From 43b47e410a8bca09cefe33f913030ce2f3b74930 Mon Sep 17 00:00:00 2001 From: Narendra VG Date: Mon, 17 Apr 2023 15:32:28 +0530 Subject: [PATCH] Upload New File --- ...1\340\262\244\340\263\215\340\262\265.txt" | 196 ++++++++++++++++++ 1 file changed, 196 insertions(+) create mode 100644 "Data Collected/Kannada/MIT Manipal/Kannada-Scrapped-dta/\340\262\227\340\263\215\340\262\260\340\262\202\340\262\245\340\262\276\340\262\262\340\262\257_\340\262\256\340\262\271\340\262\244\340\263\215\340\262\265.txt" diff --git "a/Data Collected/Kannada/MIT Manipal/Kannada-Scrapped-dta/\340\262\227\340\263\215\340\262\260\340\262\202\340\262\245\340\262\276\340\262\262\340\262\257_\340\262\256\340\262\271\340\262\244\340\263\215\340\262\265.txt" "b/Data Collected/Kannada/MIT Manipal/Kannada-Scrapped-dta/\340\262\227\340\263\215\340\262\260\340\262\202\340\262\245\340\262\276\340\262\262\340\262\257_\340\262\256\340\262\271\340\262\244\340\263\215\340\262\265.txt" new file mode 100644 index 0000000..171a5a8 --- /dev/null +++ "b/Data Collected/Kannada/MIT Manipal/Kannada-Scrapped-dta/\340\262\227\340\263\215\340\262\260\340\262\202\340\262\245\340\262\276\340\262\262\340\262\257_\340\262\256\340\262\271\340\262\244\340\263\215\340\262\265.txt" @@ -0,0 +1,196 @@ +"ಗ್ರಂಥವಿಲ್ಲದ ಕೋಣೆ ಆತ್ಮವಿಲ್ಲದ ದೇಹವಿದ್ದಂತೆ" ಮೊಟ್ಟ ಮೊದಲ ಬಾರಿಗೆ ಗ್ರಂಥಾಲಯ 1800 ಇಸವಿಯಲ್ಲಿ ಆರಂಭವಾಯಿತು. +ಲಂಡನ್‌ ನಲ್ಲಿರುವ "ಕಾಂಗ್ರೆಸ್‌ ಲೈಬ್ರರಿ" ದೊಡ್ಡ ಲೈಬ್ರರಿ ಆಗಿದೆ ಮತ್ತು ಯುನೈಟೆಡ್‌ ಸ್ಟೇಟ್ಸ್‌ನ "ನ್ಯಾಷನಲ್‌ ಲೈಬ್ರರಿ" ವಿಶ್ವದ ಅತಿದೊಡ್ಡ ಗ್ರಂಥಾಲಯದ ಸಾಲಿನಲ್ಲಿ ಬರುತ್ತದೆ. +ಗ್ರಂಥಾಲಯ ದಿನಾಚರಣೆ ಯಾವಾಗ ಆಚರಿಸಲಾಗುತ್ತದೆ? +ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ಕ್ಷೇತ್ರದಲ್ಲಿ ಸಾಕಷ್ಟು ಕೊಡುಗೆ ನೀಡಿದಕ್ಕಾಗಿ ಎಸ್‌.ಆರ್‌.ರಂಗನಾಥನ್‌ ರವರ ಜನ್ಮದಿನವನ್ನು ಪ್ರತಿವರ್ಷ ಆಗಸ್ಟ್‌ 12 ರಂದು ಭಾರತದಲ್ಲಿ ರಾಷ್ಟ್ರೀಯ ಗ್ರಂಥಾಲಯ ದಿನವನ್ನು ಆಚರಿಸಲಾಗುತ್ತದೆ. +ನಾವೆಲ್ಲರೂ ಗ್ರಂಥಾಲಯಕ್ಕೆ ಒಂದಿಲ್ಲೊಂದು ಕಾರಣಕ್ಕೆ ಹೋಗಿಯೇ ಇರುತ್ತೇವೆ. +ಯಾವುದೋ ಪುಸ್ತಕ, ಸಂಶೋಧನೆ, ಉನ್ನತ ವ್ಯಾಸಂಗ,ಪುಸ್ತಕ ಓದುವ ಹವ್ಯಾಸ ಹೀಗೆ ಕಾರಣ ಏನೇ ಇರಬಹುದು. +ಆದರೆ ಸದಾ ಪಿನ್ ಡ್ರಾಪ್‌ ಸೈಲೆನ್ಸ್‌ ನಲ್ಲಿರುವ ಗ್ರಂಥಾಲಯ ಶಿಕ್ಷಣ ಪಡೆದ ಎಲ್ಲರ ಪಾಲಿಗೆ ದೇವಾಲಯವಿದ್ದಂತೆ. +ಸಾಲು ಸಾಲಾಗಿ ಜೋಡಿಸಿಟ್ಟ ಪುಸ್ತಕಗಳು, ಸಾಲಾಗಿ ಹಾಕಿದ ಕುರ್ಚಿಗಳ ಮೇಲೆ ಸದ್ದು ಮಾಡದೇ ಪುಸ್ತಕದಲ್ಲಿ ತಲೆ ತೂರಿಸಿಕೊಂಡು ತಮ್ಮದೇ ಜಗತ್ತಿನಲ್ಲಿ ಮುಳುಗಿದವರನ್ನು ನೋಡಿದಾಗ ನಮ್ಮ ಮನಸ್ಸು ಕೂಡ ಉಶ್‌ ! ಸದ್ದು ಮಾಡಬೇಡ ಎನ್ನುತ್ತೆ. +ವಿದ್ಯಾರ್ಥಿ ದೆಸೆಯಿಂದಲೇ ಪುಸ್ತಕ ಓದುವ ಹಾಗೂ ಗ್ರಂಥಾಲಯದ ನಂಟು ಬೆಳೆದರೆ ಆ ವಿದ್ಯಾರ್ಥಿ ಜ್ಞಾನದ ಹೂರಣವನ್ನೇ ಹೊಂದಬಲ್ಲ. +ನಾವು ಗ್ರಂಥಾಲಯದ ಒಳಗೆ ಕಾಲಿಟ್ಟಾಗ "ಕೈ ಮುಗಿದು ಒಳಗೆ ಬಾ ಜ್ಞಾನ ದೇಗುಲವಿದು" ಎಂಬ ಸಾಲು ನಮ್ಮನ್ನು ಅಪ್ಪುತ್ತದೆ. +ಗೋಡೆಯ ಮೇಲೆ ಬರೆದಿರುವ ಸಾಹಿತಿಗಳ ವ್ಯಾಖ್ಯಾನಗಳು, ಚಿತ್ರಗಳು ಸೆಳೆಯುತ್ತವೆ. +"ಜ್ಞಾನದ ಬಲದಿಂದ ಅಜ್ಞಾನದ ಕೇಡು, ಜ್ಯೋತಿಯ ಬಲದಿಂದ ತಮಂಧದ ಕೇಡು" ಎಂಬ ಜಗಜ್ಯೋತಿ ಬಸವಣ್ಣನವರ ವಾಣಿ ಇಂದಿಗೂ ಚಿರಪರಿಚಿತವಾಗಿದೆ. +ಎಲ್ಲೆಲ್ಲೂ ತುಂಬಿರುವ ಅಜ್ಞಾನವನ್ನು ಜ್ಞಾನ ತೆಗೆದು ಬಿಸಾಕುತ್ತದೆ. +ಹಾಗೆಯೇ ಎಲ್ಲೆಲ್ಲೂ ಆವರಿಸಿರುವ ಕತ್ತಲನ್ನು ದೀಪ ಕಳೆಯುತ್ತದೆ. +ಅಂದರೆ ವ್ಯಕ್ತಿ ಪಡೆದುಕೊಳ್ಳುವ ಜ್ಞಾನ ಆತನ ಜೀವನವನ್ನೂ ಕೊನೆಯವರೆಗೂ ಕೈ ಹಿಡಿದು ಬೆಳಗುತ್ತದೆ. + ಇಂತಹ ಜ್ಞಾನ ಸಿಗುವುದು ಗ್ರಂಥಗಳ ಭಂಡಾರವನ್ನು ಹಾಸು ಹೊದ್ದಿರುವ ಗ್ರಂಥಾಲಯಗಳಲ್ಲಿ. + ಹಾಗಾದರೆ ಗ್ರಂಥಾಲಯ ಎಂದರೇನು? + ಗ್ರಂಥಗಳನ್ನು ಹೊಂದಿರುವ ಕೋಣೆಯಾ? + ಅಲ್ಲ. ಗ್ರಂಥಾಲಯ ತನ್ನದೇ ಆದ ನಿರ್ದಿಷ್ಟ ಅರ್ಥವನ್ನು ಹೊಂದಿದೆ. +ಗ್ರಂಥಾಲಯ ಪದವನ್ನು ಬಿಡಿಸಿ ಬರೆದಾಗ ಅಂದರೆ ಗ್ರಂಥ+ಆಲಯ ಆಗುತ್ತದೆ. +ಗ್ರಂಥ ಎಂದರೆ ಪುಸ್ತಕ, ಆಲಯ ಎಂದರೆ ಸ್ಥಳ. +ಒಟ್ಟಾರೆ ಅರ್ಥ "ಪುಸ್ತಕಗಳನ್ನು ಹೊಂದಿರುವ ಸ್ಥಳವೇ" ಗ್ರಂಥಾಲಯ. +ಹಾಗಾದರೆ ನಾಲ್ಕೈದು ಪುಸ್ತಕಗಳನ್ನು ಜೋಡಿಸಿಟ್ಟ ಕೂಡಲೇ ಅದು ಗ್ರಂಥಾಲಯ ಆಗುತ್ತದೆಯಾ? +ಇಲ್ಲ. ಗ್ರಂಥಾಲಯದಲ್ಲಿ ಹಲವು ವಿಷಯಗಳ ಪುಸ್ತಕಗಳ ನಿಘಂಟು ಇರುತ್ತದೆ. +ಎಲ್ಲಿಯೂ ಸಿಗದ, ಅತ್ಯಂತ ಪ್ರಾಚೀನ ಪುಸ್ತಕಗಳ ಸಂಗ್ರಹವಿರುತ್ತದೆ. +ನೂರಾರು ಸಾಹಿತಿಗಳು ಬರೆದ ವಿವಿಧ ಕ್ಷೇತ್ರಗಳಿಗೆ ಸಂಬಂಧಪಟ್ಟ ಜ್ಞಾನದ ಆಗರವನ್ನೇ ಗ್ರಂಥಾಲಯ ಹೊಂದಿರುತ್ತದೆ. +ಗ್ರಂಥಾಲಯದಲ್ಲಿ ನಿರ್ವಾಹಕರು, ಗ್ರಂಥ ಪಾಲಕರು ಪುಸ್ತಕಗಳನ್ನು ಅಂದವಾಗಿ ಜೋಡಿಸಿಟ್ಟು, ಬರುವವರಿಗೆ ಪುಸ್ತಕ ನೀಡುವುದು,ವಾಪಸ್‌ ಪಡೆಯುವ ಪ್ರಕ್ರಿಯೆ ನಡೆಸುತ್ತಿರುತ್ತಾರೆ. +ಒಂದು ಪೀಳಿಗೆಯಿಂದ ಮತ್ತೊಂದು ಪೀಳಿಗೆಗೆ ಪುಸ್ತಕಗಳು ವರ್ಗಾವಣೆ ಆಗುತ್ತವೆ. +ಹೀಗಾಗಿ ಗ್ರಂಥಾಲಯದ ನಿರ್ವಹಣೆ ಪ್ರಮುಖ ಪಾತ್ರ ವಹಿಸುತ್ತದೆ. +ಸ್ವಂತ ಹಣ ಕೊಟ್ಟು ಪುಸ್ತಕ ಖರೀದಿ ಮಾಡಲಾಗದವರು, ಗ್ರಂಥಾಲಯವನ್ನು ಅವಲಂಬಿಸುತ್ತಾರೆ. +ವಿರಳವಾದ ಮಾಹಿತಿಗಳು ಗ್ರಂಥಾಲಯದಲ್ಲಿ ಸಿಗುತ್ತವೆ. +ಕಲೆ,ವಾಣಿಜ್ಯ ಸ್ಥಾತಂತ್ರ್ಯ ನಂತರದಲ್ಲಿ ದೇಶದ ಸ್ಥಿತಿಗತಿ, ಕೈಗಾರಿಕೀಕರಣ, ಕರ್ನಾಟಕದ ಏಕೀಕರಣ, ರಾಜ್ಯಗಳ ಉದಯ ಹೀಗೆ ಸಾವಿರಾರು ಸಂಗತಿಗಳ ಸಂಪೂರ್ಣ ಮಾಹಿತಿಯನ್ನು ಒದಗಿಸುವ ಪುಸ್ತಕಗಳು ಗ್ರಂಥಾಲಯದಲ್ಲಿ ಲಭಿಸುತ್ತವೆ. +ಗ್ರಂಥಾಲಯ ಪಿತಾಮಹ ಎಂಬ ಕೀರ್ತಿಗೆ ವಿಜ್ಞಾನಿ ಎಸ್‌.ಆರ್‌.ರಂಗನಾಥನ್‌ ಭಾಜನರಾಗಿದ್ದಾರೆ. +ಗ್ರಂಥಾಲಯಕ್ಕೆ ಒಂದು ವೈಜ್ಞಾನಿಕ ಸ್ವರೂಪ ನೀಡಿದವರು ಎಸ್‌.ಆರ್‌.ರಂಗನಾಥನ್‌. +ಪದ್ಮಶ್ರೀ ಪುರಸ್ಕೃತ ರಂಗನಾಥನ್‌ ಅವರ ಪೂರ್ಣ ಹೆಸರು ಶಿಯ್ಯಾಳಿ ರಾಮಾಮೃತ ರಂಗನಾಥನ್‌. +12 ಆಗಸ್ಟ್‌ 1892 ರಂದು ತಮಿಳುನಾಡಿನ ತಂಜಾವೂರು ಜಿಲ್ಲೆಯ ಶಿಯ್ಯಾಳಿ ಎಂಬ ಗ್ರಾಮದಲ್ಲಿ ಜನಿಸಿದರು. +ತಂದೆ ರಾಮಾಮೃತ ಅಯ್ಯರ್‌, ತಾಯಿ ಸೀತಾಲಕ್ಷ್ಮಿ ರಂಗನಾಥನ್‌ ಗ್ರಂಥಾಲಯ ವಿಜ್ಞಾನ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. +ಗ್ರಂಥಾಲಯ ಆಡಳಿತ ಮತ್ತು ನಿರ್ವಹಣೆ, ವರ್ಗೀಕರಣ, ಸೂಚೀಕರಣ, ನಿರ್ದೇಶೀಕರಣ ಸೇವೆ, ಪ್ರಲೇಖನ ಸೇವೆಯನ್ನು ಒದಗಿಸಿ ಕೊಟ್ಟವರು