಿವರು. +ಶ್ರೀಯುತರನ್ನು ಅನೇಕ ಸಂಘ-ಸಂಸ್ಥೆಗಳು ಗುರುತಿಸಿ ಗೌರವಿಸಿವೆ. +ಶ್ರವಣಮಂಜುಳಕರ, ರಂಗಸ್ಥಳ ಝೇಂಕಾರದ ನುಡಿತ-ಭಣಿತಗಳ ಚಂಡೆವಾದನದಲ್ಲಿ ಸಿದ್ಧಿ-ಪ್ರಸಿದ್ಧಿಯನ್ನು ಕಂಡ ಯುವ ಚಂಡೆಗಾರ ಹಳ್ಳಾಡಿ ರಾಕೇಶ ಮಲ್ಯ. +ಉಡುಪಿ ಜಿಲ್ಲೆಯ ಹಳ್ಳಾಡಿ ಎಂಬ ಪುಟ್ಟಹಳ್ಳಿಯಲ್ಲಿ ಹುಟ್ಟಿ ಬೆಳೆದ ರಾಕೇಶ ಮಲ್ಯರು, ಹಳ್ಳಾಡಿ ಸುಬ್ರಾಯ ಮಲ್ಯ, ಶೋಭಾ ಮಲ್ಯ ದಂಪತಿಯ ಸುಪುತ್ರರಾಗಿ 18-02-1970ರಲ್ಲಿ ಜನಿಸಿದರು. +ಎಸ್‌.ಎಸ್‌.ಎಲ್‌.ಸಿ. ಪ್ರೌಢಶಿಕ್ಷಣದ ಬಳಿಕ ಯಕ್ಷಗಾನ ರಂಗಕ್ಕೆ ಪಾದಾರ್ಪಣೆ ಮಾಡಿದ ರಾಕೇಶಮಲ್ಯರಿಗೆ ಚಂಡೆ ವಾದನ ಕಲೆ ರಕ್ತಗತವಾಗಿ ಪ್ರಾಪ್ತಿಯಾಯಿತು. +ಇವರ ತಂದೆ ಹಳ್ಳಾಡಿ ಸುಬ್ರಾಯ ಮಲ್ಯರು ಹವ್ಯಾಸೀ ಸಂಘ ಸಂಸ್ಥೆಗಳ ಶ್ರೇಷ್ಠ ಯಕ್ಷಗಾನ ಗುರುಗಳಾದುದರಿಂದ ರಾಕೇಶರಿಗೆ ವಾದನಕಲೆ, ಯಕ್ಷಗಾನ ಬಾಂಧವ್ಯ, ಅಭಿಜಾತವಾಗಿಒಲಿಯಿತು. +16ರ ಹರೆಯದಲ್ಲೇ ಕಲಾಪ್ರಪಂಚ ಪ್ರವೇಶಿಸಿದ ರಾಕೇಶರು ಶಾಲಾದಿನಗಳಲ್ಲೇ ಚಂಡೆವಾದನ ಕಲೆಯನ್ನು ಸಿದ್ಧಿಸಿಕೊಂಡವರು. +ಇವರಿಗೆ ತಂದೆಯವರೇ ಗುರುಗಳು. +ಪದ್ಯ ಸಾಹಿತ್ಯ ಭ್ರಷ್ಠವಾಗದಂತೆ ನುಣುಪು ನವಿರಾದ ನುಡಿಸಾಣಿಕೆಯನ್ನು ಕರಗತ ಮಾಡಿಕೊಂಡ ರಾಕೇಶ ಮಲ್ಯರು ಒಳ್ಳೆಯ ಅನುಭವ ಪೂರ್ಣಕಲಾವಿದ. +ಪ್ರತೀ ಪ್ರಸಂಗಗಳ ನಡೆಯೂ ಅವರಿಗೆ ಲೀಲಾಜಾಲ. +ಪದ್ಯಗಾರಿಕೆಯೂ ಅವರಿಗೆ ತಿಳಿದಿರುವುದರಿಂದ ಚಂಡೆಯ ನುಡಿಗಾರಿಕೆಯೂ ಸುಸಂಬದ್ಧ, ಸಾಂಗ, ಸುಶ್ರಾವ್ಯ. +ಮಾರಿಕಾಂಬಾ-ಶಿರಸಿ 7, ಮಂದಾರ್ತಿ 3,ಸೌಕೂರು 10, ಪೆರ್ಡೂರು 4, ಮೇಳಗಳಲ್ಲಿ ಸುಮಾರು24 ವರ್ಷ ಕಲಾಕೃಷಿ ನಡೆಸಿದ ಶ್ರೀಯುತರು ಹಲವು ಚಂಡೆಗಾರ ಶಿಷ್ಯರನ್ನು ರೂಪಿಸಿದ್ದಾರೆ. +ಪತ್ನಿ ರಶ್ಮಿ ಮಲ್ಯ. +ಸುರಕ್ಷಾ, ಶ್ರೀನಿಧಿ ಮಕ್ಕಳು. +ರಾಕೇಶ ಮಲ್ಯರು ಪ್ರಸ್ತುತ ಪೆರ್ಡೂರು ಮೇಳದ ಪ್ರಧಾನ ಚಂಡೆಗಾರರು. +ಶ್ರೀಯುತರನ್ನು ಹಲವು ಸಂಘ-ಸಂಸ್ಥೆಗಳು ಗುರುತಿಸಿ ಸಂಮಾನಿಸಿವೆ. +ರಾಜ್ಯ, ಹೊರರಾಜ್ಯಗಳ ಹಲವಾರು ಸಾಂಸ್ಕೃತಿಕ ಸಂಘಟನೆಗಳಿಂದಲೂ ರಾಕೇಶ ಮಲ್ಯರು ಸಂಮಾನಿತರಾಗಿದ್ದಾರೆ. +ತುಂಬುಗೊರಳಿನ ಭಾವನಿರ್ಬರ, ರಸಮಧುರ,ಶ್ರವಣಮಂಜುಳ ಯಕ್ಷಗಾಯನದಲ್ಲಿ ಬಡಗುತಿಟ್ಟಿನ ಯಕ್ಷಲೋಕದಲ್ಲಿ ಜನಪ್ರಿಯರಾದ ಭಾಗವತ ಜಿ.ರಾಘವೇಂದ್ರಮಯ್ಯ ಕುಂದಾಪುರ ತಾಲೂಕಿನ ಹಾಲಾಡಿ ಎಂಬಲ್ಲಿ15-10-1968ರಲ್ಲಿ ನಾಗಪ್ಪ ಮಯ್ಯ - ಸರಸ್ವತಿ ಮಯ್ಯ ದಂಪತಿಯ ಸುಪುತ್ರರಾಗಿ ಜನಿಸಿದ ರಾಘವೇಂದ್ರಮಯ್ಯ ಅವರು 10ನೇ ತರಗತಿಯವರೆಗೆ ಶಿಕ್ಷಣಾಭ್ಯಾಸ ಪೂರೈಸಿ, ತನ್ನ 16ರ ಹರಯದಲ್ಲೇ ಯಕ್ಷಬದುಕಿಗೆ ಓಂಕಾರ ಹಾಡಿದವರು. +ಗಾನಗಾರುಡಿಗೆ ಕಾಳಿಂಗ ನಾವಡರ ಭಾಗವತಿಕೆಯೇ ರಾಘವೇಂದ್ರ ಮಯ್ಯ ಅವರಿಗೆ ಯಕ್ಷಗಾನ ಕಲಾ ಆಕರ್ಷಣೆಗೆ ಇಂಬು ನೀಡಿತು. +ಪ್ರೇರಣೆ-ಸ್ಫೂರ್ತಿ ಆಯಿತು. +ಪ್ರಾಚಾರ್ಯ ನಾರ್ಣಪ್ಪ ಉಪ್ಪೂರರಲ್ಲಿ ತಾಳದೀಕ್ಷೆ ಪಡೆದ ಮಯ್ಯ ಅವರಿಗೆ ಕೆ.ಪಿ.ಹೆಗಡೆಯವರ ಗುರುಬಲವೂ ದೊರಕಿ ಸಶಕ್ತ ಭಾಗವತಿಕೆಗೆ ಸಹಕಾರಿಯಾಯಿತು. +ಮಧುರ ಕಂಠದ ಮಯ್ಯ ಅವರ ಯಕ್ಷಗಾಯನದಲ್ಲಿ ಕಲಾಬದುಕಿನ ಸ್ಫೂರ್ತಿಯ ಚಿಲುಮೆ ಕಾಳಿಂಗ ನಾವಡರ ಕಂಠ ಸಿರಿಯ ಭಾವಪೂರ್ಣ ಇಳಿತ-ಮಿಳಿತವಾಗುವುದನ್ನು ಗಮನಿಸಬಹುದಾಗಿದೆ. +ರಂಗ ತುಂಬುವ, ನಟನ,ಕಲಾಭಿವ್ಯಕ್ತಿಗೆ ಆನುಕೂಲ್ಯವಾಗುವ ಅವರ ಭಾಗವತಿಕೆ ಎಂಥವರನ್ನು ಸೆರೆ ಹಿಡಿಯಬಲ್ಲುದು. +ಸ್ಫುಟವಾದ,ಪರಿಶುದ್ಧವಾದ ರಾಗಜ್ಞಾನ, ಖಚಿತ ತಾಳ-ಲಯಗಾರಿಕೆ, ಸಮೃದ್ಧ ಪ್ರಸಂಗಾನುಭವ, ಎಲ್ಲಕ್ಕೂ ಮಿಗಿಲಾಗಿ ಅವರು ಸಾಧಿಸಿದ ರಂಗತಾಂತ್ರಿಕತೆ ರಂಗಸ್ಥಳದಲ್ಲಿ ಎದ್ದು ಕಾಣುತ್ತದೆ. +ಪುರಾಣ ಪ್ರಸಂಗಗಳ ಆಳ ಅನುಭವವನ್ನು ಹೊಂದಿದ, ಸಮಕಾಲೀನ ರಂಗಭೂಮಿಯ ನವೀನ ಪ್ರಸಂಗಗಳಿಗೆ ಅನಿವಾರ್ಯವೆನಿಸುವ ಭಾಗವತ ಮಯ್ಯ ಅವರು ಅತ್ಯಲ್ಪ ಕಾಲದಲ್ಲೇ ತಾರಾಮೌಲ್ಯ ಸಿದ್ಧಿಸಿಕೊಂಡವರು. +ದೂರದರ್ಶನ, ಆಕಾಶವಾಣಿಯ ಕಲಾವಿದರೂ ಆಗಿರುವ ಮಯ್ಯ ಚಲನಚಿತ್ರನಟನಾಗಿಯೂ ಅನೇಕ ಸಿನೇಮಾಗಳಲ್ಲಿ ಪಾತ್ರನಿರ್ವಹಿಸಿದ್ದಾರೆ. +ಯಕ್ಷಗಾನ, 'ಹಾಸ್ಯಯಣ'ಆಡಿಯೋ ವೀಡಿಯೋಗಳ ಮೂಲಕ ಜನಪ್ರಿಯತೆಯ ತುತ್ತತುದಿಗೇರಿದ ಮಯ್ಯ ಕುಂದಗನ್ನಡ ಸೊಗಸನ್ನು ತನ್ನ ಭಾಗವತಿಕೆಯ "ಹಾಸ್ಯಯಣ' ಪ್ರಸಂಗಗಳಲ್ಲಿ ಗೊತ್ತು ಗೊಳಿಸಿ ಗೆಲುವು ಕಂಡವರು. +ಅಮೃತೇಶ್ವರಿ, ಹಾಲಾಡಿ ಪೆರ್ಡೂರು,ಸೌಕೂರು, ಸಾಲಿಗ್ರಾಮ, ಮೇಳಗಳಲ್ಲಿ ಸೇವೆ ಸಲ್ಲಿಸಿದ ಮಯ್ಯ ಅವರ ಕಲಾಬದುಕು 26 ವರ್ಷ ಕಂಡಿದೆ. +ಪತ್ನಿ ಪಲ್ಲವಿ, ಪುತ್ರ ದೀಷಣ್‌ಕುಮಾರ್‌ರನ್ನೊಳಗೊಂಡ ಪುಟ್ಟ ಸಂಸಾರ ಅವರದು. +ಅಪಾರ ಅಭಿಮಾನಿ ಬಳಗವನ್ನು ಹೊಂದಿದ ರಾಘವೇಂದ್ರ ಮಯ್ಯ ಅವರು ರಾಜ್ಯ,ಹೊರರಾಜ್ಯಗಳಲ್ಲಿ ಸಮ್ಮಾನಿತರಾಗಿದ್ದಾರೆ. +ಹೆಂಗಳೆಯರನ್ನೂ ನಾಚಿಸಬಲ್ಲ ಆಕರ್ಷಕ ಮೈಮಾಟ, ಬಾಗು-ಬಳುಕು. +ಮಧುರ ಕಂಠಸಿರಿಯಿಂದ ಮನಮೋಹಕ ಸ್ತ್ರೀವೇಷಧಾರಿಯಾಗಿ ಸಾರ್ಥಕ ಹೆಸರು ಗಳಿಸಿದ ಪ್ರತಿಭಾವಂತ ಕಲಾವಿದ ಹೊಸಂಗಡಿ ರಾಜೀವ ಶೆಟ್ಟಿ. +ಕುಂದಾಪುರ ತಾಲೂಕಿನ ಹಳ್ಳಿ ಹೊಳೆ-ವಾಟೆಬಚ್ಚಲು ಎಂಬ ಗ್ರಾಮೀಣ ಪ್ರದೇಶದಲ್ಲಿ 19-5-1961ರಲ್ಲಿ ಕರಿಯಣ್ಣ ಶೆಟ್ಟಿ-ಶೇಷಮ್ಮ ಶೆಡ್ತಿ ದಂಪತಿಯ ಪುತ್ರನಾಗಿ ಜನಿಸಿದ ರಾಜೀವ ಶೆಟ್ಟರು ಐದನೇ ತರಗತಿಗೆ ಶರಣು ಹೊಡೆದು ತನ್ನ 15ರ ಹರೆಯದಲ್ಲೇ ಬಣ್ಣದ ಬದುಕು ಕಂಡರು. +ಪರಿಸರದ ಯಕ್ಷಗಾನ ಬಯಲಾಟಗಳೇ ಇವರಿಗೆ ಕಲಾ ಆಕರ್ಷಣೆಗೆ ಇಂಬು ನೀಡಿದವು. +ನಾರ್ಣಪ್ಪಉಪ್ಪೂರ, ಕೋಟ ವೈಕುಂಠ ಅವರ ಶಿಷ್ಯನಾದ ರಾಜೀವ ಶೆಟ್ಟರು ಪ್ರಸ್ತುತ ಐವತ್ತು ದಾಟಿದರೂ ಸ್ರ್ತೀ ಸಹಜವಾದ ಎಂದಿನ ರೂಪಸಿರಿ, ಕಂಠಸಿರಿಯನ್ನು ಉಳಿಸಿಕೊಂಡಿರುವುದು ವಿಶೇಷವೆನಿಸುತ್ತದೆ. +ಕಮಲಶಿಲೆ 1, ಪೆರ್ಡೂರು 1 ಅಮೃತೇಶ್ವರಿ3, ಸೌಕೂರು 1, ಸಾಲಿಗ್ರಾಮ 7, ಬಚ್ಚಗಾರು,ಮಂದಾರ್ತಿ, ಮೇಳಗಳಲ್ಲಿ ಸುಮಾರು 35ವರುಷಗಳ ರಂಗವ್ಯವಸಾಯವನ್ನು ಯಶಸ್ವಿಯಾಗಿ ಪೂರೈಸಿದ್ದಾರೆ. +ಶ್ರೀಯುತರು ಮಂದಾರ್ತಿ ಮೇಳದ ಪ್ರಧಾನ ಸ್ತ್ರೀವೇಷಧಾರಿಯಾಗಿ ದುಡಿಯುತ್ತಿದ್ದಾರೆ. +ಶ್ರೀಯುತರ ನೃತ್ಯಾಭಿನಯದ ಲಾಲಿತ್ಯಪೂರ್ಣತೆ,ಮಾಧುರ್ಯ ಸ್ವರ ಭೇದಕ ಮಾತುಗಾರಿಕೆ ಸ್ತ್ರ ಸಹಜ ಕಲಾಭಿವ್ಯಕ್ತಿಗೆ ಪುಷ್ಠಿ ನೀಡುತ್ತದೆ. +ಎಲ್ಲಾ ಗುಣಧರ್ಮದ ಸ್ತ್ರೀ ಭೂಮಿಕೆಗಳನ್ನೂ ಇವರುನಿರ್ವಹಿಸುವವರಾದರೂ ಶೃಂಗಾರ, ಸೌಮ್ಯ, ಸ್ರ್ತೀ ವೇಷಗಳಲ್ಲಿ ಇವರು ಹೆಚ್ಚು ಗಮನೀಯವಾಗುತ್ತಾರೆ. +ಶ್ರೀಯುತರ ಪ್ರಭಾವತಿ, ಸುಗರ್ಭೆ, ಚಿತ್ರಾಂಗದೆ,ಕೈಕೇಯಿ, ಆಲೋಲಿಕೆ, ದ್ರೌಪದಿ, ರುಕ್ಮಿಣಿ,ಯೋಜನಗಂಧಿ, ಸುಭದ್ರೆ, ಶಕುಂತಲೆ ಮೊದಲಾದ ಪಾತ್ರಗಳು ಕಲಾಪ್ರೇಮಿಗಳ ಮನಸೂರೆಗೊಂಡಿವೆ. +ಕುಸುಮಾ ಆರ್ ಶೆಟ್ಟಿ, ಇವರ ಸಹ ಧರ್ಮಿಣಿಯಾಗಿದ್ದಾರೆ. +ಹರೀಶ್‌, ಗಣೇಶ್‌,ಅನುಸೂಯಾ ಇವರ ಮೂವರು ಮಕ್ಕಳು. +ಶ್ರೀಯುತರನ್ನು ಹಲವು ಸಂಘಸಂಸ್ಥೆಗಳು ಸಂಮಾನಿಸಿವೆ. +ಪೌರಾಣಿಕ ಕಲಾ ವಿಗ್ರಹಗಳನ್ನು ಸಾಂಪ್ರದಾಯಿಕ ಸೊಗಡಿನಲ್ಲಿ ಸಚೇತನ-ಗೊಳಿಸಿದ ಶ್ರೀಮಂತ ಯಕ್ಷಪ್ರತಿಭೆ ರಾಧಾಕೃಷ್ಣ ನಾಯ್ಕ ಚೇರ್ಕಾಡಿ. +ಉಡುಪಿ ಜಿಲ್ಲೆಯ ಜೇರ್ಕಾಡಿ-ಬಾಳ್ಕಟ್ಟು ಎಂಬಲ್ಲಿ 2-5-1951ರಲ್ಲಿ ಜನಿಸಿದ ರಾಧಾಕೃಷ್ಣ ನಾಯ್ಕರು ಗೋವಿಂದ ನಾಯ್ಕ-ರಾಧಾ ದಂಪತಿಯ ಸುಪುತ್ರ. +ನಾಕಕ್ಕೇ ಓದು ಸಾಕೆನಿಸಿಕೊಂಡ ನಾಯ್ಕರು 17ನೇ ವಯಸ್ಸಿನಲ್ಲಿ ಗೆಜ್ಜೆ ಕಟ್ಟಿ ಹೆಜ್ಜೆ ಹಾಕಿದವರು. +ಎಳವೆಯಲ್ಲೇ ರಾಧಾಕೃಷ್ಣ ನಾಯ್ಕರಿಗೆ ಅನ್ಯಾದೃಶ ಕಲಾಸಕ್ತಿ. +ತಂದೆಯವರೇ ಶ್ರೀಯುತರ ರಂಗಬದುಕಿಗೆ ಪ್ರೇರಣಾಶಕ್ತಿ. +ನೀಲಾವರ ರಾಮಕೃಷ್ಣಯ್ಯ ಹಿರಿಯಡಕ ಗೋಪಾಲ ರಾವ್‌, ಹಾರಾಡಿ ಕೃಷ್ಟಗಾಣಿಗ, ಹಾಗೂ ಪೇತ್ರಿ ಮಾಧು ನಾಯ್ಕ ಅವರ ಗುರುಬಲವನ್ನು ಸಂಪಾದಿಸಿದ ರಾಧಾಕೃಷ್ಣ ನಾಯ್ಕರು ಸನಾತನ ಯಕ್ಷರಂಗದ ನಿಜಸತ್ವವನ್ನು ಗಂಭೀರವಾಗಿ ಹೀರಿಕೊಂಡು ಬೆಳೆದವರು. +ಮಂದಾರ್ತಿ 14, ಅಮೃತೇಶ್ವರಿ 3, ಸಾಲಿಗ್ರಾಮ1, ಪೆರ್ಡೂರು 1, ಹಿರಿಯಡಕ 1, ಹೀಗೆ ಯಕ್ಷಗಾನ ಬವ್ಯವಸಾಯದಲ್ಲಿ ಸಾರ್ಥಕ ವಿಂಶತಿ ವರ್ಷವನ್ನು ಪೂರೈಸಿದ್ದಾರೆ. +ವೇಷ, ಬಾಷೆ, ನೃತ್ಯ, ಅಭಿನಯ,ಪ್ರಸಂಗಮಾಹಿತಿ ಹಾಗೂ ರಂಗವ್ಯವಹಾರದಲ್ಲಿ ಗರಿಷ್ಠ ಮಟ್ಟವನ್ನು ಕಾಯ್ದುಕೊಂಡ ಶ್ರೀಯುತರು ಪುರುಷವೇಷ, ಮೂರನೇವೇಷ ಹಾಗೂ ಸ್ತ್ರೀವೇಷ ನಿರ್ವಹಣೆಯಲ್ಲಿ ಕಲಾಪ್ರತಿಭೆ ಮೆರೆದವರು. +ಶ್ರೀಕೃಷ್ಣ, ಮೈಂದ, ಲವ, ಲೋಹಿತನೇತ್ರ,ವಾಸಂತಿ, ಕರಾಳನೇತ್ರೆ, ರತ್ನಾವತಿ, ನಾರದ,ಭ್ರಮರಕುಂತಳೆ, ಬಬ್ರುವಾಹನ, ಮೋಹಿನಿ, ಅಯ್ಯಪ್ಪ,ಹೀಗೆ ಎಲ್ಲಾ ವಿಧದ ವೇಷಗಳನ್ನೂ ನಿರ್ವಹಿಸಿ ಕಲಾರಸಿಕರ ಪ್ರಶಂಸೆಗೆ ಪಾತ್ರರಾಗಿದ್ದಾರೆ. +ಮಡದಿ ಯಶೋದಾ. +ಉಮಾಶ್ರೀ, ಸುಮಾಶ್ರೀ ಮಕ್ಕಳು. +ಪ್ರಸ್ತುತ ಮೇಳ ಜೀವನದಿಂದ ನಿವೃತ್ತರಾಗಿದ್ದು ಯಕ್ಷಗಾನ ಪ್ರಸಾಧನ ರಂಗಕರ್ಮಿಯಾಗಿ ಕಲಾಕಾಯಕ ನಡೆಸುತ್ತಾರೆ. +ಶ್ರೀಯುತರನ್ನು ಹಲವಾರು ಸಂಘ ಸಂಸ್ಥೆಗಳು ಸಂಮಾನಿಸಿವೆ. +ಪರಂಪರೆಯ ಪರಿಶುದ್ಧ ಹಾಸ್ಯಗಾರಿಕೆಗೆ “ಕುಂಜಾಲು' ಅನ್ನುವ ಪದ ಪರ್ಯಾಯ ನಾಮವೇ ಆಗಿ ಹೋಗಿದೆ. +ಕಾಲಮಹಿಮೆಯ ಒತ್ತಡದಲ್ಲಿ ಸುಸಂಸ್ಕೃತ ಯಕ್ಷವೈನೋದಿಕತೆ ಸ್ವರೂಪ ಕಳೆದುಕೊಳ್ಳುವ ಮಧ್ಯೆ ಕುಂಜಾಲು ರಾಮಕೃಷ್ಣ ಹಾಸ್ಯಗಾರರು, ಸಾಂಪ್ರದಾಯಿಕ ಸೀಮೆ ತುಳಿದು,ಬಡಗಿನ ಹಾಸ್ಯ ಚಕ್ರವರ್ತಿಯಾಗಿ ಕಂಗೊಳಿಸಿದರು. +ಉಡುಪಿ ಜಿಲ್ಲೆಯ ಕುಂಜಾಲು ಎಂಬಲ್ಲಿ ಪದ್ಮನಾಭ ನಾಯಕ್‌-ಶಾರದಾ ಬಾಯಿ ದಂಪತಿಯ ಸುಪುತ್ರನಾಗಿ ಜನಿಸಿದ ರಾಮಕೃಷ್ಣರು ಇದೀಗ 65ರ ಹರೆಯದಲ್ಲಿರುವ ವಿಶ್ರಾಂತ ಕಲಾವಿದರು. +ಕಡುಬಡತನದ ಕುಟುಂಬದಲ್ಲಿ ಹುಟ್ಟಿ ಬೆಳೆದ ಕುಂಜಾಲು ಅವರಿಗೆ ಬಾಲ್ಯದಿಂದಲೂ ಯಕ್ಷಗಾನ ಕಲಾಸಕ್ತಿ ಏಳನೇ ಇಯತ್ತೆಗೆ ಶರಣುಹೊಡೆದು ತನ್ನ 15ರ ಹರೆಯದಲ್ಲಿ ಯಕ್ಷಗಾನ ಲೋಕ ಪ್ರವೇಶಿಸಿದ ಇವರಿಗೆ ಗೋರ್ಪಾಡಿ ವಿಠಲ ಪಾಟೀಲರ ಪ್ರೇರಣೆ-ಮಾರ್ಗದರ್ಶನ ದೊರಕಿತು. +ಗುರುವೀರಭದ್ರನಾಯಕ್‌, ಹಾಸ್ಯಗಾರ ಹಾಲಾಡಿ ಕೊರಗಪ್ಪದಾಸ್‌ ಅವರ ಗುರುತನವನ್ನು ಪಡೆದ ರಾಮಕೃಷ್ಣ ನಾಯಕ್‌ ಅವರು ಕೊಲ್ಲೂರು,ಮಂದಾರ್ಶಿ, ಮಾರಣಕಟ್ಟೆ, ಅಮೃತೇಶ್ವರಿ,ಸಾಲಿಗ್ರಾಮ, ಇಡಗುಂಜಿ ಮೇಳಗಳಲ್ಲಿ ಸಾರ್ಥಕ 36ವರ್ಷಗಳ ಕಾಲ ಕಲಾಯಾತ್ರೆಯಲ್ಲಿ ಅಪಾರಕೀರ್ತಿಗೆ ಭಾಜನರಾಗಿದ್ದಾರೆ. +ಕುಂಜಾಲು ಅವರ ದೇಹಾಕೃತಿಯೇ ಹಾಸ್ಯಭೂಮಿಕೆಗೆ ಹೇಳಿಸಿದಂತಿದೆ. +ನೃತ್ಯ, ಅಭಿನಯ, ವೇಷ,ಭಾಷೆ, ಅಂಗಚಲನೆ, ರಂಗ ದುಡಿಮೆಂಯಲ್ಲಿ,ಗರಿಷ್ಠಮಟ್ಟದ ಸಾಧ್ಯತೆಯನ್ನು ತೋರಿದ ಹಾಸ್ಯಕಲಾವಿದರಿವರು. +ಪಾತ್ರಗಳ ಆಳಕ್ಕೆ ಇಳಿದು ಅದನ್ನೊಂದು ಸಾಮಾಜಿಕ ಸಂವಹನದ ನೆಲೆಯಾಗಿ,ತನ್ನ ವ್ಯಂಗ್ಯೋಕ್ತಿ, ಚಾಟೂಕ್ತಿಗಳಿಂದ ಭಾವಪೂರ್ಣವಾಗಿ ಕಡೆದು ನಿಲ್ಲಿಸುವುದು ಕುಂಜಾಲು ಅವರ ಅನನ್ಯ ರಂಗಧಾಟಿಯಾಗಿ ಗಮನ ಸೆಳೆಯುತ್ತದೆ. +ಹಾಸ್ಯ ಕಲೆಯ ಕುರಿತು ಸ್ವಯಂಕಲ್ಪನೆ, ಸತತ ಚಿಂತನೆ ನಡೆಸಿ ತನ್ನದೇ ವಿಶಿಷ್ಟ ಶೈಲೀಕೃತ ಮೆರುಗಿನಲ್ಲಿ ಪೌರಾಣಿಕ ಹಾಸ್ಯಭೂಮಿಕೆಗಳಿಗೆ ರಾಜ ಹಾಸ್ಯದ ಪೋಷಾಕು ತೊಡಿಸಿದ ಕುಂಜಾಲು ಅವರ ಹಾಸ್ಯಗಾರಿಕೆಗೆ ಸುಸಂಸ್ಕೃತ ಧರ್ಮವಿದೆ. + ವೈಚಾರಿಕ ಮರ್ಮವಿದೆ. + "ಕಾಶೀಮಾಣಿ' ಪಾತ್ರ ಇಂದಿಗೂ,ಮುಂದೆಂದಿಗೂ ಅವರ ಹೆಸರನ್ನು ನೆನಪಿಸುತ್ತಾ,ಹೋಗುತ್ತದೆ. +ಹಾಗೆಯೇ ಬಾಹುಕ, ಬೇಹುಚಾರಕ,ಗುರುಮಠದ ದಡ್ಡ, ವಿಡೂರಥ, ಭೀಷ್ಮವಿಜಯದ ಬ್ರಾಹ್ಮಣ, ಕಪ್ಪದೂತ, ವಿಜಯ ಮೊದಲಾದ ಪಾತ್ರಗಳಿಗೆ ಕುಂಜಾಲು ಒತ್ತಿದ ಕಲಾಮುದ್ರೆ ಅಜರಾಮರ. +ಪತ್ನಿ ಜಲಜಾ, ಪ್ರಕಾಶ, ಶಶಿಕಲಾ, ಇವರ ಉಭಯ ಮಕ್ಕಳು. +ಶ್ರೀಯುತರಿಗೆ ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಪ್ರಶಸ್ತಿ,ಉಡುಪಿಯ ಯಕ್ಷಗಾನ ಕಲಾರಂಗದ ಡಾ| ಜಿ.ಬಿ.ಶೆಟ್ಟಿ ಪ್ರಶಸ್ತಿ, ಪಳ್ಳಿ ಸೋಮನಾಥ ಹೆಗ್ಡೆ ಪ್ರಶಸ್ತಿ,ಯಕ್ಷದೇಗುಲ ಪ್ರಶಸ್ತಿ ಸೇರಿದಂತೆ ಹಲವಾರು ಸಂಮಾನ, ಪುರಸ್ಕಾರಗಳು ದೊರಕಿವೆ. +ಗಾಯನದ ಭಾವಪೋಷಕ, ರಸಪ್ರೇರಕ,ಸಾಹಿತ್ಯಪೂರಕ, ಚಂಡೆ ವಾದನದಲ್ಲಿ ಪ್ರಸಿದ್ಧಿಯ ಹೆಸರು ರಾಮಕೃಷ್ಣ ಮಂದಾರ್ತಿ. +ಬಡಗುತಿಟ್ಟಿನ ಚಂಡೆಗಾರಿಕೆಯ ತಾರಾಮೌಲ್ಯಪೂರ್ಣ ಕಲಾವಿದರಾದ ರಾಮಕೃಷ್ಣ ಅವರು ಪದ್ಮನಾಭ ಕಾಮತ್‌-ರಾಧಾ ಬಾಯಿ ದಂಪತಿಯ ಸುಪುತ್ರರಾಗಿ 14-07-1960ರಲ್ಲಿ ಮಂದಾರ್ತಿಯಲ್ಲಿ ಹುಟ್ಟಿದರು. +ಇವರ ತಂದೆಯವರಿಗೆ ಬಾಗವತಿಕೆ,ಮದ್ದಳೆಗಾರಿಕೆ ತಿಳಿದಿತ್ತು. +ಆ ಕಾರಣದಿಂದಲೇ ಮಗನಿಗೆ ಇಂತಹ ಕಲಾವಿದ್ಯ ರಕ್ತಗತ ಬಳುವಳಿಯಾಯಿತು. +7ನೇ ತರಗತಿಯವರೆಗೆ ವಿದ್ಯಾಭ್ಯಾಸ ಮಾಡಿದ ರಾಮಕೃಷ್ಣರು ತನ್ನ 12ನೇ ವಯಸ್ಸಿನಲ್ಲೇ ಯಕ್ಷಲೋಕವನ್ನು ಪ್ರವೇಶಿಸಿದರು. + ಶ್ರೀಎಂ.ಎಂ.ಹೆಗ್ಡೆಯವರು ಇವರಿಗೆ ವೃತ್ತಿರಂಗದಲ್ಲಿ ಪ್ರೇರಣಾಶಕ್ತಿಯಾಗಿ ಪ್ರೋತ್ಸಾಹ ನೀಡಿದರು. +ಮಂದಾರ್ತಿ ಮೇಳದಲ್ಲಿ ಕೋಡಂಗಿ,ನಿತ್ಯವೇಷದಲ್ಲಿ ತಿರುಗಾಟ ಆರಂಭಿಸಿದ ರಾಮಕೃಷ್ಣ ಅವರು ಮಾರಣಕಟ್ಟೆ ಮೇಳದಲ್ಲಿ ಚಂಡೆಗಾರರಾಗಿ ಗುರುತಿಸಿಕೊಂಡರು. +ಪ್ರಖ್ಯಾತ ಚಂಡೆಗಾರ ಕೆಮ್ಮಣ್ಣು ಆನಂದ ಅವರಲ್ಲಿ ಚಂಡೆವಾದನ ಶಿಕ್ಷಣವನ್ನು ಪಡೆದ ಇವರಿಗೆ ಕೊಗ್ಗ ಆಚಾರ್ಯರು ವಾದನ ಕಲೆಯ ಅನುಭವವನ್ನು ಬೋಧಿಸಿದರು. +ಸುರಗಿಕಟ್ಟೆ ಬಸವಗಾಣಿಗರೇ ಇವರಿಗೆ ತಾಳ ದೀಕ್ಷೆಯನ್ನು ನೀಡಿದ ಗುರುಗಳು. +ಮಂದಾರ್ತಿ 2, ಮಾರಣಕಟ್ಟೆ 7, ಮತ್ತೆ ಮಂದಾರ್ತಿ 1 ,ಸಾಲಿಗ್ರಾಮ 10, ಮಂದಾರ್ತಿ 5,ಹೀಗೆ ಇವರ ಕಲಾವ್ಯವಸಾಯ. +ವೃತ್ತಿರಂಗ ಭೂಮಿಯಲ್ಲಿ ರಜತವರ್ಷ ಪೂರೈಸಿ ಪ್ರಸ್ತುತ ಮಂದಾರ್ತಿ ಶ್ರೀ ದುರ್ಗಾಪರಮೇಶ್ಟರಿ ದೇವಸ್ಥಾನದ ಸನಿಹವಿರುವ ತನ್ನ ಮನೆಯಲ್ಲಿ ಹಣ್ಣುಕಾಯಿ ಅಂಗಡಿ ವ್ಯವಹಾರ ನಡೆಸುತ್ತಿದ್ದಾರೆ. +ಅನೇಕ ಆಟ-ಕೂಟಗಳಲ್ಲಿ ಭಾಗವಹಿಸುವ ಶ್ರೀಯುತರು ಚಂಡೆಗಾರಿಕೆಯಲ್ಲಿ ಈಗಲೂ ಪ್ರವೃತ್ತರು. +ಮದ್ದಳೆವಾದನದ ಪರಿಣತಿಯೂ ಇರುವ ರಾಮಕೃಷ್ಣರು ಕಾಳಿಂಗ ನಾವಡರ ಮಧುರಕಂಠದ ಯಕ್ಷಗೀತ ಗಾಯನಕ್ಕೆ ಚಂಡೆ ನುಡಿಸಿ ಮನೆಮಾತಾದ ಜನಪ್ರಿಯ ಕಲಾವಿದರು. +ಕೋಟ ಶಿವಾನಂದ, ಹಳ್ಳಾಡಿ ರಾಕೇಶ ಮಲ್ಯ, ಹಳ್ಳಾಡಿ ಜನಾರ್ದನ ಆಚಾರ್‌ ರಂತಹ ಪ್ರಸಿದ್ಧ ಚಂಡೆವಾದಕರ ಗುರುವಾಗಿಯೂ ಗುರುತಿಸಿಕೊಂಡವರು. +ಅಪಾರ ರಂಗತಂತ್ರ, ಪ್ರಸಂಗನಡೆಯಲ್ಲಿ ಗರಿಷ್ಠಮಟ್ಟದ ಅನುಭವವನ್ನು ಹೊಂದಿದ ಇವರು ಚಂಡೆಗಾರಿಕೆಗೆ ಪ್ರತ್ಯೇಕ ಕೇಳುಗ-ಪ್ರೇಕ್ಷಕರನ್ನು ಸೃಷ್ಟಿಸಿದ ಪ್ರತಿಭಾನ್ವಿತ ಚಂಡೆಗಾರರು. +ಬಾಳ ಸಂಗಾತಿ ಸುಮಾ. +ರೂಪಕಲಾ, ರಾಧಿಕಾ,ರಾಜೇಶ್‌ ಎಂಬ ಮೂರು ಮಂದಿ ಮಕ್ಕಳು. +ರಾಮಕೃಷ್ಣ ಮಂದಾರ್ತಿಯವರು ಬೆಂಗಳೂರು ಕನ್ನಡ ಸಾಹಿತ್ಯ ಪರಿಷತ್‌ ಸಂಮಾನ, ಯಕ್ಷಗಾನ ಕಲಾಕ್ಷೇತ್ರ ಗುಂಡಿಬೈಲು ಸಂಸ್ಥೆಯ ನಿಟ್ಟೂರು ಭೋಜಪ್ಪ ಸುವರ್ಣ ಪ್ರಶಸ್ತಿ, ದಿ.ಕಾಳಿಂಗ ನಾವಡ ಸ್ಮಾರಕ ಪ್ರಶಸ್ತಿಯನ್ನು ಪಡೆದ ಶ್ರೇಷ್ಠ ಕಲಾವಿದರು. +ಪುರಾಣಲೋಕದ ರಮಣೀಯ ದೃಶ್ಯಕಾವ್ಯವನ್ನು ವಿದ್ವತ್‌ ಪೂರ್ಣ ಮಾತಿನ ಮಂಟಪದಲ್ಲಿ ದರ್ಶಿಸುವ ವಜೋಸಂಪದ್ಭರಿತ ಹಿರಿಯ ಕಲಾವಿದ ಹೆಮ್ಮಾಡಿ ರಾಮ ಚಂದನ್‌. +ಕುಂದಾಪುರ ತಾಲೂಕಿನ ಹೆಮ್ಮಾಡಿ ಎಂಬ ಊರಿನಲ್ಲಿ 20-6-1950ರಲ್ಲಿ ಜನಿಸಿದ ರಾಮಚಂದನ್‌, ಮಂಜಪೂಜಾರಿ ಹಾಗೂ ಚಿಕ್ಕಮ್ಮ ದಂಪತಿಯ ಸುಪುತ್ರ. +ಹತ್ತನೇ ತರಗತಿಯವರೆಗೆ ಓದಿ,ಹತ್ತೊಂಬತ್ತನೇ ವಯಸ್ಸಿನಲ್ಲಿ ಬಣ್ಣದ ಬದುಕು ಕಂಡ ಇವರಿಗೆ ಕೀರ್ತಿಶೇಷ ರಾಮ ಗಾಣಿಗರ ಅದ್ಭುತ ಕಲಾವಂತಿಕೆಯಲ್ಲಿ ರಂಗದಲ್ಲಿ ಸಾಕಾರಗೊಳ್ಳುತ್ತಿದ್ದ ಪೌರಾಣಿಕ ವೇಷಗಳೇ ಕಲಾಜೀವನದ ಪ್ರೇರಣಾಶಕ್ತಿಯಾಗಿ ಯಕ್ಷಪಥ ತೋರಿದವು. +ಹಿರಿಯ ಕಲಾವಿದ ಐರೋಡಿ ಗೋವಿಂದಪ್ಪನವರ ತುಂಬು ಪ್ರೋತ್ಸಾಹವೂ ಕಲೆಯಲ್ಲಿ ನೆಲೆಯಾಗುವುದಕ್ಕೆ ಸ್ಫೂರ್ತಿಯ ಸೆಲೆಯಾಯಿತು. +ಹೆರಂಜಾಲು ವೆಂಕಟರಮಣ ಗಾಣಿಗ ಹಾಗೂ ಹೆಮ್ಮಾಡಿ ನಡುಬೆಟ್ಟು ಕೃಷ್ಣನವರ ಗುರುತನದ ಹಿರಿಮೆಯಲ್ಲಿ ಸಮೃದ್ಧ ಯಕ್ಷ ಕಲಾವಿದರಾಗಿ ರೂಪು-ಗೊಂಡ ರಾಮ ಚಂದನ್‌ ಬಡಗಿನತಿಟ್ಟು-ಮಟ್ಟುಗಳ ಸಾಂಪ್ರದಾಯಿಕ ಹುಟ್ಬ್ಟು-ಗುಟ್ಟುಗಳನ್ನು ಸಮರ್ಪಕವಾಗಿ ಗಟ್ಟಿಗೊಳಿಸಿಕೊಂಡರು. +ಕಳವಾಡಿ 1. ಗೋಳಿಗರಡಿ 14, ಅಮೃತೇಶ್ವರಿ 1, ಹಾಲಾಡಿ 1, ಕಮಲಶಿಲೆ 1, ಬಗ್ದಾಡಿ 1, ಹೀಗೆ 19ವರ್ಷಗಳನ್ನು ಯಶಸ್ವಿ ತಿರುಗಾಟದಲ್ಲಿ ಪೂರೈಸಿದ ಹೆಮ್ಮಾಡಿ ರಾಮ ಅವರು ಉತ್ತಮ ಅರ್ಥಧಾರಿಯಾಗಿಯೂ ಪ್ರಸಿದ್ಧರು. +ಶ್ರೀಯುತರು ನಿರ್ವಹಿಸುವ ಕರ್ಣ, ಅರ್ಜುನ,ಭೀಷ್ಮ, ಪರಶುರಾಮ, ಪೆರುಮಾಳ ಬಲ್ಲಾಳ, ಯಮ,ಶ್ರೀರಾಮ, ವಿಕ್ರಮಾದಿತ್ಯ, ಖತುಪರ್ಣ, ಪಾತ್ರಗಳು ಅವರದೇ ವಿಶಿಷ್ಟ ಶೈಲಿಯಲ್ಲಿ ನಿರೂಪಿತವಾಗಿ ಜನಮೆಚ್ಚುವ ಯಕ್ಷರಂಗಸ್ಥಳದ ಜೀವಂತ ಕಲಾವಿಗ್ರಹಗಳು. +ಪ್ರಧಾನ ವೇಷಧಾರಿಯಾಗಿ ಅಚ್ಚುಕಟ್ಟಾದ ವೇಷಾಲಂಕಾರದಲ್ಲಿ ಕಾಣಿಸಿಕೊಳ್ಳುವ ಹೆಮ್ಮಾಡಿ ರಾಮ ಕುಣಿತ ವಿಭಾಗವನ್ನು ದ್ವಿತೀಯವಾಗಿಟ್ಟು, ಭಾವಪೂರ್ಣ ಅಭಿನಯ,ವಚೋವಿಲಾಸದಿಂದ ಅದ್ವಿತೀಯ ರಂಗವೈಭವ ಕಾಣಿಸುವವರು. +ಯಕ್ಷಗಾನ ವೇಷಭೂಷಣ ತಯಾರಿ,ಯಕ್ಷಗಾನ ಗೊಂಬೆಗಳ ರಚನೆ, ಗೊಂಬೆಯಾಟಗಳಿಗೆ ಕಂಠದಾನ ನೀಡುವ ಪ್ರವೃತ್ತಿ ಶ್ರೀಯುತರ ಉಪವೃತ್ತಿಯಾಗಿದೆ. +ಮಡದಿ ಸಾಕು. +ವರದ, ವನಜ, ವಸಂತಿ,ವಸಂತ ಮಕ್ಕಳು. +ಶ್ರೀಯುತರು ಹಲವು ಸಂಘ-ಸಂಸ್ಥೆಗಳ ಗೌರವ ಸಂಮಾನ ಪಡೆದಿರುತ್ತಾರೆ. +ಉಡುಪಿ ತಾಲೂಕಿನ ಶಿರಿಯಾರ, ಗ್ರಾಮದ ಜಂಬೂರು ಎಂಬ ಪುಟ್ಟ ಹಳ್ಳಿಯ ರಾಮಚಂದ್ರ ಶಾನುಭಾಗರು ಯಕ್ಷಗಾನ ಬಡಗುತಿಟ್ಟು ಕಂಡ ಪ್ರೌಢಪ್ರತಿಭೆಯ, ಸಾಂಪ್ರದಾಯಿಕ ಶಿಷ್ಟ ಕಲಾವಿದ. +ರಾಮಚಂದ್ರ ಶಾನುಭಾಗರ ತಂದೆ ಶ್ರೀನಿವಾಸ ಶಾನುಭಾಗ, ತಾಯಿ ಲಕ್ಷಿ ಯಮ್ಮ ಎಂಟನೇಯ ತರಗತಿಯ ನಂತರ ಯಕ್ಷಗಾನ ಬಣ್ಣದ ಬದುಕಿಗೆ ಅಂಟಿಕೊಂಡ ಶಾನುಭಾಗರು ಪರಂಪರೆಯ ಪ್ರತಿನಿಧಿಯಂತೆ ಕಾಣುವ ಶ್ರೇಷ್ಠ ಕಲಾವಿದರು. +16ನೇ ವಯಸ್ಸಿಗೆ ಯಕ್ಷಲೋಕ ಪ್ರವೇಶಿಸಿದ ಶಾನುಭೋಗರು ಕೇಳಿ-ತಿಳಿ, ನೋಡಿ-ಕಲಿ ಎಂಬುದನ್ನೇ ವೃತ್ತಿ ಬದುಕಿಗೆ ಪಾಠವಾಗಿಸಿಕೊಂಡು ರಂಗಸ್ಥಳವನ್ನೇ ರಂಗಶಾಲಯಾಗಿಸಿಕೊಂಡು ಕಲಾವಿದ್ಯೆಯನ್ನು ಸಂಪಾದಿಸಿದ ಕಲಾವಿದರು. +ಜಂಬೂರು ರಾಮಚಂಂದ್ರ ಶಾನುಭಾಗರು ಯಕ್ಷಗಾನ ಪುರಾಣಲೋಕದ ಪೋಷಕಃಪಾತ್ರಗಳನ್ನು ಸಮರ್ಥವಾಗಿ ನಿರ್ವಹಿಸಿ ಗೆಲುವು ಕಂಡವರು. +ಇವರ ಅಪಾರ ಅನುಭವ ಪೂರ್ಣತೆ, ರಂಗನೆಲದಲ್ಲಿನ ಗರಿಷ್ಠಮಟ್ಟದ ಕಲಾಭಿವ್ಯಕ್ತತೆ, ಪಾತ್ರನಿಷ್ಟವಾದ ನೃತ್ಯ ಅಭಿನಯಶೀಲತೆ ಮೇಲಾಗಿ ಸಾಹಿತ್ಯ ಶುದ್ಧತೆಯ ವಚೋವೈವಿಧ್ಯತೆ ಕಲಾಭಿಮಾನಿಗಳ ಮನ ಗೆದ್ದಿದೆ. +ಧರ್ಮರಾಯ, ದೇವೇಂದ್ರ, ಶ್ರೀರಾಮ, ವಸಿಷ್ಠ,ಅರ್ಜುನ, ಬಬ್ರುವಾಹನ, ಶ್ರೀಕೃಷ್ಣ, ಪಾತ್ರಗಳಲ್ಲಿ ತನ್ನದೇ ವಿಶಿಷ್ಟವಾದ ಛಾಪು ಮೂಡಿಸಿದ ಜಂಬೂರು ಶಾನುಭಾಗರು, ಅನುಭವದ ಖಜಾನೆಯಾಗಿ ಗುರುತಿಸಲ್ಪಟ್ಟವರು. +ಮಂದಾರ್ತಿ 20, ಮಾರಣಕಟ್ಟೆ 3, ಅಮೃತೇಶ್ವರಿ 2, ಇಡಗುಂಜಿ 12, ಪೆರ್ಡೂರು 2, ಹಾಲಾಡಿ 2,ಬಗ್ದಾಡಿ 2, ಕಮಲಶಿಲೆ 3, ಗುಂಡಬಾಳ 4,ಮೇಳಗಳಲ್ಲಿ ಸುಮಾರು 55 ವರ್ಷಗಳ ಕಾಲ ದೀರ್ಫಕಾಲೀನ ರಂಗವ್ಯವಸಾಯ ನಡೆಸಿ, ಪ್ರಸ್ತುತ ವಿಶ್ರಾಂತ ಜೀವನದಲ್ಲಿದ್ದಾರೆ. +ಶ್ರೀಯುತರಿಗೆ ಈಗ 71ರ ಹರೆಯ. +ಪತ್ನಿ ಶಾರದ. +ಶ್ರೀನಿವಾಸ, ಶ್ರೀಕೃಷ್ಣ, ಸರಸ್ಪತಿ ಮೂವರು ಮಕ್ಕಳು. +ಶ್ರೀಯುತರನ್ನು ಉಡುಪಿ ಯಕ್ಷಗಾನ ಕಲಾರಂಗ,ಯಕ್ಷದೇಗುಲ, ಬೆಂಗಳೂರು, ಹಾಗೂ ಹಲವಾರು ಸಂಘ ಸಂಸ್ಥೆಗಳು ಸಂಮ್ಮಾನಿಸಿವೆ. +ಬಡಗುತಿಟ್ಟಿನ ಪರಿಮಾಣಯುಕ್ತ ನೃತ್ಯಾಭಿನಯ ಸತ್ವ ಸಮನ್ವಿತ, ಪರಿಪುಷ್ಪ ಸಾಹಿತ್ಯಿಕ ವಿಚಾಚೋದಿತ. +ಸರ್ವಾಂಗ ಸುಂದರ ಶ್ರೇಷ್ಠ ಯಕ್ಷನಟ ಕೊಂಡದ ಕುಳಿ ರಾಮಚಂದ್ರ ಹೆಗಡೆ. +ಉತ್ತರ ಕನ್ನಡದ ಹೊನ್ನಾವರ ತಾಲೂಕಿನ ಕೊಂಡದಕುಳಿ ಎಂಬಲ್ಲಿ 26-6-1961ರಲ್ಲಿ ಗಣೇಶ ಹೆಗಡೆ-ಸಮಲಾ ಹೆಗಡೆ ದಂಪತಿಯ ಸುಪುತ್ರನಾಗಿ ಜನಿಸಿದ ಹೆಗಡೆಯವರು ಎಸ್‌.