diff --git "a/Data Collected/Kannada/MIT Manipal/Kannada-Scrapped-dta/\340\262\241\340\262\276.\340\262\205\340\262\202\340\262\254\340\263\207\340\262\241\340\263\215\340\262\225\340\262\260\340\263\2151.txt" "b/Data Collected/Kannada/MIT Manipal/Kannada-Scrapped-dta/\340\262\241\340\262\276.\340\262\205\340\262\202\340\262\254\340\263\207\340\262\241\340\263\215\340\262\225\340\262\260\340\263\2151.txt" new file mode 100644 index 0000000000000000000000000000000000000000..277d19db6dd6e639b39946458df742e91e35590e --- /dev/null +++ "b/Data Collected/Kannada/MIT Manipal/Kannada-Scrapped-dta/\340\262\241\340\262\276.\340\262\205\340\262\202\340\262\254\340\263\207\340\262\241\340\263\215\340\262\225\340\262\260\340\263\2151.txt" @@ -0,0 +1,8753 @@ +ಪ್ರತಿಯೊಂದು ಜಾತಿಗೂ ತನ್ನ ಅಸ್ತಿತ್ವದ ಎಚ್ಚರವಿದೆ. +ತಾನು ಉಳಿಯಬೇಕು, ಇಷ್ಟೇ ಅದರ ಸರ್ವಸ್ವ . +ಈ ಜಾತಿಗಳು ಒಂದು ಸಂಯುಕ್ತ ಪದ್ಧತಿಯ ಸಂಘಟನೆಯನ್ನೂ ಮಾಡಿಕೊಂಡಿಲ್ಲ. +ಹಿಂದೂ-ಮುಸ್ಲಿಂ ದಂಗೆಯಾದ ಪ್ರಸಂಗವನ್ನು ಬಿಟ್ಟರೆ, ಉಳಿದ ಯಾವ ಕಾಲದಲ್ಲಿ ಆದರೂ ಒಂದು ಜಾತಿಗೂ ಇನ್ನೊಂದು ಜಾತಿಗೂ ಏನೂ ಸಂಬಂಧವಿದ್ದಂತೆ ತೋರುವುದಿಲ್ಲ. +ಇತರ ಜಾತಿಗಳಿಗಿಂತ ತಾನು ಬೇರೆಯೆಂದೂ, ವಿಶಿಷ್ಟವೆಂದೂ ತೋರಿಸಿಕೊಳ್ಳಲು ಪ್ರತಿಯೊಂದು ಜಾತಿ ಪ್ರಯತ್ನಿಸುತ್ತದೆ. +ಸಹಭೋಜನವಾಗಲೀ, ಮದುವೆಯಾಗಲೀ ಒಂದು ಜಾತಿಯವರು ತಮ್ಮ ಜಾತಿಯವರೊಡನೆ ಮಾತ್ರ ಮಾಡತಕ್ಕದ್ದು. + ಇಷ್ಟೇ ಅಲ್ಲ, ತಮ್ಮ ಜಾತಿಗೆ ಇಂತಹದೇ ಉಡುಗೆ ತೊಡುಗೆಯೆಂಬ ನಿರ್ಬಂಧ ಕೂಡ ಇದೆ. +ವಿದೇಶಿ ಪ್ರವಾಸಿಗರಿಗೆ ವಿನೋದವನ್ನೊದಗಿಸುವಂತೆ ಅಸಂಖ್ಯವಾದ ಉಡುಗೆ ತೊಡುಗೆಗಳು ಭಾರತದಲ್ಲಿ ಕಂಡು ಬರುವುದಕ್ಕೆ ಇದಕ್ಕಿಂತ ಬೇರೆ ಕಾರಣವೇನಿದೆ? +ಆದರ್ಶ ಹಿಂದೂವೆಂಬುವನು ಹೊರಗಿನ ಯಾರ ಸಂಪರ್ಕವೂ ಇಲ್ಲವೆಂದು ತನ್ನ ಬಿಲದೊಳಗೆ ಹುದುಗಿಕೊಂಡಿರುವ ಒಂದು ಇಲಿಯಾಗಿರಬೇಕು. +ಸಮಾಜ ಶಾಸ್ತ್ರಜ್ಞರು ಹೇಳುವ ಸ್ವಸಮುದಾಯ ಪಜ್ಞೆ ಹಿಂದೂಗಳಲ್ಲಿ ಒಂದಿಷ್ಟೂ ಇಲ್ಲ. +ಪ್ರತಿಯೊಬ್ಬ ಹಿಂದೂವಿನಲ್ಲಿ ಇರುವ ಪ್ರಜ್ಞೆ ಒಂದೇ, ಅದು ತನ್ನ ಜಾತಿಯ ಪ್ರಜ್ಞೆ ಆದುದರಿಂದ, ಹಿಂದೂಗಳದೇ ಒಂದು ಸಮಾಜವಾಗಲಿ,ರಾಷ್ಟ್ರವಾಗಲಿ ಸಾಧ್ಯವಾಗಿಲ್ಲ. +ಭಾರತೀಯರು ಒಂದು ರಾಷ್ಟ್ರವಲ್ಲವೆಂಬ ಮಾತನ್ನು ಒಪ್ಪುವುದಕ್ಕೆ ಎಷ್ಟೋ ಜನರ ದೇಶಾಭಿಮಾನ ಅಡ್ಡ ಬರುತ್ತದೆ. +ಹೊರಗೆ ತೋರುವ ಈ ವೈವಿಧ್ಯದ ಒಡಲಲ್ಲಿ ಮೂಲಭೂತವಾದ ಒಂದು ಐಕ್ಯತೆಯಿದ್ದು ಹಿಂದೂಗಳೆಲ್ಲ ಒಂದಾಗಿದ್ದಾರೆಂದು ಅವರು ವಾದಿಸುತ್ತಾರೆ. +ಸಂಪ್ರದಾಯಗಳಲ್ಲಿ,ನಂಬಿಕೆಗಳಲ್ಲಿ, ವಿಚಾರಗಳಲ್ಲಿ ಸಮಗ್ರ ಭರತ ಖಂಡದಲ್ಲೆಲ್ಲ ಸಾಮ್ಯತೆ ಕಾಣುವುದೆಂದು ಹೇಳುತ್ತಾರೆ. +ಈ ಸಾಮ್ಯತೆ ಇರುವುದೇನೋ ನಿಜವೆ, ಆದರೆ ಇಷ್ಟರಿಂದಲೇ ಹಿಂದೂಗಳು ಒಂದು ಸಮಾಜವೆಂಬ ನಿರ್ಣಯ ಮಾಡುವುದು ಸರಿಯಲ್ಲ. +ಹೀಗೆ ನಿರ್ಣಯಿಸುವವರಿಗೆ ಸಮಾಜದ ಅರ್ಥವೇ ತಿಳಿಯದು. +ಒಂದು ಪ್ರದೇಶದಲ್ಲಿ ಹತ್ತಿರ ಹತ್ತಿರ ಇರುವುದರಿಂದಲೇ ಜನರು ಒಂದು ಸಮಾಜವಾಗಿ ಮಾರ್ಪಡುವುದಿಲ್ಲ. +ಅದರಂತೆ, ಉಳಿದವರಿಂದ ನೂರಾರು ಮೈಲು ದೂರ ಇರುವುದರಿಂದಲೇ ಸಮಾಜಕ್ಕೆ ಹೊರತಾಗುವುದಿಲ್ಲ. +ಎರಡನೆಯದಾಗಿ, ರೂಢಿ, ಸಂಪ್ರದಾಯ, ನಂಬಿಕೆ, ವಿಚಾರ ಮೊದಲಾದವುಗಳಲ್ಲಿ ಸಾಮ್ಯತೆಯೊಂದರಿಂದ ಸಮಾಜ ರೂಪುಗೊಳ್ಳುವುದಿಲ್ಲ. +ಇಟ್ಟಿಗೆಗಳಂತೆ ವಿಷಯಗಳನ್ನು ಒಬ್ಬರಿಂದೊಬ್ಬರಿಗೆ ಸಾಗಿಸಬಹುದು. +ಅದೇ ರೀತಿಯಾಗಿ ಒಂದು ಗುಂಪಿನ ಸಂಪ್ರದಾಯ, ವಿಚಾರ, ಶ್ರದ್ಧೆಗಳು ಕೂಡ ಇನ್ನೊಂದು ಗುಂಪಿಗೆ ಸಾಗಿ ಇವೆರಡರಲ್ಲಿ ಸಾಮ್ಯತೆ ತೋರಬಹುದು. +ಸಂಸ್ಕೃತಿ ಹೀಗೆ ಪ್ರಸಾರವಾಗುತ್ತದೆ. +ಅದರ ಪರಿಣಾಮವಾಗಿ ಸಾಮ್ಯತೆ ಕಂಡುಬರುತ್ತದೆ. +ಈ ಸಾಮ್ಯತೆಯ ಆಧಾರದಿಂದ ಆ ಪ್ರಾಚೀನ ಬುಡಕಟ್ಟುಗಳೆಲ್ಲ ಒಂದೇ ಸಮಾಜವಾಗಿದ್ದವೆಂದು ಯಾರೂ ಹೇಳಲಾರರು. +ಮನುಷ್ಯರು ಸಮಾಜವಾಗಿ ಸಂಘಟಿತವಾಗಬೇಕಾದರೆ ಸಮಾನಾಧಿಕಾರದ ಕೆಲವಂಶವನ್ನು ಅವರು ಪಡೆದಿರಬೇಕು. +ಸಮಾನ ವಸ್ತುಗಳನ್ನು ಅಥವಾ ವಿಷಯಗಳನ್ನು ಹೊಂದಿರುವುದು ಬೇರೆ, ಇತರರೊಡನೆ ಕೆಲವಂಶಗಳನ್ನು ಸಮಾನವಾಗಿ ಹಂಚಿಕೊಳ್ಳಲು ಸಾಧ್ಯವಾಗುವುದು ಪರಸ್ಪರ ಸಂಪರ್ಕದಿಂದಲೇ. +ಬೇರೆ ಮಾತುಗಳಲ್ಲಿ ಹೇಳುವುದಾದರೆ, ಸಮಾಜ ಮುಂದುವರಿಯುವುದು ಅದರ ಸದಸ್ಯರಲ್ಲಿರುವ ಪರಸ್ಪರ ನಿಕಟ ಸಂಪರ್ಕದ ಮೂಲಕವೇ ಎಂದಾಯಿತು. +ಆದರೆ ಸದ್ಯಶವಾಗಿರುವುದೊಂದೇ ಸಾಲದು. +ಉದಾಹರಣೆಗಾಗಿ ನೋಡಿ ಹಿಂದೂಗಳ ವಿವಿಧ ಜಾತಿಗಳು ಆಚರಿಸುವ ಹಬ್ಬಗಳು ಒಂದೇ, ಭಿನ್ನ ಭಿನ್ನವಾಗಿಲ್ಲ. +ಹೀಗೆ ಒಂದೇ ರೀತಿಯ ಹಬ್ಬಗಳನ್ನು ಆಚರಿಸುತ್ತಲಿದ್ದರೂ ಈ ಜಾತಿಗಳೆಲ್ಲ ಒಂದು ಪರಿಪೂರ್ಣ ಅಂಗಗಳಾಗಿಲ್ಲ, ಎಲ್ಲಾ ಬಿಡಿಬಿಡಿಯಾಗಿಯೆ ಉಳಿದಿವೆ. +ಸಮಾನವಾದ ಚಟುವಟಿಕೆಯೊಂದರಲ್ಲಿ ಭಾಗವಹಿಸುವಾಗ ಪ್ರತಿಯೊಬ್ಬನಲ್ಲಿಯೂ ಸಮಾನ ಭಾವನೆ ಇರುವುದು ಅವಶ್ಯಕ. +ಈ ಸರ್ವಸಮಾನವಾದ ಕಾರ್ಯದ ಯಶಸ್ಸು ನನ್ನ ಯಶಸ್ಸು ಇದರ ಸೋಲು ನನ್ನ ಸೋಲು ಎಂಬ ಭಾವನೆ ಪ್ರತಿಯೊಬ್ಬನಲ್ಲಿ ಇದ್ದರೆ ಮಾತ್ರ ಆ ಜನರೆಲ್ಲ ಒಂದು ಸಮಾಜವಾಗಿ ಸಂಘಟಿತರಾಗುತ್ತಾರೆ. +ಹೀಗೆ ಸಮಾನ ಭಾವನೆಯಿಂದ ಒಗ್ಗೂಡುವುದನ್ನು ಜಾತಿಪದ್ಧತಿ ಪ್ರತಿಬಂಧಿಸುತ್ತದೆ. +ಹೀಗಾಗಿ ಹಿಂದೂಗಳೆಲ್ಲ ಕೂಡಿ ಸಮಾಜವಾಗುವುದನ್ನು ಅದು ತಪ್ಪಿಸಿದೆ. +ಒಂದು ಗುಂಪು ಅಥವಾ ವರ್ಗ ತಾನು ವಿಶಿಷ್ಟವೆಂಬಂತೆ ಇತರರಿಂದ ಸಿಡಿದು ಪ್ರತ್ಯೇಕವಾಗಿ ನಿಲ್ಲುತ್ತದೆ ಎಂದೂ, ಇದು ಸಮಾಜ ವಿರೋಧಿ ಭಾವನೆಯೆಂದೂ ಹಿಂದೂಗಳು ಆಗಾಗ ದೂರುತ್ತಾರೆ. +ಆದರೆ ಈ ಸಮಾಜವಿರೋಧಿ ಮನೋವೃತ್ತಿಯು ಜಾತಿಪದ್ಧತಿಯ ಅತ್ಯಂತ ದುಷ್ಪವಾದ ಅನನ್ಯ ಲಕ್ಷಣವಾಗಿದೆಯೆಂಬ ಮಾತನ್ನು ಅವರು ಸುಲಭವಾಗಿ ಮರೆಯುತ್ತಾರೆ. +ಜಾಗತಿಕ ಯುದ್ಧಕಾಲದಲ್ಲಿ ಇಂಗ್ಲಿಷರ ವಿರುದ್ಧವಾಗಿ ಜರ್ಮನರು ದ್ವೇಷ ಗೀತೆಯನ್ನು ಹಾಡುತ್ತಿದ್ದಂತೆ ಇಲ್ಲಿ ಒಂದು ಜಾತಿ ಇನ್ನೊಂದು ಜಾತಿಯ ವಿರುದ್ಧವಾಗಿ ದ್ವೇಷ ಗೀತೆ ಹಾಡಿ ಸಂತೋಷ ಪಡುತ್ತದೆ. +ಹಿಂದೂಗಳ ಸಾಹಿತ್ಯದಲ್ಲಿ ಮನುಷ್ಯರ ವಂಶಾವಳಿಗಳು ತುಂಬಿವೆ. +ಈ ವಂಶಾವಳಿಗಳು ಒಂದು ಜಾತಿಗೆ ಉತ್ಕಷ್ಟ ಮೂಲವನ್ನೂ, ಇತರ ಜಾತಿಗಳಿಗೆ ಹೀನ ಮೂಲವನ್ನೂ ತಿಳಿಸುತ್ತವೆ. +ಈ ಬಗೆಯ ವಿರೋಧಿ ಮನೋವೃತ್ತಿ ಜಾತಿಗಳಿಗಷ್ಟೇ ಸೀಮಿತವಾಗಿಲ್ಲ. +ಈ ವಿಷ ಇನ್ನೂ ಆಳವಾಗಿ ಒಳಸೇರಿ ಉಪಜಾತಿಗಳಲ್ಲಿ ಕೂಡ ಪರಸ್ಪರ ಸಂಬಂಧ ಕೆಡುವಂತೆ ಮಾಡಿದೆ. +ನನ್ನ ಪ್ರಾಂತದಲ್ಲಿ ಗೋಲಕ ಬ್ರಾಹ್ಮಣರು, ದೇವರು ಬ್ರಾಹ್ಮಣರು, ಕರಾಡಾ ಬ್ರಾಹ್ಮಣರು, ಪಲಶೇ ಬ್ರಾಹ್ಮಣರು ಮತ್ತು ಚಿತ್ಪಾವನ ಬ್ರಾಹ್ಮಣರು ಇವರೆಲ್ಲ ತಾವು ಬ್ರಾಹ್ಮಣ ಜಾತಿಯ ಉಪವರ್ಗಗಳೆಂದು ಹೇಳಿಕೊಳ್ಳುತ್ತಾರೆ. +ಬ್ರಾಹ್ಮಣ ಜಾತಿಯ ಈ ಉಪವರ್ಗಗಳಲ್ಲಿ ಕಂಡುಬರುವ ಸಮಾಜ ವಿರೋಧಿ ಪ್ರವೃತ್ತಿಯು ಬ್ರಾಹ್ಮಣ ಮತ್ತು ಬ್ರಾಹ್ಮಣೇತರರ ನಡುವೆ ಇರುವ ದ್ವೇಷದಷ್ಟೇ ತೀವ್ರವಾಗಿದೆ. +ಇಂತಹ ತೀವ್ರವಾದ ಭೇದಭಾವವಿರುವುದರಿಂದ ಜಾತಿ ತನ್ನ ಹಿತಾಸಕ್ತಿಯನ್ನು ಕಾಪಾಡಿಕೊಳ್ಳುವ ಪ್ರಸಂಗ ಬಂದಾಗ ಸಮಾಜ ವಿರೋಧಿ ಪ್ರವೃತ್ತಿ ಕಂಡುಬರುತ್ತದೆ. +ಈ ಪ್ರವೃತ್ತಿ ಇತರ ಗುಂಪುಗಳ ನಡುವೆ ಸಂಪೂರ್ಣವಾಗಿ ವ್ಯವಹಾರವನ್ನು ಸ್ಥಗಿತಗೊಳಿಸುತ್ತದೆ. +ಇತರ ವರ್ಗಗಳನ್ನು ತನ್ನಿಂದ ದೂರವಿಡುವ ಪ್ರವೃತ್ತಿ ಜಾಗೃತವಾಗುತ್ತದೆ. +ತನಗೆ ದೊರಕಿದುದನ್ನು ಸಂರಕ್ಷಣೆ ಮಾಡುವುದೇ ಈ ಪ್ರವ್ರತ್ತಿಯ ಉದ್ದೇಶ. +ರಾಷ್ಟ್ರಗಳು ತಮ್ಮ ಪ್ರತ್ಯೇಕ ಅಸ್ತಿತ್ವಕ್ಕಾಗಿ ಹೇಗೆ ಹೋರಾಡುತ್ತವೆಯೋ ಹಾಗೆ ಪ್ರತಿಯೊಂದು ಜಾತಿ ತನ್ನ ಹಿತಾಸಕ್ತಿಗಳನ್ನು ರಕ್ಷಿಸಿಕೊಳ್ಳಲು ಸಮಾಜ ವಿರೋಧಿ ಮನೋವೃತ್ತಿಯನ್ನು ತಾಳುತ್ತದೆ. +ಬ್ರಾಹ್ಮಣೇತರರಿಂದ ತಮ್ಮ ಸ್ವಂತ ಹಿತಾಸಕ್ತಿಗೆ ಹಾನಿಯಾಗದಂತೆ ನೋಡಿಕೊಳ್ಳುವುದೇ ಬ್ರಾಹ್ಮಣರಿಗೆ ಮುಖ್ಯವಾಗುತ್ತದೆ. +ಅದರಂತೆ ಬ್ರಾಹ್ಮಣರಿಂದ ತಮ್ಮ ಹಿತಾಸಕ್ತಿ ಹಾಳಾಗಬಾರದು ಎಂಬುದೇ ಅ ಬ್ರಾಹ್ಮಣರಿಗೆ ಮುಖ್ಯವಾಗುತ್ತದೆ. +ಹೀಗಾಗಿರುವುದರಿಂದ ಹಿಂದೂಗಳು ಭಿನ್ನ ಭಿನ್ನ ಜಾತಿಗಳ ಒಂದು ಕಲಸುಮೇಲೋಗರವಾಗಿದ್ದಾರೆಂಬುದಷ್ಟೇ ಅಲ್ಲ, ಸ್ವಾರ್ಥಸಾಧನೆಯೇ ಪ್ರಾಮುಖ್ಯವೆಂದುಕೊಂಡು ಹಲವಾರು ಪರಸ್ಪರ ವಿರೋಧಿ ಗುಂಪುಗಳಾಗಿ ಹೋರಾಡುತ್ತಾ ನಿಂತಿದ್ದಾರೆ. +ಪ್ರತಿಯೊಂದು ಗುಂಪೂ ತನ್ನ ಸ್ವಾರ್ಥ ಸಾಧನೆಗಾಗಿ ಹೋರಾಡುತ್ತದೆ. +ಈಗಿನ ಇಂಗ್ಲೀಷ್‌ ಜನತೆಯ ಪೂರ್ವಜರು ಗುಲಾಬಿ ಯುದ್ಧಗಳಲ್ಲಿ ಹಾಗೂ ಕ್ರಾಮ್‌ವೆಲ್‌ ಯುದ್ಧದಲ್ಲಿ ಒಂದು ಪಕ್ಷವನ್ನೋ ಇನ್ನೊಂದು ಪಕ್ಷವನ್ನೋ ವಹಿಸಿ ಪರಸ್ಪರವಾಗಿ ಹೊಡೆದಾಡಿದರು. +ಆದರೆ ಒಂದು ಪಕ್ಷದವರ ವಂಶದವರು ಇನ್ನೊಂದು ಪಕ್ಷದವರ ವಂಶದವರನ್ನು ದ್ವೇಷಿಸುವುದಿಲ್ಲ. +ಸೇಡಿನ ಮನೋಭಾವನೆಯ ಪೂರ್ವಕಾಲದ ಜಗಳ ಮರೆತುಹೋಗಿದೆ. +ಆದರೆ ಭಾರತದಲ್ಲಿ ನಡೆದುದೇ ಬೇರೆ. +ಬ್ರಾಹ್ಮಣರು ಶಿವಾಜಿಗೆ ಅಪಮಾನ ಮಾಡಿದರೆಂಬುದನ್ನು ನೆನಪಿಟ್ಟುಕೊಂಡು ಈಗಿನ ಬ್ರಾಹ್ಮಣೇತರರು ಈಗಿನ ಬ್ರಾಹ್ಮಣರನ್ನು ಕ್ಷಮಿಸಲಾರರು. +ಹಿಂದೊಂದು ಕಾಲದಲ್ಲಿ ಕಾಯಸ್ಥರನ್ನು ಕುಖ್ಯಾತಿಗೆ ಈಡು ಮಾಡಿರುವುದರಿಂದ ಇಂದಿನ ಕಾಯಸ್ಥರು ಇಂದಿನ ಬ್ರಾಹ್ಮಣರನ್ನು ಕ್ಷಮಿಸಲಾರರು. +ಇದೆಲ್ಲ ಆದದ್ದು ಯಾತರಿಂದ? + ಖಂಡಿತವಾಗಿ ಜಾತಿಪದ್ಧತಿಯಿಂದಲೇ ಆಯಿತು. +ಜಾತಿಪ್ರಜ್ಞೆ ಬಲಿಷ್ಠವಾಗಿ ಉಳಿದು ಬಂದಿರುವುದರಿಂದ ಪೂರ್ವಕಾಲದ ಜಾತಿಕಲಹಗಳ ನೆನಪು ಅಚ್ಚಳಿಯದೆ ಉಳಿದು ಐಕ್ಯವನ್ನು ಪ್ರತಿಬಂಧಿಸಿದೆ. +ಸಮಾಜದಲ್ಲಿ ಗಣನೆಗೆ ತೆಗೆದುಕೊಂಡಿರದ ಅಥವಾ ಆಂಶಿಕವಾಗಿ ಮಾತ್ರ ಬಳಸಿಕೊಂಡಿರುವ ಪ್ರದೇಶದ ಬಗ್ಗೆ ಇತ್ತೀಚೆಗೆ ನಡೆದಿರುವ ಚರ್ಜೆಯಿಂದ ಭಾರತದಲ್ಲಿರುವ ಮೂಲ ನಿವಾಸಿ ಬುಡಕಟ್ಟುಗಳ ಬಗೆಗೆ ಜನರ ಗಮನ ಹರಿದಿದೆ. +ಈ ಜನರ ಸಂಖ್ಯೆ ಸುಮಾರು ೧೩ ದಶಲಕ್ಷವಾಗಿದೆ. +ಹೊಸ ಸಂವಿಧಾನದಲ್ಲಿ ಈ ಜನರನ್ನು ಸೇರಿಸದೆ ಬಿಟ್ಟಿರುವುದು ಸರಿಯೋ ತಪ್ಪೋ, ಆ ಮಾತು ಹಾಗಿರಲಿ. +ಸಹಸ್ರಾರು ವರ್ಷಗಳ ನಾಗರಿಕತೆಯುಳ್ಳದ್ದೆಂದು ಜಂಬ ಕೊಚ್ಚಿಕೊಳ್ಳುವ ದೇಶದಲ್ಲಿಯೇ ಈ ಆದಿವಾಸಿ ಬುಡಕಟ್ಟುಗಳ ಜನರು ತಮ್ಮ ಪ್ರಾಚೀನ ಪದ್ಧತಿಯ ಅನಾಗರಿಕ ಅವಸ್ಥೆಯಲ್ಲಿ ಬದುಕುತ್ತಾ ಬಂದಿದ್ದಾರೆಂಬುದು ವಸ್ತುಸ್ಥಿತಿ. +ಇವರು ಅನಾಗರಿಕರಾಗಿ ಉಳಿದಿರುವುದಷ್ಟೇ ಅಲ್ಲ. +ಇವರಲ್ಲಿ ಕೆಲವರು ಪರಂಪರಾಗತವಾಗಿ ನಡೆಸುವ ವ್ಯವಹಾರಗಳ ಮೂಲಕ ಅಪರಾಧಿಗಳೆಂದೂ ಪರಿಗಣಿತರಾಗಿದ್ದಾರೆ. +ನಾಗರಿಕ ದೇಶದಲ್ಲಿ ೧೩ ದಶಲಕ್ಷ ಜನರು ಅನಾಗರಿಕರಾಗಿ, ವಂಶಪರಂಪರೆಯ ಅಪರಾಧಿಗಳಾಗಿ ಬದುಕುತ್ತಿದ್ದಾರೆಂದರೆ ಏನರ್ಥ? +ಇದನ್ನು ಕಂಡು ಹಿಂದೂಗಳಿಗೆ ಎಂದೂ ನಾಚಿಕೆಯಾಗಲಿಲ್ಲ. +ಇಂತಹ ವಿಚಿತ್ರ ಘಟನೆ ಬೇರೆಲ್ಲಿಯೂ ಕಾಣಲಾಗದು. +ಆದರೆ ಈ ಲಜ್ಜಾಸ್ಪದವಾದ ವಸ್ತುಸ್ಥಿತಿಗೆ ಕಾರಣವೇನು? +ಈ ಆದಿವಾಸಿ ಬುಡಕಟ್ಟುಗಳ ಜನರಿಗೆ ನಾಗರಿಕತೆಯನ್ನು ಒದಗಿಸಿ, ಗೌರವಾಸ್ಪದವಾದ ರೀತಿಯಲ್ಲಿ ಅವರು ಬದುಕುವಂತೆ ಯಾಕೆ ಪ್ರಯತ್ನ ನಡೆಯಲಿಲ್ಲ? +ಈ ಜನರ ಅನಾಗರಿಕ ಅವಸ್ಥೆಗೆ ಅವರ ಅನುವಂಶಿಕ ಮೂರ್ಲತನವೇ ಕಾರಣವೆಂದು ಬಹುಶಃ ಹಿಂದೂಗಳು ಹೇಳಬಹುದು. +ಈ ದುರ್ದೈವಿಗಳಿಗೆ ನಾಗರಿಕತೆಯನ್ನು ಒದಗಿಸಬೇಕಾಗಿತ್ತು. +ಇದನ್ನೆಲ್ಲ ತಾವೇ ಮಾಡಬೇಕಾಗಿದ್ದು, ಮಾಡದೇ ಹೋದೆವು ಎಂದು ಹಿಂದೂಗಳು ಬಹುಶಃ ಒಪ್ಪಿಕೊಳ್ಳಲಿಕ್ಕಿಲ್ಲ. +ಈಗ ಕ್ರೈಸ್ತಧರ್ಮ ಪ್ರಚಾರಕರು ಈ ಜನರಿಗಾಗಿ ಏನು ಮಾಡುತ್ತಿರುವರೋ ಅದನ್ನು ಒಬ್ಬ ಹಿಂದೂವೂ ಮಾಡಬಯಸುವನೆಂದು ಭಾವಿಸೋಣ. +ಅವನಿಂದ ಹಾಗೆ ಮಾಡುವುದು ಸಾಧ್ಯವೇ? +ಅಸಾಧ್ಯವೆಂದೇ ನಾನು ಹೇಳುತ್ತೇನೆ. +ಪ್ರಾಚೀನ ಪದ್ಧತಿಯ ಕಾಡು ಜನರನ್ನು ನಾಗರಿಕರಾಗಿ ಪರಿವರ್ತಿಸಬೇಕೆಂದರೆ ಏನು ಮಾಡಬೇಕು? +ಅವರನ್ನು ನಿಮ್ಮವರೆಂದು ಒಪ್ಪಿ ಒಳಸೇರಿಸಿ ಕೊಳ್ಳಬೇಕು. +ಅವರ ಮಧ್ಯದಲ್ಲಿ ಬದುಕಬೇಕು. +ಭ್ರಾತೃತ್ವ ಭಾವನೆಯನ್ನು ಬೆಳಸಬೇಕು. +ಸಂಕ್ಷಿಪ್ತವಾಗಿ ಹೇಳುವುದಾದರೆ, ಅವರನ್ನು ಪ್ರೀತಿಸಬೇಕು. +ಹಿಂದೂವಿಗೆ ಇದು ಹೇಗೆ ಸಾಧ್ಯ ? +ತನ್ನ ಜಾತಿಯನ್ನು ಕಾಪಾಡಿಕೊಳ್ಳುವುದಕ್ಕೆ ಅವನು ಇಡೀ ಜೀವಮಾನವನ್ನು ಮುಡಿಪಾಗಿಡುತ್ತಾನೆ. +ಶತಾಯಗತಾಯ ರಕ್ಷಿಸುಕೊಳ್ಳಲೇ ಬೇಕಾದ ಅನರ್ಫ್ಯ ಆಸ್ತಿಯಾಗಿದೆ ಅವನ ಜಾತಿ. +ವೈದಿಕ ಕಾಲದಲ್ಲಿ ಅನಾರ್ಯರೆನಿಸಿಕೊಂಡವರ ವಂಶದಲ್ಲಿ ಹುಟ್ಟಿ ಬಂದಿರುವ ಈ ಅನಾಗರಿಕರೊಡನೆ ಸಂಪರ್ಕ ಬೆಳೆಸಿದರೆ ತನ್ನ ಜಾತಿ ಕೆಟ್ಟುಹೋದೀತೆಂದು ಅವನು ದೂರವೇ ಉಳಿಯುತ್ತಾನೆ. +ಪತಿತರನ್ನು ಉದ್ಧರಿಸುವ ಮಾನವೀಯ ಕರ್ತವ್ಯಕ್ಕೆ ಹಿಂದೂವೂ ಸಿದ್ಧನಾಗಲಾರನೆಂದಲ್ಲ. +ಆದರೆ ತನ್ನ ಜಾತಿ ರಕ್ಷಣೆಯನ್ನು ಮೀರಿ ಅವನ ಮಾನವೀಯ ಕರ್ತವ್ಯ ಬುದ್ಧಿ ಕೆಲಸ ಮಾಡಲಾರದು. +ಈ ಆದಿವಾಸಿಗಳು ಅನಾಗರಿಕ ಸ್ಥಿತಿಯಲ್ಲಿ ಉಳಿಯಲು ಹಿಂದೂವಿನ ಜಾತಿಯೊಂದೇ ಕಾರಣ. +ತಮ್ಮ ನಾಗರಿಕತೆಯ ಮಧ್ಯದಲ್ಲಿ ಇವರನ್ನು ಅನಾಗರಿಕ ಸ್ಥಿತಿಯಲ್ಲಿಡಲು ಹಿಂದೂಗಳಿಗೆ ನಾಚಿಕೆಯಾಗಲೀ, ಪಶ್ಚಾತ್ತಾಪವಾಗಲೀ ಇಲ್ಲವೇ ಇಲ್ಲ. +ಹಿಂದೂಗಳಿಗೆ ಈ ಆದಿವಾಸಿಗಳ ಅನಾಗರಿಕ ಜನಸಮುದಾಯ ಯಾವತ್ತೂ ಅಪಾಯಕಾರಿ ಎಂದು ಕಂಡುಬಂದಿಲ್ಲ. +ಅವರನ್ನು ತಮ್ಮೊಳಗೆ ಸೇರಿಸಿಕೊಂಡ ಪಕ್ಷದಲ್ಲಿ ಹಿರದೂಗಳ ಶತ್ರುಸಂಖ್ಯೆ ಇನ್ನಷ್ಟು ಹೆಚ್ಚುತ್ತದೆ. +ಹಾಗೇನಾದರೂ ನಡೆದುಹೋದರೆ ಆ ದುರ್ದೈವಕ್ಕೆ ಹಿಂದೂವೇ ಹೊಣೆ, ಅವನ ಜಾತಿ ಪದ್ಧತಿಯೇ ಹೊಣೆ. +ಅನಾಗರಿಕ ಬುಡಕಟ್ಟಿನವರನ್ನು ಉದ್ಧರಿಸುವ ಮಾನವೀಯ ಕಾರ್ಯಕ್ಕೆ ಹಿಂದೂಗಳು ಪ್ರಯತ್ನಿಸಲಿಲ್ಲವೆಂಬುದಷ್ಟೇ ಅಲ್ಲ. +ಹಿಂದೂಗಳಲ್ಲಿ ಮೇಲು ಜಾತಿಯೆನಿಸಿಕೊಂಡವರು ತಮ್ಮಲ್ಲಿಯೇ ಇರುವ ಕೆಳಜಾತಿಯವನನ್ನು ಸಾಂಸ್ಕೃತಿಕವಾಗಿ ತಮ್ಮ ಮಟ್ಟಕ್ಕೆ ಏರಗೊಡಲಿಲ್ಲ. +ನಾನು ಇದಕ್ಕೆ ಎರಡು ನಿದರ್ಶನಗಳನ್ನು ಕೊಡುತ್ತೇನೆ. +ಒಂದು ಸೋನಾರರದ್ದು, ಇನ್ನೊಂದು ಪಠರೇ ಪ್ರಭುಗಳದ್ದು. +ಇವೆರಡು ಮಹಾರಾಷ್ಟ್ರದಲ್ಲಿ ಸುಪರಿಚಿತವಾದ ಎರಡು ಜಾತಿಗಳು. +ತಮ್ಮ ದರ್ಜೆಯನ್ನು ಎತ್ತರಿಸಿಕೊಳ್ಳಬೇಕೆಂದು ಇತರ ಜಾತಿಗಳಂತೆ ಈ ಎರಡು ಜಾತಿಗಳೂ ಅದೇ ಪ್ರಯತ್ನದಲ್ಲಿ ಬ್ರಾಹ್ಮಣರ ಕೆಲ ಪದ್ಧತಿಗಳನ್ನು ಒಂದೊಮ್ಮೆ ಆಚರಿಸಲು ಪ್ರಯತ್ನಿಸುತ್ತಿದ್ದವು. +ಸೋನಾರರು ತಮ್ಮನ್ನು ದೈವಜ್ಞ ಬ್ರಾಹ್ಮಣರೆಂದು ಕರೆದುಕೊಂಡು ಬ್ರಾಹ್ಮಣರಂತೆನೆರಿಗೆ ಹಾಕಿ ಧೋತ್ರ ಉಡತೊಡಗಿದರು. +ಹಾಗೂ ನಮಸ್ಕಾರ ಎಂದು ಒಬ್ಬರನ್ನೊಬ್ಬರು ಗೌರವಿಸತೊಡಗಿದರು. +ನೆರಿಗೆಯ ಧೋತ್ರ ಹಾಗೂ ನಮಸ್ಕಾರವೆಂಬ ಮಾತು ಎರಡೂ ಬ್ರಾಹ್ಮಣರಿಗೆ ವಿಶಿಷ್ಟವಾದವು. +ಸೋನಾರರು ಹೀಗೆ ತಮ್ಮನ್ನು ಅನುಕರಿಸುವುದು ಅಥವಾ ಸರಿಗಟ್ಟುವುದು ಬ್ರಾಹ್ಮಣರಿಗೆ ಸೇರಲಿಲ್ಲ. +ಪೇಶ್ವೆಯವರ ಆಡಳಿತದಲ್ಲಿ ಬ್ರಾಹ್ಮಣರೇ ಸೋನಾರರ ಈ ಪ್ರಯತ್ನವನ್ನು ಬಗ್ಗು ಬಡಿದುಬಿಟ್ಟರು. +ಮುಂಬಯಿಯಲ್ಲಿದ್ದ ಈಸ್ಟ್‌ ಇಂಡಿಯಾ ಕಂಪೆನಿಯ ಆಡಳಿತಾಧಿಕಾರಿಗಳಿಂದ ಕೂಡ ಮುಂಬಯಿ ನಿವಾಸಿಗಳಾದ ಸೋನಾರರಿಗೆ ಅಂತಹದೊಂದು ಪ್ರತಿಬಂಧಕಾಜ್ಞೆಯನ್ನು ಹೊರಡಿಸಿದರು. +ಒಂದು ಕಾಲದಲ್ಲಿ ಪಠರೇ ಪ್ರಭುಗಳ ಜಾತಿಯಲ್ಲಿ ಪುನರ್ವಿವಾಹ ಒಂದು ಸಮ್ಮತ ಸಂಪ್ರದಾಯವಾಗಿತ್ತು. +ಬ್ರಾಹ್ಮಣರಲ್ಲಿ ಇದು ಇಲ್ಲವೆಂಬುದನ್ನು ಕಂಡು ಕೆಲವರು ಇದನ್ನು ಕಲಂಕಪ್ರಾಯವೆಂದು ಭಾವಿಸಿದರೆ. +ತಮ್ಮ ಜಾತಿಯ ದರ್ಜೆಯನ್ನು ಉತ್ತಮಪಡಿಸಿ ಕೊಳ್ಳುವ ದೃಷ್ಟಿಯಿಂದ ಪಠಾರೇ ಪ್ರಭುಗಳಲ್ಲಿ ಕೆಲವರು ಪುನರ್ವಿವಾಹ ಪದ್ದತಿಯನ್ನು ತಡೆಯಲು ಪ್ರಯತ್ನಿಸಿದರು. +ಇದರಿಂದ ಪುನರ್ವಿವಾಹಕ್ಕೆ ಪರ ಹಾಗೂ ವಿರೋಧಿಗಳಾದ ಎರಡು ಬಣಗಳುಂಟಾದವು. +ಪೇಶ್ವೆಗಳು ಪರಂಪರಾವಾದಿಗಳ ಪಕ್ಷವನ್ನೇ ಎತ್ತಿಹಿಡಿದರು. +ಹೀಗೆ ಬ್ರಾಹ್ಮಣರನ್ನು ಅನುಕರಿಸ ಹೊರಟವರನ್ನು ನಿರ್ಬಂಧಿಸಿದರು. +ಮುಸಲ್ಮಾನರು ಖಡ್ಗ ಬಲದಿಂದ ತಮ್ಮ ಧರ್ಮವನ್ನು ವಿಸ್ತರಿಸಿಕೊಂಡರೆಂದು ಹಿಂದೂಗಳು ಟೀಕಿಸುವುದುಂಟು. +ಕ್ರಿಸ್ತಮತವನ್ನು ಅವರು ಹೀಗೆಯೇ ಹಳಿಯುತ್ತಾರೆ. +ಮಹಮ್ಮದೀಯರೇ ಆಗಲಿ,ಕ್ರೈಸ್ತರೇ ಆಗಲಿ ಆತ್ಮೋದ್ಧಾರಕ್ಕೆ ಅವಶ್ಯಕವಾದುದೆಂದು ತಾವು ಯಾವುದನ್ನು ನಂಬಿದ್ದರೋ ಅದನ್ನು ಒಪ್ಪದೇ ಇರುವವರ ಗಂಟಲಲ್ಲಿ ತುರುಕಿದಾಗ ಹಿಂದೂಗಳು ಏನು ಮಾಡಿದರು? +ತಮ್ಮ ಜ್ಞಾನವನ್ನು ಇತರರಿಗೆ ಕೊಡಲೊಪ್ಪಲಿಲ್ಲ. +ಇತರರನ್ನು ಅಜ್ಜಾನದಲ್ಲಿಯೇ ಇರಿಸಲು ಪ್ರಯತ್ನಿಸಿದರು. +ತಮ್ಮ ಬೌದ್ಧಿಕಹಾಗೂ ಸಾಮಾಜಿಕ ಸಂಪತ್ತನ್ನು ಪಡೆಯಲು ಸಿದ್ಧರಾದ ಇತರರೊಡನೆ ಹಂಚಿಕೊಳ್ಳಲು ಒಪ್ಪಲಿಲ್ಲ. +ಹೀಗಿರುವಾಗ ಈ ಮೂವರಲ್ಲಿ ನಮಗೆ ಹೆಚ್ಚು ಗೌರವಾಸ್ಪದರು ಯಾರು? +ಅನುಮಾನವಿಲ್ಲದೆ ನಾನು ಹೇಳುತ್ತೇನೆ - ಮಹಮ್ಮದೀಯನು ಕ್ರೂರನಾಗಿದ್ದರೆ, ಹಿಂದೂವು ನೀಚನಾಗಿದ್ದಾನೆ. +ನೀಚತನ ಕ್ರೌರ್ಯಕ್ಕಿಂತ ಕೆಟ್ಟದ್ದು. +ಹಿಂದೂ ಧರ್ಮವು ಪ್ರಚಾರಕ ಧರ್ಮವಾಗಿತ್ತೇ ಅಥವಾ ಇಲ್ಲವೆ ಎಂಬುದು ವಾದಗಸ್ತ ವಿಷಯ. +ಅದು ಎಂದೂ ಪ್ರಚಾರಕ ಧರ್ಮವಾಗಿರಲಿಲ್ಲವೆಂದು ಕೆಲವರೂ, ಪ್ರಚಾರಕವಾಗಿತ್ತೆಂದು ಇತರರೂ ವಾದಿಸುತ್ತಾರೆ. +ಒಂದು ಕಾಲಕ್ಕೆ ಹಿಂದೂ ಧರ್ಮ ಪ್ರಚಾರಕವಾಗಿತ್ತೆಂದು ಒಪ್ಪಬೇಕಾಗುತ್ತದೆ. +ಪ್ರಚಾರಕ ಧರ್ಮವಾಗಿಲ್ಲದಿದ್ದರೆ ಅದು ಭಾರತದಲ್ಲೆಲ್ಲ ಹಬ್ಬುತ್ತಿರಲಿಲ್ಲ. +ಈಗಿನ ಕಾಲದಲ್ಲಿ ಅದು ಪ್ರಚಾರಕ ಧರ್ಮವಾಗಿಲ್ಲ ಎಂದುದೂ ಅಷ್ಟೇ ಸತ್ಯವಾದ ವಿಷಯ. +ಆದುದರಿಂದ ಹಿಂದೂ ಧರ್ಮ ಪ್ರಚಾರಕವಾಗಿತ್ತೆ ಇಲ್ಲವೇ ಎಂಬುದಕ್ಕಿಂತ ನಿಜವಾದ ಪ್ರಶ್ನೆಯೆಂದರೆ ಹಿಂದೂ ಧರ್ಮ ಪ್ರಚಾರಕವಾಗಿ ಏಕೆ ಮುಂದುವರಿಯಲಿಲ್ಲ ಎಂಬುದಾಗಿದೆ. +ಹಿಂದೂಗಳಲ್ಲಿ ಜಾತಿಪದ್ಧತಿ ಬೆಳೆದುದರಿಂದ ಹಿಂದೂ ಧರ್ಮದ ಪ್ರಚಾರ ನಿಂತುಹೋಯಿತು. +ಮತಾಂತರವನ್ನು ಜಾತಿ ಒಪ್ಪುವುದಿಲ್ಲ. +ಮತಾಂತರದಲ್ಲಿ ನಂಬಿಕೆಗಳನ್ನೂ ತತ್ವಗಳನ್ನೂ ಬೋಧಿಸುವುದಷ್ಟೇ ಸಮಸ್ಯೆಯಲ್ಲ. +ಧರ್ಮಾಂತರಗೊಂಡು ಒಳಸೇರುವ ವ್ಯಕ್ತಿಗೆ ಜಾತಿಯ ಸಾಮಾಜಿಕ ಜೀವನದಲ್ಲಿ ಸ್ಥಾನ ನೀಡಬೇಕಲ್ಲವೆ? +ಇದರಿಂದ ತುಂಬ ಕಠಿಣವಾದ ಸಮಸ್ಯೆ ಹುಟ್ಟಕೊಳ್ಳುತ್ತದೆ. +ಈ ಹೊಸಬನನ್ನು ಯಾವ ಜಾತಿಗೆ ಸೇರಿಸಿಕೊಳ್ಳಬೇಕು? +ಪರಕೀಯರನ್ನು ಮತಾಂತರಗೊಳಿಸಿ ತಮ್ಮೊಳಗೆ ಸೇರಿಸಿಕೊಳ್ಳಬೇಕೆಂಬ ಹಿಂದೂಗಳಿಗೆ ಇದು ತಲೆ ತಿನ್ನುವ ಸಮಸ್ಯೆಯೇ ಸರಿ. +ಕ್ಲಬ್ಬಿನ ಸದಸ್ಯತ್ವದಂತೆ ಜಾತಿಯ ಸದಸ್ಯತ್ವವನ್ನು ಯಾರಿಗೆ ಬೇಕಾದರೂ ಕೊಡುವಂತಹುದಲ್ಲ. +ಜಾತಿಯಲ್ಲಿ ಹುಟ್ಟಿದವರಿಗೆ ಮಾತ್ರ ಜಾತಿಯ ಸದಸ್ಯತ್ವ ಸಿಕ್ಕುತ್ತದೆ. +ಜಾತಿಗಳು ಸ್ವಾಯತ್ತಾಧಿಕಾರಿಗಳುಳ್ಳ ಸಂಸ್ಥೆಗಳು. +ಹೊಸಬರನ್ನು ಸೇರಿಸಿಕೊಳ್ಳಿ ಎಂದು ಒತ್ತಾಯ ಮಾಡುವ ಅಧಿಕಾರ ಯಾರಿಗೂ ಇಲ್ಲ. +ಹಿಂದೂ ಸಮಾಜ ಜಾತಿಗಳ ಒಂದು ಸಮುದಾಯವಾಗಿಬಹುದು. + ಪ್ರತಿಯೊಂದು ಜಾತಿಯೂ ಸ್ವಾಯತ್ತ ಸಂಸ್ಥೆಯಂತೆ ಇರುವುದರಿಂದ ಮತಾಂತರಹೊಂದಿ ಬರಬೇಕೆನ್ನುವವರಿಗೆ ಅದರಲ್ಲಿ ಸ್ಥಾನವಿಲ್ಲ. +ಹಿಂದುಗಳು ತಮ್ಮ ಧರ್ಮವನ್ನು ವಿಸ್ತರಿಸುವುದಕ್ಕೂ ಇತರ ಧರ್ಮದವರನ್ನು ತಮ್ಮಲ್ಲಿ ಸೇರಿಸಿಕೊಳ್ಳುವುದಕ್ಕೂ ಅವರ ಜಾತಿಯೇ ಅಡ್ಡ ಬಂದಿದೆ. +ಜಾತಿಗಳು ಇರುವವರೆಗೆ ಹಿಂದೂಧರ್ಮ ಪ್ರಚಾರಕ ಧರ್ಮವಾಗಲಾರದು ಮತ್ತು “ಶುದ್ಧಿ' ಎನ್ನುವುದು ಕೇವಲ ಅವಿವೇಕದ ಹಾಗೂ ನಿರರ್ಥಕ ಪರಿಕಲ್ಪನೆಯಾಗುತ್ತದೆ. +ಶುದ್ದಿ ಎನ್ನುವುದು ಹಿಂದೂ ಸಮಾಜದ ಸಂಘಟನೆಗೆ ವಿರುದ್ಧವಾಗಿ ಕೆಲಸ ಮಾಡುತ್ತದೆ. +ಮಹಮ್ಮದೀಯರಿಂದ ಹಾಗೂ ಸಿಖ್ಬರಿಂದ ಹಿಂದೂವು ಭಿನ್ನವಾಗಿರುವುದು ತನ್ನ ಅಂಜುಗುಳಿತನ ಅಥವಾ ಹೇಡಿತನದಿಂದ, ಅವನ ಮನಸ್ಸಿನಿಂದ ಈ ಭಾವನೆಯನ್ನು ನಿವಾರಿಸುವುದೇ ಸಂಘಟನೆಯ ಮುಖ್ಯತತ್ವವಾಗಿದೆ. +ಹಿಂದೂವು ಆತ್ಮರಕ್ಷಣೆಗಾಗಿ ಠಕ್ಕುತನವನ್ನೂ, ದ್ರೋಹವನ್ನೂ ಮಾಡುತ್ತಾನೆ. +ಸಿಖ್ವನಿಗಾಗಲಿ ಮಹಮ್ಮದೀಯನಿಗಾಗಲಿ ನಿರ್ಭಯತೆಯನ್ನು ತಂದುಕೊಟ್ಟ ಬಲ ಯಾವುದು? +ಶಾರೀರಕ ಬಲ, ಆಹಾರ,ವ್ಯಾಯಾಮ ಮುಂತಾದವುಗಳಿಂದ ಅವರಿಗೆ ಆ ಅಧಿಕ ಧೈರ್ಯ ಬಂದಿರಲಾರದೆಂಬುದು ನಿಶ್ಚಿತ. +ಈ ವಿಷಯಗಳಲ್ಲಿ ಹಿಂದೂವಿಗೂ ಅವರಿಗೂ ಭೇದವಿಲ್ಲ. +ಈ ಬಲ ಬಂದಿರುವುದು ಅವರ ಸಹಧರ್ಮಿಗಳ ಬೆಂಬಲ ವಿಶ್ವಾಸದಿಂದ. +ಒಬ್ಬ ಸಿಖ್ಹನು ಅಪಾಯಕ್ಕೆ ಸಿಲುಕಿದರೆ ಎಲ್ಲ ಸಿಖ್ಹರೂ ತನ್ನ ಬೆಂಬಲಕ್ಕೆ ಬರುವರೆಂಬ ನಂಬಿಕೆ ಅವನಿಗಿದೆ. +ಒಬ್ಬ ಮಹಮ್ಮದೀಯನು ದಾಳಿಗೆ ಒಳಗಾದಾಗ ಎಲ್ಲ ಮಹಮ್ಮದೀಯರು ತನ್ನನ್ನು ಪಾರುಮಾಡಲು ಬರುವರೆಂಬ ವಿಶ್ವಾಸ ಅವನಿಗಿದೆ. +ಹಿಂದೂವಿಗೆ ಇಂತಹ ಯಾವ ಬಲವೂ ಇಲ್ಲ. +ತನ್ನವರು ನೆರವಿಗೆ ಬಂದಾರೆಂಬ ನಂಬಿಕೆ ಹಿಂದೂವಿಗೆ ಎಲ್ಲಿದೆ? +ಹೀಗೆ ಹಿಂದೂವು ಏಕಾಕಿತನದಿಂದ ಶಕ್ತಿಹೀನನಾಗಿ ಅಂಜು ಬುರುಕನಾಗುತ್ತಾನೆ. +ಹೊಡೆದಾಟವಾದರೆ ಎದುರಾಳಿಗೆ ಶರಣಾಗುತ್ತಾನೆ. +ಇಲ್ಲವೆ ಓಡಿ ಹೋಗುತ್ತಾನೆ. +ಸಿಖ್ಬ್ಹನಾಗಲಿ, ಮಹಮ್ಮದೀಯನಾಗಲಿ ಇಂತಹ ಪ್ರಸಂಗ ಬಂದರೆ ನಿರ್ಭಯನಾಗಿ ಹೋರಾಡುತ್ತಾನೆ. +ಯಾಕೆಂದರೆ ತನ್ನ ಹಿಂದೆ ಅನೇಕರ ಬಲವಿದೆಯೆಂದು ಅವನು ಅರಿತಿರುತ್ತಾನೆ. +ಹಿಂದೂವಿಗೆ ತನ್ನವರು ಬೆಂಬಲವಾದಾರೆಂಬ ನಂಬಿಕೆಯೇ ಇಲ್ಲ. +ಸಿಖ್ಹನಿಗೆ ಹಾಗೂ ಮಹಮ್ಮದೀಯನಿಗೆ ಆ ನಂಬಿಕೆ ಏಕೆ ಉಂಟು. + ಇದಕ್ಕೆ ಕಾರಣ ಅವರು ಇಟ್ಟುಕೊಂಡಿರುವ ಸಾಮಾಜಿಕ ಸಂಬಂಧದ ರೀತಿಗಳು. +ಸಿಖಬ್ಬಿರಾಗಲಿ, ಮಹಮ್ಮದೀಯರಾಗಲಿ ತಮ್ಮ ತಮ್ಮಲ್ಲಿ ಭಾತೃತ್ವ ಭಾವನೆಯಿಂದ ನಡೆದುಕೊಳ್ಳುತ್ತಾರೆ. +ಹಿಂದೂಗಳು ಪರಸ್ಪರವಾಗಿ ಆ ಭಾವನೆಯಿಟ್ಟುಕೊಂಡು ಬಾಳುವುದಿಲ್ಲ. +ಒಬ್ಬ ಹಿಂದೂ ಇನ್ನೊಬ್ಬ ಹಿಂದೂವನ್ನು ಭಾಯಿ ಎಂದು ಪರಿಗಣಿಸುವುದಿಲ್ಲ. +ಸಿಖ್ಬರು ಭಾವಿಸುವುದು ತಮ್ಮಲ್ಲಿರುವ ಸೋದರತೆಯ ವಿಶ್ವಾಸದಿಂದ. +ಹಿಂದೂಗಳಲ್ಲಿ ಈ ಭಾವನೆ ಬಾರದೆ ಇರುವುದಕ್ಕೆ ಅವರ ಜಾತಿ ಕಾರಣವಾಗಿದೆ. +ಜಾತಿ ಇರುವವರೆಗೆ ಸಂಘಟನೆ ಸಾಧ್ಯವಿಲ್ಲ. +ಸಂಘಟನೆಯಾಗುವವರೆಗೆ ಹಿಂದೂ ಕೈಸಾಗದವನಾಗಿ ಕುಗ್ಗಿಯೇ ನಡೆಯಬೇಕಾಗುವುದು. +ಹಿಂದೂಗಳು ತಾವು ತುಂಬ ತಾಳ್ಮೆಯುಳ್ಳವರೆಂದು ಹೇಳಿಕೊಳ್ಳುತ್ತಾರೆ. +ಇದು ನಿಜವಲ್ಲವೆಂದು ನಾನು ತಿಳಿಯುತ್ತೇನೆ. +ಅನೇಕ ಪ್ರಸಂಗಗಲ್ಲಿ ಅವರು ತಾಳ್ವೆಗೆಡಬಲ್ಲರು. +ಕೆಲ ಪ್ರಸಂಗಗಳಲ್ಲಿ ಅವರು ತಾಳ್ಮೆ ತೋರಿದರೆ ಆಗ ವಿರೋಧಿಸುವ ಬಲ ಅವರಲ್ಲಿ ಇರುವುದಿಲ್ಲ. +ಅಥವಾ ವಿರೋಧಿಸುವುದಾದರೂ ಏನೆಂದು ಉಪೇಕ್ಷೆಯಿರಬೇಕು. +ಈ ಉಪೇಕ್ಷೆ ಹಿಂದೂಗಳ ಸ್ವಭಾವದಲ್ಲಿ ಒಂದಂಶವಾಗಿ ಹೋಗಿದೆ. +ಎಷ್ಟರ ಮಟ್ಟಗೆ ಎಂದರೆ ಅಪಮಾನವಾಗಲಿ, ಅನ್ಯಾಯವೇ ಆಗಲಿ ಅದನ್ನು ಕೂಡ ಅವರು ತೆಪ್ಪಗೆ ನುಂಗಿಕೊಳ್ಳುತ್ತಾರೆ. +ಹಿಂದೂಗಳು, ಮಾರಿಸ್‌ ಕವಿಯ ಕಾವ್ಯದ ಭಾವದಂತೆ,“ದೊಡ್ಡವರು ಚಿಕ್ಕವರನ್ನು ಕೆಳಗಟ್ಟುವರು. +ಬಲಿಷ್ಠರು ಬಲಹೀನರನ್ನು ಸದೆಬಡಿಯುವರು. +ಕೂರರಿಗೆ ನಿರ್ಭಿತಿ, ದಯಾವಂತರಿಗೆ ದೈರ್ಯಹೀನತೆ. +ಬುದ್ಧಿವಂತರಿಗೆ ಇದೆಲ್ಲದರ ಉಪ್ಪೇಕೆ. +ಯಾರಿಗೆ ಏನಾದರೇನು. +ನಮಗೇಕೆ ಅದರ ಗೋಜು ಎಂಬ ಉಪೇಕ್ಷಾ ಮನೋವೃತ್ತಿ ಒಂದು ಮಹಾರೋಗ. +ಹಿಂದೂಗಳಿಗೆ ಈ ರೋಗ ಏಕೆ ಬಡಿದುಕೊಂಡಿತು? +ಸಂಘಟನೆಗೂ ಸಹಕಾರಕ್ಕೂ ಬಾಧಕವಾಗಿ ನಿಂತ ಜಾತೀಯತೆಯೇ ಈ ರೋಗದ ಮೂಲ. +ಸಾಮೂಹಿಕ ಸಂಪ್ರದಾಯ, ಅಧಿಕಾರ ಮತ್ತು ಹಿತಗಳನ್ನು ಮೀರಿ ತನ್ನ ಸ್ವಂತ ಅಭಿಪ್ರಾಯ ಮತ್ತು ನಂಬಿಕೆಗಳನ್ನು ಸ್ವತಂತ್ರವಾಗಿ ಒಬ್ಬ ವ್ಯಕ್ತಿ ಹೇಳತೊಡಗುವುದೇ ಎಲ್ಲಾ ಬಗೆಯ ಸುಧಾರಣೆಗಳ ಆರಂಭ. +ಈ ಸುಧಾರಣೆ ಮುಂದುವರಿಯುವುದೋ ಇಲ್ಲವೋ ಎನ್ನುವುದು ಆ ಸಮೂಹ ಆತನಿಗೆ ಒದಗಿಸುವ ಅವಕಾಶವನ್ನು ಅವಲಂಬಿಸುತ್ತದೆ. +ಸಮೂಹ ಅಥವಾ ಸಮಾಜ ತಾಳ್ಮೆಯಿಂದ ನ್ಯಾಯಬುದ್ಧಿಯಿಂದ ಇಂತಹ ವ್ಯಕ್ತಿಗಳನ್ನು ನೋಡಿಕೊಂಡರೆ ಆ ವ್ಯಕ್ತಿಗಳು ತಮ್ಮ ಅಭಿಪ್ರಾಯಗಳನ್ನು ಮುಂದುವರಿಸುತ್ತಾಸಾಗಿ, ಕೊನೆಗೆ ಅವರನ್ನೆಲ್ಲ ಮನವೊಲಿಸಿ ತಮ್ಮ ಹೊಸ ವಿಚಾರಗಳಿಗೆ ಒಪ್ಪಿಸುವುದೂ ಸಾಧ್ಯ ಸಮೂಹಕ್ಕೆ ಬೇಡವಾದರೆ ಆ ವ್ಯಕ್ತಿಗಳನ್ನು ಹತ್ತಿಕ್ಶ್ಳಬಹುದು. +ಹಾಗಾದಾಗ ಸುಧಾರಣೆಯ ಪ್ರಯತ್ನ ಸತ್ತು ಹೋಗುತ್ತದೆ. +ಜಾತಿಯ ಕೈಯಲ್ಲಿ ಬಹಿಷ್ಕಾರವೆಂಬುದೊಂದು ಬಲಿಷ್ಠವಾದ ಹಕ್ಕು ಇದೆ. +ಅದನ್ನು ಯಾರೂ ಪ್ರಶ್ನಿಸುವಂತಿಲ್ಲ. +ಜಾತಿಯ ನಿಯಮಗಳನ್ನು ಮೀರಿದವನಿಗೆ ಕೊಡುವ ತೀವ್ರತರವಾದ ಶಿಕ್ಷೆಯೆಂದರೆ ಈ ಬಹಿಷ್ಕಾರ. +ಬಹಿಷ್ಕೃತ ವ್ಯಕ್ತಿ ತನ್ನ ಜಾತಿಯ ಯಾವನೊಂದಿಗೂ ಸಂಬಂಧವಿಟ್ಟುಕೊಳ್ಳುವಂತಿಲ್ಲ. +ಹೀಗೆ ಎಲ್ಲರಿಗೂ ಬೇಡವಾಗಿ ಬದುಕುವುದೆಂದರೆ ಸತ್ತಂತೆಯೇ ಸರಿ. +ಈ ಬಹಿಷ್ಕಾರದ ಭಯ ಬಲವಾಗಿರುವುದರಿಂದ ಯಾವ ಹಿಂದೂವಾದರೂ ಜಾತಿ ನಿಯಮಕ್ಕೆ ವಿರೋಧವಾಗಿ ತನ್ನ ಸ್ವಂತ ಅಭಿಪ್ರಾಯಗಳನ್ನು ಹೇಳುವ ಧೈರ್ಯ ಮಾಡಲಾರನು. +ಸಮಾಜವನ್ನು ಬಿಟ್ಟು ಮನುಷ್ಯ ಬದುಕಲಾರ. +ತಾನು ಹೇಳಿದಂತೆ ಅದು ಕೇಳದಿದ್ದರೆ, ಅದು ಹೇಳಿದಂತೆ ತಾನು ಕೇಳಬೇಕು. +ಸಂಪೂರ್ಣವಾಗಿ ಅದಕ್ಕೆ ಶರಣಾಗುವ ಪ್ರಸಂಗ ಬಂದರೂ ಪರವಾಗಿಲ್ಲ. +ವ್ಯಕ್ತಿಯ ಈ ದೌರ್ಬಲ್ಯದ ಲಾಭ ಪಡೆದುಕೊಳ್ಳಲು ಜಾತಿ ಯಾವಾಗಲೂ ಸಿದ್ಧವಾಗಿರುತ್ತದೆ. +ಸುಧಾರಕನ ಜೀವನವನ್ನೊಂದು ನರಕವಾಗಿಸಬಲ್ಲ ಕುತಂತ್ರ ಜಾತಿಯಿಂದ ನಡೆಯಬಹುದು. +ಕುತಂತ್ರ ಒಂದು ಅಪರಾಧವಾಗಿದ್ದ ಪಕ್ಷದಲ್ಲಿ ಧೈರ್ಯಶಾಲಿಯೊಬ್ಬನು ಜಾತಿಗೆ ವಿರೋಧವಾಗಿ ನಿಂತನೆಂದು ಅವನನ್ನು ಬಹಿಷ್ಕರಿಸುವ ಈ ದುಷ್ಟಕೃತ್ಯವನ್ನು ಕಾನೂನು ರೀತಿಯಲ್ಲಿ ಶಿಕ್ಷಾರ್ಹವೆಂದು ಏಕೆ ಪರಿಗಣಿಸಬಾರದೋ ನಾನರಿಯೆ. +ಆದರೆ ಕಾನೂನು ಆಯಾ ಜಾತಿಗೆ ಅದರದರ ನಿಯಮಗಳ ಸ್ವಾತಂತ್ರ್ಯವಿತ್ತಿದೆ; +ತಪ್ಪಿತಸ್ಥರಿಗೆ ಬಹಿಷ್ಕಾರ ಹಾಕುವ ಸ್ವಾತಂತ್ರ್ಯವನ್ನು ಪ್ರಶ್ನಿಸುವುದಿಲ್ಲ. +ಸಂಪ್ರದಾಯಬದ್ಧ ಜನರ ಕೈಯಲ್ಲಿಜಾತಿ ಒಂದು ಬಲಿಷ್ಟ ಆಯುಧವಾಗಿದ್ದು, ಅದರಿಂದ ಸುಧಾರಕನನ್ನೂ ಸುಧಾರಣೆಗಳನ್ನೂ ಅದು ನಿರ್ಮೂಲನೆಗೊಳಿಸಬಲ್ಲದು. +ಜಾತಿಯಿಂದಾಗಿ ಹಿಂದೂಗಳ ನೈತಿಕತೆ ಶೋಚನೀಯ ಅವಸ್ಥೆಗೆ ಮುಟ್ಟಿದೆ. +ಜಾತಿ ಸಾರ್ವಜನಿಕ ಭಾವನೆಯನ್ನು ನಾಶಗೊಳಿಸಿ, ಹೃದಯ ವೈಶಾಲ್ಯವನ್ನು ಹಾಳುಮಾಡಿದೆ; +ಸಾರ್ವಜನಿಕ ಅಭಿಪ್ರಾಯಗಳಿಗೆ ಅವಕಾಶವಿಲ್ಲದಂತೆ ಮಾಡಿದೆ. +ಹಿಂದೂವಿನ ಸಮಾಜ ಹಾಗೂ ಹೊಣೆಗಾರಿಕೆ ಅವನ ಜಾತಿಗೆ ಸೀಮಿತವಾದುದು. +ಅವನ ನಿಷ್ಠೆ ಜಾತಿಗೆ ಪರಿಮಿತವಾಗಿದೆ. +ಸದ್ಗುಣ ಹಾಗೂ ನೀತಿ ಎರಡೂ ಜಾತೀಯತೆಯ ಮುಷ್ಟಿಯಲ್ಲಿ ಸಿಕ್ಕಿಕೊಂಡಿದೆ. +ಸಹಾನುಭೂತಿ ಯಾರಿಗೆ ಅವಶ್ಯಕವೋ ಅವನಿಗೆ ಅದು ಸಿಕ್ಕುತ್ತಿಲ್ಲ. +ಶ್ಲಾಘ್ಯತೆ ದೊರೆಯಬೇಕಾದವರಿಗೆ ಅದು ದೊರೆಯುತ್ತಿಲ್ಲ. +ದಾನಧರ್ಮ ಬೇಡುವವರಿದ್ದಾರೆ, ಅವರಿಗೆ ಕೊಡುವವರು ಇಲ್ಲ, ಸಂಕಷ್ಟಗಳನ್ನು ಕೇಳುವವರಿಲ್ಲ. +ದಯೆದಾನ ಇಲ್ಲವೆಂದೇನೂ ಅಲ್ಲ. +ಆದರೆ ಅದು ಜಾತಿಯನ್ನು ದಾಟಿ ಹೋಗಲಾರದು. +ಸಹಾನುಭೂತಿ ತಮ್ಮ ಜಾತಿಯವರಿಗೆ ಮಾತ್ರ ಉಂಟು, ಇತರರಿಗೆ ಇಲ್ಲ. +ಸದ್ಗುಣಿಯಾದ ಮಹಾಪುರುಷನು ನೇಕಾರನಾಗಿ ಬಂದರೆ ಹಿಂದೂವು ಅವನನ್ನು ಅನುಸರಿಸುವನೆ? +ಆತನು ಮಹಾತ್ಮನೇ ಆಗಲಿ, ಅವನನ್ನು ಮುಂದಾಳೆಂದು ಒಪ್ಪಿಕೊಳ್ಳಬೇಕಾದರೆ ಅವನು ತಮ್ಮ ಜಾತಿಯವನೇ ಆಗಿರತಕ್ಕದ್ದು. +ಮುಂದಾಳು ಬ್ರಾಹ್ಮಣನಾಗಿದ್ದರೆ ಮಾತ್ರ ಬ್ರಾಹ್ಮಣರು ಅವನ ಅನುಯಾಯಿಯಾಗುತ್ತಾರೆ. +ಕ್ಷತ್ರಿಯರು ಮುಂದಾಳಾದರೆ ಮಾತ್ರ ಕ್ಷತ್ರಿಯರು ಅವನ ಅನುಯಾಯಿಗಳಾಗುತ್ತಾರೆ. +ಇತರ ಜಾತಿಗಳಿಗೂ ಈ ಮಾತು ಹೀಗೆಯೇ ಅನ್ವಯಿಸುತ್ತದೆ. +ಒಬ್ಬ ಮನುಷ್ಯನ ಜಾತಿ ಯಾವುದೇ ಇರಲಿ ಅವನ ಯೋಗ್ಯತೆಯನ್ನು ಪರಿಗಣಿಸಬೇಕೆಂಬ ಬುದ್ಧಿ ಅಥವಾ ಹಾಗೆ ಮಾಡುವ ಧೈರ್ಯ ಹಿಂದೂವಿಗೆ ಇಲ್ಲ. +ತಮ್ಮ ಜಾತಿಯವನಾದರೆ ಮಾತ್ರ ಅವನನ್ನು ಪರಿಗಣಿಸುತ್ತಾನೆ. +ಅನಾಗರಿಕ ಜನರ ಗುಂಪಿನ ನೀತಿ ಎಷ್ಟು ಸಂಕುಚಿತವೋ ಅಷ್ಟು ಸಂಕುಚಿತವಾಗಿದೆ ಜಾತಿಯ ನೀತಿ. +ಸರಿಯಿರಲಿ, ತಪ್ಪಿರಲಿ ತನ್ನ ಜಾತಿ ಮುಖ್ಯ ಸಜ್ಜನನಿರಲಿ, ದುರ್ಜನನಿರಲಿ ತಮ್ಮ ಜಾತಿಯವನೆನ್ನುವುದೇ ಮುಖ್ಯ. +ಹೀಗೆ ತಮ್ಮ ತಮ್ಮ ಜಾತಿಯ ಹಿತವನ್ನೇ ನೋಡಿಕೊಳ್ಳುತ್ತ ಹಿಂದೂಗಳು ದೇಶಕ್ಕೆ ದ್ರೋಹ ಬಗೆದಿಲ್ಲವೆ? +ಜಾತಿಯ ದುಷ್ಪರಿಣಾಮಗಳನ್ನು ಕುರಿತ ಈ ಸುದೀರ್ಥ ವಿವರಣೆಯನ್ನು ಕೇಳಿ ನಿಮ್ಮಲ್ಲಿ ಕೆಲವರಿಗೆ ಬೇಸರವಾಗಿದ್ದರೆ ಸೋಜಿಗವಲ್ಲ. +ಇದರಲ್ಲಿ ಹೊಸದೇನೂ ಇಲ್ಲ. +ಆದುದರಿಂದ ಈ ಸಮಸ್ಯೆಯ ರಚನಾತ್ಮಕ ಪಾರ್ಶ್ವದೆಡೆಗೆ ಈಗ ಹೊರಳುತ್ತೇನೆ. +ಜಾತಿ ಬೇಡವೆಂದರೆ ನೀವು ಕಲ್ಪಿಸುವ ಆದರ್ಶ ಸಮಾಜ ಯಾವುದು? +ಈ ಪ್ರಶ್ನೆ ಅನಿವಾರ್ಯವಾಗುತ್ತದೆ. +ನನ್ನ ಮಟ್ಟಗೆ ಹೇಳುವುದಾದರೆ ಈ ಹೊಸ ಸಮಾಜವು ಸ್ವಾತಂತ್ರ್ಯ,ಸಮಾನತೆ ಹಾಗೂ ಭ್ರಾತೃತ್ವಗಳ ಆಧಾರದ ಮೇಲೆ ನಿರ್ಮಾಣವಾಗಬೇಕು. +ಯಾಕೆ ಬೇಡ? +ಭ್ರಾತೃತ್ವಕ್ಕೆ ಯಾಕೆ ಆಕ್ಷೇಪಗಳಿರಬೇಕು? +ನನಗೆ ಒಂದೂ ಹೊಳೆಯುವುದಿಲ್ಲ. +ಆದರ್ಶ ಸಮಾಜದಲ್ಲಿ ಚಲನಶೀಲ ಸ್ವಾತಂತ್ರ್ಯ, ಅಂದರೆ ಬದಲಾಗುವವರಿಗೆ ಮುಕ್ತ ಅವಕಾಶಗಳು, ಇರಬೇಕು. +ಒಂದು ಭಾಗದಲ್ಲುಂಟಾದ ಪರಿವರ್ತನೆಯನ್ನು ಇತರ ಭಾಗಗಳಿಗೆ ಸಾಗಿಸುವುದಕ್ಕೆ ಹೇರಳವಾದ ಮಾರ್ಗಗಳಿರಬೇಕು. +ಆದರ್ಶ ಸಮಾಜದಲ್ಲಿ ಪರಸ್ಪರ ತಿಳಿದುಕೊಂಡು ಪಾಲ್ಗೊಳ್ಳುವಂತಹ ಹಿತಾಸಕ್ತಿ ಅನೇಕವಾಗಿರಬೇಕು. +ಸಂಪರ್ಕಕ್ಕೆ ಬಹು ವಿಧವಾದ ಹಾಗೂ ಸಂಪೂರ್ಣ ಮುಕ್ತವಾದ ಸಾಧನಗಳೂ, ಸದವಕಾಶಗಳೂ ಇರಬೇಕು. +ಬೇರೆ ಮಾತುಗಳಲ್ಲಿ ಹೇಳುವುದಾದರೆ ಸಾಮಾಜಿಕ ಒಳಸೇರ್ಪಡೆ ಇರಬೇಕು. +ಇದೇ ಬ್ರಾತೃತ್ವ, ಪ್ರಜಾಪ್ರಭುತ್ವದ ಇನ್ನೊಂದು ಹೆಸರೇ ಇದು. +ಪ್ರಜಾಪ್ರಭುತ್ವ ಒಂದು ಬಗೆಯ ಆಡಳಿತ ವಿಧಾನ ಮಾತ್ರವಲ್ಲ. +ಅದೊಂದು ಸಾಮಾಜಿಕ ಜೀವನ ಪದ್ಧತಿ; +ಸಂಯುಕ್ತ ಸಂಪರ್ಕವುಳ್ಳ ಅನುಭವ. +ದೇಶಬಾಂಧವರಲ್ಲಿ ಪರಸ್ಪರರನ್ನು ಗೌರವದಿಂದ ಕಾಣುವ ಮನೋವೃತ್ತಿ ಪ್ರಜಾಪ್ರಭುತ್ವದ ಮೂಲ ಲಕ್ಷಣವಾಗಿದೆ. +ಸ್ವಾತಂತ್ರ್ಯಕ್ಕೇನಾದರೂ ಆಕ್ಷೇಪಣೆಗಳಿವೆಯೇ? +ಜೀವಕ್ಕೆ ಮತ್ತು ಅವಯವಗಳಿಗೆ ಇರುವ ಹಕ್ಕುಗಳಿಗೆ, ನಿರ್ಬಂಧಗಳಿಲ್ಲದೆ ಸಂಚರಿಸುವ ಹಕ್ಕುಗಳಿಗೆ ಯಾವ ಆಕ್ಷೇಪಣೆಯೂ ಇಲ್ಲ. +ಉದರ ನಿರ್ವಹಣೆಗಾಗಿ ಅವಶ್ಯಕವಾದ ಆಸ್ತಿಯ ಹಕ್ಕು,ಸಾಧನ ಸಾಮಾಗ್ರಿಗಳ ಹಕ್ಕು, ಆರೋಗ್ಯ ರಕ್ಷಣೆಯ ಹಕ್ಕು, ಈ ದೃಷ್ಟಿಯಿಂದಲೂ ಆಕ್ಷೇಪಣೆಯಿಲ್ಲ. +ಹಾಗಾದರೆ ಒಬ್ಬ ವ್ಯಕ್ತಿಯ ಶಕ್ತಿಗಳ ಲಾಭವನ್ನು ಸಮರ್ಪಕವಾಗಿ ಮತ್ತು ದಕ್ಷ ರೀತಿಯಲ್ಲಿ ಯೋಜಿಸಿ ನಡೆದುಕೊಳ್ಳುವುದಕ್ಕೆ ಸ್ವಾತಂತ್ರ್ಯವೇಕಿರಬಾರದು? +ಜಾತಿಯನ್ನು ಬೆಂಬಲಿಸುವ ಜನ ಈ ಒಂದು ಸ್ವಾತಂತ್ರ್ಯವನ್ನು ಒಪ್ಪಲಾರದು; +ಯಾಕೆಂದರೆ ಅದರಿಂದಾಗಿ ಜನರು ತಮಗೆ ಬೇಕಾದ ವೃತ್ತಿಯನ್ನು ಆಯ್ದುಕೊಳ್ಳಲು ಸ್ವಾತಂತ್ರ್ಯವಿತ್ತಂತಾಗುತ್ತದೆ. +ಆದರೆ ಈ ಸ್ವಾತಂತ್ರ್ಯವನ್ನು ಅಲ್ಲಗೆಳೆಯುವುದೆಂದರೆ ನಿರಂತರ ಗುಲಾಮ ಗಿರಿಯನ್ನು ಒಪ್ಪಿಕೊಂಡಂತೆ. +ಗುಲಾಮಗಿರಿಯೆಂದರೆ ಕಾನೂನಿನ ಕ್ರಮದಿಂದ ಒಬ್ಬನನ್ನೋ, ಹಲವರನ್ನೋ ಅಧೀನದಲ್ಲಿಟ್ಟುಕೊಳ್ಳವುದೆಂದಷ್ಟೆ ಅರ್ಥವಲ್ಲ. +ತಮ್ಮ ನಡವಳಿಕೆಗೆ ನಿರ್ದಿಷ್ಟವಾದ ಉದ್ದೇಶಗಳನ್ನು ಹೆರವರು ತಮ್ಮ ಮೇಲೆ ಹೇರುವಂತಹ ಸ್ಥಿತಿ ಕೆಲವರಿಗೆ ಇದ್ದರೆ ಆ ಸಮಾಜದ ಸ್ಥಿತಿಯೂ ಗುಲಾಮ ಗಿರಿಯೇ ಆಗುತ್ತದೆ. +ಕಾನೂನಿನ ಅರ್ಥದಲ್ಲಿ ಗುಲಾಮಗಿರಿ ಇಲ್ಲದಂತಹ ಪ್ರದೇಶದಲ್ಲಿ ಕೂಡ ಈ ಸ್ಥಿತಿ ಇರುತ್ತದೆ. +ಜಾತಿಪದ್ಧತಿ ಮೇರೆಗೆ ಕೆಲವರು ತಮ್ಮ ಇಷ್ಟಕ್ಕೆ ವಿರುದ್ಧವಾದ ವೃತ್ತಿಗಳನ್ನು ಕೈಗೊಳ್ಳಲೇಬೇಕಾಗುತ್ತದೆ. +ಅವರ ಮೇಲೆ ಆ ವೃತ್ತಿಗಳನ್ನು ಹೇರಲಾಗುತ್ತದೆ. +ಇನ್ನು ಸಮಾನತೆಗೆ ಆಕ್ಷೇಪಣೆಗಳಿವೆಯೆ? +ಫ್ರೆಂಚ್‌ ಕ್ರಾಂತಿಯ ಧ್ಯೇಯ ವಾಕ್ಯದಲ್ಲಿ ಈ ಪದವೇ ವಿವಾದಾಸ್ಪದವಾಗಿದೆ. +ಸಮಾನತೆಯನ್ನು ಆಕ್ಷೇಪಿಸುವುದು ಸರಿಯಾಗಿರಬಹುದು,ಎಲ್ಲರೂ ಸಮಾನರಲ್ಲ ಎಂಬುದನ್ನು ನಾನು ಒಪ್ಪಬೇಕಾದೀತು. +ಸಮಾನತೆ ಕೇವಲ ಒಂದು ಭ್ರಾಂತಿಯಾಗಿರಬಹುದು. +ಆದರೆ ಆದೇನಿದ್ದರೂ ವ್ಯವಹಾರದ ದೃಷ್ಟಿಯಿಂದ ಸಮಾನತೆಯನ್ನು ಸ್ವೀಕರಿಸಲೇಬೇಕಾಗುತ್ತದೆ. +ಮನುಷ್ಯನ ಶಕ್ತಿ ಅವಲಂಬಿಸುವುದು ಈ ಕೆಳಗಿನ ಮೂರನ್ನು : ೧) ದೈಹಿಕಅನುವಂಶೀಯತೆ, ೨) ತಾಯ್ತಂದೆಯರ ಆರೈಕೆ, ಶಿಕ್ಷಣ, ವೈಜ್ಞಾನಿಕ ಸಂಪತ್ತಿನ ಲಾಭ ಇತ್ಯಾದಿಯಾಗಿ ಅನಾಗರಿಕನಿಗಿಂತ ಹೆಚ್ಚು ಚೆನ್ನಾಗಿ ಬದುಕಲು ಸಹಾಯಕವಾದ ಎಲ್ಲ ಸಾಧನ ಸಂಪತ್ತುಗಳ ರೂಪವಾಗಿ ದೊರೆತ ಸಾಮಾಜಿಕ ಬಳುವಳಿ, ಮತ್ತು ಕೊನೆಯದಾಗಿ ೩) ಆ ವ್ಯಕ್ತಿಯ ಸ್ವಂತ ಪ್ರಯತ್ನಗಳು. +ಈಮೂರು ವಿಷಯಗಳಲ್ಲಿ ಮನುಷ್ಯರು ಸಮಾನರಾಗಿರುವುದಿಲ್ಲ. +ಆದರೆ ಈಗಿರುವ ಪ್ರಶ್ನೆಯೆಂದರೆ ಮನುಷ್ಯರೆಲ್ಲ ಅಸಮಾನರಾಗಿರುವುದರಿಂದ ಅವರನ್ನು ಅಸಮರೆಂದೇ ನಡೆಸಿಕೊಳ್ಳಬೇಕೆ? +ವೈಯಕ್ತಿಕ ದೃಷ್ಟಿಯಿಂದ ವಿಚಾರಿಸಿದರೆ, ಪ್ರತಿಯೊಬ್ಬ ವ್ಯಕ್ತಿಯ ಪ್ರಯತ್ನವೂ ಬೇರೆಯಾಗಿರುವುದರಿಂದ ಎಲ್ಲರನ್ನೂ ಒಂದೇ ಸಮ ಎನ್ನಲಾಗದು. +ವ್ಯಕ್ತಿಯ ಅಂತರ್‌ಶಕ್ತಿಗಳ ಸಂಪೂರ್ಣ ವಿಕಾಸಕ್ಕೆ ಸಂಪೂರ್ಣ ಪ್ರೋತ್ಸಾಹವೊದಗಿಸುವುದು ಅಪೇಕ್ಷಣೀಯ. +ಆದರೆ ಮೊದಲೆರಡರ ದೃಷ್ಟಿಯಿಂದ ಮನುಷ್ಯರನ್ನು ಅಸಮರೆಂದು ಪರಿಗಣಿಸಿದರೆ ಆಗುವ ಪರಿಣಾಮವೇನು? +ಜನ್ಮ ಶಿಕ್ಷಣ, ಮನೆತನದ ಹೆಸರು, ವ್ಯವಹಾರ, ಉದ್ಯೋಗಗಳ ಸಂಬಂಧ, ಪೂವಾರ್ಜಿತ ಶ್ರೀಮಂತಿಕೆ ಇವುಗಳನ್ನೆಲ್ಲಾ ಪಡೆದವರು ಸಹಜವಾಗಿ ಮೇಲ್ಸೈಯಾಗುತ್ತಾರೆ. +ಆದರೆ ಇಂತಹ ಸ್ಥಿತಿಯಲ್ಲಿ ಆಯ್ಕೆಯು ಅರ್ಹತೆಯ ಆಯ್ಕೆಯಾಗುವುದಿಲ್ಲ; +ಅದು ಅನುಕೂಲತೆಯುಳ್ಳವರ ಆಯ್ಕೆಯಾಗುತ್ತದೆ. +ಆದುದರಿಂದ ಇಲ್ಲಿ ಸಾಧ್ಯವಿದ್ದ ಮಟ್ಟಿಗೆ ಎಲ್ಲರೂ ಸಮಾನರೆಂದೇ ಪರಿಗಣಿಸಬೇಕಾಗುತ್ತದೆ. +ಸಮಾಜ ತನ್ನ ಸದಸ್ಯರಿಂದ ಅತ್ಯಧಿಕ ಲಾಭ ಪಡೆಯಬೇಕೆಂದಿದ್ದರೆ ಸದಸ್ಯರೆಲ್ಲರನ್ನೂ ಸಮಾನವಾಗಿ ಪರಿಗಣಿಸುವುದು ಅಗತ್ಯವಾಗುತ್ತದೆ. +ಸಮಾನತೆಯು ಅನಿವಾರ್ಯವೆಂಬುದಕ್ಕೆ ಇನ್ನೊಂದು ಕಾರಣವೂ ಇದೆ. +ಮುತ್ತದ್ದಿಯೊಬ್ಬ ಏಕಕಾಲದಲ್ಲಿ ಹಲವರ ಬಗ್ಗೆ ಕಾಳಜಿ ವಹಿಸಬೇಕಿರುತ್ತದೆ. +ಪ್ರತಿಯೊಬ್ಬನ ವಿಶಿಷ್ಟತೆಯನ್ನು ನ್ಯಾಯೋಚಿತವಾಗಿ ನೋಡಿ ಅಗತ್ಯಕ್ಕೆ ತಕ್ಕಂತೆ ಅಥವಾ ಅರ್ಹತೆಗೆ ತಕ್ಕಂತೆ ವರ್ಗೀಕರಣ ಮಾಡಲು ಆತನಿಗೆ ಸಮಯವಾಗಲೀ ತಿಳುವಳಿಕೆಯಾಗಲೀ ಇರುವುದಿಲ್ಲ. +ಎಷ್ಟೇ ಅಗತ್ಯವಿದ್ದರೂ ಈ ರೀತಿ ಮನುಷ್ಯರನ್ನು ವಿಂಗಡಿಸಿ ವರ್ಗೀಕರಿಸುವುದು ಅಸಾಧ್ಯವಾದುದು. +ಆದುದರಿಂದ ರಾಜಕೀಯ ಮುತ್ಸದ್ದಿ ಯಾವುದೋ ಒಂದು ಸ್ಥೂಲ ನಿಯಮವನ್ನು ಅನುಸರಿಸಬೇಕು. +ಆ ಸ್ಥೂಲ ನಿಯಮವೆಂದರೆ ಇದೇ, ಎಲ್ಲರನ್ನೂ ಸಮಾನರೆಂದು ಪರಿಗಣಿಸುವುದು. +ಹೀಗೆ ಪರಿಗಣಿಸುವುದು ಅವರೆಲ್ಲರೂ ಒಂದೇ ಬಗೆಯಾಗಿರುವರೆಂಬ ಕಾರಣಕ್ಕಾಗಿ ಅಲ್ಲ. +ಅವರೆಲ್ಲರ ವಿಂಗಡಣೆ ಮತ್ತು ವರ್ಗೀಕರಣ ಅಸಾಧ್ಯವೆಂಬ ಕಾರಣಕ್ಕಾಗಿ. +ಸಮಾನತೆ ತಾತ್ವಿಕವಾಗಿ ತಪ್ಪಾಗಿದ್ದರೂ ವ್ಯಾವಹಾರಿಕವಾಗಿ ಅವಶ್ಯಕವಾಗುತ್ತದೆ. +ರಾಜಕಾರಣಿಯು ರಾಜಕೀಯದಲ್ಲಿ ಮುಂದುವರಿಯುವುದು ಇದೊಂದೇ ಹಾದಿಯಿಂದ. +ತೀಕ್ಷ್ಣ ಪ್ರಾಯೋಗಿಕ ಪರೀಕ್ಷೆಯೂ ಅಗತ್ಯವಿರುವ ಅತ್ಯಂತ ಪ್ರಾಯೋಗಿಕವಾದ ಮಾರ್ಗ ಇದು. +ಇನ್ನೊಂದು ಸುಧಾರಕರ ಗುಂಪಿದೆ, ಅವರ ಆದರ್ಶವೇ ಬೇರೆ. +ತಾವು ಆರ್ಯ ಸಮಾಜದವರೆಂದು ಹೇಳಿಕೊಳ್ಳುವ ಅವರ ಆದರ್ಶವೆಂದರೆ ಸಮಾಜಕ್ಕೆ ಚಾತುರ್ವರ್ಣ್ಯವೇ ಚೌಕಟ್ಟು. +ಅಂದರೆ ಈಗ ಭಾರತದಲ್ಲಿರುವ ನಾಲ್ಕು ಸಾಎರ ಜಾತಿಗಳಿಗೆ ಬದಲಾಗಿ ನಾಲ್ಕೇ ವರ್ಗಗಳಲ್ಲಿ ಸಮಾಜವನ್ನು ವಿಭಾಗಿಸುವುದು ಅವರ ಯೋಜನೆ. +ತಮ್ಮ ಈ ಯೋಜನೆ ಹೆಚ್ಚು ಆಕರ್ಷಕವಾಗಿ ತೋರಲೆಂದು ಹಾಗೂ ಆಕ್ಷೇಪಣೆಗಳಿಗೆ ಅವಕಾಶವಿರಬಾರದೆಂದು ಅವರೇನು ಹೇಳುತ್ತಾರೆಂದರೆ ಈ ಚಾತುರ್ವರ್ಣ್ಯದ ಆಧಾರ ಜನ್ಮವಲ್ಲ. +ಗುಣ(ಯೋಗ್ಯತೆ) ಮೊದಲೇ ಹೇಳಿಬಿಡುತ್ತೇನೆ ಈ ಆದರ್ಶವನ್ನು ನಾನು ಒಪ್ಪಲಾರೆನೆಂದು. +ಮೊದಲನೆಯದಾಗಿ ಆರ್ಯ ಸಮಾಜದವರ ಈ ಚಾತುರ್ವರ್ಣ್ಯದ ಮೇರೆಗೆ ಹಿಂದೂ ಸಮಾಜದಲ್ಲಿ ಯೋಗ್ಯತೆಗೆ ಅನುಗುಣವಾಗಿಯೇ ವ್ಯಕ್ತಿಯ ಸ್ಥಾನ ನಿಗದಿಯಾವುದಿದ್ದರೆ ಬ್ರಾಹ್ಮಣ, ಕ್ಪತ್ರಿಯ, ವೈಶ್ಯ ಮತ್ತು ಶೂದ್ರ ಎಂಬ ಹಣೆಪಟ್ಟಿಗಳಿಂದ ಮನುಷ್ಯರನ್ನು ಗುರುತಿಸುವುದೇಕೆಂದು ನನಗೆ ತಿಳಿಯದು. +ವಿದ್ವಾಂಸನನ್ನು ಬ್ರಾಹ್ಮಣನೆಂದು ಕರೆಯದೆ ಗುರುತಿಸಬಹುದು. +ಯೋಧನನ್ನು ಕ್ಷತ್ರಿಯನೆಂದು ನಿರ್ದೇಶಿಸದೆ ಕೂಡ ಗೌರವಿಸಬಹುದು. +ಯೂರೋಪಿಯನ್‌ ಸಮಾಜದಲ್ಲಿ ಇಂತಹ ಖಾಯಂ ವರ್ಗನಾಮವಿಲ್ಲದೆ ವಿದ್ವಾಂಸರೂ, ಯೋಧರೂ ಗೌರವಿಸಲ್ಪಡುತ್ತಿರುವಾಗ ಹಿಂದೂ ಸಮಾಜದಲ್ಲಿ ಈ ಹಣೆ ಪಟ್ಟಿಯೇಕೆ ಬಂತು? +ಆರ್ಯ ಸಮಾಜದವರು ಈ ಪ್ರಶ್ನೆಯನ್ನು ವಿಚಾರಿಸಲು ಹೋಗಿಲ್ಲ. +ಬ್ರಾಹ್ಮಣ ಕ್ಷತ್ರಿಯಾದಿ ಹೆಸರುಗಳನ್ನು ಮುಂದುವರಿಸಿಕೊಂಡು ಹೋಗುವುದಕ್ಕೆ ಇನ್ನೊಂದು ಆಕ್ಷೇಪಣೆಯಿದೆ. +ಸುಧಾರಣೆಯೆಂದ ಮೇಲೆ ಯಾವುದೇ ಇರಲಿ, ವಸ್ತು ವಿಷಯಗಳ ಹಾಗೂ ಜನರ ಬಗೆಗೆ ನಾವು ತಾಳುವ ಭಾವನೆ ಮತ್ತು ಮನೋವೃತ್ತಿಯಲ್ಲಿ ವ್ಯತ್ಯಾಸವನ್ನುಂಟು ಮಾಡುತ್ತದೆ. +ಕೆಲಕೆಲವು ಹೆಸರುಗಳು ತಮ್ಮ ಸುತ್ತಲೂ ನಿರ್ದಿಷ್ಟವಾದ ಕಲ್ಪನೆ ವಿಚಾರಗಳನ್ನು, ವಿಶಿಷ್ಟ ಭಾವನೆಗಳನ್ನು ಕಟ್ಟಿಕೊಂಡು ಬಂದಿವೆ. +ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಮತ್ತು ಶೂದ್ರ ಎಂಬ ಈ ಹೆಸರುಗಳು ಪ್ರತಿಯೊಬ್ಬ ಹಿಂದೂವಿನ ಮನಸ್ಸಿನಲ್ಲಿ ನಿರ್ದಿಷ್ಟವಾದ ಹಾಗೂ ಸ್ಥಿರವಾದ ಚಿತ್ರವನ್ನು ನಿರ್ಮಿಸಿಕೊಟ್ಟಿದೆ. +ಜನ್ಮಸಿದ್ಧವಾಗಿ ಒಂದು ಮೇಲು ಇನ್ನೊಂದು ಅದಕ್ಕಿಂತ ಕೆಳಗೆ, ಮತ್ತೊಂದು ಇನ್ನೂ ಕೆಳಗೆ, ಹೀಗೆ ಒಂದು ತಾರತಮ್ಯದ ಶ್ರೇಣೀಕರಣದ ಮನೋಭಾವವನ್ನು ನೆಲೆಗೊಳಿಸಿದೆ. +ಈ ಹೆಸರುಗಳನ್ನು ಮುಂದುವರಿಸಿದರೆ ಈ ಮನೋಭಾವವನ್ನು ಮುಂದುವರಿಸಿದಂತೆಯೆ ಸರಿ. +ಈ ಮೇಲು-ಕೀಳಿನ ಮನೋಭಾವವನ್ನು ಹಿಂದೂಗಳ ಮನಸ್ಸಿನಿಂದ ಕಿತ್ತು ಹಾಕಬೇಕು. +ಹೊಸ ಮನೋವೃತ್ತಿಯನ್ನು ಉಂಟುಮಾಡಬೇಕಾದರೆ ಹೊಸ ಹೆಸರುಗಳೇ ಬೇಕು. +ಬ್ರಾಹ್ಮಣಾದಿಯಾಗಿ ಹೆಸರುಗಳುಳ್ಳ ಚಾತುರ್ವರ್ಣ್ಯ ಒಂದು ಮೋಸದ ಬಲೆ. +ಹಳೆಯ ಹೆಸರಿನ ಪಟ್ಟಿಯನ್ನೊಳಗೊಂಡ ಈ ಚಾತುರ್ವರ್ಣ ತೀರ ಪ್ರತಿಗಾಮಿಯಾಗಿದೆ. +ಈ ಹೆಸರು ಕೇಳಿದರೆ ನನ್ನ ರಕ್ತ ಕುದಿಯುತ್ತದೆ. +ಕಾರಣ ನಾನು ಇದನ್ನು ಮನಃಪೂರ್ವಕವಾಗಿ ವಿರೋಧಿಸುತ್ತೇನೆ. +ನನ್ನ ವಿರೋಧ ಕೇವಲ ಭಾವನಾತ್ಮಕವಾಗಿಲ್ಲ. +ಅದಕ್ಕೆ ಬಲವಾದ ಕಾರಣಗಳಿವೆ. +ಸೂಕ್ಷವಾಗಿ ಪರಿಶೀಲಿಸಿನೋಡಿದಾಗ ಸಾಮಾಜಿಕ ಸಂಘಟನೆಯ ದೃಷ್ಟಿಯಿಂದ ಜಾತುರ್ವರ್ಣ್ಯ ಅವ್ಯವಹಾರ್ಯವಾ, ಹಾನಿಕರವೂಹಾಗೂ ವ್ಯರ್ಥವೂ ಎಂದು ನನಗೆ ಮನವರಿಕೆಯಾಗಿದೆ. +ವ್ಯವಹಾರ ದೃಷ್ಟಿಯಿಂದ ಚಾತುರ್ವರ್ಣ್ಯ ಪದ್ಧತಿ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. +ಇದನ್ನು ಅದರ ಪ್ರತಿಪಾದಕರು ಯೋಚಿಸಿಲ್ಲ. +ವರ್ಣದತತ್ವ ಬೇರೆ, ಜಾತಿಯ ತತ್ವ ಬೇರೆ. +ಅವೆರಡು ಮೂಲತಃ ಬೇರೆಬೇರೆಯಾಗಿರುವುದೊಂದೇ ಅಲ್ಲದೆ ಪರಸ್ಪರ ವಿರುದ್ಧವೂ ಆಗಿವೆ. +ವರ್ಣವು ಯೋಗ್ಯತೆಯಿಂದ ನಿರ್ಣಯಿಸಲ್ಪಡುತ್ತದೆ. +ಕೆಲವು ಜನರು ಯೋಗ್ಯತೆಯಿಲ್ಲದಿದ್ದರೂ ತಮ್ಮ ಜನ್ಮಬಲದಿಂದ ಮೇಲುಜಾತಿಗೆ ಸೇರಿದವರಾಗಿದ್ದಾರೆ. +ಅಂದರೆ ಸಮಾಜದಲ್ಲಿ ಅವರಿಗೆ ಮೇಲಿನ ಸ್ಥಾನಮಾನಗಳಿವೆ. +ಇನ್ನು ಕೆಲವರು ಯೋಗ್ಯತೆ ಹೆಚ್ಚಿದ್ದರೂ ಕೆಳಜಾತಿಯಲ್ಲಿ ಹುಟ್ಟಿದವರಾದ್ದರಿಂದ ಸಮಾಜದಲ್ಲಿ ಕೆಳಗಿನ ಸ್ಥಾನದಲ್ಲಿದ್ದಾರೆ. +ಹೀಗಿರುವಾಗ ಯೋಗ್ಯತೆಯ ಮಾನದಂಡದಿಂದ ವರ್ಗವಿಭಾಗ ಮಾಡುವುದಕ್ಕೆ ಹೊರಟರೆ ಮೇಲಿನವನ್ನು ಕೆಳಗೆ ಇಳಿಸಲು ಅಥವಾ ಕೆಳಗಿನವನ್ನು ಮೇಲೇರಿಸಲು ನಿಮಗೆ ಹೇಗೆ ಸಾಧ್ಯವಾಗುತ್ತದೆ? +ವರ್ಣ ಪದ್ಧತಿಯನ್ನು ಜಾರಿಮಾಡಬೇಕೆಂದರೆ ಮೊದಲು ಜಾತಿಪದ್ಧತಿಯನ್ನು ನಾಶಮಾಡಬೇಕು. +ಜನ್ಮದಿಂದ ಸಿದ್ಧವಾಗುವ ನಾಲ್ಕು ಸಾವಿರ ಜಾತಿಗಳನ್ನು ಕರಗಿಸಿ, ಯೋಗ್ಯತಾನುಸಾರವಾಗಿ ಸ್ಥಾನವೀಯುವ ಚಾತುರ್ವರ್ಣ್ಯವನ್ನು ನೀವು ಹೇಗೆ ನಿರ್ಮಿಸುವಿರಿ? +ಇದು ಮೊದಲನೆಯ ಸಮಸ್ಯೆಯಾಯಿತು. +ಇನ್ನೂ ಒಂದು ಸಮಸ್ಯೆ ಇದೆ. +ಜನರನ್ನು ನಾಲ್ಕು ವರ್ಗಗಳಾಗಿ ವಿಭಾಗಿಸಬಹುದು ಎಂದು ಚಾತುರ್ವರ್ಣ್ಯ ಪೂರ್ವಗ್ರಹೀತವನ್ನು ಇಟ್ಟುಕೊಂಡಿದೆ. +ಇದು ಸಾಧ್ಯವೇ? +ಈ ವಿಷಯದಲ್ಲಿ ಅದು ಫ್ಲೆಟೋನಿಕ್‌ ಆದರ್ಶದಂತೆಯೇ ಇದೆ. +ಫ್ಲೇಟೊ ಮಹಾಶಯನ ದೃಷ್ಟಿಯಲ್ಲಿ ಮನುಷ್ಯರು ಸ್ವಾಭಾವಿಕವಾಗಿ ಮೂರು ವರ್ಗಗಳು. +ಕೆಲವು ಜನರಲ್ಲಿ ಹಸಿವೆ, ಬಯಕೆಗಳೇ ಪ್ರಧಾನವಾಗಿರುತ್ತವೆ. +ಇವರನ್ನು ಶ್ರಮಿಕರುಹಾಗೂ ವ್ಯಾಪಾರ ವರ್ಗಕ್ಕೆ ಅವನು ಸೇರಿಸಿದನು. +ಇನ್ನು ಕೆಲವರು ಹಸಿವು, ಬಯಕೆಗಳಿಗಿಂತ ಹೆಚ್ಚಾಗಿ ಧೈರ್ಯಸ್ವಭಾವ ಪ್ರಧಾನರಾಗಿರುತ್ತಾರೆ. +ಇವರನ್ನು ಯುದ್ಧ ಹಾಗೂ ಆಂತರಿಕ ಕ್ರಾಂತಿ ಹಾಗೂ ರಕ್ಷಣೆಗೆ ಮೀಸಲಾದ ವರ್ಗಕ್ಕೆ ಅವನು ಸೇರಿಸಿದನು. +ಉಳಿದವರು ಸರ್ವ ವಸ್ತು ವಿಷಯಗಳ ಒಳಗಿರುವ ತತ್ವವಿಚಾರ ಸಮರ್ಥರು. +ಫ್ಲೇಟೊ ಇವರನ್ನು ಜನತೆಗೆ ವಿಧಿನಿಷೇಧಗಳನ್ನು ಒದಗಿಸುವವರ ವರ್ಗಕ್ಕೆ ಸೇರಿಸಿದನು. +ಪ್ಲೇಟೊನ ರಿಪಬ್ಲಿಕ್‌ ಯಾವ ಟೀಕೆಗೆ ಒಳಗಾಗಿದೆಯೋ ಅದೇ ಟೀಕೆಗೆ ಚಾತುರ್ವರ್ಣ್ಯವೂ ಈಡಾಗುತ್ತದೆ. +ವ್ಯಕ್ತಿಗಳನ್ನು ಹೆಡೆಮುರಿ ಕಟ್ಟದಂತೆ ಮೂರು ವರ್ಗಗಳಲ್ಲಿ ಸೇರಿಸಿ ಬಿಡುವುದೆಂದರೇನು? +ಮನುಷ್ಯನ ಶಕ್ತಿಗಳ ಪರಿಜ್ಞಾನವಿದ್ದವನು ಹೀಗೆ ಮಾಡಲಾರನು. +ಪ್ರತಿಯೊಬ್ಬ ವ್ಯಕ್ತಿ ವಿಶಿಷ್ಟವಾಗಿರುತ್ತಾನೆ. +ಇತರರಂತೆ ಅವನನ್ನು ಅಳೆಯಲಾಗದು. +ಒಬ್ಬೊಬ್ಬ ವ್ಯಕ್ತಿಯೂ ಒಂದು ಬೇರೆ ವರ್ಗವೇ ಆಗಿರುತ್ತಾನೆ. +ಇದು ಫ್ಲೇಟೊಗೆ ತಿಳಿದಿರಲಿಲ್ಲ. +ಫ್ಲೇಟೊ ಮಾಡಿದ ವಿಭಾಗ ಅವೈಜ್ಞಾನಿಕವಾಗಿದೆ. +ಫ್ಲೇಟೊನ ರಿಪಬ್ರಿಕ್‌ದಂತೆ ಚಾತುರ್ವರ್ಣ್ಯವೂ ಯಶಸ್ವಿಯಾಗುತ್ತದೆ. +ಮನುಷ್ಯರನ್ನು ನಾಲ್ಕು ವರ್ಗಗಳಲ್ಲಿ ನಿರ್ದಿಷ್ಟವಾಗಿ ವಿಭಾಗಿಸುವುದು ಸಾಧ್ಯವಿಲ್ಲ. +ಪೂರ್ವದಲ್ಲಿ ಮಾಡಿದ ನಾಲ್ಕು ವರ್ಣಗಳು ನಾಲ್ಕು ಸಾವಿರ ಜಾತಿಗಳಾಗಿ ಪರಿವರ್ತನೆ ಹೊಂದಿರುವುದೇ ಇದಕ್ಕೆ ಪ್ರಬಲವಾದ ಸಾಕ್ಷಿ. +ಇನ್ನು ಮೂರನೆಯ ಸಮಸ್ಯೆಯನ್ನು ಚಾತುರ್ವರ್ಣ ಎದುರಿಸಬೇಕಾಗಿದೆ. +ಒಂದು ವೇಳೆ ನೀವುಚಾತುರ್ವರ್ಣ ಪದ್ಧತಿಯನ್ನು ಸ್ಥಾಪಿಸಿದ್ದೀರಿ ಎಂದೇ ಇಟ್ಟುಕೊಳ್ಳೋಣ. +ಅದನ್ನು ನೀವು ಕಾಯ್ದುಕೊಳ್ಳುವುದು ಹೇಗೆ? +ಚಾತುರ್ವರ್ಣ್ಯ ಯಶಸ್ವಿಯಾಗಿ ನಡೆಯಬೇಕಾದರೆ ನಿಯಮಕ್ಕೆ ತಪ್ಪಿದವರನ್ನು ಶಿಕ್ಷಿಸದೆ ಹೋದರೆ ಜನರು ತಮ್ಮ ತಮ್ಮ ವರ್ಣಗಳಲ್ಲಿ ಉಳಿಯಲಾರರು. +ಮನುಷ್ಯ ಸ್ವಭಾವಕ್ಕೆ ವ್ಯತಿರಿಕ್ತವಾಗಿರುವುದರಿಂದ ಚಾತುರ್ವರ್ಣ್ಯ ಪದ್ಧತಿ ಮುರಿದು ಬೀಳುವುದು. +ಆಂತರಿಕ ಸಜ್ಜನಿಕೆಯಿಂದ ಅದು ಬದುಕಲಾರದು. +ಕಾನೂನಿನಿಂದಲೇ ಅದನ್ನು ನಿರ್ಬಂಧಿಸಬೇಕಾಗುವುದು. +ರಾಮಾಯಣದಲ್ಲಿ ರಾಮನು ಶಂಬೂಕನನ್ನು ಕೊಂದ ಪ್ರಸಂಗವೇ ಇದಕ್ಕೆ ಸಾಕ್ಷಿ. +ರಾಮನ ಈ ಕೃತಿಯನ್ನು ಆಕ್ಷೇಪಿಸುವವರುಂಟು. +ಆದರೆ ಹಾಗೆ ಟೀಕಿಸುವವರಿಗೆ ಆ ಪ್ರಸಂಗದ ಅರ್ಥವೇ ಆಗಿಲ್ಲ. +ರಾಮ ರಾಜ್ಯವು ಚಾತುರ್ವರ್ಣ್ಯದ ತತ್ವವನ್ನು ಆಧರಿಸಿದ ರಾಜ್ಯ ರಾಮನು ರಾಜನಾಗಿ ಚಾತುರ್ವರ್ಣ್ಯವನ್ನು ರಕ್ಷಿಸಲೇಬೇಕಾಗಿತ್ತು . +ಶಂಬೂಕನು ತನ್ನ ಶೂದ್ರವರ್ಣವನ್ನು ತೊರೆದು ಬ್ರಾಹ್ಮಣನಾಗಲು ಹೊರಟನು, ಆದುದರಿಂದ ಅವನನ್ನು ಕೊಲ್ಲುವುದು ರಾಮನ ಕರ್ತವ್ಯವೇ ಆಗಿತ್ತು. +ಇದರಿಂದ ಶಿಕ್ಷಾವಿಧಾನ ಅವಶ್ಯಕವೆಂದು ಸಿದ್ಧವಾಗುತ್ತದೆ. +ಇಷ್ಟೇ ಅಲ್ಲ, ವರ್ಣವನ್ನು ಅತಿಕ್ರಮಿಸುವವರಿಗೆ ಶಿಕ್ಷೆ ಅಗತ್ಯವೆಂದು ಸಿದ್ಧವಾಗುತ್ತದೆ. +ವೇದವನ್ನು ಕೇಳುವ ಅಥವಾ ಓದುವ ಶೂದನಿಗೆ ನಾಲಗೆ ಕತ್ತರಿಸುವ ಅಥವಾ ಕಿವಿಗಳಲ್ಲಿ ಕರಗಿದ ಸೀಸವನ್ನು ಹೊಯ್ಯುವ ಶಿಕ್ಷೆ ಕೊಡಬೇಕೆಂದು ಮನುಸ್ಮೃತಿ ವಿಧಿಸುವುದು ಇದೇ ಕಾರಣದಿಂದ. +ಮನುಷ್ಯರನ್ನು ನಾಲ್ಕು ವರ್ಣಗಳಾಗಿ ಸಂಘಟಿಸಬಲ್ಲೆವೆಂದೂ, ೨ಂನೆಯ ಶತಮಾನದ ಸಮಾಜವನ್ನು ಮನುಸ್ಮೃತಿಯಲ್ಲಿ ನಿರೂಪಿಸಿದಂತಹ ಶಿಕ್ಷೆಗಳಿಗೆ ಒಪ್ಪಿಗೆ ನೀಡುವಂತೆ ಮನವೊಲಿಸಬಲ್ಲೆವೆಂದೂ ಚಾತುರ್ವರ್ಣ್ಯದ ಬೆಂಬಲಿಗರು ಆಶ್ವಾಸನೆ ಕೊಡಬೇಕು. +ತಮ್ಮ ಈ ಪದ್ಧತಿಯಲ್ಲಿ ಸ್ತೀಯರ ಸ್ಥಾನಮಾನವೇನೆಂಬುದನ್ನು ಚಾತುರ್ವರ್ಣ್ಯದ ಬೆಂಬಲಿಗರು ಯೋಚಿಸಿದಂತಿಲ್ಲ. +ಸ್ತ್ರೀಯರು ನಾಲ್ಕು ವರ್ಣಗಳಲ್ಲಿ ಹಂಚಿಕೊಳ್ಳತಕ್ಕದ್ದೇ? +ಅಥವಾ ತಮ್ಮ ತಮ್ಮ ಗಂಡಂದಿರ ವರ್ಣಕ್ಕೆ ಸೇರತಕ್ಕದ್ದೇ? +ಮದುವೆಯಿಂದಲೇ ಹೆಣ್ಣಿನ ಸ್ಥಾನ ನಿರ್ಣಯವಾಗುವುದಾದರೆ ಯೋಗ್ಯತಾನು ಸಾರವರ್ಣವೆಂಬ ಚಾತುರ್ವರ್ಣ್ಯದ ತತ್ವವೆಲ್ಲಿ ಉಳಿಯಿತು? +ಯೋಗ್ಯತಾನು ಗುಣವಾಗಿಯೇ ಅವರ ವರ್ಣವನ್ನು ನಿರ್ಣಯಿಸುವುದಾದರೆ ಆ ವರ್ಗೀಕರಣ ನಾಮ ಮಾತ್ರವೇ ಅಥವಾ ನಿಜವಾದದ್ದೇ? +ನಾಮ ಮಾತ್ರ ಎಂದಾದರೆ ಅದು ನಿಷ್ಪ್ರಯೋಜಕವಾಗುತ್ತದೆ. +ಮತ್ತು ಚಾತುರ್ವರ್ಣ್ಯವು ಸ್ತ್ರೀಯರಿಗೆ ಅನ್ವಯಿಸುವುದಿಲ್ಲವೆಂದು ಒಪ್ಪಬೇಕಾಗುತ್ತದೆ. +ಅದು ನಿಜವಾದ ವರ್ಗೀಕರಣವೆಂದ ಪಕ್ಷದಲ್ಲಿ, ನಿಯಮಕ್ಕನು ಸಾರವಾಗಿ ಸ್ತ್ರೀಯರನ್ನು ಯೋಧರನ್ನಾಗಿ, ಪುರೋಹಿತರನ್ನಾಗಿ ಒಪ್ಪಿಕೊಳ್ಳುವಿರಾ? +ಹಿಂದೂ ಸಮಾಜದಲ್ಲಿ ಉಪಧ್ಯಾಯಿನಿಯರುಂಟು; +ಸ್ತ್ರೀ ಬ್ಯಾರಿಸ್ಟರುಗಳು ಉಂಟು. +ಹೆಂಡ ತಯಾರಿಸುವ, ಕಸಾಯಿ ಖಾನೆ ನಡೆಸುವ ಸ್ತ್ರೀಯರನ್ನು ನಮ್ಮ ಸಮಾಜ ಒಪ್ಪಿಕೊಂಡಿತು. +ಚಾತುರ್ವರ್ಣ್ಯವನ್ನು ಸ್ತ್ರೀ ಯರಿಗೆ ಅನ್ವಯಿಸುವುದರಿಂದಲೇ ಹೀಗಾಗುವುದೆಂದು ಹೇಳುವುದು ಸಾಹಸದ ಮಾತು. +ಈ ಬಗೆಯ ಕಷ್ಟಗಳಿರುವುದರಿಂದ ಚಾತುರ್ವರ್ಣ್ಯ ಪದ್ಧತಿಯ ಪುನರುಜ್ಜೀವನ ಸಾಧ್ಯವೆಂದು ಯಾವ ಬುದ್ಧಿವಂತನೂ ನಂಬಲಾರನು. +ಚಾತುರ್ವರ್ಣ್ಯವು ಪ್ರಯೋಗ ಸಾಧ್ಯವೆಂದು ಗಹಿಸಿದರೂ ಕೂಡ ಅದು ತುಂಬ ದುಷ್ಟ ಪದ್ಧತಿಯೆಂದು ನಾನು ವಿರೋಧಿಸುತ್ತೇನೆ. +ಬ್ರಾಹ್ಮಣರು ಜ್ಞಾನ ಸಂಪಾದನೆ ಮಾಡಿಕೊಳ್ಳಬೇಕು. +ಕ್ಷತ್ರಿಯರು ಯುದ್ಧಕ್ಕೆ ಸಿದ್ಧರಾಗಿರಬೇಕು, ವೈಶ್ಯರು ವ್ಯಾಪಾರ ಮಾಡಬೇಕು, ಶೂದ್ರರು ಸೇವಕರಾಗಿರಬೇಕು ಎಂಬುದು ಶ್ರಮವಿಭಾಗ ಪದ್ಧತಿಯಂತೆ ತೋರುತ್ತದೆ. +ಶೂದ್ರರು ಸೇವೆಯನ್ನಲ್ಲದೆ ಇತರ ಕೆಲಸಗಳನ್ನು ಮಾಡುವ ಅವಶ್ಯಕತೆಯಿಲ್ಲವೇ ಅಥವಾ ಇದು ಇತರ ಕೆಲಸಗಳನ್ನು ಮಾಡಕೂಡದು ಎಂಬ ನಿಷೇಧವೇ? +ಮೂರು ವರ್ಣಗಳು ದ್ರವ್ಯಸಂಪಾದನೆ ಮಾಡಿ ಎಲ್ಲರನ್ನೂ ಸಲಹುವುದರಿಂದ ಶೂದ್ರರು ಸೇವೆ ಮಾಡಿಕೊಂಡಿದ್ದರೆ ಸಾಕು ಎನ್ನುವುದುಚಾತುರ್ವರ್ಣ್ಯ ಪ್ರತಿಪಾದಕರ ವಾದ. +ಬ್ರಾಹ್ಮಣರು ಜ್ಞಾನ ಸಂಪಾದಕರಾಗಿರುವುದರಿಂದ ಶೂದ್ರನು ಅವರಿಂದತನಗೆ ಬೇಕಾದುದನ್ನು ಕೇಳಿ ತಿಳಿಯಬಹುದು. +ಅಂದರೆ ಅವನಿಗೆ ಶಿಕ್ಷಣ ಯಾಕೆ ಬೇಕು? +ರಕ್ಷಣೆ ಮಾಡಲುಕ್ಷತ್ರಿಯರು ಸಿದ್ಧರಾಗಿರುವುದರಿಂದ ಶೂದ್ರನು ಶಸ್ತ್ರ ಹಿಡಿಯಬೇಕಾಗಿಲ್ಲ. +ಈ ವಾದದ ಮೇರೆಗೆ ಮೇಲಿನಮೂರು ವರ್ಣಗಳು ಪಾಲಕರು ಮತ್ತು ಶೂದ್ರ ಅವರ ಪಾಲನೆಯಲ್ಲಿವಾತ ಎಂದಾಗುತ್ತದೆ. +ಹೀಗೆ ಈವಾದ ಸರಳ ಮತ್ತು ಆಕರ್ಷಕವಾಗಿ ಗೋಚರಿಸುತ್ತದೆ. +ಆದರೆ ಇದು ಮೋಸಕ್ಕೆ ಅಥವಾ ಅನ್ಯಾಯ,ಪ್ರಮಾದಗಳಿಗೆ ಅವಕಾಶ ಕೊಡಲಾರದೆಂದು ನನಗೆ ತೋರದು. +ಬ್ರಾಹ್ಮಣರು, ಕ್ಷತ್ರಿಯರು ಹಾಗೂ ವೈಶ್ಯರು ತಮಗೆ ಒಪ್ಪಿಸಿದ ಕರ್ತವ್ಯವನ್ನು ಸರಿಯಾಗಿ ನಿರ್ವಹಿಸದೇ ಹೋದರೆ ಏನು ಗತಿ? +ತದ್ವಿರುದ್ಧವಾಗಿ ಅವರು ತಮ್ಮ ತಮ್ಮ ವರ್ಣದ ಕೆಲಸಗಳನ್ನು ಸರಿಯಾಗಿ ನಿರ್ವಹಿಸುತ್ತಿದ್ದು ಪರಸ್ಪರರ ಬಗೆಗೆ ಅಥವಾ ಶೂದ್ರರ ಬಗೆಗೆ ತಮ್ಮ ಕರ್ತವ್ಯಗಳನ್ನು ಕಡೆಗಣಿಸಿದರೆ ಏನು ಮಾಡುವುದು? +ಮೊದಲ ಮೂರು ವರ್ಣಗಳು ಶೂದ್ರನನ್ನು ನ್ಯಾಯವಾಗಿ ನಡೆಸಿಕೊಳ್ಳದಿದ್ದರೆ, ಅಥವಾ ಒಗ್ಗಟ್ಟನಿಂದ ಅವನನ್ನು ಕೆಳಮೆಟ್ಟದರೆ ಅವನಿಗೇನು ಹಾದಿ. +ಇತರ ಮೂರು ವರ್ಣಗಳು ಅಜ್ಜಾನಿಗಳೆಂಬುದನ್ನು ಅರಿತು ಅದರಿಂದ ದುರ್ಲಾಭ ಪಡೆಯುವುದಕ್ಕೆ ಬ್ರಾಹ್ಮಣನು ನಿಂತರೆ ಕ್ಷತ್ರಿಯ, ವೈಶ್ಯ, ಶೂದ್ರ ಈ ಮೂರು ವರ್ಣಗಳನ್ನು ರಕ್ಷಿಸುವವರು ಯಾರು? +ಕ್ಷತ್ರಿಯನು ರಕ್ಷಣೆಗೆ ಬದಲಾಗಿ ಲೂಟಿಗೆ ನಿಂತಲ್ಲಿ ಇತರ ಮೂರು ವರ್ಣಗಳಿಗೆ, ವಿಶೇಷವಾಗಿ ಶೂದ್ರನಿಗೆ ಸ್ಥಾತಂತ್ರ್ಯವೆಲ್ಲಿ ಉಳಿದೀತು? +ಈ ವರ್ಣಗಳು ಪರಸ್ಪರ ಅವಲಂಬಿಗಳಾಗಿರುವುದು ಅನಿವಾರ್ಯ. +ಆದರೆ ಪ್ರತಿಯೊಬ್ಬನಿಗೆ ಜೀವನಾವಶ್ಯಕವಾದ ವಿಷಯದಲ್ಲಿ ಕೂಡ ಪರವಾಲಂಬನೆ ಬೇಕೇ? +ಶಿಕ್ಷಣ ಪ್ರತಿಯೊಬ್ಬನಿಗೂ ಅವಶ್ಯಕ. +ಆತ್ಮ ರಕ್ಷಣೆಯ ಸಾಧನೋಪಾಯ ಪ್ರತಿಯೊಬ್ಬ ವ್ಯಕ್ತಿಗೂ ಅಗತ್ಯ. +ತನಗೆ ಶಿಕ್ಷಣವಿಲ್ಲದಿದ್ದರೂ ಪರವಾಗಿಲ್ಲ, ಆಯುಧಗಳಿಲ್ಲದಿದ್ದರೂ ಅಡ್ಡಿಯಿಲ್ಲ, ನೆರೆಯವನಿಗೆ ಅವೆರೆಡೂ ಇವೆಯಲ್ಲ; +ಹೀಗೆ ತೆಪ್ಪಗೆಕುಳಿತರೆ ನೆರೆಯವನು ಯಾವಾಗಲೂ ಸಹಾಯಕ್ಕೆ ಬಂದಾನೆಂಬ ನೆಚ್ಚಿಕೆಯೇನು? +ಈ ವಿಚಾರ ಸರಣಿಯೇ ಅಬದ್ಧವಾಗಿದೆ. +ಈ ಪದ್ಧತಿಯ ಬೆಂಬಲಿಗರು ಇಂತಹ ಪ್ರಶ್ನೆಗಳನ್ನು ವಿಚಾರಿಸುವುದೇ ಇಲ್ಲ. +ಆದರೆ ಇವು ಅಗತ್ಯದ ಪ್ರಶ್ನೆಗಳಾಗಿವೆ. +ಚಾತುರ್ವರ್ಣ್ಯದ ತತ್ವದ ಮೇರೆಗೆ ಮೊದಲ ಮೂರು ವರ್ಣಗಳು ಪಾಲಕರಾಗಿಯೂ ಶೂದ್ರ ವರ್ಣ ಪೋಷಿತರಾಗಿಯೂ ವರ್ತಿಸುವರೆಂದು ಭಾವಿಸಿದರೂ ಕೂಡ ಪಾಲಕರ ಕರ್ತವ್ಯ ಚ್ಯುತಿ ಅಥವಾ ಪ್ರಯತ್ನಪೂರ್ವಕ ಅನ್ಯಾಯಗಳಿಂದ ಪೋಷಿತ ವರ್ಗವನ್ನು ರಕ್ಷಿಸುವ ವಿಧಾನವೆಲ್ಲಿದೆ? +ವರ್ಣಗಳ ಪರಸ್ಪರ ಸಂಬಂಧ ಮೂಲತಃ ಪಾಲಕ-ಪೋಷಿತರಂತೆ ಇರಬೇಕೆಂಬುದು ತತ್ವವಾಗಿರಬಹುದು. +ಆದರೆ ಪ್ರತ್ಯಕ್ಷ ನಡವಳಿಕೆಯಲ್ಲಿ ಅದು ಒಡೆಯ-ಆಳು ಎಂಬ ಸಂಬಂಧವಾಗಿಯೇ ಬಂದಿದೆ. +ಬ್ರಾಹ್ಮಣ, ಕ್ಷತ್ರಿಯ ಹಾಗೂ ವೈಶ್ಯ ಈ ಮೂರು ವರ್ಣಗಳು ತಮ್ಮ ಪರಸ್ಪರ ಸ್ಥಾನಮಾನಗಳ ವಿಷಯದಲ್ಲಿ ಸಂತುಷ್ಟರಾಗಿರದಿದ್ದರೂ ಏನೋ ಒಂದು ರೀತಿಯ ಹೊಂದಾಣಿಕೆ ಮಾಡಿಕೊಂಡವು. +ಬ್ರಾಹ್ಮಣನು ಕ್ಷತ್ರಿಯನನ್ನು ಹೊಗಳಿ ಉಬ್ಬಿಸಿದನು,ಇಬ್ಬರು ಕೂಡಿ ವೈಶ್ಯನನ್ನು ತಮಗೆ ಅಧೀನ ಪಡಿಸಿಕೊಂಡರು. +ಆ ಮೇಲೆ ಮೂವರೂ ಕೂಡಿ ಶೂದ್ರನನ್ನು ಕೆಳಮೆಟ್ಟಲು ನಿರ್ಧರಿಸಿದರು. +ಶೂದನಿಗೆ ದ್ರವ್ಯ ಸಂಪಾದನೆಯ ಅವಕಾಶವನ್ನು ನಿರಾಕರಿಸಿದರು. +ಅವನುಇತರ ವರ್ಣಗಳನ್ನು ಮೀರಿ ಸ್ವಾತಂತ್ರ್ಯ ಹೊಂದಬಾರದಲ್ಲವೆ? +ತನ್ನ ಹಿತಾಸಕ್ತಿಗಳನ್ನು ಎಚ್ಚರಿಕೆಯಿಂದ ನೋಡಿಕೊಂಡಾನೆಂಬ ಭಯದಿಂದ ಅವನಿಗೆ ಜ್ಞಾನಾರ್ಜನೆಯನ್ನು ನಿರಾಕರಿಸಿದರು. +ತಮ್ಮ ಅಧಿಕಾರವನ್ನು ವಿರೋಧಿಸಿ ದಂಗೆಯೆದ್ದಾನೆಂದು ಅವನಿಗೆ ಆಯುಧಗಳು ದೊರೆಯದಂತೆ ಮಾಡಿದರು. +ಶೂದ್ರನನ್ನು ತ್ರೈವರ್ಣಿಕರು ಹೀಗೆ ನಡೆಸಿಕೊಂಡರೆಂಬುದನ್ನು ಮನುಸ್ಮತಿಯ ವಿಧಿ ನಿಷೇಧಗಳು ಸಿದ್ಧಪಡಿಸುತ್ತವೆ. +ಮನುವಿನ ವಿಧಿಗಳಿಗಿಂತ ಹೆಚ್ಚು ಕುಖ್ಯಾತವಾದ ವಿಧಿಗಳು ಇನ್ನೆಲ್ಲಿಯೂ ಇಲ್ಲ. +ಜಗತ್ತಿನಲ್ಲಿ ಯಾವುದೇ ಭಾಗದಲ್ಲಿ ನಡೆದ ಸಾಮಾಜಿಕ ಅನ್ಯಾಯವಾದರೂ ಈ ಅನ್ಯಾಯದ ಮುಂದೆ ಪೇಲವವಾಗಿ ಕಂಡೀತು. +ಮಹಾ ಜನಸಮೂಹ ಈ ಸಾಮಾಜಿಕ ಅನಿಷ್ಟಗಳನ್ನು ಯಾಕೆ ತೆಪ್ಪಗೆ ಸಹಿಸುತ್ತಾ ಬಂದಿದೆ? +ಜಗತ್ತಿನ ಬೇರೆ ಬೇರೆ ಪ್ರದೇಶಗಳಲ್ಲಿ ಸಾಮಾಜಿಕ ಕ್ರಾಂತಿಗಳಾಗಿವೆ. +ಭಾರತಲ್ಲಿ ಸಾಮಾಜಿಕ ಕ್ರಾಂತಿಗಳು ಯಾಕೆ ನಡೆಯಲಿಲ್ಲ? +ಇದು ನನ್ನನ್ನು ಸದಾ ಕಾಡುತ್ತಿರುವ ಪ್ರಶ್ನೆ. +ಈ ಪ್ರಶ್ನೆಗೆ ಇರುವುದು ಒಂದೇ ಉತ್ತರ. +ಅದೇನೆಂದರೆ ಚಾತುರ್ವರ್ಣ್ಯದ ಪದ್ಧತಿಯ ಪರಿಣಾವಾಗಿ ಹಿಂದೂ ಸಮಾಜದ ಕೆಳವರ್ಗಗಳು ದಂಗೆಯೇಳಲಾರದಷ್ಟು ದುರ್ಬಲಗೊಳಿಸಲ್ಪಟ್ಟವೆ. +ಆಯುಧಧಾರಣೆ ಅವರಿಗೆ ನಿರಾಕೃತವಾಗಿತ್ತು . +ಆಯುಧಗಳಿಲ್ಲದೆ ದಂಗೆಯೇಳುವುದು ಹೇಗೆ? +ಅವರೆಲ್ಲ ಬೇಸಾಯಗಾರರಾಗಿದ್ದರು. +ಅಥವಾ ಬೇಸಾಯದ ವೃತ್ತಿಯನ್ನು ಅವರ ಮೇಲೆ ಒತ್ತಾಯದಿಂದ ಹೇರಲಾಗಿತ್ತು. +ನೇಗಿಲ ಮೊನೆಗಳನ್ನು ಖಡ್ಗಗಳಾಗಿ ಪರಿವರ್ತಿಸಲು ಅವರಿಗೆ ಅವಕಾಶವಿರಲಿಲ್ಲ. +ಅವರ ಕೈಯಲ್ಲಿ ಖಡ್ಗವಿರಲಿಲ್ಲ. +ಆದ್ದರಿಂದ ಯಾರು ಬೇಕಾದರೂ ಬಂದು ಅವರ ತಲೆಯ ಮೇಲೆ ಕುಳಿತು ಕೊಳ್ಳಬಹುದಾಗಿತ್ತು. +ಚಾತುರ್ವರ್ಣ್ಯದ ಪರಿಣಾಮವಾಗಿ ಅವರಿಗೆ ಶಿಕ್ಷಣ ದೊರೆಯಲಿಲ್ಲ. +ತಮ್ಮ ವಿಮೋಚನೆಯ ಹಾದಿಯೇನೆಂದು ವಿಚಾರ ಮಾಡುವ ಶಕ್ತಿಯಿರಲಿಲ್ಲ. +ಅಧಮ ಸ್ಥಾನವೇ ಅವರಿಗೆ ಸ್ಥಿರವಾಯಿತು. +ವಿಮೋಚನೆಯ ಹಾದಿ ತಿಳಿಯದೆ, ವಿಮೋಚನೆಗೆ ಆಸ್ಪದವೂ ಇಲ್ಲದೆ ಹೋದುದರಿಂದ ಅವರು ಶಾಶ್ವತವಾಗಿ ಗುಲಾಮಗಿರಿಗೆ ಹೊಂದಿಕೊಂಡರು, ಅದೇ ತಮ್ಮ ಹಣೆಬರಹವೆಂದು ಸುಮ್ಮನಾದರು. +ಯೂರೋಪ್‌ಖಂಡದಲ್ಲಿ ಕೂಡ ಬಲಿಷ್ಠರು ಬಲಹೀನರನ್ನು ಕೆಳಕ್ಕೆ ಮೆಟ್ಟಿ ಹಾಳುಮಾಡದೆ ಇಲ್ಲ. +ಆದರೆ ಭಾರತದಲ್ಲಿ ಅಂತಹ ಲಜ್ಜಾಸ್ಪದ ದುರ್ಬಲತೆಗೆ ಅವರು ದಲಿತರನ್ನು ಗುರಿಮಾಡಲಿಲ್ಲ. +ಬಲಿಷ್ಠರ ಮತ್ತು ಬಲಹೀನರ ನಡುವೆ ಸಾಮಾಜಿಕ ಹೋರಾಟ ಯೂರೋಪಿನಲ್ಲಿ ಉಗ್ರವಾಗಿ ನಡೆದುದುಂಟು. +ಆದರೆ ಅಲ್ಲಿಯ ದುರ್ಬಲ ವರ್ಗಕ್ಕೆ ದೈಹಿಕ ಆಯುಧದಿಂದ ರಕ್ಷಣೆ ಮಾಡಿಕೊಳ್ಳುವ ಸ್ವಾತಂತ್ರ್ಯವಿದೆ. +ರಾಜಕೀಯ ಆಯುಧವಿದೆ. +ನೈತಿಕ ಆಯುಧವೂ ಇದೆ. +ಯೂರೋಪಿನಲ್ಲಿ ಬಲಿಷ್ಠರು ಬಲಹೀನರಿಗೆ ಈ ಮೂರು ಆಯುಧಗಳನ್ನು ಎಂದೂ ನಿರಾಕರಿಸಲಿಲ್ಲ. +ಚಾತುರ್ವರ್ಣ್ಯದ ಭಾರತದಲ್ಲಿ ಮಾತ್ರ ಜನಕ್ಕೆ ಈ ಮೂರೂ ನಿರಾಕೃತವಾದವು. +ಜನರನ್ನುನಿಸ್ಲತ್ವಗೊಳಿಸಿ, ನಿಷ್ಠಿಯಗೊಳಿಸಿ, ಅಸಹಾಯಕ ಸ್ಥಿತಿಗೆ ಇಳಿಸುವ ಈ ಪದ್ಧತಿಗಿಂತ ಹೀನವಾದುದು ಇನ್ನೊಂದು ಇರಬಾರದು. +ಇದೇನು ಅತಿಶಯೋಕ್ತಿಯಲ್ಲ. +ಇತಿಹಾಸ ಹೇರಳವಾದ ಸಾಕ್ಷಿಗಳನ್ನು ಒದಗಿಸುತ್ತದೆ. +ಸ್ವಾತಂತ್ರ್ಯ ಗೌರವ ಮತ್ತು ಕೀರ್ತಿಗೆ ಆಸ್ಪದವಾಗಿದ್ದ ಒಂದೇ ಒಂದು ಕಾಲಾವಧಿ ಭಾರತೀಯ ಚರಿತ್ರೆಯಲ್ಲಿದೆ. +ಅದು ಮೌರ್ಯ ಸಾಮ್ರಾಜ್ಯದ ಕಾಲಾವಧಿ. +ಮಿಕ್ಕೆಲ್ಲ ಕಾಲಗಳಲ್ಲಿ ಭಾರತ ಅಪಜಯ, ಅಂಧಕಾರಗಳಲ್ಲಿಯೇ ನರಳಿತು. +ಆದರೆ ಮೌರ್ಯರ ಕಾಲದಲ್ಲಿ ಚಾತುರ್ವರ್ಣ್ಯ ಸಂಪೂರ್ಣವಾಗಿ ನಾಶವಾಗಿತ್ತು. +ಬಹುಜನ ಸಮಾಜವಾಗಿದ್ದ ಶೂದ್ರರು ವಿಕಾಸವಾಗಿ ದೇಶದ ಪ್ರಭುಗಳಾದರು. +ಚಾತುರ್ವಣ್ಯದ ಅಧಿಕಾರವಿದ್ದ ಕಾಲ ಅಪಜಯ, ಅಂಧಕಾರಗಳ ಕಾಲ. +ದೇಶದ ಜನರಲ್ಲಿ ಬಹುಭಾಗವನ್ನು ಅದು ಹೀಸಸ್ಥಿತಿಗೆ ದೂಡಿತು. +ಚಾತುರ್ವರ್ಣ್ಯ ಹೊಸದಲ್ಲ. +ಅದು ವೇದಗಳಷ್ಪೇ ಪ್ರಾಚೀನವಾದುದು. +ಆದುದರಿಂದಲೇ ಅದರ ಬಗ್ಗೆ ಯೋಚಿಸಬೇಕೆಂದು ಆರ್ಯ ಸಮಾಜಗಳು ಹೇಳುತ್ತಿವೆ. +ಸಾಮಾಜಿಕ ಸಂಘಟನೆಯ ದೃಷ್ಟಿಯಿಂದ ಹಿಂದೆಯೇ ಅದನ್ನು ಪ್ರಯೋಗಿಸಿ ನೋಡಿ, ಅದು ಅಯಶಸ್ವಿಯೆಂದು ಕಂಡೂ ಆಗಿದೆ. +ಕ್ಷತ್ರಿಯರನ್ನು ನಿರ್ವಂಶಗೊಳಿಸಲು ಎಷ್ಟೋ ಸಲ ಬ್ರಾಹ್ಮಣರು ಯತ್ನಿಸಿದರು. + ಬ್ರಾಹ್ಮಣರ ನಿರ್ಮೂಲನೆಗೆ ಕ್ಷತ್ರಿಯರು ಎಷ್ಟು ಬಾರಿ ಯತ್ನಿಸಿದರು. +ಬ್ರಾಹ್ಮಣ-ಕ್ಷತ್ರಿಯರ ಹೋರಾಟದ ಪ್ರಸಂಗಗಳು ಮಹಾಭಾರತ ಹಾಗೂ ಪುರಾಣಗಳಲ್ಲಿ ತುಂಬಾ ಇವೆ. +ಬ್ರಾಹ್ಮಣನೂ ಕ್ಷತ್ರಿಯನೂ ಬೀದಿಯಲ್ಲಿ ಎದುರಾದರೆ ಮೊದಲು ನಮಸ್ಕರಿಸಬೇಕಾದವನು ಯಾರು, ಯಾರು ಯಾರಿಗೆ ಹಾದಿ ಬಿಡಬೇಕು ಎಂಬಂತಹ ಕ್ಷುಲ್ಲಕ ವಿಷಯಗಳಲ್ಲಿಕೂಡ ಅವರು ಜಗಳವಾಡಿದರು. +ಬ್ರಾಹ್ಮಣನು ಕ್ಷತ್ರಿಯನಿಗೆ ಕಣಿಸುರು, ಕ್ಷತ್ರಿಯನು ಬ್ರಾಹ್ಮಣನಿಗೆ ಕಣ್ಣುರಿ ಆಗಿದ್ದುದಷ್ಟೇ ಅಲ್ಲ; +ಕ್ಷತ್ರಿಯರು ನಿರಂಕುಶಾಧಿಕಾರಿಗಳಾಗಿ ಜನಸಾಮಾನ್ಯರ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದಂತೆಯೂ ತೋರುತ್ತದೆ. +ಚಾತುರ್ವರ್ಣ್ಯದ ಮೇರೆಗೆ ಆಯುಧ ಹೀನರಾದ ಇತರ ಮೂರು ವರ್ಣಗಳವರು ಅಸಹಾಯಕರಾಗಿ ದೇವರಿಗೆ ಮೊರೆಯಿಡುತ್ತಿದ್ದಿರಬೇಕು. +ಕ್ಷತ್ರಿಯರ ನಿರ್ಮೂಲನಕ್ಕಾಗಿಯೇ ಕೃಷ್ಣನ ಅವತಾರವಾಯಿತೆಂದು ಭಾಗವತ ಸ್ಪಷ್ಟವಾಗಿ ಹೇಳುತ್ತದೆ. +ಹೀಗೆ ವರ್ಣಗಳಲ್ಲಿ ಪರಸ್ಪರ ದ್ವೇಷ-ವೈರಗಳ ನಿದರ್ಶನಗಳು ಇಷ್ಟೊಂದು ಇರುವಾಗ ಚಾತುರ್ವರ್ಣ್ಯ ನಮಗೆ ಆದರ್ಶವಾಗಬಲ್ಲದೆ? +ಹಿಂದೂ ಸಮಾಜವನ್ನು ಆ ಮಾದರಿಯಲ್ಲಿ ನಿರ್ಮಿಸಲು ಯಾರು ಬಯಸಿಯಾರು? +ನಿಮ್ಮೊಂದಿಗೆ ಇರದ ಹಾಗೂ ನಿಮ್ಮ ಆದರ್ಶಕ್ಕೆ ವಿರೋಧಿಗಳಾದವರ ಮಾತನ್ನು ಇಲ್ಲಿಯವರೆಗೆ ಹೇಳಿದೆ. +ನಿಮ್ಮೊಂದಿಗೆ ಇದ್ದೂ ನಿಮ್ಮ ಪರವಾಗಿ ಇಲ್ಲ ಎಂಬಂತೆ ಕೆಲವರಿದ್ದಾರೆ. +ಅವರ ದೃಷ್ಟಿಕೋನವನ್ನು ನಿಮ್ಮೆದುರಿಗೆ ಇಡಬೇಕೋ ಬೇಡವೋ ಎಂದು ನಾನು ಅನುಮಾನಿಸುತ್ತಿದ್ದೆ. +ವಿಚಾರ ಮಾಡಿ ಮಾಡಿದ ಮೇಲೆ ಅದನ್ನು ನಿಮ್ಮೆದುರು ಮಂಡಿಸಲೇಬೇಕೆಂದು ನಿರ್ಧರಿಸಿದೆ. +ಅದಕ್ಕೆ ಎರಡು ಕಾರಣಗಳಿವೆ. +ಮೊದಲನೆಯದಾಗಿ, ಜಾತಿ ಸಮಸ್ಯೆಯ ವಿಷಯವಾಗಿ ಅವರ ಮನೋವೃತ್ತಿ ತಟಸ್ಥವಾಗಿದೆ. +ಎರಡನೆಯದಾಗಿ,ಅವರ ಸಂಖ್ಯೆ ಗಮನಾರ್ಹವೆನಿಸುವಷ್ಟು ದೊಡ್ಡದಾಗಿದೆ. +ಇವರಲ್ಲಿಯ ಒಂದು ಗುಂಪಿಗೆ ಹಿಂದೂಗಳ ಜಾತಿಪದ್ಧತಿಯಲ್ಲಿ ವೈಶಿಷ್ಟ್ಯವಾಗಲಿ, ಜಿಗುಪ್ಪಕರವಾದ ಅಂಶವಾಗಲಿ ತೋರುವುದಿಲ್ಲ. +ಮುಸ್ಲಿಮರಲ್ಲಿ, ಸಿಖ್ಜರಲ್ಲಿ, ಕ್ರೈಸ್ತರಲ್ಲಿ ಕೂಡ ಜಾತಿಗಳಿವೆಯೆಂದು ತೋರಿ ಅವರು ಸಮಾಧಾನ ಪಡುತ್ತಾರೆ. +ಈ ಪ್ರಶ್ನೆಯನ್ನು ವಿಚಾರಿಸುವಾಗ ನೀವು ಮೊದಲಿಗೆ ಒಂದು ಮಾತನ್ನು ನೆನಪಿಡಬೇಕು. +ಏನೆಂದರೆ ಮಾನವನ ಸಮಾಜ ಎಲ್ಲಿಯೂ ಒಂದು ಅಖಂಡತೆಯನ್ನು ಪಡೆದಿರುವುದಿಲ್ಲ. +ಅದರಲ್ಲಿ ಅನೇಕತೆಯಿರುತ್ತದೆ. +ಕ್ರಿಯಾ ಪ್ರಪಂಚದಲ್ಲಿ ವ್ಯಕ್ತಿ ಒಂದು ತುದಿಯಾದರೆ ಸಮಾಜ ಇನ್ನೊಂದು ತುದಿ. +ಇವೆರಡರ ನಡುವೆ ಸಾಂಫಿಕ ವ್ಯವಸ್ಥೆಗಳು ಅಂದರೆ ಕುಟುಂಬಗಳು, ಸ್ನೇಹಿತರು, ಸಹಕಾರಿ ಸಂಘಗಳು, ವ್ಯವಹಾರ ಸಂಸ್ಥೆಗಳು, ರಾಜಕೀಯ ಪಕ್ಷಗಳು, ಕಳ್ಳಕಾಕರ ಗುಂಪುಗಳು ಮುಂತಾದ ಚಿಕ್ಕದೊಡ್ಡ ವ್ಯಾಪ್ತಿಗಳಿರುವ ಏರ್ಪಾಡುಗಳಿರುತ್ತವೆ. +ಚಿಕ್ಕಗುಂಪುಗಳು ಸಾಮಾನ್ಯವಾಗಿ ನಿಖರವಾಗಿ ಹೊಂದಿಕೊಂಡಿದ್ದು ಜಾತಿಗಳಂತೆ ಪ್ರತ್ಯೇಕವಾಗಿರುತ್ತವೆ. +ಅವು ಅನುಸರಿಸುವ ಕಟ್ಟುಪಾಡು ಸಂಕುಚಿತವಾಗಿದ್ದು ಅನೇಕ ಸಲ ಸಮಾಜ ವಿರೋಧಿಯೂ ಆಗಿರುವುದುಂಟು. +ಈ ಮಾತು ಏಷ್ಯ ಖಂಡದ ಸಮಾಜಕ್ಕೆ ಹೇಗೊ ಹಾಗೆ ಯೂರೋಪಿನ ಸಮಾಜಕ್ಕೂ ಅನ್ವಯಿಸುತ್ತದೆ. +ಆದುದರಿಂದ ಆದರ್ಶ ಸಮಾಜವನ್ನು ರೂಪಿಸಲು ಕೇಳಬೇಕಾದುದು ಆ ಸಮಾಜದಲ್ಲಿ ಒಳಗುಂಪುಗಳು ಇವೆಯೋ ಇಲ್ಲವೋ ಎಂಬುದಲ್ಲ. +ಯಾಕೆಂದರೆ ಗುಂಪುಗಳು ಎಲ್ಲ ಸಮಾಜಗಳಲ್ಲಿಯೂ ಇರುತ್ತವೆ. +ಕಾರಣ ಕೇಳಬೇಕಾದ ಪ್ರಶ್ನೆಗಳು ಹೀಗಿವೆ : ಈ ಒಳಗಿನ ಗುಂಪುಗಳು ಎಷ್ಟು ಸಂಖ್ಯೆಯಲ್ಲಿವೆ ಮತ್ತು ಅರಿತುಕೊಂಡು ಪಾಲುಗೊಳ್ಳುವ ಹಿತಾಸಕ್ತಿಗಳು ಎಷ್ಟು ವಿಧವಾಗಿವೆ? +ವಿವಿಧ ಗುಂಪುಗಳ ನಡುವಿನ ಸಂಪರ್ಕ ಎಷ್ಟು ಪೂರ್ಣ ಹಾಗೂ ಸ್ಪತಂತ್ರವಾಗಿದೆ? +ಗುಂಪುಗಳನ್ನು ಪ್ರತ್ಯೇಕಿಸುವ ಶಕ್ತಿಗಳು, ಅವುಗಳನ್ನು ಕೂಡಿಸುವ ಶಕ್ತಿಗಳಿಗಿಂತ ಹೆಚ್ಚಾಗಿವೆಯೆ? +ಈ ಗುಂಪಿನ ಜೀವನಕ್ಕೆ ಇರುವ ಸಾಮಾಜಿಕ ಮಹತ್ವವೇನು? +ಗುಂಪು ಇತರರಿಂದ ಪ್ರತ್ಯೇಕವಾಗಿರುವುದಕ್ಕೆ ಸಂಪ್ರದಾಯ ಅಥವಾ ಸೌಲಭ್ಯದ ದೃಷ್ಟಿ ಕಾರಣವೊ ಅಥವಾ ಧರ್ಮ ಕಾರಣವೋ? +ಈ ಪ್ರಶ್ನೆಗಳಿಗೆ ಬರುವ ಉತ್ತರಗಳನ್ನು ನೋಡಿ. +ಆಮೇಲೆ ಹಿಂದೂಗಳಲ್ಲದ ವರ ಜಾತಿಭೇದಗಳೂ ಹಿಂದೂಗಳ ಜಾತಿಭೇದಗಳೂ ಒಂದೇ ಬಗೆಯವೋ ಅಲ್ಲವೋ ಎಂಬುದನ್ನು ನಿರ್ಧರಿಸಬಹುದು. +ಮಹಮ್ಮದೀಯರಲ್ಲಿ, ಸಿಖ್ಜ್ಬರಲ್ಲಿ ಹಾಗೂ ಕ್ರೈಸ್ತರಲ್ಲಿರುವ ಒಳಜಾತಿಗಳು ಹಿಂದೂಗಳಲ್ಲಿಯ ಜಾತಿಗಳಿಗಿಂತ ಸಂಪೂರ್ಣ ಬೇರೆ ಆಗಿವೆ. +ಮೊದಲನೆಯದಾಗಿ ಹಿಂದೂ ಜಾತಿಗಳಲ್ಲಿ ಐಕ್ಯವನ್ನುಂಟು ಮಾಡುವಂತಹ ಪರಸ್ಪರ ಸಂಬಂಧಗಳು ಇಲ್ಲವೇ ಇಲ್ಲ; +ಹಿಂದೂಗಳಲ್ಲದವರಲ್ಲಿ ಅವು ಅನೇಕವಾಗಿವೆ. +ಭಿನ್ನಭಿನ್ನ ಗುಂಪುಗಳಲ್ಲಿ ಪರಸ್ಪರ ಸಂಪರ್ಕ ಹಾಗೂ ಪರಸ್ಪರ ಕೊಡುಕೊಳ್ಳುವಿಕೆ ಎಷ್ಟರ ಮಟ್ಟಿಗೆ ಇರುವುದೋ ಅಷ್ಟರಮಟ್ಟಿಗೆ ಆ ಸಮಾಜ ಬಲಿಷ್ಠವಾಗಿರುತ್ತದೆ. +ಇವುಗಳನ್ನು ಕಾರ್ಲ್ರೆಲನು “ಜೈವಿಕತಂತುಗಳು' ಅಂದರೆ ಪ್ರತ್ಯೇಕವಾಗಿರುವ ಅಂಗಗಳನ್ನು ಪುನಃ ಎಳೆದು ಕೂಡಿಸುವಂತಹ ಸ್ಥಿತಿಸ್ಥಾಪಕರ ತಂತುಗಳು ಎಂದು ಕರೆಯುತ್ತಾರೆ. +ಜಾತಿಪದ್ಧತಿಯಿಂದ ಪ್ರತ್ಯೇಕಿತವಾದ ಗುಂಪುಗಳನ್ನು ಪುನಃ ಕೂಡಿಸಿಕೊಡುವ ಶಕ್ತಿ ಹಿಂದೂಗಳಲ್ಲಿ ಇಲ್ಲ. +ಹಿಂದೂಗಳಲ್ಲದವರಲ್ಲಿ ಇಂತಹ ಜೈವಿಕ ಸೂತ್ರಗಳು ಅನೇಕವಾಗಿವೆ. +ಹಿಂದೂಗಳಲ್ಲಿದ್ದಂತೆ ಇತರರಲ್ಲಿ ಕೂಡ ಜಾತಿಗಳಿದ್ದರೂ, ಹಿಂದೂಗಳಲ್ಲಿ ಜಾತಿಗಿರುವ ಮಹತ್ವ ಇತರರಲ್ಲಿ ಇಲ್ಲ. +ಒಬ್ಬ ಮಹಮ್ಮದೀಯನನ್ನೋ, ಸಿಖ್ಬನನ್ನೋ, “ನೀನು ಯಾರು?” ಎಂದು ಕೇಳಿ. +ತಾನು ಮಹಮ್ಮದೀಯನೆಂದೂ, ಸಿಖ್ಹನೆಂದೂ ಹೇಳುತ್ತಾರೆ. +ತನಗೆ ಒಳಜಾತಿಯೊಂದಿದ್ದರೂ ಅದನ್ನು ಅವನು ತಿಳಿಸುವುದಿಲ್ಲ. +ತಾನು ಮುಸ್ಲಿಮನೆಂದು ಅವನು ಹೇಳಿದರೆ, “ನೀನು ಶಿಯಾ ಅಥವಾ ಸುನ್ನಿ, ಶೇಖ್‌ಅಥವಾ ಸೈಯದ್‌, ಖಟಕ್‌ ಅಥವಾ ಪಿಂಜಾರ ಇವುಗಳಲ್ಲಿ ಯಾವುದಕ್ಕೆ ಸೇರಿದವನು?” ಎಂದುಕೇಳುವುದಿಲ್ಲ. +ತಾನು ಸಿಖ್ಹನೆಂದು ಹೇಳಿದರೆ “ಜಾಟ್‌, ರೋಡ್‌, ಮಜಬಿ, ರಾಮದಾಸಿ ಇವುಗಳಲ್ಲಿ ನೀನು ಯಾವ ಪಂಗಡಕ್ಕೆ ಸೇರಿದವನು?” ಎಂದು ನೀವು ಕೇಳುವುದಿಲ್ಲ. +ಆದರೆ ಅದೇ ಒಬ್ಬನು ತಾನು “ಹಿಂದು” ಎಂದಿಷ್ಟೆ ಹೇಳಿದರೆ ನಿಮಗೆ ಸಾಲದು, ಯಾವ ಜಾತಿಯೆಂದು ಕೇಳದೆ ಬಿಡುವುದಿಲ್ಲ. +ಅದೇಕೆ?ಹಿಂದೂಗಳಲ್ಲಿ ಜಾತಿ ಅಷ್ಟು ಮುಖ್ಯವಾಗಿದೆ. +ಅದು ತಿಳಿಯದೇ ಅ ಮನುಷ್ಯ ಎಂಥವನೆಂದು ನಿಮಗೆ ತಿಳಿಯಲಾರದು. +ಜಾತಿಯ ಅರ್ಥ ಹಿಂದೂಗಳಲ್ಲಿ ಬೇರೆ ಇತರರಲ್ಲಿ ಬೇರೆಯೆಂಬುದು ನಿಮಗೆ ಸ್ಪಷ್ಟವಾಗಬೇಕಾದರೆ ಹಿಂದೂಗಳಲ್ಲಿ ಜಾತಿಯ ಕಟ್ಟುಗಳನ್ನು ಮೀರಿದವರಿಗೆ ಏನಾಗುವುದೆಂಬುದನ್ನು ಗಮನಿಸಬೇಕು. +ಮುಸ್ಲಿಮರಲ್ಲಾಗಲಿ ಸಿಖ್ಹರಲ್ಲಾಗಲಿ ಜಾತಿಭಂಗ ಮಾಡಿದವನಿಗೆ ಬಹಿಷ್ಕಾರ ಹಾಕುವುದಿಲ್ಲ. +“ಬಹಿಷ್ಕಾರ'ವೆಂಬ ಕಲ್ಪನೆ ಕೂಡ ಅವರಲ್ಲಿ ಇಲ್ಲ. +ಹಿಂದೂಗಳಲ್ಲಿ ಅದು ನಿಶ್ಚಿತ ಶಿಕ್ಷೆ. +ಜಾತಿ ವಿಷಯದಲ್ಲಿ ಹಿಂದೂ ಹಾಗೂ ಇತರರಲ್ಲಿರುವ ಎರಡನೆಯ ಭೇದವಿದು. + ಇನ್ನು ಮೂರನೆಯ ಭೇದವೊಂದಿದೆ; + ಅದು ಹೆಚ್ಚು ಮಹತ್ವದ್ದೂ ಆಗಿದೆ. +ಹಿಂದೂಗಳಲ್ಲಿ ಇದ್ದಂತೆ ಇತರರಲ್ಲಿ ಜಾತಿಗೆ ಧಾರ್ಮಿಕ ಪ್ರತಿಷ್ಠೆಯಿಲ್ಲ. +ಇತರರಲ್ಲಿ ಜಾತಿಯೆಂಬುದು ಒಂದು ವ್ಯವಹಾರ ಅಥವಾ ರೂಢಿಮಾತ್ರ. +ಅದೊಂದು ಪಾವನವಾದ ಏರ್ಪಾಡಲ್ಲ. +ಅದನ್ನು ಅವರೇ ನಿರ್ಮಿಸಲಿಲ್ಲ. +ಹೇಗೂ ಹಿಂದಿನಿಂದ ಉಳಿದುಕೊಂಡು ಬಂದ ಒಂದು ಅಂಶವದು. +ಅದನ್ನೊಂದು ಧಾರ್ಮಿಕ ವಿಧಿಯೆಂದು ಅವರು ಪರಿಗಣಿಸುವುದಿಲ್ಲ. +ಹಿಂದೂಗಳಲ್ಲಾದರೆ ಜಾತಿಜಾತಿಗಳನ್ನು ಪ್ರತ್ಯೇಕವಾಗಿರಿಸುವಂತೆ ಧರ್ಮ ವಿಧಿಸುತ್ತದೆ. +ಅದೊಂದು ಸದಾಚಾರವೆಂದು ಹೇಳುತ್ತದೆ. +ಹಿಂದೂಗಳಲ್ಲಿ ಜಾತಿಯನ್ನು ಮೀರಿದರೆ ಧರ್ಮವನ್ನು ಮೀರಿದಂತೆಯೇ. +ಇತರರಲ್ಲಿ ಹಾಗೇನೂ ಅಲ್ಲ. +“ಇತರರಲ್ಲಿಯೂ ಜಾತಿಗಳಿರುವುದರಿಂದ ನಮ್ಮಲ್ಲಿ ಜಾತಿಗಳಿರುವುದೇನು ಮಹಾ” ಎಂದುಕೊಳ್ಳುವುದು ಅಪಾಯಕರವಾದ ಭ್ರಾಂತಿ. +ಹಿಂದೂಗಳು ಈ ಭ್ರಾಂತಿಯಿಂದ ಎಷ್ಟು ಬೇಗನೆ ಮುಕ್ತರಾಗುವವರೋ ಅಷ್ಟು ಒಳ್ಳೆಯದು. +ಇನ್ನೂ ಕೆಲವರಿದ್ದಾರೆ ಅವರ ಅಭಿಪ್ರಾಯದಲ್ಲಿ “ಜಾತಿ'ಯ ಪ್ರಶ್ನೆಗೆ ಮಹತ್ವವೇ ಇಲ್ಲ. +ಇಷ್ಟೆಲ್ಲ ಜಾತಿಗಳಿದ್ದರೂ ಹಿಂದೂ ಧರ್ಮ ಇನ್ನೂ ಉಳಿದಿಲ್ಲವೇ? +ಇನ್ನು ಮುಂದೆ ಕೂಡ ಉಳಿಯುವುದಕ್ಕೆ ಅದು ಸಮರ್ಥವಾಗಿದೆಯೆಂಬುದಕ್ಕೆ ಅದರ ಈವರೆಗಿನ ಇತಿಹಾಸವೇ ಸಾಕ್ಷಿ ಎಂದು ಅವರು ವಾದಿಸುತ್ತಾರೆ. +ಈ ಅಭಿಪ್ರಾಯವನ್ನು ಪ್ರೊ.ಎಸ್‌.ರಾಧಾಕೃಷ್ಣನ್‌ ಅವರು ತಮ್ಮ ಹಿಂದೂ ಜೀವನ ದೃಷ್ಟಿಯೆಂಬ ಗ್ರಂಥದಲ್ಲಿ ಹೀಗೆ ತಿಳಿಸಿದ್ದಾರೆ, “ಈ ನಾಗರಿಕತೆ ಬಾಳಿ ಬಂದ ಅವಧಿ ಅಲ್ಪವಾಗಿಲ್ಲ. +ನಾಲ್ಕು ಸಾವಿರ ವರ್ಷಗಳಷ್ಟು ಪೂರ್ವದಲ್ಲಿಯೂ ಇದು ಇತ್ತೆಂದು ಐತಿಹಾಸಿಕ ದಾಖಲೆಗಳಿವೆ. +ಆ ಕಾಲಕ್ಕೆ ಇದು ಒಂದು ಪರಿಣತಿಯನ್ನು ಪಡೆದಿದ್ದು, ನಡುನಡುವೆ ಸ್ವಲ್ಪ ನಿಧಾನ ಹಾಗೂ ನಿಶ್ಚಲವೆನಿಸಿದ್ದರೂ ಇಂದಿನವರೆಗೆ ಅವಿಚ್ಛಿನ್ನವಾಗಿ ನಡೆದುಬಂದಿದೆ. +ನಾಲ್ಕೈದು ಸಾವಿರ ವರ್ಷಗಳ ಆಧ್ಯಾತ್ಮಿಕ ಚಿಂತನ ಹಾಗೂ ಅನುಭವಗಳ ಒತ್ತಡವನ್ನು ಅದು ತಾಳಿಕೊಂಡಿದೆ. +ಇತಿಹಾಸದ ಆರಂಭ ಕಾಲದಿಂದ ವಿವಿಧ ಜನಾಂಗ ಹಾಗೂ ಸಂಸ್ಕೃತಿಗಳಿಗೆ ಸೇರಿದ ಜನರು ಭಾರತದೊಳಗೆ ಸಾಲುಸಾಲಾಗಿ ಬರುತ್ತಲೇ ಇದ್ದರೂ ಹಿಂದೂತ್ವ ತನ್ನ ಉನ್ನತ ಸ್ಥಾನವನ್ನು ಸಮರ್ಥವಾಗಿ ಕಾಯ್ದುಕೊಂಡಿದೆ. +ರಾಜಕೀಯ ಬೆಂಬಲದಿಂದ ಜನರನ್ನು ಮತಾಂತರಗೊಳಿಸಿ ತಮ್ಮೊಳಗೆ ಸೇರಿಸಿಕೊಳ್ಳುವ ಮತಗಳು ಕೂಡ ಬಹುಸಂಖ್ಯಾತ ಹಿಂದೂಗಳನ್ನು ಬಲಾತ್ಕರಿಸಲಾರದೆ ಹೋದವು. +ಹಿಂದೂ ಸಂಸ್ಕೃತಿಯಲ್ಲಿ ಅನನ್ಯವಾದೊಂದು ಜೀವಸತ್ವವಿದೆ. +ಗಿಡದಲ್ಲಿ ಜೀವ ರಸವಿದೆಯೊ ಇಲ್ಲವೊ ಎಂಬುದನ್ನು ಕಾಣಲು ಗಿಡವನ್ನು ಸೀಳಿ ನೋಡಬೇಕಾಗಿಲ್ಲ; +ಆದರಂತೆ ಹಿಂದೂ ಸಂಸ್ಕೃತಿಯ ಅಂತಃಸತ್ವವನ್ನು ಕಾಣಲು ಅದನ್ನು ಪೃಥಕ್ಕರಿಸಿ ಪರೀಕ್ಷಿಸಬೇಕಾಗಿಲ್ಲ”. +ಪ್ರೊ.ಎಸ್‌.ರಾಧಾಕೃಷ್ಣನ್‌ ಅವರು ಘನವಾದ ಪಾಂಡಿತ್ಯವುಳ್ಳವರೆಂದು ಪ್ರಸಿದ್ಧರಾಗಿದ್ದಾರೆ. +ಆದುದರಿಂದ ಅವರು ಹೇಳಿದ್ದೆಲ್ಲ ಆಳವಾದ ಚಿಂತನದಿಂದ ಬಂದುದೆಂದು ಭಾವಿಸಿ ಓದುಗರು ಅದರಿಂದ ಪ್ರಭಾವಿತರಾಗುತ್ತಾರೆ. +ಆದರೆ ನನ್ನ ಅಭಿಪ್ರಾಯವನ್ನು ಹೇಳಲು ನಾನು ಅನುಮಾನಿಸುವುದಿಲ್ಲ. +ಅವರ ಹೇಳಿಕೆ ಒಂದು ದುಷ್ಪ ತರ್ಕಕ್ಕೆ ಆಧಾರವಾದೀತೆಂದು ಅನ್ನಿಸುತ್ತದೆ. +"ಉಳಿದುಕೊಂಡು ಬಂದಿದೆ' ಎಂದರೆ ಉಳಿದುಕೊಳ್ಳಲು ಯೋಗ್ಯವಾಗಿದೆಯೆ ಎಂದರ್ಥವೇ? +ಒಂದು ಸಮಾಜ ಬದುಕುವುದೋ ಇಲ್ಲವೋ ಎಂಬುದು ಪ್ರಶ್ನೆಯಲ್ಲ, ಯಾವ ಸ್ಥಿತಿಯಲ್ಲಿ ಅದು ಬದುಕುತ್ತಿದೆಯೆಂಬುದು ಪ್ರಶ್ನೆ ಸಾಯದೆ ಉಳಿದುಕೊಳ್ಳುವ ರೀತಿಗಳು ಅನೇಕವಾಗಿವೆ. +ಆದರೆ ಅದೆಲ್ಲವೂ ಗೌರವಾರ್ಹವಾಗಿಲ್ಲ. +ವ್ಯಕ್ತಿಗೇ ಆಗಲಿ, ಸಮಾಜಕ್ಕೇ ಆಗಲಿ ಬದುಕುವುದು ಮತ್ತು ಗೌರವದಿಂದ ಬದುಕುವುದು ಇವೆರಡರ ಮಧ್ಯೆ ದೊಡ್ಡ ಅಂತರವಿದೆ. +ಯುದ್ಧದಲ್ಲಿ ಹೋರಾಡಿ ಗೆದ್ದು ಬದುಕುವುದು ಒಂದು ರೀತಿ. +ಹಿಮ್ಮೆಟ್ಟಿ ಸೋಲೊಪ್ಪಿ ಸೆರೆಯಾಳಾಗಿ ಬದುಕುವುದು ಇನ್ನೊಂದು ರೀತಿ. +ಎರಡೂ ಬದುಕಿ "ಉಳಿಯುವ ರೀತಿಗಳೆ'. +"ನಾನೂ, ನಮ್ಮ ಜನರೂ ಈವರೆಗೆ ಉಳಿದುಕೊಂಡು ಬಂದಿದ್ದೇವೆ” ಎಂದು ಹಿಂದೂವು ಸಮಾಧಾನಪಟ್ಟುಕೊಳ್ಳುವುದರಲ್ಲಿ ಅರ್ಥವಿಲ್ಲ. +ನಾವು ಬದುಕಿ ಉಳಿದಿದ್ದೇವೆ ಎನ್ನುವುದಕ್ಕಿಂತ ಮುಖ್ಯವಾಗಿ ಯಾವ ಸ್ಥಿತಿಯಲ್ಲಿ ಉಳಿದಿದ್ದೇವೆ ಎಂಬುದನ್ನು ಯೋಚಿಸಬೇಕು. +ಹಿಂದೂವಿನ ಜೀವನ ಸತತ ಪರಾಜಯದ ಜೀವನವಾಗಿಯೇ ಬಂದಿದೆ. +ಅವನು ಶಾಶ್ವತವೆಂದು ಭ್ರಮಿಸಿದ್ದು ಶಾಶ್ವತವಾಗಿ ಕ್ಷಯಿಸುತ್ತ ಬಂದಿದೆ. +ಹೀಗೆ ಉಳಿದು ಬಂದಿರುವ ರೀತಿ ವಿವೇಕ ಶಾಲಿ ಹಿಂದೂವಿಗೆ ನಿಜವಾಗಿ ಲಜ್ಜಾಸ್ಪದವೆಂದೇ ಅನ್ನಿಸುತ್ತದೆ. +ನಿಮ್ಮ ಸಾಮಾಜಿಕ ಸ್ವರೂಪವನ್ನು ಬದಲು ಮಾಡದೆ ಹೋದರೆ ನೀವೇನೂ ಪ್ರಗತಿಯನ್ನು ಸಾಧಿಸಲಾರಿರಿ ಎಂದು ನಾನು ನಿಸ್ತಂಶಯವಾಗಿ ಹೇಳುತ್ತೇನೆ. +ರಕ್ಷಣೆಗಾಗಲಿ ದಾಳಿಗಾಗಲಿ ನೀವು ಜನಬಲವನ್ನು ಸಿದ್ಧಗೊಳಿಸಲಾರಿರಿ. +ಜಾತಿಯ ಅಡಿಪಾಯದ ಮೇಲೆ ನೀವೇನನ್ನೂ ಕಟ್ಟಲಾರಿರಿ. +ರಾಷ್ಟ್ರವನ್ನು ನಿರ್ಮಿಸಲಾರಿರಿ,ನೀತಿಯನ್ನು ಮೌಲೀಕರಣಗೊಳಿಸಲಾರಿರಿ. +ಜಾತಿಯ ಆಧಾರದ ಮೇಲೆ ಕಟ್ಟಿದುದು ಏನೇ ಆಗಿರಲಿ ಅದು ಬಿರುಕು ಬಿಡುವುದು, ಅಖಂಡವಾಗಿ ಉಳಿಯಲಾರದು. +ಈಗ ಯೋಜಿಸಬೇಕಾದ ಪ್ರಶ್ನೆಯೊಂದು ಉಳಿದಿದೆ. +ಹಿಂದೂ ಸಮಾಜ ವ್ಯವಸ್ಥೆಯಲ್ಲಿ ಸುಧಾರಣೆ ಮಾಡುವುದು ಹೇಗೆ? +ಜಾತಿಯನ್ನು ನಾಶಗೊಳಿಸುವುದು ಹೇಗೆ? +ಇದು ಅತ್ಯಂತ ಮಹತ್ವದ ಪ್ರಶ್ನೆಯಾಗಿದೆ. +ಜಾತಿ ಸುಧಾರಣೆಯ ವಿಷಯದಲ್ಲಿ ಮೊದಲ ಹೆಜ್ಜೆಯಾಗಿ ಒಳಜಾತಿಗಳನ್ನು ನಿರ್ಮೂಲನ ಮಾಡಬೇಕೆಂಬ ಒಂದು ಅಭಿಪ್ರಾಯ ವ್ಯಕ್ತವಾಗಿದೆ. +ಜಾತಿ ಜಾತಿಗಳ ನಡುವೆ ಇರುವ ಸಮಾನತೆ ಹಾಗೂ ಸಾದೃಶ್ಯಕ್ಕಿಂತ ಹೆಚ್ಚಿನ ಸಮಾನತೆ ಹಾಗೂ ಸಾದೃಶ್ಯ ಒಳಜಾತಿಗಳ ನಡುವೆ ಇವೆಯೆಂಬ ಗ್ರಹಿಕೆ ಈ ಅಭಿಪ್ರಾಯಕ್ಕೆ ಆಧಾರವಾಗಿದೆ. +ಇದು ತಪ್ಪು ಕಲ್ಪನೆ. +ದಕ್ಷಿಣ ಭಾರತದ ಬ್ರಾಹ್ಮಣರೊಡನೆ ಹೋಲಿಸಿ ನೋಡಿದಾಗ ಮಧ್ಯ ಹಾಗೂ ಉತ್ತರ ಭಾರತದ ಬ್ರಾಹ್ಮಣರ ಸಾಮಾಜಿಕ ಸ್ಥಾನ ಕೆಳಮಟ್ಟದ್ದಾಗಿದೆ. +ಉತ್ತರಾಪಥದ ಬ್ರಾಹ್ಮಣರಿಗೆ ಅಡುಗೆ ಭಟ್ಟರಾಗುವ ಅಥವಾ ನೀರು ಹೊರುವ ಸ್ಥಿತಿಗಿಂತ ಹೆಚ್ಚಿನ ವರಮಾನವಿಲ್ಲ. +ದಕ್ಷಿಣಾಪಥದ ಬ್ರಾಹ್ಮಣರಿಗೆ ಸಾಮಾಜಿಕವಾಗಿ ಹೆಚ್ಚಿನ ಗೌರವ ದೊರೆಯುತ್ತಿದೆ. +ಉತ್ತರ ಭಾರತದ ವೈಶ್ಯರೂ, ಕಾಯಸ್ಥರೂ ಬೌದ್ಧಿಕ ಹಾಗೂ ಸಾಮಾಜಿಕ ಮಾನದಿಂದ ದಕ್ಷಿಣ ಭಾರತದ ಬ್ರಾಹ್ಮಣರಿಗೆ ಸರಿಸಮಾನರಾಗಿದ್ದಾರೆ. +ಆಹಾರದ ವಿಷಯದಲ್ಲಿಯೂ ವ್ಯತ್ಯಾಸಗಳಿವೆ. +ಡೆಕ್ಕನ್‌ ಮತ್ತು ದಕ್ಷಿಣದ ಬ್ರಾಹ್ಮಣರು ಶುದ್ಧ ಸಸ್ಯಾಹಾರಿಗಳು,ಕಾಶ್ಮೀರದ ಹಾಗೂ ಬಂಗಾಳದ ಬ್ರಾಹ್ಮಣರು ಸಸ್ಯೇತರ ಆಹಾರವನ್ನು ಸೇವಿಸುತ್ತಾರೆ. +ಡೆಕ್ಕನ್‌ ಮತ್ತು ದಕ್ಷಿಣದ ಬ್ರಾಹ್ಮಣರು ಆಹಾರ ವಿಷಯದಲ್ಲಿ ಗುಜರಾಥಿಗಳು, ಮಾರವಾಡಿಗಳು, ಬನಿಯಾಗಳು ಮತ್ತುಜೈನರು ಮುಂತಾದ ಬ್ರಾಹ್ಮಣೇತರರೊಡನೆ ಬೆರೆಯುವುದು ಹೆಚ್ಚು ವ್ಯವಹಾರ್ಯವಾದೀತು. +ಒಳಜಾತಿಗಳನ್ನೆಲ್ಲ ಒಂದುಗೂಡಿಸಲು ಸಾಧ್ಯವಾದೀತೆಂದು ಭಾವಿಸೋಣ. +ಒಳಜಾತಿಗಳ ನಾಶ ಜಾತಿಗಳ ಒಟ್ಟು ನಿರ್ಮೂಲನೆಗೆದಾರಿ ಮಾಡಿಕೊಟ್ಟೀತೆಂಬ ಭರವಸೆಯೆಲ್ಲಿದೆ? +ತದ್ವಿರುದ್ಧವಾಗಿ ಒಳಜಾತಿಗಳ ನಿರ್ಮೂಲನೆಯೊಡನೆ ಆಕ್ರಮ ನಿಂತುಹೋಗಬಹುದು. +ಹಾಗಾದ ಪಕ್ಷದಲ್ಲಿ ಒಳಜಾತಿಗಳ ನಿರ್ಮೂಲನದಿಂದ ಜಾತಿಗಳು ಇನ್ನಷ್ಟು ಬಲಿಷ್ಠವಾಗಿ ಇನ್ನಷ್ಟು ಉಪದ್ರವಕಾರಿಗಳಾಗಬಹುದು. +ಆದುದರಿಂದ ಈ ಉಪಾಯ ಪ್ರಾಯೋಗಿಕವೂಅಲ್ಲ, ಪರಿಣಾಮಕಾರಿಯೂ ಅಲ್ಲ; +ಬಹುಶಃ ಈ ಉಪಾಯ ತಪ್ಪೆಂದೂ ಸಾಬೀತಾಗಬಹುದು. +ಅಂತರ್ಜಾತೀಯ ಸಹಭೋಜನದಿಂದ ಜಾತಿ ನಿರ್ಮೂಲನೆಯನ್ನು ಸಾಧಿಸಬೇಕೆಂಬ ಇನ್ನೊಂದು ಯೋಜನೆಯನ್ನು ಸೂಚಿಸಲಾಗುತ್ತದೆ. +ಇದು ಕೂಡ ಅಸಮರ್ಪಕ ಉಪಾಯವೆಂದು ನಾನು ಪರಿಗಣಿಸುತ್ತೇನೆ. +ಅಂತರ್ಜಾತೀಯ ಸಹಭೋಜನಕ್ಕೆ ಅವಕಾಶ ಕೊಡುವಂತಹ ಜಾತಿಗಳು ಅನೇಕ ಇವೆ. +ಅನೇಕ ಜಾತಿಯವರು ಕೂಡಿ ಊಟ ಮಾಡುವುದರಿಂದ ಜಾತಿ ಭಾವನೆಯೇನೂ ನಷ್ಟವಾಗಿಲ್ಲ, ಜಾತಿಪ್ರಜ್ಞೆಯೂ ಅಳಿದಿಲ್ಲ. +ಅಂತರ್ಜಾತೀಯ ವಿವಾಹವೇ ಸರಿಯಾದ ಉಪಾಯವೆಂದು ನನಗೆ ಮನವರಿಕೆಯಾಗಿದೆ. +ತಾವು ತಮ್ಮವರೆಂಬ ಆತ್ಮೀಯ ಭಾವನೆ ರಕ್ತ ಸಂಬಂಧದಿಂದಲೇ ಬರಬಲ್ಲದು. +ಈ ಆತ್ಮೀಯತೆಯ ಮಮತೆಯ ಭಾವನೆ ಹುಟ್ಟದೆಹೋದರೆ ಜಾತಿಪದ್ಧತಿಯಿಂದ ಬೆಳೆದು ಬಂದ ಪ್ರತ್ಯೇಕತಾಭಾವನೆ ಅಳಿಯಲಾರದು. +ಹಿಂದೂಗಳಲ್ಲದವರ ಜೀವನದಲ್ಲಿ ಅಂತರ್ಜಾತೀಯ ವಿವಾಹಕ್ಕೆ ಅಷ್ಟು ಮಹತ್ವವಿರಲಿಕ್ಕಿಲ್ಲ. +ಹಿಂದೂಗಳಲ್ಲಿ ಮಾತ್ರ ಅದು ನಿಶ್ಚಿತವಾಗಿ ಮಹತ್ವದ ಘಟಕವಾಗುತ್ತದೆ. +ಇತರ ಸಂಬಂಧಗಳಿಂದ ಸಮಾಜ ಸುಸಂಘಟಿತವಾಗಿರುವಾಗ ಮದುವೆಯೆಂಬುದು ಜೀವನದಲ್ಲಿ ಒಂದು ಸಾಮಾನ್ಯ ಘಟನೆಯೆನ್ನಿಸುತ್ತದೆ. +ಆದರೆ ಸಮಾಜ ಛಿನ್ನವಿಚ್ಛಿನ್ನವಾಗಿದ್ದಾಗ ಸಂಯೋಜಕಶಕ್ತಿಯಾಗಿ ಬರುವ ವಿವಾಹ ಸಂಬಂಧ ಅಗತ್ಯದ ವಿಷಯವಾಗುತ್ತದೆ. +ಜಾತಿ ನಿರ್ಮೂಲನೆಯ ಉಪಾಯವೆಂದರೆ ಅಂತರ್ಜಾತಿಯ ವಿವಾಹವೇ. +ಬೇರೆ ಯಾವುದರಿಂದಲೂ ಜಾತಿ ಸಮಸ್ಯೆ ಪರಿಹಾರವಾಗುವುದಿಲ್ಲ. +ನಿಮ್ಮ ಜಾತ್‌-ಪತ್‌-ತೋಡಕ್‌ ಮಂಡಲವು ಈ ಮಾರ್ಗವನ್ನೇ ಕೈಗೊಂಡಿದೆ. +ನೀವು ನೇರವಾಗಿ ಎದುರಿಂದಲೇ ದಾಳಿ ಮಾಡಿದ್ದೀರಿ. +ಸಮಸ್ಯೆಯನ್ನು ಸಮರ್ಪಕವಾಗಿ ಅರಿತುಕೊಂಡಿದುದಕ್ಕಾಗಿ, ಅದಕ್ಕಿಂತ ಹೆಚ್ಚಾಗಿ ಹಿಂದೂಗಳಿಗೆ ಅವರ ತಪ್ಪನ್ನು ಎತ್ತಿ ತೋರಿಸುವ ಧೈರ್ಯಮಾಡಿದ್ದಕ್ಕಾಗಿ, ನಿಮ್ಮನ್ನು ನಾನು ಅಭಿನಂದಿಸುತ್ತೇನೆ. +ಸಾಮಾಜಿಕ ದಬ್ಬಾಳಿಕೆಯ ಮುಂದೆ ರಾಜಕೀಯ ದಬ್ಬಾಳಿಕೆ ತೀರ ಅಲ್ಪವೆನಿಸುತ್ತದೆ. +ಸರಕಾರವನ್ನು ಧಿಕ್ಕರಿಸುವ ರಾಜಕಾರಣಿಗಿಂತಲೂ ಸಮಾಜವನ್ನು ಧಿಕ್ಕರಿಸಿ ನಿಲ್ಲುವ ಸುಧಾರಕನು ಹೆಚ್ಚಿನ ಧೈರ್ಯಶಾಲಿಯಾಗಿರುತ್ತಾನೆ. +ಅಂತರ್ಜಾತೀಯ ಸಹಭೋಜನ ಹಾಗೂ ಅಂತರ್ಜಾತೀಯ ವಿವಾಹಗಳು ತೀರ ಸಾಮಾನ್ಯ ವ್ಯವಹಾರಗಳೆಂಬ ಸ್ಥಿತಿ ಉಂಟಾದಾಗಲೆ ಜಾತಿತನ್ನ ಬಲವನ್ನು ಕಳೆದುಕೊಳ್ಳುವುದು. +ಈ ನಿಮ್ಮ ಅಭಿಪ್ರಾಯ ಸರಿಯಾಗಿದೆ. +ಈ ರೋಗನಿದಾನವನ್ನು ಸರಿಯಾಗಿ ಮಾಡಿದ್ದೀರಿ. +ಆದರೆ ರೋಗಕ್ಕೆ ನೀವು ಸೂಚಿಸಿದ ಚಿಕಿತ್ಸೆ ಸರಿಯಾದುದೆ? +ಈಗ ನೀವೇ ಈ ಮುಂದಿನ ಪ್ರಶ್ನೆಯನ್ನು ಕೇಳಿಕೊಳ್ಳಿ ಅಂತರ್ಜಾತಿಯ ಸಹಭೋಜನ ಹಾಗೂ ಅಂತರ್ಜಾತಿಯ ವಿವಾಹಗಳಿಗೆ ಬಹುಸಂಖ್ಯಾತ ಹಿಂದೂಗಳು ಏಕೆ ಒಪ್ಪುತ್ತಿಲ್ಲ? +ನಿಮ್ಮ ಯೋಜನೆ ಏಕೆ ಜನಪ್ರಿಯವಾಗಿಲ್ಲ? +ಇದಕ್ಕೆ ಸಾಧ್ಯವಿರುವ ಉತ್ತರ ಒಂದೇ ಒಂದು. +ಅದೇನೆಂದರೆ ಅಂತರ್ಜಾತೀಯ ಭೋಜನ, ವಿವಾಹಗಳು ಹಿಂದೂಗಳ ದೃಷ್ಟಿಯಲ್ಲಿ ಪಾವಿತ್ರ್ಯ ಭಂಗವೆನಿಸುತ್ತವೆ; +ಅವರ ನಂಬಿಕೆ ಹಾಗೂ ತತ್ವಗಳು ಹಾಗಿವೆ. +ಜಾತಿಯೆಂಬುದು ಇಟ್ಟಿಗೆಗಳ ಒಂದು ಗೋಡೆಯಲ್ಲ ಅಥವಾ ಮುಳ್ಳುತಂತಿಯ ಬೇಲಿಯಲ್ಲ, ಆದುದರಿಂದ ಅದನ್ನು ಕೈಯಿಂದ ಕಿತ್ತುಹಾಕುವಂತಿಲ್ಲ. +ಜಾತಿ ಒಂದು ಮನೋಭಾವ. +ಜಾತಿ ನಾಶವೆಂದರೆ ಅದೊಂದುಭೌತಿಕ ವಸ್ತುವಿನ ನಾಶವಲ್ಲ, ಮನೋವೃತ್ತಿಯ ಪರಿವರ್ತನೆಯಾಗಬೇಕು. +ಜಾತಿ ಕೆಟ್ಟದಿರಬಹುದು. +ಹಿಂದೂಗಳೂ ಜಾತಿಯನ್ನು ಪಾಲಿಸುವರೆಂದಾ ಕ್ಷಣಕ್ಕೆ ಅವರು ರಾಕ್ಷಸರೆಂದಾಗಲಿ ತಲೆತಿರುಕರೆಂದಾಗಲಿ ಅರ್ಥವಲ್ಲ. +ಜಾತಿಪಾಲನೆಗೆ ಅವರ ಧರ್ಮಕರ್ಮರತೆಯೂ ಕಾರಣವಾಗಿದೆ. +ಜಾತಿ ಪರಿಪಾಲನೆ ಜನರ ತಪ್ಪಲ್ಲ. +ನಿಜವಾಗಿ ತಪ್ಪಿರುವುದು ಜಾತಿಯ ಬಗೆಗೆ ಧರ್ಮವುಂಟು ಮಾಡಿದ ಕಲ್ಪನೆಯಲ್ಲಿ. +ಈ ಮಾತು ಸರಿಯಾದರೆ, ನೀವು ಎದುರಿಸಬೇಕಾದ ವೈರಿ ಜಾತಿನಿಷ್ಠ ಜನರಲ್ಲ; +ಅವರಿಗೆ ಈ ಧರ್ಮವನ್ನು ಬೋಧಿಸಿದ ಶಾಸ್ತ್ರಗಳೇ ಶತ್ರು. +ಅಂತರ್ಜಾತೀಯ ಭೋಜನ ವಿವಾಹಗಳನ್ನೇಕೆ ಮಾಡುವುದಿಲ್ಲವೆಂದು ಜನರನ್ನು ಟೀಕಿಸುವುದರಿಂದ ಅಥವಾ ಆಗೀಗ ಅಂತರ್ಜಾತೀಯ ಭೋಜನ ವಿವಾಹಗಳನ್ನು ಏರ್ಪಡಿಸುವುದರಿಂದ ನಿಮ್ಮ ಉದ್ದೇಶ ಈಡೇರಲಾರದು. +ಶಾಸ್ತ್ರಗಳಲ್ಲಿ ಜನರಿಗಿರುವ ನಿಷ್ಠೆಯನ್ನು ನಾಶಪಡಿಸುವುದೇ ನಿಜವಾದ ಮಾರ್ಗ. +ಶಾಸ್ತ್ರಗಳು ಜನರಲ್ಲಿ ನಂಬಿಕೆಗಳನ್ನೂ, ಅಭಿಪ್ರಾಯಗಳನ್ನೂ ರೂಪಿಸುತ್ತ ಮುಂದುವರಿಯುವುದಾದರೆ ನಿಮಗೆ ಗೆಲುವಿನ ನಿರೀಕ್ಷೆಯೆಲ್ಲಿ? +ಶಾಸ್ತ್ರಗಳ ಅಧಿಕಾರವನ್ನು ನೀವು ಪ್ರಶ್ನಿಸುವುದಿಲ್ಲ. + ಶಾಸ್ತ್ರಗಳನ್ನು ಗೌರವಿಸಿನಂಬುವುದಕ್ಕೂ ಅವಕಾಶ ಕೊಡುತ್ತೀರಿ. + ಶಾಸ್ತ್ರಗಳ ವಿಧಿನಿಷೇಧಗಳನ್ನು ಅವರು ನಂಬಲು ಅಡ್ಡಿ ಮಾಡಿಲ್ಲ. +ಇಷ್ಟೆಲ್ಲ ಇದ್ದು ಆ ಜನರನ್ನು ಅವಿವೇಕಿಗಳೆಂದೂ ನಿರ್ದಯರೆಂದೂ ಟೀಕಿಸುವುದು ಅಸಂಬದ್ಧವಲ್ಲವೆ? +ಇದು ಸಮಾಜ ಸುಧಾರಣೆಯ ಮಾರ್ಗವೇ? +ಜನರ ನಡವಳಿಕೆಗೆ ಶಾಸ್ತ್ರಗಳಲ್ಲಿರುವ ಅವರ ನಂಬಿಕೆ ಕಾರಣ. +ಅಸ್ಪಶ್ಯತಾ ನಿವಾರಣೆಗಾಗಿ ಹೋರಾಡುತ್ತಿರುವ ಸುಧಾರಕರು, ಶ್ರೀ.ಗಾಂಧಿಯವರು ಸಹ, ಈ ಮಾತನ್ನು ಅರಿತಂತೆ ತೋರುವುದಿಲ್ಲ. +ಅವರ ಪ್ರಯತ್ನಗಳು ಅಯಶಸ್ವಿಯಾಗುವುದರಲ್ಲಿ ಸೋಜಿಗವೇನೂ ಇಲ್ಲ. +ನೀವು ಕೂಡ ಅದೇ ತಪ್ಪನ್ನು ಮಾಡುತ್ತ ಇದ್ದೀರೆಂದು ತೋರುತ್ತದೆ. +ಅಂತರ್ಜಾತೀಯ ಭೋಜನ ಮತ್ತು ಅಂತರ್ಜಾತೀಯ ವಿವಾಹಗಳಿಗಾಗಿ ಆಂದೋಲನ ನಡೆಸುವುದು ಮತ್ತು ಅವುಗಳನ್ನು ಏರ್ಪಡಿಸುವುದುಎಂದರೆ ಕೃತ್ರಿಮವಾದ ರೀತಿಯಲ್ಲಿ ಒತ್ತಾಯದಿಂದ ಉಣಿಸಿದಂತೆಯೇ ಸರಿ. +ಶಾಸ್ತ್ರಗಳ ಬಂಧನದಿಂದ ಪ್ರತಿಯೊಬ್ಬ ಸ್ತ್ರೀ ಪುರುಷರನ್ನು ಮುಕ್ತಗೊಳಿಸಿರಿ. +ಶಾಸ್ತ್ರಾಧಾರದಿಂದ ತುಂಬಿಕೊಂಡಿರುವ ಹಾನಿಕಾರಕವಾದ ಕಲ್ಪನೆ ಹಾಗೂ ವಿಚಾರಗಳ ಕೊಳೆಯನ್ನು ತೆಗೆದುಹಾಕಿ ಅವರ ಮನಸ್ಸುಗಳನ್ನು ಶುದ್ಧಿಗೊಳಿಸಿ. +ಹಾಗೆ ಮಾಡಿದ ಪಕ್ಷದಲ್ಲಿ ಅವರ ಅಂತರ್ಜಾತೀಯ ಭೋಜನವನ್ನೂ ಅಂತರ್ಜಾತೀಯ ವಿವಾಹವನ್ನೂ ತಾವೇ ಕೈ ಗೊಳ್ಳುವರು. +ನೀವು ಹೇಳುವ ಅವಶ್ಯಕತೆ ಉಳಿಯುವುದಿಲ್ಲ. +ದ್ವಂದ್ವಾರ್ಥಗಳಿಗೆ ಶರಣು ಹೋಗುವುದರಿಂದ ಏನು ಪ್ರಯೋಜನ? +ಶಾಸ್ತ್ರಗಳು ಹಾಗೆ ಹೇಳಿವೆಹೀಗೆ ಹೇಳಿವೆಯೆಂದು ಭಾವಿಸುವುದು ಸರಿಯಲ್ಲವೆಂದೂ, ವ್ಯಾಕರಣಾನು ಸಾರವಾಗಿ ಓದಿ ಅರ್ಥಮಾಡಿಕೊಂಡರೆ ಅದರ ವಿವರಣೆಯೇ ಬೇರೆಯಾಗುವುದೆಂದೂ ವಾದಿಸುವುದರಿಂದ ಏನೂ ಪ್ರಯೋಜನವಿಲ್ಲ. +ಜನರು ಶಾಸ್ತ್ರಗಳನ್ನು ಹೇಗೆ ಅರ್ಥ ಮಾಡಿಕೊಂಡಿದ್ದಾರೆ ಎಂಬುದು ಮುಖ್ಯ. +ಬುದ್ಧನು ತಾಳಿದ ನಿಲುವನ್ನೇ ನೀವು ತಾಳಬೇಕು. +ಗುರುನಾನಕರು ತಾಳಿದ ನಿಲುವನ್ನೇ ನೀವು ತಾಳಬೇಕು. +ಅವರಿಬ್ಬರಂತೆ ನೀವು ಕೂಡ ಶಾಸ್ತ್ರಗಳನ್ನು ಕಿತ್ತೊಗೆಯಬೇಕು. +ಇಷ್ಟೇ ಅಲ್ಲ, ಅವುಗಳ ಅಧಿಕಾರವನ್ನು ಧಿಕ್ಕರಿಸಬೇಕು. +ಜಾತಿ ಬಹಳ ಪವಿತ್ರವೆಂಬ ಭಾಂತಿ ಹುಟ್ಟಿದ್ದು ನಿಮ್ಮ ಧರ್ಮದಿಂದ ಎಂಬ ಮಾತನ್ನು ಹಿಂದೂಗಳಿಗೆ ಹೇಳುವ ಧೈರ್ಯನಿಮ್ಮಲ್ಲಿ ಬರಬೇಕು. +ನಿಮ್ಮ ಯಶಸ್ಸಿನ ಸಾಧ್ಯತೆ ಎಷ್ಟು? +ಸಾಮಾಜಿಕ ಸುಧಾರಣೆಗಳಲ್ಲಿ ವಿವಿಧ ಮಾರ್ಗಗಳಿವೆ. +ಒಂದು ವಿಧದ ಸುಧಾರಣೆ ಇದೆ. +ಜನರ ಧಾರ್ಮಿಕ ವಿಚಾರಗಳು ಅದಕ್ಕೆ ಸಂಬಂಧಪಟ್ಟವಲ್ಲ, ಆದರೆ ಅದು ಜಾತ್ಯತೀತ ಲಕ್ಷಣವನ್ನು ಹೊಂದಿದೆ. +ಈ ವರ್ಗದಲ್ಲಿ ಎರಡು ಉಪವರ್ಗಗಳಿವೆ. +ಮೊದಲನೆಯದು ಧರ್ಮತತ್ವಗಳನ್ನು ಶಿರಸಾ ವಹಿಸುತ್ತದೆ; +ಧರ್ಮವನ್ನು ಬಿಟ್ಟು ಹೋದವರಿಗೆ ಮರಳಿ ಬನ್ನಿರೆಂದೂ ಆತತ್ವಗಳನ್ನು ಪಾಲಿಸಿರೆಂದೂ ಆಮಂತ್ರಿಸುತ್ತದೆ. +ಎರಡನೆಯ ಉಪವರ್ಗ ಇದಕ್ಕೆ ವಿರುದ್ಧವಾಗಿ ವರ್ತಿಸುತ್ತದೆ. +ಧರ್ಮದ ತತ್ವಗಳನ್ನು ಉಲ್ಲೇಖಿಸಿದರೂ, ಅವುಗಳನ್ನು ಧಿಕ್ಕರಿಸಿ ಸಂಪೂರ್ಣ ವಿರುದ್ಧ ಮಾರ್ಗದಲ್ಲಿ ನಡೆಯಿರೆಂದು ಜನರಿಗೆ ಬೋಧಿಸುತ್ತದೆ. +ಅಲೌಕಿಕ ಜ್ಞಾನ ಸಂಪನ್ನರು ದೇವಾನುಗ್ರಹದಿಂದ ನಿರೂಪಿಸಿದ ವಿಧಿನಿಷೇಧಗಳು ಶಾಸ್ತ್ರಗಳಲ್ಲಿವೆ, ಆದುದರಿಂದ ಅವುಗಳನ್ನು ಮೀರುವುದು ಪಾಪ; +ಈ ಮೊದಲಾದ ಧಾರ್ಮಿಕ ನಂಬಿಕೆಗಳ ಪ್ರಭಾವದಿಂದ ಜಾತಿ ಹುಟ್ಟಿತು. +ಜಾತಿಯನ್ನೇ ನಾಶಗೊಳಿಸುವ ಸುಧಾರಣೆ ಮೂರನೆಯ ವರ್ಗಕ್ಕೆ ಸೇರುತ್ತದೆ. +ಜನರಿಗೆ ಜಾತಿಯನ್ನು ತೊರೆಯಿರೆಂದು ಹೇಳಿದರೆ ಮೂಲಭೂತವಾಗಿ ಅವರ ಧಾರ್ಮಿಕ ಕಲ್ಪನೆಗಳಿಗೇ ವಿರುದ್ಧವಾಗಿ ನಡೆಯಲು ಹೇಳಿದಂತಾಗುತ್ತದೆ. +ಮೊದಲಿನ ಎರಡು ಬಗೆಯ ಸುಧಾರಣೆಗಳು ಸುಲಭವೆಂಬುದು ಸ್ಪಷ್ಟ. +ಮೂರನೆಯ ಬಗೆಯ ಸುಧಾರಣೆ ತುಂಬ ಕಷ್ಟಕರವಾದುದು,ಬಹುಶಃ ಅಸಾಧ್ಯವೆನಿಸುವಂತಹುದು, ಸಮಾಜ ವ್ಯವಸ್ಥೆ ಹಿಂದೂಗಳಿಗೆ ಪಾವಿತ್ರ್ಯದ ವಿಷಯ, ಜಾತಿ ದೈವಮೂಲವಾದುದು. +ಜಾತಿಗೆ ಅಂಟಿಕೊಂಡಿರುವ ಈ ದೈವಾಂಶವನ್ನೂ ಪಾವಿತ್ರ್ಯ ಭಾವನೆಯನ್ನೂ ಮೊದಲು ನಾಶಪಡಿಸಬೇಕು. +ಅಂದರೆ, ಶಾಸ್ತ್ರಗಳ ಹಾಗೂ ವೇದಗಳ ಅಧಿಕಾರವನ್ನು ನೀವು ಸಂಪೂರ್ಣವಾಗಿನಿರಸನಗೊಳಿಸಬೇಕು ಎಂದರ್ಥ. +ನೆಜಾತಿ ನಿರ್ಮೂಲನಕ್ಕಿರುವ ಮಾರ್ಗಗಳನ್ನು ನಾನು ಒತ್ತಿ ಹೇಳಿದ್ದೇನೆ. +ಯಾಕೆಂದರೆ ಆದರ್ಶವನ್ನುಅರಿತುಕೊಳ್ಳುವುದಕ್ಕಿಂತ ಅದರ ಸಾಧನೆಯ ಮಾರ್ಗಗಳನ್ನು ಅರಿತುಕೊಳ್ಳುವುದು ಹೆಚ್ಚು ಮಹತ್ವದ್ದು. +ಸರಿಯಾದ ಮಾರ್ಗ ಜ್ಞಾನವಿಲ್ಲದಿದ್ದರೆ ನಿಮ್ಮ ಪ್ರಯತ್ನಗಳೆಲ್ಲ ಗುರಿ ತಪ್ಪುವುದು ನಿಶ್ಚಿತ. +ನನ್ನ ವಿಶ್ಲೇಷಣೆ ಕ ಸರಿಯಾಗಿದ್ದ ಪಕ್ಷದಲ್ಲಿ ನಿಮ್ಮ ಸಾಹಸ ಹಿಮಾಲಯವನ್ನು ಹೊತ್ತು ನಿಲ್ಲುವಂತಹುದು. +ಅದು ನಿಮಗೆ ಸಾಧ್ಯವೋ ಅಲ್ಲವೋ ಎಂಬುದನ್ನು ನೀವೇ ಹೇಳಬಲ್ಲಿರಿ. +ನನ್ನ ಮಟ್ಟಗೆ ಹೇಳುವುದಾದರೆ ಇದು ಬಹುಶಃ ಅಸಾಧ್ಯವೆಂದೇ ತೋರುತ್ತದೆ. +ಯಾಕೆಂದು ನೀವು ಕೇಳಬಹುದು. +ನಾನು ಕಂಡು ಕೊಂಡ ಅನೇಕ ಕಾರಣಗಳಲ್ಲಿ ಮಹತ್ವದ ಕೆಲವನ್ನು ಇಲ್ಲಿ ಹೇಳುತ್ತೇನೆ. +ಈ ಪ್ರಶ್ನೆಯನ್ನು ಕುರಿತು ಬ್ರಾಹ್ಮಣರು ಹೊಂದಿರುವ ದ್ವೇಷ ಮನೋವೃತ್ತಿ ಮೊದಲನೆಯ ಕಾರಣ. +ರಾಜಕೀಯ ಸುಧಾರಣೆಯ ಹಾಗೂ ಕೆಲವೆಡೆ ಆರ್ಥಿಕ ಸುಧಾರಣೆಯ ಧುರೀಣರು ಬ್ರಾಹ್ಮಣರೇ ಆಗಿದ್ದಾರೆ. +ಆದರೆ ಜಾತಿ ನಿರ್ಮೂಲನೆಗೆ ಹೊರಟ ಜನ ಸಮೂಹದಲ್ಲಿ ಒಬ್ಬನೂ ಬ್ರಾಹ್ಮಣ ಇಲ್ಲ. +ಇನ್ನು ಮುಂದಾದರೂ ಈ ವಿಷಯದಲ್ಲಿ ಬ್ರಾಹ್ಮಣರು ಮುಂದಾಳುಗಳಾದಾರೆಂಬ ಭರವಸೆಯುಂಟೆ? +ಇಲ್ಲವೆಂದು ನಾನು ಹೇಳುತ್ತೇನೆ. +ಅದೇಕೆಂದು ನೀವು ಕೇಳಬಹುದು. +ಬ್ರಾಹ್ಮಣರು ಸಾಮಾಜಿಕ ಸುಧಾರಣೆಗೆ ವಿಮುಖರಾಗಿ ಉಳಿಯುವುದಕ್ಕೆ ಕಾರಣವೇನೂ ಇಲ್ಲವೆಂದು ನೀವು ವಾದಿಸಬಹುದು. +ಹಿಂದೂ ಸಮಾಜಕ್ಕೆ ಜಾತಿ ಒಂದು ಶಾಪವೆಂದು ಬ್ರಾಹ್ಮಣರು ಬಲ್ಲರೆಂದೂ, ಜಾಗೃತವಾದ ಬುದ್ಧಿವಂತ ವರ್ಗಕ್ಕೆ ಸೇರಿದ ಅವರು ಅದನ್ನು ಉಪೇಕ್ಷಿಸಲಾರರೆಂದೂ ನೀವು ವಾದಿಸಬಹುದು. +ಬ್ರಾಹ್ಮಣರಲ್ಲಿ ವೈದಿಕರಂತಹ ಕರ್ಮಠರು ಇರುವಂತೆ ಲೌಕಿಕ ಅಥವಾ ಪ್ರಾಪಂಚಿಕರಂತಹ ವ್ಯಾವಹಾರಿಕರೂ ಇದ್ದಾರೆಂದೂ, ಜಾತಿ ನಿರ್ಮೂಲನೆಗೆ ಮೊದಲ ವರ್ಗದವರು ಮುಂದಾಗದಿದ್ದರೆ ಎರಡನೆಯ ವರ್ಗದವರು ಮುಂದೆ ಬಂದೇ ಬರುವರೆಂದೂ ನೀವು ವಾದ ಮಾಡಬಹುದು. +ಹೀಗೆಲ್ಲ ವಾದಿಸುವಾಗ ನೀವು ಒಂದು ಮುಖ್ಯವಾದ ಮಾತನ್ನು ಮರೆಯುತ್ತೀರಿ. +ಏನೆಂದರೆ, ಜಾತಿಪದ್ಧತಿಯ ನಿರ್ಮೂಲನೆಯಿಂದ ಬ್ರಾಹ್ಮಣ ಜಾತಿಗೆ ಪೆಟ್ಟು ಬೀಳಲೇಬೇಕಷ್ಟೆ. +ತಮ್ಮ ಪ್ರತಿಷ್ಠೆ ಹಾಗೂ ಅಧಿಕಾರಗಳಿಗೆ ಕತ್ತರಿ ಹಾಕುವಂಥ ಈ ಆಂದೋಲನಕ್ಕೆ ಬ್ರಾಹ್ಮಣರು ಎಂದಾದರೂ ಮುಂದಾಗಬಹುದೆ? +ವೈದಿಕ ವರ್ಗಕ್ಕೆ ವಿರುದ್ಧವಾದ ಆಂದೋಲನದಲ್ಲಿ ಲೌಕಿಕ ಬ್ರಾಹ್ಮಣರು ಭಾಗವಹಿಸುವ ಸಂಭವವುಂಟೆ? +ನನ್ನನ್ನು ಕೇಳಿದರೆ ಬ್ರಾಹ್ಮಣರಲ್ಲಿ ವೈದಿಕರು, ಲೌಕಿಕರು ಎಂದು ವರ್ಗ ಮಾಡುವುದೇ ತಪ್ಪು. +ಅವೆರಡೂ ಒಂದೇ ಬಳಗಕ್ಕೆ ಸೇರಿದವು. +ಒಂದು ದೇಹದ ಎರಡು ತೋಳುಗಳು; +ಒಂದರ ರಕ್ಷಣೆಗೆ ಇನ್ನೊಂದು ಬರುತ್ತದೆ. +ಈ ಸಂದರ್ಭದಲ್ಲಿ ಪ್ರೊ.ಡೈಸಿಯವರ “ಇಂಗ್ಲಿಷ್‌ ಕಾನ್ಸ್ಪಿಟ್ಯೂಶನ್‌' ಎಂಬ ಗ್ರಂಥದಲ್ಲಿಯ ಕೆಲವು ಅರ್ಥಗರ್ಭಿತ ಮಾತುಗಳು ನನಗೆ ನೆನಪಾಗುತ್ತವೆ. +ಶಾಸನಾಧಿಕಾರ ವಿಷಯದಲ್ಲಿ ಪಾರ್ಲಿಮೆಂಟಿಗಿರುವ ಪರಿಮಿತಿಯನ್ನು ವಿವೇಚಿಸುತ್ತ ಪ್ರೊ.ಡೈಸಿ ಹೀಗೆನ್ನುತ್ತಾರೆ. +“ಸಾರ್ವಭೌಮನ ಅಥವಾ ಪಾರ್ಲಿಮೆಂಟನ ನಿಜವಾದ ಅಧಿಕಾರ ಚಲಾವಣೆಯ ಶಕ್ತಿ ಎರಡು ಮಿತಿಗಳಿಗೆ ಬದ್ಧವಾಗಿರುತ್ತದೆ. +ಅವುಗಳಲ್ಲಿ ಒಂದು ಬಾಹ್ಯ ಇನ್ನೊಂದು ಆಂತರಿಕ. +ಪ್ರಜೆಗಳೆಲ್ಲರೂ ಅಥವಾ ಅವರಲ್ಲಿ ಬಹುಸಂಖ್ಯಾತರು ತನ್ನ ಶಾಸನವನ್ನು ಉಲ್ಲಂಘಿಸುವ ಅಥವಾ ಪ್ರತಿಭಟಿಸುವ ಸಾಧ್ಯತೆಯು ಸಾರ್ವಭೌಮತೆ ನೀಡಿರುವ ಅಧಿಕಾರಕ್ಕೆ ಒಂದು ಮಿತಿಯಾಗಿರುತ್ತದೆ. +ಸಾರ್ವಭೌಮಾಧಿಕಾರಿ ಕೂಡ ತನ್ನ ಸ್ವಭಾವಕ್ಕೆ ಅನುಸಾರವಾಗಿಯೇ ಅಧಿಕಾರ ನಡೆಸುತ್ತಾನೆ. +ಅವನ ಸಮಾಜ, ಆ ಕಾಲದ ನೈತಿಕ ಭಾವನೆ ಮೊದಲಾದವುಗಳು ಅವನ ಸ್ವಭಾವಕ್ಕೆ ಕಾರಣವಾಗಿರುತ್ತವೆ. +ಸುಲ್ತಾನನು ತನ್ನ ಇಷ್ಟಾನು ಸಾರವಾಗಿ ಮಹಮ್ಮದೀಯ ಜಗತ್ತಿನ ಧರ್ಮವನ್ನು ಬದಲಿಸಲಾರನು. +ಒಂದು ವೇಳೆ ಅವನು ಬದಲಿಸುವುದು ಸಾಧ್ಯವಾದರೂ ಮಹಮ್ಮದೀಯ ಗುರುವರ್ಗ ಮಹಮ್ಮದನ ಧರ್ಮವನ್ನು ಬಿಡಲೊಪ್ಪುವುದು ಅಸಾಧ್ಯ. +ಸುಲ್ತಾನನ ಅಧಿಕಾರಕ್ಕೆ ಬಾಹ್ಯಮಿತಿ ಎಷ್ಟು ಪ್ರಬಲವೋ ಆಂತರಿಕ ಮಿತಿಯೂ ಅಷ್ಟೇ ಪ್ರಬಲವಾಗಿರುತ್ತದೆ. +ಈ ಸುಧಾರಣೆಯನ್ನು ಪೋಪ್‌ ಯಾಕೆ ಆರಂಭಿಸಿಲ್ಲ ಎಂದು ಜನ ಸುಮ್ಮನೆ ಕೇಳುತ್ತಾರೆ. +ಇದಕ್ಕೆ ನಿಜವಾದ ಉತ್ತರ ಏನೆಂದರೆ ಧರ್ಮಗುರುವಾಗುವಾತ ಕ್ರಾಂತಿಕಾರನಲ್ಲ, +ಧರ್ಮಗುರುವಾಗಿರುವ ಮನುಷ್ಯ ಕ್ರಾಂತಿಕಾರನಾಗಲು ಬಯಸುವುದಿಲ್ಲ”. +ಈ ಮಾತುಗಳು ಭಾರತೀಯ ಬ್ರಾಹ್ಮಣರಿಗೂ ಅನ್ವಯಿಸುವುದೆಂದು ನನಗನಿಸುತ್ತದೆ. +ಬ್ರಾಹ್ಮಣನಾಗಿ ಹುಟ್ಟಿದವನಿಗೆ ಕ್ರಾಂತಿಕಾರಿಯಾಗುವ ಬಯಕೆಯಿರಲಾರದು. +“ನೀಲಿ ಕಣ್ಣುಗಳುಳ್ಳ ಕೂಸುಗಳನ್ನೆಲ್ಲ ಕೊಂದು ಬಿಡಬೇಕೆಂದು ಬ್ರಿಟಿಷ್‌ ಪಾರ್ಲಿಮೆಂಟು ಶಾಸನ ಮಾಡೀತೆ?” ಎಂದು ಕೇಳಿದ್ದರು ಲೆಸ್ಡಿ ಸ್ಟೀಫೆನ್‌. +ಹಾಗೆ ನಿರೀಕ್ಷಿಸುವುದು ನಿರಾಧಾರ. +ಸಾಮಾಜಿಕ ಸುಧಾರಣೆಯ ವಿಷಯದಲ್ಲಿ ಬ್ರಾಹ್ಮಣನು ಕ್ರಾಂತಿಕಾರಿಯಾದಾನೆಂದು ನಿರೀಕ್ಷಿಸುವುದು ಅಷ್ಟೇ ನಿರಾಧಾರವಾದುದು. +ಜಾತಿ ವಿರೋಧದ ಚಳುವಳಿಯಲ್ಲಿ ಬ್ರಾಹ್ಮಣರು ಮುಂದಾಳಾಗುವುದು ಅಥವಾ ಬಿಡುವುದು ಮಹತ್ವದ ವಿಷಯವಲ್ಲ ಎಂದು ನಿಮ್ಮಲ್ಲಿ ಕೆಲವರು ಹೇಳಬಹುದು. + ಈ ಅಭಿಪ್ರಾಯ ತಪ್ಪು . + ಸಮಾಜದಲ್ಲಿ ಬುದ್ಧಿವಂತ ವರ್ಗದ ಪಾತ್ರವನ್ನು ಉಪೇಕ್ಷಿಸಲಾಗುವುದಿಲ್ಲ. +ಒಬ್ಬ ಯುಗಪುರುಷನಿಂದ ದೇಶದ ಚರಿತ್ರೆ ನಿರ್ಮಾಣವಾಗುತ್ತದೆಯೆಂಬ ವಾದವನ್ನು ನೀವು ಒಪ್ಪಿ ಅಥವಾ ಬಿಡಿ. +ಆದರೆ ಪ್ರತಿಯೊಂದು ದೇಶದಲ್ಲಿ ಬುದ್ಧಿವಂತರ ವರ್ಗ ಆಳುವ ವರ್ಗವಲ್ಲವಾದರೂ ಅತ್ಯಂತ ಪ್ರಭಾವಿ ವರ್ಗವೆಂಬುದನ್ನು ನೀವು ಒಪ್ಪಲೇಬೇಕಾಗುತ್ತದೆ. +ಭವಿಷ್ಯತ್ತಿನ ಆಗು ಹೋಗುಗಳನ್ನು ಮುಂಗಾಣುವ ವರ್ಗವೆಂದರೆ ಪ್ರಜ್ಞಾವಂತ ವರ್ಗವೇ; +ಮುಂದಾಳಾಗಿ ಸಲಹೆ ಕೊಡಬಲ್ಲ ವರ್ಗವೂ ಅದೇ. +ಯಾವ ದೇಶದಲ್ಲಿಯೇ ಆದರೂ ಬಹುಸಂಖ್ಯಾತರಾದ ಜನಸಾಮಾನ್ಯರು ಸ್ವಂತ ಬುದ್ಧಿಶಕ್ತಿಯಿಂದ ವಿಚಾರ ಮಾಡುವ ಅಥವಾ ಮುನ್ನಡೆಯುವ ಯೋಗ್ಯತೆಯನ್ನು ಹೊಂದಿರುವುದಿಲ್ಲ. +ಜನಸಾಮಾನ್ಯರು ಯಾವಾಗಲೂ ಬುದ್ಧಿವಂತ ವರ್ಗದವರನ್ನು ಅವಲಂಬಿಸಿರುತ್ತಾರೆಂದರೆ ಅತಿಶಯೋಕ್ತಿಯಲ್ಲ. +ಈ ಬುದ್ಧಿವಂತ ವರ್ಗ ಪ್ರಾಮಾಣಿಕವೂ ಸ್ವತಂತ್ರವೂ, ನಿಸ್ಸಹವೂ ಆಗಿದ್ದ ಪಕ್ಷದಲ್ಲಿಅದು ತಾನೇ ಮುಂದಾಳ್ತನವನ್ನು ವಹಿಸಿ ದೇಶವನ್ನು ಸಂಕಟದಿಂದ ಪಾರು ಮಾಡಬಲ್ಲದು. +ಬುದ್ಧಿಶಕ್ತಿಯೇ ಪರಮ ಗುಣವೆಂದಲ್ಲ. +ಕಾರ್ಯನಿರ್ವಹಣೆಗೆ ಅದೊಂದು ಸಾಧನ ಮಾತ್ರ ಸಾಧಿಸಬೇಕಾದ ಗುರಿಯನ್ನು ನೋಡಿ ಅದಕ್ಕೆ ತಕ್ಕಂತೆ ವಿಧಾನವನ್ನು ಪ್ರಯೋಗಿಸುವುದು ಬುದ್ಧಿವಂತನ ಲಕ್ಷಣ. +ಬುದ್ಧಿಶಕ್ತಿಯುಳ್ಳವನು ಸಜ್ಜನನಾಗಿರಬಲ್ಲನು, ದುರ್ಜನನೂ ಆಗಿರಬಲ್ಲನು. +ಅದೇ ಮೇರೆಗೆ ಬುದ್ಧಿವಂತರ ವರ್ಗವು ಉದಾರ ಹೃದಯದ ಒಂದು ಸಂಘವಾಗಿದ್ದು ಹಾದಿ ತಪ್ಪಿದ ಜನತೆಯನ್ನು ಉದ್ಧರಿಸಿ ಸರಿದಾರಿಗೆ ಒಯ್ಯುವುದಕ್ಕೆ,ಸಹಾಯ ಮಾಡುವುದಕ್ಕೆ ಸದಾ ಸಿದ್ಧವಾಗಿರಬಹುದು. +ತನ್ನ ಸ್ವಾರ್ಥಕ್ಕಾಗಿ ಒಂದು ಸಂಕುಚಿತಕೂಟವನ್ನು ಸ್ಥಾಪಿಸಿ ಜನರನ್ನು ಅದರೊಳಗೆ ಸೆಳೆದುಕೊಳ್ಳುವ ವಂಚಕರ ಗುಂಪೂ ಆಗಿರಬಹುದು. +ಬುದ್ಧಿವಂತ ವರ್ಗದ ಇನ್ನೊಂದು ಹೆಸರೇ ಬ್ರಾಹ್ಮಣ ಜಾತಿಯೆಂದರೆ ನಿಮಗೆ ವ್ಯಥೆಯಾಗಬಹುದು. +ಸಮಸ್ತ ದೇಶದ ಹಿತರಕ್ಷಣೆಗೆ ನಿಲ್ಲುವ ಬದಲಾಗಿ ತಮ್ಮ ಒಂದು ಜಾತಿಯ ಹಿತಾಸಕ್ತಿಯನ್ನೇ ಈ ಬುದ್ಧಿವಂತ ವರ್ಗ ನೋಡಿಕೊಳ್ಳುತ್ತ ಬಂದಿದೆಯೆಂದು ನೊಂದುಕೊಳ್ಳಬಹುದು. +ಆದರೆ ಹಿಂದೂಗಳಲ್ಲಿ ಬುದ್ಧಿವಂತ ವರ್ಗವೆಂದರೆ ಬ್ರಾಹ್ಮಣರೇ ಎಂಬುದು ವಸ್ತುಸ್ಥಿತಿಯಾಗಿದೆ. +ಅದು ಬುದ್ಧಿವಂತ ವರ್ಗವಾಗಿರುವುದೊಂದೇ ಅದರ ಹಿರಿಮೆಯಲ್ಲ; +ಇತರ ಹಿಂದೂಗಳಿಗೆಲ್ಲ ಪರಮ ಪೂಜ್ಯವೆನಿಸಿದ ವರ್ಗವಾಗಿದೆ. +ಅವರನ್ನು ಭೂಸುರರೆಂದು ಪರಿಗಣಿಸಲಾಗಿದೆ. +ಬ್ರಾಹ್ಮಣನೇ ಗುರುವೆಂದು ವಿಧಿಸಲಾಗಿದೆ. +“ವರ್ಣಾನಾಂ ಬ್ರಾಹ್ಮಣೋಗುರುಃ' ಎಂದಿದೆ. +ಮನು ಹೀಗೆನ್ನುತ್ತಾನೆ, “ನಿರ್ದಿಷ್ಟವಾಗಿ ವಿಧಿಸದೆ ಇರುವ ಧರ್ಮಾಚರಣೆಯ ಕೆಲವು ವಿಷಯಗಳು ಬಂದಾಗ ನಾವು ಹೇಗೆ ವರ್ತಿಸಬೇಕೆಂಬ ಪ್ರಶ್ನೆ ಏಳಬಹುದು. +ಇಂತಹ ಪ್ರಸಂಗಗಳಲ್ಲಿ ಶಿಷ್ಟರಾದ ಬ್ರಾಹ್ಮಣರು ಹೇಳಿದ್ದೇ ಪ್ರಮಾಣವಾಗುತ್ತದೆ.” + ಅನಾಮ್ನತೇಷು ಧರ್ಮೇಷು ಕಥಂ ಸ್ಕಾದಿತಿ ಜೇದ್ಭವೇತ್‌ |ಯಂ ಶಿಷ್ಟಾ ಬ್ರಾಹ್ಮಣಾ ಬ್ರೂಯುಃ ಸಧರ್ಮಃ ಸ್ಕಾದಶಂಕಿತಃ ॥ +ಹೀಗೆ ಸಮಾಜವನ್ನು ತನ್ನ ಅಂಕೆಯಲ್ಲಿಟ್ಟುಕೊಂಡಿರುವ ಬುದ್ಧಿವಂತ ವರ್ಗವು ಜಾತಿ ಸುಧಾರಣೆಗೆ ವಿರೋಧವೊಡ್ಡುತ್ತಿರುವಾಗ ಜಾತಿ ನಿರ್ಮೂಲನೆಯ ಆಂದೋಲನ ಯಶಸ್ವಿಯಾಗುವ ಸಂಭವ ತೀರ ಕಡಿಮೆಯೆಂದು ನನಗೆ ತೋರುತ್ತದೆ. +ಈ ಕಾರ್ಯ ಅಸಾಧ್ಯವೆಂಬುದಕ್ಕೆ ನಾನು ಕೊಡುವ ಎರಡನೆಯ ಕಾರಣ ನಿಮಗೆ ಸ್ಪಷ್ಟವಾಗಬೇಕಾದರೆ ಜಾತಿಪದ್ಧತಿಗೆ ಎರಡು ಪಾರ್ಶ್ವಗಳಿವೆಯೆಂಬುದನ್ನು ನೀವು ಗಮನದಲ್ಲಿಟ್ಟುಕೊಳ್ಳಬೇಕು. +ಜನರನ್ನು ಬಿಡಿಬಿಡಿಗುಂಪುಗಳಾಗಿ ಅದು ಒಡೆದು ಹಾಕುವುದು ಒಂದು ಮುಖ. +ಈ ಗುಂಪುಗಳನ್ನು ಸಾಮಾಜಿಕವಾಗಿ ತಾರತಮ್ಯಭಾವದಿಂದ ಒಂದು ಶ್ರೇಣಿಗೆ ಜೋಡಿಸುವುದು ಇನ್ನೊಂದು ಮುಖ. +ಜಾತಿಗಳ ಶ್ರೇಣಿಯಲ್ಲಿ ತಾನು ಇನ್ನೊಂದು ಜಾತಿಗಿಂತ ಮೇಲೆಯೇ ಇದ್ದೇನೆಂದು ಪ್ರತಿಯೊಂದು ಜಾತಿಯೂ ಹೆಮ್ಮೆ ಪಟ್ಟುಕೊಳ್ಳುತ್ತದೆ. +ಈ ಶ್ರೇಣಿಯ ಬಾಹ್ಯಲಕ್ಷಣವಾಗಿ ಸಾಮಾಜಿಕ ಹಾಗೂ ಧಾರ್ಮಿಕ ಹಕ್ಕುಗಳ ಶ್ರೇಣಿಯೂ ಇರುತ್ತದೆ. +ಈ ಹಕ್ಕುಗಳಿಗೆ ಅಷ್ಟಾಧಿಕಾರಗಳು ಮತ್ತು ಸಂಸ್ಕಾರಗಳು ಎಂದು ಹೆಸರು. +ಜಾತಿಯ ಮಟ್ಟ ಹೆಚ್ಚು ಹೆಚ್ಚಾದಂತೆ ಈ ಹಕ್ಕುಗಳ ಸಂಖ್ಯೆ ಹೆಚ್ಚಾಗುತ್ತದೆ. +ಮಟ್ಟ ಕಡಿಮೆಯಾದಂತೆ ಅವುಗಳ ಸಂಖ್ಯೆಯೂ ಕಡಿಮೆಯಾಗುತ್ತದೆ. +ಹೀಗೆ ತಾರತಮ್ಯ ಭಾವದ ಶ್ರೇಣಿಯನ್ನು ಹೊಂದಿರುವುದೇ ಮುಖ್ಯ ತೊಡರು. +ಜಾತಿಪದ್ಧತಿಯ ಮೇಲೆದಾಳಿ ಮಾಡಲು "ಸಮಾನರ ಕೂಟ' ಸಾಧ್ಯವಾಗುವುದಿಲ್ಲ. +ತನಗಿಂತ ಮೇಲು ಜಾತಿಯವರೊಡನೆ ಊಟಮಾಡುವ ಮತ್ತು ರಕ್ತಸಂಬಂಧ ಏರ್ಪಡಿಸುವ ಹಕ್ಕು ತನಗಿದೆಯೆಂದು ಯಾವುದಾದರೂ ಜಾತಿ ಹೊರಟಿತೆನ್ನಿ ಆಗ ಕ್ಷುದ್ರ ಕಿಡಿಗೇಡಿಗಳು ಕೂಡಲೇ ಅದನ್ನು ಸ್ತಬ್ಧ ಗೊಳಿಸಬಲ್ಲರು. +ನಮ್ಮೊಡನೆ ನೀವು ರಕ್ತ ಸಂಬಂಧಾದಿಗಳನ್ನು ಮಾಡಬಯಸುವಿರಾದರೆ ನಿಮಗಿಂತ ಕೆಳಜಾತಿಯವರೊಡನೆಯೂ ಸಹಭೋಜನ ಹಾಗೂ ರಕ್ತ ಸಂಬಂಧನಿಮಗೆ ಆಗಬೇಕಲ್ಲವೆ ಎಂದು ಹೇಳಿಬಿಡುತ್ತಾರೆ. +ಎಲ್ಲರೂ ಜಾತಿ ಪದ್ಧತಿಯ ಗುಲಾಮರೇ. +ಆದರೆ ಎಲ್ಲ ಗುಲಾಮರ ಸ್ಥಾನಮಾನ ಒಂದೇ ಆಗಿಲ್ಲ. +ಆರ್ಥಿಕ ಕ್ರಾಂತಿಗೆ ಜನರನ್ನು ಹುರಿದುಂಬಿಸುತ್ತ ಕಾರ್ಲ್‌ಮಾರ್ಕ್ಸ್‌ಹೇಳಿದರು, “ನಿಮ್ಮ ಸಂಕೋಲೆಗಳನ್ನಲ್ಲದೆ ಬೇರೇನನ್ನೂ ನೀವು ಕಳೆದು ಕೊಳ್ಳಬೇಕಾಗಿಲ್ಲ”. +ಆದರೆ ಸಾಮಾಜಿಕ ಹಾಗೂ ಧಾರ್ಮಿಕ ಹಕ್ಕುಗಳನ್ನು ಹೆಚ್ಚುಕಡಿಮೆ ಪ್ರಮಾಣದಲ್ಲಿ ಹಂಚಿ ಹಾಕಿರುವ ಕುತಂತ್ರದ ಜಾತಿಪದ್ಧತಿಯಲ್ಲಿ ಸಿಕ್ಕಿಕೊಂಡ ಹಿಂದೂಗಳ ಮುಂದೆ ಕಾರ್ಲ್‌ಮಾರ್ಕ್ಸ್‌ನ ಧ್ಯೇಯವಾಕ್ಯ ಅರಣ್ಯರೋದನವಾಗುತ್ತದೆ. +ಜಾತಿಪದ್ಧತಿಯೆಲ್ಲ ನಾಶವಾಗುವುದಾದರೆ ಕೆಲವರು ಬಹಳಷ್ಟು ಪ್ರತಿಷ್ಠೆಯನ್ನೂ ಅಧಿಕಾರವನ್ನೂ ಕಳೆದುಕೊಳ್ಳಬೇಕಾದೀತು. +ಆದುದರಿಂದ ನೀವು ಹಿಂದೂಗಳನ್ನು ಸಂಘಟಿಸಿ ಜಾತಿ ನಿರ್ಮೂಲನಕ್ಕೆ ಅಣಿಗೊಳಿಸಲಾರಿರಿ. +ಹಿಂದೂಗಳನ್ನು ತರ್ಕದಿಂದ ಮನವೊಲಿಸಿ, ತರ್ಕ ವಿರುದ್ಧವಾದ ಕಾರಣ ಜಾತಿಪದ್ಧತಿಯನ್ನು ತೊರೆಯಲು ಹೇಳಬಲ್ಲಿರಾ? +ಇಲ್ಲಿ ಇನ್ನೊಂದು ಪ್ರಶ್ನೆ ಹುಟ್ಟುತ್ತದೆ. +ತರ್ಕ ಮಾಡುವ ಸ್ವಾತಂತ್ರ್ಯ ಹಿಂದೂವಿಗೆ ಇದೆಯೆ? +ಆಚಾರ ವಿಷಯದಲ್ಲಿ ಪಾಲಿಸಬೇಕಾದರೆ ಮೂರು ಶಾಸನಗಳನ್ನು ಮನುಸ್ಮೃತಿ ವಿಧಿಸಿದೆ. +“ವೇದ, ಸ್ಮೃತಿಃ,ಸದಾಚಾರಃ ಸ್ಪಸ್ಯಚಃ ಪ್ರಿಯಮಾತ್ಮಾನಃ”. +ತರ್ಕ ಮಾಡುವ ಬುದ್ಧಿಗೆ ಇಲ್ಲಿ ಆಸ್ಪದವೇ ಇಲ್ಲ. +ವೇದ, ಸ್ಮತಿ,ಸದಾಚಾರ ಇವುಗಳನ್ನುಳಿದ ಬೇರೆ ಯಾವುದನ್ನೂ ಹಿಂದೂವು ಅನುಸರಿಸಕೂಡದು. +ಮೊದಲನೆಯದಾಗಿ,ವೇದಗಳಲ್ಲಿ ಅಥವಾ ಸ್ಮೃತಿಗಳಲ್ಲಿ ಹೇಳಿರುವ ಮಾತುಗಳನ್ನು ಅರ್ಥ ಮಾಡುವಾಗ ಸಂಶಯ ಹುಟ್ಟಿಕೊಂಡರೆ ಹೇಗೆ? +ಈ ವಿಷಯದಲ್ಲಿ ಮನುವಿನ ಅಭಿಪ್ರಾಯ ಸ್ಪಷ್ಟವಾಗಿದೆ. +ಮನು ಹೇಳುತ್ತಾನೆ,ಈ ವಿಧಿಯ ಮೇರೆಗೆ ವೇದ, ಸ್ಮೃತಿಗಳ ಅರ್ಥ ವಿವರಣೆಯಲ್ಲಿ ಸ್ವತಂತ್ರ ಬುದ್ಧಿಯಿಂದ ತರ್ಕಹೂಡುವುದು ನಿಷಿದ್ಧ. +ಹೀಗಿರುವುದರಿಂದ ವೇದಗಳಲ್ಲಿ, ಸ್ಮೃತಿಗಳಲ್ಲಿ ಹೇಳಿರುವ ವಿಷಯಕ್ಕೆ ಸುಮ್ಮನೆ ತಲೆದೂಗಬೇಕು; ತರ್ಕಿಸಕೂಡದು. +ವೇದಗಳ ಉಕ್ತಿಗೂ ಸ್ಮೃತಿಗಳ ಉಕ್ತಿಗೂ ಪರಸ್ಪರ ವಿರೋಧಕಂಡು ಬಂದಿತೆನ್ನಿ, ಆ ಪ್ರಸಂಗದಲ್ಲಿ ಕೂಡ ಸ್ವಂತ ಬುದ್ಧಿಯಿಂದ ವಿಚಾರ ಮಾಡುವಂತಿಲ್ಲ. +ಎರಡು ಸ್ಮೃತಿಗಳ ಪರಸ್ಪರ ವಿರೋಧವಾದ ಮಾತುಗಳನ್ನು ಹೇಳಿದ್ದರೆ ಅವೆರಡೂ ಸಮಾನವಾದ ಶಾಸನಗಳೇ. +ಅವೆರಡರಲ್ಲಿ ಯಾವುದನ್ನು ಅನುಸರಿಸಿದರೂ ದೋಷವಿಲ್ಲ. +ಬುದ್ಧಿಶಕ್ತಿಯಿಂದ ತೂಗಿನೋಡಿ ಯಾವುದು ಸರಿಯೆಂದು ನಿರ್ಧರಿಸುವ ಪ್ರಯತ್ನ ಮಾಡಕೂಡದು. +ಮನು ಸ್ಪಷ್ಟವಾಗಿ ಸಾರುತ್ತಾನೆ,ಶ್ರುತಿ ಹಾಗೂ ಸ್ಮೃಶಿ ಇವೆರಡರಲ್ಲಿ ಪರಸ್ಪರ ವಿರೋಧ ಕಂಡರೆ ಶ್ರುತಿಯ ಮಾತೇ ಪ್ರಮಾಣ. +ಆದರೆ ಇಲ್ಲಿ ಕೂಡ ಇವೆರಡರಲ್ಲಿ ಯಾವುದು ಬುದ್ಧಿಸಮ್ಮತವೆಂದು ನೋಡಲು ಪ್ರಯತ್ನಿಸಕೂಡದು. +ಇದನ್ನು ಮನುವೇ ಹೀಗೆ ಹೇಳಿದ್ದಾರೆ. +ಎರಡು ಸ್ಮೃತಿಗಳಲ್ಲಿ ವಿರೋಧ ಕಂಡರೆ ಮನುಸ್ಮತಿಯೇ ಪ್ರಮಾಣ. +ಇಲ್ಲಿ ಕೂಡ ಸ್ವತಂತ್ರವಾಗಿ ತರ್ಕಿಸಕೂಡದು. +ಬೃಹಸ್ಪತಿ ಈ ಕೆಳಗಿನಂತೆ ಹೇಳಿದ್ದಾನೆ. +ಶ್ರುತಿ ಮತ್ತು ಸ್ಮೃತಿಗಳು ಹೇಳಿಬಿಟ್ಟ ಮೇಲೆ ಮುಗಿದು ಹೋಯಿತು. +ಹಿಂದೂವಾದವನುತನ್ನ ಬುದ್ಧಿಶಕ್ತಿಯನ್ನು ಅದಕ್ಕೆ ಬಳಸಿಕೊಳ್ಳಬೇಕಾಗಿಲ್ಲ. +ಮಹಾಭಾರತದಲ್ಲಿ ಕೂಡ ಇದೇ ಮಾತನ್ನು ಹೇಳಲಾಗಿದೆ. +ಜಾತಿ ಮತ್ತು ವರ್ಣ ಇವೆರಡನ್ನೂ ಕುರಿತು ವೇದಗಳಲ್ಲಿಯೂ ಸ್ಮೃತಿಗಳಲ್ಲಿಯೂ ವಿಧಿನಿಷೇಧಗಳನ್ನು ಹೇಳಿರುವುದರಿಂದ ಹಿಂದೂವಾದವನಿಗೆ ಸ್ವತಂತ್ರ ವಿಚಾರಶಕ್ತಿಯ ಅವಕಾಶವೇ ಇಲ್ಲ. +ರೈಲ್ವೆ ಪ್ರವಾಸ ಮತ್ತು ವಿದೇಶ ಯಾತ್ರೆಗಳಂತಹ ಪ್ರಸಂಗಗಳಲ್ಲಿ ಜಾತಿ ನಿಯಮಗಳನ್ನು ಮುರಿಯಬೇಕಾಗಿಬಂದರೂ, ಮತ್ತೆ ಜಾತಿ ನಿಯಮಗಳಿಗೆ ನಿಷ್ಠೆ ತೋರುವ ಹಿಂದೂಗಳನ್ನು ಕಂಡು ಹಿಂದೂಗಳಲ್ಲದವರು ನಗುತ್ತಿರಬಹುದು. +ಹಿಂದೂಗಳ ವಿಚಾರ ಶಕ್ತಿಗೆ ತೊಡಿಸಿದ ಇನ್ನೊಂದು ಸಂಕೋಲೆಯನ್ನು ಈ ಸಂಗತಿ ಪ್ರಕಟಿಸುತ್ತದೆ. +ಮನುಷ್ಯನ ಜೀವನ ಕೇವಲ ಅಭ್ಯಾಸ ಬಲದಿಂದ, ವಿಚಾರ ಮಾಡುವ ಅವಶ್ಯಕತೆಯಿಲ್ಲದೆಯೆ ಸಾಮಾನ್ಯವಾಗಿ ಸಾಗುತ್ತದೆ. +ಯಾವುದೋ ಒಂದು ನಿರ್ದಿಷ್ಟವಾದ ನಂಬಿಕೆ ಅಥವಾ ತಿಳುವಳಿಕೆ ಸರಿಯೊ ತಪ್ಪೊ ಎಂಬುದನ್ನು ಸಾಧಕಬಾಧಕ ಪ್ರಮಾಣಗಳಿಂದ ಪರಿಶೀಲಿಸಿ ನೋಡಿ, ಆಳವಾಗಿ ಚಿಂತಿಸಿ ನಿರ್ಣಯಕ್ಕೆ ಬರುವ ಪ್ರಸಂಗತೀರ ಅಪರೂಪ. +ಒಂದು ಸಂಕಟಕಾಲ ಅಥವಾ ಸಂದಿಗ್ಧ ಪರಿಸ್ಥಿತಿ ಉಂಟಾದಾಗ ಮಾತ್ರ ವಿಚಾರಶಕ್ತಿ ಈ ಕ್ರಿಯೆಯಲ್ಲಿ ತೊಡಗಬಹುದು. +ರೈಲ್ವೆ ಪ್ರವಾಸವಾಗಲಿ, ವಿದೇಶ ಪ್ರಯಾಣವಾಗಲಿ ಹಿಂದೂವಿನ ಜೀವನದಲ್ಲಿ ಒಂದು ದಿವ್ಯ ಪರೀಕ್ಷೆಯ ಸಂದರ್ಭವೇ ಆಗುತ್ತದೆ; +ಎಲ್ಲಾ ಕಾಲದಲ್ಲಿ ಪಾಲಿಸಲಾಗದಿದ್ದರೆ ಜಾತಿ ನಿಯಮಗಳನ್ನು ಪಾಲಿಸುವುದಾದರೂ ಯಾತಕ್ಕೆ ಎಂಬ ಪ್ರಶ್ನೆ ಹಿಂದೂವಿಗೆ ಬರಬೇಕಷ್ಟೆ, ಆದರೆ ಆ ಪ್ರಶ್ನೆ ಅವನಿಗೆ ಬರುವುದೇ ಇಲ್ಲ. +ಒಂದು ಹೆಜ್ಜೆಯಲ್ಲಿ ಜಾತಿಯನ್ನು ಉಲ್ಲಂಘಿಸುತ್ತಾನೆ. +ಮುಂದಿನ ಹೆಜ್ಜೆಯಲ್ಲಿ ಏನೂ ಆಗಿಲ್ಲವೆಂಬಂತೆ ಜಾತಿಯ ನಿಯಮವನ್ನು ಪಾಲಿಸುತ್ತಾನೆ. +ಈ ವಿಚಿತ್ರವಾದ ನಡವಳಿಕೆಗೆ ಉತ್ತರ ಶಾಸ್ತ್ರಗಳ ಶಾಸನದಲ್ಲಿದೆ. +“ಸಾಧ್ಯವಾದಷ್ಟು ಮಟ್ಟಿಗೆ ಜಾತಿ ನಿಯಮಗಳನ್ನು ಪಾಲಿಸು, ಮೀರಬೇಕಾಗಿ ಬಂದರೆ ಪ್ರಾಯಶ್ಚಿತ್ರದಿಂದ ಶುದ್ಧಿ ಮಾಡಿಕೊ” ಎಂದು ಶಾಸ್ತ್ರಗಳು ಹೇಳುತ್ತವೆ. +ಈ ಪ್ರಾಯಶ್ಚಿತ್ತ ವಿಧಾನದಿಂದ ಜಾತಿಪದ್ಧತಿ ನಿರಾತಂಕವಾಗಿ ಮುಂದುವರಿಯಲು ಅನುಕೂಲವಾಗಿದೆ. +ವಿಚಾರ ಮಾಡುವ ಅವಕಾಶವನ್ನು ತಪ್ಪಿಸಿ ಜಾತಿ ಸುರಕ್ಷಿತವಾಗಿರುವಂತೆ ನೋಡಿಕೊಳ್ಳಲಾಗಿದೆ. +ಜಾತಿ ಹಾಗೂ ಅಸ್ಪ್ಯತೆಗಳ ನಿರ್ಮೂಲನೆಗಾಗಿ ಹಲವಾರು ಜನರು ಈ ಮೊದಲೇ ಪ್ರಯತ್ನಿಸಿದ್ದುಂಟು. +ಇಂಥವರಲ್ಲಿ ರಾಮಾನುಜ,ಕಬೀರ ಮೊದಲಾದವರನ್ನು ಮುಖ್ಯವಾಗಿ ಹೆಸರಿಸಬಹುದು. +ಈ ಸುಧಾರಕರ ಪ್ರಯತ್ನಗಳನ್ನು ವಿವರಿಸಿ, ಅವರನ್ನು ಅನುಸರಿಸಿರೆಂದು ಹಿಂದೂಗಳಿಗೆ ಹೇಳಬಲ್ಲಿರಾ? +ಶ್ರುತಿ, ಸ್ಮೃತಿಗಳ ಜೊತೆಗೆ ಸದಾಚಾರವೆಂಬುದನ್ನೂ ಶಾಸನಗಳ ಸಾಲಿನಲ್ಲಿ ಮನು ಸೇರಿಸಿದ್ದಾನೆ. +ಶಾಸ್ತ್ರಗಳಿಗಿಂತ ಸದಾಚಾರವೇ ಹೆಚ್ಚಿನದೆಂದೂ ಹೇಳಲಾಗಿದೆ. +ಯದ್ಯದಾಚರ್ಯತೇ ಯೇನ ಧರ್ಮ್ಯಂ ವಾ ಧರ್ಮ್ಯಮೇವ ವಾ। +ದೇಶಸ್ಯಾಚರಣಂ ನಿತ್ಯಂ ಚರಿತ್ರಂ ತದ್ಧಿ ಕೀರ್ತಿತಮ್‌ ॥ +ಈ ಮಾತಿನ ಮೇರೆಗೆ, ಧರ್ಮವಾಗಿರಲಿ, ಅಧರ್ಮವಾಗಿರಲಿ, ಶಾಸ್ತಾನುಸಾರವಾಗಿರಲಿ, ಶಾಸ್ತ್ರವಿರುದ್ಧವೇ ಆಗಿರಲಿ, ಸದಾಚಾರವನ್ನೇ ಪಾಲಿಸತಕ್ಕದ್ದು. +ಆದರೆ ಸದಾಚಾರವೆಂದರೇನು? +ಒಳ್ಳೆಯ ನಡತೆ,ಸರಿಯಾದ ನಡತೆಯೆಂದಾಗಲೀ ಸಜ್ಜನರ ನಡತೆಯೆಂದಾಗಲೀ ಭಾವಿಸಿದರೆ ತಪ್ಪು ಸದಾಚಾರದ ಅರ್ಥ ಹಾಗಲ್ಲ. +ಒಳ್ಳೆಯದೂ, ಪುರಾತನ ಕಾಲದಿಂದ ನಡೆದು ಬಂದ ಆಚಾರವೇ ಸದಾಚಾರ. +ಸದಾಚಾರವೆಂದರೆ ಒಳ್ಳೆಯ ಆಚಾರವೆಂಬ ಅಥವಾ ಸಜ್ಜನರ ಆಚಾರವೆಂಬ ಗಹಿಕೆಯಿಂದ, ಸಜ್ಜನರನ್ನೇ ಅನುಕರಿಸಿಯಾರೆಂಬ ಭೀತಿಯಿಂದಲೋ ಏನೋ ಸ್ಮೃತಿಗಳು ಸ್ಪಷ್ಟವಾಗಿ ಹೀಗೆ ವಿಧಿಸುತ್ತವೆ “ಶ್ರುತಿ, ಸ್ಮೃತಿ,ಸದಾಚಾರಗಳಿಗೆ ವ್ಯತಿರಿಕ್ತವಾದ ನಡತೆ ದೇವತೆಗಳಿಂದಾದರೂ ಅದು ಆಚರಣೆ ಯೋಗ್ಯವಲ್ಲ”. +ಇದು ಅತಿವಿಚಿತ್ರವೆನಿಸಬಹುದು, ಅಬದ್ಧ ಎನಿಸಬಹುದು. +ಆದರೆ ವಸ್ತುಸ್ಥಿತಿ ಹಾಗಿದೆ. +"ನ ದೇವಚರಿತಂ ಚರೇತ್‌'ಎಂಬುದು ಶಾಸ್ತ್ರಗಳು ವಿಧಿಸಿದ ಶಾಸನ. +ಬುದ್ಧಿಶಕ್ತಿ ಮತ್ತು ನೀತಿ ಇವೆರಡು ಸುಧಾರಕನ ಬತ್ತಳಿಕೆಯಲ್ಲಿರುವ ಮಹಾಸ್ತ್ರಗಳು. +ಇವೆರಡನ್ನೂ ಕಿತ್ತುಕೊಂಡು ಬಿಟ್ಟರೆ ಅವನೇನು ಮಾಡಬಲ್ಲ? +ಬುದ್ಧಿಯ ಉಪಯೋಗಮಾಡಲು ಜನರಿಗೆ ಸ್ವಾತಂತ್ರ್ಯವೇ ಇಲ್ಲವೆಂದರೆ ನೀವು ಜಾತಿಯನ್ನು ನಾಶ ಪಡಿಸುವುದು ಹೇಗೆ? +ಜಾತಿಯೆಂಬುದು ನೀತಿ ಸಮ್ಮತವೋ ಅಲ್ಲವೋ ಎನ್ನುವುದನ್ನು ವಿಚಾರಿಸುವ ಸ್ವಾತಂತ್ರ್ಯ ಜನರಿಗೆ ಇಲ್ಲವೆಂದರೆ ನೀವು ಜಾತಿಯನ್ನು ಉಚ್ಛಾಟಿಸುವುದೆಂತು? +ಜಾತಿ ಕಟ್ಟಿಕೊಂಡ ಕೋಟೆ ದುರ್ಭೆದ್ಯವಾಗಿದೆ. +ಬುದ್ಧಿ ಮತ್ತು ನೀತಿಗಳು ಅದನ್ನು ಭೇದಿಸಲಾರವು. +ಇನ್ನೂ ಒಂದು ಮಾತನ್ನು ನೆನಪಿಡಿ. +ಈ ದುರ್ಗದ ಒಳಗಡೆ ಬುದ್ಧಿವಂತ ವರ್ಗವಾದ ಬ್ರಾಹ್ಮಣರ ಸೈನ್ಯ ಸನ್ನದ್ಧವಾಗಿ ನಿಂತಿದೆ. +ಇದು ಸಂಬಳಕ್ಕಾಗಿ ದುಡಿಯುವ ಸೈನ್ಯವಲ್ಲ. +ತನ್ನ ಮಾತೃಭೂಮಿಯನ್ನು ರಕ್ಷಿಸಲು ನಿಂತ ಸೈನ್ಯವಾಗಿದೆ. +ಹೀಗಿರುವುದರಿಂದಲೇ ನಾನು ಹೇಳುತ್ತೇನೆ ಹಿಂದೂಗಳಲ್ಲಿಯ ಜಾತಿಗಳನ್ನು ಹೊಡೆದಟ್ಟುವುದು ಅಸಾಧ್ಯವಾದುದು. +ಈ ಕೋಟೆಯಲ್ಲಿ ಒಂದು ತೂತು ಮಾಡುವುದಕ್ಕೆ ಒಂದು ಸುದೀರ್ಘ ಯುಗವೇ ಬೇಕಾದೀತು. +ಈ ಕಾರ್ಯಕ್ಕೆ ದೀರ್ಫಾವಧಿಯೇ ಬೇಕಾಗಲಿ, ಅಲ್ಪಾವಧಿಯೇ ಸಾಕಾಗಲಿ ನೀವು ಮರೆಯದಿರಬೇಕಾದ ಒಂದು ಮಾತಿದೆ. +ವೈಚಾರಿಕತೆಯನ್ನು ನಿರಾಕರಿಸುವ ವೇದಗಳನ್ನು ಹಾಗೂ ಶಾಸ್ತ್ರಗಳನ್ನು, ನೀತಿಗೂ ಬುದ್ಧಿಗೂ ಅವಕಾಶವೀಯದಿರುವ ವೇದಗಳನ್ನು ಹಾಗೂ ಶಾಸ್ತ್ರಗಳನ್ನು ನೀವು ಸಿಡಿಮದ್ದನ್ನಿಟ್ಟು ಉಡಾಯಿಸಬೇಕು. +ಶ್ರುತಿ ಮತ್ತು ಸ್ಮೃತಿಗಳ ಧರ್ಮವನ್ನು ನಾಶಮಾಡಬೇಕು. +ಬೇರೆ ಉಪಾಯವೇ ಇಲ್ಲ. +ಇದು ಈ ವಿಷಯದಲ್ಲಿ ನನ್ನ ಖಚಿತವಾದ ಅಭಿಪ್ರಾಯ. +ಧರ್ಮನಾಶವೆಂದರೆ ಅದಕ್ಕೆ ನನ್ನ ಅರ್ಥವೇನೆಂದು ಕೆಲವರಿಗೆ ತಿಳಿಯಲಿಕ್ಕಿಲ್ಲ. +ನನ್ನ ಈ ವಿಚಾರವೇಕೆಲವರಿಗೆ ಜಿಗುಪ್ಸೆ ಉಂಟು ಮಾಡಿರಬಹುದು. +ಕೆಲವರಿಗೆ ಅದು ಕ್ರಾಂತಿಕಾರಿಯೆಂದೂ ಅನ್ನಿಸೀತು. +ಆದುದರಿಂದ ನನ್ನ ಅಭಿಪ್ರಾಯವನ್ನು ಇಲ್ಲಿ ತಿಳಿಸಿ ಸ್ಪಷ್ಟಪಡಿಸುತ್ತೇನೆ. +ತತ್ವಗಳು ಬೇರೆ, ನಿಯಮಗಳು ಬೇರೆ. +ಇದನ್ನು ನೀವು ಒಪ್ಪುತ್ತೀರೋ ಇಲ್ಲವೋ ನಾನಂತೂ ಒಪ್ಪುತ್ತೇನೆ. +ನಿಯಮಗಳು ವ್ಯಾವಹಾರಿಕ; + ವಿಧಿಸಿದ ರೀತಿಯಲ್ಲಿನಡೆದುಕೊಳ್ಳುವ ರೂಢಿಯ ಕ್ರಮಗಳು. +ಆದರೆ ತತ್ವಗಳು ಬೌದ್ಧಿಕವಾಗಿರುತ್ತವೆ. +ಸಾರಾಸಾರ ವಿವೇಚನೆಯಿಂದ ನಿರ್ಣಯಿಸುವ ಸಾಧನಗಳವು. +ಈ ಕ್ರಮದಲ್ಲಿ ಹೋಗೆಂದು ತಿಳಿಸುವುದು ನಿಯಮಗಳ ರೀತಿ. +ತತ್ವಗಳು ನಿರ್ದಿಷ್ಟ ಕ್ರಮವನ್ನು ಹೇಳುವುದಿಲ್ಲ. +ನಿಯಮಗಳು ಪಾಕಶಾಸ್ತ್ರದ ಕ್ರಮಸೂಚನೆಯಂತೆ ಏನನ್ನು ಮಾಡಬೇಕು ಹೇಗೆ ಮಾಡಬೇಕು ಎಂದು ಹೇಳುತ್ತವೆ. +ನ್ಯಾಯದಂತಹ ಒಂದು ತತ್ವ ಬೌದ್ಧಿಕ ಹಾಗೂ ಭಾವನಾತ್ಮಕ ಗುಣವನ್ನು ಒದಗಿಸುತ್ತದೆ. +ಅದರಿಂದ ವ್ಯಕ್ತಿ ತನ್ನ ಬಯಕೆಗಳನ್ನೂ ಉದ್ದೇಶಗಳನ್ನೂ ವಿವೇಚಿಸುತ್ತಾನೆ. +ಯಾವುದನ್ನು ಮುಖ್ಯವಾಗಿ ಗಮನಿಸಬೇಕೆಂಬುದಕ್ಕೆ ಅವನಿಗೆ ಅದು ಮಾರ್ಗದರ್ಶಿಯಾಗುತ್ತದೆ. +ನಿಯಮಗಳು ಹಾಗೂ ತತ್ವಗಳಿಗೆ ಇರುವ ಈ ಭೇದದ ಮೂಲಕ ಅವುಗಳನ್ನು ಅನುಸರಿಸಿ ಮಾಡುವ ಕಾರ್ಯಗಳೂ ಭಿನ್ನವಾಗುತ್ತವೆ. +ನಿಯಮಗಳು ಒಳ್ಳೆಯದೆಂದು ಹೇಳಿದ್ದನ್ನು ಮಾಡುವುದು ಬೇರೆ, ತತ್ವದೃಷ್ಟಿಯಿಂದ ಒಳ್ಳೆಯದೆಂದು ತಿಳಿದಿದ್ದನ್ನು ಮಾಡುವುದು ಬೇರೆ. +ತತ್ವ ತಪ್ಪಿರಬಹುದು ಆದರೆ ಕೃತಿ ಪ್ರಜ್ಞಾಪೂರ್ವಕವಾಗಿದ್ದು ಹೊಣೆಗಾರಿಕೆಯನ್ನು ಹೊಂದಿರುತ್ತದೆ. +ನಿಯಮ ಸರಿಯಾಗಿರಬಹುದು ಅದನ್ನನುಸರಿಸಿ ಕೃತಿ ಯಾಂತ್ರಿಕವಾಗಿರುತ್ತದೆ. +ಧಾರ್ಮಿಕ ಕ್ರಿಯೆ ಕೆಲವೊಮ್ಮೆ ಸರಿಯಾದ ಕ್ರಿಯೆಯಾಗದಿರಬಹುದು. + ಆದರೆ ಹೊಣೆಗಾರಿಕೆಯ ಧರ್ಮ ಮುಖ್ಯವಾಗಿ ತತ್ವಗಳ ಮಾತೇ ಆಗತಕ್ಕದ್ದು. +ಅದು ನಿಯಮಗಳ ಮಾತಲ್ಲ. +ಧರ್ಮ ಕೇವಲ ನಿಯಮಗಳೆಂಬ ಅವಸ್ಥೆಗೆ ಇಳಿದಾಕ್ಷಣ ಅದು ಧರ್ಮವಾಗಿ ಉಳಿಯದು. +ಏಕೆಂದರೆ ಧರ್ಮದ ಸಾರವಾದ ಹೊಣೆಗಾರಿಕೆಯು ಆಗ ನಾಶವಾಗುತ್ತದೆ. +ಈ ಹಿಂದೂ ಧರ್ಮವೆಂದರೇನು? +ಅದೊಂದು ತತ್ವಗಳ ಕಟ್ಟೋ ಅಥವಾ ನಿಯಮಾವಳಿಯೋ? + ವೇದ, ಸ್ಮೃತಿಗಳಲ್ಲಿ ಉಕ್ತವಾದ ಹಿಂದೂ ಧರ್ಮವೆಂದರೆ ಯಾಜ್ಞಿಕ, ಸಾಮಾಜಿಕ, ರಾಜಕೀಯ ಮತ್ತು ಆರೋಗ್ಯ ರಕ್ಷಣಾತ್ಮಕ ನಿಯಮಗಳ ಒಂದುಕಲಸು ಮೇಲೋಗರವಾಗಿದೆ. +ಹಿಂದೂಗಳು ಧರ್ಮವೆಂದು ಯಾವುದನ್ನು ಕರೆಯುತ್ತಾರೋ ಅದು ವಿಧಿನಿಷೇಧಗಳ ಒಂದು ಸಂಚಯವೇ ಹೊರತು ಬೇರೇನೂ ಅಲ್ಲ. +ನಿಜವಾಗಿಯೂ ವಿಶ್ವಾಸಾತ್ಮಕವಾದ ಎಲ್ಲ ದೇಶಗಳಿಗೂ ಎಲ್ಲ ಜನಾಂಗಗಳಿಗೂ ಎಲ್ಲ ಕಾಲಕ್ಕೂ ಅನ್ವಯಿಸುವಂತಹ ತತ್ವಗಳನ್ನುಳ್ಳದ್ದು ಎಂಬರ್ಥದಲ್ಲಿ ಅದು ಧರ್ಮವೇ ಅಲ್ಲ. +ವಿಧಿ ನಿಷೇಧಗಳೇ ಧರ್ಮವೆಂಬರ್ಥ ಬರುವಂತೆ ವೇದ, ಸ್ಮೃತಿಗಳಲ್ಲೂ ಧರ್ಮಎಂಬ ಪದವನ್ನು ಬಳಸಲಾಗಿದೆ. +ವೇದದಲ್ಲಿ ಧರ್ಮವೆಂಬ ಪದವನ್ನು ಆಚಾರ ಶಾಸನಗಳೆಂಬರ್ಥದಲ್ಲಿ ಅನೇಕ ಸಲ ಬಳಸಲಾಗಿದೆ. +ಜೈಮಿನಿ ತನ್ನ ಪೂರ್ವ ಮೀಮಾಂಸೆಯಲ್ಲಿ ಆಗಮಗಳಲ್ಲಿ ಉಕ್ತವಾದಶ್ರೇಯವೇ ಧರ್ಮವೆಂದು ವ್ಯಾಖ್ಯಾನಿಸಿದ್ದಾನೆ. +ಸರಳವಾದ ಮಾತುಗಳಲ್ಲಿ ಹೇಳುವುದಾದರೆ ಹಿಂದೂಗಳು ಹೇಳುವ ಧರ್ಮವೆಂದರೆ ಕಾನೂನು ಅಥವಾ ಕಾನೂನಿನ ಕ್ರಮಕ್ಕೆ ಒಳಪಡಿಸಿದ ವರ್ಗನೀತಿ. +ಇದು ಧರ್ಮವೆಂದು ನಾನು ಒಪ್ಪಲಾರೆ. +ಕಟ್ಟುನಿಟ್ಟಾದ ನಿಯಮಾವಳಿಗಳೇ ಧರ್ಮವೆಂದು ಬಳಸಲ್ಪಡುವುದರಿಂದ ನೈತಿಕ ಸ್ವಾತಂತ್ರ್ಯ ನಾಶವಾಗುತ್ತದೆ. +ಮನಃಪೂರ್ವಕವಾದ ನಡವಳಿಕೆಗೆ ಬದಲಾಗಿ ಹೊರಗಿನಿಂದ ಹೇರಿದ ನಿಯಮಗಳನ್ನು ಗುಲಾಮರಾಗಿ ಜನ ಪಾಲಿಸಬೇಕಾಗುತ್ತದೆ. +ಈ ವಿಧಿ ನಿಷೇಧಗಳ ಅತ್ಯಂತ ದುಷ್ಪ ಅಂಶವೆಂದರೆ ಅವು ಸರ್ವ ಕಾಲಕ್ಕೂ ಇದ್ದಂತೆಯೇ ಪಾಲಿಸಲ್ಪಡಬೇಕೆಂಬುದು. +ಎಲ್ಲಾ ವರ್ಗಗಳಿಗೆ ಅವು ಸಮಾನವಾಗಿಯೂ ಇಲ್ಲ. +ಒಂದೊಂದಕ್ಕೆ ಒಂದೊಂದು ಬಗೆಯಾಗಿವೆ. +ಅವು ಸಾರ್ವಕಾಲಿಕವೆಂದು ಹೇಳಿರುವುದರಿಂದ ಈ ಅಸಮಾನತೆಯೂ ಶಾಶ್ವತವಾಗಿದೆ. +ಈ ಶಾಸನಗಳನ್ನು ವಿಧಿಸಿದವರು ಇಂತಿಂತಹ ದ್ರಷ್ಟಾರರೆಂದು ನಾವು ಅವುಗಳನ್ನು ವಿರೋಧಿಸುವುದಲ್ಲ ಇವು ಸಿದ್ಧಾಂತವೆಂಬಂತೆ ಸ್ಥಿರೀಕೃತವಾಗಿರುವುದಕ್ಕೆ ಮಾತ್ರ ನಮ್ಮ ಆಕ್ಷೇಪವಿದೆ. +ಮನುಷ್ಯ ಸುಖ ಆತನ ಪರಿಸ್ಥಿತಿಗೆ ಅನುಸಾರವಾಗಿ ಬದಲಾಗುತ್ತದೆ. +ಹೀಗಿರುವಾಗ ಈಬಗೆಯ ಶಾಶ್ಚತವಾದ ನಿಯಮ ಅಥವಾ ಶಾಸನಗಳನ್ನು ಜನತೆ ಅವ್ಯಾಹತ ಹೇಗೆ ಸಹಿಸಿಕೊಳ್ಳಬಲ್ಲದು? +ಆದುದರಿಂದ ಇಂತಹ ಧರ್ಮವನ್ನು ನಾಶಪಡಿಸಿದರೆ ಅದು ಯಾವ ರೀತಿಯಿಂದಲೂ ಅಧರ್ಮವಲ್ಲವೆಂದು ಹೇಳುತ್ತೇನೆ. +ಆ ಧರ್ಮದ ಮುಖಕ್ಕೆ ತೊಡಿಸಿದ ಈ ಮುಸುಕನ್ನು ಕಿತ್ತುಹಾಕಿ ಶಾಸನವನ್ನು ಧರ್ಮವೆಂದು ರೂಢಿಗೊಳಿಸಿದ ಅನ್ಯಾಯವನ್ನು ದೂರಗೊಳಿಸುವುದು ನಿಮ್ಮ ಅನಿವಾರ್ಯ ಕರ್ತವ್ಯ. +ಇದು ನನ್ನ ಅಭಿಪ್ರಾಯ. +ಧರ್ಮದ ಬಗೆಗೆ ಉಂಟಾಗಿರುವ ಈ ತಪ್ಪು ಕಲ್ಪನೆಯನ್ನು ಜನರ ಮನಸ್ಸಿನಿಂದ ಹೊರಗೆ ತಳ್ಳಿಬಿಡಿ. +ಅವರು ಪಾಲಿಸುತ್ತಿರುವುದು ಧರ್ಮವಲ್ಲ. + ಒಂದು ಶಾಸನ ಎಂದು ಮನವರಿಕೆ ಮಾಡಿಬಿಡಿ. +ಹಾಗೆ ಮಾಡುವಲ್ಲಿ ನೀವು ಜಯಶಾಲಿಗಳಾದ ಪಕ್ಷದಲ್ಲಿ ಆ ಧರ್ಮವನ್ನು ತಿದ್ದುವುದಕ್ಕೆ ಅಥವಾನಾಶಗೊಳಿಸುವುದಕ್ಕೆ ನಿಮಗೆ ಸಾಧ್ಯವಾಗುವುದು. + ಎಲ್ಲಿಯವರೆಗೆ ಜನರು ಅದನ್ನು ಧರ್ಮವೆಂದು ಪರಿಗಣಿಸುವುರೋ ಅಲ್ಲಿಯವರೆಗೆ ಅವರು ಅದರ ಬದಲಾವಣೆಗೆ ಸಿದ್ಧರಾಗುವುದಿಲ್ಲ. +ಯಾಕೆಂದರೆ ಧರ್ಮದಲ್ಲಿ ಬದಲಾವಣೆಯ ಕಲ್ಪನೆಯಿಲ್ಲ. +ಆದರೆ ಶಾಸನ ಅಥವಾ ಕಾನೂನು ತಿದ್ದುವಿಕೆಗೆ ಒಳಗಾಗಬಲ್ಲದೆಂದು ಅವರು ಒಪ್ಪುತ್ತಾರೆ. +ತಾವು ಧರ್ಮವೆಂದು ಭ್ರಮಿಸಿದ್ದು ನಿಜವಾಗಿಯೂ ಪ್ರಾಚೀನ ಕಾಲದ ಶಾಸನ ಅಥವಾ ಕಾನೂನು ಎಂದು ಅರಿತಾಗ ಅದನ್ನು ಬದಲಿಸಲು ಅವರು ಸಿದ್ಧರಾಗುವರು. +ಕಾನೂನನ್ನು ಬದಲಿಸಬಹುದೆಂದು ಜನ ಆಗ ಒಪ್ಪುತ್ತಾರೆ. +ವಿಧಿನಿಷೇಧಗಳ ಧರ್ಮವನ್ನು ನಾನು ಖಂಡಿಸುತ್ತಿದ್ದೇನೆ ಅಂದ ಕೂಡಲೇ ಧರ್ಮವೇ ಬೇಡವೆಂಬುದು ನನ್ನ ಅಭಿಪ್ರಾಯವಲ್ಲ. +ತದ್ದಿರುದ್ದವಾಗಿ ಬರ್ಕ್‌ ಹೇಳಿದ ಮಾತಿಗೆ ನಾನು ದನಿಗೂಡಿಸುತ್ತೇನೆ. + “ನಿಜವಾದ ಧರ್ಮವು ಸಮಾಜಕ್ಕೆ ಆಧಾರವಾಗಿರುತ್ತದೆ,. + ನಿಜವಾದ ನಾಗರಿಕ ಸರಕಾರಕ್ಕೂ ಅದೇ ಅಡಿಗಲ್ಲು”. +ಆದುದರಿಂದ ಈ ವಿಧಿ ನಿಷೇಧಗಳನ್ನು ರದ್ದುಪಡಿಸಿದಾಗ ಅವುಗಳ ಜಾಗದಲ್ಲಿ ತತ್ವಗಳ ಧರ್ಮ ನೆಲಸಬೇಕೆಂದು ನಾನು ಬಯಸುತ್ತೇನೆ. +ಧರ್ಮ ಅಗತ್ಯವೆಂದು ನನಗೆ ಮನವರಿಕೆಯಾಗಿದೆ. +ಈ ಧರ್ಮದಲ್ಲಿ ಸುಧಾರಣೆಗಳಾಗಬೇಕು. +ಅವು ಯಾವುವೆಂಬುದರ ರೂಪುರೇಷೆಗಳನ್ನು ನಿಮಗೆ ಒದಗಿಸಬೇಕಾಗಿದೆ. +ಸುಧಾರಿತ ಧರ್ಮದಲ್ಲಿ ಈಮುಂದೆ ಹೇಳುವ ಅಂಶಗಳು ಪ್ರಧಾನವಾಗಿರಬೇಕು : (೧) ಸಮಸ್ತ ಹಿಂದೂಗಳಿಗೆ ಅನ್ವಯಿಸುವ ಹಾಗೂ ಸಮಸ್ತ ಹಿಂದೂಗಳಿಗೆ ಸಮ್ಮತವಾದ ಒಂದೇ ಒಂದು ಪ್ರಮಾಣ ಭೂತವಾದ ಧರ್ಮಗ್ರಂಥವಿರಬೇಕು. +ಅಂದರೆ ಧರ್ಮಗ್ರಂಥಗಳೆಂದು ಈವರೆಗೆ ಭಾವಿಸಲಾದ ವೇದಗಳು, ಶಾಸ್ತ್ರಗಳು, ಪುರಾಣಗಳು ಧರ್ಮಗ್ರಂಥಗಳಲ್ಲವೆಂದು ಕಾನೂನಿಂದ ರದ್ದುಪಡಿಸಬೇಕು. +ಮತ್ತು ಈ ಗ್ರಂಥಗಳ ಆಧಾರದಿಂದ ಯಾವುದೇ ಆಚಾರ, ತತ್ವ ವತ ಮೊದಲಾದವುಗಳನ್ನು ಯಾರಾದರೂ ಬೋಧಿಸಿದರೆ ಅದನ್ನು ಶಿಕ್ಷಾರ್ಹ ಅಪರಾಧವೆಂದು ಪರಿಗಣಿಸಬೇಕು. +(೨) ಹಿಂದೂಗಳಲ್ಲಿರುವ ಪೌರೋಹಿತ್ಯ ಅಥವಾ ಧರ್ಮಾಧಿಪತ್ಯವನ್ನು ರದ್ದುಪಡಿಸುವುದು ಲೇಸು. +ಆದರೆ ಇದು ಅಸಾಧ್ಯವೆಂದು ತೋರುವುದರಿಂದ ಕನಿಷ್ಠಪಕ್ಷ ಅದು ಅನುವಂಶಿಕವಾಗಿರುವುದನ್ನಾದರೂ ನಿಷೇಧಿಸಬೇಕು. +ಪುರೋಹಿತ ಅಥವಾ ಧರ್ಮಾಧಿಪತಿಯಾಗಲು ಪ್ರತಿಯೊಬ್ಬ ಹಿಂದೂವಿಗೂ ಸಮಾನವಾದಹಕ್ಕು ಇರತಕ್ಕದ್ದು. +ಸರಕಾರವು ಗೊತ್ತುಪಡಿಸುವ ಒಂದು ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಸರಕಾರದಿಂದ ಸನ್ನದು ಪಡೆಯದೇ ಇದ್ದವರು ನಡೆಸುವ ಧಾರ್ಮಿಕ ಕಾರ್ಯ ಶಾಸನ ಬದ್ಧವಲ್ಲವೆಂದು ಸಾರಿ ಸರಕಾರವು ಅಂಥ ಜನರನ್ನು ದಂಡಿಸತಕ್ಕದ್ದು. +(೪) ಧರ್ಮಾಧಿಪತಿಯು ಸರಕಾರಿ ಸೇವಕನಾಗಬೇಕು ಮತ್ತು ಇತರ ಪ್ರಜೆಗಳಂತೆ ದೇಶದ ಕಾನೂನುಗಳಿಗೆ ಬದ್ಧನಾಗಿರಬೇಕು. +ನೀತಿ,ನಂಬಿಕೆಗಳು, ಪೂಜೆ ಮೊದಲಾದ ವಿಷಯಗಳಲ್ಲಿ ಸರಕಾರ ಅವನನ್ನು ವಿಚಾರಿಸಿ ಶಿಸ್ತಿನ ಕ್ರಮ ಕೈಗೊಳ್ಳಲು ಸಂಪೂರ್ಣ ಅವಕಾಶವಿರತಕ್ಕದ್ದು. +(೫) ಐ.ಸಿ.ಎಸ್‌ ಅಧಿಕಾರಿಗಳ ಸಂಖ್ಯೆಯನ್ನು ನಿಯಂತ್ರಿಸುವ ರೀತಿಯಲ್ಲೇ ಪುರೋಹಿತರ ಸಂಖ್ಯೆಯನ್ನುಅವಶ್ಯಕತೆಗೆ ಅನುಗುಣವಾಗಿ ಒಂದು ಮಿತಿಯೊಳಗೆ ಇಟ್ಟುಕೊಳ್ಳಬೇಕು. +ಇದು ತುಂಬ ತೀವ್ರವಾದ ಬದಲಾವಣೆಯೆನ್ನಿಸಬಹುದು. +ಆದರೆ ನನ್ನ ದೃಷ್ಟಿಯಿಂದ ಇದರಲ್ಲಿ ಕ್ರಾಂತಿಕಾರಕವಾದುದೇನೂ ಇಲ್ಲ. +ದೇಶದಲ್ಲಿ ಪ್ರತಿಯೊಂದು ವೃತ್ತಿಗೂ ಕ್ರಮಬದ್ಧತೆಯಿದೆ. +ಎಂಜಿನಿಯರುಗಳು ನಿರ್ದಿಷ್ಟ ಪ್ರಾವಿಣ್ಯವನ್ನು ತೋರಲೇಬೇಕು. + ಡಾಕ್ಟರು ಪ್ರಾವೀಣ್ಯವನ್ನು ತೋರಲೇಬೇಕು. + ವಕೀಲರು ಪ್ರಾವಿಣ್ಯವನ್ನು ತೋರಲೇಬೇಕು. +ಹೀಗೆ ಖಚಿತಪಡಿಸಿಕೊಂಡ ಮೇಲೆಯೇ ಇವರೆಲ್ಲರಿಗೆ ತಮ್ಮ ತಮ್ಮ ವೃತ್ತಿಗಳನ್ನು ಆರಂಭಿಸಲು ಅನುಮತಿ ದೊರೆಯುತ್ತದೆ. +ತಮ್ಮ ವೃತ್ತಿಯನ್ನು ನಡೆಸಿಕೊಂಡು ಹೋಗುವ ಕಾಲದಲ್ಲೆಲ್ಲ ಈ ಜನರು ದೇಶದ ಕಾನೂನುಗಳನ್ನು ಪಾಲಿಸತಕ್ಕದ್ದು ಮತ್ತು ತಮ್ಮತಮ್ಮ ವೃತ್ತಿಗಳು ವಿಧಿಸುವ ನೀತಿನಿಯಮಾವಳಿಯನ್ನೂ ಪಾಲಿಸತಕ್ಕದ್ದು. +ನಿರ್ದಿಷ್ಟ ಪ್ರಾವೀಣ್ಯವನ್ನು ಪಡೆಯದೆಲೆ ಕೈಗೊಳ್ಳಬಹುದಾದ ಏಕೈಕ ವೃತ್ತಿಯೆಂದರೆ ಧರ್ಮಗುರುವಿನ ಅಥವಾ ಪುರೋಹಿತನ ವೃತ್ತಿ ಈ ಕಸುಬಿಗೆ ನಿಗದಿಪಡಿಸಿದ ಒಂದು ನಿಯಮಾವಳಿಯಿಲ್ಲ. +ಈ ವೃಶ್ತಿಯನ್ನು ನಡೆಸುವ ವ್ಯಕ್ತಿ ಮಾನಸಿಕವಾಗಿ ಪೆದ್ದನಾಗಿರಬಹುದು. + ದೈಹಿಕವಾಗಿ ಗುಹ್ಯ್ಕರೋಗಗಳಿಂದ ಬಳಲುತ್ತಿರಬಹುದು, ನೈತಿಕವಾಗಿ ಪಾಪಿಯೂ ಆಗಿರಬಹುದು. +ಹೀಗಿದ್ದರೂ ಧಾರ್ಮಿಕ ಉತ್ಸವಾದಿಗಳಲ್ಲಿ ಅಧಿಕಾರಿಯಾಗಿ ಭಾಗವಹಿಸಲು, ಹಿಂದೂ ದೇವಸ್ಥಾನಗಳ ಪವಿತ್ರತಮ ಗರ್ಭಗುಡಿಯನ್ನು ಪ್ರವೇಶಿಸಲು,ದೇವರನ್ನು ಮುಟ್ಟಿ ಪೂಜಿಸಲು ಅವನು ಯೋಗ್ಯನೆಂದು ಪರಿಗಣಿಸಲ್ಪಡುತ್ತಾನೆ. +ಪುರೋಹಿತ ವರ್ಗದಲ್ಲಿ ಹುಟ್ಟಿದರೆ ಸಾಕು ಅವನಿಗೆ ಪೌರೋಹಿತ್ಯದ ಯೋಗ್ಯತೆ ತಾನಾಗಿ ಬಂದು ಬಿಟ್ಟಿರುತ್ತದೆಯೆಂಬ ರೂಢಿ ಹಿಂದೂಗಳಲ್ಲಿ ಇದೆ. +ಹಿಂದೂಗಳಲ್ಲಿರುವ ಈ ಪುರೋಹಿತ ವರ್ಗ ಕಾನೂನಿಗಾಗಲೀ ನೀತಿ ನಿಯಮಕ್ಕಾಗಲೀ ಒಳಪಟ್ಟಿಲ್ಲ. +ಅದಕ್ಕೆ ಹಕ್ಕುಗಳುಂಟು ಕರ್ತವ್ಯಗಳಿಲ್ಲ. +ನಾನು ಈ ಮೊದಲು ಸೂಚಿಸಿದಂತೆ ಈ ವರ್ಗವನ್ನು ಕಾನೂನುಗಳಿಂದ ಅಗತ್ಯವಾಗಿ ನಿಗ್ರಹಿಸತಕ್ಕದ್ದು. +ಹೀಗೆ ಮಾಡಿದರೆ ಜನರನ್ನು ತಪ್ಪುದಾರಿ ಗೆಳೆಯುವಅವರ ಕುಚೇಷ್ಟೆಗೆ ತಡೆಯುಂಟಾಗುವುದು. +ಎಲ್ಲರಿಗೂ ಧರ್ಮಾಧಿಪತ್ಯದ ಹಕ್ಕು ಸಮಾನವಾದಲ್ಲಿ ಅದು ಪ್ರಜಾಪ್ರಭುತ್ವಕ್ಕೆ ಅನುಗುಣವಾಗುವುದು. + ಇದರಿಂದ ನಿಶ್ಚಿತವಾಗಿಯೂ ಬ್ರಾಹ್ಮಣತ್ವ ನಾಶವಾಗುವುದು ಮತ್ತು ಜಾತಿನಾಶಕ್ಕೂ ಹಾದಿಯಾಗುವುದು. +ಯಾಕೆಂದರೆ ಜಾತಿಯೆಂಬುದು ಬ್ರಾಹ್ಮಣತ್ವದ ಒಂದು ವಿಷವಾಗಿ ಹಿಂದೂತ್ವವನ್ನು ಆವರಿಸಿದೆ. +ಬ್ರಾಹ್ಮಣತ್ವವನ್ನು ನಾಶ ಮಾಡಿದರೆ ಹಿಂದೂತ್ವ ಬದುಕಿ ಉಳಿದೀತು. +ಈ ಸುಧಾರಣೆಗೆ ಯಾರಿಂದಲೂ ವಿರೋಧ ಬರಬೇಕಾಗಿಲ್ಲ. +ಆರ್ಯಸಮಾಜಗಳು ಕೂಡ ಇದನ್ನು ಸ್ವಾಗತಿಸಬೇಕು. +ಏಕೆಂದರೆ ಅವರು ಪ್ರತಿಪಾದಿಸುವ ಗುಣಕರ್ಮ ತತ್ವವೇ ಇಲ್ಲಿ ಅನ್ವಯವಾಗುತ್ತದೆ. +ನೀವು ಅದನ್ನು ಮಾಡಿ ಅಥವಾ ಬಿಡಿ, ಆದರೆ ಧರ್ಮಕ್ಕೆ ಒಂದು ತಾತ್ವಿಕ ತಳಹದಿಯನ್ನು ಒದಗಿಸತಕ್ಕದ್ದು. +ಸಮಾನತೆ, ಸ್ವಾತಂತ್ರ್ಯ ಮತ್ತು ಭ್ರಾತೃತ್ವಗಳಿಗೆ ಸಮ್ಮತವಾದ ಅಂದರೆ ಪ್ರಜಾಪ್ರಭುತ್ವಕ್ಕನು ಗುಣವಾದ ಅಡಿಪಾಯ ಅವಶ್ಯವಾಗಿದೆ. +ಈ ವಿಷಯದಲ್ಲಿ ನಾನು ಅಧಿಕಾರವಾಣಿಯಿಂದ ಮಾತಾಡಲಾರೆ. +ಆದರೆ ಇಂತಹ ತಳಹದಿಗಾಗಿ ನೀವು ವಿದೇಶಿ ಮೂಲಗಳಿಂದ ಕೈಗಡ ತರಬೇಕಾಗಿಲ್ಲ. +ಉಪನಿಷತ್ತುಗಳಿಂದ ಇಂತಹ ತತ್ವಗಳನ್ನು ನೀವು ಪಡೆಯಬಹುದು. + ಉಪನಿಷತ್ತುಗಳಲ್ಲಿ ಅನುಪಯುಕ್ತವಾದ ಅಂಶಗಳನ್ನು ಬಿಟ್ಟು ಬೆಲೆಯುಳ್ಳದ್ದನ್ನು ಎತ್ತಿಕೊಂಡು ಹೊಸದೊಂದು ತಾತ್ವಿಕ ಅಡಿಪಾಯವನ್ನು ನೀವು ನಿರ್ಮಿಸಬಲ್ಲಿರೋ ಏನೋ ನಾನು ಹೇಳಲಾರೆ; + ಇಷ್ಟು ಮಾತ್ರ ನಿಜ, ಜೀವನದ ಮೂಲಭೂತ ಗ್ರಹಿಕೆಯಲ್ಲಿ ಪರಿವರ್ತನೆಯಾಗಬೇಕು. +ಜೀವನ ಮೌಲ್ಯಗಳು ಸಂಪೂರ್ಣವಾಗಿ ಬದಲಾಗಬೇಕು. +ಜೀವನ ಪೂರ್ತಿಯಾಗಿ ಹೊಸದಾಗಬೇಕು. +ಮಾನವನ ಮತ್ತು ವಿಷಯಗಳ ಬಗೆಗಿನ ದೃಷ್ಟಿಕೋನವೇ ಅಮೂಲಾಗ್ರವಾಗಿ ಬದಲಾಗಬೇಕು. +ಆದರೆ ಹೊಸ ಜೀವ ಮೃತ ದೇಹವನ್ನು ಪ್ರವೇಶಿಸದು. +ಹೊಸ ಜೀವಕ್ಕೆ ಹೊಸ ದೇಹವೇ ಬೇಕು. +ಹೊಸ ದೇಹ ತಾಳುವುದಕ್ಕೆ ಮುನ್ನಹಳೆಯ ದೇಹ ಬಿಟ್ಟು ಹೋಗಲೇಬೇಕು. +ಹೊಸ ಜೀವ ಅಸ್ತಿತ್ವಕ್ಕೆ ಬರುವ ಮುನ್ನ ಹಳೆಯ ದೇಹನಾಶವಾಗಿ ಹೋಗಬೇಕು. +ಶಾಸ್ತ್ರಗಳ ಅಧಿಕಾರವನ್ನೂ, ಶಾಸ್ತ್ರಾಧಾರದ ಧರ್ಮವನ್ನೂ ನಾಶಗೊಳಿಸಬೇಕೆಂದು ನಾನು ಹೇಳುವಾಗ ಅದಕ್ಕೆ ಈ ಮೇಲೆ ವಿವರಿಸಿದ ಅರ್ಥವೇ ಇದೆ. +ತುಂಬ ದೀರ್ಫಕಾಲದ ವರೆಗೆ ಮಾತಾಡಿದ್ದೇನೆ. +ಇನ್ನು ಈ ಉಪನ್ಯಾಸವನ್ನು ಮುಗಿಸಬೇಕು. +ನಾನು ಇಲ್ಲಿಗೇ ಉಪನ್ಯಾಸವನ್ನು ಮುಗಿಸಬಹುದಾಗಿತ್ತು. +ಆದರೆ ಹಿಂದೂಗಳಿಗೆ ಅತ್ಯಂತ ಮುಖ್ಯವಾದ ವಿಷಯದ ಕುರಿತು ಹಿಂದೂ ಶ್ರೋತೃಗಳೆದುರಿಗೆ ಬಹುಶಃ ಇದು ನನ್ನ ಕೊನೆಯ ಉಪನ್ಯಾಸವಾಗಿದೆ. +ಆದುದರಿಂದ ಮುಗಿಸುವ ಮುನ್ನ ಹಿಂದೂಗಳ ಅನುಮತಿಯನ್ನು ಬೇಡಿ ಅವರಿಗೆ ಈ ಕೆಲವು ಮಹತ್ವದ ಪ್ರಶ್ನೆಗಳನ್ನು ಮನನ ಮಾಡಲು ನೀಡಿರುತ್ತೇನೆ. +ಹಿಂದೂಗಳಲ್ಲಿ ಮಾತ್ರವಲ್ಲ, ಜಗತ್ತಿನ ವಿವಿಧ ಪ್ರದೇಶಗಳ ಜನರಲ್ಲಿ ನಂಬಿಕೆಗಳು, ರೂಢಿಗಳು,ನೀತಿನಿಯಮಗಳು, ಜೀವನದೃಷ್ಟಿಗಳು ಇದ್ದೇ ಇರುತ್ತವೆ ಎಂದು ಮಾನವ ಶಾಸ್ತಾಭ್ಯಾಸಿಯಂತೆ ನಿರ್ವಿಕಾರವಾಗಿ ನೋಡಿ ಸುಮ್ಮನಿದ್ದು ಬಿಡುವಿರಾ? +ಅಥವಾ ಯಾವ ನೀತಿನಿಯಮ, ನಂಬಿಕೆ, ರೂಢಿ ದೃಷ್ಟಿಕೋನಗಳಮೂಲಕ ಕೆಲವೇ ಕೆಲವು ಜನಕ್ಕೆ ಅಭ್ಯುದಯವುಂಟಾಯಿತು. +ಜಗತ್ತನ್ನು ತುಂಬುವುದಕ್ಕೆ ಆಳುವುದಕ್ಕೆ ಸಾಮರ್ಥ್ಯವೊದಗಿತು ಎಂದು ಯೋಚನೆ ಮಾಡುವಿರಾ? +ಪ್ರೊ.ಕಾರ್ವರ್‌ ಹೇಳುವಂತೆ, “ಆತ್ಮರಕ್ಷಣೆಯ ಸಾಧನಗಳಾದ ಹಲ್ಲು, ಉಗುರು, ಕೊಂಬು, ಪಂಜ, ತುಪ್ಪುಳು, ಗರಿಗಳು ಜೀವನದ ಹೋರಾಟಕ್ಕೆ ಹೇಗೆ ಅವಶ್ಯಕವೋ ಹಾಗೆಯೇ ನೀತಿ ಧರ್ಮಗಳೂ ಅಗತ್ಯವೆಂದು ಪರಿಗಣಿಸಬೇಕಾಗಿದೆ. +ಯಾವುದಾದರೂ ಒಂದು ಸಾಮಾಜಿಕ ಗುಂಪು, ಬಣ, ಬುಡಕಟ್ಟು ಅಥವಾ ರಾಷ್ಟ್ರ ವ್ಯವಹಾರ ಯೋಗ್ಯವಲ್ಲದ ಅನೈತಿಕ ವ್ಯವಸ್ಥೆಯನ್ನು ಪೋಷಿಸುತ್ತದೆಯೋ, ತನ್ಮೂಲಕ ತನ್ನನ್ನೇ ದುರ್ಬಲಗೊಳಿಸಿಕೊಳ್ಳುವಂತೆ ಮಾಡುವ ಸಾಮಾಜಿಕ ಕೃತಿಗಳಿಗೆ ಸಮ್ಮತಿಯನ್ನು ನೀಡುತ್ತಾ ಅಭ್ಯುದಯಕ್ಕೆ ಕಾರಣವಾಗುವ ಕೆಲಸಗಳಿಗೆ ಒಪ್ಪಿಗೆಯನ್ನು ನಿರಾಕರಿಸುತ್ತಾ ಹೋಗುತ್ತದೋ ಇಂತಹ ಸಮಾಜ ನಿರ್ಮೂಲನೆಗೊಳ್ಳುತ್ತದೆ. +ಈ ಬಗೆಯ ಸಮ್ಮತಿ ಅಥವಾ ಅಸಮೃತಿಯ ಸಂಪ್ರದಾಯಗಳು (ಇವುಗಳು ಧರ್ಮ ಮತ್ತು ನೀತಿಗಳ ಪರಿಣಾಮಗಳಾಗಿರುತ್ತವೆ)ಒಂದು ಊನವಾಗಿ ಪರಿಣಮಿಸುತ್ತವೆ; + ನೊಣಗಳಿಗೆ ಒಂದು ಮಗ್ಗುಲಿಗೆ ಎರಡು ರೆಕ್ಕೆಗಳಿದ್ದು ಇನ್ನೊಂದುಮಗ್ಗುಲಿಗೆ ಏನೂ ಇಲ್ಲದೆ ಹೋದರೆ ಆಗುವ ತರಹವಿದು. +ಒಂದು ವ್ಯವಸ್ಥೆ ಇನ್ನೊಂದರಷ್ಟೇ ಒಳ್ಳೆಯದೆಂದುವಾದಿಸುವುದು ವ್ಯರ್ಥ” ನೀತಿ ಮತ್ತು ಧರ್ಮ ಎಂಬುದು ಕೇವಲ ಇಷ್ಟ ಅಥವಾ ಅನಿಷ್ಟವೆಂಬ ವಿಷಯಗಳಲ್ಲ. +ಒಂದು ಬಗೆಯ ನೀತಿವ್ಯವಸ್ಥೆ ನಿಮಗೆ ಸಮರ್ಪಕವಾಗಿ ಕಾಣಲಾರದು, ಆದರೆ ದೇಶದೊಳಗೆ ಅದನ್ನುಸಮರ್ಪಕವಾಗಿ ಅನುಷ್ಠಾನಗೊಳಿಸುವುದರಿಂದ ಆ ರಾಷ್ಟ್ರವು ಜಗತ್ತಿನಲ್ಲಿಯೇ ಅತ್ಯಂತ ಬಲಿಷ್ಠವಾಗಬಹುದು. +ಅದೇ ರೀತಿ ಒಂದು ನೀತಿ ವ್ಯವಸ್ಥೆಯನ್ನು ಮತ್ತು ನ್ಯಾಯದ ಆದರ್ಶವನ್ನು ನೀವು ಇಷ್ಟವೆಂದುಕೊಳ್ಳಬಹುದು. +ಆದರೆ ಅವುಗಳನ್ನು ದೇಶಾದ್ಯಂತ ಆಚರಣೆಯಲ್ಲಿ ತಂದಾಗ ಆ ದೇಶ ಇತರ ದೇಶಗಳೊಡನೆ ಸ್ಪರ್ಧಿಸಿ ಗೆಲ್ಲದೇ ಹೋಗಬಹುದು. +ನಿಮ್ಮ ಮೆಚ್ಚುಗೆ, ಗೌರವಗಳು ಎಷ್ಟೇ ಇದ್ದರೂ ಇಂತಹ ರಾಷ್ಟ್ರ ಕೊನೆಗೆ ಅಸ್ತಿತ್ವವನ್ನು ಕಳೆದುಕೊಳ್ಳಬಹುದು. +ಆದುದರಿಂದ, ಹಿಂದೂಗಳು ತಮ್ಮ ಧರ್ಮವನ್ನು ಇದು ನಮ್ಮನ್ನು ಚೆನ್ನಾಗಿ ಬದುಕಿ ಉಳಿಯಗೊಡುವುದೇ ಎಂಬ ದೃಷ್ಟಿಯಿಂದ ಪರಿಶೀಲಿಸಬೇಕಾಗಿದೆ. +ಎರಡನೆಯದಾಗಿ, ಅನುವಂಶಿಕವಾಗಿ ತಮಗೆ ಬಂದ ಸಾಮಾಜಿಕ ಪರಂಪರೆಯನ್ನು ಅಖಂಡವಾಗಿ ರಕ್ಷಿಸಿಕೊಂಡು ಹೋಗಬೇಕೇ ಅಥವಾ ಉಪಯುಕ್ತವಾದ ಅಂಶವನ್ನು ಮಾತ್ರ ಆಯ್ದುಕೊಂಡು ಅದನ್ನಷ್ಟೇ ಮುಂದಿನ ಪೀಳಿಗೆಯವರಿಗೆ ಉಳಿಸಿಕೊಡಬೇಕೇ ಎಂಬುದನ್ನು ಹಿಂದೂಗಳು ಯೋಚಿಸತಕ್ಕದ್ದು. +ನನ್ನ ಗುರುಗಳಾದ ಜಾನ್‌ ಡ್ಕ್ಯೂಯಿಯವರು ಹೀಗೆ ಹೇಳಿದ್ದಾರೆ. +“ಪ್ರತಿಯೊಂದು ಸಮಾಜವೂ ಬಳುವಳಿಯಾಗಿ ಪಡೆದುಕೊಂಡು ಬಂದ ಕ್ಷುಲ್ಲಕ ಹಾಗೂ ನಿರುಪಯುಕ್ತ ಅಂಶಗಳಿಂದ ಆತಂಕ ಪಡುತ್ತಿರುತ್ತದೆ. + ಸಮಾಜ ಎಚ್ಚತ್ತುಕೊಂಡಾಗ ಈ ಪೂರ್ವಾರ್ಜಿತವನ್ನು ಸಮಗ್ರವಾಗಿ ಉಳಿಸಿಕೊಂಡು ಹೋಗದೆ ಸಮಾಜದ ಉನ್ನತಿಗೆ ಉಪಯುಕ್ತವಾದವುಗಳನ್ನು ಮಾತ್ರ ರಕ್ಷಿಸುವುದು ತನ್ನ ಹೊಣೆಗಾರಿಕೆಯೆಂದು ಅರಿತುಕೊಳ್ಳುತ್ತದೆ”. +ಫ್ರೆಂಚ್‌ ಕ್ರಾಂತಿಯ ಬದಲಾವಣೆಯ ತತ್ವವನ್ನು ಉಗ್ರವಾಗಿ ಖಂಡಿಸಿದ ಬರ್ಕ್‌ ಕೂಡ,“ಬದಲಾವಣೆಯ ಮಾರ್ಗವಿಲ್ಲದೆ ರಾಷ್ಟಕ್ಕೆ ತನ್ನನ್ನು ಉಳಿಸಿಕೊಳ್ಳುವ ಬೇರೆ ದಾರಿ ಇಲ್ಲ. +ಇಂತಹ ಮಾರ್ಗ ಅಥವಾ ಅನುಕೂಲತೆಯಿಲ್ಲದೆ ಹೋದರೆ ತಾನು ರಕ್ಷಿಸಿಕೊಳ್ಳಲೇಬೇಕೆಂಬ ಸಂವಿಧಾನದ ಅಂಶವನ್ನು ಕೂಡ ಅದು ಕಳೆದುಕೊಳ್ಳುವ ಭಯವಿದೆ” ಎಂದು ಒಪ್ಪಿಕೊಳ್ಳಬೇಕಾಯಿತು. +ಈತ ರಾಷ್ಟ್ರಕ್ಕೆ ಅನ್ವಯಿಸಿ ಹೇಳಿದ ಮಾತು ಅಪ್ಟೇ ಸಮರ್ಪಕವಾಗಿ ಸಮಾಜಕ್ಕೂ ಅನ್ವಯಿಸುತ್ತದೆ. +ಮೂರನೆಯದಾಗಿ, ತಮಗೆ ಆದರ್ಶಗಳನ್ನು ಪೂರೈಸುತ್ತಿದೆಯೆಂದು ಪ್ರಾಚೀನ ಕಾಲವನ್ನು ಪೂಜಿಸುವುದನ್ನು ಯಾಕೆ ನಿಲ್ಲಿಸಬಾರದು ಎಂಬುದನ್ನು ಹಿಂದೂಗಳು ಪರಿಶೀಲಿಸತಕ್ಕದ್ದು. +ಭೂತಕಾಲದ ಪೂಜೆಯಿಂದಾಗುವ ಅನಿಷ್ಟ ಪರಿಣಾಮವನ್ನು ಪ್ರೊ.ಡ್ಯೂಯಿಯವರು ಹೀಗೆ ಸಂಕ್ಷೇಪಿಸಿ ಹೇಳುತ್ತಾರೆ,“ವ್ಯಕ್ತಿ ವರ್ತಮಾನದಲ್ಲಿ ಮಾತ್ರ ಬಾಳಬಲ್ಲನು. +ವರ್ತಮಾನವೆಂದರೆ ಕೇವಲ ಪೂರ್ವಕಾಲದ ನಂತರ ಬಂದದ್ದು ಮಾತ್ರವಲ್ಲ, ಅದರಿಂದ ಹುಟ್ಟಿದ್ದಂತೂ ಅಲ್ಲವೇ ಅಲ್ಲ. +ಜೀವನ ಹಳೆಯದನ್ನು ಕಳಚಿಕೊಂಡು ಮುಂದುವರಿಯುತ್ತದೆ. +ಭೂತಕಾಲದ ಉತ್ಪನ್ನಗಳ ಅಧ್ಯಯನ ವರ್ತಮಾನವನ್ನು ತಿಳಿದುಕೊಳ್ಳುವುದಕ್ಕೆ ಸಹಾಯಕವಲ್ಲ. +ವರ್ತಮಾನದ ಅಗತ್ಯಕ್ಕೆ ಸಂಬಂಧಿಸಿದಂತಿದ್ದರೆ ಮಾತ್ರ ಪ್ರಾಚೀನ ಕಾಲದ ಮತ್ತು ಪರಂಪರೆಯ ಬಗೆಗಿನ ಜ್ಞಾನ ಪ್ರಾಮುಖ್ಯತೆಯನ್ನು ಪಡೆದುಕೊಳ್ಳುತ್ತದೆ. +ಪ್ರಾಚೀನ ಕಾಲದ ದಾಖಲೆಗಳೂ ಅವಶೇಷಗಳೂ ಶಿಕ್ಷಣದ ವಿಷಯವಾಗಿರುವುದರಿಂದ ಏನು ತಪ್ಪಾಗಿದೆ ಗೊತ್ತೇ? +ಪೂರ್ವಕಾಲವು ವರ್ತಮಾನಕ್ಕೆ ಒಂದು ಪ್ರತಿಸ್ಪರ್ಧಿಯೆಂದೂ, ವರ್ತಮಾನವು ಭೂತಕಾಲದ ಅಸಮರ್ಥ ಅನುಕರಣೆಯೆಂದೂ ತೋರುವ ಸಂಭವವಿದೆ”. +ವರ್ತಮಾನವು ಜೀವನ ಹಾಗೂ ಅಭಿವೃದ್ಧಿಯನ್ನು ಕಡೆಗಣಿಸುವುದಾದರೆ ಈಗಿನ ಜೀವನ ಶೂನ್ಯ ಹಾಗೂ ಭವಿಷ್ಯ ಎಲ್ಲೋ ದೂರದ ಮಾತು ಎಂಬಂತಾಗುತ್ತದೆ. +ಇಂತಹ ತತ್ವ ಪ್ರಗತಿಗೆ ವೈರಿಯಾಗುತ್ತದೆ. +ಪ್ರಬಲವಾದ ಹಾಗೂ ಸ್ಥಿರವಾದ ಜೀವನ ಪ್ರವಾಹಕ್ಕೆ ತೊಡಕಾಗುತ್ತದೆ. +ನಾಲ್ಕನೆಯದಾಗಿ, ಶಾಶ್ವತವಾದ, ಸ್ಥಾಯಿಯಾದ, ಸನಾತನವಾದ ಯಾವುದೂ ಇಲ್ಲ, ಎಲ್ಲವೂ ಬದಲಾಗುತ್ತಿರುತ್ತವೆ. + ಬದಲಾವಣೆ ವ್ಯಕ್ತಿಯ ಹಾಗೂ ಸಮಾಜದ ನಿಯಮ ಎಂದು ಅರಿತುಕೊಳ್ಳುವ ಕಾಲ ಈಗ ಸನ್ನಿಹಿತವಾಗಿಲ್ಲವೇ ಎಂದು ಹಿಂದೂಗಳು ಯೋಚಿಸಬೇಕು. +ಬದಲಾಗುತ್ತಿರುವ ಸಮಾಜದಲ್ಲಿ ಹಳೆಯ ಮೌಲ್ಯಗಳು ಸತತವಾದ ಮಾರ್ಪಾಡಿಗೆ ಒಡ್ಡಿಕೊಳ್ಳುತ್ತವೆ. +ಮನುಷ್ಯರ ಕೃತಿಗಳನ್ನು ಬೆಲೆಗಟ್ಟುವುದಕ್ಕೆ ಮಾನದಂಡಗಳಿರಬೇಕು; +ಅಗತ್ಯವಿದ್ದಾಗ ಆ ಮಾನದಂಡಗಳನ್ನು ಪುನರ್ವಿಮರ್ಶೆಗೆ ಒಳಪಡಿಸಬೇಕು. +ತಿದ್ದಲೂ ಸನ್ನದ್ಧರಾಗಿರಬೇಕು ಎಂಬುದನ್ನು ಹಿಂದೂಗಳು ಅರಿತುಕೊಳ್ಳಬೇಕು. +ಈ ಉಪನ್ಯಾಸ ಅತಿ ದೀರ್ಫ್ಥವಾಯಿತೆಂದು ನಾನು ಒಪ್ಪಿಕೊಳ್ಳಲೇಬೇಕು. +ಇಷ್ಟುದ್ದ ಆಗಿದ್ದೂ ಅದರಲ್ಲೇನಾದರೂ ಹುರುಳಿದೆಯೇ ಇಲ್ಲವೇ ಎಂಬುದನ್ನು ನೀವು ನಿರ್ಧರಿಸಬೇಕು. +ನನ್ನ ಅನಿಸಿಕೆಗಳನ್ನು ಸ್ಪಷ್ಟವಾಗಿ ತಿಳಿಸಿದ್ದೇನೆಂದು ಮಾತ್ರ ಹೇಳಬಲ್ಲೆ. + ಈ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ ವ್ಯಕ್ತಿ ಯಾವ ಅಧಿಕಾರದ ಹಸ್ತಕನೂ ಅಲ್ಲ. +ಯಾವ ದೊಡ್ಡಸ್ತಿಕೆಯ ಸ್ತುತಿಕಾರನೂ ಅಲ್ಲವೆಂದು ಹೇಳಬಯಸುತ್ತೇನೆ. +ಬಡವರ ಹಾಗೂ ದಬ್ಬಾಳಿಕೆಗೆ ಈಡಾದವರ ವಿಮೋಚನೆಗಾಗಿ ನನ್ನ ಸಾರ್ವಜನಿಕ ಜೀವನವೆಲ್ಲ ಮೀಸಲಾಗಿದೆ. +ಇದಕ್ಕಾಗಿ ನನಗೆ ದೊರೆತ ಪ್ರತಿಫಲವೇನು? +ರಾಷ್ಟ್ರೀಯ ಧುರೀಣರೂ, ರಾಷ್ಟ್ರೀಯ ಪತ್ರಿಕೆಗಳೂ ನನ್ನನ್ನೂ ಹಳಿದು ಅಪಮಾನಗೊಳಿಸಿವೆ. +ಇದಕ್ಕೆ ಇರುವ ಕಾರಣವನ್ನೂ ಹೇಳುತ್ತೇನೆ. + ಶ್ರೀಮಂತರ ಧನದಿಂದ ಬಡವರ ಉದ್ಧಾರವನ್ನೂ, ಪ್ರಜಾಹಿಂಸಕರ ಚಿನ್ನದಿಂದ ದಲಿತರ ವಿಮೋಚನೆಯನ್ನೂ ಸಾಧಿಸುವ ಪವಾಡಕ್ಕೆ-ತಂತ್ರವೆಂದು ಹೇಳಲಾರೆ. + ನಾನು ಸಮ್ಮತಿಸಲಿಲ್ಲ ಎಂಬುದೊಂದೇ ಕಾರಣ. +ನನ್ನ ಅಭಿಪ್ರಾಯಗಳಿಗೆ ಇವು ಸಮರ್ಥ ಶ್ಲಾಘನೆಯಾಗಲಾರದು. +ಅದರಿಂದ ನಿಮ್ಮ ಅಭಿಪ್ರಾಯಗಳೂ ಬದಲಾಗಲಾರವು. +ಆಗಲಿ ಬಿಡಲಿ ಅದರ ಪೂರ್ಣ ಜವಾಬ್ದಾರಿ ನಿಮಗೆ ಮಾತ್ರ ಸೇರಿದ್ದು. +ನನ್ನ ರೀತಿಯಲ್ಲಿ ಬೇಡವಾದರೆ ನಿಮ್ಮ ರೀತಿಯಲ್ಲಾದರೂ ಜಾತಿ ನಿರ್ಮೂಲನೆಗೆ ನೀವು ಪ್ರಯತ್ನಿಸಲೇಬೇಕು. +ಕ್ಷಮಿಸಿ, ನಾನು ಇನ್ನು ಮುಂದೆ ನಿಮ್ಮೊಂದಿಗೆ ಇರಲಾರೆ. +ನಾನು ಬದಲಾಗಲು ನಿರ್ಧರಿಸಿದ್ದೇನೆ. +ಕಾರಣಗಳನ್ನು ಕೊಡುವುದಕ್ಕೆ ಇದು ಜಾಗವಲ್ಲ. +ನಿಮ್ಮನ್ನು ಬಿಟ್ಟು ಹೊರಗೆ ಹೋದ ಮೇಲೆ ಕೂಡ ಸಕ್ರಿಯ ಸಹಾನುಭೂತಿಯಿಂದ ನಿಮ್ಮ ಆಂದೋಲನವನ್ನು ಗಮನಿಸುತ್ತಿರುತ್ತೇನೆ. +ಅಗತ್ಯವಿರುವ ಸಹಾಯ ಮಾಡಲೂ ಸಿದ್ದನಾಗಿರುತ್ತೇನೆ. +ನಿಮ್ಮದು ರಾಷ್ಟೀಯ ಉದ್ದೇಶದ ಕಾರ್ಯ. +ಜಾತಿಪದ್ಧತಿ ಹಿಂದೂಗಳಿಗೆ ಜೀವನದುಸಿರಾಗಿದೆ. +ಆದರೆ ಹಿಂದೂಗಳು ಎಲ್ಲೆಡೆ ವಾತಾವರಣವನ್ನು ಕೆಡಿಸಿದ್ದಾರೆ; +ಸಿಕ್ಟ್‌, ಮುಸ್ಲಿಂ, ಕ್ರೈಸ್ತ, ಹೀಗೆ ಎಲ್ಲರನ್ನೂ ಅಸ್ವಸ್ಥಗೊಳಿಸಿದ್ದಾರೆ. + ಇನ್ನೊಂದು ರಾಷ್ಟ್ರೀಯ ಧ್ಯೇಯವಾದ ಸ್ವರಾಜ್ಯಕ್ಕಿಂತಲೂ ನಿಮ್ಮದು ಹೆಚ್ಚು ಕಷ್ಟಸಾಧ್ಯವಾದ ಆಶಯ. +ಸ್ವರಾಜ್ಯದ ಹೋರಾಟದಲ್ಲಿ ಸಮಗ್ರ ದೇಶ ನಿಮ್ಮ ಜೊತೆಗಿರುತ್ತದೆ. +ಆದರೆ ಇಲ್ಲಿ ನೀವು ಇಡೀ ದೇಶದ ವಿರುದ್ಧ ಹೋರಾಟ ಮಾಡಬೇಕಾಗುತ್ತದೆ. +ಅದೂ ನಿಮ್ಮದೇ ದೇಶದ ವಿರುದ್ಧ. +ಆದರೆ ಇದು ಸ್ಪರಾಜ್ಯಕ್ಕಿಂತ ಹೆಚ್ಚು ಮಹತ್ವದ್ದು. +ರಕ್ಷಿಸಿಕೊಳ್ಳುವ ಸಾಮರ್ಥ್ಯವಿಲ್ಲದೆ ಸ್ವರಾಜ್ಯವನ್ನು ಗಳಿಸಿಕೊಂಡೇನು ಪ್ರಯೋಜನ? +ಸ್ವರಾಜ್ಯವನ್ನು ರಕ್ಷಿಸುವುದಕ್ಕಿಂತ ಸ್ವರಾಜ್ಯದಲ್ಲಿ ಹಿಂದೂಗಳನ್ನು ರಕ್ಷಿಸುವುದು ಹೆಚ್ಚು ಮಹತ್ವದ್ದಾಗುತ್ತದೆ. +ನನ್ನ ಅನಿಸಿಕೆಯಂತೆ ಜಾತಿಪದ್ಧತಿ ನಾಶವಾದರೆ ಮಾತ್ರ ಹಿಂದೂ ಸಮಾಜ ಆತ್ಮರಕ್ಷಣೆಗೆ ಸಮರ್ಥವಾಗಬಲ್ಲದು. +ಇಂಥ ಆಂತರಿಕ ಶಕ್ತಿಯಿಲ್ಲದೆ ಹೋದರೆ ಸ್ಪರಾಜ್ಯವೆಂಬುದು ಹಿಂದೂಗಳ ಪಾಲಿಗೆ ಗುಲಾಮಗಿರಿಯತ್ತ ಇಡುವ ಇನ್ನೊಂದು ಹೆಜ್ಜೆಯೇ ಆದೀತು. +ಶುಭವಾಗಲಿ, ನಿಮಗೆ ಯಶಸ್ಸು ದೊರೆಯಲೆಂದು ಹಾರೈಸುತ್ತೇನೆ. +ಮಹಾತ್ಮ ಗಾಂಧಿಯವರಿಂದ ಜಾತಿ ಪದ್ಧತಿಯ ಒಂದು ಸಮರ್ಥನೆ. +ಡಾ.