ರಂಗನಾಥನ್‌. +ಪುಸ್ತಕ ಓದುವ ಹವ್ಯಾಸ ವ್ಯಕ್ತಿಯ ಒಂಟಿತನವನ್ನು ದೂರ ಮಾಡುತ್ತದೆ. + ಏಕಾಂತದ ಭಾವ, ಮನಸ್ಸೊಳಗೆ ಮೂಡುವ ಕಲ್ಪನೆ, ಓದುತ್ತಿರುವ ಕಥೆಗೂ ಮನಸ್ಸಲ್ಲಿ ಮೂಡುತ್ತ ಹೋಗುವ ಚಿತ್ರಣಕ್ಕೂ ನಂಟಿದೆ. +ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರು ಓದಿದ "ಸತ್ಯ ಹರಿಶ್ಚಂದ್ರ ಕಥೆ" ಅವರ ಬದುಕಿನ ಆಲೋಚನೆಯ ದಿಕ್ಕನ್ನೇ ಬದಲಿಸಿ ಹಾಕಿತ್ತು. +ಜಗತ್ತಿನಲ್ಲಿ ಅತಿ ಹೆಚ್ಚು ಗ್ರಂಥಗಳನ್ನು ಓದಿದ ಕೀರ್ತಿಗೆ ಪಾತ್ರರಾದವರು ಡಾ.ಬಿ.ಆರ್‌.ಅಂಬೇಡ್ಕರ್ ಇದು ಭಾರತೀಯರು ಹೆಮ್ಮೆ ಪಡುವ ಹಾಗೂ ಮಹತ್ವದ ಸಂಗತಿಯಾಗಿದೆ. +ಅಂಬೇಡ್ಕರ್‌ ಅವರ ಪುಸ್ತಕ ಸಂಸ್ಕೃತಿ ಅವರನ್ನು ಸಾಮಾನ್ಯನಿಂದ ಅಸಾಮಾನ್ಯ ವ್ಯಕ್ತಿಯನ್ನಾಗಿಸಿತು. + ಅಮೆರಿಕದ ಗ್ರಂಥಾಲಯದಲ್ಲಿ ಇರುವ ಎಲ್ಲಾ ಪುಸ್ತಕಗಳನ್ನು ಓದಿದ ದಾಖಲೆ ಮತ್ತು ಅತಿ ಹೆಚ್ಚು ಪದವಿಗಳನ್ನುಗಳಿಸಲು ಅಂಬೇಡ್ಕರ್‌ ಅವರ ಪುಸ್ತಕ ಪ್ರೇಮವೇ ಕಾರಣವಾಗಿತ್ತು. +“ಇಡೀ ಜಗತ್ತು ನಿಂತಿರುವುದೇ ಗ್ರಂಥ ಭಂಡಾರದ ಮೇಲೆ” ಎಂಬ ಮಾತಿದೆ. +ಜಗತ್ತನ್ನು ಆಳಿದ ಸಾವಿರಾರು ಮಹಾ ಪುರುಷರು, ಜ್ಞಾನಿಗಳು, ಪಂಡಿತರು, ವಿಜ್ಞಾನಿಗಳು, ಸಾಧು, ಸಂತರು, ಇತಿಹಾಸ ಪುರುಷರು, ವಚನಕಾರರು, ದಾರ್ಶನಿಕರ, ಶರಣರ ಸಾಲುಗಳು ಇಂದಿಗೂ ಜನಮಾನಸದಲ್ಲಿ ಚಿರಪರಿಚಿತರಾಗಿದ್ದಾರೆ ಎಂದರೆ ಅದಕ್ಕೆ ಪ್ರಮುಖ ಕಾರಣ ಗ್ರಂಥಗಳು. +ಸಾಧಕರ ಬಗ್ಗೆ ಬರೆದ ಜೀವನ ಚರಿತ್ರೆ, ಸಾಹಸ ಚರಿತ್ರೆಯಂಥ ಪುಸ್ತಕಗಳೇ ಕಾರಣ. +ಸಾಹಿತಿಗಳಾದ ಕುವೆಂಪು, ದ.ರಾ.ಬೇಂದ್ರೆ, ಪೂರ್ಣಚಂದ್ರ ತೇಜಸ್ವಿ ,ಪಿ.ಲಂಕೇಶ್‌, ಪು.ತಿ.ನರಸಿಂಹಾಚಾರ್ಯ, ಗಿರೀಶ್‌ ಕಾರ್ನಾಡ್‌,ಶಿವರಾಮ ಕಾರಂತರು, ಡಿವಿಜೆ, ಪಾಟೀಲ ಪುಟ್ಟಪ್ಪ ಹಾಗೂ ಅನೇಕರು ಬರೆದಿರುವ ವಿಮರ್ಶೆ, ಕಥೆ, ಕಾದಂಬರಿ, ಚುಟುಕು, ಕವನಗಳ ಪುಸ್ತಕಗಳು ಗ್ರಂಥಾಲಯದಲ್ಲಿ ಸಿಗುತ್ತವೆ. +ಇತಿಹಾಸಕಾರರು ಬರೆದ ಐತಿಹಾಸಿಕ ಕಥನಗಳ ಸಂಗ್ರಹ, ಶಿಲಾಯುಗ, ಮಯ ಮತ್ತು ಪುರಾತನ ದೇವಾಲಯಗಳು, ಕೆತ್ತನೆಯ ಇತಿಹಾಸ ಪುಸ್ತಕಗಳು ಕೂಡ ಗ್ರಂಥಾಲಗಳಲ್ಲಿ ಸಿಗುತ್ತವೆ. +ಭಾರತದ ಸಂಪೂರ್ಣ ವ್ಯವಸ್ಥೆ ನಿಂತಿರುವುದೇ ಸಂವಿಧಾನ ಗ್ರಂಥದ ಮೇಲೆ. +ಸಾಮಾಜಿಕ, ರಾಜಕೀಯ, ಧಾರ್ಮಿಕ, ಕೌಟುಂಬಿಕ, ಆರ್ಥಿಕ ವ್ಯವಸ್ಥೆಗಳು ಸಂವಿಧಾನವನ್ನು ಆಧರಿಸಿವೆ. +ವಿದ್ಯಾರ್ಥಿಗಳು ತಮ್ಮ ಹೆಚ್ಚಿನ ಜ್ಞಾನಾರ್ಜನೆ ಮಾಡಿಕೊಳ್ಳಲೆಂದೇ ಗ್ರಂಥಾಲಯಗಳು ಹೆಚ್ಚು ಹೆಚ್ಚು ರಚಿಸಲ್ಪಟ್ಟವು. +ಪ್ರತಿಯೊಂದು ಶಾಲ,ಕಾಲೇಜುಗಳು ಮತ್ತು ಹಳ್ಳಿ ನಗರಗಳಲ್ಲಿ ಗ್ರಂಥಾಲಯಗಳು ಇದ್ದೇ ಇವೆ. +ಗ್ರಂಥಾಲಯ ಸಾಹಿತ್ಯ, ಭಾಷೆ, ಪರಂಪರೆ, ಧರ್ಮ, ನ್ಯಾಯಾಂಗ ವ್ಯವಸ್ಥೆ, ಮಹಾಕಾವ್ಯಗಳು, ವಿಜ್ಞಾನ-ತಂತ್ರಜ್ಞಾನ, ಕಥೆ, ಕಾದಂಬರಿ,ಜೀವನಚರಿತ್ರೆ, ಸ್ವಾತಂತ್ರ್ಯ ಸಂಗ್ರಾಮ ಹೀಗೆ ಪ್ರತಿಯೊಂದು ಮಾಹಿತಿ ಸಿಗುವುದೇ ಗ್ರಂಥಾಲಯದಲ್ಲಿ. +ಇಷ್ಟೆಲ್ಲಾ ಜ್ಞಾನ ಸಂಪತ್ತನ್ನು ಹೊಂದಿರುವ ಗ್ರಂಥಾಲಯಗಳನ್ನು ಆರು ವಿಧಗಳನ್ನಾಗಿ ವಿಂಗಡಿಸಲಾಗಿದೆ. +ಗ್ರಂಥಾಲಯದಲ್ಲಿ ಆರು ವಿಧಗಳು. +ಗ್ರಂಥಾಲಯವನ್ನು ಪ್ರಮುಖವಾಗಿ ಆರು ವಿಧಗಳನ್ನಾಗಿ ವಿಂಗಡಿಸಲಾಗಿದೆ. +ಬದಲಾಗುತ್ತಿರುವ ಕಾಲಮಾನಕ್ಕೆ ತಕ್ಕಂತೆ ಗ್ರಂಥಾಲಯದ ಸ್ವರೂಪ ಮತ್ತು ಡಿಜಿಟಲ್‌ ಗ್ರಂಥಾಲಯಗಳು ಹುಟ್ಟಿಕೊಂಡಿದ್ದು, ಓದುಗರಿಗೆ ಇನ್ನಷ್ಟು ಅನುಕೂಲ ಮಾಡಿ ಕೊಟ್ಟಿವೆ. +1.