ಎಸ್‌.ಎಲ್‌.ಸಿ ತನಕ ವ್ಯಾಸಂಗ ಮಾಡಿ ತನ್ನ 16ನೇ ವಯಸ್ಸಿನಲ್ಲಿ ಗುಂಡಬಾಳ ಮೇಳಕ್ಕೆ ಪಾದಾರ್ಪಣೆ ಮಾಡುವ ಮೂಲಕ ಯಕ್ಷಪ್ರಪಂಚಕ್ಕೆ ದಾಖಲಾದರು. +ಮೇರು ಕಲಾವಿದರಾದ ಕೊಂಡದ ಕುಳಿ ರಾಮಹೆಗಡೆ-ಲಕ್ಷ್ಮಣ ಹೆಗಡೆ ಅವರು ರಾಮಚಂದ ಹೆಗಡೆಯವರ ಅಜ್ಜಂದಿರು. +ತಂದೆ ಗಣೇಶ ಹೆಗಡೆ ಮಹಾನ್‌ ಯಕ್ಷಕಲಾಭಿಮಾನಿ. +ಹೀಗೆ ಕಲಾವಂತರ ಮನೆತನದಿಂದ ಬಂದ ಕೊಂಡದಕುಳಿ ಅವರಿಗೆ ಯಕ್ಷಕಲೆ ರಕ್ತಗತ ಬಳುವಳಿ. +ಗುಂಡಬಾಳ ಮೇಳ, ಸಾಲಿಗ್ರಾಮ ಮೇಳ, ಶಿರಸಿ ಪಂಚಲಿಂಗ ಮೇಳಗಳಲ್ಲಿ ಸಾರ್ಥಕ ಸೇವೆ ಸಲ್ಲಿಸಿದ ಕೊಂಡದಕುಳಿ ಪ್ರಸ್ತುತ ತಾವೇ ಸ್ಥಾಪಿಸಿದ “ಕುಂಭಾಶಿ ಪೂರ್ಣಚಂದ್ರ ಮೇಳ'ದಲ್ಲಿ ಕಲಾವಿದರಾಗಿ ದುಡಿಯುತ್ತಿದ್ದಾರೆ. +ಒಟ್ಟು ಅವರ ರಂಗ ವ್ಯವಸಾಯ 34 ವರ್ಷ. +ತಾನು ನಿರ್ವಹಿಸುವ ಪ್ರತೀ ಪಾತ್ರಗಳ ಅಂತರಂಗದ ಕಲಾಗೋಳದೊಳಗೆ ಚಕ್ರದೃಷ್ಟಿ ಹರಿಸಿ,ಪಾತ್ರದ ಮೂಲ ಸೊಗಡನ್ನು ಎತ್ತಿ ಹಿಡಿದು ತನ್ನ ಸೃಜನಾತ್ಮಕ ಕಲಾ ವೈಖರಿಯಲ್ಲಿ ಪ್ರಸ್ತುತ ಪಡಿಸುವ ಕೊಂಡದಕುಳಿ ಅವರು ಪೌರಾಣಿಕ ಅಖ್ಯಾನಕ್ಕೂ ಒಪ್ಪುವ, ನವೀನ ಕಥಾನಕಗಳಿಗೂ ಒಗ್ಗುವ ಕಲಾವಿದರು. +ಶ್ರೀಯುತರ ಶ್ರೀ ರಾಮ, ಕೃಷ್ಣ, ರಾವಣ,ಹರಿಶ್ಚಂದ್ರ, ಈಶ್ವರ, ಸುಧನ್ವ ಅರ್ಜುನ, ದಶರಥ,ಹನೂಮಂತ, ವಾಲಿ, ಕಾರ್ತವೀರ್ಯ, ದುಷ್ಟಬುದ್ಧಿ,ಬೀಷ್ಮ, ಮಾಗಧ, ಮೊದಲಾದ ಪಾತ್ರಗಳು ಪರಕಾಯ ಪ್ರವೇಶದ ಪ್ರೌಢ ಕಳೆಯಲ್ಲಿ ಕಲಾರಸಿಕರ ಹೃದಯದಲ್ಲಿ ಚಿರಸ್ಥಾಯಿಯಾಗುಳಿದಿವೆ. +ನಾಯಕ,ಖಳನಾಯಕ, ಪ್ರತಿನಾಯಕ, ಪಾತ್ರಗಳ ಸರದಾರರಾದ ಕೊಂಡದಕುಳಿ ಪಾತ್ರಗಳಿಗೆ ಜೀವ-ಭಾವ ನೀಡುವ ಅಪ್ರತಿಮ ಕಲಾವಿದರು. +ಪತ್ನಿ ಪೂರ್ಣಿಮಾ. +ಅಶ್ವಿನಿ, ಅಕ್ಷತಾ ಎಂಬ ಈರ್ವರು ಮಕ್ಕಳು. +ಶ್ರೀ ಪೇಜಾವರ ಶ್ರೀಪಾದರ ಶ್ರೀರಾಮವಿಠಲ ಪ್ರಶಸ್ತಿ ಸೇರಿದಂತೆ ಕೊಂಡದ ಕುಳಿ ಅವರ ಮಹಾನ್‌ ಪ್ರತಿಭೆಗೆ ಹಲವು ಪುರಸ್ಕಾರಗಳು ಸಂದಿವೆ. +ಬಡಗುತಿಟ್ಟು ಯಕ್ಷಗಾನ ಕಲಾರಂಗದಲ್ಲಿಅದ್ಭುತ ಪ್ರತಿಭಾ ಪಾರಮ್ಯದಲ್ಲಿ ಸಾರ್ವಭೌಮತ್ವ ಸಾಧಿಸಿದ ಮೇರು ಕಲಾವಿದ ಚಿಟ್ಟಾಣಿ ರಾಮಚಂದ್ರ ಹೆಗಡೆ. +ಆರು ದಶಕಗಳ ಸುದೀರ್ಥ ರಂಗಸೇವೆಯಲ್ಲಿ ಸಾಧನೆಯ ಶಿಖರವೇರಿದ ಚಿಟ್ಟಾಣಿಯವರು 76ರ ಇಳಿವಯಸ್ಸಿನಲ್ಲೂ ಗೆಜ್ಜೆಕಟ್ಟಿ ರಂಗಮಂಚವೇರಿದರೆ ಇಪ್ಪತ್ತರ ತರುಣರನ್ನೂ ನಾಚಿಸಿ ಬಿಡುತ್ತಾರೆ. +ಉತ್ತರ ಕನ್ನಡದ ಹೊನ್ನಾವರ-ಹೊಸಾಕುಳಿಯ ಚಿಟ್ಟಾಣಿಯೇ ಅವರ ಹುಟ್ಟೂರು. +ಸುಬ್ರಾಯ ಹೆಗಡೆ-ಗಣಪಿ ಹೆಗಡೆ ದಂಪತಿಗಳ ಸುಪುತ್ರರಾಗಿ 20-3-1934ರಲ್ಲಿ ಜನಿಸಿದರು. +ಚಿಟ್ಟಾಣಿಯವರು ಓದಿದ್ದು ಕೇವಲ ಎರಡನೇ ತರಗತಿ. +ಬಾಳೆಗದ್ದೆ ರಾಮಕೃಷ್ಣಭಟ್‌ ಇವರ ಆರಂಭಿಕ ಗುರುಗಳು. +ಕೊಂಡದಕುಳಿ ರಾಮ ಹೆಗಡೆ-ಲಕ್ಷ್ಮಣ ಹೆಗಡೆ ಅವರಿಂದ ಇವರ ಕಲಾಸಕ್ತಿ ಕುದುರಿತು. +ಮೂಡ್ಮಣಿ ನಾರಾಯಣ ಹೆಗಡೆ ಹಾಗೂ ಕೆರೆಮನೆ ಶಿವರಾಮ ಹೆಗಡೆಯವರ ಕಲಾವರ್ಚಸ್ಸು ಇವರ ಮೇಲೆ ವಿಶೇಷ ಪ್ರಭಾವ ಬೀರಿತು. +ತನ್ನ 14ರ ಹರಯದಲ್ಲಿ "ಶ್ರೀ ಕೃಷ್ಣ ಪಾರಿಜಾತ'ದಅಗ್ನಿ ಪಾತ್ರದಲ್ಲಿ ರಂಗವೇರಿದ ಚಿಟ್ಟಾಣಿ ಮತ್ತೆ ಹಿಂತಿರುಗಿ ನೋಡಲಿಲ್ಲ. +ಯಕ್ಷಲೋಕದಲ್ಲಿ "ಅಗ್ನಿ'ಯಂತೆಯೇ ಬೆಳಗಿದರು. +ಗುಂಡಬಾಳ,ಅಮೃತೇಶ್ವರಿ, ಸಾಲಿಗ್ರಾಮ, ಪಂಚಲಿಂಗ-ಶಿರಸಿ,ಕೊಳಗಿಬೀಸ್‌, ಮೂರೂರು, ಶಿರಸಿ-ಮಾರಿಕಾಂಬಾ,ಬಚ್ಚಗಾರು, ಪೆರ್ಡೂರು ಮೇಳಗಳಲ್ಲಿ ಅರವತ್ತು ವರ್ಷಗಳ ಅವರ ಕಲಾವ್ಯವಸಾಯ ಸಾರ್ಥಕವಾಗಿದೆ. +ಯಕ್ಷಗಾನ ವೇಷಕ್ಕೆ ಹೇಳಿ ಮಾಡಿಸಿದಂತಹ ಮೈಕಟ್ಟು, ವಿಶಾಲ ಹಣೆ, ಹೊಳಪಿನ ಕಣ್ಣುಗಳು ಅವರಿಗೆ ದೈವದತ್ತವಾಗಿದೆ. +ಚಿಟ್ಟಾಣಿಯವರದು ಯಕ್ಷಗಾನ ನೃತ್ಯವೈಖರಿಗೆ ಹೊಸ ಆಯಾಮ ನೀಡಿ,ತನ್ನದೇ “ಶೈಲಿ' ಹುಟ್ಟು ಹಾಕಿದ ಸಂಪನ್ನ ಪ್ರತಿಭೆ. +ಅವರ ಲಯ ಪ್ರಜ್ಞೆ, ರಂಗನಿಲುವು, ಆಂಗಿಕವಿನ್ಯಾಸ,ಮಾತಿನ ಶೈಲಿ ಪಾತ್ರ ಚಿತ್ರಣ ಎಲ್ಲವೂ ವಿಭಿನ್ನ,ಅಸಾಧಾರಣ. +ಶ್ರೀಯುತರ ಪಾತ್ರ ತಾದಾತ್ಮ್ಯ ಅನನ್ಯ. +ರಂಗಕರ್ಮದಲ್ಲೆಲ್ಲೂ ರಾಜಿ ಮಾಡಿಕೊಳ್ಳದ ನಿಷ್ಕಪಟ ಕಲಾವಿದ. +ಚಿಟ್ಟಾಣಿ ನಿರ್ವಹಿಸಿದ ಭಸ್ಮಾಸುರ, ಕೀಚಕ,ಮಾಗಧ, ಕಂಸ, ಕೌರವ, ದುಷ್ಟಬುದ್ಧಿ, ರುದ್ರಕೋಪ ಪಾತ್ರಗಳಿಗೆ ಎಂದೂ ಸಾವಿಲ್ಲ. +ಅವರಿಗೆ ಅವರೇ ಸಾಟಿ. +ಅಮೇರಿಕಾದಲ್ಲೂ ತನ್ನ ಅಪೂರ್ವ ಪ್ರತಿಭೆಯನ್ನ್ನು ಪ್ರಕಟಿಸಿ ರಸಿಕರ ಮನಸೂರೆಗೊಂಡಿದ್ದಾರೆ. +ಚಿಟ್ಟಾಣಿಯವರ ಧರ್ಮಪತ್ನಿ ಸುಶೀಲಾ. +“ಲಲಿತಾ, ಸುಬ್ರಹ್ಮಣ್ಯ, ನಾರಾಯಣ, ನರಸಿಂಹ',ಇವರ ನಾಲ್ವರು ಮಕ್ಕಳು. +ಇವರ ಸುಪುತ್ರರಾದ ಸುಬ್ರಹ್ಮಣ್ಯ ಚಿಟ್ಟಾಣಿ ಹಾಗೂ ನರಸಿಂಹ ಚಿಟ್ಟಾಣಿ ವೃತ್ತಿರಂಗದ ಭರವಸೆಯ ಕಲಾವಿದರಾಗಿ ಗುರುತಿಸಿಕೊಂಡಿದ್ದಾರೆ. +ಶ್ರೀಯುತರ ಮೇರು ಕಲಾಪ್ರತಿಭೆಗೆ ದೊರಕಿದ ಸಂಮಾನ ಗಣಿತಕ್ಕೆ ನಿಲುಕುವುದಿಲ್ಲ. +ಪ್ರತಿಷ್ಠಿತ ರಾಜ್ಯ ಪ್ರಶಸ್ತಿ, ಯಕ್ಷಗಾನ ಅಕಾಡೆಮಿ ಪ್ರಶಸ್ತಿ, ಜಾನಪದಶ್ರೀ ಪ್ರಶಸ್ತಿ ಸೇರಿದಂತೆ ಅನೇಕ ಗೌರವಕ್ಕೆ ಅವರು ಭಾಜನರಾಗಿದ್ದಾರೆ. +“ರಸರಾಜ' ಇವರಿಗೆ ಅರ್ಪಿಸಿದ ಅಭಿನಂದನ ಗ್ರಂಥ. +"ನಮ್ಮ ಚಿಟ್ಟಾಣಿ' ಆತ್ಮಕಥನ. +ಶ್ರೀಯುತರು ಪ್ರಸ್ತುತ ಶ್ರೀವೀರಾಂಜನೇಯ ಯಕ್ಷಮಿತ್ರ ಮಂಡಳಿಯ ಪ್ರಧಾನ ಕಲಾವಿದರಾಗಿ ಕಲಾಸೇವೆಗೈಯುತ್ತಿದ್ದಾರೆ. +ಮದ್ದಳೆ, ಚಂಡೆ, ಭಾಗವತಿಕೆಯೆಂಬ ಹಿಮ್ಮೇಳದ ಸರ್ವಾಂಗೀಣ ಕಲಾ ಪ್ರತಿಭೆಯಾಗಿ ಗುರುತಿಸಿಕೊಂಡ ಅನುಭವಿ ಕಲಾವಿದ ರಾಮದಾಸ್‌ ಮರವಂತೆ. +ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಮರವಂತೆಯ ಹಿರಿಯ ಭಾಗವತ ಶ್ರೀನಿವಾಸ ದಾಸ್‌-ಮಹಾಲಕ್ಷ್ಮೀ ದಾಸ್‌ ದಂಪತಿಯ ಸುಪುತ್ರರಾಗಿ 29-11-1967ರಲ್ಲಿ ಜನಿಸಿದ ರಾಮದಾಸ್‌ ಅವರು ಎಂಟನೇ ತರಗತಿಯವರೆಗಿನ ಅಕ್ಷರ ಶಿಕ್ಷಣದ ಬಳಿಕ ಆಂದರೆ ತನ್ನ ಹನ್ನೆರಡರ ಹರೆಯದಲ್ಲೇ ಯಕ್ಷಗಾನ ರಂಗ ಪ್ರವೇಶಿಸಿದರು. +ಇವರ ತಂದೆ ಹಾಗೂ ದೊಡ್ಡಪ್ಪ ನರಸಿಂಹ ದಾಸರು ಬಡಗುತಿಟ್ಟು ರಂಗಭೂಮಿ ಕಂಡ ಪರಂಪರೆಯ ಶ್ರೇಷ್ಠ ಭಾಗವತರಾಗಿದ್ದರು. +ಅಂತಹ ಕಲಾ ಕುಟುಂಬದ ಕುಡಿಯಾದ ಇವರಿಗೆ ಕಲೆಯೆಂಬುದು ಜನ್ಮಜಾತ ಬಳುವಳಿಯಾಯಿತು. +ಅಪ್ಪ ಹಾಗೂ ದೊಡ್ಡಪ್ಪನವರೇ ಇವರಿಗೆ ಯಕ್ಷಗುರುವರ್ಯರಾಗಿ ಸುಯೋಗ್ಯ ರಂಗಶಿಕ್ಷಣ ನೀಡಿದರು. +ಸೌಕೂರು 5, ಹಾಲಾಡಿ 2, ಕಳುವಾಡಿ 3,ಕಮಲಶಿಲೆ 5, ಮಾರಣಕಟ್ಟೆ 14, ಹೀಗೆ ಕಲಾಯಾತ್ರೆಯಲ್ಲಿ ಸಾರ್ಥಕ 29 ವರ್ಷಗಳನ್ನು ಕಳೆದವರು ರಾಮದಾಸರು. +ರಾಮದಾಸರ ಮದ್ದಳೆವಾದನ ಹಾಗೂ ಚಂಡೆವಾದನ ಶಾಸ್ತ್ರಚೌಕಟ್ಟಿನಲ್ಲಿಯೇ ಇರುವಂತದ್ದು. +ಅವರ ನವಿರಾದ ನುಡಿತ ಭಣಿತಗಳು ಗಾನ ಪೋಷಕವೂ ರಂಗಕಲಾವಿದರ ನೃತ್ಯ, ರಸಭಾವ ಪೂರಕವೂ ಆಗಿದೆ. +ಖಚಿತ ಲಯಸಿದ್ಧಿ, ತೀವ್ರ ವಿಲಂಬಗತಿಯಲ್ಲಿಯ ಬೆರಳುಗಾರಿಕೆಯ ಕೌಶಲ ಅದ್ಭುತವಾದದ್ದು. +ಶ್ರೀಯುತರ ರಂಗಪ್ರಜ್ಞೆಯೂ ಅಸಾಧರಣ. +ಬಿಡುವಿನ ವೇಳೆಯಲ್ಲಿ ಚಂಡೆ-ಮದ್ಬಳೆ ತಯಾರಿಕೆಯ ಕಾಯಕದಲ್ಲಿ ಶ್ರೀರಾಮದಾಸ್ ತೋಡಗಿಕೊಳ್ಳುತ್ತಾರೆ. +ಆ ವಿಭಾಗದಲ್ಲಿ ಸದ್ಯ ಬಡಗುತಿಟ್ಟಿನಲ್ಲಿ ಅವರು ಜನಪ್ರಿಯ ಕಲಾಕರ್ಮಿ,ಮಡದಿ ಸುಗುಣ. +ದರ್ಶನ ಸಿಂಚನ ಮಕ್ಕಳು. +ಇವರ ಉನ್ನತ ಕಲಾವ್ಯಕ್ತಿತ್ತವನ್ನು ಗುರುತಿಸಿದ ನಾಡಿನ ಹಲವು ಸಂಘ-ಸಂಸ್ಥೆಗಳು ಗೌರವಿಸಿವೆ. +ಸ್ಫುಟವಾದ ಹೊರಳಿಕೆ, ನಯವಾದ ನುಡಿಸಾಣಿಕೆಯಲ್ಲಿ ಕಲಾವಿದನ ಭಾವಪೂರ್ಣ ಅಭಿವ್ಯಕ್ತಿಯನ್ನು ಅರ್ಥೈಸಿಕೊಂಡ ಚಂಡೆ ವಾದನ ಶೈಲಿಯಲ್ಲಿ ಗುರುತಿಸಲ್ಪಡುವ ಚಂಡೆಗಾರ ಕರ್ಕಿ ರಾಮಭಂಡಾರಿ. +ಉತ್ತರಕನ್ನಡದ ಕರ್ಕಿ ಎಂಬಲ್ಲಿ 6-7-1966ರಲ್ಲಿ ಸತ್ಯನಾರಾಯಣ ಭಂಡಾರಿ-ಪಾರ್ವತಿ ದಂಪತಿಯ ಸುಪುತ್ರನಾಗಿ ಜನಿಸಿದ ರಾಮಭಂಡಾರಿ ಅವರು 7ನೇಇಯತ್ತೆಯವರೆಗೆ ಅಕ್ಷರಾಭ್ಯಾಸ ನಡೆಸಿ ತನ್ನ 23ನೇ ವಯಸ್ಸಿನಲ್ಲಿ ಯಕ್ಷಲೋಕವನ್ನು ಪ್ರವೇಶಿಸಿದರು. +ಶ್ರೀಯುತರದ್ದು ಕಲಾವಂತ ಮನೆತನ. +ಇವರ ತಂದೆ, ಚಿಕ್ಕಪ್ಪ, ಅಣ್ಣ ತವ್ಮ್ಮು ಎಲ್ಲರೂ ಯಕ್ಷಗಾನ ರಂಗಭೂಮಿಯ ಹಿಮ್ಮೇಳದ ವಾದನ ಕಲಾವಿದರು + ಹಾಗಾಗಿ ಇಂತಹ ಬಲಿಷ್ಠ ಕಲಾಹಿನ್ನೆಲೆಯೊಂದಿಗೆ ಸ್ವಯಂ ಆಸಕ್ತಿಯನ್ನು ಮುಂದಿಟ್ಟು-ಕೊಂಡು ಯಕ್ಷಗಾನ ವಾದನ ಪ್ರಪಂಚವನ್ನು ಸೇರಿ ಗೆಲುವು ಕಂಡರು. +ತಂದೆ ಸತ್ಯನಾರಾಯಣ ಭಂಡಾರಿ ಹಾಗೂ ಚಿಕ್ಕಪ್ಪ ಕರ್ಕಿ ಪ್ರಭಾಕರ ಭಂಡಾರಿ ಅವರು ರಾಮಭಂಡಾರಿಯವರಿಗೆ ಗುರುಗಳಾಗಿ ಸುಯೋಗ್ಯ ಚಂಡೆ ಮದ್ದಳೆವಾದನ ಕಲೆಯನ್ನು ಬೋಧಿಸಿದರು. +ಗೋಳಿಗರಡಿ 1, ಬಚ್ಚಗಾರು 4, ಸೌಕೂರು 4, ಹಾಲಾಡಿ 2, ಮಾರಣಕಟ್ಟೆ 9, ಹೀಗೆ ಕಲಾಪ್ರಪಂಚದಲ್ಲಿ ಸಾರ್ಥಕ "ವಿಂಶತಿ' ವರ್ಷದ ಕಲಾಕೃಷಿ ಪೂರೈಸಿದ್ದಾರೆ. +ಪ್ರಸ್ತುತ ಮಾರಣಕಟ್ಟೆ ಮೇಳದ ಚಂಡೆವಾದಕರಾಗಿ ದುಡಿಯುತ್ತಿದ್ದಾರೆ. +ಉಪವೃತ್ತಿಯಾಗಿ ಮಣ್ಣಿನ ಗಣೇಶ ಮೂರ್ತಿ ರಚನೆ ಹಾಗೂ ಸಮಾರಂಭ-ಗಳಿಗೆ ಮಂಗಲವಾದ್ಯ ಕಲಾವಿದರಾಗಿ ಭಾಗವಹಿಸುತ್ತಿದ್ದಾರೆ. +ಮಡದಿ ಪಾರ್ವತಿ. +ರತನ್‌, ರಮ್ಯ ಮಕ್ಕಳು. +ಶ್ರೀಯುತರನ್ನು ಅನೇಕ ಸಂಘ ಸಂಸ್ಥೆಗಳು ಗುರುತಿಸಿ ಗೌರವಿಸಿವೆ. +ಪೌರಾಣಿಕ ರಂಗಾನುಬವದೊಂದಿಗೆ,ಸದಭಿರುಚಿಯ ಹಾಸ್ಯಗಾರಿಕೆಯಲ್ಲಿ ರಂಜಿಸುವ ಹಿರಿಯ ಹಾಸ್ಯನಟ ಹೊಸಂಗಡಿ ಲಕ್ಷ್ಮಣ ಭಂಡಾರಿ. +ಕುಂದಾಪುರ ತಾಲೂಕಿನ ಹೊಸಂಗಡಿಯ ಬಾಳೆಜಡ್ಡು ಎಂಬ ಪುಟ್ಟ ಹಳಿಯಲ್ಲಿ ಹುಟ್ಟಿ ಬೆಳೆದ ಲಕ್ಷ್ಮಣ ಭಂಡಾರಿಯವರು ಕೊರಗು ಭಂಡಾರಿ-ಕಲ್ಯಾಣಿ ಬಾಯಿ ದಂಪತಿಯ ಸುಪುತ್ರ. +ಶ್ರೀಯುತರ ಪ್ರಾಯ 46. +ಮೂರನೇ ತರಗತಿಯವರೆಗಿನ ಶೈಕ್ಷಣಿಕ ಬಲವನ್ನಷ್ಟೇ ಕಂಡ ಭಂಡಾರಿ ಅವರು ತನ್ನ 13ರ ಕಿರು ಹರೆಯದಲ್ಲೇ ಯಕ್ಷಗಾನ ಬಣ್ಣದ ಬದುಕು ಕಂಡವರು. +ಸುಪ್ರಸಿದ್ಧ ಹಾಸ್ಯಗಾರ ಕುಂಜಾಲು ರಾಮಕೃಷ್ಣ ಅವರು ಇವರಿಗೆ ಸಂಬಂಧದಲ್ಲಿ ಬಾವ. +ಹಾಗಾಗಿ ಕುಂಜಾಲು ಅವರ ಹಾಸ್ಯ ಅನುಭವವೂ ಭಂಡಾರಿಯವರಿಗೆ ದಕ್ಕಿದೆ. +ಕುಂಜಾಲು ಹಾಗೂ ಪದ್ಮನಾಭ ಭಂಡಾರಿ ಅವರು ಲಕ್ಷ್ಮಣ ಭಂಡಾರಿ ಅವರ ಕಲಾಬದುಕಿಗೆ ಪ್ರೇರಣೆಯಾದವರು. +ಹಾರಾಡಿ ಸರ್ವೋತ್ತಮ ಗಾಣಿಗ ಹಾಗೂ ಪದ್ಮನಾಭ ಭಂಡಾರಿ ಅವರಲ್ಲಿ ನೃತ್ಯ, ಅಭಿನಯ, ರಂಗಾನುಭವವನ್ನು ಪಡೆದ ಲಕ್ಷ್ಮಣ ಭಂಡಾರಿ ಅವರು ವೃತ್ತಿರಂಗ ಭೂಮಿಯಲ್ಲಿ ಹಾಸ್ಯಗಾರಿಕೆಯನ್ನು ಆಶ್ರಯಿಸಿ ಗೆಲವು ಕಂಡರು. +ಹಾಲಾಡಿ, ಸೌಕೂರು, ಕಮಲಶಿಲೆ,ಗೋಳಿಗರಡಿ, ಅಮೃತೇಶ್ವರಿ, ಕಳವಾಡಿ, ಶಿರಸಿ,ಹಿರಿಯಡಕ, ಮೇಳಗಳಲ್ಲಿ 29 ವರುಷಗಳ ಕಾಲ ಕಲಾಯಾತ್ರೆ ನಡೆಸಿದ ಭಂಡಾರಿ ಅವರು ಪ್ರಸ್ತುತ ಹಿರಿಯಡಕ ಮೇಳದ ಪ್ರಧಾನ ಹಾಸ್ಕ್ಯಕಲಾವಿದರಾಗಿ ದುಡಿಯುತ್ತಿದ್ದಾರೆ. +ಪೌರಾಣಿಕ ಪ್ರಸಂಗಗಳಲ್ಲಿ ಬರುವ ಪಾಪಣ್ಣ,ಬಾಹುಕ, ಚಂದಗೋಪ, ನಕ್ಷತ್ರಿಕ, ದಾರುಕ, ವಿಜಯ,ಕಾಳಿದಾಸ, ಮೊದಲಾದ ಭೂಮಿಕೆಗಳನ್ನು ಸಮರ್ಥವಾಗಿ ಪೋಷಿಸುವ ಅನುಭವಿ ಹಾಸ್ಯಗಾರ ಲಕ್ಷ್ಮಣ ಭಂಡಾರಿಯವರು. + ವೃತ್ತಿ ಬದುಕಿನ ಬಿಡುವಿನ ವೇಳೆಯಲ್ಲಿ ಯಕ್ಷಗಾನ ವೇಷಭೂಷಣ ತಯಾರಿಕೆಯಲ್ಲಿ ತೊಡಗಿಕೊಳ್ಳುತ್ತಾರೆ. +ಪತ್ನಿ ಸರೋಜ ಭಂಡಾರಿ. +ಸುಬ್ರಹ್ಮಣ್ಯ, ರಾಧಿಕಾ, ವಿಜಯಲಕ್ಷ್ಮೀ ಮಕ್ಕಳು. +ಶ್ರೀಯುತರನ್ನು ಕೋಟ ಅಮೃತೇಶ್ವರಿ ಯಕ್ಷಗಾನ ಮಂಡಳಿ ವತಿಯಿಂದ ಸಮ್ಮಾನಿಸಲಾಗಿದೆ. +ಬಡಗುತಿಟ್ಟಿನ “ಬಣ್ಣದ ವೇಷಕ್ಕೆ ಪರ್ಯಾಯ ಪದ ಸಕ್ಕಟ್ಟು ಲಕ್ಷೀ ನಾರಾಯಣಯ್ಯ. +ಪರಂಪರೆಯ ಬಲಿಷ್ಠ ಚೌಕಟ್ಟಿನಲ್ಲಿ ದೈತ್ಯ ಪ್ರತಿಭೆಯನ್ನು ಪ್ರದರ್ಶಿಸಿ ಅಪಾರ ಪ್ರೇಕ್ಷಕರ ಮನಸೂರೆಗೊಂಡು ಬಣ್ಣಭಯಂಕರನಾಗಿ ಮೆರೆದ ಹಿರಿಯ ಕಲಾವಿದ ಸಕ್ಕಟ್ಟು ಲಕ್ಷೀನಾರಾಯಣಯ್ಯ. +ಉಡುಪಿ ತಾಲೂಕಿನ ಶಿರಿಯಾರ ಗ್ರಾಮದ ಸಕ್ಕಟ್ಟು ಎಂಬಲ್ಲಿ 26-03-1925 ರಂದು ಸಕ್ಕಟ್ಟು ಸುಬ್ಬಣ್ಣಯ್ಯ-ರಾಜಮ್ಮ ದಂಪಶಿಯ ಸುಪುತ್ರರಾಗಿ ಜನಿಸಿದ ಲಕ್ಷೀ ನಾರಾಯಣಯ್ಯನವರಿಗೆ ಓದು ನಾಕಕ್ಕೇ ಸಾಕಾಯಿತು . + ತನ್ನ 13ನೇ ವಯಸ್ಸಿನಲ್ಲೇ ಬಣ್ಣದ ಬದುಕು ಕಂಡ ಸಕ್ಕಟ್ಟು ಅವರಿಗೆ ಸ್ವಯಂಪ್ರೇರಣೆಯೇ ಕಲಾ ಜೀವನಕ್ಕೆ ಕಾರಣವಾಯಿತು. +ಇವರ ತಂದೆ ವೇಷಧಾರಿಯಾಗಿದ್ದುದರಿಂದ ರಂಗಜೀವನಕ್ಕೆ ಅದೇ ರಕ್ತಗುಣವಾಯಿತು. +ಜಂಬೂರು ಶ್ರೀನಿವಾಸ ಬಾಗವತ, ಪಾಂಡೇಶ್ವರ ಸದಾಶಿವಯ್ಯನವರ ಗುರುತನದಲ್ಲಿ ಯಕ್ಷಗಾನ ಕಲಾವಿದ್ಯೆ ಸುಸಾಂಗವಾಗಿ ದೊರಕಿತು. +ಹೂವಿನಕೋಲು ಚಿಕ್ಕಮೇಳ ತಿರುಗಾಟವೂ ಪುರಾಣ ಅನುಭವವಕ್ಕೆ ಪೂರಕ-ಪ್ರೇರಕವಾಯಿತು. +ಮಂದಾರ್ತಿ ಮೇಳದಲ್ಲೇ ಸುದೀರ್ಥ 38ವರ್ಷಗಳ ಕಲಾಸೇವೆಗೈದ ಲಕ್ಷ್ಮೀನಾರಾಯಣಯ್ಯನವರು ಸಾಲಿಗ್ರಾಮ,ಪೆರ್ಡೂರು, ಸೌಕೂರು, ಅಮೃತೇಶ್ವರಿ, ಹೊನ್ನೇಸರ ಮೇಳ ಸೇರಿದಂತೆ ಇವರ ಒಟ್ಟು ಕಲಾ ವ್ಯವಸಾಯ 54 ವರ್ಷ. +ಖ್ಯಾತ ಕಲಾವಿದ ಕೊಳ್ಳೆಬೈಲು ಕುಷ್ಠ ಅವರಿಂದ ಮುಖವರ್ಣಿಕೆಯ ವಿಧಾನವನ್ನು ಕರಗತವಾಗಿಸಿಕೊಂಡ ಸಕ್ಕಟ್ಟು ಅವರು ವೇಷಕಟ್ಟಿ ರಂಗಕ್ಕೆ ಬಂದರೆ ಪ್ರತ್ಯಕ್ಷ "ರಾಕ್ಚಸ'ನೇ ಕಣ್ಣೆದುರು ನಿಂತಂತೆ! +ಇವರು ರಾವಣ, ಮೈರಾವಣ, ವೀರಭದ್ರ,ಫಟೋತ್ಕಚ, ಉಗ್ರನರಸಿಂಹ, ಹಿಡಿಂಬ,ಶೂರಪದ್ಮಾಸುರ ಮೊದಲಾದ ಗಂಡು ಬಣ್ಣದ ವೇಷಗಳನ್ನು ಮಾಡಿದ್ದಾರೆ. +ಶೂರ್ಪನಖಾ, ಹಿಡಿಂಬೆ, ವೃತ್ರಜ್ಜಾಲೆ,ಮೊದಲಾದ ಹೆಣ್ಣುಬಣ್ಣದ ವೇಷಗಳನ್ನೂ ನಿರ್ವಹಿಸಿ ರಸಿಕರನನ್ನು ಬೆರಗುಗೊಳಿಸಿದವರು. +ಬಣ್ಣದ ವೇಷಗಳಲ್ಲದೆ, ದಶರಥ, ಮಯೂರದ್ವಜ,ಹಂಸದ್ದಜ ಮೊದಲಾದ ರಾಜವೇಷಗಳನ್ನು ಧರಿಸಿ ರಂಗವಲ್ಲಿ ಮೆರೆದವರು. +ಪತ್ನಿ ಲಕ್ಷ್ಮೀ. +ಭಾಗೀರಥಿ, ಮಂಜುನಾಥಯ್ಯ,ಜಾನಕಿ, ಜಯರಾಮ, ರಮೇಶ, ಶಾರದಾ, ಶ್ಯಾಮಲ,ಶಕುಂತಲಾ, ರಾಘವೇಂದ್ರ ಎಂಬ 9 ಮಂದಿ ಮಕ್ಕಳನ್ನು ಪಡೆದು ತುಂಬು ಸಂಸಾರಸ್ಥರಾದ ಸಕ್ಕಟ್ಟುಲಕ್ಷ್ಮೀನಾರಾಯಣಯ್ಯ-ನವರ ಕಿರಿಯ ಪುತ್ರ ರಾಘವೇಂದ್ರ ಸಕ್ಕಟ್ಟು ಯುವ ಮದ್ದಳೆವಾದಕರಾಗಿ ಯಕ್ಷಗಾನ ರಂಗಭೂಮಿಯಲ್ಲಿ ಸೇವಾತತ್ಪರರಾಗಿದ್ದಾರೆ. +ಸಕ್ಕಟ್ಟು ಅವರನ್ನು ಅನೇಕಾನೇಕ ಪ್ರಶಸ್ತಿ ಗೌರವಗಳೂ ಅರಸಿ ಬಂದಿವೆ. +ಇವರನ್ನು ಅಂದಿನ ಪ್ರಧಾನಿ ಜವಾಹರ್‌ಲಾಲ್‌ ನೆಹರೂ ಹಾಗೂ ರಾಷ್ಟಪತಿ ರಾಜೇಂದ್ರ ಪ್ರಸಾದ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ. +ಶಿವರಾಮ ಕಾರಂತರ ಯಕ್ಷರಂಗ ತಂಡದ ಮೂಲಕ ದೇಶ-ವಿದೇಶಗಳಲ್ಲಿ ಕಲಾಪ್ರತಿಭೆಯನ್ನು ಮೆರೆದ ಲಕ್ಷ್ಮೀನಾರಾಯಣಯ್ಯನವರಿಗೆ 1986ರಲ್ಲಿ ಕರ್ನಾಟಕ ಜಾನಪದ ಯಕ್ಷಗಾನ ಅಕಾಡೆಮಿ ಪ್ರಶಸ್ತಿ ದೊರೆತಿದೆ. + 1993ರಲ್ಲಿ ಮುಂಬಯಿ ಪದವೀಧರ ಯಕ್ಷಗಾನ ಪ್ರಶಸ್ತಿ,ಶ್ರೀರಾಮ-ವಿಠಲಪ್ರಶಸ್ತಿ, ನಿಟ್ಟುರು ಭೋಜಪ್ಪ,ಸುವರ್ಣ ಪ್ರಶಸ್ತಿ ಸಿಕ್ಕಿದೆ. +ಉಡುಪಿ ಯಕ್ಷಗಾನ ಕಲಾರಂಗದ ಡಾ.ಬಿ.ಬಿ.ಶೆಟ್ಟಿ ಪ್ರಶಸ್ತಿ, ಹಾರಾಡಿ ರಾಮ ಗಾಣಿಗ ಪ್ರಶಸ್ತಿಯೂ ದೊರಕಿರುತ್ತದೆ. +ಪ್ರಸಂಗಗಳ ಸಮಗ್ರಭಾವ ಭಂಗವಾಗದಂತೆ,ಪಾತ್ರಗಳ ಗುಣಧರ್ಮವನ್ನು ಸಂಪೂರ್ಣ ಅರ್ಥೈಸಿಕೊಂಡು ಪದ್ಯಸಾಹಿತ್ಯದ ಕಟ್ಟು ಕೆಡದಂತೆ ಗಾನಪೂರಕವಾಗಿ ಚಂಡೆ ನುಡಿಸುವ ಅನುಭವಿ ಚಂಡೆವಾದಕ ಶ್ರೀ ಎಸ್‌.ವಿ.