ಅಂಬೇಡ್ಕರ್‌ ಅವರ ದೋಷಾರೋಪಣೆ ಹೋದ ವರ್ಷದ ಮೇ ತಿಂಗಳಲ್ಲಿ ಲಾಹೋರದ ಜಾತ್‌-ಪತ್‌-ತೋಡಕ್‌ ಮಂಡಲದವರ ವಾರ್ಷಿಕಾಧಿವೇಶನವು ಡಾ.ಅಂಬೇಡ್ಕರ್‌ ಅವರ ಅಧ್ಯಕ್ಷತೆಯಲ್ಲಿ ನಡೆಯ ಬೇಕಿತ್ತೆಂಬುದನ್ನು ಓದುಗರು ನೆನಪಿಸಿಕೊಳ್ಳಬಹುದು. +ಅವರ ಉಪನ್ಯಾಸ ಸ್ವಾಗತ ಸಮಿತಿಯವರಿಗೆ ಸಮ್ಮತವಾಗದಿದ್ದುದರಿಂದ ಅಧಿವೇಶನವನ್ನೇ ರದ್ದುಗೊಳಿಸಲಾಯಿತು. +ತಾನೇ ಚುನಾಯಿಸಿದ ಅಧ್ಯಕ್ಷರನ್ನು, ಅವರ ಉಪನ್ಯಾಸ ಆಕ್ಷೇಪಾರ್ಹವೆಂಬ ಕಾರಣ ಒಡ್ವಿ ಸ್ವಾಗತ ಸಮಿತಿ ನಿರಾಕರಿಸುವುದು ಎಷ್ಟರ ಮಟ್ಟಿಗೆ ಸಮರ್ಥನೀಯವೆಂಬುದು ವಿವಾದಾಸ್ಪದದ ವಿಷಯ. +ಜಾತಿಪದ್ಧತಿ ಮತ್ತು ಹಿಂದೂ ಧರ್ಮಗ್ರಂಥಗಳ ವಿಷಯವಾಗಿ ಡಾ.ಅಂಬೇಡ್ಕರ್‌ಅವರ ಅಭಿಪ್ರಾಯಗಳೇನೆಂಬುದು ಸಮಿತಿಗೆ ಗೊತ್ತಿತ್ತು. +ಹಿಂದೂ ಧರ್ಮವನ್ನು ತೊರೆದು ಹೋಗುವ ತಮ್ಮ ನಿರ್ಧಾರವನ್ನು ಡಾ.ಅಂಬೇಡ್ಕರ್‌ ಅವರ ನಿಸ್ಸಂದಿಗ್ಳವಾದ ಶಬ್ದಗಳಲ್ಲಿ ಹೇಳಿದ್ದನ್ನೂ ಅದು ಅರಿತಿತ್ತು. +ಡಾ. ಅಂಬೇಡ್ಕರ್‌ ಅವರು ಸಿದ್ಧಪಡಿಸಿದ ಉಪನ್ಯಾಸದಲ್ಲಿ ಇದಕ್ಕಿಂತ ಭಿನ್ನವಾದುದನ್ನು ನಿರೀಕ್ಷಿಸುವಂತಿರಲಿಲ್ಲ. +ಸಮಾಜದಲ್ಲಿ ತನಗೊಂದು ವಿಶಿಷ್ಟ ಸ್ಥಾನವನ್ನು ನಿರ್ಮಿಸಿಕೊಂಡ ವ್ಯಕ್ತಿಯ ಸ್ಪತಂತ್ರ ವಿಚಾರಗಳನ್ನು ಕೇಳಿ ತಿಳಿದುಕೊಳ್ಳುವ ಅವಕಾಶ ಸಾರ್ವಜನಿಕರಿಗೆ ಇಲ್ಲದಂತೆ ಮಾಡಿತು ಈ ಸಮಿತಿ. +ಇನ್ನು ಮುಂದೆ ಡಾ.ಅಂಬೇಡ್ಕರ್‌ ಅವರು ಯಾವ ಹಣೆಪಟ್ಟಿ ಹಚ್ಚಿಕೊಳ್ಳುವರೊ ಏನೋ, ಆದರೆ ಅವರು ತಮ್ಮನ್ನು ಮರೆಯಲುಆಸ್ಪದ ಕೊಡದ ವ್ಯಕ್ತಿ. +ಡಾ.ಅಂಬೇಡ್ಕರ್‌ ಅವರು ಸ್ವಾಗತ ಸಮಿತಿಯಿಂದ ಫಾತಿಸಿಕೊಳ್ಳಲು ಬಿಡಲಿಲ್ಲ. +ತಮ್ಮ ಸ್ವಂತ ಖರ್ಚಿನಿಂದಈ ಉಪನ್ಯಾಸವನ್ನು ಪ್ರಕಟಿಸಿ ಉತ್ತರ ಕೊಟ್ಟಿದ್ದಾರೆ. +ಮುದ್ರಿತ ಪ್ರತಿಗೆ ಎಂಟು ಆಣೆ ಬೆಲೆ ನಿಗದಿ ಮಾಡಿದ್ದಾರೆ. +ಅದನ್ನು ಎರಡಾಣೆಗೆ, ಇಲ್ಲವಾದರೆ ನಾಲ್ಕಾಣೆಗಾದರೂ ಇಳಿಸಬೇಕೆಂದು ನಾನು ಸೂಚಿಸಬಯಸುತ್ತೇನೆ. +ಈ ಉಪನ್ಯಾಸವನ್ನು ಯಾವ ಸುಧಾರಕನೂ ಉಪೇಕ್ಷಿಸಲಾಗದು. +ಸಂಪ್ರದಾಯ ಪ್ರಿಯರೂ ಅದನ್ನೋದಿ ಪ್ರಯೋಜನ ಪಡೆಯಬಹುದು. +ಹೀಗೆಂದಾಕ್ಷಣ ಉಪನ್ಯಾಸದಲ್ಲಿ ಆಕ್ಷೇಪಾರ್ಹವಾದುದೇನೂ ಇಲ್ಲವೆಂದಲ್ಲ. +ಗಂಭೀರವಾದ ಆಕ್ಷೇಪಣೆಗಳಿಗೆ ಅದು ಆಸ್ಪದ ಕೊಡುವುದೆಂಬುದಕ್ಕಾಗಿಯಾದರೂ ಅದನ್ನು ಓದಲೇಬೇಕು. +ಡಾ.ಅಂಬೇಡ್ಕರ್‌ ಅವರು ಹಿಂದೂ ಧರ್ಮಕ್ಕೆ ಒಂದು ಪಂಥಾಹ್ಹಾನ. +ಹಿಂದೂವಾಗಿ ಬೆಳೆದು, ಹಿಂದೂ ಪ್ರಭುವೊಬ್ಬನ ನೆರವಿನಿಂದ ಶಿಕ್ಷಣ ಪಡೆದು, ತಾನು ಮತ್ತು ತನ್ನ ಜನರು ಸವರ್ಣ ಹಿಂದೂಗಳ ಕೈಯಲ್ಲಿ ಅನುಭವಿಸಿದ ಕಿರುಕುಳದಿಂದ ಹತಾಶರಾಗಿ ಈಗ ಅವರನ್ನು ತ್ಯಜಿಸಲು ಮಾತ್ರವಲ್ಲ, ಅವರಿಗೂ ತನಗೂ ಸಮಾನವಾಗಿ ಪರಂಪರಾಗತವಾಗಿ ಬಂದ ಧರ್ಮವನ್ನು ಕೂಡ ತ್ಯಜಿಸಲು ನಿರ್ಧರಿಸಿದ್ದಾರೆ. +ಧರ್ಮದ ಕೆಲವು ಪ್ರತಿಪಾದಕರ ಬಗೆಗೆ ಉಂಟಾದ ಜಿಗುಪ್ಸೆಯನ್ನು ಆತ ಆ ಧರ್ಮಕ್ಕೂ ವರ್ಗಾಯಿಸಿದ್ದಾರೆ. +ಆದರೆ ಇದರಲ್ಲಿ ಸೋಜಿಗವೇನೂ ಇಲ್ಲ. +ಒಂದು ಪದ್ಧತಿ ಅಥವಾ ಸಂಸ್ಥೆ ಎಂತಹುದೆಂಬುದನ್ನು ಅದರ ಪ್ರತಿನಿಧಿಗಳ ನಡವಳಿಕೆಯಿಂದಲೇ ನಿರ್ಧರಿಸಬಹುದು. +ಇಷ್ಟೇ ಅಲ್ಲ ಸವರ್ಣ ಹಿಂದೂಗಳಲ್ಲಿ ಬಹುಸಂಖ್ಯಾತರು ತಮ್ಮ ಜೊತೆಯಲ್ಲಿ ಬದುಕುತ್ತಿರುವ ಕೆಲವು ಹಿಂದೂಗಳನ್ನು ಅಸ್ಪಶ್ಯರೆಂದು ಕರೆದು ಕ್ರೂರವಾಗಿ ನಡೆಸಿಕೊಂಡಿರುವುದಕ್ಕೆ ಧರ್ಮಗ್ರಂಥಗಳು ನೀಡಿದ ಅಧಿಕಾರವನ್ನು ಆಧಾರವಾಗಿಟ್ಟುಕೊಂಡಿದ್ದರೆಂದು ಡಾ.ಅಂಬೇಡ್ಕರ್‌ ಕಂಡುಕೊಂಡರು. +ಈ ಬಗೆಯ ನಡವಳಿಕೆಗೆ ಕಾರಣಗಳನ್ನು ಶೋಧಿಸಿ ನೋಡಿದಾಗ ಅಸ್ಪೃಶ್ಯತೆಗೆ ಸಾಕಷ್ಟು ಪ್ರಮಾಣಗಳು ಅವರಿಗೆ ದೊರೆತವು. +ನಿರ್ದಿಷ್ಟ ಅಧ್ಯಾಯ ಹಾಗೂ ಶ್ಲೋಕಗಳನ್ನು ಉದಾಹರಿಸುತ್ತಾ ಅವರು ಮೂರು ಬಗೆಯ ದೋಷಾರೋಪಣೆಗಳನ್ನು ಮಾಡಿದ್ದಾರೆ. +ಸವರ್ಣ ಹಿಂದೂಗಳ ಅಮಾನುಷವಾದ ವರ್ತನೆ, ಅದಕ್ಕೆ ಅವರು ಕೊಡುವ ನಿರ್ಲಜ್ಜ ಸಮರ್ಥನೆ ಮತ್ತು ಧರ್ಮಗ್ರಂಥಗಳಲ್ಲಿ ಆಸಮರ್ಥನೆಗೆ ಇರುವ ಆಧಾರಗಳು. +ತನ್ನ ಜೀವನಕ್ಕಿಂತಲೂ ಹೆಚ್ಚಾಗಿ ಧರ್ಮವನ್ನು ಪ್ರೀತಿಸುವ ಯಾವ ಹಿಂದೂವಾದರೂ ಈ ದೋಷಾರೋಪಣೆಯ ಮಹತ್ವವನ್ನು ಉಪೇಕ್ಷಿಸಲಾರನು. +ಈ ಬಗೆಯ ಜಿಗುಪ್ಸೆ ಹೊಂದಿದವರು. ಡಾ. ಅಂಬೇಡ್ಕರ್‌ ಅವರು ಒಬ್ಬರೇ ಅಲ್ಲ. +ಅಂತಹ ಜನರಲ್ಲಿ ಅತ್ಯಂತ ಹಠಮಾರಿ ಹಾಗೂ ಅತ್ಯಂತ ಸಮರ್ಥರಾದ ವ್ಯಕ್ತಿ ಡಾ.ಅಂಬೇಡ್ಕರ್‌ ಅವರು. +ರಾಜಿ ಮಾಡಿಕೊಳ್ಳಲು ಅತ್ಯಂತ ಅಸಾಧ್ಯವಾದ ವ್ಯಕ್ತಿ. +ಆ ಮುಂದಾಳುಗಳ ಮುಂಚೂಣಿಯಲ್ಲಿರುವವರು ಇವರೊಬ್ಬರೇ. +ಆದರೆ ಇವರು ಅತ್ಯಂತ ಚಿಕ್ಕದಾದ ಒಂದು ಅಲ್ಪಸಂಖ್ಯಾತ ವರ್ಗಕ್ಕೆ ಪ್ರತಿನಿಧಿಯಾಗಿದ್ದಾರೆ. +ಇವರು ಹೇಳಿದ ಮಾತುಗಳನ್ನೇ ಹೆಚ್ಚು ಅಥವಾ ಕಡಿಮೆ ಉಗ್ರತೆಯಿಂದ ದಲಿತವರ್ಗದ ಅನೇಕ ಮುಂದಾಳುಗಳು ಪ್ರತಿದ್ವನಿಸುತ್ತಾರೆ. +ಆದರೆ ಅವರಲ್ಲಿ ರಾವ್‌ ಬಹಾದ್ದೂರು ಎಂ.ಸಿ.ರಾಜಾ ಮತ್ತು ದಿವಾನ್‌ ಬಹಾದ್ದೂರ್‌ ಶ್ರೀನಿವಾಸನ್‌ ಅಂಥವರು ಹಿಂದೂ ಧರ್ಮವನ್ನು ತ್ಯಜಿಸುವುದಾಗಿ ಬೆದರಿಕೆ ಹಾಕುವುದಿಲ್ಲ. +ಇಷ್ಟೇ ಅಲ್ಲ, ಹರಿಜನರನ್ನು ಕ್ರೂರವಾಗಿ, ನಿರ್ಲಜ್ಜವಾಗಿ ನಡೆಸಿಕೊಂಡರೂ ಇಲ್ಲಿಸಿಕ್ಕುವ ಬೆಚ್ಚನೆಯ ಪ್ರೀತಿಯನ್ನೇ ಸೂಕ್ತ ಪರಿಹಾರವೆಂದು ಗ್ರಹಿಸಿದ್ದಾರೆ. +ಆದರೆ ಅನೇಕ ಮುಂದಾಳುಗಳು ಹಿಂದೂ ಧರ್ಮದಲ್ಲಿ ಇನ್ನೂ ಉಳಿದುಕೊಂಡಿರುವರೆಂಬ ಮಾತ್ರಕ್ಕೆ ಡಾ.ಅಂಬೇಡ್ಕರ್‌ ಅವರ ವಾದವನ್ನು ಉಪೇಕ್ಷಿಸುವಂತಿಲ್ಲ. +ಸವರ್ಣ ಹಿಂದೂಗಳು ತಮ್ಮ ನಂಬಿಕೆಯನ್ನೂ ನಡವಳಿಕೆಯನ್ನೂ ತಿದ್ದಿಕೊಳ್ಳಬೇಕು. +ಎಲ್ಲಕ್ಕಿಂತ ಹೆಚ್ಚಾಗಿ, ವಿದ್ವಾಂಸರೂ ಪ್ರಭಾವ ಶಾಲಿಗಳೂ ಆದ ಸವರ್ಣ ಹಿಂದೂಗಳು ಧರ್ಮಶಾಸ್ತ್ರಗಳ ಅರ್ಥವನ್ನು ಸಮರ್ಪಕವಾಗಿ, ಅಧಿಕಾರಯುತವಾಗಿ ವಿವರಿಸಬೇಕು. +ಡಾ.ಅಂಬೇಡ್ಕರ್‌ ಅವರ ದೋಷಾರೋಪಣೆಯಲ್ಲಿ ಅಡಕವಾದ ಪ್ರಶ್ನೆಗಳು ಹೀಗಿವೆ:-೧. ಧರ್ಮಕ್ಕೆ ಆಧಾರವಾದ ಗ್ರಂಥಗಳಾವುವು? +೨.ಈಗ ಅಚ್ಚಾಗಿರುವ ಗ್ರಂಥಗಳೆಲ್ಲ ಮೂಲ ಪಾಠವೆಂದು ಪರಿಗಣಿಸಬೇಕೆ? +ಅಥವಾ ಅದರಲ್ಲಿ ಪ್ರಕ್ಷಿಪ್ರವೆಂದು ಕೆಲಭಾಗವನ್ನು ತಿರಸ್ಕರಿಸಬೇಕೆ? +೩.ಹೀಗೆ ಪಕ್ಷಿಪ್ತ ಭಾಗವನ್ನು ತೆಗೆದು ಹಾಕಿದ ಮೇಲೆ ಉಳಿಯುವ ಮೂಲ ಪಾಠವಾದರೂ ಅಸ್ಪಶ್ಯತೆ, ಜಾತಿಪದ್ಧತಿ, ಸ್ಥಾನಮಾನದ ಸಮಾನತೆ, ಅಂತರ್ಜಾತೀಯ ಭೋಜನ ಹಾಗೂ ಅಂತರ್ಜಾತಿಯ ವಿವಾಹಗಳ ಪ್ರಶೆಗೆ ಕೊಡುವ ಉತ್ತರವೇನು? +ಈ ಪ್ರಶ್ನೆಗಳಿಗೆ ನನ್ನ ಉತ್ತರವನ್ನೂ, ಡಾ.ಅಂಬೇಡ್ಕರ್‌ ಅವರ ವಾದದಲ್ಲಿರುವ (ಕೆಲವಾದರೂ)ದೋಷಗಳ ಬಗ್ಗೆ ನನ್ನ ಹೇಳಿಕೆಯನ್ನು ಮುಂದಿನ ಸಂಚಿಕೆಗೆ ಮೀಸಲಿಡಲಾಗಿದೆ. +ವೇದಗಳು, ಉಪನಿಷತ್ತುಗಳು, ಸ್ಮೃತಿಗಳು ಮತ್ತು ರಾಮಾಯಣ, ಮಹಾಭಾರತ ಸಹಿತವಾದ ಪುರಾಣಗಳು ಹಿಂದೂಗಳಿಗೆ ಧರ್ಮಗ್ರಂಥಗಳು. +ಅವುಗಳ ಯಾದಿ ಇಲ್ಲಿಗೇ ಮುಗಿಯವುದಿಲ್ಲ. +ಪ್ರತಿಯೊಂದು ಯುಗ, ಪ್ರತಿಯೊಂದು ತಲೆಮಾರು ಯಾದಿಗೆ ಹೊಸ ಗ್ರಂಥಗಳನ್ನು ಸೇರಿಸುತ್ತಾ ಬಂದಿದೆ. +ಆದುದರಿಂದ ಅಚ್ಚಾದ ಅಥವಾ ಹಸ್ತಲಿಖಿತ ಗ್ರಂಥಗಳೆಲ್ಲವೂ ಆಗಮಗಳಾಗುವುದಿಲ್ಲ. +ಉದಾಹರಣಾರ್ಥವಾಗಿ ಸ್ಮೃತಿಗಳಲ್ಲಿ ನಿರೂಪಿತವಾದ ಅನೇಕ ಮಾತುಗಳನ್ನು ದೇವವಾಣಿಯೆಂದು ಸ್ವೀಕರಿಸಲಾಗುವುದಿಲ್ಲ. +ಡಾ.ಅಂಬೇಡ್ಕರ್‌ಅವರು ಉದಾಹರಿಸುವ ಸ್ಮೃತಿಗಳ ಶ್ಲೋಕಗಳು ಅಧಿಕೃತ ಪಾಠವಲ್ಲ. +ಆಗಮ ಗ್ರಂಥಗಳೆಂಬ ಹೆಸರಿಗೆ ಯೋಗ್ಯವಾದ ಗ್ರಂಥಗಳು ಶಾಶ್ವತ ತತ್ವಗಳನ್ನು ಹೇಳುತ್ತವೆ ಮತ್ತು ಅರಿವುಳ್ಳವರಿಗೆಲ್ಲ ವೇಧ್ಯವಾಗುತ್ತವೆ. +ಯಾವುದು ಬುದ್ಧಿಯ ಒರೆಗಲ್ಲಿಗೆ ನಿಲ್ಲಲಾರದೋ, ಅಥವಾ ಆಧ್ಯಾತ್ಮಿಕ ಅನುಭವಕ್ಕೆ ಒಳಪಡಲಾರದೋ ಅಂತಹುದನ್ನು ದೇವವಾಣಿಯೆಂದು ಸ್ವೀಕರಿಸಲಾಗುವುದಿಲ್ಲ. +ಪ್ರಕ್ಷಿಪ್ತ ಅಂಶಗಳನ್ನು ತೆಗೆದುಹಾಕಿದ ಬಳಿಕಕೂಡ ಆಗಮಗ್ರಂಥಗಳನ್ನು ಸರಿಯಾಗಿ ವಿವರಿಸುವವರ ಅಗತ್ಯವಿದೆ. +ಅತ್ಯಂತ ಸಮರ್ಪಕವಾಗಿ ವಿವರಿಸುವವರು ಯಾರು? +ಪಂಡಿತರಂತೂ ಅಲ್ಲ. +ಪಾಂಡಿತ್ಯ ಬೇಕೆಂಬುದೇನೊ ನಿಜ. +ಆದರೆ ಧರ್ಮ ಅದರಿಂದಲೆ ಬಾಳುವುದಿಲ್ಲ. +ಸಾಧುಗಳು ಹಾಗೂ ದ್ರಷ್ಟಾರರ ಅನುಭವದಲ್ಲಿ, ಅವನ ಜೀವನ ಹಾಗೂ ಉಕ್ತಿಗಳಲ್ಲಿ ಧರ್ಮ ಬಾಳುತ್ತದೆ. +ಆಗಮಗಳ ವ್ಯಾಖ್ಯಾನಕಾರರೆಲ್ಲ ಮರೆತು ಹೋದರೂ ಕೂಡ, ಸಾಧುಸಂತರ ಒಟ್ಟು ಅನುಭವ ಉಳಿಯುತ್ತದೆ. +ಮತ್ತು ಮುಂದಿನ ಯುಗಗಳಿಗೆ ಸ್ಫೂರ್ತಿಯೊದಗಿಸುತ್ತದೆ. +ಜಾತಿ ಪದ್ಧತಿಗೂ ಧರ್ಮಕ್ಕೂ ಸಂಬಂಧವೇ ಇಲ್ಲ. +ಅದೊಂದು ರೂಢಿಯಾಗಿ ಬಂದಿದೆ. +ಅದರ ಮೂಲವೇನೂ ನಾನು ಅರಿಯೆ, ಅರಿತುಕೊಳ್ಳುವ ಅವಶ್ಯಕತೆಯೂ ಇಲ್ಲ; +ನನ್ನ ಆಧ್ಯಾತ್ಮಿಕ ಹಸಿವು ಹಿಂಗಿಸುವುದಕ್ಕೆ ಅದು ಬೇಕಾಗಿಲ್ಲ. +ಆದರೆ ಆಧ್ಯಾತ್ಮಿಕ ಅಭಿವೃದ್ಧಿಗೂ ರಾಷ್ಟ್ರೀಯ ಅಭಿವೃದ್ಧಿಗೂ ಅದು ಅಪಾಯವೊಡ್ದುತ್ತದೆಯೆಂಬುದನ್ನು ನಾನು ಬಲ್ಲೆ. +ವರ್ಣ ಮತ್ತು ಆಶ್ರಮಗಳು ಜಾತಿಗೆ ಸಂಬಂಧಪಟ್ಟಿಲ್ಲ. +ನಮ್ಮ ನಮ್ಮ ಸಾಂಪ್ರದಾಯಿಕ ವೃತ್ತಿಗಳನ್ನು ಅನುಸರಿಸಿ ನಾವು ಪ್ರತಿಯೊಬ್ಬರೂ ಉಪಜೀವನ ಸಾಗಿಸಬೇಕೆಂದು ವರ್ಣವ್ಯವಸ್ಥೆ ತಿಳಿಸುತ್ತದೆ. +ಅದು ನಮ್ಮ ಕರ್ತವ್ಯಗಳನ್ನು ವ್ಯಾಖ್ಯೆ ಮಾಡಿ ತಿಳಿಸುತ್ತದಲ್ಲದೆ ಹಕ್ಕುಗಳನ್ನಲ್ಲ. +ಮಾನವ ಕೋಟಿಯ ಕಲ್ಯಾಣಕ್ಕೆ ಅನುಕೂಲವಾದ ವೃತ್ತಿಗಳನ್ನು ಅದು ಹೇಳುತ್ತದೆ, ಬೇರೆ ವೃತ್ತಿಯನ್ನಲ್ಲ. +ವೃತ್ತಿಗಳಲ್ಲಿ ಉಚ್ಚ-ನೀಚ ಭೇದವಿಲ್ಲವೆಂಬುದೂ ಇದರಿಂದ ತಿಳಿಯುತ್ತದೆ. +ಎಲ್ಲಾ ವೃತ್ತಿಗಳೂ ಒಳ್ಳೆಯವು,ನ್ಯಾಯ ಸಮ್ಮತವಾದುವು ಮತ್ತು ಸ್ಥಾನಮಾನದ ದೃಷ್ಟಿಯಿಂದ ಸಂಪೂರ್ಣ ಸಮಾನವಾದುವು. +ಬ್ರಾಹ್ಮಣನ(ಆಧ್ಯಾತ್ಮಿಕ ಗುರುವಿನ) ವೃತ್ತಿ ಹಾಗೂ ಜಾಡಮಾಲಿಯ ವೃತ್ತಿ ಎರಡೂ ಸರಿಸಮಾನವಾದವು. +ಸಮರ್ಪಕವಾಗಿ ನೆರವೇರಿಸಿದಾಗ, ದೇವರ ದೃಷ್ಟಿಯಿಂದ, ಇವೆರಡೂ ವೃತ್ತಿಗಳಿಂದ ಬರುವ ಪುಣ್ಯವೂ ಸರಿಸಮಾನವೆ; +ಒಂದು ಕಾಲದಲ್ಲಿ ಮಾನವರ ದೃಷ್ಟಿಯಿಂದ ಕೂಡ ಎರಡಕ್ಕೂ ಸಮಾನವಾದ ಬಹುಮಾನವಿತ್ತು ಉಪಜೀವನಕ್ಕೆ ಮಾತ್ರ ವೃತ್ತಿಯಲ್ಲದೆ ಬೇರೇನೂ ಅಲ್ಲ. +ಈ ಧರ್ಮದ ಆರೋಗ್ಯಕರವಾದ ಆಚರಣೆ ಇಂದಿಗೂ ಹಳ್ಳಿಗಳಲ್ಲಿ ಕಣ್ಣಿಗೆ ಬೀಳುತ್ತದೆ. +ಆರು ನೂರು ಜನಸಂಖ್ಯೆಯುಳ್ಳ ಸೇಗಾನ್‌ ಗ್ರಾಮದಲ್ಲಿ ನಾನು ಇದ್ದೆ. +ಅಲ್ಲಿ ಬ್ರಾಹ್ಮಣರನ್ನೊಳಗೊಂಡು ಬೇರೆ ಬೇರೆ ವೃತ್ತಿಗಳವರ ಗಳಿಕೆಯಲ್ಲಿ ವಿಶೇಷ ವ್ಯತ್ಯಾಸವನ್ನೇನೂ ನಾನು ಕಂಡಿಲ್ಲ. +ಜನರು ದಾನವಾಗಿ ಅರ್ಪಿಸುವುದನ್ನೇ ಸ್ವೀಕರಿಸಿ ತಮ್ಮ ಆಧ್ಯಾತ್ಮಿಕ ಸಂಪತ್ತನ್ನು ಜನರಿಗೆ ಉದಾರವಾಗಿ ನೀಡುತ್ತಾ ಬದುಕುವ ನಿಜವಾದ ಬ್ರಾಹ್ಮಣರು ಈಗಲೂ ಇದ್ದಾರೆಂದು ನಾನು ಕಂಡಿದ್ದೇನೆ. +ಇವರಲ್ಲಿ ವರ್ಣಧರ್ಮವನ್ನು ಉಲ್ಲಂಘಿಸಿ ನಡೆಯುವ ಕೆಲ ಜನರಿರಬಹುದು. +ವ್ಯಂಗ್ಯಚಿತ್ರಗಳಂತಿರುವ ಇವರನ್ನೇ ಆಧರಿಸಿ ವರ್ಣಧರ್ಮವನ್ನು ಬೆಲೆಗಟ್ಟಲಾಗದು. +ಒಂದು ವರ್ಣ ಇನ್ನೊಂದು ವರ್ಣದ ಮೇಲೆ ಅತಿಕ್ರಮಣ ಮಾಡಿದರೆ ಅದು ಧರ್ಮವನ್ನು ಮೀರಿದಂತೆಯೇ ಸರಿ. +ಅಸ್ಪಶ್ಯತೆಯ ನಂಬಿಕೆಗೆ ವರ್ಣಧರ್ಮದಲ್ಲಿ ಆಧಾರವೇ ಇಲ್ಲ. +ಹಿಂದೂ ಧರ್ಮದ ಸಾರದ ಪ್ರಕಾರ ಸತ್ಯಸ್ತರೂಪನಾದ ಒಬ್ಬನೇ ಒಬ್ಬ ದೇವರಿದ್ದಾನೆ ಮತ್ತು ಅಹಿಂಸೆಯನ್ನು ಮಾನವ ಕುಲದ ನಿಯವವಾಗಿ ಸ್ವೀಕರಿಸಲಾಗಿದೆ. +ಹಿಂದೂ ಧರ್ಮದ ಬಗೆಗೆ ನಾನು ಮಾಡಿದ ಈ ವ್ಯಾಖ್ಯಾನವನ್ನು ಡಾ.ಅಂಬೇಡ್ಕರ್‌ ಅವರೊಬ್ಬರೇ ಅಲ್ಲದೆ, ಇನ್ನೂ ಅನೇಕರು ವಿರೋಧಿಸುವರೆಂದು ನಾನು ಬಲ್ಲೆ. +ಅದರಿಂದ ನನ್ನ ನಿಲವೇನೂ ಬದಲಾಗದು. +ಧರ್ಮದ ಅರ್ಥವನ್ನು ಈ ರೀತಿಯಲ್ಲಿ ತಿಳಿದುಕೊಂಡೆ, ಸುಮಾರು ಐವತ್ತು ವರ್ಷ ಬದುಕಿದ್ದೇನೆ ಮತ್ತು ಅದರನ್ವಯ ನನ್ನ ಜೀವನವನ್ನು ಕ್ರಮಗೊಳಿಸಲು ಸಾಧ್ಯವಿದ್ದ ಮಟ್ಟಿಗೆ ಪ್ರಯತ್ನಿಸಿದ್ದೇನೆ. +ಅಧಿಕೃತವೆಂದು ನಿಶ್ಚಿತವಾಗಿ ಒಪ್ಪಲಾಗದ ಗ್ರಂಥಗಳನ್ನು ಉದಾಹರಿಸಿ, ಹಿಂದೂ ಧರ್ಮದ ಯೋಗ್ಯ ಪ್ರತಿನಿಧಿಗಳಲ್ಲದಂತಹ ದುರಾಚರಣೆಯ ಜನರನ್ನು ಹಿಂದೂಗಳೆಂದು ಆಯ್ದುಕೊಂಡು, ಡಾ. +ಅಂಬೇಡ್ಕರ್‌ಅವರು ತಮ್ಮ ಉಪನ್ಯಾಸದಲ್ಲಿ ದೊಡ್ಡ ತಪ್ಪು ಮಾಡಿದ್ದಾರೆ. +ಡಾ. ಅಂಬೇಡ್ಕರ್‌ ಅವರು ಹಿಡಿದುಕೊಂಡಿರುವ ಮಾನದಂಡದಿಂದ ಅಳೆಯ ಹೊರಟರೆ ಈಗ ಇರುವ ಪ್ರತಿಯೊಂದು ಧರ್ಮವೂ ಪತಿತವೆನಿಸೀತು. +ತಮ್ಮ ಸಮರ್ಥವಾದ ಉಪನ್ಯಾಸದಲ್ಲಿ ಪಂಡಿತರಾದ ಈ ಡಾಕ್ಟರರು ತಮ್ಮ ವಾದವನ್ನು ಅವಶ್ಯಕತೆಗಿಂತಲೂ ಹೆಚ್ಚಾಗಿ ಸಿದ್ಧಮಾಡಿದ್ದಾರೆ. +ಚೈತನ್ಯ, ಜ್ಞಾನದೇವ, ತುಕಾರಾಮ, ತಿರುವಳ್ಳುವರ್‌, ರಾಮಕೃಷ್ಣ ಪರಮಹಂಸ,ರಾಜಾರಾಮ್‌ ಮೋಹನರಾಯ್‌, ಮಹರ್ಷಿ ದೇವೇಂದ್ರನಾಥ ಠಾಕೂರ್‌, ವಿವೇಕಾನಂದ ಮತ್ತು ಅನೇಕಾ ನೇಕರು ಒಪ್ಪಿಕೊಂಡ ಧರ್ಮವು ಡಾ.ಅಂಬೇಡ್ಕರ್‌ ಅವರು ಹೇಳುವಷ್ಟು ಗುಣಹೀನವಾಗಿರಬಲ್ಲುದೇ? +ಧರ್ಮದ ಬೆಲೆಕಟ್ಟುವುದು ಅದರ ಕನಿಷ್ಟ ಮಾದರಿಗಳಿಂದಲ್ಲ, ಆ ಧರ್ಮದಲ್ಲಿ ಉದಿಸಿದ ಅತ್ಯುತ್ತಮ ಮಾದರಿಗಳಿಂದ. +ಯಾಕೆಂದರೆ ಇಟ್ಟುಕೊಳ್ಳಬೇಕಾದ ಆದರ್ಶವೆಂದರೆ ಅದೊಂದೇ. +ವರ್ಣ ಮತ್ತು ಜಾತಿಲಾಹೋರದ ಜಾತ್‌-ಪತ್‌-ತೋಡಕ್‌ ಮಂಡಲಕ್ಕೆ ಸೇರಿದ ಶ್ರೀ ಸಂತ ರಾಮ್‌ಜಿ ಈ ಕೆಳಗಿನ ಲೇಖನವನ್ನು ಪ್ರಕಟಿಸಬೇಕೆಂದು ನನ್ನೆಡೆಗೆ ಕಳುಹಿಸಿದ್ದಾರೆ : +“ಡಾ.ಅಂಬೇಡ್ಕರ್‌ ಅವರು ಹಾಗೂ ಲಾಹೋರದ ಜಾತ್‌-ಪತ್‌-ತೋಡಕ್‌ ಮಂಡಲದ ವಿಷಯವಾಗಿ ನೀವು ವ್ಯಕ್ತಪಡಿಸಿದ ಅಭಿಪ್ರಾಯಗಳನ್ನು ಓದಿದ್ದೇನೆ. +ಈ ವಿಷಯವಾಗಿ ನಾನು ಕೆಲ ಮಾತುಗಳನ್ನು ಹೇಳಬಯಸುತ್ತೇನೆ. +ಅಸ್ಪಶ್ಯ ವರ್ಗಕ್ಕೆ ಸೇರಿದವರೆಂಬ ಕಾರಣಕ್ಕೋಸ್ಕರ ಡಾ.ಅಂಬೇಡ್ಕರ್‌ ಅವರಿಗೆ ಅಧ್ಯಕ್ಷರಾಗಲು ನಾವು ಭಿನ್ನವಿಸಲಿಲ್ಲ. +ಯಾಕೆಂದರೆ ನಾವು ಹಿಂದೂಗಳಲ್ಲಿ ಸ್ಪಶ್ವ-ಅಸ್ಪಶ್ಯ ಭೇದವನ್ನು ಮಾಡುವುದಿಲ್ಲ. +ತದ್ವಿರುದ್ಧವಾಗಿ, ಹಿಂದೂ ಧರ್ಮಕ್ಕೆ ಬಡಿದುಕೊಂಡ ಮಾರಕರೋಗವೇನೆಂದು ನಿರ್ಧರಿಸುವಲ್ಲಿ ನಮ್ಮ ಅಭಿಪ್ರಾಯವೇ ಅವರದ್ದಾಗಿದ್ದರಿಂದ ಹಿಂದೂಗಳ ಅವನತಿಗೆ ಜಾತಿಪದ್ಧತಿಯೇ ಕಾರಣವೆಂದು ಅವರು ಅಭಿಪ್ರಾಯಪಟ್ಟದುದರಿಂದ ನಾವು ಅವರನ್ನು ಅಧ್ಯಕ್ಷರಾಗಿ ಆಯ್ಕೆ ಮಾಡಿದೆವು. +ತಮ್ಮ ಡಾಕ್ಟರೇಟ್‌ ಪ್ರಬಂಧಕ್ಕೆ ಜಾತಿಪದ್ಧತಿಯನ್ನೇ ಅವರು ವಿಷಯವಾಗಿ ಆಯ್ದುಕೊಂಡಿದ್ದರು. +ಆದುದರಿಂದ ಆ ವಿಷಯವನ್ನು ಕೂಲಂಕಷವಾಗಿ ಅಭ್ಯಾಸ ಮಾಡಿದ್ದಾರೆ. +ಜಾತಿ ನಿರ್ಮೂಲನೆ ಮಾಡಲು ಹಿಂದೂಗಳ ಮನವೊಲಿಸುವುದೇ ನಮ್ಮ ಸಮ್ಮೇಳನದ ಉದ್ದೇಶವಾಗಿತ್ತು. +ಆದರೆ ಸಾಮಾಜಿಕ ಹಾಗೂ ಧಾರ್ಮಿಕ ವಿಷಯಗಳಲ್ಲಿ ಹಿಂದೂವಲ್ಲದ ವ್ಯಕ್ತಿ ಮಾಡುವ ಸಲಹೆ ಪರಿಣಾಮಕಾರಿಯಾಗಲಾರದು. +ಉಪನ್ಯಾಸದ ಕೊನೆಕೊನೆಯ ಭಾಗದಲ್ಲಿ ಈ ಡಾಕ್ಟರ್‌ ಇದು ಹಿಂದೂವಾಗಿ ತಾವು ಮಾಡುವ ಅಂತಿಮ ಭಾಷಣವೆಂದು ಹೇಳಲು ಹಠ ಹಿಡಿದರು. +ಸಮ್ಮೇಳನದ ಹಿತದೃಷ್ಟಿಯಿಂದ ಇದು ಅಪ್ರಕೃತವೂ, ಹಾನಿಕರವೂ ಅನ್ನಿಸಿತು. +ಆದುದರಿಂದ ಈ ವಾಕ್ಯವನ್ನು ತೆಗೆದುಹಾಕಬೇಕೆಂದು ನಾವು ಪ್ರಾರ್ಥಿಸಿಕೊಂಡೆವು. +ಆ ಮಾತನ್ನು ಇನ್ನೊಂದು ಸಂದರ್ಭ ಎಲ್ಲಾದರೂ ಅವರು ಹೇಳಬಹುದಾಗಿತ್ತು. +ಆದರೆ ಅವರು ನಮ್ಮ ಬಿನ್ನಹವನ್ನು ಮನ್ನಿಸಲಿಲ್ಲ. +ನಮ್ಮ ಸಮ್ಮೇಳನವು ಕೇವಲ ಒಂದು ಪ್ರದರ್ಶನವಾಗುವುದು ನಮಗೆ ಬೇಡವಾಯಿತು. +ಇಷ್ಟೆಲ್ಲ ಇದ್ದರೂ ಅವರ ಉಪನ್ಯಾಸವನ್ನು ನಾನು ಹೊಗಳದೆ ಇರಲಾರೆ. +ನನಗೆ ತಿಳಿದ ಮಟ್ಟಿಗೆ ಅವರ ಉಪನ್ಯಾಸವು ಆ ವಿಷಯವಾಗಿ ಅತ್ಯಂತ ಪಾಂಡಿತ್ಯ ಪೂರ್ಣವಾದ ಪುಬಂಧವಾಗಿದ್ದು, ಭಾರತದ ಪ್ರತಿಯೊಂದು ಭಾಷೆಯಲ್ಲಿ ಅನುವಾದ ಯೋಗ್ಯವಾಗಿದೆ. +ಇದಲ್ಲದೆ ನಿಮ್ಮ ಗಮನಕ್ಕೆ ಇನ್ನೊಂದು ಮಾತನ್ನು ತರಬಯಸುತ್ತೇನೆ. +ವರ್ಣ ಮತ್ತು ಜಾತಿ ಇವೆರಡರಲ್ಲಿ ನೀವು ತೋರಿದ ತಾತ್ವಿಕ ಭೇದವು ಸಾಮಾನ್ಯ ಜನರ ತಿಳಿವಳಿಕೆಗೆ ನಿಲುಕುವಂತಹದಲ್ಲ. +ಏಕೆಂದರೆ ಪ್ರತ್ಯಕ್ಷ ವ್ಯವಹಾರದಲ್ಲಿ ವರ್ಣವೆಂದರೂ ಅದೇ, ಜಾತಿಯೆಂದರೂ ಅದೇ. +ಅಂತರ್ಜಾತೀಯ ವಿವಾಹ ಮತ್ತು ಅಂತರ್ಜಾತೀಯ ಭೋಜನಗಳನ್ನು ನಿಷೇಧಿಸುವ ಎರಡರ ಕೆಲಸವೂ ಅದೇ. +ನಿಮ್ಮ ವರ್ಣವ್ಯವಸ್ಥೆಯ ತತ್ವ ಈ ಕಾಲದಲ್ಲಿ ಆಚರಣೆ ಸಾಧ್ಯವಿಲ್ಲ. +ಇನ್ನು ಮುಂದಿನ ಕಾಲದಲ್ಲಾದರೂ ಅದಕ್ಕೆ ಪುನರುದ್ಧಾರದ ಭರವಸೆಯಿಲ್ಲ. +ಆದರೆ ಹಿಂದೂಗಳು ಜಾತಿಪದ್ಧತಿಯ ಗುಲಾಮರಾಗಿ ಬಿಟ್ಟಿದ್ದಾರೆ. +ಜಾತಿಯನ್ನು ನಾಶ ಮಾಡಲು ಅವರು ಬಯಸುವುದಿಲ್ಲ. +ಆದುದರಿಂದ ನೀವು ವರ್ಣವ್ಯವಸ್ಥೆಯ ಕಾಲ್ಪನಿಕ ಆದರ್ಶವನ್ನು ಪ್ರತಿಪಾದಿಸಿದಾಗ ಅವರು ತಮ್ಮ ಜಾತಿಪದ್ಧತಿಗೆ ಸಮರ್ಥನೆ ದೊರೆಯಿತೆಂದು ಪರಿಗಣಿಸುತ್ತಾರೆ. +ಹೀಗೆ ವರ್ಣ ವ್ಯವಸ್ಥೆಯ ಕಾಲ್ಪನಿಕ ಲಾಭವನ್ನು ಪ್ರತಿಪಾದಿಸಿ ನೀವು ಸಾಮಾಜಿಕ ಸುಧಾರಣೆಗೆ ಮಹಾ ಅನ್ಯಾಯ ಮಾಡುತ್ತಿದ್ದೀರಿ. +ಏಕೆಂದರೆ ಅದು ನಮ್ಮ ಹಾದಿಗೆ ಅಡ್ಡಗಾಲಾಗುತ್ತದೆ. +ವರ್ಣವ್ಯವಸ್ಥೆಯನ್ನು ನಿರ್ಮೂಲಗೊಳಿಸದೆ ಅಸ್ಪಶ್ಯತಾ ನಿವಾರಣೆಗೆ ಪ್ರಯತ್ನಿಸುವುದೆಂದರೆ ರೋಗದ ಬಾಹ್ಯ ಲಕ್ಷಣಗಳಿಗೆ ಮಾತ್ರ ಚಿಕಿತ್ಸೆ ಮಾಡಿದಂತೆ. +ನೀರಿನ ಮೆಲೆ ಗೆರೆಯೆಳೆಯಲು ಮಾಡಿದ ಪ್ರಯತ್ನದಂತೆ ಆಗುತ್ತದೆ. +ಆಸ್ಪಶ್ಯರೆಂದು ಅಂಕಿತರಾದವರಿಗೆ ಹಾಗೂ ಶೂದ್ರರಿಗೆ ಸಮಾನವಾದ ಸಾಮಾಜಿಕ ಸ್ಥಾನಮಾನವನ್ನು ಕೊಡುವುದು ದ್ವಿಜರಿಗೆ ಇಷ್ಟವಾಗಿಲ್ಲ. +ಆದ್ದರಿಂದ ಅವರು ಜಾತಿ ವಿನಾಶಕ್ಕೆ ಒಪ್ಪುವುದಿಲ್ಲ; +ಅಸ್ಪಶ್ಯತಾ ನಿವಾರಣೆಗೆಂದು ಧಾರಾಳವಾಗಿ ಧನ ದಾನಮಾಡುತ್ತಾರೆ. +ಮುಖ್ಯ ಸಮಸ್ಯೆಯಿಂದ ತಪ್ಪಿಸಿಕೊಳ್ಳುವುದೇ ಅವರ ಉದ್ದೇಶ. +ಆಸ್ಪಶ್ಯತಾ ನಿವಾರಣೆಗೆ ಶಾಸ್ತ್ರಗಳಿಂದ ಸಹಾಯ ಪಡೆಯುವುದರಿಂದ ಕೆಸರಿನಿಂದ ಕೆಸರು ತೊಳೆದಂತೆಯೇ ಸರಿ.” + ಇದರಲ್ಲಿ ಕೊನೆಯ ಪರಿಚ್ಛೇದವು ನಿಶ್ಚಿತವಾಗಿ ಮೊದಲನೆಯ ಪರಿಚ್ಛೇದವನ್ನು ಅಲ್ಲಗಳೆಯುತ್ತದೆ. +ಮಂಡಲದವರು ಶಾಸ್ತ್ರಗಳ ಸಹಾಯವನ್ನು ನಿರಾಕರಿಸುವುದಾದರೆ ಅವರೂ ಡಾ.ಅಂಬೇಡ್ಕರ್‌ ಅವರ ಹಾದಿ ಹಿಡಿಯುತ್ತಾರೆ; +ಅಂದರೆ ಹಿಂದೂಗಳಾಗಿ ಉಳಿಯುವುದಿಲ್ಲ. +ಹೀಗಿರುವಾಗ “ನಾನು ಹಿಂದೂವಾಗಿ ಕೊಡುವ ಉಪನ್ಯಾಸವಿದು” ಎಂದು ಹೇಳಿದ ಮಾತ್ರಕ್ಕೆ ಡಾ.ಅಂಬೇಡ್ಕರ್‌ ಅವರ ಉಪನ್ಯಾಸವನ್ನುಇವರು ಅದು ಹೇಗೆ ಆಕ್ಷೇಪಿಸಬಲ್ಲರು? +ಮಂಡಲದ ಪ್ರತಿನಿಧಿಯಾಗಿ ಮಾತಾಡುವ ಶ್ರೀ ಸಂತರಾಮರು ಡಾ.ಅಂಬೇಡ್ಕರ್‌ ಅವರ ಉಪನ್ಯಾಸವನ್ನೆಲ್ಲ ಮೆಚ್ಚಿ ಹೊಗಳುತ್ತಿರುವುದರಿಂದ ಅವರ ನಿಲುವು ಸಮರ್ಥನೀಯವೆನಿಸದು. +ಆದರೆ ಒಂದು ಪ್ರಶ್ನೆ ಕೇಳಬೇಕಾಗಿದೆ. +ಶಾಸ್ತ್ರಗಳನ್ನು ನಿರಾಕರಿಸುವುದಾದರೆ ಈ ಮಂಡಲವು ನಂಬುವುದಾದರೂ ಯಾವುದನ್ನು ಕುರಾನನ್ನು ನಿರಾಕರಿಸಿ ಮುಸ್ಲಿಮನು ಮುಸ್ಲಿಮನಾಗಿರಬಲ್ಲನೆ? +ಬೈಬಲ್ಲನ್ನು ನಿರಾಕರಿಸಿದವನು ಕ್ರೈಸ್ತನಾಗಿ ಉಳಿಯಬಲ್ಲನೆ? +ವರ್ಣ ಹಾಗೂ ಜಾತಿ ಎರಡೂ ಒಂದೇ ಆಗಿದ್ದ ಪಕ್ಷದಲ್ಲಿ ಮತ್ತು ವರ್ಣವು ಹಿಂದೂ ಧರ್ಮಶಾಸ್ತ್ರಗಳ ಅಖಂಡ ಭಾಗವಾಗಿದ್ದರೆ, ವರ್ಣ ಅಥವಾ ಜಾತಿಯನ್ನುನಿರಾಕರಿಸುವವರು ತಮ್ಮನ್ನು ಹಿಂದೂಗಳೆಂದು ಅವರು ಹೇಗೆ ಕರೆದುಕೊಳ್ಳಬಲ್ಲರೋ ನಾನರಿಯೆ. +ಶ್ರೀ ಸಂತರಾಮರು ಶಾಸ್ತ್ರಗಳನ್ನು ಕೆಸರಿಗೆ ಹೋಲಿಸುತ್ತಾರೆ. +ನನಗೆ ನೆನಪಿರುವ ಮಟ್ಟಿಗೆ ಡಾ.ಅಂಬೇಡ್ಕರ್‌ ಅವರು ಶಾಸ್ತ್ರಗಳಿಗೆ ಇಂತಹ ಚಿತ್ರನಾಮವನ್ನು ದಯಪಾಲಿಸಿಲ್ಲ. +ಶಾಸ್ತ್ರಗಳು ಈಗಿನ ಅಸ್ಪಶ್ಯತೆಯನ್ನು ಸಮರ್ಥಿಸುವುದಾದರೆ ನಾನು ನನ್ನನ್ನು ಹಿಂದೂವೆಂದು ಕರೆದುಕೊಳ್ಳಲೊಲ್ಲೆ ಎಂದು ಹೇಳಿದ್ದೇನೆ. +ಇದು ನನ್ನ ಮನಃಪೂರ್ವಕವಾದ ಖಚಿತ ಅಭಿಪ್ರಾಯ. +ಅದೇ ಮೇರೆಗೆ ಅಸಹ್ಯವಾಗಿರುವ ಈಗಿನ ಜಾತಿಪದ್ಧತಿಯನ್ನು ಶಾಸ್ತ್ರಗಳು ಬೆಂಬಲಿಸುವುದು ನಿಜವಾದರೆ ನಾನು ಹಿಂದೂವಾಗಿ ಉಳಿಯಬಯಸುವುದಿಲ್ಲ. +ಅಂತರ್ಜಾತೀಯ ಭೋಜನ ಹಾಗೂ ಅಂತರ್ಜಾತೀಯ ವಿವಾಹಗಳ ಬಗೆಗೆ ನನ್ನ ಆಕ್ಷೇಪವೇನೂ ಇಲ್ಲ. +ಶಾಸ್ತ್ರಗಳ ಹಾಗೂ ಅವುಗಳ ಅರ್ಥವಿವರಣೆಯ ವಿಷಯವಾಗಿ ನನ್ನ ನಿಲುವೇನೆಂಬುದನ್ನು ನಾನು ಮತ್ತೊಮ್ಮೆ ಹೇಳುವ ಅವಶ್ಯಕತೆಯಿಲ್ಲ. +ಬುದ್ಧಿಸಮ್ಮತವಾದ, ಸಮರ್ಪಕವಾದ ನೈತಿಕವಾಗಿ ಸಮರ್ಥನೀಯವಾದ ನಿಲುವೆಂದರೆ ಅದೊಂದೇ ಎಂದೂ, ಹಿಂದೂ ಸಂಪ್ರದಾಯದಲ್ಲಿ ಅದಕ್ಕೆ ಹೇರಳವಾದ ಪ್ರಮಾಣವುಂಟೆಂದೂ ಶ್ರೀಸಂತರಾಮರಿಗೆ ನಾನು ಹೇಳಬಯಸುತ್ತೇನೆ. +ಡಾ.ಅಂಬೇಡ್ಕರ್‌ ಅವರಿಂದ ಮಹಾತ್ಮರಿಗೆ ಒಂದು ಪ್ರತ್ಯುತ್ತರ ಜಾತ್‌-ಪತ್‌-ತೋಡಕ್‌ ಮಂಡಲಕ್ಕಾಗಿ ನಾನು ಸಿದ್ಧಪಡಿಸಿದ ಜಾತಿ ವಿಷಯದ ಉಪನ್ಯಾಸವನ್ನು ಗಮನಿಸಿ ತಮ್ಮ ಹರಿಜನ ಪತ್ರಿಕೆಯಲ್ಲಿ ಉಲ್ಲೇಖಿಸುವ ಮೂಲಕ ಮಹಾತ್ಮರು ನನ್ನನ್ನು ಗೌರವಿಸಿದ್ದಾರೆ. +ಇದನ್ನು ನಾನು ತುಂಬ ಮೆಚ್ಚುತ್ತೇನೆ. +ಅವರು ಮಾಡಿದ ನನ್ನ ಉಪನ್ಶ್ಯಾಸದ ವಿಮರ್ಶೆಯನ್ನು ನೋಡಿದರೆ ಜಾತಿಯ ಬಗೆಗೆ ನಾನು ವ್ಯಕ್ತಪಡಿಸಿದ ಅಭಿಪ್ರಾಯಗಳನ್ನು ಮಹಾತ್ಮಾಜಿ ಸಂಪೂರ್ಣವಾಗಿ ವಿರೋಧಿಸುತ್ತಾರೆಂಬುದು ಸ್ಪಷ್ಟವಾಗುತ್ತದೆ. +ವಿರೋಧಿಗಳೊಡನೆ ವಾದಕ್ಕೆ ನಿಲ್ಲುವುದು ನನ್ನ ಪದ್ಧತಿಯಲ್ಲ. +ನಾನು ವಾದಿಸಲೇಬೇಕೆಂಬಂತಹ ವಿಶೇಷ ಕಾರಣಗಳಿದ್ದರೆ ಆ ಮಾತು ಬೇರೆ. +ನನ್ನ ವಿರೋಧಿ ಯಾವನೋಒಬ್ಬ ಸಾಮಾನ್ಯ ಮನುಷ್ಯನಾಗಿದ್ದರೆ ನಾನು ಅವನ ಗೋಜಿಗೆ ಹೋಗುತ್ತಿರಲಿಲ್ಲ. +ಆದರೆ ನನ್ನನ್ನು ವಿರೋಧಿಸಿ ನಿಂತವರು ಮಹಾತ್ಮರಾಗಿರುವುದರಿಂದ ಅವರ ವಾದವನ್ನು ನಾನು ವಿಮರ್ಶಿಸಿ ಉತ್ತರಿಸಬೇಕಾಗಿದೆ. +ನನ್ನನ್ನು ಗೌರವಿಸಿದ್ದಕ್ಕಾಗಿ ಅವರನ್ನು ಮೆಚ್ಚುತ್ತೇನೆ. +ಆದರೆ ವೇದಿಕೆಯಿಂದ ವ್ಯಕ್ತಮಾಡಲಾಗದ ಉಪನ್ಯಾಸವನ್ನು ನಾನು ಮುದ್ರಿಸಿದ್ದು ನನ್ನನ್ನು ಜನ ಮರೆಯಕೂಡದೆಂಬ ಉದ್ದೇಶದಿಂದ ಎಂದು ಸೂಚಿಸಿ ಪ್ರಚಾರಕ್ಕಾಗಿ ನಾನು ಆತುರಪಡುತ್ತಿದ್ದೇನೆಂದು ಆರೋಪಿಸಲಾಗಿದೆ. +ಇಂತಹ ದೋಷಾರೋಪಣೆಗೆ ಸ್ವತಃ ಮಹಾತ್ಮರು ಕೈಯಿಕ್ಕಿದುದನ್ನು ಕಂಡು ನನಗೆ ವಿಸ್ಮಯವಾಗಿದೆ. +ಮಹಾತ್ಮರು ಏನೇ ಹೇಳಲಿ, ಹಿಂದೂಗಳನ್ನು ಕೆಣಕಿ ಅವರು ತಮ್ಮ ಸ್ಥಿತಿಯನ್ನು ಸರಿಯಾಗಿ ಅರಿತುಕೊಳ್ಳಲೆಂದು ಪ್ರೇರೇಪಿಸುವ ಉದ್ದೇಶದಿಂದ ಮಾತ್ರ ನಾನುಆ ಉಪನ್ಯಾಸವನ್ನು ಮುದ್ರಿಸಿ ಪ್ರಕಟಿಸಿದೆನು. +ಪ್ರಚಾರಕ್ಕಾಗಿ ನಾನು ಎಂದೂ ಹಾತೊರೆದವನಲ್ಲ. +ಹಾಗೆ ನೋಡಿದರೆ ನನಗೆ ಅವಶ್ಯಕವಾದುದಕ್ಕಿಂತ ಹೆಚ್ಚಾಗಿಯೇ ಅದು ನನಗೆ ದೊರೆತಿದೆ. +ಒಂದು ವೇಳೆ ಪ್ರಚಾರಾಪೇಕ್ಷೆಯಿಂದಲೆ ನಾನು ಅದನ್ನು ಪ್ರಕಟಸಿದೆನೆಂದು ಇಟ್ಟುಕೊಳ್ಳಿ. +ಆಗ ನನ್ನ ಮೇಲೆ ಕಲ್ಲು ಒಗೆಯುವವರುಯಾರು? + ಮಹಾತ್ಮರಂತೆ ಗಾಜಿನ ಮನೆಯಲ್ಲಿ ಇರುವವರಂತೂ ಹಾಗೆ ಮಾಡಕೂಡದು. +ನನ್ನ ಉದ್ದೇಶದ ಮಾತು ಹೋಗಲಿ. +ಉಪನ್ಯಾಸದಲ್ಲಿ ನಾನು ಎತ್ತಿದ ಪ್ರಶ್ನೆಗಳಿಗೆ ಮಹಾತ್ಮರೇನು ಹೇಳುತ್ತಾರೆ? +ನಾನು ಎತ್ತಿದ ಪ್ರಶ್ನೆಗಳನ್ನು ಅವರು ಮುಟ್ಟಿಯೇ ಇಲ್ಲ, ಮತ್ತು ಹಿಂದೂಗಳ ಮೇಲೆ ದೋಷಾರೋಪಣೆಯೆಂದು ಅವರು ಮಂಡಿಸಿದ ವಿಷಯಗಳು ನನ್ನ ಉಪನ್ಯಾಸದಲ್ಲಿ ಎಲ್ಲಿಯೂ ಇಲ್ಲ. +ನನ್ನ ಉಪನ್ಯಾಸವನ್ನು ಓದಿ ನೋಡಿದರೆ ಯಾರಿಗಾದರೂ ಇದು ಸ್ಪಷ್ಟವಾಗುತ್ತದೆ. +ನನ್ನ ಉಪನ್ಯಾಸದಲ್ಲಿ ನಾನು ಮಂಡಿಸಿದ್ದ ಮುಖ್ಯ ಅಂಶಗಳು ಈ ಕೆಳಗಿನಂತೆ ಇವೆ: ೧. ಜಾತಿಪದ್ಧತಿ ಹಿಂದೂಗಳನ್ನು ಹಾಳುಗೆಡಹಿದೆ. +೨.ಚಾತುರ್ವಣ್ಯದ ಮೇರೆಗೆ ಹಿಂದೂ ಸಮಾಜವನ್ನು ಪನಃ ನಿರ್ಮಿಸುವುದು ಅಸಾಧ್ಯ. +ಯಾಕೆಂದರೆ ವರ್ಣ ವ್ಯವಸ್ಥೆಯೊಂದು ಸೋರುವ ಪಾತ್ರೆಯಿದ್ದಂತೆ. +ಉಳಿದುಕೊಳ್ಳುವಂಥ ಅಂತಸ್ಥ ಬಲ ಅದಕ್ಕಿಲ್ಲ ಯಾರಾದರೂ ವರ್ಣವನ್ನು ಅತಿಕ್ರಮಿಸಿದರೆ ಅವರನ್ನು ಶಿಕ್ಷೆಗೆ ಗುರಿ ಮಾಡುವಂತಹ ಶಾಸನಾಧಿಕಾರ ಅದಕ್ಕೆ ಅಗತ್ಯ. +ಆ ಅಧಿಕಾರವಿಲ್ಲದೆ ಹೋದರೆ ವರ್ಣವ್ಯವಸ್ಥೆಯು ಜಾತಿವ್ಯವಸ್ಥೆಯ ಅವಸ್ಥೆಗೆ ಇಳಿಯುವ ಸಂಭವವಿದೆ. +೩.ಚಾತುರ್ವಣ್ಯದ ಮೇರೆಗೆ ಹಿಂದೂ ಸಮಾಜವನ್ನು ಪುನರ್ರೂಪಿಸುವುದು ಅಪಾಯಕಾರಿಯಾಗುತ್ತದೆ. +ಯಾಕೆಂದರೆ ವರ್ಣವ್ಯವಸ್ಥೆ ಸಾಮಾನ್ಯ ಜನಸಮೂಹಕ್ಕೆ ಜ್ಞಾನ ಸಂಪಾದನೆ ಹಾಗೂ ಶಸ್ತ್ರಾಭ್ಯಾಸದ ಅವಕಾಶವನ್ನು ನಿರಾಕರಿಸುವುದರಿಂದ ಜನಸಾಮಾನ್ಯರ ಅವನತಿಗೆ ಕಾರಣವಾಗುತ್ತದೆ. +೪.ಸ್ವಾತಂತ್ರ್ಯ, ಸಮಾನತೆ ಹಾಗೂ ಭ್ರಾತೃತ್ವ ತತ್ವಗಳನ್ನೊಳಗೊಂಡ ಧರ್ಮವನ್ನು ಆಧರಿಸಿಯೇ ಹಿಂದೂ ಸಮಾಜದ ಪುನರ್ನಿರ್ಮಾಣವಾಗತಕ್ಕದ್ದು. +೫.ಈ ಗುರಿಯನ್ನು ಸಾಧಿಸಬೇಕಾದರೆ ಜಾತಿ ಮತ್ತು ವರ್ಣಗಳ ಬಗೆಗಿರುವ ಗೌರವಭಾವನೆ ನಷ್ಟವಾಗತಕ್ಕದ್ದು. +೬.ಶಾಸ್ತ್ರಗಳು ದೇವವಾಣಿಯೆಂಬ ಭಾವನೆಯನ್ನು ನಾಶಗೊಳಿಸುವುದರಿಂದ ಮಾತ್ರ ಜಾತಿ, ವರ್ಣಗಳ ಮೇಲಿನ ಗೌರವ ನಾಶವಾಗಬಲ್ಲದು. +ಮಹಾತ್ಮರು ಎತ್ತಿದ ಪ್ರಶ್ನೆಗಳು ನನ್ನ ವಾದಕ್ಕೆ ಸಂಪೂರ್ಣವಾಗಿ ಅಪ್ರಕೃತವಾಗಿದ್ದು, ನನ್ನ ಉಪನ್ಯಾಸದಿಂದ ಅವರೇನೂ ತಿಳಿದುಕೊಂಡಿಲ್ಲವೆಂಬುದು ಸ್ಪಷ್ಟ. +ಇನ್ನು ಮಹಾತ್ಮರು ಹೇಳಿದ್ದೇನೆಂಬುದನ್ನು ಪರೀಕ್ಷಿಸೋಣ. +ಅವರು ಹೇಳಿದ ಮೊದಲನೆಯ ಮಾತೆಂದರೆ ನಾನು ಉದಾಹರಿಸಿದ ಗ್ರಂಥಗಳು ಅಧಿಕೃತವಲ್ಲ ಎಂಬುದು. +ಈ ವಿಷಯದಲ್ಲಿ ನಾನು ಅಧಿಕಾರಯುಕ್ತನಲ್ಲವೆಂದು ಒಪ್ಪುತ್ತೇನೆ. +ಆದರೆ ಸಂಸ್ಕೃತ ಭಾಷೆ ಮತ್ತು ಹಿಂದೂ ಶಾಸ್ತ್ರಗಳ ಬಗೆಗೆ ಅಧಿಕಾರವಾಣಿಯಿಂದ ನುಡಿಯಬಲ್ಲವರಾಗಿದ್ದ ಶ್ರೀ ತಿಲಕರ ಲೇಖನಗಳಿಂದ ನಾನು ಆ ಉದಾಹರಣೆಗಳನ್ನು ಆಯ್ದುಕೊಂಡಿದ್ದೇನೆಂದು ಹೇಳಬಯಸುತ್ತೇನೆ. +ಅವರು ಹೇಳುವ ಎರಡನೆಯ ಮಾತೆಂದರೆ, ಶಾಸ್ತ್ರಗಳ ಅರ್ಥವನ್ನು ಸರಿಯಾಗಿ ವಿವರಿಸಬಲ್ಲವರು ಸಾಧುಸಂತರಲ್ಲದೆ ವಿದ್ವಾಂಸರಲ್ಲ, ಮತ್ತು ಜಾತಿಪದ್ಧತಿ ಹಾಗೂ ಅಸ್ಪಶ್ಯತೆಯನ್ನು ಶಾಸ್ತ್ರಗಳು ಒಪ್ಪುವುದಿಲ್ಲವೆಂದು ಸಾಧುಸಂತರು ಹೇಳುತ್ತಾರೆ. +ಮೊದಲನೆಯದಾಗಿ ನಾನು ಮಹಾತ್ಮರಿಗೆ ಈ ಪಶ್ನೆ ಕೇಳುತ್ತೇನೆ, ಶಾಸ್ತ್ರಗಳಲ್ಲಿ ಪ್ರಕ್ಷಿಪ್ತ ಭಾಗಗಳಿದ್ದರೆ ಹಾಗೂ ಸಾಧುಸಂತರು ಅವುಗಳನ್ನುಬೇರೆ ರೀತಿಯಿಂದ ಅರ್ಥ ಮಾಡಿ ವಿವರಿಸಿದ್ದರೆ ಯಾರಿಗೆ ಏನು ಪ್ರಯೋಜನ? +ಶಾಸ್ತ್ರಗಳು ಅಧಿಕೃತವೋ ಅಥವಾ ಮೂಲವೋ ಪ್ರಕ್ಷಿಪ್ರಪೋ ಎಂಬ ಭೇದವನ್ನು ಜನಸಾಮಾನ್ಯರು ಗಮನಿಸುವುದಿಲ್ಲ. +ಶಾಸ್ತ್ರಗಳ ಪಾಠವೇ ಜನಸಾಮಾನ್ಯರಿಗೆ ಗೊತ್ತಿರುವುದಿಲ್ಲ. +ಅವುಗಳಲ್ಲಿ ಇರುವುದೇನೆಂದು ತಿಳಿಯಲಾರದಷ್ಟು ಜನ ನಿರಕ್ಷರಿಗಳಾಗಿದ್ದಾರೆ. +ಹೇಳಿದ್ದನ್ನೆಲ್ಲ ಕೇಳಿ ನಂಬಿದವರು ಅವರು. +ಜಾತಿಪದ್ಧತಿಯನ್ನೂ, ಅಸ್ಪ ಶ್ಯತೆಯನ್ನೂ ಶಾಸ್ತ್ರಗಳು ವಿಧಿಸಿವೆಯೆಂದು ಅವರಿಗೆ ಹೇಳುತ್ತಾ ಬರಲಾಗಿದೆ. +ಇನ್ನು ಸಾಧು ಸಂತರ ಮಾತು. +ವಿದ್ವಾಂಸರ ಬೋಧನೆಗಿಂತ ಸಾಧುಸಂತರ ಬೋಧನೆ ಎಷ್ಟೇ ಭಿನ್ನವಾಗಿ, ಎಷ್ಟೇ ಉನ್ನತವಾಗಿ ಇದ್ದರೂ ಆ ಬೋಧನೆಯ ಪರಿಣಾಮ ಮಾತ್ರ ಸೊನ್ನೆಯೆ ಆಗಿದೆಯೆಂಬುದು ಶೋಚನೀಯ. +ಇದಕ್ಕೆ ಕಾರಣಗಳು ಎರಡು. +ಮೊದಲನೆಯದಾಗಿ ಸಾಧುಸಂತರಲ್ಲಿ ಒಬ್ಬರೂ ಜಾತಿ ಪದ್ಧತಿಯಮೇಲೆ ದಾಳಿ ಮಾಡಲಿಲ್ಲ. +ತದ್ದಿರುದ್ಧವಾಗಿ ಜಾತಿಪದ್ಧತಿಗೆ ಅವರು ಪರಮನಿಷ್ಠರಾಗಿದ್ದರು. +ಅವರಲ್ಲಿ ಬಹುಪಾಲು ಜನ ತಮ್ಮ ತಮ್ಮ ಜಾತಿಗಳ ಸದಸ್ಯರಾಗಿಯೇ ಬದುಕಿದರು. +ಹಾಗೂ ಆಯಾ ಜಾತಿಯವರಾಗಿಯೇ ಸತ್ತರು. +ಜ್ಞಾನದೇವನಿಗೆ ತಾನು ಬ್ರಾಹ್ಮಣನೆಂಬ ಅಭಿಮಾನ ಎಷ್ಟು ತೀವ್ರವಾಗಿತ್ತು ಗೊತ್ತೆ? +ಪೈಠಣದ ಬ್ರಾಹ್ಮಣರು ಆತನನ್ನು ತಮ್ಮಲ್ಲಿ ಸೇರಿಸಿಕೊಳ್ಳಲು ಒಪ್ಪದಿದ್ದಾಗ ಆ ಬ್ರಾಹ್ಮಣ ಸಮಾಜವು ತನ್ನನ್ನು ಬ್ರಾಹ್ಮಣನೆಂದು ಪರಿಗಣಿಸುವಂತೆ ಮಾಡಲು ಅವನು ವಿಶ್ವ ಪ್ರಯತ್ನ ಮಾಡಿದನು. +ಸಂತ ಏಕನಾಥನು ಅಸ್ಪಸ್ತರನ್ನು ಮುಟ್ಟುವುದಲ್ಲದೆ ಅವರೊಡನೆ ಊಟ ಮಾಡುವ ಧೈರ್ಯವನ್ನೂ ತೋರಿದನು. +ಆ ಧೈರ್ಯ ತೋರಿದ್ದು ಏಕೆ ಗೊತ್ತೌ ಹಾಗೆ ಮಾಡಿದಾಗ ಅಂಟಿಕೊಂಡ ಮೈಲಿಗೆ ಒಂದು ಗಂಗಾ ಸ್ನಾನದಿಂದ ತೊಳೆದುಹೋಗುವುದೆಂದು ಅವನಿಗೆ ವಿಶ್ವಾಸವಿತ್ತು. +'ಸಂತರು ಜಾತಿ ಮತ್ತು ಅಸ್ಪಶ್ಯತೆಯ ವಿರುದ್ಧವಾಗಿ ಎಂದೂ ಅಂದೋಲನ ನಡೆಸಲಿಲ್ಲವೆಂದು ನನ್ನ ವ್ಯಾಸಂಗದಿಂದ ಅರಿತುಕೊಂಡಿದ್ದೇನೆ. +ಜೀವಾತ್ಮ-ಪರಮಾತ್ಮರ ಸಮಬಂಧವೇ ಅವರಿಗೆ ಮುಖ್ಯವಾಗಿತ್ತು. +ಮನುಷ್ಯರೆಲ್ಲಾ ಸಮಾನರೆಂದು ಅವರು ಬೋಧಿಸಲಿಲ್ಲ. +ದೇವರ ದೃಷ್ಟಿಯಲ್ಲಿ ಎಲ್ಲರೂ ಸಮಾನರೆಂದು ಮಾತ್ರ ಹೇಳಿದರು. +ಇದು ತುಂಬ ನಿರುಪದ್ರವಕಾರಿ ಹೇಳಿಕೆ. +ಯಾರಾದರೂ ಹೇಳಬಹುದಾದ ಮಾತು. +ಸಾಧುಸಂತರ ಬೋಧನೆ ಪರಿಣಾಮಕಾರಿಯಾಗದೆ ಹೋದುದಕ್ಕೆ ಇನ್ನೂ ಒಂದು ಕಾರಣವಿದೆ. +ಸಾಧುಸಂತರು ಜಾತಿಯನ್ನು ಮೀರಬಹುದಾದರೂ ಜನಸಾಮಾನ್ಯರು ಮಾತ್ರ ಮೀರಲಾಗದೆಂದು ವಿಧಿಸುತ್ತ ಬರಲಾಗಿದೆ. +ಆದುದರಿಂದ ಸಾಧುಸಂತರು ಅನುಕರಣೀಯ ವ್ಯಕ್ತಿಗಳಲ್ಲ. +ಅವರು ಗೌರವಾರ್ಹರಾದ ಪುಣ್ಯವ್ಯಕ್ತಿಗಳೆಂದಷ್ಟೆ ಪರಿಗಣಿತರಾದವರು. +ಹೀಗಾಗಿ ಅವರ ಜೀವನವಾಗಲಿ,ಬೋಧನೆಗಳಾಗಲಿ ಜನರ ಭಾವನೆಯ ಮೇಲೆ ಪ್ರಭಾವ ಬೀರಲಿಲ್ಲ. +ವಿದ್ವಾಂಸರ ವಿವರಣೆಗಿಂತ ಸಾಧುಸಂತರು ಕೊಡುವ ಶಾಸ್ತಾರ್ಥ ವಿವರಣೆ ಬೇರೆಯೆಂಬುದರಿಂದ ಲಾಭವೇನೂ ಆಗಲಿಲ್ಲ. +ಶಾಸ್ತ್ರಗಳ ಬಗೆಗೆ ಜನಸಾಮಾನ್ಯರ ಅಭಿಪ್ರಾಯ ಅವರಿಂದ ಸಂಪೂರ್ಣ ಭಿನ್ನವಾಗಿದೆಯೆಂಬುದು ವಸ್ತುಸ್ಥಿತಿ. +ಇದನ್ನು ನಾವು ಮುಖ್ಯವಾಗಿ ಲಕ್ಷ್ಯದಲ್ಲಿಡತಕ್ಕದ್ದು. +ಶಾಸ್ತ್ರಗಳ ಅಧಿಕಾರವನ್ನು ನಿರಾಕರಿಸದೆ ಈ ಸಮಸ್ಯೆಯನ್ನು ನಿರಾಕರಿಸುವುದು ಹೇಗೆ? +ಮಹಾತ್ಮಾಜಿ ಈ ಪ್ರಶ್ನೆಯನ್ನು ಯೋಚಿಸಿಲ್ಲ. +ಮಹಾತ್ಮಾಜಿ ಮಂಡಿಸುವ ಯೋಜನೆ ಏನೇ ಇರಲಿ,ಒಳ್ಳೆಯ ಸಾಧುವೊಬ್ಬನ ಪುಣ್ಯಮಯವಾದ ಬದುಕು ಉನ್ನತವಾಗಿರಬಹುದು. +ಅಂಥವರಿಂದ ಅವರಿಗೆ ಒಳ್ಳೆಯದಾಗಿರಬಹುದು. +ಸಾಧುಸಂತರೂ, ಮಹಾತ್ಮರೂ ಭಾರತದಲ್ಲಿ ಗೌರವಾರ್ಹ ವ್ಯಕ್ತಿಗಳಾಗಿದ್ದಾರೆ. +ಆದರೆ ಅನುಕರಣೀಯ ವ್ಯಕ್ತಿಗಳಲ್ಲ ಎಂಬುದು ಜನಸಾಮಾನ್ಯರ ಮನೋಭಾವ. +ಹೀಗಿರುವಾಗ ನಮ್ಮ ಸಮಸ್ಯೆಗೆ ಸಾಧುಸಂತರಿಂದೇನೂ ಫಲವಾಗಿಲ್ಲ. +ಇದನ್ನು ಗಾಂಧೀಜಿ ಒಪ್ಪಬೇಕಾಗುತ್ತದೆ. +ಚೈತನ್ಯ, ಜ್ಞಾನದೇವ, ತುಕಾರಾಮ, ತಿರುವಳ್ಳುವರ್‌, ರಾಮಕೃಷ್ಣ ಪರಮಹಂಸ ಮುಂತಾದವರು ತಮ್ಮದೆಂದು ಒಪ್ಪಿಕೊಂಡ ಧರ್ಮ ಯೋಗ್ಯತೆಯಿಲ್ಲದುದಲ್ಲವೆಂಬುದೂ ಧರ್ಮದ ಯೋಗ್ಯತೆಯನ್ನು ಅಳೆಯಬೇಕಾದದ್ದು ಅದರ ಅಯೋಗ್ಯ ಮಾದರಿಗಳಿಂದ ಅಲ್ಲ ಅತ್ಯುತ್ತಮ ಮಾದರಿಗಳಿಂದ ಎಂಬುದೂ ಮಹಾತ್ಮರು ಹೇಳುವ ಮೂರನೆಯ ಮಾತು. +ಅವರ ಈ ಹೇಳಿಕೆಯ ಪ್ರತಿಯೊಂದು ಶಬ್ದವನ್ನೂ ನಾನು ಒಪ್ಪುತ್ತೇನೆ. +ಆದರೆ ಇದರಿಂದ ಮಹಾತ್ಮರು ಏನನ್ನು ಸಿದ್ಧ ಮಾಡಬಯಸುತ್ತಾರೋ ನನಗೆ ತಿಳಿಯದು. +ಧರ್ಮವನ್ನು ಅದರ ಅತ್ಯುನ್ನತ ವ್ಯಕ್ತಿಗಳಿಂದ ಬೆಲೆಗಟ್ಟಬೇಕೆಂಬುದೇನೊ ನಿಜ. +ಆದರೆ ಅಷ್ಟರಿಂದ ಎಲ್ಲಾ ಮುಗಿದಂತಾಯಿತೆ? +ಮುಗಿಯಲಿಲ್ಲವೆಂದೇ ಹೇಳುತ್ತೇನೆ. +ಅಯೋಗ್ಯ ಅಥವಾ ಕೀಳು ಮಾದರಿಗಳೇ ಇಷ್ಟೊಂದು ಹೆಚ್ಚಾಗಿ, ಉತ್ತಮ ಮಾದರಿ ಇಷ್ಟು ವಿರಳವಾದುದೇಕೆ? +ಈ ಪ್ರಶ್ನೆ ನಿಂತುಕೊಂಡಿದೆ. +ಈ ಪಶ್ನೆಗೆ ಎರಡು ಉತ್ತರಗಳನ್ನು ಕಲ್ಪಿಸಬಹುದು. +(೧) ಕೀಳು ಮಾದರಿಗಳಾಗಿರುವವರು ಜನ್ಮಜಾತವಾದ ಯಾವುದೋ ಒಂದು ವಿಕ್ಷಿಪ್ರತೆಯ ಕಾರಣ ನೈತಿಕ ಶಿಕ್ಷಣವನ್ನು ಅರಗಿಸಿಕೊಳ್ಳಲಾರದವರಾಗಿರುತ್ತಾರೆ. +ಅದರಿಂದಾಗಿ ಧಾರ್ಮಿಕ ಆದರ್ಶದತ್ತ ಒಂದು ಹೆಜ್ಜೆಯನ್ನಾದರೂ ಇಡಲು ಅವರು ಅಸಮರ್ಥರಿರುತ್ತಾರೆ. + ೨)ಧಾರ್ಮಿಕ ಆದರ್ಶವೇ ಸಂಪೂರ್ಣವಾಗಿ ಯುಕ್ತವಲ್ಲದ ಆದರ್ಶವಾಗಿದ್ದು ಅನೇಕರ ಬದುಕಿಗೆ ಅಯೋಗ್ಯವಾದ ನೈತಿಕ ತಿರುವನ್ನು ಒದಗಿಸಿರಬೇಕು. +ಕೆಲವರು ಅತ್ಯುತ್ತಮ ವ್ಯಕ್ತಿಗಳಾಗಿ ಉಳಿದಿದ್ದರೆ ಆ ಅಯೋಗ್ಯ ನೈತಿಕತಿರುವನ್ನು ಸರಿಪಡಿಸಿ, ಯೋಗ್ಯಪಥಕ್ಕೆ ಹೊರಳಿಸಿಕೊಂಡಿರಬೇಕು. +ಇವೆರಡು ಸಂಭಾವ್ಯ ಕಾರಣಗಳಲ್ಲಿ ಮೊದಲನೆಯದನ್ನು ನಾನು ಸ್ವೀಕರಿಸಲಾರೆ; +ಮಹಾತ್ಮರು ಕೂಡ ಇದನ್ನು ಸ್ವೀಕರಿಸಲಾರರು. +ನನ್ನ ಅಭಿಪ್ರಾಯದಲ್ಲಿ ಎರಡನೆಯ ಕಾರಣವೇ ಯುಕ್ತಾಯುಕ್ತವಾಗಿ ತೋರುತ್ತದೆ. +ಇನ್ನು ಮೂರನೆಯ ಕಾರಣವೊಂದು ಮಹಾತ್ಮರಿಗೆ ಹೊಳೆದರೆ ಆ ಮಾತು ಬೇರೆ. +ಹೀಗಿರುವುದರಿಂದ ಅತ್ಯುತ್ತಮ ಮಾದರಿಗಳಿಂದಲೇ ಧರ್ಮದ ಯೋಗ್ಯತೆಯನ್ನು ಅಳೆಯಬೇಕೆಂಬ ಮಹಾತ್ಮರವಾದ ನಿಷ್ಠಲವಾಗುತ್ತದೆ. +ಅಯೋಗ್ಯ ಆದರ್ಶವನ್ನು ಪೂಜಿಸುತ್ತ ಅಡ್ಡದಾರಿ ಹಿಡಿದ ಬಹುಸಂಖ್ಯಾತ ಜನರನ್ನು ಕಂಡು ಅಯ್ಯೋ ಪಾಪ ಎನ್ನುವುದಕ್ಕಿಂತ ಹೆಚ್ಚಿಗೇನೂ ಮಾಡಿದಂತಾಗುವುದಿಲ್ಲ. +ಸಾಧುಸಂತರ ಮೇಲ್ಪಂಕ್ತಿಯನ್ನು ಅನುಸರಿಸಿದ ಪಕ್ಷದಲ್ಲಿ ಹಿಂದೂ ಧರ್ಮ ಸಹನೀಯವಾಗಬಹುದೆಂಬ ಮಹಾತ್ಮರ ವಾದ ತಪ್ಪೆಂಬುದಕ್ಕೆ ಇನ್ನೂ ಒಂದು ಕಾರಣವಿದೆ.” +ಚೈತನ್ಯ ಮೊದಲಾದ ಪ್ರಖ್ಯಾತರ ಉದಾಹರಣೆಯಿಂದ ಮಹಾತ್ಮರು ಸೂಚಿಸ ಬಯಸುವುದೇನು? +ಉಚ್ಚಜಾತಿಯ ಜನರೆಲ್ಲರೂ ಕೀಳುಜಾತಿಯ ಜನರೊಡನೆ ಉತ್ತಮ ನೀತಿ ಮಟ್ಟದಲ್ಲಿ ನಡೆದುಕೊಂಡರೆ ಯಾವ ಬದಲಾವಣೆಯೂ ಅವಶ್ಯವಾಗದೆ ಈಗಿರುವ ಸ್ವರೂಪದಲ್ಲಿಯೇ ಹಿಂದೂ ಸಮಾಜವು ಸಹನೀಯವಾಗಬಲ್ಲುದು ಎಂಬುದು ಅವರ ಉದ್ದೇಶ. +ಈ ಬಗೆಯ ವಿಚಾರ ಸರಣಿಗೆ ನಾನು ಸಂಪೂರ್ಣ ವಿರೋಧಿಯಾಗಿದ್ದೇನೆ. +ತಮ್ಮ ಜೀವನದಲ್ಲಿ ಉನ್ನತವಾದ ಸಾಮಾಜಿಕ ಆದರ್ಶವನ್ನು ಸಾದಿಸುತ್ತಿರುವ ಮೇಲು ಜಾತಿಯ ಹಿಂದೂಗಳನ್ನು ನಾನು ಗೌರವಿಸಬಲ್ಲೆನು. +ಇಂತಹ ವ್ಯಕ್ತಿಗಳಿಲ್ಲದೆ ಹೋದರೆ ಭಾರತ ದೇಶದ ಬದುಕು ಇನ್ನಷ್ಟು ಕಷ್ಟಕರವೂ ಅಸಹ್ಯವೂ ಆದೀತು. +ಆದರೆ ವೈಯಕ್ತಿಕ ಚಾರಿತ್ರ್ಯ ಸುಧಾರಣೆಯಿಂದಲೇ ಜಾತಿವಂತ ಹಿಂದೂಗಳನ್ನೆಲ್ಲ ಉತ್ತಮ ವ್ಯಕ್ತಿಗಳಾಗಿ ಪರಿವರ್ತಿಸುವ ಪ್ರಯತ್ನವು ಶ್ರಮದ ಅಪವ್ಯಯವಾಗುತ್ತದೆ, ಭ್ರಾಂತಿಗೆ ಜೋತು ಬಿದ್ದಂತೆ ಆಗುತ್ತದೆ. +ಆಯುಧಗಳನ್ನು ನಿರ್ಮಿಸುವ ಒಬ್ಬ ಮನುಷ್ಯನಿದ್ದಾನೆಂದು ಇಟ್ಟುಕೊಳ್ಳಿ. +ವೈಯಕ್ತಿಕವಾಗಿ ಉತ್ತಮ ಚಾರಿತ್ರವಂತನಾದರೆ ಆತನು ಒಳ್ಳೆಯ ಮನುಷ್ಯನಾಗುವನೆ? +ಎಪ್ರಿಲ್‌ ತಿಂಗಳ ಆರ್ಯನ್‌ ಪಾತ್‌ ಪತ್ರಿಕೆಯಲ್ಲಿ ಶ್ರೀ ಹೆಚ್‌.ಎನ್‌.ಬ್ರೇಲ್‌ ಪಢ್‌ ಅವರು ಬರೆದಿರುವ "ನೀತಿ ಮತ್ತು ಸಮಾಜಸ್ವರೂಪ' ಎಂಬ ಉಜ್ವಲ ಲೇಖನವನ್ನು ಈ ಸಂದರ್ಭದಲ್ಲಿ ನೋಡಬಹುದು. +ವಿಷ ಹರಡದಂತಹ ಗ್ಯಾಸನ್ನೂ ನಿರ್ಮಿಸುವನೆ?ಅದು ಸಾಧ್ಯವಿಲ್ಲ. +ಅದರಂತೆ, ಜಾತಿಪಜ್ಞೆ ಜಾಗೃತವಾಗಿರುವ ಮನುಷ್ಯನ ಚಾರಿತ್ರ್ಯ ಒಳ್ಳೆಯದಾದರೆ ಅವನು ಒಳ್ಳೆಯ ಮನುಷ್ಯನಾಗುವನೆ? +ಅಂದರೆ ತನ್ನ ನೆರೆಹೊರೆಯವನ್ನೆಲ್ಲ ತನ್ನ ಮಿತ್ರರೆಂದೂ ಸಮಾನರೆಂದೂ ನಡೆಸಿಕೊಳ್ಳುವನೆ? +ತನ್ನ ಸ್ಥಿತಿಗನು ಸಾರವಾಗಿ ಅವರಿಗಿಂತ ಮೇಲಿನವನೆಂದೂ ಕೆಳಗಿನವನೆಂದೂ ಅವನು ನಡೆದುಕೊಳ್ಳಬೇಕಾಗುತ್ತದೆ. +ಅಂದರೆ ತನ್ನ ಜಾತಿಯವರೊಡನೆ ನಡೆದುಕೊಂಡಂತೆ ಇತರರೊಡನೆ ನಡೆದುಕೊಳ್ಳಲಾಗುವುದಿಲ್ಲ. +ಎಲ್ಲರನ್ನೂ ತನ್ನ ಬಂಧುಗಳೆಂದು,ಸಮಾನರೆಂದು ಅವನು ಕಾಣಲಾರನು. +ವಾಸ್ತವವಾಗಿ ನೋಡಿದರೆ ತನ್ನ ಜಾತಿಯವರಲ್ಲದ ಜನರೊಡನೆ ಅವರಾರೋ ಪರಕೀಯರೆಂಬಂತೆ ಹಿಂದೂವು ವ್ಯವಹರಿಸುತ್ತಾನೆ. +ಏನು ಮಾಡಿದರೂ ಭಯವಿಲ್ಲ, ಎಂತಹ ವಂಚನೆ ಮಾಡಿದರೂ ನಾಚಬೇಕಾಗಿಲ್ಲ ಎಂಬ ಮನೋವೃತ್ತಿ ಅವನ ನಡವಳಿಕೆಯಲ್ಲಿ ಕಾಣುತ್ತದೆ. +ಇತರರಿಗಿಂತ ಉತ್ತಮವಾದ ಹಿಂದೂ ಇರಬಹುದು. +ಇತರರಿಗಿಂತ ಕೀಳಾದ ಹಿಂದೂ ಇರಬಹುದು; +ಆದರೆ ಒಳ್ಳೆಯ ಹಿಂದೂ ಇರಲಾರನು. +ಅವನ ವೈಯಕ್ತಿಕ ಸ್ವಭಾವ ಅದಕ್ಕೆ ಕಾರಣವಲ್ಲ. +ತನ್ನ ದೇಶ ಬಾಂಧವರೊಡನೆ ಅವನಿಟ್ಟುಕೊಂಡಿರುವ ಸಂಬಂಧದ ಮೂಲಾಧಾರವೇ ತಪ್ಪಾಗಿದೆ. +ಈ ಸಂಬಂಧ ತಪ್ಪಾಗಿದ್ದರೆ ಎಂತಹ ಉತ್ತಮ ಮನುಷ್ಯನೂ ನೀತಿವಂತನಾಗಿ ಉಳಿಯಲಾರನು. +ಗುಲಾಮರನ್ನು ಇಟ್ಟುಕೊಂಡಿರುವವನು ಇತರರಿಗಿಂತ ಉತ್ತಮನಾಗಿರಬಹುದು, ಅಥವಾ ಕೀಳಾಗಿರಬಹುದು; +ಆದರೆ ಗುಲಾಮನಿಗೆ ಒಳ್ಳೆಯ ಒಡೆಯನಿರುವುದಿಲ್ಲ. +ಒಳ್ಳೆಯ ಮನುಷ್ಯನು ಒಡೆಯನಾಗಿರಲಾರ ಮತ್ತು ಒಡೆಯನು ಒಳ್ಳೆಯ ಮನುಷ್ಯನಾಗಿರಲಾರ. +ಮೇಲು ಜಾತಿ ಹಾಗೂ ಕೆಳಜಾತಿಗಳ ಸಂಬಂಧಕ್ಕೂ ಇದೇ ಮಾತು ಅನ್ವಯಿಸುತ್ತದೆ. +ಮೇಲು ಜಾತಿಯವನು ಒಳ್ಳೆಯ ಮನುಷ್ಯನಾಗಿ ಇರಲಾರ. + ಏಕೆಂದರೆ ತಾನು ಮೇಲು ಜಾತಿಯವನಾಗಿ ಉಳಿಯಬೇಕಾಗಿದ್ದರೆ ಕೆಳಜಾತಿಯೊಂದು ಇದ್ದೇ ಇರಬೇಕಲ್ಲವೆ? +ತನ್ನ ಮೇಲೊಬ್ಬನು ಮೇಲುಜಾತಿಯವನಿದ್ದಾನೆಂಬ ಪ್ರಜ್ಞೆ ಕೆಳಜಾತಿಯವನಿಗೆ ಒಳ್ಳೆಯದಲ್ಲ. +ವರ್ಣ ಅಥವಾ ಜಾತಿಪದ್ಧತಿಯನ್ನು ಆಧರಿಸಿದ ಸಮಾಜವು ತಪ್ಪು ಸಂಬಂಧವನ್ನೇ ಆಧರಿಸಿದೆ ಎಂದು ನಾನು ನನ್ನ ಉಪನ್ಯಾಸದಲ್ಲಿ ವಾದಿಸಿದ್ದೇನೆ. +ಮಹಾತ್ಮರು ನನ್ನ ವಾದವನ್ನು ಧ್ವಂಸಗೊಳಿಸುವರೆಂದು ನಾನು ನಿರೀಕ್ಷಿಸಿದ್ದೆ. +ಅದಕ್ಕೆ ಬದಲಾಗಿ ಅವರು ಚಾತುರ್ವಣ್ಯದಲ್ಲಿ ತಮ್ಮ ನಿಷ್ಠೆಯನ್ನು ಮತ್ತೆ ಮತ್ತೆ ಹೇಳಿದರು. +ಅಷ್ಟೆ ಆದರೆ ಅದಕ್ಕೆ ಆಧಾರವನ್ನು ಕೊಡಲಿಲ್ಲ. +ಬ್ರಾಹ್ಮಣನು ಕೊನೆವರೆಗೆ ಬ್ರಾಹ್ಮಣನಾಗಿಯೆ ಉಳಿಯುವುದು ಉತ್ಕಷ್ಟವೆಂದು ಮಹಾತ್ಮರಿಗೆ ತೋರಿದೆ. +ಜೀವನಾಂತ್ಯದವರೆಗೆ ಬ್ರಾಹ್ಮಣರಾಗಿಯೇ ಉಳಿಯಲು ಬಯಸದಂತಹ ಬ್ರಾಹ್ಮಣರು ಅನೇಕರಿದ್ದಾರೆಂಬುದು ವಸ್ತುಸ್ಥಿತಿ. +ಆ ಮಾತು ಹಾಗಿರಲಿ. +ತಮ್ಮ ಕುಲಪರಂಪರಾಗತ ವೃತ್ತಿಯಾದ ಪೌರೋಹಿತ್ಯ ಅಥವಾ ಪೂಜಾರಿತನಕ್ಕೆ ಗಟ್ಟಯಾಗಿ ಅಂಟಿಕೊಂಡಿರುವ ಬ್ರಾಹ್ಮಣರ ವಿಷಯವಾಗಿ ಏನನ್ನೋಣ? +ಇದು ಪ್ರಾಚೀನಕಾಲದಿಂದ ನಡೆದು ಬಂದ ತಮ್ಮ ಕುಲವೃತ್ತಿಯೆಂಬ ಶ್ರದ್ಧೆಯಿಂದ ಅದನ್ನು ಅವರು ನಡೆಸುವರೆ? +ಅಥವಾ ಧನಲಾಭದ ದುರಾಸೆಯಿಂದ ಆ ವೃತ್ತಿಗೆ ಅಂಟಿಕೊಂಡಿರುವರೇ? +ಇಂತಹ ಪ್ರಶ್ನೆಗಳನ್ನು ಮಹಾತ್ಮರು ವಿಚಾರಿಸುವುದಕ್ಕೆ ಹೋಗುವುದಿಲ್ಲ. +ಧಾರಾಳವಾಗಿ ಕೊಟ್ಟ ದಾನದಿಂದ ಜೀವಿಸುತ್ತಾ ತಮ್ಮ ಆಧ್ಯಾತ್ಮಿಕ ಸಂಪತ್ತನ್ನು ಜನಕ್ಕೆ ಬೀರುತ್ತಾ ಇರುವ ನಿಜವಾದ ಬ್ರಾಹ್ಮಣರು ಇದ್ದಾರೆಂಬುದು ಮಹಾತ್ಮರಿಗೆ ತೃಪ್ತಿಕರವಾಗಿದೆ. +ಜನಕ್ಕೆ ಆಧ್ಯಾತ್ಮಿಕ ಸಂಪತ್ತನ್ನು ಒಯ್ದು ಮುಟ್ಟಿಸುವ ಕಾರ್ಯದಲ್ಲಿ ಸಂಪ್ರದಾಯಸ್ಥ ಬ್ರಾಹ್ಮಣನ ಇನ್ನೊಂದು ಚಿತ್ರಣವನ್ನು ನಾವು ಕೊಡಬಲ್ಲೆವು. +ಬ್ರಾಹ್ಮಣನು ಪ್ರೇಮದೇವತೆಯಾದ ವಿಷ್ಣುವಿಗೆ ಪೂಜಾರಿಯಾಗಬಲ್ಲನು. +ಪ್ರಳಯ ದೇವತೆಯಾದ ಶಂಕರನಿಗೂ ಅವನು ಪೂಜಾರಿಯಾಗಬಲ್ಲನು. +ಜಗತ್ತಿಗೆ ಪ್ರೇಮದ ಸಂದೇಶವನ್ನು ಬೀರಿದ ಮಹಾಗುರು ಬುದ್ಧನಿಗೂ ಅವನು ಪೂಜಾರಿಯಾಗಬಲ್ಲನು. +ಪ್ರತಿದಿನ ಪಶುಬಲಿಯನ್ನು ಬೇಡುವ ಕಾಳಿದೇವಿಗೂ ಅವನು ಪೂಜಾರಿ. +ಕ್ಷತ್ರಿಯ ದೇವನಾದ ರಾಮನಿಗೆ ಅವನು ಪೂಜಾರಿ. + ಕ್ಷತ್ರಿಯರ ನಾಶಕ್ಕೆ ಅವತಾರವೆತ್ತಿದ ಪರಶುರಾಮನಿಗೂ ಅವನು ಪೂಜಾರಿ. +ಸೃಷ್ಟಿಕರ್ತನಾದ ಬ್ರಹ್ಮದೇವರಿಗೂ ಅವನು ಪೂಜಾರಿಯಾಗುತ್ತಾನೆ. +ಬ್ರಹ್ಮನಿಗೆ ವಿರೋಧಿಯಾದ ಅಲ್ಲಾ ದೇವರಿಗೆ ಕೂಡ ಇವನು ಪೂಜಾರಿಯಾಗಬಲ್ಲನು,ಇದು ಸತ್ಯದ ಚಿತ್ರಣವಲ್ಲವೆಂದು ಯಾರೂ ಹೇಳಲಾರರು. +ಪರಸ್ಪರ ವಿರುದ್ಧ ಗುಣಗಳುಳ್ಳ ವಿವಿಧ ದೇವತೆಗಳಿಗೆಲ್ಲಾ ನಿಷ್ಠೆ ತೋರುವವನಾದರೆ ಆ ಮನುಷ್ಯ ಪ್ರಾಮಾಣಿಕ ಭಕ್ತನೆಂದು ಹೇಳಲಾಗದು. +ಇದು ತಮ್ಮ ಧರ್ಮದಲ್ಲಿರುವ ಔದಾರ್ಯ ಭಾವನೆಗೆ ಸಹಿಷ್ಣುತಾ ಭಾವಕ್ಕೆ ಸಾಕ್ಷಿಯೆಂದು ಹಿಂದೂಗಳು ನಂಬುತ್ತಾರೆ. +ಇದು ಸಹಿಷ್ಣುತೆಯಾಗಿರದೆ ಎಲ್ಲ ದೇವರ ಬಗೆಗೆ ತಾಳಿರುವ ಉಪೇಕ್ಷೆ ಅಥವಾ ಅಶಕ್ತನು ತೋರುವ ಉದಾಸೀನ ಪ್ರವೃತ್ತಿ ಆಗಿರಬಹುದು. +ಈ ಎರಡು ಮನೋವೃತ್ತಿಗಳು ಹೊರನೋಟಕ್ಕೆ ಒಂದೇ ಎಂಬಂತೆ ತೋರಬಹುದು. +ಆದರೆ ಪರೀಕ್ಷಿಸಿ ನೋಡಿದಾಗ ಅವೆರಡರಲ್ಲಿ ಮೂಲಭೂತವಾದ ಭೇದವನ್ನು ಕಾಣಬಹುದು. +ಅನೇಕ ದೇವತೆಗಳಿಗೆ ಪೂಜೆ ಸಲ್ಲಿಸುವುದು ಸಹಿಷ್ಣುತೆಗೆ ಅಥವಾ ಉದಾರ ಭಾವನೆಗೆ ನಿದರ್ಶನವೆಂದು ಹೇಳಲಾಗುತ್ತದೆ. +ಸಂದರ್ಭಕ್ಕೆ ತಕ್ಕಂತೆ ಅನುಕೂಲ ಸಿಂಧುವನ್ನಾಶ್ರಯಿಸುವ ವಂಚಕ ವೃತ್ತಿಗೂ ಇದು ನಿದರ್ಶನವಾಗಬಹುದಲ್ಲವೆ? +ಈ ಸಹಿಷ್ಣುತೆ ಕೇವಲ ಕಪಟಾಚರಣೆಯೆಂದು ನನಗೆ ಖಾತ್ರಿಯಾಗಿದೆ. +ತನಗೆ ಲಾಭಕರವಾಗುವಂತಿದ್ದರೆ ಯಾವ ದೇವರನ್ನಾದರೂ ಪೂಜಿಸಲು, ಯಾವ ದೇವರಿಗಾದರೂ ಭಕ್ತನಾಗಲು ಸಿದ್ಧನಾಗುವಂತಹ ಮನುಷ್ಯನಲ್ಲಿ ಅದೆಂತಹ ಆಧ್ಯಾತ್ಮಿಕ ಸಂಪತ್ತು ತುಂಬಿದ್ದೀತು? +ಇಂತಹವರಲ್ಲಿ ಆಧ್ಯಾತ್ಮಿಕ ಸಂಪತ್ತಿಲ್ಲವೆಂಬುದಷ್ಟೇ ಅಲ್ಲ, ಶ್ರದ್ಧೆಯಿಲ್ಲದೆ, ನಿಷ್ಠೆಯಿಲ್ಲದೆ, ತಂದೆಯಿಂದ ಮಗನಿಗೆ ಪರಂಪರಾಗತವಾಗಿಬಂದ ಯಾಂತ್ರಿಕ ವೃತ್ತಿಯೆಂದು ಅದನ್ನು ಪಾಲಿಸುತ್ತಾ ಬರುವುದು ಸದ್ಗುಣವಲ್ಲ, ಸಚ್ಚಾರಿತ್ರವೂ ಅಲ್ಲ; +ಧರ್ಮದ ಸೇವೆಯಾಗಿರುವ ಒಂದು ಉದಾತ್ತ ವೃತ್ತಿಯ ದುರುಪಯೋಗವೇ ಆಗಿದೆ ನಿಜವಾಗಿ. +ಪ್ರತಿಯೊಬ್ಬನೂ ತನ್ನ ಪರಂಪರಾಗತ ಕುಲವೃತ್ತಿಯನ್ನೇ ಪಾಲಿಸಿಕೊಂಡು ಬರಬೇಕೆಂಬ ತತ್ವಕ್ಕೆ ಮಹಾತ್ಮರು ಅದೇಕೆ ಅಂಟಿಕೊಳ್ಳುತ್ತಾರೆ? +ಅದಕ್ಕೆ ಎಲ್ಲಿಯೂ ಅವರು ಕಾರಣಗಳನ್ನು ವಿವರಿಸಿಲ್ಲ. +ಅವರು ಹೇಳದಿದ್ದರೂ ಅದಕ್ಕೆ ಏನೋ ಕಾರಣವಿದ್ದಿರಲೇ ಬೇಕು. +ಕೆಲವರ್ಷಗಳ ಹಿಂದೆ ತಮ್ಮ ಯಂಗ್‌ ಇಂಡಿಯಾ ಪತ್ರಿಕೆಯಲ್ಲಿ "ಜಾತಿ ಮತ್ತು ವರ್ಗ'" ಎಂಬ ವಿಷಯವಾಗಿ ಬರೆಯುತ್ತಾ ಸಾಮಾಜಿಕ ಭದ್ರತೆಯ ದೃಷ್ಟಿಯಿಂದ ವರ್ಗಕ್ಕಿಂತ ಜಾತಿಯೇ ಹೆಚ್ಚು ಸಮರ್ಪಕವಾಗಿ ಹೊಂದಾಣಿಕೆ ಮಾಡಬಲ್ಲದಾದುದರಿಂದ ವರ್ಗಕ್ಕಿಂತ ಜಾತಿಯೇ ಮೇಲೆಂದು ಅವರು ವಾದಿಸಿದ್ದರು. +ಕುಲವೃತ್ತಿಯನ್ನೇ ಪಾಲಿಸಬೇಕೆಂಬ ಅವರ ವಾದಕ್ಕೆ ಇದೇ ಕಾರಣವಾಗಿದ್ದರೆ. +ಸಾಮಾಜಿಕ ಜೀವನದ ಬಗೆಗೆ ಅವರ ಅಭಿಪ್ರಾಯ ತಪ್ಪೆಂದು ಹೇಳಬೇಕಾಗುತ್ತದೆ. +ಸಾಮಾಜಿಕ ಭದ್ರತೆಯನ್ನು ಎಲ್ಲರೂ ಅಪೇಕ್ಷಿಸುತ್ತಾರೆ; +ಭದ್ರತೆ ಬೇಕಾದರೆ ವ್ಯಕ್ತಿವ್ಯಕ್ತಿಗಳ ನಡುವೆ ಮತ್ತು ವರ್ಗವರ್ಗಗಳ ನಡುವೆ ಇರುವ ಸಂಬಂಧಗಳಲ್ಲಿ ಅಷ್ಟಿಷ್ಟು ಹೊಂದಾಣಿಕೆಯನ್ನು ಸಾಧಿಸಲೇಬೇಕಾಗುತ್ತದೆ. +ಆದರೆ ಪ್ರತಿಯೊಬ್ಬರಿಗೂ ಬೇಡವಾದ ಎರಡು ಅಂಶಗಳಿವೆ. +ಮೊದಲನೆಯದಾಗಿ, ಬದಲಾವಣೆ ಮಾಡಲಾಗದಂತೆ ಎಲ್ಲಾ ಕಾಲಕ್ಕೂ ಸ್ಥಿರವಾಗಿ ಅಚಲವಾಗಿರುವಂತಹ ಸಂಬಂಧ ಬೇಡವಾಗಿದೆ. +ಭದ್ರತೆ ಬೇಕು, ಆದರೆ ಬದಲಾವಣೆ ಅವಶ್ಯಕವಾದಾಗಲೂ ಅದಕ್ಕೆ ಆಸ್ಪದವೀಯದಂತಹ ವ್ಯವಸ್ಥೆಯಿಂದ ಆದಾಗುವುದಾದರೆ ಬೇಡ. +ಎರಡನೆಯದಾಗಿ, ಕೇವಲ ಹೊಂದಾಣಿಕೆ ಯಾರಿಗೂ ಬೇಡವಾಗಿದೆ. +ಹೊಂದಾಣಿಕೆ ಬೇಕು, ಆದರೆ ಅದರಿಂದ ಸಾಮಾಜಿಕ ನ್ಯಾಯಕ್ಕೆ ಚ್ಯುತಿಯಾಗಕೂಡದು. +ಜಾತಿಪದ್ಧತಿಯಿಂದ ಎಂದರೆ ಪರಂಪರಾಗತ ಕುಲವೃತ್ತಿಯ ಪಾಲನೆಯಿಂದ ಸಾಮಾಜಿಕ ಸಂಬಂಧದ ಹೊಂದಾಣಿಕೆ ಮಾಡಹೊರಟರೆ ಈ ಎರಡುಅನಿಷ್ಟಗಳನ್ನು ತಪ್ಪಿಸಲಾದೀತೆ? +ಆಗದೆಂದೇ ನನಗೆ ಮನವರಿಕೆ. +ಸಾಮಾಜಿಕ ಹೊಂದಾಣಿಕೆಯ ಮುಖ್ಯತತ್ವಗಳಾದ ಸಮಾನತೆ ಹಾಗೂ ಪರಿವರ್ತನಶೀಲತೆ ಇವೆರಡಕ್ಕೂ ವಿರೋಧವೊಡ್ಡುವುದಾದ್ದರಿಂದ ಇದು ಹೊಂದಾಣಿಕೆಯ ಉತ್ತಮ ಉಪಾಯವಾಗುವುದಿಲ್ಲ. +ಬದಲಿಗೆ ಅತ್ಯಂತ ಕೆಟ್ಟ ಉಪಾಯವಾಗುತ್ತದೆ. +ಜಾತಿಯನ್ನು ಅಲ್ಲಗಳೆದು ವರ್ಣದಲ್ಲಿ ಮಾತ್ರ ಶ್ರದ್ಧೆ ತಾಳಿರುವುದರಿಂದ ಮಹಾತ್ಮರು ಪ್ರಗತಿ ಸಾಧಿಸಿದ್ದಾರೆಂದು ತೋರಬಹುದು. +ಒಂದು ಕಾಲಕ್ಕೆ ಈ ಮಹಾತ್ಮರು ಕಟ್ಟಾ ಸನಾತನಿ ಹಿಂದೂವಾಗಿದ್ದರೆಂಬುದು ಸತ್ಯ. +ವೇದ, ಉಪನಿಷತ್ತು,ಪುರಾಣಗಳು, ಹೀಗೆ ಹಿಂದೂ ಧರ್ಮಗ್ರಂಥಗಳೆಂದು ಯಾವಯಾವುದಕ್ಕೆಹೆಸರಿದೆಯೊ ಅಂತಹ ಎಲ್ಲವುಗಳಲ್ಲಿಯೂ ಅವರಿಗೆ ನಂಬಿಕೆಯಿತ್ತು. +ಅದರಿಂದಾಗಿ ಅವತಾರಗಳನ್ನೂ ಪುನರ್ಜನ್ಮಗಳನ್ನೂ ಅವರು ನಂಬಿದ್ದರು. +ಜಾತಿಪದ್ಧತಿಯಲ್ಲಿ ಶ್ರದ್ಧೆಯಿಟ್ಟುಕೊಂಡು ಸಂಪ್ರದಾಯ ಶೀಲರಂತೆ ಜೋರಾಗಿ ಅದನ್ನು ಸಮರ್ಥಿಸುತ್ತಿದ್ದರು. +ಬೇರೆ ಜಾತಿಯವರೊಡನೆ ಊಟ, ಜಲಪಾನ, ಮದುವೆಗಳ ಬೇಡಿಕೆಗಳನ್ನು ಖಂಡಿಸುತ್ತಿದ್ದರು. +ಅಂತರ್ಜಾತೀಯ ಭೋಜನ ನಿಷೇಧವು "ಸಂಕಲ್ಪ ಬಲದ ಸಂವರ್ಧನೆಗೂಕೆಲವು ಸಾಮಾಜಿಕ ಸದ್ಗುಣ ರಕ್ಷಣೆಗೂ ಸಹಾಯಕಾರಿ'ಯೆಂದು ವಾದಿಸುತ್ತಿದ್ದರು. +ಈ ಡಂಭಾಚಾರದ ಹುಚ್ಚು ವಿವರಗಳನ್ನೆಲ್ಲ ಈಗ ಅವರು ಖಂಡಿಸಿರುವುದು ಒಳ್ಳೆಯದು. +ಜಾತಿಪದ್ಧತಿಯು ಆಧ್ಯಾತ್ಮಿಕ ಹಾಗೂ ರಾಷ್ಟೀಯ ಅಭಿವೃದ್ಧಿಗೆ ಆತಂಕಕಾರಿಯೆಂದು ಅವರು ಒಪ್ಪಿರುವುದೂ ಒಳ್ಳೆಯದೆ. +ಅವರ ಮಗ ಅಂತರ್ಜಾತೀಯ ವಿವಾಹ ಮಾಡಿಕೊಂಡಿದ್ದು ಈ ಪರಿವರ್ತನೆಗೆ ಸಂಬಂಧಿಸಿಯೋ ಏನೋ. +ಆದರೆ ಮಹಾತ್ಮರು ನಿಜವಾಗಿಯೂ ಪ್ರಗತಿ ಹೊಂದಿದ್ದಾರೆಯೇ? +ಮಹಾತ್ಮರು ಎತ್ತಿ ಹಿಡಿಯುವ ಈ ವರ್ಣವೆಂತಹುದು? +ಸ್ವಾಮಿ ದಯಾನಂದಸರಸ್ವತಿ ಹಾಗೂ ಅವರ ಅನುಯಾಯಿಗಳಾದ ಆರ್ಯ ಸಮಾಜಿಗಳು ಬೋಧಿಸುವ ವೈದಿಕ ವರ್ಣವೆ. +ವ್ಯಕ್ತಿಯ ನೈಸರ್ಗಿಕ ಪ್ರವೃತ್ತಿ ಅಥವಾ ಸಾಮರ್ಥ್ಯಕ್ಕೆ ಅನುಗುಣವಾದ ವೃತ್ತಿಯನ್ನು ಅನುಸರಿಸಬೇಕೆಂಬುದು ವೈದಿಕ ವರ್ಣದ ಮುಖ್ಯ ತತ್ವ . +ನೈಸರ್ಗಿಕ ಪ್ರವೃತ್ತಿಗೆ ಅನುಕೂಲವಾಗಲಿ ಬಿಡಲಿ, ಪರಂಪರಾಗತವಾದ ಕುಲವೃತ್ತಿಯನ್ನೇ ಅನುಸರಿಸಬೇಕೆಂಬುದು ಮಹಾತ್ಮರ ವರ್ಣಕ್ಕಿರುವ ಮುಖ್ಯ ತತ್ವ . +ಮಹಾತ್ಮರ ಮೇರೆಗೆ ವರ್ಣ ಮತ್ತು ಜಾತಿ ಇವೆರಡರ ಅಂತರವೇನು? +ಏನೂ ಇದ್ದಂತೆ ತೋರುವುದಿಲ್ಲ. +ಮಹಾತ್ಮರು ನೀಡುವ ವ್ಯಾಖ್ಯೆಯ ಮೇರೆಗೆ ವರ್ಣವೆಂಬುದು ಜಾತಿಯ ಇನ್ನೊಂದು ಹೆಸರಾಗುತ್ತದೆ. +ಹೀಗಿರುವುದರಿಂದ ಮಹಾತ್ಮರು ಪ್ರಗತಿ ಹೊಂದುವುದಕ್ಕೆ ಬದಲಾಗಿ ಹಿಂಚಲನೆಯನ್ನು ಹೊಂದಿದ್ದಾರೆ. +ವೈದಿಕ ವರ್ಣಕ್ಕೆ ಇದ್ದ ಉದಾತ್ತ ಕಲ್ಪನೆಯನ್ನು ವಿದ್ರೂಪಗೊಳಿಸಿ ಮಹಾತ್ಮರು ತಮ್ಮ ಅರ್ಥವಿವರಣೆಯಿಂದ ಅದನ್ನು ಹಾಸ್ಯಾಸ್ಪದವಾಗುವಂತೆ ಮಾಡಿದ್ದಾರೆ. +ವರ್ಣವ್ಯವಸ್ಥೆಯನ್ನು ನಾನು ತಿರಸ್ಕರಿಸುತ್ತಿದ್ದು ಅದಕ್ಕೆ ಕಾರಣಗಳೇನೆಂದು ನನ್ನ ಉಪನ್ಯಾಸದಲ್ಲಿ ವಿವರಿಸಿದ್ದೇನೆ. +ಹಾಗಿದ್ದರೂ ಕೂಡ, ಸ್ವಾಮಿ ದಯಾನಂದರೇ ಮೊದಲಾದವರು ವೈದಿಕ ವರ್ಣಕ್ಕೆ ನೀಡುವ ಅರ್ಥ ವಿವರಣೆ ಸಮಂಜಸವೂ ಆಕ್ಷೇಪರಹಿತವೂ ಆಗಿದೆಯೆಂದು ನಾನು ಒಪ್ಪಲೇಬೇಕು. +ಸಮಾಜದಲ್ಲಿ ವ್ಯಕ್ತಿಯ ಸ್ಥಾನವನ್ನು ಗೊತ್ತುಪಡಿಸುವಾಗ ಅವನ ಜನ್ಮವನ್ನೇ ಆಧಾರವಾಗಿ ಹಿಡಿಯಲು ಅದು ಅವಕಾಶವೀಯುತ್ತಿರಲಿಲ್ಲ. +ವ್ಯಕ್ತಿಯ ಯೋಗ್ಯತೆಯನ್ನಪ್ಟೆ ಅದು ಮನ್ನಸುತ್ತಿತ್ತು ಮಹಾತ್ಮರು ವರ್ಣಕ್ಕೆ ಕೊಡುವ ಅರ್ಥವಿವರಣೆ ವೈದಿಕ ವರ್ಣದ ವಿಪರ್ಯಾಸವಾಗಿದ್ದು ಅಸಹ್ಯವೂ ಆಗಿದೆ. +ವರ್ಣ ಮತ್ತುಜಾತಿ ಎರಡೂ ಸಂಪೂರ್ಣವಾಗಿ ಭಿನ್ನ ಪರಿಕಲ್ಪನೆಗಳು. +ವರ್ಣವು ವ್ಯಕ್ತಿಯ ಯೋಗ್ಯತೆಯನ್ನು ಆಧಾರವಾಗಿಟ್ಟು ಕೊಳ್ಳುತ್ತದೆ. + ಜಾತಿಯು ವ್ಯಕ್ತಿಯ ಜನ್ಮವನ್ನು ಆಧರಿಸುತ್ತದೆ. +ಇವೆರಡೂ ಭಿನ್ನವೆಂಬುದಷ್ಟೇ ಅಲ್ಲ, ಪರಸ್ಪರ ವಿರುದ್ಧವೂ ಆಗಿದೆ. +ಪ್ರತಿಯೊಬ್ಬರೂ ತಮ್ಮ ತಮ್ಮ ಕುಲವೃತ್ತಿಯನ್ನು ಅನುಸರಿಸಬೇಕೆಂಬುದರಲ್ಲಿ ಮಹಾತ್ಮರಿಗೆ ನಂಬಿಕೆಯಿರುವುದಾದರೆ ಅವರು ಜಾತಿ ಪದ್ಧತಿಯ ಪ್ರಚಾರವನ್ನೇ ಮಾಡುತ್ತಿದ್ದಾರೆಂದಾಯಿತು. +ಮತ್ತು ಅದನ್ನು ವರ್ಣವ್ಯವಸ್ಥೆಯೆಂದು ಅವರು ಹೇಳುತ್ತಿರುವುದು ಸುಳ್ಳು ಮಾತ್ರವಲ್ಲದೆ ಗೊಂದಲ ಗೆಟ್ಟವಿಚಾರವನ್ನು ಇನ್ನಷ್ಟು ಗೊಂದಲಗೆಡಿಸಿದಂತಾಗಿದೆ. +ಅವರ ಈ ಗೊಂದಲಗೆಟ್ಟ ವಿಚಾರಕ್ಕೆ ಕಾರಣವೇನೆಂದರೆ ವರ್ಣ ಯಾವುದು ಹಾಗೂ ಜಾತಿ ಯಾವುದು ಎಂಬುದರ ಸ್ಪಷ್ಟ ಹಾಗೂ ಖಚಿತ ಜ್ಞಾನ ಅವರಿಗಿಲ್ಲ; +ಹಿಂದೂ ಧರ್ಮದ ರಕ್ಷಣೆಗೆ ಅವುಗಳಲ್ಲಿ ಯಾವುದು ಅವಶ್ಯಕವೆಂಬ ನಿಶ್ಚಿತ ಅರಿವು ಅವರಲ್ಲಿಲ್ಲ. +ಜಾತಿಹಿಂದೂ ಧರ್ಮದ ತತ್ವವಲ್ಲವೆಂದು ಅವರು ಹೇಳಿದ್ದಾರೆ. +ಈ ಅಭಿಪ್ರಾಯವನ್ನು ಕೂಡ ಬದಲಿಸುವುದಕ್ಕೆ ಒಂದು ರಹಸ್ಯ ಕಾರಣ ಅವರಿಗೆ ಕಂಡುಬರಲಿಕ್ಕಿಲ್ಲವೆಂದು ಹಾರೈಸೋಣ. +ಹಾಗಾದರೆ ವರ್ಣವೆಂಬುದು ಹಿಂದೂಧರ್ಮದ ಮೂಲ ತತ್ವವೇ? +ಇದಕ್ಕೆ ಸ್ಪಷ್ಟ ಉತ್ತರ ಸಾಧ್ಯವಿಲ್ಲ. +“ಡಾಕ್ಟರ್‌ ಅಂಬೇಡ್ಕರ್‌ ಅವರದೋಷಾರೋಪಣೆ" ಎಂಬ ಅವರ ಲೇಖನವನ್ನೋದಿದವರು “ಇಲ್ಲ' ಎಂದೇ ಉತ್ತರಿಸುವರು. +ವರ್ಣವು ಹಿಂದೂ ಧರ್ಮದ ಸಾರಭೂತವಾದ ಅಂಗವೆಂದು ಈ ಲೇಖನದಲ್ಲಿ ಅವರು ಹೇಳಿಲ್ಲ. +ಅದಕ್ಕೆ ಬದಲಾಗಿಅವರು ಹೇಳಿರುವುದು ಹೀಗೆ : “ಒಂದೂ ಧರ್ಮದ ಮೂಲ ತತ್ವವೆಂದರೆ ಸತ್ಯಸ್ತರೂಪನಾದ ಒಬ್ಬನೇ ಒಬ್ಬ ದೇವರಿದ್ದಾನೆ ಎಂಬುದು ಮತ್ತು ಮಾನವ ಕುಟುಂಬದ ಧರ್ಮ ಅಹಿಂಸೆಯೆಂಬುದು”. +ಆದರೆ ಶ್ರೀಸಂತರಾಮರಿಗೆ ಉತ್ತರವಾಗಿ ಬರೆದ ಲೇಖನವನ್ನು ಓದಿದವರು "ಹೌದು' ಎನ್ನುವರು. +ಆ ಲೇಖನದಲ್ಲಿ ಅವರು ಹೀಗೆಂದಿದ್ದಾರೆ : “ಕುರಾನ್‌ನನ್ನು ಒಪ್ಪದವನು ಮುಸಲ್ಮಾನನಾಗಿ ಉಳಿಯುವುದು ಸಾಧ್ಯವೆ? +ಬೈಬಲ್ಲನ್ನು ನಿರಾಕರಿಸಿದವನು ಕ್ರೈಸ್ತನಾಗಿ ಉಳಿಯುವುದು ಸಾಧ್ಯವೆ? +ವರ್ಣ ಹಾಗೂ ಜಾತಿ ಎರಡೂ ಒಂದೇ ಆಗಿದ್ದ ಪಕ್ಷದಲ್ಲಿ ಮತ್ತು ವರ್ಣವು ಹಿಂದೂ ಧರ್ಮಶಾಸ್ತ್ರಗಳ ಅಖಂಡ ಭಾಗವಾಗಿದ್ದರೆ, ವರ್ಣ ಅಥವಾ ಜಾತಿಯನ್ನು ನಿರಾಕರಿಸುವವರು ತಮ್ಮನ್ನು ಹಿಂದೂಗಳೆಂದು ಅವರು ಹೇಗೆ ಕರೆದುಕೊಳ್ಳಬಲ್ಲರೋನಾನರಿಯೆ”. +ನುಣುಚಿಕೊಳ್ಳುವಂತೆ ಈ ಬಗೆಯ ಸಂದಿಗ್ಧ ಮಾತುಗಳೇಕೆ? +ಮಹಾತ್ಮರು ಯಾರ ಕೈಗೂಸಿಕ್ಕದಂತೆ ಪ್ರಯತ್ನಿಸುವುದೇಕೆ? +ಯಾರನ್ನು ಮೆಚ್ಚಿಸ ಬಯಸುತ್ತಾರೆ? +ಈ ಸಂತರಿಗೆ ಸತ್ಯ ಹೊಳೆದಿಲ್ಲವೆ? +ಅಥವಾ ಸಂತನ ಕಾಣ್ಕೆಗೆ ರಾಜಕಾರಣಿ ಅಡ್ಡವಾಗಿ ನಿಂತಿದ್ದಾನೆಯೆ? +ಮಹಾತ್ಮರಿಗೆ ಉಂಟಾಗಿರುವ ಈ ಗೊಂದಲಗೇಡು ಬಹುಶಃ ಎರಡು ಕಾರಣಗಳಿಂದ ಎಂದು ತೋರುತ್ತದೆ. +ಮೊದಲನೆಯದು ಮಹಾತ್ಮರ ಸ್ವಭಾವ. +ಪ್ರತಿಯೊಂದು ವಿಷಯದಲ್ಲಿ ಅವರಿಗೆ ಮಗುವಿನ ಮುಗ್ಧತೆಯಿರುತ್ತದೆ; +ಆತ್ಮವಂಚನೆ ಮಾಡಿಕೊಳ್ಳುವ ಮಗುವಿನ ಸ್ವಭಾವ ಇರುತ್ತದೆ. +ಮಗುವಿನಂತೆ ಅವರು ತಮಗೆ ನಂಬಬೇಕೆಂದು ಅನ್ನಿಸಿದ್ದನ್ನು ನಂಬಿಬಿಡುತ್ತಾರೆ. +ಜಾತಿಯಲ್ಲಿಯ ನಂಬಿಕೆಯನ್ನು ಬಿಟ್ಟಂತೆ ವರ್ಣದಲ್ಲಿಯ ನಂಬಿಕೆಯನ್ನು ಬಿಡಬೇಕೆಂದು ಅನ್ನಿಸುವವರೆಗೆ ಮಹಾತ್ಮರು ಅದನ್ನು ತೊರೆಯಲಾರರು. +ಅಲ್ಲಿಯವರೆಗೆ ನಾವು ಕಾಯಬೇಕು. +ಎರಡನೆಯ ಕಾರಣವೆಂದರೆ ಮಹಾತ್ಮರು ಆಡಬಯಸಿದ ದ್ವಿಪಾತ್ರ, ಮಹಾತ್ಮಾ ಮತ್ತು ರಾಜಕಾರಣಿ ಎರಡೂ ಆಗಬೇಕೆನ್ನುತ್ತಾರೆ. +ಮಹಾತ್ಮರಾಗಿ ನಿಂತು ರಾಜಕಾರಣಿಯನ್ನು ಆಧ್ಯಾತ್ಮಿಕ ಪ್ರಭಾವಕ್ಕೆ ಒಳಪಡಿಸಲು ಅವರು ಪ್ರಯತ್ನಿಸುತ್ತಾ ಇರಬಹುದು. +ಅದರಲ್ಲಿ ಅವರಿಗೆ ಸಿದ್ಧಿಯಾಗಿದೆಯೋ ಇಲ್ಲವೋ ತಿಳಿಯದು. +ಆದರೆ ರಾಜಕಾರಣ ಅವರನ್ನು ನಿಶ್ಚಿತವಾಗಿಯೂ ವ್ಯವಹಾರ ಕುಶಲಿಯಾಗಿ ಮಾರ್ಪಡಿಸಿದೆ. +ಸಮಾಜವು ಸಮಗ್ರ ಸತ್ಯವನ್ನು ನುಡಿಯಲಾಗದು. +ಸಮಗ್ರ ಸತ್ಯವನ್ನು ಆಡುತ್ತಿದ್ದರೆ ತನ್ನ ರಾಜಕಾರಣಕ್ಕೆ ಅದು ಲೇಸಲ್ಲ. +ರಾಜಕಾರಣಿ ಇದನ್ನು ಚೆನ್ನಾಗಿ ಅರಿತುಕೊಂಡಿರಬೇಕು. +ಜಾತಿ, ವರ್ಣವನ್ನು ಮಹಾತ್ಮರು ಯವಾಗಲೂ ಸಮರ್ಥಿಸುವುದೇಕೆಂದು ಈಗ ತಿಳಿಯಿತಲ್ಲವೆ? +ಅವುಗಳನ್ನು ವಿರೋಧಿಸಿದರೆ ರಾಜಕಾರಣದಲ್ಲಿ ತಮಗೆ ಸ್ಥಾನ ಉಳಿಯದು. +ಅದೇನೇ ಇರಲಿ ವರ್ಣದ ಹೆಸರಿನಿಂದ ಜಾತಿಯನ್ನು ಸಮರ್ಥಿಸುವಲ್ಲಿ ಅತ್ಮವಂಚನೆಯ ಜೊತೆಗೆ ಪರಮ ವಂಚನೆಯನ್ನೂ ಮಾಡುತ್ತಿದ್ದೀರೆಂದು ಮಹಾತ್ಮರಿಗೆ ನಾವು ಹೇಳಲೇಬೇಕಾಗಿದೆ. +ಹಿಂದೂಗಳು ಹಾಗೂ ಹಿಂದೂ ಧರ್ಮ ಇವೆರಡಕ್ಕೂ ನಾನು ಅನ್ವಯಿಸಿದ ಅಳತೆಗೋಲು ತೀರಕಠೋರವೆಂದೂ, ಆ ಮಾಪಕದಿಂದ ಅಳೆಯ ಹೊರಟರೆ ಈಗಿರುವ ಯಾವ ಧರ್ಮವೂ ಸಮರ್ಪಕವಾಗಲಾರದೆಂದೂ ಮಹಾತ್ಮರು ಹೇಳುತ್ತಾರೆ. +ನಾನು ಬಳಸಿದ ಮಾನದಂಡ ಉನ್ನತವೆಂಬುದು ನಿಜವಾಗಿರಬಹುದು. +ಆದರೆ ಅದು ದೊಡ್ಡದೋ ಚಿಕ್ಕದೋ ಎಂಬುದು ಪ್ರಶ್ನೆಯಲ್ಲ. +ಆ ಮಾಪಕಗಳು ಯೋಗ್ಯವೇ ಅಲ್ಲವೇ ಎಂಬುದು ಮುಖ್ಯ ಪ್ರಶ್ನೆ ಒಂದು ಜನತೆ ಮತ್ತು ಅವರ ಧರ್ಮ ಇವೆರಡನ್ನು ಸಾಮಾಜಿಕ ನೀತಿಯನ್ನಾಧರಿಸಿದ ಸಾಮಾಜಿಕ ಮಟ್ಟದಿಂದಲೇ ಬೆಲೆ ಕಟ್ಟಬೇಕಾಗಿತ್ತದೆ. +ಜನರ ಕಲ್ಯಾಣ ಜೀವನಕ್ಕೆಧರ್ಮವೊಂದು ಅವಶ್ಯಕ ಘಟಕವಾಗಿದ್ದರೆ ಇದನ್ನು ಬಿಟ್ಟು ಬೇರೆ ಯಾವ ಪ್ರಮಾಣವೂ ಅಗತ್ಯವಾಗದು. +ಹಿಂದೂಗಳು ಹಾಗೂ ಹಿಂದೂಧರ್ಮ ಇವೆರಡರ ಯೋಗ್ಯತೆಯನ್ನು ಅಳೆಯಲು ನಾನು ಉಪಯೋಗಿಸಿದ ಮಾನದಂಡ ಅತ್ಯಂತ ಸಮರ್ಪಕವೆಂದೇ ನಾನು ಸಾಧಿಸುತ್ತೇನೆ. +ಅದಕ್ಕಿಂತ ಉತ್ತಮವಾದುದು ನನಗೆ ಗೊತ್ತಿಲ್ಲ. +ನನ್ನ ಮಾನದಂಡದಿಂದ ಅಳೆದರೆ ಗೊತ್ತಿರುವ ಪ್ರತಿಯೊಂದು ಧರ್ಮವೂ ಅದಕ್ಕೆ ನಿಲುಕದೆ ಸೋತು ಹೋಗುವುದೆಂಬುದು ನಿಜವಾಗಿರಬಹುದು. +ಆದರೆ ಹಿಂದೂಗಳ ಹಾಗೂ ಹಿಂದೂಧರ್ಮದ ಮುಂದಾಳಾಗಿ ನಿಂತ ಮಹಾತ್ಮರಿಗೆ ಇದು ನೆಮ್ಮದಿಯ ಕಾರಣವಾಗಕೂಡದು. +ಇನ್ನೊಬ್ಬ ಹುಚ್ಚನಿದ್ದಾನೆಂದು ಹುಚ್ಚನಿಗೆ ಸಮಾಧಾನವೆ? +ಹಿಂದೂಗಳ ಹಾಗೂ ಹಿಂದೂ ಧರ್ಮ ಇವೆರಡೂ ಸಮರ್ಪಕವಾದ ಮಟ್ಟದಲ್ಲಿ ಇಲ್ಲವೆಂಬ ಒಂದೇ ಒಂದು ಕಾರಣದಿಂದ ಜಿಗುಪ್ಸೆ ಮತ್ತು ತಿರಸ್ಕಾರ (ಇವೆರಡೂ ನನ್ನಲ್ಲಿವೆ ಎಂದೇ ಆರೋಪಿಸಲಾಗಿದೆ) ಹುಟ್ಟಲಿಲ್ಲ. +ಈ ಮಾತನ್ನು ಮಹಾತ್ಮರಿಗೆ ನಾನು ಖಂಡಿತವಾಗಿ ಹೇಳಬಯಸುತ್ತೇನೆ. +ಜಗತ್ತು ತುಂಬ ದೋಷಯುಕ್ತವಾಗಿದೆಯೆಂದೂ, ಅದರಲ್ಲಿ ಇರಬಯಸುವವರು ಆ ಎಲ್ಲಾ ದೋಷಗಳನ್ನು ಸಹಿಸಿಕೊಳ್ಳಬೇಕೆಂದೂ ನಾನು ಅರಿತಿದ್ದೇನೆ. +ನಾನು ಇರಬೇಕಾಗಿ ಬಂದ ಸಮಾಜದಲ್ಲಿ ಅದರ ದೋಷಗಳನ್ನು ನ್ಯೂನತೆಗಳನ್ನು ಸಹಿಸಲು ಸಿದ್ಧನಾಗಿದ್ದೇನೆ. +ಆದರೆ ತಪ್ಪು ಆದರ್ಶಗಳನ್ನೇ ಎತ್ತಿ ಹಿಡಿಯುವ ಅಥವಾ ಸರಿಯಾದ ಆದರ್ಶಗಳನ್ನಿಟ್ಟುಕೊಂಡು ಕೂಡ ಅದಕ್ಕೆ ಅನುಗುಣವಾಗಿ ತನ್ನ ಜೀವನವನ್ನು ತಿದ್ದಿಕೊಳ್ಳಲೊಲ್ಲದ ಸಮಾಜದಲ್ಲಿ ಬದುಕಲು ನಾನು ಒಪ್ಪಲಾರೆ. +ಹಿಂದೂಗಳೂ ಹಾಗೂ ಹಿಂದೂ ಧರ್ಮ ಇವೆರಡರ ಬಗೆಗೂ ನಾನು ಜಿಗುಪ್ಸೆ ಹೊಂದಿದ್ದರೆ ಅವುಗಳು ತಪ್ಪು ಆದರ್ಶಗಳನ್ನಿಟ್ಟುಕೊಂಡು ಅಯೋಗ್ಯವಾದ ಸಾಮಾಜಿಕ ಜೀವನವನ್ನು ನಡೆಸುತ್ತಿರುವುದೇ ಅದಕ್ಕೆ ಕಾರಣವಾಗಿದೆ. +ಹಿಂದೂಗಳು ಹಾಗೂ ಹಿಂದೂ ಧರ್ಮದ ಜೊತೆಗಿರುವ ನನ್ನ ಜಗಳಕ್ಕೆ ಅವುಗಳ ಸಾಮಾಜಿಕ ನಡವಳಿಕೆಯ ನ್ಯೂನತೆ ಕಾರಣವಲ್ಲ, ಇನ್ನೂ ಆಳವಾದ ಮೂಲಭೂತ ಕಾರಣವಿದೆ. +ಅದು ಅವರ ಆದರ್ಶಗಳ ವಿಚಾರಕ್ಕೆ ಸೇರಿದ್ದು. +ಹಿಂದೂ ಸಮಾಜಕ್ಕೆ ನೈತಿಕ ಪುನರ್ಜನ್ಮ ಈಗ ಅತ್ಯಂತ ಅವಶ್ಯಕವೆಂದು ನನಗೆ ತೋರುತ್ತದೆ. +ಇದನ್ನು ಈಗಲೇ ಸಾಧಿಸದೆ ಮುಂದೂಡುವುದು ಅಪಾಯಕಾರಿಯಾದೀತು. +ಈ ಪುನರ್ಜನ್ಮ ಅಥವಾ ಪುನರುದ್ಧಾರವನ್ನು ನಿರ್ಧರಿಸುವವರು ಹಾಗೂ ನಿಯಂತ್ರಿಸುವವರು ಯಾರು ಎಂಬುದು ಪ್ರಶ್ನೆ. +ಬೌದ್ಧಿಕ ಪುನರ್ಜನ್ಮವನ್ನು ಪಡೆದು, ಬೌದ್ಧಿಕ ಧೈರ್ಯ ತೋರುವ ಪ್ರಾಮಾಣಿಕತೆ ಇದ್ದವರು ಈ ಕಾರ್ಯ ಮಾಡಬಲ್ಲರು. +ಈ ಮಾನದಂಡದಿಂದ ಅಳೆದು ನೋಡಿದಾಗ ಈಗ ಹಿಂದೂ ಮುಂದಾಳುಗಳೆನಿಸಿಕೊಂಡವರು ಈ ಮಹಾಕಾರ್ಯಕ್ಕೆ ಅನರ್ಹರೆಂದು ನನ್ನ ಅಭಿಪ್ರಾಯ. +ಪೂರ್ವಭಾವಿಯಾಗಿ ಹೊಂದಿರಬೇಕಾದ ಬೌದ್ಧಿಕ ಪುನರ್ಜನ್ಮವನ್ನು ಅವರು ಹೊಂದಿಲ್ಲ. +ಹಾಗೆ ಹೊಂದಿದವರೇ ಆಗಿದ್ದ ಪಕ್ಷದಲ್ಲಿ ಅಶಿಕ್ಷಿತ ಜನಸಮೂಹದಂತೆ ತಾವೇ ಮೋಸ ಮಾಡಿಕೊಳ್ಳುತ್ತಿರಲಿಲ್ಲ. + ಈಗ ಅವರು ಮಾಡುತ್ತಿರುವಂತೆ ಜನತೆಯ ಅಜ್ಞಾನವನ್ನು ದುರುಪಯೋಗ ಪಡಿಸಿಕೊಳ್ಳುತ್ತಲೂ ಇರಲಿಲ್ಲ. +ಹಿಂದೂ ಸಮಾಜ ಅಭದ್ರವಾಗಿ ಮುರಿದುಬೀಳುತ್ತಿದ್ದರೂ ಈ ಮುಂದಾಳುಗಳು ಪ್ರಸಕ್ತ ಕಾಲಕ್ಕೆ ಸಂಬಂಧವಿಲ್ಲದ ಪ್ರಾಚೀನ ಆದರ್ಶಗಳನ್ನೇ ಬೋಧಿಸುತ್ತಲಿದ್ದಾರೆ. +ಸಮಾಜದ ಬುನಾದಿಯೇನೆಂದು ಪರೀಕ್ಷಿಸುವುದಕ್ಕೆ ಅವರು ಬಲ್ಲರು, ಆದರೆ ಅದನ್ನು ವಿರೋಧಿಸುತ್ತಾರೆ. +ಹಿಂದೂ ಜನ ಸಮೂಹ ತನ್ನ ನಂಬಿಕೆಗಳ ಬಗೆಗೆ ಅತ್ಯಂತ ಅಜಾಗರೂಕವಾಗಿದೆ. +ಮುಂದಾಳುಗಳೂ ಹಾಗೆಯೇ ಇದ್ದಾರೆ. +ಆದರೆ ಈ ನಂಬಿಕೆಗಳನ್ನು ಅಲ್ಲಗಳೆಯುವುದಕ್ಕೆ ಯಾರಾದರೂ ಪ್ರಯತ್ನಿಸಿದರೆ ಮಾತ್ರ ಈ ಮುಂದಾಳುಗಳು ಆ ನಂಬಿಕೆಗಳ ಬಗೆಗೆ ಆವೇಶ ತಾಳುತ್ತಾರೆ. +ಮಹಾತ್ಮಾಜಿ ಕೂಡ ಇದಕ್ಕೆ ಅಪವಾದವಾಗಿಲ್ಲ. +ಸ್ವತಂತ್ರ ವಿಚಾರದಲ್ಲಿ ಅವರಿಗೆ ನಂಬಿಕೆಯಿದ್ದಂತೆ ತೋರುವುದಿಲ್ಲ. +ಸಾಧುಸಂತರನ್ನುಅನುಸರಿಸುವುದೇ ಮೇಲೆಂದು ಅವರಿಗೆ ತೋರುತ್ತದೆ. +ಪವಿತ್ರವಾದ ಕೆಲವು ಕಲ್ಪನೆಗಳನ್ನು ಗೌರವಿಸುತ್ತಬಂದ ಸಂಂಪ್ರದಾಯವಾದಿಯಂತಿರುವ ಈ ಮಹಾತ್ಮರು ವಿಚಾರ ಮಾಡಲು ತೊಡಗಿದರೆ ಅವರು ಈವರೆಗೆ ಪಾಲಿಸಿಕೊಂಡು ಬಂದಿರುವ ಅನೇಕ ಆದರ್ಶಗಳಿಗೂ ವ್ಯವಸ್ಥೆಗಳಿಗೂ ಸಮಾಧಿ ಆಗುವುದಲ್ಲವೆ? +ಅವರು ಮರುಕಕ್ಕೆ ಪಾತ್ರರಾಗಿದ್ದಾರೆ. +ಸ್ವತಂತ್ರ ವಿಜಾರದ ಪ್ರತಿಯೊಂದು ಕ್ರಿಯೆಯೂ ಜಗತ್ತಿನ ಸುಭದ್ರವಾದ ಸ್ಥಿತಿ ಎನ್ನುವುದಕ್ಕೆ ಆಪತ್ತನ್ನು ಒದಗಿಸುತ್ತದೆ. +ಸಾಧುಸಂತರನ್ನು ನಂಬಿಕೊಂಡು ಕುಳಿತರೆ ನಾವು ಸತ್ಯದ ಬಳಿಗೆ ಸಾಗಲಾರೆವು. +ಸಾಧುಸಂತರು ಕೂಡ ಮನುಷ್ಯ ಮಾತ್ರರು. +ಲಾರ್ಡ್‌ ಬಲ್‌ಫೂರ್‌ ಹೇಳುವ ಹಾಗೆ,“ಸತ್ಯ ಶೋಧನೆಗೆ ಮನುಷ್ಯನ ಮನಸ್ಸು ಹಂದಿಯ ಮೂತಿಯಷ್ಟೂ ಒಳ್ಳೆಯ ಸಾಧನವಲ್ಲ”. +ಮಹಾತ್ಮರು ವಿಚಾರ ಮಾಡುತ್ತಲೇ ಇದ್ದಲ್ಲಿ, ಪುರಾತನ ಸಮಾಜದ ಸ್ಪರೂಪವನ್ನು ಸಮರ್ಥಿಸುವುದಲ್ಲಿ ಅವರು ತಮ್ಮ ಬುದ್ಧಿಯ ದುರುಪಯೋಗವನ್ನು ಮಾಡುತ್ತಿದ್ದಾರೆಂದು ತೋರುತ್ತದೆ. +ಪ್ರಭಾವಶಾಲಿ ಪ್ರತಿಪಾದಕರಾಗಿರುವುದಕ್ಕೇ ಅವರು ಹಿಂದೂಗಳ ಪರಮ ಶತ್ರುಗಳು. +ಈ ಮಹಾತ್ಮರಲ್ಲದೆ ಇನ್ನೂ ಕೆಲವು ಮುಖಂಡರಿದ್ದಾರೆ, ಸುಮ್ಮನೆ ಕಣ್ಣಮುಚ್ಚಿ ನಂಬಿಕೆಯಿಂದ ಅನುಸರಿಸಿಕೊಂಡು ಹೋಗುವವರಲ್ಲ ಇವರು. +ವಿಚಾರ ಮಾಡುವ ಧೈರ್ಯವುಳ್ಳವರು. +ವಿಚಾರದಿಂದ ಕಂಡುಕೊಂಡ ಮಾರ್ಗದಲ್ಲಿ ಮುನ್ನಡೆಯುವವರು. +ಆದರೆ ಜನಸಾಮಾನ್ಯರಿಗೆ ಮಾರ್ಗದರ್ಶನದ ಪ್ರಸಂಗ ಬಂದಾಗ ಮಾತ್ರ ಇವರು ಅಪ್ರಮಾಣಿಕರಾಗುತ್ತಾರೆ ಅಥವಾ ಉದಾಸೀನರಾಗುತ್ತಾರೆ. +ಇದು ದುರ್ದೈವದ ಸಂಗತಿ. +ಬಹುಶಃ ಪ್ರತಿಯೊಬ್ಬ ಬ್ರಾಹ್ಮಣನೂ ಜಾತಿಯ ನಿಯಮವನ್ನು ಉಲ್ಲಂಫಿಸಿದ್ದಾನೆ. +ಪೌರೋಹಿತ್ಯ ನಡೆಸದ ಬ್ರಾಹ್ಮಣರ ಸಂಖ್ಯೆ ತೀರ ದೊಡ್ಡದಾಗಿದೆ. +ತಮ್ಮ ಕುಲವೃತ್ತಿಯಾದ ಪೂಜೆ ಪೌರೋಹಿತ್ಕ್ಯಗಳನ್ನು ಬಿಟ್ಟಿದ್ದಾರೆಂಬುದಷ್ಟೆ ಅಲ್ಲದೆ ಬ್ರಾಹ್ಮಣರು ಶಾಸ್ತ್ರಗಳಲ್ಲಿ ನಿಷಿದ್ಧವೆಂದು ಹೇಳಿದ ವೃತ್ತಿಗಳನ್ನು ಕೂಡ ಕೈಗೊಂಡು ನಡೆಸುತ್ತಾ ಇದ್ದಾರೆ. +ಹೀಗೆ ಪ್ರತಿದಿನ ಜಾತಿ ನಿಯಮವನ್ನು ಮುರಿಯುತ್ತಿರುವ ಬ್ರಾಹ್ಮಣರಲ್ಲಿ ಎಷ್ಟು ಜನಜಾತಿಯನ್ನು ಹಾಗೂ ಶಾಸ್ತ್ರಗಳನ್ನು ತೊರೆಯಲು ಬೋಧಿಸುತ್ತಾರೆ. +ಜಾತಿ ಶಾಸ್ತ್ರಗಳನ್ನು ವಿರೋಧಿಸಿ ಮಾತನಾಡುವ ಒಬ್ಬ ಪ್ರಾಮಾಣಿಕ ಬ್ರಾಹ್ಮಣನಿದ್ದರೆ, ಪ್ರತಿದಿನ ಜಾತಿಯನ್ನು ಮೀರಿ ಶಾಸ್ತ್ರಗಳನ್ನು ಮೆಟ್ಟುತ್ತಲೇ ಅವೆರಡನ್ನು ಆವೇಶದಿಂದ ಸಮರ್ಥಿಸಿ ಎತ್ತಿ ಹಿಡಿಯುವ ಬ್ರಾಹ್ಮಣರು ನೂರಾರು ಜನ ಇದ್ದಾರೆ. +ಈ ದ್ವಿಮುಖ ಕಪಟಾಚರಣೆಯೇತಕ್ಕೆ? +ಜನಸಾಮಾನ್ಯರು ಜಾತಿಯ ಹಿಡಿತದಿಂದ ಮುಕ್ತರಾದ ಪಕ್ಷದಲ್ಲಿ ಬ್ರಾಹ್ಮಣ ವರ್ಗದ ಅಧಿಕಾರ, ಗೌರವಗಳಿಗೆ ಅವರು ಆಸ್ಪದ ಕೊಡಲಾರರೆಂಬ ಭಯ ಬ್ರಾಹ್ಮಣರಿಗಿದೆ. +ಬುದ್ಧಿವಂತ ವರ್ಗವಾದ ಬ್ರಾಹ್ಮಣರ ಈ ಅಪ್ರಾಮಾಣಿಕತೆ ಅತ್ಯಂತ ಲಜ್ಜಾಸ್ಪದವಾಗಿದೆ. +ಮ್ಯಾಥ್ಯೂ ಆರ್ನಾಲ್ಡ್‌ ಹೇಳುವಂತೆ,“ಹಿಂದೂಗಳು ಸತ್ತುಹೋದ ಒಂದು ಜಗತ್ತು ಮತ್ತು ಜನ್ಮ ತಳೆಯಲು ಶಕ್ತಿಯಿಲ್ಲದ ಇನ್ನೊಂದು ಜಗತ್ತು ಇವೆರಡರ ನಡುವೆ ಎಡತಾಕುತ್ತಿದ್ದಾರೆ”. + ಮಹಾತ್ಮರಿಗೆ ಅವರು ಮೊರೆಯಿಡುತ್ತಾರೆ. +ಮಹಾತ್ಮರಿಗೆ ವಿಚಾರ ಮಾಡುವುದರಲ್ಲಿ ನಂಬಿಕೆಯಿಲ್ಲ. +ಆದುದರಿಂದ ಪ್ರಶ್ಯಕ್ಷಾನುಭವದ ಒರೆಗಲ್ಲಿಗೆ ನಿಲ್ಲಬಲ್ಲಂಥ ಮಾರ್ಗದರ್ಶನವನ್ನು ಅವರು ನೀಡಲಾರರು. +ತಮಗೆ ಮಾರ್ಗದರ್ಶನ ಮಾಡಬಲ್ಲರೆಂದು ಜನಸಾಮಾನ್ಯರು ಬುದ್ಧಿವಂತ ವರ್ಗವನ್ನು ನಂಬಿ ನಿರೀಕ್ಷಿಸುವರು. +ಆದರೆ ಈ ಮಹನೀಯರು ತುಂಬ ಅಪ್ರಾಮಾಣಿಕರಾಗುತ್ತಾರೆ,ಅಥವಾ ತೀರಾ ಉಪೇಕ್ಷೆ ತಾಳುತ್ತಾರೆ. +ಒಂದು ಮಹಾ ದುರಂತಕ್ಕೆ ನಾವು ಸಾಕ್ಷಿಗಳಾಗಿ ನಿಂತಿದ್ದೇವೆ. +ಈ ದುರಂತದ ಸಮ್ಮುಖದಲ್ಲಿ ನಾವು “ಇಂಥವರು ನಿಮ್ಮ ಮುಂದಾಳುಗಳು, ಓ ಹಿಂದೂಗಳೇ!” ಎಂದುಶೋಕಿಸಬಹುದಷ್ಟೆ +ಮಹಾರಾಷ್ಟ್ರವನ್ನು ಭಾಷೆಯ ಆಧಾರದ ಮೇಲೆ ಪುನರ್ನಿರ್ಮಿಸುವ ಬಗೆಗೆ ಬೇರೆ ಬೇರೆ ಲೇಖಕರು ಬರೆದ ಅನೇಕ ಪುಸ್ತಕ ಮತ್ತು ಕಿರುಪುಸ್ತಕಗಳಿಂದ ಈ ಜ್ಞಾಪಕ ಪತ್ರದಲ್ಲಿ ಬಳಸಿದ ಅಂಕಿ ಸಂಖ್ಯೆಗಳನ್ನು ತೆಗೆದುಕೊಳ್ಳಲಾಗಿದೆ. +ಅದೇ ರೀತಿ, ಇದಕ್ಕೆ ಲಗತ್ತಿಸಿದ ಮಹಾರಾಷ್ಟದ ನಕಾಶೆ ಸಂಪೂರ್ಣ ಸರಿಯಾಗಿದ್ದೆಂದು ತಿಳಿಯಬೇಕಾಗಿಲ್ಲ. +ಇಷ್ಟೆ ಪುನರ್ನಿರ್ಮಾಣವಾದಾಗ ಪ್ರಾಂತ್ಯ ಹೇಗೆ ಕಾಣುವುದೆಂಬುದರ ಕಲ್ಪನೆ ಕೊಡುವ ಉದ್ದೇಶದಿಂದ ಇದನ್ನು ಲಗತ್ತಿಸಲಾಗಿದೆ. +ಭಾಷಾವಾರು ಪ್ರಾಂತ್ಯಗಳ ಸಮಸ್ಯೆ ಪಕ್ಷೀಯ ಪೂರ್ವಗ್ರಹಿತ ಅಭಿಪ್ರಾಯ ಮತ್ತು ಹಿತಾಸಕ್ತಿಗಳಿಂದ ಹುಟ್ಟಿರುವ ವಿವಾದಕ್ಕಷ್ಟೇ ಅಲ್ಲ, ಅವುಗಳ ಒಳ್ಳೆಯ ಅಂಶಗಳ ಬಗೆಗಿರುವ ಭಿನ್ನಾಭಿಪ್ರಾಯಗಳಿಗೂ ಎಡೆಗೊಟ್ಟರುತ್ತದೆ. +ವಿವಾದದ ಅಂಶಗಳು ನೆರೆಹೊರೆಯ ಪ್ರದೇಶಗಳ ನಡುವಿರುವ ಹಕ್ಕು ಪ್ರತಿಹಕ್ಕುಗಳಿಗೆ ಮತ್ತು ಅವುಗಳನ್ನು ಸೇರಿಸುವುದಕ್ಕೆ ಮಾಡಿದ ಕರಾರುಗಳಿಗೆ ಸಂಬಂಧಿಸಿರುತ್ತವೆ. +ಮಹಾರಾಷ್ಟ್ರ ಪ್ರಾಂತ್ಯಕ್ಕೆ ಸಂಬಂಧಿಸಿದ ವಿವಾದವನ್ನು ನಾನು ಅನಂತರ ಪರಿಶೀಲಿಸುವೆ. +ಈಗ ಮೊದಲು ಭಾಷಾವಾರು ಪ್ರಾಂತ್ಯಗಳ ರಚನೆಯ ಬಗೆಗೆ ಇರುವ ಸೂಚನೆಯ ಒಳ್ಳೆಯ ಅಂಶಗಳನ್ನು ಪರಿಶೀಲನೆಗೆ ಎತ್ತಿಕೊಳ್ಳುವೆನು. +ಭಾಷಾವಾರು ಪ್ರಾಂತ್ಯಗಳ ನಿರ್ಮಾಣದ ಬೇಡಿಕೆಯಲ್ಲಿ ಅಡಗಿರುವ ಉದ್ದೇಶಗಳು . + ಭಾಷಾವಾರು ಪ್ರಾಂತ್ಯಗಳ ನಿರ್ಮಾಣದ ಬೇಡಿಕೆಯಲ್ಲಿ ಅಡಗಿರುವ ಉದ್ದೇಶವೇನು? +ಸಾಮಾನ್ಯವಾಗಿ ಭಾಷಾವಾರು ಪ್ರಾಂತ್ಯಗಳ ರಚನೆ ಆಗಬೇಕೆಂದು ವಾದಿಸುವವರು ಒಂದೊಂದು ಪ್ರಾಂತ್ಯದಲ್ಲಿ ಒಂದೊಂದು ಭಾಷೆ ಮತ್ತು ಒಂದೊಂದು ಸಂಸ್ಕೃತಿಯ ಜನರು ಇರುತ್ತಾರೆಂದು ನಂಬಿರುತ್ತಾರೆ. +ಆದ್ದರಿಂದ ಅವು ತಮ್ಮ ತಮ್ಮ ಭಾಷೆ ಮತ್ತು ಸಂಸ್ಕೃತಿಗಳನ್ನು ಬೆಳೆಸಲು ಸಂಪೂರ್ಣ ಅವಕಾಶ ಪಡೆಯಬೇಕು. +ಬೇರೆ ಮಾತಿನಲ್ಲಿ ಹೇಳುವುದಾದರೆ, ಪ್ರಾಂತ್ಯಗಳು ವಿಶಿಷ್ಟ ರಾಷ್ಟ್ರೀಯತೆಯ ಅಂಶಗಳನ್ನು ಹೊಂದಿರುತ್ತವೆ. +ರಾಷ್ಟ್ರೀಯತೆಯನ್ನು ಪೂರ್ಣ ಬೆಳೆಸುವುದಕ್ಕೆ ಅವುಗಳಿಗೆ ಸ್ವಾತಂತ್ರ್ಯ ಇರಬೇಕು. +ಭಾಷಾವಾರು ಪ್ರಾಂತ್ಯ ರಚನೆಯಿಂದ ಉದ್ಭವಿಸುವ ತೊಂದರೆಗಳು. + ಭಾಷಾವಾರು ಪ್ರಾಂತ್ಯರಚನೆಯ ಸಮಸ್ಯೆಯನ್ನು ಚರ್ಚಿಸುವಾಗ ದ್ವಿವಿಧ ರೀತಿಯ ಭಾವೀಭಾರತ ಸರಕಾರದ ಸಂರಚನೆಯನ್ನು ಲಕ್ಷ್ಯಕ್ಕೆ ತೆಗೆದುಕೊಳ್ಳದಿರುವುದು ಸಂಕುಚಿತ ದೃಷ್ಟಿ ಎನಿಸುವುದು. +(ಅ) ಕೇಂದ್ರ ಸರಕಾರ ಮತ್ತು (ಬಿ) ಅನೇಕ ಪ್ರಾಂತೀಯ ಸರಕಾರಗಳು ತಮ್ಮ ತಮ್ಮ ಶಾಸಕಾಂಗದ,ಕಾರ್ಯಾಂಗದ ಮತ್ತು ಆಡಳಿತಾತ್ಮಕ ಕಾರ್ಯಗಳ ನಿರ್ವಹಣೆಯಲ್ಲಿ ಪರಸ್ಪರ ಸಂಬಂಧ ಇಟ್ಟುಕೊಂಡು ಹಾಸುಹೊಕ್ಕಾಗಿರಬೇಕಾಗುತ್ತದೆ. +ಆದ್ದರಿಂದ ಭಾಷಾವಾರು ಪ್ರಾಂತ್ಯಗಳ ರಚನೆಗೆ ಒಪ್ಪಿಗೆಕೊಡುವ ಮುನ್ನ ಭಾಷಾವಾರು ಕೇಂದ್ರ ಸರಕಾರದ ಕಾರ್ಯ ನಿರ್ವಹಣೆಯ ಮೇಲೆ ಯಾವ ಪರಿಣಾಮ ಬೀರಬಹುದೆಂಬುದನ್ನು ವಿಚಾರಿಸುವುದು ಅಗತ್ಯವಿರುತ್ತದೆ. +ನಿರೀಕ್ಷಿಸಬಹುದಾದ ಅನೇಕ ಪರಿಣಾಮಗಳಲ್ಲಿ ಕೆಳಗಿನವು ಬಹಳ ಸ್ಪಷ್ಟವಿರುತ್ತವೆ : +ತಮ್ಮ ತಮ್ಮ ಜನಾಂಗದ ಭಾಷೆಯ ಮತ್ತು ಸಾಹಿತ್ಯದ ಬಗೆಗೆ ಅಭಿಮಾನ ಇರುವ ಎಷ್ಟು ಗುಂಪುಗಳಿರುವವೊ ಅಷ್ಟು ರಾಷ್ಟಗಳು ಹುಟ್ಟುವವು. +ಕೇಂದ್ರ ಶಾಸಕಾಂಗವು ಅನೇಕ ರಾಷ್ಟಗಳ ಒಕ್ಕೂಟವಾಗುವುದು ಮತ್ತು ಕೇಂದ್ರ ಕಾರ್ಯಾಂಗವು ತಮ್ಮ ತಮ್ಮ ಸಂಸ್ಕೃತಿಗಳ ಪ್ರತ್ಯೇಕತೆಯ ಅರಿವಿರುವ ಮತ್ತು ಭಿನ್ನಭಿನ್ನ ಆಸಕ್ತಿಗಳನ್ನು ಹೊಂದಿರುವ ಪ್ರತ್ಯೇಕ ರಾಷ್ಟ್ರಗಳ ಸಂಗಮವಾಗುವುದು. +ಅವು ಬಹುಮತ ನಿರ್ಣಯ ಒಪ್ಪದಿರುವಂತಹ ಇಲ್ಲವೆ ಹೊರಗೆ ಹೋಗುವಂತಹ ರಾಜಕೀಯ ಅವಿಧೇಯತೆಯನ್ನು ಬೆಳೆಸಿಕೊಳ್ಳಬಹುದು. +ಅಂತಹ ಮನೋಧರ್ಮದ ಬೆಳವಣಿಗೆಯ ಸಾಧ್ಯತೆಯನ್ನು ಒಟ್ಟಿನಲ್ಲಿ ತೆಗೆದುಹಾಕುವಂತಿಲ್ಲ. +ಅಂತಹ ಮನೋಧರ್ಮ ಬೆಳೆದದ್ದಾದರೆ ಕೇಂದ್ರ ಸರಕಾರದ ಕಾರ್ಯನಿರ್ವಹಣೆ ಅಸಾಧ್ಯವಾಗುವುದು. +ಭಾಷಾವಾರು ಪ್ರಾಂತ್ಯ ರಚನೆ ಕೇಂದ್ರ ಮತ್ತು ಪ್ರಾಂತಗಳ ನಡುವೆ ಇರಬೇಕಾದ ಅವಶ್ಯಕ ಆಡಳಿತಾತ್ಮಕ ಸಂಬಂಧಗಳಿಗೆ ಮಾರಕವಾಗುವುದು. +ಪ್ರತಿಯೊಂದು ಪ್ರಾಂತ್ಯ ತನ್ನದೇ ಭಾಷೆಯಲ್ಲಿ ವ್ಯವಹರಿಸಹತ್ತಿದ್ದರೆ, ಎಷ್ಟು ಭಾಷಾವಾರು ಪ್ರಾಂತ್ಯಗಳಿವೆಯೊ ಅಷ್ಟು ಭಾಷೆಗಳಲ್ಲಿ ಕೇಂದ್ರ ವ್ಯವಹರಿಸಬೇಕಾಗುತ್ತದೆ. +ಇದು ಅಸಾಧ್ಯ ಕೆಲಸ ಎಂದು ಒಪ್ಪಲೇಬೇಕಾಗುತ್ತದೆ. +ನ್ಯಾಯಾಂಗದ ಮೇಲೆ ಆಗುವ ಪರಿಣಾಮವನ್ನು ಅಭ್ಯಸಿಸುವುದರಿಂದ ಭಾಷಾವಾರು ಪ್ರಾಂತ್ಯಗಳು ಕೇಂದ್ರ ಸರಕಾರದ ಆಡಳಿತ ಯಂತ್ರದ ಕಾರ್ಯನಿರ್ವಹಣೆಯಲ್ಲಿ ಭಾರಿ ಬಿಕ್ಕಟ್ಟನ್ನು ಹುಟ್ಟಿಸುತ್ತವೆ ಎಂಬುದು ತಿಳಿದುಬರುತ್ತದೆ. +ಈ ಹೊಸ ವ್ಯವಸ್ಥೆಯಲ್ಲಿ ಪ್ರತಿಯೊಂದು ಪ್ರಾಂತ್ಯ ಒಂದು ಉಚ್ಚ ನ್ಯಾಯಾಲಯವನ್ನು ಮತ್ತು ಅದರ ಕೆಳಗೆ ಅನೇಕ ಕೆಳದರ್ಜೆಯ ನ್ಯಾಯಾಲಯಗಳನ್ನು ಹೊಂದುವುದು. +ಅವೆಲ್ಲವುಗಳ ಮೇಲೆ ವರಿಷ್ಠ ನ್ಯಾಯಾಲಯ ಇರುವುದು. +ಅದು ಉಚ್ಛನ್ಯಾಯಾಲಯಗಳ ವಿರುದ್ಧ ಹೂಡಿದ ಮೊಕದ್ದಮೆಗಳನ್ನು ನಡೆಸುವ ಹಕ್ಕನ್ನು ಪಡೆದಿರುತ್ತದೆ. +ಭಾಷಾವಾರು ಪ್ರಾಂತ್ಯಗಳ ಆಧಾರದ ಮೇಲೆ ಪ್ರತಿಯೊಂದು ಉಚ್ಚನ್ಯಾಯಾಲಯವು ಆಯಾ ಪ್ರಾಂತ್ಯದ ಭಾಷೆಯಲ್ಲಿ ಮೊಕದ್ದಮೆಗಳನ್ನು ನಡೆಸುವುದು. +ಉಚ್ಚ ನ್ಯಾಯಾಲಯದಲ್ಲಾದ ಅನ್ಯಾಯವನ್ನು ಸರಿಪಡಿಸಲು ವರಿಷ್ಠ ನ್ಯಾಯಾಲಯಕ್ಕೆ ಮೊರೆ ಹೊಕ್ಕಾಗ ವರಿಷ್ಠ ನ್ಯಾಯಾಲಯ ಏನು ಮಾಡಬೇಕು? +ಆಗ ವರಿಷ್ಠ ನ್ಯಾಯಾಲಯವನ್ನು ಮುಚ್ಚಬೇಕಾಗುತ್ತದೆ. +ಎಲ್ಲ ನ್ಯಾಯಾಧೀಶರಿಗೆ ದೇಶದ ಎಲ್ಲ ಭಾಷೆಗಳು ಗೊತ್ತಿರುವುದುಅಸಾಧ್ಯ (ಸದ್ಯಕ್ಕೆ ನ್ಯಾಯವಾದಿಗಳ ಸಮಸ್ಯೆಯನ್ನು ಬಿಟ್ಟುಬಿಡುತ್ತೇನೆ.) +ತಲೆಕೆಡಿಸಿಕೊಳ್ಳದೆ ಇಂತಹ ಪರಿಸ್ಥಿತಿಯ ಬಗೆಗೆ ಯೋಚಿಸುವುದು ಯಾರಿಗೂ ಸಾಧ್ಯವಿಲ್ಲ. +ಅದು ಭಾರತದ ವಿಭಜನೆಗೆ ದಾರಿ ಮಾಡಬಹುದು. +ಭಾರತವು ಒಂದು ಸಂಯುಕ್ತ ರಾಷ್ಟ್ರ ಆಗುವುದು ಬಿಟ್ಟುಗೊಂದಲ ಮತ್ತು ಅವ್ಯವಸ್ಥೆಯ ಪರಿಸ್ಥಿತಿ ಎದುರಾಗಿ, ಅದೊಂದು ಮತ್ತೊಂದು ವಿಚ್ಛಿದ್ರ ಯುರೋಪ್‌ ಆಗುವ ಸಾಧ್ಯತೆ ಇರುತ್ತದೆ. + ಭಾಷಾವಾರು ಪ್ರಾಂತ್ಯರಚನೆಯ ಸೂಚನೆಯು ಭಾರತದ ಐಕ್ಕತೆಗೆ ಧಕ್ಕೆ ತರುವಂತಹ ಸಮಸ್ಯೆಗಳನ್ನು ಸೃಷ್ಟಿಸುತ್ತದೆಂಬುದು ನಿಜವಿದ್ದರೂ, ಭಾಷೆಯ ಆಧಾರದ ಮೇಲೆ ಆಗುವ ಪ್ರಾಂತ್ಯಗಳ ಪುನರ್ನಿರ್ಮಾಣದಿಂದ ಕೆಲವು ನಿಶ್ಚಿತ ರಾಜಕೀಯ ಲಾಭಗಳಾಗುತ್ತವೆ ಎಂಬುದರಲ್ಲಿ ಸಂಶಯವಿರುವುದಿಲ್ಲ. +ಭಾಷಾವಾರು ಪ್ರಾಂತ್ಯಗಳ ಯೋಜನೆಯಿಂದ ಆಗುವ ಮುಖ್ಯ ಲಾಭ ಎಂದರೆ-ಪ್ರಜಾಸತ್ತೆ ಪರಿಣಾಮಕಾರಿಯಾಗಿ ಕೆಲಸ ಮಾಡಲು ಮಿಶ್ರಪ್ರಾಂತ್ಯಗಳಿಗಿಂತ ಭಾಷಾವಾರು ಪ್ರಾಂತ್ಯಗಳು ಹೆಚ್ಚು ಸಹಾಯಮಾಡುತ್ತವೆ. +ಪ್ರಜಾಸತ್ತೆಗೆ ಅವಶ್ಯ ಇರುವ ಏಕರೂಪತ್ವವನ್ನು ಭಾಷಾವಾರು ಪ್ರಾಂತ್ಯ ತಯಾರಿಸುತ್ತದೆ. +ಒಂದು ಪ್ರಾಂತ್ಯದ ಜನರ ಏಕರೂಪತ್ವವು ಅವರೆಲ್ಲರು ಒಂದೇ ಮೂಲ, ಒಂದೇ ಭಾಷೆ, ಒಂದೇ ಸಾಹಿತ್ಯ,ಒಂದೇ ಐತಿಹಾಸಿಕ ಪರಂಪರೆ, ಒಂದೇ ಬಗೆಯ ಆಚಾರ ವಿಚಾರಗಳನ್ನು ಹೊಂದುವುದನ್ನು ಅವಲಂಬಿಸಿರುತ್ತದೆ. +ಇದನ್ನು ಯಾವ ಸಮಾಜಶಾಸ್ತ್ರಜ್ಞನೂ ಅಲ್ಲಗಳೆಯುವಂತಿಲ್ಲ. +ಸಾಮಾಜಿಕ ಏಕರೂಪತೆ ಇಲ್ಲದಿರುವುದರಿಂದ ರಾಜ್ಯದಲ್ಲಿ ಅಪಾಯಸ್ಥಿತಿ ಉಂಟಾಗುತ್ತದೆ. +ಅದರಲ್ಲಿಯೂ ವಿಶೇಷವಾಗಿ, ಪ್ರಜಾಸತ್ತಾತ್ಮಕ ಸಂರಚನೆಯ ಆಧಾರದ ಮೇಲೆ ನಿರ್ಮಿಸಿದ ರಾಜ್ಯದಲ್ಲಿ ಸಮರಸ ಭಾವದ ಜನರು ಇಲ್ಲದ ರಾಜ್ಯದಲ್ಲಿ ಪ್ರಜಾಸತ್ತೆ ಕೆಲಸ ಮಾಡದು ಎಂದು ಇತಿಹಾಸದ ನಿದರ್ಶನ ಇರುತ್ತದೆ. +ಸಮಾಜಘಾತುಕರ ಗುಂಪುಗಳಾಗಿ ವಿಂಗಡಿಸಲ್ಪಟ್ಟಂತಹ, ಭಿನ್ನರೂಪದ ಜನರಿದ್ದ ಸಮಾಜದಲ್ಲಿ ಪ್ರಜಾಸತ್ತಾತ್ಮಕ ಆಡಳಿತವು ತಾರತಮ್ಯ (ಸಮಾಜಸಮಾಜಗಳ ನಡುವೆ), ಉದಾಸೀನತೆ (ಕೆಲವು ಗುಂಪಿನವರ ಬಗೆಗೆ), ಪಕ್ಷಪಾತ, ತುಳಿತ (ಅಧಿಕಾರದಲ್ಲಿದ್ದ ಗುಂಪಿನವರಿಂದ ಉಳಿದವರ ಆಸಕ್ತಿಗಳ)-ಇಂತಹ ವಿಚ್ಛಿದ್ರಕಾರಕ ಶಕ್ತಿಗಳಿಗೆ ಎಡೆಗೊಡುವುದರಲ್ಲಿ ಸಂಶಯ ಇರುವುದಿಲ್ಲ. +ಬಹುರೂಪಿ ಸಮಾಜದಲ್ಲಿ ಪ್ರಜಾಸತ್ತೆ ಏಕೆ ಯಶಸ್ವಿ ಆಗದೆಂದರೆ-ಅಲ್ಲಿ ಅಧಿಕಾರ ನಿಷ್ಪಕ್ರಪಾತವಾಗಿ,ಅರ್ಹತೆಯ ಆಧಾರದ ಮೇಲೆ ಸರ್ವರ ಕಲ್ಯಾಣಕ್ಕಾಗಿ ಉಪಯೋಗಿಸಲ್ಪಡದೆ, ಒಂದೇ ಗುಂಪಿನ ಏಳ್ಗೆಗಾಗಿ ಮತ್ತು ಉಳಿದ ಗುಂಪಿನ ಅವನತಿಗಾಗಿ ಉಪಯೋಗಿಸಲ್ಪಡುತ್ತದೆ. +ಏಕಾಭಿ ರುಚಿಯ ಜನರಿಂದ ಕೂಡಿದ ಏಕರೂಪ ರಾಜ್ಯವು ಪ್ರಜಾಸತ್ತೆಯ ನಿಜವಾದ ಉದ್ದೇಶ ಸಾಧನೆಗೆ ಶ್ರಮಿಸುವುದು. + ಏಕೆಂದರೆ ರಾಜಕೀಯ ಅಧಿಕಾರದ ದುರುಪಯೋಗಕ್ಕೆ ಎದೆಗೊಡುವಂತಹ ಕೃತ್ರಿಮ ಆತಂಕಗಳು ಇಲ್ಲವೆ ಸಾಮಾಜಿಕ ದ್ವೇಷ ಅಲ್ಲಿರುವುದಿಲ್ಲ. +ಮೇಲಿನ ವಿವೇಚನೆಯಿಂದ, ಪ್ರಜಾಸತ್ತೆ ಸರಿಯಾಗಿ ಕಾರ್ಯ ನಿರ್ವಹಿಸಬೇಕಾದರೆ, ಸಮಾನ ಅಭಿರುಚಿಯ ಏಕರೂಪ ಗುಂಪುಗಳಾಗಿ ದೇಶದ ಜನರನ್ನು ವಿವಿಧ ರಾಜ್ಯಗಳಲ್ಲಿ ಹಂಚಬೇಕಾಗುತ್ತದೆಂದು ಸಿದ್ಧವಾಗುತ್ತದೆ. +ಇದೀಗ ಸಿದ್ಧವಾಗುತ್ತಿರುವ ಭಾರತದ ಸಂವಿಧಾನವು ಪ್ರಜಾಸತ್ತಾತ್ಮಕ ರಾಜ್ಯದ ಸಂವಿಧಾನ ವಿನ್ಯಾಸವನ್ನು ಪಡೆದಿರುತ್ತದೆ. +ಅಂದರೆ, ಪ್ರಜಾಸತ್ತೆಯು ಯಶಸ್ವಿ ಆಗಬೇಕಿದ್ದರೆ, ಪ್ರತಿಯೊಂದು ಪ್ರಾಂತ್ಯವು ಸಮರಸ ಭಾವನೆಯ ಜನರಿಂದ ಕೂಡಿರಬೇಕಾಗುತ್ತದೆ. +ಇದನ್ನೇ ಇನ್ನೊಂದು ರೀತಿಯಲ್ಲಿ ಹೀಗೆ ಹೇಳಬಹುದು. +ಪ್ರಜಾಸತ್ತಾತ್ಮಕ ಸಂವಿಧಾನದ ಚೌಕಟ್ಟಿನಲ್ಲಿ ಹೊಂದಿಕೊಂಡು ಕೆಲಸ ಮಾಡಬೇಕಾದರೆ ಪ್ರತಿಯೊಂದು ಪ್ರಾಂತ್ಯವು ಭಾಷಾವಾರು ಪ್ರಾಂತ್ಯವಾಗಬೇಕಾಗುತ್ತದೆ. +ಭಾಷಾವಾರು ಪ್ರಾಂತ್ಯರಚನೆಗೆ ಇದು ಸರಿಯಾದ ಸಮರ್ಥನೆಯಾಗಿದೆ. +ಭಾಷಾವಾರು ಪ್ರಾಂತ್ಯ ರಚನೆಯನ್ನು ಮುಂದೂಡಲು ಶಕ್ಯವೇ? +ಭಾಷಾವಾರು ಪ್ರಾಂತ್ಯ ರಚನೆಯನ್ನು ಮುಂದೂಡಲು ಶಕ್ಯವೇ? +ಇದಕ್ಕೆ ಸಂಬಂಧಿಸಿದಂತೆ,ಈ ಕೆಳಗಿನ ವಿಚಾರಗಳನ್ನು ಆಯೋಗದ ಎದುರು ಇಡಬಯಸುತ್ತೇನೆ: +ಭಾಷಾವಾರು ಪ್ರಾಂತ ರಚನೆಯ ಬೇಡಿಕೆಯಲ್ಲಿ ಹೊಸದೇನೂ ಇರುವುದಿಲ್ಲ. +ಈಗಾಗಲೇ ಆರು ಪ್ರಾಂತ್ಯಗಳು (೧) ಪೂರ್ವ ಪಂಜಾಬ್‌, (೨) ಸಂಯುಕ್ತ ಪ್ರಾಂತಗಳು, (೩)ಬಿಹಾರ, (೪) ಪಶ್ಚಿಮ ಬಂಗಾಲ, (೫) ಅಸ್ಸಾಮ್‌ ಮತ್ತು (೬) ಓರಿಸ್ಸಾ-ಭಾಷಾವಾರು ಪ್ರಾಂತಗಳಾಗಿರುತ್ತವೆ. +ಭಾಷೆಯ ಆಧಾರದ ಮೇಲೆ ಪುನರ್ನಿರ್ಮಾಣ ಆಗಬೇಕೆಂದು ಒತ್ತಾಯಿಸುತ್ತಿರುವ ಪ್ರಾಂತಗಳೆಂದರೆ (೧) ಮುಂಬೈ, (೨) ಮದ್ರಾಸ್‌ ಮತ್ತು (೩) ಕೇಂದ್ರಪ್ರಾಂತಗಳು ಆರು ರಾಜ್ಯಗಳ ನಿರ್ಮಾಣದಲ್ಲಿ ಭಾಷಾವಾರು ತತ್ವವನ್ನು ಅನುಸರಿಸಿರುವಾಗ,ಉಳಿದ ರಾಜ್ಯಗಳು ತಮಗೆ ಅದೇ ತತ್ವವವನ್ನು ಅನ್ವಯಿಸಲು ಕೇಳುತ್ತಿದ್ದಾಗ, ಅವುಗಳನ್ನು ಅನಿರ್ದಿಷ್ಟ ಅವಧಿಯವರೆಗೆ ಕಾಯಿಸುವುದು ಸಾಧು ಎನಿಸದು. +ಭಾಷೆಯ ಆಧಾರದ ಮೇಲೆ ನಿರ್ಮಾಣವಾಗದ ಪ್ರಾಂತಗಳಲ್ಲಿಯ ಪರಿಸ್ಥಿತಿ, ಗಂಡಾಂತರಮಟ್ಟ ಮುಟ್ಟದಿದ್ದರೂ, ಅದು ಪ್ರಾಚೀನ ತುರ್ಕ ಸಾಮ್ರಾಜ್ಯ ಇಲ್ಲವೆ ಪ್ರಾಚೀನ ಆಸ್ಟ್ರೊ-ಹಂಗೇರಿಯ ಸಾಮ್ರಾಜ್ಯಗಳಿಗಿಂತ ವಿಭಿನ್ನವಿರುವುದಿಲ್ಲ. +ತುರ್ಕ ಸಾಮ್ರಾಜ್ಯದ ಇಲ್ಲವೆ ಆಸ್ಟೊ-ಹಂಗೇರಿಯ ಸಾಮ್ರಾಜ್ಯದ ವಿನಾಶಕ್ಕೆ ಕಾರಣವಾದ ಸ್ಪೋಟಕ ಶಕ್ತಿಯೇ ಭಾಷಾವಾರು ಪ್ರಾಂತ್ಯ ರಚನೆಯ ಬೇಡಿಕೆಯಲ್ಲಿ ಅಡಗಿರುತ್ತದೆ. +ಅದು ಸ್ಫೋಟಗೊಳ್ಳುವ ಮಟ್ಟಕ್ಕೆ ಪರಿಸ್ಥಿತಿ ಹೋಗದಂತೆ ಮಾಡುವುದು ಉತ್ತಮ. +ಪರಿಸ್ಥಿತಿ ವಿಪರೀತವಾದರೆ ಅದನ್ನು ನಿಯಂತ್ರಿಸುವುದು ಕಠಿಣ. +ಎಲ್ಲಿಯವರೆಗೆ ಪ್ರಾಂತ್ಯಗಳು ಪ್ರಜಾಸತ್ತಾತ್ಮಕ ಸಂವಿಧಾನವನ್ನು ಹೊಂದಿರಲಿಲ್ಲವೊ, ಅಥವಾ ಹೊಸ ಸಂವಿಧಾನ ಕೊಡಮಾಡುವ, ವಿಸ್ನೃತ ಸಾರ್ವಭೌಮ ಅಧಿಕಾರಗಳನ್ನು ಹೊಂದಿರಲಿಲ್ಲವೋ ಅಲ್ಲಿಯವರೆಗೆ ಭಾಷಾವಾರು ಪ್ರಾಂತ್ಯ ರಚನೆಯ ಬೇಡಿಕೆ ತುರ್ತಿನದಾಗಿರಲಿಲ್ಲ. +ಆದರೆ ಹೊಸ ಸಂವಿಧಾನ ಜಾರಿಯಾದ ಬಳಿಕ, ಈ ಸಮಸ್ಯೆ ತೀವ್ರಸ್ವರೂಪ ತಳೆದಿದ್ದು, ಅದರ ಪರಿಹಾರ ತುರ್ತಾಗಿ ಆಗಬೇಕಾಗಿರುತ್ತದೆ. +ಸಮಸ್ಯೆ ತುರ್ತಾಗಿ ಬಗೆಹರಿಯಬೇಕಿದ್ದರೆ ಅದಕ್ಕೆ ಪರಿಹಾರ ಏನು? +ಈಗಾಗಲೇ ಸೂಚಿಸಿದಂತೆ,ಪರಿಹಾರ ಎರಡು ಕರಾರುಗಳನ್ನು ಪೂರೈಸಬೇಕು. +ಭಾಷಾವಾರು ಪ್ರಾಂತ್ಯದ ತತ್ವವನ್ನು ಅಂಗೀಕರಿಸುವಲ್ಲಿ,ಭಾರತದ ಐಕ್ಯತೆಗೆ ಧಕ್ಕೆ ಆಗದಂತೆ ಎಚ್ಚರಿಕೆ ವಹಿಸಬೇಕು. +ಆದ್ದರಿಂದ ನನ್ನ ಪರಿಹಾರವು ಹೀಗಿರುತ್ತದೆ-ಅಂದರೆ, ಭಾಷಾವಾರು ತತ್ವದ ಆಧಾರದ ಮೇಲೆ ಪ್ರಾಂತ್ಯಗಳು ಪುನಃ ನಿರ್ಮಾಣವಾಗಬೇಕೆನ್ನುವ ಬೇಡಿಕೆಯನ್ನು ಅಂಗೀಕರಿಸುವಾಗ, ಕೇಂದ್ರದಲ್ಲಿರುವ ಆಡಳಿತ ಭಾಷೆಯೇ ಎಲ್ಲ ಪ್ರಾಂತ್ಯಗಳ ಆಡಳಿತ ಭಾಷೆ ಆಗಬೇಕೆಂದು ಭಾರತದ ಸಂವಿಧಾನದಲ್ಲಿ ಅವಕಾಶ ಕಲ್ಪಿಸಬೇಕು. +ಕೇವಲ ಈ ಭೂಮಿಕೆಯ ಆಧಾರದ ಮೇಲೆ ನಾನು ಭಾಷಾವಾರು ಪ್ರಾಂತ್ಯಗಳ ಬೇಡಿಕೆಯನ್ನು ಅನುಮೋದಿಸುತ್ತೇನೆ. +ನನ್ನ ಸಲಹೆ ಈಗ ಜಾರಿಯಲ್ಲಿರುವ ಭಾಷಾವಾರು ಪ್ರಾಂತ್ಯಗಳ ಪರಿಕಲ್ಪನೆಗೆ ವಿರುದ್ಧ ಇರುವುದೆಂಬುದರ ಅರಿವು ನನಗೆ ಇರುತ್ತದೆ. +ಅದರ ಪ್ರಕಾರ ಪ್ರಾಂತೀಯ ಭಾಷೆಯೇ ಅದರ ಆಡಳಿತ ಭಾಷೆಯಾಗಿರಬೇಕು. +ಭಾಷಾವಾರು ಪ್ರಾಂತ್ಯಗಳಿಗೆ ನನ್ನದೇನೂ ಅಭ್ಯಂತರ ಇರುವುದಿಲ್ಲ. +ಆದರೆ ಎಲ್ಲಿ ಪ್ರಾಂತೀಯ ಭಾಷೆ ಕೇಂದ್ರದ ಆಡಳಿತ ಭಾಷೆಗಿಂತ ಭಿನ್ನವಾಗಿದೆಯೊ, ಅಲ್ಲಿ ಪ್ರಾಂತೀಯ ಭಾಷೆಯೇ ಆಡಳಿತ ಭಾಷೆ ಆಗುವುದಕ್ಕೆ ನನ್ನ ಬಲವಾದ ಆಕ್ಷೇಪ ಇರುತ್ತದೆ. +ನನ್ನ ಆಕ್ಷೇಪಕ್ಕೆ ಈ ಕೆಳಗಿನ ವಿಚಾರಗಳೇ ಆಧಾರ. +೧. ಭಾಷಾವಾರು ಪ್ರಾಂತ್ಯ ರಚನೆಗೂ, ಅವುಗಳ ಆಡಳಿತ ಭಾಷೆಗೂ ಏನೂ ಸಂಬಂಧ ಇರುವುದಿಲ್ಲ. +ಯಾವ ಪ್ರಾಂತ್ಯವು ಸಾಮಾಜಿಕ ರಚನೆ ದೃಷ್ಟಿಯಿಂದ ಏಕರೂಪವಿರುತ್ತದೆಯೊ ಅದುವೇ ನಿಜವಾದ ಭಾಷಾವಾರು ಪ್ರಾಂತ್ಯವೆಂದು ನನಗನಿಸುತ್ತದೆ. +ಪ್ರಜಾಸತ್ತಾತ್ಮಕ ಸರಕಾರ ಪೂರೈಸಬೇಕಾದಂತಹ ಸಾಮಾಜಿಕ ಧ್ಯೇಯಗಳನ್ನು ಸಾಧಿಸಲು ಅದು ಹೆಚ್ಚು ಅರ್ಹವಿರುತ್ತದೆ. +ನನ್ನ ದೃಷ್ಟಿಯಲ್ಲಿ, ಭಾಷಾವಾರು ಪ್ರಾಂತ್ಯಕ್ಕೂ ಅದರ (ಆಡಳಿತ) ಭಾಷೆಗೂ ಯಾವುದೇ ಸಂಬಂಧ ಇರುವುದಿಲ್ಲ. +ಭಾಷಾವಾರು ಪ್ರಾಂತ್ಯಗಳ ಯೋಜನೆಯಲ್ಲಿ ಭಾಷೆ ತಕ್ಕಮಟ್ಟಗೆ ಮಹತ್ವದ ಪಾತ್ರ ವಹಿಸುತ್ತದೆ. +ಭಾಷೆಯ ಆಧಾರದ ಮೇಲೆ ಪ್ರಾಂತ್ಯ ರಚನೆ ಆಗುವಲ್ಲಿ,ಅಂದರೆ, ಪ್ರಾಂತ್ಯಗಳ ಮೇರೆಗಳನ್ನು ನಿರ್ಧರಿಸುವುದಕ್ಕಷ್ಟೇ ಅದರ ಪಾತ್ರ ಸೀಮಿತವಾಗಿರುತ್ತದೆ. +ಭಾಷಾವಾರು ಪ್ರಾಂತ್ಯಗಳ ಯೋಜನೆಯಲ್ಲಿ ಪ್ರಾಂತೀಯ ಭಾಷೆಯೇ ಆಡಳಿತ ಭಾಷೆ ಆಗಬೇಕೆಂಬ ಕಡ್ಡಾಯ ಇರುವುದಿಲ್ಲ. +ಒಂದು ಪ್ರಾಂತ್ಯದ ಸಾಂಸ್ಕೃತಿಕ ಐಕ್ಯತೆ ಉಳಿಸುವುದಕ್ಕೆ ಪ್ರಾಂತೀಯ ಭಾಷೆಯನ್ನೇ ಅದರ ಆಡಳಿತ ಭಾಷೆಯನ್ನಾಗಿ ಮಾಡುವುದು ಅವಶ್ಯ ಇರುವುದಿಲ್ಲ. +ಸಾಂಸ್ಕೃತಿಕ ಐಕ್ಯತೆ ಇದ್ದೇ ಇರುತ್ತದೆ. +ಅದನ್ನು ಉಳಿಸುವ ಸಂಗತಿಗಳು ಭಾಷೆಯಷ್ಟೇ ಅಲ್ಲದೆ ಇನ್ನೂ ಅನೇಕ ಇರುತ್ತವೆ. +ಅವು ಯಾವುವೆಂದರೆ ಒಂದು ಪ್ರಾಂತ್ಯದ ಜನರೆಲ್ಲರಿಗೂ ಒಂದೇ ಐತಿಹಾಸಿಕ ಸಂಪ್ರದಾಯ, ಒಂದೇ ಸಾಮಾಜಿಕ ರೂಢಿಗಳು ಮುಂತಾದವು. +ಸುದೈವದಿಂದ, ಒಂದು ಪ್ರಾಂತ್ಯದಲ್ಲಿ ವಾಸಿಸುವವನು, ಯಾವುದೇ ಭಾಷೆಯನ್ನು ಆಡುತ್ತಿದ್ದರೂ, ಅವನು ಆ ಪ್ರಾಂತೀಯನೇ ಆಗಿರುತ್ತಾನೆ. +ಮಹಾರಾಷ್ಟ್ರದಲ್ಲಿ ವಾಸಿಸುವವನು, ಮರಾಠಿ ಭಾಷೆಯನ್ನು ಆಡದಿದ್ದರೂ ಮರಾಠಿಗನಾಗದಿರುವ ಭೀತಿ ಇರುವುದಿಲ್ಲ. +ಅದೇ ರೀತಿ, ತಮಿಳು ಪ್ರಾಂತ್ಯದವನಾಗಿರಲಿ,ಆಂಧ್ರಪ್ರಾಂತ್ಯದವನಾಗಿರಲಿ, ಬಂಗಾಲ ಪ್ರಾಂತ್ಯದವನಾಗಿರಲಿ, ಅವನು ಆಡುವ ಭಾಷೆ ಯಾವುದೇ ಇರಲಿ,ಆಂಧ್ರದಲ್ಲಿ ವಾಸಿಸುವವನು ಆಂಧ್ರನು, ತಮಿಳು ನಾಡಿನಲ್ಲಿರುವವನು ತಮಿಳನು, ಬಂಗಾಲದಲ್ಲಿ ವಾಸಿಸುವವನು ಬಂಗಾಲಿಯೂ ಆಗಿರುತ್ತಾನೆ. +೨.ನಿಸ್ಸಂದೇಹವಾಗಿ, ಭಾಷಾವಾರು ಪ್ರಾಂತ್ಯಗಳ ಪರವಾಗಿ ಮುಚ್ಚುಮರೆಯಿಲ್ಲದೆ ಮಾತನಾಡುವವರು,ಭಾಷಾವಾರು ಪ್ರಾಂತ್ಯಗಳನ್ನು ಪ್ರತ್ಯೇಕ ರಾಷ್ಟ್ರಗಳನ್ನಾಗಿ ಮಾಡುವ ಉದ್ದೇಶ ತಮಗಿಲ್ಲ ಎಂದು ಹೇಳುತ್ತಾರೆ. +ಅವರ ಪ್ರಾಮಾಣಿಕತೆಯನ್ನು ಶಂಕಿಸುವಂತಿಲ್ಲ. +ಆದರೆ ಹೀಗೂ ಆಗುವುದುಂಟು-ಕರ್ತೃಗಳು ಎಂದೂ ಉದ್ದೇಶಿಸದಿದ್ದ ದಿಶೆಯಲ್ಲಿ ಘಟನೆಗಳು ಸಂಭವಿಸುತ್ತವೆ. +ಆದ್ದರಿಂದ ಕಾಲಕ್ರಮದಲ್ಲಿ ಘಟನೆಗಳು ಅಹಿತಕರ ತಿರುವು ಪಡೆಯದಂತೆ ಪ್ರಾರಂಭದಲ್ಲಿಯೇ ಜಾಗ್ರತೆ ವಹಿಸುವುದು ಅವಶ್ಯವಿರುತ್ತದೆ. +ಒಂದೆಡೆ ವ್ಯವಸ್ಥೆ ಸಡಿಲಾಗುತ್ತಿದ್ದರೆ, ಇನ್ನೊಂದು ಕಡೆಯಿಂದ ಅದನ್ನು ಬಿಗಿಗೊಳಿಸುವುದರಲ್ಲಿ ತಪ್ಪೇನೂ ಇರುವುದಿಲ್ಲ. +೩ .ಪ್ರಾಂತೀಯ ಭಾಷೆ ಅದರ ಆಡಳಿತ ಭಾಷೆಯಾಗುವುದು ಸಹಜ ಎನಿಸಿದರೂ, ಹಾಗೆ ಆಗಗೊಡಬಾರದು, ಭಾಷಾವಾರು ಪ್ರಾಂತ್ಯ ರಚನೆಯಲ್ಲಿ ಯಾವುದೇ ಅಪಾಯ ಇರುವುದಿಲ್ಲ. +ಅಪಾಯ ಇರುವುದು ಆಯಾ ಪ್ರಾಂತ್ಯದ ಭಾಷೆಗಳನ್ನೇ ಆಡಳಿತ ಭಾಷೆಗಳನ್ನಾಗಿ ಮಾಡುವುದರಲ್ಲಿ ಪ್ರಾಂತ್ಯ ಭಾಷೆಗಳನ್ನೇ ಆಡಳಿತ ಭಾಷೆಗಳನ್ನಾಗಿ ಮಾಡುವುದು ಪ್ರಾಂತೀಯ ರಾಷ್ಟ್ರಗಳ ನಿರ್ಮಾಣಕ್ಕೆ ಎಡೆಗೊಡುತ್ತದೆ. +ಪ್ರಾಂತ್ಯಭಾಷೆಗಳನ್ನು ಆಡಳಿತ ಭಾಷೆಗಳಾಗಿ ಬಳಸುವುದರಿಂದ ಪ್ರಾಂತೀಯ ಸಂಸ್ಕೃತಿಗಳು ಉಳಿದವುಗಳಿಂದ ಪ್ರತ್ಯೇಕಿಸಲ್ಪಟ್ಟು ಪ್ರವಹತೆಯನ್ನು ಕಳೆದುಕೊಂಡು ಗಟ್ಟಿಕಲ್ಲಾಗುವವು. +ಹೀಗಾಗಲು ಬಿಡುವುದು ಮಾರಕವಾಗುವುದು. +ಹೀಗಾಗಲು ಬಿಡುವುದೆಂದರೆ, ಎಲ್ಲದರಲ್ಲಿಯೂ ಪ್ರತ್ಯೇಕತೆಯನ್ನು ಪಡೆದ ಸ್ವತಂತ್ರ ರಾಷ್ಟ್ರಗಳನ್ನು ನಿರ್ಮಿಸಿದಂತೆಯೇ ಮತ್ತು ಸಂಯುಕ್ತ ಭಾರತದ ವಿನಾಶದ ಬಾಗಿಲು ತೆರೆದಂತೆಯೇ. +ಪ್ರಾಂತ್ಯ ಭಾಷೆಗಳು ಆಡಳಿತ ಭಾಷೆಗಳಾಗದಿರುವಂಥ ಭಾಷಾವಾರು ಪ್ರಾಂತ್ಯಗಳ ಸಂಸ್ಕೃತಿಗಳು ಜೀವಂತವಿದ್ದು, ಪ್ರವಾಹಕ ಗುಣವನ್ನು ಹೊಂದಿದ್ದು ಪರಸ್ಪರ ವಿನಿಮಯ ಅಬಾಧಿತವಾಗಿ ನಡೆದಿರುತ್ತದೆ. +ಯಾವುದೇ ಪರಿಸ್ಥಿತಿಯಲ್ಲಿ ಪ್ರಾಂತ್ಯಭಾಷೆಗಳು ಆಯಾ ಪ್ರಾಂತಗಳ ಆಡಳಿತ ಭಾಷೆಗಳಾಗಗೊಡಬಾರದು. +ಪ್ರಾಂತ್ಯ ಭಾಷೆಗಿಂತ ಭಿನ್ನವಾದ, ಅಖಿಲ ಭಾರತದ ಆಡಳಿತ ಭಾಷೆಯನ್ನು ಭಾಷಾವಾರು,ಪ್ರಾಂತ್ಯದ ಮೇಲೆ ಹೇರುವುದರಿಂದ ಅದರ ಸಂಸ್ಕೃತಿಯನ್ನು ಉಳಿಸಲು ಏನೂ ಆತಂಕವಾಗದು. +ಸರಕಾರಿ ವಲಯಗಳಲ್ಲಿ ಮಾತ್ರ ಆಡಳಿತ ಭಾಷೆಯನ್ನು ಬಳಸಲಾಗುವುದು. +ಉಳಿದ ಕಡೆಗಳಲ್ಲಿ, ಅಂದರೆ ಸಾಂಸ್ಕೃತಿಕ ಕ್ಷೇತ್ರದಲ್ಲಿ ಪ್ರಾಂತ್ಯ ಭಾಷೆಯನ್ನು ಬಳಸಲು ಮಾರ್ಗ ಇನ್ನೂ ಮುಕ್ತವಿರುತ್ತದೆ. +ಆಡಳಿತ ಭಾಷೆ ಮತ್ತುಆಡಳಿತಕ್ಕೆ ಬಳಸದ ಭಾಷೆಗಳ ನಡುವೆ ಆರೋಗ್ಯಕರ ಸ್ಪರ್ಧೆ ನಡೆಯಬಹುದು. +ಒಂದು ಇನ್ನೊಂದನ್ನು ಹೊರಹಾಕಲು ಯತ್ನಿಸಬಹುದು. +ಆಡಳಿತ ಭಾಷೆ ಪ್ರಾಂತ್ಯಭಾಷೆಯನ್ನು ಹೊರಹಾಕುವಲ್ಲಿ ಯಶಸ್ವಿಯಾದರೆ,ಅದಕ್ಕಿಂತ ಉತ್ತಮವಾದದ್ದು ಇನ್ನಾವುದೂ ಇಲ್ಲ. +ಹಾಗೆ ಆಗದಿದ್ದರೂ ಹೆಚ್ಚು ಅಪಾಯವಿರುವುದಿಲ್ಲ. +ಸಹಿಸಲಿಕ್ಕಾಗದಂಥ ಪರಿಸ್ಥಿತಿಯೇನೂ ಉದ್ಭವಿಸದು. +ಇಂಗ್ಲಿಷ್‌ ಆಡಳಿತ ಭಾಷೆಯಾಗಿ, ಪ್ರಾಂತ್ಯ ಭಾಷೆ ಸಂಸ್ಕೃತವಾಗಿರುವಂತಹ ಸದ್ಯದ ಪರಿಸ್ಥಿತಿಗಿಂತ ಇದೇನೂ ಹೆಚ್ಚು ಅಸಹನೀಯ ಆಗುವುದಿಲ್ಲ. +ವ್ಯತ್ಯಾಸ ಇಷ್ಟೆ ಇಂಗ್ಲಿಷ್‌ ಬದಲು ಬೇರೊಂದು ಭಾಷೆ ಆಡಳಿತ ಭಾಷೆ ಆಗುವುದು. +ತೃಪ್ತಿಕರ ಪರಿಹಾರಕ್ಕೆ ಬೇಕಾದ ಅಗತ್ಯತೆಗಳು +ನಾನು ಸೂಚಿಸುವ ಪರಿಹಾರ ಆದರ್ಶ ಪರಿಹಾರ ಆಗಲಿಕ್ಕಿಲ್ಲ ಎಂಬುದರ ಅರಿವು ನನಗಿರುತ್ತದೆ. +ಅದರಿಂದ ಪ್ರಾಂತ್ಯಗಳಲ್ಲಿ ಪ್ರಜಾಸತ್ತಾತ್ಮಕ ಮಾರ್ಗದಲ್ಲಿ ಸಂವಿಧಾನದ ಕಾರ್ಯ ನಿರ್ವಹಣೆ ಸಾಧ್ಯವಾಗುತ್ತದೆ. +ಆದರೆ ಅದು ಕೇಂದ್ರದಲ್ಲಿ ಸಾಧ್ಯವಾಗುವುದಿಲ್ಲ. +ಏಕೆಂದರೆ, ಕೇವಲ ಭಾಷಾವಾರು ಐಕ್ಯ-ಒಂದೇ ಭಾಷೆ ಆಡುವ ಸೌಲಭ್ಯದಿಂದ ಏಕರೂಪತೆ ಹುಟ್ಟುವುದೆಂಬ ಭರವಸೆ ಇರುವುದಿಲ್ಲ. +ಅದಕ್ಕೆ ಭಾಷೆಯಿಲ್ಲದೆ ಬೇರೆ ಅನೇಕ ವಿಷಯಗಳ ಅವಶ್ಯಕತೆ ಇರುತ್ತದೆ. +ಈ ಮೊದಲು ಹೇಳಿದಂತೆ, ಪ್ರಾಂತ್ಯಗಳಿಂದ ಕೇಂದ್ರ ಶಾಸನ ಸಭೆಗೆ ಆಯ್ಕೆಯಾದ ಸದಸ್ಯರು ತಮ್ಮ ಪ್ರಾಂತೀಯತೆಯನ್ನು ಕಾಯ್ಬ್ದುಕೊಂಡಿರುತ್ತಾರೆ. +ಬಂಗಾಲಿಗಳು, ತಮಿಳರು, ಆಂಧ್ರರು, ಮಹಾರಾಷ್ಟ್ರೀಯರು, ಕಚೇರಿಗಳಲ್ಲಿ ತಮ್ಮ ಮಾತೃಭಾಷೆಯನ್ನಾಡದೆ ಕೇಂದ್ರದ ಆಡಳಿತ ಭಾಷೆಯನ್ನು ಆಡುತ್ತಿದ್ದರೂ, ಬಂಗಾಲಿಗಳು ಬಂಗಾಲಿಗಳಾಗಿ, ತಮಿಳರು ತಮಿಳರಾಗಿ,ಆಂಧ್ರರು ಆಂಧ್ರರಾಗಿ, ಮಹಾರಾಷ್ಟ್ರೀಯರು ಮಹಾರಾಷ್ಟೀಯರಾಗಿಯೇ ಇರುತ್ತಾರೆ. +ಆದರೆ ಕೂಡಲೇ ಕಾರ್ಯ ರೂಪಕ್ಕಿಳಿಸುವಂತಹ ಆದರ್ಶ ಪರಿಹಾರ ನನಗೆ ತೋಚುತ್ತಿಲ್ಲ. +ಅದಕ್ಕೂ ಸ್ಪಲ್ಪ ಕಡಿಮೆ ಮಟ್ಟದ ಪರಿಹಾರದಿಂದ ತುಷ್ಟರಾಗಬೇಕು. +ನಾವು ಕಂಡುಹಿಡಿಯುವ ಯಾವುದೇ ಪರಿಹಾರ ಎರಡು ಕರಾರುಗಳನ್ನು ಪೂರೈಸಬೇಕಾಗುತ್ತದೆ : +(೧) ಅದು ಆದರ್ಶ ಪರಿಹಾರವಲ್ಲದಿದ್ದರೂ, ಆದರ್ಶಕ್ಕಿಂತ ಸ್ಟಲ್ಪ ಕಡಿಮೆಇರಬೇಕು +(೨) ಅದು ಆದರ್ಶ ಪರಿಹಾರವಾಗಿ ಬೆಳೆಯಲು ಶಕ್ಯವಿರಬೇಕು. +ಈ ಎಲ್ಲ ಸಂಗತಿಗಳನ್ನು ಲಕ್ಷ್ಯದಲ್ಲಿಟ್ಟುಕೊಂಡು ನಿರ್ಣಯಿಸಿದ್ದಾದರೆ, ನಾನು ಸೂಚಿಸಿದ ಪರಿಹಾರ ಈ ಎರಡೂ ಕರಾರುಗಳನ್ನು ಪೂರೈಸುವುದೆಂದು ಧೈರ್ಯವಾಗಿ ಹೇಳಬಲ್ಲೆ. +ಮಹಾರಾಷ್ಟ್ರ ಸ್ವಾವಲಂಬಿ ಪ್ರಾಂತ್ಯವಾಗುವುದೆ? +ಸ್ವಾಲಂಬನದ ಪರೀಕ್ಷೆಗಳು:ಮಹಾರಾಷ್ಟ ಪ್ರಾಂತ್ಯ ರಚನೆಯ ಪ್ರಶ್ನೆಯನ್ನು ಚರ್ಚಿಸುವಾಗ ಅದು ಸ್ವಾವಲಂಬಿಯಾದ ಪ್ರಾಂತ್ಯವಾಗಬಲ್ಲದೇ ಎಂಬುದನ್ನು ಮನವರಿಕೆ ಮಾಡಿಕೊಳ್ಳುವುದು ಅವಶ್ಯ . +ಆರ್ಥಿಕವಾಗಿ ಸ್ವತಂತ್ರ ಪ್ರಾಂತ್ಯವೆಂದು ಘೋಷಿಸಲು ಅದು ಕೆಲವು ಕರಾರುಗಳನ್ನು ಪೂರೈಸಬೇಕಾಗುತ್ತದೆ. +ಅದು ನಿಶ್ಚಿತ ಪ್ರಮಾಣದ ವಿಸ್ತಾರ,ಜನಸಂಖ್ಯೆ ಮತ್ತು ಜನಸಂಖ್ಯೆಗೆ ಸರಿಸಮವಾದ ಆದಾಯವನ್ನು ಪಡೆಯಬೇಕಾಗುತ್ತದೆ. +ಒಂದು ಪ್ರಾಂತ್ಯವು ಕನಿಷ್ಠ ಮಟ್ಟದ ಜೀವನ ಸೌಲಭ್ಯಗಳನ್ನು ಒದಗಿಸುವಷ್ಟು ಸ್ವಾವಲಂಬಿಯಾಗಿದ್ದರೆ ಸಾಲದು. +ಅದು ನಿರ್ದಿಷ್ಟ ಮಟ್ಟದ ಆಡಳಿತ ಸುವ್ಯವಸ್ಥೆಯನ್ನು ಮತ್ತು ಸಾಮಾಜಿಕ ಕ್ಷೇಮವನ್ನು ಒದಗಿಸಲು ಬೇಕಾದ ಆದಾಯವನ್ನು ಹೊಂದಿರಬೇಕಾಗುತ್ತದೆ. +ಮಹಾರಾಷ್ಟ್ರ ಆರ್ಥಿಕವಾಗಿ ಸ್ವಾವಲಂಬಿಯೇ? +೧೪) ಮಹಾರಾಷ್ಟ ಪ್ರಾಂತ್ಯವು ಈ ಎಲ್ಲಾ ಕರಾರುಗಳನ್ನು ಪೂರೈಸುತ್ತದೆಯೇ ಕೆಳಗಿನ ಅಂಕಿಸಂಖ್ಯೆಗಳು ಭಾಷೆಯ ಆಧಾರದ ಮೇಲೆ ನಿರ್ಮಿಸಿದ ಮಹಾರಾಷ್ಟ ಪ್ರಾಂತ್ಯದ ವಿಸ್ತಾರ ಮತ್ತು ಜನಸಂಖ್ಯೆಯನ್ನು ಸೂಚಿಸುತ್ತವೆ . +ಮಹಾರಾಷ್ಟದ ವಿಸ್ತಾರ ಮತ್ತು ಜನಸಂಖ್ಯೆ ಎರಡು ತರಹದ ಅಂಕಿಗಳನ್ನು ಕೊಡುತ್ತದೆ :(೧) ಚಿಕ್ಕಗಾತ್ರದಲ್ಲಿ ಮತ್ತು (೨) ಪೂರ್ಣ ಆಕಾರದಲ್ಲಿ, ಪೂರ್ಣ ಆಕಾರದ ಅಂಕಿ ಸಂಖ್ಯೆಯ ಪ್ರಕಾರ, ಮರಾಠಿ ಭಾಷಿಕರನ್ನೆಲ್ಲ ಒಂದೇ ಪ್ರಾಂತದಲ್ಲಿ ಸೇರಿಸಿದರೆ, ಅದರ ಒಟ್ಟು ವಿಸ್ತಾರ ೧.೩೩,೪೬೬ಚದರ ಮೈಲು ಮತ್ತು ಅದರ ಜನಸಂಖ್ಯೆ ೨,೧೫,೮೫,೭ಂಂ ಆಗುವುದು. +ಚಿಕ್ಕ ಗಾತ್ರದ ಅಂಕಿಸಂಖ್ಯೆಯ ಪ್ರಕಾರ, ಅಂದರೆ, ಬೇರೆ ಸಂಸ್ಥಾನಗಳಲ್ಲಿ ಸೇರಿರುವ ಮರಾಠಿ ಭಾಷಿಕರನ್ನು ಬಿಟ್ಟು ಆಗುವ ಮಹಾರಾಷ್ಟದ ವಿಸ್ತಾರ ೮೪,೧೫೧ ಚದರ ಮೈಲು ಮತ್ತು ಜನಸಂಖ್ಯೆ ೧,೫೪,೩೩,೪ಂಂ ಆಗುವುದು. +ಮಹಾರಾಷ್ಟದ ಆದಾಯತು: ಸದ್ಯದ ತೆರಿಗೆ ಮಾನದ ಪ್ರಕಾರ ಅವಿಸ್ತ್ಯತ ಮಹಾರಾಷ್ಟ್ರದ ವಾರ್ಷಿಕ ಆದಾಯ ಸುಮಾರು ರೂ.೨೫,೬೧,೫೧,000 ಎಂದು ಅಂದಾಜು ಮಾಡಲಾಗಿದೆ. + ಉಳಿದ ಪ್ರಾಂತಗಳೊಂದಿಗೆ ಮಹಾರಾಷ್ಟದ ತುಲನೆ:ಇಷ್ಟು ವಿಸ್ತಾರ, ಜನಸಂಖ್ಯೆ ಮತ್ತು ಆದಾಯ ಹೊಂದಿರುವ ಮಹಾರಾಷ್ಟ್ರ ಸ್ವಾವಲಂಬಿ ಪ್ರಾಂತ್ಯ ಆಗಬಲ್ಲದೇ ಎಂಬುದನ್ನು ತಿಳಿದುಕೊಳ್ಳಲು ಬೇರೆ ದೇಶಗಳೊಂದಿಗೆ ಹೋಲಿಸಿ ನೋಡುವುದು ಅವಶ್ಯವಿರುತ್ತದೆ. +ಅಮೇರಿಕೆಯ ಸಂಯುಕ್ತ ಸಂಸ್ಥಾನದಲ್ಲಿರುವ ಪ್ರಥಮ (ಅತಿ ದೊಡ್ಡ) ಮತ್ತು ನಾಲ್ವತ್ತೇಳನೆಯ(ಅತಿಸಣ್ಣ) ಪ್ರಾಂತ್ಯಗಳ ಅಂಕಿಗಳನ್ನು ಅವುಗಳ ವಿಸ್ತಾರ ಮತ್ತು ಜನಸಂಖ್ಯೆ ಕ್ರಮದಲ್ಲಿ ಇಲ್ಲಿ ಕೊಟ್ಟಿರುತ್ತೇನೆ. + ಅವಿಸ್ತ್ಯ ತ ಮಹಾರಾಷ್ಟವನ್ನಾಗಲಿ ಪೂರ್ಣ ಮಹಾರಾಷ್ಟವನ್ನಾಗಲಿ ತುಲನೆಗೆ ತೆಗೆದುಕೊಂಡರೆ,ಅದು ಅಮೇರಿಕೆಯ ಸಂಯುಕ್ತ ಸಂಸ್ಥಾನಗಳ ಯಾವುದೇ ರಾಜ್ಯಕ್ಕಿಂತ-ವಿಸ್ತೀರ್ಣದಲ್ಲಿ ಅತಿ ಚಿಕ್ಕದಾಗಿರುವ ಡೆಲವೇರಿಗಿಂತಲೂ ಮತ್ತು ಜನಸಂಖ್ಯೆಯಲ್ಲಿ ಅತಿ ದೊಡ್ಡದಾಗಿರುವ ನ್ಯೂಯಾರ್ಕಿಗಿಂತಲೂ-ಎಷ್ಟೋಪಟ್ಟು ದೊಡ್ಡದಿರುತ್ತದೆಂದು ತಿಳಿದುಬರುತ್ತದೆ. +ಸದ್ಯಕ್ಕೆ ಅಸ್ತಿತ್ವದಲ್ಲಿರುವ ಭಾಷಾವಾರು ಪ್ರಾಂತ್ಯಗಳು ಮತ್ತು ಭಾವೀ ಭಾಷಾವಾರು ಪ್ರಾಂತ್ಯಗಳೊಂದಿಗೆ ಮಹಾರಾಷ್ಟವನ್ನು ಹೋಲಿಸುವುದು ಉಪಯುಕ್ತವಾಗಬಹುದು. +ಅವುಗಳ ವಿಸ್ತಾರ,ಜನಸಂಖ್ಯೆ, ಮತ್ತು ಆದಾಯದ ಅಂಕಿಸಂಖ್ಯೆಗಳನ್ನು ಕೆಳಗೆ ಕೊಟ್ಟಿರುತ್ತದೆ. +ಈ ಅಂಕಿಸಂಖ್ಯೆಗಳಿಗೆ ಮಹಾರಾಷ್ಟದ ಅಂಕಿಸಂಖ್ಯೆಗಳನ್ನು ಹೋಲಿಸಿದರೆ, ವಿಸ್ತಾರ, ಜನಸಂಖ್ಯೆ ಮತ್ತು ಆದಾಯದ ದೃಷ್ಟಿಯಿಂದ ಮಹಾರಾಷ್ಟ್ರ ಆರ್ಥಿಕವಾಗಿ ಸ್ವಾವಲಂಬಿ ಪ್ರಾಂತ್ಯವಾಗಲು ಅಷ್ಟೇ ಅಲ್ಲ,ಅದೊಂದು ಬಲಿಷ್ಠ ಪ್ರಾಂತ್ಯ ಆಗುವುದೆನ್ನುವುದರಲ್ಲಿ ಸಂಶಯವಿರುವುದಿಲ್ಲ. +ಮಹಾರಾಷ್ಟ್ರ ಪ್ರಾಂತ್ಯವು ಸಂಯುಕ್ತ ರೂಪದ ವ್ಯವಸ್ಥೆಯದಾಗಬೇಕೊ ಅಥವಾ ಏಕರೂಪದ 'ವ್ಯವಸ್ಥೆಯದಾಗಬೇಕೊ? +ವಿವಾದಾಸ್ಪದ ವಿಷಯಗಳ ಕಡೆಗೆ ನಾನೀಗ ಗಮನ ಹರಿಸುವೆನು. +ಮಹಾರಾಷ್ಟದ ಏಕೀಕರಣವು ವಿವಾದಾಸ್ಪದ ವಿಷಯವಾಗಿರುವುದಿಲ್ಲ. +ವಿವಾದವಿರುವುದು ಅದನ್ನು ಹೇಗೆ ಕಾರ್ಯರೂಪಕ್ಕಿಳಿಸಬೇಕೆಂಬುದರ ಬಗೆಗೆ ನವ ಮಹಾರಾಷ್ಟ ಒಂದೇ ಶಾಸಕಾಂಗ ಮತ್ತು ಒಂದೇ ಕಾರ್ಯಾಂಗದಿಂದ ಕೂಡಿದ ಏಕವ್ಯವಸ್ಥೆಯ ಪ್ರಾಂತ್ಯವಾಗಬೇಕೆಂಬುದು ಒಂದು ವಿಚಾರ. +ಇನ್ನೊಂದು ವಿಚಾರದ ಪ್ರಕಾರ, ಎರಡು ಉಪಪ್ರಾಂತಗಳಿಂದ ಕೂಡಿದ ಸಂಯುಕ್ತ ವ್ಯವಸ್ಥೆಯ ಪ್ರಾಂತ್ಯವಾಗಬೇಕು. +ಒಂದು ಉಪಪ್ರಾಂತದಲ್ಲಿ ಮುಂಬೈ ಪ್ರಾಂತ್ಯದ ಮರಾಠಿ ಮಾತಾಡುವ ಜಿಲ್ಲೆಗಳಿರಬೇಕು. + ಇನ್ನೊಂದರಲ್ಲಿ ಮಧ್ಯಪ್ರಾಂತಗಳ ಮತ್ತು ಬೀರಾರ್‌ನ ಮರಾಠಿ ಮಾತಾಡುವ ಜಿಲ್ಲೆಗಳಿರಬೇಕು. +ಎರಡು ಉಪಪ್ರಾಂತ್ಯಗಳ ವಿಚಾರ ಹುಟ್ಟಿರುವುದು ಮಧ್ಯಪ್ರಾಂತ್ಯಗಳ ಮತ್ತು ಬೀರಾರ್‌ ಪ್ರಾಂತ್ಯಗಳ ಮರಾಠಿ ಮಾತಾಡುವ ಜನರಿಂದ ಅದು ತಮ್ಮ ರಾಜಕೀಯ ಜೀವನ ಕೊನೆಗೊಳ್ಳುವುದೆಂಬ ಭೀತಿ ಇರುವ ಕೆಲವೇ ಉಚ್ಚ ಜಾತಿಯ ರಾಜಕಾರಣಿಗಳ ವಿಚಾರವೆಂದು ತಿಳಿದು ನನಗೆ ಸಮಾಧಾನವೆನಿಸಿದೆ. +ಅದಕ್ಕೆ ಮಧ್ಯಪ್ರಾಂತ್ಯಗಳ ಹಾಗೂ ಬೀರಾರ್‌ನ ಸಾಮಾನ್ಯ ಜನರ ಬೆಂಬಲ ಇರುವುದಿಲ್ಲ. +ಒಂದು ಬಹು ಮಹತ್ವದ ತತ್ವವನ್ನು ವಿವರಿಸುವ ಅವಕಾಶ ಇದರಿಂದ ದೊರೆಯುವುದೆಂಬ ಕಾರಣದಿಂದ ಈ ಭಿನ್ನ ವಿಚಾರವನ್ನಲ್ಲಿ ಪ್ರತಿಪಾದಿಸಿರುತ್ತೇನೆ. +ಭಾಷಾವಾರು ಪ್ರಾಂತ್ಯವನ್ನು ನಿರ್ಮಿಸುವ ನಿರ್ಣಯ ತೆಗೆದುಕೊಂಡ ಬಳಿಕ, ಒಂದಕ್ಕೊಂದು ಹತ್ತಿದ ಮತ್ತು ಒಂದೇ ಭಾಷೆಯನ್ನಾಡುವ ಜನರಿರುವ ಜಿಲ್ಲೆಗಳೆಲ್ಲ ಒಂದೇ ಪ್ರಾಂತ್ಯದಲ್ಲಿ ಬರಬೇಕೆಂಬುದು ನನ್ನ ಖಚಿತ ಅಭಿಪ್ರಾಯ. +ಆಯ್ಕೆಗಾಗಲಿ ಅಥವಾ ಸ್ವಂತ ನಿರ್ಣಯಗಳಾಗಲಿ ಇಲ್ಲಿ ಅವಕಾಶ ಇರಕೂಡದು. +ದೊಡ್ಡ ಪ್ರಾಂತೀಯ ಘಟಕಗಳನ್ನು ನಿರ್ಮಿಸಲು ಎಲ್ಲರೂ ಪ್ರಯತ್ನಿಸತಕ್ಕದ್ದು. +ಚಿಕ್ಕ ಪ್ರಾಂತ್ಯಗಳು ಸಾಮಾನ್ಯ ಸ್ಥಿತಿಯಲ್ಲಿ ಭಾಗವಾಗುತ್ತವೆ. +ತುರ್ತು ಸ್ಥಿತಿಯಲ್ಲಿದುರ್ಬಲತೆಯ ತಾಣಗಳಾಗುತ್ತವೆ. +ಅಂತಹ ಪ್ರಸಂಗವನ್ನು ತಪ್ಪಿಸತಕ್ಕದ್ದು. +ಆದ್ದರಿಂದಲೇ ಮಹಾರಾಷ್ಟ್ರದ ಎಲ್ಲ ಭಾಗಗಳು ಒಂದೇ ಪ್ರಾಂತ್ಯದಲ್ಲಿ ಸೇರಬೇಕೆಂದು ನಾನು ಒತ್ತಿ ಹೇಳುತ್ತೇನೆ. +ಮಹಾರಾಷ್ಟ್ರ ಮತ್ತು ಮುಂಬೈ ನಗರ ಮುಂಬೈ ಬಗೆಗಿರುವ ವಿವಾದ. +ಮುಂಬೈಯನ್ನು ಮಹಾರಾಷ್ಟ್ರದಲ್ಲಿ ಸೇರಿಸಬೇಕೊ, ಬೇಡವೊ ಎಂಬ ಮತ್ತೊಂದು ವಿಷಯದ ಬಗೆಗೆ ವಿವಾದವಿರುತ್ತದೆ. +ಭಾರತೀಯ ವರ್ತಕರ ಭವನದಲ್ಲಿ ಒಂದು ಸಭೆ ಸೇರಿತ್ತು . +ಆ ಸಭೆಯಲ್ಲಿ ಭಾಗವಹಿಸಿದವರ ಸಂಖ್ಯೆ ೬ಂ ಕ್ಕೂ ಒಬ್ಬ ಭಾರತೀಯ ಕ್ರೈಸ್ತನ ಹೊರತಾಗಿ ಅವರೆಲ್ಲರು ಗುಜರಾತಿ ಮಾತನಾಡುವ ವರ್ತಕರು ಮತ್ತು ಉದ್ದಿಮೆದಾರರು. +ಅದು ಕೆಲವೇ ವರ್ಗದವರ ಚಿಕ್ಕ ಸಭೆಯಾದರೂ ಅದರ ಗೊತ್ತುವಳಿಗಳನ್ನು ಭಾರತದ ಪ್ರತಿಯೊಂದು ಮಹತ್ವದ ವೃತ್ತಪತ್ರಿಕೆಯ ಮುಖಪುಟದಲ್ಲಿ ತಕ್ಷಣ ಪ್ರಕಟಿಸಲಾಯಿತು . +ಆ ಗೊತ್ತುವಳಿಗಳ ಪ್ರಭಾವ ಟೈಮ್ಸ್‌ ಆಫ್‌ ಇಂಡಿಯಾ ಪತ್ರಿಕೆಯ ಮೇಲೆ ಅಧಿಕವಾದ್ದರಿಂದ ಅದು ಆ ಗೊತ್ತುವಳಿಗಳನ್ನು ಕುರಿತು ಸಂಪಾದಕೀಯ ಲೇಖನವನ್ನೇ ಬರೆಯಿತು. +ಅದು ಮಹಾರಾಷ್ಟ್ರ ಪ್ರಾಂತ್ಯದ ವಿರುದ್ಧ ಎತ್ತಿದ ನಿಂದಕ ದ್ವನಿಯನ್ನು ಮೆಲ್ಲಗೆ ಖಂಡಿಸುತ್ತ, ಆ ಸಭೆಯ ಗೊತ್ತುವಳಿಗಳನ್ನೆಲ್ಲ ಎತ್ತಿಹಿಡಿಯಿತು. +ಐಯರ್ಲೆಂಡಿನ ವಿವಾದದಲ್ಲಿ “ಲಾರ್ಡ್‌ ಬರ್ಕನ್‌ ಹೆಡ್‌ನು ಐಯರ್ಲೆಂಡದ ಮುಂದಾಳು ಮಿ.ರೆಡಮಾರ್ಡಗೆ ಕೊಟ್ಟ ಉತ್ತರದ ಸಾಧುತ್ವವೇ ಇದರಿಂದ ಸಿದ್ಧವಾಗುತ್ತದೆ. +ಅಂದರೆ ಕೆಲವು ಪ್ರಸಂಗಗಳಲ್ಲಿ ಅಲ್ಪ ಸಂಖ್ಯೆಯ ವರ್ಗವೇ ಬಹುಸಂಖ್ಯೆಯ ವರ್ಗಕ್ಕಿಂತ ಹೆಚ್ಚು ಪ್ರಭಾವೀ ಇರುತ್ತದೆ. +ಈ ವಿವಾದದ ಬಗೆಗೆ ಅನುಕೂಲ ಮತ್ತು ಪ್ರತಿಕೂಲ ವಿಚಾರಗಳನ್ನು ಮಂಡಿಸದಿದ್ದಲ್ಲಿ ನನ್ನ ವಿಜ್ಞಾಪನ ಪತ್ರವು ಬಹಳ ಅಪೂರ್ಣವಾಗುವುದು. +ಅದಕ್ಕೆ ಎರಡು ಕಾರಣಗಳುಂಟು. +ಮೊದಲನೆಯದಾಗಿ,ಆ ಸಭೆಯು ಬಹು ಮಹತ್ವದ ಸಭೆ ಎಂದು ಪರಿಗಣಿಸಲಾಗಿರುತ್ತದೆ. +ಎರಡನೆಯದಾಗಿ, ಸಭೆಯ ಗೊತ್ತುವಳಿಗಳನ್ನು ವಿಶ್ವವಿದ್ಯಾಲಯದ ಖ್ಯಾತ ಪ್ರಾಧ್ಯಾಪಕರು ಎತ್ತಿಹಿಡಿದಿರುತ್ತಾರೆ. +ಮುಂಬೈ ಬಗೆಗಿನ ಸೂಚನೆಗಳು. + ಸಭೆಯು ಕೆಳಗಿನ ಗೊತ್ತುವಳಿಯನ್ನು ಅಂಗೀಕರಿಸಿತು + ಭಾಷಾವಾರು ಪ್ರಾಂತ್ಯರಚನೆಯ ಪ್ರಶ್ನೆಯನ್ನು ಮುಂದೂಡಬೇಕು. +ಇಲ್ಲವೆ ಹಾಗೆ ಮುಂದೂಡಲು ಸಾಧ್ಯವಿಲ್ಲದಿದ್ದಲ್ಲಿ, ಮುಂಬೈ ನಗರವನ್ನು ಪ್ರತ್ಯೇಕ ಪ್ರಾಂತ್ಯವನ್ನಾಗಿ ಮಾಡಬೇಕು. +ಇವೂ ಅಲ್ಲದೆ, ಮೂರನೆಯ ಗೊತ್ತುವಳಿಯನ್ನು ಸಹ ಮಂಡಿಸಲಾಗಿತ್ತು. +ಅದೆಂದರೆ ಕೊಂಕಣವನ್ನು ಪ್ರತ್ಯೇಕ ಪ್ರಾಂತ್ಯವನ್ನಾಗಿ ಮಾಡಿ, ಮುಂಬೈಯನ್ನು ಅದರ ರಾಜಧಾನಿ ಮಾಡಬೇಕು. +ಈ ಯೋಜನೆಗೆ ಯಾರ ಬೆಂಬಲವೂ ಇದ್ದಿರಲಿಲ್ಲ. +ಆದ್ದರಿಂದ ಅದನ್ನು ಚರ್ಚಿಸುವ ಅವಶ್ಯಕತೆ ಇರುವುದಿಲ್ಲ. +ಮುಂಬೈ ಬಗೆಗೆ ನಿರ್ಣಯ ಈಗಲೇ ತೆಗೆದುಕೊಳ್ಳಬೇಕು. + ಮುಂಬೈ ಮಹಾರಾಷ್ಟ್ರದಲ್ಲಿ ಸೇರಬೇಕೋ ಅಥವಾ ಬೇಡವೋ ಎಂಬ ಮುಖ್ಯ ಸಮಸ್ಯೆಯನ್ನು ಅತ್ಯರ್ಥಗೊಳಿಸಿದ್ದಾದರೆ. + ಮಹಾರಾಷ್ಟ್ರ ಪ್ರಾಂತ್ಯ ರಚನೆಯ ವಿಷಯವನ್ನು ಮುಂದೂಡುವುದಕ್ಕೆ ನನ್ನದೇನೂ ಅಭ್ಯಂತರ ಇರುವುದಿಲ್ಲ. +ಇನ್ನೊಂದು ಇಲ್ಲವೆ ಹತ್ತು ವರ್ಷ ಮುಂದಕ್ಕೆ ಹಾಕಿದರೂ ನಡೆಯುತ್ತದೆ . +ಆದರೆ,ಆ ಗೊತ್ತುವಳಿ ಕೇವಲ ಪಲಾಯನವಾದ ಆಗಿರುತ್ತದೆ. +ಅದು ಸಮಸ್ಯೆಯನ್ನು ಬಗೆಹರಿಸದೆ, ಸುಮ್ಮನೆ ಮುಂದೂಡುತ್ತದೆ. +ಆದ್ದರಿಂದ ಮುಖ್ಯ ಸಮಸ್ಯೆಯ ಇತ್ಯರ್ಥ ಈಗಲೇ ಆಗತಕ್ಕದ್ದು. +ಮುಂಬೈ ಮಹಾರಾಷ್ಟ್ರದಿಂದ ಹೊರಗುಳಿಯಬೇಕೆಂಬುದಕ್ಕೆ ಆಧಾರ ಮುಂಬೈಯನ್ನು ಮಹಾರಾಷ್ಟ್ರದಿಂದ ಪ್ರತ್ಯೇಕಿಸಬೇಕೆಂಬ ನಿಲುವಿನ ಪರ ವಾದದ ಅಂಶಗಳನ್ನು ಕೆಳಗೆ ಕೊಟ್ಟರುತ್ತದೆ :೧) ಮುಂಬೈ ಎಂದೂ ಮಹಾರಾಷ್ಟದ ಭಾಗ ಆಗಿರುವುದಿಲ್ಲ? +೨) ಮುಂಬೈ ಎಂದೂ ಮರಾಠಾ ಸಾಮ್ರಾಜ್ಯದ ಭಾಗ ಆಗಿರಲಿಲ್ಲ? +೩) ಮುಂಬೈ ನಗರದಲ್ಲಿ ಮರಾಠಿ ಮಾತನಾಡುವವರು ಬಹುಸಂಖ್ಯೆಯಲ್ಲಿ ಇರುವುದಿಲ್ಲ. +೪) ಮುಂಬೈ ನಗರದಲ್ಲಿ ಗುಜರಾಧಿಗಳು ಬಹಳ ಹಿಂದಿನ ಕಾಲದಿಂದ ವಾಸವಾಗಿದ್ದಾರೆ. +೫) ಮುಂಬೈ ಮಹಾರಾಷ್ಟ್ರದ ಹೊರಗಿನ ಪ್ರದೇಶಗಳ ಮುಖ್ಯವ್ಯಾಪಾರೀ ಕೇಂದ್ರ ಆಗಿರುತ್ತದೆ. +ಆದ್ದರಿಂದ ಮುಂಬೈ ಮೇಲೆ ಮಹಾರಾಷ್ಟ್ರದ ಹಕ್ಕು ಇರುವುದಿಲ್ಲ. +ಅದು ಇಡೀ ಭಾರತಕ್ಕೆ ಸೇರಿದ್ದು. +೬)ಮುಂಬೈಯಲ್ಲಿ ವ್ಯಾಪಾರ ಮತ್ತು ಉದ್ದಿಮೆಯನ್ನು ಸ್ಥಾಪಿಸಿದವರು ಮತ್ತು ಬೆಳೆಸಿದವರು ಗುಜರಾಥಿ ಭಾಷೆಯನ್ನು ಆಡುವವರು. +ಮಹಾರಾಷ್ಟೀಯರು ಅಲ್ಲಿ ಕೇವಲ ಕರಣಿಕರು ಮತ್ತು ಕೂಲಿಗಳಾಗಿ ದುಡಿಯುತ್ತಿದ್ದಾರೆ. +ಹೆಚ್ಚು ಪ್ರಮಾಣದಲ್ಲಿ ಕಾರ್ಮಿಕರಾಗಿದ್ದ ಮಹಾರಾಷ್ಟೀಯರ ರಾಜಕೀಯ ಪ್ರಭುತ್ವದ ಕೆಳಗೆ ವ್ಯಾಪಾರ ಮತ್ತು ಉದ್ದಿಮೆಯ ಒಡೆಯರನ್ನು ಇಡುವುದು ತಪ್ಪಾಗುತ್ತದೆ. +೭) ಮುಂಬೈಯ ಹೆಚ್ಚಿನ ಆದಾಯದ ಮೇಲೆ ಜೀವಿಸುವ ಉದ್ದೇಶದಿಂದ ಮುಂಬೈಯನ್ನು ಮಹಾರಾಷ್ಟ್ರ ತನ್ನಲ್ಲಿ ಸೇರಿಸಿಕೊಳ್ಳಬಯಸುತ್ತದೆ. +೮) ಬಹು ಭಾಷೆಗಳ ಪ್ರಾಂತ್ಯವಿರುವುದು ಹೆಚ್ಚು ಉತ್ತಮ. +ಅಲ್ಲಿ ಅಲ್ಪ ಸಂಖ್ಯೆಯವರಿಗೆ ಅಪಾಯ ಇರುವುದಿಲ್ಲ +೯)ಪ್ರಾಂತ್ಯಗಳ ಪುನರ್ವಿಂಗಡಣೆ ವೈಚಾರಿಕ ಮಾರ್ಗ ಅನುಸರಿಸಬೇಕೇ ವಿನಹ, ಪ್ರತ್ಯೇಕ ರಾಷ್ಟೀಯ ಭಾವನೆ ಪ್ರಚೋದಿಸುವ ಭಾವುಕ ಮಾರ್ಗವನ್ನೆಲ್ಲ.” +ಈ ಅಂಶಗಳನ್ನು ಪರಿಶೀಲಿಸುವುದರಿಂದ ಒಂದನೆಯವು ಮತ್ತು ಎರಡನೆಯವು ಪೂರ್ವಭಾವೀ ಅಂಶಗಳೆಂದು ಸ್ಪಷ್ಟವಿರುತ್ತದೆ. +ಏಕೆಂದರೆ, ಸಿದ್ಧಮಾಡುವ ಹೊಣೆ ಯಾರದೆಂದು ನಿರ್ಧರಿಸುವಲ್ಲಿ ಅವು ನಮಗೆ ಸಹಾಯ ಮಾಡುತ್ತವೆ. +ಮುಂಬೈ ಮಹಾರಾಷ್ಟದ ಭಾಗವೆಂದು ಸಿದ್ಧವಾಗಿರುವಾಗ, ಮಹಾರಾಷ್ಟ್ರದಿಂದ ಅದನ್ನು ಏಕೆ ಪ್ರತ್ಯೇಕಿಸಬೇಕೆಂದು ಸಿದ್ಧಮಾಡಿ ತೋರಿಸುವ ಹೊಣೆ, ಮುಂಬೈ ಪ್ರತ್ಯೇಕ ಇರಬೇಕೆಂದು ಒತ್ತಾಯಿಸುವವರದಿರುತ್ತದಲ್ಲದೆ, ಮುಂಬೈ ಮಹಾರಾಷ್ಟದ ಭಾಗವಾಗಿ ಉಳಿಯಬೇಕೆಂದು ಹಕ್ಕಿನಿಂದ ಹೇಳುವವರದಲ್ಲ. +ಆದ್ದರಿಂದ ನಾನು ಈ ಎರಡು ಅಂಶಗಳನ್ನು ಮೊದಲಿಗೆ ಪರಿಶೀಲಿಸುತ್ತೇನೆ. +ಈ ಅಂಶಗಳನ್ನು ಇತಿಹಾಸ ಮತ್ತು ಭೂಗೋಳ ಎರಡರ ಬೆಳಕಿನಲ್ಲಿ ನೋಡಬಹುದು. +ಈ ಸಮಸ್ಯೆಯನ್ನು ಬಿಡಿಸುವಲ್ಲಿ ಇತಿಹಾಸ ಸಹಾಯ ಮಾಡಲಾರದೆಂಬ ಮನವರಿಕೆ ನನಗಿರುತ್ತದೆ. +ನಮ್ಮ ನಿರ್ಣಯಕ್ಕೆ ಆಧಾರವಾಗಬೇಕಾದ ವಾಸ್ತವ ಸಂಗತಿಗಳನ್ನು ಹುಡುಕಲು ಎಷ್ಟು ಹಿಂದಕ್ಕೆ ಹೋಗಬೇಕೆಂದು ಗೊತ್ತಾಗುವುದಿಲ್ಲ. +ಇಲ್ಲಿ ಪ್ರಾಚೀನ ಇತಿಹಾಸ ಪ್ರಯೋಜನಕಾರಿ ಆಗದೆಂಬುದು ಸ್ಪಷ್ಟವಿರುತ್ತದೆ. +ನಮಗೆ ಉಪಯೋಗಕ್ಕೆ ಬರುವುದು ವರ್ತಮಾನದ ಗತ ಇತಿಹಾಸ. +ನಮ್ಮ ಎದುರಿರುವ ಸದ್ಯದ ಸಮಸ್ಯೆಯನ್ನು ಬಿಡಿಸಲು ವರ್ತಮಾನದ ಇತಿಹಾಸ ಸಹಾಯವಾಗಬಹುದೆಂಬ ಭರವಸೆಯನ್ನು ಯಾರಾದರೂ ಪಶ್ನಿಸಬಹುದು. +ಪ್ರಾಚೀನ ಕಾಲದಲ್ಲಿ ಗೆದ್ದು ಆಳುವವರ ಮತ್ತು ಸೋತು ಆಳಲ್ಪಡುವವರ ನಡುವೆ ಸಂಪರ್ಕ ಇರುತ್ತಿತ್ತು. +ಭಾರತಕ್ಕೆ ಅನ್ವಯಿಸುವ ಮಾತು ಯೂರೋಪಕ್ಕೂ ಅನ್ವಯಿಸುತ್ತದೆ. +ಆದರೆ ಇಂತಹ ಸಂಪರ್ಕಗಳ ಪರಿಣಾಮಗಳು ಯೂರೋಪ್‌ ಮತ್ತು ಭಾರತದಲ್ಲಿ ಬೇರೆ ಬೇರೆ ಆಗಿರುತ್ತವೆ. +ಯೂರೋಪದಲ್ಲಿ ಇಂಥ ಸಂಪರ್ಕಗಳ ಪರಿಣಾಮವಾಗಿ ಪರಸ್ಪರ ತಿಕ್ಕಾಡುವ ಸಾಮಾಜಿಕ ಘಟಕಗಳ ಸರಿ ಬೆರಕೆ ಸಾಧ್ಯವಾಯಿತು. +ಮೇಲಿಂದ ಮೇಲೆ ನಡೆದ ಅಂತರ್ಬಣಗಳ ಮದುವೆಗಳು ಮೂಲ ಜನಾಂಗಗಳನ್ನು ದಿಜ್ಮೂಢಗೊಳಿಸಿರುತ್ತವೆ. +ಅತಿ ಹೆಚ್ಚು ಉಪಯುಕ್ತವಿದ್ದ ಇಲ್ಲವೆ ಎಲ್ಲ ಜನರಾಡುವ ಒಂದು ಭಾಷೆ ಇನ್ನೊಂದನ್ನು ಪದಚ್ಯುತಗೊಳಿಸಿತು. +ಒಂದೇ ದೇಶದಲ್ಲಿಯ ಶ್ರೇಷ್ಠ ನಾಗರಿಕತೆಯು ಮಿಕ್ಕವುಗಳನ್ನು ಸಹಜವಾಗಿ ಕಿತ್ತು ಹಾಕಿರುತ್ತದೆ. +ಪರಕೀಯ ಸಂಸ್ಕೃತಿಗಳನ್ನು ಮತ್ತು ಭಾಷೆಗಳನ್ನು ಅರಗಿಸಿಕೊಳ್ಳುವ ಸಹಜ ಬಲವು ತೀರ ಪ್ರಬಲವಿದ್ದುದರಿಂದ ಅದರ ನಿಯಂತ್ರಣಕ್ಕೆ ಕ್ರಮ ಕೈಗ್ಗೊಳ್ಳುವುದು ಅವಶ್ಯವಿರುತ್ತದೆ. +ಭಾರತದಲ್ಲಿ ಎಂತಹ ಪ್ರವೃತ್ತಿ ಇರುತ್ತದೆ? +ನಿಶ್ಚಯವಾಗಿಯೂ ಅದು ಬೆರಕೆಗೆ ವಿರುದ್ಧ ಇರುತ್ತದೆ. +ಮುಸಲ್ಮಾನರು ಹಿಂದೂಗಳನ್ನು ಜಯಿಸಿದರು. +ಆದರೆ ಮುಸಲ್ಮಾನರು ಮುಸಲ್ಮಾನರಾಗಿ ಉಳಿದರು ಮತ್ತು ಹಿಂದೂಗಳು ಹಿಂದೂಗಳಾಗಿ ಉಳಿದರು. +ಮಹಾರಾಷ್ಟೀಯರು ಗುಜರಾಥಿಗಳನ್ನು ಗೆದ್ದರು, ಮತ್ತು ಕೆಲವರ್ಷ ಅವರನ್ನು ಆಳಿದರು. +ಗುಜರಾತಿಗಳ ಮೇಲೆ ಅದರ ಪರಿಣಾಮ ಏನಾಯಿತು? +ಪರಿಣಾಮ ಶೂನ್ಯ. +ಗುಜರಾತಿಗಳು ಗುಜರಾತಿಗಳಾಗಿ ಉಳಿದಿದ್ದಾರೆ. +ಮತ್ತು ಮಹಾರಾಷ್ಟ್ರೀಯರು ಮಹಾರಾಷ್ಟ್ರೀಯರಾಗಿ ಉಳಿದಿದ್ದಾರೆ. +ಮಹಾರಾಷ್ಟೀಯರನ್ನು ಚಾಲುಕ್ಯರು ಗೆದ್ದರು. +ಶಿಲಾಹಾರರೂ ಮಹಾರಾಷ್ಟೀಯರನ್ನು ಗೆದ್ದರು. +ಆದರೆ ಅವರ ನಡುವೆ ಸರಿಬೆರಕೆ ಏರ್ಪಡಲಿಲ್ಲ. +ಚಾಲುಕ್ಕರು ಹಾಗೂ ಶಿಲಾಹಾರರು ತಾವು ಇದ್ದ ಹಾಗೇ ಉಳಿದರು. +ಮಹಾರಾಷ್ಟ್ರೀಯರೂ ಹಾಗೆ ಉಳಿದರು. +ಐತಿಹಾಸಿಕ ಪರಿಸ್ಥಿತಿ ಹೀಗಿದ್ದಾಗ ಸದ್ಯದ ಸಮಸ್ಯೆಗೆ ಪರಿಹಾರ ಕಂಡುಹಿಡಿಯುವಲ್ಲಿ ಅದರಿಂದ ಏನು ಸಹಾಯ ಸಿಕ್ಕಬಹುದು? +ಆಂತರಿಕ ಏರಿಳಿತಗಳು ಮತ್ತು ಬಾಹ್ಯ ದಾಳಿಗಳ ಇತಿಹಾಸ ಚಲಿಸುವ ಚಿತ್ರಕ್ಕಿಂತ ಹೆಚ್ಚೇನೂ ಆಗಿರುವುದಿಲ್ಲ. + ಪರಕೀಯರ ಇಲ್ಲವೆ ಸ್ಪದೇಶೀಯರ ಜಯಕ್ಕೆ ಏನೂ ಅರ್ಥ ಇರುವುದಿಲ್ಲ ಮತ್ತು ಅದರಿಂದ ಏನೂ ಸಿದ್ಧ ಆಗುವುದಿಲ್ಲ. +ನಾವು ಈಗ ಭೂಗೋಳದ ಠಡೆಗೆ ತಿರುಗೋಣ ಮತ್ತು ಅದರ ತೀರ್ಪನ್ನು ಗಮನಿಸೋಣ. +ಇತಿಹಾಸಕ್ಕಿಂತ ಇದು ಹೆಚ್ಚು ಉತ್ತಮ ಸಾಕ್ಷಿ ಇದ್ದಂತೆ ತೋರುತ್ತದೆ. +ಈ ಉದ್ದೇಶಕ್ಕಾಗಿ ಮಹಾರಾಷ್ಟ್ರದ ಪ್ರದೇಶದಲ್ಲಿ ಮುಂಬೈಯ ಸ್ಥಳವನ್ನು ಗಮನಿಸಬೇಕಾಗುತ್ತದೆ. +ಮಹಾರಾಷ್ಟ್ರ ಅಸ್ತಿತ್ವಕ್ಕೆ ಬಂದದ್ದಾದರೆ ಅದರ ಆಕಾರ ತ್ರಿಕೋನವನ್ನು ಹೋಲುತ್ತದೆ. +ಒಂದು ಬದಿಗೆ ದಮನ್‌ ಮತ್ತು ಕಾರವಾರಗಳ ನಡುವಿನ ಪಶ್ಚಿಮ ಕರಾವಳಿ ಇರುತ್ತದೆ. +ಮುಂಬೈ ದಮನ್‌ ಮತ್ತು ಕಾರವಾರಗಳ ಮಧ್ಯ ಇರುತ್ತದೆ. +ಗುಜರಾಥ ಪ್ರಾಂತ್ಯ ದಮನ್‌ದಿಂದ ಪ್ರಾರಂಭವಾಗಿ ಉತ್ತರಕ್ಕೆ ಹರಡುತ್ತದೆ. +ಮುಂಬೈ ಗುಜರಾಥ ಪ್ರಾಂತದ ಪ್ರಾರಂಭದ ಗುರುತಾದ ದಮನ್‌ನ ದಕ್ಷಿಣಕ್ಕೆ ೮೫ ಮೈಲು ಮತ್ತು ಕರ್ನಾಟಕದ ಪ್ರಾರಂಭದ ಗುರುತಾದ ಕಾರವಾರದ ಉತ್ತರಕ್ಕೆ ೨೫ಂ ಮೈಲು ದೂರದಲ್ಲಿರುತ್ತದೆ. +ದಮನ್‌ ಮತ್ತು ಕಾರವಾರಗಳ ನಡುವಿನ ಸಂಪೂರ್ಣಪ್ರದೇಶ ಮಹಾರಾಷ್ಟಕ್ಕೆ ಸೇರಿದ್ದಾದರೆ, ಮುಂಬೈ ಮಹಾರಾಷ್ಟ್ರಕ್ಕೆ ಸೇರಿದ್ದಲ್ಲವೆಂದು ಹೇಗೆ ಸಾಧಿಸುವುದು? +ಇದು ಅಲ್ಲಗಳೆಯಲಿಕ್ಕಾಗದಂಥ ನೈಸರ್ಗಿಕ ಸಂಗತಿ. +ಭೂಗೋಳ ಮುಂಬೈಯನ್ನು ಮಹಾರಾಷ್ಟ್ರದ ಭಾಗವನ್ನಾಗಿ ಮಾಡಿರುತ್ತದೆ. +ಪ್ರಾಕೃತಿಕ ಸಂಗತಿಗಳಿಗೆ ಸವಾಲು ಹಾಕಬಯಸುವವರು ಹಾಕಲಿ. +ಪೂರ್ವಗ್ರಹ ಪೀಡಿತವಲ್ಲದ ಬುದ್ಧಿಗೆ ಮುಂಬೈ ಮಹಾರಾಷ್ಟ್ರಕ್ಕೆ ಸೇರಿದ್ದೆಂಬುದಕ್ಕೆ ಭೂಗೋಳ ಅಂತಿಮ ಆಧಾರವಾಗಿರುತ್ತದೆ. + ಮುಂಬೈಯನ್ನು ಮರಾಠರು ತಮ್ಮ ಸಾಮ್ರಾಜ್ಯದಲ್ಲಿ ಸೇರಿಸಿಕೊಳ್ಳದಿದ್ದ ಸಂಗತಿ, ಭೂಗೋಳ ಕೊಟ್ಟ ನಿರ್ಣಯದ ಸಾಧುತ್ವಕ್ಕೆ ಯಾವುದೇ ರೀತಿಯಲ್ಲಿ ಧಕ್ಕೆ ತರಲಾರದು. +ಮರಾಠರು ಮುಂಬೈಯನ್ನು ಗೆಲ್ಲುವಗೊಡವೆಗೆ ಹೋಗದಿದ್ದರೇನಾಯಿತು? +ಅದರಿಂದ ಮುಂಬೈ ಮಹಾರಾಷ್ಟ್ರದ ಭಾಗವಲ್ಲವೆಂದು ಸಿದ್ಧವಾಗುವುದಿಲ್ಲ. +ಅದರ ಅರ್ಥ ಇಷ್ಟೆ ಮರಾಠರ ಶಕ್ತಿ ಭೂಶಕ್ಕಿ ಆಗಿತ್ತು ಮತ್ತು ಅವರು ಬಂದರನ್ನು ಗೆಲ್ಲುವುದರ ಕಡೆಗೆ ಲಕ್ಷ್ಮಹಾಕಲಿಲ್ಲ. +ಅಂಶಗಳ ನಿರ್ಣಯ ಸಿಕ್ಕಿರುವಾಗ, ಮುಂಬೈಯನ್ನು ಮಹಾರಾಷ್ಟ್ರದಲ್ಲಿ ಸೇರಿಸತಕ್ಕದ್ದಲ್ಲ ಎಂದು ವಾದಿಸುವವರ ಮೇಲೆ ಅದನ್ನು ಸಿದ್ಧಮಾಡುವ ಜವಾಬುದಾರಿಕೆಯನ್ನು ಹೇರತಕ್ಕದ್ದು. +ಅವರು ತಮ್ಮ ಜವಾಬುದಾರಿಯನ್ನು ನಿಭಾಯಿಸಿದ್ದಾರೆಯೆ? +ಈ ಪ್ರಶ್ನೆ ನಮ್ಮನ್ನು ಇತರ ಅಂಶಗಳ ಪರಿಶೀಲನೆಗೆ ತೊಡಗಿಸುತ್ತದೆ. +ಮರಾಠಿ ಮಾತನಾಡುವ ಜನಸಂಖ್ಯೆ-ಬಹುಸಂಖ್ಯೆಯೇ ಅಥವಾ ಅಲ್ಪಸಂಖ್ಯೆಯೇ? + ಈ ಪ್ರಶ್ನೆಯ ವಿಷಯದಲ್ಲಿ ಒಮ್ಮತ ಇರುವುದಿಲ್ಲ. +ಮುಂಬೈ ಮಹಾರಾಷ್ಟ್ರದಲ್ಲಿ ಸೇರಬೇಕೆಂಬುದರ ಪರವಾಗಿ ಮಾತನಾಡುತ್ತ ಪ್ರೊ.ಗಾಡಗೀಳ್‌ ಅವರು ೧೯೪೧ರ ಜನಗಣತಿಯ ಪ್ರಕಾರ ಮುಂಬೈಯಲ್ಲಿ ಮರಾಠಿ ಮಾತಾಡುವವರ ಸಂಖ್ಯೆ ಶೇ.೫೧ ಇರುವುದೆಂದು ಒತ್ತಿ ಹೇಳುತ್ತಾರೆ. +ಅದರ ವಿರುದ್ಧ ಮಾತನಾಡುತ್ತ ಪ್ರೊ.ಫೀವಾಲಾ ಅವರು ಮರಾಠಿ ಮಾತನಾಡುವವರ ಸಂಖ್ಯೆ ಶೇ.೪೧ ಇದೆ ಎಂದುಹೇಳಿದರೆ, ಪ್ರೊ.ವಕೀಲ್‌ ಅವರು ಅದರ ಪ್ರಮಾಣವನ್ನು ಇನ್ನೂ ಕಡಿಮೆ ಮಾಡಿ ಇನ್ನೂ ಕೆಳಗೆ, ಅಂದರೆ ಶೇ.೩೯ ಕ್ಕೆ ಇಳಿಸುತ್ತಾರೆ. +ಈ ಅಂಕಿ ಸಂಖ್ಯೆಗಳನ್ನು ಪರಿಶೀಲಿಸಲು ನನಗೆ ಸಮಯ ಇರಲಿಲ್ಲ. +ಮುಂಬೈಯ ಜನಗಣನೆಯಿಂದ ಮರಾಠಿ ಆಡುವವರ ನಿಖರವಾದ ಅಂಕಿ ಸಂಖ್ಯೆ ಸಿಗುವುದಿಲ್ಲ ಎಂದು ನನಗನ್ನಿಸುತ್ತದೆ. +ಆದಾಗ್ಯೂ ಪ್ರೊ.ವಕೀಲ್‌ ಅವರು ಕೊಡುವ ಕಾರಣಗಳನ್ನು ಓದಿದರೆ, ಅವರು ಬಯಸಿದಂತೆ ಆಗಬಯಸುವ ಕಾರಣಗಳನ್ನು ಕೊಟ್ಟಿದ್ದಾರೆಂದು ಅನಿಸದಿದ್ದರೂ, ಅವು ಕಾಲ್ಪನಿಕ ಎಂದು ಅನಿಸದಿರದು. +ಆದರೆ, ಪ್ರೊ.ವಕೀಲ್‌ ಅವರು ಕೊಡುವ ಅಂಕಿ ಸಂಖ್ಯೆ ಸರಿ ಎಂದು ತಿಳಿದರೂ, ಅದರಿಂದ ಏನಾಗಬೇಕಾಗಿದೆ? +ಅದರಿಂದ ಯಾವ ನಿರ್ಣಯಕ್ಕೆ ಬರಲು ಶಕ್ಯ. + ಮುಂಬೈಯನ್ನು ಮಹಾರಾಷ್ಟ್ರದಲ್ಲಿ ಸೇರಿಸಬೇಕೆಂಬ ಭಾಷಾವಾರು ಪ್ರಾಂತ್ಯಗಳು ೧೩೧ಬೇಡಿಕೆಯನ್ನು ಹತ್ತಿಕ್ಕಬಹುದೆ? +ಬ್ರಿಟಿಷರು ಭಾರತದ ಒಡೆಯರಾದಂದಿನಿಂದ ಭಾರತವು ಒಂದೇ ರಾಷ್ಟ್ರ ಆಗಿರುತ್ತದೆ. +ಅದರಲ್ಲಿ ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಮುಕ್ತ ಸಂಚಾರದ ಹಕ್ಕು ಇರುತ್ತದೆ. +ಭಾರತೀಯರೆಲ್ಲ ಬಂದು ಮುಂಬೈಯಲ್ಲಿ ನೆಲೆಸಿದರೆ, ಅದರಿಂದ ಮಹಾರಾಷ್ಟ್ರೀಯರಿಗೆ ಯಾಕೆ ತೊಂದರೆ ಆಗಬೇಕು? +ಅದು ಅವರ ತಪ್ಪಲ್ಲ. +ಮುಂಬೈಯನ್ನು ಮಹಾರಾಷ್ಟ್ರದಿಂದ ಹೊರಗಿಡಲು ಜನಸಂಖ್ಯೆಯು ಆಧಾರವಾಗಲಾರದು. +ಗುಜರಾಥಿಗಳು ಮುಂಬೈಯ ಮೂಲ ನಿವಾಸಿಗಳೆ? + ಈ ಪ್ರಶ್ನೆಯನ್ನು ಆಮೂಲಾಗ್ರ ಪರಿಶೀಲಿಸೋಣ. +ಗುಜರಾಥಿಗಳು ಮೂಲ ನಿವಾಸಿಗಳಲ್ಲದ್ದಿರೆ ಅವರು ಮುಂಬೈಗೆ ಹೇಗೆ ಬಂದರು? +ಅವರ ಸಂಪತ್ತಿನ ಮೂಲವೇನು? +ಯಾವ ಗುಜರಾಥೀಯ ತಾನೆ ತಾನು ಮುಂಬೈಯ ಮೂಲ ನಿವಾಸಿ ಎಂದು ಹೇಳಬಯಸುವನು? +ಮತ್ತೆ ಅದೇ ಪ್ರಶ್ನೆ ನಮ್ಮನ್ನು ಕೆಣಕುತ್ತದೆ. +ಹಾಗಾದರೆ, ಅವರು ಮುಂಬೈಗೆ ಹೇಗೆ ಬಂದರು? + ಪೋರ್ಚುಗೀಸರು, ಫ್ರೆಂಚರು ಮತ್ತು ಇಂಗ್ಲಿಷರು ಮಾಡಿದಂತೆ ನಷ್ಟ ಇಲ್ಲದೆ ಅಪಾಯ ಎದುರಿಸುವ ಸಾಹಸ ಮಾಡಿದರೆ? +ಈ ಪಶ್ನೆಗಳಿಗೆ ಇತಿಹಾಸ ಕೊಡುವ ಉತ್ತರಗಳು ಸ್ಪಷ್ಟ ಇರುತ್ತವೆ. +ಸ್ವಯಂ ಪ್ರೇರಣೆಯಿಂದ ಗುಜರಾಥಿಗಳು ಮುಂಬೈಗೆ ಬರಲಿಲ್ಲ. +ಮಾರುಕಟ್ಟೆಯ ದಲ್ಲಾಳಿಗಳಾಗಿ ಕೆಲಸ ಮಾಡಲು ಈಸ್ಟ್‌ ಇಂಡಿಯಾ ಕಂಪನಿಯ ಅಧಿಕಾರಿಗಳು ಅವರನ್ನು ಕರೆತಂದರು. +ಈಸ್ಟ್‌ ಇಂಡಿಯಾ ಕಂಪನಿಯ ಪ್ರಥಮ ಕಾರಖಾನೆ ಸೂರತ್‌ದಲ್ಲಿ ಪ್ರಾರಂಭವಾಯಿತು. +ವ್ಯಾಪಾರ ನಿರ್ವಹಿಸುವಲ್ಲಿ ದಲ್ಹಾಳಿಗಳಾಗಿ ಕೆಲಸ ಮಾಡಿದ ಸೂರತ್‌ ವರ್ತಕರನ್ನು ಅವರು ಅರಿತಿದ್ದರು. +ಆದ್ದರಿಂದ ಅವರನ್ನು ಮುಂಬೈಗೆ ಕರೆತಂದರು. +ಗುಜರಾಥಿಗಳು ಮುಂಬೈಗೆ ಬಂದುದು ಹೀಗೆ. +ಎರಡನೆಯದಾಗಿ, ಉಳಿದ ವರ್ತಕರೊಂದಿಗೆ ಮುಕ್ತ ಸ್ಪರ್ಧೆಗಿಳಿಯುವ ಉದ್ದೇಶದಿಂದ ಅವರು ಮುಂಬೈಗೆ ಬರಲಿಲ್ಲ. +ಅವರು ಈಸ್ಟ್‌ ಇಂಡಿಯಾ ಕಂಪನಿಯಿಂದ ಕೆಲವು ವಿಶೇಷ ವ್ಯಾಪಾರಿ ಸೌಲಭ್ಯಗಳನ್ನು ಪಡೆದುಕೊಂಡು ಬಂದರು. +ಅವರನ್ನು ಮುಂಬೈಗೆ ಆಮದು ಮಾಡಿಕೊಳ್ಳುವ ವಿಷಯವನ್ನು ೧೬೭೧ ರಲ್ಲಿ ಆಗಿನ ಗವರ್ನರ್‌ ಆಂಗೀಯರ್‌ ಅವರು ಮೊದಲಬಾರಿ ಪರಿಶೀಲಿಸಿದರು. +ಬಾಂಬೆ ನಗರ ಮತ್ತು ದ್ವೀಪದ ಗೆಜೆಟಿಯರ್‌ನ ಒಂದನೆಯ ಸಂಪುಟದಲ್ಲಿ ಈ ಕೆಳಗಿನಂತೆ ಅದರ ಉಲ್ಲೇಖ ಇರುತ್ತದೆ”; +ಗವರ್ನರ್‌ ಆಂಗೀಯರ್‌ ಅವರು ಆಸಕ್ತಿ ವಹಿಸಿದ ಯೋಜನೆ ಎಂದರೆ ಮುಂಬೈಯಲ್ಲಿ ಸೂರತ್‌ವರ್ತಕರು (ಬನಿಯಾರು) ನೆಲೆಸುವ ವಿಷಯವನ್ನು ನಿರ್ಧರಿಸುವುದು. +ಮಹಾಜನರು ಇಲ್ಲವೆ ಸೂರತ್‌ ಬನಿಯಾ ಸಮಾಜದ ಸಭೆಯು ಮುಂಬೈಗೆ ಬರುವ ಸಾಹಸವನ್ನು ಮಾಡುವ ಮುಂಚೆ ಕೆಲವು ಸೌಲಭ್ಯಗಳ ಭರವಸೆಯನ್ನು ಬಯಸಿದರೆಂದು ಮತ್ತು ಕಂಪನಿಯು ಮಹಾ ಜನದ ಬೇಡಿಕೆಗಳಿಗೆ ಸಾಮಾನ್ಯಒಪ್ಪಿಗೆ ಕೊಟ್ಟತೆಂದು ತೋರುತ್ತದೆ. +೧ಂ ನೇ ಜನವರಿಯಂದು ಸೂರತ್‌ ಕೌನ್ಸಿಲ್‌ ಕಂಪನಿಗೆ ಒಂದು ಪತ್ರ ಬರೆಯಿತು. +ಮುಂಬೈಯಲ್ಲಿ ಅವರಿಗೆ ಬೇಕಾದ ಸೌಲಭ್ಯಗಳನ್ನು ಕುರಿತು ಸ್ಯಾಮಸನ್‌ ಹಡಗಿನ ಮುಖಾಂತರಕಳಿಸಿದ ಅರ್ಜಿಗೆ ನೀವು ಕೊಟ್ಟ ಉತ್ತರದಿಂದ ಮಹಾಜನ ಇಲ್ಲವೆ ಬನಿಯಾರ ಮುಖ್ಯ ಸಂಘವುಸಮಾಧಾನವಾಗಿರುತ್ತದೆ. +ಆದರೂ ಇನ್ನೊಮ್ಮೆ ತಮಗೆ ತೊಂದರೆ ಕೊಡಬೇಕೆಂದು ನಿರ್ಧರಿಸಿದ್ದಾರೆ. +ತಮ್ಮ ಹಕ್ಕುಗಳನ್ನು ಕೊಟ್ಟು ಅವನ್ನು ನಿಮ್ಮ ಮುದ್ರಿಕೆಯಿಂದ ದೃಢೀಕರಿಸಬೇಕೆಂದು, ನಿಮ್ಮ ಮಧ್ಯಸ್ಥಗಾರಶ್ರೀ ಭೀಮಾಜಿ ಪಾರಖ್‌ ಅವರಿಗೆ ಆದೇಶ ನೀಡಿದ್ದಾರೆ. +ಅಲ್ಲದೆ ತಮ್ಮ ಬೇಡಿಕೆಯನ್ನು ಪುಷ್ಟೀಕರಿಸುವಕಾರಣಗಳನ್ನು ಫಾಲ್ಕನ್‌ ಹಡಗಿನ ಮೂಲಕ ಕಳಿಸಲಾಗುತ್ತಿರುವ ಈ ಕಾಗದದಲ್ಲಿ ವಿವರಿಸಿದ್ದಾರೆ. +ತಮ್ಮ ಬೇಡಿಕೆಯನ್ನು ಬಲಪಡಿಸಲು ಉಪಯೋಗಿಸಿದ ವಾದದಲ್ಲಿ ಸ್ವಲ್ಪ ತೂಕ ಇದ್ದಂತೆ ತೋರುತ್ತದೆ. +ಮಾನ್ಯ ಕಂಪನಿಯು ಶಾಶ್ವತ ಎಂದೂ, ಅದರ ಕಾಯಿದೆಗಳು ಬಲಯುತವಾಗಿರುತ್ತವೆ ಎಂದೂ ಅವರು ಹೇಳುತ್ತಾರೆ. +ಆದರೆ ಅದರ ಅಧ್ಯಕ್ಷರು ಮತ್ತು ಕೌನ್ಸಿಲ್‌ಗಳು ಬದಲಾಗುತ್ತವೆ. +ಅವುಗಳ ಸ್ಥಳದಲ್ಲಿ ಹೊಸದಾಗಿ ಬಂದ ಅಧ್ಯಕ್ಷ ಹಾಗೂ ಕೌನ್ಸಿಲ್‌ಗಳು ಹಿಂದಿನವರು ಕೊಟ್ಟಿದ್ದನ್ನು ಬದಲಾಯಿಸುತ್ತಾರೆ. +ಮಾನ್ಯರು, ಈ ಕಾರಣಕ್ಕಾಗಿ ಅವರ ವಿನಂತಿಯನ್ನು ಮಂಜೂರ್‌ ಮಾಡುವಿರೆಂದು ಆಶಿಸುತ್ತಾರೆ. +ನಮ್ಮ ತೀರ್ಪಿನ ಪ್ರಕಾರ, ಅದರಿಂದ ನಿಮಗೆ ಆತಂಕ ಒದಗುವುದಿಲ್ಲ. + ತದ್ವಿರುದ್ಧ ಅದರಿಂದ ಹೆಚ್ಚು ಪ್ರಯೋಜನ ಆಗಬಹುದು, ಅವರಿಗೆ ಕೊಡುವ ಹಕ್ಕುಗಳ ಇತಿಮಿತಿಗಳನ್ನು ನಿರ್ಧರಿಸುವುದು ನಿಮ್ಮ ಬುದ್ಧಿಗೆ ಬಿಟ್ಟ ವಿಷಯ. +ಅವರ ಪತ್ರಕ್ಕೆ ನೀವು ಉತ್ತರ ಬರೆಯುವ ಕೃಪೆ ಮಾಡಿದರೆ ಅವರಿಗೆ ಬಹಳ ಸಮಾಧಾನ ಆಗುತ್ತದೆ ಮತ್ತು ನಿಮ್ಮ ಹಿತಾಸಕ್ತಿಗಳಿಗೆ ಏನೂ ಬಾಧೆ ಬರದು. + ಈಸ್ಟ್‌ ಇಂಡಿಯಾ ಕಂಪನಿಯಿಂದ ಗುಜರಾಥಿಗಳು ಯಾವ ವಿಶೇಷ ಸೌಲಭ್ಯಗಳನ್ನು ಕೇಳಿದ್ದರು? + ದಿಯು ನಗರದ ಪ್ರಸಿದ್ಧ ಬನಿಯಾ ನೀಮಾ ಪಾರಖ್‌ ಪ್ರಕಾರ ಕೆಳಗಿನ ಮನವಿಯಿಂದ ಅವರು ಕೇಳಿದ ಸೌಲಭ್ಯಗಳ ಬಗೆಗೆ ಸ್ವಲ್ಪ ಕಲ್ಪನೆ ಬರುತ್ತದೆ. + ೧).“ಮನೆ ಇಲ್ಲವೆ ಉಗ್ರಾಣ ಕಟ್ಟಲು ಎಷ್ಟು ಬೇಕೆಂದು ತೀರ್ಮಾನಿಸಿದಷ್ಟು ನಿವೇಶನವನ್ನು ಸದ್ಯದ ನಗರದ ಸಮೀಪದಲ್ಲಿ ಬಾಡಿಗೆ ಹೇರದೆ ಮಾನ್ಯ ಕಂಪನಿಯವರು ಕೊಡತಕ್ಕದ್ದು. +೨).ಅವರು ತನ್ನ ಜಾತಿಯ ವೆರ್ಸ್‌ (ಗೋರರು ಇಲ್ಲವೆ ಪುರೋಹಿತರು) ಬ್ರಾಹ್ಮಣರೊಂದಿಗೆ ಯಾವುದೇ ವ್ಯಕ್ತಿಯನ್ನು ಪೀಡಿಸದೆ ತನ್ನ ಮನೆಯಲ್ಲಿ ತನ್ನ ಧರ್ಮವನ್ನು ನಿರಾತಂಕವಾಗಿ ಆಚರಿಸಬಹುದು. +ಇಂಗ್ಲಿಷ್‌, ಪೋರ್ಚುಗೀಸ್‌, ಇಲ್ಲವೆ ಬೇರಿನ್ನಾವ ಕ್ರೈಸ್ತನು, ಇಲ್ಲವೆ ಇಸ್ಲಾಮ ಧರ್ಮದವನಿಗೆ ತಮ್ಮ ಕಾಂಪೌಂಡಿನಲ್ಲಿ ವಾಸಿಸಲಿಕ್ಕಾಗಲಿ, ಯಾವುದೇ ಪ್ರಾಣಿವಧೆ ಮಾಡುವುದಕ್ಕಾಗಲಿ, ಯಾವುದೇ ರೀತಿಯ ಪ್ರಾಣಿಹಿಂಸೆ ಮಾಡುವುದಕ್ಕಾಗಲಿ ಪರವಾನಗಿ ಕೊಡಬಾರದು. +ಯಾವುದೇ ವ್ಯಕ್ತಿ ತಮ್ಮ ಮನೆಯ ಕಾಂಪೌಂಡಿನಲ್ಲಿ ತಮ್ಮನ್ನು ನೋಯಿಸಬಹುದೆಂದು ಅನಿಸಿದಲ್ಲಿ, ಗವರ್ನರ್‌ (ಸೂರತ್‌ದಲ್ಲಿ) ಇಲ್ಲವೆ ಡೆಪ್ಯೂಟಿ ಗವರ್ನರ್‌(ಮುಂಬೈಯಲ್ಸಿ)ರಿಗೆ ಅವನ ವಿರುದ್ಧ ದೂರು ಸಲ್ಲಿಸಿದಲ್ಲಿ, ಉಳಿದವರಿಗೆ ಪಾಠಕಲಿಸುವ ರೀತಿಯಲ್ಲಿ ಅವನನ್ನು ದಂಡಿಸಬೇಕು. +ತಮ್ಮ ಧರ್ಮದ ವಿಧಿವಿಧಾನದ ಪ್ರಕಾರ ತಮ್ಮವರ ಶವಸಂಸ್ಕಾರ ಮಾಡುವ ಹಕ್ಕುಗಳನ್ನೇ ತಮಗೆ ಕೊಡಬೇಕು. +ಹಾಗೆ ಮದುವೆ ಸಮಾರಂಭಗಳಲ್ಲಿ ತಮ್ಮ ಧಾರ್ಮಿಕ ವಿಧಿವಿಧಾನಗಳನ್ನು ಅನುಸರಿಸುವ ಹಕ್ಕು ತಮಗಿರಬೇಕು. +ತಮ್ಮ ಉದ್ಯೋಗದ ಯಾವುದೇ ವ್ಯಕ್ತಿಯನ್ನು ಗಂಡಾಗಲಿ, ಹೆಣ್ಣಾಗಲಿ, ಯಾವುದೇ ವಯಸ್ಸಿನವರಿರಲಿ-ಕ್ರೆ ಸ್ತಧರ್ಮ ಸ್ವೀಕರಿಸಲು ಒತ್ತಾಯಿಸಬಾರದು. +ತಾನು ಮತ್ತು ತನ್ನ ಕುಟುಂಬದವರು ಮನೆ ಕಾಯುವ (ಗಸ್ತಿ) ಕೆಲಸ ಇಲ್ಲವೆ ಅದಕ್ಕೆ ಸಂಬಂಧಿಸಿದ ಕರ್ತವ್ಯಗಳಿಂದ ಮುಕ್ತವಿರಬೇಕು. +ಕಂಪನಿ, ಗವರ್ನರ್‌, ಡೆಪ್ಕೂಟಿ ಗವರ್ನರ್‌,ಕೌನ್ಸಿಲ್‌ ಇಲ್ಲವೆ ಬೇರೆ ಯಾರೇ ಆಗಲಿ ಯಾವುದೇ ಕಾರಣಕ್ಕಾಗಿ, ವೈಯಕ್ತಿಕ ಇಲ್ಲವೆ ಸಾರ್ವಜನಿಕ ಉಪಯೋಗಕ್ಕಾಗಲಿ ಸಾಲಕೊಡಲು ತಮ್ಮನ್ನು ಒತ್ತಾಯಿಸತಕ್ಕದ್ದಲ್ಲ. +ತನ್ನ, ತನ್ನ ವಕೀಲರ, ಅಟಾರ್ನಿಗಳ ಇಲ್ಲವೆ ತಮ್ಮ ಜಾತಿಯ ವ್ಯಾಪಾರಿಗಳ ಮತ್ತು ನಡುಗಡ್ಡೆಯಲ್ಲಿ ವಾಸಿಸುವ ಯಾವುದೇ ವ್ಯಕ್ತಿಯ ನಡುವೆ ಭಿನ್ನಾಭಿಪ್ರಾಯ ಉಂಟಾದಲ್ಲಿ, ನ್ಯಾಯಾಲಯದಲ್ಲಿ ವ್ಯಾಜ್ಯ ನಡೆದಲ್ಲಿ, ತನ್ನನ್ನಾಗಲಿ, ತಮ್ಮವರನ್ನಾಗಲಿ ಸರಿಯಾದ ತಿಳುವಳಿಕೆಯ ನೋಟೀಸು ಕೊಡದೆ, ಸಾರ್ವಜನಿಕರೆದುರು ಬಂಧಿಸಬಾರದು, ಅಪಮಾನಮಾಡಬಾರದು, ಜೈಲಿಗೆಒಯ್ಯಬಾರದು. +ತಾನು ಇಲ್ಲವೆ ತಮ್ಮವರು ಪ್ರಾಮಾಣಿಕವಾಗಿ ಹಾಗೂ ಸ್ನೇಹ ಸೌಹಾರ್ದದಿಂದ ನ್ಯಾಯ ಒದಗಿಸಿಕೊಳ್ಳುವ ಹಕ್ಕು ಪಡೆದಿರಬೇಕು . +ಒಂದು ವೇಳೆ ತಾನು ಇಲ್ಲವೆ ತನ್ನ ಅಟಾರ್ನಿ ಮತ್ತು ತಮ್ಮ ಜಾತಿಯ ವರ್ತಕರ ನಡುವೆ ಭಿನ್ನಾಭಿಪ್ರಾಯ ಉಂಟಾದಲ್ಲಿ,ನ್ಯಾಯಾಲಯಕ್ಕೆ ಹೋಗದೆ, ತಮ್ಮಲ್ಲಿಯೇ ವ್ಯಾಜ್ಯ ತೀರಿಸಿಕೊಳ್ಳುವ ಸ್ವಾತಂತ್ರ್ಯವಿರಬೇಕು. +ತಾನು ಬಯಸಿದ ಬಂದರುಗಳಿಗೆ ಹಡಗಿನಲ್ಲಿ ಹೋಗಿ ವ್ಯಾಪಾರ ಮಾಡುವ ಮತ್ತು ಒಮ್ಮೆ ಗವರ್ನರ್‌ ಇಲ್ಲವೆ ಡೆಪ್ಯೂಟಿ ಗವರ್ನರ್‌ ಇಲ್ಲವೆ ಸುಂಕದವರಿಗೆ ನೋಟೀಸು ಕೊಟ್ಟು ಅವರ ಒಪ್ಪಿಗೆ ಪಡೆದ ಬಳಿಕ ಹಡಗು ನಿಲ್ಲಿಸುವ, ಫೀ ಕೊಡದೆ ತನಗೆ ಸರಿಕಂಡಾಗ ಹಡಗಿನ ಹೊರಗೆ ಹೋಗುವ ಇಲ್ಲವೆ ಒಳಗೆ ಬರುವ ಸ್ವಾತಂತ್ರ್ಯವಿರಬೇಕು. +ಹನ್ನೆರಡು ತಿಂಗಳ ಅವಧಿಯಲ್ಲಿ ಮಾರಾಟವಾಗುವುದಕ್ಕಿಂತ ಹೆಚ್ಚು ಸರಕನ್ನು ದಂಡೆಗೆ ಇಳಿಸಿಕೊಂಡಿದ್ದರೆ, ಆಮದು ಮಾಡುವ ಇಲ್ಲವೆ ರಫ್ತು ಮಾಡುವ, ತೆರಿಗೆ ಕೊಡದೆ ತನಗೆಬೇಕಾದ ಬಂದರುಗಳಿಗೆ ಹೆಚ್ಚಿನ ಸರಕನ್ನು ಸಾಗಿಸುವ ಸ್ವಾತಂತ್ರ್ಯ ಹೊಂದಿರಬೇಕು. +ಯಾವುದೇ ವ್ಯಕ್ತಿ ತನಗೆ ಹಣಿಯಾಗಿದ್ದಲ್ಲಿ ಮತ್ತು ಉಳಿದ ವರ್ತಕರಿಗೂ ಯಣಿಯಾಗಿದ್ದಲ್ಲಿ ಎಲ್ಲರ ಸಾಲವನ್ನು ತೀರಿಸುವುದು ಅವನಿಗೆ ಶಕ್ಯವಿಲ್ಲದಿದ್ದಾಗ, ಉಳಿದವರಿಗಿಂತ ಮೊದಲು ತನ್ನ ಸಾಲವನ್ನು ವಸೂಲಿ ಮಾಡುವ ಹಕ್ಕು ತನಗಿರಬೇಕು. +ಯುದ್ಧ ನಡೆದರೆ ಇಲ್ಲವೆ ಯಾವುದೆ ಅಪಾಯ ಸಂಭವಿಸಿದರೆ, ತನ್ನ ಸರಕು, ನಗನಾಣ್ಯ ಮತ್ತು ಕುಟುಂಬದವರನ್ನು ಸುರಕ್ಷಿತವಾಗಿ ಇರಿಸಲು ಕೋಟೆಯೊಳಗೆ ಒಂದು ಉಗ್ರಾಣದ ಮನೆ ಕೊಡಬೇಕು. +ತನಗೆ ಇಲ್ಲವೆ ತನ್ನ ಕುಟುಂಬದವರಿಗೆ, ಕೋಟೆಗೆ, ಗವರ್ನರ್‌ ಇಲ್ಲವೆ ಡೆಪ್ಯೂಟಿ ಗವರ್ನರ್‌ಮನೆಗೆ ಹೋಗುವ ಮತ್ತು ಅಲ್ಲಿಂದ ಹಿಂದಿರುಗುವ ಸ್ವಾತಂತ್ರ್ಯ ಇರಬೇಕು. +ತಮ್ಮನ್ನು ನಾಗರಿಕ ಮರ್ಯಾದೆಯಿಂದ ಸ್ವಾಗತಿಸಬೇಕು ಮತ್ತು ತಮ್ಮ ಯೋಗ್ಯತೆಯ ಪ್ರಕಾರ ಕುಳಿತುಕೊಳ್ಳಲು ಪರವಾನಗಿ ಇರಬೇಕು. +ಕುದುರೆಗಾಡಿ, ಕುದುರೆ, ಮೇನೆ ಮತ್ತು ಕೊಡೆಗಳನ್ನು ತಮ್ಮ ಅನುಕೂಲ ಬಂದಂತೆ ಯಾವುದೇ ಆತಂಕವಿಲ್ಲದೆ ಬಳಸುವ ಹಕ್ಕಿರಬೇಕು. +ತಮ್ಮಸೇವಕರು ಶತ್ತಿ ಮತ್ತು ಕಠಾರಿಗಳನ್ನು ಹಿಡಿಯಬಹುದು, ಅವರಿಗೆ ಯಾರೂ ಬೈಯ್ಯಬಾರದು, +ಅವರು ಅಪರಾಧ ಮಾಡದೆ ಅವರನ್ನು ಹೊಡೆಯಬಾರದು ಇಲ್ಲವೆ ಜೇಲಿಗೆ ಹಾಕಬಾರದು. +ತನ್ನ ಸಂಬಂಧಿಕರು, ಸ್ನೇಹಿತರು, ತನ್ನನ್ನಾಗಲಿ, ತನ್ನ ಕುಟುಂಬದವರನ್ನಾಗಲಿ, ಕಾಣಲು ಯಾವುದೇ ಬಂದರುಗಳಿಂದ ಬಂದರೂ ಅವರನ್ನು ಮರ್ಯಾದೆಯಿಂದ ಕಾಣಬೇಕು. +ತಾನು ಇಲ್ಲವೆ ತಾನು ಗೊತ್ತುಪಡಿಸಿದವರು ಯಾರೆ ಆಗಲಿ, ತೆಂಗಿನಕಾಯಿ, ಅಡಿಕೆ, ವೀಳ್ಯದೆಲೆ ಮತ್ತು ಹೊರಗೆ ರಫ್ತು ಮಾಡದಿದ್ದಂತಹ ಯಾವುದೇ ವಸ್ತುವನ್ನು ಯಾರಿಗೂ ಹಿಂಸೆಯಾಗದಂತೆ ಆ ನಡುಗಡ್ಡೆಯಲ್ಲಿ ಮಾರುವ ಸ್ವಾತಂತ್ರ್ಯ ಇರಬೇಕು. +ನೀಮಾ ಪಾರಖ್‌ ಅವರ ಮನವಿಯ ಪರಿಶೀಲನೆ ಹೇಗಾಯಿತೆಂಬುದನ್ನು ಮುಂಬೈಯ ಡೆಪ್ಯೂಟಿ ಗವರ್ನರ್‌ ಅವರ ೧೬೭೭ ರ ಏಪ್ರಿಲ್‌ ೩ ನೇ ತಾರೀಖಿನ ಉತ್ತರದಲ್ಲಿ ಕಾಣಬಹುದು . +“ಆದೇಶದ ಪ್ರಕಾರ ನೀಮಾ ಪಾರಖ್‌ ವ್ಯಾಪಾರಸ್ಥರ ಬೇಡಿಕೆಗಳನ್ನು ಪರಿಶೀಲಿಸಿದ್ದೇವೆ. +ನಮಗೆ ತಿಳಿದಂತೆ ಅವರು ಕೇಳುವ ಸವಲತ್ತುಗಳು ಯಾವುದೇ ತಪ್ಪು ತಿಳುವಳಿಕೆಯಿಂದ ಪ್ರೇರಿತವಾದವುಗಳಾಗಿಲ್ಲ. +ಅವುಗಳಲ್ಲಿ ಬಹಳಷ್ಟು ತೀರ ಕೆಳದರ್ಜೆಯವರು ಹೊಂದಿರುವಂತಹ ಸವಲತ್ತುಗಳಾಗಿರುತ್ತವೆ. +“ಕಂಪನಿಯ ಒಡೆತನದಲ್ಲಿ ಸಾಕಷ್ಟು ವಿಸ್ತಾರವಾದ ಭೂಮಿ ಇರುವುದರಿಂದ ಮೊದಲನೆಯದನ್ನು ಪೂರೈಸುವುದು ಬಹಳ ಸರಳ. +ಇಲ್ಲಿ ನೆಲೆಸಲು ಬರುವ ಬನಿಯಾಗಳಿಗೆ ಮತ್ತು ಇತರರಿಗೆ ನಾವು ಪ್ರತಿದಿನ ಅದನ್ನೇ ಮಾಡುತ್ತೇವೆ. +ಎರಡನೆಯ ವಿಷಯದಲ್ಲಿ ಹೇಳುವುದಾದರೆ, ಎಲ್ಲರಿಗೂ ತಮ್ಮ ತಮ್ಮ ಧರ್ಮ ಆಚರಿಸುವ ಮತ್ತು ಮದುವೆ ಮುಂಜಿಗಳಲ್ಲಿ ಧಾರ್ಮಿಕ ವಿಧಿವಿಧಾನಗಳನ್ನು ಅನುಸರಿಸುವ ಸ್ವಾತಂತ್ರ್ಯಇದ್ದೇ ಇರುತ್ತದೆ. +ಬನಿಯಾಗಳು ತಮ್ಮವರ ಶವಗಳನ್ನು ಅಪವಿತ್ರಗೊಳಿಸದೆ ಅವುಗಳಿಗೆ ಅಗ್ನಿಸಂಸ್ಕಾರ ಕೊಡುತ್ತಿದ್ದಾರೆ. +ತಮ್ಮಷ್ಟಕ್ಕೆ ತಾವು ವಾಸಿಸುವ ಬನಿಯಾಗಳ ಮನೆಗಳ ಸಮೀಪ ಯಾವುದೇ ಪ್ರಾಣಿಯನ್ನು ಕೊಲ್ಲಲು ಯಾರಿಗೂ ಪರವಾನಗಿ ಕೊಡುವುದಿಲ್ಲ. +ಯಾರೂ ಮನೆಯವರ ಪರವಾನಗಿ ಇರದೆ ಯಾರ ಮನೆಯನ್ನಾದರೂ ಪ್ರವೇಶಿಸಬಹುದೆಂದು ಯಾರೂ ಊಹಿಸಬಾರದು. +ವ್ಯಕ್ತಿಗಳ ಇಚ್ಛೆಯ ವಿರುದ್ಧ ಯಾರನ್ನಾದರೂ ಕ್ರೈಸ್ತರನ್ನಾಗಿ ಮತಾಂತರಗೊಳಿಸಲು ಬಲತ್ಕಾರ ಮಾಡಿದರೆ, ಇಡೀ ಜಗತ್ತೇ ನಮ್ಮನ್ನು ಖಂಡಿಸುವುದು. +ಹೊರೆ ಹೊರಲು ಯಾವ ವ್ಯಕ್ತಿಯನ್ನೂ ಅವನ ಇಚ್ಛೆಯ ವಿರುದ್ಧ ಒತ್ತಾಯಿಸುತ್ತಿರುವುದಿಲ್ಲ. +ಯಾವುದೆ ಬನಿಯಾ, ಬ್ರಾಹ್ಮಣ, ಮುಸಲ್ಮಾನ ಇಲ್ಲವೆ ಅಂಥವರು ಯಾರೇ ಆಗಲಿ ಅವರನ್ನು ನಗರ ಕಾವಲು ಮಾಡುವ ಕಾರ್ಯಕ್ಕೆ ಒತ್ತಾಯಿಸುವುದಿಲ್ಲ. +ಆದರೆ ಯಾವುದೆ ವ್ಯಕ್ತಿ ವಾಡೆ ಕೊಂಡಿದ್ದರೆ, ಎಚ್ಚರಿಕೆ ಕೊಟ್ಟೊಡನೆ ಒಬ್ಬ ಸುಸಜ್ಜಿತ ಸೈನಿಕರನ್ನು ಕಳಿಸಬೇಕು. +ಆದರೆ ಅವನಿಗೆ ಭೂಮಿ ಇರದಿದ್ದರೆ, ಅವನಿಂದ ಸುಂಕ (ಕಂದಾಯ) ವಸೂಲಿ ಮಾಡುವುದಿಲ್ಲ. +ಆದ್ದರಿಂದ ನೀಮಾ ಅವರಿಗೆ ಈ ಸವಲತ್ತುಗಳನ್ನು ಕೊಡಬಹುದು. +ಅವನು ಭೂಮಿಯನ್ನು ಕೊಳ್ಳಲು ಹೊರಟಾಗ ತೆರಿಗೆಯ ಕಿರುಭಾರವನ್ನು ಅದರ ಮೇಲೆ ಕೊಡಬೇಕಾಗುವುದೆಂಬ ತಿಳುವಳಿಕೆಯನ್ನು ಅವನಿಗೆ ಕೊಡಬೇಕು. +“ನಾಲ್ಕನೆಯ ಬೇಡಿಕೆಯು ನಿಜಕ್ಕೂ ವಿಶೇಷ ಸವಲತ್ತು ಆಗಿರುತ್ತದೆ. +ಆದರೆ ಸಿಡುಕಿನ ಗಿರಿಧರ ಮತ್ತು ಇನ್ನೂ ಕೆಲವರು ಪಡೆದಿರುವ ಸೌಲಭ್ಯಕ್ಕಿಂತ ಹೆಚ್ಜೇನೂ ಅಲ್ಲ. +ಈ ಸೌಲಭ್ಯ ಅವನನ್ನು ಈ ನಾಡಿನಕಾಯಿದೆ ಕಟ್ಟಳೆಯಿಂದ ಮುಕ್ತ ಮಾಡುವುದಿಲ್ಲ. +ಆದರೆ ನ್ಯಾಯ ಗೌರವಯುತ ರೀತಿಯಲ್ಲಿ ದೊರೆಯುವಂತಾಗಬೇಕೆಂದು ಅದು ಕೇಳುತ್ತದೆ. +ಅದರ ವಿಷಯಕ್ಕೆ ಅವನಿಗೆ ಸಂಶಯವಿರುವುದು ಬೇಡ ಮತ್ತು ತಮ್ಮ ತಮ್ಮಲ್ಲಿಯ ಭಿನ್ನಾಭಿಪ್ರಾಯಗಳನ್ನು ತಮ್ಮಲ್ಲಿಯೇ ಬಗೆಹರಿಸಿಕೊಳ್ಳಲು ಮಾನ್ಯ ಗವರ್ನರ್‌ಅವರ ಪರವಾನಗಿ ಇರುತ್ತದೆ. +“ಐದನೆಯ ಬೇಡಿಕೆಯ ವಿಷಯಕ್ಕೆ ಹೇಳುವುದಾದರೆ, ಪ್ರತಿ ಟನ್‌ ಭಾರಕ್ಕೆ ಇರುವ ೧ ರೂಪಾಯಿ ಹಡಗು ನಿಲ್ಲಿಸುವ ಫೀ ಸಂಪೂರ್ಣ ರದ್ದುಪಡಿಸಲಾಗಿದೆ. +೧ಂಂ ಟನ್‌ ಭಾರಕ್ಕಿರುವ ಅತಿ ಸ್ವಲ್ಪ ೧ ರೂ.