ಸಾರ್ವಜನಿಕ ಗ್ರಂಥಾಲಯ ಸಾರ್ವಜನಿಕ ಗ್ರಂಥಾಲಯವನ್ನು “ಶ್ರೀ ಸಾಮಾನ್ಯರ ವಿಶ್ವವಿದ್ಯಾಲಯ” ಎಂದು ಕರೆಯಲಾಗಿದೆ. +ಸಾರ್ವಜನಿಕವಾಗಿ ಸಮುದಾಯಗಳಲ್ಲಿ ವಿದ್ಯೆ ಜ್ಞಾನ, ಓದಿನ ಬಗ್ಗೆ ಆಸಕ್ತಿ ಮತ್ತು ಅಭಿರುಚಿ ಬೆಳೆಸಲು ಉದ್ದೇಶಿಸಿ ಸ್ಥಾಪನೆ ಮಾಡಿರುವ ಮುಕ್ತ ಸಾರ್ವಜನಿಕ ವ್ಯವಸ್ಥೆಯೇ ಈ ಸಾರ್ವಜನಿಕ ಗ್ರಂಥಾಲಯಗಳು. +ಸಾರ್ವಜನಿಕರ ಓದಿಗಾಗಿ ನಿರ್ಮಾಣವಾಗಿರುವ ಗ್ರಂಥಾಲಯಗಳನ್ನು ಸಾರ್ವಜನಿಕ ಗ್ರಂಥಾಲಯ ಎಂದು ಕರೆಯುತ್ತಾರೆ. +ಇಲ್ಲಿ ಎಲ್ಲರಿಗೂ ಮುಕ್ತವಾಗಿ ಪುಸ್ಥಕ ಓದಲು ಮತ್ತು ಪಡೆಯಲು ಅವಕಾಶವಿರುತ್ತದೆ. +ಶ್ರೀ ಸಾಮಾನ್ಯನ ಓದಿಗಾಗಿ ಸಾರ್ವಜನಿಕ ಗ್ರಂಥಾಲಯಗಳ ಪಾತ್ರ ಮತ್ತು ಕೊಡುಗೆ ಮಹತ್ವದ್ದಾಗಿದೆ. +ಗ್ರಂಥಾಲಯ ಇಲಾಖೆಯು ಪ್ರತಿಯೊಬ್ಬರಿಗೂ ಪುಸ್ತಕಗಳ ಜ್ಞಾನ ದೊರೆಯುವಂತೆ ಮಾಡಿದೆ. +2.ಖಾಸಗಿ ಗ್ರಂಥಾಲಯ ವ್ಯಕ್ತಿಯ ಸದಭಿರುಚಿಯ ಭಾಗವಾಗಿದೆ. +ಯಾರಿಗೆ ತುಂಬಾ ಓದುವ, ಬರೆಯುವ ಹವ್ಯಾಸವಿರುತ್ತದೆಯೋ ಅಂಥವರು ಮನೆ ಅಥವಾ ಆಫೀಸುಗಳಲ್ಲಿ ಪುಸ್ತಕಗಳ ಸಂಗ್ರಹ ಮಾಡಿ ಅದಕ್ಕೆಂದೇ ಸ್ಥಳವನ್ನು ನಿಗದಿಪಡಿಸುತ್ತಾರೆ. +ವೈದ್ಯರು, ವಕೀಲರು, ಸಾಹಿತಿಗಳು, ಇತಿಹಾಸಕಾರರು ಹೀಗೆ ವೃತ್ತಿ ಮತ್ತು ಪ್ರವೃತ್ತಿಗಾಗಿ ಪುಸ್ತಕ ಸಂಗ್ರಹ, ಪುಸ್ತಕ ಓದುವ ಮತ್ತು ಮಾಹಿತಿ ನೀಡಲು ಬಯಸಿದ ಯಾರು ಬೇಕಾದರೂ ಗ್ರಂಥಾಲಯ ಹೊಂದಬಹುದಾಗಿದೆ. +ಒಟ್ಟಾರೆಯಾಗಿ ಇದು ವ್ಯಕ್ತಿಗತ ಗ್ರಂಥಾಲಯವಾಗಿರುತ್ತದೆ. +3.ರಾಷ್ಟ್ರೀಯ ಗ್ರಂಥಾಲಯ ವಿಶ್ವಮಟ್ಟದ ಪುಸ್ತಗಳ ಸಂಗ್ರಹವನ್ನು ಒಳಗೊಂಡಿರುತ್ತದೆ. +ಇಲ್ಲಿ ಎಲ್ಲಾ ಭಾಷೆಯ ಪುಸ್ತಕಗಳ ಸಂಗ್ರವಿರುತ್ತದೆ. +ವಿಶ್ವದ ಎಲ್ಲಾ ಪ್ರಮುಖ ಲೇಖಕರ ಕೃತಿಗಳನ್ನು ಇಲ್ಲಿ ನಾವು ಕಾಣಬಹುದಾಗಿದೆ. +4.ಸಂಚಾರಿ ಗ್ರಂಥಾಲಯ ಎಂದರೆ ಒಂದು ವಾಹನದಲ್ಲಿ ವಿವಿಧ ವಯೋಮಾನದವರಿಗೆ ಬೇಕಾದ ಪುಸ್ತಕಗಳನ್ನು ಹೊಂದಿದ ವಾಹನ ಓಣಿ ಹಾಗೂ ಏರಿಯಾಗಳಲ್ಲಿ ಹೋಗಿ ಪುಸ್ತಕ ಓದುಗರಿಗೆ ಪುಸ್ತಕ ತಲುಪಿಸುವುದೇ ಸಂಚಾರಿ ಗ್ರಂಥಾಲಯ ಆಗಿದೆ. +ಈ ಪರಿಕಲ್ಪನೆ ಇತ್ತೀಚೆಗೆ ಹುಟ್ಟಿಕೊಂಡಿದೆ. +ಮನೆಯಿಂದ ದೂರವಿದೆ ಎನ್ನುವ ಕಾರಣಕ್ಕೋ, ಸಮಯದ ಅಭಾವದಿಂದಲೋ,ಗ್ರಂಥಾಲಯಕ್ಕೆ ತೆರಳಿ ಓದಲು ಸಾಧ್ಯವಾಗದವರಿಗೆ ಸಂಚಾರಿ ಗ್ರಂಥಾಲಯ ಸಹಕಾರಿಯಾಗಿದೆ. + ಮಕ್ಕಳ ಗ್ರಂಥಾಲಯ ಹೆಸರೇ ಸೂಚಿಸುವಂತೆ ಮಕ್ಕಳಿಗೆ ಸಂಬಂಧಪಟ್ಟ ಪುಸ್ತಕಗಳ ಸಂಗ್ರಹವಿರುವ ಗ್ರಂಥಾಲಯಗಳೇ ಮಕ್ಕಳ ಗ್ರಂಥಾಲಯ ಆಗಿವೆ. +ಇಲ್ಲಿ 18 ವರ್ಷದೊಳಗಿನ ಮಕ್ಕಳ ಓದಿಗೆ ಬೇಕಾದ ಪುಸ್ತಕಗಳ ಸಂಗ್ರಹವಿರುತ್ತದೆ. +ಆಟ-ಪಾಠ, ಮಕ್ಕಳ ಬೌದ್ಧಿಕ ಬೆಳವಣಿಗೆ, ಮಕ್ಕಳ ಆರೋಗ್ಯ, ಮಕ್ಕಳ ಕಥೆಗಳು, ಚಿತ್ರ ಬಿಡಿಸುವ ವಿಧಾನ ಹೀಗೆ ಮಕ್ಕಳಿಗೆ ಅನುಕೂಲಕರ ಹಾಗೂ ಆಸಕ್ತಿ ಹಚ್ಚಿಸುವ ಪುಸ್ತಕಗಳನ್ನು ಇಲ್ಲಿ ಕಾಣುತ್ತೇವೆ. +6.ಆಧುನಿಕ ಗ್ರಂಥಾಲಯ ಹೆಚ್ಚಾಗಿ ಯುತ್ಸ್‌ ಹಾಗೂ ಮಧ್ಯ ವಯಸ್ಕರನ್ನು ಆಧರಿಸಿ ನಿರ್ಮಾಣ ಮಾಡಲಾಗಿದೆ. +ಆಧುನಿಕ ಗ್ರಂಥಾಲಯಗಳು ಸ್ಪರ್ಧಾತ್ಮಕ ಪರೀಕ್ಷೆ ಹಾಗೂ ಡಿಜಿಟಲ್‌ ಗ್ರಂಥಾಲಯದ ಮಾಹಿತಿಯನ್ನು ಒಳಗೊಂಡಿದೆ. +ಸರ್ಕಾರಿ ಸೇವೆಗಳ ಮಾಹಿತಿ, ಸರ್ಕಾರಿ ನೌಕರಿ ಪರೀಕ್ಷೆ ಬರೆಯಲು ಬೇಕಾದ ಎಲ್ಲಾ ಮಾಹಿತಿ ಆಧುನಿಕ ಗ್ರಂಥಾಲಯದಲ್ಲಿ ಸಿಗುತ್ತದೆ. +ಪ್ರಶ್ನೋತ್ತರ, ವಿವಿಧ ಪರೀಕ್ಷೆಗೆ ಸಂಬಂಧಪಟ್ಟ ಪುಸ್ತಕಗಳು, ಮ್ಯಾಗಜಿನ್‌ ಗಳು ಲಭ್ಯ ಇವೆ. +ಇನ್ನು ಕುಳಿತಲ್ಲಿಯೇ ಗೂಗಲ್‌ ಸರ್ಚ್‌ ಮುಖಾಂತರ ಮಾಹಿತಿ ತೆಗೆದುಕೊಳ್ಳುವುದು, ಸಾಮಾಜಿಕ ಜಾಲತಾಣಗಳ ಮೂಲಕ ಲೇಖನ,ಪೇಪರ್‌ ಓದುವುದು, ಆ್ಯಪ್‌ ಗಳ ಮೂಲಕ ಸಾಹಿತ್ಯದ ಅಪಾರ ಸಂಪತ್ತಿನ ಬಗ್ಗೆ ತಿಳಿದುಕೊಳ್ಳುವುದನ್ನು ಡಿಜಿಟಲ್‌ ಗ್ರಂಥಾಲಯ ಎಂದು ಹೆಸರಿಸಲಾಗಿದೆ. +ಆರು ಬಗೆಯ ಗ್ರಂಥಾಲಯದ ನಂತರ ಈಗ ನಾವು ಗ್ರಂಥಾಲಯದ ಭಾಗಗಳ ಬಗ್ಗೆ ತಿಳಿಯೋಣ. +ಗ್ರಂಥಾಲಯವನ್ನು ಎರಡು ಭಾಗಗಳನ್ನಾಗಿ ವಿಂಗಡಿಸಲಾಗಿದೆ. +ಗ್ರಂಥಾಲಯದ ಎರಡು ಭಾಗಗಳು 1.