diff --git "a/Data Collected/Kannada/MIT Manipal/Kannada-Scrapped-dta/Book3-\340\262\225\340\262\260\340\263\215\340\262\250\340\262\276\340\262\237\340\262\225\340\262\246_\340\262\252\340\262\260\340\262\202\340\262\252\340\262\260\340\263\206.txt" "b/Data Collected/Kannada/MIT Manipal/Kannada-Scrapped-dta/Book3-\340\262\225\340\262\260\340\263\215\340\262\250\340\262\276\340\262\237\340\262\225\340\262\246_\340\262\252\340\262\260\340\262\202\340\262\252\340\262\260\340\263\206.txt" new file mode 100644 index 0000000000000000000000000000000000000000..eb1d983d36e6ee7ab579e1f6cb4161d3d82a72bf --- /dev/null +++ "b/Data Collected/Kannada/MIT Manipal/Kannada-Scrapped-dta/Book3-\340\262\225\340\262\260\340\263\215\340\262\250\340\262\276\340\262\237\340\262\225\340\262\246_\340\262\252\340\262\260\340\262\202\340\262\252\340\262\260\340\263\206.txt" @@ -0,0 +1,26 @@ +ಕನ್ನಡ ಓದುಗರಿಗೆ ಸುಲಭ ಬೆಲೆಯಲ್ಲಿ ಉತ್ತಮ ಕೃತಿಗಳು ಲಭ್ಯವಾಗಬೇಕೆನ್ನುವ ಉದ್ದೇಶದಿಂದ ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಹಲವಾರು ಪ್ರಕಟಣಾ ಯೋಜನೆಗಳನ್ನು ರೂಪಿಸಿಕೊಂಡು ಕಾರ್ಯರೂಪಕ್ಕೆ ತರುತ್ತಿದೆ. +ಪ್ರಸಕ್ತ ವರ್ಷ ಡಾ.ಅನಂತಮೂರ್ತಿಯವರ ಸಮಗ್ರ ಸಾಹಿತ್ಯ, ಹೀಗೆ ಪ್ರಮುಖ ಸಾಹಿತಿಗಳ ಸಮಗ್ರ ಸಾಹಿತ್ಯ ಹಾಗೂ ವಿಜಯನಗರದ ಕಲೆ ಮತ್ತು ಸಾಹಿತ್ಯ, ಎಚ್.ಡಿ.ಇಂಚಲರ ಸಮಗ್ರ ಕಾವ್ಯ ಮತ್ತು ರಾವ್ ಬಹದ್ದೂರ್,ಎಲ್.