ಲಕ್ಷ್ಮೀನಾರಾಯಣ ಹೆಗಡೆ. +ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಸಂಪ ಎಂಬಲ್ಲಿ 25-5-1960ರಲ್ಲಿ ಜನಿಸಿದ ಲಕ್ಷ್ಮೀನಾರಾಯಣ ಹೆಗಡೆ ವಿಶ್ವೇಶ್ವರಯ್ಯ-ಲಕ್ಷ್ಮಮ್ಮ ದಂಪತಿಯ ಸುಪುತ್ರ. +7ನೇ ತರಗತಿಯ ವರೆಗಿನ ವಿದ್ಯಾಭ್ಯಾಸದ ತರುವಾಯ, 15ನೇ ವಯಸ್ಸಿನಲ್ಲಿ ಯಕ್ಷಗಾನ ಪ್ರಪಂಚ ಹೊಕ್ಕ ಲಕ್ಷ್ಮೀನಾರಾಯಣ ಹೆಗಡೆ ಸಮರ್ಥ ಚಂಡೆಗಾರರಾಗಿ ಖ್ಯಾತಿ ಪಡೆದವರು. +ಸಂಪ ಲಕ್ಷ್ಮೀ ನಾರಾಯಣ ಅವರ ಅಜ್ಜ ಭಾಗವತರು. + ಚಿಕ್ಕಪ್ಪ ವೇಷಧಾರಿಯಾಗಿದ್ದರು. +ಹಾಗಾಗಿ ಕಲಾಸಂಸ್ಕಾರವೆನ್ನವುದು ಶ್ರೀಯುತರಿಗೆ ಕೌಟುಂಬಿಕ ಹಿನ್ನೆಲೆಯಲ್ಲಿ ಎಳವೆಯಲ್ಲೇ ಮೈಗೂಡಿತು. +ಪ್ರಸಂಗಕರ್ತ ಗುಂಡು ಸೀತಾರಾಮ ತಲವಾಟ ಹಾಗೂ ಮನೆಯವರ ಸಂಪೂರ್ಣ ಸಹಕಾರ,ಪ್ರೇರಣೆಯಿಂದ ಕಲಾಜೀವನದ ಹಾದಿ ಹಿಡಿದ ಸಂಪ ಅವರು ಗೋಡೆ ನಾರಾಯಣ ಹೆಗಡೆಯವರಲ್ಲಿ ನೃತ್ಯ ಕಲೆಯನ್ನು ಗಜಾನನ ಭಂಡಾರಿ ಗುಣವಂತೆ ಅವರಲ್ಲಿ ಚಂಡೆ-ಮದ್ದಳೆ ವಾದನದ ತರಬೇತಿಯನ್ನು ವ್ಯವಸ್ಥಿತವಾಗಿ ಪಡೆದವರು. +ಅಮೃತೇಶ್ವರಿ 2, ಸಾಲಿಗ್ರಾಮ 4, ಹಿರಿಯಡಕ 1, ಮೂಲ್ಕಿ 1, ಶಿರಸಿ-ಪಂಚಲಿಂಗ 2, ಬಚ್ಚಗಾರು 5, ಪೂರ್ಣಚಂದ್ರಮೇಳ 10, ಹೀಗೆ ಕಲಾವ್ಯವಸಾಯದಲ್ಲಿ ಬೆಳ್ಳಿ ವಸಂತವನ್ನು ಕಂಡಿದ್ದಾರೆ. +ಪ್ರತಿಭಾನ್ವಿತ ಕಲಾವಿದರಾದ ಲಕ್ಷ್ಮೀನಾರಾಯಣ ಹೆಗಡೆ ಅವರು ಹಿಮ್ಮೇಳದಲ್ಲಿ ಸಮರ್ಥ ಪ್ರಭುತ್ವ ಕಂಡುಕೊಂಡಂತೆ, ಮುಮ್ಮೇಳದಲ್ಲೂ ಸಮರ್ಥ ಕಲಾವಂತಿಕೆ ಹೊಂದಿದವರು. +ವೃತ್ತಿ ಬದುಕಿನ ಮೊದಲವರ್ಷ ವೇಷಧಾರಿಯಾಗಿಯೇ ಸೇವೆ ಸಲ್ಲಿಸಿರುವವರು. +ಪುಂಡುವೇಷಗಳನ್ನೂ,ಸ್ತ್ರೀವೇಷಗಳನ್ನೂ ಮಾಡಿ ಸೈ ಅನ್ನಿಸಿಕೊಂಡಿದ್ದಾರೆ. +ಸಂಪ ಲಕ್ಷ್ಮೀನಾರಾಯಣ ಬಾಳಿನ ಜೊತೆಗಾತಿ ಸರಸ್ಪತಿ. +ಸೌಮ್ಯ, ಸಂದೇಶ ಮಕ್ಕಳು. +ಶ್ರೀಯುತರಿಗೆ ದಿ.ಕೊಂಡದಕುಳಿ ರಾಮಹೆಗಡೆ ಪ್ರಶಸ್ತಿ ,ರಾಘವೇಶ್ವರಪ್ರಶಸ್ತಿ, ಮಧ್ಯಪ್ರದೇಶದ ನೊರೊನಾದಲ್ಲಿ ಪುರಸ್ಕಾರ ದೊರಕಿರುತ್ತದೆ. +ಪುರಾಣ ಜ್ಞಾನಸಂಪನ್ನ ಹಿರಿಯ ಚಂಡೆವಾದಕ ವಾಸುದೇವ ವಿಷ್ಣು ಭಟ್‌. +ಉತ್ತರಕನ್ನಡದ ಗುಂಡಿಬೈಲು ವಾಸುದೇವ ಭಟ್ಟರ ಹುಟ್ಟೂರು. +15-8-1940ರಲ್ಲಿ ವಿಷ್ಣು ರಾಮ ಭಟ್ಟ-ಭಾಗೀರಥಿ ದಂಪತಿಯ ಪುತ್ರನಾಗಿ ಜನಿಸಿದ ಶ್ರೀಯುತರ ಅಕ್ಷರ ಶಿಕ್ಷಣ ನಾಲ್ಕನೇ ತರಗತಿಯವರೆಗೆ ಮಾತ್ರ. +ವಾಸುದೇವ ಭಟ್ಟರ ಅಜ್ಜ ವೇಷಧಾರಿ. +ಹೀಗಾಗಿ ಯಕ್ಷಗಾನ ಕಲಾಸಕ್ತಿ ಎಳವೆಯಲ್ಲಿಯೇ ಮೈಗೂಡಿತು. +ತನ್ನ 16 ಹರೆಯದಲ್ಲಿ ಬಣ್ಣದ ಬಾಳುವೆಗೆ ಮನಮಾಡಿದ ಭಟ್ಟರು ಹಿಮ್ಮೇಳದ ಚಂಡೆವಾದನ ಕಲಾವಿದರಾಗಿ ಗುರುತಿಸಿಕೊಂಡರು. +ಶ್ರೀಯುತರಿಗೆ ಚಂಡೆವಾದನ ಕಲೆ, "ಏಕಲವ್ಯಪ್ರಯೋಗ'ದಂತೆ ಸ್ವಯಂ ಸಿದ್ಧಿಯಾದುದು ನಿಜಕ್ಕೂ ವಿಶೇಷ ವೆನಿಸುತ್ತದೆ. +ಅಮೃತೇಶ್ವರಿ 1, ಹಾಲಾಡಿ 1, ಮಾರಣಕಟ್ಟೆ19, ಕಮಲಶಿಲೆ 4, ಇಡಗುಂಜಿ 2, ಬಚ್ಚಗಾರು 1,ಸಾಲಿಗ್ರಾಮ 1, ಗುಂಡಬಾಳ 20 ಹೀಗೆ ವಾಸುದೇವಭಟ್ಟರು 49 ವರ್ಷ ಪೂರೈಸಿದ್ದಾರೆ. +ಅನುಭವಿ ಚಂಡೆಗಾರರಾದ ಭಟ್ಟರ ವಾದನ ಪದ್ಧತಿ ಪಾರಂಪರಿಕವಾದದ್ದು. +ಚಂಡೆಯ ಗುಂಡಿಗೆಯಿಂದ ನಾದಪೂರ್ಣ ನುಡಿಮಿಡಿತದಿಂದ ಯಕ್ಷನಟನ ಪಾತ್ರಾಬಿವ್ಯಕ್ತಿಗೆ, ಭಾಗವತರ ಗಾನ ಪ್ರಸ್ತುತಿಗೆ ಸುಯೋಗ್ಯ ಸಾಂಗತ್ಯ ಒದಗಿಸುವ ವಿಶೇಷ ಕಲಾವಂತಿಕೆ ಇವರಲ್ಲಿ ನಿಚ್ಚಳವಾಗಿ ಗುರಿತಿಸಬಹುದಾಗಿದೆ. +ಹಿರಿಯ ಚಂಡೆವಾದಕರಾದ ವಾಸುದೇವ ಭಟ್ಟರ ಗರಡಿಯಲ್ಲಿ ಪಳಗಿದ ಅನೇಕ ಚಂಡೆವಾದಕರು ವೃತ್ತಿರಂಗದಲ್ಲಿ ಪ್ರತಿಭಾವಂತರಾಗಿ ಬೆಳಗುತ್ತಿದ್ದಾರೆ. +ಶ್ರೀಯುತರ ಸಹಧರ್ಮಿಣಿ ಲಕ್ಷ್ಮಿ ಈಗಲೂ ಗುಂಡಬಾಳ. +ಮೇಳದಲ್ಲಿ ಶ್ರೀಯುತರು ಕಲಾಸೇವಾ ತತ್ಪರರು. +ಅನೇಕ ಸಂಘ ಸಂಸ್ಥೆಗಳು ಇವರನ್ನು ಸಂಮಾನಿಸಿವೆ. +ಗಂಡುಕಲೆಯ ಪ್ರಚಂಡ ಕಲಾಪ್ರತಿಭೆ ವಿದ್ಯಾಧರ ಜಲವಳ್ಳಿ ನಿರ್ವಹಣಾ ಭೂಮಿಕೆಗಳಿಗೆ ತನ್ನದೇ ವಿಶಿಷ್ಟಕಲಾ ನೈಪುಣ್ಯದಿಂದ ಜೀವಕಳೆ ನೀಡುವ ಪ್ರಬುದ್ಧ ಕಲಾವಿದ. +ನಾಯಕ, ಖಳನಾಯಕ, ಪಾತ್ರಗಳೆರಡಲ್ಲೂ ಸಮಾನ ಪ್ರಭುತ್ವ ಕಂಡುಕೊಂಡ ವಿದ್ಯಾಧರ ಜಲವಳ್ಳಿ ಅಪಾರ ಅಭಿಮಾನಿಗಳನ್ನು ಸೃಷ್ಟಿಸಿಕೊಂಡ ಸಂಪನ್ನ ಪ್ರತಿಭೆ. +ಉತ್ತರಕನ್ನಡದ ಜಲವಳ್ಳಿಯೇ ಇವರ ಹುಟ್ಟೂರು. +ಪ್ರಖ್ಯಾತ ಕಲಾವಿದ ಜಲವಳ್ಳಿ ವೆಂಕಟೇಶರಾವ್‌ ಇವರ ತಂದೆ. +ತಾಯಿ ಕಲ್ಯಾಣಿ. +12-7-1972ರಲ್ಲಿ ಜನಿಸಿದ ವಿದ್ಯಾಧರ ಜಲವಳ್ಳಿಯವರ ಓದು ಎಂಟನೇ ತರಗತಿಯವರೆಗೆ ಮಾತ್ರ. +16ರ ಹರೆಯದಲ್ಲೇ ಇವರ ರಂಗಪ್ರವೇಶ. +ತಂದೆಯವರ ವೇಷಗಳು ಹಾಗೂ ಪ್ರಸಿದ್ಧಿಯೇ ಅವರಿಗೆ ಕಲಾಪ್ರೇರಣೆ. +ಪಾತ್ರ ಸ್ವಭಾವವನ್ನರಿತ ನೃತ್ಯಾಭಿನಯ, ಗತ್ತು-ಗಾಂಭೀರ್ಯದ ರಂಗವೈಖರಿ,ಆಕರ್ಷಕ ವೇಷಗಾರಿಕೆ, ತೂಕದ ಸ್ವರಭಾರ,ಜಲವಳ್ಳಿಯವರ ಕಲಾಸಂಕೇಶಗಳು. +ಪುರಾಣಪಾತ್ರಗಳ ಪರಿಣಾಮಕಾರಿ ರಂಗಾಭಿವ್ಯಕ್ತಿಯೊಂದಿಗೆ,ವಚೋವೈಭವದ ರಸಗಡಲಿನಲ್ಲಿ ವರ್ತಮಾನದ ವೈಚಾರಿಕತೆಯ ರಂಗ ತರಂಗಗಳನ್ನು ಸೃಷ್ಟಿಸುವ ಸೃಜನಶೀಲ ಕಲಾವಿದ ಜಲವಳ್ಳಿ ವಿದ್ಯಾದರ ಪ್ರತೀಪಾತ್ರಗಳಿಗೂ ಅವರದ್ದೇ ಆದ ಸ್ಪಷ್ಟ ಸ್ವರೂಪ ನೀಡಿದ್ದಾರೆ. +ಸುಧನ್ವ, ಅರ್ಜುನ, ಕೌರವ, ಮಾಗಧ,ವಿಶ್ವಾಮಿತ್ರ, ವೀರಮಣಿ, ಕೀಚಕ, ಬಲರಾಮ,ಭದ್ರಸೇನ, ಕಂಸ, ವತ್ಸಾಖ್ಯ, ಕೌಂಡ್ಲೀಕ ಮೊದಲಾದ ಪೌರಾಣಿಕ ಭೂಮಿಕೆಗಳಿಗೆ ವಿಶಿಷ್ಟ ಮೆರುಗು ನೀಡಿದ ಪ್ರತಿಭಾ ಶಾಲಿ ಕಲಾವಿದರಿವರು. +ಬಾಳಿನ ಜೊತೆಗಾತಿ ಜಾಹ್ನವಿ ಜಲವಳ್ಳಿ. +ಪುತ್ರ ಕಲಾಧರ. +ಬಡಗುತಿಟ್ಟಿನಲ್ಲಿ ನಡುಬಡುಗು ಹಾಗೂ ಬಡಾಬಡಗು ಎರಡೂ ಇವರಲ್ಲಿ ಸುಪುಷ್ಟವಾಗಿ ಮೇಳೈಸಿ ಕಲಾರಸಿಕರಿಗೆ ವಿಶೇಷ ಮುದವನ್ನು ನೀಡಿದೆ. +ಗುಂಡಬಾಳ 1, ಗೋಳಿಗರಡಿ 2, ಕಮಲಶಿಲೆ 5, ಸಾಲಿಗ್ರಾಮ 2, ಪೆರ್ಡೂರು 12, ಹೀಗೆ 22 ವರ್ಷಗಳ ಸಾರ್ಥಕ ಕಲಾ ತಿರುಗಾಟದಲ್ಲಿ ಯಶಸ್ಸು ಸಂಪಾದಿಸಿದ್ದಾರೆ. +ಶ್ರೀಯುತರು ಹಲವು ಸಂಘ-ಸಂಸ್ಥೆಗಳಿಂದ ಸಂಮಾನಿತರಾಗಿದ್ದಾರೆ. +ವರ್ತಮಾನದ ಯಕ್ಷಗಾನ ರಂಗಭೂಮಿಯ ಬಹುಬೇಡಿಕೆಯ ಕಲಾವಿದರಾಗಿ ರೂಪುಗೊಂಡಿದ್ದಾರೆ. +ಮಧ್ಯಮ ಬಡಗಿನ ಸೊಗಸು ತುಂಬಿದ ವೇಷಗಾರಿಕೆ, ಗಂಭೀರ ಸ್ವರಭಾರದ ಅರ್ಥಗಾರಿಕೆ,ಗತ್ತು-ಗೈರತ್ತಿನ ಪರಿಸುಟ ಅಭಿನಯ ಯುಕ್ತ ನೃತ್ಯಗಾರಿಕೆ ಹಾಗೂ ಅಗಾಧ ಪೌರಾಣಿಕ ಜ್ಞಾನ ಪೂರ್ಣತೆ ಕಲಾಬದುಕಿನಲ್ಲಿ ಕಾಣಿಸುವ ಸಂಪನ್ನ ಕಲಾವಿದ ಕೋಡಿ ವಿಶ್ವನಾಥ ಗಾಣಿಗ. +ಕುಂದಾಪುರ ತಾಲೂಕಿನ ಕೋಡಿ ಎಂಬಲ್ಲಿ10-8-1962ರಲ್ಲಿ ಶ್ರೀನಿವಾಸ ಗಾಣಿಗ-ಲಕ್ಷಿ ಗಾಣಿಗ ದಂಪತಿಯ ಸುಪುತ್ರನಾಗಿ ಜನಿಸಿದ ವಿಶ್ವನಾಥ ಗಾಣಿಗರು 5ನೇ ಇಯತ್ತೆಗೆ ಶಿಕ್ಷಣ ಮೊಟಕುಗೊಳಿಸಿ ತನ್ನ 14ರ ಹರೆಯದಲ್ಲೇ ಕಲಾಪ್ರಪಂಚಕ್ಕೆ ಅಡಿಯಿರಿಸಿದರು. +ಹಾರಾಡಿ ರಾಮಗಾಣಿಗ, ಕೃಷ್ಣಗಾಣಿಗ, ನಾರಾಯಣ ಗಾಣಿಗ, ಮೊದಲಾದ ಹಾರಾಡಿ ಮನೆತನದ ಶ್ರೇಷ್ಠ ಕಲಾಪರಂಪರೆಯ ಹಿನ್ನೆಲೆಯನ್ನು ಹೊಂದಿದ ಗಾಣಿಗರು ಪ್ರಸಿದ್ಧ ಕಲಾವಿದ ಕೋಡಿಶಂಕರಗಾಣಿಗರ ಸೋದರಳಿಯ. +ಕೋಡಿ ಶಂಕರಗಾಣಿಗರ ಗುರುತನದಲ್ಲಿ ಸಾರ್ಥಕ ಕಲಾವಿದ್ಯೆಯನ್ನು ಪಡೆದ ಕೋಡಿ ವಿಶ್ವನಾಥ ಗಾಣಿಗರು ಪೌರಾಣಿಕ ಕಥಾನಕಗಳ ನಾಯಕ, ಪ್ರತಿನಾಯಕ, ಖಳನಾಯಕ ಭೂಮಿಕೆಗಳಿಗೆ ಸಮರ್ಪಕ ಪೋಷಣೆ ಒದಗಿಸುವವರು. +ಕಮಲಶಿಲೆ 2, ಹಾಲಾಡಿ 5, ಗೋಳಿಗರಡಿ 2, ಸಾಲಿಗ್ರಾಮ 1, ಅಮೃತೇಶ್ವರಿ 2, ಸೌಕೂರು 22, ಹೀಗೆ ಕಲಾಪ್ರಪಂಚದಲ್ಲಿ 34 ವರ್ಷಗಳ ವ್ಯವಸಾಯ ಪೂರೈಸಿ ಸೌಕೂರು ಮೇಳದ ಪ್ರಧಾನ ವೇಷಧಾರಿಯಾಗಿ ದುಡಿಯುತ್ತಿದ್ದಾರೆ. +ವಿಶ್ವನಾಥಗಾಣಿಗರ ಕರ್ಣ, ಭಸ್ಮಾಸುರ, ಅರ್ಜುನ, ಕೀಚಕ,ವೀರಮಣಿ, ಶನೀಶ್ವರ, ಕೌಂಡ್ಲೀಕ, ಸುಧನ್ವ, ರಾವಣ,ಜಮದಗ್ನಿ ಮೊದಲಾದ ಭೂಮಿಕೆಗಳು ರಸಿಕಜನಮನದಲ್ಲಿ ಚಿರಸ್ಥಾಯಿಯಾಗಿವೆ. +ಹಾರಾಡಿ ಪರಂಪರೆಯ ಮುಂಡಾಸು ವೇಷಗಳನ್ನು ಸರ್ವಾಂಗೀಣ ಶೋಭೆಯಲ್ಲಿ ರಂಗದಲ್ಲಿ ತೆರೆದಿಡುವ ಕಲಾವಿದ ಕೋಡಿಯವರು . +ಪತ್ನಿ ಸುಜಾತ ಗಾಣಿಗ, ನಾಲ್ವರು ಪುತ್ರಿಯರ ತುಂಬಿದ ಸಂತೃಪ್ತ ಕುಟುಂಬ ಹೊಂದಿದವರು. +ಶ್ರೀಯುತರನ್ನು ಹೆಬ್ಬಾಡಿಕೊಂಡಳಬೆಟ್ಟು, ಅನಂತಶಶೆಟ್ಟರ ಸ್ಮರಣಾರ್ಥ ಸಮಾರಂಭದಂದು ಶೀರೂರು ಎಂಬಲ್ಲಿ ಗೌರವಪೂರ್ವಕ ಸಮ್ಮಾನಿಸಲಾಗಿದೆ. +ಬಡಗುತಿಟ್ಟಿನ ಹಿಮ್ಮೇಳದ ಸರ್ವಾಂಗವನ್ನೂ ಸಂಪೂರ್ಣಬಲ್ಲ, ಮುಮ್ಮೇಳದ ಕುರಿತೂ ಪರಿಣತಿ ಹೊಂದಿದ ಹಿರಿಯ ಭಾಗವತ ಎಂ.ವಿಶ್ವೇಶ್ವರ ಸೋಮಯಾಜಿ. +ಕುಂದಾಪುರ ತಾಲೂಕಿನ ಬೆಳ್ಳಾಲ ಗ್ರಾಮದ ಮೋರ್ಟು ಎಂಬಲ್ಲಿ 24-12-1951ರಲ್ಲಿ ಎಂ.ಶಿವರಾಮ ಸೋಮಯಾಜಿ, ಮೀನಾಕ್ಷಿಯಮ್ಮ ದಂಪತಿಯ ಪುತ್ರರಾಗಿ ವೈದಿಕ ಮನೆತನದಲ್ಲಿ ಜನಿಸಿದ ಸೋಮಯಾಜಿಯವರು 5ನೇ ಇಯತ್ತೆಯವರೆಗಿನ ಶೈಕ್ಷಣಿಕ ಹಂತ ಪೂರೈಸಿ, ತನ್ನ 15ನೇ ವರ್ಷದಲ್ಲಿ ಯಕ್ಷಗಾನ ಪ್ರಪಂಚವನ್ನು ಪ್ರವೇಶಿಸಿದವರು. +ಬೆಳ್ಳಾಲ ವೆಂಕಟಾಚಲ ಹೆಬ್ಬಾರ್‌ ಅವರಲ್ಲಿ ತಾಳದೀಕ್ಷೆ ಪಡೆದು, ಜನ್ಸಾಲೆ ನಾಗಪ್ಪಯ್ಯ ಶ್ಯಾನುಭಾಗರು, ಮಾರ್ವಿ ವಾದಿರಾಜ ಹೆಬ್ಬಾರರಿಂದ ಭಾಗವತಿಕೆಯ ತಂತ್ರವನ್ನು ಸಿದ್ಧಿಸಿಕೊಂಡು, ನಾರ್ಣಪ್ಪ ಉಪ್ಪೂರರ ಶಿಷ್ಯನಾಗಿ ಪರಿಪೂರ್ಣ ಗಾನವಿದ್ಯೆಯನ್ನು ತನ್ನದಾಗಿಸಿಕೊಂಡರು. +ಕೊಡವೂರು 1. ಪೆರ್ಡೂರು 2, ಮಾರಣಕಟ್ಟೆ 2, ಶಿವರಾಜಪುರ 2, ಮಂದಾರ್ಶಿ 1, ಹಿರಿಯಡಕ 1, ಕಳವಾಡಿ 1, ಅಮೃತೇಶ್ವರಿ 1, ನಾಗರಕೊಡಿಗೆ 3,ಕಮಲಶಿಲೆ 1, ಸೌಕೂರು 3, ಹಾಲಾಡಿ 1, ಸೀತೂರು 1. +ಹೀಗೆ 30ವರ್ಷ ಸುದೀರ್ಥ ಕಲಾವ್ಯವಸಾಯ ಮಾಡಿದ ಸೋಮಯಾಜಿಯವರು ಪ್ರಸ್ತುತ ವಿಶ್ರಾಂತ ಜೀವನ ನಡೆಸುತ್ತಿದ್ದಾರೆ. +ಹವ್ಯಾಸಿ ಸಂಘ-ಸಂಸ್ಥೆಗಳ ಗುರುಗಳಾಗಿ ಕಲಾಸೇವೆ ಸಲ್ಲಿಸುತ್ತಿದ್ದಾರೆ. +ಸೋಮಯಾಜಿಯವರು ಕೇವಲ ಭಾಗವತರಷ್ಟೇ ಅಲ್ಲದೆ ಮದ್ದಳೆ, ಚಂಡೆ ವಾದಕರೂ ಕೂಡ. +ಪ್ರಾರಂಭಿಕ ವೃತ್ತಿರಂಗ ಭೂಮಿಯ ಕೊಡವೂರು ಮೇಳದಲ್ಲಿ ಒಡ್ಡೋಲಗ ಸಹಿತ ಅನೇಕ ವೇಷಗಳನ್ನೂ ಮಾಡಿದ್ದೂ ಇದೆ. +ಪ್ರಸಂಗಕರ್ತರೂ ಆಗಿರುವ ಸೋಮಯಾಜಿಯವರ “ಕಮಲಶಿಲೆ ಕ್ಷೇತ್ರಮಹಾತ್ಮ್ಯೆ'ಹಾಗೂ "ರಾಜಾ ರತ್ನಸೇನ' ಅಮೂಲ್ಯ ಕಲಾಕೃತಿಗಳಾಗಿ ಗಮನಸೆಳೆಯುತ್ತವೆ. +ಸಹಧರ್ಮಿಣಿ ಸುಶೀಲ. +ಸುಮಶ್ರೀ, ಸೌಮ್ಯಶ್ರೀ ಮಕ್ಕಳು. +ಶ್ರೀಯುತರನ್ನು ಹಲವು ಸಂಘ-ಸಂಸ್ಥೆಗಳು ಗುರುತಿಸಿ ಗೌರವಿಸಿವೆ. +ಪೌರಾಣಿಕ ರಂಗ ಸಿದ್ಧಾಂತದಲ್ಲಿ ಯಕ್ಷಗಾನ ಸ್ರ್ತೀ ಭೂಮಿಕೆಗಳಿಗೆ ಪ್ರಾಣ ಚೈತನ್ಯ ನೀಡುವ ರಂಗಸ್ಥಳದ ಗರತಿ, ಮೂರೂರು ವಿಷ್ಣುಭಟ್‌. +ಉತ್ತರಕನ್ನಡದ ಮೂರೂರು ಎಂಬಲ್ಲಿ ಗಜಾನನ ಪರಮೇಶ್ವರ ಭಟ್ಟ - ಭಾಗೀರಥಿ ದಂಪತಿಯ ಸುಪುತ್ರರಾಗಿ 24-01-1958ರಲ್ಲಿ ಜನಿಸಿದ ವಿಷ್ಣುಭಟ್‌ಎಸ್ಸೆಸ್ಸೆಲ್ಸಿಯ ವರೆಗಿನ ಪ್ರೌಢವ್ಯಾಸಂಗದ ಬಳಿಕ, ತನ್ನ 22ನೇ ವಯಸ್ಸಿನಲ್ಲೇ ಯಕ್ಷಲೋಕದ ಹೆಣ್ಣಾದರು. +ಮೂರೂರು ರಾಮ ಹೆಗಡೆಯವರ ಗುರುತನದಲ್ಲಿ ಪ್ರಬಲ ಕಲಾವಿದ್ಯೆಯನ್ನು ಸಂಪಾದಿಸಿದ ವಿಷ್ಣು ಭಟ್ಟರು ಸಮರ್ಥ ಸ್ತ್ರೀವೇಷಧಾರಿಯಾಗಿ ಖ್ಯಾತನಾಮವನ್ನು ಗಳಿಸಿದರು. +ಪಿ.ವಿ.ಹಾಸ್ಯಗಾರ್‌ ಕರ್ಕಿ, ಅವರು ಶ್ರೀಯತರಿಗೆ ಯಕ್ಷಗಾನ ರಂಗಾನುಭವ ಬೋಧಿಸಿದರು. +ಭಾವನಾತ್ಮಕ ಸ್ರ್ತೀ ಪಾತ್ರಗಳಲ್ಲಿ ತನ್ಮ್ನಯರಾಗುವ ಭಟ್ಟರು, ಸಾತ್ತ್ವಿಕ ಭೂಮಿಕೆಯ ಸಾಮ್ರಾಜ್ಞಿಯಾಗಿ ಗುರುತಿಸಲ್ಪಟ್ಟವರು. +ಭಟ್ಟರ ಸ್ತ್ರೀಪಾತ್ರಗಳಂದರೆ ಗಂಡುಜೀವದಲ್ಲಿ ಹೆಣ್ಣು ಹೊಕ್ಕಂತೆ. +ಅವರ ದಾಕ್ಷಾಯಿಣಿ,ಸೀತೆ, ಅಂಬೆ, ಮಂಡೋದರಿ, ಮೇನಕೆ, ಚಂದ್ರಮತಿ,ದಮಯಂತಿ, ಪ್ರಭಾವತಿ, ಸಾವಿತ್ರಿ, ಶಕುಂತಲೆ,ಮೊದಲಾದ ಭೂಮಿಕೆಗಳು ಈಗಲೂ ಜನಮನದಲ್ಲಿ ಹಸಿರಾಗಿ ಉಳಿದುಕೊಂಡಿದ್ದರೆ, ಅವರ ಮೇರುಪ್ರತಿಭೆಗೆ ಪ್ರತ್ಯೇಕ ಪುರಾವೆ ಬೇಕಾಗಲಾರದು. +ನಿರದ್ಗಳ ವಚೋಸಂಪತ್ತು ಪಾತ್ರೋಚಿತ ಹಾವ-ಭಾವ, ಪ್ರೌಢ ನೃತ್ಯಾಭಿನಯದ ಎರಕದಲ್ಲಿ ಪಾತ್ರಗಳನ್ನು ಕೆತ್ತಿಡುವ ಕಲೆ ವಿಷ್ಣುಭಟ್ಟರನ್ನು ಗಾಢವಾಗಿ ಬೆಸೆದುಕೊಂಡಿದೆ. +ಗುಂಡಬಾಳ-2, ಅಮೃತೇಶ್ವರಿ 2, ಕೋಟಹಿರೇಮಹಾಲಿಂಗೇಶ್ವರ ಮೇಳ 1, ಶಿರಸಿಪಂಚಲಿಂಗೇಶ್ವರ 1, ಪೆರ್ಡೂರು 9, ಇಡಗುಂಜಿ 1 ,ಶಿರಸಿ ಮಾರಿಕಾಂಬಾ 2, ಮಂದಾರ್ತಿ 1, ಸಾಲಿಗ್ರಾಮ 2, ಪೂರ್ಣಚಂದ್ರಮೇಳ 10, ಹೀಗೆ ಕಲಾಲೋಕದಲ್ಲಿ ಭಟ್ಟರ ಯಕ್ಷವ್ಯವಸಾಯ 31 ವರ್ಷ ಸಾರ್ಥಕ ಸಾಧನೆಯಾಗಿ ಪ್ರಶಂಸೆ ಪಡೆದಿದೆ. +ಇವರ ಶ್ರೀಮತಿಯೇ ಶ್ರೀಮತಿ. +ಆದರ್ಶ, ಸೌಮ್ಯ ಶ್ರೀಯುತರ ಈರ್ವರು ಮಕ್ಕಳು. +ಪ್ರಸ್ತುತ ವಿಷ್ಣು ಭಟ್ಟರು ಪೂರ್ಣಚಂದ್ರಮೇಳ, ಕುಂಭಾಶಿ ಇದರ ಕಲಾವಿದರು. +ವಿಷ್ಣುಭಟ್ಟರ ಪ್ರೌಢ ಪ್ರತಿಭೆಗೆ ಬೆಂಗಳೂರಿನ ಅಭಿಮಾನಿ ಬಳಗದಿಂದ ಗೌರವ ಸಂಮಾನ,ಗಂಗೊಳ್ಳಿ, ಮುದ್ರಾಡಿ, ಹಳ್ಳಿಹೊಳೆ ಮೊದಲಾದ ಕಡೆಗಳಲ್ಲಿ ಆದರಣೀಯಗೌರವ ಸಂಮಾನ ದೊರಕಿರುತ್ತದೆ. +ಆಕರ್ಷಕ ಅಂಗಸೌಷ್ಠವ, ಸುಮಧುರ ಸ್ಪರಸಿರಿ,ಲಾಲಿತ್ಯಪೂರ್ಣ ನೃತ್ಯರೇಖೆ, ಅನುಭವ ಬದ್ಧರಂಗವೈಖರಿ, ಕಮನೀಯ ಕಲಾಭಿನಯ, ಗಮನೀಯ ರಸಾನುಭವ ಕಲ್ಪಿಸಿಕೊಡಬಲ್ಲ ಸಮರ್ಥ ಸ್ತ್ರೀವೇಷಧಾರಿಕೆ ಎಸ್‌.ವಿಷ್ಣುಮೂರ್ತಿ ಬಾಸ್ರಿ. +ಉಡುಪಿ ಜಿಲ್ಲೆಯ ಕುಂಜಾಲು ಬಾಸ್ರಿ ಅವರ ಹುಟ್ಟೂರು. +ಇವರ ಜನನ 1968ರಲ್ಲಿ ಕೆ.ವೈಶ್ರೀನಿವಾಸ ಬಾಸ್ರಿ, ಸರಸ್ವತಿ ಅವರ ಸುಪುತ್ರ. +ಶ್ರೀಯುತರು ಎಸ್‌.ಎಸ್‌.ಎಲ್‌.ಸಿ ವ್ಯಾಸಂಗದ ಬಳಿಕ,ತನ್ನ 18ನೇ ವಯಸ್ಸಿನಲ್ಲಿ ಯಕ್ಷಗಾನ ರಂಗಭೂಮಿಗೆ ಹೆಜ್ಜೆಯಿರಿಸಿದರು. +ಉಡುಪಿ ಯಕ್ಷಗಾನ ಕೇಂದ್ರದ ವಿದ್ಯಾರ್ಥಿಯಾಗಿ ನೀಲಾವರ ರಾಮಕೃಷ್ಣಯ್ಯ, ಮಹಾಬಲ ಕಾರಂತ,ಹೆರಂಜಾಲು ವೆಂಕಟರಮಣ ಗಾಣಿಗರ ಶಿಷ್ಯನಾಗಿ ಸದೃಢ ಕಲಾಶಿಕ್ಷಣ ಪಡೆದರು. +ಮೂಲ್ಕಿ 1, ಅಮೃತೇಶ್ವರಿ 2,ಹಿರೇಮಹಾಲಿಂಗೇಶ್ವರ ಕೋಟ 1, ಶಿರಸಿ 5,ಕಮಲಶಿಲೆ 5, ಮಂದಾರ್ತಿ 7, ಸೌಕೂರು 3. ಹೀಗೆ 24 ವರ್ಷಗಳ ಕಲಾ ವ್ಯವಸಾಯ ಯಶಸ್ವಿಯಾಗಿ ಪೂರೈಸಿದ್ದಾರೆ. +ಉತ್ತಮ ಪೌರಾಣಿಕ ಜ್ಞಾನ, ರಂಗಾನುಭವವನ್ನು ಹೊಂದಿದ ಬಾಸ್ರಿ ಅವರು ಹಿಮ್ಮೇಳದಲ್ಲೂ ಪರಿಣತಿ ಸಾಧಿಸಿದವರು. +ಶ್ರೀಯುತರ ಅಂಬೆ, ಚಿತ್ರಾಂಗದೆ, ದ್ರೌಪದಿ, ಸುಭದ್ರೆ, ಶಶಿಪ್ರಭೆ,ಮೋಹಿನಿ, ಮೀನಾಕ್ಷಿ ಮೊದಲಾದ ಸ್ತ್ರೀಪಾತ್ರಗಳು ಜನಾಕರ್ಷಣೆ ಗೊಂಡಿವೆ. +ಇವರ ಧರ್ಮಪತ್ನಿ ಹೇಮಾ. +ಪುತ್ರ ಕಾರ್ತಿಕ್‌ಬಾಸ್ರಿ. +ಪ್ರತಿಭಾನ್ವಿತ ಸ್ತ್ರೀವೇಷಧಾರಿ ವಿಷ್ಣುಮೂರ್ತಿಬಾಸ್ರಿ ಅವರನ್ನು ಹಲವು ಸಂಘಸಂಸ್ಥೆಗಳು ಸಂಮಾನಿಸಿವೆ. +ಯಕ್ಷಗಾನದ ಸಾಂಪ್ರದಾಯಿಕ ನಡೆಯನ್ನು"ಉಪ್ಪೂರ ಶೈಲಿ'ಯಲ್ಲಿ ಪ್ರತಿಧ್ವನಿಸುವ,ಪರಂಪರೆಯನ್ನು ಪ್ರತಿನಿಧಿಸುವ ಮಧುರ ಕಂಠಸಿರಿಯ ಹಿರಿಯ ಭಾಗವತ ವಿಷ್ಣು ಸುಬ್ರಾಯ ಹೆಗಡೆ ಹಿರೇಮಕ್ಕಿ. +ಉತ್ತರಕನ್ನಡ ಜಿಲ್ಲೆಯ ಹಿರೇಮಕ್ಕಿ ಎಂಬಲ್ಲಿ 1949ರಲ್ಲಿ ಸುಬ್ರಾಯ ಮಹಾಬಲೇಶ್ವರ ಹೆಗಡೆ-ಭಾಗೀರಥಿ ಹೆಗಡೆ ದಂಪತಿಯ ಸುಪುತ್ರರಾಗಿ ಜನಿಸಿದ ವಿಷ್ಣು ಹೆಗಡೆಯವರು ಒಂಭತ್ತಕ್ಕೆ ಓದು ಮುಗಿಸಿ,ಯಕ್ಷಗಾನದ ತುಂಬು ಹಂಬಲದಿಂದ ಕಲಾಶಿಕ್ಷಣ ಪಡೆಯಲು ಮುಂದಾದರು. +ತಂದೆ ಸುಬ್ರಾಯಹೆಗಡೆಯವರು ಅರ್ಥಧಾರಿಯಾಗಿದ್ದರು. +ತೀರ್ಥರೂಪರ ಪ್ರೋತ್ಸಾಹ, ಪ್ರೇರಣೆಯಿಂದ 24ನೇ ವರ್ಷದಲ್ಲಿ ಕಲಾವ್ಯವಸಾಯ ಕೈಗೊಂಡ ಹೆಗಡೆಯವರು ನಾರ್ಣಪ್ಪ ಉಪ್ಪೂರ, ಶಪ್ಪೆಕೆರೆ ಭಾಗವತರಿಂದ ಗಾನಕಲೆಯನ್ನು ಸಂಪಾದಿಸಿದರು. +ಪೌರಾಣಿಕ ಪ್ರಸಂಗ ನಡೆಯನ್ನು ಸುಪುಷ್ಟವಾಗಿ ಬಲ್ಲ ಹೆಗಡೆಯವರ ಶೈಲೀಕೃತ ಮಂಜುಳ ಯಕ್ಷರಸಗಾನ ಪ್ರೇಕ್ಷಕ-ಶ್ರಾವಕರ ಮನಗೆದ್ದಿದೆ. +ಹಾಲಾಡಿ, ಕಮಲಶಿಲೆ, ಕಳುವಾಡಿ, ಬಗ್ವಾಡಿ,ಮಾರಣಕಟ್ಟೆ, ಮಂದಾರ್ತಿ, ಪೆರ್ಡೂರು, ಗುಂಡಬಾಳ,ಬಜ್ಚಗಾರು, ಅಮೃತೇಶ್ವರಿ, ಮೇಳಗಳಲ್ಲಿ ಸಾರ್ಥಕ ಕಲಾಸೇವೆ ನಡೆಸಿದ ವಿಷ್ಣು ಹೆಗಡೆಯವರ 22ವರ್ಷದ ತಿರುಗಾಟ ಯಶಸ್ವಿಯಾಗಿದೆ. +ಪ್ರಸ್ತುತ ಹೆಗಡೆಯವರು ಅಮೃತೇಶ್ವರಿ ಮೇಳದ ಪ್ರಧಾನ ಭಾಗವತರಾಗಿದ್ದಾರೆ. +ಸಹಧರ್ಮಿಣಿ ಗಿರಿಜಾ ವಿಷ್ಣುಹೆಗಡೆ. +ಓರ್ವ ಸುಪುತ್ರ ಗಣಪತಿ. +ವಿಷ್ಟು ಹೆಗಡೆಯವರಿಗೆ ಕೋಟ ಅಮೃತೇಶ್ವರಿ ಮೇಳದ ವತಿಯಿಂದ ಹಾಗೂ ಹುಟ್ಟೂರ ಗೌರವ, ಸಂಮಾನ ದೊರಕಿರುತ್ತದೆ. +ಬಡಗುತಿಟ್ಟಿನ ಯಕ್ಷಗಾನ ಕ್ಷೇತ್ರದಲ್ಲಿ ತನ್ನದೇ ವಿಶಿಷ್ಟ ಛಾಷು ಮೂಡಿಸಿ ಗೆಲುವಿನ ಗಿರಿಯೇರಿದ ಧೀಮಂತ ಕಲಾವಿದ ಜಲವಳ್ಳಿ ವೆಂಕಟೇಶ ರಾವ್‌. +ಅಗ್ರಮಾನ್ಯ ಕಲಾವಿದ ಜಲವಳ್ಳಿ ವೆಂಕಟೇಶರಾವ್‌ ಅವರು ಹೊನ್ನಾವರ ತಾಲೂಕಿನ ಜಲವಳ್ಳಿ ಎಂಬ ಪುಟ್ಟ ಹಳ್ಳಿಯಲ್ಲಿ ಬೊಮ್ಮ ಮಡಿವಾಳ -ಶ್ರೀದೇವಿ ದಂಪತಿಯ ಪುತ್ರರಾಗಿ 1-11-1933ರಲ್ಲಿ ಜನಿಸಿದರು. +ಕಾಡುವ ಕಡುಬಡತನದಿಂದ ಎರಡನೇ ಇಯತ್ತೆಗೆ ಶಿಕ್ಷಣ ಮೊಟಕು-ಗೊಳಿಸಿ ತನ್ನ 16ರ ಹರೆಯದಲ್ಲೇ ಕಲಾಲೋಕಕ್ಕೆ ಹೆಜ್ಜೆ ಹಾಕಿದರು. +ರಾಮನಾಗಪ್ಪ ಎಂಬವರ ಭಾಗವತಿಕೆ ಹಾಗೂ ಅರ್ಥಗಾರಿಕೆ ಇವರಿಗೆ ರಂಗಭೂಮಿಗೆ ಪ್ರೇರಣೆಯಾಯಿತು. +ಹಡಿನಬಾಳ ಸತ್ಯನಾರಾಯಣ ಹೆಗಡೆಯವರು ಇವರನ್ನು ಗುಂಡುಬಾಳ ಮೇಳಕ್ಕೆ ಸೇರಿಸಿದವರು. +ಸ್ವಯಂ ಪ್ರತಿಭೆಯನ್ನು ಸತತ ಸಾಧನೆಯ ಮೂಲಕ ಜಾಹೀರು ಗೊಳಿಸಿದ ಜಲವಳ್ಳಿ. +ಈ ರಂಗದಲ್ಲಿ ತನ್ನ ಮೇರು ಕಲಾವಂತಿಕೆಯಿಂದ ಅಪಾರ ಜನಮನ್ನಣೆ ಗಳಿಸಿದರು. +ಗುಂಡಬಾಳ 10, ಇಡಗುಂಜಿ 2, ಕೊಂಡದಕುಳಿ2, ಕೊಳಗಿಬೀಸ್‌ 2, ಸುರತ್ಕಲ್‌ 4, ಸಾಲಿಗ್ರಾಮ24, ಪೆರ್ಡೂರು 4, ಕಮಲಶಿಲೆ 1, ಗೋಳಿಗರಡಿ 1. \ +ಹೀಗೆ ಆರು ದಶಕ ಸುದೀರ್ಥ-ಸಾರ್ಥಕರಂಗಯಾತ್ರೆ ಪೂರೈಸಿದ ಜಲವಳ್ಳಿಯವರು ಪ್ರಸ್ತುತ ಪೆರ್ಡೂರು ಮೇಳದ ಪ್ರಧಾನ ಕಲಾವಿದರಾಗಿ ಈಗಲೂ ಗೆಜ್ಜೆಕಟ್ಟಿ ಹೆಜ್ಜೆ ಹಾಕುತ್ತಿದ್ದಾರೆ. +ಆರಂಭದಲ್ಲಿ ಸ್ತ್ರೀಪಾತ್ರಗಳನ್ನೂ ಇವರು ನಿರ್ವಹಿಸಿದ್ದರು. +ಶನೀಶ್ವರ ಮಹಾತ್ಮೆಯ "ಶನೀಶ್ವರ'ನಪಾತ್ರ ಅವರಿಗೆ ಸಾರ್ಥಕ ಹೆಸರು ತಂದಿತ್ತಿದೆ. +ರಂಗಸ್ಥಳದಲ್ಲಿ “ಎರಡು ಸುತ್ತು-ಮೂರು ಗತ್ತು'ಎಂಬುದು ಜಲವಳ್ಳಿಯವರ ಸೃಷ್ಟಿಶೀಲ-ಯಕ್ಷಗಾನೀಯ ಶೈಲಿಗೆ ಸಂದ ಕಲಾಮರ್ಯಾದೆ. +ಅವರ ಭಾಷಾ ಸಂಪತ್ತು ಅಗಾಧ, ವ್ಯಾಕರಣಬದ್ಧ,ಪಾಂಡಿತ್ಯ ಭರಿತ, ಪಾತ್ರಗಳ ಘನತೆ, ಗೌರವ ಮುಕ್ಕಾಗದಂತೆ ಪೌರಾಣಿಕ ರಂಗಾವರಣದಲ್ಲಿ ನಿರೂಪಿಸುವ ಕಲಾಭಾತಿ ಅವರದ್ದು. +ಭಸ್ಮಾಸುರ,ಶನೀಶ್ವರ, ಈಶ್ವರ, “ಕಾರ್ತವೀರ್ಯ' ದ ರಾವಣ, ಕಂಸ,ಸುಭದ್ರಾ ಕಲ್ಯಾಣದ ಬಲರಾಮ, ವಲಲ ಭೀಮ,ಗದಾಯುದ್ಧದ ಭೀಮ, ದುಷ್ಟಬುದ್ಧಿ, ರಕ್ತಜಂಘ ಅವರದೇ ವಿಶಿಷ್ಟ ಶೈಲಿಯಲ್ಲಿ ಅಮರವಾದ ಪಾತ್ರಗಳು. +ಪತ್ನಿ ಕಲ್ಯಾಣಿ. +ಮಾರುತಿ, ಮಂಜುನಾಥ,ವಿದ್ಯಾಧರ ಇವರ ಮೂವರು ಸುಪುತ್ರರು. +ಇವರ ಪುತ್ರ ವಿದ್ಯಾಧರ ಜಲವಳ್ಳಿ ಸಮರ್ಥ ಕಲಾವಿದ. +ಶ್ರೀಯುತರ ಮೇರು ಪ್ರತಿಭೆಗೆ ಪ್ರತಿಷ್ಠಿತ ರಾಜ್ಯಪ್ರಶಸ್ತಿ, ಜಾನಪದ ಯಕ್ಷಗಾನ ಅಕಾಡೆಮಿ ಪ್ರಶಸ್ತಿ ದೊಕಿದೆ. +ಅಭಿಮಾನಿ ಬಳಗದಿಂದ ಗೌರವ ಅಭಿನಂದನೆಯೂ ಬ್ರಹ್ಮಾವರದಲ್ಲಿ ನಡೆದಿದೆ. +ಯಕ್ಷಗಾನ “ಕಲಾರಂಗ'ದ ಪ್ರೊ.