ಪುಸ್ತಕ ಓದುವುದು . +ಅದರಲ್ಲಿ ಒಂದನೇ ಭಾಗ ಪುಸ್ತಕ ಓದುವುದು ಆಗಿದೆ. +ಯಾರೇ ಗ್ರಂಥಾಲಯಕ್ಕೆ ಹೋದರೂ ಸಹ ಅಲ್ಲಿಯೇ ಕುಳಿತು ಪುಸ್ತಕ ಓದುತ್ತಾರೆ. +ಇಲ್ಲವೇ ಗ್ರಂಥಾಲಯದ ಕಾರ್ಡ್‌ ಮಾಡಿಸಿ ಪುಸ್ತಕವನ್ನು ಮನೆಗೆ ತೆಗೆದುಕೊಂಡು ಬಂದು ಓದಿ ಮತ್ತೆ ಮರಳಿಸುತ್ತಾರೆ. +ಈ ಪ್ರಕ್ರಿಯೆ ಗ್ರಂಥಾಲಯದ ಪ್ರಮುಖ ಭಾಗವಾಗಿದೆ. +ಪುಸ್ತಕವನ್ನು ನೀಡಲೆಂದೇ ಗ್ರಂಥಾಲಯದಲ್ಲಿ ನಿರ್ವಾಹಕರು ಇರುತ್ತಾರೆ. +ಅವರೇ ಸಾರ್ವಜನಿಕರ ಎಂಟ್ರಿ ಮಾಡಿ, ಸಮಯ ಹಾಗೂ ಸಹಿ ನಮೂದಿಸಿದ ನಂತರ ಪುಸ್ತಕ ತೆಗೆದುಕೊಂಡು ಅಲ್ಲಿಯೇ ಕುಳಿತು ಓದಲು ಅನುಮತಿ ನೀಡುತ್ತಾರೆ. +ಇಲ್ಲವೇ ಕಾರ್ಡ್‌ ಹೊಂದಿದವರಿಗೆ ಪುಸ್ತಕಗಳನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶ ನೀಡುತ್ತಾರೆ. +ಪುಸ್ತಕ ಆಯ್ಕೆಯಾದ ನಂತರ ಪುಸ್ತಕದ ಹೆಸರು ಮತ್ತು ಸಂಖ್ಯೆಯನ್ನು ನಮೂದಿಸಿ, ಪುಸ್ತಕ ನೀಡುತ್ತಾರೆ. +2.ಪುಸ್ತಕ ಬಿಡುಗಡೆ ಮಾಡುವುದು . +ಗ್ರಂಥಾಲಯದಲ್ಲಿ ಕೇವಲ ಪುಸ್ತಕ ಕೊಡುವುದು, ತೆಗೆದುಕೊಳ್ಳುವುದು, ಓದುವ ಪ್ರಕ್ರಿಯೆ ಮಾತ್ರ ನಡೆಯುವುದಿಲ್ಲ. +ಇಲ್ಲಿ ಸಾಹಿತಿಗಳು,ಲೇಖಕರು, ಸರ್ಕಾರದಿಂದ ಲೋಕಾರ್ಪಣೆಗೊಳ್ಳುವ ಪುಸ್ತಕಗಳನ್ನು ಗ್ರಂಥಾಲಯಗಳಲ್ಲಿ ಸುಂದರ ಕಾರ್ಯಕ್ರಮ ನಡೆಸುವ ಮೂಲಕ ಪುಸ್ತಕ ಬಿಡುಗಡೆ ಮಾಡುವ ಕಾರ್ಯಕ್ರಮವಾಗಿದೆ. +ಪುಸ್ತಕಗಳ ಹಂಚಿಕೆ, ಪುಸ್ತಕಗಳ ಬಿಡುಗಡೆ ಕಾರ್ಯಕ್ರಮ ಗ್ರಂಥಾಲಯದ ಎರಡನೇ ಭಾಗವಾಗಿದೆ. +ಗ್ರಂಥಾಲಯದ ಮಹತ್ವ "ಒಂದು ಮಂದಿರ ಕಟ್ಟಿಸಿದರೆ ಸಾವಿರಾರು ಭಿಕ್ಷುಕರು ಹುಟ್ಟಿಕೊಳ್ಳುತ್ತಾರೆ. +ಒಂದು ಗ್ರಂಥಾಲಯ ಕಟ್ಟಿಸಿದರೆ ಸಾವಿರಾರು ವಿದ್ವಾಂಸರು ಹುಟ್ಟಿಕೊಳ್ಳುತ್ತಾರೆ " ಎಂದು ಡಾ. ಬಿ. ಆರ್‌. ಅಂಬೇಡ್ಕರ್‌ ಹೇಳಿದ್ದಾರೆ. +ಅವರ ಈ ಒಂದು ನಾಣ್ನುಡಿಯೇ ಗ್ರಂಥಾಲಯದ ಮಹತ್ವ ಎಂಥದ್ದು ಎಂಬುದನ್ನು ಸಾರಿ ಸಾರಿ ಹೇಳುತ್ತದೆ. +ಗ್ರಂಥಾಲಯ ಒಂದು ಸ್ವಾಸ್ತ್ಯ ಸಮಾಜದ ನಿರ್ಮಾಣಕ್ಕೆ ದಾರಿದೀಪವಾಗಿದೆ. +ಗ್ರಂಥಾಲಯದ ಅನುಕೂಲಗಳು ಈ ಕೆಳಗಿನಂತಿವೆ: +* ಗ್ರಂಥಾಲಯದಿಂದ ಶಿಕ್ಷಣದ ಗುಣಮಟ್ಟ ಹೆಚ್ಚುತ್ತದೆ. +* ಗ್ರಂಥಾಲಯದಿಂದ ಜನರು ಜ್ಞಾನಾರ್ಜನೆ ಪಡೆಯುತ್ತಾರೆ. +* ಹಲವು ವಿಷಯಗಳ ಜ್ಞಾನ ಹೊಂದುತ್ತಾರೆ. +* ಪೀಳಿಗೆಯಿಂದ ಪೀಳಿಗೆಗೆ ನಮ್ಮ ಸಂಸ್ಕೃತಿ, ಸಾಹಿತ್ಯ, ಕಲೆ, ವಿಜ್ಞಾನ, ಪರಂಪರೆ, ಭಾಷೆಗಳ ಜ್ಞಾನವನ್ನು ಒದಗಿಸುತ್ತದೆ. +* ವಾರಪತ್ರಿಕೆ, ಮಾಸ ಪತ್ರಿಕೆ, ದಿನಪತ್ರಿಕೆ, ಮ್ಯಾಗಜಿನ್‌ ಗಳು ಓದುಗರಿಗೆ ದೈನಂದಿನ ಆಗು-ಹೋಗುಗಳು ಮತ್ತು ಲೇಖನಗಳನ್ನು ಓದಲು ಅವಕಾಶ ಮಾಡಿ ಕೊಡುತ್ತದೆ. +* "ಒಂದು ಒಳ್ಳೆಯ ಪುಸ್ತಕ ನೂರು ಸ್ನೇಹಿತರಿಗೆ ಸಮ, ಆದರೆ ಒಬ್ಬ ಒಳ್ಳೆಯ ಸ್ನೇಹಿತ ಒಂದು ಗ್ರಂಥಾಲಯಕ್ಕೆ ಸಮ" ಎಂದು ವಿಜ್ಞಾನಿ ಎಪಿಜೆ ಅಬ್ದುಲ್‌ ಕಲಾಂ ಅವರ ವಾಣಿಯಂತೆ ಗ್ರಂಥಾಲಯ ಮನಸ್ಸಿನ ವಿಕಾಸ ಹಾಗೂ ಅರಿವು, ತಿಳಿವಳಿಕೆ ನೀಡುತ್ತದೆ. +*ಗ್ರಂಥಾಲಯದಲ್ಲಿ ಪುಸ್ತಕಗಳನ್ನು ತೆಗೆದುಕೊಂಡು ಓದುವ ಹವ್ಯಾಸ ನಮ್ಮ ಜೀವನದಲ್ಲಿ ನಾವು ಯಾವ ರೀತಿ ಇರಬೇಕು,ಹೇಗೆಂದರೆ ಹಾಗೆ ಪುಸ್ತಕಗಳನ್ನು ಮಡಚುವುದು, ಪುಸ್ತಕದ ಮೇಲೆ ಬರೆಯವುದು, ಹಾಳೆಗಳನ್ನು ಕೀಳುವುದು ಇಂತಹ ರೂಢಿಯನ್ನು ತಪ್ಪಿಸುತ್ತದೆ. +ಸಮಯ ಪ್ರಜ್ಞೆ ಮೂಡಿಸುತ್ತದೆ. +ಸರಿಯಾದ ಸಮಯಕ್ಕೆ ಪುಸ್ತಕ ವಾಪಸ್‌ ಕೊಡುವುದು ಇದೆಲ್ಲವೂ ನಮ್ಮ ಜೀವನದಲ್ಲಿ ವ್ಯಕ್ತಿತ್ವ ವಿಕಸನಕ್ಕೆ ಕಾರಣವಾಗುತ್ತದೆ. +* ಬಿಡುವಿನ ವೇಳೆಯನ್ನು ಸದುಪಯೋಗ ಪಡಿಸಿಕೊಳ್ಳಲು ಮತ್ತು ಇಷ್ಟದ ಲೇಖಕರ ಪುಸ್ತಕಗಳನ್ನು ಓದಲು ಇದು ಸಹಕಾರಿ. +* ಕಥೆ, ಕಾದಂಬರಿ, ಕವನ, ಐತಿಹಾಸಿಕ ಘಟನೆಗಳಂತ ಸ್ವಾರಸ್ಯಕರ ಬರಹಗಳ ಸಂಗ್ರಹವನ್ನು ಗ್ರಂಥಾಲಯ ಹೊಂದಿದ್ದು, ಜನರಲ್ಲಿ ಪುಸ್ತಕದ ಸದಭಿರುಚಿ ಹೆಚ್ಚಿಸಲು ಸಹಕಾರಿಯಾಗಿದೆ. +* ನಾಟಕ ಮತ್ತು ಇತರೆ ಕೃತಿಗಳ ಸಂಗ್ರಹ ಓದುಗನಿಗೆ ಮನರಂಜನೆ ನೀಡುತ್ತದೆ. +ಗ್ರಂಥಾಲಯ ದಿನಾಚರಣೆ :ಗ್ರಂಥಾಲಯ ಪಿತಾಮಹ ಎಸ್‌.ಆರ್‌.ರಂಗನಾಥನ್‌ ಅವರ ಸವಿ ನೆನಪಿಗಾಗಿ ಆಗಸ್ಟ್‌ 2ನ್ನು ಗ್ರಂಥಾಲಯ ದಿನಾಚರಣೆಯನ್ನಾಗಿಆಚರಿಸಲಾಗುತ್ತದೆ. +ಸ್ವಾತಂತ್ರ್ಯಾ ನಂತರದಲ್ಲಿ ಶಿಕ್ಷಣ ಹೆಚ್ಚಿನ ಪ್ರಾಮುಖ್ಯತೆ ಪಡೆಯುತ್ತಾ ಹೋಯಿತು. +ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ಗ್ರಂಥಾಲಯ ಪರಿಕಲ್ಪನೆ ವಿಸ್ತಾರ ಗೊಳ್ಳುತ್ತಾ ಹೋಯಿತು. +ಗ್ರಂಥಾಲಯ ವಿಭಾಗದಲ್ಲಿ ಕೆಲಸ ಮಾಡುವವರಿಗೆಂದೇ ವಿಶ್ವವಿದ್ಯಾಲಯಗಳಲ್ಲಿ ಕೋರ್ಸ್‌ ಗಳು ಆರಂಭವಾದವು. +ಅದರಲ್ಲಿ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ಕೂಡ ಒಂದಾಗಿದೆ. +ದೂರಸಂಪರ್ಕ ಮತ್ತು ಮಾಹಿತಿ ತಂತ್ರಜ್ಞಾನ ಪರಸ್ಪರ ಹೊಂದಿಕೊಂಡಿವೆ. +ಈಗ ಡಿಜಿಟಲ್‌ ಲೈಬ್ರರಿಗಳ ಬಳಕೆ ಹೆಚ್ಚಿದೆ. +ಅದರಲ್ಲೂ ಮಾಹಿತಿ ಒದಗಿಸುವ ಕೆಲಸ ವೇಗವಾಗಿ ಬೆಳೆಯುತ್ತಿದೆ. +ಹೀಗಾಗಿ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಬೆಳವಣಿಗೆ ತುಂಬಾ ಬೇಡಿಕೆಯ ವಿಷಯವಾಗಿದೆ. +ಅದಾಗ್ಯೂ ಮಾಹಿತಿ ತಂತ್ರಜ್ಞಾನ ಉದ್ಯೋಗಕ್ಕೆ ಪೂರಕವಾಗಿರುವ ಮಾಹಿತಿ ನೀಡುತ್ತದೆ. +ವೃತ್ತಿಪರ ಕ್ಷೇತ್ರದಲ್ಲಿ ಗ್ರಂಥಾಲಯ ಮತ್ತು ಮಾಹಿತಿ ತಂತ್ರಜ್ಞಾನ ಕ್ಷೇತ್ರ ಆಧುನಿಕ ಜಗತ್ತಿನಲ್ಲಿ ಹೆಚ್ಚು ಬೇಡಿಕೆಯಲ್ಲಿದೆ ಮತ್ತು ಬೇರೆ ಕ್ಷೇತ್ರಗಳಿಗಿಂತ ಮುಂಚೂಣಿಯಲ್ಲಿದೆ. +ಮಾಹಿತಿ ವಿನಿಮಯ ಕೇಂದ್ರವಾಗಿ ಬೆಳೆದಿರುವ ಗ್ರಂಥಾಲಯದ ಮೂಲ ಸ್ವರೂಪ ಸಾಕಷ್ಟು ಬದಲಾವಣೆಯಾಗಿದೆ. +ಮೊದಲಿದ್ದ ಗ್ರಂಥಪಾಲಕರು ಎನ್ನುವ ಹುದ್ದೆ ಈಗ ಬದಲಾಗಿದ್ದು, ಮಾಹಿತಿ ವಿಜ್ಞಾನಿ ಎಂಬ ಹೆಸರಿನೊಂದಿಗೆ ಹುದ್ದೆ ಬದಲಾಗಿದೆ. +ಸಂಶೋಧನೆ, ಭಾಷೆ, ಸಾಹಿತ್ಯ ಸಾಮಾಜಿಕ ವಿಜ್ಞಾನ ಕ್ಷೇತ್ರ ವಿಜ್ಞಾನ ಮತು ತಂತಜ್ಞಾನ, ಕಾನೂನು, ವೈದಕೀಯ, ಜಾನಪದ ಸೇರಿದಂತೆ ಸಾಕಷ್ಟು ವಿಷಯಗಳ ಮಾಹಿತಿ ಹೊಂದಿವೆ ಗ್ರಂಥಾಲಯಗಳು. +ಹೀಗಾಗಿ ಮಾಹಿತಿ ಮತ್ತು ತಂತ್ರಜ್ಞಾನ ಚಾಲ್ತಿಗೆ ಬಂದಿತು. +ಈಗ ಸಾಕಷ್ಟು ಬೇಡಿಕೆಯ ವೃತ್ತಿಪರ ಕೋರ್ಸ್‌ ಆಗಿ ಮಾಹಿತಿ ತಂತ್ರಜ್ಞಾನ ಹೊರಹೊಮ್ಮಿದೆ. +ಪುಸ್ತಕಗಳ ಮಹತ್ವ ಪುಸ್ತಕವನ್ನು ತೆರೆದಾಗ ಹೊಸ ಪ್ರಪಂಚವೇ ತೆರೆದುಕೊಳ್ಳುತ್ತದೆ ಎಂಬ ಮಾತಿದೆ. +ಪುಸ್ತಕ ನಮ್ಮಲ್ಲಿನ ಅಂಧಕಾರ, ತಮಸ್ಸು ಭಾವನೆಗಳನ್ನು ತೆಗೆದು ಹಾಕಿ ಒಳ್ಳೆತನವನ್ನು ಮೈಗೂಡಿಸಿಕೊಳ್ಳುವಂತೆ ಮಾಡುತ್ತದೆ. +ಮೌಲ್ಯಗಳ ಕಲಿಕೆ, ವ್ಯಕ್ತಿಯ ಸರ್ವತೋಮುಖ ಬೆಳವಣಿಗೆ, ವ್ಯಕ್ತಿತ್ವ ವಿಕಸನಕ್ಕೆ ಸಹಕಾರಿಯಾಗಿದೆ. +ಅ ಪುಸ್ತಕವನ್ನು ಗೆಳೆಯನನ್ನಾಗಿ ಮಾಡಿಕೊಂಡರೆ ವೈಚಾರಿಕ ವಿಚಾರಗಳು, ಪ್ರಬುದ್ಧತೆ ವ್ಯಕ್ತಿಯಲ್ಲಿ ಬೆಳೆಯುತ್ತದೆ. +ಇದು ಒಳ್ಳೆಯ ಆಲೋಚನೆ, ಉತ್ತಮ ಕಾರ್ಯಗಳತ್ತ ನಮ್ಮನ್ನು ಪ್ರಚೋದಿಸುತ್ತದೆ. +* ಪುಸ್ತಕ ಓದುವುದರಿಂದ ಎಲ್ಲಾ ಕ್ಷೇತ್ರಗಳ ಬಗ್ಗೆ ಜ್ಞಾನ ದೊರೆಯುತ್ತದೆ. +* ಸೌಹಾರ್ದ ಮನೋಭಾವ ಬೆಳೆಯುತ್ತದೆ. +* ವಿದ್ಯಾರ್ಥಿಗಳಿಗೆ ಪುಸ್ತಕ ಓದುವ ಹವ್ಯಾಸ ಜೀವನ ಮೌಲ್ಯ ಮತ್ತು ಜೀವನ ಪಾಠ ಕಲಿಸುತ್ತದೆ. +* ಪುಸ್ತಕದಿಂದ ಪ್ರಾಪಂಚಿಕ ಜ್ಞಾನ ಸಿಗುತ್ತದೆ. +ಪುಸ್ತಕ ವ್ಯಕ್ತಿಯ ಬದುಕನ್ನು ರೂಪಿಸಬಲ್ಲ ಶಕ್ತಿ ಹೊಂದಿದೆ. +ಒಂದೊಳ್ಳೆ ಪುಸ್ತಕ ವ್ಯಕ್ತಿಯ ಜೀವನಕ್ಕೆ ದಾರಿದೀಪವಾಗಬಲ್ಲದು. +ವಿದ್ಯಾರ್ಥಿ ಜೀವನದಲ್ಲಿ ಪುಸ್ತಕದ ಮಹತ್ವ: +"ಸ್ಟುಡೆಂಟ್‌ ಲೈಫ್‌ ಈಸ್‌ ಗೋಲ್ಡನ್‌ ಲೈಫ್‌'" ಎಂಬ ಮಾತಿದೆ. +ನಮ್ಮ ಜೀವನವನ್ನು ಬಂಗಾರದಂತೆ ಮೌಲ್ಯವಾಗಿಸಿಕೊಳ್ಳಲು ಸಹಾಯ ಮಾಡುವುದೇ ಪುಸ್ತಕಗಳು. +ಪುಸ್ತಕಗಳು ವಿದ್ಯಾರ್ಥಿಗಳ ಭವಿಷ್ಯಕ್ಕೆ ಅಡಿಪಾಯ ಹಾಕುತ್ತವೆ. +ಓದಿನಿಂದ ವಿದ್ಯಾರ್ಥಿ ಅಪಾರ ಜ್ಞಾನ ಪಡೆಯುತ್ತಾ ಪ್ರಬುದ್ಧನಾಗುತ್ತಾನೆ. +ಹಾಗಾದರೆ ವಿದ್ಯಾರ್ಥಿಗಳ ಜೀವನದಲ್ಲಿ ಪುಸ್ತಕಗಳ ಪಾತ್ರ ಎಷ್ಟು ಮಹತ್ವದ್ದಾಗಿದೆ ಎಂಬುದನ್ನು ನೋಡೋಣ. +1.ವಿದ್ಯಾರ್ಥಿ ಪುಸ್ತಕಗಳ ಓದಿನಿಂದ ಚಿಕ್ಕ ವಯಸ್ಸಿನಲ್ಲೇ ಅಪಾರ ಜ್ಞಾನ ಸಂಪತ್ತು ಪಡೆಯುತ್ತಾನೆ. +2.ವಿದ್ಯಾರ್ಥಿಗಳು ಓದುವ ಹವ್ಯಾಸ ಅವರ ಭವಿಷ್ಯವನ್ನು ಸುಗಮವಾಗಿಸುತ್ತದೆ. +ಹೆಚ್ಚಿನ ವ್ಯಾಸಂಗದ ಸಮಯದಲ್ಲಿ ಬೋರ್‌ ಆಗದೆ,ವಿಷಯ ವಸ್ತುವನ್ನು ಬೇಗ ಅರಿತುಕೊಳ್ಳುತ್ತಾನೆ. +3.ಪುಸ್ತಕಗಳ ಓದು ವಿದ್ಯಾರ್ಥಿಯಲ್ಲಿ ಆತ್ಮವಿಶ್ವಾಸ ಹೆಚ್ಚಿಸುತ್ತದೆ. +ವಿವಿಧ ವಿಷಯಗಳ ಬಗ್ಗೆ ತಿಳಿವಳಿಕೆ ಹೊಂದಲು ಸಹಾಯಮಾಡುತ್ತದೆ. +4.ವಸ್ತುಗಳನ್ನು ಕಂಡಾಗ ಅವುಗಳ ಬಗ್ಗೆ ತಿಳಿಯುವ ಕುತೂಹಲ, ಓದಿನೆಡೆಗೆ ಆಸಕ್ತಿ ಹೆಚ್ಚುತ್ತದೆ. +5.ವಿದ್ಯಾರ್ಥಿಗಳಲ್ಲಿ ಓದುವ ಹವ್ಯಾಸ ವಿಷಯಗಳ ಗ್ರಹಣೆಗೆ ಮತ್ತು ಹೊಸ ಹೊಸ ಅರ್ಥಗಳನ್ನು ತಿಳಿಯಲು ಸಹಕಾರಿಯಾಗಿದೆ. +6.ವಿದ್ಯಾರ್ಥಿಗಳ ಜೀವನದಲ್ಲಿ ಪುಸ್ತಕ ಓದು, ವಿವೇಕ, ವಿನಯ, ಸಂಸ್ಕಾರ ಕಲಿಯಲು ಮತ್ತು ಉತ್ತಮ ಸ್ನೇಹಿತರನ್ನು ಹೊಂದಲು ಸಹಾಯ ಮಾಡುತ್ತದೆ. +ಕೆಟ್ಟವರ ಸಂಗ ಮಾಡಿ ದಾರಿ ತಪ್ಪುವುದನ್ನು ತಪ್ಪಿಸುತ್ತದೆ. +7.ಬರವಣಿಗೆ, ತಾರ್ಕಿಕ ವಿಚಾರ, ಉತ್ತಮ ಆಲೋಚನೆಗಳ ಬೆಳವಣಿಗೆಗೆ ಸಹಕಾರಿ. +8.ಮೌಲ್ಯಗಳ ಕಲಿಕೆಗೆ ಮತ್ತು ಯಾವುದೇ ವಿಷಯದ ಬಗ್ಗೆ ಗಟ್ಟಿಯಾದ ನಿರ್ಧಾರ ತೆಗೆದುಕೊಳ್ಳುವುದು ಮತ್ತು ಸದೃಢ ಮನಸ್ಸು ಹೊಂದಲು ಪುಸ್ತಕ ಸಹಕಾರಿಯಾಗಿದೆ. +9.ಜೀವನದಲ್ಲಿ ಎದುರಾಗುವ ಸವಾಲುಗಳು, ಸಂಕಷ್ಟಗಳನ್ನು ಸಮಾಧಾನದಿಂದ ಎದುರಿಸುವುದನ್ನು ಪುಸ್ತಕಗಳ ಓದು ಕಲಿಸುತ್ತದೆ. +10.ಕೆಟ್ಟ ವಿಚಾರಗಳಿಗೆ ತಲೆ ಕೆಡಿಸಿಕೊಳ್ಳದೇ ಉಜ್ವಲ ಭವಿಷ್ಯ ರೂಪಿಸಿಕೊಳ್ಳುವ ಇಚ್ಛೆ ಚಿಕ್ಕಂದಿನಿಂದಲೇ ಹೊರ ಹೊಮ್ಮುವಂತೆ ಮಾಡುತ್ತವೆ. +ವಿಶ್ವವಿದ್ಯಾನಿಲಯದ ಗ್ರಂಥಾಲಯಗಳು :ಉನ್ನತ ಶಿಕ್ಷಣಕ್ಕೆ ನಾವು ಹೋದಾಗ ಅಲ್ಲಿ ವಿಶ್ವವಿದ್ಯಾಲಯಗಳು ಬೃಹತ್‌ ಗ್ರಂಥಾಲಯ ಹೊಂದಿರುವುದನ್ನು ಕಾಣುತ್ತೇವೆ. +ಅಲ್ಲಿ ನಮಗೆ ವಿವಿಧ ಭಾಷೆ, ಸಾಹಿತ್ಯ ಕ್ಷೇತ್ರಗಳ ಅಧ್ಯಯನಕ್ಕೆ ಅನುಕೂಲವಾಗುವ ಮತ್ತು ಪಠ್ಯ ಹಾಗೂ ಪಠ್ಯೇತರ ಪುಸ್ತಕಗಳು ಓದಲು ಸಿಗುತ್ತವೆ. +ವಿದ್ಯಾರ್ಥಿ ಅದೇ ವಿಶ್ವವಿದ್ಯಾಲಯದವನಾಗಿದ್ದಾಗ ಮಾತ್ರ ವಿಶ್ವವಿದ್ಯಾಲಯ ಗ್ರಂಥಾಲಯದ ಸೌಲಭ್ಯ ಪಡೆಯಲು ಸಾಧ್ಯ. +ಇಲ್ಲಿ ಸರ್ಕಾರಿ ಅನುದಾನದ ಮೂಲಕ ಹಾಗೂ ಯುಜಿಸಿ ಅನುದಾನದ ಮೂಲಕ ಬಂದ ಪುಸ್ತಕಗಳ ಸಂಗ್ರಹ ಇರುತ್ತದೆ. +ಹಲವಾರು ಪುಸ್ತಕಗಳು, ಜರ್ನಲ್‌ ಗಳು, ರಿಪೋರ್ಟ್‌, ಥೀಸಿಸ್‌ ಸೇರಿದಂತೆ ಪುಸ್ತಕಗಳ ಬಿಡುಗಡೆ ಕಾರ್ಯಕ್ರಮಗಳು ನಡೆಯುತ್ತವೆ. +ಭವಿಷ್ಯದ ಗ್ರಂಥಾಲಯಗಳು "ಪ್ರಪಂಚದಲ್ಲಿ ಮರಣವಿಲ್ಲದ ವರ ಪಡೆದಿರುವ ವಸ್ತು- ಪುಸ್ತಕ". +ಕಾಲ ಬದಲಾದಂತೆ ಹಾಗೂ ತಂತ್ರಜ್ಞಾನ ಮುಂದುವರೆದಂತೆ ಗ್ರಂಥಾಲಯದ ಸ್ವರೂಪ, ಚಿತ್ರಣ ಕೂಡ ಬದಲಾಗಿದೆ. +ಈಗ ಎಲ್ಲೆಲ್ಲೂ ಡಿಜಿಟಲ್‌ ರಂಗ ಹೆಚ್ಚು ವಿಸ್ತರಿಸುತ್ತ ಬೆಳೆದಿದೆ. +ಹೀಗಾಗಿ ಭವಿಷ್ಯದ ಗ್ರಂಥಾಲಯಗಳಾಗಿ ಈಗ ಡಿಜಿಟಲ್‌ ಲೈಬ್ರರಿ, ಎಲೆಕ್ಟ್ರಾನಿಕ್‌ ಮಾಸ್ಯವಗಳ ಮೂಲಕ ಪುಸ್ತಕಗಳನ್ನು ನಾವಿದ್ದಲ್ಲಿಯೇ ಓದುವ ಅವಕಾಶವಿದೆ. +ನಮಗೆ ಬೇಕಾದ ಪುಸ್ತಕಗಳನ್ನು ಮೊಬೈಲ್‌, ಲ್ಯಾಪ್‌ ಟಾಪ್‌, ಕಂಪ್ಯೂಟರ್‌ ಪರದೆಯ ಮೂಲಕ ಇಂಟರ್ನೆಟ್‌, ಗೂಗಲ್‌ ಸರ್ಚ್‌ಮುಖಾಂತರ ಓದುವ, ಮಾಹಿತಿ ಪಡೆದುಕೊಳ್ಳುವ ಪ್ರಕ್ರಿಯೆ ಹೆಚ್ಚು ನಡೆಯುತ್ತಿದೆ. +ಈಗಿನ ಸಾಕಷ್ಟು ಜನರು ಭವಿಷ್ಯದ ಗ್ರಂಥಾಲಯವಾಗಿರುವ ಡಿಜಿಟಲ್‌ ಲೈಬ್ರರಿಯನ್ನೇ ಆಶ್ರಯಿಸಿದ್ದಾರೆ. +ಗ್ರಂಥಾಲಯದ ಅನುಕೂಲಗಳು ಗ್ರಂಥಾಲಯದಿಂದ ಸಾಕಷ್ಟು ಅನುಕೂಲತೆಗಳು ಇವೆ. +ಅವುಗಳಲ್ಲಿ ಕೆಲವು ಇಲ್ಲಿವೆ. +* ಎಲ್ಲರಿಗೂ ಸಮಾನವಾಗಿ ಪುಸ್ತಕಗಳು ಓದಲು ಸಿಗುವ ಅವಕಾಶದ ಸೃಷ್ಟಿ +* ಹೆಚ್ಚು ದುಡ್ಡು ಖರ್ಚು ಮಾಡಿ ಪುಸ್ತಕ ಕೊಳ್ಳಲಾಗದವರಿಗೆ ಗ್ರಂಥಾಲಯ ಪುಸ್ತಕ ಓದಿಗೆ ಸಹಕಾರಿಯಾಗಿದೆ. +* ಗ್ರಂಥಾಲಯ ನಮ್ಮಲ್ಲಿನ ಅಶಿಸ್ತನ್ನು ತೆಗೆದು ಹಾಕುತ್ತದೆ. +* ಗ್ರಂಥಾಲಯ ಸಮಯದ ಬಗ್ಗೆ ಜ್ಞಾನ ಹೊಂದುವಂತೆ ಮಾಡುತ್ತದೆ. +* ಗ್ರಂಥಾಲಯ ಭವಿಷ್ಯ ರೂಪಿಸುವ ದೇವಾಲಯವಾಗಿದೆ. +* ಗ್ರಂಥಾಲಯ ಓದಿನ ಹಾಗೂ ಪುಸ್ತಕ ಸಂಸ್ಕೃತಿಯನ್ನು ಜೀವಂತವಾಗಿರಿಸಲು ಸಹಕಾರಿಯಾಗಿದೆ. +ಉಪಸಂಹಾರ:ಒಟ್ಟಿನಲ್ಲಿ ಗ್ರಂಥಾಲಯಗಳು ಆರಂಭವಾದಾಗಿನಿಂದ ಮನುಷ್ಯ ಮತ್ತಷ್ಟು ಹೊಸ ಹೊಸ ಆವಿಷ್ಕಾರ ಗಳನ್ನು ಮಾಡುತ್ತ ಸಮಾಜಕ್ಕೆ ಒಳ್ಳೆಯ ಕೊಡುಗೆ ನೀಡುತ್ತ ಹೋದ. +ಗ್ರಂಥಾಲಯ ವ್ಯಕ್ತಿಯಲ್ಲಿ ಓದುವ ಹಾಗೂ ಸಾಧಿಸುವ ಛಲವನ್ನು ಹುಟ್ಟು ಹಾಕುತ್ತದೆ. +ಓದಿನ ಹಸಿವು ವ್ಯಕ್ತಿಯನ್ನು ಯಾವ ಸಾಧನೆಗಾದರೂ ಸಿದ್ಧಗೊಳ್ಳುವಂತೆ ಮಾಡುತ್ತದೆ. +ಜ್ಞಾನ ವ್ಯಕ್ತಿಯ ಮೊದಲ ಸಂಪತ್ವಾಗಬೇಕು. +ಅಂದಾಗ ಮಾತ್ರ ಆತ ಉತ್ತಮ ಬದುಕು ಹೊಂದಲು ಸಾಧ್ಯ. +ಜಗತ್ತಿನಲ್ಲಿ ಯಾರು ಏನನ್ನು ಬೇಕಾದರೂ ಕದಿಯಬಹುದು. +ಆದರೆ ಯಾರೂ ಕದಿಯಲಾಗದ ಸಂಪತ್ತು ಎಂದರೆ ಅದು ಜ್ಞಾನ ಮಾತ್ರ. +“ಮಹಾಜ್ಞಾನಿಯಾದವನು ಎಲ್ಲರಿಂದಲೂ ಗೌರವಿಸಲ್ಪಡುತ್ತಾನೆ” ಎಂಬ ಮಾತಿದೆ. +ಇದು ಅಕ್ಷರಶಃ ನಿಜ. +ಯಾರಲ್ಲಿ ಜ್ಞಾನ ಭಂಡಾರ ತುಂಬಿದೆಯೋ ಅವರು ಯಾರಿಗೂ ಅಂಜುವ ಪ್ರಮೇಯವೇ ಬರುವುದಿಲ್ಲ. +ಎಲ್ಲ ವಿಷಯದ ಜ್ಞಾನ ಸಂಪಾದನೆ ವ್ಯಕ್ತಿಯನ್ನು ಮಹಾಜ್ಞಾನಿಯನ್ನಾಗಿ ಮಾಡುತ್ತದೆ. +ಆಗ ಇಡೀ ಜಗತ್ತೇ ಆತನನ್ನು ಗೌರವಿಸುತ್ತದೆ. +ಆತನಿಂದ ಸಲಹೆ, ಮಾರ್ಗದರ್ಶನ ಪಡೆದುಕೊಳ್ಳುತ್ತದೆ. +"ಗ್ರಂಥವಿಲ್ಲದ ಕೋಣೆ ಆತ್ಮವಿಲ್ಲದ ದೇಹವಿದ್ದಂತೆ" ಮೊಟ್ಟ ಮೊದಲ ಬಾರಿಗೆ ಗ್ರಂಥಾಲಯ 1800 ಇಸವಿಯಲ್ಲಿ ಆರಂಭವಾಯಿತು. +ಲಂಡನ್‌ ನಲ್ಲಿರುವ "ಕಾಂಗ್ರೆಸ್‌ ಲೈಬ್ರರಿ" ದೊಡ್ಡ ಲೈಬ್ರರಿ ಆಗಿದೆ ಮತ್ತು ಯುನೈಟೆಡ್‌ ಸ್ಟೇಟ್ಸ್‌ನ "ನ್ಯಾಷನಲ್‌ ಲೈಬ್ರರಿ" ವಿಶ್ವದ ಅತಿದೊಡ್ಡ ಗ್ರಂಥಾಲಯದ ಸಾಲಿನಲ್ಲಿ ಬರುತ್ತದೆ. +ಗ್ರಂಥಾಲಯ ದಿನಾಚರಣೆ ಯಾವಾಗ ಆಚರಿಸಲಾಗುತ್ತದೆ? +ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ಕ್ಷೇತ್ರದಲ್ಲಿ ಸಾಕಷ್ಟು ಕೊಡುಗೆ ನೀಡಿದಕ್ಕಾಗಿ ಎಸ್‌.ಆರ್‌.ರಂಗನಾಥನ್‌ ರವರ ಜನ್ಮದಿನವನ್ನು ಪ್ರತಿವರ್ಷ ಆಗಸ್ಟ್‌ 12 ರಂದು ಭಾರತದಲ್ಲಿ ರಾಷ್ಟ್ರೀಯ ಗ್ರಂಥಾಲಯ ದಿನವನ್ನು ಆಚರಿಸಲಾಗುತ್ತದೆ. -- GitLab