ಬಸವರಾಜು ಹಾಗೂ ಗೌರೀಶ ಕಾಯ್ಕಿಣಿ ಅವರುಗಳ ಆಯ್ದ ಕೃತಿಗಳನ್ನು ಹೊರತರಲಾಗುತ್ತಿದೆ. +ಈಯೋಜನೆಯಡಿ ಸುವರ್ಣ ಕರ್ನಾಟಕದ ಅಂಗವಾಗಿ ಮರು ಮುದ್ರಿಸಿದ್ದ ಕರ್ನಾಟಕದ ಪರಂಪರೆ ಕೃತಿಗಳ ಮರುಮುದ್ರಣವೂ ಒಂದಾಗಿದೆ. +ಕರ್ನಾಟಕ ಎಂದೊಡನೆ ಒಂದು ಉಜ್ವಲವಾದ, ಪುರಾತನವಾದ, ಅಪರಂಪರವಾದ ಸಾಂಸ್ಕೃತಿಕ ಪರಂಪರೆಯ ವಿರಾಟ್ ದೃಶ್ಯವೇ ಕಣ್ಣೆದುರು ಗೋಚರಿಸುತ್ತದೆ. +ಇತಿಹಾಸ, ಸಂಸ್ಕೃತಿ, ಭಾಷೆ, ಸಂಗೀತ,ಸಾಹಿತ್ಯ, ಶಿಲ್ಪಕಲೆ, ನಾಟ್ಯ, ಮುಂತಾದ ಸುದೀರ್ಘ ಇತಿಹಾಸವುಳ್ಳ ಶ್ರೀಮಂತ ಸಂಸ್ಕೃತಿಯ ಸಂಪದ್ಭರಿತನಾಡು. +ಈ ಚೆಲುವ ಕನ್ನಡ ನಾಡಿನ ವೈಭವ, ಚಿತ್ತಾಕರ್ಷಕ ಕಲೆ, ಪ್ರತಿಭಾ ವಿಲಾಸಗಳನ್ನು ಕಂಡು `ಕನ್ನಡಮೆನಿಪ್ಪಾನಾಡು ಚೆಲ್ವಾಯ್ತು’ ಎಂದು ಕವಿ ಆಂಡಯ್ಯ ಉದ್ಗರಿಸಿರುವುದು. +ಕರ್ನಾಟಕ ಎಂಬ ಹೆಸರಿಗೆ ಪುರಾತನ ಇತಿಹಾಸವಿದೆ. +ಈ ಹೆಸರಿನ ಹಿಂದೆ ನಾಡಿನ ಪುರಾತನ ಸಂಸ್ಕೃತಿಮತ್ತು ಸಂಪ್ರದಾಯವಿದೆ. +ಕರ್ನಾಟಕದ ಧರ್ಮ, ಇತಿಹಾಸ, ಭಾಷೆ, ಕಲೆ, ಆಚಾರ-ವಿಚಾರ, ಪರಂಪರೆ ಮುಂತಾದವುಗಳಿಗೆ ಒಂದು ವಿಶಿಷ್ಟತೆಯಿದೆ; +ಇವು ಇಲ್ಲಿನ ಸಂಸ್ಕೃತಿಯ ಸಜೀವ ಭಂಡಾರಗಳಾಗಿವೆ. +ಕರ್ನಾಟಕ ಪರಂಪರೆ ಗ್ರಂಥವು ಪ್ರಾಚೀನ ಕಾಲದಿಂದ ಆರಂಭವಾಗಿ ಕರ್ನಾಟಕದ ಭೂವಿಕಾಸ, ಪ್ರಾಕೃತಿಕ ಲಕ್ಷಣಗಳು, ಭಾಷೆ, ಕದಂಬ, ಗಂಗ, ಚಾಲುಕ್ಯ, ರಾಷ್ಟ್ರಕೂಟ, ವಿಜಯನಗರ ಹೀಗೆ ಕರ್ನಾಟಕವನ್ನು ಆಳಿದ ರಾಜವಂಶಗಳು, ಸಾಂಸ್ಕೃತಿಕ ಬದುಕಿನ ಉಜ್ವಲತೆ, ನಮ್ಮ ನಾಡಿನ ಭವ್ಯ ಪರಂಪರೆಯನ್ನು ಪರಿಚಯಿಸುತ್ತದೆ. +ಕರ್ನಾಟಕ-ಕನ್ನಡಿಗ ಪ್ರಪಂಚದ ಕೆಲವೇ ಅತಿ ಪುರಾತನ ನಾಗರಿಕತೆಗಳಲ್ಲೊಂದಾದ ಕಿಷ್ಕಿಂದಾ ನಾಗರಿಕತೆಯ ವಾರಸುದಾರ. +ಭಾರತವು ಪೂರ್ಣಸ್ವರೂಪ ತಾಳದ ಮುನ್ನವೇ ಜಗತ್ಪ್ರಸಿದ್ಧವಾಗಿದ್ದ ಜಂಬೂದ್ವೀಪದ ಗರ್ವಶಾಲಿ ಮೂಲಪುರುಷ, ಐತಿಹಾಸಿಕ ವೈಭವಕ್ಕೆ ಸರಿಜೋಡಿಲ್ಲದ ಸಾಹಿತ್ಯ-ಸಂಗೀತ, ಕಲಾ ನೈಪುಣ್ಯಕ್ಕೆ ಸಾಟಿಯಿಲ್ಲದ ಸಾಂಸ್ಕೃತಿಕ ಗೌರವಕ್ಕೆ ಹಕ್ಕುದಾರ. +ಭಾರತದಲ್ಲಿ ಮತ್ತಾವ ಪ್ರದೇಶದಲ್ಲೂ ಕಾಣಸಿಗದಷ್ಟು ದೀರ್ಘಕಾಲದ ಚಕ್ರವರ್ತಿತನ; +ಅದರೊಡನೆಯೇ ಆಧ್ಯಾತ್ಮಿಕ ಶ್ರೇಯ,ಸಾಹಿತ್ಯಕ ಮೇಲ್ಮೆಯನ್ನು ಮೆರೆಸಿದ ನಾಡು