ಫೀ ಮಾತ್ರ ಇರುತ್ತದೆ. +ಅದು ಬಹಳಷ್ಟು ಇಲ್ಲದಿರುವುದರಿಂದ ನಾವೇನೂ ಅದಕ್ಕೆ ಅಂಟಿಕೊಳ್ಳುವುದಿಲ್ಲ. +ಗವರ್ನರ್‌ ಅವರು ಕೊಡಬೇಕೆಂದು ಹೇಳಿದರೂ, ಅವನು ತನ್ನ ಹಡಗುಗಳ ಮಟ್ಟಿಗಷ್ಟೇ ಕೇಳುತ್ತಿರುವುದರಿಂದ,ಕಂಪನಿಯು ಅದನ್ನು ಬಿಡಬಹುದು. +“ಆರನೆಯ ಸವಲತ್ತನ್ನು ನಾವು ಸರಿಯಾಗಿ ಅರ್ಥಮಾಡಿದರೆ, ಎಲ್ಲರೂ ಅನುಭವಿಸುವ ಸೌಲಭ್ಯಕ್ಕಿಂತ ಹೆಚ್ಚಿರುವುದಿಲ್ಲ. +ಇಲ್ಲಿ ಯಾರೂ ತಾವು ರಫ್ತು ಮಾಡುವ ವಸ್ತುಗಳಿಗಾಗಲಿ ಇಲ್ಲವೆ ಕೊಂಡುಕೊಳ್ಳುವ ವಸ್ತುಗಳಿಗಾಗಲಿ ಸುಂಕಕೊಡುವುದಿಲ್ಲ. +ಆದರೆ ಮಾರಲಿಕ್ಕಾಗದ ಸರಕುಗಳನ್ನು ಇಳಿಸಿಕೊಳ್ಳುವುದಕ್ಕೆ ಸುಂಕ ಕೊಡದಿದ್ದರೆ ಕಂಪನಿಗೆ ಅಧಿಕ ಹಾನಿ ಆಗುತ್ತದೆ. +ಎರಡು ವರ್ಷ ಗುತ್ತಿಗೆ ಆಧಾರದ ಮೇಲೆ ತೆರಿಗೆಯನ್ನು ಗುತ್ತಿಗೆಗೆ ಬಿಡಲಾಗಿದ್ದು, ಅದು ಮರಳಿ ಇಡಿಯಾಗಿ ಕಂಪನಿ ಕೈಗೆ ಬರುವವರೆಗೆ, ಅವರಿಗೆ ಕೊಡುವ ಸೌಲಭ್ಯದಿಂದ ಕಂಪನಿಯ ಆದಾಯಕ್ಕೆ ಧಕ್ಕೆ ಬರುವುದಿಲ್ಲ. +“ಏಳನೆಯ ಬೇಡಿಕೆಯ ವಿಷಯಕ್ಕೆ, ನಮ್ಮ ಕಾಯಿದೆಯ ಪ್ರಕಾರ, ಯಾವುದೇ ವ್ಯಕ್ತಿಯು ಒಬ್ಬರಿಗಿಂತ ಹೆಚ್ಚು ಜನರ ಸಾಲ ತೀರಿಸಬೇಕಾಗಿದ್ದಲ್ಲಿ ಯಾರು ಕೋರ್ಟಿನಲ್ಲಿ ಮೊದಲು ತೀರ್ಪು ಪಡೆಯುತ್ತಾರೊ ಅವರ ಯಣವನ್ನು ಮೊದಲು ತೀರಿಸಲಾಗುವುದು. +ಆದರೆ ಅದಕ್ಕಾಗಿ ಯಾರೂ ಖೇದಪಡಬೇಕಾಗಿಲ್ಲ. +ಒಮ್ಮೆ ಕೊಟ್ಟಿರುವ ಹಣದ ಮೇಲೆ ಯಾವ ಸಾಲಗಾರನ ಹಕ್ಕು ಇರುವುದಿಲ್ಲ. +ಏಕೆಂದರೆ ಅದರಒಡೆಯನಾಗುವುದಿಲ್ಲ. +ತೀರ್ಪುಕೊಟ್ಟಾಗ ಕಾಯಿದೆ ಪ್ರಕಾರ ಕೊಟ್ಟಂತಾಗುವದು, ಆದ್ದರಿಂದ (ತೀರ್ಪುಬಾರದೆ) ಅದರ ಒಡೆಯನಾಗಲಾರ, ಆದರೆ ಒಬ್ಬ ವ್ಯಕ್ತಿ ಇಬ್ಬರಿಂದ ಹಣ ಪಡೆದಿದ್ದರೆ, ಮೊದಲು ಒಬ್ಬದಾವೆ ಮಾಡುತ್ತಾನೆ, ಅನಂತರ ಎರಡನೆಯವನು ದಾವೆ ಮಾಡುತ್ತಾನೆ. +ಎರಡನೆಯವನಿಗೆ ಯಾವ ನ್ಯಾಯದ ಪ್ರಕಾರ ಸಾಲಕೊಂಡವನ ಆಸ್ತಿಪಾಸ್ತಿಯನ್ನು ಕೊಡಲಿಕ್ಕಾಗುತ್ತದೆ. +ಇಷ್ಟೆ, ನಮ್ಮ ಕಾಯಿದೆ ಪ್ರಕಾರ ಅವನಿಗೆ ಸಾಧ್ಯವಿದ್ದಷ್ಟು ಬೇಗ ನ್ಯಾಯ ದೊರಕಿಸುವ ಯತ್ನ ಮಾಡಲಾಗುವುದು ಮತ್ತು ಸಂಬಂಧಿಸಿದ ಸಾಲಗಾರರನ್ನು ಪೂರ್ಣ ಸಾಲ ಮರುಪಾವತಿ ಮಾಡಲು ಒತ್ತಾಯಿಸಲಾಗುವುದು. +ಮತ್ತು ಕೊಡದಿರುವ ಮೊತ್ತದ ಸಲುವಾಗಿ ಗವರ್ನರ್‌ ಅವರು ಬಿಡುಗಡೆಗೆ ಆಜ್ಞೆ ಮಾಡುವವರೆಗೆ ಜೇಲಿನಲ್ಲಿ ಇರಿಸಲಾಗುವುದು. +ಇಷ್ಟರಿಂದ ಅವನಿಗೆ ತೃಪ್ತಿ ಆಗಬಹುದೆಂದು ನಾವು ಭಾವಿಸುತ್ತೇವೆ. +“ಎಂಟನೆಯ ಸವಲತ್ತಿನ ಪ್ರಕಾರ, ಯುದ್ಧ ಸಾರಿದರೆ, ಎಲ್ಲ ಗೌರವಸ್ಥರಿಗೆ, ಕೋಟೆಗೆ ಹೋಗಿ ಅಲ್ಲಿ ತಮ್ಮ ನಗನಾಣ್ಯ ಮತ್ತು ಬೇರೆ ಬೆಲೆಬಾಳುವ ವಸ್ತುಗಳನ್ನು ಸುರಕ್ಷಿತವಾಗಿಡುವ ಸ್ವಾತಂತ್ರ್ಯ ಇರುತ್ತದೆ. +ಕೋಟಿಯನ್ನು ಕಚ್ಚಾ ಮತ್ತು ಉರುಟು ವಸ್ತುಗಳಿಂದ ತುಂಬುತ್ತಾನೆಂದು ನಾನೇನೂ ತಿಳಿಯುವದಿಲ್ಲ. +ಆದರೆ ಸಣ್ಣ ಖೋಲೆ ಹಿಡಿಸುವಷ್ಟು ಆಭರಣ, ಮನೆಯ ಸಾಮಾನು, ಬೆಲೆಬಾಳುವ ಬಟ್ಟೆ ಮುಂತಾದವನ್ನು ತಾನು ಇಚ್ಛಿಸಿದಷ್ಟು ತರಬಹುದು ಮತ್ತು ತನಗೆ ಮತ್ತು ತನ್ನ ಕುಟುಂಬದವರಿಗಾಗಿ ಒಂದು ಉಗ್ರಾಣವನ್ನು ಕೊಡಲಾಗುವುದು. +“ಒಂಬತ್ತನೆಯ ಮತ್ತು ಹತ್ತನೆಯ ಸವಲತ್ತುಗಳನ್ನು ಒಟ್ಟಿಗೆ ಕೂಡಿಸಬಹುದು. +ಅವು ಕೇವಲ ಸಂಖ್ಯೆಯನ್ನು ಬೆಳೆಸಲಿಕ್ಕೆ ಬೇರೆ ಬೇರೆ ಇರುತ್ತವೆ. +ಅವನ್ನು ಅನುಷ್ಠಾನಕ್ಕೆ ತಂದರೆ ನಮ್ಮ ಸರಕಾರವು ನಗದಿರಲಾರದು. +ಏಕೆಂದರೆ, ಅವರು ಈಗಾಗಲೆ ಕೇಳುವುದಕ್ಕಿಂತ ಹೆಚ್ಚು ಸವಲತ್ತು ಪಡೆದಿರುತ್ತಾರೆ. +ಏಕೆಂದರೆ, ಕೋಟೆಯೊಳಗೆ ಹೋಗಲಿಕ್ಕೆ ಮತ್ತು ಕೋಟೆಯಿಂದ ಹಿಂದಿರುಗಲಿಕ್ಕೆ ಪರವಾನಗಿಯನ್ನು ಸರಿಯಾದ ಮುನ್ಸೂಚನೆ ಕೊಟ್ಟಿದ್ದರೆ, ಯಾರಿಗೂ ಅಲ್ಲಗಳೆಯುವುದಿಲ್ಲ . + ತನ್ನಿಷ್ಟ ಬಂದಷ್ಟು ಕುದುರೆಗಾಡಿ,ಕುದುರೆ ಮುಂತಾದವುಗಳನ್ನು ಇಟ್ಟುಕೊಳ್ಳಬಹುದು. + ಸೇವಕರು ಇಷ್ಟವಿದ್ದ ಆಯುಧ ಧರಿಸಬಹುದು. +ಇದು ಸಾಮಾನ್ಯ ಸವಲತ್ತಾಗಿರುತ್ತದೆ. +ನಿರಂತರವಾಗಿ ವಸ್ತುಗಳನ್ನು ಕೊಳ್ಳುವ ಮತ್ತು ಮಾರುವ ಸ್ವಾತಂತ್ರ್ಯಕ್ಕಿಂತ ಹೆಚ್ಚೇನೂ ನಮ್ಮಿಂದ ಬೆಳೆದಿರುವುದಿಲ್ಲ. +ಈ ಸ್ವಾತಂತ್ರ್ಯವೇ ಉದ್ಯೋಗದ ಲೋಹ ಚುಂಬಕ. +“ಕೊನೆಯದಾಗಿ ಸುಂಕ ಹಾಕದೆ ಹತ್ತು ಮಣ ತಂಬಾಕನ್ನು ಇಟ್ಟುಕೊಳ್ಳಲು ಪರವಾನಗಿ ಕೇಳುವುದೆ ಹೆಚ್ಚು ಕಠಿಣವಾದ ಬೇಡಿಕೆ ಅನಿಸುತ್ತದೆ. +ಯಾಕೆಂದರೆ ಇಂತಹ ಬೇಡಿಕೆಗಳನ್ನು ಈಡೇರಿಸಿದ್ದಾದರೆ, ಒಕ್ಕಲಿಗರುಇನ್ನೂ ಹೆಚ್ಚಿನ ಸವಲತ್ತು ಕೇಳುತ್ತಾರೆ. +ಹತ್ತು ಮಣ ತಂಬಾಕು ಮಾರಿದರೆ ಅವರಿಗೆ ಬಹಳಷ್ಟು ಲಾಭಸಿಗುತ್ತದೆ. +ಈ ಬೇಡಿಕೆಯನ್ನು ಹೇಗೆ ಈಡೇರಿಸಬೇಕೆಂಬುದು ನಮಗೆ ತಿಳಿಯದಾಗಿದೆ. +ಈ ವಿಷಯದಲ್ಲಿ ತಾವು ನಮಗಿಂತಲೂ ಹೆಚ್ಚು ಉತ್ತಮ ನಿರ್ಣಯ ತೆಗೆದುಕೊಳ್ಳಲು ಶಕ್ಯರು? + ಅದಕ್ಕೆ ಉತ್ತರವಾಗಿ ದಿನಾಂಕ ೨೬ ನೇ ಏಪ್ರಿಲ್‌ ಸೂರತ್‌ ಕೌನ್ಸಿಲ್‌ ಹೀಗೆ ಬರೆಯಿತು. +ನೀಮಾ ಪರಖಾ ಬನಿಯಾರು ಮುಂಬೈಯಲ್ಲಿ ನೆಲೆಸುವ ಸಲುವಾಗಿ ಮಂಡಿಸಿದ ಬೇಡಿಕೆಗಳನ್ನು ಕುರಿತು ಬರೆದ ನಿಮ್ಮ ಉತ್ತರವನ್ನು ನಾವು ಗಮನಿಸುತ್ತೇವೆ. +ಮತ್ತೊಮ್ಮೆ ಅವರ ಬೇಡಿಕೆಗಳ ಬಗೆಗೆ ವಿಚಾರಿಸುವಾಗ,ಈ ನಡುಗಡ್ಡೆಯಲ್ಲಿ ಯಾರೂ ನಮ್ಮ ವಿಷಯಕ್ಕೆ ಎಳ್ಳಷ್ಟು ತಪ್ಪು ತಿಳುವಳಿಕೆ ಆಗದಂತೆ ಜಾಗ್ರತೆವಹಿಸುವೆವು ಮತ್ತು ಸುಂಕ ರಹಿತವಾಗಿ ಪ್ರತಿವರುಷ ೧ಂ ಮಣ ತಂಬಾಕನ್ನು ಈ ನಡುಗಡ್ಡೆಯಲ್ಲಿ ಪಡೆಯುವ ಇಲ್ಲವೆ ತರುವ ಬೇಡಿಕೆಯನ್ನು ಇಡಿಯಾಗಿ ಒಪ್ಪುವುದನ್ನು ಬಿಟ್ಟು ಅವರ ಉಳಿದೆಲ್ಲ ಬೇಡಿಕೆಗಳನ್ನು ನಾವು ಎತ್ತಿಹಿಡಿಯುತ್ತೇವೆ. +ಮುಂಬೈ ಭಾರತದ ಮಾರಾಟ ಮಳಿಗೆ ಎಂಬುದನ್ನು ಒಪ್ಪಬಹುದು. +ಆದರೆ ಅದೇ ಕಾರಣದಿಂದ ಮಹಾರಾಷ್ಟ್ರ ಮುಂಬೈಯನ್ನು ತನ್ನದೆಂದು ಸಾಧಿಸಲಿಕ್ಕೆ ಆಗದೆಂದು ಹೇಳುವ ಮಾತನ್ನು ಅರ್ಥ ಮಾಡಿಕೊಳ್ಳುವುದು ಕಠಿಣವೆನಿಸುತ್ತದೆ. +ಪ್ರತಿಯೊಂದು ಬಂದರು ಸೇವೆ ಸಲ್ಲಿಸುವ ಪ್ರದೇಶ ತನ್ನ ದೇಶವಲ್ಲದೆ ಹೊರದೇಶಗಳನ್ನೂ ಒಳಗೊಂಡಿರುತ್ತದೆ. +ಆಗ ಆ ಬಂದರನ್ನು ಅದು ಯಾವ ದೇಶದ ಭೂಭಾಗದಲ್ಲಿರುತ್ತದೆಯೋ ಆ ದೇಶ ತನ್ನದೆಂದು ಕರೆಯಲಿಕ್ಕಾಗದೆಂದು ಹೇಳಲಿಕ್ಕಾಗದು. +ಸ್ವಿಜ್ಜರ್ ಲೆಂಡ್‌ಗೆ ತನ್ನದೇ ಆದ ಬಂದರು ಇರುವುದಿಲ್ಲ. +ಅದು ಜರ್ಮನ್‌, ಇಟಾಲಿಯನ್‌ ಇಲ್ಲವೆ ಫ್ರೆಂಚ್‌ ಬಂದರುಗಳನ್ನು ಉಪಯೋಗಿಸುತ್ತದೆ. +ಅದಕ್ಕಾಗಿ ಜರ್ಮನಿ, ಇಟಲಿ ಇಲ್ಲವೆ ಫ್ರಾನ್ಸ್‌ಗೆ ತಮ್ಮ ಬಂದರುಗಳ ಮೇಲಿರುವ ಪ್ರಾದೇಶಿಕ ಅಧಿಕಾರವನ್ನು ಸ್ವಿಜ್ಜರ್ ಲೆಂಡ್‌ ಅಲ್ಲಗಳೆಯಬಲ್ಲದೆ? +ಮಹಾರಾಷ್ಟ್ರವಲ್ಲದೆ ಇನ್ನುಳಿದ ಪ್ರಾಂತಗಳಿಗೂ ಬಂದರಾಗಿ ಸೇವೆ ಸಲ್ಲಿಸುತ್ತಿರುವ ಕಾರಣಕ್ಕಾಗಿ, ಮುಂಬೈ ತನ್ನದೆಂದು ಕರೆದುಕೊಳ್ಳುವ ಅಧಿಕಾರವನ್ನು ಮಹಾರಾಷ್ಟ್ರೇತರರಿಗೆ ಮುಂಬೈ ಬಂದರನ್ನು ಮುಚ್ಚಿಬಿಡುವ ಅಧಿಕಾರವನ್ನು ಮಹಾರಾಷ್ಟ್ರ ಹೊಂದಿದ್ದರೆ ಆಗ ವಸ್ತು ಸ್ಥಿತಿ ಬದಲಾಗುತ್ತಿತ್ತು. +ಸಂವಿಧಾನದ ಪ್ರಕಾರ ಹಾಗೆ ಮಾಡುವ ಅಧಿಕಾರ ಅದಕ್ಕಿರುವುದಿಲ್ಲ. +ಇದರ ಪರಿಣಾಮವಾಗಿ ಮುಂಬೈ ಅನ್ನು ಮಹಾರಾಷ್ಟ್ರದಲ್ಲಿ ಸೇರಿಸುವುದರಿಂದ, ಅದರ ಸೇವೆಯನ್ನು ಹಿಂದಿನಂತೆಯೇ ಬಳಸಿಕೊಳ್ಳುವ ಮಹಾರಾಷ್ಟೇತರ ಪ್ರಾಂತ್ಯಗಳ ಹಕ್ಕಿಗೆ ಧಕ್ಕೆ ಬರುವುದಿಲ್ಲ. +ಗುಜರಾತಿಗಳು-ಮುಂಬೈಯ ವ್ಯಾಪಾರ ಮತ್ತು ಉದ್ದಿಮೆಯ ಒಡೆಯರು. +ವ್ಯಾಪಾರದಲ್ಲಿ ಗುಜರಾತಿಗಳದೇ ಏಕಸ್ವಾಮ್ಯ ಎಂಬುದನ್ನು ಒಪ್ಪಬಹುದು. +ಆದರೆ ಈ ಏಕಸ್ವಾಮ್ಯವನ್ನು ಈಸ್ಟ್‌ ಇಂಡಿಯಾ ಕಂಪನಿ ಅವರು ಮುಂಬೈಯಲ್ಲಿ ನೆಲೆಸುವಾಗ ಕೊಡಮಾಡಿದ ಸವಲತ್ತುಗಳ ಲಾಭದಿಂದ ಪಡೆಯಲು ಶಕ್ಯವಾಯಿತು. +ಮುಂಬೈಯ ವ್ಯಾಪಾರ ಉದ್ದಿಮೆಗಳನ್ನು ಯಾರು ಸ್ಥಾಪಿಸಿದರೆಂಬುದನ್ನು ತಿಳಿದುಕೊಳ್ಳಲು ದೊಡ್ಡ ಸಂಶೋಧನೆಯ ಅವಶ್ಯಕತೆ ಇರುವುದಿಲ್ಲ. +ಗುಜರಾತಿಗಳು ಮುಂಬೈಯ ವ್ಯಾಪಾರ ಉದ್ದಿಮೆಗಳನ್ನು ಸ್ಥಾಪಿಸಿದರೆನ್ನುವ ಹೇಳಿಕೆಗೆ ಯಾವ ಆಧಾರವೂ ಇರುವುದಿಲ್ಲ. +ಅದನ್ನು ಸ್ಥಾಪಿಸಿದವರು ಗುಜರಾತಿಗಳಲ್ಲ, ಯೂರೋಪಿಯನ್ನರು. +ಗುಜರಾತಿಗಳು ಎಂದು ಹೇಳುವವರು ಹಾಗೆ ಹೇಳುವುದಕ್ಕೆ ಮೊದಲು ಟೈಮ್ಸ್‌ ಆಫ್‌ ಇಂಡಿಯಾ ಕೈಪಿಡಿಯನ್ನು ಓದಲಿ, ಅದರ ಪ್ರಕಾರ ಗುಜರಾತಿಗಳು ಕೇವಲ ವರ್ತಕರಾಗಿದ್ದಾರೆ. +ಉದ್ಭಿಮೆದಾರರಾಗಿರುವುದು ಬೇರೆ ವಿಷಯ, ವರ್ತಕರು ಉದ್ದಿಮೆದಾರರು ಒಂದೇ ಆಗಲಾರದು. + ಮುಂಬೈ ಮಹಾರಾಷ್ಟ್ರದ್ದೆಂದು ಒಮ್ಮೆ ಸಾಬೀತು ಆದ ಮೇಲೆ ಮುಂಬೈಯನ್ನು ತನ್ನೊಳಗೆ ಸೇರಿಸಿಕೊಳ್ಳುವ ಮಹಾರಾಷ್ಟ್ರದ ಹಕ್ಕನ್ನು, ಮುಂಬೈಯ ವ್ಯಾಪಾರ, ಉದ್ದಿಮೆಗಳು ಗುಜರಾತಿಗಳ ಒಡೆತನದಲ್ಲಿವೆ ಎಂಬ ವಾದ ಹತ್ತಿಕ್ಕಲಾರದು. +ಒತ್ತೆ ಕೊಟ್ಟ ನಿವೇಶನದಲ್ಲಿ ಒತ್ತೆ ತೆಗೆದುಕೊಂಡವನು ಶಾಶ್ವತ ಕಟ್ಟಡಗಳನ್ನು ಕಟ್ಟಿಸಿಕೊಂಡಿರುವ ಕಾರಣಕ್ಕಾಗಿ, ನಿವೇಶನದ ಮೇಲೆ ಇರುವ ಮೂಲ ಒಡೆಯನ ಹಕ್ಕನ್ನು ತೆಗೆದುಹಾಕಲು ಬರುವುದಿಲ್ಲ. +ಗುಜರಾತಿಗಳು ವ್ಯಾಪಾರ ಉದ್ದಿಮೆಗಳನ್ನು ಸ್ಥಾಪಿಸಿದ್ದಾರೆಂದರೂ ಕೂಡ, ಅವರ ಸ್ಥಿತಿ ಒತ್ತೆ ನೆಲದ ಮೇಲೆ ಮನೆಕಟ್ಟಿಕೊಂಡವರ ಸ್ಥಿತಿಗಿಂತ ಭಿನ್ನವಿರುವುದಿಲ್ಲ. +ಆದರೆ, ಮುಂಬೈ ಮಹಾರಾಷ್ಟ್ರದಲ್ಲಿ ಸೇರಬೇಕೊ, ಬೇಡವೊ ಎಂಬುದನ್ನು ನಿರ್ಧರಿಸಬೇಕಾದ ಸಮಸ್ಯೆಗೆ, ಮುಂಬೈಯ ವ್ಯಾಪಾರ ಮತ್ತು ಉದ್ದಿಮೆಗಳನ್ನು ಯಾರು ಸ್ಥಾಪಿಸಿದರೆಂಬುದು ಅಪ್ರಸ್ತುತ. +ವ್ಯಾಪಾರ ಮತ್ತು ಉದ್ದಿಮೆಗಳ ಮೇಲಿನ ಏಕಸ್ವಾಮ್ಯವನ್ನು ಆಧರಿಸಿರುವ ವಾದ ನಿಜವಾಗಿಯೂ ರಾಜಕೀಯ ವಾದವಾಗಿರುತ್ತದೆ. +ಒಡೆಯರು ಆಳುಗಳ ಮೇಲೆ ಒಡೆತನ ಸಾಧಿಸಬಹುದು; +ಆದರೆ ಆಳುಗಳು ಒಡೆಯರ ಮೇಲೆ ತಮ್ಮ ಒಡೆತನವನ್ನು ಸಾಧಿಸಲು ಎಂದೂ ಪರವಾನಗಿ ಕೊಡಬಾರದೆಂದು ಇದರ ಅರ್ಥವಾಗುತ್ತದೆ. +ಈ ವಾದ ಸರಣಿಯನ್ನು ಅನುಸರಿಸುವವರಿಗೆ ತಾವು ಏನನ್ನು ವಿರೋಧಿಸುತ್ತಿರುವೆವೆಂಬುದು ಗೊತ್ತಿದ್ದಂತೆ ತೋರುವುದಿಲ್ಲ. +ಈ ವಾದವನ್ನು ಮುಂಬೈ ನಗರದ ಸಮಸ್ಯೆಗೆ ಸೀಮಿತಗೊಳಿಸಬೇಕೆ ಅಥವಾ ಎಲ್ಲಕ್ಕೂ ಅನ್ವಯಿಸಬೇಕೆ ಎಂಬುದರ ಬಗ್ಗೆ ಅವರ ವಿರೋಧ ಮಾತ್ರ ಸುಸ್ಪಷ್ಟವಾಗಿದೆ. + ಅದನ್ನು ಎಲ್ಲ ಕಡೆಗೂ ಏಕೆ ಅನ್ವಯಿಸಬಾರದೆನ್ನುವುದಕ್ಕೆ ಕಾರಣವಿರುವುದಿಲ್ಲ. +ಏಕೆಂದರೆ,ಮುಂಬೈಯ ಜನರನ್ನು ಒಡೆಯರು ಮತ್ತು ಆಳುಗಳು ಇಲ್ಲವೆ ಬಂಡವಾಳಗಾರರು ಮತ್ತು ಕೂಲಿ ಆಳುಗಳಾಗಿ ಮಾಡುವ ಹಾಗೆ ಗುಜರಾಥ ಪ್ರಾಂತ್ಯವನ್ನು ಇಲ್ಲವೆ ಭಾರತದಲ್ಲಿಯ ಎಲ್ಲ ಪ್ರಾಂತ್ಯಗಳನ್ನು ಎರಡು ಭಾಗ ಮಾಡಬೇಕಾಗುತ್ತದೆ. +ಮುಂಬೈಯ ಒಡೆಯ ಮತ್ತು ಬಂಡವಾಳಗಾರರ ಹಿತಾಸಕ್ತಿಗಳನ್ನು ರಕ್ಷಿಸುವ ಸಲುವಾಗಿ ಮುಂಬೈಯನ್ನು ಕೆಲಸಗಾರರು ತುಂಬಿರುವ ಮಹಾರಾಷ್ಟದ ಹೊರಗಿಟ್ಟರೆ, ಗುಜರಾತಿನ ಬಂಡವಾಳಗಾರರನ್ನು ಅಲ್ಲಿಯ ಗುಜರಾತಿ ಕಾರ್ಮಿಕರಿಂದ ರಕ್ಷಿಸಲು ಯಾವ ವಿಧಾನ ಸೂಚಿಸುತ್ತಾರೆ? +ಮುಂಬೈಯಲ್ಲಿರುವ ಗುಜರಾತಿಗಳ ಪರ ವಾದ ಮಂಡಿಸಲು ತಲೆಕೆದರಿಕೊಳ್ಳುತ್ತಿರುವ ವಕೀಲ ಮತ್ತು ದಾಂತವಾಲಾರಂಥ ಪ್ರಾಧ್ಯಾಪಕರು ಗುಜರಾತಿನ ಕಾರ್ಮಿಕ ವರ್ಗದವರಿಂದ ಗುಜರಾತಿನ ಬಂಡವಾಳಗಾರರನ್ನು ರಕ್ಷಿಸುವ ಉಪಾಯ ಮತ್ತು ವಿಧಾನದ ಬಗೆಗೆ ಯೋಚಿಸಿರುವುದಿಲ್ಲ. +ಪ್ರೌಢ ಮತದಾನವನ್ನು ಕೈ ಬಿಡುವುದೊಂದೇ ಅವರು ಸೂಚಿಸಬಹುದಾದ ಉಪಾಯ ಆಗಿರುತ್ತದೆ. +ಮುಂಬೈ ಬಂಡವಾಳಗಾರರನ್ನಷ್ಟೇ ರಕ್ಷಿಸುವುದಾಗಿರದೆ ಎಲ್ಲ ಬಂಡವಾಳಗಾರರನ್ನು ರಕ್ಷಿಸುವ ಉದ್ದೇಶ ಅವರದಾಗಿದ್ದರೆ, ಇದೊಂದೇ ಉಪಾಯ ಇರುತ್ತದೆ. +ಆದಾಗ್ಯೂ ಈ ಪ್ರಾಧ್ಯಾಪಕರು ಒತ್ತಿ ವಾದಿಸಬಹುದಾದಂಥ ಒಂದು ಅಂಶವಿರುತ್ತದೆ. +ಅದೇನೆಂದರೆ, ಮುಂಬೈ ಮಹಾರಾಷ್ಟ್ರದಲ್ಲಿ ಸೇರಿದ್ದಾದರೆ, ಮಹಾರಾಷ್ಟೀಯರು ಬಹುಸಂಖ್ಯೆಯಲ್ಲಿರುವುದರಿಂದ ಅವರು ಮುಂಬೈಯಲ್ಲಿರುವ ಗುಜರಾತಿ ಬಂಡವಾಳಗಾರರ ವಿಷಯದಲ್ಲಿ ತಾರತಮ್ಯ ಮಾಡಬಹುದೆಂಬುದು ಇಂತಹ ವಾದವನ್ನು ಯಾರಾದರೂ ಪ್ರಶಂಸಿಸಬಹುದು. +ಆದರೆ, ಈ ವಾದವನ್ನು ಬಳಸುವವರು ಕೆಳಗಿನ ಎರಡು ಸಂಗತಿಗಳನ್ನು ಗಮನಿಸಬೇಕು. +ಇಂತಹ ಸ್ಥಿತಿಯು ಕೇವಲ ಮಹಾರಾಷ್ಟ್ರದಲ್ಲಷ್ಟೇ ಅಲ್ಲ. +ಅದು ಯಾವುದೇ ಪ್ರಾಂತದಲ್ಲಿ ಉದ್ಭವಿಸಬಹುದು. +ಬಿಹಾರದ ಬಗೆಗೆ ಇಲ್ಲಿ ಹೇಳ ಬಯಸುತ್ತೇನೆ. +ಬಿಹಾರದಲ್ಲಿಯ ಕಲ್ಲಿದ್ದಲು ದೊರೆಯುವ ಪ್ರದೇಶ ಬಿಹಾರದ ಜನರಿಗೆ ಸಂಬಂಧಿಸಿದ್ದು. +ಆದರೆ ಕಲ್ಲಿದ್ದಲು ಮಾಲಿಕರು ಗುಜರಾತಿಗಳು, ಕಾಥೇವಾಡದವರು, ಇಲ್ಲವೆ ಯೂರೋಪಿಯನ್ನರು ಆಗಿರುತ್ತಾರೆ. +ಬಿಹಾರಿಗಳು ಗುಜರಾತಿಗಳು, ಕಾಥೇವಾಡಿಗಳ ಇಲ್ಲವೆ ಯೂರೋಪಿಯನ್ನರ ನಡುವೆ ತಾರತಮ್ಯ ಮಾಡುವ ಸಾಧ್ಯತೆ ಇರುವುದಿಲ್ಲ. +ಬಿಹಾರದ ಕಲ್ಲಿದ್ದಲು ಕ್ಷೇತ್ರಗಳನ್ನು ಬಿಹಾರ ಪ್ರಾಂತದ ಹೊರಗುಳಿಸಿ,ಕಾಥೇವಾಡ ಮತ್ತು ಗುಜರಾತಿನ ಕಲ್ಲಿದ್ದಲು ಗಣಿಮಾಲಿಕರ ಹಿತದೃಷ್ಟಿಯಿಂದ ಇನ್ನೊಂದು ಪ್ರತ್ಯೇಕ ಪ್ರಾಂತ್ಯ ಮಾಡಬೇಕೆ? +ಭಾರತದ ಸಂವಿಧಾನವು ಅಲ್ಪಸಂಖ್ಯಾತರ ವಿರುದ್ಧ ಆಗಬಹುದಾದ ತಾರತಮ್ಯದ ಸಾಧ್ಯತೆಯನ್ನು ಗಮನಿಸಿರುತ್ತದೆ. + ಅಲ್ಲದೆ ಅದನ್ನು ತಡೆಯಲು ಸಾಕಷ್ಟು ಅವಕಾಶ ಕಲ್ಪಿಸಿರುತ್ತದೆ. +ತಾರತಮ್ಯ ಮಾಡುವುದರ ವಿರುದ್ಧ ಕಾಯಿದೆಗಳಿರುತ್ತವೆ. +ಹಾನಿ ಭರಿಸುವ ಕುರಿತು ಕಾಯಿದೆಗಳಿರುತ್ತವೆ. +ಯಾವುದೆ ನಾಗರಿಕನಿಗೆ ಆಗುವ ಅಪಾಯ, ಅನ್ಯಾಯ ಇಲ್ಲವೆ ಕಿರುಕುಳ ತಡೆಯಲು ವ್ಯಕ್ತಿಗಳ ಮತ್ತು ಸರಕಾರಗಳ ವಿರುದ್ಧ ವಿಶೇಷ ಸವಲತ್ತಿನ ರಿಟ್‌ಗಳನ್ನು ಕೊಡುವ ಅಧಿಕಾರ ಹೊಂದಿರುವ ಉಚ್ಛ ನ್ಯಾಯಾಲಯಗಳಿರುತ್ತವೆ. +ತಾರತಮ್ಯತೆಯ ವಿರುದ್ಧ ಮುಂಬೈಯ ಗುಜರಾತಿ ವರ್ತಕರು ಮತ್ತು ಉದ್ದಿಮೆದಾರರಿಗೆ ಇದಕ್ಕೂ ಎಂಥ ಹೆಚ್ಚಿನ ರಕ್ಷಣೆ ಬೇಕಾಗಿರುತ್ತದೆ? +ಮುಂಬೈಯ ಹೆಚ್ಚಿನ ಆದಾಯದ ಮೇಲೆ ಮಹಾರಾಷ್ಟದ ಕಣ್ಣು: ಮುಂಬೈಯ ಹೆಚ್ಚುವರಿ ಆದಾಯದ ಮೇಲೆ ಮಹಾರಾಷ್ಟ್ರದ ಕಣ್ಣಿರುವುದನ್ನು ನಿಂದಿಸುವುದಕ್ಕೆ ಮುಂಚೆ ಮುಂಬೈಯ ಆದಾಯ ಅದರ ವೆಚ್ಚಕ್ಕಿಂತ ಹೆಚ್ಚಿರುತ್ತದೆಂದು ಸಿದ್ಧಮಾಡಬೇಕು. +ಹೆಚ್ಚಿದಂತೆ ತೋರುತ್ತಿರುವುದು ನಿಜವಾಗಿಯೂ ಲೆಕ್ಕದಲ್ಲಿ ತಪ್ಪಾಗಿರುವುದರಿಂದ. +(೧) ಗವರ್ನರ್‌ ಮತ್ತು ಅವರ ಸಿಬ್ಬಂದಿ (೨) ಮಂತ್ರಿ ಮಹೋದಯರು ಮತ್ತು ಅವರ ಸಿಬ್ಬಂದಿ (೩) ಶಾಸಕಾಂಗ ಮತ್ತು ಅದರಮೇಲಿನ ವೆಚ್ಚ (೪) ನ್ಯಾಯಾಂಗ (೫) ಪೋಲೀಸ್‌ ಮತ್ತು (೬) ಪ್ರಾಂತೀಯ ಕಚೇರಿಗಳ ವ್ಯವಸ್ಥೆ(ಕಮೀಷನರ್‌ ಆಫ್‌ ಪೋಲೀಸ್‌ ಮತ್ತು ಡೈರೆಕ್ಟರ್‌ ಆಫ್‌ ಪಜ್ಜಿಕ್‌ ಇನ್‌ಸ್ಪೆಕ್ಷನ್‌). + ಪೋಲೀಸ್‌ ಕಮೀಷನರ್‌ ಮತ್ತು ಶಿಕ್ಷಣ ಇಲಾಖೆ ನಿರ್ದೇಶಕರು-ಈ ಪ್ರತಿಯೊಬ್ಬರ ವೆಚ್ಚವನ್ನು ಗಣನೆಗೆ ತೆಗೆದುಕೊಳ್ಳದಿದ್ದರೆ ತಪ್ಪಾಗುತ್ತದೆ. +ಸದ್ಯದ ತೆರಿಗೆ ದರದ ಪ್ರಕಾರ ಮೇಲಿನ ಖರ್ಚಿನ ಬಾಬತ್ತುಗಳನ್ನು ಮುಂಬೈಯ ಖರ್ಚಿಗೆ ಸೇರಿಸಿದರೆ ಮುಂಬೈಯಿ ಆದಾಯ ಹೆಚ್ಚಾಗುವುದಿಲ್ಲ. +ಮುಂಬೈಯ ವೆಚ್ಚದಲ್ಲಿ ಇದನ್ನೆಲ್ಲ ಸೇರಿಸುವುದನ್ನು ಬಿಟ್ಟು ಅನಂತರ ಆದಾಯ ಹೆಚ್ಚಿರುವುದೆಂದು ಹೇಳುವುದು ತಪ್ಪು ಸಿದ್ಧಾಂತವಾಗುತ್ತದೆ. +ಮುಂಬೈಯ ಹೆಚ್ಚುವರಿ ಆದಾಯದ ಮೇಲೆ ಜೀವಿಸುವ ಉದ್ದೇಶದಿಂದ ಮಹಾರಾಷ್ಟೀಯರು ಮುಂಬೈಯನ್ನು ಕೇಳುತ್ತಿದ್ದಾರೆನ್ನುವ ಹೇಳಿಕೆ ನಿಜಕ್ಕೂ ತಪ್ಪಾಗಿರುವುದಷ್ಟೆ ಅಲ್ಲ, ಅದು ಮಹಾರಾಷ್ಟೀಯರ ಉದ್ದೇಶದ ಬಗೆಗೆ ಸಂದೇಹ ಹುಟ್ಟಿಸುತ್ತದೆ. +ಮಹಾರಾಷ್ಟ್ರೀಯರು ಇಂತಹ ಉದ್ದೇಶದಿಂದ ಪ್ರೇರಿತರಾಗಿರುವರೆಂದು ನನಗೆ ಅನಿಸುವುದಿಲ್ಲ. +ಅವರು ವ್ಯಾಪಾರಿಗಳಲ್ಲ. +ಉಳಿದ ಸಮುದಾಯ ಹಾಗೆ ಅವರಿಗೆ ಹಣದ ಆಶೆ ಇರುವುದಿಲ್ಲ. +ಇದು ಅವರ ಉಚ್ಚ ಗುಣಗಳಲ್ಲಿ ಒಂದು ಎಂದು ನಂಬಿದವರಲ್ಲಿ ನಾನೂ ಒಬ್ಬ. +ಎಂದೂ ಹಣ ಅವರ ದೇವತೆ ಆಗಿರುವುದಿಲ್ಲ. +ಅದೆಂದೂ ಅವರ ಸಂಸ್ಕೃತಿಯ ಭಾಗ ಆಗಿರುವುದಿಲ್ಲ. +ಅದಕ್ಕಾಗಿಯೇ ಅವರು ಹೊರಗಡೆಯಿಂದ ಬಂದ ಉಳಿದೆಲ್ಲ ಸಮಾಜದವರಿಗೆ ವ್ಯಾಪಾರ,ಉದ್ದಿಮೆಯ ಮೇಲೆ ಏಕಸ್ವಾಮ್ಯ ಸಾಧಿಸಲು ಅವಕಾಶ ಕೊಟ್ಟಿರುತ್ತಾರೆ. +ಆದರೆ ನಾನು ತೋರಿಸಿಕೊಟ್ಟಂತೆ,ಮುಂಬೈ ಹೆಚ್ಚಿನ ಆದಾಯ ಹೊಂದಿರುವುದಿಲ್ಲ ಮತ್ತು ಮಹಾರಾಷ್ಟೀಯರು ಅದರ ಮೇಲೆ ಕಣ್ಣಿಡುವ ಪ್ರಶ್ನೆ ಇರುವುದೇ ಇಲ್ಲ. +ಒಂದು ವೇಳೆ ಅಂತಹ ಉದ್ದೇಶ ಮಹಾರಾಷ್ಟೀಯರಲ್ಲಿ ಇದ್ದರೆ ತಪ್ಪೇನಿದೆ? +ಮುಂಬೈಯ ವ್ಯಾಪಾರ ಮತ್ತು ಉದ್ದಿಮೆಗಳನ್ನು ಸ್ಥಾಪಿಸುವುದಕ್ಕಾಗಿ ಬೇಕಾದ ಕೆಲಸಗಾರರನ್ನು ಒದಗಿಸುವಲ್ಲಿ ಎಲ್ಲ ಪ್ರಾಂತ್ಯದವರಿಗಿಂತ ಮಹಾರಾಷ್ಟ್ರದವರು ಹೆಚ್ಚು ಮಹತ್ವದ ಪಾತ್ರ ವಹಿಸಿದ್ದಾರೆ . + ಮುಂದಾದರೂ ಹಾಗೇ ಮಾಡಬಹುದೆನ್ನುವ ಕಾರಣದಿಂದ ಮುಂಬೈಯ ಹೆಚ್ಚುವರಿ ಆದಾಯದ ಮೇಲೆ ತಮ್ಮ ಹಕ್ಕು ಇರುವುದೆಂದು ಡಾಣಾಡಂಗುರ ವಾದಿಸಬಹುದು. +ಉತ್ಪನ್ನದ ಮೇಲೆ ಹೆಚ್ಚಲ್ಲದಿದ್ದರೂ ಬಂಡವಾಳಕ್ಕಿರುವಷ್ಟು ಅಧಿಕಾರ ಕಾರ್ಮಿಕರದ್ದಿರುತ್ತದೆಂಬುದನ್ನು ಅಲ್ಲಗೆಳೆಯಲು ಎಂತಹ ಖ್ಯಾತ ಅರ್ಥಶಾಸ್ತ್ರಜನಿಗೂ ಕಠಿಣವಾಗುತ್ತದೆ. +ಎರಡನೆಯದಾಗಿ, ಮುಂಬೈಯ ಹೆಚ್ಚಿನ ಆದಾಯವನ್ನು ಕೇವಲ ಮಹಾರಾಷ್ಟ್ರದವರು ಉಪಯೋಗಿಸದೆ ಭಾರತದ ಜನರೆಲ್ಲ ಉಪಯೋಗಿಸುತ್ತಿದ್ದಾರೆ. +ಮುಂಬೈ ಜನರು ಕೇಂದ್ರಕ್ಕೆ ಕೊಡುವ ಆದಾಯ ತೆರಿಗೆ, ತೆರಿಗೆ ಮೇಲಿನ ತೆರಿಗೆ ಮುಂತಾದ್ದು ಸಮಗ್ರ ಭಾರತದ ಸಲುವಾಗಿ ವೆಚ್ಚಮಾಡಲಾಗುತ್ತಿದೆ. +ಯು.ಪಿ, ಬಿಹಾರ,ಅಸ್ಸಾಮ್‌, ಓರಿಸ್ಸಾ, ಪ.ಬಂಗಾಲ, ಪೂ, ಪಂಜಾಬ್‌ ಮತ್ತು ಮದ್ರಾಸ್‌ ಪ್ರಾಂತಗಳು ಮುಂಬೈಯ ಹೆಚ್ಚಿನ ಆದಾಯವನ್ನು ಕಬಳಿಸುವುದಕ್ಕೆ ಪ್ರೊ.ವಕೀಲ್‌ ಅವರ ಅಭ್ಯಂತರ ಇರುವುದಿಲ್ಲ. +ಅವರ ಅಭ್ಯಂತರ ಇರುವುದು ಅದರ ಅಲ್ಪ ಅಂಶವನ್ನು ಮಹಾರಾಷ್ಟ್ರದವರು ಉಪಯೋಗಿಸುವುದಕ್ಕೆ ಇದಕ್ಕೆ ನ್ಯಾಯವಾದ ಎನ್ನುವುದಿಲ್ಲ. +ಇದು ಕೇವಲ ಮಹಾರಾಷ್ಟ್ರದವರ ಬಗೆಗಿರುವ ತಮ್ಮ ದ್ವೇಷದ ಪ್ರದರ್ಶನವಾಗಿರುತ್ತದೆ. +ಮುಂಬೈಯನ್ನು ಪ್ರತ್ಯೇಕ ಪ್ರಾಂತವನ್ನಾಗಿ ಮಾಡಿದರೂ, ಮಹಾರಾಷ್ಟ್ರ ಮುಂಬೈಯ ಹೆಚ್ಚುವರಿ ಆದಾಯದಲ್ಲಿ ತನ್ನ ಪಾಲನ್ನು ಪಡೆಯುವುದನ್ನು ಪ್ರೊ.ವಕೀಲ್‌ ಅವರು ಹೇಗೆ ತಪ್ಪಿಸುತ್ತಾರೆಂಬುದು ನನಗೆ ತಿಳಿಯುವುದಿಲ್ಲ. +ಮುಂಬೈ ಪ್ರತ್ಯೇಕ ಪ್ರಾಂತವಾದಾಗ್ಯೂ, ಅದು ಆದಾಯ ತೆರಿಗೆ, ತೆರಿಗೆ ಮೇಲೆ ತೆರಿಗೆ ಮುಂತಾದ್ದನ್ನು ಕೊಡಬೇಕಾಗುತ್ತದೆ. +ಮತ್ತು ನಿಶ್ಚಯವಾಗಿಯೂ ಮುಂಬೈ ಕೇಂದ್ರಕ್ಕೆ ಕೊಟ್ಟುದರೊಳಗಿಂದ ಮಹಾರಾಷ್ಟ್ರ ತನ್ನ ಪಾಲನ್ನು ಪ್ರತ್ಯಕ್ಷವಾಗಿ ಇಲ್ಲವೆ ಅಪ್ರತ್ಯಕ್ಷವಾಗಿ ಪಡೆದೇ ಪಡೆಯುತ್ತದೆ. +ಈಗಾಗಲೇ ಹೇಳಿದಂತೆ ಪ್ರೊ.ವಕೀಲ್‌ ಅವರ ವಾದದಲ್ಲಿ ಸತ್ಯಕ್ಕಿಂತ ದ್ವೇಷ ಹೆಚ್ಚಿರುತ್ತದೆ. +ಮುಂಬೈಯನ್ನು ಮಹಾರಾಷ್ಟಕ್ಕೆ ಸೇರಿಸುವುದರ ವಿರುದ್ಧ ಇದ್ದ ಸಾಮಾನ್ಯಟ್ರ ವಾದಗಳು +ದಾಂತವಾಲಾ ಮತ್ತು ಪ್ರೊ.ಘೀವಾಲಾ ಅವರು ಒತ್ತಿಹೇಳಿದ ಅಂಶಗಳ ಕಡೆಗೆ ನಾನೀಗ ಗಮನ ಹರಿಸುವೆನು. +ಅವರ ವಾದಗಳು ಭಾಷಾವಾರು ಪ್ರಾಂತಗಳ ರಚನೆ ತತ್ವದ ಬುಡವನ್ನೇ ಕಡಿಯುತ್ತವೆ. +ಅದಕ್ಕಾಗಿಯೇ ಅದನ್ನು ಈ ಜ್ಞಾಪಕ ಪತ್ರದ ಪ್ರಥಮ ಭಾಗದಲ್ಲೇ ಚರ್ಚಿಸಬೇಕಾಗಿತ್ತು. +ಆದರೆ ಅವರ ವಾದ ಮುಂಬೈಯನ್ನು ಮಹಾರಾಷ್ಟದ ಹೊರಗಿಡಬೇಕೆಂದಿರುವುದರಿಂದ ಅದನ್ನು ಈ ಭಾಗದಲ್ಲಿ ಚರ್ಚಿಸುವುದು ಸರಿ ಎಂದು ನನಗನಿಸುತ್ತದೆ. +ಈ ಭಾಗದಲ್ಲಿಯ ಅಂಶಗಳು ಮುಂಬೈಯನ್ನು ಮಹಾರಾಷ್ಟ್ರದಲ್ಲಿ ಸೇರಿಸುವುದಕ್ಕೆ ವಿರೋಧಿ ವಾದಗಳಾಗಿರುತ್ತವೆ. +ಭಾಷಾವಾರು ಪ್ರಾಂತಗಳ ರಚನೆ ಒಳ್ಳೆಯದಲ್ಲ ಎಂಬುದು ಈರ್ವರು ಪ್ರಾಧ್ಯಾಪಕರ ವಾದಗಳ ಮುಖ್ಯಾಂಶ ಆಗಿರುತ್ತದೆ. +ಭಾಷಾವಾರು ಪ್ರಾಂತಗಳ ವಿರುದ್ಧ ಎತ್ತಿರುವ ಕಿರುಚಾಟ ತೀರ ತಡವಾಗಿ ಕೇಳಬರಹತ್ತಿದೆ. +ಈ ಪ್ರಾಧ್ಯಾಪಕರು ಎಂದಿನಿಂದ ಈ ವಿಚಾರಗಳನ್ನು ಹೊಂದಿದ್ದಾರೆಂಬುದು ತಿಳಿದಿರುವುದಿಲ್ಲ. +ಗುಜರಾತನ್ನೂ ಭಾಷಾವಾರು ಪ್ರಾಂತವಾಗಿ ಪುನರ್ಫಟಿಸುವುದಕ್ಕೆ ತಮ್ಮ ವಿರೋಧವಿದೆ ಎಂಬುದನ್ನು ಅವರು ಸ್ಪಷ್ಟಪಡಿಸಿರುವುದಿಲ್ಲ. +ಇಲ್ಲವೆ, ಮೊದಲು ಭಾಷಾವಾರು ಪ್ರಾಂತ ರಚನೆ ತತ್ವವನ್ನು ಒಪ್ಪಿ. +ಆ ತತ್ವದ ಪ್ರಕಾರ ಮುಂಬೈಯನ್ನು ಮಹಾರಾಷ್ಟ್ರಕ್ಕೆ ಒಪ್ಪಿಸಬೇಕಾಗುತ್ತದೆಂದು ಗೊತ್ತಾದ ಕೂಡಲೆ ಅವಸರದಿಂದ ಅದನ್ನು ಬಿಟ್ಟುಬಿಟ್ಟದ್ದಾರೆ. +ಬಹುಶಃ ತಮ್ಮ ಉದ್ದೇಶಕ್ಕೆ ಸೀಮಿತವಾದ ವಾದವು ದೊರೆಯದೆ,ತಾವು ಹೇಳಬಯಸುವುದಕ್ಕಿಂತ ಹೆಚ್ಚಿಗೆ ಹೇಳುವಂಥ ವಾದಕ್ಕೆ ಮೊರೆಹೋದ ಪ್ರಸಂಗಗಳಲ್ಲಿ ಇದೂ ಒಂದಾಗಿರುತ್ತದೆ. +ಏನೇ ಆಗಲಿ, ಅವರ ವಾದಗಳ ಹುರುಳನ್ನು ಒರೆಗೆ ಹಚ್ಚಲು ಸಿದ್ಧನಿದ್ದೇನೆ. + ಪ್ರೊ.ದಾಂತವಾಲಾ ಅವರು ಭಾಷಾವಾರು ಪ್ರಾಂತಗಳ ವಿರುದ್ಧ ಇರುವ ತಮ್ಮ ವಿಚಾರಗಳ ಸಮರ್ಥನೆಗೆ ಲಾರ್ಡ್‌ ಅ್ಯಕ್ಟನ್‌ ಅವರನ್ನು ಅವಲಂಬಿಸಿರುತ್ತಾರೆ. + ಅವರ ಪ್ರಸಿದ್ಧ ಪುಸ್ತಕ ಸ್ವಾತಂತ್ರ್ಯೇತಿಹಾಸ ಮತ್ತು ಇತರ ಪ್ರಬಂಧಗಳು “ರಾಷ್ಟೀಯತ್ವ” ಪ್ರಬಂಧದಿಂದ ಕೆಳಗಿನ ಗದ್ಯಭಾಗವನ್ನು ಎತ್ತಿಕೊಳ್ಳುತ್ತಾರೆ: +“ನಾಗರಿಕ ಜೀವನ ನಡೆಸಲು ಸಮಾಜ ನಿರ್ಮಾಣವಾಗಬೇಕಾದರೆ ಅನೇಕ ಜನರು ಒಟ್ಟಿಗೆ ಸೇರುವುದು ಅವಶ್ಯವಿರುವಂತೆ, ಒಂದು ರಾಷ್ಟ್ರ ನಿರ್ಮಾಣವಾಗಲು ಅನೇಕ ರಾಜ್ಯಗಳು ಒಟ್ಟಿಗೆ ಸೇರುವುದು ಅವಶ್ಯವಿರುತ್ತದೆ.” +ಈ ಅವತರಣಿಕೆ ಲಾರ್ಡ್‌ ಅ್ಯಕ್ಟನ್‌ ಅವರ ವಿಚಾರಗಳನ್ನು ಪೂರ್ಣ ತಪ್ಪಾಗಿ ಬಿಂಬಿಸುತ್ತದೆಂದು ಹೇಳಲು ನನಗೆ ವಿಷಾದ ಎನಿಸುತ್ತದೆ. +ಅವತರಣಿಕೆ ದೊಡ್ಡ ಗದ್ಯಭಾಗದ ಪ್ರಾರಂಭದ ಕೆಲವು ಸಾಲುಗಳಾಗಿರುತ್ತದೆ. +ಆ ಪೂರ್ಣ ಗದ್ಯಭಾಗ ಇಲ್ಲಿದೆ. +“ನಾಗರಿಕ ಜೀವನ ನಡೆಸಲು ಸಮಾಜ ನಿರ್ಮಾಣವಾಗ ಬೇಕಾದರೆ ಅನೇಕ ಜನರು ಒಟ್ಟಿಗೆ ಸೇರುವುದು ಅವಶ್ಯವಿರುವಂತೆ, ಒಂದು ರಾಷ್ಟ್ರ ನಿರ್ಮಾಣವಾಗಲು ಅನೇಕ ರಾಜ್ಯಗಳು ಒಟ್ಟಿಗೆ ಸೇರುವುದು ಅವಶ್ಯವಿರುತ್ತದೆ. +ರಾಜಕೀಯ ಒಕ್ಕೂಟಗಳಲ್ಲಿ ಬೌದ್ಧಿಕವಾಗಿ ಹೆಚ್ಚಿನ ಗುಣಮಟ್ಟದ ಜನಾಂಗಗಳೊಂದಿಗೆ ಕೂಡಿ ಜೀವಿಸುವುದರಿಂದ ಕೆಳಮಟ್ಟದ ಜನಾಂಗಗಳು ಉದ್ಧಾರವಾಗುತ್ತವೆ. +ಶಕ್ತಿಗುಂದಿದ ಮತ್ತು ಅವನತಿಯ ಮಾರ್ಗ ಹಿಡಿದ ರಾಜ್ಯಗಳು ಕಿರಿಯ ರಾಜ್ಯಗಳ ನವ ಚೈತನ್ಯ ಸಂಪರ್ಕದಿಂದ ಪುನಃ ಚೇತರಿಸಿಕೊಂಡಿರುತ್ತವೆ. +ನೈತಿಕ ಅಧಃ ಪತನಗೊಳಿಸುವ ಸರ್ವಾಧಿಕಾರತ್ವದ ಇಲ್ಲವೆ ವಿಘಟನಗೊಳಿಸುವ ಪ್ರಜಾಪ್ರಭುತ್ವದ ಪ್ರಭಾವದ ಕಾರಣದಿಂದ ಯಾವ ರಾಜ್ಯಗಳ ಸಂಘಟನೆಯ ಮೂಲಾಂಶಗಳು ಮತ್ತು ಸರಕಾರ ನಡೆಸುವ ಸಾಮರ್ಥ್ಯ ಕುಂದಿರುತ್ತವೆಯೊ ಆ ರಾಷ್ಟ್ರಗಳು ಅಧಿಕ ಬಲಿಷ್ಠ, ಆದರೆ ಅವು ಭ್ರಷ್ಟ ಜನಾಂಗಗಳ ಶಿಸ್ತಿನ ಪ್ರಭಾವದಿಂದ ಮೊದಲಿನ ಸ್ಥಿತಿಗೆ ಬರುತ್ತವೆ, ಮತ್ತು ವಿನೂತನ ಶಿಕ್ಷಣವನ್ನು ಪಡೆಯುತ್ತವೆ. +ಈ ಫಲವತ್ತಾಗಿಸುವ ಮತ್ತು ಪುನಃ ಸೃಷ್ಟಿಸುವ ಪ್ರಕ್ರಿಯೆ ಒಂದೇ ಸರಕಾರದ ಕೆಳಗೆ ವಾಸಿಸುವುದರಿಂದ ಸಾಧ್ಯವಿರುತ್ತದೆ. +ರಾಷ್ಟ್ರದ ಕಡಾವಿಯಲ್ಲಿ ಬೆಸುಗೆ ಕಾರ್ಯ ನಡೆಯುತ್ತದೆ. +ಅದರಿಂದ ಒಂದು ಭಾಗದ ಮಾನವ ಜನಾಂಗದ ಚೈತನ್ಯ,ಜ್ಞಾನ, ಮತ್ತು ಶಕ್ತಿಗಳನ್ನು ಇನ್ನೊಂದು ಭಾಗದ ಜನರಿಗೆ ಮುಟ್ಟಿಸಬಹುದು”. +ಉಳಿದ ಗದ್ಯಭಾಗವನ್ನು ಪ್ರೊ.ದಾಂತವಾಲಾ ಅವರು ಏಕೆ ಬಿಟ್ಟರೆಂಬುದನ್ನು ತಿಳಿಯುವುದು ಕಷ್ಟ. +ಇದು ಉದ್ದೇಶ ಪೂರ್ವಕ ಸತ್ಯವನ್ನು ಹತ್ತಿಕ್ಕುವ ಮತ್ತು ಅಸತ್ಯವನ್ನು ಎತ್ತಿ ಹಿಡಿಯುವ ಒಂದು ಉದಾಹರಣೆ ಎಂದು ನಾನು ಸೂಚಿಸಬಯಸುವುದಿಲ್ಲ. +ವಸ್ತುಸ್ಥಿತಿ ಏನಿದೆ ಎಂದರೆ, ಅದು ಲಾರ್ಡ್‌ಅ್ಯಕ್ಟನ್‌ ಅವರ ವಿಚಾರಗಳನ್ನು ತಪ್ಪಾಗಿ ಬಿಂಬಿಸುತ್ತದೆ. +ಈ ಪ್ರಾಧ್ಯಾಪಕ ಮಹಾಶಯರು ಅದರ ಮೇಲೆ ಇಷ್ಟೊಂದು ಭರವಸೆ ಏಕೆ ಇಟ್ಟರೆಂಬುದು ನನಗೆ ಅರ್ಥವಾಗುವುದಿಲ್ಲ. +ಕೆಳ ಮಟ್ಟದ ಜನಾಂಗಗಳನ್ನುಉಚ್ಚಮಟ್ಟದವರೊಂದಿಗೆ ಕೂಡಿಸಿದರೆ, ಕೆಳಮಟ್ಟದವರು ಸುಧಾರಿಸಬಹುದೆಂಬುದು ಸ್ಪಷ್ಟವಿರುತ್ತದೆ. +ಆದರೆ ಪ್ರಶ್ನೆ ಇರುವುದು ಯಾರು ಕೆಳಮಟ್ಟದವರು, ಯಾರು ಉಚ್ಚಮಟ್ಟದವರೆಂಬುದು. +ಗುಜರಾತಿಗಳು ಮಹಾರಾಷ್ಟೀಯರಿಗಿಂತ ಕೆಳಮಟ್ಟದವರೆ? +ಇಲ್ಲವೆ ಮಹಾರಾಷ್ಟೀಯರು ಗುಜರಾತಿಗಳಿಗಿಂತ ಕೆಳಮಟ್ಟದವರೆ? +ಎರಡನೆಯದಾಗಿ, ಗುಜರಾತಿಗಳ ಮತ್ತು ಮಹಾರಾಷ್ಟ್ರೀಯರ ನಡುವೆ ಅವರಿಬ್ಬರನ್ನು ಒಂದುಗೂಡಿಸುವ ಭರವಸೆಯ ಸಂಪರ್ಕ ನಾಲೆ ಯಾವುದು? +ಈ ಪ್ರಶ್ನೆಯ ಬಗೆಗೆ ಪ್ರೊ.ದಾಂತವಾಲಾ ಅವರು ಯೋಚಿಸಿರುವುದಿಲ್ಲ. +ಅವರಿಗೆ ಲಾರ್ಡ್‌ ಅ್ಯಕ್ಷನ್‌ ಅವರ ಪ್ರಬಂಧದಲ್ಲಿ ಒಂದು ವಾಕ್ಯ ಸಿಕ್ಕಿತು. +ತಮ್ಮ ವಾದವನ್ನು ಸಮರ್ಥಿಸಲು ಮತ್ತೇನೂ ಸಿಗದೆ ಇದ್ದುದರಿಂದ ಅದನ್ನು ಜಿಗಿದು ಹಿಡಿದರು. +ತಾತ್ಪರ್ಯ ಇಷ್ಟೆ. +ಭಾಷಾವಾರು ಪ್ರಾಂತ ರಚನೆಯ ಸಮಸ್ಯೆಗೆ ಸಂಬಂಧಿಸಿದ ಯಾವುದೇ ಅಂಶ ಅದರಲ್ಲಿರುವುದಿಲ್ಲ. +ಪ್ರೊ.ದಾಂತವಾಲಾ ಅವರ ವಾದಗಳ ಬಗೆಗೆ ಇಷ್ಟು ಹೇಳುವುದು ಸಾಕು. +ಈಗ ನಾನು ಪ್ರೊ.ಫೀವಾಲಾ ಅವರ ವಾದದ ಅಂಶಗಳನ್ನು ಪರಿಶೀಲಿಸುವೆ. + ಪ್ರೊ.ಫೀವಾಲಾ ಅವರು ಕೂಡ ಲಾರ್ಡ್‌ ಅ್ಯಕ್ಷನ್‌ ಅವರ ಮೇಲೆ ಭರವಸೆ ಇಡುತ್ತಾರೆ. +ಅವರು ಲಾರ್ಡ್‌ ಅ್ಯಕ್ಚನ್‌ ಅವರ ರಾಷ್ಟೀಯತೆ ಕುರಿತು ಬರೆದ ಪ್ರಬಂಧದಿಂದ ಒಂದು ಭಾಗ ಉದ್ಧರಿಸುತ್ತಾರೆ. +ಆ ಗದ್ಯಭಾಗವನ್ನು ನಾನು ಇಲ್ಲಿ ಪೂರ್ಣ ಕೊಡುತ್ತೇನೆ. +“ರಾಷ್ಟ್ರೀಯತೆಯ ಆಧುನಿಕ ಸಿದ್ಧಾಂತವು ರಾಷ್ಟ್ರೀಯತೆಯ ಹಕ್ಕುಗಳ ಅತಿ ಪ್ರಬಲ ಎದುರಾಳಿ ಆಗಿರುತ್ತದೆ. +ಸೈದ್ಧಾಂತಿಕವಾಗಿ, ರಾಷ್ಟ್ರ ಮತ್ತು ರಾಜ್ಯ ಎರಡನ್ನು ಸರಿಸಮಾನ ಮಾಡುವುದರಿಂದ, ರಾಷ್ಟ್ರದ ಮೇರೆಯ ಒಳಗೆ ಬರುವ ಉಳಿದೆಲ್ಲ ರಾಜ್ಯವನ್ನು ವಾಸ್ತವವಾಗಿ ಅಧೀನ ಸ್ಥಿತಿಗೆ ಇಳಿಸಿದಂತಾಗುತ್ತದೆ. +ಒಂದು ರಾಷ್ಟ್ರ ಆಗಿರುವ ರಾಜ್ಯ ಮಿಕ್ಕವುಗಳನ್ನು ತನ್ನ ಸಮಾನ ಎಂದು ಒಪ್ಪಲು ಸಾದ್ಯವಿಲ್ಲ. +ಏಕೆಂದರೆ,ಎಲ್ಲ ಸಮಾನ ಎಂದು ಗ್ರಹಿಸಿದರೆ ಒಂದು ರಾಜ್ಯವು ರಾಷ್ಟ್ರವಾಗದೆ ರಾಜ್ಯವಾಗಿಯೇ ಉಳಿಯುವುದು. +ಅಂದರೆ ಈ ತತ್ವದಲ್ಲಿ ವಿರೋಧಾಭಾಸವಿರುತ್ತದೆ. +ಆದ್ದರಿಂದ ಸಮಾನ ಎಲ್ಲ ಹಕ್ಕುಗಳು ತನಗೇ ಸೇರಿದವುಎಂದು ಹೇಳುವ ಮುಖ್ಯ ಘಟಕ ಹೊಂದಿರುವ ಮಾನವೀಯ ಮತ್ತು ನಾಗರಿಕ ಅಂಶಗಳ ಪ್ರಮಾಣಕ್ಕನುಗುಣವಾಗಿ ಕಡಿಮೆ ಮಟ್ಟದ ಜನಾಂಗಗಳು ನಶಿಸುತ್ತವೆ, ಇಲ್ಲವೆ ಗುಲಾಮಿ ಸ್ಥಿತಿಗೆ ಇಳಿಸಲ್ಪಡುತ್ತವೆ. +ಇಲ್ಲವೆ ಹೊರಹಾಕಲ್ಪಡುತ್ತವೆ. +ಅದೂ ಇಲ್ಲಿ ಪರಾವಲಂಬಿ ಸ್ಥಿತಿಯಲ್ಲಿ ಇರಿಸಲ್ಪಡುತ್ತವೆ”'. +ವಿದ್ವಾಂಸರಾದ ಪ್ರಾಧ್ಯಾಪಕರು ಲಾರ್ಡ್‌ ಅ್ಯಕ್ಟನ್‌ ಅವರ ಹೆಸರನ್ನೇಕೆ ತಮ್ಮ ವಾದದಲ್ಲಿ ಎಳೆತಂದರೆಂದು ನನಗೆ ತಿಳಿಯುವುದಿಲ್ಲ. +ನಿಜಕ್ಕೂ ಉದ್ಧ್ಭತ ಗದ್ಯಭಾಗ ಅವರಿಗೆ ಸಹಾಯ ಮಾಡುವುದಿಲ್ಲ. +ಒಂದು ವಿಚಾರ ಅವರ ತಲೆ ತುಂಬಿದಂತೆ ತೋರುತ್ತದೆ. +ಮುಂಬೈಯನ್ನು ಮಹಾರಾಷ್ಟ್ರದಲ್ಲಿ ಸೇರಿಸಿದ್ದಾದರೆ ಮಹಾರಾಷ್ಟ್ರ ಪ್ರಾಂತವು ಎರಡು ಪ್ರಾಂತಗಳಿಂದ ಕೂಡಿರಬೇಕಾಗುತ್ತದೆ. +ಒಂದು ಪ್ರಾಂತವು ಮರಾಠಿಮಾತಾಡುವವರಿಂದ, ಇನ್ನೊಂದು ಗುಜರಾತಿ ಮಾತಾಡುವವರಿಂದ ಕೂಡಿರಬೇಕಾಗುತ್ತದೆ. +ಮರಾಠಿ ಮಾತನಾಡುವ ವರ್ಗ ಪ್ರಬಲವಾಗುವುದರಿಂದ ಗುಜರಾತಿ ಮಾತಾಡುವ ವರ್ಗ ಅಧೀನ ವರ್ಗದ ಸ್ಥಿತಿಗೆ ಇಳಿಯುತ್ತದೆ. +ಅವರು ಈ ಸಮಸ್ಯೆಯನ್ನು ಮಂಡಿಸಿದ ರೀತಿಯ ಬಗೆಗೆ ತಕರಾರು ಇರುವುದಿಲ್ಲ. +ಆದರೆ ಅವರು ಮಾಡಿದ ತೀರ್ಮಾನಗಳಿಗೆ ಬಹಳಷ್ಟು ತಕರಾರುಗಳಿರುತ್ತವೆ. +ಮೊದಲನೆಯದಾಗಿ, ಜಾತೀಯ ಆಧಾರದ ಮೇಲೆ ಸಂಘಟಿತವಾಗಿರುವಂಥ ಸಮಾಜವನ್ನು ಹೊಂದಿರುವ ಭಾರತ ದೇಶವನ್ನು ಆಡಳಿತದ ಉದ್ದೇಶಕ್ಕಾಗಿ ಯಾವ ವಿಧದಲ್ಲಿ ವಿಭಜಿಸಿದರೂ, ಪ್ರತಿಯೊಂದು ಭಾಗದಲ್ಲಿ ಜನಸಂಖ್ಯೆಯ ಆಧಾರದ ಮೇಲೆ ಒಂದೊಂದು ಸಮಾಜ ಬಲಿಷ್ಠವಾಗಿರುತ್ತದೆ. +ಬಲಿಷ್ಠವಾಗಿರುವುದರಿಂದ ಆ ಪ್ರದೇಶದ ರಾಜಕೀಯ ಅಧಿಕಾರಕ್ಕೆಲ್ಲ ಅದುವೇ ವಾರಸುದಾರ ಆಗುತ್ತದೆ. +ಮುಂಬೈಯನ್ನೊಳಗೊಂಡ ಏಕೀಕೃತ ಮಹಾರಾಷ್ಟ್ರದಲ್ಲಿ ಮರಾಠಿ ಮಾತನಾಡುವ ಜನರು ಗುಜರಾತಿ ಮಾತನಾಡುವವರ ಮೇಲೆ ಅಧಿಕಾರ ನಡೆಸಿದರೆ ಈ ಸ್ಥಿತಿಯು ಮಹಾರಾಷ್ಟ್ರಕಷ್ಟೇ ಸೀಮಿತವಾಗಿರಬಹುದೆ? +ಮರಾಠಿ ಮಾತನಾಡುವವರೊಳಗೆ ಇಂಥ ಘಟನೆಗಳು ಸಂಭವಿಸುವುದಿಲ್ಲವೆ? +ಗುಜರಾತ್‌ ಪ್ರತ್ಯೇಕ ಪ್ರಾಂತವಾಗುವ ಪಕ್ಷಕ್ಕೆ ಇಂಥ ಘಟನೆ ಸಂಭವಿಸುವುದಿಲ್ಲವೆ? +ಮರಾಠಿ ಮಾತನಾಡುವ ಪ್ರದೇಶದಲ್ಲಿಯೇ ಮರಾಠರು ಮತ್ತು ಮರಾಠೇತರರು ಎಂದು ವರ್ಗಗಳಾಗುತ್ತವೆ. +ಮರಾಠರು ಪ್ರಬಲ ವರ್ಗದವರಿದ್ದುದರಿಂದ,ಗುಜರಾತಿ ಮಾತನಾಡುವವರನ್ನು ಮತ್ತು ಮರಾಠೇತರನ್ನು ಅಧೀನ ಸ್ಥಿತಿಗೆ ಹತ್ತಿಕ್ಕುತ್ತಾರೆ. +ಅದೇ ರೀತಿ ಗುಜರಾತಿನ ಕೆಲವು ಭಾಗಗಳಲ್ಲಿ ಅನವಿಲ ಬ್ರಾಹ್ಮಣರದು ಪ್ರಬಲ ವರ್ಗವಿರುತ್ತದೆ. +ಉಳಿದ ಭಾಗದಲ್ಲಿ ಪತಿದರರು ಪ್ರಬಲ ವರ್ಗದವರಾಗಿದ್ದಾರೆ. +ಅನವಿಲರು ಮತ್ತು ಪತಿದರರು ಉಳಿದ ಸಮಾಜದವರನ್ನು ಅಧೀನ ಸ್ಥಿತಿಗೆ ಹತ್ತಿಕ್ಕುತ್ತಾರೆ. +ಆದ್ದರಿಂದ ಈ ಸಮಸ್ಯೆ ಮಹಾರಾಷ್ಟ್ರಕಷ್ಟೇ ಸೀಮಿತವಾಗಿರುವುದಿಲ್ಲ. +ಇದು ಸಾರ್ವತ್ರಿಕ ಸಮಸ್ಯೆ ಆಗಿರುತ್ತದೆ. +ಈ ಸಮಸ್ಯೆಗೆ ಪರಿಹಾರ ಏನು? +ಸಮ್ಮಿಶ್ರ ಪ್ರಾಂತಗಳಿರುವುದೇ ಪರಿಹಾರ ಎಂದು ಪ್ರೊ.ಫೀವಾಲಾ ಅವರು ನಂಬುತ್ತಾರೆ. +ಈ ಪರಿಹಾರ ಅವರು ಸ್ಪತಃ ಕಂಡುಹಿಡಿದಿದ್ದಲ್ಲ. +ಅದನ್ನು ಅವರು ಲಾರ್ಡ್‌ ಅ್ಯಕ್ಟನ್‌ ಅವರಿಂದ ತೆಗೆದುಕೊಂಡಿರುತ್ತಾರೆ. +ಆದರೆ ಲಾರ್ಡ್‌ ಅ್ಯಕ್ಟನ್‌ ಅವರು ಪ್ರತಿಪಾದಿಸುವ ಪರಿಹಾರ ನಿಃಸಂಶಯವಾಗಿಯೂ ಶುದ್ಧಾಂಗವಾಗಿ ತಪ್ಪಾಗಿದೆ. +ಲಾರ್ಡ್‌ ಅ್ಯಕ್ಟನ್‌ ಅವರು ತಮ್ಮ ವಿಚಾರದ ಸಮರ್ಥನೆಗೆ ಆಸ್ಟಿಯಾದ ಉದಾಹರಣೆ ಕೊಡುತ್ತಾರೆ. +ದುರ್ದೈವದಿಂದ ಆಸ್ಟಿಯಾದ ಗತಿ ಏನಾಯಿತೆಂದು ನೋಡಲು, ಲಾರ್ಡ್‌ ಅ್ಯಕ್ಷನ್‌ ಅವರು ಬಹಳ ದಿವಸ ಬಾಳಲಿಲ್ಲ. +ಆಸ್ಟಿಯಾ ಸಮಿಶ್ರ ರಾಷ್ಟ್ರ ಆಗಿತ್ತು. +ಆದರೆ ಎಲ್ಲ ರಾಜ್ಯಗಳಿಗೆ ಸುರಕ್ಷೆಯನ್ನು ಒದಗಿಸುವುದಾಗದೆ, ರಾಜ್ಯಗಳ ಪರಸ್ಪರ ತಿಕ್ಕಾಟ ಆಸ್ಟಿಯವನ್ನು ನುಚ್ಚು ನೂರು ಮಾಡಿತು. +ನಿಜವಾದ ಪರಿಹಾರ ಸಮಿಶ್ರ ರಾಷ್ಟ್ರ ಅಲ್ಲ. +ಸಾಮಾನ್ಯವಾಗಿ ಜಾತ್ಯಾತೀತ ಬಹುಸಂಖ್ಯಾ ವರ್ಗದವರು ಹಿಡಿಯಬಹುದಾದ ಅಧಿಕಾರವನ್ನು ಯಾವ ವರ್ಗದವರಿಗೂ ಕೊಡದೆ ಇರುವ ಮತ್ತು ಎಲ್ಲ ಜನರ ಹೆಸರಿನಲ್ಲಿ ಉಪಯೋಗಿಸಬಹುದಾದ ಸರ್ವತಂತ್ರ ಸ್ವತಂತ್ರ ರಾಷ್ಟ್ರವೇ ನಿಜವಾದ ಪರಿಹಾರವಾಗಿರುತ್ತದೆ. +ಪ್ರೊ. ಫೀವಾಲಾ ಅವರು ಈ ಪರಿಹಾರ ಸ್ವೀಕರಿಸಲು ಸಿದ್ಧರಿರುತ್ತಾರೆಯೆ? +ಅವರ ಉತ್ತರ ಏನಿರಬಹುದೆಂಬುದಕ್ಕೆ ಯಾರಿಗೂ ಸಂಶಯ ಇರುವುದಿಲ್ಲ. +ಎರಡನೆಯದಾಗಿ, ಪ್ರೊ.ಫೀವಾಲಾ ಅವರು ಸಾಮಾಜಿಕ ಅರ್ಥದ ರಾಷ್ಟ್ರೀಯತೆಯನ್ನು ಕಾಯಿದೆಯ ಮತ್ತು ರಾಜಕೀಯ ಅರ್ಥದ ರಾಷ್ಟ್ರೀಯತೆಯೊಂದಿಗೆ ಸೇರಿಸಿ ಗೊಂದಲ ಮಾಡಿದ್ದಾರೆ. +ಭಾಷಾವಾರು ಪ್ರಾಂತದ ಬಗೆಗೆ ಮಾತಾಡುವಾಗ ಜನರು ಅನೇಕ ವೇಳೆ ರಾಷ್ಟೀಯತೆಯ ಬಗೆಗೆ ಹೇಳುತ್ತಾರೆ. +ಕಾಯಿದೆಗೆ ಮತ್ತು ರಾಜಕೀಯಕ್ಕೆ ಸಂಬಂಧವಿಲ್ಲದ ಅರ್ಥದಲ್ಲಷ್ಟೇ ಈ ರೀತಿ ಪದಬಳಕೆ ಮಾಡಲು ಶಕ್ಯವಿರುತ್ತದೆ. +ನನ್ನ ಯೋಜನೆಯಲ್ಲಿ ಎರಡು ಪ್ರತ್ಯೇಕ ಪ್ರಾಂತಗಳ ನಿರ್ಮಾಣಕ್ಕೆ ಅವಕಾಶ ಇರುವುದಿಲ್ಲ. +ನನ್ನ ಸೂಚನೆ ಎರಡು ಪ್ರಾಂತದ ವಿಚಾರವನ್ನು ಮೊಳಕೆಯಲ್ಲಿಯೇ ಕತ್ತರಿಸುತ್ತದೆ. +ಆದರೆ,ಸಾಮಾನ್ಯವಾಗಿ ಸೂಚಿಸಲಾಗಿದ್ದ ಮಾದರಿಯ ಪ್ರಕಾರ ಪ್ರಾಂತೀಯ ಭಾಷೆಯನ್ನೇ ಆಡಳಿತ ಭಾಷೆ ಹೊಂದಿದ ಭಾಷಾವಾರು ಪ್ರಾಂತಗಳನ್ನು ನಿರ್ಮಿಸಿದಾಗ್ಯೂ, ಸ್ವತಂತ್ರ ರಾಷ್ಟ್ರಗಳು ಹೊಂದಿದ ಸಾರ್ವಭೌಮತ್ವವನ್ನು ಈ ಪ್ರಾಂತಗಳು ಹೊಂದಲಾರವು. +ಪ್ರೊ.ಫೀವಾಲಾ ಅವರು ಏನು ಬಯಸಿದ್ದಾರೆನ್ನುವುದನ್ನು ಖಚಿತವಾಗಿ ತಿಳಿದುಕೊಳ್ಳುವುದು ಕಠಿಣ. +ವಿಶಾಲ ಅರ್ಥದಲ್ಲಿ ಅವರು ಬಯಸಿದ್ದು ಎರಡು ವಿಷಯಗಳು : (೧) ಮಿಶ್ರರಾಜ್ಯ ಮತ್ತು(೨) ಪ್ರಮುಖವರ್ಗ, ಸಣ್ಣ ವರ್ಗಗಳನ್ನು ಅಧೀನ ಸ್ಥಿತಿಗೆ ಇಳಿಸುವ ಪ್ರಭಾವೀ ಸ್ಥಿತಿಯಲ್ಲಿ ಇಲ್ಲದಿರುವಿಕೆ. +ಇದನ್ನು ಸಾಧಿಸುವಲ್ಲಿ ಭಾಷಾವಾರು ಪ್ರಾಂತಗಳು ಹೇಗೆ ಆತಂಕ ಒಡ್ಡುತ್ತವೆಂಬುದು ನನಗೆ ತೋಚುವುದಿಲ್ಲ. +ಕಾರಣ, ಭಾಷೆಯ ಆಧಾರದ ಮೇಲೆ ಪ್ರಾಂತಗಳ ಪುನರ್‌ನಿರ್ಮಾಣ ಆದಾಗ್ಯೂ (೧) ಪ್ರಾಂತಗಳು ಪ್ರೊ.ಫೀವಾಲಾ ಅವರು ಬಯಸಿದ ಅನೇಕ ಸಮಾಜಗಳ ಮಿಶ್ರಪ್ರಾಂತಗಳಾಗಿ ಮುಂದುವರೆಯುವುವು. +ಸಣ್ಣ ಸಮಾಜಗಳ ಮತ್ತು ಸಣ್ಣ ಪ್ರಾಂತಗಳ ಹಿತರಕ್ಷಿಸುವ ಉದ್ದೇಶದಿಂದ ಹೆಚ್ಚು ಸ್ಟುಟವಾದ ಮಿಶ್ರರಾಜ್ಯವನ್ನು ಬಯಸಿದರೆ, ನಿಶ್ಚಯವಾಗಿಯೂ ಕೇಂದದಲ್ಲಿ ಅಂಥ ಮಿಶ್ರ ರಾಜ್ಯ ಬರುವುದು. +ನಾನು ಹೇಳಿದಂತೆ, ಮಿಶ್ರರಾಜ್ಯ ಒಳ್ಳೆಯ ಇಲ್ಲವೆ ಗಟ್ಟ ರಾಜ್ಯ ಎಂದು ನನಗೇನೂ ಅನ್ನಿಸುವುದಿಲ್ಲ. +ಆದರೆ ಪ್ರೊ.ಘೀವಾಲಾ ಅವರು ಬಯಸಿದರೆ, ಒಂದಲ್ಲ ಒಂದು ರೀತಿಯಲ್ಲಿ ಪ್ರಾಂತ ಮತ್ತು ಕೇಂದ್ರ ಎರಡೂ ಕಡೆಗಳಲ್ಲಿ ಅದನ್ನು ಪಡೆಯಬಹುದು. +ಮೊದಲನೆಯದರಲ್ಲಿ ವಿವಿಧ ಸಮಾಜಗಳು ಸೇರಿ ಒಂದು ಪ್ರಾಂತವಾಗುವುದು. + ಮತ್ತು ಎರಡನೆಯದರಲ್ಲಿ ವಿವಿಧ ಪ್ರಾಂತಗಳು ಪ್ರತಿನಿಧಿಗಳು ಕೇಂದದಲ್ಲಿ ಒಟ್ಟು ಸೇರುವುದು. +ಅವರ ಎರಡನೆಯ ಉದ್ದೇಶಕ್ಕೆ ಎರಡು ತರಹದ ರಕ್ಷಣೆ ಇರುತ್ತದೆ. +ಮೊದಲನೆಯದಾಗಿ,ಮಿಶ್ರ ರಾಜ್ಯ ಕೊಡಲು ಶಕ್ಯವಿರುವಂತಹ ರಕ್ಷಣೆಯನ್ನು ಪ್ರತಿಯೊಬ್ಬ ಪ್ರಜೆ ಪಡೆಯುತ್ತಾನೆ. +ಎರಡನೆಯದಾಗಿ,ಭಾರತದ ತುಂಬೆಲ್ಲ ಪ್ರಜೆತನ ಒಂದೇ ಆಗುವುದು, ಪ್ರಾಂತೀಯ ಪ್ರಜೆತನ ಇರುವುದಿಲ್ಲ. +ಮಹಾರಾಷ್ಟ್ರದಲ್ಲಿರುವ ಗುಜರಾತಿ ವ್ಯಕ್ತಿಯು ಮಹಾರಾಷ್ಟ್ರದಲ್ಲಿರುವ ಮರಾಠಿಗನಿಗಿರುವ ಹಕ್ಕುಗಳನ್ನೇ ಪಡೆಯುತ್ತಾನೆ. +ಭಾಷಾವಾರು ಪ್ರಾಂತಗಳ ವಿರುದ್ಧ ಈ ಸೌಲಭ್ಯಗಳನ್ನು ಕೊಟ್ಟ ಬಳಿಕ ಪ್ರೊ.ಫೀವಾಲಾ ಅವರ ತಕರಾರು ಏನೆಂಬುದು ನನಗೆ ತಿಳಿಯದಾಗಿದೆ. +ಪ್ರೊ.ಫೀವಾಲಾ ಅವರು ಇನ್ನೂ ಎರಡು ಶಿಫಾರಸುಗಳನ್ನು ಮಾಡಿರುತ್ತಾರೆ. +೧) ಪ್ರಾಂತಗಳನ್ನು ಪುನಃ ವಿಂಗಡಿಸುವುದಿದ್ದರೆ, ಭಾಷೆಯ ಆಧಾರದ ಮೇಲೆ ಮಾಡದೆ,ತಾರ್ಕಿಕ ಆಧಾರದ ಮೇಲೆ ಮಾಡಬೇಕು. +೨) ರಾಷ್ಟ್ರೀಯತೆಯನ್ನು ವೈಯಕ್ತಿಕ ವಿಷಯವನ್ನಾಗಿ ಮಾಡಬೇಕು. +ಆರ್ಥಿಕ ತಳಹದಿಯ ಮೇಲೆ ಮಾಡುವ ಪ್ರಾಂತಗಳ ಪುನರ್ವಿಂಗಡಣೆ ತಾರ್ಕಿಕವೆನಿಸುತ್ತದೆ. +ಭಾಷೆಯ ತಳಹದಿಯ ಮೇಲೆ ಮಾಡುವುದಕ್ಕಿಂತ ಈ ವಿಧಾನ ಹೆಚ್ಚು ವೈಜ್ಞಾನಿಕ ಎನಿಸುತ್ತದೆ. +ಆದಾಗ್ಯೂ,ಪ್ರಾಂತಗಳ ಅವೈಜ್ಞಾನಿಕ ಪುನರ್ವಿಂಗಡಣೆ ಭಾರತದ ಆರ್ಥಿಕ ಮೂಲಕ ಉಪಯೋಗಕ್ಕೆ ಹೇಗೆ ಅಡ್ಡಿ ಬರುವುದೊ ನನಗೆ ತಿಳಿಯದಾಗಿದೆ. +ಪ್ರಾಂತೀಯ ಮೇರೆಗಳು ಆಡಳಿತಾತ್ಮಕ ಅಷ್ಟೆ. +ಅವು ಆರ್ಥಿಕ ಮೂಲಗಳ ಸರಿಯಾದ ಉಪಯೋಗಕ್ಕೆ ಅಡೆತಡೆಗಳನ್ನು ಒಡ್ಡುವುದಿಲ್ಲ. +ಭಾಷಾವಾರು ಪ್ರಾಂತಗಳಿಲ್ಲರುವ ಆರ್ಥಿಕ ಮೂಲಗಳ ಬಗೆಗೆ ಆಯಾ ಪ್ರಾಂತದವರಿಗಲ್ಲದೆ ಬೇರೆಯವರಿಗೆ ಏನೂ ತಿಳಿಯದಂಥ ಪರಿಸ್ಥಿತಿ ಉದ್ಭವಿಸುತ್ತಿದ್ದರೆ, ಭಾಷಾವಾರು ಪ್ರಾಂತ ರಚನೆ ಒಂದು ಕುಹಕ ಯೋಜನೆ ಆಗುತ್ತಿತ್ತು ಆದರೆ ಅಂಥ ಪ್ರಸಂಗ ಇರುವುದಿಲ್ಲ. +ಎಲ್ಲಿಯವರೆಗೆ ಆರ್ಥಿಕ ಮೂಲಗಳನ್ನು ಯಾರು ಬೇಕಾದರೂ ಉಪಯೋಗ ಮಾಡುವುದನ್ನು ನಿಷೇಧಿಸುವ ಅಧಿಕಾರವನ್ನು ಭಾಷಾವಾರು ಪ್ರಾಂತಗಳಿಗೆ ಕೊಡುವುದಿಲ್ಲವೋ, ಅಲ್ಲಿಯವರೆಗೆ ಭಾಷಾವಾರು ಪ್ರಾಂತ, ವೈಚಾರಿಕ ತಳಹದಿಯ ಮೇಲೆ ರಚಿಸಿದ ಪ್ರಾಂತದಿಂದ ದೊರೆಯುವ ಎಲ್ಲ ಲಾಭಗಳನ್ನು ಕೊಡುತ್ತದೆ. +ರಾಷ್ಟ್ರೀಯತೆಯನ್ನು ವೈಯಕ್ತಿಕ ವಿಷಯವನ್ನಾಗಿಸುವ ಮತ್ತು ಅದನ್ನು ಧರ್ಮದ ಸಮಾನವಾಗಿ ಕಾಣಬೇಕೆನ್ನುವ ಅನುಮೋದನೆಯನ್ನು ಅತಿ ಅವಾಸ್ತವಿಕ ಎಂದು ತಳ್ಳಿಹಾಕಬಹುದು. +ಅದು ಅನೇಕ ಆಡಳಿತಾತ್ಮಕ ಸಮಸ್ಯೆಗಳನ್ನು ಎಬ್ಬಿಸುವುದು. +ಜಗತ್ತು ಒಂದೇ ರಾಷ್ಟ್ರವಾದಾಗ, ಮತ್ತು ಎಲ್ಲ ರಾಷ್ಟ್ರಗಳು ಅದರ ಅಂಗರಾಷ್ಟಗಳಾದಾಗ ಇದು ಸರಿಯಾಗಿ ಕಾರ್ಯರೂಪಕ್ಕೆ ಬರುವುದು. + ಇದುವರೆಗೆ ಮುಂಬೈಯನ್ನು ಮಹಾರಾಷ್ಟ್ರದಲ್ಲಿ ಸೇರಿಸುವುದಕ್ಕೆ ವಿರೋಧ ಮಾಡಿದವರು ಪ್ರತಿಪಾದಿಸಿದ ವಾದಗಳನ್ನು ಪರಿಶೀಲಿಸಿದ್ದೇನೆ. + ಅವು ಬಹಳ ಮಹತ್ವದವು ಎನಿಸಿದ್ದರಿಂದ ಅವನ್ನು ಪರಿಶೀಲಿಸುವ ತೊಂದರೆಯನ್ನು ತೆಗೆದುಕೊಂಡಿದ್ದೇನೆ. +ಸಾಮಾನ್ಯನು ತಪ್ಪುದಾರಿ ಹಿಡಿಯದಂತೆ ಮಾಡುವ ಉದ್ದೇಶದಿಂದ ನಾನು ಈ ಕೆಲಸ ಮಾಡಿದ್ದೇನೆ. +ಸಾಮಾನ್ಯನು ತಪ್ಪುದಾರಿ ಹಿಡಿಯುವ ಸಾಧ್ಯತೆ ಇತ್ತು. +ಮತ್ತು ಅದಕ್ಕೆ ಎರಡು ಕಾರಣಗಳಿದ್ದವು. +ಮೊದಲನೆಯದಾಗಿ, ಈ ವಾದಗಳನ್ನು ಮಂಡಿಸಿದವರು ಸಾಮಾನ್ಯರಿರುವುದಿಲ್ಲ. +ಅವರು ವಿಶ್ವವಿದ್ಯಾಲಯದ ಪ್ರಾಧ್ಯಾಪಕರು. +ಎರಡನೆಯದಾಗಿ, ಪ್ರೊ ಗಾಡಗೀಳ್‌ ಅವರು ಮುಂಬೈಯನ್ನು ಮಹಾರಾಷ್ಟ್ರದಲ್ಲಿ ಸೇರಿಸುವ ಸೂಚನೆಯನ್ನು ಮಾಡಿದ ಬಳಿಕ ಈ ಪ್ರಾಧ್ಯಾಪಕರು ತಮ್ಮ ವಾದಗಳನ್ನು ಮಂಡಿಸಿದರು. +ದುರ್ದೈವದಿಂದ, ಇದುವರೆಗೆ ಪ್ರೊ.ಗಾಡಗೀಳ್‌ ಅವರ ಪ್ರತಿವಾದಿಗಳ ವಾದವನ್ನು ಖಂಡಿಸುವ ಯತ್ನ ಯಾರೂ ಮಾಡಿರುವುದಿಲ್ಲ. +ಅದರಿಂದ ಪ್ರೊ.ಗಾಡಗೀಳ್‌ ಅವರ ಪ್ರತಿಸ್ಪರ್ಧಿಗಳು ಗೆದ್ದಿದ್ದಾರೆಂಬ ತಪ್ಪು ತಿಳುವಳಿಕೆ ಜನರಿಗೆ ಉಂಟಾಗಿರುತ್ತದೆ. +ಈ ತಪ್ಪು ಕಲ್ಪನೆಯನ್ನು ಹೋಗಲಾಡಿಸುವುದು ಅತಿ ಅವಶ್ಯವಿತ್ತು . + ಮುಂಬೈಯನ್ನು ಮಹಾರಾಷ್ಟದಲ್ಲಿ ಸೇರಿಸುವ ಬಗ್ಗೆ ಪ್ರೊ ಗಾಡಗೀಳ್‌ ಅವರು ಎದುರಾಳಿಗಳಿಗೆ ತೋಚದಂಥ ಆದರೆ ನ್ಯಾಯಯುತವಾಗಿ ಮತ್ತು ಗಟ್ಟಿಯಾಗಿ ಮಹಾರಾಷ್ಟ್ರೀಯರ ಪರವಾಗಿ ಮಂಡಿಸಬಹುದಾದಂಥ, ಕೆಲವು ವಾದಗಳು ಇರುತ್ತವೆ. +ಆಯೋಗಕ್ಕೆ ಈ ವಿಚಾರಗಳು ಹೊಳೆಯುವ ಅಥವಾ ಹೊಳೆಯದಿರುವ ಸಾಧ್ಯತೆಯೂ ಇರುತ್ತದೆ. +ಆದ್ದರಿಂದ, ಆಯೋಗಕ್ಕೆ ಅವಶ್ಯಕತೆ ಎನಿಸಿದರೂ,ಅವನ್ನಿಲ್ಲಿ ಹೇಳ ಬಯಸುತ್ತೇನೆ. + ಮುಂಬೈಯನ್ನು ಮಹಾರಾಷ್ಟ್ರದ ಹೊರಗಿಡಬೇಕೆಂಬ ಸಮಸ್ಯೆಗೆ ಸಂಬಂಧಿಸಿದ ನಿರ್ಣಯ ತೆಗೆದುಕೊಳ್ಳುವಾಗ ಆಯೋಗ ಕಲ್ಕತ್ತೆಯ ಸ್ಥಾನವನ್ನು ಗಮನಿಸಬೇಕು. +ಮುಂಬೈಯ ಹಾಗೆ ಕಲ್ಕತ್ತಾ ಪೂರ್ವಭಾರತದ ಮಾರಾಟ ಮಳಿಗೆ. +ಮುಂಬೈಯಲ್ಲಿರುವ ಮಹರಾಷ್ಟೀಯರು ಹೇಗೆ ಅಲ್ಪಸಂಖ್ಯಾತರೋ ಹಾಗೆ ಕಲ್ಕತ್ತೆಯಲ್ಲಿರುವ ಬಂಗಾಲಿಗಳು ಅಲ್ಪ ಸಂಖ್ಯಾತರಾಗಿದ್ದಾರೆ. +ಮುಂಬೈಯಲ್ಲಿರುವ ಮಹಾರಾಷ್ಟೀಯರ ಹಾಗೆ ಕಲ್ಕತ್ತೆಯಲ್ಲಿರುವ ಬಂಗಾಲಿಯರು ವ್ಯಾಪಾರ ಉದ್ದಿಮೆಗಳ ಒಡೆಯರಾಗಿರುವುದಿಲ್ಲ. +ತದ್ವಿರುದ್ಧ ಕಲ್ಕತ್ತೆಯಲ್ಲಿಯ ಬಂಗಾಳಿಗಳ ಸ್ಥಿತಿ ಮುಂಬೈಯಲ್ಲಿಯ ಮಹಾರಾಷ್ಟೀಯರ ಸ್ಥಿತಿಗಿಂತ ಹೆಚ್ಚು ಕೆಟ್ಟಿದ್ದಿತು. +ಏಕೆಂದರೆ, ಮಹಾರಾಷ್ಟೀಯರು ಕನಿಷ್ಠ ಪಕ್ಷ ಮುಂಬೈಯ ವ್ಯಾಪಾರ ಮತ್ತು ಉದ್ದಿಮೆಗಳಿಗೆ ಕೂಲಿಕಾರರನ್ನು ಒದಗಿಸಿದರೆಂದು ಅಧಿಕಾರವಾಣಿಯಿಂದ ಹೇಳಬಹುದಾಗಿದೆ. +ಬಂಗಾಲಿಗಳು ಈ ವಿಷಯದಲ್ಲಿ ಏನನ್ನೂ ಅನ್ನುವಂತಿಲ್ಲ. +ಆಯೋಗವು ಮುಂಬೈಯನ್ನು ಮಹಾರಾಷ್ಟ್ರದಿಂದ ಪ್ರತ್ಯೇಕಿಸುವ ವಾದವನ್ನು ಸ್ವೀಕರಿಸಿದರೆ,ಕಲ್ಕತ್ತೆಯನ್ನು ಬಂಗಾಲದಿಂದ ಬೇರ್ಪಡಿಸುವಂತೆ ಶಿಫಾರಸು ಮಾಡಲು ಸಿದ್ಧವಿರಬೇಕಾಗುತ್ತದೆ. +ಏಕೆಂದರೆ,ಈಗ ಕೊಟ್ಟರುವ ಕಾರಣಗಳಿಗೆ ಮುಂಬೈಯನ್ನು ಮಹಾರಾಷ್ಟ್ರದಿಂದ ಪ್ರತ್ಯೇಕಿಸಲು ಸಾಧ್ಯವಾದರೆ, ಅವೇ ಕಾರಣಗಳು ಕಲ್ಕತ್ತೆಗೆ ಅನ್ವಯಿಸುತ್ತಿರುವಾಗ ಕಲ್ಕತ್ತೆಯನ್ನೇಕೆ ಬಂಗಾಲದಿಂದ ಪ್ರತ್ಯೇಕಿಸಲಿಕ್ಕಾಗದು ಎಂಬುದು ಬಹಳ ಸಮಂಜಸ ಪ್ರಶ್ನೆಯಾಗಿದೆ. +ಮುಂಬೈ ಪ್ರತ್ಯೇಕ ಪ್ರಾಂತವಾಗುವ ಸಾಮರ್ಥ್ಯ ಹೊಂದಿರುತ್ತದೆಯೇ? +ಮುಂಬೈಯಲ್ಲಿ ಪ್ರತ್ಯೇಕಿಸುವುದಕ್ಕಿಂತ ಮೊದಲು ಆರ್ಥಿಕ ದೃಷ್ಟಿಯಿಂದ ಸ್ವತಂತ್ರ ಪ್ರಾಂತವಾಗುವ ಸಾಮರ್ಥ್ಯ ಅದು ಹೊಂದಿರುತ್ತದೆ ಎಂದು ಸಿದ್ಧಮಾಡಿ ತೋರಿಸಬೇಕು. +ಆದಾಯ ಮತ್ತು ವೆಚ್ಚದ ಸರಿಯಾದ ಲೆಕ್ಕ ಇಟ್ಟಿದ್ದಾದರೆ, ಸದ್ಯದ ತೆರಿಗೆಯ ಮಾನವ ಆಧಾರದ ಮೇಲಿಂದ ಅದು ಸ್ವಾವಲಂಬಿ ಪ್ರಾಂತವಾಗಲಿಕ್ಕಿಲ್ಲ. +ಹಾಗಿದ್ದಾಗ, ಮುಂಬೈ ಪ್ರತ್ಯೇಕ ಪ್ರಾಂತವಾಗಬೇಕೆಂಬ ವಾದ ಮುರಿದುಬೀಳುತ್ತದೆ. +ಮುಂಬೈಯನ್ನು ಓರಿಸ್ಸಾ ಮತ್ತು ಅಸ್ಸಾಮಗಳಂಥ ಪ್ರಾಂತಗಳೊಂದಿಗೆ ಹೋಲಿಸುವುದು ನಿರುಪಯೋಗ, ಉಚ್ಚ ಆಡಳಿತ ಮಟ್ಟ ಉಚ್ಚ ಜೀವನ ಮಟ್ಟ ಹೆಚ್ಚು ಕೂಲಿ ಇದ್ದುದರಿಂದ ತೆರಿಗೆದಾರರನ್ನು ಹಿಂಡಿ ಹಿಪ್ಪಿ ಮಾಡುವಷ್ಟು ತೆರಿಗೆ ಹೇರಿದರೂ, ಮುಂಬೈಯ ವೆಚ್ಚ ಭರಿಸಲು ಸಾಕಾಗುವಷ್ಟು ಆದಾಯ ಬರುವುದಿಲ್ಲ. +ಮಹಾಮುಂಬೈ ಮಾಡುವುದರ ಉದ್ದೇಶ:ಮುಂಬೈ ಮೇರೆಗೆ ಹತ್ತಿದ ಮಹಾರಾಷ್ಟ್ರದ ಭಾಗಗಳನ್ನು ಸೇರಿಸಿ ಮಹಾಮುಂಬೈ ಮಾಡುವಲ್ಲಿ ಮುಂಬೈ ಸರಕಾರ ತೋರಿದ ಅಸಹ್ಯ ಅವಸರದ ಕಾರಣದಿಂದ ಅದು ಆರ್ಥಿಕವಾಗಿ ಸ್ವಾವಲಂಬಿ ಪ್ರಾಂತವಾಗುವುದರ ಬಗೆಗಿರುವ ಸಂಶಯ ಇನ್ನಷ್ಟು ಹೆಚ್ಚಾಗುತ್ತದೆ. +ಮುಂಬೈಯನ್ನು ಸ್ವಾವಲಂಬಿ ಪ್ರಾಂತವನ್ನಾಗಿ ಮಾಡುವುದಕ್ಕಲ್ಲದೆ ಬೇರಿನ್ನಾವ ಉದ್ದೇಶಕ್ಕಾಗಿ ಆ ಪ್ರದೇಶವನ್ನು ಮುಂಬೈಯಲ್ಲಿ ಕೂಡಿಸಿರುವುದಿಲ್ಲ. +ಬೇರಿನ್ನಾವ ಉದ್ದೇಶವಿರಲು ಸಾಧ್ಯ? +ಎಲ್ಲಿಯವರೆಗೆ ಮುಂಬೈ ಮಹಾರಾಷ್ಟ್ರದ ಭಾಗವಾಗಿತ್ತೋ ಅಲ್ಲಿಯವರೆಗೆ ಮಹಾರಾಷ್ಟ್ರದ ಯಾವ ಭಾಗದಲ್ಲಿ ಅದನ್ನು ಸೇರಿಸಬೇಕೆಂಬುದು ಮಹತ್ವದ ವಿಷಯ ಆಗಿರಲಿಲ್ಲ. +ಆದರೆ ಮುಂಬೈಯನ್ನು ಪ್ರತ್ಯೇಕ ಪ್ರಾಂತವನ್ನಾಗಿ ಮಾಡುವಾಗ, ಅದಕ್ಕೆ ಸ್ವಾವಲಂಬನ ಶಕ್ತಿಯನ್ನು ನೀಡುವ ಸಲುವಾಗಿ ಮಹಾರಾಷ್ಟೀಯರು ತಮ್ಮ ಪ್ರದೇಶವನ್ನು ಬಿಟ್ಟುಕೊಡಲು ದೀರ್ಫ ಅವಧಿ ಹಿಡಿಯುವುದು. +ಗುಜರಾಥೀಯರು ಬೇಡುವಂತೆ ಮುಂಬೈಯನ್ನು ಬಿಟ್ಟುಕೊಡುವುದಷ್ಟೇ ಅಲ್ಲ ಮಹಾಮುಂಬಯಿ ಯೋಜನೆಯನ್ನು ಪೂರೈಸಲು ಮಹಾರಾಷ್ಟ್ರವು ಕೆಲವು ಭಾಗವನ್ನೂ ನ್ಯಾಯಯುತವಾಗಿ ಬಿಟ್ಟುಕೂಡಬೇಕೋ ಬೇಡವೋ ಎಂಬುದನ್ನು ನಿರ್ಧರಿಸುವ ಜವಾಬುದಾರಿ ಭಾಷಾವಾರು ಪ್ರಾಂತ ರಚನೆಯ ಆಯೋಗದ ಮೇಲೆ ಬಿದ್ದಿದೆ. +ಈ ಜವಾಬುದಾರಿಯಿಂದ ತಪ್ಪಿಸಿಕೊಳ್ಳಲು ಆಯೋಗಕ್ಕೆ ಸಾಧ್ಯವಾಗದು. +ಮಹಾರಾಷ್ಟ್ರ ಮತ್ತು ಮುಂಬೈ ಒಂದಕ್ಕೊಂದು ಅವಲಂಬಿಸಿರುವುದಕ್ಕೆ ಅಲ್ಲ. + ಅವು ನಿಜವಾಗಿಯೂ ಒಂದಾಗಿದ್ದು, ಅವಿಭಾಜ್ಯವಿರುತ್ತವೆ. +ಎರಡನ್ನು ಪ್ರತ್ಯೇಕಿಸುವುದರಿಂದ ಎರಡಕ್ಕೂ ಪ್ರಾಣಾಂತಿಕ ಪೆಟ್ಟು ಬೀಳುತ್ತದೆ. +ಮುಂಬೈಯ ಜಲ ಮತ್ತು ಜಲವಿದ್ಯುತ್ತಿನ ಮೂಲಗಳು ಮಹಾರಾಷ್ಟದಲ್ಲಿರುತ್ತವೆ . +ಮಹಾರಾಷ್ಟ್ರದ ಬುದ್ಧಿಜೀವಿಗಳು ಮುಂಬೈಯಲ್ಲಿ ವಾಸಿಸುತ್ತಿದ್ದಾರೆ. +ಮುಂಬೈಯನ್ನು ಮಹಾರಾಷ್ಟ್ರದಿಂದ ಪ್ರತ್ಯೇಕಿಸುವುದೆಂದರೆ, ಮುಂಬೈಯ ಆರ್ಥಿಕ ಸ್ಥಿತಿಯನ್ನು ಕೆಡಿಸಿದಂತಾಗುತ್ತದೆ. + ಮಹಾರಾಷ್ಟೀಯರನ್ನು ಅವರ ಬುದ್ಧಿಜೀವಿಗಳಿಂದ ಪ್ರತ್ಯೇಕಿಸುವುದರಿಂದ ಅವರು ಮಾರ್ಗದರ್ಶನವಿಲ್ಲದೆ ದಾರಿ ಕಳೆದುಕೊಳ್ಳುತ್ತಾರೆ. + ಅವರು ಯಾವ ಗತಿಯನ್ನೂ ಹೊಂದುವುದಿಲ್ಲ. +ಮಧ್ಯಸ್ಥಿಕೆಯಿಂದ ಪರಿಹಾರ ಕಂಡು ಹಿಡಿಯುವುದು:ಮುಂಬೈ ಸಮಸ್ಯೆಯನ್ನು ಮಧ್ಯಸ್ಥಿಕೆಯಿಂದ ಮುಗಿಸಿಬಿಡಬೇಕೆಂದು ಕೆಲವು ಮೂಲಗಳಿಂದ ಸೂಚನೆಗಳು ಬಂದಿರುವುದನ್ನು ನಾನು ಕಂಡಿದ್ದೇನೆ. +ಇದಕ್ಕಿಂತ ಹೆಜ್ಜು ಅಸಂಬದ್ಧ ಸೂಚನೆಯನ್ನು ನಾನೆಂದೂ ಕೇಳಿರುವುದಿಲ್ಲ. +ಮದುವೆಗೆ ಸಂಬಂಧಿಸಿದ ವ್ಯಾಜ್ಯವನ್ನು ಮಧ್ಯಸ್ಥ ವ್ಯಕ್ತಿಯ ನಿರ್ಣಯದ ಆಧಾರದ ಮೇಲೆ ಮುಗಿಸುವುದು ಎಷ್ಟು ಅಸಂಬದ್ಧವೊ ಇದೂ ಅಷ್ಟೇ ಅಸಂಬದ್ಧ ಎನಿಸುತ್ತದೆ. +ಮುಂಬೈ ಮತ್ತು ಮಹಾರಾಷ್ಟ್ರಗಳನ್ನು ದೇವರು ಒಂದಾಗಿ ಸೃಷ್ಟಿಸಿದ್ದಾನೆ. +ಯಾವ ಮಧ್ಯಸ್ಥಿಕೆಗಾರನೂ ಅವೆರಡನ್ನು ಬೇರ್ಪಡಿಸಲಾರ. +ಅದನ್ನು ನಿರ್ಣಯಿಸುವ ಅಧಿಕಾರವಿರುವುದು ಆಯೋಗಕ್ಕಪ್ಟೇ. +ಅದೇ ಈ ವ್ಯಾಜ್ಯವನ್ನು ಬಗೆಹರಿಸಲಿ. +ನಿರ್ಬಂಧ ಮತ್ತು ಸಮದಂಡಿಗಳ ಆವಶ್ಯಕತೆ:೧೫ಂ ವರ್ಷ ಕಾಲ ದೇಶವನ್ನು ಆಳಿದ ಬ್ರಿಟಿಷರು ಭಾಷಾವಾರು ಪ್ರಾಂತ ರಚನೆಯ ಸಮಸ್ಯೆ ಪ್ರಚಲಿತ ಇದ್ದಾಗ್ಯೂ ಎಂದೂ ಅದರ ಬಗೆಗೆ ಯೋಚಿಸಲಿಲ್ಲ. +ಬಹುಭಾಷಾ ಪ್ರದೇಶಗಳಲ್ಲಿ ಸಾಂಸ್ಕೃತಿಕ ಆವಶ್ಯಕತೆಗಳನ್ನು ಪೂರೈಸುವುದಕ್ಕಿಂತ ಸುಭದ್ರ ಸರಕಾರವನ್ನು ಸ್ಥಾಪಿಸುವುದರಲ್ಲಿ ಮತ್ತು ಶಾಂತಿ ಸುವ್ಯವಸ್ಥೆಯನ್ನು ಕಾಪಾಡುವುದರಲ್ಲಿ ಹೆಚ್ಚು ಆಸಕ್ತರಾಗಿದ್ದರು. +ಅಂತೂ, ಏಕಭಾಷಿಕರ ಗುಂಪು ಎದ್ದು ಕಾಣುವ ಪ್ರದೇಶಗಳಲ್ಲಿ ತಾವು ಮಾಡಿದ ಆಡಳಿತ ವ್ಯವಸ್ಥೆಯಲ್ಲಿ ಭಾಷಾ ದೃಷ್ಟಿಯಿಂದ ಸ್ವಲ್ಪ ಹೊಂದಾಣಿಕೆ ಮಾಡುವುದು ಅವಶ್ಯ ಎಂದು ಅವರಿಗೆ ತಮ್ಮ ಆಳ್ವಿಕೆಯ ಕೊನೆಗೆ ತಿಳಿಯಿತೆಂಬುದು ನಿಜ. +ಉದಾಹರಣೆಗೆ ಭಾರತವನ್ನು ತಾವು ಬಿಡುವುದಕ್ಕೆ ಮುಂಚೆ ಬಂಗಾಲ, ಬಿಹಾರ ಮತ್ತು ಓರಿಸ್ಸಾ ಪ್ರಾಂತಗಳನ್ನು ಭಾಷಾವಾರು ಪ್ರಾಂತಗಳನ್ನಾಗಿ ಮಾಡಿದರು. +ಅವರ ಆಳ್ವಿಕೆ ಇನ್ನೂ ಮುಂದುವರೆದಿದ್ದರೆ, ಭಾಷಾವಾರು ಪ್ರಾಂತ ತತ್ವವನ್ನು ತರ್ಕಬದ್ಧವಾಗಿ ಸಂಪೂರ್ಣ ಅನುಷ್ಠಾನಕ್ಕೆ ತರುತ್ತಿದ್ದರೆಂದು ಹೇಳುವುದು ಕಠಿಣ. +ಆದರೆ ಬ್ರಿಟಿಷರು ಭಾಷಾವಾರು ಪ್ರಾಂತಗಳ ರಚನೆ ಬಗೆಗೆ ವಿಚಾರಿಸುವುದಕ್ಕಿಂತ ಬಹು ಹಿಂದೆ,ಅಂದರೆ ೧೯೨ಂ ರಲ್ಲಿ ಕಾಂಗೆಸ್ಸು, ಗಾಂಧೀಜಿ ಅವರ ನೇತೃತ್ವದಲ್ಲಿ. +ಭಾಷಾವಾರು ಪ್ರಾಂತಗಳು ಆಧಾರದ ಮೇಲೆ ತನಗೋಸ್ಕರವೇ ಒಂದು ಸಂವಿಧಾನವನ್ನು ತಯಾರಿಸಿತು. +೧೯೨ಂರಲ್ಲಿ ರೂಪಿತವಾದ ಸಿದ್ಧಾಂತವನ್ನೊಳಗೊಂಡ ಸಂವಿಧಾನ ಸುಯೋಜಿತವಾದುದು ಅಥವಾ ಜನರನ್ನು ಕಾಂಗ್ಲೆಸ್ಸಿನೊಳಗೆ ಎಳೆದುಕೊಳ್ಳಲು ಒಡ್ಡಿದ ಆಮಿಷವೊ ಎಂಬುದನ್ನು ಊಹಿಸುವ ಗೋಜಿಗೆ ಹೋಗುವುದಿಲ್ಲ. +ಭಾಷೆಗೆ ಸಂಬಂಧಿಸಿದ ವಿಷಯಗಳು ಮಹತ್ವದವು ಎಂಬುದನ್ನು ಬ್ರಿಟಿಷರು ತಿಳಿದುಕೊಂಡರೆಂಬುದರಲ್ಲಿ ಮತ್ತು ಅದನ್ನು ಸೀಮಿತ ಪ್ರಮಾಣದಲ್ಲಿ ಕಾರ್ಯ ರೂಪಕ್ಕಿಳಿಸಿದರೆಂಬುದರಲ್ಲಿ ಸಂಶಯವಿರುವುದಿಲ್ಲ. +ವಿರೋಧ :೧೯೨ಂ ರ ಸಂವಿಧಾನದ ಪ್ರಕಾರ ತಾನೇ ನಿರ್ಮಿಸಿದ ಜವಾಬುದಾರಿಯನ್ನು ಹೊರುವ ಆವಶ್ಯಕತೆ ಕಾಂಗ್ರೆಸ್ಸಿಗೆ ೧೯೪೫ ರವರೆಗೆ ಬರಲಿಲ್ಲ. +೧೯೪೫ ರಲ್ಲಿ ಅಧಿಕಾರ ವಹಿಸಿಕೊಂಡಾಗ ಅದಕ್ಕೆ ಈ ಜವಾಬು ದಾರಿ ಹೊಳೆಯಿತು. +ಲೋಕಸಭೆಯ ಸದಸ್ಯರೊಬ್ಬರು ಭಾರತದಲ್ಲಿ ಭಾಷಾವಾರು ಪ್ರಾಂತಗಳ ರಚನೆ ಕುರಿತುಮಂಡಿಸಿದ ಗೊತ್ತುವಳಿಯಿಂದ ಇದಕ್ಕೆ ಚಾಲನೆ ದೊರೆಯಿತೆನ್ನುವುದು ಅದರ ಇತ್ತೀಚಿನ ಇತಿಹಾಸವನ್ನುಅವಲೋಕಿಸಿದಾಗ ತಿಳಿದುಬರುತ್ತದೆ. +ಆ ಚರ್ಚೆಯಲ್ಲಿ ಸರಕಾರದ ಪರವಾಗಿ ಉತ್ತರ ಹೇಳುವುದು ನನ್ನ ಪಾಲಿಗೆ ಬಂದಿತು. +ನಾನು ಸಹಜವಾಗಿ ಈ ವಿಷಯದ ಬಗೆಗೆ ಮೇಲಿನವರ ನಿಶ್ಚಿತಧೋರಣೆಯನ್ನು ಅರಿಯಲು ಅವರ ಬಳಿಗೆ ಹೋದೆ. +ಇದು ವಿಚಿತ್ರವೆಂದು ಅನಿಸಬಹುದು. +ಭಾಷಾವಾರು ಪ್ರಾಂತರಚನೆಗೆ ವರಿಷ್ಠರು ಸಂಪೂರ್ಣ ವಿರುದ್ಧ ಇದ್ದರೆಂದು ಸ್ಪಷ್ಟವಾಯಿತು. +ಇಂಥ ಪ್ರಸಂಗದಲ್ಲಿ ಚರ್ಚೆಗೆ ಉತ್ತರ ಹೇಳುವ ಜವಾಬುದಾರಿಯನ್ನು ಪ್ರಧಾನ ಮಂತ್ರಿಯವರ ಮೇಲೆ ಹೇರಿ ಪರಿಹಾರ ದೊರಕಿಸಿದ್ದಾಯಿತು. +ಪ್ರಧಾನಿ ಅವರು ತಮ್ಮ ಉತ್ತರದಲ್ಲಿ ಪ್ರತ್ಯೇಕ ಆಂಧ್ರಪ್ರಾಂತವನ್ನು ಕೂಡಲೇ ನಿರ್ಮಿಸುವ ಭರವಸೆ ಇತ್ತರು. +ಪ್ರಧಾನಿಯವರ ಹೇಳಿಕೆಯ ಆಧಾರದ ಮೇಲೆ ಗೊತ್ತುವಳಿಯನ್ನು ಹಿಂತೆಗೆದುಕೊಳ್ಳಲಾಯಿತು. +ಆ ವಿಷಯ ಅಲ್ಲಿಯೇ ಉಳಿಯಿತು. +ಎರಡನೆಯ ಬಾರಿ ನಾನು ಕರಡು ಸಮಿತಿಯ ಅಧ್ಯಕ್ಷನಾದುದರಿಂದ ಈ ವಿಷಯವನ್ನು ಎರಡನೆಯ ಬಾರಿ ಪರಿಶೀಲಿಸಬೇಕಾಯಿತು. +ಸಂವಿಧಾನದ ಕರಡು ಸಿದ್ಧವಾದಾಗ, ಗೊತ್ತುವಳಿಯನ್ನು ಕುರಿತು ಅವರು ಹೇಳಿದುದನ್ನು ಲಕ್ಷ್ಯದಲ್ಲಿಟ್ಟುಕೊಂಡು, ಸಂವಿಧಾನದ ಭಾಗ (ಎ) ರಾಜ್ಯಗಳ ಪಟ್ಟಿಯಲ್ಲಿ ಆಂಧ್ರವನ್ನು ಪ್ರತ್ಯೇಕ ರಾಜ್ಯವನ್ನಾಗಿ ಸೇರಿಸಬಹುದೆ ಎಂದು ಪ್ರಧಾನ ಮಂತ್ರಿಯವರಿಗೆ ಒಂದು ಪತ್ರ ಬರೆದು ಕೇಳಿದೆ. +ಆಗ ಏನು ನಡೆಯಿತೆಂಬುದನ್ನು ಜ್ಞಾಪಿಸಿಕೊಳ್ಳಲು ನನ್ನ ಬಳಿ ಏನೂ ಇರುವುದಿಲ್ಲ. +ಆದರೆ ಸಂವಿಧಾನ ಸಭೆಯ ಅಧ್ಯಕ್ಷರಾದ ಡಾ.ರಾಜೇಂದ್ರ ಪ್ರಸಾದ್‌ ಅವರು ಉತ್ತರ ಪ್ರದೇಶದ ವಕೀಲರಾದ ಶ್ರೀಧರ್‌ ಅವರ ಅಧ್ಯಕ್ಷತೆಯಲ್ಲಿ ಭಾಷಾವಾರು ಪ್ರಾಂತ ರಚನೆಯ ವಿಷಯವನ್ನು ಶೋಧಿಸಲು ಬಂದ ಸಮಿತಿಯನ್ನು ನೇಮಿಸಿದರು. +ಬೇರೆ ಯಾವುದಕ್ಕೂ ಜನರು ಧರ್‌ ಕಮಿಟಿಯನ್ನು ನೆನಪಿಡಲಿಕ್ಕಿಲ್ಲ. +ಆದರೆ ಒಂದು ವಿಷಯದಲ್ಲಿ ಅದನ್ನು ಮರೆಯುವುದಿಲ್ಲ. +ಮಹಾರಾಷ್ಟ್ರವನ್ನು ಭಾಷಾವಾರು ಪ್ರಾಂತವನ್ನಾಗಿ ಮಾಡಿದಲ್ಲಿ ಯಾವುದೇ ಸ್ಥಿತಿಯಲ್ಲಿ, ಎಂಥದೇ ಪ್ರಸಂಗದಲ್ಲಿ ಮುಂಬೈಯನ್ನು ಮಹಾರಾಷ್ಟ್ರದಲ್ಲಿ ಸೇರಿಸತಕ್ಕದ್ದಲ್ಲ ಎಂದು ಸಮಿತಿ ಶಿಫಾರಸು ಮಾಡಿತು. +ಅನಂತರ ಜೈಪುರ ಕಾಂಗ್ರೆಸ್‌ ಅಧಿವೇಶನದಲ್ಲಿ ಆ ವರದಿಯನ್ನು ಪರಿಶೀಲಿಸಲಾಯಿತು. +ಪ್ರಧಾನ ಮಂತ್ರಿ, ಶ್ರೀ ವಲ್ಲಭಬಾಯಿ ಪಟೇಲ್‌, ಮತ್ತು ಡಾ.ಪಟ್ಟಾಭಿ ಸೀತಾರಾಮಯ್ಯ ಈ ಮೂವರು ಸದಸ್ಯರ ಕಮಿಟಿಯನ್ನು ಜೈಪುರ ಕಾಂಗೆಸ್ಸು ನಿಯಮಿಸಿತು. +ಅವರು ಒಂದು ವರದಿಯನ್ನು ಸಿದ್ಧಮಾಡಿದರು. +ಆಂಧ್ರಪ್ರಾಂತವನ್ನು ಕೂಡಲೆ ರಚಿಸಬೇಕೆಂದು, ಆದರೆ ಮದ್ರಾಸನ್ನು ತಮಿಳುನಾಡಿನಲ್ಲಿ ಬಿಡಬೇಕೆಂಬುದು ಅದರ ಸಾರಾಂಶವಾಗಿತ್ತು. +ಅದರ ವಿವರಗಳನ್ನು ಪರಿಶೀಲಿಸಲು ಮತ್ತೊಂದು ಸಮಿತಿಯನ್ನು ನಿಯಮಿಸಲಾಯಿತು. +ಅದು ಹೆಚ್ಚು ಕಡಿಮೆ ಒಮ್ಮತದ ವರದಿಯಾಗಿತ್ತು. +ಆದರೆ ಮದ್ರಾಸ್‌ ಮೇಲಿರುವ ತಮ್ಮ ಹಕ್ಕನ್ನು ಬಿಟ್ಟುಕೊಡಲು ಸಿದ್ಧವಿರದ ಆಂಧ್ರರು ಶ್ರೀ ಪ್ರಕಾಶಂ ಅವರು ಸಹ ಸೇರಿದಂತೆ ಅದನ್ನು ವಿರೋಧಿಸಿದರು. +ಅನಂತರ ಅದು ಇದ್ದಲ್ಲಿಯೇ ಸುಪ್ತಸ್ಥಿತಿಯನ್ನಪ್ಪಿತು. +ಅದರ ತರುವಾಯ ಆಂಧ್ರ ಪ್ರಾಂತದ ಸಲುವಾಗಿ ತಮ್ಮ ಜೀವವನ್ನು ಮುಡುಪಾಗಿಟ್ಟು ಶ್ರೀ ಪೊಟ್ಟಿ ಶ್ರೀರಾಮಲು ಅವರ ಪ್ರಸಂಗ ಬರುತ್ತದೆ. +ಎಲ್ಲ ಕಾಂಗ್ರೆಸ್ಸಿಗರು ಒಪ್ಪಿಕೊಂಡಂಥ ಒಂದು ವಿಷಯಕ್ಕಾಗಿ ಶ್ರೀರಾಮಲು ಅವರು ತಮ್ಮ ಜೀವ ಕೊಡಬೇಕಾಗಿ ಬಂದದ್ದು ಆಳುವ ಪಕ್ಷದ ಮೇಲೆ ಬರೆದ ಶೋಕ ಟಿಪ್ಪಣಿ ಇದ್ದಂತಿದೆ. +ಆಂಧ್ರಪ್ರದೇಶವನ್ನು ನಿರ್ಮಿಸಬೇಕೆಂದು ಮಾಡಿದ ವಿಚಾರವು ಶ್ರೀರಾಮುಲು ಅವರ ಆತ್ಮಕ್ಕೆ ಪ್ರಧಾನಿ ಅವರು ಸಲ್ಲಿಸಿದ ಪಿಂಡದಾನವಿದ್ದಂತಿದೆ. +ಇನ್ನಾವ ದೇಶದಲ್ಲಿ ಜನರು ಸರಕಾರದ ಇಂಥ ಕ್ರಮವನ್ನು ಸಹಿಸುತ್ತಿದ್ದರೆಂಬುದನ್ನು ಊಹಿಸಿ ಪ್ರಯೋಜನವಿಲ್ಲ. +ನನ್ನ ಅಭಿಪ್ರಾಯದ ಪ್ರಕಾರ ಒಂದು ಭಾಷಾವಾರು ಪ್ರಾಂತ ನಿರ್ಮಾಣವಾಗುವುದಕ್ಕಿಂತ ಮೊದಲು ಅದು ಮೂರು ಕರಾರುಗಳನ್ನು ಪೂರೈಸಬೇಕಾಗುತ್ತದೆ. +ಮೊದಲನೆಯದಾಗಿ, ಅದು ಆರ್ಥಿಕವಾಗಿ ಸ್ವಾವಲಂಬಿಯಾಗಿರಬೇಕು. +ಸಂವಿಧಾನವನ್ನು ರೂಪಿಸುವ ಸಮಯದಲ್ಲಿ, ಭಾರತೀಯ ಸಂಸ್ಥಾನಗಳ ವಿಲೀನೀಕರಣ ಪ್ರಶ್ನೆ ಪರಿಶೀಲನೆಗೆ ಬಂದಾಗ ಈ ನಿಯಮವನ್ನು ಅಂಗೀಕರಿಸಲಾಯಿತು. +ಆರ್ಥಿಕವಾಗಿ ಸ್ವಾವಲಂಬಿಗಳಾದ ಸಂಸ್ಥಾನಗಳಿಗೆ ಮಾತ್ರ ಸ್ವತಂತ್ರ ಪ್ರಾಂತಗಳಾಗಿ ಉಳಿಯಲು ಅನುಮತಿ ನೀಡಲಾಯಿತು. +ಉಳಿದೆಲ್ಲ ಸಂಸ್ಥಾನಗಳನ್ನು ನೆರೆಯ ಪ್ರಾಂತಗಳಲ್ಲಿ ವಿಲೀನಗೊಳಿಸಲಾಯಿತು. +ಆಂಧ್ರ ಒಂದು ಸಹರಾ ಮರುಭೂಮಿ ನಿಯೋಜಿತ ಆಂಧ್ರ ಪ್ರಾಂತವು ಆರ್ಥಿಕವಾಗಿ ಸ್ವಾವಲಂಬಿ ಪ್ರಾಂತವಾಗಿರುತ್ತದೆಯೆ? +ಆಂಧ್ರಪ್ರಾಂತದ ವಾರ್ಷಿಕ ಆರ್ಥಿಕ ಕೊರತೆ ೫ ಕೋಟಿ ರೂಪಾಯಿಗಳಷ್ಟಿರುತ್ತದೆ ಎಂದು ನ್ಯಾಯಾಧೀಶ ವಾಂಟೊ ಸ್ಪಷ್ಟವಾಗಿ ಒಪ್ಪಿದ್ದರು. +ಈ ಕೊರತೆಯನ್ನು ಎರಡು ರೀತಿಯಿ೦ದ ಕಡಿಮೆ ಮಾಡಬಹುದಾಗಿತ್ತು. +ತೆರಿಗೆ ಹೆಚ್ಚಿಸುವುದು ಇಲ್ಲವೆ ಖರ್ಚು ಕಡಿಮೆ ಮಾಡುವುದು. +ಆಂಧ್ರ ಈ ಸಮಸ್ಯೆಯನ್ನು ಎದುರಿಸಲೇಬೇಕಾಗುತ್ತದೆ. +ಕೇಂದ್ರವು ಈ ಕೊರತೆಯನ್ನು ಭರಿಸುವ ಜವಾಬುದಾರಿಯನ್ನು ಹೊರುತ್ತದೆಯೆ? +ಹೊರುವ ಹಾಗಿದ್ದರೆ ಈ ಹೊರೆ ನಿಯೋಜಿತ ಆಂಧ್ರ ಪ್ರಾಂತಕ್ಕಷ್ಟೇ ಸೀಮಿತವಾಗಿರುತ್ತದೆಯೋ ಅಥವಾ ಉಳಿದ ಇಂಥ ಪ್ರಾಂತಗಳಿಗೆ ಅನ್ವಯಿಸುವುದೋ? +ಇವು ಪರಿಶೀಲಿಸಬೇಕಾದ ಪ್ರಶ್ನೆಗಳು. +ಹೊಸ ಆಂಧ್ರ ಪ್ರಾಂತಕ್ಕೆ ನಿರ್ದಿಷ್ಟ ರಾಜಧಾನಿ ಇರುವುದಿಲ್ಲ. + ರಾಜಧಾನಿ ಇರದೆ ರಾಜ್ಯ ನಿರ್ಮಾಣ ಮಾಡುವುದನ್ನು ನಾನೆಂದೂ ಕೇಳಿಲ್ಲ. +ನಿಯೋಜಿತ ಆಂಧ್ರಪ್ರಾಂತದ ಸರಕಾರಕ್ಕೆ ಮದ್ರಾಸದಲ್ಲಿ ಒಂದು ರಾತ್ರಿ ಕಳೆಯಲು ಅನುಮತಿಸುವ ಸೌಜನ್ಯವನ್ನು ತಮಿಳುಕುಲದ ಮಹಾನಾಯಕ ಶ್ರೀ ರಾಜಗೋಪಾಲಚಾರಿಯವರು ತೋರಿಸುವುದಿಲ್ಲ. +ಅತಿಥಿಗಳನ್ನು ಆದರಿಸುವ ಸೌಜನ್ಯ ಹಿಂದೂ ಧರ್ಮವಿಧಿಸಿದ ಕಟ್ಟಳೆ ಆಗಿರುತ್ತದೆ. +ನಿವೇಶನವನ್ನು ಆಯ್ದು ಕಾರ್ಯ ನಿರ್ವಹಿಸುವ, ಬೇಕಾದ ಕಟ್ಟಡಗಳನ್ನು ಕಟ್ಟಕೊಳ್ಳುವ ಜವಾಬ್ದಾರಿಯನ್ನು ಹೊಸ ಸರಕಾರಕ್ಕೆ ಬಿಟ್ಟು ಬಿಡಲಾಗಿದೆ. +ಅದು ಯಾವ ಸ್ಥಳವನ್ನು ಆಯ್ದುಕೊಳ್ಳಬೇಕು? +ಯಾವುದರಿಂದ ಕಟ್ಟಡಗಳನ್ನು ಕಟ್ಟಕೊಳ್ಳಬೇಕು? +ಆಂಧ್ರಪ್ರದೇಶ ಒಂದು ಸಹರಾ ಇದ್ದಂತಿದ್ದು ಅದರಲ್ಲಿ ಓಯಿಸಿಸ್‌ಗಳು ಇರುವುದಿಲ್ಲ. +ಅದು ಈ ಸಹರಾದಲ್ಲಿ ಕಟ್ಟಡಗಳನ್ನು ಕಟ್ಟಿಸುವುದು ವ್ಯರ್ಥ. +ಅಲ್ಲಿ ಇರಲಿಕ್ಕಾಗದೆ ಯೋಗ್ಯ ವಸತಿ ಇದ್ದ ಕಡೆ ಸ್ಥಳಾಂತರಿಸಲೇಬೇಕಾಗುತ್ತದೆ . +ತಾತ್ಕಾಲಿಕ ಮುಖ್ಯ ಕಚೇರಿಗಳಿಗಾಗಿ ಮಾಡುವ ವೆಚ್ಚ ವ್ಯರ್ಥ. +ಸರಕಾರ ಈ ವಿಷಯ ಯೋಚಿಸಿರುವುದೆ? +ಶಾಶ್ಚತ ರಾಜಧಾನಿ ಆಗಬಹುದಾದಂಥ ಒಂದು ಸ್ಥಳವನ್ನು ಅದಕ್ಕೆ ಈಗಾಗಲೇ ಏಕೆ ಕೊಡಬಾರದು? +ಈ ದೃಷ್ಟಿಯಿಂದ ವಾರಂಗಲ್‌ ಯೋಗ್ಯ ಸ್ಥಳ ಎಂದು ನನಗನಿಸುತ್ತದೆ. +ಅದು ಆಂಧ್ರದ ಪ್ರಾಚೀನ ರಾಜಧಾನಿ. +ಅದು ರೈಲ್ವೆ ಜಂಕ್ಷನ್‌ ಆಗಿರುತ್ತದೆ. +ಅಲ್ಲಿ ಅನೇಕ ದೊಡ್ಡ ದೊಡ್ಡ ಕಟ್ಟಡಗಳಿರುತ್ತವೆ. +ಅದು ಹೈದರಾಬಾದ್‌ ಸಂಸ್ಥಾನದ ಭಾಗವಾಗಿರುವ ಆಂಧ್ರಪ್ರದೇಶದಲ್ಲಿ ಬರುವುದು ನಿಜ. +ನಿಯಮಾನುಸಾರ,ರಾಕ್ಷಸ ಗಾತ್ರದ ಹೈದರಾಬಾದ್‌ ಸಂಸ್ಥಾನವನ್ನು ವಿಭಜಿಸಿ ಸಂಪೂರ್ಣ ಆಂಧ್ರಪ್ರಾಂತವನ್ನು ಮಾಡಬಹುದಿತ್ತು . +ಆದರೆ, ಪ್ರಧಾನ ಮಂತ್ರಿಗಳಿಗೆ ಒಪ್ಪಿಗೆ ಆಗದಿದ್ದಲ್ಲಿ ಹೈದರಾಬಾದದಲ್ಲಿ ಒಂದು ಆಂಧ್ರಪ್ರದೇಶವನ್ನು ನಿರ್ಮಿಸಿ,ಅದನ್ನು ಹೊಸ ಆಂಧ್ರಪ್ರದೇಶಕ್ಕೆ ಕೂಡಿಸಿ, ತನ್ಮೂಲಕ ವಾರಂಗಲ್ಲಿಗೆ ದಾರಿಮಾಡಲಿಕ್ಕಾಗುವುದಿಲ್ಲವೆ? +ಪರಪ್ರದೇಶಗಳಿಂದ ಆವೃತವಾದ ಸಂಸ್ಥಾನಗಳಿಗೆ ಭಾರತದಲ್ಲಿ ಕೊರತೆ ಇರುವುದಿಲ್ಲ. +ಆದರೆ ಪ್ರಧಾನಮಂತ್ರಿಗಳು ಹೈದರಾಬಾದ್‌ ಮತ್ತು ಕಾಶ್ಮೀರಗಳಲ್ಲಿ ದೇವರ ಇಚ್ಛೆಯ ವಿರುದ್ಧ ಕೆಲಸ ಮಾಡಬಯಸಿದ್ದಾರೆ. +ಅದರ ಪರಿಣಾಮವನ್ನು ಅವರು ಕೂಡಲೇ ನೋಡುವರೆಂಬ ಭರವಸೆ ನನಗೆ ಇದೆ. +ಪ್ರಥಮ ಕರಾರು:ಇದು ಕೇವಲ ಆನುಷಂಗಿಕ. +ಭಾಷಾವಾರು ಪ್ರಾಂತ ಆರ್ಥಿಕವಾಗಿ ಸ್ವಾವಲಂಬಿ ಆಗಿರಬೇಕೆಂಬುದು ನನ್ನ ವಾದದ ಮುಖ್ಯ ಅಂಶ, ಎರಡನೆಯದಾಗಿ, ಭಾಷಾವಾರು ಪ್ರಾಂತದಲ್ಲಿ ಏನೇನು ಸಂಭವಿಸಬಹುದೆಂಬುದನ್ನು ಗಮನಿಸಬೇಕಾಗಿದೆ. +ದುರ್ದೈವದಿಂದ, ಜನಸಂಖ್ಯಾ ಶಾಸ್ತ್ರದ ಪ್ರಕಾರ ಭಾರತದ ಜನಸಂಖ್ಯೆಯನ್ನು ಯಾರೂ ಸಂಪೂರ್ಣ ಅಭ್ಯಾಸ ಮಾಡಿರುವುದಿಲ್ಲ. +ಹಿಂದೂಗಳಷ್ಟು, ಮುಸಲ್ಮಾನರಷ್ಟು ಯಹ್ಕೂದ್ಯರೆಷ್ಟು. +ಕ್ರೈಸ್ತರೆಷ್ಟು ಮತ್ತು ಅಸ್ಪೃಶ್ಯರೆಷ್ಟು ಎಂದು ಕೇವಲ ಜನಗಣತಿಯಿಂದ ತಿಳಿದಿದ್ದೇವೆ. +ಎಷ್ಟು ಧರ್ಮಗಳಿವೆ ಎಂಬುದನ್ನು ತಿಳಿದುಕೊಳ್ಳದೆ ಈ ಮಾಹಿತಿ ಉಪಯೋಗಕ್ಕೆ ಬರುವುದಿಲ್ಲ. +ವಿವಿಧ ಭಾಷಾವಾರು ಪ್ರಾಂತಗಳಲ್ಲಿ ವಿವಿಧ ಧರ್ಮದವರು ಎಷ್ಟೆಷ್ಟು ಇರುವರೆಂಬುದನ್ನು ತಿಳಿದುಕೊಳ್ಳುವುದು ಅವಶ್ಯವಿರುತ್ತದೆ. +ಇದರ ವಿಷಯಕ್ಕೆ ನಮ್ಮ ಬಳಿ ಬಹಳ ಕಡಿಮೆ ಮಾಹಿತಿ ಇರುತ್ತದೆ. +ಎಲ್ಲರೂ ತಮ್ಮ ತಮ್ಮ ಜ್ಞಾನ ಭಂಡಾರ ಮತ್ತು ಸಂಗ್ರಹಿತ ಮಾಹಿತಿಯನ್ನು ಅವಲಂಬಿಸಬೇಕಾಗುತ್ತದೆ. +ಭಾಷಾವಾರು ಪ್ರದೇಶದಲ್ಲಿ ಜಾತಿ ವ್ಯವಸ್ಥೆ ಹೀಗಿರುತ್ತದೆ. +ಒಂದೆರಡು ಪ್ರಮುಖ ಜಾತಿಗಳು ಮತ್ತು ಕೆಲವು ಅಲ್ಪಸಂಖ್ಯಾತರ ಜಾತಿಗಳಿದ್ದು, ಅಲ್ಪಸಂಖ್ಯಾತರ ಜಾತಿಗಳು ಪ್ರಮುಖ ಜಾತಿಗಳ ಅಧೀನವಾಗಿದ್ದು, ಅವುಗಳನ್ನುಅವಲಂಬಿಸಿರುತ್ತದೆ ಎಂದರೆ ಅದನ್ನಾದರೂ ವಿರೋಧಿಸುವರೆಂದು ನನಗನಿಸುವುದಿಲ್ಲ. +ಜಾತಿ ವ್ಯವಸ್ಥೆ :ಜಾತಿ ವ್ಯವಸ್ಥೆಯ ಕೆಲವು ಉದಾಹರಣೆಗಳನ್ನು ಇಲ್ಲಿ ಉಲ್ಲೇಖಿಸುತ್ತೇನೆ. +ಪಂಜಾಬದ ಪೆಪ್ಸುದ ಉದಾಹರಣೆಯನ್ನೇ ತೆಗೆದುಕೊಳ್ಳಿ. +ಜಾಟರು ಎಲ್ಲ ಕಡೆಗೆ ಪ್ರಬಲ ಇದ್ದಾರೆ. +ಹರಿಜನರು ಜಾಟರ ಅಧೀನರಾಗಿದ್ದು, ಅವರನ್ನು ಅವಲಂಬಿಸಿರುತ್ತಾರೆ. +ಆಂಧ್ರದ ಉದಾಹರಣೆ ತೆಗೆದುಕೊಳ್ಳಿ. +ಈ ಭಾಷಾವಾರು ಪ್ರದೇಶದಲ್ಲಿ ಎರಡು-ಮೂರು ಪ್ರಮುಖ ಜಾತಿಗಳಿರುತ್ತವೆ. +ಒಂದೊಂದು ಭಾಗದಲ್ಲಿ ಒಂದೊಂದು ಪ್ರಮುಖ ಇರುತ್ತವೆ. +ರೆಡ್ಡಿ, ಕಮ್ಮ ಇಲ್ಲವೆ ಕಾಪು ಜಾತಿಯವರು. +ಎಲ್ಲ ಭೂಮಿ, ಎಲ್ಲ ಕಾರ್ಯಾಲಯ,ಎಲ್ಲ ವ್ಯಾಪಾರವನ್ನು ಇವರೇ ಹಿಡಿದಿರುತ್ತಾರೆ. +ಎಲ್ಲ ಹರಿಜನರು ಅವರ ಅಧೀನರಾಗಿದ್ದು, ಅವರನ್ನು ಅವಲಂಬಿಸಿ ಜೀವಿಸುತ್ತಾರೆ. +ಮಹಾರಾಷ್ಟದ ಉದಾಹರಣೆ ತೆಗೆದುಕೊಳ್ಳಿ. +ಮಹಾರಾಷ್ಟ್ರದ ಪ್ರತಿಯೊಂದು ಹಳ್ಳಿಯಲ್ಲಿ ಮರಾಠರು ಅಧಿಕ ಸಂಖ್ಯೆಯಲ್ಲಿರುತ್ತಾರೆ. +ಬ್ರಾಹ್ಮಣರು, ಗುಜಾರರು, ಕೋಳಿಗಳು, ಮತ್ತು ಹರಿಜನರು ಮರಾಠರಿಗೆ ಅಧೀನರಾಗಿದ್ದು, ಅವರೊಂದಿಗೆ ಸಹಕರಿಸುತ್ತಾರೆ. +ಬ್ರಾಹ್ಮಣರು ಮತ್ತು ಬನಿಯಾರು ಯಾರ ಭೀತಿಯೂ ಇರದೆ ಜೀವಿಸುತ್ತಿದ್ದ ಕಾಲವೊಂದಿತ್ತು ಆದರೆ ಕಾಲ ಬದಲಾಗಿರುತ್ತದೆ. +ಗಾಂಧೀಜಿಯ ಹತ್ಯೆಯಾದ ಬಳಿಕ ಮರಾಠರು ಬ್ರಾಹ್ಮಣ ಮತ್ತು ಬನಿಯಾರನ್ನು ಚೆನ್ನಾಗಿ ಥಳಿಸಿದ ಪರಿಣಾಮವಾಗಿ,ಸುರಕ್ಷಿತ ಸ್ಥಳಗಳೆಂದು ಪಟ್ಟಣ ಸೇರಿದ್ದಾರೆ. +ಬಡ ಹರಿಜನರು ಮತ್ತು ಕೋಳಿಗಳು ಮತ್ತು ಮಾಲಿಗಳು ಮಾತ್ರ ಬಹುಸಂಖ್ಯೆಯ ಮರಾಠರ ಪೀಡೆಯನ್ನು ಅನುಭವಿಸುತ್ತ ಅಲ್ಲೇ ಉಳಿದಿದ್ದಾರೆ. +ಈ ಜಾತಿವ್ಯವಸ್ಥೆಯನ್ನು ಮರೆಯುವುದು ಅಪಾಯಕರ. +ಭಾಷಾವಾರು ಪ್ರಾಂತದಲ್ಲಿ ಅಲ್ಪಸಂಖ್ಯಾತರ ಸಮಾಜಗಳಿಗೆ ಯಾವ ಭವಿಷ್ಯ ಇರುತ್ತದೆ? +ವಿಧಾನಸಭೆ ಮತ್ತು ಲೋಕ ಸಭೆಗಳಿಗೆ ಶಾಸಕಾಂಗಕ್ಕೆ ಚುನಾಯಿತರಾಗುವ ಸಾಧ್ಯತೆ ಇರುತ್ತದೆಯೆ? +ರಾಜ್ಯಸರಕಾರದ ಸೇವೆಯಲ್ಲಿ ಸ್ಥಳ ದೊರಕಿಸಲು ಅವರಿಗೆ ಶಕ್ಯವಿರುತ್ತದೆಯೆ? +ಅವರ ಆರ್ಥಿಕ ಸ್ಥಿತಿ ಸುಧಾರಿಸುವುದರ ಕಡೆಗೆ ಸರಕಾರದ ಗಮನ ಹರಿಯುವುದೆಂದು ನಿರೀಕ್ಷಿಸಬಹುದೆ? +ಇಂಥ ಸ್ಥಿತಿಯಲ್ಲಿ, ಭಾಷಾವಾರು ಪ್ರಾಂತಗಳನ್ನು ನಿರ್ಮಿಸುವುದೆಂದರೆ ಬಹುಸಂಖ್ಯೆಯ ಸಮಾಜದವರ ಕೈಗೆ ಸ್ವರಾಜ್ಯವನ್ನು ಕೊಡುವುದೆಂದು ಅರ್ಥ. +ಗಾಂಧೀಜಿ ಅವರು ದೊರಕಿಸಿದ ಸ್ವರಾಜ್ಯಕ್ಕೆ ಎಂಥ ದುರ್ದೆಶೆ? +ಸಮಸ್ಯೆಯ ಈ ಮುಖ ಕಾಣಿಸದಿದ್ದವರಿಗೆ, ಭಾಷಾವಾರು ಪ್ರಾಂತದ ಬದಲು ಜಾಟ ಪ್ರಾಂತ, ರೆಡ್ಡಿ ಪ್ರಾಂತ, ಮರಾಠ ಪ್ರಾಂತ ಎಂದರೆ ಹೆಚ್ಚು ಅರ್ಥವಾಗುತ್ತದೆ. +ಗಮನಾರ್ಹ ಮೂರನೆಯ ಸಮಸ್ಯೆ ಎಂದರೆ-ಭಾಷಾವಾರು ಪ್ರಾಂತ ರಚಿಸುವುದೆಂದರೆ ಒಂದು ಭಾಷೆಯನ್ನು ಆಡುವ ಜನರನ್ನೆಲ್ಲ ಒಂದೇ ರಾಜ್ಯದಲ್ಲಿ ಸಂಘಟಿಸುವುದೆ ಆಗಿದೆ. +ಮರಾಠರನ್ನೆಲ್ಲ ಒಂದೇ ಮಹಾರಾಷ್ಟ್ರದಲ್ಲಿ ಕೂಡಿಸಬೇಕೆ? +ಆಂಧ್ರಪ್ರದೇಶವನ್ನೆಲ್ಲ ಒಂದೇ ಆಂಧ್ರ ರಾಜ್ಯದಲ್ಲಿ ಸೇರಿಸಬೇಕೆ? +ಒಂದು ಭಾಷೆ ಆಡುವವರನ್ನು ಒಂದೆಡೆ ಸೇರಿಸುವ ಸಮಸ್ಯೆ ಹೊಸ ರಾಜ್ಯಗಳಿಗಷ್ಟೇ ಸಂಬಂಧಿಸಿದುದಲ್ಲ. +ಹಿಂದೀ ಮಾತನಾಡುವವರನ್ನೆಲ್ಲ ಉ.ಪ್ರದೇಶದಲ್ಲಿರುವಂತೆ ಒಂದೇ ಪ್ರಾಂತದಲ್ಲಿ ಏಕೆ ಸೇರಿಸಬೇಕು. +ಮೌರ್ಯ ಚಕ್ರಾಧಿಪತ್ಯದ ವಿಚ್ಛಿದ್ರತೆಯ ನಂತರ ಭರತಖಂಡದ ಪರಿಸ್ಥಿತಿ ಏನಾಯಿತೋ ಅದೇ ಪರಿಸ್ಥಿತಿ ಏಕತ್ರೀಕರಣದ ಫಲವಾಗಿ ಸಂಭವಿಸುವ ಪ್ರತ್ಯೇಕತಾ ಪ್ರಜ್ಞೆಯಿಂದ ಈ ರಾಷ್ಟ್ರಕ್ಕೊದಗುತ್ತದೆ. +ವಿಧಿ ಈ ರಾಷ್ಟ್ರದ ಭವಿಷ್ಯವನ್ನು ಆ ಕಡೆಗೆ ನೂಕುತ್ತಿದೆಯೆ? +ಹಾಗೆಂದರೆ ಭಾಷಾವಾರು ಪ್ರಾಂತ ರಚನೆಗೆ ಸಮರ್ಥನೆ ಇಲ್ಲವೆಂದಲ್ಲ. +ಭಾಷಾವಾರು ಪ್ರಾಂತದ ಹೆಸರಿನಲ್ಲಿ ಬಹುಸಂಖ್ಯಾತ ಜಾತಿಯವರಿ೦ಂದ ಅಧಿಕಾರದ ದುರುಪಯೋಗ ಆಗದಂತೆ ನಿರ್ಬಂಧ ಮತ್ತು ಸಮಯ ದಂಡಿಗಳು ಇರಬೇಕೆಂಬುದು ಇದರ ಅರ್ಥ. +ಭಾಷಾವಾರು ರಾಜ್ಯಗಳನ್ನು ಕುರಿತ ವಿಚಾರಗಳು :ಭಾಷಾವಾರು ರಾಜ್ಯಗಳ ರಚನೆಯು ಇಂದಿನ ಜ್ವಲಂತ ಪ್ರಶ್ನೆ ಸಂಸತ್ತಿನಲ್ಲಿ ನಡೆದ ಚರ್ಚೆಯಲ್ಲಿ ಅನಾರೋಗ್ಯದ ಕಾರಣದಿಂದ ಭಾಗವಹಿಸಲು ಅಸಮರ್ಥನಾದುದಕ್ಕೆ ನಾನು ವಿಷಾದಿಸುತ್ತೇನೆ. +ಅಂತೆಯೇ ಪ್ರತ್ಯೇಕವಾದಿಗಳು ತಮ್ಮ ಅಭಿಪ್ರಾಯಗಳಿಗೆ ಅನುಕೂಲವಾಗುವಂತಹ ಪ್ರಚಾರವನ್ನು ಈ ದೇಶದಲ್ಲಿ ನಡೆಸುತ್ತಿರುವುದನ್ನು ಕಂಡು ಬೇಸತ್ತಿದ್ದೇನೆ. +ಉದಾಸೀನತೆಯಿಂದ ಮೌನತಾಳಲಾಗದಷ್ಟು ನನಗೆ ಈ ಪ್ರಶ್ನೆ ಮಹತ್ವಪೂರ್ಣವಾದುದು. +ನಾನು ಸುಮ್ಮನಿದ್ದುದಕ್ಕೆ ಕಾರಣವನ್ನು ತಿಳಿಯದೆ ಹಲವರು ನನ್ನನ್ನು ಆಕ್ಷೇಪಿಸಿದ್ದಾರೆ. +ಆದ್ದರಿಂದ ನಾನು ಮತ್ತೊಂದು ಪರ್ಯಾಯ ವಿಧಾನವನ್ನು ಅಂದರೆ ನನ್ನ ಅಭಿಪ್ರಾಯಗಳನ್ನು ಬರವಣಿಗೆಯ ಮೂಲಕ ತಿಳಿಸಲು ತೊಡಗಿದ್ದೇನೆ. +ಈ ಕೈಪಿಡಿಯಲ್ಲಿ ವ್ಯಕ್ತವಾಗಿರುವ ವಿಚಾರಗಳು ಮತ್ತು ಈ ಮೊದಲು ನಾನು ಕೊಟ್ಟಿರುವ ಸಾರ್ವಜನಿಕ ಹೇಳಿಕೆಗಳ ನಡುವೆ ಕೆಲವು ಅಸಂಗತತೆಯನ್ನು ಓದುಗರು ಕಂಡುಕೊಳ್ಳಬಹುದು. +ನನ್ನ ಅಭಿಪ್ರಾಯಗಳಲ್ಲಿ ಅಂತಹ ಬದಲಾವಣೆಗಳು ಕೆಲವೇ ಎಂಬುದನ್ನು ನಾನು ಉಚಿತವಾಗಿ ಬಲ್ಲೆ. +ಅಲ್ಪ ಸ್ವಲ್ಪ ಮಾಹಿತಿಯ ಆಧಾರದ ಮೇಲೆ ಮೊದಲಿನ ಹೇಳಿಕೆಯನ್ನು ಕೊಡಲಾಗಿತ್ತು. +ಸಮಗ್ರ ಚಿತ್ರ ನನ್ನ ಮನಸ್ಸಿನಲ್ಲಿ ಆಗ ಮೂಡಿರಲಿಲ್ಲ; +ರಾಜ್ಯ ಪುನರ್ವಿಂಗಡನಾ ಸಮಿತಿ (ಎಸ್‌. ಆರ್‌. ಸಿ)ಯ ವರದಿ ಹೊರ ಬಂದಾಗ ಮೊಟ್ಟಮೊದಲಿಗೆ ನನ್ನ ಕಣ್ಣು ತೆರೆಯಿತು. +ನನ್ನ ಅಭಿಪ್ರಾಯಗಳಲ್ಲಿ ವಿಮರ್ಶಕನು ಕಾಣಬಹುದಾದ ಯಾವುದೇ ಬದಲಾವಣೆಗೆ ಇದು ಸಾಕಷ್ಟು ಸಮಾಧಾನ ಕೊಡಬಲ್ಲದು. +ಅಂದಿನ ಮತ್ತು ಇಂದಿನ ನನ್ನ ವಿಚಾರಗಳಲ್ಲಿ ಕಂಡುಬರಬಹುದಾದ ಪೂರ್ವಾಪರ ವಿರೋಧವನ್ನೇ ತನ್ನ ಬಂಡವಾಳವಾಗಿ ಮಾಡಿಕೊಳ್ಳಲು ಅಪೇಕ್ಷಿಸುವ ವೈರಭಾವ ಮತ್ತು ಅಸೂಯೆಗಳಿಂದ ಕೂಡಿದ ವಿಮರ್ಶಕನಿಗೆ ನನ್ನ ಉತ್ತರ ನೇರವಾಗಿದೆ. +ಸುಸಂಗತತೆ ಕತ್ತೆಯ ಗುಣವೆಂದು ಎಮರ್ಸನ್‌ ಹೇಳಿದ್ದಾನೆ. +ಆದ್ದರಿಂದ ನನ್ನನ್ನು ನಾನೇ ಕತ್ತೆ ಮಾಡಿಕೊಳ್ಳುವ ಅಪೇಕ್ಷೆ ನನಗಿಲ್ಲ. +ಎಂದೋ ವ್ಯಕ್ತಮಾಡಿದ ಅಭಿಪ್ರಾಯಕ್ಕೆ ಸುಸಂಗತತೆಯ ಹೆಸರಿನಲ್ಲಿ ಯಾವ ವಿಚಾರಶೀಲ ಮನುಷ್ಯನನ್ನೂ ಕಟ್ಟಿಹಾಕಲು ಸಾಧ್ಯವಿಲ್ಲ. +ಸುಸಂಗತತೆಗಿಂತ ಹೆಚ್ಚು ಪ್ರಾಮುಖ್ಯವಾದುದೆಂದರೆ ಹೊಣೆಗಾರಿಕೆ. +ತಾನು ಏನು ಕಲಿತಿದ್ದನೋ ಅದನ್ನು ಹೊಣೆಗಾರ ಮನುಷ್ಯರು ತೊರೆಯಲೂ ಕಲಿಯಬೇಕು. +ಪುನರ್ಯೋಜಿಸಲೂ ಮತ್ತು ತನ್ನ ವಿಚಾರಗಳಲ್ಲಿ ಬದಲಾವಣೆ ಮಾಡಿಕೊಳ್ಳಲೂ ಹೊಣೆಗಾರ ಮನುಷ್ಯನು ಧೈರ್ಯಶಾಲಿಯಾಗಿರಬೇಕು. +ತಾನು ಏನು ಕಲಿತಿದ್ದನೋ ಅದನ್ನು ತೊರೆಯಲೂ ಮತ್ತು ತನ್ನ ವಿಚಾರಗಳನ್ನು ಪುನರ್‌ರಚಿಸಲೂ ಸಬಲ ಕಾರಣವಿರಬೇಕೆಂಬುದು ನಿಜ. +ಆಲೋಚನೆಯಲ್ಲಿ ಕೊನೆಯ ತೀರ್ಮಾನವೆಂಬುದು ಇರಲಾರದು. +ಭಾಷಾವಾರು ರಾಜ್ಯಗಳ ರಚನೆಯು ಅತ್ಯಗತ್ಯವೆನಿಸಿದರೂ, ಅದನ್ನು ಯಾವುದೇ ರೀತಿಯ ಪುಂಡತನದಿಂದ ನಿರ್ಧರಿಸಲಾಗುವುದಿಲ್ಲ. +ಹಾಗೆಯೇ ಒಂದು ಪಕ್ಷದ ಆಸಕ್ತಿಗಳಿಗೆ ಅನುಕೂಲವಾಗುವ ರೀತಿಯಲ್ಲಿಯೂ ಈ ಸಮಸ್ಯೆಯನ್ನು ಬಿಡಿಸಕೂಡದು. +ನಿರ್ಲಿಪ್ತ ಪರ್ಯಾಲೋಚನೆಯ ಮೂಲಕ ಈ ಸಮಸ್ಯೆಯನ್ನು ಪರಿಹರಿಸಬೇಕು. +ನಾನು ಮಾಡುತ್ತಿರುವುದು ಇಂತಹ ಪರ್ಯಾಲೋಚನೆ ಮತ್ತು ನನ್ನ ಓದುಗರೂ ಆ ರೀತಿ ಮಾಡಬೇಕೆಂದು ಕೇಳಿಕೊಳ್ಳುತ್ತೇನೆ. +ಸಂವಿಧಾನದ ೩ ನೆಯ ವಿಧಿಯು ಹೊಸ ರಾಜ್ಯಗಳನ್ನು ಸ್ಥಾಪಿಸಲು ಸಂಸತ್ತಿಗೆ ಅಧಿಕಾರ ಕೊಡುತ್ತದೆ. +ಭಾಷೆಯ ಆಧಾರದ ಮೇಲೆ ರಾಜ್ಯಗಳ ರಚನೆಯಾಗಬೇಕೆಂಬ ಪ್ರಬಲ ಬೇಡಿಕೆಯ ಹಿನ್ನೆಲೆಯಲ್ಲಿ ರಾಜ್ಯಗಳನ್ನು ಪುನರ್ವಿ೦ಂಗಡಿಸಲು ಕಾಲಾವಕಾಶವಿದ್ದಿಲ್ಲವಾದ್ದರಿ೦ದ ಸಂಸತ್ತಿಗೆ ಈ ಅಧಿಕಾರವನ್ನು ಕೊಡಲಾಯಿತು. +ಭಾಷಾನುಗುಣ ರಾಜ್ಯ ರಚನೆಯ ಬಗೆಗೆ ಬರುತ್ತಿದ್ದ ನಿರಂತರ ಒತ್ತಾಯದ ಕಾರಣದಿಂದಾಗಿ,ಈ ಸಮಸ್ಯೆಯ ಪರಿಶೀಲನೆಗೆ ಪ್ರಧಾನ ಮಂತ್ರಿಗಳು ರಾಜ್ಯ ಪುನರ್ವಿಂಗಡಣಾ ಆಯೋಗವನ್ನು ನೇಮಿಸಿದರು. +ರಾಜ್ಯ ಪುನರ್ವಿಂಗಡಣಾ ಆಯೋಗವು ಈ ಕೆಳಗಿನ ರಾಜ್ಯಗಳನ್ನು ರಚಿಸಲು ತನ್ನ ವರದಿಯಲ್ಲಿ ಶಿಫಾರಸು ಮಾಡಿತು. +ಇಲ್ಲಿ ರಾಜ್ಯಗಳ ಗಾತ್ರವನ್ನು ಹೋಲಿಸಿ ನೋಡುವುದು ಮುಖ್ಯ. +ಜನಸಂಖ್ಯೆಯನ್ನು ಆಳತೆಗೋಲಾಗಿ ಇಟ್ಟುಕೊಂಡಾಗ ಉಂಟಾಗುವ ಪರಿಣಾಮ ಈ ಕೆಳಕಂಡಂತಿರುತ್ತದೆ: +ಪ್ರತಿಯೊಂದರಲ್ಲಿಯೂ ೧ ರಿಂದ ೨ ಕೋಟಿ ಜನಸಂಖ್ಯೆಯುಳ್ಳ ೮ ರಾಜ್ಯಗಳಿವೆ. +ಪ್ರತಿಯೊಂದರಲ್ಲಿಯೂ ೨ ರಿಂದ ೪ ಕೋಟ ಜನಸಂಖ್ಯೆಯುಳ್ಳ ೪ ರಾಜ್ಯಗಳಿವೆ. +೪ ಕೋಟ ಜನಸಂಖ್ಯೆಗಿಂತ ಹೆಚ್ಚಿಗಿರುವ ಒಂದು ರಾಜ್ಯವಿದೆ. +೬ ಕೋಟ ಜನಸಂಖ್ಯೆಗಿಂತ ಹೆಚ್ಚಿರುವ ಒಂದು ರಾಜ್ಯವಿದೆ. +ಇದರ ಪರಿಣಾಮವು ವಿಪರೀತವಾಗುತ್ತದೆ ಎಂದು ಹೇಳಬೇಕಾದ ಅಗತ್ಯವಿಲ್ಲ. +ರಾಜ್ಯದ ಗಾತ್ರವು ಮುಖ್ಯ ವಿಷಯವಲ್ಲವೆಂದೂ ಹಾಗೂ ಗಣರಾಜ್ಯದಲ್ಲಿ ಸೇರುವ ರಾಜ್ಯಗಳ ಗಾತ್ರದ ಸಮಾನತೆ ಕ್ಷಣಕಾಲವಾದರೂ ಚಿಂತಿಸಬೇಕಾದ ವಿಷಯವಲ್ಲವೆಂದೂ ಆಯೋಗವು ಯೋಚಿಸುವಂತೆ ಕಾಣುತ್ತದೆ. +ಆಯೋಗವು ಮಾಡಿದ ಮೊದಲ ಹಾಗೂ ಅತ್ಯಂತ ಭೀಕರವಾದ ತಪ್ಪು ಇದು. +ಸಕಾಲದಲ್ಲಿ ಸರಿಪಡಿಸದಿದ್ದರೆ, ಇದು ಭಾರತಕ್ಕೆ ತುಂಬಾ ಹಾನಿ ಮಾಡುವುದು ಖಂಡಿತ. +ಭಾಷಾ ವಾದದ ಅತಿರೇಕ:ವಿವಿಧ ರಾಜ್ಯಗಳ ಸ್ಥಾಪನೆಗೆ ರಾಜ್ಯ ಪುನರ್ವಿಂಗಡಣಾ ಆಯೋಗವು ಶಿಫಾರಸು ಮಾಡಿದೆ. +ಆ ಶಿಫಾರಸ್ಸುಗಳ ಒಂದು ಪರಿಣಾಮವೆಂದರೆ ವಿವಿಧ ರಾಜ್ಯಗಳ ಗಾತ್ರದಲ್ಲಿ ವ್ಯತ್ಯಾಸ. +ಇದನ್ನು ಮೊದಲ ಅಧ್ಯಾಯದಲ್ಲಿ ತೋರಿಸಿಕೊಟ್ಟಿದ್ದೇನೆ. +ಅಲ್ಲದೆ ಆಯೋಗವು ಮಾಡಿರುವ ಶಿಫಾರಸ್ಸುಗಳಲ್ಲಿ ಮತ್ತೊಂದು ದೋಷವಿದೆ. +ಈ ದೋಷ ಸ್ಟಲ್ಪ ಮಟ್ಟಿಗೆ ಮರೆಯಾಗಿದೆಯಾದರೂ ಅದು ಇರುವುದು ನಿಜ. +ಉತ್ತರ ಭಾರತವನ್ನು ದಕ್ಷಿಣ ಭಾರತಕ್ಕೆ ಸಂಬಂಧಿಸಿದಂತೆ ಪರಿಗಣಿಸದಿರುವುದರಲ್ಲಿ ಆ ದೋಷವಡಗಿದೆ. +ಭಾಷಾವಾರು ರಾಜ್ಯ ರಚನೆಯ ಹೆಸರಿನಲ್ಲಿ ಭಾರತವನ್ನು ವಿಭಜಿಸುವ ಹಂಚಿಕೆಯನ್ನು ಕಡೆಗಣಿಸಲಾಗದು. +ಆಯೋಗವು ಯೋಚಿಸುವಷ್ಟು ಅದು ನಿರಪಾಯಕಾರಿಯಾದುದಲ್ಲ. +ಅದು ತುಂಬಾ ವಿಷಪೂರಿತವಾಗಿದೆ. +ಈಗಿಂದೀಗಲೇ ಆ ವಿಷವನ್ನು ತೆಗೆದುಹಾಕಲೇಬೇಕು. +ಭಾರತೀಯ ಒಕ್ಕೂಟದ ಕಲ್ಪನೆ ಒಂದು ವಿಚಾರವನ್ನು ವ್ಯಕ್ತ ಮಾಡುತ್ತದೆ. +ಅದು ಒಂದು ಸಾಧನೆಯನ್ನು ಸೂಚಿಸಿರುವುದಿಲ್ಲ. + “ಅಮೆರಿಕನ್‌ ಕಾಮನ್‌ವೆಲ್ತ್‌” ಎಂಬ ಪುಸ್ತಕದಲ್ಲಿ ಬ್ರೈಸ್‌, ಸ್ಪಷ್ಟ ತಿಳಿವಳಿಕೆ ಕೊಡಬಲ್ಲ ಈ ಕೆಳಗಿನ ಪ್ರಸಂಗವನ್ನು ನಿರೂಪಿಸಿದ್ದಾನೆ. +ಅವನು ಹೇಳುವುದು ಹೀಗೆ :“ಕಲವು ವರ್ಷಗಳ ಹಿಂದೆ, ತನ್ನ ವಾರ್ಷಿಕ ಸಮ್ಮೇಳನವೊಂದರಲ್ಲಿ ಸಾರ್ವಜನಿಕ ಪೂಜಾ ವಿಧಾನವನ್ನು ತಿದ್ದುಪಡಿ ಮಾಡುವ ಕಾರ್ಯದಲ್ಲಿ ಅಮೆರಿಕೆಯ ಪ್ರೊಟಸ್ಟೆಂಟ್‌ ಎಪಿಸ್ಕೋಪಲ್‌ ಚರ್ಚ್‌ ಮಗ್ನವಾಗಿತ್ತು. +ಸಣ್ಣ ವಾಕ್ಯಗಳ ಪ್ರಾರ್ಥನೆಯ ಜೊತೆಗೆ, ಇಡೀ ಜನತೆಗಾಗಿ ಒಂದು ಸಾಮೂಹಿಕ ಪ್ರಾರ್ಥನೆಯನ್ನು ಮಧ್ಯ ಭಾಗದಲ್ಲಿರುವ ಕೆಲವು ರಾಜ್ಯಗಳನ್ನು ನಾನು ಸೇರಿಸಿದ್ದೇನೆ. +ಏಕೆಂದರೆ ಭಾಷೆಯ ಮೂಲಕ ಅವುಗಳಲ್ಲಿ ಪರಸ್ಪರ ಸಂಬಂಧವಿದೆ ಸೇರಿಸುವುದು ಒಳ್ಳೆಯದು ಎಂದು ಯೋಜಿಸಲಾಗಿತ್ತು. +ಸುಪ್ರಸಿದ್ಧ ನವ ಇಂಗ್ಲೆಂಡ್‌ ದೈವಜ್ಞನೊಬ್ಬನು ದೇವರೇ, ನಮ್ಮ ರಾಷ್ಟ್ರವನ್ನು ಆಶೀರ್ವದಿಸು ಎಂಬ ಪದಗಳನ್ನು ಸೂಚಿಸಿದ. +ಅವು ಆ ಮಧ್ಯಾಹ್ನ ಆಕ್ಷಣದಲ್ಲಿ ಸ್ವೀಕೃತವಾದವು. +ಮಾರನೇ ದಿನ ಆ ವಾಕ್ಯವನ್ನು ಪುನಃ ಪರಿಶೀಲನೆಗೆ ತೆಗೆದುಕೊಳ್ಳಲಾಯಿತು. +"ರಾಷ್ಟ್ರ ಎಂಬ ಪದಕ್ಕೆ ಅಲ್ಲಿಯ ಸಾಮಾನ್ಯರು ಹಲವು ವಿರೋಧಗಳನ್ನು ವ್ಯಕ್ತಪಡಿಸಿದರು. +ಯಾಕೆಂದರೆ,ಆ ಪದವು ಅತಿ ನಿಖರವಾದ ರಾಷ್ಟೀಯ ಏಕತೆಯ ಅರ್ಥವನ್ನು ಕೊಡುತ್ತದೆ ಎಂಬುದು ಅವರ ವಾದವಾಗಿತ್ತು . +ಆಗ ಆ ಪದವನ್ನು ಕೈಬಿಟ್ಟು “ಓ ದೇವರೇ ಈ ಸಂಯುಕ್ತ ಸಂಸ್ಥಾನಗಳನ್ನು ಆಶೀರ್ವದಿಸು”ಎಂಬ ವಾಕ್ಯವನ್ನು ಅವರು ಸ್ವೀಕರಿಸಿದರು. +ತನ್ನನ್ನು “ಭಾರತೀಯ ಸಂಯುಕ್ತ ರಾಜ್ಯಗಳು” ಎಂದು ಕರೆದುಕೊಳ್ಳಲೂ ಭಾರತವು ಮಾನಸಿಕವಾಗಿ ಮತ್ತು ನೈತಿಕವಾಗಿ ಅರ್ಹವಾಗಿಲ್ಲ. +ಭಾರತವು ಸಂಯುಕ್ತ ರಾಜ್ಯಗಳಾಗಿ ಆಗಲು ನಾವು ಇನ್ನೂ ಬಹಳ ದೂರ ಕ್ರಮಿಸಬೇಕಾಗಿದೆ. +ಭಾರತೀಯ ಸಂಯುಕ್ತ ರಾಜ್ಯಗಳಿಂದ, ಭಾರತೀಯ ಒಕ್ಕೂಟವು ಬಹಳ ಬಹಳ ದೂರದಲ್ಲಿದೆ. +ಆದರೆ ಉತ್ತರ ಭಾರತವನ್ನು ಬಲಪಡಿಸಿ, ದಕ್ಷಿಣ ಭಾರತವನ್ನು ಒಡೆಯುವುದು ಆ ಗುರಿಯನ್ನು ಸಾಧಿಸಲು ಸರಿಯಾದ ಕ್ರಮವಲ್ಲ. +ಭಾಷಾ ವಾದದ ಪರಿಮಿತಿಗಳು:ಭಾಷಾವಾರು ರಾಜ್ಯದ ಆಗು ಹೋಗುಗಳು “ಒ೦ದು ರಾಜ್ಯ, ಒಂದು ಭಾಷೆ ಎಂಬುದು ಬಹುಮಟ್ಟಿಗೆ ವಿಶ್ವದ ಪ್ರತಿಯೊಂದು ರಾಷ್ಟ್ರದ ಲಕ್ಷಣ. +ಜರ್ಮನಿಯ ಸಂವಿಧಾನವನ್ನು ಪರಿಶೀಲಿಸಿ, ಫ್ರಾನ್ಸಿನ ಸಂವಿಧಾನವನ್ನು ಪರಿಶೀಲಿಸಿ, ಇಟಲಿಯ ಸಂವಿಧಾನವನ್ನು ಪರಿಶೀಲಿಸಿ, ಇಂಗ್ಲೆಂಡಿನ ಸಂವಿಧಾನವನ್ನು ಪರಿಶೀಲಿಸಿ ಮತ್ತು ಅಮೆರಿಕೆಯ ಸಂಯುಕ್ತ ಸಂಸ್ಥಾನಗಳ ಸಂವಿಧಾನವನ್ನು ಪರಿಶೀಲಿಸಿ, “ಒಂದು ರಾಜ್ಯ, ಒಂದು ಭಾಷೆ” ಎಂಬುದು ನಿಯಮ. +ಈ ನಿಯಮದ ಉಲ್ಲಂಘನೆ ಎಲ್ಲೆಲ್ಲಿ ಆಗಿದೆಯೋ, ಅಲ್ಲೆಲ್ಲಾ ರಾಜ್ಯಕ್ಕೆ ಅಪಾಯ ಒದಗಿದೆ. +ಪ್ರಾಚೀನ ಆಸ್ಟ್ರಿಯನ್‌ ಸಾಮ್ರಾಜ್ಯ ಮತ್ತು ಪ್ರಾಚೀನ ಟರ್ಕಿ ಸಾಮ್ರಾಜ್ಯಗಳು ಸಂಕೀರ್ಣ ರಾಜ್ಯಗಳಿಗೆ ದೃಷ್ಟಾಂತಗಳು. +ಅವು ಎಲ್ಲಾ ಅರ್ಥದಲ್ಲಿಯೂ ಬಹುಭಾಷಾ ರಾಷ್ಟ್ರಗಳಾಗಿದ್ದವು. +ಬಹು ಭಾಷಾ ರಾಷ್ಟ್ರಗಳಾಗಿದ್ದರಿ೦ದಲೇ,ಅವುಗಳು ಸಿಡಿದು ಹೋದವು. +ಭಾರತವು, ಸಂಕೀರ್ಣ ರಾಜ್ಯಗಳ ಸಮೂಹವಾಗಿ ಮುಂದುವರಿದರೆ,ಅಂತಹ ದುರದೃಷ್ಟದಿಂದ ಅದು ಪಾರಾಗಲಾರದು. +ಏಕಭಾಷಾ ರಾಜ್ಯವು ಸ್ಥಿರವಾಗಿರುತ್ತದೆ; +ಬಹುಭಾಷಾ ರಾಜ್ಯವು ಅಸ್ಥಿರವಾಗಿರುತ್ತದೆ ಎಂಬುದಕ್ಕೆ ಕಾರಣ ಸುಸ್ಪಷ್ಟ ಒಂದು ರಾಜ್ಯವು ಸುಹೃತ್‌ ಬಾಂಧವ್ಯ ಭಾವನೆಯ ಆಧಾರದ ಮೇಲೆ ರಚಿತವಾಗಿರುತ್ತದೆ. +ಸಂಕ್ಷಿಪ್ತವಾಗಿ ಹೇಳುವುದಾದರೆ, “ನಾವೆಲ್ಲ ಒಂದು” ಎಂಬಂತಹ ಸಾಂಘಿಕ ಚಿತ್ತವೃತ್ತಿಯೇ ಆ ಭಾವನೆ. +ಈ ಭಾವನೆಯ ಹಿಡಿತಕ್ಕೆ ಸಿಕ್ಕವರು ತಾವೆಲ್ಲ ಬಂಧು ಬಾಂಧವರೆಂದು ಭಾವಿಸುತ್ತಾರೆ. +ತಮ್ಮ ತಮ್ಮ ಬಂಧು ಬಳಗದವರ ಬಗ್ಗೆ ಸೌಹಾರ್ದ ಭಾವನೆ, ಬಂಧು ಬಳಗದವರಲ್ಲದವರ ಬಗ್ಗೆ ಅಸಹನಾ ಭಾವನೆ ಇವು ಒಂದೇ ಸಮಯದಲ್ಲಿರುತ್ತವೆ. +ಅದು ಹೋಗುತ್ತ ಬರುತ್ತ ಉಭಯ ಮುಖಗಳಲ್ಲಿ ಕೊರೆಯುವ ಜಾತಿ ಪ್ರಜ್ಞೆಯ ಭಾವನೆ. +ಇದು ಸಜಾತಿ ಪ್ರಜ್ಞೆಯ ಭಾವನೆ. +ಈ ಭಾವನೆ ಆರ್ಥಿಕ,ಸಾಮಾಜಿಕ ಏರುಪೇರುಗಳನ್ನು ಹಾಗೂ ಗಣನೆಯಿಲ್ಲದೆ ಸ್ವಜನತೆಯನ್ನು ಭದ್ರವಾಗಿ ಬಂಧಿಸುತ್ತದೆ. +ವಿಜಾತಿಯವರನ್ನು ದೂರ ಸರಿಸಿಡುತ್ತದೆ. +ಇದು ಬೇರೆ ಗುಂಪಿನೊಡನೆ ಸೇರದಿರುವ ಪ್ರತ್ಯೇಕತಾ ಭಾವನೆ. +ಸೌಹಾರ್ದ ಭಾವನೆಯ ಅಸ್ತಿತ್ವ ಸ್ಥಿರವಾದ ಹಾಗೂ ಜನ ತಂತ್ರಾತ್ಮಕ ರಾಷ್ಟ್ರದ ಬುನಾದಿ. +ಭಾಷಾವಾರು ರಾಜ್ಯವು ಅವಶ್ಯಕವೆಂಬುದಕ್ಕೆ ಇದು ಒಂದು ಕಾರಣ. +ಒಂದು ರಾಜ್ಯವು ಏಕಭಾಷಾತ್ಮಕವಾಗಿರಬೇಕೆಂಬುದಕ್ಕೆ ಇತರ ಕಾರಣಗಳೂ ಉಂಟು. +"ಓಂದು ರಾಜ್ಯ, ಒಂದು ಭಾಷೆ" ನಿಯಮವು ಏಕೆ ಅಗತ್ಯ ಎಂಬುದಕ್ಕೆ ಬೇರೆ ಎರಡು ಕಾರಣಗಳುಂಟು. +ಒಂದು ರಾಷ್ಟ್ರದ ಪ್ರಜೆಗಳ ನಡುವೆ ಸೌಹಾರ್ದ ಭಾವನೆಯಿಲ್ಲದಿದ್ದರೆ, ಪ್ರಜಾತಂತ್ರವು ಘರ್ಷಣೆಯಿಲ್ಲದೆ ನಡೆಯದು ಎಂಬುದು ಒಂದು ಕಾರಣ. +ನಾಯಕತ್ವಕ್ಕಾಗಿ ಗುಂಪುಗಳ ನಡುವಣ ಹೋರಾಟ, ಮತ್ತು ಆಡಳಿತದಲ್ಲಿ ಭೇದ ನೀತಿಯನುಸರಣೆ ಇವು ಯಾವುದೇ ಸಂಕೀರ್ಣ ರಾಷ್ಟ್ರದಲ್ಲಿ ಯಾವಾಗಲೂ ಕಂಡುಬರುತ್ತವೆ; +ಅವು ಪ್ರಜಾತಂತ್ರದೊಂದಿಗೆ ಅಸಂಗತವೆನಿಸುತ್ತವೆ. +ಸಂಕೀರ್ಣ ರಾಷ್ಟವೊಂದರಲ್ಲಿ, ಪ್ರಜಾತಂತ್ರದ ವಿಫಲತೆಗೆ ಅತ್ಯುತ್ತಮ ಉದಾಹರಣೆಯೆಂದರೆ ಇಂದಿನ ಮುಂಬಯಿ ರಾಜ್ಯ. +ಸಂಕೀರ್ಣ ರಾಜ್ಯವೊಂದು ಹೇಗೆ ಅಭಿವೃದ್ಧಿ ಹೊಂದಬಲ್ಲದು ಎಂಬುದನ್ನು ಅರಿತು ಅನುಭವ ಪಡೆಯಲು, ಇಂದಿನ ಮುಂಬಯಿ ರಾಜ್ಯವು ಹೀಗೆಯೇ ಉಳಿಯಬೇಕು ಎಂದು ರಾಜ್ಯ ಪುನರ್ವಿಂಗಡನಾ ಸಮಿತಿ ಸೂಚಿಸಿದೆ. +ಇಂತಹ ಸೂಚನೆಯಿಂದ ನಾನು ದಿಗ್ಭಮೆಗೊಂಡಿದ್ದೇನೆ. +ಕಳೆದ೨ಂ ವರ್ಷಗಳಿಂದ ಸಂಕೀರ್ಣ ರಾಜ್ಯವಾಗಿ ಮುಂಬಯಿ ಪರಿಸ್ಥಿತಿಯೇನೆಂಬುದನ್ನು ಗಮನಿಸಿಯೂ ಮತ್ತು ಮರಾಠಿಗರು ಮತ್ತು ಗುಜರಾತಿಗಳ ನಡುವೆಯಿರುವ ತೀವ್ರತರ ಹಗೆತನವನ್ನು ಕಂಡೂ ಇಂತಹ ಅರ್ಥಹೀನ ಸಲಹೆಯನ್ನು ಕೇವಲ ತಿಳಿಗೇಡಿ ಅಥವಾ ಮರೆಗುಳಿ ವ್ಯಕ್ತಿಯು ಕೊಡಬಹುದು. +ಸಂಕೀರ್ಣರಾಜ್ಯದಲ್ಲಿ ಜನತಂತ್ರದ ವಿಫಲತೆಗೆ ಮತ್ತೊಂದು ಉದಾಹರಣೆಯೆಂದರೆ, ಹಿಂದಿನ ಮದ್ರಾಸ್‌ ರಾಜ್ಯ. +ಸಂಯುಕ್ತ ಭಾರತದ ಸಂಕೀರ್ಣ ರಾಷ್ಟ್ರ ಸ್ಥಾಪನೆ ಮತ್ತು ಭಾರತವೆಂಬ ಏಕ ರಾಷ್ಟ್ರದಲ್ಲೂ, ಭಾರತ,ಪಾಕಿಸ್ಥಾನಗಳೆಂಬ ಎರಡು ರಾಜ್ಯಗಳು ಅವಶ್ಯಕ ವಿಭಜನೆ ಇವು, ಸಂಕೀರ್ಣ ರಾಷ್ಟ್ರವೊಂದರಲ್ಲಿ ಜನತಂತ್ರವಿರುವುದು ಅಸಾಧ್ಯವೆಂಬುದಕ್ಕೆ ಮತ್ತಿತರ ಉದಾಹರಣೆಗಳು. +“ಒಂದು ರಾಜ್ಯ, ಒಂದು ಭಾಷೆ” ನಿಯಮವನ್ನು ಅನುಸರಿಸುವುದು ಅಗತ್ಯ ಎಂಬುದಕ್ಕೆ ಮತ್ತೊಂದು ಕಾರಣ. +ಜನಾಂಗೀಯ ಮತ್ತು ಸಾಂಸ್ಕೃತಿಕ ಘರ್ಷಣೆಗಳಿಗೆ ಇದೊಂದೇ ಪರಿಹಾರವೆಂಬುದು. +ತಮಿಳರು ಆಂಧ್ರರನ್ನೂ, ಆಂಧ್ರರು ತಮಿಳರನ್ನೂ ಏಕೆ ದ್ವೇಷಿಸುತ್ತಾರೆ? +ಹೈದರಾಬಾದಿನಲ್ಲಿರುವ ಆಂಧ್ರರು ಮರಾಠಿಗರನ್ನೂ, ಮರಾಠಿಗರು ಆಂಧ್ರರನ್ನೂ ಏಕೆ ದ್ವೇಷಿಸುತ್ತಾರೆ? +ಗುಜರಾತಿಗಳು ಮರಾಠಿಗರನ್ನು,ಮರಾಠಿಗಳು ಗುಜರಾತಿಗಳನ್ನೂ ಏಕೆ ದ್ವೇಷಿಸುತ್ತಾರೆ? +ಇದಕ್ಕೆ ಉತ್ತರ ತುಂಬಾ ಸರಳ. +ಇಬ್ಬರ ನಡುವೆಯಾವುದೇ ಸ್ವಾಭಾವಿಕ ವೈರವಿದೆಯೆಂಬುದು ಇದಕ್ಕೆ ಕಾರಣವಲ್ಲ. +ಅವರನ್ನು ಅಕ್ಕಪಕ್ಕದಲ್ಲಿ ಕುಳ್ಳಿರಿಸಿ,ಸರ್ಕಾರದಂತಹ, ಸಾಮಾನ್ಯ ಸಹಭಾಗಿ ಚಿತ್ರದಲ್ಲಿ ಭಾಗವಹಿಸಲು ಒತ್ತಾಯಿಸುವಂತಹ ವಿಷಯವೇ ದ್ವೇಷಕ್ಕೆ ಕಾರಣ. +ಇದಕ್ಕೆ ಮತ್ತಾವ ಪರಿಹಾರವಿಲ್ಲ. +ಎಲ್ಲಿಯವರೆಗೆ ಇವರು ಕಡ್ಡಾಯವಾಗಿ ರಾಜಕೀಯ ರಂಗದಲ್ಲಿ, ಅಕ್ಕಪಕ್ಕದಲ್ಲಿರುವ ಸ್ಥಿತಿ ಉಳಿದಿರುತ್ತದೆಯೋ, ಅಲ್ಲಿಯವರೆಗೆ ಇಬ್ಬರ ನಡುವೆ ಶಾಂತಿ ಇರಲಾರದು. +ಕೆನಡಾ, ಸ್ವಿಟ್ಟರ್‌ಲೆಂಡ್‌ ಮತ್ತು ದಕ್ಷಿಣ ಆಫ್ರಿಕಾ ದೇಶಗಳ ಉದಾಹರಣೆಗಳನ್ನು ಉಲ್ಲೇಖಿಸುವ ಜನರೂ ಇದ್ದಾರೆ. +ಇಂತಹ ದ್ವಿಭಾಷಾ ರಾಷ್ಟ್ರಗಳು ಇವೆ ಎಂಬುದು ನಿಜ. +ಆದರೆ ಕೆನಡಾ, ಸ್ವಿಟ್ಟರ್‌ಲೆಂಡ್‌ ಮತ್ತು ದಕ್ಷಿಣ ಆಫ್ರಿಕಾಗಳ ಜಾಯಮಾನ ಅಂತಃ ಪ್ರವೃತ್ತಿಗಳಿಗಿಂತ ಭಾರತದ ಪ್ರತಿಭೆ, ಜಾಯಮಾನಗಳು ವಿಭಿನ್ನವಾಗಿವೆ ಎಂಬುದನ್ನು ಮರೆಯಲಾಗದು. +ಕೂಡಿಸುವುದು ಸ್ವಿಟ್ಜರ್‌ಲೆಂಡ್‌, ದಕ್ಷಿಣ ಆಫ್ರಿಕಾ ಮತ್ತು ಕೆನಡಾಗಳ ಪ್ರವೃತ್ತಿ, ಒಡೆಯುವುದು ಭಾರತದ ಪ್ರವೃತ್ತಿ. +ಅವರನ್ನೆಲ್ಲಾ ಇಲ್ಲಿಯವರೆಗೆ ಒಟ್ಟಿಗೆ ಹಿಡಿದಿರಲಾಗಿರುವ ಸಂಗತಿಯು ವಸ್ತುಗಳ ಸಹಜತಿಗೆ ಅನುಗುಣವಾಗಿಲ್ಲ. +ಅವರಿಬ್ಬರೂ ಕಾಂಗ್ರೆಸ್‌ ಶಿಸ್ತಿನಿಂದ ಬಂಧಿತರಾಗಿದ್ದಾರೆ ಎಂಬ ಸತ್ಯ ಸಂಗತಿ ಇದಕ್ಕೆ ಕಾರಣ. +ಆದರೆ ಕಾಂಗ್ರೆಸ್‌ ಎಲ್ಲಿಯವರೆಗೆ ಉಳಿಯಬಲ್ಲದು? +ಕಾಂಗ್ರೆಸ್‌ ಎಂದರೆ ಪಂಡಿತ ನೆಹರೂ,ಪಂಡಿತ ನೆಹರೂ ಅಂದರೆ ಕಾಂಗ್ರೆಸ್‌. +ಆದರೆ ಪಂಡಿತ ನೆಹರು ಚಿರಂಜೀವಿಯೆ? +ಈ ಪ್ರಶ್ನೆಗಳತ್ತ ಗಮನಕೊಡುವ ಯಾರಾದರೂ, ಕಾಂಗ್ರೆಸ್‌ ಆ ಚಂದ್ರಾರ್ಕ ಉಳಿಯಲಾರದು ಎಂಬುದನ್ನು ಮನಗಾಣುತ್ತಾರೆ. +ಒಂದು ದಿನ ಕಾಂಗ್ರೆಸಿಗೆ ಕೊನೆ ಬರಲೇಬೇಕು. +ಮುಂದಿನ ಚುನಾವಣೆಯೊಳಗೇ ಅದು ಕೊನೆಗಾಣಬಹುದು. +ಹಾಗೆ ಆದಾಗ, ಮುಂಬಯಿ ರಾಜ್ಯದಲ್ಲಿ ಆಡಳಿತ ನಡೆಯುವುದಕ್ಕೆ ಬದಲಾಗಿ, ಅಂತರ್ಯುದ್ಧ ನಡೆಯುವುದನ್ನು ಕಾಣಬಹುದು. +ಆದ್ದರಿಂದ ಎರಡು ಕಾರಣಗಳಿಂದಾಗಿ ಅಂದರೆ ಜನತಂತ್ರಕ್ಕೆ ಮಾರ್ಗವನ್ನು ಸುಲಭಗೊಳಿಸಲು ಮತ್ತು ಜನಾಂಗೀಯ ಮತ್ತು ಸಾಂಸ್ಕೃತಿಕ ಬಿಕ್ಕಟ್ಟನ್ನು ನಿವಾರಿಸಲು ನಮಗೆ ಭಾಷಾವಾರು ರಾಜ್ಯಗಳು ಬೇಕು. +ಭಾಷಾವಾರು ರಾಜ್ಯಗಳನ್ನು ರಚಿಸಲು ಭಾರತವು ಹಿಡಿದ ಹಾದಿ ಸೂಕ್ತವಾದುದು. +ಎಲ್ಲಾ ರಾಷ್ಟ್ರಗಳೂ ಅನುಸರಿಸುವ ಮಾರ್ಗ ಅದೇ. +ಭಾಷಾನುಗುಣವಾದ ಇತರ ರಾಷ್ಟ್ರಗಳು ಪ್ರಾರಂಭದಿಂದಲೂ, ಹಾಗೆ ಆಗಿರುತ್ತವೆ. +ಭಾರತದ ಬಗ್ಗೆ ಹೇಳುವುದಾದರೆ, ಆ ಗುರಿಯನ್ನು ಮುಟ್ಟಲು ಅದು ತಾನೆ ಹಿಂದೆ ನಡೆಯಬೇಕಾಗುತ್ತದೆ. +ಆದರೆ ಈ ದೇಶ ನಡೆಯಬೇಕೆಂದಿರುವ ದಾರಿ ಈಗಾಗಲೇ ಚೆನ್ನಾಗಿ ಸವೆದ ದಾರಿ. +ಅದು ಇತರ ರಾಷ್ಟ್ರಗಳು ಅನುಸರಿಸಿದ ಹಾದಿ. +ಭಾಷಾವಾರು ರಾಜ್ಯದ ಅನುಕೂಲತೆಗಳನ್ನು ಹೇಳಿದ ನಂತರ, ಅದರ ಅಪಾಯಗಳನ್ನೂ ನಾನು ಪ್ರಸ್ತಾಪಿಸಲೇಬೇಕು. +ತನ್ನ ಪ್ರಾದೇಶಿಕ ಭಾಷೆ ಅಧಿಕೃತ ರಾಜ್ಯ ಭಾಷೆಯಾಗಿರುವ ಭಾಷಾವಾರು ರಾಜ್ಯವು, ಸುಲಭವಾಗಿ ಒಂದು ಸ್ವತಂತ್ರ ರಾಷ್ಟ್ರವಾಗಿ ಬೆಳೆಯಬಹುದು. +ಸ್ಪತಂತ್ರ ರಾಜ್ಯ ಹಾಗೂ ಸ್ವತಂತ್ರ ರಾಷ್ಟ್ರಗಳ ನಡುವಣ ದಾರಿ ಬಹಳ ಕಿರಿದಾದುದು. +ಹೀಗಾದರೆ, ನಮ್ಮ ಭಾರತ ಆಧುನಿಕ ಭಾರತವಾಗಿ ಉಳಿಯಲಾರದು. +ಪರಸ್ಪರ ವೈರ ಮತ್ತು ಯುದ್ಧಗಳಲ್ಲಿ ಮುಳುಗಿರುವ ಅನೇಕ ದೇಶಗಳನ್ನೊಳಗೊಂಂಡ ಮಧ್ಯಕಾಲೀನ ಭಾರತವಾಗಿ ಅದು ಪರಿಣಮಿಸುತ್ತದೆ. +ಭಾಷಾವಾರು ರಾಜ್ಯಗಳ ರಚನೆಯಲ್ಲಿಯೇ ಈ ಅಪಾಯವಡಗಿದೆ ಎಂಬುದು ಸುಸ್ಪಷ್ಟ ಭಾಷಾವಾರು ರಾಜ್ಯಗಳನ್ನು ರಚಿಸದಿದ್ದರೂ ಅದೇ ರೀತಿಯ ಅಪಾಯವಿರುತ್ತದೆ. +ವಿವೇಕಶೀಲನೂ ದೃಢಮನೋಭಾವದವನೂ ಆದ ರಾಜನೀತಿಜ್ಞನು ಮೊದಲನೆಯ ಅಪಾಯವನ್ನು ತಪ್ಪಿಸಬಲ್ಲ. +ಆದರೆ ಸಂಕೀರ್ಣ ರಾಜ್ಯದ ಅಪಾಯಗಳು ಹಿರಿದಾಗಿವೆ. +ರಾಜನೀತಿಜ್ಞನು ಎಂಥಹ ಹಿರಿಮೆಯುಳ್ಳವನಾಗಿದ್ದರೂ,ಆ ಅಪಾಯಗಳು ಅವನ ನಿಯಂತ್ರಣಕ್ಕೆ ಸಿಕ್ಕಲಾರವು. +ಈ ಅಪಾಯವನ್ನು ಹೇಗೆ ಎದುರಿಸಬಹುದು? +ಈ ಅಪಾಯವನ್ನು ಎದುರಿಸಲು ನಾನು ಒಂದೇ ಒಂದು ಉಪಾಯವನ್ನು ಯೋಜಿಸಬಲ್ಲೆ. +ಪ್ರಾದೇಶಿಕ ಭಾಷೆಯು ರಾಜ್ಯದ ಅಧಿಕೃತ ಭಾಷೆಯಾಗಿರಕೂಡದೆಂದು ರಾಜ್ಯಾಂಗ ರಚನೆಯಲ್ಲಿ ಅವಕಾಶ ಮಾಡುವುದೇ ಆ ಉಪಾಯ. +ರಾಷ್ಟ್ರದ ಅಧಿಕೃತ ಭಾಷೆ ಹಿಂದಿಯಾಗಿರಬೇಕು ಮತ್ತು ಈ ಉದ್ದೇಶ ಸಾಧನೆಗೆ ಭಾರತವು ಅರ್ಹವಾಗುವವರೆಗೆ ಇಂಗ್ಲಿಷ್‌ ಅಧಿಕೃತ ಭಾಷೆಯಾಗಿ ಉಳಿಯಬೇಕು. +ಭಾರತೀಯರು ಇದನ್ನು ಒಪ್ಪಿಕೊಳ್ಳುತ್ತಾರೆಯೇ? +ಅವರು ಒಪ್ಪಿಕೊಳ್ಳದಿದ್ದಲ್ಲಿ. +ಭಾಷಾವಾರು ರಾಜ್ಯಗಳು ಬಹು ಸುಲಭವಾಗಿ ಗಂಡಾಂತರಕಾರಿ ಯಾಗಬಲ್ಲವು. +ಒಂದು ಭಾಷೆ ಜನರನ್ನು ಒಂದುಗೂಡಿಸಬಲ್ಲದು. +ಎರಡು ಭಾಷೆಗಳು ಜನರನ್ನು ಒಡೆಯುವುದು ಖಂಡಿತ. +ಇದು ಕಠೋರ ನಿಯಮ. +ಸಂಸ್ಕೃತಿಯು ಭಾಷೆಯಿಂದ ರಕ್ಷಿತವಾಗಿರುತ್ತದೆ. +ಭಾರತೀಯರು ಒಂದುಗೂಡಿ, ಒಂದು ಸಾಮಾನ್ಯ ಸಂಸ್ಕೃತಿಯನ್ನು ಬೆಳೆಸುವ ಆಶಯ ಹೊಂದಿರುವುದರಿಂದ, ಹಿಂದಿಯನ್ನು ತಮ್ಮ ಭಾಷೆಯನ್ನಾಗಿ ಸ್ವೀಕರಿಸುವುದು ಎಲ್ಲಾ ಭಾರತೀಯರ ಆದ್ಯ ಕರ್ತವ್ಯ. +ಭಾಷಾವಾರು ರಾಜ್ಯದ ಅವಿಭಾಜ್ಯ ಅಂಗವೆಂಬುದಾಗಿ ಈ ಸಲಹೆಯನ್ನು ಯಾವುದೇ ಭಾರತೀಯನು ಒಪ್ಪಿಕೊಳ್ಳದಿದ್ದಲ್ಲಿ ಭಾರತೀಯನಾಗಿರಲು ಆತನಿಗೆ ಹಕ್ಕಿಲ್ಲ. +ಆತನು ನೂರಕ್ಕೆ ನೂರು ಮರಾಠಿಗನಾಗಿರಬಹುದು. +ನೂರಕ್ಕೆ ನೂರು ತಮಿಳನಾಗಿರಬಹುದು ಅಥವಾ ನೂರಕ್ಕೆ ನೂರು ಗುಜರಾತಿಯಾಗಿರಬಹುದು. +ಭೌಗೋಳಿಕ ಅರ್ಥದಲ್ಲಿ ಇದ್ದರೂ ನಿಜವಾದ ಅರ್ಥದಲ್ಲಿ ಆತನು ಭಾರತೀಯನಾಗಿರಲಾರ, ನನ್ನ ಸಲಹೆಯನ್ನು ಒಪ್ಪಿಕೊಳ್ಳದಿದ್ದರೆ, ಭಾರತವು ಭಾರತವಾಗಿ ಉಳಿಯಲಾರದು. +ಅದು ಪರಸ್ಪರ ವೈರ ಮತ್ತು ಯುದ್ಧಗಳಲ್ಲಿ ನಿರತರಾಗಿರುವ ವಿವಿಧ ರಾಷ್ಟಗಳ ಒಂದು ಗುಂಪಾಗಿರುತ್ತದೆ ಅಷ್ಟೆ. +"ಎಲೈ ಭಾರತೀಯರೇ ನೀವು ಎಂದೆಂದೂ ಬೇರೆ ಬೇರೆ ಇರುತ್ತೀರಿ ಮತ್ತು ನೀವು ಯಾವಾಗಲೂ ಗುಲಾಮರಾಗಿರುತ್ತೀರಿ" ಎಂದು, ದೇವರು ಭಾರತ ಮತ್ತು ಭಾರತೀಯರ ಮೇಲೆ ಕ್ರೂರ ಶಾಪವನ್ನು ಹೇರಿದಂತೆ ತೋರುತ್ತದೆ. +ಭಾರತವು ಪಾಕಿಸ್ಥಾನದಿಂದ ಪ್ರತ್ಯೇಕಿಸಲ್ಪಟ್ಟದ್ದಕ್ಕೆ ನನಗೆ ಸಂತೋಷವಾಗಿದೆ. +ಹಾಗೆ ಹೇಳಬೇಕೆಂದರೆ,ನಾನು ಪಾಕಿಸ್ಥಾನ ತತ್ತ್ವ ಪ್ರತಿವಾದಕ. +ನಾನು ದೇಶ ವಿಭಜನೆಯನ್ನು ಸಮರ್ಥಿಸಿದೆ. +ಏಕೆಂದರೆ ವಿಭಜನೆಯ ಮೂಲಕ ಮಾತ್ರ ಹಿಂದೂಗಳು ಸ್ವತಂತ್ರರಾಗುವುದು ಮಾತ್ರವಲ್ಲದೆ, ಸ್ವಾಧೀನರೂ ಆಗುತ್ತಾರೆ ಎಂದು ನಾನು ಭಾವಿಸಿದೆ. +ಒಂದೇ ರಾಷ್ಟ್ರದಲ್ಲಿ, ಭಾರತ ಮತ್ತು ಪಾಕಿಸ್ಥಾನಗಳು ಕೂಡಿ ಇರುತ್ತಿದ್ದರೆ, ಸ್ವತಂತ್ರರಾಗಿದ್ದರೂ ಕೂಡಾ ಹಿಂದೂಗಳೂ ಮುಸಲ್ಮಾನರ ಕರುಣೆಯಿಂದ ಜೀವಿಸಿರಬೇಕಾಗುತ್ತಿತ್ತು . +ಹಿಂದೂಗಳ ದೃಷ್ಟಿಯಿಂದ,ಭಾರತವು ಸ್ವತಂತ್ರವಾಗಿದ್ದರೂ ಹಿಂದೂಗಳ ದೃಷ್ಟಿಯಲ್ಲಿ ಅದು ಸ್ವಾಯತ್ತ ಭಾರತವಾಗುತ್ತಿರಲಿಲ್ಲ. +ಅದು ಎರಡು ರಾಷ್ಟ್ರಗಳಿಂದ ಆಳಲ್ಪಟ್ಟ ಒಂದು ದೇಶದ ಸರ್ಕಾರವಾಗುತ್ತಿತ್ತು. +ಈ ಎರಡರಲ್ಲಿ, ಹಿಂದೂ ಮಹಾಸಭೆ ಮತ್ತು ಜನಸಂಘಗಳಿದ್ದರೂ ಕೂಡ, ಮುಸಲ್ಮಾನರು ಆಳರಸರಾಗುತ್ತಿದ್ದರೆಂಬುದರಲ್ಲಿ ಸಂಶಯವಿಲ್ಲ. +ತನ್ನ ಶಾಪವನ್ನು ಪರಿಹರಿಸಿ ಭಾರತವು ಒಂದು ಮಹಾನ್‌ ಹಾಗೂ ಸಂಪದ್ಭರಿತ ರಾಷ್ಟ್ರವಾಗುವುದಕ್ಕೆಅವಕಾಶ ಮಾಡಿಕೊಡಲು ದೇವರು ಇಚ್ಛಿಸಿದ್ದಾನೆ ಎಂದು ದೇಶ ವಿಭಜನೆಯಾದಾಗ ನಾನು ಭಾವಿಸಿದೆ. +ಆದರೆ ಆ ಶಾಪ ಮತ್ತೆ ನಮ್ಮ ಮೇಲೆ ಎರಗಬಹುದೆಂಬ ಭೀತಿ ನನಗಿದೆ. +ಏಕೆಂದರೆ, ಭಾಷಾವಾರು ರಾಜ್ಯಗಳನ್ನು ಸಮರ್ಥಿಸುತ್ತಿರುವವರು, ಪ್ರಾದೇಶಿಕ ಭಾಷೆಯನ್ನು ರಾಜ್ಯದ ಅಧಿಕೃತ ಭಾಷೆಯನ್ನಾಗಿ ಮಾಡುವ ಆದರ್ಶವನ್ನು ತಮ್ಮ ಅಂತರಂಗದಲ್ಲಿ ಇಟ್ಟುಕೊಂಡಿದ್ದಾರೆಂಬುದನ್ನು ನಾನು ಗಮನಿಸಿದ್ದೇನೆ. +ಒಂದು ಗೂಡಿದ ಭಾರತದ ಕಲ್ಪನೆಗೆ ಇದು ಒಂದು ಸಾವಿನ ಸಂಕೇತವಾಗುತ್ತದೆ. +ಪ್ರಾದೇಶಿಕ ಭಾಷೆಗಳು ಅಧಿಕೃತ ಭಾಷೆಗಳಾದಾಗ, ಭಾರತವನ್ನು ಒಂದು ಏಕೀಕೃತ ದೇಶವನ್ನಾಗಿ ಮಾಡುವ, ಭಾರತೀಯರನ್ನು ಮೊದಲೂ, ಕಡೆಗೂ ಭಾರತೀಯರನ್ನಾಗಿ ಮಾಡುವ ಆದರ್ಶ ಮಾಯವಾಗುತ್ತದೆ. +ಇದರಿಂದ ಪಾರಾಗುವ ಏಕೈಕ ಉಪಾಯವನ್ನು ಸೂಚಿಸುವುದನ್ನು ಬಿಟ್ಟು ಮತ್ತೇನನ್ನೂ ನಾನು ಮಾಡಲಾರೆ. +ಅದನ್ನು ಪರಿಗಣಿಸುವುದು ಭಾರತೀಯರಿಗೇ ಬಿಟ್ಟದ್ದು. +ಒಂದು ಭಾಷೆಗೆ ಒಂದು ರಾಜ್ಯವಿರಲೇಬೇಕೆ? +ಭಾಷಾವಾರು ರಾಜ್ಯವೆಂದರೆ ಏನರ್ಥ? +ಒಂದು ಭಾಷೆಯನ್ನು ಮಾತನಾಡುವ ಎಲ್ಲಾ ಜನರನ್ನೂ, ಒಂದು ರಾಜ್ಯದ ಹದ್ದು ಬಸ್ತಿನಲ್ಲಿ ತರಬೇಕು ಎಂಬ ಅರ್ಥ ಅದಕ್ಕೆ ಇರಬಹುದು. +ಪ್ರತಿಯೊಂದು ರಾಜ್ಯವೂ ಒಂದು ಭಾಷೆಯನ್ನಾಡುವ ಎಲ್ಲ ಜನರನ್ನು ತನ್ನ ಹದ್ದುಬಸ್ತಿನಲ್ಲಿ ಒಳಗೊಂಡಿರುವುದಾದರೆ, ಒಂದು ಭಾಷೆಯನ್ನಾಡುವ ಜನರನ್ನು ಹಲವು ರಾಜ್ಯಗಳಲ್ಲಿ ವಿಂಗಡಿಸಬಹುದು ಎಂಬ ಅರ್ಥವೂ ಅದಕ್ಕಿರಬೇಕಾಗುತ್ತದೆ. +ಯಾವುದು ಸರಿಯಾದ ಅರ್ಥ? +ಒಂದು ಭಾಷೆಯನ್ನು ಮಾತನಾಡುವ ಜನರಿಗೆಲ್ಲಾ ಏಕೈಕ ರಾಜ್ಯ ರಚಿಸಬೇಕೆಂಬ ಒಂದು ನಿಯಮವನ್ನುಪಾಲಿಸುವ ನಿಲುವನ್ನು ಆಯೋಗ ತಳೆಯಿತು. +ಓದುಗನು ಮೊದಲನೆಯ ಭೂಪಟವನ್ನು ನೋಡಲಿ, ಉತ್ತರ ಮತ್ತು ದಕ್ಷಿಣ ರಾಜ್ಯಗಳ ನಡುವಣ ವ್ಯತ್ಯಾಸವನ್ನು ಆತನು ತಕ್ಷಣ ಗಮನಿಸುತ್ತಾನೆ. +ಈ ವ್ಯತ್ಯಾಸ ನಡುಕ ಹುಟ್ಟಸುವಂತಿದೆ. +ದೊಡ್ಡ ರಾಜ್ಯಗಳ ಭಾರವನ್ನು ಹೊರಲು ಸಣ್ಣ ರಾಜ್ಯಗಳಿಗೆ ಅಸಾಧ್ಯವಾಗುತ್ತದೆ. +ಈ ವ್ಯತ್ಯಾಸವು ಎಷ್ಟು ಅಪಾಯಕಾರಿಯಾದುದೆಂಬುದನ್ನು ಆಯೋಗವು ಅರಿತಿಲ್ಲ. + ಅಂತಹ ವ್ಯತ್ಯಾಸವು ಅಮೆರಿಕೆಯ ಸಂಯುಕ್ತ ಸಂಸ್ಥಾನಗಳಲ್ಲಿಯೂ ಇದೆ ಎಂಬುದು ನಿಜ. +ಆದರೆ ಅದರಿಂದ ಆಗಬಹುದಾದ ಅನರ್ಥಗಳನ್ನು ಸಂಯುಕ್ತ ಸಂಸ್ಥಾನಗಳ ಸಂವಿಧಾನದಲ್ಲಿರುವ ನಿಯಮ ನಿಬಂಧನೆಗಳು ತಡೆದಿವೆ. +ತಮ್ಮ ಅಸಮ್ಮತಿ ಸೂಚಿಸಿದಾಗ ಸಂಯುಕ್ತ ಸಂಸ್ಥಾನಗಳ ರಾಜ್ಯಾಂಗ ರಚನೆಯಲ್ಲಿರುವ ಅಂತಹ ಒಂದು ರಕ್ಷಣೋಪಾಯವನ್ನು ಶ್ರೀ ಪಣಿಕರ್‌ ಅವರು ಪ್ರಸ್ತಾಪಿಸಿದ್ದಾರೆ. +ಅವರ ವರದಿಯಿಂದ ಆಯ್ದ ಭಾಗ ಹೀಗಿದೆ :“ಒಂದು ಗಣತಂತ್ರವು ಸಾರ್ಥಕವಾಗಿ ಕಾರ್ಯ ನಿರ್ವಹಿಸಲು ಅದರ ಪ್ರತ್ಯೇಕ ಭಾಗಗಳು ಶಕ್ಯವಿದ್ದಷ್ಟು ಸಮನಾದ ಪ್ರಮಾಣದಲ್ಲಿರುವುದು ಅತ್ಯವಶ್ಯಕವೆಂದು ನಾನು ಪರಿಗಣಿಸುತ್ತೇನೆ. +ವಿಪರೀತ ವ್ಯತ್ಯಾಸವು ಸಂಶಯ ಹಾಗು ತಿರಸ್ಕಾರ ಭಾವನೆ ಹುಟ್ಟಿಸುವುದರಲ್ಲಿದೆ ಗಣತಂತ್ರದ ರಚನೆಯನ್ನೇ ಒಡೆಯಲು ಸಾಧ್ಯವಿರುವ ಶಕ್ತಿಗಳನ್ನು ಉತ್ಪತ್ತಿ ಮಾಡುತ್ತದೆ. +ಇದರಿಂದ ಅಂತಹ ವ್ಯತ್ಯಾಸವು ದೇಶದ ಐಕ್ಕಮತ್ಕ್ಯಕ್ಕೆ ಅಪಾಯವಾಗಿ ಪರಿಣಮಿಸುತ್ತದೆ. +ಎಲ್ಲಾ ಕಡೆಯೂ ಇದನ್ನು ಸ್ಪಷ್ಟವಾಗಿ ಗ್ರಹಿಸಲಾಗಿದೆ. +ಅನೇಕ ಗಣತಂತ್ರ ಸಂವಿಧಾನಗಳಲ್ಲಿ,ಜನಸಂಖ್ಯೆ ಮತ್ತು ಸಂಪನ್ಮೂಲಗಳಿಗೆ ಸಂಬಂಧಿಸಿದಂತೆ ವ್ಯಾಪಕ ವ್ಯತ್ಯಾಸವು ಇದ್ದರೂ, ದೊಡ್ಡ ರಾಜ್ಯಗಳ ಪ್ರಭಾವ ಮತ್ತು ಅಧಿಕಾರವನ್ನು ಮಿತಿಗೊಳಿಸಲು ಎಚ್ಚರವಹಿಸಲಾಗಿದೆ. +ಈ ರೀತಿ ಅಮೆರಿಕೆಯ ಸಂಯುಕ್ತ ಸಂಸ್ಥಾನಗಳಲ್ಲಿ, ಜನಸಂಖ್ಯೆ ಮತ್ತು ಸಂಪನ್ಮೂಲಗಳಲ್ಲಿ ವ್ಯಾಪಕ ವ್ಯತ್ಯಾಸವಿರುವ ರಾಜ್ಯಗಳಿವೆ. +ಉದಾಹರಣೆಗೆ ನ್ಯೂಯಾರ್ಕ್‌ ರಾಜ್ಯದ ಜನಸಂಖ್ಯೆ ನಿವಾಡ ರಾಜ್ಯದ ಜನಸಂಖ್ಯೆಗಿಂತ ಅನೇಕ ಪಟ್ಟು ಹೆಚ್ಚಾಗಿದೆ. +ಹೀಗಿದ್ದರೂ ಪ್ರತಿಯೊಂದು ರಾಜ್ಯಕ್ಕೂ ಸೆನೆಟನಲ್ಲಿ ಸರಿಸಮಾನ ಪ್ರಾತಿನಿಧ್ಯ ದೊರಕುವಂತೆ ರಾಜ್ಯಾಂಗ ರಚನೆಯಲ್ಲಿ ಅವಕಾಶ ಮಾಡಲಾಗಿದೆ”. +ಈ ಅಂಶಕ್ಕೆ ಸಂಬಂಧಿಸಿದಂತೆಯೇ ಸೋವಿಯತ್‌ ಯೂನಿಯನ್‌ ಮತ್ತು ಹಳೆಯ ಜರ್ಮನಿಗಳ ಉದಾಹರಣೆ ಕೊಡುತ್ತಾರೆ. +ಅವರು ಹೇಳುವುದು ಹೀಗಿದೆ:ಸೋವಿಯತ್‌ ಯೂನಿಯನ್ನಿನಲ್ಲಿ ಕೂಡ, ಪ್ರಧಾನ ರಷ್ಯಾದ ಜನಸಂಖ್ಯೆ ದೊಡ್ಡದು. +ಸಂಯುಕ್ತ ರಾಷ್ಟದ ಇತರ ಎಲ್ಲಾ ಭಾಗಗಳ ಒಟ್ಟು ಜನಸಂಖ್ಯೆಗಿಂತಲೂ ಅದು ಅಧಿಕವಾಗಿದೆ. +ಪ್ರಧಾನ ಭಾಗವಾದರಷ್ಠವು ಸಂಯುಕ್ತ ರಾಷ್ಟ್ರದ ಇತರ ಭಾಗಗಳ ಮೇಲೆ ಅಧಿಕಾರ ನಡೆಸಲಾಗದಂತೆ ರಾಷ್ಟ್ರಗಳ ಸದನದಲ್ಲಿ ಕಟ್ಟು ಕಟ್ಟಳೆಯಿದೆ. +ಬಿಸ್‌ಮಾರ್ಕನ ರೀಚ್‌ ನಲ್ಲಿಯೂ ಜನಸಂಖ್ಯೆಯ ದೃಷ್ಟಿಯಿಂದ, ಪ್ರಶ್ಯಾಕ್ಕೆ ಪ್ರಧಾನ ಸ್ಥಾನವಿದ್ದರೂ ರೀಶ್ರತ್‌; +ಅಥವಾ ರಾಷ್ಟ್ರದಪ್ರತಿನಿಧಿ ಸಭೆಯಲ್ಲಿ, ಅದಕ್ಕೆ ಸಲ್ಲಬೇಕಾದುದಕ್ಕಿಂತಲೂ (ಮೂರನೇ ಒಂದು ಭಾಗಕ್ಕಿಂತ) ಕಡಿಮೆ ಪ್ರಾತಿನಿಧ್ಯವನ್ನು ಕೊಡಲಾಗಿತ್ತು. +ಅಲ್ಲದೆ, ಆ ವ್ಯವಸ್ಥೆಯ ಕಾಯಂ ಅಧ್ಯಕ್ಷತೆಯನ್ನು ಬಲ್ಗೇರಿಯಾಕ್ಕೆ ಬಿಡಲಾಗಿತ್ತು . +ಇದರಿಂದ ಒಂದು ಮಾತು ಸ್ಪಷ್ಟವಾಗುತ್ತದೆ. +ಪ್ರಶ್ಯಾದಲ್ಲಿ ರಾಜಕೀಯ, ಸೈನಿಕ ಮತ್ತು ಆರ್ಥಿಕ ಅಧಿಕಾರ ಕೇಂದ್ರೀಕೃತವಾಗಿದ್ದರೂ, ಸಂಯುಕ್ತ ರಾಷ್ಟ್ರದ ಹಿತದೃಷ್ಟಿಯಿಂದ, ಸಣ್ಣ ಸಣ್ಣ ರಾಜ್ಯಗಳಿಗೆ ಹೆಚ್ಚಿನ ಅಧಿಕಾರಸಿಗುವಂತೆ ನೋಡಿಕೊಳ್ಳುವುದು ಅವಶ್ಯವೆನಿಸಿದ್ದಿತು. +ರೀಸ್ಟಾ ಲೋಕ ಸಭೆಗಿಂತ ರೀಶ್ರತ್‌ ಅಥವಾ ರಾಜ್ಯ ಪರಿಷತ್ತಿಗೆ ಹೆಚ್ಚಿನ ಅಧಿಕಾರಗಳನ್ನು ಕೊಟ್ಟು ಪ್ರಶ್ಯಾ ಅಲ್ಪಸಂಖ್ಯಾತವಾಗುವಂತೆ ಮಾಡಲಾಗಿದ್ದಿತು. +ಅಸಮಾನ ಪ್ರಾತಿನಿಧ್ಯದಿಂದುಂಟಾಗುವ ಅಪಾಯಗಳನ್ನು ತಪ್ಪಿಸಲು ಅಮೆರಿಕೆಯ ಸಂಯುಕ್ತ ಸಂಸ್ಥಾನಗಳ ಸಂವಿಧಾನದಲ್ಲಿ ಒದಗಿಸಿರುವ ಮತ್ತೊಂದು ರಕ್ಷಣೆಯ ಬಗ್ಗೆ ಶ್ರೀ ಪಣಿಕರ್‌ ಅವರು ಪ್ರಸ್ತಾಪಿಸಿಲ್ಲ. +ನಮ್ಮ ಸಂವಿಧಾನದನ್ವಯ ಅಧಿಕಾರದಲ್ಲಿ ಎರಡೂ ಸದನಗಳು ಸಮಾನವಲ್ಲ. +ಆದರೆ ಸಂಯುಕ್ತ ಸಂಸ್ಥಾನಗಳ ಸಂವಿಧಾನದಲ್ಲಿನ ಪರಿಸ್ಥಿತಿ ತೀರ ಭಿನ್ನವಾಗಿದೆ. +ಅಲ್ಲಿ, ಎರಡು ಸದನಗಳೂ ಅಧಿಕಾರದಲ್ಲಿ ಪರಸ್ಪರ ಸಮನಾಗಿವೆ. +ಹಣಕಾಸಿನ ಬಿಲ್‌ಗಳಿಗೂ ಸೆನೆಟಿನ ಅನುಮತಿ ಅಗತ್ಯ ಭಾರತದಲ್ಲಿ ಹೀಗಿಲ್ಲ. +ಜನಸಂಖ್ಯೆಯ ನಡುವಣ ಭಿನ್ನ ಭೇದಗಳಲ್ಲಿ ಇದು ಬಹಳ ವ್ಯತ್ಯಯವನ್ನು ಉಂಟುಮಾಡುತ್ತದೆ. +ಜನಸಂಖ್ಯೆಯಲ್ಲಿ ಮತ್ತು ಅಧಿಕಾರದಲ್ಲಿ ರಾಜ್ಯಗಳ ನಡುವೆ ಇರುವ ಈ ಭಿನ್ನಭೇದವು ದೇಶವನ್ನು ಬಲಿ ತೆಗೆದುಕೊಳ್ಳುವುದು ಖಂಡಿತ. +ಇದಕ್ಕೆ ವಿರುದ್ಧವಾಗಿ ತಕ್ಕ ಪರಿಹಾರವನ್ನು ಅಳವಡಿಸುವುದು ಅತ್ಯಂತ ಅಗತ್ಯ. +ಉತ್ತರ ಮತ್ತು ದಕ್ಷಿಣಗಳ ನಡುವೆ :ಉತ್ತರ ಪ್ರದೇಶ ಮತ್ತು ಬಿಹಾರಗಳನ್ನು ಹಾಗೆಯೇ ಉಳಿಸಿಕೊಂಡದ್ದು ಮಾತ್ರವಲ್ಲದೆ, ಆಯೋಗವು ಹೊಸದಾದ ಹಾಗೂ ಹೆಚ್ಚು ದೊಡ್ಡದಾದ ಮಧ್ಯಪ್ರದೇಶ ಮತ್ತು ರಾಜಸ್ಥಾನಗಳನ್ನೂ ಅವುಗಳ ಜೊತೆಗೆ ಸೇರಿಸಿದೆ. +ಈ ಮೂಲಕ ಆಯೋಗವು ಮಾಡಿದ್ದು ಕೇವಲ ರಾಜ್ಯಗಳ ನಡುವಣ ವ್ಯತ್ಯಾಸವಲ್ಲ. +ಅದು ಉತ್ತರ ಮತ್ತು ದಕ್ಷಿಣಗಳ ನಡುವೆ ಒಂದು ಹೊಸ ಸಮಸ್ಯೆಯನ್ನೇ ಸೃಷ್ಟಿಸಿದೆ. +ಉತ್ತರ ಭಾರತ ಹಿಂದಿ ಮಾತನಾಡುವ ಪ್ರದೇಶ. +ದಕ್ಷಿಣ ಭಾರತ ಹಿಂದಿ ಮಾತನಾಡುವ ಪ್ರದೇಶ. +ಹಿಂದಿ ಮಾತನಾಡುವ ಜನಸಂಖ್ಯೆಯ ಗಾತ್ರವೆಷ್ಟು ಎಂಬುದನ್ನು ಅನೇಕ ಜನ ತಿಳಿಯರು. +ಅದು ಭಾರತದ ಒಟ್ಟು ಜನಸಂಖ್ಯೆಯ ಸುಮಾರು ಶೇಕಡ ೪೮.ಉತ್ತರವನ್ನು ಬಲಪಡಿಸುವುದರಲ್ಲೂ ಮತ್ತು ದಕ್ಷಿಣವನ್ನು ಒಡೆಯುವುದರಲ್ಲಿಯೂ ಆಯೋಗದ ಪರಿಶ್ರಮವು ಪರ್ಯವಸಾನವಾಗುತ್ತದೆ ಎಂದು ಈ ವಾಸ್ತವಾಂಶವನ್ನು ಗಮನಿಸುವ ಯಾರಾದರೂ ಹೇಳಲು ಹಿಂಜರಿಯಲಾರರು. +ಉತ್ತರದ ಪ್ರಭುತ್ವವನ್ನು ದಕ್ಷಿಣ ಸಹಿಸಿಕೊಳ್ಳಬಲ್ಲದೇ? +ಕಾಂಗ್ರೆಸ್‌ ಪಕ್ಷದ ಸಭೆಯೊಂದರಲ್ಲಿ ಕರಡು ಸಂವಿಧಾನದ ಪರಿಶೀಲನೆ ನಡೆದಾಗ, ಹಿಂದಿಯನ್ನು ರಾಷ್ಟ್ರ ಭಾಷೆಯನ್ನಾಗಿ ಸ್ವೀಕರಿಸುವ ಸಮಸ್ಯೆ ಚರ್ಚೆಗೆ ಬಂದಿತು. +ಆಗ ಏನಾಯಿತು ಎಂಬುದನ್ನು ನಾನು ಈಗ ಬಹಿರಂಗಪಡಿಸಿದರೆ ಬಹುಶಃ ರಹಸ್ಯ ಭಂಗ ಮಾಡಿದಂತಾಗದು. +ಈ ಸಮಸ್ಯೆಗೆ ಸಂಬಂಧಿಸಿದಂತೆ ಇರುವ ೧೧೫ ನೇ ವಿಧಿಯಷ್ಟು ವಿವಾದಾಸ್ಪದವಾದ ಮತ್ತೊಂದು ಯಾವ ವಿಧಿಯೂ ಇಲ್ಲವೆಂಬುದು ಸಾಬೀತಾಯಿತು. +ಇದಕ್ಕಿಂತ ಹೆಚ್ಚು ಕಾವನ್ನುಂಟು ಮಾಡಿದ ವಿಧಿ ಮತ್ತೊಂದಿರಲಿಲ್ಲ. +ಈ ದೀರ್ಫಚರ್ಚೆಯ ಅನಂತರ, ಸಮಸ್ಯೆಯ ಬಗ್ಗೆ ಮತ ತೆಗೆದುಕೊಂಡಾಗ, ಅದರ ಪರವಾಗಿ ೭೮ ಮತ್ತು ವಿರೋಧವಾಗಿ ೭೮ ಮತಗಳು ಬಂದವು. +ಈ ಗಂಟನ್ನು ಬಿಡಿಸಲಾಗಲಿಲ್ಲ. +ಬಹಳ ಸಮಯದ ನಂತರ,ಪಕ್ಷದ ಸಭೆಯಲ್ಲಿ ಈ ಸಮಸ್ಯೆಯ ಬಗ್ಗೆ ಮತ ತೆಗೆದುಕೊಂಡಾಗ ಹಿಂದಿಗೆ ವಿರುದ್ಧವಾಗಿ ೭೭ ಹಾಗೂ ಪರವಾಗಿ ೭೮ ಮತಗಳು ಬಂದವು. +ಹಿಂದಿಯು ಏಕೈಕ ಮತದಿಂದ ರಾಷ್ಟ್ರ ಭಾಷೆಯಾಗಿ ತನ್ನ ಸ್ಥಾನವನ್ನು ಗಿಟ್ಟಿಸಿಕೊಂಡಿತು. +ನಾನು ಈ ವಾಸ್ತವಾಂಶಗಳನ್ನು ನನ್ನ ಸ್ವಂತ ತಿಳಿವಳಿಕೆಯಿಂದ ಹೇಳುತ್ತಿದ್ದೇನೆ. +ಕರಡು ಸಮಿತಿಯ ಅಧ್ಯಕ್ಷನಾಗಿ, ಕಾಂಗ್ರೆಸ್‌ ಪಕ್ಷದ ಅಂತರಂಗದ ಸಭೆಯಲ್ಲಿ ನನಗೆ ಸಹಜವಾಗಿ ಪ್ರವೇಶವಿದ್ದಿತು. +ಉತ್ತರದವರ ಬಗ್ಗೆ ದಕ್ಷಿಣದವರಿಗೆ ಅದೆಷ್ಟು ಅಸಹನೆಯಿದೆ ಎಂಬುದನ್ನು ಈ ವಾಸ್ತವಾಂಶಗಳು ತಿಳಿಸುತ್ತವೆ. +ಉತ್ತರವು ಬಲಶಾಲಿಯಾಗಿ ಉಳಿದು ದಕ್ಷಿಣವು ಒಡೆದಾಗ ಮತ್ತು ಭಾರತೀಯ ರಾಜಕಾರಣದ ಮೇಲೆ ಅಳತೆಗೆಟ್ಟ ಪ್ರಭಾವವನ್ನು ಬೀರುವ ಪ್ರವೃತ್ತಿಯನ್ನು ಉತ್ತರವು ಮುಂದುವರಿಸಿದಾಗ, ಈ ಅಸಹನೆ ದ್ವೇಷವಾಗಿ ಬೆಳೆಯಬಹುದು. +ಕೇಂದ್ರದಲ್ಲಿ ಅಂತಹ ವಿಪರೀತ ಪ್ರಭಾವವನ್ನು ಬೀರಲು ಒಂದು ರಾಜ್ಯವನ್ನು ಬಿಡುವುದು ಅಪಾಯಕಾರಿ ಸಂಗತಿ. +ಪ್ರಸಂಗದ ಈ ಅಂಶದ ಕಡೆ ಶ್ರೀ ಪಣಿಕರ್‌ ಅವರು ನಮ್ಮ ಗಮನ ಸೆಳೆದಿದ್ದಾರೆ. +ತಮ್ಮ ಭಿನ್ನಾಭಿಪ್ರಾಯ ವರದಿಯಲ್ಲಿ ಅವರು ಹೀಗೆ ಹೇಳಿದ್ದಾರೆ: +“ವಿವಿಧ ಭಾಗಗಳ ಸಮಾನತೆಯ ಸಂಯುಕ್ತ ತತ್ತ್ವವನ್ನು ಕೈಬಿಡುವುದರ ಮೂಲಕ ಉಂಟಾದ ಈಗಿನ ಅಸಾಮಂಜಸ್ಯದ ಪರಿಣಾಮವೆಂದರೆ ಉತ್ತರ ಪ್ರದೇಶದ ಹೊರಗಿನ, ಎಲ್ಲಾ ರಾಜ್ಯಗಳಲ್ಲಿ ಅಪನಂಬಿಕೆ ಮತ್ತು ಜಿಗುಪ್ಸಾ ಭಾವನೆಗಳ ಉದಯ. +ದಕ್ಷಿಣ ರಾಜ್ಯಗಳಲ್ಲಿ ಮಾತ್ರವಲ್ಲದೆ, ಪಂಜಾಬ್‌, ಬಂಗಾಳ ಮತ್ತು ಇತರ ಕಡೆಗಳಲ್ಲಿ, ಅಖಿಲ ಭಾರತೀಯ ವ್ಯವಹಾರಗಳಲ್ಲಿ ಉತ್ತರ ಪ್ರದೇಶದ ಪ್ರಭುತ್ವಕ್ಕೆ, ಈಗಿನ ಸರ್ಕಾರದ ರಚನೆಯು ಎಡೆಮಾಡಿಕೊಟ್ಟಿದೆ ಎಂಬ ಅಭಿಪ್ರಾಯವನ್ನು ಆಯೋಗದ ಮುಂದೆ ವ್ಯಕ್ತಮಾಡಲಾಯಿತು. +ಈ ಭಾವನೆ ಇರುವುದನ್ನು ಯಾರೂ ಅಲ್ಲಗೆಳೆಯಲಾರರು. +ಅಂತಹ ಭಾವನೆಗಳನ್ನು ಇರಲು ಬಿಟ್ಟರೆ ಮತ್ತು ಅದಕ್ಕೆ ಪರಿಹಾರಗಳನ್ನು ಹುಡುಕಿ ಈಗಲೇ ಕಂಡುಕೊಳ್ಳದಿದ್ದರೆ, ನಮ್ಮ ಏಕತೆಗೆ ಅದು ಅಪಾಯಕಾರಿಯಾಗಿ ಪರಿಣಮಿಸುತ್ತದೆಂಬುದನ್ನೂ ಅಲ್ಲಗೆಳೆಯಲಾಗದು. +”ಉತ್ತರ ಮತ್ತು ದಕ್ಷಿಣಗಳ ನಡುವೆ ವ್ಯಾಪಕ ವ್ಯತ್ಯಾಸವಿದೆ. +ಉತ್ತರವು ಸಂಪ್ರದಾಯ ಬದ್ಧವಾಗಿದೆ. +ದಕ್ಷಿಣವು ಪ್ರಗತಿ ಶೀಲವಾಗಿದೆ. +ಉತ್ತರವು ಮೂಢನಂಬಿಕೆಗಳಿಂದ ತುಂಬಿದೆ. +ದಕ್ಷಿಣವು ವಿಚಾರ ಶೀಲವಾಗಿದೆ. +ಶೈಕ್ಷಣಿಕವಾಗಿ ದಕ್ಷಿಣವು ಮುಂದುವರಿದಿದೆ, ಉತ್ತರವು ಹಿಂದುಳಿದಿದೆ. +ದಕ್ಷಿಣ ಸಂಸ್ಕೃತಿಯು ಆಧುನಿಕವಾಗಿದೆ. +ಉತ್ತರದ ಸಂಸ್ಕೃತಿಯು ಹಳೆಯದಾಗಿದೆ. +ಸ್ವತಂತ್ರ ಸ್ವಾಯತ್ತ ಭಾರತದ ಪ್ರಥಮ ಪ್ರಧಾನಿಯಾಗಿ ಬ್ರಾಹ್ಮಣನೊಬ್ಬನು ಆಯ್ಕೆಯಾದ ಘಟನೆಯನ್ನು ಮಹೋತ್ತರವಾಗಿ ಆಚರಿಸಲು ಕಾಶಿಯ ಬ್ರಾಹ್ಮಣರು ೧೯೪೭, ಆಗಸ್ಟ್‌ ೧೫ ರಂದು ಯಜ್ಞಮಾಡಿದಾಗ,ಪ್ರಧಾನಿ ನೆಹರೂ ಅವರು ಆ ಯಜ್ಞದಲ್ಲಿ, ಉಪಸ್ಥಿತರಿರಲಿಲ್ಲವೇ? +ಆ ಬ್ರಾಹ್ಮಣರು ತೊಟ್ಟ ಯಜ್ಞದಂಡವನ್ನು ಹಿಡಿಯಲಿಲ್ಲವೇ ಮತ್ತು ಅವರು ತಂದಿದ್ದ ಗಂಗಾಜಲವನ್ನು ಕುಡಿಯಲಿಲ್ಲವೇ? +ತಮ್ಮ ಸತ್ತ ಗಂಡಂದಿರ ಹೆಣಗಳೊಂದಿಗೆ ಚಿತೆಯೇರಿ ತಮ್ಮನ್ನು ತಾವೇ ಸುಟ್ಟುಕೊಳ್ಳುವಂತೆ ಅದೆಷ್ಟು ಜನ ಹೆಂಗಸರ ಮೇಲೆ ಇತ್ತೀಚಿನ ದಿನಗಳಲ್ಲಿ ಸತಿ ಹೋಗಲು ಬಲಾತ್ಕಾರ ನಡೆದಿಲ್ಲ. +ರಾಷ್ಟ್ರಾಧ್ಯಕ್ಷರು ಕಾಶಿಗೆ ಹೋಗಿ ಬ್ರಾಹ್ಮಣರನ್ನು ಪೂಜಿಸಿ, ಅವರ ಕಾಲನ್ನು ತೊಳೆದು, ಆ ನೀರನ್ನು ಕುಡಿಯಲಿಲ್ಲವೇ? +ಸತಿ ಪದ್ಧತಿ ಮತ್ತು ಬೆತ್ತಲೆ ಅಥವಾ ಸಾಧುಗಳನ್ನು ಉತ್ತರ ಇನ್ನೂ ಉಳಿಸಿಕೊಂಡಿದೆ. +ಕಳೆದ ಹರಿದ್ದಾರ ಜಾತ್ರೆಯಲ್ಲಿ ನಾಗಾ ಸಾಧುಗಳು ಎಂತಹ ಅನಾಹುತ ಮಾಡಿದರು; +ಅವರ ವಿರುದ್ಧ ಉತ್ತರಪ್ರದೇಶದಲ್ಲಿ ಯಾರಾದರೂ ಪ್ರತಿಭಟಿಸಿದರೇ? +ಉತ್ತರದ ಆಳ್ವಿಕೆಯನ್ನು ದಕ್ಷಿಣ ಅದು ಹೇಗೆ ಸಹಿಸಿಕೊಳ್ಳಬಲ್ಲದು? +ಉತ್ತರದಿಂದ ಕಳಚಿಕೊಳ್ಳುವ ದಕ್ಷಿಣದ ಅಪೇಕ್ಷೆಯ ಕುರುಹುಗಳು ಈಗಾಗಲೇ ಕಂಡುಬರುತ್ತಿವೆ. +ರಾಜ್ಯ ಪುನರ್ವಿಂಗಡಣಾ ಆಯೋಗದ ಶಿಫಾರಸ್ಸುಗಳ ಮೇಲೆ ಶ್ರೀ ರಾಜಗೋಪಾಲಚಾರಿಯವರು ಒಂದು ಹೇಳಿಕೆ ಕೊಟ್ಟಿದ್ದಾರೆ. +ಅದು ಟೈಮ್ಸ್‌ ಆಫ್‌ ಇಂಡಿಯಾ ಪತ್ರಿಕೆಯ, ೧೯೫೫, ನವೆಂಬರ್‌ ೨೭ರಂದು ಪ್ರಕಟವಾಗಿದೆ. +ಅವರ ಹೇಳಿಕೆ ಹೀಗಿದೆ:“ರಾಜ್ಯ ಪುನರ್ವಿಂಗಡಣಾ ಆಯೋಗದ ಕಾರ್ಯ ತಂತ್ರಗಳನ್ನು ಮುಂದಿನ ೧೫ ವರ್ಷಗಳವರೆಗೆ ತಡೆಹಿಡಿಯುವುದು ಅಸಾಧ್ಯವೆನಿಸಿದರೆ ಭಾರತವನ್ನು ಕೇಂದ್ರವು ಒಂದು ಏಕ ರಾಷ್ಟ್ರವನ್ನಾಗಿ ಆಳುವುದೇ ಇದಕ್ಕೆ ಏಕೈಕ ಪರ್ಯಾಯ. +ಪ್ರಾದೇಶಿಕ ಕಮೀಷನರುಗಳ ಮೇಲ್ವಿಚಾರಣೆಯಲ್ಲಿ, ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಬೋರ್ಡುಗಳೊಡನೆ ಕೇಂದ್ರ ಸರ್ಕಾರವು ನೇರವಾಗಿ ಆಳಿಕೆ ನಡೆಸುವುದು. +“ಐತಿಹಾಸಿಕ ಪರಿಣಾಮಗಳಿಂದ ಉಂಟಾದ ಸ್ಥಿತಿಗತಿಗಳ ಹಿನ್ನೆಲೆಯನ್ನು ಬಿಟ್ಟು, ದಿವಾನಖಾನೆಯಲ್ಲಿ ಕುಳಿತು ಕಲ್ಪಿಸಿಕೊಂಡ ಮೇರೆಗಳು ಮತ್ತು ವಿಭಾಗಗಳ ಬಗ್ಗೆ ಆಗುವ ವಿವಾದಕ್ಕೆ ರಾಷ್ಟೀಯ ಶಕ್ತಿಯನ್ನು ಹಾಳುಮಾಡುವುದು ಅತ್ಯಂತ ಹೇಯ ಅಪರಾಧ”. +“ನನ್ನ ಸಾಮಾನ್ಯ ನಂಬುಗೆಗಳನ್ನು ಒತ್ತಟ್ಟಿಗಿಟ್ಟು ಹೇಳಬೇಕಾದರೆ, ದೇಶದ ದಕ್ಷಿಣ ಪ್ರದೇಶದ ರಾಜಕೀಯ ಮಹತ್ವವನ್ನು ಉಳಿಸಬೇಕಾದರೆ, ಒಂದು ಬೃಹತ್‌ ದಕ್ಷಿಣ ರಾಜ್ಯ ರಚನೆ ಅತ್ಯಗತ್ಯವೆಂಬುದು ನನ್ನ ಭಾವನೆ. +ದಕ್ಷಿಣವನ್ನು ತಮಿಳು ನಾಡು, ಮಲೆಯಾಳ ಮತ್ತು ಇತರ ಸಣ್ಣ ಸಣ್ಣ ಪ್ರದೇಶಗಳನ್ನಾಗಿ ಕತ್ತರಿಸುವುದು, ಪ್ರತಿಯೊಂದರ ದುರ್ಬಲತೆಯಲ್ಲಿ ಪರ್ಯವಸಾನವಾಗುವುದರ ಜೊತೆಗೆ, ಇದರ ಅಂತಿಮ ಪರಿಣಾಮವೆಂದರೆ, ಇಡೀ ಭಾರತ ದೇಶವೇ ಇನ್ನೂ ಹೆಚ್ಚು ದುರ್ಬಲವಾಗುವುದು.” +ಶ್ರೀ ರಾಜಗೋಪಾಲಚಾರಿಯವರು ತಮ್ಮ ಮನಸ್ಸನ್ನು ಪೂರ್ಣವಾಗಿ ಬಿಚ್ಚಿ ಹೇಳಿಲ್ಲ. +ಅವರು ದೇಶದ ಗವರ್ನರ್‌ ಆಗಿದ್ದಾಗ ಮತ್ತು ನಾನು ಕಾಯಿದೆ ಸಚಿವನಾಗಿ ಕರಡನ್ನು ಸಿದ್ಧಪಡಿಸುತ್ತಿದ್ದಾಗ ಅವರು ನನಗೆ ಪೂರ್ಣವಾಗಿ ಹಾಗೂ ವ್ಯಕ್ತ ರೂಪದಲ್ಲಿ ತಮ್ಮ ಮನಸ್ಸಿನಲ್ಲಿರುವುದನ್ನು ತಿಳಿಸಿದ್ದರು. +ಅಂದು ರೂಢಿಯ ಸಂದರ್ಶನಕ್ಕಾಗಿ ನಾನು ರಾಜಗೋಪಾಲಚಾರಿಯವರಲ್ಲಿಗೆ ಹೋಗುತ್ತಿದ್ದೆ. +ಅಂತಹ ಸಂದರ್ಶನವೊಂದರಲ್ಲಿ, ಸಂವಿಧಾನ ಸಭೆಯು ರೂಪಿಸುತ್ತಿದ್ದ ಒಂದು ರೀತಿಯ ಸಂವಿಧಾನದ ಬಗ್ಗೆ ಮಾತನಾಡುತ್ತಾ ಶ್ರೀ ರಾಜಗೋಪಾಲಚಾರಿಯವರು, "ನೀವು ತುಂಬಾ ದೊಡ್ಡ ತಪ್ಪು ಮಾಡುತ್ತಿದ್ದೀರಿ. +ಇಡೀ ಭಾರತಕ್ಕೆ ಎಲ್ಲಾ ಪ್ರದೇಶಗಳಿಗೂ ಸಮಾನ ಪ್ರಾತಿನಿಧ್ಯವಿರುವ ಒಂದೇ ಗಣ ರಾಜ್ಯವಿರಬೇಕೆಂಬುದು ವ್ಯಾವಹಾರಿಕವಲ್ಲ. +ಅಂತಹ ಗಣರಾಜ್ಯದಲ್ಲಿ, ಭಾರತದ ಪ್ರಧಾನಿ ಹಾಗೂ ರಾಷ್ಟ್ರಾಧ್ಯಕ್ಷರಿಬ್ಬರೂ ಯಾವಾಗಲೂ ಹಿಂದಿ ಮಾತನಾಡುವ ಪ್ರದೇಶದವರೇ ಆಗಿರುತ್ತಾರೆ. +ನೀವು ಎರಡು ಗಣತಂತ್ರಗಳನ್ನು ರೂಪಿಸಬೇಕು. +ಒಂದು ಉತ್ತರ ಭಾರತದ ಗಣತಂತ್ರ ಮತ್ತೊಂದು ದಕ್ಷಿಣ ಭಾರತದ ಗಣತಂತ್ರ ಅವರೆಡನ್ನೂ ಸೇರಿಸಿ ಒಂದು ಸಂಯುಕ್ತ ಗಣತಂತ್ರವನ್ನು ರೂಪಿಸಬೇಕು. +ಅದರಲ್ಲಿ ಮೂರು ವಿಷಯಗಳ ಬಗ್ಗೆ ವಿಧಾನಪ್ರತಿಕ್ರಿಯೆ ನಡೆಯಬೇಕು. +ಅಲ್ಲದೆ ಅದರಲ್ಲಿ ಎರಡು ಗಣತಂತ್ರಗಳಿಗೂ ಸಮಾನ ಪ್ರಾತಿನಿಧ್ಯವಿರಬೇಕು. +”ಇವು ಶ್ರೀ ರಾಜಗೋಪಾಲಚಾರಿಯವರ ನಿಜವಾದ ವಿಚಾರಗಳು. +ಒಬ್ಬ ಕಾಂಗ್ರೆಸ್ಸಿಗರ ಹೃದಯದಂತರಾಳದಿಂದ ಬಂದಂತಹ ಈ ವಿಚಾರಗಳು ನನ್ನ ಕಣ್ಣು ತೆರೆಸುವಂತಾದವು. +ಭಾರತ ಉತ್ತರ ಮತ್ತು ದಕ್ಷಿಣ ಭಾಗಗಳಾಗಿ ಒಡೆಯುವ ಭವಿಷ್ಯವನ್ನು ನುಡಿದ ಒಬ್ಬ ಪ್ರವರ್ತಕರೆಂದು ಅವರನ್ನು ನಾನು ಈಗ ಪರಿಗಣಿಸುತ್ತೇನೆ. +ಶ್ರೀ ರಾಜಗೋಪಾಲಚಾರಿಯವರ ಭವಿಷ್ಯವಾಣಿಯನ್ನು ಸುಳ್ಳಾಗಿಸಲು ನಾವು ಎಲ್ಲಾ ಕ್ರಮಗಳನ್ನೂ ತೆಗೆದುಕೊಳ್ಳಬೇಕು. +ಅಮೆರಿಕೆಯ ಸಂಯುಕ್ತ ಸಂಸ್ಥಾನಗಳಲ್ಲಿ ಉತ್ತರ ಮತ್ತು ದಕ್ಷಿಣಗಳ ನಡುವೆ ಅಂತರ್ಯುದ್ಧ ನಡೆದದ್ದನ್ನು ನಾವು ಮರೆಯಬಾರದು. +ಭಾರತದಲ್ಲಿಯೂ ಉತ್ತರ ಮತ್ತು ದಕ್ಷಿಣಗಳ ನಡುವೆ ಅಂತರ್ಯುದ್ಧ ನಡೆಯಬಹುದು. +ಅಂತಹ ಘರ್ಷಣೆಗೆ ಕಾಲವು ಹಲವು ನೆಲೆಗಳನ್ನು ಒದಗಿಸುತ್ತವೆ. +ಉತ್ತರ ಮತ್ತು ದಕ್ಷಿಣಗಳ ನಡುವೆ ವ್ಯಾಪಕವಾದ ಸಾಂಸ್ಕೃತಿಕ ವ್ಯತ್ಯಾಸಗಳಿವೆ ಆ ಸಾಂಸ್ಕೃತಿಕ ವ್ಯತ್ಯಾಸಗಳು ತೀವ್ರತರವಾಗಿ ಹತ್ತಿ ಉರಿಯುತ್ತಿವೆ ಎಂಬುದನ್ನು ನಾವು ಮರೆಯಬಾರದು. +ಉತ್ತರವನ್ನು ಬಲಪಡಿಸಿ ದಕ್ಷಿಣವನ್ನು ಒಡೆಯುವ ತಮ್ಮ ಪ್ರಯತ್ನದಲ್ಲಿ ತಾವು ಭಾಷಾ ಸಮಸ್ಯೆಯೊಡನೆ ಮಾತ್ರ ವ್ಯವಹರಿಸುತ್ತಿಲ್ಲ. +ರಾಜಕೀಯ ಸಮಸ್ಯೆಯೊಡನೆಯೂ ವ್ಯವಹರಿಸುತ್ತಿದ್ದೇನೆ ಎಂಬುದನ್ನು ಆಯೋಗದವರು ಅರಿಯದಾದರು. +ಅಂತಹ ಘಟನೆ ನಡೆಯುತ್ತಿರುವುದನ್ನು ತಪ್ಪಿಸಲು ಈಗಿಂದೀಗಲೇ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬೇಕು. +ಉತ್ತರದ ವಿಭಜನೆ:ಸಮಸ್ಯೆಯ ಅರಿವಾಗಿರುವುದರಿಂದ, ಈಗ ನಾವು ಅದರ ಪರಿಹಾರಕ್ಕೆ ಯತ್ನಿಸಬೇಕು. +ಒಂದು ರಾಜ್ಯದ ಗಾತ್ರವನ್ನು ನಿರ್ಧರಿಸಲು ಯಾವುದಾದರೂ ಒಂದು ಆಧಾರವನ್ನು ಅನುಸರಿಸಿದರೆ ಪರಿಹಾರ ಸಾಧ್ಯವೆಂಬುದು ಸುಸ್ಪಷ್ಟ ಅಂತಹ ಆಧಾರವನ್ನು ಗೊತ್ತು ಮಾಡುವುದು ಸುಲಭ ಸಾಧ್ಯವಿಲ್ಲ. +ಎರಡು ಕೋಟಿ ಜನಸಂಖ್ಯೆಯನ್ನು ಅಳತೆಗೋಲಾಗಿ ನಾವು ಇಟ್ಟುಕೊಂಡರೆ, ದಕ್ಷಿಣ ರಾಜ್ಯಗಳು ಬಹುಮಟ್ಟಿಗೆ ಸಂಕೀರ್ಣ ರಾಜ್ಯಗಳಾಗುತ್ತವೆ. +ಉತ್ತರದ ರಾಜ್ಯಗಳ ಹಾವಳಿಯನ್ನು ಎದುರಿಸಲು, ದಕ್ಷಿಣ ರಾಜ್ಯಗಳ ಗಾತ್ರವನ್ನು ಹಿಗ್ಗಲಿಸುವುದು ಸಾಧ್ಯವಿಲ್ಲ. +ಉತ್ತರದ ರಾಜ್ಯಗಳಾದ ಉತ್ತರ ಪ್ರದೇಶ, ಬಿಹಾರ ಮತ್ತು ಮಧ್ಯಪ್ರದೇಶಗಳನ್ನು ಒಡೆಯುವುದೇ ಇದಕ್ಕಿರುವ ಏಕೈಕ ಪರಿಹಾರ. +ಉತ್ತರದ ರಾಜ್ಯಗಳ ವಿಭಜನೆ:ನಾನು ಈಗಾಗಲೇ ಹೇಳಿದಂತೆ, ಭಾಷಾವಾರು ರಾಜ್ಯಗಳ ರೂಪು ರೇಖೆ ಹಾಕುವುದರಲ್ಲಿ ಆಯೋಗವು ಉತ್ತರವನ್ನು ಬಲಪಡಿಸಿ ದಕ್ಷಿಣವನ್ನು ಒಡೆದಿದೆ. +ಆಯೋಗವು ಇದನ್ನು ಉದ್ದೇಶ ಪೂರ್ವಕವಾಗಿ ಮಾಡಿಲ್ಲವೆಂಬುದರ ಬಗ್ಗೆ ನನಗೆ ಸಂಶಯವಿಲ್ಲ. +ಆದರೆ ಉದ್ದೇಶ ಪೂರ್ವಕವಾಗಲಿ, ಆಗದಿರಲಿ,ಆದುದಂತೂ ಸತ್ಯ ಅದರ ಕೆಟ್ಟ ಪರಿಣಾಮಗಳೂ ಕೂಡ ಸುಸ್ಪಷ್ಟವಾಗಿವೆ. +ಆದ್ದರಿಂದ ಈ ಪರಿಸ್ಥಿತಿಯನ್ನು ಸರಿಪಡಿಸುವುದು ಅಗತ್ಯ. +ಇದಕ್ಕೆ ಏಕೈಕ ಮಾರ್ಗವೆಂದರೆ,ಮೂರು ರಾಜ್ಯಗಳಾದ (೧) ಉತ್ತರ ಪ್ರದೇಶ, (೨) ಬಿಹಾರ್‌ ಮತ್ತು (೩) ಮಧ್ಯಪ್ರದೇಶಗಳನ್ನು ಸಣ್ಣಸಣ್ಣ ಭಾಗಗಳಾಗಿ ವಿಭಜಿಸುವುದು. +ಇದರ ಪರವಾಗಿ, ಧೈರ್ಯವಾಗಿ ಕೆಲವು ತಾತ್ಕಾಲಿಕ ಸಲಹೆಗಳನ್ನು ಕೊಡುತ್ತೇನೆ. +ಇಂತಹ ವಿಭಜನೆಯಿಂದ, ಭಾಷಾವಾರು ರಾಜ್ಯದಲ್ಲಿ ಅಂತರ್ಗತವಾಗಿರುವ ತತ್ವಗಳಿಗೆ ವಿರೋಧಬರದು. +ಏಕೆಂದರೆ,ಈ ಸಲಹೆಯ ಪ್ರಕಾರ ಈ ರಾಜ್ಯಗಳನ್ನು ವಿಭಜಿಸಿದರೆ, ಅದರಿಂದ ರೂಪುಗೊಳ್ಳುವ ಪ್ರತಿಯೊಂದು ರಾಜ್ಯವೂ ಭಾಷಾವಾರು ರಾಜ್ಯವಾಗುತ್ತದೆ. +ಸಂಸತ್ತಿನ ಇತ್ತೀಚಿನ ಚರ್ಚೆಯೊಂದರಲ್ಲಿ, ಉತ್ತರ ಪ್ರದೇಶವನ್ನು ಭಾಗ ಮಾಡುವುದಕ್ಕೆ ತಮ್ಮ ಆಕ್ಷೇಪಣೆ ಇಲ್ಲವೆಂದು ಶ್ರೀ ಪಂತ್‌ ಅವರು ಹೇಳಿದ್ದರಿಂದ ನಾನು ಸಂತೋಷಪಟ್ಟೆ, +ಅವರು ಉತ್ತರ ಪ್ರದೇಶದ ಬಗ್ಗೆ ಏನು ಹೇಳಿದರೋ ಅದು ಬಿಹಾರ ಮತ್ತು ಮಧ್ಯಪ್ರದೇಶಗಳಿಗೂ ಅನ್ವಯಿಸುತ್ತದೆ ಎಂದು ಭಾವಿಸಲಡ್ಡಿಯಿಲ್ಲ. +ಉತ್ತರ ಪ್ರದೇಶದ ವಿಭಜನೆ: ಉತ್ತರ ಪ್ರದೇಶದ ಬಗ್ಗೆ ಹೇಳುವುದಾದರೆ ಅದನ್ನು ಮೂರು ಭಾಗಗಳಾಗಿ ವಿಭಜಿಸಬೇಕೆಂಬುದು ನನ್ನ ಸಲಹೆ . +ಈ ಮೂರು ರಾಜ್ಯಗಳಲ್ಲಿ ಪ್ರತಿಯೊಂದರಲ್ಲಿಯೂ ಸುಮಾರು ಎರಡು ಕೋಟಿ ಜನಸಂಖ್ಯೆಯಿರಬೇಕು. +ಸಮರ್ಥ ಆಡಳಿತಕ್ಕಾಗಿ ಒಂದು ರಾಜ್ಯದ ಜನಸಂಖ್ಯೆ ಸುಮಾರು ಎರಡು ಕೋಟಿಯಿರಬೇಕೆಂಬುದನ್ನು ಒಂದು ಅಳತೆಗೋಲನ್ನಾಗಿ ಪರಿಗಣಿಸಬೇಕು. +ಈ ರಾಜ್ಯಗಳ ಮೇರೆಗಳನ್ನು ಹೇಗೆ ಗುರ್ತಿಸಬೇಕೆಂಬುದನ್ನು ಇಲ್ಲಿರುವ ೨ ನೇ ನಂಬರ್‌ ಭೂಪಟದಲ್ಲಿ ತೋರಿಸಿದ್ದೇನೆ. +ಉತ್ತರ ಪ್ರದೇಶದ ಮೂರು ರಾಜ್ಯಗಳು (೧) ಮೀರತ್‌, (೨) ಕಾನ್ಪುರ ಮತ್ತು (೩)ಅಲಹಾಬಾದ್‌ಗಳನ್ನು ತಮ್ಮ ರಾಜಧಾನಿಗಳನ್ನಾಗಿ ಮಾಡಿಕೊಳ್ಳಬಹುದು. +ಈ ಮೂರು ರಾಜ್ಯಗಳಲ್ಲಿ ಪ್ರತಿಯೊಂದರ ಮಧ್ಯಭಾಗದಲ್ಲಿ ಈ ನಗರಗಳು ಇವೆ. +ಬಿಹಾರದ ವಿಭಜನೆ: ಬಿಹಾರವನ್ನು ಎರಡು ರಾಜ್ಯಗಳನ್ನಾಗಿ ವಿಂಗಡಿಸಬೇಕೆಂಬುದು ನನ್ನ ಸಲಹೆ. +ಈ ಎರಡು ರಾಜ್ಯಗಳಲ್ಲಿ ಒಂದೊಂದರಲ್ಲಿ ಸುಮಾರು ಒಂದೂವರೆ ಕೋಟಿಗಿಂತ ಸ್ವಲ್ಪ ಹೆಚ್ಚು ಜನಸಂಖ್ಯೆಯಿರುತ್ತದೆ. +ಒಂದು ಸರಕಾರವು ಆಡಳಿತ ನಡೆಸಲು ಅದು ಅಷ್ಟೇನೂ ಕಡಿಮೆ ಜನಸಂಖ್ಯೆಯಲ್ಲ. +ಎಲ್ಲಿ ಮೇರೆಗಳನ್ನು ಗುರ್ತಿಸಬೇಕೆಂಬುದನ್ನು ಇಲ್ಲಿರುವ ೩ ನೇ ನಂಬರ್‌ ಭೂಪಟದಲ್ಲಿ ತೋರಿಸಿದ್ದೇನೆ. +ಬಿಹಾರದ ಎರಡು ರಾಜ್ಯಗಳು, (೧) ಪಾಟ್ನಾ ಮತ್ತು (೨) ರಾಂಚಿಗಳನ್ನು ತಮ್ಮ ರಾಜಧಾನಿಗಳನ್ನು ಮಾಡಿಕೊಳ್ಳಬಹುದು. +ಅವುಗಳು ಸರಿಯಾಗಿ ಎರಡು ರಾಜ್ಯಗಳ ಮಧ್ಯ ಭಾಗದಲ್ಲಿವೆ. +ಮಧ್ಯಪ್ರದೇಶದ ವಿಭಜನೆ: ಮಧ್ಯಪ್ರದೇಶವು ಎರಡು ರೂಪದಲ್ಲಿ ನಮ್ಮ ಕಣ್ಮುಂದೆ ನಿಲ್ಲುತ್ತದೆ -ಹಳೆಯ ಮಧ್ಯಪ್ರದೇಶ ಮತ್ತು ಹೊಸ ಮಧ್ಯಪ್ರದೇಶ. +ಹಳೆಯ ಮಧ್ಯಪ್ರದೇಶದಲ್ಲಿರುವ ಭಾಗಗಳು. +(೧) ಒಂದು ಕಾಲದಲ್ಲಿ ಮಧ್ಯಪ್ರಾಂತ್ಯ ಮತ್ತು ಬೀರಾರ್‌ ಎಂಬ ಹೆಸರಿದ್ದ ಪ್ರದೇಶ ಮತ್ತು(೨) ಪೂರ್ವ ರಾಜ್ಯಗಳು ಎಂಬ ಹೆಸರಿನ ರಾಜ್ಯಗಳಲ್ಲಿರುವ ಕೆಲವು ಭಾರತೀಯ ಪ್ರದೇಶಗಳು. +ಈ ಹಳೆಯ ಮಧ್ಯಪದೇಶದಲ್ಲಿ ೨೧/೨ ಕೋಟಿ ಜನಸಂಖ್ಯೆಯಿತ್ತು ಅದರಲ್ಲಿ ೨೨ ಜಿಲ್ಲೆಗಳಿದ್ದವು. +ಅದರ ವಿಧಾನಸಭೆಯಲ್ಲಿ ೨೨೩ ಸದಸ್ಯರಿದ್ದರು. +ಆಯೋಗವು ಯೋಜಿಸಿರುವಂತಹ ಆ ಹೊಸ ಮಧ್ಯಪ್ರದೇಶದಲ್ಲಿರುವ ಭಾಗಗಳು -(೧) ಹಳೆಯ ಮಧ್ಯಪ್ರದೇಶದ ೧೪ ಜಿಲ್ಲೆಗಳು(೨) ಇಡೀ ಭೋಪಾಲ್‌ (೩) ಇಡೀ ವಿಂಧ್ಯ ಪ್ರದೇಶ (೪) ಮಂಡಸೌರ್‌ ಜಿಲ್ಲೆಯ ಸುನೆಲ್‌ ಹೊರನಾಡನ್ನು ಬಿಟ್ಟು ಇರುವ ಮಧ್ಯಭಾರತ ಮತ್ತು (೫) ರಾಜಸ್ಥಾನದ ಕೋಟಾ ಜಿಲ್ಲೆಯ ಸಿರೋಂಜ್‌ ಉಪವಿಭಾಗ. +ಈ ಹೊಸ ಮಧ್ಯಪ್ರದೇಶದ ಒಟ್ಟು ಜನಸಂಖ್ಯೆ ೨೬೧ ದಶಲಕ್ಷಗಳು ಮತ್ತು ಅದರ ವಿಸ್ತೀರ್ಣ ಸುಮಾರು ೧೭೧.೨ಂಂ ಚದರ ಮೈಲಿಗಳು. +ಇದನ್ನು (೧) ಉತ್ತರ ಮಧ್ಯಪ್ರದೇಶ ಮತ್ತು ದಕ್ಷಿಣ ಮಧ್ಯಪ್ರದೇಶ ಎಂಬ ಎರಡು ರಾಜ್ಯಗಳನ್ನಾಗಿ ವಿಭಜಿಸಬೇಕೆಂಬುದು ನನ್ನ ಸಲಹೆ. +ಹೊಸ ಉತ್ತರ ಮಧ್ಯಪ್ರದೇಶ ರಾಜ್ಯದಲ್ಲಿ ಈ ಕೆಳಗಿನ ಭಾಗಗಳಿರಬೇಕು:(೧) ಇಡೀ ವಿಂಧ್ಯ ಪ್ರದೇಶ (೨) ಇಡೀ ಭೋಪಾಲ್‌ ರಾಜ್ಯ. +ಹೊಸ ದಕ್ಷಿಣ ಮಧ್ಯಪ್ರದೇಶ ರಾಜ್ಯದಲ್ಲಿ ಈ ಕೆಳಗಿನ ಭಾಗಗಳಿರಬೇಕು (೧) ಇಡೀ ಇಂದೂರು ರಾಜ್ಯ (೨) ಮಹಾಕೋಸಲದ ೧೪ ಜಿಲ್ಲೆಗಳು. +ಈ ಇಂದೂರು ರಾಜ್ಯದ ಜನಸಂಖ್ಯೆ ಸುಮಾರು ೨ ಕೋಟಿಗಳು ಮತ್ತು ವಿಂಧ್ಯ ಪ್ರದೇಶದ ಜನಸಂಖ್ಯೆ ಸುಮಾರು ೧.೩೦ ಕೋಟಿ . +ಈ ರಾಕ್ಷಸ ರಾಜ್ಯವನ್ನು ಆಯೋಗವು ಏಕೆ ರೂಪಿಸಿತು ಎಂಬುದನ್ನು ತಿಳಿಯಲು ಯಾವ ಮಾರ್ಗವೂ ಇಲ್ಲ. +ಆದರೆ ಸೃಷ್ಟಿಯಿಂದ ಪ್ರಧಾನಿ ನೆಹರು ಕೂಡ ಅಚ್ಚರಿಗೊ೦ಡರು. +"ಒಂದು ಭಾಷೆ ಒಂದು ರಾಜ್ಯ" ಎಂಬುದು ತಪ್ಪಿಸಿಕೊಳ್ಳಲಾಗದ ಸ್ಪಷ್ಟ ಆದೇಶವೆಂಬ ಭಾವನೆಯಿಂದ ಆಯೋಗವು ವ್ಯವಹರಿಸಿದೆ ಎಂದಷ್ಟೇ ಭಾವಿಸಬೇಕಾಗುತ್ತದೆ. +ನಾನು ಈಗಾಗಲೇ ತೋರಿಸಿರುವಂತೆ "ಒ೦ದು ಭಾಷೆ, ಒಂದು ರಾಜ್ಯವು" ಸ್ಪಷ್ಟ ಆದೇಶವಾಗಲಾರದು. +ವಾಸ್ತವವಾಗಿ ಒಂದು "ರಾಜ್ಯ ಒಂದುಭಾಷೆ" ಎಂಬುದೇ ನಿಯಮವಾಗಬೇಕು. +ಆದ್ದರಿಂದ, ಒಂದು ಭಾಷೆಯನ್ನಾಡುವ ಜನರು ಹಲವು ರಾಜ್ಯಗಳಾಗಿ ತಾವೇ ವಿಂಗಡಿಸಿಕೊಳ್ಳಬಹುದು. +ಮಹಾರಾಷ್ಟ್ರದ ಬಗ್ಗೆ ವ್ಯವಹರಿಸಲು ಸಲಹೆಗಳು :ಮಹಾರಾಷ್ಟ್ರವು ಭಿನ್ನಾಭಿಪ್ರಾಯಕ್ಕೆ ಎಡೆಯಾಗಿರುವ ಮತ್ತೊಂದು ಪ್ರದೇಶ. +ಈಗ ನಾಲ್ಕು ಸಲಹೆಗಳಿವೆ. +(೧) ಮುಂಬಯಿ ರಾಜ್ಯವನ್ನು ಈಗಿರುವಂತೆಯೇ ಉಳಿಸಿಕೊಳ್ಳುವುದು; +ಅಂದರೆ ಮಹಾರಾಷ್ಟ್ರ ಗುಜರಾತ್‌ ಮತ್ತು ಮುಂಬಯಿಗಳನ್ನೊಳಗೊಂಡ ಸಂಕೀರ್ಣ ರಾಜ್ಯವನ್ನಾಗಿ ಉಳಿಸಿಕೊಳ್ಳುವುದು. +(೨) ಈಗಿರುವ ರಾಜ್ಯವನ್ನು ಉಳಿದು, ಮಹಾರಾಷ್ಟ್ರ ಮತ್ತು ಗುಜರಾತ್‌ಗಳನ್ನು ಪ್ರತ್ಯೇಕಿಸಿ ಅವೆರಡನ್ನೂ ಪ್ರತ್ಯೇಕ ರಾಜ್ಯಗಳನ್ನಾಗಿ ಮಾಡುವುದು. +(೩) ಮುಂಬಯಿಯೂ ಸೇರಿದಂತೆ ಸಂಯುಕ್ತ ಮಹಾರಾಷ್ಟ್ರವನ್ನು ಒಂದು ರಾಜ್ಯವನ್ನಾಗಿ ಸ್ಥಾಪಿಸುವುದು. +(೪) ಮಹಾರಾಷ್ಟ್ರವನ್ನು ಮುಂಬಯಿಯಿಂದ ಪತ್ಯೇಕಿಸಿ, ಮುಂಬಯಿಯನ್ನೇ ನಗರ ರಾಜ್ಯವನ್ನಾಗಿ ಸ್ಥಾಪಿಸುವುದು. +ನನ್ನ ಸಲಹೆಗಳು ಯಾವುವು ಎಂಬುದನ್ನು ನಾನು ಹೇಳಲು ಇಚ್ಛಿಸುತ್ತೇನೆ. +ಅವು ಈ ಕೆಳಕಂಡಂತಿವೆ. +ಸಂಕೀರ್ಣ ರಾಜ್ಯವನ್ನಾಗಿ ಮುಂಬಯಿಯನ್ನು ಉಳಿಸಿಕೊಳ್ಳುವ ಯತ್ನವನ್ನು ತ್ಯಜಿಸಬೇಕು. +ಮಹಾರಾಷ್ಟ್ರವನ್ನು (೧) ಮಹಾರಾಷ್ಟ್ರ ನಗರ ರಾಜ್ಯ (ಮುಂಬಯಿ) (೨) ಪಶ್ಚಿಮ ಮಹಾರಾಷ್ಟ್ರ (೩)ಮಧ್ಯ ಮಹಾರಾಷ್ಟ್ರ ಮತ್ತು (೪) ಪೂರ್ವ ಮಹಾರಾಷ್ಟ್ರಗಳೆಂಬುದಾಗಿ, ನಾಲ್ಕು ರಾಜ್ಯಗಳಾಗಿ ವಿಭಾಗಿಸುತ್ತೇನೆ. +ಮಹಾರಾಷ್ಟ್ರ ನಗರ ರಾಜ್ಯ : ಮುಂಬಯಿ ನಗರ, ಮತ್ತು ಅದನ್ನು ಉತ್ತಮ ಹಾಗೂ ಶಕ್ತಿಶಾಲಿ ನಗರವಾಗಿ ಉಳಿಸಲು ನೆರವಾಗುವಂತಹ ಮಹಾರಾಷ್ಟದ ಪ್ರದೇಶ. +ಪಶ್ಚಿಮ ಮಹಾರಾಷ್ಟ್ರ : (೧) ಥಾಣಾ, (೨) ಕೋಲಾಬ, (೩) ರತ್ನಗಿರಿ (೪) ಪೂನಾ, (೫)ಉತ್ತರ ಸತಾರಾ, (೫) ದಕ್ಷಿಣ ಸತಾರಾ, (೭) ಕೊಲ್ಲಾಪುರ ಮತ್ತು (೮) ಕರ್ನಾಟಕಕ್ಕೆ ಕೊಡಲಾಗಿರುವ ಮರಾಠಿ ಮಾತನಾಡುವ ಸೀಮೆಗಳು. +ಮಧ್ಯ ಮಹಾರಾಷ್ಟ್ರ : (೧) ಡಾಂಗ್‌, (೨) ಪೂರ್ವ ಖಾಂದೇಶ್‌, (೩) ಪಶ್ಚಿಮ ಖಾಂದೇಶ್‌ (೪)ನಾಸಿಕ್‌, (೫) ಅಹಮದ್‌ ನಗರ, (೬) ಔರಂಗಾಬಾದ್‌ (೭) ನಾಂದೇಶ್‌ (೮) ಪರ್ಬಾನಿ, (೯) ಬೀಡ್‌(೧೦) ಉಸ್ಮಾನಾಬಾದ್‌, (೧೧) ಸೊಲ್ಲಾಪುರ ನಗರ ಮತ್ತು ಸೊಲ್ಲಾಪುರ ಜಿಲ್ಲೆಯ ಮರಾಠಿ ಮಾತನಾಡುವ ಪ್ರದೇಶ ಮತ್ತು (೧೨) ತೆಲಂಗಾಣಕ್ಕೆ ಕೊಡಲಾಗಿರುವ ಮರಾಠಿ ಮಾತನಾಡುವ ಸೀಮೆಗಳು. +ಪೂರ್ವ ಮಹಾರಾಷ್ಟ್ರ : (೧) ಬುಲ್ಬಾನ್‌, (೨) ಯೆಯೋತಮಲ್‌, (೩) ಅಂಕೋಲಾ, (೪)ಅಮರಾವತಿ, (೫) ವಾರ್ಧಾ, (೬) ಚಂದಾ, (೭) ನಾಗಪುರ, (೮) ಭನ್ದಾರಾ ಮತ್ತು (೯) ಹಿಂದೀ ರಾಜ್ಯಗಳಿಗೆ ಕೊಡಲಾಗಿರುವ ಮರಾಠಿ ಮಾತನಾಡುವ ಸೀಮೆಗಳು. +ಈ ಸೂಚನೆಗಳ ಅರ್ಹತೆಗಳನ್ನು ಈ ಮುಂದೆ ಪರಿಶೀಲಿಸುತ್ತೇನೆ. +ಸಂಕೀರ್ಣ ರಾಜ್ಯದಲ್ಲಿ ಮಹಾರಾಷ್ಟ್ರೀಯರು ಮುಂಬಯಿ ಒಂದು ಸಂಕೀರ್ಣ ರಾಜ್ಯವಾಗಿ ಉಳಿಯಬೇಕೆ? +ಅದು ಅತ್ಯಂತ ಅಸಹಜ ಕ್ರಮ. +ಕಲ್ಕತ್ತ ನಗರವು ಪ್ರತ್ಯೇಕ ನಗರ ರಾಜ್ಯವಲ್ಲ. +ಮದ್ರಾಸು ಪ್ರತ್ಯೇಕ ನಗರ ರಾಜ್ಯವಲ್ಲ. +ಮುಂಬಯಿಯನ್ನು ಮಾತ್ರ ಏಕೆ ಇದಕ್ಕೆ ಅಪರಾಧವನ್ನಾಗಿ ಮಾಡಬೇಕು? +ಮುಂಬಯಿ ಮಂತ್ರಿ ಮಂಡಲದಲ್ಲಿ ಮಹಾರಾಷ್ಟ್ರೀಯರ ಸ್ಥಾನಮಾನವೇನು? +ಮಂತ್ರಿಸ್ಥಾನ ವಿತರಣೆಯನ್ನು ನಾವು ಪರಿಶೀಲಿಸೋಣ: +ವಿಧಾನ ಸಭೆಯಲ್ಲಿ ಗುಜರಾತೀ ಸದಸ್ಯರು ಕೇವಲ ೧೦೬, ಮಹಾರಾಷ್ಟೀಯ ಸದಸ್ಯರು ೧೪೯. +ಹೀಗಿದ್ದರೂ ಮಹಾರಾಷ್ಟ್ರೀಯ ಮಂತ್ರಿಗಳಿಗೆ ಗುಜರಾತೀ ಮಂತ್ರಿಗಳು ಸಂಖ್ಯೆಯಲ್ಲಿ ಸಮನಾಗಿದ್ದಾರೆ. +ಉಪಮಂತ್ರಿಗಳಲ್ಲಿ ಮಾತ್ರ, ಮಹಾರಾಷ್ಟೀಯ ಒಟ್ಟು ಸಂಖ್ಯೆಯಲ್ಲಿ ಒಬ್ಬರು ಹೆಚ್ಚಿದ್ದಾರೆ. +ಆದರೆ ಮಂತ್ರಿಗಳು ಮತ್ತು ಉಪವಮಂತ್ರಿಗಳಲ್ಲಿ ಅಧಿಕಾರ ಹಾಗೂ ಖಾತೆಗಳು ಹೇಗೆ ವಿತರಣೆಯಾಗಿದೆ ಎಂಬುದು ಅತ್ಯಂತ ಪ್ರಮುಖ ವಿಷಯ. +ಮುಂಬಯಿ ರಾಜ್ಯದ ಈ ಸಮ್ಮಿಶ್ರ ಮಂತ್ರಿಮ೦ಡಲದಲ್ಲಿ,ಮಹಾರಾಷ್ಟ್ರೀಯ ಮಂತ್ರಿಗಳಿಗೆ ಏನು ಪ್ರಭುತ್ವ ಮತ್ತು ಅಧಿಕಾರಗಳಿವೆ ಎಂಬುದನ್ನು ಅದು ತೋರಿಸುತ್ತದೆ. +ಉಪ ಮಂತ್ರಿಗಳ ನಡುವೆಯೂ ಇದೇ ರೀತಿ ವಿಷಯಗಳ ಹಂಚಿಕೆಯಾಗಿದೆ. +ಅಭಿವೃದ್ಧಿ ಕಾರ್ಯಕ್ಕಾಗಿ ಮಹಾರಾಷ್ಟ್ರದಲ್ಲಿ ಮತ್ತು ಗುಜರಾತಿನಲ್ಲಿ ಎಷ್ಟು ಹಣವನ್ನು ಖರ್ಚುಮಾಡಲಾಗಿದೆ ಎಂಬುದನ್ನು ನೋಡೋಣ. +ಮೂರು ವರ್ಷಗಳಲ್ಲಿ ಮಹಾರಾಷ್ಟ್ರ ಮತ್ತು ಗುಜರಾತಿನ ಒಬ್ಬೊಬ್ಬ ವ್ಯಕ್ತಿಯ ಮೇಲೆ ಮಾಡಲಾದ ಖರ್ಚಿನ ಒಂದು ಕಲ್ಪನೆಯನ್ನು ಕೊಡುತ್ತವೆ: +ಸಮ್ಮಿಶ್ರ ಮುಂಬಯಿ ರಾಜ್ಯದ ಬಗ್ಗೆಮಹಾರಾಷ್ಟೀಯರು ಅಸಹ್ಯ ಭಾವನೆ ತಳೆದಿದ್ದರೆ, ಅವರನ್ನು ಯಾರಾದರೂ ದೂಷಿಸಬಲ್ಲರೇ? +ಇಂತಹ ಶರಣಾಗತಿ ಸ್ಥಾನವನ್ನು ಯಾವ ಮಹಾರಾಷ್ಟೀಯನೂ ಸಹಿಸುವುದಿಲ್ಲ. +ಸಮಿಶ್ರ ರಾಜ್ಯದ ವಿಚಾರವನ್ನು ಮುಕ್ತಾಯವಾಗಿ ಗಾಳಿಗೆ ತೂರಿಬಿಡಬೇಕು. +ಮುಂಬಯಿ ನಗರ ವಿವಾದಕ್ಕೆ ಎಡೆಯಾಗಿರುವ ಒಂದು ಸ್ಥಳ, ಆ ಭಿನ್ನಾಭಿಪ್ರಾಯವು ಹೆಚ್ಚು ತೀವ್ರತರವಾಗಿ ಪರಿಣಮಿಸಿದೆ. +ಈ ನಗರವು ಮಹಾರಾಷ್ಟ್ರದ ಭಾಗವಾಗಿರಬೇಕೆಂಬುದು ಮಹಾರಾಷ್ಟ್ರೀಯರ ಬಯಕೆಯಾದರೆ ಅದು ಪ್ರತ್ಯೇಕ ರಾಜ್ಯವಾಗಬೇಕೆಂಬುದು ಗುಜರಾತಿಗಳ ಆಶಯ. +ಈ ಭಿನ್ನಾಭಿಪ್ರಾಯದಿಂದಾಗಿ ತಲೆಗಳೊಡೆದಿದ್ದರೂ ಒಪ್ಪಂದವೇರ್ಪಟ್ಟಿಲ್ಲ. +ಆದ್ದರಿಂದ ಈ ವಿಷಯದ ಆಮೂಲಾಗ್ರ ಪರಿಶೀಲನೆ ಅಗತ್ಯ. +ಮುಂಬಯಿ ನಗರವು ತಮ್ಮದೇ ಎಂದು ಗುಜರಾತಿಗಳು ಸಾಧಿಸುತ್ತಿಲ್ಲವಾದರೂ, ಅದರ ಮೇಲೆ ತಮ್ಮ ಹಿಡಿತವನ್ನು ಅವರು ಸಡಿಲಿಸುವುದಿಲ್ಲ. +ನಗರದ ವ್ಯಾಪಾರೋದ್ಯಮಗಳನ್ನು ನಿಯಂತ್ರಿಸುವ ಕಾರಣದಿಂದಾಗಿ ಅವರು ಅದರ ಮೇಲೆ ಒಂದು ರೀತಿಯ ಅನುಭೋಗದ ಹಕ್ಕನ್ನು ಸಾಧಿಸುತ್ತಾರೆ. +ಈ ನಗರವು ಮಹಾರಾಷ್ಟ್ರದ ಭಾಗವಾಗಬೇಕೋ? +ಅಥವಾ ಒಂದು ಪ್ರತ್ಯೇಕ ರಾಜ್ಯವಾಗಬೇಕೋ? +ಎಂಬುದೇ ಪ್ರಮುಖ ಪ್ರಶ್ನೆ . +ಈ ಸಮಸ್ಯೆಗೆ ಸಂಬಂಧಿಸಿದಂತೆ ಗುಜರಾತಿಗಳು ಮತ್ತು ಮಹಾರಾಷ್ಟ್ರೀಯರ ನಡುವೆ ತೀವ್ರಕರ ಭಿನ್ನಾಭಿಪ್ರಾಯವಿದೆ. +ಮುಂಬಯಿಯು ಪೂರ್ಣವಾಗಿ ನವ ಮಹಾರಾಷ್ಟ್ರ ರಾಜ್ಯದ ಒಂದು ಭಾಗವಾಗಬೇಕೆಂಬುದು ಮಹಾರಾಷ್ಟ್ರೀಯರ ಬಯಕೆ. +ಗುಜರಾತಿಗಳು ಇದನ್ನು ಪ್ರಬಲವಾಗಿ ವಿರೋಧಿಸುತ್ತಾರೆ. +ಅವರು ಎರಡು ಪರಿಹಾರಗಳನ್ನು ಮುಂದಿಟ್ಟಿದ್ದಾರೆ. +ಈಗಿರುವ ದ್ವಿಭಾಷಾ ಮುಂಬಯಿ ರಾಜ್ಯವನ್ನು ಗುಜರಾತ್‌ ಮತ್ತು ಮಹಾರಾಷ್ಟ್ರಗಳೆಂಬ ಎರಡು ಭಾಷಾ ಘಟಕಗಳನ್ನಾಗಿ ಒಡೆಯಕೂಡದು ಎಂಬುದು ಮೊದಲ ಪರಿಹಾರ. +ಮುಂಬಯಿ ನಗರವನ್ನು ಒಂದು ಪ್ರತ್ಯೇಕ ರಾಜ್ಯವನ್ನಾಗಿ ಮಾಡಬೇಕೆಂಬ ಕಾಂಗ್ರೆಸ್‌ ಕಾರ್ಯಕಾರಿ ಸಮಿತಿಯ ನಿರ್ಣಯದಿಂದ ಗುಜರಾತಿಗಳಿಗೆ ಸಂತೋಷವಾಗಿದೆ. +ಆದರೆ ಇದರಿಂದ ಮಹಾರಾಷ್ಟ್ರೀಯರು ಕೋಪಗೊಂಡಿರುವುದು ಸಹಜ. +ಮಹಾರಾಷ್ಟ್ರೀಯರ ಈ ಅಸಮಾಧಾನವು ಸಾಕಷ್ಟು ಸಮರ್ಥನೀಯವೆನಿಸ ಬಹುದಾಗಿದೆ. +ಮುಂಬಯಿಮೇಲೆ ಮಹಾರಾಷ್ಟ್ರಕ್ಕಿರುವ ಹಕ್ಕಿನ ವಿರುದ್ಧ ಮಾಡಲಾಗಿರುವ ವಾದಗಳಲ್ಲಿ ಹುರುಳಿಲ್ಲ. +ಮುಂಬಯಿಯ ಒಟ್ಟು ಜನಸಂಖ್ಯೆಯಲ್ಲಿ ಮರಾಠಿ ಮಾತನಾಡುವವರು ಬಹುಸಂಖ್ಯಾತರಾಗುವುದಿಲ್ಲವೆಂಬುದು ಮೊದಲನೆಯ ವಾದ. +ಮುಂಬಯಿ ನಗರದ ಒಟ್ಟು ಜನಸಂಖ್ಯೆ ಬಹಳ ಹೆಚ್ಚು. +ಅದರಲ್ಲಿ ಮರಾಠಿ ಮಾತನಾಡುವ ಜನಸಂಖ್ಯೆ ಶೇಕಡ ೪೮. +ಮೇಲಿನ ರೀತಿಯ ವಾದವನ್ನು ಮುಂದೊಡ್ಡುವವರಿಗೆ ಆ ವಾದದ ದುರ್ಬಲತೆಯ ಅರಿವಿಲ್ಲ. +ಮುಂಬಯಿ ನಗರದ ಒಟ್ಟು ಮರಾಠಿ ಜನಸಂಖ್ಯೆ ಶೇಕಡ ೫ಂ ಕ್ಕಿಂತ ಕಡಿಮೆ ಎಂಬುದರಲ್ಲಿ ಸಂಶಯವಿಲ್ಲವಾದರೂ, ಎರಡು ವಿಷಯಗಳನ್ನು ಆಧರಿಸಿ ಅದನ್ನು ಪರಿಶೀಲಿಸಬೇಕಾಗುತ್ತದೆ. +ಮುಂಬಯಿ ನಗರದಲ್ಲಿ ಮರಾಠಿಗರು ಅಲ್ಪ ಸಂಖ್ಯಾತರೆನಿಸಿದರೂ ಕೂಡ, ಭೌಗೋಳಿಕವಾಗಿ ಆ ನಗರವು ಮಹಾರಾಷ್ಟದ ಭಾಗವೆಂಬುದನ್ನು ಯಾರೂ ಅಲ್ಲಗಳೆಯಲಾರರು. + ಗುಜರಾತ್‌ ಪ್ರದೇಶ ಕಾಂಗ್ರೆಸ್‌ ಸಮಿತಿಯ ಒಂದು ಸಭೆಯಲ್ಲಿ ಮಾತನಾಡುತ್ತಿದ್ದಾಗ ಮುಂಬಯಿ ಮಹಾರಾಷ್ಟ್ರದ ಭಾಗವೆಂಬುದನ್ನು ಶ್ರೀ ಮೊರಾರ್ಜಿದೇಸಾಯಿಯವರೂ ಕೂಡ ಒಪ್ಪಿಕೊಂಡಿದ್ದಾರೆ. +ಜನಸಂಖ್ಯಾ ಘಟಕವನ್ನು ಪರಿಶೀಲಿಸುವಲ್ಲಿ ಪರಿಗಣಿಸಬೇಕಾದ ಎರಡನೆಯ ಅಂಶವೆಂದರೆ,ಲಾಭಗಳಿಸುವುದಕ್ಕಾಗಿ ಅಥವಾ ಹೊಟ್ಟೆಪಾಡಿಗಾಗಿ ಭಾರತದ ಇತರ ಕಡೆಗಳಿಂದ ಮುಂಬಯಿಗೆ ಬರುವ ಜನರ ನಿರಂತರ ಪ್ರವಾಹ. +ಅವರಲ್ಲಿ ಯಾರೂ ಮುಂಬಯಿಯನ್ನು ತಮ್ಮ ಸ್ಥಳವೆಂದು ಪರಿಗಣಿಸುವುದಿಲ್ಲವಾದ್ದರಿಂದ ಅವರನ್ನು ಮುಂಬಯಿನ, ಶಾಶ್ವತ ನಿವಾಸಿಗಳು ಎಂದು ಪರಿಗಣಿಸಕೂಡದು. +ಅವರಲ್ಲಿ ಹಲವಾರು ಕೆಲವು ತಿಂಗಳುಗಳಿದ್ದು ವಾಪಸ್ಸು ಹೋಗುತ್ತಾರೆ. +ಮುಂಬಯಿ ಮಹಾರಾಷ್ಟ್ರೀಯರಿಗೆ ಮಾತ್ರ ನಿವಾಸ ಸ್ಥಳ, ಮತ್ತಾರಿಗೂ ಅಲ್ಲ. +ಆದ್ದರಿಂದ ಮುಂಬಯಿ ನಗರದ ಬಹು ಸಂಖ್ಯಾತ ಜನ ಯಾರು ಎಂದು ನಿರ್ಣಯಿಸುವ ಉದ್ದೇಶಕ್ಕೆ ಮಹಾರಾಷ್ಟ್ರೀಯರಲ್ಲದವರನ್ನು ಗಣಿಸುವುದು ತರ್ಕಬದ್ಧವೂ ಅಲ್ಲ, ನಿಷ್ಪಕ್ಷಪಾತವೂ ಅಲ್ಲ. +ಪೌರತನವನ್ನು ನಿರ್ಬಂಧಿಸುವ ಸ್ಥಳೀಯ ಕಾನೂನಿನ ಅಭಾವದಿಂದಾಗಿ ಮುಂಬಯಿ ನಗರದಲ್ಲಿ ಮರಾಠಿ ಮಾತನಾಡದ ಜನರ ಹೆಚ್ಚಳವಾಗಿದೆಯೆಂಬುದನ್ನೂ ಅವರು ಗ್ರಹಿಸಿಲ್ಲ. +ಒಂದು ಪಕ್ಷ ಮುಂಬಯಿ ರಾಜ್ಯದಲ್ಲಿ ಅಂತಹ ಕಾನೂನಿದ್ದರೆ, ಭಾರತದ ಎಲ್ಲಾ ಭಾಗಗಳಿಂದ ಮುಂಬಯಿಗೆ ಬರುವ ಜನಪ್ರವಾಹವನ್ನು ತಡೆಯಬಹುದಿತ್ತಲ್ಲದೆ,ಅಲ್ಲಿ ಮರಾಠಿಗರ ಬಹು ಸಂಖ್ಯತ್ವವನ್ನು ಉಳಿಸಿಕೊಳ್ಳಬಹುದಾಗಿತ್ತು. +ಮುಂಬಯಿ ಪಶ್ಚಿಮ ತೀರದಲ್ಲಿರುವ ಒಂದು ಬಂದರು. +ಇದರಿಂದಾಗಿ ಮರಾಠಿಗರಲ್ಲದವರು ಈ ನಗರಕ್ಕೆ ನುಗ್ಗುತ್ತಿದ್ದಾರೆ ಎಂಬ ಅಂಶವನ್ನೂ ಅವರು ಗ್ರಹಿಸಿಲ್ಲ. +ಯುರೋಪಿನಿಂದ ಮುಂಬಯಿಗೆ ಇರುವ ಸಮುದ್ರ ಮಾರ್ಗವು, ಯುರೋಪಿನಿಂದ ಕಲ್ಕತ್ತೆಗಾಗಲೀ ಅಥವಾ ಮದ್ರಾಸಿಗಾಗಲೀ ಇರುವ ಮಾರ್ಗಕ್ಕಿಂತ ಹೆಚ್ಚು ಸಮೀಪ. +ಆದ್ದರಿಂದ ಭಾರತದ ಇತರ ಭಾಗಗಳ ಜನರು ತಮ್ಮ ನಿವಾಸ ಸ್ಥಳಗಳನ್ನು ಬಿಟ್ಟು ತಾತ್ಕಾಲಿಕ ನಿವಾಸಿಗಳಾಗಿ ಮುಂಬಯಿಗೆ ಹೆಚ್ಚು ಹೆಚ್ಚು ಸಂಖ್ಯೆಯಲ್ಲಿ ಬರುತ್ತಾರೆ. +ಇತರ ಯಾವೆಡೆಗಿಂತಲೂ ಮುಂಬಯಿಯಲ್ಲಿ ಉದ್ಯೋಗವನ್ನು ಪಡೆಯುವುದು ಸುಲಭ. +ವಾಸ್ತವವಾಗಿ ಹೇಳಬೇಕಾದರೆ, ಈ ಸಮಸ್ಯೆಯನ್ನು ಬೇರೊಂದು ದೃಷ್ಟಿಕೋನದಿಂದ ನೋಡಬೇಕಾಗುತ್ತದೆ. +ಕಳೆದ ಸುಮಾರು ಎರಡು ಶತಮಾನಗಳಿಂದಲೂ ಜನರು ಮುಂಬಯಿಗೆ ಬರುತ್ತಿದ್ದಾರೆ. +ಹೀಗಿದ್ದರೂ, ಈ ಜನ ಪ್ರವಾಹವು, ಈ ನಗರದಲ್ಲಿನ ಮರಾಠೀ ಜನಸಂಖ್ಯೆಯನ್ನು ಶೇಕಡ ೪೮ ಕ್ಕಿಂತ ಕೆಳಗೆ ಇಳಿಸಿಲ್ಲ. +ಎರಡು ಶತಮಾನಗಳ ಅನಂತರವೂ, ಈ ನಗರದ ಜನಸಂಖ್ಯೆಯ ಸಂಯೋಜನೆಯಲ್ಲಿ ಮರಾಠಿತನವೇ ಆಧಾರ ಶಿಲೆಯಂತಿದೆ. +ಗುಜರಾತಿಗಳು ವಲಸೆ ಬಂದ ಜನ. +ಮುಂಬಯಿಯನ್ನು ಮಹಾರಾಷ್ಟ್ರದ ಭಾಗವಾಗಿ ಉಳಿಸಲು ಒತ್ತಾಯಿಸಬಲ್ಲ ಇನ್ನೂ ಇತರ ವಾದಗಳು ಕೂಡಾ ಇವೆ. +ಭಾರತದಲ್ಲಿ ಕೇವಲ ಮುಂಬಯಿಯು ಮಾತ್ರ ಸಂಕೀರ್ಣ ನಗರವಲ್ಲ. +ಕಲ್ಕತ್ತ ಮತ್ತುಮದ್ರಾಸುಗಳೂ ಕೂಡ ಸಂಕೀರ್ಣ ನಗರಗಳು. +ಕಲ್ಕತ್ತವು ಪಶ್ಚಿಮ ಬಂಗಾಳದ ಭಾಗವಾಗಿಯೂ ಮತ್ತು ಮದ್ರಾಸ್‌, ಮದ್ರಾಸ್‌ ರಾಜ್ಯದ ಭಾಗವಾಗಿಯೂ ಇರುವುದಾದರೆ, ಮುಂಬಯಿಯನ್ನು ಮಹಾರಾಷ್ಟದ ಭಾಗವನ್ನಾಗಿ ಮಾಡಲು ಆಕ್ಷೇಪಣೆ ಏನು ? + ಪ್ರತಿಯೊಬ್ಬ ಮಹಾರಾಷ್ಟೀಯನೂ ಕೇಳಿಯೇ ಕೇಳುವ ಪ್ರಶ್ನೆಯಿದು. +ಈ ಪಶ್ನೆಗೆ ಯಾವ ಉತ್ತರವನ್ನೂ ನಾನು ಕಾಣುತ್ತಿಲ್ಲ. +ಇತರರನ್ನು ಆಳಲು ಮಹಾರಾಷ್ಟೀಯರು ಅಸಮರ್ಥರು ಎಂಬುದಾಗಿ ಕಾಂಗ್ರೆಸ್‌ ವರಿಷ್ಠ ಮಂಡಳಿ ಯೋಚಿಸುತ್ತದೆ ಎಂಬ ಒಂದೇ ಉತ್ತರ ನನ್ನ ಮನಸ್ಸಿಗೆ ಬರುತ್ತದೆ. +ಇದು ಮಹಾರಾಷ್ಟ್ರೀಯತನಕ್ಕೇ ಕಳಂಕ ತರುವಂತಹ ವಿಷಯವಾದ್ದರಿಂದ ಮಹಾರಾಷ್ಟ್ರೀಯ ಇದನ್ನು ಸಹಿಸುವುದಿಲ್ಲ. +ಮಹಾರಾಷ್ಟ್ರೀಯರಲ್ಲದವರ ಬಂಡವಾಳದಿಂದ ಮುಂಬಯಿಯನ್ನು ನಿರ್ಮಿಸಲಾಗಿದೆ ಎಂದು ಹೇಳುತ್ತಾರೆ ಹಾಗೂ ಇರಬಹುದು. +ಆದರೆ ಮದ್ರಾಸನ್ನು ಮದ್ರಾಸಿಗರ ಬಂಡವಾಳದಿಂದಲೇ ನಿರ್ಮಿಸಲಾಗಿದೆಯೇ? +ಕಲ್ಕತ್ತವನ್ನು ಬಂಗಾಳೀಯರ ಬಂಡವಾಳದಿಂದಲೇ ನಿರ್ಮಿಸಲಾಗಿದೆಯೇ? +ಯುರೋಪಿಯನ್ನರ ಬಂಡವಾಳವಿಲ್ಲದಿದ್ದರೆ ಮದ್ರಾಸ್‌ ಮತ್ತು ಕಲ್ಕತ್ತಗಳು ಹಳ್ಳಿಗಳಾಗಿ ಉಳಿದಿರುತ್ತಿದ್ದ ಸಾಧ್ಯತೆಯೋ ಹೆಚ್ಚು. +ಮುಂಬಯಿಯನ್ನು ಮಹಾರಾಷ್ಟೀಯರು ತಮಗಾಗಿ ಕೇಳಿದಾಗ, ಅದರ ವಿರುದ್ಧ ಈ ಮೇಲಿನ ಅಂಶವನ್ನು ಹೇರುವುದೇಕೆ? +ಮುಂಬಯಿನ ಇಂದಿನ ಸ್ಥಿತಿಗೆ ಮಹಾರಾಷ್ಟ್ರೀಯರು ಕನಿಷ್ಠ ಪಕ್ಷತಮ್ಮ ಬೆವರನ್ನಾದರೂ ಸುರಿಸಿದ್ದಾರೆ. +ಅವರ ಶ್ರಮವಿಲ್ಲದಿದ್ದರೆ, ಈ ನಗರ ಇಂದಿನ ಪರಿಸ್ಥಿತಿಯಲ್ಲಿರುತ್ತಿರಲಿಲ್ಲ. +ಮುಂಬಯಿಯ ಜೀವನದ ಎಳೆಗಳು ಮಹಾರಾಷ್ಟ್ರದಲ್ಲಿ ನೆಲೆಗೊಂಡಿವೆ ಎಂಬುದನ್ನು ಯಾವಾಗಲೂ ನೆನಪಿಡಬೇಕು. +ಅದರ ವಿದ್ಯುಚ್ಛಕ್ತಿಯ ಜಲ ಮೂಲಗಳು ಮಹಾರಾಷ್ಟ್ರದಲ್ಲಿವೆ. +ಮಹಾರಾಷ್ಟ್ರವು ಮುಂಬಯಿಯನ್ನು ಯಾವ ಕ್ಷಣದಲ್ಲಿಯಾದರೂ "ಮೆಹೆಂಜೋದಾರೋ' ಅಂದರೆ ಶವಗಳ ನಗರವನ್ನಾಗಿ ಮಾಡಬಲ್ಲದು. +ಮಹಾರಾಷ್ಟ್ರೀಯರು ತಮ್ಮ ವಿರುದ್ಧ ಭೇದ ನೀತಿಯನ್ನು ಸರಿಸುತ್ತಾರೆಂದು ಗುಜರಾತಿ ಜನರು ಭಯಭೀತರಾಗಿದ್ದಾರೆ. +ಆದರೆ ನಮ್ಮ ಸಂವಿಧಾನದಲ್ಲಿ ವಿಭೇದ ನೀತಿಗೆ ಅವಕಾಶವಿಲ್ಲ. +ಏಕೆಂದರೆ,ಅದರಲ್ಲಿ ಮೂಲಭೂತ ಹಕ್ಕುಗಳು ಮತ್ತು ಪರಿಹಾರಗಳನ್ನು ಪಟ್ಟಿ ಮಾಡಲಾಗಿದೆ. +ಹೈಕೋರ್ಟು ಮತ್ತು ಸುಪ್ರಿಂ ಕೋರ್ಟುಗಳು ರಿಟ್‌ ಮುಖಾಂತರ ಅನ್ಯಾಯಕ್ಕೆ ತಕ್ಷಣ ಪರಿಹಾರ ಒದಗಿಸಬಲ್ಲವು. +ವಿಭೇದ ನೀತಿ ರೂಪದ ಪ್ರತಿಯೊಂದು ಅನ್ಯಾಯಕ್ಕೂ ರಾಜ್ಯಾಂಗ ರಚನೆಯಲ್ಲಿ ಪರಿಹಾರ ಒದಗಿಸಲಾಗಿದೆ. +ಹೀಗಿರಲು ಗುಜರಾತಿಗಳು ಯಾವುದೇ ರೀತಿ ಭಯಪಡುವುದೇಕೆ? +“ಮುಂಬಯಿಯನ್ನು ಪ್ರತ್ಯೇಕ ನಗರ ರಾಜ್ಯವನ್ನಾಗಿ ಮಾಡುವುದರಿಂದ ಗುಜರಾತಿಗಳಿಗೆ ಏನು ಲಾಭವಾಗುತ್ತದೆ ಎಂಬುದನ್ನು ನಾವು ಈಗ ಪರಿಶೀಲಿಸೋಣ. +ಮುಂಬಯಿ ರಾಜ್ಯದಲ್ಲಿ ಅವರ ಜನಸಂಖ್ಯೆ ಕೇವಲ ಶೇಕಡ ೧೦. +ಮುಂಬಯಿ ರಾಜ್ಯದ ವಿಧಾನ ಸಭೆಯಲ್ಲಿ ಅವರು ಎಷ್ಟು ಸ್ಥಾನವನ್ನು ಪಡೆಯಬಲ್ಲರು? +ಶೇಕಡ ೧೦ ಕೂಡ ಸಾಧ್ಯವಿಲ್ಲ. +ಶೇಕಡ ೯೦ ಪ್ರತಿನಿಧಿಗಳ ಎರುದ್ಧ ಕೇವಲ ಶೇಕಡ ೧೦ ಮಂದಿ ಪ್ರತಿನಿಧಿಗಳು ತಮ್ಮ ಆಶ್ರಿತರನ್ನು ಅದು ಹೇಗೆ ಕಾಪಾಡಬಲ್ಲರು? +ಮಹಾರಾಷ್ಟ್ರೀಯರು ಮತ್ತು ಗುಜರಾತಿಗಳ ನಡುವೆ ಪರಸ್ಪರ ವಿರೋಧ ಭಾವನೆಗಳು, ಹಿಂದೆಂದೂಇಲ್ಲದಷ್ಟು ತೀವ್ರತರವಾಗಿ ಈಗ ಏರತೊಡಗುತ್ತವೆ ಎಂಬುದನ್ನು ನೆನಪಿಡಬೇಕು. +ಮಹಾರಾಷ್ಟ್ರೀಯರು ಗುಜರಾತಿ ಉಮೇದುವಾರನಿಗೆ ಮತ ಕೊಡುವುದಿಲ್ಲ. +ಅಂತೆಯೇ ಗುಜರಾತಿಯು ಮಹಾರಾಷ್ಟ್ರೀಯ ಉಮೇದುವಾರನಿಗೆ ಮತ ನೀಡುವುದಿಲ್ಲ. +ತಮ್ಮ ಹಣದಿಂದ ಗುಜರಾತಿಗಳು ಮಹಾರಾಷ್ಟ್ರದ ನೆಲವನ್ನು ಕೃಷಿ ಮಾಡಲು ಇಲ್ಲಿಯವರೆಗೆ ಸಮರ್ಥರಾಗಿದ್ದರು. +ಆದರೆ ಆತ್ಮಾಭಿಮಾನವು ಕೆರಳಿದಾಗ ಹಣವು ನೆರವಾಗಲಾರದು. +ನಗರಾಡಳಿತದಲ್ಲಿ ಕೇವಲ ಅಲ್ಪ ಭಾಗವನ್ನು ಪಡೆಯುವುದಕ್ಕಿಂತ ಸದ್ಭಾವವನ್ನು ಗಳಿಸಿಕೊಳ್ಳುವುದು ತಮಗೆ ಉತ್ತಮ ರಕ್ಷಣೆಯಲ್ಲವೇ ಎಂಬುದನ್ನು ಗುಜರಾತಿಗಳು ಮನಗಾಣಬೇಕು. +ಮಹಾರಾಷ್ಟ್ರ ವಾದವು ಉಕ್ಕಿನಷ್ಟೇ ಗಟ್ಟಿಯಾದುದು. +ಹೀಗಿದ್ದರೂ ಪ್ರತಿಪಕ್ಷದ ಕಡೆಯೂ ಕೆಲವು ಅಂಶಗಳಿವೆ. +ತಮ್ಮ ಕೋಪ ತಾಪದಲ್ಲಿ, ಆ ಅಂಶಗಳನ್ನು ಪರಿಗಣಿಸುವುದರಲ್ಲಿ ಮಹಾರಾಷ್ಟ್ರೀಯರು ವಿಫಲರಾಗಬಾರದು. +ಮುಂಬಯಿ ಮಹಾರಾಷ್ಟ್ರದಲ್ಲಿಯೇ ಇರಬೇಕೆಂಬುದು ಮಹಾರಾಷ್ಟೀಯರ ಅಪೇಕ್ಷೆ ಸರಿಯಷ್ಟೆ. +ಆದರೆ ಅವರು ಪರಿಗಣಿಸಲೇಬೇಕಾದ ಪ್ರಶ್ನೆಯೆಂದರೆ: ತಮಗೆ ಏನು ಬೇಕು? +ಅಭಿವೃದ್ಧಿ ಶೀಲ ಮುಂಬಯಿಯೋ ಅಥವಾ ಅವನತಿ ಹೊಂದುತ್ತಿರುವ ಮುಂಬಯಿಯೋ? +ಮಹಾರಾಷ್ಟದ ಆಶ್ರಯದಲ್ಲಿ ಮುಂಬಯಿಯು ಅಭಿವೃದ್ಧಿ ಹೊಂದಬಲ್ಲದೇ? +ಬೇರೆ ಮಾತುಗಳಲ್ಲಿ ಹೇಳುವುದಾದರೆ ನಗರದಲ್ಲಿ ಬೆಳೆಯುತ್ತಿರುವ ವ್ಯಾಪಾರೋದ್ಯಮಗಳಿಗೆ ಅಗತ್ಯವಿರುವ ಬಂಡವಾಳವನ್ನು ಮಹಾರಾಷ್ಟೀಯರು ಒದಗಿಸಬಲ್ಲರೇ? +ಇಲ್ಲ ಎಂಬುದಾಗಿ ಮಹಾರಾಷ್ಟೀಯರು ಒಪ್ಪಿಗೆ ಉತ್ತರ ಕೊಡಬೇಕಾಗುತ್ತದೆ. +ಬಂಡವಾಳದ ಅಗತ್ಯ ಪೂರೈಸಲು ಕೆಲವು ವರ್ಷಗಳು ಅನಂತರ ಮಹಾರಾಷ್ಟೀಯರು ಸಮರ್ಥರಾಗಬಹುದು. +ಆದರೆ ಈಗ ಮಾತ್ರ ಅದು ಖಂಡಿತ ಸಾಧ್ಯವಿಲ್ಲ. +ಬಂಡವಾಳದ ಹಾರುವಿಕೆಯಿಂದಾಗಲೀ ಅಥವಾ ವ್ಯಾಪಾರೀ ಕುಟುಂಬಗಳನ್ನು ಹೊರಹೊರಡಿಸುವುದರಿಂದಾಗಲೀ, ಮುಂಬಯಿಯಲ್ಲಿ ವಾಸಿಸುತ್ತಿರುವ ಮಹಾರಾಷ್ಟೀಯರ ಜೀವನ ಮಟ್ಟದ ಮೇಲೆ ಏನು ಪರಿಣಾಮವಾಗಬಹುದು? +ಎಂಬುದು ಎರಡನೆಯ ಅಂಶ. +ತಮ್ಮ ಅಭಿಮಾನಕ್ಕೆ ಎಷ್ಟೇ ಧಕ್ಕೆಯುಂಟಾಗುವುದಾದರೂ, ತಮ್ಮದು ಗುಮಾಸ್ತರ ಹಾಗೂ ಕೂಲಿಗಳ ಒಂದು ಜನಾಂಗವೆಂಬುದನ್ನು ಮಹಾರಾಷ್ಟೀಯರು ಮರೆಯಕೂಡದು. +ಅಳಿಯುತ್ತಿರುವ ನಗರದಲ್ಲಿ ಅವರು ಅದೆಂತಹ ಉದ್ಯೋಗವನ್ನು ಪಡೆಯಬಲ್ಲರು? +ಮುಂಬಯಿಯ ಪ್ರಶ್ನೆಯನ್ನು ಮಹಾರಾಷ್ಟೀಯರು ಈ ದೃಷ್ಟಿಕೋನದಿಂದಲೂ ಪರಿಶೀಲಿಸಬೇಕು. +ಮುಂಬಯಿಯನ್ನು ಪ್ರತ್ಯೇಕ ರಾಜ್ಯವನ್ನಾಗಿ ಏಕೆ ಮಾಡಬೇಕೆಂಬುದಕ್ಕೆ ಮತ್ತೊಂದು ಕಾರಣವೂ ಉಂಟು. +ಹಳ್ಳಿಗಳಲ್ಲಿ ವಾಸಿಸುತ್ತಿರುವ ಅಲ್ಪ ಸಂಖ್ಯಾತರೂ ಮತ್ತು ಪರಿಶಿಷ್ಟ ಜಾತಿಯವರೂ ಬಹುಸಂಖ್ಯಾಸಮಾಜದ ಸದಸ್ಯರ ದೌರ್ಜನ್ಯ, ದಮನ ಮತ್ತು ಕೊಲೆಗಡುಕ ಕೃತ್ಯಗಳಿಗೆ ತುತ್ತಾಗುತ್ತಾರೆ. +ಆದುದರಿಂದ ಅಲ್ಪ ಸಂಖ್ಯಾಕರಿಗೆ ಒಂದು ಆಶ್ರಯದ ಅಗತ್ಯವಿದೆ. +ಆಶ್ರಯ ಪಡೆಯಲು ಅನುಕೂಲವಾಗುವ ಸ್ಥಾನದಲ್ಲಿ,ಬಹು ಸಂಖ್ಯಾತರ ದೌರ್ಜನ್ಯ ಕೃತ್ಯದಿಂದ ಅವರು ಪಾರಾಗಬಹುದು. +ಮುಂಬಯಿಯನ್ನೊಳಗೊಂಡ ಸಂಯುಕ್ತ ಮಹಾರಾಷ್ಟ್ರವಿರುವುದಾದರೆ, ಸುರಕ್ಷತೆಗಾಗಿ ಅವರು ಎಲ್ಲಿಗೆ ಹೋಗುತ್ತಾರೆ? +ಶ್ರೀ ಗಾಂಧಿಯನ್ನು ಗೋಡ್ಸೆ ಕೊಂದಾಗ, ಹಳ್ಳಿಗಳಲ್ಲಿ ವಾಸಿಸುತ್ತಿದ್ದ ಬ್ರಾಹ್ಮಣರು, ಮಾರವಾಡಿಗಳು ಮತ್ತು ಗುಜರಾತಿಗಳ ಮೇಲೆ ದೌರ್ಜನ್ಯ ಕೃತ್ಯಗಳನ್ನು ನಡೆಸಲಾಯಿತು. +ಒಂದು ಕಾಲದಲ್ಲಿ ಹಳ್ಳಿಗಳಲ್ಲಿ ವಾಸಿಸುತ್ತಿದ್ದ ಬ್ರಾಹ್ಮಣರು,ಮಾರವಾಡಿಗಳು ಮತ್ತು ಗುಜರಾತಿಗಳೆಲ್ಲರೂ ಆಗ ಓಡಿಹೋದರು. +ಈಗ ಪಟ್ಟಣಗಳಲ್ಲಿ ವಾಸಿಸುತ್ತಿರುವ ಅವರು ತಮ್ಮ ಹಿಂದಿನ ಅನುಭವಗಳನ್ನು ಮರೆತು, ಸುರಕ್ಷಿತ ಬಂದರು ಪಟ್ಟಣವನ್ನು