diff --git "a/Data Collected/Kannada/MIT Manipal/\340\262\270\340\262\276\340\262\202\340\262\270\340\263\215\340\262\245\340\262\277\340\262\225_\340\262\257\340\263\213\340\262\234\340\262\250\340\263\206.txt" "b/Data Collected/Kannada/MIT Manipal/\340\262\270\340\262\276\340\262\202\340\262\270\340\263\215\340\262\245\340\262\277\340\262\225_\340\262\257\340\263\213\340\262\234\340\262\250\340\263\206.txt" new file mode 100644 index 0000000000000000000000000000000000000000..7cf6668b90c5cf368b9f49d9b70a03cdf868d6f7 --- /dev/null +++ "b/Data Collected/Kannada/MIT Manipal/\340\262\270\340\262\276\340\262\202\340\262\270\340\263\215\340\262\245\340\262\277\340\262\225_\340\262\257\340\263\213\340\262\234\340\262\250\340\263\206.txt" @@ -0,0 +1,56 @@ +ಸಾಂಸ್ಥಿಕ ಯೋಜನೆ. +ಪೀಠಿಕೆ : +ಶಿಕ್ಷಣಕ್ಕೆ ಒಂದು ಯೋಜನೆಯು ಅಗತ್ಯ . +ಅಂತೆಯೇ ರಾಜ್ಯ ಹಾಗು ರಾಷ್ಟ್ರ ಮಟ್ಟದಲ್ಲಿ ಶಿಕ್ಷಣಿಕ ಯೋಜನೆಗಳ ವ್ಯವಸ್ಥಾ ಕ್ರಮವನ್ನು ಅನುಸರಿಸಿ ಕೊಂಡು ರೂಪಗೊಳ್ಳುತ್ತವೆ. +ಆದರೆ ರಾಷ್ಟ್ರದ ಯೋಜನೆಗಳ ಅನುಷ್ಠಾಣವು ನೇರವಾಗಿ ಕೆಳಹಂತದಲ್ಲಿ ಅನ್ವಯಗೊಳ್ಳುವುದು ಅಸಾದ್ಯ . +ಆದುದರಿಂದಲೇ ಸಾಂಸ್ಥಿಕ ಯೋಜನೆಯು ಈಗ ರುಢಿಗೆ ಬಂದಿದೆ ಇದೊಂದು ಶಿಕ್ಷಣದ ಆವಿಷ್ಕಾರವೂ ಆಗಿದ್ದು ತನ್ನದೆ ಆದ ಪ್ರಾಮುಖ್ಯಾತೆ ಪಡೆದಿದೆ . +ಐತಿಹಾಸಿಕ ಹಿನ್ನಲೆ : +೧೯೬೮ ನವೆಂಬರ್ ೧ ರಂದು ಭೋಪಾಲದಲ್ಲಿ ಸಾಂಸ್ಥಿಕ ಯೋಜನೆಯ ವಿಷಯವಾಗಿ ರಾಷ್ಟ್ರೀಯ ಮಟ್ಟದಲ್ಲಿ ಪ್ರೌಡ ವ್ಯಾಸಂಗವೊಂದು ಏರ್ಪಟ್ಟಿತ್ತು . +ಈ ವ್ಯಾಸಂಗದಲ್ಲಿ ತಮ್ಮ ದೀರ್ಘ ಅನುಭವದ ಮಾತುಗಳಿಂದ ಸಾಂಸ್ಥಿಕ ಯೋಜನೆಯ ಬಗೆಗೆ ಮಾತನಾಡಿದ ” ಎಂ.ಬಿ.ಬುಚ್ ” ರವರು ಇದನ್ನು ಈ ರೀತಿ ವ್ಯಾಖ್ಯಾನಿಸಿದ್ದಾರೆ . +” ಸಂಸ್ಥೆಯ ಅಗತ್ಯಗಳಿಗೆ ಅನುಗುಣವಾಗಿ ಉಪಲಬ್ಧವಿರುವ ಮತ್ತು ವ್ಯವಹಾರವನ್ನು ಸುಧಾರಿಸುವ ಮೂಲಕ ಭವಿಷ್ಯದಲ್ಲಿ ಸಂಸ್ಥೆಯ ಅಭಿವೃದ್ದಿಗಾಗಿ ಸಿದ್ದ ಪಡಿಸುವ ಕಾರ್ಯ ಸಮೂಹವೇ ಸಾಂಸ್ಥಿಕ ಯೋಜನೆ ” +ಈ ವಾಕ್ಯವನ್ನು ವಿಶ್ಲೇಷಿಸಿದಾಗ ಈ ಕೆಳಗಿನ ಅಂಶಗಳು ಕಂಡು ಬರುತ್ತವೆ . +೧ .ಸಾಂಸ್ಥಿಕ ಯೋಜನೆಯ ಲಭ್ಯವಿರುವ ಮತ್ತು ಭವಿಷತ್ತಿನಲ್ಲಿ ದೊರೆಯ ಬಹುದಾದ ಸಂಪನ್ಮೂಲಗಳನ್ನು ಆಧರಿಸುತ್ತದೆ . +೨ .ಸಾಂಸ್ಥಿಕ ಯೋಜನೆಯು ಸಂಪೂರ್ಣವಾಗಿ ಅಗತ್ಯಗಳಿಗೆ ಅನುಕೂಲವಾಗಿದೆ . +೩ .ಈ ಯೋಜನೆಯು ಅಲ್ಪ ಕಾಲಿಕ ಅಥವಾ ದೀರ್ಘ ಕಾಲಿಕವೂ ಆಗಿರಬಹುದು . +೪ .ಸಾಂಸ್ಥಿಕ ಯೋಜನೆಯು ಸಿದ್ದ ಪಡಿಸಿದ ಅಭಿವೃದ್ಧಿ ಕಾರ್ಯ ಸಮೂಹಗಳನ್ನು ಒಳಗೊಂಡಿದೆ . +ಸಾಂಸ್ಥಿಕ ಯೋಜನೆಯ ಉದ್ದೇಶಗಳು : +೧ .ಶಾಲಾ ವಿನ್ಯಾಸದಲ್ಲಿ ಸುಧಾರಣೆ ತರುವುದು . +೨ .ಶಾಲೆಯ ಕಾರ್ಯಗಳು ಯೋಗ್ಯ ದಿಕ್ಕಿನಲ್ಲಿ ಸಾಗುವಂತೆ ನಿರ್ದೇಶಿಸುವುದು . +೩ .ಶಾಲೆಯ ಕಾರ್ಯಗಳು ಯೋಗ್ಯವಾಗುವಂತೆ ಯುಕ್ತ ರೀತಿಯಲ್ಲಿ ತೊಡಗಲು ಶಿಕ್ಷಕರಿಗೆ ಸದಾವಕಾಶವನ್ನು ಒದಗಿಸುವುದು . +೪ .