ಬಿ.ವಿ.ಆಚಾರ್ಯ ಪ್ರಶಸ್ತಿ ದೊರಕಿದೆ. +ಬಡಗುತಿಟ್ಟು ಯಕ್ಷಗಾನ ರಂಗಭೂಮಿಯ ಶಾಸ್ತ್ರೋಕ್ತ ಕಲಾಪದ್ಧತಿಯನ್ನು ಪರಿಪೂರ್ಣ ಬಲ್ಲಪರಂಪರೆಯ ಅಗ್ರಮಾನ್ಯ ವೇಷಧಾರಿ ಹೇರಂಜಾಲು ವೆಂಕಟರಮಣ ಗಾಣಿಗ. +ಕುಂದಾಪುರ ತಾಲೂಕಿನ ಹೇರಂಜಾಲು ಎಂಬ ಪುಟ್ಟ ಹಳ್ಳಿಯಲ್ಲಿ 16-2-1930ರಲ್ಲಿ ಜನಿಸಿದ ವೆಂಕಟರಮಣ ಗಾಣಿಗರು ಗಣಪಯ್ಯ ಗಾಣಿಗ ನಾಗಮ್ಮ ಗಾಣಿಗ ದಂಪತಿಯ ಸುಪುತ್ರ. +ಶ್ರೀಯುತರ ವಿದ್ಯಾರ್ಹತೆ 5ನೇ ತರಗತಿಯವರೆಗೆ ಮಾತ್ರ. +ವೆಂಕಟರಮಣ ಗಾಣಿಗರ ತಂದೆ ಯಕ್ಷಗಾನ ವೇಷಧಾರಿಯಾಗಿದ್ದುದರಿಂದ ಕಲೆಯೆಂಬುದು ಇವರಿಗೆ ಜನ್ಮದತ್ತವಾಯಿತು. +ಎಳವೆಯಲ್ಲೇ ಅನ್ಯಾದೃಶ ಕಲಾಸಕ್ತಿ ಮೈ ತುಂಬಿಕೊಂಡಿದ್ದ ಇವರನ್ನು ಶಾಲಾ ಅಧ್ಯಾಪಕರು ನೇರ್ಪುಗೊಳಿಸಿದರು. +ಅದೇ ಇವರ ರಂಗ ಪ್ರಯಾಣಕ್ಕೆ ಪ್ರೇರಣೆ. +14ರ ಹರಯದಲ್ಲಿ ಯಕ್ಷಗಾನ ಲೋಕ ಪ್ರವೇಶಿಸಿದ ಗಾಣಿಗರು ದಶಾವತಾರಿ ಗುರು ವೀರಭದ್ರನಾಯ್ಕ ಹಾಗೂ ಬೇಳಂಜೆ ತಿಮ್ಮಪ್ಪನಾಯ್ಕರನ್ನು ಗುರುಗಳಾಗಿ ಸ್ವೀಕರಿಸಿ ಸಮರ್ಪಕ ಯಕ್ಷವಿದ್ಯಾ ಸಂಪನ್ನರಾದರು. +ಮಾರಣಕಟ್ಟೆ 10, ಕೊಲ್ಲೂರು 2, ಅಮೃತೇಶ್ಟರಿ 5, ಸಾಲಿಗ್ರಾಮ 8, ಕುಂಡವು 1, ಇಡಗುಂಜಿ 7,ಹೀಗೆ 33 ವರ್ಷಗಳ ಕಲಾ ವ್ಯವಸಾಯವನ್ನು ಸುಸಾಂಗವಾಗಿ ಪೂರೈಸಿ ವಿಶ್ರಾಂತ ಜೀವನದಲ್ಲಿದ್ದಾರೆ. +ಉಡುಪಿ ಯಕ್ಷಗಾನ ಕೇಂದ್ರದ ಗುರುಗಳಾಗಿ ಡಾ.ಶಿವರಾಮ ಕಾರಂತರ “ಯಕ್ಷರಂಗ'ದ ಕಲಾವಿದರಾಗಿ ಅನನ್ಯ ಕಲಾಕೈಂಕರ್ಯವನ್ನು ಗೈದ ಹಿರಿಮೆಯೂ ಇವರಿಗಿದೆ. +ದೇಶ-ವಿದೇಶಗಳಲ್ಲಿ ಇವರ ಕಲಾಪ್ರತಿಭೆ ಮೆರೆದಿದೆ. +ಇವರ ನೂರಾರು ಮಂದಿ ಶಿಷ್ಯರು ವೃತ್ತಿರಂಗದಲ್ಲಿ ಹೆಸರಾಂತ ಕಲಾವಿದರಾಗಿ ಖ್ಯಾತಿ ಪಡೆದಿದ್ದಾರೆ. +ಶ್ರೀಯುತರ ನೃತ್ಯಾಭಿನಯ, ರಂಗನಡೆ,ವಾಚಿಕತೆ, ವೇಷಕ್ರಮ, ಎಲ್ಲವೂ ನೂರಕ್ಕೆ ನೂರು ಯಕ್ಷಗಾನೀಯವಾದದ್ದು. +ಸ್ತ್ರೀವೇಷಧಾರಿಯಾಗಿಯೂ,ಪುರುಷವೇಷದಧಾರಿಯಾಗಿಯೂ ಗಾಣಿಗರು ಸುಪ್ರಸಿದ್ಧರು. +ಇವರ ಶಶಿಪ್ರಭಾ, ಮೀನಾಕ್ಷಿ, ದ್ರೌಪದಿ,ದಾಕ್ಷಾಯಿಣಿ, ಮೊದಲಾದ ಸ್ರ್ತೀ ಭೂಮಿಕೆಗಳು ಹಾಗೂ ಸುಧನ್ವ, ಅರ್ಜುನ, ಭೀಷ್ಮ ದ್ರೋಣ, ಮೊದಲಾದ ಗಂಡುವೇಷಗಳು ಜನಪ್ರಿಯ. +ಧರ್ಮಪತ್ನಿ ಗಣಪು. +ಗೋಪಾಲಗಾಣಿಗ,ನಾರಾಯಣ ಗಾಣಿಗ, ಬಾಲಕೃಷ್ಣ ಗಾಣಿಗ ಮಕ್ಕಳು. +ಇವರ ಪುತ್ರರಾದ ಗೋಪಾಲ ಗಾಣಿಗ ಭಾಗವತರು. +ಬಾಲಕೃಷ್ಣ ಗಾಣಿಗ ಮದ್ದಳೆವಾದಕರು. +ಶ್ರೀಯುತರಿಗೆ ರಾಜ್ಯೋತ್ಸವ ಪ್ರಶಸ್ತಿ. +ಕರ್ಗಲ್ಲು ಪ್ರಶಸ್ತಿ, ಶ್ರೀನಿವಾಸ ಉಡುಪ ಪ್ರಶಸ್ತಿ, ಕೋಟ ವೈಕುಂಠ ಪ್ರಶಸ್ತಿ, ಜಿ.ಶಂಕರ್‌ ಗೌರವಧನ ಲಭಿಸಿದೆ. +ಮಾನ್ಯ ಗಾಣಿಗರು ಈ ಗ್ರಂಥ ಅಚ್ಚು ಹಾಕಿಸುವ ಕಾಲಾವಧಿಯಲ್ಲಿ ಕಾಲನಕರೆಗೆ ಓಗೊಟ್ಟು ಜೀವನರಂಗ ಸ್ಥಳದಿಂದ ನಿರ್ಗಮಿಸಿದ್ದಾರೆ. +ಕರಾವಳಿ ಕಲೆಯ ಕಮನೀಯ ಪ್ರತಿಭೆಯಾಗಿ ರಮಣೀಯ ಜೀವ ಪ್ರತಿಮೆಯಾಗಿ, ಗಮನೀಯ ರಂಗವೈಭವದಲ್ಲಿ ಕಂಗೊಳಿಸುವ ಯಕ್ಷಮೋಹಕ ತಾರೆ ಶಶಿಕಾಂತ ಶೆಟ್ಟಿ ಕಾರ್ಕಳ. +ಕಾರ್ಕಳದ ಧರ್ಮಪ್ಪ ಶೆಟ್ಟಿ-ಲಲಿತಾ ದಂಪತಿಯ ಸುಪುತ್ರನಾಗಿ 8-1-1980ರಲ್ಲಿ ಜನಿಸಿದ ಶಶಿಕಾಂಶ ಶೆಟ್ಟರು, ಬಾಲ್ಯದಿಂದ ಬಡತನದಲ್ಲಿ ಬೆಳೆದವರು. +ಹೀಗಾಗಿ ಅವರ ಶಾಲಾ ಶೈಕ್ಷಣಿಕ ಓದು 9ಕ್ಕೇ ಸೀಮಿತವಾಯಿತು. +ಜೀವನೋಪಾಯಕ್ಕಾಗಿ ಟೈಲರಿಂಗ್‌ವೃತ್ತಿ ಹತ್ತಿರ ಕರೆಯಿತು. +ಎಳವೆಯಲ್ಲೇ ಬೇರುಬಿಟ್ಟಿದ್ದ ಯಕ್ಷಗಾನ ಕಲಾಸಕ್ತಿ ಕಾರ್ಕಳದ ಮಾರಿಗುಡಿಯಲ್ಲಿ ನಡೆಯುತ್ತಿದ್ದ ಸಾಪ್ತಾಹಿಕ ಯಕ್ಷಗಾನ ತರಗತಿಗೆ ಎಳೆದು ತಂದಿತು. +ಕಾರ್ಕಳದ ಸತೀಶ್‌ ಎಂ.ಅವರ ಶಿಷ್ಯನಾಗಿ ತೆಂಕುತಿಟ್ಟಿನ ಹೆಜ್ಜೆಗಾರಿಕೆ ಕಲಿತ ಶಶಿಕಾಂತರಿಗೆ ಕಲಾಸಿದ್ಧಿಕ್ಷಿ ಪ್ರಗತಿಯಲ್ಲಿ ಕೈವಶವಾಯಿತು. +ಯಕ್ಷಗಾನದಲ್ಲಿ ಕ್ರಮೇಣ ಬೆಳೆಯುತ್ತಾ ಸಾಗಿದ ಶಶಿಕಾಂತ್‌ ಕರ್ಗಲ್ಲು ವಿಶ್ವೇಶ್ವರ ಭಟ್‌, ಬನ್ನಂಜೆ ಸಂಜೀವಸುವರ್ಣ ಹಾಗೂ ಕೋಳ್ಕೂರು ರಾಮಚಂದ್ರರಾಯರ ಗುರುತನದಲ್ಲಿ ಉನ್ನತ ಕಲಾವಿದ್ಯೆಯನ್ನು ತನ್ನದಾಗಿಸಿಕೊಂಡರು. +ಕರ್ನಾಟಕ, ಬಪ್ಪನಾಡು, ಭಗವತಿ ಮೇಳಗಳಲ್ಲಿ ಹವ್ಯಾಸಿಯಾಗಿ ಮೂರು ವರ್ಷ ಕಲಾಕೃಷಿ ನಡೆಸಿದ ಶೆಟ್ಟರು ಬಡಗಿನ ಮಂದಾರ್ತಿ ಮೇಳಕ್ಕೆ ಸೇರ್ಪಡೆ-ಗೊಂಡು ತನ್ನ ಶ್ರೀಮಂತ ಕಲಾಸಿರಿಯಲ್ಲಿ ಪುರಾಣ ಪಾತ್ರಗಳಿಗೆ ಪ್ರಾಣಪ್ರತಿಷ್ಠೆ ನೀಡಿದರು. +ಅಲ್ಲಿ ಎಂ.ಎ.ನಾಯ್ಕರ ರಂಗಮಾಹಿತಿ, ಅನುಭವವೂ ಶ್ರೀಯುತರಿಗೆ ಸುಪುಷ್ಟವಾಗಿ ದೊರಕಿತು. +ತದನಂತರ ಹೆರಂಜಾಲು ಗೋಪಾಲಗಾಣಿಗರ ಸಹಕಾರದಲ್ಲಿ ಸಾಲಿಗ್ರಾಮ ಮೇಳ ಸೇರಿದರು. +ಅಲ್ಲಿಂದಲೇ ಶಶಿಕಾಂತರ ಶುಕ್ರದೆಸೆ ಪ್ರಾರಂಭ. +ಜನಪ್ರಿಯ ಸ್ತ್ರೀವೇಷಧಾರಿಯಾಗಿ ರಂಗ ಬದುಕಿನ ಶೃಂಗ ಸಾರ್ಥಕ್ಯ ವಿಶೇಷ ತಾರಾಮೌಲ್ಯ ಇಲ್ಲಿ ಸಂಪ್ರಾಪ್ತವಾಯಿತು. +ಶಶಿಪ್ರಭೆಯಾಗಿ, ಅಂಬೆಯಾಗಿ, ದಾಕ್ಷಾಯಿಣಿಯಾಗಿ,ಚಂದ್ರಮತಿಯಾಗಿ, ದಮಯಂತಿಯಾಗಿ,ಶಕುಂತಲೆಯಾಗಿ, ಕೈಕೇಯಿಯಾಗಿ, ಸತ್ಯಭಾಮೆಯಾಗಿ ತನ್ನೆಲ್ಲಾ ಕಲಾ ಸತ್ವವನ್ನು ಪಾತ್ರಗಳ ಮೂಲಕ ರಂಗಮಂಚದಲ್ಲಿ ಹರಳುಗಟ್ಟಿಸಿದರು. +ಸಾಂಪ್ರದಾಯಿಕಕತೆಯೊಂದಿಗೆ ಸೃಜನ ಶೀಲತೆಯನ್ನೂ ಸೇರಿಸಿ ಯಕ್ಷಗಾನೀಯ ಚೌಕಟ್ಟಿನಲ್ಲಿ ಶುದ್ಧ ಹವಳವಾಗಿ ಕಣ್ಣೆಳೆದರು. +ಆಕರ್ಷಕ ವೇಷ, ಪರಿಶುದ್ಧ ವಾಗ್ನಿತೆ,ಸತ್ವಪೂರ್ಣ ನೃತ್ಯಾಭಿನಯು, ಭಾವಯುಕ್ತ ಪಾತ್ರಚಿತ್ರಣದಲ್ಲಿ ವಿಜೃಂಭಿಸುವ ಸಮರ್ಥಸ್ತ್ರೀವೇಷಧಾರಿ ಶಶಿಕಾಂತ ಶೆಟ್ಟರು ಉತ್ತಮ ಅರ್ಥಧಾರಿಯೂ ಹೌದು. +ಈಗಾಗಲೇ ದೇಶ, ವಿದೇಶಗಳಲ್ಲಿ ಶ್ರೀಯುತರ ಕಲಾ ಪ್ರತಿಭೆಯ ಕಂಪು ಸೂಸಿದೆ. +ಬಾಳ ಸಂಗಾತಿ ದೇವಿಕಾ. +ಶಿವರಂಜನ್‌ ಸುಪುತ್ರ. +ಇವರಿಗೆ ಹೈದರಾಬಾದ್‌, ಕಾರ್ಕಳ, ಉಡುಪಿ ಮುಂತಾದೆಡೆ ಸಂಮಾನ ದೊರಕಿದೆ. +ದೂರದ ದುಬಾಯಿಯಲ್ಲೂ ತಮ್ಮ ಕಲಾ ಪ್ರತಿಭೆಯನ್ನು ಪ್ರದರ್ಶಿಸಿದ್ದಾರೆ. +ಸಾಂಪ್ರದಾಯಿಕ ರಂಗ ಸಂವಿಧಾನಕ್ಕೆ ಸ್ವಯಂಪ್ರತಿಭೆಯ ಮೆರುಗು ನೀಡಿ ಪ್ರಸಿದ್ಧ ಹಾರಾಡಿ ತಿಟ್ಟಿನ ಸಮರ್ಥ ಪ್ರತಿಪಾದಕರಾಗಿ ಗುರುತಿಸಿಕೊಂಡ ಹಿರಿಯ ಕಲಾವಿದ ಕೋಡಿ ಶಂಕರ ಗಾಣಿಗ. +31-05-1932ರಲ್ಲಿ ಬಜ್ಚ ಗಾಣಿಗ-ಕಾವೇರಮ್ಮ ದಂಪತಿಯ ಸುಪುತ್ರರಾಗಿ ಉಡುಪಿ ತಾಲೂಕಿನ ಹಾರಾಡಿಯಲ್ಲಿ ಜನಿಸಿದ ಶಂಕರಗಾಣಿಗರು ಬಡಗಿನ ಯಕ್ಷಗಾನದ ದಂತಕತೆ ಹಾರಾಡಿ ರಾಮಗಾಣಿಗರ ಅಣ್ಣನ ಮಗ. +ಹಾರಾಡಿ ಕುಷ್ಠ ಗಾಣಿಗರ ಸೋದರಳಿಯ. +ಹಾಗೂ ಮಗಳ ಗಂಡ. +ಹೀಗಾಗಿ ಹಾರಾಡಿ ಮನೆತನದ ಬಂಧುತ್ವ ಹಾಗೂ ಅಪ್ರತಿಮ ಕಲಾವ್ಯಕ್ತಿತ್ವ ಶಂಕರಗಾಣಿಗ ಅವರಿಗೆ ನಿಚ್ಚಳವಾಗಿ ಒಲಿದು ಒದಗಿತು. +5ನೇ ತರಗತಿಯವರೆಗೆ ಶಾಲಾಭ್ಯಾಸ ಮಾಡಿದ ಗಾಣಿಗರು ದಶಾವತಾರಿ ವರಾರ್ವಿ ರಾಮಕೃಷ್ಣ ಹೆಬ್ಬಾರ್‌ ಹಾಗೂ ಮಾವಂದಿರಾದ ಹಾರಾಡಿ ಕುಷ್ಕ ಗಾಣಿಗ,ನಾರಾಯಣ ಗಾಣಿಗರ ಗುರುತನದಲ್ಲಿ ಪರಂಪರೆಯ ಪರಿಪಕ್ವ ಫಲವಾಗಿ ಯಕ್ಷವೃಕ್ಷದಲ್ಲಿ ನಳನಳಿಸಿದರು. +ಸೌಕೂರು ಮೇಳದಲ್ಲಿ ಗೆಜ್ಜೆ ಕಟ್ಟಿದ ಗಾಣಿಗರು ಅಮೃತೇಶ್ವರಿ, ಮಾರಣಕಟ್ಟೆ, ಕಮಲಶಿಲೆ, ಪೆರ್ಡೂರು,ಇಡಗುಂಜಿ ಮೇಳಗಳಲ್ಲಿ 55 ವರ್ಷಗಳ ಸಾರ್ಥಕ ಕಲಾಬದುಕು ಕಂಡಿದ್ದಾರೆ. +ಪ್ರಸ್ತುತ ಶಂಕರ ಗಾಣಿಗರು ಬೆಂಗಳೂರಿನಲ್ಲಿ ವಿಶ್ರಾಂತ ಜೀವನದಲ್ಲಿದ್ದಾರೆ. +ನಾಯಕ, ಖಳನಾಯಕ ಪಾತ್ರಗಳಲ್ಲಿ ಪೌರಾಣಿಕತೆಯ ಅಂತಃಸತ್ವವನ್ನು ಎತ್ತಿಹಿಡಿಯುವ ಶಂಕರಗಾಣಿಗರು ಎರಡನೇ ವೇಷಧಾರಿಯಾಗಿ ವಿಜೃಂಭಿಸುವ ಪೂರ್ವದಲ್ಲಿ ಸುಮಾರು ಹದಿನೈದು ವರ್ಷ ಪ್ರಧಾನ ಸ್ತ್ರೀವೇಷಧಾರಿಯಾಗಿ ರಂಗಸ್ಥಳವನ್ನು ಬೆಳಗಿದವರು. +ಹಾರಾಡಿ ಶೈಲಿಯಲ್ಲಿ ನಿರೂಪಿತವಾದ ಕರ್ಣ,ಅರ್ಜುನ, ಜಾಂಬವ, ಹಮುತುಪರ್ಣ, ಹಿರಣ್ಯಕಶಿಪು ಮೊದಲಾದ ಪಾತ್ರಗಳ ಶಾಸ್ತ್ರೋಕ್ತ ರಂಗಚಿತ್ರಣ ಸ್ಮರಣೀಯ, ಹಾಗೆಯೇ ಭಸ್ಮಾಸುರ, ಶಬರ, ಕಣ್ಣಪ್ಪ,ವಿಭಿಷಣ, ಯಮ, ಜಮದಗ್ನಿ ಮೊದಲಾದ ಪುರಾಣಪಾತ್ರಗಳನ್ನು ರಂಗದಲ್ಲಿ ಮೆರೆದ ಪರಿ ಅವರ್ಣನೀಯ. +ಮುಂಡಾಸು ಹಾಗೂ ಪಾರ್ಟಿನ ವೇಷಗಳಲ್ಲಿ ಗಾಣೀಗರ ವಿಶೇಷ ಪ್ರತಿಭೆ ರಂಗ ರಮಣೀಯ. +ಕೋಡಿ ಶಂಕರಗಾಣಿಗರ ಅರ್ಧಾಂಗಿ ಶ್ರೀಮತಿ ಕನಕಾಂಗಿ. +ಸುಮಿತ್ರ ದಾಮೋದರ, ಅಂಬಿಕಾ,ಸಂತೋಷ, ಶ್ರೀಧರ ಮಕ್ಕಳು. +ಶ್ರೀ ಶಂಕರ ಗಾಣಿಗರಿಗೆ 2004ರಲ್ಲಿ ಪ್ರತಿಷ್ಠಿತ ರಾಜ್ಯ ಪ್ರಶಸ್ತಿ, ಕಾರ್ಕಡ ಶ್ರೀನಿವಾಸ ಉಡುಪ ಪ್ರಶಸ್ತಿ,ಉಡುಪಿ ಯಕ್ಷಗಾನ "ಕಲಾರಂಗ'ದ ಮಾರ್ವಿ ಹೆಬ್ಬಾರ್‌ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿ-ಪುರಸ್ಕಾರ-ಸಂಮಾನ-ಗೌರವ ದೊರಕಿವೆ. +ಬಳುಕುವ ಲತಾಂಗಿಯಾಗಿ, ಸಾಹಿತ್ಯಪೂರ್ಣ ಸ್ವಚ್ಛಮಾತಿನ ಯಕ್ಷ ಶುಭ್ರಾಂಗಿಯಾಗಿ ಕಾಣುವ ಉಳ್ಳೂರು ಶಂಕರ ದೇವಾಡಿಗರು ಉನ್ನತ ಪ್ರತಿಭೆಯ ಸಮರ್ಥ ಸ್ತ್ರೀವೇಷಧಾರಿ. +ಕುಂದಾಪುರ ತಾಲೂಕಿನ ಉಳ್ಳೂರು ಎಂಬಲ್ಲಿ ನಾರಾಯಣ ದೇವಾಡಿಗ-ಚಂದ್ರಾವತಿ ದಂಪತಿಯ ಸುಪುತ್ರರಾಗಿ ಜನಿಸಿದ ಶಂಕರ ದೇವಾಡಿಗರಿಗೆ ಈಗ ನಲವತ್ತು ವರ್ಷ ಪ್ರಾಯ. +ನಾಕಕ್ಕೇ ಓದು ಸಾಕೆನಿಸಿಕೊಂಡ ಶಂಕರ ಅವರುತನ್ನ 18ರ ಹರೆಯದಲ್ಲೇ ಯಕ್ಷಗಾನಕ್ಕೆ ಮುಖಮಾಡಿದರು. +ಹೆರಂಜಾಲು ಗೋಪಾಲ ಗಾಣಿಗ,ನಾಗೂರು ಶ್ರೀನಿವಾಸ ದೇವಾಡಿಗರೇ ಇವರ ಗುರುಗಳು. +ಶೃಂಗಾರ, ಸೌಜನ್ಯ, ಗರತಿ ಪಾತ್ರಗಳಲ್ಲಿ ತನ್ನ ಕಲಾಪ್ರತಿಭಾ ಸಿರಿವಂತಿಕೆಯನ್ನು ಸಾದರ ಪಡಿಸುವ ಉಳ್ಳೂರು ಅವರ ಸೀತೆ, ಶ್ರೀದೇವಿ, ಸುಭದ್ರೆ, ಕುಂತಿ,ವಿಷಯೆ ಮೊದಲಾದ ಪಾತ್ರಗಳು ಜನ ಮನರಂಜಿಸುವಲ್ಲಿ ಗೆಲುವು ಕಂಡಿವೆ. +ಸುಪುಷ್ಠ ಭಾಷಾ ಚಮತ್ಕಾರ, ಸ್ವೀಸಹಜ ಕಂಠಶ್ರೀ,ಲಾಲಿತ್ಯಪೂರ್ಣ ಹಾವ-ಭಾವ, ನೃತ್ಯ ಅಭಿನಯಕೌಶಲ, ಪಾತ್ರ ತಾದಾತ್ಮ್ಯ, ಆಕರ್ಷಕ ವೇಷ ವೈಭವ ಉಳ್ಳೂರು ಶಂಕರರ ಗಮನೀಯ ಅಂಶರ್ಬಹಿರಂಗದ ಕಲಾಂಶಗಳಾಗಿ ಗುರುತಿಸಲ್ಪಡುತ್ತದೆ. +ಮಾರಣಕಟ್ಟೆ 9, ಶಿರಸಿ -ಮಾರಿಕಾಂಬಾ 1,ಅಮೃತೇಶ್ವರಿ 1, ಬಗ್ದಾಡಿ 1. ಪೆರ್ಡೂರು 10,ಸಾಲಿಗ್ರಾಮ 1, ಹೀಗೆ 23ವರ್ಷಗಳ ರಂಗಕೃಷಿ ಅವರದ್ದು. +ಪ್ರಸ್ತುತ ಶಂಕರ ದೇವಾಡಿಗ ಸಾಲಿಗ್ರಾಮ ಮೇಳದ ಕಲಾವಿದರಾಗಿ ದುಡಿಯುತ್ತಿದ್ದಾರೆ. +ಮಡದಿ ಶಾರದಾ. +ಶಶಾಂಕ, ಶಾರ್ವರಿ, ಶರಣ್ಯ ಮಕ್ಕಳು. +ಕಲಾವಿದ ಶಂಕರ ದೇವಾಡಿಗರನ್ನು ಹಲವು ಸಂಘಸಂಸ್ಥೆಗಳು ಗೌರವಿಸಿವೆ. +ರಾಜ್ಯ, ಹೊರರಾಜ್ಯದ ಅನೇಕ ಸಂಘಟನೆಗಳು ಗುರುತಿಸಿ ಗೌರವಿಸಿವೆ. +ಮದ್ದಳೆಯ ನಾದಲೋಕದ ನಿಧಿಯಂತೆ ಕಂಗೊಳಿಸುವ ಯಲ್ಲಾಪುರ ಶಂಕರ ಭಾಗವತರು ವಿದ್ವತ್‌ಶೀಲ ಪ್ರತಿಭೆಯಾಗಿ ಗುರುತಿಸಿಕೊಂಡ ಸಮರ್ಥ ಮದ್ದಳೆವಾದಕರು. +ಉತ್ತರಕನ್ನಡದ ಯಲ್ಲಾಪುರ ಎಂಬಲ್ಲಿ 1-5-1955ರಲ್ಲಿ ಜನಿಸಿದ ಶಂಕರ ಭಾಗವತರು ರಾಮಚಂದ್ರ ಭಾಗವತ್‌-ಕಮಲಾ ಭಾಗವತ್‌ ದಂಪತಿಯ ಪುತ್ರ. +ಎಳವೆಯಲ್ಲೇ ಕಲಾಸಕ್ತಿಯನ್ನು ಗಂಭೀರವಾಗಿ ಮೈಗೂಡಿಸಿಕೊಂಡಿದ್ದ ಶಂಕರಭಾಗವತ ಅವರಿಗೆ ಖ್ಯಾತ ಮದ್ದಳೆಗಾರ ಬೇಳಂಜೆ ತಿಮ್ಮಪ್ಪ ನಾಯ್ಕರೇ ಬಣ್ಣದ ಬದುಕಿನ ನಾದಲೀಲೆಗೆ ಪ್ರೇರಕ-ಪ್ರೋತ್ಸಾಹಕ ವ್ಯಕ್ತಿ -ಶಕ್ತಿ 7ನೇ ತರಗತಿಯವರೆಗೆ ವಿದ್ಯಾಭ್ಯಾಸ ನಡೆಸಿದ ಶ್ರೀಯುತರು, ಬೇಳಂಜೆ ತಿಮ್ಮಪ್ಪ ನಾಯ್ಕ, ನಾರ್ಣಪ್ಪಉಪ್ಪೂರ, ಗೋರ್ಪಾಡಿ ವಿಠಲ ಪಾಟೀಲ್‌,ವೀರಭದ್ರನಾಯ್ಕ್‌, ಮಹಾಬಲ ಕಾರಂತ, ಮರವಂತೆ ನರಸಿಂಹದಾಸ್‌, ಕಡತೋಕ ಮಂಜುನಾಥ ಭಾಗವತ,ಹೊಸ್ತೋಟ ಮಂಜುನಾಥ ಭಾಗವತ ಮೊದಲಾದವರ ಗುರುತನವನ್ನು ಮನಸ್ವೀ ಸ್ವೀಕರಿಸಿದವರು. +ಶಾಸ್ತ್ರೀಯ ಸಂಗೀತ, ತಬಲಾವಾದನ,ಚಂಡೆವಾದನವನ್ನು ಬಲ್ಲ ಈ ಮದ್ದಳೆಗಾರ ಮದ್ದಳೆಯ ಮೃದು ನುಡಿತ ಗಾನ ಪೋಷಕ. +ನಟನಚೇತನಶೀಲ ಅಭಿವ್ಯಕ್ತಿಗೆ ಪೂರಕವಾದದ್ದು. +ಶಾಸ್ತ್ರೀಯಮಟ್ಟು-ಪೆಟ್ಟುಗಳೂ, ನವ್ಯತೆಯ ಸೃಷ್ಟಿಶೀಲ ನುಡಿತ-ಭಣಿತದ ಗುಟ್ಟುಗಳೂ ಅವರಿಗೆ ಹಸ್ತಗತವಾಗಿದೆ. +ಕಾಳಿಂಗ ನಾವಡರ ಕಂಠಸಿರಿಯಲ್ಲಿ ಶಂಕರಭಾಗವತರ ಮದ್ಧಳೆಯ ಮಾಂತ್ರಿಕ ಶಕ್ತಿ ಯಕ್ಷಲೋಕ ತುಂಬಿಕೊಂಡಿದೆ. +ಭಾವಾನುಕೂಲ್ಯಕರವಾದ ಮದ್ದಳೆಯ ನುಡಿಗಾರಿಕೆ-ನುಡಿಸಾಣಿಕೆಯಲ್ಲಿ ರಂಗಮಂಚಕ್ಕೆ ನಾದಪೂರ್ಣ ಗುಂಗು ತುಂಬಿಸುವ ಶಂಕರ ಭಾಗವತರು ಪೆರ್ಡೂರು 2, ಕೆರೆಮನೆ 1, ಅಮೃತೇಶ್ವರಿಡೇರೆ 4, ಶಿರಸಿ ಪಂಚಲಿಂಗ 4, ಸಾಲಿಗ್ರಾಮ ಮೇಳ ಹೀಗೆ 35ವರ್ಷ ಸೇವೆ ಸಲ್ಲಿಸಿದ್ದಾರೆ. +ದಕ್ಷಿಣೋತ್ತರ ಕನ್ನಡ ಜಿಲ್ಲೆಯ ಹಿರಿ-ಕಿರಿಯ ಶ್ರೇಷ್ಠ ಭಾಗವತರ,ಕಲಾವಿದರ ಹಿಮ್ಮೇಳ-ಮುಮ್ಮೇಳಕ್ಕೆ ಸೂಕ್ತವಾದ ಸಾಂಗತ್ಯ ನೀಡಿದ ಮೇರು ಪ್ರತಿಭಾನ್ವಿತ ಮದ್ದಳೆಗಾರ ಶಂಕರಭಾಗವತರು ಪ್ರಸ್ತುತ ಅತಿಥಿ ಮದ್ದಳೆಗಾರರಾಗಿ ದುಡಿಯುತ್ತಿದ್ದಾರೆ. +ಮದ್ದಳೆಯ ವಾದನಕ್ಕೆ ತಾರಾಮೌಲ್ಯ ತಂದುಕೊಟ್ಟ ಸಂಪನ್ನಶೀಲ ಪ್ರಶಿಭೆ ಶಂಕರಭಾಗವತರು . +ಪತ್ನಿ ವಿನೋದ ಭಾಗವತ್‌. +ದರ್ಶನ್‌, ಪೂಜಾ ಮಕ್ಕಳು. +ಶಿರಸಿ ಟಿ.ಎಸ್‌.ಎಸ್‌ ಅಭಿಮಾನಿ ಸಂಘ,ಬೆಂಗಳೂರು, ಮುಂಬೈ ಅಭಿಮಾನಿಗಳ ಬಳಗದಿಂದಲೂ ಶ್ರೀಯುತರು ಸಂಮಾನ ಪಡೆದಿರುತ್ತಾರೆ. +ಬಡಗುತಿಟ್ಟಿನ ಸಂಪ್ರದಾಯ ಸಾರವನ್ನು ಘನೀಕರಿಸಿಕೊಂಡು ಪೌರಾಣಿಕ ಪಾತ್ರಗಳಲ್ಲಿ ತನ್ನದೇ ವಿಶೇಷ ಕಲಾಪ್ರೌಢಿಮೆ ಕಾಣಿಸುವ ಕಲಾವಿದ ಸಂಪನ್ನಕಟ್ಟಿನ ಬೈಲು ಶಿವರಾಮ ಶೆಟ್ಟಿ . +ಕುಂದಾಪುರ ತಾಲೂಕಿನ ಕಟ್ಟಿನಬೈಲು ಎಂಬ ಹಳ್ಳಿಯಲ್ಲಿ 1963ರಲ್ಲಿ ಜನಿಸಿದ ಶಿವರಾಮ ಶೆಟ್ಟರು,ಕುಷ್ಠಪ್ಪ ಶೆಟ್ಟಿ - ಚಂದಮ್ಮ ಶೆಡ್ತಿ ದಂಪತಿಯ ಸುಪುತ್ರ ಸುತ್ತಮುತ್ತಲಿನ ಬಯಲಾಟಗಳ ಪ್ರೇರಣೆಯಿಂದ ಕಲಾಜೀವನದ ಕನಸುಕಂಡ ಶಿವರಾಮಶೆಟ್ಟರು, 5ನೇ ಇಯತ್ತೆಯ ನಂತರ 14ನೇ ವಯಸ್ಸಿನಲ್ಲೇ ಯಕ್ಷಜಗತ್ತಿಗೆ ಹೆಜ್ಜೆಯೂರಿದರು. +ಐರಬೈಲು ಆನಂದ ಶೆಟ್ಟರ ಪ್ರೇರಣೆಯಿಂದ ಕಲಾಬದುಕಿನ ಮಾರ್ಗವನ್ನು ಸುಸಾಂಗವಾಗಿಸಿಕೊಂಡ ಶಿವರಾಮ ಶೆಟ್ಟರು, ಸರ್ವೋತ್ತಮ ಗಾಣಿಗ ಹಾರಾಡಿ ಹಾಗೂ ಐರಬೈಲು ಆನಂದ ಶೆಟ್ಟರ ಶಿಷ್ಯನಾಗಿ ಉನ್ನತ ಕಲಾವಿದ್ಯೆಯನ್ನು ಮೈಗೂಡಿಸಿಕೊಂಡರು. +ಶ್ರೀಯುತರ ಗತ್ತು-ಗಾಂಭೀರ್ಯದ ರಂಗನಡೆ,ತೂಕದ ವಾಕ್‌ವೈಖರಿ, ನಡುತಿಟ್ಟಿನ ಸೊಗಡು ಮೆರೆಯುವ ವೇಷವೈಭವ ಮನಮೆಚ್ಚುವಂತಹುದು. +ಪಾತ್ರ ಮೆರೆಸುವಂತಾದ್ದು. +ಮುಂಡಾಸು ವೇಷಗಳ ನಿರ್ವಹಣೆಯಲ್ಲಂತೂ ಶ್ರೀಯುತರ ಕಲಾಪ್ರತಿಭೆ ಉತ್ಕೃಷ್ಟಮಟ್ಟದ್ದು ಎನ್ನಬಹುದಾಗಿದೆ. +ಮಾರಣಕಟ್ಟೆ 3, ಕಮಲಶಿಲೆ 7, ಕಳವಾಡಿ 1,ಮಡಾಮಕ್ಕಿ 8, ಸೌಕೂರು 7, ಹಾಲಾಡಿ 6, ಹೀಗೆ 32ವರ್ಷಗಳ ಕಲಾ ವ್ಯವಸಾಯವನ್ನು ಯಶಸ್ವೀಯಾಗಿ ಪೂರೈಸಿದ ಶೆಟ್ಟರು ಪ್ರಸ್ತುತ ಹಾಲಾಡಿ ಮೇಳದ ಕಲಾವಿದರು. +ಶ್ರೀಯುತರ ಕೌಂಡ್ಲೀಕ, ದಮನ, ವೀರಮಣಿ,ಸುಲೋಚನಾ, ವಿಭೀಷಣ, ವೃಷಕೇತು ಮೊದಲಾದ ಮುಂಡಾಸುವೇಷಗಳು ಪ್ರೇಕ್ಷಕರ ಮನೋಭೂಮಿಕೆಗಳಲ್ಲಿ ಗಟ್ಟಿಸ್ಥಾನ ಪಡೆದಿವೆ. +ಕಸ್ತೂರಿಶೆಟ್ಟಿ ಶ್ರೀಯುತರ ಬಾಳ ಸಂಗಾತಿ. +ನವೀನ, ನಯನ ಮಕ್ಕಳು. +ಅನುಭವಪೂರ್ಣ, ಕಲಾವಿದ ಕಟ್ಟಿನಬೈಲು ಶಿವರಾಮ ಶೆಟ್ಟರು ಹಲವು ಸಂಘ-ಸಂಸ್ಥೆಗಳಿಂದ ಸಂಮಾನ ಪಡೆದಿದ್ದಾರೆ. +ಮಂಗಳೂರಿನ ಜಾಗತಿಕ ಬಂಟಪ್ರತಿಷ್ಠಾನದ ಗೌರವ ಪ್ರಶಸ್ತಿಯೂ ಇವರಿಗೆ ದೊರಕಿರುತ್ತದೆ. +ಬಡಗುತಿಟ್ಟು ಯಕ್ಷಗಾನದ ಚಂಡೆವಾದನದಲ್ಲಿ ಸಿದ್ಧಿ ಪ್ರಸಿದ್ಧಿಯನ್ನು ಕಂಡ ಪ್ರಬುದ್ಧ ಚಂಡೆವಾದಕ ಶಿವಾನಂದ ಕೋಟ. +ಉಡುಪಿ ಜಿಲ್ಲೆಯ ಗಿಳಿಯಾರು ಗ್ರಾಮದ ಕೋಟದ ರಾಮಕೃಷ್ಣ ಮೆರಟ-ಜಲಜಾಕ್ಷಿ ದಂಪತಿಯ ಸುಪುತ್ರರಾಗಿ 10-9-1967ರಲ್ಲಿ ಜನಿಸಿದ ಶಿವಾನಂದಕೋಟ ಅವರು 7ನೇ ತರಗತಿಯವರೆಗೆ ಅಕ್ಷರಾಭ್ಯಾಸಮಾಡಿ 13ರ ಹರೆಯದಲ್ಲೇ ಯಕ್ಷಲೋಕ ಪವೇಶಿಸಿದ ಸಂಪನ್ನ ಪ್ರತಿಭೆ. +ಕೋಟದ "ಯಕ್ಷತರಂಗ' ಬಾಲಕರ ಮೇಳದ ಬಾಲಕಲಾವಿದನಾಗಿ ಎಂ.ಎನ್‌.ಮಧ್ಯಸ್ಥರ ಯಕ್ಷಗಾನ ತರಬೇತಿಯ "ಗಣೇಶೋತ್ಪತ್ರಿ' ಪ್ರಸಂಗದಲ್ಲಿ"ಭೃಂಗಿ'ಯಾಗಿ ರಂಗಮಂಚವೇರಿದ ಶಿವಾನಂದ ಮತ್ತೆ ಯಕ್ಷಗಾನವನ್ನೇ ವೃತ್ತಿ-ಯಾಗಿಸಿಕೊಂಡರು. +ಯಕ್ಷಗಾನದ ವೀರವಾದ್ಯವೆನಿಸಿದ ಚಂಡೆಯ ನಾದಮಾಧುರ್ಯಕ್ಕೆ ಮನಸೋತ ಶಿವಾನಂದರಿಗೆ ಎಳವೆಯಲ್ಲಿ “ಹಳೇ ಪಾತ್ರೆ-ಹಳೇ ಡಬ್ಬಿ'ಯೇ ಚಂಡೆಯಾಗಿದ್ದುವು. +ಇಂತಹ ವಾದನಾಸಕ್ತಿ ಮುಂದೆ ಇವರ ಕೈ ಚುರುಕಾಗಿಸಿತು. +ಸುತ್ತಮುತ್ತಲಿನ ಬಯಲಾಟಗಳ ಚಂಡೆಯ ಗಂಡುದ್ದನಿ ಇವರ ಗುಂಡಿಗೆಯನ್ನು ತುಂಬಿಕೊಂಡಿತು. +ಚಂಡೆವಾದನ ಕಲಿಕೆಯಲ್ಲಿ ಇವರದ್ದು ಆರಂಭಿಕ “ಏಕಲವ್ಯ ಪ್ರಯೋಗ'ವಾಯಿತು. +ತದನಂತರ ಸುಪ್ರಸಿದ್ಧ ಚಂಡೆಗಾರ ಮಂದಾರ್ತಿ ರಾಮಕೃಷ್ಣರ ಗುರುತನ, ಹೊಳೆಗದ್ದೆ ಗಜಾನನ ಭಂಡಾರಿಯವರ ಮಾರ್ಗದರ್ಶನ ದೊರಕಿ,ಚಂಡೆಗಾರಿಕೆಯಲ್ಲಿ ಸ್ಪಷ್ಟ ಆಯಾಮವನ್ನು ಕಂಡುಕೊಳ್ಳುವುದಕ್ಕೆ ಸುಲಭ ಸಾಧ್ಯವಾಯಿತು. +ಮೊದಲು ವೃತ್ತಿರಂಗಭೂಮಿಯಲ್ಲಿ ವೇಷಧಾರಿಯಾಗಿ ಗುರುತಿಸಿಕೊಂಡ ಶಿವಾನಂದರನ್ನು ಹಿರಿಯ ಭಾವಗವತ ನಾರ್ಣಪ್ಪ ಉಪ್ಪೂರರೇ ಅಮೃತೇಶ್ವರಿ ಮೇಳಕ್ಕೆ ಸೇರ್ಪಡೆ ಗೊಳಿಸಿದರು. +ಆ ಮೇಳದಲ್ಲಿ ಬಾಲಗೋಪಾಲನಾಗಿ ಕುಣಿಯುತ್ತಿದ್ದ ಶಿವಣ್ಣ ಮುಂದೆ ಶಿರಸಿ ಪಂಚಲಿಂಗೇಶ್ವರ ಮೇಳದಲ್ಲಿ ಸಹ ಚಂಡೆವಾದಕರಾಗಿ ಕಲಾವಿದರನ್ನು ಕುಣಿಸಿ,ಜನಮನ ತಣಿಸಿದರು. +ಅಮೃತೇರ್ಶವರಿ ಮೇಳದಲ್ಲಿ 3ವರ್ಷ ವೇಷಧಾರಿಯಾಗಿ, ಶಿರಸಿ ಪಂಚಲಿಂಗ 1, ಕೋಟ ಹಿರೇಮಹಾಲಿಂಗೇಶ್ವರ ಮೇಳ 1, ಸಾಲಿಗ್ರಾಮ ಮೇಳ 25 ಹೀಗೆ 30ವರ್ಷಗಳ ಕಲಾ ತಿರುಗಾಟದಲ್ಲಿ ಶಿವಾನಂದ ಕೋಟ ಅನುಭವಿ ಚಂಡೆಗಾರರಾಗಿ ಖ್ಯಾತಿ ಪಡೆದಿದ್ದಾರೆ. +ಪ್ರಸಂಗದ ಅಂತರಂಗ ಭಾವ, ಪಾತ್ರಗಳಸ್ವಭಾವ, ಸನ್ನಿವೇಶ ಅರ್ಥೈಸಿಕೊಂಡು ನವಿರಾದ ನುಡಿಸಾಣಿಕೆಯಲ್ಲಿ ಮೆರೆಯುವ ಶಿವಾನಂದ ಕೋಟಅವರ ಕಾಶೀಮಾಣಿ ಪಾತ್ರ ಜನಪ್ರಿಯ. + ಪತ್ನಿ ಸುರೇಖಾ. + ಸಂಧ್ಯಾ, ಶಶಿಧರ ಮಕ್ಕಳು. +ಉತ್ಸಾಹಿ ಚಂಡೆವಾದಕ ಕೋಟ ಶಿವಾನಂದ ಅವರು ನವದೆಹಲಿಂಗುಲ್ಲಿ 1992ರಲ್ಲಿ ನಡೆದ"ಪೂಲ್‌ವಾಲೋಂಕಿ ಸೈರ್‌' ಮಹೋತ್ಸವದಲ್ಲಿ ಗೌರವ ಸಂಮಾನ ಸ್ವೀಕರಿಸಿದ್ದಾರೆ. +ಹೈದರಾಬಾದ್‌-ಕರ್ನಾಟಕ ಸಂಘವತಿಯಿಂದ ಬೆಂಗಳೂರು, ಮುಂಬೈ, ಕುಮಟಾ,ಮೊದಲಾದ ಕಡೆಗಳಲ್ಲಿ ಗೌರವ ಸಂಮಾನ ಪಡೆದಿದ್ದಾರೆ. +ಬಡಾಬಡಗಿನ ಪ್ರಸಿದ್ಧ ಕೆರೆಮನೆಯ,ಕಲಾಕುಟುಂಬದ ಮೂರನೇ ಪೀಳಿಗೆಯ ಪ್ರಬುದ್ಧ ಕಲಾವಿದ ಕೆರೆಮನೆ ಶಿವಾನಂದ ಹೆಗಡೆ. +ಉತ್ತರ ಕನ್ನಡದ ಹೊನ್ನಾವರ ತಾಲೂಕಿನ ಗುಣವಂತೆಯಲ್ಲಿ 24-10-1961ರಲ್ಲಿ ಜನಿಸಿದ ಶಿವಾನಂದ ಹೆಗಡೆ, ಯಕ್ಷಗಾನ ವರನಟ ಕೆರೆಮನೆ ಶಂಭು ಹೆಗಡೆ ಹಾಗೂ ಗೌರಿ ಶಂಭು ಹೆಗಡೆ ದಂಪತಿಯ ಸುಪುತ್ರ. +ಮನೆತನದ ಕಲಾಪರಂಪರೆಯ ಪ್ರಭಾವದಿಂದ ತನ್ನ 12ರ ಹರೆಯದಲ್ಲೇ ಇವರು ಬಣ್ಣ ಹಚ್ಚಿದರು. +ಅಪ್ರತಿಮ ಕಲಾವಿದ ಅಜ್ಜ ಶಿವರಾಮ ಹೆಗಡೆ ಹಾಗೂ ತಂದೆ ಶಂಭು ಹೆಗಡೆಯವರ ಸಮರ್ಥ ಮಾರ್ಗದರ್ಶನ ಇವರನ್ನು ಸಮರ್ಥ ಕಲಾವಿದನನ್ನಾಗಿ ರೂಪಿಸುವಲ್ಲಿ ಶಕ್ತವಾಯಿತು. +ಅಜ್ಜ, ತಂದೆ, ದೊಡ್ಡಪ್ಪ (ಕೆರೆಮನೆ ಮಹಾಬಲ ಹೆಗಡೆ), ಚಿಕ್ಕಪ್ಪ (ಕೆರೆಮನೆ ಗಜಾನನ ಹೆಗಡೆ),ಎಲ್ಲರೂ ಈ ರಂಗದ ಶ್ರೇಷ್ಠ ಕಲಾವಿದರಾಗಿ ಸಾರ್ಥಕ ಕೀರ್ತಿ ಸಂಪಾದಿಸಿದ್ದರು. +ಹಾಗಾಗಿ ಆನುವಂಶೀಯ ಕಲಾಬಳುವಳಿ ಇವರನ್ನು ಗಾಡವಾಗಿ ಬೆಸೆದುಕೊಂಡಿದೆ. +ಅಜ್ಜ ಶಿವರಾಮಹೆಗಡೆ ಹಾಗೂ ಕುಟುಂಬದ ಎಲ್ಲಾ ಹಿರಿಯ ಕಲಾವಿದರು, ಹೊಸ್ತೋಟ ಮಂಜುನಾಥ ಬಾಗವತರು, ಹೆರಂಜಾಲು ವೆಂಕಟರಮಣ, ಮಲ್ಗದ್ದೆ ಗಣೇಶ ಹೆಗಡೆ, ಕರ್ಕಿ ನಾರಾಯಣ ಹಾಸ್ಯಗಾರ್‌ ಇವರಿಗೆ ಗುರುಬಲವಾದರು. +ಶಿವಾನಂದ ಹೆಗಡೆಯವರು ಪುರುಷ ವೇಷ ಹಾಗೂ ಸ್ತ್ರೀವೇಷಗಳನ್ನು ಸಮರ್ಥವಾಗಿ ನಿರ್ವಹಿಸುವವರು. +ಶ್ರೀಯುತರ ಶ್ರೀಕೃಷ್ಣ ಕಾರ್ತವೀರ್ಯ ರಾವಣ, ಸುಧೇಷ್ಟೆ, ದ್ರೌಪದಿ, ಕೌರವ, ಜರಾಸಂಧ,ಭೀಮ, ಬಲರಾಮ, ಶ್ರೀರಾಮ, ಸಾಲ್ವ, ಭೀಷ್ಯ ಸುಧನ್ವ,ಅರ್ಜುನ, ಧರ್ಮಾಂಗದ, ಹನುಮಂತ ಪಾತ್ರಗಳು ಜನಪ್ರಿಯ. +ಗುಂಡಬಾಳ ಮೇಳದಲ್ಲಿ 2 ವರ್ಷ,ಪಂಚಲಿಂಗ-ಇಡಗುಂಜಿ ಮೇಳದಲ್ಲಿ ಕಲಾ ಸೇವೆ ನಡೆಸಿದ ಶಿವಾನಂದ ಹೆಗಡೆ ಸ್ವಯಂ ಸಂಚಾಲಕತ್ವದ ಇಡಗುಂಜಿ ಮೇಳದ ಪ್ರಧಾನ ಕಲಾವಿದರು. +ಇಡಗುಂಜಿ ಯಕ್ಷಗಾನ ಕೇಂದ್ರದ ನಿರ್ದೇಶಕರು. +ದೇಶ-ವಿದೇಶಗಳಲ್ಲಿ ಇವರ ಕಲಾಪ್ರತಿಭೆ ಮೆರೆದಿದೆ. +ಬಿ.ಎ.ಪೂರೈಸಿದ ಇವರು ಶ್ರೀಮತಿ ಮಾಯಾರಾವ್‌ ಅವರ ನಿರ್ದೇಶನದಲ್ಲಿ ಕೊರಿಯೋಗ್ರಫಿ ಡಿಪ್ಲೋಮಾ ಮಾಡಿದರು. +ಕಥಕ್‌ಮತ್ತಿತರ ಜಾನಪದ ನೃತ್ಯಕಲೆಯನ್ನು ಬಲ್ಲರು. +ಶ್ರೀಯುತರು ಅನೇಕ ದಾರವಾಹಿಗಳಲ್ಲಿ ಅಭಿನಯಿಸಿದ್ದಾರೆ. +ಅನೇಕ ನಾಟಕಗಳನ್ನು ನಿರ್ದೇಶಿಸಿದ್ದಾರೆ. +ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. +ಇವರ ಧರ್ಮಪತ್ನಿ ರಾಜೇಶ್ವರಿ ಹೆಗಡೆ. +ಶ್ರೀಧರ ಹೆಗಡೆ, ಶಶಿಧರ ಹೆಗಡೆ ಇವರ ಮಕ್ಕಳು. +ಇವರಿಗೆ ಭಾರತ ಸರಕಾರದ ಶಿಷ್ಯವೇತನ ಹಾಗೂ ನೂರಾರು ಸಂಮಾನ ದೊರಕಿದೆ. +ಹಲವು ಬಾರಿ ವಿದೇಶ ಪ್ರಯಾಣ ಮಾಡಿ ಅಲ್ಲೂ ಕಲೆಯ ಪ್ರಸಾರಕ್ಕೆ ನೆರವಾಗಿದ್ದಾರೆ. +ನೀಳವಾದ ಆಳಂಗ, ಗತ್ತು ಗೈರತ್ತಿನ ನೃತ್ಯವೈಖರಿ, ಗಂಭೀರ ಸ್ವರಭಾರ, ಸಾಂಪ್ರದಾಯಿಕ ಪಾತ್ರ ಕಟ್ಟೋಣ. +ಇಂತಹ ರಂಗಾಂಗ ಶೋಭಿತ ಹಿರಿಯ ವೇಷಧಾರಿ ಶೀನ ಕುಲಾಲ್‌ ಗಾವಳಿ. +ಕುಂದಾಪುರ ತಾಲೂಕಿನ ಪುಟ್ಟ ಹಳ್ಳಿಯೆನಿಸಿದ ಗಾವಳಿ ಎಂಬಲ್ಲಿ 19-3-1949ರಲ್ಲಿ ಬಚ್ಚ ಕುಲಾಲ್‌-ಕೊಲ್ಲು ಕುಲಾಲ್ತಿ ದಂಪತಿಯ ಸುಪುತ್ರನಾಗಿ ಜನಿಸಿದ ಶೀನ ಕುಲಾಲರು 2ನೇ ತರಗತಿಗೆ ಶರಣು ಹೊಡೆದು,ತನ್ನ 25ನೇ ವಯಸ್ಸಿನಲ್ಲಿ ಯಕ್ಷಗಾನ ರಂಗ ಜೀವನಕ್ಕೆ ಮುಂದಾದರು. +ಆರ್ಥಿಕ ಅನಾನುಕೂಲತೆಯಿಂದ ಸಂಕಟಪಡುತ್ತಿದ್ದ ಕುಟುಂಬ ನಿರ್ವಹಣೆಗೆ ಯಕ್ಷಗಾನ ಬಣ್ಣ-ನೂಪುರದ ಸಾಂಗತ್ಯ ಲೇಸೆಂದು ಬಗೆದ ಶೀನಕುಲಾಲರು ಸ್ವಯಂ ಪ್ರೇರಣೆ ಆಸಕ್ತಿಯಿಂದ ಈ ರಂಗಬದುಕಿಗೆ ಜೊತೆಯಾದರು. +ಬಾಬು ಕುಲಾಲಗಾವಳಿ ಹಾಗೂ ಮಜ್ಜಿಗೆ ಬೈಲು ಚಂದಯ್ಯ ಶೆಟ್ಟರ ಗುರುತನದಲ್ಲಿ ವ್ಯವಸ್ಥಿತ ಕಲಾವಿದ್ಯೆಯನ್ನು ಗಳಿಸಿದ ಶ್ರೀಯುತರು ಹಂತ ಹಂತವಾಗಿ ಬೆಳೆದು ಸುಯೋಗ್ಯ ಕಲಾವಿದರಾಗಿ ರೂಪುಗೊಂಡರು. +ಮಾರಣಕಟ್ಟೆ 7, ಕಮಲಶಿಲೆ 7, ಹಾಲಾಡಿ 7,ಬಗ್ಡಾಡಿ 1! ಮಂದಾರ್ತಿ 8, ಕಳವಾಡಿ 1, ಸೌಕೂರು1, ಪೆರ್ಡೂರು 1, ಅಮೃತೇಶ್ವರಿ, ಸಾಲಿಗ್ರಾಮ 1,ಹೀಗೆ 35 ವರ್ಷಗಳ ನಿರಂತರ ಕಲಾ ವ್ಯವಸಾಯದಲ್ಲಿ ಯಶಸ್ಸು ಸಂಪಾದಿಸಿದರು. +ಪೌರಾಣಿಕ ಕಥಾನಕಗಳ ಪ್ರಧಾನರಾಜವೇಷಗಳನ್ನೂ ಮುಂಡಾಸು ವೇಷಗಳನ್ನು ಸುಪುಷ್ಟವಾಗಿ ಪೋಷಿಸುವ ಶ್ರೀಯುತರ ರಂಗವಾಗ್ಮಿತೆ ಪ್ರೌಢವಾದುದು. +ಕರ್ಣ, ಶಲ್ಯ, ಶಂತನು, ಕೌರವ, ಜಾಂಬವ,ಬಲರಾಮ, ವೀರಮಣಿ ಶತ್ರುಘ್ನ, ಭಗದತ್ತ, ಶನೀಶ್ವರ ಮೊದಲಾದ ಪಾತ್ರಗಳಿಗೆ ತನ್ನದೇ ಕಲಾಮೆರುಗು ನೀಡಿರುವರು. +ಪತ್ನಿ ಪಾರ್ವತಿ. +ಸೌಮ್ಯ, ಗೀತಾ, ಉದಯ,ಸುರೇಂದ್ರ ಮಕ್ಕಳು. +ಹಿರಿಯ ಕಲಾವಿದ ಶೀನಕುಲಾಲರನ್ನು ಡಾ.ಜಿ.ಶಂಕರ್‌ ಫ್ಯಾಮಿಲಿ ಟ್ರಸ್ಟ್‌,ಯಶಸ್ವೀ ಕಲಾವೃಂದ ತೆಕ್ಕಟ್ಟಿ ಮೊದಲಾದ ಸಂಘ-ಸಂಸ್ಥೆಗಳು ಗುರುತಿಸಿ ಗೌರವಿಸಿವೆ. +ಬಡಗುತಿಟ್ಟಿನ ಯಕ್ಷಗಾನ ರಂಗದ ಪೂರ್ವಾನುಗತವಾದ ಕಲಾಶೈಲಿಯನ್ನು ಬಣ್ಣದ ಬದುಕಿನುದ್ದಕ್ಕೂ ಪಾಲಿಸಕೊಂಡು ಬಂದ ಅಗ್ರಮಾನ್ಯ ವೇಷಧಾರಿ ಜಮದಗ್ನಿ ಶೀನ ನಾಯ್ಕ್‌. +“ಜಮದಗ್ನಿ ಶೀನ' ಅನ್ನುವ ಅನ್ವರ್ಥ ನಾಮದಿಂದಲೇ ಚಿರಪರಿಚಿತರಾದ ಶ್ರೀಯುತರು ಇದೀಗ 69ರ ಹರೆಯದಲ್ಲಿರುವ ಹಿರಿಯ ಪ್ರತಿಭೆ. +ಇವರ ಹುಟ್ಟೂರು ಕುಂದಾಪುರ ತಾಲೂಕಿನ ಜನ್ನಾಡಿ. +ತಂದೆ ಕುಷ್ಠ ಮೊಗವೀರ, ತಾಯಿ ಶ್ರೀಮತಿ ಲಚ್ಚಿ. +ಮನೆಯಲ್ಲಿ ಕಿತ್ತು ತಿನ್ನುವ ಬಡತನ ಶೀನ ಅವರನ್ನು ಶಾಲಾ ಶಿಕ್ಷಣವನ್ನು ಎರಡನೇ ತರಗತಿಗಷ್ಟೇ ಸೀಮಿತಗೊಳಿಸಿತು. +ಸುತ್ತಮುತ್ತ ನಡೆಯುತ್ತಿದ್ದ ಯಕ್ಷಗಾನ ಆಟ-ಕೂಟಗಳ ಆಕರ್ಷಣೆ ವೃತ್ತಿ ಬದುಕಿಗೆ ಪ್ರೇರೇಪಿಸಿತು. +ಬಣ್ಣದ ಸಂಜೀವಯ್ಯನವರಲ್ಲಿ ಪ್ರಾಥಮಿಕ ಯಕ್ಷ ಶಿಕ್ಷಣ ಪಡೆದ ಅವರು ತನ್ನ 13ರ ಹರೆಯದಲ್ಲೇ ರಂಗಮಂಚಕ್ಕೆ ಹೆಜ್ಜೆ ಹಾಕಿದರು. +ಗುರುವೀರಭದ್ರ ನಾಯಕ್‌, ಬಿ. ಶ್ರೀನಿವಾಸ ನಾಯ್ಕ,ವಂಡಾರು ಬಸವ ಹಾಗೂ ಪೆರ್ಡೂರು ರಾಮನವರ ಶಿಷ್ಯನಾಗಿ ಶಾಸ್ತ್ರೀಯ ಕಲಾವಿದ್ಯೆಂತುನನ್ನು ಸಮರ್ಪಕವಾಗಿ ಸಂಪಾದಿಸಿದ ಜಮದಗ್ನಿ ಶೀನನಾಯ್ಕರಿಗೆ ವೃತ್ತಿ ಮೇಳದಲ್ಲಿ ಶೇಷಗಿರಿ ಭಾಗವತರು, ಹಿರಿಯಡಕ ಗೋಪಾಲರಾಯರು ಹಾಗೂ ಚಂಡೆ ಕಿಟ್ಟನವರ ಪ್ರೋತ್ಸಹ, ಮಾರ್ಗದರ್ಶನ ಸುಪುಷ್ಟವಾಗಿ ದೊರಕಿತು. +ಮಂದಾರ್ತಿ, ಮಾರಣಕಟ್ಟೆ, ಪೆರ್ಡೂರು,ಅಮೃತೇಶ್ವರಿ, ಸಾಲಿಗ್ರಾಮ, ಪೊಳಲಿ, ಕೊಡವೂರು,ಗೋಳಿಗರಡಿ, ಹಾಲಾಡಿ, ಬಗ್ದಾಡಿ, ಕಮಲಶಿಲೆ,ಮೇಳಗಳಲ್ಲಿ ಸುದೀರ್ಫ್ಥ ಐವತ್ತು ವರುಷಗಳ ಕಾಲ ಕಲಾಸೇವೆ ನಡೆಸಿದ ಶೀನನಾಯ್ಕರು ಉಭಯತಿಟ್ಟುಗಳಲ್ಲೂ ವಿಜೃಂಭಿಸಿ ಗೆಲುವು ಕಂಡವರು. +ಶೀನನಾಯ್ಕರು ಆರಂಭಿಕ ವೃತ್ತಿಬದುಕಿನಲ್ಲಿ ಪ್ರಧಾನ ಸ್ರ್ತೀ ವೇಷಧಾರಿಯಾಗಿ ಖ್ಯಾತನಾಮರಾದವರು. +ಇವರ ಶಶಿಪ್ರಭೆ, ಮೀನಾಕ್ಷಿ, ದ್ರೌಪದಿ, ಸೀತೆ,ಚಿತ್ರಾಂಗದೆ, ಪ್ರಮೀಳೆ, ಮಂಡೋದರಿ, ಪಾತ್ರಗಳು ಜನಪ್ರಿಯವಾಗಿವೆ. +ಒಮ್ಮೆ ಮಾರಣಕಟ್ಟೆ ಮೇಳದಲ್ಲಿ ಪರಿಸ್ಥಿತಿಯ ಒತ್ತಡದಿಂದ "ರೇಣುಕಾ ಮಹಾತ್ಮ್ಯೆ'ಯ ಜಮದಗ್ನಿ ಪಾತ್ರ ನಿರ್ವಹಿಸಬೇಕಾಗಿ ಬಂದಿತು. +ಅಂದು ನಿರ್ವಹಿಸಿದ ಆ ಪಾತ್ರ ಅದೆಷ್ಟು ಜನ ಮೆಚ್ಚುಗೆಗಳಿಸಿತೆಂದರೆ ರಾತ್ರಿ ಬೆಳಗಾಗುವುದರೊಳಗೆ ಜನ್ನಾಡಿ ಶೀನನಾಯ್ಕರು “ಜಮದಗ್ನಿ ಶೀನ'ರಾಗಿ ಬಿಟ್ಟರು . +ಆನಂತರ ಪ್ರರುಷವೇಷಧಾರಿಯಾಗಿ, ಎರಡನೇವೇಷಧಾರಿಯಾಗಿ ಪೌರಾಣಿಕ ಭೂಮಿಕೆಗಳಿಗೆ ಜೀವತುಂಬಿದರು. +ಅರ್ಜುನ, ಜಾಂಬವ, ಭೀಮ, ಕೌರವ,ವಿಶ್ವಾಮಿತ್ರ, ಋತುಪರ್ಣ, ಪಾತ್ರಗಳಿಗೆ ತನ್ನದೇ ಶೈಲೀಕೃತ ವಿಶೇಷ ಮೆರುಗು ನೀಡಿದರು. +ಮಡದಿ ಕೊಲ್ಲು ಮೊಗೇರ್ಶಿ. +ಪ್ರಕಾಶ, ಪ್ರತಾಪ,ಮಹೇಶ, ದಿನೇಶ, ಮಾಲಿನಿ, ಶಾಲಿನಿ ಮಕ್ಕಳು. +ಪ್ರಬದ್ಧ ಕಲಾವಿದ ಜಮದಗ್ನಿ ಶೀನನಾಯ್ಕರು,ಹಲವಾರು ಸಂಘ ಸಂಸ್ಥೆಗಳ ಸಂಮಾನ ಪಡೆದಿದ್ದಾರೆ. +ಪಾರಂಪರಿಕ ಶೈಲಿಯಲ್ಲಿ ಬಣ್ಣಗಾರಿಕೆ,ನಾಟ್ಯಗಾರಿಕೆ, ಹಾಗೂ ಮಾತುಗಾರಿಕೆಯನ್ನು ರೂಢಿಸಿಕೊಂಡು ಮಾರಣಕಟ್ಟೆ ಮೇಳದ ಬಣ್ಣದ ವೇಷಧಾರಿಯಾಗಿ ಮನ್ನಣೆಯನ್ನು ಪಡೆದ ಹಿರಿಯ ಕಲಾವಿದರು ಶ್ರೀ ಬ್ರಹ್ಮೇರಿ ಶೀನನಾಯ್ಕ. +ಸುಬ್ಬಯ್ಯ ನಾಯ್ಕ-ಗಿರಿಜಾ ದಂಪತಿಯ ಪುತ್ರರಾಗಿ ಕುಂದಾಪುರ ತಾಲೂಕಿನ ಬ್ರಹ್ಮೇರಿ ಎಂಬಲ್ಲಿ ಜನಿಸಿದ ಶೀನನಾಯ್ಕರು 52ವರ್ಷದ ಹಿರಿತನದ ಕಲಾವಂತರು. +ಎಳವೆಯಲ್ಲಿ ಮೈಮನ ತುಂಬಿದ ಅನ್ಯಾದೃಶ ಯಕ್ಷಗಾನ ಕಲಾಸಕ್ತಿಯೇ ಇವರ ವೃತ್ತಿರಂಗಭೂಮಿಗೆ ಪ್ರೇರಣೆಯಾಯಿತೆನ್ನಬಹುದಾಗಿದೆ. +ಗುರುವೀರಭದ್ರನಾಯಕರ ಶಿಷ್ಯರಾದ ಬ್ರಹ್ಮೇರಿ ಶೀನನಾಯ್ಕರು ಯಕ್ಷಕಥಾನಕಗಳ ರಾಜವೇಷ,ಮುಂಡಾಸುವೇಷಗಳನ್ನು ನಿರ್ವಹಿಸುತ್ತಾ ಬಣ್ಣದವೇಷದಲ್ಲಿ ಖ್ಯಾತನಾಮವನ್ನು ಪಡೆದವರು. +ಶೀನನಾಯ್ಕರು 4ನೇ ತರಗತಿಗೆ ಶರಣು ಹೊಡೆದು, ತನ್ನ 18ನೇ ವಯಸ್ಸಿನಲ್ಲಿ ಯಕ್ಷಗಾನ ಪ್ರಪಂಚವನ್ನು ಪ್ರವೇಶಿಸಿದವರು. +ಮಾರಣಕಟ್ಟೆ ಮೇಳ 12, ಸೌಕೂರು 8, ಕಮಲಶಿಲೆ 4, ಹಾಲಾಡಿ 6,ಹೀಗೆ ಇವರ ಕಲಾವ್ಯವಸಾಯದ ಒಟ್ಟು ತಿರುಗಾಟ ಮೂವತ್ತು . +ಮಹಿಷಾಸುರ, ಹಿಡಿಂಬಾಸುರ, ಕೌಂಡ್ಲೀಕ,ಶೂರಸೇನ, ಶೂರ್ಪನಖಾ, ಘಟೋತ್ಕಚ ಮೊದಲಾದ ಭೂಮಿಕೆಗಳು ಶೀನನಾಯ್ಕರ ಉನ್ನತ ಪ್ರತಿಭೆಯಿಂದ ರಂಗಸ್ಥಳದಲ್ಲಿ ಮೆರೆದು ಕಲಾರಸಿಕರ ಶ್ಲಾಘನೆಗೆ ಪಾತ್ರವಾಗಿವೆ. +ಇವರ ಶ್ರೀಮತಿ ರತ್ನನಾಯ್ಕ. +ಮಂಜುನಾಥ,ವಿಶ್ವನಾಥ, ಜಗನ್ನಾಥ ಎಂಬ ಮೂವರು ಗಂಡುಮಕ್ಕಳು . +ಪ್ರಸ್ತುತ ಮಾರಣಕಟ್ಟೆ ಮೇಳದ ಬಣ್ಣದವೇಷಧಾರಿ-ಯಾಗಿ ಸಾರ್ಥಕ ಹೆಸರು ಗಳಿಸಿದ್ದಾರೆ. +ಪ್ರೌಢ ಕಲಾನುಭವದೊಂದಿಗೆ ಸಾಂಪ್ರದಾಯಿಕ ಆವರಣದಲ್ಲಿ ವಿಜೃಂಭಿಸುವ ಬ್ರಹ್ಮೇರಿ ಶೀನನಾಯ್ಕ ಅವರನ್ನು ಹಲವಾರು ಸಂಘಸಂಸ್ಥೆಗಳು ಗುರುತಿಸಿ ಸಂಮಾನಿಸಿವೆ. +ಪೌರಾಣಿಕ ಜ್ಞಾನ ಸಂಪತ್ತಿನಲ್ಲಿ ವ್ಯಾಕರಣ ಶುದ್ಧವಾಗಿ ಹೊರಹೊಮ್ಮುವ ಮಾತುಗಾರಿಕೆ,ಪಾತ್ರೋಚಿತವಾದ ನಾಟ್ಯ, ಅಭಿನಯ ಪದ್ಧತಿ,ಸುಂದರವಾದ ವೇಷವಿನ್ಯಾಸ, ಹೃದಯಸ್ಪರ್ಶಿ ಭಾವವಿಲಾಸ ನಿರ್ವಹಣಾ ಭೂಮಿಕೆಗಳಲ್ಲಿ ಸಮೃದ್ಧವಾಗಿ ಸಾಕಾರಗೊಳಿಸುವ ಪುರುಷವೇಷಧಾರಿ ಶ್ರೀಕಂಠ ಭಟ್‌ಎಚ್‌.ಎಸ್‌. +ಚಿಕ್ಕಮಂಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ಎಡ್ಲುಕುಡಿಗೆ ಎಂಬಲ್ಲಿ 30-7-1961ರಲ್ಲಿ ಶೇಷಗಿರಿ ಅಯ್ಯ-ವಿಶಾಲಾಕ್ಷಮ್ಮ ದಂಪತಿಯ ಸುಪುತ್ರರಾಗಿ ಜನಿಸಿದ ಶ್ರೀಕಂಠ ಭಟ್‌ ಅವರು, 7ನೇ ತರಗತಿಯವರೆಗಿನ ಅಕ್ಷರಾಭ್ಯಾಸದ ಬಳಿಕ, ತನ್ನ 15ರ ಹರೆಯದಲ್ಲಿ ಯಕ್ಷಗಾನ ರಂಗ ಪ್ರವೇಶಿಸಿದರು. +ಚಿಕ್ಕಂದಿನಿಂದಲೇ ಯಕ್ಷಗಾನ ಕಲೆಯ ಕುರಿತ ವಿಶೇಷ ಆಸಕ್ತಿ ಆಕರ್ಷಣೆ ಹೊಂದಿದ ಶ್ರೀಕಂಠಭಟ್ಟರು ಉಡುಪಿ ಯಕ್ಷಗಾನ ಕೇಂದ್ರದಲ್ಲಿ ನೀಲಾವರ ರಾಮ ಕೃಷ್ಣಯ್ಯ, ಶ್ರೀಧರ ಹೆಬ್ಬಾರ್‌ ಅವರ ಗುರುತನದಲ್ಲಿ ಸಶಕ್ತ ಯಕ್ಷಶಿಕ್ಷಣ ಪಡೆದವರು. +ಎಚ್‌.ಎಸ್‌.ಗೋಪಾಲ ಕೃಷ್ಣಯ್ಯನವರಲ್ಲಿ ಪ್ರಸಂಗಮಾಹಿತಿ ರಂಗನಡೆಯನ್ನು ಸುಪುಷಯವಾಗಿ ಸಂಪಾದಿಸಿದರು. +ಸಾಲಿಗ್ರಾಮ 1, ಪೆರ್ಡೂರು 1 ಶೃಂಗೇರಿ 1,ಕಮಲಶಿಲೆ 2, ಸೌಕೂರು 1, ಮಾರಣಕಟ್ಟೆ 4,ಅಮೃತೇಶ್ವರಿ 2, ನಾಗರಕೊಡಿಗೆ 1. ಮಂದಾರ್ತಿ13, ಗುತ್ತಿಯೆಡೆ ಹಳ್ಳಿ 4, ಹೀಗೆ ಮೂರು ದಶಕಗಳ ಕಲಾಯಾತ್ರೆಯಲ್ಲಿ ಶ್ರೀಕಂಠ ಭಟ್ಟರು ಸಾರ್ಥಕ ಕೀರ್ತಿ ಸಂಪಾದಿಸಿದ್ದಾರೆ. +ಪ್ರಸ್ತುತ ಹಿರಿಯಡಕ ಮೇಳದ ಕಲಾವಿದರಾಗಿ ಸೇವೆ ಸಲ್ಲಿಸುತ್ತಿದ್ದಾರೆ. +ಎಲ್ಲಾಬಗೆಯ ಗಂಡು ಪಾತ್ರಗಳನ್ನು ಭಟ್ಟರು ನಿರ್ವಹಿಸಬಲ್ಲರು. +ಸುಧನ್ವ, ಅರ್ಜುನ, ಬಬ್ರುವಾಹನ,ಶ್ವೇತಕುಮಾರ, ಶ್ರೀರಾಮ, ಶ್ರೀಕೃಷ್ಣ, ವಿಷ್ಣು ಚಂಡ-ಮುಂಡ, ಮಹಿಷಾಸುರ ಹನುಮಂತ, ಪರಶುರಾಮ ಮೊದಲಾದ ಪಾತ್ರಗಳು ಶ್ರೀಯುತರಿಗೆ ಜನಪ್ರಿಯತೆ ತಂದಿತ್ತಿವೆ. +ಅನೇಕ ಶಿಷ್ಯರಿಗೆ ನೃತ್ಯಶಿಕ್ಷಣ ನೀಡಿ ಕಲಾ-ವಿದರನ್ನಾಗಿ ರೂಪಿಸಿದ ಶ್ರೀಕಂಠಭಟ್ಟರಿಗೆ ಚಂಡೆಮದ್ದಳೆವಾದನ ಪರಿಣತಿಯೂ ಇದೆ. +ಪತ್ನಿ ಶಕುಂತಲಾ. +ಶ್ರೀರಕ್ಷಾ, ಶ್ರೀಲತಾ, ಶ್ರೀನಿಧಿ ಮಕ್ಕಳು. +ಹಲವಾರು ಸಂಘ ಸಂಸ್ಥೆಗಳು ಶ್ರೀಯುತರನ್ನು ಸಂಮಾನಿಸಿವೆ. +ಯಕ್ಷಗಾನದ ಕಲಾರಸಿಕರು ಚಪ್ಪರಿಸಿ ಚೇತೋಹಾರಿಗೊಳ್ಳಬಹುದಾದ ವಿನೋದ ವ್ಯಂಜನವನ್ನುಣಿಸುವ ದಕ್ಷ ಹಾಸ್ಯನಟ ಚಪ್ಪರಮನೆ ಶ್ರೀಧರ ನಾರಾಯಣ ಹೆಗಡೆ. +ಸಾಂಪ್ರದಾಯಿಕ ಸಮಕಾಲೀನ ಸ್ಥಿತಿ-ಗತಿಗನುಸಾರವಾದ ಪ್ರೌಢಹಾಸ್ಯಗಾರಿಕೆ ಶ್ರೀಧರ ಹೆಗಡೆಯವರ ಹೆಚ್ಚುಗಾರಿಕೆ. +6-11-1965ರಲ್ಲಿ ಸಿದ್ಧಾಮರದ ಚಪ್ಪರಮನೆ ಎಂಬಲ್ಲಿ ನಾರಾಯಣ ಹೆಗಡೆ-ಸೀತಾ ಹೆಗಡೆ ದಂಪತಿಯ ಮಗನಾಗಿ ಜನಿಸಿದ ಶ್ರೀಧರಹೆಗಡೆಯವರು ಎಂಟರ ಅಕ್ಷರ ಶಿಕ್ಷಣದ ತರುವಾಯ ಹದಿನೆಂಟಕ್ಕೇ ಯಕ್ಷಗಾನ ಕಲೆಯ ನೆಂಟತನ ಬಯಸಿದರು. +ಇವರ ತಂದೆ ವೇಷಧಾರಿ. +ಚಿಕ್ಕತಂದೆ ಭಾಗವತರು, ಹಾಗಾಗಿ ಶ್ರೀಧರ ಹೆಗಡೆಯವರಿಗೆ ಕಲೆ ಅಭಿಜಾತವಾಗಿ ಒದಗಿತು. +ಸಾಲಿಗ್ರಾಮ 2, ನಾಗರಕೊಡಿಗೆ 3, ಶಿರಸಿ 4,ಪೆರ್ಡೂರು 1, ಹೀಗೆ ಕಲಾಲೋಕದಲ್ಲಿ 10ವರುಷ ಸೇವೆ ಸಲ್ಲಿಸಿದವರು. +ಅನೇಕಾನೇಕ ವೃಶ್ತಿಮೇಳಗಳ ಅತಿಥಿ ಕಲಾವಿದರಾಗಿಯೂ ಕಲಾ ಕಾರ್ಯ ತತ್ಪರರು. +ಕುಂಜಾಲು ರಾಮಕೃಷ್ಣಯ್ಯ ಅವರ ಶಿಷ್ಯನಾದ ಶ್ರೀಧರ ಹೆಗಡೆಯವರಿಗೆ ಕುಂಜಾಲು ಅವರೊಂದಿಗೆ 4 ವರ್ಷಗಳ ಒಡನಾಟವೂ ಇದೆ. +ಹಾಗಾಗಿ ಕುಂಜಾಲು ಅವರ ಹಾಸ್ಯದ ಛಾಪು ಇವರ ಕೆಲವು ಪಾತ್ರಗಳಲ್ಲಿ ನಿಚ್ಚಳವಾಗಿ ಪಡಿ ಮೂಡುವುದನನ್ನು ಗುರುತಿಸಬಹುದಾಗಿದೆ. +ಹವ್ಯಾಸಿ ತಾಳಮದ್ದಳೆ ಅರ್ಥಧಾರಿಯೂ ಆಗಿರುವ ಶ್ರೀಧರ ಹೆಗಡೆಯವರ ಪ್ರಹ್ಲಾದ ಚರಿತ್ರೆಯ ದಡ್ಡ, ದಮಯಂತಿಯ ಬಾಹುಕ,ಚಂದ್ರಾವಳಿಯ ಚಂದಗೋಪ, ಬೇಡರಕಣ್ಣಪ್ಪದ ಕಾಶೀಮಾಣಿ ಗದಾಯುದ್ಧದ ಬೇಹುಚಾರಕ ಕಲಾಪ್ರಿಯರ ಮನ ಮೆಚ್ಚಿಸಿವೆ. +ಸುಸಂಸ್ಕೃತವಾದ ಹಾಸ್ಯಗಾರಿಕೆಯಲ್ಲಿ ಪೌರಾಣಿಕ ವೈಚಾರಿಕತೆಯ ರಸವೈಶಿಷ್ಟತೆಗಳನ್ನು ನವಿರಾಗಿ ಪ್ರಸ್ನುತಿಸುವ ಶ್ರೀಧರ ಹೆಗಡೆಯವರು ಕಲಾವರಣ ಮೀರದ ಸಮರ್ಥ ಹಾಸ್ಯಗಾರ. +ಪತ್ನಿ ಸಾವಿತ್ರಿ. +ಶ್ರೀಪಾದ, ಸಂದೇಶ ಈರ್ವರು ಪುತ್ರರು. +ಇವರನ್ನು ಕನ್ನಡ ಸಾಹಿತ್ಯ ಸಮ್ಮೇಳನ,ಹಲವಾರು ಸಂಘ ಸಂಸ್ಥೆಗಳು ಇವರನ್ನು ಗೌರವಿಸಿವೆ. +ಞರಾಣ ಭೂಮಿಕೆಗಳಲ್ಲಿ ತನ್ನದೇ ಗತ್ತು ಗಾಂಭೀರ್ಯಪೂರ್ಣ ಕಲಾವೈಭವವನ್ನು ಮೆರೆಯುವ ಪ್ರತಿಭಾವಂತ ಕಲಾವಿದ ನಾಗೂರು ಶ್ರೀನಿವಾಸ ದೇವಾಡಿಗ. +ಕುಂದಾಪುರ ತಾಲೂಕಿನ ನಾಗೂರು ಎಂಬಲ್ಲಿ ತಿಮ್ಮ ದೇವಾಡಿಗ-ಕಾವೇರಿ ದಂಪತಿಯ ಸುಪುತ್ರರಾಗಿ ಜನಿಸಿದ ಶ್ರೀಯುತರಿಗೆ ಪ್ರಾಯ ನಲವತ್ನಾಲ್ಕು. +ಎಂಟರ ವಿದ್ಯಾಭ್ಯಾಸ ಬಳಿಕ ಹದಿನೆಂಟರ ಹರೆಯದಲ್ಲೇ ಬಣ್ಣದ ಲೋಕದ ನಂಟು ಅಂಟಿಸಿಕೊಂಡ ಶ್ರೀನಿವಾಸ ದೇವಾಡಿಗರು ಗುರುವೆಂಕಟರಮಣ ಗಾಣಿಗರ ಶಿಷ್ಯನಾಗಿ ಸಾಂಪ್ರದಾಯಿಕ ಕಲಾ ಶಿಕ್ಷಣವನ್ನು ಪಡೆದರು. +ಯಾವುದೇ ಪುರುಷ ಪಾತ್ರಗಳಿಗೆ ಜೀವ ಚೈತನ್ಯ ನೀಡುವ ಕಲಾವಂತಿಕೆ ಹೊಂದಿದ ದೇವಾಡಿಗರು ಖಳಪಾತ್ರಗಳಲ್ಲೂ ವಿಶೇಷವಾಗಿ ಗುರುತಿಸಲ್ಪಡುತ್ತಾರೆ. +ಮುಂಡಾಸು ವೇಷಗಳಲ್ಲೂ ಇವರ ಕಲಾಪ್ರತಿಭೆ ಗಮನೀಯವಾದ್ದೇ. +ಸ್ವರಭಾರ, ನೃತ್ಯ, ಅಭಿನಯ,ರಂಗನಡೆ, ವೇಷಗಾರಿಕೆ, ಎಲ್ಲದರಲ್ಲೂ ಯಕ್ಷಗಾನೀಯ, ಸೊಗಡು ತೋರುವ ಶ್ರೀಯುತರ ಕರ್ಣ, ಶಲ್ಯ, ಭೀಮ, ಕೌರವ, ಕಂಸ, ಕಾಲನೇಮಿ,ರಾವಣ, ವಿಭೀಷಣ, ವೀರಮಣಿ ಪಾತ್ರಗಳು ಕಲಾರಸಿಕರ ಪ್ರೀತಿಗೆ ಪಾತ್ರವಾಗಿವೆ. +ಮಾರಣಕಟ್ಟೆ ಮೇಳವೊಂದರಲ್ಲೇ 26 ವರ್ಷಗಳ ಕಾಲ ರಂಗ ವ್ಯವಸಾಯ ಪೂರೈಸಿ ಅದೇ ಮೇಳದಲ್ಲಿ ಸಾರ್ಥಕ ಕಲಾ ಬದುಕು ನಡೆಸಿ ಪ್ರೇಕ್ಷಕರ ಮೆಚ್ಚುಗೆ ಗಳಿಸಿರುತ್ತಾರೆ. + ಪತ್ನಿ ಪಾರ್ವತಿ. +ಕಿರಣ್‌, ಕೀರ್ತನ್‌ ಮಕ್ಕಳು. +ಶ್ರೀಯುತರನ್ನು ಹಲವಾರು ಸಂಘ ಸಂಸ್ಥೆಗಳು ಗುರುತಿಸಿ ಗೌರವಿಸಿವೆ. +ಆಕರ್ಷಣೀಯ ರೂಪ, ಮಾಧುರ್ಯತೆಯ ಕಂಠ,ಲಾಲಿತ್ಯಪೂರ್ಣ ಹಾವ-ಭಾವ, ಸ್ಫುಟವಾದ ನೃತ್ಯಾಭಿನಯ ಸುಸಂಸ್ಕೃತ ವಾಚಿಕವೈಖರಿ. +ಇವೆಲ್ಲವನ್ನೂ ಸುಪುಷ್ಟವಾಗಿ ಮೈತುಂಬಿಕೊಂಡು ಯಕ್ಷಗಾನ ರಂಗಮಂಚದ ಹೆಣ್ಣಾಗಿ ಕಣ್ಮನ ಸೆಳೆಯುವ ಪ್ರಬುದ್ಧ ಸ್ತ್ರೀವೇಷಧಾರಿ ಶ್ರೀನಿವಾಸಭಟ್‌ನಾಗರಕೊಡಿಗೆ. +ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ನಾಗರಕೊಡಿಗೆಯೇ ಶ್ರೀನಿವಾಸಭಟ್ಟರ ಹುಟ್ಟೂರು. +ದಿನಾಂಕ 1-6-1969ರಲ್ಲಿ ಜನಿಸಿದ ಭಟ್ಟರು ಶ್ರೀ ಶಂಕರಯ್ಯ-ಜಯಮ್ಮ ದಂಪತಿಯ ಸುಪುತ್ರ . +7ನೇತರಗತಿಯವರೆಗೆ ವಿದ್ಯಾಭ್ಯಾಸ ಪೂರೈಸಿ, ಯಕ್ಷಗಾನ ರಂಗಭೂಮಿಗೆ ಧುಮುಕಿದ ಶ್ರೀನಿವಾಸಭಟ್ಟರಿಗೆ ನಾಗರಕೊಡಿಗೆ ರಾಮಕೃಷ್ಣಮೂರ್ತಿಯವರೇ ರಂಗಪ್ರೇರಣಾಶಕ್ತಿ. +ನಾಗರಕೊಡಿಗೆ ರಾಮಕೃಷ್ಣಮೂರ್ತಿ-ಬೆಳಿಯಾರು ಕೃಷ್ಣಮೂರ್ತಿ ಇವರ ಯಕ್ಷಗುರುಗಳು. +ಪೆರ್ಡೂರು 1, ಹಾಲಾಡಿ 1 ಕಳವಾಡಿ 1,ನಾಗರಕೊಡಿಗೆ 5, ಕಮಲಶಿಲೆ 7, ಸೌಕೂರು 6,ಸಾಲಿಗ್ರಾಮ 1, ಮಾರಣಕಟ್ಟೆ 5, ಹೀಗೆ 27ವರ್ಷಗಳ ಕಲಾಕೃಷಿಯಲ್ಲಿ ಭಟ್ಟರು ಧನ್ಯತೆ ಕಂಡವರು. +ಯಾವುದೇ ಗುಣಸ್ವಭಾವದ ಸ್ತ್ರೀಭೂಮಿಕೆಗಳನ್ನು ತನ್ನ ಪ್ರತಿಭಾ ಶಕ್ತಿಯಿಂದ ಸಂಪನ್ನಶೀಲಗೊಳಿಸುವ ಕಲಾವಂತಿಕೆ ಹೊಂದಿದ ಶ್ರೀನಿವಾಸ ಭಟ್ಟರು ನಿರ್ವಹಿಸಿದ ದ್ರೌಪದಿ, ಮೀನಾಕ್ಷಿ, ಶಶಿಪ್ರಭೆ, ಕಯಾದು,ಚಂದ್ರಾವಳಿ, ತಿಲೋತ್ತಮೆ, ದೇವಯಾನಿ ಮೊದಲಾದ ಪಾತ್ರಗಳು ಕಲಾರಸಿಕೆ ಜನಮನವನ್ನು ಸಂತೃಪ್ತಿಗೊಳಿಸುವಲ್ಲಿ ಯಶಸ್ವಿಯಾಗಿವೆ. +ಪತ್ನಿ ಶೈಲಜಾ. +ನಾಗೇಂದ್ರ, ನರೇಂದ್ರ ಮಕ್ಕಳು. +ಪ್ರಸ್ತುತ ಪ್ರಧಾನ ಸ್ತ್ರೀವೇಷಧಾರಿಯಾಗಿ ಮಾರಣಕಟ್ಟೆ ಮೇಳದಲ್ಲಿ ಸೇವಾನಿರತರಾಗಿದ್ದಾರೆ. +ಶ್ರೀಯುತರನ್ನು ಹಲವು ಸಂಘ-ಸಂಸ್ಥೆಗಳು ಗುರುತಿಸಿ ಸಂಮಾನಿಸಿವೆ. +ಯಕ್ಷಕಲಾ ಶ್ರೀಮದ್ಗಾಂಭೀರ್ಯದ ಸಂಪನ್ನ ಪ್ರತಿಭೆ ಥಂಡಿಮನೆ ಶ್ರೀಪಾದ ಭಟ್‌. +ಉತ್ತರ ಕನ್ನಡದ ಶಿರಸಿಯ ಕೋಳಿಗಾರ್‌ ಇವರ ಹುಟ್ಟೂರು. +ತಂದೆ ತಿಮ್ಮಣ್ಣಭಟ್ಟ ಥಂಡಿಮನೆ ತಾಯಿ ಗಿರಿಜಾ ತಿಮ್ಮ ಭಟ್ಟ,20-07-1963ರಲ್ಲಿ ಜನಿಸಿದ ಶ್ರೀಪಾದ ಭಟ್ಟರು ಬಾಲ್ಯದಲ್ಲಿಯೇ ಯಕ್ಷಕಲೆಗೆ ವಶವಾದರು. +ತನ್ನ 20ನೇ ವಯಸ್ಸಿನಲ್ಲಿಯೇ ಯಕ್ಷರಂಗಕ್ಕೆ ಹೆಜ್ಜೆ ಹಾಕಿದ ಭಟ್ಟರಿಗೆ ವೇಷಧಾರಿಯಾಗಿದ್ದ ತಂದೆ ತಿಮ್ಮಣ್ಣ ಭಟ್ಟರೇ ಪ್ರೋತ್ಸಾಹಕ ಚೈತನ್ಯವಾದರು. +ಹಿರಿಯಭಾಗವತ, ಯಕ್ಷಗಾನ ರಸಋಷಿ ಹೊಸ್ತೋಟ ಮಂಜುನಾಥ ಭಾಗವತರ ಬಲಿಷ್ಠವಾದ ಗುರುತನ ಇವರನ್ನು ಕಲಾವಿದನನ್ನಾಗಿ ರೂಪಿಸಿತು. +ಯಾವುದೇ ಪಾತ್ರಗಳ ಆಂತರಿಕ ಭಾವ ವೈವಿಧ್ಯವನ್ನು ಸಮೂಲ ಅರ್ಥೈಕ್ಯೆಯೊಂದಿಗೆ ಪ್ರೌಢ ಪ್ರತಿಭಾವಿಲಾಸದಲ್ಲಿ ರಂಗಸ್ಥಳದಲ್ಲಿ ಪ್ರಸ್ತುತ ಪಡಿಸುವ ಥಂಡಿಮನೆಯವರು ಪಾತ್ರನಿಷ್ಠೆಯಲ್ಲಿ ಎದ್ದು ಕಾಣುವ ಕಲಾವ್ಯಕ್ತಿತ್ವವನ್ನು ರೂಢಿಸಿಕೊಂಡವರು. +ಅವರ ಗತ್ತು-ಗೈರತ್ತು,ವಜೋವೈಖರಿ ಸುಪುಷ್ಟ ನೃತ್ಯಾಭಿನಯದ ಹದವಾದ ಎರಕ ಪೌರಾಣಿಕ ಭೂಮಿಕೆಗಳನ್ನು ಸಚೇತನವಾಗಿ ರಂಗದಲ್ಲಿ ತೆರೆದಿಡುತ್ತದೆ. +ನಾಯಕ, ಪ್ರತಿನಾಯಕ,ಖಳನಾಯಕ ಭೂಮಿಕೆಗಳನ್ನು ಸಾಂಪ್ರದಾಯಿಕ ಹೊಳಪು, ಸೃಜನಶೀಲ ಛಾಪಿನೊಂದಿಗೆ ಕಾಣಿಸುವ ಥಂಡಿಮನೆಯವರು ರಂಗವೇರಿದರೆ ಯಾವತ್ತೂ ಥಂಡಿಯಲ್ಲ. +ಬಿಸುಪು ಬಿರುಸಿನ ಉಠಾವು, ಕಾವು. +ಶಿರಸಿ-ಪಂಚಲಿಂಗ ಮೇಳ 5, ಶಿರಸಿ-ಮಾರಿಕಾಂಬಾ ಮೇಳ 3, ಸಾಲಿಗ್ರಾಮ 8,ಮಂದಾರ್ತಿ 6, ಪೆರ್ಡೂರು 3, ಹೀಗೆ ರಜತವರ್ಷದ ಸುದೀರ್ಥ ತಿರುಗಾಟ ಥಂಡಿಮನೆಯವರದ್ದು. +ಈಶ್ವರ,ದಶರಥ, ಭೀಷ್ಯ ಸಾಲ್ವ, ಕಾರ್ತವೀರ್ಯ, ಯಯಾತಿ,ಅರ್ಜುನ, ಕೀಚಕ, ಕಂಸ, ಭರತ, ತ್ರಿಶಂಕು, ರಾವಣ,ವಾಲಿ, ಭಸ್ಮಾಸುರ, ಶುಂಭಾಸುರ, ದುರ್ಜಯ,ಮಾಗಧ, ಕೌರವ ಹೀಗೆ ಪೌರಾಣಿಕ ವ್ಯಕ್ತಿ-ಶಕ್ತಿಗಳ ರಮ್ಯಾ ದ್ಭುತ ಕಲಾಸಂಪನ್ಮತೆ ಥಂಡಿಮನೆಯವರಲ್ಲಿ ಕಾಣಬಹುದಾಗಿದೆ. +ಪತ್ನಿ ಸುನೀತಾ ಶ್ರೀಪಾದ ಭ. + ಪುತ್ರ ಶ್ರೀಕಾಂತಭ. + ಸಂತೃಪ್ತ ಕಿರು ಸಂಸಾರ. +ಬೆಂಗಳೂರು ಸೇರಿ ಹಲವೆಡೆ ಇವರನ್ನು ಅಭಿಮಾನಿಗಳು ಸಮ್ಮಾನಿಸಿದ್ದಾರೆ. +ಪ್ರಗಲ್ಫ ಪಾಂಡಿತ್ಯಪೂರ್ಣ ಪ್ರೌಢ ಪ್ರತಿಭೆಯಲ್ಲಿ ವಿಜೃಂಭಿಸುವ ಹಿರಿಯ ಕಲಾವಿದ ಶ್ರೀಪಾದಹೆಗಡೆಯವರುಉತ್ತರ ಕನ್ನಡದ ಮಾಳಕೋಡು ಎಂಬಲ್ಲಿ ಹುಟ್ಟಿಬೆಳೆದ ಧೀಮಂತರು. +ಇವರ ತಂದೆ ಗಣೇಶ ಹೆಗಡೆ,ತಾಯಿ ಮಹಾಲಕ್ಷೀ ಹೆಗಡೆ. +30-9-1953ರಲ್ಲಿ ಜನಿಸಿದ ಶ್ರೀಪಾದ ಹೆಗಡೆಯವರು, 10ನೇ ತರಗತಿಯ ಬಳಿಕ ಯಕ್ಷಗಾನ ರಂಗ ಪ್ರವೇಶಿಸಿದರು. +26ನೇ ವಯಸ್ಸಿನಲ್ಲಿ ಬಣ್ಣದ ಬದುಕು ಕಂಡ ಶ್ರೀಪಾದ ಹೆಗಡೆಯವರಿಗೆ ಶ್ರೀ ಕ್ಷೇತ್ರ ಗುಂಡಬಾಳದಲ್ಲಿ ಬಾಲ್ಯದಲ್ಲಿ ನೋಡಿದ ಆಟಗಳು, ಮೇರು ತಾರೆಗಳಾದ ಕೆರೆಮನೆ ಮಹಾಬಲ ಹೆಗಡೆ, ಚಿಟ್ಟಾಣಿ, ಜಲವಳ್ಳಿಯವರ ವೇಷಗಳು ಪ್ರೇರಣೆ ನೀಡಿದುವು. +ಕೆರೆಮನೆ ಮಹಾಬಲ ಹೆಗಡೆಯವರ ಶಿಷ್ಯರಾದ ಇವರಿಗೆ ಸೋದರ ಮಾವ ಸತ್ಯ ಹೆಗಡೆ ಹಡಿನಬಾಳ ಅವರೂ ಗುರುವಾದರು. +ಗುಂಡಬಾಳ, ಅಮೃತೇಶ್ವರಿ,ಹಿರೇಮಹಾಲಿಂಗೇಶ್ವರ ಮೇಳ ಕೋಟ, ಪೆರ್ಡೂರು,ಬಚ್ಚಗಾರು, ಸಾಲಿಗ್ರಾಮ ಕೆರೆಮನೆ ಮಂದಾರ್ತಿಮೇಳಗಳಲ್ಲಿ ಸಾರ್ಥಕ ಕಲಾಕೃಷಿ ಸಾಗಿಸಿದ ಹಡಿನಬಾಳ ಅವರು ಈ ರಂಗಭೂಮಿಯಲ್ಲಿ 31ವರ್ಷ ತಿರುಗಾಟ ನಡೆಸಿದ್ದಾರೆ. +ಪಟ್ಟು ತೋರುವ ಮಾತಿನ ಪಟುತ್ವ,ಪಾತ್ರಕ್ಕೊಪ್ಪುವ ಕಲಾಬಿವ್ಯಕ್ತಿಯ ಸತ್ವ-ತತ್ವ,ನ್ಯಾಯೋಚಿತ ನೃತ್ಯಾಭಿನಯದ ಸಶಕ್ತತೆ, ಗಂಭೀರಕಳೆಯಲ್ಲಿ ಪುರಾಣ ವ್ಯಕ್ತಿ-ಶಕ್ತಿಗಳ ಅನಾವರಣ. +ವೈಶಿಷ್ಟ್ಯತೆ ಹಡಿನಬಾಳ ಅವರಲ್ಲಿ ನಿಚ್ಚಳವಾಗಿ ಗುರುತಿಸಬಹುದಾಗುತ್ತದೆ. + ದಕ್ಷ, ಈಶ್ವರ, ಶ್ರೀರಾಮ, ಆಂಜನೇಯ,ಅರ್ಜುನ, ಭೀಮ, ರಕ್ತಜಂಘ, ಮಾಗಧ, ಕಂಸ,ಶತ್ರುಘ್ನ, ಭೀಷ್ಮ ಪರಶುರಾಮ ಮೊದಲಾದ ಪಾತ್ರಗಳಿಗೆ ತನ್ನದೇ ಛಾಪು ನೀಡಿದ ಶ್ರೀಯುತರು ಅಂಬೆ, ಚಿತ್ರಾಂಗದೆಯಂತಹ ಸ್ತ್ರೀಭೂಮಿಕೆಗಳನ್ನೂ ನಿರ್ವಹಿಸಿದ್ದಾರೆ. +ಕೈಲಾಸ ಶಾಸ್ತ್ರಿಯೂ ಹೆಗಡೆಯವರ ಲಲಿತ ಗಂಭೀರ ಪಾತ್ರಗಳಲ್ಹೊಂದಾಗಿ ಜನಪ್ರಿಯತೆ ಪಡೆದಿದೆ. +ಉಪವೃತ್ತಿಯಾಗಿ ಮೃಣ್ಮಯ ಗಣೇಶಮೂರ್ತಿ ರಚನೆಯಲ್ಲಿ ತೊಡಗಿ-ಕೊಳ್ಳುವ ಹೆಗಡೆಯವರು ವಿಜಯಲಕ್ಷ್ಮೀ ಹೆಗಡೆಯವರನ್ನು ವರಿಸಿ, ಶ್ರೀಶ,ಜಗದೀಶ ಈರ್ವರು ಪುತ್ರರನ್ನೂ ಪಡೆದಿದ್ದಾರೆ. +ಮೇರು ಪ್ರತಿಭೆಯ ಹಡಿನಬಾಳ ಶ್ರೀಪಾದಹೆಗಡೆಯವರನ್ನು ಬೆಂಗಳೂರಿನ ಅಗ್ನಿಸೇವಾಟ್ರಸ್ಟ್‌ನ ಯಕ್ಷಗಾನ ಯೋಗಕ್ಷೇಮ ಸಂಸ್ಥೆಯವತಿಯಿಂದ ಗೌರವ ಪೂರ್ಣವಾಗಿಸ ವತ್ಮಾನಿಸಲಾಗಿದೆ. +ಯಾಜಿ ಯಕ್ಷ ಮಿತ್ರಮಂಡಳಿಯಿಂದ ಸಮ್ಮಾನಿಸಲ್ಪಟ್ಟಿದ್ದಾರೆ. +ಹಲವು ಸಂಘಸಂಸ್ಥೆಗಳು ಇವರನ್ನು ಗೌರವಿಸಿವೆ. +ಪ್ರಸನ್ನ ಚಿತ್ತದ ಮಡಿಮನಸ್ಸಿನ ಸುಂದರಲಕ್ಷಣವಾಗಿ ಮನುಷ್ಯನಿಗೆ ಸಹಜಧರ್ಮವಾದ ನಗುವನ್ನು ಸೊಗಸಾಗಿ ಕಲಾರಸಿಕರ ಮೊಗದಲ್ಲಿ ಅರಳಿಸುವ ಬಗೆಯನ್ನು ಬಲ್ಲ ಯಕ್ಷ ವಿನೋದ ವಿಶಾರದ ಶೇಖರ ಶೆಟ್ಟಿ ಎಳಬೇರು. +ಕುಂದಾಪುರ ತಾಲೂಕಿನ ಎಳಬೇರು ಎಂಬ ಹಳ್ಳಿಯಲ್ಲಿ 28-12-1968ರಲ್ಲಿ ಜನಿಸಿದ ಶೇಖರಶೆಟ್ಟರು ಗಣಪಯ್ಯ ಶೆಟ್ಟಿ-ಲಚ್ಚಮ್ಮ ಶೆಡ್ತಿ ದಂಪತಿಯ ಸುಪುತ್ರ. +ಎಳವೆಯಲ್ಲಿಯೇ ಯಕ್ಷಲೋಕದ ನಗೆಗಾರರಾಗುವ ಕನಸು ಕಂಡ ಶ್ರೀಯುತರು 7ನೇಇಯತ್ತೆಗೆ ಶರಣು ಹೊಡೆದು ಹಿರಿಯ ಹಾಸ್ಯಕಲಾವಿದ ಕಮಲಶಿಲೆ ಮಹಾಬಲ ದೇವಾಡಿಗರ ಶಿಷ್ಯತ್ವ ಸ್ವೀಕರಿಸಿ 12ನೇ ವಯಸ್ಸಿನಲ್ಲೇ ಗೆಜ್ಜೆ ಕಟ್ಟಿ ರಂಗಮಂಚದಲ್ಲಿ ಹೆಜ್ಜೆ ಹಾಕಿದರು. +ಖಚಿತ ಲಯಗಾರಿಕೆ, ಉಚಿತ ಮಾತುಗಾರಿಕೆ,ಹಾಸ್ಯಯುಕ್ತ ನೃತ್ಯಗಾರಿಕೆ, ಗಂಭೀರತೆಯ ರೂಕ್ಷವಿಜಾರ-ವೈವಿಧ್ಯತೆಯನ್ನು ರಂಜನೀಯವಾಗಿ ನಿರೂಪಿಸುವ ರಂಗಪ್ರಾವೀಣ್ಯತೆ, ಪಾತ್ರವರಿತು ನಡೆವ ಕಲಾ ಪ್ರೌಢತೆ ಶೇಖರ ಶೆಟ್ಟರಲ್ಲಿ ಹಾಸುಹೊಕ್ಕಾಗಿದೆಯೆನ್ನಬಹುದು. +ಬಗಾಡಿ ಮೇಳದಲ್ಲಿ 2ವರ್ಷ ಕಲಾವ್ಯವಸಾಯ ನಡೆಸಿದ ಶ್ರೀಯುತರು ಮಾರಣಕಟ್ಟೆ ಮೇಳದಲ್ಲಿ 24ವರ್ಷಗಳಿಂದ ರಂಗಕೃಷಿಯಲ್ಲಿದ್ದಾರೆ. +ಶೆಟ್ಟರ ಒಟ್ಟು ತಿರುಗಾಟದ ಅವಧಿ ಇಪ್ಪತ್ತಾರು ವರ್ಷ. +ಬಾಹುಕ, ಪಾಪಣ್ಣ, ಚಂದಗೋಪ, ವಿಜಯ,ನಂದಿಶೆಟ್ಟಿ, ದಾರುಕ, ಕಂದರ, ಮೊದಲಾದ ಪಾತ್ರಗಳಿಗೆ ಎಳಬೇರು ಅವರು ಯಕ್ಷಗಾನದ ಹಳೆಬೇರಿನಲ್ಲಿ ಹೊಸಚಿಗುರು ಮೂಡಿಸಿದ್ದಾರೆ. +ಶ್ರೀಯುತರ ಬಾಳ ಸಂಗಾತಿ ಸರಸ್ಪತಿ ಶೆಟ್ಟಿ. +ಪ್ರಸನ್ನ ಹಾಗೂ ಪ್ರಗತಿ ಮಕ್ಕಳು. +ಪ್ರತಿಭಾನ್ವಿತ ಹಾಸ್ಯಗಾರ, ಎಳಬೇರು ಶೇಖರ ಶೆಟ್ಟರನ್ನು ನಾಡಿನ ಹಲವಾರು ಸಂಘ-ಸಂಸ್ಥೆಗಳು ಗುರುತಿಸಿ ಗೌರವಿಸಿವೆ. +ಸುಪುಷ್ಟ ಯಕ್ಷ ಕಲಾನುಭವ ದ್ರವ್ಯವನ್ನು ಗಂಭೀರವಾಗಿ ಹೀರಿಕೊಂಡು ಸಂಪನ್ನ ಪ್ರತಿಭೆಯಾಗಿ ರೂಪುಗೊಂಡ ಹಿರಿಯ ಚೆಂಡೆವಾದಕ ಸತ್ಯನಾರಾಯಣ ಭಂಡಾರಿ. +ಉತ್ತರಕನ್ನಡದ ಹೊನ್ನಾವರ ತಾಲೂಕಿನ ಕರ್ಕಿ ಎಂಬಲ್ಲಿ 14-5-1934ರಲ್ಲಿ ಜನಿಸಿದ ಶ್ರೀಯುತರು ಅವರು ಪಾಂಡುರಂಗ ಭಂಡಾರಿ - ಹೊನ್ನಮ್ಮ ದಂಪತಿಯ ಸುಪುತ್ರ. +ಕುಟುಂಬ ನಿರ್ವಹಣೆಯ ಗುರುತರವಾದ ಹೊಣೆಗಾರಿಕೆ ಸತ್ಯನಾರಾಯಣಭಂಡಾರಿ ಅವರಿಗೆ ಎಳವೆಯಲ್ಲೇ ಹೆಗಲೇರಿ ಇವರ ಓದು ಒಂದನೇ ತರಗತಿಗಷ್ಟೇ ಸೀಮಿತವಾಯಿತು. +ಮದ್ದಳೆಗಾರರಾಗಿದ್ದ ತಂದೆ ಪಾಂಡುರಂಗಭಂಡಾರಿಯವರೇ ಇವರಿಗೆ ಗುರುವಾಗಿ ಶಸ್ರ್ತೋಕ್ತ ಚಂಡೆವಾದನ ಕಲೆಯನ್ನು ಬೋಧಿಸಿದರು. +ತಂದೆಯವರ ಪ್ರೋತ್ಸಾಹ ಪ್ರೇರಣೆಯಂತೆ ತನ್ನ 14ರ ಹರೆಯದಲ್ಲಿ ವೃತ್ತಿ ಬದುಕಿಗೆ ಯಕ್ಷಗಾನ ರಂಗವನ್ನು ಆಯ್ದುಕೊಂಡ ಭಂಡಾರಿಯವರು ಚಂಡೆವಾದನದಲ್ಲಿ ಬಹುಬೇಗನೆ ಕಲಾಸಿದ್ಧಿ ಪಡೆದರು. +ಕರ್ಕಿ ಹಾಸ್ಯಗಾರರ ಮೇಳದಲ್ಲಿ 10 ವರ್ಷ,ಕುಮಟಾ ಮೇಳದಲ್ಲಿ 5ವರ್ಷ, ಕೊಳಗಿಬೀಸ್‌ಮೇಳದಲ್ಲಿ 3 ವರ್ಷ, ಅಮೃತೇಶ್ವರಿ ಮೇಳದಲ್ಲಿ 7ವರ್ಷ, ಇಡಗುಂಜಿ ಮೇಳದಲ್ಲಿ 10 ವರ್ಷ,ಗುಂಡಬಾಳ ಮೇಳದಲ್ಲಿ 6 ವರ್ಷ, ಹೀಗೆ 41ವರ್ಷಗಳ ಸುದೀರ್ಥ ವೃತ್ತಿ ತಿರುಗಾಟದಲ್ಲಿ ಭಂಡಾರಿಯವರ ಕಲಾಬದುಕು ಸಾರ್ಥಕ್ಯವನ್ನು ಕಂಡುಕೊಂಡಿದೆ. +ಸಂಪ್ರದಾಯಶೀಲ ರಂಗಪದ್ದತಿಗೆ ಶ್ರೀಯುತರ ಚಂಡೆಗಾರಿಕೆ ಪರಿಪೂರ್ಣ ಸಾಂಗತ್ಯ ನೀಡಿದೆ. +ಸ್ಪಷ್ಟವಾದ ಹೊರಳಿಕೆಯಲ್ಲಿ ಅವರು ಚಂಡೆಯಲ್ಲಿ ನಾದ ಹೊಮ್ಮಿಸುವ ಪರಿ ಅಸಾಧಾರಣ. + ಉತ್ತಮರಂಗತಂತ್ರ,ಸಶಕ್ತ ಪ್ರಸಂಗ ಮಾಹಿತಿಯನ್ನು ಬಲ್ಲಸತ್ಯನಾರಾಯಣ ಭಂಡಾರಿಯವರು ಸಮರ್ಥಮದ್ದಳೆಗಾರರೂ ಆಗಿದ್ದಾರೆ. +ಇವರ ಮಡದಿ ಪಾರ್ವತಿ. +ಗಜಾನನ ಭಂಡಾರಿ,ರಾಮ ಭಂಡಾರಿ, ಹೊನ್ನಮ್ಮ ರಮೇಶ ಭಂಡಾರಿ ಇವರ ನಾಲ್ಕು ಮಂದಿ ಮಕ್ಕಳು. +ಇವರ ಪುತ್ರರಾದ ಗಜಾನನ ಭಂಡಾರಿ, ರಾಮ ಭಂಡಾರಿ, ವೃತ್ತಿಮೇಳದಲ್ಲಿ ಜಂಡೆ-ಮುದ್ದಳೆಗಾರರಾಗಿ ಗುರುತಿಸಿಕೊಂಡಿದ್ದಾರೆ. +ಇವರನ್ನು ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಪ್ರಶಸ್ತಿ ನೀಡಿ ಗೌರವಿಸಿವೆ. +ಉಡುಪಿ ಯಕ್ಷಗಾನ ಕಲಾರಂಗದ ಪ್ರಶಸ್ತಿಯನ್ನು ಪಡೆದಿರುತ್ತಾರೆ ಅಲ್ಲದೇ ಹಲವಾರು ಸಂಘಸಂಸ್ಥೆಗಳು ಇವರನ್ನು ಗೌರವಿಸಿವೆ. +ಸಾಂಪ್ರದಾಯಿಕ ಚಂಡೆ-ಮದ್ದಳೆ ವಾದನಕಲೆಯನ್ನು ಪರಿಪುಷ್ಪವಾಗಿ ಕರಗತ ಮಾಡಿಕೊಂಡ ಹಿರಿಯ ಹಿಮ್ಮೇಳ ಕಲಾವಿದ ವೈ.ಸದಾನಂದ ಪ್ರಭು. +ಕುಂದಾಪುರ ತಾಲೂಕಿನ ಏಳಜಿತ ಎಂಬ ಹಳ್ಳಿಯಲ್ಲಿ ವೈ ರಾಮಚಂದ್ರ ಪ್ರಭು-ಸರಸ್ವತಿ ಬೃಾ ದಂಪತಿಯ ಪುತ್ರರಾಗಿ 9-10-1935ರಲ್ಲಿ ಜನಿಸಿದ ಸದಾನಂದ ಪ್ರಭು ಅವರು ಎಂಟನೇ ಇಯತ್ತೆಯವರೆಗೆ ಶೈಕ್ಷಣಿಕ ಸಂಸ್ಕಾರ ಪಡೆದು, ತನ್ನ ಹದಿನಾರರ ಹರೆಯದಲ್ಲಿಯೇ ಯಕ್ಷಗಾನ ವಲಯವನ್ನು ಪ್ರವೇಶಿಸಿದರು. +ಶ್ರೀಯುತರ ತಂದೆ ಅರ್ಥಧಾರಿಯಾಗಿದ್ದರು. +ದೊಡ್ಮಪ್ಪ ದಾಸಪ್ಪ ಪ್ರಭು ಅವರು ಮದ್ದಳೆವಾದಕರಾಗಿದ್ದರು. +ಹಾಗಾಗಿ ಕಲಾವಂಶ ಮನೆತನದ ಹಿನ್ನಲೆ ಇವರನ್ನು ಗಾಢವಾಗಿ ಬೆಸೆದುಕೊಂಡಿತು. +ಗುರು ವೀರಭದ್ರನಾಯಕ್‌ರಿಂದ ನೃತ್ಯ,ಅಭಿನಯ, ಕೆಮ್ಮಣ್ಣು ಆನಂದ ಅವರಲ್ಲಿ ಚೆಂಡೆವಾದನ,ನಾರ್ಣಪ್ಪ ಉಪ್ಪೂರರಲ್ಲಿ ಭಾಗವತಿಕೆ, ಬೇಳಂಜೆ ತಿಮ್ಮಪ್ಪ ನಾಯ್ಕರಲ್ಲಿ ಮದ್ದಳೆಗಾರಿಕೆ ಶಿಕ್ಷಣ ಪಡೆದ ಸಶಕ್ತ ಕಲಾವಿದ. +ಕೊಲ್ಲೂರು 6, ಮಾರಣಕಟ್ಟೆ 6, ಅಮೃತೇಶ್ವರಿ 3, ಕಮಲಶಿಲೆ 6, ಚಿಕ್ಕ ಹೊನ್ನೆಸರ 3, ಕಳವಾಡಿ 3,ಹೀಗೆ 27 ವರ್ಷಗಳ ಸಾರ್ಥಕ ಕಲಾವ್ಯವಸಾಯ ಪೂರೈಸಿದ ಪ್ರಭುಗಳು ಪ್ರಸ್ತುತ ವೃತ್ತಿಜೀವನದಿಂದ ನಿವೃತ್ತರಾಗಿದ್ದಾರೆ. +ಯಕ್ಷಗಾನ ಕಲಿಕಾಸ್ತಕರಿಗೆ ಗುರುವಾಗಿ ತನ್ನು ಕಲಾವಿದ್ಯೆಯನ್ನು ಧಾರೆಯೆರೆಯುತ್ತಿದ್ದಾರೆ. +ಶ್ರೀಯುತರ ಚಂಡೆ-ಮದ್ದಳೆ ವಾದನ ಪದ್ಧತಿ ಸಾಂಪ್ರದಾಯಿಕ ರಂಗ ಪದ್ಯತಿಯಲ್ಲೇ ನಿರೂಪಣೆಗೊಳ್ಳುವಂತಾದ್ದು. +ನಾದೋತ್ಪಾದಕ ಹೂರಳಿಕೆ, ಸ್ಫುಟವಾದ ಪೆಟ್ಟು ಇವರ ಮದ್ದಳೆವಾದನದಲ್ಲಿ ಗುರುತಿಸಬಹುದಾಗಿದೆ. +ನುಣುಪು ನವಿರಾದ ಗಾನ ಪೋಷಕ ಚಂಡೆವಾದನ ಕಲೆ ಇವರಿಗೆ ಪರಿಪೂರ್ಣವಾಗಿ ಸಿದ್ಧಿಸಿದೆ. +ಬಡಗುತಿಟ್ಟಿನ ಅನೇಕಾನೇಕ ಯಕ್ಷದಿಗ್ಗಜರನ್ನು ರಂಗಸ್ಥಳದಲ್ಲಿ ಕುಣಿಸಿದ ಅನುಭವಿ ಹಿಮ್ಮೇಳದ ಕಲಾವಿದ ಸದಾನಂದ ಪ್ರಭು . +ಅವರ ಪತ್ನಿ ಪದ್ಮಾವತಿ ಬೃಾ. +ಗೋದಾವರಿ, ಆಶಾಲತ, ಮಮತಾ, ಗಣಪತಿ ಎಂಬ ನಾಲ್ಕು ಮಂದಿ ಮಕ್ಕಳು. +ಶ್ರೀಯುತರಿಗೆ ನಾಲ್ಕು ವರುಷಗಳಿಂದ ಸರಕಾರದ ಮಾಸಾಶನ ಸಿಗುತ್ತಿದೆ. +ಡಾ.ಜಿ.ಶಂಕರ್‌ಫ್ಯಾಮಿಲಿ ಟ್ರಸ್ಟ್‌ನ ಗೌರವ ಪುರಸ್ಕಾರವೂ ಲಭಿಸಿದೆ. +ಚುರುಕಿನ ನೃತ್ಯವಿಧಾನ, ಭಾವಪೂರ್ಣ ಪಾತ್ರಚಿತ್ರಣ, ಉತ್ತಮ ಭಾಷಾಪ್ರಜ್ಞೆ, ಆಕರ್ಷಣೀಯ ವೇಷಗಾರಿಕೆ ಸುಪುಷ್ಟವಾಗಿ ರಂಗಮಂಚದಲ್ಲಿ ದರ್ಶಿಸುವ ಪ್ರಬುದ್ಧ ಪುರುಷವೇಷಧಾರಿ ಇಳಲಿ ಸದಾಶಿವ ಹೆಗ್ಡೆ. +ಕುಂದಾಪುರ ತಾಲೂಕಿನ ಆಜ್ರಿ, ಸನಿಹದ ಇಳಲಿ ಎಂಬಲ್ಲಿ 22-8-1967ರಲ್ಲಿ ಜನಿಸಿದ ಸದಾಶಿವ ಹೆಗ್ಡೆ ಅವರು ದಿ.ಶ್ರೀನಿವಾಸ ಹೆಗ್ಡೆ - ಇಂದಿರಾ ಹೆಗ್ಡೆ ದಂಪತಿಯ ಸುಪುತ್ರ. +8ನೇ ತರಗತಿಯವರೆಗೆ ವಿದ್ಯಾಬ್ಯಾಸ ಮಾಡಿದ ಹೆಗ್ಡೆಯವರು 15ನೇವಯಸ್ಸಿನಲ್ಲೇ ರಂಗಲೋಕ ಪವೇಶಿಸಿದರು. +ಯಕ್ಷಗಾನ ಕಲೆಯ ಕುರಿತು ತೀವ್ರ ಆಸಕ್ತಿಯನ್ನು ಎಳವೆಯಲ್ಲೇ ಮೈ-ಗೂಡಿಸಿಕೊಂಡ ಅವರು,ಆರ್ಗೋಡು ಗೋವಿಂದರಾಯ ಶೆಣೈಯವರ ಶಿಷ್ಯನಾಗಿ ಸಶಕ್ತ ಕಲಾಶಿಕ್ಷಣ ಪಡೆದರು. +ಶೆಣೈಯವರ ಪ್ರೋತ್ಸಾಹ, ಪ್ರೇರಣೆಯಂತೆ ವೃತ್ತಿ ಜೀವನಕ್ಕೆ ಹೆಜ್ಜೆಯಿರಿಸಿದರು. +ಪೆರ್ಡೂರು 2, ಸೌಕೂರು 4, ಕಮಲಶಿಲೆ 7,ಮಡಾಮಕ್ಕಿ 2, ಅಮೃತೇಶ್ವರಿ 5, ಕಳವಾಡಿ 1,ಮಂದಾರ್ತಿ 1, ಬಗ್ಡಾಡಿ 1, ಹಾಲಾಡಿ 3, ಸಿಗಂಧೂರು 2, ಹೀಗೆ 28 ವರ್ಷಗಳ ಯಕ್ಷತಿರುಗಾಟ ಇಳಲಿಯವರಿಗೆ ಸಾರ್ಥಕ ಹೆಸರು ತಂದಿತ್ತಿದೆ. +ಮೂರನೇ ವೇಷಧಾರಿಯಾಗಿಯೂ, ಪುರುಷವೇಷಧಾರಿಯಾಗಿಯೂ ಇಳಲಿಯವರು ಪ್ರಸಿದ್ಧರು. +ಇವರ ಬಬ್ರುವಾಹನ, ಅಭಿಮನ್ಯು, ಸುಧನ್ವ, ಶ್ರೀಕೃಷ್ಣ,ಧರ್ಮಾಂಗದ ಪಾತ್ರಗಳ ರಂಗಚಿತ್ರಣ ಕಲಾರಸಿಕರ ಹಾರ್ದಿಕ ಮೆಚ್ಚುಗೆ ಗಳಿಸಿರುತ್ತದೆ. +ಜೋಡಾಟಗಳಲ್ಲಿ ಇವರ ಬಿರುಸಿನ ಮಂಡಿಕುಣಿತ ಬೆರಗು ಹುಟ್ಟಿಸುತ್ತದೆ. +ಪೌರಾಣಿಕತೆಯ ಅಂತಸಶ್ವವನ್ನು ಅರ್ಥಗಾರಿಕೆಯಲ್ಲಿ ಮನಮುಟ್ಟುವಂತೆ ನಿರೂಪಿಸುವ ಕಲಾವಂತಿಕೆ ಇವರಿಗಿದೆ. +ಶ್ರೀಯುತರು ಪ್ರಸ್ತುತ ಮಡಾಮುಕ್ಕಿ ಮೇಳದ ಪುರುಷವೇಷಧಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. +ಹಲವು ಸಂಘ-ಸಂಸ್ಥೆಗಳ ಗೌರವ ಸಂಮಾನಕ್ಕೆ ಭಾಜನರಾಗಿದ್ದಾರೆ. +ಸುಪ್ರಸಿದ್ದ ಹಾರಾಡಿಯ ಯಕ್ಷಕಲಾಕುಟುಂಬದ ಸಮೃದ್ಧ ಪ್ರತಿಭೆಯಾಗಿ ಬೆಳಗುತ್ತಿರುವ ಅನುಭವಿ ಕಲಾವಿದ ಹಾರಾಡಿ ಸರ್ವೋತ್ತಮ ಗಾಣಿಗ. +ಉಡುಪಿ ತಾಲೂಕಿನ ಹಾರಾಡಿ ಎಂಬ ಹಳ್ಳಿಯಲ್ಲಿ 7-7-1955ರಲ್ಲಿ ಜನಿಸಿದ ಸರ್ವೋತ್ತಮಗಾಣಿಗರು ಕೃಷ್ಣ ಗಾಣಿಗ-ಗೋಪಮ್ಮ ದಂಪತಿಯ ಸುಪುತ್ರ. +ಇವರ ವಿದ್ಯಾರ್ಹತೆ ನಾಲ್ಕನೇ ತರಗತಿ. +ಆರ್ಥಿಕ ಅನಾನುಕೂಲತೆಯೇ ಶ್ರೀಯುತರಿಗೆ ಬಣ್ಣದ ಬದುಕಿನ ದಾರಿ ತೋರಿಸಿತು. +ಮಾವ ಹಾರಾಡಿಮಹಾಬಲ ಗಾಣಿಗರ ಕಲಾ ಪ್ರೋತ್ಸಾಹ, ಪ್ರೇರಣೆಯೂ ದೊರಕಿತು. +14ನೇ ವರ್ಷದಲ್ಲಿ ರಂಗಪ್ರವೇಶ ಮಾಡಿದ ಸರ್ವೋತ್ತಮ ಗಾಣಿಗರು ಉಡುಪಿ ಯಕ್ಷಗಾನಕೇಂದ್ರದ ವಿದ್ಯಾರ್ಥಿಯಾಗಿ, ದಶಾವತಾರಿ ಗುರು ವೀರಭದ್ರ ನಾಯ್ಕ, ನೀಲಾವರ ರಾಮಕೃಷ್ಣಯ್ಯ,ಹಿರಿಯಡಕ ಗೋಪಾಲ ರಾಯರ ಶಿಷ್ಯವೃತ್ತಿಯಲ್ಲಿ ಶಾಸ್ತ್ರೋಕ್ತ ರಂಗ ಶಿಕ್ಷಣ ಪಡೆದುಕೊಂಡರು. +ಯಕ್ಷಲೋಕದ ದಂತಕತೆಗಳಾದ ಹಾರಾಡಿ ರಾಮಗಾಣಿಗ ಹಾಗೂ ಕುಷ್ಠ ಗಾಣಿಗರು ಶ್ರೀಯುತರಿಗೆ ಸಂಬಂಧದಲ್ಲಿ ಮಾವಂದಿರು. +ಹಾಗಾಗಿ ಯಕ್ಷಕಲೆ ಎಂಬುದು ಇವರಿಗೆ ಜನ್ಮಜಾತವಾಗಿ ಒಲಿದುಬಂದಿದೆ. +ಬಡಗುತಿಟ್ಟಿನ ಸಂಪ್ರದಾಯ ಚೌಕಟ್ಟಿನಲ್ಲೇ ಪೌರಾಣಿಕ ಪಾತ್ರಗಳನ್ನು ಸಹಜ ಕಲಾ ಸತ್ವಗಳಿಂದ ಕಡೆದಿಡುವ ವಿಶೇಷ ಕಲಾವಂತಿಕೆಯನ್ನು ಹೊಂದಿದ ಗಾಣಿಗರು ಮನೆತನದ ಹಾರಾಡಿ ತಿಟ್ಟನ್ನು, ಗುರುತನದ ಮಟಪಾಡಿತಿಟ್ಟನ್ನೂ ಸುಪುಷ್ಟವಾಗಿ ಕಲಾವ್ಯಕ್ತಿತ್ವದಲ್ಲಿ ನಿರೂಪಿಸುವ ಅಪರೂಪದ ಕಲಾವಿದರು. +ಆಕರ್ಷಕ ವೇಷಾಲಂಕಾರ, ಪರಿಶುದ್ಧ ಭಾಷಾಪ್ರೌಢಿಮೆ, ಗರಿಷ್ಠ ರಂಗಾ-ನುಭವ, ಸಶಕ್ತ ಪುರಾಣಪ್ರಜ್ಞೆ,ಖಚಿತ ಲಯಗಾರಿಕೆ, ಪಾರಂಪರಿಕ ನೃತ್ಯಾಭಿನಯ ಕೌಶಲದಿಂದ, ಕಂಗೊಳಿಸುವ ಬಡಗಿನ ಶ್ರೇಷ್ಠಪುರುಷವೇಷಧಾರಿಯಾದ ಶ್ರೀಯುತರು ಅಮೃತೇಶ್ವರಿ1, ಮಂದಾರ್ತಿ 3, ಮಾರಣಕಟ್ಟೆ 5, ಮಂದಾರ್ತಿ8, ಹೀಗೆ ನಾಲ್ಕು ದಶಕಗಳ ರಂಗ ಕೃಷಿ ಮಾಡಿದ್ದಾರೆ. +ಶ್ರೀಯುತರ ಸುಧನ್ವ, ಪುಷ್ಕಳ, ಬಲರಾಮ, ಶ್ರೀಕೃಷ್ಣ,ಅರ್ಜುನ, ಕಂಸ, ಕೌರವ, ಮೊದಲಾದ ಭೂಮಿಕೆಗಳು ಜನಪ್ರಿಯ. +ವೃತ್ತಿರಂಗದಲ್ಲಿ ಶ್ರೀಯುತರ ನೂರಾರು ಶಿಷ್ಯರು ಕಲಾಸೇವೆ ಗೈಯುತ್ತಿದ್ದಾರೆ. +ಮಡದಿ ಲಲಿತಾ. +ಪಯಸ್ವಿನಿ, ತೇಜಸ್ವಿನಿ, ಅಕ್ಷಯ, ಅಕ್ಷತಾ, ಅಜಯ ಮಕ್ಕಳು. +ಹಲವಾರು ಸಂಘಸಂಸ್ಥೆಗಳು ಇವರನ್ನು ಗೌರವಿಸಿವೆ. +ಲಲಿತ-ಗಂಭೀರ ಹಾಸ್ಯಗಾರಿಕೆಯಲ್ಲಿ ಕಲಾರಸಿಕರ ಮನಮುದಗೊಳಿಸುವ ಶಿಷ್ಟ ಕಲಾವಿದ ಶ್ರೀ ಸಂಜೀವ ಕೊಠಾರಿ. +1958ರ ಜನವರಿ 21ರಂದು ಕುಂದಾಪುರ ತಾಲೂಕಿನ ಮೂಡುಬಗೆ ಅಂಪಾರು ಎಂಬಲ್ಲಿ ಬಡಿಯಕೊಠಾರಿ-ಗಂಗಾ ದಂಪತಿಯ ಸುಪುತ್ರರಾಗಿ ಜನಿಸಿದ ಸಂಜೀವ ಕೊಠಾರಿಯವರು ಆರಕ್ಕೆ ಓದು ಮುಗಿಸಿ 15ನೇ ವಯಸ್ಸಿನಲ್ಲೇ ಬಣ್ಣದ ಬದುಕು ಕಂಡವರು. +ಹಾಸ್ಯ ದಿಗ್ಗಜ ಕುಂಜಾಲು ರಾಮಕೃಷ್ಣ ಅವರ ಶಿಷ್ಯರಾದ ಸಂಜೀವ ಕೊಠಾರಿಯವರು ಸಮರ್ಪಕ ರಂಗ ತಾಂತ್ರಿಕತೆಯಲ್ಲಿ ವೈನೋದಿಕತೆಯನ್ನು ಸೃಷ್ಟಿಸುವ ಕಲಾವಿದರು. +ಪ್ರೌಢ ಅಭಿನಯವನ್ನು ಬೆಳಗುವ ಸಂಪನ್ನಶೀಲತೆಯನ್ನು ಮೈಗೂಡಿಸಿಕೊಂಡವರು. +ನೈಚ್ಯವಿಲ್ಲದ ಸುಸಂಸ್ಕೃತ ರಂಗಧರ್ಮದೊಂದಿಗೆ ಹಾಸ್ಯಗಾರಿಕೆಯಲ್ಲಿ ವೈಚಾರಿಕತೆ ಪಡಿಮೂಡಿಸುವ ಸಂಜೀವ ಕೊಠಾರಿಯವರ ಶ್ರೀ ಕೃಷ್ಣ ಲೀಲೆಯ ವಿಜಯ, ದಮಯಂತಿಯ ಬಾಹುಕ, ಶ್ರೀರಾಮಪಟ್ಟಾಭಿಷೇಕದ ಮಂಥರೆ, ಕಾಶಿಮಾಣಿ, ಶಕುನಿ,ಸುದೇವ, ಕಂದರ ಮೊದಲಾದ ಭೂಮಿಕೆಗಳು ಕಲಾಭಿಮಾನಿಗಳ ಹೃನ್ಮನಸೂರೆಗೊಂಡು ನಗೆಯ ರಸವ್ಯಂಜನವನ್ನು ಪುಷ್ಕಳವಾಗಿ ಉಣಿಸಿವೆ. +ಕಮಲಶಿಲೆ, ಹಾಲಾಡಿ, ಹಿರಿಯಡಕ,ಪೆರ್ಡೂರು ಶಿರಸಿ, ಸೌಕೂರು, ಮಾರಣಕಟ್ಟೆ ,ಮಂದಾರ್ತಿ ಮೇಳಗಳಲ್ಲಿ ಸಾರ್ಥಕ 36ವರ್ಷಗಳ ಕಾಲ ಸಮರ್ಥ ಹಾಸ್ಯ ಕಲಾವಿದರಾಗಿ ಮೆರೆದ ಶ್ರೀಯುತರು ಪ್ರಸ್ತುತ ಮಂದಾರ್ತಿ ಮೇಳದ ಪ್ರಧಾನ ಹಾಸ್ಯಗಾರರು. +ಧರ್ಮಪತ್ನಿ ಜಲಜಾ. +ಪ್ರತಿಮಾ, ಪ್ರಮೀಳಾ,ಮಾಧವಿ, ಪ್ರಸನ್ನ ಮಕ್ಕಳು. +ಶ್ರೀಯುತರು ಸಮರ್ಥಹಾಸ್ಯ ಕಲಾವಿದರೂ ಮಾತ್ರವಲ್ಲ. +ಸೃಜನಶೀಲ ಪೌರಾಣಿಕ ಪ್ರಸಂಗ ಸಂಯೋಜಕರೂ ಹೌದು. +ಕಲಾರಸಿಕ ಮನಮೋಹಕ ವೇಷಗಾರಿಕೆ,ಶ್ರುತಿನಿಷ್ಠ ಸುಮಧುರ ಅರ್ಥಗಾರಿಕೆ, ಒನಪು ತುಂಬಿದ ಸುಲಲಿತ ನೃತ್ಯಗಾರಿಕೆ. +ಯಕ್ಷಗಾನ ಸ್ರ್ತೀ ಯಾಗಿ ದರ್ಶಿಸುವ ಪ್ರತಿಭಾಶಾಲಿ ಕಲಾವಿದ ಹೆನ್ನಾಬೈಲು ಸಂಜೀವ ಶೆಟ್ಟಿ ಕುಂದಾಪುರ ತಾಲೂಕಿನ ಹೆನ್ನಾಬೈಲು ಎಂಬ ಹಳ್ಳಿಯಲ್ಲಿ 20-6-1972ರಲ್ಲಿ ಜನಿಸಿದ ಸಂಜೀವ ಶೆಟ್ಟರು ಅಂತಯ್ಯ ಶೆಟ್ಟಿ-ಪಾರ್ವತಿ ಶೆಟ್ಟಿ ದಂಪತಿಯ ಸುಪುತ್ರ. +ಐದನೇ ಇಯತ್ತೆಯ ಬಳಿಕ,ಅಂದರೆ ತನ್ನ 11ರ ಹರೆಯದಲ್ಲೇ ಬಣ್ಣದ ಬಾಳುವೆಯನ್ನು ಸ್ವೀಕರಿಸಿದ ಶೆಟ್ಟರು, ಹಿರಿಯ ಸ್ತ್ರೀವೇಷಧಾರಿ ಅರಾಟೆ ಮಂಜುನಾಥ ಅವರ ಶಿಷ್ಯನಾಗಿ ನೃತ್ಯ, ಅಭಿನಯ, ಅರ್ಥಗಾರಿಕೆ,ರಂಗನಡೆಯನ್ನು ಅಭ್ಯಸಿದರು. +ಆರ್ಗೋಡು ಮೋಹನದಾಸ ಶೆಣೈ ಅವರ ಗುರುತನವನ್ನೂ ಶ್ರೀಯುತರು ಪಡೆದು ಸುಯೋಗ್ಯ ಕಲಾವಿದನಾಗಿ ಗುರುತಿಸಿಕೊಂಡರು. +ಹಾಲಾಡಿ 1, ಕಮಲಶಿಲೆ 20, ಮಂದಾರ್ತಿ2, ಸೌಕೂರು 2, ಹೀಗೆ ಯಕ್ಷಗಾನ ಯಾನದಲ್ಲಿ ಸಾರ್ಥಕ ಬೆಳ್ಳಿ ಹಬ್ಬವನ್ನು ಪೂರೈಸಿ, ಕಮಲಶಿಲೆ ಮೇಳದ ಸ್ತ್ರೀವೇಷಧಾರಿಯಾಗಿ ದುಡಿಯುತ್ತಿದ್ದಾರೆ. +ಪೌರಾಣಿಕ ಸ್ತ್ರೀಭೂಮಿಕೆಗಳ ಲಲಿತ-ಗಂಭೀರ ನಡೆಯ ಭಾವಾಭಿವ್ಯಕ್ತಿಯಲ್ಲಿ ಗರಿಷ್ಠಮಟ್ಟದ ಪ್ರತಿಭೆಯನ್ನು ಮೆರೆಯುವ ಸಂಜೀವಶೆಟ್ಟರ ದ್ರೌಪದಿ, ಸುಭದ್ರೆ,ಚಿತ್ರಾಂಗದೆ, ಶಶಿಪ್ರಭೆ, ಮೀನಾಕ್ಷಿ, ಮೋಹಿನಿ, ಭ್ರಮರಕುಂತಳೆ, ಮೊದಲಾದ ಪಾತ್ರಗಳು ಕಲಾಪ್ರೇಕ್ಷಕರ ಮನಸೂರೆಗೊಂಡಿವೆ. +ಇವರ ಮಡದಿ ಕುಸುಮಾ ಶೆಟ್ಟಿ. +ಪ್ರಶಾಂತ,ಪ್ರದೀಪ, ಪ್ರತೀಕ ಮಕ್ಕಳು. +ಶ್ರೀಯುತರು ರಾಜ್ಯ ಹೊರರಾಜ್ಯಗಳ ಅನೇಕ ಸಂಘ-ಸಂಸ್ಥೆಗಳಿಂದ ಸಂಮಾನಿತರಾಗಿದ್ದಾರೆ. +ಯಕ್ಷಗಾನ ರಂಗಧರ್ಮಕ್ಕೆ ಚ್ಯುತಿ ಬಾರದಂತೆ ತನ್ನದೇ ವೈಶಿಷ್ಟ್ಯ ಪೂರ್ಣ ರಂಗನಡೆಯಲ್ಲಿ ಪೌರಾಣಿಕ ಪಾತ್ರಗಳಿಗೆ ಜೀವ ತುಂಬುವ ಸಮರ್ಥ ಕಲಾವಿದ ಸಿ.ಸಾಧುಕುಮಾರ್‌. +ಉಡುಪಿ ಜಿಲ್ಲೆಯ ಬಾರ್ಕೂರು-ಹೇರಾಡಿಯ ನಾರಾಯಣ ಕೊಠಾರಿ-ರಾಧಾಕೊಠಾರಿ ದಂಪತಿಯ ಪುತ್ರರಾಗಿ 1960ರಲ್ಲಿ ಹೇರಾಡಿಯಲ್ಲಿ ಜನಿಸಿದ ಸಾಧುಕುಮಾರ್‌ 5ನೇ ತರಗತಿಯವರೆಗೆ ಅಕ್ಷರಾಭ್ಯಾಸಮಾಡಿ, ತನ್ನ 15ನೇ ವಯಸ್ಸಿನಲ್ಲೇ ಮುಖಕ್ಕೆ ಬಣ್ಣಹಚ್ಚಿದವರು. +ಬಿದ್ರಗೋಡು ವಾಸುದೇವ ಆಚಾರ್ಯರ ಚಿಕ್ಕ ಮೇಳ, ಹೂವಿನಕೋಲು ತಿರುಗಾಟವೇ ಇವರಿಗೆ ಈ ರಂಗಭೂಮಿಂದು ಹೆಜ್ಜೆ ಗೆಜ್ಜೆಗೆ ಕಾರಣ,ಪ್ರೇರಣೆಯಾಯಿತು. +ಪ್ರಸಂಗಕರ್ತರೂ, ಭಾಗವತರೂ ಆಗಿದ್ದ ವಾಸುದೇವ ಆಚಾರ್ಕರ ಸಶಕ್ತ ಗುರುತನ ಇವರನ್ನು ಸುಯೋಗ್ಯ ಕಲಾವಿದನನ್ನಾಗಿ ರೂಪಿಸಿತು. +ಸುದೃಢ ಶರೀರ, ಗಂಭೀರ ಶಾರೀರ,ರಸಪರಿಷ್ಣುತ ವಚೋಚಮತ್ಕಾರ, ಪಾತ್ರೋಚಿತ ರಂಗವ್ಯವಹಾರ, ಸುಪುಷ್ಟ ನೃತ್ಯ ಅಭಿನಯ ಸಾಕಾರ ಶ್ರೀಯುತರಲ್ಲಿ ನಾವು ಗುರುತಿಸಬಹುದಾಗಿದೆ. +ಯಾವುದೇ ಪೌರಾಣಿಕ ಪ್ರಸಂಗಗಳ ಖಳಭೂಮಿಕೆಗಳಿಗೆ ಸಾಧು ಕುಮಾರರು ನೀಡುವ ಕಲಾವರ್ಚಸ್ಸು ಅವರದೇ ಶೈಲೀಕೃತ ಸೊಗಡಿನದ್ದು. +ವೈನೋದಿಕವಾದ ಪಾತ್ರ ಚಿತ್ರಣ ಅವರ ವಿಶೇಷ ಕಲಾಚಾತುರ್ಯಕ್ಕೆ ಸಾಕ್ಷಿಯಾಗಿದೆ. +ಕೌಂಡ್ಲೀಕ್ಕ ಕಮಲಭೂಪ, ಹನುಮಂತ,ಘಟೋತ್ಕಚ, ಬಲರಾಮ, ಕೌರವ, ರಕ್ತಜಂಘಾಸುರ,ಸುಂದರರಾವಣ, ಸಾಲ್ವ, ಭೀಮ ಶಲ್ಯ, ಅರ್ಜುನ,ಮೊದಲಾದ ಭೂಮಿಕೆಗಳಲ್ಲಿ ಸಾಧುಕುಮಾರರ ವಿಶಿಷ್ಟ ಛಾಪು ಪಡಿಮೂಡುತ್ತದೆ. +ಈಗಾಗಲೇ ಗೋಳಿಗರಡಿ,ಸೌಕೂರು, ಕಳವಾಡಿ, ಕಮಲಶಿಲೆ, ಶಿವರಾಜಪುರ-ತೀರ್ಥಹಳ್ಳಿ, ಹಾಲಾಡಿ, ಅಮೃತೇಶ್ವರಿ ಸಾಲಿಗ್ರಾಮ ಮೇಳಗಳಲ್ಲಿ ಸೇವೆ ಸಲ್ಲಿಸಿದ ಇವರು 19ವರ್ಷಗಳಿಂದ ಮಂದಾರ್ತಿ ಮೇಳದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. +ಒಟ್ಟು ರಂಗಕೃಷಿ 35 ವರ್ಷ. +ಬಿಡುವಿನ ವೇಳೆಯಲ್ಲಿ ಶಾಲಾ ಮಕ್ಕಳಿಗೆ ತನ್ನ ಕಲಾವಿದ್ಯೆಯನ್ನು ನಿಸ್ವಾರ್ಥವಾಗಿ ಧಾರೆಯೆರೆಯುವ ಸಾಧುಕುಮಾರ್‌ ತನ್ನ ಜೀವನರಂಗದಲ್ಲಿ ಸುವರ್ಣ ವರ್ಷಕ್ಕೆ ನಿಕಟವಾಗಿದ್ದಾರೆ. +ಧರ್ಮಪತ್ನಿ ಶಕುಂತಲಾ. +ಮಿಥುನ್‌, ಮಿಲಾಕ್ಷ,ಮಾಧುರಿ ಮೂರು ಮಂದಿ ಮಕ್ಕಳು. +ಶ್ರೀಯುತರು ಹಲವಾರು ಸಂಘಸಂಸ್ಥೆಗಳ ಗೌರವ ಸಂಮಾನ ಪಡೆದಿದ್ದಾರೆ. +ಪುರಾಣಾಂತರಂಗದ ಸಾರ-ಸತ್ವವನ್ನು ಎತ್ತಿಹಿಡಿಯುವ ವೈಚಾರಿಕ ಅರ್ಥಗಾರಿಕೆ, ಹಸ್ತ,ಗ್ರೀವಾರೇಚಕದ ಸೊಗಸಿನಲ್ಲಿ ನಿರೂಪಿತವಾಗುವ ನೃತ್ಯಗಾರಿಕೆ, ಪ್ರಸಂಗ ಪದ್ಯಗಳ ಸಮಗ್ರ ಭಾವವನ್ನರಿತ ಜೀವಂತಿಕೆಯು ಅಭಿನಯ ಕಲಾವಂತಿಕೆ,ಹಿಮ್ಮೇಳೈಸುವ ಖಚಿತ ಲಯಗಾರಿಕೆ, ಧನಾತ್ಮಕವಾಗಿ ಯಕ್ಷರಂಗದಲ್ಲಿ ತೋರಿ ಗೊಡುವ ಅನುಭವಿ ಯಕ್ಷನಟ ಸೀತಾರಾಮ ಹೆಗಡೆ. +ಉತ್ತರಕನ್ನಡದ ಶಿರಸಿ ತಾಲೂಕಿನ ಶಿರಗುಣಿ ಎಂಬಲ್ಲಿ 2-11-1967ರಲ್ಲಿ ಜನಿಸಿದ ಸೀತಾರಾಮಹೆಗಡೆಯವರು, ಶ್ರೀಧರ ನಾರಾಯಣ ಹೆಗಡೆ ಹಾಗೂ ಮಹಾಂಕಾಳೀ ಹೆಗಡೆ ದಂಪತಿಯ ಸುಪುತ್ರ. +6ನೇ ತರಗತಿವರೆಗೆ ಓದಿದ ಶ್ರೀಯುತರು ಕೆರೆಮನೆ ಶಂಭುಹೆಗಡೆಯವರ ಗುರುತನ ಹಾಗೂ ಮಾರ್ಗ-ದರ್ಶನವನ್ನು ಪಡೆದು 22ನೇ ವಯಸ್ಸಿನಲ್ಲೇ ಯಕ್ಷಗಾನರಂಗ ಪ್ರವೇಶಿಸಿದರು. +ಸೀತಾರಾಮ ಹೆಗಡೆಯವರ ದೊಡ್ಡಪ್ಪ ವೇಷಧಾರಿ ಹಾಗೂ ಭಾಗವತರು. +ಕೆರೆಮನೆ ಶ್ರೀ ಮಾಯಾ ಕಲಾಕೇ೦ದ್ರದಲ್ಲಿ ಹೆರಂಜಾಲು ವೆಂಕಟರಮಗಾಣಿಗರಲ್ಲಿ ಸುಸಂಬದ್ಧ ನೃತ್ಯ ಶಿಕ್ಷಣ ಪಡೆದ ಶ್ರೀಯುತರು ಅಲ್ಲಿ ಹಿರಿಯ ಚಂಡೆವಾದಕ ಕೃಷ್ಣಯಾಜಿ (ಕುಟ್ಟುಯಾಜಿ) ಇಡಗುಂಜಿ ಹಾಗೂ ಗುರುರಾಜ ಮಾರ್ಪಳ್ಳಿ ಅವರಿಂದ ಸಮರ್ಪಕರಂಗ ಮಾಹಿತಿ ಪಡೆದರು. +ಕಳವಾಡಿ, ಪೆರ್ಡೂರು, ಗುಂಡಬಾಳ,ಗೋಳಿಗರಡಿ, ಅಮೃತೇಶ್ವರಿ ಮೇಳಗಳಲ್ಲಿ ಶ್ರೀಯುತರ ವಿಂಶತಿ ಕಲಾವ್ಯವಸಾಯ ಸಾರ್ಥಕ ಕೀರ್ತಿ ತಂದಿತ್ತಿದೆ. +ವೈವಿಧ್ಯಮಯ ನಡೆ, ಭಾವಗಳ ಗಂಡುಭೂಮಿಕೆಗಳಿಗೆ ಇವರು ಜೀವ ತುಂಬ ಬಲ್ಲರು. +ರಾಜವೇಷ,ಮುಂಡಾಸುವೇಷ, ಪುರುಷವೇಷ, ಪುಂಡುವೇಷ,ಹೀಗೆ ಯಾವುದೇ ಪಾತ್ರಗಳಲ್ಲೂ ಅವರು ತನ್ನತನವನ್ನು ತೋರಬಲ್ಲರು. +ಶತ್ರುಘ್ನ, ರಾವಣ, ವಿಷ್ಣು, ಶಿವ,ಕೌಂಡ್ಲೀಕ, ಕಮಲಭೂಪ, ವಿಕ್ರಮಾದಿತ್ಯ ಮೊದಲಾದ ಪಾತ್ರಗಳ ನಿರ್ವಹಣೆ ಅವರಿಗೆ ತೃಪ್ತಿ ನೀಡಿದೆ. +ಪ್ರೇಕ್ಷಕರಮನ ಮೆಚ್ಚಿಸಿದೆ. +ಇವರು ಹಲವು ಸಂಘ-ಸಂಸ್ಥೆಗಳ ಗೌರವ ಸಂಮಾನ ಪಡೆದಿದ್ದಾರೆ. +ಪೌರಾಣಿಕತೆಯ ಗರ್ಭದಲ್ಲಿ ಅಡಗಿರುವ ಸತ್ವಾಂಶಗಳನ್ನು ಯಕ್ಷಗಾನ ಪಾತ್ರಗಳ ಮೂಲಕ ಗೊತ್ತುಗೊಳಿಸುವ ಸಮರ್ಥ ಸ್ತ್ರೀವೇಷಧಾರಿ ಬೇಳಂಜೆ ಸುಂದರ ನಾಯ್ಕ. +ಕಾಮಿ ನಾಯ್ಕ-ಸುಶೀಲಾ ಬಾಯಿ ದಂಪತಿಯ ಸುಪುತ್ರರಾದ ಸುಂದರ ನಾಯ್ಕರು 1963ರಲ್ಲಿ ಬೇಳಂಜೆ ಎಂಬಲ್ಲಿ ಜನಿಸಿದರು. +5ನೇ ತರಗತಿಯ ವರೆಗಿನ ಶೈಕ್ಷಣಿಕ ಹಂತ ಮುಗಿಸಿದ ಇವರು ತಂದೆಯವರ ಪ್ರೋತ್ಸಾಹ, ಶಂಕರನಾರಾಯಣ ಸಾಮಗರ ಪ್ರೇರಣೆಯಂತೆ ತನ್ನ 13ರ ಹರಯದಲ್ಲೇ ಯಕ್ಷಗಾನ ವೃತ್ತಿ ಜೀವನ ಆರಂಭಿಸಿದರು. +ಇವರ ತಂದೆ ಕಾವಿ ನಾಯ್ಕರು ಮದ್ದಳೆವಾದಕರು. +ದೊಡ್ಡಪ್ಪ ಬೇಳಂಜೆ ತಿಮ್ಮಪ್ಪನಾಯ್ಕರು ಯಕ್ಷಲೋಕದ ಚಿರಪರಿಚಿತ ಮದ್ದಳೆಗಾರರು. +ಸಂಬಂಧದಲ್ಲಿ ಬಾವನಾಗಿರುವ ಪೇತ್ರಿ ಮಾಧುನಾಯ್ಕರು ಉತ್ತಮ ವೇಷಧಾರಿ. +ಹೀಗಾಗಿ ಮನೆತನದ ಕಲಾವಂತಿಕೆ ಶ್ರೀಯುತರ ಕಲಾ ಬದುಕಿಗೆ ನಿಚ್ಚಳ ಸ್ಫೂರ್ತಿ ನೀಡಿತು. +ಇವರಿಗೆ ತಂದೆಯವರು ಹಾಗೂ ಬುಕ್ಕಿಗುಡ್ಡೆ ಮಹಾಬಲ ನಾಯ್ಕರು ಗುರುಗಳು. +ಮಂದಾರ್ತಿ18, ಪೆರ್ಡೂರು 9, ಸಾಲಿಗ್ರಾಮ 3, ಹಾಲಾಡಿ 2,ಕಮಲಶಿಲೆ 1, ಹಿರಿಯಡಕ 2, ಹೀಗೆ 35 ವರ್ಷಗಳ ಕಲಾವ್ಯವಸಾಯವನ್ನು ಯಶಸ್ವಿಯಾಗಿ ಪೂರೈಸಿದ್ದಾರೆ. +ಗಂಭೀರ ಭಾವಾಭಿವ್ಯಕ್ತಿಯ ಸ್ತ್ರೀಭೂಮಿಕೆಗಳಲ್ಲಿ ಶ್ರೀಯುತರ ಪ್ರತಿಭೆ ಗಮನೀಯ. +ಶ್ರೀಯುತರ ಆಂಗಿಕವಿನ್ಯಾಸ, ಸ್ವರ ನಿರೂಪಣೆ, ರಂಗನಡೆ,ಸ್ತೀವೇಷದ ಬಿರುಸು, ಸೆಡಕುಗಳಿಗೆ ಸಮುಚಿತವಾಗಿ ಪಾತ್ರವನ್ನು ಗೆಲ್ಲಿಸುತ್ತವೆ. +ಕಸೆ ಸ್ರ್ತೀ ವೇಷಗಳ ವೀರತನದ ಕೆಚ್ಚು ಇವರಲ್ಲಿ ವಿಶೇಷವಾಗಿ ಗುರುತಿಸಲ್ಪಡುತ್ತದೆ. +ಮೀನಾಕ್ಷಿ, ಪ್ರಮೀಳೆ, ದ್ರೌಪದಿ, ಶಶಿಪ್ರಭೆಯಂತಹ ಇವರ ಪಾತ್ರಗಳು ಜನಪ್ರಿಯ. +ಅಂತೆಯೇ ದಮಯಂತಿ, ಅಂಬೆ, ಶ್ರೀದೇವಿ, ದೇವಯಾನಿ,ಕೈಕೇಯಿ ಪಾತ್ರಗಳೂ ಪ್ರಸಿದ್ಧ. +ಶ್ರೀಯುತರು ಅನೇಕ ಪುರುಷವೇಷಗಳನ್ನೂ ನಿರ್ವಹಿಸಿದ್ದಾರೆ. +ಪತ್ನಿ ಆಶಾ. +ಸತೀಶ್‌, ಶ್ಯಾಮಲಾ, ಅನಿಲ ಮಕ್ಕಳು. +ಹಲವಾರು ಸಂಘಸಂಸ್ಥೆಗಳು ಇವರನ್ನು ಸಂಮಾನಿಸಿವೆ. +ಸಾಂಪ್ರದಾಯಿಕ ಯಕ್ಷಗಾಯನದ ಗಟ್ಟಿಹಿಡಿತದೊಂದಿಗೆ ಭಾಗವತಿಕೆಯಲ್ಲಿ ಪ್ರಯೋಗಶೀಲತೆಯನ್ನು ತಂದ ಹಿರಿಯ ಭಾಗವತ ಸುಬ್ರಹ್ಮಣ್ಯ ಧಾರೇಶ್ವರ. +ಪವಿತ್ರಕ್ಷೇತ್ರ ಗೋಕರ್ಣ ಧಾರೇಶ್ವರರ ಹುಟ್ಟೂರು. +ಇವರ ತಂದೆ ಲಕ್ಷಿ ನಾರಾಯಣ ಭಟ್‌, ತಾಯಿಲಕ್ಷ್ಮೀ. +ಯಕ್ಷಗಾನದ ಯುಗಪ್ರವರ್ತಕ ಜಿ.ಆರ್‌.ಕಾಳಿಂಗ ನಾವಡರ ಪದ್ಯಗಾರಿಕೆ ಹಾಗೂ ಅವರ ಗಾಯನದಲ್ಲಿ ಇವರು ಕಂಡ ಹಿಂದೂಸ್ಥಾನೀ ಸಂಗೀತದ ಬೀಜಗುಣವೆನ್ನುವುದು ಇವರನ್ನು ಗಾನಲೋಕಕ್ಕೆ ಎಳೆದು ತಂದಿತು. + ಪಿ.ಯು.ಸಿ. ವ್ಯಾಸಂಗದ ಬಳಿಕ, ತನ್ನ 21ನೇ ವಯಸ್ಸಿನಲ್ಲೇ ಯಕ್ಷಗಾನ ರಂಗವನ್ನು ಪ್ರವೇಶಿಸಿದ ಸುಬ್ರಹ್ಮಣ್ಮ ಧಾರೇಶ್ವರರು ನಾರ್ಣಪ್ಪ ಉಪೂರರ ಶಿಷ್ಯನಾಗಿ ಗಾನದೀಕ್ಷೆಯನ್ನು ಪಡೆದರು. +ಯುವಕರಾಗಿದ್ದಾಗಲೇ ಸುಗಮ ಸಂಗೀತ ಗಾಯನದ ಪರಿಣತಿ ಹೊಂದಿದ್ದ ಧಾರೇಶ್ವರರಿಗೆ ತಂದೆ ಹವ್ಯಾಸೀ ಯಕ್ಷಗಾನ ವೇಷಧಾರಿಯಾಗಿದ್ದುದರಿಂದ ಯಕ್ಷಗಾನ ರಂಗದ ನಿಕಟ ಬಾಂಧವ್ಯ ಸಾಧ್ಯವಾಯಿತು. +ಸುಗಮ ಸಂಗೀತ ಶೈಲಿ, ಶಾಸ್ತ್ರೀಯ ಶೈಲಿಯನ್ನುಯಕ್ಷಗಾನ ಭಾಗವತಿಕೆಯಲ್ಲಿ ನಿರೂಪಿಸುವ ಧಾರೇಶ್ವರರು ನವರಸಗಳನ್ನು ತನ್ನ ಸುಖ ಶಾರೀರದ ಮೂಲಕ ಸುಶ್ರಾವ್ಯವಾಗಿ ಭಾವಪೂರ್ಣವಾಗಿ ಹಾಡಿತೋರಿಸಬಲ್ಲರು. +ರಂಗದ ಮೇಲೆ ಪ್ರಬಲ ಹಿಡಿತವನ್ನು ಸಾಧಿಸಿದ ಧಾರೇಶ್ವರರ ಪೌರಾಣಿಕ ರಂಗಪ್ರಜ್ಞೆ ಅಪಾರ. +ಕತೆಯ ಶಾಖೋಪಶಾಖೆಗಳಲ್ಲಿ ವಿಹರಿಸಬಲ್ಲ ಕವಿತಾಶಕ್ತಿಯೂ ಹಾಗೆಯೇ ಖಚಿತ ಲಯಗಾರಿಕೆ, ತಾಳಪದ್ಧತಿ, ಸ್ಫುಟವಾದ ಸಾಹಿತ್ಯ ನಿರೂಪಣೆ, ಮಂಜುಳ ಸ್ವರಾಲಾಪನೆಯಿಂದ ಭಾಗವತಿಕೆಯಲ್ಲಿ ವಿಶೇಷ ಸಂಚಲನ ಮೂಡಿಸಿ,ಶಾಸ್ತೋಕ್ತ ಸಂಗೀತದ ಕವಚ ತೊಡಿಸಿ ಅಪಾರ ಪ್ರೇಕ್ಷಕ ವಲಯವನ್ನು ಸೃಷ್ಟಿಸಿಕೊಂಡ ಪ್ರಬುದ್ಧ ಭಾಗವತರಿವರು. +ಪುರಾಣ ಪ್ರಸಂಗಗಳ ಪದ್ಯಗಳ ತಿಟ್ಟು, ಮಟ್ಟುಗಳ ಗುಟ್ಟನ್ನು ಸಂಪೂರ್ಣ ಬಲ್ಲ ಶ್ರೀಯುತರು ಭಾಗವತಿಕೆಯ ಪಾರಂಪರಿಕತೆಗೆ ಹೊಸತನದ ಸ್ಪರ್ಶನೀಡಿ ಕ್ರಾಂತಿ ಮಾಡಿದವರು. +ನಾವಡರ ನಿಧನ ಯಕ್ಷಗಾನ ಕ್ಷೇತ್ರದಲ್ಲಿ ಒಂದು ನಿರ್ವಾತವನ್ನೇ ಸೃಷ್ಟಿಸಿತ್ತು. +ಧಾರೇಶ್ವರರ ಪ್ರಯೋಗಶೀಲತೆ ಆ ಕೊರತೆ ನೀಗಿಸಿತು. +ಧಾರೇಶ್ವರರು ಅಮೃತೇಶ್ವರಿ,ಹಿರೇಮಹಾಲಿಂಗೇಶ್ವರ ಮೇಳ ಕೋಟ, ಶಿರಸಿ ಪಂಚಲಿಂಗ ಮೇಳಗಳಲ್ಲಿ ಸೇವೆ ಸಲ್ಲಿಸಿದ್ದಾರೆ. +ಸುಮಾರು 24 ವರ್ಷಗಳಿಂದ ಪೆರ್ಡೂರು ಮೇಳದ ಪ್ರಧಾನಭಾಗವತರಾಗಿ ದುಡಿಯುತ್ತಿದ್ದಾರೆ. +ಧಾರೇಶ್ವರರಒಟ್ಟು ರಂಗಕೃಷಿ 33 ವರ್ಷ. +ಪತ್ನಿ ಸುಧಾ. +ಕಾರ್ತಿಕೇಯ, ತೇಜಶ್ರೀ ಈರ್ವರು ಮಕ್ಕಳು. +ನಾಡಿನಾದ್ಯಂತ ಇವರಿಗೆ ಅಭಿಮಾನಿಗಳಿಂದ ಅಗಣಿತ ಸಂಖ್ಯೆಯ ಅಭಿನಂದನೆ, ಸಂಮಾನಗಳು ಅರ್ಹವಾಗಿ ಲಭಿಸಿವೆ. +ಬಲಿಷ್ಠವಾದ ಗುರುಪರಂಪರೆಯ ಯಕ್ಷಶ್ಶೈಕ್ಷಣಿಕ ಸಂಸ್ಕಾರ ಸಿದ್ಧಾಂತಗಳಿಗೆ ಬದ್ಧರಾಗಿ, ಗರಿಷ್ಠಮಟ್ಟದ ಕಲಾಭಿವ್ಯಕ್ತಿಯಲ್ಲಿ ವಿಜೃಂಭಿಸುವ ಉತ್ಕೃಷ್ಟ ಪ್ರತಿಭೆಯ ಶಿಷ್ಟ ಕಲಾವಿದ ಸುಬ್ರಹ್ಮಣ್ಯ ಭಟ್ಟ, ಗುಡ್ಡೆಹಿತ್ಲು. +ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ನಿಟ್ಟೂರು - ಗುಡ್ಡೆಹಿತ್ಲು ಎಂಬಲ್ಲಿ ಮಹಾಬಲ ಭಟ್‌-ಪರಮಮ್ಮ ದಂಪತಿಯ ಪುತ್ರರಾಗಿ ಹುಟ್ಟಿದ ಭಟ್ಟರು 55ರ ಹಿರಿತನದಲ್ಲಿರುವ ಪ್ರತಿಭಾನ್ವಿತ ಕಲಾವಿದರು. +ಏಳನೇ ತರಗತಿಗೆ ಶಾಲಾ ವಿದ್ಯಾಭ್ಯಾಸಕ್ಕೆ ಮಂಗಳ. +ಹದಿನೆಂಟರ ಹರೆಯದಲ್ಲೇ ಯಕ್ಷಲೋಕಕ್ಕೆ ಗಮನ. +ಬಾಲ್ಯದಲ್ಲಿ ಬಯಲಾಟಗಳನ್ನು ನೋಡಿ, ತಾಳಮದ್ದಳೆ ಅರ್ಥವನ್ನು ಕೇಳಿ ತಾನೂ ಕಲಾವಿದನಾಗಬೇಕೆಂಬ ಕನಸು ಕಟ್ಟಿಕೊಂಡ ಭಟ್ಟರು. +ಸ್ವಯಂ ಆಸಕ್ತಿ, ಶ್ರದ್ಧೆ,ಪರಿಶ್ರಮ, ಅಧ್ಯಯನ ಶೀಲತೆಯಿಂದ ಬಾಲ್ಯದ ಕನಸುಗಳಿಗೆ ಬಣ್ಣ ತುಂಬಿದರು. +ದಶಾವತಾರಿ ಗುರು ವೀರಭದ್ರನಾಯಕ ಹಾಗೂ ನಾರ್ಣಪ್ಪ ಉಪ್ಪೂರರ ಗರಡಿಯಲ್ಲಿ ಪಳಗಿ ಶಾಸ್ತ್ರೀಯ ಯಕ್ಷ ವಿದ್ಯಾಸಂಪತ್ತನ್ನು ಸೂರೆ ಗೈದರು. +ಶಿವರಾಜಪುರ, ಅಮೃತೇಶ್ವರಿ, ಪೆರ್ಡೂರು,ಸಾಲಿಗ್ರಾಮ, ಕಮಲಶಿಲೆ, ಸೌಕೂರು, ಮಾರಣಕಟ್ಟೆ,ಮಂದಾರ್ತಿ, ಗುಂಡಬಾಳ, ಸೋಮವಾರ ಸಂತೆ,ಹಾಗೂ ಮಡಾಮಕ್ಕಿ ಮೇಳಗಳಲ್ಲಿ ಸುಬ್ರಹ್ಮಣ್ಯ ಭಟ್ಟರ ಯಶಸ್ವಿ ತಿರುಗಾಟ ಮೂರು ದಶಕ ಕಂಡಿದೆ. +ಖಳನಾಯಕ, ಪ್ರತಿನಾಯಕ, ನಾಯಕ ಹಾಗೂ ಹಾಸ್ಯಭೂಮಿಕೆಗಳನ್ನು ನಿರ್ವಹಿಸುವ ಅಪೂರ್ವ ಕಲಾವ್ಯಕ್ತಿತ್ವ ಭಟ್ಟರದ್ದು. +ಗತ್ತು ಗೈರತ್ತಿನ ರಂಗನಡೆ,ಸ್ಫುಟವಾದ ಅಭಿನಂತು ಕೌಶಲ, ಪ್ರಧಾನಭೂಮಿಕೆಗಳಿ-ಗೊಪ್ಪುವ ಆಳ್ತನ, ವೇಷ ವೈಖರಿ ಎಲ್ಲಕ್ಕೂ ಪ್ರಮುಖವಾಗಿ ವಿಶೇಷ ವಾಕ್‌ಸಿದ್ಧಿ ಸುಬ್ರಹ್ಮಣ್ಯ ಭಟ್ಬರ ಪ್ರಖರ ಪ್ರತಿಭೆಗೆ ಪುರಾವೆಯಾಗುತ್ತವೆ. +ವಿಜಯದ ಭೀಷ್ಮ ಕಪಾಲದ ಬ್ರಹ್ಮ ವೀರಮಣಿ,ಯಯಾತಿ, ಬಲರಾಮ, ಜಾಂಬವ, ದಕ್ಷ, ಅರ್ಜುನ,ದುರ್ಜಯ, ಹನುಮಂತ, ರಾವಣ, ಚಂದಗೋಪ,ಕಾಳಿದಾಸ, ಕಂದರ, ಬಾಹುಕ, ಮೊದಲಾದ ಪಾತ್ರಗಳಿಗೆ ತನ್ನದೇ ವಿಶೇಷ ಮೆರುಗು ನೀಡಿ ಜನಪ್ರಿಯರಾಗಿದ್ದಾರೆ. +ಶ್ರೀಯುತರ ನೂರಾರು ಶಿಷ್ಯರು ವೃತ್ತಿರಂಗದಲ್ಲಿದ್ದಾರೆ. +ಶ್ರೀಯುತರು ವೇಷಧಾರಿಯೂ ಹೌದು. +ಭಾಗವತರೂ ಹೌದು ಅರ್ಥಧಾರಿಯೂ ಹೌದು. +ಬಾಳ ಸಂಗಾತಿ ಸಾವಿತ್ರಿ . +ಗುರುದತ್‌ ಹಾಗೂ ವೃಂದಾ ಮಕ್ಕಳು. +ಅನೇಕ ಸಂಘ ಸಂಸ್ಥೆಗಳಿಂದ ಗೌರವ ಸಂಮಾನ ಪಡೆದಿರುತ್ತಾರೆ. +ಬಡಾಬಡಗಿನ ಯಕ್ಷ ಸಾಮೃದ್ಧಿಕತೆಯ ಸಹಜ ಕಲಾಪ್ರತಿಭೆ ಚಿಟ್ಟಾಣಿ ಸುಬ್ರಹ್ಮಣ್ಯ ಹೆಗಡೆ. +ಸುಪ್ರಸಿದ್ಧ ಯಕ್ಷಗಾನ ಕಲಾವಿದ ಚಿಟ್ಟಾಣಿ ರಾಮಚಂದ್ರ ಹೆಗಡೆ - ಸುಶೀಲಾ ಹೆಗಡೆ ಅವರ ಸುಪುತ್ರರಾದ ಸುಬ್ರಹ್ಮಣ್ಯ ಹೆಗಡೆ 25-3-1962ರಲ್ಲಿ ಚಿಟ್ಟಾಣಿಯಲ್ಲಿ ಜನಿಸಿದರು. +ಬಾಲ್ಯದಿಂದಲೇ ಯಕ್ಷಗಾನ ಕಲೆಯ ಮೇಲಣ ಅತೀವ ಆಸಕ್ತಿ ಹೊಂದಿದ್ದ ಸುಬ್ರಹ್ಮಣ್ಯ ಹೆಗಡೆಯವರಿಗೆ ತಂದೆಯವರ ಕಲಾಸಿದ್ಧಿ, ಪ್ರಸಿದ್ಧಿಯೇ ಪ್ರೇರಣೆಯಾಯಿತು. +ರಕ್ತಗತವಾದ ಕಲಾವಿದ್ಯೆ ಹತ್ತನೇ ತರಗತಿಯ ಅಕ್ಷರವಿದ್ಯೆಗೆ ಶರಣು ಹೊಡೆಸಿತು. +ತನ್ನ 13ನೇ ವರ್ಷದಲ್ಲಿ ಕಲಾಭ್ಯಾಸಕ್ಕೆ ತೊಡಗಿದ ಸುಬ್ರಹ್ಮಣ್ಯ ಹೆಗಡೆಯವರು 16ರ ಹರೆಯದಲ್ಲಿ ಯಕ್ಷಲೋಕಕ್ಕೆ ಚರಣವಿರಿಸಿದರು. +ಹೊನ್ನಾವರದ ಗೋವಿಂದ ಭಟ್‌ ಎಂಬವರ ಗುರುತನವನ್ನು ಹೊಂದಿದ ಸುಬ್ರಹ್ಮಣ್ಯ ಹೆಗಡೆಯವರು ಪರಿಶ್ರಮಿಕ ರಂಗಾಧ್ಯಯನದಿಂದ ಪರಿಪಕ್ವತೆಯನ್ನು ಸಾಧಿಸಿದವರು. +ಸರ್ವಸಮರ್ಥ ಪುರುಷವೇಷಧಾರಿಯಾಗಿ ಗಮನ ಸೆಳೆದರು. +ಗುಂಡುಬಾಳ 3, ಸಾಲಿಗ್ರಾಮ 5, ಹಿರೇಮಹಾಲಿಂಗೇಶ್ವರ 2, ಶಿರಸಿ-ಪಂಚಲಿಂಗ 3,ಪೆರ್ಡೂರು 2, ಬಚ್ಚಗಾರು 5, ಶಿರಸಿ-ಮಾರಿಕಾಂಬಾ 2, ಮಂದಾರ್ತಿ 3, ವೀರಾಂಜನೇಯ 5, ಹೀಗೆ ಮೂರು ದಶಕಗಳ ಯಶಸ್ವೀ ತಿರುಗಾಟದಲ್ಲಿ ಸುಯೋಗ್ಯ ಹೆಸರು ಗಳಿಸಿದ್ದಾರೆ. +ಯಕ್ಷಗಾನ ಕಥಾನಾಯಕ, ಖಳನಾಯಕ,ಪ್ರತಿನಾಯಕ, ಹಾಗೂ ಪೋಷಕ ಪಾತ್ರಗಳನ್ನು ಪರಿಣಾಮಕಾರಿಯಾಗಿ ನಿರೂಪಿಸುವ ಶ್ರೀಯುತರ ನೃತ್ಯಾಭಿನಯ ಸ್ಪಷ್ಟತೆ, ಪಾತ್ರ ತಲ್ಲೀನತೆ, ಆಕರ್ಷಕ ವೇಷಗಾರಿಕೆ, ಸಾಹಿತ್ಯಪೂರ್ಣ ಮಾಚಿಕತೆ ಗುರುತಿಸಲ್ಪಡುವಂತಹುದು. +ಧರ್ಮಾಂಗದ, ಶ್ರೀಕೃಷ್ಣ,ಅರ್ಜುನ, ಕಲಾಧರ, ಕೌರವ, ಕಂಸ, ವತ್ಸಾಖ್ಯ,ಹರಿಶ್ಚಂದ್ರ ಪಾತ್ರಗಳು ಜನಪ್ರಿಯ. +ಪ್ರಸ್ತುತ ಬಂಗಾರಮಕ್ಕಿ ವೀರಾಂಜನೇಯ ಯಕ್ಷಮಿತ್ರ ಮಂಡಳಿಯ ನಿರ್ದೇಶಕರು. +ಶ್ರೀಯುತರ ಬಾಳ ಸಂಗಾತಿ ಪಾರ್ವತಿ ಹೆಗಡೆ. +ಪ್ರೀತಿ ಹೆಗಡೆ, ಕಾರ್ತಿಕ ಹೆಗಡೆ ಮಕ್ಕಳು. +ಹಲವಾರು ಸಂಘ-ಸಂಸ್ಥೆಗಳ, ಅಭಿಮಾನಿ ಬಳಗದಿಂದ ಸಂಮಾನ ದೊರಕಿರುತ್ತದೆ. +ಪೂರ್ವ ಯಕ್ಷಗಾನದ ಗಾನ ಘರಾನವನ್ನು ಸಮೃದ್ಧವಾಗಿ ಪೋಷಿಸಿಕೊಂಡು, ಸಂಪನ್ನ ಪ್ರತಿಭೆಯಾಗಿ ಬೆಳೆದ ಹಿರಿಯ ತಲೆಮಾರಿನ ಅಗ್ರಮಾನ್ಯ ಭಾಗವತ ಕಪ್ಪೆಕೆರೆ ಸುಬ್ರಾಯ ಹೆಗಡೆ. +ಉತ್ತರ ಕನ್ನಡದ ಹೊನ್ನಾವರ ತಾಲೂಕಿನ ಹಡಿನಬಾಳ ಎಂಬಲ್ಲಿ 1-8-1947ರಲ್ಲಿ ಈಶ್ವರ ಹೆಗಡೆ-ಗೋಪಿ ಹೆಗಡೆ ದಂಪತಿಯ ಸುಪುತ್ರರಾಗಿ ಜನಿಸಿದ ಸುಬ್ರಾಯ ಹೆಗಡೆಯವರ ವಿದ್ಯಾಭ್ಯಾಸ ಹತ್ತನೆ ತರಗತಿಯವರೆಗೆ. +ಹದಿನಾರರ ಹರೆಯದಲ್ಲೇ ಯಕ್ಷಗಾನದ ಗಾನಬದುಕಿಗೆ ಮನ ಮಾಡಿದರು. +ತಂದೆ ತಾಯಿಗಳ ಪ್ರೋತ್ಸಾಹ-ಪ್ರೇರಣೆಯೇ ಸುಬ್ರಾಯ ಹೆಗಡೆಯವರ ರಂಗಜೀವನಕ್ಕೆ ಮಾರ್ಗಮಣಿ ದೀಪವಾಯಿತು. +ವೃತ್ತಿ ಬದುಕಿನ ಗಾಯನ ದ್ರುಮಕ್ಕೆ ಮರವಂತೆ ನರಸಿಂಹದಾಸರು,ನಾರ್ಣಪ್ಪ ಉಪ್ಪೂರರು ಹಾಗೂ ಶಿವರಾಮ ಹೆಗಡೆಯವರು ನೀರೆರೆದು ಪೋಷಿಸಿದರು. +ಗಣಪತಿ ಹೆಗಡೆ ಹಾಗೂ ಕೆರೆಮನೆ ಮಹಾಬಲ ಹೆಗಡೆಯವರು ಇವರಿಗೆ ಗುರುಗಳಾಗಿ ಬೆಂಬಲಿಸಿದರು. +ಗುಂಡುಬಾಳ 18, ಇಡಗುಂಜಿ 12, ಅಮೃತೇಶ್ವರಿ8, ಕಮಲಶಿಲೆ 1, ಸಾಲಿಗ್ರಾಮ 1, ಬಚ್ಚಗಾರು 1,ಪಂಚಲಿಂಗ 4, ಹೀಗೆ 45 ವರ್ಷಗಳ ಸುದೀರ್ಥ ಕಲಾವ್ಯವಸಾಯದಲ್ಲಿ ಸುಬ್ರಾಯ ಹೆಗಡೆಯವರು ವಿಶೇಷ ಕೀರ್ತಿಗೆ ಭಾಜನ-ರಾಗಿದ್ದಾರೆ. +ಶ್ರೀಯುತರು ಒಬ್ಬ ಶ್ರೇಷ್ಠ ಭಾಗವತ ಮಾತ್ರವಲ್ಲ. +ಇವರಿಗೆ ಚಂಡೆ-ಮದ್ಧಳೆವಾದನದ ಪರಿಣಿತಿಯೂ ಇದೆ. +ನೃತ್ಯಾಭಿನಯದ ಕಲೆಯೂ ತಿಳಿದಿದೆ. +ಹಾಗಾಗಿ ಇವರು ಯಕ್ಷಗಾನ ರಂಗದ ಸರ್ವಾಂಗೀಣ ಕಲಾವಿದರು. +ವೇಷದಾರಿಯಾಗಿ ಅರ್ಜುನ, ಬಲರಾಮ,ವಿಜಯವರ್ಮ, ನಾರದ ಮೊದಲಾದ ಪಾತ್ರಗಳನ್ನೂ ನಿರ್ವಹಿಸಿದವರು. +ಸುಬ್ರಾಯ ಹೆಗಡೆಯವರ ತಾಳಗತಿಯಲ್ಲಿನ ಪರಿಶುದ್ಧತೆ, ಎದ್ದು ಕಾಣುವ ಲಯಬದ್ಧತೆ,ಕಲಾವಿದರನ್ನು ರಂಗದಲ್ಲಿ ಬಳಸಿಕೊಳ್ಳುವ ಕಲಾತಾಂತ್ರಿಕತೆ, ಪ್ರಸಂಗ ನಿರ್ದೇಶನ ಶಕ್ತತೆ ಸುಯೋಗ್ಯ ಭಾಗವತನ ಸ್ಥಾನ-ಮಾನ್ಯತೆಯನ್ನು ಗೊತ್ತುಪಡಿಸುತ್ತದೆ. +ಇವರ ಪೌರಾಣಿಕ ಜ್ಞಾನ ಅಪಾರ. +ಗಂಭೀರ ಸ್ವರಸಂಚಾರದಲ್ಲಿ ರಂಗಕ್ಕೆ ಬಿಸಿ ತುಂಬುವ ಅದ್ಭುತ ಚೈತನ್ಯ ಇವರಿಗಿದೆ. +ಸುಬ್ರಾಯ ಭಾಗವತರ ನೂರಾರು ಶಿಷ್ಯರು ಯಕ್ಷಗಾನ ಕ್ಷೇತ್ರದಲ್ಲಿ ಮಹೋನ್ನತ ಪ್ರತಿಭೆಗಳಾಗಿ ವಿಜೃಂಭಿಸುತ್ತಿದ್ದಾರೆ. +ಪ್ರಸ್ತುತ ಶ್ರೀಯುತರು ಉಮಾಮಹೇಶ್ವರ ಹಾಗೂ ಸದ್ಗುರು ದಯಾಶ್ರಿತ ಯಕ್ಷಗಾನ ಸಂಸ್ಥೆಗಳಲ್ಲಿ ತಾಳಮದ್ದಳೆ ಭಾಗವತರಾಗಿ ಸೇವೆ ಸಲ್ಲಿಸುತ್ತಿದ್ದಾರೆ. +ಧರ್ಮಪತ್ನಿ ಹೇಮಾ. +ಈಶ್ವರಚಂದ್ರ, ಫಣೇಂದ್ರ ಮಕ್ಕಳು. +ಶ್ರೀಯುತರನ್ನು ಹಲವಾರು ಸಂಘ-ಸಂಸ್ಥೆಗಳು ಗುರುತಿಸಿ ಗೌರವಿಸಿವೆ. +ಉಡುಪಿ ಯಕ್ಷಗಾನ“ಕಲಾರಂಗ'ದ ಭಾಗವತ ನಾರ್ಣಪ್ಪ ಉಪ್ಪೂರು ಪ್ರಶಸ್ತಿ ಸೇರಿದಂತೆ ಹಲವು ಸಮ್ಮಾನ ದೊರಕಿರುತ್ತದೆ. +ಯಕ್ಷಲೋಕದ ವೀರ ವಾದ್ಯವೆನಿಸಿದ ಚಂಡೆಯ ಮಾಧುರ್ಯ ಪೂರ್ಣ ನುಡಿತದಲ್ಲಿ ಸಿದ್ಧ ಹಸ್ತರಾದ ಅನುಭವಿ ಹಿರಿಯ ಚಂಡೆವಾದಕ ಬಾಡ ಸುಕ್ರಪ್ಪ ನಾಯ್ಕ . +ಉತ್ತರ ಕನ್ನಡದ ಬಾಡ-ಹುಬ್ಬಣಗೇರಿ ಎಂಬಲ್ಲಿ 23-3-1945ರಲ್ಲಿ ನಾರಾಯಣ ನಾಯ್ಕ - ಮಹಾಸತಿ ದಂಪತಿಯ ಸುಪುತ್ರರಾಗಿ ಜನಿಸಿದ ಇವರು ಬಾಲ್ಯದಿಂದಲೇ ಕಲಾಸಕ್ತಿಯನ್ನ್ನು ಮೈ ಗೂಡಿಸಿಕೊಂಡವರು. +ಏಳನೇ ತರಗತಿಯ ವರೆಗಿನ ಶೈಕ್ಷಣಿಕ ಹಂತವನ್ನು ಪೂರೈಸಿ ಕಡುಬಡತನದ ರೈತಾಪಿ ಕುಟುಂಬದ ಸುಕ್ರಪ್ಪನವರು 24ನೇ ವಯಸ್ಸಿನಲ್ಲಿ ಬಣ್ಣದ ಜೀವನಕ್ಕೆ ಮುಂದಾದರು. +ಇವರ ತಂದೆಯವರು ಹಾಗೂ ಅಣ್ಣ ಚಂಡೆಮದ್ದಳೆ ವಾದಕರಾಗಿದ್ದರು. +ಅವರೇ ಇವರಿಗೆ ರಂಗಬದುಕಿಗೆ ಪ್ರೇರಣೆ ಪ್ರೋತ್ಸಾಹ ನೀಡಿದರು. +ತಂದೆಯಿಂದಲೇ ಚಂಡೆವಾದನ ಕಲಿತ ಸುಕ್ರಪ್ಪನವರು 1973ರಲ್ಲಿ ಕೋಟ ಹಿರೇ ಮಹಾಲಿಂಗೇಶ್ವರ ದೇವಳದ ಕಲಾಗರಡಿಯನ್ನು ಸೇರಿ ಭಾಗವತ ನಾರ್ಣಪ್ಪಉಪ್ಪೂರ, ದುರ್ಗಪ್ಪ ಗುಡಿಗಾರರಿಂದ ಹೆಚ್ಚಿನ ರಂಗ ಪರಿಣತಿ ಸಾಧಿಸಿದರು. +ಕಾಳಿಂಗ ನಾವಡರ ಮೂಲಕ ವೃತ್ತಿಮೇಳಕ್ಕೆ ಸೇರ್ಪಡೆಯಾದರು. +ಕುಮಟಾ 12, ಮೂಲ್ಕಿ 3, ಬಜ್ಚಗಾರು 3,ಕುಮಟಾ (ಡೇರೆ) 2, ಹಾಲಾಡಿ 2, ಕಮಲಶಿಲೆ 1,ಬಗ್ವಾಡಿ 3. ಗೋಳಿಗರಡಿ 2, ಕಳವಾಡಿ 3,ನಾಗರಕೊಡಿಗೆ 2, ಅಮೃತೇಶ್ವರಿ 7, ಹೀಗೆ ನಾಲ್ಕು ದಶಕಗಳ ಅವರ ರಂಗವ್ಯವಸಾಯ ಸಾರ್ಥಕವಾಗಿದೆ. +ನಯವಾದ ನುಡಿತ ಶೈಲಿ, ಪ್ರಸಂಗದ ಸನ್ನಿವೇಶ -ಸಂದರ್ಭ, ಕಾಲ-ಪಾತ್ರವರಿತ ಅವರ ವಾದನ ಕ್ರಮ,ಪದ್ಯಸಾಹಿತ್ಯ ಸ್ಪಷ್ಟವಾಗಿ ಕೇಳಿಸುವಂತೆ ಚಂಡೆಬಾರಿಸುವ ಗುಣ ಅವರ ಕಲಾವ್ಯಕ್ತಿತ್ವದಲ್ಲಿ ಕಂಡು ಬರುತ್ತದೆ. +ಗಾಯನ ಹಾಗೂ ಮದ್ದಳೆವಾದನಕ್ಕೆ ನ್ಯೂನವಾಗದಂತೆ ಪೂರಕವಾಗಿದ್ದು, ಮಾರ್ದವತೆಯ ನರುಗಂಪು ಹೊರಸೂಸುವ ಅವರ ಚಂಡೆಗಾರಿಕೆ ಆನುಭವಿಕವಾದದ್ದು. +ಉತ್ತಮ ಚಂಡೆವಾದಕರಾದ ಸುಕ್ರಪ್ಪನವರಿಗೆ ಮದ್ದಳೆಗಾರಿಕೆಯೂ ಗೊತ್ತು. +ವೃತ್ತಿಜೀವನದ ಬಿಡುವಿನ ಅವಧಿಯಲ್ಲಿ ಅವರು ಕೃಷಿಕರ್ಮದಲ್ಲಿ ತೊಡಗುತ್ತಾರೆ. +ಮಡದಿ ಮಹಾದೇವಿ. +ರವಿಕಾಂತ, ವೀಣಾ, ವಿದ್ಯಾಸರೋಜಾ, ಶ್ರೀಧರ ಮಕ್ಕಳು. +ಶ್ರೀಯುತರು ಹುಟ್ಟೂರ ಸಂಮಾನ, ಅಮೃತೇಶ್ವರಿ ಮೇಳದಲ್ಲಿ ಗೌರವ ಪುರಸ್ಕಾರ ಪಡೆದಿರುತ್ತಾರೆ. +ಬಡಗುತಿಟ್ಟನ ಸಾಂಪ್ರದಾಯಿಕ ಶೈಲೀಕೃತ ಭವ್ಯತೆಯನ್ನು ಪಾತ್ರಗಳ ಮೂಲಕ ಜೀವಂತವಾಗಿ ತೆರೆದಿಡುವ ಮಧ್ಯಮತಿಟ್ಟಿನ ಸಮರ್ಥ ಕಲಾವಿದ ಕೋಟ ಸುರೇಶ ಬಂಗೇರ. +ಉಡುಪಿ ತಾಲೂಕಿನ ಮಣೂರು-ಪಡುಕರೆ ಎಂಬಲ್ಲಿ 1965ರಲ್ಲಿ ಜನಿಸಿದ ಸುರೇಶ ಬಂಗೇರ ಅವರು ಮಣೂರು ಬೇಡು ಮರಕಾಲ-ಅಕ್ಕಮ್ಮ ದಂಪತಿಯ ಸುಪುತ್ರ. +5ನೇ ಇಯತ್ತೆಯವರೆಗೆ ಅಕ್ಷರಾಭ್ಯಾಸ ಮಾಡಿದ ಸುರೇಶ ಬಂಗೇರ ಅವರು ತನ್ನ 16ನ ಹರೆಯದಲ್ಲೇ ಬಣ್ಣದ ಬದುಕು ಕಂಡರು. +ಪ್ರಸಿದ್ಧ ಕಲಾವಿದ ಶಿರಿಯಾರ ಮಂಜುನಾಯ್ಕರ ಹೂವಿನಕೋಲು ತಿರುಗಾಟದ ಬಾಲಕಲಾವಿದನಾಗಿ ಶಿರಿಯಾರರ ನಿಕಟಸಂಪರ್ಕವನ್ನು ಸಾಧಿಸಿ ಪ್ರೌಢ ಅರ್ಥಗಾರಿಕೆ, ರಂಗನಡೆ, ನೃತ್ಯಾಭಿನಯ ಕೌಶಲವನ್ನು ಕಂಡುಕೊಂಡು ತನ್ನ ಕಲಾನುಭವವನ್ನು ಗರಿಷ್ಠಮಟ್ಟದಲ್ಲಿಟ್ಟು ಕೊಂಡ ಕಲಾವಿದ. +ಮೊಳಹಳ್ಳಿ ಹೆರಿಯನಾಯ್ಕರ ಗುರುತನವೂ ಶ್ರೀಯುತರನ್ನು ಸುಯೋಗ್ಯ ಕಲಾವಿದನನ್ನಾಗಿ ರೂಪಿಸುವಲ್ಲಿ ಶಕ್ತವಾಗಿದೆ. +ಮಂದಾರ್ತಿ 7, ಸೌಕೂರು17, ಸಾಲಿಗ್ರಾಮ 2, ಕಮಲಶಿಲೆ 3, ಅಮೃತೇಶ್ವರಿ 2, ಪೆರ್ಡೂರು 2, ಹೀಗೆ ಬಂಗೇರರ ಕಲಾವ್ಯವಸಾಯ 33 ವರ್ಷ ಪ್ರಸ್ತುತ ಸುರೇಶ ಬಂಗೇರರು ಸೌಕೂರುಮೇಳದ ಕಲಾವಿದರು. +ಬಡಗುತಿಟ್ಟಿನ ಪುರುಷವೇಷಗಳ ಸಾಂಪ್ರದಾಯಿಕ ಸೊಗಸು ಮೈತುಂಬಿ- ಕೊಂಡಸುರೇಶ ಅವರ ಪರಿಶುದ್ಧವಾದ ನೃತ್ಯಾಭಿನಯ ವೈಖರಿ, ಆಕರ್ಷಕ ಆಳಂಗ, ಪ್ರಗಲ್ಫ ಪಾಂಡಿತ್ಯ,ನಿರರ್ಗಳ ವಚೋವಿಲಾಸ, ನಿರ್ವಹಣಾ ಭೂಮಿಕೆಗಳಿಗೆ ಪ್ರಾಣ ಶಕ್ತಿ ನೀಡುತ್ತವೆ. +ಶ್ರೀಯುತರ ಸುಧನ್ವ, ಪುಷ್ಕಳ,ಮಾರ್ತಾಂಡತೇಜ, ಅರ್ಜುನ, ದೇವವೃತ, ವತ್ಸಾಖ್ಯ,ಚಂದ್ರಹಾಸ ಮೊದಲಾದ ಭೂಮಿಕೆಗಳು ಪೌರಾಣಿಕತೆಯ ಸಚೇತನ ರಂಗಪ್ರತಿಮೆಗಳಾಗುತ್ತವೆ. +ಪತ್ನಿ ಸುಶೀಲಾ, ಪುತ್ರ ಸುರಕ್ಷಾ ಅವರೊಂದಿಗೆ ಕೋಟ ಪಡುಕರೆಯಲ್ಲಿ ವಾಸವಾಗಿರುವ ಅನುಭವಿಯುವ ಕಲಾವಿದ ಸುರೇಶ ಬಂಗೇರ ಇವರಿಗೆ ಹಲವು ಸಂಮಾನಗಳು ದೊರಕಿವೆ. +ಇಂಪಾದ ಸುಖಸ್ವರಸಂಪತ್ತಿಕೆಯಲ್ಲಿ ಮುಮ್ಮೇಳದ ಕಲಾಭಿವ್ಯಕ್ತಿಗೆ ಸೊಂಪಾದ ಕಳೆನೀಡುವ ಯುವ ಭಾಗವತ ಸುರೇಶ ಶೆಟ್ಟಿ ಶಂಕರನಾರಾಯಣ. +ಕುಂದಾಪುರ ತಾಲೂಕಿನ ಶಂಕರನಾರಾಯಣ ಎಂಬ ಪುಟ್ಟ ಹಳ್ಳಿಯಲ್ಲಿ 17-02-1967 ರಲ್ಲಿ ಜನಿಸಿದ ಸುರೇಶ ಶೆಟ್ಟರು ಶಿವರಾಮಶೆಟ್ಟಿ-ಕುಸುಮಾವತಿ ದಂಪತಿಯ ಸುಪುತ್ರ. +8ನೇ ಇಯತ್ತೆಗೆ, ಅಕ್ಷರ ಮಂಗಳಹಾಡಿ, 14ನೇ ವಯಸ್ಸಿನಲ್ಲೇ ಯಕ್ಷಗಾನ ಲೋಕದ ಜೀವನಯಾತ್ರೆಗೆ ಶ್ರೀಕಾರ ಹಾಡಿದ ಶೆಟ್ಟರು ಉಡುಪಿ ಯಕ್ಷಗಾನ ಕೇಂದ್ರದ ವಿದ್ಯಾರ್ಥಿಯಾಗಿ ಸಶಕ್ತ ಶಿಕ್ಷಣವನ್ನು ಪಡೆದರು. +ತಂದೆ ತಾಳಮದ್ದಳೆ ಅರ್ಥಧಾರಿಯಾಗಿರುವುದರಿಂದ ಬಾಲಕ ಸುರೇಶನಿಗೆ ಎಳವೆಯಲ್ಲೇ ಕಲಾಜ್ಞಾನ ಪ್ರಾಪ್ತವಾಯಿತು. +ಹಿರಿಯಭಾಗವತ ಕೆ.ಪಿ.ಹೆಗಡೆಯವರ ಗುರುತನ,ಮಾರ್ಗದರ್ಶನದಲ್ಲಿ ಶ್ರೀಯುತರು ಸಮರ್ಥಭಾಗವತರಾಗಿ ರೂಪುಗೊಂಡರು. +ಉತ್ತಮ ನೃತ್ಯಪಟುವೂ ಆಗಿರುವ ಸುರೇಶ ಶೆಟ್ಟರು ವೇಷ-ಧಾರಿಯಾಗಿ ರಂಗಮಂಚದಲ್ಲಿ ಕುಣಿದು ಮೆರೆದವರು. +ಯಾವುದೇ ಶ್ರುತಿಯಲ್ಲೂ ಭಾವಪೂರ್ಣವಾಗಿ,ಲೀಲಾಜಾಲವಾಗಿ ಶಾರೀರ ತೊಡಗಿಸುವ ಶೆಟ್ಟರ ಮಧುರ ಗಾನಾಮೃತಧಾರೆ ನಾಡಿನಾದ್ಯಂತ ಪಸರಿಸಿದೆ. +ಪೌರಾಣಿಕವಿರಲಿ, ನವ್ಯವಿರಲಿ ಸುರೇಶ ಶೆಟ್ಟರ ಭಾಗವತಿಕೆಯ ವೈಖರಿ ರಸಾತ್ಮಕವಾಗಿ ಸಾಗುತ್ತದೆ. +ಕಮಲಶಿಲೆ 2, ಸಾಲಿಗ್ರಾಮ 2, ಹಾಲಾಡಿ 1,ಪೆರ್ಡೂರು 20, ಹೀಗೆ ಬಣ್ಣದ ಲೋಕದಲ್ಲಿ ಬೆಳ್ಳಿಹಬ್ಬವನ್ನು ಯಶಸ್ವಿಯಾಗಿ ಪೂರೈಸಿ ಪ್ರಸ್ತುತ ಅತಿಥಿ ಭಾಗವತರಾಗಿ ಕಲಾಸೇವೆ ಮುಂದುವರಿಸುತ್ತಿದ್ದಾರೆ. +ಪತ್ನಿ ಶೃಂಗಾರಿ. +ಚಿರಾಗ್‌, ವಿಪುಲ್‌ ಮಕ್ಕಳು. +ಪ್ರತಿಭಾನ್ವಿತ ಭಾಗವತ ಸುರೇಶ ಶೆಟ್ಟರನ್ನು ಹಲವಾರು ಸಂಘ-ಸಂಸ್ಥೆಗಳು ಗುರುತಿಸಿ ಸಂಮಾನಿಸಿವೆ. +ಶಾಸ್ತೋಕ್ತ ಯಕ್ಷವಿದ್ಯಾ ಪ್ರೌಢಿಮೆಯಲ್ಲಿ ನಡುತಿಟ್ಟಿನ ದೃಢವಾದ ಶೈಲಿಯನ್ನು ರಂಗಮಂಚದಲ್ಲಿ ಪಡಿಮೂಡಿಸುವ ಪ್ರತಿಭಾನ್ವಿತ ಯಕ್ಷನಟ ಆಲೂರು ಸುರೇಂದ್ರ. +ಬಡಗಿನ ಸಮರ್ಥ ಪುರುಷವೇಷಧಾರಿಯಾಗಿ,ಪುಂಡು ವೇಷಧಾರೆಯಾಗಿ ಪೌರಾಣಿಕ ಪಾತ್ರ ಪ್ರಪಂಚವನ್ನು ಬೆಳಗಿದ ಆಲೂರು ಸುರೇಂದ್ರ ಅವರು ಅಪಾರ ಕಲಾನುಭವವನ್ನು ಕಲಾವ್ಯಕ್ತಿತ್ವದಲ್ಲಿ ಹರಳುಗಟ್ಟಿಸಿಕೊಂಡು ಪ್ರತೀ ಪಾತ್ರಗಳ ಜೀವನಾಡಿ ಮಿಡಿತವನ್ನು ಸಮಗ್ರವಾಗಿ ಅರಿತು ವ್ಯವಹರಿಸುವ ಸಂಪನ್ನ ಪ್ರತಿಭೆ. +ಕುಂದಾಪುರ ತಾಲೂಕಿನ ಆಲೂರು ಎಂಬಲ್ಲಿ 1960ರಲ್ಲಿ ಗೋಪಾಲ-ಸಿದ್ಧು ದಂಪತಿಯ ಸುಕುಮಾರನಾಗಿ ಜನಿಸಿದ ಸುರೇಂದ್ರ ಬಾಲ್ಯದಲ್ಲಿಯೇ ಯಕ್ಷಕಲಾಸಕ್ತಿಯನ್ನು ಅನ್ಯಾದೃಶವಾಗಿ,ಮೈತುಂಬಿಸಿ ಕೊಂಡವರು. +ಹಿರಿಯ ಕಲಾವಿದ ಕೊಪ್ಪಾಟೆ ಮುತ್ತಗೌಡರಗುರುತನ ಹಾಗೂ ಪ್ರೇರಣೆ ಪಡೆದು ತನ್ನ 13ರ ಹರೆಯದಲ್ಲೇ ಯಕ್ಷಗಾನ ಬಣ್ಣ-ನೂಪುರದ ಬೆಡಗಿಗೆ ಮನಸೋತ ಇವರ ಸೋದರ ಮಾವ ಆಲೂರು ತೇಜ ಅವರು. +ಹಾರ್ದಿಕ ಪ್ರೋತ್ಸಾಹ,ರಂಗ ಮಾರ್ಗದರ್ಶನದಲ್ಲಿ ಸಮರ್ಥ ಕಲಾವಿದನಾಗಿ ರೂಪು-ಗೊಂಡವರು. +ಮಾರಣಕಟ್ಟೆ 24, ಕಮಲಶಿಲೆ 8, ಸೌಕೂರು3, ಹೀಗೆ ಮೂರು ಮೇಳಗಳಲ್ಲೇ 35 ವರ್ಷ ಕಲಾವ್ಯವಸಾಯ ಪೂರೈಸಿದ್ದಾರೆ. +ಪ್ರಸ್ತುತ ಮಾರಣಕಟ್ಟೆ ಮೇಳದಲ್ಲಿ ದುಡಿಯುತ್ತಿದ್ದಾರೆ. +ಐವತ್ತರ ವಯಸ್ಸಿನ ಆಲೂರು ಸುರೇಂದ್ರ ವೇಷ ಹಾಕಿದರೆ ರಂಗಮಂಚದಲ್ ಲಿಹದಿನೆಂಟರ ತರುಣನಾಗಿ ಬೆರಗು ಹುಟ್ಟಿಸುತ್ತಾರೆ. +ಪುಂಡುವೇಷಗಳಲ್ಲಿ ಅವರು ಕಾಣಿಸುವ ವಿಶೇಷ ಚುರುಕು ನಡೆಯ ನೃತ್ಯವೈಖರಿ, ಪುರುಷ ಪಾತ್ರಗಳಲ್ಲಿ ತೋರುವ ಪೌರುಷೇಯ ವರ್ಚಸ್ಸು ಕಲಾರಸಿಕರ ಮನ ತುಂಬಿದೆ. +ಶ್ರೀಯುತರ ಸುಧನ್ವ, ಪುಷ್ಕಳ, ದೇವವೃತ,ಬಬ್ರುವಾಹನ, ಅಭಿಮನ್ಯು, ಯಯಾತಿ, ಪಾತ್ರಗಳು ಜನಪ್ರಿಯ. +ಸುಸಮರ್ಥ ಗುರುವಾಗಿಯೂ ಅನೇಕ ಪ್ರತಿಭಾವಂತ ಶಿಷ್ಯಕಲಾವಿದರನ್ನು ಯಕ್ಷಲೋಕಕ್ಕೆ ನೀಡಿದ ಇವರ ಬಾಳ ಸಂಗಾತಿ ಸಿಂಗಾರಿ. +ನಾಲ್ವರು ಮಕ್ಕಳು. +ಆಲೂರು ಸುರೇಂದ್ರ ಅವರನ್ನು ಹಲವು ಸಂಘ ಸಂಸ್ಥೆಗಳು ಗೌರವಿಸಿವೆ. +ಕಲಾರಾಧನೆಯನ್ನೇ ಉಸಿರಾಗಿಸಿ, ಛಲವನ್ನೇ ಬದುಕಿನ ಬಂಡವಾಳ -ವಾರಿಸಿಕೊಂಡು ವರ್ಣರಂಜಿತ ವೇಷವೈವಿಧ್ಯದಲ್ಲಿ ಗುರುತಿಸಲ್ಪಟ್ಟ ಹಿರಿಯ ಕಲಾವಿದ ಮೊಗೆಬೆಟ್ಟು ಹೆರಿಯ ನಾಯ್ಕ. +ಯಕ್ಷಗಾನದ ಆಡುಂಬೊಲವಾದ ಕುಂದಾಪುರ ತಾಲೂಕಿನ ಬೇಳೂರು ಗ್ರಾಮವಾದ ಮೊಗೆಬೆಟ್ಟು ಎಂಬಲ್ಲಿ ಜನಿಸಿದ ಶ್ರೀಯುತರು 58ರ ಹಿರಿತನದಲ್ಲಿ ಬೆಳೆದು ನಿಂತಿದ್ದಾರೆ. +ಇವರ ತಂದೆ ಮೊಗೆಬೆಟ್ಟು ವೀರ ನಾಯ್ಕ ತಾಯಿ ಚಂದಮ್ಮ ಮೊಗೇರ್ತಿ. +ಹೆರಿಯ ನಾಯ್ಕ ಅವರ ಹಸಿದಹೊಟ್ಟೆ ಅವರನ್ನು 3ನೇ ತರಗತಿಯಿಂದ ಹೊರದಬ್ಬಿತು. +ಸುತ್ತ ಮುತ್ತ ಜರುಗುತ್ತಿದ್ದ ಯಕ್ಷಗಾನ ದೀವಟಿಗೆ ಬೆಳಕಿನಾಟ ಕೈಬೀಸಿ ಹತ್ತಿರ ಕರೆಯಿತು. +ತನ್ನ 16ನೇ ವಯಸ್ಸಿನಲ್ಲೇ ಬಣ್ಣದ ಬದುಕು ಕಂಡ ನಾಯ್ಕರು 1970ರ ದಶಕದಲ್ಲಿ ಕೋಟದ ಯಕ್ಷಗಾನ ಕಲಿಕಾ ಕೇಂದ್ರಕ್ಕೆ ಸೇರಿ ಅಲ್ಲಿನಾರ್ಣಪ್ಪ ಉಪ್ಪೂರರಿಂದ ತಾಳದೀಕ್ಷೆ ಪಡೆದರು. +ಹಿರಿಯ ಮದ್ದಳೆಗಾರ ತಿಮ್ಮಪ್ಪ ನಾಯ್ಕರಲ್ಲಿ ಸಂಪ್ರದಾಯ ನೃತ್ಯ ಶಿಕ್ಷಣ ಹೊಂದಿದರು. +ಕಿರಿಯ ವಯಸ್ಸಿನಲ್ಲೇ ಮಂದಾರ್ತಿ ಮೇಳಕ್ಕೆ ಸೇರಿದ ಹಿರಿಯನವರು ಅಲ್ಲಿ ಸಂಗೀತಗಾರರಾಗಿ ರಾಜವೇಷಧಾರಿಯಾಗಿ ಸೇವೆ ಸಲ್ಲಿಸಿದರು. +ಮಂದಾರ್ತಿ 4, ಮಾರಣಕಟ್ಟೆ 4, ಅಮೃತೇಶ್ವರಿ 5, ರಂಜದಕಟ್ಟೆ 3, ಹೀಗೆ 16 ವರ್ಷಗಳ ಕಾಲ ರಂಗಕೃಷಿ ನಡೆಸಿ ಪ್ರಸ್ತುತ ವಿಶ್ರಾಂತ ಜೀವನದಲ್ಲಿದ್ದಾರೆ. +ದೈಹಿಕ ಅನಾರೋಗ್ಯದ ನಿಮಿತ್ತ ವೃತ್ತಿಮೇಳ ತೊರೆದ ನಾಯ್ಕರು ಕಲೆಯನ್ನು ಕೈ ಬಿಡಲಿಲ್ಲ. +ಸುತ್ತ ಮುತ್ತಲಿನ ಕಲಾಸಕ್ತರನ್ನು ಸಂಘಟಿಸಿ, ಕಲಾಪ್ರತಿಭೆಯನ್ನು ನೇರ್ಪುಗೊಳಸಿದರು. +ಚಿಕ್ಕುಹ್ಯಾಗುಳಿ ಯಕ್ಷಗಾನಸಂಘ, ಮೊಗೆಬೆಟ್ಟು, ಸಕ್ಕಟ್ಟು ಮಹಾಗಣಪತಿ ಯಕ್ಷಗಾನ ಮಂಡಳಿ, ಚಟ್ಟರೆ ಕಲ್ಲು-ನೂಜಿ ಸಿದ್ಧಿವಿನಾಯಕ ಕಲಾಸಂಘ ಸ್ಥಾಫಿಸಿ ಅನೇಕ ಕಲಾವಿದರನ್ನು ಬೆಳಕಿಗೆ ತಂದರು. +ಯಕ್ಷಗಾನ ರಂಗಭೂಮಿಯಲ್ಲಿ ರಾಜವೇಷ,ಪುರುಷವೇಷ, ಬಣ್ಣದ ವೇಷ, ಸ್ರ್ತೀವೇಷ, ಕಿರಾತವೇಷ,ಹಾಸ್ಯ ಸೇರಿದಂತೆ ಸರ್ವವೇಷ ವೈವಿಧ್ಯದಲ್ಲೂ ಕಾಣಿಸಿಕೊಂಡ ನಾಯ್ಕರು ಶತ್ರುಘ್ನ, ದೇವೆಂದ್ರ,ಮಹಿಷಾಸುರ, ಶ್ರೀಕೃಷ್ಣ ಅರ್ಜುನ, ಕರಾಳನೇತ್ರೆ,ವೃತ್ರ ಜ್ವಾಲೆ, ಶೂರಪದ್ಮಾಸುರ, ಕುಳಿಂದ,ಕಮಲಭೂಪ, ಪರಶುರಾಮ ಮೊದಲಾದ ಪುರಾಣ ಭೂಮಿಕೆಗಳಿಗೆ ತನ್ನದೇ ಕಲಾವರ್ಚಸ್ಸು ನೀಡಿದ್ದಾರೆ. +ಶ್ರೀಯುತರು ಸುಮಾರು 15 ಯಕ್ಷಗಾನ ಪ್ರಸಂಗಗಳನ್ನು ರಚಿಸಿ ಕಲಾತ್ಮಕ ಪ್ರಸಂಗಕರ್ತರಾಗಿಯೂ ಪ್ರಸಿದ್ಧರು. +ಶ್ರೀಯುತರ ಧರ್ಮಪತ್ನಿ ಗುಲಾಬಿ. +ಓರ್ವ ಸುಪುತ್ರ ಎಂ.ಎಚ್‌.ಪ್ರಸಾದ್‌ಕುಮಾರ್‌ . +ಇವರು ಉಡುಪಿ ಯಕ್ಷಗಾನ ಕೇಂದ್ರದಲ್ಲಿ ಪ್ರತಿಭಾನ್ವಿತ ಕಲಾವಿದನಾಗಿ ಸೇವೆ ಸಲ್ಲಿಸುತ್ತಿದ್ದಾರೆ. +ಡಾ|ಜಿ.ಶಂಕರ್‌ ಟ್ರಸ್ಟ್‌ ಪ್ರಶಸ್ತಿಯು ಸೇರಿ ಹಲವು ಗೌರವ ಸಂಮಾನ ದೊರಕಿರುತ್ತದೆ. +ಬಡಗುತಿಟ್ಟು ಯಕ್ಷಗಾನ ರಂಗಭೂಮಿಯ ಪರಂಪರೆಯ ಹಿರಿತನದಲ್ಲಿ ಮೆರೆಯುವ ಪ್ರತಿಭಾ ಸಂಪನ್ನ ಹಿರಿಯ ಕಲಾವಿದ ಮೊಳಹಳ್ಳಿ ಹೆರಿಯ ನಾಯ್ಕ. +ಸಾಂಪ್ರದಾಯಿಕತೆಯ ಸೊಗಡಿನಲ್ಲಿ ಪುರಾಣ ಪಾತ್ರಗಳಿಗೆ ಪ್ರಾಣಪ್ರತಿಷ್ಠೆ ನೀಡುವ ಮೊಳಹಳ್ಳಿ ಹೆರಿಯನಾಯ್ಕರು, ಚಿಕ್ಕ ಮರಕಾಲ-ಮುತ್ತು ಮರಕಾಲ್ವಿ ದಂಪತಿಯ ಸುಪುತ್ರರಾಗಿ, ಕುಂದಾಪುರದ ಮೊಳಹಳ್ಳಿ ಎಂಬ ಪುಟ್ಟ ಹಳ್ಳಿಯಲ್ಲಿ ಹುಟ್ಟಿ ಬೆಳೆದು ಇದೀಗ 73ವರ್ಷದ ಹಿರಿಯನಾಗಿ ಕಲಾಸೇವೆಯಲ್ಲಿದ್ದಾರೆ. +ಶ್ರೀಯುತರ ಶೈಕ್ಷಣಿಕ ಹಂತ ಮೂರು. +ಆದರೆ ಯಕ್ಷಗಾನ ರಂಗಭೂಮಿಯ ಇವರ ಮೇರು ಪತಿಭೆಗೆ ಸಲ್ಲುವ ಅಂಕ ನಿಜಕ್ಕೂ ನೂರಕ್ಕೆ ನೂರು. +ಬಾಲ್ಯದಿಂದಲೇ ಕಲೆಂತು ನಂಟನ್ನು ಅಂಟಿಸಿಕೊಂಡ ಹೆರಿಯ ನಾಯ್ಕರಿಗೆ ಬಡತನವೇ ಕಲಾಬಾಳುವೆಗೆ ಪ್ರೇರಣೆಯಾಯಿತು. +ಹಿರಿಯ ಭಾಗವತ ನಾರ್ಣಪ್ಪ ಉಪ್ಪೂರ, ಮದ್ದಳೆಗಾರ ಬೇಳಂಜೆ ತಿಮ್ಮಪ್ಪನಾಯ್ಕರ ಗುರುತನದಲ್ಲಿ ಕಲಾಮಾರ್ಗದರ್ಶನವಾಯಿತು. +ತನ್ನ 16ನೇ ವಯಸ್ಸಿನಲ್ಲೇ ಬಣ್ಣದ ಬದುಕುಕಂಡ ನಾಯ್ಕರು ಮತ್ತೆ ಹಿಂತಿರುಗಿ ಕಂಡದ್ದಿಲ್ಲ. +ಮಂದಾರ್ತಿ (20) ಮಾರಣಕಟ್ಟೆ (16) ಸೌಕೂರು(3), ಹಾಲಾಡಿ (3) ಕಮಲಶಿಲೆ(1), ಅಮೃತೇಶ್ವರಿ(5), ಸಾಲಿಗ್ರಾಮ (1, ಪೆರ್ಡೂರು (1),ರಾಜರಾಜೇಶ್ವರಿ (1), ಕೊಲ್ಲೂರು (1), ಗೋಳಿಗರಡಿ(1), ಒಟ್ಟು ಇವರ ಮೇಳದ ತಿರುಗಾಟ ಸುಮಾರು 57 ವರ್ಷ. +ಈಗಲೂ ಮಾರಣಕಟ್ಟೆ ಮೇಳದಲ್ಲಿ ಗೆಜ್ಜೆ ಕಟ್ಟಿ ಹೆಜ್ಜೆ ಹಾಕುತ್ತಿರುವ ವೃತ್ತಿನಿಷ್ಠ ಶ್ರೇಷ್ಠಕಲಾವಿದ. +ಬಡಗಿನ ಘಟಾನುಘಟಿ ಕಲಾವಿದರ ಒಡನಾಟವನ್ನು ಹೊಂದಿದ ನಾಯ್ಕರು ಅಪಾರ ಕಲಾನುಭವದ ಯಕ್ಷಕಲಾ ಕಣಜ. +ಇವರ ಸುಧನ್ವ,ಅರ್ಜುನ, ಯಯಾತಿ, ತಾಮ್ರಧ್ವಜ, ಯತುಪರ್ಣ,ಶ್ವೇತಕುಮಾರ, ಮಾರ್ತಾಂಡತೇಜ, ಮೊದಲಾದ ಪಾತ್ರಗಳು ಇಂದಿಗೂ ಅವರ ಛಾಪು ಮುದ್ರೆಯಲ್ಲಿ ಕಲಾಲೋಕದಲ್ಲಿ ಚಿರಸ್ಥಾಯಿ-ಯಾಗುಳದಿವೆ. +ಮಧ್ಯಮಠತಿಟ್ಟಿನ, “ಮಧ್ಯಮ ಪಾಂಡವಿ' ಎಂದೇ ಕರೆಯಬಹುದಾದ ಹೆರಿಯನಾಯ್ಕರ "ಅರ್ಜುನ'ಪಾತ್ರವಂತೂ ಯಕ್ಷರಂಗದ ಅಮೂಲ್ಯ ಸೊತ್ತಾಗಿ ವಿಜೃಂಭಿಸುತ್ತದೆ. +ಪತ್ನಿ ಬುಡ್ಡು. +ವೇದಾವತಿ, ಸುಶೀಲ,ಪ್ರಭಾಕರ, ಉದಯ, ಅಶೋಕ, ಅರುಣ, ಸುಮನಾ,ಪ್ರಕಾಶ, ನವೀನ ಎಂಬ ಒಂಭತ್ತು ಮಂದಿ ಮಕ್ಕಳನ್ನು ಪಡೆದಿದ್ದಾರೆ. +ಇವರ ಪುತ್ರ ಉದಯ ಕುಮಾರ್‌ಯಕ್ಷಗಾನ ವೃತ್ತಿರಂಗದ ಭರವಸೆಯ ಯುವ ಕಲಾವಿದರು. +ಇವರಿಗೆ 2009ನೇ ಸಾಲಿನ ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡಮಿ ಪ್ರಶಸ್ತಿ ದೊರೆತಿದೆ. +ಆಚಾರ್ಯ ಪ್ರಶಸ್ತಿ, ಡಾ| ಜಿ.ಶಂಕರ್‌ ಟ್ರಸ್ಟ್‌ ಪ್ರಶಸ್ತಿಯೂ ಸೇರಿ ನೂರಾರು ಕಡೆ ಗೌರವ ಸಂವರಾನಗಳು ದೊರಕಿರುತ್ತದೆ. +ಮಧ್ಯಮಠತಿಟ್ಟಿನ, “ಮಧ್ಯಮ ಪಾಂಡವಿ' ಎಂದೇ ಕರೆಯಬಹುದಾದ ಹೆರಿಯನಾಯ್ಕರ "ಅರ್ಜುನ'ಪಾತ್ರವಂತೂ ಯಕ್ಷರಂಗದ ಅಮೂಲ್ಯ ಸೊತ್ತಾಗಿ ವಿಜೃಂಭಿಸುತ್ತದೆ. +ಪತ್ನಿ ಬುಡ್ಡು. +ವೇದಾವತಿ, ಸುಶೀಲ,ಪ್ರಭಾಕರ, ಉದಯ, ಅಶೋಕ, ಅರುಣ, ಸುಮನಾ,ಪ್ರಕಾಶ, ನವೀನ ಎಂಬ ಒಂಭತ್ತು ಮಂದಿ ಮಕ್ಕಳನ್ನು ಪಡೆದಿದ್ದಾರೆ. +ಇವರ ಪುತ್ರ ಉದಯ ಕುಮಾರ್‌ಯಕ್ಷಗಾನ ವೃತ್ತಿರಂಗದ ಭರವಸೆಯ ಯುವ ಕಲಾವಿದರು. +ಇವರಿಗೆ 2009ನೇ ಸಾಲಿನ ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡಮಿ ಪ್ರಶಸ್ತಿ ದೊರೆತಿದೆ. +ಆಚಾರ್ಯ ಪ್ರಶಸ್ತಿ, ಡಾ| ಜಿ.ಶಂಕರ್‌ ಟ್ರಸ್ಟ್‌ ಪ್ರಶಸ್ತಿಯೂ ಸೇರಿ ನೂರಾರು ಕಡೆ ಗೌರವ ಸಂವರಾನಗಳು ದೊರಕಿರುತ್ತದೆ.