ಸೇರಿದವರ ರೀತಿ,ಸಂಯುಕ್ತ ಮಹಾರಾಷ್ಟ್ರಕ್ಕಾಗಿ ಒತ್ತಾಯಿಸುತ್ತಿದ್ದಾರೆ. +ಕಾಂಗ್ರೆಸ್‌ ವರಿಷ್ಠ ಮಂಡಳಿಯ ನಿರ್ಧಾರವನ್ನು ತಾತ್ಪೂರ್ತಿಕವಾಗಿ ಒಪ್ಪಿಕೊಂಡರೆ ಮಹಾರಾಷ್ಟ್ರೀಯರು ಒಳ್ಳೆಯದನ್ನೇ ಮಾಡಿದಂತಾಗುತ್ತದೆ ಎಂದು ನನಗೆ ತೋರುತ್ತದೆ. +ಮುಂಬಯಿಯನ್ನು ಕಳೆದುಕೊಳ್ಳುವ ಭಯವನ್ನು ಮರಾಠಿಗರು ಹೊಂದಿರುವ ಅಗತ್ಯವಿಲ್ಲ. +ಮುಂಬಯಿಯನ್ನು ಮರಾಠಿಗರಿಂದ ಯಾರೂ ಕಿತ್ತುಕೊಳ್ಳಲಾರರು. +ಮುಂಬಯಿಯನ್ನು ಒಂದು ಪ್ರತ್ಯೇಕ ರಾಜ್ಯವನ್ನಾಗಿ ಮಾಡಲು ಇರುವ ವಿರೋಧಕ್ಕೆ ನಿಜವಾದ ಕಾರಣವೆಂದರೆ, "ಬೊಂಬಾಯಿ" ಎಂದು ಹೆಸರು. +ಅದು ಮಹಾರಾಷ್ಟ್ರದ ಒಂದು ಭಾಗವೆಂದು ಅರ್ಥವನ್ನು ಆ ಹೆಸರು ಒಳಗೊಂಡಿಲ್ಲ. +ಈ ವಿರೋಧವನ್ನು ಹೋಗಲಾಡಿಸಲು ನನ್ನ ಸಲಹೆಯೆಂದರೆ, ನವ ಮುಂಬಯಿ ರಾಜ್ಯಕ್ಕೆ ಹೊಸ ಹೆಸರಿಡುವುದು. +ಆ ಹೆಸರಿನಲ್ಲಿಯೇ ಮಹಾರಾಷ್ಟ್ರವೆಂಬ ಪದ ಅಳವಟ್ಟಿರಬೇಕು. +ಈ ಸಲಹೆಯ ಪ್ರಕಾರ ಮುಂಬಯಿಯನ್ನು ಒಂದು ಪ್ರತ್ಯೇಕ ರಾಜ್ಯವನ್ನಾಗಿ ಸ್ಥಾಪಿಸುವ ಬದಲು,ಮಹಾರಾಷ್ಟ್ರವನ್ನು (೧) ಮಹಾರಾಷ್ಟ್ರ ನಗರ ರಾಜ್ಯ (ಮುಂಬಯಿ ನಗರ), (೨) ಪಶ್ಚಿಮ ಮಹಾರಾಷ್ಟ್ರ(೩) ಮಧ್ಯ ಮಹಾರಾಷ್ಟ್ರ ಮತ್ತು (೪) ಪೂರ್ವ ಮಹಾರಾಷ್ಟ್ರ ಎಂಬುದಾಗಿ ನಾಲ್ಕು ರಾಜ್ಯಗಳನ್ನಾಗಿ ವಿಂಗಡಿಸಿದರೆ, ಪ್ರತ್ಯೇಕ ಮುಂಬಯಿ ರಾಜ್ಯವನ್ನು ಸ್ಥಾಪಿಸಲು ಯಾವ ವಿರೋಧ ಬರಬಲ್ಲದು? +ಮುಂಬಯಿಯನ್ನು ಪ್ರತ್ಯೇಕಿಸುವುದು ಇದರಲ್ಲಿ ಅಡಕವಾಗಿದೆ. +ನಗರದ ಹೆಸರಿನಲ್ಲಿ ಈ ರೀತಿ ಬದಲಾವಣೆ ಮಾಡುವುದರಿಂದ, ಈ ಯೋಜನೆಯು ಮುಂಬಯಿಯನ್ನು ಮಹಾರಾಷ್ಟ್ರದಿಂದ ಪ್ರತ್ಯೇಕಿಸುತ್ತದೆ ಎಂಬ ಆಧಾರದ ಮೇಲೆ ಮುಂಬಯಿಯನ್ನು ಪ್ರತ್ಯೇಕ ನಗರ ರಾಜ್ಯವನ್ನಾಗಿ ಸ್ಥಾಪಿಸುವುದಕ್ಕೆ ಯಾವ ಮಹಾರಾಷ್ಟೀಯನು ವಿರೋಧಿಸುತ್ತಾನೆ? +ಎಂಬುದನ್ನು ನಾನು ತಿಳಿಯಲಿಚ್ಛಿಸುತ್ತೇನೆ. +ಮುಂಬಯಿಯನ್ನು ಪ್ರತ್ಯೇಕ ರಾಜ್ಯವನ್ನಾಗಿ ಮಾಡಬೇಕೆಂದು ಹೇಳಿದಾಗ, ಮಹಾರಾಷ್ಟ್ರವನ್ನು ನಾಲ್ಕು ರಾಜ್ಯಗಳನ್ನಾಗಿ ಮಾಡಬೇಕೆಂದು ಹೇಳಿದಂತಾಗುತ್ತದೆ ಅಷ್ಟೆ . +ಮಹಾರಾಷ್ಟ್ರವನ್ನು ಎರಡು ಅಥವಾ ಮೂರು ರಾಜ್ಯಗಳನ್ನಾಗಿ ವಿಂಗಡಿಸುವುದಕ್ಕೆ ವಿರೋಧವಿಲ್ಲದಿದ್ದಲ್ಲಿ, ಅದನ್ನು ನಾಲ್ಕು ರಾಜ್ಯಗಳಾಗಿ ವಿಂಗಡಿಸುವುದಕ್ಕೆ ಯಾವ ವಿರೋಧವಿರಬಲ್ಲದು? +ನನಗೆ ಒಂದು ಕಾಣಿಸುತ್ತಿಲ್ಲ. +ಭಾಷಾ ಸಾಮ್ಯದ ಕಾರಣಕ್ಕಾಗಿ, ಕಲ್ಕತ್ತವನ್ನು ಬಂಗಾಳ ನಗರ ರಾಜ್ಯವೆಂದೂ ಮತ್ತು ಮದ್ರಾಸನ್ನು ತಮಿಳು ನಗರರಾಜ್ಯವೆಂದೂ ಕರೆಯಬಹುದೆಂದು ನನ್ನ ಸಲಹೆ. +ಮಹಾರಾಷ್ಟ್ರೀಯರು ಮತ್ತು ಗುಜರಾತಿಗಳ ನಡುವಣ ತಿಕ್ಕಾಟವನ್ನು ಕಡಿಮೆ ಮಾಡಲು ನಾನು ಮುಂದಿಡುವ ಸಲಹೆಯಿದೊಂದು. +ಮಹಾರಾಷ್ಟ್ರ ನಗರ ರಾಜ್ಯ ಒಂದು ಹೆಚ್ಚಿನ ರಾಜ್ಯವಷ್ಟೆ. +ಮುಂಬಯಿಯೂ ಸೇರಿದಂತೆ ಸಂಯುಕ್ತ ಮಹಾರಾಷ್ಟ್ರವನ್ನು ಬಯಸುತ್ತಿರುವವರು, ಮಹಾರಾಷ್ಟ್ರಕ್ಕೆ ಈ ಹೆಚ್ಚಿನ ಲಾಭವನ್ನು ಪಡೆಯುವ ಭರವಸೆ ಹೊಂದಿದ್ದಾರೆ. +ನಗರ ರಾಜ್ಯದ ಹೆಚ್ಚಿನ ಕಂದಾಯಕ್ಕೆ ಕಾರಣವೆಂದರೆ (೧) ಆಸ್ತಿಕರ ಮತ್ತು (೨) ವಿದ್ಯುತ್‌ ಕರ. +ಒಂದು ಪಕ್ಷ ಮುಂಬಯಿ ಪ್ರತ್ಯೇಕ ರಾಜ್ಯವಾಗುವುದಾದರೆ, ಈ ಕಂದಾಯವನ್ನು ಮಹಾರಾಷ್ಟ್ರವು ಸ್ವಾಧೀನಪಡಿಸಿಕೊಳ್ಳಬಲ್ಲದೇ? +ಮುಂಬಯಿ ನಗರ ರಾಜ್ಯದ ಆಸ್ತಿಕರದಿಂದ, ಆಸ್ತಿಕರದ ಉತ್ಪನ್ನವನ್ನು ಬೇರೆಡೆಗೆ ಒಯ್ಯಲು ಏನೂ ಮಾಡಲು ಸಾಧ್ಯವಿಲ್ಲ. +ಅದು ಸ್ಥಳೀಯ ಆಸ್ತಿಯ ಮೇಲಿನ ಸ್ಥಳೀಯ ಕರ. +ಒಂದು ರಾಜ್ಯದಲ್ಲಿರುವ ಆಸ್ತಿಯ ಕರಭಾರದಿಂದ ಬರುವ ಉತ್ಪನ್ನ ಈ ರಾಜ್ಯದ ಸ್ಪತ್ತು. +ಆದರೆ ವಿದ್ಯುತ್‌ ಕರಕ್ಕೆ ಸಂಬಂಧಿಸಿದ ಪರಿಸ್ಥಿತಿಯೇ ಬೇರೆ. +ಗುಜರಾತ್‌ ಮತ್ತು ಮಹಾರಾಷ್ಟ್ರಗಳು ಬೇರೆಯಾಗಲೇ ಬೇಕು. +ಅವು ಬೇರೆಯಾದಾಗ, ತನ್ನ ರಾಜ್ಯದಲ್ಲಿಯೇ ಉತ್ಪಾದನೆಯಾಗಿ ಅಲ್ಲಿಯೇ ಬಳಸಲಾಗುವ ವಿದ್ಯುತ್ತಿನಿಂದ ಬರುವ ಕಂದಾಯದ ಮೇಲೆ ಗುಜರಾತ್‌ ತನ್ನ ಹಕ್ಕು ಸ್ಥಾಪಿಸುತ್ತದೆ. +ಹಾಗೆಯೇ ಮಹಾರಾಷ್ಟ್ರವು ಕೂಡ ತನ್ನಲ್ಲಿಯೇ ಉತ್ಪಾದನೆಯಾಗಿ,ಬಳಸಲಾಗುವ ವಿದ್ಯುತ್ತಿನಿಂದ ಬರುವ ಕಂದಾಯದ ಮೇಲೆ ತನ್ನ ಹಕ್ಕು ಸ್ಥಾಪಿಸುತ್ತದೆ. +ಮುಂಬಯಿ ನಗರವೂ ಕೂಡ ಒಂದು ರಾಜ್ಯವಾದಾಗ, ಅದೇ ರೀತಿ ಮಾಡುತ್ತದೆ. +ಆದರೆ ಮುಂಬಯಿಯು ಅದೇರೀತಿ ಮಾಡಲು ಅಂದರೆ ಕಂದಾಯವನ್ನು ತನಗಾಗಿಯೇ ಸ್ವಾಧೀನಪಡಿಸಿಕೊಳ್ಳಲು, ಅದನ್ನು ಬಿಡಬಹುದೇ? +ಆ ನಗರದ ಹೊರಗೆ ಅಂದರೆ ಮಹಾರಾಷ್ಟ್ರದಲ್ಲಿ ಆ ವಿದ್ಯುತ್ತು ಉತ್ಪತ್ತಿಯಾಗುತ್ತದೆ. +ಆದ್ದರಿಂದ, ವಿದ್ಯುತ್ತಿನಿಂದ ಬಂದ ಎಲ್ಲಾ ಕಂದಾಯವನ್ನೂ ಸ್ವಾಧೀನ ಪಡಿಸಿಕೊಳ್ಳಲು ಹೊಸ ಮುಂಬಯಿ ನಗರ ರಾಜ್ಯಕ್ಕೆ ಹಕ್ಕಿಲ್ಲ. +ರಾಜ್ಯ ಹಣಕಾಸಿನ ವಿದ್ಯಾರ್ಥಿಗಳಿಗೆಲ್ಲಾ ಚೆನ್ನಾಗಿ ತಿಳಿದಿರುವಂತೆ, ಅಂತಹ ಸಂದರ್ಭದಲ್ಲಿ ಸಂಪನ್ಮೂಲಗಳ ವಿಭೇದನ ಹಾಗೂ ಉತ್ಪನ್ನದ ಹಂಚಿಕೆ ತತ್ವವನ್ನು ಅನ್ವಯಿಸುವುದು ಸೂಕ್ತ ವಿಧಾನ. +ಇನ್ನೂ ಹೆಚ್ಚು ಸ್ಪಷ್ಟವಾಗಿ ಹೇಳಬೇಕೆಂದರೆ, ವಿದ್ಯುತ್‌ಕರ ಹೇರಿಕೆಯನ್ನು ಕೇಂದ್ರವು ವಹಿಸಿಕೊಂಡು,ಅದರಿಂದ ಬಂದ ಉತ್ಪನ್ನವನ್ನು ಮಹಾರಾಷ್ಟ್ರದ ನಾಲ್ಕು ರಾಜ್ಯಗಳಾದ - (೧) ಮುಂಬಯಿ, (೨) ಪಶ್ಚಿಮಮಹಾರಾಷ್ಟ್ರ (೩) ಮಧ್ಯ ಮಹಾರಾಷ್ಟ್ರ ಮತ್ತು (೪) ಪೂರ್ವ ಮಹಾರಾಷ್ಟ್ರಗಳಲ್ಲಿ ಅವುಗಳ ಅಗತ್ಯಕ್ಕನುಗುಣವಾಗಿ ಹಂಚಲಿ,. +ಮುಂಬಯಿನ ಪ್ರತ್ಯೇಕತೆಯಿಂದಾಗಿ ಉಳಿದ ಮೂರು ಮಹಾರಾಷ್ಟ್ರಗಳಲ್ಲಿ ಉಂಟಾಗಬಹುದಾದ ಹಣಕಾಸಿನ ಒತ್ತಡವನ್ನು ಕಡಿಮೆ ಮಾಡಿದಂತಾಗುತ್ತದೆ. +ಸಂಯುಕ್ತವಾಗಿರುವುದೋ ಅಥವಾ ಪ್ರತ್ಯೇಕವಾಗಿರುವುದೋ? +ಮುಂಬಯಿಗೆ ಒಂದು ಹೊಸ ವಿಸ್ತೀರ್ಣವನ್ನು ನಿಗದಿಮಾಡಿ ಅದನ್ನು ಪ್ರತ್ಯೇಕ ನಗರ ರಾಜ್ಯವನ್ನಾಗಿ ಮಾಡಬೇಕೆಂದು ನಾನು ಹೇಳಿದ್ದೇನೆ. +ಉಳಿದ ಮಹಾರಾಷ್ಟ್ರದ ಬಗ್ಗೆ ಹೇಗೆ ವ್ಯವಹರಿಸಬೇಕೆಂಬ ಪ್ರಶ್ನೆ ಈಗ ನಮ್ಮ ಮುಂದಿದೆ. +ಉಳಿದ ಮಹಾರಾಷ್ಟ್ರವನ್ನು ರಾಜ್ಯಗಳಾಗಿ ವಿಂಗಡಿಸಬೇಕೆಂದು ನಾನು ಸೂಚಿಸಿದ್ದೇನೆ. +ಬಹು ಪ್ರಾಚೀನ ಕಾಲದಿಂದಲೂ ಮಹಾರಾಷ್ಟ್ರವು ಮೂರು ರಾಜ್ಯಗಳಾಗಿಯೇ ವಿಭೇದನಗೊಂಡಿದೆ. +ಅಶೋಕನ ಕಾಲದಲ್ಲಿ, ಮೊಟ್ಟ ಮೊದಲಿಗೆ ಮಹಾರಾಷ್ಟ್ರವು ಇತಿಹಾಸದಲ್ಲಿ ಕಾಣಿಸಿಕೊಳ್ಳುತ್ತದೆ. +ಬೌದ್ಧ ಧರ್ಮದ ಪ್ರಚಾರಕ್ಕಾಗಿ, ಭಾರತದ ವಿವಿಧ ಭಾಗಗಳಿಗೆ ಅಶೋಕನು ಕಳುಹಿಸಿದ ಧರ್ಮ ಪ್ರಚಾರಕರ ಬಗೆಗೆ ಹೇಳುವಾಗ, "ಮಹಾವಂಶ" ದಲ್ಲಿ ಮಹಾರಾಷ್ಟದ ಹೆಸರು ಬರುತ್ತದೆ. +ಆದರೆ ಅನಂತರ'ತ್ರೈಮಹಾರಾಷ್ಟ್ರಿಕಾ' ಅಥವಾ ಮೂರು ಮಹಾರಾಷ್ಟಗಳು ಎಂಬುದಾಗಿ ಪಾಳಿ ಸಾಹಿತ್ಯದಲ್ಲಿ ಪ್ರಸ್ತಾಪಿಸಲಾಗಿದೆ. +ಬಹು ಪ್ರಾಚೀನ ಕಾಲದಿಂದಲೂ ಮೂರು ಮಹಾರಾಷ್ಟ್ರಗಳಿದ್ದವೆಂಬುದೇ ಇದರರ್ಥ. +ಆದ್ದರಿಂದ ನನ್ನ ಸಲಹೆಯು ಹೊಸದೇನಲ್ಲ. +ಕೋಷ್ಟಕದಲ್ಲಿ ತೋರಿಸಿರುವಂತೆ, ಜನಸಂಖ್ಯೆ, ವಿಸ್ತೀರ್ಣ ಹಾಗೂ ಕಂದಾಯಗಳ ಹಂಚಿಕೆಯಿರುತ್ತದೆ. +ಮೂರರಲ್ಲಿ ಪ್ರತಿಯೊಂದು ವಿಭಾಗದ ವಿಸ್ತೀರ್ಣ ಮತ್ತು ಮೇರೆಗಳನ್ನು ಜೊತೆಗಿರುವ ಭೂಪಟ ತೋರಿಸುತ್ತದೆ. +ವಿಸ್ತೀರ್ಣ ಮತ್ತು ಜನಸಂಖ್ಯೆಗಳ ದೃಷ್ಟಿಯಿ೦ದ, ಮೂರು ವಿಭಾಗಗಳಿಗೆ ವಿರುದ್ಧವಾಗಿ ಆಕ್ಷೇಪಣೆ ಎತ್ತಲು ಈಗಂತೂ ಯಾವ ಅವಕಾಶವೂ ಇಲ್ಲ. +ಬಹಳ ಹಿಂದಿನ ಕಾಲದಿಂದಲೂ ಅವುಗಳನ್ನು "ತ್ರೈಮಹಾರಾಷ್ಟ್ರಿಕಾ" ಎಂದೇ ಕರೆಯಲಾಗುತ್ತಿತ್ತು. +ಈ ವಿಭೇದನೆಯಿಂದ ಭಾಷಾ ತತ್ತ್ವಕ್ಕೆ ಅಪಚಾರವಾಗುವುದಿಲ್ಲ. +ಎಲ್ಲಾ ಮೂರು ಮಹಾರಾಷ್ಟ್ರಗಳಲ್ಲಿಯೂ ಒಂದೇ ಭಾಷೆಯಿದ್ದರೆ, ವಾಸ್ತವವಾಗಿ, ಮರಾಠಿ ಭಾಷೆಯ ಬೆಳವಣಿಗೆಗೆ, ಅದು ಸಮಂಜಸವೆನಿಸಿದರೆ,ಅನುಕೂಲವಾಗುತ್ತದೆ. +ಅವುಗಳ ಉಳಿವಿನ ಪ್ರಶ್ನೆಯನ್ನು ನಾನು ಮುಂದೆ ಪರಿಶೀಲಿಸುತ್ತೇನೆ. +ಒಂದು ವಿಶೇಷ ಅಧ್ಯಾಯದಲ್ಲಿ ಪ್ರತ್ಯೇಕವಾಗಿ ಈ ಪ್ರಶ್ನೆಯನ್ನು ಪರಿಶೀಲಿಸಲು ನಾನು ಯೋಚಿಸಿದ್ದೇನೆ. +ಅಂದು ಮುಂಬಯಿ ಹೆಸರೇ ಗೊತ್ತಿರಲಿಲ್ಲ. +ಹಾಗಿಲ್ಲದಿದ್ದಲ್ಲಿ ಅದು ಮಹಾರಾಷ್ಟ್ರದ ನಾಲ್ಕನೇ ಭಾಗವಾಗಿರುತ್ತಿತ್ತು. +ಉಳಿದ ಮಹಾರಾಷ್ಟ್ರಗಳಲ್ಲಿ, ನಾನು ಹೇಳುವ ಪೂರ್ವ ಮಹಾರಾಷ್ಟ್ರವು ಈಗಾಗಲೇ ಪ್ರತ್ಯೇಕ ರಾಜ್ಯವಾಗಿದೆ. +ಅದು ಹಾಗೇ ಪ್ರತ್ಯೇಕವಾಗಿರಲು ಬಿಡುವುದೇ ಅಗತ್ಯ. +ಅದರಲ್ಲಿ ಈಗಾಗಲೇ ಚೆನ್ನಾಗಿ ನೆಲೆನಿಂತ ಆಡಳಿತ, ಕಂದಾಯ ಮತ್ತು ಕಾನೂನು ವ್ಯವಸ್ಥೆಗಳು ಇವೆ. +ಹಿಂದಿ ಮಾತನಾಡುವವರ ಜಾಲಗಳಿಂದ ಅದು ಈಗಾಗಲೇ ಪ್ರತ್ಯೇಕಗೊಂಡಿದೆ. +ಈಗಿನ ಮುಂಬಯಿ ರಾಜ್ಯದ ಭಾಗವಾಗಿರುವ ಮಹಾರಾಷ್ಟ್ರ ಮತ್ತು ಈಗಿನ ಹೈದರಾಬಾದ್ ರಾಜ್ಯದ ಭಾಗವಾಗಿರುವ ಮಹಾರಾಷ್ಟ್ರ ಇವುಗಳನ್ನು ಹೇಗೆ ವಿಭಾಗಿಸುವುದು ಎಂಬುದೇ ಉಳಿದಿರುವ ಏಕೈಕ ಸಮಸ್ಯೆ. +ಇವೆರಡನ್ನೂ ಕೂಡಿಸಿ, ನಾನು ಈಗಾಗಲೇ ಹೇಳಿದ ಪೂರ್ವ ಮಹಾರಾಷ್ಟ್ರದೊಡನೆ ಸೇರಿಸುವ ಬದಲು ಮುಂಬಯಿನ ಮಹಾರಾಷ್ಟ್ರ ಭಾಗವನ್ನು ಮತ್ತು ಮರಾಠವಾಡವನ್ನು ಎರಡು ಸಮನಾದ ರಾಜ್ಯಗಳನ್ನಾಗಿ ಏಕೆ ವಿಭಾಗಿಸಬಾರದು? +ಇದು ನನ್ನ ಹಂಚಿಕೆ. +ಮುಂಬಯಿ ರಾಜ್ಯದ ಮಹಾರಾಷ್ಟ್ರ ಭಾಗದ ಆರುಜಿಲ್ಲೆಗಳನ್ನು ವರ್ಗಾಯಿಸಿ ಅವುಗಳನ್ನು ಮರಾಠಾವಾಡದ ಭಾಗವಾಗಿ ನಾನು ಮಾಡುತ್ತೇನೆ. +ಮೂರು ಮಹಾರಾಷ್ಟ್ರಗಳ ವಿಸ್ತೀರ್ಣ ಮತ್ತು ಜನಸಂಖ್ಯೆಯ ವಿಭಜನೆಯನ್ನು ಕೆಳಗೆ ತೋರಿಸಲಾಗಿದೆ. +ಮೂರು ಮಹಾರಾಷ್ಟ್ರ ರಾಜ್ಯಗಳ ಜನಸಂಖ್ಯೆ, ವಿಸ್ತೀರ್ಣ ಮತ್ತು ಕಂದಾಯಗಳು ಬಹುಮಟ್ಟಿಗೆ ಈ ಕೆಳಕಂಡಂತಿರುತ್ತವೆ. +ನನ್ನ ಯೋಜನೆಯ ಸಮರ್ಥನೆಗಾಗಿ ನಾನು ಕಂಡುಕೊಂಡ ಕಾರಣಗಳನ್ನು ಹೇಳಲು ಈಗ ತೊಡಗುತ್ತೇನೆ. +ಮಹಾರಾಷ್ಟ್ರವು ಎಂದೆಂದೂ ಮೂರು ಭಾಗವಾಗಿ ವಿಭಜನೆಗೊಂಡಿತ್ತು ಎಂದು ನಾನು ಹೇಳಿದ್ದೇನೆ. +ಇದು ಒಂದು ಐತಿಹಾಸಿಕ ವಾದ, ಸಂಯುಕ್ತ ಮಹಾರಾಷ್ಟ್ರವೆಂದು ಹೇಳಲಾಗುವ ಕ್ಷೇತ್ರದ, ಸಂಪ್ರದಾಯ,ಜೀವನವಿಧಾನ ಮತ್ತು ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಗತಿ ಒಂದೇ ಅಲ್ಲವೆಂಬುದನ್ನು ಕೊನೆಯ ಪಕ್ಷ ಇದು ತೋರಿಸುತ್ತದೆ. +ಸಂಯುಕ್ತ ಮಹಾರಾಷ್ಟ್ರವಾಗಬೇಕೆಂದು ಆತುರ ತೋರಿಸುತ್ತಿರುವವರು, ಇದನ್ನು ತೀವ್ರವಾಗಿ ಪರಿಗಣಿಸಬಾರದು. +ಆದರೆ ಇಂದಿನ ಪರಿಸ್ಥಿತಿಯಿಂದ ಉದ್ಭವಿಸುವ ಇತರ ವಾದಗಳೂ ಇವೆ. +ಅವುಗಳನ್ನು ಕಡೆಗಣಿಸಲಾಗುವುದಿಲ್ಲ. +ಕೆಲವನ್ನು ಇಲ್ಲಿ ಪ್ರಸ್ತಾಪಿಸುತ್ತೇನೆ. +ಸಂಯುಕ್ತ ಮಹಾರಾಷ್ಟ್ರದಂತಹ ಬೃಹತ್‌ ರಾಜ್ಯದ ಆಡಳಿತವನ್ನು ಒಂದೇ ಒಂದು ಸರ್ಕಾರವು ನಡೆಸಲಾರದೆಂಬುದು ನನ್ನ ಮೊದಲ ವಾದ. +ಮರಾಠಿ ಮಾತನಾಡುವ ಕ್ಷೇತ್ರದಲ್ಲಿರುವ ಒಟ್ಟು ಜನಸಂಖ್ಯೆ ೩,೩೦,೮೩,೪೯೦. +ಮರಾಠಿ ಮಾತನಾಡುತ್ತಿರುವ ಜನರು ವಾಸಿಸುತ್ತಿರುವ ಒಟ್ಟು ವಿಸ್ತೀರ್ಣ ೪,೭೪,೫೧೪ ಚ. ಮೈಲಿಗಳು. +ಇದು ಎಸ್ತಾರವಾದ ಕ್ಷೇತ್ರವಾದುದರಿಂದ, ಒಂದೇ ರಾಜ್ಯದ ಮೂಲಕ ಸಮರ್ಥ ಆಡಳಿತ ನಡೆಸುವುದು ಅಸಾಧ್ಯ. +ಸಂಯುಕ್ತ ಮಹಾರಾಷ್ಟ್ರದ ಬಗ್ಗೆ ಮಾತನಾಡುತ್ತಿರುವ ಮಹಾರಾಷ್ಟ್ರೀಯರು, ತಮ್ಮ ಮಹಾರಾಷ್ಟ್ರದ ವಿಸ್ತೀರ್ಣ ಹಾಗೂ ಜನಸಂಖ್ಯೆಯ ಹರವು ಎಷ್ಟೆಂಬ ಕಲ್ಪನೆ ಹೊಂದಿಲ್ಲ. +ಆದರೂ ಏಕೈಕ ಮಹಾರಾಷ್ಟ್ರ ರಾಜ್ಯ ಏಕೆಬೇಕು? +ಇದನ್ನು ಅರ್ಥ ಮಾಡಿಕೊಳ್ಳಲು ನಾನು ಪೂರ್ಣ ಅಸಮರ್ಥನಾಗಿದ್ದೇನೆ. +ಒಂದು ಪ್ರತ್ಯೇಕ ಮಹಾರಾಷ್ಟ್ರವಿರಬೇಕೆಂದು ಒಂದು ವಿಷಯ. +ಆದರೆ ಏಕೈಕ ಮಹಾರಾಷ್ಟ್ರವಿರಬೇಕೆಂಬುದು ಮತ್ತೊಂದು ವಿಷಯ. +ಗುಜರಾತಿಗಳಿಂದ ಹಾಗೂ ಹಿಂದೀ ಮಾತನಾಡುವವರಿಂದ ಪ್ರತ್ಯೇಕವಾಗಿರದ ಒಂದು ಮಹಾರಾಷ್ಟದ ಪರ ನಾನು. +ಆದರೆ ಸ್ವತಂತ್ರ ಮಹಾರಾಷ್ಟ್ರವನ್ನು ಒಂದೇ ರಾಜ್ಯವನ್ನಾಗಿ ಏಕೆ ಮಾಡಬೇಕೆಂಬುದನ್ನು ಅರ್ಥ ಮಾಡಿಕೊಳ್ಳಲು ನನಗಾಗುತ್ತಿಲ್ಲ. +ಉತ್ತರ ಪ್ರದೇಶದೊಂದಿಗೆ ಯುದ್ಧವನ್ನು ಘೋಷಿಸಲು ಮರಾಠಿಗರು ಯೋಚಿಸುತ್ತಿಲ್ಲವಾದ್ದರಿ೦ದ, ಅವರಿಗೆ ಸಾಮಾನ್ಯ ಮುಂಚೂಣಿಯೊಂದರ ಅಗತ್ಯವಿಲ್ಲ. +ಮಹಾರಾಷ್ಟ್ರೀಯರ ದೃಷ್ಟಿಯಿಂದಲೂ ಕೂಡ, ಇಂತಹ ಸಮುಚ್ಚಯವೇಕಿರಬೇಕು? +ಸತಾರದ ಮರಾಠಿಯೊಬ್ಬನು ಔರಂಗಬಾದಿನ ಮರಾಠಿಯೊಬ್ಬನೊಡನೆ ಯಾವ ಸೌಹಾರ್ದ ಭಾವವನ್ನು ಹೊಂದಿದ್ದಾನೆ? +ನಾಸಿಕ್‌ದ ಮರಾಠಿಯೊಬ್ಬನು, ರತ್ನಗಿರಿಯ ಮರಾಠಿಯೊಬ್ಬನೊಂದಿಗೆ ಯಾವ ಸೌಹಾರ್ದ ಭಾವಹೊಂದಿದ್ದಾನೆ? +ಸತಾರದ ಮರಾಠಿಗನು, ಔರಂಗಬಾದಿನ ಮರಾಠಿಗನ ಮೇಲೆ ಎಂಥ ವಾತ್ಸಲ್ಯ ಮತ್ತು ಆಸಕ್ತಿಗಳನ್ನು ತೋರಿಸುತ್ತಾನೆ. +ರತ್ನಗಿರಿಯ ಮರಾಠಿಗನ ಸಮಸ್ಯೆಗಳ ಬಗ್ಗೆ ನಾಸಿಕದ ಮರಾಠಿಗನು ಯಾವ ಒತ್ತಾಸೆ ಮತ್ತು ಆಸಕ್ತಿಗಳನ್ನು ತೋರಿಸುತ್ತಾನೆ? +ಸಮುಚ್ಚಯಕ್ಕೆ ಯಾವುದೇ ಅರ್ಥವಿಲ್ಲ ಮತ್ತು ಅದರಿಂದ ಯಾವ ಉದ್ದೇಶವೂ ಸಫಲವಾಗದು. +ಇಂದಿನ ಮುಂಬಯಿಯ ಮಂತ್ರಿಮಂಡಲದಲ್ಲಿರುವ ಎಲ್ಲಾ ಮಂತ್ರಿಗಳೂ ಸತಾರ ಜಿಲ್ಲೆಯಿಂದ ಅಥವಾ ನಾಸಿಕದಿಂದ ಬಂದವರು. +ಕೊಂಕಣದಿ೦ದ ಅಲ್ಲಿ ಒಬ್ಬರೂ ಇಲ್ಲ. +ಮಹಾರಾಷ್ಟ್ರದ ಮೂರು ಭಾಗಗಳ ನಡುವಣ ಆರ್ಥಿಕ ಅಸಮಾನತೆಯು ಎರಡನೆಯ ವಿಚಾರ. +ಮರಾಠವಾಡವನ್ನು ನಿಜಾಮನು ಪೂರ್ಣವಾಗಿ ಕಡೆಗಣಿಸಿದ್ದಾನೆ. +ನಾನು ಹೇಳುವ ಮಧ್ಯ ಮಹಾರಾಷ್ಟ್ರದ ಹಿತಾಸಕ್ತಿಯನ್ನು ಇತರ ಎರಡು ಮಹಾರಾಷ್ಟ್ರದವರು ನೋಡಿಕೊಳ್ಳುತ್ತಾರೆ ಎಂಬುದಕ್ಕೆ ಖಾತರಿಯೇನು? +ಮಹಾರಾಷ್ಟ್ರದ ಮೂರು ಭಾಗಗಳ ನಡುವಣ ಔದ್ಯಮಿಕ ಅಸಮಾನತೆ ಮೂರನೆಯ ವಿಚಾರ. +ಪಶ್ಚಿಮ ಮಹಾರಾಷ್ಟ್ರ ಮತ್ತು ಪೂರ್ವ ಮಹಾರಾಷ್ಟ್ರಗಳು ಔದ್ಯಮಿಕವಾಗಿ ಬಹಳ ಮುಂದುವರಿದಿವೆ. +ಮಧ್ಯ ಮಹಾರಾಷ್ಟ್ರದ ಪರಿಸ್ಥಿತಿಯೇನು? +ಅದರ ಔದ್ಯಮಿಕ ಅಭಿವೃದ್ಧಿಯ ಬಗ್ಗೆ ಖಾತರಿಯೇನು? +ಮಧ್ಯಮಹಾರಾಷ್ಟ್ರದ ಔದ್ಯಮಿಕ ಬೆಳವಣಿಗೆಯಲ್ಲಿ, ಪಶ್ಚಿಮ ಮತ್ತು ಪೂರ್ವ ಮಹಾರಾಷ್ಟ್ರಗಳು ಆಸಕ್ತಿವಹಿಸುತ್ತವೆಯೇ? +ಒಂದು ಕಡೆ ಪಶ್ಚಿಮ ಮತ್ತು ಪೂರ್ವ ಮಹಾರಾಷ್ಟ್ರಗಳು, ಮತ್ತೊಂದು ಕಡೆ ಮಧ್ಯ ಮಹಾರಾಷ್ಟ್ರ . +ಇವುಗಳ ನಡುವಣ ಶೈಕ್ಷಣಿಕ ಅಸಮಾನತೆಯು ನಾಲ್ಕನೆಯ ವಿಚಾರ. +ಅವುಗಳ ನಡುವಣ ಅಸಮಾನತೆಯು ತೀವ್ರತರವಾದುದು. +ಮಧ್ಯ ಮಹಾರಾಷ್ಟ್ರವು ಪೂನಾ ವಿಶ್ವವಿದ್ಯಾನಿಲಯದ ಕಕ್ಷೆಯಲ್ಲಿ ಬರುವುದಾದರೆ,ಅದರ ಭವಿಷ್ಯ ಸರ್ವನಾಶವಾದಂತೆ. +ಮರಾಠವಾಡದ ಬಗ್ಗೆ ನಾನು ತುಂಬಾ ಚಿಂತಿತನಾಗಿದ್ದೇನೆ. +ಕಳೆದ ೨೦೦ ವರ್ಷಗಳಿಂದ ಇಲ್ಲಿಯವರೆಗೆ ಅದು ನಿಜಾಮರ ರಾಜ್ಯದಲ್ಲಿತ್ತು. +ನಿಜಾಮರು ಈ ಕ್ಷೇತ್ರವನ್ನು ಅಪರಾಧವೆನಿಸುವಷ್ಟು ಕಡೆಗಣಿಸಿದ್ದಾರೆ. +ಮರಾಠವಾಡದಲ್ಲಿ ಒಂದು ಮೈಲಿಯಷ್ಟು ನಾಲೆ ನೀರಾವರಿಯಿಲ್ಲ. +ಮರಾಠಾವಾಡದ ತಾಲೂಕು ಸ್ಥಳಗಳಲ್ಲಿ ಪ್ರೌಢಶಾಲೆಯೂ ಇಲ್ಲ. +ನಿಜಾಮರ ಸಾರ್ವಜನಿಕ ಸೇವೆಯಲ್ಲಿ ಮರಾಠಾವಾಡದ ಒಬ್ಬ ಯುವಕನೂ ಇರಲಿಲ್ಲ. +ನಾನು ಮಾಹಿತಿ ಮತ್ತು ಅನುಭವಗಳನ್ನಾಧರಿಸಿ ಮಾತನಾಡುತ್ತಿದ್ದೇನೆ. +ಜನರು ಕೆಳಗುಳಿದಿರುವುದು ಹಾಗೂ ಹೊರಗುಳಿದಿರುವುದು ಮಾತ್ರವಲ್ಲ, ಅವರು ಅಜ್ಞಾನಿಗಳೂ ಆಗಿದ್ದಾರೆ. +ಎರಡು ಕಡೆಯೂ ಇರುವ ಬಹಳ ಮುಂದುವರಿದ ಜನರು ಅವರನ್ನು ಕಿತ್ತು ತಿಂದಿದ್ದಾರೆ. +ಅವರ ಉದ್ಯೋಗದ ಮಾರ್ಗಗಳನ್ನು ಮುಚ್ಚಿದಾಗ, ಅವರ ಸ್ಥಾನಮಾನಗಳಲ್ಲಿ ಇನ್ನೂ ಹೆಚ್ಚು ಅವನತಿಯಾಗುತ್ತಿದೆ. +ಪೂನಾ ವಿಶ್ವವಿದ್ಯಾಲಯದ ಅಧೀನದಲ್ಲಿ ಮರಾಠವಾಡ ಹೋದಾಗ ಏನಾಗಬಹುದೆಂದು ಯೋಚಿಸಲು ನಾನು ನಡುಗುತ್ತೇನೆ. +ಪೂನಾ ವಿಶ್ವವಿದ್ಯಾಲಯದ ಅಧೀನದಲ್ಲಿರುವ ಶಾಲಾ ಕಾಲೇಜುಗಳ ಶಿಕ್ಷಣಮಟ್ಟವು ಎಷ್ಟು ಹೆಚ್ಚಿದೆಯೆಂದರೆ, ಮರಾಠಾವಾಡದಿಂದ ಹೋದ ಯಾವ ವಿದ್ಯಾರ್ಥಿಯೂ ಅಲ್ಲಿನ ಪರೀಕ್ಷೆಯಲ್ಲಿ ತೇರ್ಗಡೆ ಹೊಂದುವ ಭರವಸೆಯಿಂದಿರಲಾರ. +ಸಂಯುಕ್ತ ಮಹಾರಾಷ್ಟ್ರದ ಹುಚ್ಚಿನಿಂದ,ಏಕೈಕ ಹಾಗೂ ಸಾಮಾನ್ಯ ವಿಶ್ವವಿದ್ಯಾಲಯದ ಹುಚ್ಚೂ ಬೆಳೆಯುವ ಸಾಧ್ಯತೆಯಿದೆ. +ಸಂಯುಕ್ತ ಮಹಾರಾಷ್ಟ್ರದ ಸ್ಥಾಪನೆಯನ್ನು ಹಿಂಬಾಲಿಸಿ, ಉದ್ಯೋಗವನ್ನು ಪಡೆದುಕೊಳ್ಳಲು ಪೂನಾ ಮತ್ತು ನಾಗಪುರದ ಬ್ರಾಹ್ಮಣರು ಮರಾಠಾವಾಡಕ್ಕೆ ನುಗ್ಗುವುದು ಪ್ರಾರಂಭವಾಗುತ್ತದೆ. +ಮಹಾರಾಷ್ಟ್ರವನ್ನು ಏಕೆ ಮೂರು ಭಾಗಗಳಾಗಿ ವಿಭಜಿಸಬೇಕೆಂಬುದಕ್ಕೆ ಇದು ಮತ್ತೊಂದು ಕಾರಣ. +ಮುಂಬಯಿಯ ವಿಧಾನ ಸಭೆಯ ಒಟ್ಟು ಸದಸ್ಯ ಸಂಖ್ಯೆ ೩೧೫. +ಅದರಲ್ಲಿ ಮರಾಠಿ ಮಾತನಾಡುವವರು ೧೪೯ ಮಂದಿ. +ಮುಂಬಯಿಯ ವಿಧಾನಪರಿಷತ್ತಿನ ಒಟ್ಟು ಸಂಖ್ಯೆ ೭೨. + ಅದರಲ್ಲಿ ಮರಾಠಿ ಮಾತನಾಡುವವರು ೩೪ ಮಂದಿ. +ಹೀಗಿದ್ದ ಮೇಲೆ, ಯಾರಾದರೂ ಮರಾಠಿ ಮಾತಾನಾಡುವ ವ್ಯಕ್ತಿ ಮುಂಬಯಿಯ ಮುಖ್ಯಮಂತ್ರಿಯಾಗಿರಬೇಕಾದದ್ದು ಸ್ವತಃಸಿದ್ಧ ಸಂಗತಿ. +ಮುಖ್ಯಮಂತ್ರಿ ಪದವಿಗೆಶ್ರೀ ಹಿರೇ ಒಬ್ಬ ಉಮೇದುವಾರರಾಗಿ ನಿಂತರು. +ಆದರೆ ಕಾಂಗ್ರೆಸ್‌ ವರಿಷ್ಠ ಮಂಡಳಿಯು ಅವರನ್ನು ಬಲಾತ್ಕಾರವಾಗಿ ಕೂರಿಸಿತು. +ಹಿರೇ ಅವರನ್ನು ಕೂರಿಸಿದ್ದೂ ಮಾತ್ರವಲ್ಲದೆ, ಮುಖ್ಯಮಂತ್ರಿ ಪದವಿಗೆ ಮೊರಾರ್ಜಿ ದೇಸಾಯಿಯವರ ಹೆಸರನ್ನು ಸೂಚಿಸುವಂತೆ ಅವರನ್ನು ಒತ್ತಾಯಿಸಲಾಯಿತು. +ಒಬ್ಬ ಮರಾಠೀ ನೇತಾರನಿಗೆ ಎಂತಹ ಅಪಮಾನ. +ಅಲ್ಲದೆ, ಮರಾಠಿಗರ ರಾಜಕೀಯ ಬುದ್ಧಿಮತ್ತೆಗೆ, ಕಾಂಗ್ರೆಸ್‌ವರಿಷ್ಟ ಮಂಡಳಿಯು ಯಾವ ಬೆಲೆಯನ್ನು ಕೊಡುತ್ತದೆ. +ಈ ಹಿಂದೆ ಹೇಳಲಾದ ವಿಷಯಗಳ ವಿಂಗಡನೆಯಿಂದ ಮಹಾರಾಷ್ಟ್ರೀಯ ಮಂತ್ರಿಗಳ ಅದೇ ರೀತಿಯ ಅಸಾಮರ್ಥ್ಯವು ಸ್ಪಷ್ಟವಾಗುತ್ತದೆ. +ಮಹಾರಾಷ್ಟ್ರೀಯರಿಗೆ ರಾಜಕೀಯ ಪ್ರತಿಭೆಯ ಕೊರತೆಯಿದೆ ಎಂಬುದು ಮೇಲ್ಕಂಡ ವಾಸ್ತವಾಂಶಗಳಿಂದ ಸ್ಪಷ್ಟವಾಗುತ್ತದೆ. +ತಿಲಕ್‌ ಅಥವಾ ಗೋಖಲೆ ಅಥವಾ ರಾನಡೆಯವರಂತಹ ಉನ್ನತ ವ್ಯಕ್ತಿಯೊಬ್ಬನೂ ಇಲ್ಲ. +ಇಂದು ಮರಾಠಿಗನು ಯಾವುದಕ್ಕೂ ಲೆಕ್ಕವಿಲ್ಲ. +ಕಾಂಗ್ರೆಸ್ಸಿಗನಲ್ಲದ ಮಹಾರಾಷ್ಟ್ರೀಯನೂ ಕೂಡ ಲೆಕ್ಕಕ್ಕಿಲ್ಲ. +ಆದ್ದರಿಂದ ರಾಜಕೀಯ ಜೀವನಕ್ಕೆ ಮಹಾರಾಷ್ಟ್ರೀಯರನ್ನು ತರಬೇತಿಗೊಳಿಸುವುದು ಅತ್ಯಂತ ಅಗತ್ಯ. +ಜನಸಮುದಾಯಕ್ಕೆ ಅಧಿಕಾರ ವರ್ಗಾವಣೆಯಿಂದಾಗಿ, ರಾಜಕೀಯ ತರಬೇತಿ ಅತ್ಯಾವಶ್ಯಕವೆನಿಸಿದೆ. +ಮರಾಠರು ಎಂಬ ಪದವನ್ನು ಎರಡು ಅರ್ಥದಲ್ಲಿ ಬಳಸಲಾಗಿದೆ. +ಒಂದು ಅರ್ಥದಲ್ಲಿ, ಯಾರ್ಯಾರು ಮರಾಠಿಯನ್ನು ಮಾತನಾಡುತ್ತಾರೋ ಅವರೆಲ್ಲಾ ಮರಾಠಿಗರೆನಿಸುತ್ತಾರೆ. +ಮತ್ತೊಂದು ಅರ್ಥದಲ್ಲಿ ಜಾತಿಯಿಂದ ಮರಾಠರೆನಿಸುತ್ತಾರೆ. +ಇವರೆಲ್ಲರನ್ನೂ ಮರಾಠರೆನ್ನುತ್ತಾರೆ. +ಆದರೆ ಮರಾಠಿ ಮಾತನಾಡುವುದರಿಂದ ಮರಾಠರೆನಿಸುವವರ ಹಾಗೂ ಜಾತಿಯಿಂದ ಮರಾಠರೆನಿಸುವವರ ನಡುವಣ ವ್ಯತ್ಯಾಸವನ್ನು ಗಮನಿಸುವಲ್ಲಿ ಅವರು ವಿಫಲರಾಗಿದ್ದಾರೆ. +ಬ್ರಾಹ್ಮಣರ ಅಭಿಲಾಷೆಗಳನ್ನು ಎದುರಿನ ರಾಜಕೀಯವಾಗಿ ಮರಾಠಿಗರು ಅತ್ಯಂತ ಹಿಂದುಳಿದ ಸಮಾಜವೆಂಬುದನ್ನು ಈಗ ಅಲ್ಲಗಳೆಯಲಾಗುವುದಿಲ್ಲ. +ಅವರಿಗೆ ರಾಜಕೀಯ ತರಬೇತಿ ಸಿಗಬೇಕಾದುದು ಅತ್ಯಾವಶ್ಯಕ. +ಏಕೈಕ ಮಹಾರಾಷ್ಟ್ರವಿರುವುದಾದರೆ, ಮುಖ್ಯಮಂತ್ರಿಯಾಗಲು ಒಬ್ಬ ಮರಾಠಿಗನಿಗೆ, ಮತ್ತು ಮಂತ್ರಿಗಳಾಗಲು ಐದು ಅಥವಾ ಆರು ಮಂದಿಗೆ ತರಬೇತಿ ಕೊಡಬಹುದು. +ಇದಕ್ಕೆ ಬದಲಾಗಿ, ಮೂರು ಮಹಾರಾಷ್ಟ್ರ ರಾಜ್ಯಗಳಿದ್ದರೆ, ಮುಖ್ಯಮಂತ್ರಿಗಳಾಗಲು ಮೂವರು ಮರಾಠಿಗಳೂ,ಮಂತ್ರಿಗಳಾಗಲು ಮೂವತ್ತು ಮರಾಠಿಗಳು ತರಬೇತಿ ಪಡೆಯಲು ಸಾಧ್ಯವಾಗುತ್ತದೆ. +ನಮ್ಮ ಆಳರಸರಿಗೆ ಶಿಕ್ಷಣ ಕೊಡುವುದರಲ್ಲಿ ನೆರವಾಗುವುದರ ಮೂಲಕ ನಮಗೆ ನಾವೇ ನಿಜವಾಗಿ ಸೇವೆ ಮಾಡಿಕೊಳ್ಳಬಹುದು. +ತಮ್ಮ ಶಕ್ತಿ ಸಾಮರ್ಥ್ಯಗಳನ್ನು ಬೆಳೆಸಿಕೊಳ್ಳಲು ಮತ್ತು ಅವುಗಳನ್ನು ಪ್ರಯೋಗಿಸಲು ಹೆಚ್ಚು ಕಾರ್ಯಕ್ಷೇತ್ರವನ್ನು ಒದಗಿಸುವುದೇ ಮರಾಠಿಗರಿಗೆ ಶಿಕ್ಷಣ ಕೊಡುವ ಏಕೈಕ ಮಾರ್ಗ. +ಮೂರು ಮಹಾರಾಷ್ಟ್ರಗಳ ಸ್ಥಾಪನೆಯಿಂದ ಮಾತ್ರ ಇದು ಸಾಧ್ಯ. +ಸಂದರ್ಭಕ್ಕೆ ಉಚಿತವೆನಿಸುವ ಒಂದು ಕಥೆಯಿದೆ. +ಒಬ್ಬ ಚಿಕ್ಕ ಬಾಲಕಿಯ ತಂದೆಯು ಆಕೆಯನ್ನು ವಿಹಾರಕ್ಕಾಗಿ ಅರಣ್ಯಕ್ಕೆ ಕರೆದೊಯ್ದಿರುತ್ತಾನೆ. +ದೊಡ್ಡ ಮರಗಳ ನಡುವೆ ಕುರುಚಲು ಗಿಡಗಳು ಇರುವುದನ್ನು ಆಕೆ ನೋಡುತ್ತಾಳೆ. +ಅದೇ ಪರಿಸ್ಥಿತಿಯು ಎಲ್ಲಾ ಕಡೆಯೂ ಇರುವುದನ್ನು ಕಂಡು, ದೊಡ್ಡ ಮರಗಳ ಕೆಳಗಿರುವ ಕುರುಚಲು ಗಿಡಗಳು ಏಕೆ ಬೆಳೆಯುವುದಿಲ್ಲವೆಂದು ಆಕೆಯು ತನ್ನ ತಂದೆಯನ್ನು ಕೇಳುತ್ತಾಳೆ. +ಅಯ್ಯೋ | ನನಗೆ ಗೊತ್ತಿಲ್ಲವೆಂದು ಅವನು ಹೇಳುತ್ತಾನೆ. +ಆದಾಗ್ಯೂ, ಆ ಪ್ರಶ್ನೆಯು ಮಹತ್ವಪೂರ್ಣವೆಂಬುದನ್ನು ಅವನು ಮನಗಾಣುತ್ತಾನೆ. +ಆತನು ಒಂದು ಕಾಲೇಜಿನಲ್ಲಿ ಪ್ರಾಧ್ಯಾಪಕ. +ಮಾರನೇ ದಿನ ಕಾಲೇಜಿನಲ್ಲಿ, ತನ್ನ ಸಸ್ಯಶಾಸ್ತ್ರಜ್ಞ ಸಹೋದ್ಯೋಗಿಗೆ ಆ ಪ್ರಶ್ನೆಯನ್ನು ಕೇಳುತ್ತಾನೆ. +ಏಕೆ? ಉತ್ತರ ಸರಳವಾದುದು. +ದೊಡ್ಡ ಮರಗಳು ಸೂರ್ಯ ರಶ್ಮಿಯನ್ನೆಲ್ಲಾ ತಾವೇ ಬಳಸಿಕೊಳ್ಳುತ್ತವೆ. +ಕುರುಚಲು ಗಿಡಗಳಿಗೆ ಏನೂ ಸಿಗುವುದಿಲ್ಲ. +ಅದರಿಂದ ಅವು ಬೆಳೆಯುವುದಿಲ್ಲ ಎಂದು ಆ ಸಸ್ಯಶಾಸ್ತ್ರಜ್ಯನು ಹೇಳುತ್ತಾನೆ. +ಈ ಕಥೆಯ ನೀತಿಯನ್ನು ಮರಾಠಾವಾಡದ ಜನರು ಎಂದೆಂದೂ ಮರೆಯಕೂಡದು. +ಸಂಯುಕ್ತ ಮಹಾರಾಷ್ಟ್ರದ ಪರವಾಗಿರುವ ಏಕೈಕ ವಾದವೆಂದರೆ, ಅದು ರಾಮಾಯಣದಲ್ಲಿ ಬಹಳ ವರ್ಷಗಳನಂತರ ರಾಮ ಮತ್ತು ಭರತ, ಈ ಇಬ್ಬರು ಸೋದರರ ಸಮಾಗಮನವಿದ್ದಂತೆ ಎಂಬುದು. +ಇದು ಪರಿಗಣಿಸಬಹುದಾದ ನಿಕೃಷ್ಟ ವಾದ. +ಪಶ್ಚಿಮ ಮಹಾರಾಷ್ಟ್ರವು ಭರವಸೆ ಕೊಡಬಹುದಾದ ಕೆಲವು ರಿಯಾಯಿತಿಗಳಿರುವ ರಾಜಕೀಯ ಒಪ್ಪಂದದಿಂದ ಸಂತೃಪ್ತರಾದ ಕೆಲವು ಮರಾಠಿಗರಿದ್ದಾರೆ. +ಒಪ್ಪಂದಗಳು ಕಾಗದದ ಚೂರುಗಳಿದ್ದಂತೆ. +ಅವುಗಳನ್ನು ಜಾರಿಗೆ ತರಲಾಗುವುದಿಲ್ಲ. +ಯಾರೂ ಜಾರಿಗೆ ತರಲಾಗದ ರಾಜಕೀಯ ಒಪ್ಪಂದಗಳಿಗೆ ಬದಲಾಗಿ ನಮ್ಮ ಕೈಯಲ್ಲಿ ಅಧಿಕಾರವನ್ನು ಪಡೆದಿರುವುದು ಉತ್ತಮವಲ್ಲವೇ? +ಮುಂಬಯಿ ಸರ್ಕಾರದಲ್ಲಿ, ಮರಾಠಿಗರದು ಎಂಥಹ ನಿಕೃಷ್ಟ ಹಾಗೂ ದುರ್ಬಲ ಕಾರ್ಯಪ್ರದರ್ಶನ. +ಅತ್ಯಂತ ಹೆಚ್ಚು ಮುಂದುವರಿದ ಹಾಗೂ ವಿದ್ಯಾವಂತರಾದ ಮರಾಠಿಗರದೇ ಇಂತಹ ಕಾರ್ಯ ಪ್ರದರ್ಶನವಾದರೆ,ಮರಾಠಾವಾಡದ ಜನರಿಂದ ಏನು ತಾನೆ ನಿರೀಕ್ಷಿಸಲು ಸಾಧ್ಯ? +ತನ್ನ ಸ್ಥಿತಿಯನ್ನು ಉತ್ತಮಪಡಿಸಿಕೊಳ್ಳಲು, ಮರಾಠಾವಾಡದ ಅಥವಾ ಮಧ್ಯ ಮಹಾರಾಷ್ಟದ ಜನರು ತಮ್ಮ ಕೈಯಲ್ಲೇ ಅಧಿಕಾರವನ್ನು ಹೊಂದಿರಬೇಕೆಂದು, ಆ ಜನರಿಗೆ ನಾನು ಸಲಹೆ ನೀಡುತ್ತಾನೆ. +ಕೈಬಿಟ್ಟ ಪ್ರದೇಶವನ್ನು ಮರಳಿ ಪಡೆಯುವುದು ಮರಾಠಿ ಮಾತನಾಡುವ ಜನರನ್ನೆಲ್ಲಾ ಒಂದೇ ರಾಜ್ಯದಲ್ಲಿ ಕಟ್ಟಹಾಕಬೇಕೋ ಅಥವಾ ಅವರನ್ನು ಹೆಚ್ಚಿನ ಎರಡು ಮೂರು ರಾಜ್ಯಗಳಲ್ಲಿ ಎಂಗಡಿಸಬೇಕೋ? +ಮುಂಬಯಿಯನ್ನು ಪ್ರತ್ಯೇಕ ಮಾಡಿದಾಗ ಉಳಿದ ಭಾಗವನ್ನು ಎಲ್ಲಿಗೆ ಸೇರಿಸಬೇಕೆಂಬುದೇ ನಮ್ಮ ಮುಂದಿನ ಪ್ರಶ್ನೆ . +ಉಳಿದುದರಲ್ಲಿ ಎರಡು ಭಾಗಗಳಿವೆ: (೧) ಗುಜರಾತ್‌ (೨) ಮಹಾರಾಷ್ಟ್ರ. +ಮಹಾರಾಷ್ಟ್ರದ ಬಗ್ಗೆ ನನ್ನ ಕಳಕಳಿ. +ಭಾಷಾವಾರು ಪ್ರಾಂತಗಳ ರಚನೆಯಲ್ಲಿ ಮರಾಠಿ ಮಾತನಾಡುವ ಪ್ರದೇಶಗಳಿಗೆ, ಮರಾಠಿ ಮಾತನಾಡುವ ಪ್ರದೇಶಗಳನ್ನು ಆಯೋಗವು ಕೊಟ್ಟಿದೆ. +ಆ ರೀತಿ ಕೈಬಿಡಲಾದ ಪ್ರದೇಶಗಳು ಈ ಕೆಳಗಿನಂತಿವೆ :- +(೧) ಬೆಳಗಾವಿ ನಗರವೂ ಸೇರಿದಂತೆ ಬೆಳಗಾವಿ ತಾಲೂಕು +(೨) ಖಾನಾಪೂರ ತಾಲೂಕು +(೩) ನಿಪ್ಪಾಣಿಯೂ ಸೇರಿದಂತೆ ಚಿಕ್ಕೋಡಿ ತಾಲೂಕು + (೪) ಸೂಪಾ ತಾಲೂಕು + (೫) ಕಾರವಾರ ತಾಲೂಕು + (೬) ಬೀದರಿನಲ್ಲಿರುವ ನಿಲಂಗಾ ತಾಲೂಕು + (೭) ಬೀದರಿನಲ್ಲಿರುವ ಅಹಮ್ಮದಪುರ ತಾಲೂಕು + (೮) ಬೀದರಿನಲ್ಲಿರುವ ಉದ್ಗೀರ್‌ ತಾಲೂಕು + (೯)ಅದಿಲಾಬಾದಿನಲ್ಲಿರುವ ರಾಜಗಿರಿ ತಾಲೂಕು + (೧೦) ಪಕ್ಕದಲ್ಲಿರುವ ಹಿಂದಿ ಮಾತನಾಡುವ ಪ್ರದೇಶಕ್ಕೆ ಕೊಡಲಾಗಿರುವ ವಿದರ್ಭದ ಕೆಲವುಭಾಗಗಳು. + ಮಹಾರಾಷ್ಟ್ರದಿಂದ ಪ್ರತ್ಯೇಕಿಸಲಾಗಿರುವ ಮರಾಠಿಗರ ಜನಸಂಖ್ಯೆ ೧೩,೮೯,೬೪೮ ಆಗುತ್ತದೆ. +ಸಂಮಿಶ್ರ ಮುಂಬಯಿ ರಾಜ್ಯವನ್ನು ಉಳಿಸಿಕೊಳ್ಳುವಲ್ಲಿ ಆಯೋಗವು, ಎರಡು ಬಹು ಮುಖ್ಯ ಉದ್ದೇಶಗಳನ್ನು ಈಡೇರಿಸಿಕೊಳ್ಳಬೇಕಾಯಿತು. +ಮುಂಬಯಿಯು ಮರಾಠಿಗರ ಕೈ ಸೇರದಂತೆ ನೋಡಿಕೊಳ್ಳುವುದು ಒಂದು ಉದ್ದೇಶ. +ಸಂಮಿಶ್ರ ರಾಜ್ಯವೊಂದನ್ನು ರಚಿಸುವ ಮೂಲಕ ಆಯೋಗವು ಈ ಉದ್ದೇಶವನ್ನು ಸಾಧಿಸಿತು. +ಮರಾಠಿಗರು ಮತ್ತು ಗುಜರಾತಿಗಳ ನಡುವೆ ಸಮಾನತೆಯನ್ನು ಉಂಟುಮಾಡುವುದು . +ಅವರು ಮಾಡಬೇಕಾಗಿದ್ದ ಎರಡನೇ ಕೆಲಸ . +ಆಯೋಗವು ಯೋಚಿಸಿದಂತೆ ಮುಂಬಯಿ ರಾಜ್ಯದ ಮುಂದಿನ ವಿಧಾನ ಸಭೆಯಲ್ಲಿ ಇವರಿಬ್ಬರ ನಡುವಣ ಸಮಾನತೆಯ ಅಗತ್ಯ ಅತ್ಯಂತ ತುರ್ತುವಿಷಯಗಳು ಯಾರನ್ನು ಅವಲಂಬಿಸಿದ್ದರೋ, ಆ ಕರ್ನಾಟಕದ ಸದಸ್ಯರು, ನವಕರ್ನಾಟಕ ರಾಜ್ಯದಲ್ಲಿ ಕಾಣೆಯಾದರು. +ಮಹಾರಾಷ್ಟ್ರದ ರೆಕ್ಕೆಗಳನ್ನು ಕತ್ತರಿಸಿ ಮರಾಠಿ ಮಾತನಾಡದ ಪ್ರದೇಶಗಳಿಗೆ ಮರಾಠಿ ಮಾತನಾಡುವ ಪ್ರದೇಶಗಳನ್ನು ಕೊಡುವುದರ ಮೂಲಕ ಆಯೋಗವು ಇದನ್ನು ಸಾಧಿಸಿಕೊ೦ಡಿತು. +ಈ ರೀತಿಯ ರಾಜಕೀಯ ವಿಧ್ವಂಸಕ ಕೃತ್ಯಕ್ಕೆ ಮತ್ತಾವ ಕಾರಣವು ಇದ್ದಂತಿಲ್ಲ. +ಮಹಾರಾಷ್ಟ್ರಕ್ಕೆ ಆಯೋಗವು ಮಾಡಿದ ಈ ಅನ್ಯಾಯವನ್ನು ಈಗ ಸರಿಪಡಿಸಲೇಬೇಕು. +ಅದೃಷ್ಟವಶಾತ್‌ ಅದನ್ನು ಸರಿಪಡಿಸಲು ಸಾಧ್ಯ. +ಸಂಮಿಶ್ರ ರಾಜ್ಯದ ಪ್ರಸ್ತಾಪ ಮುರಿದು ಬಿದ್ದಿದೆ. +ಅಲ್ಲದೆ ಮರಾಠಿಗರು ಮತ್ತು ಗುಜರಾತಿಗಳ ನಡುವೆ ಸಮಾನತೆಯ ಅಗತ್ಯವಿಲ್ಲ. +ಪ್ರಸ್ತುತ ಸಮಸ್ಯೆಗಳಿಗೆ ಸಂಬಂಧಿಸಿದ ಸಾರಾಂಶ:ಭಾಷಾವಾರು ರಾಜ್ಯಗಳ ರಚನೆಯ ಹಿನ್ನೆಲೆಯಲ್ಲಿರಬೇಕಾದ ನಿಯಮಗಳ ಸಾರಾಂಶವನ್ನು ಓದುಗರ ಅನುಕೂಲಕ್ಕಾಗಿ ಇಲ್ಲಿ ಕೊಟ್ಟಿದ್ದೇನೆ. +ಆ ನಿಯಮಗಳನ್ನು ಈಗಾಗಲೇ ಹಿಂದಿನ ಪುಟಗಳಲ್ಲಿ ವಿವರಿಸಿದ್ದೇನೆ. +ಆದರೂ ಅವು ಚದುರಿದಂತಿವೆ. +ಈ ನಿಯಮಗಳನ್ನು ಕೆಳಗಿನಂತೆ ನಿರೂಪಿಸಬಹುದು: +(೧) ಸಂಕೀರ್ಣ ರಾಜ್ಯ ರಚನೆಯ ವಿಚಾರವನ್ನು ಸಂಪೂರ್ಣವಾಗಿ ಕೈಬಿಡಬೇಕು. +(೨) ಪ್ರತಿಯೊಂದು ರಾಜ್ಯವು ಏಕ ಭಾಷಾ ರಾಜ್ಯವಾಗಿರಬೇಕು, ಒಂದು ರಾಜ್ಯ, ಒಂದು ಭಾಷೆ. +(೩) "ಒಂದು ರಾಜ್ಯ, ಒಂದು ಭಾಷೆ" ಯ ಸೂತ್ರವನ್ನು, 'ಒಂದು ಭಾಷೆ, ಒಂದು ರಾಜ್ಯ' ಸೂತ್ರದ ತೊಡಕಿಗೆ ಸಿಕ್ಕಿಸಬಾರದು. +(೪) ವಿಸ್ತೀರ್ಣ, ಜನಸಂಖ್ಯೆ ಮತ್ತು ಒಂದೇ ಭಾಷೆ ಮಾತನಾಡುವ ಜನರ ನಡುವೆ ಇರುವ ಸ್ಥಿತಿಗಳಲ್ಲಿ ವ್ಯತ್ಯಾಸಗಳು. +ಇವು ಯಾವುದನ್ನೂ ಲೆಕ್ಕಿಸದೆ, ಒಂದೇ ಭಾಷೆಯನ್ನು ಮಾತನಾಡುವ ಜನರನ್ನು ಒಂದೇ ಸರ್ಕಾರದ ಆಡಳಿತಕ್ಕೊಳಪಡಿಸಬೇಕೆಂದು 'ಒ೦ದು ಭಾಷೆ, ಒಂದುರಾಜ್ಯ' ಸೂತ್ರದ ಅರ್ಥ. +ಮುಂಬಯಿಯೂ ಸೇರಿದಂತೆ ಸಂಯುಕ್ತ ಮಹಾರಾಷ್ಟ್ರ ರಚನೆಗಾಗಿ ನಡೆದಿರುವ ಚಳವಳಿಯ ಹಿಂದಿರುವ ವಿಚಾರ ಇದೇ. + ಇದು ಒಂದು ಅರ್ಥಹೀನ ಸೂತ್ರ. +ಇದಕ್ಕೆ ಯಾವುದೇ ಹಿನ್ನೆಲೆ ಇಲ್ಲ. +ಇದನ್ನು ಕೈಬಿಡಲೇ ಬೇಕು. +ಪ್ರಪಂಚದ ಇತರ ಕಡೆಗಳಲ್ಲಿ ಮಾಡಿರುವಂತೆ, ಒಂದು ಭಾಷೆಯನ್ನಾಡುವ ಜನತೆಯನ್ನು ಅನೇಕ ರಾಜ್ಯಗಳನ್ನಾಗಿ ಬೇರ್ಪಡಿಸಬಹುದು. +(೫) ಒಂದು ಭಾಷೆಯನ್ನಾಡುವ ಜನತೆಯನ್ನು ಎಷ್ಟು ರಾಜ್ಯಗಳನ್ನಾಗಿ ವಿಂಗಡಿಸಬೇಕು ಎಂಬುದಕ್ಕೆ ಆಧಾರಾಂಶಗಳೆಂದರೆ (೧) ಸಮರ್ಥ ಆಡಳಿತದ ಅಗತ್ಯಗಳು (೨) ವಿವಿಧ ಪ್ರದೇಶಗಳ ಅಗತ್ಯಗಳು, (೩) ವಿವಿಧ ಪ್ರದೇಶಗಳಲ್ಲಿರುವ ಭಾವನಾ ಸಮುಚ್ಚಯ, ಮತ್ತು (೪) ಬಹುಸಂಖ್ಯಾತರು ಮತ್ತು ಅಲ್ಪ ಸಂಖ್ಯಾತರ ನಡುವಿನ ಪ್ರಮಾಣ. +(೬) ರಾಜ್ಯದ ವಿಸ್ತೀರ್ಣ ಹೆಚ್ಚಾದಂತೆಲ್ಲಾ, ಬಹು ಸಂಖ್ಯಾತರೊಂದಿಗೆ ಅಲ್ಪ ಸಂಖ್ಯಾತರಿಗಿರುವ ಪ್ರಮಾಣವು ಕಡಿಮೆಯಾಗುತ್ತಾ ಬರುತ್ತದೆ. +ಅಲ್ಪ ಸಂಖ್ಯಾತರ ಪರಿಸ್ಥಿತಿ ಶೋಚನೀಯವಾಗುತ್ತದೆಯಲ್ಲದೆ ಅಲ್ಪ ಸಂಖ್ಯಾತರ ಮೇಲೆ ಬಹು ಸಂಖ್ಯಾತರು ನಡೆಸಬಹುದಾದ ದೌರ್ಜನ್ಯ ಕೃತ್ಯವು ಹೆಚ್ಚಾಗುತ್ತದೆ. +ಆದ್ದರಿಂದ ರಾಜ್ಯಗಳು ಚಿಕ್ಕದಾಗಿರಬೇಕು. +(೭) ಬಹು ಸಂಖ್ಯಾತರ ದೌರ್ಜನ್ಯ ಕೃತ್ಯಗಳನ್ನು ತಡೆಯಲು ಅಲ್ಪ ಸಂಖ್ಯಾತರಿಗೆ ರಕ್ಷಣೆ ಒದಗಿಸಬೇಕು. +ಇದನ್ನು ಮಾಡಲು ಸಂವಿಧಾನದಲ್ಲಿ ತಿದ್ದುಪಡಿ ಮಾಡಬೇಕು. +ಅಲ್ಲದೆ ಬಹು ಸದಸ್ಯ ಮತಕ್ಷೇತ್ರ (ಎರಡು ಅಥವಾ ಮೂರು) ಗಳಲ್ಲಿ ಸಂಚಿತ ಮತ ಚಲಾವಣೆಯ ಮೂಲಕ ಒಂದು ವ್ಯವಸ್ಥೆಯನ್ನು ಏರ್ಪಡಿಸಲು ಅವಕಾಶ ಮಾಡಿಕೊಡಬೇಕು. +ಭಾಷಾವಾರು ರಾಜ್ಯಗಳ ಸಮಸ್ಯೆಗಳು:ಅಸ್ತಿತ್ವ ಸಾಮರ್ಥ್ಯ ಮೂರು ಮಹಾರಾಷ್ಟ್ರ ರಾಜ್ಯಗಳು ಉಳಿಯುವ ಸಾಮರ್ಥ್ಯ ಹೊಂದಿವೆಯೇ? +ಅವುಗಳ ಖರ್ಚನ್ನು ನಿಭಾಯಿಸಲು ಅವಕ್ಕೆ ಬರುವ ಆದಾಯ ಸಾಕಾಗುತ್ತದೆಯೇ? +ಅಂತಹ ಪ್ರಶ್ನೆ ಎದ್ದೇ ಏಳುತ್ತದೆ? +ಕೇವಲ ಮಹಾರಾಷ್ಟ್ರಕ್ಕೆ ಸಂಬಂಧಿಸಿದಂತೆ ಅಂತಹ ಪ್ರಶ್ನೆ ಕೇಳಬಹುದು ಎಂಬುದಲ್ಲ. +ಭಾರತದಲ್ಲಿರುವ ಇನ್ನೂ ಅನೇಕ ರಾಜ್ಯಗಳಿಗೆ ಸಂಬಂಧಿಸಿದಂತೆಯೂ ಅಂತಹ ಪ್ರಶ್ನೆ ಕೇಳಬಹುದು. +ಡಾ.ಜಾನ್‌ ಮಥಾಯ್‌ ಕರಪರಿಶೀಲನಾ ಸಮಿತಿಯ ಅಧ್ಯಕ್ಷರಾಗಿದ್ದರು. +ಆ ಸಮಿತಿಯು ಸಲ್ಲಿಸಿದ ವರದಿಯ ಭಾಗ 111 ರಿ೦ದ, ಭಾಗ "ಎ' ರಾಜ್ಯಗಳು. +ಭಾಗ'ಬಿ' ರಾಜ್ಯಗಳು ಮತ್ತು ಕೇಂದ್ರ ಸರ್ಕಾರಕ್ಕೆ ಸಂಬಂಧಿಸಿದ ನಾಲ್ಕು ಹೇಳಿಕೆಗಳನ್ನು ಆಯ್ದು ನಾನಿಲ್ಲಿ ಕೊಡುತ್ತೇನೆ. +ಈ ಹೇಳಿಕೆಗಳಿಂದ ಈ ಕೆಳಗಿನ ವಿಷಯ ಎದ್ದು ಕಾಣುತ್ತವೆ. +(೧) ರಾಜ್ಯಗಳ ಜೀವಿತಾವಧಿಯಲ್ಲಿ ಕೆಲವು ವರ್ಷದವರೆಗೆ ಕೊರತೆಯಿರಲಿಲ್ಲ. +ಅವುಗಳೆಲ್ಲಾ ಸಮರ್ಥವಾಗಿದ್ದವು. +ಕಾಂಗ್ರೆಸ್‌ ಆಡಳಿತಕ್ಕೆ ಬಂದ ಮೇಲೆ ಮಾತ್ರ, ರಾಜ್ಯಗಳು ತಮ್ಮ ಆರ್ಥಿಕ ಸಾಮರ್ಥ್ಯ ಕಳೆದುಕೊಂಡವು. +(೨) ಕಾಂಗ್ರೆಸ್‌ ಆಡಳಿತಕ್ಕೆ ಬಂದಾಗಿನಿಂದ, ಅಬಕಾರಿ ತೆರಿಗೆಯು ಕಡಿಮೆಯಾಗತೊಡಗಿತು. +ಅದು ಇಲ್ಲವಾಗುವ ಸ್ಥಿತಿಯವರೆಗೂ ಇಳಿಯಿತು. +(೩) ಆದಾಯಕರ ಮತ್ತು ಮಾರಾಟಕರಗಳು ಬೃಹತ್‌ ಪ್ರಮಾಣದಲ್ಲಿ ಹೆಚ್ಚಾದವು. +ರಾಜ್ಯಗಳು ತಮ್ಮ ಆರ್ಥಿಕ ಸಾಮರ್ಥ್ಯವನ್ನು ಹೇಗೆ ಕಳೆದುಕೊಂಡವು ಎಂಬುದನ್ನು ಈ ಕಾರಣಗಳು ವಿವರಿಸುತ್ತವೆ. +ಒಂದು ಸುಳ್ಳು ಆದರ್ಶಕ್ಕಾಗಿ ಅಬಕಾರಿ ಕಂದಾಯವನ್ನು ಬಲಿ ಕೊಡಲಾಯಿತು. +ಆ ಆದರ್ಶಕ್ಕೆ ಯಾವುದೇ ಅರ್ಥವಿಲ್ಲ, ವಿವೇಚನೆಯಿಲ್ಲ ಮತ್ತು ವಾಸ್ತವತೆಯಿಲ್ಲ. +ಕಾಂಗ್ರೆಸ್ಸು ಅನುಸರಿಸಿದ ಪಾನನಿರೋಧ ನೀತಿಗೆ ಸಂಬಂಧಿಸಿದಂತೆ, ಸವಾಲಿನ ಭಯವಿಲ್ಲದೆ,ಈ ಕೆಳಗಿನ ನಿರ್ಣಯಗಳನ್ನು ಮಾಡಬಹುದು: +(೧) ನಿರರ್ಥಕವಾಗಿ ಬೃಹತ್‌ ಪ್ರಮಾಣದ ಕಂದಾಯವನ್ನು ಬಲಿ ಕೊಡಲಾಯಿತು. +(೨) ಜನರು ಕುಡಿಯುವುದನ್ನು ನಿಲ್ಲಿಸಲಿಲ್ಲ. +ಕಳ್ಳ-ಭಟ್ಟಿ ತಯಾರಿಕೆಯು ಭಾರೀ ಪ್ರಮಾಣದಲ್ಲಿ ಆಗುತ್ತಿದೆ. +(೩) ಸರ್ಕಾರವು ಕಳೆದುಕೊಂಡ ಹಣವನ್ನು ಕಳ್ಳಭಟ್ಟಿ ಮದ್ಯದ ತಯಾರಕನು ದೋಚುತ್ತಿದ್ದಾನೆ. +(೪) ಪಾನ ನಿರೋಧವು ಸಮಾಜವನ್ನು ಅನೈತಿಕಗೊಳಿಸಿದೆ. +ಮೊದಲು ಒಂದು ಕುಟುಂಬದ ಗಂಡಸರು ಮಾತ್ರ ಕುಡಿಯುತ್ತಿದ್ದರು. +ಯಾಕೆಂದರೆ ಮದ್ಯದ ಅಂಗಡಿಗೆ ಹೋಗಲು ಅವರಿಗೆ ಮಾತ್ರ ಸಾಧ್ಯವಿತ್ತು. +ಕಳ್ಳಭಟ್ಟಿ ಮದ್ಯದ ಉತ್ಪಾದನೆಯು ಈಗ ಗೃಹ ಕೈಗಾರಿಕೆಯಾಗಿದೆ. +ಮನೆಯಲ್ಲಿ ಮದ್ಯ ತಯಾರಾಗುವುದರಿಂದ, ಗಂಡಸರು ಮತ್ತು ಹೆಂಗಸರಿಬ್ಬರೂ ಕುಡಿಯುತ್ತಾರೆ. +(೫) ಪಾನ ನಿರೋಧದಿಂದಾದ ಕಂದಾಯ ನಷ್ಟದ ಜೊತೆಗೆ, ಪಾನನಿರೋಧವನ್ನು ಜಾರಿಗೆತರಲು ಪೋಲೀಸ್‌ ಕಾರ್ಯಾಚರಣೆಗೆ ಆಗುವ ಹೆಚ್ಚಿನ ಖರ್ಚನ್ನೂ ಸರ್ಕಾರ ಭರಿಸಬೇಕಾಗುತ್ತದೆ. +ಆದರೆ ಪೋಲೀಸರು ಪಾನ ನಿರೋಧ ಕಾರ್ಯಾಚರಣೆಯನ್ನು ಎಂದೂ ಮಾಡುವುದಿಲ್ಲ. +ಯಾವುದು ನಿರೋಧಿಸಲಾರದೋ ಅಂತಹ ಪಾನ ನಿರೋಧರಿ೦ದ ಏನು ಪ್ರಯೋಜನ? +ಈ ಪಾನ ನಿರೋಧವನ್ನು ಇಡೀ ಭಾರತಕ್ಕೆ ವಿಸ್ತರಿಸುವುದಾಗಿ ಕಾಂಗ್ರೆಸ್‌ ಬೆದರಿಸುತ್ತಿದೆ. +ಯಾರನ್ನು ತಾನು ನಾಶಮಾಡಬೇಕೆಂದು ಇಚ್ಛಿಸುತ್ತಾನೋ ಅಂತಹವರನ್ನು ದೇವರು ಮೊದಲು ಹುಚ್ಚರನ್ನಾಗಿ ಮಾಡುತ್ತಾನೆ ಎಂದು ಹೇಳುವುದುಂಟು. +ಕಾಂಗ್ರೆಸಿಗರಿಗೆ ದೇವರು ಅದನ್ನೇ ಮಾಡುತ್ತಿದ್ದಾನೆ. +ಆರ್ಥಿಕ ಸಾಮರ್ಥ್ಯ ಹಾಗೂ ಪಾನನಿರೋಧ ಇವೆರಡನ್ನೂ ಕಾಂಗ್ರೆಸ್‌ ಉಳಿಸಿಕೊಳ್ಳಲು ಸಾಧ್ಯವಿಲ್ಲ ಎಂದು ನಾನು ಹೇಳಿದರೆ ಸಾಕು. +ಭೂಕಂದಾಯದ ಬಗ್ಗೆ ಹೇಳುವುದಾದರೆ, ಅದನ್ನು ಖಂಡಿತ ಹೆಚ್ಚಿಸಬಹುದು. +ಮತಗಳನ್ನು ಕಳೆದುಕೊಳ್ಳುವ ಭಯದಿಂದ ರೈತರನ್ನು ಮುಟ್ಟಲು ಕಾಂಗ್ರೆಸ್ಸಿಗೆ ಭಯ. +ಆದ್ದರಿಂದ ವ್ಯಾಪಾರಕರ ಮತ್ತು ಆದಾಯಕರಗಳ ಮೂಲಕ ಹಣವನ್ನು ಸಂಪಾದಿಸುತ್ತಿದೆ. +ಕೋಷ್ಟಕ ೬ ರಲ್ಲಿ ಸ್ಪಷ್ಟವಾಗಿ ಕಾಣುವಂತೆ, ಈ ಎರಡು ರೀತಿಯ ಕರಗಳು ನಗರ ವಾಸಿಗಳ ಮೇಲೆ ಭಾರವಾಗಿ ಪರಿಣಮಿಸಿವೆ. +ಆರ್ಥಿಕ ಸಾಮರ್ಥ್ಯವು ಒಂದು ಸಮಸ್ಯೆಯಲ್ಲವೆಂಬುದು ಇದರಿಂದ ಸ್ಪಷ್ಟವಾಗುತ್ತದೆ. +ತನ್ನ ತೆರಿಗೆಯ ನೀತಿಯನ್ನು ಮಾತ್ರ ಕಾಂಗ್ರೆಸ್ಸು ಮಾರ್ಪಡಿಸಬೇಕು. +ಆರ್ಥಿಕ ಸಾಮರ್ಥ್ಯವು ತೆರಿಗೆಯನ್ನು ಹೊರುವ ಶಕ್ತಿ ಮತ್ತು ತೆರಿಗೆಯನ್ನು ಹಾಕುವ ಮನಸ್ಸುಗಳಿಗೆ ಸಂಬಂಧಿಸಿದ ಪ್ರಶ್ನೆ. +ಈಗ ಬೇಕಾಗಿರುವುದು ಮನಸ್ಸು . +ಭಾರತದ ಇಡೀ ತೆರಿಗೆ ವ್ಯವಸ್ಥೆಯಲ್ಲಿ ಬದಲಾವಣೆಯ ಅಗತ್ಯವಿದೆ. +ಇದು ಸಂವಿಧಾನದಲ್ಲಿ ಬದಲಾವಣೆಗೆ ಸಂಬಂಧಿಸಿದ ವಿಷಯ. +ಈಗ ಅದರ ಬಗ್ಗೆ ನಾನು ಪಸ್ತಾಪಿಸಲಾರೆ . +ಮತ್ತೊಂದು ಸಂದರ್ಭಕ್ಕೆ ಅದನ್ನು ನಾನು ಮೀಸಲಿಡಬೇಕು. +ಬಹು ಸಂಖ್ಯಾತರು ಮತ್ತು ಅಲ್ಪ ಸಂಖ್ಯಾತರು ರಾಜಕಾರಣವು ವಾಸ್ತವಿಕವಾಗಿಲ್ಲದಿದ್ದರೆ ಶೂನ್ಯವೆನಿಸುತ್ತದೆ. +ಪಾಂಡಿತ್ಯವನಿಸುವಂತಹದು ಅದರಲ್ಲಿ ಏನೂ ಇಲ್ಲ. +ರಾಜಕಾರಣದ ಯಾವುದೇ ಕಾರ್ಯತಂತ್ರದ ಬಗ್ಗೆ ನ್ಯಾಯ ನಿರ್ಣಯ ಕೊಡುವ ಮೊದಲು ಯಾರಾದರೂ ಮೂಲ ರೇಖಾಕೃತಿಯನ್ನು ಪರಿಗಣಿಸಬೇಕೆಂದು ಇದರಿಂದ ವ್ಯಕ್ತವಾಗುತ್ತದೆ. +“ಮೂಲ ರೇಖಾಕೃತಿ' ಎಂದರೆ ಏನರ್ಥ? +ಎಂದು ಯಾರಾದರೂ ನನ್ನನ್ನು ಪ್ರಶ್ನಿಸಬಹುದು. +ರಾಜಕೀಯ ಯೋಜನೆಯನ್ನು ಯಾವುದಕ್ಕೆ ಅನ್ವಯಿಸಬೇಕೆಂಬ ಅಪೇಕ್ಷೆಯಿದೆಯೋ, ಅಂತಹ ಒಂದು ಸಮುದಾಯದ ಸಾಮಾಜಿಕ ರಚನೆಯೇ ಮೂಲ ರೇಖಾಕೃತಿ ಎಂಬುದು ನನ್ನ ಮತ. +ರಾಜಕೀಯ ರಚನೆಯು ಸಾಮಾಜಿಕ ರಚನೆಯ ಮೇಲೆ ನಿಲ್ಲುತ್ತದೆ ಎಂದು ಹೇಳಲು ಯಾವುದೇ ಸಮರ್ಥನೆ ಬೇಕಿಲ್ಲ. +ವಾಸ್ತವವಾಗಿ, ರಾಜಕೀಯ ರಚನೆಯ ಮೇಲೆ ಸಾಮಾಜಿಕ ರಚನೆಯು ಅಪಾರವಾದ ಪ್ರಭಾವ ಬೀರುತ್ತದೆ. +ಅದು ರಾಜಕೀಯ ಕಾರ್ಯಕ್ಷಮತೆಯಲ್ಲಿ ಬದಲಾವಣೆ ತರಬಹುದು. +ಅಥವಾ ಅದನ್ನು ಶೂನ್ಯಗೊಳಿಸಬಹುದು ಇಲ್ಲವೆ ಅದನ್ನು ಹೀಯಾಳಿಕೆಗೂ ಗುರಿಪಡಿಸಬಹುದು. +ಭಾರತದಲ್ಲಿ ಸಾಮಾಜಿಕ ರಚನೆಯು ಜಾತಿ ಪದ್ಧತಿಯ ಮೇಲೆ ಕಟ್ಟಲ್ಪಟ್ಟಿದೆ. +ಜಾತಿ ಪದ್ಧತಿಯು ಹಿಂದೂ ನಾಗರಿಕತೆ ಮತ್ತು ಸಂಸ್ಕೃತಿಯ ಒಂದು ವಿಶೇಷ ಕೊಡುಗೆ. +ಅದರ ಸ್ವಭಾವವನ್ನು ವಿವರಿಸಲು ಯಾರಿಗೂ ಅವಶ್ಯವಿಲ್ಲದಷ್ಟು ಈ ಜಾತಿ ಪದ್ಧತಿ ಎಲ್ಲರಿಗೂ ಚೆನ್ನಾಗಿ ತಿಳಿದಿರುವ ಸಂಗತಿ. +ಅದು ಭಾಷಾವಾರು ರಾಜ್ಯಗಳ ಮೇಲೆ ಎಂತಹ ಪ್ರಭಾವ ಬೀರಬಲ್ಲದೆಂಬುದನ್ನು ಯಾರಾದರೂ ಸುಲಭವಾಗಿ ತೋರಿಸಲು ಯತ್ನಿಸಬಹುದು. +ಹೇಗಾದರೂ, ಗಮನಿಸಬೇಕಾದ ಕೆಲವು ವಿಚಿತ್ರ ಲಕ್ಷಣಗಳು ಈ ಜಾತಿ ಪದ್ಧತಿಗಿವೆ: +(೧) ಜಾತಿಗಳು ಹೇಗೆ ಹರಡಿಕೊಂಡಿವೆಯೆಂದರೆ, ಯಾವುದಾದರೂ ಒಂದು ಪ್ರದೇಶದಲ್ಲಿ ಪ್ರಧಾನವಾದ ಒಂದು ಜಾತಿಯಿರುತ್ತದೆ ಮತ್ತು ಇತರ ಕೆಲವು ಚಿಕ್ಕಪುಟ್ಟ ಜಾತಿಗಳಿರುತ್ತವೆ. +ತಮ್ಮ ಸಾಪೇಕ್ಷೆ ತೀರ ಚಿಕ್ಕವಾಗಿರುವುದಲ್ಲದೆ, ಹಳ್ಳಿಯ ಜಮೀನಿನಲ್ಲಿ ಬಹು ಪಾಲನ್ನು ಪಡೆದಿರುವ ದೊಡ್ಡ ಜಾತಿಯನ್ನು ಆರ್ಥಿಕವಾಗಿ ಅವಲಂಬಿಸಿರುತ್ತವೆ. +ಈ ಕಾರಣದಿಂದ ಚಿಕ್ಕಪುಟ್ಟ ಜಾತಿಗಳು ಅಲ್ಲಿ ಗುಲಾಮರಂತಿರುತ್ತವೆ. +(೨) ಕೇವಲ ಅಸಮಾನತೆಯು ಮಾತ್ರ ಜಾತಿ ಪದ್ಧತಿಯ ಪ್ರಮುಖ ಲಕ್ಷಣವಲ್ಲ. +ಅದು ಅಂತಸ್ಥ ಅಸಮಾನತಾ ವ್ಯವಸ್ಥೆಯಿಂದ ಕಲುಷಿತಗೊಂಡಿದೆ. +ಎಲ್ಲಾ ಜಾತಿಗಳೂ ಯಾವುದೇ ಸಮಾನಸ್ವರದಲ್ಲಿಲ್ಲ. +ಅವು ಒಂದರ ಮೇಲೊಂದಿದೆ. +ಕ್ರಮೇಣ ಏರುತ್ತಾ ಹೋಗುವ ದ್ವೇಷಶ್ರೇಣಿಯೂ ಮತ್ತು ಕ್ರಮೇಣ ಇಳಿಯುತ್ತಾ ಹೋಗುವ ತಾತ್ಸಾರ ಶ್ರೇಣಿಯೂ ಈ ಜಾತಿ ವ್ಯವಸ್ಥೆಯಲ್ಲಿದೆ. +(೩) ಒಂದು ರಾಷ್ಟ್ರದಲ್ಲಿರಬಹುದಾದ ಎಲ್ಲಾ ಪ್ರಶ್ಯೇಕತೆ ಹಾಗೂ ಅಭಿಮಾನಗಳು ಒಂದು ಜಾತಿಯಲ್ಲಿವೆ. +ದೊಡ್ಡ ಮತ್ತು ಚಿಕ್ಕ ರಾಷ್ಟ್ರಗಳ ಸಮೂಹವಿದ್ದಂತೆ, ಜಾತಿಗಳ ಸಮೂಹವಿರುತ್ತದೆಂದು ಹೇಳಿದರೆ ಅಸಮಂಜಸವಲ್ಲ. +ಅಂಕಿ ಸಂಖ್ಯೆ, ವಾಸ್ತವತೆಗಳ ಆಧಾರದ ಮೇಲೆ ಈ ಅಂಶಗಳನ್ನು ಸ್ಪಷ್ಟಪಡಿಸಲಾರೆನಾದ್ದರಿಂದ ನಾನು ವಿಷಾದಿಸುತ್ತೇನೆ. +ಈ ಅಂಶಗಳ ಬಗ್ಗೆ ಮಾಹಿತಿ ಕೊಡುವ ಏಕೈಕ ಮೂಲವೆಂದರೆ ಜನಗಣತಿ. +ನನಗೆ ನೆರವಾಗಲು ಅದೂ ಕೂಡ ವಿಫಲವಾಗಿದೆ. +ಜನಗಣತಿಯ ಪ್ರಾರಂಭ ಕಾಲದಿ೦ದಲೂ, ಯಾವುದು ಭಾರತೀಯ ಜನಗಣತಿಯಲ್ಲಿ ಪ್ರಮುಖ ಲಕ್ಷಣವಾಗಿದ್ದಿತೋ ಅಂತಹ ಜಾತಿ ಕೋಷ್ಟಕಗಳನ್ನು ಕಳೆದ ಜನಗಣತಿಯಲ್ಲಿ ಕೊಟ್ಟಿಲ್ಲ. +ಇದಕ್ಕೆ ಕೇಂದ್ರ ಗೃಹಮಂತ್ರಿಗಳು ಹೊಣೆಗಾರರು. +ಅವರ ಅಭಿಪ್ರಾಯದಲ್ಲಿ ಶಬ್ದಕೋಶವೊಂದರಲ್ಲಿ ಒಂದು ಶಬ್ದವಿಲ್ಲದಿದ್ದರೆ, ಆ ಶಬ್ದದ ವಿಷಯ ಅಸ್ತಿತ್ವದಲ್ಲಿ ಇಲ್ಲ ಎಂದು ಅವರ ಕಲ್ಪನೆ. +ಜಾತಿ ವ್ಯವಸ್ಥೆಯಿಂದ ರಾಜಕಾರಣದ ಮೇಲೆ ಆಗುವ ಪರಿಣಾಮಗಳು ಸುಸ್ಪಷ್ಟ . +ಇದರಲ್ಲಿ ಕುತೂಹಲಕಾರಿ ಅಂಶವೆಂದರೆ ಚುನಾವಣೆಗಳ ಮೇಲೆ ಈ ವ್ಯವಸ್ಥೆಯು ಎಂತಹ ಪ್ರಭಾವವನ್ನು ಬೀರುತ್ತದೆ ಎಂಬುದು ಏಕ ಸದಸ್ಯ ಚುನಾವಣಾ ಕ್ಷೇತ್ರ ವ್ಯವಸ್ಥೆಯಿ೦ದ ರೂಪುಗೊಳ್ಳುವ ಪ್ರತಿನಿಧಿ ಸರ್ಕಾರದ ಆಧಾರ ಚುನಾವಣೆ. +ಪರಿಣಾಮಗಳ ಸಾರಾಂಶ ಈ ಕೆಳಕಂಡಂತಿದೆ. +(೧) ಮತದಾನ ಎಂದೆಂದೂ ಜಾತಿಬದ್ಧವಾಗಿರುತ್ತದೆ. +ಮತದಾರನು ತನ್ನ ಜಾತಿಯ ಉಮೇದುವಾರನಿಗೆ ಮತ ನೀಡುತ್ತಾನೆ. + ಅತ್ಯುತ್ತಮ ಉಮೇದುವಾರನಿಗೆ ನೀಡುವುದಿಲ್ಲ. +(೨) ಕೇವಲ ಜಾತಿಯ ಬಹು ಸಂಖ್ಯೆಯಿಂದ, ಬಹುಸಂಖ್ಯಾತ ಜಾತಿಯು ಸ್ಥಾನವನ್ನು ಪಡೆಯುತ್ತದೆ. +(೩) ಬಹುಸಂಖ್ಯಾತ ಜಾತಿಯ ಉಮೇದುವಾರನಿಗೆ ಮತ ನೀಡುವಂತೆ ಅಲ್ಪಸಂಖ್ಯಾತ ಜಾತಿಯ ಮೇಲೆ ಒತ್ತಡ ಹೇರಲಾಗುತ್ತದೆ. +(೪) ಬಹುಸಂಖ್ಯಾತ ಜಾತಿಯು ನಿಲ್ಲಿಸಿರುವ ಉಮೇದುವಾರನಿಗೆ ಎದುರಾಗಿ ನಿಂತು ಗೆಲ್ಲಲು ಅಲ್ಪಸಂಖ್ಯಾತ ಜಾತಿಯ ಉಮೇದುವಾರನಿಗೆ, ಅಲ್ಪ ಸಂಖ್ಯಾತ ಜಾತಿಯ ಮತಗಳು ಸಾಕಾಗುವುದಿಲ್ಲ. +(೫) ಅಂತಸ್ತು ಬದ್ಧ ಅಸಮಾನತೆಯುಳ್ಳ ಸಾಮಾಜಿಕ ವ್ಯವಸ್ಥೆಯ ಪರಿಣಾಮವಾಗಿ, ಮೇಲ್ವರ್ಗದ(ಬಹುಸಂಖ್ಯಾತ) ಸಮಾಜಗಳ ಮತದಾರನು, ಅಲ್ಪಸಂಖ್ಯಾತ ಸಮಾಜದ ಉಮೇದುವಾರನಿಗೆ ತನ್ನ ಮತವನ್ನು ಕೊಡಲು ಯಾವಾಗಲೂ ಕೆಳಗಿಳಿಯಲಾರ. +(೬) ಇದಕ್ಕೆ ಬದಲಾಗಿ, ಸಾಮಾಜಿಕವಾಗಿ ಕೆಳ ಹಂತದಲ್ಲಿರುವ ಅಲ್ಪ ಸಂಖ್ಯಾತ ಸಮಾಜದ ಮತದಾರನು, ಬಹು ಸಂಖ್ಯಾತ ಜಾತಿಯ ಉಮೇದುವಾರನಿಗೆ ಮತ ಕೊಡುವಲ್ಲಿ ಹೆಮ್ಮೆ ಪಡುತ್ತಾನೆ. +ಅಲ್ಪ ಸಂಖ್ಯಾತ ಜಾತಿಯ ಉಮೇದುವಾರನು ಚುನಾವಣೆಯಲ್ಲಿ ಏಕೆ ಸೋಲುತ್ತಾನೆ ಎಂಬುದಕ್ಕೆ ಇದು ಮತ್ತೊಂದು ಕಾರಣ. +ಕಾಂಗ್ರೆಸ್‌ ಯಾವಾಗಲೂ ಗೆಲ್ಲುತ್ತದೆ ಎಂಬುದು ನಾವೆಲ್ಲ ಕಂಡ ಸಂಗತಿ. +ಆದರೆ ಕಾಂಗ್ರೆಸ್‌ ಏಕೆ ಗೆಲ್ಲುತ್ತದೆ? +ಎಂದು ಯಾರೂ ಕೇಳುವುದಿಲ್ಲ. +ಕಾಂಗ್ರೆಸ್‌ ಬಹಳ ಜನಪ್ರಿಯ ಪಕ್ಷ ಎಂದೇ ಹೇಳುತ್ತಾರೆ. +ಆದರೆ ಕಾಂಗ್ರೆಸ್‌ ಏಕೆ ಬಹಳ ಜನಪ್ರಿಯವಾಗಿದೆ? +ಮತ ಕ್ಷೇತ್ರಗಳಲ್ಲಿ ಯಾವ ಜಾತಿಗಳು ಬಹುಸಂಖ್ಯಾತವಾಗಿರುತ್ತವೆಯೋ ಅಂತಹ ಜಾತಿಗಳ ಉಮೇದುವಾರರನ್ನು ಕಾಂಗ್ರೆಸ್‌ ಯಾವಾಗಲೂ ಚುನಾವಣೆಗೆ ನಿಲ್ಲಿಸುತ್ತದೆ. +ಎಂಬುದು ನಿಜವಾದ ಉತ್ತರ. +ಜಾತಿ ಮತ್ತು ಕಾಂಗೆಸ್‌ಗಳು ನಿಕಟವಾಗಿ ಸೇರಿಕೊಂಡಿವೆ. +ಜಾತಿ ವ್ಯವಸ್ಥೆಯನ್ನು ಅನೈತಿಕವಾಗಿ ಬಳಸಿಕೊಂಡು ಕಾಂಗೆಸ್‌ ಗೆಲ್ಲುತ್ತದೆ. +ಭಾಷಾವಾರು ರಾಜ್ಯಗಳ ರಚನೆಯಿಂದ, ಜಾತಿ ವ್ಯವಸ್ಥೆಯ ಅನಿಷ್ಟ ಪರಿಣಾಮಗಳು ಇನ್ನೂ ಹೆಚ್ಚು ತೀಕ್ಷ್ಣವಾಗುವುದರಲ್ಲಿ ಸಂಶಯವಿಲ್ಲ. +ಅಲ್ಪ ಸಂಖ್ಯಾತ ಜಾತಿಗಳನ್ನು ಬಗ್ಗು ಬಡಿಯಬಹುದು. +ಒಂದು ಪಕ್ಷ ಬಗ್ಗು ಬಡಿಯದಿದ್ದಲ್ಲಿ, ಅವುಗಳನನ್ನು ಭಯಭೀತರನ್ನಾಗಿ ಮಾಡಬಹುದು ಅಥವಾ ಪೀಡಿಸಬಹುದು. +ಅವರು ಭೇದಭಾವಕ್ಕೆ ತುತ್ತಾಗುವುದು ಖಂಡಿತ. +ಅಲ್ಲದೆ ನ್ಯಾಯದ ಎದುರು ಸಮಾನತೆಯೂ ಮತ್ತು ಸಾರ್ವಜನಿಕ ಜೀವನದಲ್ಲಿ ಸಮಾನ ಅವಕಾಶವೂ ಅವರಿಗೆ ಸಿಗದಂತೆ ಆಗುತ್ತದೆ. +ರಾಷ್ಟ್ರಗಳ ಇತಿಹಾಸವನ್ನೂ ಮತ್ತು ಅವುಗಳ ಆದರ್ಶಗಳಲ್ಲಿ ಆಗುವ ಬದಲಾವಣೆಗಳನ್ನೂ ಲಾರ್ಡ್‌ಆಕ್ಷನ್‌ ಚೆನ್ನಾಗಿ ರೂಪಿಸಿದ್ದಾನೆ: +“ಹಳೆಯ ಯುರೋಪಿಯನ್‌ ಪದ್ಧತಿಯಲ್ಲಿ, ರಾಷ್ಟಗಳ ಹಕ್ಕುಗಳನ್ನು ಸರಕಾರಗಳು ಮಾಡುತ್ತಿರಲಿಲ್ಲ. +ಪ್ರಜೆಗಳೂ ಒತ್ತಾಯ ಪಡಿಸುತ್ತಿರಲಿಲ್ಲ. +ರಾಷ್ಟ್ರಗಳ ಹಿತಾಸಕ್ತಿಗಳಿಗೆ ಬದಲಾಗಿ ಆಳುತ್ತಿದ್ದ ರಾಜವಂಶಗಳ ಹಿತಾಸಕ್ತಿಗಳಿಗೆ ಅನುಗುಣವಾಗಿ ದೇಶದ ಗಡಿಗಳು ಮಾರ್ಪಡುತ್ತಿದ್ದವು. +ಅಲ್ಲದೆ ಸಾಮಾನ್ಯ ಪ್ರಜೆಯ ಆಸೆ ಆಶೋತ್ತರಗಳಿಗೆ ಸಾಮಾನ್ಯವಾಗಿ ಗಮನ ಕೊಡದೆ ಆಡಳಿತ ನಡೆಸಲಾಗುತ್ತಿತ್ತು. +ಎಲ್ಲಿ ಎಲ್ಲಾ ಸ್ಥಾತಂತ್ರ್ಯಗಳು ದಮನವಾಗುತ್ತಿದ್ದವೋ, ಅಲ್ಲಿ ರಾಷ್ಟೀಯ ಸ್ವಾತಂತ್ರ್ಯದ ಹಕ್ಕನ್ನು ಸಹಜವಾಗಿ ಕಡೆಗಣಿಸಲಾಗುತ್ತಿತ್ತು. +ಅಲ್ಲದೆ ನಿಲಾನನ ಮಾತುಗಳಲ್ಲಿ ಹೇಳುವುದಾದರೆ, ತನ್ನ ಮದುವೆಯ ಬಳುವಳಿಯಾಗಿ ರಾಜಕುಮಾರಿಯು ಒಂದು ರಾಜ ಪ್ರಭುತ್ವವನ್ನೇ ತನ್ನೊಡನೆ ಒಯ್ಯುತ್ತಿದ್ದಳು.” + ಮೊದಲು ಜನಾಂಗಗಳು ಉತ್ಸಾಹ ಶೂನ್ಯವಾಗಿರುತ್ತಿದ್ದವು. +ನಂತರ ಅವುಗಳಲ್ಲಿ ಪ್ರಜ್ಞೆ ಮೂಡಿದಾಗ,“ತಮ್ಮ ನ್ಯಾಯಬದ್ಧ ಆಳರಸರ ರಕ್ಷಣೆಗಾಗಿ ಅವರು ಮೊದಲು ಆಕ್ರಮಣಕಾರರ ವಿರುದ್ಧ ದಂಗೆಯೆದ್ದರು. +ದುರಾಕ್ರಮಣಕಾರರ ಆಳ್ವಿಕೆಗೆ ಒಳಪಡಲು ಅವರು ನಿರಾಕರಿಸಿದರು. + ತಮ್ಮ ಆಳರಸರೇ ತಮಗೆ ಅನ್ಯಾಯವೆಸಗಿದಾಗ ಅವರ ವಿರುದ್ಧವೇ ಬಂಡಾಯವೆದ್ದರು. +ನಿಖರವಾದ ದೂರುಗಳಿ೦ಂದ ಸಮರ್ಥಿಸಲ್ಪಟ್ಟ ಪ್ರತ್ಯೇಕ ಕುಂದು ಕೊರತೆಗಳಿಂದ ಪ್ರೇರಿತವಾದ ಬಂಡಾಯಗಳು ಆಗುತ್ತಿದ್ದವು. +ಅನಂತರ ಪೂರ್ಣ ಬದಲಾವಣೆಗೆ ಕಾರಣವಾದ ಫೆಂಚ್‌ ಕ್ರಾಂತಿಯುಂಟಾಯಿತು. +ಜನರು ಏನು ಮಾಡಲು ಇಚ್ಛಿಸುತ್ತಾರೋ ಅದನ್ನು ಮಾಡುವ ಹಕ್ಕು ಅವರದ್ದು ಎಂಬ ಶ್ರೇಷ್ಠ ಒರೆಗಲ್ಲಿನ ಆಧಾರದ ಮೇಲೆ ತಮ್ಮ ಆಸೆ ಆಕಾಂಕ್ಷೆಗಳನ್ನು ಮಾನ್ಯ ಮಾಡಿಕೊಳ್ಳಲು, ಜನರಿಗೆ ಆ ಕ್ರಾಂತಿ ತಿಳಿವಳಿಕೆ ಕೊಟ್ಟಿತು. +ಭೂತಕಾಲದ ಹಾಗೂ ತತ್ಕಾಲದ ರಾಜಪ್ರಭುತ್ಚದ ನಿಯಂತ್ರಣಕ್ಕೆ ಒಳಪಡದ ಪ್ರಜಾಪ್ರಭುತ್ವದ ವಿಚಾರವನ್ನು ಆ ಕ್ರಾಂತಿ ಘೋಷಿಸಿತು.” +ಒಂದು ಜಾತಿಯು ಒಂದು ರಾಷ್ಟ್ರ ಆದರೆ ಒಂದು ದೇಶದ ಪ್ರಭುತ್ವವು ಮತ್ತೊಂದು ದೇಶದ ಮೇಲಿದ್ದಂತೆಯೇ, ಒಂದು ಜಾತಿಯ ಪ್ರಭುತ್ವವು ಮತ್ತೊಂದು ಜಾತಿಯ ಮೇಲಿರುವುದನ್ನು ಒಪ್ಪಿಕೊಳ್ಳಲಾಗದು. +ಆದರೆ, ಒಂದು ಪಕ್ಷ ಅಷ್ಟು ದೂರಕ್ಕೆ ಹೋಗದ, ಈ ವಿಷಯವನ್ನು ಕೇವಲ ಬಹು ಸಂಖ್ಯಾತ ಮತ್ತು ಅಲ್ಪಸಂಖ್ಯಾತರಿಗೆ ಸೀಮಿತಗೊಳಿಸಿದರೆ, ಆಗಲೂ ಅಲ್ಪ ಸಂಖ್ಯಾತರ ಮೇಲೆ ಪ್ರಭುತ್ವ ನಡೆಸಲು ಬಹುಸಂಖ್ಯಾತರಿಗೆ ಏನು ಹಕ್ಕಿದೆ? ಎಂಬ ಪ್ರಶ್ನೆ ಉಳಿಯುತ್ತದೆ. +ಬಹು ಸಂಖ್ಯಾತರು ಏನು ಮಾಡುತ್ತಾರೋ ಅದೇ ಸರಿ ಎಂಬುದು ಇದಕ್ಕೆ ಉತ್ತರ. +ಅಲ್ಪಸಂಖ್ಯಾತರು ಏನು ತಾನೆ ಆಪಾದನೆ ಮಾಡಬಲ್ಲರು? +ಬಹು ಸಂಖ್ಯಾತ ನಿಯಮವನ್ನು ಅವಲಂಬಿಸುವವರು, (೧) ಮತೀಯ ಬಹು ಸಂಖ್ಯಾತರುಮತ್ತು (೨) ರಾಜಕೀಯ ಬಹು ಸಂಖ್ಯಾತರು ಎಂಬ ಎರಡು ರೀತಿಯ ಬಹು ಸಂಖ್ಯಾತರಿರುತ್ತಾರೆ ಎಂಬುದನ್ನು ಮರೆಯುತ್ತಾರೆ. +ರಾಜಕೀಯ ಬಹು ಸಂಖ್ಯಾತರ ವರ್ಗ ರಚನೆಯಲ್ಲಿ ಬದಲಾವಣೆ ಯಾವಾಗಲೂ ಸಾಧ್ಯ . +ರಾಜಕೀಯ ಬಹುಮತ ಬೆಳೆಯುತ್ತದೆ. +ಮತೀಯ ಬಹುಮತ ಹುಟ್ಟು ನಿಂದಾದದ್ದು. +ರಾಜಕೀಯ ಬಹುಮತಕ್ಕೆ ಸೇರಲು ಬಾಗಿಲು ತೆರೆದಿರುತ್ತದೆ. +ಆದರೆ ಮತೀಯ ಬಹುಮತದ ಬಾಗಿಲು ಮುಚ್ಚಿರುತ್ತದೆ. +ಕಟ್ಟಲು ಅಥವಾ ಕೆಡಿಸಲು ರಾಜಕೀಯ ಬಹುಮತದ ರಾಜಕಾರಣಗಳಲ್ಲಿ ಯಾರಿಗೂ ಅಡೆ ತಡೆಯಿಲ್ಲ. +ಮತೀಯ ಬಹುಮತದ ರಾಜಕಾರಣಗಳು, ಅದರಲ್ಲೇ ಹುಟ್ಟಿದವರಿಂದ ರೂಪುಗೊಳ್ಳುತ್ತವೆ. +ಪ್ರಭುತ್ವ ಮಾಡಲು ರಾಜಕೀಯ ಬಹುಮತಕ್ಕೆ ಕೊಡಲಾದ ಅಧಿಕಾರದ ಹಕ್ಕುಗಳನ್ನು ಮತೀಯ ಬಹುಮತವು ಅದು ಹೇಗೆ ಅಪಹರಿಸಬಲ್ಲದು? +ಅಂತಹ ಅಧಿಕಾರದ ಹಕ್ಕುಗಳನ್ನು ಮತೀಯ ಬಹುಮತಕ್ಕೆ ಕೊಡುವುದೆಂದರೆ, ಅನುವಂಶೀಯ ಸರ್ಕಾರವನ್ನು ಸ್ಥಾಪಿಸಿ ಆ ಬಹುಮತದ ದೌರ್ಜನ್ಯಕ್ಕೆ ಅವಕಾಶ ಕಲ್ಪಿಸಿಕೊಟ್ಟಂತೆಯೇ ಸರಿ. +ಮತೀಯ ಬಹುಮತದ ಈ ದೌರ್ಜನ್ಯವು ಕೇವಲ ಬರಡು ಕನಸಲ್ಲ. +ಅದು ಹಲವು ಅಲ್ಪ ಸಂಖ್ಯಾತರ ಅನುಭವ. +ಮಹಾರಾಷ್ಟ್ರದ ಬ್ರಾಹ್ಮಣರಿಗಾದ ಇತ್ತೀಚಿನ ಅನುಭವವು ಇನ್ನೂ ಹಸಿಹಸಿಯಾಗಿದೆ. +ಅದರ ಬಗ್ಗೆ ಹೆಚ್ಚು ಹೇಳುವುದು ಅನಾವಶ್ಯಕ. +ಇದಕ್ಕೆ ಪರಿಹಾರವೇನು? +ಇಂತಹ ಮತೀಯ ದೌರ್ಜನ್ಯದ ವಿರುದ್ಧವಾಗಿ ಕೆಲವು ರಕ್ಷಣೆಗಳನ್ನು ಒದಗಿಸುವುದು ಅಗತ್ಯವೆಂಬುದರಲ್ಲಿ ಸಂಶಯವಿಲ್ಲ. +ಅಂತಹ ರಕ್ಷಣೆಗಳು ಯಾವುವು? ಎಂಬುದೇ ಪ್ರಶ್ನೆ. +ವಿಪರೀತ ದೊಡ್ಡ ರಾಜ್ಯವನ್ನು ರಚಿಸದಿರುವುದೇ ಮೊದಲ ರಕ್ಷಣೆ. +ವಿಪರೀತ ದೊಡ್ಡ ರಾಜ್ಯದಲ್ಲಿ ವಾಸಿಸುವ ಅಲ್ಪ ಸಂಖ್ಯಾತರ ಮೇಲೆ ಆಗುವ ಪರಿಣಾಮಗಳ ಅರಿವು ಹಲವರಿಗಿಲ್ಲ. +ರಾಜ್ಯವು ಎಷ್ಟೆಷ್ಟು ದೊಡ್ಡದಾಗಿರುತ್ತದೆಯೋ, ಬಹು ಸಂಖ್ಯಾತರೊಂದಿಗೆ ಅಲ್ಪ ಸಂಖ್ಯಾತರೊಂದಿಗಿರುವ ಪ್ರಮಾಣವು ಅಷ್ಟಷ್ಟೇ ಚಿಕ್ಕದಾಗುತ್ತದೆ. +ಒಂದು ಉದಾಹರಣೆಯೆಂದರೆ, ಒಂದು ಪಕ್ಷ ಮಹಾವಿದರ್ಭವು ಪ್ರತ್ಯೇಕವಾಗಿ ಉಳಿಯುವುದಾದರೆ, ಮುಸಲ್ಮಾನರೊಂದಿಗೆ ಹಿಂದೂಗಳ ಪ್ರಮಾಣ ಆಗಿರುತ್ತದೆ. +ಪರಿಶಿಷ್ಠ ಜಾತಿಯವರ ಪ್ರಮಾಣವು ಅದೇ ಆಗಿರುತ್ತದೆ. +ಒಟ್ಟುಗೂಡಿದ ಬಹು ಸಂಖ್ಯಾತರು ಸಣ್ಣ ಕಲ್ಲೋಂದನ್ನು ಅಲ್ಪ ಸಂಖ್ಯಾತರ ಎದೆಯ ಮೇಲೆ ಹೇರಿದರೆ ಹೇಗೋ ತಾಳಿಕೊಳ್ಳಬಹುದು. +ಆದರೆ ಅವರು ಬೃಹತ್‌ ಪರ್ವತವೊಂದರ ಹೊರೆಯನ್ನು ತಾಳಲಾರರು. +ಆ ಹೊರೆಯನ್ನು ಅಲ್ಪ ಸಂಖ್ಯಾತರನ್ನು ಅಪ್ಪಚ್ಚಿ ಮಾಡುತ್ತದೆ. +ಅದರಿಂದ ಸಣ್ಣ ರಾಜ್ಯಗಳ ರಚನೆಯು ಅಲ್ಪ ಸಂಖ್ಯಾತರಿಗೆ ರಕ್ಷಣೆಯಾಗುತ್ತದೆ. +ವಿಧಾನ ಸಭೆಯಲ್ಲಿ ಒಂದು ರೀತಿಯ ಪ್ರಾತಿನಿಧ್ಯ ಕೊಡುವುದು ಎರಡನೆ ರಕ್ಷಣೆ. +ರಾಜ್ಯಾಂಗ ರಚನೆಯಲ್ಲಿ ಕೊಡಲಾಗಿರುವ ಹಳೆಯ ರೀತಿಯ ಪರಿಹಾರಗಳೆಂದರೆ: (೧) ಕೆಲವು ಮೀಸಲಾದ ಸ್ಥಾನಗಳು,ಮತ್ತು (೨) ಪ್ರತ್ಯೇಕ ಮತದಾರರು. +ಹೊಸ ರಾಜ್ಯಾಂಗ ರಚನೆಯಲ್ಲಿ ಈ ಎರಡೂ ಪರಿಹಾರಗಳನ್ನು ಕೈಬಿಡಲಾಗಿದೆ. +ಕುರಿಗಳ ತುಪ್ಪಳವನ್ನು ಕತ್ತರಿಸಲಾಗಿದೆ. +ಅವು ಚಳಿಯ ಕೊರೆತವನ್ನು ಅನುಭವಿಸುತ್ತದೆ. +ಅವುಗಳ ಮೈಮೇಲೆ ಉಳಿದಿರುವ ಉಣ್ಣೆಯನ್ನು ಸ್ವಲ್ಪ ಬಿಸಿ ಮಾಡುವುದು ಅಗತ್ಯ. +ಪ್ರತ್ಯೇಕ ಮತದಾರರ ಕ್ಷೇತ್ರಗಳು ಅಥವಾ ಸ್ಥಾನ ಮೀಸಲಾತಿಗಳನ್ನು ಮತ್ತೆ ಕಾರ್ಯ ರೂಪಕ್ಕೆ ತರಕೂಡದು. +ಈಗಿನ ರಾಜ್ಯಾಂಗ ರಚನೆಯಲ್ಲಿ ಅಂತರ್ಗತವಾಗಿರುವ ಏಕ ಸದಸ್ಯ ಮತಕ್ಷೇತ್ರ ವ್ಯವಸ್ಥೆಗೆ ಬದಲಾಗಿ, ಬಹು ಸದಸ್ಯ (ಎರಡು ಅಥವಾ ಮೂರು) ಮತ ಕ್ಷೇತ್ರಗಳನ್ನು ರೂಪಿಸಿದರೆ ಸಾಕು. +ಭಾಷಾವಾರು ರಾಜ್ಯಗಳ ಬಗ್ಗೆ ಅಲ್ಪ ಸಂಖ್ಯಾತರು ಹೊಂದಿರುವ ಹೆದರಿಕೆಗಳನ್ನು ಇದು ಹೋಗಲಾಡಿಸುತ್ತದೆ. +ಭಾರತ ಮತ್ತು ಎರಡನೇ ರಾಜಧಾನಿಯ ಅಗತ್ಯ:ಉತ್ತರ ಮತ್ತು ದಕ್ಷಿಣಗಳ ನಡುವಣ ಬಿಕ್ಕಟ್ಟನ್ನು ಪರಿಹರಿಸುವ ಮಾರ್ಗ . +ಭಾರತಕ್ಕೆ ಏಕ ರಾಜಧಾನಿಯೊಂದಿದ್ದರೆ ನಡೆಯಬಹುದೆ? +ಈಗ ಭಾರತದಲ್ಲಿ ಒಂದೇ ರಾಜಧಾನಿಯಿದೆ ಎಂಬುದು ಈ ಪ್ರಶ್ನೆಯನ್ನು ತಳ್ಳಿಹಾಕಲಾಗದು. +ಭಾರತದ ಇಂದಿನ ರಾಜಧಾನಿಯ ನೆಲೆಸಮಾಧಾನಕರವಾಗಿಲ್ಲದಿದ್ದರೆ, ಈ ಪ್ರಶ್ನೆಯನ್ನು ಪರಿಶೀಲಿಸಲು ಇದು ಸೂಕ್ತ ಸಮಯ. +ಬ್ರಿಟಿಷರು ದೇಶ ಬಿಟ್ಟು ಹೋದಾಗಿನಿಂದಲೂ ಭಾರತಕ್ಕೆ ಒಂದೇ ಒಂದು ರಾಜಧಾನಿಯಿದೆ. +ಅದು ದೆಹಲಿ. +ಬ್ರಿಟಿಷರಿಗೆ ಮುಂಚೆ ಯಾವಾಗಲೂ ಭಾರತದಲ್ಲಿ ಎರಡು ರಾಜಧಾನಿಗಳಿರುತ್ತಿದ್ದವು. +ಮೊಗಲರ ಕಾಲದಲ್ಲಿ ಭಾರತದಲ್ಲಿ, ದೆಹಲಿ ಮತ್ತು ಕಾಶ್ಮೀರದ ಶ್ರೀನಗರ ಈ ಎರಡು ರಾಜಧಾನಿಗಳಿದ್ದವು. +ಬ್ರಿಟಿಷರು ಬಂದಾಗಲೂ, ಎರಡು ರಾಜಧಾನಿಗಳಿದ್ದವು. +ಒಂದು ಕಲ್ಕತ್ತ ಮತ್ತೊಂದು ಸಿಮ್ಲಾ. +ಅವರು ಕಲ್ಕತ್ತವನ್ನು ಬಿಟ್ಟು ದೆಹಲಿಗೆ ಹೋದಾಗಲೂ, ಸಿಮ್ಲಾವನ್ನು ಬೇಸಿಗೆ ರಾಜಧಾನಿಯಾಗಿ ಉಳಿಸಿಕೊಂಡರು. +ಮೊಗಲರು ಮತ್ತು ಬ್ರಿಟಿಷರು ಎರಡು ರಾಜಧಾನಿಗಳನ್ನು ಉಳಿಸಿಕೊಂಡದ್ದು, ಹವಾಮಾನದ ಕಾರಣಕ್ಕಾಗಿ, ದೆಹಲಿ ಅಥವಾ ಕಲ್ಕತ್ತದಲ್ಲಿ ವರ್ಷದ ಹನ್ನೆರಡು ತಿಂಗಳೂ ವಾಸಿಸಲು ಮೊಗಲರಿಗಾಗಲೀ ಬ್ರಿಟಿಷರಿಗಾಗಲೀ ಸಾಧ್ಯವಿರಲಿಲ್ಲ. +ಬೇಸಿಗೆಯ ತಿಂಗಳುಗಳಿಗೆ ಶ್ರೀನಗರವನ್ನು ಅವರು ತಮ್ಮ ರಾಜಧಾನಿಯನ್ನಾಗಿ ಮಾಡಿಕೊಂಡರು. +ಅದೇ ರೀತಿ, ಕಲ್ಕತ್ತದಲ್ಲಿ ಬೇಸಿಗೆ ೩ ತಿಂಗಳುಗಳು ಬ್ರಿಟಿಷರಿಗೆ ಅಸಹನೀಯವಾಗಿ ಇರುತ್ತಿದ್ದವು. +ಆದ್ದರಿಂದ, ಅವರು ಎರಡನೆ ರಾಜಧಾನಿಯನ್ನು ಸ್ಥಾಪಿಸಿಕೊಂಡರು. +ಈ ಹವಾಮಾನ ಸ್ಥಿತಿಗತಿಗಳಿಗೆ ಮತ್ತೆ ಮೂರು ಸ್ಥಿತಿಗತಿಗಳನ್ನು ಸೇರಿಸಬೇಕು. +ಮೊಗಲರ ಅಥವಾ ಬಿಟಿಷರ ಆಳ್ವಿಕೆಯಲ್ಲಿ,ಜನಪರ ಸರ್ಕಾರವಿರಲಿಲ್ಲ. +ಈಗ ನಮ್ಮಲ್ಲಿ ಜನಪರ ಸರ್ಕಾರವಿರುವುದರಿಂದ, ಜನತೆಯ ಅನುಕೂಲ ಪ್ರಮುಖವಾದ ವಿಷಯ. +ದಕ್ಷಿಣದವರಿಗೆ ದೆಹಲಿಯು ಅತ್ಯಂತ ಅನಾನುಕೂಲ ಸ್ಥಳ. +ಉತ್ತರದವರೂ ಬೇಸಿಗೆಯ ಕಾಲದಲ್ಲಿ ಅಲ್ಲಿಯ ಚಳಿ ಹಾಗೂ ದೂರ ಇವೆರಡೂ ಅವರನ್ನು ಬಾಧಿಸುತ್ತವೆ. +ಅವರು ತಮ್ಮ ವಾಸಸ್ಥಳ ಹಾಗೂ ಅಧಿಕಾರ ಸ್ಥಾನದ ಹತ್ತಿರವಿರುವುದರಿಂದ ತಮ್ಮ ಅಸಮಾಧಾನವನ್ನು ವ್ಯಕ್ತ ಮಾಡುವುದಿಲ್ಲ. +ದಕ್ಷಿಣದ ಜನತೆಯ ಭಾವನೆಯು ಎರಡನೇ ಅಂಶವೆನಿಸಿದರೆ, ದೇಶ ಸಂರಕ್ಷಣೆಯು ಮೂರನೇ ಅಂಶ. +ತಮ್ಮ ದೇಶದ ರಾಜಧಾನಿಯು ತಮ್ಮಿಂದ ಬಹು ದೂರವಿದೆ ಎಂಬುದೂ ಮತ್ತು ತಮ್ಮನ್ನು ಉತ್ತರ ಭಾರತದವರು ಆಳುತ್ತಿದ್ದಾರೆಂಬುದೂ ದಕ್ಷಿಣ ಭಾರತದವರ ನೋವು, ಮೂರನೆಯ ವಿಚಾರ ಬಹು ಮುಖ್ಯವಾದುದು. +ದೆಹಲಿಯು ಅಪಾಯ ಶೀಲ ಸ್ಥಳವೆಂಬುದೇ ಆ ವಿಚಾರ. +ತನ್ನ ನೆರೆಯವರೊಂದಿಗೆ ಶಾಂತಿಯಿಂದ ಬಾಳಲು ಭಾರತವು ಪ್ರಯತ್ನಿಸುತ್ತಿದ್ದರೂ, ಒಂದಲ್ಲ ಒಂದು ಸಮಯದಲ್ಲಿ ಅದು ಯುದ್ಧವನ್ನು ಎದುರಿಸುವ ಅಗತ್ಯವಿಲ್ಲ ಎಂದು ನಂಬಿಕೊಳ್ಳಲಾಗದು. +ಯುದ್ಧವೇನಾದರೂ ಆಗುವುದಾದರೆ, ಭಾರತಸ ರ್ಕಾರವು ದೆಹಲಿಯನ್ನು ಬಿಟ್ಟು ತನ್ನ ನೆಲೆಗಾಗಿ ಬೇರೆ ಯಾವುದಾದರೂ ಸ್ಥಳವನ್ನು ಹುಡುಕಬೇಕಾಗುತ್ತದೆ. +ಭಾರತ ಸರ್ಕಾರವು ಸ್ಥಳಾಂತರ ಮಾಡಬಹುದಾದ ರಾಜಧಾನಿ ಯಾವುದು? +ಯಾರಾದರೂ ಯೋಚಿಸಬಹುದಾದ ಸ್ಥಳವೆಂದರೆ ಕಲ್ಕತ್ತಾ. +ಆದರೆ, ಕಲ್ಕತ್ತವೂ ಕೂಡಾ ಟಿಬೆಟ್ಟನಿಂದ ಬಾಂಬ್‌ ದಾಳಿ ಮಾಡಬಹುದಾದ ಅಂತರದಲ್ಲಿದೆ. +ಈಗ ಭಾರತ ಮತ್ತು ಚೀನಾಗಳು ಮಿತ್ರ ರಾಷ್ಟಗಳಾಗಿದ್ದರೂ ಕೂಡಾ,ಈ ಮೈತ್ರಿಯು ಎಲ್ಲಿಯವರೆಗೆ ಉಳಿಯುತ್ತದೆ ಎಂಬುದನ್ನು ಯಾರೂ ಖಚಿತವಾಗಿ ಹೇಳಲಾರರು. +ಭಾರತ ಮತ್ತು ಚೀನಾಗಳ ನಡುವೆ ಘರ್ಷಣೆಯಾಗುವ ಸಾಧ್ಯತೆ ಇದ್ದೇ ಇದೆ. +ಹಾಗಾದಲ್ಲಿ ಕಲ್ಕತ್ತವು ರಾಜಧಾನಿಯಾಗಲು ನಿರುಪಯುಕ್ತವೆನಿಸುತ್ತದೆ. +ಕೇಂದ್ರ ಸರ್ಕಾರವು ಆಶ್ರಯ ಪಡೆಯಲು ಅನುಕೂಲಕರವೆಂದು ಪರಿಗಣಿಸಬಹುದಾದ ಮತ್ತೊಂದು ನಗರವೆಂದರೆ ಮುಂಬಯಿ. +ಆದರೆ ಮುಂಬಯಿ ಒಂದು ಬಂದರು. +ಒಂದು ಪಕ್ಷ ಕೇಂದ್ರ ಸರ್ಕಾರವು ಅಲ್ಲಿಗೆ ಬಂದರೆ, ಅದನ್ನು ಸಂರಕ್ಷಿಸಲು ನಮ್ಮ ನೌಕಾದಳ ತುಂಬಾ ದುರ್ಬಲವಾಗಿದೆ. +ನಾವು ಯೋಜಿಸಬಹುದಾದ ನಾಲ್ಕನೇ ಸ್ಥಳ ಯಾವುದಾದರೂ ಉಂಟೇ? +ಹೈದರಾಬಾದ್‌ ಅಂತಹ ಸ್ಥಳವೆಂದು ನನಗೆ ಕಾಣುತ್ತದೆ. +ಹೈದರಾಬಾದ್‌, ಸಿಕಂದರಾಬಾದ್‌ ಮತ್ತು ಬೋಲಾರಮ್‌ಗಳನ್ನು ಸೇರಿಸಿ ಪ್ರಧಾನ ಕಮಿಷನರ್‌ ಪ್ರಾಂತವೊಂದನ್ನು ರಚಿಸಿ, ಅದನ್ನು ಭಾರತದ ಎರಡನೇ ರಾಜಧಾನಿಯನ್ನಾಗಿ ಮಾಡಬೇಕು. +ಭಾರತದ ರಾಜಧಾನಿಗೆ ಎಲ್ಲಾ ಅವಶ್ಯಕತೆಗಳನ್ನೂ ಹೈದರಾಬಾದ್‌ ಪೂರೈಸುತ್ತದೆ. +ಎಲ್ಲಾ ರಾಜ್ಯಗಳಿಗೂ ಹೈದರಾಬಾದ್‌ ಸಮನಾದ ಅಂತರದಲ್ಲಿದೆ. +ಕೆಳಗೆ ಕೊಡಲಾಗಿರುವ ಅಂತರಗಳ ಕೋಷ್ಟಕವನ್ನು ನೋಡಿದರೆ ಯಾರಾದರೂ ಅದನ್ನು ಮನಗಾಣುತ್ತಾರೆ. +ದೇಶ ಸಂರಕ್ಷಣೆಯ ದೃಷ್ಟಿಯಿಂದ, ಅದು ಕೇಂದ್ರ ಸರ್ಕಾರಕ್ಕೆ ಸುರಕ್ಷತೆ ಕೊಡುತ್ತದೆ. +ಭಾರತದ ಎಲ್ಲ ಭಾಗಗಳಿಂದಲೂ ಅದು ಸಮಾನ ಅಂತರದಲ್ಲಿದೆ. +ತಮ್ಮ ಸರ್ಕಾರವು ಕೆಲವು ಸಮಯ ತಮ್ಮೊಡನೆ ಇದೆ ಎಂಬ ಭಾವನೆಯನ್ನು ಅದು ದಕ್ಷಿಣ ಭಾರತೀಯರಿಗೆ ಉಂಟು ಮಾಡುತ್ತದೆ. +ಚಳಿಗಾಲದಲ್ಲಿ ಸರ್ಕಾರವು ದೆಹಲಿಯಲ್ಲೇ ಇರಬಹುದು. +ಉಳಿದ ಕಾಲಗಳಲ್ಲಿ ಅದು ಹೈದರಾಬಾದಿನಲ್ಲಿ ಇರಬಹುದು. +ದೆಹಲಿಯಲ್ಲಿರುವ ಎಲ್ಲಾ ಸೌಕರ್ಯಗಳೂ ಹೈದರಾಬಾದಿನಲ್ಲಿವೆ. +ಅಲ್ಲದೆ, ದೆಹಲಿಗಿಂತ ಹೆಚ್ಚು ಉತ್ತಮ ನಗರವಿದು. +ದೆಹಲಿಯಲ್ಲಿರುವ ಎಲ್ಲಾ ವೈಭವವೂ ಇಲ್ಲಿದೆ. +ಭವನಗಳ ಬೆಲೆ ಕಡಿಮೆ, ಅಲ್ಲದೆ ಅವು ನಿಜವಾಗಿಯೂ ಸುಂದರ ಭವನಗಳು. +ಸೌಂದರ್ಯದಲ್ಲಿಯೂ ದೆಹಲಿಯ ಭವನಗಳಿಗಿಂತ ಬಹಳ ಶ್ರೇಷ್ಠವಾಗಿವೆ. +ಅವುಗಳೆಲ್ಲಾ ಮಾರಾಟಕ್ಕಿವೆ. +ಅಲ್ಲಿ ಈಗ ಬೇಕಾಗಿರುವುದು ಸಂಸತ್‌ ಭವನ ಮಾತ್ರ ಆ ಭವನವನ್ನು ಭಾರತ ಸರ್ಕಾರವು ಸುಲಭವಾಗಿ ಕಟ್ಟಬಲ್ಲದು. +ವರ್ಷವಿಡೀ ಸಂಸತ್‌ ಸಭೆ ನಡೆಸಲು ಹಾಗೂ ಕಾರ್ಕನಿರತವಾಗಿರಲು ಇಲ್ಲಿ ಸಾಧ್ಯ . +ಇದು ದೆಹಲಿಯಲ್ಲಿ ಸಾಧ್ಯವಿಲ್ಲ. +ಭಾರತದ ಎರಡನೇ ರಾಜಧಾನಿಯಾಗಿ ಹೈದರಾಬಾದನ್ನು ಮಾಡಲು ಆಕ್ಷೇಪಣೆ ಏನೆಂಬುದು ನನಗೆ ತಿಳಿಯುತ್ತಿಲ್ಲ. +ರಾಜ್ಯಗಳ ಪುನರ್ವಿಂಗಡಣೆಯ ಈ ಸಮಯದಲ್ಲಿ ಈ ಕೆಲಸವನ್ನು ಮಾಡಬೇಕು. +ಹೈದರಾಬಾದ್‌, ಸಿಕಂದರಾಬಾದ್‌ ಮತ್ತು ಬೋಲಾರಮ್‌ಗಳ್ನು ಸೇರಿಸಿ ಭಾರತದ ಎರಡನೇ ರಾಜಧಾನಿಯನ್ನು ಸ್ಥಾಪಿಸಬೇಕು. +ಇಡೀ ದಕ್ಷಿಣ ಭಾರತ, ಮಹಾರಾಷ್ಟ್ರ ಮತ್ತು ಆಂಧ್ರಗಳಿಗೆ ಸಂತೋಷವಾಗುವಂತೆ ಈ ಕಾರ್ಯವನ್ನು ಅದೃಷ್ಟವಶಾತ್‌ ಸುಲಭವಾಗಿ ಸಾಧಿಸಬಹುದು. +ಉತ್ತರ ಮತ್ತು ದಕ್ಷಿಣಗಳ ನಡುವಣ ಬಿಕ್ಕಟ್ಟನ್ನು ನಿವಾರಿಸಲು ಇದು ಮತ್ತೊಂದು ಪರಿಹಾರ. +ರಾನಡೆ, ಗಾಂಧಿ ಮತ್ತು ಜಿನ್ನಾಣ್‌ಪ್ರಸ್ತಾವನೆ : ಪುಣೆಯ ಡೆಕ್ಕನ್‌ ಸಭಾದವರು ದಿವಂಗತ ನ್ಯಾಯಮೂರ್ತಿ ಮಹದೇವ ಗೋವಿಂದ ರಾನಡೆಯವರ ೧ಂ೧ನೆಯ ಜನ್ಮದಿನವನ್ನು ಜನವರಿ ೧೮, ೧೯೪ಂರಂದು ಆಚರಿಸುವ ಸಂದರ್ಭದಲ್ಲಿ ಉಪನ್ಯಾಸ ನೀಡಲು ನನ್ನನ್ನು ಆಮಂತ್ರಿಸಿದ್ದರು. +ಆಮಂತ್ರಣವನ್ನು ಸ್ವೀಕರಿಸುವುದು ನನಗೆ ಅಷ್ಟೇನೂ ಪ್ರಿಯವಾದುದಾಗಿರಲಿಲ್ಲ. +ಏಕೆಂದರೆ, ರಾನಡೆಯವರನ್ನು ಕುರಿತು ಮಾತನಾಡುವಾಗ ಅನಿವಾರ್ಯವಾಗಿ ಚರ್ಚಿಸಲೇಬೇಕಾಗಿದ್ದ ಸಾಮಾಜಿಕ ಮತ್ತು ರಾಜಕೀಯ ಸಮಸ್ಯೆಗಳ ಕುರಿತ ನನ್ನ ವಿಚಾರಗಳು ಸಭಿಕರಿಗೂ ಮತ್ತು ಡೆಕ್ಕನ್‌ ಸಭಾದ ಸದಸ್ಯರಿಗೂ ಅಪ್ಯಾಯಮಾನವಾಗಲಾರದೆಂಬುದು ನನಗೆ ಗೊತ್ತಿದ್ದಿತು. +ಆದಾಗ್ಯೂ ಅವರ ಆಮಂತ್ರಣವನ್ನು ಸ್ಟೀಕರಿಸಿದೆ. +ನಾನು ಉಪನ್ಯಾಸ ನೀಡುವಾಗ ಅದನ್ನು ಪ್ರಕಟಿಸುವ ಉದ್ದೇಶ ನನಗಿರಲಿಲ್ಲ. +ದೊಡ್ಡ ವ್ಯಕ್ತಿಗಳ ವಾರ್ಷಿಕ ಸಮಾರಂಭಗಳಲ್ಲಿ ಮಾಡಲಾದ ಭಾಷಣಗಳು ಪ್ರಾಸಂಗಿಕವಾದವುಗಳಾಗಿರುತ್ತವೆ. +ಅವುಗಳು ಶಾಶ್ವತ ಮೌಲ್ಯವನ್ನು ಹೊಂದಿರುವುದಿಲ್ಲ. +ನನ್ನ ಭಾಷಣ ಇದಕ್ಕೆ ಹೊರತಾದದ್ದು ಎಂದು ನನಗೆ ಅನಿಸಿರಲಿಲ್ಲ. +ಆದರೆ ಇಡೀ ಭಾಷಣವನ್ನು ಮುದ್ರಿಸಬೇಕೆಂದು ಬಯಸುವ ನನ್ನ ಅನೇಕ ಹಟಮಾರಿ ಸ್ನೇಹಿತರು ನನ್ನನ್ನು ಒತ್ತಾಯಿಸುತ್ತಿದ್ದಾರೆ. +ನಾನು ಈ ವಿಷಯದಲ್ಲಿ ತಟಸ್ಥನಾಗಿದ್ದೇನೆ. +ಈ ಭಾಷಣಕ್ಕೆ ದೊರೆತ ಪ್ರಚಾರದಿಂದ ನನಗೆ ತೃಪ್ತಿಯಾಗಿದೆ. +ಇದಕ್ಕೂ ಹೆಚ್ಚು ಪ್ರಚಾರ ಪಡೆಯುವ ಆಶೆ ನನಗಿಲ್ಲ. +ಆದಾಗ್ಯೂ ಇದನ್ನು ಮೂಲೆ ಗುಂಪಾಗಗೊಡಬಾರದೆಂದು ಯೋಚಿಸುವವರಿದ್ದರೆ ಅವರನ್ನು ನಿರಾಶೆಗೊಳಿಸುವ ಕಾರಣವಿಲ್ಲವೆಂದು ನನಗನಿಸುತ್ತದೆ. +ಪ್ರಕಟಿತವಾದ ಭಾಷಣಕ್ಕೂ, ಅಂದು ಮಾಡಿದ ಭಾಷಣಕ್ಕೂ ಎರಡು ಅಂಶಗಳಲ್ಲಿ ವ್ಯತ್ಯಾಸವಿದೆ. +ಭಾಷಣದ ೧ಂನೆಯ ವಿಭಾಗವನ್ನು ಭಾಷಣವು ಅತಿ ದೀರ್ಫಕಾಲ ಬೆಳೆಯಬಾರದೆಂಬ ಕಾರಣದಿಂದ ಕೈ ಬಿಡಲಾಗಿತ್ತು. +ಈ ವಿಭಾಗವನ್ನು ಕೈಬಿಟ್ಟರೂ ಭಾಷಣ ಒಂದು ಗಂಟೆ ಮೂವತ್ತು ನಿಮಿಷಗಳವರೆಗೆ ಬೆಳೆಯಿತು. +ಇದು ಮೊದಲ ವ್ಯತ್ಯಾಸ. +ಎರಡನೆಯ ವ್ಯತ್ಯಾಸವೆಂದರೆ, ರಾನಡೆ ಮತ್ತು ಪುಲೆಯವರನ್ನುಹೋಲಿಸಿದ ೮ನೆಯ ವಿಭಾಗದ ಬಹಳಷ್ಟು ಭಾಗವನ್ನು ಕೈಬಿಟ್ಟಿರುವುದು. +ಇದನ್ನು ಕೈಬಿಡಲು ಎರಡು ಕಾರಣಗಳುಂಟು. +ಮೊದಲನೆಯದಾಗಿ ಈ ಇಬ್ಬರು ವ್ಯಕ್ತಿಗಳ ನಡುವಣ ಹೋಲಿಕೆ ಇವರಿಗೆ ಅಪಚಾರವಾಗದಷ್ಟು ಪೂರ್ಣ ಮತ್ತು ವಿವರವಾಗಿರಲಿಲ್ಲ. +ಎರಡನೆಯದಾಗಿ, ಸಾಕಷ್ಟು ಪ್ರಮಾಣದಲ್ಲಿ ಕಾಗದ ದೊರಶಕಿಸಿಕೊಳ್ಳುವಲ್ಲಿ ಕಷ್ಟವಾದಾಗ ಭಾಷಣದ ಕೆಲವು ಭಾಗಗಳನ್ನು ಕೈಬಿಡುವುದೇ ಸೂಕ್ತವಾಗಿತ್ತು. +ಈ ಭಾಷಣದ ಪ್ರಕಟಣೆ ವಿಚಿತ್ರ ಪರಿಸ್ಥಿತಿಯಲ್ಲಾಗುತ್ತಿದೆ. +ಸಾಮಾನ್ಯವಾಗಿ ಪ್ರಕಟಣೆಯ ನಂತರ ವಿಮರ್ಶೆಗಳು ಬರುತ್ತವೆ. +ಈ ಸಂಗತಿಯಲ್ಲಿ ಪರಿಸ್ಥಿತಿ ವ್ಯತಿರಿಕ್ತವಾಗಿದೆ. +ಇನ್ನೂ ಹೆಚ್ಚು ಕೆಡುಕಿನ ಸಂಗತಿ ಎಂದರೆ ಭಾಷಣದ ಮೇಲಣ ವಿಮರ್ಶೆಗಳು ಭಾಷಣವನ್ನು ಕಟುವಾಗಿ ಟೀಕಿಸಿವೆ. +ಇದರ ಬಗ್ಗೆ ಪ್ರಕಾಶಕರು ಚಿಂತಿಸಬೇಕಾಗಿತ್ತು. +ಈ ಪ್ರಕಟಣೆಯಲ್ಲಿರುವ ಅಪಾಯವನ್ನು ಅರಿತೂ ಅವರು ಪ್ರಕಟಿಸಲು ಮುಂದೆ ಬಂದಿರುವುದು ಸಂತೋಷದ ಸಂಗತಿ. +ಈ ಭಾಷಣದಲ್ಲಿ ಶಾಶ್ವತ ಮೌಲ್ಯದ ಅಂಶಗಳಿವೆ ಎಂಬ ನನ್ನ ಸ್ನೇಹಿತರ ವಿಚಾರವನ್ನು ಈ ಸಂಗತಿ ಪುಷ್ಟೀಕರಿಸುತ್ತದೆ. +ಇದಕ್ಕೆ ಹೆಚ್ಚೇನನ್ನೂ ಹೇಳಬೇಕಾಗಿಲ್ಲ. +ನನ್ನ ಮಟ್ಟಿಗೆ ಹೇಳಬೇಕಾದರೆ, ಪತ್ರಿಕೆಯವರು ನನ್ನ ಭಾಷಣವನ್ನು ಟೀಕಿಸಿರುವುದರಿಂದ ನನಗೇನೂ ವ್ಯಥೆಯಾಗಿಲ್ಲ. +ಆದರೆ ಅವರ ಟೀಕೆಗಳಿಗೆ ಆಧಾರವೇನು? +ಮತ್ತು ಭಾಷಣವನ್ನು ನಿಂದಿಸಲು ಮುಂದೆ ಬಂದಿರುವವರು ಯಾರು? +ಭಾರತದ ರಾಜಕೀಯದಲ್ಲಿ ಶ್ರೀಯುತ ಗಾಂಧಿ ಮತ್ತು ಜಿನ್ನಾರವರು ಉಂಟುಮಾಡಿದ ಗೊಂದಲಕ್ಕಾಗಿ ನಾನು ಅವರನ್ನು ಖಂಡಿಸಿರುವುದೇ ನನ್ನ ದೂಷಣೆಗೆ ಕಾರಣ ಮತ್ತು ಹೀಗೆ ಖಂಡಿಸುವಲ್ಲಿ ಅವರೀರ್ವರ ಬಗ್ಗೆ ದ್ವೇಷ ಮತ್ತು ಅಗೌರವ ತೋರಿಸಿದ್ದೇನೆ ಎಂದೂ ಆಪಾದಿಸಲಾಗಿದೆ. +ಈ ಆಪಾದನೆಗೆ ಉತ್ತರವಾಗಿ ನಾನು ಇಷ್ಟೇ ಹೇಳಬಲ್ಲೆ. + ನಾನು ಯಾವಾಗಲೂ ವಿಮರ್ಶಕನಾಗಿದ್ದೇನೆ ಮತ್ತು ವಿಮರ್ಶಕನಾಗಿಯೇ ಇರಬಯಸುವೆ. +ನಾನು ತಪ್ಪುಗಳನ್ನು ಮಾಡುತ್ತಿರಬಹುದು. +ಆದರೆ ಬೇರೆಯವರ ಮಾರ್ಗದರ್ಶನ ಮತ್ತು ನಿರ್ದೇಶನಗಳಿಗಾಗಿ ಕಾಯುವುದಕ್ಕಿಂತ ಅಥವಾ ಸುಮ್ಮನೆ ಕುಳಿತುಕೊಂಡು ಪರಿಸ್ಥಿತಿ ಹದಗೆಡುವುದಕ್ಕೆ ದಾರಿ ಮಾಡುವುದಕ್ಕಿಂತ ತಪ್ಪುಗಳನ್ನು ಮಾಡುವುದು ಒಳ್ಳೆಯದು. +ನಾನು ದ್ವೇಷದಿಂದ ಪ್ರೇರಿತನಾಗಿದ್ದೇನೆಂದು ನನ್ನನ್ನು ದೂಷಿಸುವವರು ಎರಡು ಅಂಶಗಳನ್ನು ಮರೆಯುತ್ತಾರೆ. +ಮೊದಲನೆಯದಾಗಿ, ಈ ಆಪಾದಿತ ದ್ವೇಷ ನನ್ನ ಯಾವುದೇ ವೈಯಕ್ತಿಕ ಕಾರಣದಿಂದ ಹುಟ್ಟಿಲ್ಲ. +ನಾನು ಅವರ (ಗಾಂಧಿ, ಜಿನ್ನಾ) ವಿರುದ್ಧವಿರುವ ಕಾರಣ ನಾನು ಅವರೊಡನೆ ಒಂದು ತೀರ್ಮಾನಕ್ಕೆ ಬರಬೇಕೆಂದಿದ್ದೇನೆ. +ಯಾವುದಾದರೂ ಒಂದು ರೀತಿಯ ತೀರ್ಮಾನಕ್ಕೆ ಬರಬೇಕೆಂಬುದೇ ನನ್ನ ಇಚ್ಛೆ. +ಆದರ್ಶ ಪ್ರಾಯವಾದಂತಹ ತೀರ್ಮಾನಕ್ಕಾಗಿ ಕಾಯಲು ನಾನು ಸಿದ್ಧನಿಲ್ಲ. +ಅಂತೆಯೇ ನಾನು ಯಾವುದೇ ವೈಭವೋಪೇತ ವ್ಯಕ್ತಿಯ ಇಚ್ಛೆ ಮತ್ತು ಒಪ್ಪಿಗೆಯನ್ನು ಅವಲಂಬಿಸುವಂತಹ ತೀರ್ಮಾನವನ್ನೂ ಸಹಿಸಲಾರೆ. +ಎರಡನೆಯದಾಗಿ, ತನ್ನ ಪ್ರೀತಿ ಮತ್ತು ದ್ವೇಷದಲ್ಲಿ ಬಲವಾಗಿಲ್ಲದ ಯಾವುದೇ ವ್ಯಕ್ತಿ ಉದಾತ್ತ ತತ್ವಗಳು ಮತ್ತು ತಾನು ಹೋರಾಡುತ್ತಿರುವ ಉದ್ದೇಶಗಳಿಗೆ ಪುಷ್ಟಿಯನ್ನು ನೀಡಲಾರ ಮತ್ತು ತನ್ನ ಯುಗದ ಮೇಲೆ ಪ್ರಭಾವ ಬೀರಲಾರ. +ನಾನು ಅನ್ಯಾಯ, ದಬ್ಬಾಳಿಕೆ, ಆಡಂಬರ ಮತ್ತು ಆಷಾಢಭೂತಿತನವನ್ನು ದ್ವೇಷಿಸುತ್ತೇನೆ ಮತ್ತು ನನ್ನ ದ್ವೇಷದಲ್ಲಿ ಈ ಎಲ್ಲಾ ವಿಧದ ಅಪರಾಧಿಗಳು ಸೇರಿರುತ್ತಾರೆ. +ನನ್ನ ದ್ವೇಷದ ಭಾವನೆಗಳೇ ನನ್ನ ನಿಜವಾದ ಬಲ ಎಂದು ನನ್ನ ಟೀಕಾಕಾರರಿಗೆ ತಿಳಿಸಬಯಸುತ್ತೇನೆ. +ಈ ದ್ವೇಷ ನಾನು ನಂಬಿರುವ ಗುರಿಗಳ ಬಗ್ಗೆ ಇರುವ ನನ್ನ ಒಲವಿನ ಪ್ರತಿಕ್ರಿಯೆಯೇ ಆಗಿದ್ದು ಇದಕ್ಕಾಗಿ ನಾನು ನಾಚಬೇಕಾಗಿಲ್ಲ. +ಈ ಕಾರಣಗಳಿಂದಾಗಿ ಭಾರತದ ರಾಜಕೀಯ ಪ್ರಗತಿಯ ನಿಲುಗಡೆಗೆ ಕಾರಣರಾಗಿರುವ ಶ್ರೀ ಗಾಂಧಿ ಮತ್ತು ಶ್ರೀ ಜಿನ್ನಾರವರನ್ನು ಟೀಕಿಸಿದುದಕ್ಕಾಗಿ ನಾನು ಕ್ಷಮೆ ಕೇಳಬೇಕಾಗಿಲ್ಲ. +ಕಾಂಗ್ರೆಸ್‌ ಪತ್ರಿಕೆಗಳು ನನ್ನನ್ನು ದೂಷಿಸಿವೆ. +ಕಾಂಗ್ರೆಸ್‌ ಪತ್ರಿಕೆಗಳನ್ನು ನಾನು ಚೆನ್ನಾಗಿ ಬಲ್ಲೆ. +ಅವರ ಟೀಕೆಗಳಿಗೆ ನಾನು ಯಾವ ಬೆಲೆಯನ್ನೂ ಕೊಡುವುದಿಲ್ಲ. +ಅವು ನನ್ನ ತರ್ಕಗಳು ಅಸಮರ್ಪಕವಾದುವುಗಳೆಂದು ಯಾವತ್ತೂ ನಿರೂಪಿಸಿಲ್ಲ. +ನನ್ನನ್ನು ಪ್ರತಿಯೊಂದಕ್ಕೂ ಟೀಕಿಸುವ, ಬಯ್ಯುವ ಮತ್ತು ದೂಷಿಸುವ ಹಾಗೂ ನಾನು ಹೇಳಿದ್ದನ್ನೆಲ್ಲಾ ತಪ್ಪಾಗಿ ವರದಿ ಮಾಡುವ, ತಪ್ಪಾಗಿ ನಿರೂಪಿಸುವ ಮತ್ತು ಅಪಾರ್ಥ ಉಂಟುಮಾಡುವ ಕಾಯಕ ಮಾತ್ರ ಅವುಗಳಿಗೆ ಗೊತ್ತು. +ನಾನು ಮಾಡುವ ಯಾವುದೇ ಕೆಲಸ ಕಾಂಗ್ರೆಸ್‌ ಪತ್ರಿಕೆಗಳಿಗೆ ಸಂತೋಷವನ್ನುಂಟು ಮಾಡುವುದಿಲ್ಲ. +ನನ್ನ ಬಗ್ಗೆ ಕಾಂಗ್ರೆಸ್‌ ಪತ್ರಿಕೆಗಳು ಹೊಂದಿರುವಈ ದ್ವೇಷೋದ್ರೇಕ, ನನ್ನ ಅಭಿಪ್ರಾಯದಲ್ಲಿ, ಹಿಂದೂಗಳು ಅಸ್ಪಶ್ಯರ ಬಗ್ಗೆ ಹೊಂದಿರುವ ದ್ವೇಷದ ಪ್ರತಿರೂಪವೇ ಆಗಿದೆ ಎಂದು ಹೇಳಿದರೆ ತಪ್ಪಾಗಲಾರದು. +ಕಳೆದ ಅನೇಕ ವರ್ಷಗಳಿಂದ ಕಾಂಗ್ರೆಸ್‌ನ ಟೀಕೆಗೆ ಗುರಿಯಾಗಿರುವ ಶ್ರೀ ಜಿನ್ನಾರವರನ್ನು ನಾನು ಟೀಕಿಸಿರುವುದೇ ಕಾಂಗ್ರೆಸ್‌ ಪತ್ರಿಕೆಗಳು ಕೆರಳಲು ಕಾರಣ. +ಆದ್ದರಿಂದಲೇ ನನ್ನ ಬಗೆಗಿನ ಅವರ ದ್ವೇಷೋದ್ರೇಕವು ವೈಯಕ್ತಿಕವಾಗಿ ಪರಿಣಮಿಸಿದೆ. +ಕಾಂಗ್ರೆಸ್‌ ಪತ್ರಿಕೆಗಳು ಎಷ್ಟೇ ಕಠೋರ ಮತ್ತು ಅವಾಚ್ಯ ಬೈಗಳನ್ನು ನನ್ನ ಮೇಲೆರೆಚಿದರೂ ನಾನು ನನ್ನ ಕರ್ತವ್ಯವನ್ನು ಮಾಡಲೇಬೇಕು. +ನಾನು ಮೂರ್ತಿ ಪೂಜಕನಲ್ಲ. +ನಾನು ಅವುಗಳನ್ನು ಒಡೆದು ಹಾಕುವುದರಲ್ಲಿ ನಂಬಿಗೆಯುಳ್ಳವನು. +ನಾನು ಶ್ರೀ ಗಾಂಧಿ ಮತ್ತು ಶ್ರೀ ಜಿನ್ನಾರನ್ನು ದ್ವೇಷಿಸುತ್ತಿದ್ದರೆ ಅವರು ನನಗೆ ಸೇರುವುದಿಲ್ಲವೇ ಹೊರತು ಅವರನ್ನು ದ್ವೇಷಿಸುವುದಿಲ್ಲ . +ಅದಕ್ಕೆ ಕಾರಣ ನಾನು ಭಾರತವನ್ನು ಹೆಚ್ಚಾಗಿ ಪ್ರೀತಿಸುತ್ತೇನೆ. +ಇದೇ ನಿಜವಾದ ರಾಷ್ಟೀಯನ ನಂಬುಗೆ. +ವ್ಯಕ್ತಿಗಳಿಗಿಂತ ದೇಶ ದೊಡ್ಡದು, ಮತ್ತು ಶ್ರೀಯುತಗಾಂಧಿ ಮತ್ತು ಶ್ರೀಯುತ ಜಿನ್ನಾರವರನ್ನು ಪೂಜಿಸುವುದು ಮತ್ತು ಭಾರತದ ಸೇವೆ ಎರಡೂ ಬೇರೆಯಾಗಿವೆಯಷ್ಟೇ ಅಲ್ಲ ಅವುಗಳಲ್ಲಿ ವಿರೋಧಾಭಾಸವಿದೆ ಎಂಬ ಅಂಶವನ್ನು ನನ್ನ ದೇಶಬಾಂಧವರು ಎಂದಾದರೂ ಒಂದು ದಿನ ಅರಿತುಕೊಳ್ಳುವರೆಂದು ನಾನು ಆಶಿಸುತ್ತೇನೆ. +ಈ ಆಮಂತ್ರಣವು ನನಗೆ ಸಂತೋಷವನ್ನು ನೀಡಿಲ್ಲವೆಂದು ನಾನು ಹೇಳಬೇಕಾಗಿದೆ. +ಈ ಸಂದರ್ಭಕ್ಕೆ ತಕ್ಕ ಕಾರ್ಯ ನನ್ನಿಂದಾಗಲಿಕ್ಕಿಲ್ಲ. + ಒಂದು ವರ್ಷದ ಹಿಂದೆ ಮುಂಬಯಿಯಲ್ಲಿ ರಾನಡೆಯವರ ಶತಮಾನೋತ್ಸವವನ್ನು ಆಚರಿಸಿದಾಗ ಭಾಷಣ ಮಾಡಲು ರೈಟ್‌ ಆನರಬಲ್‌ ಶ್ರೀನಿವಾಸ ಶಾಸ್ತ್ರಿಯವರನ್ನು ಆಮಂತ್ರಿಸಲಾಗಿತ್ತು. + ಅನೇಕ ಕಾರಣಗಳಿಂದಾಗಿ ಈ ಕರ್ತವ್ಯವನ್ನು ನಿರ್ವಹಿಸಲು ಅವರು ಸೂಕ್ತ ವ್ಯಕ್ತಿಯಾಗಿದ್ದರು. + ಅವರ ಜೀವನದ ಹಲವು ಕಾಲ ಶ್ರೀನಿವಾಸ ಶಾಸ್ತ್ರಿಯವರು ರಾನಡೆಯವರ ಸಮಕಾಲೀನರಾಗಿದ್ದರು. +ಅವರು ರಾನಡೆಯವರ ನಿಕಟವರ್ತಿಗಳಾಗಿದ್ದರಲ್ಲದೆ ರಾನಡೆಯವರು ಯಾವಕಾರ್ಯಕ್ಕಾಗಿ ತಮ್ಮ ಜೀವನವನ್ನೇ ಮುಡುಪಾಗಿಟ್ಟಿದ್ದರೋ ಆ ಕಾರ್ಯವನ್ನು ಕಣ್ಣಾರೆ ಕಂಡವರು. +ಅವರಿಗೆ ರಾನಡೆಯವರನ್ನು ಅವರ ಸಹಚರರೊಡನೆ ಹೋಲಿಸಿ ಅವರ ಕೆಲಸ ಮೌಲ್ಯಮಾಪನೆ ಮಾಡುವ ಅವಕಾಶವಿತ್ತು. +ಶ್ರೀನಿವಾಸ ಶಾಸ್ತ್ರಿಯವರು ರಾನಡೆಯವರೊಡನೆ ಹೊಂದಿದ್ದ ಆತ್ಮೀಯ ಸಂಪರ್ಕದ ಕಾರಣ ಅವರ ಬಗ್ಗೆ ಆತ್ಮವಿಶ್ವಾಸದಿಂದ ತಮ್ಮ ಅಭಿಪ್ರಾಯಗಳನ್ನು ಹೇಳಬಲ್ಲವರಾಗಿದ್ದರು. +ಅವರು ಸಾಂದರ್ಭಿವಾಗಿ ಕೆಲವು ಐತಿಹ್ಯಗಳನ್ನು ಹೇಳುವುದರ ಮೂಲಕ ಸಭಿಕರೆದುರು ರಾನಡೆಯವರ ವ್ಯಕ್ತಿತ್ವವನ್ನು ಪ್ರಜ್ವಲಿತಗೊಳಿಸಬಲ್ಲವರಾಗಿದ್ದರು. +ನನ್ನಲ್ಲಿ ಈ ಯಾವ ಅರ್ಹತೆಗಳೂ ಇಲ್ಲ. +ರಾನಡೆಯವರೊಡನೆ ನನಗಿದ್ದ ಸಂಬಂಧ ಅತಿ ವಿರಳ. +ನಾನು ಅವರನ್ನು ನೋಡಿಯೂ ಇರಲಿಲ್ಲ. +ಅವರ ಬಗ್ಗೆ ಎರಡು ಘಟನೆಗಳನ್ನು ಮಾತ್ರ ನಾನು ನೆನಪಿಸಿಕೊಳ್ಳಬಲ್ಲೆ. +ಮೊದಲನೆಯದು ಅವರ ನಿಧನಕ್ಕೆ ಸಂಬಂಧಿಸಿದ್ದು. +ನಾನು ಆಗ ತಾರಾ ಮಾಧ್ಯಮಿಕ ಶಾಲೆಯಲ್ಲಿ ಒಂದನೆಯ ತರಗತಿಯ ವಿದ್ಯಾರ್ಥಿಯಾಗಿದ್ದೆ. +೧೯ಂ೧ರ ಜನವರಿ ೧೬ರಂದು ಶಾಲೆಯನ್ನು ಮುಚ್ಚಲಾಗಿ ಹುಡುಗರಿಗೆ ರಜೆ ಸಿಕ್ಕಿತು. +ಶಾಲೆಯನ್ನು ಏಕೆ ಮುಚ್ಚಲಾಯಿತು ಎಂದು ಕೇಳಿದಾಗ ರಾನಡೆಯವರು ನಿಧನರಾಗಿದ್ದಾರೆ ಎಂದು ನಮಗೆ ತಿಳಿಸಲಾಯಿತು. +ಆಗ ನನಗೆ ೯ ವರ್ಷ. +ರಾನಡೆಯವರು ಯಾರು, ಅವರು ಏನು ಮಾಡಿದ್ದಾರೆ ಎಂಬ ಯಾವ ವಿಷಯವೂ ನನಗೆ ಗೊತ್ತಿರಲಿಲ್ಲ. +ಇತರ ಹುಡುಗರಂತೆ ನನಗೂ ರಜೆ ದೊರೆತದ್ದರಿಂದ ಸಂತೋಷವಾಯಿತು. +ಯಾರು ನಿಧನರಾದರೆಂಬುದನ್ನು ತಿಳಿದುಕೊಳ್ಳುವ ಗೋಜಿಗೂ ಹೋಗಲಿಲ್ಲ. +ರಾನಡೆಯವರ ಬಗ್ಗೆ ನನಗೆ ಜ್ಞಾಪಕಕ್ಕೆ ಬರುವ ಎರಡನೆಯ ಘಟನೆ ಮೊದಲನೆಯದಕ್ಕಿಂತ ಬಹಳ ಕಾಲದ ನಂತರದ್ದು. +ಒಮ್ಮೆ ನಾನು ನನ್ನ ತಂದೆಯವರ ಹಳೆಯ ಕಾಗದ ಪತ್ರಗಳ ಗಂಟುಗಳನ್ನು ಪರಿಶೀಲಿಸುವಾಗ ಅದರಲ್ಲಿ ನನಗೆ ಸೈನ್ಯದಲ್ಲಿ ಮಹಾರ ಕೋಮಿನವರನ್ನು ಭರ್ತಿ ಮಾಡಬಾರದೆಂದು ಭಾರತ ಸರಕಾರದವರು ೧೮೯೨ರಲ್ಲಿ ಹೊರಡಿಸಿದ್ದ ಆಜ್ಞೆಯ ವಿರುದ್ಧ ಮಹಾರಕೋಮಿನ ನಿಯೋಜಿತ ಮತ್ತು ನಿಯೋಜಿತರಲ್ಲದ ಸೈನಿಕ ಅಧಿಕಾರಿಗಳು ಮಾಡಿಕೊಂಡಿದ್ದರೆಂದು ಹೇಳಲಾದ ವಿಜ್ಞಾಪನಾ ಪತ್ರ ದೊರಕಿತು. +ವಿಚಾರಿಸಿದಾಗ ಇದು ಅನ್ಯಾಯಕ್ಕೊಳಗಾದ ಮಹಾರರ ಪರವಾಗಿ ರಾನಡೆಯವರು ಸಿದ್ಧಪಡಿಸಿದ ವಿಜ್ಞಾಪನಾ ಪತ್ರದ ನಕಲು ಎಂದು ತಿಳಿದು ಬಂದಿತು. +ಇವೆರಡು ಸಂಗತಿಗಳನ್ನು ಬಿಟ್ಟರೆ ರಾನಡೆಯವರ ಬಗ್ಗೆ ಇನ್ನೇನನ್ನೂ ನಾನು ಜ್ಞಾಪಿಸಿಕೊಳ್ಳಲಾರೆ. +ಅವರ ಬಗ್ಗೆ ನನ್ನ ಅರಿವು ಸಂಪೂರ್ಣ ಅಪರೋಕ್ಷ. +ಅವರ ಕಾರ್ಯದ ಬಗ್ಗೆ ನಾನು ಓದಿ ತಿಳಿದುಕೊಂಡಿದ್ದೇನಲ್ಲದೆ ಇತರರು ಅವರ ಬಗ್ಗೆ ಹೇಳಿರುವುದನ್ನೂ ಕೇಳಿದ್ದೇನೆ. +ಆದ್ದರಿಂದ ಅವರ ಬಗ್ಗೆ ನಿಮ್ಮ ಆಸಕ್ತಿಯನ್ನು ಹೆಚ್ಚಿಸುವ ಅಥವಾ ಮಾಹಿತಿಯನ್ನು ನೀಡುವಂತಹ ವೈಯಕ್ತಿಕ ವಿವರಗಳನ್ನು ನನ್ನಿಂದ ನೀವು ನಿರೀಕ್ಷಿಸಬಾರದು. +ಆ ಕಾಲದ ಒಬ್ಬ ಸಾರ್ವಜನಿಕ ವ್ಯಕ್ತಿಯಾಗಿ ಮತ್ತು ಇಂದಿನ ರಾಜಕೀಯದಲ್ಲಿ ಅವರ ಸ್ಥಾನದ ಬಗ್ಗೆ ಮಾತ್ರ ನನ್ನ ವಿಚಾರಗಳನ್ನು ಮಂಡಿಸಲಿದ್ದೇನೆ. +ನಿಮಗೆಲ್ಲ ಚೆನ್ನಾಗಿ ತಿಳಿದಿರುವಂತೆ ರಾನಡೆಯವರನ್ನು ಒಬ್ಬ ಮಹಾಪುರುಷನೆಂದು ಬಣ್ಣಿಸುವ ಅವರ ಸ್ನೇಹಿತರಿದ್ದಾರೆ. +ಇದನ್ನು ನಿರಾಕರಿಸುವವರೂ ಇದ್ದಾರೆ. +ಆದರೆ ಸತ್ಯ ಸಂಗತಿ ಯಾವುದು? +ಈ ಪ್ರಶ್ನೆಯ ಉತ್ತರ ಇನ್ನೊಂದು ಪ್ರಶ್ನೆಯ ಉತ್ತರವನ್ನವಲಂಬಿಸಿದೆ. +ಅದೆಂದರೆ ಇತಿಹಾಸವು ಮಹಾಪುರುಷರ ಜೀವನ ವೃತ್ತಾಂತವಾಗಿದೆಯೇ? +ಈ ಪಶ್ನೆ ಪಸ್ತುತವೂ ಮತ್ತು ಮಹತ್ವದ್ದೂ ಆಗಿದೆ. +ಏಕೆಂದರೆ, ಮಹಾಪುರುಷರು ಇತಿಹಾಸ ನಿರ್ಮಾಪಕರಾಗಿರದಿದ್ದರೆ ನಾವು ಸಿನಿಮಾ ನಟರಿಗಿಂತ ಹೆಚ್ಚಾಗಿ ಅವರನ್ನು ಏಕೆ ಗಮನಿಸಬೇಕಾಗಿತ್ತು ಭಿನ್ನಾಭಿಪ್ರಾಯ ಸಹಜ. +ಒಬ್ಬ ವ್ಯಕ್ತಿ ಎಷ್ಟೇ ದೊಡ್ಡವನಾಗಿರಲಿ ಅವನು ತನ್ನ ಯುಗದ ಶಿಶು ಎಂದು ಒತ್ತುಕೊಟ್ಟು ಹೇಳುವವರಿದ್ದಾರೆ. +ಅವರ ಪ್ರಕಾರ ಯುಗವು ಅವನಿಗೆ ಕರೆ ನೀಡಿತು, ಯುಗವೇ ಎಲ್ಲವನ್ನೂ ಮಾಡಿತು. +ಅವನು ಏನನ್ನೂ ಮಾಡಿಲ್ಲ. +ಈ ಅಭಿಪ್ರಾಯವನ್ನು ಹೊಂದಿರುವವರು ಇತಿಹಾಸಕ್ಕೆ ತಪ್ಪ ಅರ್ಥ ಕಲ್ಪಿಸುತ್ತಾರೆಂದೇ ನನ್ನ ಅಭಿಮತ. +ಐತಿಹಾಸಿಕ ಬದಲಾವಣೆಗೆ ಮೂರು ವಿಭಿನ್ನ ಕಾರಣಗಳುಂಟು. +ಆಗಸ್ಟಿನನು ಪ್ರತಿಪಾದಿಸಿದ ಇತಿಹಾಸದ ಸಿದ್ಧಾಂತ ಒಂದು ಉಂಟು. +ಇದರ ಪ್ರಕಾರ ಇತಿಹಾಸವು ದೈವಿಕ ಯೋಜನೆಯ ಅರಳುವಿಕೆಯೇ ಆಗಿದೆ. +ಈ ಯೋಜನೆಯ ಅಂಗವಾಗಿ ಮನುಕುಲವು ಯುದ್ಧ ಮತ್ತು ಯಾತನೆಗಳನ್ನು ಈ ದೈವಿಕ ಯೋಜನೆಯ ಅಂತಿಮ ಮಹಾವಿಚಾರಣೆಯ ದಿನದಂದು ಮುಕ್ತಾಯಗೊಳಿಸುವವರೆಗೂ ಅನುಭವಿಸುತ್ತಲೇ ಇರುತ್ತದೆ. +ಇದೂ ಅಲ್ಲದೆ ಬಕಲ್‌ರವರ ಸಿದ್ಧಾಂತದ ಪ್ರಕಾರ ಭೂಗೋಳಶಾಸ್ತ್ರ ಮತ್ತು ಭೌತಶಾಸ್ತ್ರಗಳು ಇತಿಹಾಸವನ್ನು ನಿರ್ಮಿಸಿವೆ. +ಕಾರ್ಲ್‌ಮಾರ್ಕ್ಸ್‌ನು ಮೂರನೆಯ ಸಿದ್ಧಾಂತವನ್ನು ಪ್ರತಿಪಾದಿಸಿದನು. +ಅವನ ಪ್ರಕಾರ ಇತಿಹಾಸವು ಆರ್ಥಿಕ ಶಕ್ತಿಯ ಪರಿಣಾಮವೇ ಆಗಿದೆ. +ಇತಿಹಾಸವು ಮಹಾಪುರುಷರ ಜೀವನ ವೃತ್ತಾಂತ ಎಂಬ ಅಭಿಪ್ರಾಯವನ್ನು ಈ ಮೂರು ಸಿದ್ಧಾಂತಗಳಲ್ಲಿ ಯಾವ ಸಿದ್ಧಾಂತವೂ ಒಪ್ಪುವುದಿಲ್ಲ. +ನಿಜವಾಗಿಯೂ ಅವು ಇತಿಹಾಸ ನಿರ್ಮಾಣದಲ್ಲಿ ಮಾನವನಿಗೆ ಯಾವ ಸ್ಥಾನವನ್ನೂ ನೀಡಿಲ್ಲ. +ಆಗಸ್ಟಿನನ ಸಿದ್ಧಾಂತವನ್ನು ವಿಧಿವಾದಿಗಳ ಹೊರತು ಇತರ ಯಾರೂ ಮಾನ್ಯ ಮಾಡುವುದಿಲ್ಲ. +ಬಕಲ್‌ ಮತ್ತು ಮಾರ್ಕ್‌ರವರು ಹೇಳಿರುವುದರಲ್ಲಿ ಸ್ವಲ್ಪ ಸತ್ಯಾಂಶವಿದ್ದರೂ ಅವು ಸಂಪೂರ್ಣ ಸತ್ಯಗಳಾಗಿಲ್ಲ. +ವ್ಯಕ್ತಿ ಸ್ವರೂಪವಲ್ಲದ ಶಕ್ತಿಗಳೇ ಪ್ರಮುಖ, ಮತ್ತು ಇತಿಹಾಸ ನಿರ್ಮಾಣದಲ್ಲಿ ಮಾನವನು ಒಂದು ಅಂಶವಾಗಿಲ್ಲವೆಂಬ ಅವರ ಅಭಿಪ್ರಾಯ ಸಂಪೂರ್ಣ ತಪ್ಪು. +ವ್ಯಕ್ತಿ ಸ್ವರೂಪವಲ್ಲದ ಅಂಶಗಳು ನಿರ್ಣಾಯಕವಾಗಿರುತ್ತವೆ ಎಂಬುದನ್ನು ಸಂಪೂರ್ಣ ಅಲ್ಲಗಳೆಯಲಾಗದು. +ಆದರೆ ವ್ಯಕ್ತಿ ಸ್ವರೂಪವಲ್ಲದ ಅಂಶಗಳ ಪ್ರಭಾವ ಮಾನವನನ್ನೇ ಅವಲಂಬಿಸಿದೆ ಎಂಬುದನ್ನು ಒಪ್ಪಲೇಬೇಕು. +ಚಕಮಕಿಕಲ್ಲು ಎಲ್ಲಾ ಕಡೆ ಅಸ್ತಿತ್ವದಲ್ಲಿರಬಾರದು. +ಆದರೆ ಅದು ಎಲ್ಲಿ ಲಭ್ಯವಿದೆಯೋ ಅಲ್ಲಿ ಒಂದು ಕಲ್ಲನ್ನು ಇನ್ನೊಂದರೊಡನೆ ಹೊಡೆದು ಬೆಂಕಿಯನ್ನು ಉತ್ಪಾದಿಸಲು ಮನುಷ್ಯ ಬೇಕಾಗುತ್ತಾನೆ. +ಧಾನ್ಯಗಳು ಎಲ್ಲಾ ಕಡೆ ದೊರೆಯಲಿಕ್ಕಿಲ್ಲ. +ಆದರೆ ಅವು ದೊರೆತಲ್ಲಿ ಅವುಗಳನ್ನು ಕುಟ್ಟಿ ಪುಡಿಮಾಡಿ ರುಚಿಕರ ಮತ್ತು ಪುಷ್ಟಿಕರ ಹಿಟ್ಟನ್ನು ತಯಾರಿಸಿ ಒಕ್ಕಲುತನಕ್ಕೆ ಅಸ್ತಿಭಾರ ಹಾಕಲು ಮನುಷ್ಯ ಬೇಕು. +ಲೋಹ ದೊರೆಯದ ಅನೇಕ ಪ್ರದೇಶಗಳಿವೆ. +ಆದರೆ ಲೋಹಗಳು ದೊರೆಯುವಲ್ಲಿ ನಾಗರಿಕತೆ ಮತ್ತು ಸಂಸ್ಕೃತಿಗಳ ಆಧಾರಗಳಾದ ಸಲಕರಣೆಗಳು ಮತ್ತು ಯಂತ್ರಗಳನ್ನು ನಿರ್ಮಿಸಲು ಮನುಷ್ಯನ ಆವಶ್ಯಕತೆ ಇದೆ. +ಸಾಮಾಜಿಕ ಸನ್ನಿವೇಶಗಳ ನಿದರ್ಶನವನ್ನೇ ತೆಗೆದುಕೊಳ್ಳೋಣ. +ವಿವಿಧ ಬಗೆಯ ದುರಂತ ಪರಿಸ್ಥಿತಿಗಳು ಉದ್ಭವಿಸುತ್ತವೆ. +ಅಂತಹ ಒಂದು ಪರಿಸ್ಥಿತಿಯನ್ನು ಥಾಯರನ್ನು ಬರೆದಥಿಯೋಡರ ರೂಸ್‌ವೆಸ್ಟರ ಜೀವನ ಚರಿತ್ರೆಯಲ್ಲಿ ವಿವರಿಸಿದ್ದಾನೆ. +ಅವನು ಹೇಳುವಂತೆ: "ಪ್ರತಿಯೊಂದು ಪಂಥ, ಪಕ್ಷ ಅಥವಾ ಸಂಸ್ಥೆಯಲ್ಲಿ ಅದರ ಬೆಳವಣಿಗೆ ನಿಂತುಹೋದ, ಅದರ ರಕ್ತನಾಳಗಳು ಗಡುಸಾಗುವ, ಅದರ ಕಿರಿಯರು ದೂರದೃಷ್ಟಿಯನ್ನು ಕಳೆದುಕೊಳ್ಳುವ, ವಯೋವೃದ್ಧರು ಯಾವ ಕನಸುಗಳನ್ನು ಕಾಣಲಾರದಂತಹ ಸನ್ನಿವೇಶ ಒದಗಿ ಬರುತ್ತದೆ; + ಅದು ತನ್ನ ಗತಕಾಲವನ್ನೇ ಅವಲಂಬಿಸಿ ಜೀವಿಸುತ್ತದೆಯಲ್ಲದೆ ಆ ಗತಕಾಲವನ್ನೇ ಜೀವಂತವಾಗಿಡಲು ಹತಾಶ ಪ್ರಯತ್ನ ಮಾಡುತ್ತದೆ. +ರಾಜಕೀಯದಲ್ಲಿ ಇಂತಹ ನಿಶ್ಚೇಷ್ಟಿತ ಪರಿಸ್ಥಿತಿ ಉಂಟಾದಾಗ ಅದನ್ನು ಪ್ರತಿಗಾಮಿತ್ವ ಎಂದು ಕರೆಯುತ್ತೇವೆ. +ತಾನು ಜಡ್ಡುರೋಗಕ್ಕೆ ತುತ್ತಾಗಿರುವನೆಂಬುದರ ಪರಿವೆಯೇ ಇಲ್ಲದ, ಅವಶ್ಯಕತೆಯನ್ನು ಕಂಡುಕೊಳ್ಳದ ಶಮನದ ಸ್ಥಿತಿಯೇ ಪ್ರತಿಗಾಮಿತ್ವ ಬದಲಾದ ಹೊಸ ಪರಿಸ್ಥಿತಿಗೆ ಹೊಂದಿಕೊಳ್ಳಲಾರದ ಪ್ರತಿಗಾಮಿ ಮುದುಕ ಹಳೆಯ ಮುರಿದ ಕುರ್ಚಿಯಲ್ಲಿ ಕುಸಿಯುವಂತೆ ತನ್ನ ಗತಕಾಲವನ್ನೇ ಅವಲಂಬಿಸುತ್ತಾನೆ". +ಇನ್ನೊಂದು ವಿಧದ ಪರಿಸ್ಥಿತಿ ಅವನತಿ ಮಾತ್ರವಲ್ಲ, ವಿನಾಶಕಾರಿಯೂ ಆಗಿದೆ. +ಇಂತಹ ಪರಿಸ್ಥಿತಿ ಬಿಕ್ಕಟ್ಟು ಉಂಟಾದಾಗಲೆಲ್ಲ ಉದ್ಭವಿಸುತ್ತದೆ. +ಹಳೆಯ ವಿಧಾನಗಳು, ಹಳೆಯ ರೂಢಿಗಳು, ಹಳೆಯ ವಿಚಾರಗಳು ಸಮಾಜವನ್ನು ಮೇಲೆತ್ತಿ ಅದನ್ನು ಮುನ್ನಡೆಸುವಲ್ಲಿ ವಿಫಲವಾಗುತ್ತವೆ. +ಹೊಸ ವಿಧಾನಗಳನ್ನು ಕಂಡುಕೊಳ್ಳದ ಹೊರತು ಉಳಿವಿನ ಸಾಧ್ಯತೆ ಇರುವುದಿಲ್ಲ ಯಾವ ಸಮಾಜವೂ ಸರಳವಾಗಿ ಮುನ್ನಡೆಯಲಾರದು. +ಪ್ರತಿಯೊಂದು ಸಮಾಜವೂ ಅವನತಿ ಮತ್ತು ವಿನಾಶದ ಸಾಧ್ಯತೆಯನ್ನು ಎದುರಿಸಲೇಬೇಕಾಗುತ್ತದೆ. +ಕೆಲವು ಬದುಕುತ್ತವೆ, ಇನ್ನು ಕೆಲವು ನಾಶವಾಗುತ್ತವೆ. +ಮತ್ತು ಇನ್ನು ಕೆಲವು ಅವನತಿ ಮತ್ತು ಜಡತ್ವವನ್ನು ಅನುಭವಿಸ್ತುವೆ. +ಹೀಗೇಕೆ? ಕೆಲವು ಸಮಾಜಗಳ ಉಳಿವಿಗೆ ಕಾರಣಗಳೇನು? +ಕಾರ್ಲೈಲನು ಇದಕ್ಕೆ ಉತ್ತರ ನೀಡಿದ್ದಾನೆ. +ಅವನು ತನ್ನದೇ ಆದ ವಿಶಿಷ್ಟ ರೀತಿಯಲ್ಲಿ ಈ ರೀತಿ ಹೇಳುತ್ತಾನೆ. +“ಸಾಕಷ್ಟು ಒಳ್ಳೆಯ, ಬುದ್ಧಿವಂತ ಮತ್ತು ಶ್ರೇಷ್ಠ ವ್ಯಕ್ತಿಯನ್ನು ದೊರಕಿಸಿಕೊಂಡಿದ್ದೇ ಆದಲ್ಲಿ ಯಾವ ಕಾಲವೂ ವಿನಾಶವಾಗುತ್ತಿರಲಿಲ್ಲ. + ಕಾಲದ ನಿಜವಾದ ಅವಶ್ಯಕತೆ ಏನೆಂಬುದನ್ನು ಅರಿತುಕೊಳ್ಳುವ ಬುದ್ಧಿವಂತಿಕೆ,ಇಲ್ಲಿಂದ ಮುಂದೆ ಅದನ್ನೂ ಸರಿಯಾದ ಮಾರ್ಗದಲ್ಲಿ ನಡೆಸಿಕೊಂಡು ಹೋಗುವ ಶೌರ್ಯ, ಇವೇ ಎಲ್ಲಾ ಯುಗಕ್ಕೆ ಪರಿಹಾರಗಳು.” + ಇತಿಹಾಸ ನಿರ್ಮಾಣದಲ್ಲಿ ಮಾನವನ ಪಾತ್ರವನ್ನು ಅಲ್ಲಗಳೆಯುವವರಿಗೆ ಇದು ನಿರ್ಣಾಯಕ ಉತ್ತರ ಎಂದು ನನ್ನ ಭಾವನೆ. +ಯಾವುದೇ ಬಿಕ್ಕಟ್ಟನ್ನು ಹೊಸ ವಿಧಾನಗಳ ಆವಿಷ್ಕಾರದ ಮೂಲಕ ಎದುರಿಸಬಹುದು. +ಎಲ್ಲಿ ಹೊಸ ವಿಧಾನಗಳಿಲ್ಲೋ ಅಂತಹ ಸಮಾಜ ವಿನಾಶವಾಗುತ್ತದೆ. +ಕಾಲವೇ ಸಾಧ್ಯವಾದ ಹೊಸ ಮಾರ್ಗಗಳನ್ನು ಸೂಚಿಸುತ್ತದೆ. +ಆದರೆ ಸರಿಯಾದ ಮಾರ್ಗವನ್ನನು ಸರಿಸುವುದು ಕಾಲದ ಕೆಲಸವಲ್ಲ. +ಅದು ಮಾನವನ ಕೆಲಸ. +ಆದ್ದರಿಂದ ಮನುಷ್ಯ ಒಂದು ಅಂಶವಾಗಿದ್ದಾನೆ ಮಾತ್ರವಲ್ಲ,ವ್ಯಕ್ತಿ ಮೊದಲೋ, ಸಮಾಜ ಮೊದಲೋ ಎಂಬುದನ್ನು ಸನ್ನಿವೇಶವೇ ನಿರ್ಣಯಿಸುತ್ತದೆ. +ಮಹಾಪುರುಷ ಅಥವಾ ಶ್ರೇಷ್ಠ ವ್ಯಕ್ತಿ ಎಂದು ಯಾರನ್ನು ಕರೆಯಬಹುದು? +ಸಮರ ಶೂರರಾದ ಅಲೆಗ್ಸಾಂಡರ್‌, ಅಟ್ಟಲಾ, ಸೀಜರ್‌ ಮತ್ತು ತೈಮೂರಲಂಗರ ಬಗ್ಗೆ ಕೇಳಿದರೆ ಈ ಪ್ರಶ್ನೆಗೆ ಉತ್ತರ ಕೊಡುವುದು ಕಷ್ಟವಾಗಲಿಕ್ಕಿಲ್ಲಿ. + ಸಮರ ಶೂರರು ಯುಗವನ್ನೇ ನಿರ್ಮಿಸುವುದರ ಮೂಲಕ ವ್ಯಾಪಕವಾದ ಪರಿವರ್ತನೆಯನ್ನುಂಟು ಮಾಡುತ್ತಾರೆ. +ತಮ್ಮ ಜನಜನಿತ ವಿಜಯಗಳಿಂದ ಅವರು ತಮ್ಮ ಸಮಕಾಲೀನರನ್ನು ಎದೆಗುಂದಿಸಿ ದಿಗ್ಭಮೆಗೊಳಿಸುತ್ತಾರೆ. +ಬೇರೆಯವರು ಅವರನ್ನು ಶ್ರೇಷ್ಠ ಎಂದು ಕರೆಯುವ ಮುನ್ನವೇ ಅವರು ಶ್ರೇಷ್ಠ ಅಥವಾ ಮಹಾನ್‌ ಆಗಿಬಿಡುತ್ತಾರೆ. +ಅವರು ಮಾನವರ ಮಧ್ಯದಲ್ಲಿ ಜಿಂಕೆಗಳೊಡನೆ ಸಿಂಹವಿದ್ದಂತೆ. +ಆದರೆ ಇತಿಹಾಸದಲ್ಲಿ ಅವರ ಶಾಶ್ವತ ಪ್ರಭಾವ ಅತ್ಯಂತ ವಿರಳವೆಂಬುದು ಅಷ್ಟೇ ಸತ್ಯ. +ಅವರ ಗೆಲುವುಗಳು ಕುಗ್ಗುತ್ತವೆ. +ನೆಪೋಲಿಯನ್ನನಂತಹ ಮಹಾದಂಡ ನಾಯಕ ತನ್ನ ಎಲ್ಲಾ ಗೆಲುವುಗಳನಂತರ ಫ್ರಾನ್ಸ್‌, ದೇಶವನ್ನು ತಾನು ಪಡೆದುಕೊಂಡುದಕ್ಕಿಂತಲೂ ಚಿಕ್ಕದನ್ನಾಗಿಯೇ ಬಿಟ್ಟು ಹೋದ. +ದೂರದಿಂದ ನೋಡಿದಾಗ ಇವರು ಪ್ರಪಂಚದ ಗತಿಯಲ್ಲಿ ಅವಶ್ಯ ಬಿದ್ದಾಗ ಬಂದು ಹೋಗುವವರಾಗಿದ್ದು,ತಾವು ಜೀವಿಸಿದ ಸಮಾಜದ ಮೇಲೆ ಯಾವುದೇ ಶಾಶ್ವತ ಗುರುತನ್ನು ಬಿಟ್ಟು ಹೋಗಲಾರರು. +ಅವರ ಜೀವನದ ವಿವರಗಳು ಮತ್ತು ಅವುಗಳಿಂದ ದೊರೆಯುವ ಕಲಿಕೆ ಕುತೂಹಲಕಾರಿಯಾಗಿರಬಹುದು. +ಆದರೆ ಅವು ಇಡೀ ಸಮಾಜದ ಪರಿವರ್ತನೆ ಮತ್ತು ಅದರ ಸುಧಾರಣೆಯ ದಿಶೆಯಲ್ಲಿ ವ್ಯಾಪಕ ಪ್ರಭಾವ ಬೀರಲಾರವು. +ಸೈನ್ಯದ ದಂಡಾಧಿಕಾರಿಯಲ್ಲದವರ ಬಗ್ಗೆ ಈ ಪಶ್ನೆ ಕೇಳಿದಾಗ ಉತ್ತರ ಕೊಡುವುದು ಕಷ್ಟವೆನಿಸುವುದು. +ಏಕೆಂದರೆ ಆಗ ಅದು ಹಲವು ಪರೀಕ್ಷೆಗಳ ಪ್ರಶ್ನೆಯಾಗುವುದು. +ಬೇರೆ ಬೇರೆ ವ್ಯಕ್ತಿಗಳಿಗೆ ಬೇರೆ ಬೇರೆ ಪರೀಕ್ಷಾಧಾರಗಳುಂಟು. +ವೀರಯುಗ ಆರಾಧಕನಾದ ಕಾರ್ಲೈಲನು ತನ್ನದೇ ಆದ ಪರೀಕ್ಷಾ ವಿಧಾನವನ್ನು ನಿರೂಪಿಸಿದ್ದಾನೆ: +“ಯಾವುದೇ ವ್ಯಕ್ತಿ, ಅದರಲ್ಲಿಯೂ ವಿಶೇಷವಾಗಿ, ಮಹಾಪುರುಷನೆನಿಸಿಕೊಳ್ಳುವವನು ಸತ್ಯಕ್ಕೆ ಹೊರತಾಗಿರುವೆನೆಂದರೆ ಅದು ನಂಬಲಾಗದ ಸಂಗತಿ ಎಂದು ನಾನು ಕಂಠೋಕ್ತವಾಗಿ ಹೇಳುತ್ತೇನೆ. +ಅದೇ ಅವನ ಮೂಲ ಆಧಾರ ಎಂದು ನನಗನಿಸುತ್ತದೆ. +ಏನೇ ಮಾಡಲು ಶಕ್ತನಾದ ವ್ಯಕ್ತಿ ಮೊದಲು ಅದರ ಬಗ್ಗೆ ನಿಷ್ಕಪಟಿಯಾಗಿರಬೇಕು. +ಅಂಥವನನ್ನೇ ನಾನು ಸತ್ಯವಂತನೆಂದು ಕರೆಯುತ್ತೇನೆ. +ಸತ್ಯಸಂಧತೆ ಅಥವಾ ಮನಃಪೂರ್ವಕವಾದ ನಿಷ್ಠೆ ಆಳವಾಗಿ ಮತ್ತು ಅಪ್ಪಟವಾಗಿರುವುದು ಶೂರರಲ್ಲಿರಬೇಕಾದ ಪ್ರಮುಖಲಕ್ಷಣ.” +ಕಾರ್ಲೈಲನು ನಿಷ್ಠೆ ಅಥವಾ ಸಾಚಾತನದ ಪರೀಕ್ಷೆಯನ್ನು ನಿರ್ದಿಷ್ಟವಾಗಿ ವಿವರಿಸಲು ಕಾತುರನಾಗಿದ್ದನು. +ಮತ್ತು ಈ ವಿಷಯದಲ್ಲಿ ತನ್ನ ಸ್ಪಷ್ಟ ವಿಚಾರವನ್ನು ವಾಚಕರಿಗೆ ತಿಳಿಸ ಬಯಸಿದನು. +ಮನಃಪೂರ್ವಕವಾದ ನಿಷ್ಠೆಯ ಬಗ್ಗೆ ಆತನ ವಿಚಾರ ಹೀಗಿದ್ದಿತು: +“ನಿಷ್ಠೆ ಎಂದು ಕರೆದುಕೊಳ್ಳುವುದು ನಿಷ್ಠೆಯಲ್ಲ. +ನಿಜವಾಗಿಯೂ ಅದು ಒಂದು ನಿಕೃಷ್ಟ ವಿಷಯ. +ಅದು ಒಂದು ಪೊಳ್ಳು, ಬಡಾಯಿಯ ಬುದ್ಧಿಪೂರ್ವಕ ನಿಷ್ಠೆ. +ಅದು ಮುಖ್ಯವಾಗಿ ಆತ್ಮವಂಚನೆಯದಾಗಿದೆ. +ಮಹಾಪುರುಷನ ಶ್ರದ್ಧೆ ತನಗೇ ಅವ್ಯಕ್ತ ಮತ್ತು ಅನಿರ್ವಚನೀಯವಾದದ್ದು. +ಅಲ್ಲ, ಅವನಿಗೆ ಕಪಟಾಚರಣೆಯ ಅರಿವಿರುತ್ತದೆಯಲ್ಲದೆ,ನಿಷ್ಠೆಯ ಅರಿವಿರುವುದಿಲ್ಲ. +ಏಕೆಂದರೆ, ಸತ್ಯಮಾರ್ಗದ ನಿಯಮಗಳಂತೆ ಮನುಷ್ಯ ಒಂದು ದಿನವಾದರೂ ನಡೆಯಬಲ್ಲನೇ? ಇಲ್ಲ. +ಮಹಾಪುರುಷನಾದವನು ತನ್ನ ನಿಷ್ಠೆಯ ಬಗ್ಗೆ ಜಂಭ ಕೊಚ್ಚಿಕೊಳ್ಳುವುದಿಲ್ಲ. +ಹಾಗೆ ಹೇಳಿಕೊಳ್ಳುವುದಂತೂ ದೂರ ಉಳಿಯಿತು, ಅವನು ತಾನು ಸತ್ಯಸಂಧನಾಗಿದ್ದೇನೆಯೇ ಎಂಬ ಪ್ರಶ್ನೆಯನ್ನು ಕೇಳಿಕೊಳ್ಳುವುದಿಲ್ಲ. +ಅವನ ಸತ್ಯಸಂಧತೆ ಅಥವಾ ನಿಷ್ಠೆ ಅವನನ್ನೇ ಅವಲಂಬಿಸಿರುವುದಿಲ್ಲ. +ಅವನು ಸತ್ಯಸಂಧನಾಗದೇ ಬೇರೆ ಮಾರ್ಗವೇ ಇಲ್ಲ.” +ಎಷ್ಟು ದೊಡ್ಡ ದಂಡನಾಯಕವಾಗಿದ್ದನೋ ಅಷ್ಟೇ ಶ್ರೇಷ್ಠ ಆಡಳಿತಗಾರನಾಗಿದ್ದ ನೆಪೋಲಿಯನ್ನನ ಬಗ್ಗೆ ಪರಿಶೀಲಿಸುವಾಗ, ಮಹಾಪುರುಷರ ಬಗ್ಗೆ ಲಾರ್ಡ್‌ ರೋಸ್‌ಬೆರಿ ತನ್ನದೇ ಆದ ಪರೀಕ್ಷಾಧಾರವನ್ನು ಸೂಚಿಸಿದ್ದನು. +ನೆಪೋಲಿಯನ್‌ ಮಹಾಪುರುಷನಾಗಿದ್ದನೇ? +ಎಂಬ ಪ್ರಶ್ನೆಗೆ ಉತ್ತರಿಸುವಾಗ ರೋಸ್‌ಬೆರಿ ಈ ರೀತಿ ಹೇಳಿದ್ದಾನೆ: +"ಮಹಾ" (ಶ್ರೇಷ್ಠ ಎಂದರೆ ಬೌದ್ಧಿಕತೆ ಮತ್ತು ನೈತಿಕ ಗುಣಗಳ ಸಂಗಮವೆಂದಾದರೆ, ಅವನು(ನೆಪೋಲಿಯನನು) ನಿಜವಾಗಿಯೂ ಶ್ರೇಷ್ಠವಾಗಿರಲಿಲ್ಲ. +ಆದರೆ ಅವನು ಅಸಾಮಾನ್ಯ ಮತ್ತು ಪರಮೋಚ್ಚನಾಗಿದ್ದನೆಂಬ ಕಾರಣದಿಂದ ಶ್ರೇಷ್ಠನಾಗಿದ್ದನೆಂಬುದರಲ್ಲಿ ಸಂದೇಹವಿಲ್ಲ. +ಶ್ರೇಷ್ಠತೆಯು ಸಹಜಶಕ್ತಿ, ಪ್ರಬಲತೆ, ಮತ್ತು ಮಾನವೀಯತೆಯನ್ನೇ ದಾಟನಿಂತ ಮಾನವೀಯತೆಯ ಪ್ರತೀಕ ಎಂದಾದರೆ ನೆಪೋಲಿಯನ್ನನು ಖಂಡಿತವಾಗಿ ಶ್ರೇಷ್ಠನಾಗಿದ್ದನು. +ನಾವು ಯಾವುದನ್ನು ಪ್ರತಿಭೆ ಎಂದು ಕರೆಯುತ್ತೇವೆಯೋ ಅಂತಹ ನಿರೂಪಿಸಲಾಗದಂತಹ ಕಿಡಿಯೂ ಅಲ್ಲದೆ, ಎಂದೂ ಯಾರೂ ಸರಿಸಮಾನಿಸಲಾರದ ಮತ್ತು ಮೀರಿಸಲಾರದಂತಹ ಕಿಡಿಯೂ ಅಲ್ಲದೆ, ಎಂದೂ ಯಾರೂ ಸರಿಸಮಾನಿಸಲಾರದ ಮತ್ತು ಮೀರಿಸಲಾರದಂತಹ ಬುದ್ಧಿಮತ್ತೆ ಮತ್ತು ಚೇತನದ ಸಂಗಮದ ಪ್ರತೀಕ ಅವನಾಗಿದ್ದನು.” +ತತ್ವಜ್ಞಾನಿಗಳು ಅಥವಾ ಮಾನವನ ವ್ಯವಹಾರಗಳಲ್ಲಿ ದೈವಿಕ ಮಾರ್ಗದರ್ಶನವಿದೆ ಎಂದು ನಂಬುಗೆಯುಳ್ಳವರ ಪ್ರಕಾರ ಇನ್ನೊಂದು, ಮೂರನೆಯ ಪರೀಕ್ಷಾಧಾರವೂ ಉಂಟು. +ಶ್ರೇಷ್ಠ ಪುರುಷಯಾರು ಎಂಬ ಬಗ್ಗೆ ಅವರು ವಿಭಿನ್ನವಾದ ಕಲ್ಪನೆಯನ್ನು ಹೊಂದಿದ್ದಾರೆ. +ಅವರ ಅಭಿಪ್ರಾಯದ ಸಾರಾಂಶವನ್ನು ರೋಸ್‌ಬೆರಿ ಹೇಳಿದಂತೆ ಸಂಕ್ಷಿಪ್ತವಾಗಿ ಹೇಳುವುದಾದರೆ, ಒಬ್ಬ ಮಹಾಪುರುಷನನ್ನು ಮಹತ್ತರವಾದ ನೈಸರ್ಗಿಕ ಅಥವಾ ಅದ್ಭುತ ಶಕ್ತಿಯಿಂದಾಗಿ ಸಮಾಜದ ಜಾಡ್ಯವನ್ನು ನಿವಾರಿಸಿ ಅದನ್ನು ಸರಿಯಾದ ಮಾರ್ಗದಲ್ಲಿ ನಡೆಸಿಕೊಂಡು ಹೋಗಲು, ಮತ್ತು ಮುಖ್ಯವಾಗಿ ಸಮಾಜದ ಪುನರುತ್ಥಾನವನ್ನುಂಟು ಮಾಡಲು ಶಕ್ತನಾದ ದುಷ್ಟರನ್ನು ಶಿಕ್ಷಿಸುವ ದೇವರ ಆಗ್ರಹ ಸ್ವರೂಪದ ವ್ಯಕ್ತಿ ಈ ಲೋಕದಲ್ಲಿ ಜನ್ಮ ತಾಳುತ್ತಾನೆ. +ಈ ಮೂರರಲ್ಲಿ ಯಾವುದು, ನಿಜವಾದ ಪರೀಕ್ಷೆ? +ನನ್ನ ನಿರ್ಣಯದಲ್ಲಿ ಇವು ಏಕಪಕ್ಷೀಯವಾಗಿದ್ದು ಯಾವುವೂ ಸಮರ್ಪಕ ವಿವರಣೆಗಳಾಗಿಲ್ಲ. +ಮನಃಪೂರ್ವಕವಾದ ಶ್ರದ್ಧೆ ಮಹಾಪುರುಷತ್ವದ ಒರೆಗಲ್ಲು. +ಕ್ಷೆಮೆನ್ಫ್ಯೂ ಒಂದು ಕಡೆ ಹೇಳಿರುವಂತೆ ಬಹುತೇಕ ರಾಜಕೀಯ ಪ್ರಮುಖರು ಪಟಂಗರೇ ಆಗಿರುತ್ತಾರೆ. +ರಾಜಕೀಯ ಪ್ರಮುಖರು ಅಥವಾ ನಾಯಕರು ಶ್ರೇಷ್ಠ ಪುರುಷರಾಗಿರಬೇಕಾಗಿಲ್ಲ. +ಯಾರನ್ನು ನೋಡಿ ಕ್ಲೆಮೆನ್ಸ್ಯೂ ತನ್ನ ಅಭಿಪ್ರಾಯವನ್ನು ರೂಪಿಸಿಕೊಂಡನೋ ಅಂತಹವರಲ್ಲಿ ನಿಷ್ಠೆಯ ಅಭಾವವಿದ್ದಿರಬಹುದು. +ಆದಾಗ್ಯೂ ನಿಷ್ಠೆಯೇ ಪ್ರಾಥಮಿಕ ಅಥವಾ ಏಕೈಕ ಒರೆಯಾಗಿದೆ ಎಂಬುದನ್ನೂ ಯಾರೂ ಒಪ್ಪವುದಿಲ್ಲ. +ನಿಷ್ಠೆ ಒಂದೇ ಸಾಲದು. +ಮಹಾಪುರುಷನಲ್ಲಿ ನಿಷ್ಠೆ ಇರಲೇಬೇಕು. +ಏಕೆಂದರೆ ಅದು ಎಲ್ಲಾ ನೈತಿಕ ಗುಣಗಳ ಸಮಷ್ಟಿ ಅದಿರದ ಹೊರತು ಯಾರನ್ನೂ ಮಹಾಪುರುಷನೆಂದು ಕರೆಯಲಾಗದು. +ಆದರೆ ಒಬ್ಬ ವ್ಯಕ್ತಿ ಮಹಾಪುರುಷನಾಗಬೇಕಾದರೆ ನಿಷ್ಠೆಗಿಂತಲೂ ಹೆಚ್ಚಿನ ಅಂಶ ಅವನಲ್ಲಿರಬೇಕಾಗುತ್ತದೆ. +ಒಬ್ಬ ಮನುಷ್ಯ ನಿಷ್ಠೆಯನ್ನು ಹೊಂದಿದ್ದರೂ ಅವನು ಮೂರ್ಖನಾಗಿರಬಹುದು. +ಮೂರ್ಖನು ಮಹಾಮಾನವನ ವಿರೋಧಾಭಾಸವಾಗಿರುತ್ತಾನೆ. +ಯಾವ ವ್ಯಕ್ತಿ ಸಮಾಜಕ್ಕೆ ಗಂಡಾಂತರ ಒದಗಿದಾಗ ಅದರ ಉಳಿವಿಗಾಗಿ ನಿವಾರಣೋಪಾಯವನ್ನು ನೀಡಬಲ್ಲನೋ ಅವನೇ ಮಹಾಪುರುಷ. +ಆದರೆ ಅಂತಹ ಮಾರ್ಗವನ್ನು ಕಂಡು ಹಿಡಿಯುವಲ್ಲಿ ಅವನಿಗೆ ಸಹಾಯ ಮಾಡುವುದು ಯಾವುದು? +ಅವನು ತನ್ನ ಬುದ್ಧಿಮತ್ತೆಯಿಂದ ಮಾತ್ರ ನಿವಾರಣೋಪಾಯವನ್ನು ಕಂಡುಕೊಳ್ಳಬಲ್ಲ. +ಇನ್ನೆಲ್ಲವೂ ನಿರರ್ಥಕ. +ಆದ್ದರಿಂದ ನಿಷ್ಠೆ ಮತ್ತು ಬುದ್ಧಿಮತ್ತೆಯ ಸಂಗಮವಾಗದ ಹೊರತು ಯಾವ ವ್ಯಕ್ತಿಯೂ ಮಹಾಪುರುಷನಾಗಲಾರ. +ಮಹಾಪುರುಷನನ್ನು ಗುರುತಿಸಲು ಇಷ್ಟೇ ಸಾಕೇ? +ಈ ಹಂತದಲ್ಲಿ ಪ್ರಖ್ಯಾತ ಪುರುಷ ಮತ್ತು ಮಹಾಪುರುಷರ ನಡುವೆ ಇರುವ ವ್ಯತ್ಯಾಸವನ್ನು ಪರಿಶೀಲಿಸಬೇಕೆಂದು ನನಗನಿಸುತ್ತದೆ. +ಏಕೆಂದರೆ ಮಹಾಪುರುಷನು ಪ್ರಖ್ಯಾತಪುರುಷನಿಗಿಂತ ಅತ್ಯಂತ ಭಿನ್ನವಾಗಿರುವನೆಂದು ನನ್ನ ದೃಢ ನಂಬುಗೆ. +ಬೇರೆಯವರೊಡನೆ ಹೋಲಿಸಿದಾಗ ನಿಷ್ಠೆ ಮತ್ತು ಬುದ್ಧಿಮತ್ತೆ ಇವೆರಡು ಪ್ರಖ್ಯಾತ ಪುರುಷನನ್ನು ಗುರುತಿಸಲು ಸಾಕು. +ಆದರೆ ಅವನನ್ನು ಮಹಾಪುರುಷನ ಘನತೆಯ ಸ್ಥಾನಕ್ಕೆ ಏರಿಸಲು ಈ ಎರಡು ಗುಣಗಳೇ ಸಾಲವು. +ಒಬ್ಬ ಮಹಾಪುರುಷನಲ್ಲಿ ಪ್ರಖ್ಯಾತ ಪುರುಷನಲ್ಲಿರುವ ಗುಣಗಳಿಗಿಂತಲೂ ಇನ್ನೂ ಹೆಚ್ಚಿನ ಅಂಶ ಬೇಕಾಗುತ್ತದೆ. +ಅದು ಯಾವುದು? +ಈ ಹಂತದಲ್ಲಿ ತತ್ವಜ್ಮಾನಿಯು ಮಹಾಪುರುಷನ ಬಗ್ಗೆ ನೀಡಿದ ವ್ಯಾಖ್ಯೆ ಮಹತ್ವವೆನಿಸುವುದು. +ಮಹಾಪುರುಷನೆನಿಸಿಕೊಳ್ಳುವವನು ಸಾಮಾಜಿಕ ಉದ್ದೇಶದಿಂದ ಪ್ರೇರಿತನಾಗಿದ್ದು ಸಮಾಜದ ರಕ್ಷಕ ಮತ್ತುಉದ್ಧಾರಕನಾಗಿ ಅದರಲ್ಲಿನ ಕೊಳೆಯನ್ನು ತೊಳೆಯುವವನಾಗಿರಬೇಕು. +ಈ ಎಲ್ಲಾ ಅಂಶಗಳಿಂದಲೇ ಮಹಾಪುರುಷ ಮತ್ತು ಪ್ರಖ್ಯಾತ ಪುರುಷನ ನಡುವೆ ಇರುವ ವ್ಯತ್ಯಾಸವನ್ನು ಕಂಡುಕೊಳ್ಳಬಹುದು. +ಅಂತಹ ವ್ಯಕ್ತಿಯೇ ಮಹಾಪುರುಷನ ಬಿರುದಿಗೆ ಪಾತ್ರನಾಗಿ ಎಲ್ಲರ ಗೌರವ ಮತ್ತು ಭಕ್ತಿಗೆ ಅರ್ಹನಾಗುತ್ತಾನೆ. +ರಾನಡೆಯವರು ಒಬ್ಬ ಮಹಾಪುರುಷರಾಗಿದ್ದರೇ? +ಅವರು ದೇಹಗಾತ್ರದಲ್ಲೇನೋ ದೊಡ್ಡವರಾಗಿದ್ದರು. +ಅವರ ವಿಶಾಲಕಾಯದಿಂದ ಅವರನ್ನು ಒಬ್ಬ ಐರಿಷ್‌ ಸೇವಕ ತನ್ನ ಸ್ವಾಮಿಯಾದ ಕಾರ್ಡಿನಲ್‌ ವೈಸ್‌ಮನನನ್ನು "ಪ್ರಖ್ಯಾತರಾದ ತಾವು' ಎಂದು ಉಚ್ಚಾರ ಮಾಡಲು ಬಾರದೆ “ಅಪರಿಮಿತರಾದ ತಾವು' ಎಂದು ಹೇಳಿದ ರೀತಿಯಲ್ಲಿ ರಾನಡೆಯವರು ಅಪರಿಮಿತರಾದ ವ್ಯಕ್ತಿಯಾಗಿದ್ದರು. +ಅವರು ಉಜ್ವಲ ಮನೋಧರ್ಮದವರೂ,ಸ್ನೇಹಪರರೂ ಮತ್ತು ಬಹುಮುಖ ಸಾಮಥ್ಯವುಳ್ಳವರೂ ಆಗಿದ್ದರು. +ಎಲ್ಲಾ ನೈತಿಕ ಗುಣಗಳ ಸಮ್ಮಿಳತವೇ ಆಗಿದ್ದಂತಹ ನಿಷ್ಠೆಯನ್ನು ಅವರು ಹೊಂದಿದ್ದರು. +ಆ ನಿಷ್ಠೆ ಕಾರ್ಲೈಲನು ನಿಗದಿಪಡಿಸಿದಂತಹುದಾಗಿತ್ತು. +ಅದು ಪೊಳ್ಳು ನಿಷ್ಠೆಯಾಗಿರಲಿಲ್ಲ. +ಅದು ಸ್ವಾಭಾವಿಕವಾದ ನಿಷ್ಠೆಯಾಗಿದ್ದು, ಸ್ವಭಾವ ಜನ್ಯವಾಗಿತ್ತು. ಡಾಂಭಿಕವಾಗಿರಲಿಲ್ಲ. + ಅವರು ದೊಡ್ಡ ದೇಹದವರೂ ಮತ್ತು ನಿಷ್ಠೆಯಲ್ಲಿಯೂ ದೊಡ್ಡವರಾಗಿದ್ದರಲ್ಲದೆ ಬುದ್ಧಿಮತ್ತೆಯಲ್ಲಿಯೂ ದೊಡ್ಡವರಾಗಿದ್ದರು. +ರಾನಡೆಯವರು ಉನ್ನತಮಟ್ಟದ ಸಾಮರ್ಥವನ್ನು ಹೊಂದಿದ್ದರೆಂಬುದನ್ನು ಯಾರೂ ಪ್ರಶ್ನಿಸಲಾರರು. +ಅವರು ಉಚ್ಚನ್ಯಾಯಾಲಯದ ನ್ಯಾಯವಾದಿ ಮತ್ತು ನ್ಯಾಯಮೂರ್ತಿ ಮಾತ್ರವಾಗಿರಲಿಲ್ಲ. +ಅವರು ಒಬ್ಬ ಪ್ರಥಮ ದರ್ಜೆಯ ಅರ್ಥಶಾಸ್ತ್ರಜ್ಯರೂ ಇತಿಹಾಸಕಾರರೂ ಶಿಕ್ಷಣವೇತ್ತರೂ ಮತ್ತು ದಿವ್ಯಜ್ಞಾನಿಗಳೂ ಆಗಿದ್ದರು. +ಅವರು ರಾಜಕಾರಣಿಯಾಗಿರಲಿಲ್ಲ. +ಅಬ್ರಹಾಂ ಲಿಂಕನ್‌ಒಮ್ಮೆ ಹೇಳಿದಂತೆ: “ರಾಜಕಾರಣಿಗಳು ಜನತೆಯ ಹಿತಕ್ಕಿಂತ ಭಿನ್ನವಾದ ತಮ್ಮದೇ ಆದ ವಿಶಿಷ್ಟ ಹಿತವನ್ನು ಹೊಂದಿದವರಾಗಿರುತ್ತಾರೆ. +ಒಟ್ಟಾರೆ ಹೇಳುವುದಾದರೆ ಅವರೆಲ್ಲರೂ ಸತ್ಯವ೦ಂತರ ಪಥದಿಂದ ಒಂದು ಹೆಜ್ಜೆ ದೂರವಿರುವವರೇ ಆಗಿರುತ್ತಾರೆ” . +ರಾನಡೆಯವರು ರಾಜಕಾರಣಿಯಾಗಿರದಿದ್ದರೂ, ರಾಜಕೀಯದಲ್ಲಿ ಅಗಾಧ ಆಸಕ್ತಿಯುಳ್ಳವರಾಗಿದ್ದರು. +ಭಾರತದ ಇತಿಹಾಸದಲ್ಲಿ ರಾನಡೆಯವರಷ್ಟು ಅಗಾಧವಾದ ಪಾಂಡಿತ್ಯ ತೀಕ್ಷ್ಣಬುದ್ಧಿ ಮತ್ತು ದೂರದೃಷ್ಟಿಯುಳ್ಳ ಇನ್ನೊಬ್ಬ ವ್ಯಕ್ತಿಯನ್ನು ಕಾಣುವುದು ಅಸಾಧ್ಯ. +ಅವರು ಅಧ್ಯಯನ ಮಾಡದ ಮತ್ತು ಅಗಾಧ ಪಾಂಡಿತ್ಯ ಪಡೆಯದ ವಿಷಯವೇ ಇರಲಿಲ್ಲ. +ಅವರ ಅಧ್ಯಯನ ಅದ್ಭುತವಾಗಿತ್ತು . +ಅವರು ಪರಿಪೂರ್ಣ ಪಂಡಿತರಾಗಿದ್ದರು. +ಅವರು ತಮ್ಮ ಕಾಲದಲ್ಲಿ ಮಾತ್ರ ಶ್ರೇಷ್ಠರಾಗಿರಲಿಲ್ಲ. +ಯಾವುದೇ ಮಾನದಂಡದಿಂದ ಪರೀಕ್ಷಿಸಿದರೂ ಅವರು ಸದಾ ಶ್ರೇಷ್ಠರಾಗಿದ್ದರು. +ನಾನು ಈಗಾಗಲೇ ಹೇಳಿರುವಂತೆ ಶ್ರೇಷ್ಠತೆಯ ಪಟ್ಟಕ್ಕೆ ಕೇವಲ ನಿಷ್ಠೆ ಮತ್ತು ಬುದ್ಧಿಮತ್ತೆ ಒಟ್ಟಾರೆಯಾಗಿಯಾಗಲೀ ಅಥವಾ ಪ್ರತ್ಯೇಕವಾಗಿಯಾಗಲೀ ಸಮರ್ಪಕ ಆಧಾರಗಳಾಗಲಾರವು. +ಈ ಎರಡು ಗುಣಗಳನ್ನಷ್ಟೇ ಹೊಂದಿದ್ದರೆ ರಾನಡೆಯವರನ್ನು ಮಹಾಪುರುಷರೆಂದು ಕರೆಯಲಾಗುತ್ತಿರಲಿಲ್ಲ. +ತಾವು ಮಹಾಪುರುಷರೆಂದು ಕರೆಯಿಸಿಕೊಳ್ಳುವ ಹಕ್ಕು ರಾನಡೆಯವರು ಹೊಂದಿದ್ದ ಸಾಮಾಜಿಕ ಉದ್ದೇಶ್ಯಗಳು ಮತ್ತು ಅವರು ಅವುಗಳನ್ನು ಸಾಧಿಸಿದ ರೀತಿಯನ್ನೇ ಅವಲಂಬಿಸಿದೆ. +ಈ ಬಗ್ಗೆ ಸಂದೇಹವೇ ಇರಲಾರದು. +ಇತಿಹಾಸಕಾರರು, ಅರ್ಥಶಾಸ್ತ್ರಜ್ವರು ಅಥವಾ ಶಿಕ್ಷಣವೇತ್ತರು ಎನ್ನುವುದಕ್ಕಿಂತ ಹೆಚ್ಚಾಗಿ ರಾನಡೆಯವರು ಸಮಾಜ ಸುಧಾರಕರೆಂದೇ ಪ್ರಸಿದ್ಧರಾಗಿದ್ದಾರೆ. +ಅವರ ಇಡೀ ಜೀವನ ಸಮಾಜ ಸುಧಾರಣೆಗಾಗಿ ನಡೆಸಿದ ಅವಿರತ ಹೋರಾಟವಾಗಿದೆ. +ಅವರು ಸಮಾಜ ಸುಧಾರಕರಾಗಿದ್ದರಿಂದಲೇ ಅವರನ್ನು ಮಹಾಪುರುಷರೆಂದು ಮಾನ್ಯ ಮಾಡಲಾಗಿದೆ. +ಒಬ್ಬ ಸುಧಾರಕನಲ್ಲಿರಬೇಕಾದ ದೂರದೃಷ್ಟಿ ಮತ್ತು ಧೈರ್ಯ ಈ ಎರಡೂ ಅಂಶಗಳು ರಾನಡೆಯವರಲ್ಲಿದ್ದವು. +ಅವರು ಜನಿಸಿದ ವಾತಾವರಣದಲ್ಲಿ ಅವರ ಧೈರ್ಯಕ್ಕೆ ಹೋಲಿಸಿದಾಗ ಅವರ ದೂರದೃಷ್ಟಿ ಕಡಿಮೆಯ ಗುಣವಾಗಿರಲಿಲ್ಲ. +ಅವರು ಒಬ್ಬ ಪ್ರವಾದಿಯ ದೂರದೃಷ್ಟಿಯನ್ನು ಬೆಳೆಸಿಕೊಂಡಿದ್ದರು. +ಈ ಪದವನ್ನು ಯಹೂದಿಯ ಅರ್ಥದಲ್ಲಿ ಬಳಸಿದ್ದೇನೆ-ಎಂಬುದು ಅವರು ಹುಟ್ಟಿದ ಕಾಲವನ್ನು ಗಣನೆಗೆ ತೆಗೆದುಕೊಂಡಾಗ ಆಶ್ಚರ್ಯಕರವೇ ಸರಿ. +ರಾನಡೆಯವರು ೧೮೪೨ರಲ್ಲಿ ಎಂದರೆ ಮರಾಠ ಚಕ್ರಾಧಿಪತ್ಯದ ಪತನಕ್ಕೆ ಕಾರಣವಾದ ಕರ್ಕಿಯ ಯುದ್ದದ ೨೪ ವರುಷಗಳ ನಂತರ ಜನಿಸಿದರು. +ಮರಾಠ ಚಕ್ರಾಧಿಪತ್ಯದ ಪತನದ ಬಗ್ಗೆ ಬೇರೆ ಬೇರೆ ಜನರಲ್ಲಿ ಬೇರೆ ಬೇರೆ ಪ್ರತಿಕ್ರಿಯೆ ವ್ಯಕ್ತವಾದವು. +ನಾತುರಂತಹ ವ್ಯಕ್ತಿಗಳು ಘಟನೆಗಿಂತ ಮುಂಚೆಯೇ ಮತ್ತು ಇನ್ನು ಕೆಲವರು ಘಟನೆಯ ನಂತರ ಇದರಲ್ಲಿ ಶಾಮೀಲಾದರು. +ಇವರೆಲ್ಲರೂ ಬ್ರಾಹ್ಮಣ ಪೇಶ್ವೆಯವರ ಕರಾಳ ಆಡಳಿತ ಕೊನೆಗೊಂಡಿತೆಂದು ಸಂತಸಪಟ್ಟರು. +ಆದರೆ ಈ ಘಟನೆಯಿಂದ ಮಹಾರಾಷ್ಟ್ರದ ಅಸಂಖ್ಯಾತ ಜನರು ಸಂಭೀಭೂತರಾದುದು ನಿಸ್ಸಂದೇಹ ಸಂಗತಿ. +ಇಡೀ ಭಾರತ ದೇಶ ಮುನ್ನುಗ್ಗಿ ಬರುತ್ತಿದ್ದ ವಿದೇಶಿ ದಳಗಳ ಅಧೀನಕ್ಕೊಳಗಾಗುತ್ತಿದ್ದ ಸಮಯದಲ್ಲಿ ಮಹಾರಾಷ್ಟ್ರದ ಒಂದು ಮೂಲೆಯಲ್ಲಿ ವಾಸಿಸುತ್ತಿದ್ದ ಹಾಗೂ ಸ್ವಾತಂತ್ರ್ಯದ ಅರ್ಥವನ್ನು ತಿಳಿದುಕೊಂಡಿದ್ದ ಕಟ್ಟು ಮಸ್ತಾದ ಜನಾಂಗ ಭೂಭಾಗದ ಅಂಗುಲ ಅಂಗುಲಕ್ಕೂ ಹೋರಾಡಿ ಮೈಲು ಮೈಲುಗಟ್ಟಲೇ ಪ್ರದೇಶದ ಆಧಿಪತ್ಯ ಸ್ಥಾಪಿಸಿದ್ದಿತು. +ಬ್ರಿಟಿಷರ ಗೆಲವಿನಿಂದಾಗಿ ಈ ಜನಾಂಗವು ತನ್ನ ಅತ್ಯಂತ ಅಮೂಲ್ಯ ವಸ್ತುವನ್ನು ಕಳೆದುಕೊಂಡಿತ್ತು. +ಆಗ ಮಹಾರಾಷ್ಟ್ರದ ಉತ್ಕೃಷ್ಟ ಬುದ್ಧಿಮತ್ತೆ ಯಾವ ರೀತಿಯಲ್ಲಿ ದಿಗೃಮೆಗೊಂಡಿತ್ತು . +ತನ್ನ ಕ್ಷಿತಿಜದಲ್ಲಿ ಸಂಪೂರ್ಣ ಕತ್ತಲೆ ಆವರಿಸಿದ್ದನ್ನು ಕಂಡಿತ್ತು ಎಂಬುದನ್ನು ಯಾರಾದರೂ ಊಹಿಸಬಹುದು. +ಇಂತಹ ಬೃಹತ್‌ ಪ್ರಮಾಣದ ವಿನಾಶಕ್ಕೆ ಸ್ವಾಭಾವಿಕ ಪ್ರತಿಕ್ರಿಯೆ ಏನಾಗಿರಬಹುದು? +ಆತ್ಮಾರ್ಪಣೆ, ಸೋಲು ಮತ್ತು ಅನಿವಾರ್ಯಕ್ಕೆ ಶರಣಾಗದೇ ಮತ್ತೇನು ಸಾಧ್ಯ? +ಈ ಸನ್ನಿವೇಶಕ್ಕೆ ರಾನಡೆಯವರು ಹೇಗೆ ಸ್ಪಂದಿಸಿದರು? +ಅವರ ಸ್ಪಂದನ ಭಿನ್ನವಾಗಿಯೇ ಇತ್ತು. +ಬಿದ್ದವನು ಏಳಲೇಬೇಕು ಎಂಬ ಆಶಾಭಾವನೆಯನ್ನು ಅವರು ಹೊಂದಿದ್ದರು. +ಈ ಆಶಾಭಾವನೆಯ ಆಧಾರವಾಗಿ ಅವರು ಒಂದು ಹೊಸ ವಿಶ್ವಾಸವನ್ನು ಬೆಳೆಸಿಕೊಂಡರು. +ಅವರ ಮಾತಿನಲ್ಲಿಯೇ ಇದನ್ನು ಕೇಳುವ:“ನನ್ನ ನಂಬಿಕೆಯ ಎರಡು ಅಂಶಗಳಲ್ಲಿ ನನಗೆ ಅಚಲ ವಿಶ್ವಾಸವಿದೆ. +ನಮ್ಮ ಈ ದೇಶ ಉಜ್ವಲ ಭವಿಷ್ಯವುಳ್ಳ ನಾಡು. +ಈ ನಮ್ಮ ಜನಾಂಗ ಆಯ್ದ ಉತ್ಕೃಷ್ಟ ಜನಾಂಗ” ಅವರು ಭರವಸೆ ಮತ್ತು ಆತ್ಮವಿಶ್ವಾಸಗಳ ಹೊಸ ವೈವಿಧ್ಯಮಯ ಸುವಾರ್ತೆಯನ್ನು ನಿರೂಪಿಸುವುದರಿಂದಲೇ ಸಂತೃಪ್ತರಾಗಲಿಲ್ಲ. +ಈ ಆಶೆಯನ್ನು ಈಡೇರಿಸಿಕೊಳ್ಳುವ ಬಗೆಯ ಪ್ರಶ್ನೆಗೆ ಉತ್ತರ ಹುಡುಕುವುದರಲ್ಲಿ ನಿರತರಾದರು. +ಈ ಅಧಃಪತನದ ಕಾರಣಗಳ ನಿರ್ವಿಕಲ್ಪ ವಿಶ್ಲೇಷಣೆ ಈ ದಿಶೆಯಲ್ಲಿ ಮೊದಲನೆಯ ಅವಶ್ಯಕತೆಯಾಗಿತ್ತು. +ಈ ಅಧಃಪತನವು ಹಿಂದೂ ಸಾಮಾಜಿಕ ವ್ಯವಸ್ಥೆಯಲ್ಲಿರುವ ಕೆಲವು ದೌರ್ಬಲ್ಯಗಳಿಂದುಂಟಾಗಿದ್ದು ಈ ದೌರ್ಬಲ್ಯಗಳನ್ನು ನಿವಾರಿಸುವವರೆಗೂ ನಮ್ಮ ಆಶೆಗಳು ಈಡೇರಲಾರವು. +ಆದ್ದರಿಂದ ದಿವ್ಯ ಸಂದೇಶವು ಕರ್ತವ್ಯದ ಕರೆ ನೀಡುತ್ತದೆ. +ಹಿಂದೂ ಸಮಾಜದ ಸುಧಾರಣೆಯೇ ಈ ಕರ್ತವ್ಯದ ಕರೆಯಾಗಿದೆ. +ಹೀಗಾಗಿ ಸಮಾಜ ಸುಧಾರಣೆ ರಾನಡೆಯವರ ಜೀವನದ ಪ್ರಧಾನ ಉದ್ದೇಶ್ಯವಾಯಿತು. +ಅವರು ಸಮಾಜ ಸುಧಾರಣೆಯ ಬಗ್ಗೆ ಬಲವಾದ ಒತ್ತಾಸೆಯನ್ನು ಬೆಳೆಸಿಕೊಂಡರಲ್ಲದೆ ಸಮಾಜ ಸುಧಾರಣೆಗಾಗಿ ಅವರು ಮಾಡದ ಯಾವ ಕೆಲಸವೂ ಇರಲಿಲ್ಲ. +ಸಭೆಗಳನ್ನು ನಡೆಸುವುದು, ನಿಯೋಗಗಳನ್ನು ಒಯ್ಯುವುದು,ಭಾಷಣಗಳನ್ನು ಮಾಡುವುದು, ಬೋಧನೆ, ಲೇಖನಗಳು, ಸಂದರ್ಶನಗಳು, ಪತ್ರಗಳನ್ನು ಬರೆಯುವುದು ಇವೆಲ್ಲವೂ ಅವರ ಸಾಧನಗಳಾಗಿದ್ದು ಇವೆಲ್ಲವನ್ನೂ ಅವಿರತ ಉತ್ಸಾಹದಿಂದ ನಿರ್ವಹಿಸುತ್ತಿದ್ದರು. +ಅವರು ಅನೇಕ ಸಂಘ-ಸಂಸ್ಥೆಗಳನ್ನು ಸ್ಥಾಪಿಸಿದರು. +ಅನೇಕ ಪತ್ರಿಕೆಗಳನ್ನು ಆರಂಭಿಸಿದರು. +ಇಷ್ಟರಿಂದಲೇ ಅವರಿಗೆ ತೃಪ್ತಿಯಾಗಲಿಲ್ಲ. +ಸಮಾಜ ಸುಧಾರಣೆಯನ್ನು ಸಾಧಿಸಲು ಇದಕ್ಕಿಂತಲೂ ಹೆಜ್ಜು ಶಾಶ್ವತವಾದ,ವ್ಯವಸ್ಥಿತವಾದ ಏರ್ಪಾಡನ್ನು ಅವರು ಬಯಸಿದ್ದರು. +ಆದ್ದರಿಂದ ಅವರು ಅಖಿಲ ಭಾರತ ಸಂಸ್ಥೆಯಾದ "ಸಾಮಾಜಿಕ ಸಮಾವೇಶ” ಎಂಬ ಸಂಸ್ಥೆಯನ್ನು ಸ್ಥಾಪಿಸಿದರು. +ಇದು ಭಾರತೀಯ ರಾಷ್ಟೀಯ ಕಾಂಗ್ರೆಸ್‌ನ ಅಂಗಸಂಸ್ಥೆಯಾಗಿ ಕೆಲಸ ಮಾಡುತ್ತಿತ್ತು. +ಪ್ರತಿ ವರ್ಷ ಸೇರುತ್ತಿದ್ದ ಈ ಸಮಾವೇಶದಲ್ಲಿ ಸಾಮಾಜಿಕ ಜಾಡ್ಯಗಳ ಬಗ್ಗೆ ಚರ್ಚಿಸಿ ಅವುಗಳ ನಿವಾರಣೋಪಾಯಗಳನ್ನು ಸೂಚಿಸುತ್ತಿತ್ತು . +ಪ್ರತಿವರ್ಷ ರಾನಡೆಯವರು ಇದರ ಸಮ್ಮೇಳನಗಳಲ್ಲಿ ತಪ್ಪದೇ ಭಾಗವಹಿಸುತ್ತಿದ್ದರು. +ಅವರಿಗೆ ಇದು ಸಮಾಜ ಸುಧಾರಣೆಗಾಗಿ ಮಾಡಲೇಬೇಕಾಗಿದ್ದ ಒಂದು ತೀರ್ಥಯಾತ್ರೆಯೂ ಆಗಿತ್ತು. +ಸಮಾಜ ಸುಧಾರಣೆ ಮಾಡುವಲ್ಲಿ ರಾನಡೆಯವರು ಅಮೋಘವಾದ ಧೈರ್ಯವನ್ನು ಪ್ರದರ್ಶಿಸಿದರು. +ಈ ತಲೆಮಾರಿನ ಅನೇಕರು ಇದನ್ನು ಕೇಳಿ ನಗಬಹುದು. +ಜೇಲಿಗೆ ಹೋಗುವುದು ಇಂದು ಭಾರತದಲ್ಲಿ ಹುತಾತ್ಮತೆಯ ದ್ಯೋತಕವಾಗಿದೆ. +ಇದನ್ನು ದೇಶ ಪ್ರೇಮದ ಮತ್ತು ಧೈರ್ಯದ ಕೃತ್ಯವೆಂದು ಪರಿಗಣಿಸಲಾಗಿದೆ. +ಅನ್ಯಥಾ ಯಾರ ಗಮನಕ್ಕೂ ಬರದಂತಹ ಜನ, ಯಾರು ಕೊನೆಯ ಮಾರ್ಗವಾಗಿ ಉಪಾಯವಿಲ್ಲದೇ ರಾಜಕೀಯಕ್ಕೆ ಇಳಿದು ಪಟಿಂಗರೆನಿಸಿಕೊಂಡಿದ್ದಾರೋ ಅವರು ಜೇಲಿಗೆ ಹೋಗಿ ಹುತಾತ್ಮರಾಗಿ ಹೆಸರು ಮತ್ತು ಪ್ರಸಿದ್ಧಿಯನ್ನು ಗಳಿಸಿಕೊಂಡಿದ್ದಾರೆ. +ಇದು ಆಘಾತಕರ. +ಆದರೆ ಟಳಕ್‌ ಅವರು ಮತ್ತು ಅವರ ತಲೆಮಾರಿನ ಜನರು ಜೇಲಿನಲ್ಲಿ ಅನುಭವಿಸಿದ ಕಷ್ಟಕಾರ್ಪಣ್ಯಗಳನ್ನು ಅನುಭವಿಸಿದ್ದರೆ ಹೀಗೆ ಹೇಳುವುದರಲ್ಲಿ ಸತ್ಯಾಂಶವಿದೆ. +ಇಂದಿನ ಜೇಲು ಜೀವನದಲ್ಲಿ ಯಾವ ಭಯೋತ್ಪಾದಕತೆಯೂ ಉಳಿದಿಲ್ಲ. +ಅದು ಕೇವಲ ಸ್ಥಾನಬದ್ಧತೆಯ ಕ್ರಮವಾಗಿದೆ. +ರಾಜಕೀಯ ಬಂಂದಿಗಳನ್ನು ಅಪರಾಧಿ ಎಂದು ಪರಿಗಣಿಸುವ ಪ್ರಶ್ನೆಯೇ ಉಳಿದಿಲ್ಲ. +ಅವರನ್ನು ಪ್ರತ್ಯೇಕ ವರ್ಗದಲ್ಲಿಡಲಾಗುವುದು. +ಅವರು ಕಷ್ಟಗಳನ್ನು ಅನುಭವಿಸಬೇಕಾಗಿಲ್ಲ. +ಹೆಸರು ಕೆಡಿಸಿಕೊಳ್ಳುವ ಪ್ರಮೇಯವೂ ಇಲ್ಲ ಮತ್ತು ಅಗಲಿಕೆಯ ಪ್ರಶ್ನೆಯೂ ಇಲ್ಲ. +ಆದ್ದರಿಂದ ಇದರಲ್ಲಿ ಧೈರ್ಯ ಅಥವಾ ಎದೆಗಾರಿಕೆಯ ಯಾವ ಸಂಗತಿಯೂ ಇಲ್ಲ. +ಆದರೂ ಟಳಕರ ಕಾಲದಲ್ಲಿದ್ದ ಹಾಗೆ ಜೇಲು ಜೀವನವು ಕಠಿಣ ತರವಾಗಿದ್ದರೂ ರಾಜಕೀಯ ಕೈದಿಗಳು ಸಮಾಜ ಸುಧಾರಕರಿಗಿಂತಲೂ ತಾವು ಹೆಚ್ಚು ಧೈರ್ಯಶಾಲಿಗಳು ಎಂದು ವಾದಿಸುವ ಗೋಜಿಗೆ ಅವರು ಹೋಗುತ್ತಿರಲಿಲ್ಲ. +ಸರಕಾರಕ್ಕಿಂತಲೂ ಹೆಚ್ಚಾಗಿ ಸಮಾಜವು ಒಬ್ಬ ವ್ಯಕ್ತಿಯ ಮೇಲೆ ಹೆಚ್ಚಿನ ಪ್ರಮಾಣದ ದಜ್ಬಾಳಿಕೆ ಮತ್ತು ಹಿಂಸೆಯನ್ನು ಮಾಡಬಲ್ಲದೆಂಬ ಅಂಶವನ್ನು ಅನೇಕರು ತಿಳಿದುಕೊಳ್ಳುವುದಿಲ್ಲ. +ಸಮಾಜವು ಉಪಯೋಗಿಸುವ ದಬ್ಬಾಳಿಕೆಯ ಸಾಧನಗಳು ಮತ್ತು ಅವುಗಳ ವ್ಯಾಪ್ತಿ ಸರಕಾರಕ್ಕೆ ಲಭ್ಯವಿರುವ ಸಾಧನಗಳಿಗಿಂತಲೂ ಹೆಚ್ಚು ವ್ಯಾಪಕವಾದವುಗಳಾಗಿವೆ. +ತನ್ನ ವ್ಯಾಪ್ತಿಯಲ್ಲಿ ಪ್ರಮಾಣದಲ್ಲಿ ಮತ್ತು ಕಾಠಿಣ್ಯದಲ್ಲಿ ಬಹಿಷ್ಕಾರಕ್ಕೆ ಹೋಲಿಸಬಹುದಂತಹ ಯಾವ ಶಿಕ್ಷೆ ಭಾರತದ ದಂಡ ಸಂಹಿತೆಯಲ್ಲಿ ದೊರೆಯುತ್ತದೆ? +ಸಮಾಜವನ್ನು ವಿರೋಧಿಸಿ ತನ್ನ ಮೇಲೆಯೇ ಬಹಿಷ್ಕಾರದ ಶಿಕ್ಷೆಯನ್ನು ತಂದುಕೊಳ್ಳುವ ಸಮಾಜ ಸುಧಾರಕ ಹೆಚ್ಚು ಧೈರ್ಯಶಾಲಿಯೋ ಅಥವಾ ಸರಕಾರವನ್ನು ವಿರೋಧಿಸಿ ಕೆಲವು ತಿಂಗಳು ಅಥವಾ ಕೆಲವು ವರ್ಷಗಳ ಜೇಲು ಶಿಕ್ಷೆಯನ್ನು ಪಡೆಯುವ ರಾಜಕೀಯ ಕೈದಿ ಹೆಚ್ಚು ಧೈರ್ಯಶಾಲಿಯೋ? +ಸಮಾಜ ಸುಧಾರಕನ ಧೈರ್ಯಕ್ಕೂ ರಾಜಕೀಯ ದೇಶಭಕ್ತನ ಧೈರ್ಯಕ್ಕೂ ಇರುವ ವ್ಯತ್ಯಾಸವನ್ನು ಅಳೆಯುವಾಗ ನಾವು ಇನ್ನೊಂದು ಮುಖ್ಯ ಅಂಶವನ್ನು ಕಡೆಗಣಿಸುತ್ತೇವೆ. +ಸಮಾಜ ಸುಧಾರಕನು ಸಮಾಜವನ್ನೇ ಧಿಕ್ಕರಿಸಿದಾಗ ಅವನನ್ನು ಹುತಾತ್ಮನೆಂದು ಯಾರೂ ಹೊಗಳುವುದಿಲ್ಲ. +ಅವನ ಜೊತೆ ಸ್ನೇಹ ಬೆಳೆಸಲು ಯಾರೂ ಇರುವುದಿಲ್ಲ. +ಅವನನ್ನು ತಿರಸ್ಕರಿಸಿ ದೂರವಿಡುತ್ತಾರೆ. +ಆದರೆ ರಾಜಕೀಯ ದೇಶಭಕ್ತನು ಸರಕಾರವನ್ನು ಧಿಕ್ಕರಿಸಿದಾಗ ಅವನಿಗೆ ಇಡೀ ಸಮಾಜ ಬೆಂಬಲ ನೀಡುತ್ತದೆ. +ಅವನನ್ನು ಉದ್ಭಾರಕನೆಂದು ಹಾಡಿ ಹೊಗಳುತ್ತದೆ. +ಏಕಾಂಗಿಯಾಗಿ ಹೋರಾಡುವ ಸಮಾಜ ಸುಧಾರಕ ಹೆಚ್ಚಿನ ಧೈರ್ಯಶಾಲಿಯೋ ಅಥವಾ ಜನಸಾಮಾನ್ಯರ ಬೆಂಬಲದ ಶ್ರೀರಕ್ಷೆಯಲ್ಲಿ ಹೋರಾಡುವ ರಾಜಕಾರಣಿ ದೇಶಭಕ್ತನೋ? +ಸಮಾಜ ಸುಧಾರಣೆಯಲ್ಲಿ ರಾನಡೆಯವರು ಧೈರ್ಯಶಾಲಿಯಾಗಿದ್ದರೆಂಬುದನ್ನು ಅಲ್ಲಗಳೆಯುವುದು ನಿರರ್ಥಕ. +ಅವರು ನಿಜವಾಗಿಯೂ ಹೆಚ್ಚಿನ ಧೈರ್ಯವನ್ನು ತೋರಿದರು. +ಸಾಮಾಜಿಕ ಮತ್ತು ಧಾರ್ಮಿಕ ರೂಢಿಗಳು ಎಷ್ಟೇ ಅನೀತಿ ಅಥವಾ ಅನ್ಯಾಯ ಪೂರಿತವಾದರೂ ಅವುಗಳ ಆಧಾರವನ್ನು ಪ್ರಶ್ನಿಸುವುದೂ ಕೂಡ ಅಸಂಪ್ರದಾಯ, ದೇವದೂಷಣೆ, ಮತ್ತು ಅಪವಿತ್ರಗೊಳಿಸುವಂತಹ ಕೃತ್ಯ ಎಂದು ಪರಿಗಣಿಸಲಾಗುತ್ತಿದ್ದ ಕಾಲದಲ್ಲಿ ರಾನಡೆಯವರು ಜೀವಿಸಿದ್ದರೆಂಬುದನ್ನು ನಾವು ಮರೆಯಬಾರದು. +ರಾನಡೆಯವರ ಸಮಾಜ ಸುಧಾರಣೆಯ ಮಾರ್ಗ ಸುಗಮವಾಗಿರಲಿಲ್ಲ. +ಅನೇಕ ಕಡೆಗಳಿಂದ ಅದಕ್ಕೆ ಅಡೆತಡೆಗಳಿದ್ದವು. +ಯಾರ ಉದ್ಧಾರವನ್ನು ಅವರು ಬಯಸಿದ್ದರೋ ಅದೇ ಜನರ ಭಾವನೆಗಳು ಪುರಾತನ ಕಾಲದಲ್ಲಿ ಬೇರೂರಿದವುಗಳಾಗಿದ್ದವು. +ತಮ್ಮ ಪೂರ್ವಜರು ಅತ್ಯಂತ ಬುದ್ಧಿಶಾಲಿಗಳೂ, ಘನವಂತರೂ ಆಗಿದ್ದರೆಂಬುದು ಅವರ ವಿಶ್ವಾಸವಾಗಿತ್ತಲ್ಲದೆ ಅವರು ನಿಯೋಜಿಸಿದ ಸಮಾಜ ವ್ಯವಸ್ಥೆ ಅತ್ಯಂತ ಆದರ್ಶವಾದುದಾಗಿದೆ ಎಂಬುದು ಅವರ ಭಾವನೆಯಾಗಿತ್ತು. +ರಾನಡೆಯವರು ಯಾವ ಹಿಂದೂ ಸಮಾಜದ ಕಟ್ಟಳೆಗಳನ್ನು ಅನ್ಯಾಯ ಮತ್ತು ಅವಹೇಳನಕರವೆಂದು ಪರಿಗಣಿಸಿದ್ದರೋ ಅವೆ ಈ ಜನರಿಗೆ ತಮ್ಮ ಧರ್ಮದ ಅತ್ಯಂತ ಪವಿತ್ರವಾದ ಕಟ್ಟಳೆಗಳಾಗಿದ್ದವು. +ಇದು ಶ್ರೀಸಾಮಾನ್ಯನ ಭಾವನೆಯಾಗಿತ್ತು. +ಬುದ್ಧಿಜೀವಿಗಳಲ್ಲಿ ಎರಡು ವಿಭಿನ್ನ ವಿಚಾರಧಾರೆಗಳಿದ್ದವು. +ತನ್ನ ನಂಬುಗೆಯಲ್ಲಿ ಸಂಪೂರ್ಣ ಸಂಪ್ರದಾಯಬದ್ಧವಾದ ಮತ್ತು ರಾಜಕೀಯ ದೃಷ್ಟಿ ಇಲ್ಲದ ವಿಚಾರಧಾರೆ ಒಂದಾಗಿದ್ದರೆ, ಇನ್ನೊಂದು ಆಧುನಿಕ ದೃಷ್ಟಿಕೋನ ಹೊಂದಿದ್ದರೂ ತನ್ನ ಧ್ಯೇಯೋದ್ದೇಶಗಳಲ್ಲಿ ಮೂಲತಃ ರಾಜಕೀಯ ದೃಷ್ಟಿಹೊಂದಿದ ವಿಚಾರಧಾರೆಯಾಗಿತ್ತು . +ಚಿಪಳೂಣಕರ್‌ ಅವರು ಮೊದಲನೆಯ ಧಾರೆಯ ಪ್ರಮುಖರಾಗಿದ್ದರೆ,ಟಳಕರು ಎರಡನೆಯ ಧಾರೆಯ ಪ್ರಮುಖರಾಗಿದ್ದರು. +ಇವರಿಬ್ಬರೂ ಒಂದಾಗಿ ರಾನಡೆಯವರಿಗೆ ತಮಗೆ ಸಾಧ್ಯವಾದ ಎಲ್ಲಾ ಅಡ್ಡಿ ಆತಂಕಗಳನ್ನುಂಟು ಮಾಡಿದರು. +ಅವರು ಸಮಾಜ ಸುಧಾರಣೆಗೆ ಸಾಕಷ್ಟು ಹಾನಿಯುಂಟು ಮಾಡಿದ್ದಲ್ಲದೆ, ಇದುವರೆಗಿನ ಅನುಭವದಂತೆ ಭಾರತದ ರಾಜಕೀಯ ಸುಧಾರಣೆಗೂ ಅವರು ದೊಡ್ಡ ಹಾನಿಯನ್ನೆಸಗಿದರು. +ಸಂಪ್ರದಾಯಬದ್ಧ ಮತ್ತು ರಾಜಕೀಯ ದೃಷ್ಟಿ ಇಲ್ಲದ ವಿಚಾರಧಾರೆಯವರು ಹೆಗಲ್‌ನ ತತ್ವವಾದ ಆದರ್ಶ ಧ್ಯೇಯವನ್ನು ಸಾಧಿಸುವ ಮತ್ತು ವಾಸ್ತವಿಕತೆಯನ್ನು ಆದರ್ಶಿಕರಿಸುವುದರಲ್ಲಿ ನಂಬುಗೆ ಹೊಂದಿದ್ದರು. +ಇದು ನನಗೆ ನಿವಾರಿಸಲಾರದ ಕಗ್ಗಂಟಾಗಿದೆ. +ಹೀಗೆ ಮಾಡುವುದು ಘೋರ ಅನ್ಯಾಯವೇ ಸರಿ. +ಹಿಂದೂ ಧಾರ್ಮಿಕ ಮತ್ತು ಸಾಮಾಜಿಕ ವ್ಯವಸ್ಥೆಯಲ್ಲಿ ಅದರ ಆದರ್ಶಕ್ಕೆ ವಾಸ್ತವಿಕತೆಯನ್ನು ಕೊಡಲು ಸಾಧ್ಯವಾಗುವುದಿಲ್ಲ. +ಏಕೆಂದರೆ ಅದರ ಆದರ್ಶವೇ ದೋಷಪೂರಿತವಾಗಿದೆ. +ಅದೇ ರೀತಿ ವಾಸ್ತವಿಕತೆಗೆ ಆದರ್ಶದ ಸ್ಥಾನವನ್ನೂ ಕೊಡಲು ಬರುವುದಿಲ್ಲ. +ಏಕೆಂದರೆ ವಾಸ್ತವಿಕತೆಯ ಸದ್ಯದ ಪರಿಸ್ಥಿತಿ ಕೀಳಿಗಿಂತಲೂ ಕೀಳುಮಟ್ಟದ್ದಾಗಿದೆ. +ಇದೇನೂ ಉತ್ಪ್ರೇಕ್ಷೆಯಲ್ಲ. +ಹಿಂದೂ ಸಾಮಾಜಿಕ ಉಪಯುಕ್ತತೆ ಮತ್ತು ಸಾಮಾಜಿಕ ನ್ಯಾಯದ ದೃಷ್ಟಿಯಿಂದ ಪರಿಶೀಲಿಸೋಣ. +ಅದೇ ತಾನೇ ಟಂಕಸಾಲೆಯಲ್ಲಿ ಸೃಷ್ಟಿಯಾದಂತಹ ಹೊಸ ಧರ್ಮ ಒಳ್ಳೆಯದೆಂದು ಹೇಳಲಾಗುತ್ತದೆ. +ಆದರೆ ಹಿಂದೂ ಧರ್ಮದ ಆರಂಭದಲ್ಲಿಯೇ ಖೊಟ್ಟಿ ನಾಣ್ಯವೆನಿಸಿದೆ. +ಹಿಂದೂ ಧರ್ಮ ಸೃಷ್ಟಿಸಿದಂತಹ ಹಿಂದೂ ಸಮಾಜದ ಆದರ್ಶಗಳು ಆ ಸಮಾಜವನ್ನು ಹೀನಾಯವಾಗಿಸಿ ಭ್ರಷ್ಟಗೊಳಿಸಿದೆ. +ಅದು ಸತ್ಯದಲ್ಲಿ ಮತ್ತು ರಚನೆಯಲ್ಲಿ ನೀಷೆಯ ತತ್ವವನ್ನೇ ಅವಲಂಬಿಸಿದೆ. +ನೀಷೆಯು ಹುಟ್ಟುವುದಕ್ಕೆ ಬಹು ಮೊದಲೇ ಮನು, ನೀಷೆ ಬೋಧಿಸಲಿದ್ದ ಮತ ತತ್ವವನ್ನು ಸಾರಿದ್ದನು. +ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವರಹಿತವಾದ ಧರ್ಮ ಅದಾಗಿತ್ತು. +ಅದು ಹಿಂದೂ ಸಮಾಜದ ಇತರರೆಲ್ಲರೂ ಅದರ ಮಹಾಮಾನವನೆನಿಸಿದ ಬ್ರಾಹ್ಮಣನನ್ನು ಪೂಜಿಸುವತತ್ವದ ಘೋಷಣೆಯಾಗಿದ್ದಿತು. + ಈ ಮಹಾಮಾನವನಾದ ಬ್ರಾಹ್ಮಣ ಮತ್ತು ಅವನ ವರ್ಗ ಮಾತ್ರ ಜೀವಿಸಲು ಮತ್ತು ಆಳಲು ಹುಟ್ಟಿದ್ದಾನೆ ಎಂಬ ತತ್ವವನ್ನು ಅದು ಪ್ರತಿಪಾದಿಸಿತು. +ಇತರರು ಅವರ ಸೇವೆಮಾಡಲು ಮಾತ್ರ ಹುಟ್ಟಿದ್ದಾರೆಯೇ ಹೊರತು ಇನ್ನೇನೂ ಮಾಡಲಿಕ್ಕಾಗಿಯಲ್ಲ. +ಇವರಿಗೆ ತಮ್ಮದೇ ಆದಜೀವನ ಎನ್ನುವುದು ಇಲ್ಲ. +ತಮ್ಮದೇ ಆದ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳುವ ಹಕ್ಕೂ ಇವರಿಗಿಲ್ಲ. +ಇದೇ ಹಿಂದೂ ಧರ್ಮದ ಸುವಾರ್ತೆ. +ಹಿಂದೂ ದರ್ಶನವು, ಅದು ವೇದಾಂತವೇ ಆಗಿರಲಿ, ಸಾಂಖ್ಯವೇ ಆಗಿರಲಿ, ನ್ಯಾಯವೇ ಆಗಿರಲಿ, ವೈಶೇಷಿಕವೇ ಆಗಿರಲಿ, ಅದು ಹಿಂದೂ ಧರ್ಮವನ್ನು ಯಾವುದೇ ರೀತಿಯಲ್ಲಿ ಪ್ರಭಾವಿತಗೊಳಿಸದೆ ತನ್ನದೇ ಆದ ವರ್ತುಲದಲ್ಲಿ ಚಲಿಸಿದೆ. +ಈ ತತ್ವವನ್ನು ಪ್ರಶ್ನಿಸುವ ಧೈರ್ಯ ಅದಕ್ಕಿರಲಿಲ್ಲ. +ಎಲ್ಲವೂ ಬ್ರಹ್ಮ ಎಂಬ ಆ ಹಿಂದೂ ದರ್ಶನ ಕೇವಲ ಬೌದ್ಧಿಕ ವಿಚಾರವಾಗಿತ್ತು. +ಎಂದಿಗೂ ಅದು ಸಮಾಜ ದರ್ಶನವಾಗಲೇ ಇಲ್ಲ. +ಹಿಂದೂ ದಾರ್ಶನಿಕರು ತಮ್ಮ ದರ್ಶನ ಮತ್ತು ತಮ್ಮ ಮನು ಎರಡನ್ನೂ ಎರಡು ಕೈಗಳಲ್ಲಿ ಬೇರೆ ಬೇರೆಯಾಗಿ ತಮ್ಮ ಎಡಗೈಯಲ್ಲಿ ಏನಿದೆ ಎಂಬುದು ಬಲಗೈಗೆತಿಳಿಯದ ರೀತಿಯಲ್ಲಿ ಹಿಡಿದುಕೊಂಡಿದ್ದರು. +ಇವುಗಳ ಅಸಂಬದ್ಧತೆ ಹಿಂದೂಗಳನ್ನು ಎಂದೂ ಬಾಧಿಸಲಿಲ್ಲ. +ಇಂತಹ ಹಿಂದೂ ಸಾಮಾಜಿಕ ವ್ಯವಸ್ಥೆಗಿಂತ ಕೀಳಾದ ಯಾವುದಾದರೂ ಬೇರೆ ವ್ಯವಸ್ಥೆ ಇರಲು ಸಾಧ್ಯವೇ? +ಜಾತಿ ಪದ್ಧತಿಯು ಹಿಂದೂಗಳ ಆದರ್ಶವೆನಿಸಿದ್ದು ಚಾತುರ್ವಣ್ಯ ಪದ್ಧತಿಯ ಹೀನ ರೂಪವಾಗಿದೆ. +ಚಾತುರ್ವಣ್ಣ್ಯವು ಒಂದು ಆದರ್ಶ ಸಾಮಾಜಿಕ ವ್ಯವಸ್ಥೆ ಎಂದು ಹುಟ್ಟು ಮೂರ್ಖನಲ್ಲದ ಇನ್ನಾರಾದರೂ ಒಪ್ಪುವುದು ಸಾಧ್ಯವೆ? +ವ್ಯಕ್ತಿಗತವಾಗಿ ಮತ್ತು ಸಾಮಾಜಿಕವಾಗಿ ಅದು ಒಂದು ಅವಿವೇಕ ಮತ್ತು ಅಪರಾಧ. +ಒಂದೇ ಒಂದು ವರ್ಗದವರು ಮಾತ್ರ ಶಿಕ್ಷಣ ಮತ್ತು ಅಧ್ಯಯನಕ್ಕೆ ಅರ್ಹರು. +ಒಂದೇ ಒಂದು ವರ್ಗದವರು ಮಾತ್ರ ಶಸ್ತ್ರಾಸ್ತ್ರಗಳನ್ನು ಹಿಡಿಯಬಲ್ಲರು. +ಒಂದೇ ಒಂದು ವರ್ಗ ಮಾತ್ರ ವಾಣಿಜ್ಯಕ್ಕೆ ಅರ್ಹರು. +ಒಂದೇ ಒಂದು ವರ್ಗದವರು ಮಾತ್ರ ಸೇವಕರಾಗಿರಬೇಕು. +ವ್ಯಕ್ತಿಯ ಮೇಲೆ ಇದರ ಪರಿಣಾಮಗಳು ಸ್ವಯಂವೇದ್ಯ. +ತನ್ನ ಉಪಜೀವನಕ್ಕಾಗಿ ತನ್ನ ಶಿಕ್ಷಣದ ದುರುಪಯೋಗಪಡಿಸಿ ತನ್ನ ವಿದ್ಯೆಯ ಘನತೆಗೆ ಕುಂದು ತರದೇ ಇರುವಂತಹ ವ್ಯಕ್ತಿ ಇರಲು ಸಾಧ್ಯವೇ? +ಶಿಕ್ಷಣ ಮತ್ತು ಸಂಸ್ಕೃತಿ ಇಲ್ಲದಂತಹ ಯೋಧ ತನ್ನ ಆಯುಧಗಳನ್ನು ವಿನಾಶಕ್ಕಾಗಿಯಲ್ಲದೇ ಸಂರಕ್ಷಣೆಗೆ ಬಳಸುವುದು ಸಾಧ್ಯವೇ? +ಯಾವಾಗಲೂ ಗಳಿಕೆಯ ದೃಷ್ಟಿಯನ್ನೇ ಹೊಂದಿರುವ ವರ್ತಕನು ಪಶುವಿನ ಮಟ್ಟಕ್ಕೆ ಇಳಿಯದೇ ಇರುವುದು ಸಾಧ್ಯವೇ? +ಶಿಕ್ಷಣವನ್ನು ಹೊಂದಲು ಅಧಿಕಾರವಿಲ್ಲದ, ಶಸ್ತ್ರಾಸ್ತಗಳನ್ನು ಹಿಡಿಯುವ ಅವಕಾಶವಿಲ್ಲದ, ಮತ್ತು ಇತರ ಯಾವುದೇ ರೀತಿಯ ಜೀವನಾಧಾರವಿಲ್ಲದ ಸೇವಕ ತನ್ನ ನಿಯಾಮಕನು ಇಚ್ಛಿಸಿದ ರೀತಿಯಲ್ಲಿ ಬದುಕಲು ಸಾಧ್ಯವೇ? +ವ್ಯಕ್ತಿಗೇ ಇಷ್ಟು ವಿನಾಶಕಾರಿಯಾದ ವ್ಯವಸ್ಥೆ ಸಹಜವಾಗಿ ಸಮಾಜವನ್ನು ದುರ್ಬಲಗೊಳಿಸುತ್ತದೆ. +ಸಾಮಾಜಿಕ ರಚನೆ ಸಾಮಾನ್ಯ ಪರಿಸ್ಥಿತಿಯಲ್ಲಿ ಚೆನ್ನಾಗಿದ್ದರೆ ಸಾಲದು. +ಅದು ಎಂತಹ ಬಿರುಗಾಳಿಯನ್ನಾದರೂ ಎದುರಿಸುವ ಶಕ್ತಿ ಪಡೆದಿರಬೇಕು. +ಹಿಂದೂಜಾತಿ ಪದ್ಧತಿಯು ಆಕ್ರಮಣದ ಬಿರುಗಾಳಿಯನ್ನು ಎದುರಿಸುವ ಸಾಮರ್ಥ್ಯವನ್ನು ಹೊಂದಿದೆಯೇ? +ಅದು ಎದುರಿಸಲಾರದು ಎಂಬುದು ಸತ್ಯಸಂಗತಿ. +ಸ್ವ-ರಕ್ಷಣೆಗಾಗಲೀ ಅಥವಾ ಆಕ್ರಮಣ ಮಾಡುವುದಕ್ಕಾಗಲೀ ಒಂದು ಸಮಾಜವು ತನ್ನ ಶಕ್ತಿಯನ್ನು ಕ್ರೋಡೀಕರಿಸುವ ಸ್ಥಿತಿಯಲ್ಲಿರಬೇಕು. +ಕಾರ್ಯಗಳನ್ನು ಮತ್ತು ಕರ್ತವ್ಯಗಳನ್ನು ಪ್ರತ್ಯೇಕಿಸಿ ಹಂಚಿ ಅವುಗಳನ್ನು ನಿರ್ವಿಕಲ್ಪವಾಗಿ ಶಾಶ್ವತವಾಗಿ ನಿಯೋಜಿಸಿದಂತಹ ಪರಿಸ್ಥಿತಿಯಲ್ಲಿ ಕ್ರೋಡೀಕರಿಸಲು ಉಳಿದಿರುವುದಾದರೂ ಏನು? +ಹಿಂದೂ ಸಾಮಾಜಿಕ ವ್ಯವಸ್ಥೆಯಲ್ಲಿ ಶೇಕಡ ತೊಂಬತ್ತು ಹಿಂದೂಗಳು-ಬ್ರಾಹ್ಮಣರು, ವೈಶ್ಯರು, ಶೂದ್ರರು-ಶಸ್ತಾಸ್ತ್ರಗಳನ್ನು ಹಿಡಿಯುವಂತಿಲ್ಲ. +ವಿಪತ್ತಿನ ಗಳಿಗೆಯಲ್ಲಿ ತನ್ನ ಸೈನ್ಯಬಲವನ್ನು ಹೆಚ್ಚಿಸಲಾರದಂತಹ ದೇಶ ತನ್ನ ರಕ್ಷಣೆಯನ್ನು ಹೇಗೆ ಮಾಡಿಕೊಳ್ಳಬಲ್ಲದು? +ಆಗಿಂದಾಗ್ಗೆ ಕೇಳಿಬರುವ ದೂರಿನಂತೆ ಬುದ್ಧನು ತನ್ನ ಅಹಿಂಸಾ ತತ್ವದ ಬೋಧನೆಯ ಮೂಲಕ ಹಿಂದೂ ಸಮಾಜವನ್ನು ದುರ್ಬಲಗೊಳಿಸಲಿಲ್ಲ. +ಬ್ರಾಹ್ಮಣ ಸಿದ್ಧಾಂತವಾದ ಚಾತುರ್ವಣ೯್ಯ ಪದ್ಧತಿಯು ಹಿಂದೂ ಸಮಾಜದ ಸೋಲಿಗೆ ಮಾತ್ರವಲ್ಲ ಅದರ ಅಧಃಪತನಕ್ಕೂ ಕಾರಣವಾಗಿದೆ. +ಹಿಂದೂ ಸಾಮಾಜಿಕ-ಧಾರ್ಮಿಕ ಸಿದ್ಧಾಂತಗಳು ಹಿಂದೂ ಸಮಾಜದ ಅವನತಿಗೆ ಹೇಗೆ ಕಾರಣವಾಗಿವೆ ಎಂದು ನಾನು ಹೇಳಿದ್ದನ್ನು ನಿಮ್ಮಲ್ಲಿ ಅನೇಕರು ಆಕ್ಷೇಪಿಸಬಹುದು. +ಆದರೆ ಸತ್ಯಾಂಶವೇನು? +ನಾನು ಮಾಡಿದ ಆರೋಪವನ್ನು ಅಲ್ಲಗಳೆಯಲು ಸಾಧ್ಯವೇ? +ಯಾರ ಸಮೀಪವೂ ಬಾರಲಾರದಂತಹ, ತಮ್ಮ ನೆರಳು ಯಾರ ಮೇಲೂ ಬೀಳಲಾರದಂತಹ ಮತ್ತು ಯಾರೂ ನೋಡಲಾರದಂತಹ ವ್ಯಕ್ತಿಗಳಿರುವ ಸಮಾಜ ಪ್ರಪಂಚದಲ್ಲಿ ಎಲ್ಲಿಯಾದರೂ ಇದೆಯೇ? +ತಮ್ಮ ಮೈಯನ್ನು ಬಟ್ಟೆಯಿಂದ ಮುಚ್ಚಿಕೊಳ್ಳುವುದನ್ನೂ ತಿಳಿಯದಂತಹ ಕಾಡುಗಳಲ್ಲಿ ವಾಸಿಸುವ ಅನಾಗರಿಕ ಆದಿ ಜನಾಂಗಗಳಿರುವ ಸಮಾಜ ಎಲ್ಲಿಯಾದರೂ ಇದೆಯೇ? +ಸಂಖ್ಯೆಯಲ್ಲಿ ಅವರೆಷ್ಟಿದ್ದಾರೆ? +ಅವು ನೂರಾರೋ ಅಥವಾ ಸಾವಿರಾರೋ? +ಅವರು ಹಲವೇ ಜನರಿದ್ದರೆ ಚೆನ್ನಾಗಿತ್ತು ದುರಂತವೆಂದರೆ ಅವರ ಸಂಖ್ಯೆ ಅನೇಕ ದಶಲಕ್ಷಗಳಲ್ಲಿದೆ. +ದಶದಶಲಕ್ಷಗಟ್ಟಲೆ ಅಸ್ಪೃಶ್ಯರು, ಅಪರಾಧಿ ಬುಡಕಟ್ಟಿನವರು ಮತ್ತು ಆದಿ ಜನಾಂಗದವರಿದ್ದಾರೆ. +ಈ ಪರಿಸ್ಥಿತಿಯಲ್ಲಿ ಹಿಂದೂ ನಾಗರಿಕತೆ ಎಂಬುದು ನಾಗರಿಕತೆಯಾಗಿದೆಯೇ ಅಥವಾ ಹೇಯಸ್ಥಿತಿಯೇ ಎಂದು ಅಚ್ಚರಿಪಡಬೇಕಾಗಿದೆ. +ಇದು ಆದರ್ಶದ ಪರಿಸ್ಥಿತಿ. +ಇನ್ನು ರಾನಡೆಯವರು ಕಾರ್ಯ ನಿರತರಾದಾಗ ಇದ್ದ ವಸ್ತುಸ್ಥಿತಿಯನ್ನು ವೀಕ್ಷಿಸೋಣ. +ಬ್ರಿಟಿಷರ ಆಗಮನದ ಕಾಲದಲ್ಲಿ ಮತ್ತು ರಾನಡೆಯವರಂತಹ ಸಮಾಜ ಸುಧಾರಕರು ಎದುರಿಸಿದಂತಹ ಪರಿಸ್ಥಿತಿಗಳನ್ನು ಈಗ ಊಹಿಸುವುದೂ ಸಹ ಅಸಾಧ್ಯ. +ಮೊದಲು ನಾನು ಬುದ್ಧಿಜೀವಿಗಳ ವರ್ಗದಿಂದಲೇ ಆರಂಭಿಸುವೆ. +ನಾಗರಿಕತೆಯನ್ನು ಬೆಳೆಸಿಕೊಂಡು ಬರುವ ಮತ್ತು ಅದರ ಮಾರ್ಗದರ್ಶನ ಮಾಡುವ ಕಾರ್ಯ ಬುದ್ಧಿಜೀವಿಗಳನ್ನೇ ಅವಲಂಬಿಸಿರುತ್ತದೆ. +ಬ್ರಾಹ್ಮಣವರ್ಗವೇ ಇಲ್ಲಿ ಆ ಬುದ್ಧಿಜೀವಿ. +ಹಳೆಯ ಹಿಂದೂ ಕಾನೂನಿನ ಪ್ರಕಾರ ಬ್ರಾಹ್ಮಣರಿಗೆ ಪುರೋಹಿತರ ಸ್ಥಾನ ಮತ್ತು ಸವಲತ್ತುಗಳನ್ನು ನೀಡಲಾಗಿದ್ದು ಅವರನ್ನು ಕೊಲೆಯ ಅಪರಾಧಕ್ಕೂ ಮರಣದಂಡನೆಗೊಳಪಡಿಸುವಂತಿರಲಿಲ್ಲ. . ಮತ್ತು ೧೮೧೭ರವರೆಗೆ ಈಸ್ಟ್‌ ಇಂಡಿಯಾ ಕಂಪನಿಯವರು ಈ ಸವಲತ್ತನ್ನು ನೀಡಿದರು. +ಇದಕ್ಕೆ ಕಾರಣ ಬ್ರಾಹ್ಮಣರು ಬಲಿಷ್ಠರಾಗಿದ್ದರು. +ಆದರೆ ಅವರಲ್ಲಿ ಏನಾದರೂ ಸತ್ವ ಉಳಿದಿತ್ತೇ? +ಅವರ ಉದ್ಯೋಗವು ತನ್ನ ಘನತೆಯನ್ನು ಕಳೆದುಕೊಂಡಿತ್ತು. +ಬ್ರಾಹ್ಮಣ ಉಪದ್ರವಿಯಾಗಿದ್ದ. +ಅವನು ವ್ಯವಸ್ಥಿತವಾಗಿ ಸಮಾಜ ಭಕ್ಷಕನಾಗಿದ್ದು ಧರ್ಮದ ಹೆಸರಿನಲ್ಲಿ ಸ್ವಂತ ಲಾಭ ಮಾಡಿಕೊಳ್ಳುತ್ತಿದ್ದ. +ತಾನೇ ಸಿದ್ಧಪಡಿಸಿದ ಟನ್ನುಗಟ್ಟಲೆ ಪುರಾಣಗಳು, ಶಾಸ್ತ್ರಗಳು, ಬಡ ಅನಕ್ಷರಸ್ಥ, ಮೂಢನಂಬುಗೆಯ ಸಾಮಾನ್ಯ ಜನಸಮೂಹವನ್ನು ವಂಚಿಸುವ,ಮರುಳು ಮಾಡುವ, ಶೋಷಿಸುವ ಮತ್ತು ತಪ್ಪುದಾರಿಗೆಳೆಯುವುದಕ್ಕಾಗಿ ಬ್ರಾಹ್ಮಣರು ಬಳಸಿದ ತೀಕ್ಷ್ಣವಾದ ಆಚರಣೆಗಳ ಭಂಡಾರಗಳಾಗಿದ್ದವು. +ಈ ಭಾಷಣದಲ್ಲಿ ಇವುಗಳಿಗೆ ಆಧಾರಗಳನ್ನೊದಗಿಸುವುದು ಅಸಾಧ್ಯ. +ತಮ್ಮ ಹಕ್ಕುಗಳು ಮತ್ತು ವಿಶೇಷ ಸೌಲಭ್ಯಗಳ ರಕ್ಷಣೆಗಾಗಿ ಬ್ರಾಹ್ಮಣರು ಸಂಸ್ಕರಿಸಿದಂತಹ ಕೆಲವು ನಿರ್ಬಂಧಗಳನ್ನು ಮಾತ್ರ ಇಲ್ಲಿ ಹೇಳಬಯಸುತ್ತೇನೆ. +ಈ ಬಗ್ಗೆ ಹೆಚ್ಚು ತಿಳಿದುಕೊಳ್ಳಬಯಸುವವರು ೧೭೮೬ರ ೫ನೆಯ ಕಾನೂನನ್ನು ಓದಲಿ. +ಅದರ ಪ್ರಕಾರ ಒಬ್ಬ ಬ್ರಾಹ್ಮಣನು ತಾನು ಬಯಸಿದ್ದನ್ನು ತನ್ನ ಜಾಲಕ್ಕೆ ಒಳಗಾಗದ ವ್ಯಕ್ತಿಯಿಂದ ಬಲಾತ್ಕಾರದಿಂದ ಪಡೆಯಬಹುದಾಗಿತ್ತು. +ಉದಾಹರಣೆಗಾಗಿ, ತನ್ನ ಶರೀರವನ್ನು ಚಾಕು ಮತ್ತು ಚೂರಿಗಳಿಂದ ಸೀಳಿಕೊಳ್ಳುವುದು ಅಥವಾ ವಿಷ ಕುಡಿಯುವುದಾಗಿ ಹೆದರಿಸುವುದು ಮುಂತಾದ ಬೆದರಿಕೆಯ ತಂತ್ರಗಳನ್ನು ತನ್ನ ಲಾಭಕ್ಕಾಗಿ ಬಳಸುತ್ತಿದ್ದನು. +ಹಿಂದೂಗಳನ್ನು ಬಲಾತ್ಕರಿಸಲು ಬ್ರಾಹ್ಮಣನು ಇನ್ನೂ ಅನೇಕ, ಎಷ್ಟು ಅಸಾಧರಣವಾಗಿದ್ದವೋ ಅಷ್ಟೇ ನಾಚಿಕೆಗೇಡಿನ, ತಂತ್ರಗಳನ್ನು ಬಳಸುತ್ತಿದ್ದನು. +ಬ್ರಾಹ್ಮಣನು ತನ್ನ ತಂತ್ರಕ್ಕೆ ಮಣೆಯದ ವ್ಯಕ್ತಿಯ ಮನೆಯ ಮುಂದೆ ಒಂದು ವರ್ತುಳಾಕಾರದ ಬೇಲಿಯನ್ನು ರಚಿಸಿ ಅದರಲ್ಲಿ ಕಟ್ಟಿಗೆಯನ್ನು ತುಂಬಲಾಗುತ್ತಿತ್ತು. +ಇದನ್ನು ಕೂರ್‌ ಎಂದು ಕರೆಯಲಾಗುತ್ತಿತ್ತು. +ಇದರಲ್ಲಿ ಕಟ್ಟಿಗೆಗಳ ಮಧ್ಯೆ ಒಬ್ಬ ಮುದುಕಿಯನ್ನು ಕೂಡಿಸಿ ತನ್ನ ಬೇಡಿಕೆಯನ್ನು ಈಡೇರಿಸದಿದ್ದಲ್ಲಿ ಆಕೆಯನ್ನು ಸುಟ್ಟು ಬಿಡುವುದಾಗಿ ಬೆದರಿಸಲಾಗುತ್ತಿತ್ತು . +ಇದೇ ತರಹದ ಇನ್ನೊಂದು ತಂತ್ರವೆಂದರೆ ತನ್ನಹೆಂಡಿರು ಮಕ್ಕಳನ್ನು ಆ ವ್ಯಕ್ತಿಯ ಮನೆಯ ಮುಂದೆ ಕೂಡಿಸಿ ಅವರ ಶಿರಚ್ಛೇದನ ಮಾಡುವುದಾಗಿ ಬೆದರಿಸುವುದು. +ಮೂರನೆಯ ವಿಧದ ತಂತ್ರವೆಂದರೆ ಆ ವ್ಯಕ್ತಿಯ ಬಾಗಿಲಲ್ಲಿ ಉಪವಾಸ ಕುಳಿತು ಧರಣಿಮಾಡುವುದು, ಈ ತಂತ್ರ ಏನೂ ಅಲ್ಲ. +ಬ್ರಾಹ್ಮಣರು ಬ್ರಾಹ್ಮಣೇತರ ಕನ್ಯೆಯರ ಶೀಲ ಭಂಗ ಮಾಡುವ ಹಕ್ಕನ್ನು ಸಾಧಿಸತೊಡಗಿದ್ದರು. +ಈ ಪದ್ಧತಿಯು ಕಲ್ಲಿಕೋಟೆಯ ರಭಾಮೋರಿನವರ ಕುಟುಂಬದಲ್ಲಿ ಮತ್ತು ವೈಷ್ಣವರ ವಲ್ಲಭಾಚಾರಿ ಪಂಗಡಗಳಲ್ಲಿ ಆಚರಣೆಯಲ್ಲಿತ್ತು. +ಬ್ರಾಹ್ಮಣರು ಯಾವ ಮಟ್ಟದ ಅಧೋಗತಿಗಿಳಿದಿದ್ದರೆಂಬುದು ಇದರಿಂದ ವ್ಯಕ್ತವಾಗುತ್ತವೆ. +ಬೈಬಲ್ಲಿನಲ್ಲಿ ಹೇಳಿರುವಂತೆ ಉಪ್ಪು ತನ್ನ ರುಚಿಯನ್ನು ಕಳೆದುಕೊಂಡಾಗ ಆ ರುಚಿಯನ್ನು ಇನ್ನೆಲ್ಲಿಂದ ಮರಳಿಸಲು ಸಾಧ್ಯ? +ಹಿಂದೂ ಸಮಾಜದ ನೈತಿಕ ಬಂಧಗಳು ಅಪಾಯಕಾರಿ ಘಟ್ಟ ತಲುಪಿದ್ದವೆಂಬುದರಲ್ಲಿ ಆಶ್ಚರ್ಯವೇನಿಲ್ಲ. +ಈ ನೈತಿಕ ಅಂಧಃಪತನವನ್ನು ತಡೆಯುವ ಉದ್ದೇಶದಿಂದ ಈಸ್ಟ್‌ ಇಂಡಿಯಾ ಕಂಪೆನಿಯು ೧೮೧೯ರಲ್ಲಿ ಒಂದು ಕಾನೂನನ್ನು ಮಾಡಬೇಕಾಯಿತು. +ಈ ಕಾನೂನಿನ ಪೀಠಿಕೆಯಲ್ಲಿ ಹೇಳಿದಂತೆ ಹೆಂಡತಿಯನ್ನು ಅಥವಾ ಹೆಣ್ಣುಮಕ್ಕಳನ್ನು ವೇಶ್ಯಾವೃತ್ತಿಯಲ್ಲಿ ತೊಡಗಿಸುವುದಕ್ಕಾಗಿ ಹೆಂಗಸರನ್ನು ನೇಮಕ ಮಾಡಿಕೊಳ್ಳಲಾಗುತ್ತಿತ್ತು. +ಗಂಡಂದಿರು ಮತ್ತು ತಂದೆಯರಲ್ಲಿ ತಮ್ಮ ಕುಟುಂಬದವರನ್ನು ಮತ್ತು ಮಕ್ಕಳನ್ನು ತೊರೆಯುವುದು ಸಾಮಾನ್ಯ ಸಂಗತಿಯಾಗಿತ್ತು. +ಸಾರ್ವಜನಿಕ ಸದ್ವಿವೇಚನೆ ಎಂಬುದೇ ಇರಲಿಲ್ಲ. +ಅದಿಲ್ಲದಾಗ ಸಾಮಾಜಿಕ ಅನ್ಯಾಯಗಳ ವಿರುದ ನೈತಿಕ ಕ್ರೋಧವನ್ನು ನಿರೀಕ್ಷಿಸುವುದು ನಿರರ್ಥಕವಾಗಿತ್ತು. +ಬ್ರಾಹ್ಮಣರು ಪ್ರತಿಯೊಂದು ಸಾಮಾಜಿಕ ಅನ್ಯಾಯವನ್ನು ಸಮರ್ಥಿಸಿಕೊಳ್ಳುವುದರಲ್ಲೇ ನಿರತರಾಗಿದ್ದರು. +ಏಕೆಂದರೆ ಅವರು ತಮ್ಮ ಜೀವನೋಪಾಯಕ್ಕೆ ಅವುಗಳನ್ನೇ ಅವಲಂಬಿಸಿದ್ದರು. +ಅವರು ಲಕ್ಷ ಲಕ್ಷಾಂತರ ಜನರನ್ನು ಗುಲಾಮರನ್ನಾಗಿಸಿದ ಅಸ್ಪೃಶ್ಯತೆಯ ಆಚರಣೆಯನ್ನು ಸಮರ್ಥಿಸಿಕೊಂಡರು. +ಜಾತಿ ಪದ್ಧತಿಯನ್ನು ಸಮರ್ಥಿಸಿಕೊಂಡರು. +ಜಾತಿಪದ್ಧತಿಗೆ ಎರಡು ಆಧಾರಗಳಾದ ಬಾಲ್ಯವಿವಾಹ ಮತ್ತು ಬಲಾತ್ಕಾರದ ವೈಧವ್ಯಗಳನ್ನು ಸಮರ್ಥಿಸಿಕೊಂಡರು. +ವಿಧವೆಯರ ದಹನವನ್ನು ಸಮರ್ಥಿಸಿಕೊಂಡರಲ್ಲದೆ ಬಹುಪತ್ನೀತ್ವ ಪದ್ಧತಿಯಿಂದ ರಜಪೂತರು ತಮಗೆ ಹುಟ್ಟಿದ ಸಹಸ್ರಾರು ಹೆಣ್ಣುಮಕ್ಕಳನ್ನು ಕೊಂದುಹಾಕುತ್ತಿದ್ದಂತಹ ವರ್ಗೀಕೃತ ಸಾಮಾಜಿಕ ವ್ಯವಸ್ಥೆಯನ್ನು ಸಮರ್ಥಿಸಿಕೊಂಡರು. +ಎಂತಹ ನಾಚಿಗೆಗೇಡು. +ಎಂತಹ ಅನ್ಯಾಯ. +ಇಂತಹ ಸಮಾಜ ಬದುಕುವ ಆಸೆಯನ್ನು ಹೊಂದಬಹುದೇ? +ರಾನಡೆಯವರು ಕೇಳಿದ ಪ್ರಶ್ನೆಗಳು ಇಂಥವು. +ಆದ್ದರಿಂದಲೇ ಕಟ್ಟುನಿಟ್ಟಾದ ಮತ್ತು ಉಗ್ರ ಸಮಾಜ ಸುಧಾರಣೆಯ ಮುಖಾಂತರ ಮಾತ್ರ ಸಮಾಜವನ್ನು ರಕ್ಷಿಸಬಹುದಾಗಿದೆ ಎಂಬುದು ಅವರ ಸಿದ್ಧಾಂತವಾಗಿತ್ತು. +ಅವರು ಕಡುವಿರೋಧಿಗಳು ರಾಜಕೀಯ ಪಂಥದ ಬುದ್ಧಿಜೀವಿ ವರ್ಗಕ್ಕೆ ಸೇರಿದವರಾಗಿದ್ದರು. +ಇವರು ತಮ್ಮದೇ ಆದ ಹೊಸ ಸಿದ್ಧಾಂತವನ್ನು ನಿರೂಪಿಸಿದರು. +ಸಿದ್ಧಾಂತದ ಪ್ರಕಾರ ರಾಜಕೀಯ ಸುಧಾರಣೆಗೆ ಸಾಮಾಜಿಕ ಸುಧಾರಣೆಗಿಂತ ಹೆಚ್ಚಿನ ಪ್ರಾಶಸ್ತ ಬರಬೇಕು. +ಈ ಸಿದ್ಧಾಂತವನ್ನು ಅನೇಕ ವೇದಿಕೆಗಳಿಂದ ಮಂಡಿಸಲಾಯಿತು. +ಮುಂಬಯಿ ಉಚ್ಚನ್ಯಾಯಾಲಯದ ನ್ಯಾಯಮೂರ್ತಿ ತೆಲಂಗರಂತಹ ಪ್ರತಿಭಾಶಾಲಿಗಳು ತಮ್ಮ ನ್ಯಾಯವಾದಿಯ ತೀಕ್ಷ್ಣವಾದ ಬುದ್ಧಿವಂತಿಕೆಯಿಂದ ಈ ವಾದವನ್ನು ಸಮರ್ಥಿಸಿಕೊಂಡರು. +ಈ ಸಿದ್ಧಾಂತವು ಜನರ ಗಮನವನ್ನು ಸೆಳೆಯಿತು. +ಸಮಾಜ ಸುಧಾರಣೆಯಚಳವಳಿಗೆ ಏಕಮಾತ್ರ ಅಡ್ಡಿ ಯಾವುದಾದರೂ ಇದ್ದಿದ್ದರೆ ಅದು ರಾಜಕೀಯ ಸುಧಾರಣೆಯ ಕೂಗು. +ಈ ಸಿದ್ಧಾಂತ ಅಸಮರ್ಥನೀಯ. +ಈ ವಿಷಯದಲ್ಲಿ ರಾನಡೆಯವರ ವಿರೋಧಿಗಳು ತಪ್ಪು ಮಾಡಿದರಲ್ಲದೆ ಇದನ್ನು ಸಮರ್ಥಿಸಿಕೊಳ್ಳುವುದರ ಮೂಲಕ ಅವರು ದೇಶದ ಹಿತವನ್ನು ಕಡೆಗಣಿಸಿದರೆಂಬುದು ನಿಸ್ತಂದೇಹ. +ನ್ಯಾಯಮೂರ್ತಿ ಶ್ರೀ ತೆಲಂಗರವರು ರಾಜಕಾರಣಿಗಳ ಸಿದ್ಧಾಂತವನ್ನು ಸಮರ್ಥಿಸಿದ ಆಧಾರಗಳೇನೋ ತರ್ಕಬದ್ಧವಾಗಿದ್ದವು. +ಆದರೆ ಕೇವಲ ತರ್ಕ ನ್ಯಾಯಸಮೃತವಲ್ಲ ಮತ್ತು ಸಾಮ್ಯವು ಪ್ರಮಾಣವಾಗಲಾರದೆಂಬುದನ್ನು ಅವರು ಸಂಪೂರ್ಣ ಮರೆತರು. +ತೆಲಂಗರವರಿಗೆ ರಾನಡೆಯವರಿಗಿದ್ದ “ಸಾಮಾಜಿಕ”ಮತ್ತು “ರಾಜಕೀಯ”ಗಳ ನಡುವಣ ಅಂತಃಸಂಬಂಧದ ಬಗ್ಗೆ ಸರಿಯಾದ ಪರಿಕಲ್ಪನೆ ಇರಲಿಲ್ಲ. +ಇನ್ನು ಅವರ ಸಿದ್ಧಾಂತದ ಆಧಾರಗಳನ್ನು ಪರಿಶೀಲಿಸೋಣ. +ಅವರು ನೀಡಿದಂತಹ ಕಾರಣಗಳು ಅಥವಾ ಆಧಾರಗಳು ಅಷ್ಟು ಪ್ರಭಾವೀ ಕಾರಣಗಳಾಗಿರಲಿಲ್ಲ. +ಆದರೆ ನಾನು ಅವರು ಹೇಳಿದ ಅತ್ಯಂತ ಪ್ರಭಾವಿ ಎನಿಸಿದ ತರ್ಕಗಳನ್ನು ಎದುರಿಸಲು ಸಿದ್ಧನಿದ್ದೇನೆ. +ಆದಾಗ್ಯೂ ಅವರ ಸಿದ್ಧಾಂತ ಅಸಮರ್ಥನೀಯ. +ಈಗ ನಮೂದಿಸಲಾಗುವ ಆಧಾರಗಳು ಅತಿಪ್ರಮುಖವಾದವು ಎಂದು ನನಗನಿಸುತ್ತದೆ. +ಮೊದಲನೆಯದಾಗಿ,ಜನತೆಯ ಹಕ್ಕುಗಳನ್ನು ಸಂರಕ್ಷಿಸುವುದಕ್ಕಾಗಿ ನನಗೆ ಮೊದಲು ರಾಜಕೀಯ ಅಧಿಕಾರದ ಅವಶ್ಯಕತೆ ಇದೆ ಎಂದು ಹೇಳಬಹುದು. +ಈ ಉತ್ತರವು ಅಮೆರಿಕೆಯ ರಾಜಕೀಯ ಪಟು ಜೆಫರ್‌ಸನ್‌ ನೀಡಿದ ಅತಿಸೀಮಿತವಾದ ಸರಕಾರ ಸಿದ್ಧಾಂತವನ್ನು ಆಧರಿಸಿದೆ. +ಜೆಫರಸನ್‌ ಅವರ ಪ್ರಕಾರ ರಾಜಕೀಯವು ಜನರ ಹಕ್ಕುಗಳನ್ನು ಅಬಾಧಿತವಾಗಿ ಉಳಿಸಿಕೊಂಡುಹೋಗುವ ರಾಜ್ಯದ ರಕ್ಷಕ ಕರ್ತವ್ಯ ಮಾತ್ರವೆನಿಸಿದೆ. +ಈ ಸಿದ್ಧಾಂತವು ತರ್ಕಬದ್ಧವಾಗಿದೆ ಎಂದೇ ಇಟ್ಟುಕೊಳ್ಳೋಣ. +ಆದರೆ ಹಕ್ಕುಗಳೇ ಇಲ್ಲದಿರುವಾಗ ರಾಜ್ಯಕ್ಕೆ ರಕ್ಷಿಸಲು ಉಳಿದಿರುವುದಾದರೂ ಏನು ಎಂಬ ಪ್ರಶ್ನೆ ಉದ್ಭವಿಸುತ್ತದೆ. +ಸಂರಕ್ಷಣೆಯ ಪ್ರಶ್ನೆ ಗಂಭೀರ ಸಂಗತಿಯಾಗಬೇಕಾದರೆ ಮೊದಲು ಹಕ್ಕುಗಳು ಲಭ್ಯವಿರಬೇಕು. +ಸರಕಾರವು ವಿಶಿಷ್ಟ ಹಕ್ಕುಗಳನ್ನು ಹೊಂದಿರುವವರನ್ನು ಮಾತ್ರ ರಕ್ಷಿಸಬೇಕು ಮತ್ತು ಏನೂ ಇಲ್ಲದವರನ್ನು ಶಿಕ್ಷಿಸಬೇಕು ಎಂಬ ವಿಚಾರವನ್ನು ಮಾನ್ಯ ಮಾಡದೇ ಹೋದರೆ, ರಾಜಕೀಯ ಸುಧಾರಣೆ ಸಾಮಾಜಿಕ ಸುಧಾರಣೆಗಿಂತ ಮೊದಲಾಗಬೇಕೆಂಬ ಸಿದ್ಧಾಂತ ಅಸಂಬದ್ಧವಾಗುತ್ತದೆ. +ಈ ಸಿದ್ಧಾಂತದ ಪರವಾಗಿ ನೀಡಬಹುದಾದ ಎರಡನೆಯ ಆಧಾರವೆಂದರೆ ಪ್ರತಿಯೊಬ್ಬನಿಗೂ ಕಾನೂನಿನನ್ವಯ ಕೆಲ ಮೂಲಭೂತ ಹಕ್ಕುಗಳನ್ನು ನೀಡುವುದೇ ಆಗಿದೆ. +ಮೊದಲು ರಾಜಕೀಯ ಅಧಿಕಾರವನ್ನು ಪಡೆಯದೇ ಹೋದರೆ ಅಂತಹ ಮೂಲಭೂತ ಹಕ್ಕುಗಳನ್ನು ನೀಡಲಾಗುವುದಿಲ್ಲ. +ಇದೇನೋ ಬಹು ಸಮಂಜಸವೆನಿಸುತ್ತದೆ. +ಆದರೆ ಈ ವಾದದಲ್ಲಿ ಏನಾದರೂ ತಿರುಳು ಇದೆಯೇ? +ಅಮೆರಿಕೆಯ ಸಂವಿಧಾನದಲ್ಲಿ ಮತ್ತು ಕ್ರಾಂತಿಕಾರಿ ಫ್ರಾನ್ಸ್‌ನ ಸಂವಿಧಾನದಲ್ಲಿ ಅವುಗಳನ್ನು ಅಳವಡಿಸಿದಾಗಿನಿಂದಲೂ ಮೂಲಭೂತ ಹಕ್ಕುಗಳ ವಿಚಾರ ಸುಪರಿಚಿತವಾಗಿದೆ. +ಪ್ರತಿ ವ್ಯಕ್ತಿಗೂ ಮೂಲಭೂತ ಹಕ್ಕುಗಳ ವಿಚಾರ ಸುಪರಿಚಿತವಾಗಿದೆ. +ಪ್ರತಿ ವ್ಯಕ್ತಿಗೂ ಮೂಲಭೂತ ಹಕ್ಕುಗಳನ್ನು ಉಡುಗೊರೆಯಾಗಿ ಕೊಡುವ ವಿಚಾರ ಪ್ರಶಂಸನೀಯವಾದದ್ದೆ. +ಆದರೆ ಅವುಗಳನ್ನು ಪರಿಣಾಮಕಾರಿಯಾಗಿ ಮಾಡುವುದು ಹೇಗೆ ಎಂಬುದೇ ಪ್ರಶ್ನೆ. +ಹಕ್ಕುಗಳನ್ನು ಒಮ್ಮೆ ಕಾನೂನಿನಲ್ಲಿ ವಿಧಿಸಿದರೆ ಅವುಗಳ ರಕ್ಷಣೆಯಾಗುವುದು ಎಂಬುದು ಪ್ರಚಲಿತ ಭಾವನೆ. +ಇದೂ ಸಹ ಅಸಮರ್ಥನೀಯ ಪರಿಕಲ್ಪನೆ. +ಹಕ್ಕುಗಳ ರಕ್ಷಣೆ ಕಾನೂನಿನಿಂದ ಆಗದೆ ಸಮಾಜದ ಸಾಮಾಜಿಕ ಮತ್ತು ನೈತಿಕ ಸದಸದ್ವಿವೇಕದಿಂದ ಮಾತ್ರ ಸಾಧ್ಯ ಕಾನೂನು ವಿಧಿಸುವಂತಹ ಹಕ್ಕುಗಳನ್ನು ಸಾಮಾಜಿಕ ಸದಸದ್ವಿವೇಕವು ಮಾನ್ಯ ಮಾಡಲು ಸಿದ್ಧವಿದ್ದರೆ ಹಕ್ಕುಗಳು ಸುರಕ್ಷಿತವಾಗಿರುತ್ತವೆ. +ಆದರೆ ಮೂಲಭೂತ ಹಕ್ಕುಗಳನ್ನು ಸಮಾಜ ವಿರೋಧಿಸಿದ್ದಾದರೆ ಯಾವ ಕಾನೂನು, ಯಾವ ಸಂಸತ್ತೂ,ಯಾವ ನ್ಯಾಯಾಂಗವೂ ಕೂಡ ಅವುಗಳನ್ನು ನಿಜವಾದ ಸ್ವರೂಪದಲ್ಲಿ ರಕ್ಷಿಸಲಾರವು. +ಅಮೆರಿಕಾದಲ್ಲಿ ಕಪ್ಪು ಜನಾಂಗದವರಿಗೆ ಜರ್ಮನಿಯಲ್ಲಿ ಯಹೂದಿಯರಿಗೆ, ಭಾರತದಲ್ಲಿ ಅಸ್ಪೃಶ್ಯರಿಗೆ ಮೂಲಭೂತ ಹಕ್ಕುಗಳಿಂದ ಆಗುವ ಪ್ರಯೋಜನವೇನು? +ಬರ್ಕ್‌ ಹೇಳಿದಂತೆ ಇಡೀ ಜನಸ್ತೋಮವನ್ನು ದಂಡಿಸುವ ವಿಧಾನವೇ ಇಲ್ಲ. +ಕಾನೂನು ಒಬ್ಬ, ಏಕೈಕ, ಅವಿಧೇಯ ಅಪರಾಧಿಯನ್ನು ಶಿಕ್ಷಿಸಬಲ್ಲದು. +ಕಾನೂನನ್ನು ಮುರಿಯುವ ದೃಢ ನಿರ್ಧಾರಮಾಡಿದ ಇಡೀ ಜನಸಮೂಹದ ಮೇಲೆ ಅದು ಪರಿಣಾಮಕಾರಿಯಾಗಲಾರದು. +ಕೊಲೆರಿಜ್‌ನ ಮಾತಿನಲ್ಲಿ ಹೇಳುವುದಾದರೆ ಸಾಮಾಜಿಕ ಸದಸದ್ವಿವೇಕ ಆತ್ಮದ ಶಾಂತ ಮತ್ತು ಭ್ರಷ್ಟಗೊಳಿಸಲಾಗದಂತಹ ವಿಧಾಯಕ ವಿರೋಧವನ್ನು ಒಡ್ಡಿದಾಗಲೇ ಮೂಲಭೂತ ಅಥವಾ ಇನ್ನಾವುದೇ ರೀತಿಯ ಹಕ್ಕುಗಳು ಸುರಕ್ಷಿತವಾಗುತ್ತವೆ. +ರಾಜಕಾರಣಿಗಳ ಮೂರನೆಯ ತರ್ಕ ಸ್ವರಾಜ್ಯದ ಹಕ್ಕಿನ ಆಧಾರವನ್ನವಲಂಬಿಸಿದೆ. +ಸ್ವರಾಜ್ಯವು ಸುರಾಜ್ಯಕ್ಕಿಂತ ಶ್ರೇಷ್ಠ ಎಂಬ ಕೂಗು ಸುಪರಿಚಿತ. + ಒಂದು ಘೋಷಣೆಗೆ ಕೊಡುವುದಕ್ಕಿಂತ ಹೆಚ್ಚಿನ ಮಹತ್ವವನ್ನು ಈ ಮಾತಿಗೆ ಕೊಡಬೇಕಾಗಿಲ್ಲ. +ಸ್ವರಾಜ್ಯವು ಸುರಾಜ್ಯವೂ ಆಗಿರಬೇಕೆಂಬುದೇ ಎಲ್ಲರ ಬಯಕೆ. +ಮುತ್ಸದ್ದಿಗಳು ಒಳ್ಳೆಯ ಸರಕಾರ ಬಯಸಿದ್ದರೆಂಬುದರಲ್ಲಿ ಸಂದೇಹವಿಲ್ಲ. +ಪ್ರಜಾಸತ್ತಾತ್ಮಕ ಸರಕಾರದ ರಚನೆಯೇ ಅವರ ಗುರಿಯಾಗಿತ್ತು. +ಆದರೆ ಪ್ರಜಾಸತ್ತಾತ್ಮಕ ಪದ್ಧತಿಯ ಸರಕಾರದ ಸ್ಥಾಪನೆ ಸಾಧ್ಯವೇ? +ಎಂದು ಅವರು ಯೋಚಿಸಲಿಲ್ಲ. +ಅವರ ವಾದ ಅನೇಕ ತಪ್ಪುಗ್ರಹಿಕೆಗಳನ್ನು ಅವಲಂಬಿಸಿತ್ತು. +ಸಾಮಾಜಿಕ ಪ್ರಜಾಸತ್ತೆ ಇಲ್ಲದೆ ಪ್ರಜಾಪ್ರಭುತ್ವದ ಕೇವಲ ಬಾಹ್ಯಾಕಾರವನ್ನು ಹೊಂದುವುದು ನಿಷ್ಟ್ರಯೋಜಕ. +ಪ್ರಜಾಪ್ರಭುತ್ವ ಕೇವಲ ಸರಕಾರದ ಬಾಹ್ಯರೂಪವಲ್ಲ ಎಂಬುದನ್ನು ರಾಜಕಾರಣಿಗಳು ಅರಿತುಕೊಳ್ಳಲಿಲ್ಲ. +ಅದು ಮೂಲತಃ ಸಮಾಜದ ಒಂದು ಪ್ರಕಾರ. +ಪ್ರಜಾಸತ್ತಾತ್ಮಕ ಸಮಾಜವು ಒಕ್ಕಟ್ಟು ಸಾಮೂಹಿಕ ಧೋರಣೆ, ಸಾರ್ವಜನಿಕ ಉದ್ದೇಶಗಳಿಗೆ ನಿಷ್ಠೆ ಮತ್ತು ಪರಸ್ಪರ ಸಹಾನುಭೂತಿ ಇವುಗಳನ್ನು ಹೊಂದಿರುವ ಅವಶ್ಯಕತೆ ಇಲ್ಲ. +ಆದರೆ ಅದರಲ್ಲಿ ಅವಶ್ಯವಾಗಿ ಎರಡು ಅಂಶಗಳು ಅಡಕವಾಗಿವೆ. +ಮೊದಲನೆಯದಾಗಿ,ಒಂದು ವಿಧದ ಮನೋಭಾವನೆ ತನ್ನ ಸಹಜೀವಿಗಳ ಬಗ್ಗೆ ಅದರ ಮತ್ತು ಸಮಾನತೆಯ ಮನೋಭಾವನೆ. +ಎರಡನೆಯದಾಗಿ, ಕಠಿಣ ಸಾಮಾಜಿಕ ಅಡೆತಡೆಗಳಿಂದ ಮುಕ್ತವಾದ ಸಾಮಾಜಿಕ ವ್ಯವಸ್ಥೆ. +ವಿಶೇಷಾಧಿಕಾರ ಉಳ್ಳವರು ಮತ್ತು ಇಲ್ಲದವರ ನಡುವೆ ಭಿನ್ನತೆ, ಪ್ರತ್ಯೇಕತೆ, ಬಹಿಷ್ಕಾರ ಮತ್ತು ಪ್ರಜಾಸತ್ತೆ ಇವು ಅಸಂಬದ್ಧ. +ರಾನಡೆಯವರ ವಿರೋಧಿಗಳು ಈ ಅಂಶದ ಸತ್ಯವನ್ನು ಅರ್ಥಮಾಡಿಕೊಳ್ಳದಿದ್ದುದು ದುರದೃಷ್ಟಕರ. +ಯಾವುದೇ ರೀತಿಯಲ್ಲಿ ಪರೀಕ್ಷೆ ಮಾಡಿದರೂ ಈ ವಿವಾದದಲ್ಲಿ ರಾನಡೆಯವರ ನಿಲುವು ಮತ್ತುಅವರ ಯೋಜಿತ ಕಾರ್ಯಗಳು ಸೂಕ್ತವೂ ಮೂಲಭೂತವೂ ಆಗಿದ್ದವು. +ಮಾನವನ ನೈತಿಕ ಪ್ರಜ್ಞೆಗೆ ನಿಲುಕುವಂತಹ ಯಾವುದೇ ರೀತಿಯ ಹಕ್ಕುಗಳು ಹಿಂದೂ ಸಮಾಜದಲ್ಲಿರಲಿಲ್ಲ. +ಕೆಲವೇ ಜನರಿಗೆ ವಿಶೇಷ ಸೌಲಭ್ಯಗಳು ಮತ್ತು ಅನೇಕರಿಗೆ ನಿಷೇಧಗಳು ಮಾತ್ರ ಇದ್ದವು. +ರಾನಡೆಯವರು ಹಕ್ಕುಗಳನ್ನು ಕಲ್ಪಿಸಿಕೊಡುವುದಕ್ಕಾಗಿ ಹೋರಾಡಿದರು. +ಅವರು ಮರಣಾವಸ್ಥೆಯಲ್ಲಿದ್ದ ಹಿಂದೂ ಸಮಾಜದ ಅಂತಃಪ್ರಜ್ಞೆಯನ್ನು ಪುನಃಶ್ಚೇತನಗೊಳಿಸ ಬಯಸಿದ್ದರು. +ರಾನಡೆಯವರು ನಿಶ್ಚಿತವಾದ ಮತ್ತು ಸುಭದ್ರ ರಾಜಕೀಯಕ್ಕೆ ಅವಶ್ಯವೆನಿಸಿದ ನಿಜವಾದ ಸಾಮಾಜಿಕ ಪ್ರಜಾತಂತ್ರವನ್ನು ಸ್ಥಾಪಿಸುವ ಧ್ಯೇಯವನ್ನು ಹೊಂದಿದ್ದರು. +ಒಂದು ರಾಷ್ಟ್ರದ ಉಳಿವಿಗೆ ರಾಜಕೀಯ ಸ್ಥಾತಂತ್ರ್ಯ ಅವಶ್ಯವೋ ಅಥವಾ ಶಕ್ತಿಯುತ ನೈತಿಕ ಸತ್ಯ ಅವಶ್ಯವೋ ಎಂಬ ಎರಡು ಪರಸ್ಪರ ವಿರೋಧಿ ಅಭಿಪ್ರಾಯಗಳ ನಡುವೆ ಸಂಘರ್ಷಣೆಯುಂಟಾಗಿತ್ತು. +ಇತಿಹಾಸದ ಜಾಗರೂಕ ಮತ್ತು ತುಲನಾತ್ಮಕ ಅಧ್ಯಯನದ ಫಲವಾಗಿ ಪ್ರಸಿದ್ಧ ಇತಿಹಾಸಕಾರ ಲೆಕಿ ತನ್ನ ಅಭಿಪ್ರಾಯವನ್ನು ಹೀಗೆ ವ್ಯಕ್ತಪಡಿಸಿದ್ದನು: +“ಒಂದು ರಾಷ್ಟ್ರದ ಬಲ ಮತ್ತು ಅಭಿವೃದ್ಧಿ ಅದರ ಶುದ್ಧಜೀವನ, ವ್ಯಾವಹಾರಿಕ ಪ್ರಾಮಾಣಿಕತೆ,ಉನ್ನತ ಮಟ್ಟದ ನೈತಿಕ ಸಾಮರ್ಥ, ಸಾರ್ವತ್ರಿಕ ಅಂತಃಕರಣ, ಸರಳ ರೂಢಿಗಳು, ಧೈರ್ಯ, ಸತ್ಯಸಂಧತೆ ಮತ್ತು ಒಳ್ಳೆಯ ಗುಣ ಹಾಗೂ ಬುದ್ಧಿಮತ್ತೆಯಿಂದ ಉಗಮಿಸುವ ಸರಿಯಾದ ಮತ್ತು ಸಮಾಧಾನದ ನಿರ್ಣಯಗಳನ್ನೇ ಅವಲಂಬಿಸಿರುತ್ತವೆ. +ಒಂದು ರಾಷ್ಟ್ರದ ಭವಿಷ್ಯದ ಬಗ್ಗೆ ನೀವು ಬುದ್ಧಿವಂತಿಕೆಯ ನಿರ್ಣಯವನ್ನು ತೆಗೆದುಕೊಳ್ಳಬೇಕಾದರೆ, ಜನತೆಯಲ್ಲಿ ಸದ್ಗುಣಗಳು ಹೆಚ್ಚುತ್ತಿವೆಯೇ ಅಥವಾ ಕ್ಷೀಣವಾಗುತ್ತಿವೆಯೇ ಎಂಬುದನ್ನು ಎಚ್ಚರಿಕೆಯಿಂದ ಗಮನಿಸಿ ಮತ್ತು ಸಾರ್ವಜನಿಕ ಜೀವನದಲ್ಲಿ ಯಾವ ಗುಣಗಳು ಪ್ರಧಾನವಾಗಿವೆ ಎಂಬುದನ್ನು ಎಚ್ಚರಿಕೆಯಿಂದ ವೀಕ್ಷಿಸಿ. +ಶೀಲದ ಮಹತ್ವ ಹೆಚ್ಚುತ್ತಿದೆಯೇ ಕ ಅಥವಾ ಕಡಿಮೆಯಾಗುತ್ತಿದೆಯೇ? +ರಾಷ್ಟದಲ್ಲಿ ಅತ್ಯುನ್ನತ ಸ್ಥಾನಗಳನ್ನು ಪಡೆಯುವ ಜನರ ವಿಷಯವಾಗಿ ಖಾಸಗಿ ಜೀವನದಲ್ಲಿ ಪಕ್ಷಭೇದವಿಲ್ಲದ ಸಮರ್ಥ ಜನರು ಅತ್ಯಂತ ಜವಾಬ್ದಾರಿಯಿಂದ ಮಾತನಾಡುತ್ತಿದ್ದಾರೆಯೇ? +ಆ ಜನರು ದೃಢ ನಂಬಿಕೆಗಳ ಸುಸಂಗತ ಜೀವನದ ಹಾಗೂ ನಿರ್ವಿವಾದವಾದ ಪ್ರಾಮಾಣಿಕತೆಯುಳ್ಳ ವ್ಯಕ್ತಿಗಳೇ? +ಈ ವಿಚಾರಧಾರೆಯನ್ವಯವೇ ಒಂದು ರಾಷ್ಟ್ರದ ಜಾತಕವನ್ನು ನೀವು ರಚಿಸಬಹುದು.” +ರಾನಡೆಯವರು ಬುದ್ಧಿವಂತರಷ್ಟೇ ಅಲ್ಲ, ತರ್ಕಬದ್ಧರೂ ಆಗಿದ್ದರು. +ಅವರು ತಮ್ಮ ವಿರೋಧಿಗಳಿಗೆ ಏಕಕಾಲದಲ್ಲಿ ರಾಜಕೀಯ ತೀವ್ರಗಾಮಿಗಳು ಮತ್ತು ಸಾಮಾಜಿಕ ಸಂಪ್ರದಾಯವಾದಿಗಳಾಗಿರುವವರ ವಿರುದ್ಧ ಈ ಕೆಳಗಿನ ಸ್ಪಷ್ಟ ಮತ್ತು ತಪ್ಪು ಅಭಿಪ್ರಾಯಕ್ಕೆಡೆಯಾಗದ ಮಾತುಗಳಲ್ಲಿ ಎಚ್ಚರಿಸಿದರು: +“ನೀವು ಭಾಗಶಃ ಉದಾರವಾದಿಗಳಾಗಿರಲು ಸಾಧ್ಯವಿಲ್ಲ. + ನೀವು ರಾಜಕೀಯದಲ್ಲಿ ಉದಾರವಾದಿಗಳಾಗಿದ್ದು ಧರ್ಮದಲ್ಲಿ ಸಂಪ್ರದಾಯವಾದಿಗಳಾಗಿರಲು ಆಗದು. +ಬುದ್ಧಿ-ಭಾವಗಳು ಜೊತೆಜೊತೆಯಾಗಿ ಸಾಗಬೇಕು. +ಏಕಕಾಲದಲ್ಲಿ ನಿಮ್ಮ ಮನಸ್ಸನ್ನು ಸಂಕುಚಿತಗೊಳಿಸಿಕೊಂಡು ನಿಮ್ಮ ಬೌದ್ಧಿಕ ಬೆಳವಣಿಗೆಯನ್ನು ಬೆಳೆಸಿಕೊಳ್ಳಲಾರಿರಿ, ನಿಮ್ಮ ಮನಸ್ಸನ್ನು ಸಮೃದ್ಧಿಸಿಕೊಳ್ಳಲಾರಿರಿ, ನಿಮ್ಮ ರಾಜಕೀಯ ಹಕ್ಕುಗಳು ಮತ್ತು ಸವಲತ್ತುಗಳ ವ್ಯಾಪ್ತಿಯನ್ನು ವಿಶಾಲಗೊಳಿಸಿಕೊಳ್ಳಲಾರಿರಿ. +ಯಾರು ತಮ್ಮ ಆಳರಸರಿಂದ ಹಕ್ಕುಗಳನ್ನು ಮತ್ತು ಸವಲತ್ತುಗಳನ್ನು ಪಡೆದುಕೊಳ್ಳಲು ಹೋರಾಡುತ್ತಿರುವರೋ ಅಂಥವರು ತಮ್ಮ ಮೂಢನಂಬಿಕೆಗಳು ಮತ್ತು ಸಾಮಾಜಿಕ ಅನಿಷ್ಟಗಳ ಸರಪಳಿಗಳಿಂದ ಬಂಧಿತರಾಗಿರಬೇಕೆಂಬುದು ನಿರರ್ಥಕ ಕನಸು. +ಅನತಿ ದೂರದಲ್ಲಿ ಇಂತಹ ನಿರರ್ಥಕ ಕನಸುಗಳು ಹುಸಿಯಾಗಲಿವೆ.” +ರಾನಡೆಯವರ ಈ ಮಾತುಗಳು ಸತ್ಯ ಮಾತ್ರವಾಗಿರದೆ ಭವಿಷ್ಯವಾಣಿಯಂತಿದ್ದವು ಎಂಬುದು ಅನುಭವನ ವೇದ್ಯವಾಗಿದೆ. +ಈ ಮಾತನ್ನು ಅಲ್ಲಗಳೆಯುವವರು ಈ ಅಂಶಗಳನ್ನು ಪರಿಶೀಲಿಸಬೇಕು. +ನಾವು ರಾಜಕೀಯದಲ್ಲಿ ಯಾವ ಸ್ಥಿತಿಯಲ್ಲಿದ್ದೇವೆ ಮತ್ತು ಅದಕ್ಕೆ ಕಾರಣಗಳೇನು? +ರಾಷ್ಟ್ರೀಯ ಕಾಂಗ್ರೆಸ್‌ಸ್ಥಾಪನೆಯಾಗಿ ೫ಂ ವರ್ಷಗಳಾದವು. +ಅದರ ನಾಯಕತ್ವದ ಹಸ್ತಾಂತರವಾಗಿದೆ. +ಅದು ವಿವೇಕಿಗಳಿಂದ ಅವಿವೇಕಿಗಳ ಕೈಗೆ ಹೋಗಿದೆ, ಅಥವಾ ವಾಸ್ತವಿಕತಾ ವಾದಿಗಳ ಕೈಯಿಂದ ಆದರ್ಶವಾದಿಗಳ ಕೈಗೆ ಹೋಗಿದೆ ಎಂದು ನಾನು ಹೇಳುತ್ತಿಲ್ಲ. +ಆದರೆ ಅದು ಸೌಮ್ಯವಾದಿಗಳಿಂದ ಉಗ್ರವಾದಿಗಳ ಕೈಗೆ ಹೋಗಿದೆ. +೫ಂ ವರ್ಷಗಳ ರಾಜಕೀಯ ಮುನ್ನಡೆಯ ನಂತರ ದೇಶ ಯಾವ ಸ್ಥಿತಿಯಲ್ಲಿದೆ? +ಈ ಬಿಕ್ಕಟ್ಟಿಗೆ ಕಾರಣವೇನು? +ಉತ್ತರ ಸರಳವಾಗಿದೆ. +ಕೋಮುವಾರು ಇತ್ಯರ್ಥವಿಲ್ಲದಿರುವುದೇ ಈ ಬಿಕ್ಕಟ್ಟಿಗೆ ಕಾರಣ. +ರಾಜಕೀಯ ಇತ್ಯರ್ಥಕ್ಕೆ ಕೋಮುವಾರು ಇತ್ಯರ್ಥದ ಅವಶ್ಯಕತೆ ಏನಿದೆ ಎಂಬ ಪ್ರಶ್ನೆಯನ್ನು ನೀವು ಹಾಕಿಕೊಂಡಾಗ,ರಾನಡೆಯವರ ನಿಲುವಿನ ಮೂಲಭೂತ ಮಹತ್ವದ ಅರಿವು ಉಂಟಾಗುತ್ತದೆ. +ಈ ಪ್ರಶ್ನೆಗೆ ಉತ್ತರ ನಮ್ಮ ಅ ಪ್ರಜಾಪ್ರಭುತ್ನವಾದಿ, ಪಟ್ಟಭದ್ರ ವರ್ಗಗಳ ಪರವಾದ ಮತ್ತು ಸಾಮಾನ್ಯ ಜನತೆಯ ವಿರೋಧಿ ವರ್ಗಪ್ರಜ್ಞೆ ಮತ್ತು ಕೋಮುವಾರು ಭಾವನೆಯ ದೋಷಪೂರ್ಣ ಸಾಮಾಜಿಕ ವ್ಯವಸ್ಥೆಯಲ್ಲಿ ಸಿಗುತ್ತದೆ. +ಇಂತಹ ಅಡಿಪಾಯದ ಮೇಲೆ ಕಟ್ಟಲಾದ ರಾಜಕೀಯ ಪ್ರಜಾಪ್ರಭುತ್ವ ಸಂಪೂರ್ಣ ವಿಪರ್ಯಾಸವೆನಿಸುತ್ತದೆ. +ಆದ್ದರಿಂದಲೇ ಸವರ್ಣಹಿಂದೂಗಳನ್ನು ಬಿಟ್ಟರೆ ಇನ್ನಾರೂ ಗಂಭೀರ ಹೊಂದಾಣಿಕೆಗಳ ವಿನಾ ರಾಜಕೀಯ ಪ್ರಜಾಪ್ರಭುತ್ವ ಸ್ಥಾಪನೆಗೆ ಒಪ್ಪುವುದಿಲ್ಲ. + ಈ ಜಾತೀಯ ಬಿಕ್ಕಟ್ಟು, ಬ್ರಿಟಿಷ್‌ ಸರಕಾರದ ಸೃಷ್ಟಿ ಎಂದು ಕೆಲವರು ಸಮಾಧಾನ ಪಟ್ಟುಕೊಳ್ಳಬಹುದು. +ಕೆಲವರು ತಮಗೆ ಆಪ್ಯಯಮಾನವಾದ ವಿಚಾರಗಳನ್ನಷ್ಟೇ ಮುಂದಿಟ್ಟು, ಜವಾಬ್ದಾರಿಯನ್ನು ಬೇರೆಯವರ ಮೇಲೆ ಹಾಕಬಹುದು. +ಇದು ಪಲಾಯನ ಮನೋಭಾವ. +ಆದರೆ ಜಾತೀಯ ಅಥವಾ ಕೋಮುವಾರು ಬಿಕ್ಕಟ್ಟು ನಮ್ಮ ಸಾಮಾಜಿಕ ವ್ಯವಸ್ಥೆಯ ದೋಷಗಳಿಂದ ಉದ್ಭವಿಸಿದ್ದೆಂದು ಮತ್ತು ಅದು ಭಾರತವು ರಾಜಕೀಯ ಅಧಿಕಾರ ಪಡೆಯುವ ಹಾದಿಯಲ್ಲಿ ಅಡ್ಡಿಯಾಗಿದೆಯೆಂಬ ಅಂಶವನ್ನು ಅಲ್ಲಗಳೆಯಲಾಗದು. +ರಾನಡೆಯವರ ಉದ್ದೇಶ ಹೊಸ ವ್ಯವಸ್ಥೆಯ ನಿರ್ಮಾಣವಾಗಿರದಿದ್ದರೂ, ಹಳೆಯ ವ್ಯವಸ್ಥೆಯನ್ನು ಸುಧಾರಿಸುವುದಾಗಿತ್ತು. +ಹಿಂದೂ ಸಮಾಜದ ನೈತಿಕ ಬಲವನ್ನು ಹೆಚ್ಚಿಸುವುದಕ್ಕೆ ಅವರು ಒತ್ತು ಕೊಟ್ಟಿದ್ದರು. +ಅವರ ಮಾತುಗಳನ್ನು ನಾವು ಕೇಳಿ ಪಾಲಿಸಿದ್ದ ಪಕ್ಷದಲ್ಲಿ ಈ ವ್ಯವಸ್ಥೆಯ ಪ್ರಖರತೆ ಮತ್ತು ಕಾಠಿಣ್ಯ ತುಸುವಾದರೂ ಕಡಿಮೆಯಾಗುತ್ತಿತ್ತು. +ಅದು ಜಾತೀಯ ಬಿಕ್ಕಟ್ಟನ್ನು ನಿವಾರಿಸದೇ ಇದ್ದರೂ ಅದರ ನಿವಾರಣೆ ಸುಲಭವಾಗಬಹುದಿತ್ತು. +ಎಷ್ಟೇ ಸೀಮಿತವಾಗಿದ್ದರೂ ಅದರ ಪ್ರಯತ್ನಗಳು ಪರಸ್ಪರ ವಿಶ್ವಾಸಕ್ಕೆ ದಾರಿ ಮಾಡಿಕೊಡುತ್ತಿದ್ದವು. +ಆದರೆ ರಾಜಕೀಯ ಅಧಿಕಾರದಾಹ ರಾಜಕಾರಣಿಗಳನ್ನು ಇತರ ಯಾವ ವಿಷಯಕ್ಕೂ ಮನಸ್ಸು ಕೊಡಲಾರದಷ್ಟು ಕುರುಡರನ್ನಾಗಿ ಮಾಡಿತ್ತು. +ರಾನಡೆಯವರು ತಮ್ಮ ಸೇಡು ತೀರಿಸಿಕೊಂಡರು. +ರಾಜಕೀಯ ರಕ್ಷಣೆಯನ್ನು ಕೊಡಮಾಡಿದ್ದು ಸಾಮಾಜಿಕ ಸುಧಾರಣೆಯ ಅವಶ್ಯಕತೆಯನ್ನು ನಿರಾಕರಿಸಿದ್ದಕ್ಕಾಗಿ ತೆತ್ತ ದಂಡವಲ್ಲವೇ? +ರಾನಡೆಯವರು ಪ್ರಬಲವಾದ ಪಾತ್ರವನ್ನಾಡಿದ ಕ್ಷೇತ್ರದಲ್ಲಿ ಸಾಧಿಸಿದುದೆಷ್ಟು? +ಒಂದು ಅರ್ಥದಲ್ಲಿ ಈ ಪ್ರಶ್ನೆಯೇ ಅಷ್ಟು ಪ್ರಧಾನವಲ್ಲ. +ಸಾಧನೆ ಶ್ರೇಷ್ಠತೆಯ ಅಳತೆಗೋಲಲ್ಲ. +ಕಾರ್ಲ್ಮೆಲ್‌ ಹೇಳಿದಂತೆ:"ಅಯ್ಯೋ। ಆದರ್ಶಗಳನ್ನು ಯಾವಾಗಲೂ ಸಂಪೂರ್ಣವಾಗಿ ಕಾರ್ಯಗತಗೊಳಿಸಲು ಸಾಧ್ಯವಿಲ್ಲಎಂಬುದನ್ನು ನಾವು ಬಲ್ಲೆವು. +ಆದರ್ಶಗಳು ನಿಲುಕಲಾರದಷ್ಟು ದೂರವಿರಬೇಕು . + ಸಾಧ್ಯವಿದ್ದಷ್ಟು ಅವುಗಳ ಸಮೀಪ ಹೋಗುವುದರಿಂದಲೇ ನಾವು ಕೃತಕೃತ್ಯ ತೃಪ್ತಿಹೊಂದಬೇಕು". + ಫಿಲರ್‌ ಹೇಳಿರುವಂತೆ: ಈ ನಮ್ಮ ಬಡ ಪ್ರಪಂಚದಲ್ಲಿ ಸಿಟ್ಟಿನಿಂದ "ವಾಸ್ತವಿಕತೆಯ ಪರಿಣಾಮವನ್ನು ಪರಿಪೂರ್ಣತೆಯ ಅಳತೆಗೋಲಿನಿಂದ ಅಳೆಯದಿರಲಿ.?" +ಅಂತಹವರನ್ನು ನಾವು ಬುದ್ಧಿವಂತನೆಂದು ಪರಿಗಣಿಸಲಾರೆವು. +ಅವನನ್ನು ರೋಗಗ್ರಸ್ತ,ಅತೃಪ್ತ, ಮೂರ್ಖನೆಂದೇ ನಾವು ಪರಿಗಣಿಸುತ್ತೇವೆ. +ರಾಯ್‌ ಬಹಾದ್ದೂರ್‌ ಪಿ. ಆನಂದಾಚಾರಿಯವರು ಸಮಾಜ ಸುಧಾರಣೆಯ ಬಗ್ಗೆ ತಯಾರಿಸಿದ ತಮ್ಮ ಹೇಳಿಕೆಯಲ್ಲಿ ಆಗ ಸಮಾಜಸುಧಾರಕರು ಎದುರಿಸಬೇಕಾಗಿದ್ದ ಈ ಐದು ಸಮಸ್ಯೆಗಳನ್ನು ಗುರುತಿಸಿದ್ದರು. + ೧.