ಕರ್ನಾಟಕ. +ಇಂತಹ ಸಮೃದ್ಧ ಕರ್ನಾಟಕದ ಸಾಂಸ್ಕೃತಿಕ,ಭೌಗೋಳಿಕ, ಧಾರ್ಮಿಕ, ರಾಜಕೀಯ, ಸಾಹಿತ್ಯಕ ಪರಂಪರೆ ಮತ್ತು ಇತಿಹಾಸವನ್ನು ಸ್ಥೂಲವಾಗಿ ಪರಿಚಯಿಸುವ `ಕರ್ನಾಟಕದ ಪರಂಪರೆ’ ಎಂಬ ಈ ಅಮೂಲ್ಯ ಗ್ರಂಥವು ಮೈಸೂರು ಸರ್ಕಾರ ೧೯೬೮ರಲ್ಲಿ ಪ್ರಕಟಿಸಿದ್ದ ‘Karnataka Through the Age’ ಎಂಬ ಆಂಗ್ಲ ಗ್ರಂಥದ ಅನುವಾದವಾಗಿದೆ. +ಇದನ್ನು ಕೆ. ಸಂಪದ್ಗಿರಿರಾವ್ ಅವರ ಅಧ್ಯಕ್ಷತೆಯಲ್ಲಿ ರಚನೆಯಾಗಿದ್ದ ಭಾಷಾಂತರ ಯೋಜನಾ ಸಮಿತಿಯ ಮೂಲಕ ಕನ್ನಡಕ್ಕೆ ಅನುವಾದಿಸಿ, ೧೯೭೦ರಲ್ಲಿ ಪ್ರಕಟಿಸಲಾಗಿತ್ತು. +ನಂತರ ೧೯೯೨ರಲ್ಲಿ ಮರು ಮುದ್ರಿಸಲಾಗಿತ್ತು. +ನಂತರ ಇದಕ್ಕೆ ಅಪಾರ ಬೇಡಿಕೆ ಇದ್ದುದರಿಂದ ೨೦೦೬ರಲ್ಲಿ ಸುವರ್ಣ ಕರ್ನಾಟಕದ ಅಂಗವಾಗಿ ಮರು ಮುದ್ರಿಸಲಾಯಿತು. +ಈಗ ಮತ್ತೆ `ಕರ್ನಾಟಕದ ಪರಂಪರೆ’ಯ ಪ್ರತಿಗಳು ಮುಗಿದಿದ್ದು, ಇದಕ್ಕೆ ಅಪಾರಬೇಡಿಕೆ ಇರುವುದರಿಂದ ಮರು ಮುದ್ರಿಸಲಾಗುತ್ತಿದೆ. +ನಿಸರ್ಗವು ಪ್ರಯೋಗಗಳ ಆಗರ. +ನಿರಂತರ ಬದಲಾವಣೆಯೇ ಅದರ ಸ್ಥಾಯಿ. +ಹೀಗಾಗಿ ಕರ್ನಾಟಕದ ಇತಿಹಾಸದಲ್ಲಿ ಭೌಗೋಳಿಕವಾಗಿ, ಧಾರ್ಮಿಕವಾಗಿ, ರಾಜಕೀಯವಾಗಿ, ಸಾಂಸ್ಕೃತಿಕವಾಗಿ ಇಂದು ಹಲವಾರು ಬದಲಾವಣೆಗಳಾಗಿವೆ. +ಇಂತಹ ಬದಲಾವಣೆಗಳನ್ನು ಸ್ಪಷ್ಟವಾಗಿ ಗುರುತಿಸಲು ಪ್ರಾಚೀನ ಐತಿಹಾಸಿಕ ಮಾಹಿತಿ, ದಾಖಲೆಗಳನ್ನೊಳಗೊಂಡ ಗ್ರಂಥಗಳ ಅಗತ್ಯವಿದೆ. +ಅಂಥ ಗ್ರಂಥಗಳ ಪೈಕಿ ಕರ್ನಾಟಕದ ಪ್ರಾಚೀನ ಪರಂಪರೆಯ ಭವ್ಯ ಚಿತ್ರಣವನ್ನು ನೀಡುವ ಸುಮಾರು ಎರಡು ಸಾವಿರ ವರ್ಷಗಳ ಕಾಲಾವಧಿಯಲ್ಲಿ ಹರಿದು ಬಂದಿರುವ ನಮ್ಮ ನಾಡಿನ ಅಮೂಲ್ಯ ಪರಂಪರೆಯನ್ನು ಕುರಿತ `ಕರ್ನಾಟಕದ ಪರಂಪರೆ’ ಗ್ರಂಥವು ಕನ್ನಡಿಗರಲ್ಲಿ ಕರ್ನಾಟಕದ ಚಾರಿತ್ರಿಕ ಮತ್ತು ಸಾಂಸ್ಕೃತಿಕ ಪ್ರಜ್ಞೆಯನ್ನು ಜಾಗೃತಗೊಳಿಸಲಿ ಎಂದು ಆಶಿಸುತ್ತಾ ಕನ್ನಡ ನಾಡು, ನುಡಿ, ಸಂಸ್ಕೃತಿಯನ್ನು ಕುರಿತ ಈ ಅಮೂಲ್ಯ ಗ್ರಂಥದ ಪ್ರಯೋಜನವನ್ನು ಪಡೆದುಕೊಳ್ಳಲಿ ಎಂದು ಹಾರೈಸುತ್ತೇನೆ. +ಈ ಕೃತಿಯ ಪ್ರಯೋಜನವನ್ನು ಕನ್ನಡ ಜನತೆ ಪಡೆದುಕೊಂಡರೆ ನಮ್ಮ ಶ್ರಮ ಸಾರ್ಥಕ.