ತನಗೆ ಅತಿ ಸುಲಭವಾಗಿ ಲಭ್ಯವಾಗುವ ಎಲ್ಲ ಭೌತಿಕ ಸಂಪನ್ಮೂಲವನ್ನು ಸದ್ವನಿಯೋಗಪಡಿಸಿಕೊಂಡು ಶಿಕ್ಷಣಿಕ ವಯವಸ್ಥೆಯು ತನ್ನೆಲ್ಲ ಪ್ರಸಕ್ತ ನಿಯತಾಂಕಗಳಲ್ಲಿ ಅಭಿವೃದ್ದಿ ಆಗುವಂತಹ ಸರ್ವ ವ್ಯಾಪ್ತಿ ಯೋಜನೆಗಳನ್ನು ತಯಾರಿಸುವುದು . +೫ .ಶಾಲೆಯ ಯೋಜನೆಗಳಲ್ಲಿ ಮತ್ತು ಭೋಧನೆಯನ್ನು ಸುಧಾರಣೆಗಳನ್ನು ತರುವಲ್ಲಿ ಶಿಕ್ಷಕರ ಸ್ವತಂತ್ರ್ಯವನ್ನು ಸಡಿಲಗೊಳಿಸುವುದು . +೬ .ಸಹಪಠ್ಯ ಚಟುವಟಿಗಳ ಸೂಕ್ತ ಸಂಘಟನೆ ಮಾಡುವುದು . +೭ .ಶಿಕ್ಷಣವು ಒಂದು ಬಂಡವಾಳ ಹೂಡಿಕೆ ಎಂಬ ಪರಿಕಲ್ಪನೆಯನ್ನು ಸಧಿತಗೊಳಿಸುವುದು . +ಸಾಂಸ್ಥಿಕ ಯೋಜನೆಯ ಲಕ್ಷಣಗಳು : ' +೧ .ಅಗತ್ಯತೆ ಮತ್ತು ಬೇಡಿಕೆಗಳಿಗೆ ಅಡಿಪಾಯವಾಗಿರಬೇಕು . +೨ .ಗುರಿಗಳಿಗೆ ಆಧ್ಯತೆ ನೀಡುವುದು . +೩ .ವಿಧಾನ ಮತ್ತು ತಂತ್ರಗಳಲ್ಲಿ ನಿರ್ಧಿಷ್ಟತೆಯನ್ನು ಹೊಂದಿರುವುದು . +೪ .ಶಾಲೆಯ ಮತ್ತು ಸಮುದಾಯದ ಸಂಪನ್ಮೂಲಗಳನ್ನು ಉತ್ತಮವಾಗಿ ಬಳಸಿಕೊಳ್ಳಲು ಅವಕಾಶ ನೀಡುವುದು . +೫ .ವ್ಯಕ್ತಿಗಳ ಕಾರ್ಯಗತವಾಗಿರದೆ ವಿಕೇಂದ್ರೀ ಕೃತ ಮತ್ತು ಪ್ರಜಾ ಸತ್ತಾತ್ಮಕ ಸಂವಹನ ಆಗಿರುತ್ತದೆ . +೬ .ಪರಿಸರದಲ್ಲಿ ಆಗುವ ಬದಲಾವಣೆಗಳನ್ನು ಪರಿಗಣನೆಗೆ ತೆಗೆದುಕೊಳ್ಳುವುದರಿಂದ ಸಾಂಸ್ಥಿಕ ಯೋಜನೆಯು ನಿರಂತರವಾಗಿ ಅಭಿವೃದ್ದಿ ಹೊಂದುತ್ತಿರುತ್ತದೆ . +೭ .ನಮ್ಯತೆಯ ಗುಣವನ್ನು ಹೊಂದಿದ ಯೋಜನೆಯಾಗಿದೆ . +೮ .ನಿರ್ಧಿಷ್ಟವಾಗಿ ವಿವಿಧ ವರ್ಷಗಳ ಯೋಜನೆಯ ಜಯಾ ಪಜಯಗಳನ್ನು ಮೌಲ್ಯ ಮಾಪನ ಮಾಡುವುದು ಮತ್ತು ಪರಿವರ್ತನೆ ತಂದುಕೊಳ್ಳುವುದು . +ಸಾಂಸ್ಥಿಕ ಯೋಜನೆಯ ವ್ಯಾಪ್ತಿ : +೧ .ಶಾಲಾಸ್ಥವರ ಸುಧಾರಣೆ : +ಶುಧ್ದವಾದ ಕುಡಿಯುವ ನೀರಿನ ವ್ಯವಸ್ಥೆ ಶೌಚಾಲಯ , ಉಪಹಾರ ಮತ್ತು ಆರೋಗ್ಯ ಸೇವೆ ಒದಗಿಸುವುದು , ಪಾಠೋಪಕರಣಗಳ ವ್ಯವಸ್ಥೆ . +ಆಕರ್ಷಕ ಕಟ್ಟಡ ವಿನ್ಯಾಸ , ಆಟೋಪಕರಣಗಳು ಮತ್ತು ಆಟದ ಬಯಲು . +೨ .ಭೋಧನಾತ್ಮಕ ಸುಧಾರಣೆ : +ಭೋಧನೆಗೆ ಸಂಬಂಧಿಸಿದ ಚರ್ಚೆ , ಕ್ರಿಯಾ ಸಂಶೋಧನೆಯ ವಿನಿಮೆಯ , ವಿಶೇಷ ಉಪನ್ಯಾಸ ಮಾಲಿಕ , ವೃತ್ತಿ ನಿರತ ತರಬೇತಿಗಳಿಗೆ ಶಿಕ್ಷಕರನ್ನು ಕಳಿಸುವುದು . +ಪುನಶ್ಚೇತನ ಶಿಬಿರಗಳ ಮತ್ತು ರಜಾ ತರಬೇತಿಗಳು +೩ .ಸಹಪಠ್ಯ ಚಟುವಟಿಕೆಗಳು : +ವಿದ್ಯಾರ್ಥಿ ಒಕ್ಕೂಟ ರಚನೆ , ಸಾಂಸ್ಕೃತಿಕ ಚಟುವಟಿಕೆಗಳು ಸಮಾಜ ಸೇವೆ , ಶೈಕ್ಷಣಿಕ ಪ್ರವಾಸ , ವನ ಭೋಜನಕೂಟ ಹಾಗೂ ಕ್ರಿಡೆಗಳು ಇತ್ಯಾದಿ . +೪ .ಸುಧಾರಿತ ಆಡಳಿತಾತ್ಮಕ ಯೋಜನೆಗಳನ್ನು ರೂಪಿಸುವಿಕೆ : +ಸಾಂಸ್ಥಿಕ ಯೋಜನೆಯ ಹಂತಗಳು. +೧ .ವರ್ತಮಾನ ಸ್ಥಿತಿಯನ್ನು ವಿಶ್ಲೇಷಿಸುವುದು . +೨ .ಸಂಪನ್ಮೂಲಗಳನ್ನು ನಿರೀಕ್ಷಿಸುವುದು . +೩ .ಸುಧಾರಣೆಯ ಕಾರ್ಯಕ್ರಮಗಳನ್ನು ತಯಾರಿಸುವುದು . +೪ .ಯೋಜನೆಯನ್ನು ಮೌಲ್ಯಮಾಪನವನ್ನು ಮಾಡುವುದು . +ಸಾಂಸ್ಥಿಕ ಯೋಜನೆಯ ಒಳಗೂಂಡಿರುವ ಕಾರ್ಯಕ್ರಮಗಳು : +೧ .ವಿದ್ಯಾರ್ಥಿಗಳ ಪ್ರವೇಶ ಮತ್ತು ವರ್ಗವಿಂಗಡಣೆ . +೨ .ಭೋಧನಾ ಕಾರ್ಯವನ್ನು ಹಂಚಿಕೊಡುವದು , ವಿಷಯಗಳು ವಿತರಣೆ . +೩ .ವೇಳಾ ಪತ್ರಿಕೆಯ ತಯಾರಿಕೆ . +೪ .ಸಹಪಠ್ಯ ಮತ್ತು ಪಠ್ಯೇತರ ವೇಳಾಪಟ್ಟಿ ತಯಾರಿಸುವುದು . +೫ .ವಾರದ ಪರೀಕ್ಷಣಗಳು , ಮಾಸಿಕ ಪರಿಕ್ಷೆಗಳು , ಪೂರ್ವತಯಾರಿ ಪರೀಕ್ಷೆಗಳನ್ನು ನಡೆಸುವುದು . +೬ .ಫಲಿತಾಂಶ ಪ್ರಕಟನೆ ಮತ್ತು ಪ್ರಗತಿ ಪತ್ರಿಕೆಗಳನ್ನು ಚರ್ಚಿಸುವುದು . +೭ .ಪಾಲಕ - ಭೋಧಕರ ಸಭೆ ಮತ್ತು ಇತರ ಸಭೆಗಳು. +೮ .ದಾಖಲಾತಿಗಳ ನಿರ್ವಹಣೆ .