ಬಾಲ್ಯವಿವಾಹ; ೨. ವಿಧವಾವಿವಾಹ; ೩. ನಮ್ಮ ದೇಶ ಬಾಂಧವರು ಪ್ರವಾಸ ಮಾಡಲುಅಥವಾ ವಿದೇಶಗಳಲ್ಲಿ ವಾಸಮಾಡುವ ಸ್ಥಾತಂತ್ರ್ಯಲ್ಲ ಸ್ತ್ರೀಯರಿಗೆ ಆಸ್ತಿ ಹಕ್ಕು ಮತ್ತು; ೫. ಸ್ತ್ರೀ ಶಿಕ್ಷಣ. +ಈ ಕಾರ್ಯಕ್ರಮಗಳಲ್ಲಿ ಅವರು ಹೆಚ್ಚು ಭಾಗ ಸಾಧಿಸಿದ್ದರು. +ಇವೆಲ್ಲವನ್ನು ಅವರು ಸಾಧಿಸಲಾಗದಿರುವುದಕ್ಕೆ ಅವರ ವಿರುದ್ಧ ಅನೇಕ ಅಡಚಣೆಗಳಿದ್ದವು ಎಂಬುದನ್ನು ಮರೆಯಬಾರದು. +ಬುದ್ಧಿಶಾಲಿ, ದೃಢನಿಶ್ಚಿತ ಮತ್ತು ಅಪ್ರಾಮಾಣಿಕ ಬುದ್ಧಿಜೀವಿಗಳ ತಂಡ ಸಂಪ್ರದಾಯವನ್ನು ರಕ್ಷಿಸಲು ಮತ್ತು ರಾನಡೆಯವರನ್ನು ಪ್ರತಿಭಟಿಸಲು ಮುಂದಾಯಿತು. +ಪರಿಸ್ಥಿತಿ ಯುದ್ಧಸಾದ್ಯಶ ಘೋರ ರೂಪ ತಾಳಿತು. +ಅದು ಯುದ್ಧವೇ ಆಗಿತ್ತು. +ಈ ದೇಶದಲ್ಲಿ ಸಾಮಾಜಿಕ ಸುಧಾರಣೆಯ ವಿವಾದದ ಅಲೆ ಎದ್ದಾಗ ಉಂಟಾಗಿದ್ದ ಪರಿಸ್ಥಿತಿಯ ಕಲ್ಪನೆಯನ್ನೂ ಸಹ ಈಗ ಯಾರೂ ಮಾಡಲಾರರು. +ಸಂಪ್ರದಾಯವಾದಿ ವರ್ಗ ಸಮಾಜ ಸುಧಾರಕರಎರುದ್ಧ ಆಗ ಉಪಯೋಗಿಸಿದ ಬೈಗಳು, ನಿಂದೆಗಳು, ಅಪವಾದಗಳನ್ನು ಸಭ್ಯತೆಯ ಕಾರಣ ಉಚ್ಚರಿಸಲಾಗದು. +ಸಮ್ಮತಿಯ ವಯೋಮಸೂದೆಯ ಪರವಾಗಿದ್ದ ಪುರೋಹಿತಶಾಹಿಯನ್ನು ಪುರಸ್ಕರಿಸಿ ಬರೆದಂತಹ ಲೇಖನಗಳನ್ನು ಓದಿದರೆ ಜನನಾಯಕರೆಂದು ಕರೆಸಿಕೊಂಡವರು ಯಾವ ಮಟ್ಟಕ್ಕೆ ಇಳಿದಿದ್ದರೆಂಬುದು ಅರ್ಥವಾಗುತ್ತದೆ. +ಒಬ್ಬ ಗಂಡ ೧೨ ವರ್ಷ ತುಂಬದ ತನ್ನ ಹೆಂಡತಿಯೊಡನೆ ಲೈಂಗಿಕ ಸಂಬಂಧವನ್ನು ಹೊಂದಿದ್ದೇ ಆದರೆ ಅವನನ್ನು ಶಿಕ್ಷಿಸುವುದು ಈ ಮಸೂದೆಯ ಉದ್ದೇಶವಾಗಿತ್ತು. +ಬುದ್ಧಿ ನೆಟ್ಟಗಿರುವ ಹುಚ್ಚು ಪುರೋಹಿತಶಾಹಿಯ ವಿರೋಧವನ್ನು ಎದುರಿಸಬೇಕಾಯಿತು. +ರಾನಡೆಯವರುಸಾಧಿಸಿದ್ದು ಸ್ವಲ್ಪ ಎಂದು ಒಪ್ಪಿಕೊಂಡರೂ, ಅವರು ಇನ್ನೂ ಹೆಚ್ಚು ಸಾಧಿಸಲಾರದ್ದಕ್ಕೆ ಯಾರು ಆನಂದಪಡಬೇಕು? + ಆನಂದಪಡುವುದಕ್ಕೆ ಕಾರಣವಿರಲಿಲ್ಲ. +ಸಮಾಜ ಸುಧಾರಣೆಯ ಅವನತಿ ಸಹಜವಾಗಿತ್ತು. +ಸಮಾಜ ಸುಧಾರಣೆಯ ಬಗ್ಗೆ ದ್ವೇಷ ಅತಿ ಹೆಚ್ಚಾಗಿತ್ತು . +ರಾಜಕೀಯ ಅಧಿಕಾರದ ಕರೆ ಅತ್ಯಂತ ಆಕರ್ಷಕವಾಗಿತ್ತು. +ಇದರ ಪರಿಣಾಮವಾಗಿ ಸಮಾಜ ಸುಧಾರಣೆಗೆ ಅಂಟಿಕೊಂಡಿದ್ದವರು ಕೆಲವೇ ಜನರಿದ್ದರು. +ಕಾಲ ಕ್ರಮೇಣ ಸಮಾಜ ಸುಧಾರಣಾ ಸಮಾವೇಶನವನ್ನು ತೊರೆದು ಜನತೆ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ ಕಡೆ ಹೆಚ್ಚು ಸಂಖ್ಯೆಯಲ್ಲಿ ನುಗ್ಗತೊಡಗಿತು. +ಸಮಾಜ ಸುಧಾರಕರ ಮೇಲೆ ರಾಜಕಾರಣಿಗಳು ಮೇಲ್ಸೈ ಸಾಧಿಸಿದರು. +ಅವರ ಜಯ ಹೆಮ್ಮೆಯ ವಿಷಯವಾಗಿತ್ತೆಂದು ಯಾರೂ ಈಗ ಒಪ್ಪುವುದಿಲ್ಲವೆಂಬುದು ನನಗೆ ಗೊತ್ತು. +ಅದು ನಿಜವಾಗಿಯೂ ವಿಷಾದಕರ ಸಂಗತಿ. +ರಾನಡೆಯವರು ಸಂಪೂರ್ಣವಾಗಿ ಗೆಲುವಿನ ಪಕ್ಷದ ಕಡೆ ಇರಲಿಕ್ಕಿಲ್ಲ. +ಆದರೆ ಅವರು ತಪ್ಪು ದಾರಿಯಲ್ಲಿರಲಿಲ್ಲ. +ಮತ್ತು ಅವರ ಕೆಲ ವಿರೋಧಿಗಳಂತೆ ಅವರು ಯಾವಾಗಲೂ ತಪ್ಪು ದಾರಿಯಲ್ಲಂತೂ ಇರಲಿಲ್ಲ. +ರಾನಡೆಯವರನ್ನು ಇತರರೊಡನೆ ಯಾವ ರೀತಿ ಹೋಲಿಸಬಹುದು? +ಹೋಲಿಕೆಗಳು ಯಾವಾಗಲೂ ಜುಗುಪ್ಸೆ ಮತ್ತು ಅಹಿತಕರ. +ಆದಾಗ್ಯೂ, ಹೋಲಿಕೆಗಿಂತ ಇನ್ನಾವುದೇ ವಿಧಾನ ಹೆಚ್ಚು ಬೆಳಕು ಚೆಲ್ಲಲಾರದು. +ಆದರೆ ಅದು ಬೋಧಪ್ರದವೂ ಮತ್ತು ಕುತೂಹಲಕಾರಿಯಾಗಬೇಕಾದರೆ ಸದೃಶ ವ್ಯಕ್ತಿಗಳ ಹೋಲಿಕೆ ಮಾಡಬೇಕೆಂಬ ಅಂಶವನ್ನು ನೆನಪಿಡಬೇಕು. +ರಾನಡೆಯವರು ಸಮಾಜ ಸುಧಾರಕರಾಗಿದ್ದರು. +ಆದ್ದರಿಂದ ಅವರನ್ನು ಇತರ ಸಮಾಜ ಸುಧಾರಕರೊಡನೆ ಹೋಲಿಸುವುದು ಉಪಯುಕ್ತ . +ರಾನಡೆಯವರನ್ನು ಜ್ಯೋತಿಬಾ ಫುಲೆಯವರೊಡನೆ ಹೋಲಿಸುವುದು ಅತ್ಯಂತ ಬೋಧಪ್ರದವೆನಿಸುವುದು. +ಫುಲೆಯವರು ೧೮೨೭ರಲ್ಲಿ ಜನಿಸಿ ೧೮೯ಂರಲ್ಲಿ ನಿಧನರಾದರು. +ರಾನಡೆಯವರು ೧೮೪೨ರಲ್ಲಿ ಜನಿಸಿ ೧೯ಂ೧ರಲ್ಲಿನಿಧನರಾದರು. +ಆದ್ದರಿಂದ ಫುಲೆ ಮತ್ತು ರಾನಡೆಯವರು ಸಮಕಾಲೀನರಾಗಿದ್ದು, ಇಬ್ಬರೂ ಅಗಶ್ರೇಣಿಯ ಸಮಾಜ ಸುಧಾರಕರಾಗಿದ್ದರು. +ರಾನಡೆಯವರು ರಾಜಕಾರಣಿಗಳಾಗಿರಲಿಲ್ಲವೆಂಬ ಕಾರಣಕ್ಕಾಗಿ ರಾನಡೆಯವರನ್ನು ಇತರ ರಾಜಕಾರಣಿಗಳೊಡನೆ ಹೋಲಿಸುವ ವಿಚಾರವನ್ನು ಕೆಲವರು ಆಕ್ಷೇಪಿಸಬಹುದು. +ರಾನಡೆಯವರು ರಾಜಕಾರಣಿಗಳಾಗಿರಲಿಲ್ಲವೆಂದು ಹೇಳುವುದು ರಾಜಕಾರಣ ಪದಕ್ಕೆ ಅತ್ಯಂತ ಸೀಮಿತ ಮತ್ತು ಸಂಕುಚಿತವಾದ ಅರ್ಥವನ್ನು ಕೊಟ್ಟಂತಾಗುತ್ತದೆ. +ರಾಜಕಾರಣಿಯಾದವನು ಕೇವಲ ರಾಜಕಾರಣದಲ್ಲಿ ಮಾತ್ರ ನಿರತನಾಗಿರುವುದಿಲ್ಲ. +ಅವನು ರಾಜಕೀಯ ಪದ್ಧತಿ ಮತ್ತು ಅದು ಸೂಕ್ಷಾರ್ಥದ ಮೇಲೆ ತನ್ನದೇ ಆದ ನಂಬುಗೆ, ವಿಶ್ವಾಸವನ್ನು ಹೊಂದಿದವನಾಗಿರುತ್ತಾನೆ. +ರಾನಡೆಯವರು ತಮ್ಮದೇ ಆದ ವಿಧಾನ ಹಾಗೂ ಸೂಕ್ಷಾರ್ಥದಲ್ಲಿ ವಿಶಿಷ್ಟವಾದಂತಹ ರಾಜಕೀಯ ಪ್ರಣಾಳಿಕೆಯ ಸಂಸ್ಥಾಪಕರಾಗಿದ್ದರು. +ಈ ಅರ್ಥದಲ್ಲಿ ಅವರು ರಾಜಕಾರಣಿಗಳಾಗಿದ್ದರು. +ಆದ್ದರಿಂದ ಅವರನ್ನು ಇತರ ರಾಜಕಾರಣಿಗಳೊಡನೆ ಹೋಲಿಸಬಹುದು. +ಸಮಾಜ ಸುಧಾರಕರೊಡನೆ ಮತ್ತು ರಾಜಕಾರಣಿಗಳೊಡನೆ ಅವರ ಹೋಲಿಕೆ ಬೋಧಪ್ರದವಾಗಬಲ್ಲದು ಮತ್ತು ಅಂತಹ ಹೋಲಿಕೆಗಾಗಿ ಸಾಕಷ್ಟು ವಿಷಯಗಳಿವೆ. +ಸಮಯ ಮತ್ತುಅಭಿರುಚಿ ನಿಜವಾದ ಪ್ರಶ್ನೆಯಾಗಿದೆ. +ರಾನಡೆಯವರನ್ನು ಸಮಾಜ ಸುಧಾರಕರು ಮತ್ತು ರಾಜಕಾರಣಿಗಳೊಡನೆ ವ್ಯಾಪಕವಾಗಿ ಹೋಲಿಕೆ ಮಾಡಲು ಸಮಯವಿಲ್ಲ. +ಆದ್ದರಿಂದ ಅವರನ್ನು ಪ್ರತ್ಯೇಕವಾಗಿ ಸಮಾಜ ಸುಧಾರಕರೊಡನೆಯಾಗಲೀ ಅಥವಾ ರಾಜಕಾರಣಿಗಳೊಡನೆಯಾಗಲೀ ಹೋಲಿಸಬೇಕಾಗುತ್ತದೆ. +ಇದು ಅಭಿರುಚಿಯ ವಿಷಯ. +ನನ್ನ ಮಟ್ಟಿಗೆ ಹೇಳುವುದಾದರೆ ಈಗಿರುವ ಸಮಯದಲ್ಲಿ ರಾನಡೆಯವರನ್ನು ಫುಲೆಯವರೊಡನೆ ಹೋಲಿಸಬಯಸಿದ್ದೆ. +ಏಕೆಂದರೆ ನನ್ನ ಅಭಿಪ್ರಾಯದಲ್ಲಿ ರಾಜಕೀಯ ಸುಧಾರಣೆಗಿಂತ ಸಮಾಜ ಸುಧಾರಣೆ ಹೆಚ್ಚು ಮೂಲಭೂತವಾದದ್ದು. +ನನ್ನ ಅಭಿರುಚಿ ಮತ್ತು ಸಭಿಕರ ಅಭಿರುಚಿಗಳಲ್ಲಿ ಭಿನ್ನತೆ ಇರುವುದು ದುರದೃಷ್ಟಕರ. +ಆದರೆ ಸಭಿಕರನ್ನು ಈ ಸಭೆಯಲ್ಲಿ ಕೂರಿಸಿಕೊಳ್ಳಲು ನನ್ನ ಬಯಕೆಗಿಂತ ಅವರ ಬೇಕು ಬೇಡಗಳನ್ನು ಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ. +ಸಮಾಜ ಸುಧಾರಣೆಯ ಉಗ್ರತೆ ಈಗ ತಣ್ಣಗಾಗಿದೆ. +ರಾಜಕೀಯದ ಹುಚ್ಚು ಭಾರತೀಯರನ್ನು ತನ್ನ ಮುಷ್ಟಿಯಲ್ಲಿ ಹಿಡಿದಿಟ್ಟದೆ. +ರಾಜಕೀಯದ ಗೀಳು ಜನತೆಯನ್ನು ಅಂಟಿಕೊಂಡಿದ್ದು ಜನತೆ ಅದನ್ನು ಸವಿದಷ್ಟೂ ಅದರ ಹಂಬಲ ಹೆಚ್ಚುತ್ತಲೇ ಹೋಗುತ್ತದೆ. +ನಾನು ಈಗ ಮಾಡಲಿರುವ ಕೆಲಸ ಅತ್ಯಂತ ಅಹಿತಕರವಾದದ್ದು. +ಅದನ್ನು ಮಾಡಲು ನಾನು ಮುಂದಾಗಿರುವುದಕ್ಕೆ ಕಾರಣವೆಂದರೆ ರಾನಡೆಯವರ ರಾಜಕೀಯ ಸಿದ್ಧಾಂತ ಮತ್ತು ಇಂದಿನ ರಾಜಕಾರಣಿಗಳಲ್ಲಿ ಅವರ ಸ್ಥಾನವನ್ನು ಪರಿಪೂರ್ಣವಾಗಿ ಪ್ರತಿಪಾದಿಸುವುದು ಮತ್ತು ಅದರ ಮಹತ್ವವನ್ನು ಜನತೆಗೆ ಸ್ಪಷ್ಟವಾಗಿ ತಿಳಿಸುವುದು ನನ್ನ ಕರ್ತವ್ಯವೆಂದು ನಾನು ಭಾವಿಸಿದ್ದೇನೆ. +ರಾನಡೆಯವರೊಡನೆ ಹೋಲಿಸಬೇಕಾದ ಇಂದಿನ ರಾಜಕಾರಣಿಗಳು ಯಾರು? +ರಾನಡೆಯವರು ತಮ್ಮ ಕಾಲದ ಮಹಾನ್‌ ರಾಜಕಾರಣಿಗಳಾಗಿದ್ದರು. +ಆದ್ದರಿಂದ ಅವರನ್ನು ಇಂದಿನ ಅತ್ಯಂತ ಶ್ರೇಷ್ಠರಾಜಕಾರಣಿಗಳೊಡನೆಯೇ ಹೋಲಿಸಬೇಕಾಗುತ್ತದೆ. +ಭಾರತದಲ್ಲಿ ಕ್ಷಿತಿಜದಲ್ಲಿ ಇಂದು ಇಬ್ಬರು ಮಹಾನ್‌ರಾಜಕಾರಣಿಗಳಿದ್ದಾರೆ. +ಅವರು ಎಷ್ಟು ದೊಡ್ಡವರೆಂದರೆ ಹೆಸರಿಸದೇ ಅವರನ್ನು ಗುರುತಿಸಬಹುದು-ಅವರೇ ಗಾಂಧಿ ಮತ್ತು ಜಿನ್ನಾ. +ಅವರು ಯಾವ ರೀತಿಯ ಇತಿಹಾಸವನ್ನು ನಿರ್ಮಿಸಲಿದ್ದಾರೆಂಬುದು ಮುಂದಿನ ತಲೆಮಾರುಗಳು ಹೇಳಬೇಕಾದ ವಿಷಯ. +ನಮ್ಮ ಮಟ್ಟಿಗೆ, ಅವರು ಪತ್ರಿಕೆಗಳಲ್ಲಿ ಅಗ್ರಪಂಕ್ತಿಯಲ್ಲಿರುತ್ತಾರೆಂಬುದು ನಿರ್ವಿವಾದ. +ಅವರು ಮುಂಚೂಣಿಯಲ್ಲಿದ್ದು, ಸೂತ್ರ ಅವರ ಕೈಯಲ್ಲಿದೆ. +ಒಬ್ಬರು ಹಿಂದೂಗಳ ನಾಯಕರಾಗಿದ್ದರೆ, ಇನ್ನೊಬ್ಬರು ಮುಸಲ್ಮಾನರ ನಾಯಕರಾಗಿದ್ದಾರೆ. +ಅವರು ಇಂದಿನ ವೀರರು ಮತ್ತು ದೇವತಾ ಸ್ವರೂಪರಾಗಿದ್ದಾರೆ. +ಇವರನ್ನು ರಾನಡೆಯವರೊಡನೆ ಹೋಲಿಸಬಯಸುತ್ತೇನೆ. +ಇವರು ರಾನಡೆಯವರೊಡನೆ ಯಾವ ರೀತಿ ಹೋಲುತ್ತಾರೆ? +ಈಗಾಗಲೇ ನಮಗೆ ಸುಪರಿಚಿತವಾಗಿರುವ ಅವರ ಮನೋಧರ್ಮ ಮತ್ತು ವಿಧಾನಗಳ ವಿಷಯದಲ್ಲಿ ಎರಡು ಮಾತು ಹೇಳುವುದು ಅವಶ್ಯ. +ಅವು ಉಪಯುಕ್ತವೇ ಇರಲಿ ಅಥವಾ ಇಲ್ಲದಿರಲಿ ಈ ವಿಷಯದಲ್ಲಿ ನನ್ನ ಅನಿಸಿಕೆಗಳನ್ನು ಮಾತ್ರ ಹೇಳಬಯಸುತ್ತೇನೆ. +ಅವರ ಬಗ್ಗೆ ನನಗೆ ಹೊಳೆದ ಮೊಟ್ಟ ಮೊದಲನೆಯ ವಿಷಯವೆಂದರೆ: ಅವರಿಗೆ ತಮ್ಮ ಅಸಮಾನ್ಯ ಸ್ವಾಭಿಮಾನ ಮತ್ತು ಸ್ವಯಂ ಆಧಿಪತ್ಯವೇ ಸರ್ವಸ್ಥವಾಗಿದ್ದು ದೇಶದ ಉದ್ದೇಶವನ್ನು ಕೇವಲ ಚದುರಂಗದಾಟವನ್ನಾಗಿಸಿಕೊಂಡಂತಹ ಇವರಿಬ್ಬರನ್ನು ಮೀರಿಸುವ ಇನ್ನೊಬ್ಬ ವ್ಯಕ್ತಿ ಸಿಗಲಾರ. +ಇವರು ಭಾರತದ ರಾಜಕೀಯವನ್ನು ತಮ್ಮ ವೈಯಕ್ತಿಕ ವಿವಾದವನ್ನಾಗಿ ಮಾಡಿಕೊಂಡಿದ್ದಾರೆ. +ಇದರ ದುಷ್ಪರಿಣಾಮದ ಅರಿವು ಅವರಿಗಿಲ್ಲ. +ಅದು ಸಂಭವಿಸುವವರೆಗೂ ಇವರಿಗೆ ಅದರ ಅರಿವೇ ಉಂಟಾಗುವುದಿಲ್ಲ. +ಪರಿಣಾಮಗಳು ಸಂಭವಿಸಿದಾಗ ಇವರಿಗೆ ಅದರ ಕಾರಣಗಳ ನೆನಪು ಉಂಟಾಗುವುದಿಲ್ಲ; + ಉಂಟಾದಾಗ ಅದನ್ನು ಅವರು ಸಂತೃಪ್ತ ದೃಷ್ಟಿಯಿಂದ ಕಡೆಗಣಿಸುತ್ತಾರೆ. +ಇದು ಅವರನ್ನು ಪಶ್ಚಾತ್ತಾಪದಿಂದ ಪಾರುಮಾಡುತ್ತದೆ. +ಅವರು ಪ್ರತ್ಯೇಕತೆಯ ಭವ್ಯಪೀಠದ ಮೇಲೆ ನಿಂತಿದ್ದಾರೆ. +ತಮ್ಮ ಸರಿಸಮಾನಸ್ಕರಿಂದ ತಾವೇ ಪ್ರತ್ಯೇಕತೆಯ ಗೋಡೆಗಳನ್ನು ನಿರ್ಮಿಸಿಕೊಂಡಿದ್ದಾರೆ. +ಅವರು ತಮಗಿಂತ ಕಡಿಮೆ ಮಟ್ಟದ ಜನರೊಡನೆ ಬೆರೆಯಲು ಬಯಸುತ್ತಾರೆ. +ಟೀಕೆಯಿಂದ ಅಸಂತೋಷಗೊಳ್ಳುತ್ತಾರೆ. +ಮತ್ತು ಅದನ್ನು ಸಹಿಸುವ ತಾಳ್ಮೆ ಅವರಿಗಿಲ್ಲ. +ಅವರು ಹೊಗಳು ಭಟ್ಟರ ಲಲ್ಲೆಯಿಂದ ಸಂತುಷ್ಟರಾಗುತ್ತಾರೆ. +ಇಬ್ಬರಿಗೂ ಎಲ್ಲಿ ಹೋದರೂ ತಾವೇ ಮುಂದಿರುವಂತೆ ವ್ಯವಸ್ಥೆ ಮಾಡಿಕೊಳ್ಳುವ ತಂತ್ರ ಚೆನ್ನಾಗಿ ಗೊತ್ತು. +ಇವರಿಬ್ಬರಲ್ಲಿ ಪ್ರತಿಯೊಬ್ಬರೂ ತಾನೇ ಶ್ರೇಷ್ಠ ಎಂದು ಕರೆದುಕೊಳ್ಳುತ್ತಾರೆ. +ಶ್ರೇಷ್ಠತೆಯೊಂದೇ ಅವರ ವಾದವಾಗಿದ್ದರೆ ಅಷ್ಟೇನೂ ಆಶ್ಚರ್ಯವಾಗುತ್ತಿರಲಿಲ್ಲ. +ಶ್ರೇಷ್ಠತೆಯೂ ಅಲ್ಲದೇ ತಾವು ಎಂದೂ ತಪ್ಪುಮಾಡುವವರಲ್ಲ ಎಂಬ ಭಾವನೆಯನ್ನು ಇವರು ತಳೆದಿದ್ದಾರೆ. +ಒಂಬತ್ತನೆಯ ಪೋಪ್‌ ಪಯಸ್‌ನ ಪವಿತ್ರ ಆಡಳಿತದ ಕಾಲದಲ್ಲಿ ತಪ್ಪಿಗವಕಾಶವಿಲ್ಲದ ಪೋಪನ ಗುಣಗಳ ಚರ್ಚೆ ನಡೆದಾಗ ಪೋಪ್‌ ಪಯಸಹೇಳಿದಂತೆ: “ನಾನು ಪೋಪ್‌ ಆಗುವ ಮುನ್ನ ನನಗೆ ಪೋಪನು ತಪ್ಪು ಮಾಡಲಾರ ಎಂಬ ನಂಬುಗೆ ಇತ್ತು. +ಈಗ ನಾನು ಅದನ್ನು ಅನುಭವಿಸುತ್ತಿದ್ದೇನೆ.” + ದೇವರು ಮೈಮರೆತ ಘಳಿಗೆಯಲ್ಲಿ ನಮ್ಮ ನಾಯಕರನ್ನಾಗಿ ನೇಮಿಸಿದ ಈ ಇಬ್ಬರು ಮಹಾಶಯರ ಮನೋಭಾವನೆಯೂ ಇದೇ ರೀತಿಯದಾಗಿದೆ. +ಇವರ ಶ್ರೇಷ್ಠತೆಯ ಮತ್ತು ಎಂದೂ ತಪ್ಪು ಮಾಡಲಾರದ ಭಾವನೆಗೆ ಪತ್ರಿಕೆಗಳು ಪುಷ್ಟಿಕೊಟ್ಟಿವೆ. +ಹೀಗೆ ಹೇಳದೇ ವಿಧಿಯಿಲ್ಲ. +ನಾರ್ಥಕ್ಷಿಫ್‌ ಮಾದರಿಯ ಪತ್ರಿಕೋದ್ಯಮವನ್ನು ಕುರಿತು ಗಾರ್ಡಿನರ್‌ ಹೇಳಿದ ಮಾತುಗಳು, ನನ್ನ ಅಭಿಪ್ರಾಯದಲ್ಲಿಭಾರತದ ಪತ್ರಿಕೋದ್ಯಮಕ್ಕೆ ಅತ್ಯಂತ ಸಮಂಜಸವೆನಿಸುತ್ತವೆ. +ಭಾರತದಲ್ಲಿ ಒಮ್ಮೆ ಪತ್ರಿಕೋದ್ಯಮವು ಒಂದು ವೃತ್ತಿಯಾಗಿತ್ತು. +ಈಗ ಅದು ವ್ಯಾಪಾರವಾಗಿದೆ. +ಸಾಬೂನನ್ನು ಉತ್ಪಾದಿಸುವುದಕ್ಕಿಂತಲೂ ಹೆಚ್ಚಿನ ನೈತಿಕ ಹೊಣೆ ಅದಕ್ಕಿಲ್ಲ. +ಅದು ತನ್ನನ್ನು ಸಾರ್ವಜನಿಕರಿಗೆ ಬೋಧನೆ ಮಾಡುವ ಜವಾಬ್ದಾರಿಯುತ ಸಾಧನ ಎಂದು ತಿಳಿದುಕೊಂಡೇ ಇಲ್ಲ. +ನಿಷ್ಪಕ್ಷಪಾತವಾದ ಸುದ್ದಿಯನ್ನು ಕೊಡುವುದು. +ಸಮಾಜದ ಹಿತದೃಷ್ಟಿಯಿಂದ ಸಾರ್ವಜನಿಕ ನೀತಿಯನ್ನು ಜನತೆಯ ಮುಂದೆ ಮಂಡಿಸುವುದು. +ಎಷ್ಟೇ ದೊಡ್ಡವರಿದ್ದರೂ ತಪ್ಪು ಮಾರ್ಗದಲ್ಲಿ ಹೋಗುತ್ತಿರುವವರನ್ನು ನಿರ್ಭಯವಾಗಿ ಖಂಡಿಸುವುದು ಮುಂತಾದವುಗಳನ್ನು ತನ್ನ ಆದ್ಯ ಕರ್ತವ್ಯವೆಂದು ಭಾರತದ ಪತ್ರಿಕೋದ್ಯಮ ಅರಿತುಕೊಂಡಿಲ್ಲ. +ಒಬ್ಬ ವ್ಯಕ್ತಿಯನ್ನು ಆಯ್ದುಕೊಂಡು ಅವನ ಮೂರ್ತಿಪೂಜೆ ಮಾಡುವುದೇ ತನ್ನ ಪ್ರಮುಖ ಕರ್ತವ್ಯವೆಂದು ಅದು ತಿಳಿದುಕೊಂಡಿದೆ. +ಅದರಲ್ಲಿ ಸುದ್ದಿಯ ಬದಲು ಭಾವೋದ್ರೇಕದ ವಿಷಯಗಳಿರುತ್ತವೆ. +ವಿಚಾರಪೂರಿತ ಅಭಿಪ್ರಾಯದ ಬದಲು ಅವೈಚಾರಿಕ ಉದ್ರೇಕವಿರುತ್ತದೆ. + ಬೇಜಾವಾಬ್ದಾರಿ ಜನರ ಭಾವೋದ್ರೇಕವನ್ನು ಕೆರಳಿಸಲು ಜವಾಬ್ದಾರಿಯುತ ಜನರ ಭಾವನೆಗಳನ್ನು ಉದ್ರೇಕಿಸುವ ಪ್ರವೃತ್ತಿಯೇ ಕಂಡುಬರುತ್ತದೆ. +ಈ ನಾರ್ಥ್‌ಕ್ಷಿಫ್‌ ಮಾದರಿಯ ಪತ್ರಿಕೋದ್ಯಮವನ್ನು ಲಾರ್ಡ್‌ಸ್ಕಾಲಿಸಓರಿಯವರು ಇದು ಕಚೇರಿಯ ಹುಡುಗರುಕ ಚೇರಿಯ ಹುಡುಗರಿಗಾಗಿ ಬರೆದ ಪತ್ರಿಕೋದ್ಯಮ ಎಂದು ಕರೆದರು. +ಭಾರತದ ಪತ್ರಿಕೋದ್ಯಮ ಇದೇ ರೀತಿಯದಾಗಿದ್ದು ಅದರಲ್ಲಿ ಇನ್ನೂ ಹೆಚ್ಚಿನ ಸಂಗತಿಯೊಂದಿದೆ. +ಅದೇನೆಂದರೆ, ತಮ್ಮ ನಾಯಕರ ಜಯಜಯಕಾರ ಮಾಡಲು ತಮಟೆಬಾರಿಸುವ ಹುಡುಗರು ಅದರಲ್ಲಿ ಬರೆಯುತ್ತಾರೆ. +ನಾಯಕ ಪೂಜೆಗಾಗಿಯೇ ದೇಶದ ಹಿತವನ್ನು ಹಿಂದೆಂದೂ ಇಷ್ಟು ಅವಿವೇಕತನದಿಂದ ಕಡೆಗಣಿಸಲಾಗಿರಲಿಲ್ಲ. + ಭಾರತದಲ್ಲಿ ನಾಯಕಪೂಜೆಯನ್ನು ಇಂದು ಕಾಣುವಷ್ಟು ಕುರುಡಾಗಿ ಎಂದೂ ಆಚರಿಸಿರಲಿಲ್ಲ. +ಇದಕ್ಕೆ ಕೆಲವು ಗೌರವಯುತ ಅಪವಾದಗಳಿರುವುದು ಸಂತೋಷದ ಸಂಗತಿ. +ಆದರೆ ಅಂತಹವರು ಕೆಲವೇ ಜನರಿದ್ದು ಅವರನ್ನು ಯಾರೂ ಕೇಳುವವರಿಲ್ಲ. +ಪತ್ರಿಕೆಗಳ ಪ್ರಶಂಸೆ ಮತ್ತು ಜಯಘೋಷಣಗಳಲ್ಲಿ ತಮ್ಮ ಸ್ಥಾನಗಳನ್ನು ಭದ್ರಪಡಿಸಿಕೊಂಡಿರುವ ಈ ಇಬ್ಬರು ಮಹನೀಯರು ಪ್ರದರ್ಶಿಸುತ್ತಿರುವ ಪ್ರಾಬಲ್ಯದ ಭಾವನೆ ಮಿತಿಮೀರಿದೆ. +ತಮ್ಮ ಪ್ರಾಬಲ್ಯದಿಂದ ಅವರು ತಮ್ಮ ಅನುಯಾಯಿಗಳನ್ನು ಮತ್ತು ರಾಜಕೀಯವನ್ನು ಭ್ರಷ್ಟಗೊಳಿಸಿದ್ದಾರೆ. +ತಮ್ಮ ವರ್ತನೆಯಿಂದ ಅವರು ಅರ್ಧದಷ್ಟು ಅನುಯಾಯಿಗಳನ್ನು ಮೂರ್ಖರನ್ನಾಗಿ ಮಾಡಿದ್ದಾರೆ, ಇನ್ನರ್ಧ ಜನರನ್ನು ಕಪಟಿಗಳನ್ನಾಗಿಸಿದ್ದಾರೆ. +ತಮ್ಮ ಆಧಿಕ್ಯವನ್ನು ಸ್ಥಾಪಿಸಿಕೊಳ್ಳುವಲ್ಲಿ ಅವರು ಹಣವಂತರ ಮತ್ತು ಬೃಹತ್‌ ವ್ಯಾಪಾರಿಗಳ ಸಹಾಯ ಪಡೆದಿದ್ದಾರೆ. +ಪ್ರಪ್ರಥಮವಾಗಿ ನಮ್ಮ ದೇಶದಲ್ಲಿ ಹಣವು ವ್ಯವಸ್ಥಿತ ಅಧಿಕಾರದ ಸ್ಥಾನ ಪಡೆದಿದೆ. +ಅಮೆರಿಕದ ಅಧ್ಯಕ್ಷ ರೂಸ್‌ವೆಲ್ಬರು ತಮ್ಮ ದೇಶದ ಸಾರ್ವಜನಿಕರೆದುರು ಮಂಡಿಸಿದ ಪ್ರಶ್ನೆಗಳು ಈಗಾಗಲೇ ಉದ್ಭವಿಸಿರದಿದ್ದಲ್ಲಿ ಇನ್ನಾದರೂ ಇಲ್ಲಿಯೂ ಉದ್ಭವಿಸುತ್ತವೆ; +ಯಾರು ಆಳತಕ್ಕದ್ದು - ಸಂಪತ್ತೋ ಅಥವಾ ವ್ಯಕ್ತಿಯೋ? +ಯಾವುದು ಮುನ್ನಡೆಸತಕ್ಕದ್ದು-ಹಣವೋ ಅಥವಾ ಬುದ್ಧಿಯೋ? +ಸಾರ್ವಜನಿಕ ಅಧಿಕಾರ ಸ್ಥಾನಗಳನ್ನು ಯಾರು ಅಲಂಕರಿಸತಕ್ಕದ್ದು-ಸುಶಿಕ್ಷಿತ, ದೇಶಭಕ್ತ,ಸ್ಪತಂತ್ರ ವ್ಯಕ್ತಿಗಳೋ ಅಥವಾ ವ್ಯಕ್ತಿರೂಪ ಸಾಂಸ್ಥಿಕ ಬಂಡವಾಳದ ಊಳಿಗಮಾನ್ಯ ಜೀತದಾಳೋ? +ಸದ್ಯದ ಪರಿಸ್ಥಿತಿಯಲ್ಲಿ ಭಾರತದ ರಾಜಕೀಯವು ಅದರಲ್ಲಿಯೂ ಹಿಂದೂಗಳ ರಾಜಕೀಯವು ಆಧ್ಯಾತ್ಮಿಕಗೊಳ್ಳುವುದರ ಬದಲು ಸಂಪೂರ್ಣವಾಗಿ ವ್ಯಾಪಾರೀ ಮನೋಭಾವ ಬೆಳೆಸಿಕೊಂಡಿದೆ. +ಅದು ಎಲ್ಲಿಯವರೆಗೆ ಹೋಗಿದೆ ಎಂದರೆ ಭ್ರಷ್ಟಾಚಾರಕ್ಕೆ ಇನ್ನೊಂದು ಹೆಸರಾಗಿದೆ. +ಸುಸಂಸ್ಕತರಾದ ಅನೇಕ ವ್ಯಕ್ತಿಗಳು ಈ ಹೊಲಸಿನೊಡನೆ ಸಂಪರ್ಕವನ್ನು ಹೊಂದಲು ನಿರಾಕರಿಸಿದ್ದಾರೆ. +ರಾಜಕೀಯವು ಒಂದು ಚರಂಡಿಯಾಗಿದ್ದು ಅದು ಅಸಹ್ಯ ಮತ್ತು ಅನಾರೋಗ್ಯಕರವಾಗಿದೆ. +ರಾಜಕಾರಣಿಯಾಗುವುದೆಂದರೆ ಕೊಳಚೆಯಲ್ಲಿ ಕೆಲಸಮಾಡಲು ಹೋದಂತೆ. +ಈ ಇಬ್ಬರು ಮಹನೀಯರ ಕೈಯಲ್ಲಿ ರಾಜಕಾರಣವು ಅತಿರೇಕದ ಸ್ಪರ್ಧೆಯಾಗಿದೆ. +ಶ್ರೀಯುತ ಗಾಂಧಿ ಮಹಾತ್ಮನೆಂದು ಕರೆಸಿಕೊಂಡರೆ, ಶ್ರೀಯುತ ಜಿನ್ನಾ ಅವರನ್ನು ಖಾಯಿದೆ ಆರುಮ್‌ ಎಂದು ಕರೆಯಬೇಕು. +ಗಾಂಧಿಯವರ ಕೈಯಲ್ಲಿ ಕಾಂಗ್ರೆಸ್‌ ಇದ್ದರೆ. +ಜಿನ್ನಾರವರಿಗೆ ಮುಸ್ಲಿಂ ಲೀಗ್‌ ಇದೆ. +ಕಾಂಗ್ರೆಸ್‌ನಲ್ಲಿ ಕಾರ್ಯಕಾರಿ ಸಮಿತಿ ಮತ್ತು ಅಖಿಲ ಭಾರತ ಕಾಂಗ್ರೆಸ್‌ ಸಮಿತಿ ಇದ್ದರೆ, ಮುಸ್ಲಿಂ ಲೀಗ್‌ನಲ್ಲೂ ಕಾರ್ಯಕಾರಿಣಿ ಮತ್ತು ಅದರ ಸಮಿತಿ ಇರಬೇಕು. +ಕಾಂಗ್ರೆಸ್‌ ಅಧಿವೇಶನದ ನಂತರ ಲೀಗ್‌ ಸಹ ಅದನ್ನನುಸರಿಸಿ ತನ್ನ ಹೇಳಿಕೆ ನೀಡಬೇಕು. +ಕಾಂಗ್ರೆಸ್‌೧೭,000 ಪದಗಳ ಠರಾವನ್ನು ಪಾಸು ಮಾಡಿದರೆ, ಮುಸ್ಲಿಂ ಲೀಗಿನ ಠರಾವು ಇದಕ್ಕಿಂತ ಕೊನೆಪಕ್ಷ ಒಂದು ಸಾವಿರ ಪದಗಳಷ್ಟು ಹೆಚ್ಚಿರಬೇಕು. +ಕಾಂಗ್ರೆಸ್‌ ಅಧ್ಯಕ್ಷರು ಪತ್ರಿಕಾ ಗೋಷ್ಠಿಯನ್ನು ಕರೆದರೆ,ಮುಸ್ಲಿಂ ಲೀಗಿನ ಅಧ್ಯಕ್ಷರೂ ಕರೆಯಬೇಕು. +ಕಾಂಗ್ರೆಸ್‌ ಸಂಯುಕ್ತ ರಾಷ್ಟ್ರಸಂಘಕ್ಕೆ ಮನವಿಯನ್ನುಕ ಳುಹಿಸಿದರೆ, ಲೀಗ್‌ ಹಿಂದೆ ಬೀಳಬಾರದು. +ಇದಕ್ಕೆಲ್ಲಾ ಕೊನೆ ಎಂದು? +ಒಪ್ಪಂದ ಯಾವಾಗ? +ಸದ್ಯದ ಭವಿಷ್ಯತ್ತಿನಲ್ಲಿ ಒಪ್ಪಂದದ ಸಾಧ್ಯತೆ ಇಲ್ಲ. +ಕೆಲವು ಅಸಂಬದ್ಧ ಕರಾರುಗಳಿಲ್ಲದೆ ಅವರು ಭೇಟಿಯಾಗುವುದಿಲ್ಲ. +ಗಾಂಧಿ ತಾನು ಹಿಂದೂ ಎಂಬುದನ್ನು ಒಪ್ಪಿಕೊಳ್ಳಬೇಕೆಂದು ಜಿನ್ನಾ ಒತ್ತಾಯಪಡಿಸುತ್ತಾರೆ. +ಜಿನ್ನಾ ತಾನು ಮುಸಲ್ಮಾನ ಮುಖಂಡರಲ್ಲೊಬ್ಬ ಎಂಬುದನ್ನು ಒಪ್ಪಿಕೊಳ್ಳಬೇಕೆಂದು ಗಾಂಧಿ ಒತ್ತಾಯಪಡಿಸುತ್ತಾರೆ. +ಭಾರತದ ಈ ಇಬ್ಬರು ಮುಖಂಡರುಗಳಲ್ಲಿ ಕಂಡು ಬರುವಂತಹ ರಾಜಕೀಯ ದಿವಾಳಿತನ ಎಂದೆಂದೂ ಕಂಡುಬಂದಿರಲಿಲ್ಲ. +ಪ್ರತಿಯೊಂದನ್ನೂ ವಿರೋಧಿಸುವುದನ್ನೇ ತಮ್ಮ ಕಸುಬನ್ನಾಗಿ ಮಾಡಿಕೊಂಡಿರುವ ಯಾವುದನ್ನೂ ಒಪ್ಪಿಕೊಳ್ಳದ ಮತ್ತು ಸಮಯಕ್ಕೆ ತಕ್ಕಂತೆ ಮಾತನಾಡುವ ವಕೀಲರುಗಳಂತೆ, ಇವರಿಬ್ಬರೂ ದೀರ್ಫವಾದ ಕೊನೆಯಿಲ್ಲದ ಉಪನ್ಯಾಸಗಳನ್ನು ಮಾಡುತ್ತಿದ್ದಾರೆ. +ಬಿಕ್ಕಟ್ಟಿನ ನಿವಾರಣೆಗೆ ಯಾವುದೇ ಸೂಚನೆ ಮಾಡಿದ್ದರೂ ಅವರ ಶಾಶ್ವತವಾದ "ನಕಾರ' ಉತ್ತರ ದೊರೆಯುವುದು. +ಇಬ್ಬರಲ್ಲಿ ಯಾರೊಬ್ಬರೂ ಸಮಸ್ಯೆಗಳಿಗೆ ಯಾವುದೇ ಶಾಶ್ವತವಾದ ಸಲಹೆಯನ್ನು ಪರಿಶೀಲಿಸುವುದಿಲ್ಲ. +ಇವರಿಬ್ಬರ ನಡುವೆ ಭಾರತದ ರಾಜಕೀಯವು, ಬ್ಯಾಂಕುಗಳಲ್ಲಿ, ಪ್ರಚಲಿತವಿರುವ ಮಾತಿನಲ್ಲಿ ಹೇಳುವುದಾದರೆ, "ಹೆಪ್ಪುಕಟ್ಟಿಕೊಂಡಿದೆ' ಆದ್ದರಿಂದ ಯಾವ ರಾಜಕೀಯ ಕ್ರಿಯೆಯೂ ಸಾಧ್ಯವಿಲ್ಲ. +ಇವರಿಬ್ಬರೊಡನೆ ಹೋಲಿಸಿದಾಗ ರಾನಡೆಯವರು ಯಾವ ರೀತಿ ಕಾಣುತ್ತಾರೆ? +ಆ ಕುರಿತು ಹೇಳಲು ನನ್ನ ಮೇಲೆ ಯಾವುದೇ ರೀತಿಯ ಪ್ರಭಾವವನ್ನೂ ಅವರು ಬೀರಿಲ್ಲ. +ಬೇರೆಯವರು ಅವರ ಬಗ್ಗೆ ಬರೆದಿರುವುದನ್ನು ಓದಿ, ಅವರು ಹೇಗಿದ್ದಿರಬಹುದೆಂದು ಹೇಳಬಲ್ಲೆ. +ಅವರಲ್ಲಿ ದುರಭಿಮಾನ ಎಳ್ಳಷ್ಟೂ ಇರಲಿಲ್ಲ. +ತಮ್ಮ ಅಗಾಧ ಬೌದ್ಧಿಕ ಸಾಧನೆಗಳಿಂದ ಅವರು ಹೆಮ್ಮೆಪಡಬಹುದಾಗಿತ್ತು ಅಷ್ಟೇ ಏಕೆ ದುರಹಂಕಾರಿಯೂ ಆಗಬಹುದಾಗಿತ್ತು. +ಆದರೆ ಅವರು ಅತ್ಯಂತ ವಿನಯಶೀಲರೂ, ನಿಗರ್ವಿಗಳೂ ಆಗಿದ್ದರು. +ಶ್ರದ್ಧಾಳುಗಳಾದ ಯುವಕರು ಅವರ ಪಾಂಡಿತ್ಯ ಮತ್ತು ಸ್ನೇಹಸ್ವಭಾವಗಳಿಗೆ ಮಾರುಹೋಗಿದ್ದರು. +ಈ ಗೌರವಾನ್ವಿತ ಗುರುವಿನ ಉದಾತ್ತ ಪ್ರಭಾವಕ್ಕೊಳಗಾದ ಯುವಕರು ತಮ್ಮ ಇಡೀ ಜೀವನವನ್ನು ರೂಪಿಸಿಕೊಂಡರು. +ಅವರು ಮೂರ್ಖರ ಹೊಗಳಿಕೆಗಳಿಂದ ತೃಪ್ತರಾಗಲಿಲ್ಲ. +ತಮ್ಮ ಸರಿಸಮಾನಸ್ಕರ ಮಧ್ಯದಲ್ಲಿ ನಿರ್ಭಯರಾಗಿ ಒಡನಾಡುತ್ತಿದ್ದರು . + ಅದರನ್ವಯ ಕೊಡಕೊಳ್ಳುವ ತತ್ವವನು ಪರಿಪಾಲಿಸುತ್ತಿದ್ದರು. +ತಾವು ಅಂತರ್ವಾಣಿಯಿಂದ ಮಾರ್ಗದರ್ಶನ ಪಡೆಯುವ ಯೋಗಿ ಅಥವಾ ಆಧ್ಯಾತ್ಮಿ ಎಂದು ಎಂದೂ ಹೇಳಿಕೊಳ್ಳಲಿಲ್ಲ. +ಅವರು ತಮ್ಮ ವಿಚಾರಗಳನ್ನು ವೈಚಾರಿಕತೆ ಮತ್ತು ಅನುಭವಗಳ ಒರೆಗೆ ಹಚ್ಚಿಕೊಳ್ಳಲುಸದಾ ಸಿದ್ಧರಾದ ವೈಚಾರಿಕರಾಗಿದ್ದರು. +ಅವರ ಶ್ರೇಷ್ಠತೆ ಸಹಜವಾದುದಾಗಿತ್ತು. +ಯಾವುದೇ ರಂಗಭೂಮಿ ಅಥವಾ ವಿಲಕ್ಷಣವಾದ ಯಾವುದೇ ತಂತ್ರ ಅಥವಾ ದೇಣಿಗೆ ಪಡೆಯುವ ಪತ್ರಿಕೆಗಳ ಅವಶ್ಯಕತೆ ಅವರಿಗಿರಲಿಲ್ಲ. +ನಾನು ಈಗಾಗಲೇ ಹೇಳಿರುವಂತೆ ರಾನಡೆಯವರು ಮೂಲತಃ ಒಬ್ಬ ಸಮಾಜ ಸುಧಾರಕರಾಗಿದ್ದರು. +ಅವರದ್ದು ರಾಜಕೀಯದಲ್ಲಿ ವ್ಯವಹಾರ ಕುದುರಿಸಿಕೊಳ್ಳುವ ಪ್ರವೃತ್ತಿಯಾಗಿರಲಿಲ್ಲ. + ಆದರೆ, ಅವರು ಭಾರತದ ರಾಜಕೀಯ ಪ್ರಗತಿಯಲ್ಲಿ ಸಾಕಷ್ಟು ಮಹತ್ವದ ಪಾತ್ರವನ್ನು ನಿಭಾಯಿಸಿದರು. +ಕೆಲವು ರಾಜಕಾರಣಿಗಳಿಗೆ ಅವರು ಗುರುವಾಗಿದ್ದರು. +ಅಂತಹ ರಾಜಕಾರಣಿಗಳು ತಮ್ಮ ವಿರೋಧಿಗಳನ್ನು ತಮ್ಮ ಪ್ರತಿಭೆ ಮತ್ತು ಸಾಧನೆಗಳಿಂದ ಚಕಿತಗೊಳಿಸಿದರು. +ಇನ್ನೂ ಕೆಲವರಿಗೆ ಅವರು ಮಾರ್ಗದರ್ಶಕರಾಗಿದ್ದರು. +ಆದರೆ ಎಲ್ಲರಿಗೂ ಅವರು ಒಬ್ಬ ದಾರ್ಶನಿಕರಾಗಿದ್ದರು. +ರಾನಡೆಯವರ ರಾಜಕೀಯ ಸಿದ್ಧಾಂತವೇನು? +ಅವುಗಳನ್ನು ಮೂರು ತತ್ವಗಳಲ್ಲಿ ನಿರೂಪಿಸಬಹುದು:(೧) ಕಾಲ್ಪನಿಕವಾದ ವಿಚಾರಗಳನ್ನು ತಮ್ಮ ಆದರ್ಶಗಳನ್ನಾಗಿ ಇಟ್ಟುಕೊಳ್ಳಬಾರದು. +ಆದರ್ಶಗಳು ಸಾಧಿಸಲು ಸಾಧ್ಯ ಎಂಬ ಭರವಸೆಯನ್ನು ನೀಡುವಂತಹವುಗಳಾಗಿರಬೇಕು. +(೨) ರಾಜಕೀಯದಲ್ಲಿ ಬುದ್ಧಿಮತ್ತೆ ಮತ್ತು ಸಿದ್ಧಾಂತಗಳಿಗಿಂತ ಜನತೆಯ ಭಾವನೆಗಳು ಮತ್ತು ದೃಷ್ಟಿಕೋನ ಹೆಚ್ಚು ಪ್ರಾಧಾನ್ಯತೆ ಹೊಂದಿರುತ್ತವೆ. +ಅದರಲ್ಲಿಯೂ ಮುಖ್ಯವಾಗಿ ಸಂವಿಧಾನ ರಚನೆಯಲ್ಲಿ ಇದು ಸತ್ಯ. +ಉಡುಗೆ ತೊಡುಗೆಗಳಂತೆ ಸಂವಿಧಾನವೂ ಅಭಿರುಚಿಯ ವಿಷಯವಾಗಿದೆ. +ಎರಡೂ ಸರಿಯಾಗಿ ಹೊಂದಬೇಕು ಮತ್ತು ಆಹ್ಲಾದಕರವಾಗಿರಬೇಕು. +(೩) ರಾಜಕೀಯ ಸಂಧಾನಗಳಲ್ಲಿ ಸಾಧ್ಯತೆ ಮೂಲ ನಿಯಮವಾಗಿರಬೇಕು. +ಯಾವುದನ್ನು ನೀಡಲಾಗಿದೆಯೋ ಅದನ್ನೇ ಒಪ್ಪಿಕೊಳ್ಳಬೇಕೆಂದು ಇದರ ಅರ್ಥವಲ್ಲ. +ಅಲ್ಲವೇ ಅಲ್ಲ. +ನಿಮ್ಮ ಎದುರಾಳಿಯು ಕೊಡಮಾಡಿದ್ದಕ್ಕಿಂತಲೂ ಹೆಚ್ಚಿನದನ್ನು ಕೊಡುವಂತೆ ಮಾಡಲು ನಿಮ್ಮಲ್ಲಿ ಹೆಚ್ಚಿನ ಸಾಧನಗಳು ಇಲ್ಲದೇ ಹೋದಾಗ ಮಾತ್ರ ಕೊಟ್ಟದ್ದನ್ನು ನಿರಾಕರಿಸಬಾರದೆಂಬುದು ಇದರ ಅರ್ಥ. +ಈ ಮೂರು ರಾನಡೆಯವರ ರಾಜಕೀಯ ಸಿದ್ಧಾಂತಗಳಾಗಿದ್ದವು. +ಅವರ ಬರೆಹಗಳು ಮತ್ತು ಭಾಷಣಗಳಿಂದ ಆಯ್ದ ಸೂಕ್ತ ಉಕ್ತಿಗಳಿಂದ ಇವುಗಳನ್ನು ವಿವರಿಸುವುದು ಸುಲಭ. +ಆದರೆ ಇದಕ್ಕೆ ಈಗ ಸಮಯವೂ ಇಲ್ಲ ಮತ್ತು ಅದರ ಅವಶ್ಯಕತೆಯೂ ಇಲ್ಲ. +ಏಕೆಂದರೆ ರಾನಡೆಯವರ ಬರೆಹಗಳ ಮತ್ತು ಭಾಷಣಗಳ ಪರಿಚಯವಿರುವ ಎಲ್ಲರಿಗೂ ಇದು ಸುಸ್ಪಷ್ಟ . +ರಾನಡೆಯವರ ಈ ಮೂರು ಸಿದ್ಧಾಂತಗಳನ್ನು ಯಾರು ಪ್ರಶ್ನಿಸಲು ಸಾಧ್ಯ? +ಸಾಧ್ಯವಿದ್ದರೂ ಯಾವ ಸಿದ್ಧಾಂತದ ಬಗ್ಗೆ? +ಮೊದಲನೆಯದನ್ನು ಕೇವಲ ಭಾವನಾ ಪ್ರಪಂಚಿಯಾದವನು ಪ್ರಶ್ನಿಸಬಲ್ಲ. +ಅಂತಹವರನ್ನು ನಾವು ಗಮನಿಸಬೇಕಾಗಿಲ್ಲ. +ಎರಡನೆಯ ಸಿದ್ಧಾಂತ ಎಷ್ಟು ಸ್ಪಷ್ಟ ಮತ್ತು ಪ್ರಮುಖವಾಗಿದೆ ಎಂದರೆ ಅದನ್ನು ಕಡೆಗಣಿಸುವುದೆಂದರೆ ನಮ್ಮ ವಿನಾಶವೆಂದೇ ಹೇಳಬಹುದು. +ಮೂರನೆಯ ಸಿದ್ಧಾಂತದ ಮೇಲೆ ಭಿನ್ನಾಭಿಪ್ರಾಯ ಸಾಧ್ಯ. +ಸತ್ಕಾಂಶವೆಂದರೆ ಈ ಸಿದ್ಧಾಂತವೇ ಉದಾರವಾದಿಗಳನ್ನು ಕಾಂಗ್ರೆಸ್ಸಿಗರಿಂದ ಪ್ರತ್ಯೇಕಿಸಿದ್ದು, ನಾನೇನೂ ಉದಾರವಾದಿಯಲ್ಲ. +ಆದರೆ ರಾನಡೆಯವರ ಸಿದ್ಧಾಂತ ಸರಿಯಾಗಿತ್ತೆಂದು ನನ್ನ ಖಚಿತ ಅಭಿಪ್ರಾಯ. + ತತ್ವದ ಬಗ್ಗೆ ಹೊಂದಾಣಿಕೆ ಆಗಬಾರದು. +ಒಮ್ಮೆ ತತ್ವವನ್ನು ಒಪ್ಪಿಕೊಂಡ ಮೇಲೆ ಅದನ್ನು ಹಂತ ಹಂತವಾಗಿ ಸಾಧಿಸಲು ಯಾವ ಅಭ್ಯಂತರವೂ ಇರಬಾರದು. +ರಾಜಕೀಯದಲ್ಲಿ ಕ್ರಮೇಣತೆ ಅನಿವಾರ್ಯ. +ಒಮ್ಮೆ ತತ್ವವನ್ನು ಮಾನ್ಯಮಾಡಿದಾಗ ಅದರಿಂದ ಯಾವುದೇ ಹಾನಿಯುಂಟಾಗುವಂತಿರಲಿ, ಅದರಿಂದ ಹೆಚ್ಚು ಅನುಕೂಲಗಳುಂಟು. +ಈ ಮೂರನೆಯ ಸಿದ್ಧಾಂತದ ಮೇಲೆ ರಾನಡೆ ಮತ್ತು ಟಿಳಕರ ನಡುವೆ ಈ ಕೆಳಗಿನ ಒಂದು ಅಂಶದ ಹೊರತು ಯಾವ ಭಿನ್ನಾಭಿಪ್ರಾಯವೂ ಇರಲಿಲ್ಲ. +ಅದೆಂದರೆ: ಟಿಳಕರು ಸಾಧ್ಯವಾದುದನ್ನು ನಿರ್ಬಂಧಗಳ ಮೂಲಕ ಗರಿಷ್ಠಗೊಳಿಸಲು ಬಯಸಿದರು, ರಾನಡೆಯವರು ಈ ನಿರ್ಬಂಧಗಳನ್ನು ಸಂಶಯದಿಂದ ನೋಡಿದರು. +ಇದೊಂದೇ ವ್ಯತ್ಯಾಸ. +ಉಳಿದ ವಿಷಯಗಳಲ್ಲಿ ಅವರು ಏಕಾಭಿಪ್ರಾಯ ಹೊಂದಿದ್ದರು. +ರಾನಡೆಯವರ ರಾಜಕೀಯ ಸಿದ್ಧಾಂತದಲ್ಲಿ ನಿರ್ಬಂಧಗಳಿಲ್ಲದಿರುವ ಕಾರಣದಿಂದಲೇ ಅದರ ಮಹತ್ವ ಕಡಿಮೆಯಾಗುವುದಿಲ್ಲ. +ನಮಗೆ ಯಾವ ನ್ಯಾಯ ನಿರ್ಬಂಧಗಳು ಲಭ್ಯವಿದೆ ಎಂಬುದು ನಮಗೆಲ್ಲರಿಗೂ ಗೊತ್ತಿರುವ ಸಂಗತಿ. +ಹಳೆಯವು, ಹೊಸವು ಎಲ್ಲವನ್ನೂ ನಾವು ಪ್ರಯೋಗಿಸಿ ನೋಡಿದ್ದೇವೆ. +ಅವುಗಳ ಪರಿಣಾಮಗಳನ್ನು ನಾನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. +ರಾನಡೆಯವರ ಜನ್ಮದಿನವನ್ನು ಆಚರಿಸುವಾಗ ಅವರ ವಿರೋಧಿಗಳು ಮತ್ತು ವಿಮರ್ಶಕರು ಏನು ಹೇಳಬಹುದೆಂಬುದನ್ನು ನಾವು ಕಡೆಗಣಿಸಲಾಗದು. +ರಾನಡೆಯವರ ಜನ್ಮದಿನವನ್ನು ಏಕೆ ಆಚರಿಸಬೇಕೆಂದು ಅವರು ಕೇಳಬಹುದು. +ವ್ಯಕ್ತಿಪೂಜೆಯ ಕಾಲ ಎಂದೋ ಮುಗಿದು ಹೋಗಿದೆ ಎಂದೂ ಅವರು ತರ್ಕಿಸಬಹುದು. +ನಾನು ಶ್ರೀ ಗಾಂಧಿ ಮತ್ತು ಶ್ರೀ ಜಿನ್ನಾರವರ ಸಂಬಂಧದಲ್ಲಿ ಮೂರ್ತಿ ಪೂಜೆಯನ್ನು ಖಂಡಿಸಿ, ರಾನಡೆಯವರ ಮೂರ್ತಿಪೂಜೆಯನ್ನು ಹೇಗೆ ಸಮರ್ಥಿಸುವೆ ಎಂದು ವಿರೋಧಿಗಳು ಕೇಳಬಹುದು. +ಇವು ಸೂಕ್ತವಾದ ಪ್ರಶ್ನೆಗಳೇ, ವ್ಯಕ್ತಿಪೂಜೆ ನಶಿಸುತ್ತಿದೆ ಎಂಬುದೇನೋ ನಿಜ. +ಅದರ ಬಗ್ಗೆ ಸಂಶಯವಿಲ್ಲ. +ತನ್ನ ಯುಗವನ್ನು ದೂಷಿಸಿದ ಕಾರ್ಲೈಲನ ಕಾಲದಲ್ಲಿಯೂ ಅದು ನಶಿಸುತ್ತಿತ್ತು. +ಕಾರ್ಲೈಲನ ಮಾತುಗಳಲ್ಲಿಯೇ ಹೇಳುವುದಾದರೆ: “ಇದು ಮಹಾಪುರುಷರ ಅಸ್ತಿತ್ವವನ್ನೇ ಅಲ್ಲಗಳೆಯುವ ಯುಗ.\ + ಮಹಾಪುರುಷರ ಅನಿವಾರ್ಯತೆಯನ್ನೂ ಅಲ್ಲಗಳೆಯುವ ಯುಗವೂ ಇದಾಗಿದೆ.” + ಕಾರ್ಲೈಲ್‌ ಮುಂದುವರಿದು ಹೇಳಿದ್ದೇನೆಂದರೆ: “ನಮ್ಮ ಟೀಕಾಕಾರರಿಗೆ ಒಬ್ಬ ಮಹಾಪುರುಷನನ್ನು ತೋರಿಸಿ ಅವರು ಅವನ ಬಗ್ಗೆ ವಿವರ ನೀಡಬಲ್ಲರು. +ಇದು ಅವನನ್ನು ಅಳೆಯುವುದಕ್ಕಾಗಿಯೋ ಹೊರತು ಅವನನ್ನು ಪೂಜಿಸಲಿಕ್ಕಲ್ಲ.” +ಆದರೆ ಭಾರತದಲ್ಲಿ ವ್ಯಕ್ತಿ ಪೂಜೆ ಅವನತಿಗೊಂಡಿಲ್ಲ. +ಇಂದಿಗೂ ಭಾರತವು ವಿಗ್ರಹಾರಾಧನೆಯ ಪರಮೋಚ್ಚ ಭೂಮಿಯಾಗಿದೆ. +ಧರ್ಮದಲ್ಲಿ ಮೂರ್ತಿ ಪೂಜೆ ಇದೆ. +ರಾಜಕೀಯದಲ್ಲಿ ವ್ಯಕ್ತಿ ಪೂಜೆ ಇದೆ. +ಭಾರತದ ರಾಜಕೀಯ ಜೀವನದಲ್ಲಿ ವ್ಯಕ್ತಿ ಪೂಜೆ ಒಂದು ಸತ್ಯಸಂಗತಿಯಾಗಿರುವುದು ದುರದೃಷ್ಟಕರ. +ವ್ಯಕ್ತಿಪೂಜೆ, ಪೂಜಕರನ್ನು ಭ್ರಷ್ಟಗೊಳಿಸುವುದಲ್ಲದೆ ದೇಶಕ್ಕೆ ಅಪಾಯಕಾರಿಯಾಗಿದೆ. +ನೀವು ಪೂಜಿಸುವ ಮುನ್ನ ಆತನು ನಿಜವಾಗಿಯೂ ಶ್ರೇಷ್ಠನಾಗಿದ್ದಾನೆಯೇ ಎಂದು ತಿಳಿದುಕೊಳ್ಳುವ ಬಗ್ಗೆ ನೀಡಲಾಗಿರುವ ಎಚ್ಚರಿಕೆಯನ್ನು ನಾನು ಸ್ವಾಗತಿಸುತ್ತೇನೆ. +ಆದರೆ ದುರದೃಷ್ಟವೆಂದರೆ ಇದು ಸುಲಭದ ಕೆಲಸವಲ್ಲ. +ಏಕೆಂದರೆ ಇಂದಿನ ದಿನಗಳಲ್ಲಿ ಪತ್ರಿಕೆಗಳನ್ನು ತಮ್ಮ ಕೈಯಲ್ಲಿಟ್ಟುಕೊಂಡು ಮಹಾಪುರುಷರನ್ನು ಕಾರ್ಖಾನೆಗಳಲ್ಲಿ ಮಾಡಿದಂತೆ ತಯಾರು ಮಾಡುವುದು ಸುಲಭ. +ಕಾರ್ಲ್ಮೆಲನು ಇತಿಹಾಸದಲ್ಲಿ ಆಗಿಹೋದ ಅನೇಕ ಮಹಾಪುರುಷರನ್ನು “ಬ್ಯಾಂಕು ನೋಟು'ಗಳೆಂದು ವರ್ಣಿಸಿರುವುದು ಸೂಕ್ತವಾಗಿದೆ. +ಬ್ಯಾಂಕು ನೋಟುಗಳಂತೆ ಅವರೂ ಚಿನ್ನದ ಪ್ರತೀಕಗಳು. +ಅವು ಖೋಟಾ ನೋಟುಗಳಲ್ಲವೆಂಬ ಅಂಶವನ್ನು ನಾವು ಖಾತ್ರಿ ಮಾಡಿಕೊಳ್ಳಬೇಕು. +ಮಹಾಪುರುಷರನ್ನು ಪೂಜಿಸುವಾಗ ನಾವು ಹೆಚ್ಚು ಜಾಗರೂಕರಾಗಿರಬೇಕೆಂಬುದನ್ನು ನಾನು ಒಪ್ಪತ್ತೇನೆ. +ಏಕೆಂದರೆ ಆ ದೇಶದಲ್ಲಿ ಇಂದು “ಕಿಸೆಗಳ್ಳರಿಂದ ಎಚ್ಚರಿಕೆ” ಎಂಬ ಫಲಕದೊಂದಿಗೆ “ಮಹಾಪುರುಷರಿಂದ ಎಚ್ಚರಿಕೆ” ಎಂಬ ಫಲಕವನ್ನೂ ಹಾಕುವ ಪರಿಸ್ಥಿತಿ ಉಂಟಾಗಿದೆ. +ವ್ಯಕ್ತಿಪೂಜೆಯನ್ನು ಸಮರ್ಥಿಸಿಕೊಂಡ ಕಾರ್ಲೈಲನೂ ಕೂಡ ತನ್ನ ಓದುಗರನ್ನು ಹೀಗೆ ಎಚ್ಚರಿಸಿದ್ದನು:“ಹುಸಿ ಮತ್ತು ಸ್ವಾರ್ಥವ್ಯಕ್ತಿಗಳ ಸಮೂಹವೇ ಇತಿಹಾಸದಲ್ಲಿ ಮಹಾಪುರುಷರಾಗಿ ಮೆರೆದು ಹೋಗಿದೆ.” +ಪ್ರಪಂಚದ ಗೌರವಾಕರ್ಷಣೆಯನ್ನು ಈ ಮಹಾಪುರುಷರೆನಿಸಿಕೊಂಡವರು ಸ್ವೀಕರಿಸಿರುವವರಾದರೂ,ಪ್ರಪಂಚದ ಕಾರ್ಯ ಮಾತ್ರ ಆಗಿಲ್ಲ. +ವೀರ ಪುರುಷರು ನಿರ್ಗಮಿಸಿದ್ದಾರೆ. +ಆದರೆ ಡಂಭಾಚಾರಿಗಳು ಆಗಮಿಸಿದ್ದಾರೆ.” +ಭಾರತದ ಇಂದಿನ ಮಹಾಪುರುಷರು ಪಡೆಯಲಿರುವ ಪರಮಪದದ ಗೌರವಗಳನ್ನು ರಾನಡೆಯವರು ಎಂದೂ ಪಡೆಯಲಿಲ್ಲ. +ಅದು ಹೇಗೆ ಸಾಧ್ಯ? +ಅವರು ಶಹನಾಯಿಯಿಂದ ಯಾವುದೇ ತಾಜಾಸಂದೇಶವನ್ನು ತರಲಿಲ್ಲ. +ಅವರು ಯಾವ ಚಮತ್ಕಾರಗಳನ್ನೂ ಮಾಡಲಿಲ್ಲ ಮತ್ತು ಯಾವುದೇ ಭವ್ಯತೆಯನ್ನು ಶೀಘ್ರವಾಗಿ ತಂದುಕೊಡುವ ವಾಗ್ದಾನವನ್ನೂ ನೀಡಲಿಲ್ಲ. +ಅವರು ಅಸಾಧಾರಣ ಪ್ರತಿಭಾಶಾಲಿಯಾಗಿರಲಿಲ್ಲ ಮತ್ತು ಯಾವುದೇ ಅತಿಮಾನವ ಗುಣಗಳನ್ನೂ ಹೊಂದಿರಲಿಲ್ಲ. +ಆದರೆ ಇದಕ್ಕೆ ಪರಿಹಾರಗಳುಂಟು. +ರಾನಡೆಯವರು ಭವ್ಯತೆ ಮತ್ತು ಆಧಿಪತ್ಯವನ್ನು ತೋರಿಸದಿದ್ದರೂ ಅವರು ಯಾವುದೇ ರೀತಿಯ ಅನಾಹುತವನ್ನುಂಟು ಮಾಡಲಿಲ್ಲ. +ಭಾರತದ ಸೇವೆಯಲ್ಲಿ ತೊಡಗಿಸಲು ಅವರಲ್ಲಿ ಯಾವುದೇ ಅತಿಮಾನವಗುಣಗಳಿರದಿದ್ದರೆ ಭಾರತವನ್ನು ಅವುಗಳ ದುರುಪಯೋಗದ ಅನಾಹುತದಿಂದಲಾದರೂ ತಪ್ಪಿಸಿದಂತಾಯಿತು. +ಅವರು ಮೇಧಾವಿಯಾಗಿರದಿದ್ದರೂ, ಅವರು ದೇಶದ ಸಮಸ್ಯೆಯ ಪರಿಹಾರಕ್ಕೆ ಅಡ್ಡಿ ಉಂಟುಮಾಡುವಂತಹ ಮೂಲಭೂತ ಅಪ್ರಾಮಾಣಿಕವಾದ ಅತಿ ಬುದ್ಧಿವಂತಿಕೆಯ ಮಾನಸಿಕ ಪ್ರವೃತ್ತಿಯನ್ನು ಪ್ರದರ್ಶಿಸಲಿಲ್ಲ. +ರಾನಡೆಯವರಲ್ಲಿ ಅಲಂಕಾರಾತಿಶಯವಾದ ಅಥವಾ ವೈಪರೀತ್ಯದ ಯಾವ ಅಂಶಗಳೂ ಇರಲಿಲ್ಲ. +ಉಗ್ರಗಾಮಿಯ ಪಾತ್ರವನ್ನಾಡಿ ಕುಪ್ತಸಿದ್ಧಿಯನ್ನು ಪಡೆಯುವ ಗೀಳಿಗೆ ಅವರು ಬೀಳಲಿಲ್ಲ. +ಜನತೆಯ ದೇಶಭಕ್ತಿ ಭಾವನೆಗಳ ದುರುಪಯೋಗದ ಮೂಲಕ ಜನರನ್ನು ತಪ್ಪದಾರಿ ಗೆಳೆಯಲು ಅವರು ನಿರಾಕರಿಸಿದರು. +ದೇಶದ ಅತ್ಯಂತ ಶ್ರದ್ಧಾಳು ಮತ್ತು ನಿಸ್ವಾರ್ಥ ಸೇವಕರ ಪ್ರಯತ್ನಗಳಿಗೆ ಅಡ್ಡಿಯುಂಟು ಮಾಡುವಂತಹ ಮತ್ತು ಅಂತಹ ದೇಶಭಕ್ತರ ಬೆನ್ನು ಮುರಿಯುವಂತಹ ಯಾವುದೇ ವಿಧಾನಗಳಿಗೆ ಅವರು ಸಮ್ಮತಿಸಲಿಲ್ಲ. +ಆ ವಿಧಾನಗಳು ಗಾತ್ರದಲ್ಲಿ ದೊಡ್ಡದಾಗಿದ್ದರೂ ಅವು ಪರಿಣಾಮಕಾರಿ ಮತ್ತು ತಪ್ಪಾಗಲಾರದಂತಹ,ಮೋಸ ಹೋಗದಂತಹ ವಿಧಾನಗಳಾಗಿರಲಿಲ್ಲ. +ಸಂಕ್ಷಿಪ್ತದಲ್ಲಿ, ರಾನಡೆಯವರು ಸಮುದ್ರ ಮಧ್ಯೆ ತನ್ನ ಹಡಗಿನೊಡನೆ ಕೈಚಳಕ ಪ್ರದರ್ಶನ ಮಾಡುವುದರ ಬದಲು ಅದನ್ನು ಸುರಕ್ಷಿತವಾಗಿ ನೆಲೆ ಮುಟ್ಟಿಸುವ ಬುದ್ಧಿವಂತ ನಾವಿಕನೋಪಾದಿಯಲ್ಲಿದ್ದರು. +ಸಂಕ್ಷಿಪ್ತದಲ್ಲಿ ರಾನಡೆಯವರು ಬ್ಯಾಂಕಿನ ಖೋಟಾ ನೋಟಾಗಿರಲಿಲ್ಲ. +ಅವರನ್ನು ಪೂಜಿಸುವಾಗ ನಾವು ಒಬ್ಬ ಹುಸಿ ವ್ಯಕ್ತಿಗೆ ತಲೆಬಾಗಿ ನಮಿಸುತ್ತಿರುವ ಭಾವನೆ ನಮ್ಮಲ್ಲಿ ಉಂಟಾಗುವುದಿಲ್ಲ. +ಎರಡನೆಯದಾಗಿ, ರಾನಡೆಯವರ ಈ ಜನ್ಮ ದಿನಾಚರಣೆ ವ್ಯಕ್ತಿ ಪೂಜೆಯ ಕಾರ್ಯವಲ್ಲ. +ಅಪಾರವಾದ ನಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸುವ ಅರ್ಥದಲ್ಲಿ ವ್ಯಕ್ತಿಪೂಜೆ ಒಂದು ವಿಧಾನ. +ಆದರೆ ನಾಯಕನ ಆಜ್ಞೆಗಳನ್ನು ಕುರುಡಾಗಿ ಪಾಲಿಸುವುದು ಅತ್ಯಂತ ಭಿನ್ನರೀತಿಯ ವ್ಯಕ್ತಿಪೂಜೆ. +ಮೊದಲನೆಯ ರೀತಿಯ ವ್ಯಕ್ತಿಪೂಜೆಯಲ್ಲಿ ಏನೂ ತಪ್ಪಿಲ್ಲ. +ಆದರೆ ಎರಡನೆ ರೀತಿಯ ವ್ಯಕ್ತಿಪೂಜೆ ಅತ್ಯಂತ ಹೇಯವಾದದ್ದು. +ಮೊದಲನೆ ವಿಧಾನವು ಎಲ್ಲಾ ರೀತಿಯಲ್ಲಿಯೂ ಶ್ರೇಷ್ಠವಾದ ಗುಣಗಳ ಬಗ್ಗೆ ನಮ್ಮ ಗೌರವವನ್ನು ಸೂಚಿಸುವುದಾಗಿದ್ದು,. +ಮಹಾಪುರುಷನಾದವನು ಈ ಗುಣಗಳ ಪ್ರತೀಕ ಮಾತ್ರ. +ಆದರೆ ಎರಡನೆಯ ವಿಧಾನವು ಒಬ್ಬ ಗುಲಾಮ ತನ್ನ ಮಾಲೀಕನಿಗೆ ತೋರಿಸುವ ದಾಸ್ಯಪ್ರವೃತ್ತಿಯಾಗಿದೆ. +ಮೊದಲನೆಯ ವಿಧಾನವು ಗೌರವಪೂರ್ವಕವಾಗಿದ್ದರೆ, ಎರಡನೆಯದು ಅಧಃಪತನದ ದ್ಯೋತಕ. + ಮೊದಲನೆಯ ವಿಧಾನದಲ್ಲಿ ವ್ಯಕ್ತಿಯ ವಿಚಾರಶಕ್ತಿ ಮತ್ತು ಸ್ವಾತಂತ್ರ ಹರಣವಾಗುವುದಿಲ್ಲ. +ಆದರೆ ಎರಡನೆಯ ವಿಧಾನದಲ್ಲಿ ವ್ಯಕ್ತಿ ಸಂಪೂರ್ಣ ಮೂರ್ಖನಾಗುತ್ತಾನೆ. +ಮೊದಲನೆಯ ವಿಧಾನದಲ್ಲಿ ರಾಜ್ಯಕ್ಕೆ ಯಾವ ಅಪಾಯವೂ ಒದಗುವುದಿಲ್ಲ. +ಆದರೆ ಎರಡನೆಯ ವಿಧಾನವು ರಾಜ್ಯಕ್ಕೆ ಅಪಾಯವುಂಟು ಮಾಡುವ ಮೂಲವೆನಿಸುವುದು. +ರಾನಡೆಯವರ ಜನ್ಮ ದಿನಾಚರಣೆಯಲ್ಲಿ ನಾವು ಯಾರಿಂದಲೂ ಚುನಾಯಿತನಾಗಿರದ, ಯಾರಿಗೂ ಹೊಣೆಗಾರನಾಗಿರದ ಯಾರಿಂದಲೂ ವಜಾ ಮಾಡಲಾಗದಂತಹ ಯಜಮಾನನ ಪೂಜೆ ಮಾಡುತ್ತಿಲ್ಲ. +ಆದರೆ ಜನತೆಗೆ ನಿಜವಾದ ನಾಯಕತ್ವ ನೀಡಿದ ಮತ್ತು ಕಪಟ ಹಾಗೂ ಹಿಂಸಾಮಾರ್ಗದ ಮೂಲಕ ತನ್ನದೇ ವಿಚಾರಗಳನ್ನು ಅವರ ಮೇಲೆ ಹೇರದೆ ಜನತೆಯ ನಿರ್ಣಯಗಳನ್ನು ಕಾರ್ಯಗತಗೊಳಿಸಿದಂತಹ ವ್ಯಕ್ತಿಗೆ ನಮ್ಮ ಮೆಚ್ಚುಗೆ ಮತ್ತು ಶ್ರದ್ಧಾಂಜಲಿಯನ್ನು ಅರ್ಪಿಸುತ್ತಿದ್ದೇವೆ. +ಮೂರನೆಯದಾಗಿ, ವ್ಯಕ್ತಿ ಪೂಜೆ ಮಾಡಲು ನಾವು ಇಲ್ಲಿ ಸೇರಿಲ್ಲ. + ಇದು ರಾನಡೆಯವರ ರಾಜಕೀಯ ತತ್ವಗಳನ್ನು ನೆನೆಯುವ ಸಂದರ್ಭ. +ಕಾಲಕಾಲಕ್ಕೆ ಅವರ ತತ್ವಗಳನ್ನು ನೆನೆಯುವುದು ಅವಶ್ಯವೆಂದು ನನಗನಿಸುತ್ತದೆ. +ಏಕೆಂದರೆ, ಅವರ ರಾಜಕೀಯ ತತ್ವಪ್ರಣಾಳಿಕೆ ಕ್ಷೇಮಕರ ಮತ್ತು ಅರ್ಥಪೂರ್ಣವಾಗಿದೆ. +ಅದು ಮಂದಗತಿಯದಾದರೂ, ಹೊಳೆಯದಿದ್ದರೂ ಅದು ಚಿನ್ನವೇ. +ಈ ಬಗ್ಗೆ ಯಾರಿಗಾದರೂ ಸಂಶಯವೇ? +ಸಂಶಯವಿದ್ದರೆ ಅವರು ಬಿಸ್ಮಾರ್ಕ್‌, ಬ್ಯಾಲ್‌ಫೇರ್‌ ಮತ್ತು ಮೋರ್ಷೆಯವರ ಕ ಈ ಕೆಳಗಿನ ಮಾತುಗಳ ಮನನ ಮಾಡಲಿ. +ಜರ್ಮನಿಯ ಮಹಾನ್‌ ರಾಜಕೀಯ ಪಟು ಹಾಗೂ ಮುಖಂಡ ಬಿಸ್ಕಾರ್ಕ್‌ ಹೇಳಿದ ಹಾಗೆ:“ರಾಜಕೀಯವು ಸಾಧ್ಯತೆಯ ಒಂದು ಜೂಜಾಟ”. +ವಾಲ್ಟರ್‌ ಬೇಗ್‌ಹಾಟನ ಸುಪ್ರಸಿದ್ಧ ಗಂಥ "ಇಂಗ್ಲಿಶ್‌ ಸಂವಿಧಾನ'ದ ಮುನ್ನುಡಿಯಲ್ಲಿ ಬ್ಯಾಲ್‌ಫೋರ್‌ಹೇಳಿದ ಮಾತುಗಳಿವು:“ಹೆಚ್ಚಿಗೆ ವಿನಾಶಮಾಡದೆ ವ್ಯಾಪಕ ಬದಲಾವಣೆಯನ್ನುಂಟು ಮಾಡಿದ ಮಧ್ಯಕಾಲೀನ ರಾಜಪ್ರಭುತ್ವವನ್ನು ಆಧುನಿಕ ಪ್ರಜಾಪ್ರಭುತ್ವಕ್ಕೆ ಕ್ರಮೇಣವಾಗಿ ಪರಿವರ್ತಿಸಿದ ಸುದೀರ್ಫ ಪ್ರಕ್ರಿಯೆಯ ಮೂಲಾಧಾರವನ್ನು ಕಂಡುಕೊಂಡಾಗ, ಬುದ್ಧಿಮತ್ತೆ ಮತ್ತು ಸಿದ್ಧಾಂತಗಳ ಬದಲು ಮನೋಭಾವನೆ ಮತ್ತು ಚಾರಿತ್ರ್ಯದ ಅಧ್ಯಯನ ಅವಶ್ಯ ಎಂಬ ಅರಿವು ನಮ್ಮಲ್ಲಿ ಉಂಟಾಗುತ್ತದೆ. +ಬ್ರಿಟಷ್‌ ಸಂಸ್ಥೆಗಳನ್ನು ಅಪರಿಚಿತ ದೇಶಗಳಲ್ಲಿ ಒಟ್ಟಾಗಿ ಸ್ಥಾಪಿಸಬೇಕೆಂದು ಶಿಫಾರಸ್ಸು ಮಾಡುವವರು ಈ ಸತ್ಯವನ್ನು ಅರಿತುಕೊಳ್ಳುವುದು ಉಪಯುಕ್ತ. +ಅಂತಹ ಪ್ರಯೋಗದಲ್ಲಿ ಅಪಾಯವಿಲ್ಲದಿರಲಾರದು. +ಸಂವಿಧಾನಗಳನ್ನು ನಕಲು ಮಾಡುವುದು ಸುಲಭ, ಆದರೆ ಮನೋಭಾವನೆಗಳ ನಕಲು ಮಾಡುವುದು ಸುಲಭವಲ್ಲ. +ಇದೇನಾದರೂ ಸಂಭವಿಸಿ, ಸ್ಥಳೀಯ ಮನೋಭಾವನೆಗಳೂ ಮತ್ತು ಸಂವಿಧಾನಗಳ ನಡುವೆ ಹೊಂದಾಣಿಕೆಯಾಗದೇ ಹೋದಲ್ಲಿ ಅದರ ಪರಿಣಾಮ ಗಂಭೀರವೆನಿಸುವುದು. +ಜನತೆಯಲ್ಲಿ ಈ ಪ್ರಮುಖ ವಿಷಯದಲ್ಲಿ ಈ ಕೊರತೆ ಇದ್ದರೆ ಅವರಲ್ಲಿ ಬೇರೆ ಯಾವುದೇ ಪ್ರತಿಭೆಗಳಿದ್ದರೂ ಅವು ಮಹತ್ವವೆನಿಸುವುದಿಲ್ಲ. +ಉದಾಹರಣೆಗಾಗಿ ಅವರಲ್ಲಿ ತಮ್ಮ ನಿಷ್ಠೆಯ ಮಟ್ಟವನ್ನು ನಿರ್ಣಯಿಸುವ ಶಕ್ತಿ ಇಲ್ಲದಿದ್ದರೆ, ಸ್ವಾತಂತ್ರ್ಯವನ್ನು ಕುರಿತು ಸಹಜ ಪ್ರವೃತ್ತಿ ಮತ್ತು ಕಾನೂನಿನ ಪ್ರತಿ ಸಹಜವಾದ ಗೌರವವಿಲ್ಲದಿದ್ದರೆ ಅವರಲ್ಲಿ ಹಾಸ್ಯ ಪ್ರವೃತ್ತಿ ಹಾಗೂ ಸುಪ್ರಸನ್ನತೆ ಇಲ್ಲದಿದ್ದರೆ ಹಾಗೂ ಅನ್ಯಾಯ, ಮೋಸವನ್ನು ಸಹಿಸಿಕೊಳ್ಳುವುದಾದರೆ; +ಹೇಗೆ ಮತ್ತು ಯಾವಾಗ ಹೊಂದಾಣಿಕೆ ಮಾಡಿಕೊಳ್ಳಬೇಕೆಂಬ ಅರಿವಿಲ್ಲದಿದ್ದರೆ; +ಒಮ್ಮೊಮ್ಮೆ ತರ್ಕದ ಅಭಾವದ ಹೆಸರಿನಲ್ಲಿ ಮಾಡಲಾದ ಪರಮಾಧಿ ನಿರ್ಣಯಗಳನ್ನು ನಂಬದಂತಹ ಪ್ರವೃತ್ತಿ ಇಲ್ಲದಿದ್ದರೆ, ಭ್ರಷ್ಟಾಚಾರ ಅವರನ್ನು ರೊಚ್ಚಿಗೇಳಿಸದಿದ್ದರೆ ಮತ್ತು ಅವರನ್ನು ವಿಭಜಿಸುವ ಅಂಶಗಳು ಅನೇಕ ಅಥವಾ ಗಹನವಾದವುಗಳಾಗಿದ್ದರೆ ಅಂತಹ ಪರಿಸ್ಥಿತಿಯಲ್ಲಿ ಬ್ರಿಟಿಷ್‌ ಸಂಸ್ಥೆಗಳು ಯಶಸ್ವಿಯಾಗುವುದು ಕಷ್ಟ ಅಥವಾ ಅಸಾಧ್ಯವೆನಿಸುವುದು. +ಎಲ್ಲಿ ಸಂಸದೀಯ ಪದ್ಧತಿಯಲ್ಲಿ ನಂಬುಗೆ ಮತ್ತು ಪಕ್ಷಗಳ ವ್ಯವಹಾರಗಳನ್ನು ನಡೆಸಿಕೊಂಡು ಹೋಗುವ ನೈಪುಣ್ಯತೆ ಪರಿಪೂರ್ಣತೆಯ ಪರಾಕಾಷ್ಠವನ್ನು ಮುಟ್ಟಿವೆಯೋ ಅಲ್ಲಿ ಸಹ ಅದರ ಸಂಭವ ಕಡಿಮೆ ಎಂದೇ ಹೇಳಬಹುದು.” +ಮೋರಕ್ಲೆ ಈ ರೀತಿ ಹೇಳಿದ್ದಾರೆ:“ರಾಜಕಾರಣಿಗಳು ವ್ಯವಹರಿಸಬೇಕಾದ ಸಾಮಾಜಿಕ ಸಂರಚನೆಗಳ ಅಂಶಗಳಲ್ಲಿ, ತಾರ್ಕಿಕ ಪರಿಪೂರ್ಣತೆ ಬಯಸಿದರೆ ಆ ಕುರಿತು ಅವರಿಗಿರುವ ಅವಜ್ಞೆಯನ್ನು ಮಾತ್ರ ತೋರಿಸಿದಂತಾಗುತ್ತದೆ. + ಇನ್ನಾವುದೇ ಸಂಗತಿಯನ್ನು ಒಪ್ಪಿಕೊಳ್ಳುವುದು ತಿಳಿಗೇಡಿತನ ಎನಿಸುವುದು. +ಸಾಧ್ಯವೆನಿಸಿದರೂ ಕೂಡ ಅಂತಹ ಬದಲಾವಣೆಗಳನ್ನು ಪದೇ ಪದೇ ಮಾಡಬಯಸುವುದು ಮೂರ್ಖತನ. +ಸಣ್ಣಪುಟ್ಟ ಸುಧಾರಣೆಗಳು ದೊಡ್ಡ ಸುಧಾರಣೆಗಳ ಕಡು ವೈರಿಗಳು ಎಂಬ ಫ್ರೆಂಚ್‌ ಅಪಾಯಕಾರಿ ಹೇಳಿಕೆ ಸಾಧಾರಣವಾಗಿ ಹೇಳುವ ಅರ್ಥದಲ್ಲಿ ಸಾಮಾಜಿಕ ವಿನಾಶದ ಸೂತ್ರವಾಗಿದೆ.” +ರಾಜಕೀಯದಲ್ಲಿ ಯಶಸ್ಸು ಈ ತತ್ವಗಳನ್ನೇ ಅವಲಂಬಿಸುತ್ತದೆ. +ರಾನಡೆಯವರು ಪ್ರತಿಪಾದಿಸಿದ ತತ್ವಗಳಿಂದ ಇವು ಭಿನ್ನವಾಗಿವೆಯೇ? +ಬಿಸ್ಮಾರ್ಕ್‌ ಬ್ಯಾಲಫೋರ್‌ ಮತ್ತು ಮೋರ್ಲೆಯವರು ಕ ಪ್ರತಿಪಾದಿಸುವುದಕ್ಕಿಂತ ಅನೇಕ ವರ್ಷಗಳ ಮೊದಲೇ ರಾನಡೆಯವರು ಈ ತತ್ವಗಳನ್ನು ಪ್ರತಿಪಾದಿಸಿರುವುದು ಅವರ ಮಹತ್ವವನ್ನು ಒತ್ತಿ ಹೇಳುತ್ತದೆ. +ರಾನಡೆಯವರು ಯಾವ ಪೀಳಿಗೆಯ ಸೇವೆ ಮಾಡಿದರೋ ಆ ಪೀಳಿಗೆಯವರು ಇವರನ್ನು ತಮ್ಮರಾಜಕೀಯ ಮಾರ್ಗದರ್ಶಕ, ದಾರ್ಶನಿಕ ಮತ್ತು ಸ್ನೇಹಿತನೆಂದು ಅಂಗೀಕರಿಸುವುದರಲ್ಲಿ ತಮ್ಮ ಬುದ್ಧಿವಂತಿಕೆಯನ್ನು ಪ್ರದರ್ಶಿಸಿದ್ದಾರೆ. +ಅವರು ಸದ್ಯದ ಪೀಳಿಗೆಯವರಿಗಷ್ಟೇ ಅಲ್ಲದೆ ಮುಂದಿನ ಪೀಳಿಗೆಯವರಿಗೂ ಮಾರ್ಗದರ್ಶಕ, ದಾರ್ಶನಿಕ ಮತ್ತು ಸ್ನೇಹಿತರಾಗಬಲ್ಲರೆಂಬುದರಲ್ಲಿ ಅವರ ಶ್ರೇಷ್ಠತೆಮತ್ತು ಮಹತ್ವ ಅಡಗಿದೆ. +ರಾನಡೆಯವರ ವಿರುದ್ಧ ಪದೇ ಪದೇ ಮಾಡಲಾಗುತ್ತಿರುವ ಒಂದು ಆಪಾದನೆಯನ್ನು ಪರಿಶೀಲಿಸಬೇಕೆಂದು ನನಗನಿಸುತ್ತದೆ. +ಬ್ರಿಟಿಷರು ಭಾರತವನ್ನು ಗೆದ್ದದ್ದು ದೈವನಿಯಾಮಕ, ಅದು ಭಾರತೀಯರ ಹಿತದೃಷ್ಟಿಯಿಂದ ಒಳಿತೇ, ಮತ್ತು ಭಾರತವು ಬ್ರಿಟಿಷ್‌ ಚಕ್ರಾಧಿಪತ್ಯದ ಅಧೀನದಲ್ಲಿರುವುದರಲ್ಲಿಯೇ ದೇಶದ ಹಿತದೃಷ್ಟಿ ಅಡಕವಾಗಿದೆ ಎಂದು ರಾನಡೆಯವರ ನಂಬುಗೆಯಾಗಿತ್ತೆಂದು ಹೇಕಲಾಗುತ್ತಿದೆ. +ಸಂಕ್ಷಿಪ್ತದಲ್ಲಿ,ರಾನಡೆಯವರು ಭಾರತದ ಸ್ವಾತಂತ್ರ್ಯದ ವಿರೋಧಿಯಾಗಿದ್ದರು ಎಂದು ಆಪಾದಿಸಲಾಗಿದೆ. +ರಾನಡೆಯವರ ಕೆಳಗಿನ ಹೇಳಿಕೆಗಳ ಆಧಾರದ ಮೇಲೆ ಬಹುಶಃ ಈ ಆಪಾದನೆ ಮಾಡಲಾಗಿದೆ. +“ಭಾರತದಲ್ಲಿ ಶತಶತಮಾನಗಳಿಂದ ವಾಸಿಸುತ್ತಿರುವ ಈ ವಿಶಾಲ ಜನಸ್ತೋಮವನ್ನು ಪರಕೀಯ ಆಧಿಪತ್ಯದ ಪ್ರಭಾವ ಮತ್ತು ಹಿಡಿತದಲ್ಲಿಡುವುದು ದೈವನಿಯಾಮಕವೆಂದು ಹೇಳುವುದು, ಅಂತಹ ಪ್ರಭಾವ ಮತ್ತು ಹಿಡಿತಗಳು ಭಾರತೀಯ ಜನಾಂಗಗಳಲ್ಲಿದ್ದ ಅಭಾವಗಳನ್ನು ನಿವಾರಿಸಿ ಅವರ ಬಲವರ್ಧನೆಗೆ ಸಹಾಯಕವಾಗುವುದಕ್ಕಾಗಿಯೇ ಎಂಬ ನಂಬುಗೆಯ ಆಧಾರದ ಮೇಲೆ ಸಾಧ್ಯ ಆದರೆ ಒಂದು ಮಾತುನಿಜ. +ಅದೇನೆಂದರೆ, ಐದುನೂರು ವರ್ಷಗಳ ಅಸ್ತಿತ್ವದ ನಂತರ ಮೊಘಲ್‌ ಸಾಮ್ರಾಜ್ಯ ಪಂಜಾಬಿನಲ್ಲಿ ಸ್ಥಳೀಯ ಜನಾಂಗಗಳ ಪುನರ್‌ಸ್ಥಾಪನೆಗೆ ಎಡೆಮಾಡಿ ಕೊಟ್ಟಿತಲ್ಲದೆ ಮಧ್ಯ ಮತ್ತು ದಕ್ಷಿಣ ಹಿ೦ದೂಸ್ಥಾನದಾದ್ಯಂತ ಮಹಮ್ಮದೀಯರ ವಿಜಯಗಳಿಗೆ ಮೊದಲು ಶರಣಾಗತರಾದವರಿಗಿಂತಲೂ ಸುಭದ್ರ ಅಡಿಪಾಯ ಹಾಕಲು ಅವಕಾಶ ಉಂಟಾಯಿತು. +“ಹಿ೦ದೂಗಳು ಮತ್ತು ಮಹಮ್ಮದೀಯರಲ್ಲಿ ಶಿಸ್ತು ಮತ್ತು ನಿಯೋಜಿತ ಅಧಿಕಾರದ ಅಭಾವವಿದೆ. +ಸ್ಥಾನಿಕ ಸ್ವಾತಂತ್ರ್ಯ ಪ್ರೇಮ, ನಾಗರಿಕ ಜೀವನಕ್ಕೆ ಅವಶ್ಯವೆನಿಸಿದ ಗುಣಗಳಲ್ಲಿ ಮತ್ತು ತಾಂತ್ರಿಕ ನೈಪುಣ್ಯತೆಯಲ್ಲಿ ವಿಜ್ಞಾನ ಮತ್ತು ಸಂಶೋಧನೆಗಳಲ್ಲಿ, ಸಾಹಸಮಯ ಆವಿಷ್ಕಾರಗಳಲ್ಲಿ, ಕಷ್ಟಗಳನ್ನು ಎದುರಿಸುವ ದೃಢತೆಯಲ್ಲಿ ಮತ್ತು ಸ್ತೀಯರ ಬಗೆಗೆ ಗೌರವ ತೋರಿಸುವ ಪ್ರವೃತ್ತಿಯಲ್ಲಿ ಇವರಿಬ್ಬರಿಗೂ ನಂಬುಗೆ ಇಲ್ಲ. +ಪಾಶ್ಚಿಮಾತ್ಯ ಯುರೋಪಿನ ಮಟ್ಟಕ್ಕೆ ಭಾರತೀಯ ಜನಾಂಗಗಳನ್ನು ತರುವಂತಹ ಗುಣಗಳು ಹಳೆಯ ಕಾಲದ ಹಿಂದೂಗಳಲ್ಲಾಗಲೀ ಅಥವಾ ಮಹಮ್ಮದೀಯರಲ್ಲಾಗಲೀ ಕಾಣಬರುವುದಿಲ್ಲ. +ಆದ್ದರಿಂದ ಶಿಕ್ಷಣವನ್ನು ನವೀಕರಿಸಬೇಕಾಯಿತು. +ಆ ಕೆಲಸ ಈಗ ಕಳೆದ ಒಂದು ಶತಮಾನದಿಂದ ಸಾಗಿದೆ. +ಅದರಲ್ಲಿಯೂ ಬ್ರಿಟಿಷ್‌ ಚಕ್ರಾಧಿಪತ್ಯದಲ್ಲಿ ಅದು ಹೆಚ್ಚಿನ ಪ್ರಮಾಣದಲ್ಲಿ ಸಾಗಿದೆ. +ಇದರ ಪರಿಣಾಮಗಳನ್ನು ನಾವೆಲ್ಲರೂ ನೋಡುತ್ತಿದ್ದೇವೆ.” +ರಾನಡೆಯವರ ಈ ಹೇಳಿಕೆಗಳನ್ನು ಅವಲೋಕಿಸಿದಾಗ ಅವರ ಮೇಲೆ ಮಾಡಲಾದ ಆಪಾದನೆ ತಪ್ಪು ಗ್ರಹಿಕೆಯಿಂದ ಕೂಡಿದುದಾಗಿರುವುದು ಸ್ಪಷ್ಟವಾಗುವುದು. +ಈ ಹೇಳಿಕೆಗಳು ಸ್ಪಷ್ಟ ಮತ್ತು ಸರಳವಾದುವುಗಳಾಗಿದ್ದು, ಊಹಾಪೂರ್ವಕವಾಗಿಯೂ ಕೂಡ ಈ ಹೇಳಿಕೆಗಳ ಆಧಾರದ ಮೇಲೆ ರಾನಡೆಯವರು ಭಾರತದ ಸ್ವಾತಂತ್ರ್ಯದ ವಿರೋಧಿಗಳಾಗಿದ್ದರೆಂದು ಹೇಳಲು ಬರುವುದಿಲ್ಲ. +ಈ ಅರ್ಥದಲ್ಲಿ ಅವರ ಮೇಲೆ ಮಾಡಲಾದ ಆಪಾದನೆ ಸುಳ್ಳು ಮತ್ತು ಆಧಾರ ರಹಿತವಾಗಿದೆ. +ಈ ಹೇಳಿಕೆಗಳು ರಾನಡೆಯವರ ಆತ್ಮಗೌರವಕ್ಕೆ ಅಪಚಾರ ಬಗೆಯುವುದಂತಿರಲಿ, ಇವು ಅವರ ಬುದ್ಧಿವಂತಿಕೆ ಮತ್ತು ವಿವೇಚನಾ ಶಕ್ತಿಯ ಪ್ರಮಾಣವಾಗಿವೆ. +ಈ ಹೇಳಿಕೆಗಳ ಮೂಲಕ ರಾನಡೆಯವರು ತಿಳಿಸಬಯಸಿದ್ದೇನು? +ನನಗೆ ತಿಳಿದ ಮಟ್ಟಿಗೆ ರಾನಡೆಯವರು ಎರಡು ವಿಷಯಗಳನ್ನು ಹೇಳಬಯಸಿದ್ದರು. +ಅವರು ತಿಳಿಸಬಯಸಿದ ಮೊದಲನೆಯ ವಿಷಯವೆಂದರೆ, ಭಾರತದ ಮೇಲೆ ಬ್ರಿಟನ್ನಿನ ವಿಜಯ ಭಾರತಕ್ಕೆ ತನ್ನ ಆರ್ಥಿಕ ಮತ್ತು ಸಾಮಾಜಿಕ ವ್ಯವಸ್ಥೆಯನ್ನು ಪುನರ್ರಚಿಸಿಕೊಳ್ಳಲು ಮತ್ತು ಸರಿಪಡಿಸಿಕೊಳ್ಳಲು, ತಾನು ಸ್ವತಂತ್ರವಾದ ನಂತರ ತನ್ನ ಮೇಲೆ ಸಂಭವಿಸಬಹುದಾದ ಯಾವುದೇ ರೀತಿಯ ವಿದೇಶೀ ಆಕ್ರಮಣವನ್ನು ಎದುರಿಸಲು ಸಮರ್ಥವಾಗಲು ಅವಶ್ಯವೆನಿಸಿದ ಆಶ್ರಯ, ಸಮಯ ಮತ್ತು ಅವಕಾಶ ಒದಗಿಸಿಕೊಟ್ಟಿದೆ. +ರಾನಡೆಯವರು ತಿಳಿಸಬಯಸಿದ ಎರಡನೆಯ ಸಂಗತಿ ಎಂದರೆ, ಭಾರತವು ಒಂದು ಏಕೀಕೃತ ರಾಷ್ಟ್ರವಾಗುವ ಮೊದಲು ತನ್ನ ಭಾವನೆಗಳಲ್ಲಿ, ವಿಚಾರಗಳಲ್ಲಿ ಏಕತೆಯನ್ನು ಸಾಧಿಸಿಕೊಳ್ಳದೆ ಮತ್ತು ಸರ್ವಸಮ್ಮತವಾದ ಗುರಿಯನ್ನು ನಿಗದಿಗೊಳಿಸಿಕೊಳ್ಳುವ ಮೊದಲೇ ಬ್ರಿಟಿಷ್‌ ಚಕ್ರಾಧಿಪತ್ಯದಿಂದ ಹೊರಗೆ ಹೋಗುವುದೆಂದರೆ ಸ್ವಾತಂತ್ರ್ಯದ ಹೆಸರಿನಲ್ಲಿ ಅನಾಹುತ ಮತ್ತು ವಿನಾಶವನ್ನು ಆಹ್ವಾನಿಸಿದಂತೆಯೇ ಸರಿ. +ಈ ಸತ್ಯಾಂಶಗಳು ಎಷ್ಟು ಮಹತ್ವದವುಗಳಾಗಿವೆ? +ಮುಂದುವರಿಯ ಬಯಸುವ ಯಾವುದೇ ಸಮಾಜದಲ್ಲಿ ಅನಿವಾರ್ಯವೆನಿಸಿದ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಸಂಘರ್ಷಗಳನ್ನು ನಿವಾರಿಸಿಕೊಳ್ಳುವುದರಲ್ಲಿ ಆಶ್ರಯ, ರಕ್ಷಣೆಯ ಮಹತ್ವದ ಅರಿವು ನಮ್ಮ ಜನತೆಯಲ್ಲಿಲ್ಲ. +ಇಂಗ್ಲೆಂಡಿನಲ್ಲಿ ಯಶಸ್ವಿಯಾದ ಸಂಸದೀಯ ಸಂಸ್ಥೆಗಳು ಯೂರೋಪಿನ ಯಶಸ್ವಿಯಾಗದಿರುವುದಕ್ಕೆ ಕಾರಣಗಳನ್ನು ವಿವರಿಸುವಂತೆ ಒಮ್ಮೆ ಪ್ರೊಫೆಸರ್‌ ಮೇಟ್‌ಲ್ಯಾಂಡರನ್ನು ಕೇಳಲಾಯಿತು. +ಈ ಪ್ರಶ್ನೆಗೆ ಅವರು ನೀಡಿದ ಉತ್ತರದಿಂದ ರಕ್ಷಣೆಯ ಮಹತ್ವದ ಅರಿವಾಗುತ್ತದೆ. +ಈ ವ್ಯತ್ಯಾಸಕ್ಕೆ ಇಂಗ್ಲಿಸ್‌ ಕಾಲುವೆ ಕಾರಣ ಎಂದುಅವರು ಉತ್ತರಿಸಿದರು. +ಈ ಉತ್ತರದ ಮೂಲಕ ಅವರು ತಿಳಿಸಬಯಸಿದ್ದೇನೆಂದರೆ, ಇಂಗ್ಲಿಷ್‌ ಕಾಲುವೆ ವಿದೇಶೀ ಆಕ್ರಮಣದಿಂದ ರಕ್ಷಣೆ ಒದಗಿಸಿರುವ ಮೂಲಕ ಇಂಗ್ಲೆಂಡಿಗೆ ತನ್ನ ರಾಜಕೀಯ ವ್ಯವಸ್ಥೆಯನ್ನು ಸುಧಾರಿಸಿಕೊಳ್ಳಲು ಅವಕಾಶ ಮಾಡಿಕೊಟ್ಟಿತು. +ಆದ್ದರಿಂದ ಇಂಗ್ಲೆಂಡಿನ ಜನತೆ ತಮ್ಮ ಸ್ವಾತಂತ್ರ್ಯ ನೀಡಲು ಇಂಗ್ಲೆಂಡ್‌ ಸುರಕ್ಷಿತವಾಯಿತು. +ಆಶ್ರಯದ ಮಹತ್ವವನ್ನು ಅಬ್ರಹಾಂ ಲಿಂಕನ್‌ ಕೂಡ ಒತ್ತಿ ಹೇಳಿದರು. +ಅಮೆರಿಕದ ರಾಜಕೀಯ ಸಂಸ್ಥೆಗಳು ಶಾಶ್ವತವಾಗಲು ಕಾರಣಗಳನ್ನು ವಿವರಿಸುತ್ತಾ ಅಬ್ರಹಾಂ ಲಿಂಕನ್‌ಹೀಗೆ ಹೇಳಿದರು:“ಬೋನಾಪಾರ್ಟಿಯನ್ನು ದಂಡನಾಯಕನನ್ನಾಗಿ ಹೊಂದಿದ್ದು”. +ಯುರೋಪ್‌, ಏಶಿಯಾ ಮತ್ತು ಆಫ್ರಿಕಾ ದೇಶಗಳ ಸಂಯುಕ್ತ ಸೈನ್ಯಗಳು ಬಲಪ್ರಯೋಗದಿಂದ ಓಹೈಯೋದಿಂದ ಒಂದು ಗುಟುಕು ನೀರನ್ನೂ ಕುಡಿಯಲಾಗಲಿಲ್ಲ, ಅಥವಾ ಸಾವಿರಾರು ವರ್ಷಗಳ ಪ್ರಯತ್ನದಿಂದ ಬ್ಲೂರಿಡ್ಜ್‌ ಮೇಲೆ ಒಂದು ರೇಖೆಯನ್ನೂ ಎಳೆಯಲಾಗಲಿಲ್ಲ”. +ಈ ತನ್ನ ಹೇಳಿಕೆಯಲ್ಲಿ ಲಿಂಕನ್ನನು ಸಾಮಾಜಿಕ ಪುನಾರಚನೆಯಲ್ಲಿಯೂ ಕೂಡ ಆಶ್ರಯದ(ರಕ್ಷಣೆ) ಮಹತ್ವ ಮತ್ತು ಅವಶ್ಯಕತೆಯನ್ನು ಒತ್ತಿ ಹೇಳಿದ್ದಾನೆ. +ಇಂಗ್ಲೆಂಡ್‌ ಮತ್ತು ಅಮೆರಿಕಾಗಳಂತೆ ಭಾರತ ಸುರಕ್ಷಿತ ದೇಶವಲ್ಲ. +ಭಾರತವು ಭೂಮಾರ್ಗ, ಜಲಮಾರ್ಗ ಮತ್ತು ವಾಯುಮಾರ್ಗಗಳ ಉದ್ದಗಲಗಳಲ್ಲಿದೆ. +ಭಾರತಕ್ಕೆ ರಕ್ಷಣೆ ಇಲ್ಲದೇ ಇರುವುದರಿಂದ ತಾನು ಪುನರ್ರಚನೆಯ ಕಾರ್ಯದಲ್ಲಿ ತೊಡಗಿರುವಾಗ ಹೊರಗಿನಿಂದ ಆಕ್ರಮಣ ಸಂಭವಿಸಿದರೆ ದೇಶ ಛಿದ್ರವಾಗುವ ಭಯವಿದೆ. +ಪುನರ್ರಚನೆಯ ಅವಧಿಯಲ್ಲಿ ಭಾರತಕ್ಕೆ ಒಣ ಬಂದರಿನ ಅವಶ್ಯಕತೆ ಇದೆ. +ಬ್ರಿಟಿಷ್‌ ಚಕ್ರಾಧಿಪತ್ಯ ಭಾರತಕ್ಕೆ ಇಂತಹ ಹಡಗುಕಟ್ಟೆಯೋಪಾದಿಯಲ್ಲಿದೆ. +ಭಾರತಕ್ಕೆ ಅತ್ಯವಶ್ಯವಾದ ಬ್ರಿಟಿಷ್‌ ಚಕ್ರಾಧಿಪತ್ಯ ನೀಡಲಿರುವ ರಕ್ಷಣೆಯ ಮಹತ್ವವನ್ನು ಅರಿತುಕೊಳ್ಳುವಂತೆ ತಮ್ಮ ದೇಶಬಾಂಧವರನ್ನು ಕೇಳಿಕೊಂಡ ರಾನಡೆಯವರ ಜಾಣ್ಮೆಯನ್ನು ಯಾರಾದರೂ ಪ್ರಶ್ನಿಸಲು ಸಾಧ್ಯವೇ? +ಒಂದು ಅಧೀನ ರಾಷ್ಟ್ರ ತನ್ನ ಆಧಿಪತ್ಯ ರಾಷ್ಟ್ರದಿಂದ ಸಂಬಂಧ ಕಡಿದುಕೊಂಡು ತನ್ನ ಸ್ವಾತಂತ್ರ ಇವನ್ನು ಘೋಷಿಸಿಕೊಳ್ಳಲು ಸದಾ ಕಾತುರವಾಗಿರುತ್ತದೆ. +ಆದರೆ ತನ್ನ ಮೇಲೆ ಆ ಸ್ವಾತಂತ್ರ್ಯದ ಪರಿಣಾಮವೇನಾಗಬಹುದೆಂದು ಅದು ಕ್ಷಣಕಾಲವೂ ಯೋಚಿಸುವುದಿಲ್ಲ. +ಅಧೀನ ರಾಷ್ಟ್ರ ಮತ್ತು ಆಧಪತ್ಯ ರಾಷ್ಟ್ರಗಳ ನಡುವಣ ಬಾಂಧವ್ಯ ಆಧಿಪತ್ಯ ರಾಷ್ಟ್ರಕ್ಕಿಂತ ಅಧೀನ ರಾಷ್ಟ್ರಕ್ಕೇ ಹೆಚ್ಚು ಅವಶ್ಯಕ ಎಂಬ ಅಂಶವನ್ನು ಸಾಮಾನ್ಯವಾಗಿ ಅರಿತುಕೊಳ್ಳುವುದಿಲ್ಲ. +ಇದು ಅಧೀನ ರಾಷ್ಟ್ರದ ಆಂತರಿಕ ಪರಿಸ್ಥಿತಿಯನ್ನವಲಂಬಿಸಿದೆ. +ಅಧೀನ ರಾಷ್ಟ್ರ ಅಖಂಡವಾಗಿರಬಹುದು. +ಅಥವಾ ಅದು ಅನೇಕ ಭಾಗಗಳಲ್ಲಿರಬಹುದು. +ಆ ಭಾಗಗಳು ಯಾವಾಗಲೂ ಒಂದುಗೂಡದ ಸ್ಥಿತಿಯಲ್ಲಿರಬಹುದು. +ಅಥವಾ ಭಾಗಗಳು ಸದ್ಯ ಒಂದಾಗದೇ ಇರಬಹುದಾದರೂ ದೀರ್ಘಕಾಲ ಒಟ್ಟಾಗಿದ್ದಾದರೆ ಒಂದಾಗುವ ಸಾಧ್ಯತೆ ಇರಬಹುದು. +ಬಾಂಧವ್ಯವನ್ನು ಕಡಿದುಕೊಳ್ಳುವುದರಿಂದ ಉಂಟಾಗುವ ಪರಿಣಾಮಗಳು ಅಧೀನ ರಾಷ್ಟದ ಆಂತರಿಕ ಪರಿಸ್ಥಿತಿಗಳನ್ನುಅವಲಂಬಿಸಿರುತ್ತವೆ. +ಅಖಂಡವಾದ ಅಧೀನ ರಾಷ್ಟಕ್ಕೆ ಬಾಂಧವ್ಯವನ್ನು ಪಡೆದುಕೊಳ್ಳುವುದರಿಂದ ಆರಾಷ್ಟ್ರಕ್ಕೆ ಹಿತಕಾರಿ ಎನಿಸಬಹುದು. +ಆದರೆ ಎಂದೂ ಒಂದಾಗಲಾರದಂತಹ ಭಾಗಗಳಿಂದ ಕೂಡಿರುವ ರಾಷ್ಟ್ರಕ್ಕೆ ಬಾಂಧವ್ಯವನ್ನು ಕಡಿದುಕೊಳ್ಳುವುದರಿಂದ ಆಗಬಹುದಾದ ಹಿತಾಹಿತ ನಾವು ನೋಡುವದೃಷ್ಟಿಯನ್ನವಲಂಬಿಸಿದೆ. +ಆದರೆ ಈ ಮೂರನೆಯ ಸಂಗತಿಯಲ್ಲಿ ಒಂದು ನಿಶ್ಚಿತ ಅಪಾಯವಿದೆ. +ಕಾಲ ಪಕ್ವವಿರುವಾಗ ಬಾಂಧವ್ಯವನ್ನು ಕಡಿದುಕೊಂಡರೆ ಎಲ್ಲಿ ಏಕತೆ ಅಪೇಕ್ಷಣೀಯ ಮತ್ತು ಸಾಧ್ಯವಿದೆಯೋ ಅಲ್ಲಿ ವಿಚ್ಛಿದ್ರ ತೆಗೆಡೆಮಾಡಿದಂತಾಗುತ್ತದೆ. +ಅದು ಬುದ್ಧಾ ಪೂರ್ವಕ ಕೃತಿಯಾಗುತ್ತದೆ. +ಈ ಎರಡನೆಯ ಅಪಾಯದ ವಿರುದ್ಧ ರಾನಡೆಯವರು ತಮ್ಮ ದೇಶಬಾಂಧವರನ್ನು ಎಚ್ಚರಗೊಳಿಸಬಯಸಿದ್ದರು. +ಇಂತಹ ಎಚ್ಚರಿಕೆಯನ್ನು ನೀಡುವ ರಾನಡೆಯವರ ಜಾಣ್ಮೆಯನ್ನು ಯಾರು ಪ್ರಶ್ನಿಸಲು ಸಾಧ್ಯ? +ಇದರ ಅವಶ್ಯಕತೆಯನ್ನು ಪ್ರಶ್ನಿಸುವ ಮನೋಭಾವ ಉಳ್ಳವರು ಚೀನಾದ ಕಡೆಗೆ ನೋಡಲಿ. +ಚೀನೀಕ್ರಾಂತಿ ಸಂಭವಿಸಿ ೩ಂ ವರ್ಷ ಕಳೆದಿದೆ. +ಚೀನೀಯರು ನೆಲೆಕಂಡಿದ್ದಾರೆಯೇ? ಇಲ್ಲ. +“ಚೀನೀ ಕ್ರಾಂತಿಯ ಚಲನೆ ಯಾವಾಗ ನಿಲ್ಲಲಿದೆ” ಎಂದು ಜನ ಈಗಲೂ ಕೇಳುತ್ತಿದ್ದಾರೆ. +ಮತ್ತು ಚೀನಾದೇಶದ ಪರಿಸ್ಥಿತಿಯನ್ನು ಬಲ್ಲವರಿಗೆ ಅದು “ಬಹುಶಃ ಮೂರು ವರ್ಷ ತೆಗೆದುಕೊಳ್ಳುವುದು” ಎಂದು ಹೇಳದೇ ವಿಧಿ ಇಲ್ಲ. +ಚೀನಾದಲ್ಲಿ ಎಲ್ಲಾ ಜನರ ಸ್ವಾಮಿನಿಷ್ಠೆಯನ್ನು ಪಡೆದಂತಹ ಸುಭದ್ರ ಸರಕಾರವನ್ನು ಸ್ಥಾಪಿಸಲು ಸಾಧ್ಯವಾಗಿದೆಯೇ? +ಅದಂತೂ ದೂರ ಉಳಿಯಿತು. +ನಿಜ ಹೇಳಬೇಕಾದರೆ, ಚೀನಾದಲ್ಲಿ ಇಂದು ಕ್ರಾಂತಿಗಿಂತ ಮೊದಲಿದ್ದಕ್ಕಿಂತಲೂ ಹೆಚ್ಚಿನ ಒಡಕು ಮತ್ತು ಶಿಥಿಲತೆ ಇದೆ. +ಕ್ರಾಂತಿಯಿಂದ ಉಂಟಾಗಿರುವ ಅನಾಹುತ ಎಷ್ಟು ಬೃಹತ್ವಮಾಣದ್ದಾಗಿದೆ ಎಂದರೆ ಚೀನಾದ ಸ್ವಾತಂತ್ರ್ಯವೇ ಗಂಡಾಂತರದಲ್ಲಿದೆ. +ಚೀನಾ ತನ್ನ ಸ್ವಾತಂತ್ರ್ಯವನ್ನು ಕ್ರಾಂತಿಯ ಪರಿಣಾಮವಾಗಿ ಕಳೆದುಕೊಂಡಿಲ್ಲ. +ಆದರೆ ತನಗಿದ್ದ ಅನೇಕ ಶತ್ರುಗಳಲ್ಲಿ ಅದನ್ನು ಯಾರು ಕಬಳಿಸಬೇಕೆಂಬ ವಿಷಯದಲ್ಲಿದ್ದ ಭಿನ್ನಾಭಿಪ್ರಾಯದಿಂದಾಗಿ ಕಳೆದುಕೊಂಡಿತು ಎಂಬ ಅಂಶ ಅನೇಕ ಭಾರತೀಯರಿಗೆ ತಿಳಿದಿಲ್ಲ. +ಜೇನಾದ ಕ್ರಾಂತಿ ಒಂದು ದೊಡ್ಡ ತಪ್ಪಾಗಿತ್ತು. +ಇದು ಯೂನ್‌-ಫಿನ್‌-ಕಾಯ್‌ ಅವರ ಅಭಿಪ್ರಾಯವಾಗಿತ್ತು . +“ಸದ್ಯದ ಪರಿಸ್ಥಿತಿಯಲ್ಲಿ ಚೀನಾದ ಜನತೆ ಗಣರಾಜ್ಯ ಸ್ಥಾಪನೆಗೆ ಪಕ್ಷವಾಗಿದ್ದಾರೆಯೇ ಅಥವಾ ಗಣರಾಜ್ಯವು ಚೀನಾದ ಜನತೆಗೆ ಬಗ್ಗುವಂತಹುದಾಗಿದೆಯೋ ಎಂಬ ವಿಷಯದಲ್ಲಿ ನನಗೆ ಸಂಶಯವಿದೆ. +ಚೀನಾದ ಜನತೆಗೆ ಅಥವಾ ಅಲ್ಲಿನ ಇಂದಿನ ಪರಿಸ್ಥಿತಿಗೆ ಒಗ್ಗದಂತಹ ಯಾವುದೇ ವಿಧದ ಸರಕಾರದ ಪ್ರಯೋಗದ ಮುಖಾಂತರ ಸಾಧಿಸಲಾಗದ ಭದ್ರತೆ ಮತ್ತು ಸಾಮಾನ್ಯಸ್ಥಿತಿಯನ್ನು ಸೀಮಿತ ರೂಪದ ರಾಜಪ್ರಭುತ್ವವನ್ನು ಸ್ಥಾಪಿಸುವುದರ ಮೂಲಕ ಸಾಧಿಸಲು ಸಾಧ್ಯ. +ಸದ್ಯ ಚಕ್ರವರ್ತಿಯನ್ನು ಉಳಿಸಿಕೊಂಡು ಹೋಗಬೇಕೆಂಬುದಕ್ಕೆ ಒಂದೇ ಒಂದು ಕಾರಣವೆಂದರೆ ಸಂವೈಧಾನಿಕ ರಾಜಪ್ರಭುತ್ವದಲ್ಲಿ ನನಗಿರುವ ನಂಬುಗೆ. +ಅಂತಹ ಸರಕಾರ ಪದ್ಧತಿಯನ್ನು ಹೊಂದಿದ್ದಾದರೆ ಆ ಸ್ಥಾನಕ್ಕೆ ಜನತೆ ಒಪ್ಪುವಂತಹ ಇನ್ನಾರೂ ಇಲ್ಲ. +ಈ ಗಂಡಾಂತರ ಸಮಯದಲ್ಲಿ ಚೀನಾವನ್ನು ವಿನಾಶ ಮತ್ತು ಅದರಿಂದ ಸಂಭವಿಸಬಹುದಾದ ಅನೇಕ ಕೆಡುಕುಗಳಿಂದ ರಕ್ಷಿಸುವುದೇ ನನ್ನ ಏಕೈಕ ಉದ್ದೇಶ್ಯವಾಗಿದೆ”. +ಭಾರತೀಯರಿಗೆ ಚೀನಾ ಒಂದು ಉದಾಹರಣೆಯಾಗದೆ ಎಚ್ಚರಿಕೆಯಾಗಬೇಕೆಂದು ಯೋಚಿಸುವವರು ರಾನಡೆಯವರು ಸ್ಥಾತಂತ್ರ್ಯ ವಿರೋಧಿ ಎಂದು ಆಪಾದಿಸುವ ಬದಲು, ತನ್ನ ದೇಶ ಬಾಂಧವರನ್ನು ಅಪಕ್ವಕಾಲದ ಕ್ರಾಂತಿಯ ಕೇಡುಗಳ ವಿರುದ್ಧ ಎಚ್ಚರಿಸಿದ್ದಕ್ಕಾಗಿ ಸಂತೋಷಪಡುವರು. +ಮಹಾಪುರುಷರ ಕೊನೆಯ ಮಾತುಗಳು ಮತ್ತು ಅವರ ಕೊನೆಯ ವಿಷಾದ ಅಥವಾ ಪಶ್ಚಾತ್ತಾಪಗಳ ಕುರಿತು ಮುಂದಿನ ತಲೆಮಾರಿನವರಿಗೆ ಯಾವಾಗಲೂ ಹೆಚ್ಚು ಆಸಕ್ತಿ. +ಮಹಾಪುರುಷರ ಕೊನೆಯ ಮಾತುಗಳು ಈ ಪ್ರಪಂಚದ ತಮ್ಮ ಅನುಭವಗಳ ಅಥವಾ ಮುಂದಿನ ಪ್ರಪಂಚದ ದೃಷ್ಟಿಯ ಸೂಚಕಗಳಾಗಿರಲಿಲ್ಲ. +ಉದಾಹರಣೆಗೆ, ಸಾಕ್ರಟಿಸನು ಕ್ರಿಟೊನನ್ನು ಕರೆದು ಹೇಳಿದ ಕೊನೆಯ ವಿಚಾರಗಳೇನೆಂದರೆ, “ನಾವು ಎಸ್ಕ್ಯೂಲೇಪಿಯಸ್‌ನಿಗೆ ಒಂದು ಹುಂಜವನ್ನು ಕೊಡಬೇಕಾಗಿದೆ, ಆ ಯಣವನ್ನು ತೀರಿಸು, ಯಾವ ಕಾರಣದಿಂದಲೂ ಬಿಡಬೇಡ”. +ಆದರೆ ಅವರ ಕಟ್ಟಕಡೆಯ ಪಶ್ಚಾತ್ತಾಪಗಳು ಅತ್ಯಂತ ಅರ್ಥಪೂಣವಾದವುಗಳಾಗಿದ್ದು ನಮ್ಮ ಚಿಂತನೆಗೆ ಯೋಗ್ಯವಾಗಿರುತ್ತವೆ. +ನೆಪೋಲಿಯನ್ನನ ದೃಷ್ಟಾಂತವನ್ನೇ ತೆಗೆದುಕೊಳ್ಳೋಣ. +ಸೇಂಟ್‌ ಹೆಲೆನಾದಲ್ಲಿ ನೆಪೋಲಿಯನ್ನನ ಮರಣದ ಮುಂಚೆ ಆತನ ಕೊನೆಯ ಪಶ್ಚಾತ್ತಾಪಗಳೆನ್ನಬಹುದಾದ ಮೂರು ಮೂಲ ಸಂಗತಿಗಳ ಬಗ್ಗೆ ಅವನು ಚಡಪಡಿಸುತ್ತಿದ್ದುದಾಗಿ ಪ್ರಮಾಣವಿದೆ. +ಅವು ಯಾವುವೆಂದರೆ:ತಾನು ತನ್ನ ಜೀವನದ ಇನ್ನಾವುದೇ ಅತ್ಯುನ್ನತ ಫಳಿಗೆಯಲ್ಲಿ ಸಾಯಲು ಸಾಧ್ಯವಿರಲಿಲ್ಲ; +ತಾನು ತನ್ನ ಈ ಜಿಪ್ತನ್ನು ತೊರೆದು ಪೌರ್ವಾತ್ಮ ಪ್ರದೇಶದ ತನ್ನ ಮಹಾದಾಕಾಂಕ್ಷೆಯನ್ನು ಬಿಟ್ಟದ್ದು. +ಮತ್ತು ಕೊನೆಯದಾದರೂ ಯಾವ ರೀತಿಯಲ್ಲಿಯೂ ಕನಿಷ್ಠವಲ್ಲದ ವಾಟರ್‌ಲೂನಲ್ಲಿ ತನ್ನ ಪರಾಭವ. +ರಾನಡೆಯವರು ಯಾವುದಾದರೂ ಅತ್ಯುನ್ನತ ಪಶ್ಚಾತ್ತಾಪಗಳನ್ನು ಹೊಂದಿದ್ದರೇ? +ಒಂದು ಮಾತಂತೂ ನಿಜ. +ರಾನಡೆಯವರಿಗೆ ಯಾವುದೇ ಪಶ್ಚಾತ್ತಾಪಗಳಿದ್ದರೂ, ನೆಪೋಲಿಯನ್ನನ ಮನಃಶಾಂತಿಯನ್ನು ಕದಡಿದಂತಹ ಪಶ್ಚಾತ್ತಾಪಗಳು ಅವರಿಗಿರಲಿಲ್ಲ. +ರಾನಡೆಯವರು ಸೇವೆಗಾಗಿ ಬದುಕಿದ್ದರೇ ಹೊರತು ಕೇವಲ ಪ್ರತಿಷ್ಠೆ ಅಥವಾ ಹೊಗಳಿಕೆಗಾಗಿಯಲ್ಲ. +ತಮ್ಮ ಮರಣದ ಘಳಿಗೆ ಅತಿಶಯ ಕೀರ್ತಿಮಯವಾಗುವುದೋ ಇಲ್ಲವೋ ಅಥವಾ ತಾವು ಮಹಾಪುರುಷನಾಗಿ ಸಾವನ್ನಪ್ಪುವರೋ ಅಥವಾ ಒಡೆಯನಾಗಿ ಮರಣಹೊಂದುವರೋ ಅಥವಾ ಸಾಧಾರಣ ಶೀತವ್ಯಾಧಿಯಿಂದ ಮರಣಹೊಂದಿದ ಒಬ್ಬ ಸಾಮಾನ್ಯ ವ್ಯಕ್ತಿಯಾಗಿಯೋ ಎಂಬ ಬಗ್ಗೆ ಅವರು ಚಿಂತಿಸಲಿಲ್ಲ. +ವಾಸ್ತವಿಕವಾಗಿ ರಾನಡೆಯವರಿಗೆ ಯಾವ ಪಶ್ಚಾತ್ತಾಪಗಳ ಚಿಂತೆಯೂ ಇರಲಿಲ್ಲ. +ಅವರಿಗೆ ಪಶ್ಚಾತ್ತಾಪ ಪಡುವಂತಹ ಯಾವುದೇ ಕೃತ್ಯ ಅಥವಾ ಘಟನೆಯ ಅರಿವು ಇರಲಿಲ್ಲವೆಂಬುದು ಸ್ಪಷ್ಟವಿದೆ. +ಅವರು ಸುಖಮಯ ಮತ್ತು ಶಾಂತಿಯುತ ಮರಣವನ್ನು ಅಪ್ಪಿದರು. +ಈಗ ಅವರು ಹುಟ್ಟಿ ಬಂದರೆ ಅವರು ಯಾವುದೇ ವಿಷಯದ ಬಗ್ಗೆ ಪಶ್ಚಾತ್ತಾಪ ಪಡಬಹುದೇ ಎಂಬ ಪ್ರಶ್ನೆ ಔಚಿತ್ಯ ಪೂರ್ಣವೆನಿಸುವುದು. +ಒಂದು ವಿಷಯದಲ್ಲಿ ಮಾತ್ರ ಅವರು ಅತ್ಯಂತ ದುಃಖಿತರಾಗುವರೆಂಬ ಸಂಪೂರ್ಣ ಭರವಸೆ ನನಗಿದೆ. + ಅದಾವುದೆಂದರೆ ಇಂದು ಭಾರತದಲ್ಲಿ ಉದಾರವಾದಿ ಪಕ್ಷದ ಪರಿಸ್ಥಿತಿ. +ಭಾರತದಲ್ಲಿ ಇಂದು ಉದಾರವಾದಿ ಪಕ್ಷದ ಸ್ಥಿತಿ ಏನಾಗಿದೆ? +ಅದು ಅಶಕ್ತವಾಗಿದೆ ಎಂದರೆ ಅತ್ಯಂತ ಸೌಮ್ಯ ವಿವರಣೆ ಎನಿಸುವುದು. +ಉದಾರವಾದಿಗಳು ಭಾರತದ ರಾಜಕೀಯದ ಅತ್ಯಂತ ಹೀನರಾಗಿದ್ದಾರೆ. +ನಾರ್ಟನ್ನನು ಇನ್ನೊಂದು ಸಂದರ್ಭದಲ್ಲಿ ಹೇಳಿದ ಮಾತುಗಳನ್ನು ಬಳಸುವುದಾದರೆ, ಇವರು ಜನತೆಯಿಂದ ತಿರಸ್ಕಾರಕ್ಕೆ ಒಳಗಾಗಿದ್ದು, ಸರಕಾರದಲ್ಲೂ ಮಾನ್ಯತೆ ಪಡೆದಿಲ್ಲ. +ಇವೆರಡರ ಗುಣಗಳನ್ನು ಹೊಂದಿರುವುದಂತಿರಲಿ,ಇವರು ಈ ಎರಡು ಕಡೆಯ ದುರ್ಗುಣಗಳನ್ನು ಅಳವಡಿಸಿಕೊಂಡಿದ್ದಾರೆ. +ಉದಾರವಾದಿ ಪಕ್ಷವು ಕಾಂಗ್ರೆಸ್‌ ಪಕ್ಷದ ಎದುರಾಳಿಯಾಗಿದ್ದ ಕಾಲ ಒಂದಿತ್ತು. +ಆದರೆ ಇಂದು ಉದಾರವಾದಿ ಪಕ್ಷ ಮತ್ತು ಕಾಂಗ್ರೆಸ್‌ಪಕ್ಷಗಳ ನಡುವಣ ಸಂಬಂಧ ಯಜಮಾನ ಮತ್ತು ಆತನ ನಾಯಿಯ ಸಂಬಂಧದಂತಿದೆ. +ಆಗಾಗ್ಗೆ ನಾಯಿ ತನ್ನ ಯಜಮಾನನಿಗೆ ಬೊಗಳುತ್ತದೆ. +ಆದರೆ ತನ್ನ ಜೀವನದ ಹೆಚ್ಚುಕಾಲ ಯಜಮಾನನನ್ನು ಹಿಂಬಾಲಿಸುವುದರಲ್ಲಿಯೇ ತೃಪ್ತಿಯಾಗುತ್ತದೆ. +ಉದಾರವಾದಿ ಪಕ್ಷ ಕಾಂಗಸ್‌ ಪಕ್ಷದ ಬಾಲವಲ್ಲದೆ ಇನ್ನೇನು? +ಉದಾರವಾದಿಗಳು ಕಾಂಗ್ರೆಸ್‌ನಲ್ಲಿ ಏಕೆ ವಿಲೀನವಾಗಬಾರದೆಂದು ಕೆಲವರು ಕೇಳುವಷ್ಟು ಅದರ ಅಸ್ತಿತ್ವ ನಿಕೃಷ್ಟವಾಗಿದೆ. +ರಾನಡೆಯವರು ಉದಾರ ಪಕ್ಷದ ಅವಸಾನದ ಬಗ್ಗೆ ಪಶ್ಚಾತ್ತಾಪಪಡದೇ ಇರಲು ಹೇಗೆ ಸಾಧ್ಯ? +ಯಾವುದೇ ಭಾರತೀಯನಾದರೂ ಪಶ್ಚಾತ್ತಾಪಪಡದಿರುವುದು ಹೇಗೆ ಸಾಧ್ಯ? +ಉದಾರವಾದಿ ಪಕ್ಷದ ಪತನ ಉದಾರವಾದಿಗಳ ದುರಂತ. +ಆದರೆ ಅದು ನಿಜವಾಗಿಯೂ ದೇಶದ ದುರ್ದೈವ. +ಪ್ರಜಾ ಸರಕಾರಕ್ಕೆ ಪಕ್ಷದ ಅವಶ್ಯಕತೆ ಎಷ್ಟಿದೆ ಎಂದರೆ ಅದಿಲ್ಲದೆ ಅಂತಹ ಸರಕಾರವನ್ನುನಡೆಸಿಕೊಂಡು ಹೋಗುವುದು ಊಹಿಸಲು ಅಸಾಧ್ಯ. +ಅಮೆರಿಕದ ಒಬ್ಬ ಪ್ರಖ್ಯಾತ ಇತಿಹಾಸಕಾರಹೇಳುವಂತೆ:“ನಮ್ಮ ಸಂವಿಧಾನ ರಚನೆಯ ಯಾವುದೇ ಅಂಗವನ್ನು ನಾಶಗೊಳಿಸುವುದನ್ನಾಗಳಲಿ, ಸಂವಿಧಾನವು ವಿವರಿಸಿದ ಬಹುತೇಕ ಭಾಗಗಳನ್ನು ಮುಳುಗಿಸುವುದನ್ನು ಊಹಿಸುವುದು ರಾಜಕೀಯ ಸಂಯೋಜನೆಯಿಲ್ಲದೆ ನಾವು ವ್ಯವಹರಿಸಬಲ್ಲೆವೆಂದು ಊಹಿಸುವುದಕ್ಕಿಂತ ಸುಲಭ. + ಏಕೆಂದರೆ ಅವು ನಮ್ಮ ಸತ್ವಯುತವಾದ ಸಂಸ್ಥೆಗಳು. + ಒಂದು ದೇಶದ ಮತದಾರ ಸಮೂಹ ಒಂದು ಪಕ್ಷದ ಶಿಸ್ತು ಮತು ನಿಯಂತ್ರಣವಿಲ್ಲದೆ ದೇಶವನ್ನು ಆಳುವುದೆಂದರೆ, ಜೇಮ್ಸ್‌ ಬ್ರಾಯಿಸ್‌ ಹೇಳಿದಂತೆ:ಬಡ ರೈಲು-ಮಂಡಳಿಯ ವ್ಯವಹಾರಗಳನ್ನು ಸಮವಸ್ತ್ರಧರಿಸಿದ ಪಾಲುದಾರರ ಮತಗಳಿಂದ,ಅಥವಾ ಒಂದು ಹಡಿಗಿನ ಯಾನದ ಮಾರ್ಗವನ್ನು ಪ್ರಯಾಣಿಕರ ಮತಗಳಿಂದ ನಿರ್ಧರಿಸುವ ಪ್ರಯತ್ನದಂತಾಗುತ್ತದೆ”. +ಒಂದು ರಾಜಕೀಯ ಪಕ್ಷವು ಪ್ರಜಾ ಸರಕಾರದ ಅವಿಭಾಜ್ಯ ಅಂಗ ಎಂಬುದನ್ನು ಅಲ್ಲಗಳೆಯಲಾಗದು. +ಆದರೆ ಏಕಪಕ್ಷದ ಆಡಳಿತ ಪ್ರಜಾ ಸರಕಾರಕ್ಕೆ ಮಾರಕ ಎಂಬ ಅಂಶವನ್ನೂ ಅಲ್ಲಗಳೆಯಲು ಆಗದು. +ವಾಸ್ತವಿಕವಾಗಿ ಅದು ಪ್ರಜಾ ಸರಕಾರಕ್ಕೆ ವಿರೋಧವೆನಿಸುವುದು. +ಈ ಸಂಗತಿಗೆ ಜರ್ಮನಿ ಮತ್ತು ಇಟಲಿ ಅತ್ಯಂತ ಸುಸಂಗತವಾದ ಪ್ರಮಾಣವಾಗಿದೆ. +ಸರ್ವಾಧಿಕಾರಿ ರಾಷ್ಟ್ರಗಳಿಂದ ಜಾಗೃತರಾಗುವುದರ ಬದಲು ನಾವು ಅವುಗಳನ್ನು ಅನುಕರಿಸುವಂತಹ ಮಾದರಿಗಳನ್ನಾಗಿ ತೆಗೆದುಕೊಳ್ಳುತ್ತಿದ್ದೇವೆ. +ಈ ರೀತಿ ಮಾಡುತ್ತಿರುವವರು ಏಕಪಕ್ಷ ಸರಕಾರದಿಂದುಂಟಾಗಬಹುದಾದ ಸರ್ವಧಿಕಾರ ಮತ್ತು ಸಾರ್ವಜಿಕ ವ್ಯವಹಾರಗಳನ್ನು ತಪ್ಪುದಾರಿ ಹಿಡಿಸುವ ಸಾಧ್ಯತೆಯನ್ನು ಅರ್ಥಮಾಡಿಕೊಳ್ಳುತ್ತಿಲ್ಲ. +ಏಕ ಪಕ್ಷ ಪ್ರಜಾ ಸರಕಾರವೆಂದರೆ ಪ್ರಜಾಪ್ರಭುತ್ವದ ಹೆಸರಿನಲ್ಲಿ ತೆರೆಮರೆಯಲ್ಲಿ ನಿರಂಕುಶಾಡಳಿತವೆನಿಸುವುದು. +ಏಕಪಕ್ಷ ಸರಕಾರ ಪದ್ಧತಿಯಲ್ಲಿ ಬಹುಸಂಖ್ಯಾತರ ದಬ್ಬಾಳಿಕೆ ಕೇವಲ ಅರ್ಥರಹಿತ ಪದವಾಗಿರದೆ ಅದು ಹೇಗೆ ನಿಜವಾಗಿಂತರರೂ ಅನಾಹುತಕಾರಿಯಾಗ ಬಲ್ಲವೆಂಬುದು ಭಾರತದಲ್ಲಿ ಕಾಂಗ್ರೆಸ್‌ ಆಡಳಿತದಿಂದ ನಮ್ಮ ಅನುಭವಕ್ಕೆ ಬಂದಿದೆ. +ಬ್ರಿಟಿಷರ ಆಡಳಿತದಲ್ಲಿ ಅವಶ್ಯವೆನಿಸಿದ್ದ ಕಾರ್ಯಾಂಗ ಮತ್ತು ನ್ಯಾಯಾಂಗಗಳ ಪ್ರತ್ಯೇಕತೆ ಈಗ ಅವಶ್ಯವಿಲ್ಲ ಎಂದು ಶ್ರೀ ರಾಜಗೋಪಾಲಚಾರಿಯವರು ಹೇಳಿದ್ದನ್ನು ನಾವು ಕೇಳಿಲ್ಲವೆ? +ಒಬ್ಬ ನಿರಂಕುಶಾಧಿಕಾರಿಯ ರಕ್ತ ದಾಹವನ್ನು ಇದು ತೋರಿಸುವುದಿಲ್ಲವೇ? +ಚುನಾಯಿತವಾದ ಮಾತ್ರಕ್ಕೆ ಅದು ನಿರಂಕುಶಾಧಿಕಾರವಾಗದೇ ಇರದು. +ಅದೇ ರೀತಿ ನಿರಂಕುಶಾಧಿಕಾರಿಗಳು ನಮ್ಮವರೇ ಆದ ಮಾತ್ರಕ್ಕೆ ಅದು ಸಮೃತವಾಗಲಾರದು. +ಚುನಾಯಿತ ನಿರಂಕುಶಾಧಿಕಾರವನ್ನು ಸ್ಥಾಪಿಸುವುದರ ಮೂಲಕ ದಬ್ಬಾಳಿಕೆಯ ವಿರುದ್ಧ ರಕ್ಷಣೆ ಒದಗಿಸುವುದು ಸಾಧ್ಯವಿಲ್ಲ. +ನಿರಂಕುಶಾಡಳಿತದ ವಿರುದ್ಧ ಒದಗಿಸಬಹುದಾದ ನಿಜವಾದ ರಕ್ಷಣೆ ಎಂದರೆ ಅದನ್ನು ಪದಚ್ಯುತಗೊಳಿಸುವ ಸಾಧ್ಯತೆ. +ಅದನ್ನು ದುರ್ಬಲಗೊಳಿಸುವ ಮತ್ತು ಅದರ ಸ್ಥಾನವನ್ನು ವಿರೋಧಿ ಪಕ್ಷಗಳು ಪಡೆಯುವ ಸಾಧ್ಯತೆಯಲ್ಲಿ ಅಡಗಿದೆ. +ಪ್ರತಿಯೊಂದು ಸರಕಾರವು ತನ್ನ ನಿರ್ಣಯಗಳಲ್ಲಿ ಎಡವಬಹುದು. +ಅನೇಕ ಸರಕಾರಗಳು ದುರಾಡಳಿತ ಮಾಡಬಹುದು, ಮತ್ತು ಹಲವು ಸರಕಾರಗಳು ಭ್ರಷ್ಟಾಚಾರ, ಅನ್ಯಾಯ, ದಬ್ಬಾಳಿಕೆ ಮತ್ತು ದುರುದ್ದೇಶದಿಂದ ಕೂಡಿರಬಹುದು. +ಯಾವ ಸರಕಾರವೂ ಟೀಕೆಗೆ ಹೊರತಾಗಿರಬಾರದು. +ಆದರೆ ಸರಕಾರವನ್ನು ಯಾರು ಟೀಕಿಸಬಲ್ಲರು? +ಅದು ವ್ಯಕ್ತಿಗಳಿಂದ ಎಂದೂ ಆಗಲಾರದು. +ತನ್ನ ಶತ್ರುಗಳೊಡನೆ ಹೇಗೆ ವ್ಯವಹರಿಸಬೇಕೆಂಬ ಬಗ್ಗೆ ಸರ್‌ ಟೋಬಿ ಯವರು ತಮ್ಮ ಉಪದೇಶವನ್ನು ಬಿಟ್ಟುಹೋಗಿದ್ದಾರೆ. +ಅವರು ಹೇಳಿದಂತೆ: “ಅವನನ್ನು ನೋಡಿದ ತತ್‌ಕ್ಷಣವೇ ಕತ್ತಿಯನ್ನು ಎಳೆ, ಎಳೆಯುತ್ತಿದ್ದಂತೆಯೇ ಕರಾಳವನ್ನುಂಟು ಮಾಡು”. +ಆದರೆ ಸರಕಾರದ ವಿರುದ್ಧ ನಿಲ್ಲಬಯಸುವ ವ್ಯಕ್ತಿಗೆ ಇದು ಸಾಧ್ಯವಾಗದು. +ಯಶಸ್ವಿಯಾಗಿ ಈ ಪಾತ್ರ ನಿರ್ವಹಿಸುವ ವ್ಯಕ್ತಿಗಳ ಎರುದ್ಧ ಅನೇಕ ಆತಂಕಗಳಿವೆ. +ಮೊದಲನೆಯದಾಗಿ, ಬ್ಟ್ರೆಸ್‌ ಹೇಳಿದಂತೆ ವಿಧಿವಾದದಲ್ಲಿ ಜನಸಮೂಹದ ನಂಬುಗೆ, ಈ ನಂಬುಗೆಯಿಂದಾಗಿ ಜನರಲ್ಲಿ ಸ್ವಪ್ರಯತ್ನದಲ್ಲಿ ವಿಶ್ವಾಸವೇ ಇಲ್ಲದಂತಾಗಿದೆ. +ಮಾನವರ ಎಲ್ಲಾ ಆಗುಹೋಗುಗಳು ವ್ಯಕ್ತಿ ಪ್ರಯತ್ನದಿಂದ ಪ್ರಭಾವಿತವಾಗಲು ಸಾಧ್ಯವಿಲ್ಲ ಎಂಬ ಅವರ ಭಾವನೆ ಅಸಹಾಯಕತೆಯ ಭಾವನೆಗೆ ದಾರಿ ಮಾಡಿದೆ. +ಎರಡನೆಯದಾಗಿ, ಬಹು ಸಂಖ್ಯಾತರ ದಬ್ಬಾಳಿಕೆ. +ತಮ್ಮ ಮಾತನ್ನು ಕೇಳದವರ ಮೇಲೆದಂಡ ಮತ್ತು ಬಹಿಷ್ಕಾರ ಹಾಕುವ ಹಾಗೂ ಇತರ ಸಾಮಾಜಿಕ ಅನಾನುಕೂಲತೆಗಳನ್ನುಂಟು ಮಾಡುವ ಸಾಧ್ಯತೆ ನಮ್ಮಲ್ಲಿ ಕೆಲವರಿಗೆ ಕಾಂಗ್ರೆಸ್‌ ಅಧಿಕಾರಾವಧಿಯಲ್ಲಿ ಇದರ ಅನುಭವ ಆಗಿದೆ. +ಮೂರನೆಯದಾಗಿ,ತನಿಖಾ ವಿಭಾಗದ ಭಯ. +ಸರಕಾರದ ಅಧೀನದಲ್ಲಿರುವ ಗೆಸ್ಟ್‌ಪೋ ಮತ್ತು ಇತರ ಸಾಧನಗಳ ಮೂಲಕ ಟೀಕಿಸುವವರನ್ನು ಹಿಂಬಾಲಿಸಿ ಅವರ ಬಾಯಿ ಮುಚ್ಚಿಸಲಾಗುವುದು. +ಧೈರ್ಯವೇ ಸ್ವಾಂತ್ರ್ಯದ ತಳಹದಿಯಾಗಿದೆ. +ಅಂತಹ ದೈರ್ಯ ವ್ಯಕ್ತಿಗಳು ಸಂಘಟಿತರಾಗುವುದರಲ್ಲಿ ಜನಿಸುವುದು. +ಸರಕಾರವನ್ನು ನಡೆಸಲು ಪಕ್ಷದ ಅವಶ್ಯಕತೆ ಇದೆ. +ಆದರೆ ಸರಕಾರದಲ್ಲಿ ದಬ್ಬಾಳಿಕೆ ನಡೆಯದಂತೆ ನೋಡಿಕೊಳ್ಳಲು ಎರಡು ಪಕ್ಷಗಳು ಅವಶ್ಯ. +ಪ್ರಜಾಸತ್ತಾತ್ಮಕ ಸರಕಾರ ಎರಡು ಪಕ್ಷಗಳ ಮೂಲಕ ಕೆಲಸ ಮಾಡಿದಾಗಲೇ ಅದು ಪ್ರಜಾಸತ್ತಾತ್ಮಕವಾಗಬಲ್ಲದು. +ಅಂದರೆ ಒಂದು ಪಕ್ಷ ಅಧಿಕಾರದಲ್ಲಿದ್ದಾಗ ಇನ್ನೊಂದು ವಿರೋಧಿ ಪಕ್ಷವಾಗಿರಬೇಕು. +ಜೆನ್ನಿಂಗ್ಸ್‌ ಹೇಳಿರುವಂತೆ:“ವಿರೋಧಿ ಪಕ್ಷವಿಲ್ಲದೆ ಪ್ರಜಾಪ್ರಭುತ್ವವಿರಲಾರದು. +ಮಹಾಪ್ರಭುವಿನ ಪ್ರತಿ ಪಕ್ಷ ಅರ್ಥರಹಿತವಾದ ಮಾತಲ್ಲ. +ಮಹಾ ಪ್ರಭುವಿಗೆ ಪ್ರತಿ ಪಕ್ಷವೂ ಬೇಕು. +ಸರಕಾರವೂ ಬೇಕು”. +ಈ ಎಲ್ಲಾ ವಿಷಯಗಳನ್ನು ಪರಿಶೀಲಿಸಿದಾಗ, ಭಾರತದಲ್ಲಿ ಉದಾರವಾದಿ ಪಕ್ಷದ ಪತನ ಮಹಾದುರಂತವಲ್ಲ ಎಂದು ಯಾರು ಹೇಳಲು ಸಾಧ್ಯ? +ಉದಾರವಾದಿ ಪಕ್ಷದ ಪುನರುಜ್ಜೀವನವಾಗದೆ ಅಥವಾ ಇನ್ನೊಂದು ಪಕ್ಷವನ್ನು ರಚಿಸದೆ ಸ್ವಾತಂತ್ರ್ಯ ಹೋರಾಟ ಮಾಡಿದರೆ ಸ್ವಾತಂತ್ರ್ಯದ ಬದಲು ದಬ್ಬಾಳಿಕೆ ಸ್ಥಾಪಿತವಾಗುವುದು. +ದಬ್ದಾಳಿಕೆಯು ಅದು ದೇಶೀಯವೇ ಆಗಿರಲಿ, ವಿದೇಶೀಯೇ ಆಗಿರಲಿ ಸ್ವಾತಂತ್ರ್ಯದ ವಿರೋಧಾಭಾಸವೆನಿಸುವುದು. +ಭಾರತೀಯರು ಈ ಸಂಗತಿಯನ್ನು ಅರಿತುಕೊಳ್ಳದೇ ಇರುವುದುದು ರ್ದೈವದ ಸಂಗತಿ. +ಕಾಂಗ್ರೆಸ್‌ ಪಕ್ಷ ಒಂದೇ ಮತ್ತು ಕಾಂಗ್ರೆಸ್‌ ಎಂದರೆ ರಾಷ್ಟ್ರ ಎಂದು ಹಾಡುತ್ತಿರುವವರು ತಮ್ಮ ನಿರ್ಣಯಕ್ಕಾಗಿ ಪಶ್ಚಾತಾಪಪಡುವ ಕಾಲ ಬರುವುದೆಂಬುದರಲ್ಲಿ ನನಗೆ ಸಂಶಯವಿಲ್ಲ. +ಉದಾರವಾದಿ ಪಕ್ಷ ಏಕೆ ಬಿದ್ದು ಹೋಯಿತು? +ರಾನಡೆಯವರ ಸಿದ್ಧಾಂತದಲ್ಲಿ ಏನಾದರೂ ದೋಷವಿದೆಯೇ? +ಆ ಪಕ್ಷದಲ್ಲಿರುವ ವ್ಯಕ್ತಿಗಳಲ್ಲಿ ಏನಾದರೂ ದೋಷಗಳಿವೆಯೇ? +ಅಥವಾ ಆ ಪಕ್ಷದ ಕಾರ್ಯ ವಿಧಾನದಲ್ಲಿ ಏನಾದರೂ ತಪ್ಪುಗಳಿವೆಯೇ? +ನನ್ನ ಮಟ್ಟಿಗೆ ಹೇಳುವುದಾದರೆ ರಾನಡೆಯವರ ಸಿದ್ಧಾಂತದಲ್ಲಿ ಮೂಲಭೂತವಾದ ಯಾವ ನ್ಯೂನತೆಯೂ ಇರಲಿಲ್ಲ. +ಅಥವಾ ಈ ಎರಡು ಪಕ್ಷಗಳಲ್ಲಿ ಕಾಂಗ್ರೆಸ್‌ನ ಗುರಿ ಶ್ರೇಷ್ಠವಾಗಿತ್ತು . +ಉದಾರವಾದಿ ಪಕ್ಷ ಶ್ರೇಷ್ಠ ಪುರುಷರಿಂದ ಕೂಡಿತ್ತು ಎಂದು ಹೇಳಲೂ ಆಗದು. +ಉದಾರವಾದಿ ಪಕ್ಷದಲ್ಲಿ ಎರಡೂ ಇದ್ದವು. +ಉದಾರವಾದಿ ಪಕ್ಷದ ಪತನ ಅಂಗ ರಚನೆಯ ಅಭಾವದಿಂದಾಗಿದೆ ಎಂದು ನನಗನಿಸುತ್ತದೆ. +ಉದಾರವಾದಿ ಪಕ್ಷದ ರಚನೆಯಲ್ಲಿನ ದೋಷಗಳನ್ನು ಮತ್ತು ನ್ಯೂನತೆಗಳನ್ನು ಬಯಲಿಗೆಳೆಯುವುದು ಉಪಯುಕ್ತವೆನಿಸದಿರಲಾರದು. +ಪೆಂಡಲ್‌ಟನ್‌ ಹೆರಿಂಗ್‌ಟನ್‌ ತನ್ನ “ಪೋಟಿಸ್‌ ಆಫ್‌ ಡೆಮಾಕ್ರಸಿ” ಎಂಬ ಗ್ರಂಥದಲ್ಲಿ ಹೇಳಿರುವಂತೆ ಒಂದು ಪಕ್ಷದ ರಚನೆ ಮೂರು ಸಮಾನ ಕೇಂದ್ರದ ವರ್ತುಲಗಳಲ್ಲಿ ಪಸರಿಸಿರುತ್ತದೆ. +ಮಧ್ಯ ವರ್ತುಲಪಕ್ಷದ ರಚನೆ ನಿಯಂತ್ರಿಸುವ ಹೈಕಮಾಂಡ್‌ ಎಂಬ ಕರೆಯಲಾಗುವ ಕೆಲವೇ ಪ್ರಮುಖರಿಂದ ಕೂಡಿರುತ್ತದೆ. +ಪಕ್ಷದ ಸಂಘಟನೆಯಲ್ಲಿ ಪಕ್ಷದ ಅಧಿಕಾರಿಗಳಾಗಿ ಅಥವಾ ಇತರ ಸಾರ್ವಜನಿಕ ಸ್ಥಾನಗಳಲ್ಲಿದ್ದು ಕೊಂಡು ತಮ್ಮ ಜೀವನ ಸಾಗಿಸುವಂತಹ ಕಾರ್ಯಕರ್ತರುಗಳು ಇದರೊಡನೆ ಸಂಬಂಧವಿಟ್ಟುಕೊಂಡಿರುತ್ತಾರೆ. +ಇವರು ವೃತ್ತಿಪರ ರಾಜಕಾರಣಿಗಳಾಗಿದ್ದು ಪಕ್ಷದ ರಚನೆಯ ಅಂಗವಾಗಿರುತ್ತಾರೆ. +ಹೈಕಮಾಂಡ್‌ ಮತ್ತು ಪಕ್ಷದ ಅಂಗರಚನೆಯಿಂದ ಕೂಡಿದ ಈ ಒಳಗಣ ಗುಂಪಿನ ಸುತ್ತ ಪಕ್ಷಕ್ಕೆ ಪಾರಂಪರಿಕ ಭಾವನಾತ್ಮಕ ನಿಷ್ಠೆಯನ್ನು ಹೊಂದಿರುವಂತಹ ವ್ಯಕ್ತಿಗಳ ಒಂದು ದೊಡ್ಡ ಸಮೂಹವಿರುತ್ತದೆ. +ಪಕ್ಷದ ವೃತ್ತಿಪರ ಕಾರ್ಯಕರ್ತರು ಮತ್ತು ಮುಖಂಡರುಗಳಿಗಿಂತಲೂ ಹೆಚ್ಚಿನ ರೀತಿಯಲ್ಲಿ ಇವರು ಪಕ್ಷದ ಧ್ಯೇಯಾದರ್ಶಗಳು ಮತ್ತುಚಿನ್ಹೆಗಳ ಬಗ್ಗೆ ಆಸ್ಥೆಯುಳ್ಳವರಾಗಿರುತ್ತಾರೆ. +ಇವರು ಪಕ್ಷದ ಆದರ್ಶಗಳಿಗೆ ಮತ ನೀಡುತ್ತಾರೆಯೇ ವಿನಾ ಅದರ ಕೃತಿಗಳಿಗಲ್ಲ. +ಈ ಎರಡನೆಯ ವರ್ತುಲದ ಹೊರಗಡೆ ಯಾವುದೇ ಪಕ್ಷಕ್ಕೆ ಸಂಬಂಧಪಡದ ವಿಶಾಲ ಜನಸಮೂಹವಿರುತ್ತದೆ. +ಇದು ಚರಜನಸಂಖ್ಯೆ ಇದ್ದಂತೆ, ಇವರು ಯಾವುದೇ ಪಕ್ಷದೊಡನೆ ಸಂಬಂಧವಿಟ್ಟುಕೊಳ್ಳದಿರುವುದಕ್ಕೆ ಕಾರಣವೆಂದರೆ, ಅವರಲ್ಲಿ ಯಾವುದೇ ಧ್ಯೇಯ ಧೊರಣೆ ಇಲ್ಲದಿರುವುದು,ವಿಚಾರಗಳಿಲ್ಲದಿರುವುದು, ಅಥವಾ ಯಾವ ಪಕ್ಷ ಪ್ರಣಾಳಿಕೆಯಲ್ಲಿ ಸೇರದಿರುವಂತಹ ಅವರ ವಿಶಿಷ್ಟ ಹಿತಾಸಕ್ತಿಗಳು ಎರಡನೆಯ ವರ್ತುಲದ ಹೊರಗಿರುವವರು ರಾಜಕೀಯ ಪಕ್ಷದ ಕಾರ್ಯಾಚರಣೆಯಲ್ಲಿ ಪ್ರಮುಖ ಅಂಶವಾಗಿರುತ್ತಾರೆ. +ಅವರು ಒಂದು ರಾಜಕೀಯ ಪಕ್ಷ ಗೆಲ್ಲಲೇಬೇಕಾದಂತಹ ಬಹುಮಾನ. +ಈ ಬಹುಮಾನವನ್ನು ಗೆಲ್ಲಲು ಕೇವಲ ನೀತಿ ನಿರೂಪಣೆ, ತತ್ವಗಳ ಪ್ರತಿಪಾದನೆ ಸಾಲದು. +ಅವರಿಗೆ ಕಾರ್ಯಸಾಧನೆಯಲ್ಲಿ ಆಸಕ್ತಿ ಆದ್ದರಿ೦ದ ಒಂದು ರಾಜಕೀಯ ಪಕ್ಷ ಸಂಘಟಿತ ಕಾರ್ಯಾಚರಣೆಯಲ್ಲಿ ತೊಡಗಬೇಕು. +ಪ್ರೆಸಿಡೆಂಟ್‌ ವುಡ್‌ರೋ ವಿಲ್ಲನ್ನರ ಮಾತಿನಲ್ಲಿ ಹೇಳುವುದಾದರೆ, ಬಹುಮತ ಆಳ್ವಿಕೆಯ ಸ್ವರಾಜ್ಯದಲ್ಲಿ ವೈಯಕ್ತಿಕ ಅಭಿಪ್ರಾಯಕ್ಕಿಂತ ಸಂಘಟಿತ ಕಾರ್ಯದ ಮುಖಾಂತರ ಹೆಚ್ಚಿನದನ್ನು ಸಾಧಿಸಬಹುದು. +ಸಂಘಟಿತ ಕಾರ್ಯಕ್ಕಾಗಿ ವೈಯಕ್ತಿಕ ಅಭಿಪ್ರಾಯದ ಬೆಂಬಲವನ್ನು ಒದಗಿಸಿಕೊಡುವ ಕಾರ್ಯ ರಾಜಕೀಯ ಪಕ್ಷದ ಪ್ರಮುಖ ಕರ್ತವ್ಯವೆನಿಸುವುದು. +ಸೈದ್ಧಾಂತಿಕವಾಗಿ ರಾಜಕೀಯ ಪಕ್ಷಗಳು ಸಾರ್ವಜನಿಕ ಅಭಿಪ್ರಾಯದ ಅಭಿವ್ಯಕ್ತಿ ಮತ್ತು ಅದನ್ನು ಕಾರ್ಯಗತಗೊಳಿಸುವ ಸಾಧನಗಳು, ಅದನ್ನು ನಿರ್ದೇಶಿಸುತ್ತವೆ. + ಅದರ ಮೇಲೆ ಪ್ರಭಾವ ಬೀರುತ್ತವೆ ಮತ್ತು ಅದನ್ನು ನಿಯಂತ್ರಿಸುತ್ತವೆ. +ನಿಜವಾಗಿಯೂ ಇದು ರಾಜಕೀಯ ಪಕ್ಷದ ಪ್ರಮುಖ ಕಾರ್ಯ. +ಇದಕ್ಕಾಗಿ ಪಕ್ಷಗಳು ಎರಡು ಕೆಲಸಗಳನ್ನು ಮಾಡಬೇಕು. +ಮೊದಲನೆಯದಾಗಿ,ಪಕ್ಷವು ಜನಸಮೂಹದೊಡನೆ ಸಂಬಂಧ ಇಟ್ಟುಕೊಳ್ಳಬೇಕು. +ಅದು ತನ್ನ ತತ್ವಗಳು ನೀತಿಗಳು, ವಿಚಾರಗಳು ಮತ್ತು ಅಭ್ಯರ್ಥಿಗಳೊಡನೆ ಜನಸಮೂಹದ ಮಧ್ಯೆ ಹೋಗಬೇಕು. +ಎರಡನೆಯದಾಗಿ, ತನ್ನ ಕಾರ್ಯಕ್ರಮಗಳ ಬಗ್ಗೆ ಜನತೆಗೆ ಪ್ರಚಾರ ಮಾಡಬೇಕು. +ಅದು ಜನತೆಯನ್ನು ಚೇತನಗೊಳಿಸಬೇಕು ಮತ್ತು ಅವರಲ್ಲಿ ತಿಳುವಳಿಕೆಯನ್ನುಂಟು ಮಾಡಬೇಕು. +ಪುನಃ ಬ್ರೈಸನ ಮಾತುಗಳಲ್ಲಿಯೇ ಹೇಳುವುದಾದರೆ, “ಮತದಾರರು ತೀರ್ಮಾನಿಸಬೇಕಾದ ರಾಜಕೀಯ ಸಮಸ್ಯೆಗಳ ಬಗ್ಗೆ ಅವರಿಗೆ ಅವಶ್ಯವಾದ ಮಾಹಿತಿ ನೀಡಿರಿ, ಅವರ ನಾಯಕರ ಬಗ್ಗೆ ಮತ್ತು ಎದುರಾಳಿಗಳ ಅಪರಾಧಗಳ ಬಗ್ಗೆ ತಿಳಿಸಿ ಹೇಳಿರಿ. +ಈ ಮೂಲಭೂತಸಂಗತಿಗಳಿಂದಲೇ ಸಂಘಟಿತ ಕಾರ್ಯ ಸಾಧ್ಯ ಸಂಘಟಿತ ಕಾರ್ಯವನ್ನು ಕೈಕೊಳ್ಳಲಾರದ ರಾಜಕೀಯ ಪಕ್ಷ ತನ್ನನ್ನು ಒಂದು ಪಕ್ಷವೆಂದು ಕರೆದುಕೊಳ್ಳುವ ಹಕ್ಕನ್ನು ಕಳೆದುಕೊಳ್ಳುತ್ತದೆ. +ಒಂದು ಸಂಘಟನೆಯೋಪಾದಿಯಲ್ಲಿ ಉದಾರವಾದಿ ಪಕ್ಷವು ಇವುಗಳಲ್ಲಿ ಯಾವುದನ್ನು ಮಾಡಿದೆ? +ಉದಾರವಾದಿ ಪಕ್ಷದಲ್ಲಿ ಹೈಕಮಾಂಡ್‌ ಮಾತ್ರ ಇದೆ. +ಇದಕ್ಕೆ ತನ್ನದೇ ಆದ ಆಡಳಿತ ಯಂತ್ರವಿಲ್ಲ. +ಆಡಳಿತ ಯಂತ್ರವಿಲ್ಲದ ಹೈಕಮಾಂಡ್‌ ಕೇವಲ ನೆರಳಿನಂತೆ. +ಅದರ ಬೆಂಬಲಿಗರು ಎರಡನೆಯ ಸಮಾನ ಕೇಂದ್ರದ ವರ್ತುಲದಲ್ಲಿರುವವರಿಗೆ ಸೀಮಿತವಾಗಿದ್ದು ಅವರು ಪರಂಪರಾಗತ ಸಂಬಂಧ ಹೊಂದಿದವರಾಗಿರುತ್ತಾರೆ. +ಮುಖಂಡರು ಭಾವನಾತ್ಮಕ ನಿಷ್ಠೆಯನ್ನು ಪ್ರಚೋದಿಸಲಾರರು. +ಜನಸಮೂಹವನ್ನು ಕಲೆಹಾಕುವಂತಹ ಘೋಷಣೆ ಅವರಲ್ಲಿರುವುದಿಲ್ಲ. +ಉದಾರವಾದಿ ಪಕ್ಷಕ್ಕೆ ಜನಸಮೂಹದೊಡನೆ ಸಂಬಂಧ ಬೆಳೆಸಿಕೊಳ್ಳುವುದರಲ್ಲಿ ವಿಶ್ವಾಸವಿಲ್ಲ. +ಜನಸಮೂಹದಿಂದ ಇಷ್ಟೊಂದು ಪ್ರಶ್ಯೇವಾಗಿರುವ ಪಕ್ಷವನ್ನು ಊಹಿಸುವುದೂ ಕಷ್ಟ. +ಮತಾಂತರದಲ್ಲಿಯೂ ಅದಕ್ಕೆ ನಂಬಿಕೆ ಇಲ್ಲ. +ಅದಕ್ಕೆ ಬೋಧಿಸಲು ತನ್ನದೇ ಆದ ಸುವಾರ್ತೆ ಇಲ್ಲವೆಂದಲ್ಲ. +ಆದರೆ ಹಿಂದೂ ಧರ್ಮದಂತೆ ಅದು ಮತಾಂತರವಿಲ್ಲದ ಧರ್ಮ. +ಅದು ನೀತಿ ಮತ್ತು ತತ್ವಗಳನ್ನು ನಿರೂಪಿಸುವುದರಲ್ಲಿ ವಿಶ್ವಾಸವಿಟ್ಟಿದೆ. +ಆದರೆ ಅವುಗಳನ್ನು ಕಾರ್ಯಗತಗೊಳಿಸಲು ಅದು ಕೆಲಸ ಮಾಡುವುದಿಲ್ಲ. +ಪ್ರಚಾರ ಮತ್ತು ಸಂಘಟಿತ ಕಾರ್ಯ ಉದಾರವಾದಿ ಪಕ್ಷಕ್ಕೆ ಶಾಪದಂತೆ ಅಗ್ರಾಹ್ಯ. + ಅದರ ರಾಜಕೀಯ ಚಟುವಟಿಕೆಗಳು ವೈಯಕ್ತಿಕ ಅಭಿಪ್ರಾಯಗಳನ್ನು ಆಹ್ವಾನಿಸಬೇಕೆಂದಾಗ ಅದಕ್ಕಾಗಿ ಹಾತೂರೆಯುವುದಕ್ಕೆ ಮಾತ್ರ ಸೀಮಿತವಾಗಿವೆ. +ಹೀಗಿದ್ದಾಗ, ಉದಾರವಾದಿ ಪಕ್ಷ ಅಪಕೀರ್ತಿಗೊಳಗಾಗಿರುವುದರಲ್ಲಿ ಏನು ಆಶ್ಚರ್ಯ? +ಉದಾರವಾದಿ ಪಕ್ಷವು ಯಾವುದೇ ಗುರಿ ಸಾಧಿಸಲು ಅದರಲ್ಲಿಯೂ ರಾಜಕೀಯ ಮೂಲಾಂಶಗಳನ್ನು ಒಂದುಗೂಡಿಸಿ ಕಾರ್ಯಗತಗೊಳಿಸುವುದರಲ್ಲಿ ಒಂದು ಸಂಘಟನೆಯ ಅವಶ್ಯಕತೆಯಂತಹ ಪ್ರಾಥಮಿಕ ಸಂಗತಿಯನ್ನು ಮರೆತಿದೆ. +ಭಾರತದಲ್ಲಿ ಉದಾರವಾದಿ ಪಕ್ಷದ ಅವಸಾನಕ್ಕೆ ಯಾರು ಜವಾಬ್ದಾರರು? +ಎಷ್ಟೇ ವಿಷಾದದಿಂದಲಾದರೂ ಈ ಅನಾಹುತಕ್ಕೆ ರಾನಡೆಯವರೂ ಕೆಲಮಟ್ಟಿಗೆ ಜವಾಬ್ದಾರರು ಎಂದು ಒಪ್ಪಿಕೊಳ್ಳಲೇ ಬೇಕಾಗುತ್ತದೆ. +ರಾನಡೆಯವರು ಉನ್ನತ ವರ್ಗಕ್ಕೆ ಸೇರಿದವರಾಗಿದ್ದರು. +ಆ ವರ್ಗದಲ್ಲಿಯೇ ಜನಿಸಿ ಅದರಲ್ಲಿಯೇ ಬೆಳೆದವರು. +ಎಂದೂ ಅವರು ಸಾಮಾನ್ಯ ಜನತೆಯ ವ್ಯಕ್ತಿಯಾಗಲಿಲ್ಲ. +ಉದಾರವಾದಿ ಪಕ್ಷಕ್ಕೆ ಸಂಘಟನೆ ಇರಲಿಲ್ಲ. +ಏಕೆಂದರೆ ಅದಕ್ಕೆ ಜನತಾ ಸಂಪರ್ಕದಲ್ಲಿ ವಿಶ್ವಾಸವಿರಲಿಲ್ಲ. +ಪಕ್ಷಕ್ಕೆ ಜನಸಂಪರ್ಕದ ಬಗ್ಗೆ ಅನಾಸಕ್ತಿ ರಾನಡೆಯವರು ಬಳುವಳಿ. +ಜನತೆಯೊಡನೆ ಸಂಬಂಧವಿಟ್ಟುಕೊಳ್ಳದ ನೀತಿಯನ್ನನುಸರಿಸುವಲ್ಲಿ ಪಕ್ಷವು ರಾನಡೆಯವರು ಬಿಟ್ಟುಹೋಗಿರುವ ಪರಂಪರೆಯನ್ನನುಸರಿಸುತ್ತಿದೆ. +ರಾನಡೆಯವರು ಉದಾರವಾದಿ ಪಕ್ಷಕ್ಕೆ ಬಿಟ್ಟುಹೋಗಿರುವ ಇನ್ನೊಂದು ಪರಂಪರೆ ಇದೆ. +ತತ್ವಗಳು ಮತ್ತು ನೀತಿಗಳಲ್ಲಿ ಕುರುಡ ಬಿಟ್ಟುಹೋಗಿರುವ ಇನ್ನೊಂದು ಪರಂಪರೆ. +ಮ್ಯಾರಿನಿ ಒಮ್ಮೆ ಹೇಳಿದಂತೆ: “ನೀವು ಮನುಷ್ಯರನ್ನು ಕೊಲ್ಲಬಹುದು. +ಆದರೆ ಒಂದು ಶ್ರೇಷ್ಠ ವಿಚಾರವನ್ನು ಕೊಲ್ಲಲಾರಿರಿ.” +ನನ್ನ ಅಭಿಪ್ರಾಯದಲ್ಲಿ ಇದು ಅತ್ಯಂತ ತಪ್ಪುತಿಳುವಳಿಕೆಯ ವಿಚಾರವಾಗಿದೆ. +ಮನುಷ್ಯರು ಸಾಯುತ್ತಾರೆ, ಅದೇ ರೀತಿ ವಿಚಾರಗಳೂ ಕೂಡ. +ಒಂದು ವಿಚಾರ ಅಥವಾ ಭಾವನೆ ತನ್ನಷ್ಟಕ್ಕೆ ತಾನೇ ಬೇರು ಬಿಡುವುದೆಂದು ಭಾವಿಸುವುದು ಸರಿಯಲ್ಲ. +ಗಿಡಕ್ಕೆ ನೀರೆರೆಯ ಬೇಕಾದಂತೆ, ವಿಚಾರಕ್ಕೂ ಪ್ರಚಾರದ ಅವಶ್ಯಕತೆ ಇದೆ. +ಇಲ್ಲವಾದಲ್ಲಿ ಎರಡೂ ಬಾಡಿ ಸತ್ತುಹೋಗುತ್ತವೆ. +ರಾನಡೆಯವರು ಮ್ಯಾರಿನಿಯ ವಿಚಾರವನ್ನು ಒಪ್ಪಿಕೊಂಡಿದ್ದರು, ಮತ್ತು ಭಾವನೆಗೆ ಸತತ ಪೋಷಣೆ ಮತ್ತು ರಕ್ಷಣೆ ಬೇಕೆಂಬ ವಿಚಾರವನ್ನು ಅವರು ಅರಿತುಕೊಳ್ಳಲಿಲ್ಲ. +ಉದಾರವಾದಿ ಪಕ್ಷ ಕೇವಲ ತತ್ವಗಳು ಮತ್ತು ನೀತಿ ನಿರೂಪಣೆಯಿಂಂದ ತೃಪ್ತಿಯಾದುದಕ್ಕೆ ರಾನಡೆಯವರ ಈ ಪರಂಪರೆಯ ಪ್ರಭಾವವೇ ಕಾರಣ. +ಎಲ್ಲಾ ಉದಾರವಾದಿಗಳು ತಮ್ಮ ನಾಯಕನನ್ನು ಹಿಂಬಾಲಿಸುವುದೇ ತಮ್ಮ ಕರ್ತವ್ಯವೆಂದು ಹೇಳುವರೆಂದು ನನಗೆ ಗೊತ್ತು. +ಹಾಗಾದರೆ ಒಂದು ಭಕ್ತಿಯುತ ಅನುಯಾಯಿಗಳ ಸಮೂಹದ ಧೋರಣೆ ಇನ್ನೇನಿರಲಿಕ್ಕೆ ಸಾಧ್ಯ? +ಇದಕ್ಕಿಂತ ತಪ್ಪು ಮತ್ತು ವಿಮರ್ಶನಾ ರಹಿತ ಅಭಿಪ್ರಾಯ ಸಾಧ್ಯವೇ? +ಇಂತಹ ಮನೋಭಾವನೆಯಲ್ಲಿ ಎರಡು ಸಂಗತಿಗಳು ಅಡಗಿವೆ. +ಒಬ್ಬ ಮಹಾಪುರುಷ ತನ್ನ ಅನುಯಾಯಿಗಳ ಮೇಲೆ ತನ್ನ ತತ್ವಗಳನ್ನೇ ಹೇರುವುದರ ಮೂಲಕ ಕೆಲಸ ಮಾಡುತ್ತಾನೆ. +ಅನುಯಾಯಿಗಳು ತಮ್ಮ ಗುರುವಿಗಿಂತ ಹೆಚ್ಚು ಜಾಣರಾಗಬಾರದೆಂಬುದು ಇದರ ಅರ್ಥ. +ಈ ಎರಡು ವಿಚಾರಗಳೂ ತಪ್ಪು. +ಇವು ಗುರುವಿಗೇ ಅನ್ಯಾಯ ಮಾಡಿದಂತೆ. +ಯಾವ ಮಹಾಪುರುಷನೂ ತನ್ನ ಅನುಯಾಯಿಗಳ ಮೇಲೆ ತನ್ನ ವಿಚಾರಗಳನ್ನು ನಿರ್ಣಯಗಳನ್ನೂ ಹೇರಿ ಅವರ ಸ್ವಾತಂತ್ರ್ಯವನ್ನು ಕುಂಠಿತಗೊಳಿಸುವ ಮೂಲಕ ಕಾರ್ಯನಿರ್ವಹಿಸುವುದಿಲ್ಲ. +ಯಾವ ಮಹಾಪುರುಷನೂ ತನ್ನ ಅನುಯಾಯಿಗಳ ಮೇಲೆ ತನ್ನ ವಿಚಾರಗಳನ್ನು ಹೇರುವುದಿಲ್ಲ. +ಅವನು ತನ್ನ ಅನುಯಾಯಿಗಳಲ್ಲಿರುವ ಸುಪ್ತಚೇತನವನ್ನು ಉದ್ದೀಪನಗೊಳಿಸಿ ಅವುಗಳ ಏಕಾಸಕ್ಕೆ ನೆರವಾಗುತ್ತಾನೆ. +ಶಿಷ್ಯನಾದವನು ತನ್ನ ಗುರುವಿನಿಂದ ಮಾರ್ಗದರ್ಶನ ಪಡೆಯುತ್ತಾನೆ. +ಅವನು ತನ್ನ ಗುರುವಿನ ಸಿದ್ಧಾಂತಗಳನ್ನು ಮತ್ತು ನಿರ್ಣಯಗಳನ್ನು ಸ್ವೀಕರಿಸಬೇಕಾಗಿಲ್ಲ. +ಇದರಲ್ಲಿ ಗುರುವಿನ ಬಗ್ಗೆ ಶಿಷ್ಯನ ಕೃತಜ್ಞತೆ ಇಲ್ಲವೆಂದಲ್ಲ. +ಗುರುವಿನ ತತ್ವಗಳನ್ನು ನಿರಾಕರಿಸುವಾಗಲೂ ಸಹ ಶಿಷ್ಯ ತನ್ನ ಗುರುವಿನ ಬಗ್ಗೆ ತನ್ನ ಆಳವಾದ ಗೌರವವನ್ನು ಹೀಗೆ ವ್ಯಕ್ತಪಡಿಸುತ್ತಾನೆ: “ನೀವು ನನ್ನನ್ನು ಜಾಗೃತಗೊಳಿಸಿದ್ದೀರಿ. +ಅದಕ್ಕೆ ನಿಮಗೆ ನನ್ನ ಧನ್ಯವಾದಗಳು” . +ಗುರುವಿಗೆ ಇದಕ್ಕಿಂತ ಕಡಮೆ ಅಥವಾ ಶಿಷ್ಯನಿಗೆ ಇದಕ್ಕಿಂತ ಹೆಚ್ಚಿಗೆ ನೀಡವ ಪ್ರಶ್ನೆ ಏಳುವುದಿಲ್ಲ. +ಆದ್ದರಿಂದ ತನ್ನ ಗುರುವಿನ ತತ್ವಗಳು, ನಿರ್ಣಯಗಳಿಂದ ಶಿಷ್ಯ ಬಂಧಿತನಾಗುವುದು ಗುರು ಮತ್ತು ಶಿಷ್ಯ ಇಬ್ಬರಿಗೂ ಹಿತವಲ್ಲ. +ತನ್ನ ಗುರುವಿನ ತತ್ವಗಳನ್ನು ತಿಳಿದುಕೊಳ್ಳುವುದು ಶಿಷ್ಯನ ಕರ್ತವ್ಯ. +ಅವುಗಳ ಮಹತ್ವ ಮತ್ತು ಶ್ರೇಷ್ಠತೆಯ ಬಗ್ಗೆ ಅವನಿಗೆ ಮನದಟ್ಟಾದರೆ ಮಾತ್ರ ಅವುಗಳ ಪ್ರಸಾರ ಮಾಡಬೇಕು. +ಇದೇ ಪ್ರತಿಯೊಬ್ಬ ಗುರುವಿನ ಬಯಕೆ. +ಯೇಸು ಮತ್ತು ಬುದ್ಧ ಇದನ್ನೇ ಬಯಸಿದ್ದರು. +ರಾನಡೆಯವರ ಬಯಕೆಯೂ ಇದೇ ಆಗಿತ್ತೆಂದು ನನಗೆ ಖಾತ್ರಿ ಇದೆ. +ಉದಾರವಾದಿಗಳು ರಾನಡೆಯವರ ಬಗ್ಗೆ ವಿಶ್ವಾಸ,ಗೌರವ ಮತ್ತು ಪ್ರೀತಿಯನ್ನು ಹೊಂದಿದ್ದೇ ಆದರೆ, ತಾವು ಒಂದೆಡೆ ಸೇರಿ ಅವರ ಗುಣಗಾನ ಮಾಡುವುದರಲ್ಲಿಯೇ ನಿರತರಾಗುವ ಬದಲು ರಾನಡೆಯವರ ಸುವಾರ್ತೆ ಅಥವಾ ಮಹಾಮಂತ್ರದ ಪ್ರಸಾರ ಮಾಡಲು ಉದ್ಯುಕ್ತರಾಗುವುದು ಅವರ ಸವೋಚ್ಚ ಕರ್ತವ್ಯವಾಗಬೇಕು. +ಈ ಕರ್ತವ್ಯವವನ್ನು ನಿರ್ವಹಿಸಲು ಉದಾರವಾದಿಗಳು ಮುಂದಾಗುವರೆಂಬುದಕ್ಕೆ ಯಾವ ಭರವಸೆ ಇದೆ? + ಪರಿಸ್ಥತಿ ನಿರಾಶಾದಾಯಕವಾಗಿದೆ. +ಉದಾರವಾದಿಗಳು ಇತ್ತೀಚಿನ ಚುನಾವಣೆಗಳಲ್ಲಿ ಸ್ಪರ್ಧಿಸಲೂ ಇಲ್ಲ. +ಇದು ಆಶ್ಚರ್ಯಕರ. +ಆದರೆ ಉದಾರವಾದಿ ಪಕ್ಷದ ಪ್ರಮುಖ ಪ್ರಜೆ ಎನಿಸಿಕೊಂಡಿರುವ ರೈಟ್‌ಆನರಬಲ್‌ ಶ್ರೀನಿವಾಸ ಶಾಸ್ತ್ರಿಯವರ ಹಾರೈಕೆಯಾಗಿತ್ತು. +ಕೌರವರ ಆಶ್ರಯದಲ್ಲಿದ್ದುಕೊಂಡು ಅವರ ಶತ್ರುಗಳಾದ ಪಾಂಡವರ ಯಶಸ್ಸನ್ನೇ ಬಯಸುತ್ತಾ ಅದಕ್ಕಾಗಿ ಶ್ರಮಿಸಿದ ಭೀಷ್ಮನ ರಾಜದ್ರೋಹ ಮತ್ತು ವಿಶ್ವಾಸಘಾತ ಕೃತ್ಯ ಒಂದನ್ನು ಬಿಟ್ಟರೆ ಇದಕ್ಕೆ ಸರಿಸಮಾನವಾದ ಸಂಗತಿ ಇನ್ನೊಂದು ಇರಲಿಕ್ಕಿಲ್ಲ. +ಉದಾರವಾದಿಗಳೂ ಕೂಡ ರಾನಡೆಯವರ ಸಂದೇಶದಲ್ಲಿ ವಿಶ್ವಾಸ ಕಳೆದುಕೊಂಡಿದ್ದರೆಂದು ಇದು ತೋರಿಸುತ್ತದೆ. +ಇದು ಉದಾರವಾದಿ ಪಕ್ಷದ ಸ್ವಾಸ್ಥ್ಯ ಮತ್ತು ಪರಿಸ್ಥಿತಿಯಾಗಿದ್ದರೆ ಆ ಪಕ್ಷ ಸಾಯುವುದೇ ಲೇಸು. +ಇದರಿಂದ ಒಂದು ಹೊಸ ಧೋರಣೆಯ ನಿರೂಪಣೆಗೆ ದಾರಿಯಾಗುವುದಲ್ಲದೇ ನಮಗೆ ಉದಾರವಾದ ಮತ್ತು ಉದಾರವಾದಿಗಳ ವ್ಯರ್ಥ ಆಲಾಪದಿಂದ ಮುಕ್ತಿ ದೊರೆಯುವುದು. +ಇಂತಹ ಒಂದು ಘಟನೆಯಿ೦ದ ರಾನಡೆಯವರೂ ಸಹ ತಮ್ಮ ಸಮಾಧಿಯಲ್ಲಿಯೇ ತೃಪ್ತಿ ಹೊಂದಬಹುದು. +ಸೌತ್‌ಬರೋ ಸಮಿತಿಗೆ ನೀಡಿದ ಸಾಕ್ಷ್ಯ ಲಿಖಿತ ಹೇಳಿಕೆ “ವೈಯಕ್ತಿಕ ನೆಲೆಯ ಆದ್ಯತೆ ಹಾಗೂ ಅಭಿಪ್ರಾಯವನ್ನು ಸಾರ್ವಜನಿಕ ಅನಿಸಿಕೆಯಾಗಿ ಹೇಗೆ ಮಾರ್ಪಡಿಸುವುದು ಎಂಬುದೇ ಸರಕಾರದ ಅತ್ಯಂತ ಕಠಿಣ ಮತ್ತು ಪ್ರಮುಖ ಪ್ರಶ್ನೆ ಆಗಿದೆ. +ಇದೇ ಜನಪ್ರಿಯ ಸಂಸ್ಥೆಗಳ ಕಗ್ಗಂಟು” ಎಂದು ಪ್ರೊಫೆಸರ್‌ ಎ.ಬಿ.ಹಾರ್ಟ್‌ ಹೇಳುತ್ತಾರೆ. +ಆದರೆ ಇದು ಜನಪ್ರಿಯ ಸರಕಾರದ ಭಾಗಶಃ ವ್ಯಾಖ್ಯೆ ಆದ್ದರಿಂದ ಈ ವ್ಯಾಖ್ಯೆಯ ಒಂದು ಭಾಗದ ಅದಕ್ಕಿಂತ ಹೆಚ್ಚಲ್ಲದಿದ್ದರೂ ಅಷ್ಟೇ ಮಹತ್ವವುಳ್ಳ ಇನ್ನೊಂದು ಭಾಗಕ್ಕೆ ಒತ್ತು ಕೊಡುವುದು ಅವಶ್ಯಕ. +ಪ್ರತಿಯೊಬ್ಬನ ವೈಯಕ್ತಿಕ ಸಾಮಥನ್ಯಗಳ ಬಳಕೆಗೆ ಸರಕಾರವು ಅತ್ಯಂತ ಪ್ರಮುಖ ಕ್ಷೇತ್ರವಾಗಿರುವುದರಿಂದ ಯಾವೊಬ್ಬ ವ್ಯಕ್ತಿಗೂ ಸರಕಾರದ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವ ಅವಕಾಶವನ್ನು ನಿರಾಕರಿಸಲಾಗದು. +ಅಂದರೆ,ಜನಪ್ರಿಯ ಸರಕಾರವೆಂದರೆ ಜನತೆಗಾಗಿರುವ ಸರಕಾರ ಮಾತ್ರ ಎಂದಲ್ಲ, ಅದು ಜನತೆಯಿಂದಾದ ಸರಕಾರ ಕೂಡ. +ಇದನ್ನೇ ಬೇರೆ ರೀತಿಯಲ್ಲಿ ಹೇಳುವುದಾದರೆ, ಅಭಿಪ್ರಾಯಗಳ ಪ್ರಾತಿನಿಧ್ಯವಿದ್ದಾಗ ಮಾತ್ರ ಅದು ಅರ್ಥಪೂರ್ಣವಾಗುವುದು. +ವ್ಯಕ್ತಿಗತ ಪ್ರಾತಿನಿಧ್ಯವಿಲ್ಲದೇ ಕೇವಲ ಅಭಿಪ್ರಾಯಗಳ ಪ್ರಾತಿನಿಧ್ಯವನ್ನೇ ಸಾಮಾನ್ಯವಾಗಿ ನಾವು ಕಾಣುತ್ತೇವೆ. +ಆದ್ದರಿಂದ, ಭಾರತದಲ್ಲಿ ಜನಪ್ರಿಯ ಸರಕಾರ ರಚಿಸುವಾಗ ಚುನಾವಣಾ ಪದ್ಧತಿ ಮತ್ತು ಮತಕ್ಷೇತ್ರಗಳನ್ನು ನಿರೂಪಿಸುವಲ್ಲಿ ಚುನಾವಣಾ ಪದ್ಧತಿ ಕುರಿತು ರಚಿತವಾಗಿರುವ ಈ ಸಮಿತಿ ಅಭಿಪ್ರಾಯ ಮತ್ತು ವ್ಯಕ್ತಿಗಳ ಪ್ರಾತಿನಿಧ್ಯ ಇವರೆಡಕ್ಕೂ ಅವಕಾಶವಿರುವಂತೆ ನೋಡಿಕೊಳ್ಳಬೇಕು. +ಚುನಾವಣಾಪದ್ಧತಿ ಮತ್ತು ಮತಕ್ಷೇತ್ರಗಳ ಕುರಿತ ಯಾವುದೇ ಯೋಜನೆಯಲ್ಲಿ ಇವರೆಡಕ್ಕೂ ಅವಕಾಶವಿಲ್ಲದೇ ಹೋದಲ್ಲಿ ಜನಪ್ರಿಯ ಸರಕಾರ ಸ್ಥಾಪನೆಯ ಉದ್ದೇಶ ವಿಫಲವಾಗುವುದು. +ಈ ಕಾರ್ಯದ ಸಫಲತೆ ಯಾವ ಸಮಾಜದಲ್ಲಿ ಜನಪ್ರಿಯ ಸರಕಾರ ಸ್ಥಾಪಿತವಾಗಬೇಕಾಗಿದೆಯೋ ಆ ಸಮಾಜದ ವಾಸ್ತವಿಕತೆಯ ಬಗ್ಗೆ ನಮ್ಮ ನಿಷ್ಕಷ್ಟವಾದ ಭಾವನೆಯನ್ನೇ ಅವಲಂಬಿಸಿದೆ. +ಲಾರ್ಡ್‌ಡಿಫರಿನ್ನರು ಭಾರತದ ವಾಸ್ತವಿಕ ಚಿತ್ರಣವನ್ನು ಈ ರೀತಿ ವಿವರಿಸಿದ್ದಾರೆ. +“ಜನಸಂಖ್ಯೆ ಅಸಂಖ್ಯಾತ ಪ್ರತ್ಯೇಕ ಮತ್ತು ನಿಶ್ಚಿತ ಜನಾಂಗಗಳಿಂದ ವಿವಿಧ ಧರ್ಮಗಳನ್ನುಪಾಲಿಸುವ, ವಿಭಿನ್ನ ಕಟ್ಟಳೆಗಳನ್ನು ಆಚರಿಸುವ ಬೇರೆ ಬೇರೆ ಭಾಷೆಗಳನ್ನು ಆಡುವ, ಮತ್ತು ಅವರಲ್ಲಿ ಅನೇಕರು ಅಸಂಗತವಾದ ಪೂರ್ವಕಲ್ಪಿತ ಭಾವನೆಗಳಿಂದ ಕೂಡಿದ ಆಚರಣೆಗಳ ಪರಸ್ಪರ ವಿರೋಧವಾದ ಮಟಲಗಳಿಂದ ಮತ್ತು ಪ್ರತೀಕಾರಕ ವಿಶಿಷ್ಟ ಹಿತಾಸಕ್ತಿಗಳಿಂದಲೂ ಕೂಡಿದೆ. +ಆದರೆ ಭಾರತದ ಅತ್ಯಂತ ಪ್ರಧಾನವಾದ ಗುಣವಿಶೇಷವೆಂದರೆ ಪರಸ್ಪರ ವಿರೋಧವಾದ ಮತ್ತು ಪರಸ್ಪರ ವಿರುದ್ಧ ತತ್ವಗಳನ್ನುಹೊಂದಿದ ಎರಡು ಶಕ್ತಿಶಾಲಿ ರಾಜಕೀಯ ಬಣಗಳಲ್ಲಿ ಜನತೆಯ ವಿಂಗಡಣೆ. +ಅನೇಕ ಜಾತಿಗಳಾಗಿ ವಿಂಗಡಿಸಲಾದ ಹಿಂದೂಗಳು ಒಂದು ಕಡೆ ಇದ್ದರೆ, ಸಾಮಾಜಿಕ ಸಮಾನತೆ ಹೊಂದಿರುವ ಮಹಮ್ಮದೀಯರು ಇನ್ನೊಂದು ಕಡೆ. +ಈ ಎರಡು ಬಣಗಳೊಡನೆ ಲಕ್ಷಾಂತರ ಸಂಖ್ಯೆಯಲ್ಲಿರುವ ಅಸಂಖ್ಯಾತ ಜನಾಂಗಗಳನ್ನೂ ಸೇರಿಸಬೇಕಾಗುತ್ತದೆ. +ಇವರಲ್ಲಿ ಜನಾಂಗೀಯ ಮತ್ತು ರಾಜಕೀಯ ವಿಭಿನ್ನತೆಯಿಂದ ಕೂಡಿದ ಯುದ್ಧಪ್ರವೃತ್ತಿ ಆಚರಣೆಗಳು, ಪರಂಪರೆಗಳು ಮತ್ತು ಶ್ರದ್ಧಾಪೂರ್ವಕ ಧಾರ್ಮಿಕ ನಂಬುಗೆ ಹೊಂದಿರುವ ಸಿಖ್ಖರು, ಸರಹದ್ದು ಪ್ರಾಂತ್ಯಗಳಲ್ಲಿರುವ ರೋಹಿಲರು, ಪಠಾಣರು, ಅಸಾಮೀಯರು, ಬಲೂಜಿಗಳು ಹಾಗೂ ಉಳಿದ ಕೆಚ್ಚೆದೆಯ ಬುಡಕಟ್ಟುಗಳು, ಹಿಮಾಲಯದ ಪದರುಗಳಲ್ಲಿರುವ ಪರ್ವತ ವಾಸಿಗಳು,ಬರ್ಮಾದಲ್ಲಿರುವ ನಮ್ಮ ಪ್ರಜೆಗಳು, ಮಂಗೋಲ ಕುಲದವರು ಮತ್ತು ಬೌದ್ಧಧರ್ಮಿಗಳು, ಗೊಂಡರು,ಮಾರರು, ಭೀಲರು ಮತ್ತು ಮಧ್ಯ ಹಾಗೂ ದಕ್ಷಿಣ ಭಾರತದ ಆರ್ಯೆತರ ಜನಾಂಗಗಳು, ಶೀಘ್ರಗತಿಯಲ್ಲಿ ಬೆಳೆಯುತ್ತಿರುವ ಸಿದ್ಧವಸ್ತುಗಳನ್ನು ತಯಾರಿಸುವ ಹಾಗೂ ವಾಣಿಜ್ಯ ಆಸಕ್ತಿಯುಳ್ಳ ಉದ್ಯಮಶೀಲ ಫಾರ್ಸಿಗಳು ಇವರೆಲ್ಲರೂ ಹಿಂದೂಗಳು ಮತ್ತು ಮಹಮ್ಮದೀಯರರಲ್ಲಿರುವಷ್ಟೇ ವಿಭಿನ್ನತೆಯಿಂದ ಕೂಡಿದವರಾಗಿದ್ದಾರೆ. +ಇದೂ ಅಲ್ಲದೆ ಈ ಅಸಂಖ್ಯಾತ ಜನಸಮೂಹಗಳಲ್ಲಿ ಮನುಕುಲವು ಇತಿಹಾಸ ಪೂರ್ವಕಾಲದಿಂದ ಇಂದಿನವರೆಗೂ ನಡೆದು ಬಂದ ನಾಗರಿಕತೆಯ ಬೆಳವಣಿಗೆಯ ವಿವಿಧ ಘಟ್ಟಗಳನ್ನು ಏಕಕಾಲದಲ್ಲಿ ಕಾಣಬಹುದು.” + ಭಾರತೀಯ ಜನತೆ ಜಾತಿ ಮತ್ತು ಪಂಗಡಗಳಲ್ಲಿ ವಿಭಜಿತರಾಗಿರುವುದರಿಂದ ಅವರು ಪ್ರಾತಿನಿಧಿಕಸರಕಾರಕ್ಕೆ ಯೋಗ್ಯರಲ್ಲ ಎಂಬ ವಿಚಾರವನ್ನು ಆಂಗ್ಲರು ಸದಾ ಹೇಳುತ್ತಾ ಬಂದಿದ್ದಾರೆ. +ಭಾರತದ ರಾಜಕಾರಣಿಗಳಲ್ಲಿ ಅಗ್ರಗಣ್ಯರಾದವರು ಇದನ್ನು ಅಲ್ಲಗಳೆಯುತ್ತಾರೆ. +ಅವರು ಅಧಾರಸಹಿತವಾಗಿ ಭಾರತದಲ್ಲಿರುವಂತೆ ಯೂರೋಪಿನಲ್ಲಿಯೂ ಕೂಡ ಸಾಮಾಜಿಕ ವರ್ಗಗಳಿವೆ ಎಂದು ತೋರಿಸಿಕೊಟ್ಟಿದ್ದಾರೆ. +ಅಮೇರಿಕೆಯಲ್ಲಿರುವ ಸಾಮಾಜಿಕ ವರ್ಗಗಳನ್ನು ಮೀರಿಸದಿದ್ದರೂ ಅವುಗಳಿಗೆ ಸಮಾನವಾಗಿಯಾದರೂ ಇವೆ. +ಭಾರತದಲ್ಲಿನ ವರ್ಗಗಳಿಗೆ ಹೋಲುವ ಅಮೆರಿಕದಲ್ಲಿನ ಸಾಮಾಜಿಕ ವರ್ಗಗಳು ಪರಸ್ಪರ ಪಿತೂರಿಯ ಮೂಲಕ ಸಾರ್ವಜನಿಕರನ್ನು ಬೇಟೆಯಾಡುತ್ತವೆ. +ಇವು ಕೇವಲ ರಾಜಕೀಯ ವಿಭಾಗಗಳಾಗಿರದೇ ಪರಸ್ಪರ ವಿಭಿನ್ನ ಧ್ಯೇಯಗಳನ್ನು ಹೊಂದಿರುವ ಔದ್ಯೋಗಿಕ, ವೈಜ್ಞಾನಿಕ ಮತ್ತು ಧಾರ್ಮಿಕ ಸಂಘಗಳಾಗಿವೆ. +ವಿಭಿನ್ನ ಗುರಿ ಹೊಂದಿರುವ ರಾಜಕೀಯ ಪಕ್ಷಗಳು, ಸಾಮಾಜಿಕ ಒಳಪಂಗಡಗಳು, ಸಂಚುಕೂಟಗಳು ಮತ್ತು ತಂಡಗಳೂ ಅಲ್ಲದೇ, ಅಮೆರಿಕಾದ ಜನತೆಯಲ್ಲಿ ಪೋಲಿಶ್‌, ಡಚ್ಚರು, ಸ್ವೀಡಿಷರು, ಜರ್ಮನರು,ರಷ್ಯನರು ಮುಂತಾದ ಶಾಶ್ವತ ವಿಭಾಗಗಳೂ ಇವೆ. +ಇವರೆಲ್ಲರೂ ತಮ್ಮದೇ ಆದ ಭಾಷೆ, ಧಾರ್ಮಿಕ ಮತ್ತು ನೈತಿಕ ಕಟ್ಟಳೆಗಳು ಮತ್ತು ಪರಂಪರೆಗಳನ್ನು ಹೊಂದಿದ್ದಾರೆ. +ಸಾಮಾಜಿಕ ವಿಭಜನೆಗಳಿಂದಾಗಿ ಯಾವುದಾದರೂ ರಾಷ್ಟ್ರ ಪ್ರಾತಿನಿಧ್ಯ ಸರಕಾರವನ್ನು ಹೊಂದಲು ಅಸಮರ್ಥ ಎನ್ನುವುದಾದರೆ ಭಾರತದಷ್ಟೇ ಅಮೆರಿಕಾವೂ ಅಸಮರ್ಥವೆನಿಸಬೇಕು. +ಆದರೆ ತನ್ನಲ್ಲಿ ಸಾಮಾಜಿಕ ವರ್ಗಗಳಿದ್ದಾಗ್ಯೂ ಅದು ಪ್ರತಿನಿಧಿ ಸರಕಾರ ಹೊಂದಲು ಯೋಗ್ಯವಾಗಿದೆ ಎಂದರೆ ಭಾರತದಲ್ಲಿ ಏಕೆ ಸಾಧ್ಯವಿಲ್ಲ? +ಶಾಶ್ವತವಾಗಿ ಬೇರೂರಿರುವ ಇವರನ್ನು ಕಿತ್ತುಹಾಕುವುದು ಬಹು ಕಠಿಣ ಕೆಲಸ. +ಭಾರತದ ರಾಜಕಾರಣಿಗಳಿಗೆ ಭಾರತದಲ್ಲಿರುವ ವರ್ಗಗಳು ಬೇರೆ ವಿಧದವುಗಳಾಗಿವೆ ಎಂಬುದನ್ನು ತೋರಿಸಿಕೊಡಬೇಕು. +ಇಲ್ಲವೇ ಅವರ ವಾದವನ್ನು ಒಪ್ಪಿಕೊಳ್ಳಬೇಕಾಗುತ್ತದೆ. +ಇವೆರಡನ್ನು ಬಿಟ್ಟರೆ ಮೂರನೆಯ ಮಾರ್ಗ ಸಾಧ್ಯವೇ ಇಲ್ಲ. +ನನ್ನ ಅಭಿಪ್ರಾಯದಲ್ಲಿ ಇವರ ವಾದವನ್ನು ಒಪ್ಪಿಕೊಳ್ಳಬೇಕಿಲ್ಲ. +ಏಕೆಂದರೆ, ಭಾರತದ ರಾಜಕೀಯದಲ್ಲಿ ಸಾಮಾಜಿಕ ವಿಭಾಗಗಳು ಮತ್ತು ವರ್ಗಗಳು ವಾಸ್ತವಂಶಗಳಾಗಿವೆ. +ಅವು ಹೇಗೆ ವಾಸ್ತವವಾಗಿವೆಯೆಂಬುದನ್ನು ತೋರಿಸಲು ಅವು ವಾಸ್ತವವಾಗಿರದಿದ್ದ ಪಕ್ಷದಲ್ಲಿ ಏನಾಗಬಹುದಿತ್ತೆಂಬದನ್ನು ಊಹಿಸಿಕೊಳ್ಳಬೇಕಾಗುತ್ತದೆ. +ಜನರು ತಮ್ಮಲ್ಲಿರುವ ಸಾಮಾನ್ಯ ಗುಣಗಳ ಆಧಾರದ ಮೇಲೆ ಒಟ್ಟಿಗೆ ಜೀವಿಸುತ್ತಾರೆ. +ತಮ್ಮದೇ ಆದ ಸಮೂಹವನ್ನು ರೂಪಿಸಲು ಅವರಲ್ಲಿ ಸಮಾನ ಗುರಿಗಳು, ನಂಬುಗೆಗಳು,ಆಕಾಂಕ್ಷೆಗಳು ಮತ್ತು ಸಮಾನ ತಿಳುವಳಿಕೆ ಇರಬೇಕಾಗುತ್ತಿವೆ. +ಅಥವಾ ಸಮಾಜ ಶಾಸ್ತ್ರಜ್ಞರ ಭಾಷೆಯಲ್ಲಿ ಹೇಳಬೇಕಾದರೆ ಅವರು ಸಮಾನ ಮನಸ್ಕರಾಗಿರಬೇಕಾಗುತ್ತದೆ. +ಈ ಸಮಾನ ಗುಣಗಳನ್ನು ಅವರು ಹೊಂದುವುದು ಹೇಗೆ ಅಥವಾ ಅವರು ಹೇಗೆ ಸಮಾನ ಮನಸ್ಕರಾಗಬಲ್ಲರು? +ಒಂದೇ ರೊಟ್ಟಿಯನ್ನು ಹಂಚಿಕೊಳ್ಳುವ ಸಮಾನ ಮನೋಭಾವ ಸಾಧ್ಯವಿಲ್ಲ. + ಇತರರ ಮನೋಭಾವನೆ ಅಥವಾ ಸಮಾನ ವಿಚಾರಗಳನ್ನು ಬೆಳೆಸಿಕೊಳ್ಳಲು ಅವರೊಡನೆ ಸಂಪರ್ಕವಿಟ್ಟು ಕೊಳ್ಳಬೇಕಾಗುತ್ತದೆ. +ಅಥವಾ ಅವರ ಚಟುವಟಿಕೆಗಳಲ್ಲಿ ಭಾಗವಹಿಸಬೇಕಾಗುತ್ತದೆ. +ಪರಸ್ಪರ ಸಾಮೀಪ್ಯದಲ್ಲಿ ವಾಸಮಾಡುವುದರಿಂದಲೇ ಸಮಾನ ಮನಸ್ಕರಾಗುವುದು ಸಾಧ್ಯವಿಲ್ಲ. +ಅಂತೆಯೇ,ಪರಸ್ಪರ ದೂರವಾಗಿ, ಪ್ರತ್ಯೇಕವಾಗಿ ವಾಸಿಸುವುದರಿಂದ ಸಮಾನ ಮನಸ್ಕರಾಗಲಾರರು ಎಂದಲ್ಲ. +ಸಾಮೂಹಿಕ ಚಟುವಟಿಕೆಗಳಲ್ಲಿ ಭಾಗವಹಿಸುವುದರಿಂದ ಮಾತ್ರ ಸಮಾನ ಮನಸ್ಕರಾಗುವುದು ಸಾಧ್ಯ. +ಪ್ರತಿಯೊಂದು ಜನಸಮೂಹ ತನ್ನದೇ ಆದ ವಿಶಿಷ್ಠ ರೀತಿಯ ಸಮಾನ ವಿಚಾರಗಳನ್ನು ಸೃಷ್ಟಿಸಿಕೊಳ್ಳುತ್ತದೆ. +ಆದರೆ ರಾಜಕೀಯ ಸಂಘಟನೆಯೊಳಗೆ ಸೇರಿಸಿಕೊಳ್ಳಬೇಕಾಗಿರುವ ಒಂದಕ್ಕಿಂತ ಹೆಚ್ಚು ಸಮೂಹಗಳಿದ್ದಾಗ ವಿವಿಧ ವಿಚಾರಗಳನ್ನು ಹೊಂದಿದ ಗುಂಪುಗಳಲ್ಲಿ ಘರ್ಷಣೆ ಉಂಟಾಗುವುದು. +ಎಲ್ಲಿಯವರೆಗೆ ಈ ಗುಂಪುಗಳು ಪ್ರತ್ಯೇಕವಾಗಿ ಉಳಿಯುವುವೋ ಅಲ್ಲಿಯವರೆಗೆ ಈ ಘರ್ಷಣೆ ಇದ್ದೇ ಇರುತ್ತದೆ. +ಮಾತ್ರವಲ್ಲ, ಸಾಮರಸ್ಯವೂ ಸಾಧ್ಯವಾಗುವುದಿಲ್ಲ. +ವಿವಿಧ ಸಮೂಹಗಳ ಪ್ರತ್ಯೇಕತೆ ಪ್ರಮುಖ ಕೇಡಾಗಿದೆ. +ವಿವಿಧ ಸಮೂಹಗಳಲ್ಲಿ ಆಂತರಿಕ ಸಂಬಂಧಕ್ಕೆ ಅವಕಾಶವಿದ್ದರೆ,ಪ್ರತ್ಯೇಕತೆಯ ದೋಷ ನಿವಾರಣೆಯಾಗುವುದು. +ಏಕೆಂದರೆ, ವಿವಿಧ ಗುಂಪುಗಳ ಆಂತರಿಕ ಸಂಬಂಧದ ಮೂಲಕ ಅವುಗಳ ಸಮಾಜೀಕೃತ ಮನೋಭಾವನೆಗಳ ಪುನರ್‌ಸಾಮಾಜೀಕರಣ ಸಾಧ್ಯ. + ಹಳೆಯದರ ಸ್ಥಾನದಲ್ಲಿ ವಿವಿಧ ಗುಂಪುಗಳ ಆಸಕ್ತಿಗಳು, ಧ್ಯೇಯಗಳು ಮತ್ತು ಆಕಾಂಕ್ಷೆಗಳ ಪ್ರಾತಿನಿಧಿಕವಾದಂತಹ ಒಂದು ಹೊಸ ವಿಧದ ಸಮಾನ ಮನಸ್ಕತೆಯನ್ನು ಅದು ರೂಪಿಸುತ್ತದೆ. +ಸಾಮಾಜಿಕ ಅಥವಾ ರಾಜಕೀಯ ಸಾಮರಸ್ಯಯುತ ಜೀವನಕ್ಕೆ ಸಮಾನ ಮನಸ್ಕತೆ ಅತ್ಯವಶ್ಯ . +ಈಗಾಗಲೇ ತಿಳಿಸಿದಂತೆ, ಅದು ಸಂಪರ್ಕ, ಪಾಲ್ಗೊಳ್ಳುವಿಕೆ ಮತ್ತು ಆಂತರಿಕ ಸಂಬಂಧಗಳ ಪ್ರಮಾಣವನ್ನವಲಂಬಿಸಿರುತ್ತದೆ. +ಭಾರತದಲ್ಲಿರುವ ವಿಭಾಗಗಳನ್ನು ಈ ಒರೆಯಿಂದ ಪರೀಕ್ಷಿಸಿದಾಗ, ಇವು ಸಾಮರಸ್ಯಯುತ ಹಾಗೂ ಮಧುರ ರಾಜಕೀಯ ಜೀವನಕ್ಕೆ ಆತಂಕಗಳಾಗಿವೆಯೆಂದೇ ಹೇಳಬೇಕಾಗುತ್ತದೆ. +ಭಾರತದಲ್ಲಿ ಖಚಿತವಾದ ಭಾವನೆಗಳನ್ನು ಹೊಂದಿರುವ ಮತ್ತು ಪರಸ್ಪರ ಘರ್ಷಣೆ ಉಂಟಾಗುವ ಗುಂಪು ಅಥವಾ ವಿಭಾಗಗಳನ್ನು ಈ ಕೆಳಕಾಣಿಸಿದ ರೀತಿಯಲ್ಲಿ ವಿಂಗಡಿಸಬಹುದು. +೧. ಹಿಂದೂಗಳು, ೨.ಮಹಮ್ಮದೀಯರು,೩. ಕೈಸ್ತರು,೪. ಫಾರ್ಸಿಗಳು,೫. ಯಹೂದಿಯರು, ಇತ್ಯಾದಿ. +ಹಿಂದೂಗಳ ಹೊರತು - ಉಳಿದೆಲ್ಲ ಸಮೂಹಗಳಲ್ಲಿ ಆಂತರಿಕ ಸಂಬಂಧದ ಸಂಪೂರ್ಣ ಸ್ವಾತಂತ್ರ್ಯವಿದ್ದು ಅವುಗಳ ಸದಸ್ಯರಲ್ಲಿ ಪರಸ್ಪರ ಸಂಪೂರ್ಣ ವಿಚಾರ ಸಮ್ಮತಿ ಅಥವಾ ಏಕಮನಸ್ಕತೆಯನ್ನು ನಿರೀಕ್ಷಿಸಬಹುದಾಗಿದೆ. +ಆದರೆ ಹಿಂದೂಗಳ ವಿಷಯದಲ್ಲಿ ಸಲ್ಪ ದೀರ್ಫ ವಿಶ್ಲೇಷಣೆ ಮಾಡಬೇಕಾಗುತ್ತದೆ. +ಹಿಂದೂಗಳ ಬಗ್ಗೆ ಪ್ರಮುಖ ವಿಷಯವೆಂದರೆ ಅವರು ಹಿಂದೂಗಳೆನಿಸಿಕೊಳ್ಳುವ ಮೊದಲು ಒಂದು ಜಾತಿಗೆ ಸೇರಿದವರಾಗಿರುತ್ತಾರೆ. +ಜಾತಿಗಳು ಎಷ್ಟರ ಮಟ್ಟಿಗೆ ಪ್ರತ್ಯೇಕವಾಗಿವೆ ಎಂದರೆ ಅವರು ಹಿಂದೂಯೇತರರೊಂದಿಗೆ ವ್ಯವಹರಿಸುವಾಗ ಮಾತ್ರ ತಾವು ಹಿಂದೂ ಎಂಬ ಅಂಶ ಮುಖ್ಯವಾಗುತ್ತದೆ. +ಆದರೆ ಬೇರೆ ಜಾತಿಗೆ ಸೇರಿದ ಹಿಂದೂಗಳೊಡನೆ ವ್ಯವಹರಿಸುವಾಗ ಜಾತಿ ಪ್ರಜ್ಞೆ ಪ್ರಮುಖವಾಗುತ್ತದೆ. +ತಾವು ಹಿಂದೂಗಳಾಗಿರುವುದರಿಂದ ಅವರ ನಡುವೆ ಏಕ ಮನಸ್ಕತೆಗಿಂತ ಜಾತಿಭಾವನೆ ಹೆಚ್ಚು ಪ್ರಭಾವಶಾಲಿಯಾಗುತ್ತದೆ. +ಆದ್ದರಿಂದ ವಿಭಿನ್ನ ಜಾತಿಗೆ ಸೇರಿದ ಹಿಂದೂಗಳಲ್ಲಿ ಹಿಂದೂಯೇತರರ ನಡುವೆ ಇದ್ದಂತೆ ಏಕ ಮನಸ್ಕರಾದ ವ್ಯಕ್ತಿಗಳಲ್ಲಿಯೇ ಘರ್ಷಣೆಯುಂಟಾಗುವ ಸಂಭವವಿದೆ. +ಈ ಘರ್ಷಣೆ ಸಂಪೂರ್ಣ ಜಾತಿ ಪದ್ಧತಿಯನ್ನೇ ಆವರಿಸಿದೆ ಎಂದು ತರ್ಕ ಮಾಡುವವರೂ ಕೆಲವರಿದ್ದಾರೆ. +ಆದರೆ ಇದು ಅತಿಯಾದ ವಿರೋಧವೆನಿಸುತ್ತದೆ. +ಸಂಪರ್ಕದ ದೃಷ್ಟಿಯಿಂದ, ಹಿಂದೂಗಳಲ್ಲಿ ಜಾತಿಗಳಿದ್ದಾಗ್ಯೂ ಅವರನ್ನು ಸ್ಪೃಶ್ಯರು ಮತ್ತು ಅಸ್ಪೃಶ್ಯರು ಎಂಬ ಎರಡು ಭಾಗಗಳನ್ನಾಗಿ ವಿಂಗಡಿಸಬಹುದು. +ಸ್ಪೃಶ್ಯರಲ್ಲಿ ಆಂತರಿಕ ಸಂಪರ್ಕ ಎಷ್ಟರ ಮಟ್ಟಿಗಿದೆ ಎಂದರೆ ಅವರೊಳಗೆ ಏಕಮನಸ್ಕರಲ್ಲಿರಬಹುದಾದ ಘರ್ಷಣೆಗಳು ಅಷ್ಟು ಗಂಭೀರವೆನಿಸಲಾರವು. +ಆದರೆ ಇದಕ್ಕೂ ಮತ್ತು ಸ್ಪೃಶ್ಯ ಹಾಗು ಅಸ್ಪೃಶ್ಯ ಏಕಮನಸ್ಕರ ನಡುವೆ ಉಂಟಾಗುವ ಘರ್ಷಣೆಗೂ ವ್ಯತ್ಯಾಸವಿದೆ. +ಅವರ ಆಂತರಿಕ ಸಂಬಂಧಗಳಿಗೆ ಅಸ್ಪಶ್ಯತೆ ಒಂದು ಬಲವಾದ ನಿಷೇಧವಾಗಿದೆ. +ಅವರಲ್ಲಿರುವ ಸಂಪೂರ್ಣ ಪ್ರತ್ಯೇಕತೆ ಅವರ ಭಾವನೆಗಳ ವಿಭಿನ್ನತೆಯ ತೀಕ್ಷ್ಣತೆಯ ಕಾರಣವಾಗಿದೆ. +ಅಂದ ಮೇಲೆ ಭಾರತದಲ್ಲಿ ನಿಜವಾದ ಸಾಮಾಜಿಕ ವಿಭಾಗಗಳು ಯಾವುವೆಂದರೆ:೧.ಸ್ಪೃಶ್ಯ ಹಿಂದೂಗಳು,೨.ಅಸ್ಪಶ್ಯ ಹಿಂದೂಗಳು,೩.ಮಹಮ್ಮದೀಯರು,೪. ಕ್ರೈಸ್ತರು,೫.ಪಾರ್ಸಿಗಳು,೬.ಯಹೂದಿಯರು. + ಜನಪ್ರಿಯ ಸರಕಾರ ಸ್ಥಾಪಿಸುವ ಯಾವುದೇ ನೀತಿ ಅಥವಾ ಧೋರಣೆಯನ್ನು ರೂಪಿಸುವಾಗ ಸಮಾಜದ ಈ ನಿಜವಾದ ವಿಭಾಗಗಳನ್ನು ಕಡೆಗಣಿಸುವುದು ವಿಹಿತವಲ್ಲ. +ಆದರೆ ಜನಪ್ರಿಯ ಸರಕಾರದ ಯಶಸ್ಸು ಮತಕ್ಷೇತ್ರಗಳು ಮತ್ತು ಚುನಾವಣಾ ಪದ್ಧತಿ ಎಷ್ಟರ ಮಟ್ಟಿಗೆ ಸಾಮಾಜಿಕ ಶಕ್ತಿಗಳನ್ನು ಪ್ರಸಾರಮಾಡಬಲ್ಲವು ಮತ್ತು ಎಷ್ಟರ ಮಟ್ಟಿಗೆ ವ್ಯಕ್ತಿಗತ ಪ್ರಾತಿನಿಧ್ಯವನ್ನು ನೀಡಬಲ್ಲುವೆಂಬುದನ್ನು ಅವಲಂಬಿಸಿದ್ದರೆ,ಚುನಾವಣೆಗಳಲ್ಲಿ ವಿವಿಧ ಗುಂಪುಗಳ ನಡುವಣ ಘರ್ಷಣೆ ಯಾವ ಸ್ವರೂಪ ತಾಳಬಹುದೆಂಬುದನ್ನು ನಾವು ಅಧ್ಯಯನ ಮಾಡಬೇಕಾಗುತ್ತದೆ. +ಯಾವುದೇ ಪ್ರಾದೇಶಿಕ ಮತಕ್ಷೇತ್ರದಲ್ಲಿ ಮೇಲ್ಕಾಣಿಸಿದ ವಿಭಾಗಗಳಿಗೆ ಸೇರಿದ ಮತದಾರರನ್ನು ಒಂದುಗೂಡಿಸಿದರೆ, ಮತದಾರರು ಬಹುಮತದಿಂದ ಅಭ್ಯರ್ಥಿಯು ಸಂಬಂಧಪಟ್ಟ ಮತಕ್ಷೇತ್ರ ಪ್ರತಿನಿಧಿಯಾಗಿರಬೇಕೆಂದು ಸಾರುತ್ತಾರೆ. +ಇದರಿಂದ ಉದ್ಭವಿಸುವ ಪ್ರಶ್ನೆ ಎಂದರೆ:ಅಂತಹ ಅಭ್ಯರ್ಥಿಯ ಆ ಪ್ರಾದೇಶಿಕ ಮತಕ್ಷೇತ್ರದ ಎಲ್ಲಾ ವರ್ಗಗಳ ನಿಜವಾದ ಪ್ರತಿನಿಧಿಯಾಗುವುದು ಸಾಧ್ಯವೇ? +ಅವನು ಆ ಕ್ಷೇತ್ರದ ವಿಚಾರಗಳ ನಿಜವಾದ ಪ್ರತಿಬಿಂಬವಾಗಬಲ್ಲನೇ? +ಅವನು ಆ ಕ್ಷೇತ್ರದಲ್ಲಿರುವ ಎಲ್ಲಾ ಹಿತಾಸಕ್ತಿಗಳ ಪ್ರತಿನಿಧಿ ಎನಿಸಬಲ್ಲನೇ? +ನಿರ್ದಿಷ್ಟವಾಗಿ ಕೇಳಬೇಕೆಂದರೆ, ಒಬ್ಬ ಹಿಂದೂ ಅಭ್ಯರ್ಥಿ ಮಹಮ್ಮದೀಯರ ಹಿತಾಸಕ್ತಿಗಳನ್ನು ಪ್ರತಿನಿಧಿಸಬಲ್ಲನೇ? +ಈ ಮೊದಲು ಹೇಳಲಾದ ಎಲ್ಲಾ ವಿಭಾಗಗಳು ಜಾತ್ಯತೀತವಲ್ಲದ ಅಥವಾ ಕೇವಲ ಧಾರ್ಮಿಕ ಹಿತಾಸಕ್ತಿಗಳಿಂದ ಕೂಡಿವೆ ಎಂಬ ಅಂಶವನ್ನು ಈ ಹಂತದಲ್ಲಿ ನೆನಪಿಡಬೇಕಾಗುತ್ತದೆ. +ಪ್ರತಿಯೊಂದು ಬಣವೂ ಕೇವಲ ಜಾತ್ಯತೀತ ಅಥವಾ ಭೌತಿಕ ಅಂಶಗಳ ಆಧಾರದ ಮೇಲೆ ಒಂದಾಗಿದೆ ಎಂದು ಹೇಳಲು ಬರುವುದಿಲ್ಲ. +ಅಂದಾಗ ಜಾತ್ಯತೀತ ಹಿತಾಸಕ್ತಿಗಳ ಪ್ರಶ್ನೆ ಉದ್ಭವಿಸಿದಾಗ ಅವುಗಳಲ್ಲಿ ಒಡಕುಂಟಾಗುತ್ತದೆ. +ಭೌತಿಕ ವಿಷಯಗಳ ದೃಷ್ಟಿಯಿಂದ ಮಹಮ್ಮದೀಯರು, ಫಾರ್ಸಿಗಳು, ಹಿಂದೂಗಳು ಇತ್ಯಾದಿ ಜನರಿರುವುದು ಸಾಧ್ಯವಿಲ್ಲ. +ಈ ಪ್ರತಿಯೊಂದು ಸಮುದಾಯಗಳಲ್ಲಿ ಭೂಮಾಲೀಕರು, ಕೂಲಿಕಾರರು,ಬಂಡವಾಳ ಶಾಹಿಗಳು, ನಿರುಪಾಧಿಕ ವ್ಯಾಪಾರವಾದಿಗಳು, ಉದ್ಯಮದ ರಕ್ಷಣಾನೀತಿ ಪ್ರತಿಪಾದಿಗಳು ಮುಂತಾದವರು ಇರುತ್ತಾರೆ. +ಭೌತಿಕ ಹಿತಾಸಕ್ತಿಗಳನ್ನು ಹೊಂದಿದ ಪ್ರತಿಯೊಂದು ವಿಭಾಗದಲ್ಲಿ ಹಿಂದೂಗಳು,ಮಹಮ್ಮದೀಯರು, ಫಾರ್ಸಿಗಳು ಮುಂತಾದವರಿರುತ್ತಾರೆ. +ತತ್ಪರಿಣಾಮವಾಗಿ, ಒಬ್ಬ ಹಿಂದೂ ಅಭ್ಯರ್ಥಿ ಮಹಮ್ಮದೀಯರ ಭೌತಿಕ ಹಿತಾಸಕ್ತಿಗಳನ್ನು ಪ್ರತಿನಿಧಿಸಬಲ್ಲ. +ಇದೇ ರೀತಿ ಒಬ್ಬ ಮಹಮ್ಮದೀಯ ಅಭ್ಯರ್ಥಿ ಹಿಂದೂಗಳ ಭೌತಿಕ ಹಿತಾಸಕ್ತಿಗಳನ್ನು ಪ್ರತಿನಿಧಿಸಬಲ್ಲ. +ಆದ್ದರಿಂದ ಭೌತಿಕ ಹಿತಾಸಕ್ತಿಗಳ ವಿಷಯದಲ್ಲಿ ವಿವಿಧ ಸಮುದಾಯಗಳಲ್ಲಿ ಘರ್ಷಣೆ ಉಂಟಾಗುವುದು ಸಾಧ್ಯವಿಲ್ಲ. +ಕಾಲಕ್ರಮೇಣ ಧಾರ್ಮಿಕ ಹಿತಾಸಕ್ತಿಗಳು ಜನರ ವ್ಯವಹಾರಗಳಲ್ಲಿ ಅಧೀನಸ್ಥಾನ ಪಡೆಯುವುದೆಂದು ನಾವು ಭಾವಿಸುವುದಾದರೆ,ಒಂದು ಸಮುದಾಯದ ಜಾತ್ಯತೀತ ಹಿತಾಸಕ್ತಿಗಳನ್ನು ಇನ್ನೊಂದು ಸಮುದಾಯ ಅಭ್ಯರ್ಥಿ ಪ್ರತಿನಿಧಿಸಬಲ್ಲ ಎಂದು ಹೇಳಬಹುದು. +ಈ ದೃಷ್ಟಿಯಲ್ಲಿ ಜನಪ್ರಿಯ ಸರಕಾರಕ್ಕೆ ಪ್ರಾದೇಶಿಕ ಮತಕ್ಷೇತ್ರ ಸಾಕಾಗುವುದು. +ಆದರೆ ಇನ್ನೂ ಹೆಚ್ಚಿನ ಪರಿಶೀಲನೆ ಮಾಡಿದಾಗ ಅದು ಜನಪ್ರಿಯ ಸರಕಾರದ ವ್ಯಾಖ್ಯೆಗೆ ಭಾಗಶಃ ಸಮಾಧಾನವೆನಿಸುವುದು. +ಇವು ಎಷ್ಟರ ಮಟ್ಟಿಗೆ ನಿಜ ಎಂಬುದನ್ನು ಈಗ ತೋರಿಸಲಾಗುವುದು. +ಒಂದು ಪ್ರಾದೇಶಿಕ ಮತಕ್ಷೇತ್ರದಲ್ಲಿ ವಿವಿಧ ಬಣಗಳ ನಡುವಣ ಚುನಾವಣಾ ಸ್ಪರ್ಧೆಯಲ್ಲಿ ಮತದಾರರು ತಾವು ಸಹಾನುಭೂತಿ ಹೊಂದಿದ ಅಭ್ಯರ್ಥಿಯ ಪರವಹಿಸುತ್ತಾರೆ. +ಆದರೆ ಯಾವ ಬಗ್ಗೆ ಸಹಾನುಭೂತಿ ಹೊಂದಬೇಕೆಂಬ ವಿಷಯವನ್ನು ಅವರಿಗಾಗಿ ಮೊದಲೇ ನಿರ್ಣಯಿಸಲಾಗಿರುತ್ತದೆ. +ಎರಡು ವಿಭಿನ್ನ ಬಣಗಳಿಗೆ ಸೇರಿದ ಮತ್ತು ಒಂದೇ ಹಿತಾಸಕ್ತಿಯನ್ನು ಪ್ರತಿನಿಧಿಸುವುದಾಗಿ ಹೇಳುವ ಇಬ್ಬರು ಅಭ್ಯರ್ಥಿಗಳಿದ್ದಾಗ ಮತದಾರರು ತಮ್ಮ ಬಣಕ್ಕೆ ಸೇರಿದ ಅಭ್ಯರ್ಥಿಗೇ ಮತ ಹಾಕುತ್ತಾರೆ. +ಹೆಚ್ಚು ಮತದಾರರನ್ನು ಹೊಂದಿರುವ ಬಣದ ಅಭ್ಯರ್ಥಿಯೇ ಚುನಾಯಿತನಾಗುತ್ತಾನೆ. +ಮತದಾರರ ಈ ಪಕ್ಷಪಾತದಿಂದಾಗಿ ಅಲ್ಪಸಂಖ್ಯಾತ ಬಣಗಳಿಗೆ ಸೇರಿದ ಸದಸ್ಯರ ಹಿತಾಸಕ್ತಿಗಳು ಪ್ರಾತಿನಿಧ್ಯ ಪಡೆದಾಗ್ಯೂ ಅವರಿಗೆ ವ್ಯಕ್ತಿಗಳ ಪ್ರಾತಿನಿಧ್ಯ ಪಡೆಯುವ ಅವಕಾಶವಿರುವುದಿಲ್ಲ. +ಜನತೆಯ ಅಭಿಪ್ರಾಯಗಳು ಮತ್ತು ಹಿತಾಸಕ್ತಿಗಳಿಗೆ ಸರಿಯಾದ ಮತ್ತು ಸಾಕಷ್ಟು ಪ್ರಾತಿನಿಧ್ಯ ದೊರಕಿಸುವಂತಹ ವಿಧಾನಗಳನ್ನು ರೂಪಿಸುವುದರಲ್ಲಿ ಆಸಕ್ತರಾದವರಿಗೆ ವ್ಯಕ್ತಿಗತ ಪ್ರಾತಿನಿಧ್ಯದ ಮಹತ್ವವನ್ನು ತಿಳಿದುಕೊಳ್ಳುವುದು ನಿರರ್ಥಕವೆನಿಸುವುದು. +ಅಂದ ಮಾತ್ರಕ್ಕೆ ಸ್ವಂತ ಅಥವಾ ವ್ಯಕ್ತಿಗಳ ಪ್ರಾತಿನಿಧ್ಯಕ್ಕೆ ಮಹತ್ವವಿಲ್ಲವೆಂದಲ್ಲ. +ಇತ್ತೀಚಿನ ದಿನಗಳಲ್ಲಿ “ಜನರ ಸರಕಾರ”ಕ್ಕಿಂತ “ಜನರಿಂದಾದ ಸರಕಾರ ಹೆಚ್ಚು ಗಮನ ಸೆಳೆದಿದೆ. +ವಾಸ್ತವಿಕವಾಗಿ, “ಜನರಿಗಾಗಿರುವ ಸರಕಾರ” ಜನರಿಂದಾದ ಸರಕಾರವಾಗಿರುವುದೇ ಹೆಚ್ಚು ಅರ್ಥಪೂರ್ಣವೂ ಪರಿಣಾಮಕಾರಿಯೂ ಆಗಿರಬಲ್ಲದು. +ಆದರೂ ಎಲ್ಲಾ ರಾಜಕೀಯ ಸೈದ್ಧಾಂತಿಕರು ಅಂತಹ ಸರಕಾರವನ್ನು ಒಮ್ಮತದಿಂದ ಖಂಡಿಸುವರು. +ಇದರ ಕಾರಣಗಳನ್ನು ತಿಳಿದುಕೊಳ್ಳುವುದು ಅವಶ್ಯವೆನಿಸುವುದು. +ಪ್ರತಿಯೊಂದು ವಿಧದ ಸಂಘವು ಶೈಕ್ಷಣಿಕ ಸಾಧನವಾಗಿರುವುದರಿಂದ ಅದು ತನ್ನ ಸದಸ್ಯರ ಮನೋಧರ್ಮವನ್ನು ರೂಪಿಸುವಲ್ಲಿ ಪ್ರಭಾವ ಬೀರುತ್ತದೆ. +ತತ್ಪರಿಣಾಮವಾಗಿ, ಒಬ್ಬ ವ್ಯಕ್ತಿ ಇತರರೊಡನೆ ಹೊಂದಿರುವ ಸಂಬಂಧದ ಕಾರಣ ಯಾವ ಅಭಿಪ್ರಾಯಗಳನ್ನು ಹೊಂದಿರುವನೋ ವೈಯಕ್ತಿಕವಾಗಿಯೂ ಅದೇ ಅಭಿಪ್ರಾಯವುಳ್ಳವನಾಗಿರುತ್ತಾನೆ. +ಜನರಿಗಾಗಿರುವ ಸರಕಾರ ಜನರಿಂದಾದ ಸರಕಾರವಾಗಿರದಿದ್ದಾಗ ಅದು ಕೆಲವರನ್ನು ಯಜಮಾನರನ್ನಾಗಿ, ಇತರರನ್ನು ಅಧೀನ ಪ್ರಜೆಗಳನ್ನಾಗಿಸುವುದು ನಿಜ. +ಏಕೆಂದರೆ, ಸಂಘಗಳ ಪ್ರತಿಪರಿಣಾಮಗಳು ರೂಪದಲ್ಲಿಯೇ ವ್ಯಕ್ತಿ ತನ್ನ ವ್ಯಕ್ತಿತ್ವದ ಬೆಳವಣಿಗೆಯನ್ನು ಕಾಣಬಲ್ಲ ಮತ್ತು ಅದನ್ನು ಅಳೆಯಬಲ್ಲ. +ವ್ಯಕ್ತಿತ್ವದ ಬೆಳವಣಿಗೆ ಸಮಾಜದ ಸರ್ವೋಚ್ಚ ಗುರಿ. +ಸಾಮಾಜಿಕ ವ್ಯವಸ್ಥೆ ಪ್ರತಿಯೊಬ್ಬನಿಗೂ ಅಪೇಕ್ಷಣೀಯ. +ಸಾಮಾಜಿಕ ಮತ್ತು ತನ್ನ ಸಾಮಥನ್ಯಕ್ಕನುಗುಣವಾದ ಪಾತ್ರವನ್ನು ನಿರ್ವಹಿಸಲು ಮುಂದಾಗಲು ಸ್ವಾತಂತ್ರ್ಯ ಕೊಡಬೇಕು. +ಅದು ವ್ಯಕ್ತಿತ್ವದ ನವೀಕರಣ ಮತ್ತು ಬೆಳವಣಿಗೆಗೆ ಹೊಸ ಸೂತ್ರವಾಗಬೇಕು. +ಆದರೆ ಒಂದು ಸಂಘದ ಸರಕಾರವೂ ಒಂದು ಸಂಘವೇ ಆಗಿದೆ. +ಎಲ್ಲಾ ಪಾತ್ರಗಳನ್ನು ಎಲ್ಲರೂ ನಿರ್ವಹಿಸಲಾರದಂತಿದ್ದಾಗ ಎಂದು ಅನೇಕರ ಹಿತಾಸಕ್ತಿಗಳ ವೆಚ್ಚದಲ್ಲಿ ಕೆಲವೇ ಜನರ ವ್ಯಕ್ತಿತ್ವವನ್ನು ಬೆಳೆಸುವ ಸಂಭವವಿರುತ್ತದೆ. +ಪ್ರಜಾಪ್ರಭುತ್ವದ ಹಿತದೃಷ್ಟಿಯಿಂದ ಇಂತಹ ಪರಿಸ್ಥಿತಿಯನ್ನು ಬೆಳೆಸುವ ಸಂಭವವಿರುತ್ತದೆ. +ಪ್ರಜಾಪ್ರಭುತ್ವದ ಹಿತದೃಷ್ಟಿಯಿಂದ ಇಂತಹ ಪರಿಸ್ಥಿತಿಯನ್ನು ತಪ್ಪಿಸಬೇಕಾಗುತ್ತದೆ. +ನಿರ್ದಿಷ್ಟವಾಗಿ ಹೇಳಬೇಕೆಂದರೆ ಜನ ಕೇವಲ ಮತದಾರರಾಗಿದ್ದರೇ ಸಾಲದು. +ಶಾಸಕರಾಗುವುದೂ ಅವಶ್ಯ. +ಇಲ್ಲದೇ ಹೋದರೆ ಶಾಸಕರಾಗುವವರು ಕೇವಲ ಮತದಾರರಾಗಿಯೇ ಉಳಿದವರ ಯಜಮಾನರಾಗುತ್ತಾರೆ. +ಈ ನಿರರ್ಥಕವಾದ ಪದ್ಧತಿಯನ್ನು ನಿವಾರಿಸಲು ಅಸಮರ್ಥವಾದ ಪ್ರಾದೇಶಿಕ ಮತಕ್ಷೇತ್ರಗಳನ್ನು ವಿರೋಧಿಸಬೇಕಾದುದು ಸರಿ. +ಮತದಾರರು ಅಭ್ಯರ್ಥಿಗಳ ವ್ಯಕ್ತಿತ್ವವನ್ನು ನೋಡದೇ ಅವರ ಕಾರ್ಯಕ್ರಮಗಳ ಆಧಾರದ ಮೇಲೆಯೇ ಮತ ನೀಡುವರೆಂಬ ತಪ್ಪುಗಹಿಕೆ ಇದಕ್ಕೆ ಕಾರಣ. +ವಸ್ತುಸ್ಥಿತಿ ಎಂದರೆ, ಮತದಾರರು ಮತದಾರರಾಗುವುದಕ್ಕಿಂತ ಮೊದಲು ಪ್ರಾಥಮಿಕವಾಗಿ ಒಂದು ಗುಂಪು ಅಥವಾ ಬಣದ ಸದಸ್ಯರಾಗಿರುತ್ತಾರೆ. +ಅವರಿಗೆ ಅಭ್ಯರ್ಥಿಯ ವ್ಯಕ್ತಿತ್ವ ಮಹತ್ವದ್ದಾಗಿರುತ್ತದೆ. +ಒಂದೇ ರೀತಿಯ ಹಿತವನ್ನು ಪ್ರತಿನಿಧಿಸುವ ಇಬ್ಬರುಅಭ್ಯರ್ಥಿಗಳ ನಡುವೆ ಸಹಜವಾಗಿಯೇ ಅವರು ತಮ್ಮ ಬಣಕ್ಕೆ ಸೇರದ ಅಭ್ಯರ್ಥಿಗಿಂತ ತಮ್ಮ ಬಣಕ್ಕೆ ಸೇರಿದ ಅಭ್ಯರ್ಥಿಗೇ ಪ್ರಾಶಸ್ತ್ಯ ನೀಡುತ್ತಾರೆ. +ಈ ರೀತಿಯ ಪ್ರಾಶಸ್ತ್ಯದ ಪರಿಣಾಮವಾಗಿ ದೊಡ್ಡ ಬಣಕ್ಕೆ ಸೇರಿದ ಮತದಾರರು ಶಾಸಕರಾಗುವ ಉಚ್ಚಮಟ್ಟ ತಲುಪಿದರೆ, ಚಿಕ್ಕ ಬಣದ ಮತದಾರರು ಇದರಲ್ಲಿ ಅವರ ಯಾವ ತಪ್ಪಿಲ್ಲದಿದ್ದಾಗ್ಯೂ ಕೇವಲ ಮತದಾರರೇ ಆಗಿರುವ ಕೆಳಗಿನ ಸ್ಥಾನದಲ್ಲಿ ಉಳಿಯಬೇಕಾಗುತ್ತದೆ. +ಜನತಾ ಸರಕಾರದ ಮೂಲ ಸಮಸ್ಯೆ ಎಂದರೆ ಹಿತಗಳು ಮತ್ತು ಅಭಿಪ್ರಾಯಗಳ ಪ್ರಾತಿನಿಧ್ಯ ವ್ಯಕ್ತಿಗತ ಪ್ರಾತಿನಿಧ್ಯ ಇನ್ನೊಂದು ಸಮಸ್ಯೆ. +ಪ್ರಾದೇಶಿಕ ಮತಕ್ಷೇತ್ರಗಳು ಜನತಾ ಸರಕಾರವನ್ನು ಸ್ಥಾಪಿಸುವಲ್ಲಿ ವಿಫಲವಾಗುತ್ತವೆ. +ಏಕೆಂದರೆ ಅವು ಅಲ್ಪಸಂಖ್ಯಾತ ಬಣಗಳ ಸದಸ್ಯರಿಗೆ ವ್ಯಕ್ತಿಗತ ಪ್ರಾತಿನಿಧ್ಯ ದೊರಕಿಸುವಲ್ಲಿ ವಿಫಲವಾಗಿವೆ. +ಕೆಲವು ಪಂಗಡಗಳ ರಾಜಕೀಯ ಜೀವನದ ವಿರುದ್ಧ ಸಾಮಾಜಿಕ ವಿಭಾಗಗಳು ಹೇಗೆ ಕೆಲಸ ಮಾಡುವುವೆಂಬುದರ ಸರಿಯಾದ ವಿಶ್ಲೇಷಣೆ ಇದಾಗಿದ್ದರೆ, ಈ ಸಮಸ್ಯೆಯನ್ನು ಎದುರಿಸಲು ಅನುಪಾತ ಪ್ರಾತಿನಿಧ್ಯ ಪದ್ಧತಿಗಿಂತ ಕೀಳಾದ ಪದ್ಧತಿ ಇನ್ನೊಂದಿಲ್ಲ. +ಅನುಪಾತ ಪ್ರಾತಿನಿಧ್ಯ ವಿವಿಧ ಅಭಿಪ್ರಾಯಗಳಿಗೆ ಅವುಗಳ ಪ್ರಮಾಣಕ್ಕನು ಗುಣವಾಗಿ ಪ್ರಾತಿನಿಧ್ಯ ನೀಡುವ ಉದ್ದೇಶಹೊಂದಿದೆ. +ಇದು ಮತದಾರರು ಒಬ್ಬ ಅಭ್ಯರ್ಥಿಯ ವಿಚಾರಗಳಿಗೆ ಮತದಾನ ಮಾಡುತ್ತಾರೆಯೇ ಹೊರತು ಅವನ ವೈಯಕ್ತಿಕ ಗುಣಗಳಿಗಲ್ಲ ಎಂಬ ತಪ್ಪು ಗ್ರಹಿಕೆಯ ಪರಿಣಾಮವಾಗಿದೆ. +ಈಗ ನಮ್ಮ ಎದುರಿಗೆ ಇರುವ ಸಮಸ್ಯೆಗೆ ಅನುಪಾತ ಪ್ರಾತಿನಿಧ್ಯ ಪದ್ಧತಿ ಸಮಂಜಸವೆನಿಸುವುದಿಲ್ಲ. +ಆದ್ದರಿಂದ ಈ ಪರಿಸ್ಥಿತಿಯನ್ನು ಎದುರಿಸಲು ಎರಡು ವಿಧಾನಗಳಿವೆ. +ವ್ಯಕ್ತಿಗತ ಪ್ರಾತಿನಿಧ್ಯ ಪಡೆಯಲಾರದಂತಹ ಅಲ್ಪಸಂಖ್ಯಾತರಿಗೆ ಬಹುಸದಸ್ಯ ಮತಕ್ಷೇತ್ರಗಳಲ್ಲಿ ಸ್ಥಾನಗಳ ಕಾಯ್ದಿರಿಸುವಿಕೆ. + ಇಲ್ಲವೇ ಕೋಮುವಾರು ಚುನಾಯಕ ಸಮುದಾಯಗಳನ್ನು ರಚಿಸುವುದು. +ಇವೆರಡೂ ಉಪಯುಕ್ತವಾಗಿವೆ. +ಮಹಮ್ಮದೀಯರ ಪ್ರಾತಿನಿಧ್ಯಕ್ಕಾಗಿ ಅವರು ಬಹುಸದಸ್ಯ ಕ್ಷೇತ್ರಗಳಲ್ಲಿ ತಮಗಾಗಿ ಕಾಯ್ದಿರಿಸಿದ ಸ್ಥಾನಗಳಿಗಾಗಿ ನಡೆಯುವ ಸಾರ್ವತ್ರಿಕ ಚುನಾವಣೆಗಳಲ್ಲಿ ಭಾಗವಹಿಸುವುದು ಅಪೇಕ್ಷಣೀಯ. +ಹಿಂದೂ ಮತ್ತು ಮಹಮ್ಮದೀಯರನ್ನು ಪ್ರತ್ಯೇಕಿಸುವ ಭಿನ್ನತೆಗಳ ವಕ್ರತೆ ಈಗಾಗಲೇ ಅತ್ಯಂತ ತೀಕ್ಷ್ಣವಾಗಿದ್ದು, ಕೋಮುವಾರು ಚುನಾವಣೆಗಳಿಂದ ಅದು ಇನ್ನೂ ಹರಿತಗೊಳ್ಳಬಹುದೆಂದು ಹೇಳಬಹುದು. +ಆದರೆ ಮಹಮ್ಮದೀಯರ ಸಂಬಂಧವಾಗಿ ಕೋಮುವಾರು ಚುನಾವಣೆ ಈಗಾಗಲೇ ಇತ್ಯರ್ಥವಾದ ಸಂಗತಿ. + ಅದರಲ್ಲಿ ಯಾವುದೇ ಬದಲಾವಣೆ ಎಷ್ಟೇ ಲಾಭದಾಯಕವೆನಿಸಿದರೂ ಅದು ಸಾಧ್ಯವಿಲ್ಲ. +ಆದರೆ ಈ ತರ್ಕವು ಸಾಮಾನ್ಯವಾಗಿ ಹಿಂದೂಗಳ ಪ್ರಾತಿನಿಧ್ಯದ ಸಂಬಂಧವಾಗಿದ್ದು, ಅದರಲ್ಲಿಯೂ ಅಸ್ಪೃಶ್ಯ ಹಿಂದೂಗಳ ಸಂಬಂಧವಾಗಿದೆ. + ಹಿಂದೂಗಳ ಪ್ರಾತಿನಿಧ್ಯದ ಮೇಲಣ ಚರ್ಜೆಯನ್ನು ಈಗ ವಿವಿಧ ಹಿಂದೂ ಬಣಗಳಲ್ಲಿ ಕಾಣುತ್ತಿರುವ ಒಂದು ಹೊಸ ಪ್ರಜ್ಞೆಯನ್ನು ತಿಳಿಸುವ ಹೇಳಿಕೆಯ ಮುಖಾಂತರ ಆರಂಭಿಸಬಹುದು. +ಆದೇನೆಂದರೆ:“ಒಂದು ಸಮುದಾಯವು ರಕ್ಷಣೆಯ ಆವಶ್ಯಕತೆ ಇರುವ ತನ್ನ ಪ್ರತ್ಯೇಕ ಹಿತಗಳ ಆಧಾರದ ಮೇಲೆ ಪ್ರಾತಿನಿಧ್ಯ ಕೇಳಬಹುದು. +ಭಾರತದಲ್ಲಿ ಇಂತಹ ಮೂರು ವಿಧದ ಹಿತಾಸಕ್ತಿಗಳು ಮಾತ್ರ ಇವೆ. +ಅವು ಭಾರತದ ಬಲಶಾಲಿ, ಸ್ವಭಾವಸಿದ್ಧ ಧಾರ್ಮಿಕ ವೈರದಿಂದ ಉದ್ಭವಿಸಿರಬಹುದು . +ಒಂದು ಪಂಗಡವು ಶೈಕ್ಷಣಿಕವಾಗಿ ಹಿಂದುಳಿದಿರುವುದರಿಂದ ಉಂಟಾಗಿರಬಹುದು. +ಸಾಮಾಜಿಕ-ಧಾರ್ಮಿಕ ನ್ಯೂನತೆ ಅಥವಾ ದೌರ್ಬಲ್ಯಗಳಿಗೊಳಗಾದ ಪಂಗಡಗಳಿಂದ ಹುಟ್ಟಿರಬಹುದು. +ನಮ್ಮ ಚರ್ಚೆಯನ್ನು ಹಿಂದೂಸಮುದಾಯಗಳಿಗೇ ಸೀಮಿತಗೊಳಿಸಿದರೆ, ಕೆಲವು ಸಮುದಾಯಗಳು ಅತ್ಯಂತ ಹಿಂದುಳಿದವುಗಳಾಗಿದ್ದು,ಅವುಗಳು ಗಂಭೀರವಾದ ಸಾಮಾಜಿಕ ದಬ್ಬಾಳಿಕೆಗೊಳಗಾಗಿವೆ. +ಅಸ್ಪೃಶ್ಯ ವರ್ಗಗಳು ತಮ್ಮ ಕುಂದುಕೊರತೆಗಳ ನಿವಾರಣೆಗಾಗಿ ಹೋರಾಡುವಂತಹ ತಮ್ಮ ಪ್ರತಿನಿಧಿಗಳನ್ನೇ ಶಾಸನಸಭೆಯಲ್ಲಿ ಹೊಂದಿರಬೇಕು. +ಬ್ರಾಹ್ಮಣ ಪುರೋಹಿತ ಸಾಮಾಜಿಕ ಮತ್ತು ಬೌದ್ಧಿಕ ಪ್ರಾಬಲ್ಯಕ್ಕೆ ಒಳಗಾದ ಬ್ರಾಹ್ಮಣೇತರರು ತಮಗಾಗಿ ಪ್ರತ್ಯೇಕ ಪ್ರಾತಿನಿಧ್ಯ ಕೇಳುವುದು ಉಚಿತವೆನಿಸುವುದು. +ಹಿಂದೂಗಳ ಈ ಹೊಸ ಪ್ರಜ್ಞೆ ಅಸ್ಪೃಶ್ಯರ ಪ್ರತ್ಯೇಕ ಹಿತಾಸಕ್ತಿಗಳನ್ನು ಒಪ್ಪಿಕೊಳ್ಳುವಾಗ, ಸ್ಪೃಶ್ಯಹಿಂದೂಗಳು ಪತ್ಯೇಕ ಗುಂಪಿಗೆ ಸೇರಿದವರೆಂಬುದನ್ನು ಒಪ್ಪಿಕೊಳ್ಳುವುದಿಲ್ಲವೆಂಬುದು ಇದರಿಂದ ಸ್ಪಷ್ಟವಾಗುತ್ತದೆ. +ಈ ಹೊಸ ಪ್ರಜ್ಞೆ ಸ್ಪೃಶ್ಯರ ಹಿಂದೂಗಳನ್ನು ತಮ್ಮದೇ ಆದ ಪ್ರಶ್ಯೇಕ ಹಿತಾಸಕ್ತಿಗಳುಳ್ಳ ಬ್ರಾಹ್ಮಣರು ಮತ್ತು ಬ್ರಾಹ್ಮಣೇತರರು ಎಂದು ಎರಡು ಗುಂಪುಗಳಾಗಿ ವಿಭಜಿಸುತ್ತದೆ. +ಮೂರು ಪಂಗಡಗಳಲ್ಲಿ ವಿಭಜಿಸಲಾಗಿರುವ ಹಿಂದೂಗಳಿಗಾಗಿ ಸಮ್ಮಿಶ್ರ ಚುನಾಯಕ ಸಮುದಾಯಗಳಲ್ಲಿ ಪ್ರತ್ಯೇಕ ಚುನಾಯಕ ಸಮುದಾಯಗಳು ಅಥವಾ ಕಾಯ್ದಿಟ್ಟ ಸ್ಥಳಗಳನ್ನು ಬೇಡಲಾಗಿದೆ. +ಅಸ್ಪೃಶ್ಯರ ಪ್ರಾತಿನಿಧ್ಯದ ಸಮಸ್ಯೆಯನ್ನು ಪರಿಶೀಲಿಸುವ ಮೊದಲು, ಬ್ರಾಹ್ಮಣರು ಮತ್ತು ಬ್ರಾಹ್ಮಣೇತರರ ಬಗ್ಗೆ ಸ್ವಲ್ಪ ಹೇಳಬೇಕಾಗಿದೆ. +“ಬ್ರಾಹ್ಮಣೇತರರು ಶೈಕ್ಷಣಿಕ ವಿಷಯಗಳಲ್ಲಿ ಹಿಂದುಳಿದಿದ್ದಾರೆ” ಎಂಬುದು ಅವರ ವಿಶೇಷಾಸಕ್ತಿ ಎಂದು ಹೇಳಲು ಬರುವುದಿಲ್ಲ. +ಇದು ಶೈಕ್ಷಣಿಕವಾಗಿ ಹಿಂದುಳಿದಂತಹ ಬ್ರಾಹ್ಮಣರೂ ಸೇರಿದಂತೆ ಎಲ್ಲರಿಗೂ ಅನ್ವಯಿಸುವ ವಿಷಯ. +"ಬ್ರಾಹ್ಮಣರ ಬೌದ್ಧಿಕ ಮತ್ತು ಸಾಮಾಜಿಕ ಪ್ರಾಬಲ್ಯ" ಕೇವಲ ಬಾಹ್ಮಣೇತರರನ್ನು ಬಾಧಿಸುವ ವಿಷಯವಲ್ಲ. +ಅದು ಎಲ್ಲರನ್ನೂ ಬಾಧಿಸುವುದರಿಂದ ಅದು ಎಲ್ಲರಿಗೂ ಸಂಬಂಧಿಸಿದ ವಿಷಯವಾಗಿದೆ. +ರಕ್ಷಣೆಯಾಗಬೇಕಾಗಿರುವ ಬ್ರಾಹ್ಮಣೇತರರ ವಿಶೇಷ ಹಿತಾಸಕ್ತಿಗಳು ಯಾವುವು? +ಬ್ರಾಹ್ಮಣೇತರರಿಗಾಗಿಯೇ ಪ್ರತ್ಯೇಕ ಪ್ರಾತಿನಿಧ್ಯದ ಬೇಡಿಕೆ ವಿಫಲವಾಗುತ್ತದೆ. +ಏಕೆಂದರೆ ಅವರಿಗೆ ಎಲ್ಲ ಬ್ರಾಹ್ಮಣೇತರರು ಒಂದೇ ವಿಧವಾದ ಸಾಮಾನ್ಯ ಆಸಕ್ತಿಗಳನ್ನು ಹೊಂದಿದ್ದಾರೆ ಎಂದು ಸಿದ್ಧಪಡಿಸುವುದು ಸಾಧ್ಯವಿಲ್ಲ. +ಆದರೆ ಅವರು ವೈಯಕ್ತಿಕ ಅಥವಾ ವ್ಯಕ್ತಿಗತ ಪ್ರಾತಿನಿಧ್ಯ ಪಡೆದುಕೊಳ್ಳುವುದರಲ್ಲಿ ವಿಫಲರಾಗಿದ್ದಾರೆಯೇ? +ಇದನ್ನು ಅಂಕಿಸಂಖ್ಯೆಗಳ ಆಧಾರದ ಮೇಲೆ ಸಮರ್ಪಕವಾಗಿ ವಿವರಿಸಬಹುದು. +ಈ ರೀತಿ ನೋಡಿದಾಗ ಈ ಅಂಕಿ ಅಂಶಗಳಿಂದ ಮಾಡಬಹುದಾದ ತೀರ್ಮಾನಗಳು ಅತಿ ಮುಖ್ಯವೆನಿಸುವುವು. +(೧) ಬ್ರಾಹ್ಮಣರಿಗೆ ಏಕರೂಪದ ಚುನಾವಣೆಯ ಹಕ್ಕನ್ನು ಕೊಟ್ಟಿದ್ದಾದರೆ, ಅವರು ಸಂಖ್ಯೆಯಲ್ಲಿ ಅಲ್ಪ ಸಂಖ್ಯಾತರಾಗಿದ್ದರೂ ಸಮೂಹ-೨ ರಲ್ಲಿ ಕಾಣಿಸಿರುವಂತೆ, ಅವರು ಒಟ್ಟು ಮತದಾರರ ಸಂಖ್ಯೆಯಲ್ಲಿ ಬಹುಮತದವರಾಗುತ್ತಾರೆ. +(೨) ಏಕರೂಪ ಚುನಾವಣಾ ಹಕ್ಕನ್ನು ಹೊಂದಿದ್ದರೂ, ಕೂಡ ಬ್ರಾಹ್ಮಣೇತರ ಜಾತಿಗಳವರಾದ ಲಿಂಗಾಯತರು ಮತ್ತು ಮರಾಠರು ಮತದಾರರ ಪಟ್ಟಿಯಲ್ಲೇನೋ ಕಾಣಿಸಿಕೊಳ್ಳದೇ ಇರುವುದಿಲ್ಲ. +ಆದರೂ ಬ್ರಾಹ್ಮಣ ಮತದಾರರು ಮತ್ತು ಅವರ ಜನಸಂಖ್ಯೆಯ ಪ್ರಮಾಣಕ್ಕೆ ಹೋಲಿಸಿದಾಗ ಬ್ರಾಹ್ಮಣೇತರ ಮತದಾರರು ಮತ್ತು ಅವರ ಜನಸಂಖ್ಯೆಗಿರುವ ಪ್ರಮಾಣ ಕಡಿಮೆಯಾಗಿರುತ್ತದೆ. +ಬ್ರಾಹ್ಮಣರು ಮತ್ತು ಅವರ ಮತದಾರರ ಪ್ರಮಾಣ ಮಿತಿ ಮೀರಿದ್ದಾಗಿದೆ. +ಇದನ್ನು ಅವರ ಬಗೆಗೆ ವಿಶ್ವಾಸದಿಂದಾಗಲೀ ಅಥವಾ ಅವರದೇ ಸಂಖ್ಯೆಯ ಆಧಾರದ ಮೇಲೆ ಸಮರ್ಥಿಸಿಕೊಳ್ಳಲು ಬರುವುದಿಲ್ಲ. +ಲಿಂಗಾಯತರು ತಮ್ಮ ಮತದಾರರು ಪ್ರಮಾಣ ಕಡಿಮೆ ಇದೆ ಎಂದು ದೂರುವುದು ನ್ಯಾಯಸಮೃತವಾದರೂ ಅವರು ವ್ಯಕ್ತಿಗತ ಪ್ರಾತಿನಿಧ್ಯ ಪಡೆಯವಲ್ಲಿ ಯಶಸ್ವಿಯಾಗುವರು. +ಬ್ರಾಹ್ಮಣರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿದ್ದರೂ, ಮರಾಠರ ಮತದಾರರ ಪ್ರಮಾಣ ಕಡಿಮೆಯಾಗಿರುವುದಲ್ಲದೆ ಮತದಾರರ ಪಟ್ಟಿಯಲ್ಲಿಯೂ ಅವರಿಗೆ ತೊಂದರೆಯುಂಟಾಗಿ, ವ್ಯಕ್ತಿಗಳ ಪ್ರಾತಿನಿಧ್ಯ ಪಡೆಯುವುದರಲ್ಲಿ ವಿಫಲರಾಗುವ ಸಾಧ್ಯತೆ ಇದೆ. +ಈ ತರ್ಕದನುಸಾರ ಮರಾಠರಿಗಾಗಿ ವಿಶೇಷ ವ್ಯವಸ್ಥೆಯ ಅವಶ್ಯಕತೆಯನ್ನು ಒಪ್ಪಿಕೊಳ್ಳಲೇ ಬೇಕಾಗುತ್ತದೆ. + ಈ ವಿಶೇಷ ವ್ಯವಸ್ಥೆ ಯಾವ ರೀತಿಯದಾಗಿರಬೇಕೆಂಬುದೇ ಪ್ರಶ್ನೆ ನನ್ನ ಅಭಿಪ್ರಾಯದಲ್ಲಿ ಈ ವ್ಯವಸ್ಥೆ ಕಾಯ್ದಿರಿಸಿದ ಸ್ಥಾನಗಳಿಂದ ಕೂಡಿದ ಪ್ರತ್ಯೇಕ ಚುನಾಯಕ ಸಮೂಹಗಳ ಬದಲು ಕಡಿಮೆ ನಿರ್ಬಂಧಗಳಿಂದ ಕೂಡಿದ ಮತದಾನದ ಹಕ್ಕನ್ನು ನಿಡುವುದು ಅಪೇಕ್ಷಣೀಯ. +ಬ್ರಾಹ್ಮಣೇತರ ಮತದಾನದ ಹಕ್ಕು ಬ್ರಾಹ್ಮಣರಿಗಿಂತ ಕಡಿಮೆ ನಿರ್ಬಂಧಗಳಿಂದ ಕೂಡಿದುದಾಗಿರಬೇಕು. +ಈ ವ್ಯವಸ್ಥೆಯಿಂದ ಮತದಾರರ ಪಟ್ಟಿಯಲ್ಲಿ ಬ್ರಾಹ್ಮಣೇತರರ ಸ್ಥಾನ ಸುಧಾರಿಸುವುದಲ್ಲದೆ. +ಸಂಪೂರ್ಣ ಅನುಗ್ರಹಿತವಾದ ಬ್ರಾಹ್ಮಣರ ಸ್ಥಾನ ಸಮೀಕೃತಗೊಳ್ಳುವುದು. +ಎಲ್ಲರ ಹಿತದೃಷ್ಟಿಯಿಂದ ಬ್ರಾಹ್ಮಣರು ರಾಜಕೀಯದಲ್ಲಿ ಇದುವರೆಗೆ ನಿರ್ವಹಿಸುತ್ತಿದ್ದ ಪ್ರಮುಖ ಪಾತ್ರವನ್ನು ನಿರ್ವಹಿಸಬಾರದು. +ಅವರು ದೇಶದ ಸಾಮಾಜಿಕ ಜೀವನದ ಮೇಲೆ ವಿನಾಶಕಾರಿ ಪ್ರಭಾವ ಬೀರಿದ್ದಾರೆ. +ಆದ್ದರಿಂದ ಎಲ್ಲ ಹಿತ ದೃಷ್ಟಿಯಿಂದ ರಾಜಕೀಯದಲ್ಲಿ ಅವರ ಈ ವಿನಾಶಕಾರಿ ಪ್ರಭಾವ ಅತ್ಯಂತ ಕನಿಷ್ಠ ಮಟ್ಟದಲ್ಲಿರಬೇಕು. +ಬ್ರಾಹ್ಮಣ ಅತ್ಯಂತ ಬಹಿಷ್ಕಾರಕನಾಗಿರುವುದರಿಂದ ಅವನು ಅತ್ಯಂತ ಸಮಾಜಘಾತುಕ ವ್ಯಕ್ತಿ ಕೂಡ. +ಘಟನಾತ್ಮಕ ಸುಧಾರಣೆಗಳ ವರದಿಯ ಕೃತ್ಯಗಳೂ ಕೂಡ ಸೀಮಿತ ಅಥವಾ ಏಕರೂಪ ಚುನಾವಣಾ ಪದ್ಧತಿಯ ಪರವಾಗಿಲ್ಲ. +ಅವರೇ ಹೇಳಿರುವಂತೆ, “ಚುನಾವಣಾ ವ್ಯವಸ್ಥೆಯಲ್ಲಿನ ಇತಿಮಿತಿಗಳನ್ನು ವ್ಯಾವಹಾರಿಕ ಅಡಚಣೆಗಳ ಆಧಾರದ ಮೇಲೆ ನಿರ್ಣಯಿಸಬೇಕೇ ಹೊರತು ಪೂರ್ವ ನಿರ್ಧಾರಿತ ಶಿಕ್ಷಣದಮಟ್ಟ ಅಥವಾ ಆದಾಯದ ಪ್ರಮಾಣ ಮುಂತಾದ ಅರ್ಹತೆಗಳ ಮೇಲಲ್ಲ. +ಜನಸಂಖ್ಯೆ ಮತ್ತು ಸಂಪತ್ತು ಅಸಮಾನವಾಗಿ ಹಂಚಿಹೋಗಿರುವುದರಿಂದ ಮತದಾನದ ಅರ್ಹತೆಗಳನ್ನು ನಿರ್ಣಯಿಸುವಾಗ ವಿಭಿನ್ನ ಪ್ರಾಂತ್ಯಗಳ ನಡುವೆಯಲ್ಲದೇ ಒಂದೇ ಪ್ರಾಂತ್ಯದ ಬೇರೆ ಬೇರೆ ಭಾಗಗಳ ನಡೆವೆಯೂ ವಿಭಿನ್ನ ಆಧಾರಗಳನ್ನು ಅನುಸರಿಸುವುದು ಅವಶ್ಯವಾಗಬಹುದು. +ಇದೂ ಅಲ್ಲದೆ, ಮತದಾನದ ಅರ್ಹತೆಯನ್ನೂ ನಿಗದಿಗೊಳಿಸುವಾಗ ನಾವು ವಿಭಿನ್ನ ಪ್ರಾಂತ್ಯಗಳ ನಡೆವೆಯಲ್ಲದೇ ಮತ್ತು ಒಂದು ಪ್ರಾಂತ್ಯದೊಳಗೆ ವಿಭಿನ್ನ ಭಾಗಗಳಿಗಲ್ಲದೇ, ಒಂದೇ ಪ್ರಾಂತ್ಯದ ವಿಭಿನ್ನ ಜಾತಿಗಳಿಗೂ ವಿಭಿನ್ನ ಆಧಾರಗಳನ್ನನುಸರಿಸಬೇಕು. +ಹೀಗೆ ವ್ಯತ್ಯಾಸ ಮಾಡದೇ ಹೋದರೆ ಶ್ರೀಮಂತ ಮತ್ತು ಸುಶಿಕ್ಷಿತ ಜನಸಂಖ್ಯೆಯುಳ್ಳ ಚಿಕ್ಕ ಜಾತಿಗಳು ಬಡ ಮತ್ತು ಅಶಿಕ್ಷಿತ ಜನಸಂಖ್ಯೆಯುಳ್ಳ ದೊಡ್ಡ ಜಾತಿಗಳಿಗಿಂತ ಹೆಚ್ಚು ಮತಗಳನ್ನು ಪಡೆಯುವುವು. +ಚುನಾವಣಾ ಪದ್ಧತಿಯಲ್ಲಿ ಏಕರೂಪತೆಯನ್ನು ತೊಡೆದುಹಾಕಬೇಕು. +ಇದರ ಬಹು ಮುಖ್ಯ ಪರಿಣಾಮವೆಂದರೆ ಈಗ ಕೆಲ ಬ್ರಾಹ್ಮಣೇತರ ಕೋಮಿನವರು ಆಗ್ರಹಪಡಿಸುತ್ತಿರುವ ಕೋಮುವಾರು ಪ್ರಾತಿನಿಧ್ಯ ಅಥವಾ ಸ್ಥಳ ಕಾಯ್ದಿರುಸುವಿಕೆಯನ್ನು ತಪ್ಪಿಸುವುದು. +ಸಾಮಾನ್ಯವಾಗಿ ಅಸ್ಪೃಶ್ಯರು ಕನಿಕರಪಡುವಂತಹವರಾಗಿದ್ದು, ಅವರಿಗೆ ರಕ್ಷಿಸಿಕೊಳ್ಳುವಂತಹ ಯಾವ ಹಿತಾಸಕ್ತಿಗಳೂ ಇಲ್ಲವೆಂಬ ಕಾರಣ ಎಲ್ಲಾ ರಾಜಕೀಯ ವ್ಯವಸ್ಥೆಯಲ್ಲಿ ಅವರನ್ನು ಕಡೆಗಣಿಸಲಾಗಿದೆ. +ಆದಾಗ್ಯೂ ಅವರ ಹಿತಾಸಕ್ತಿಗಳು ಅತ್ಯಧಿಕವಾಗಿದೆ. +ಅವರು ಮುಟ್ಟುಗೋಲು ಹಾಕಿಕೊಳ್ಳುವುದರಿಂದ ರಕ್ಷಿಸಿಕೊಳ್ಳಬೇಕಾದ ದೊಡ್ಡ ಆಸ್ತಿಯನ್ನು ಹೊಂದಿದ್ದಾರೆ ಎಂದು ಅರ್ಥವಲ್ಲ. +ಆದರೆ ಅವರ ವ್ಯಕ್ತಿತ್ವವನ್ನೇ ದುರ್ಬಲತೆಗಳು ಅಸ್ಪಶ್ಯರ ಮನುಷ್ಯತ್ವವನ್ನೇ ಹಾಳುಮಾಡಿವೆಯಾದ್ದರಿಂದ ಅಪಾಯಕ್ಕೊಳಗಾಗಿರುವ ಅವರ ಹಿತಾಸಕ್ತಿಗಳು ಇಡೀ ಮಾನವ ಕುಲದ ಹಿತಾಸಕ್ತಿಗಳಾಗಿವೆ. +ಈ ಪ್ರಾಥಮಿಕ ಹಿತಾಸಕ್ತಿಯ ಎದುರು ಆಸ್ತಿಯ ಹಿತಾರ್ಥಗಳು ಏನೂ ಅಲ್ಲ. +ಯಾರ ಅಸ್ತಿತ್ವ ಇತರರನ್ನವಲಂಬಿಸಿದೆಯೋ ಅವರೇ ಗುಲಾಮರು ಎಂದು ಪ್ಲೇಟೋ ನೀಡಿದ ಗುಲಾಮರ ವ್ಯಾಖ್ಯೆಯನ್ನು ಒಪ್ಪಿಕೊಳ್ಳುವುದಾದರೆ, ಅಸ್ಪೃಶ್ಯರು ನಿಜವಾಗಿಯೂ ಗುಲಾಮರು. +ತಮ್ಮ ಕೀಳು ಪರಿಸ್ಥಿತಿಯ ಬಗ್ಗೆ ಎಂದೂ ದೂರಲಾರದಷ್ಟು ಅವರು ಸಮಾಜಾಧೀನರಾಗಿದ್ದಾರೆ. +ಒಬ್ಬ ಮನುಷ್ಯ ಇನ್ನೊಬ್ಬ ಮನುಷ್ಯನಿಗೆ ಕೊಡುವ ಸಾಮಾನ್ಯ ಗೌರವವನ್ನು ತಮಗೆ ತೋರಿಸುವಂತೆ ಇತರ ಕೋಮಿನವರನ್ನು ಒತ್ತಾಯಿಸುವ ಕನಸನ್ನು ಕಾಣುವುದೂ ಅಸ್ಪಶ್ಯನಿಗೆ ಸಾಧ್ಯವಿಲ್ಲ. +ತಮ್ಮ ಹುಟ್ಟು ತಮ್ಮ ವಿಧಿಪ್ರಾಪ್ತಿ ಎಂಬ ನಂಬುಗೆ ಅವರ ಮನಸ್ಸಿನಲ್ಲಿ ಎಷ್ಟರ ಮಟ್ಟಿಗೆ ಬೇರೂರಿದೆ ಎಂದರೆ, ತಮ್ಮ ಅದೃಷ್ಟವನ್ನು ತೊಡೆದು ಹಾಕಬಹುದೆಂಬ ವಿಚಾರ ಅವರಿಗೆ ಎಂದೂ ಹೊಳೆಯುವುದಿಲ್ಲ. +ಮನುಷ್ಯ ದೇಹ ಒಂದೇ ಅಥವಾ ತಮ್ಮ ಬಗ್ಗೆ ಇತರರ ವರ್ತನೆಗಿಂತ ಉತ್ತಮ ವರ್ತನೆಯನ್ನು ನಿರೀಕ್ಷಿಸುವುದು ತಮ್ಮ ಹಕ್ಕು ಎಂಬ ಅರಿವನ್ನು ಅವರಿಗೆ ಯಾರೂ ಮಾಡಿಕೊಡಲಾರರು. +ಅಸ್ಪೃಶ್ಯರ ಕುರಿತು ತೋರಲಾಗುತ್ತಿರುವ ವರ್ತನೆಯ ನಿಖರವಾದ ವಿವರಣೆ ಕೊಡುವುದು ಸಾಧ್ಯವಿಲ್ಲ. +"ಅಸ್ಪೃಶ್ಯ" ಪದವು ಅವರು ಅನುಭವಿಸುತ್ತಿರುವ ಕಷ್ಟ ಮತ್ತು ಜಾಡ್ಯಗಳ ಸಂಕ್ಷಿಪ್ತ ವಿವರಣೆಯಾಗಿದೆ. +ಅಸ್ಪೃಶ್ಯತೆಯಿಂದ ಅವರ ವ್ಯಕ್ತಿತ್ವದ ಬೆಳವಣಿಗೆ ಕುಂಠಿತವಾಗಿದೆಯಲ್ಲದೇ ಅವರ ಪ್ರಾಪಂಜಿಕ ಸುಖಕ್ಕೂ ಅಡ್ಡಿಯಾಗಿದೆ. +ಇದರಿಂದ ಅವರು ನಾಗರಿಕ ಹಕ್ಕುಗಳಿಂದಲೂ ವಂಚಿತರಾಗಿದ್ದಾರೆ. +ಉದಾಹರಣೆಗಾಗಿ,ಕೊಂಕಣದಲ್ಲಿ ಅಸ್ಪೃಶ್ಯರು ಸಾರ್ವಜನಿಕ ರಸ್ತೆಗಳನ್ನು ಉಪಯೋಗಿಸದಂತೆ ನಿಷೇಧಿಸಲಾಗಿದೆ. +ಉಚ್ಚಜಾತಿಯವರಾದರೂ ಎದುರಿಗೆ ಬಂದರೆ, ಅಸ್ಪಶ್ಯನು ಅಲ್ಲಿಂದ ತನ್ನ ನೆರಳು ಉಚ್ಚ ಜಾತಿಯವನ ಮೇಲೆ ಬೀಳದಷ್ಟು ದೂರ ಓಡಿಹೋಗಿ ನಿಲ್ಲಬೇಕು. +ಅಸ್ಪೃಶ್ಯ ಪೌರನೂ ಅಲ್ಲ. +ಪೌರತ್ವವೆಂದರೆ ಹಕ್ಕುಗಳ ಸಮುದಾಯ. +ಆ ಹಕ್ಕುಗಳು ಯಾವುವೆಂದರೆ (೧) ವೈಯಕ್ತಿಕ ಸ್ವಾತಂತ್ರ್ಯ.,(೨) ವೈಯಕ್ತಿಕ ಕ ರಕ್ಷಣೆ ಅಥವಾ ಭದ್ರತೆ, (೩) ಖಾಸಗಿ ಆಸ್ತಿಯ ಹಕ್ಕು, (೪) ಕಾನೂನಿನ ಸಮಾನತೆ, (೫) ಆತ್ಮಸಾಕ್ಷಿಯ ಸ್ವಾತಂತ್ರ್ಯ, (೬) ಅಭಿಪ್ರಾಯ ಮತ್ತು ವಾಕ್‌ ಸ್ವಾತಂತ್ರ್ಯ, (೭) ಒಂದು ಕಡೆ ಸಭೆ ಸೇರುವ ಸ್ವಾತಂತ್ರ್ಯ,(೮) ಒಂದು ದೇಶದ ಸರಕಾರದಲ್ಲಿ ಪ್ರಾತಿನಿಧ್ಯದ ಹಕ್ಕು, ಮತ್ತು (೯) ರಾಜ್ಯದಲ್ಲಿ ಅಧಿಕಾರ ಸ್ಥಾನಹೊಂದುವ ಹಕ್ಕು. +ಬ್ರಿಟಿಷ್‌ ಸರಕಾರವು ತಾತ್ವಿಕವಾಗಿಯಾದರೂ ಈ ಹಕ್ಕುಗಳನ್ನು ತನ್ನ ಭಾರತೀಯ ಪ್ರಜೆಗಳಿಗೆ ಕ್ರಮೇಣವಾಗಿ ಕೊಟ್ಟಿದೆ ಎಂದು ಹೇಳಬಹುದು. +ಪ್ರಾತಿನಿಧ್ಯದ ಹಕ್ಕು ಮತ್ತು ರಾಜ್ಯದ ಅಧಿಕಾರ ಸ್ಥಾನದ ಹಕ್ಕು ಪೌರತ್ವದ ಪ್ರಮುಖ ಹಕ್ಕುಗಳು. +ಆದರೆ ತಮ್ಮ ಅಸ್ಪಶ್ಯತೆಯಿಂದಾಗಿ ಅಸ್ಪೃಶ್ಯರು ಈ ಹಕ್ಕುಗಳಿಂದ ವಂಚಿತರಾಗಿದ್ದಾರೆ. +ಕೆಲವು ಸ್ಥಳಗಳಲ್ಲಿ ಅವರಿಗೆ ವೈಯಕ್ತಿಕ ಸ್ವಾತಂತ್ರ್ಯದ ಹಕ್ಕು ಮತ್ತು ವೈಯಕ್ತಿಕ ರಕ್ಷಣೆಯ ಹಕ್ಕು ಕಾನೂನಿನ ಸಮಾನತೆಯ ಹಕ್ಕುಗಳಂತಹ ಸಾಮಾನ್ಯ ಹಕ್ಕುಗಳೂ ಸಹ ಅವರಿಗೆ ದೊರೆಯುವುದಿಲ್ಲ. +ಇವೇ ಅಸ್ಪಶ್ಯರ ಹಿತಾಸಕ್ತಿಗಳು. +ಅಸ್ಪಶ್ಯರನ್ನು ಅಸ್ಪಶ್ಯರೇ ಪ್ರತಿನಿಧಿಸಬೇಕೆಂಬುದು ಯಾರಿಗಾದರೂ ತಿಳಿಯುವ ವಿಷಯ. +ಇತರರೂ ವ್ಯಕ್ತಪಡಿಸಲಾರದಂತಹ ತಮ್ಮದೇ ಆದ ವಿಶಿಷ್ಟ ಹಿತಾಸಕ್ತಿಗಳನ್ನು ಅವರು ಹೊಂದಿದ್ದಾರೆ. +ಮುಕ್ತ ವ್ಯಾಪಾರದ ಆಸಕ್ತಿಯನ್ನು ಬ್ರಾಹ್ಮಣ,ಮಹಮ್ಮದೀಯ ಅಥವಾ ಮರಾಠಾ ಚೆನ್ನಾಗಿಯೇ ಪ್ರತಿನಿಧಿಸಬಲ್ಲ. +ಆದರೆ ಇವರಾರೂ ಅಸ್ಪಶ್ಯರಹಿತಾರ್ಥಗಳ ಬಗ್ಗೆ ಮಾತನಾಡಲಾರರು. +ಏಕೆಂದರೆ, ಇವರು ಅಸ್ಪಶ್ಯರಲ್ಲ. +ಅಸ್ಪೃಶ್ಯರು ಮಾತ್ರ ವ್ಯಕ್ತಪಡಿಸಬಹುದಾದಂತಹ ಒಂದು ವಿಶಿಷ್ಟ ಹಿತಾಸಕ್ತಿಗಳನ್ನು ಅಸ್ಪೃಶ್ಯರು ಹೊಂದಿದ್ದಾರೆ. +ಆದ್ದರಿಂದ ತಮ್ಮ ಹಿತಾಸಕ್ತಿಗಳನ್ನು ಪ್ರತಿನಿಧಿಸುವಂತಹ ಮತ್ತು ತಮ್ಮ ಕುಂದುಕೊರತೆಗಳನ್ನು ವ್ಯಕ್ತಪಡಿಸುವಂತಹ ಅಸ್ಪೃಶ್ಯರು ಬೇಕೆಂಬುದು ಇದರಿಂದ ಸ್ಪಷ್ಟವಾಗುತ್ತದೆ. +ಮತ್ತು ಎರಡನೆಯದಾಗಿ, ತಮ್ಮ ಕುಂದು ಕೊರತೆಗಳ ನಿವಾರಣೆಗಾಗಿ ಒತ್ತಾಯಪಡಿಸಲು ಪ್ರಬಲರಾಗುವಷ್ಟು ಸಂಖ್ಯೆಯಲ್ಲಿ ಅವರಿರಬೇಕಾಗುತ್ತದೆ. +ಅಸ್ಪೃಶ್ಯರನ್ನು ಸಾಮಾನ್ಯ ಪ್ರಾದೇಶಿಕ ಚುನಾಯಕರ ಮೂಲಕ ಸಾಕಷ್ಟು ಸಂಖ್ಯೆಯಲ್ಲಿ ಶಾಸನಸಭೆಗೆ ಚುನಾಯಿಸಲು ಸಾಧ್ಯವೇ? +ಈಗಾಗಲೇ ನೀಡಲಾಗಿರುವ ಅಂಕಿ ಸಂಖ್ಯೆಗಳನ್ನು ಗಮನಿಸಿದಾಗ ಅಸ್ಪೃಶ್ಯರು ಪ್ರತಿ ಸಾವಿರ ಜನಸಂಖ್ಯೆಯ ೬೯.೪ ರಷ್ಟಿದ್ದರೂ ತಮ್ಮೊಳಗೆ ಒಬ್ಬ ಮತದಾರನನ್ನೂ ಹೊಂದಿಲ್ಲ. +ಇಂತಹ ಪರಿಸ್ಥಿತಿಯಲ್ಲಿ ಸಾಮಾನ್ಯ ಚುನಾಯಕ ಏರ್ಪಾಡಿನಲ್ಲಿ ಶಾಸನಸಭೆಗೆ ಒಬ್ಬ ಪ್ರತಿನಿಧಿಯನ್ನೂ ಆರಿಸಿ ಕಳುಹಿಸುವುದು ಸಾಧ್ಯವಿಲ್ಲ. +ಸವರ್ಣಹಿಂದೂಗಳು ಒಬ್ಬ ಅಸ್ಪೃಶ್ಯ ಅಭ್ಯರ್ಥಿಯ ಪರವಾಗಿ ಮತ ನೀಡುವರೆಂಬ ಆಶೆಯೂ ಅವರಿಗಿಲ್ಲ. +ಧಾರ್ಮಿಕ ಆಧಾರದ ಮೇಲೆ ಮಾಡಲಾದ ಜಾತಿಗಳ ವರ್ಗೀಕರಣ ಅಸ್ಪಶ್ಯರಿಗೆ ಎರಡೂ ರೀತಿಯಲ್ಲಿ ಹಾನಿಕರವೆನಿಸುವುದು; +ಒಂದು ಕಡೆ ಕೆಳವರ್ಗದವರ ಮನಸ್ಸಿನಲ್ಲಿ ಉಚ್ಚ ವರ್ಗದವರ ಬಗ್ಗೆ ಒಲವು ಉಂಟಾದರೆ, ಇನ್ನೊಂದು ಕಡೆ ಉಚ್ಚವರ್ಗದವರ ಮನಸ್ಸಿನಲ್ಲಿ ಕೆಳವರ್ಗದವರ ಬಗ್ಗೆ ತಿರಸ್ಕಾರ ಭಾವನೆ ಬೆಳೆಯುತ್ತದೆ. +ಹೀಗಾಗಿ ಏರುತ್ತಿರುವ ಒಲವು ಮತ್ತು ಇಳಿಯುತ್ತಿರುವ ತಿರಸ್ಕಾರದ ಪ್ರಮಾಣ ಎರಡೂ ರೀತಿಯಲ್ಲಿ ಅಸ್ಪೃಶ್ಯರ ಅಧೋಗತಿಗೆ ಕಾರಣವಾಗುತ್ತದೆ. +ಅಸ್ಪೃಶ್ಯರಿಗೆ ಒಂದೂ ಮತವನ್ನು ನೀಡದೆ ಸ್ಪೃಶ್ಯರು ಈಗಾಗಲೇ ಕ್ಷೀಣವಾಗಿರುವ ಅಸ್ಪೃಶ್ಯರ ಮತಗಳನ್ನು ಪಡೆಯುವುದು ಶತಸಿದ್ಧ. +ಇಂತಹ ಪರಿಸ್ಥಿತಿಯಲ್ಲಿ ಅತ್ಯಂತ ಹೆಚ್ಚಿನ ಹಿತಾಸಕ್ತಿಗಳನ್ನು ಪಣಕ್ಕಿರುವ ಅಸ್ಪೃಶ್ಯರು ಸಾರ್ವತ್ರಿಕ ಪ್ರಾದೇಶಿಕ ಚುನಾಯಕ ವ್ಯವಸ್ಥೆಯಲ್ಲಿ ಅತಿ ಹೆಚ್ಚಿನ ತೊಂದರೆಗೀಡಾಗುತ್ತಾರೆ. +ಅವರಿಗೆ ಮುಕ್ತ ಮಾರ್ಗದೊರಕಿಸಿಕೊಡುವುದಕ್ಕಾಗಿ ಅವರಿಗೆ ಸಾಕಷ್ಟು ಪ್ರಾತಿನಿಧ್ಯ ನೀಡಲು ಅವರಿಗಾಗಿ ವಿಶೇಷ ವ್ಯವಸ್ಥೆ ಮಾಡಲೇಬೇಕಾಗುತ್ತದೆ. +ಆದರೆ ಅಂತಹ ಯಾವುದೇ ವ್ಯವಸ್ಥೆಯನ್ನು ರೂಪಿಸುವಾಗ ಮುಂಬಯಿ ಪ್ರಾಂತ್ಯದಲ್ಲಿ ಸಂವಿಧಾನಾತ್ಮಕ ಸುಧಾರಣೆಗಳು ೨೯೩ಅಸ್ಪೃಶ್ಯರ ಜನಸಂಖ್ಯೆ ಎಷ್ಟಿದೆ ಎಂಬುದನ್ನು ಗಮನಿಸಬೇಕಾಗುತ್ತದೆ. +ಮುಂಬಯಿ ಪ್ರಾಂತ್ಯದ ೧೯೧೧ರ ಜನಗಣತಿ ವರದಿ ಪ್ರಕಾರ "ಅಪರಿಶುದ್ಧತೆಯನ್ನುಂಟು ಮಾಡಿವೆ". +೧೯೧೧ರ ಜನಗಣತಿಯ ಪ್ರಕಾರ ಮುಂಬಯಿ ಪ್ರಾಂತ್ಯದ ಒಟ್ಟು ಜನಸಂಖ್ಯೆ ಬ್ರಿಟಿಷ್‌ಜಿಲ್ಲೆಗಳಲ್ಲಿ ಮಾತ್ರ ೧೯.೬೨೬, ೪೭೭ ಆಗಿದೆ. +ಇವರಲ್ಲಿ ಅಸ್ಪೃಶ್ಯರ ಜನಸಂಖ್ಯೆ ೧,೬೨೭,೯೮೦ ಅಥವಾ ಒಟ್ಟು ಜನಸಂಖ್ಯೆಯ ೮ ಪ್ರತಿಶತ. +ಸದ್ಯಕ್ಕೆ ಮುಂಬಯಿ ವಿದಾನ ಪರಿಷತ್ತಿನಲ್ಲಿ ೧೦೦ ಸದಸ್ಯರಿರುವರು ಎಂದು ಇಟ್ಟುಕೊಂಡರೂ, ಅಸ್ಪಶ್ಯರನ್ನು ಪ್ರತಿನಿಧಿಸಲು ಪರಿಷತ್ತಿನಲ್ಲಿ ೮ ಜನ ಪ್ರತಿನಿಧಿಗಳಿರಬೇಕಾಗುತ್ತದೆ. +ಪ್ರತಿ ೨,೦೦,೦೦೦ ಜನರಿಗೆ ಒಬ್ಬ ಪ್ರತಿನಿಧಿಯಂತೆ ಹಂಚಿದರೂ ಕೂಡ ೨೦ ಮಿಲಿಯ ಜನರಿಗೆ ೧೦೦ಪ್ರತಿನಿಧಿಗಳೆಂಬ ಪ್ರಮಾಣದಲ್ಲಿ ಅಸ್ಪೃಶ್ಯರು ತಮ್ಮನ್ನು ಪ್ರತಿನಿಧಿಸಲು ೮ ಪ್ರತಿನಿಧಿಗಳನ್ನು ಹೊಂದುವ ಹಕ್ಕು ಹೊಂದುವರು. +ಆದರೆ ಮುಂಬಯಿ ಪ್ರಾಂತ್ಯದ ಅಸ್ಪೃಶ್ಯರು ಒಟ್ಟು ೯ ಪ್ರತಿನಿಧಿಗಳನ್ನು ಆರಿಸಲು ಅವಕಾಶ ಮಾಡಿಕೊಡಬಹುದು. +ಒಬ್ಬ ಹೆಚ್ಚಿನ ಪ್ರತಿನಿಧಿಯ ಆಯ್ಕೆಯ ಸಮರ್ಥನೆಯನ್ನು ನಂತರ ಕೊಡಲಾಗುವುದು. +ಅವರಿಗೆ ೯ ಪ್ರತಿನಿಧಿಗಳನ್ನು ಚುನಾಯಿಸುವ ಅವಕಾಶ ನೀಡಿದ ಪಕ್ಷ ಅವರನ್ನು ಚುನಾಯಿಸುವ ಮತಕ್ಷೇತ್ರಗಳು ಈ ರೀತಿ ಇರಬೇಕು. + ಮುಂಬಯಿ ನಗರ ಮತ್ತು ಸಿಂಧ್‌ ಪ್ರಾಂತ್ಯವನ್ನು ಹೊರತುಪಡಿಸಿ, ಪ್ರಾಂತ್ಯದ ಇತರ ಜಿಲ್ಲೆಗಳನ್ನು ಭಾಷಾವಾರು ಆಧಾರದ ಮೇಲೆ ಅಳವಡಿಸಬೇಕು +ಅಸ್ಪೃಶ್ಯ ಮತಕ್ಷೇತ್ರಗಳು ಮತ್ತು ಪ್ರತಿ ಮತಕ್ಷೇತ್ರದಿಂದ ಚುನಾಯಿಸಬೇಕಾದ ಪ್ರತಿನಿಧಿಗಳ ಸಂಖ್ಯೆ ಇಷ್ಟಿರಬೇಕು. +ಹೀಗೆ ಚುನಾಯಿತರಾದ ಈ ಸದಸ್ಯರು ಪ್ರಾಂತ್ಯದ ಅಸ್ಪಶ್ಯರನ್ನು ಚಕ್ರಾಧಿಪತ್ಯದ ಕೇಂದ್ರ ವಿಧಾನಷರಿಷತ್ತಿನಲ್ಲಿ ಪ್ರತಿನಿಧಿಸಲು ತಮ್ಮೊಳಗೇ ಒಬ್ಬ ಪ್ರತಿನಿಧಿಯನ್ನು ಆರಿಸಲು ಒಂದು ಮತಕ್ಷೇತ್ರವಾಗಬೇಕು. +ಅಸ್ಪೃಶ್ಯರ ಜನಸಂಖ್ಯೆಗೆ ೮ ಪ್ರತಿನಿಧಿಗಳು ಹೆಚ್ಚೆನಿಸದಿದ್ದರೂ ಅದು ಅಸ್ಪೃಶ್ಯರ ಮತಗಳ ಬಲದ ದೃಷ್ಟಿಯಿಂದ ಹೆಚ್ಚಾಗಿದೆ ಎಂದು ಆಕ್ಷೇಪಿಸಬಹುದು. +ಅಸ್ಪೃಶ್ಯರು ಒಂದು ಬಡವರ ಸಮುದಾಯ ಮತ್ತು ಒಂದೇ ರೀತಿಯ ಮತದಾನ ಪದ್ಧತಿಯಲ್ಲಿ ಬೇರೆ ಪಂಗಡದವರಿಗಿಂತ ಪ್ರತಿ ಸಾವಿರಕ್ಕೆ ಅವರಲ್ಲಿ ಕಡಿಮೆ ಪ್ರಮಾಣದ ಮತದಾರರಿರುತ್ತಾರೆ ಎಂಬುದೂ ನಿಜವೇ. +ಆದರೆ ಅವರ ವಿಷಯ ಪರಿಸ್ಥಿತಿಯನ್ನು ಒಪ್ಪಿಕೊಂಡಾಗ ಅವರ ಪ್ರತಿನಿಧಿಗಳ ಸಂಖ್ಯೆಯನ್ನು ನಿರ್ಬಂಧಿಸುವ ಬದಲು ಅವರ ಮತದಾರರ ಸಂಖ್ಯೆಯನ್ನುಹೆಚ್ಚಿಸುವುದು ನಮ್ಮ ಗುರಿಯಾಗಬೇಕು. +ಎಂದರೆ ಎಲ್ಲ ಅಸ್ಪಶ್ಯರಿಗಾಗಿ ಮತದಾನದ ಅರ್ಹತೆಗಳನ್ನು ಸಡಿಲಗೊಳಿಸಬೇಕು. +ಮತದಾನ ವ್ಯವಸ್ಥೆ ಹೇಗಿರಬೇಕೆಂಬುದು ಬಹುಮುಖ್ಯ ಪ್ರಶ್ನೆ ಮತದಾನದ ಹಕ್ಕನ್ನು ಯಾರು ಅದನ್ನು ಬುದ್ಧಿವಂತಿಕೆಯಿಂದ ಉಪಯೋಗಿಸಲು ಯೋಗ್ಯರಿರುವರೋ ಅಂತಹವರಿಗೆ ಮಾತ್ರ ಕೋಬೇಕೆಂಬ ಒಂದು ವಾದವಿದೆ. +ಈ ಅಭಿಪ್ರಾಯದ ವಿರುದ್ಧವಾಗಿ ಎಲ್‌.ಟಿ.ಹಾಬ್‌ಹಾಸರ ಮಾತುಗಳಲ್ಲಿ ಹೇಳುವುದಾದರೆ: “ಪ್ರಜಾಪ್ರಭುತ್ವದ ಯಶಸ್ಸು ಮತದಾರರು ತಮಗೆ ನೀಡಲಾದ ಅವಕಾಶಗಳಿಗೆ ಯಾವರೀತಿಯಲ್ಲಿ ಸ್ಪಂದಿಸುವರೆಂಬುದನ್ನು ಅವಲಂಬಿಸಿದೆ ಎಂಬುದು ನಿಜ. +ಅವರ ಅಂತಹ ಪ್ರತಿಕ್ರಿಯೆಗೆ ಅವಕಾಶಗಳನ್ನೂ ಮಾಡಿಕೊಡಬೇಕು. +ಪ್ರಜಾ ಸರಕಾರದಲ್ಲಿ ಪಾಲ್ಗೊಳ್ಳುವುದೂ ಒಂದು ಶಿಕ್ಷಣವೇ. + ಮತದಾನದ ಹಕ್ಕು ಅಂತಹ ಆಸಕ್ತಿಯನ್ನು ಜಾಗೃತಗೊಳಿಸಲು ಉತ್ತೇಜಕವೆನಿಸುವುದು. +ಮತದಾನ ಒಂದೇ ಶಾಂತಚಿತ್ತ ನಾಗರಿಕನನ್ನು ಚೀರಾಡುವ ಮತ್ತು ತೆರೆಮರೆಯ ವ್ಯಕ್ತಿಗಳಿಂದ ಮುಕ್ತಗೊಳಿಸಬಲ್ಲದು. +ಸದ್ಯದ ಪರಿಸ್ಥಿತಿಯಲ್ಲಿ ಜನರಲ್ಲಿ ಕಂಡುಬರುತ್ತಿರುವ ನಿರಾಸಕ್ತಿಯ ಒಂದೇ ಕಾರಣದಿಂದ ಜವಾಬ್ದಾರಿ ಸರಕಾರವನ್ನು ನೀಡುವುದನ್ನಾಗಲಿ ಅಥವಾ ಮತದಾನದ ಹಕ್ಕನ್ನು ಪರಿಮಿತ ಅಥವಾ ನಿರ್ಬಂಧಗೊಳಿಸುವುದು ಸರಿಯಲ್ಲ”. + ಮತದಾನವೇ ಒಂದು ಶಿಕ್ಷಣ ಮತ್ತು ಅಸಮಾನವಾಗಿ ಹಂಚಿಕೆಯಾದ ಸಂಪತ್ತಿರುವ ಗುಂಪುಗಳಿವೆ. +ಮಾತ್ರವಲ್ಲ, ಈ ಗುಂಪುಗಳಲ್ಲಿ ಒಮ್ಮತ ರೂಪುಗೊಂಡಿಲ್ಲ ಎಂಬ ಅಂಶಗಳನ್ನು ಗಣನೆಗೆತೆಗೆದುಕೊಂಡು ಈ ವರದಿಯ ಕರ್ತೃಗಳು ಏಕರೂಪದ ವ್ಯವಸ್ಥೆಯನ್ನು ಪುರಸ್ಕರಿಸಲಾಗುವುದಿಲ್ಲ ಎಂದು ಹೇಳಿರುವುದು ಸರಿ. +ಆದರೆ ಅಸ್ಪೃಶ್ಯರ ವಿಷಯದಲ್ಲಿ ಅವರ ಪ್ರತಿನಿಧಿಗಳ ಸಂಖ್ಯೆಯನ್ನು ಕಡಿಮೆಗೊಳಿಸಲು ಎಷ್ಟು ಕಡಿಮೆ ಕಾರಣಗಳಿವೆಯೋ ಅಷ್ಟೇ ಹೆಚ್ಚು ಕಾರಣಗಳು ಅವರ ಮತದಾರರ ಸಂಖ್ಯೆಯನ್ನು ಹೆಚ್ಚಿಸಲು ಇವೆ. +ಒಂದು ಗೊತ್ತಾದ ಮತದಾನ ವ್ಯವಸ್ಥೆಯಲ್ಲಿ ಅಸ್ಪೃಶ್ಯ ಮತದಾರರು ಪ್ರಬಲರಾಗದಿರುವುದು ಅವರ ತಪ್ಪಲ್ಲ. +ಅವರ ವ್ಯಕ್ತಿತ್ವಕ್ಕೆ ಅಂಟಿಕೊಂಡಿರುವ ಅಸ್ಪಶ್ಯತೆಯೇ ಅವರ ನೈತಿಕ ಮತ್ತು ದೈಹಿಕ ಅಭಿವೃದ್ಧಿಗೆ ಅಡ್ಡಿಯಾಗಿದೆ. +ವಾಣಿಜ್ಯ, ಉದ್ದಿಮೆ ಅಥವಾ ಸರಕಾರಿ ಸೇವೆ ಇವು ಸಂಪತ್ತನ್ನು ಗಳಿಸುವ ಮೂಲ ಸಾಧನಗಳು. +ತಮ್ಮ ಅಸ್ಪಶ್ಯತೆಯಿಂದಾಗಿ ಅಸ್ಪೃಶ್ಯರು ಈ ಯಾವುದೇ ವೃತ್ತಿಯನ್ನು ಕೈಕೊಳ್ಳಲಾರರು. +ಒಬ್ಬ ಅಸ್ಪೃಶ್ಯ ವ್ಯಾಪಾರಿಯಿಂದ ಯಾವ ಹಿಂದೂವೂ ಕೊಳ್ಳುವುದಿಲ್ಲ. +ಅಸ್ಪಶ್ಯನಾದವನು ಯಾವುದೇ ಲಾಭದಾಯಕ ಕಾಯಕದಲ್ಲಿ ತೊಡಗಲಾರ. +ಈಸ್ಟ್‌ಇಂಡಿಯಾ ಕಂಪೆನಿಯ ದಿನಗಳಿಂದಲೂ ಸೈನಿಕ ಸೇವೆ ಅಸ್ಪೃಶ್ಯನ ಏಕಾಧಿಪತ್ಯವಾಗಿತ್ತು. +ಅವರು ಸೈನ್ಯದಲ್ಲಿ ಎಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಭರ್ತಿಯಾಗಿದ್ದರೆಂದರೆ,ಮಾರ್ಕ್ವಿಸ್‌ ಟ್ವೀಡಲ್‌ಡೇಲ್‌ ೧೮೫೯ರಲ್ಲಿ ಭಾರತೀಯ ಸೈನಿಕ ಆಯೋಗಕ್ಕೆ ತಾನು ಸಲ್ಲಿಸಿದ ಟಿಪ್ಪಣಿಯಲ್ಲಿ ಈ ರೀತಿ ಬರೆದಿದ್ದನು: “ಕೀಳು ಜಾತಿಯ ಜನರ ಸಹಾಯದಿಂದ ಭಾರತವನ್ನು ಗೆಲ್ಲಲಾಗಿತ್ತು ಎಂಬ ಅಂಶವನ್ನು ಎಂದೂ ಮರೆಯಬಾರದು”. +ಆದರೆ ಸಿಪಾಯಿ ದಂಗೆಯ ನಂತರ ಬ್ರಿಟಿಷರು ಮರಾಠರಿಂದ ತಮ್ಮ ಸೈನಿಕರನ್ನು ಭರ್ತಿಮಾಡಿಕೊಳ್ಳಲು ಸಾಧ್ಯವಾದ ಮೇಲೆ ಮುಂಬಯಿ ಸೈನ್ಯದ ಮೂಲ ಶಕ್ತಿಯಾಗಿದ್ದ ಕೀಳು ಜಾತಿಯ ಜನರ ಪರಿಸ್ಥಿತಿ ಚಿಂತಾಜನಕವಾಯಿತು. +ಮರಾಠರು ಕೀಳುಜಾತಿಯವರಿಗಿಂತ ಉತ್ತಮ ಸೈನಿಕರಾಗಿದ್ದರೆಂಬ ಕಾರಣದಿಂದಲ್ಲ. +ಆದರೆ ಮರಾಠರ ಧಾರ್ಮಿಕ ಭಾವನೆಗಳು ಅವರ ಕೀಳು ಜಾತಿಯ ಅಧಿಕಾರಿಗಳ ಕೈಕೆಳಗೆ ಕೆಲಸ ಮಾಡಲು ಅಡ್ಡಿಯಾಗಿದ್ದವು. +ಇವರ ಅಭಿಪ್ರಾಯ ಎಷ್ಟು ಪೂರ್ವಕಲ್ಪಿತವಾಗಿತ್ತೆಂದರೆ ಜಾತಿ ಭಾವನೆಗಳನ್ನು ಹೊಂದಿರದ ಬ್ರಿಟಿಷರೂ ಕೂಡ ಅಸ್ಪಶ್ಯರ ವರ್ಗಗಳಿಂದ ಭರ್ತಿ ಮಾಡಿಕೊಳ್ಳುವುದನ್ನು ನಿಲ್ಲಿಸಬೇಕಾಯಿತು. +ಇದೇ ರೀತಿ ಪೊಲೀಸ್‌ ಸೇವೆಯಲ್ಲಿಯೂ ಅಸ್ಪೃಶ್ಯರ ಭರ್ತಿಯನ್ನು ನಿರಾಕರಿಸಲಾಯಿತು. +ಅನೇಕ ಸರಕಾರಿ ಕಚೇರಿಗಳಲ್ಲಿ ಅಸ್ಪೃಶ್ಯನಿಗೆ ಸ್ಥಾನ ದೊರಕಿಸಿಕೊಳ್ಳುವುದು ಅಸಾಧ್ಯ ಕಾರ್ಖಾನೆಗಳಲ್ಲಿಯೂ ಸಹ ತಾರತಮ್ಯ ಮಾಡಲಾಯಿತು. +ಅನೇಕ ಅಸ್ಪಶ್ಯರು ವೃತ್ತಿಯಲ್ಲಿ ನೇಕಾರರಾಗಿದ್ದರೂ ಕೂಡ ಹತ್ತಿಗಿರಣಿಗಳಲ್ಲಿ ಅವರನ್ನು ನೇಯ್ಗೆ ವಿಭಾಗದಲ್ಲಿ ಸೇರಿಸಿಕೊಳ್ಳುತ್ತಿರಲಿಲ್ಲ. +ಮುಂಬಯಿ ನಗರಸಭೆಯ ಒಂದು ಶಾಲೆಯಲ್ಲಿ ಜರುಗಿದ ಒಂದು ಘಟನೆಯನ್ನು ಈ ಸಂದರ್ಭದಲ್ಲಿ ಉದಾಹರಿಸಬಹುದು. +ಭಾರತದಲ್ಲಿ ಇತರ ಯಾವುದೇ ನಗರಸಭೆಗಿಂತಲೂ ಹೆಚ್ಚು ಸ್ವಾತಂತ್ರ್ಯ ಹೊಂದಿರುವ ನಗರಸಭೆಯಾದ ಮುಂಬಯಿಯಂತಹ ಅತ್ಯಂತ ಸರ್ವಸಹಿಷ್ಣು ಮತ್ತು ದೊಡ್ಡ ನಗರದಲ್ಲಿ ಎರಡು ಪ್ರತ್ಯೇಕ ವಿಧದ ಶಾಲೆಗಳಿವೆ. ಸ್ಪೃಶ್ಯರ ಮಕ್ಕಳಿಗೆ ಒಂದು ಬಗೆಯ ಶಾಲೆಗಳು ಮತ್ತು ಅಸ್ಪೃಶ್ಯರ ಮಕ್ಕಳಿಗೆ ಇನ್ನೊಂದು ಬಗೆಯ ಶಾಲೆಗಳು. +ಇದು ಗಮನಿಸಲೇಬೇಕಾದಂತಹ ಪ್ರಮುಖ ಅಂಶವಾಗಿದೆ. +ಶಾಲೆಗಳನ್ನು ವರ್ಗೀಕರಿಸಿದಂತೆಯೇ ಶಿಕ್ಷಕರನ್ನೂ ಸಹ ಸ್ಪೃಶ್ಯ ಮತ್ತು ಅಸ್ಪೃಶ್ಯ ಶಿಕ್ಷಕರೆಂದು ವರ್ಗೀಕರಿಸಲಾಗಿದೆ. +ಅಸ್ಪೃಶ್ಯ ವರ್ಗದ ಶಿಕ್ಷಕರು ಸಾಕಷ್ಟು ಸಂಖ್ಯೆಯಲ್ಲಿ ದೊರಕದಿರುವ ಕಾರಣ ಕೆಲವು ಅಸ್ಪೃಶ್ಯರ ಶಾಲೆಗಳಲ್ಲಿ ಸ್ಪೃಶ್ಯ ಶಿಕ್ಷಕರು ಕೆಲಸ ಮಾಡುತ್ತಿದ್ದಾರೆ. +ಇನ್ನೂ ಆಘಾತಕರ ವಿಷಯವೆಂದರೆ ಅಸ್ಪೃಶ್ಯರ ಶಾಲೆಗಳ ಸೇವೆಯಲ್ಲಿ ಹೆಚ್ಚಿನ ಶ್ರೇಣಿಯ ಶಿಕ್ಷಕರ ಜಾಗಗಳು ಖಾಲಿ ಇದ್ದರೆ ಶ್ರೇಣಿಯಲ್ಲಿ ಸ್ಪೃಶ್ಯ ಶಿಕ್ಷಕರನ್ನು ಹೇರಲಾಗುತ್ತದೆ. +ಏಕೆಂದರೆ, ಅಸ್ಪಶ್ಯ ಶಿಕ್ಷಕರು ಸಾಕಷ್ಟು ಸಂಖ್ಯೆಯಲ್ಲಿ ದೊರಕದೇ ಇದ್ದು ಉನ್ನತ ಶ್ರೇಣಿಯ ಸ್ಥಾನದಲ್ಲಿ ಶಿಕ್ಷಕರು ಸ್ಥಾನಗಳು ಖಾಲಿ ಇದ್ದೇ ಇರುತ್ತವೆ. +ಆದರೆ ಅದೇ ರೀತಿ ಸ್ಪೃಶ್ಯರ ಶಾಲೆಗಳ ಸೇವೆಯಲ್ಲಿ ಉನ್ನತ ಶ್ರೇಣಿಯ ಸ್ಥಾನಗಳಲ್ಲಿ ಅಸ್ಪೃಶ್ಯ ಶಿಕ್ಷಕರನ್ನು ಹೇರಲಾಗುವುದಿಲ್ಲ. +ಅಸ್ಪಶ್ಯ ಶಿಕ್ಷಕನು ಅಸ್ಪೃಶ್ಯರ ಶಾಲೆಯಲ್ಲಿಯೇ ಉನ್ನತ ಶ್ರೇಣಿಯ ಸ್ಥಾನ ಖಾಲಿಯಾಗುವವರೆಗೂ ಕಾಯಬೇಕಾಗುತ್ತದೆ. +ಇದು ಹಿಂದೂ ಸಾಮಾಜಿಕ ನೈನಿಕತೆ. +ಇಂತಹ ಸನ್ನಿವೇಶದಲ್ಲಿ,ಅಸ್ಪೃಶ್ಯರು ಬಡತನದಿಂದ ಬಳಲುತ್ತಿರುವಾಗ, ಈ ಸಮಿತಿಯು, ಅಸ್ಪೃಶ್ಯ ಮತದಾರರ ಪಟ್ಟಿ ಚಿಕ್ಕದಾಗಿದೆ ಎಂದು ಮಾತ್ರಕ್ಕೆ ಅವರಿಗೆ ಪ್ರಾತಿನಿಧ್ಯವನ್ನು ನಿರಾಕರಿಸದೆ, ಅವರ ದಾರಿದ್ರ್ಯಕ್ಕೆ ಕಾರಣವಾದಂತಹ ಸಾಮಾಜಿಕ ಪಿಡುಗುಗಳನ್ನು ನಿವಾರಿಸಿಕೊಳ್ಳಲು ಸಾಧ್ಯವಾಗುವಷ್ಟು ಪ್ರಮಾಣದಲ್ಲಿ ಅಸ್ಪಶ್ಯರಿಗೆ ಪ್ರಾತಿನಿಧ್ಯ ನೀಡುವ ವಿಧಾನವನ್ನು ಕಂಡುಹಿಡಿಯುವುದೆಂದು ಆಶಿಸಲಾಗಿದೆ. +ಸದ್ಯದ ಪರಿಸ್ಥಿತಿಯಲ್ಲಿ ಸಂಪತ್ತನ್ನು ಗಳಿಸುವ ಎಲ್ಲಾ ಮಾರ್ಗಗಳು ಮುಚ್ಚಿಹೋಗಿರುವಾಗ ಅಸ್ಪಶ್ಶರಿಂದ ಹೆಚ್ಚಿನ ಪ್ರಮಾಣದ ಆಸ್ತಿಯ ಅರ್ಹತೆಯನ್ನು ನಿರೀಕ್ಷಿಸುವುದು ವಿವೇಕವೆನಿಸುವುದಿಲ್ಲ. +ಅವರಿಗೆ ಆಸ್ತಿ ಸಂಗ್ರಹಣೆಯ ಎಲ್ಲಾ ಮಾರ್ಗಗಳನ್ನು ನಿರಾಕರಿಸಿ ಅವರಿಗೆ ಆಸ್ತಿ ಅರ್ಹತೆಯನ್ನು ನಿಗದಿಪಡಿಸುವುದು ಗಾಯದ ಮೇಲೆ ಬರೆ ಎಳೆದಂತೆ. +ಅಸ್ಪಶ್ಯ ಮತದಾರರ ಸಂಖ್ಯೆಯನ್ನು ಸಾಕಷ್ಟು ಹೆಚ್ಚಿಸಲು ಯಾವ ರೀತಿಯ ಮತದಾನ ಪದ್ಧತಿ ಇರಬೇಕು ಮತ್ತು ಅದು ಯಾವ ಮಟ್ಟದಲ್ಲಿರಬೇಕು ? +ಅಂಕಿ ಸಂಖ್ಯೆಗಳು ಲಭ್ಯವಿಲ್ಲದುದರಿಂದ ನಾನು ಈ ವಿಷಯವನ್ನು ಸಮಿತಿಯ ನಿರ್ಣಯಕ್ಕೆ ಬಿಟ್ಟಿದ್ದೇನೆ. +ಸಾಧ್ಯವಾದಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಅಸ್ಪೃಶ್ಯರಿಗೆ ರಾಜಕೀಯ ಜೀವನದಲ್ಲಿ ತರಬೇತಿ ನೀಡುವ ಉದ್ದೇಶದಿಂದ ಅವರಿಗೆ ಮತದಾನದ ಅರ್ಹತೆಯನ್ನು ಸಾಕಷ್ಟು ಕಡಿಮೆ ಮಟ್ಟದಲ್ಲಿ ನಿಗದಿಪಡಿಸುವುದು ವಿಹಿತ. +ಅವರು ತಮ್ಮತನದ ಅರಿವೇ ಇಲ್ಲದಷ್ಟು ಹೀನಾಯ ಪರಿಸ್ಥಿತಿಯಲ್ಲಿದ್ದಾರೆ. +ನಾನು ಆಗ್ರಹ ಪೂರ್ವಕವಾಗಿ ಹೇಳಬಯಸುವುದು ಇಷ್ಟೇ. +ಅಸ್ಪೃಶ್ಯರ ಪ್ರಾತಿನಿಧ್ಯದ ಪ್ರಮಾಣವನ್ನು ನಿಗದಿಮಾಡುವಾಗ ಈ ಸಮಿತಿಯು ಅಸ್ಪಶ್ಯರು ಯಾವುದಕ್ಕಾಗಿ ಹೋರಾಡುತ್ತಿದ್ದಾರೋ ಅದನ್ನೂ ಗಮನದಲ್ಲಿಟ್ಟುಕೊಂಡು ಮತದಾರರ ಪ್ರಮಾಣಕ್ಕನುಗುಣವಾಗಿ ಪ್ರತಿನಿಧಿಗಳ ಸಂಖ್ಯೆಯನ್ನು ನಿಗದಿಪಡಿಸದೆ,ಆಗಬೇಕಾದ ಪ್ರತಿನಿಧಿಗಳ ಸಂಖ್ಯೆಯನ್ನು ಗಮನದಲ್ಲಿಟ್ಟುಕೊಂಡು ಮತದಾರರ ಸಂಖ್ಯೆಯನ್ನು ವಿಸ್ತರಿಸಬೇಕು. +ಈ ಸಂದರ್ಭದಲ್ಲಿ ಲಾರ್ಡ್‌ ಮೋರ್ಲೆಯವರು ಹೇಳಿರುವರೆಂದು ಹೇಳಲಾದ ಮಾತುಗಳನ್ನು ಸಮಿತಿಯ ಗಮನಕ್ಕೆ ತರುವುದು ಅಪ್ರಸ್ತುತವಾಗಲಾರದು. +ಅವರು ಹೇಳಿದ್ದೇನೆಂದರೆ:“ವಿಧಾನಮಂಡಲಗಳಲ್ಲಿ ನಿಜವಾದ ಸಾಮಾಜಿಕ ಶಕ್ತಿಗಳು ಮತ್ತು ಸಂಬಂಧಪಟ್ಟ ಕೋಮಿನವರ ಆಶೆ ಆಕಾಂಕ್ಷೆಗಳು ಹಾಗೂ ಅವರ ಅವಶ್ಯಕತೆಗಳಲ್ಲಿ ಸಮತೋಲನವನ್ನುಂಟು ಮಾಡುವಂತಹ ಶಕ್ತಿಗಳ ಪ್ರಾತಿನಿಧಿಕ ಸಂಸ್ಥೆಗಳಾಗಿರಬೇಕು. +ಇದನ್ನು ಗಣಿತ, ಬೀಜಗಣಿತ, ಜಾಮಿತಿ ಅಥವಾ ತರ್ಕಶಾಸ್ತ್ರಗಳಿಂದ ಸಾಧಿಸಲಾಗುವುದಿಲ್ಲ. +ಆದರೆ ಇದು ವಿಶಾಲದೃಷ್ಟಿಯ ಮೂಲಕ ಸಾಧ್ಯ ಪ್ರಾತಿನಿಧ್ಯದ ಪ್ರಮಾಣವನ್ನು ನಿಗದಿಗೊಳಿಸುವಲ್ಲಿ ಸಂಖ್ಯೆ ಮೂಲಾಧಾರವಾಗಿದ್ದರೂ, ಕೆಲವು ಮಾರ್ಪಡಿಸುವಂತಹ ಅಂಶಗಳು ಪ್ರತಿನಿಧಿಗಳ ಸಂಖ್ಯೆಯನ್ನು ನಿರ್ಧರಿಸುವಲ್ಲಿ ಪ್ರಭಾವ ಬೀರಬಹುದೆಂಬುದರಲ್ಲಿ ಅವರಿಗೆ ಅಭ್ಯಂತರವಿರಲಿಲ್ಲ.” + ಆದ್ದರಿಂದ ಮುಂಬಯಿ ಪ್ರಾಂತ್ಯದ ಅಸ್ಪೃಶ್ಯರು ಮೇಲೆ ಹೇಳಿದ ರೀತಿಯಲ್ಲಿ ಘಟಿಸಲಾದ ಮತಕ್ಷೇತ್ರಗಳಿಂದ ೯ ಸದಸ್ಯರು ಒಂದುಮತ ಕ್ಷೇತ್ರವಾಗಿ ತಮ್ಮೊಳಗಿಂದ ಸಾಮ್ರಾಜ್ಯದ ವಿಧಾನ ಮಂಡಲಿಯಲ್ಲಿ ಅಸ್ಪಶ್ಯರನ್ನು ಪ್ರತಿನಿಧಿಸುವ ಒಬ್ಬ ಸದಸ್ಯನನ್ನು ಚುನಾಯಿಸಬೇಕು. +ಉಳಿದ ೮ ಸದಸ್ಯರು ಮುಂಬಯಿ ವಿಧಾನ ಮಂಡಲಿಯಲ್ಲಿ ಅಸ್ಪಶ್ಯರನ್ನು ಪ್ರತಿನಿಧಿಸಬೇಕು. +ಅಸ್ಪೃಶ್ಯರ ಪ್ರಾತಿನಿಧ್ಯಕ್ಕೆ ಕೋಮುವಾರು ಪ್ರಾತಿನಿಧ್ಯವೂ ಅಲ್ಲದೆ ಇನ್ನೂ ಇತರ ವಿಧಾನಗಳೂಇವೆ. +ಈ ವಿಧಾನಗಳ ಬಗೆಗೆ ವಿಶ್ಲೇಷಿಸದೆ ಈ ಹೇಳಿಕೆಯನ್ನು ಮುಕ್ತಾಯಗೊಳಿಸುವುದು ಸರಿಯಲ್ಲ. +ಕಾಂಗ್ರೆಸ್‌ ಪಕ್ಷವು ಮಹಮ್ಮದೀಯರನ್ನು ಹೊರತುಪಡಿಸಿ ಇತರ ಎಲ್ಲರಿಗೂ ಕೋಮುವಾರು ಪ್ರಾತಿನಿಧ್ಯವನ್ನೂ ಅಲ್ಲದೇ ನಾಮಕರಣ ಪದ್ಧತಿಯ ವ್ಯಾಪಕ ಬಳಕೆಯನ್ನೂ ನಿರಾಕರಿಸಿದೆ. +ಹೀಗಿರುವಾಗ,ಅಸ್ಪೃಶ್ಯರಿಗೆ ಉಳಿದಿರುವ ಒಂದೇ ಮಾರ್ಗವೆಂದರೆ ಸಾಮಾನ್ಯ ಚುನಾಯಕ ಸಮುದಾಯದಿಂದ ಸ್ಪರ್ಧಿಸುವುದು. +ಸ್ಪರ್ಧಿಸಲು ಎಲ್ಲರೂ ಸಮಾನ ಸ್ಪತಂತ್ರರಾಗಿದ್ದಾಗ ಮಾತ್ರ ಇದು ಸಾಧ್ಯ ಅಸ್ಪಶ್ಯರನ್ನು ಶಾಸ್ತ್ರಗಳ ಮೂಲಕ ಸ್ಪೃಶ್ಯರ ಪರ ಮತ್ತು ಸ್ಪಶ್ಯರನ್ನು ಅಸ್ಪಶ್ಯ-ವಿರೋಧಿಗಳೆಂದರು ಅವರ ಮನಸ್ಸನ್ನು ತಿದ್ದಿ ನಂತರ ಇಬ್ಬರೂ ಮಕ್ತ ಚುನಾವಣೆಯಲ್ಲಿ ಸ್ಪರ್ಧಿಸಬೇಕೆಂದು ಹೇಳುವುದು ಬುದ್ಧಿಭ್ರಮಣೆಯದ್ಯೋತಕ ಅಥವಾ ಕಪಟದಿಂದ ಕೂಡಿದುದಾಗಿದೆ. +ಆದರೆ ಕಾಂಗ್ರೆಸ್‌ ಪಕ್ಷವು ತನ್ನ ಧೋರಣೆಯಲ್ಲಿ ರಾಜಕೀಯ ತೀವ್ರಗಾಮಿಯಾಗಿದ್ದರೂ ಸಾಮಾಜಿಕ ಸಂಪ್ರದಾಯವಾದಿಗಳಿಂದ ಕೂಡಿದ ಸಂಸ್ಥೆ ಎಂಬುದನ್ನುಎಂದೂ ಮರೆಯಲಾರದು. +ಸಾಮಾಜಿಕ ಮತ್ತು ರಾಜಕೀಯ ಪರಸ್ಪರ ಸಂಬಂಧವಿಲ್ಲದ ವಿಷಯಗಳು ಎಂಬುದು ಅವರ ಮಹಾಮಂತ್ರವಾಗಿದೆ. +ಅವರ ದೃಷ್ಟಿಯಲ್ಲಿ ರಾಜಕೀಯ ಮತ್ತು ಸಾಮಾಜಿಕ ವಿಷಯಗಳು ಎರಡು ಪ್ರತ್ಯೇಕ ಉಡುಪುಗಳಾಗಿದ್ದು ಅವುಗಳನ್ನು ಹವಾಮಾನಕ್ಕನುಗುಣವಾಗಿ ಧರಿಸಬಹುದಾಗಿದೆ. +ಇಂತಹ ಮಾನಸಿಕ ಪ್ರವೃತ್ತಿ ಹಾಸ್ಯಾಸ್ಪದ. +ಏಕೆಂದರೆ, ಇದು ಒಪ್ಪಿಕೊಳ್ಳವುದಾಕ್ಕಾಗಲೀ ಅಥವಾ ತಿರಸ್ಕರಿಸುವುದಕ್ಕಾಗಲೀ ಗಂಭೀರವಾಗಿ ಪರಿಗಣಿಸಲು ಯೋಗ್ಯವಾಗಿಲ್ಲ. +ಅದನ್ನು ನಂಬುವುದು ಲಾಭಕರವಾಗಿರುವುದರಿಂದ ಅದು ಸುಲಭವಾಗಿ ಅವಸಾನ ಹೊಂದಲಾರದು. +ಈ ಅಸಹಜ ಪೂರ್ವೋಕ್ತಿಯಿಂದ ಆರಂಭವಾದ ಕಾಂಗ್ರೆಸ್‌ ಚಟುವಟಿಕೆಗಳು ಸಹಜವೇ ಎನಿಸಿವೆ. +ಕಾಂಗೆಸ್‌ ಅಧಿವೇಶನಗಳಲ್ಲಿ ಭಾಗವಹಿಸುವವರು ಅದೇ ಚಪ್ಪರದಲ್ಲಿ ಜರುಗುವ ರಾಷ್ಟೀಯ ಸಾಮಾಜಿಕ ಕಾಂಗೆಸ್ಸಿನ ಅಧಿವೇಶನದಲ್ಲಿ ಭಾಗವಹಿಸಲು ಆಸ್ಥೆ ವಹಿಸುವುದಿಲ್ಲ. +ಕಾಂಗ್ರೆಸ್‌ ಅಧಿವೇಶನದಲ್ಲಿ ಭಾಗವಹಿಸುವವರು ಒಮ್ಮೆ ಕಾಂಗ್ರೆಸ್ಸಿನ ಪೆಂಡಾಲನ್ನು ಸಾಮಾಜಿಕ ಕಾಂಗ್ಲೆಸ್ಸಿನ ಅಧಿವೇಶನಕ್ಕಾಗಿ ಬಳಸುವ ವಿರುದ್ಧ ನಮ್ಮ ಪ್ರಾಂತ್ಯದ ಬುದ್ಧಿಜೀವಿಗಳ ನೆಲೆಗಟ್ಟಸಿದ ಪುಣೆ ನಗರದಲ್ಲಿ ಪ್ರಚಾರ ಕೈಕೊಳ್ಳಲಾಗಿತ್ತಲ್ಲದೆ ಒಮ್ಮೆ ನಿರಾಕರಿಸಲೂ ಆಗಿತ್ತು. +ಕಾಂಗೆಸ್‌ ಪಕ್ಷವು ಆ ರಾಷ್ಟೀಯ ಅಥವಾ ರಾಷ್ಟ್ರ ವಿರೋಧಿ ಸಂಸ್ಥೆಯಾಗಿರುವುದರಿಂದ ಕೋಮುವಾರು ಚುನಾಯಕ ಪದ್ಧತಿಯ ಬಗ್ಗೆ ಅವರ ಅಭಿಪ್ರಾಯಗಳು ಗಂಭೀರ ಪರಿಶೀಲನೆಗೆ ಅರ್ಹವಾಗಿಲ್ಲ. +ಸಾಮ್ಯವಾದಿಗಳು ತಮ್ಮ ಪ್ರತ್ಯೇಕ ಸಭೆಯಲ್ಲಿ ಹೆಚ್ಚಾಗಿ ದಯೆ ತೋರಿದ್ದಾರೆ. +ಅವರು ಹಿಂದುಳಿದ ಕೋಮುಗಳಿಗಾಗಿ ಬಹುಸದಸ್ಯ ಮತಕ್ಷೇತ್ರಗಳಲ್ಲಿ ಸ್ಥಾನಗಳನ್ನು ಕಾಯ್ದಿರಿಸಬೇಕೆಂದು ಸೂಚಿಸಿದ್ದಾರೆ. +ಅಸ್ಪೃಶ್ಯರಿಗಾಗಿ ಎಷ್ಟು ಸ್ಥಾನಗಳಿರಬೇಕೆಂದು ಅವರು ಹೇಳಿಲ್ಲ. +ಆದರೆ ಅನೇಕರು ತಿಳುವಳಿಕೆಯುಳ್ಳ ಸೌಮ್ಯವಾಗಿರುವ ಮತ್ತು ಸಹಾನುಭೂತಿಯುಳ್ಳವರು ಸಾಮಾನ್ಯವಾಗಿ ವಿಧಾನ ಮಂಡಳಿಯಲ್ಲಿ ಒಬ್ಬ ಅಥವಾ ಇಬ್ಬರು ಅಸ್ಪಶ್ಯರ ಪ್ರತಿನಿಧಿಗಳಿದ್ದರೆ ಸಾಕೆಂಬ ಅಭಿಪ್ರಾಯ ಹೊಂದಿದ್ದಾರೆ. +ಈ ಸಭ್ಯರು ತಳೆದ ಸಹಾನುಭೂತಿಗಾಗಿ ಕೃತಜ್ಞತೆಗೆ ಪಾತ್ರರಾಗಿದ್ದಾಗ್ಯೂ ಅವರ ವಿಚಾರವನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. +ಒಬ್ಬ ಅಥವಾ ಇಬ್ಬರು ಅಸ್ಪೃಶ್ಯರ ಪ್ರತಿನಿಧಿಗಳು ಇರುವುದರೆಂದರೆ ಯಾರೂ ಇಲ್ಲದಂತೆಯೇ. +ವಿಧಾನಮಂಡಲವೊಂದು ಹಳೆಯ ವಿಲಕ್ಷಣ ಅಂಗಡಿಯಲ್ಲ. +ಅದು ಸಮಾಜದ ಭವಿಷ್ಯವನ್ನು ನಿರ್ಮಿಸುವ ಅಥವಾ ಹಾಳುಮಾಡುವ ಮಂಡಲಿ. +ಒಬ್ಬ ಅಥವಾ ಇಬ್ಬರು ಅಸ್ಪಶ್ಯರ ಪ್ರತಿನಿಧಿಗಳು ತಮ್ಮ ಸ್ಥಿತಿಯನ್ನು ಸುಧಾರಿಸಿಕೊಳ್ಳಲು ಅವಶ್ಯವಾದ ಕಾನೂನುಗಳನ್ನು ಹೇಗೆ ಮಾಡಿಕೊಳ್ಳಲು ಸಾಧ್ಯ ಅಥವಾ ತಮ್ಮ ಸ್ಥಿತಿಯನ್ನು ಹಾಳುಮಾಡುವಂತಹ ಕಾನೂನುಗಳನ್ನು ಹೇಗೆ ತಡೆಯಬಲ್ಲರು? + ಸ್ಪಷ್ಟವಾಗಿ ಹೇಳುವುದಾದರೆ, ಉಚ್ಚಸವರ್ಣ ಹಿಂದೂಗಳಿಗೆ ನೀಡಲಾದ ರಾಜಕೀಯ ಅಧಿಕಾರದಿಂದ ಅಸ್ಪಶ್ಯರು ಹೆಚ್ಚು ಒಳಿತನ್ನು ನಿರೀಕ್ಷಿಸಲಾರರು. +ಅವರು ತಮಗೆ ನೀಡಲಾಗುವ ಅಧಿಕಾರವನ್ನು ಅಸ್ಪಶ್ಯರ ವಿರುದ್ಧ ಬಳಸಲಾರರು ಎಂದು ಹೇಳಲು ಬರುವುದಿಲ್ಲ ಆದಾಗ್ಯೂ, ಅದನ್ನು ಅಸ್ಪಶ್ಯರ ಒಳಿತಿಗಾಗಿ ಉಪಯೋಗಿಸಲಾಗುವುದಿಲ್ಲ ಎಂದು ಖಂಡಿತವಾಗಿ ಹೇಳಬಹುದು. +ಯಾವುದೇ ವಿಧಾನ ಮಂಡಲವು ತನಗೆ ಬೇಕಾದ್ದನ್ನು ಮಾಡಲು ಸಾರ್ವಭೌಮ ಅಧಿಕಾರ ಹೊಂದಿರುತ್ತದೆ. +ಆದರೆ ಅದು ಏನು ಮಾಡಬೇಕೆಂದು ಬಯಸುವುದೋ ಅದು ತನ್ನ ಗುಣವಿಶೇಷವನ್ನವಲಂಬಿಸಿರುತ್ತದೆ. +ಇಂಗ್ಲೆಂಡಿನ ಸಂಸತ್ತು ಸಾರ್ವಭೌಮವಾಗಿದ್ದರೂ ಕೂಡ ಅದುನೀಲಲೋಚನ ಕೂಸುಗಳನ್ನು ಸಂರಕ್ಷಿಸುವುದು ಕಾಯಿದೆ ಬಾಹಿರ ಎಂದು ಶಾಸನ ಮಾಡುವುದಿಲ್ಲ ಎಂದು ನಾವು ನಿಸ್ಸಂದೇಹವಾಗಿ ಹೇಳಬಹುದು. +ಮಹಮ್ಮದನ ಧರ್ಮವನ್ನು ಬದಲಾಯಿಸುವ ಅಧಿಕಾರವಿದ್ದಾಗ್ಯೂ ಸುಲ್ತಾನ ಅದನ್ನು ಬದಲಾಯಿಸುವುದಿಲ್ಲ. +ಅದೇ ರೀತಿ ಪೋಪನಿಗೆ ಅಧಿಕಾರವಿದ್ದರೂ ಅವನು ಕ್ರೈಸ್ತನ ಧರ್ಮವನ್ನು ಕಿತ್ತೊಗೆಯುವುದಿಲ್ಲ. +ಅಂತೆಯೇ, ಬಹುತೇಕ ಸವರ್ಣ ಹಿಂದೂಗಳಿಂದ ಕೂಡಿದ ಶಾಸನಸಭೆ ಅಸ್ಪಶ್ಯತೆಯನ್ನು ನಿವಾರಿಸುವ, ಅಂತರ್‌ವಿವಾಹಗಳನ್ನು ಮನ್ನಿಸುವ, ಸಾರ್ವಜನಿಕ ರಸ್ತೆಗಳನ್ನು, ಸಾರ್ವಜನಿಕ ದೇವಾಲಯಗಳನ್ನು, ಸಾರ್ವಜನಿಕ ಶಾಲೆಗಳನ್ನು ಬಳಸುವುದರ ವಿರುದ್ಧ ಇರುವ ನಿರ್ಬಂಧಗಳನ್ನೂ ರದ್ದುಪಡಿಸುವಂತಹ, ಸಂಕ್ಷಿಪ್ತದಲ್ಲಿ, ಅಸ್ಪೃಶ್ಯರನ್ನು ಶುದ್ಧಿಗೊಳಿಸುವಂತಹ ಕಾನೂನುಗಳನ್ನು ಮಾಡುವುದಿಲ್ಲ. +ಇಂತಹ ಕಾನೂನುಗಳನ್ನೂ ಅವರು ಮಾಡಲಾರರೆಂದಲ್ಲ, ಆದರೆ ಮುಖ್ಯವಾಗಿ ಅವರು ಕಾರ್ಯಪ್ರವೃತ್ತರಾಗುವುದೇ ಇಲ್ಲ. +ಶಾಸಕಾಂಗವು ಒಂದು ರೀತಿಯ ಸಾಮಾಜಿಕ ಪರಿಸ್ಥಿತಿಯ ಪ್ರತೀಕವಾಗಿದ್ದು ಸಾಮಾಜಿಕ ಸ್ಥಿತಿಯನ್ನು ನಿರ್ಣಯಿಸುವ ಅಂಶಗಳೇ ಅದರ ಅಧಿಕಾರವನ್ನೂನಿರ್ಧರಿಸುತ್ತವೆ. +ಇದು ನಿರಾಕರಿಸಲಾರದಷ್ಟು ಸ್ಪಷ್ಟ ಮುಂದೇನಾಗಬಹುದೆಂಬುದನ್ನು ಹಿಂದೇನಾಗಿದೆ ಎಂಬುದರ ಆಧಾರದ ಮೇಲೆ ಊಹಿಸಬಹುದು. +ಘನವೆತ್ತ ಶ್ರೀ ದಾದಾಭಾಯಿಯವರು ೧೯೧೬ರಲ್ಲಿ ಸಾರ್ವಭೌಮ ವಿಧಾನ ಮಂಡಲಿಯಲ್ಲಿ ಮಂಡಿಸಿದ ಠರಾವಿನ ಸಂಗತಿಯನ್ನು ನೋಡಿದರೆ ಮಂಡಲಿಯ ಸವರ್ಣ ಹಿಂದೂಗಳಿಗೆ ಯಾವುದೇ ಸಾಮಾಜಿಕ ಸಮಸ್ಯೆಯನ್ನು ಮಂಡಲಿಯಲ್ಲಿ ತರುವುದು ಬೇಕಾಗಿರಲಿಲ್ಲ ಎಂಬುದು ಗೊತ್ತಾಗುತ್ತದೆ. +ಅಸ್ಪೃಶ್ಯರ ಹಿತವನ್ನು ಬಯಸುವ ಅನೇಕರು ಈ ಠರಾವನ್ನು ವಿರೋಧಿಸಿ ಟೀಕೆ ಮಾಡಿದ ಸಂಗತಿ ಸುವಿದಿತವಿರುವುದರಿಂದ ಅದನ್ನು ಪುನಃ ಹೇಳುವ ಅವಶ್ಯಕತೆ ಇಲ್ಲ. +ಆದರೆ ಹೆಚ್ಚಾಗಿ ಗೊತ್ತಿಲ್ಲದ ವಿಷಯವೆಂದರೆ ಈ ಠರಾವು ಸೋತು ಹೋದರೂ ಅದನ್ನು ಮಂಡಿಸಿದ ಸದಸ್ಯರನ್ನು ಕ್ಷಮಿಸಲಿಲ್ಲ. +ಏಕೆಂದರೆ, ಇಂತಹ ಅನಿಷ್ಠ ಠರಾವನ್ನು ಮಂಡಿಸುವುದೇ ಪಾಪಕರ ಎಂದು ಇತರ ಸದಸ್ಯರ ಭಾವನೆಯಾಗಿತ್ತು. +ತದನಂತರದ ಚುನಾವಣೆಗಳಲ್ಲಿ ಈ ಠರಾವನ್ನು ತಂದ ಸದಸ್ಯರು ಒಮ್ಮೆ ತಮ್ಮ ಒಂದು ಲೇಖನದಲ್ಲಿ “ಯಾರು ಅಸ್ಪೃಶ್ಯರ ಏಳಿಗೆಗೆ ದುಡಿಯುತ್ತಾರೋ ಅವರೇ ಸ್ವತಃ ನೀತಿಭ್ರಷ್ಟರು” ಎಂದು ಬರೆದಿದ್ದ ಶ್ರೀಯುತ ಖಪರ್ಡೆಯವರಿಗೆ ದಾರಿಮಾಡಿಕೊಡ ಬೇಕಾಯಿತು. +ಇದು ಉಚ್ಚ ಜಾತಿಯವರು ಅಸ್ಪಶ್ಯರ ಬಗೆಗೆ ತೋರುವ ಪ್ರತೀಕಾರದ ಸಹಾನೂಭೂತಿಯಾಗಿಲ್ಲವೇ? +ಅಸ್ಪೃಶ್ಯರ ಒಬ್ಬ ಅಥವಾ ಇಬ್ಬರು ಸದಸ್ಯರು ಸಾಕೆಂದು ಹೇಳುವವರು ರಾಜಕೀಯ ಹಕ್ಕುಗಳ ನಿಜವಾದ ಅರ್ಥವನ್ನು ತಿಳಿದುಕೊಳ್ಳದವರಾಗಿದ್ದಾರೆ ರಾಜಕೀಯ ಹಕ್ಕಿನ ನಿಜವಾದ ಅರ್ಥದ ಸಾರಾಂಶ ಕೇವಲ ತಾಂತ್ರಿಕವಾಗಿ ಮತದಾನದ ಹಕ್ಕು ಎಂದಾಗಿರುವುದಾದರೂ, ಅದು ನಿಜವಾಗಿಯೂ ಕಾನೂನುಗಳ ಪರವಾಗಿ ಅಥವಾ ಕಾನೂನುಗಳನ್ನು ಮಾಡುವವರ ಪರವಾಗಿ ಮತದಾನ ಮಾಡುವುದರಲ್ಲಿ ಅಡಗಿದೆ. + ಅದು ಯಾವುದೇ ಮಸೂದೆಯ ಪರವಾಗಿ ಅಥವಾ ಮತದಾನ ಮಾಡುವ ಸಂದರ್ಭದಲ್ಲಿ “ಹೌದು ಅಥವಾ ಅಲ್ಲ” ಎಂದು ಹೇಳುವುದೂ ಅಲ್ಲ. +ಅನೇಕ ಹೆಸರುಗಳುಳ್ಳ ಓಟಿನ ಚೀಟಿಯ ಮೇಲೆ ಮುದ್ರೆಯೊತ್ತಿ ಮತಪೆಟ್ಟಿಗೆಯಲ್ಲಿ ಹಾಕುವ ಹಕ್ಕಿಗೆ ಯಾವ ಹೆಚ್ಚಿನ ಬೆಲೆಯೂ ಇಲ್ಲ. +ಅವು ಇತರ ವ್ಯವಹಾರಗಳಂತೆ ಶೈಕ್ಷಣಿಕ ಉಪಯುಕ್ತತೆಯನ್ನು ಹೊಂದಿವೆ. +ಮತದಾನ ಅಥವಾ ರಾಜಕೀಯ ಹಕ್ಕಿನ ಮಹತ್ವ ಸಾಂಘಿಕ ಜೀವನವನ್ನು ಬಲಪಡಿಸುವ ಕರಾರುಗಳನ್ನು ನಿಯಮಿತಗೊಳಿಸುವ ಕಾರ್ಯದಲ್ಲಿ ಪ್ರತ್ಯಕ್ಷ ಮತ್ತು ಸಕ್ರಿಯಾಗಿ ಭಾಗವಹಿಸುವ ಅವಕಾಶದಲ್ಲಿದೆ. +ಸದ್ಯದಲ್ಲಿರುವ ಸ್ಪೃಶ್ಯರು ಮತ್ತು ಅಸ್ಪೃಶ್ಯರ ನಡುವಿನ ಸಾಂಘಿಕ ಜೀವನದ ಕರಾಗುಗಳು ಸ್ಪಶ್ಯರಿಗೆ ಅಪಮಾನಕರ ಮತ್ತು ಅಸ್ಪಶ್ಯರಿಗೆ ಅತ್ಯಂತಹಾನಿಕರವಾಗಿವೆ. + ಒಂದು ಜನಾಂಗದ ಸಾಮರ್ಥ್ಯ ಪರಿಣಾಮಕಾರಿಯಾಗಬೇಕಾದರೆ ಅವರಿಗೆ ಆಸಾಮರ್ಥ್ಯದ ಬಳಕೆಯ ಸಾಮಾಜಿಕ ಕರಾರುಗಳನ್ನು ಗೊತ್ತುಪಡಿಸುವ ಅಧಿಕಾರವಿರಬೇಕು. + ಈ ಕರಾರುಗಳನು ಅತ್ಯಂತ ಅಮೂಲ್ಯವಾಗಿದ್ದರೆ ಅವುಗಳನ್ನು ಪರಿಷ್ಕರಿಸುವುದರಲ್ಲಿಯೇ ಸ್ಪೃಶ್ಯ ಮತ್ತು ಅಸ್ಪೃಶ್ಯ ಇಬ್ಬರ ಒಳಿತು ಅಡಗಿದೆ. +ಅಸ್ಪೃಶ್ಯರು ಈ ಪರಿಷ್ಕರಣದ ಮೇಲೆ ತಮ್ಮ ಪ್ರಭಾವ ಬೀರುವ ಸ್ಥಿತಿಯಲ್ಲಿರಬೇಕು. +ಅವರ ಸಮಸ್ಯೆಗಳ ತೀಕ್ಷ್ಣತೆಯನ್ನು ನೋಡಿದರೆ ಈಗಾಗಲೇ ಸೂಚಿಸಿರುವಂತೆ ಅವರಿಗೆ ತಮ್ಮ ಜನಸಂಖ್ಯೆಯ ಪ್ರಮಾಣಕ್ಕನು ಗುಣವಾಗಿ ಪ್ರಾತಿನಿಧ್ಯ ದೊರೆಯಬೇಕು. +ಒಬ್ಬರು ಅಥವಾ ಇಬ್ಬರು ಸದಸ್ಯರನ್ನು ಕೊಡಮಾಡುವುದು ದಯಾಪರತೆಯಾಗುವುದೇ ಹೊರತು ನ್ಯಾಯಯುತವೂ ಅಲ್ಲ. + ಈ ಮೊದಲು ಹೇಳಲಾದ ಲಾರ್ಡ್‌ ಮೋರ್ಷೆಯವರ ಮಾತುಗಳಲ್ಲಿ “ಪ್ರಾತಿನಿಧ್ಯದ ಪ್ರಮಾಣವನ್ನು ಅವಶ್ಯಕತೆ ನಿರ್ಧರಿಸಬೇಕೇ ಹೊರತು ಸಂಖ್ಯೆಗಳಲ್ಲ.” +ಅಸ್ಪೃಶ್ಯರ ಪ್ರಾತಿನಿಧ್ಯದ ಬಗೆಗೆ ನಿಮ್ನ ವರ್ಗ ಮಂಡಲಿಯು ಇತ್ತೀಚೆಗೆ ಒಂದು ಪ್ರತಿ ಯೋಜನೆಯನ್ನು ತಂದಿದೆ. +ಈ ಯೋಜನೆಯನ್ನು ಸದಸ್ಯರ ಅಭಿಮತದಿಂದ ಆಯ್ಕೆ ಪದ್ಧತಿ ಎಂದು ಕರೆಯಲಾಗಿದೆ. +ಈ ಯೋಜನೆಯಂತೆ ಅಸ್ಪೃಶ್ಯರ ಪ್ರತಿನಿಧಿಗಳನ್ನು ಮಂಡಲಿಯ ಚುನಾಯಿತ ಸದಸ್ಯರ ಅನುಮತಿಯಿಂದ ನಾಮಕರಣ ಮಾಡಬೇಕು. +ಅಸ್ಪಶ್ಯರ ಬಗ್ಗೆ ನಿಮ್ನ ವರ್ಗ ಮಂಡಲಿಯ ಈ ತವಕ ನೋಡಿ ಅಳಬೇಕೋ ನಗಬೇಕೋ ಎಂಬುದನ್ನು ನಿರ್ಣಯಿಸುವುದು ಕಷ್ಟವಾಗಿದೆ. +ಅತ್ತರೆ ಇಂತಹ ಬುದ್ಧಿಗೇಡಿ ಯೋಜನೆ ಎಂದಾದರೂ ಕಾರ್ಯಗತವಾಗಬಹುದೆಂದು ನಂಬಿದಂತಾಗುತ್ತದೆ. +ಆದ್ದರಿಂದ ನಕ್ಕು ಬಿಡುವುದೇ ಒಳಿತಾದ ಮಾರ್ಗ. +ಇತರರ ಬಗ್ಗೆ ದಯಾಪರತೆ ಪ್ರದರ್ಶಿಸುವುದೆಂದರೆ ಅವರೊಡನೆ ಸಮ್ಮತಿಸಿ ಅವರ ಒಳಿತನ್ನು ತಾವೇ ಆರಿಸಿಕೊಳ್ಳುವಂತೆ ಮಾಡುವ ಬದಲು ತಮ್ಮ ಒಳಿತು ಯಾವುದದರಲ್ಲಿದೆ ಎಂದು ಅವರಿಗೆ ಆಜ್ಞಾಪಿಸುವ ಒಂದು ಮುಖವಾಡ ಎಂದು ಹೇಳಬಹುದು. +ನಿಮ್ನ ವರ್ಗಗಳ ಸ್ಥಿತಿಯನ್ನು ಸುಧಾರಿಸಿ ಅವರನ್ನು ಉಚ್ಚ ಜಾತಿಯ ಮಾಲಿಕರ ದಬ್ಬಾಳಿಕೆ ಮತ್ತು ಶೋಷಣೆಯಿಂದ ವಿಮೋಚನಗೊಳಿಸುವ ಉದ್ದೇಶ್ಯದಿಂದ ನಿಮ್ನ ವರ್ಗಗಳ ಮಂಡಲಿಯನ್ನು ಆರಂಭಿಸಲಾಗಿತ್ತು. +ಆದರೆ ಈ ಮಂಡಲಿ ತನ್ನ ರಕ್ಷಣೆಯಲ್ಲಿರುವ ಜನರ ಅಥವಾ ತನ್ನ ಪ್ರತಿನಿಧಿಗಳು ತಮ್ಮ ಹಳೆಯ ಯಜಮಾನರ ಗುಲಾಮಗಿರಿಯೇ ಮುಂದುವರಿಯುವಂತಹ ಯೋಜನೆಯನ್ನು ತರುವಂತಹ ಒತ್ತಡಕ್ಕೊಳಗಾಗುವ ಹೀನ ಪರಿಸ್ಥಿತಿಯಲ್ಲಿದೆ. +ಯಜಮಾನರು ಮತ್ತು ಮಂಡಲಿ ಒಂದಾಗಿ ನಿಮ್ನ ವರ್ಗದವರು ಮೋಕ್ಷದ ಆಸೆಯನ್ನೇ ತೊರೆಯುವ ಮತ್ತು ನಿರಂತರ ನಿಮ್ನರಾಗಿಯೇ ಉಳಿಯುವಂತಹ ಯೋಜನೆಯನ್ನು ನಿರೂಪಿಸಿದ್ದಾರೆ. +ಇಂತಹ ತಂತ್ರಗಳಿಂದ ಎಷ್ಟೇ ಅಜ್ಜಾನಿಗಳಾಗಿದ್ದರೂ ಅಸ್ಪಶ್ಯರು ಮೋಸ ಹೋಗಲಾರರು, ಅಂತೆಯೇ ಇಂತಹ ತಂತ್ರಗಳು ಚುನಾವಣಾ ಮಿತಿಯ ಸದಸ್ಯರನ್ನೂ ಮೋಸಗೊಳಿಸಲಾರವು. +ಮಂಡಲಿಯ ಈ ಯೋಜನೆಯನ್ನು ಇನ್ನೊಂದು ದೃಷ್ಟಿಯಿಂದಲೂ ಸ್ವೀಕರಿಸಲಾಗದು. +ತನ್ನ ಆಡಳಿತ ಸಮಿತಿಯಲ್ಲಿ ಒಬ್ಬ ಅಸ್ಪೃಶ್ಯರು ಸದಸ್ಯನನ್ನೂ ಸೇರಿಸಿಕೊಳ್ಳಲು ಸತತವಾಗಿ ನಿರಾಕರಿಸಿ ಅಸ್ಪೃಶ್ಯರ ಪ್ರಾತಿನಿಧ್ಯದ ಬಗ್ಗೆ ಯೋಜನೆಯನ್ನು ಸೂಚಿಸಿರುವುದು ಮಂಡಲಿಯ ಅತಿರೇಕದ ಪರಮಾವಧಿ, ಈ ಪಕ್ಷಪಾತಿ ಮತ್ತು ಅಧಿಕಪ್ರಸಂಗಿ ಯೋಜನೆಯನ್ನು ತಿರಸ್ಕರಿಸಲೇಬೇಕು. +ಸರಕಾರದಿಂದ ನಾಮಕರಣ ಪದ್ಧತಿಯನ್ನು ಇತರ ವಿಧದ ನಾಮಕರಣಕ್ಕೆ ಹೋಲಿಸಿದಾಗ ಅದನ್ನು ಒಪ್ಪಿಕೊಳ್ಳಬಹುದಾದರೂ, ಅಸ್ಪೃಶ್ಯರ ದೃಷ್ಟಿಯಿಂದ ವಿರೋಧಿಸಬೇಕಾಗಿದೆ. +ಪ್ರತಿನಿಧಿಗಳ ಸ್ವಾತಂತ್ರ್ಯವನ್ನು ಮೊಟಕುಗೊಳಿಸುವುದೇ ಅಲ್ಲದೆ ನಾಮಕರಣ ಎಲ್ಲಾ ಕೋಮುಗಳ ಅದರಲ್ಲಿಯೂ ಅಸ್ಪಶ್ಯರಿಗೆ ಅತ್ಯವಶ್ಯಕವೆನಿಸಿದ ರಾಜಕೀಯ ಶಿಕ್ಷಣವನ್ನು ನೀಡುವಲ್ಲಿ ವಿಫಲವಾಗುವುದು. +ಈ ಹಂತದಲ್ಲಿ ಕೋಮುವಾರು ಪ್ರಾತಿನಿಧ್ಯದ ವಿರುದ್ಧ ಇರುವ ವಾದವನ್ನು ಪರಿಶೀಲಿಸೋಣ. +“ಸ್ವರಾಜ್ಯವನ್ನು ಬೆಳೆಸಿಕೊಂಡು ಬಂದಿರುವ ರಾಷ್ಟ್ರಗಳ ಇತಿಹಾಸ ನಿಶ್ಚಿತವಾಗಿ ಕೋಮುವಾರು ಪ್ರಾತಿನಿಧ್ಯದ ವಿರೋಧವಾಗಿದೆ” ಎಂಬುದು ಈ ವರದಿಯ ಕರ್ತೃಗಳ ಮೊದಲನೆಯ ವಾದ. +ಆದರೆ ಇದಕ್ಕೂ ಮುಂಚಿನ ಪುಟದಲ್ಲಿ ವರದಿಯ ಕರ್ತೃಗಳು ಪ್ರಪಂಚದ ಇತರ ಕಡೆಗೆ ಪ್ರಾತಿನಿಧಿಕ ಸಂಸ್ಥೆಗಳ ಅಸ್ತಿತ್ವದ ಆಧಾರಗಳು ಭಾರತೀಯ ಸಮಾಜದಲ್ಲಿ ಭಿನ್ನವಾಗಿದ್ದು ಈ ಸಂಬಂಧ ಜಾತಿ ಮತ್ತು ಪಂಥಗಳ ನಡುವಣ ವ್ಯತ್ಯಾಸಗಳನ್ನು ಗಮನಿಸಬೇಕು ಎಂದು ಹೇಳಿದ್ದಾರೆ. +ಮೊದಲಿನದನ್ನು ಬರೆಯುವಾಗ ನಂತರದ ಪರಿಸ್ಥಿತಿಯ ವಿಶ್ಲೇಷಣೆ ಅವರ ಮನಸ್ಸಿನಿಂದ ಮಾಯವಾಗಿ ಮರೆತು ಹೋಗಿರಬೇಕು ಇಲ್ಲವೇ ಅವರು ಏಕಕಾಲಕ್ಕೆ ಪರಸ್ಪರ ವಿರೋಧವಾದ ವಿಚಾರಗಳನ್ನು ಹೊಂದಿದ್ದರೆಂದು ಹೇಳಬೇಕಾಗುತ್ತದೆ. +ಈ ಎರಡು ವಿಚಾರಗಳನ್ನೂ ಒಟ್ಟಿಗೆ ನೋಡಿದಾಗ ವರದಿಯ ಕರ್ತೃಗಳು ಒಂದು ಅಸಾಧಾರಣವಾದ ಸನ್ನಿವೇಶದಲ್ಲಿ ಅಸಾಧಾರಣ ಪರಿಹಾರವನ್ನೇ ಒದಗಿಸಬೇಕಾಗುತ್ತದೆ ಎಂಬ ಸತ್ಯದ ಆಧಾರದ ಮೇಲೆ ಕೋಮುವಾರು ಪ್ರಾತಿನಿಧ್ಯವನ್ನು ಮನ್ನಿಸಬೇಕಾಗುತ್ತದೆ. +ಕೋಮುವಾರು ಪ್ರಾತಿನಿಧ್ಯದ ವಿರೋಧ ಇರುವ ಇನ್ನೊಂದು ಮುಖ್ಯ ವಾದವೆಂದರೆ ಅದು ಸಾಮಾಜಿಕ ಒಡಕುಗಳನ್ನು ಶಾಶ್ವತಗೊಳಿಸುತ್ತದೆ ಎಂಬುದಾಗಿದೆ. +ವಿಚಿತ್ರವೆಂದರೆ, ಯಾರು ಈ ಸಾಮಾಜಿಕ ಒಡಕುಗಳನ್ನು ಎತ್ತಿ ಹಿಡಿದಿರುವರೋ ಅವರೇ ಈ ಪ್ರತಿವಾದವನ್ನು ಶಕ್ತಿಯುತವಾಗಿ ಪ್ರತಿಪಾದಿಸುತ್ತಿದ್ದಾರೆ. +ಕೋಮುವಾರು ಪ್ರಾತಿನಿಧ್ಯವನ್ನು ಯಾರು ವಿರೋಧಿಸುತ್ತಿದ್ದಾರೋ, ಅವರೇ ಶ್ರೀ ಪಟೇಲರ ಅಂತರ್ಜಾತೀಯ ವಿವಾಹ ಮಸೂದೆಯನ್ನು ಜಾತಿ ವಿರೋಧಿ ಮಸೂದೆ ಎಂದು ಉಗ್ರವಾಗಿ ವಿರೋಧಿಸುತ್ತಿದ್ದಾರೆ ಎಂಬುದನ್ನುಈ ಸಮಿತಿ (ಸೌತ್‌ಬರೋ ಸಮಿತಿ) ದಯಮಾಡಿ ಗಮನಿಸಬೇಕು. +ಈ ವಾದವನ್ನು ಮುಂದಿಡುತ್ತಿರುವವರ ನಿಷ್ಠೆಯನ್ನು ಗಂಭೀರವಾಗಿ ಶಂಕಿಸಬೇಕಾಗುತ್ತದೆ. +ಆದರೆ ವರದಿಯ ಕರ್ತೃಗಳೇ ಇದನ್ನು ಕೋಮುವಾರು ಪ್ರಾತಿನಿಧ್ಯದ ವಿರೋಧವಾಗಿ ಎರಡನೆಯ ಸ್ಥಾನದಲ್ಲಿಟ್ಟರುವುದರಿಂದ ಸಾಧ್ಯವಾದರೆ ಈ ವಾದವನ್ನು ಎದುರಿಸಲೇಬೇಕು. +ಕೋಮುವಾರು ಪ್ರಾತಿನಿಧ್ಯ ಸಾಮಾಜಿಕ ವಿಭಜನೆಗಳನ್ನು ಶಾಶ್ವತಗೊಳಿಸುವುದೇ? +ಕೋಮುವಾರು ಪ್ರಾತಿನಿಧ್ಯವೆಂದರೆ ಸಾಮಾಜಿಕ ವಿಭಜನೆಗಳಿಂದ ಕೂಡಿದ ಚುನಾಯಕ ಸಂಘಗಳನ್ನು ನಿರ್ಮಸಿದರೆ ಈ ಟೀಕೆ ಸಮಂಜಸವೆನಿಸುವುದು. +ವಿಭಜನೆಗಳು ನಿಜವಾಗಿಯೂ ವಿಭಜನೆಗಳಲ್ಲವೆಂದು ಇಟ್ಟುಕೊಂಡಾಗ ಮಾತ್ರ ಇದು ನಿಜವೆನಿಸಬಹುದು. +ಹಾಗಿದ್ದ ಪಕ್ಷದಲ್ಲಿ ಅಭ್ಯಂತರವಿಲ್ಲ. +ಇದು ಎಲ್ಲಾ ಆಂಗ್ಲರು ಸಮಾಜ ವಿರೋದಿಗಳೆಂದು ಹೇಳುವಷ್ಟೇ ತಪ್ಪು ಗ್ರಹಿಕೆಯಿಂದ ಕೂಡಿದುದಾಗಿದೆ. +ಕೋಮುವಾರು ಪ್ರಾತಿನಿಧ್ಯ ವಿಭಜನೆಗಳ ಕೆಡಕು ಪರಿಣಾಮಗಳನ್ನು ತೊಡೆದುಹಾಕುವ ಒಂದು ಸಾಧನ. +ಯಾರು ಕೋಮುವಾರು ಪ್ರಾತಿನಿಧ್ಯದ ಈ ಉಪಯುಕ್ತತೆಯನ್ನು ಒಪ್ಪಿಕೊಂಡರೂ, ಅದು ವಿಭಜನೆ ಹಾಗೂ ಒಡಕನ್ನು ಮುಂದುವರಿಸಿಕೊಂಡು ಹೋಗುತ್ತದೆ ಎಂಬ ಕಾರಣದಿಂದ ಅದನ್ನು ವಿರೋಧಿಸುತ್ತಿದ್ದಾರೋ ಅಂತಹವರಿಗೆ ಈ ಪದ್ಧತಿಯು ವಿಭಜನೆಗಳನ್ನು ತೊಡೆದುಹಾಕಲು ಸಹಾಯಕವಾಗಬಲ್ಲದೆಂದು ತೋರಿಸಿಕೊಡಲು ಇನ್ನೊಂದು ಪ್ರಮಾಣವೂ ಇದೆ. +ಕೋಮುವಾರು ಚುನಾಯಕರು ಮತ್ತು ಸಾಮಾಜಿಕ ವಿಭಜನೆಗಳು ಒಂದೇ ಘಟಕಗಳಾದಾಗ ವಿವಿಧ ಜಾತಿಗಳ ಜನರನ್ನು ಒಂದೆಡೆ ಕೂಡಿಸಿದಂತಾಗುತ್ತದೆ. +ಇಲ್ಲದೇ ಹೋದಲ್ಲಿ ಇವರು ವಿಧಾನಮಂಡಲಿಯಲ್ಲಿ ಎಂದೂ ಒಟ್ಟಾಗಿ ಕೂಡುವುದು ಸಾಧ್ಯವಿಲ್ಲ. +ಹೀಗಾಗಿ, ವಿಧಾನ ಮಂಡಲವು ಯಾವಾಗಲೂ ಪತ್ಯೇಕವಾಗಿದ್ದ ಕಾರಣ ಸಮಾಜವಿರೋಧಿಗಳಾಗಿದ್ದ ವಿವಿಧ ಜಾತಿಗಳ ಸದಸ್ಯರು ಭಾಗವಹಿಸುವ ಸಾಧನವಾಗಿ ಪರಿಣಮಿಸಿ ಅವರಿಗೆ ಸಹಜೀವನದ ಅವಕಾಶವನ್ನುಂಟು ಮಾಡುವುದು. +ಸಹಜೀವನದಲ್ಲಿ ಸಕ್ರಿಯ ಪಾಲ್ಗೊಳ್ಳುವಿಕೆಯಿಂದ ಪಾಲ್ಗೊಳ್ಳುವವರ ಮನೋಭಾವಗಳ ಮೇಲೆ ತನ್ನ ಪ್ರಭಾವ ಬೀರದೇ ಇರಲಾರದು. +ಇಂದು ಒಂದು ಜಾತಿ ಅಥವಾ ಒಂದು ಧಾರ್ಮಿಕ ಗುಂಪು ಎಂದರೆ ಒಂದು ರೀತಿಯ ವಿಶಿಷ್ಟ ಮನೋಭಾವನೆಯೇ ಆಗಿದೆ. +ಎಲ್ಲಿಯವರೆಗೆ ಒಂದು ಜಾತಿ ಅಥವಾ ಗುಂಪು ಪ್ರತ್ಯೇಕವಾಗಿರುತ್ತದೆಯೋ ಅಲ್ಲಿಯವರೆಗೆ ಅದರ ಭಾವನೆಗಳು ಜಡವಾಗಿರುತ್ತವೆ. +ಹಲವು ಜಾತಿಗಳು ಮತ್ತು ಗುಂಪುಗಳು ಸಂಪರ್ಕ ಹೊಂದಲು ಮತ್ತು ಪರಸ್ಪರ ಸಹಕಾರ ಬೆಳೆಸಿಕೊಳ್ಳಲಾರಂಭಿಸಿದಾಕ್ಷಣ ಜಡವಾದ ಭಾವನೆಗಳು ಪುನರ್‌ಸಾಮಾಜೀಕರಣ ಹೊಂದುವುವು. +ಮಹಮ್ಮದೀಯರು, ಕ್ರೈಸ್ತರು ಮುಂತಾದವರ ಬಗೆಗೆ ಹಿಂದೂಗಳು ಭಾವನೆಗಳಲ್ಲಿ ಪುನರ್‌ ಸಾಮಾಜೀಕರಣವಾದರೆ, ಮಹಮ್ಮದೀಯರು, ಕ್ರೈಸ್ತರು ಮುಂತಾದವರು ಕೂಡ ಹಿಂದೂಗಳ ಬಗೆಗೆ ತಮ್ಮ ಭಾವನೆಗಳಲ್ಲಿ ಪುನರ್‌ಸಾಮಾಜೀಕರಣ ಹೊಂದುವರು, ಅಥವಾ ಸ್ಪೃಶ್ಯ ಹಿಂದೂಗಳು ಅಸ್ಪಶ್ಯರ ಬಗ್ಗೆ ಈ ರೀತಿ ಪರಿವರ್ತಿತ ಭಾವನೆ ತಳೆದರೆ ಜಾತಿ ಭೇದಗಳು ಅಳಿಸಿಹೋಗುವುವು. +ಜಾತಿ ಒಂದು ಭಾವನೆಯಾಗಿದ್ದರೆ, ಅದನ್ನೇನೂ ಅಲ್ಲ, ಜಾತಿ ದ್ಯೋತಕ ಭಾವನೆಗಳು ಅಳಿಸಿಹೋದಾಗ ಜಾತಿಯೂ ಸಹ ಅಳಿಸಿಹೋಗುವುದು. +ಆದರೆ ಸದ್ಯ ಅಸ್ತಿತ್ವದಲ್ಲಿರುವ ವಿಭಿನ್ನ ಜಾತಿದ್ಯೋತಕ ಭಾವನೆಗಳು. +ಈ ವಿಭಿನ್ನ ಗುಂಪುಗಳು ಒಟ್ಟಾರೆಯಾಗಿ ಸಾರ್ವಜನಿಕ ಚಟುವಟಕೆಗಳಲ್ಲಿ ಭಾಗವಹಿಸಿದಾಗ ಮಾತ್ರ ಅವುಗಳ ವಿಸರ್ಜನೆಯಾಗುವುದು ಸಾಧ್ಯ ಭಾವನೆಗಳ ಬದಲಾವಣೆ ಅಲ್ಪಕಾಲೀನವಾಗಿರದೆ, ವಿಧಾನ ಮಂಡಲಿಯ ಹೊರಗಡೆಯೂ ಸಹ ಜೀವನದ ಮೇಲೆ ಪ್ರಭಾವ ಬೀರುವುದು. +ಒಟ್ಟಿಗೆ ಕೆಲಸ ಮಾಡಲು ಎಷ್ಟು ಹೆಚ್ಚು ಅವಕಾಶಗಳಿರುತ್ತವೆಯೋ ಅಷ್ಟೂ ಒಳ್ಳೆಯದು. +ಆಗ ಬೃಹತ್‌ಪ್ರಮಾಣದಲ್ಲಿ ಪುನರ್‌ ಸಾಮಾಜೀಕರಣವಾಗಿ ಜಾತಿ ಗುಂಪುಗಳು ಶೀಘ್ರವಾಗಿ ಕೊನೆಗೊಳ್ಳುವುವು. +ಹೀಗಾಗಿ ಸದ್ಯದಲ್ಲಿರುವ ವಿಭಜನೆಗಳನ್ನು ಶಾಶ್ವತಗೊಳಿಸುತ್ತದೆ ಎಂಬ ಕಾರಣದಿಂದ ಯಾರು ಕೋಮುವಾರು ಪ್ರಾತಿನಿಧ್ಯ ವ್ಯವಸ್ಥೆಯನ್ನು ಖಂಡಿಸುತ್ತಿದ್ದಾರೋ ಅಂತಹವರು ಆಲೋಚಿಸಿ ಈ ಪದ್ಧತಿಯನ್ನು ವಿಭಜನೆಗಳನ್ನು ತೊಡೆದುಹಾಕುವ ಸತ್ವಶಾಲಿ ಸಾಧನವಾಗಿದೆ ಎಂದು ಸ್ವಾಗತಿಸುತ್ತಾರೆ. +ಅಸ್ಪಶ್ಶರಿಗಾಗಿ ಕೋಮುವಾರು ಮತ್ತು ಯಥೋಚಿತ ಪ್ರಾತಿನಿಧ್ಯದ ಮಹತ್ವ ಮತ್ತು ಅವಶ್ಯಕತೆ ಪ್ರಶ್ನಾತೀತವಾಗಿದೆ. +ಈ ವಿಷಯದ ಮೇಲೆ ಅಸ್ಪಶ್ಯರು ಎಷ್ಟು ಆಳವಾದ ಉದ್ವೇಗದಿಂದ ಮಾತನಾಡುತ್ತಾರೆ ಎಂಬುದನ್ನು ಮದ್ರಾಸ್‌ ಪ್ರಾಂತ್ಯದ ಅಸ್ಪೃಶ್ಯರು ಮಾಂಟಿಗೂ ಅವರಿಗೆ ಹೇಳಿದ ಮಾತುಗಳಿಂದ ಅಳೆಯಬಹುದು. +ಅಸ್ಪಶ್ಯರಿಗೆ ಕೋಮು ಪ್ರಾತಿನಿಧ್ಯವಿದ್ದರೆ ಭಾರತಕ್ಕೆ ಸ್ವರಾಜ್ಯವನ್ನು ಕೊಟ್ಟರೆ ರಕ್ತಪಾತವಾಗುವುದೆಂದು ಅವರು ಎಚ್ಚರಿಸಿದ್ದರು. +ಆದರೆ ವರದಿಯ ಕರ್ತೃಗಳು ಅಸ್ಪಶ್ಯರನ್ನು ಸದ್ಯದ ಶಾಶ್ವತ ಬುದ್ದಿಜೀವಿಗಳ ಮೇಲೆಯೇ ಹೆಚ್ಚು ವಿಶ್ವಾಸವಿಟ್ಟಂತಿದೆ. +ಅವರು ಹೇಳುವಂತೆ: “ಸುಶಿಕ್ಷಿತ ಭಾರತೀಯರು ತಮ್ಮ ಸಂಘಟನಾ ಪ್ರಯತ್ನವನ್ನು ಕೇವಲ ರಾಜಕೀಯ ಉದ್ದೇಶಗಳಿಗಾಗಿಯಲ್ಲದೇ ವಿವಿಧ ರೀತಿಯ ಸಾರ್ವಜನಿಕ ಮತ್ತು ಸಾಮಾಜಿಕ ಸೇವೆಗಾಗಿಯೂ ಮಾಡುತ್ತಿದ್ದಾರೆ ಎಂದು ಕಂಡುಬಂದಿದೆ.” + ಕರ್ತೃಗಳು ಅಸ್ಪೃಶ್ಯರ ಬೇಡಿಕೆಗಳನ್ನು ಪರೋಕ್ಷವಾಗಿ ಒಪ್ಪಿಕೊಂಡಿರುವುದರಿಂದ ಅವರ ಈ ವಿಶ್ವಾಸ ಎಷ್ಟು ಸುಭದ್ರವಾಗಿದೆ ಎಂಬುದನ್ನು ವಿಚಾರಿಸುವುದು ಸೂಕ್ತವೇ ಆಗಿದೆ. +ಶಿಕ್ಷಣ ಮತ್ತು ಅದರ ಸಾಮಾಜಿಕ ಮೌಲ್ಯದ ವಿಷಯವಾಗಿ ಜೋಸೆಫ್‌ ಆಡಿಸನ್ನರ ಮಾತುಗಳು ಜ್ಞಾಪಿಸಿಕೊಳ್ಳಲಾರದಷ್ಟು ಹಳೆಯವೇನೂ ಆಗಿಲ್ಲ. +ಅವರು ಹೇಳಿರುವುದೇನೆಂದರೆ: "ಮಾನವರಲ್ಲಿಯ ವಿಶೇಷ ಗುಣಗಳನ್ನು ಯಾವ ರೀತಿಯಲ್ಲಿ ಬಳಸಬೇಕೆಂಬ ಪರಿವೆಯೇ ಇಲ್ಲದವರಿಗೆ ಅವು ಗೌರವ ನೀಡಿವೆ ಎಂದು ತಿಳಿದರೆ ಮಾನವ ಸಮಾಜಕ್ಕೆ ಇದಕ್ಕಿಂತ ಹೆಚ್ಚಿನ ಹಾನಿ ಇನ್ನೊಂದಿಲ್ಲ. +ನಿಸರ್ಗದತ್ತವಾದ ಗುಣಗಳು ಮತ್ತು ಕಾಲತ್ಮಕ ಸಾಧನೆಗಳು ಅಮೂಲ್ಯವಾದವು. +ಆದರೆ ಅವುಗಳನ್ನು ಶ್ರೇಷ್ಠತೆಗನುಗುಣವಾಗಿ ಅಥವಾ ಘನತೆಯ ನಿಯಮಗಳಿಗನುಗುಣವಾಗಿ ಆಚರಿಸಬೇಕಾಗಿರುವುದರಿಂದ, ನಾವು ಯಾರೋಡನೆ ವ್ಯವಹರಿಸುತ್ತೇವೆಯೋ ಅವರಲ್ಲಿರುವ ಉತ್ಕೃಷ್ಟತೆಯನ್ನು ಗಮನಿಸಬೇಕಾಗುತ್ತದೆ. +ಇಲ್ಲದೇ ಹೋದರೆ ನಮ್ಮ ವಿಚಾರ ಮತ್ತುತೀರ್ಮಾನದಲ್ಲಿ ಯಾರು ಹೇಯವೋ ಅಂಂತಹವರನ್ನೇ ನಾವು ಮೆಚ್ಚಿಕೊಳ್ಳಬೇಕಾಗುತ್ತದೆ." + ಬುದ್ಧಿಜೀವಿಗಳೆಂದರೆ ಬ್ರಾಹ್ಮಣರು, ಬ್ರಾಹ್ಮಣರೆಂದರೆ ಬುದ್ಧಿಜೀವಿಗಳು ಎಂಬ ಅಂಶ ಅಂಕಿಸಂಖ್ಯೆಗಳಿಂದ ಕಂಡುಬರುತ್ತದೆ. +ಬುದ್ಧಿಜೀವಿಗಳ ಮನೋಭಾವನೆ ಬ್ರಾಹ್ಮಣರ ಮನೋಭಾವನೆಯೇ ಆಗಿದೆ. +ಅವರ ದೃಷ್ಟಿ ಬ್ರಾಹ್ಮಣದೃಷ್ಟಿ ಆತನು ಎಲ್ಲರ ಪರವಾಗಿ ಮಾತನಾಡುವ ಕಲೆಯನ್ನು ಪಡೆದಿದ್ದರೂ,ಬ್ರಾಹ್ಮಣ ಮುಖಂಡ ಯಾವ ರೀತಿಯಲ್ಲಿಯೂ ಜನತಾ ಮುಖಂಡನಾಗಲಾರ. +ಹೆಚ್ಚೆಂದರೆ ಅವನು ತನ್ನ ಜಾತಿಯ ಮುಖಂಡ, ಏಕೆಂದರೆ ಅವನು ತನ್ನ ಜಾತಿಯವರನ್ನು ಬೇರೆ ಜಾತಿಯವರಿಗಿಂತ ಹೆಚ್ಚೆಂದು ಭಾವಿಸುತ್ತಾನೆ. +ಅಸ್ಪೃಶ್ಯರ ಬಗ್ಗೆ ಅನುಕಂಪವಿಲ್ಲದ ಬ್ರಾಹ್ಮಣರು ಇಲ್ಲ ಎಂದು ಇದರರ್ಥವಲ್ಲ. +ನ್ಯಾಯವಾಗಿ ಹೇಳಬೇಕೆಂದರೆ, ಅಸ್ಪಶ್ಯತೆಯ ಭೀಕರ ಸ್ವರೂಪ ಮತ್ತು ಅದನ್ನು ಆಚರಿಸುತ್ತಿರುವ ಸಮಾಜಕ್ಕೆ ಅದರಿಂದುಟಾಂಗುವ ಅಪಾಯವನ್ನು ಅರಿತಿರುವ ಕೆಲವೇ ಸಾಮ್ಯವಾದಿ ಮತ್ತು ವಿಚಾರವಂತ ಬ್ರಾಹ್ಮಣರೂ ಇದ್ದಾರೆ. +ಆದರೆ ಅಸ್ಪಶ್ಯತೆಯ ಭೀಕರತೆಯ ವಿಷಯದಲ್ಲಿ ಹಿಂದೆಂದೂ ಲಭ್ಯವಿರದಷ್ಟು ಹೆಚ್ಚು ಪ್ರಮಾಣದ ಪುರಾವೆ ಇಂದು ದೊರಕಿದ್ದರೂ ಕೂಡ ಮತ್ತು ಅದು ದಿನನಿತ್ಯ ಜೀವನದಲ್ಲಿ ಕಂಡುಬಂದರೂ ಅದನ್ನು ನಿರಾಕರಿಸುವ ಬ್ರಾಹ್ಮಣರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. +ಇಂತಹವರ ದೃಷ್ಟಿಯಲ್ಲಿ ಸ್ವಾತಂತ್ರ್ಯವೆಂದರೆ ಇತರರನ್ನು ತುಳಿಯುವ ಕ್ರೂರಿ ಮತ್ತು ನಿರ್ದಯಿಯಾಗುವ ಸ್ವಾತಂತ್ರ್ಯವಾಗಿದ್ದು, ಅಸ್ಪೃಶ್ಯರಿಗೆ ಅನ್ಯಾಯ ಮಾಡುವುದರಲ್ಲಿಯೇ ಸಂಪೂರ್ಣ ತಮ್ಮದೇ ಆದ ವಿಶಿಷ್ಟ ಹಕ್ಕುಗಳ ಸಮೃದ್ಧಿ ಮತ್ತು ಸಂರಕ್ಷಣೆ ಅಡಗಿದೆ ಎಂದು ಅವರು ತಿಳಿದಿದ್ದಾರೆ. +ಇವರ ಸೂಕ್ಷ್ಮ ಕುಲೀನತೆ ಆಂಗ್ಲರನ್ನು ತಮಗಿಂತ ಶ್ರೇಷ್ಠರೆಂದೂ ಅಥವಾ ಅಸ್ಪೃಶ್ಯರನ್ನು ತಮ್ಮ ಸಮಾನಸ್ಕರೆಂದೂ ಮನ್ನಿಸುವುದಿಲ್ಲ. +“ನಾನು ಯಾರನ್ನೂ ನನ್ನ ಮೇಲಿನವನೆಂದೂ,ಮತ್ತು ನನಗಿಂತ ಕೆಳಗಿನವರು ನನ್ನನ್ನು ಯಾವಾಗಲೂ ಸಮೀಪಿಸಬಾರದು” ಇದು ಅವರ ನಿಜವಾದ ಸಾಮಾಜಿಕ ಭಾವನೆ ಮತ್ತು ರಾಜಕೀಯ ನಂಬಿಕೆಯಾಗಿದೆ. +ಯಾರೂ ಬ್ರಾಹ್ಮಣ ಮುಖಂಡರ ಸಮಾಜ ವಿರೋಧಿ ಮನಸ್ಸಿನ ವಿರುದ್ಧ ಮಾತನಾಡುವರೋ ಅಂತಹವರಿಗೆ ಮೊದಲ ದರ್ಜೆಯ ಶ್ರೇಷ್ಠ ಬ್ರಾಹ್ಮಣಮುಖಂಡರೂ ಇದ್ದಾರೆಂದು ಎಚ್ಚರಿಸುತ್ತಾರೆ. +ಇದೇನೋ ನಿಜ. +ವೈಯಕ್ತಿಕವಾದ ಮತ್ತು ಅನಿವಾರ್ಯವಾಗಿ ತೆರಲೇಬೇಕಾದ ದಂಡವೆಂಬಂತೆ ಮಾಡುವ ತ್ಯಾಗ ಅವರ ಅತೀಂದ್ರಯ ಶಕ್ತಿ ಸೂಕ್ಷ್ಮವಾಗಿ ಕಂಡುಬರುವಂತೆ ಕೆಲವು ಒಳ್ಳೆಯ, ಅಂದರೆ ಅಪರೂಪವಾಗಿ ಕೆಲವೇ ಜನರಲ್ಲಿ ಕಂಡುಬರಬಹುದು. +ಈ ಅನ್ಯಾಯ ವಸ್ತುಸ್ಥಿತಿಯಿಂದ ಪ್ರತ್ಯೇಕಿಸಲಾರದಷ್ಟು ಗಾಢವಾಗಿದೆ ಎಂಬುದನ್ನು ಮನುಕುಲ ಮತ್ತು ಸತ್ಯ ಎದುರಿಸಬೇಕಾದ ಸವಾಲಾಗಿದೆ. +ಅಸ್ಪೃಶ್ಯರ ಶೋಚನೀಯ ಪರಿಸ್ಥಿತಿಯನ್ನು ಇನ್ನು ಸಹಿಸಲು ಸಾಧ್ಯವಿಲ್ಲ, ಏಕೆಂದರೆ,ಕೆಲವೇ ಮೃದು ಹೃದಯಗಳು ಸಹಾನುಭೂತಿ ತೋರಿದರೂ ಕೆರಳಿದ ಪ್ರಾಮಾಣಿಕ ಕ್ರೋದದ ಪ್ರವಾಹನಿಲ್ಲಲಾರದು. +ಈ ಪ್ರವಾಹ ಇದ್ದದ್ದರಲ್ಲಿಯೇ ಕೆಲವು ತಪ್ಪಿತಸ್ಥರಲ್ಲದ ನಿರಪರಾಧಿಗಳನ್ನೂ ತಪ್ಪಿತಸ್ಥರ ಸಮೂಹದೊಡನೆ ಕೊಚ್ಚಿಕೊಂಡು ಹೋಗುವುದು. +ಭಾರತದಲ್ಲಿ ರಾಷ್ಟ್ರೀಯತೆಯ ಒಲವನ್ನು ಗಮನಿಸಿದಾಗ ಇಂತಹ ಸಹಾನುಭೂತಿಪರರ ಸಂಖ್ಯೆ ಬೆಳೆಯುವುದೆಂದು ನಂಬಲು ಸಾಧ್ಯವಿಲ್ಲ. +ತದ್ವಿರುದ್ಧವಾಗಿ ತಪ್ಪಿತಸ್ಥರ ಸಂಖ್ಯೆಯೇ ಬೆಳೆಯುವುದು ನಿಶ್ಚಿತ. +ರಾಜಕೀಯ ಚಳುವಳಿಯ ಬೆಳೆವಣಿಗೆಯಿಂದಾಗಿ ಸಾಮಾಜಿಕ ಸುಧಾರಣೆಯ ಚಳವಳಿ ಇಳಿಮುಖವಾಗಿದೆ, ಅಷ್ಟೇ ಏಕೆ, ಅದು ಸಂಪೂರ್ಣ ನಶಿಸಿಹೋಗಿದೆ. +ಉಚ್ಛ್ರಾಯ ಪ್ರಭಾವವನ್ನು ಬೀರುವಂತಹ ಪ್ರಾರ್ಥನಾ ಸಮಾಜ ಮತ್ತು ಬ್ರಾಹ್ಮೋ ಸಮಾಜಗಳು ಇತಿಹಾಸದ ಪುಟ ಸೇರಿವೆ. +ಭವಿಷ್ಯದಲ್ಲಿ ಇಂತಹ ಸಂಸ್ಥೆ ಹುಟ್ಟಲಾರವು. +ಒಂದೇ ವರ್ಗಕ್ಕೆ ಸೀಮಿತವಾದಂತಹ ಶಿಕ್ಷಣದ ಬೆಳವಣಿಗೆ ಉದಾರವಾದಕ್ಕೆ ಎಂದೂ ದಾರಿಯಾಗಲಾರದು. +ಅದು ವರ್ಗ ಹಿತಾಸಕ್ತಿಗಳ ಸಮರ್ಥನೆ ಮತ್ತು ರಕ್ಷಣೆಗೆ ಸಹಾಯಕವಾಗಬಲ್ಲದು. +ದಲಿತರ ವಿಮೋಚಕರನ್ನು ಸೃಷ್ಟಿಸುವ ಬದಲು ಇಂತಹ ಶಿಕ್ಷಣ ಯಥಾಸ್ಥಿತಿಯ ಪೋಷಕರು ಮತ್ತು ಗತಕಾಲದ ಸಮರ್ಥಕರನ್ನು ಸೃಷ್ಟಿಸುತ್ತದೆ. +ಇದು ಇಲ್ಲಿಯವರೆಗಿನ ಶಿಕ್ಷಣದ ಪರಿಣಾಮವೇ ಅಲ್ಲವೇ? +ಭವಿಷ್ಯದಲ್ಲಿ ಇದು ಹಿಂದೂ ಹೊಸ ಮಾರ್ಗವನ್ನು ಸರಿಸುವುದೆಂಬ ನಂಬಿಕೆಗೆ ಆಧಾರಗಳಿಲ್ಲ. +ಆದ್ದರಿಂದ ಅಸ್ಪೃಶ್ಯರನ್ನು ಉನ್ನತ ಜಾತಿಯವರ ದಯಾಪರತೆಗೆ ಬಿಡುವ ಬದಲು, ಯಾರು ಇತರರಂತೆ ಅಧಿಕಾರವನ್ನು ಕಿತ್ತುಕೊಳ್ಳಲು ಕಾತುರರಾಗಿಲ್ಲವೋ ಆದರೆ ಯಾರು ಸಮಾಜದಲ್ಲಿ ತಮ್ಮ ಸಹಜವಾದ ಸ್ಥಾನ ಪಡೆಯಲು ಕಾತುರರಾಗಿದ್ದಾರೆಯೋ ಅಂತಹ ಅಸ್ಪಶ್ಶರಿಗೆ ಅಧಿಕಾರವನ್ನು ಕೊಡುವುದು ವಿವೇಕಯುತ ಮಾರ್ಗವೆನಿಸುವುದು. +ಪ್ರಪಂಚದ ಮೊದಲ ಯುದ್ಧವು. +ಅದರ ಇಂಗಿತಗಳೇನೇ ಇರಲಿ, ಭವಿಷ್ಯದ ಅಂತಾರಾಷ್ಟೀಯ ಸಂಬಂಧಗಳನ್ನು ನಿಯಮಗೊಳಿಸುವ ಸ್ವಯಂ ನಿರ್ಣಯ ತತ್ವಕ್ಕೆಡೆ ಮಾಡಿದೆ. +ಆಗಸ್ಟ್‌ ೨ಂ, ೧೯೧೭ರ ಘೋಷಣೆ ಭಾರತಕ್ಕೆ ಈ ತತ್ವವನ್ನು ಅನ್ವಯಿಸುವುದಾಗಿ ಹೇಳಿರುವುದು ಸಂತೋಷದ ಸಂಗತಿ. +ಈ ತತ್ವವು ಪ್ರತಿಪಾದಿಸುವುದೇನೆಂದರೆ, ಪ್ರತಿಯೊಂದು ಜನಾಂಗ ತಾನು ಯಾವ ಸ್ಥಿತಿಯಲ್ಲಿ ಜೀವಿಸಬಯಸುತ್ತದೆ ಎಂಬುದನ್ನು ನಿರ್ಣಯಿಸಲು ಸ್ವತಂತ್ರವಾಗಿರಬೇಕು. +ಈ ತತ್ವವನ್ನೂ ಅಂತರರಾಷ್ಟಿಯ ಸಂಬಂಧಗಳಿಗೆ ಮಾತ್ರ ಸೀಮಿತಗೊಳಿಸುವುದು ಇದರ ಆಚರಣೆಯ ಮಹತ್ವವನ್ನು ಕುಂಠಿತಗೊಳಿಸಿದಂತಾಗುತ್ತದೆ. +ಏಕೆಂದರೆ ವೈಷಮ್ಯ, ರಾಷ್ಟ್ರಗಳ ನಡುವೆ ಮಾತ್ರ ಇರುವುದಿಲ್ಲ. +ಆದರೆ ಒಂದು ರಾಷ್ಟ್ರದೊಳಗಡಯೇ ವಿವಿಧ ವರ್ಗಗಳ ನಡುವೆಯೂ ಇರುತ್ತದೆ. +ವಿಪರ್ಯಾಸವೆಂದರೆ, ಭಾರತದ ರಾಜಕಾರಣಿಗಳು ತಮ್ಮ ರಾಜಕೀಯ ಭಾಷಣಗಳಲ್ಲಿ ಅವೇಶಭರಿತವಾಗಿ ಭಾರತೀಯ ಜನತೆಯ ಬಗ್ಗೆ ಶಾಸನಾನುಸಾರವಾದ ಭಾವನೆಯನ್ನು ವ್ಯಕ್ತಮಾಡುತ್ತಾರೆ. +ಅವರ ಶಾಸನಾನುಸಾರ ಭಾವನೆಯಲ್ಲೆ ಭಾರತೀಯ ಜನತೆ ಸಹಜವಾಗಿಯೇ ಒಂದು ಜನಾಂಗವಾಗಿದೆ. +ಈ ಜನತೆಯಲ್ಲಿರುವ ಸ್ತುತ್ಯಾರ್ಹವಾದಂತಹ ಸಾರ್ವಜನಿಕ ಸಂಕಲ್ಪ ಮತ್ತು ಕಲ್ಯಾಣ,ಸಾರ್ವಜನಿಕ ಗುರಿಗೆ ನಿಷ್ಠೆ ಮತ್ತು ಈ ಏಕತೆಯ ಹಿಂದಿರುವ ಪರಸ್ಪರ ಸಹಾನುಭೂತಿ ಇವುಗಳನ್ನು ಅವರು ಮೆಚ್ಚಿಕೊಳ್ಳುತ್ತಾರೆ. +ಈ ಶಾಸನಾನುಗತ ಭಾವನೆ ಮತ್ತು ವಾಸ್ತವಿಕ ಭಾವನೆಗಳು ಹೇಗೆ ಪರಸ್ಪರ ವಿರೋಧಿಯಾಗಿವೆ ಎಂಬ ಅಂಶವನ್ನು ಈ ಸಮಿತಿಯು ಗಮನಿಸದಿರಲಾರದು. +ಉದಾಹರಣೆಗಾಗಿ,ಬ್ರಿಟಿಷರು ಭಾರತೀಯರನ್ನು ಗೆದ್ದು ಅವರ ಅಡಿಯಾಳುಗಳನ್ನಾಗಿ ಮಾಡಿಕೊಂಡುದರ ಪರಿಣಾಮವಾಗಿ ದೊರೆತ ಪಾಠ. +ಬ್ರಾಹ್ಮಣ ರಾಜಕಾರಣಿಗಳು ಈ ಬಂಡವಾಳದ ಲಾಭ ಪಡೆಯುವುದುನ್ನು ಎಂದೂ ಮರೆಯುವುದಿಲ್ಲ. +ಈ ಅನಿಷ್ಟ ಪಾಠಗಳನ್ನು ಜಾನ್‌ ಷೋರ್‌ ೧೮೩೨ರಲ್ಲಿ ಬರೆದ ತನ್ನ Notes on Indian Affairs ಯಲ್ಲಿ ಚಿತ್ರಿಸಿದ್ದಾನೆ. +ದಿವಂಗತ ಸನ್ಮಾನ್ಯ ಶ್ರೀ ಗೋಖಲೆಯವರು ಒಮ್ಮೆ ವಿದೇಶೀ ಸಂಸ್ಥೆಯ ಅತಿ ದುಬಾರಿ ವ್ಯವಹಾರದ ಬಗ್ಗೆ ಮಾತನಾಡುತ್ತಾ ಇದೇ ಭಾವನೆಗಳನ್ನು ವ್ಯಕ್ತಪಡಿಸಿದರು. +ಅವರು ಹೇಳಿದ್ದೇನೆಂದರೆ. +“ಇನ್ನೂ ಹೆಚ್ಚಿನ ಅನಿಷ್ಟ ಪಾಠವೊಂದಿದೆ. +ಸದ್ಯದ ವ್ಯವಸ್ಥೆಯಡಿಯಲ್ಲಿ ಭಾರತೀಯ ಜನಾಂಗ ಕುಬ್ಬವಾಗುತ್ತಿದೆ. +ನಾವು ನಮ್ಮ ಜೀವನದಾದ್ಯಂತ ಕೀಳರಿಮೆಯ ವಾತಾವರಣದಲ್ಲಿಯೇ ಜೀವಿಸಬೇಕಾಗಿದೆ. + ಸದ್ಯದ ವ್ಯವಸ್ಥೆಯ ಅವಶ್ಯಕತೆಗಳ ತೃಪ್ತಿಗಾಗಿ ನಮ್ಮಲ್ಲಿಯ ಅತ್ಯಂತ ದೊಡ್ಡವರೂ ಕೂಡ ಬಾಗಿ ನಡೆಯಬೇಕಾಗಿದೆ. +ಈಟನ್‌ ಮತ್ತು ಹ್ಯಾರೊ ಶಾಲೆಗಳಲ್ಲಿ ಪ್ರತಿಯೊಬ್ಬ ಬಾಲಕನು ತಾನು ಮುಂದೆ ಎಂದಾದರೂ ಒಂದು ದಿನ ಒಬ್ಬ ಗ್ಲ್ಯಾಡ್‌ಸ್ಟನ್‌ ಅಥವಾ ನೆಪೋಲಿಯನ್‌ ಅಥವಾ ಒಬ್ಬ ವೆಲಿಂಗ್ಟನ್ನನಾಗುವೆಎಂಬ ಮಹಾದಾಕಾಂಕ್ಟೆಯಿಂದ ತನಗೆ ಸಾಧ್ಯವಾದ ಸರ್ವಪ್ರಯತ್ನ ಮಾಡುವ ಅವಕಾಶವನ್ನು ನಮಗೆ ನಿರಾಕರಿಸಲಾಗಿದೆ. +ನಮ್ಮ ವ್ಯಕ್ತಿತ್ವ ಎಷ್ಟು ಎತ್ತರ ಬೆಳೆಯಲು ಸಾಧ್ಯವೋ ಅಷ್ಟು ಎತ್ತರವನ್ನು ನಾವು ಈ ವ್ಯವಸ್ಥೆಯಲ್ಲಿ ಎಂದೂ ತಲುಪಲಾರೆವು. +ಸ್ವಯಂ ಆಡಳಿತ ಹೊಂದಿರುವ ಪ್ರತಿಯೊಂದು ಜನಾಂಗ ಅನುಭವಿಸುವ ನೈತಿಕ ಉತ್ಕರ್ಷವನ್ನು ನಾವು ಎಂದಿಗೂ ಅನುಭವಿಸಲಾರೆವು. +ನಮ್ಮ ದೇಶದಲ್ಲಿಯೇ ನಾವು ಕಟ್ಟಿಗೆ ಕಡಿಯುವವರಾಗಿ ಮತ್ತು ನೀರು ಸೇದುವವರಾಗಿಯೇ ಖಾಯಂ ರೂಪ ಹೊಂದುವ ತನಕ ನಮ್ಮ ಆಡಳಿತಾತ್ಮಕ ಮತ್ತು ಸೈನಿಕ ಸಾಮರ್ಥ್ಯಗಳು ಬಳಕೆಯಾಗದೆ ಕ್ರಮೆಣ ನಶಿಸಿ ಹೋಗುತ್ತವೆ.” +ಒಬ್ಬ ಬ್ರಾಹ್ಮಣ (ಅವನು ಘನವಂಂತ ಬ್ರಾಹ್ಮಣನೇ ಇರಬೇಕು) ಬ್ರಿಟಿಷ್‌ ನೌಕರಶಾಹಿಯನ್ನು ಅಪಮಾನಗೊಳಿಸಲು ವ್ಯಕ್ತಪಡಿಸಿದಂತಹ ಭಾವನೆಗಳನ್ನು ಅಸ್ಪೃಶ್ಯರು ಬ್ರಾಹ್ಮಣರ ಸ್ವಲ್ಪ ಜನಾಧಿಪತ್ಯವನ್ನು ಅಪಮಾನಗೊಳಿಸಲು ಹೆಚ್ಚು ಯೋಗ್ಯ ರೀತಿಯಲ್ಲಿ ವ್ಯಕ್ತಪಡಿಸಬಾರದೇಕೆ ಎಂಬ ಭಾವನೆಯತ್ತ ಸಮಿತಿಯ ಗಮನ ಸೆಳೆಯಬಯಸುತ್ತೇನೆ. +ನೌಕರಶಾಹಿಯು ಯಾವ ಜನತೆಗಾಗಿ ಮಾಡಿದಂತಹ ಸರಕಾರದ ವ್ಯವಸ್ಥೆ ಅದೇ ಜನತೆಯನ್ನು ಕುಬ್ಬರನ್ನಾಗಿ ಮಾಡಿತ್ತೋ ಆ ವ್ಯವಸ್ಥೆಯಲ್ಲಿ ಬದಲಾವಣೆಗಳನ್ನು ಮಾಡಬೇಕೆಂಬ ಭಾವನೆಗಳನ್ನು ಅರಿತುಕೊಳ್ಳುವುದರ ಮೂಲಕ ತನ್ನ ಮೇಲಿನ ಅಪಾದನೆಗಳನ್ನು ಸುಳ್ಳಾಗಿಸಿದೆ ಎಂದು ಪ್ರಶಂಸಾಪೂರ್ವಕವಾಗಿ ಹೇಳಬಹುದು. +ಆದರೆ ಈ ಅಲ್ಪ ಜನಾಧಿಪತ್ಯವು ಇದರರ್ಧದಷ್ಟಾದರೂ ಪ್ರಶಂಸೆಗೆ ಪಾತ್ರವಾಗಿದೆಯೇ? +ಹಿಂದೂ ಸಾಮಾಜಿಕ ವ್ಯವಸ್ಥೆಯು ಸರ್ವಕಾಲೀನ ಅತಿಮಾನವ ದೃಷ್ಟಿಯನ್ನು ಹೊಂದಿದ್ದ ಮತ್ತು ಮುಂದಿನ ಯುಗಗಳಿಗಾಗಿ ಶಾಶ್ವತ ವ್ಯವಸ್ಥೆ ಮಾಡುವಂತಹ ಅಸಾಧಾರಣ ಶಕ್ತಿಯನ್ನು ಪಡೆದಿದ್ದಂತಹ ತಮ್ಮ ಪೂರ್ವಜರಿಂದ ಪರಿಪೂರ್ಣಿತವಾದ ವ್ಯವಸ್ಥೆಯಾಗಿದೆ ಎಂಬುದು ಅವರ ನಂಬಿಕೆ. +ಈ ಮನುಕುಲ ವ್ಯವಸ್ಥೆಯಲ್ಲಿ ಅವರಲ್ಲಿ ಆಳವಾಗಿ ಬೇರೂರಿರುವ ಭಾವನೆ ಹಿಂದೂ ಸಮಾಜದ ಪುನರಚನೆಗೆ ಅತಂಕವಾಗಿದೆ. +ಮತ್ತು ಸಾರ್ವಜನಿಕ ಹಿತದ ದೃಷ್ಟಿಯಿಂದ ಮಾಡಬೇಕಾದ ಪಟ್ಟಭದ್ರ ಹಿತಾಸಕ್ತಿಗಳ ಪುನಃಪರಿಶೀಲನೆಗೆ ಅಡ್ಡಿಯಾಗಿದೆ. +೧೯೧೮ನೇ ಮಾರ್ಚ್‌ ತಿಂಗಳಲ್ಲಿ ಮುಂಬಯಿಯಲ್ಲಿ ಅಸ್ಪಶ್ಯತಾ ನಿವಾರಣೆಗಾಗಿ ಸಮ್ಮೇಳನದ ಒಂದು ನಾಟಕವನ್ನಾಡಲಾಯಿತು. +ಡಾಕ್ಟರ್‌ ಕುರ್ತಕೋಟಿ, ಕರವೀರ ಪ್ರಸಿದ್ಧಿಯ ಶಂಕರಾಚಾರ್ಯರು ಯಾವುದೋ ತುರ್ತುಕಾರ್ಯದ ನೆಪದಲ್ಲಿ ಸಮ್ಮೇಳನಕ್ಕೆ ಒಂದೆರಡು ದಿನ ಮುಂಜೆಯೇ ಉತ್ತರ ಹಿಂದೂಸ್ಥಾನಕ್ಕೆ ಹೋದರು. +ಶ್ರೀಯುತ ಟಿಳಕರು ಸಮ್ಮೇಳನದಲ್ಲಿ ಒಂದುಪುಟ್ಟ ಭಾಷಣ ಮಾಡಿದರೆಂದು ಹೇಳಲಾಗಿದೆ. +ಟಿಳಕರ ಅದೃಷ್ಟವೋ ಏನೋ ಈ ಭಾಷಣ ವರದಿಯಾಗಲಿಲ್ಲ. +ಆದರೆ ಇದು ಅಸ್ಪಶ್ಯರನ್ನು ವಂಚಿಸಲು ಅವರು ತೋರಿದ ಒಣ ಸಹಾನುಭೂತಿಯಾಗಿತ್ತು. +ಏಕೆಂದರೆ ಅಸ್ಪೃಶ್ಯತಾ ನಿವಾರಣೆಗಾಗಿ ಸಿದ್ಧಪಡಿಸಿದ ಫೋಷಣೆಯ ಕರಡು ಪ್ರತಿಯನ್ನು ತೋರಿಸಿದಾಗ ಅದಕ್ಕೆ ತಮ್ಮ ಸಹಿ ಹಾಕುವುದರ ಮೂಲಕ ಅದನ್ನು ಮಾನ್ಯ ಮಾಡಲು ನಿರಾಕರಿಸಿದರೆಂದು ಅತ್ಯಂತ ವಿಶ್ವಸನೀಯನ ಸಾಕ್ಷಿಯಿಂದ ತಿಳಿದುಬಂದಿದೆ. +ಒಂದು ರಾಷ್ಟ್ರದೊಳಗಡೆ ಇರುವಂತಹ ವೈಷಮ್ಯ ಮತ್ತು ಸಾಮರಸ್ಯದ ಅಭಾವದ ನಿದರ್ಶನವನ್ನು ಇದು ತೋರಿಸುತ್ತದೆಯಾದ್ದರಿಂದ ಸ್ವಯಂನಿರ್ಣಯದ ತತ್ವವನ್ನು ಅನ್ವಯಿಸಲು ಇದು ಸೂಕ್ತವಾದ ಪ್ರದೇಶವಾಗಿದೆ. +ಮುಂದುವರಿದ ವರ್ಗಗಳು ಈ ತತ್ವವನ್ನು ಭಾರತಕ್ಕೆ ಅನ್ವಯಿಸಲು ಒತ್ತಾಯಪಡಿಸುತ್ತಿದ್ದರೆ,ಮುಂದುವರೆದು ಭಾರತೀಯರ ಬೆಳವಣಿಗೆ ಕುಂಠಿತಗೊಳ್ಳುವುದನ್ನು ತಪ್ಪಿಸಲು ಈ ಸಮಿತಿಯವರು ಭಾಗಶಃ ಒಪ್ಪಿದ್ದರೂ ಕೂಡ, ಅಸ್ಪೃಶ್ಯರು ತಮ್ಮ ಹಿತದೃಷ್ಟಿಯಿಂದ ಇದರ ಸೌಲಭ್ಯವನ್ನು ತಮಗೂ ವಿಸ್ತರಿಸಬೇಕೆಂದು ಕೇಳುವುದು ನ್ಯಾಯಯುತವಲ್ಲವೇ? +ಸ್ವಯಂನಿರ್ಣಯದ ಅವಶ್ಯಕತೆಯನ್ನು ಅಸ್ಪಶ್ಯರ ವಿಷಯದಲ್ಲಿ ಒಪ್ಪಿಕೊಂಡಿದ್ದೇ ಆದರೆ, ಕೋಮು ಪ್ರಾತಿನಿಧ್ಯವನ್ನು ಅವರಿಗೆ ನಿರಾಕರಿಸಲು ಬರುವುದಿಲ್ಲ. +ಏಕೆಂದರೆ ಕೋಮು ಪ್ರಾತಿನಿಧ್ಯ ಮತ್ತು ಸ್ವಯಂನಿರ್ಣಯ ತತ್ವ ಒಂದೇ ಅರ್ಥಕೊಡುವ ಎರಡು ಭಿನ್ನಪದಗಳು. +ಶ್ರೀಯುತ ಭೀಮರಾವ್‌ ಆರ್‌.ಅಂಬೇಡ್ಕರ್‌ ಅವರ ಪೂರಕ ಲಿಖಿತ ಹೇಳಿಕೆ . +ಸರಕಾರವು ಸಿಂಧದ ಹಿಂದೂಗಳಿಗೆ ೩ ಸ್ಥಾನಗಳನ್ನು ಕಾಯ್ದಿರಿಸಿದೆ. +ನಾನು ಅವರಿಗೆ ೪ ಸ್ಥಾನಗಳನ್ನು ಸೂಚಿಸಿದ್ದೇನೆ. +ಅದರಲ್ಲಿ ಒಂದನ್ನು ಸಿಂಧದ ಅಸ್ಪಶ್ಯರಿಗಾಗಿ ನಿಗದಿಪಡಿಸಿ ಅದಕ್ಕೆ ಕೋಮು ಚುನಾಯಕರಿ೦ದ ಆಯ್ಕೆಯಾಗಬೇಕು. +ಆರು ನಗರಗಳಿಗೆ ನಾನು ೧೭ ಸ್ಥಾನಗಳನ್ನು ಕಾಯ್ದಿರಿಸಿದ್ದೇನೆ. +ಇವುಗಳಲ್ಲಿ ೧೦ ಸ್ಥಾನಗಳನ್ನು ಮುಂಬಯಿ ನಗರಕ್ಕೆ ಕೊಡಬೇಕೆಂದು ನಾನು ಸೂಚಿಸುತ್ತೇನೆ. +ಈ ನಗರದ ೧೦ ಸ್ಥಾನಗಳಲ್ಲಿ ಒಂದನ್ನು ನಗರದ ಅಸ್ಪಶ್ಯರಿಗೆ ಕೊಡಬೇಕು. +ಈ ಸ್ಥಾನಕ್ಕೂ ಸಹ ಕೋಮು ಚುನಾಯಕರಿಂದ ಆಯ್ಕೆಯಾಗಬೇಕು. +ಸಿಂಧದ ಮತ್ತು ಮುಂಬಯಿಯ ಅಸ್ಪಶ್ಯರಿಗೆ ಯಾವ ರೀತಿ ಪ್ರಾತಿನಿಧ್ಯ ಕೊಡಬಹುದೆಂದು ಇದುವರೆಗೆ ವಿವರಿಸಲಾಗಿದೆ. +ಈ ಎರಡು ಸ್ಥಾನಗಳೂ ಅಲ್ಲದೆ ಅಸ್ಪಶ್ಯರಿಗೆ, ಮುಂಬಯಿ ನಗರವನ್ನು ಹೊರತುಪಡಿಸಿ, ಪ್ರಾಂತ್ಯಕ್ಕಾಗಿಯೇ ೭ ಸ್ಥಾನಗಳನ್ನು ಕೊಡಬೇಕು. +ಯಾವ ಮತಕ್ಷೇತ್ರಗಳಲ್ಲಿ ಈ ೭ ಸ್ಥಾನಗಳನ್ನು ಹಂಚಬೇಕೆಂಬುದನ್ನು ನನ್ನ ಮೊದಲನೆಯ ಹೇಳಿಕೆಯ ೭ನೆಯ ಪುಟದಲ್ಲಿ ಸೂಚಿಸಿದ್ದೇನೆ. +ಈ ರೀತಿ ಪ್ರಾಂತ್ಯದ ಅಸ್ಪೃಶ್ಯರಿಗಾಗಿ ೯ ಸ್ಥಾನಗಳನ್ನು ರಚಿಸಬೇಕು. +ಮುಂಬಯಿ ಸರಕಾರಕ್ಕೆ ನಿಮ್ನ ವರ್ಗಗಳನ್ನು ಗುರುತಿಸುವುದು ಕಷ್ಟವಾಗಿದೆ. +ಇದು ನಿಜವಾಗಿ ಕಷ್ಟವೇನೂ ಅಲ್ಲ. +ಏಕೆಂದರೆ, ವಾಸ್ತವಿಕವಾಗಿ ಅಸ್ಪೃಶ್ಯರು ಮತ್ತು ನಿಮ್ನ ವರ್ಗದವರು ಒಂದೇ ಆಗಿದ್ದಾರೆ. +ಅಸ್ಪೃಶ್ಯರ ಹೀನಾಯ ಸ್ಥಿತಿಯನ್ನು ಅರಿತಿದ್ದರೂ, ಮುಂಬಯಿ ಸರಕಾರದ ಜಡತ್ವ ನಿಜವಾಗಿಯೂ ಅಶ್ವರ್ಯಕರವಾಗಿದೆ. +ನಿಮ್ನ ವರ್ಗಗಳ ಪ್ರಾತಿನಿಧ್ಯಕ್ಕೆ ಅವಕಾಶ ಮಾಡದಿರುವ ಮೂಲಕ ಸರಕಾರವು ಉದ್ದೇಶಪೂರ್ವಕವಾಗಿಯೇ ಅತ್ಯಂತ ಗಂಭೀರವಾದ ಹಿತಾಸಕ್ತಿಯನ್ನು ಅನಾಹುತಕ್ಕೊಡ್ಡಿದೆ. +ಸಮಿತಿಯ ಈ ಅನಾಹುತವನ್ನು ತಪ್ಪಿಸಲಿದೆಯೆಂಬ ಭಾವನೆ ನನಗಿದೆ. +ಈ ೬ಂ ಸ್ಥಾನಗಳಲ್ಲಿ ಏಳನ್ನು ತೆಗೆದುಕೊಂಡ ಮೇಲೆ, ಉಳಿದ ೫೩ ಸ್ಥಾನಗಳನ್ನು ಈ ಕೆಳಗೆ ಹೇಳುವ ಇಪ್ಪತ್ತಾರು ಜಿಲ್ಲೆಗಳ ಸ್ಪೃಶ್ಯರ ನಡುವೆ ಹಂಚಬೇಕೆಂದು ಸೂಚಿಸುತ್ತೇನೆ. +ಈ ವಿಷಯದಲ್ಲಿ ನಾನು ಸರಕಾರದೊಡನೆ ಅಷ್ಟಾಗಿ ಸಮ್ಮತಿಸದಿದ್ದಾಗ್ಯೂ ಸಿಂಧದ ೭ ಜಿಲ್ಲೆಗಳು ತಲಾ ೨ ರಂತೆ ೧೪ ಸದಸ್ಯರನ್ನು ಚುನಾಯಿಸಬೇಕು. +ಆದರೆ ಸಿಂಧದ ಹೊರಗಡೆ ಉಳಿದ ೧೯ಜಿಲ್ಲೆಗಳಿಗೆ ದ್ವಿಸದಸ್ಯ ಮತಕ್ಷೇತ್ರ ಸಾಲದು. +ಏಕೆಂದರೆ, ಈ ಜಿಲ್ಲೆಗಳಲ್ಲಿ ಸವರ್ಣ ಹಿಂದೂಗಳ ಜನಸಂಖ್ಯೆ ಎಲ್ಲಾ ಭಾಗಗಳಲ್ಲಿ ಒಂದೇ ಬಗೆಯದಾಗಿಲ್ಲ. +ಸವರ್ಣ ಹಿಂದೂಗಳ ವಿವಿಧ ಉಪಶಾಖೆಗಳ ಆಶೋತ್ತರಗಳನ್ನು ಈಡೇರಿಸುವುದಕ್ಕಾಗಿ ಕೆಲವು ಕಡೆಯಾದರೂ ದ್ವಿಸದಸ್ಯ ಕ್ಷೇತ್ರದ ಆಧಾರವನ್ನು ಕೈಬಿಡಬೇಕಾಗುತ್ತದೆ. +ಈ ರೀತಿ ಜಿಲ್ಲೆಗಳ ಸಮುದಾಯಗಳನ್ನು ರಚಿಸುವುದರ ಪ್ರಮುಖ ಉಪಯುಕ್ತತೆ ಎಂದರೆ ಕೋಮುವಾರು ಪ್ರಾತಿನಿಧ್ಯವನ್ನು ನೀಡದೇ ಮರಾಠರು ಮತ್ತು ಲಿಂಗಾಯತರ ಬೇಡಿಕೆಗಳನ್ನು ಈಡೇರಿಸುವುದು. +ರಾಜಕೀಯ ಉದ್ದೇಶದಿಂದ ಮತ್ತು ಕೋಮುವಾರು ಪ್ರಾತಿನಿಧ್ಯದ ಕ್ಷೇತ್ರವನ್ನು ಕನಿಷ್ಠ ಪ್ರಮಾಣಕ್ಕೆ ಇಳಿಸುವ ದೃಷ್ಟಿಯಿಂದ ಜಿಲ್ಲೆಗಳ ಎಲ್ಲೆಗಳನ್ನು ದಾಟುವುದನ್ನು ವಿರೋಧಿಸಬೇಕಾಗಿಲ್ಲ. +ಮಹಮ್ಮದೀಯರಿಗೆ ಕೊಡಬೇಕಾದ ಪ್ರತಿನಿಧಿಗಳ ಸಂಖ್ಯೆಯ ಸಂಬಂಧವಾಗಿ ಮುಂಬಯಿ ಸರಕಾರದೊಂದಿಗೆ ನನ್ನ ಭಿನ್ನಾಭಿಪ್ರಾಯವಿದೆ. +ಜನಸಂಖ್ಯೆ ಮತ್ತು ಕಾಂಗ್ರೆಸ್‌ ಯೋಜನೆ, ಈ ಎರಡು ಆಧಾರಗಳಲ್ಲಿ, ಮುಂಬಯಿ ಸರಕಾರವು ವಿಚಾರ ಮಾಡುವ ಗೋಜಿಗೆ ಹೋಗದೆ, ಕಾಂಗ್ರೆಸ್‌ ಯೋಜನೆಯನ್ನು ಒಪ್ಪಿಕೊಂಡಿದೆ. +ಹೀಗೆ ಮಾಡುವಲ್ಲಿ ಅವರು ಸುಧಾರಣೆಗಳ ಯೋಜನೆಯ ಕರ್ತೃಗಳ ಅತ್ಯಂತ ವಿಚಾರಪರ ಅಭಿಪ್ರಾಯವನ್ನು ಕೂಡ ಕಡೆಗಣಿಸಿದ್ದಾರೆ. +ಕರ್ತೃಗಳು ಹೇಳಿರುವಂತೆ, ಹೀಗೆ ಮಾಡುವುದಕ್ಕೆ ಕಾಂಗ್ರೆಸ್‌-ಲೀಗ್‌ ಯೋಜನೆಯಲ್ಲಿ ನಿಗದಿತವಾದ ಮಹಮ್ಮದೀಯರ ಪ್ರಾತಿನಿಧ್ಯದ ಪ್ರಮಾಣದ ಬಗ್ಗೆ ಸಂಧಾನ ಮಾಡುವುದೇ ಇರುವ ವಿಶಾಲ ಜನಸಮೂಹದ ಪರವಾಗಿ ಕಾಂಗ್ರೆಸ್‌ನ ವಾಗ್ದಾನಗಳು ಆ ಜನರಿಗೆ ಬಾಧ್ಯವಾಗಲಾರವು. +ಮಹಮ್ಮದೀಯರು ಈ ಪ್ರಾಂತ್ಯದ ಒಟ್ಟು ಜನಸಂಖ್ಯೆಯ ಶೇಕಡಾ ೨ಂ ರಷ್ಟಿದ್ದಾರೆ. +ಆದ್ದರಿಂದ ಜನಸಂಖ್ಯೆಯ ಆಧಾರದ ಮೇಲೆ ೧ಂಂ ಚುನಾಯಿತ ಸ್ಥಾನಗಳಲ್ಲಿ ಅವರಿಗೆ ೨ಂ ಸ್ಥಾನಗಳನ್ನು ಮಾತ್ರ ನೀಡಬೇಕಾಗುತ್ತದೆ. +ಅವಶ್ಯಕತೆಯ ಆಧಾರದ ಮೇಲೆ ಹೆಚ್ಚೆಂದರೆ ೨೪ ಸ್ಥಾನಗಳಿಂದ ಅವರು ತೃಪ್ತರಾಗಬೇಕು. +ಇಷ್ಟು ಸ್ಥಾನಗಳಿಗಿಂತ ಹೆಚ್ಚು ಸ್ಥಾನಗಳನ್ನು ಕೊಡುವುದನ್ನು ಸಹಿಸಲಾಗದು. +ಏಕೆಂದರೆ ಇದಕ್ಕಾಗಿ ಬೇರೆ ಕೋಮಿನವರ ಸ್ಥಾನಗಳಲ್ಲಿ ಕಡಿತ ಮಾಡಬೇಕಾಗುತ್ತದೆ. +೨೪ ಸ್ಥಾನಗಳಲ್ಲಿ ಸಿಂಧದ ೭ ಜಿಲ್ಲೆಗಳು ತಲಾ ಇಬ್ಬರಂತೆ ಒಟ್ಟು ೧೪ ಮಹಮ್ಮದೀಯರ ಪ್ರತಿನಿಧಿಗಳನ್ನು ಚುನಾಯಿಸುತ್ತವೆ. +ಮಹಮ್ಮದೀಯರಿಗೂ ಸಹ ನಾನು ವಿಭಾಗಾವಾರು ಸಮುದಾಯಗಳಿಂತ ಭಾಷಾವಾರು ಸಮುದಾಯಗಳನ್ನೇ ಹೆಚ್ಚು ಬಯಸುತ್ತೇನೆ. +ಥಾಣಾ ಮತ್ತು ಸೂರತ್‌ ಜಿಲ್ಲೆಗಳು ಒಂದೇ ವಿಭಾಗದಲ್ಲಿದ್ದ ರೂಥಾಣಾದ ಮಹಮ್ಮದೀಯರಿಗೂ ಮತ್ತು ಸೂರತ್‌ದ ಮಹಮ್ಮದೀಯರಿಗೂ ಹೇಗೆ ಸಂಬಂಧವಿರಲು ಸಾಧ್ಯ? +ವಿಭಿನ್ನ ಕುಲ (ಪಂಗಡ) ಗಳವರನ್ನು ರಾಜಕೀಯ ಉದ್ದೇಶಗಳಿಗಾಗಿ ಒಂದು ಗೂಡಿಸುವುದು ಅಸಂಬದ್ಧವೆನಿಸುವುದು. +ಶ್ರೀಯುತ ಭೀಮರಾವ್‌ ಆರ್‌.ಅಂಬೇಡ್ಕರ್‌ ಅವರನ್ನು ಕರೆಸಿ ಹೇಳಿಕೆ ಪಡೆಯಲಾಯಿತು. +ಸರ್‌ ಫ್ರ್ಯಾಂಕ್‌ ಸ್ಲೈ ಶ್ರೀಯುತ ಅಂಬೇಡ್ಕರ್‌ ಅವರು ಸಿಡೆನ್‌ಹ್ಯಾಪು ಕಾಮರ್ಸ್‌ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿದ್ದರು. +ಮುಂಬಯಿಯ ಎಲ್ಫಿನ್‌ಸ್ಟನ್‌ ಕಾಲೇಜಿನ ಪದವಿಯನ್ನು, ನ್ಯೂಯಾರ್ಕಿನ ಕೊಲಂಬಿಯಾ ವಿಶ್ವವಿದ್ಯಾಲಯದಿ೦ದ ಎಂ.ಎ. ಪದವಿಯನ್ನು ಪಡೆದಿದ್ದಾರೆ. +ಇವರು ಮಹಾರ ಕೋಮಿನವರಾಗಿದ್ದು,ಇವರ ಹೇಳಿಕೆ ಹೆಚ್ಚಾಗಿ ನಿಮ್ಮ ವರ್ಗಗಳನ್ನು ಕುರಿತಾಗಿದೆ. +ಇವರು ಹಿಂದೂಗಳನ್ನು ಸ್ಪೃಶ್ಯರು ಮತ್ತು ಅಸ್ಪೃಶ್ಯರು ಎಂದು ಎರಡು ವರ್ಗಗಳಲ್ಲಿ ವಿಭಿಜಿಸಿದ್ದಾರೆ. +ಈ ವಿಭಜನೆ ಆಚರಣೆಯಲ್ಲಿ ಸುಸ್ಪಷ್ಟವಾಗಿದ್ದು ಜಾತಿಗಳ ಆಧಾರದ ವಿಭಜನೆಗಿಂತ ಹೆಚ್ಚು ಅನುಕೂಲಕರವಾಗಿದೆ. +ಬ್ರಾಹ್ಮಣ ಮತ್ತು ಬ್ರಾಹ್ಮಣೇತರ ಎಂಬ ಬ್ರಾಹ್ಮಣೇತರರ ನಡುವಣ ವ್ಯತ್ಯಾಸ ಒಬ್ಬ ಅಭ್ಯರ್ಥಿಯ ವಿಷಯದಲ್ಲಿ ಮತದಾರರ ಮನೋಭಾವ ಹೆಚ್ಚು ಭಿನ್ನವೆನಿಸುವುದಿಲ್ಲ. +ಆದರೆ ಸ್ಪೃಶ್ಯ ಮತ್ತು ಅಸ್ಪೃಶ್ಯನ ನಡುವಣ ವ್ಯತ್ಯಾಸ ಹೆಚ್ಚು ಭಿನ್ನವೆನಿಸುವುದು. +ಇವರು ತಮ್ಮ ಪೂರಕ ಹೇಳಿಕೆಯಲ್ಲಿ ಸೂಚಿಸಿದ ಪ್ರಕಾರ ತ್ರಿಸದಸ್ಯ ಕ್ಷೇತ್ರಗಳಲ್ಲಿ ಬ್ರಾಹ್ಮಣೇತರರಿಗೆ ಕೆಲವು ಸ್ಥಾನಗಳು ದೊರಕುವುದರಿಂದ, ಬ್ರಾಹ್ಮಣೇತರರಿಗೆ ಕೋಮುವಾರು ಪ್ರಾತಿನಿಧ್ಯದ ಅವಶ್ಯಕತೆ ಇದೆ ಎಂದು ಅವರು ತಿಳಿದಿಲ್ಲ. +ಅವರ ಲಿಖಿತ ಹೇಳಿಕೆಯ ೧೬ನೆಯ ಪ್ಯಾರಾದಲ್ಲಿ ಕೊಟ್ಟಿರುವ ಅಂಕಿಸಂಖ್ಯೆಗಳ ಆಧಾರದ ಮೇಲೆ ಏಕರೀತಿಯ ಆಸ್ತಿ ಅರ್ಹತೆಯ ಮೇಲೆ ಜನಸಂಖ್ಯೆಯಲ್ಲಿ ಅಲ್ಪಸಂಖ್ಯಾತರೆನಿಸಿದ ಕೋಮುಗಳು ಮತದಾನ ಬಲದಿಂದ ಬಹುಸಂಖ್ಯಾತವಾಗಬಹುದು. +ಅವರು ನಮೂದಿಸಿದ ಕೆಲವು ಕೋಮುಗಳು ಇಡೀ ಪ್ರಾಂತ್ಯದಲ್ಲಿ ಅಲ್ಪಸಂಖ್ಯಾತವಾಗಿರಬಹುದಾದರೂ, ಕೆಲವು ಜಿಲ್ಲೆಗಳಲ್ಲಿ ಅವು ಬಹುಸಂಖ್ಯಾತವಾಗಿರಬಹುದು. +ಆದ್ದರಿಂದ ಕೋಮುವಾರು ಪ್ರಾತಿನಿಧ್ಯದ ಉದ್ವೇಗವನ್ನು ಸಾಧ್ಯವಾದ ಮಟ್ಟಿಗೆ ತಗ್ಗಿಸುವ ಪ್ರಯತ್ನ ಮಾಡಬೇಕು. +ಇದಕ್ಕಾಗಿ ಅವರು ತ್ರಿಸದಸ್ಯ ಕ್ಷೇತ್ರಗಳ ರಚನೆಗೆ ಶಿಫಾರಸು ಮಾಡಿದ್ದಾರೆ. +ಅಸ್ಪೃಶ್ಯರ ಮತಾಧಿಕಾರದಲ್ಲಿ ಅವರು ಕೆಲವು ಮಾರ್ಪಾಟುಗಳನ್ನು ಬಯಸಿದ್ದರು. +ಆದರೆ ಇಬ್ಬರು ಸದಸ್ಯರಿಗಿಂತ ಹೆಚ್ಚು ಸದಸ್ಯರ ಮತಕ್ಷೇತ್ರಗಳನ್ನು ರಚಿಸಿದ್ದಾಗ ಮತದಾನದ ಹಕ್ಕಿನ ಅರ್ಹತೆಗಳನ್ನು ಇಳಿಸುವ ಪ್ರಶ್ನೆ ಅಷ್ಟು ಮಹತ್ವದ ಪ್ರಶ್ನೆಯಾಗುವುದಿಲ್ಲ. +ಚಿಕ್ಕ ಮತ ಕ್ಷೇತ್ರಗಳಲ್ಲಿ ಉದಾಹರಣೆಗಾಗಿ ಮರಾಠಿರಿಗಾಗಿರುವ ಕ್ಷೇತ್ರಗಳಲ್ಲಿ, ಅವರನ್ನು ಒಟ್ಟುಗೂಡಿಸುವುದು ಅಪೇಕ್ಷಣೀಯವೆನಿಸಬಹುದು. +ಯಾವುದೇ ಒಂದು ಕೋಮಿನವರು ಒಂದು ಮತಕ್ಷೇತ್ರದಲ್ಲಿ ಬಹುಸಂಖ್ಯೆಯ ಮತಗಳನ್ನು ಹೊಂದಿದ್ದರೆ,ಅಂತಹ ಕೋಮಿನವರಿಗೆ ಪ್ರತ್ಯೇಕ ಕೋಮುವಾರು ಪ್ರಾತಿನಿಧ್ಯದ ಅವಶ್ಯಕತೆ ಇರುವುದಿಲ್ಲ. +ಅದೇ ರೀತಿ ಯಾವುದಾದರೂ ಮತಕ್ಷೇತ್ರದಲ್ಲಿ ಅಸ್ಪೃಶ್ಯರು ಬಹುಸಂಖ್ಯೆಯಲ್ಲಿದ್ದುದೇ ಆದರೆ ಅವರು ಕೋಮುವಾರು ಪ್ರಾತಿನಿಧ್ಯವನ್ನು ಕೇಳುತ್ತಿರಲಿಲ್ಲ. +ಅವರು ಅಲ್ಪ ಸಂಖ್ಯಾತರಾಗಿರುವ ಕಾರಣಕ್ಕಾಗಿ ಮತ್ತು ಏಕರೂಪ ಮತದಾನದ ಹಕ್ಕಿನ ಪ್ರಕಾರ ಅವರು ಸದಾ ಅಲ್ಪಸಂಖ್ಯಾತರಾಗಿಯೇ ಉಳಿಯವರಾದ್ದರಿಂದ ಅವರು ಪ್ರತ್ಯೇಕ ಪ್ರಾತಿನಿಧ್ಯ ಕೇಳುತ್ತಿದ್ದಾರೆ. +ಅವರು ಉದಾರ ಮತದಾನ ಅರ್ಹತೆಯನ್ನು ಏಕೆ ಕೇಳುತ್ತಿದ್ದಾರೆಂದು ಅವರ ಅಸ್ಪಶ್ಯತೆಯಿಂದಾಗಿ ಅವರಿಗೆ ಆಸ್ತಿಯೇ ಇಲ್ಲ. +ಅವರ ಹತ್ತಿರ ಗಿರಾಕಿಗಳು ಹೋಗದಿರುವ ಕಾರಣ ಅವರು ವ್ಯಾಪಾರವನ್ನು ಮಾಡುವುದೂ ಸಾಧ್ಯವಾಗಲಿಲ್ಲ. +ಒಮ್ಮೆ ಒಬ್ಬ ಮಹಾರ ಮಹಿಳೆ ಕಲ್ಲಂಗಡಿ ಹಣ್ಣು ಮಾರಿದುದಕ್ಕಾಗಿ ಅವಳನ್ನು ಪೋಲೀಸು ಠಾಣೆಗೆ ಕರೆದೊಯ್ದ ಘಟನೆಯನ್ನು ಅವರು ಜ್ಞಾಪಿಸಿಕೊಂಡರು. +ಮುಂಬಯಿ ಪ್ರಾಂತ್ಯದ ಹೊರಗಡೆಯ ಪರಿಸ್ಥಿತಿ ಅವರಿಗೆ ಗೊತ್ತಿರಲಿಲ್ಲ. +ಮುಂಬಯಿ ಪ್ರಾಂತ್ಯದ ಗಿರಣಿಗಳಲ್ಲಿ ಅಸ್ಪೃಶ್ಯರನ್ನು ನೇಯ್ಗೆ ವಿಭಾಗದಲ್ಲಿ ಕೆಲಸ ಮಾಡಲು ಬಿಡುತ್ತಿರಲಿಲ್ಲ. +ಒಂದು ಪ್ರಸಂಗದಲ್ಲಿ ಒಬ್ಬ ಅಸ್ಪೃಶ್ಯ ತಾನು ಮಹಮ್ಮದೀಯನೆಂದು ಹೇಳಿಕೊಂಡು ಕೆಲಸ ಮಾಡುತ್ತಿದ್ದ ಆದರೆ ಸತ್ಯಸಂಗತಿ ತಿಳಿದಾಗ ಅವನನ್ನು ಕಠೋರವಾಗಿ ಥಳಿಸಲಾಯಿತು. +“ಅಸ್ಪೃಶ್ಯ” ಎಂದರೆ ತನ್ನ ಸ್ಪರ್ಶದಿಂದ ಇತರರನ್ನು ಅಪವಿತ್ರಗೊಳಿಸುವವ, ಎಂಬ ವ್ಯಾಖ್ಯೆ ಚುನಾವಣೆಯ ಉದ್ದೇಶ್ಯಗಳಿಗೆ ಸಮರ್ಪಕವಾಗಿದೆ. +ಕೆಲವು ಜಾತಿಗಳು ಕೆಲವು ಜಿಲ್ಲೆಗಳಲ್ಲಿ ಅಸ್ಪೃಶ್ಯವಾಗಿದ್ದವು. +ಇನ್ನೂ ಕೆಲವು ಜಿಲ್ಲೆಗಳಲ್ಲಿ ಸ್ಪೃಶ್ಯವಾಗಿದ್ದವು ಎಂಬುದು ನಿಜವಲ್ಲ. +ಅಂಬೇಡ್ಕರ್‌ ಅವರ ಲೆಕ್ಕಾಚಾರದ ಪ್ರಕಾರ ಅಸ್ಪೃಶ್ಯರು ಒಟ್ಟು ಜನಸಂಖ್ಯೆಯ ಶೇಕಡಾ ೮ರಷ್ಟಿದ್ದಾರೆ. +ಆದರೆ ಅವರು ೯ ಸ್ಥಾನಗಳನ್ನು ಕೇಳಿದ್ದಾರೆ. +ಅಂದರೆ ಪ್ರಾತಿನಿಧ್ಯ ಶೇಕಡಾ ೯ ರಷ್ಟಾಗುತ್ತದೆ. +ಈ ಸ್ಥಾನಗಳನ್ನು ಪ್ರತ್ಯೇಕ ಕೋಮುವಾರು ಚುನಾವಣೆಯ ಮೂಲಕ ತುಂಬಬೇಕು. +ಸದ್ಯದ ಅವರ ಬೆಳವಣಿಗೆಯ ಪರಿಸ್ಥಿತಿಯಲ್ಲಿ ಅಸ್ಪೃಶ್ಯರು ಜವಾಬ್ದಾರಿಯುತ ಮತವನ್ನು ಕೊಡಲು ಅರ್ಹನಾಗಿಲ್ಲ ಎಂಬ ಅರಿವು ಅವರಿಗಿದ್ದಿತು. +ಇಡೀ ಮುಂಬಯಿ ಪ್ರಾಂತ್ಯದಲ್ಲಿ ನಿಮ್ನ್ಮ ವರ್ಗದವರೊಳಗೆ ಕೇವಲ ಒಬ್ಬ ಪದವೀಧರ ಮತ್ತು ೬ ಅಥವಾ ೭ ಜನ ಮೆಟ್ರಿಕ್ಯುಲೇಷನ್‌ ಆದವರಿದ್ದರು. +ಇಂಗ್ಲಿಷನ್ನು ಕಲಿತವರ ಸಂಖ್ಯೆ ಬಹಳ ಕಡಿಮೆ ಇತ್ತು. +ಆದರೆ ಹಿಂದುಳಿದ ವರ್ಗಗಳವರಿಗಿಂತ ಕಡಿಮೆಯಂತೂ ಇರಲಿಲ್ಲ. +ನಿಮ್ನ ವರ್ಗದವರು, ಅದರಲ್ಲಿಯೂ ವಿಶೇಷವಾಗಿ ಮಹಾರರು ಮತ್ತು ಚಮ್ಮಾರರು, ಮತಚಲಾಯಿಸುವ ಯೋಗ್ಯತೆ ಹೊಂದಿದ್ದರು. +ಅವರಿಗೆ ಶಿಕ್ಷಣದ ಆಧಾರದ ಮೇಲೂ ಮತಾಧಿಕಾರಕೊಡಬೇಕೆಂದು ಅವರು ಹೇಳಿದ್ದಾರೆ. +ಹೈಸ್ಕೂಲಿನ ೬ ಅಥವಾ ೭ನೆಯ ತರಗತಿ ಪಾಸು ಮಾಡಿದ್ದಂತಹ ಕನಿಷ್ಠ ಪಕ್ಷ ೨೫ ಅಥವಾ ಅದಕ್ಕೂ ಹೆಚ್ಚು ಜನರು ಸಿಗುತ್ತಾರೆ. +ಮತ್ತು ಸಂಖ್ಯೆ ಹೆಚ್ಚಲ್ಲದಿದ್ದರೂ, ನಿಮ್ನ ವರ್ಗದವರಿಗಾಗಿ ಅವರು ಕೇಳಿದ್ದ ೯ ಸ್ಥಾನಗಳನ್ನು ಇವರೊಳಗಿಂದ ಭರ್ತಿ ಮಾಡಬಹುದೆಂದು ಅವರು ತಿಳಿದಿದ್ದರು. +ಅಂತಹ ಅಭ್ಯರ್ಥಿಯು ಪದವೀಧರವನಷ್ಟು ಸ್ಪಷ್ಟವಾಗಿ ಅಭಿಪ್ರಾಯ ವ್ಯಕ್ತಮಾಡಲಾರನಾದರೂ ವಾಸ್ತವಿಕವಾಗಿ ಅವನಷ್ಟೇ ಉಪಯುಕ್ತನಾಗಬಲ್ಲ. +ಬೇರೆ ಮಾರ್ಗಗಳಿಂದ ನಿಮ್ಮ ವರ್ಗದವರ ಪ್ರತಿನಿಧಿಗಳೆಂದು ಆರಿಸುವ ಯಾವುದೇ ವ್ಯವಸ್ಥೆಗೆ ಅವರು ವಿರೋಧವಾಗಿದ್ದರು. +ಉದಾಹರಣೆಗಾಗಿ, ಮಿಶನರಿಗಳನ್ನು ಈ ವರ್ಗಗಳ ಪ್ರತಿನಿಧಿಗಳನ್ನಾಗಿ ಮಾಡುವುದು ಯಾವ ಅರ್ಥದಲ್ಲಿಯೂ ನಿಜವಾದ ಪ್ರಾತಿನಿಧ್ಯವೆನಿಸದು. +ನಿಮ್ನ ವರ್ಗದವರಿಗೆ ಬೇಕಾಗಿದ್ದು ಸಂಖ್ಯೆಯಲ್ಲಿ ಸ್ಥಾನ ಮಹಮ್ಮದೀಯರಿಗೆ ಕೊಡಮಾಡಿದ ೧೮ ಸ್ಥಾನಗಳನ್ನು ೧ಂಕ್ಕೆ ಇಳಿಸಬೇಕೆಂದರು. +ಸ್ಥಾನಗಳನ್ನು ಈ ರೀತಿ ಕಡಿಮೆ ಮಾಡುವುದು ಸಮರ್ಥನೀಯವಾಗಿತ್ತು ಏಕೆಂದರೆ ಜನಸಂಖ್ಯೆಯ ಆಧಾರದ ಮೇಲೆ ಮಹಮ್ಮದೀಯರಿಗೆ ಒಟ್ಟು ಸ್ಥಾನಗಳಲ್ಲಿ ಶೇಕಡಾ ೨ಂಸ್ಥಾನಗಳಷ್ಟು ಮಾತ್ರ ದೊರೆಯಬೇಕು. +ಅವರ ಪ್ರಕಾರ ಕಾಂಗ್ರೆಸ್‌ಲೀಗ್‌ ಒಪ್ಪಂದ ಎಲ್ಲರಿಗೂ ಬಂಧನಕಾರಿಯಲ್ಲ. +| + ಅಸ್ಪಶ್ಯರೆನಿಸಿಕೊಂಡವರಿಗೆ ಕೆಲವು ನಾಗರಿಕ ಹಕ್ಕುಗಳನ್ನು ನಿರಾಕರಿಸಲಾಗಿತ್ತು. +ಉದಾಹರಣೆಗಾಗಿ, ರಸ್ತೆಗಳ ಮೇಲೆ ಓಡಾಡುವುದು ಪ್ರತಿಯೊಬ್ಬ ನಾಗರಿಕನ ಹಕ್ಕು. +ಯಾರನ್ನಾದರೂ,ತಾತ್ಕಾಲಿಕವಾಗಿ ಓಡಾಡದಂತೆ ತಡೆದರೂ ಅದು ಅವನ ಹಕ್ಕನ್ನು ಉಲ್ಲಂಫಿಸಿದಂತಾಗುತ್ತದೆ. +ಒಬ್ಬ ವ್ಯಕ್ತಿತನ್ನ ಹಕ್ಕು ಚಲಾಯಿಸುವುದನ್ನು ಕಾನೂನು ತಡೆದರೂ ಅಷ್ಟೇ ಅಥವಾ ಸಾಮಾಜಿಕ ರೂಢಿಯಿಂದ ಅಡ್ಡಿಯಾದರೂ ಅಷ್ಟೇ. +ಅಂಬೇಡ್ಕರ್‌ ಅವರ ದೃಷ್ಟಿಯಲ್ಲಿ ಇವೆರಡರಲ್ಲಿರುವ ವ್ಯತ್ಯಾಸ ಕ್ವಚಿತ್ತಾಗಿದೆ. +ಸರಕಾರವು ಈ ಸಾಮಾಜಿಕ ರೂಢಿಗಳನ್ನೇ ಮಾನ್ಯ ಮಾಡಿ ಅಸ್ಪೃಶ್ಯ ವರ್ಗದವರನ್ನು ಸರಕಾರಿ ಸೇವೆಯಲ್ಲಿ ನೇಮಕ ಮಾಡಿಕೊಳ್ಳುತ್ತಿಲ್ಲ. +ನಿಮ್ನ ವರ್ಗದವರ ಸ್ಥಿತಿಯನ್ನು ಸುಧಾರಿಸುವುದೇ ಸರಕಾರದ ಉದ್ದೇಶ್ಯವಾಗಿರುವುದರಿಂದ ಆ ಕೋಮುಗಳಿಗೆ ಮತಾಧಿಕಾರದ ಅರ್ಹತೆಗಳನ್ನು ಇಳಿಸಬೇಕೆಂದು ಅವರು ಸೂಚಿಸಿದರು. +ಜನಗಣತಿಯ ವರದಿಯನ್ನು ಪರಿಶೀಲಿಸಿ ಸ್ಪೃಶ್ಯ ಮತ್ತು ಅಸ್ಪಶ್ಯ ಸಮಸ್ಯೆ ಸಿಂಧದಲ್ಲಿರುವುದಾಗಿ ಇವರು ಹೇಳುತ್ತಾರೆ. +ಅಲ್ಲಿ ಹೆಚ್ಚು ಪ್ರಮಾಣದ ಜನಸಂಖ್ಯೆಯಲ್ಲಿ ಮಹಮ್ಮದೀಯರಿದ್ದಾಗ್ಯೂ ಹಿಂದೂಗಳೂ ಅಲ್ಲಿದ್ದಾರೆ. +ಸಿಂಧದಲ್ಲಿ ಹಿಂದೂಗಳಿಗಾಗಿ ವಿಶೇಷ ವ್ಯವಸ್ಥೆ ಮಾಡುವುದಾದರೆ ನಿಮ್ಮ ವರ್ಗದವರಿಗೂ ಅಂತಹ ವಿಶೇಷ ವ್ಯವಸ್ಥೆಯನ್ನು ಮಾಡಬಾರದೇಕೆ ಎಂದು ಇವರು ಕೇಳುತ್ತಾರೆ. +ಮಿಸ್ಟರ್‌ ಬ್ಯಾನರ್ಜಿ: ನಿಮ್ನ ವರ್ಗದವರು ಇಂಗ್ಲಿಷನ್ನು ಮಾತನಾಡಬಲ್ಲ ಮತ್ತು ತಮ್ಮ ಸಮಸ್ಯೆಗಳನ್ನು ವಿಧಾನ ಮಂಡಲಿಯಲ್ಲಿ ಮಂಡಿಸಬಲ್ಲ ೯ ಸದಸ್ಯರನ್ನು ಕೊಡಬಲ್ಲರು. +ಆರನೆಯ ತರಗತಿ ಮೆಟ್ರಿಕ್ಕುಲೇಷನ್ನಿನ ಕೆಳಗಿನ ತರಗತಿಯಾಗಿದ್ದು ೬ನೆಯ ತರಗತಿಯನ್ನು ಪಾಸು ಮಾಡಿದವರು ಮಂಡಲಿಯಲ್ಲಿ ಜರುಗುವ ಚರ್ಚೆಯನ್ನು ತಿಳಿದುಕೊಳ್ಳಬಲ್ಲರು. +ಈ ತರಗತಿಯನ್ನು ಪಾಸುಮಾಡಿದ ಸುಮಾರು ೨೫ ಜನರಿದ್ದಾರೆ. +ರಾಜಕೀಯ ಉದ್ದೇಶಗಳಿಗಾಗಿ ಅಸ್ಪಶ್ಯರಂತೇ ಇರುವ ನಿಮ್ಮ ವರ್ಗದವರನ್ನು ಗುರುತಿಸುವುದು ಕಷ್ಟವೇನಲ್ಲ. +ನಿಮ್ನ ವರ್ಗಕ್ಕೆ ಸೇರದ ಯಾವ ವ್ಯಕ್ತಿಯೂ ತಾನು ಆ ವರ್ಗಕ್ಕೆ ಸೇರಿದವನೆಂದು ಹೇಳಲು ಮುಂದಾಗುವುದಿಲ್ಲ. +ಆದರೆ ಇದು ಹಿಂದುಳಿದ ವರ್ಗದವರಲ್ಲಿ ಸಾಧ್ಯಇವರ ಪ್ರಾಕಾರ ನಿಮ್ನ ವರ್ಗದವರ ೮ ಪ್ರತಿನಿಧಿಗಳಿದ್ದರೆ ಸಾಕು ಮತ್ತು ಅವರನ್ನು ಚುನಾವಣೆಯ ಮುಖಾಂತರ ಆರಿಸಬೇಕು. +ನಾಮಕರಣಗೊಂಡ ಸದಸ್ಯರು ಇವರ ಸಮಸ್ಯೆಗಳನ್ನು ಪರಿಣಾಮಕಾರಿಯಾಗಿ ಪ್ರತಿನಿಧಿಸಲಾರರು. +ಮಿಸ್ಟರ್‌ ಕ್ರಂಪ್‌: ಇವರಿಗೆ ಸಿಂಧ್‌ ಪ್ರಾಂತ್ಯದ ಅಸ್ಪೃಶ್ಯರ ಸಮಸ್ಯೆ ಮತ್ತು ಪರಿಸ್ಥಿತಿಯ ಬಗ್ಗೆ ಅನುಭವವಿಲ್ಲದುದರಿಂದ ಇವರು ಅಲ್ಲಿ ಭಂಗಿಗಳೆಂದು ಕರೆಯಲಾಗುತ್ತಿರುವ ಒಂದೇ ಒಂದು ಗುಂಪು ಇದೆ ಎಂಬ ವಿಷಯದಲ್ಲಿ ಏನನ್ನೂ ಹೇಳಲಾಗಲಿಲ್ಲ. +ಇವರಿಗೆ ದೊರೆತ ಮಾಹಿತಿ ಪ್ರಕಾರ ಸಿಂಧದಲ್ಲಿ ಹಿಂದೂಗಳ ಸಂಖ್ಯೆ ೮೩೭, ೪೨೬ ಇತ್ತು ಮತ್ತು ಅಸ್ಪೃಶ್ಯರ ಒಟ್ಟು ಸಂಖ್ಯೆ ೧೩೫,೨೨೪ ಆಗಿತ್ತು. +ಮಿಸ್ಟರ್‌ ನಟರಾಜನ್‌: ಎಲ್ಲರಿಗೂ ಸಮಾನ ಅವಕಾಶಗಳನ್ನೊದಗಿಸುವುದೇ ಭಾರತದಲ್ಲಿ ಬ್ರಿಟಿಷ್‌ ಆಡಳಿತದ ಗುರಿಯಾಗಿದೆ ಎಂಬುದು ಇವರ ಅಭಿಪ್ರಾಯ. +ಜನತಾ ಮಂಡಲಿಗಳಿಗೆ ಬಹುಪಾಲು ಅಧಿಕಾರವನ್ನು ವರ್ಗಾಯಿಸುವಾಗ ಈಗಿರುವ ಕಷ್ಟಗಳು ಮತ್ತು ನಿಷೇಧಗಳು ರಾಜಕೀಯ ಸಂಸ್ಥೆಗಳಲ್ಲಿ ಶಾಶ್ವತವಾಗಿ ಮುಂದುವರಿಯದಂತೆ ಎಚ್ಚರಿಕೆ ವಹಿಸಬೇಕು. +ಸದ್ಯದ ಪರಿಸ್ಥಿತಿಯ ಬಗ್ಗೆ, ಉದಹರಣೆಗಾಗಿ ಪರೇಲದಲ್ಲಿ: ನಿಮ್ನ ವರ್ಗಗಳಿಗಾಗಿಯೇ ಇರುವ ಶಾಲೆಯಲ್ಲಿ ಅದು ಒಳ್ಳೆಯ ಶಾಲೆಯಾಗಿರುವುದರಿಂದ ಅದರಲ್ಲಿ ಸವರ್ಣ ಹಿಂದೂ ವಿದ್ಯಾರ್ಥಿಗಳೂ ಇದ್ದಾರೆ ಎಂದು ಇವರು ಒಪ್ಪತ್ತಾರೆ. +ತಾವೇ ಸ್ವತಃ ನಿಮ್ನ ವರ್ಗಕ್ಕೆ ಪ್ರಾಧ್ಯಾಪಕರಾಗಿ ಎಲ್ಲಾ ವರ್ಗಗಳ ವಿಧ್ಯಾರ್ಥಿಗಳಿದ್ದರೂ ಸವರ್ಣ ಹಿಂದೂ ವಿದ್ಯಾರ್ಥಿಗಳೊಡನೆ ವ್ಯವಹರಿಸುವಲ್ಲಿ ಯಾವ ಕಷ್ಟವನ್ನೂ ಅನುಭವಿಸಿಲ್ಲವೆಂದು ಹೇಳುತ್ತಾರೆ. +ಸರಕಾರವು ಅಸ್ಪೃಶ್ಯ ವಿದ್ಯಾರ್ಥಿಗಳನ್ನು ಗುರುತಿಸಿ ಅವರಿಗೆ ಶಾಲೆಗಳಲ್ಲಿ ಸೂಕ್ತ ಸ್ಥಳಗಳನ್ನು ನೀಡಿದ್ದೇ ಆದರೆ, ಅವರ ಅಂತಸ್ತು ಮತ್ತು ಅವರ ಶಕ್ತಿಚೇತನಗೊಳ್ಳುತ್ತದೆ. +ಅವರಿಗೆ ಕೊಡಬೇಕಾದ ಸ್ಥಳಗಳ ಸಂಖ್ಯೆಯ ಬಗ್ಗೆ ಅವರಿಗೆ ಚಿಂತೆ ಇರಲಿಲ್ಲ. +ಅವರಿಗೆ ಸಾಕಷ್ಟು ಸ್ಥಳಗಳಿರಬೇಕೆಂಬುದೇ ಇವರ ಅಭಿಪ್ರಾಯವಾಗಿತ್ತು. +ಜನವರಿ 1939 ರಂದು ಮಣೆಯ ಗೋಖಲೆ ಭವನದಲ್ಲಿ ಗೋಖಲೆ ರಾಜಕೀಯ ಮತ್ತು ಅರ್ಥಶಾಸ್ತ್ರ ಸಂಸ್ಥೆಯ ವಾರ್ಷಿಕ ಸಮಾರಂಭದಲ್ಲಿ ಮಾಡಿದ ಉಪನ್ಯಾಸ. +ನೀವಿಂದು ಆಯ್ದುಕೊಂಡಿರುವ ದಿಕ್ಕಿಗೆ ಹೋಲಿಸಿದರೆ ನೀವು ಸವೆಸಿದ ಹಾದಿಯ ದೂರ ಅಷ್ಟೇನೂ ಮಹತ್ವದ್ದಲ್ಲ? +ಮಾಲಿಕೆಯ ಈ ಹೊತ್ತಿಗೆ ರೂಪುಗೊಂಡ ಬಗೆ ಮತ್ತು ಈಗ ಇದನ್ನು ಪ್ರಕಟಿಸುವ ಉದ್ದೇಶದ ಕುರಿತು ಒಂದೆರಡು ಮಾತುಗಳನ್ನು ಹೇಳುವುದು ಅಪ್ರಸ್ತುತವಾಗಲಾರದೆಂದು ಭಾವಿಸುತ್ತೇನೆ. +ಪುಣೆಯಲ್ಲಿ ಡಾ.ಡಿ.ಆರ್‌.ಗಾಡಗೀಳ್‌ ಅವರ ಮಾರ್ಗದರ್ಶನದಲ್ಲಿ ಕೆಲಸ ಮಾಡುತ್ತಿರುವ ಗೋಖಲೆ ರಾಜಕೀಯ ಮತ್ತು ಅರ್ಥಶಾಸ್ತ್ರ ಸಂಸ್ಥೆಯ ಕುರಿತು ಅನೇಕರಿಗೆ ತಿಳಿದಿದೆ. +ಈ ಸಂಸ್ಥೆ ಪ್ರತಿವರ್ಷ "ಸಂಸ್ಥಾಪಕರ ದಿನ" ಎಂದು ಕರೆಯಲಾಗುವ ಸಮಾರಂಭವನ್ನು ಏರ್ಪಡಿಸುತ್ತಿದ್ದು ರಾಜಕೀಯ ಶಾಸ್ತ್ರ ಮತ್ತು ಅರ್ಥಶಾಸ್ತ್ರಕ್ಕೆ ಸಂಬಂಧಪಟ್ಟ ವಿಷಯದ ಮೇಲೆ ಉಪನ್ಯಾಸ ನೀಡಲು ಯಾರನ್ನಾದರೂ ಆಹ್ವಾನಿಸುತ್ತದೆ. +ಡಾ.ಗಾಡಗೀಳ್‌ ಅವರು ಈ ವರ್ಷದ ಭಾಷಣ ಮಾಡಲು ನನ್ನನ್ನು ಆಹ್ವಾನಿಸಿದ್ದಾರೆ. +ನಾನು ಈ ಆಮಂತ್ರಣವನ್ನು ಸ್ವೀಕರಿಸಿ ಒಕ್ಕೂಟ ರಾಜ್ಯ ವ್ಯವಸ್ಥೆಯನ್ನು ನನ್ನ ಭಾಷಣದ ವಿಷಯವನ್ನಾಗಿ ಆಯ್ದುಕೊಂಡಿರುವೆ. +ಒಕ್ಕೂಟ ಭಾಷಣದಲ್ಲಿ ೧) ರಾಜ್ಯದ ರಚನೆ, ಮತ್ತು ೨) ಈ ರಚನೆಯ ವಿಮರ್ಶೆ ಈ ಎರಡೂ ಅಂಶಗಳು ಸೇರಿವೆ. +ಈ ಉಪನ್ಯಾಸವನ್ನು ೨೯ ನೆಯ ಜನವರಿ ೧೯೩೯ ರಂದು ಪುಣೆಯ ಗೋಖಲೆ ಭವನದಲ್ಲಿ ಮಾಡಲಾಯಿತು. +ಉಪನ್ಯಾಸದ ನಿಗದಿತ ಅವಧಿ ಒಂದು ಗಂಟೆ. +ಆದರೆ ಸುಮಾರು ಎರಡು ಗಂಟೆ ತೆಗೆದುಕೊಂಡರೂ ಮುಗಿಯದಿದ್ದುದರಿಂದ ಒಕ್ಕೂಟದ ರಚನೆಯ ಪೂರ್ಣ ಭಾಗವನ್ನು, ವ್ಯವಸ್ಥೆಯ ವಿಮರ್ಶೆಯ ಕೆಲವು ಭಾಗಗಳನ್ನು ಕೈಬಿಡಲಾಯಿತು. +ಇದೀಗ, ಉಪನ್ಶಾಸದ ಪೂರ್ಣ ಪಾಠವನ್ನು ಈ ಹೊತ್ತಿಗೆಯಲ್ಲಿ ಸೇರಿಸುತ್ತಿದ್ದೇನೆ. +ಈ ಹೊತ್ತಿಗೆ ರೂಪುಗೊಂಡಿದ್ದರ ಕುರಿತು ಇಷ್ಟು ವಿವರಣೆ ಸಾಕೆಂದುಕೊಳ್ಳುವೆ. +ಇನ್ನು ಇದರ ಪ್ರಕಣೆಯ ಕಾರಣಗಳು, ಗೋಖಲೆ ಸಂಸ್ಥೆಯಲ್ಲಿ ಮಾಡಲಾದ ಎಲ್ಲಾ ಉಪನ್ಯಾಸಗಳನ್ನು ಪ್ರಕಟಿಸಲಾಗುವುದು. +ಆದ್ದರಿಂದ ಈ ಪ್ರಕಟಣೆಯೂ ಸಹಜವೇ. +ನಾನು ಇದನ್ನು ಪ್ರಕಟಿಸಲು ಇದೂ ಅಲ್ಲದೇ ಇತರ ಕಾರಣಗಳೂ ಇವೆ. +ಉಪನ್ಯಾಸದ ಒಕ್ಕೂಟ ವ್ಯವಸ್ಥೆಯ ಕುರಿತು ಭಾರತದ ಸಾರ್ವಜನಿಕರು ಒಂದು ರೀತಿಯ ಮಜ್ಬನಲ್ಲಿದ್ದಾರೆ. +ಒಕ್ಕೂಟ ವ್ಯವಸ್ಥೆ ಬರಲಿದೆ ಮತ್ತು ಅದು ಒಳ್ಳೆಯದಲ್ಲ ಎಂಬ ಅಂಶದ ಹೊರತು ಸಾರ್ವಜನಿಕರಿಗೆ ಒಕ್ಕೂಟ ಸ್ಪರೂಪದ ಬಗ್ಗೆ ಸ್ಪಷ್ಟ ಭಾವನೆ ಇಲ್ಲದಿರುವುದರಿಂದ ಅದರ ಬಗ್ಗೆ ಅವರು ಸರಿಯಾದ ಅಭಿಪ್ರಾಯ ಹೊಂದಲು ಸಾಧ್ಯವಿಲ್ಲ. +ಆದ್ದರಿಂದ ಈ ಒಕ್ಕೂಟ ವ್ಯವಸ್ಥೆಯ ರೂಪುರೇಷೆಗಳು ಮತ್ತು ಅದರ ವಿಮರ್ಶೆಯನ್ನು ನೀಡುವ ಮತ್ತು ಈ ವ್ಯವಸ್ಥೆಯನ್ನು ಅರ್ಥ ಮಾಡಿಕೊಳ್ಳಲು ಸಹಾಯವಾಗುವಂತಹ ಒಂದು ಪುಸ್ತಕೆ ಸಾರ್ವಜನಿಕರ ಕೈಯಲ್ಲಿರುವುದು ಅವಶ್ಯವಾಗಿದೆ. +ಈ ಕಿರುಹೊತ್ತಿಗೆ ಇಂತಹ ಆವಶ್ಯಕತೆಯನ್ನು ಪೂರೈಸುವುದಾಗಿ ನನ್ನ ಭಾವನೆ. +ಈ ಕಿರುಹೊತ್ತಿಗೆಯ ಪ್ರಕಟಣೆ ಸಕಾಲಿಕವೂ ಆಗಿದೆ ಎಂದು ನನ್ನ ಭಾವನೆ. +ಒಕ್ಕೂಟ ವ್ಯವಸ್ಥೆ ಇಂದು ಒಂದು ಜ್ವಲಂತ ಸಮಸ್ಯೆಯಾಗಿದ್ದು ಆದು ತ್ನರಿತವೂ ಆಗಿದೆ. +ಬ್ರಿಟಿಷ್‌ ಭಾರತದ ಜನರುಅನತಿ ದೂರದಲ್ಲಿ ಈ ಸಂಯುಕ್ತ ರಾಜ್ಯ ವ್ಯವಸ್ಥೆಯನ್ನು ಒಪ್ಪಬೇಕೋ ಅಥವಾ ಬೇಡವೋ ಎಂಬುದನ್ನು ನಿರ್ಣಯಿಸಬೇಕಾಗಿದೆ. +ಈ ದೇಶದ ಪ್ರಮುಖ ರಾಜಕೀಯ ಸಂಘಟನೆಯಾಗಿರುವ ಕಾಂಗ್ರೆಸ್‌ ಪ್ರಾಂತೀಯ ಸ್ವಾಯತ್ತತೆಯನ್ನು ಒಕ್ಕೂಟ ಒಪ್ಪಿಕೊಂಡಿರುವಂತೆ ವ್ಯವಸ್ಥೆಯನ್ನೂ ಒಪ್ಪಿಕೊಳ್ಳಲು ಇಚ್ಛಿಸುವಂತೆ ತೋರುತ್ತದೆ. +ಮುಸ್ಲಿಂ ಲೀಗ್‌ನೊಡನೆ ಮತ್ತು ದೇಶೀ ಸಂಸ್ಥಾನಗಳೊಡನೆ ನಡೆದಿರುವ ಸಂಧಾನಗಳನ್ನು ಗಮನಿಸಿದರೆ ಕಾಂಗ್ರೆಸ್‌ ಒಕ್ಕೂಟ ವ್ಯವಸ್ಥೆಯನ್ನು ಒಪ್ಪಿಕೊಳ್ಳುವುದೆಂಬ ಭಾವನೆ ಉಂಟಾಗುತ್ತದೆ. +ಇತರ ಪಕ್ಷಗಳೊಡನೆ ಹೊಂದಾಣಿಕೆ ಮಾಡಿಕೊಂಡು ಕಾಂಗ್ರೆಸ್‌ ಪಕ್ಷ ಪ್ರಾಂತ್ಯಗಳಲ್ಲಿ ಅಧಿಕಾರದಲ್ಲಿರುವಂತೆ ಕೇಂದ್ರದಲ್ಲಿಯೂ ಅಧಿಕಾರದ ಗದ್ದುಗೆಯನ್ನೇರುವ ಸನ್ನಾಹದಲ್ಲಿರುವಂತೆ ಈ ಸಂಧಾನಗಳಿಂದ ನನಗೆ ತೋರುತ್ತದೆ. +ಶ್ರೀ ಸುಭಾಷ್‌ ಚಂದ್ರ ಬೋಸರು ನುಡಿದಿರುವಂತೆ ಕಾಂಗ್ರೆಸ್‌ ಪಕ್ಷದ ಕೆಲವು ಬಲಪಂಥೀಯರು ಪ್ರಸ್ತಾಪಿತ ಒಕ್ಕೂಟ ವ್ಯವಸ್ಥೆಯನ್ನು ಒಪ್ಪಲು ತುದಿಗಾಲ ಮೇಲೆ ನಿಂತಿದ್ದಾರೆ. +ಮಾತ್ರವಲ್ಲ, ಸಚಿವ ಸಂಪುಟವನ್ನೂ ಸಿದ್ಧಪಡಿಸಿಕೊಂಡು ಇಟ್ಟಿದ್ದಾರಂತೆ. +ಇದು ನಿಜವೊ, ಅಲ್ಲವೊ ಮುಖ್ಯವಲ್ಲ. +ಇದೆಲ್ಲ ನಿಜವಲ್ಲವೆಂದೇ ನಾನು ಭಾವಿಸುತ್ತೇನೆ. +ಅದೇನೆ ಇರಲಿ,ಒಕ್ಕೂಟ ಪ್ರಸ್ತಾಪನೆಯ ವಿಷಯ ಗಂಭಿರವೂ,ತುರ್ತಿನದೂ ಆಗಿದೆ. +ಈ ಕುರಿತು ಏನಾದರೂ ಹೇಳಬೇಕೆಂದಿರುವವರು ಈಗ ಹೇಳಲೇ ಬೇಕಿದೆ. +ಮೌನವಾಗಿರುವುದು ಅಪರಾಧವೆಂದೇ ನಾನು ಭಾವಿಸುವೆ. +ಆ ನಿಟ್ಟಿನಲ್ಲಿಯೇ ಈ ಉಪನ್ಯಾಸವನ್ನು ತ್ವರಿತವಾಗಿ ಪ್ರಕಟಿಸಲು ಮುಂದಾಗಿರುವೆ. +ಒಕ್ಕೂಟ ವ್ಯವಸ್ಥೆಯ ವಿಷಯದಲ್ಲಿ ನನಗೆ ನನ್ನದೇ ಅಭಿಪ್ರಾಯಗಳುಂಟು. +ಈ ವಿಚಾರಗಳು ಉಳಿದವರಿಗೆ ಒಪ್ಪಿಗೆಯಾಗದಿರಬಹುದು. +ಆದರೆ, ಚಿಂತನೆಗೆ ಪ್ರಚೋದಿಸಬಲ್ಲವು ಎಂದೇ ನಂಬಿದ್ದೇನೆ. +ಡಾ.ಗಾಡಗೀಳರೆ, ಗೋಖಲೆ ಸಂಸ್ಥೆಯ ವಿದ್ಯಾರ್ಥಿಗಳೆ,ಈ ಸಂಜೆ ತಮ್ಮನ್ನು ಉದ್ದೇಶಿಸಿ ಉಪನ್ಯಾಸ ನೀಡಲು ನನ್ನನ್ನು ಆಹ್ವಾನಿಸಿರುವುದು ತಾವು ನನಗೆ ನೀಡಿರುವ ಗೌರವವೆಂದು ಭಾವಿಸುತ್ತೇನೆ. +ನಿಮ್ಮ ಸಂಸ್ಥೆಯ ಸಂಸ್ಥಾಪಕರ ದಿನಾಚರಣೆಗಾಗಿ ತಾವು ಇಲ್ಲಿ ನೆರೆದಿದ್ದೀರಿ. +ನಿಮ್ಮ ಸಂಸ್ಥೆಯ ಸಂಸ್ಥಾಪಕರಾದ ದಿವಂಗತ ರಾವ್‌ಬಹದ್ದೂರ್‌ ಆರ್‌.ಆರ್‌.ಕಾಳೆಯವರ ವೈಯಕ್ತಿಕ ಪರಿಚಯ ಪಡೆಯುವ ಸುಯೋಗ ನನ್ನದಾಗಿತ್ತು. +ಮುಂಬಯಿಯ ಹಳೆಯ ವಿಧಾನ ಪರಿಷತ್ತಿನಲ್ಲಿ ಅವರೂ ನನ್ನಂತೆ ಸದಸ್ಯರಾಗಿದ್ದರು. +ತಾವು ಪಸ್ತಾಪಿಸುತ್ತಿದ್ದ ಪ್ರತಿಯೊಂದು ವಿಷಯದಲ್ಲಿ ಅವರು ಪಸ್ತಾಪಿಸುತ್ತಿದ್ದರು. +ಎಷ್ಟು ಕಾಳಜಿ ತೋರಿಸುತ್ತಿದ್ದರು ಮತ್ತು ಅಭ್ಯಾಸ ಮಾಡುತ್ತಿದ್ದರೆಂಬುದು ನನಗೆ ಗೊತ್ತು. +ಜ್ಞಾನ ಮತ್ತು ಅಧ್ಯಯನಕ್ಕೆ ಮಹತ್ವ ನೀಡುವ ಎಲ್ಲರೂ ನಾನು ತಿಳಿದುಕೊಂಡಂತೆ ಈ ಸಂಸ್ಥೆಯ ಪ್ರಮುಖ ಕರ್ತವ್ಯವಾದ ಜ್ಞಾನದ ಶೋಧನೆ ಹಾಗೂ ಅದನ್ನು ಉಪಯೋಗಿಸಿಕೊಳ್ಳಲು ಆಸಕ್ತಿ ಹೊಂದಿರುವ ಎಲ್ಲರಿಗೂ ಅನುವು ಮಾಡಿಕೊಡುವ ಈ ಸಂಸ್ಥೆಯ ಸಂಸ್ಥಾಪನೆಗೆ ಸಹಾಯ ಮಾಡಿದ ಶ್ರೀ ಕಾಳೆಯವರಿಗೆ ಯಣಿಯಾಗಿರಬೇಕು. +ಏಕೆಂದರೆ, ಮೊದಲನೆಯದಾಗಿ ಜ್ಞಾನವೇ ಶಕ್ತಿ. + ಎರಡನೆಯದಾಗಿ, ಜ್ಞಾನ ಪಡೆಯಬಯಸುವವರೆಲ್ಲರಿಗೂ ಅದರ ಶೋಧನೆ ಮಾಡಲು ಸಾಕಷ್ಟು ಸಮಯ ಮತ್ತು ತಾಳ್ಮೆ ಇರುವುದಿಲ್ಲ. +ಜ್ಞಾನದ ಅವಶ್ಯಕತೆಯಲ್ಲಿ ನಂಬುಗೆ ಇರುವ ಮತ್ತು ಅದನ್ನು ಪಡೆದುಕೊಳ್ಳುವಲ್ಲಿರುವ ಕಷ್ಟಗಳನ್ನು ಅರಿತಿರುವ ನನಗೆ ಅವರೊಡನೆ ಮತ್ತು ಅವರು ಸ್ಥಾಪಿಸಿದ ಈ ಸಂಸ್ಥೆಯೊಡನೆ ಸಹಯೋಗಿಯಾಗಲು ಅತ್ಯಂತ ಸಂತೋಷಪವೆನಿಸಿದೆ. +೧೯೩೫ ರ ಭಾರತ ಸರಕಾರದ ಕಾಯ್ದೆಯಲ್ಲಿ ಅಳವಡಿಸಲಾಗಿರುವ ಒಕ್ಕೂಟ ರಾಜ್ಯ ವ್ಯವಸ್ಥೆ ಇಂದಿನ ಭಾಷಣಕ್ಕಾಗಿ ನಾನು ಆಯ್ದುಕೊಂಡಿರುವ ವಿಷಯವಾಗಿದೆ. +ಈ ವಿಷಯದ ಶೀರ್ಷಿಕೆಯಿಂದ ನಾನು ಒಕ್ಕೂಟ ರಾಜ್ಯದ ಸಂವಿಧಾನವನ್ನು ವಿವರಿಸಲಿದ್ದೇನೆ ಎಂಬ ಭಾವನೆ ನಿಮಗುಂಟಾಗಿರಬಹುದು. +ಇದು ಅಸಾಧ್ಯದ ಕೆಲಸ, ಒಕ್ಕೂಟ ವ್ಯವಸ್ಥೆಯ ವ್ಯಾಪ್ತಿ ಹರಹು ಅತ್ಯಂತ ವಿಶಾಲವಾಗಿವೆ. +ಮೊದಲನೆಯದಾಗಿ, ಅದರ ನಿಬಂಧನೆಗಳು ಭಾರತ ಸರಕಾರ ಕಾಯ್ದೆ, ೧೯೩೫ ರ ೩೨೧ ವಿಭಾಗಗಳಲ್ಲಿ,ಎರಡನೆಯದಾಗಿ ಈ ಕಾಯ್ದೆಯ ಅಂಗವಾಗಿರುವ ೯ ಅನುಸೂಚಿಗಳಲ್ಲಿ, ಮೂರನೆಯದಾಗಿ ಈ ಕಾಯ್ದೆಯಡಿಯಲ್ಲಿ ಸಚಿವ ಮಂಡಲಿಯ ಸಲಹೆಯ ಮೇರೆಗೆ ಹೊರಡಿಸಲಾಗಿರುವ ೩೧ ರಾಜಾಜ್ಞೆಗಳು,ಮತ್ತು ನಾಲ್ಕನೆಯದಾಗಿ ದೇಶೀಯ ಸಂಸ್ಥಾನಗಳು ಪಾಸು ಮಾಡಲಿರುವ ನೂರಾರು ಸೇರ್ಪಡೆಯ ದಸ್ತಾವೇಜುಗಳು ಸೇರಿವೆ. +ಇಂತಹ ಗಂಭೀರ ವಿಷಯದ ಕುರಿತು ಪರಿಣತಿಯನ್ನು ಕೆಲವೇ ಜನಹೊಂದಿರಲಿಕ್ಕೆ ಸಾಕು ಮತ್ತು ಅಂತಹ ಪರಿಣತಿಯನ್ನು ಹೊಂದಿದ ಯಾರಿಗೇ ಆಗಲಿ ಈ ವಿಷಯವನ್ನು ವಿವರವಾಗಿ ಪ್ರತಿಪಾದಿಸಲು ಅನೇಕ ವರ್ಷಗಳೇ ಬೇಕಾಗಬಹುದು. +ನನ್ನ ಕಾರ್ಯ ವ್ಯಾಪ್ತಿ ಅತ್ಯಂತ ಸೀಮಿತವಾದುದಾಗಿದೆ. +ಈ ಒಕ್ಕೂಟ ರಾಜ್ಯ ಯೋಜನೆಯನ್ನು ಕೆಲವು ಮಾನ್ಯವಾದ ನಿರ್ಣಾಯಕ ತತ್ವಗಳೊಂದಿಗೆ ಒರೆಹಚ್ಚಿ ಇದರ ಪರಿಣಾಮಗಳನ್ನು ಆಧರಿಸಿ ಯೋಜನೆಯ ಶ್ರೇಷ್ಠತೆಯ ಬಗ್ಗೆ ನೀವೇ ತೀರ್ಮಾನ ಮಾಡುವುದರಲ್ಲಿ ನಿಮಗೆ ಸಹಾಯ ಮಾಡುವುದು ಅಷ್ಟೇ. +ಈ ಯೋಜನೆಯ ರೂಪುರೇಷೆಗಳ ವಿವರಣೆಯನ್ನು ಸಂಪೂರ್ಣವಾಗಿ ಕೈಬಿಡುವುದು ಸಾಧ್ಯವಿಲ್ಲವೆಂಬುದೇನೋ ನಿಜ . +ಯೋಜನೆಯ ರೂಪುರೇಷೆಗಳನ್ನು ನೀಡಲಿದ್ದೇನೆ. +ಇದು ಪೂರ್ವಭಾವಿ ಆವಶ್ಯಕತೆಯಾಗಿದ್ದು, ಈ ವಿವರಣೆ ನೀಡದಿದ್ದರೆ ಯೋಜನೆಯ ಕುರಿತ ನನ್ನ ಟೀಕೆ ಮತ್ತು ವಿಮರ್ಶೆ ಗಾಳಿಯೊಡನೆ ಗುದ್ದಾಡಿದಂತಾಗುತ್ತದೆ. +ಆದರೆ ನಾನು ನೀಡಲಿರುವ ವಿವರಣೆ ಅತ್ಯಂತ ಸಂಕ್ಷಿಪ್ತವಾಗಿದ್ದು ಈ ಯೋಜನೆಯ ಗುಣಾವಗುಣಗಳ ಬಗ್ಗೆ ತಿಳಿದುಕೊಳ್ಳಲು ನಿಮಗೆ ಸಹಾಯವಾಗುವಷ್ಟು ಅಂಶಗಳನ್ನು ಮಾತ್ರ ವಿವರಿಸುವೆ. +ಭಾರತ ಒಕ್ಕೂಟ ವ್ಯವಸ್ಥೆಯ ಹುಟ್ಟು, ಬೆಳವಣಿಗೆ ಆಧುನಿಕ ಕಾಲದಲ್ಲಿ ನಮಗೆ ತಿಳಿದಂತೆ ಒಕ್ಕೂಟ ಪದ್ಧತಿಯ ಸರಕಾರವನ್ನು ಹೊಂದಿರುವ ಐದು ದೇಶಗಳಿವೆ. + ೧) ಅಮೆರಿಕ ಸಂಯುಕ್ತ ಸಂಸ್ಥಾನ, (೨) ಸ್ವಿಟ್ಜರ್‌ಲ್ಯಾಂಡ್‌, (೩) ಜರ್ಮನ್‌ ಚಕ್ರಾಧಿಪತ್ಯ,(೪) ಕೆನಡ ಮತ್ತು (೫) ಆಸ್ಪೇಲಿಯ. + ಈ ಐದು ದೇಶಗಳ ಜೊತೆ ಈಗ ಆರನೆಯದಾಗಿ ಭಾರತ ಒಕ್ಕೂಟ ವ್ಯವಸ್ಥೆ ಸೇರಿಸುವ ವಿಚಾರವಿದೆ. +ಈ ಒಕ್ಕೂಟ ವ್ಯವಸ್ಥೆಯ ರಾಜ್ಯಗಳು ಯಾವುವು ? +ಈ ಪ್ರಶ್ನೆಗೆ ಉತ್ತರಕ್ಕಾಗಿ ಕಾಯ್ದೆಯ ೫ನೆಯ ವಿಭಾಗವನ್ನು ನೋಡಿ. +ಅದರಲ್ಲಿ ಹೇಳಿರುವಂತೆ (೧) ಸಂಸತ್ತಿನ ಎರಡೂ ಸದನಗಳು ಈ ವಿಷಯದಲ್ಲಿ ಸಾರ್ವಭೌಮ ಮಹಾಪ್ರಭುವಿಗೆ ಮನವಿಯನ್ನು ಸಲ್ಲಿಸಿದರೆ ಭಾರತದ ಒಕ್ಕೂಟ ವ್ಯವಸ್ಥೆಯ ಘೋಷಣೆ ಮತ್ತು ಇದರಲ್ಲಿ ನಮೂದಿಸಲಾದ ಕರಾರನ್ನು ಮನ್ನಿಸಲಾಗಿದ್ದರೆ ಮಹಾಪ್ರಭುವು ಘೋಷಣೆಯ ಮೂಲಕ ತಿಳಿಯಪಡಿಸಲಾದ ದಿನದಿಂದ ಪ್ರಭುತ್ವದಡಿಯಲ್ಲಿ ಭಾರತ ಒಕ್ಕೂಟ ವ್ಯವಸ್ಥೆ ಎಂದು ಕರೆಯಲಾಗುವ ಸಂಯುಕ್ತ ರಾಜ್ಯವು ಒಗ್ಗೂಡುವುದೆಂದು ಮಹಾಪ್ರಭುವು ಘೋಷಿಸುವುದು ಕಾನೂನುಬದ್ಧವೆನಿಸುವುದು. +ಅ)ಇನ್ನು ಮುಂದೆ ಗವರ್ನರರ ಪ್ರಾಂತ್ಯಗಳೆಂದು ಕರೆಯಲಾಗುವ ಪ್ರಾಂತ್ಯಗಳು. +ಬ) ಒಕ್ಕೂಟದಲ್ಲಿ ಈಗಾಗಲೇ ಸೇರ್ಪಡೆಯಾಗಿರುವ ಅಥವಾ ಇನ್ನು ಮುಂದೆ ಸೇರ್ಪಡೆಯಾಗಲಿರುವ ದೇಶೀ ಸಂಸ್ಥಾನಗಳು, ಮತ್ತು ಈ ರೀತಿ ಸ್ಥಾಪಿತವಾದ ಒಕ್ಕೂಟದ ಇನ್ನು ಮೇಲೆ ಚೀಫ್‌ ಕಮೀಷನರರ ಪ್ರಾಂತ್ಯಗಳೆಂದೆ ಕರೆಯಲಾಗುವ ಪ್ರಾಂತ್ಯಗಳು ಸೇರ್ಪಡೆಯಾಗತಕ್ಕದ್ದು. +(೨) ನಮೂದಿಸಲಾದ ಕರಾರು ಎಂದರೆ,(ಅ) ಈ ಕಾಯ್ದೆಯ ಮೊದಲನೆಯ ಅನುಸೂಚಿಯ ಎರಡನೆಯ ಭಾಗದಲ್ಲಿ ನಮೂದಿತವಾದ ನಿಯಮಗಳ ಪ್ರಕಾರ ಸಂಸ್ಥಾನದ ರಾಜರು ಕೌನ್ಸಿಲ್‌ ಆಫ್‌ ಸ್ಟೇಟ್‌ಗೆ ಐವತ್ತೆರಡು ಸದಸ್ಯರಿಗಿಂತ ಕಡಿಮೆಇಲ್ಲದಷ್ಟು ಸದಸ್ಯರನ್ನು ಆರಿಸುವ ಅಧಿಕಾರ ಹೊಂದಿರುತ್ತಾರೆ. +(ಬ) ಈಗ ನಮೂದಿಸಲಾದ ನಿಯಮಗಳ ಪ್ರಕಾರ ಎಲ್ಲಾ ಸಂಸ್ಥಾನಗಳ ಒಟ್ಟು ಜನಸಂಖ್ಯೆ. +ಕೊನೆಯ ಪಕ್ಷ ಅರ್ಧದಷ್ಟಾದರೂ ಜನಸಂಖ್ಯೆ ಹೊಂದಿರುವಷ್ಟು ಒಕ್ಕೂಟಕ್ಕೆ ಸಂಸ್ಥಾನಗಳು ಸೇರ್ಪಡೆಯಾಗಿವೆ ಎಂಬುದನ್ನು ಗೊತ್ತು ಮಾಡಿಕೊಳ್ಳಬೇಕು. +ಒಕ್ಕೂಟದ ಉದ್ಭಾಟನೆಗೆ ಈ ವಿಭಾಗದಲ್ಲಿ ನಮೂದಿಸಲಾಗಿರುವ ಕರಾರುಗಳೇನೇ ಇರಲಿ, ಈ ಒಕ್ಕೂಟದ ಘಟಕಗಳು ಯಾವುವೆಂದು ಸ್ಪಷ್ಟವಾಗುತ್ತದೆ. +ಅವುಗಳೆಂದರೆ : (೧) ಗವರ್ನರರ ಪ್ರಾಂತ್ಯಗಳು,(೨) ಚೀಫ್‌ ಕಮೀಷನರರ ಪ್ರಾಂತ್ಯಗಳು, ಮತ್ತು (೩) ಭಾರತೀಯ ಅಥವಾ ದೇಶೀ ಸಂಸ್ಥಾನಗಳು. +ಈ ಭಾರತ ಸಂಯುಕ್ತ ರಾಜ್ಯದ ಗಾತ್ರವೇನು ? +ಭಾರತ ಸಂಯುಕ್ತ ರಾಜ್ಯದ ಬಗ್ಗೆ ಮಾತನಾಡುವಾಗ ಅನೇಕರಿಗೆ ಇದು ಎಷ್ಟು ಬೃಹದಾಕಾರದ್ದಾಗಲಿದೆ ಎಂಬ ಕಲ್ಪನೆ ಇದ್ದಂತಿಲ್ಲ. +ವಿಸ್ತೀರ್ಣದಲ್ಲಿ ಭಾರತ ಒಕ್ಕೂಟ ವ್ಯವಸ್ಥೆಯು ಅಮೇರಿಕದ ಮತ್ತು ಆಸ್ಟ್ರೇಲಿಯದ ೩/೫ ರಷ್ಟು ಮತ್ತು ಕೆನಡದ ಅರ್ಧದಷ್ಟಿದೆ. +ಜರ್ಮನಿಯ ೯ ಪಟ್ಟು ಮತ್ತು ಸ್ವಿಟ್ಜಲೆಂಡ್‌ನ ೧೨೦ ರಷ್ಟು ಆಗುವುದು. +ಜನಸಂಖ್ಯೆಯಲ್ಲಿ ಅದು ಅಮೇರಿಕದ ೩ ರಷ್ಟು,ಜರ್ಮನಿಯ ೫ ರಷ್ಟು. +ಕೆನಡದ ೩೫ ರಷ್ಟು,ಆಸ್ಟ್ರೇಲಿಯದ ೫೮ ರಷ್ಟು ಮತ್ತು ಸ್ಟಿಟ್ಜಲೆಂಡ್‌ನ ೮೮ ರಷ್ಟಾಗುತ್ತದೆ. +ಅದು ಹೊಂದಿರುವ ಘಟಕಗಳ ದೃಷ್ಟಿಯಿಂದ ಹೋಲಿಸಿದರೆ ಅಮೇರಿಕಕ್ಕಿಂತ ೩ ಪಟ್ಟು ದೊಡ್ಡದಾಗಿದೆ. +ಜರ್ಮನಿಗಿಂತ ೬ ೧/೨ಯಷ್ಟು ದೊಡ್ಡದಾಗಿದೆ. +ಸ್ವಿಟ್ಜಲೆಂಡ್‌ಗಿ೦ತ ೮ ರಷ್ಟು ದೊಡ್ಡದಾಗಿದೆ, ಕೆನಡಕ್ಕಿಂತ ೧೮ ರಷ್ಟು ದೊಡ್ಡದಾಗಿದೆ ಮತ್ತು ಆಸ್ಟ್ರೇಲಿಯಾಕ್ಕಿಂತ ೨೭ ರಷ್ಟು ದೊಡ್ಡದಾಗಿದೆ. +ಹೀಗಾಗಿ ಭಾರತ ಒಕ್ಕೂಟ ವ್ಯವಸ್ಥೆ ಒಂದು ದೊಡ್ಡ ಒಕ್ಕೂಟ ಮಾತ್ರವೇ ಅಲ್ಲ. + ಅದು ಒಕ್ಕೂಟ ವ್ಯವಸ್ಥೆಯಲ್ಲಿಯೇ ದೈತ್ಯಾಕಾರದ್ದಾಗಿದೆ. +ಈ ಒಕ್ಕೂಟ ವ್ಯವಸ್ಥೆಗೆ ಆಡಳಿತಾಧಿಕಾರ ಮತ್ತು ಶಕ್ತಿಗಳನ್ನು ನೀಡುವ ಮೂಲ ಯಾವುದು ? +ಮಹಾಪ್ರಭುವಿನ ಪರವಾಗಿ ಗವರ್ನರ್‌ ಜನರಲ್ಲರು ಒಕ್ಕೂಟ ವ್ಯವಸ್ಥೆಯ ಕಾರ್ಯಾಂಗ ಅಧಿಕಾರವನ್ನು ಚಲಾಯಿಸುವರು ಎಂದು ೭ ನೆಯ ವಿಭಾಗದಲ್ಲಿ ಹೇಳಲಾಗಿದೆ. +ಒಕ್ಕೂಟ ಅಧಿಕಾರವನ್ನು ಪ್ರಭುತ್ವದಿಂದ ಪಡೆಯಲಾಗಿದೆ ಎಂದು ಇದರ ಅರ್ಥ. +ಈ ವಿಷಯದಲ್ಲಿ ಭಾರತ ಒಕ್ಕೂಟ ಮತ್ತು ಅಮೇರಿಕ ಸಂಯುಕ್ತ ರಾಜ್ಯಗಳಲ್ಲಿ ವ್ಯತ್ಯಾಸವಿದೆ. +ಅಮೇರಿಕದಲ್ಲಿ ಸಂಯುಕ್ತ ರಾಜ್ಯದ ಅಧಿಕಾರವನ್ನು ಜನತೆಯಿಂದ ಪಡೆಯಲಾಗಿದೆ. +ಅಮೇರಿಕದ ಸಂಯುಕ್ತ ರಾಜ್ಯಗಳಲ್ಲಿ ವ್ಯತ್ಯಾಸವಿದ್ದು, ಭಾರತ ಒಕ್ಕೂಟದಲ್ಲಿ ಆಸ್ಟ್ರೇಲಿಯ ಹಾಗೂ ಕೆನಡ ಸಂಯುಕ್ತ ರಾಜ್ಯಗಳಲ್ಲಿ ಹೋಲಿಕೆ ಇದೆ. +ಆಸ್ಟ್ರೇಲಿಯಾ ಮತ್ತು ಕೆನಡದಲ್ಲಿಯೂ ಕೂಡ ಸಂಯುಕ್ತ ರಾಜ್ಯದ ಅಧಿಕಾರ ಮೂಲ ಪ್ರಭುತ್ವದಲ್ಲಿಯೇ ಇದ್ದು, ಭಾರತ ಸರಕಾರದ ಕಾಯ್ದೆಯ ೭ನೆಯ ವಿಭಾಗವು ಆಸ್ಟ್ರೇಲಿಯದ ಕಾಯ್ದೆಯ ೬೧ ನೆಯ ಎಭಾಗ ಮತ್ತು ಕೆನಡದ ಕಾಯ್ದೆಯ ೯ನೆಯ ವಿಭಾಗವನ್ನು ಹೋಲುತ್ತದೆ. +ಈ ವಿಷಯದಲ್ಲಿ ಭಾರತ ಒಕ್ಕೂಟ ಅಮೇರಿಕದ ಸಂಯುಕ್ತ ರಾಜ್ಯದಿಂದ ಭಿನ್ನವಾಗಿದ್ದು ಕೆನಡ ಮತ್ತು ಆಸ್ಟ್ರೇಲಿಯ ಸಂಯುಕ್ತ ರಾಜ್ಯಗಳೊಡನೆ ಸಮ್ಮತವಾಗಿದ್ದುದು ಸಹಜವಾಗಿಯೇ ಅರ್ಥವಾಗಬಲ್ಲುದು. +ಅಮೆರಿಕ ಒಂದು ಗಣರಾಜ್ಯವಾಗಿದ್ದು, ಕೆನಡ ಮತ್ತು ಭಾರತ (ಬ್ರಿಟಿಷ್‌) ಪ್ರಭುತ್ವದ ಪರಮಾಧಿಕಾರದ ಅಥವಾ ಒಳರಾಜ್ಯಗಳಾಗಿವೆ. +ಅಮೆರಿಕದ ಎಲ್ಲಾ ಅಧಿಕಾರಗಳ ಮೂಲ ಕೇಂದ್ರ ಜನತೆಯೇ ಆಗಿದ್ದಾರೆ. +ಕೆನಡ ಮತ್ತು ಭಾರತದಲ್ಲಿ ಎಲ್ಲಾ ಅಧಿಕಾರದ ಮೂಲ ಸೂತ್ರ ಪ್ರಭುವಿನಲ್ಲಿದೆ. +ಪ್ರಭುತ್ವ ಯಾವ ಮೂಲದಿಂದ ತನ್ನ ಅಧಿಕಾರ ಪಡೆಯುತ್ತದೆ ? +ಕೆನಡ ಮತ್ತು ಆಸ್ಟೇಲಿಯಕ್ಕೆ ಸಂಬಂಧಿಸಿದಂತೆ ಇಂತಹ ಪ್ರಶ್ನೆ ಅನವಶ್ಯಕ. +ಏಕೆಂದರೆ ಅಲ್ಲಿ ಪ್ರಭುತ್ವವೇ ಎಲ್ಲಾ ಅಧಿಕಾರದ ಅಂತಿಮ ಮೂಲವಾಗಿದೆ . +ಅದನ್ನು ಮೀರಿ ಅಥವಾ ಅದರಹಿ೦ದೆ ಪ್ರಮಾಣಿಸುವಂತಹ ಯಾವುದೇ ಮೂಲ ಇರುವುದಿಲ್ಲ. +ಭಾರತ ಒಕ್ಕೂಟದ ಕುರಿತು ನಾವು ಹೀಗೆ ಹೇಳಲು ಸಾಧ್ಯವೇ ? + ಒಕ್ಕೂಟ ಚಲಾಯಿಸುವ ಎಲ್ಲಾ ಅಧಿಕಾರದ ಅಂತಿಮ ಮೂಲ ಪ್ರಭುತ್ವವೇ? +ಈ ಅಧಿಕಾರವನ್ನು ಪ್ರಮಾಣಿಸಲು ಪ್ರಭುತ್ವದ ಆಚೆಗೆ ಅಥವಾ ಅದನ್ನು ಬಿಟ್ಟು ಇನ್ನಾವುದೇ ಮೂಲ ಇದೆಯೇ? +ಸಂಯುಕ್ತ ರಾಜ್ಯದ ಅಧಿಕಾರದ ಕೆಲವೇ ಅಂಶಗಳಿಗೆ ಪ್ರಭುತ್ವವು ಅಂತಿಮ ಮೂಲವಾಗಿದ್ದು,ಉಳಿದ ವಿಷಯಗಳಿಗೆ ಪ್ರಭುತ್ವ ಅಂತಿಮ ಮೂಲವಾಗಿಲ್ಲ. +ಇದು ನಿಜಸ್ಥಿತಿ ಎಂಬುದು ವಿಲೀನ ಪ್ರಕ್ರಿಯೆಯ ಕರಾರುಗಳಿಂದ ಸ್ಪಷ್ಟವಾಗುತ್ತದೆ. +ಕರಡು ದಸ್ತಾವೇಜಿನಿಂದ ಈ ಕೆಳಗಿನ ಅಂಶಗಳನ್ನು ಉದ್ಧರಿಸುತ್ತೇನೆ. +ಒಕ್ಕೂಟ ವ್ಯವಸ್ಥೆಯಲ್ಲಿ ಸೇರ್ಪಡೆಯಾಗಬಹುದಾದ ಭಾರತೀಯ ಸಂಸ್ಥಾನಗಳು . + ಸ್ವಾಯತ್ತ ಪ್ರಾಂತ್ಯಗಳಾಗಿ ಘಟಿಸಲಾಗಲಿರುವ ಬ್ರಿಟಿಷ್‌ ಭಾರತದ ಪ್ರಾಂತ್ಯಗಳನ್ನೊಳಗೊಂಡ ಭಾರತ ಒಕ್ಕೂಟ ಸ್ಥಾಪನೆಯ ಪ್ರಸ್ತಾಪವನ್ನು ಬ್ರಿಟನ್ನಿನ ಸಂಸತ್ತು . + ಮಹಾಪ್ರಭುವಿನ ಸರಕಾರದ, ಬ್ರಿಟಿಷ್‌ ಭಾರತದ ಮತ್ತು ಭಾರತೀಯ ಸಂಸ್ಥಾನಗಳ ರಾಜರುಗಳ ಪ್ರತಿನಿಧಿಗಳೊಡನೆ ಚರ್ಚೆ ಮಾಡಲಾಗಿದ್ದು ಮತ್ತು ಬ್ರಿಟನ್ನಿನ ಸಂಸತ್ತಿನ ಕಾಯ್ದೆಯ ಮೂಲಕ ಮತ್ತು ಭಾರತೀಯ ಸಂಸ್ಥಾನಗಳ ಸೇರ್ಪಡೆಯೊಂದಿಗೆ ಭಾರತ ಒಕ್ಕೂಟ ಸ್ಥಾಪನೆಯಾಗಬೇಕೆಂದು ಈ ಪ್ರಸ್ತಾಪಗಳು ಉದ್ದೇಶಿಸಿದ್ದು ಮತ್ತು ಭಾರತ ಒಕ್ಕೂಟ ಸ್ಥಾಪನೆಗೆ ಈಗ ಭಾರತ ಸರಕಾರ ಕಾಯ್ದೆ, ೧೯೩೫ ರಲ್ಲಿ ಅವಕಾಶ ಕಲ್ಪಿಸಲಾಗಿದ್ದು ಮತ್ತು ಈ ಕಾಯ್ದೆಯಲ್ಲಿ ಮಹಾ ಪ್ರಭುವು ತನ್ನ ಘೋಷಣೆಯ ಮೂಲಕ ಭಾರತ ಒಕ್ಕೂಟ ಸ್ಥಾಪಿತವಾಗುವ ದಿನಾಂಕವನ್ನು ಘೋಷಿಸದ ಹೊರತು ಮತ್ತು ಅವಶ್ಯಕವಾದ ಸಂಖ್ಯೆಯಷ್ಟು ಭಾರತೀಯ ಒಕ್ಕೂಟದಲ್ಲಿ ಸೇರ್ಪಡೆಯಾಗುವವರೆಗೆ ಇಂತಹ ಘೋಷಣೆಯನ್ನು ಹೊರಡಿಸುವಂತಿಲ್ಲ. +ಮತ್ತು ಉಲ್ಲೇಖಿತ ಕಾಯ್ದೆಯ ಸಂಯುಕ್ತ ರಾಜ್ಯದಲ್ಲಿ ನನ್ನ ಸೇರ್ಪಡೆಯ ಮೂಲಕ ನೀಡಲಾದ ನನ್ನ ಸಮ್ಮತಿಯ ಹೊರತು ನನ್ನ ಯಾವುದೇ ಪ್ರದೇಶಕ್ಕೆ ಅನ್ವಯವಾಗುವಂತಿಲ್ಲ; +ಆದ್ದರಿಂದ, ನಾನೀಗ (ಪೂರ್ಣ ಹೆಸರು ಮತ್ತು ಅಧಿಕಾರ ನಾಮ ಸೇರಿಸಿ ಸಂಸ್ಥಾನದ ಹೆಸರನ್ನು ನಮೂದಿಸಿ) ರಾಜನಾಗಿ ಭಾರತದ ಹಿತರಕ್ಷಣೆ ಮತ್ತು ಕಲ್ಯಾಣಕ್ಕಾಗಿ ಸಹಕರಿಸಲು ಪ್ರಭುತ್ವದ ಆಶ್ರಯದಲ್ಲಿ ಗವರ್ನರ್‌ ಪ್ರಾಂತ್ಯಗಳೆಂದು ಮತ್ತು ಚೀಫ್‌ ಕಮೀಷನರ್‌ ಪ್ರಾಂತ್ಯಗಳೆಂದು ಕರೆಯಲಾದ ಪ್ರಾಂತ್ಯಗಳು ಹಾಗೂ ಭಾರತೀಯ ಸಂಸ್ಥಾನದ ರಾಜರುಗಳು ಸೇರಿದ ಭಾರತ ಸಂಯುಕ್ತ ರಾಜ್ಯವೆಂದು ಕರೆಯಲಾದ ವ್ಯವಸ್ಥೆಯಲ್ಲಿ ಒಂದುಗೂಡಿ ನನ್ನ ಸಂಸ್ಥಾನದಲ್ಲಿ ಮತ್ತು ಅದರ ಮೇಲೆ ನಾನು ಹೊಂದಿರುವ ಸಾರ್ವಭೌಮ ಅಧಿಕಾರದನ್ವಯ ಈ ದಸ್ತಾವೇಜಿಗೆ ಮಹಾಪ್ರಭುಗಳು ಒಪ್ಪಿಗೆ ನೀಡುವರೆಂಬ ಆಧಾರದ ಮೇಲೆ ಭಾರತ ಸರಕಾರ ಕಾಯ್ದೆ. +೧೯೩೫ರನ್ವಯ ಸ್ಥಾಪಿತವಾಗುವ ಭಾರತ ಒಕ್ಕೂಟದಲ್ಲಿ ಸೇರ್ಪಡೆಯಾಗುವೆನೆಂದು ಸಾರುತ್ತೇನೆ”. +ಇದು ಭಾರತ ಒಕ್ಕೂಟದ ಅತ್ಯಂತ ಮಹತ್ವದ ಅಂಶವಾಗಿದೆ. +ಭಾರತ ಒಕ್ಕೂಟ ವ್ಯವಸ್ಥೆ ಮತ್ತುಕೆನಡ ಹಾಗೂ ಆಸ್ಟ್ರೇಲಿಯ ಸಂಯುಕ್ತ ರಾಜ್ಯಗಳ ನಡುವಣ ವ್ಯತ್ಯಾಸ ಯಾವ ಕಾರಣದಿಂದುಂಟಾಗಿದೆ? +ಯಾವ ವಿಷಯದಲ್ಲಿ ಪ್ರಭುತ್ವ ಅಂತಿಮ ಮೂಲವಾಗಿದೆ ಮತ್ತು ಯಾವ ವಿಷಯದಲ್ಲಿ ಅದು ಹಾಗಾಗಿಲ್ಲ ? +ಈ ಪ್ರಶ್ನೆಗಳನ್ನು ಅರ್ಥ ಮಾಡಿಕೊಳ್ಳಲು ಎರಡು ವಿಷಯಗಳನ್ನು ಗಮನಿಸಬೇಕು. +ಮೊದಲನೆಯದಾಗಿ, ಭಾರತ ಒಕ್ಕೂಟವು ಎರಡು ಭಿನ್ನ ಪ್ರದೇಶಗಳಿಂದ ಕೂಡಿದೆ. +ಬ್ರಿಟಿಷ್‌ ಭಾರತ ಮತ್ತು ಭಾರತೀಯ ಅಥವಾ ದೇಶೀ ಸಂಸ್ಥಾನಗಳು. +೫ನೆಯ ವಿಭಾಗವನ್ನು ಅವಲೋಕಿಸಿದಾಗ ಈ ಅಂಶ ಸ್ಪಷ್ಟವಾಗುವುದು. +ಎರಡನೆಯದಾಗಿ, ಪ್ರಭುತ್ವದೊಂದಿಗೆ ಈ ಎರಡೂ ಪ್ರದೇಶಗಳ ಸಂಬಂಧ ಏಕರೀತಿಯದಾಗಿಲ್ಲ. +ಬ್ರಿಟಿಷ್‌ ಭಾರತ ಎಂದು ಕರೆಯಲಾಗುತ್ತಿರುವ ಪ್ರದೇಶಗಳು ಪ್ರಭುತ್ವದಡಿಯಲ್ಲಿವೆ. +ಆದರೆ ಭಾರತೀಯ ಸಂಸ್ಥಾನಗಳೆಂದು ಕರೆಯಲಾಗುತ್ತಿರುವ ಪ್ರದೇಶಗಳು ಪ್ರಭುತ್ವದಡಿಯಲ್ಲಿರದೆ, ರಾಜರ ಅಧೀನದಲ್ಲಿವೆ. +೨ ನೆಯ ಮತ್ತು ೩೧೧ ನೆಯ ವಿಭಾಗಗಳಿಂದ ಇದು ಸ್ಪಷ್ಟವಾಗುತ್ತದೆ. +ಬ್ರಿಟಿಷ್‌ ಭಾರತದ ಭೂಪ್ರದೇಶ ಪ್ರಭುತ್ವದಡಿ ಇರುವುದರಿಂದ ಪ್ರಭುತ್ವವೇ ಅದರ ಮೇಲೆ ಸಾರ್ವಭೌಮತ್ವವನ್ನು ಹೊಂದಿದೆ. +ಮತ್ತು ಭಾರತೀಂತು ಸಂಸ್ಥಾನಗಳ ಭೂಪ್ರದೇಶ ಆಯಾ ಸಂಸ್ಥಾನಗಳ ರಾಜರಡಿಯಲ್ಲಿರುವುದರಿ೦ದ ರಾಜರುಗಳೇ ತಮ್ಮ ತಮ್ಮ ಸಂಸ್ಥಾನಗಳ ಮೇಲೆ ಸಾರ್ವಭೌಮತ್ವ ಹೊಂದಿರುತ್ತಾರೆ. +ಭಾರತದ ಒಕ್ಕೂಟ ವ್ಯವಸ್ಥೆಯಲ್ಲಿ ಪ್ರಭುತ್ವವು ಕೆಲವು ಭಾಗಗಳಲ್ಲಿ ಅಧಿಕಾರದ ಅಂತಿಮ ಮೂಲವಾಗಿದೆ. +ಉಳಿದ ಭಾಗಗಳಲ್ಲಿ ಎಲ್ಲಿಯವರೆಗೆ ಬ್ರಿಟಿಷ್‌ ಭಾರತವು ಒಕ್ಕೂಟದ ಒಂದು ಭಾಗವಾಗಿರುವುದೋ ಅಲ್ಲಿಯವರೆಗೆ ಪ್ರಭುತ್ವವು ಅಧಿಕಾರದ ಮೂಲವಾಗಿದೆಯೆಂದು ನಾನು ಏಕೆ ಹೇಳಿದೆನೆಂದು ನಿಮಗೆ ಈಗ ಅರ್ಥವಾಗುವುದು. +ಭಾರತೀಯ ರಾಜನು ಎಲ್ಲಿಯವರೆಗೆ ತನ್ನ ಸಂಸ್ಥಾನವು ಈ ಸಂಯುಕ್ತ ರಾಜ್ಯದ ಭಾಗವಾಗಿರುತ್ತದೆಯೋ ಅಲ್ಲಿಯವರೆಗೆ ತನ್ನ ಸಂಸ್ಥಾನದಲ್ಲಿ ಅಧಿಕಾರದ ಅಂತಿಮ ಮೂಲವಾಗಿರುತ್ತಾನೆ. +೭ ನೆಯ ವಿಭಾಗದಲ್ಲಿ ಹೇಳಿರುವಂತೆ ಒಕ್ಕೂಟ ವ್ಯವಸ್ಥೆಯ ಕಾರ್ಯಾಂಗ ಅಧಿಕಾರವನ್ನು ಪ್ರಭುತ್ವದ ಪರವಾಗಿ ಗವರ್ನರ್‌ ಜನರಲ್‌ ಚಲಾಯಿಸುವರೆಂದರೆ ಭಾರತ ಒಕ್ಕೂಟದ ಕಾರ್ಯಾಚರಣೆಯಲ್ಲಿ ಪ್ರಭುತ್ವವು ಗವರ್ನರ್‌ ಜನರಲ್‌ರಿಗೆ ನಿಯೋಜಿಸಲಾದ ಪ್ರಭುತ್ವದ ಅಧಿಕಾರವು ಭಾಗಶಃ ತನ್ನದೇ ಆಗಿದ್ದು ಭಾಗಶಃ ಭಾರತೀಯ ಸಂಸ್ಥಾನಗಳ ರಾಜರುಗಳಿಂದ ಪಡೆದುಕೊಂಡದ್ದಾಗಿದೆ ಎಂದು ತಿಳಿದುಕೊಳ್ಳಬೇಕಾಗುತ್ತದೆ. +ಒಂದು ದೇಶಿ ಸಂಸ್ಥಾನದ ರಾಜನಿಗೆ ಸೇರಿದ ಅಧಿಕಾರವನ್ನು ಪ್ರಭುತ್ವವು ಯಾವ ವಿಧಾನದಿಂದ ಪಡೆದುಕೊಳ್ಳುವುದು? +ಭಾರತದ ಕಾಯ್ದೆಯಲ್ಲಿ ಈ ವಿಧಾನವನ್ನು ಸೇರ್ಪಡೆ ಅಥವಾ ಪ್ರವೇಶ ಎಂದು ಕರೆಯಲಾಗಿದೆ. +ಈ ಪ್ರದೇಶವು ಸಂಸ್ಥಾನದ ರಾಜನು ಸೇರ್ಪಡೆಯ ದಸ್ತಾವೇಜನ್ನು ಬರೆದುಕೊಡುವ ಮೂಲಕ ಸಿಂಧುವಾಗುವುದು. +ಸೇರ್ಪಡೆಯ ದಸ್ತಾವೇಜಿನ ನಿಯಮಗಳನ್ನು ೬(೧) ನೆಯ ವಿಭಾಗದಲ್ಲಿ ಹೇಳಲಾಗಿದೆ. +ಈ ವಿಭಾಗದಲ್ಲಿ ಹೇಳಿರುವಂತೆ “ಒಂದು ಸಂಸ್ಥಾನದ ರಾಜನು ತನ್ನ, ತನ್ನ ವಾರಸುದಾರರು ಮತ್ತು ಉತ್ತರಾಧಿಕಾರಿಗಳ ಪರವಾಗಿ ಬರೆದುಕೊಟ್ಟ ಸೇರ್ಪಡೆಯ ದಸ್ತಾವೇಜಿಗೆ ಮಹಾ ಪ್ರಭುವು ಸಮ್ಮತಿಯನ್ನು ಸೂಚಿಸಿದಾಗ ಆ ಸಂಸ್ಥಾನವು ರಾಜ್ಯಕ್ಕೆ ಸೇರ್ಪಡೆಯಾಯಿತೆಂದು ಪರಿಗಣಿಸತಕ್ಕದ್ದು. +ಅ) ಈ ಕಾಯ್ದೆಯ ಆಶಯದಂತೆ ಅಸ್ತಿತ್ವಕ್ಕೆ ಬಂದ ಒಕ್ಕೂಟ ವ್ಯವಸ್ಥೆಗೆ ಸನ್ಮಾನ್ಯ ದೊರೆ,ಭಾರತದ ಗವರ್ನರ್‌ ಜನರಲ್‌, ಒಕ್ಕೂಟದ ಶಾಸಕಾಂಗ, ನ್ಯಾಯಾಂಗ ಮತ್ತು ಒಕ್ಕೂಟಕ್ಕಾಗಿ ರಚಿಸಲಾದ ಯಾವುದೇ ಬಗೆಯ ಸಂರಚನೆಗಳು, ಸೇರ್ಪಡೆಯ ದೆಸೆಯಿಂದಾಗಿಯೇ ಅನುವಾಗುತ್ತವೆ. +ಆದಾಗ್ಯೂ,ಇವುಗಳಿಗೆ ವಿಧಿವಿಧಾನಗಳು ಅನ್ವಯವಾಗಲಿದ್ದು. +ದೊರೆಯ ಆಡಳಿತಕ್ಕೆ ಒಳಪಟ್ಟ ಪ್ರದೇಶದಲ್ಲಿ ಆತನೊಂದಿಗಿದ್ದ ಅಧಿಕಾರಕ್ಕೆ ಬದಲಾಗಿ ಒಕ್ಕೂಟದ ನಿಯಮಗಳು ಜಾರಿಯಾಗಲಿದೆ. + ಜೊತೆಗೆ ಬ) ಸೇರ್ಪಡೆಯ ವಿಧಿವಿಧಾನಕ್ಕೆ ಅನುಗುಣವಾಗಿ ಒಪ್ಪಿತವಾದ ಎಲ್ಲ ಅಂಶಗಳನ್ನು ತಮ್ಮ ಸಂಸ್ಥಾನದಲ್ಲಿ ಅನುಷ್ಠಾನಗೊಳಿಸುವ ಜವಾಬ್ದಾರಿಯೂ ಕೂಡ ಒಪ್ಪಂದದ ಭಾಗವಾಗಿರುತ್ತದೆ. +ದೊರೆಗೆ ಈಗ ನೀಡಲಾಗಿರುವ ಅಧಿಕಾರವು ಅವರ ಆಳ್ವಿಕೆಯ ಪ್ರದೇಶವನ್ನು ಭಾರತದ ಒಕ್ಕೂಟದಲ್ಲಿ ವಿಲೀನಗೊಳಿಸುವ ಪ್ರಕ್ರಿಯೆ ವಿಧಿವಿಧಾನದಿಂದ ದೊರೆತುದಾಗಿದೆ. +ಮಾತ್ರವಲ್ಲ, ಒಕ್ಕೂಟದ ಮೇಲೆದೊರೆಗಿರುವ ಅಧಿಕಾರವು ಆ ಮೂಲದಿಂದಲೇ ಬಂದುದಾಗಿದೆ. +ಇದು ಒಕ್ಕೂಟ ವ್ಯವಸ್ಥೆಯ ಹುಟ್ಟಿಗೆ ಕಾರಣವಾಗುವ ನಿಯಮಾವಳಿ. +ಆದರೆ ಒಕ್ಕೂಟದ ಅಭಿವೃದ್ಧಿಗೂ ಒಂದು ಕಾನೂನು ಬೇಕಿಲ್ಲವೆ ? ಹಾಗಿದ್ದರೆ, ಅದು ಯಾವುದು? +ಇನ್ನೊಂದು ಮಾತಿನಲ್ಲಿ ಹೇಳುವುದಾದರೆ ಅಗತ್ಯ ಬದಲಾವಣೆಗಳಿಗೆ ನಿಯಮಾವಳಿ ಎಲ್ಲಿದೆ ? +ಇದನ್ನು ೬(೧) (ಅ) ವಿಭಾಗದಲ್ಲಿ ಹೇಳಲಾಗಿದೆ. +ಒಬ್ಬ ರಾಜನು ವಿಲೀನ ಪ್ರಕ್ರಿಯೆಯ ಮೂಲಕ “ಈ ಕಾಯ್ದೆಯನ್ವಯ ಸ್ಥಾಪಿತವಾದ ಒಕ್ಕೂಟಕ್ಕೆ” ಪ್ರವೇಶಿಸುತ್ತಾನೆ ಎಂಬುದು ೬(೧) (ಅ) ವಿಭಾಗದಿಂದ ಸ್ಪಷ್ಟವಾಗುತ್ತದೆ. +ಅನುಸೂಚಿ 1 ರಲ್ಲಿ ಸಂವಿಧಾನಕ್ಕೆ ಮುಂದೆ ಮಾಡಬಹುದಾದ ತಿದ್ದುಪಡಿಯನ್ನು ವಿವರಿಸಲಾಗಿದೆ. +ಭಾರತ ಸರಕಾರ ಕಾಯ್ದೆಯ ಯಾವ ವಿಷಯಗಳಲ್ಲಿ ಮಾಡಬಹುದಾದ ತಿದ್ದುಪಡಿಯಿ೦ದ ಸೇರ್ಪಡೆಯ ದಸ್ತಾವೇಜಿನ ಮೇಲೆ ಪರಿಣಾಮವಾಗುವುದು ಮತ್ತು ಸಂಸ್ಥಾನಗಳ ಸೇರ್ಪಡೆಯ ದಸ್ತಾವೇಜಿನ ಮೇಲೆ ಪರಿಣಾಮವಾಗುವುದಿಲ್ಲ ಎಂಬ ವಿಷಯವನ್ನು ಅದು ಹೇಳುತ್ತದೆ. +೬(೫)ನೆಯ ಪರಿಚ್ಛೇದವು ಎರಡು ಕೆಲಸ ಮಾಡುತ್ತದೆ. +ಮೊದಲನೆಯದಾಗಿ, ಅದು ಸೇರ್ಪಡೆಯ ದಸ್ತಾವೇಜಿನ ಅನುಸೂಚಿ 11 ರಲ್ಲಿ ಸೇರ್ಪಡೆಯ ದಸ್ತಾವೇಜಿನ ಮೇಲೆ ಪರಿಣಾಮವಾಗದಂತಹ ವಿಷಯಗಳಲ್ಲಿ ತಿದ್ದುಪಡಿಮಾಡುವ ಹಕ್ಕನ್ನು ಸಂಸತ್ತಿಗೆ ನೀಡುತ್ತದೆ. +ಎರಡನೆಯದಾಗಿ, ಮೇಲೆ ಹೇಳಿದ ವಿಷಯಗಳಲ್ಲಿ ಸಂಸತ್ತು ತಿದ್ದುಪಡಿ ಮಾಡಬಹುದಾದರೂ ಅದು ಸಂಸ್ಥಾನಗಳಿಗೆ ಅವು ಇನ್ನೊಂದು ಪೂರಕ ಒಪ್ಪಂದದ ಮೂಲಕ ತಾವು ಬಾಧ್ಯರಾಗಿದ್ದೇವೆ ಎಂದು ಬರೆದುಕೊಡುವವರೆಗೂ ಅವರು ತಿದ್ದುಪಡಿಗೆ ಬದ್ಧವಾಗುವುದಿಲ್ಲ. +ಒಟ್ಟಿನಲ್ಲಿ, ಈ ಸಂಯುಕ್ತ ರಾಜ್ಯದ ಘಟಕಗಳೆಲ್ಲಕ್ಕೂ ಕಾರ್ಯಾಚರಣೆಯ ಮೂಲ ಏಕರೂಪವಾಗಿರುವುದಿಲ್ಲ. +ಘಟಕಗಳು ಪ್ರತ್ಯೇಕವಾಗಿವೆ. +ಅವುಗಳನ್ನು ಸುಮ್ಮನೆ ಒಂದು ಗೂಡಿಸಿಡಲಾಗಿದೆ ಮಾತ್ರ. +ಕೆಲವು ವಿಷಯಗಳಲ್ಲಿ ಈ ಘಟಕಗಳನ್ನು ಪರಿವರ್ತಿಸಲು ಸಾಧ್ಯವೇ ಇಲ್ಲ. +ಕೆಲವು ಉದ್ದೇಶಗಳಿಗಾಗಿ ಅವುಗಳನ್ನು ಪರಿವರ್ತಿಸಬಹುದಾದರೂ ಅಂತಹ ಪರಿವರ್ತನೆಗೆ ಎಲ್ಲಾ ಘಟಕಗಳು ಒಂದೇ ವಿಧದಲ್ಲಿ ಬದ್ಧವಾಗುವುದಿಲ್ಲ. +ಕೆಲವು ಬದ್ಧವಾಗಬಹುದು ಆದರೆ ಇನ್ನೂ ಕೆಲವು ತಮ್ಮ ಒಪ್ಪಿಗೆ ಇದ್ದಲ್ಲಿ ಮಾತ್ರ ಬದ್ಧವಾಗಬಹುದು. +ಬೇರೆ ರೀತಿಯಲ್ಲಿ ಹೇಳಬೇಕೆಂದರೆ, ಈ ಸಂಯುಕ್ತ ರಾಜ್ಯ ವ್ಯವಸ್ಥೆಯಲ್ಲಿ ಬೆಳವಣಿಗೆಗೆ ಅವಕಾಶವಿಲ್ಲ. +ಅದು ಸ್ಥಾಯಿಯಾಗಿದ್ದು ಚಲಿಸಲಾರದಂತಹದು. +ವಿಕಾಸದ ಮೂಲಕವೂ ಅಲ್ಲಿ ಬದಲಾವಣೆ ಸಾಧ್ಯವಿಲ್ಲ. +ಅದು ಎಲ್ಲಿ ಸಾಧ್ಯವೋ ಅಲ್ಲಿ ಅಂತಹ ಬದಲಾವಣೆಯನ್ನು ಒಪ್ಪಿಕೊಳ್ಳದ ಹೊರತು ಅದು ಬಾಧ್ಯವಾಗುವುದಿಲ್ಲ. +ಒಕ್ಕೂಟ ವ್ಯವಸ್ತೆಯ ಸ್ವರೂಪ ಒಕ್ಕೂಟದ ಶಾಸಕಾಂಗ ಒಕ್ಕೂಟ ವ್ಯವಸ್ಥೆಯ ಶಾಸಕಾಂಗವು ಉಭಯ ಸದನಗಳ ಶಾಸಕಾಂಗವಾಗಿದೆ. +ವಿಧಾನ ಸಭೆ ಎಂದು ಕರೆಯಲಾದ ಒಂದು ಕೆಳ ಸದನವಿದ್ದು, ರಾಜ್ಯ ಸಭೆ ಎಂದು ಕರೆಯಲಾದ ಮೇಲ್ಸದನವಿದೆ. +ಈ ಎರಡೂ ಸದನಗಳ ರಚನೆ ಗಮನಾರ್ಹ ಅಂಶವಾಗಿದೆ. +ಜನಸಂಖ್ಯೆ ಮತ್ತು ವಿಸ್ತೀರ್ಣದ ದೃಷ್ಟಿಯಿಂದ ಮತ್ತು ಇತರ ಶಾಸಕಾಂಗಗಳಿಗೆ ಹೋಲಿಸಿ ನೋಡಿದಾಗ ಈ ಎರಡೂ ಸದನಗಳು ಗಾತ್ರದಲ್ಲಿ ಅತಿ ಸಣ್ಣವಾಗಿವೆ ಎಂದೇ ಹೇಳಬಹುದು. +ಒಕ್ಕೂಟ ರಾಜ್ಯದ ವಿಧಾನ ಸಭೆಯ ಸದಸ್ಯರ ಸಂಖ್ಯೆ ೩೭೫ ಇದ್ದು ರಾಜ್ಯಸಭೆಯ ಸಂಖ್ಯೆ ೨೬ಂ ಆಗಿದೆ. +ಈ ಸ್ಥಾನಗಳನ್ನು ಕೆಲವು ಪ್ರಮಾಣದಲ್ಲಿ ಬ್ರಿಟಷ್‌ ಭಾರತ ಮತ್ತು ಭಾರತೀಯ ಸಂಸ್ಥಾನಗಳ ನಡುವೆ ಹಂಚಲಾಗಿದೆ. +ಫೆಡರಲ್‌ ವಿಧಾನ ಸಭೆಯ ೩೭೫ ಸ್ಥಾನಗಳಲ್ಲಿ ೨೫ಂ ಸ್ಥಾನಗಳನ್ನು ಬ್ರಿಟಿಷ್‌ ಭಾರತಕ್ಕೆ ಮತ್ತು ೧೨೫ ಸ್ಥಾನಗಳನ್ನು ದೇಸಿ ಸಂಸ್ಥಾನಗಳಿಗೆ ಕೊಡಲಾಗಿದೆ. +ರಾಜ್ಯಸಭೆಯ ೨೬ಂ ಸ್ಥಾನಗಳಲ್ಲಿ ೧೫೬ ಸ್ಥಾನಗಳನ್ನು ಬಿಟಿಷ್‌ ಭಾರತಕ್ಕೆ ಮತ್ತು ೧ಂ೪ ಸ್ಥಾನಗಳನ್ನು ದೇಸಿ ಸಂಸ್ಥಾನಗಳಿಗೆ ನಿಗದಿಪಡಿಸಲಾಗಿದೆ. +ಬ್ರಿಟಿಷ್‌ ಭಾರತ ಮತ್ತು ದೇಸಿ ಸಂಸ್ಥಾನಗಳ ನಡುವೆ ಮಾಡಲಾದ ಸ್ಥಾನಗಳ ವಿತರಣೆಯನ್ನು ಯಾವುದೇ ರೀತಿಯ ಸಮಾನ ಪ್ರಮಾಣ ತತ್ವದ ಆಧಾರದ ಮೇಲೆ ಮಾಡಲಾಗಿಲ್ಲವೆಂಬುದು ಕಂಡುಬರುತ್ತದೆ. +ಜನಸಂಖ್ಯೆಯನ್ನು ಪ್ರಾತಿನಿಧ್ಯದ ಆಧಾರವೆಂದು ತೆಗೆದುಕೊಳ್ಳಬಹುದು. +ಆದಾಯವನ್ನೂ ಪ್ರಾತಿನಿಧ್ಯದ ಆಧಾರವೆಂದು ತೆಗೆದುಕೊಳ್ಳುವುದು ಸಾಧ್ಯ. +ಆದರೆ ಇವೆರಡರಲ್ಲಿ ಯಾವುದೂ ಆಧಾರವಾಗಿಲ್ಲ. +ನೀವು ಜನಸಂಖ್ಯೆಯನ್ನೇ ಆಧಾರವಾಗಿಟ್ಟುಕೊಂಡರೂ ಅಥವಾ ಆದಾಯವನ್ನೇ ಇಟ್ಟುಕೊಂಡರೂ ಬ್ರಿಟಿಷ್‌ ಭಾರತಕ್ಕಿರುವ ಪ್ರಾತಿನಿಧ್ಯ ಕಡಿಮೆ ಎನಿಸುವುದು. +ಅದೇ ಭಾರತೀಯ ಸಂಸ್ಥಾನಗಳು ಎರಡೂ ಸದನಗಳಲ್ಲಿ ಹೆಚ್ಚಿನ ಪ್ರಾತಿನಿಧ್ಯ ಪಡೆದಿವೆ. +ಈ ಸ್ಥಾನಗಳನ್ನು ತುಂಬುವ ವಿಧಾನವೂ ಗಮನಾರ್ಹವಾಗಿದೆ. +ಬ್ರಿಟಿಷ್‌ಭಾರತದಿಂದ ಎರಡೂ ಸದನಗಳಿಗೆ ಪ್ರತಿನಿಧಿಗಳು ಚುನಾಯಿತರಾಗುತ್ತಾರೆ. +ಆದರೆ ಭಾರತೀಯ ಸಂಸ್ಥಾನಗಳ ಪ್ರತಿನಿಧಿಗಳು ಸಂಸ್ಥಾನದ ರಾಜರುಗಳಿಂದ ನಾಮಕರಣಗೊಳ್ಳುತ್ತಾರೆ. +ತನ್ನ ಸಂಸ್ಥಾನದ ಪ್ರತಿನಿಧಿಗಳು ತನ್ನಿಂದ ನೇಮಕಗೊಳ್ಳುವರಾದರೂ, ತನ್ನ ಪ್ರಜೆಗಳೇ ಅವರನ್ನು ಆರಿಸುವುದಕ್ಕೆ ಅವಕಾಶ ಕೊಡುವುದು ರಾಜನ ವಿವೇಚನೆಗೆ ಬಿಟ್ಟ ವಿಷಯವಾಗಿದೆ. +ತನ್ನ ಪ್ರಜೆಗಳಿಂದ ಆಯ್ಕೆಯಾದವರನ್ನೇ ತಾನು ನೇಮಕ ಮಾಡಬಹುದು, ಅಥವಾ ತಾನು ಬಯಸಿದರೆ ಎರಡೂ ವಿಧಾನಗಳನ್ನು, ಎಂದರೆ ಆಯ್ಕೆ ಮತ್ತು ನೇಮಕ, ಪದ್ಧತಿಗಳನ್ನು ಅನುಸರಿಸಬಹುದು. +ಇದರ ಅಂತಿಮ ಪರಿಣಾಮವೆಂದರೆ ಸಂಸ್ಥಾನದ ಪ್ರತಿನಿಧಿ ಜನತೆಯಿಂದ ಚುನಾಯಿತನಾಗದೆ, ರಾಜನಿಂದ ನೇಮಕಗೊಂಡಂತಾಗುವುದು. +ಬ್ರಿಟಿಷ್‌ ಎರಡೂ ಸದನಗಳಿಗೆ, ಭಾರತದ ಪ್ರತಿನಿಧಿಗಳು ಚುನಾಯಿತರಾಗುತ್ತಾರೆ. +ಆದರೆ ಇಲ್ಲಿಯೂ ಕೂಡ ಗಮನಿಸಬೇಕಾದ ಒಂದು ವಿಚಿತ್ರ ಸಂಗತಿ ಇದೆ. +ಎಲ್ಲಾ ದ್ವಿಸದನ ಶಾಸಕಾಂಗಗಳಲ್ಲಿ ಕೆಳಸದನವು ಜನತಾ ಸದನವಾಗಿದ್ದು ಜನರೇ ಅದರ ಸದಸ್ಯರನ್ನು ನೇರವಾಗಿ ಚುನಾಯಿಸುತ್ತಾರೆ. +ಮೇಲ್ಸದನವು ಪರಿಷ್ಕಾರಕ ಸದನವಾಗಿದ್ದು ಅದರ ಸದಸ್ಯರು ಅಪ್ರತ್ಯಕ್ಷವಾಗಿ ಚುನಾಯಿತರಾಗುತ್ತಾರೆ. +ಭಾರತ ಸಂಯುಕ್ತರಾಜ್ಯದಲ್ಲಿ ಈ ವಿಧಾನವು ತಿರುವು ಮುರುವಾಗಿದೆ. +ಇಲ್ಲಿ ಮೇಲ್ಸದನಕ್ಕೆ ಜನರಿಂದ ನೇರ ಚುನಾವಣೆಯಾಗುತ್ತದೆ ಮತ್ತು ಕೆಳಸದನಕ್ಕೆ ಪ್ರಾಂತೀಯ ಶಾಸಕಾಂಗಗಳಿಂದ ಅಪ್ರತ್ಯಕ್ಷ ಚುನಾವಣೆ ನಡೆಯುವುದು. +ಒಕ್ಕೂಟ ರಾಜ್ಯದ ವಿಧಾನ ಸಭೆಯ ಅವಧಿ ಐದು ವರ್ಷವಿದ್ದು, ಅದಕ್ಕಿಂತ ಮುಂಚೆಯೂ ಅದನ್ನು ವಿಸರ್ಜಿಸಬಹುದು. +ರಾಜ್ಯ ಸಭೆ ಕಾಯಂ ಸಭೆಯಾಗಿದ್ದು, ಇದನ್ನು ವಿಸರ್ಜಿಸಲು ಬರುವುದಿಲ್ಲ. +ಈ ಸಭೆಯ ಮೂರನೆಯ ಒಂದು ಭಾಗ ಸದಸ್ಯರು ಪ್ರತಿ ಮೂರು ವರ್ಷಕ್ಕೊಮ್ಮೆ ಬದಲಾಗುವ ಮೂಲಕ ಈ ಸದನ ಕಾಯಂ ಅಸ್ತಿತ್ವ ಹೊಂದಿದೆ. +ಇನ್ನು ನೀತಿ ನಿಯಮಗಳನ್ನು ರೂಪಿಸುವ ಹಾಗೂ ಆಯವ್ಯಯಕ್ಕೆ ಅಂಗೀಕಾರ ನೀಡುವ ವಿಷಯದಲ್ಲಿ ಈ ಎರಡೂ ಸದನಗಳು ಪಡೆದಿರುವ ಅಧಿಕಾರವನ್ನು ಗಮನಿಸಬಹುದು. +ನಿಯಮ ರೂಪಿಸುವ ಅಧಿಕಾರಕ್ಕೆ ಸಂಬಂಧಿಸಿದಂತೆ ಕೆಲವು ಸಂವಿಧಾನಗಳಲ್ಲಿ ಹಣಕಾಸಿನ ಮಸೂದೆಗಳು ಮತ್ತು ಇತರ ಮಸೂದೆಗಳಲ್ಲಿ ಭೇದವನ್ನು ಕಲ್ಪಿಸಲಾಗಿದ್ದು, ಹಣಕಾಸು ಮಸೂದೆಗಳನ್ನು ಮಂಡಿಸುವ ಅಧಿಕಾರವನ್ನು ಮೇಲ್ಸದನಕ್ಕೆ ಕೊಡಲಾಗಿಲ್ಲ. +ಅದೇ ರೀತಿ ಮೇಲ್ಸದನವು ಹಣಕಾಸಿನ ಮಸೂದೆಯನ್ನು ತಿರಸ್ಕರಿಸುವ ಅಧಿಕಾರವನ್ನು ಹೊಂದಿಲ್ಲ. +ಕೇವಲ ಒಂದು ನಿಗದಿತ ಅವಧಿಯವರೆಗೆ ಅದನ್ನು ತಡೆ ಹಿಡಿಯುವ ಅಧಿಕಾರ ಮಾತ್ರ ಅದಕ್ಕೆ ಇರುತ್ತದೆ. +ಆದರೆ ಭಾರತದ ಸಂವಿಧಾನದ ಮಸೂದೆಗಳಲ್ಲಿ ಇಂತಹ ಯಾವುದೇ ಭೇದ ಮಾಡಲಾಗಿಲ್ಲ. +ಹಣಕಾಸಿನ ಮಸೂದೆಗಳು ಮತ್ತು ಇತರ ಮಸೂದೆಗಳನ್ನು ಒಂದೇ ವಿಧವಾಗಿ ಪರಿಗಣಿಸಲಾಗಿದ್ದು ಅವು ನೀತಿ ನಿಯಮಗಳಾಗಲು ಎರಡೂ ಸದನಗಳ ಅಂಗೀಕಾರ ಅವಶ್ಯ. +ಇಲ್ಲಿರುವ ಒಂದೇ ಒಂದು ವ್ಯತ್ಯಾಸವೆಂದರೆ ೩೦(೧) ನೆಯ ವಿಭಾಗದ ಪ್ರಕಾರ ಹಣಕಾಸಿನ ಮಸೂದೆಯಲ್ಲದ ಮಸೂದೆಯನ್ನು ಯಾವುದಾದರೂ ಸದನದಲ್ಲಿ ಮಂಡಿಸಬಹುದಾಗಿದ್ದು, ೩೭ ನೆಯ ವಿಭಾಗದ ಪ್ರಕಾರ ಹಣಕಾಸಿನ ಮಸೂದೆಯನ್ನು ಮೇಲ್ಸದನದಲ್ಲಿ ಮಂಡಿಸುವಂತಿಲ್ಲ. +ಆದರೆ ೩ (೨) ನೆಯ ವಿಭಾಗದ ಪ್ರಕಾರ ಹಣಕಾಸಿನ ಮಸೂದೆಯು ಇತರ ಯಾವುದೇ ಮಸೂದೆಯಂತೆ ಮೇಲ್ಸದನದ ಒಪ್ಪಿಗೆಯನ್ನು ಪಡೆಯಬೇಕಾಗುತ್ತದೆ. +ವೆಚ್ಚಕ್ಕೆ ಮಂಜೂರಾತಿ ನೀಡುವ ಅಧಿಕಾರದ ಸಂಬಂಧದಲ್ಲಿಯೂ ಸಹ ದ್ವಿಸದನ ಪದ್ಧತಿಯಲ್ಲಿ ಮಾನ್ಯತೆ ಪಡೆದಿರುವ ಎರಡೂ ಸದನಗಳಿಗೆ ಈ ಅಧಿಕಾರವನ್ನು ಹಂಚಿಕೊಡುವ ತತ್ವಗಳನ್ನು ಕೈಬಿಡಲಾಗಿದೆ. +೩೧(೧) ನೆಯ ವಿಭಾಗದ ಪ್ರಕಾರ ವಾರ್ಷಿಕ ಅಂದಾಜು ಆಯವ್ಯಯ ಪಟ್ಟಿಯನ್ನು ಒಕ್ಕೂಟ ಶಾಸಕಾಂಗದ ಎರಡೂ ಸದನಗಳಲ್ಲಿ ಮಂಡಿಸತಕ್ಕದ್ದು, ಎರಡೂ ಸದನಗಳೂ ಅದರ ಮೇಲೆ ಚರ್ಚೆ ನಡೆಸಬಹುದು. +ಅವುಗಳ ಮೇಲೆ ಎರಡೂ ಸದನಗಳಲ್ಲಿ ಚರ್ಚೆ ನಡೆಯುವುದು ಮಾತ್ರವೇ ಅಲ್ಲ. +ಅವುಗಳನ್ನು ಎರಡೂ ಸದನಗಳಲ್ಲಿ ಮತಕ್ಕೆ ಹಾಕಬೇಕಾಗುತ್ತದೆ. +೩೪(೨) ನೆಯ ವಿಭಾಗದ ಪ್ರಕಾರ ಖರ್ಚಿಗೆ ಬೇಕಾದ ಮೊತ್ತವನ್ನು ಬೇಡಿಕೆಯ ರೂಪದಲ್ಲಿ ಸಂಯುಕ್ತ ವಿಧಾನ ಸಭೆಯಲ್ಲಿ ಮಂಡಿಸಿನಂತರ ರಾಜ್ಯ ಸಭೆಯ ಮಂಜೂರಾತಿ ಪಡೆಯಬೇಕಾಗಿದೆ. +ಯಾವುದೇ ಬೇಡಿಕೆಗೆ ಒಪ್ಪಿಗೆ ನೀಡುವ ಅಥವಾ ತಿರಸ್ಕರಿಸುವ ಅಥವಾ ಯಾವುದೇ ಬೇಡಿಕೆಯ ಮೊತ್ತದಲ್ಲಿ ಕಡಿತದೊಂದಿಗೆ ಮಂಜೂರಾತಿ ನೀಡುವ ಅಧಿಕಾರ ಎರಡೂ ಸದನಗಳಿಗಿದೆ. +ಆದ್ದರಿಂದ ನೀತಿ ನಿಯಮ ರೂಢಿಸುವ ಮತ್ತು ಆಯವ್ಯಯಕ್ಕೆ ಅಂಗೀಕಾರ ನೀಡುವ ಎರಡೂ ಅಧಿಕಾರಗಳಲ್ಲಿ ಈ ಎರಡೂ ಸದನಗಳಿಗೆ ಸರಿಸಮಾನ ಅಧಿಕಾರವಿರುವುದು ಕಂಡುಬರುತ್ತದೆ. +ಈ ಎರಡೂ ಸದನಗಳ ನಡುವೆ ಉಂಟಾಗಬಹುದಾದ ಘರ್ಷಣೆ ಒಂದು ಸದನ ಇನ್ನೊಂದು ಸದನಕ್ಕೆ ಮಣಿಯುವುದರಿಂದಲೇ ನಿವಾರಣೆಯಾಗಲಾರದು. +ಎರಡೂ ಸದನಗಳ ನಡುವೆ ಉದ್ಭವವಾಗುವ ಭಿನ್ನಾಭಿಪ್ರಾಯಗಳ ನಿವಾರಣೆಗೆ ಎರಡೂ ಸದನಗಳ ಜಂಟಿ ಅಧಿವೇಶನವೇ ಮಾರ್ಗ. +೩೧(೧)ನೆಯ ವಿಭಾಗದಲ್ಲಿ ಯಾವುದೇ ಮಸೂದೆಯ ಮೇಲಣ ಭಿನ್ನಾಭಿಪ್ರಾಯ ನಿವಾರಣೆಗಾಗಿ ಕರೆಯುವ ಜಂಟಿ ಅಧಿವೇಶನಕ್ಕಾಗಿ ಅನುಸರಿಸಬೇಕಾದ ವಿಧಾನವನ್ನು ಹೇಳಲಾಗಿದೆ. +೩೪(೩) ನೆಯ ವಿಭಾಗದಲ್ಲಿ ಖರ್ಚಿಗೆ ಮಂಜೂರಿ ನೀಡುವ ವಿಷಯದಲ್ಲಿ ಉದ್ಭವಿಸಿದ ಭಿನ್ನಾಭಿಪ್ರಾಯಗಳ ನಿವಾರಣೆಯ ವಿಧಾನವನ್ನು ತಿಳಿಸಲಾಗಿದೆ. +(ಬ) ಒಕ್ಕೂಟ ವ್ಯವಸ್ಥೆಯ ಕಾರ್ಯಾಂಗ ಒಕ್ಕೂಟ ವ್ಯವಸ್ಥೆಯ ಕಾರ್ಯಾಂಗದ ರಚನೆಯನ್ನು ೭(೧) ನೆಯ ವಿಭಾಗದಲ್ಲಿ ವಿವರಿಸಲಾಗಿದೆ. +ಈ ವಿಭಾಗದ ಪ್ರಕಾರ ಸಂಯುಕ್ತ ರಾಜ್ಯದ ಕಾರ್ಯಾಂಗದ ಅಧಿಕಾರವನ್ನು ಗವರ್ನರ್‌ ಜನರಲ್ಲರಿಗೆ ನೀಡಲಾಗಿದೆ. +ಅವರೇ ಈ ಸಂಯುಕ್ತ ರಾಜ್ಯದ ಕಾರ್ಯಾಂಗ ಅಧಿಕಾರಿ. +ಈ ಒಕ್ಕೂಟ ಕಾರ್ಯಾಂಗದ ಬಗ್ಗೆ ಗಮನಿಸಬೇಕಾದ ಮೊದಲನೆಯ ಅಂಶವೆಂದರೆ ಇದು ಸಾಂಸ್ಥಿಕವಾಗಿರದೇ ಏಕಾತ್ಮಕ ಕಾರ್ಯಾಂಗವಾಗಿದೆ. +ಭಾರತದಲ್ಲಿ ಬ್ರಿಟಿಷರು ದೇಶದ ನಾಗರಿಕ ಮತ್ತು ಸೈನಿಕ ಸರಕಾರವನ್ನು ವಹಿಸಿಕೊಂಡಾಗಿನಿಂದ ಯಾವಾಗಲೂ ಕಾರ್ಯಾಂಗವು ಏಕಾತ್ಮಕ ಸ್ಟರೂಪದ್ದಾಗಿಲ್ಲ. +ಕಾರ್ಯಾಂಗವು ಸಂಯೋಜಿತ ಸ್ವರೂಪದ್ದಾಗಿತ್ತು. +ಪ್ರಾಂತ್ಯಗಳಲ್ಲಿ ಅದನ್ನು ಗವರ್ನರ್‌-ಇನ್‌-ಕೌನ್ಸಿಲ್‌ ಎಂದು ಕರೆಯಲಾಗಿತ್ತು. +ಕೇಂದ್ರದಲ್ಲಿ ಅದನ್ನು ಗವರ್ನರ್‌-ಜನರಲ್‌-ಇನ್‌-ಕೌನ್ಲಿಲ್‌ ಎಂದು ಕರೆಯಲಾಗಿತ್ತು. +ಪ್ರಾಂತ್ಯಗಳ ಮತ್ತು ಭಾರತದ ನಾಗರಿಕ ಮತ್ತು ಸೈನಿಕ ಆಡಳಿತ ಗವರ್ನರ್‌-ಜನರಲ್‌ರ ಕೈಯಲ್ಲಿಯೂ ಇರಲಿಲ್ಲ. +ಈ ಆಡಳಿತವನ್ನು ಮಂತ್ರಾಲೋಚನ ಸಭೆಯ ಸದಸ್ಯರೊಡನೆ ಗವರ್ನರರಿಗೆ ಕೊಡಲಾಗಿತ್ತು. +ಮಂತ್ರಾಲೋಚನ ಸಭೆಯ ಸದಸ್ಯರನ್ನು ದೊರೆಯು ನೇಮಕ ಮಾಡುತ್ತಿದ್ದು. +ಅವರು ತಮ್ಮ ಅಧಿಕಾರವನ್ನು ಗವರ್ನರ್‌-ಜನರಲ್‌ರಿಂದ ಪಡೆಯುತ್ತಿರಲಿಲ್ಲ. + ಅವರು ತಮ್ಮ ಅಧಿಕಾರವನ್ನು ಪ್ರಭುತ್ವದಿಂದ ಪಡೆಯುತ್ತಿದ್ದರಲ್ಲದೆ ಗವರ್ನರ್‌ ಇಲ್ಲವೇ ಗವರ್ನರ್‌-ಜನರಲ್‌ರೊಂದಿಗೆ ಸರಿಸಮಾನ ಅಧಿಕಾರ ಹೊಂದಿದ್ದರು . + ಪ್ರದೇಶದ ಶಾಂತಿ ಮತ್ತು ಸುವ್ಯವಸ್ಥೆಯ ಪ್ರಶ್ನೆಗಳ ಹೊರತಾಗಿ ಇತರ ಎಲ್ಲಾ ವಿಷಯಗಳಲ್ಲಿ ಗವರ್ನರ್‌ ಮತ್ತು ಗವರ್ನರ್‌-ಜನರಲ್‌ರು ಬಹುಮತ ನಿರ್ಣಯಕ್ಕೆ ಬದ್ಧರಾಗಿರುತ್ತಿದ್ದರು. +ಆದ್ದರಿಂದ ಸಂವಿಧಾನವು ರೂಢಿಗತ ವ್ಯವಸ್ಥೆಯನ್ನು ಕೈಬಿಟ್ಟಿದೆ. +ಹೀಗೆ ಕೈಬಿಟ್ಟಿರುವುದು ತಾತ್ವಿಕವಾಗಿ ಸರಿಯಲ್ಲವೆಂದಾಗಲೀ, ಅಥವಾ ರೂಢಿನಿಯಮಗಳಿಂದ ಅಥವಾ ಸಂಯುಕ್ತ ರಾಜ್ಯ ಸಂವಿಧಾನದ ಆವಶ್ಯಕತೆಗಳಿಂದ ಉದ್ಭವಿಸುವ ಪರಿಸ್ಥಿತಿಗಳಿಂದ ಸಮರ್ಥಿಸಲಾಗುವುದಿಲ್ಲವೆಂದು ನಾನು ಹೇಳುತ್ತಿಲ್ಲ. +ಆದರೆ ಇದು. +ಒಂದು ಅತ್ಯಂತ ಮಹತ್ವದ ಬದಲಾವಣೆಯಾಗಿದೆ ಎಂಬುದನ್ನು ಮಾತ್ರ ನೀವು ಗಮನಿಸಬೇಕೆಂದು ಬಯಸುತ್ತೇನೆ. +ಒಕ್ಕೂಟದ ಕಾರ್ಯಾಂಗದ ಬಗ್ಗೆ ಗಮನಿಸಬೇಕಾದ ಮುಂದಿನ ಅಂಶವೆಂದರೆ, ಗವರ್ನರ್‌-ಜನರಲ್ಲರು ಒಕ್ಕೂಟ ವ್ಯವಸ್ಥೆಯ ಕಾರ್ಯಾಂಗ ಅಧಿಕಾರಿಯಾಗಿದ್ದರೂ, ಅವರ ಅಧಿಕಾರ ಚಲಾವಣೆಗೆ ಕೆಲವು ಕರಾರುಗಳನ್ನು ವಿಧಿಸಲಾಗಿದೆ. +ಸಂವಿಧಾನವು ಅವರ ಕಾರ್ಯಾಂಗದ ಅಧಿಕಾರಗಳನ್ನು ನಾಲ್ಕು ವಿಧಗಳಲ್ಲಿ ವಿಂಗಡಿಸಿದ್ದು ಇವುಗಳಲ್ಲಿ ಪ್ರತಿಯೊಂದು ವಿಧದ ಅಧಿಕಾರವನ್ನು ಯಾವ ರೀತಿ ಚಲಾಯಿಸಬೇಕೆಂದು ಗೊತ್ತುಪಡಿಸಿದೆ. + ಕೆಲವು ವಿಷಯಗಳಲ್ಲಿ ಗವರ್ನರ್‌-ಜನರಲ್‌ರು : (೧) ತಮ್ಮ ಸ್ವಂತ ವಿವೇಚನೆಯಿಂದ ಕಾರ್ಯಮಾಡಬೇಕು; + (೨) ಕೆಲವು ವಿಷಯಗಳಲ್ಲಿ ಅವರು ತಮ್ಮ ಮಂತ್ರಿಗಳ ಸಲಹೆಯಂತೆ ನಡೆಯಬೇಕು; + (೩) ಇನ್ನು ಕೆಲವು ವಿಷಯಗಳಲ್ಲಿ ಅವರು ತಮ್ಮ ಮಂತ್ರಿಗಳೊಡನೆ ಸಮಾಲೋಚಿಸಿದ ನಂತರ ಕ್ರಮ ಕೈಗೊಳ್ಳಬೇಕು; + ಮತ್ತು (೪) ಕೆಲವು ವಿಷಯಗಳಲ್ಲಿ ಅವರು ತಮ್ಮ ವ್ಯಕ್ತಿಗತ ನಿರ್ಣಯದ ಪ್ರಕಾರ ನಡೆದುಕೊಳ್ಳಬೇಕು. +ಗವರ್ನರ್‌-ಜನರಲ್‌ರ ಕಾರ್ಯಾಂಗದ ಅಧಿಕಾರಗಳ ಈ ನಾಲ್ಕು ವಿಧದ ಕಾರ್ಯಗಳ ಶಾಸನಾನುಗತ ಮೂಲಾರ್ಥದ ಬಗ್ಗೆ ಒಂದು ಮಾತು ಹೇಳಬಹುದು. +ಇದನ್ನು ವಿವರಿಸುವ ಉತ್ತಮ ವಿಧಾನವೆಂದರೆ “ತನ್ನ ಸಚಿವರ ಸಲಹೆಯಂತೆ ನಡೆದುಕೊಳ್ಳುವುದು? +ಎಂಬುದರ ಅರ್ಥವನ್ನು ವಿವರಿಸುವುದೇ ಆಗಿದೆ. +ಇಂತಹ ವಿಷಯಗಳಲ್ಲಿ ಸರಕಾರವನ್ನು ಮಂತ್ರಿಗಳ ಅಧಿಕಾರದನ್ವಯ ಮತ್ತು ಗವರ್ನರ್‌-ಜನರಲ್‌ನ ಹೆಸರಿನಲ್ಲಿ ಮಾತ್ರ ನಡೆಸಿದಂತಾಗುತ್ತದೆ. +ಇದನ್ನೇ ಬೇರೆ ರೀತಿಯಲ್ಲಿ ಹೇಳಬೇಕೆಂದರೆ, ಮಂತ್ರಿಗಳ ಸಲಹೆ ಗವರ್ನರ್‌-ಜನರಲ್‌ರು ತಮ್ಮ ವಿವೇಚನೆಯಂತೆ ನಡೆದುಕೊಳ್ಳುವುದೆಂದರೆ ಸರಕಾರವನ್ನು ಗವರ್ನರ್‌ ಜನರಲ್‌ರ ಹೆಸರಿನಲ್ಲಿಯೇ ನಡೆಸಿದಂತೆಯಲ್ಲದೆ ಅವರ ಅಧಿಕಾರ ಬಲದ ಮೇಲೆಯೂ ನಡೆಸಿದಂತೆ ಎಂದು ಅರ್ಥ. +ಎಂದರೆ ಮಂತ್ರಿಗಳಿಂದ ಯಾವ ಹಂತದಲ್ಲಿಯೂ ಹಸ್ತಕ್ಷೇಪವಾಗುವಂತಿಲ್ಲ. +ಮಂತ್ರಿಗಳಿಗೆ ಸಲಹೆ ನೀಡುವ ಹಕ್ಕು ಇರುವುದಿಲ್ಲ. +ಮತ್ತು ವರ್ನರ್‌-ಜನರಲ್‌ರು ಮಂತ್ರಿಗಳ ಸಲಹೆಯನ್ನು ಕೇಳಲು ಬಾಧ್ಯರಲ್ಲ; +ಎಂದರೆ ಇಂತಹ ವಿಷಯಗಳ ಕಡತಗಳು ಮಂತ್ರಿಗಳ ಬಳಿಗೆ ಹೋಗುವ ಅವಶ್ಯಕತೆ ಇಲ್ಲ. +“ತನ್ನ ವ್ಯಕ್ತಿಗತ ನಿರ್ಣಯದಂತೆ ನಡೆದುಕೊಳ್ಳುವುದು” ಎಂದರೆ ಆ ವಿಷಯವು ಮಂತ್ರಿಗಳು ಸಲಹೆ ನೀಡುವ ವ್ಯಾಪ್ತಿಯಲ್ಲಿದ್ದಾಗ್ಯೂ ಅದನ್ನು ಅಂತಿಮವಾಗಿ ನಿರ್ಣಯಿಸುವ ಅಧಿಕಾರ ಮಂತ್ರಿಗೆ ಇರುವುದಿಲ್ಲ. + ಅಂತಿಮ ಅಧಿಕಾರ ಗವರ್ನರ್‌-ಜನರಲ್‌ರದಾಗಿರುತ್ತದೆ. +ಸಲಹೆ ನೀಡುವ ಅಧಿಕಾರ ಮಂತ್ರಿಗಳಿಗೆ ಇರುವುದಿಲ್ಲ ಎಂದರೆ ಗವರ್ನರ್‌-ಜನರಲ್‌ರ ವಿವೇಚನೆಯಂತೆ ಮತ್ತು ಅವರ ವ್ಯಕ್ತಿಗತ ನಿರ್ಣಯದಂತೆ ನಡೆದುಕೊಳ್ಳುವ ವಿಷಯಗಳಲ್ಲಿ ಗವರ್ನರ್‌-ಜನರಲ್‌ರು ಮಂತ್ರಿಗಳ ಸಲಹೆ ಪಡೆಯಲು ಬದ್ಧರಾಗಿರುತ್ತಾರೆ. +ಅಂತಹ ಸಲಹೆಯನ್ನು ಪರಿಶೀಲಿಸಬಹುದು, ಅದಕ್ಕೆ ವಿರುದ್ಧವಾಗಿ ಬೇರೆ ರೀತಿ ನಿರ್ಣಯವನ್ನು ತೆಗೆದುಕೊಳ್ಳಬಹುದು. +ಆದರೆ ತಮ್ಮ ವಿವೇಚನೆಯ ವಿಷಯಗಳಲ್ಲಿ ಸಲಹೆಯನ್ನು ಪಡೆಯಲೂ ಅವರು ಬದ್ದರಾಗಿರುವುದಿಲ್ಲ. +"ಸಮಾಲೋಚನೆಯ ನಂತರ" ಎಂಬುದು ಕೇವಲ ಒಂದು ಕ್ರಮ. +ಅಂತಹ ವಿಷಯಗಳಲ್ಲಿ ಅಧಿಕಾರ ಗವರ್ನರ್‌-ಜನರಲ್‌ರ ಕೈಯಲ್ಲಿಯೇ ಇದೆ. +ಅವರು ಮಂತ್ರಿಗಳ ಆಶಯಗಳನ್ನು ಗಣನೆಗೆ ತೆಗೆದುಕೊಳ್ಳಬೇಕೆಂಬುದು ಮಾತ್ರ ಇದರ ಅರ್ಥ. +"ಸಮಾಲೋಚನೆಯ ನಂತರ ಕೈಗೊಳ್ಳಬೇಕಾದ" ಮತ್ತು "ವ್ಯಕ್ತಿಗತ ತೀರ್ಮಾನದಂತೆ" ಎಂಬ ವಿಷಯಗಳಲ್ಲಿ ಈ ರೀತಿ ವ್ಯತ್ಯಾಸ ಮಾಡಬಹುದು. +“ವ್ಯಕ್ತಿಗತ ತೀರ್ಮಾನದಡಿಯಲ್ಲಿ ಬರುವ ವಿಷಯಗಳಲ್ಲಿ ಅಧಿಕಾರ ಮಂತ್ರಿಗಳ ಕೈಯಲ್ಲಿರುತ್ತದೆ. +ಗವರ್ನರ್‌-ಜನರಲ್ಲರಿಗೆ ಮೇಲ್ವಿಚಾರಣೆಯ ಅಧಿಕಾರವಿದ್ದು ಅವಶ್ಯ ಬಿದ್ದರೆ ತಮ್ಮ ಮೇಲಧಿಕಾರದ ಬಲದಿಂದ ಮಂತ್ರಿಗಳ ನಿರ್ಣಯಗಳನ್ನು ರದ್ದುಪಡಿಸಬಹುದು. +“ಸಮಾಲೋಚನೆಯ ನಂತರ” ಎಂಬ ವಿಷಯಗಳಲ್ಲಿ ಅಧಿಕಾರವು ಗವರ್ನರ್‌-ಜನರಲ್ಲರಿಗೆ ಸೇರಿದ್ದು, ಏನು ಮಾಡಬೇಕೆಂಬುದು ತಮ್ಮ ಬಯಕೆ ಎಂದು ಹೇಳುವ ಸ್ವಾತಂತ್ರ್ಯ ಮಂತ್ರಿಗಳಿಗಿದೆ. +(ಕ) ಒಕ್ಕೂಟ ವ್ಯವಸ್ಥೆಯ ನ್ಯಾಯಾಂಗ ಭಾರತ ಸರಕಾರ ಕಾಯ್ದೆಯಲ್ಲಿ ಒಕ್ಕೂಟದ ಅಂಗವಾಗಿ ಒಂದು ಒಕ್ಕೂಟ ನ್ಯಾಯಾಲಯವನ್ನು ಸ್ಥಾಪಿಸಲು ಅವಕಾಶ ಮಾಡಲಾಗಿದೆ. +ಒಕ್ಕೂಟ ನ್ಯಾಯಾಲಯದಲ್ಲಿ ಒಬ್ಬ ಮುಖ್ಯ ನ್ಯಾಯಾಧೀಶ ಮತ್ತು ಬ್ರಿಟನ್ನಿನ ದೊರೆಯು ಅವಶ್ಯವೆಂದು ಕಂಡಷ್ಟು ಕಿರಿಯ ನ್ಯಾಯಾಧೀಶರಿರತಕ್ಕದ್ದು. +ಇವರಸಂಖ್ಯೆ, ಶಾಸಕಾಂಗವು ಈ ಸಂಸ್ಥೆಯನ್ನು ಹೆಚ್ಚಿಸಬೇಕೆಂದು ಮನವಿ ಮಾಡಿಕೊಳ್ಳುವವರೆಗೂ ಆರಕ್ಕಿಂತ ಹೆಚ್ಚಿಗೆ ಇರತಕ್ಕದ್ದಲ್ಲ. +ಒಕ್ಕೂಟ ನ್ಯಾಯಾಂಗವು ಅಸಲು ಅಥವಾ ಮೂಲ ಮೊಕದ್ದಮೆಯ ವಿಚಾರಣೆಯ ಅಧಿಕಾರ ವ್ಯಾಪ್ತಿ ಮತ್ತು ಅಪೀಲು ಅಧಿಕಾರ ವ್ಯಾಪ್ತಿಯನ್ನೂ ಹೊಂದಿರುತ್ತದೆ. +ಒಕ್ಕೂಟ ನ್ಯಾಯಾಲಯದ ಮೂಲ ಅಧಿಕಾರ ವ್ಯಾಪ್ತಿಯನ್ನು ಉಲ್ಲೇಖಿಸಿರುವ ೨ಂ೪ ನೆಯ ವಿಭಾಗದಲ್ಲಿ ನ್ಯಾಯಾಲಯವು ಒಕ್ಕೂಟವ್ಯವಸ್ಥೆ, ಪ್ರಾಂತ್ಯಗಳು ಮತ್ತು ಸೇರ್ಪಡೆಯಾದ ಸಂಸ್ಥಾನಗಳ ನಡುವೆ ಉದ್ಭವಿಸುವ ಯಾವುದೇ ಕಾನೂನಿನ ಪ್ರಶ್ನೆ ಅಥವಾ ಕಾನೂನಿನನ್ವಯ ಹಕ್ಕನ್ನು ಆಧರಿಸದ ಯಾವುದೇ ಸಂಗತಿಯಲ್ಲಿ ಪ್ರತ್ಯೇಕ ಮೂಲ ಅಧಿಕಾರ ವ್ಯಾಪ್ತಿಯನ್ನು ಹೊಂದಿರುವುದು ಎಂದು ನಿಗದಿಪಡಿಸಲಾಗಿದೆ. +ಆದಾಗ್ಯೂ ಈ ವಿಭಾಗದಲ್ಲಿ ಹೇಳಿರುವಂತೆ, ಒಂದು ರಾಜ್ಯ ಅಥವಾ ಸಂಸ್ಥಾನವು ಪಕ್ಷಕಾರನಾಗಿದ್ದರೆ ಆ ವಿವಾದವು ಕಾಯ್ದೆ ಅಥವಾ ಮಂತ್ರಿಮಂಡಳದ ಆಜ್ಞೆಯಡಿಯಲ್ಲಿ ಉದ್ಭವಿಸುವ ಅಂಶಗಳನ್ನು ಅರ್ಥೈಸುವ ವಿಷಯವನ್ನು ಕುರಿತದ್ದಾಗಿರಬೇಕು. +ವಿಲೀನ ವಿಧಿವಿಧಾನದ ಪ್ರಕಾರ ಒಕ್ಕೂಟಕ್ಕೆ ಕೊಡಮಾಡಲಾದ ಶಾಸಕಾಂಗ ಅಥವಾ ಕಾರ್ಯಾಂಗ ಅಧಿಕಾರದ ವ್ಯಾಪ್ತಿಯನ್ನು ಕುರಿತದ್ದಾಗಿರಬೇಕು. +ರಾಜ್ಯಗಳಲ್ಲಿ ಒಕ್ಕೂಟದ ಕಾನೂನನ್ನು ಜಾರಿಗೊಳಿಸುವ ವಿಷಯದಲ್ಲಿ ಕಾಯ್ದೆಯ 311 ನೆಯ ಭಾಗದ ಪ್ರಕಾರ ಆಗಿರುವ ಒಪ್ಪಂದಕ್ಕೆ ಸಂಬಂಧಿಸಿದ್ದಾಗಿರಬೇಕು. +ಅಥವಾ ರಾಜ್ಯಗಳಿಗಾಗಿ ಒಕ್ಕೂಟದ ಶಾಸಕಾಂಗವು ನಿಯಮಗಳನ್ನು ರೂಢಿಸುವ ಅಧಿಕಾರ ಹೊಂದಿರುವ ಯಾವುದೇ ವಿಷಯದಲ್ಲಿ, ಅಥವಾ ಒಕ್ಕೂಟ ವ್ಯವಸ್ಥೆಯ ಸ್ಥಾಪನೆಯ ನಂತರ ಪ್ರಭುತ್ವದ ಪ್ರತಿನಿಧಿಯ ಸಮೃತಿಯೊಡನೆ ರಾಜ್ಯಗಳು ಮತ್ತು ಒಕ್ಕೂಟ ವ್ಯವಸ್ಥೆ ಅಥವಾ ಪ್ರಾಂತ್ಯಗಳ ನಡುವೆ ಮಾಡಿಕೊಂಡ ಒಪ್ಪಂದದ ವಿಷಯಗಳನ್ನು ಅಧಿಕಾರ ವ್ಯಾಪ್ತಿಯಲ್ಲಿ ಸೇರಿಸಲಾಗಿದೆ. +ಒಕ್ಕೂಟ ನ್ಯಾಯಾಲಯವು ರಾಜ್ಯಗಳ ಮೇಲೆ ಹೊಂದಿರುವ ಈ ಸೀಮಿತ ಅಧಿಕಾರ ವ್ಯಾಪ್ತಿಯು, ಯಾವುದೇ ಒಪ್ಪಂದದಲ್ಲಿ ಪ್ರತ್ಯೇಕವಾಗಿ ಅಂತಹ ಅಧಿಕಾರ ವ್ಯಾಪ್ತಿಯಿಂದ ವಿಷಯಗಳಡಿಯಲ್ಲಿ ಉದ್ಭವಿಸುವ ವಿವಾದಗಳು ನ್ಯಾಯಿಕವಾಗುವುದಿಲ್ಲ ಎಂಬ ವಿಧಿಯಿಂದ ಇನ್ನೂ ಹೆಚ್ಚು ಸೀಮಿತಗೊಂಡಿದೆ. +ಒಕ್ಕೂಟ ವ್ಯವಸ್ಥೆಯ ನ್ಯಾಯಾಲಯದ ಅಪೀಲು ಅಧಿಕಾರ ವ್ಯಾಪ್ತಿಯನ್ನು ೨ಂ೫ ಮತ್ತು ೨ಂ೭ ನೆಯ ವಿಭಾಗಗಳಲ್ಲಿ ವಿಧಿಬದ್ಧಗೊಳಿಸಲಾಗಿದೆ. +ನ್ಯಾಯಾಲಯಕ್ಕೆ ಬ್ರಿಟಿಷ್‌ ಭಾರತದ ಉಚ್ಚ ನ್ಯಾಯಾಲಯದ ಯಾವುದೇ ತೀರ್ಪು, ನಿರ್ಣಯ ಅಥವಾ ಅಂತಿಮ ತೀರ್ಪಿನ ಮೇಲೆ ಯಾವುದೇ ಪ್ರಕರಣದಲ್ಲಿ ಈಕಾಯ್ದೆ ಅಥವಾ ಮಂತ್ರಿ ಮಂಡಳದ ಆಜ್ಞೆಯಲ್ಲಿ ಮುಖ್ಯವಾದ ಕಾನೂನಿನ ಪ್ರಶ್ನೆ ಅಡಗಿದೆಯೆಂದು ಉಚ್ಚನ್ಯಾಯಾಲಯವು ಪ್ರಮಾಣಿಕರಿಸಿದಲ್ಲಿ ಅಪೀಲು ಅಥವಾ ಮೇಲ್ಮನವಿ ಸಲ್ಲಿಸಬಹುದೆಂದು ೨೦೫ನೆಯ ವಿಭಾಗದಲ್ಲಿ ಹೇಳಲಾಗಿದೆ. +೨೦೭ ನೆಯ ವಿಭಾಗ ಸಂಯುಕ್ತ ರಾಜ್ಯದಲ್ಲಿ ಸೇರ್ಪಡೆಯಾದ ರಾಜ್ಯಗಳ (ಸಂಸ್ಥಾನಗಳ) ನ್ಯಾಯಾಲಯಗಳ ನಿರ್ಣಯದ ಮೇಲಿನ ಮೇಲ್ಮನವಿಗೆ ಸಂಬಂಧಿಸಿದೆ. +ಯಾವುದೇ ಕಾನೂನಿನ ಪ್ರಶ್ನೆಯನ್ನು ತಪ್ಪಾಗಿ ನಿರ್ಣಯಿಸಲಾಗಿದ್ದು ಆ ಪ್ರಶ್ನೆ ಈ ಕಾಯ್ದೆಯನ್ನು ಅಥವಾ ಮಂತ್ರಿ ಮಂಡಳದ ಯಾವುದೇ ಆಜ್ಞೆಯನ್ನು ಅರ್ಥೈಸುವ ವಿಷಯದಲ್ಲಿ, ಅಥವಾ ರಾಜ್ಯದ ಆಡಳಿತದ ವಿಷಯವಾಗಿ ರಾಜ್ಯದ ಸೇರ್ಪಡೆಯ ದಸ್ತಾವೇಜಿನ ಪ್ರಕಾರ ಅಥವಾ ಈ ಕಾಯ್ದೆಯ 3/1ನೆಯ ವಿಭಾಗದಂತೆ ಮಾಡಿಕೊಂಡ ಒಪ್ಪಂದದ ಪ್ರಕಾರ ಸಂಯುಕ್ತ ಶಾಸಕಾಂಗ ಅಥವಾ ಕಾರ್ಯಾಂಗದ ಅಧಿಕಾರಕ್ಕೆ ಸಂಬಂಧಿಸಿದ ಒಕ್ಕೂಟದ ಶಾಸಕಾಂಗದ ಕಾನೂನಿನ ಸಂಬಂಧವಾಗಿ ಆಯಾ ರಾಜ್ಯದ ನ್ಯಾಯಾಲಯದ ತೀರ್ಪಿನ ಮೇಲೆ ಒಕ್ಕೂಟ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಬಹುದು. +ಆದರೆ ೨೦೭ ನೆಯ ವಿಭಾಗದ (೨) ನೆಯ ಉಪವಿಭಾಗದಲ್ಲಿ ಇಂತಹ ಯಾವುದೇ ಮೇಲ್ಮನವಿಯನ್ನು ಒಂದು ನಿರ್ದಿಷ್ಟ ಪ್ರಕರಣದ ರೂಪದಲ್ಲಿ ಉಚ್ಚ ನ್ಯಾಯಾಲಯವು ಒಕ್ಕೂಟ ನ್ಯಾಯಾಲಯಕ್ಕೆ ಸಲ್ಲಿಸಿ ಅದರ ಅಭಿಪ್ರಾಯ ಕೇಳತಕ್ಕದ್ದು, ಮತ್ತು ಒಕ್ಕೂಟ ನ್ಯಾಯಾಲಯವು ಒಂದು ಪ್ರಕರಣವನ್ನು ನಮೂದಿಸುವಂತೆ ಕೇಳಬಹುದು. +ಒಕ್ಕೂಟ ವ್ಯವಸ್ಥೆಯ ನ್ಯಾಯಾಂಗದ ವಿಷಯದಲ್ಲಿ ಇನ್ನೂ ಎರಡು ಅಂಶಗಳನ್ನು ಗಮನಿಸಬಹುದು. +ಮೊದಲನೆಯದು, ಒಕ್ಕೂಟ ನ್ಯಾಯಾಲಯಕ್ಕೆ ತನ್ನ ಆಜ್ಞೆಗಳನ್ನು ಜಾರಿ ಮಾಡಲು ಇರುವ ಅಧಿಕಾರದ ಬಗ್ಗೆ. +ತನ್ನ ಆಜ್ಞೆಗಳನ್ನು ಜಾರಿಗೊಳಿಸಲು ಒಕ್ಕೂಟ ನ್ಯಾಯಾಲಯಕ್ಕೆ ತನ್ನದೇ ಆದ ವ್ಯವಸ್ಥೆ ಇಲ್ಲ. +೨೧೦ ನೆಯ ವಿಭಾಗದಲ್ಲಿ ಹೇಳಿರುವಂತೆ ನ್ಯಾಯಾಲಯದ ಆಜ್ಞೆಗಳು ಬ್ರಿಟಿಷ್‌ ಭಾರತದ ಅಥವಾ ಯಾವುದೇ ಘಟಕ ಸಂಸ್ಥಾನದ ಎಲ್ಲ ಭಾಗಗಳಲ್ಲೂ ಆಯಾ ಭಾಗಗಳ ಅತ್ಯುಚ್ಚ ನ್ಯಾಯಾಲಯ ತನ್ನ ಸಿವಿಲ್‌ ಮತ್ತು ಕ್ರಿಮಿನಲ್‌ ಅಧಿಕಾರ ವ್ಯಾಪ್ತಿಯ ಬಲದ ಮೇಲೆ ನೀಡಿದ ತೀರ್ಪು ಎಂದು ಜಾರಿಯಾಗುತ್ತದೆ. +ಆದ್ದರಿಂದ ಸಂಯುಕ್ತ ನ್ಯಾಯಾಲಯವು ತನ್ನ ಆಜ್ಞೆಗಳನ್ನು ಜಾರಿಗೊಳಿಸಲು ಒಕ್ಕೂಟದ ಘಟಕಗಳ ಆಡಳಿತ ಯಂತ್ರವನ್ನೇ ತನ್ನ ಸಾಧನವನ್ನಾಗಿ ಬಳಸಬೇಕಾಗಿದೆ. +ಒಕ್ಕೂಟದ ಘಟಕಗಳು ಒಕ್ಕೂಟ ನ್ಯಾಯಾಲಯಕ್ಕೆ ಈ ವಿಷಯದಲ್ಲಿ ತಮ್ಮ ಸಹಾಯ ನೀಡಬೇಕಾಗುತ್ತದೆ. +ಈ ಪದ್ಧತಿ ಬೇರೆಡೆಗಿಂತ ಭಿನ್ನವಾಗಿದೆ. +ಉದಾಹರಣೆಗಾಗಿ ಅಮೇರಿಕ ಸಂಯುಕ್ತ ಸಂಸ್ಥಾನಗಳಲ್ಲಿ ಸರ್ವೋಚ್ಚ ನ್ಯಾಯಾಲಯವು ತನ್ನ ಆಜ್ಞೆಗಳನ್ನು ಜಾರಿಗೊಳಿಸಲು ತನ್ನದೇ ಆದ ವ್ಯವಸ್ಥೆ ಮತ್ತು ಸಾಧನಗಳನ್ನು ಹೊಂದಿದೆ. +ಒಕ್ಕೂಟ ವ್ಯವಸ್ಥೆಯ ನ್ಯಾಯಾಲಯದ ಬಗ್ಗೆ ಗಮನಿಸಬೇಕಾದ ಎರಡನೆಯ ಅಂಶವೆಂದರೆ ನ್ಯಾಯಾಧೀಶರನ್ನು ಕಿತ್ತುಹಾಕಲು ಕಾರ್ಯಾಂಗಕ್ಕಿರುವ ಅಧಿಕಾರ ಮತ್ತು ಅವರ ನಡತೆಯನ್ನು ಚರ್ಚಿಸಲು ಶಾಸಕಾಂಗಕ್ಕೆ ಇರುವ ಸಂಯುಕ್ತ ರಾಜ್ಯಗಳ ನ್ಯಾಯಾಲಯಗಳಿಂದ ಭಿನ್ನವಾಗಿದೆ. +ಸಂವಿಧಾನದಲ್ಲಿ ಒಕ್ಕೂಟ ನ್ಯಾಯಾಲಯದ ನ್ಯಾಯಾಧೀಶರನ್ನು ಅಮಾನತ್ತುಗೊಳಿಸುವ ಅಧಿಕಾರವನ್ನು ಗವರ್ನರ್‌-ಜನರಲ್‌ರಿಗೆ ಕೊಡಲಾಗಿಲ್ಲ. +ಶಾಸಕಾಂಗದಲ್ಲಿ ನ್ಯಾಯಾಧೀಶನ ನ್ಯಾಯಾಂಗೀಯ ನಡತೆಯ ಚರ್ಚೆಯನ್ನು ನಿಷೇಧಿಸಲಾಗಿದೆ. +ಇದರಿಂದ ಒಕ್ಕೂಟ ನ್ಯಾಯಾಲಯದ ನ್ಯಾಯಾಧೀಶರಿಗೆ ನಿಶ್ಚಿತ ಅಧಿಕಾರಾವಧಿ ದೊರೆಯುವುದಲ್ಲದೆ, ಅವರ ಕಾರ್ಯದಲ್ಲಿ ಶಾಸಕಾಂಗದ ಅಥವಾ ಕಾರ್ಯಾಂಗದ ಹಸ್ತಕ್ಷೇಪದಿಂದ ರಕ್ಷಣೆ ನೀಡಿದಂತಾಗುತ್ತದೆ. +ನ್ಯಾಯಾಂಗವನ್ನು ಕಾರ್ಯಾಂಗದ ಹಿಡಿತದಿಂದ ತಪ್ಪಿಸಲು ನ್ಯಾಯಾಧೀಶನ ಅಧಿಕಾರದ ಅವಧಿ ಕಾರ್ಯಾಂಗದ ಇಚ್ಛೆಯನ್ನವಲಂಬಿಸಿರಬಾರದು. +ಇದರ ಆವಶ್ಯಕತೆಯನ್ನರಿತೇ ಎಲ್ಲಾ ಸಂವಿಧಾನಗಳಲ್ಲಿ ನ್ಯಾಯಾಧೀಶರ ಅಧಿಕಾರವಧಿ ಅವರ ಒಳ್ಳೆಯ ನಡತೆಯ ಅವಧಿಯಲ್ಲಿ ಮತ್ತು ಅವರ ನಡತೆ ಸರಿಯಿಲ್ಲವೆಂದು ಶಾಸಕಾಂಗವು ತೀರ್ಮಾನಿಸಿದಲ್ಲಿ ಆ ನ್ಯಾಯಾಧೀಶನನ್ನು ತೆಗೆದುಹಾಕುವ ವ್ಯವಸ್ಥೆ ಮಾಡಲಾಗಿದೆ. +ಇಂತಹ ವ್ಯವಸ್ಥೆ ಈ ಒಕ್ಕೂಟ ವ್ಯವಸ್ಥೆಯ ಸಂವಿಧಾನದಲ್ಲಿ ಇರುವುದಿಲ್ಲವಾದ್ದರಿಂದ ಒಕ್ಕೂಟ ನ್ಯಾಯಾಲಯದ ನ್ಯಾಯಾಧೀಶನು ಒಮ್ಮೆ ನೇಮಕಗೊಂಡರೆ ತನ್ನ ಅಧಿಕಾರಾವಧಿಯಲ್ಲಿ ಆತನ ನಡತೆ ಹೇಗೇ ಇದ್ದರೂ ಆತನ ನಿವೃತ್ತಿಯವರೆಗೂ ಆತನನ್ನು ತೆಗೆದುಹಾಕಲು ಬರುವುದಿಲ್ಲ. +ಇದಕ್ಕೆ ಬದಲಾಗಿ ೨ಂಂ (೨) (ಬಿ) ವಿಭಾಗದಲ್ಲಿ ಒಕ್ಕೂಟ ನ್ಯಾಯಾಲಯದ ನ್ಯಾಯಾಧೀಶನನ್ನು ದುರ್ನಡತೆ ಅಥವಾ ದೈಹಿಕ ಅಥವಾ ಮಾನಸಿಕ ದೌರ್ಬಲ್ಯತೆಯ ಕಾರಣ ಪ್ರೀವೀ ಕೌನ್ಸಿಲನ ನ್ಯಾಯಿಕ ಸಮಿತಿಯ ಶಿಫಾರಸಿನ ಮೇಲೆ ಸಾರ್ವಭೌಮನಾದ ದೊರೆ ಅಧಿಕಾರದಿಂದ ತೆಗೆದುಹಾಕಬಹುದು. +ಒಕ್ಕೂಟ ವ್ಯವಸ್ಥೆಯ ಅಧಿಕಾರಗಳು ಒಕ್ಕೂಟದ ಸರಕಾರದ ಅಧಿಕಾರಗಳನ್ನು ವಿವರಿಸುವ ಮೊದಲು ಸಂಯುಕ್ತ ಪದ್ಧತಿ ಸರಕಾರದ ಮೂಲತತ್ವವನ್ನು ವಿವರಿಸುವುದು ಅಪೇಕ್ಷಣೀಯ. +ಏಕಾತ್ಮಕ ಸರಕಾರದೊಡನೆ ಹೋಲಿಸದ ಹೊರತು ಇದನ್ನು ವಿವರಿಸುವ ಇನ್ನಾವುದೇ ಸರಳ ಮಾರ್ಗವಿಲ್ಲ. +ಒಕ್ಕೂಟ ಪದ್ಧತಿಯ ಸರಕಾರವು ಏಕಾತ್ಮಕ ಪದ್ಧತಿಯ ಸರಕಾರಕ್ಕಿಂತ ಭಿನ್ನವಾಗಿದ್ದರೂ ಆ ವ್ಯತ್ಯಾಸ ಸುಲಭವಾಗಿ ಕಾಣಬರುವುದಿಲ್ಲ. +ಬಾಹ್ಯದಲ್ಲಿ ಈ ಎರಡರಲ್ಲೂ ಬಹಳ ಸಾಮ್ಯ ಕಂಡುಬರುತ್ತದೆ. +ಈಗಿನ ಕಾಲದಲ್ಲಿ ಪ್ರತಿಯೊಂದು ದೇಶದ ಸರಕಾರವು ಪರಸ್ಪರ ಸಂಬಂಧವುಳ್ಳ ಆಡಳಿತಾತ್ಮಕ ಘಟಕಗಳಿಂದ ನಡೆದಿದ್ದು ಅವು ನಿರ್ದಿಷ್ಟ ಕ್ಷೇತ್ರಗಳಲ್ಲಿ ನಿರ್ದಿಷ್ಟ ಸಾರ್ವಜನಿಕ ಕಾರ್ಯಗಳನ್ನು ನಿರ್ವಹಿಸುತ್ತವೆ. +ಇದು ಒಕ್ಕೂಟ ಪದ್ಧತಿಯ ಸರಕಾರ ಹೊಂದಿರುವ ದೇಶದ ವಿಷಯದಲ್ಲಿಯೂ ನಿಜ ಮತ್ತು ಏಕಾತ್ಮಕ ರೂಪದ ಸರಕಾರ ಹೊಂದಿರುವ ದೇಶದ ವಿಷಯದಲ್ಲಿಯೂ ನಿಜ ಸಂಗತಿಯಾಗಿದೆ. +ಒಕ್ಕೂಟ ರಾಜ್ಯ ಸಂವಿಧಾನದಲ್ಲಿ ಒಂದು ಕೇಂದ್ರ ಸರಕಾರವಿದ್ದು ಅದರೊಡನೆ ಪರಸ್ಪರ ಸಂಬಂಧ ಹೊಂದಿರುವ ಅನೇಕ ಸ್ಥಳೀಯ ಸರಕಾರಗಳಿವೆ. +ಇದೇ ರೀತಿ ಏಕಾತ್ಮಕ ಸಂವಿಧಾನದಲ್ಲಿಯೂ ಒಂದು ಕೇಂದ್ರ ಸರಕಾರವಿದ್ದು ಅದರೊಡನೆ ಪರಸ್ಪರ ಸಂಬಂಧ ಹೊಂದಿರುವ ಅನೇಕ ಸ್ಥಳೀಯ ಸರಕಾರಗಳಿವೆ. +ಆದ್ದರಿಂದ ಮೇಲ್ನೋಟಕ್ಕೆ ಇವೆರಡರಲ್ಲಿ ಯಾವ ವ್ಯತ್ಯಾಸವೂ ಕಂಡುಬರುವುದಿಲ್ಲ. +ಆದಾಗ್ಯೂ, ಅದು ಸ್ಪಷ್ಟವಾಗಿ ಕಾಣದಿದ್ದರೂ ಇವೆರಡರ ನಡುವೆ ಒಂದು ಮಹತ್ವದ ವ್ಯತ್ಯಾಸವಿದೆ. +ಕೇಂದ್ರ ಮತ್ತು ಸ್ಥಳೀಯ ಆಡಳಿತಾತ್ಮಕ ಘಟಕಗಳ ಪರಸ್ಪರ ಸಂಬಂಧದ ಸ್ವರೂಪದಲ್ಲಿ ಈ ವ್ಯತ್ಯಾಸ ಕಂಡುಬರುತ್ತದೆ. +ಏಕಾತ್ಮಕ ಸ್ವರೂಪ ಸರಕಾರದಲ್ಲಿ ಸ್ಥಳೀಯ ಸಂಸ್ಥೆಗಳ ಅಧಿಕಾರಗಳು ಕೇಂದ್ರ ಸರಕಾರದ ಕಾಯ್ದೆಯಿಂದ ನಿರೂಪಿತವಾಗುತ್ತದೆ. +ಇಂತಹ ಸ್ಥಿತಿಯಲ್ಲಿ ಕೇಂದ್ರ ಸರಕಾರವು ಸ್ಥಳೀಯ ಸರಕಾರಗಳ ಅಧಿಕಾರಗಳನ್ನು ಯಾವಾಗ ಬೇಕಾದರೂ ಹಿಂದಕ್ಕೆ ಪಡೆಯಬಹುದು. +ಸಂಯುಕ್ತ ಸ್ವರೂಪದ ಸರಕಾರ ಪದ್ಧತಿಯಲ್ಲಿ ಕೇಂದ್ರ ಸರಕಾರದ ಹಾಗೂ ಸ್ಥಳೀಯ ಸರಕಾರಗಳ ಅಧಿಕಾರಗಳು ಸಂವಿಧಾನಾತ್ಮಕ ಕಾನೂನಿನಿಂದ ನಿರೂಪಿತವಾಗಿದ್ದು ಸ್ಥಳೀಯ ಸರಕಾರವಾಗಲೀ ಕೇಂದ್ರ ಸರಕಾರವಾಗಲೀ ತನ್ನದೇ ಆದ ಕಾಯ್ದೆಯಿಂದ ಇವನ್ನು ಬದಲಾಯಿಸಲು ಬರುವುದಿಲ್ಲ. +ಎರಡೂ ಸರಕಾರಗಳು ತಮ್ಮ ಅಧಿಕಾರಗಳನ್ನುಸಂವಿಧಾನಾತ್ಮಕ ಕಾನೂನಿನಿಂದ ಪಡೆದುಕೊಂಡಿದ್ದು ಸಂವಿಧಾನದನ್ವಯ ಎರಡೂ ಸರಕಾರಗಳು ತಮಗೆ ನೀಡಲಾಗಿರುವ ಅಧಿಕಾರಗಳಿಗನ್ವಯವಾಗಿ ನಡೆದುಕೊಳ್ಳಬೇಕಾಗುತ್ತದೆ. +ಸಂವಿಧಾನವು ಪ್ರತಿಯೊಂದು ಸರಕಾರದ ಅಧಿಕಾರಗಳನ್ನು ನಿಗದಿಪಡಿಸುವುದೂ ಅಲ್ಲದೆ, ಅದು ತನ್ನಿಂದ ನಿಗದಿಗೊಳಿಸಲಾದ ಎಲ್ಲೆಯನ್ನು ಮೀರಿ ಯಾವುದಾದರೂ ಕಾಯ್ದೆಯನ್ನು ಕೇಂದ್ರ ಸರಕಾರವಾಗಲೀ ಅಥವಾ ಸ್ಥಳೀಯ ಸರಕಾರವಾಗಲೀ ಅಂಗೀಕರಿಸಿದಲ್ಲಿ ಅದನ್ನು ರದ್ದುಪಡಿಸುವುದಕ್ಕಾಗಿ ನ್ಯಾಯಾಂಗವನ್ನು ಸ್ಥಾಪಿಸುತ್ತದೆ. +ಈ ವಿಷಯವನ್ನು ಕ್ಲೆಮೆಂಟ್‌ರವರು ಕೆನಡಾ ಸಂವಿಧಾನದ ಮೇಲಣ ತಮ್ಮ ಗ್ರಂಥದ ಈ ಉದ್ಭತ ಭಾಗದಲ್ಲಿ ಚೆನ್ನಾಗಿ ಹೇಳಿದ್ದಾರೆ. +“ವಿವರಗಳಂತಿರಲಿ, ಆಧುನಿಕ ಕಾಲದಲ್ಲಿ ಸಂಯುಕ್ತ ಒಕ್ಕೂಟ ಪದವು ಒಂದು ಒಪ್ಪಂದವಾಗಿದ್ದು. +ಜನರನ್ನು ಸಾಮಾನ್ಯ ಸಂಬಂಧದ ವಿಷಯಗಳೆಂದು ಒಪ್ಪಿಕೊಳ್ಳಲಾದ ವಿಷಯಗಳಲ್ಲಿ ಒಂದು ಕೇಂದ್ರ ಸರಕಾರದ ನಿಯಂತ್ರಣಕ್ಕೆ ಜನರನ್ನು ಒಳಪಡಿಸುವುದಲ್ಲದೆ, ಪ್ರತಿಯೊಂದು ಸ್ಥಳೀಯ ಸರಕಾರಕ್ಕೆ ಇತರ ಎಲ್ಲಾ ವಿಷಯಗಳಲ್ಲಿ ಸ್ವಾತಂತ್ರ್ಯವಿದ್ದು ಅವುಗಳಿಗೆ ಸ್ವಾಯತ್ತತೆ ನೀಡುತ್ತದೆ. +ಈ ಸಿದ್ಧಾಂತದ ಪರಿಣಾಮವಾಗಿ ಅಥವಾ ಅವಶ್ಯ ಉಪಸಿದ್ಧಾಂತವಾಗಿ ಈ ಇಡೀ ವ್ಯವಸ್ಥೆಯು ಮೂಲಭೂತ ಕಾನೂನು ಎನಿಸಿದ್ದು ನ್ಯಾಯಾಲಯಗಳಿಂದ ಮಾನ್ಯತೆ ಪಡೆದು ಅವುಗಳ ಮುಖಾಂತರ ಜಾರಿಗೊಳಿಸುವಂತಹುದಾಗಿದೆ. +“ಇಡೀ ಸಂಯುಕ್ತ ರಾಜ್ಯಕ್ಕೆ ಸಂಬಂಧಿಸಿದ ಸಾಮಾನ್ಯ ವಿಷಯಗಳನ್ನು ಪ್ರತಿ ಘಟಕದ ಸ್ಥಳೀಯ ವಿಷಯಗಳಿಂದ ಪ್ರತ್ಯೇಕಿಸುವುದು ಸಂಯುಕ್ತ ರಾಜ್ಯದ ಮೂಲ ಅಂಶವಲ್ಲ. +ಪ್ರತ್ಯೇಕತೆಯ ರೇಖೆ ಸಂಯುಕ್ತ ರಾಜ್ಯದ ಘಟಕಗಳ ಅಭಿಪ್ರಾಯದಲ್ಲಿ ತಮ್ಮ ವಾಸ್ತವಿಕ ಪರಿಸ್ಥಿತಿಯಲ್ಲಿ ಭೌಗೋಳಿಕ, ವಾಣಿಜ್ಯ, ಜನಾಂಗೀಯ ಮತ್ತು ಇತರ ಅಂಶಗಳ ಆಧಾರದ ಮೇಲೆ ಸಾಮಾನ್ಯ ಸರಕಾರಕ್ಕೆ ವಹಿಸಿಕೊಡಬೇಕೆಂಬುದನ್ನು ಅವಲಂಬಿಸಿದೆ. +ಆದರೆ ಸಂಯುಕ್ತ ಘಟಕಗಳು ಕೊನೆಯ ಪಕ್ಷ ಇಂದು ಮೂರು ಶ್ರೇಷ್ಠ ಆಂಗ್ಲೋಸ್ಕಾಕ್ಟನ್‌ ಸಂಯುಕ್ತ ರಾಜ್ಯಗಳೆನಿಸಿಕೊಂಡಿರುವ ಅಮೆರಿಕ ಸಂಯುಕ್ತ ಸಂಸ್ಥಾನ, ಆಸ್ಟ್ರೇಲಿಯ ಮತ್ತು ಕೆನಡಾದಲ್ಲಿರುವಂತೆ ತಾವು ಪ್ರವೇಶ ಪಡೆಯುವಾಗ ಒಪ್ಪಂದದಲ್ಲಿ ಒಪ್ಪಿಕೊಂಡ ಕಾರ್ಯಕ್ಷೇತ್ರಗಳನ್ನು ಕಾಯ್ದುಕೊಂಡು ಹೋಗುವುದು ಆಧುನಿಕ ಸಂಯುಕ್ತ ರಾಜ್ಯ ವ್ಯವಸ್ಥೆಯ ತಿರುಳಾಗಿದೆ. +ಇದು ನ್ಯಾಯಾಲಯಗಳ ಮೇಲೆ ಹೊರಿಸಲಾದ ಕರ್ತವ್ಯದ ಮಹತ್ವ ಮತ್ತು ಪ್ರಾಧಾನ್ಯವನ್ನು ತೋರಿಸುತ್ತದೆಯಲ್ಲದೆ, ಈ ನ್ಯಾಯಾಲಯಗಳು ದೇಶದ ಸುವ್ಯವಸ್ಥಿತ ಮೂಲಭೂತ ಕಾನೂನಿನ ಏಕೈಕ ಸಂವಿಧಾನಾತ್ಮಕ ವ್ಯಾಖ್ಯೆಯ ಸಾಧನಗಳಾಗಿವೆ”. +ಆದ್ದರಿಂದ ಸರಕಾರ ಅಧಿಕಾರಗಳನ್ನು ಕೇಂದ್ರ ಮತ್ತು ಸ್ಥಳೀಯ ಸರಕಾರಗಳ ನಡುವೆ ಸಂವಿಧಾನಾತ್ಮಕ ಕಾನೂನಿನ ಮೂಲಕ ವಿಭಜಿಸುವುದು ಮತ್ತು ಅದನ್ನು ನ್ಯಾಯಾಂಗದ ಮೂಲಕ ಉಳಿಸಿಕೊಂಡು ಬರುವುದು ಒಕ್ಕೂಟ ಸ್ವರೂಪ ಸರಕಾರದ ಎರಡು ಅವಶ್ಯ ಲಕ್ಷಣಗಳಾಗಿವೆ. +ಈ ಎರಡು ಲಕ್ಷಣಗಳಿಂದಲೇ ಅದು ಏಕಾತ್ಮಕ ಸರಕಾರದಿಂದ ಭಿನ್ನವಾಗಿದೆ. +ಸಂಕ್ಷಿಪ್ತದಲ್ಲಿ, ಪ್ರತಿಯೊಂದು ಸಂಯುಕ್ತ ರಾಜ್ಯದಲ್ಲಿ ಎರಡು ಅಂಶಗಳು ಅಡಗಿವೆ . + (೧) ಅದರ ಘಟಕಗಳು ಮತ್ತು ಕೇಂದ್ರ ಸರಕಾರದ ನಡುವೆ ಅಧಿಕಾರ ವಿಭಜನೆಯನ್ನು ಒಂದು ಮಾನದಂಡ ಮತ್ತು ಸೀಮೆಗನು ಸಾರವಾಗಿ ಸಂವಿಧಾನಾತ್ಮಕ ಕಾನೂನಿನ ಮೂಲಕ ಮಾಡುವುದು ಹಾಗೂ ವಿಭಜನೆಯ ನಂತರ ಅದನ್ನು ಬದಲಾಯಿಸುವ ಅಧಿಕಾರ ಸಂಯುಕ್ತ ಸರಕಾರ ಇಲ್ಲವೆ ಘಟಕ ರಾಜ್ಯ ಎರಡಕ್ಕೂ ಇರುವುದಿಲ್ಲ . + ಅವು ತಮಗೆ ನೀಡಲಾದ ಅಧಿಕಾರಕ್ಕೆ ತಮ್ಮ ಚಟುವಟಿಕೆಗಳನ್ನು ಸೀಮಿತಗೊಳಿಸಬೇಕು. +(೨) ಕೇಂದ್ರ ಅಥವಾ ಘಟಕದ ಯಾವುದೇ ಶಾಸಕೀಯ,ಕಾರ್ಯಾಂಗದ, ಆಡಳಿತಾತ್ಮಕ ಅಥವಾ ಹಣಕಾಸಿಗೆ ಸಂಬಂಧಿಸಿದ ಯಾವುದೇ ಕಾರ್ಯ ಸಂವಿಧಾನದನ್ವಯ ನೀಡಲಾದ ಅಧಿಕಾರವನ್ನು ಮೀರಿದೆಯೇ ಎಂಬ ಅಂಶವನ್ನು ನಿರ್ಣಯಿಸಲು ಎರಡೂ ಕಡೆ ನಿಯಂತ್ರಣಕ್ಕೊಳಗಾಗಿರದ ನ್ಯಾಯಮಂಡಳಿ ಇರತಕ್ಕದ್ದು. +ಒಕ್ಕೂಟ ಸರಕಾರದ ಅರ್ಥವನ್ನು ವಿವರಿಸಿದ ನಂತರ ಸಂವಿಧಾನದಲ್ಲಿ ಸಂಯುಕ್ತ ಸರಕಾರಕ್ಕೆ ನೀಡಲಾಗಿರುವ ಅಧಿಕಾರಗಳ ಬಗ್ಗೆ ನಿಮಗೆ ವಿವರಿಸುತ್ತೇನೆ. +(ಅ) ಒಕ್ಕೂಟ ವ್ಯವಸ್ಥೆ ಶಾಸನಾಧಿಕಾರಿಗಳು ಶಾಸನಾಧಿಕಾರಗಳ ವಿತರಣೆಯ ಉದ್ದೇಶಕ್ಕಾಗಿ ಕಾನೂನು ಮಾಡಬಹುದಾದ ವಿಷಯಗಳನ್ನು ಮೂರು ವಿಧದ ಪಟ್ಟಿಗಳಲ್ಲಿ ತಯಾರಿಸಲಾಗಿದೆ. +ಮೊದಲನೆಯ ವಿಧದ ಪಟ್ಟಿಯಲ್ಲಿ ಫೆಡರಲ್‌ ಸರಕಾರ ತಾನೇ ಪ್ರತ್ಯೇಕವಾಗಿ ಕಾನೂನು ಮಾಡುವ ಅಧಿಕಾರದ ವಿಷಯಗಳನ್ನು ಕೊಡಲಾಗಿದೆ. +ಈ ಪಟ್ಟಿಯನ್ನು ಫೆಡರಲ್‌ ಅಥವಾ ಸಂಯುಕ್ತ ಪಟ್ಟ ಎಂದು ಕರೆಯಲಾಗಿದೆ. +ಎರಡನೆಯ ವಿಧದ ವಿಷಯಗಳಲ್ಲಿ ಪ್ರಾಂತೀಯ ಶಾಸಕಾಂಗಕ್ಕೆ ಕಾನೂನು ಮಾಡುವ ಪ್ರತ್ಯೇಕ ಅಧಿಕಾರ ಹೊಂದಿರುವ ವಿಷಯಗಳು ಸೇರಿವೆ. +ಇದನ್ನು ಪ್ರಾಂತೀಯ ಪಟ್ಟಿ ಎಂದು ಕರೆಯಲಾಗಿದೆ. +ಮೂರನೆಯ ವಿಧದ ಪಟ್ಟಿಯಲ್ಲಿ ಫೆಡರಲ್‌ ಮತ್ತು ಪ್ರಾಂತೀಯ ಶಾಸಕಾಂಗಗಳೆರಡೂ ಕಾನೂನು ಮಾಡಲು ಅಧಿಕಾರ ಪಡೆದ ವಿಷಯಗಳುಸೇರಿವೆ. + ಇದನ್ನು ಸಮಾನ ಅಧಿಕಾರ ಪಟ್ಟಿ ಎಂದು ಕರೆಯಲಾಗಿದೆ. +ಈ ಪಟ್ಟಿಗಳಲ್ಲಿ ಸೇರಿದ ವಿಷಯಗಳು ಮತ್ತು ಅವುಗಳ ವ್ಯಾಪ್ತಿಯನ್ನು ಭಾರತ ಸರಕಾರದ ಕಾಯ್ದೆಯ ಅನುಸೂಚಿಯಲ್ಲಿ ಕೊಡಲಾಗಿದೆ. +ಒಕ್ಕೂಟ ವ್ಯವಸ್ಥೆಯ ಮೂಲಭೂತ ತತ್ವಗಳ ಪ್ರಕಾರ ಪ್ರಾಂತೀಯ ಪಟ್ಟಿಯಲ್ಲಿ ಸೇರಿದ ವಿಷಯದ ಮೇಲೆ ಫೆಡರಲ್‌ ಶಾಸಕಾಂಗವು ಕಾನೂನು ರಚಿಸಿದರೆ ಅದು ಸಂವಿಧಾನಬಾಹಿರವೆನಿಸಿ ಅನೂರ್ಜಿತವಾಗುವುದು. + ಇದೇ ರೀತಿ ಪ್ರಾಂತೀಯ ಶಾಸಕಾಂಗವು ಫೆಡರಲ್‌ ಪಟ್ಟಿಯಲ್ಲಿ ಸೇರಿದ ವಿಷಯದ ಮೇಲೆ ಕಾನೂನು ರಚಿಸಿದರೆ ಅದೂ ಸಹ ಸಂವಿಧಾನಬಾಹಿರವೆನಿಸಿ ಅನೂರ್ಜಿತವಾಗುವುದು. +ಈಗ ಈ ವಿಷಯಕ್ಕೆ ಸಂಬಂಧಿಸಿದ ಕಾನೂನಾಗಿರುವ ೧ಂ೭ ನೆಯ ವಿಭಾಗ ಮತ್ತು ವಿಧಿಬದ್ಧನಿಯಮದ ಪ್ರಕಾರ ಈ ರೀತಿ ಹೇಳಲಾಗಿದೆ. +ಫೆಡರಲ್‌ ಪಟ್ಟಿ ಮತ್ತು ಪ್ರಾಂತೀಯ ಪಟ್ಟಿಗಳ ವಿಷಯಗಳಿಗೆ ಸಂಬಂಧವಾದ ಕಾನೂನು ನಡುವೆ ಘರ್ಷಣೆ ಪದೇ ಪದೇ ಉಂಟಾಗುವ ಸಾಧ್ಯತೆ ಇಲ್ಲ. +ಆದರೆ ಈಎರಡು ಶಾಸಕಾಂಗಗಳ ನಡುವೆ ಘರ್ಷಣೆ ಹೆಚ್ಚಾಗಿ ಸಮಾನಾಧಿಕಾರ ಪಟ್ಟಿಯು ವಿಷಯಗಳಲ್ಲಿ ಸಂಭವಿಸುವುದು ಖಚಿತ. +ಇದಕ್ಕೆ ಸಂಬಂಧಿಸಿದ ಕಾನೂನು ೧ಂ೭ ನೆಯ ವಿಭಾಗ. +ಇದರ (೧) ನೆಯ ಉಪ ವಿಭಾಗದಲ್ಲಿ ಪ್ರಾಂತೀಯ ಕಾನೂನಿನ ಮೇಲೆ ಫೆಡರಲ್‌ ಕಾನೂನು ಯಾವ ಸಂದರ್ಭದಲ್ಲಿ ಸಿಂಧುವಾಗುವುದೆಂದು ಹೇಳಲಾಗಿದೆ. +ಯಾವ ಸಂದರ್ಭದಲ್ಲಿ ಪ್ರಾಂತೀಯ ಕಾನೂನು ಫೆಡರಲ್‌ ಕಾನೂನಿನ ಮೇಲೆ ಸಿಂಧುವಾಗುವುದೆಂದು ಉಪವಿಭಾಗ (೨) ರಲ್ಲಿ ಹೇಳಲಾಗಿದೆ. +ಈ ಎರಡೂ ಉಪವಿಭಾಗಗಳನ್ನು ಒಟ್ಟಿಗೆ ಓದಿದಾಗ ಕಾನೂನಿನನ್ವಯ ಪರಿಸ್ಥಿತಿ ಹೀಗಿದೆ. +ಎರಡೂ ಕಾನೂನುಗಳಲ್ಲಿ ಫಘರ್ಷಣೆಯುಂಟಾದಾಗ ಪ್ರಾಂತೀಯ ಕಾನೂನಿನ ಮೇಲೆ ಫೆಡರಲ್‌ ಕಾನೂನು ಸಿಂಧುವಾಗುವುದು ನಿಯಮ. +ಆದರೆ ಯಾವುದೇ ಪ್ರಾಂತೀಯ ಕಾನೂನನ್ನು ಗವರ್ನರ್‌-ಜನರಲ್‌ರ ಪರಿಶೀಲನೆಗೆ ಅಥವಾ ಮಹಾಪ್ರಭು ದೊರೆಯ ಸಮ್ಮತಿಗಾಗಿ ಕಳಿಸಿಕೊಟ್ಟಾಗ ಅಂತಹ ಪರಿಶೀಲನೆ ಮತ್ತು ಸಮ್ಮತಿ ದೊರೆತರೆ ಅದೇ ವಿಷಯದಲ್ಲಿ ಫೆಡರಲ್‌ ಶಾಸಕಾಂಗವು ಪುನಃ ಕಾನೂನು ಮಾಡುವ ತನಕ ಪ್ರಾಂತೀಯ ಕಾನೂನು ಜಾರಿಯಲ್ಲಿರುವುದು. +ಕಾನೂನು ಮಾಡುವ ಅಧಿಕಾರ ವಿತರಣೆಯ ವಿಷಯದಲ್ಲಿ ಎಲ್ಲಾ ಸಂಯುಕ್ತ ರಾಜ್ಯಗಳೂ ಇಂದು ಸಮಸ್ಯೆಯನ್ನು ಎದುರಿಸುತ್ತವೆ. +ಶಾಸನಾಧಿಕಾರದ ವಿಷಯಪಟ್ಟಿ ಪರಿಪೂರ್ಣ ಅಥವಾ ಸಮಗ್ರವಾಗಿರಲು ಸಾಧ್ಯವಿಲ್ಲದಿರುವುದೇ ಈ ಸಮಸ್ಯೆಗೆ ಕಾರಣ. +ಅದು ಎಷ್ಟೇ ಪರಿಪೂರ್ಣ ಮತ್ತು ಸಮಗ್ರವಾಗಿರುವುದೆಂದರೂ ಅವುಗಳಲ್ಲಿ ಸೇರದೆ ಉಳಿದುಹೋಗಿರುವ ವಿಷಯಗಳಿರುವ ಸಾಧ್ಯತೆ ಇದ್ದೇ ಇರುತ್ತದೆ. +ಹೀಗೆ ಉಳಿದುಹೋದ ವಿಷಯಗಳ ಮೇಲೆ ಕಾನೂನು ಮಾಡುವ ಅಧಿಕಾರವನ್ನು ಇಂತಹ ಅನಿಶ್ಚಿತ ಸಂದರ್ಭದಲ್ಲಿ ಯಾರಿಗೆ ನೀಡಬೇಕೆಂಬ ವಿಷಯವಾಗಿ ಪ್ರತಿಯೊಂದು ಸಂಯುಕ್ತ ರಾಜ್ಯದಲ್ಲಿಯೂ ಜಿಜ್ಞಾಸೆಗೆ ಅವಕಾಶ ಮಾಡಬೇಕಾಗುತ್ತದೆ. +ಈ ಅಧಿಕಾರವನ್ನು ಕೇಂದ್ರ ಸರಕಾರಕ್ಕೆ ಕೊಡಬೇಕೇ ಅಥವಾ ಘಟಕ ಸರಕಾರಗಳಿಗೆ? +ಇಲ್ಲಿಯವರೆಗೆ ಈ ವಿಷಯವನ್ನು ಪರಿಗಣಿಸುವ ಒಂದೇ ಮಾರ್ಗವಿದೆ. +ಕೆಲವು ಸಂಯುಕ್ತ ರಾಜ್ಯಗಳಲ್ಲಿ, ಈ ಅಧಿಕಾರವನ್ನು ಕೆನಡಾದಲ್ಲಿರುವಂತೆ ಕೇಂದ್ರ ಸರಕಾರಕ್ಕೆ ಕೊಡಲಾಗಿದೆ. +ಮತ್ತು ಕೆಲವು ಸಂಯುಕ್ತ ರಾಜ್ಯಗಳಲ್ಲಿ ಆಸ್ಟ್ರೇಲಿಯಾದಲ್ಲಿಯಂತೆ, ಈ ಅಧಿಕಾರವನ್ನು ಘಟಕಗಳಿಗೆ ಕೊಡಲಾಗಿದೆ. +ಭಾರತ ಒಕ್ಕೂಟ ವ್ಯವಸ್ಥೆಯಲ್ಲಿ ಈ ಅಧಿಕಾರವನ್ನು ಕೇಂದ್ರ ಸರಕಾರಕ್ಕಾಗಲೀ ಅಥವಾ ಪ್ರಾಂತ್ಯ ಸರಕಾರಕ್ಕಾಗಲೀ ಕೊಡಲಾಗಿಲ್ಲ. +೧ಂ೪ ನೆಯ ವಿಭಾಗದ ಪ್ರಕಾರ ಆ ಅಧಿಕಾರವನ್ನು ಒಂದು ರೀತಿಯಲ್ಲಿ ಗವರ್ನರ್‌-ಜನರಲ್‌ರಿಗೆ ನೀಡಲಾಗಿದೆ. +ಮೂರೂ ಪಟ್ಟಿಗಳಲ್ಲಿ ಸೇರದ ಯಾವುದೇ ವಿಷಯದ ಮೇಲೆ ಕಾನೂನು ಮಾಡುವ ಪ್ರಸಂಗದಲ್ಲಿ ಗವರ್ನರ್‌-ಜನರಲ್‌ರು ಈ ಅಧಿಕಾರ ಫೆಡರಲ್‌ಶಾಸಕಾಂಗಕ್ಕಿದೆಯೇ ಅಥವಾ ಪ್ರಾಂತ್ಯ ಶಾಸಕಾಂಗಕ್ಕಿದೆಯೇ ಎಂಬುದನ್ನು ನಿರ್ಣಯಿಸುತ್ತಾರೆ. +(ಬ) ಒಕ್ಕೂಟ ವ್ಯವಸ್ಥೆಯ ಕಾರ್ಯಾಂಗದ ಅಧಿಕಾರಗಳು ಒಕ್ಕೂಟ ವ್ಯವಸ್ಥೆಯ ಕಾರ್ಯಾಂಗಾಧಿಕಾರಗಳ ವ್ಯಾಪ್ತಿ ಏನು ಎಂಬುದು ಮೊದಲನೆಯ ಪ್ರಶ್ನೆ. +ಅದು ಶಾಸನಾಧಿಕಾರಗಳೊಂದಿಗೆ ಸಮಾನ ವ್ಯಾಪ್ತಿಯದಾಗಿದೆಯೇ? +ಕೆಲವು ಸಂಯುಕ್ತ ರಾಜ್ಯಗಳಲ್ಲಿ ಇದನ್ನು ಕಾನೂನಿನಲ್ಲಿ ಸ್ಪಷ್ಟಪಡಿಸಿಲ್ಲ. +ಅದನ್ನು ನ್ಯಾಯಾಂಗದ ನಿರ್ಣಯಕ್ಕೆ ಬಿಡಲಾಗಿತ್ತು. +ಕೆನಡಾದಲ್ಲಿ ಈ ರೀತಿ ಮಾಡಲಾಗಿದೆ. +ಭಾರತ ಸಂವಿಧಾನವು ಈ ವಿಷಯವನ್ನು ನ್ಯಾಯಾಲಯಗಳ ನಿರ್ಣಯಕ್ಕೆ ಬಿಟ್ಟಿಲ್ಲ. +ಇದನ್ನು ಕಾಯ್ದೆಯಲ್ಲಿಯೇ ಸ್ಪಷ್ಟವಾಗಿ ವಿವರಿಸಲಾಗಿದೆ. +೮ (೧) ನೆಯ ವಿಭಾಗವು ಈ ವಿಷಯಕ್ಕೆ ಪ್ರಸ್ತುತವಾಗಿದೆ. +ಇದರ ಪ್ರಕಾರ ರಾಜ್ಯದ ಕಾರ್ಯಾಂಗಾಧಿಕಾರ ಈ ಕೆಳಕಂಡ ವಿಷಯಗಳಿಗೆ ವ್ಯಾಪಿಸುತ್ತದೆ. +ಅ) ಒಕ್ಕೂಟ ಶಾಸಕಾಂಗವು ಶಾಸನ ರೂಪಿಸುವ ವಿಷಯಗಳಿಗೆ +ಬ) ಬ್ರಿಟಿಷ್‌ ಭಾರತದಲ್ಲಿ ಮಹಾಪ್ರಭು ದೊರೆಯ ಪರವಾಗಿ ನೌಕೆ, ಸೇನೆ ಮತ್ತು ವಾಯುಪಡೆಗಳ ನೇಮಕ ಮತ್ತು ಮಹಾಪ್ರಭು ದೊರೆಯ ಆಡಳಿತಕ್ಕೊಳಪಟ್ಟ ಭಾರತದ ಸೈನ್ಯದ ಆಡಳಿತ. +ಸಂವಿಧಾನಾತ್ಮಕ ಸುಧಾರಣೆಗಳು +ಕ) ಬುಡಕಟ್ಟು ಪ್ರದೇಶಗಳಿಗೆ ಸಂಬಂಧಪಟ್ಟ ಒಡಂಬಡಿಕೆಗಳು, ದತ್ತಿಗಳು, ಸಮ್ಮತಿ, ವಹಿವಾಟು ಅಥವಾ ಇನ್ನಾವುದೇ ವಿಧದ ಅಧಿಕಾರ ವ್ಯಾಪ್ತಿಯಲ್ಲಿ ದೊರೆಯು ಚಲಾಯಿಸುವ ಹಕ್ಕುಗಳು,ಅಧಿಕಾರಗಳು ಮತ್ತು ಅಧಿಕಾರ ಕ್ಷೇತ್ರ. +ಈ ಉಪ ವಿಭಾಗದ ನಿಬಂಧನೆಗಳನ್ನು ಅರ್ಥ ಮಾಡಿಕೊಳ್ಳುವುದು ಕಷ್ಟವೇನಲ್ಲ. +ಆದರೆ ಉಪ-ಖಂಡಿಕೆ (ಅ) ಅರ್ಥ ಮಾಡಿಕೊಳ್ಳುವಲ್ಲಿ ಸ್ವಲ್ಪ ತೊಡಕಾಗಬಹುದು. +ಕಾರ್ಯಾಂಗಾಧಿಕಾರಗಳು ಶಾಸನಾಧಿಕಾರಗಳ ಜೊತೆ ಸಮಾನವ್ಯಾಪ್ತಿಯದಾಗಿರ ತಕ್ಕದ್ದೆಂದು ಅದು ಹೇಳುತ್ತದೆ. +ಸಂಯುಕ್ತ ರಾಜ್ಯದ ಶಾಸನಾಧಿಕಾರಗಳು ಫೆಡರಲ್‌ ಪಟ್ಟಿಗಷ್ಟೇ ಅಲ್ಲ, ಸಮಾನಾಧಿಕಾರ ಪಟ್ಟಿಗೂ ಅನ್ವಯಿಸುತ್ತದೆ. +ಹೀಗಿರುವಾಗ ಒಕ್ಕೂಟದ ಕಾರ್ಯಾಂಗಾಧಿಕಾರವು ಸಮಾನಾಧಿಕಾರ ಪಟ್ಟಿಯಲ್ಲಿರುವ ವಿಷಯಗಳಿಗೂ ಅನ್ವಯಿಸುವುದೆ? +ಈ ಪ್ರಶ್ನೆಗೆ ಉತ್ತರ ಕೊಡುವ ಮುನ್ನ ಎರಡು ಅಂಶಗಳನ್ನು ನೆನಪಿನಲ್ಲಿಡಬೇಕು. +ಮೊದಲನೆಯದಾಗಿ,ಸಮಾನಾಧಿಕಾರದ ಪಟ್ಟಿಯಲ್ಲಿರುವ ವಿಷಯಗಳ ಮೇಲೆ ಪ್ರಾಂತೀಯ ಶಾಸನಾಧಿಕಾರವೂ ಇದೆ. +ಎರಡನೆಯದಾಗಿ, ೪೯ (೨)ನೆಯ ವಿಭಾಗದ ಪ್ರಕಾರ ಪ್ರತಿಯೊಂದು ಪ್ರಾಂತ್ಯದ ಕಾರ್ಯಾಂಗಾಧಿಕಾರವು ಪ್ರಾಂತ್ಯದ ಶಾಸಕಾಂಗವು ಕಾನೂನು ಮಾಡುವ ಅಧಿಕಾರವಿರುವ ವಿಷಯಗಳಿಗೆ ಅನ್ವಯಿಸುತ್ತದೆ. +ಒಕ್ಕೂಟದ ಕಾರ್ಯಾಂಗಾಧಿಕಾರವು ಸಮಾನಾಧಿಕಾರದ ಪಟ್ಟಿಯಲ್ಲಿರುವ ವಿಷಯಗಳಿಗೂ ಅನ್ವಯಿಸುತ್ತದೆಯೆ ಎಂಬ ಪ್ರಶ್ನೆಗೆ ಉತ್ತರವೆಂದರೆ ಸಮಾನಾಧಿಕಾರದ ಪಟ್ಟಿಯಲ್ಲಿರುವ ವಿಷಯಗಳ ಮೇಲಣ ಕಾರ್ಯಾಂಗ ಅಧಿಕಾರವು ಸಂಯುಕ್ತ ಸರಕಾರ ಹಾಗೂ ಪ್ರಾಂತೀಯ ಸರಕಾರ ಎರಡೂ ಸರಕಾರಗಳಿಗೆ ಸೇರಿದೆ. . + ೧೨೬(೨)ನೆಯ ವಿಭಾಗದ ನಿಬಂಧನೆಗಳಿಂದ ಇದು ಸ್ಪಷ್ಟವಾಗಿದೆ. +ಪ್ರಾಂತೀಯ ಶಾಸಕಾಂಗವು ಆಗಲೇ ಶಾಸನ ಮಾಡಿದ ವಿಷಯಗಳನ್ನು ಹೊರತುಪಡಿಸಿ ಉಳಿದ ವಿಷಯಗಳು ಸಂಯುಕ್ತ ಶಾಸಕಾಂಗದ ಅಧಿಕಾರಕ್ಕೆ ಒಳಪಡುವವು. +ಸಮಾನಾಧಿಕಾರ ಪಟ್ಟಿಯು ಸಂಯುಕ್ತ ಶಾಸನಾಂಗದ ಅಧಿಕಾರಕ್ಕೊಳಪಟ್ಟರುವ ಒಂದೇ ಪಟ್ಟಿಯಾಗಿಲ್ಲ. +೧ಂ೨ ನೆಯ ವಿಭಾಗದ ಪ್ರಕಾರ ತುರ್ತು ಪರಿಸ್ಥಿತಿಗಳಲ್ಲಿ ಒಕ್ಕೂಟ ಶಾಸನಾಂಗವು ಪ್ರಾಂತೀಯ ಪಟ್ಟಿಯಲ್ಲಿ ಸೇರಿದ ವಿಷಯಗಳ ಮೇಲೂ ಕಾನೂನು ಮಾಡುವ ಹಕ್ಕುಪಡೆದಿದೆ. +೧ಂ೬ ನೆಯ ವಿಭಾಗದಪ್ರಕಾರ ಅಂತಾರಾಷ್ಟ್ರೀಯ ಒಪ್ಪಂದಗಳನ್ನು ಜಾರಿಗೊಳಿಸುವ ಹಕ್ಕನ್ನು ಪಡೆದಿದೆ. +ಒಕ್ಕೂಟದ ಕಾರ್ಯಾಂಗಾಧಿಕಾರವು ಇಂತಹ ವಿಷಯಗಳಿಗೂ ಅನ್ವಯಿಸುವುದೆ ? + ಯಾವ ವಿಷಯದಲ್ಲಿ ಫೆಡರಲ್‌ಶಾಸನ ಮಾಡಲು ಬರುವುದೋ ಆ ವಿಷಯಗಳಿಗೂ ಸಂಯುಕ್ತ ರಾಜ್ಯದ ಕಾರ್ಯಾಂಗಾಧಿಕಾರ ಅನ್ವಯಿಸುತ್ತದೆ ಎಂದೇ ಹೇಳಬೇಕಾಗುತ್ತದೆ. +(ಕ) ಒಕ್ಕೂಟ ವ್ಯವಸ್ಥೆಯ ಆಡಳಿತಾತ್ಮಕ ಅಧಿಕಾರಗಳು ಒಕ್ಕೂಟದ ಕಾರ್ಯಾಂಗಾಧಿಕಾರಗಳು ಅದರ ಶಾಸನಾಧಿಕಾರಗಳಿಗೆ ಅನುಗುಣವಾಗಿರುವಂತೆ ಅದರ ಆಡಳಿತಾಧಿಕಾರಗಳು ಕಾರ್ಯಾಂಗಾಧಿಕಾರಗಳಿಗೆ ಅನುಗುಣವಾಗಿರುತ್ತದೆ. +ಈ ನಿಯಮಕ್ಕೆ ಒಂದು ಅಪವಾದವಿದೆ. +ಈ ಅಪವಾದವು ಸಮಾನಾಧಿಕಾರ ಪಟ್ಟಿಯ ವಿಷಯಗಳ ಆಡಳಿತಕ್ಕೆ ಸಂಬಂಧಿಸಿದ್ದಾಗಿದೆ. +ಸಮಾನಾಧಿಕಾರ ಪಟ್ಟಿಯ ವಿಷಯಗಳ ಮೇಲೆ ಸಂಯುಕ್ತ ರಾಜ್ಯದ ಶಾಸನಾಧಿಕಾರವನ್ನು ೧ಂಂ ನೆಯ ಪರಿಚ್ಛೇದದ ಪ್ರಕಾರ ಕೊಡಲಾಗಿದೆ. +ಈಗಾಗಲೇ ಹೇಳಿದಂತೆ,ಸಂಯುಕ್ತ ಶಾಸಕಾಂಗದಿಂದ ಈಗಾಗಲೇ ಶಾಸನ ಮಾಡಿದ ವಿಷಯಗಳಿಗೆ ಸಂಯುಕ್ತ ರಾಜ್ಯದ ಕಾರ್ಯಾಂಗಾಧಿಕಾರವು ಅನ್ವಯಿಸುತ್ತದೆ. +ಆದರೆ ಸಮಾನಾಧಿಕಾರ ಪಟ್ಟಿಯಲ್ಲಿರುವ ವಿಷಯಗಳ ಮೇಲೆ ಆಡಳಿತಾಧಿಕಾರವು ಒಕ್ಕೂಟ ವ್ಯವಸ್ಥೆಗೆ ಸೇರುವುದಿಲ್ಲ. +ಅದು ಪ್ರಾಂತ್ಯಗಳಿಗೆ ಸೇರಿದೆ. +(ಡ) ಒಕ್ಕೂಟ ವ್ಯವಸ್ಥೆಯ ಹಣಕಾಸಿನ ಅಧಿಕಾರಗಳು ಒಕ್ಕೂಟದ ಆದಾಯ ನಾಲ್ಕು ಮೂಲಗಳಿಂದ ಬರುತ್ತದೆ . +(೧) ವಾಣಿಜೋಂದ್ಯಮದಿಂದ ಬರುವ ಆದಾಯ, (೨) ಸಾರ್ವಭೌಮ ಕಾರ್ಯಗಳಿಂದ ಬರುವ ಆದಾಯ, (೩) ಕಪ್ಪ ಕಾಣಿಕೆಗಳಿಂದ ಬರುವ ಆದಾಯ ಮತ್ತು (೪) ತೆರಿಗೆಗಳಿಂದ ಬರುವ ಆದಾಯ. +ಮೊದಲನೆಯ ವಿಧದ ಆದಾಯದಲ್ಲಿ ಅಂಚೆ ಮತ್ತು ತಂತಿ, ಫೆಡರಲ್‌ ರೈಲು ಮಾರ್ಗಗಳು,ಬ್ಯಾಂಕುಗಳಿಂದ ಬರುವ ಲಾಭ ಮತ್ತು ಇತರ ವಾಣಿಜ್ಯ ಸಂಬಂಧಿ ಕಾರ್ಯಗಳಿಂದ ಬರುವ ಆದಾಯಸೇರಿದೆ. + ಎರಡನೆಯದರಲ್ಲಿ ನಾಣ್ಯ ಚಲಾವಣೆ, ಅಧಿಕೃತ ಪ್ರದೇಶ ಮತ್ತು ಫೆಡರಲ್‌ ಸರಕಾರದ ನೇರ ಆಡಳಿತಕ್ಕೊಳಪಟ್ಟ ಪ್ರದೇಶಗಳಿಂದ ಬರುವ ಆದಾಯ ಸೇರಿದೆ. +ಮೂರನೆಯ ವಿಧದ ಆದಾಯದಲ್ಲಿ ಭಾರತೀಯ ಸಂಸ್ಥಾನಗಳು ಸಲ್ಲಿಸುವ ಕಪ್ಪ ಕಾಣಿಕೆಗಳು ಸೇರಿವೆ. +ತೆರಿಗೆಗಳಿಂದ ಬರುವ ಆದಾಯದ ವರ್ಗೀಕರಣ ಫೆಡರಲ್‌ ಸರಕಾರಕ್ಕೆ ಸಂವಿಧಾನದಲ್ಲಿ ನೀಡಲಾಗಿರುವ ತೆರಿಗೆ ವಿಧಿಸುವ ಅಧಿಕಾರವನ್ನವಲಂಬಿಸಿದೆ. +ಫೆಡರಲ್‌ ಸರಕಾರಕ್ಕೆ ನೀಡಲಾದ ತೆರಿಗೆ ಹಾಕುವ ಅಧಿಕಾರ ಮೂರು ಮುಖ್ಯ ವಿಧದ್ದಾಗಿದೆ. +ಮೊದಲನೆಯ ವಿಧದ ತೆರಿಗೆ ವಿಧಿಸುವ ಅಧಿಕಾರದಲ್ಲಿ ತೆರಿಗೆಯ ಎಲ್ಲಾ ಮೊತ್ತವನ್ನು ಫೆಡರಲ್‌ ಸರಕಾರವೇ ಸಂಪೂರ್ಣವಿನಿಯೋಗಿಸಿಕೊಳ್ಳುವಂತಹ ತೆರಿಗೆಗಳು ಸೇರಿವೆ. +ಎರಡನೆಯ ವಿಧದಲ್ಲಿ, ಫೆಡರಲ್‌ ಸರಕಾರ ವಿಧಿಸಿ,ಸಂಗ್ರಹಿಸುವ ಅಧಿಕಾರ ಹೊಂದಿದ್ದು ಬಂದ ಆದಾಯವನ್ನು ಕೇಂದ್ರ ಮತ್ತು ಪ್ರಾಂತ್ಯ ಸರಕಾರಗಳ ನಡುವೆ ಹಂಚಲಾಗುತ್ತದೆ. +ತೆರಿಗೆ ವಿಧಿಸುವ ಮೊದಲನೆಯ ವಿಧದ ಅಧಿಕಾರದಡಿಯಲ್ಲಿ ಬರುವಂತಹ ಆದಾಯದ ಬಾಬ್ತುಗಳನ್ನು ಫೆಡರಲ್‌ ಪಟ್ಟಿಯಲ್ಲಿ ನಿರ್ದಿಷ್ಟವಾಗಿ ತಿಳಿಸಲಾಗಿದೆ. +(೧) ರಫ್ತಿನ ಮೇಲೆ ಹಾಕುವ ಸುಂಕವೂ ಸೇರಿದಂತೆ ಸುಂಕದ ತೆರಿಗೆ. +(೨) ಭಾರತದಲ್ಲಿ ಉತ್ಪಾದಿಸಲಾದ, ಹೊಗೆಸೊಪ್ಪು ಮತ್ತು ಇತರ ಸರಕುಗಳ ಮೇಲೆ, ಈ ಕೆಳಗಿನ ಸರಕುಗಳನ್ನು ಹೊರತುಪಡಿಸಿ, ಹೇರಲಾದ ಅಬ್ಕಾರಿ. +(ಅ) ಜನರ ಬಳಕೆಗಾಗಿರುವ ಮದ್ಯಪಾನೀಯಗಳು. +(ಬ) ಅಫೀಮು, ಭಾರತೀಯ ಗಾಂಜಾ ಮತ್ತು ಇತರ ಮಾದಕ ಮತ್ತು ಮಾದಕೇತರ ವಸ್ತುಗಳು. +(ಕ) ಮದ್ಯಸಾರ, ಅಥವಾ ಮೇಲಣ ಒಳಪ್ಕಾರಾ (ಬ) ದಲ್ಲಿ ಹೇಳಿರುವ ಯಾವುದೇ ಮಾದಕ ಪದಾರ್ಥವನ್ನು ಸೇರಿಸಿ ಸಿದ್ಧಪಡಿಸಿದ ಔಷಧಿ ಮತ್ತು ಸೌಂದರ್ಯಸಾಧನದ ವಸ್ತುಗಳು. +(೩) ಕಾರ್ಪೋರೇಷನ್‌ ತೆರಿಗೆ.,(೪) ಉಪ್ಪು,(೫) ರಾಜ್ಯ ಲಾಟರಿಗಳು. +(೬) ಕೃಷಿಯೇತರ ಆದಾಯದ ಮೇಲೆ ತೆರಿಗೆ,(ಲ) ವ್ಯಕ್ತಿಗತ ಮತ್ತು ಕಂಪನಿಗಳ ಕೃಷಿ ಭೂಮಿಯನ್ನು ಹೊರತುಪಡಿಸಿ ಆಸ್ತಿಗಳ ಮೌಲ್ಯದ ಮೇಲೆ ಹಾಕುವ ಮತ್ತು ಕಂಪೆನಿಗಳ ಬಂಡವಾಳದ ಮೇಲೆ ಹಾಕುವ ತೆರಿಗೆ. +(೮) ಕೃಷಿ ಭೂಮಿಯನ್ನು ಹೊರತುಪಡಿಸಿ ಇತರ ಆಸ್ತಿಯ ಉತ್ತರಾಧಿಕಾರದ ತೆರಿಗೆ. +(೯) ಹುಂಡಿಗಳು, ಚಕ್ಕುಗಳು, ಪ್ರಾಮಿಸರಿ ನೋಟುಗಳು, ರಫ್ತು ಪಟ್ಟಿ ಹಣ ಭರವಸೆಯ ಪತ್ರ,ಇನ್‌ಶ್ಕೂರೆನ್ಸ್‌ ಪಾಲಿಸಿಗಳು, ಪ್ರತಿನಿಧಿ ಪತ್ರ ಮತ್ತು ರಸೀತಿಗಳ ಮೇಲೆ ಹೇರುವ ಸ್ಟಾಂಪ್‌ ತೆರಿಗೆಯ ದರಗಳು. +(೧ಂ) ರೈಲು ಮತ್ತು ವಿಮಾನಗಳಲ್ಲಿ ಸಾಗಿಸಲಾದ ಪ್ರಯಾಣಿಕರು ಮತ್ತು ಸರಕುಗಳ ಮೇಲೆ ಹೇರಲಾದ ಪ್ರಯಾಣ ತೆರಿಗೆ ಮತ್ತು ರೈಲ್ವೆ ದರಗಳು ಮತ್ತು ಸರಕು ಸಾಗಣೆಯ ದರಗಳ ಮೇರೆ ತೆರಿಗೆ. +(೧೧) ಈ ಪಟ್ಟಿಯಲ್ಲಿ ನಮೂದಿಸಲಾಗಿರುವ ಯಾವುದೇ ವಿಷಯದ ಮೇಲೆ, ಆದರೆ ಯಾವುದೇ ನ್ಯಾಯಾಲಯದಲ್ಲಿ ತೆಗೆದುಕೊಳ್ಳದೆ ಇರುವ ಫೀಯನ್ನು ಬಿಟ್ಟು ಇತರ ಫೀಜು. +ಈ ಸಂಬಂಧದಲ್ಲಿ ಸಮಾನಾಧಿಕಾರ ಪಟ್ಟಿಯಲ್ಲಿ ಸೇರಿರುವ ಈ ಕೆಳಗಿನ ಬಾಬ್ತುಗಳ ಬಗ್ಗೆ ಗಮನ ನೀಡಬೇಕು:೧) ವಿವಾಹ ಮತ್ತು ವಿವಾಹ ವಿಚ್ಛೇದನ. +೨) ಉಯಿಲುಗಳು, ಅಂತಿಮ ಇಷ್ಟಪತ್ರ ಬರೆದಿಡದೇ ಸತ್ತುಹೋದ ಪರಿಸ್ಥಿತಿ ಮತ್ತು ಉತ್ತರಾಧಿಕಾರ. +೩) ಆಸ್ತಿ ಮತ್ತು ಇತರ ಕೃಷಿ ಭೂಮಿಗಳ ಹಸ್ತಾಂತರ. +ಈ ವಿಷಯಗಳು ಸಮಾನಾಧಿಕಾರ ಪಟ್ಟಿಯಲ್ಲಿ ಸೇರಿರುವ ವಿಷಯಗಳಾಗಿರುವುದರಿಂದ ಒಕ್ಕೂಟ ಶಾಸಕಾಂಗವು ಇವುಗಳ ಮೇಲೆ ಕಾನೂನು ಮಾಡುವ ಅಧಿಕಾರ ಹೊಂದಿರುತ್ತದೆ. +ಇಂತಹ ಕಾನೂನು ಮಾಡುವಾಗ ಒಕ್ಕೂಟದ ಶಾಸಕಾಂಗವು ಇವುಗಳ ಮೂಲಕ ಆದಾಯವನ್ನೂ ಪಡೆಯಬಹುದೆ ? +ಈ ಪ್ರಶ್ನೆಗೆ ಕಾಯ್ದೆಯಲ್ಲಿ ಯಾವ ಉತ್ತರವೂ ಇರುವಂತಿಲ್ಲ. +೧ಂ೪ನೇ ವಿಭಾಗದಲ್ಲಿ ವಿಶೇಷ ಅಧಿಕಾರವನ್ನು ಚಲಾಯಿಸುವ ವಿಷಯದಲ್ಲಿ ಹೇಳಲಾಗಿರುವ ನಿಯಮಗಳು ಈ ವಿಷಯಕ್ಕೂ ಅನ್ವಯಿಸುತ್ತವೆ ಎಂದು ಮಾತ್ರ ಹೇಳಬಹುದು. +ಸಂವಿಧಾನದ ಪ್ರಕಾರ ವಿಭಜಿಸಬಹುದಾದ ಆದಾಯದ ಮೂಲಗಳು ಈ ರೀತಿ ಇವೆ . +(೧) ಕಾರ್ಪೊರೇಷನ್‌ ತೆರಿಗೆಯ ಹೊರತಾದ ಆದಾಯ ತೆರಿಗೆ. +(೨) ಸೆಣಬು ರಫ್ತು ತೆರಿಗೆಫೆಡರಲ್‌ ಕಾನೂನಿನ ಪ್ರಕಾರ ವಿಭಜಿಸಬಹುದಾದ ಆದಾಯಗಳೆಂದರೆ: (೧) ಉಪ್ಪಿನ ಮೇಲಿನ ತೆರಿಗೆ,(೨) ತಂಬಾಕು ಮತ್ತು ಇತರ ವಸ್ತುಗಳ ಮೇಲಿನ ಅಬಕಾರಿ ತೆರಿಗೆ (೩) ರಫ್ತು ತೆರಿಗೆ. +ಒಕ್ಕೂಟ ವ್ಯವಸ್ಥೆಯ ಆರ್ಥಿಕ ಅಧಿಕಾರಗಳ ವಿಷಯದಲ್ಲಿರುವ ಒಂದು ವಿಶೇಷ ಅಂಶಗಮನಾರ್ಹವಾಗಿದೆ. +ಈ ಕಾಯ್ದೆಯಲ್ಲಿ ಸಂಯುಕ್ತ ಸರಕಾರಕ್ಕೆ ತೆರಿಗೆ ವಿಧಿಸುವ ಹಕ್ಕನ್ನು ನೀಡುವಾಗತೆರಿಗೆ ವಿಧಿಸುವ ಅಧಿಕಾರ ಮತ್ತು ತೆರಿಗೆ ವಸೂಲು ಮಾಡುವ ಹಕ್ಕುಗಳ ನಡುವೆ ವ್ಯತ್ಯಾಸ ಮಾಡಿದೆ. +ಕೆಲವು ವಿಷಯಗಳಲ್ಲಿ ತೆರಿಗೆ ವಿಧಿಸುವ ಅಧಿಕಾರ ಫೆಡರಲ್‌ ಸರ್ಕಾರಕ್ಕೆ ನೀಡಲಾಗಿದ್ದರೂ ಕೂಡ ಅದನ್ನು ವಸೂಲು ಮಾಡುವ ಹಕ್ಕನ್ನು ಅದಕ್ಕೆ ನೀಡಲಾಗಿಲ್ಲ. +ಆದಾಯ ತೆರಿಗೆ ಮತ್ತು ಕಾರ್ಪೋರೇಷನ್‌ತೆರಿಗೆ ಮೇಲಿನ ಸರ್‌ಚಾರ್ಜ್‌ ವಿಷಯದಲ್ಲಿ ಇದು ಅನ್ವಯವಾಗುತ್ತದೆ. +ಆದಾಯ ತೆರಿಗೆ ಫೆಡರಲ್‌ಉದ್ದೇಶಗಳಿಗಿರುವುದಾದರೂ ಅದನ್ನು ಪ್ರಾಂತ್ಯಗಳಲ್ಲಿ ವಿಧಿಸಬಹುದಾಗಿದ್ದಾಗ್ಯೂ ರಾಜ್ಯ ಸಂಸ್ಥಾನಗಳಲ್ಲಿ ವಿಧಿಸುವಂತಿಲ್ಲ. +ಆದಾಯ ತೆರಿಗೆಯ ಮೇಲಣ ಫೆಡರಲ್‌ ಸರ್‌ಚಾರ್ಜ್‌ ಅಥವಾ ಹೆಚ್ಚಿನ ತೆರಿಗೆಯನ್ನು ಮಾತ್ರ ರಾಜ್ಯ ಸಂಸ್ಥಾನದ ಪ್ರಜೆಗಳು ಕೊಡಬೇಕಾಗುತ್ತದೆ. +ಏಕೆಂದರೆ ಈ ಹೆಚ್ಚಿನ ತೆರಿಗೆಯನ್ನು ಪ್ರಾಂತ್ಯ ಮತ್ತು ರಾಜ್ಯಗಳೆರಡರಲ್ಲೂ ವಿಧಿಸಬಹುದಾಗಿದೆ. +ಆದರೆ ೧೩೮ (೩) ನೆಯ ವಿಭಾಗದ ಪ್ರಕಾರ ಸಂಯುಕ್ತ ಸರಕಾರಕ್ಕೆ ರಾಜ್ಯಗಳಲ್ಲಿ ಈ ತೆರಿಗೆಯನ್ನು ವಸೂಲು ಮಾಡುವ ಹಕ್ಕು ಇರುವುದಿಲ್ಲ. +ಇದನ್ನು ವಸೂಲು ಮಾಡುವ ಕೆಲಸವನ್ನು ಆಯಾ ರಾಜ್ಯದ ರಾಜನಿಗೆ ವಹಿಸಲಾಗಿದೆ. +ರಾಜನು ಈ ಹೆಚ್ಚುವರಿ ತೆರಿಗೆಯನ್ನು ತನ್ನ ಪ್ರಜೆಗಳಿಂದ ವಸೂಲು ಮಾಡದೆ ತಾನೇ ಒಂದು ಒಟ್ಟು ಮೊತ್ತದ ಹಣವನ್ನು ಕೊಡಲು ಒಪ್ಪಿದರೆ ಸಂಯುಕ್ತ ರಾಜ್ಯ ಸರಕಾರವು ಅದಕ್ಕೆ ಒಪ್ಪಲೇಬೇಕಾಗುತ್ತದೆ. +ಕಾರ್ಪೊರೇಷನ್‌ ತೆರಿಗೆಗೂ ಇದು ಅನ್ವಯಿಸುತ್ತದೆ. +ಸಂಯುಕ್ತ ರಾಜ್ಯವು ಇದನ್ನು ರಾಜ್ಯಗಳ ಪ್ರಜೆಗಳ ಮೇಲೆ ಹೇರಬಹುದು. +ಆದರೆ ತನ್ನ ಅಧಿಕಾರಿಗಳ ಮೂಲಕ ನೇರವಾಗಿ ವಸೂಲು ಮಾಡುವಂತಿಲ್ಲ. +೧೩೯ ನೆಯ ವಿಭಾಗದ ಪ್ರಕಾರ ಕಾರ್ಪೊರೇಷನ್‌ತೆರಿಗೆಯನ್ನು ವಸೂಲು ಮಾಡುವುದು ರಾಜ್ಯಗಳ ರಾಜರ ಹಕ್ಕಿನ ಕಾರ್ಯವಾಗಿದೆ. +ಒಕ್ಕೂಟ ವ್ಯವಸ್ಥೆಯ ಸ್ವರೂಪ(೧) ಸಂಯೋಗದ ಲಕ್ಷಣಗಳು :ಭಾರತ ಒಕ್ಕೂಟ ವ್ಯವಸ್ಥೆ ಇತರ ಸಂಯುಕ್ತ ರಾಜ್ಯಗಳೊಂದಿಗೆ ಯಾವ ರೀತಿಯಲ್ಲಿ ಹೋಲುತ್ತದೆ? +ಇದು ಕೇವಲ ಔಪಚಾರಿಕ ಪ್ರಶ್ನೆಯಾಗಿರದೆ ಅವಶ್ಯ ಪ್ರಶ್ನೆಯೂ ಆಗಿದೆ. +ಒಂದು ವಸ್ತುವಿನ ಸ್ಪರೂಪವನ್ನು ತಿಳಿದುಕೊಳ್ಳಲು ಹೋಲಿಕೆ ಮತ್ತು ವ್ಯತ್ಯಾಸಗಳನ್ನು ಗಮನಿಸುವ ವಿಧಾನ ಅತ್ಯಂತ ಸೂಕ್ತವಾಗಿದೆ. +ಹೋಲಿಕೆಯನ್ನು ದೃಷ್ಟಿಕೋನಗಳ ಆಧಾರದ ಮೇಲೆ ಮಾಡಬಹುದು. +ಆದರೆ ಈ ಬೃಹತ್ ಪ್ರಮಾಣದ ಹೋಲಿಕೆ ಕೈಗೊಳ್ಳಲು ಸಮಯವಿಲ್ಲ. +ಆದ್ದರಿಂದ ನಾನು ಕೇವಲ ನಾಲ್ಕು ಪ್ರಶ್ನೆಗಳನ್ನು ಮಾತ್ರ ಪರಿಶೀಲಿಸ ಬಯಸುತ್ತೇನೆ: +(೧) ಈ ಸಂಯುಕ್ತ ರಾಜ್ಯವು ನಿರಂತರವಾದ ಅಥವಾ ಶಾಶ್ವತವಾದ ಒಕ್ಕೂಟವಾಗಿದೆಯೇ? +(೨) ಘಟಕಗಳು ಸಂಯುಕ್ತ ಸರಕಾರದೊಡನೆ ಹೊಂದುವ ಸಂಬಂಧ ಯಾವ ರೀತಿಯದು? +(೩) ಘಟಕಗಳ ಪರಸ್ಪರ ಸಂಬಂಧ ಯಾವ ರೀತಿಯದು? +(೪) ಈ ಘಟಕಗಳ ಜನರಲ್ಲಿರುವ ಸಂಬಂಧಗಳು ಹೇಗಿರುತ್ತವೆ? +ಈ ಕಾಯ್ದೆಯನ್ವಯ ಸ್ಥಾಪಿಸಿರುವ ಒಕ್ಕೂಟ ವ್ಯವಸ್ಥೆ ಅಸ್ತಿತ್ವದಲ್ಲಿರುವವರೆಗೆ ಅದರಲ್ಲಿ ಭಾರತೀಯ ಸಂಸ್ಥಾನಗಳ ಸೇರ್ಪಡೆ ಶಾಶ್ವತ ಅಥವಾ ನಿರಂತರವಾಗಿರುವುದು ಎಂಬುದರಲ್ಲಿ ಸಂಶಯವಿಲ್ಲ. +ಒಕ್ಕೂಟ ಅಸ್ತಿತ್ವದಲ್ಲಿರುವಾಗ ಇವುಗಳಿಗೆ ಅದನ್ನು ಬಿಟ್ಟು ಹೋಗುವ ಅಥವಾ ಒಕ್ಕೂಟವನ್ನು ತ್ಯಜಿಸುವ ಹಕ್ಕು ಇರುವುದಿಲ್ಲ. +ಆದರೆ ಇದು ನಿಜವಾದ ಪ್ರಶ್ನೆಯಲ್ಲ. +ಕಾಯ್ದೆಯನ್ನು ಬದಲಾಯಿಸಿದಾಗಲೂ ಸಂಯುಕ್ತ ರಾಜ್ಯ ವ್ಯವಸ್ಥೆ ಮುಂದುವರಿಯುವುದೇ ಎಂಬುದು ನಿಜವಾದ ಪ್ರಶ್ನೆಯಾಗಿದೆ. +ಇದನ್ನೇ ಬೇರೆ ರೀತಿಯಲ್ಲಿ ಹೇಳಬೇಕೆಂದರೆ ಇದು ತ್ಯಜಿಸುವ ಹಕ್ಕು ಇರದಂತಹ ನಿರಂತರ ಒಕ್ಕೂಟವೇ ಅಥವಾ ತ್ಯಜಿಸುವ ಹಕ್ಕುಳ್ಳ ಒಂದು ಮೈತ್ರಿಕೂಟವೇ ಎಂಬುದು ಪ್ರಶ್ನೆಯಾಗಿದೆ. +ನನ್ನ ಅಭಿಪ್ರಾಯದಲ್ಲಿ ಭಾರತದ ಒಕ್ಕೂಟ ವ್ಯವಸ್ಥೆಯು ಒಂದು ನಿರಂತರವಾದ ಒಕ್ಕೂಟವಾಗಿರದೆ ಭಾರತದ ಸಂಸ್ಥಾನಗಳು ಅದನ್ನು ತ್ಯಜಿಸುವ ಹಕ್ಕನ್ನು ಹೊಂದಿರುತ್ತವೆ. +ಈ ವಿಷಯದಲ್ಲಿ ಅಮೆರಿಕ ಸಂಯುಕ್ತ ಸಂಸ್ಥಾನ ಮತ್ತು ಭಾರತದ ಸಂಯುಕ್ತ ರಾಜ್ಯ ಸಂವಿಧಾನಾತ್ಮಕ ಸುಧಾರಣೆಗಳು ೩೪೫ ಸಂವಿಧಾನಗಳು ಸಂಪೂರ್ಣ ಭಿನ್ನವಾಗಿವೆ. +ಅಮೆರಿಕದ ಸಂವಿಧಾನದಲ್ಲಿ ಬಿಟ್ಟುಹೋಗುವ ಅಥವಾ ತ್ಯಜಿಸುವ ಹಕ್ಕಿನ ಬಗೆ ಏನನ್ನೂ ಹೇಳಿಲ್ಲ. +ಏಕೆ ಹೇಳಿಲ್ಲವೆಂಬ ವಿಷಯವಾಗಿ ವಿವರಣೆ ಎರಡು ವಿಧದಲ್ಲಿದೆ; +ಇದು ಒಂದು ಮಾನ್ಯವಾದ ಸಂಗತಿಯಾದ್ದರಿಂದ ಈ ಹಕ್ಕನ್ನು ಕೊಡಲಾಗಿಲ್ಲ ಎಂಬುದು ಕೆಲವರ ಹೇಳಿಕೆ. +ಇತರರ ಪ್ರಕಾರ ಇದನ್ನು ಅಲ್ಲಗಳೆಯಲಾಗಿಲ್ಲವಾದ್ದರಿಂದ ಇದನ್ನು ಬಿಡಲಾಗಿಲ್ಲ. +ಈ ಹಕ್ಕನ್ನು ಮಾನ್ಯ ಮಾಡಿಲ್ಲವಾದ್ದರಿಂದ ಅದನ್ನು ಸಂವಿಧಾನದಿಂದ ಕೈಬಿಡಲಾಗಿದೆಯೇ ಎಂಬ ಪ್ರಶೆಗೆ ಸಂಬಂಧಿಸಿದ ವಿವಾದವೇ ಅಮೆರಿಕದ ೧೮೬೧ ರ ಆಂತರಿಕ ಯುದ್ಧಕ್ಕೆಡೆ ಮಾಡಿತು. +ಈ ಆಂತರಿಕಯುದ್ಧವು ಎರಡು ಪ್ರಮುಖ ತತ್ವಗಳನ್ನು ನಿರ್ಧರಿಸಿತು. +(೧) ಫೆಡರಲ್‌ ಸರಕಾರದ ಯಾವುದೇ ಕಾಯ್ದೆಯನ್ನು ಅನೂರ್ಜಿತಗೊಳಿಸುವ ಹಕ್ಕು ಯಾವ ರಾಜ್ಯಕ್ಕೂ ಇರುವುದಿಲ್ಲ. +(೨) ಒಕ್ಕೂಟದಿಂದ ಹೊರಹೋಗುವ ಹಕ್ಕು ಯಾವ ರಾಜ್ಯಕ್ಕೂ ಇರುವುದಿಲ್ಲ. +ಭಾರತ ಸಂಯುಕ್ತ ರಾಜ್ಯದಲ್ಲಿ ಒಕ್ಕೂಟದಿಂದ ಹೊರಹೋಗುವ ಹಕ್ಕನ್ನು ಸ್ಥಾಪಿಸಲು ಯುದ್ಧಕ್ಕೆ ಹೋಗುವ ಅವಶ್ಯಕತೆಇಲ್ಲ. +ಏಕೆಂದರೆ ಭಾರತದ ಸಂಸ್ಥಾನಗಳಿಗೆ ಕೆಲವು ತೊಂದರೆಗಳು ಸಂಭವಿಸಿದಲ್ಲಿ ಒಕ್ಕೂಟವನ್ನು ಬಿಟ್ಟುಹೋಗುವ ಹಕ್ಕನ್ನು ಸಂವಿಧಾನವು ಮಾನ್ಯ ಮಾಡಿದೆ. +ಯಾವುದು ನಿರಂತರ ಒಕ್ಕೂಟ ಮತ್ತುಯಾವುದು ಕೇವಲ ಮೈತ್ರಿಕೂಟ ಎಂಬ ಅಂಶವನ್ನು ಬ್ಲ್ಯಾಕ್‌ಸ್ಟನ್‌ ಅವರು ಇಂಗ್ಲೆಂಡ್‌ ಮತ್ತು ಸ್ಕಾಟ್‌ಲೆಂಡ್‌ಗಳ ಒಕ್ಕೂಟದ ಸ್ವರೂಪ ವಿವರಣೆಯಲ್ಲಿ ನೀಡಲಾಗಿರುವಷ್ಟು ಸ್ಪಷ್ಟವಾಗಿ ಇನ್ನೆಲ್ಲೂ ಹೇಳಲಾಗಿಲ್ಲ. +ಅವರ ಭಾಷೆಯಲ್ಲಿಯೇ ಹೇಳಬೇಕೆಂದರೆ, ಭಾರತ ಸಂಯುಕ್ತ ರಾಜ್ಯವು ಒಂದು ಸಂಸ್ಥಾಬದ್ಧ ಒಕ್ಕೂಟವಾಗಿಲ್ಲ. +ಏಕೆಂದರೆ ಒಂದು ಒಕ್ಕೂಟದಲ್ಲಿ ಒಪ್ಪಂದ ಮಾಡಿಕೊಳ್ಳುವ ಎರಡು ರಾಜ್ಯಗಳು ಪುನರುಜ್ಜೀವಗೊಳಿಸುವ ಅಧಿಕಾರವಿಲ್ಲದೆ ಸಂಪೂರ್ಣ ನಿರ್ನಾಮವಾಗಿ ಬಿಡುತ್ತದೆ. +ಭಾರತ ಸಂಯುಕ್ತ ರಾಜ್ಯವು ಪ್ರಭುತ್ವ ಮತ್ತುಭಾರತೀಯ ಸಂಸ್ಥಾನಗಳ ನಡುವೆ ಮಾಡಿಕೊಳ್ಳಲಾದ ಒಪ್ಪಂದವಾಗಿದೆ. +ಇದರಲ್ಲಿ ಯಾವುದೇ ಪಕ್ಷ ನಿರ್ನಾಮವಾಗುವುದಿಲ್ಲ. +ಆದರೆ ಎರಡು ಪಕ್ಷಗಳು ಕರಾರಿನ ಉಲ್ಲಂಘನೆಯಾದಲ್ಲಿ ತಮ್ಮ ಮುನ್ನಾಸ್ಥಿತಿಗೆ ಮರಳುವ ಹಕ್ಕನ್ನು ಕಾಯ್ದಿರಿಸಿಕೊಳ್ಳುತ್ತವೆ. +ಅಮೆರಿಕ ಸಂಯುಕ್ತ ಸಂಸ್ಥಾನದ ಸಂವಿಧಾನವು ಒಂದು ಒಪ್ಪಂದದ ರೂಪದಲ್ಲಿ ಜನಿಸಿ ಮುಂದೆ ಒಕ್ಕೂಟವಾಗಿ ರೂಪುಗೊಂಡಿತು. +ಭಾರತ ಸಂಯುಕ್ತ ರಾಜ್ಯವು ಒಪ್ಪಂದದ ರೂಪದಲ್ಲಿ ಜನಿಸಿ ಒಪ್ಪಂದವಾಗಿಯೇ ಉಳಿಯುವುದು. +ಭಾರತ ಸಂಯುಕ್ತ ರಾಜ್ಯದಲ್ಲಿ ಒಕ್ಕೂಟದ ಯಾವ ಲಕ್ಷಣಗಳೂ ಕಂಡುಬರುವುದಿಲ್ಲ. +ಆದರೆ ಒಂದು ಒಪ್ಪಂದದ ಎಲ್ಲಾ ಲಕ್ಷಣಗಳನ್ನು ಹೊಂದಿದೆ ಎಂಬುದು ವಿವಾದಾತೀತವಾಗಿದೆ. +ಒಂದು ಒಕ್ಕೂಟದ ವಿಶಿಷ್ಟ ಲಕ್ಷಣಗಳನ್ನು ಡೇನಿಯಲ್‌ ವೆಬ್‌ಸ್ಟರ್‌ ಅಮೆರಿಕದ ಸಂವಿಧಾನ ಕುರಿತ ತಮ್ಮ ಭಾಷಣವೊಂದರಲ್ಲಿ ಚೆನ್ನಾಗಿ ವಿವರಿಸುತ್ತಾ ಹೀಗೆ ಹೇಳಿರುತ್ತಾರೆ. +ಸಂವಿಧಾನದಲ್ಲಿ 'ಸಂಯುಕ್ತ ಸಂಸ್ಥಾನಗಳ ಸರಕಾರ' ಎಂದು ಸ್ಥಾಪಿಸಲಾದ ರಾಜಕೀಯ ವ್ಯವಸ್ಥೆಯ ಪ್ರಸ್ತಾಪವಿದೆ. +ಸಾರ್ವಭೌಮ ರಾಜ್ಯಗಳ ನಡುವಣ ಸಂಘ ಅಥವಾ ಸಂಧಿಯನ್ನು ಸರಕಾರ ಎಂದು ಕರೆಯುವುದು ಭಾಷೆಯ ಮೇಲೆ ಎಸಗಿದ ವಿಚಿತ್ರ ಅತ್ಯಾಚಾರವೆನಿಸುವುದಿಲ್ಲವೆ ? +ಒಂದು ರಾಜ್ಯದ ಸರಕಾರವೆಂದರೆ ರಾಜಕೀಯ ಅಧಿಕಾರ ಹೊಂದಿರುವ ವ್ಯವಸ್ಥೆಯಾಗಿದೆ. +ಹಿಂದು ಸರಕಾರ, ಸಂಘ ಮತ್ತು ಒಪ್ಪಂದದ ನಡುವಣ ವ್ಯಾಪಕ ಮತ್ತು ಸ್ಪಷ್ಟ ವ್ಯತ್ಯಾಸವೆಂದರೆ ಸರಕಾರವು ಒಂದು ರಾಜಕೀಯ ವ್ಯವಸ್ಥೆಯಾಗಿದೆ. +ಅದು ತನ್ನದೇ ಆದ ಇಚ್ಛೆಯನ್ನು ಹೊಂದಿದ್ದು ತನ್ನ ಉದ್ದೇಶಗಳನ್ನು ಈಡೇರಿಸುವ ಅಧಿಕಾರ ಮತ್ತು ಸಾಮರ್ಥ್ಯವನ್ನೂ ಹೊಂದಿರುತ್ತದೆ. +ಆದರೆ ಪ್ರತಿಯೊಂದು ಒಪ್ಪಂದವೂ ತನ್ನ ಗೊತ್ತುವಳಿಗಳ ಕಾರ್ಯಾಚರಣೆಗೆ ಇನ್ನೊಂದು ವ್ಯವಸ್ಥೆಯ ಅಧಿಕಾರವನ್ನು ಅವಲಂಬಿಸಬೇಕಾಗುತ್ತದೆ. +ಸಾರ್ವಭೌಮ ಸಮುದಾಯಗಳ ನಡುವಣ ಒಪ್ಪಂದದಲ್ಲಿಯೂ ಸಹ ಈ ಪರಿಸ್ಥಿತಿ ಉಂಟಾಗುವುದಾದಾಗ್ಯೂ ಅಂತಹ ಸಂದರ್ಭಗಳ ನಡುವಣ ಒಪ್ಪಂದಕ್ಕೊಳಗಾದ ಒಂದು ಪಕ್ಷದ ಬಲದ ವಿರುದ್ಧ ಇನ್ನೊಂದು ಪಕ್ಷದ ಬಲ ಎಂದರೆ ಅದು ಯುದ್ಧದ ಬಲವೇ ಆಗಿರುತ್ತದೆ. +ಆದರೆ ಒಂದು ಸರಕಾರವು ತನ್ನ ನಿರ್ಣಯಗಳನ್ನು ತನ್ನ ಸ್ವಂತ ಪರಮಾಧಿಕಾರದ ಮೂಲಕವೇ ಕಾರ್ಯಗತಗೊಳಿಸುತ್ತದೆ. +ತನ್ನದೇ ಗೊತ್ತುವಳಿಗಳಿಗೆ ವಿಧೇಯತೆಯನ್ನು ಒತ್ತಾಯಿಸುವುದು ಯುದ್ಧವೆನಿಸುವುದಲ್ಲ. +ಇದನ್ನು ವಿರೋಧಿಸುವ ಹಕ್ಕನ್ನು ಹೊಂದಿರುವ ಯಾವುದೇ ವಿರೋಧಿ ಪಕ್ಷವನ್ನು ಅದು ನಿರೀಕ್ಷಿಸುವುದಿಲ್ಲ. + ತನ್ನ ಇಂಗಿತವನ್ನು ತಾನೇ ಜಾರಿಗೊಳಿಸುವ ಅಧಿಕಾರವನ್ನು ಅದು ಅವಲಂಬಿಸುತ್ತದೆ. +ಮತ್ತು ಅದು ಇಂತಹ ಅಧಿಕಾರವನ್ನು ಕಳೆದುಕೊಂಡಾಕ್ಷಣವೇ ಅದು ಸರಕಾರವಾಗಿ ಉಳಿಯುವುದಿಲ್ಲ.” +ಈ ಹಿನ್ನೆಲೆಯಲ್ಲಿ ಈ ಕೆಳಗಿನ ಅಂಶಗಳನ್ನು ಗಮನಿಸಬೇಕು. +೧೯೩೫ ರ ಕಾಯ್ದೆಯು ಬ್ರಿಟಿಷ್‌ಭಾರತ ಮತ್ತು ಭಾರತೀಯ ಸಂಸ್ಥಾನಗಳಿಗಾಗಿ ಒಕ್ಕೂಟವನ್ನು ವಿಧಿಪೂರ್ವಕವಾಗಿ ಸ್ಥಾಪಿಸುವುದಿಲ್ಲ. +ಈ ಕಾಯ್ದೆಯು ಬ್ರಿಟಷ್‌ ಭಾರತಕ್ಕಾಗಿ ಮಾತ್ರ ಸಂಯುಕ್ತ ಸರಕಾರವನ್ನು ವಿಧಿವತ್ತಾಗಿ ಸ್ಥಾಪಿಸುತ್ತದೆ. +ಪ್ರತಿಯೊಂದು ಸಂಸ್ಥಾನವು ಸೇರ್ಪಡೆಯ ದಸ್ತಾವೇಜನ್ನು ಸ್ವೀಕರಿಸಿದಾಗ ಮಾತ್ರ ಸಂಯುಕ್ತ ಸರಕಾರ ಸಂಸ್ಥಾನಗಳ ಸರಕಾರವೆನಿಸುವುದು. +ಮೇಲಾಗಿ ಸಂಸ್ಥಾನಗಳು ಸಂಯುಕ್ತ ಸರಕಾರಕ್ಕೆ ಸದಾಕಾಲ ಬದ್ಧವಾಗಿರುವುದಿಲ್ಲ ಎಂಬ ವಿಷಯವನ್ನೂ ಗಮನಿಸಿ. +ಅದರ ಬಾಧ್ಯತೆ ಕೆಲವು ಸಂದರ್ಭಗಳಲ್ಲಿ ಮಾತ್ರ ಮುಂದುವರಿಯುವುದು. +ಎಲ್ಲಿಯವರೆಗೆ ಈ ಕಾಯ್ದೆಯಲ್ಲಿನ ಕೆಲವು ನಿಬಂಧನೆಗಳು ಬದಲಾಗುವುದಿಲ್ಲವೋ ಅಲ್ಲಿಯವರೆಗೆ ಮಾತ್ರ ಅದು ಮುಂದುವರಿಯುವುದು. +ಮೂರನೆಯದಾಗಿ,ಯಾವ ನಿಬಂಧನೆಗಳ ಬದಲಾವಣೆಗೆ ಅನುಮತಿ ಇದೆಯೋ ಈ ನಿಬಂಧನೆಗಳು ಬದಲಾದ ನಂತರ ಸಂಸ್ಥಾನಗಳು ಒಪ್ಪಿಗೆ ನೀಡಿದರೆ ಮಾತ್ರ ಅದು ಬಾಧ್ಯವಾಗುವುದು. +ಈ ಎಲ್ಲಾ ಅಂಶಗಳು ಭಾರತ ಒಕ್ಕೂಟ ವ್ಯವಸ್ಥೆಯು ಒಂದು ಒಪ್ಪಂದದ ರೂಪದಲ್ಲಿದೆಯೇ ಹೊರತು ಅದು ನಿರಂತರವಾದ ಒಕ್ಕೂಟವಲ್ಲ ಎಂಬ ಅಂಶವನ್ನು ಸ್ಪಷ್ಟಪಡಿಸುತ್ತವೆ. +ಅವಶ್ಯ ಬಿದ್ದಲ್ಲಿ ಒಡೆದುಹೋಗುವ ಮತ್ತು ತಮ್ಮ ಪೂರ್ವ ಸ್ಥಿತಿಗೆ ಮರಳುವ ಹಕ್ಕು ಒಪ್ಪಂದದ ತಿರುಳಾಗಿದೆ. +ಆದ್ದರಿಂದ ಈ ವಿಷಯದಲ್ಲಿ ಭಾರತ ಒಕ್ಕೂಟ ವ್ಯವಸ್ಥೆಯ ಅಮೆರಿಕ ಸಂಯುಕ್ತ ಸಂಸ್ಥಾನ,ಕೆನಡಾ ಮತ್ತು ಆಸ್ಟ್ರೇಲಿಯಾದ ಸಂಯುಕ್ತ ರಾಜ್ಯಗಳಿಂದ ಭಿನ್ನವಾಗಿದೆ. +ಭಾರತದ ಸಂವಿಧಾನದಲ್ಲಿ ಸಂವಿಧಾನ ತಿದ್ದುಪಡಿಯಾದ ಪಕ್ಷದಲ್ಲಿ ಒಕ್ಕೂಟವನ್ನು ಬಿಟ್ಟು ಹೋಗುವ ಹಕ್ಕನ್ನು ಮಾನ್ಯಮಾಡಲಾಗಿರುವುದರಿಂದ ಮತ್ತು ಅಮೆರಿಕ ಸಂವಿಧಾನದಲ್ಲಿ ಸಂವಿಧಾನವನ್ನು ಯಾವುದೇ ರಾಜ್ಯದ ಇಚ್ಛೆಯ ವಿರುದ್ಧ ಬದಲಾಯಿಸಿದರೂ ಸಹ ಒಕ್ಕೂಟವನ್ನು ಬಿಟ್ಟು ಹೋಗುವ ಹಕ್ಕನ್ನು ಮಾನ್ಯಮಾಡಲಾಗಿಲ್ಲವಾದ್ದರಿಂದ ಈ ವಿಷಯದಲ್ಲಿ ಭಾರತ ಸಂವಿಧಾನ ಮತ್ತು ಅಮೆರಿಕ ಸಂವಿಧಾನದಲ್ಲಿ ವ್ಯತ್ಯಾಸವಿದೆ. +ಆಸ್ಟ್ರೇಲಿಯ ಮತ್ತು ಕೆನಡಾದಲ್ಲಿ ಈ ಪ್ರಶ್ನೆ ಉದ್ಭವಿಸುವುದೇ ಇಲ್ಲ. +ಉದ್ಭವಿಸಿದರೂ ಅದನ್ನು ಬಗೆಹರಿಸಲು ಆಂತರಿಕ ಯುದ್ದ ಅನಾವಶ್ಯಕ. +ಈ ಎರಡು ಸಂಯುಕ್ತ ರಾಜ್ಯಗಳಲ್ಲಿ ಸಾರ್ವಭೌಮತ್ವವು ಇದ್ದು ಅದನ್ನು ಫೆಡರಲ್‌ ಸರಕಾರವೇ ಚಲಾಯಿಸಲಿ ಅಥವಾ ಘಟಕ ಸರಕಾರಗಳೇ ಚಲಾಯಿಸಲಿ, ಅದು ಪ್ರಭುತ್ವಕ್ಕೆ ಸೇರಿದ್ದು. +ಸಂಯುಕ್ತ ರಾಜ್ಯದ ಉಳಿವು ಅಳಿವು ಬ್ರಿಟನ್ನಿನ ದೊರೆ ಮತ್ತು ಸಂಸತ್ತಿಗೆ ಸೇರಿದ ವಿಷಯ. +ಸಂಯುಕ್ತ ರಾಜ್ಯವಾಗಲೀ ಘಟಕಗಳಾಗಲೀ ಈ ಪ್ರಶ್ನೆಯನ್ನು ಸಂಸತ್ತಿನ ಸಮ್ಮತಿ ಇಲ್ಲದೇ ನಿರ್ಣಯಿಸುವಂತಿಲ್ಲ. +ಒಂದು ವೇಳೆ ವಿಸರ್ಜನೆಯಾದರೆ ಅದು ಕೇವಲ ಪ್ರಭುತ್ವದ ಸಾರ್ವಭೌಮತ್ವವನ್ನು ಹಿಂದಕ್ಕೆ ತೆಗೆದುಕೊಂಡಂತೆ ಮತ್ತು ಅದರ ಪುನರ್‌ ವಿತರಣೆಯ ಅಧಿಕಾರ ಪ್ರಭುತ್ವಕ್ಕೆ ಇದ್ದೇ ಇದೆ. +ವಿಸರ್ಜನೆ ವಿಧಿವತ್ತಾಗಿರಬಹುದು ಮತ್ತು ಅದು ಕಾನೂನಿಗೆ ವಿರುದ್ಧವಾದ ರೀತಿಯಲ್ಲಿ ಸಂಭವಿಸಿದರೂ ಸಾರ್ವಭೌಮತ್ವವು ಪ್ರಭುತ್ವಕ್ಕೆ ಸೇರಿರುವುದರಿಂದ ಅದು ಅದನ್ನು ಸಿಡಿದೆದ್ದ ಘಟಕಗಳಿಗೂ ಕೊಡಬಹುದು. +ಭಾರತ ಸಂಯುಕ್ತ ರಾಜ್ಯವು ಬ್ರಿಟಿಷ್‌ ಭಾರತದ ಪ್ರಾಂತ್ಯಗಳಿಂದ ಮಾತ್ರಕೂಡಿದ್ದಾಗಿದ್ದರೆ ಇದೇ ಪರಿಸ್ಥಿತಿ ಭಾರತಕ್ಕೂ ಅನ್ವಯವಾಗುತ್ತಿತ್ತು. +ಒಕ್ಕೂಟ ಬಿಟ್ಟುಹೋಗುವ ಪ್ರಶ್ನೆಯೇ ಉದ್ಭವಿಸುತ್ತಿರಲಿಲ್ಲ. +ಪ್ರಭುತ್ವದ ವಿಚಾರದಲ್ಲಿ ಪ್ರಾಂತ್ಯಗಳಿಗೆ ಯಾವ ಸ್ಥಾನ ಉಚಿತವೆಂದನಿಸುತ್ತಿತ್ತೋ ಆಸ್ಥಾನದಲ್ಲಿ ಅವು ಇರಬೇಕಾಗುತ್ತಿತ್ತು. +ಭಾರತೀಯ ಸಂಸ್ಥಾನಗಳ ಪ್ರವೇಶದಿಂದ ಭಾರತದ ಒಕ್ಕೂಟ ವ್ಯವಸ್ಥೆಯು ಇತರ ಸಂಯುಕ್ತ ರಾಜ್ಯಗಳಿಂದ ಭಿನ್ನವಾಗಿದೆ. +ಭಾರತೀಯ ಸಂಸ್ಥಾನಗಳ ಪ್ರವೇಶ ಎಲ್ಲಾ ಸಂದರ್ಭಗಳಲ್ಲಿ ಮತ್ತು ಸದಾ ಕಾಲದ್ದಾಗಿಲ್ಲ. +ಅವುಗಳ ಪ್ರವೇಶ ಕೆಲವು ಕರಾರುಗಳು ಮತ್ತು ಷರತ್ತುಗಳನ್ನವಲಂಬಿಸಿದೆ. +ಈ ಪರಿಸ್ಥಿತಿಯಲ್ಲಿ ಭಾರತದ ಸಂಯುಕ್ತ ರಾಜ್ಯ ನಿರಂತರವಾದ ಒಕ್ಕೂಟವೆನಿಸುವುದಿಲ್ಲ. +ಭಾರತೀಯ ಸಂಸ್ಥಾನಗಳು ಪೂರ್ವಭಾವಿಯಾಗಿ ವಿವಾಹ ವಿಚ್ಛೇದನದ ಕರಾರುಗಳು ಒಪ್ಪಿತವಾಗದೇ ಭಾರತೀಯ ಪ್ರಾಂತ್ಯಗಳೊಡನೆ ವಿವಾಹ ಸಂಬಂಧ ಬೆಳೆಸುವುದಿಲ್ಲ. +ಅವುಗಳ ಸ್ಥಿತಿಯೇ ಹೀಗಿದೆ. +ಆದ್ದರಿಂದ ಭಾರತದ ಸಂಯುಕ್ತ ರಾಜ್ಯವು ಒಂದು ಒಪ್ಪಂದವೇ ಹೊರತು ಒಕ್ಕೂಟವಲ್ಲ. +(೨) ಒಕ್ಕೂಟ ವ್ಯವಸ್ಥೆಯೊಂದಿಗೆ ಘಟಕಗಳ ಸಂಬಂಧ ಪ್ರತಿಯೊಂದು ಪ್ರತ್ಯೇಕ ಘಟಕವು ಬಹುಮಟ್ಟಿಗೆ ಸಮಾನ ರಾಜಕೀಯ ಹಕ್ಕುಗಳನ್ನು ಹೊಂದಿರುವುದು ಸಂಯುಕ್ತ ರಾಜ್ಯಗಳ ಸಾಮಾನ್ಯ ಲಕ್ಷಣ. +ವಿವಿಧ ಘಟಕಗಳು ಸಮಾನ ಅಂತಸ್ತನ್ನು ಹೊಂದಿರುವುದು ಒಂದು ಅವಶ್ಯಕತೆ. +ಘಟಕಗಳ ಅಂತಸ್ತಿನಲ್ಲಿ ಅಸಮಾನತೆಯನ್ನುಂಟು ಮಾಡಿದರೆ ಪ್ರಬಲಪಾಲುದಾರರಾಗುವಂತಹ ಅಧಿಕಾರವನ್ನು ಅವಕ್ಕೆ ಕೊಟ್ಟಂತಾಗುತ್ತದೆ. +ಒಂದು ಸಂಯುಕ್ತ ರಾಜ್ಯದಲ್ಲಿ ಪ್ರಬಲ ಪಾಲುದಾರರ ಅಸ್ತಿತ್ವವು ಡೈಸೆಯವರ ಅಭಿಪ್ರಾಯದಲ್ಲಿ ಎರಡು ಅಪಾಯಗಳಿಂದ ಕೂಡಿದುದಾಗಿರುತ್ತದೆ. +ಮೊದಲನೆಯದಾಗಿ, ಪ್ರಬಲ ಪಾಲುದಾರರು ಸಂಯುಕ್ತ ಸಮಾನತೆಯ ತತ್ವಕ್ಕೆ ಅಸಂಗತವಾದ ಅಧಿಕಾರವನ್ನು ಚಲಾಯಿಸಬಹುದು. +ಎರಡನೆಯದಾಗಿ ಇದರಿಂದ ಸಂಯುಕ್ತ ರಾಜ್ಯದೊಳಗಡೆ ಪ್ರಧಾನ ಘಟಕಗಳು ಮತ್ತು ಅಧೀನ ಘಟಕಗಳು ಇಲ್ಲವೆ ಅಧೀನ ಘಟಕಗಳು ಮತ್ತು ಪ್ರಧಾನ ಘಟಕಗಳ ಒಂದು ಸಂಯೋಜನೆ ಸೃಷ್ಟಿಯಾಗಬಹುದು. +ಇಂತಹ ಅನಾರೋಗ್ಯಕರ ಪರಿಸ್ಥಿತಿಯನ್ನು ತಡೆಗಟ್ಟಲು ಎಲ್ಲಾ ಸಂಯುಕ್ತ ರಾಜ್ಯಗಳು ಸಮಾನ ಅಂತಸ್ತಿನ ತತ್ವವನ್ನು ಪಾಲಿಸುತ್ತದೆ. +ಭಾರತದ ಒಕ್ಕೂಟ ವ್ಯವಸ್ಥೆಯಲ್ಲಿ ಈ ತತ್ವವನ್ನು ಎಷ್ಟರ ಮಟ್ಟಿಗೆ ಪಾಲಿಸಲಾಗಿದೆ ? +(ಅ) ಶಾಸನ ರೂಪಿಸುವ ಅಂಶಶಾಸನ ರೂಪಿಸುವ ಉದ್ದೇಶಕ್ಕಾಗಿ ಈ ಕಾರ್ಯವನ್ನು ಮೂರು ಭಾಗಗಳಾಗಿ ವಿಭಜಿಸಿರುವುದು ನಿಮಗೆ ತಿಳಿದ ಸಂಗತಿ. +ಫೆಡರಲ್‌ ಅಥವಾ ಒಕ್ಕೂಟ ರಾಜ್ಯಪಟ್ಟಿ, ಕನ್‌ಕರೆಂಟ್‌ ಅಥವಾ ಸಮಾನಾಧಿಕಾರ ಪಟ್ಟಿ ಮತ್ತು ಪ್ರಾಂತೀಯ ಪಟ್ಟಿ ಎಂಬ ಮೂರು ಪಟ್ಟಿಗಳಿವೆ. +ಶಾಸನ ರೂಪಿಸುವ ಉದ್ದೇಶಕ್ಕಾಗಿ ಫೆಡರಲ್‌ ಪಟ್ಟಿಯಲ್ಲಿ ೫೯ ವಿಷಯಗಳಿದ್ದು, ಸಮಾನಾಧಿಕಾರ ಪಟ್ಟಿಯಲ್ಲಿ ೩೬ ವಿಷಯಗಳಿವೆ. +ಇಲ್ಲಿ ಗಮನಿಸಬೇಕಾದ ಮೊದಲನೆಯ ವಿಷಯವೆಂದರೆ ಪ್ರಾಂತ್ಯಗಳು ಈ ಎರಡೂ ಪಟ್ಟಿಗಳಿಗೆ ಬದ್ಧವಾಗಿವೆ. +ಒಕ್ಕೂಟದ ಅಧಿಕಾರ ವ್ಯಾಪ್ತಿಗೆ ಬದ್ಧರಾಗುವುದಕ್ಕಾಗಿ ಪ್ರಾಂತ್ಯಗಳು ಈ ಎರಡೂ ಪಟ್ಟಿಗಳಿಂದ ವಿಷಯಗಳನ್ನು ತಮ್ಮ ಇಚ್ಛೆಯಂತೆ ಆರಿಸಿಕೊಳ್ಳುವಂತಿಲ್ಲ. +ಈ ಎರಡೂ ಪಟ್ಟಿಗಳಿಂದ ಬಿಡುಗಡೆಹೊಂದಲು ಕರಾರು ಮಾಡಿಕೊಳ್ಳುವ ಸ್ವಾತಂತ್ರ್ಯವೂ ಪ್ರಾಂತ್ಯಗಳಿಗಿಲ್ಲ. +ಒಕ್ಕೂಟಕ್ಕೆ ಪ್ರವೇಶ ಪಡೆಯುವ ಸಂಸ್ಥಾನದ ಸ್ಥಾನ ಭಿನ್ನವಾಗಿದೆ. +ಪ್ರವೇಶ ಪಡೆಯುವ ಸಂಸ್ಥಾನವು ಸಮಾನಾಧಿಕಾರ ಪಟ್ಟಿಯಿಂದ ಸಂಪೂರ್ಣವಾಗಿ ಹೊರಗುಳಿಯಬಹುದು. +೬(೨) ನೆಯ ವಿಭಾಗದ ಪ್ರಕಾರ ಭಾರತೀಯ ಸಂಸ್ಥಾನದ ರಾಜನು ಸಮಾನಾಧಿಕಾರ ಪಟ್ಟಿಯಲ್ಲಿ ಸೇರಿದ ವಿಷಯಗಳಲ್ಲಿಯೂ ಒಕ್ಕೂಟಕ್ಕೆ ಸೇರಲು ಸಮ್ಮತಿಸಲು ಅಭ್ಯಂತರವಿಲ್ಲ. +ಆದರೆ ಹೀಗೆ ಮಾಡಲೇಬೇಕೆಂಬ ನಿರ್ಬಂಧವಿಲ್ಲ. +ಒಕ್ಕೂಟದಲ್ಲಿ ಪ್ರವೇಶ ಪಡೆಯಲು ಇಂತಹ ಒಪ್ಪಂದ ಪೂರ್ವಭಾವಿ ಕರಾರಲ್ಲ. +ಫೆಡರಲ್‌ ಪಟ್ಟಿಯ ವಿಷಯದಲ್ಲಿ ಸಂಸ್ಥಾನದ ರಾಜರು ಫೆಡರಲ್‌ ಶಾಸನ ಸಭೆಯ ಅಧಿಕಾರ ವ್ಯಾಪ್ತಿಗೆ ಒಳಪಡುವ ವಿಷಯದಲ್ಲಿ ಯಾವ ಸಂಶಯವೂ ಇಲ್ಲ. +ಆದರೆ ಸಂಯುಕ್ತ ರಾಜ್ಯಕ್ಕೆ ಅವನ ಬಾಧ್ಯತೆ ಸೇರ್ಪಡೆಯ ದಸ್ತಾವೇಜಿನಲ್ಲಿ ನಮೂದಿಸಲಾದ ವಿಷಯಗಳಿಗೆ ಸೀಮಿತವಾಗುತ್ತದೆ. +ನಾನು ಈಗಾಗಲೇ ತಿಳಿಸಿರುವಂತೆ ಫೆಡರಲ್‌ ಪಟ್ಟಿಯಲ್ಲಿ ೫೯ ವಿಷಯಗಳು ಸೇರಿವೆ. +ಸಂಯುಕ್ತ ರಾಜ್ಯವನ್ನು ಪ್ರವೇಶಿಸಲು ರಾಜನು ಈ ಎಲ್ಲಾ ವಿಷಯಗಳನ್ನು ಒಪ್ಪಿಕೊಳ್ಳಬೇಕೆಂಬ ನಿರ್ಬಂಧವೇನೂ ಇಲ್ಲ. +ಅವನು ಕೆಲವು ವಿಷಯಗಳನ್ನಾಗಲೀ ಅಥವಾ ಎಲ್ಲಾ ವಿಷಯಗಳನ್ನಾಗಲಿ ಒಪ್ಪಿಕೊಳ್ಳಬಹುದು. +ಒಬ್ಬ ರಾಜನು ಒಂದು ವಿಷಯವನ್ನು ಒಪ್ಪಿಕೊಳ್ಳಬಹುದು ಮತ್ತು ಇನ್ನೊಬ್ಬ ರಾಜನೂ ಇನ್ನೊಂದು ವಿಷಯವನ್ನುಒಪ್ಪಿಕೊಳ್ಳಬಹುದು. +ಒಕ್ಕೂಟದಲ್ಲಿ ಪ್ರವೇಶಿಸ ಬಯಸುವ ಪ್ರತಿಯೊಬ್ಬ ರಾಜನು ಕೆಲವು ವಿಷಯಗಳನ್ನುಒಪ್ಪಿಕೊಳ್ಳಲೇಬೇಕೆಂಬ ಕಡ್ಡಾಯವನ್ನು ಸಂವಿಧಾನ ವಿಧಿಸಿಲ್ಲ. +ಆದ್ದರಿಂದ ಒಕ್ಕೂಟವು ತನ್ನ ಶಾಸನಾಧಿಕಾರದಲ್ಲಿ ಬ್ರಿಟಿಷ್‌ ಭಾರತ ಮತ್ತು ಪ್ರಾಂತ್ಯಗಳ ಮೇಲೆ ಏಕರೂಪವಾದ ಮತ್ತು ಸಂಪೂರ್ಣ ಪ್ರಭಾವ ಹೊಂದಿದ್ದರೂ ವಿವಿಧ ಸಂಸ್ಥಾನಗಳ ಮೇಲೆ ವಿವಿಧ ರೀತಿಯ ಪರಿಣಾಮ ಹೊಂದಿದೆ. +ಒಬ್ಬ ರಾಜನು ಒಂದು ವಿಷಯಕ್ಕೆ ಸಂಬಂಧಿಸಿದಂತೆ ಮಾತ್ರ, ಒಕ್ಕೂಟ ಸೇರಿದ್ದರೂ ಅವನು ಫೆಡರಲ್‌ಪಟ್ಟಿಯಲ್ಲಿರುವ ಎಲ್ಲಾ ವಿಷಯಗಳಲ್ಲಿ ಸೇರಿರುವ ರಾಜ್ಯದಷ್ಟೇ ಮುಖ್ಯವಾಗಿರುತ್ತಾನೆ. +ಪ್ರಾಂತ್ಯ ಪಟ್ಟಿಯಲ್ಲಿರುವ ವಿಷಯಗಳಲ್ಲಿ ಪ್ರಾಂತ್ಯಗಳು ಸಂಪೂರ್ಣ ಮತ್ತು ಪ್ರತ್ಯೇಕ ಶಾಸನಾಧಿಕಾರ ಹೊಂದಿವೆ. +ಸಂಸ್ಥಾನಗಳಿಗಾಗಿಯೇ ಪ್ರತ್ಯೇಕ ಸಂಸ್ಥಾನ ಪಟ್ಟಿಯನ್ನೂ ಕಾಯ್ದೆಯಲ್ಲಿ ಕೊಡಲಾಗಿಲ್ಲ. +ಅಂತಹ ಪಟ್ಟಿಯನ್ನು ಕೊಡುವುದೂ ಸಾಧ್ಯವಿಲ್ಲ. +ಆದರೆ ಅದರಲ್ಲಿ ಸಂಸ್ಥಾನಗಳು ಒಕ್ಕೂಟಕ್ಕೆ ಒಪ್ಪಿಸದೇ ಇರುವ ವಿಷಯಗಳು ಸೇರಿವೆ ಎಂದು ಹೇಳಬಹುದು. +ಪ್ರಾಂತ್ಯ ಶಾಸನ ಸಭೆಗಳ ಪ್ರತ್ಯೇಕ ಅಧಿಕಾರದ ಬಗ್ಗೆ ಹೇಳಬೇಕೆಂದರೆ, ೧ಂ೨ ನೆಯ ವಿಭಾಗದನ್ವಯ ಗವರ್ನರ್‌-ಜನರಲ್‌ರು ಯುದ್ಧದಿಂದ ಭಾರತದ ಭದ್ರತೆಗೆ ಅಪಾಯವಿರುವ ಕಾರಣ ಅಥವಾ ಆಂತರಿಕ ಗಲಭೆಗಳಿಂದ ಗಂಭೀರ ತುರ್ತು ಪರಿಸ್ಥಿತಿ ಘೋಷಿಸಿದ ಸಂದರ್ಭದಲ್ಲಿ ಸಂಯುಕ್ತ ರಾಜ್ಯದ ಶಾಸಕಾಂಗವು ಪ್ರಾಂತ್ಯ ಪಟ್ಟಿಯಲ್ಲಿ ಸೇರಿದ ವಿಷಯದಲ್ಲಿಯೂ ತನ್ನದೇ ಶಾಸನ ಮಾಡಬಹುದು. +ಭಾರತೀಯ ಸಂಸ್ಥಾನಗಳ ಸಂಬಂಧವಾಗಿ ಇಂತಹ ಯಾವುದೇ ನಿಬಂಧನೆ ಇರುವುದಿಲ್ಲ. +ಭಾರತಕ್ಕೆ ಅಪಾಯ ಒಡ್ಡುವಂತಹ ಗಂಭೀರ ತುರ್ತುಪರಿಸ್ಥಿತಿ ಒಂದು ಪ್ರಾಂತ್ಯದ ಪ್ರದೇಶದಲ್ಲಿ ಉದ್ಭವಿಸುವಂತೆ ಸಂಸ್ಥಾನದಲ್ಲಿ ಉಂಟಾಗಬಹುದು. +ತುರ್ತುಪರಿಸ್ಥಿತಿಯಲ್ಲಿ ಸಂಯುಕ್ತ ರಾಜ್ಯ ಶಾಸಕಾಂಗವು ಪ್ರಾಂತ್ಯದಲ್ಲಿ ಪ್ರವೇಶ ಮಾಡಿ ಶಾಸನ ಮಾಡಲು ಬರುವಂತೆ ಸಂಸ್ಥಾನಗಳಲ್ಲಿ ಪ್ರವೇಶ ಮಾಡಿ ಶಾಸನ ಮಾಡುವಂತಿಲ್ಲ ಎಂಬುದು ಇದರ ಅರ್ಥ. +(ಬ) ಕಾರ್ಯಾಂಗದ ವಿಷಯ :ಕಾರ್ಯಾಂಗದ ವಿಷಯದಲ್ಲಿಯೂ ರಾಜ್ಯಗಳು ಮತ್ತು ಪ್ರಾಂತ್ಯಗಳು ಒಂದೇ ಸ್ಥಾನದಲಿಲ್ಲ. +೮ನೆಯ ವಿಭಾಗದಲ್ಲಿ ಒಕ್ಕೂಟದ ಕಾರ್ಯಾಂಗದ ಅಧಿಕಾರ ವ್ಯಾಪ್ತಿಯನ್ನು ವಿವರಿಸಲಾಗಿದೆ. +ಈ ಅಧಿಕಾರವನ್ನು ೭ ನೆಯ ವಿಭಾಗದ ಪ್ರಕಾರ ಮಹಾ ದೊರೆಯ ಪರವಾಗಿ ಗವರ್ನರ್‌-ಜನರಲ್‌ಅವರು ಚಲಾಯಿಸುತ್ತಾರೆ. +ಉಪವಿಭಾಗ (ಅ) ದ (೧) ನೆಯ ಉಪಖಂಡದ ಪ್ರಕಾರ ಒಕ್ಕೂಟದಕಾರ್ಯಾಂಗಾಧಿಕಾರವು ಶಾಸಕಾಂಗಕ್ಕೆ ಶಾಸನಾಧಿಕಾರವಿರುವ ಎಲ್ಲಾ ವಿಷಯಗಳಿಗೂ ಅನ್ವಯಿಸುತ್ತದೆ. +ಆದರೆ ಈ ವಿಭಾಗ ಪ್ರಾಂತ್ಯಗಳಿಗೆ ಅನ್ವಯಿಸುವ ರೀತಿಯಲ್ಲಿ ಸಂಸ್ಥಾನಗಳಿಗೆ ಅನ್ವಯಿಸುವುದಿಲ್ಲ. +ಪ್ರಾಂತ್ಯಗಳಿಗೆಸಂಬಂಧಿಸಿದಂತೆ ಅಧಿಕಾರವು ಫೆಡರಲ್‌ ಪಟ್ಟಿಯಲ್ಲಿ ಸೇರಿದ ಎಲ್ಲಾ ವಿಷಯಗಳಿಗೆ ಅನ್ವಯಿಸುತ್ತದೆ. +ಕೆಲವು ಇತಿಮಿತಿಗಳಲ್ಲಿ ಸಮಾನಾಧಿಕಾರ ಪಟ್ಟಿಯಲ್ಲಿ ಸೇರಿದ ವಿಷಯಗಳಲ್ಲಿಯೂ ಅದು ತನ್ನದೇ ಆದಪ್ರತ್ಯೇಕ ಅಧಿಕಾರ ಹೊಂದಿದೆ. +ಆದರೆ ಸಂಸ್ಥಾನಗಳ ಸಂಬಂಧದಲ್ಲಿ ಪರಿಸ್ಥಿತಿ ಬೇರೆಯೇ ಆಗಿದೆ. +ಸಂಸ್ಥಾನಗಳ ಸಂಬಂಧದಲ್ಲಿ ಸಂಯುಕ್ತ ರಾಜ್ಯವು ಸಮಾನಾಧಿಕಾರ ಪಟ್ಟಿಯಲ್ಲಿರುವ ವಿಷಯಗಳಲ್ಲಿಕಾರ್ಯಾಂಗಾಧಿಕಾರವನ್ನು ಹೊಂದಿಲ್ಲ. +ಅಲ್ಲದೆ ಸಂಯುಕ್ತ ರಾಜ್ಯವು ತನ್ನ ಶಾಸನಾಧಿಕಾರ ಪಟ್ಟಿಯಲ್ಲಿರುವ ವಿಷಯಗಳಲ್ಲಿಯೂ ಸಂಸ್ಥಾನಗಳ ವಿಷಯವಾಗಿ ತನ್ನದೇ ಆದ ಪ್ರತ್ಯೇಕ ಅಧಿಕಾರವನ್ನು ಹೊಂದಲು ಅರ್ಹವಾಗಿಲ್ಲ. +ಈ ಸಂದರ್ಭದಲ್ಲಿ ೮ ನೆಯ ವಿಭಾಗದ ೨ ನೆಯ ಉಪವಿಭಾಗ ಬಹು ಮುಖ್ಯ . +ಅದರಲ್ಲಿ ಹೀಗೆ ಹೇಳಲಾಗಿದೆ:“ಈ ವಿಭಾಗದಲ್ಲಿ ಏನೇ ಹೇಳಿದ್ದರೂ ಒಕ್ಕೂಟ ವ್ಯವಸ್ಥೆಗೆ ಸೇರಿದ ಯಾವುದೇ ಸಂಸ್ಥಾನದ ರಾಜನು ಸಂಯುಕ್ತ ರಾಜ್ಯ ಶಾಸಕಾಂಗವು ಸಂಸ್ಥಾನಗಳಿಗಾಗಿ ಶಾಸನ ಮಾಡುವ ಅಧಿಕಾರ ಹೊಂದಿರುವ ವಿಷಯಗಳ ಮೇಲೆ ತನ್ನ ಅಧಿಕಾರವನ್ನು ಚಲಾಯಿಸುತ್ತಾನೆ. +ಆದರೆ ಅಂತಹ ಶಾಸನಕ್ಕೆ ಸಂಬಂಧಿಸಿದ ಸಂಯುಕ್ತ ರಾಜ್ಯದ ಕಾರ್ಯಾಂಗಾಧಿಕಾರವನ್ನು ಚಲಾಯಿಸುವಾಗ ರಾಜನು ತನ್ನ ಕಾರ್ಯಾಂಗಾಧಿಕಾರವನ್ನು ಚಲಾಯಿಸಲಾಗುವುದಿಲ್ಲ. +ಈ ಉಪ ವಿಭಾಗದಲ್ಲಿ ಸ್ಪಷ್ಟವಾಗಿ ಹೇಳಿರುವುದಿಷ್ಟೇ-ಪ್ರಾಂತ್ಯಗಳಲ್ಲಿ ಒಕ್ಕೂಟದ ಕಾರ್ಯಾಂಗಾಧಿಕಾರವು ಅದರ ಶಾಸಕಾಂಗವು ಶಾಸನ ಮಾಡುವ ಅಧಿಕಾರ ಹೊಂದಿರುವ ಎಲ್ಲಾ ವಿಷಯಗಳಿಗೆ ಅನ್ವಯಿಸುತ್ತದೆ. +ಆದರೆ ಸಂಸ್ಥಾನಗಳ ಸಂಬಂಧದಲ್ಲಿ ಪರಿಸ್ಥಿತಿ ಬೇರೆಯೇ ಆಗಿದೆ. +ಒಕ್ಕೂಟದ ಶಾಸಕಾಂಗವು ಶಾಸನ ರಚಿಸುವ ಅಧಿಕಾರ ಹೊಂದಿದ ಮಾತ್ರಕ್ಕೆ ಆ ವಿಷಯದಲ್ಲಿ ಫೆಡರಲ್‌ ಕಾರ್ಯಾಂಗಾಧಿಕಾರ ಸಂಸ್ಥಾನಗಳಿಗೆ ಅನ್ವಯಿಸುವುದಿಲ್ಲ. +ಅಂತಹ ಅಧಿಕಾರವನ್ನು ಒಕ್ಕೂಟದ ಶಾಸಕಾಂಗ ಈ ಸಂಬಂಧವಾಗಿ ಕಾನೂನು ರಚಿಸುವುದರಿಂದ ಮಾತ್ರ ಕೊಡಲು ಸಾಧ್ಯ . +ಒಕ್ಕೂಟದಲ್ಲಿ ಶಾಸಕಾಂಗದಲ್ಲಿ ಸಂಸ್ಥಾನಗಳು ದೊಡ್ಡ ಪ್ರಮಾಣದಲ್ಲಿ ಪ್ರಾತಿನಿಧ್ಯ ಹೊಂದಿರುವುದರಿಂದ ಅಂತಹ ಕಾನೂನು ರಚಿಸುವುದು ಸಾಧ್ಯವೇ ಎಂಬುದು ಸಮಸ್ಯೆ. +ಪರಿಣಾಮ ಏನೇ ಆಗಲಿ, ಸೈದ್ಧಾಂತಿಕವಾಗಿ ಒಕ್ಕೂಟದ ಕಾರ್ಯಾಂಗಾಧಿಕಾರವು ಸಂಸ್ಥಾನಗಳಿಗೆ ಅನ್ವಯಿಸುವುದಿಲ್ಲ. +ವಸ್ತುಸ್ಥಿತಿ ಏನೆಂದರೆ ಪ್ರಾಂತ್ಯಗಳಿಗಾಗಿ ಒಕ್ಕೂಟವು ಶಾಸನ ರಚಿಸುವುದೂ ಅಲ್ಲದೆ ಅದನ್ನು ಕಾರ್ಯಗತಗೊಳಿಸುವುದು. +ಆದರೆ ಸಂಯುಕ್ತ ರಾಜ್ಯಕ್ಕೆ ಸೇರ್ಪಡೆಯಾದ ಸಂಸ್ಥಾನಗಳು ಶಾಸನ ಮಾಡಬಹುದಾಗಿಯೇ ಹೊರತು ಅವನ್ನು ಕಾರ್ಯಗತಗೊಳಿಸುವ ಅಧಿಕಾರ ಹೊಂದಿಲ್ಲ. +ರಾಜ್ಯವು ಕಾರ್ಯಗತಗೊಳಿಸುವ ಅಧಿಕಾರ ಹೊಂದಿರಬಹುದಾಗಿದೆ. +(ಕ) ಆಡಳಿತ ವಿಷಯದಲ್ಲಿ ಸಂವಿಧಾನದಲ್ಲಿ ಆಡಳಿತದ ದೃಷ್ಟಿಯಿಂದ ನೋಡಿದಾಗ ಕಾಯ್ದೆಯ ಕೆಲವು ಭಾಗಗಳಲ್ಲಿ ಒಕ್ಕೂಟ ವ್ಯವಸ್ಥೆಯು ಪ್ರಾಂತ್ಯ ಸರಕಾರಗಳು ಮತ್ತು ಸಂಸ್ಥಾನಗಳ ಸರಕಾರಗಳ ಮಾರ್ಗದರ್ಶನಕ್ಕಾಗಿ ಕೆಲವು ನಿಯಮಗಳಿರುವುದು ಕಂಡುಬರುತ್ತದೆ. +ತಮಗೆ ಸೇರಿದ ಕಾರ್ಯಾಂಗಾಧಿಕಾರವನ್ನು ಯಾವ ರೀತಿ ಚಲಾಯಿಸಬೇಕೆಂದು ಹೇಳುವುದೇ ಈ ಭಾಗಗಳ ಉದ್ದೇಶ. +ಇವಾವುವೆಂದರೆ ೧೨೨, ೧೨೬ ಮತ್ತು ೧೨೮ ನೆಯ ವಿಭಾಗಗಳು. +೧೨೨ ನೆಯ ವಿಭಾಗವು ಒಕ್ಕೂಟ ಸರಕಾರವನ್ನು ಕುರಿತಾಗಿದೆ. +ಅದರಲ್ಲಿ ಹೀಗೆ ಹೇಳಲಾಗಿದೆ:“೧೨೨ (೧) ಪ್ರತಿಯೊಂದು ಪ್ರಾಂತ್ಯದ ಮತ್ತು ಸೇರ್ಪಡೆಯಾದ ಸಂಸ್ಥಾನದ ಕಾರ್ಯಾಂಗಾಧಿಕಾರವನ್ನು ಚಲಾಯಿಸುವಾಗ ಪ್ರಾಂತ್ಯ ಮತ್ತು ಸೇರ್ಪಡೆಯಾದ ಸಂಸ್ಥಾನದಲ್ಲಿ ಅನ್ವಯವಾಗುವ ಸಂಯುಕ್ತ ಶಾಸಕಾಂಗದ ಶಾಸನಗಳ ಪಾಲನೆಯಾಗುವಂತ ನೋಡಿಕೊಳ್ಳಬೇಕು. +(೨) ಈ ವಿಭಾಗದ ಉಪವಿಭಾಗ (೧) ರಲ್ಲಿ ಹೇಳಲಾದ ಯಾವುದೇ ಪ್ರಾಂತ್ಯಕ್ಕೆ ಸಂಬಂಧಪಟ್ಟ ಒಕ್ಕೂಟದ ಕಾನೂನುಗಳಲ್ಲಿ ಆ ಪ್ರಾಂತ್ಯಕ್ಕೆ ಅನ್ವಯಿಸುವ ಅಸ್ತಿತ್ವದಲ್ಲಿರುವ ಯಾವುದೇ ಭಾರತೀಯ ಕಾನೂನು ಸೇರಿರುತ್ತದೆ. +(೩) ಕಾಯ್ದೆಯ ಈ ವಿಭಾಗದಲ್ಲಿ ಹೇಳಲಾಗಿರುವ ಯಾವುದೇ ವಿಧಿಗಳಿಗೆ ವಿರೋಧವಾಗದಂತೆ ಒಕ್ಕೂಟದ ಕಾರ್ಯಾಂಗಾಧಿಕಾರವನ್ನು ಯಾವುದೇ ಪ್ರಾಂತ್ಯ ಅಥವಾ ಸಂಸ್ಥಾನದಲ್ಲಿ ಆ ಪ್ರಾಂತ್ಯ ಅಥವಾ ಸಂಸ್ಥಾನದ ಹಿತಾಸಕ್ತಿಗಳಿಗನುಗುಣವಾಗಿ ಚಲಾಯಿಸಬೇಕು”. +೧೨೬ ನೆಯ ವಿಭಾಗದಲ್ಲಿ ಪ್ರಾಂತೀಯ ಸರಕಾರಗಳನ್ನು ಕುರಿತು ಈ ರೀತಿ ಹೇಳಲಾಗಿದೆ :“೧೨೬ (೧) ಪ್ರತಿಯೊಂದು ಪ್ರಾಂತ್ಯದ ಕಾರ್ಯಾಂಗಾಧಿಕಾರವನ್ನು ಚಲಾಯಿಸುವಾಗ ಒಕ್ಕೂಟವ್ಯವಸ್ಥೆಯ ಕಾರ್ಯಾಂಗಾಧಿಕಾರದ ಆಚರಣೆಗೆ ಅಡ್ಡಿಯಾಗದಂತೆ ಅಥವಾ ವಿರೋಧವಾಗದಂತೆ ನೋಡಿಕೊಳ್ಳಬೇಕು. + ಒಕ್ಕೂಟದ ಕಾರ್ಯಾಂಗಾಧಿಕಾರದಂಗವಾಗಿ ಅಗತ್ಯ ಕಂಡುಬಂದಲ್ಲಿ ಪ್ರಾಂತೀಯ ಸರ್ಕಾರಗಳಿಗೆ ನಿರ್ದೇಶನಗಳನ್ನು ನೀಡಬಹುದಾಗಿದೆ ಎಂದು ಅರ್ಥೈಸಬೇಕು.” + ೧೨೮ ನೆಯ ವಿಭಾಗದಲ್ಲಿ ರಾಜ್ಯಗಳನ್ನು ಕುರಿತು ಹೀಗೆ ಹೇಳಲಾಗಿದೆ : +ಸಂವಿಧಾನಾತ್ಮಕ ಸುಧಾರಣೆಗಳು ೩೫೧“೧೨೮(೧) ಸಂಯುಕ್ತ ರಾಜ್ಯಕ್ಕೆ ಪ್ರವೇಶ ಪಡೆದ ಪ್ರತಿಯೊಂದು ಸಂಸ್ಥಾನವೂ ತನ್ನ ಕಾರ್ಯಾಂಗಾಧಿಕಾರವನ್ನು ಚಲಾಯಿಸುವಾಗ ಫೆಡರಲ್‌ ಶಾಸನಕ್ಕೆ ಅನ್ವಯವಾಗುವ ವಿಷಯಗಳಲ್ಲಿ ಫೆಡರಲ್‌ ಕಾರ್ಯಾಂಗಾಧಿಕಾರದ ಚಲಾವಣೆಗೆ ಅಡ್ಡಿ ವಿರೋಧವಾಗದಂತೆ ನೋಡಿಕೊಳ್ಳಬೇಕು”. +(೨) ಈ ಮೊದಲಿನ ಉಪ ವಿಭಾಗದಲ್ಲಿ ಹೇಳಲಾದ ಕರ್ತವ್ಯವನ್ನು ಪೂರೈಸುವಲ್ಲಿ ಸಂಯುಕ್ತ ರಾಜ್ಯದಲ್ಲಿ ಸೇರ್ಪಡೆಯಾದ ಯಾವುದೇ ರಾಜ್ಯದ ರಾಜನು ವಿಫಲವಾಗಿದ್ದಾನೆಂದು ಗವರ್ನರ್‌-ಜನರಲ್‌ಅವರಿಗೆ ಕಂಡುಬಂದರೆ ಗವರ್ನರ್‌-ಜನರಲ್‌ನು ತನ್ನ ವಿವೇಚನೆಯ ಪ್ರಕಾರ ಈ ರಾಜನಿಂದ ತನಗೆ ಬಂದ ಮನವಿಯನ್ನು ಪರಿಶೀಲಿಸಿದ ನಂತರ ತನಗೆ ಸೂಕ್ತ ಕಂಡ ರೀತಿಯಲ್ಲಿ ಅವಶ್ಯವಾದ ನಿರ್ದೇಶನಗಳನ್ನು ಕೊಡಬಹುದು. +ಈ ವಿಭಾಗದಡಿಯಲ್ಲಿ ಒಕ್ಕೂಟದ ಕಾರ್ಯಾಂಗಾಧಿಕಾರವನ್ನು ಯಾವುದೇ ರಾಜ್ಯದಲ್ಲಿ ಚಲಾಯಿಸಬಹುದಾದ ವಿಷಯದಲ್ಲಿ ಚಲಾಯಿಸಬಹುದಾಗಿಯೇ ಇಲ್ಲವೇ ಎಂಬ ಪ್ರಶ್ನೆ ಉದ್ಭವಿಸಿದಲ್ಲಿ,ಒಕ್ಕೂಟದ ಅಥವಾ ರಾಜನು ಬಯಸಿದರೆ ಆ ಪ್ರಶ್ನೆಯನ್ನು ಫೆಡರಲ್‌ ನ್ಯಾಯಾಲಯಕ್ಕೆ ಈ ಕಾಯ್ದೆಯಲ್ಲಿ ನೀಡಲಾಗಿರುವ ಮೇಲಾಧಿಕಾರದನ್ವಯ ಈ ಪ್ರಶ್ನೆಯ ನಿರ್ಣಯಕ್ಕಾಗಿ ಕಳುಹಿಸಿಕೊಡಬಹುದು”. +ಈ ಎಲ್ಲಾ ಅಂಗ ಸಂಸ್ಥೆಗಳ ಕಾರ್ಯಾಂಗಾಧಿಕಾರದ ಘರ್ಷಣೆಯುಂಟಾಗುವ ಸಾಧ್ಯತೆ ಇದ್ದ ಪಕ್ಷದಲ್ಲಿ ಈ ಎಲ್ಲಾ ಭಾಗಗಳು ಹೆಚ್ಚು ಉಪಯುಕ್ತವಾಗುತ್ತಿದ್ದವು. +ಈ ಎಲ್ಲಾ ವಿಧಿಗಳು ಅನಾವಶ್ಯಕವೆನಿಸುವುವು. +ಏಕೆಂದರೆ ವಾಸ್ತವಿಕವಾಗಿ ಕಾರ್ಯಾಂಗಾಧಿಕಾರದಲ್ಲಿ ಘರ್ಷಣೆಯುಂಟಾಗುವುದಿಲ್ಲ. +ಕಾರ್ಯಾಂಗಾಧಿಕಾರದ ನಂತರ ಆಡಳಿತಾತ್ಮಕ ಆಚರಣೆಯಿಂದ ಮಾತ್ರ ಅದು ಉದ್ಭವಿಸಲು ಸಾಧ್ಯ. +ಆಡಳಿತವನ್ನು ಕಾರ್ಯಾಂಗಾಧಿಕಾರದಿಂದ ಪ್ರತ್ಯೇಕಿಸಿದಾಗ ಘರ್ಷಣೆಯುಂಟಾಗುವ ಸಾಧ್ಯತೆ ಇರುವುದಿಲ್ಲ . +ಈ ವಿಭಾಗದಲ್ಲಿ ಕೊಡಲಾಗಿರುವ ಎಚ್ಚರಿಕೆ ಅನವಶ್ಯಕ. +ಫೆಡರಲ್‌ ಸಂವಿಧಾನದಲ್ಲಿ ಫೆಡರಲ್‌ ಸರಕಾರದ ಆಡಳಿತಾತ್ಮಕ ಅಧಿಕಾರಗಳನ್ನು ಸಂಪೂರ್ಣವಾಗಿ ತೆಗೆದುಹಾಕಿ, ಯಾವುದೇ ಕ್ರಿಯಾತ್ಮಕ ಶಕ್ತಿ ಇಲ್ಲದೆ ಅದನ್ನೊಂದು ಚೌಕಟ್ಟನ್ನಾಗಿ ಉಳಿಸುವ ಸಂಭವವಿದೆ. +ಸಂವಿಧಾನದ ಪ್ರಕಾರ ಗವರ್ನರ್‌ ಜನರಲ್‌ ಅವರು ಫೆಡರಲ್‌ ಶಾಸಕಾಂಗವು ಅಂಗೀಕರಿಸಿದ ಯಾವುದೇ ಕಾನೂನಿನ ಕಾರ್ಯಾಚರಣೆಯ ಜವಾಬ್ದಾರಿಯನ್ನು ಫೆಡರಲ್‌ ಕಾರ್ಯಾಂಗಕ್ಕೆ ನೀಡದೆ ಘಟಕಗಳಿಗೆ ಎಂದರೆ ಪ್ರಾಂತೀಯ ಮತ್ತು ಭಾರತೀಯ ಸಂಸ್ಥಾನಗಳಿಗೆ ವಹಿಸಿಕೊಡಬಹುದು. +೧೨೪ ನೇ ವಿಭಾಗದಲ್ಲಿ ಹೇಳಿರುವ ಕರಾರುಗಳಿಂದ ಇದು ಸ್ಪಷ್ಟವಾಗುತ್ತದೆ. +“೧೨೪. (೧) ಈ ಕಾಯ್ದೆಯಲ್ಲಿ ಏನೇ ಹೇಳಿದ್ದರೂ, ಗವರ್ನರ್‌ ಜನರಲ್‌ ಅವರು ಒಂದು ಪ್ರಾಂತ್ಯದ ಅಥವಾ ಸಂಯುಕ್ತ ರಾಜ್ಯದಲ್ಲಿ ಪ್ರವೇಶ ಪಡೆದ ಸಂಸ್ಥಾನದ ಸರಕಾರದ ಸಮ್ಮತಿಯಿಂದ,ಸಂಯುಕ್ತ ರಾಜ್ಯದ ಕಾರ್ಯಾಂಗಾಧಿಕಾರದ ವ್ಯಾಪ್ತಿಗೊಳಪಟ್ಟ ಕಾರ್ಯಗಳನ್ನು ಕೆಲವು ಷರತ್ತುಗಳ ಮೇಲೆ ರಾಜನ ಸರಕಾರಕ್ಕೆ ಅಥವಾ ರಾಜನಿಗೆ ಇಲ್ಲವೆ ಅವುಗಳ ಅಧಿಕಾರಿಗಳಿಗೆ ವಹಿಸಿಕೊಡಬಹುದು. +(೨) ಫೆಡರಲ್‌ ಶಾಸಕಾಂಗದ ಕಾನೂನನ್ನು, ಜಾರಿಗೊಳಿಸಲು ಅದು ಪ್ರಾಂತೀಯ ಶಾಸಕಾಂಗವು ಕಾನೂನು ಮಾಡಲು ಅಧಿಕಾರ ಹೊಂದಿರದ ವಿಷಯವಾಗಿದ್ದರೂ ಕೂಡ, ಒಂದು ಪ್ರಾಂತ್ಯ ಅಥವಾ ಅದರ ಅಧಿಕಾರಗಳಿಗೆ ಅಧಿಕಾರ ಕೊಟ್ಟು ಅದಕ್ಕೆ ಅವರನ್ನು ಜವಾಬ್ದಾರರನ್ನಾಗಿ ಮಾಡಬಹುದು. +(೩) ಒಕ್ಕೂಟವನ್ನು ಸೇರಿರುವ ಸಂಸ್ಥಾನಕ್ಕೆ ಅನ್ವಯಿಸುವ ಫೆಡರಲ್‌ ಶಾಸಕಾಂಗದ ಕಾನೂನನ್ನು ಸಂಸ್ಥಾನದ ರಾಜನಿಂದ ನಿಯೋಜಿತರಾದ ಅಧಿಕಾರಿಗಳಿಗೆ ಅಧಿಕಾರ ನೀಡಬಹುದು. +(೪) ಈ ವಿಭಾಗದಲ್ಲಿ ಹೇಳಿರುವಂತೆ ಎಲ್ಲಿ ಅಧಿಕಾರಗಳನ್ನು ಮತ್ತು ಕಾರ್ಯಗಳನ್ನು ಯಾವುದೇ ಪ್ರಾಂತ್ಯ ಅಥವಾ ಒಕ್ಕೂಟಕ್ಕೆ ಸೇರಿದ ಸಂಸ್ಥಾನ ಅಥವಾ ಅವುಗಳ ಅಧಿಕಾರಗಳಿಗೆ ಕೊಡಲಾಗಿದೆಯೋ ಅಲ್ಲಿ ಆ ಕಾರ್ಯಗಳನ್ನು ನಿರ್ವಹಿಸುವಲ್ಲಿ ತಗಲುವ ವೆಚ್ಚಕ್ಕಾಗಿ ಒಪ್ಪಂದದ ಪ್ರಕಾರ ಗೊತ್ತಾದ ಮೊತ್ತವನ್ನು ಅವರಿಗೆ ಕೊಡತಕ್ಕದ್ದು. + ಹಾಗೆ ಕೊಡದೆ ಹೋದ ಪಕ್ಷದಲ್ಲಿ ಭಾರತದ ಮುಖ್ಯ ನ್ಯಾಯಾಧೀಶರಿಂದ ನೇಮಕಗೊಂಡ ನ್ಯಾಯ ನಿರ್ಣಾಯಕನಿಂದ ನಿರ್ಣಯಿಸಲಾದ ಮೊತ್ತವನ್ನು ಕೊಡತಕ್ಕದ್ದು. +ಪ್ರಾಂತ್ಯಗಳು ಮತ್ತು ಸಂಸ್ಥಾನಗಳು ಒಟ್ಟಾಗಿ ಸಂಯುಕ್ತ ರಾಜ್ಯದ ಕಾರ್ಯಾಂಗಾಧಿಕಾರಗಳನ್ನು ತಾವೇ ಕಸಿದುಕೊಂಡು ಅದನ್ನು ಕೇವಲ ಶಾಸನಾಧಿಕಾರವುಳ್ಳ ಸಂಸ್ಥೆಯನ್ನಾಗಿ ಮಾಡುವ ಸಾಧ್ಯತೆಯೂ ಇದೆ. +೧೨೫ ನೆಯ ವಿಧಿಯು ಸೂಚಿಸುವ ಅಂಶದಿಂದಾಗಿ ಗಂಭೀರ ಸ್ಥಿತಿ ನಿರ್ಮಾಣವಾಗುವಂತಿದೆ. +“೧೨೫ (೧) ಈ ಕಾಯ್ದೆಯಲ್ಲಿ ಏನೇ ಹೇಳಿದ್ದರೂ ಮತ್ತು ಸಂಸ್ಥಾನದ ಸೇರ್ಪಡೆಯ ದಸ್ತಾವೇಜಿನಲ್ಲಿ ಏನಾದರೂ ನಿಯಮವಿದ್ದರೆ, ಗವರ್ನರ್‌ ಜನರಲ್‌ ಅವರು ಮತ್ತು ಒಕ್ಕೂಟಕ್ಕೆ ಪ್ರವೇಶ ಪಡೆದ ಸಂಸ್ಥಾನದ ರಾಜರ ನಡುವೆ ಒಪ್ಪಂದ ಮಾಡಿಕೊಂಡು ಸಂಸ್ಥಾನಕ್ಕೆ ಅನ್ವಯಿಸುವ ಒಕ್ಕೂಟದ ಶಾಸಕಾಂಗದ ಕಾನೂನನ್ನು ರಾಜರು ಅಥವಾ ಅವರ ಅಧಿಕಾರಿಗಳ ಮುಖಾಂತರ ಕಾರ್ಯಗತಗೊಳಿಸಬಹುದು. +(೨) ಈ ವಿಭಾಗದ ನಿಯಮಗಳ ಪ್ರಕಾರ ಮಾಡಿಕೊಂಡ ಒಪ್ಪಂದದನ್ವಯ ಗವರ್ನರ್‌ ಜನರಲ್‌ಅವರು ತಮ್ಮ ವಿವೇಚನೆಯಲ್ಲಿ ಪರಿಶೀಲನೆ ಅಥವಾ ಇನ್ನಾವುದೇ ವಿಧಾನದ ಮೂಲಕ ಒಪ್ಪಂದಕ್ಕೆ ಸಂಬಂಧಿಸಿದ ಕಾನೂನು ಫೆಡರಲ್‌ ಸರಕಾರದ ನೀತಿಗನುಗುಣವಾಗಿ ಕಾರ್ಯಗತವಾಗಿದೆಯೇ ಅಥವಾ ಹಾಗಾಗಿರದ ಪಕ್ಷದಲ್ಲಿ ಅವರು ತಮ್ಮ ವಿವೇಚನೆಗನು ಸಾರವಾಗಿ ಸೂಕ್ತ ಕಂಡ ನಿರ್ದೇಶನಗಳನ್ನು ರಾಜನಿಗೆ ನೀಡಬಹುದು. +(೩) ಈ ವಿಭಾಗದ ಪ್ರಕಾರ ಮಾಡಲಾದ ಯಾವುದೇ ಒಪ್ಪಂದಕ್ಕೆ ಎಲ್ಲಾ ನ್ಯಾಯಾಲಯಗಳು ನ್ಯಾಯಿಕ ಗಮನ ನೀಡತಕ್ಕದ್ದು”. +ಈ ವಿಭಾಗದಲ್ಲಿ ಹೇಳಿರುವುದರ ಅರ್ಥ, ಒಂದು ಸಂಸ್ಥಾನವು ತನ್ನ ಸೇರ್ಪಡೆಯ ದಸ್ತಾವೇಜಿನ ಮೂಲಕ ಫೆಡರಲ್‌ ಕಾನೂನುಗಳನ್ನು ರಾಜ್ಯದಲ್ಲಿ ಆಚರಣೆಗೆ ತರುವ ಕಾರ್ಯವನ್ನು ಆ ಸಂಸ್ಥಾನದ ನಿಯೋಗಿಗಳು ಅಥವಾ ಕಾರ್ಯಭಾರಿಗಳ ಮೂಲಕವೇ ಮಾಡಬೇಕಲ್ಲದೆ ಫೆಡರಲ್‌ ನಿಯೋಗಿಗಳ ಮೂಲಕವಲ್ಲ, ಮತ್ತು ಹಾಗೆ ಗೊತ್ತುಪಡಿಸಿದ್ದ ಪಕ್ಷದಲ್ಲಿ ಒಕ್ಕೂಟವು ಆ ರಾಜ್ಯದೊಳಗೆ ಯಾವ ಆಡಳಿತಾತ್ಮಕ ಅಧಿಕಾರವನ್ನೂ ಹೊಂದಿಲ್ಲ ಎಂದು ನಿರ್ಣಯಿಸಬಹುದು. +ಕಾನೂನಿನ ಸೌಕರ್ಯ ಮತ್ತು ಲಾಭ ಆಡಳಿತವನ್ನವಲಂಬಿಸಿರುತ್ತದೆ. +ಆಡಳಿತದಲ್ಲಿ ಅ ದಕ್ಷತೆ ಅಥವಾ ಭಷ್ಟಾಚಾರವಿದ್ದರೆ ಕಾನೂನು ನಿರುಪಯುಕ್ತವೆನಿಸಿರುತ್ತದೆ. +ಒಕ್ಕೂಟದ ಆಡಳಿತಾತ್ಮಕ ಅಧಿಕಾರಗಳನ್ನು ಕಳೆಯುವುದೆಂದರೆ ನಿಜವಾಗಿಯೂ ಅದನ್ನು ಕುಂಠಿತಗೊಳಿಸಿದಂತೆಯೇ. +ಒಕ್ಕೂಟದ ಕೆಲವು ಘಟಕಗಳಿಗೆ ತಮ್ಮ ಪ್ರದೇಶದಲ್ಲಿ ಫೆಡರಲ್‌ ಸರಕಾರಕ್ಕೆ ಆಡಳಿತಾತ್ಮಕ ಅಧಿಕಾರವಿಲ್ಲ ಎಂದು ಹೇಳಲು ಸ್ವಾತಂತ್ರ್ಯವಿರುವ ಸಂಯುಕ್ತ ರಾಜ್ಯ ಎಲ್ಲಿಯೂ ಇಲ್ಲ. +ಭಾರತ ಒಕ್ಕೂಟ ವ್ಯವಸ್ಥೆ ಇದಕ್ಕೆ ಒಂದು ಅಪವಾದವೆನಿಸಿದೆ. +ಪ್ರಾಂತ್ಯಗಳು ಮತ್ತು ರಾಜ್ಯಗಳಲ್ಲಿ ಈ ವಿಷಯದಲ್ಲಿ ಭಿನ್ನತೆ ಇರುವುದಲ್ಲದೆ, ತಮ್ಮ ಅಧಿಕಾರ ಚಲಾವಣೆಯ ವಿಷಯದಲ್ಲಿಯೂ ಫೆಡರಲ್ ಸರಕಾರದಿಂದ ಮೇಲ್ವಿಚಾರಣೆ ಮತ್ತು ನಿರ್ದೇಶನದ ಹೊಣೆಗಾರಿಕೆಯಲ್ಲಿಯೂ ಅವುಗಳಲ್ಲಿ ಭಿನ್ನತೆ ಇದೆ. +೧೨೬ ನೆಯ ವಿಭಾಗವನ್ನು ೧೨೮ ನೆಯ ವಿಭಾಗದೊಂದಿಗೆ ಹೋಲಿಸಿ ನೋಡಿದಾಗ ಈ ಭಿನ್ನತೆ ಸ್ಪಷ್ಟವಾಗುವುದು. +ಸಂವಿಧಾನಾತ್ಮಕ ಸುಧಾರಣೆಗಳು ೩೫೩ ಪ್ರತಿಯೊಂದು ಪ್ರಾಂತ್ಯದ ಕಾರ್ಯಾಂಗಾಧಿಕಾರವನ್ನು ಒಕ್ಕೂಟದ ಕಾರ್ಯಾಂಗಾಧಿಕಾರದ ಚಲಾವಣೆಗೆ ಅಡ್ಡಿಪಡಿಸದಂತೆ ಅಥವಾ ವಿರೋಧವಾಗದಂತೆ ಚಲಾಯಿಸಬೇಕೆಂದು ೧೨೬ ನೆಯ ವಿಭಾಗದಲ್ಲಿ ಹೇಳಲಾಗಿದೆ. +ಈ ಉದ್ದೇಶಕ್ಕಾಗಿ ಅವಶ್ಯವೆಂದು ತೋರಿದ ನಿರ್ದೇಶನಗಳನ್ನು ಪ್ರಾಂತ್ಯಗಳಿಗೆ ಕೊಡುವ ಕಾರ್ಯಾಂಗಾಧಿಕಾರ ಸಂಯುಕ್ತ ರಾಜ್ಯಕ್ಕಿದೆ. +೧೨೮ ನೆಯ ವಿಭಾಗದಲ್ಲಿಯೂ ಸೇರ್ಪಡೆಯಾದ ರಾಜ್ಯಗಳಿಗಾಗಿ ಇಂತಹದೇ ಕಾನೂನನ್ನು ಮಾಡಲಾಗಿದೆ. +ಆದರೆ ಈ ಎರಡೂ ವಿಭಾಗಗಳಲ್ಲಿ ಒಂದು ಮಹತ್ತರವಾದ ವ್ಯತ್ಯಾಸವಿದೆ. +೧೨೬ ನೆಯ ವಿಭಾಗದ ಪ್ರಕಾರ ಸಂಯುಕ್ತ ರಾಜ್ಯದ ಕಾರ್ಯಾಂಗಾಧಿಕಾರವು ಪ್ರಾಂತ್ಯಕ್ಕೆ ತನಗೆ ಅವಶ್ಯವೆಂದು ತೋರಿದ ನಿರ್ದೇಶನಗಳನ್ನು ನೀಡುವ ಅಧಿಕಾರ ಹೊಂದಿದೆ. +ಆದರೆ ೧೨೮ ನೆಯ ವಿಭಾಗ ಅಂತಹ ಅಧಿಕಾರ ನೀಡುವುದಿಲ್ಲ. +ಎಂದರೆ ಸಂಯುಕ್ತ ರಾಜ್ಯಕ್ಕೆ ಸೇರ್ಪಡೆಯಾದ ರಾಜ್ಯದ ರಾಜನಿಗೆ ರಾಜ್ಯದ ಕಾರ್ಯಾಂಗಾಧಿಕಾರವನ್ನು ಸಂಯುಕ್ತ ರಾಜ್ಯದ ಕಾರ್ಯಾಂಗಾಧಿಕಾರದ ಚಲಾವಣೆಗೆ ಅಡ್ಡಿ ಅಥವಾ ವಿರೋಧವನ್ನೊಡ್ಡುವುದನ್ನು ತಡೆಗಟ್ಟಲು ನಿರ್ದೇಶನವನ್ನು ನೀಡುವ ಅಂತರ್ಗತ ಅಧಿಕಾರವಿಲ್ಲವೆಂದಾಯಿತು. +ಇದು ಒಂದು ಅತ್ಯಂತ ಮಹತ್ವದ ವ್ಯತ್ಯಾಸ. +ಈ ಅಧಿಕಾರವನ್ನು ಒಕ್ಕೂಟಕ್ಕೆ ಕೊಡುವುದರ ಬದಲು ಗವರ್ನರ್‌-ಜನರಲ್‌ ಅವರಿಗೆ ಕೊಡಲಾಗಿದೆ. +ಗವರ್ನರ್‌-ಜನರಲ್‌ ಅವರು ಕಾನೂನಿನ ಪ್ರಕಾರ ಒಕ್ಕೂಟದ ಸರಕಾರದಿಂದ ಪ್ರತ್ಯೇಕವಾಗಿದ್ದು ತಮಗೆ ತೋಚಿದ ರೀತಿಯಲ್ಲಿ ರಾಜರಿಗೆ ನಿರ್ದೇಶನಗಳನ್ನು ನೀಡುವ ಅಧಿಕಾರ ಪಡೆದಿದ್ದಾರೆ. +ಇನ್ನೂ ಒಂದು ವ್ಯತ್ಯಾಸ ಗಮನೀಯವಾಗಿದೆ. +೧೨೬ ನೆಯ ವಿಭಾಗದ ಪ್ರಕಾರ ನಿರ್ದೇಶನಗಳನ್ನಿತ್ತಾಗ ಪ್ರಾಂತ್ಯದ ಗವರ್ನರ್‌ ಅವರು ಅವುಗಳನ್ನು ಪಾಲಿಸಲು ಬದ್ಧರಾಗಿರುತ್ತಾರೆ. +ಅಂತಹ ನಿರ್ದೇಶನಗಳ ಅವಶ್ಯಕತೆಯನ್ನು ಪ್ರಶ್ನಿಸುವುದಕ್ಕಾಗಲಿ ಅಥವಾ ಅವುಗಳನ್ನು ನೀಡಲು ಗವರ್ನರ್‌-ಜನರಲ್‌ ಅವರಿಗಿರುವ ಅಧಿಕಾರವನ್ನು ಪ್ರಶ್ನಿಸುವ ಹಕ್ಕಾಗಲಿ ಗವರ್ನರ್‌ಅವರಿಗೆ ಇರುವುದಿಲ್ಲ. +ಒಂದು ಸಂಸ್ಥಾನದ ರಾಜನ ವಿಷಯದಲ್ಲಿ ಪರಿಸ್ಥಿತಿ ಸಂಪೂರ್ಣ ಬೇರೆಯೇ ಆಗಿದೆ. +ಅವರು ಅಂತಹ ನಿರ್ದೇಶನವನ್ನು ಪ್ರಶ್ನಿಸಬಹುದು ಮತ್ತು ಫೆಡರಲ್‌ ನ್ಯಾಯಾಲಯದಲ್ಲಿ ಈವಿಷಯದಲ್ಲಿ ನ್ಯಾಯ ತೀರ್ಪನ್ನು ಪಡೆಯಬಹುದು. +ಏಕೆಂದರೆ ೧೨೮ ನೆಯ ವಿಭಾಗದ ೨ ನೆಯ ಉಪ ವಿಭಾಗಕ್ಕೆ ನೀಡಲಾದ ಉಪಖಂಡದಲ್ಲಿ ಹೇಳಿರುವಂತೆ ಈ ವಿಭಾಗದಡಿಯಲ್ಲಿ ಸಂಯುಕ್ತ ಸರಕಾರದ ಕಾರ್ಯಾಂಗಾಧಿಕಾರವನ್ನು ಅಂತಹ ಅಧಿಕಾರ ಚಲಾವಣೆಗೆ ಅವಕಾಶವಿದ್ಧಾಗ ಸಂಸ್ಥಾನದಲ್ಲೂ ಅದನ್ನುಕಾರ್ಯಗತಗೊಳಿಸಬಹುದೇ ಎಂಬ ಪ್ರಶ್ನೆ ಉದ್ಭವಿಸಿದರೆ ಆ ಪ್ರಶ್ನೆಯನ್ನು ಸಂಯುಕ್ತ ರಾಜ್ಯವಾಗಲೀ ಅಥವಾ ಸಂಸ್ಥಾನದ ರಾಜ್ಯವಾಗಲೀ ನ್ಯಾಯಾಲಯದ ನಿರ್ಣಯ ಬಯಸಿ, ಅದನ್ನು ನಿರ್ಣಯಕ್ಕಾಗಿ ಫೆಡರಲ್‌ ನ್ಯಾಯಾಲಯಕ್ಕೆ ತೆಗೆದುಕೊಂಡು ಹೋಗಬಹುದು. +(೩) ಹಣಕಾಸಿನ ವಿಷಯದಲ್ಲಿ ಹಣಕಾಸಿನ ಪ್ರಶ್ನೆಗೆ ಬಂದಾಗ ಪ್ರಾಂತ್ಯಗಳು ಮತ್ತು ರಾಜ್ಯಗಳ ನಡುವೆ ಇರುವ ವ್ಯತ್ಯಾಸ ಎದ್ದುಕಾಣುವಂತಿದೆ. +ಉದಾಹರಣೆಗೆ ಒಕ್ಕೂಟಕ್ಕೆ ಪ್ರಾಂತ್ಯಗಳು ಮತ್ತು ರಾಜ್ಯಗಳ ಮೇಲೆ ತೆರಿಗೆ ವಿಧಿಸುವ ಅಧಿಕಾರವನ್ನೇ ತೆಗೆದುಕೊಳ್ಳೋಣ. +ಒಕ್ಕೂಟದ ಆದಾಯಕ್ಕೆ ಎರಡು ವಿಧದ ಮೂಲಗಳಿವೆ. + ತೆರಿಗೆಯಿಂದ ಬಂದಂತಹ ಆದಾಯ, ಮತ್ತು ತೆರಿಗೆಯಿಂದ ಬಾರದ ಆದಾಯ. + ತೆರಿಗೆಯಿಂದ ಬರದೇ ಇರುವ ಆದಾಯ ಆರು ವಿಧಗಳಲ್ಲಿವೆ . +ಫೆಡರಲ್‌ ಪಟ್ಟಿಯಲ್ಲಿ ಸೇರಿದ ವಿಷಯಗಳ ಮೇಲಣ ರಕಮು ಅಥವಾ ಫೀಜು. +ಅಂಚೆ ಉಳಿತಾಯ ಖಾತೆಗಳೂ ಸೇರಿದಂತೆ ಅಂಚೆ ಸೇವೆಯಿಂದ ಬರುವ ಆದಾಯ. + ಫೆಡರಲ್‌ ರೈಲು ಸೇವೆಯಿಂದ ಬರುವ ಆದಾಯ. + ನಾಣ್ಯ ಮತ್ತು ನೋಟುಗಳ ವ್ಯವಹಾರದಲ್ಲಿನ ಆದಾಯ . + ರಿಸರ್ವ್‌ ಬ್ಯಾಂಕ್‌ ಮತ್ತು ಇತರ ಫೆಡರಲ್‌ ಉದ್ಯಮಗಳಿಂದ ಬರುವ ಲಾಭ . + ಸೇರ್ಪಡೆಯಾದ ಮತ್ತು ಸೇರ್ಪಡೆಯಾಗದ ರಾಜ್ಯಗಳಿಂದ ಪ್ರಭುತ್ವಕ್ಕೆ ಸಲ್ಲಿಸಲಾದ ನೇರಕಾಣಿಕೆಗಳು. +ಭಾರತ ಸರಕಾರ ಕಾಯ್ದೆಯನ್ವಯ ತೆರಿಗೆಯ ಮೂಲಕ ಬರುವ ಆದಾಯ ಎರಡು ವಿಧವಾಗಿದೆ; +ಸಾಮಾನ್ಯ ತೆರಿಗೆ ಮತ್ತು ಅಸಾಮಾನ್ಯ ಅಥವಾ ಸಾಧಾರಣ ಮತ್ತು ಅಸಾಧಾರಣ ತೆರಿಗೆ. +ಸಾಮಾನ್ಯ ತೆರಿಗೆಯಲ್ಲಿ ಈ ಕೆಳಗಣ ಮೂಲಗಳು ಸೇರಿವೆ:(೧) ಸುಂಕ,(೨) ರಫ್ತು ತೆರಿಗೆ,(೩) ಅಬ್ಕಾರಿ ತೆರಿಗೆ,(೪) ಉಪ್ಪು,(೫) ಕಾರ್ಪೋರೇಷನ್‌ ತೆರಿಗೆ,(೬) ಕೃಷಿ ಆದಾಯದ ಹೊರತು ಇತರ ಆದಾಯದ ಮೇಲೆ ತೆರಿಗೆ. +(೭) ಆಸ್ತಿ ಮೇಲಣ ತೆರಿಗೆ, ಎಂದರೆ ವ್ಯಕ್ತಿಗಳ ಆಸ್ತಿ ಮತ್ತು ಸಂಪತ್ತಿನ ಮೂಲ ಮೌಲ್ಯದ ಮೇಲಣ ತೆರಿಗೆ. +ಅಸಾಮಾನ್ಯ ಅಥವಾ ಅಸಾಧಾರಣ (ಹೆಚ್ಚಿಗೆ) ಆದಾಯ ಈ ಕೆಳಗಿನಂತಿದೆ:೧) ಆದಾಯ ತೆರಿಗೆಯ ಮೇಲೆ ಸರ್‌ಚಾರ್ಜ್‌ ಅಥವಾ ಹೆಚ್ಚಿನ ತೆರಿಗೆ. +೨) ಉತ್ತರಾಧಿಕಾರದ ತೆರಿಗೆಗಳ ಮೇಲೆ ಹೆಚ್ಚಿನ ತೆರಿಗೆಗಳು. +೩) ರೈಲು ಅಥವಾ ವಿಮಾನಯಾನದಲ್ಲಿ ಪ್ರಯಾಣಿಕರ ಮತ್ತು ಸರಕುಗಳ ಮೇಲೆ ಹೇರಲಾದ ಪ್ರಯಾಣ ತೆರಿಗೆ ಮತ್ತು ರೈಲು ದರಗಳು ಮತ್ತು ಸರಕು ಸಾಗಣೆಯ ದರಗಳ ಮೇಲೆ ಹೆಚ್ಚಿನ ತೆರಿಗೆ. +೪) ಮುದ್ರಾಂಕಗಳ ಮೇಲೆ ವಿಧಿಸುವ ಹೆಚ್ಚಿನ ತೆರಿಗೆಗಳು. +ಈಗ ಸಾಧಾರಣವಿರಲಿ, ಅಸಾಧಾರಣವಿರಲಿ ಯಾವುದೇ ವಿಧದ ತೆರಿಗೆಗಳ ಭಾರವನ್ನು ಹೊರಲು ಪ್ರಾಂತ್ಯಗಳು ಬಾಧ್ಯವಾಗಿವೆ. +ಆದರೆ ರಾಜ್ಯಗಳ ವಿಷಯದಲ್ಲಿ ಇದು ನಿಜವಲ್ಲ. +ಉದಾಹರಣೆಗಾಗಿ,ರಾಜ್ಯಗಳು ಸಾಮಾನ್ಯ ಸ್ಥಿತಿಯಲ್ಲಿ ೬ ಮತ್ತು ೭ ನೆಯ ವಿಧದ ಸಾಮಾನ್ಯ ತೆರಿಗೆಗಳ ಭಾರ ಹೊರಲು ಬಾಧ್ಯರಾಗಿಲ್ಲ, ಆದರೆ ಪ್ರಾಂತ್ಯಗಳು ಬಾಧ್ಯತೆ ಹೊಂದಿವೆ. +ಅಸಾಧಾರಣವಾದ ತೆರಿಗೆ ವಿಧಿಸುವ ವಿಷಯದಲ್ಲಿ ಸಂಸ್ಥಾನಗಳು ಆರ್ಥಿಕ ಆಪತ್ಕಾಲೀನ ಪರಿಸ್ಥಿತಿಯಲ್ಲಿಯೂ ಸಹ ೨, ೩ ಮತ್ತು ೪ ನೆಯ ವಿಧದ ತೆರಿಗೆಗಳನ್ನು ಭರಿಸಲು ಬಾಧ್ಯರಾಗಿಲ್ಲ . +೧ ನೆಯ ವಿಧದ ಆದಾಯದ ಅಸಾಧಾರಣ ಮೂಲಗಳ ಪಕಾರ ತೆರಿಗೆ ಕೊಡಲು ಬಾಧ್ಯರಾಗಿದ್ದಾಗ್ಯೂ ಇತರ ಎಲ್ಲಾ ಉಳಿತಾಯ ಮಾಡಲಾಗಿದೆ ಎಂದು ದೃಢೀಕರಿಸಬೇಕು. +ರಾಜ್ಯಗಳು ಮತ್ತು ಪ್ರಾಂತ್ಯಗಳ ನಡುವೆ ಹಣಕಾಸಿನ ದೃಷ್ಟಿಯಲ್ಲಿ ಇನ್ನೊಂದು ವ್ಯತ್ಯಾಸವಿದೆ. +ಕಾಯ್ದೆಯಲ್ಲಿ ಪ್ರಾಂತೀಯ ಸರಕಾರಗಳ ತೆರಿಗೆ ವಿಧಿಸುವ ಅಧಿಕಾರ ಕ್ಷೇತ್ರದ ವ್ಯಾಖ್ಯೆಯನ್ನು ಕೊಡಲಾಗಿದೆ. +ಕಾಯ್ದೆಯಲ್ಲಿ ಹೇಳಲಾದ ವಿಷಯಗಳನ್ನು ಬಿಟ್ಟು ಇತರ ವಿಷಯಗಳ ಮೇಲೆ ತೆರಿಗೆ ವಿಧಿಸುವ ಅಧಿಕಾರ ಪ್ರಾಂತೀಯ ಸರಕಾರಗಳಿಗೆ ಇರುವುದಿಲ್ಲ. +ಆದರೆ ರಾಜ್ಯಗಳ ವಿಷಯದಲ್ಲಿ ಇದು ಅನ್ವಯಿಸುವುದಿಲ್ಲ. +ಸಂಯುಕ್ತ ರಾಜ್ಯದಲ್ಲಿ ಸೇರ್ಪಡೆಯಾದ ರಾಜ್ಯದ ಅಧಿಕಾರಗಳನ್ನು ವಿವರಿಸಿರುವ ಭಾರತ ಸರಕಾರ ಕಾಯ್ದೆಯಲ್ಲಿ ರಾಜ್ಯದ ತೆರಿಗೆ ವ್ಯವಸ್ಥೆಯ ಬಗ್ಗೆ ಏನನ್ನೂ ಹೇಳಿಲ್ಲ. +ತನ್ನ ಆಂತರಿಕ ಆಡಳಿತಕ್ಕಾಗಿ ಆದಾಯ ಪಡೆಯಲು ತೆರಿಗೆ ವಿಧಿಸುವ ಯಾವುದೇ ಮೂಲವನ್ನು ಅದು ಆರಿಸಿಕೊಳ್ಳಬಹುದು . +ತನ್ನಂತೆ ಅದೂ ಒಕ್ಕೂಟದ ಘಟಕವಾಗಿರುವ ನೆರೆಯ ಪ್ರಾಂತ್ಯದಿಂದ ತನ್ನ ಭೂಪ್ರದೇಶವನ್ನು ಪ್ರವೇಶಿಸುವ ವಸ್ತುಗಳ ಮೇಲೆ ಸುಂಕವನ್ನು ವಿಧಿಸಬಹುದು. +ಭಾರತದ ಸಂಯುಕ್ತ ಒಕ್ಕೂಟ ವ್ಯವಸ್ಥೆಯ ಪ್ರಮುಖವಲ್ಲದಿದ್ದರೂ ಮುಖ್ಯವಾದ ಉದ್ದೇಶವೆಂದರೆ ವ್ಯವಸ್ಥೆಯ ಭೂಪ್ರದೇಶದಲ್ಲಿ ಮುಕ್ತವಾಗಿ ನಡೆಯುವ ವಾಣಿಜ್ಯ-ವ್ಯವಹಾರವಾಗಿದೆ. +ಅಂತರ ರಾಜ್ಯ ವಾಣಿಜ್ಯವನ್ನು ತಡೆಯುವ ಉದ್ದೇಶದಿಂದ ಒಕ್ಕೂಟದ ಒಂದು ಘಟಕವು ಇನ್ನೊಂದು ಘಟಕಕ್ಕೆ ಅಡೆತಡೆಗಳನ್ನು ಹೇರುವುದಕ್ಕಾಗಿ ಸುಂಕವನ್ನು ವಿಧಿಸುವುದು ಇತಿಹಾಸದಲ್ಲಿ ಯಾವುದೇ ಸಂಯುಕ್ತ ರಾಜ್ಯದಲ್ಲಿ ಇಲ್ಲ. +ಭಾರತದ ಒಕ್ಕೂಟವು ಈ ನಿಯಮಕ್ಕೆ ಒಂದು ಅಪವಾದವಾಗಿದೆ. +ಮತ್ತು ಈ ಅಂಶದ ಕಾರಣವಾಗಿಯೇ ಭಾರತದ ಸಂಯುಕ್ತ ರಾಜ್ಯವು ಇಂದು ಜನರಿಗೆ ಸುಪರಿಚಿತವಾದ ಇತರ ಸಂಯುಕ್ತ ರಾಜ್ಯಗಳಿಗೆ ತೀವ್ರ ವಿರೋಧ ರೀತಿಯದಾಗಿದೆ. +ಒಕ್ಕೂಟ ವ್ಯವಸ್ಥೆಯ ಸಂವಿಧಾನದ ಒಂದು ಲಕ್ಷಣವೆಂದರೆ ಅದರಲ್ಲಿ ಸೇರಿದ ಭೂಪ್ರದೇಶವನ್ನು ಹಂಚಲಾಗಿದ್ದರೂ ಹಂಚುವಿಕೆಗೆ ಒಳಪಟ್ಟರಲಿ ಇಲ್ಲವೆ ಪ್ರತ್ಯೇಕ ಘಟಕಗಳ ಕೈಯಲ್ಲಿರಲಿ ಅದು ಒಂದೇ ಪ್ರದೇಶವಾಗಿರುತ್ತದೆ. +ಏನೇ ಆಗಲಿ, ಸುಂಕ ವಿಧಿಸುವ ಉದ್ದೇಶಕ್ಕಾಗಿ ಆ ಇಡೀ ಭೂಪ್ರದೇಶವನ್ನು ಒಂದು ಘಟಕವೆಂದು ಪರಿಗಣಿಸಲಾಗುವುದು. +ಪ್ರತಿಯೊಂದು ವ್ಯಾಪಾರ ಮತ್ತು ಒಕ್ಕೂಟದಲ್ಲಿ ವ್ಯಾಪಾರ ಮತ್ತು ವಾಣಿಜ್ಯವನ್ನು ತಡೆಯಲು ಒಂದು ಘಟಕವು ಇನ್ನೊಂದು ಘಟಕದ ವಿರುದ್ಧ ನಿರೋಧಕಗಳನ್ನು ರಚಿಸುವುದನ್ನು ತಡೆಯುವ ಅಧಿಕಾರ ಮತ್ತು ನಿರೋಧಕ ಶಕ್ತಿ ಇರುತ್ತದೆ. +ಅಮೆರಿಕ ಸಂವಿಧಾನದ 1 ನೆಯ ಅನುಚ್ಛೇದದ ೯ನೆಯ ವಿಭಾಗದ ಪ್ರಕಾರ ಒಂದು ರಾಜ್ಯವು ತನ್ನ ರಾಜ್ಯಕ್ಕೆ ವಸ್ತುಗಳನ್ನು ಆಮದು ಮತ್ತು ರಫ್ತು ಮಾಡಿಕೊಳ್ಳುವುದನ್ನು ತಪ್ಪಿಸುವ, ಅಥವಾ ತನ್ನ ಎಲ್ಲೆಗಳಿಂದ ಹೊರಗೆ ಹೋಗುವ ಅಥವಾ ಒಳಗೆ ಪ್ರವೇಶಿಸುವ ಸರಕುಗಳ ಮೇಲೆ ಆಮದು ಅಥವಾ ರಫ್ತು ತೆರಿಗೆ ಹೇರುವುದನ್ನು ನಿಷೇಧಿಸಲಾಗಿದೆ. +11 ನೆಯ ಅನುಚ್ಛೇದದ ೮ (೩) ನೆಯ ವಿಭಾಗದಲ್ಲಿ ರಾಜ್ಯಗಳು ಮತ್ತು ಒಕ್ಕೂಟದ ನಡುವೆ ವ್ಯಾಪಾರ ಅಥವಾ ವಾಣಿಜ್ಯವನ್ನು ಕ್ರಮಪಡಿಸುವ ಅಧಿಕಾರವನ್ನು ಫೆಡರಲ್‌ ಸರಕಾರಕ್ಕೆ ನೀಡಲಾಗಿದೆ. +ಆಸ್ಟ್ರೇಲಿಯದಲ್ಲಿ ಸಂವಿಧಾನದ ೯೨ ನೆಯ ವಿಭಾಗದ ಪ್ರಕಾರ ರಾಜ್ಯಗಳು ಮತ್ತು ಫೆಡರಲ್‌ಸರಕಾರಗಳು ಸಂವಿಧಾನದ ೯೨ ನೆಯ ವಿಧಿಯಲ್ಲಿ ನೀಡಲಾದ “ರಾಜ್ಯಗಳ ನಡುವಣ ವಾಣಿಜ್ಯ ಮತ್ತು ವ್ಯಾಪಾರ, ಅದು ಆಂತರಿಕ ಸಾಗಾಣಿಕೆಯ ಮೂಲಕವಾಗಿರಲಿ ಅಥವಾ ಸಮುದ್ರಯಾನದ ಮೂಲಕವಾಗಿರಲಿ,ಅದು ಸಂಪೂರ್ಣವಾಗಿ ಮುಕ್ತವಾಗಿರ ತಕ್ಕದ್ದು”. +ಎಂಬ ಮೂಲಭೂತ ರಕ್ಷಣೆಯ ಉಲ್ಲಂಘನೆಯಾಗದಂತೆ ಕ್ರಮಪಡಿಸುವ ಅಧಿಕಾರ ಪಡೆದಿದ್ದು ಅದನ್ನು ಚಲಾಯಿಸಲು ಬದ್ಧವಾಗಿವೆ. +ಕೆನಡಾದ ೧೨೧ ನೆಯ ವಿಭಾಗದ ಪ್ರಕಾರ ಯಾವುದೇ ಪ್ರಾಂತ್ಯದಲ್ಲಿ “ಬೆಳೆದ, ಉತ್ಪಾದಿಸಲಾದ ಅಥವಾ ಸಿದ್ಧಪಡಿಸಲಾದ ವಸ್ತುಗಳಿಗೆ ಒಕ್ಕೂಟ ಸ್ಥಾಪಿತವಾದಾಗಿನಿಂದ ಮತ್ತು ನಂತರ, ಇತರ ಪ್ರತಿಯೊಂದು ಪ್ರಾಂತ್ಯದೊಳಗೆ ಪ್ರವೇಶ ನೀಡತಕ್ಕದ್ದು”. +ಭಾರತ ಸಂವಿಧಾನದಲ್ಲಿ ಸಂಯುಕ್ತ ರಾಜ್ಯದೊಳಗೆ ವ್ಯಾಪಾರ ಮತ್ತು ವಾಣಿಜ್ಯ ಸ್ವಾತಂತ್ರ್ಯದ ಸಂಬಂಧವಾದ ವಿಧಿಗಳನ್ನು ೨೯೭ ನೆಯ ವಿಭಾಗದಲ್ಲಿ ಹೇಳಲಾಗಿದೆ. +ಅದರಲ್ಲಿ ಹೇಳಿರುವಂತೆ:“೨೯೭, (೧) ಯಾವುದೇ ಪ್ರಾಂತೀಯ ಶಾಸಕಾಂಗ ಅಥವಾ ಸರಕಾರವು ಈ ಕೆಳಗೆ ಹೇಳಿದಂತೆ-(ಅ) ಪ್ರಾಂತೀಯ ಶಾಸನಾಧಿಕಾರ ಪಟ್ಟಿಯಲ್ಲಿ ನಮೂದಿಸಲಾಗಿದೆಯೆಂಬ ಕಾರಣದಿಂದ ಪ್ರಾಂತ್ಯದೊಳಗೆ ವ್ಯಾಪಾರ ಮತ್ತು ವಾಣಿಜ್ಯದ ವಿಷಯದಲ್ಲಿ, ಅಥವಾ ವಸ್ತುಗಳ ಉತ್ಪಾದನೆ, ಸರಬರಾಜುಮತ್ತು ವಿತರಣೆಯ ವಿಷಯದಲ್ಲಿ ಯಾವುದೇ ಕಾನೂನು ಮಾಡುವ ಅಥವಾ ನಿಷೇಧಿಸುವ ಇಲ್ಲವೇ ಯಾವುದೇ ಕಾರ್ಯಾಂಗ ಚರ್ಯೆಯನ್ನು ತೆಗೆದುಕೊಳ್ಳುವ ಅಥವಾ ಪ್ರವೇಶವನ್ನು ನಿರ್ಬಂಧಿಸುವ ಅಥವಾ ಪ್ರಾಂತ್ಯದಿಂದ ಯಾವುದೇ ವಿಧದ ಅಥವಾ ವಿವರಣೆಯ ಸರಕುಗಳನ್ನು ರಫ್ತು ಮಾಡುವುದನ್ನುನಿರ್ಬಂಧಿಸುವಂತಿಲ್ಲ . +(ಬ) ಈ ಕಾಯ್ದೆಯಲ್ಲಿರುವ ಯಾವುದೇ ವಿಧಿಯ ಆಧಾರದ ಮೇಲೆ ಪ್ರಾಂತ್ಯದಲ್ಲಿ ಸಿದ್ಧಪಡಿಸಿದ ಅಥವಾ ಉತ್ಪಾದಿಸಿದ ಯಾವುದೇ ಸರಕುಗಳು ಮತ್ತು ಈ ರೀತಿ ಸಿದ್ಧಪಡಿಸದ ಅಥವಾ ಉತ್ಪಾದಿಸದ ವಸ್ತುಗಳ ನಡುವೆ ಮೊದಲಿನ ವರ್ಗದ ಪರವಾಗಿ ತಾರತಮ್ಯ ಮಾಡುವಂತಿಲ್ಲ. +ಅಥವಾ ಪ್ರಾಂತ್ಯದ ಹೊರಗಡೆ ಸಿದ್ಧಪಡಿಸಲಾದ ಅಥವಾ ಉತ್ಪಾದಿಸಲಾದ ಸರಕುಗಳ ವಿಷಯದಲ್ಲಿ ಒಂದು ಪ್ರದೇಶದಲ್ಲಿ ಉತ್ಪಾದಿಸಲಾದ ಅಥವಾ ಸಿದ್ಧಪಡಿಸಲಾದ ವಸ್ತುಗಳು ಮತ್ತು ಇನ್ನೊಂದು ಪ್ರದೇಶದಲ್ಲಿ ಸಿದ್ಧಪಡಿಸಲಾದ ಅಥವಾ ಉತ್ಪಾದಿಸಲಾದ ಅದೇ ತರಹದ ವಸ್ತುಗಳ ನಡುವೆ ತಾರತಮ್ಯ ಮಾಡುವಂತಿಲ್ಲ. +(೨) ಇದಕ್ಕೆ ವಿರೋಧವಾಗಿ ಜಾರಿ ಮಾಡಲಾದ ಯಾವುದೇ ಕಾನೂನಿನಲ್ಲಿ ವಿರೋಧವಾಗಿರುವಷ್ಟು ಭಾಗ ಅಸಿಂಧುವಾಗುತ್ತದೆ”. +ವ್ಯಾಪಾರ ಮತ್ತು ವಾಣಿಜ್ಯದ ಸ್ವಾತಂತ್ರ್ಯ ಪ್ರಾಂತ್ಯಗಳಿಗೆ ಮಾತ್ರ ಸೀಮಿತವಾಗಿದೆ ಎಂಬ ಅಂಶ ಈ ವಿಭಾಗದ ವಿಧಿಗಳಿಂದ ಸ್ಪಷ್ಟವಾಗುತ್ತದೆ. +ಎಂದರೆ, ಭಾರತೀಯ ಸಂಸ್ಥಾನಗಳು ಪ್ರಾಂತ್ಯಗಳಿಂದ ಬರುವ ಸರಕುಗಳ ಪ್ರವೇಶವನ್ನು ಸಂಪೂರ್ಣವಾಗಿ ನಿಷೇಧಿಸಬಹುದು ಅಥವಾ ಅವುಗಳ ಮೇಲೆ ತೆರಿಗೆ ವಿಧಿಸಬಹುದು. +ಇದು ಫೆಡರಲ್‌ ಒಕ್ಕೂಟದಲ್ಲಡಗಿರುವ ಮೂಲಭೂತ ವಿಚಾರಕ್ಕೆ ವಿರೋಧವಾಗಿದೆ. +ಒಕ್ಕೂಟದ ಒಂದು ಘಟಕವು ಇನ್ನೊಂದು ಘಟಕದೊಂದಿಗೆ ವಾಣಿಜ್ಯ ಸಮರವನ್ನು ನಡೆಸುವುದಕ್ಕೆ ಅವಕಾಶ ಕೊಡುವುದೆಂದರೆ ಒಕ್ಕೂಟ ತತ್ವದ ನಿರಾಕರಣೆಯೇ ಸರಿ. +(೪) ಒಕ್ಕೂಟ ವ್ಯವಸ್ಥೆಯಲ್ಲಿ ಜನತೆಯ ಸಂಬಂಧ ಈ ಪ್ರಶ್ನೆಯನ್ನು ಎತ್ತಿಕೊಳ್ಳುವ ಮುನ್ನ ಕೆಲವು ವ್ಯತ್ಯಾಸಗಳನ್ನು ತಿಳಿಸುವ ಮೂಲಕ ಹಿನ್ನೆಲೆಯನ್ನು ಒದಗಿಸುವುದು ಅವಶ್ಯ. +"ರಾಜ್ಯ' ಮತ್ತು "ಸಮಾಜ' ಎಂಬ ಪದಗಳನ್ನು ಅವೆರಡರಲ್ಲಿ ಸಾಮ್ಯವಿಲ್ಲ ಅಥವಾ ವಿರೋಧವಿದೆ ಎಂಬ ಅರ್ಥದಲ್ಲಿ ಬಳಸಲಾಗುತ್ತಿದೆ. +ಆದರೆ ರಾಜ್ಯ ಮತ್ತು ಸಮಾಜಗಳನಡುವೆ ಅಂತಹ ಮೂಲಭೂತ ವ್ಯತ್ಯಾಸವೇನೂ ಇಲ್ಲ. +ರಾಜ್ಯದ ಸಮಗ್ರ ಅಧಿಕಾರವನ್ನು ಕಾನೂನಿನ ಅಧಿಕಾರದ ಮೂಲಕ ಚಲಾಯಿಸಲಾಗುವುದೆಂಬುದೇನೋ ನಿಜ, ಆದರೆ ಸಮಾಜ ತನ್ನ ಸಮಗ್ರ ಅಧಿಕಾರಗಳನ್ನು ಜಾರಿಗೊಳಿಸಲು ಧಾರ್ಮಿಕ ಮತ್ತು ಸಾಮಾಜಿಕ ಅಧಿಕಾರವನ್ನವಲಂಬಿಸುತ್ತದೆ. +ಆದ್ದರಿಂದ ರಾಜ್ಯ ಮತ್ತು ಸಮಾಜದ ನಡುವೆ ಪರಸ್ಪರ ವ್ಯತ್ಯಾಸವಿಲ್ಲ. +ಎರಡನೆಯದಾಗಿ, ಸಮಾಜದಲ್ಲಿರುವ ಜನರು ರಾಜ್ಯದ ಸದಸ್ಯರೂ ಆಗಿರುತ್ತಾರೆ. +ಈ ಕಾರಣದಿಂದಲೂ ರಾಜ್ಯ ಮತ್ತು ಸಮಾಜದ ನಡುವೆ ವ್ಯತ್ಯಾಸವಿರುವುದಿಲ್ಲ. +ಆದಾಗ್ಯೂ ಒಂದು ವ್ಯತ್ಯಾಸವಿದೆ, ಆದರೆ ಅದು ಇನ್ನೊಂದು ವಿಧವಾದದ್ದು. +ಸಮಾಜ ವಾಸಿಸುವ ಮತ್ತು ಅದರ ಸದಸ್ಯನಾಗಿರುವ ಪ್ರತಿಯೊಬ್ಬ ವ್ಯಕ್ತಿಯು ರಾಜ್ಯದ ಸದಸ್ಯನಾಗಿರಬೇಕಾಗಿಲ್ಲ. + ಒಂದು ರಾಜ್ಯದ ಮೇರೆಗಳ ಒಳಗಡೆ ವಾಸಿಸುವವರು ಮಾತ್ರ ಆ ರಾಜ್ಯಕ್ಕೆ ಸೇರಿದವರಾಗಿರ ಬೇಕಾಗಿಲ್ಲ. +ರಾಜ್ಯಕ್ಕೆ ಸೇರಿದವರು ಮತ್ತು ಸೇರದೇ ಇರುವವರ ನಡುವಣ ವ್ಯತ್ಯಾಸ ಬಹಳ ನಿರ್ಣಾಯಕವಾಗಿದ್ದು ಅದರ ಪರಿಣಾಮಗಳು ಮಹತ್ವದವುಗಳಾಗಿರುವುದರಿಂದ ಅದನ್ನು ಮರೆಯಬಾರದು. +ರಾಜ್ಯಕ್ಕೆ ಸೇರಿದವರು ಅದರ ಸದಸ್ಯರಾಗಿದ್ದು ಸದಸ್ಯತ್ವದ ಎಲ್ಲಾ ಲಾಭಗಳನ್ನು ಎಂದರೆ ರಾಜ್ಯದ ಮೇಲೆ ಮತ್ತು ಅದರ ವಿರುದ್ಧ ಸಮಗ್ರ ಹಕ್ಕುಗಳು ಮತ್ತು ಕರ್ತವ್ಯಗಳನ್ನು ಹೊಂದಿರುತ್ತಾರೆ. +ಕರ್ತವ್ಯಗಳ ದೃಷ್ಟಿಯಿಂದ ಈ ಸಂಬಂಧವು ಪ್ರಜೆ ಎಂಬ ಪದದಿಂದ ಸುಸ್ಪಷ್ಟವಾಗುವುದು. +ಹಕ್ಕುಗಳು ವ್ಯಕ್ತವಾಗುವುದು. +ಈ ವ್ಯತ್ಯಾಸದ ಪರಿಣಾಮವಾಗಿ ಯಾರು ರಾಜ್ಯಕ್ಕೆ ಸೇರದೆ ಅದರಲ್ಲಿ ವಾಸಿಸುತ್ತಿರುವರೋ ಅವರಿಗೆ ಸದಸ್ಯತ್ವದ ಲಾಭ ದೊರೆಯದೆ ಅವರು ವಿದೇಶಿಯರಾಗಿದ್ದು ಪೌರರಲ್ಲ ಎಂದು ಅರ್ಥ. +ಸೈದ್ಧಾಂತಿಕವಾಗಿ, ಒಂದು ರಾಜ್ಯದಲ್ಲಿ ವಿದೇಶೀಯರು ಮತ್ತು ಪೌರರ ನಡುವೆ ವ್ಯತ್ಯಾಸ ಮಾಡುವುದು ಸುಲಭದ ಕೆಲಸವೆಂದು, ವಾಸ್ತವಿಕವಾಗಿ ಅದು ಯಾಂತ್ರಿಕ ಕೆಲಸವೆಂದು, ತೋರುತ್ತದೆ. +ಅದರಲ್ಲಿಯೂ ಏಕಾತ್ಮಕ ರಾಜ್ಯದ ವಿಷಯದಲ್ಲಿ ಇದು ನಿಜ ಸಂಗತಿ. +ಇಲ್ಲಿ ಒಂದು ಸರಳ ಪ್ರಶ್ನೆ ಇದೆ. +ಈ ರಾಜ್ಯ ಮತ್ತು ಇನ್ನಾವುದೇ ಅಥವಾ ಎಲ್ಲಾ ವಿದೇಶಿ ರಾಜ್ಯಗಳ ನಡುವಣ ಸಂಬಂಧವೇನು ? +ಸಂಯುಕ್ತ ರಾಜ್ಯದಲ್ಲಿ ಈ ವಿಷಯ ಇನ್ನೂ ಜಟಿಲವಾಗಿದೆ. +ಏಕೆಂದರೆ ಇಲ್ಲಿ ಪ್ರತಿಯೊಬ್ಬ ವ್ಯಕ್ತಿಯೂ ದ್ವಿವಿಧವಾದ ಸಂಬಂಧ ಹೊಂದಿರುತ್ತಾನೆ. +ಒಂದು ಕಡೆ ಅವನು ಇಡೀ ಸಂಯುಕ್ತ ರಾಜ್ಯದೊಂದಿಗೆ ಕೆಲವು ಸಂಬಂಧಗಳನ್ನು ಹೊಂದಿರುತ್ತಾನೆ; +ಇನ್ನೊಂದು ಕಡೆ ತಾನು ವಾಸಿಸುತ್ತಿರುವ (ಘಟಕ) ರಾಜ್ಯದೊಡನೆ ಕೆಲವು ಸಂಬಂಧಗಳನ್ನು ಹೊಂದಿರುತ್ತಾನೆ. +ಸಂಯುಕ್ತ ರಾಜ್ಯದಲ್ಲಿ ಒಬ್ಬ ವ್ಯಕ್ತಿಯ ಸ್ಥಾನಮಾನವನ್ನುನಿರ್ಣಯಿಸಲು ಹೊರಟಾಕ್ಷಣವೇ ಒಂದಲ್ಲ, ಅನೇಕ ಪ್ರಶ್ನೆಗಳಿಗೆ ಉತ್ತರ ಕೊಡಬೇಕಾಗುತ್ತದೆ; +ವಿದೇಶದೊಡನೆ ಇರುವ ಸಂಬಂಧದ ವ್ಯತಿರಿಕ್ತ ಸಂಯುಕ್ತ ರಾಜ್ಯದೊಡನೆ ಈ ವ್ಯಕ್ತಿಯ ಸಂಬಂಧವೇನು ? + ತಾನು ವಾಸಿಸುತ್ತಿರುವ (ಘಟಕ) ರಾಜ್ಯದೊಡನೆ ಈ ವ್ಯಕ್ತಿಯ ಸಂಬಂಧವೇನು ? + ಇದಕ್ಕೂ ಮುಂದೆ ಹೋಗಿ ಕೇಳುವುದಾದರೆ ಒಬ್ಬ ವ್ಯಕ್ತಿ ಒಂದು (ಘಟಕ) ರಾಜ್ಯದ ಪೌರನಾಗಿ ಸಂಯುಕ್ತ ರಾಜ್ಯದ ಪೌರನಾಗಿರದೇ ಇರುವುದು ಸಾಧ್ಯವೇ ? +ಕೆನಡಾ ಮತ್ತು ಆಸ್ಟೇಲಿಯಾ ದೇಶಗಳು ಸಂಯುಕ್ತ ರಾಜ್ಯಗಳಾದಾಗ ಇಂತಹ ಪ್ರಶ್ನೆಗಳು ಉದ್ಭವಿಸಲೇಇಲ್ಲ. +ಏಕೆಂದರೆ ತಮ್ಮ ತಮ್ಮ ಘಟಕಗಳಲ್ಲಿ ವಾಸಿಸುತ್ತಿದ್ದವರು ಸಂಯುಕ್ತ ರಾಜ್ಯ ಸ್ಥಾಪಿತವಾದ ಸಮಯದಲ್ಲಿ ಜನ್ಮತಃ ಬ್ರಿಟಷ್‌ ಪ್ರಜೆಗಳಾಗಿದ್ದರು. +ಸಂಯುಕ್ತ ರಾಜ್ಯದ ಸ್ಥಾಪನೆಯ ನಂತರ ಪ್ರಜಾ ಹಕ್ಕನ್ನು ನೀಡುವ ಅಧಿಕಾರವನ್ನು ಸಂಯುಕ್ತ ರಾಜ್ಯಕ್ಕೆ ಕೊಡಲಾಯಿತು. +ತತ್ಪರಿಣಾಮವಾಗಿ ಸಂಯುಕ್ತ ರಾಜ್ಯದಿಂದ ಪ್ರಜಾ ಹಕ್ಕನ್ನು ಪಡೆದವನು ಸಂಯುಕ್ತ ರಾಜ್ಯದ ನಾಗರಿಕನಾಗುತ್ತಾನೆ. +ಆ ಕಾರಣದಿಂದಲೇ ಅವನು ಅದರ ಪ್ರತಿಯೊಂದು ಘಟಕದ ನಾಗರೀಕನೂ ಆಗಿರುತ್ತಾನೆ. +ಇಂತಹ ಪ್ರಶ್ನೆಗಳು ಅಮೆರಿಕ ಸಂಯುಕ್ತ ಸಂಸ್ಥಾನ, ಸ್ವಿಟ್ಟರ್‌ಲ್ಯಾಂಡ್‌ ಮತ್ತು ಜರ್ಮನಿಯಲ್ಲಿ ಉದ್ಭವಿಸಿದವು . +ಏಕೆಂದರೆ, ಈ ಸಂಯುಕ್ತ ರಾಜ್ಯಗಳ ರಚನೆಗೆ ಮುಂಚೆ ಅವುಗಳ ಘಟಕಗಳು ಸಾರ್ವಭೌಮರಾಜ್ಯಗಳಾಗಿದ್ದವು . +ಅವುಗಳ ಪ್ರಜೆಗಳು ವಿದೇಶೀಯರಾಗಿದ್ದರು. +ಆದರೆ ಈ ಎಲ್ಲಾ ಪ್ರಸಂಗಗಳಲ್ಲಿ ಸಂಯುಕ್ತ ರಾಜ್ಯದ ಅಂಗವಾಗಿ ಏಕರೂಪವಾದ ನಾಗರಿಕತ್ವ ಅಥವಾ ಪೌರತ್ವವನ್ನು ಸ್ಥಾಪಿಸಿದುದು ಗಮನಾರ್ಹವಾಗಿದೆ. +ಒಂದು ಘಟಕದ ಪೌರತ್ವದಲ್ಲಿ ಸಂಯುಕ್ತ ರಾಜ್ಯದ ಪೌರತ್ವವೂ ಅಡಗಿದೆ ಎಂಬ ನಿಯಮವನ್ನು ಸ್ಥಿರೀಕರಿಸಲಾಯಿತು. +ಭಾರತದ ಒಕ್ಕೂಟ ವ್ಯವಸ್ಥೆಯ ಸ್ಥಿತಿ ಅಮೆರಿಕ ಸಂಯುಕ್ತ ಸಂಸ್ಥಾನ, ಜರ್ಮನಿ ಮತ್ತು ಸ್ವಿಟ್ಟರ್‌ಲ್ಯಾಂಡ್‌ಗಳೊಂದಿಗೆ ಹೋಲಿಸಿದಾಗ ಏಕರೀತಿಯಾಗಿದೆ. +ಭಾರತೀಯ ಸಂಸ್ಥಾನದ ಪ್ರಜೆಯು ಬ್ರಿಟಿಷ್‌ ಭಾರತ ಮತ್ತು ಇನ್ನೊಂದು ಭಾರತೀಯ ಸಂಸ್ಥಾನದಲ್ಲಿ ವಿದೇಶೀಯನಾಗುತ್ತಾನೆ. +ಬ್ರಿಟಿಷ್‌ಭಾರತ ಪ್ರಾಂತ್ಯದ ಪ್ರಜೆಯು ಪ್ರತಿಯೊಂದು ಭಾರತೀಯ ಸಂಸ್ಥಾನದಲ್ಲಿ ವಿದೇಶೀಯನಾಗುತ್ತಾನೆ. +ಈ ವಿಷಯದಲ್ಲಿ ಭಾರತದ ಒಕ್ಕೂಟ ವ್ಯವಸ್ಥೆ ಏನು ಮಾಡಲಿದೆ ? +ಅದು ಸಂಯುಕ್ತ ರಾಜ್ಯದ ಸದಸ್ಯರಾಗುವ ಎಲ್ಲಾ ಘಟಕಗಳಿಗಾಗಿ ಒಂದು ಏಕರೂಪ ಪೌರತ್ವವನ್ನು ನಿರ್ಮಿಸುವುದೇ ? +ಇಲ್ಲವೆಂದೇ ಇದಕ್ಕೆ ಉತ್ತರ ಕೊಡಬೇಕಾಗುತ್ತದೆ. +ಒಬ್ಬ ಬ್ರಿಟಿಷ್‌ ಭಾರತೀಯನು ತಾನು ಮೊದಲಿದ್ದಂತೆ ಪ್ರತಿಯೊಂದು ಭಾರತೀಯ ರಾಜ್ಯ ಅಥವಾ ಸಂಸ್ಥಾನದಲ್ಲಿ ಅದು ಫೆಡರಲ್‌ ರಾಜ್ಯವಾಗಿದ್ದರೂ ಅಲ್ಲೂ ಅವನು ವಿದೇಶೀಯನಾಗಿರುತ್ತಾನೆ. +ಇದೇ ರೀತಿ ಸಂಯುಕ್ತ ರಾಜ್ಯಕ್ಕೆ ಸೇರಿರುವ ಭಾರತೀಯ ಸಂಸ್ಥಾನದ ಪ್ರಜೆಯು ಪ್ರತಿಯೊಂದು ಬ್ರಿಟಷ್‌ ಭಾರತ ಪ್ರಾಂತ್ಯದಲ್ಲಿ ಸಂಯುಕ್ತ ರಾಜ್ಯ ಸ್ಥಾಪನೆಯಾದ ನಂತರವೂ ತಾನು ಮೊದಲಿದ್ದಂತೆ ವಿದೇಶೀಯನಾಗಿಯೇ ಉಳಿಯುತ್ತಾನೆ. +ಆದ್ದರಿಂದ ಇದರಲ್ಲಿ ಸಾಮಾನ್ಯ ಅಥವಾ ಏಕರೂಪ ರಾಷ್ಟೀಯತೆ ಇಲ್ಲ. +ಸಂಯುಕ್ತ ರಾಜ್ಯದ ಮೂಲ ತತ್ವವೇನೆಂದರೆ ಸಂಯುಕ್ತ ರಾಜ್ಯಕ್ಕೆ ಸೇರಿದ ಸಂಸ್ಥಾನದ ರಾಜನು ಆ ರಾಜ್ಯದ ರಾಜನಾಗಿಯೇ ಉಳಿಯುವುದಲ್ಲದೆ ಆತನ ಪ್ರಜೆಗಳೂ ಆ ಪ್ರಭುತ್ವದ ಪ್ರಜೆಗಳಾಗಿ ಉಳಿಯುವರು. +ಅದೇ ರೀತಿ ಸಂಯುಕ್ತ ರಾಜ್ಯದ ಪ್ರಾಂತ್ಯಗಳಿಗೆ ಸಾರ್ವಭೌಮ ಪ್ರಭು ಆಳುವವನಾಗಿರುವವನು ಮತ್ತು ಅಲ್ಲಿಯ ಪ್ರಜೆಗಳು ಆತನ ಪ್ರಜೆಗಳಾಗಿಯೇ ಉಳಿಯುವವರು. +ಪೌರತ್ವದಲ್ಲಿನ ವ್ಯತ್ಯಾಸ ಎರಡು ನಿರ್ದಿಷ್ಟ ವಿಧಗಳಲ್ಲಿ ವ್ಯಕ್ತವಾಗುತ್ತದೆ. +ಮೊದಲನೆಯದಾಗಿ, ಅದು ಸೇವೆಯ ಹಕ್ಕಿನ ರೂಪದಲ್ಲಿ ವ್ಯಕ್ತವಾಗುತ್ತದೆ. +ಒಕ್ಕೂಟ ವ್ಯವಸ್ಥೆಯ ಪ್ರಭುತ್ವದ ಆಡಳಿತದಡಿಯಲ್ಲಿ ಸ್ಥಾಪಿತವಾಗುತ್ತಿರುವುದರಿಂದ, ಪ್ರಭುತ್ವದ ಪ್ರಜೆಗಳಾಗಿರುವವರು ಮಾತ್ರ ಅದರಲ್ಲಿ ಕೆಲಸ ಮಾಡಲು ಅರ್ಹರಾಗಿರುತ್ತಾರೆ. +ಇದನ್ನು ೨೬೨ ನೆಯ ವಿಭಾಗದಲ್ಲಿ ಮಾನ್ಯ ಮಾಡಲಾಗಿದೆ. +ಇದು ನಿಜವಾಗಿಯೂ ಸಂಸ್ಥಾನಗಳ ಪ್ರಜೆಗಳಿಗೆ ಅನ್ಯಾಯ ಮಾಡಿದಂತಾಗುತ್ತದೆ. +ಪೌರತ್ವದಲ್ಲಿನ ವ್ಯತ್ಯಾಸದ ತರ್ಕಬದ್ಧ ಪರಿಣಾಮವಾದ ಈ ಅನ್ಯಾಯವನ್ನು ತಡೆಯಲು ಭಾರತೀಯ ಸಂಸ್ಥಾನಗಳ ಪ್ರಜೆಗಳು ಸಂಯುಕ್ತ ರಾಜ್ಯದಲ್ಲಿ ಸೇವೆ ಸಲ್ಲಿಸಲು ಅರ್ಹರೆಂದು ಘೋಷಿಸಲು ಸೆಕ್ರೆಟರಿ ಆಫ್‌ ಸ್ಟೇಟ್‌ಇ ವರಿಗೆ ಅಧಿಕಾರ ನೀಡಲಾಗಿದೆ. +ಇದೊಂದು ಅಸಂಗತ ಪರಿಸ್ಥಿತಿ. +ಇದರಿಂದ ಭಾರತೀಯ ಸಂಸ್ಥಾನದ ಪ್ರಜೆಗಳಿಗೆ ಆಗುವ ಅನ್ಯಾಯವನ್ನು ತಗ್ಗಿಸಿದಂತಾದರೂ, ಭಾರತೀಯ ಸಂಸ್ಥಾನಗಳಲ್ಲಿ ಬ್ರಿಟಿಷ್‌ ಭಾರತೀಯರಿಗೆ ಉದ್ಯೋಗದ ಹಕ್ಕಿನ ವಿಷಯದಲ್ಲಿ ಆಗಿರುವ ಅನ್ಯಾಯ ಮುಂದುವರಿದಿದೆ. +ಏಕೆಂದರೆ, ಬ್ರಿಟಿಷ್‌ಭಾರತೀಯರು ಭಾರತೀಯ ಸಂಸ್ಥಾನಗಳಲ್ಲಿ ಸೇವೆಗೆ ಅರ್ಹರು ಎಂದು ಘೋಷಿಸಲು ಭಾರತೀಯ ಸಂಸ್ಥಾನಗಳಿಗೆ ಬಾಧ್ಯತೆ ಇರುವುದಿಲ್ಲ. +ಅದೇನೇ ಇದ್ದರೂ ಸಂಯುಕ್ತ ರಾಜ್ಯದಲ್ಲಿ ಇಂತಹ ಅಸಂಬದ್ಧತೆ ಇರುವುದರಿಂದ ಈ ಸಂಯುಕ್ತ ರಾಜ್ಯವು ವಿಲಕ್ಷಣವಾದದ್ದಾಗಿದೆ. +ಎರಡನೆಯದಾಗಿ, ಪೌರತ್ವದಲ್ಲಿನ ವ್ಯತ್ಯಾಸವು 111 ನೆಯ ಅನುಸೂಚಿಯಲ್ಲಿ ವಿಧಿಸಲಾದ ಶಾಸಕಾಂಗದ ಸದಸ್ಯರು ತೆಗೆದುಕೊಳ್ಳಬೇಕಾದ ಪ್ರಮಾಣ ವಚನದಲ್ಲಿಯೂ ವ್ಯಕ್ತವಾಗುತ್ತದೆ. +ಬ್ರಿಟಿಷ್‌ ಪ್ರಜೆಯಾಗಿರುವ ಸದಸ್ಯನು ತೆಗೆದುಕೊಳ್ಳಬೇಕಾದ ಪ್ರಮಾಣ ವಚನ ಈ ರೀತಿ ಇದೆ . +“ನಾನು, ವಿಧಾನ ಪರಿಷತ್ತಿನ (ಅಥವಾ ವಿಧಾನ ಸಭೆಯ) ಸದಸ್ಯನಾಗಿ ಚುನಾಯಿತ (ಅಥವಾನಾಮಕರಣ ಅಥವಾ ನೇಮಕ) ನಾಗಿದ್ದು, ನಾನು ನಿಜವಾದ ರಾಜಭಕ್ತಿ ಮತ್ತು ನಿಷ್ಠೆಯನ್ನು ಭಾರತದ ಚಕ್ರಾಧಿಪತಿ ಮಹಾಪ್ರಭು ದೊರೆಗಳಿಗೆ, ಅವರ ಹಕ್ಕುದಾರರು ಹಾಗೂ ಉತ್ತರಾಧಿಕಾರಿಗಳಿಗೆ ತೋರಿಸುತ್ತೇನೆ. +ಮತ್ತು ನಾನು ಈಗ ಕೈಗೊಳ್ಳುತ್ತಿರುವ ಕರ್ತವ್ಯವನ್ನು ನಿಷ್ಠೆಯಿಂದ ನಿರ್ವಹಿಸುತ್ತೇನೆ ಎಂದು ವಿಧಿವತ್ತಾಗಿ ಪ್ರಮಾಣ (ಸತ್ಯವಾಗಿ) ಮಾಡುತ್ತೇನೆ. +ಭಾರತೀಯ ಸಂಸ್ಥಾನದ ಅರಸನ ಪ್ರಜೆಯು ತೆಗೆದುಕೊಳ್ಳಬೇಕಾದ ಪ್ರಮಾಣ ವಚನ ಹೀಗಿದೆ . +"ನಾನು ವಿಧಾನ ಪರಿಷತ್ತಿನ (ಅಥವಾ ವಿಧಾನ ಸಭೆಯ) ಸದಸ್ಯನಾಗಿ (ಅಥವಾ ನಾಮಕರಣಅಥವಾ ನೇಮಕ) ನಾಗಿದ್ದು, ನಾನು ಅವರ ಹಕ್ಕುದಾರರು ಮತ್ತು ಉತ್ತರಾಧಿಕಾರಿಗಳಿಗೆ ನನ್ನ ನಿಷ್ಠೆ ಮತ್ತು ರಾಜಭಕ್ತಿಯನ್ನು ತೋರಿಸುತ್ತೇನೆ . + ನಾನು ಈಗ ಕೈಗೊಳ್ಳುತ್ತಿರುವ ಸ್ಥಾನದ ಕರ್ತವ್ಯವನ್ನು ನಿಷ್ಠೆಯಿಂದ ನಿರ್ವಹಿಸುತ್ತೇವೆಂದು ವಿಧಿವತ್ತಾಗಿ ಪ್ರಮಾಣ (ಸತ್ಯವಾಗಿ) ಮಾಡುತ್ತೇನೆ". +ಈ ಪ್ರಮಾಣ ವಚನದಿಂದ ಭಾರತೀಯ ಸಂಸ್ಥಾನದ ಪ್ರಜೆಯು ದ್ವಿವಿಧ ನಿಷ್ಠೆಯನ್ನು ಹೊಂದಿರುವುದು ಖಚಿತವಾಗುತ್ತದೆ. +ಅವನು ತನ್ನ ಸಂಸ್ಥಾನದ ಅರಸನಿಗೆ ಮತ್ತು (ಬ್ರಿಟನ್ನಿನ) ದೊರೆಗೂ ಸಹ ನಿಷ್ಠೆಯನ್ನು ಹೊಂದಿರುತ್ತಾರೆ. +ಮೇಲ್ನೋಟಕ್ಕೆ ಪರಿಸ್ಥಿತಿಯು ಅಮೆರಿಕ ಸಂಯುಕ್ತ ಸಂಸ್ಥಾನಗಳಿಗಿಂತ ಅಷ್ಟೇನೂ ಭಿನ್ನವಾಗಿಲ್ಲವೆಂದು ತೋರುತ್ತದೆ. +ಅಮೆರಿಕದಲ್ಲಿ ಒಬ್ಬ ವ್ಯಕ್ತಿ ಒಕ್ಕೂಟದ ಮತ್ತು ರಾಜ್ಯದ ನಾಗರಿಕನಾಗಿದ್ದು,ಎರಡೂ ಸರಕಾರಗಳಿಗೆ ನಿಷ್ಠೆ ಹೊಂದಿರುತ್ತಾನೆ. +ಪ್ರತಿಯೊಂದು ಸರಕಾರವು ಅವನ ನಿಷ್ಠೆಯನ್ನುಪಡೆಯುವ ಅಧಿಕಾರ ಹೊಂದಿದೆ. +ಆದರೆ ಎರಡರಲ್ಲೂ ಘರ್ಷಣೆಯುಂಟಾದಾಗ ಅವರ ನಿಷ್ಠೆಯಾರಿಗೆ ಇರುವುದು ಎಂಬ ಪ್ರಶ್ನೆ ಕೇಳಿದಾಗ ನಿಮಗೆ ಎರಡರಲ್ಲೂ ಇರುವ ವ್ಯತ್ಯಾಸ ತಿಳಿಯುವುದು. +ಈ ಪ್ರಶ್ನೆಯ ಸಂಬಂಧವಾಗಿ ಬ್ರೈಸ್‌ರವರು ಹೀಗೆ ಹೇಳುತ್ತಾರೆ. +ವಿಧೇಯತೆಯನ್ನು ಅಪೇಕ್ಷಿಸುವ ರಾಜ್ಯದ ಹಕ್ಕು, ಅದರ ವಿಷಯ ವ್ಯಕ್ತಿಗಿಂತ ವಿಶಾಲವಾದುದಾಗಿದೆ. +ಮೊದಲ ನೋಟದಲ್ಲಿ ರಾಜ್ಯದ ಪ್ರತಿಯೊಂದು ಕಾನೂನು, ರಾಜ್ಯದ ಪ್ರತಿಯೊಂದು ಅಧಿಕೃತ ಆದೇಶವೂ ನಾಗರಿಕನನ್ನು ಬಾಧ್ಯನನ್ನಾಗಿ ಮಾಡುತ್ತದೆ. +ಆದರೆ ರಾಷ್ಟೀಯ ಸರಕಾರಕ್ಕೆ ಸೀಮಿತವಾದ ಅಧಿಕಾರವಿದೆ. +ಅದು ಕೆಲವೇ ಉದ್ದೇಶಗಳಿಂದ ಅಥವಾ ಕೆಲವೇ ವಿಷಯಗಳ ಮೇಲೆ ಕಾನೂನು ಮಾಡಬಹುದು ಅಥವಾ ಆಜ್ಞಾಪಿಸಬಹುದು. +ಆದರೆ ತನ್ನ ಅಧಿಕಾರದ ಮಿತಿಯೊಳಗೆ ರಾಜ್ಯದ ಅಧಿಕಾರಕ್ಕಿಂತ ಅದರ ಅಧಿಕಾರ ಹೆಚ್ಚಾಗಿದ್ದು. +ರಾಜ್ಯದ ಅಧಿಕಾರಕ್ಕೆ ಅವಿಧೇಯತೆ ತೋರುವ ಅಪಾಯವಿದ್ದಾಗ್ಯೂ ಅದಕ್ಕೆ ವಿಧೇಯತೆ ತೋರಿಸಬೇಕಾಗುತ್ತದೆ. +“ರಾಜ್ಯದ ಶಾಸಕಾಂಗ ಅಥವಾ ಕಾರ್ಯಾಂಗದ ಯಾವುದೇ ಕಾರ್ಯ ಹಾಗೂ ಸಂವಿಧಾನ ಅಥವಾ ಸಂವಿಧಾನದನ್ವಯ ಮಾಡಲಾದ ರಾಷ್ಟೀಯ ಸರಕಾರದ ಕಾಯ್ದೆ ಇವುಗಳ ನಡುವೆ ಘರ್ಷಣೆ ಉಂಟಾದಾಗ ರಾಜ್ಯ ಸರಕಾರ ಸಂವಿಧಾನದ ವಿರುದ್ಧ ನಡೆದುಕೊಳ್ಳುವಂತಿಲ್ಲವಾದ್ದರಿಂದ, ಅದು ವಾಸ್ತವಿಕವಾಗಿ ರಾಜ್ಯ ಸರಕಾರದ ಕಾರ್ಯವಾಗಿರದೆ, ಸರಕಾರದ ವತಿಯಿಂದ ಮಾಡಲಾದ ಕಾರ್ಯಎಂದು ತಪ್ಪಾಗಿ ನಿರೂಪಣೆ ಮಾಡಿದ್ದಾಗಿರುತ್ತದೆ. +ಆದ್ದರಿಂದ ಅದು ಕಾನೂನಿನ ಪ್ರವರ್ತನೆಯಿಂದ ಅನೂರ್ಜಿತವಾಗುವುದು. +ರಾಜ್ಯದ ಆದೇಶದ ನೆಪದ ಮೇಲೆ ಸಂಯುಕ್ತ ರಾಜ್ಯದ ಅಧಿಕಾರಕ್ಕೆ ವಿಧೇಯತೇಯತೆ ತೋರದವರು ಒಕ್ಕೂಟದ ವಿರುದ್ಧ ಬಂಡುಕೋರರಾಗಿದ್ದು ಅಂತಹವರು ಬಲವಂತವಾಗಿ ವಿಧೇಯತೆಯನ್ನು ತೋರಿಸುವಂತೆ ಮಾಡಬೇಕಾಗುತ್ತದೆ. +ರಾಜ್ಯ ಮತ್ತು ವ್ಯಕ್ತಿಗಳು ಸಹ ಅಪರಾಧಿಗಳಾಗಿದ್ದರೂ ಸಹಅಂತಹ ಬಂಡುಕೋರರನ್ನು ಬಲವಂತಪಡಿಸುವುದು ರಾಜ್ಯದ ವಿರುದ್ಧವಾಗಿರದೇ ಅವರ ಮೇಲೆನ ವ್ಯಕ್ತಿಗತವಾಗಿರುತ್ತದೆ. +ಒಂದು ರಾಜ್ಯವು ಸಂಯುಕ್ತ ರಾಜ್ಯದಿಂದ ಹಿಂದಕ್ಕೆ ಸರಿಯುವಂತಿಲ್ಲ ಅಥವಾ ಬಿಟ್ಟುಹೋಗುವಂತಿಲ್ಲ ಮತ್ತು ಅದರ ವಿರುದ್ಧ ದಂಗೆ ಏಳುವಂತಿಲ್ಲ. +ಅದೇ ರೀತಿ ಅದನ್ನು ಬಲವಂತಪಡಿಸಲೂ ಬರುವಂತಿಲ್ಲ”. +ನಿಷ್ಠೆಯ ವಿಷಯದಲ್ಲಿ ಘರ್ಷಣೆಯುಂಟಾದಾಗ ಭಾರತದ ಒಕ್ಕೂಟ ಸರಕಾರವು ಒಕ್ಕೂಟ ಸರಕಾರ ತೆಗೆದುಕೊಂಡ ನಿಲುವನ್ನು ತೆಗೆದುಕೊಳ್ಳಲು ಸಾಧ್ಯವೇ ? +ಅಂತಹ ನಿಲುವು ಸಾಧ್ಯವಿಲ್ಲ ಎಂಬುದರಲ್ಲಿ ಸಂಶಯವಿಲ್ಲ, ಏಕೆಂದರೆ ದೊರೆಯ ಮೇಲಿನ ನಿಷ್ಠೆ ದೊರೆತನವನ್ನು ಏಳಿಸುತ್ತದೆ. +ಇದು ಅಪಾಯಕಾರಿಯಲ್ಲದಿದ್ದರೂ ಅತ್ಯಂತ ಅಸಂತೋಷಕರ ಪರಿಸ್ಥಿತಿ. +ಒಕ್ಕೂಟ ವ್ಯವಸ್ಥೆಯ ಸಾಮರ್ಥ್ಯಒಂದು ದೇಶದಲ್ಲಿ, ಇಡೀ ರಾಷ್ಟ್ರದ ಹೆಸರಿನಲ್ಲಿ ಅದರ ಒಮ್ಮತ ಇಚ್ಛೆಯ ಪರವಾಗಿ ಮಾತನಾಡುವಂತಹ ಮತ್ತು ಕಾರ್ಯ ಮಾಡುವಂತಹ ಒಂದೇ ಸರಕಾರವಿದ್ದರೆ ಅದು ಅತ್ಯಂತ ಬಲಶಾಲಿ ಸರಕಾರವಾಗುವುದೆನ್ನುವುದರಲ್ಲಿ ಸಂದೇಹವಿಲ್ಲ. +ಬಲಶಾಲಿ ಸರಕಾರ ಮಾತ್ರ ತುರ್ತು ಪರಿಸ್ಥಿತಿಯಲ್ಲಿ ಕಾರ್ಯ ನಿರ್ವಹಿಸಲು ಶಕ್ತವಾಗುವುದು. +ಯಾವ ದೇಶದಲ್ಲಿ ಶಕ್ತಿಯ ಪ್ರತ್ಯೇಕ ಕೇಂದ್ರಗಳಾಗಿರುವ ಅಸಂಖ್ಯಾತ ಸರಕಾರಗಳಿರುತ್ತವೆಯೋ ಅಲ್ಲಿ ಸರಕಾರದ ದಕ್ಷತೆ ಅತ್ಯಂತ ದುರ್ಬಲವಾಗಿರಲಿರಲಷ್ಟೇ ಸಾಧ್ಯ. +ಅದರಲ್ಲಿಯೂ, ರಾಷ್ಟ್ರಬಲದ ವಿವಿಧ ಅಂಗಗಳಿಂದ ಕೂಡಿದ, ಪ್ರತ್ಯೇಕವಾಗಿ ರಚಿತವಾದ ರಾಜಕೀಯ ಸಂಸ್ಥೆಗಳಾಗಿರುವುದರಿಂದ ಕೇಂದ್ರ ಸರಕಾರದ ಇಚ್ಛೆಯನ್ನು ವಿರೋಧಿಸುವಲ್ಲಿ ವ್ಯಕ್ತಿಗಳಿಗಿಂತ ಹೆಚ್ಚು ಪ್ರಭಾವಶಾಲಿಯಾಗಿರುತ್ತವೆ. +ಏಕೆಂದರೆ ಇಂತಹ ಪ್ರತಿಯೊಂದು ಸಂಸ್ಥೆಯು ತನ್ನದೇ ಆದ ಸರಕಾರ, ಆದಾಯ, ಸೈನ್ಯ ಮತ್ತು ಇವುಗಳನ್ನು ಒಗ್ಗೂಡಿಸುವ ಸ್ಥಾನಿಕ ದೇಶಪ್ರೇಮವನ್ನು ಹೊಂದಿರುತ್ತವೆ. +ಏಕಾತ್ಮಕ ಸರಕಾರ ಎಲ್ಲಿರುವುದೋ ಅಲ್ಲಿ ಮೇಲೆ ಹೇಳಿದ ಮೊದಲನೆಯ ಪರಿಸ್ಥಿತಿ ಇರುತ್ತದೆ. +ಸಂಯುಕ್ತ ರಾಜ್ಯ ಪದ್ಧತಿಯ ಸರಕಾರ ಎಲ್ಲಿರುವುದೋ ಅಲ್ಲಿ ಎರಡನೆಯ ಪರಿಸ್ಥಿತಿ ಉಂಟಾಗುತ್ತದೆ. +ಭಾರತದ ಒಕ್ಕೂಟ ವ್ಯವಸ್ಥೆಯು ಒಂದು ಸಂಯುಕ್ತ ಸರಕಾರವಾಗಿರುವುದರಿಂದ ಅದರ ಎಲ್ಲಾ ದೌರ್ಬಲ್ಯಗಳನ್ನು ಹೊಂದಿರುತ್ತದೆ. + ಆದರೆ ಭಾರತದ ಒಕ್ಕೂಟವು ಇತರ ಯಾವ ಸಂಯುಕ್ತ ರಾಜ್ಯಗಳಲ್ಲಿಯೂ ಇರಲಾರದಂತಹ ಇನ್ನೂ ಹೆಚ್ಚಿನ ದೌರ್ಬಲ್ಯಗಳನ್ನು ಹೊಂದಿರುವ ಕಾರಣ ಅವು ಅದನ್ನು ಸಂಪೂರ್ಣವಾಗಿ ನಿಶಕ್ತಗೊಳಿಸುವ ಸಾಧ್ಯತೆ ಇದೆ. +ಭಾರತದ ಒಕ್ಕೂಟವನ್ನು ಅಮೆರಿಕ ಸಂಯುಕ್ತ ಸಂಸ್ಥಾನಗಳೊಂದಿಗೆ ಹೋಲಿಸಿ ನೋಡಿ. +ಬ್ರೈಸ್‌ ಅವರು ಹೇಳುವಂತೆ :“ಪ್ರತಿಯೊಂದು ರಾಜ್ಯದ ನಾಗರಿಕರ ಮೇಲೆ ರಾಷ್ಟೀಯ ಸರಕಾರದ ಅಧಿಕಾರ ನೇರ ಮತ್ತು ತತ್‌ಕ್ಷಣದ್ದಾಗಿದ್ದು ಅದನ್ನು ರಾಜ್ಯಗಳ ಮುಖಾಂತರ ಚಲಾಯಿಸಲಾಗುವುದಿಲ್ಲ ಮತ್ತು ಅದಕ್ಕೆ ರಾಜ್ಯ ಸರಕಾರದ ಸಹಕಾರವೂ ಬೇಕಾಗುವುದಿಲ್ಲ. +ಅನೇಕ ವಿಷಯಗಳಲ್ಲಿ ರಾಷ್ಟೀಯ ಸರಕಾರವು ರಾಜ್ಯಸರಕಾರಗಳನ್ನು ಕಡೆಗಣಿಸುತ್ತದೆಯಲ್ಲದೇ, ಅದು ನಾಗರಿಕರನ್ನು ತನ್ನ ಕಾನೂನುಗಳಿಗೆ ಸಮಾನ ಬಾಧ್ಯರೆಂದು ಪರಿಗಣಿಸುತ್ತದೆ. +ಫೆಡರಲ್‌ ನ್ಯಾಯಾಲಯಗಳು, ಕಂದಾಯ ಅಧಿಕಾರಗಳು ಮತ್ತು ಅಂಚೆ ಕಚೇರಿ ಇವು ರಾಜ್ಯದ ಯಾವುದೇ ಅಧಿಕಾರಗಳನ್ನವಲಂಬಿಸದೆ ನೇರವಾಗಿ ವಾಷಿಂಗ್‌ಟನ್ನಿನ ಮೇಲೆ ಅವಲಂಬಿತವಾಗಿರುತ್ತದೆ. + ಫೆಡರಲ್‌ ವಿಷಯಗಳಲ್ಲಿ ಸ್ಥಳೀಯ ಸ್ವಯಂ ಆಡಳಿತ ಸರಕಾರವಿಲ್ಲ. +ಕಾರ್ಯಾಂಗವೇ ಆಗಿರಲಿ, ನ್ಯಾಯಾಂಗವೇ ಆಗಿರಲಿ, ಫೆಡರಲ್‌ ಸರಕಾರವು ರಾಜ್ಯಗಳ ಮೇಲೆ ತನ್ನ ಅಧಿಕಾರವನ್ನು ರಾಜ್ಯದ ಅಧಿಕಾರಗಳಿಂದ ಸ್ಪಷ್ಟವಾಗಿ ಪ್ರತ್ಯೇಕ ಮತ್ತು ಸ್ವತಂತ್ರರಾಗಿರುವ ಅಧಿಕಾರಿಗಳ ಮುಖಾಂತರ ಚಲಾಯಿಸುತ್ತದೆ. +ಉದಾಹರಣೆಗಾಗಿ, ಫೆಡರಲ್‌ ಅಪ್ರತ್ಯಕ್ಷ ತೆರಿಗೆಗಳನ್ನು ಕರಾವಳಿ ಯುದ್ದಕ್ಕೂ ಮತ್ತು ದೇಶದಾದ್ಯಂತ ವಾಷಿಂಗ್ಟನ್ನಿನಲ್ಲಿರುವ ಖಜಾನೆ ಇಲಾಖೆಯ ಆದೇಶದಂತೆ ಫೆಡರಲ್‌ ಸುಂಕದಕಟ್ಟೆಯ ಅಧಿಕಾರಿಗಳು ಮತ್ತು ನಿರ್ವಹಣಾಧಿಕಾರಿಗಳ ಮೂಲಕ ವಿಧಿಸಲಾಗುತ್ತದೆ. +ಫೆಡರಲ್‌ನ್ಯಾಯಾಲಯಗಳ ತೀರ್ಪುಗಳನ್ನು ದೇಶದಾದ್ಯಂತ ಸಹಾಯಕ ಸಿಬ್ಬಂದಿಯ ಸಹಾಯದಿಂದ ಅಮೇರಿಕದ ಮಾರ್ಷಲರು ಜಾರಿಗೊಳಿಸುತ್ತಾರೆ. +ಇದರಿಂದ ಕೇಂದ್ರೀಯ ರಾಷ್ಟ್ರ ಸರಕಾರಕ್ಕೆ ಎಲ್ಲೆಡೆ ಜನತೆಯ ಮೇಲೆ ಯಾವುದೇ ರಾಜ್ಯದ ಪ್ರದೇಶದಲ್ಲಿ ಹೃತ್ಪೂರ್ವಕ ನಿಷ್ಠೆ ಇರಲಿ ಅಥವಾ ಇಲ್ಲದೇ ಇರಲಿ,ಕಾನೂನು ಎಷ್ಟೇ ಅಪ್ರಿಯವಾಗಿರಲಿ ಅದನ್ನು ಚಲಾಯಿಸುವ ಮೂಲಕ ತನ್ನ ನಿಯಂತ್ರಣವನ್ನಿಟ್ಟುಕೊಳ್ಳಲು ಸಹಾಯಕವಾಗಿದೆ. +ಆದ್ದರಿಂದ ಈ ನಿಬಂಧನೆ ಅತ್ಯಂತ ಮಹತ್ವದ್ದಾಗಿದೆ. +ನೇರ ಸಂಪರ್ಕದ ಎಲ್ಲಾ ಬಿಂದುಗಳನ್ನು ಕೇಂದ್ರ ಕಾರ್ಯಾಂಗದೊಡನೆ ಜೋಡಿಸುವ ಮೂಲಕ ರಾಷ್ಟೀಯ ಸರಕಾರ ವ್ಯವಸ್ಥೆಯು ಇಡೀ ದೇಶದ ನರಗಳೋಪಾದಿಯಲ್ಲಿ ಇಡೀ ಒಕ್ಕೂಟದಾದ್ಯಂತ ಪಸರಿಸುತ್ತದೆ”.ಭಾರತದ ಒಕ್ಕೂಟದ ವಿಷಯದಲ್ಲಿ ಈ ಅಂಶಗಳನ್ನು ಖಚಿತವಾಗಿ ಹೇಳಲು ಬರುವುದಿಲ್ಲ. +ಅದು ಅವಲಂಬಿತ ಜನತೆಯೊಡನೆ ನೇರ ಸಂಬಂಧವನ್ನು ಹೊಂದಿಲ್ಲ. +ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ ರಾಜ್ಯಗಳು ರಾಜ್ಯಗಳಿಗಾಗಿ ತಾವು ಫೆಡರಲ್‌ ಶಾಸಕಾಂಗಕ್ಕೆ ತಮ್ಮ ಪ್ರತಿನಿಧಿಗಳನ್ನು ಆರಿಸಿದಾಗ್ಯೂ ಕೇಂದ್ರ ಸರಕಾರದಲ್ಲಿ ಯಾವ ಸ್ಥಾನವನ್ನೂ ಹೊಂದಿಲ್ಲ. +ಕೇಂದ್ರದರಾಜಕೀಯ ಕಾರ್ಯಗಳು ರಾಜ್ಯಗಳ ಮೂಲಕ ಪಡೆಯುವುದಿಲ್ಲ. +ಗುಂಪುಗಳಾಗಿ ರಾಜ್ಯಗಳ ಸಂಯೋಜನೆ ಇರುವುದಿಲ್ಲ . + ಅಧಿಕೃತವಾಗಿ ರಾಜ್ಯ ಸಂಘಟನೆಗಳ ಮೂಲಕ ರಾಜ್ಯಗಳು ಒಗ್ಗೂಡುವ ಪರಿಪಾಠವಿಲ್ಲ. +ಭಾರತದ ಒಕ್ಕೂಟ ಎಷ್ಟು ಭಿನ್ನವಾಗಿದೆ . + ರಾಜ್ಯಗಳಿಗೆ ಕಾನೂನು ರೀತ್ಯ ಅಥವಾ ವಿಧ್ಯುಕ್ತವಾಗಿ ಮಾನ್ಯತೆ ನೀಡಲಾಗಿದೆಯಲ್ಲದೆ ವಿಧ್ಯುಕ್ತವಾಗಿ ವಿನಾಯಿತಿಗಳನ್ನೂ ಮತ್ತು ಕಾನೂನಿನಿಂದ ವಿಮುಕ್ತಿಯನ್ನೂ ನೀಡಲಾಗಿದೆ. +ಈ ವಿನಾಯಿತಿಗಳು ಮತ್ತು ವಿಮುಕ್ತಿಗಳ ವಿಷಯವಾಗಿ ಸಂಸ್ಥಾನಗಳು ಮತ್ತು ಪ್ರಾಂತ್ಯಗಳಿಂದ ಸಮ್ಮಿಳಿತ ಕ್ರಿಯೆ ಮತ್ತು ಪ್ರತಿಕ್ರಿಯೆಯ ಹೆಚ್ಚಿನ ಸಾಧ್ಯತೆಗಳಿವೆ. +ಭಾರತ ಸಂಯುಕ್ತ ರಾಜ್ಯ ದುರ್ಬಲವಾಗುವುದೆಂಬ ಭಾವನೆ ಬೆಳೆಯಲು ಇದು ಇನ್ನೊಂದು ಕಾರಣವಾಗಿದೆ. +ಒಕ್ಕೂಟದಿಂದ ಪ್ರಯೋಜನಗಳು ಸಂಯುಕ್ತ ರಾಜ್ಯದ ಪ್ರತಿಪಾದಕರು ಈ ವ್ಯವಸ್ಥೆಯನ್ನು ಒಪ್ಪಿಕೊಳ್ಳುವ ನಿಟ್ಟಿನಲ್ಲಿ ಈ ಅಂಶಗಳನ್ನು ಮುಂದಿಟ್ಟಿರುತ್ತಾರೆ. +ಮೊದಲನೆಯದಾಗಿ, ಇದು ಭಾರತದ ಏಕತೆಗೆ ಸಹಾಯವಾಗುತ್ತದೆ. +ಎರಡನೆಯದಾಗಿ,ಇದರಿಂದಾಗಿ ಬ್ರಿಟಿಷ್‌ ಭಾರತವು ಭಾರತೀಯ ಭಾರತದ (ಸಂಸ್ಥಾನಗಳ) ಮೇಲೆ ಪ್ರಭಾವ ಬೀರುವಂತಾಗಿ ಭಾರತೀಯ ಭಾರತದಲ್ಲಿ ನಿರಂಕುಶಾಧಿಕಾರವನ್ನು ಬ್ರಿಟಿಷ್‌ ಭಾರತದಲ್ಲಿರುವಂತೆ ಪ್ರಜಾಸತ್ತೆಯನ್ನಾಗಿ ಪರಿವರ್ತಿಸಲು ಸಹಾಯಕವಾಗುತ್ತದೆ. +ಮೂರನೆಯ ಅಂಶವೆಂದರೆ ಜವಾಬ್ದಾರಿ ಸರಕಾರವನ್ನೊಳಗೊಂಡ ಯೋಜನೆಯಾಗಿದೆ. +ಒಕ್ಕೂಟದ ಪರವಾಗಿರುವ ಈ ಮೂರು ವಾದಗಳನ್ನು ಅತ್ಯಂತ ಗಂಭೀರವಾಗಿ ಪ್ರತಿಪಾದಿಸಲಾಗಿದ್ದು ಅವುಗಳನ್ನು ಪ್ರತಿಪಾದಿಸಿರುವವರು ಅತ್ಯಂತ ಪ್ರಭಾವಶಾಲಿಗಳಾಗಿರುವುದರಿಂದ ಈ ವಾದಗಳಲ್ಲಡಗಿರುವ ಅಂಶಗಳನ್ನು ಪರಿಶೀಲಿಸುವುದ ಅವಶ್ಯವಾಗಿದೆ. +ಒಕ್ಕೂಟ ವ್ಯವಸ್ಥೆ ಮತ್ತು ಭಾರತದ ಏಕತೆ ಒಂದೇ ಪದ್ಧತಿಯ ಸರಕಾರದ ಅನುಕೂಲಗಳು ನಿಜವಾಗಿಯೂ ಯಥಾರ್ಥವಾಗಿವೆ. +ಏಕರೂಪ ಕಾನೂನು, ಏಕರೂಪ ಆಡಳಿತ ಮತ್ತು ಏಕತೆಯ ಭಾವನೆಗಳು ಒಳ್ಳೆಯ ಜೀವನದ ಆವಶ್ಯಕತೆಗಳು. +ಆದರೆ ಇವೆಲ್ಲವೂ ಏಕರೂಪ ಪದ್ಧತಿಯ ಸರಕಾರದಡಿಯಲ್ಲಿ ನಡೆಸಲಾದ ಸರ್ವಸಮಾನ ಸಾರ್ವಜನಿಕ ಜೀವನದ ಪ್ರತಿಫಲಗಳು. +ಮಿಕ್ಕ ವಿಷಯಗಳು ಸಮನಾಗಿದ್ದರೆ, ಭಾರತದಾದ್ಯಂತ ಸಂಯುಕ್ತ ರಾಜ್ಯದ ಏಕರೂಪ ಪದ್ಧತಿಯ ಸರಕಾರವನ್ನು ಸ್ವಾಗತಿಸಲೇಬೇಕು. +ಆದರೆ ೧೯೩೫ ರ ಭಾರತ ಸರಕಾರದ ಕಾಯ್ದೆ, ಭಾರತದ ಭೂಪ್ರದೇಶವೆಂದು ಕರೆಯಲಾಗಿರುವ ಪ್ರದೇಶವನ್ನು ಏಕರೂಪ ಸರಕಾರ ವ್ಯವಸ್ಥೆಯಾಗಿ ಒಗ್ಗೂಡಿಸುವುದೇ ? +ಇದು ಅಖಿಲ ಭಾರತ ಒಕ್ಕೂಟವೆ ? +ಈ ಒಕ್ಕೂಟದಲ್ಲಿ ಬ್ರಿಟಿಷ್‌ ಭಾರತ ಕೂಡಿದೆ ಎಂಬುದೇನೋ ನಿಜ. + ಪ್ರಾಂತ್ಯಗಳು, ಸಂಯುಕ್ತ ರಾಜ್ಯದ ಘಟಕಗಳು ಎಂದು ಸಾರಿರುವುದರಿಂದ ಬ್ರಿಟಿಷ್‌ ಭಾರತವು ಸಂಯುಕ್ತ ರಾಜ್ಯದಲ್ಲಿ ಸೇರಿರುವುದೆಂದೇ ಅರ್ಥ. +ಪ್ರಾಂತ್ಯಗಳು ಸಂಯುಕ್ತ ರಾಜ್ಯದ ಘಟಕಗಳೆಂದು ಸಾರಿರುವ ಕಾರಣ ಇದು ಭಾರತೀಯ ಭಾರತದೊಂದಿಗೆ ಹೊಂದಿಕೆ ಮಾಡಿಕೊಂಡಂತೆ ಭಾರತೀಯ ಭಾರತ ಚಿಕ್ಕ ಪ್ರದೇಶವೇನೂ ಅಲ್ಲ. +ಪ್ರಾದೇಶಿಕ ಕ್ಷೇತ್ರ ಮತ್ತು ಜನಸಂಖ್ಯೆಯ ಅಂಕಿ ಸಂಖ್ಯೆಗಳನ್ನು ಹೋಲಿಸಿದಾಗ ಬ್ರಿಟಿಷ್‌ ಭಾರತ ಮತ್ತು ಭಾರತೀಯ ಭಾರತದ ವಿಸ್ತಾರದ ಕಲ್ಪನೆಯಾಗುತ್ತದೆ . +ಕ್ಷೇತ್ರ-ಚದುರ ಜನಸಂಖ್ಯೆ ಮೈಲುಗಳಲ್ಲಿ (೧೯೩೧)ಬರ್ಮಾ ಮತ್ತು ಏಡನ್‌ಹೊರತಾದ ಬ್ರಿಟಿಷ್‌ ಭಾರತ ೮,೬೨,೬೩ಂ ೨.೫೬,೮೫೯,. +೭೮೭ಭಾರತೀಯ ರಾಜ್ಯಗಳು ೭,೧೨,೫ಂ೮ ೮೧.೩೧ಂ.೮೪೫(ಸಂಸ್ಥಾನಗಳು)ಭಾರತೀಯ ಭಾರತವು ಜನಸಂಖ್ಯೆಯ ಶೇಕಡಾ ೩೯ ರಷ್ಟು ಮತ್ತು ಇಡೀ ಭಾರತ ಕ್ಷೇತ್ರದ ಶೇಕಡಾ ೩೧ ರಷ್ಟಿದೆಯೆಂಬುದು ಇದರಿಂದ ಕಂಡು ಬರುತ್ತದೆ. +ಈ ಭಾರತೀಯ ಭಾರತದ ಎಷ್ಟು ಭಾಗ ಈ ಸಂಯುಕ್ತ ರಾಜ್ಯದಡಿಯಲ್ಲಿ ಬರಲಿದೆ? +ಇದನ್ನು ಅಖಿಲ ಭಾರತ ಒಕ್ಕೂಟವೆಂದು ಕರೆಯಲಾಗುತ್ತಿರುವುದರಿಂದ ಈ ಕ್ಷೇತ್ರದ ಪ್ರತಿಯೊಂದು ಅಂಗುಲವೂ ಸಂಯುಕ್ತ ರಾಜ್ಯದಲ್ಲಿ ಸೇರಲಿದೆಯೆಂದು ಮತ್ತು ಅದು ಸಂಯುಕ್ತ ಸರಕಾರದ ಅಧಿಕಾರ ವ್ಯಾಪ್ತಿಗೆ ಬರುವುದೆಂದು ಅನೇಕರು ಹೇಳಬಹುದಾಗಿದೆ. +ಇಂತಹ ಅಭಿಪ್ರಾಯ ಸಂಸ್ಥಾನಗಳ ಸೇರ್ಪಡೆಯ ಸಂಬಂಧದ ೬(೧) ನೆಯ ವಿಭಾಗದ ಮಾತುಗಳಿಂದ ಉಂಟಾಗುತ್ತದೆ. +ಪ್ರತಿಯೊಬ್ಬ ಅರಸನು ಸಂಯುಕ್ತ ರಾಜ್ಯವನ್ನು ಸೇರುವ ತನ್ನ ಇಚ್ಛೆಯನ್ನು ಘೋಷಿಸುತ್ತಾನೆ ಎಂದು ಹೇಳಿರುವುದರಿಂದ ಪ್ರತಿಯೊಂದು ಸಂಸ್ಥಾನವೂ ಸಂಯುಕ್ತ ರಾಜ್ಯವನ್ನು ಸೇರುವ ಹಕ್ಕನ್ನು ಹೊಂದಿರುವುದೆಂಬ ಸೂಚನೆಯನ್ನು ಈ ವಿಭಾಗ ನೀಡುತ್ತದೆ. +ಇದು ನಿಜವಾದರೆ ಕಾಲಕ್ರಮೇಣ ಈ ಸಂಯುಕ್ತ ರಾಜ್ಯವು ಅಖಿಲ ಭಾರತ ಸಂಯುಕ್ತ ರಾಜ್ಯವಾಗಬಲ್ಲದೆಂಬುದರಲ್ಲಿ ಸಂದೇಹವಿಲ್ಲ. +ಆದರೆ ಇದು ತಪ್ಪು ಅಭಿಪ್ರಾಯವಾಗಿದೆ. +೬(೧) ನೆಯ ವಿಭಾಗವನ್ನು ಕಾಯ್ದೆಯ ಒಂದನೆಯ ಅನುಸೂಚಿಯ (ಷೆಡ್ಯೂಲಿನ) ಜೊತೆ ಓದಿದಾಗ ಇಂತಹ ಅಭಿಪ್ರಾಯ ಉಂಟಾಗಲಾರದು. +ಒಂದನೆಯ ಅನುಸೂಚಿ ಕೇವಲ ಅರಸರಿಗೆ ನೀಡಲಾದ ಸ್ಥಾನಗಳ ಪಟ್ಟಿಯನ್ನು ಕೊಟ್ಟಿರುವ ಅನುಸೂಚಿ ಎಂದು ತಿಳಿಯಲಾಗಿದೆ. +ಇದು ಒಂದನೆಯ ಅನುಸೂಚಿಯ ಅತ್ಯಂತ ಅಪೂರ್ಣ ವಾಚನವಾಗಿದೆ. +ಈ ಅನುಸೂಚಿಯಲ್ಲಿ ಇನ್ನೂ ಹೆಚ್ಚಿನ ವಿಷಯ ಹೇಳಲಾಗಿದೆ. +ಅದು ಕೇವಲ ಸ್ಥಾನಗಳ ಪಟ್ಟಿಯನ್ನೂ ಕೊಟ್ಟಿರುವುದಲ್ಲದೇ ಸಂಯುಕ್ತ ರಾಜ್ಯವನ್ನು ಸೇರುವ ಅರ್ಹತೆ ಅಥವಾ ಹಕ್ಕನ್ನು ಹೊಂದಿರುವ ಸಂಸ್ಥಾನಗಳ ಪಟ್ಟಿಯನ್ನು ನಮೂದಿಸುತ್ತದೆ. +ತನ್ಮೂಲಕ ತಾವು ಬಯಸಬಹುದಾದರೆ ಸಂಯುಕ್ತ ರಾಜ್ಯದೊಳಗೆ ಬರಬಹುದಾದ ರಾಜ್ಯಗಳ ಗರಿಷ್ಠ ಸಂಖ್ಯೆಯನ್ನು ನಿಗದಿಗೊಳಿಸುತ್ತದೆ. +ಎಂದರೆ ಸಂಯುಕ್ತ ರಾಜ್ಯವನ್ನು ಸೇರಲು ಪ್ರತಿಯೊಂದು ರಾಜ್ಯಕ್ಕೂ ಅವಕಾಶವಿಲ್ಲವೆಂದಾಯಿತು. +ನಮೂದಿಸಲಾದ ರಾಜ್ಯಗಳು ಮಾತ್ರ ಸೇರಬಹುದಾಗಿದೆ. +ಇದು ಒಂದನೆಯ ಅನುಸೂಚಿಯಲ್ಲಿ ಕೊಡಲಾಗಿರುವ ಸ್ಥಾನಗಳ ಪಟ್ಟಿಯ ಮಹತ್ವಸಂಯುಕ್ತ ರಾಜ್ಯವನ್ನು ಸೇರಬಹುದಾದ ರಾಜ್ಯಗಳ ಒಟ್ಟು ಸಂಖ್ಯೆ ಎಷ್ಟು? +ಒಂದನೆಯ ಅನುಸೂಚಿಯ ಪ್ರಕಾರ ಆ ಸಂಖ್ಯೆ ೧೪೭ ಕ್ಕೆ ಸೀಮಿತವಾಗಿದೆ. +ಅನುಸೂಚಿಯಲ್ಲಿ ನಿಗದಿತವಾಗಿರುವ ಈ ಮಿತಿಯಿಂದ ಅನೇಕ ಪ್ರಶ್ನೆಗಳು ಉದ್ಭವಿಸುತ್ತವೆ. +ಅಧಿಕೃತ ಸಂಖ್ಯೆಯ ಪ್ರಕಾರ ಭಾರತದಲ್ಲಿ ಒಟ್ಟು ೬೨೭ ಸಂಸ್ಥಾನಗಳಿವೆ. +ಎಂದರೆ ೪೮ಂ ಸಂಸ್ಥಾನಗಳು ಒಕ್ಕೂಟದ ಹೊರಗುಳಿಯಬೇಕಾಗಿದ್ದು ಅವು ಯಾವಾಗಲೂ ಸಂಯುಕ್ತ ರಾಜ್ಯಕ್ಕೆ ಪ್ರವೇಶ ಪಡೆಯುವಂತಿಲ್ಲ. +ಇದನ್ನು ನಾವು ಅಖಿಲ ಭಾರತ ಒಕ್ಕೂಟವೆಂದು ಕರೆಯಬಹುದೇ? +ಇದು ಅಖಂಡ ಒಕ್ಕೂಟವಾಗಬೇಕಿದ್ದರೆ, ಈ ಸಂಸ್ಥಾನಗಳನ್ನು ಏಕೆ ಹೊರಗಿಡಲಾಗಿದೆ? +ಈ ಹೊರಗುಳಿದ ಸಂಸ್ಥಾನಗಳ ಸ್ಥಾನವೇನು? +ಅವು ಸಾರ್ವಭೌಮ ಸಂಸ್ಥಾನಗಳಾಗಿರದಿದ್ದ ಪಕ್ಷದಲ್ಲಿ ಅವುಗಳಿಗೆ ಸಂಯುಕ್ತ ರಾಜ್ಯಕ್ಕೆ ಪ್ರವೇಶ ಪಡೆಯಲು ಅವಕಾಶವನ್ನೇಕೆ ಕೊಡಲಾಗಿದೆ? +ಸಾರ್ವಭೌಮತ್ವ ಹೊಂದಿದ ಸಂಸ್ಥಾನಗಳಿರದಿದ್ದರೆ ಮತ್ತು ಸಾರ್ವಭೌಮತ್ವ ಬ್ರಿಟಷ್‌ ಪಭುತ್ನದಲ್ಲಿದ್ದ ಪಕ್ಷದಲ್ಲಿ, ಪ್ರಭುತ್ವವು ಈ ಭೂಪ್ರದೇಶದ ಮೇಲಣ ತನ್ನ ಸಾರ್ವಭೌಮತ್ವವನ್ನು ಸಂಯುಕ್ತ ರಾಜ್ಯಕ್ಕೆ ಏಕೆ ವರ್ಗಾಯಿಸಿಲ್ಲ? +ಹೀಗೆ ಹೊರಗಿಡಲಾದ ಸಂಸ್ಥಾನಗಳ ಅಂತಿಮ ಗತಿ ಏನು? +ಇವುಗಳನ್ನು ಕೆಲವು ಭಾರತೀಯ ಸಂಸ್ಥಾನಗಳಲ್ಲಿ ಅಥವಾ ಕೆಲವು ಭಾರತೀಯ ಪ್ರಾಂತ್ಯಗಳಲ್ಲಿ ವಿಲೀನಗೊಳಿಸಲಾಗುವುದೇ? +ನಾನು ಇದೆಲ್ಲವನ್ನೂ ಏಕೆ ಹೇಳುತ್ತಿದ್ದೇನೆಂದರೆ,ಮೊದಲನೆಯದಾಗಿ ಈ ಸಂಯುಕ್ತ ರಾಜ್ಯವು ಅಖಿಲ ಭಾರತ ಸಂಯುಕ್ತ ರಾಜ್ಯವಾಗಿಲ್ಲ ಎಂಬುದನ್ನು ತೋರಿಸಬಯಸುತ್ತೇನೆ. +ಎರಡನೆಯದಾಗಿ, ಈ ಹೊರಗಿಡಲಾದ ಸಂಸ್ಥಾನಗಳನ್ನು ತಮ್ಮೊಳಗೆ ವಿಲೀನಗೊಳಿಸಲು ಕೆಲವು ಭಾರತೀಯ ಸಂಸ್ಥಾನಗಳು ಮಾಡುತ್ತಿರುವ ಪ್ರಯತ್ನದ ಕಡೆಗೆ ಗಮನ ಸೆಳೆಯಬಯಸುತ್ತೇನೆ. +ಇನ್ನೊಂದು, ಪ್ರಶ್ನೆಯನ್ನು ಎತ್ತಬಹುದಾಗಿದೆ. +ಈ ಸಂಯುಕ್ತ ರಾಜ್ಯವು ಬ್ರಿಟಿಷ್‌ ಭಾರತದ ಮತ್ತು ಭಾರತೀಯ ಸಂಸ್ಥಾನಗಳ ಪ್ರಜೆಗಳನ್ನು ಒಂದು ರಾಷ್ಟ್ರವಾಗಿ ಒಗ್ಗೂಡಿಸುವುದೇ? +ಒಕ್ಕೂಟ ವ್ಯವಸ್ಥೆಯು ಅವಶ್ಯವಾಗಿ ಒಂದು ಸಂಘಟಕ ಸಂಸ್ಥೆ ಅಥವಾ ಸಂಘವಾಗಿದೆ. +ಅದರೊಳಗೆ ಚಿಕ್ಕ ಚಿಕ್ಕ ರಾಜಕೀಯ ಸಮುದಾಯಗಳಿರುತ್ತವೆ. +ಈ ಘಟಕಗಳ ಮೇಲೆ ಸಂಯುಕ್ತ ರಾಜ್ಯವೆಂದು ಕರೆಯಲಾದ ದೊಡ್ಡ ರಾಜಕೀಯ ಸಮಷ್ಠಿ ಇರುತ್ತದೆ. +ಈ ವಿವಿಧ ರಾಜಕೀಯ ಸಮುದಾಯಗಳು ಕೇವಲ ರಾಜಕೀಯ ಸಂಘಗಳಾಗಿಯೇ ಉಳಿಯುವುವೇ ಅಥವಾ ಅಂತಿಮವಾಗಿ ಅವು ಒಂದು ರಾಷ್ಟದ ನಿರ್ಮಾಣಕ್ಕೆಡೆ ಮಾಡುವಂತಹ ಸಾಮಾನ್ಯ ಸಾಮಾಜಿಕ ಬಂಧದ ರೂಪ ತಳೆಯುವುದೇ ಎಂಬುದು ಅವು ಯಾವ ರೂಪ ತಳೆಯುವುದೆಂಬುದನ್ನವಲಂಬಿಸಿದೆ. +ಬ್ರೈಸ್‌ ಅವರು ಹೇಳಿರುವಂತೆ:“ದೊಡ್ಡ ಅಥವಾ ವಿಶಾಲ ರಾಜಕೀಯ ಸಮುದಾಯದಲ್ಲಿ ಅದಕ್ಕಿಂತ ಚಿಕ್ಕ ಸಮುದಾಯಗಳಿದ್ದಾಗ ಚಿಕ್ಕ ಸಮುದಾಯಗಳು ದೊಡ್ಡ ಸಮುದಾಯದೊಡನೆ ಹೊಂದಿರುವ ಸಂಬಂಧ ಸಾಮಾನ್ಯವಾಗಿ ಈ ಕೆಳಗಣ ಎರಡು ರೀತಿಯ ಸಂಬಂಧಗಳಲ್ಲಿ ಯಾವುದಾದರೂ ಒಂದು ರೀತಿಯದಾಗಿರುವುದಾಗಿ ತೋರುತ್ತದೆ. +ಇವುಗಳಲ್ಲಿ ಒಂದು ರೀತಿ ಎಂದರೆ ಒಂದು ಲೀಗ್‌ ರಚನೆಯಾಗುವುದು. + ಬಹು ಸಂಖ್ಯೆಯ ರಾಜಕೀಯಸಂಸ್ಥೆಗಳಿರುವ ಸಂಘದಲ್ಲಿ, ಅವು ರಾಜ ಪ್ರಭುತ್ವಗಳೇ ಆಗಿರಲಿ ಅಥವಾ ಗಣರಾಜ್ಯಗಳೇ ಆಗಿರಲಿ,ಕೆಲವು ಉದ್ದೇಶಗಳಿಗಾಗಿ ಅದರಲ್ಲಿಯೂ ಎಲ್ಲರ ರಕ್ಷಣೆಗಾಗಿ ಒಂದುಗೂಡುವುದು. +ಈ ರೀತಿ ಸಂಯೋಜಿತವಾದ ಸಂಸ್ಥೆ ಅಥವಾ ಸಂಘದ ಸದಸ್ಯರು ವ್ಯಕ್ತಿಗಳಾಗಿರದೇ ಸಮುದಾಯಗಳಾಗಿರುತ್ತವೆ. +ಅದು ಸಮುದಾಯಗಳ ಸಮೂಹವಾಗಿರುತ್ತದೆ. +ಅದನ್ನು ಸೇರಿರುವ ಸಮುದಾಯಗಳು ಪರಸ್ಪರರಿಂದ ಪ್ರತ್ಯೇಕವಾದ ಕೂಡಲೆ ಅದು ಕಣ್ಮರೆಯಾಗುವುದು. +ಇದೂ ಅಲ್ಲದೇ ಅದು ಸಮುದಾಯಗಳೊಂದಿಗೆ ಮಾತ್ರ ಕಾರ್ಯ ಮಾಡುತ್ತದೆ ಮತ್ತು ವ್ಯವಹರಿಸುತ್ತದೆ. +ವ್ಯಕ್ತಿಗಳೊಂದಿಗೆ ಅದು ಯಾವ ಸಂಬಂಧವನ್ನೂ ಹೊಂದಿರುವುದಿಲ್ಲ. +ಅವನ ಮೇಲೆ ತೆರಿಗೆ ವಿಧಿಸುವ ಹಕ್ಕು ಅಥವಾ ಅವನಿಗೆ ನ್ಯಾಯದಾನ ಮಾಡುವ,ಅಥವಾ ಅವನಿಗಾಗಿ ಕಾನೂನು ಮಾಡುವ ಹಕ್ಕನ್ನು ಹೊಂದಿರುವುದಿಲ್ಲ. +ಏಕೆಂದರೆ ಈ ಎಲ್ಲಾವಿಷಯಗಳಲ್ಲಿ ಅವನು ತನ್ನ ಸಮುದಾಯಕ್ಕೆ ನಿಷ್ಠೆ ಹೊಂದಿರುತ್ತಾನೆ. +ಎರಡನೆಯ ರೀತಿಯೆಂದರೆ, ಚಿಕ್ಕ ಸಮುದಾಯಗಳು ನಾವು ರಾಷ್ಟ್ರ ಎಂದು ಕರೆಯುವ ದೊಡ್ಡ ಸಮುದಾಯದ ಉಪವಿಭಾಗಗಳಾಗಿರುವುದು. +ಅವುಗಳನ್ನು ಆಡಳಿತದ ಉದ್ದೇಶಕ್ಕಾಗಿ ಮಾತ್ರಸೃಷ್ಟಿಸಲಾಗಿರಬಹುದು, ಅಥವಾ ಇನ್ನಾವುದೇ ಕಾರಣದಿಂದಲೋ ಅವು ಅಸ್ತಿತ್ವದಲ್ಲಿರುತ್ತವೆ. +ಅವುಗಳುಹೊಂದಿರಬಹುದಾದಂತಹ ಅಧಿಕಾರಗಳು ರಾಷ್ಟ್ರದಿಂದ ನಿಯೋಜಿತವಾಗಿರುತ್ತವೆ . +ತನ್ನ ಇಚ್ಛಾನುಸಾರಈ ಅಧಿಕಾರಗಳನ್ನು ರಾಷ್ಟ್ರವು ರದ್ದುಪಡಿಸಬಹುದು. +ರಾಷ್ಟ್ರವು ಸಮುದಾಯಗಳ ಮೇಲೂ ಅಲ್ಲದೆ ರಾಷ್ಟದ ಪ್ರತಿಯೊಬ್ಬ ನಾಗರಿಕನ ಮೇಲೂ ತನ್ನ ಅಧಿಕಾರಿಗಳ ಮೂಲಕ ನೇರವಾಗಿ ಕಾರ್ಯಾಚರಣೆಮಾಡುತ್ತದೆ. + ಏಕೆಂದರೆ ಅದು ರಾಷ್ಟ್ರ ಸಮುದಾಯಗಳಿಂದ ಸ್ವತಂತ್ರವಾಗಿದ್ದು ಆ ಸಮುದಾಯಗಳೆಲ್ಲವೂ ಕಣ್ಮರೆಯಾದರೂ ಅದು ಅಸ್ತಿತ್ವದಲ್ಲಿ ಮುಂದುವರಿಯುತ್ತದೆ. + ಎಲ್ಲಿ ಸರಕಾರದ ವಿಧಾನ ಮೈತ್ರಿಕೂಟದ ಪದ್ಧತಿಯದಾಗಿರುತ್ತದೆಯೋ ಅಲ್ಲಿ ಅದು ಮೊದಲನೆಯ ಸಂವಿಧಾನಾತ್ಮಕ ಸುಧಾರಣೆಗಳು ೩೬೫ ರೀತಿಯದಾಗಿರುತ್ತದೆ. +ಏಕಾತ್ಮಕ ಪದ್ಧತಿಯ ಸರಕಾರ ಅಸ್ತಿತ್ವದಲ್ಲಿದ್ದರೆ ಅದು ಎರಡನೆಯ ರೀತಿಯದಾಗಿರುತ್ತದೆ. +ಸಂಯುಕ್ತ ರಾಜ್ಯ ಇವೆರಡರಲ್ಲಿ ಮಧ್ಯ ರೀತಿಯದು. +ಆದರೆ ರಾಷ್ರ್ಟೀಯತೆ ಕೇವಲ ಏಕಾತ್ಮಕ ಪದ್ಧತಿಯ ಸರಕಾರದೊಡನೆ ಮಾತ್ರ ಸುಸಂಗತವಾಗಿರುವುದೆಂದು ಮತ್ತು ಸಂಯುಕ್ತ ರಾಜ್ಯ ಸರಕಾರ ಪದ್ಧತಿಯೊಡನೆ ಅಸಂಗತವಾಗಿರುವುದೆಂದು ಭಾವಿಸಬಾರದು. +ಒಂದು ರಾಷ್ಟ್ರ ಆಗಲೇ ಅಸ್ತಿತ್ವದಲ್ಲಿದ್ದಿರಬಹುದು. +ಅದನ್ನು ಸ್ಥಾಪಿಸಲೂಬಹುದೆಂಬುದನ್ನು ಮನಸ್ಸಿನಲ್ಲಿಡಬೇಕು. +ಪ್ರಾರಂಭದಲ್ಲಿ ಒಕ್ಕೂಟದಲ್ಲಿ ರಾಷ್ಟವಿಲ್ಲದಿರಬಹುದು. +ಅದು ಅಸಂಬದ್ಧ ಸಮುದಾಯಗಳ ಒಟ್ಟುಗೂಡುವಿಕೆಯಾಗಿರಬಹುದು. +ಆದರೆ ಸಂಯುಕ್ತ ಸರಕಾರವೂ ಕೊನೆಗೆ ಒಂದು ರಾಷ್ಟ್ರವಾಗುವ ಸಾಧ್ಯತೆ ಇದೆ. +ಅಮೆರಿಕ ಸಂಯುಕ್ತ ಸಂಸ್ಥಾನವು ಇದಕ್ಕೆ ಅತ್ಯಂತ ಗಮನಾರ್ಹ ಉದಾಹರಣೆಯಾಗಿದೆ. +ಈ ಸಂದರ್ಭದಲ್ಲಿ ವಿಸ್ಟರ್‌ ಬ್ರೈಸ್‌ರು ಬೋಧ ಪ್ರದವಾದ ಮತ್ತು ಅಷ್ಟೇ ರೋಚಕವಾದ ಒಂದು ಕತೆಯನ್ನು ಹೇಳುತ್ತಾರೆ. +ಅವರ ಮಾತುಗಳಲ್ಲಿಯೇ ಅದನ್ನು ಇಲ್ಲಿ ಕೊಟ್ಟರುತ್ತೇನೆ. +“ಕೆಲವು ವರ್ಷಗಳ ಹಿಂದೆಅಮೆರಿಕಾದ ಪ್ರೊಟೆಸ್ಟೆಂಟ್‌ ಬಿಷಪ್‌ ಗುರುಗಳ ಆಡಳಿತದಲ್ಲಿರುವ ಕ್ರೈಸ್ತ ಧರ್ಮ ಸಂಸ್ಥೆ ತನ್ನ ತ್ರೈವಾರ್ಷಿಕ ಸಮ್ಮೇಳನದಲ್ಲಿ ತನ್ನ ಸಾರ್ವಜನಿಕ ಪೂಜಾ ವಿಧಾನ ಸೂತ್ರಗಳನ್ನು ಪರಿಷ್ಕರಿಸುವುದರಲ್ಲಿ ತೊಡಗಿತ್ತು. +ಸಂಕ್ಷಿಪ್ತ ವಾಕ್ಯದಲ್ಲಿ ಇಡೀ ಜನತೆಗಾಗಿ ಒಂದು ಪ್ರಾರ್ಥನೆಯನ್ನು ಸೇರಿಸುವುದು ಅಪೇಕ್ಷಣೀಯವೆಂದು ಯೋಜಿಸಲಾಯಿತು. +ನ್ಯೂ ಇಂಗ್ಲೆಂಡಿನ ಒಬ್ಬ ಪ್ರಖ್ಯಾತ ದೇವತಾಶಾಸ್ತ್ರ ನಿಷುಣನು ಈ ಪದಗಳನ್ನುಸೂಚಿಸಿದನು. +"ಓ ದೇವರೆ, ನಮ್ಮ ರಾಷ್ಟ್ರವನ್ನು ಆಶೀರ್ವದಿಸು”. + ಒಂದು ಮಧ್ಯಾಹ್ನ ಆ ಕ್ಷಣದ ಪ್ರೇರಣೆಯಿಂದ ಒಪ್ಪಿಕೊಳ್ಳಲಾದ ಈ ವಾಕ್ಯವನ್ನು ಮರುದಿನ ಮರುವಿಚಾರಣೆಗಾಗಿ ಮಂಡಿಸಲಾಯಿತು. +ಆಗ “ರಾಷ್ಟ್ರ ಪದವು ರಾಷ್ಟೀಯ ಏಕತೆಗೆ ಅತ್ಯಂತ ನಿಷ್ಕರ್ಷವಾದ ಮಾನ್ಯತೆಯನ್ನು ನೀಡುವುದೆಂದು ಲೌಕಿಕ ವರ್ಗದ ಸದಸ್ಯರು ಆಕ್ಷೇಪಗಳನ್ನೆತ್ತಿದಾಗ “ರಾಷ್ಟ್ರ ಪದವನ್ನು ಕೈಬಿಡಲಾಯಿತು. +ಮತ್ತು ಅದರ ಬದಲು ಈ ಪದಗಳನ್ನು ಸ್ವೀಕರಿಸಲಾಯಿತು. +“ಓ ದೇವರೇ, ಈ ಸಂಯುಕ್ತ ಸಂಸ್ಥಾನಗಳನ್ನು ಆಶೀರ್ವದಿಸು”,ಭಗವಂತನ ಈ ಪ್ರಾರ್ಥನೆ ಏನೇ ಇರಲಿ, ರಾಜ್ಯಗಳ ಭಾವನೆಯ ವಿರುದ್ಧ ರಾಷ್ಟ್ರ ಭಾವನೆಯನ್ನುಪ್ರೋತ್ಸಾಹಿಸುವುದಕ್ಕೆ ಇರುವ ವಿರೋಧವೇನೇ ಇರಲಿ . +ಸಂಯುಕ್ತ ರಾಜ್ಯ ಸರಕಾರ ಪದ್ಧತಿ ಏನೇಇದ್ದರೂ ಅಮೆರಿಕ ಸಂಯುಕ್ತ ಸಂಸ್ಥಾನ ಇಂದು ಒಂದು ರಾಷ್ಟ್ರವಾಗಿವೆ. +ಅದು ಸಾಮಾಜಿಕ ಅರ್ಥದಲ್ಲಿಯೂಒಂದು ರಾಷ್ಟವಾಗಿದೆ ಎಂಬ ಅಂಶ ನಿರ್ವಿವಾದವಾಗಿದೆ. +ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ ಇದು ಹೇಗೆ ಸಂಭವಿಸಿತು ? +ಭಾರತ ಸಂಯುಕ್ತ ರಾಜ್ಯ ಯೋಜನೆಯಲ್ಲಿ ಹೀಗೆ ಸಂಭವಿಸಬಹುದೆಂದು ನಾವು ನಿರೀಕ್ಷಿಸಬಹುದೇ ? +ಅಮೆರಿಕದಲ್ಲಿ ಇದು ಹೇಗೆ ಸಂಭವಿಸಿತೆಂಬುದನ್ನು ಬ್ರೈಸ್‌ ಹೀಗೆ ವಿವರಿಸಿರುತ್ತಾರೆ. +ಅವರು ಹೇಳುವಂತೆ, ಅಮೆರಿಕದಲ್ಲಿ “ಕೇಂದ್ರಅಥವಾ ರಾಷ್ಟ್ರೀಯ ಸರಕಾರ ಕೇವಲ ಒಂದು ಸಂಘವಾಗಿಲ್ಲ. + ಏಕೆಂದರೆ ಅದು ನಾವು ರಾಜ್ಯಗಳೆಂದು ಕರೆಯುವ ಘಟಕ ಸಮುದಾಯಗಳ ಮೇಲೆಯೇ ಸಂಪೂರ್ಣವಾಗಿ ಆವಲಂಬವಾಗಿಲ್ಲ. +ಅದು ಸ್ವತಃ ಒಂದು ರಾಷ್ಟ್ರ ಸಮುದಾಯವಾಗಿದ್ದು ರಾಷ್ಟ್ರಪಮುದಾಯಗಳ ಒಕ್ಕೂಟವೂ ಆಗಿದೆ. +ಏಕೆಂದರೆ ಅದು ನೇರವಾಗಿ ಪ್ರತಿಯೊಬ್ಬ ನಾಗರಿಕನ ನಿಷ್ಠೆಯನ್ನು ಪಡೆಯುತ್ತ. +ತನ್ನ ನ್ಯಾಯಾಲಯಗಳು ಹಾಗೂ ಕಾರ್ಯಾಂಗಾಧಿಕಾರಿಗಳ ಮೂಲಕ ಅವನ ಮೇಲೆ ಕಾರ್ಯಾಚರಣೆ ಮಾಡುತ್ತದೆ”. + ಅದು ಅವನಮೇಲೆ ತೆರಿಗೆ ವಿಧಿಸಬಹುದು, ಅವನಿಗಾಗಿ ಕಾನೂನು ಮಾಡಬಹುದು . + ಅವನಿಗೆ ನ್ಯಾಯದಾನವನ್ನೂ ಮಾಡಬಹುದು. +ಸಂಕ್ಷಿಪ್ತವಾಗಿ ಹೇಳಬೇಕೆಂದರೆ, ಅದು ಸಂಪೂರ್ಣವಾಗಿಲ್ಲವಾದರೂ ಬಹುಮಟ್ಟಿಗೆ ಅಮೆರಿಕವನ್ನು ಒಂದು ರಾಷ್ಟ್ರವನ್ನಾಗಿ ರೂಪಿಸುವಂತಹ ಸರಕಾರಿ ಪ್ರಕ್ರಿಯೆ ಅಥವಾ ವಿಧಾನವಾಗಿದೆ. +ಅಮೆರಿಕ ಸಂಯುಕ್ತ ಸಂಸ್ಥಾನದ ಫೆಡರಲ್‌ ಪದ್ಧತಿಯ ಸರಕಾರದಲ್ಲಿ ರಾಷ್ಟ್ರ ಸರಕಾರ ಮತ್ತು ವ್ಯಕ್ತಿಯನಡುವೆ ನೇರ ಸಂಬಂಧ, ಸಂಪರ್ಕವಿರುವುದರಿಂದ ಇದು ಸಾಧ್ಯವಾಗಿವೆ. +ಭಾರತದ ಸಂಯುಕ್ತ ರಾಜ್ಯ ಯೋಜನೆಯಲ್ಲಿ ಇದು ಸಾಧ್ಯವೇ ? ಸಾಧ್ಯವಿಲ್ಲ ಎಂದೇ ನನ್ನ ಉತ್ತರ. +ಭಾರತೀಯ ಸಂಸ್ಥಾನಗಳ ಜನರು ಸಂಸ್ಥಾನಗಳ ಪ್ರಜೆಗಳಾಗಿಯೇ ಉಳಿಯುತ್ತಾರೆ. +ಫೆಡರಲ್‌ಸರಕಾರವು ಅವರೊಡನೆ ನೇರವಾಗಿ ವ್ಯವಹರಿಸುವಂತಿಲ್ಲ. +ಎಲ್ಲವನ್ನೂ ಸಂಸ್ಥಾನಗಳ ಮುಖಾಂತರವೇ ಮಾಡಬೇಕಾಗುತ್ತದೆ. +ತೆರಿಗೆ ವಿಧಿಸುವ ಉದ್ದೇಶಕ್ಕಾಗಿಯೂ ಎರಡರ ನಡುವೆ ಸಂಪರ್ಕವಿಲ್ಲ. +ಹೀಗೆ ಪ್ರತಿಯೊಂದು ಪ್ರಭಾವದಿಂದ ದೂರವಿರಿಸಿ ರಾಷ್ಟ್ರೀಯ ಸರಕಾರದ ಅಸ್ತಿತ್ವವನ್ನೇ ಅನುಭವಿಸಲಾಗದಂತಹ ಸ್ಥಿತಿಯಲ್ಲಿರಿಸಿದರೆ ಭಾರತೀಯ ಸಂಸ್ಥಾನದ ಜನರ ಮನಸ್ಸಿನಲ್ಲಿ ತಾವು ರಾಷ್ಟ್ರೀಯ ಸರಕಾರಕ್ಕೆ ಸೇರಿದವರು ಎಂಬ ಭಾವನೆ ಬೆಳೆಯಲು ಹೇಗೆ ಸಾಧ್ಯ ? +ಭಾರತದ ಸಂಯುಕ್ತ ಸಂಸ್ಥಾನವು ಸಂಯುಕ್ತ ಸಂಸ್ಥಾನಗಳ ಅಥವಾ ಸಂಯುಕ್ತ ರಾಜ್ಯಗಳ ಒಂದು ಸಂಸ್ಥೆಗಿಂತ ಹೆಚ್ಚೇನೂ ಆಗಲಾರದೆಂಬುದು ನನ್ನ ಭೀತಿಯಾಗಿದೆ. +ನಿರಂಕುಶ ಆಡಳಿತವನ್ನು ಪ್ರಜಾಸತ್ತೆಗೆ ಒಳಪಡಿಸುವುದು ಒಕ್ಕೂಟ ವ್ಯವಸ್ಥೆಯ ಪ್ರತಿಪಾದಕರು ವಾದಿಸುವಂತೆ ಅದರ ಇನ್ನೊಂದು ಬ್ರಿಟಿಷ್‌ ಭಾರತದ ಹೊಸ ಪ್ರಜಾಪ್ರಭುತ್ವಗಳನ್ನು ಮತ್ತು ಭಾರತೀಯ ಸಂಸ್ಥಾನಗಳ ಪುರಾತನ ನಿರಂಕುಶಾಡಳಿತಗಳನ್ನು ಅದು ಒಂದೇ ರಾಜಕೀಯ ವ್ಯವಸ್ಥೆಯಡಿಯಲ್ಲಿ ತರುತ್ತದೆ. +ಇವೆರಡರ ನಡುವೆ ಸಂಪರ್ಕ ಕಲ್ಪಿಸಿ,ಭಾರತೀಯ ಸಂಸ್ಥಾನಗಳ ನಿರಂಕುಶಾಡಳಿತವನ್ನು ಪ್ರಜಾಪ್ರಭುತ್ವ ವ್ಯವಸ್ಥೆಯನ್ನಾಗಿ ಪರಿವರ್ತಿಸಲು ಪ್ರಯತ್ನಿಸುತ್ತೇನೆ. +ಈ ತರ್ಕವನ್ನು ಪರಿಶೀಲಿಸಿ, ಅದರಲ್ಲಿ ಎಷ್ಟು ಬಲವಿದೆ ಎಂಬುದನ್ನು ತಿಳಿಯಲು ಭಾರತೀಯ ಸಂಸ್ಥಾನಗಳು ಮತ್ತು ಬ್ರಿಟಿಷ್‌ ಭಾರತದ ಪ್ರಾಂತ್ಯಗಳು ಭೌಗೋಳಿಕ ಸಂಲಗ್ನತೆಯನ್ನುಹೊಂದಿವೆ ಎಂಬ ಅಂಶವನ್ನು ಗಮನಿಸುವುದು ವಿಹಿತ. +ಇವೆರಡರ ನಡುವೆ ಸತತ ಸಂಬಂಧವಿದೆ. +ಬ್ರಿಟಿಷ್‌ ಭಾರತದ ಪ್ರಾಂತ್ಯಗಳ ಜನರು ಮತ್ತು ಭಾರತೀಯ ರಾಜ್ಯಗಳ ಜನರು ಜನಾಂಗ, ಭಾಷೆ ಮತ್ತುಜನಾಂಗ, ಧರ್ಮ, ಭಾಷೆ ಮತ್ತು ಸಾಂಸ್ಕೃತಿಕ ಏಕತೆ ಇದ್ದರೂ ಕೂಡ ಬ್ರಿಟಿಷ್‌ ಭಾರತಕ್ಕೆ ಭಾರತೀಯ ಸಂಸ್ಥಾನಗಳ ಸರಕಾರ ಪದ್ಧತಿಗಳ ಮೇಲೆ ಯಾವುದೇ ಪ್ರಭಾವ ಬೀರಲಾಗಿಲ್ಲ. +ಇದಕ್ಕೆ ಪ್ರತಿಯಾಗಿ ಬ್ರಿಟಿಷ್‌ ಭಾರತವು ನಿರಂಕುಶಾಡಳಿತದಿಂದ ಪ್ರಜಾಪ್ರಭುತ್ವದೆಡೆಗೆ ಸಾಗಿದ್ದರೂ ಕೂಡ, ಭಾರತೀಯ ಸಂಸ್ಥಾನಗಳು ತಮ್ಮ ಮೊದಲಿನ ಸರಕಾರ ಪದ್ಧತಿಗಳಲ್ಲಿಯೇ ಉಳಿದಿವೆ. +ಆದ್ದರಿಂದ ಬ್ರಿಟಿಷ್‌ ಭಾರತವು ತನ್ನ ಶಾಸಕಾಂಗ ಮತ್ತು ಕಾರ್ಯಾಂಗಗಳ ಮೂಲಕ ಭಾರತೀಯ ರಾಜ್ಯಗಳ ಮೇಲೆ ಪ್ರಭಾವ ಬೀರುವಂತೆ ಈ ಕಾಯ್ದೆಯಲ್ಲಿಯೇ ಯಾವುದಾದರೂ ವಿಶೇಷ ವಿಧಾನವಿರದ ಹೊರತು ಈ ತರ್ಕದಲ್ಲಿ ಯಾವ ಹುರುಳೂ ಇರುವುದಿಲ್ಲ. +ಬ್ರಿಟಿಷ್‌ ಭಾರತವು ರಾಜ್ಯಗಳ ಮೇಲೆ ತನ್ನ ಪ್ರಭಾವ ಬೀರುವ ಅಧಿಕಾರವನ್ನು ಕೊಡುವಂತಹುದೇನಾದರೂ ಈ ಕಾಯ್ದೆಯಲ್ಲಿದೆಯೇ ? +ಈ ಸಂಬಂಧವಾಗಿ ೩೪(೧) ನೆಯ ವಿಭಾಗವನ್ನು ಪರಿಶೀಲಿಸಬಹುದು. +ಇದರಲ್ಲಿ ಆಯವ್ಯಯ ಅಂದಾಜು ಪಟ್ಟಿಯ ಮೇಲೆ ಶಾಸಕಾಂಗದಲ್ಲಿ ಮಾಡಲಾಗುವ ಚರ್ಚೆ ಮತ್ತು ಮತದಾನದ ವಿಧಾನಗಳನ್ನು ಪ್ರಸ್ತಾಪಿಸಲಾಗಿದೆ. +ಈ ವಿಭಾಗದ ವಿಧಾನವನ್ನು ಪರಿಶೀಲಿಸಿದಾಗ ೩೩ ನೆಯ ವಿಭಾಗದ (೩) ನೆಯ ಉಪ ವಿಭಾಗದ (ಎ) ಮತ್ತು (ಎಫ್‌) ಪ್ಯಾರಾಗಳಿಗೆ ಸಂಬಂಧಪಟ್ಟ ಅಂದಾಜುಗಳನ್ನು ಫೆಡರಲ್‌ ಶಾಸಕಾಂಗದಲ್ಲಿ ಚರ್ಚಿಸಲು ಬರುವುದಿಲ್ಲ ಎಂಬುದು ಸ್ಪಷ್ಟವಾಗುತ್ತದೆ. +(೩) ನೆಯ ಉಪ ವಿಭಾಗದ ಪ್ಯಾರಾ (ಎ)ಗವರ್ನರ್‌-ಜನರಲ್ಲರ ಸಂಬಳ ಸಾರಿಗೆಗಳು ಮತ್ತು ಅವರ ಕಚೇರಿಗಾಗಿ ಬೇಕಾದ ವೆಚ್ಚಗಳ ಅಂದಾಜಿಗೆ ಸಂಬಂಧಿಸಿದ್ದು, ಈ ಅಂದಾಜನ್ನು ಮಂತ್ರಿಮಂಡಳದ ಆದೇಶದಂತೆ ಮಾಡಬೇಕಾಗುತ್ತದೆ. +ಮತ್ತು ಪ್ಯಾರಾ (ಎಫ್‌) ಈ ಕಾಯ್ದೆಯನ್ವಯ ಮಹಾಪ್ರಭು ದೊರೆಗೆ ಸಂಯುಕ್ತ ರಾಜ್ಯದ ಆದಾಯದಿಂದ ಭಾರತೀಯ ಸಂಸ್ಥಾನಗಳೊಡನೆ ಪ್ರಭುತ್ವ ಹೊಂದಿರುವ ಸಂಬಂಧದಿಂದಾಗಿ ಉದ್ಭವಿಸುವ ಕಾರ್ಯಗಳಿಗಾಗಿ ಮಾಡುವ ವೆಚ್ಚಕ್ಕೆ ಸಂಬಂಧಿಸಿದುದಾಗಿರುತ್ತದೆ. +ವಿಭಾಗ ೩೮ ಇದೇ ವಿಷಯಕ್ಕೆ ಸಂಬಂಧಿಸಿದ ಇನ್ನೊಂದು ವಿಭಾಗವಾಗಿದೆ. +೩೮ ನೆಯ ವಿಭಾಗದಲ್ಲಿ ಕಾರ್ಯ ಕಲಾಪಗಳನ್ನು ಕ್ರಮಪಡಿಸುವುದಕ್ಕಾಗಿ ಒಕ್ಕೂಟದ ಶಾಸಕಾಂಗವು ನಿಯಮಗಳನ್ನು ಮಾಡುವ ವಿಧಾನವನ್ನು ಹೇಳಲಾಗಿದೆ. +ಈ ವಿಧಿಯ ಪ್ರಕಾರ ಸಂಯುಕ್ತರಾಜ್ಯ ಶಾಸಕಾಂಗವು ತನ್ನದೇ ಆದ ನಿಯಮಗಳನ್ನು ಮಾಡುವುದಾದರೂ ಜನರೆಲ್ಲರೂ ನಿಯಮಗಳನ್ನುಮಾಡಲು ಅವಕಾಶ ಮಾಡಲಾಗಿದೆ. +ಕ) ಭಾರತೀಯ ರಾಜ್ಯಗಳಿಗೆ ಸಂಬಂಧಿಸಿದ ಮತ್ತು ಅವುಗಳಿಂದಾಗಿ ಒಕ್ಕೂಟದಲ್ಲಿ ಶಾಸಕಾಂಗವು ಕಾನೂನು ಮಾಡುವ ಅಧಿಕಾರವನ್ನು ಹೊಂದಿರುವ ವಿಷಯವನ್ನು ಬಿಟ್ಟು, ಇತರ ಯಾವುದೇ ವಿಷಯದ ಮೇಲೆ ಚರ್ಚೆಯನ್ನು ಪ್ರತಿಬಂಧಿಸುವ, ಪ್ರಶ್ನೆಗಳನ್ನು ಕೇಳುವ ಬಗ್ಗೆ ಗವರ್ನರ್‌ ಜನರಲ್ಲರಿಗೆ ತಮ್ಮ ವಿವೇಚನೆಯಲ್ಲಿ ಆ ವಿಷಯವು ಸಂಯುಕ್ತ ರಾಜ್ಯದ ಹಿತಾಸಕ್ತಿಗಳು ಅಥವಾ ಬ್ರಿಟಿಷ್‌ ಪ್ರಜೆಯ ಹಿತಾಸಕ್ತಿಗಳಿಗೆ ಸಂಬಂಧಪಟ್ಟದ್ದಾಗಿದೆ ಎಂದು ಮನವರಿಕೆಯಾಗಿ ಆ ವಿಷಯದಲ್ಲಿ ಚರ್ಚೆ ಮಾಡಬಹುದು . +ಪ್ರಶ್ನೆ ಕೇಳಬಹುದೆಂದು ಒಪ್ಪಿಗೆ ನೀಡಿದ್ದ ಮಹಾ ಪ್ರಭುಗಳು ಅಥವಾ ಗವರ್ನರ್‌-ಜನರಲ್‌ರು ಮತ್ತು ಯಾವುದೇ ವಿದೇಶ ಅಥವಾ ಅರಸನೊಡನೆ ಸಂಬಂಧಗಳ ಬಗ್ಗೆ ಚರ್ಚೆ ಅಥವಾ ಪ್ರಶ್ನೆಗಳನ್ನು ಕೇಳುವುದು. +ಬುಡಕಟ್ಟು ಪ್ರದೇಶ ಅಥವಾ ಯಾವುದೇ ಪ್ರತ್ಯೇಕಿತ ಕ್ಷೇತ್ರದ ಆಡಳಿತದ, ಅದರ ವೆಚ್ಚದ ಅಂದಾಜನ್ನು ಬಿಟ್ಟು ಉಳಿದ ವಿಷಯಗಳ ಮೇಲೆ ಚರ್ಚೆ ಮಾಡುವುದು, ಪ್ರಶ್ನೆಗಳನ್ನುಕೇಳುವುದು. + ಯಾವುದೇ ಭಾರತೀಯ ರಾಜ್ಯದ ಅರಸನ ಅಥವಾ ಆಳುವ ಕುಟುಂಬದ ಯಾವುದೇ ಸದಸ್ಯನ ವೈಯಕ್ತಿಕ ನಡತೆಯ ಮೇಲೆ ಚರ್ಚೆ ಮಾಡುವುದು . + ಪಶ್ನೆ ಕೇಳುವುದನ್ನು ಪ್ರತಿಬಂಧಿಸುವುದಕ್ಕಾಗಿ :ಮತ್ತು ಈ ವಿಭಾಗದಲ್ಲಿ ಗವರ್ನರ್‌ ಜನರಲ್‌ರು ಮಾಡಿದ ಯಾವುದೇ ನಿಯಮವು ಛೇಂಬರಿನಿಂದ ಮಾಡಲಾದ ಯಾವುದೇ ನಿಯಮಗಳೊಂದಿಗೆ ಅಸಮಂಜಸ ಅಥವಾ ವಿರುದ್ಧವೆನಿಸಿದಲ್ಲಿ ಗವರ್ನರ್‌ಜನರಲ್‌ರು ಮಾಡಿದ ನಿಯಮಗಳು ಸಿಂಧುವಾಗುವುದೆಂದು ಹೇಳಲಾಗಿದೆ. +೪ಂ ನೆಯ ವಿಭಾಗ ಈ ವಿಷಯಕ್ಕೆ ಸಂಬಂಧಿಸಿದ ಇನ್ನೊಂದು ವಿಭಾಗ. +ಅದರಲ್ಲಿ ಹೀಗೆ ಹೇಳಲಾಗಿದೆ. + “ಫೆಡರಲ್‌ ನ್ಯಾಯಾಲಯದ ಅಥವಾ ಉಚ್ಛ ನ್ಯಾಯಾಲಯದ ಯಾವುದೇ ನ್ಯಾಯಾಧೀಶರುಗಳ ಕರ್ತವ್ಯ ನಿರ್ವಹಣೆಯಲ್ಲಿ ಅವರ ನಡತೆಯನ್ನು ಕುರಿತು ಸಂಯುಕ್ತ ರಾಜ್ಯಶಾಸಕಾಂಗದಲ್ಲಿ ಚರ್ಚಿಸಲಾಗದು. + ಮತ್ತು ಈ ಉಪ ವಿಭಾಗದಲ್ಲಿ ಪ್ರಸ್ತಾಪಿಸಲಾರದಂತೆ ಉಚ್ಚನ್ಯಾಯಾಲಯವೆಂದರೆ ಸಂಯುಕ್ತ ರಾಜ್ಯದಲ್ಲಿ ಸೇರ್ಪಡೆಯಾದ ರಾಜ್ಯದ ಈ ಕಾಯ್ದೆಯ ೯ ನೆಯ ಭಾಗದಲ್ಲಿ ಹೇಳಲಾದ ಉದ್ದೇಶಗಳಿಗಾಗಿ ಉಚ್ಚ ನ್ಯಾಯಾಲಯವೆಂದು ಪರಿಗಣಿಸಲಾದ ಯಾವುದೇ ನ್ಯಾಯಾಲಯದ ಎಂದು ಅರ್ಥೈಸತಕ್ಕದ್ದೆಂದು ವಿಧಿಸಲಾಗಿದೆ. + ಕಾಯ್ದೆಯಲ್ಲಿ ಪ್ರಾಂತೀಯ ಶಾಸಕಾಂಗಗಳನ್ನು ಸಂಸ್ಥಾಪಿಸುವ ಬಗೆಗೆ ಸಂಬಂಧಪಟ್ಟ ಭಾಗದಲ್ಲಿಯೂ ಇದೇ ರೀತಿ ಹೇಳಲಾಗಿದೆ. +೮೪ ನೆಯ ವಿಭಾಗವು ೩೮ ನೆಯ ವಿಭಾಗದ ಪ್ರತಿರೂಪವಾಗಿದೆ. +೩೮ ನೆಯ ವಿಭಾಗದ ಪ್ರಕಾರಪ್ರಾಂತೀಯ ಶಾಸಕಾಂಗದ ಯಾವುದೇ ಸದಸ್ಯನು ಯಾವುದೇ ಭಾರತೀಯ ರಾಜ್ಯದ ನಡತೆ ಅಥವಾರಾಜ್ಯದ ವಿಷಯಗಳ ಮೇಲೆ ಪ್ರಶ್ನೆ ಕೇಳದಂತೆ ಪ್ರತಿಬಂಧಿಸಲಾಗಿದೆ. +೮೬ ನೆಯ ವಿಭಾಗವು ೪ಂನೆಯ ಎಭಾಗದ ಪ್ರತಿರೂಪವಾಗಿದೆ. +ಆಯವ್ಯಯ ಪಟ್ಟಿಯ ಜರ್ಚೆ, ಮತ್ತು ಪ್ರಶ್ನೆಗಳನ್ನು ಕೇಳುವುದು ಪ್ರಾಂತೀಯ ಶಾಸಕಾಂಗವು ಆಡಳಿತದ ಮೇಲೆ ತನ್ನ ಪ್ರಭಾವ ಬೀರಲು ಇರುವ ಎರಡು ಅತ್ಯಂತ ಮಹತ್ವದ ವಿಧಾನಗಳಾಗಿವೆ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ. +ಆಯವ್ಯಯ ಪಟ್ಟಿಯ ಮೇಲಣ ಚರ್ಚೆ ಸೈದ್ಧಾಂತಿಕವಾಗಿ,ಜನತೆಯ ಕುಂದುಕೊರತೆಗಳ ನಿವಾರಣೆಯಾಗದ ಹೊರತು ಕಾರ್ಯಾಂಗಕ್ಕೆ ಹಣಕಾಸನ್ನು ಒದಗಿಸಲಾಗದು ಎಂಬ ತರ್ಕದ ಆಧಾರ ಹೊಂದಿದೆ. +ಪ್ರಜಾಪ್ರಭುತ್ವದ ಘೋಷಣಾ ವಾಕ್ಕ ಹೀಗಿದೆ : ಕುಂದುಕೊರತೆಗಳ ನಿವಾರಣೆಯ ನಂತರವೇ ಹಣಕಾಸನ್ನು ಒದಗಿಸುವುದು. + ಆಯವ್ಯಯ ಪಟ್ಟಿಯ ಚರ್ಚೆ ತಮ್ಮ ಕುಂದುಕೊರತೆಗಳನ್ನು ಕಾರ್ಯಾಂಗಕ್ಕೆ ನಿವೇದಿಸಿಕೊಳ್ಳಲು ಜನತೆಗಿರುವ ಒಂದು ಅವಕಾಶ. +ಆದ್ದರಿಂದ ಇದು ಅತ್ಯಂತ ನ್ಯಾಯ ಸಮ್ಮತವಾದ ವಿಶೇಷ ಅಧಿಕಾರವಾಗಿದೆ. +೩೪ನೆಯ ವಿಭಾಗದಲ್ಲಿ ಕಂಡುಬರುವಂತೆ, ಶಾಸಕಾಂಗವು ಸಂಸ್ಥಾನದ ಪ್ರಜೆಗಳ ಕುಂದುಕೊರತೆಗಳನ್ನು ಸದನದಲ್ಲಿ ಕಾರ್ಯಾಂಗದೆದುರು ಇಡುವುದನ್ನು ಪ್ರತಿಬಂಧಿಸಲಾಗಿದೆ. +ಇದೇ ರೀತಿ ಪ್ರಶ್ನೆಗಳನ್ನು ಕೇಳುವ ಹಕ್ಕು ಸಹ ನ್ಯಾಯ ಸಮ್ಮತವಾದದ್ದೇ ಆದಾಗ್ಯೂ ಅದನ್ನೂ ಸಹ ನಿರಾಕರಿಸಲಾಗಿದೆ. +ನ್ಯಾಯಾಂಗದ ನಡತೆಯನ್ನು ಒಂದು ಸೂಕ್ತವಿಧಿಗನು ಸಾರವಾದ ಸೂಚನೆಯ ಮೂಲಕ ಟೀಕಿಸುವ ಹಕ್ಕೂ ಸಹ ಶಾಸಕಾಂಗಗಳಿಗೆ ಇರುತ್ತದೆ. +ಆದರೆ ಇದನ್ನೂ ಸಹ ನಿರಾಕರಿಸಿದೆ. +ಭಾರತೀಯ ಸಂಸ್ಥಾನಗಳ ಆಂತರಿಕ ಆಡಳಿತದ ಮೇಲೆ ಸಂಯುಕ್ತ ರಾಜ್ಯ ಶಾಸಕಾಂಗ ಯಾವ ರೀತಿಯಲ್ಲಿ ತನ್ನ ಪ್ರಭಾವ ಬೀರಬಹುದೆಂದು ಹೇಳುವುದು ಕಷ್ಟಸಂಸ್ಥಾನಗಳ ಆಂತರಿಕ ಆಡಳಿತದ ಮೇಲೆ ಪ್ರಶ್ನೆ ಕೇಳದಂತೆ ಮತ್ತು ನಿರ್ಣಯಗಳನ್ನು ಮಂಡಿಸದಂತೆ ಬ್ರಿಟಿಷ್‌ ಭಾರತದ ಪ್ರತಿನಿಧಿಗಳನ್ನೂ ಅಲ್ಲದೇ, ಈ ದುರಾಡಳಿತಕ್ಕೆ ಬಲಿಯಾದ ಸಂಸ್ಥಾನಗಳ ಪ್ರತಿನಿಧಿಗಳನ್ನೂ ಪ್ರತಿಬಂಧಿಸಲಾಗಿದೆ. +ಈ ಪರಿಸ್ಥಿತಿಯೊಂದಿಗೆ ಒಕ್ಕೂಟದಲ್ಲಿ ಸೇರ್ಪಡೆಯಾದ ಸಂಸ್ಥಾನಗಳು ಬ್ರಿಟಿಷ್‌ ಭಾರತದ ಮೇಲೆ ಬೀರಬಹುದಾದ ಪ್ರಭಾವವನ್ನು ಹೋಲಿಸಿ, ನೋಡಿ. +ಮೊದಲನೆಯದಾಗಿ, ಸೇರ್ಪಡೆಯಾದ ಸಂಸ್ಥಾನಗಳ ಪ್ರತಿನಿಧಿಗಳು ಸಂಯುಕ್ತ ರಾಜ್ಯ ಶಾಸಕಾಂಗದಲ್ಲಿ ಯಾವುದೇ ಪ್ರಶ್ನೆ ಕೇಳುವ ಅಥವಾ ಯಾವುದೇ ವಿಷಯವನ್ನು ಎತ್ತುವುದರ ಮೇಲೆ ಯಾವ ನಿರ್ಬಂಧವೂ ಇಲ್ಲ. +ಎತ್ತಲಾದ ಪ್ರಶ್ನೆ ಅಥವಾ ವಿಷಯ ಬ್ರಿಟಿಷ್‌ ಭಾರತಕ್ಕೆ ಸಂಬಂಧಪಟ್ಟಿದ್ದು ಅದು ಬ್ರಿಟಿಷ್‌ ಭಾರತದ ಆಂತರಿಕ ಆಡಳಿತಕ್ಕೆ ಸಂಬಂಧಿಸಿದ್ದುದಾಗಿರುವ ಅಂಶ ಸೇರ್ಪಡೆಯಾದ ಸಂಸ್ಥಾನಗಳ ಪ್ರತಿನಿಧಿಗಳಿಗೆ ಅದರ ಬಗೆಗೆ ಪ್ರಸ್ತಾಪ ಮಾಡುವುದಕ್ಕೆ ಅಡ್ಡಿಯಾಗುವುದಿಲ್ಲ. +ಎರಡನೆಯದಾಗಿ, ಸೇರ್ಪಡೆಯಾದ ಸಂಸ್ಥಾನ ಪ್ರತಿನಿಧಿಗಳು ಒಕ್ಕೂಟದ ಹಣಕಾಸಿನ ಸೂಚನೆಗಳನ್ನು ಚರ್ಚಿಸಿ ಮತ ನೀಡುವುದರ ಮೇಲೆ ಯಾವ ನಿರ್ಬಂಧವೂ ಇರುವುದಿಲ್ಲ. +ಅಂತಹ ಯಾವುದೇ ಸಂವಿಧಾನಾತ್ಮಕ ಸುಧಾರಣೆಗಳು ೩೬೯ ಸೂಚನೆ ಬ್ರಿಟಿಷ್‌ ಭಾರತಕ್ಕೆ ಸಂಬಂಧಿಸಿದುದು ಮತ್ತು ರಾಜ್ಯಗಳಿಗೆ ಸಂಬಂಧಿಸಿದುದಲ್ಲ ಎಂಬ ಅಂಶ ಅವರಿಗೆ ಯಾವ ಅಡ್ಡಿಯನ್ನೂ ಉಂಟುಮಾಡಲಾರದು. +ಮೂರನೆಯದಾಗಿ, ಕಾನೂನು ಮಾಡುವಲ್ಲಿ ಸೇರ್ಪಡೆಯಾದ ಸಂಸ್ಥಾನಗಳ ಪ್ರತಿನಿಧಿಗಳು ಫೆಡರಲ್‌ಶಾಸಕಾಂಗದಲ್ಲಿ ತರಲಾದ ಯಾವುದೇ ಗೊತ್ತುವಳಿ ಅಥವಾ ಮಸೂದೆಯ ಮೇಲೆ ಮತ ನೀಡಲು ಸ್ವತಂತ್ರರಾಗಿದ್ದಾರೆ. +ಸಂಯುಕ್ತ ರಾಜ್ಯದ ಶಾಸನಾಧಿಕಾರ : ಅನ್ವಯಿಸುವ ಎರಡು ವಿಷಯ ಪಟ್ಟಿಗಳಿವೆ. +ಫೆಡರಲ್‌ ಪಟ್ಟಿ ಮತ್ತು ಸಮಾನಾಧಿಕಾರ ಪಟ್ಟಿ. +ಪ್ರಾಂತ್ಯಗಳು ಸಂಪೂರ್ಣವಾಗಿ ಫೆಡರಲ್‌ ಪಟ್ಟಿಗೊಳಗಾಗಿವೆ. +ಸೇರ್ಪಡೆಯಾದ ರಾಜ್ಯಗಳು ಸಂಪೂರ್ಣವಾಗಿ ಈ ಪಟ್ಟಿಗೊಳಗಾಗಿಲ್ಲ. +ಪ್ರಾಂತ್ಯಗಳು ಸಮಾನಾಧಿಕಾರ ಪಟ್ಟಿಗೆ ಸಂಪೂರ್ಣ ಬದ್ಧವಾಗಿವೆ. +ಸೇರ್ಪಡೆಯಾದ ಸಂಸ್ಥಾನ ಅದಕ್ಕೆ ಬದ್ಧವಾಗಿರಬೇಕಾಗಿಲ್ಲ. +ಆದಾಗ್ಯೂ,ಸಂಸ್ಥಾನಗಳ ಪ್ರತಿನಿಧಿಗಳು ಇವೆರಡು ಪಟ್ಟಿಗಳಲ್ಲಿ ಬರುವ ವಿಷಯಗಳ ಮೇಲೆ ಮತ ನೀಡುವ ಹಕ್ಕನ್ನುಪಡೆದಿದ್ದಾರೆ. +ಇದನ್ನೇ ಬೇರೆ ಮಾತುಗಳಲ್ಲಿ ಹೇಳುವುದಾದರೆ, ಈ ಒಕ್ಕೂಟ ವ್ಯವಸ್ಥೆ ಯೋಜನೆಯು ಬ್ರಿಟಿಷ್‌ ಭಾರತಕ್ಕಾಗಿ ಶಾಸನ ರೂಪಿಸುವ ಹಕ್ಕನ್ನು ಸಂಸ್ಥಾನಗಳಿಗೆ ನೀಡುತ್ತದೆ. +ಆದರೆ ಬ್ರಿಟಷ್‌ಭಾರತವು, ಸಂಸ್ಥಾನಗಳು ಸ್ವಇಚ್ಛೆಯಿಂದ ಈ ಎರಡೂ ಪಟ್ಟಿಗಳಲ್ಲಿರುವ ವಿಷಯಗಳಿಗೆ ಒಳಪಡುವುದನ್ನು ಹೊರತುಪಡಿಸಿ, ಇತರ ವಿಷಯಗಳಲ್ಲಿ ರಾಜ್ಯಗಳ ಮೇಲೆ ಶಾಸನಾಧಿಕಾರ ಹೊಂದಿಲ್ಲ. +ಬ್ರಿಟಿಷ್‌ ಭಾರತದ ಮೇಲೆ ಸಂಸ್ಥಾನಗಳು ಹೊಂದಿರುವ ಶಾಸನ ಬದ್ಧ ನಿಲುವನ್ನು ರೂಪಿಸುವ ಪ್ರಭಾವದ ವ್ಯಾಪ್ತಿ ಯಾವ ರೀತಿಯಲ್ಲಿಯೂ ನಗಣ್ಯವಾದುದಾಗಲಿ ಹಾಗೆಯೇ ಬಿಟ್ಟು ಬಿಡುವಂಥದ್ದಾಗಲಿ ಆಗಿಲ್ಲ. + ಸಮಾನಾಧಿಕಾರ ಪಟ್ಟಿಗೇ ಸೀಮಿತಗೊಳಿಸಿದರೆ ಅದರಲ್ಲಿ ೩೬ ವಿಷಯಗಳಿವೆ. +ಈ ೩೬ವಿಷಯಗಳಲ್ಲಿ ಕ್ರಿಮಿನಲ್‌ ಕಾನೂನು, ಕ್ರಿಮಿನಲ್‌ ಮತ್ತು ಸಿವಿಲ್‌ ಪ್ರಕ್ರಿಯೆ, ಉದ್ಯೋಗಗಳು, ವೃತ್ತಪತ್ರಿಕೆಗಳು,ಪುಸ್ತಕಗಳು ಮತ್ತು ಮುದ್ರಣಾಲಯಗಳು ಮುಂತಾದವು ಸೇರಿವೆ. +ಇವು ಅತಿ ಮುಖ್ಯವಾದ ವಿಷಯಗಳು. +ಇವು ಪ್ರಾಂತ್ಯಗಳ ಜನರ ಸ್ವಾತಂತ್ರ್ಯಕ್ಕೆ ಸಂಬಂಧಿಸಿದ ವಿಷಯಗಳು. +ಸಂಸ್ಥಾನಗಳು ಸಮಾನಾಧಿಕಾರ ಪಟ್ಟಿಯಲ್ಲಿರುವ ವಿಷಯಗಳ ಮೇಲೆ ಕಾನೂನು ಮಾಡುವುದರ ಬಗ್ಗೆ ಚರ್ಚೆಯಲ್ಲಿ ಭಾಗವಹಿಸುವ ಮತ್ತು ಮತ ನೀಡುವ ಹಕ್ಕನ್ನು ಹೊಂದಿರುವುದರಿಂದ ಅವು ಪ್ರಾಂತ್ಯಗಳಲ್ಲಿರುವ ಬ್ರಿಟಿಷ್‌ ಭಾರತೀಯರ ಹಕ್ಕುಗಳು, ವಿಶೇಷಾಧಿಕಾರಗಳು, ಮತ್ತು ಸ್ವಾತಂತ್ರ್ಯಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಶಾಸನ ಮಾಡುವ ಹಕ್ಕು ಮತ್ತು ಅಧಿಕಾರ ಹೊಂದುತ್ತವೆ. +ಇದೂ ಅಲ್ಲದೆ ಶಾಸನ ರೂಪಿಸುವ ಕ್ಷೇತ್ರದಲ್ಲಿ, ಸಮಾನಾಧಿಕಾರ ಪಟ್ಟಿಯ ಸಂಬಂಧವಾಗಿ ಸಂಸ್ಥಾನಗಳು ಬಾಧ್ಯತೆ ರಹಿತವಾದ ಅಧಿಕಾರವನ್ನು ಪಡೆದಿವೆ. +ಅವರು ತಾವು ಮಾಡಿದ ಕಾನೂನುಗಳಿಗೇ ಬಾಧ್ಯರಾಗಿರುವ ಕಾರಣ ತಮ್ಮ ಬಗ್ಗೆಯೂ ವಿಚಾರ ಮಾಡದೆಯೇ ತಮಗೆ ಬೇಕಾದ ಕಾನೂನು ಮಾಡಲು ಸ್ವತಂತ್ರರಾಗಿದ್ದಾರೆ. +ಈ ವಿಷಯದಲ್ಲಿ ಅವರ ನಡತೆ ತಮಗೆ ತೋಚಿದಷ್ಟು ಬೇಜವಾಬ್ದಾರಿಯದಾಗಿರಬಹುದು. +ಬ್ರಿಟಿಷ್‌ ಭಾರತದಲ್ಲಿ ಆಡಳಿತ ಮತ್ತು ಶಾಸನ ಕಾರ್ಯಗಳ ಮೇಲೆ ಪ್ರಭಾವ ಬೀರುವ ಹಕ್ಕನ್ನು ಮಾತ್ರ ಸಂಸ್ಥಾನಗಳು ಪಡೆದಿವೆ ಎಂದು ಹೇಳುವುದು ಕಡಿಮೆ ಹೇಳಿದಂತೆಯೇ. +ಸತ್ಯ ಸಂಗತಿ ಎಂದರೆ ಸಂಸ್ಥಾನಗಳು ಬ್ರಿಟಿಷ್‌ ಭಾರತದ ಮೇಲೆ ತಮ್ಮ ಆಧಿಕಾರವನ್ನು ಹೊಂದಬಹುದು. +ಏಕೆಂದರೆ, ಕೇವಲ ಬ್ರಿಟಿಷ್‌ ಭಾರತಕ್ಕೆ ಸಂಬಂಧಪಟ್ಟ ವಿಷಯಗಳ ಮೇಲೆ ಬ್ರಿಟಿಷ್‌ ಭಾರತದ ಪ್ರತಿನಿಧಿಗಳು ಬಹು ಸಂಖ್ಯೆಯಿಂದ ಸೋಲಿಸಿದ ಮಂತ್ರಿ ಮಂಡಳವನ್ನು ರಾಜ್ಯಗಳು ತಮ್ಮ ಬಲದಿಂದ ಸೋತ ಅದೇ ಮಂತ್ರಿ ಮಂಡಳವನ್ನು ಅಧಿಕಾರದಲ್ಲಿ ಮುಂದುವರಿಯುವಂತೆ ಮಾಡಬಲ್ಲವು. +ಇದು ಹೇಗೆ ಸಾಧ್ಯವೆಂದರೆ ತಮಗೆ ಸಂಬಂಧಿಸಿದ ವಿಷಯವಾಗಿರಲಿ ಅಥವಾ ಅಲ್ಲದಿರಲಿ ಅವಿಶ್ವಾಸ ನಿರ್ಣಯವೂ ಸೇರಿದಂತೆ ಯಾವುದೇ ನಿರ್ಣಯದ ಮೇಲೆ ಅವುಗಳಿಗೆ ಮತದಾನದ ಹಕ್ಕನ್ನು ನೀಡಲಾಗಿದೆ. +ಇದು ಭಾರತೀಯ ಸಂಸ್ಥಾನಗಳ ಕೈಯಲ್ಲಿ ಬ್ರಿಟಿಷ್‌ ಭಾರತದ ಮೇಲೆ ನಿಯಂತ್ರಣ ನೀಡುವುದಲ್ಲದೇ ಮತ್ತೇನು ? +ಸಂಸ್ಥಾನಗಳು ಬ್ರಿಟಿಷ್‌ ಭಾರತದ ಆಂತರಿಕ ವಿಷಯಗಳ ಚರ್ಚೆಯಲ್ಲಿ ಭಾಗವಹಿಸುವುದು,ಅದಕ್ಕೆ ವ್ಯತಿರಿಕ್ತವಾಗಿ ಬ್ರಿಟಿಷ್‌ ಭಾರತದ ಪ್ರತಿನಿಧಿಗಳು ಸಂಸ್ಥಾನಗಳ ವಿಷಯಗಳ ಮೇಲೆ ಚರ್ಚೆ ಮಾಡುವ ಸಮಾನ ಹಕ್ಕನ್ನು ಹೊಂದದೇ ಇರುವುದು ಅನ್ಯಾಯ. +ಈ ಅಸಂಗತತೆಯನ್ನು ನಿವಾರಿಸಲು ಸಂಸ್ಥಾನಗಳ ಹಕ್ಕನ್ನು ಬ್ರಿಟಿಷ್‌ ಭಾರತದ ಆಂತರಿಕ ಎಷಯಗಳಿಗೆ ಸಂಬಂಧಿಸಿದ ವಿಷಯಗಳ ಚರ್ಚೆ ಮತ್ತು ಮತದಾನಕ್ಕೆ ಮಾತ್ರ ಸೀಮಿತಗೊಳಿಸುವ ಮೂಲಕ ಸರಿಪಡಿಸಲು ಉದ್ದೇಶಿಸಲಾಗಿತ್ತು. +ಆದರೆ,ಅರಸರು ಮತ್ತು ಅವರ ಪ್ರತಿನಿಧಿಗಳು ಯಾವಾಗಲೂ ಇಂತಹ ವ್ಯತ್ಯಾಸ ಮಾಡುವುದನ್ನು ವಿರೋಧಿಸುತ್ತಾ ಬಂದಿದ್ದು, ಮಂತ್ರಿ ಮಂಡಲದ ಭವಿಷ್ಯವನ್ನು ನಿರ್ಧರಿಸುವ ಮತ್ತು ಮುಂದಿನ ಸರಕಾರದ ವಿಷಯವನ್ನು ನಿರ್ಧರಿಸುವ ಹಕ್ಕಿಗಾಗಿ ಸದಾ ಒತ್ತಾಯಿಸುತ್ತಿದ್ದಾರೆ. +ಸಂವಿಧಾನವು ಅರಸರ ಅಭಿಪ್ರಾಯವನ್ನೇ ಸದಾ ಪುರಸ್ಕರಿಸುತ್ತಿದ್ದು ಬ್ರಿಟಿಷ್‌ ಭಾರತದ ಅಭಿಪ್ರಾಯವನ್ನು ಕಡೆಗಣಿಸಿದೆ. +ಕಾನೂನಿನಲ್ಲಿಯೇ ಸಂಸ್ಥಾನಗಳನ್ನು ಬ್ರಿಟಿಷ್‌ ಭಾರತದ ವ್ಯವಹಾರಗಳ ಮೇಲೆ ನಿಯಂತ್ರಣ ಹೊಂದುವ ಸ್ಥಿತಿಯಲ್ಲಿಡಲಾಗಿದೆ ಎಂಬ ಅಂಶ ಈ ಹೋಲಿಕೆಯಿಂದ ವ್ಯಕ್ತವಾಗುತ್ತದೆ. +ಮತ್ತು ಅದೇ ಕಾನೂನು ಬ್ರಿಟಿಷ್‌ ಭಾರತವು ರಾಜ್ಯಗಳ ಮೇಲೆ ಪ್ರಭಾವ ಬೀರದಂತೆ ಅದನ್ನು ದುರ್ಬಲಗೊಳಿಸಿದೆ. +ಇದು ನಿಜವಾದ ಪರಿಸ್ಥಿತಿ ಎಂಬುದನ್ನು ಎಲ್ಲರೂ ಒಪ್ಪಿಕೊಳ್ಳಬೇಕಾಗುತ್ತದೆ. +ಇದನ್ನೇ ಬೇರೆ ಮಾತುಗಳಲ್ಲಿ ಹೇಳಬೇಕೆಂದರೆ, ಸಂಯುಕ್ತ ರಾಜ್ಯ ಯೋಜನೆಯು ಬ್ರಿಟಿಷ್‌ ಭಾರತವು ಭಾರತೀಯ ರಾಜ್ಯಗಳನ್ನು ಪ್ರಜಾಸತ್ತಾತ್ಕಕಗೊಳಿಸುವುದಕ್ಕೆ ಅಡ್ಡಿಯಾಗುವುದೇ ಹೊರತು ಸಹಾಯಕವಾಗುವುದಿಲ್ಲ. +ತದ್ವಿರುದ್ಧವಾಗಿ ಅದು ಬ್ರಿಟಷ್‌ ಭಾರತದಲ್ಲಿ ಪ್ರಜಾಪ್ರಭುತ್ವದ ವಿನಾಶ ಮಾಡಲು ಭಾರತೀಯ ಸಂಸ್ಥಾನಗಳಿಗೆ ಸಹಾಯಮಾಡುತ್ತದೆ. +ಒಕ್ಕೂಟ ವ್ಯವಸ್ಥೆ ಮತ್ತು ಜವಾಬ್ದಾರಿ:ಇನ್ನು ಜವಾಬ್ದಾರಿಯ ಪರವಾಗಿರುವ ವಾದವನ್ನು ಪರಿಶೀಲಿಸೋಣ. +ಬ್ರಿಟಿಷ್‌ ಭಾರತದ ದೃಷ್ಟಿಯಿಂದ ಇದು ಇತರ ಎರಡು ವಾದಗಳಿಗಿಂತ ಹೆಚ್ಚು ನಿರ್ಣಾಯಕವಾಗಿದ್ದು ಹೆಚ್ಚು ಜಾಗರೂಕತೆಯಿಂದ ಪರಾಮರ್ಶಿಸಬೇಕಾಗಿದೆ. +ಒಕ್ಕೂಟ ವ್ಯವಸ್ಥೆಯಲ್ಲಿ ಜವಾಬ್ದಾರಿಯ ಪ್ರಮಾಣ ಹೇಗಿದೆ ಎಂದು ಕೇಳೋಣ. +ಈ ಪ್ರಶ್ನೆಗೆ ಉತ್ತರ ಕೊಡಲು ನೀವು ಕಾಯ್ದೆಯ ೯ ಮತ್ತು ೧೧ ನೆಯ ವಿಭಾಗಗಳನ್ನು ಒಟ್ಟಿಗೆ ಓದಿದಾಗ ಈ ಜವಾಬ್ದಾರಿ ಎಷ್ಟರ ಮಟ್ಟಿಗೆ ಇದೆ ಎಂಬುದು ನಿಮಗೆ ಮನವರಿಕೆಯಾಗುತ್ತದೆ. +ಈ ವಿಭಾಗಗಳ ಪ್ರಕಾರ ಸರಕಾರದ ಅಧಿಕಾರದ ಕ್ಷೇತ್ರವನ್ನು ಎರಡು ವಿಧಗಳಲ್ಲಿ ವಿಭಜಿಸಲಾಗಿದೆ. +ಒಂದು ವಿಧದಲ್ಲಿ ಕೆಳಗಣ ಈ ನಾಲ್ಕು ವಿಷಯಗಳನ್ನು ಸೇರಿಸಲಾಗಿದೆ : ೧) ರಕ್ಷಣೆ, ೨) ಧಾರ್ಮಿಕ ವ್ಯವಹಾರಗಳು, ೩) ವಿದೇಶಿ ವ್ಯವಹಾರಗಳು, ಮತ್ತು ೪) ಬುಡಕಟ್ಟು ಪ್ರದೇಶಗಳ ಆಡಳಿತ. +ಸಂಯುಕ್ತ ರಾಜ್ಯದ ಕಾರ್ಯಾಂಗಾಡಳಿತದ ವ್ಯಾಪ್ತಿಯಲ್ಲಿ ಬರುವ ಇತರ ಅಧಿಕಾರಗಳನ್ನು ಇನ್ನೊಂದು ಪ್ರತ್ಯೇಕ ವಿಧದಲ್ಲಿ ವಿಂಗಡಿಸಲಾಗಿದೆ. +ಈ ಸಂವಿಧಾನಾತ್ಮಕ ಸುಧಾರಣೆಗಳು ೩೭೧ ಎರಡೂ ವಿಧವಾದ ಅಧಿಕಾರಗಳ ಕಾರ್ಯಾಂಗದ ಅಧಿಕಾರವನ್ನು ಗವರ್ನರ್‌ ಜನರಲ್ಲರಿಗೆ ನೀಡಲಾಗಿದೆ. +ಆದರೆ ಈ ಎರಡೂ ವಿಧದ ವಿಷಯಗಳಲ್ಲಿ ಸರಕಾರದ ಅಧಿಕಾರದ ದೃಷ್ಟಿಯಿಂದ ಒಂದು ವ್ಯತ್ಯಾಸ ಮಾಡಲಾಗಿದೆ. +ಮೊದಲನೆಯ ವಿಧದ ನಾಲ್ಕು ವಿಷಯಗಳು ಈ ಕಾಯ್ದೆಯ ಪ್ರಕಾರ ಗವರ್ನರ್‌ಜನರಲ್ಲರ ವಿವೇಚನಾಧಿಕಾರಕ್ಕೊಳಪಟ್ಟಿವೆ. +ಎರಡನೆಯ ವಿಧದ ಉಳಿದ ವಿಷಯಗಳಲ್ಲಿ ಕಾಯ್ದೆಯ ಪ್ರಕಾರ ಗವರ್ನರ್‌-ಜನರಲ್‌ರು ಮಂತ್ರಿ ಮಂಡಳದ ಸಲಹೆಯ ಮೇರೆಗೆ ವರ್ತಿಸಬೇಕು. +ಮೊದಲನೆಯ ನಾಲ್ಕು ವಿಷಯಗಳಲ್ಲಿ ಸರಕಾರಿ ಅಧಿಕಾರ ಹೊಂದಿರುವ ಗವರ್ನರ್‌-ಜನರಲ್‌ರನ್ನು ಶಾಸಕಾಂಗವು ಅಧಿಕಾರದಿಂದ ಕಿತ್ತುಹಾಕಲು ಬರುವುದಿಲ್ಲ. + ಉಳಿದ ವಿಷಯಗಳಲ್ಲಿ ಸರಕಾರವು ಶಾಸಕಾಂಗಕ್ಕೆ ಜವಾಬ್ದಾರಿಯಾಗಿದೆ. +ಏಕೆಂದರೆ ಯಾರ ಸಲಹೆಯ ಮೇರೆಗೆ ಸರಕಾರಿ ಅಧಿಕಾರ ಚಲಾಯಿಸಲಾಗುತ್ತದೆಯೋ ಆ ಮಂತ್ರಿಗಳನ್ನು ಶಾಸಕಾಂಗ ಕಿತ್ತುಹಾಕಬಹುದು. +ಆದ್ದರಿಂದ ಈ ಸಂಯುಕ್ತ ರಾಜ್ಯ ಯೋಜನೆಯಲ್ಲಿರುವ ಜವಾಬ್ದಾರಿ ಸೀಮಿತವಾದ ಜವಾಬ್ದಾರಿಯ ನಿದರ್ಶನವಾಗಿದೆ. +ಸಾಮಾಜಿಕ, ರಾಜಕೀಯ ಮತ್ತು ಆರ್ಥಿಕ ದೃಷ್ಟಿಯಲ್ಲಿ ಅತ್ಯಂತ ಮಹತ್ವದ ವಿಷಯಗಳೆಂದು ಪರಿಗಣಿಸಲಾಗಿರುವ ರಕ್ಷಣೆ ಮತ್ತು ವಿದೇಶ ವ್ಯವಹಾರಗಳು ಈ ಜವಾಬ್ದಾರಿಯ ವ್ಯಾಪ್ತಿಗೊಳಪಟ್ಟಿಲ್ಲ. +ಈ ಯೋಜನೆಯು ಭಾರತ ಸರಕಾರ ಕಾಯ್ದೆಯ ೧೯೧೯ ರಲ್ಲೊಳಗೊಂಡಿದ್ದ ಪ್ರಾಂತೀಯ ಸಂವಿಧಾನದ ಆಧಾರ ಹೊಂದಿದ್ದು ಮಾಂಟಿಗೊ-ಚೆರ್ಕ್ಸ್‌ಫರ್ಡ್‌ ಸುಧಾರಣೆಗಳ ಪ್ರಕಾರ ವರ್ಗಾಯಿಸಲಾದ ಮತ್ತು ಕಾಯ್ದಿರಿಸಿದ ವಿಷಯಗಳೆಂದು ವಿಭಜಿಸಲಾಗಿದ್ದ ದ್ವಿ-ಸರ್ಕಾರ (ಡಯಾರ್ಕಿ) ಪದ್ಧತಿಯನ್ನು ಹೋಲುತ್ತದೆ. +೧೯೩೫ ರ ಕಾಯ್ದೆಯ ಸಂಯುಕ್ತ ರಾಜ್ಯ ಸಂವಿಧಾನದಲ್ಲಿ ಅಡಕವಾಗಿರುವ ಜವಾಬ್ದಾರಿ ಯೋಜನೆ ೧೯೧೯ ರ ಕಾಯ್ದೆಯಪ್ರಾಂತೀಯ ಸಂವಿಧಾನದಲ್ಲಿ ಅಳವಡಿಸಲಾಗಿದ್ದ ಜವಾಬ್ದಾರಿ ಯೋಜನೆಯ ತದ್ರೂಪವಾಗಿದೆ. +ಇದು ನಿಜವಾದ ಜವಾಬ್ದಾರಿಯಾಗಿದೆಯೇ ?ಅಲ್ಲವೆಂದೇ ನನ್ನ ಉತ್ತರ. +ಹೀಗೆ ಹೇಳಲು ನನ್ನ ಕಾರಣಗಳನ್ನು ಕೊಡುತ್ತೇನೆ. +ಮೊದಲನೆಯದಾಗಿ, ಜವಾಬ್ದಾರಿಯ ವ್ಯಾಪ್ತಿ ಸೀಮಿತವಾಗಿದೆ. +ಮಾತ್ರವಲ್ಲ,ಅದು ಮಂತ್ರಿಗಳ ಮುಕ್ತ ಕಾರ್ಯಾಚರಣೆಗೆ ಅವಕಾಶ ನೀಡುವುದಿಲ್ಲ. +ಜವಾಬ್ದಾರಿಯು ಎಷ್ಟರ ಮಟ್ಟಿಗೆ ತೊಡಕಿನದೂ, ನಿರ್ಬಂಧಿತವೂ ಆಗಿದೆ ಎಂಬುದನ್ನು ಮನವರಿಕೆ ಮಾಡಿಕೊಳ್ಳಲು ಜವಾಬ್ದಾರಿ ಹೊಂದಿರುವ ವಿಷಯಗಳಲ್ಲಿ ವ್ಯವಹರಿಸುವಾಗ ಮಂತ್ರಿಗಳ ಅಧಿಕಾರಗಳ ಮೇಲೆ ಹೇರಲಾಗಿರುವ ನಿರ್ಬಂಧಗಳನ್ನು ಗಣನೆಗೆ ತೆಗೆದುಕೊಳ್ಳಬೇಕು. +ಜವಾಬ್ದಾರಿ ಹೊಂದಿರುವ ಕ್ಷೇತ್ರದಲ್ಲಿ ವ್ಯವಹರಿಸುವಾಗ ಮಂತ್ರಿಗಳ ಅಧಿಕಾರದ ಮೇಲೆ ಹೇರಲಾಗಿರುವ ಮೊದಲನೆಯ ವಿಧದ ನಿರ್ಬಂಧಗಳು ಗವರ್ನರ್‌-ಜನರಲ್‌ರ ವಿಶೇಷ ಜವಾಬ್ದಾರಿ ಎಂದು ಕರೆಯಲಾದ ವಿಷಯಗಳಿಂದ ಉದ್ಭವವಾಗುತ್ತವೆ. +ವರ್ಗಾಯಿಸಲಾದ ವಿಷಯಗಳಲ್ಲಿ ವ್ಯವಹರಿಸುವಾಗ ಮಂತ್ರಿಗಳ ಅಧಿಕಾರದ ಮೇಲೆ ಇನ್ನೊಂದು ವಿಧದ ನಿರ್ಬಂಧಗಳಿವೆ. +ಇದನ್ನು ತಿಳಿದುಕೊಳ್ಳಲು ನೀವು ಈ ಸಂಯುಕ್ತ ರಾಜ್ಯ ಸಂವಿಧಾನದ ಇನ್ನೊಂದು ವಿಶೇಷ ಲಕ್ಷಣವನ್ನು ಅರ್ಥ ಮಾಡಿಕೊಳ್ಳಬೇಕು. +ಸಂವಿಧಾನದಲ್ಲಿ ವಿವಿಧ ವಿಷಯಗಳನ್ನು ಸರಕಾರದ ಅಧಿಕಾರದ ದೃಷ್ಟಿಯಿಂದ ವರ್ಗೀಕರಿಸಲಾಗಿದೆ. +ಹೀಗೆ ವರ್ಗೀಕರಣ ಮಾಡಿರುವುದರಿಂದ ಸಂಕ್ಟಿಪ್ತತೆಯ ಕಾರಣ ವರ್ಗಾಯಿಸಲಾದ ವಿಷಯಗಳು ಮತ್ತು ಕಾಯ್ದಿರಿಸಿದ ವಿಷಯಗಳೆಂದು ಹೆಸರಿಸಬಹುದಾದ ವಿಭಜನೆಯಾಗಿದೆ. +ಸಂವಿಧಾನ ಇಷ್ಟಕ್ಕೇ ನಿಲ್ಲುವುದಿಲ್ಲ. +ಮುಂದುವರೆದು ಅದರಲ್ಲಿ ವರ್ಗಾಯಿಸಲಾದ ವಿಷಯಗಳನ್ನು ಎರಡು ವಿಧಗಳಲ್ಲಿ ವಿಂಗಡಿಸಲಾಗಿದೆ. + ಮಂತ್ರಿಗಳು ತಮ್ಮ ಸರಕಾರಿ ಅಧಿಕಾರದ ಮೂಲಕ ಆಡಳಿತ ನಿಯಂತ್ರಣ ಹೊಂದಿರುವ ವಿಷಯಗಳು. + ಮಂತ್ರಿಗಳು ತಮ್ಮ ಸರಕಾರಿ ಅಧಿಕಾರಗಳ ಮೂಲಕ ನಿಯಂತ್ರಣ ಹೊಂದಿರುವ ವಿಷಯಗಳು. + ಈ ವರ್ಗೀಕರಣದ ಉದಾಹರಣೆಯಾಗಿ ರೈಲು ಮಾರ್ಗಗಳನ್ನೇ ತೆಗೆದುಕೊಳ್ಳೋಣ. +ರೈಲು ಮಾರ್ಗ ವರ್ಗಾಯಿಸಲಾದ ವಿಷಯವಾಗಿದೆ. +ಮಂತ್ರಿಗಳ ಆಡಳಿತ ನಿಯಂತ್ರಣ ರೈಲು ಮಾರ್ಗಗಳಿಗೆ ಅನ್ವಯಿಸುತ್ತದೆ. +ಆದರೆ ಮಂತ್ರಿಗಳು ರೈಲು ಮಾರ್ಗಗಳ ವಿಷಯದಲ್ಲಿ ಆಡಳಿತ ನಿಯಂತ್ರಣದ ಹಕ್ಕನ್ನು ಹೊಂದಿಲ್ಲ. +ರೈಲು ಮಾರ್ಗಗಳ ಮೇಲಣ ಆಡಳಿತ ನಿಯಂತ್ರಣವನ್ನು ರೈಲು ಮಾರ್ಗ ಪ್ರಾಧಿಕಾರ ಎಂಬ ಸಂಸ್ಥೆಗೆ ನೀಡಲಾಗಿದೆ. +ಆಡಳಿತ ನಿಯಂತ್ರಣ ಸಹಿತ ಸರಕಾರೀ ಅಧಿಕಾರ ಮತ್ತು ಆಡಳಿತ ನಿಯಂತ್ರಣ ರಹಿತ ಸರಕಾರೀ ಅಧಿಕಾರ ಇವುಗಳ ನಡುವೆ ವ್ಯತ್ಯಾಸವಿಲ್ಲವೇ ಇಲ್ಲ. +ಈ ಎರಡೂ ಸ್ಥಿತಿಗಳಲ್ಲಿ ನಿಜವಾದ ವ್ಯತ್ಯಾಸವಿದೆ. +ರೈಲು ಮಾರ್ಗಗಳ ವಿಷಯದಲ್ಲಿರುವ ಈ ವ್ಯತ್ಯಾಸವನ್ನು ೧೮೧ ನೆ ವಿಭಾಗದ (೨)ನೆಯ ಉಪವಿಭಾಗದಲ್ಲಿ ಸ್ಪಷ್ಟಪಡಿಸಲಾಗಿದೆ. +ಈ ವ್ಯತ್ಯಾಸವು ನೀತಿ ನಿರೂಪಣೆಯ ಅಧಿಕಾರ ಮತ್ತು ಅದರ ಕಾರ್ಯಾಚರಣೆಯ ಸಾಮರ್ಥ್ಯದ ನಡುವೆ ಇರುವ ವ್ಯತ್ಯಾಸವೇ ಆಗಿದೆ. +ಕಾರ್ಯಾಚರಣೆಯ ಸಾಮರ್ಥ್ಯ ಮತ್ತು ನೀತಿ ನಿರೂಪಣೆಯ ಅಧಿಕಾರಗಳ ಪ್ರತ್ಯೇಕೀಕರಣ ಅಥವಾ ವಿಚ್ಛೇದನವಿರುವ ಸರಕಾರದ ವ್ಯವಸ್ಥೆಯಲ್ಲಿ ನಿಜವಾದ ಜವಾಬ್ದಾರಿ ಇರಲು ಸಾಧ್ಯವೇ ? + ಇದಕ್ಕೆ ಉತ್ತರವನ್ನು ಒಕ್ಕೂಟ ವ್ಯವಸ್ಥೆಯ ಪ್ರತಿಪಾದಕರೇ ಹೇಳಬೇಕು. +ಒಕ್ಕೂಟ ವ್ಯವಸ್ಥೆ ಯೋಜನೆಯಲ್ಲಿರುವ ಜವಾಬ್ದಾರಿ ಅಥವಾ ಹೊಣೆಗಾರಿಕೆ ಭಾರತ ಸರಕಾರ ಕಾಯ್ದೆ, ೧೯೧೯ ರ ಪ್ರಕಾರ ಪ್ರಾಂತ್ಯಗಳಲ್ಲಿ ಜಾರಿಗೆ ತರಲಾದ ದ್ವಿಸರ್ಕಾರ ವ್ಯವಸ್ಥೆಯನ್ನು ಹೋಲುತ್ತದೆ ಎಂದು ಈಗಾಗಲೇ ಹೇಳಿದ್ದೇನೆ. +ಆದರೆ ಒಕ್ಕೂಟದಲ್ಲಿ ಅಳವಡಿಸಲಾಗಿರುವ ಜವಾಬ್ದಾರಿಯ ಯೋಜನೆಯನ್ನು ಪ್ರಾಂತ್ಯಗಳಲ್ಲಿನ ದ್ವಿಸರ್ಕಾರ ಯೋಜನೆಯೊಡನೆ ಹೋಲಿಸಿ ನೋಡಿದಾಗ ಸಂಯುಕ್ತ ರಾಜ್ಯ ಯೋಜನೆಯಲ್ಲಿ ದ್ವಿಸರ್ಕಾರ ಯೋಜನೆಗಿಂತ ಕಡಿಮೆ ಜವಾಬ್ದಾರಿ ಇರುವಂತೆ ಯೋಜಿಸಲಾಗಿದೆ. +ಪ್ರಾಂತ್ಯಗಳಲ್ಲಿನ ದ್ವಿಸರ್ಕಾರ ಯೋಜನೆಯಲ್ಲಿರದಂತಹ ಎರಡು ಅಂಶಗಳನ್ನು ಸಂಯುಕ್ತ ರಾಜ್ಯ ಯೋಜನೆಯಲ್ಲಿ ಅಳವಡಿಸಲಾಗಿದೆ . +ಸಂಯುಕ್ತ ರಾಜ್ಯದಲ್ಲಿರದೇ ಇರುವ ಒಂದು ಅಂಶವನ್ನು ದ್ವಿಸರ್ಕಾರ ಯೋಜನೆಯಲ್ಲಿ ಸೇರಿಸಲಾಗಿದೆ. +ಒಂದು ವ್ಯವಸ್ಥೆಯಲ್ಲಿ ಎರಡು ಅಂಶಗಳಿರುವುದು ಮತ್ತು ಇನ್ನೊಂದು ವ್ಯವಸ್ಥೆಯಲ್ಲಿ ಒಂದು ಅಂಶ ಅಥವಾ ಸಂಗತಿ ಇಲ್ಲದಿರುವುದು ಸಂಯುಕ್ತ ರಾಜ್ಯದಲ್ಲಿರುವ ದ್ವಿಸರ್ಕಾರ ಪದ್ಧತಿಯನ್ನು ಪ್ರಾಂತ್ಯಗಳಲ್ಲಿರುವ ದ್ವಿಸರ್ಕಾರ ಪದ್ಧತಿಗಿಂತ ಕನಿಷ್ಠ ರೀತಿಯದನ್ನಾಗಿ ಮಾಡಿದೆ. +ಒಕ್ಕೂಟ ರಾಜ್ಯ ಯೋಜನೆಯಲ್ಲಿರುವ ಎರಡು ಹೊಸ ಸಂಗತಿಗಳಲ್ಲಿ ವರ್ಗಾಯಿಸಲಾದ ವಿಷಯಗಳಲ್ಲಿ ಗವರ್ನರ್‌-ಜನರಲ್‌ರ ವಿಶೇಷ ಜವಾಬ್ದಾರಿ ಒಂದು ಅಂಶವಾಗಿದ್ದರೆ, ಇದೇ ವಿಷಯಗಳ ಮೇಲೆ ಸರಕಾರಿ ಅಧಿಕಾರ ಮತ್ತು ಆಡಳಿತ ನಿಯಂತ್ರಣಗಳ ಪ್ರತ್ಯೇಕತೆ ಇನ್ನೊಂದು ಅಂಶವಾಗಿದೆ. +ಈ ಎರಡು ಹೊಸ ಸಂಗತಿಗಳಾಗಿದ್ದು ಇವು ಪ್ರಾಂತ್ಯಗಳಲ್ಲಿ ದ್ವಿಸರ್ಕಾರ ಸಂವಿಧಾನದಲ್ಲಿ ಇರಲಿಲ್ಲ. +ಗವರ್ನರ್‌-ಜನರಲ್‌ರ ವಿಶೇಷ ಜವಾಬ್ದಾರಿ ನಿಷೇಧಾಧಿಕಾರದ ಇನ್ನೊಂದು ಹೆಸರಾಗಿದ್ದು ಅದು ಮಂತ್ರಿಗಳ ತೀರ್ಮಾನಗಳನ್ನು ತಳ್ಳಿ ಹಾಕುವ ಅಧಿಕಾರವಾಗಿದೆ. +ಇಂಗ್ಲಿಷ್‌ ಸಂವಿಧಾನದಲ್ಲಿಯೂ ಸಹದೊರೆಗೆ ಇಂತಹ ನಿಷೇಧಾಧಿಕಾರ ಕೊಡಲಾಗಿದೆ. +ವಿಶೇಷ ಜವಾಬ್ದಾರಿಯ ಬಗ್ಗೆ ಈ ಅಭಿಪ್ರಾಯ ಮೇಲ್ನೋಟಕ್ಕೆ ಸರಿ ಎಂದೂ ತೋರುತ್ತದೆ. +ಆದರೆ ವಾಸ್ತವಿಕವಾಗಿ ಇದು ದೊರೆಯ ನಿಷೇಧಾಧಿಕಾರದ ಚಲಾವಣೆಯ ಪರಿಸ್ಥಿತಿ ಮತ್ತು ಕರಾರುಗಳ ತಪ್ಪು ಗ್ರಹಿಕೆಯ ಪರಿಣಾಮವಾಗಿದೆ. +ನನಗೆ ತಿಳಿದ ಮಟ್ಟಿಗೆ ಒಂದು ಜವಾಬ್ದಾರಿ ಸರ್ಕಾರ ವ್ಯವಸ್ಥೆಯಲ್ಲಿ ದೊರೆ ಮತ್ತು ಆತನ ಮಂತ್ರಿಗಳ ನಡುವಣ ಸಂಬಂಧವನ್ನು ಮೆಕಾಲೆಗಿಂತ ಚೆನ್ನಾಗಿ ಇನ್ನಾರೂ ವಿವರಿಸಿಲ್ಲ. +ಅವರ ಮಾತುಗಳಲ್ಲೇ ಹೇಳುವುದಾದರೆ -ಇಂಗ್ಲೆಂಡ್‌ ದೊರೆಯ ಪ್ರತಿಯೊಂದು ಕಾರ್ಯಕ್ಕೂ ಯಾರಾದರೂ ಒಬ್ಬ ಮಂತ್ರಿ ಜವಾಬ್ದಾರಿಯನ್ನು ತೆಗೆದುಕೊಳ್ಳದ ಹೊರತು ತನ್ನ ನಿಷೇಧಾಧಿಕಾರವನ್ನು ಚಲಾಯಿಸುವಂತಿಲ್ಲ. + ಯಾವ ಮಂತ್ರಿಯೂ ಜವಾಬ್ದಾರಿ ಹೊರಲು ಸಿದ್ಧವಿಲ್ಲದಿದ್ದರೆ ದೊರೆಯು “ತಗ್ಗಬೇಕಾಗುತ್ತದೆ. + ಹೋರಾಡಬೇಕಾಗುತ್ತದೆ ಇಲ್ಲವೇ ಅಧಿಕಾರ ತ್ಯಾಗ ಮಾಡಬೇಕಾಗುತ್ತದೆ”. +ಗವರ್ನರ್‌ ಜನರಲ್‌ರ ಸ್ಥಾನ ಬೇರೆ ರೀತಿಯಾಗಿದೆ. +ಅವನು ತಗ್ಗಬೇಕಾಗಿಲ್ಲ. +ತಮ್ಮ ಕಾರ್ಯಕ್ಕೆ ಜವಾಬ್ದಾರಿ ಹೊರಲು ಯಾವ ಮಂತ್ರಿಯೂ ಸಿದ್ಧವಿಲ್ಲದಿದ್ದರೂ ಅವನು ತನ್ನ ಕೆಲಸ ಮಾಡಬಲ್ಲ. +ಇದೇ ದೊರೆಯ ನಿಷೇಧಾಧಿಕಾರ ಮತ್ತು ಗವರ್ನರ್‌-ಜನರಲ್‌ರ ನಿಷೇಧಾಧಿಕಾರದ ನಡುವೆ ಇರುವ ವ್ಯತ್ಯಾಸ. + ಈ ನಿಷೇಧಾಧಿಕಾರ ವರ್ಗಾಯಿಸಲಾದ ವಿಷಯಗಳಿಗೆ ಸಂಬಂಧಿಸಿದುದಾಗಿದೆ ಎಂಬುದು ಮುಖ್ಯವಾಗಿ ಗಮನಿಸಬೇಕಾದ ಅಂಶವಾಗಿದೆ. +ಪ್ರಾಂತ್ಯಗಳ ದ್ವಿಸರ್ಕಾರ ಸಂವಿಧಾನದಲ್ಲಿ ವರ್ಗಾಯಿಸಲಾದ ವಿಷಯಗಳು ಗವರ್ನರ್‌ರ ನಿಷೇಧಾಧಿಕಾರಕ್ಕೆ ಒಳಪಟ್ಟಿರಲಿಲ್ಲ. +ಎಂದರೆ,ಗವರ್ನರ್‌ ಅವರಿಗೆ ವಿಶೇಷ ಜವಾಬ್ದಾರಿಗಳು ಇರಲಿಲ್ಲ. +ಗವರ್ನರ್‌-ಜನರಲ್‌ರು ವರ್ಗಾಯಿಸಲಾದ ವಿಷಯಗಳಲ್ಲಿಯೂ ಮಂತ್ರಿಗಳ ಕೆಲಸಗಳನ್ನು ತಳ್ಳಿಹಾಕುವ ಅಧಿಕಾರ ಹೊಂದಿದ್ದಾಗ ಮಂತ್ರಿಗಳ ಜವಾಬ್ದಾರಿಯಲ್ಲಿರುವ ಸತ್ವವಾದರೂ ಏನು. +ನನ್ನ ಅಭಿಪ್ರಾಯದಲ್ಲಿ ಅದು ಅತ್ಯಲ್ಪ. +ಇನ್ನೊಂದು ಹೊಸ ವಿಷಯವೆಂದರೆ, ಸರಕಾರದ ಅಧಿಕಾರ ಮತ್ತು ಆಡಳಿತ ನಿಯಂತ್ರಣಗಳ ಪ್ರತ್ಯೇಕತೆ. +ಪ್ರಾಂತ್ಯಗಳ ದ್ವಿಸರ್ಕಾರ ಸಂವಿಧಾನದಲ್ಲಿ ಇಂತಹ ಏರ್ಪಾಡು ಇರಲಿಲ್ಲ. +ಈ ವ್ಯವಸ್ಥೆಯಲ್ಲಿ ಒಂದು ವಿಷಯವನ್ನು ವರ್ಗಾಯಿಸುವಾಗ ಸರಕಾರಿ ಅಧಿಕಾರ ಮತ್ತು ಆಡಳಿತಾತ್ಮಕ ನಿಯಂತ್ರಣವನ್ನೂ ಸಹ ಮಂತ್ರಿಗೆ ವರ್ಗಾಯಿಸಲಾಗುತ್ತಿತ್ತು. +ಒಬ್ಬ ಮಂತ್ರಿಯೂ ಕೇವಲ ಆದೇಶಗಳನ್ನು ನೀಡಿ ಅವುಗಳ ಕಾರ್ಯಾಚರಣೆಯ ಮೇಲೆ ನಿಯಂತ್ರಣ ಹೊಂದಿರದಿದ್ದರೆ ಅಂತಹ ಮಂತ್ರಿಯ ಜವಾಬ್ದಾರಿಯಲ್ಲಿ ಏನು ಸತ್ವವಿರಲಿಕ್ಕೆ ಸಾಧ್ಯ ಎಂಬ ಪ್ರಶ್ನೆಯನ್ನು ನೀವೇ ಹಾಕಿಕೊಳ್ಳುವಿರಿ. +ಅದು ಅತ್ಯಲ್ಪ. +ಪ್ರಾಂತ್ಯಗಳ ದ್ವಿಸರ್ಕಾರ ಸಂವಿಧಾನದಲ್ಲಿ ಅಡಕವಾಗಿರುವ ಮತ್ತು ಒಕ್ಕೂಟದ ಸಂವಿಧಾನದಲ್ಲಿ ಕೈಬಿಡಲಾಗಿರುವ ವಿಷಯದ ಆರಕ್ಷಿತ ವಿಷಯಗಳಿಗೆ ಹಣಕಾಸು ಒದಗಿಸುವುದರ ಸಂಬಂಧದ್ದಾಗಿದೆ. +ಈ ಸಂಬಂಧದಲ್ಲಿ ೧೯೧೯ ರ ಹಳೆಯ ಕಾಯ್ದೆಯ ೭೨ ಡಿ ವಿಭಾಗ ಮತ್ತು ಈಗಿನ ಕಾಯ್ದೆಯ ೩೩ಮತ್ತು ೩೪ ನೆಯ ವಿಭಾಗಗಳನ್ನು ಹೋಲಿಸಿ ನೋಡುವುದು ಉಪಯುಕ್ತವೆನಿಸುವುದು. +೭೨ಡಿ ವಿಭಾಗದ (೨) ನೆಯ ಉಪವಿಭಾಗದಲ್ಲಿ ಹೀಗೆ ಹೇಳಲಾಗಿದೆ :“ಪ್ರಾಂತ್ಯದ ವಾರ್ಷಿಕ ಆದಾಯ ಮತ್ತು ವೆಚ್ಚದ ಅಂದಾಜು ಪಟ್ಟಿಯನ್ನು ಪ್ರತಿನಿಧಿಸುವ ವಿಧಾನಪರಿಷತ್ತಿನಲ್ಲಿ ಮಂಡಿಸತಕ್ಕದ್ದು . + ಯಾವುದೇ ವರ್ಷದಲ್ಲಿ ಸ್ಥಳೀಯ ಸರಕಾರಕ್ಕೆ ಪ್ರಾಂತೀಯ ಸರಕಾರದ ಆದಾಯದಿಂದ ಮತ್ತು ಇತರ ಹಣಕಾಸುಗಳಿಂದ ವಿನಿಯೋಗಿಸುವ ಸೂಚನೆಗಳನ್ನು ಪರಿಷತ್ತಿನಲ್ಲಿ ಅನುದಾನದ ಬೇಡಿಕೆಯ ರೂಪದಲ್ಲಿ ಮತದಾನಕ್ಕಾಗಿ ಮಂಡಿಸತಕ್ಕದ್ದು. +ಪರಿಷತ್ತು ಯಾವುದೇ ಬೇಡಿಕೆಗೆ ಸಮ್ಮತಿ ನೀಡಬಹುದು ಅಥವಾ ನಿರಾಕರಿಸಬಹುದು. +ಅಥವಾ ಬೇಡಿದ ಮೊತ್ತದಲ್ಲಿ ವೆಚ್ಚದ ಯಾವುದಾದರೂ ಬಾಬ್ತಿನಲ್ಲಿ ಕಡಿಮೆ ಮಾಡುವ ಮೂಲಕ ಕಡಿತ ಮಾಡಬಹುದು. + ಇದರೊಡನೆ ಸದ್ಯದ ೧೯೩೫ ರ ಕಾಯ್ದೆಯ ೩೪ ನೆಯ ವಿಭಾಗವನ್ನು ಹೋಲಿಸಿ ನೋಡಿ, ೩೪ ನೆಯ ವಿಭಾಗದ ಉಪವಿಭಾಗ (೧)ರಲ್ಲಿ ಹೀಗೆ ಹೇಳಲಾಗಿದೆ :“ಸಂಯುಕ್ತ ರಾಜ್ಯದ ಆದಾಯಗಳ ಮೇಲೆ ಹೇರುವ ವೆಚ್ಚವೆಂದು ಪರಿಗಣಿಸಲಾಗುವ ವೆಚ್ಚದ ಅಂದಾಜನ್ನು ಶಾಸಕಾಂಗದ ಅನುಮತಿ ಪಡೆಯಲು ಸಲ್ಲಿಸಲಾಗದು. + ಆದರೆ ಈ ಉಪವಿಭಾಗದಲ್ಲಿ ಹೇಳಿರುವುದಾವುದನ್ನೂ ಶಾಸಕಾಂಗದ ಯಾವುದೇ ಸದನದಲ್ಲಿ ೩೩ ನೆಯ ವಿಭಾಗದ ಉಪವಿಭಾಗ(೩) ರ ಪ್ಯಾರಾ (ಎ) ಅಥವಾ ಪ್ಯಾರಾ (ಎಫ್‌) ನಲ್ಲಿ ಹೇಳಲಾದ ವಿಷಯಗಳಿಗೆ ಸಂಬಂಧಿಸಿದ ಅಂದಾಜುಗಳ ಹೊರತು ಇತರ ಅಂದಾಜುಗಳ ಚರ್ಚೆ ಮಾಡುವುದನ್ನು ತಪ್ಪಿಸಬಹುದೆಂದು ಅರ್ಥಮಾಡಬಾರದು”. + ವಿಭಾಗ ೩೩ ರ ಪ್ರಕಾರ ಒಕ್ಕೂಟ ಆದಾಯಕ್ಕೆ ಹಾಕಿದ ಖರ್ಚಿನಲ್ಲಿ ಆರಕ್ಷಿತ ವಿಷಯಗಳ ಮೇಲಣ ಖರ್ಚು ಸೇರಿರುತ್ತದೆ. +ಎರಡೂ ಕಾಯ್ದೆಗಳ ನಿಬಂಧನೆಗಳನ್ನು ಹೋಲಿಸಿ ನೋಡಿದಾಗ,ಹಳೆಯ ಕಾಯ್ದೆಯ ೭೨ ಡಿ ವಿಭಾಗದಲ್ಲಿ ಅನುದಾನದಲ್ಲಿನ ಬೇಡಿಕೆಗಳ ಮಂಜೂರಾತಿಯ ಸಂಬಂಧದಲ್ಲಿ ವರ್ಗಾಯಿಸಲಾದ ಮತ್ತು ಆರಕ್ಷಿತ ವಿಷಯಗಳಲ್ಲಿ ಯಾವ ವ್ಯತ್ಯಾಸವನ್ನೂ ಮಾಡಲಾಗಿಲ್ಲ. +ಮತ್ತು ಆರಕ್ಷಿತ ವಿಷಯಗಳ ಮೇಲಣ ವೆಚ್ಚದ ಮೇಲೆ ಚರ್ಚೆಗೆ ಅವಕಾಶವೂ ಅಲ್ಲದೆ ಶಾಸಕಾಂಗದಲ್ಲಿ ಮಂಜೂರಾತಿ ಮಾಡಲು ಅವಕಾಶವಿತ್ತು. +ಹೊಸ ಕಾಯ್ದೆಯ ೩೪ ನೆಯ ವಿಭಾಗದ ನಿಬಂಧನೆಗಳ ಒಕ್ಕೂಟದ ಪ್ರಕಾರ ಶಾಸಕಾಂಗವು ಆರಕ್ಷಿತ ವಿಷಯಗಳ ಮೇಲಣ ವೆಚ್ಚದ ಮೇಲೆ ಚರ್ಚೆ ಮಾತ್ರ ಮಾಡಬಹುದಾಗದೆಯೇ ಹೊರತು ಅಂಗೀಕಾರ ನೀಡುವಂತಿಲ್ಲ. +ಇದು ಅತ್ಯಂತ ಮಹತ್ವದ ವ್ಯತ್ಯಾಸ. +ಹಳೆಯ ಕಾಯ್ದೆಯಲ್ಲಿ ಕಾಯ್ದಿರಿಸಿದ ವಿಷಯಗಳ ಮೇಲೂ ಶಾಸಕಾಂಗ ಹಣಕಾಸು ಅಧಿಕಾರ ಹೊಂದಿತ್ತು. +ಸದ್ಯದ ಸಂವಿಧಾನದಲ್ಲಿ ಅವುಗಳು ಸಂಯುಕ್ತ ರಾಜ್ಯ ಶಾಸಕಾಂಗದ ಹಣಕಾಸಿನ ಮೇಲಣ ಅಧಿಕಾರದಿಂದ ಮುಕ್ತವಾಗಿವೆ. +ಪ್ರಾಂತೀಯ ಸಂವಿಧಾನದಲ್ಲಿ ಆರಕ್ಷಿತ ವಿಷಯಗಳ ವೆಚ್ಚದ ಮೇಲಣ ಶಾಸಕಾಂಗದ ಮಂಜೂರಾತಿ ಅಂತಿಮವಾದದ್ದಾಗಿರಲಿಲ್ಲವೆಂಬುದೇನೋ ನಿಜ. +೭೨ ಡಿ ವಿಭಾಗದ ಒಂದು ನಿಬಂಧನೆಯ ಪ್ರಕಾರ ಗವರ್ನರಿಗೆ “ಕಾಯ್ದಿರಿಸಿದ ವಿಷಯಗಳ ಮೇಲಣ ಬೇಡಿಕೆಗೆ ಶಾಸಕಾಂಗವು ಮಂಜೂರಾತಿ ತಡೆಹಿಡಿದರೆ ಅಥವಾ ಅದರಲ್ಲಿ ಕಡಿತ ಮಾಡಿದರೂ ಕೂಡ, ಬೇಡಿಕೆಯಲ್ಲಿ ಸೂಚಿಸಿರುವ ಹಣದ ವಿಷಯದಲ್ಲಿ ತಮ್ಮ ಜವಾಬ್ದಾರಿ ನಿರ್ವಹಿಸಲು ಅವಶ್ಯವಾಗಿದೆ ಎಂದು ಗವರ್ನರರು ದೃಢೀಕರಿಸಿದಲ್ಲಿ ಅಂತಹ ಬೇಡಿಕೆಗೆ ಅಂಗೀಕಾರ ದೊರೆತಿದೆಯೆಂದೇ ಭಾವಿಸಿಕೊಂಡು ಕೆಲಸ ಮಾಡುವ” ಅಧಿಕಾರ ನೀಡಲಾಗಿದೆ. +ಭಾರತ ಸರಕಾರ ಕಾಯ್ದೆ ೧೯೩೫ ರ ಪ್ರಕಾರ ಆರಕ್ಷಿತ ವಿಷಯಗಳ ಮೇಲಣ ವೆಚ್ಚದ ಮೊತ್ತವನ್ನು ೪೨ ಕೋಟಿ ರೂಪಾಯಿಗಳೆಂದು ನಿಗದಿಪಡಿಸಿರುವುದೂ ನಿಜ. + ಆದರೂ ಈಗಲೂ ಇರುವ ವ್ಯತ್ಯಾಸವೆಂದರೆ,ಹಳೆಯ ಸಂವಿಧಾನದಲ್ಲಿ ಆರಕ್ಷಿತ ವಿಷಯಗಳು ಶಾಸಕಾಂಗದ ಹಣಕಾಸಿನ ನಿಯಂತ್ರಣಕ್ಕೊಳಪಟ್ಟಿದ್ದವು. +ಆದರೆ ಹೊಸ ಸಂವಿಧಾನದಲ್ಲಿ ಶಾಸಕಾಂಗ ಅಂತಹ ನಿಯಂತ್ರಣ ಹೊಂದಿಲ್ಲ. +ಇಲ್ಲಿರುವ ವ್ಯತ್ಯಾಸ ಅಲ್ಪವೇನಲ್ಲ. +ಬೇಡಿಕೆಗಳಿಗೆ ಮಂಜೂರಾತಿ ನೀಡುವುದು ಕಾರ್ಯಾಂಗದ ಜವಾಬ್ದಾರಿಯನ್ನು ವಿಧಿಸುವ ಅತ್ಯಂತ ಪರಿಣಾಮಕಾರಿ ವಿಧಾನವಾಗಿದೆ. +ದೃಢೀಕರಿಸುವ ಅಧಿಕಾರವು ಆರಕ್ಷಿತ ವಿಷಯಗಳ ಮೇಲೆ ಶಾಸಕಾಂಗದ ನಿಯಂತ್ರಣವನ್ನು ತಪ್ಪಿಸಿರಬಹುದು. +ಆದರೆ ಅದರ ಪ್ರಭಾವವನ್ನು ಅದು ಸಂಪೂರ್ಣವಾಗಿ ತೊಡೆದು ಹಾಕಿಲ್ಲ. +ಸದ್ಯದ ಸಂವಿಧಾನದಲ್ಲಿ ಶಾಸಕಾಂಗವು ಆರಕ್ಷಿತ ವಿಷಯಗಳ ಮೇಲೆ ನಿಯಂತ್ರಣವನ್ನು ಹೊಂದಿಲ್ಲ ಮತ್ತು ಅವುಗಳ ಮೇಲೆ ತನ್ನ ಪ್ರಭಾವವನ್ನೂ ಬೀರಲಾರದು. +ಆದ್ದರಿಂದ ಹಳೆಯ ಪ್ರಾಂತೀಯ ಸಂವಿಧಾನದ ದ್ವಿಸರ್ಕಾರ ಪದ್ಧತಿಯಲ್ಲಿ ಈಗಿನ ಸಂಯುಕ್ತ ರಾಜ್ಯದಲ್ಲಿರುವ ದ್ವಿಸರ್ಕಾರ ಪದ್ಧತಿಗಿಂತ ಹೆಚ್ಚು ಜವಾಬ್ದಾರಿ ಇದ್ದಿತೆಂಬುದು ನಿಸ್ಸಂದೇಹ. +ಕಾರ್ಯಾಂಗವು ಶಾಸಕಾಂಗಕ್ಕೆ ಉತ್ತರದಾಯಿಯಾಗಿಲ್ಲದಿರುವುದರಿಂದ ಒಕ್ಕೂಟದಲ್ಲಿ ಕಾರ್ಯಾಂಗವು ಸರ್ವೋಚ್ಚವಾಗಿದೆ ಎಂದು ಹೇಳುವುದು ಇನ್ನೊಂದು ಬಗೆ. +ಕಾರ್ಯಾಂಗದ ಸರ್ವೋಚ್ಚತೆಯನ್ನು ಕಾಪಾಡಿಕೊಳ್ಳುವ ಹಲವು ವಿಧಾನಗಳಿವೆ. +ಶಾಸಕಾಂಗದ ಅಧಿಕಾರಗಳನ್ನು ಮೊಟಕುಗೊಳಿಸುವ ಮೂಲಕ ಅದನ್ನು ಕಾಪಾಡಬಹುದು. +ಅಥವಾ ಶಾಸಕಾಂಗವು ಯಾವಾಗಲೂ ಕಾರ್ಯಾಂಗದ ಆಜ್ಚಾವರ್ತಿಯಾಗಿರುವ ರೀತಿಯಲ್ಲಿ ಅದನ್ನು ರಚಿಸುವ ಮೂಲಕವೂ ಕಾಪಾಡಬಹುದಾಗಿದೆ. +ಒಕ್ಕೂಟ ವ್ಯವಸ್ಥೆಯ ಯೋಜನೆಯು ಈ ಎರಡೂ ವಿಧಾನಗಳನ್ನನುಸರಿಸಿದೆ. +ಮೊದಲನೆಯದಾಗಿ ಅದು ಫೆಡರಲ್‌ ಶಾಸಕಾಂಗದ ಅಧಿಕಾರಗಳನ್ನು ಸೀಮಿತಗೊಳಿಸುತ್ತದೆ. +ಈ ಯೋಜನೆಯಲ್ಲಿ ಎಷ್ಟರಮಟ್ಟಿಗೆ ಫೆಡರಲ್‌ ಶಾಸಕಾಂಗದ ಹಣಕಾಸಿನ ಅಧಿಕಾರಗಳನ್ನು ಮೊಟಕುಗೊಳಿಸಿದೆ ಎಂಬುದನ್ನು ಈಗಾಗಲೇ ವಿವರಿಸಿದ್ದೇನೆ. + ಫೆಡರಲ್‌ ಶಾಸಕಾಂಗಕ್ಕೆ ಆದಾಯದ ಮೇಲೆ ಖರ್ಚು ಹಾಕಿದ ವಿಷಯಗಳಿಗೆ ಸಂಬಂಧಿಸಿದ್ದೆಂದು ಹೇಳಲಾದ ಬೇಡಿಕೆಗಳನ್ನು ನಿರಾಕರಿಸುವ ಹಕ್ಕು ಇರುವುದಿಲ್ಲ. +ಒಕ್ಕೂಟದ ಯೋಜನೆಯಲ್ಲಿ ಫೆಡರಲ್‌ ಶಾಸಕಾಂಗದ ಶಾಸನ ರೂಪಿಸುವ ಅಧಿಕಾರಗಳನ್ನೂ ಮೊಟಕುಗೊಳಿಸಲಾಗಿದೆ. +ಈ ನಿರ್ಬಂಧಗಳನ್ನು ೧ಂ೮ ನೆಯ ವಿಭಾಗದಲ್ಲಿ ನಿಗದಿಪಡಿಸಲಾಗಿದ್ದು,ಅದರಲ್ಲಿ ಹೀಗೆ ಹೇಳಲಾಗಿದೆ :“೧ಂ೮. (೧) ಗವರ್ನರ್‌-ಜನರಲ್‌ರು ತಮ್ಮ ವಿವೇಚನೆಯಲ್ಲಿ ಈ ಕೆಳಗೆ ಹೇಳುವ ಯಾವುದೇ ವಿಷಯ, ಮಸೂದೆ ಅಥವಾ ತಿದ್ದುಪಡಿ ಮಂಡನೆಗೆ ಪೂರ್ವಭಾವಿ ಅನುಮತಿ ನೀಡದ ಹೊರತು ಅವುಗಳನ್ನು ಫೆಡರಲ್‌ ಶಾಸಕಾಂಗದ ಯಾವುದೇ ಸದನದಲ್ಲಿ ಮಂಡಿಸುವಂತಿಲ್ಲ”. +ಅವು ಯಾವುವೆಂದರೆ:(ಎ) ಬ್ರಿಟಿಷ್‌ ಭಾರತಕ್ಕೆ ಅನ್ವಯಿಸುವ ಸಂಸತ್ತಿನ ಯಾವುದೇ ಕಾಯ್ದೆಯ ನಿಬಂಧನೆಗಳಿಗೆ ವಿರೋಧವಾದ ಯಾವುದೇ ತಿದ್ದುಪಡಿ ಮಾಡುವ ಅಥವಾ ಅದನ್ನೂ ರದ್ದುಪಡಿಸುವ, ಮಸೂದೆ,ತಿದ್ದುಪಡಿ ಮುಂತಾದವು. +ಅಥವಾ(ಬಿ) ಗವರ್ನರ್‌-ಜನರಲ್‌ರ ಅಥವಾ ಗವರ್ನರರ ಕಾಯ್ದೆ ಅಥವಾ ಅವರು ತಮ್ಮ ವಿವೇಚನೆಯಲ್ಲಿ ಹೊರಡಿಸಲಾದ ಯಾವುದೇ ಆದೇಶವನ್ನು ರದ್ದುಪಡಿಸುವ, ತಿದ್ದುಪಡಿ ಮಾಡುವ ಅಥವಾ ವಿರೋಧವಾದ ನಿಬಂಧನೆಗಳನ್ನು ಮಾಡುವ, ಮಸೂದೆಗಳು ಅಥವಾ (ಸಿ) ಈ ಕಾಯ್ದೆಯನ್ವಯ ಗವರ್ನರ್‌ ಜನರಲ್‌ರು ತಮ್ಮ ವಿವೇಚನೆಯ ಪ್ರಕಾರ ಮಾಡುವ ಯಾವುದೇ ವಿಷಯಗಳಿಗೆ ಸಂಬಂಧಿಸಿದ. +ಅಥವಾ(ಡಿ) ಯಾವುದೇ ಪೋಲಿಸ್‌ ಪಡೆಯ ವಿಷಯವಾಗಿರುವ ಯಾವುದೇ ಕಾಯ್ದೆಯನ್ನು ರದ್ದುಗೊಳಿಸುವ ಅಥವಾ ತಿದ್ದುಪಡಿ ಮಾಡುವ, ಅಥವಾ(ಇ) ಯೂರೋಪಿಯನ್‌ ಬ್ರಿಟಿಷ್‌ ಪ್ರಜೆಗಳ ಸಂಬಂಧ ಕ್ರಿಮಿನಲ್‌ ವ್ಯವಹರಣೆಯ ವಿಷಯವಾಗಿ,ಅಥವಾ(ಎಫ್‌) ಬ್ರಿಟಿಷ್‌ ಭಾರತದಲ್ಲಿ ವಾಸ ಮಾಡದೆ ಇರುವವರ ಮೇಲೆ ಬ್ರಿಟಿಷ್‌ ಭಾರತದಲ್ಲಿ ವಾಸ ಮಾಡುವವರಿಗಿಂತ ಹೆಚ್ಚಿಗೆ ತೆರಿಗೆ ವಿಧಿಸುವ, ಅಥವಾ ಬ್ರಿಟಿಷ್‌ ಭಾರತದಲ್ಲಿ ಸಂಪೂರ್ಣವಾಗಿ ನಿರ್ವಹಿಸಲಾಗದ ಮತ್ತು ನಿಯಂತ್ರಣವಿರದ ಕಂಪನಿಗಳ ಮೇಲೆ ಅಲ್ಲಿಯೇ ನಿರ್ವಹಿಸಲಾಗುತ್ತಿರುವ ಕಂಪೆನಿಗಳಿಗಿಂತ ಹೆಚ್ಚಿನ ತೆರಿಗೆ ವಿಧಿಸುವ ಅಥವಾ(ಜೆ) ಗ್ರೇಟ್‌ ಬ್ರಿಟನ್‌ ಮತ್ತು ಉತ್ತರ ಐರ್ಲೆಂಡಿನಲ್ಲಿ ವಿಧಿಸಬಹುದಾದ ಆದಾಯ ತೆರಿಗೆಯ ಮೇಲೆ ಸಂಯುಕ್ತ ರಾಜ್ಯ ತೆರಿಗೆಯಲ್ಲಿ ರಿಯಾಯಿತಿ ಕೊಡುವುದರ ಮೇಲೆ ನಿರ್ಬಂಧಗಳು. +(೨) ಗವರ್ನರ್‌-ಜನರಲ್‌ರು ತಮ್ಮ ವಿವೇಚನೆಯಲ್ಲಿ ತಮ್ಮ ಪೂರ್ವಭಾವಿ ಒಪ್ಪಿಗೆಯನ್ನು ನೀಡುವುದು ಸೂಕ್ತವೆಂದು ಪರಿಗಣಿಸದೆ ಹೋದಲ್ಲಿ ಪ್ರಾಂತೀಯ ಶಾಸಕಾಂಗದ ಯಾವುದೇ ಸದನದಲ್ಲಿ ಈ ಕೆಳಗೆ ಹೇಳುವ ವಿಷಯಗಳ ಮೇಲೆ ಯಾವುದೇ ಮಸೂದೆ ಅಥವಾ ತಿದ್ದುಪಡಿಯನ್ನು ಮಂಡಿಸುವಂತಿಲ್ಲ; +(ಎ) ಬ್ರಿಟಿಷ್‌ ಭಾರತಕ್ಕೆ ಅನ್ವಯಿಸುವ ಸಂಸತ್ತಿನ ಯಾವುದೇ ಕಾಯ್ದೆಯ ನಿಬಂಧನೆಗಳನ್ನು ವಿರೋಧಿಸುವ, ರದ್ದುಪಡಿಸುವ, ತಿದ್ದುಪಡಿ ಮಾಡುವಂತಹವು ಅಥವಾ(ಬಿ) ಗವರ್ನರ್‌-ಜನರಲ್‌ರು ತಮ್ಮ ವಿವೇಚನೆಯಲ್ಲಿ ಹೊರಡಿಸಲಾದ ಕಾಯ್ದೆ ಅಥವಾ ವಿಶೇಷ ಆಜ್ಞೆಗೆ ವಿರೋಧವಾದ, ರದ್ದುಪಡಿಸುವ ಅಥವಾ ತಿದ್ದುಪಡಿ ಮಾಡುವಂತಹವು ಅಥವಾ (ಸಿ) ಈ ಕಾಯ್ದೆಯ ಪ್ರಕಾರ ಗವರ್ನರ್‌-ಜನರಲ್‌ರು ತಮ್ಮ ವಿವೇಚನೆಯಂತೆ ಮಾಡಬಹುದಾದ ಕಾರ್ಯಗಳಿಗೆ ಸಂಬಂಧಿಸಿದವುಗಳು; + ಅಥವಾ(ಡಿ) ಯೂರೋಪಿಯನ್‌ ಜ್ರಿಟಿಷ್‌ ಪ್ರಜೆಗಳ ಸಂಬಂಧವಾದ ಕ್ರಿಮಿನಲ್‌ ಪ್ರಕರಣಗಳಿಗೆ ಸಂಬಂಧಿಸಿರುವವು; + ಮತ್ತು ಪ್ರಾಂತ್ಯದ ಗವರ್ನರರು ತಮ್ಮ ವಿವೇಚನೆಯಲ್ಲಿ ತಮ್ಮ ಪೂರ್ವಭಾವಿ ಒಪ್ಪಿಗೆಯನ್ನು ಕೊಡುವುದು ಸೂಕ್ತವೆಂದು ಪರಿಗಣಿಸದೇ ಹೋದಲ್ಲಿ ಈ ಕೆಳಗಣ ವಿಷಯಗಳ ಸಂಬಂಧವಾಗಿ ಯಾವುದೇ ಮಸೂದೆ ಅಥವಾ ತಿದ್ದುಪಡಿಯನ್ನು ಮಂಡಿಸುವಂತಿಲ್ಲ . + (1) ಗವರ್ನರರು ತಮ್ಮ ವಿವೇಚನೆಯಲ್ಲಿ ಹೊರಡಿಸಲಾದ ಯಾವುದೇ ಕಾಯ್ದೆ ಅಥವಾ ವಿಶೇಷ ಆಜ್ಞೆಗೆ ವಿರೋಧವೆನಿಸುವ, ಅದನ್ನು ರದ್ದುಪಡಿಸುವ ಅಥವಾ ತಿದ್ದುಪಡಿ ಮಾಡುವಂತಹವು; + ಅಥವಾ(1) ಯಾವುದೇ ಪೋಲೀಸ್‌ ಪಡೆಯ ವಿಷಯವಾಗಿರುವ ಯಾವುದೇ ಕಾಯ್ದೆಯನ್ನು ರದ್ದುಪಡಿಸುವ ಅಥವಾ ತಿದ್ದುಪಡಿ ಮಾಡುವ ವಿಷಯಗಳು. +(೩) ಈ ವಿಭಾಗದಲ್ಲಿ ಹೇಳಿರುವ ಯಾವುದೂ ಈ ಕಾಯ್ದೆಯ ಪ್ರಕಾರ ಯಾವುದೇ ಮಸೂದೆ ಅಥವಾ ತಿದ್ದುಪಡಿಯನ್ನು ಮಂಡಿಸಲು ಗವರ್ನರ್‌ ಜನರಲ್‌ರ ಅಥವಾ ಗವರ್ನರರ ಪೂರ್ವಭಾವಿ ಒಪ್ಪಿಗೆ ಬೇಕೆಂದು ನಮೂದಿಸಲಾದ ಕಾಯ್ದೆಯ ಇತರ ವಿಧಿಗಳಿಗೆ ಸಂಬಂಧಪಡುವುದಿಲ್ಲ. +ಒಕ್ಕೂಟದ ಯೋಜನೆಯು ಕಾರ್ಯಾಂಗದ ಸರ್ವೋಚ್ಛತೆಯನ್ನು ಕಾಪಾಡುವ ಸಾಧನವಾಗಿ ಶಾಸಕಾಂಗದ ಅಧಿಕಾರಗಳನ್ನು ಮೊಟಕುಗೊಳಿಸುವುದಕ್ಕೆ ಮಾತ್ರ ಸೀಮಿತವಾಗಿಲ್ಲ. +ಈ ಯೋಜನೆಯಲ್ಲಿ ಫೆಡರಲ್‌ ಶಾಸಕಾಂಗದ ರಚನೆಯನ್ನು ಮಾಡುವಾಗ ಅದು ಯಾವಾಗಲೂ ಕಾರ್ಯಾಂಗದ ಆಜ್ಞಾವರ್ತಿಯಾಗಿರುವಂತೆ ನೋಡಿಕೊಳ್ಳಲಾಗಿದೆ. +ಈ ಸಂದರ್ಭದಲ್ಲಿ ಫೆಡರಲ್‌ ಶಾಸಕಾಂಗದ ನಿಜವಾದ ರಚನೆ ಹೇಗಿದೆ ಎಂಬುದನ್ನು ಗಮನಿಸುವುದು ಅತ್ಯವಶ್ಯ. +ಈಗಾಗಲೇ ತಿಳಿಸಿರುವಂತೆ ವಿಧಾನ ಸಭೆಯಲ್ಲಿ ೩೫೭ ಸದಸ್ಯರಿದ್ದು. +ಅವರಲ್ಲಿ ೧೨೫ ಸದಸ್ಯರನ್ನು ಭಾರತೀಯ ಸಂಸ್ಥಾನಗಳಿಗೆ ಮತ್ತು ೨೫ಂ ಸದಸ್ಯರನ್ನು ಬ್ರಿಟಿಷ್‌ ಭಾರತಕ್ಕೆಂದು ನಿಗದಿಪಡಿಸಲಾಗಿದೆ. +ರಾಜ್ಯಸಭೆ (ಕೌನ್ಸಿಲ್‌ ಆಫ್‌ ಸ್ಟೇಟ್‌) ಯ ಸದಸ್ಯರ ಒಟ್ಟು ಸಂಖ್ಯೆ ೨೬ಂ ಇದ್ದು ಇವರಲ್ಲಿ ೧ಂ೪ ಸದಸ್ಯರನ್ನು ಭಾರತೀಯ ಸಂಸ್ಥಾನಗಳಿಗೆ ಮತ್ತು ೧೫೬ ಸದಸ್ಯರನ್ನು ಬ್ರಿಟಿಷ್‌ ಭಾರತಕ್ಕೆಂದು ನಿಗದಿಪಡಿಸಲಾಗಿದೆ. +ಸಂಸ್ಥಾನಗಳಿಗೆ ನಿಗದಿತವಾದ ಸ್ಥಾನಗಳನ್ನುರಾಜರು ನಾಮಕರಣದ ಮೂಲಕ ತುಂಬುತ್ತಾರೆ. +ಬ್ರಿಟಿಷ್‌ ಭಾರತಕ್ಕೆ ನಿಗದಿತವಾದ ಸ್ಥಾನಗಳನ್ನು ಚುನಾವಣೆಗಳ ಮೂಲಕ ತುಂಬಲಾಗುತ್ತದೆ. +ಆದ್ದರಿಂದ ಫೆಡರಲ್‌ ಶಾಸಕಾಂಗವು ಭಾಗಶಃ ನಾಮಕರಣದ ಮೂಲಕ ಮತ್ತು ಭಾಗಶಃ ಚುನಾವಣೆಯ ಮೂಲಕ ಘಟಿಸಲಾದ ಪರಸ್ಪರ ತಾಳೆಯಾಗದ ಅಂಶಗಳಿಂದ ಕೂಡಿದ ಸಂಸ್ಥೆಯಾಗಿದೆ. +ರಾಜರುಗಳಿಂದ ನಾಮಕರಣಗೊಂಡ ಸದಸ್ಯರು ಫೆಡರಲ್‌ ಶಾಸಕಾಂಗದಲ್ಲಿ ಯಾವ ರೀತಿ ವರ್ತಿಸುವರೆಂಬುದು ಮೊದಲನೆಯ ಪ್ರಶ್ನೆಯಾಗಿದೆ. +ಅವರು ಫೆಡರಲ್‌ ಕಾರ್ಯಾಂಗದಿಂದ ಸ್ವತಂತ್ರರಾಗಿರುವರೇ ಅಥವಾ ಅಧೀನರಾಗಿರುವರೇ? +ಭವಿಷ್ಯ ನುಡಿಯುವುದು ಕಷ್ಟ ಆದರೆ ಈ ನಾಮಕರಣಗಳ ಮೇಲೆ ಪ್ರಭಾವ ಬೀರುವ ಅಂಶಗಳನ್ನು ಗಮನಿಸಬಹುದು. +ಬ್ರಿಟಿಷ್‌ ಸರ್ಕಾರವು ಸಂಸ್ಥಾನಗಳ ಮೇಲೆ ಸಾರ್ವಭೌಮತ್ವವನ್ನು ಹೊಂದಿರುವುದು ನಿರ್ವಿವಾದ. +ಸಾರ್ವಭೌಮತ್ವ ಅಥವಾ ಪರಮಾಧಿಕಾರ ಸರ್ವ ವ್ಯಾಪಕವಾದ ಪದವಾಗಿದ್ದು, ಅದು ಪ್ರಭುತ್ವವು ಭಾರತ ಸರಕಾರದ ರಾಜಕೀಯ ವಿಭಾಗದ ಮೂಲಕ ರಾಜ್ಯಗಳ ಅಥವಾ ಸಂಸ್ಥಾನಗಳ ಮೇಲೆ ಚಲಾಯಿಸಬಹುದಾದ ಹಕ್ಕುಗಳ ದ್ಯೋತಕವಾಗಿದೆ. +ಈ ಹಕ್ಕುಗಳಲ್ಲಿ ಕೆಲವು ವಿಧದ ನೇಮಕಗಳನ್ನು ಮಾಡುವ ವಿಷಯದಲ್ಲಿ ರಾಜಕೀಯ ವಿಭಾಗವು ರಾಜ್ಯಗಳಿಗೆ ಸಲಹೆ ನೀಡುವ ಹಕ್ಕೂ ಸಹ ಸೇರಿದೆ. +“ಸಲಹೆ” ಎಂದು ಕರೆಯಲಾಗುವ ಪದವು “ಆಜ್ಞಾಪಿಸು: ಎಂಬರ್ಥದ ಚತುರೋಪಾಯದ ಮಾತು ಎಂಬುದು ಸುಪರಿಚಿತವಾದ ಸಂಗತಿ. +ಈ ಸ್ಥಾನಗಳನ್ನು ತುಂಬುವುದರಲ್ಲಿ ರಾಜಕೀಯ ವಿಭಾಗವು ರಾಜರುಗಳಿಗೆ ಸಲಹೆ ನೀಡುವ ಹಕ್ಕನ್ನು ಸ್ಥಾಪಿಸಿಕೊಳ್ಳುವುದೆಂಬುದರಲ್ಲಿ ಸಂಶಯವೇ ಇಲ್ಲ. +ಇದು ಸಂಭವಿಸಿದರೆ ಪರಿಣಾಮವೇನು 9ಇದು ಸಂಭವಿಸಿದಾಗ ರಾಜರುಗಳ ಪ್ರತಿನಿಧಿಗಳೆಂದರೆ ಜನತೆಗೆ ಅಥವಾ ರಾಜರುಗಳಿಗೂ ವಿಧೇಯತೆಯನ್ನು ಹೊಂದಿರದ, ಭಾರತ ಸರಕಾರದ ರಾಜಕೀಯ ವಿಭಾಗಕ್ಕೆ ನಿಷ್ಠೆಯನ್ನು ಹೊಂದಿರದ, ಭಾರತ ಸರಕಾರದ ರಾಜಕೀಯ ವಿಭಾಗಕ್ಕೆ ನಿಷ್ಠೆಯನ್ನು ಹೊಂದಿರುವ ಒಂದು ಅಧಿಕೃತ ತಂಡ ಎಂಬ ಇನ್ನೊಂದು ಹೆಸರಾಗಿದೆ. + ಈ ಸಂಬಂಧವಾಗಿ ಇನ್ನೂ ಎರಡು ಸಂಗತಿಗಳನ್ನು ಗಮನಿಸಬೇಕು. +ಮೊದಲನೆಯ ಸಂಗತಿ ಎಂದರೆ ಈ ಸಾರ್ವಭೌಮತ್ವವು ಸಂಯುಕ್ತ ರಾಜ್ಯದಿಂದ ಹೊರಗುಳಿದಿರುತ್ತದೆ. + ಎಂದರೆ,ಮಂತ್ರಿಗಳು ರಾಜರುಗಳ ಪ್ರತಿನಿಧಿಗಳ ನಾಮಕರಣದ ಬಗ್ಗೆ ಯಾವ ಸಲಹೆಯನ್ನೂ ಕೊಡುವಂತಿಲ್ಲ,ಮತ್ತು ಶಾಸಕಾಂಗಕ್ಕೆ ಅದನ್ನು ಟೀಕಿಸುವ ಹಕ್ಕು ಇರುವುದಿಲ್ಲ. +ಅವರು ಗವರ್ನರ್‌-ಜನರಲ್‌ರಿಂದ ವಿಭಿನ್ನರಾದ ವೈಸ್‌ರಾಯ್‌ರವರ ನಿಯಂತ್ರಣದಲ್ಲಿರುತ್ತಾರೆ. +ಎರಡನೆಯದಾಗಿ, ರಾಜರುಗಳ ಈ ಅಧಿಕೃತ ತಂಡ ಅಥವಾ ಗುಂಪು ಸಣ್ಣದೇನೂ ಅಲ್ಲ. +ಕೆಳ ಸದನದಲ್ಲಿ ೧೮೭ ಸ್ಥಾನಗಳನ್ನು ಹೊಂದಿರುವ ಪಕ್ಷವು ಬಹುಮತವನ್ನು ಸಾಧಿಸಬಹುದು. +ಮೇಲ್ಲದನದಲ್ಲಿ ೧೩ಂ ಸದಸ್ಯರನ್ನು ಹೊಂದಿರುವ ಪಕ್ಷ ಬಹುಮತ ಸಾಧಿಸಬಹುದು. +ಕೆಳಸದನದಲ್ಲಿ ರಾಜರುಗಳು ೧೨೫ ಸ್ಥಾನಗಳನ್ನು ಹೊಂದಿರುತ್ತಾರೆ. +ತಮ್ಮ ಬಹುಮತ ಸಾಧಿಸಲು ಅವರಿಗೆ ಬೇಕಾಗಿರುವುದು ೬೨ ಸದಸ್ಯರ ತಂಡ ಮಾತ್ರ ಮೇಲ್ಲದನದಲ್ಲಿ ಅವರು ೧ಂ೪ಸ್ಥಾನಗಳನ್ನು ಹೊಂದಿದ್ದಾರೆ; + ಅಲ್ಲಿ ಅವರಿಗೆ ಬೇಕಾಗಿರುವುದು ೨೬ ಸದಸ್ಯರು ಮಾತ್ರ ಈ ವಿಶಾಲ ಬಲವನ್ನು ಕಾರ್ಯಾಂಗವು ತನ್ನ ಅಂಕೆಯಲ್ಲಿಟ್ಟುಕೊಳ್ಳಬಹುದು. +ಇಂತಹ ಶಾಸಕಾಂಗವು ಸ್ವತಂತ್ರವಾಗಿರಲು ಹೇಗೆ ಸಾಧ್ಯ ? +ಈ ಬಲದಿಂದ ಆರಕ್ಷಿತ ಅರ್ಧ ಭಾಗವು ವರ್ಗಾಯಿಸಲಾದ ಅರ್ಧಭಾಗವನ್ನು ತನ್ನ ನಿಯಂತ್ರಣದಲ್ಲಿಟ್ಟುಕೊಳ್ಳಬಹುದು. +ಬ್ರಿಟಿಷ್‌ ಭಾರತದ ಪ್ರತಿನಿಧಿಗಳು ಯಾವ ರೀತಿ ವರ್ತಿಸುವರು ? +ನಾನು ಈ ವಿಷಯದಲ್ಲಿ ಸ್ಪಷ್ಟವಾಗಿ ಹೇಳಲಾರೆ. +ಆದರೆ ಕೆಲವು ರಾಜ್ಯಗಳಲ್ಲಿ ಕ್ರಮಬದ್ಧವಾದ ಆಯವ್ಯಯ ಪಟ್ಟಿಯಾಗಲೀ ಲೆಕ್ಕ-ಪತ್ರಗಳ ಸ್ವತಂತ್ರ ತಪಾಸಣೆ ಪದ್ಧತಿಯಾಗಲೀ ಇರುವುದಿಲ್ಲವೆಂಬುದನ್ನು ನೆನಪಿನಲ್ಲಿಡಬೇಕೆಂದು ನಾನು ಬಯಸುತ್ತೇನೆ. +ರಾಜರುಗಳಿಗೆ ಬ್ರಿಟಿಷ್‌ ಭಾರತದ ಪ್ರತಿನಿಧಿಗಳ ಬೆಂಬಲವನ್ನು ಕೊಂಡುಕೊಳ್ಳುವುದು ಕಷ್ಟವೇನೂ ಆಗುವುದಿಲ್ಲ. +ರಾಜಕೀಯ ಒಂದು ಹೊಲಸು ಆಟವಾಗಿದೆ. +ಬ್ರಿಟಿಷ್‌ ಭಾರತದ ರಾಜಕಾರಣಿಗಳೇನೂ ಭ್ರಷ್ಟಾಚಾರಕ್ಕೆ ಹೊರತಾಗಿರುವರೆಂದು ಭಾವಿಸುವಂತಿಲ್ಲ. +ಮತ್ತು ಒಂದು ಗೊತ್ತಾಗದ ರೀತಿಯಲ್ಲಿ ಕೊಂಡುಕೊಳ್ಳುವುದು ಸಾಧ್ಯವಿದ್ದಲ್ಲಿ ನಿಜವಾದ ಅಪಾಯವಿರುತ್ತದೆ. +ಒಕ್ಕೂಟ ಯೋಜನೆಯಲ್ಲಿರುವ ಜವಾಬ್ದಾರಿಗೆ ಸಂಬಂಧಿಸಿದ ನಿಬಂಧನೆಗಳನ್ನು ನೀವು ಬಯಸಿದಯಾವ ದೃಷ್ಟಿಯಿಂದಲಾದರೂ ನೋಡಿ ನಿಮ್ಮದೇ ಆದ ರೀತಿಯನ್ನು ಅದನ್ನು ವಿಶ್ಲೇಷಿಸಿದಾಗ ಅದರಲ್ಲಿ ನಿಜವಾದ ಜವಾಬ್ದಾರಿ ಎಂಬುದು ಇಲ್ಲವೇ ಇಲ್ಲ ಎಂದು ಗೊತ್ತಾಗುತ್ತದೆ. +ಒಕ್ಕೂಟ ವ್ಯವಸ್ಥೆಯ ವ್ಯಥೆ :ಈ ಅಖಿಲ ಭಾರತ ಒಕ್ಕೂಟ ವ್ಯವಸ್ಥೆಯು ಸಂಪೂರ್ಣ ದೋಷಪೂರ್ಣವಾಗಿದೆ ಯಾರೂ ಹೇಳಲಾರರು. +ಆದರೆ ಅದರ ಬಗ್ಗೆ ನಾವು ಏನು ಮಾಡಬೇಕೆಂಬ ಪ್ರಶ್ನೆ ಕೇಳಿದಾಗ ಮಾತ್ರ ಭಿನ್ನಾಭಿಪ್ರಾಯಗಳುಂಟಾಗುತ್ತವೆ. +ಕಾಲಕಾಲಕ್ಕೆ ಭಾರತೀಯ ಪ್ರಮುಖರು ಈ ಪ್ರಶ್ನೆಗೆ ನೀಡಿರುವ ಉತ್ತರಗಳಿಂದ ಒಕ್ಕೂಟದ ಬಗ್ಗೆ ಎರಡು ವಿಭಿನ್ನ ಮನೋಭಾವನೆಗಳಿರುವುದು ಕಂಡುಬರುತ್ತದೆ. +ಒಂದು ಕಡೆ ಈ ಯೋಜನೆ ದೋಷಯುಕ್ತವಾಗಿರುವುದೇನೋ ನಿಜ. +ಆದರೆ ಇದನ್ನು ಒಪ್ಪಿಕೊಂಡು ಅದರಿಂದ ಸಾಧ್ಯವಾದಷ್ಟು ಒಳ್ಳೆಯದನ್ನು ಪಡೆದುಕೊಳ್ಳಬೇಕೆಂಬುದು ಒಂದು ಮನೋಭಾವನೆ. +ಇನ್ನೊಂದು ಕಡೆ ಇದನ್ನು ಒಪ್ಪಿಕೊಂಡು ಕಾರ್ಯಗತಗೊಳಿಸುವ ಮೊದಲು ಈ ಸಂಯುಕ್ತ ರಾಜ್ಯ ಸಂವಿಧಾನದಲ್ಲಿ ಕೆಲಸೂಕ್ತ ಬದಲಾವಣೆಗಳನ್ನು ಮಾಡಬೇಕೆಂಬುದು ಇನ್ನೊಂದು ವಿಚಾರ. +ಕಾಂಗ್ರೆಸ್‌ ಮತ್ತು ಲಿಬರಲ್‌ಫೆಡರೇಷನ್‌ ಸಂಸ್ಥೆಗಳೆರಡೂ ಈ ವಿಷಯದಲ್ಲಿ ಒಂದೇ ಅಭಿಪ್ರಾಯ ಹೊಂದಿರುವುದು ಒಳ್ಳೆಯದೇ. +ಸಂಯುಕ್ತ ರಾಜ್ಯವನ್ನು ಒಪ್ಪಿಕೊಂಡು ಕಾರ್ಯಗತಗೊಳಿಸುವ ಮುನ್ನ ಕೆಲವು ಬದಲಾವಣೆಗಳನ್ನು ಮಾಡಲೇಬೇಕೆಂದು ಎರಡೂ ಸಂಸ್ಥೆಗಳು ಹೇಳಿವೆ. +ಒಕ್ಕೂಟ ವ್ಯವಸ್ಥೆಯು ಬಹುತೇಕ ಭಾರತೀಯರಿಗೆ ಸ್ವೀಕಾರಾರ್ಹವಾಗಿಲ್ಲ ಎಂಬುದು ಪಶ್ನಾತೀತವಾಗಿದೆ. +ಆದರೆ ಯಾವ ವಿಷಯದಲ್ಲಿ ಸಂವಿಧಾನಕ್ಕೆ ತಿದ್ದುಪಡಿ ಮಾಡಬೇಕಾಗಿದೆ ಎಂಬುದೇ ಪ್ರಶ್ನೆ. +ನಾವು ಯಾವ ಬದಲಾವಣೆಗಳಿಗಾಗಿ ಒತ್ತಾಯ ಪಡಿಸಬೇಕು ? +ಈ ಪ್ರಶ್ನೆಯ ಸಂಬಂಧವಾಗಿ ಕಾಂಗ್ರೆಸ್‌ ಮತ್ತುಲಿಬರಲ್‌ ಫೆಡರೇಷನ್‌ಗಳು ಅಂಗೀಕರಿಸಿರುವ ಗೊತ್ತುವಳಿಗಳಿಂದಲೇ ಆರಂಭಿಸೋಣ. +ತನ್ನ ೧೯೩೮ರ ಹರಿಷುರ ಅಧಿವೇಶನದಲ್ಲಿ ಕಾಂಗ್ರೆಸ್‌ ಗೊತ್ತುವಳಿಯನ್ನು ಅಂಗೀಕರಿಸಿತು. +“ಕಾಂಗ್ರೆಸ್‌ ಈ ಹೊಸ ಸಂವಿಧಾನವನ್ನು ತಿರಸ್ಕರಿಸುತ್ತದೆ . +ಜನತೆಗೆ ಒಪ್ಪಿಗೆಯಾಗಬಹುದಂತಹ ಸಂವಿಧಾನವು ಸ್ವಾತಂತ್ರ್ಯದ ಆಧಾರದ ಮೇಲೆಯೇ ಇರಬೇಕಾಗಿದೆ. +ಯಾವುದೇ ವಿದೇಶೀ ಶಕ್ತಿಯ ಹಸ್ತಕ್ಷೇಪವಿಲ್ಲದೇ ಭಾರತೀಯರಿಂದಲೇ ಸಂವಿಧಾನ ಸಭೆಯಲ್ಲಿ ರಚಿತವಾಗಬೇಕೆಂದು ಸಾರುತ್ತದೆ. +ನಿರಾಕರಣೆಯ ಈ ತತ್ವಕ್ಕೆ ಅಂಟಿಕೊಂಡೇ ಕಾಂಗ್ರೆಸ್ಸು ಸ್ವಾತಂತ್ರ್ಯ ಹೋರಾಟದಲ್ಲಿ ರಾಜ್ಯವನ್ನು ಬಲಪಡಿಸುವ ಧ್ಯೇಯದಿಂದ ಪ್ರಾಂತ್ಯಗಳಲ್ಲಿ ಕಾಂಗ್ರೆಸ್‌ ಮಂತ್ರಿಮಂಡಲಗಳನ್ನು ರಚಿಸಲು ಅಪ್ಪಣೆ ನೀಡಿದೆ. +ಸೂಚಿತವಾದ ಸಂಯುಕ್ತ ರಾಜ್ಯದ ವಿಷಯದಲ್ಲಿ ಇಂತಹ ಯಾವುದೇ ವಿಚಾರಗಳು ತಾತ್ಕಾಲಿಕವಾಗಿಯಾಗಲೀ ಅಥವಾ ನಿಗದಿತ ಅವಧಿಗಾಗಲೀ ಅನ್ವಯಿಸುವುದಿಲ್ಲ . +ಈ ಸಂಯುಕ್ತ ರಾಜ್ಯವನ್ನು ಬಲವಂತವಾಗಿ ಹೇರುವುದರಿಂದ ಭಾರತಕ್ಕೆ ಗಂಭೀರ ಸ್ವರೂಪದ ಹಾನಿಯುಂಟಾಗುವುದಲ್ಲದೇ ಅದರ ಮೇಲೆ ಸಾಮ್ರಾಜ್ಯಶಾಹ ಹಿಡಿತವನ್ನು ಬಲಪಡಿಸಿದಂತಾಗುತ್ತದೆ. +ಒಕ್ಕೂಟದ ಯೋಜನೆಯಲ್ಲಿ ಜವಾಬ್ದಾರಿಯ ವ್ಯಾಪ್ತಿಯಿಂದ ಅನೇಕ ಅತ್ಯವಶ್ಯ ಸರಕಾರೀ ಕಾರ್ಯಗಳನ್ನು ಹೊರಗಿಡಲಾಗಿದೆ. +“ಕಾಂಗ್ರೆಸ್ಸು ಒಕ್ಕೂಟದ ವಿಚಾರಕ್ಕೆ ವಿರೋಧಿಯಾಗಿಲ್ಲ; + ಆದರೆ ನಿಜವಾದ ಸಂಯುಕ್ತ ರಾಜ್ಯವು ಜವಾಬ್ದಾರಿಯ ವಿಷಯವೂ ಅಲ್ಲದೇ, ಹೆಚ್ಚು ಕಡಿಮೆ ಒಂದೇ ಪ್ರಮಾಣದ ಸ್ವಾಧೀನತೆ ಮತ್ತು ನಾಗರಿಕ ಸ್ವಾತಂತ್ರ್ಯವನ್ನೂ ಹಾಗೂ ಪ್ರಜಾಸತ್ತಾತ್ಮಕವಾದ ಚುನಾವಣಾ ಪದ್ಧತಿಯ ಆಧಾರದ ಪ್ರಾತಿನಿಧ್ಯ ಹೊಂದಿರುವ ಸ್ವತಂತ್ರ ಘಟಕಗಳಿಂದ ಕೂಡಿದುದಾಗಿರಬೇಕು. +ಸಂಯುಕ್ತ ರಾಜ್ಯದಲ್ಲಿ ಭಾಗವಹಿಸುವ ಭಾರತೀಯ ರಾಜ್ಯಗಳ ಪ್ರಾತಿನಿಧಿಕ ಸಂಸ್ಥೆಗಳು, ಜವಾಬ್ದಾರಿ ಸರಕಾರ, ಪ್ರಜಾಸ್ಥಾತಂತ್ರ್ಯ ಮತ್ತು ಫೆಡರಲ್‌ ಸದನಗಳಿಗೆ ಚುನಾವಣೆಯ ವಿಷಯಗಳಲ್ಲಿ ಪ್ರಾಂತ್ಯಗಳಿಗೆ ಬಹುಮಟ್ಟಿಗೆ ಸರಿಸಮಾನವಾಗಿರಬೇಕು. +ಇಲ್ಲದೇ ಹೋದರೆ ಒಕ್ಕೂಟ ರಾಜ್ಯದ ಈಗಿನ ಪರಿಕಲ್ಪನೆ ರಾಷ್ಟ್ರೀಯ ಏಕತೆಯ ನಿರ್ಮಾಣದ ಬದಲು ಪ್ರತ್ಯೇಕತಾಮನೋಭಾವನೆಗೆ ಪ್ರೋತ್ಸಾಹ ನೀಡುವುದಲ್ಲದೇ ರಾಜ್ಯಗಳನ್ನು ಆಂತರಿಕ ಮತ್ತು ಬಾಹ್ಯ ಸಂಘರ್ಷಣೆಯಲ್ಲಿ ತೊಡಗಿಸುತ್ತದೆ. +"ಆದ್ದರಿಂದ, ಸೂಚಿತ ಒಕ್ಕೂಟವನ್ನು ಕಾಂಗ್ರೆಸ್‌ ಖಂಡಿಸುತ್ತದೆ ಮತ್ತು ಪ್ರಾಂತೀಯ ಸರಕಾರಗಳಿಗೆ ಮತ್ತು ಮಂತ್ರಿಮಂಡಳಿಗಳಿಗೆ ಇದರ ಉದ್ಭಾಟನೆಯನ್ನು ತಡೆಯುವಂತೆ ಕರೆ ನೀಡುತ್ತದೆ. +ಜನರ ಸ್ಪಷ್ಟ ಇಚ್ಛೆಯ ವಿರುದ್ಧವಾಗಿ ಇದನ್ನು ಬಲವಂತವಾಗಿ ಹೇರುವ ಪ್ರಯತ್ನ ಮಾಡಿದ್ದೇ ಆದರೆ ಅದನ್ನು ಸಾಧ್ಯವಾದ ಎಲ್ಲಾ ವಿಧಾನಗಳ ಮೂಲಕ ಪ್ರತಿಭಟಿಸಬೇಕು . +ಪ್ರಾಂತೀಯ ಸರಕಾರಗಳು ಹಾಗೂ ಮಂತ್ರಿ ಮಂಡಳಗಳು ಅದರೊಡನೆ ಸಹಕರಿಸಲು ನಿರಾಕರಿಸಬೇಕು. +ಅಂತಹ ಪ್ರಸಂಗ ಉದ್ಭವಿಸಿದರೆ ಅಖಿಲ ಭಾರತ ಕಾಂಗ್ರೆಸ್‌ ಸಮಿತಿಯು ಈ ಸಂದರ್ಭದಲ್ಲಿ ಅನುಸರಿಸಬೇಕಾದ ಮಾರ್ಗ ಮತ್ತು ಕಾರ್ಯಕ್ರಮವನ್ನು ನಿರ್ಧರಿಸಬೇಕೆಂದು ಸೂಚಿಸಲಾಗಿದೆ. +ನ್ಯಾಷನಲ್‌ ಲಿಬರೇಷನ್‌ ಫೆಡರೇಷನ್‌ ತನ್ನ ಮುಂಬಯಿ ಅಧಿವೇಶನದಲ್ಲಿ ಅಂಗೀಕರಿಸಿದ್ದ ಗೊತ್ತುವಳಿಯಲ್ಲಿ ಈ ಅಂಶಗಳಿವೆ . +“ನ್ಯಾಷನಲ್‌ ಲಿಬರೇಷನ್‌ ಫೆಡರೇಷನ್‌ದ ಅಭಿಪ್ರಾಯದಲ್ಲಿ ಈ ಸಂವಿಧಾನವು. +ಅದರಲ್ಲಿಯೂ ಭಾರತ ಸರಕಾರ ಕಾಯ್ದೆ ೧೯೩೫ ರಲ್ಲಿ ಅಳವಡಿಸಲಾಗಿರುವ ಕೇಂದ್ರದ ವಿಷಯದಲ್ಲಿ, ಸಂಪೂರ್ಣ ಅತೃಪ್ತಿಕರವಾಗಿದ್ದು ಅನೇಕ ವಿಷಯಗಳಲ್ಲಿ ಪ್ರತಿಗಾಮಿಯಾಗಿದೆ. +ನ್ಯಾಷನಲ್‌ ಲಿಬರೇಷನ್‌ ಫೆಡರೇಷನ್‌ಭಾರತಕ್ಕೆ ರಾಜ್ಯ ಒಕ್ಕೂಟ ವ್ಯವಸ್ಥೆ ಸಹಜವಾಗಿಯೇ ಇರುವ ಏಕೈಕ ಆದರ್ಶವೆಂದು ಮಾನ್ಯಮಾಡುವುದಾದರೂ, ತನ್ನ ಅಭಿಪ್ರಾಯದಲ್ಲಿ ಅದು ಕಾಯ್ದೆಯಲ್ಲಿ ನಿರೂಪಿಸಲಾದ ಸಂಯುಕ್ತ ರಾಜ್ಯದ ಸ್ವರೂಪದಲ್ಲಿ, ಅದರಲ್ಲಿಯೂ ವಿಶೇಷವಾಗಿ ಈ ದಿಶೆಯಲ್ಲಿ (ಅ) ರಾಜರುಗಳ ಸ್ಥಾನವನ್ನು ಸ್ಪಷ್ಟಗೊಳಿಸಿ ಸಂಸ್ಥಾನದ ಪ್ರತಿನಿಧಿಗಳ ಚುನಾವಣೆಯ ಹಕ್ಕನ್ನು ಅಲ್ಲಿಯ ಪ್ರಜೆಗಳಿಗೆ ದೊರಕಿಸಿ ಕೊಡುವುದು; +(ಬ)ಹಣಕಾಸಿನ ವಿಷಯಗಳಲ್ಲಿ ಮತ್ತು ವಾಣಿಜ್ಯ ಪಕ್ಷಪಾತ ನೀತಿಗೆ ಇರುವ ರಕ್ಷಣೆಗಳನ್ನು ತೆಗೆದುಹಾಕುವುದು. +(ಕ) ಪ್ರಾಂತ್ಯಗಳಿಂದ ಒಕ್ಕೂಟ ವಿಧಾನ ಸಭೆಯ ಸದಸ್ಯರ ನೇರ ಚುನಾವಣಾ ಪದ್ಧತಿಯನ್ನು ಆರಂಭಿಸುವುದು. +(ಡ) ಯುಕ್ತ ಸಮಯದ ಅವಧಿಯೊಳಗೆ ಭಾರತವು ಚಕ್ರಾಧಿಪತ್ಯದಲ್ಲಿ ಸ್ವತಂತ್ರ ಒಳರಾಷ್ಟ ಸ್ಥಾನವನ್ನು ಪಡೆಯಲು ಅವಕಾಶವಿರುವಂತೆ ಸಂವಿಧಾನವನ್ನು ಸಾಕಷ್ಟು ನವ್ಯವಾಗಿರುವಂತೆ ಮಾಡುವುದು ಪ್ರಸ್ತಾಪಿಸಬೇಕಿದೆ. +“ಕೇಂದ್ರದಲ್ಲಿ ಬೇಜವಾಬ್ದಾರಿ ಸರ್ಕಾರ ಮತ್ತು ಪ್ರಾಂತ್ಯಗಳಲ್ಲಿ ಜವಾಬ್ದಾರಿ ಸರಕಾರಗಳಿರುವುದು ಈಗಿನ ಪರಿಸ್ಥಿತಿಯಲ್ಲಿ ಸಂಪೂರ್ಣ ಅಸಂಬದ್ಧ ಮತ್ತು ಅಸಂಗತ ಎಂದು ನ್ಯಾಷನಲ್‌ ಫೆಡರೇಷನ್‌ ಪರಿಗಣಿಸುತ್ತದೆ. +ಮತ್ತು ಸಂವಿಧಾನದ ಫೆಡರಲ್‌ ಭಾಗಕ್ಕೆ ಸಂಬಂಧಿಸಿದಂತೆ ಸರ್ವಸಮ್ಮತವಾಗುವ ರೀತಿಯಲ್ಲಿ ಅದರಲ್ಲಿ ಶೀಘ್ರ ಬದಲಾವಣೆಗಳನ್ನು ಮಾಡಬೇಕೆಂದು ಸಂಸತ್ತನ್ನು ಒತ್ತಾಯಪಡಿಸುತ್ತದೆ. +ಒಕ್ಕೂಟ ವ್ಯವಸ್ಥೆಯ ಸಂವಿಧಾನದ ಯಶಸ್ವಿ ಕಾರ್ಯಚರಣೆಗೆ ಈ ಎಲ್ಲಾ ಬದಲಾವಣೆಗಳು ಅವಶ್ಯವೆಂದು ಫೆಡರೇಷನ್‌ ಅಭಿಪ್ರಾಯಪಡುತ್ತದೆ”. +ಬದಲಾವಣೆಗಳಿಗಾಗಿ ಕಾಂಗ್ರೆಸ್‌ ಇಲ್ಲವೆ ಲಿಬರಲ್‌ ಫೆಡರೇಷನ್ನಿನ ಈ ಬೇಡಿಕೆಗಳು ಒಕ್ಕೂಟವನ್ನು ತಿರಸ್ಕರಿಸುವ ಸದ್ಯದ ಮನೋಭಾವನೆಯನ್ನು ಪರಿವರ್ತಿಸಿ ಅದನ್ನು ಒಪ್ಪಿಕೊಳ್ಳುವಂತೆ ಮಾಡಲು ಸಾಧ್ಯವೆ? +ನನ್ನ ಮಟ್ಟಿಗೆ ಹೇಳುವುದಾದರೆ ಈ ಗೊತ್ತುವಳಿಗಳಲ್ಲಿ ಹೇಳಲಾದ ಬದಲಾವಣೆಗಳು, ಅವುಗಳನ್ನು ಕಾರ್ಯಗತಗೊಳಿಸಿದರೂ, ನನ್ನಲ್ಲಿ ಪರಿವರ್ತನೆಯನ್ನುಂಟು ಮಾಡಲಾರವು. +ನನಗನಿಸಿದ ಮಟ್ಟಿಗೆ ಬ್ರಿಟಿಷ್‌ ಸಂಸತ್ತು ಒಕ್ಕೂಟ ವ್ಯವಸ್ಥೆಯ ಯಾವುದೇ ವಿವರವನ್ನು ಕೂಡಲೇ ಬದಲಾಯಿಸಲು ಸಿದ್ಧವಿದೆಯೇ ಎಂಬುದು ಮುಖ್ಯವಲ್ಲ. +ನನ್ನ ದೃಷ್ಟಿಯಲ್ಲಿ, ಬ್ರಿಟಿಷ್‌ ಸಂಸತ್ತು ಈ ಗೊತ್ತುವಳಿಗಳಲ್ಲಿ ಕೇಳಲಾಗಿರುವ ಪ್ರತಿಯೊಂದು ಬೇಡಿಕೆಯನ್ನು ಪೂರೈಸಲು ಸಿದ್ಧವಾಗಿದ್ದರೂ ಕೂಡ ಸಂಯುಕ್ತ ರಾಜ್ಯದ ಬಗ್ಗೆ ಇರುವ ಆಕ್ಷೇಪಣೆಗಳ ನಿವಾರಣೆಯಾಗುವುದಿಲ್ಲ. +ನನ್ನ ಮೂಲಭೂತ ಪಶ್ನೆ ಎಂದರೆ ಈ ಸಂಯುಕ್ತ ರಾಜ್ಯ ಯೋಜನೆಯು ಭಾರತವು ಕೊನೆಗೆ ತನ್ನ ಗುರಿಯನ್ನು ಮುಟ್ಟಲು ಸಹಾಯಕವಾಗುವುದೇ, ಮತ್ತುಆಸಕ್ತಿಯುಳ್ಳ ಪ್ರತಿಯೊಬ್ಬರೂ ಈ ದೃಷ್ಟಿಯಿಂದ ಇದನ್ನು ಪರಿಶೀಲಿಸಬೇಕೆಂದು ಬಯಸುತ್ತೇನೆ. +ಭಾರತದ ರಾಜಕೀಯ ವಿಕಾಸದ ಗುರಿ ಏನು ? + ಇದರ ಬಗ್ಗೆ ಯಾವುದೇ ದೃಢವಾದ ನಿರ್ದಿಷ್ಟತೆ ಇದ್ದಂತೆ ತೋರುವುದಿಲ್ಲ. +ಭಾರತದ ಜನತೆಯ ರಾಜಕೀಯ ಆಕಾಂಕ್ಷೆಗಳನ್ನು ಪ್ರತಿಧ್ವನಿಸುವ ಏಕೈಕಸಂಸ್ಥೆ ಎಂದು ಹೇಳಿಕೊಳ್ಳುತ್ತಿರುವ ಕಾಂಗ್ರೆಸ್‌ ಒಳ್ಳೆಯ ಸರಕಾರವೇ ತನ್ನ ಗುರಿ ಎಂದು ಹೇಳುತ್ತ ಬಂದಿದೆ. +ನಂತರ ಅದು ಒಳ್ಳೆಯ ಸರಕಾರದ ಗುರಿಯಿಂದ ಸ್ವರಾಜ್ಯ ಅಥವಾ ಜವಾಬ್ದಾರಿ ಸರಕಾರದೆಡೆಗೆ ಜವಾಬ್ದಾರಿ ಸರಕಾರದಿಂದ ಆಧಿಪತ್ಯಕ್ಕೆ ಮತ್ತು ಪರಮಾಧಿಕಾರ ಸ್ಥಾನದಿಂದ ಸ್ವಾತಂತ್ರ ದಿಡೆಗೆ ಮುನ್ನಡೆಯಿತು. +ಈ ಹಂತದಲ್ಲಿ ಕಾಂಗ್ರೆಸ್‌ ಕೆಲಕಾಲ ಆತ್ಮ ನಿರೀಕ್ಷಣೆಗಾಗಿ ನಿಂತಿತು. +ನಂತರ ಕೆಲಕಾಲ ಡೋಲಾಯಮಾನದ ಸ್ಥಿತಿಯಲ್ಲಿತ್ತು. +ಅದು ಈಗ ಸ್ವತಂತ್ರ ಒಳ ರಾಷ್ಟ್ರಸ್ಥಾನದ ಗುರಿಗೆ ವಾಪಸಾಗಿದೆ. +ಕಾಂಗ್ರೆಸ್‌ನ ದೃಷ್ಟಿಯಲ್ಲಿ ಇದು ಭಾರತದ ಗುರಿಯಾಗಿದೆ ಎಂದು ಭಾವಿಸಿದರೆ ತಪ್ಪೇನೂ ಇಲ್ಲ. +ಈ ಸಂಯುಕ್ತ ರಾಜ್ಯ ಯೋಜನೆಯು ಕಾಲಕ್ರಮೇಣ ಸ್ಪತಂತ್ರ ಒಳರಾಷ್ಟ್ರವಾಗಿ ವಿಕಸಿತಗೊಳ್ಳಬಲ್ಲದೇ ಎಂಬುದು ಈಗಿನ ಪ್ರಶ್ನೆ. +ಆಧಿಪತ್ಯದ ಸ್ಥಾನವನ್ನು ಬ್ರಿಟಷ್‌ ಸಂಸತ್ತು ಭಾರತಕ್ಕೆ ಕೊಡಬಹುದಾದ ಉಡುಗೊರೆ ಎಂದು ಅನೇಕ ಭಾರತೀಯರು ಭಾವಿಸಿದಂತಿದೆ. +ಬ್ರಿಟಿಷ್‌ ಸಂಸತ್ತು ಅದನ್ನು ನೀಡಲು ಮನಸ್ಸು ಮಾಡಿದರೆ ಯಾವುದೂ ಅದಕ್ಕೆ ಅಡ್ಡಿಯಾಗಲಾರದು. +ಭಾರತವು ಪಡೆಯುವ ಭರವಸೆಯನ್ನು ಕಳೆದುಕೊಂಡಿದ್ದರೆ,ಬ್ರಿಟಿಷ್‌ ಸಂಸತ್ತು ಈ ಬೇಡಿಕೆಯನ್ನು ತಿರಸ್ಕರಿಸಿರುವುದೇ ಇದಕ್ಕೆ ಕಾರಣ ಎಂಬುದು ಅವರ ವಿಚಾರ. +ತಮ್ಮ ಈ ಅಭಿಪ್ರಾಯವನ್ನು ಸಮರ್ಥಿಸಿಕೊಳ್ಳಲು ಅವರು ೧೯೩೫ರ ಕಾಯ್ದೆಯ ಪ್ರಸ್ತಾವನೆಯಲ್ಲಿ ಸ್ಥಾನ ಪಡೆಯುವುದು ಭಾರತದ ಗುರಿ ಎಂಬುದಾಗಿ ಸೇರಿಸಲು ಬ್ರಿಟಿಷ್‌ ಸಂಸತ್ತು ನಿರಾಕರಿಸಿದ್ದನ್ನುಉಲ್ಲೇಖಿಸುತ್ತಾರೆ. +ಅಂತಹ ಪ್ರಸ್ತಾವನೆಯ ಬೇಡಿಕೆ ಅತ್ಯಂತ ಸೂಕ್ತವಾಗಿತ್ತೆಂಬುದನ್ನು ಮಾನ್ಯ ಮಾಡಲೇಬೇಕು. +೧೯೨೯ರಲ್ಲಿ ಲಾರ್ಡ್‌ ಇರ್ವಿನ್‌ ಅವರು ಬ್ರಿಟಿಷ್‌ ಸಂಸತ್ತಿನ ಎಲ್ಲಾ ರಾಜಕೀಯ ಪಕ್ಷಗಳ ಸಮ್ಮತಿಯಿಂದ ಸ್ವತಂತ್ರ ಒಳರಾಷ್ಟ್ರ ಸ್ಥಾನವನ್ನು ಪಡೆಯುವುದು ಭಾರತದ ರಾಜಕೀಯ ವಿಕಾಸದ ಅಂತಿಮ ಗುರಿಯಾಗಿದೆ ಎಂದು ಸಾರಿದ್ದರು. +ಆದ್ದರಿಂದ ಭಾರತೀಯರ ಬೇಡಿಕೆ ಹೊಸದೇನೂ ಆಗಿರಲಿಲ್ಲ. +ಗವರ್ನರ್‌-ಜನರಲ್‌ ಮತ್ತು ವೈಸ್‌ರಾಯ್‌ ಇದನ್ನು ಅಧಿಕೃತವಾಗಿಯೇ ಹೇಳಿದ್ದರು. +ಆದರೆ ಬ್ರಿಟಿಷ್‌ ಸರಕಾರವು ಅಂತಹ ಪೀಠಿಕೆ ಅಥವಾ ಪ್ರಸ್ತಾವನೆಯನ್ನು ಸೇರಿಸಲು ನಿರಾಕರಿಸಿತು . +ಈ ನಿರಾಕರಣೆ ಬ್ರಿಟಿಷ್‌ ಸರಕಾರದ ವಿಚಿತ್ರ ವರ್ತನೆಯಾಗಿತ್ತು. +ಆದರೆ ಈ ನಿರಾಕರಣೆಗೆ ಕೊಡಲಾದ ಕಾರಣಗಳು ಇನ್ನೂ ವಿಚಿತ್ರವಾಗಿದ್ದವು. +ಈ ಅಂಶಗಳಿಂದ ಕೂಡಿದ ಪೀಠಿಕೆಯನ್ನು ಸೇರಿಸಲು ನಿರಾಕರಿಸುವ ತನ್ನ ವರ್ತನೆಯ ಸಮರ್ಥನೆಗಾಗಿ ಬ್ರಿಟಿಷ್‌ ಸರಕಾರವು ಅನೇಕ ಆಧಾರಗಳನ್ನು ನೀಡಿತು. +ಪೀಠಿಕೆಯು ಕಾರ್ಯಾಚರಣೆಯ ಸತ್ವವನ್ನು ಹೊಂದಿರುವುದಿಲ್ಲವಾದ್ದರಿಂದ ಅದು ನಿರರ್ಥಕ ಎಂಬುದು ಅವರ ಮೊದಲನೆ ವಾದವಾಗಿತ್ತು. +ಆದರೆ ಈ ವಾದವನ್ನು ಸುಲಭವಾಗಿ ಎದುರಿಸಲಾಯಿತು. +ಎಲ್ಲಾ ಕಾಯ್ದೆಗಳು ಸಂಸತ್ತಿನ ಉದ್ದೇಶಗಳನ್ನು ಉಲ್ಲೇಖಿಸುವ ಪೀಠಿಕೆಗಳನ್ನು ಹೊಂದಿರುತ್ತವೆ. +ಅದಕ್ಕೆ ಕಾನೂನಿನ ಶಕ್ತಿ ಇಲ್ಲವೆಂಬುದು ನಿಜ, ಆದರೆ ನ್ಯಾಯಾಲಯಗಳು ಪೀಠಿಕೆಗಳು ನಿರರ್ಥಕ ಎಂದು ಯಾವಾಗಲೂ ಅಭಿಪ್ರಾಯಪಟ್ಟಿಲ್ಲ. +ವಾಸ್ತವಿಕವಾಗಿ ಯಾವುದೇ ಕಾಯ್ದೆಯ ವಿಧಿಗಳ ಬಗ್ಗೆ ಸಂಶಯ ಉಂಟಾದಾಗ ನ್ಯಾಯಾಲಯಗಳು ಕಾಯ್ದೆ ಮಾಡಿರುವ ಉದ್ದೇಶವನ್ನು ತಿಳಿದುಕೊಳ್ಳಲು ಪೀಠಿಕೆಯನ್ನೇ ಅವಲಂಬಿಸಿ ಸಂಶಯಾತ್ಮಕ ರೀತಿಯಲ್ಲಿರುವ ಕಾನೂನಿನ ವಿಧಿಗಳನ್ನು ಅರ್ಥೈಸುತ್ತವೆ. +ಈ ಪರಿಸ್ಥಿತಿಯಿಂದ ಪ್ರೇರಿತವಾಗಿ ಬ್ರಿಟಷ್‌ ಸರಕಾರವು ೧೯೧೯ ರ ಕಾಯ್ದೆಯನ್ನು ರದ್ದುಗೊಳಿಸಿ ಅದರ ಪೀಠಿಕೆಯನ್ನು ಉಳಿಸಿಕೊಂಡಿತು. +ಇದೂ ಕೂಡ ಇನ್ನೊಂದು ವಿಚಿತ್ರ ಸಂಗತಿಯಾಗಿದೆ. +ಮೊದಲನೆಯದಾಗಿ, ೧೯೧೯ ರ ಕಾಯ್ದೆಯ ಅಂಗವಾಗಿ ಸೇರಿಸಲಾಗಿದ್ದ ಪೀಠಿಕೆ ನಿರರ್ಥಕವೆನಿಸಿದ್ದರೆ ಅದನ್ನು ಉಳಿಸಿಕೊಳ್ಳುವ ಅವಶ್ಯಕತೆಯೇ ಇರಲಿಲ್ಲ. +ಎರಡನೆಯದಾಗಿ, ೧೯೧೯ ರ ಕಾಯ್ದೆಯಲ್ಲಿ ಪೀಠಿಕೆಯ ಅವಶ್ಯಕತೆ ಇದ್ದಲ್ಲಿ ಅದನ್ನು ೧೯೩೫ ರ ಕಾಯ್ದೆಯಲ್ಲಿ ಹೊಸದಾಗಿ ಸೇರಿಸಬೇಕಾಗಿತ್ತು. +ಬ್ರಿಟಿಷ್‌ ಸರಕಾರ ಹೀಗೆ ಮಾಡಲಿಲ್ಲ. +ಇದಕ್ಕೆ ಬದಲಾಗಿ ಅದು ಮುಂಡದಿಂದ ಪ್ರತ್ಯೇಕವಾದ ರುಂಡದ ವಿಲಕ್ಷಣ ದೃಶ್ಯವನ್ನು ಸೃಷ್ಟಿಸಿತು. +ರುಂಡವು ರದ್ದುಪಡಿಸಲಾದ ೧೯೧೯ ರ ಕಾಯ್ದೆಯಲ್ಲಿದ್ದು ಮುಂಡವನ್ನು ಸದ್ಯದ ೧೯೩೫ ರ ಕಾಯ್ದೆಯಲ್ಲಿ ಕಾಣಬಹುದು. +ಮೂರನೆಯದಾಗಿ, ಭಾರತೀಯ ಜನತೆ ಪರಮಾಧಿಕಾರದ ಆಶ್ವಾಸನೆಯನ್ನು ಹೊಂದಿರುವ ಪೀಠಿಕೆಯನ್ನು ಬಯಸಿತ್ತು. +ಇದೇ ಘೋಷಣೆಯನ್ನು ಲಾರ್ಡ್‌ಇರ್ವಿನ್‌ ಮಾಡಿದ್ದರು. +೧೯೧೯ ರ ಕಾಯ್ದೆಯ ಪೀಠಿಕೆಯಲ್ಲಿ ಜವಾಬ್ದಾರಿ ಸರಕಾರದ ಪ್ರಸ್ತಾಪ ಮಾತ್ರಇದೆ. +ಅದರಲ್ಲಿ ಪರಮಾಧಿಕಾರದ ಪ್ರಸ್ತಾಪವಿಲ್ಲ. +ಹೀಗಾಗಿ ೧೯೧೯ ರ ಕಾಯ್ದೆಯ ಪೀಠಿಕೆಯನ್ನು ಉಳಿಸಿಕೊಳ್ಳುವುದೆಂದರೆ ಅತ್ಯಂತ ಅವಿವೇಕದ ಕೆಲಸವೆಂದೇ ಹೇಳಬೇಕಾಗುತ್ತದೆ. +ಪರಮಾಧಿಕಾರವೇ ಗುರಿ ಎಂದು ಸಾರುವ ಪೀಠಿಕೆಯನ್ನು ಸೇರಿಸಲು ಬ್ರಿಟಿಷ್‌ ಸಂಸತ್ತು ಏಕೆ ನಿರಾಕರಿಸಿತು ? +ಈ ಬೇಡಿಕೆಯನ್ನು ಈಡೇರಿಸುವ ಬದಲು ಬ್ರಿಟಿಷ್‌ ಸಂಸತ್ತು ಅತ್ತಿಂದಿತ್ತ ಏಕೆ ಹೊಯ್ದಾಡಿತು ? +ಇದಕ್ಕೆ ಕೊಟ್ಟ ಉತ್ತರ ಎಂದಿನಂತಿದ್ದು ಅದು ಆಲ್ಜಿಯನನ ವಿಶ್ವಾಸ ದ್ರೋಹದಕತೆಯಾಗಿತ್ತು. +ನನ್ನ ಅಭಿಪ್ರಾಯ ಬೇರೆಯೇ ಆಗಿದೆ. +ಬ್ರಿಟಿಷ್‌ ಸಂಸತ್ತು ಡೊಮಿನಿಯನ್‌ ಸ್ಥಾನದ ಆಶ್ವಾಸನೆ ನೀಡುವ ಪೀಠಿಕೆಯನ್ನು ನಿರಾಕರಿಸಲು ಕಾರಣವೇನೆಂದರೆ ಇಂತಹ ಆಶ್ವಾಸನೆಯನ್ನು ಈಡೇರಿಸುವುದು ತನ್ನ ಅಧಿಕಾರಕ್ಕೆ ಮೀರಿದ್ದೆಂದು ಸಂಸತ್ತಿಗೆ ಗೊತ್ತಿತ್ತು. +ಬ್ರಿಟಿಷ್‌ ಸಂಸತ್ತಿನಲ್ಲಿ ಪ್ರಾಮಾಣಿಕತೆಯ ಅಭಾವವಿರಲಿಲ್ಲ. +ನಿಜಸ್ಥಿತಿ ಎಂದರೆ ತನಗೆ ಇಂತಹ ಆಶ್ವಾಸನೆ ಈಡೇರಿಸುವುದು ಸಾಧ್ಯವಿಲ್ಲವೆಂಬ ಅದರ ಪ್ರಾಮಾಣಿಕತೆಯೇ ಈ ಬೇಡಿಕೆಯನ್ನು ನಿರಾಕರಿಸಲು ಕಾರಣವಾಗಿತ್ತು. +ಅದಕ್ಕೆ ಈ ಸಂಯುಕ್ತ ರಾಜ್ಯ ಯೋಜನೆಯಲ್ಲಿ ಡೊಮಿನಿಯನ್‌ ಸ್ಥಾನಕ್ಕೆ ಅವಕಾಶವಿಲ್ಲ ಎಂದು ಹೇಳುವ ಧೈರ್ಯದ ಅಭಾವವೂ ಇತ್ತು. +ಒಕ್ಕೂಟ ವ್ಯವಸ್ಥೆಯಲ್ಲಿ ಡೊಮಿನಿಯನ್‌ ಸ್ಥಾನ ಏಕೆ ಸಾಧ್ಯವಿಲ್ಲ ? +ಇದರಲ್ಲಿ ಜವಾಬ್ದಾರಿ ಸರಕಾರವಿರುವುದು ಸಾಧ್ಯವಿಲ್ಲವಾದುದರಿಂದ ಅದು ಅಸಾಧ್ಯವಾಗಿದೆ. +ಭಾರತವು ಮೊದಲು ಜವಾಬ್ದಾರಿ ಸರಕಾರವನ್ನು ಹೊಂದಬೇಕು. +ಜವಾಬ್ದಾರಿ ಸರಕಾರ ಹೊಂದಲು ಈಗ ಕಾಯ್ದಿರಿಸಲಾಗಿರುವ ವಿಷಯಗಳು ವರ್ಗಾಯಿಸಲಾದ ವಿಷಯಗಳಾಗಬೇಕು. +ಸ್ವತಂತ್ರ ಒಳರಾಷ್ಟ್ರ ಸ್ಥಾನದತ್ತ ವಿಕಾಸದಲ್ಲಿ ಇದು ಮೊದಲ ಹಂತ. +ನಿಮ್ಮಲ್ಲಿ ಕೆಲವರು ಕಾಯ್ದಿರಿಸಿದ ವಿಷಯಗಳು ಏಕೆ ವರ್ಗಾಯಿಸಲಾದ ವಿಷಯಗಳಾಗಲಾರವು ಎಂಬುದಾಗಿ ನಾನು ಹೇಳುವುದಕ್ಕೆ ಕಾರಣಗಳೇನು ಎಂದು ತಿಳಿಯಬಯಸುತ್ತೀರಿ. +ಪ್ರಾಂತ್ಯಗಳ ಯೋಜನೆಯಲ್ಲಿಯೂ ಕೂಡ ಒಕ್ಕೂಟದ ಯೋಜನೆಯಲ್ಲಿರುವಂತೆ ಕಾಯ್ದಿರಿಸಿದ ವಿಷಯಗಳಿದ್ದವೆಂದು ಜ್ಞಾಪಿಸಿಕೊಳ್ಳಬೇಕು . + ಸುಮಾರು ೨ಂ ವರ್ಷಗಳ ಅವಧಿಯಲ್ಲಿ ಆರಕ್ಷಿತ ವಿಷಯಗಳು ವರ್ಗಾಯಿಸಿದ ವಿಷಯಗಳಾಗಬಹುದಾದರೆ ಒಕ್ಕೂಟದಲ್ಲಿಯೂ ಇದು ಸಂಭವಿಸುವಲ್ಲಿ ಇರುವ ತೊಂದರೆ ಎಂದು ಅವರು ಕೇಳಬಹುದು. +ಇದು ಮಹತ್ವದ ಪ್ರಶ್ನೆಯಾಗಿರುವುದರಿಂಂದ ಇನ್ನು ಇದಕ್ಕೆ ನನ್ನ ಕಾರಣಗಳನ್ನು ಕೊಡುತ್ತೇನೆ. +ಮೊದಲನೆಯದಾಗಿ, ಪ್ರಾಂತ್ಯಗಳ ಸಾಮ್ಯ ನೀಡುವುದು ತಪ್ಪು ಅದು ಏಕೆ ತಪ್ಪು ಎಂಬುದನ್ನು ತಿಳಿದುಕೊಳ್ಳುವುದು ಮಹತ್ವದ್ದಾಗಿದೆ. +ಅದು ಏಕೆ ಸರಿಯಿಲ್ಲವೆಂದರೆ ಪ್ರಾಂತ್ಯಗಳ ಯೋಜನೆಯಲ್ಲಿ ಆರಕ್ಷಿತ ಮತ್ತು ವರ್ಗಾಯಿಸಲಾದ ವಿಷಯಗಳ ನಡುವೆ ಆಡಳಿತ ದಕ್ಷತೆಯ ಅವಶ್ಯಕತೆಯ ಪ್ರಕಾರ ವ್ಯತ್ಯಾಸ ಮಾಡಲಾಗಿತ್ತು. +ಸಂಯುಕ್ತ ರಾಜ್ಯದಲ್ಲಿ ಕಾದರಿಸಿದ ಮತ್ತು ವರ್ಗಾಯಿಸಲಾದ ವಿಷಯಗಳ ನಡುವಣ ವ್ಯತ್ಯಾಸ ಆಡಳಿತ ದಕ್ಷತೆಯ ಆಧಾರದ ಮೇಲೆ ಅಲ್ಲದೆ ಕಾನೂನಿನ ಅವಶ್ಯಕತೆಯ ಆಧಾರದ ಮೇಲೆ ಮಾಡಲಾಗಿದೆ ಎಂಬುದಕ್ಕೆ ಪ್ರಮಾಣವೇನೂ ಬೇಕಾಗಿಲ್ಲ. +ಸೈಮನ್‌ ಕಮೀಷನ್‌ಕೇಂದ್ರ ಮಟ್ಟದಲ್ಲಿ ದ್ವಿಸರಕಾರ ವ್ಯವಸ್ಥೆಯ ಶಿಫಾರಸು ಮಾಡದೆ ಇರುವುದಕ್ಕೆ ಒಂದು ಕಾರಣವೆಂದರೆ ಆಡಳಿತ ದೃಷ್ಟಿಯಿಂದ ಸರಕಾರದ ವಿಷಯಗಳನ್ನು ಆರಕ್ಷಿತ ಮತ್ತು ವರ್ಗಾಯಿಸಲಾದ ಎಂಬ ಪರಸ್ಪರ ಸಂಬಂಧವಿಲ್ಲದ ವಿಭಾಗಗಳನ್ನಾಗಿ ವಿಂಗಡಿಸುವುದರಿಂದ ದಕ್ಷತೆಗೆ ಧಕ್ಕೆ ಬರುವುದು . +ಸೈಮನ್‌ಕಮೀಷನ್ನಿನ ವರದಿಯ ಮೇಲೆ ಭಾರತ ಸರಕಾರ ಕಳುಹಿಸಿದ ಸರಕಾರೀ ಪತ್ರದಲ್ಲಿ ಈ ವಾದವನ್ನು ಸಂಪೂರ್ಣವಾಗಿ ಒಪ್ಪಿಕೊಂಡಿತ್ತು. +ಆದ್ದರಿಂದ ಈ ವಿಭಜನೆ ಆಡಳಿತಾತ್ಮಕ ಆಧಾರ ಹೊಂದಿರಲಿಲ್ಲ. +ಅದು ಕಾನೂನಿನ ಅವಶ್ಯಕತೆಯ ಪರಿಣಾಮವಾಗಿತ್ತು. +ಇದು ಮೂಲಭೂತ ವ್ಯತ್ಯಾಸವಾಗಿದ್ದು ಇದನ್ನು ಎಂದಿಗೂ ಕಡೆಗಣಿಸಲಾಗದು. +ಈ ಕಾನೂನಿನ ಆವಶ್ಯಕತೆ ಹೇಗೆ ಉದ್ಭವಿಸಿತು ? +ಇಂತಹ ಆವಶ್ಯಕತೆ ಭಾರತೀಯ ಸಂಸ್ಥಾನಗಳ ಕಾರಣವಾಗಿಯೇ ಉದ್ಭವಿಸಿತೆಂದು ನಾನು ಹೇಳುತ್ತೇನೆ. +ಇನ್ನೂ ಮುಂದುವರಿದು, ಸಂಯುಕ್ತ ರಾಜ್ಯವು ಬ್ರಿಟಿಷ್‌ ಭಾರತ ಪ್ರಾಂತ್ಯಗಳಿಗೆ ಸೀಮಿತಗೊಂಡಾಗ್ಯೂ ಅದರಲ್ಲಿ ಕೆಲವು ವಿಷಯಗಳನ್ನು ಆರಕ್ಷಿತವಾದವುಗಳೆಂದು ಪರಿಗಣಿಸುವ ಅವಶ್ಯಕತೆ ಇರುವುದೆಂದು ಹೇಳುವೆ. +ಕೆಲವು ವಿಷಯಗಳನ್ನು ಅರಕ್ಷಿತ ವಿಷಯಗಳೆಂದು ಪರಿಗಣಿಸುವುದು ಸಂಯುಕ್ತ ರಾಜ್ಯದಲ್ಲಿ ಭಾರತೀಯ ಸಂಸ್ಥಾನಗಳ ಪ್ರವೇಶದ ನೇರ ಪರಿಣಾಮವಾಗಿದೆ. +ಭಾರತೀಯ ರಾಜ್ಯಗಳ ಪ್ರವೇಶದಿಂದಾಗಿ ಕೆಲವು ವಿಷಯಗಳನ್ನು ಕಾದಿಟ್ಟ ವಿಷಯಗಳೆಂದು ಪರಿಗಣಿಸುವಂತೆ ಒತ್ತಾಯಿಸುವಂತಹ ಯಾವ ಸಂಗತಿ ಅವುಗಳಲ್ಲಿವೆ ? +ಈ ಪಶ್ನೆಗೆ ಉತ್ತರವಾಗಿ ಭಾರತ ಸರಕಾರ ಕಾಯ್ದೆಯ ೧೮ಂ ನೆಯ ವಿಭಾಗದತ್ತ ನಿಮ್ಮ ಗಮನ ಸೆಳೆಯಬಯಸುವೆ. +೧೮ಂನೆಯ ವಿಭಾಗ ಹೀಗೆ ಹೇಳುತ್ತದೆ :“ಈ ಕಾಯ್ದೆಯ ಮೂರನೆಯ ಭಾಗದ ಆರಂಭಕ್ಕೆ ಮುಂಚೆ ಸೆಕ್ರೆಟರಿ ಆಫ್‌ ಸ್ಟೇಟ್‌-ಇನ್‌-ಕೌನ್ಲಿಲ್‌ರವರು ಅಥವಾ ಅವರ ಪರವಾಗಿ ಭಾರತೀಯ ರಾಜ್ಯಗಳೊಡನೆ ಪ್ರಭುತ್ವದ ಕಾರ್ಯಗಳ ನಿರ್ವಹಣೆಯ ಸಂಬಂಧವಾಗಿ ಮಾಡಲಾದ ಯಾವುದೇ ಒಪ್ಪಂದ ಈ ಕಾಯ್ದೆಯ ಮೂರನೆಯ ಭಾಗದ ಆರಂಭದಿಂದಲೇ ಅದು ಮಹಾಪ್ರಭುವಿನ ಪರವಾಗಿ ಮಾಡಿದುದಾಗಿದೆ ಎಂದೇ ಪರಿಗಣಿಸಲಾಗಿ ಜಾರಿಯಲ್ಲಿ ಬರುವುದು . +ಅಂತಹ ಯಾವುದೇ ಒಪ್ಪಂದದಲ್ಲಿ ಸೆಕ್ರೆಟರಿ ಆಫ್‌ ಸ್ಟೇಟ್‌-ಇನ್‌-ಕೌನ್ಸಿಲ್‌ರ ಕುರಿತು ಬರುವ ಎಲ್ಲಾ ಉಲ್ಲೇಖಗಳನ್ನು ಇದೇ ರೀತಿ ಅರ್ಥೈಸತಕ್ಕದ್ದು”. +ಭಾರತೀಯ ಸಂಸ್ಥಾನಗಳು ಮಾಡಿಕೊಂಡ ಎಲ್ಲಾ ಒಡಂಬಡಿಕೆಗಳು ಇಂಗ್ಲೆಂಡಿನ ಪ್ರಭುತ್ವದೊಂದಿಗೆ ಮಾಡಿಕೊಂಡ ಒಪ್ಪಂದವಾಗಿದೆಯೇ ಹೊರತು ಭಾರತ ಸರಕಾರದೊಂದಿಗಲ್ಲ ಎಂದು ರಾಜರು ಬಟ್ಲರ್‌ಸಮಿತಿಯ ಮುಂದೆ ಮಂಡಿಸಿದ ವಾದಕ್ಕೆ ಈ ವಿಭಾಗದಲ್ಲಿ ಕಾನೂನಿನ ರೂಪ ಕೊಡಲಾಗಿದೆ. +ಇದನ್ನು ಬಟ್ಟರ್‌ ಸಮಿತಿ ಒಪ್ಪಿಕೊಂಡಿತ್ತುಈ ಸಿದ್ಧಾಂತದ ಪರಿಣಾಮ ಏನು ಎಂದು ತಿಳಿದುಕೊಳ್ಳುವುದು ಮುಂದಿನ ಹೆಜ್ಜೆಯಾಗಿದೆ. +ಈ ಸಿದ್ಧಾಂತದ ಪರಿಣಾಮ ಅತ್ಯಂತ ನಿರ್ಣಾಯಕವಾಗಿದೆ. +ಆದರೆ ಇದರ ಪರಿಣಾಮಗಳನ್ನು ಸಂಪೂರ್ಣವಾಗಿ ಕಡೆಗಣಿಸಿರುವುದು ದುರದೃಷ್ಟಕರ. +ಭಾರತೀಯ ಸಂಸ್ಥಾನಗಳು ಮಾಡಿಕೊಂಡಿರುವ ಒಪ್ಪಂದದ ಸಂಬಂಧಗಳು ಇಂಗ್ಲೆಂಡಿನ ಪ್ರಭುತ್ವದೊಂದಿಗಿರುವುದರಿಂದ ಈ ಒಪ್ಪಂದಗಳನ್ವಯ ಉದ್ಭವಿಸುವ ಬಾಧ್ಯತೆಗಳನ್ನು ಈಡೇರಿಸುವ ಕರ್ತವ್ಯ ಮತ್ತು ಜವಾಬ್ದಾರಿ ಸಂಪೂರ್ಣವಾಗಿ ಇಂಗ್ಲೆಂಡಿನ ಪ್ರಭುತ್ವದ ಮೇಲಿದೆ. +ಅದು ಯಾವಾಗಲೂ ಈ ಬಾಧ್ಯತೆಗಳನ್ನು ಈಡೇರಿಸುವ ಸ್ಥಿತಿಯಲ್ಲಿಡಬೇಕೆಂದು ರಾಜರುಗಳು ವಾದಿಸುತ್ತಿದ್ದಾರೆ. +ರಾಜರುಗಳೊಡನೆ ಮಾಡಿಕೊಳ್ಳಲಾದ ಈ ಒಪ್ಪಂದಗಳು ಇಂಗ್ಲೆಂಡಿನ ಪ್ರಭುತ್ವದ ಮೇಲೆ ಯಾವಬಾಧ್ಯತೆಯನ್ನು ಹೇರಿವೆ ? + ಇಂಗ್ಲೆಂಡಿನ ಪ್ರಭುತ್ವದ ಮೇಲೆ ಒಪ್ಪಂದಗಳು ಹೇರಿರುವ ಮತ್ತು ಪ್ರಭುತ್ವಮನ್ನಿಸಿರುವ ಬಾಧ್ಯತೆ ಎಂದರೆ ರಾಜರುಗಳನ್ನು ಆಂತರಿಕ ಗಲಭೆಗಳು ಮತ್ತು ಬಾಹ್ಯ ಆಕ್ರಮಣದಿಂದ ರಕ್ಷಿಸುವುದು. +ಪ್ರಭುತ್ವವು ಯಾವ ರೀತಿಯಲ್ಲಿ ಈ ಬಾಧ್ಯತೆಯನ್ನು ಈಡೇರಿಸುವುದು ? +ಈ ಬಾಧ್ಯತೆಯನ್ನು ನಿರ್ವಹಿಸಲು ಪ್ರಭುತ್ವಕ್ಕಿರುವ ಏಕೈಕ ಮಾರ್ಗವೆಂದರೆ ವಿದೇಶ ವ್ಯವಹಾರಗಳು ಮತ್ತು ಸೈನ್ಯವನ್ನು ಪ್ರತ್ಯೇಕವಾಗಿ ತನ್ನ ನಿಯಂತ್ರಣದಲ್ಲಿಟ್ಟುಕೊಳ್ಳುವುದು. +ಕಾಯ್ದಿರಿಸಿದ ವಿಷಯಗಳ ಆವಶ್ಯಕತೆಯು ಕಾನೂನು ಸಮ್ಮತ ಆವಶ್ಯಕತೆಯಾಗಿದೆ ಎಂದು ಏಕೆ ಹೇಳುತ್ತಿರುವೆನೆಂಬುದರ ಅರ್ಥ ಈಗ ಸ್ಪಷ್ಟವಾಗಿರಬಹುದು. +ಕಾನೂನು ಸಮ್ಮತ ಅವಶ್ಯಕತೆ ಪ್ರಭುತ್ವದ ಒಪ್ಪಂದದ ಬಾಧ್ಯತೆಗಳಿಂದ ಹೊರಹೊಮ್ಮಿದ್ದು ಮತ್ತು ೧೮ಂ ನೆಯ ವಿಭಾಗದಲ್ಲಿ ಹೇಳಿರುವಂತೆ ಈ ಒಪ್ಪಂದಗಳ ಸಂಬಂಧ ಎಲ್ಲಿಯವರೆಗೆ ಉಳಿಯುತ್ತದೆಯೋ ಅಲ್ಲಿಯವರೆಗೆ ಆರಕ್ಷಿತ ವಿಷಯಗಳು ವರ್ಗಾಯಿಸಲಾದ ವಿಷಯಗಳಾಗಲಾರವು. +ಹೀಗೆ ಆಗಲು ಸಾಧ್ಯವಿರುವುದಿಲ್ಲವಾದ್ದರಿಂದ ಡೊಮಿನಿಯನ್‌ಸ್ಥಾನವಂತಿರಲಿ, ಜವಾಬ್ದಾರಿ ಸರಕಾರಕ್ಕೂ ಅವಕಾಶವಿಲ್ಲ. +ಅಂತಿಮ ಗುರಿಯನ್ನು ಕುರಿತು ನಾನು ನೀಡಿರುವ ಸಂವಿಧಾನದ ಈ ವಿಶ್ಲೇಷಣೆಯಿಂದ ಈ ಸಂವಿಧಾನವು ಸ್ಥಿರ ಮತ್ತು ಕಠಿಣವಾದ ಸಂವಿಧಾನವಾಗಿದೆ ಎಂದು ಕೆಲವರು ಹೇಳಲು ಹಿಂಜರಿಯಲಿಕ್ಕಿಲ್ಲ ಎಂದು ನಂಬಿದ್ದೇನೆ. +ಅದರಲ್ಲಿ ಬದಲಾವಣೆ ಸಾಧ್ಯವಿಲ್ಲ. +ಆದ್ದರಿಂದ ಅದು ಪ್ರಗತಿ ಹೊಂದಲೂ ಸಾಧ್ಯವಿಲ್ಲ. +ಅದು ಬುನಾದಿಯಲ್ಲಿಯೇ ಸಿಕ್ಕಿಕೊಂಡಿರುವ ಸಂವಿಧಾನವಾಗಿದ್ದು ಇಂತಹ ಸಂವಿಧಾನವನ್ನು ಸ್ವೀಕರಿಸುವುದು ಅಥವಾ ಬಿಡುವುದು ಭಾರತದ ಜನತೆಗೆ ಬಿಟ್ಟ ವಿಷಯ. +ಸಂವಿಧಾನವನ್ನು ನಮ್ಮ ಗುರಿಯ ದೃಷ್ಟಿಯಿಂದ ಇಷ್ಟು ದೀರ್ಘವಾಗಿ ಪರಿಶೀಲಿಸಿ ನಿಮ್ಮನ್ನು ದಣಿಸಿದ್ದಕ್ಕಾಗಿ ಕ್ಷಮೆ ಕೇಳುತ್ತೇನೆ. +ಆದರೆ ವಿಷಯವನ್ನು ಇಷ್ಟು ದೀರ್ಘವಾಗಿ ಪರಿಶೀಲಿಸಲು ಈ ಪ್ರಶ್ನೆಯ ಬಗ್ಗೆ ಕೆಲ ಜನರ ಮನೋಭಾವನೆಯೇ ನನಗೆ ನೆಪವಾಗಿದೆ. +ಯಾವ ಸಂವಿಧಾನವೂ ಪರಿಪೂರ್ಣವಾಗಿರಲಾರದೆಂಬುದನ್ನು ನಾನು ಬಲ್ಲೆ. +ಅಪೂರ್ಣತೆಗಳು ಇದ್ದೇ ಇರುತ್ತವೆ. +ಆದರೆ ಅಪೂರ್ಣತೆಯ ಮತ್ತು ಅಂತರ್ಗತವಾದ ಹಾಗೂ ಆಜನ್ಮ ಕೊರತೆಗಳ ನಡುವೆ ವ್ಯತ್ಯಾಸವನ್ನು ಕಂಡುಕೊಳ್ಳಬೇಕಾಗುತ್ತದೆ. +ಅಪೂರ್ಣತೆಗಳನ್ನು ನಿವಾರಿಸಬಹುದು. +ಆದರೆ ಆಜನ್ಮ ಕೊರತೆಗಳನ್ನುತುಂಬಿಕೊಡಲು ಬರುವುದಿಲ್ಲ. +ಕಾಂಗ್ರೆಸ್‌ ಮತ್ತು ಲಿಬರಲ್‌ ಫೆಡರೇಷನ್‌ಗಳು ಮಾಡಿರುವ ಗೊತ್ತುವಳಿಗಳು ಅಪೂರ್ಣತೆಗಳನ್ನು ನಿವಾರಿಸಬಲ್ಲವು. +ಆದರೆ ಅವು ಆಜನ್ಮ ಕೊರತೆಗಳನ್ನು ನಿವಾರಿಸಬಲ್ಲವೇ ? +ಕೊರತೆಗಳಿಲ್ಲವೆಂದು ನನಗೆ ಖಾತ್ರಿ ಮಾಡಿಕೊಟ್ಟರೆ ಅಪೂರ್ಣತೆಗಳಿರುವುದಕ್ಕೆ ನನ್ನ ಅಭ್ಯಂತರವಿಲ್ಲ. +ಡೊಮಿನಿಯನ್‌ ಸ್ಥಾನಕ್ಕೆ ಅವಕಾಶವಿಲ್ಲದಿರುವುದು ಈ ಸಂವಿಧಾನದ ಅತ್ಯಂತ ದೊಡ್ಡ ಕೊರತೆಯಾಗಿದೆ. +ಈ ಕೊರತೆ ಇರುವುದು ಕಾಂಗ್ಲೆಸ್ಸಿಗೂ ಗೊತ್ತಿಲ್ಲ . + ಲಿಬರಲ್‌ ಫೆಡರೇಷನ್ನಿಗೂ ಗೊತ್ತಿಲ್ಲ. +ಅವರ ಬೇಡಿಕೆಗಳಿಗೂ ಭಾರತದ ರಾಜಕೀಯ ವಿಕಾಸದ ಗುರಿಗೂ ಸಂಬಂಧವೇ ಇಲ್ಲ. +ಅವುಗಳಲ್ಲಿ ಅದನ್ನು ಹೇಳಿಯೂ ಇಲ್ಲ. +ಕಾಂಗ್ರೆಸ್ಸಿಗರು ರಾಜಕೀಯ ಅಧಿಕಾರವನ್ನು ಆಕ್ರಮಿಸುವ ಸಾಧ್ಯತೆಯಿಂದ ಎಷ್ಟು ಆಕರ್ಷಿತರಾಗಿರುವರೆಂದರೆ ಅವರಿಗೆ ಬ್ರಿಟಿಷ್‌ ಸರಕಾರದ ವಿರುದ್ಧ ಈ ಘೋಷಣೆಯಲ್ಲಿ ತಮ್ಮ ಬೇಡಿಕೆಗಳ ಪ್ರಸ್ತಾಪವೇ ಇಲ್ಲವೆಂಬುದೂ ತಿಳಿದಿಲ್ಲ. +ಇದು ಆಶ್ಚರ್ಯಕರ. +ಕಾಂಗ್ರೆಸ್‌ ಮರೆತರೂ ಭಾರತದ ಜನತೆಮರೆಯಲಾರದು. +ಮರೆಯಲೂ ಕೂಡದು. +ಹಾಗೆ ಮರೆಯುವುದು ಹಾನಿಕರವಾಗುವುದು. +ಮರೆವು ವ್ಯಕ್ತಿಗೆ ಎಷ್ಟು ಹಾನಿಕರವೋ ಜನತೆಗೂ ಅಷ್ಟೇ ಹಾನಿಕರವಾಗುವುದು ತಲುಪುವ ದಾರಿಯೇ ಮನೆಯಾಗಲಾರದು. +ದಾರಿ ಮನೆಯನ್ನು ತಲುಪಿಸುತ್ತದೋ ಇಲ್ಲವೋ ಎಂದು ಅರಿಯದೆ ಕ್ರಮಿಸುವುದು ಗುಂಡಿಯಲ್ಲಿ ಬಿದ್ದಂತೆಯೇ ಸರಿ. +ನೀವು ನನ್ನನ್ನು ತಪ್ಪು ತಿಳಿದುಕೊಳ್ಳಬಾರದು. +ನಾನು ತಾಳ್ಮೆ ಇಲ್ಲದ ಆದರ್ಶವಾದಿಯಲ್ಲ. +ನಾನು ಕಾಯಲು ಸಿದ್ಧವಿದ್ದು ಕಂತುಗಳಲ್ಲಿ ಪಡೆಯಲು ತಯಾರಾಗಿರುವ ಅಲ್ಪತೃಪ್ತರನ್ನು ಖಂಡಿಸುತ್ತಿಲ್ಲ. +ಇಡೀ ಒಂದು ರೂಪಾಯಿ ಪಡೆಯುವ ಹಕ್ಕು ಇದ್ದಾಗ್ಯೂ ಒಂದು ಆಣೆಯನ್ನು ಬೇಡಿ ಒಂದು ಪೈಸಿಕ್ಕಾಗ ದೊಡ್ಡ ವಿಜಯಿಗಳಂತೆ ಮೆರೆಯುವ ಇವರ ಬಗ್ಗೆ ಕನಿಕರ ಪಡಬೇಕಾಗುತ್ತದೆ. +ನಾನು ಬಯಸುವುದಿಷ್ಟೇ. +ಪರಿಸ್ಥಿತಿಯ ಒತ್ತಡದಿಂದ ನಾವು ಅಲ್ಪತೃಪ್ತರಾಗಿದ್ದಾಗ್ಯೂ ವಾಸ್ತವತಾವಾದಿಗಳಾಗದೇ ಇರಬಾರದು. +ಒಂದು ಕಂತನ್ನು ಸ್ವೀಕರಿಸುವಾಗ ಅದನ್ನು ಎಚ್ಚರಿಕೆಯಿಂದ ಪರೀಕ್ಷಿಸಿ. + ಅದು ನಮ್ಮ ಇಡೀ ಬೇಡಿಕೆಯನ್ನು ಸರಿದೂಗಿಸುವುದೋ ಇಲ್ಲವೋ ಎಂಬುದರ ಮನವರಿಕೆ ಮಾಡಿಕೊಳ್ಳಬೇಕಾಗುತ್ತದೆ. +ಇಲ್ಲದೇ ಹೋದಲ್ಲಿ ಅನೇಕ ಬಾರಿ ಸಂಭವಿಸುವಂತೆ ಯಾವುದು ತತ್‌ಕ್ಷಣದಲ್ಲಿ ಒಳ್ಳೆಯದೆನಿಸುತ್ತದೆಯೋ ಅದೇ ಅದಕ್ಕಿಂತಲೂಒಳ್ಳೆಯದರ ಶತ್ರುವಾಗಿ ಪರಿಣಮಿಸುತ್ತದೆ. +ಭವಿಷ್ಯದ ಈ ವಿಚಾರ ನಿಮ್ಮಲ್ಲಿ ಅನೇಕರಿಗೆ ವಿಚಿತ್ರವೆನಿಸಬಹುದು. +ನಾವೆಲ್ಲರೂ ಬೈಸರಸಂಸತ್ತಿನ ಸಾರ್ವಭೌಮತ್ವದ ಸೂತ್ರದಲ್ಲಿ ಪರಿಪೂರ್ಣವಾಗಿ ಹೋಗಿದ್ದೇವೆ. +ಸಂಸತ್ತು ಸರ್ವೋಜ್ಚವಾಗಿದೆ,ಅದು ಎಷ್ಟರ ಮಟ್ಟಿಗೆ ಸರ್ವೋಚ್ಚವಾಗಿದೆ ಎಂದರೆ ಗಂಡನ್ನು ಹೆಣ್ಣನ್ನಾಗಿ, ಹೆಣ್ಣನ್ನು ಗಂಡನ್ನಾಗಿ ಮಾಡುವುದೊಂದನ್ನು ಬಿಟ್ಟು ಎಲ್ಲವನ್ನೂ ಮಾಡಬಲ್ಲದು ಎಂಬುದನ್ನು ಅವರಿಂದ ತಿಳಿದುಕೊಂಡಿದ್ದೇವೆ. +ಬ್ರಿಟಿಷ್‌ ಸಂಸತ್ತು ಸರ್ವೋಚ್ಚವಾಗಿರುವಾಗ ರಾಜರುಗಳು ಹೇಗೆ ಅದಕ್ಕೆ ಅಡ್ಡಿಯಾಗಬಲ್ಲರು ಎಂಬ ಪ್ರಶ್ನೆಯನ್ನು ನಿಮ್ಮಲ್ಲಿ ಕೆಲವರು ಕೇಳುವುದು ಅಸ್ವಾಭಾವಿಕವೇನೂ ಅಲ್ಲ. +ಬ್ರಿಟಿಷ್‌ ಸಂಸತ್ತು ಭಾರತಸಂಯುಕ್ತ ರಾಜ್ಯದ ಮೇಲೆ ಸರ್ವೋಚ್ಚತೆ ಹೊಂದಿಲ್ಲ ಎಂಬ ವಾದವನ್ನು ಒಪ್ಪಿಕೊಳ್ಳಲು ನೀವು ಸ್ವಲ್ಪ ಹೆಚ್ಚಿನ ಪ್ರಯತ್ನ ಮಾಡಬೇಕಾಗುತ್ತದೆ. +ಈಗ ಭಾರತ ಸರಕಾರದಲ್ಲಿ ಅಳವಡಿಸಲಾಗಿರುವ ಫೆಡರಲ್‌ಸಂವಿಧಾನವನ್ನು ಬದಲಾಯಿಸುವ ಅದರ ಅಧಿಕಾರ ಅತ್ಯಂತ ಸೀಮಿತವಾದದ್ದಾಗಿದೆ. +ಈ ಕಾಯ್ದೆಯಲ್ಲಿ ಭಾರತದ ಶಾಸಕಾಂಗಗಳಿಗೆ ಯಾವುದೇ ಅಂಗಭೂತ ಅಧಿಕಾರಗಳನ್ನು ನೀಡಲಾಗಿಲ್ಲ ಎಂಬುದರ ವಿಷಯದಲ್ಲಿ ಭಾರತ ರಾಜಕಾರಣಿಗಳು ತಮ್ಮ ದುಃಖ ಮತ್ತು ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. +ಭಾರತ ಸರಕಾರ ಕಾಯ್ದೆಯ ಪ್ರಕಾರ ಫೆಡರಲ್‌ ಶಾಸಕಾಂಗವಾಗಲಿ, ಪ್ರಾಂತೀಯ ಶಾಸಕಾಂಗವಾಗಲೀ ಸಂವಿಧಾನವನ್ನು ಬದಲಾಯಿಸುವ ಅಥವಾ ಅದಕ್ಕೆ ತಿದ್ದುಪಡಿಮಾಡುವ ಅಧಿಕಾರ ಹೊಂದಿಲ್ಲ. +ಕಾಯ್ದೆಯ೩ಂ೮ ನೆಯ ವಿಭಾಗದನ್ವಯ ಫೆಡರಲ್‌ ಶಾಸಕಾಂಗ ಮತ್ತು ಪ್ರಾಂತೀಯ ಶಾಸಕಾಂಗವು ಸಂವಿಧಾನದಲ್ಲಿ ಆಗಬೇಕಾದ ಬದಲಾವಣೆಗಳ ಶಿಫಾರಸ್ಸು ಮಾಡುವ ಗೊತ್ತುವಳಿಯನ್ನು ಸ್ವೀಕರಿಸುವುದಕ್ಕೆ ಮಾತ್ರ ಅವಕಾಶವಿದೆ. +ಮತ್ತು ಅದನ್ನು ಸಂಸತ್ತಿನ ಎರಡೂ ಸದನಗಳಲ್ಲಿ ಮಂಡಿಸಲು ಸೆಕ್ರೆಟರಿ ಆಫ್‌ ಸ್ಟೇಟ್‌ರವರು ಬದ್ಧರಾಗಿರುತ್ತಾರೆ. +ಇದು ಅಮೆರಿಕ ಸಂಯುಕ್ತ ಸಂಸ್ಥಾನ, ಆಸ್ಟ್ರೇಲಿಯಾ, ಜರ್ಮನ್‌ ಸಂಯುಕ್ತ ರಾಜ್ಯ ಮತ್ತು ಸ್ಪಿಟ್ಟರ್‌ಲ್ಯಾಂಡ್‌ ಸಂವಿಧಾನಗಳ ವಿರುದ್ಧವಾಗಿದೆ. +ಭಾರತದ ಎಲ್ಲಾ ವಿಭಾಗಗಳ ಮತ್ತು ಹಿತಾಸಕ್ತಿಗಳ ಪ್ರಾತಿನಿಧಿಕ ಸಂಸ್ಥೆಗಳಾಗಿರುವ ಶಾಸಕಾಂಗಗಳಿಗೆ ಗೊತ್ತುಪಡಿಸಲಾದ ಕೆಲವು ಇತಿ ಮಿತಿಗಳಲ್ಲಿ ಅಧಿಕಾರವನ್ನು ಏಕೆ ಕೊಡಬಾರದೆಂಬುದಕ್ಕೆ ಕಾರಣವೇ ಇಲ್ಲ. +ಅದೇನೇ ಇರಲಿ, ಭಾರತದಲ್ಲಿ ಶಾಸಕಾಂಗಗಳು ಸಂವಿಧಾನದಲ್ಲಿ ಮತ್ತು ಚುನಾವಣೆಯ ಹಕ್ಕಿನಲ್ಲಿಯೂ ಯಾವ ಬದಲಾವಣೆಯನ್ನೂ ಮಾಡಲಾರವು. +ಅದರಲ್ಲಿಯೂ ಅವು ಕಾಯ್ದಿರಿಸಿದ ವಿಷಯಗಳನ್ನು ವರ್ಗಾಯಿಸಲಾದ ವಿಷಯಗಳನ್ನಾಗಿ ಬದಲಾಯಿಸಲಾರವು. +ಬ್ರಿಟಿಷ್‌ ಸಂಸತ್ತು ಸಂವಿಧಾನವನ್ನು ಬದಲಾಯಿಸುವ ಅಧಿಕಾರವಿರುವ ಏಕೈಕ ಸಂಸ್ಥೆ. +ಆದರೆ ಸಂಸತ್ತಿಗೂ ಕೂಡ ಫೆಡರಲ್‌ ಸಂವಿಧಾನವನ್ನು ಬದಲಾಯಿಸು ಅಧಿಕಾರವಿಲ್ಲ ಎಂಬುದು ಕೆಲವೇ ಜನರಿಗೆ ಗೊತ್ತಿರುವ ವಿಷಯ. +ಇದು ಸತ್ಯಸಂಗತಿಯಾಗಿದ್ದು ನಾವು ಅದನ್ನು ಎಷ್ಟು ಬೇಗ ಅರಿತುಕೊಳ್ಳುತ್ತೇವೆಯೋ ಅಷ್ಟು ಒಳ್ಳೆಯದು. +ಈ ದೃಷ್ಟಿಯಿಂದ II ನೆಯ ಷೆಡ್ಯೂಲಿನ ಮಹತ್ವವವನ್ನು ಹೆಚ್ಚು ಹೇಳಬೇಕಾಗಿಲ್ಲ. +ಅದಕ್ಕೆ ನೀಡಬೇಕಿದ್ದಷ್ಟು ಗಮನ ನೀಡದೇ ಇರುವುದು ವಿಷಾದಕರ. +II ನೆಯ ಷೆಡ್ಯೂಲ್‌ ಕೇವಲ ಒಂದು ಸನ್ನದಾಗಿರದೆ ಅದು ಸಂವಿಧಾನದ ಕಾರ್ಯಾಚರಣೆಯ ಒಂದು ಸೃಷ್ಟೀಕರಣದ ತಃಖ್ತೆ ಅಥವಾ ಪಟ್ಟಿಯೂ ಆಗಿದೆ. +ಇಡೀ ಷೆಡ್ಯೂಲ್‌ ಎಚ್ಚರಿಕೆಯಿಂದ ಅಧ್ಯಯನ ಮಾಡುವಂತಹ ದಾಖಲೆಯಾಗಿದೆ. +I ನೆಯ ಷೆಡ್ಯೂಲಿನಲ್ಲಿ ಏನು ಹೇಳಲಾಗಿದೆ ? +ಅದರಲ್ಲಿ ಭಾರತ ಸರಕಾರ ಕಾಯ್ದೆಯ ಕೆಲವು ವಿಧಿಗಳಿಗೆ ಸಂಸತ್ತು ತಿದ್ದುಪಡಿ ಮಾಡಬಹುದು ಮತ್ತು ಇನ್ನು ಕೆಲವು ವಿಧಿಗಳಿಗೆ ಸಂಸತ್ತು ತಿದ್ದುಪಡಿ ಮಾಡುವಂತಿಲ್ಲ ಎಂದು ಹೇಳಲಾಗಿದೆ. +ಇದು ಸಂಸತ್ತು ಸವೋಚ್ಚವಲ್ಲ ಮತ್ತು ಸಂವಿಧಾನವನ್ನು ಬದಲಾಯಿಸುವ ಅದರ ಹಕ್ಕು ಸೀಮಿತವಾಗಿದೆಯೆಂದು ಹೇಳುವ ಇನ್ನೊಂದು ರೀತಿ. +ಎರಡನೆಯ ಷೆಡ್ಕೂಲ್‌ನಲ್ಲಿ ಸಂಸತ್ತು ತಿದ್ದುಪಡಿ ಮಾಡುವ ಅಧಿಕಾರ ಹೊಂದಿಲ್ಲ ಎಂದು ಹೇಳಿದ ವಿಧಿಗಳಿಗೆ ಸಂಸತ್ತು ತಿದ್ದುಪಡಿ ಮಾಡಿದರೆ ಏನಾಗುತ್ತದೆ ? +ಈ ಪಶ್ನೆಗೆ ಷೆಡ್ಯೂಲ್‌ ನೀಡುವ ಉತ್ತರವೇನೆಂದರೆ ಅಂತಹ ಕಾಯ್ದೆಯು ಸಂಯುಕ್ತ ರಾಜ್ಯಕ್ಕೆ ಸಂಸ್ಥಾನಗಳ ಸೇರ್ಪಡೆಯ ಮೇಲೆ ಪರಿಣಾಮ ಉಂಟುಮಾಡುತ್ತದೆ. +ಎಂದರೆ ಅದು ಸೇರ್ಪಡೆಯ ದಸ್ತಾವೇಜಿನ ಬಂಧನಕಾರಿ ಅಂಶವನ್ನು ಭಂಗಗೊಳಿಸುತ್ತದೆ. +ಇದನ್ನೇ ಬೇರೆ ಮಾತುಗಳಲ್ಲಿ ಹೇಳಬೇಕಾದರೆ ಸಂಸತ್ತು ಎರಡನೆಯ ಷೆಡ್ಯೂಲಿನಲ್ಲಿ ನಿಷೇಧಿಸಲಾದ ಕಾಯ್ದೆಯ ಯಾವುದೇ ವಿಧಿಗೆ ತಿದ್ದುಪಡಿ ಮಾಡಿದ್ದೇ ಆದರೆ ರಾಜರುಗಳಿಗೆ ಸಂಯುಕ್ತ ರಾಜ್ಯದಿಂದ ಹೊರಗೆ ಹೋಗುವ ಹಕ್ಕು ನೀಡಿದಂತಾಗುತ್ತದೆ. +ಕೆಲವು ಪ್ರಖ್ಯಾತ ನ್ಯಾಯವಾದಿಗಳು ಬೇರೆ ಅಭಿಪ್ರಾಯ ಹೊಂದಿರುವುದು ನನಗೆ ಗೊತ್ತಿದೆ. +ಅವರ ಅಭಿಪ್ರಾಯದಲ್ಲಿ ರಾಜರುಗಳು ಒಮ್ಮೆ ಸಂಯುಕ್ತ ರಾಜ್ಯವನ್ನು ಸೇರಿದರೆಂದರೆ ಅವರು ಅದನ್ನು ಬಿಟ್ಟು ಹೊರಹೋಗಲು ಬರುವುದಿಲ್ಲ. +ಅದೇನೇ ಇರಲಿ ನಾನು ನನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದೇನೆ . +ನನ್ನ ಈ ಅಭಿಪ್ರಾಯ ಸಂಪೂರ್ಣಆಧಾರ ರಹಿತವಾಗಿಲ್ಲ ಎಂದು ಹೇಳಬಯಸುತ್ತೇನೆ. +ಭಾರತ ಸರಕಾರ ಮಸೂದೆಯ ಚರ್ಚೆ ನಡೆದಾಗ ಸಾಲಿಸಿಟರ್‌ ಜನರಲ್‌ ಮತ್ತು ಸೆಕ್ರೆಟರಿ ಆಫ್‌ಸ್ಟೇಟ್‌ ಕೂಡ ಹೌಸ್‌ ಆಫ್‌ ಕಾಮನ್ಸ್‌ನಲ್ಲಿ ನಾನು ಕೊಟ್ಟಿರುವ ಅರ್ಥವನ್ನೇ ಕೊಟ್ಟಿರುತ್ತಾರೆ. +ಸಾಲಿಸಿಟರ್‌ ಜನರಲ್‌ರು ಹೀಗೆ ಹೇಳಿದರು :“ಕೆಲವು ಇತಿಮಿತಿಗಳಲ್ಲಿ ನಿಶ್ಚಿತವೂ ನಿರ್ದಿಷ್ಟವೂ ಆದ ಹಾಗೂ ನಂತರ ನಾವು ಸಂಪೂರ್ಣ ಬದಲಾಯಿಸಲಾಗದಂತಹ ಸಂಯುಕ್ತ ರಾಜ್ಯ ರಚನೆ ಇರದ ಹೊರತು ರಾಜ್ಯಗಳು ಅದರಲ್ಲಿ ಸೇರಲು ಒಪ್ಪುವುದಿಲ್ಲ. +ಮೂಲಭೂತವಲ್ಲದವುಗಳು ಮತ್ತು ಸೇರ್ಪಡೆಯ ದಸ್ತಾವೇಜಿನ ವಿರುದ್ಧವಾಗದಂತಹ ವಿಷಯಗಳನ್ನು ತಿಳಿಸುವುದೇ ಈ ವಿಧಿಯ ಉದ್ದೇಶವಾಗಿದೆ”. + “ಮೂಲಭೂತ ವಿಷಯಗಳಲ್ಲಿ ಇದರ ರಚನೆಯನ್ನು ಬದಲಾಯಿಸುವುದಾದರೆ ರಾಜ್ಯಗಳು “ಇದು ನಾವು ಸೇರಿರುವ ಸಂಯುಕ್ತ ರಾಜ್ಯವಲ್ಲ” ಎಂದು ಹೇಳುವ ಸ್ಪಷ್ಟ ಹಕ್ಕನ್ನು ಹೊಂದಿರುತ್ತವೆ”. + ಸೆಕ್ರಟರಿ ಆಫ್‌ ಸ್ಟೇಟ್‌ ಹೇಳಿದ್ದೇನೆಂದರೆ :“ರಾಜ್ಯಗಳು ಮೇಲೆ ಪರಿಣಾಮ ಬೀರುವಂತಹ ಮಸೂದೆಯ ಭಾಗಗಳಿಗೆ ತಿದ್ದುಪಡಿಮಾಡುವುದಾದರೆ,ನೀವು ರಾಜ್ಯಗಳು ಸೇರ್ಪಡೆಯಾದ ಷರತ್ತುಗಳನ್ನು ಬದಲಾಯಿಸಿದಂತಾಗುತ್ತದೆ. +ಇದರಿಂದ ರಾಜರುಗಳು ತಮ್ಮ ಸೇರ್ಪಡೆಯ ದಸ್ತಾವೇಜಿನಲ್ಲಿ ಬದಲಾವಣೆ ಮಾಡಲಾಗಿದೆ ಎಂದು ದೂರುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. +ರಾಜರುಗಳು ಮಾಡಿಕೊಂಡಿರುವ ಒಪ್ಪಂದಗಳಡಿಯಲ್ಲಿ ಬರುವಂತಹ ಯಾವುದೇ ವಿಷಯಗಳಿಗೆ ಸಂಬಂಧಿಸಿದ ಮಸೂದೆಯ ಭಾಗಗಳಿಗೆ ತಿದ್ದುಪಡಿ ಮಾಡಲು ಬರುವುದಿಲ್ಲವೆಂದು ಇದರ ಅರ್ಥ. +ಅವರ ಸೇರ್ಪಡೆಯ ದಸ್ತಾವೇಜಿನ ಆಧಾರವನ್ನು ತೊಡೆದು ಹಾಕುವಂತಹ ಬದಲಾವಣೆಗಳನ್ನು ಮಸೂದೆಯಲ್ಲಿ ಮಾಡಿದ್ದೇ ಆದರೆ ರಾಜರುಗಳು ಮತ್ತು ಸಂಸತ್ತಿನ ನಡುವೆ ಆಗಿರುವ ಒಪ್ಪಂದವನ್ನು ಮುರಿದುಕೊಂಡಂತೆ ಮತ್ತು ಇದರಿಂದ ರಾಜರುಗಳು ಸ್ವತಂತ್ರರಾಗುವರು”'. +“ಮಸೂದೆಯ ಸಾಮಾನ್ಯ ಯೋಜನೆಯಂತೆ ರಾಜ್ಯಗಳನ್ನು ಸಂಯುಕ್ತ ರಾಜ್ಯದಲ್ಲಿ ಸೇರುವಂತೆ ಕೇಳಿದಾಗ ಅವರು ಸೇರಲಿರುವ ಸಂಯುಕ್ತ ರಾಜ್ಯದ ವಿಷಯವಾಗಿ ಕೆಲವು ಸಂಗತಿಗಳನ್ನು ತಿಳಿದುಕೊಳ್ಳುವ ಹಕ್ಕನ್ನು ಹೊಂದಿರುತ್ತಾರೆ. +ಈ ತಿಂಗಳು ಒಂದು ರಾಜ್ಯವನ್ನು “ನೀವು ಒಕ್ಕೂಟದಲ್ಲಿ ಸೇರುತ್ತೀರಾ”,ಎಂದು ಕೇಳಿ ಮುಂದಿನ ತಿಂಗಳು ರಾಜ್ಯವು ಸೇರಿದ ಸಂಯುಕ್ತ ರಾಜ್ಯ ವ್ಯವಸ್ಥೆಯ ಕೆಲವು ಮೂಲಭೂತ ಅಂಶಗಳನ್ನು ಬದಲಾಯಿಸುವುದು ಈ ಸದನಕ್ಕೆ ಅಸಂಬದ್ಧವೆನಿಸುವುದು. +ಆದ್ದರಿಂದ ಇಂತಹ ಒಂದು ಷೆಡ್ಯೂಲಿನ ಆವಶ್ಯಕತೆ ಇದೆ. +ರಾಜ್ಯಗಳು ಸೇರ್ಪಡೆ ಹೊಂದಿರುವ ಸಂವಿಧಾನಾತ್ಮಕ ವ್ಯವಸ್ಥೆಯಲ್ಲಿ ಮಸೂದೆಯಲ್ಲಿ ಅವುಗಳಿಗೆ ಸಂಬಂಧಿಸಿದ ಯಾವುದೇ ಭಾಗಗಳಲ್ಲಿ ತಿದ್ದುಪಡಿಯ ಮೂಲಕ ಬದಲಾವಣೆ ಮಾಡಲಾರದಂತಹ ವಿಷಯಗಳನ್ನು ವಿವರಿಸುವುದೇ ಮಸೂದೆಯ ಉದ್ದೇಶವಾಗಿದೆ. +ರಾಜ್ಯಗಳ ಸೇರ್ಪಡೆಯ ದಸ್ತಾವೇಜಿನ ಸಿಂಧುತ್ವವನ್ನು ಬದಲಾಯಿಸಲಾರದಂತಹ ಕಾಯ್ದೆಯ ವಿಧಿಗಳನ್ನು ತಿಳಿಸುವುದು ಈ ಪೆಡ್ಯೂಲಿನ ಯೋಜನೆಯಾಗಿದೆ”. +ಒಂದೆಡೆ ರಾಜ್ಯದ ಸೇರ್ಪಡೆಯ ದಸ್ತಾವೇಜಿನ ಕ್ರಮಬದ್ಧತೆಯನ್ನು ಬದಲಾಯಿಸದಂತಹ ತಿದ್ದುಪಡಿಗಳಿರುವ ಭಾಗಗಳು, ಇನ್ನೊಂದೆಡೆ ಸೇರ್ಪಡೆಯ ಕ್ರಮಬದ್ಧತೆಯನ್ನು ಬದಲಾಯಿಸುವಂತಹ ಭಾಗಗಳು ಈ ಮಸೂದೆಯಲ್ಲಿರುವುದನ್ನು ಕಾಣುತ್ತೇವೆ. +ಈ ತರಹದ ಷೆಡ್ಯೂರನ್ನು ಸಿದ್ಧಪಡಿಸುವಾಗ ಅರಸರು ತಮ್ಮ ಸಮ್ಮತಿ ಇಲ್ಲದೇ ತಿದ್ದುಪಡಿ ಮಾಡಬಾರದು ಎಂದು ಕೇಳಬಹುದಾದ ನ್ಯಾಯಸಮ್ಮತವಾದ ವಿಷಯಗಳಾವುವು ಎಂಬುದನ್ನು ವಿವರಿಸುವಲ್ಲಿ ಬಹಳ ಎಚ್ಚರಿಕೆ ವಹಿಸಬೇಕಾಗುತ್ತದೆ. +ಸಂದಿಗ್ಧ ಸ್ಥಿತಿಯ ಕೆಲವು ವಿಷಯಗಳಿರುವುದು ಸಹಜ. +ಸದ್ಯದ ಸ್ಥಿತಿಯಲ್ಲಿ ಹೆಚ್ಚಿನ ವ್ಯತ್ಯಾಸ ಉಂಟುಮಾಡಲಾರದಂತಹ ಕೆಲವು ಸಣ್ಣಪುಟ್ಟ ಅಪ್ರಧಾನ ತಿದ್ದುಪಡಿಗಳಿರಬಹುದು. +ಮತ್ತು ಇಂತಹ ತಿದ್ದುಪಡಿಗಳಿಗೂ ರಾಜ್ಯಗಳು ನಾವು ಈ ವಿಷಯದಲ್ಲಿ ನಮ್ಮ ಸೇರ್ಪಡೆಯ ದಸ್ತಾವೇಜಿನ ಕ್ರಮಬದ್ಧತೆಯನ್ನು ಬದಲಾಯಿಸುತ್ತದೆ ಎಂದು ಹೇಳುವ ನಮ್ಮ ಹಕ್ಕನ್ನು ಪ್ರತಿಪಾದಿಸುತ್ತೇವೆ ಎಂದು ಹೇಳುವುದು ಅತ್ಯಂತ ವಿವೇಚನಾರಹಿತ ನಿಲುವೆನಿಸುತ್ತದೆ. +ಸಾಮಾನ್ಯ ಶಕ್ತಿ ಸಮತೋಲನದಲ್ಲಿ ವ್ಯತ್ಯಾಸವನ್ನುಂಟು ಮಾಡುವಂತಹ, ರಾಜ್ಯಗಳು ಸೇರಬೇಕಾಗಿರುವ ಒಕ್ಕೂಟದ ಸ್ವರೂಪಕ್ಕೆ ಮಹತ್ವವೆನಿಸಿದ ವಿಷಯಗಳಲ್ಲಿ ಕಾರ್ಯಾಂಗ ನಿಯಂತ್ರಣಕ್ಕಾಗಿ ಕಾದಿರಿಸುವ ಹಾಗೂ ಗವರ್ರರ್‌-ಜನರಲ್‌ರು ತಮ್ಮ ವಿವೇಚನಾನುಸಾರ ವ್ಯವಹರಿಸುವ ವಿಷಯಗಳಲ್ಲಿ ರಾಜ್ಯಗಳು ಸಮ್ಮತಿಯಿಲ್ಲದೆ ತಿದ್ದುಪಡಿ ಮಾಡಬಾರದೆಂದು ಹೇಳುವುದು ಸರಿ. +“ಗವರ್ನರ್‌-ಜನರಲ್‌ನ ಕೈಯಲ್ಲಿರುವ ವಿಶೇಷ ಅಧಿಕಾರಗಳ ಇಡೀ ವಿಸ್ತಾರ ಈ ಸಂಯುಕ್ತ ರಾಜ್ಯದ ಅವಶ್ಯ ಲಕ್ಷಣ. +ಇದು ರಾಜ್ಯಗಳು “ಇದು ಬದಲಾವಣೆಯಾಗಿದೆ” ಅಥವಾ “ಇದನ್ನು ಬದಲಾಯಿಸಲಾಗಿದೆ” ಎಂದು ಹೇಳಬಹುದಾದ ಒಂದು ಭಾಗವಾಗಿದೆ. +ಆದರೆ ಇದರಿಂದ ಸದಾಕಾಲ ಕ ಭಾರತದ ಅಭಿವೃದ್ಧಿಗೆ ಯಾವುದೇ ರೀತಿಯಲ್ಲಿ ಅಡ್ಡಿಯಾಗಲಾರದು. +ಇವು ರಾಜ್ಯಗಳೊಡನೆ ಸಂಧಾನ ಮಾಡುವಂತಹ ವಿಷಯಗಳು. + ಏಕೆಂದರೆ ವಸ್ತುತಃ ಇವು ಸಂಸ್ಥಾನಗಳು ಸೇರ್ಪಡೆಯಾದಂತಹ ಸಂಯುಕ್ತ ರಾಜ್ಯಕಿಂತ ಬೇರೆ ವಿಧದ ಸಂಯುಕ್ತ ರಾಜ್ಯವನ್ನು ನಿರ್ವಿಸುತ್ತವೆ”. +ಎರಡನೆಯ ಷೆಡ್ಯೂಲಿನಲ್ಲಿ ಸೇರ್ಪಡೆಯ ದಸ್ತಾವೇಜಿನ ಮೇಲೆ ಪರಿಣಾಮವನ್ನುಂಟು ಮಾಡುವ ಬದಲಾವಣೆಗಳನ್ನು ಸಂಸತ್ತು ಮಾಡಿದ್ದೇ ಆದರೆ ಏನಾಗುತ್ತದೆ ಎಂಬ ಪ್ರಶ್ನೆಗೆ ಉತ್ತರವೆಂದರೆ, ರಾಜರುಗಳು ಒಕ್ಕೂಟದಿಂದ ಹೊರಹೋಗುವ ಹಕ್ಕನ್ನು ಪಡೆಯುತ್ತಾರೆ. +ಬೇರೆ ಮಾತುಗಳಲ್ಲಿ ಹೇಳುವುದಾದರೆ, ಅಂತಹ ಬದಲಾವಣೆಗಳ ಪರಿಣಾಮವಾಗಿ ಒಕ್ಕೂಟ ವ್ಯವಸ್ಥೆ ಒಡೆದುಹೋಗುತ್ತದೆ. +ಸೇರ್ಪಡೆಯ ದಸ್ತಾವೇಜಿನ ಮೇಲೆ ಪರಿಣಾಮವನ್ನುಂಟು ಮಾಡದೆ ಮಾಡಬಹುದಾದ ಬದಲಾವಣೆಗಳಾವುವು ? +ಎರಡನೆಯ ಷೆಡ್ಯೂಲಿನಲ್ಲಿ ಅಂತಹ ಪರಿಣಾಮವನ್ನುಂಟು ಮಾಡದ ವಿಷಯಗಳು ಎಂದು ಹೇಳಲಾದ ನಿಬಂಧನೆಗಳನ್ನು ನಿಮ್ಮ ಗಮನಕ್ಕೆ ತರುವೆ. +ಎರಡನೆಯ ಷೆಡ್ಯೂಲಿನ ಪ್ರಕಾರ ವಿಷಯಗಳ ಸಂಬಂಧವಾಗಿ ಸಂವಿಧಾನದಲ್ಲಿ ಯಾವುದೇ ಬದಲಾವಣೆ ಮಾಡುವಂತಿಲ್ಲ; +(೧) ಗವರ್ನರ್‌-ಜನರಲ್‌ರು ಸಂಯುಕ್ತ ರಾಜ್ಯದ ಕಾರ್ಯಾಂಗಾಧಿಕಾರಗಳನ್ನು ಚಲಾಯಿಸುವ; +(೨) ಗವರ್ನರ್‌-ಜನರಲ್‌ರ ಕಾರ್ಯಗಳ ನಿರೂಪಣೆ; +(೩) ಸಂಯುಕ್ತ ರಾಜ್ಯದ ಕಾರ್ಯಾಂಗಾಧಿಕಾರ; + (೪) ಮಂತ್ರಿಮಂಡಳದ ಕಾರ್ಯಗಳು ಮತ್ತು ಮಂತ್ರಿಗಳ ಆಯ್ಕೆ ಹಾಗೂ ಸಭೆ ಕರೆಯುವುದು ಮತ್ತು ಅದರಅಧಿಕಾರಾವಧಿ; + (೫) ಗವರ್ನರ್‌-ಜನರಲ್‌ ತನ್ನ ವಿವೇಚನೆಯಂತೆ ಪಡೆಯುವ ವಿಷಯವೇ ಅಥವಾತನ್ನ ವೈಯಕ್ತಿಕ ನಿರ್ಣಯದಂತೆ ನಡೆಯುವ ವಿಷಯವೇ ಎಂದು ನಿರ್ಧರಿಸುವ ಅಧಿಕಾರ; + (೬)ವಿದೇಶ ವ್ಯವಹಾರಗಳು ಮತ್ತು ರಕ್ಷಣೆಯ ವಿಷಯದಲ್ಲಿ ಗವರ್ನರ್‌-ಜನರಲ್‌ರ ಕರ್ತವ್ಯಗಳು; + (೭)ಇಡೀ ಭಾರತದ ಅಥವಾ ಆದರೆ ಯಾವುದೇ ಭಾಗದ ಶಾಂತಿ ಮತ್ತು ನೆಮ್ಮದಿ ಕುರಿತು ಗವರ್ನರ್‌-ಜನರಲ್‌ರ ವಿಶೇಷ ಜವಾಬ್ದಾರಿಗಳು; + (೮) ಫೆಡರಲ್‌ ಸರಕಾರದ ಹಣಕಾಸಿನ ಸುಭದ್ರತೆ ಮತ್ತುವಿಶ್ವಾಸ; + (೯) ಭಾರತೀಯ ರಾಜ್ಯಗಳ ಹಕ್ಕುಗಳು ಮತ್ತು ಅವುಗಳ ಅರಸರ ಹಕ್ಕುಗಳು ಮತ್ತು ಘನತೆ; + (೧ಂ) ಈ ಕಾಯ್ದೆಯನ್ವಯ ತನ್ನ ಕರ್ತವ್ಯಗಳನ್ನು ತನ್ನ ವಿವೇಚನೆಯನ್ವಯ ಅಥವಾ ಸ್ವಂತನಿರ್ಣಯಕ್ಕನುಸಾರವಾಗಿ ನಿರ್ವಹಿಸುವುದು; + (೧೧) ಗವರ್ನರ್‌-ಜನರಲ್‌ರಿಗೆ ಮಹಾಪ್ರಭುಗಳಿಂದನೀಡಲಾದ ಅನುದೇಶ ದಸ್ತಾವೇಜು (ಇನ್‌ಸ್ಟುಮೆಂಟ್‌ ಆಫ್‌ ಇನ್‌ಸ್ಟಕ್ಷನ್‌); + (೧೨) ಸಂಯುಕ್ತ ರಾಜ್ಯದವ್ಯವಹಾರಗಳ ಬಗ್ಗೆ ಗವರ್ನರ್‌-ಜನರಲ್‌ರು ತಮ್ಮ ವಿವೇಚನೆಯಲ್ಲಿ ಮಾಡಬಹುದಾದ ವಿಷಯಗಳು . + ಅವುಗಳ ಬಗ್ಗೆ ತಾವು ಮಾಹಿತಿ ಪಡೆದುಕೊಳ್ಳುವುದಕ್ಕಾಗಿ ಅವಶ್ಯವಾದ ನಿಯಮಗಳನ್ನು ಮಾಡುವುದರಮೇಲೆ ಸೆಕ್ರೆಟರಿ ಆಫ್‌ ಸ್ಟೇಟ್‌ರವರ ಉಸ್ತುವಾರಿ. +ಎರಡನೆಯ ಷೆಡ್ಯೂಲ್‌ ಸಂವಿಧಾನಾತ್ಮಕ ನಿಷೇಧಗಳ ಅತ್ಯಂತ ವಿಶಾಲ ಸಂಗ್ರಹವೇ ಆಗಿದೆ. +ನಾನು ಅವುಗಳಲ್ಲಿ ಕೆಲವನ್ನು ಮಾತ್ರ ಕೊಟ್ಟಿದ್ದೇವೆ. +ಸಂವಿಧಾನದಲ್ಲಿ ಬದಲಾವಣೆ ಮಾಡುವ ಸಂಸತ್ತಿನ ಅಧಿಕಾರ ಎಷ್ಟು ಸೀಮಿತವಾಗಿದೆ ಎಂಬುದನ್ನು ತೋರಿಸಲು ಇವು ಸಾಕಾಗುತ್ತವೆ. +ಸಂಸತ್ತಿನ ಅಧಿಕಾರ ಏಕೆ ಸೀಮಿತವಾಗಿದೆ ? +ಇದನ್ನು ಅರ್ಥ ಮಾಡಿಕೊಳ್ಳಲು ಸಂಸತ್ತಿನ ಅಧಿಕಾರದ ಮೇಲಿರುವ ನಿರ್ದಿಷ್ಟ ಇತಿಮಿತಿಗಳನ್ನು ಗಮನಿಸುವುದು ಅವಶ್ಯ. +ಕಾನೂನಿನ ಪ್ರಕಾರಕಾನೂನು ಮಾಡುವ ಸಂಸತ್ತಿನ ಅಧಿಕಾರ ದೊರೆಯ ಆಧಿಪತ್ಯದಲ್ಲಿರುವ ದೇಶಗಳಿಗೆ ಮಾತ್ರ ಅನ್ವಯವಾಗುತ್ತದೆ. +ಭಾರತದ ಸಂಸ್ಥಾನಗಳು ಬ್ರಿಟನ್‌ ದೊರೆಯ ಆಧಿಪತ್ಯಕ್ಕೊಳಪಟ್ಟರುವ ಭಾಗಗಳಾಗಿರಲಿಲ್ಲ . +ಅವುಗಳಲ್ಲಿ ಯಾವುವೂ ಸಂಸತ್ತಿನ ಶಾಸಕಾಂಗ ಅಧಿಕಾರಕ್ಕೊಳಪಟ್ಟಿರಲಿಲ್ಲ. +ಭಾರತ ಸರಕಾರ ಕಾಯ್ದೆಯು ಸಂಸ್ಥಾನಗಳ ಈ ಸ್ಥಾನಮಾನದಲ್ಲಿ ಯಾವ ಬದಲಾವಣೆಯನ್ನೂ ಮಾಡಿಲ್ಲ. +ಸಂಯುಕ್ತ ರಾಜ್ಯವಿದ್ದಾಗ್ಯೂ ರಾಜ್ಯಗಳು ವಿದೇಶೀ ಪ್ರದೇಶಗಳಾಗಿಯೇ ಹಾಗೂ ಮೊದಲಿದ್ದಂತೆಯೇ ಉಳಿಯುವುವು. +ಇದರ ವಿವಿಧ ಘಟಕಗಳು ಪರಸ್ಪರ ವಿದೇಶೀ ರಾಜ್ಯಗಳಾಗಿರುವುದು ಒಕ್ಕೂಟ ವ್ಯವಸ್ಥೆಯ ಅತ್ಯಂತ ಅಸಾಧಾರಣ ಲಕ್ಷಣವಾಗಿದೆ. +ಕಾಯ್ದೆಯಲ್ಲಿ ರಾಜ್ಯಗಳ ಮೇಲೆ ದೊರೆಯ ಆಧಿಪತ್ಯವಿಲ್ಲದಿರುವಂತೆ ಮಾಡಿರುವುದರಿಂದ ಅವುಗಳಿಗಾಗಿ ಕಾನೂನು ರೂಢಿಸುವ ಅಧಿಕಾರ ಸಂಸತ್ತಿಗೆ ಇರುವುದಿಲ್ಲ. +ಸಂಪತ್ತು ಸೇರ್ಪಡೆಯ ದಸ್ತಾವೇಜಿನಿಂದ ರಾಜ್ಯಗಳ ಮೇಲೆ ಅಧಿಕಾರ ಪಡೆಯುತ್ತದೆ. +ಹೀಗಿರುವಾಗ, ಅದರ ಅಧಿಕಾರ ರಾಜ್ಯಗಳು ತಮ್ಮ ಸೇರ್ಪಡೆಯ ದಸ್ತಾವೇಜಿನ ಮೂಲಕ ವರ್ಗಾಯಿಸಲಾದ ಅಧಿಕಾರಕ್ಕೆ ಮಾತ್ರ ಸೀಮಿತವಾಗುತ್ತದೆ. +ಪ್ರೀವೀ ಕೌನ್ಸಿಲಿನ ಮಾತಿನಲ್ಲೇ ಹೇಳುವುದಾದರೆ, ನೀರಿನ ಸೆಲೆ ತನ್ನ ಉಗಮ ಸ್ಥಾನಕ್ಕಿಂತ ಎತ್ತರಕ್ಕೆ ಹೇಗೆ ಹೋಗಲಾರದೋ ಹಾಗೆ ಸಂಸತ್ತು ರಾಜ್ಯಗಳು ತಮ್ಮ ಸೇರ್ಪಡೆಯ ದಸ್ತಾವೇಜುಗಳ ಮೂಲಕ ಕೊಡಮಾಡಿದ ಅಧಿಕಾರಗಳಿಗಿಂತ ಹೆಚ್ಚಿನ ಅಧಿಕಾರಗಳನ್ನು ರಾಜ್ಯಗಳ ಮೇಲೆ ಹೊಂದಲಾರದು. +ಸಂವಿಧಾನ ತಿದ್ದುಪಡಿ ಮಾಡುವ ಸಂಸತ್ತಿನ ಅಧಿಕಾರ ಏಕೆ ಸೀಮಿತವಾಗಿದೆ ಎಂದು ಇದರಿಂದ ಅರ್ಥವಾಗುತ್ತದೆ. +ಸಂಸತ್ತಿಗಿರುವ ಬದಲಾವಣೆಯ ಅಧಿಕಾರ ಸೇರ್ಪಡೆಯ ದಸ್ತಾವೇಜಿನಿಂದ ಸೀಮಿತಗೊಂಡಿದೆ ಎಂಬುದು ಮತ್ತು ಯಾವುದೇ ಹೆಚ್ಚಿನ ಅಧಿಕಾರ ಚಲಾವಣೆಗೆ ರಾಜರುಗಳ ಪೂರ್ವಭಾವಿ ಸಮ್ಮತಿ ಅಗತ್ಯ ಎಂಬುದು ಇದುವರೆಗೆ ಮಾಡಲಾದ ವಿಶ್ಲೇಷಣೆಯಿಂದ ವ್ಯಕ್ತವಾಗುತ್ತದೆ. +ಕಾಯ್ದೆಯ ನಿಬಂಧನೆಗಳ ಕಾನೂನಾತ್ಮಕ ಪರಿಣಾಮದ ರೂಪವಾಗಿ ಇದು ಆಘಾತಕರವೇನಲ್ಲ. +ಆದರೆ ಯಾವುದೇ ಬದಲಾವಣೆ ಮಾಡುವ ಅಧಿಕಾರ ಹೊಂದಿರದ ವಿಷಯಗಳಲ್ಲಿ ರಕ್ಷಣೆ ಮತ್ತು ವಿದೇಶ ವ್ಯವಹಾರಗಳಂತಹ ವಿಷಯಗಳಿದ್ದು ಅವುಗಳನ್ನು ಆರಕ್ಷಿತ ವಿಷಯಗಳಿಂದ ವರ್ಗಾಯಿಸಲಾದ ವಿಷಯಗಳೆಂದು ಬದಲಾವಣೆ ಮಾಡುವ ಅಧಿಕಾರ ಅರಸರು ಸಮ್ಮತಿಸಿ ಅಂತಹ ಅಧಿಕಾರವನ್ನು ಸಂಸತ್ತಿಗೆ ನೀಡದ ಹೊರತು ಸಂಸತ್ತಿಗೆ ಇರುವುದಿಲ್ಲ ಎಂಬ ಅಂಶವನ್ನು ನಾವು ಪರಿಗಣಿಸಬೇಕು. +ಆಗ ಒಕ್ಕೂಟ ವ್ಯವಸ್ಥೆಯ ಪರಿಣಾಮ ಎಷ್ಟು ಗಂಭೀರ ಸ್ವರೂಪದ್ಧಾಗಲಿದೆ ಎಂಬುದನ್ನು ಊಹಿಸಲು ನಿಮಗೆ ಸಾಧ್ಯವಾಗುವುದು. +ಒಕ್ಕೂಟದ ಸ್ಥಾಪನೆಯಿಂದ ಅಧಿಕಾರವು ಸಂಸತ್ತಿನ ಕೈಯಿಂದ ತಪ್ಪಿ ಅರಸರ ಕೈಗಳಿಗೆ ಹೋಗುವುದು. +ಈ ಒಕ್ಕೂಟವು ಅರಸರನ್ನು ಭವಿಷ್ಯದ ನಿರ್ಣಾಯಕರನ್ನಾಗಿ ಮಾಡುತ್ತದೆ. +ಅವರ ಸಮ್ಮತಿ ಇಲ್ಲದೆ ಭಾರತವು ರಾಜಕೀಯವಾಗಿ ಮುಂದುವರೆಯಲಾರದು. +ಒಕ್ಕೂಟ ವ್ಯವಸ್ಥೆಯ ಪರಿಣಾಮಗಳನ್ನೂ ಗಮನಿಸಬೇಕು. +ನಾನು ಅವುಗಳಲ್ಲಿ ಕೇವಲ ಒಂದನ್ನು ಮಾತ್ರ ಪ್ರಸ್ತಾಪಿಸುತ್ತೇನೆ. +ನಾವು ಸ್ವೀಕರಿಸಿದ್ದೇ ಆದರೆ ಈ ಒಕ್ಕೂಟವೇ ಬ್ರಿಟಿಷ್‌ ಭಾರತೀಯರು ಬದಲಾವಣೆಗಾಗಿ ನಡೆಸಿರುವ ಹೋರಾಟದಲ್ಲಿ ಅವರ ಸ್ಥಾನವನ್ನು ದುರ್ಬಲಗೊಳಿಸುತ್ತದೆ. +ಇಲ್ಲಿಯವರೆಗೆ,ಭಾರತೀಯ ಜನತೆ ಮತ್ತು ಬ್ರಿಟಿಷ್‌ ಸಂಸತ್ತಿನ ನಡುವೆ ನಡೆದ ಹೋರಾಟದಲ್ಲಿ ಸಂಸತ್ತು ಯಾವಾಗಲೂ ದುರ್ಬಲವಾಗಿತ್ತು. +ಅದಕ್ಕೆ ಜನತೆಯ ಹಕ್ಕನ್ನು ವಿರೋಧಿಸಲು ತನ್ನ ಇಚ್ಛೆ ಹೊರತು ಇನ್ನೇನೂ ಇರಲಿಲ್ಲ. + ಸಂಯುಕ್ತ ರಾಜ್ಯದ ನಂತರ ಈ ಪರಿಸ್ಥಿತಿ ತಲೆಕೆಳಗಾಗಲೇಬೇಕು. +ಭಾರತದ ಜನತೆ ದುರ್ಬಲ ಸ್ಥಿತಿಯಲ್ಲಿದ್ದು ಸಂಸತ್ತು ಬಲಶಾಲಿಯಾಗುವುದು. +ಸಂಯುಕ್ತ ರಾಜ್ಯದ ನಂತರ ಸಂಸತ್ತು ಬದಲಾವಣೆಯ ಬೇಡಿಕೆಯನ್ನು ಮನ್ನಿಸಲು ಬಯಸುತ್ತದೆ. +ಆದರೆ ತನ್ನ ಅಧಿಕಾರ ಸೀಮಿತವಾಗಿದ್ದುದರಿಂದ ಭಾರತೀಯರು ಯಾವುದೇ ಬದಲಾವಣೆಯ ಬೇಡಿಕೆಯನ್ನು ಮಂಡಿಸುವ ಮುನ್ನ ಅರಸರ ಸಮ್ಮತಿಯನ್ನು ಪಡೆದುಕೊಳ್ಳಬೇಕಾಗುವುದೆಂದು ಹೇಳುವ ಸ್ಥಿತಿಯಲ್ಲಿರುತ್ತದೆ. +ಸಂಸತ್ತು ಇಂತಹ ನಿಲುವನ್ನು ತೆಗೆದುಕೊಳ್ಳುವುದನ್ನು ಯಾವುದೂ ತಪ್ಪಿಸಲಾರದು. +ಒಕ್ಕೂಟ ವ್ಯವಸ್ಥೆಯನ್ನು ಒಪ್ಪಿಕೊಂಡದ್ದೇ ಆದರೆ ಅದರಲ್ಲಡಗಿರುವ ಅಂಶಗಳಿಗೆ ಉತ್ತರ ನೀಡುವವರು ಯಾರು ? +ಒಕ್ಕೂಟ ವ್ನವಸ್ಥೆಗೆ ಇರುವ ವಿಪತ್ತು :ಭಾರತ ಸಂಸ್ಥಾನಗಳನ್ನು ಏನು ಮಾಡಬೇಕು ? +ಈ ಪ್ರಶ್ನೆಯನ್ನು ಪದೇ ಪದೇ ಕೇಳಲಾಗುತ್ತಿದೆ. +ಗಣರಾಜ್ಯದಲ್ಲಿ ನಂಬಿಕೆಯುಳ್ಳ ಕೆಲವರು ಅವುಗಳನ್ನು ಸಂಪೂರ್ಣವಾಗಿ ತೊಡೆದು ಹಾಕಬೇಕೆಂದು ಬಯಸುತ್ತಾರೆ. +ಸರಕಾರದ ಸ್ಟರೂಪಗಳಿಗೆ ಮಹತ್ವ ಕೊಡದವರು ಈ ಅಭಿಪ್ರಾಯವನ್ನು ತಿರಸ್ಕರಿಸುತ್ತಾರೆ. +ಆದರೆ ಅವರೂ ಸಹ ಯಾವುದು ಚೆನ್ನಾಗಿ ಕೆಲಸ ಮಾಡುವುದೋ ಅದೇ ಶ್ರೇಷ್ಠ ಎಂಬುದನ್ನು ಒಪ್ಪಿಕೊಳ್ಳಲೇಬೇಕು. +ಭಾರತದ ಸಂಸ್ಥಾನಗಳು ಚೆನ್ನಾಗಿ ಕೆಲಸ ಮಾಡಬಲ್ಲವೆಂದು ಹೇಳಬಹುದೇ? +ಈ ಪ್ರಶ್ನೆಗೆ ಯಾರಾದರೂ ಹೌದೆಂದು, ಅದರಲ್ಲಿಯೂ ಎಲ್ಲಾ ರಾಜ್ಯಗಳ ಬಗ್ಗೆ, ಹೇಳುವವರು ಇರುವರೇ ಎಂಬುದು ನನಗೆ ತಿಳಿಯದು. +ಸಂಸ್ಥಾನಗಳ ಆಡಳಿತವೆಂದರೆ ಅವ್ಯವಸ್ಥೆ ಮತ್ತು ದುರಾಡಳಿತಕ್ಕೆ ಇನ್ನೊಂದು ಹೆಸರಾಗಿದೆ. +ಅತಿ ಕೆಲವೇ ರಾಜ್ಯಗಳು ಈ ಆಪಾದನೆಗೆ ಹೊರತಾಗಿರಬಹುದು. +ಸಂಸ್ಥಾನಗಳಲ್ಲಿ ಇಂತಹ ಅವ್ಯವಸ್ಥೆ ಮತ್ತು ದುರಾಡಳಿತಗಳೇಕೆ ಇರಬೇಕೆಂದು ಅನೇಕರು ಕೇಳುತ್ತಲೇ ಇದ್ದಾರೆ. +ಇದು ವೈಯಕ್ತಿಕ ಆಳ್ವಿಕೆಯ ಪರಿಣಾಮ ಎಂಬುದು ಸರ್ವ ಸಾಮಾನ್ಯ ಉತ್ತರವಾಗಿದೆ. +ಈ ವೈಯಕ್ತಿಕ ಆಳ್ವಿಕೆಯ ಬದಲು ಜನಪ್ರಿಯ ಸರಕಾರವನ್ನು ಸ್ಥಾಪಿಸಬೇಕೆಂದು ಎಲ್ಲೆಡೆ ಒತ್ತಾಯಿಸಲಾಗುತ್ತಿದೆ. +ಈ ಬೇಡಿಕೆಯ ಪರಿಣಾಮದ ಬಗ್ಗೆ ನನಗೆ ಅನುಮಾನವಿದೆ. +ಅನೇಕ ರಾಜ್ಯಗಳಲ್ಲಿ ಜನಪ್ರಿಯ ಸರಕಾರದ ಸ್ಥಾಪನೆ ಅಲ್ಲಿಯ ಪ್ರಜೆಗಳ ಹೀಡೆಗಳಿಗೆ ಪರಿಹಾರವಾಗಲಾರದೆಂದು ನನಗನಿಸುತ್ತದೆ. +ಏಕೆಂದರೆ ಈ ತೊಂದರೆಗಳು ಎಷ್ಟರಮಟ್ಟಿಗೆ ಅರಸರ ದುರಾಡಳಿತದಿಂದ ಉದ್ಭವಿಸುವವೋ ಅಷ್ಟೇ ಸಂಪನ್ಮೂಲಗಳ ಅಭಾವದಿಂದಲೂ ಉಂಟಾಗುತ್ತವೆ. +ಭಾರತದ ಸಂಸ್ಥಾನಗಳ ಸಂಪನ್ಮೂಲಗಳು ಎಷ್ಟು ವಿರಳವಾಗಿವೆ ಎಂಬುದರ ಬಗ್ಗೆ ಅನೇಕರಿಗೆ ಕಲ್ಪನೆ ಇರಲಿಕ್ಕಿಲ್ಲ. +ಇಲ್ಲಿ ಕೆಲವು ನಿಜ ಸಂಗತಿಗಳನ್ನು ಕೊಡುವೆ. +ಒಟ್ಟು ೬೨೭ ಸಂಸ್ಥಾನಗಳಲ್ಲಿ ಹತ್ತು ಸಂಸ್ಥಾನಗಳು ಮಾತ್ರ ೧ ಕೋಟಿಗಿಂತ ಹೆಚ್ಚಿನ ವಾರ್ಷಿಕ ಆದಾಯ ಹೊಂದಿರುತ್ತವೆ. +ಈ ಹತ್ತು ಸಂಸ್ಥಾನಗಳಲ್ಲಿ,ಐದು ರಾಜ್ಯಗಳು ಒಂದು ಕೋಟಿಗಿಂತ ಸ್ವಲ್ಪ ಹೆಚ್ಚು ಆದಾಯ ಹೊಂದಿದ್ದು, ಮೂರು ರಾಜ್ಯಗಳ ಆದಾಯ ೨ ಮತ್ತು ೨ ೧/೪ ಕೋಟಿಗಳ ನಡುವೆ ಇದೆ. +ಒಂದು ಸಂಸ್ಥಾನ ೩ ೧/೪ ಕೋಟಿಗಿಂತ ಸ್ವಲ್ಪ ಹೆಚ್ಚು ಆದಾಯ ಹೊಂದಿದ್ದರೆ ಒಂದೇ ಸಂಸ್ಥಾನ ಮಾತ್ರ ೮ ಕೋಟಿಗಳಿಗಿಂತ ಸ್ವಲ್ಪ ಹೆಚ್ಚುಆದಾಯ ಹೊಂದಿದೆ. +ಸುಮಾರು ಹನ್ನೆರಡು ಸಂಸ್ಥಾನಗಳ ಆದಾಯ ೫ಂ ರಿಂದ ೨೫ ಲಕ್ಷಗಳ ನಡುವೆ ಇದೆ. +ಮೂವತ್ತು ಸಂಸ್ಥಾನಗಳು ೨೫ ಲಕ್ಷಗಳಿಂದ ೧ಂ ಲಕ್ಷಗಳ ನಡುವಣ ಆದಾಯ ಹೊಂದಿದೆ. +ಉಳಿದ ೫೬೬ ಸಂಸ್ಥಾನಗಳು ೧ಂ ಲಕ್ಷಗಳಿಗಿಂತಲೂ ಕಡಿಮೆಯ ಆದಾಯ ಹೊಂದಿವೆ. +೧ಂ ಲಕ್ಷಕ್ಕಿಂತ ಕಡಿಮೆ ಆದಾಯವಿರುವ ಸಂಸ್ಥಾನಗಳು ಎಷ್ಟು ಚಿಕ್ಕವಾಗಿವೆ ಎಂಬುದರ ಕಲ್ಪನೆ ಇದರಿಂದ ಆಗುವುದಿಲ್ಲ. +ಆದ್ದರಿಂದ ಕೆಲವು ನಿದರ್ಶನಗಳನ್ನು ಕೊಡಬೇಕಾಗುತ್ತದೆ. +ಈ ೫೬೬ ಸಂಸ್ಥಾನಗಳಲ್ಲಿ ೫ಂಂ ರೂಪಾಯಿ ವಾರ್ಷಿಕ ಆದಾಯ ಮತ್ತು ೨ಂ೬ ಜನರುಳ್ಳ ಒಂದು ಸಂಸ್ಥಾನವಿದೆ. +೧೬೫ ರೂಪಾಯಿ ಆದಾಯ ಮತ್ತು ೨೩೯ ಜನರುಳ್ಳ ಮತ್ತೊಂದು ೧೨೮ ರೂಪಾಯಿ ಆದಾಯ . +೧೪೭ ಜನಸಂಖ್ಯೆಯುಳ್ಳ ಮತ್ತು ೮ಂ ರೂಪಾಯಿ ಆದಾಯ ಮತ್ತು ೨೭ ಜನರುಳ್ಳ ಇತರ ಸಂಸ್ಥಾನಗಳೂ ಇವೆ. + ೮ಂ ರೂಪಾಯಿ ಆದಾಯ ಮತ್ತು ೨೭ ಜನರುಳ್ಳ ಸಂಸ್ಥಾನವೂ ಸೇರಿದಂತೆ ಇವುಗಳಲ್ಲಿ ಪ್ರತಿಯೊಂದು ಸಂಸ್ಥಾನವೂ ಸ್ವಾಯತ್ತ ರಾಜ್ಯವಾಗಿದೆ. +ಪ್ರತಿಯೊಂದು ಸಂಸ್ಥಾನವೂ ತನ್ನ ಪ್ರಜೆಗಳಿಗೆ ಶಾಂತಿ ಸುವ್ಯವಸ್ಥೆಗೆ ಸಂಬಂಧಿಸಿದ ಕಂದಾಯ,ಕಾರ್ಯಾಂಗ ಮತ್ತು ನ್ಯಾಯಾಂಗ ಸೇವೆಗಳನ್ನು ಮತ್ತು ಸಾರ್ವಜನಿಕ ಕಲ್ಯಾಣಕ್ಕೆ ಸಂಬಂಧಿಸಿದ ಶಿಕ್ಷಣ,ಸ್ವಚ್ಛತೆ, ರಸ್ತೆ ಮುಂತಾದ ಸೇವೆಗಳನ್ನು ಒದಗಿಸುವ ವಿಶೇಷ ಜವಾಬ್ದಾರಿ ಹೊಂದಿರುವುವೆಂಬುದು ಈ ಸ್ವಾಯತ್ತತೆಯ ಅರ್ಥ ೧೨ ಕೋಟಿ ರೂಪಾಯಿ ಆದಾಯವಿರುವ ಮುಂಬೈಯಲ್ಲಿರುವ ನಮಗೆ ನಾಗರಿಕ ಆಡಳಿತ ನಡೆಸಲು ಕಷ್ಟವಾಗುತ್ತಿದೆ. +ಇದಕ್ಕೆ ಸರಿಸಮಾನ ಆದಾಯವಿರುವ ಇತರ ಪ್ರಾಂತ್ಯಗಳೂ ಇದೇ ರೀತಿ ಕಷ್ಟ ಅನುಭವಿಸುತ್ತಿವೆ. +ಪರಿಸ್ಥಿತಿ ಹೀಗಿರುವಾಗ ನೂರಾರು ರೂಪಾಯಿ ಮತ್ತು ಸಾವಿರಾರು ಜನಸಂಖ್ಯೆಯುಳ್ಳ ಈ ಚಿಕ್ಕ ಪುಟ್ಟ ಸಂಸ್ಥಾನಗಳು ಒಬ್ಬ ನಾಗರಿಕ ತನ್ನ ಸರಕಾರದಿಂದ ನಿರೀಕ್ಷಿಸುವ ಸಾಮಾನ್ಯ ಸೇವೆಗಳನ್ನು ಪೂರೈಸಲು ಹೇಗೆ ಸಾಧ್ಯ ? +ಎಷ್ಟೇ ಸದ್ಭಾವನೆಯ ಮತ್ತು ಎಷ್ಟೇ ಆದರ್ಶ ರಾಜನಿದ್ದರೂ ಕಾರ್ಯಭಾರ ದಯನೀಯವಾಗಿದೆ. +ಇದಕ್ಕಿರುವ ಒಂದೇ ಪರಿಹಾರವೆಂದರೆ ಭಾರತೀಯ ರಾಜ್ಯಗಳು ಆಕ್ರಮಿಸಿರುವ ಇಡೀ ಪ್ರದೇಶದ ಪುನರ್‌ ಸಂಘಟನೆಯಾಗಿದೆ. +ಒಂದು ನಿರ್ದಿಷ್ಟ ಗಾತ್ರದ ಕ್ಷೇತ್ರ ಮತ್ತು ಮೊತ್ತದ ಆದಾಯವನ್ನು ಗೊತ್ತುಪಡಿಸಿ ಅದನ್ನು ಒಂದು ಹೊಸ ಪ್ರಾಂತ್ಯವನ್ನಾಗಿ ರಚಿಸಿ ಆ ಪ್ರದೇಶವನ್ನು ಈಗ ಆಳುವ ಅರಸರಿಗೆ ಪಿಂಚಣಿ ನೀಡುವುದು ಒಂದು ಸೂಕ್ತ ಪರಿಹಾರವಾಗಿದೆ. +ತಮ್ಮ ಕ್ಷೇತ್ರ ವ್ಯಾಪ್ತಿ ಮತ್ತು ಆದಾಯದ ಆಧಾರದ ಮೇಲೆ ಮತ್ತು ಸಂಪನ್ಮೂಲಗಳ ದೃಷ್ಟಿಯಿಂದ ಯಾವ ರಾಜ್ಯಗಳು ಒಳ್ಳೆಯ ಮಟ್ಟದ ಆಡಳಿತವನ್ನು ನೀಡಲು ಶಕ್ತವಾಗಿವೆಯೋ ಅಂತಹ ರಾಜ್ಯಗಳನ್ನು ಮಾತ್ರ ಪ್ರತ್ಯೇಕವಾಗಿ ಉಳಿಸಿಕೊಳ್ಳಬಹುದು. +ಈ ಒರೆಗೆ ಹತ್ತದ ರಾಜ್ಯಗಳು ಹೋಗಲೇಬೇಕು. +ಇನ್ನಾವ ಮಾರ್ಗವೂ ಇಲ್ಲ. +ಇದು ಏನು ಮಾಡಬಹುದಾಗಿದೆ ಎಂಬುದು ಮಾತ್ರವಲ್ಲ. +ಹೀಗೆ ಮಾಡುವುದು ನಮ್ಮ ಕರ್ತವ್ಯ. +ಅಷ್ಟೇ ಏಕೆ ಪವಿತ್ರ ಕರ್ತವ್ಯವಾಗಿದೆಎಂದು ನಾನು ಹೇಳುತ್ತೇನೆ. +ಕೆಲವರು ಈ ರಾಜರುಗಳು ತಮ್ಮ ಪ್ರದೇಶದಲ್ಲಿ ಆಳುವ ಅನುವಂಶಿಕ ಹಕ್ಕನ್ನು ಹೊಂದಿರುವ ಬಗ್ಗೆ ಯೋಜಿಸುವರೆಂಬುದನ್ನು ನಾನು ಬಲ್ಲೆ. +ಆದರೆ ಅರಸನ ಹಕ್ಕು ಹೆಚ್ಚು ಮುಖ್ಯವೋ ಅಥವಾ ಪ್ರಜೆಗಳ ಕಲ್ಯಾಣವೋ ಎಂದು ನಾನು ಕೇಳುತ್ತೇನೆ. +ರಾಜರುಗಳ ಹಕ್ಕುಗಳು ಜನಗಳ ಕಲ್ಕಾಣಕ್ಕಿಂತ ಹೆಚ್ಚು ಮಹತ್ವದ್ದೆಂದು ರಾಜ್ಯಗಳ ಅತ್ಯಂತ ಹಿತಚಿಂತಕ ಸ್ನೇಹಿತರೂ ಹೇಳಲಾರರೆಂಬುದು ನನ್ನ ಖಚಿತ ಅಭಿಪ್ರಾಯ. +ಇವೆರಡರಲ್ಲಿ ಸಂಘರ್ಷ ಉಂಟಾದರೆ ಇದರಲ್ಲಿ ಯಾವುದು ಸೋಲಬೇಕು? +ಇಲ್ಲಿಯೂ ಸಹ ರಾಜ್ಯಗಳ ನಿಕಟ ಸ್ನೇಹಿತರೂ ಕೂಡ ರಾಜರುಗಳ ಹಕ್ಕುಗಳನ್ನು ಉಳಿಸಲು ಪ್ರಜೆಗಳ ಕಲ್ಯಾಣವನ್ನು ಬಲಿಕೊಡಬೇಕೆಂದು ಹೇಳಲಾರರು ಎಂದು ನನಗನಿಸುತ್ತದೆ. +ಭಾರತದ ಸಂಸ್ಥಾನಗಳ ಪುನಾಸಂಘಟನೆಯ ಪ್ರಶ್ನೆ ರಾಜಕೀಯ ಪ್ರಶ್ನೆಯಲ್ಲ. +ನನ್ನ ಅಭಿಪ್ರಾಯದಲ್ಲಿ ಅದು ಕೇವಲ ಆಡಳಿತಾತ್ಮಕ ಪ್ರಶ್ನೆ ಅದು ಅನಿವಾರ್ಯ ಪ್ರಶ್ನೆಯೂ ಆಗಿದೆ. +ಏಕೆಂದರೆ, ಅದನ್ನು ಎದುರಿಸದೇ ಇರುವುದು ರಾಜ್ಯಗಳ ಪ್ರಜೆಗಳನ್ನು ದಂಡಿಸಿದಂತೆ, ಸದಾ ದುಃಖ ಮತ್ತು ಅಭದ್ರತೆಯಿಂದ ತೊಳಲಾಡುತ್ತಿರುವ ಇಂತಹ ಲಕ್ಷಾಂತರ ಜನರಿದ್ದಾರೆ. +ನಾನು ಸೂಚಿಸುತ್ತಿರುವುದು ಕ್ರಾಂತಿಕಾರಿ ವಿಧಾನವೇನಲ್ಲ. +ಒಬ್ಬ ಅರಸನಿಗೆ ಪಿಂಚಣಿ ನೀಡಿ ಅವನ ಪ್ರದೇಶವನ್ನು ಸ್ವಾಧೀನಪಡಿಸಿಕೊಳ್ಳುವುದು ಕಾನೂನು ಸಮ್ಮತ ಮಾರ್ಗವಾಗಿದ್ದು ಅದು ಎಲ್ಲರಿಗೂ ಗೊತ್ತಿರುವಂತೆ ಸಾರ್ವಜನಿಕ ಉದ್ದೇಶಗಳಿಗಾಗಿ ಖಾಸಗಿ ಹಕ್ಕುಗಳು ಮತ್ತು ಆಸ್ತಿಗಳನ್ನು ಸ್ವಾಧೀನಪಡಿಸಿಕೊಳ್ಳಲು ಅವಕಾಶ ಮಾಡುವ ಭೂಸ್ವಾಧೀನ ಕಾಯ್ದೆಯನ್ವಯ ಸಮ್ಮತವಾದದ್ದು. +ದುರದೃಷ್ಟವೆಂದರೆ ಇದುವರೆಗೆ ಭಾರತೀಯ ಸಂಸ್ಥಾನಗಳ ಪ್ರಶ್ನೆಯನ್ನು ಈ ದೃಷ್ಟಿಯಿಂದ ಪರಿಗಣಿಸಲಾಗಿಲ್ಲ. +ನಾನು ತಮ್ಮ ಮುಂದೆ ಇಡಬೇಕೆಂದಿರುವ ಬಹು ಮುಖ್ಯ ಪ್ರಶ್ನೆ ಎಂದರೆ, “ಒಕ್ಕೂಟದ ಸ್ಥಾಪನೆಯ ನಂತರ ನಿಮಗೆ ಈ ಪ್ರಶ್ನೆಯನ್ನು ಎದುರಿಸಲು ಅವಕಾಶವಿರುವುದೇ? ಅವಕಾಶವಿರುವುದಿಲ್ಲ. +ಏಕೆ ಇರುವುದಿಲ್ಲ ಎಂದು ನೀವು ಕೇಳಬಹುದು. +ನಾನು ಹೇಗೆ ಈ ತೀರ್ಮಾನಕ್ಕೆ ಬಂದಿದ್ದೇನೆ ಎಂದೂ ನೀವು ಕೇಳಬಹುದು. +ಸಂಯುಕ್ತ ರಾಜ್ಯಕ್ಕೆ ಪ್ರವೇಶ ಪಡೆಯುವ ವಿಷಯದಲ್ಲಿ ಪ್ರಾಂತ್ಯಗಳು ಮತ್ತು ರಾಜ್ಯಗಳು ವಿಭಿನ್ನ ಆಧಾರ ಹೊಂದಿವೆ ಎಂದು ಈಗಾಗಲೇ ತಿಳಿಸಿದ್ದೇನೆ. +ಪ್ರಾಂತ್ಯಗಳಿಗೆ ಬೇರೆ ಮಾರ್ಗವೇ ಇಲ್ಲ. +ಅವು ಒಕ್ಕೂಟದ ಘಟಕಗಳಾಗಿರಲು ಒಪ್ಪಲೇಬೇಕು. +ಆದರೆ ಸಂಸ್ಥಾನಗಳಿಗೆ ಆಯ್ಕೆಯ ಅವಕಾಶವಿದೆ. +ಅವು ಒಕ್ಕೂಟವನ್ನು ಸೇರಬಹುದು ಅಥವಾ ನಿರಾಕರಿಸಬಹುದು. +ಇದು ಪ್ರಾಂತ್ಯಗಳ ಮತ್ತು ಸಂಸ್ಥಾನಗಳ ದೃಷ್ಟಿಯಂತೆ ಇರುವ ಸ್ಥಾನಮಾನ. +ಆದರೆ ಒಕ್ಕೂಟದ ದೃಷ್ಟಿಯಲ್ಲಿ ಅದರ ಸ್ಥಾನ ಏನು? +ಒಕ್ಕೂಟವು ಯಾವುದೇ ಸಂಸ್ಥಾನದ ಪ್ರವೇಶದ ವಿಷಯದಲ್ಲಿ ಬೇರೆ ಮಾರ್ಗವಿದೆಯೇ? +ಸಂಯುಕ್ತ ರಾಜ್ಯವು ಯಾವುದೇ ಸಂಸ್ಥಾನದ ಪ್ರವೇಶವನ್ನು ನಿರಾಕರಿಸಬಲ್ಲುದೆ? +ಇಲ್ಲ, ಹಾಗೆ ನಿರಾಕರಿಸುವ ಹಕ್ಕು ಒಕ್ಕೂಟಕ್ಕಿಲ್ಲ. +ಸಂಸ್ಥಾನಕ್ಕೆ ಒಕ್ಕೂಟ ಸೇರುವ ಹಕ್ಕಿದೆ. +ಆದರೆ ಒಕ್ಕೂಟ ಪ್ರವೇಶವನ್ನು ನಿರಾಕರಿಸುವ ಹಕ್ಕು, ಕೊನೆಯ ಪಕ್ಷ ಮೊದಲಿನ ೨ಂ ವರ್ಷಗಳವರೆಗೆ, ಇರುವುದಿಲ್ಲ. +ಇರುವ ಸ್ಥಿತಿ ಇದು. +ಇನ್ನು ಒಕ್ಕೂಟ ಸೇರುವ ಸಂಸ್ಥಾನದ ಹಕ್ಕಿನ ಅರ್ಥವೇನು? +ನನ್ನ ಅಭಿಪ್ರಾಯದಲ್ಲಿ ಪ್ರವೇಶ ಪಡೆಯುವ ಹಕ್ಕಿಗೆ ಮಾನ್ಯತೆ ನೀಡುವುದೆಂದರೆ ಸಂಸ್ಥಾನದ ಸಾರ್ವಭೌಮತ್ವ ಸ್ಥಾನಕ್ಕೆ ಮನ್ನಣೆ ನೀಡಿದಂತೆ. +ಅವುಗಳ ಸಾರ್ವಭೌಮತ್ವವನ್ನು ಮಾನ್ಯ ಮಾಡುವುದೆಂದರೆ ರಾಜ್ಯದ ಅವಿನಾಶತ್ವವನ್ನು ಒಪ್ಪಿಕೊಂಡಂತೆ. + ಎಂದರೆ ಅದರ ಪ್ರಾದೇಶಿಕ ಸಮಗ್ರತೆಯನ್ನುಳಿಕೊಳ್ಳುವ ಹಕ್ಕನ್ನು ಮಾನ್ಯ ಮಾಡಿ ಅದಕ್ಕೆ ಆಂತರಿಕ ಆಡಳಿತ ಅಧಿಕಾರದ ಭರವಸೆ ನೀಡಿದಂತೆ. +ಇದು ಕೇವಲ ೨೭ ಜನಸಂಖ್ಯೆ ಮತ್ತು ೮ಂ ರೂಪಾಯಿಗಳ ಆದಾಯವುಳ್ಳ ಸಂಸ್ಥಾನಕ್ಕೂ ಅನ್ವಯಿಸುತ್ತದೆ. +ಒಂದು ಸಂಸ್ಥಾನಕ್ಕೆ ಒಕ್ಕೂಟದಲ್ಲಿ ಪ್ರವೇಶ ನೀಡುವುದರ ಒಳಾರ್ಥ ಹೀಗಿರುವುದರಿಂದ,ಒಕ್ಕೂಟದ ಸ್ಥಾಪನೆಯಾದ ಮೇಲೆ ಭಾರತೀಯ ಸಂಸ್ಥಾನದ ಪುನರ್‌ಘಟನೆ ಸಾಧ್ಯವಿಲ್ಲವೆಂದೂ ಮತ್ತು ಈ ಸಂಸ್ಥಾನಗಳ ಪ್ರಜೆಗಳು ಸದಾಕಾಲ ಅವ್ಯವಸ್ಥೆ ಮತ್ತು ದುರಾಡಳಿತಕ್ಕೊಳಗಾಗುವರೆಂದು ನಾನು ಸಂಪೂರ್ಣ ಆಧಾರದಿಂದ ಸಮರ್ಥಿಸಬಲ್ಲೆ. +ಈ ವಿಷಯದಲ್ಲಿ ಬ್ರಿಟಿಷ್‌ ಭಾರತವು ಈಗ ಏನಾದರೂ ಮಾಡಲು ಸಾಧ್ಯವೇ? +ಅದು ಏನನ್ನೂ ಮಾಡಲು ಸಾಧ್ಯವಿಲ್ಲವೆಂದು ನನಗನಿಸುತ್ತದೆ. + ಬ್ರಿಟಿಷ್‌ ಭಾರತವೇನಾದರೂ ತನಗಾಗಿ ಜವಾಬ್ದಾರಿ ಸರಕಾರವನ್ನು ಪಡೆದುಕೊಂಡಿದ್ದೇ ಆಗಿದ್ದರೆ, ಅದು ಯಾವ ಸಂಸ್ಥಾನವನ್ನು ಯಾವ ಷರತ್ತುಗಳ ಮೇಲೆ ಸೇರಿಸಿಕೊಳ್ಳಬಹುದೆಂಬುದನ್ನು ನಿರ್ಧರಿಸುವ ಸ್ಥಿತಿಯಲ್ಲಿರುತ್ತಿತ್ತು. +ಅದು ಒಕ್ಕೂಟದ ಪ್ರವೇಶಕ್ಕೆ ಸಂಸ್ಥಾನಗಳ ಪ್ರದೇಶಗಳನ್ನು ಪುನರ್‌ಘಟಿಸುವ ಪೂರ್ವಭಾವಿ ಕರಾರನ್ನು ಹಾಕಬಹುದಾಗಿತ್ತು. +ದುರದೃಷ್ಟವೆಂದರೆ ಬ್ರಿಟಿಷ್‌ ಭಾರತವು ಜವಾಬ್ದಾರಿ ಸರಕಾರವನ್ನು ಹೊಂದಿಲ್ಲ. +ಕೇಂದ್ರದಲ್ಲಿ ಜವಾಬ್ದಾರಿ ಸರಕಾರ ಹೊಂದುವ ಅದರ ಹಕ್ಕನ್ನು ನಿಜವಾಗಿಯೂ ನಿರಾಕರಿಸಲಾಗಿದ್ದು ಅದು ಸಂಸ್ಥಾನಗಳ ಪ್ರವೇಶವನ್ನೇ ಅವಲಂಬಿಸುವಂತೆ ಮಾಡಲಾಗಿದೆ. +“ರಾಜ್ಯಗಳಿಲ್ಲದೇ ಜವಾಬ್ದಾರಿ ಇಲ್ಲ” ಎಂಬುದು ಬ್ರಿಟಿಷ್‌ ಭಾರತದ ಗತಿಯಾಗಿದೆ. +ತನ್ನ ಸ್ಥಾನವೇ ಹೀಗಿರುವಾಗ ಬ್ರಿಟಿಷ್‌ ಭಾರತವು ರಾಜ್ಯಗಳೊಡನೆ ಯಾವುದೇ ಒಪ್ಪಂದ ಮಾಡಿಕೊಳ್ಳುವ ಸ್ಥಿತಿಯಲ್ಲಿಲ್ಲ. +ತಾನು ಜವಾಬ್ದಾರಿ ಸರಕಾರವನ್ನು ಹೊಂದಿದ್ದರೆ ಇದು ಸಾಧ್ಯವಿತ್ತು. +ಇದೇ ಕಾರಣಕ್ಕಾಗಿಯೇ ನಾನು ಯಾವಾಗಲೂ ಬ್ರಿಟಿಷ್‌ ಭಾರತವು ಮೊದಲು ಸಂಯುಕ್ತ ರಾಜ್ಯವನ್ನು ಕೇಳಬೇಕು . +ಜವಾಬ್ದಾರಿಯನ್ನು ಬ್ರಿಟಿಷ್‌ ಭಾರತಕ್ಕೆ ಮಾತ್ರ ಸೀಮಿತಗೊಳಿಸಬೇಕೆಂದು ಹೇಳುತ್ತಿದ್ದೇನೆ. +ಇದನ್ನು ಪಡೆದುಕೊಂಡಾಗಲೇ ಸ್ವಾತಂತ್ರ್ಯ ಮತ್ತು ಎಲ್ಲಾ ರೀತಿಯಲ್ಲಿಯೂ ಒಳ್ಳೆಯ ಸರಕಾರದ ಆಧಾರದ ಮೇಲೆ ರಚಿತವಾದ ಅಖಿಲ ಭಾರತ ಸಂಯುಕ್ತ ರಾಜ್ಯದ ದಾರಿ ಸುಗಮವಾಗುವುದು ಸಾಧ್ಯ. +ಸಂಯುಕ್ತ ರಾಜ್ಯ ಪ್ರಸ್ತುತ ರೀತಿಯಲ್ಲಿ ಅಸ್ತಿತ್ವಕ್ಕೆ ಬಂದರೆ ಇಂತಹ ಸಾಧ್ಯತೆ ಕೈ ತಪ್ಪಿಹೋಗುತ್ತದೆ. +ಒಕ್ಕೂಟ ವ್ಯವಸ್ಥೆಯ ಕೆಲವು ವಿಕೃತ ಅಂಶಗಳನ್ನು ನಿಮ್ಮ ಗಮನಕ್ಕೆ ಈಗಾಗಲೇ ತಂದಿರುವೆ. +ನಾನು ನಿಮ್ಮ ಗಮನಕ್ಕೆ ಈಗ ತರುವ ಅಂಶ ವಿಕೃತಿಗಿಂತ ಹೆಚ್ಚಿನದಾಗಿದೆ. +ಅದೇ ಈ ಒಕ್ಕೂಟ ವಿಪತ್ತು. +ಸಂಸ್ಥಾನಗಳ ಪ್ರಜೆಗಳ ವಿಷಯದಲ್ಲಿ ಅದು ಅವರ ವಿಧಿ ಲಿಖಿತ. +ಅದು ಒಮ್ಮೆ ಆಚರಣೆಗೆ ಬಂದಿತೆಂದರೆ ಅದರಿಂದ ಅವರಿಗೆ ಮುಕ್ತಿಯೇ ಇಲ್ಲ. +ಸಂಸ್ಥಾನ ಸಮಸ್ಯೆಯನ್ನು ಪರಮಾಧಿಕಾರ ಅಥವಾ ಸಾರ್ವಭೌಮಾಧಿಕಾರವು ತಾನು ಬಯಸಿದಲ್ಲಿ ನಾನು ಹೇಳಿದ ಅಥವಾ ಜನತೆಯ ಕಲ್ಕ್ಯಾಣಕ್ಕನುಗುಣವಾದ ಯಾವುದೇ ವಿಧಾನದ ಪ್ರಕಾರ ಬಗೆಹರಿಸಬಹುದಾಗಿದೆ ಎಂದು ನನ್ನ ನಂಬುಗೆ. +ಈ ಪರಮಾಧಿಕಾರವು ಹಿಂದೂ ಧರ್ಮಶಾಸ್ತ್ರದ ತ್ರಿಮೂರ್ತಿಗಳಿದ್ದಂತೆ. +ಅದು ರಾಜ್ಯಗಳನ್ನು ಸೃಷ್ಟಿಸಿರುವುದರಿಂದ ಬ್ರಹ್ಮ ಅವುಗಳನ್ನು ರಕ್ಷಿಸುವುದರಿಂದ ವಿಷ್ಣು, ಅದು ಅವುಗಳನ್ನು ನಾಶಮಾಡಬಲ್ಲದಾದುದರಿಂದ ಶಿವ, ಪರಮಾಧಿಕಾರವು ಸಂಸ್ಥಾನಗಳ ಸಂಬಂಧದಲ್ಲಿ ಬೇರೆ ಬೇರೆ ಕಾಲದಲ್ಲಿ ಅದು ಈ ಎಲ್ಲಾ ಪಾತ್ರಗಳನ್ನು ಆಡಿದೆ. +ಒಂದು ಕಾಲದಲ್ಲಿ ಅದು ಶಿವನ ಪಾತ್ರ ಆಡಿತ್ತು . +ಈಗ ಅದು ವಿಷ್ಣುವಿನ ಪಾತ್ರವನ್ನಾಡುತ್ತಿರುವುದು ಜನತೆಯ ಹಿತದ ದೃಷ್ಟಿಯಿಂದ ಅತ್ಯಂತ ಕ್ರೂರ ಕೃತಿಯಾಗಿದೆ. +ಬ್ರಿಟಿಷ್‌ ಭಾರತವು ಇದರಲ್ಲಿ ಪಾಲ್ಗೊಳ್ಳಬೇಕೇ? +ಇದು ನಿಮ್ಮ ಪರಿಶೀಲನೆಗೆ ಬಿಟ್ಟ ವಿಷಯ. + ರಾಜ್ಯಗಳಿಲ್ಲದ ಒಕ್ಕೂಟ ವ್ಯವಸ್ಥೆನ:ಒಕ್ಕೂಟದ ಪರ ವಾದವನ್ನು ಇನ್ನೊಂದು ದೃಷ್ಟಿಕೋನದಿಂದಲೂ ಮಂಡಿಸಲಾಗಿದೆ. +ಆ ವಾದವನ್ನು ಪರಿಶೀಲಿಸಲಿದ್ದೇನೆ. +ಸಂವಿಧಾನದಲ್ಲಿ ಸ್ವಾಯತ್ತ ಪ್ರಾಂತ್ಯಗಳನ್ನು ರಚಿಸಲಾಗಿದೆ ಎಂದು ವಾದಿಸಲಾಗಿದೆ. +ಪ್ರಾಂತ್ಯಗಳ ಸ್ವಾಯತ್ತತೆಯ ಅರ್ಥ ಸ್ವಾತಂತ್ರ್ಯ, ಎಂದರೆ ಬ್ರಿಟಿಷ್‌ ಭಾರತದ ಒಕ್ಕಟ್ಟಿನ ಭಂಗ ಆದ್ದರಿಂದ ಇದನ್ನು ತಪ್ಪಿಸಲೇಬೇಕು. +ಪ್ರಾಂತ್ಯಗಳನ್ನು ಒಂದುಗೂಡಿಸಿ ಅವುಗಳು ಕಳೆದ ಒಂದು ಶತಮಾನದ ಬ್ರಿಟಿಷ್‌ ಆಡಳಿತದ ಫಲವಾಗಿ ಹೊಂದಿರುವ ಒಕ್ಕಟ್ಟು ಮತ್ತು ಏಕರೂಪತೆಯನ್ನು ವಿವರಗಳಲ್ಲಿ ಅಲ್ಲದಿದ್ದರೂಮೂಲಭೂತ ಅಂಶಗಳಲ್ಲಿಯಾದರೂ ಉಳಿಸಿಕೊಂಡು ಹೋಗುವಂತಹ ಯಾವುದಾದರೂ ಕಟ್ಟುಪಾಡುಗಳನ್ನು ಒದಗಿಸುವುದು ಅತ್ಯಾವಶ್ಯಕ. +ಸ್ವಾಯತ್ತ ಪ್ರಾಂತ್ಯಗಳ ರಚನೆಯಿಂದ ಕೇಂದ್ರ ಸರಕಾರದ ಸೃಷ್ಟಿ ಅವಶ್ಯವೆಂದಾದರೆ ಈ ವಾದ ಅರ್ಥಪೂರ್ಣವೆನಿಸುವುದು. +ಈ ಸೂಚನೆ ಸಾರ್ವತ್ರಿಕ ಸಮ್ಮತಿ ಪಡೆಯುವುದೆಂದು ನನಗೆ ಖಚಿತವೆನಿಸಿದೆ. +ಜರುಗಿದ ಎಲ್ಲಾ ದುಂಡುಮೇಜಿನ ಪರಿಷತ್ತುಗಳಲ್ಲಿ ಭಾಗವಹಿಸಿದ ಪ್ರತಿನಿಧಿಗಳಲ್ಲಿ ದಿವಂಗತ ಸರ್‌ಮಹಮದ್‌ ಇಖ್‌ಬಾಲರೊಬ್ಬರೇ ಕೇಂದ್ರ ಸರಕಾರದ ಸ್ಥಾಪನೆಯನ್ನು ವಿರೋಧಿಸಿದ್ದರು. +ಜಾತಿಪಂಥಗಳ ಭೇದ ಭಾವನೆಯಿಲ್ಲದೆ ಪ್ರತಿಯೊಬ್ಬ ಪ್ರತಿನಿಧಿ ಅವರ ಅಭಿಪ್ರಾಯದ ವಿರುದ್ಧವಾಗಿದ್ದರು. +ಇವರೆಲ್ಲರೂ ಸ್ವಾಯತ್ತ ಪ್ರಾಂತ್ಯಗಳ ರಚನೆಯಿಂದಾಗಿ ಕೇಂದ್ರ ಸರಕಾರದ ಸ್ಥಾಪನೆಯ ಅವಶ್ಯಕತೆ ಸ್ಪಷ್ಟವಿದೆ. +ಇಲ್ಲದ ಪಕ್ಷದಲ್ಲಿ ಆರಾಜಕತೆ ಸ್ವಾಯತ್ತತೆಯ ಪರಿಣಾಮವಾಗುತ್ತದೆ ಎಂದು ವಾದಿಸಿದ್ದರು. +ಆದರೆ ಈ ವಾದ ನ್ಯಾಯ ಸಮ್ಮತವಾದ ವ್ಯಾಪ್ತಿಯನ್ನು ಮೀರಿದೆ. + ಅದು ಅಖಿಲ ಭಾರತ ಮಟ್ಟದಲ್ಲಿ ಕೇಂದ್ರ ಸರಕಾರದ ಸ್ಥಾಪನೆಯನ್ನು ಸಮರ್ಥಿಸಿಕೊಳ್ಳುವ ಉದ್ದೇಶ ಹೊಂದಿದೆ. +ಬ್ರಿಟಿಷ್‌ಭಾರತಕ್ಕಾಗಿ ಕೇಂದ್ರ ಸರಕಾರದ ಸ್ಥಾಪನೆಯ ವಾದವನ್ನು ಇಡೀ ಭಾರತ ದೇಶಕ್ಕಾಗಿ ಕೇಂದ್ರ ಸರಕಾರ ಸ್ಥಾಪನೆಯನ್ನು ಪುಷ್ಟೀಕರಿಸಲು ಬಳಸಲಾಗಿದೆ. +ಬ್ರಿಟಿಷ್‌ ಭಾರತದಲ್ಲಿ ಸ್ವಾಯತ್ತ ಪ್ರಾಂತ್ಯಗಳ ರಚನೆ:ಭಾರತೀಯ ಸಂಸ್ಥಾನಗಳೂ ಸೇರಿದಂತೆ ಇಡೀ ಭಾರತಕ್ಕಾಗಿ ಕೇಂದ್ರ ಸರಕಾರ ರಚನೆಗೆ ಸಮರ್ಥನೆ ನೀಡಬಲ್ಲದೇ ಎಂಬುದು ನೀವು ಈಗ ಪರಿಶೀಲಿಸಬೇಕಾದ ಪ್ರಶ್ನೆಯಾಗಿದೆ. +ಸ್ವಾಯತ್ತ ಪ್ರಾಂತ್ಯಗಳ ರಚನೆಯಿಂದಾಗಿ ಇಡೀ ಭಾರತಕ್ಕಾಗಿ ಕೇಂದ್ರ ಸರಕಾರದ ರಚನೆಯಾಗಬೇಕಾಗಿಲ್ಲ ಎಂಬುದು ನನ್ನವಾದ. +ಬ್ರಿಟಿಷ್‌ ಭಾರತದಲ್ಲಿ ಸ್ವಾಯತ್ತ ಪ್ರಾಂತ್ಯಗಳ ಸ್ಥಾಪನೆಯಿಂದ ಖಚಿತವಾಗುವ ಎರಡು ಸಂಗತಿಗಳೆಂದರೆ:(೧) ಬ್ರಿಟಿಷ್‌ ಭಾರತಕ್ಕಾಗಿ ಒಂದು ಕೇಂದ್ರ ಸರಕಾರವಿರಬೇಕು. +ಮತ್ತು (೨) ಆ ಕೇಂದ್ರ ಸರಕಾರ ಒಕ್ಕೂಟ ಪದ್ಧತಿಯದಾಗಿರಬೇಕೇ ಹೊರತು ಏಕಾತ್ಮಕ ಸ್ವರೂಪದ್ದಲ್ಲ. + ಒಕ್ಕೂಟದ ಮೂಲತತ್ವವೆಂದರೆ ಕೇಂದ್ರ ಸರಕಾರ ಮತ್ತು ಘಟಕಗಳ ನಡುವೆ ಕಾನೂನು ಬದ್ಧವಾಗಿ ಶಾಸಕಾಂಗ ಮತ್ತು ಕಾರ್ಯಾಂಗ ಅಧಿಕಾರಗಳ ವಿಭಜನೆ. +ಕೇಂದ್ರ ಮತ್ತು ಘಟಕಗಳ ಅಧಿಕಾರಗಳನ್ನು ವ್ಯಾಖ್ಯಾನಿಸಿ ಅವುಗಳ ಎಲ್ಲೆಗಳನ್ನು ನಿರ್ಧರಿಸಿ ಸ್ಪಷ್ಟಪಡಿಸಿದಾಗ ಒಂದು ಸರಕಾರಕ್ಕೆ ಇನ್ನೊಂದು ಸರಕಾರದ ಕಾರ್ಯಕ್ಷೇತ್ರವನ್ನು ಅತಿಕ್ರಮಿಸುವ ಹಕ್ಕು ಇರುವುದಿಲ್ಲ. +ಪ್ರಾಂತ್ಯಗಳ ಸ್ವಾಯತ್ತತೆ ಎಂದರೆ ಅವುಗಳ ಅಧಿಕಾರಗಳು ಸ್ಪಷ್ಟವಾಗಿದ್ದು ಅಧಿಕಾರಗಳನ್ನು ಅವುಗಳಿಗೆ ನೀಡುವುದು . +ನಿಜವಾದ ಪ್ರಾಂತೀಯ ಸ್ವಾಯತ್ತತೆ ಇರಬೇಕಾದರೆ ಕೇಂದ್ರಸರಕಾರದ ಅಧಿಕಾರಗಳಿಗೂ ಮಿತಿ ಇರಬೇಕು. +ಇಲ್ಲದೇ ಹೋದರೆ ಅದು ಪ್ರಾಂತ್ಯಗಳ ಕ್ಷೇತ್ರವನ್ನುಅತಿಕ್ರಮಿಸುವ ಪರಿಸ್ಥಿತಿಯಲ್ಲಿರುತ್ತದೆ. +ಸರಳ ರೀತಿಯಲ್ಲಿ ಹೇಳುವುದಾದರೆ ಕಾನೂನು ಬದ್ಧವಾಗಿ ಅಧಿಕಾರಗಳನ್ನು ಸ್ಪಷ್ಟವಾಗಿ ನಿರ್ಣಯಿಸಿ ಇತಿಮಿತಿಗಳನ್ನು ಹೇರುವುದೇ ಸ್ವಾಯತ್ತತೆಯ ಅರ್ಥ. +ಮತ್ತು ಎಲ್ಲಿ ಯಾವುದೇ ಎರಡು ರಾಜಕೀಯ ಸಂಸ್ಥೆಗಳ ನಡುವೆ ಅಧಿಕಾರವನ್ನು ಸ್ಪಷ್ಟವಾಗಿ ಗೊತ್ತುಪಡಿಸಲಾಗಿದೆಯೋ ಅದು ಒಕ್ಕೂಟವಾಗಿರಲಿಕ್ಕೇ ಬೇಕು. +ಪ್ರಾಂತೀಯ ಸ್ವಾಯತ್ತತೆಯಿಂದಾಗಿ ಬ್ರಿಟಷ್‌ ಭಾರತದಲ್ಲಿ ಕೇಂದ್ರ ಸರಕಾರ ಸ್ಥಾಪನೆ ಅನಿವಾರ್ಯ ಮತ್ತು ಅದು ಒಕ್ಕೂಟದ ಸ್ವರೂಪದ್ದಾಗಿರಬೇಕೆಂದು ನಾನು ಏಕೆ ಹೇಳಿದನೆಂಬುದು ನಿಮಗೆ ಈಗ ಅರ್ಥವಾಗುತ್ತದೆ. +ಇದು ಅಖಿಲ ಭಾರತ ಸಂಯುಕ್ತ ರಾಜ್ಯಕ್ಕೆ ಸಮರ್ಥನೆ ನೀಡುವುದಿಲ್ಲ. +ಇದರಲ್ಲಿ ಸಂಸ್ಥಾನಗಳನ್ನು ಏಕೆ ಸೇರಿಸಬೇಕೆಂಬ ಪ್ರಶ್ನೆಗೆ ಇನ್ನೂ ಉತ್ತರ ನೀಡಬೇಕಾಗಿದೆ. +ಯಾರು ಬ್ರಿಟಿಷ್‌ ಭಾರತ ಸಂಯುಕ್ತ ರಾಜ್ಯದಿಂದ ಭಿನ್ನವಾದ ಈ ಅಖಿಲ ಭಾರತ ಸಂಯುಕ್ತ ರಾಜ್ಯವನ್ನು ಸಮರ್ಥಿಸುವರೋ ಅವರು ಈ ಪ್ರಶ್ನೆಗೆ ಉತ್ತರ ಕೊಡಬೇಕು. +ನಾನು ಹೇಳಿದಂತೆ ಈಗ ಬೇಕಾಗಿರುವುದು ಬ್ರಿಟಿಷ್‌ ಭಾರತಕ್ಕಾಗಿ ಒಕ್ಕೂಟ ಸ್ವರೂಪದ ಕೇಂದ್ರಸರಕಾರ ಈ ಸಂಗತಿಯನ್ನು ಸಂವಿಧಾನದಲ್ಲಿ ಮಾನ್ಯ ಮಾಡಲಾಗಿದೆ. +ಭಾರತ ಸರಕಾರ ಕಾಯ್ದೆ, ೧೯೩೫ ರಲ್ಲಿ ಎರಡು ವಿಭಿನ್ನ ರೀತಿಯ ಒಕ್ಕೂಟ ರಾಜ್ಯಗಳನ್ನು ಸ್ಥಾಪಿಸಲಾಗಿದೆ. +ಎಂಬ ಅಂಶವನ್ನು ಅನೇಕರು ಗಮನಿಸಿಲ್ಲ. + ಒಂದು ಬ್ರಿಟಷ್‌ ಭಾರತದ ಪ್ರಾಂತ್ಯಗಳನ್ನೊಳಗೊಂಡದ್ದಾದರೆ ಇನ್ನೊಂದು ಬ್ರಿಟಿಷ್‌ ಭಾರತದ ಪ್ರಾಂತ್ಯಗಳು ಮತ್ತು ಭಾರತೀಯ ರಾಜ್ಯಗಳನ್ನೊಳಗೊಂಡ ಸಂಯುಕ್ತ ರಾಜ್ಯ. +ಇಂತಹ ಮಹತ್ವದ ಈ ಸಂಗತಿಯನ್ನು ಅನೇಕರು ಕಾಣದೇ ಇರುವುದು ಆಶ್ಚರ್ಯಕರ. +ಭಾರತ ಸರಕಾರ ಕಾಯ್ದೆ ಎರಡು ಸಂಯುಕ್ತ ರಾಜ್ಯಗಳನ್ನು ಸ್ಥಾಪಿಸಿದೆ ಎಂಬುದು ನಿರ್ವಿವಾದ. +ಈ ಬಗ್ಗೆ ಯಾರಿಗಾದರೂ ಸಂಶಯವಿದ್ದಲ್ಲಿ ಅದು III ಮತ್ತು XIII ನೆಯ ಭಾಗಗಳನ್ನು ಒಟ್ಟಿಗೆ. +ಮತ್ತು II ಮತ್ತು III ನೆಯ ಭಾಗಗಳನ್ನು ಕೂಡಿಯೇ ಓದಬೇಕು. +II ಮತ್ತು IIIನೆಯ ಭಾಗಗಳಲ್ಲಿ ಅಖಿಲ ಭಾರತ ಒಕ್ಕೂಟ ರಾಜ್ಯವಿರುವುದು ಕಂಡುಬರುವುದಲ್ಲದೆ ಅದರಲ್ಲಿ ಒಕ್ಕೂಟದ ಸಂವಿಧಾನವನ್ನು ಕೊಡಲಾಗಿದೆ. +III ಮತ್ತು XIII ನೆಯ ಭಾಗಗಳಲ್ಲಿ ರಾಜ್ಯಗಳನ್ನು ಹೊರತುಪಡಿಸಿದ ಬ್ರಿಟಿಷ್‌ ಭಾರತದ ಪ್ರಾಂತ್ಯಗಳ ಸಂಯುಕ್ತ ರಾಜ್ಯವಿದ್ದು ಆ ಸಂಯುಕ್ತ ರಾಜ್ಯದ ಸಂವಿಧಾನವನ್ನು ಕೊಡಲಾಗಿದೆ. +XIII ನೆಯ ಭಾಗದಲ್ಲಿ ಬದಲಾವಣೆಯ ಕಾಲದ ವಿಧಿಗಳೆಂದು ಕರೆಯಲಾದ ವಿಧಿಗಳಿಗೆ ಸಂಬಂಧಿಸಿದ್ದಾಗ್ಯೂ ಬ್ರಿಟಿಷ್‌ ಭಾರತದ ಯೋಜನೆ ಭಾರತದ ಒಕ್ಕೂಟಕ್ಕಿಂತ ರಾಜ್ಯಕ್ಕಿಂತ ಕಡಿಮೆಯಾದದ್ದೇನೂ ಅಲ್ಲ. +ಏಕೆಂದರೆ ಅದು ನಿಗದಿತ ಅವಧಿಗಾಗಿರಲೀ ಅಥವಾ ಸದಾಕಾಲಕ್ಕಾಗಿರಲೀಕಾಯ್ದೆ ಕಾಯ್ದೆಯೇ. +ಕಾಯ್ದೆಯ ಪ್ರಕಾರ ಬಿಟಿಷ್‌ ಭಾರತೀಯ ಪ್ರಾಂತ್ಯಗಳಿಗೆ ಒಂದು ಒಕ್ಕೂಟ ರಾಜ್ಯ ಮತ್ತು ಇನ್ನೊಂದು ಅಖಿಲ ಭಾರತ ಒಕ್ಕೂಟವನ್ನು ಸಹ ಸ್ಥಾಪಿಸಲಾಗಿದೆ ಎಂಬುದನ್ನು ಅಲ್ಲಗಳೆಯಲಾಗದು. +ಈ ಎರಡುಒಕ್ಕೂಟ ರಾಜ್ಯಗಳಲ್ಲಿರುವ ವ್ಯತ್ಯಾಸವೇನು ? + ಸಂಯುಕ್ತ ರಾಜ್ಯದ ಶಾಸಕಾಂಗದ ಅಧಿಕಾರಗಳಲ್ಲಿ ಏನಾದರೂ ವ್ಯತ್ಯಾಸವಿದೆಯೇ ? +ಯಾವ ವ್ಯತ್ಯಾಸವೂ ಇಲ್ಲವೆಂದೇ ನನ್ನ ಉತ್ತರ. +ಅಸ್ತಿತ್ವದಲ್ಲಿರುವ ಸಂಯುಕ್ತ ರಾಜ್ಯ ಬ್ರಿಟಿಷ್‌ ಭಾರತ ಸಂಯುಕ್ತ ರಾಜ್ಯವಾಗಿರಲೀ ಅಥವಾ ಅಖಿಲ ಭಾರತ ಸಂಯುಕ್ತ ರಾಜ್ಯವಾಗಿರಲೀ ಅಥವಾ ಅಖಿಲ ಭಾರತ ಸಂಯುಕ್ತ ರಾಜ್ಯವಾಗಿರಲೀ ಸಂಯುಕ್ತ ರಾಜ್ಯದ ಶಾಸಕಾಂಗ ಪಟ್ಟಿ ಒಂದೇ ಆಗಿರುತ್ತದೆ. +ಅದೇ ರೀತಿ ಸಮಾನಾಧಿಕಾರ ಪಟ್ಟಿಯೂ ಒಂದೇ ಇರುತ್ತದೆ. +ಹಣಕಾಸಿನ ಅಧಿಕಾರಗಳಲ್ಲೇನಾದರೂ ವ್ಯತ್ಯಾಸವಿದೆಯೇ ? +ಇದಕ್ಕೂ ಇಲ್ಲವೆಂದೇ ಉತ್ತರ. +ಅದು ಅಖಿಲ ಭಾರತ ಒಕ್ಕೂಟ ವ್ಯವಸ್ಥೆಯಾಗಿರಲಿ ಅಥವಾ ಬ್ರಿಟಿಷ್‌ ಭಾರತ ಸಂಯುಕ್ತರಾಜ್ಯವಾಗಿರಲಿ ತೆರಿಗೆ ವಿಧಿಸುವ ಅಧಿಕಾರ ಒಂದೇ ಆಗಿರುತ್ತದೆ. +ಒಕ್ಕೂಟದ ನ್ಯಾಯಾಂಗದ ವ್ಯವಸ್ಥೆಯಲ್ಲೇನಾದರೂ ಬದಲಾವಣೆ ಇದೆಯೇ ? +ಅಂತಹ ಯಾವ ಬದಲಾವಣೆಯೂ ಇಲ್ಲ. +ಫೆಡರಲ್‌ ನ್ಯಾಯಾಲಯವು ಅಖಿಲ ಭಾರತ ಒಕ್ಕೂಟ ಎಷ್ಟು ಅವಶ್ಯವೋ ಬ್ರಿಟಿಷ್‌ ಭಾರತ ಸಂಯುಕ್ತ ರಾಜ್ಯಕ್ಕೂ ಅಷ್ಟೇ ಅವಶ್ಯವಾಗಿದೆ. +ಈ ಎರಡೂ ಒಕ್ಕೂಟ ವ್ಯವಸ್ಥೆಗಳು ಹೇಗೆ ಭಿನ್ನವಾಗಿವೆ ? +ಇವೆರಡರಲ್ಲಿ ವ್ಯತ್ಯಾಸವಿರುವುದು. +ಈ ವ್ಯತ್ಯಾಸವನ್ನು ಕಂಡುಕೊಳ್ಳಲು ನೀವು ೩೧೩ ನೆಯ ಒಂದೇ ವಿಭಾಗವನ್ನು ೮ ನೆಯ ವಿಭಾಗದೊಂದಿಗೆ ಹೋಲಿಸಬೇಕು. +ಅದು ಬ್ರಿಟಿಷ್‌ ಭಾರತ ಒಕ್ಕೂಟವಾದರೆ ಅದರ ಕಾರ್ಯಾಂಗಾಧಿಕಾರ ಗವರ್ನರ್‌-ಜನರಲ್‌-ಇನ್‌-ಕೌನ್ಸಿಲ್‌ನಲ್ಲಿರುತ್ತದೆ. +ಮತ್ತು ಅದು ಅಖಿಲ ಭಾರತ ಒಕ್ಕೂಟವಾದರೆ ವರ್ಗಾಯಿಸಲಾದ ವಿಷಯಗಳಲ್ಲಿ ಅದರ ಕಾರ್ಯಾಂಗಾಧಿಕಾರವು ಶಾಸಕಾಂಗಕ್ಕೆ ಜವಾಬ್ದಾರರಾದ ಮಂತ್ರಿಗಳ ಸಲಹೆಯ ಮೇಲೆ ಕೆಲಸ ಮಾಡುವ ಗವರ್ರನ್‌-ಜನರಲ್‌ರ ಕೈಯಲ್ಲಿರುತ್ತದೆ ಎಂಬ ಅಂಶ ಈ ಹೋಲಿಕೆಯಿಂದ ತಿಳಿಯುತ್ತದೆ . +ಅಂದರೆ, ಒಂದು ಬ್ರಿಟಿಷ್‌ ಭಾರತ ಒಕ್ಕೂಟ ಮಾತ್ರವಾಗಿದ್ದು ಅಖಿಲ ಭಾರತ ಒಕ್ಕೂಟ ರಾಜ್ಯವಾಗಿರದಿದ್ದರೆ ಕೇಂದ್ರದಲ್ಲಿ ಜವಾಬ್ದಾರಿ ಇರುವುದಿಲ್ಲ. +ಬ್ರಿಟಿಷ್‌ ಭಾರತಕ್ಕೆ ಜವಾಬ್ದಾರಿಯನ್ನು ಕೊಡಬೇಕಾದರೆ ಸಂಸ್ಥಾನಗಳ ಪ್ರವೇಶ ಪೂರ್ವಭಾವಿ ಕರಾರು ಎಂಬುದು ಇದರ ಅರ್ಥ. +ಆದ್ದರಿಂದ ಸಂಸ್ಥಾನಗಳ ಪ್ರವೇಶ ಏಕೆ ಅಷ್ಟೊಂದು ಅವಶ್ಯ ಎಂದು ನೀವು ಕೇಳುವಿರಿ. +ಎಲ್ಲಾ ಸಂಯುಕ್ತ ರಾಜ್ಯಗಳೂ ತಮ್ಮ ಘಟಕಗಳ ಸುರಕ್ಷತೆ ಮತ್ತು ಏಕತೆಗೆ ಬಾಹ್ಯಶಕ್ತಿಯಿಂದ ಅಪಾಯ ಒದಗಿಬಂದಾಗ ಅಸ್ತಿತ್ವಕ್ಕೆ ಬಂದಿದೆ. +ಉತ್ತರ ಅಮೆರಿಕದ ರಾಜ್ಯಗಳು ಬ್ರಿಟಿಷ್‌ ಸಾಮ್ರಾಜ್ಯಷಾಹಿಯ ಅಧಿಪತ್ಯಕ್ಕೊಳಗಾಗುವ ಭಯದಿಂದ ತಪ್ಪಿಸಿಕೊಳ್ಳಲು ಸಂಯುಕ್ತ ರಾಜ್ಯ ವ್ಯವಸ್ಥೆ ಮಾಡಿಕೊಂಡವು. +ಕೆನಡಾದ ಪ್ರಾಂತ್ಯಗಳು ಅಮೆರಿಕ ಸಂಯುಕ್ತ ಸಂಸ್ಥಾನಗಳ ದಾಳಿ ಮತ್ತು ವಿಲೀನದ ಭಯದಿಂದ ತಪ್ಪಿಸಿಕೊಳ್ಳಲು ಸಂಯುಕ್ತ ರಾಜ್ಯ ವ್ಯವಸ್ಥೆ ಮಾಡಿಕೊಂಡವು. +ಜಪಾನಿನ ಅಪಾಯದಿಂದ ಆಸ್ಟ್ರೇಲಿಯಾದ ವಸಾಹತುಗಳು ಒಂದಾದವು. +ಭಾರತ ಸಂಯುಕ್ತ ರಾಜ್ಯವು ಇಂತಹ ಯಾವುದೇ ಪರಿಸ್ಥಿತಿಯ ಫಲವಾಗಿ ಆಗಿಲ್ಲ ಎಂಬುದು ಸುಸ್ಪಷ್ಟ ಬ್ರಿಟಿಷ್‌ ಭಾರತ ಮತ್ತು ಭಾರತೀಯ ಸಂಸ್ಥಾನಗಳ ಮೇಲೆ ಎರಗಲು ಹೊಂಚುಹಾಕುತ್ತಿರುವ ಯಾವುದೇ ಹೊಸ ದಾಳಿಕೋರರೂ ಭಾರತ ಮೇರೆಯಲ್ಲಿಲ್ಲ. +ಬ್ರಿಟಿಷ್‌ ಭಾರತ ಮತ್ತು ಭಾರತೀಯ ಸಂಸ್ಥಾನಗಳ ನಡುವೆ ಶಾಂತಿಯನ್ನುಂಟು ಮಾಡಲೂ ಅದರ ಅವಶ್ಯಕತೆಯಿಲ್ಲ. +ಬ್ರಿಟಿಷ್‌ ಭಾರತವು ಪ್ರಭುತ್ವದ ಸಾರ್ವಭೌಮತ್ನದಡಿಯಲ್ಲಿದ್ದರೇನು? +ಶಾಂತಿ ಮತ್ತು ಯುದ್ಧವೂ ಸೇರಿದ ವಿದೇಶ ಸಂಬಂಧಗಳ ವಿಷಯದಲ್ಲಿ ಎರಡೂ ವಿಭಾಗಗಳು ಒಂದೇ ಅಧಿಕಾರ ಎಂದರೆ ಪ್ರಭುತ್ವದ ಅಧಿಕಾರಕ್ಕೊಳಪಟ್ಟವೆ. +ಎರಡೂ ಶಾಂಂತಿಯುತವಾಗಿರುವುದಕ್ಕೆ ಇದೇ ಕಾರಣ. +ಇದೇ ಕಾರಣದಿಂದಲೇ ಅವು ಯದ್ಧಕ್ಕೆ ಹೋಗಲಾರವು ಮತ್ತು ಹೋಗುವುದೂ ಇಲ್ಲ. +ಬಾಹ್ಯ ಅಕ್ರಮಣ ಇಲ್ಲವೆ ಆಂತರಿಕ ಶಾಂತಿ ಈ ಅಖಿಲಭಾರತ ಒಕ್ಕೂಟದ ತೋರಿಕೆಯ ಉದ್ದೇಶವಾಗಲಾರದು. +ಅಂದ ಮೇಲೆ ಈ ಒಕ್ಕೂಟದ ಉದ್ದೇಶವಾದರೂ ಏನು? + ಇದನ್ನು ಸೇರಲು ರಾಜ್ಯಗಳನ್ನು ಏಕೆ ಆಹ್ವಾನಿಸಲಾಗಿದೆ ? + ಕೇಂದ್ರದ ಜವಾಬ್ದಾರಿಗಾಗಿ ಅವುಗಳ ಪ್ರವೇಶವನ್ನು ಪೂರ್ವಭಾವಿ ಕರಾರನ್ನಾಗಿ ಏಕೆ ಮಾಡಲಾಗಿದೆ ? +ನಿರ್ದಾಕ್ಷಿಣ್ಯವಾಗಿ ಹೇಳಬೇಕೆಂದರೆ, ಸಾರ್ವಭೌಮ ಹಿತಾಸಕ್ತಿಗಳನ್ನು ರಕ್ಷಿಸಲು ಮತ್ತು ಬಿಟಿಷ್‌ ಭಾರತದಲ್ಲಿ ಏಳುತ್ತಿರುವ ಪ್ರಜಾಪ್ರಭುತ್ಚದ ಅಲೆಯನ್ನು ಹತ್ತಿಕ್ಕುವುದೇ ಇದರ ಉದ್ದೇಶವಾಗಿದೆ. +ಬೇರೆ ಯಾವುದೇ ಕಾರಣವಿದ್ದರೆ ನಾನು ಅದನ್ನು ಪರಿಶೀಲಿಸಲು ಸಿದ್ಧ ಆದರೆ ಬೇರೆ ಯಾವುದೇ ವಿವರಣೆ ಸಾಧ್ಯವಿಲ್ಲ. +ಬ್ರಿಟಿಷ್‌ಸಾಮ್ರಾಜ್ಯಶಾಹಿಯ ಆಸಕ್ತಿಗಳನ್ನು ಪೂರೈಸಿಕೊಳ್ಳಲು ಸಂಯುಕ್ತ ರಾಜ್ಯದಲ್ಲಿ ಅರಸರ ಅವಶ್ಯಕತೆ ಇರುವುದು ಪ್ರಶ್ನಾತೀತ. +ಸಂಸತ್ತಿನಲ್ಲಿ ಭಾರತ ಸರಕಾರ ಮಸೂದೆಯ ಮೇಲೆ ನಡೆದ ಚರ್ಜೆಯ ಸಮಯದಲ್ಲಿ ಭಾರತದ ಸೆಕ್ರೆಟರಿ ಆಫ್‌ ಸ್ಟೇಟ್‌ ಅವರು ಒಪ್ಪಿಕೊಂಡಂತೆ “ಭಾರತದ ಕೇಂದ್ರ ಸರಕಾರದಲ್ಲಿ ಭದ್ರತೆ . +ಸಾಮ್ರಾಜ್ಯಶಾಹಿಯ ಭಾವನೆಗಳ ಪ್ರಬಲ ಶಕ್ತಿಯ ಪ್ರತೀಕರಾದ ರಾಜರುಗಳ ಪ್ರವೇಶವನ್ನು ನಾವೆಲ್ಲರೂ ಸ್ವಾಗತಿಸಬೇಕು”. +ಬ್ರಿಟಿಷ್‌ ಭಾರತದಲ್ಲಿ ಪ್ರಜಾಸತ್ತೆಯನ್ನು ಹತ್ತಿಕ್ಕುವುದೇ ಉದ್ದೇಶವಾಗಿರಲಾರದಾದರೂ ಇದು ಸಂಯುಕ್ತ ರಾಜ್ಯದಲ್ಲಿ ರಾಜರುಗಳ ಪ್ರವೇಶದ ಪರಿಣಾಮವಾಗುವುದೆಂಬುದು ನನಗೆ ಖಚಿತವಾಗಿದೆ. +ಒಕ್ಕೂಟದೊಳಗೆ ಸೇರ್ಪಡೆಗೊಳ್ಳಲು ಎಂತಹ ಬೆಲೆಯನ್ನು ತೆರಲಾಗಿದೆ ? +ಈಗಾಗಲೇ ಹೇಳಿರುವುದನ್ನು ಪುನಃ ಹೇಳಬಯಸುವುದಿಲ್ಲ. +ಪ್ರಾತಿನಿಧ್ಯ, ತೆರಿಗೆ ಆಡಳಿತ, ಕಾನೂನು ಮುಂತಾದ ವಿಷಯಗಳಲ್ಲಿ ಮಾಡಲಾಗಿರುವ ಈಗಾಗಲೇ ಹೇಳಿರುವ ಪಕ್ಷಪಾತಗಳನ್ನು ನೀವು ಜ್ಞಾಪಿಸಿಕೊಂಡಿದ್ದೇ ಆದಲ್ಲಿ, ರಾಜರುಗಳನ್ನು ಸಂಯುಕ್ತ ರಾಜ್ಯದಲ್ಲಿ ಸೇರುವಂತೆ ಪ್ರೇರೇಪಿಸಲು ಬ್ರಿಟಿಷ್‌ ಭಾರತವು ಯಾವ ಲಾಭಗಳನ್ನು ನೀಡಿದೆ. +ಯಾವ ಹಕ್ಕುಗಳನ್ನು ಸಮರ್ಪಿಸಲು ಬ್ರಿಟಿಷ್‌ ಭಾರತವು ಯಾವ ಲಾಭಗಳನ್ನು ನೀಡಿದೆ. + ಯಾವ ಹಕ್ಕುಗಳನ್ನು ಸಮರ್ಪಿಸಿದೆ ಮತ್ತು ಯಾವ ವಿನಾಯಿತಿಗಳನ್ನು ನೀಡಲಾಗಿದೆ ಎಂಬುದು ನಿಮಗೆ ತಿಳಿಯುತ್ತದೆ. +ಇದಕ್ಕೆ ಪ್ರತಿಫಲವಾಗಿ ಬ್ರಿಟಿಷ್‌ ಭಾರತಕ್ಕೆ ಏನು ದೊರಕಿದೆ ? +ಒಕ್ಕೂಟದ ಸಂವಿಧಾನದಲ್ಲಿ ಸಂಪೂರ್ಣ ಜವಾಬ್ದಾರಿ ಸರಕಾರವನ್ನು ನೀಡಿದ್ದೇ ಆಗಿದ್ದರೆ,ಬ್ರಿಟಿಷ್‌ ಭಾರತವು ಸಂಯುಕ್ತ ರಾಜ್ಯದಲ್ಲಿ ರಾಜರ ಸೇರ್ಪಡೆಗಾಗಿ ಅದು ತೆತ್ತ ಬೆಲೆಗೆ ಸ್ವಲ್ಪವಾದರೂ ಪರಿಹಾರ ನೀಡಿದಂತಾಗುತ್ತಿತ್ತು . +ಆದರೆ ಬ್ರಿಟಿಷ್‌ ಭಾರತಕ್ಕೆ ಹೇಳಿಕೊಳ್ಳುವಂತಹ ಜವಾಬ್ದಾರಿ ಲಭ್ಯವಾಗಿಲ್ಲ. +ಬ್ರಿಟಿಷ್‌ ಭಾರತಕ್ಕೆ ದೊರೆತಿರುವುದು ತುಂಡರಿಸಿದ, ವಿಕೃತಗೊಳಿಸಿದ ಮತ್ತು ಷರತ್ತುಗಳು ಹಾಗೂ ನಿರ್ಬಂಧಗಳಿಂದ ಕೂಡಿದ ತೋರಿಕೆಯ ಜವಾಬ್ದಾರಿ ಮಾತ್ರ. +ರಾಜರುಗಳು ಸಂಯುಕ್ತ ರಾಜ್ಯವನ್ನು ಪ್ರವೇಶಿಸಲು ಸುಗಮಗೊಳಿಸಲು ಬ್ರಿಟಿಷ್‌ ಭಾರತವು ಮಾಡಿದ ತ್ಯಾಗಕ್ಕೆ ಕೇಂದ್ರದಲ್ಲಿ ತಕ್ಕ ಜವಾಬ್ದಾರಿಯನ್ನು ಪಡೆದುಕೊಳ್ಳುವುದು ಸಾಧ್ಯವಾಗದಿರುವುದು ಮಾತ್ರವಲ್ಲ, ರಾಜರುಗಳಿಂದ ಸ್ವತಂತ್ರವಾಗಿ ತನ್ನದೇ ಆದ ಹಕ್ಕಿನ ಆಧಾರದ ಮೇಲೆ ಭಾರತ ಡೊಮಿನಿಯನ್‌ ಸ್ಥಾನದ ಬೇಡಿಕೆಯ ಹಕ್ಕನ್ನೂ ಕಳೆದುಕೊಂಡಂತಾಗಿದೆ. +ಈ ಅಖಿಲ ಭಾರತ ಒಕ್ಕೂಟದ ಸಂಂಬಂಧವಾಗಿ ಬ್ರಿಟಿಷ್‌ ಭಾರತಕ್ಕೆ ಎಷ್ಟು ಹಾನಿ ತಟ್ಟುತ್ತದೆ . + ಅದು ಏನನ್ನು ಕಳೆದುಕೊಳ್ಳಲಿದೆ ಎಂಬುದರ ಕಲ್ಪನೆ ಅನೇಕರಿಗೆ ಇಲ್ಲ. + ಈ ಹೊಸ ಸಂವಿಧಾನವು ಬ್ರಿಟಿಷ್‌ಭಾರತದ ಜನತೆಯ ಹೋರಾಟದ ಫಲವಾಗಿದೆ. +ಬ್ರಿಟಿಷ್‌ ಭಾರತದ ಜನತೆಯ ಹೋರಾಟ ಮತ್ತುಯಾತನೆಗಳೇ ಈ ಸಂವಿಧಾನದ ರಚನೆಗೆ ಒತ್ತಾಸೆಗಳಾಗಿದ್ದವು. +ಬ್ರಿಟಿಷ್‌ ಭಾರತದ ಜನತೆ ತಮಗಾಗಿ ಯಾವ ಹಕ್ಕುಗಳಿಗಾಗಿ ಆಗ್ರಹಿಸಿದ್ದರು? +ನಾನು ಈಗಾಗಲೇ ಹೇಳಿರುವಂತೆ, ಬ್ರಿಟಿಷ್‌ ಭಾರತದಲ್ಲಿ ಒಳ್ಳೆಯ ಸರಕಾರ ಅವರ ಮೊದಲನೆಯ ಆಗ್ರಹವಾಗಿತ್ತು. +ಅದರ ನಂತರ ಸ್ವಯಂ ಆಡಳಿತ ಸರಕಾರ, ಎಂದರೆ ಬ್ರಿಟಿಷ್‌ ಭಾರತಕ್ಕೆ ಜವಾಬ್ದಾರಿ ಸರಕಾರ ಅವರ ಇನ್ನೊಂದು ಬೇಡಿಕೆಯಾಗಿತ್ತು. +ಕೊನೆಯದಾಗಿ ಅವರು ಬ್ರಿಟಿಷ್‌ ಡೊಮಿನಿಯನ್‌ ಸ್ಥಾನಕ್ಕಾಗಿ ಆಗ್ರಹಪಡಿಸಿದ್ದರು. +ಬ್ರಿಟಿಷ್‌ ಸಂಸತ್ತು ಈ ಪ್ರತಿಯೊಂದು ಬೇಡಿಕೆಯನ್ನೂ ಮಾನ್ಯ ಮಾಡಿ ಒಪ್ಪಿಕೊಂಡಿತ್ತು. +ಬ್ರಿಟಿಷ್‌ ಸಂಸತ್ತು ೧೯೧೭ ರಲ್ಲಿ ಜವಾಬ್ದಾರಿ ಸರಕಾರ ಸ್ಥಾಪನೆಯ ಗುರಿಯನ್ನು ಒಪ್ಪಿಕೊಂಡಿತ್ತು. +೧೯೨೯ ರಲ್ಲಿ ಇಂಗ್ಲಿಷ್‌ ರಾಷ್ಟ್ರ ಸ್ವತಂತ್ರ ಒಳರಾಷ್ಟ್ರ ಸ್ಥಾನದ ಗುರಿಯನ್ನು ಒಪ್ಪಿಕೊಂಡಿತ್ತು. +ಪ್ರತಿ ಸಾರಿಮಾಡಲಾದ ಬೇಡಿಕೆಯನ್ನು ಅಥವಾ ಆಗ್ರಹವನ್ನು ಬ್ರಿಟಿಷ್‌ ಭಾರತದ ಜನತೆಯ ಹೆಸರಿನಲ್ಲಿಯೇ ಮಾಡಲಾಗಿತ್ತೆಂದು ಈಗ ನಾವು ಒತ್ತುಕೊಟ್ಟು ಹೇಳಬೇಕಾಗಿದೆ. +ಪ್ರತಿ ಸಾರಿಯೂ ಬ್ರಿಟಿಷ್‌ ಭಾರತದ ಜನತೆಯ ಹೆಸರಿನಲ್ಲಿ ಅದನ್ನು ಒಪ್ಪಿಕೊಳ್ಳಲಾಗಿತ್ತು. +ಈಗ ಸಂಯುಕ್ತ ರಾಜ್ಯದ ಪರಿಣಾಮವಾಗಿ ಬ್ರಿಟಷ್‌ಭಾರತದ ಸ್ಥಾನವೇನು ? + ಈ ಯೋಜನೆಯಡಿಯಲ್ಲಿ ರಾಜರುಗಳು ಬರೆದ ವಿನಾ ಬ್ರಿಟಿಷ್‌ ಭಾರತವು ಕೇಂದ್ರದಲ್ಲಿ ಎಂದೂ ಜವಾಬ್ದಾರಿಯನ್ನು ಪಡೆಯಲಾರದು. +ಇದೇ ಅದರ ಪರಿಸ್ಥಿತಿ. +ಇದರಿಂದ ಬ್ರಿಟಿಷ್‌ ಭಾರತವು ತನ್ನದೇ ಆದ ಹಕ್ಕಿನ ಮೇಲೆ ತನ್ನ ಹೆಸರಿನಲ್ಲಿ ಅರಸರಿಂದ ಸ್ಪತಂತ್ರವಾಗಿ ತನಗಾಗಿ ಜವಾಬ್ದಾರಿ ಸರಕಾರಕ್ಕಾಗಿ ಆಗ್ರಹಪಡಿಸುವ ಹಕ್ಕನ್ನು ಕಳೆದುಕೊಂಡಂತಾಗಿದೆ. +ಇದು ತಾನು ಮಾಡಿದ ಮತ್ತು ಒಪ್ಪಿಕೊಳ್ಳಲಾದ ಬೇಡಿಕೆಯ ಫಲವಾದ್ದರಿಂದ ತನ್ನ ಮೂಲಭೂತ ಹಕ್ಕಾಗಿತ್ತು. +ಈಗ ಈ ಹಕ್ಕನ್ನು ಕಳೆದುಕೊಂಡಂತಾಗಿದೆ. +ಏಕೆಂದರೆ ಬ್ರಿಟಷ್‌ ಭಾರತವು ತನ್ನ ಭವಿಷ್ಯವನ್ನು ರೂಪಿಸಿಕೊಳ್ಳಲು ಸಂಸ್ಥಾನಗಳ ಇಚ್ಛೆಗಳನ್ನವಲಂಬಿಸುವಂತೆ ಮಾಡಲಾಗಿದೆ. +ಈ ಸಂಯುಕ್ತ ರಾಜ್ಯದ ಎರಡು ಭಾಗಗಳಲ್ಲಿ ಬ್ರಿಟಿಷ್‌ ಭಾರತವು ಪ್ರಗತಿಪರ ಭಾಗವಾಗಿದ್ದು ರಾಜ್ಯಗಳು ಪ್ರಗತಿ ವಿರೋಧಿ ಭಾಗಗಳಾಗಿವೆ. +ಪ್ರಗತಿಪರ ಭಾಗವನ್ನು ಪ್ರತಿಗಾಮಿ ಭಾಗವೊಂದಿಗೆ ಜೋಡಿಸಿ, ಪ್ರಗತಿಪರ ಭಾಗದ ಮಾರ್ಗ ಮತ್ತು ಭವಿಷ್ಯವು ಪ್ರತಿಗಾಮಿ ಭಾಗವನ್ನವಲಂಬಿಸುವಂತೆ ಮಾಡಿರುವ ಈ ಸಂಯುಕ್ತ ರಾಜ್ಯದ ಅತ್ಯಂತ ದುದೃಷ್ಟಕರ ಅಂಶವಾಗಿದೆ. +ಈ ದುರಂತಕ್ಕೆ ನಿಮ್ಮ ರಾಷ್ಟ್ರ ನಾಯಕರನ್ನೇ ನೀವು ದೂರಬೇಕಾಗಿದೆ. +ಅದೃಷ್ಟವಶಾತ್‌ ನಾನು ನಿಮ್ಮ ಈ ರಾಷ್ಟ್ರನಾಯಕರಲ್ಲಿ ಒಬ್ಬನಾಗಿಲ್ಲ. +ನಾನು ತಲುಪಿರುವ ಅತಿ ಹೆಚ್ಚಿನ ಅಂತಸ್ತೆಂದರೆ ಅಸ್ಪಶ್ಯರ ನಾಯಕತ್ವ. +ಈ ಅಂತಸ್ತನ್ನೂ ನನಗೆ ನಿರಾಕರಿಸಲಾಗಿದೆ ಎಂದು ನನಗನ್ನಿಸಿದೆ. +ಮಹಾತ್ಮ ಗಾಂಧಿಯವರಎಡಗೈ ಬಂಟ ಠಕ್ಕರ್‌ ಬಾಪಾ, ಇವರನ್ನು ಎಡಗೈ ಬಂಟನೆಂದು ಏಕೆ ಕರೆಯುವೆನೆಂದರೆ ವಲ್ಲಭಬಾಯಿ ಪಟೇಲರು ಬಲಗೈ ಬಂಟರಾಗಿದ್ದಾರೆ. +ಅವರು ಇತ್ತೀಚೆಗೆ ನನ್ನನ್ನು ಕೇವಲ ಮಹಾರರ ನಾಯಕ ಎಂದು ಕರೆದಿದ್ದಾರೆ. +ಅವರು ನನಗೆ ಮುಂಬಯಿ ಪ್ರಾಂತ್ಯದ ಅಸ್ಪಶ್ಯರ ನಾಯಕತ್ವವನ್ನು ನೀಡಲೂ ಸಿದ್ಧರಿಲ್ಲ. + ಠಕ್ಕರ್‌ ಬಾಪಾರವರು ಮತ್ಸರದಿಂದ ಹೀಗೆ ಹೇಳಿರುವರೋ ಅಥವಾ ಸತ್ಯದ ಮೇಲಣ ಪ್ರೀತಿಯಿಂದ ಹೇಳಿರುವರೋ ಅದರ ಬಗ್ಗೆ ನನಗೆ ಚಿಂತೆ ಇಲ್ಲ. +ಏಕೆಂದರೆ, ರಾಜಕೀಯ ನನ್ನ ಮೊದಲ ಪ್ರೀತಿಯೇನೂ ಅಲ್ಲ. + ಅಥವಾ ರಾಷ್ಟ್ರ ನಾಯಕತ್ವ ನನ್ನ ಜೀವನದ ಗುರಿಯೂ ಅಲ್ಲ. +ರಾಷ್ಟ್ರನಾಯಕರು ಈ ದೇಶಕ್ಕೆ ಎಂತಹ ಅನಾಹುತವನ್ನುಂಟು ಮಾಡುತ್ತಿದ್ದಾರೆ ಎಂದು ಗಮನಿಸಿದಾಗ ನಾನು ಈ ಮಹಾನುಭಾವರ ಸಮೂಹದಲ್ಲಿಲ್ಲವೆಂಬ ಸಮಾಧಾನ ನನಗುಂಟಾಗುತ್ತದೆ. +ಕೆಲವು ರಾಷ್ಟ್ರ ನಾಯಕರು ಸಂವಿಧಾನ ರಚನೆಯ ಕಾರ್ಯಕ್ಕೆ ನಿಜವಾಗಿಯೂ ಸಿದ್ಧರಿರಲಿಲ್ಲವೆಂದು ಹೇಳಿದರೆ ನೀವು ನಂಬಬೇಕು. +ಅವರು ದುಂಡು ಮೇಜಿನ ಪರಿಷತ್ತಿಗೆ ವಿವಿಧ ಸಂವಿಧಾನಗಳ ತುಲನಾತ್ಮಕ ಅಧ್ಯಯನ ಮಾಡದೆಯೇ ಹೋಗಿದ್ದರು ಮತ್ತು ಅವರೆದುರಿಗೆ ಮಂಡಿಸಲಾದ ಯಾವುದೇ ಸಮಸ್ಯೆಗಳಿಗೆ ಪರಿಹಾರಗಳನ್ನು ನಿರೂಪಿಸಲಾರದೇ ಹೋದರು. +ನಿಜವಾಗಿಯೂ ಸಮರ್ಥರಾಗಿದ್ದ ಇತರರು ಒಕ್ಕೂಟದ ಬಗ್ಗೆ ಎಷ್ಟರ ಮಟ್ಟಿಗೆ ಪ್ರೇರಿತರಾಗಿದ್ದರೆಂದರೆ ಅವರು ಚಿಕ್ಕ ಮಕ್ಕಳಂತೆ ತಾವು ರೂಪಿಸುತ್ತಿರುವ ಒಕ್ಕೂಟವು ನಿಜವಾದ ಸಂಯುಕ್ತ ರಾಜ್ಯವೇ ಅಥವಾ ಸಂಯುಕ್ತ ರಾಜ್ಯದ ಹೆಸರಿನಲ್ಲಿ ಎಸಗುತ್ತಿರುವ ಮೋಸವೇ ಎಂಬುದನ್ನು ಅರಿತುಕೊಳ್ಳಲಾರದೇ ಹೋದರು. +ಈ ದುರಂತ ಸಂಪೂರ್ಣವಾಗಿ ದೋಷ ಪೂರ್ಣ ನಾಯಕತ್ವದ ಫಲವಾಗಿದೆ. +ಈಗ ಇಟ್ಟಿರುವ ತಪ್ಪು ಹೆಜ್ಜೆಗಳನ್ನು ಸರಿಪಡಿಸಬಹುದೇ ಮತ್ತು ಕಳೆದುಕೊಂಡದ್ದನ್ನು ಪುನಃ ಪಡೆಯಲು ಸಾಧ್ಯವೇ ಎಂಬುದು ನನಗೆ ತಿಳಿಯದು. +ಆದರೆ ಬ್ರಿಟಿಷ್‌ ಭಾರತದ ಜನರು ತಾವು ಏನನ್ನು ಕಳೆದುಕೊಂಡಿರುವರೆಂಬುದನ್ನು ತಿಳಿದುಕೊಳ್ಳುವುದು ಸರಿಯಾದ ಮಾರ್ಗ. +ಅವರಿಗೆ ತಮ್ಮದೇ ಆದ ಸಂಯುಕ್ತ ರಾಜ್ಯ ದೊರೆತಿದೆ ಮತ್ತು ಅವರು ತಮ್ಮದೇ ಆದ ಸಂಯುಕ್ತ ರಾಜ್ಯಕ್ಕೆ ಜವಾಬ್ದಾರಿಗಾಗಿ ಆಗ್ರಹಿಸುವ ಹಕ್ಕನ್ನು ಪಡೆದಿರುತ್ತಾರೆ. +ಬ್ರಿಟಿಷ್‌ ಭಾರತಕ್ಕೆ ಮಾತ್ರ ಒಕ್ಕೂಟವನ್ನೂ ನಿರ್ಮಿಸುವುದು ಅಪೇಕ್ಷಣೀಯವೆಂಬುದಕ್ಕೆ ಇನ್ನೂ ಒಂದು ಕಾರಣವಿದೆ. +ಬ್ರಿಟಿಷ್‌ ಭಾರತ ಮತ್ತು ಭಾರತೀಯ ಸಂಸ್ಥಾನಗಳನ್ನೊಳಗೊಂಡ ಸಂಯುಕ್ತ ರಾಜ್ಯ ಸಾಮರಸ್ಯದಿಂದ ಕೆಲಸ ಮಾಡಲಾರದು. +ಇವೆರಡರ ನಡುವೆ ಘರ್ಷಣೆಯುಂಟು ಮಾಡುವಂತಹ ಎರಡು ಅಂಶಗಳಿವೆಯೆಂದು ನನಗೆ ಖಚಿತವಾಗಿದೆ. +ಮೊದಲನೆಯ ಅಂಶವು ಈ ಎರಡೂ ಭಾಗಗಳ ಪ್ರತಿನಿಧಿಗಳ ಸ್ಥಾನದಲ್ಲಿರುವ ವ್ಯತ್ಯಾಸದಿಂದ ಉದ್ಭವಿಸುತ್ತದೆ. +ಬ್ರಿಟಿಷ್‌ ಭಾರತದ ಪ್ರತಿನಿಧಿಗಳ ಸ್ಥಾನದಲ್ಲಿರು ವವ್ಯತ್ಯಾಸದಿಂದ ಉದ್ಭವಿಸುತ್ತದೆ. +ಬ್ರಿಟಿಷ್‌ ಭಾರತದ ಪ್ರತಿನಿಧಿಗಳು ಸ್ವತಂತ್ರರಾಗಿದ್ದರೆ, ಭಾರತೀಯ ಸಂಸ್ಥಾನಗಳ ಪ್ರತಿನಿಧಿಗಳು ರಾಜಕೀಯ ವಿಭಾಗದ ಗುಲಾಮರಾಗಿರುತ್ತಾರೆ. +ಫೆಡರಲ್‌ ಶಾಸಕಾಂಗದಲ್ಲಿ ಈ ಎರಡು ಬಗೆಯ ಪ್ರತಿನಿಧಿಗಳ ಅಧಿಕಾರದ ಮೂಲಗಳು ಬೇರೆಯಾಗಿವೆ. +ಬ್ರಿಟಿಷ್‌ ಭಾರತದ ಪ್ರತಿನಿಧಿಗಳು ಮಂತ್ರಿಗಳು ಅಧಿಕಾರವನ್ನು ವಿಸ್ತರಿಸುವ ಕಾರ್ಯದಲ್ಲಿ ನಿರತರಾಗಿರುತ್ತಾರೆ. +ಸಂಸ್ಥಾನಗಳ ಪ್ರತಿನಿಧಿಗಳು ಮಂತ್ರಿಗಳು ವಿರುದ್ಧ ಗವರ್ನರ್‌-ಜನರಲ್‌ನ ಅಧಿಕಾರಕ್ಕೆ ಬೆಂಬಲ ಕೊಡುವುದು ಖಚಿತ. + ಈ ರೀತಿ ಮಾಡುವಂತೆ ಅವರನ್ನು ಒತ್ತಾಯಿಸಲಾಗುವುದು. +ಈ ಘರ್ಷಣೆ ಅನಿವಾರ್ಯ ಮತ್ತು ಇದರ ಪರಿಣಾಮವಾಗಿ ಭಾರತೀಯ ಸಂಸ್ಥಾನಗಳ ಬಗ್ಗೆ ಬ್ರಿಟಿಷ್‌ ಭಾರತ ಕಹಿ ಭಾವನೆ ತಳೆಯುವುದು ಖಚಿತ. +ಪ್ರಾಂತ್ಯಗಳಲ್ಲಿ ಇದಕ್ಕೂ ಮುಂಚಿನ ಆಳ್ವಿಕೆಯ ಕಾಲದಲ್ಲಿ ಸಂಭವಿಸಿದ್ದು ಇದೇ ಹಳೆಯ ಪ್ರಾಂತೀಯ ಪರಿಷತ್ತುಗಳಲ್ಲಿ ನಾಮಕರಣಗೊಂಡ ಸದಸ್ಯರ ಹಾಗೂ ಚುನಾಯಿತ ಸದಸ್ಯರ ಭಾವನೆಗಳು ಸ್ನೇಹಪರವಾಗಿರಲಿಲ್ಲ. +ಫೆಡರಲ್‌ ಶಾಸಕಾಂಗದಲ್ಲಿಯೂ ಇದೇ ಅನುಭವ ಮರುಕಳಿಸಲಿದೆ. +ಸದನದಒಂದು ಭಾಗವನ್ನು ಶಾಸಕಾಂಗದ ನಿಯಂತ್ರಣಕ್ಕೊಳಗಾಗದ ಬಾಹ್ಯ ಶಕ್ತಿಯ ಸಾಧನವಾಗಿ ಅದರ ಇನ್ನೊಂದು ಭಾಗದ ಆಶೋತ್ತರಗಳನ್ನು ಮಣ್ಣುಗೂಡಿಸುವ ಉದ್ದೇಶಕ್ಕಾಗಿ ಬಳಸಲಾಗುತ್ತಿದೆ ಎಂದಾಗ ಅಂತಹ ಭಾವನೆ ಉಂಟಾಗುವುದು ಸಹಜವೇ. +ಇದು ವಿರಸದ ಒಂದು ಅಂಶ. +ವಿರಸದ ಇನ್ನೊಂದು ಅಂಶವೆಂದರೆ ಒಕ್ಕೂಟದಲ್ಲಿ ಬ್ರಿಟಿಷ್‌ ಭಾರತದ, ಸಂಸ್ಥಾನಗಳ ಸ್ಥಾನದಲ್ಲಿರುವ ಅಸಮಾನತೆ, ಕಾನೂನಿನ ಎದುರು ಸಮಾನತೆ ಅಮೂಲ್ಯ ವಸ್ತು. +ಆದರೆ ಎಲ್ಲರೂ ಒಂದೇ ಕಾರಣದಿಂದ ಅದನ್ನು ಮಾನ್ಯ ಮಾಡುವುದಿಲ್ಲ. +ಅನೇಕರು ಅದನ್ನು ಒಂದು ಆದರ್ಶವಾಗಿ ಆದರಿಸುತ್ತಾರೆ. +ಅದು ಏಕೆ ನಿರ್ಧಾರಕವಾಗಿದೆ ಎಂಬುದನ್ನು ಕೆಲವೇ ಜನ ಅರಿತಿದ್ದಾರೆ. +ಕಾನೂನಿನ ದೃಷ್ಟಿಯಲ್ಲಿ ಸಮಾನತೆ ರೀತಿಯಲ್ಲಿ ನೊಂದವರಲ್ಲಿ ಸಮಾನ ಭಾವನೆಗಳು ಬೆಳೆಯುವಂತೆ ಒತ್ತಾಯಿಸುತ್ತದೆ. +ಸಮಾನತೆ ಇಲ್ಲದ, ಕೆಲವರಿಗೆ ಸೌಕರ್ಯಗಳಿದ್ದು ಇತರರಿಗೆ ಇವು ಇಲ್ಲದಿರುವ, ಪರಿಸ್ಥಿತಿಯಲ್ಲಿ ವಿಶೇಷ ಸೌಕರ್ಯಗಳನ್ನು ಹೊಂದಿರುವವರು ಸಮಾನತೆಯ ಹೋರಾಟದಲ್ಲಿ ಸೌಕರ್ಯಗಳನ್ನು ಹೊಂದದೇ ಇರುವವರ ಜೊತೆ ಸೇರುವುದಂತಿರಲಿ, ವಾಸ್ತವಿಕವಾಗಿ ಅವರ ವಿರೋಧ ಮಾಡುವರು. +ಹಿಂದಿನ ಕಾಲದಲ್ಲಿ ರಾಜರುಗಳು ಮಾಡಿದಂತೆ ಸರ್ವಾಧಿಕಾರಿ ಇತರರ ವಿರೋಧವನ್ನು ಕೆರಳಿಸದೆ ಕೆಲವರ ಹಲ್ಲುಗಳನ್ನು ಒಂದೊಂದಾಗಿ ಕಿತ್ತು ಹಾಕಬಹುದು. +ಪ್ರತಿಯಾಗಿ,ಇತರರೂ ಈ ದಾಳಿಯಲ್ಲಿ ಸೇರುವರು. +ಆದರೆ ತಮ್ಮ ಹಲ್ಲುಗಳನ್ನು ಕಿತ್ತದ್ದಕ್ಕಾಗಿ ದಂಡ ರೂಪದಲ್ಲಿ ಸರ್ವಾಧಿಕಾರಿ ಕೇಳಿದಷ್ಟು ಹಣವನ್ನು ತೆರಬೇಕೆಂದು ಕಾನೂನು ಮಾಡಿದ ಪಕ್ಷದಲ್ಲಿ ಎಲ್ಲರೂ ಅದರ ವಿರುದ್ಧ ದಂಗೆ ಏಳುವರು. +ಒಕ್ಕೂಟ ವ್ಯವಸ್ಥೆಯಲ್ಲಿ ಬ್ರಿಟಿಷ್‌ ಭಾರತ ಮತ್ತು ಭಾರತೀಯ ಸಂಸ್ಥಾನಗಳ ನಡುವೆ ಸಮಾನತೆ ಇಲ್ಲ. +ಭಾರತೀಯ ಸಂಸ್ಥಾನಗಳು ಬ್ರಿಟಿಷ್‌ ಭಾರತಕ್ಕೆ ನಿರಾಕರಿಸಲಾದ ಅನೇಕ ಸೌಲಭ್ಯಗಳು ಮತ್ತು ವಿನಾಯಿತಿಗಳನ್ನು ಹೊಂದಿವೆ. +ಇದು ತೆರಿಗೆ ಹೇರುವ ವಿಷಯದಲ್ಲಿ ಇನ್ನೂ ನಿರ್ದಿಷ್ಟವಾಗಿದೆ. +ಬ್ರಿಟಿಷ್‌ ಭಾರತ ಮತ್ತು ಭಾರತೀಯ ಸಂಸ್ಥಾನಗಳ ಪ್ರತಿನಿಧಿಗಳ ನಡುವೆ ಯಾರು ಮೊದಲು ತೆರಿಗೆಯ ಭಾರವನ್ನು ಹೊರಬೇಕೆಂಬ ವಿಷಯದಲ್ಲಿ ತೀಕ್ಷ್ಣತೆ ಉಂಟಾಗುತ್ತದೆ. +ಯಾವುದೇ ಒಬ್ಬ ಮನುಷ್ಯನ ಜೇಬಿಗೆ ಕ್ಕ ಹಾಕಿದಾಗ ಅವನ ದೇಶಭಕ್ತಿ ಮಾಯವಾಗುತ್ತದೆ. +ಸಂಸ್ಥಾನಗಳ ಪ್ರತಿನಿಧಿಗಳ ಕಾರ್ಯಾಂಗವನ್ನು ಶಾಸಕಾಂಗಕ್ಕೆ ಹೊಣೆಗಾರಿಗೆ ಹೊಂದುವಂತೆ ಮಾಡುವಾಗ ಸಾಮಾನ್ಯ ಆವಶ್ಯಕತೆಗಳಿಗಿಂತ ಹೆಚ್ಚಾಗಿ ತನ್ನ ಸ್ವಂತ ಆರ್ಥಿಕ ಹಿತಾಸಕ್ತಿಗಳಿಗೆ ಆದ್ಯತೆ ನೀಡುವುದು ಸಹಜ. +ಬ್ರಿಟಿಷ್‌ ಭಾರತ ಮತ್ತು ಭಾರತೀಯ ಸಂಸ್ಥಾನಗಳು ಪರಸ್ಪರ ಕಚ್ಚಾಡುವಂತಾದರೆ ಅವುಗಳನ್ನು ಒಂದೇ ವ್ಯವಸ್ಥೆಯಡಿಯಲ್ಲಿ ನೆಲೆಗೊಳಿಸುವುದರ ಉಪಯುಕ್ತತೆಯಾದರೂ ಏನು ? +ಬ್ರಿಟಿಷ್‌ ಭಾರತ ಮತ್ತು ಭಾರತೀಯ ರಾಜ್ಯಗಳಲ್ಲಿರುವ ಸರ್ಕಾರ ಪದ್ಧತಿ ಮತ್ತು ಅವುಗಳಲ್ಲಡಗಿರುವ ತತ್ವಗಳಲ್ಲಿ ಸಂಪೂರ್ಣ ಭಿನ್ನತೆ ಇದೆ. +ಇವೆರಡೂ ಭಾಗಗಳು ತಮ್ಮದೇ ಆದ ಪ್ರತ್ಯೇಕ ಕ್ಷೇತ್ರಗಳನ್ನು ರೂಪಿಸಿಕೊಳ್ಳುವುದಾದರೆ ಎರಡರ ನಡುವಣ ಭಿನ್ನತೆಗಳು ಅವುಗಳಲ್ಲಿ ವೈರತ್ವವನ್ನು ಹುಟ್ಟಿಸಲಿಕ್ಕಿಲ್ಲ. +ಭಾರತೀಯ ಸಂಸ್ಥಾನಗಳಲ್ಲಿರುವ ಸರ್ಕಾರ ಪದ್ಧತಿ ಎಲ್ಲಿಯವರೆಗೆ ಬ್ರಿಟಿಷ್‌ ಭಾರತವು ಅಂತಹ ಸರಕಾರ ವ್ಯವಸ್ಥೆಗಳು ಎಷ್ಟೇ ಪುರಾತನವಾಗಿದ್ದರೂ ಅವುಗಳನ್ನು ಸಹಿಸಿಕೊಳ್ಳಬಲ್ಲವು. +ಅದರ ಒಕ್ಕೂಟ ವ್ಯವಸ್ಥೆಯಲ್ಲಿ ಅವುಗಳನ್ನು ಮಹತ್ವದ ಮತ್ತು ಶಕ್ತಿಕಾರಿ ಅಂಶಗಳನ್ನಾಗಿ ಮಾಡಿರುವುದರಿಂದ ಬ್ರಿಟಿಷ್‌ ಭಾರತವುಇ ದರ ಬಗ್ಗೆ ನಿರಾಸಕ್ತವಾಗಿರಲು ಸಾಧ್ಯವಿಲ್ಲ. +ನಿಜವಾಗಿಯೂ ಸಂಯುಕ್ತ ರಾಜ್ಯದ ರಚನೆಯಿಂದಾಗಿ ಬ್ರಿಟಿಷ್‌ ಭಾರತವು ತನ್ನ ಹಿತಾಸಕ್ತಿಗಳ ದೃಷ್ಟಿಯಿಂದ ಭಾರತೀಯ ಸಂಸ್ಥಾನಗಳಲ್ಲಿ ಅಸ್ತಿತ್ವದಲ್ಲಿರುವ ಸರ್ಕಾರದ ಪದ್ಧತಿಗಳಲ್ಲಿ ಕ್ರಾಂತಿಕಾರಿ ಬದಲಾವಣೆಗಳನ್ನುಂಟು ಮಾಡುವಂತೆ ಒತ್ತಾಯಿಸುತ್ತದೆ. +ಇದು ಸಂಯುಕ್ತ ರಾಜ್ಯದ ಅನಿವಾರ್ಯ ಪರಿಣಾಮ. +ಇದು ಸಂಸ್ಥಾನಗಳು ಶ್ರದ್ಧಾಪೂರ್ವಕವಾಗಿ ಬಯಸಿದ ಅಂತಿಮ ಧ್ಯೇಯವೇ ? ಇದು ಅವು ಪರಿಗಣಿಸಬೇಕಾದ ಪ್ರಶ್ನೆ. +ಬ್ರಿಟಿಷ್‌ ಭಾರತವು ಇಂತಹ ಸಾಧ್ಯತೆಯನ್ನು ಸ್ವಾಗತಿಸುವುದೇ ? +ನನ್ನ ಮಟ್ಟಗೆ ಹೇಳುವುದಾದರೆ ನಾನು ಇದನ್ನು ಸ್ವಾಗತಿಸುವುದಿಲ್ಲ. + ಅಷ್ಟು ವಿಶಾಲ ರಂಗದೊಡನೆ ಯುದ್ಧ ಸಾರುವುದು ಅಸಾಧ್ಯ. +ಸಂಸ್ಥಾನಗಳು ಅಸಂಖ್ಯಾತವಾಗಿದ್ದು ಅವುಗಳ ಮೇಲೆ ಏಕಾಏಕಿ ದಾಳಿ ಮಾಡುವುದು ಸಾಧ್ಯವಿಲ್ಲ. +ಸಂಸ್ಥಾನಗಳು ರಾಜ್ಯ ರಚನೆಯ ಅಂಗಗಳಾಗಿದ್ದು ಅವುಗಳ ಮೇಲೆ ದಾಳಿಮಾಡಿ ಅದು ಸಂವಿಧಾನಾತ್ಮಕವೆಂದು ಸಮರ್ಥಿಸಿಕೊಳ್ಳುವುದೂ ಸಾಧ್ಯವಿಲ್ಲ. +ಎರಡನೆಯದಾಗಿ, ನೀವೇ ಏಕೆ ಈ ಕಷ್ಟಕ್ಕೆ ಗುರಿಯಾಗಬೇಕು ? +ಕೆಲವು ಸಂದರ್ಭಗಳಲ್ಲಿ ಒಬ್ಬನು ತಾನು ಆಸ್ತಿಯನ್ನು ಕೊಳ್ಳುತ್ತಿರುವಾಗ ವಿವಾದವನ್ನೇ ಖರೀದಿಸುತ್ತಿರುತ್ತಾನೆ. +ಬ್ರಿಟಿಷ್‌ ಭಾರತವು ಒಕ್ಕೂಟ ವ್ಯವಸ್ಥೆ ಒಪ್ಪಿಕೊಳ್ಳುವುದೆಂದರೆ ತೊಂದರೆಗಳನ್ನು ಕೊಂಡುಕೊಂಡಂತೆಯೇ. +ಮೂರನೆಯದಾಗಿ, ಈ ಸಂವಿಧಾನದಲ್ಲಿ ಡೊಮಿನಿಯನ್‌ ಸ್ಥಾನವನ್ನು ಅತ್ಯಂತ ಕಠೋರವಾಗಿ ಸದ್ಯಕ್ಕೆ ಕೈ ಬಿಡಲಾಗಿದೆಯಲ್ಲದೆ ಮುಂದೆಯೂ ಸಹ ಅದು ದೊರೆಯದಂತೆ ಮಾಡಲಾಗಿದೆ. +ಯಾವುದೇ ದೃಷ್ಟಿಯಿಂದ ನೋಡಿದರೂ ನನಗೆ ತೋಚುವ ಅತ್ಯಂತ ಬುದ್ಧಿವಂತಿಕೆಯ ಮಾರ್ಗವೆಂದರೆ ಸಂಸ್ಥಾನಗಳನ್ನು ಅವು ಎಲ್ಲಿವೆಯೋ ಅಲ್ಲಿಯೇ ಉಳಿಸಿ. + ಬ್ರಿಟಷ್‌ ಭಾರತವು ತನಗಾಗಿ ತನ್ನದೇ ಆದ ಒಕ್ಕೂಟ ವ್ಯವಸ್ಥೆಯನ್ನು ರೂಪಿಸಿಕೊಳ್ಳಬೇಕು. +ವಿವಿಧ ದೃಷ್ಟಿಗಳಲ್ಲಿ ಒಕ್ಕೂಟ ವ್ಯವಸ್ಥೆ :ಒಕ್ಕೂಟ ವ್ಯವಸ್ಥೆಯನ್ನು ಬೇರೆ ಬೇರೆಯವರು ಬೇರೆ ಬೇರೆ ದೃಷ್ಟಿಯಿಂದ ನೋಡುತ್ತಿದ್ದಾರೆ. +ಹಿಂದೂಗಳು, ಮುಸಲ್ಮಾನರು ಮತ್ತು ಕಾಂಗ್ರೆಸ್‌ ಪಕ್ಷ ತಮ್ಮದೇ ದೃಷ್ಟಿಕೋನ ಹೊಂದಿದ್ದಾರೆ. +ವರ್ತಕರು ಮತ್ತು ವಾಣಿಜ್ಯೋದ್ಯಮಿಗಳ ದೃಷ್ಟಿಕೋನವೂ ಇದೆ. +ಪ್ರತಿಯೊಬ್ಬರ ದೃಷ್ಟಿಕೋನ ಅವರವರ ಹಿತಾಸಕ್ತಿಗಳಿಗನುಗುಣವಾಗಿ. +ಒಕ್ಕೂಟ ರಾಜ್ಯದಲ್ಲಿ ರಾಜರುಗಳ ಹಿತಾಸಕ್ತಿ ಏನು ? +ಅವರ ಉದ್ದೇಶಗಳನ್ನು ಅರಿತುಕೊಳ್ಳಲು ಬಟ್ಲರ್‌ ಸಮಿತಿಯತ್ತ ನೋಡಬೇಕು. +ರಾಜರುಗಳು ಪರಮಾಧಿಕಾರ ಸಿದ್ಧಾಂತದನ್ಹಯ ಅವರು ಪಡೆದಿರುವ ಒಪ್ಪಂದದ ಹಕ್ಕುಗಳ ಮೇಲೆ ಭಾರತ ಸರಕಾರದ ರಾಜಕೀಯ ವಿಭಾಗದ ಅತಿಕ್ರಮಣದ ಬಗ್ಗೆ ದೂರುತ್ತಿದ್ದಾರೆ. +ರಾಜಕೀಯ ವಿಭಾಗವು ತಮ್ಮ ಮತ್ತು ಬ್ರಿಟಷ್‌ ಸರಕಾರದ ನಡುವೆ ಇರುವ ಒಪ್ಪಂದಗಳಲ್ಲಿ ನೀಡಲಾದಹಕ್ಕುಗಳ ಹೊರತು ಇನ್ನಾವ ಹೆಚ್ಚಿನ ಹಕ್ಕುಗಳನ್ನು ಸಂಸ್ಥಾನಗಳ ಮೇಲೆ ಹೊಂದಲಾರದೆಂದು ಅವರು ಒತ್ತಿ ಹೇಳುತ್ತಿದ್ದಾರೆ. +ರಾಜಕೀಯ ವಿಭಾಗವು ಒಪ್ಪಂದಗಳಲ್ಲಿ ಉಲ್ಲೇಖಿತವಾದ ಹಕ್ಕುಗಳೂ ಅಲ್ಲದೆ ಪ್ರಭುತ್ವಕ್ಕೆ ರಾಜಕೀಯ ಸಂಪ್ರದಾಯಗಳು ಮತ್ತು ರೂಢಿಗಳಲ್ಲಿ ಮಾನ್ಯವಾದ ಹಕ್ಕುಗಳೂ ಇವೆ ಎಂದು ವಾದಿಸುತ್ತಿದೆ. +ಈ ವಿವಾದವನ್ನು ತೀರ್ಮಾನಿಸಲು ಸೆಕ್ರೆಟರಿ ಆಫ್‌ ಸ್ಟೇಟ್‌ರವರು ಬಟ್ಲರ್‌ ಸಮಿತಿಯನ್ನು ನೇಮಿಸಲು ಒಪ್ಪಿದರು. +ಬಟ್ಟರ್‌ ಸಮಿತಿಯು ತಮ್ಮ ವಾದವನ್ನು ಒಪ್ಪಿಕೊಂಡು ಪರಮಾಧಿಕಾರದ ವ್ಯಾಪ್ತಿಯನ್ನು ಒಪ್ಪಂದಗಳಲ್ಲಿ ಉಲ್ಲೇಖಿತವಾದ ಹಕ್ಕುಗಳಿಗೆ ಸೀಮಿತಗೊಳಿಸಬಹುದೆಂದು ರಾಜರುಗಳು ಹಾರೈಸಿದ್ದರು. +ಆದರೆ ಅವರ ದುರ್ದೈವದಿಂದಾಗಿ ಅವರಿಗೆ ನಿರಾಶೆಯಾಯಿತು. + ಏಕೆಂದರೆ ಬಟ್ಲರ್‌ ಸಮಿತಿಯು ಅಧಿಕಾರ ಪಾರಮ್ಯವಾಗಿದ್ದು ಅದನ್ನು ವ್ಯಾಖ್ಯಾನಿಸುವುದಾಗಲೀ ಅಥವಾ ಸೀಮಿತಗೊಳಿಸುವುದಾಗಲೀ ಸಾಧ್ಯವಿಲ್ಲ ಎಂದು ತನ್ನ ವರದಿಯಲ್ಲಿ ಹೇಳಿತು. +ಬಟ್ಲರ್‌ ಸಮಿತಿಯ ಈ ನಿರ್ಣಯದಂತೆ ರಾಜರುಗಳು ಮತ್ತು ಸರಕಾರದ ರಾಜಕೀಯ ವಿಭಾಗಕ್ಕೆ ಸಂಪೂರ್ಣ ಅಧೀನರಾಗಿರುವರೆಂದು ಅರ್ಥವಾಯಿತು. +ಮತ್ತು ಅವರು ತಮ್ಮ ಈ ದುರದೃಷ್ಟಕರ ಪರಿಸ್ಥಿತಿಯಿಂದ ತಪ್ಪಿಸಿಕೊಳ್ಳಲು ಅವರಿಗೆ ಇದ್ದ ಒಂದೇ ಮಾರ್ಗವೆಂದರೆ, ಏಕೆಂದರೆ ಸಂಯುಕ್ತ ರಾಜ್ಯದ ಅಧಿಕಾರ ಎಲ್ಲಿಯವರೆಗೆ ಇರುತ್ತದೆಯೋ ಅಲ್ಲಿಯವರೆಗೆ ರಾಜಕೀಯ ವಿಭಾಗದ ಅಧಿಕಾರ ಇರುವುದಿಲ್ಲ. +ಒಕ್ಕೂಟದ ಅಧಿಕಾರವನ್ನು ಫೆಡರಲ್‌ಶಾಸಕಾಂಗ ಮತ್ತು ಕಾರ್ಯಾಂಗ ಮಾತ್ರ ಚಲಾಯಿಸಬಹುದು. +ಅವರಿಗೆ ಈ ಎರಡೂ ಅಂಗಗಳಲ್ಲಿ ಸಾಕಷ್ಟು ಬಲವಿರುವುದರಿಂದ ಅವರು ಸಂಯುಕ್ತ ರಾಜ್ಯವನ್ನು ಬಯಸಿದರು. +ತಮ್ಮ ಸಮಸ್ಯೆಗಳಿಗೆ ಒಕ್ಕೂಟ ರಾಜ್ಯದ ಪರಿಹಾರ ಎರಡು ಸೌಲಭ್ಯಗಳನ್ನು ಒದಗಿಸಿತು. +ಮೊದಲನೆಯದೆಂದರೆ ಅದು ಅವರು ಬಹುವಾಗಿ ಕಾತರದಿಂದ ಬಯಸಿದ್ದ ಆಂತರಿಕ ಸ್ವಾಯತ್ತತೆಯನ್ನು ನೀಡುತ್ತದೆ. + ಏಕೆಂದರೆ ಸಂಯುಕ್ತ ರಾಜ್ಯವನ್ನು ಸೇರುವ ಘಟಕಗಳು ಸ್ಪಸಂತೋಷದಿಂದ ಸಾಮಾನ್ಯ ಕೇಂದ್ರ ಸರಕಾರಕ್ಕೆ ಕೊಡಲಾದವಿಷಯಗಳ ಹೊರತು ಉಳಿದ ಎಲ್ಲಾ ಅಧಿಕಾರಗಳನ್ನು ತಮ್ಮ ಕೈಯಲ್ಲಿಯೇ ಇಟ್ಟುಕೊಳ್ಳುವುದು. + ಕೇಂದ್ರಕ್ಕೆ ನೀಡಲಾದ ಅಧಿಕಾರಗಳಲ್ಲಿಯೂ ತಮ್ಮ ಪಾಲನ್ನು ಹೊಂದುವುದು ಸಂಯುಕ್ತ ರಾಜ್ಯದ ಮೂಲ ತತ್ವವಾಗಿದೆ. +ಸಂಯುಕ್ತ ರಾಜ್ಯದ ಎರಡನೆಯ ಸೌಲಭ್ಯವೆಂದರೆ ಫೆಡರಲ್‌ ಅಧಿಕಾರದ ವ್ಯಾಪ್ತಿಯಲ್ಲಿ ಪರಮಾಧಿಕಾರ ಇಲ್ಲದಾಗುವುದು. +ಆದ್ದರಿಂದ ರಾಜರುಗಳ ಉದ್ದೇಶ ಸ್ಪಾರ್ಥವಾಗಿದ್ದು ಭಾರತ ಸರಕಾರದ ಅಧಿಕಾರದಿಂದ ಸಾಧ್ಯವಾದಷ್ಟು ತಪ್ಪಿಸಿಕೊಳ್ಳುವುದು ಅವರ ಮೂಲ ಧ್ಯೇಯವಾಗಿತ್ತು. +ಇದು ರಾಜರುಗಳ ಪ್ರಾಥಮಿಕ ಹಿತಾಸಕ್ತಿಗಳಲ್ಲೋಂದಾಗಿತ್ತು. +ಅವರು ಸಂರಕ್ಷಿಸಿಕೊಳ್ಳಬೇಕಾಗಿದ್ದ ಇನ್ನೂ ಒಂದು ಹಿತಾಸಕ್ತಿ ಇತ್ತು. +ಅದೆಂದರೆ ತಮ್ಮ ಸರಕಾರದ ನಾಗರಿಕ ಮತ್ತು ಸೈನಿಕ ಅಧಿಕಾರಗಳನ್ನು ಸಾಧ್ಯವಾದಷ್ಟು ತಮ್ಮ ಕೈಯಲ್ಲಿ ಉಳಿಸಿಕೊಳ್ಳುವುದು. +ಸಂಯುಕ್ತ ರಾಜ್ಯವನ್ನು ಸಾಧ್ಯವಾದಷ್ಟು ನಿಸ್ಸಾರಗೊಳಿಸುವುದರ ಮೂಲಕ ಅದು ತಮ್ಮ ಮೇಲೆ ಕಠೋರವಾಗದಂತೆ ನೋಡಿಕೊಳ್ಳುವುದು ಅವರ ಉದ್ದೇಶವಾಗಿತ್ತು. +ರಾಜರ ಹಿತಾಸಕ್ತಿಗಳು ದ್ವಿ-ವಿಧವಾಗಿದ್ದವು. +ಅವರು ಪರಮಾಧಿಕಾರದಿಂದ ತಪ್ಪಿಸಿಕೊಳ್ಳಬೇಕೆಂದಿದ್ದರು. +ಎರಡನೆಯದಾಗಿ,ಅವರು ಸಂಯುಕ್ತ ರಾಜ್ಯದ ಅಧಿಕಾರದ ವ್ಯಾಪ್ತಿಗೆ ತಮ್ಮನ್ನು ಅವಶ್ಯಕತೆಗಿಂತ ಹೆಚ್ಚಿನ ಪ್ರಮಾಣದಲ್ಲಿ ಅಧೀನವಾಗುವುದನ್ನು ತಪ್ಪಿಸಿಕೊಳ್ಳಬಯಸಿದ್ದರು. +ಸಂಯುಕ್ತ ರಾಜ್ಯದ ಬಗ್ಗೆ ಅವರೆದುರು ಎರಡು ಪ್ರಶ್ನೆಗಳಿದ್ದವು. +ಈ ವ್ಯವಸ್ಥೆಯು ಎಷ್ಟರ ಮಟ್ಟಿಗೆ ಪರಮಾಧಿಕಾರದ ದಬ್ಬಾಳಿಕೆಯಿಂದ ತಪ್ಪಿಸಿಕೊಳ್ಳಲು ತಮಗೆ ಸಹಾಯಕವಾಗುವುದು ? +ಎರಡನೆಯದಾಗಿ, ಈ ಸಂಯುಕ್ತ ರಾಜ್ಯದ ಯೋಜನೆಯು ಎಷ್ಟರಮಟ್ಟಿಗೆ ತಮ್ಮ ಸಾರ್ವಭೌಮತ್ವ ಮತ್ತು ಆಂತರಿಕ ಸರಕಾರದ ಅಧಿಕಾರಗಳನ್ನು ಕಿತ್ತುಕೊಳ್ಳುವುದು ? +ಅವರು ಮೊದಲನೆಯದರಿಂದ ಹೆಚ್ಚೆಚ್ಚು ಪಡೆದುಕೊಂಡು ಕೊನೆಯದರಲ್ಲಿ ಅತಿ ಕಡಿಮೆ ಕೊಡುವ ಪ್ರಯತ್ನದಲ್ಲಿದ್ದಾರೆ. +ಮುಸಲ್ಮಾನರು ತಮ್ಮದೇ ಆದ ಹಿತಾಸಕ್ತಿಯನ್ನು ಹೊಂದಿದ್ದು, ಅದರಿಂದ ಅವರ ಇಡೀ ದೃಷ್ಟಿವಿವರ್ಣಗೊಂಡಿದೆ ಮಾತ್ರವಲ್ಲ, ಅದೊಂದನ್ನು ಬಿಟ್ಟು ಇನ್ನೇನನ್ನು ನೋಡಲು ಸಿದ್ಧರಿಲ್ಲ. +ಅವರ ಅಲ್ಪಸಂಖ್ಯಾತರ ಹಿತಾಸಕ್ತಿಯೇ ಅದಾಗಿತ್ತು. +ತಮ್ಮನ್ನು ಹಿಂದೂ ಬಹುಸಂಖ್ಯಾತರಿಂದ ರಕ್ಷಿಸಿಕೊಳ್ಳಲು ಅವರು ತಿಳಿದಿದ್ದುದು ಒಂದೇ ಒಂದು ಮಾರ್ಗ. +ತಮಗಾಗಿ ಬಹುಮತ ಕೇಳುವುದೇ ಆ ಮಾರ್ಗವಾಗಿತ್ತು. +ಪ್ರಾತಿನಿಧ್ಯದಲ್ಲಿ ಅಧಿಕ ಮಾನ್ಯತೆ, ಪ್ರತ್ಯೇಕ ಚುನಾವಣಾ ಮಂಡಳಿ ಮತ್ತು ಸ್ಥಾನಗಳ ಕಾಯ್ದಿರಿಸುವಿಕೆಗಳ ಮೂಲಕ ಅದನ್ನು ಸಾಧಿಸುವುದು ಅವರ ವಿಚಾರವಾಗಿತ್ತು. +೧೯೩ಂ ರಲ್ಲಿ ಮುಸಲ್ಮಾನ ಅಲ್ಪ ಸಂಖ್ಯಾತರಹಿತಾಸಕ್ತಿಗಳನ್ನು ರಕ್ಷಿಸಲು ಅವರು ಇದಕ್ಕಿಂತಲೂ ಹೆಚ್ಚು ಪರಿಣಾಮಕಾರಿಯಾದ ಇನ್ನೊಂದು ವಿಧಾನವನ್ನು ಕಂಡುಕೊಂಡರು. +ಹಿಂದೂ ಬಹುಸಂಖ್ಯಾತರು ಮತ್ತು ಮುಸಲ್ಮಾನ ಅಲ್ಪ ಸಂಖ್ಯಾತರನ್ನು ಹೊಂದಿರುವ ಪ್ರಾಂತ್ಯಗಳ ವಿರುದ್ಧವಾಗಿ ಮುಸಲ್ಮಾನ ಬಹುಸಂಖ್ಯಾತರು ಮತ್ತು ಹಿಂದೂ ಅಲ್ಪ ಸಂಖ್ಯಾತರಿರುವಂತಹ ಹೊಸ ಪ್ರಾಂತ್ಯಗಳನ್ನು ರಚಿಸುವುದೇ ಈ ವಿಧಾನವಾಗಿತ್ತು . +ಈ ರೀತಿ ಪ್ರಾಂತ್ಯಗಳಲ್ಲಿ ಸಮತೋಲವನವುಳ್ಳ ವ್ಯವಸ್ಥೆಯ ಮೂಲಕ ಮುಸಲ್ಮಾನ ಬಹುಸಂಖ್ಯೆಯುಳ್ಳ ಪ್ರಾಂತ್ಯಗಳ ಮುಸಲ್ಮಾನ ಬಹುಸಂಖ್ಯಾತರಿಗೆ ತಮ್ಮ ಪ್ರಾಂತ್ಯದ ಹಿಂದೂಗಳನ್ನು ಒತ್ತೆಯಾಳುಗಳನ್ನಾಗಿ ಹಿಡಿದುಕೊಂಡು ಹಿಂದೂ ಬಹುಸಂಂಖ್ಯೆಯುಳ್ಳ ಪ್ರಾಂತ್ಯಗಳಲ್ಲಿರುವ ಮುಸಲ್ಮಾನ ಅಲ್ಪ ಸಂಖ್ಯಾತರನ್ನು ರಕ್ಷಿಸುವ ಉದ್ದೇಶದಿಂದ ಅವರು ಈ ವ್ಯವಸ್ಥೆಯನ್ನು ರೂಪಿಸಿಕೊಂಡರು. +ಮುಸಲ್ಮಾನ ಬಹುಸಂಖ್ಯಾತ ಪ್ರಾಂತ್ಯಗಳನ್ನು ರಚಿಸಿ ಅವುಗಳನ್ನು ಬಲಯುತ ಮತ್ತು ಶಕ್ತಿಯುತವನ್ನಾಗಿ ಮಾಡುವುದೇ ಅವರ ಪ್ರಮುಖ ಆಸಕ್ತಿಯಾಗಿತ್ತು. +ಇದನ್ನು ಸಾಧಿಸಲು ಅವರು ಸಿಂಧ್‌ ಪ್ರಾಂತ್ಯವನ್ನು ಪ್ರತ್ಯೇಕಿಸಿ ವಾಯುವ್ಯ ಪ್ರಾಂತ್ಯಕ್ಕೆ ಜವಾಬ್ದಾರಿ ಸರ್ಕಾರವನ್ನು ನೀಡಬೇಕೆಂದು ಒತ್ತಾಯಿಸಿದರು. + ಇದರಿಂದ ನಾಲ್ಕು ಪ್ರಾಂತ್ಯಗಳ ಮೇಲೆ ಅಧಿಪತ್ಯ ಹೊಂದುವುದು ಅವರ ತಂತ್ರವಾಗಿತ್ತು. +ಪ್ರಾಂತ್ಯಗಳನ್ನು ಬಲಪಡಿಸಲು ಕೇಂದ್ರವನ್ನು ದುರ್ಬಲಗೊಳಿಸಬೇಕೆಂದು ಅವರು ಒತ್ತಾಯಿಸಿದರು. +ಈ ಉದ್ದೇಶ ಸಾಧನೆಗಾಗಿ ಮುಸಲ್ಮಾನರು ಶೇಷ ಅಧಿಕಾರಗಳನ್ನು ಪ್ರಾಂತ್ಯಗಳಿಗೆ ನೀಡಬೇಕೆಂದು ಮತ್ತು ಕೇಂದ್ರದಲ್ಲಿ ತಮಗೆ ಬ್ರಿಟಿಷ್‌ ಭಾರತಕ್ಕೆ ನಿಗದಿಯಾದ ಸ್ಥಳಗಳಲ್ಲಿ ೧/೩ ಭಾಗವೂ ಅಲ್ಲದೇ ರಾಜರುಗಳಿಗೆ ನಿಗದಿಯಾದ ಸ್ಥಾನಗಳಲ್ಲಿಯೂ ೧% ಭಾಗ ಸ್ಥಾನಗಳನ್ನು ನೀಡುವುದರ ಮೂಲಕ ಹಿಂದೂಗಳ ಪ್ರಾತಿನಿಧ್ಯದಲ್ಲಿ ಕಡಿಮೆ ಮಾಡಬೇಕೆಂದು ಬೇಡಿಕೆ ಮಂಡಿಸಿದ್ದರು. +ಹಿಂದೂ ಮಹಾಸಭೆ ಪ್ರತಿನಿಧಿಸಿದ ಹಿಂದೂಗಳು ಕೇವಲ ಒಂದು ವಿಷಯದ ಬಗ್ಗೆ ಚಿಂತಿಸುತ್ತಿದ್ದರು. +ಅವರೇ ಗುರುತಿಸಿದ ಮುಸಲ್ಮಾನರ ವಿಪತ್ತನ್ನು ಯಾವ ರೀತಿ ಎದುರಿಸಬೇಕು ? +ರಾಜರುಗಳು ಸೇರುವಿಕೆಯಿಂದ ಹಿಂದೂಗಳ ಬಲ ವೃದ್ಧಿಯಾಗುವುದೆಂದು ಹಿಂದೂ ಮಹಾ ಸಭೆಯ ಅನಿಸಿಕೆಯಾಗಿತ್ತು. +ಅವರಿಗೆ ಉಳಿದ ಯಾವ ಸಂಗತಿಗಳೂ ಮಹತ್ವದವುಗಳಾಗಿರಲಿಲ್ಲ. + ಏನೇ ಆಗಲಿ, ಹೇಗೇ ಆಗಲಿಒಕ್ಕೂಟ ಆಗಲೇಬೇಕೆಂಬುದು ಅವರ ಅಭಿಪ್ರಾಯವಾಗಿತ್ತು. +ಭಾರತೀಯ ವಾಣಿಜ್ಯ ಸಮುದಾಯದ ದೃಷ್ಟಿಕೋನ ಪರಿಶೀಲಿಸಲಾರ್ಹವಾದ ಇನ್ನೊಂದು ದೃಷ್ಟಿಕೋನವಾಗಿದೆ. + ಈ ವಿಶಾಲ ದೇಶವಾದ ಭಾರತದಲ್ಲಿ ವಾಣಿಜ್ಯ ಸಮುದಾಯ ಒಂದು ಚಿಕ್ಕ ಸಮುದಾಯವೆಂಬುದೇನೋ ನಿಜ. +ಆದರೆ ಸಮುದಾಯದ ದೃಷ್ಟಿಕೋನ ಇತರ ಯಾವುದೇ ಸಮುದಾಯವೆಂಬುದೇನೋ ನಿಜ. +ಆದರೆ ಸಮುದಾಯದ ದೃಷ್ಟಿಕೋನ ಇತರ ಯಾವುದೇ ಸಮುದಾಯದ ದೃಷ್ಟಿಕೋನಕ್ಕಿಂತ ಹೆಚ್ಚು ನಿರ್ಣಾಯಕವಾಗಿದೆ ಎಂಬುದು ನಿಸ್ಸಂಶಯ. +ಈ ಸಮುದಾಯವು ಕಾಂಗ್ರೆಸ್ಸಿನ ಪರವಾಗಿದೆ. +ಅದು ಕಾಂಗ್ರೆಸಿನ ಹೋರಾಟಕ್ಕೆ ಅವಶ್ಯವಾದ ಹಣ ಒದಗಿಸುತ್ತಿದೆ . + ಕಾಂಗ್ರೆಸ್ಸು ತನ್ನಇಚ್ಛೆಯಂತೆ ವರ್ತಿಸಬೇಕೆಂದು ಅದು ಬಯಸುತ್ತದೆ. +ಈ ಸಮುದಾಯವು ಪ್ರಾಥಮಿಕವಾಗಿ ವಾಣಿಜ್ಯ ಪಕ್ಷಪಾತ ನೀತಿ ಮತ್ತು ವಿನಿಮಯ ಪ್ರಮಾಣವನ್ನು ತಗ್ಗಿಸಿಕೊಳ್ಳುವುದರಲ್ಲಿ ಆಸಕ್ತಿ ಹೊಂದಿದೆ. +ಇದು ಅತ್ಯಂತ ಸಂಕುಚಿತ ಮತ್ತು ಸೀಮಿತ ದೃಷ್ಟಿಕೋನವಾಗಿದೆ. +ಭಾರತೀಯ ವಾಣಿಜ್ಯ ಸಮುದಾಯವು ವಾಣಿಜ್ಯ ಮತ್ತು ವ್ಯಾಪಾರ ಕ್ಷೇತ್ರದಲ್ಲಿ ಐರೋಪ್ಯರ ಸ್ಥಾನವನ್ನು ಆಕ್ರಮಿಸುವ ಸನ್ನಾಹದಲ್ಲಿದೆ. +ರಾಷ್ಟ್ರೀಯತೆಯ ಹೆಸರಿನಲ್ಲಿ ಇದನ್ನು ಸಾಧಿಸುತ್ತಿರುವುದಾಗಿ ಅದು ಹೇಳಿಕೊಳ್ಳುತ್ತಿದೆ. + ಅದು ವಿನಿಮಯ ದರವನ್ನು ಇಳಿಸಿಕೊಳ್ಳುವ ಹಕ್ಕನ್ನು ಪಡೆದುಕೊಳ್ಳುವ ಮೂಲಕ ವಿದೇಶೀ ವ್ಯಾಪಾರದಲ್ಲಿ ಲಾಭ ಮಾಡಿಕೊಳ್ಳಬಯಸಿದೆ. +ರಾಷ್ಟ್ರೀಯತೆಯ ಹೆಸರಿನಲ್ಲಿಯೇ ಇದನ್ನು ಮಾಡುತ್ತಿರುವುದಾಗಿ ಹೇಳುತ್ತಿದೆ. +ಸ್ವತಃ ತಮಗಾಗಿ ಲಾಭಗಳಿಸುವುದಕ್ಕಿಂತ ಹೆಚ್ಚಿನ ಇನ್ನಾವುದೇ ವಿಷಯದಲ್ಲಿ ವರ್ತಕರಿಗೆ ಆಸಕ್ತಿಯಿಲ್ಲ. +ಕಾಂಗ್ರೆಸ್ಸಿನ ವಿಷಯದಲ್ಲಿ ನಾನೇನು ಹೇಳಬೇಕು? +ಅದರ ದೃಷ್ಟಿಕೋನ ಏನು? +ದುಂಡು ಮೇಜಿನ ಪರಿಷತ್ತಿನಲ್ಲಿ ಕಾಂಗ್ರೆಸ್‌ ಭಾರತದ ಏಕೈಕ ಪಕ್ಷವಾಗಿದ್ದು ಇತರ ಯಾರನ್ನೂ ಗಣನೆಗೆ ತೆಗೆದುಕೊಳ್ಳಬಾರದು. + ಬ್ರಿಟನ್‌ ಕಾಂಗ್ರೆಸಿನೊಡನೇ ತೀರ್ಮಾನಕ್ಕೆ ಬರಬೇಕೆಂದು ಅದು ತಳೆದ ನಿಲುವೇ ಕಾಂಗ್ರೆಸ್ಸಿನ ದೃಷ್ಟಿಕೋನವಾಗಿದೆ ಎಂದು ಹೇಳಿದರೆ ಅದು ಉತ್ಪ್ರೇಕ್ಷೆಯೂ ಅಲ್ಲ ಮತ್ತು ವಿಪರ್ಯಾಸವೂ ಅಲ್ಲ. +ಇದು ದುಂಡುಮೇಜಿನ ಪರಿಷತ್ತಿನಲ್ಲಿ ಗಾಂಧಿಯವರ ಹಾಡಿನ ಪಲ್ಲವಿಯಾಗಿತ್ತು. +ಅವರು ತಾವೇ ಭಾರತದ ಸರ್ವಾಧಿಕಾರಿ ಎಂದು ಬಿಟಿಷ್‌ರಿಂದ ಮಾನ್ಯತೆ ಪಡೆಯಲು ಎಷ್ಟರಮಟ್ಟಿಗೆ ನಿರತರಾಗಿದ್ದರೆಂದರೆ ಅವರಿಗೆ ಯಾರೊಡನೆ ತೀರ್ಮಾನಕ್ಕೆ ಬರಬೇಕೆಂದುದು ಮುಖ್ಯವಾಗಿತ್ತೇ ಹೊರತು ತೀರ್ಮಾನದ ಷರತ್ತುಗಳು ಮುಖ್ಯವಾಗಿರಲಿಲ್ಲ. +ತೀರ್ಮಾನದ ಷರತ್ತುಗಳ ವಿಷಯದಲ್ಲಿ ವ್ಯವಹರಿಸಲು ಗಾಂಧಿಯವರು ಸಮರ್ಥರಾಗಿರಲಿಲ್ಲ. +ಅವರು ಲಂಡನ್ನಿಗೆ ಹೋದಾಗ ಅವರ ಹತ್ತಿರ ಸಲಹೆಗಾಗಿ ಹೋಗಿ ಅವರ ಆಶೀರ್ವಾದ ಪಡೆದು ಹಿಂತಿರುಗುವ ಜನರಂತೆ ಅಲ್ಲ. +ಆದರೆ ಅವರನ್ನು ಒಬ್ಬ ನ್ಯಾಯವಾದಿ ತನ್ನೆದುರಿಗೆ ಕಟಕಟೆಯಲ್ಲಿ ನಿಂತ ಸಾಕ್ಷಿದಾರನೊಡನೆ ವ್ಯವಹರಿಸುವಂತೆ ವ್ಯವಹರಿಸಲಾಗುವುದೆಂಬ ಅಂಶವನ್ನು ಅವರು ಮರೆತಿದ್ದರು. +ಗಾಂಧಿಯವರು ತಾವು ಹೋಗುತ್ತಿರುವುದು ಒಂದು ರಾಜಕೀಯ ಸಮ್ಮೇಳನಕ್ಕೆ ಎಂಬುದನ್ನೂ ಮರೆತಿದ್ದರು. +ಅವರು ನರ್ಸಿ ಮೆಹತಾರವರ ಹಾಡುಗಳನ್ನು ಹಾಡುತ್ತಾ ಒಂದು ವೈಷ್ಣವ ದೇವಾಲಯಕ್ಕೆ ಹೋಗುವಂತೆ ಅಲ್ಲಿಗೆ ಹೋಗಿದ್ದರು. +ಎಲ್ಲಾ ಸಂಗತಿಗಳನ್ನು ಕುರಿತು ಯೋಚಿಸಿದಾಗ ಯಾವುದಾದರೂ ರಾಷ್ಟ್ರ ತನ್ನ ರಾಷ್ಟೀಯ ಸಮಸ್ಯೆಯನ್ನು ಬಗೆಹರಿಸುವ ಉದ್ದೇಶದಿಂದ ಸಂಧಾನ ಮಾಡಲು ಗಾಂಧಿಯವರಿಗಿಂತ ಅಸಾಮರ್ಥ್ಯ ವ್ಯಕ್ತಿಯನ್ನು ಕಳುಹಿಸುವುದು ಸಾಧ್ಯವೇ ಎಂದು ನನಗೆ ಆಶ್ಚರ್ಯವೆವಿಸಿದೆ. +ಗಾಂಧಿಯವರು ಸಂಧಾನ ಮಾಡುವುದರಲ್ಲಿ ಎಷ್ಟು ಅಸಮರ್ಥರಾಗಿದ್ದರೆಂದರೆ ಈ ರಾಯಭಾರಿಯನ್ನು ದೇಶದ ಸ್ವಾತಂತ್ರ್ಯದ ತತ್ವದ ಆಧಾರದ ಮೇಲೆ ಸಂಧಾನ ಮಾಡಲು ಕಳುಹಿಸಿದರೆ ಪ್ರಾಂತೀಯ ಸ್ವಾಯತ್ತತೆಯನ್ನು ಒಪ್ಪಿಕೊಂಡು ಭಾರತಕ್ಕೆ ಮರಳಲು ಅವರು ಸಿದ್ಧರಾಗಿದ್ದರೆಂಬ ಅಂಶದಿಂದ ಸ್ಪಷ್ಟವಾಗುತ್ತದೆ. +ಗಾಂಧಿಯವರು ದುಂಡುಮೇಜಿನ ಪರಿಷತ್ತಿನಲ್ಲಿ ಭಾರತದ ಹಿತಾಸಕ್ತಿಗಳಿಗೆ ಅನಾಹುತ ಉಂಟುಮಾಡಿದಷ್ಟು ಇನ್ನಾರೂ ಮಾಡಿರಲಿಕ್ಕಿಲ್ಲ ಅವರ ಬಗ್ಗೆ ಹೆಚ್ಚು ಹೇಳದಿರುವುದೇ ಲೇಸು. +ಒಕ್ಕೂಟ ವ್ಯವಸ್ಥೆಯ ಪ್ರಸ್ತುತ ಯೋಜನೆಯಲ್ಲಿ ಈ ಪ್ರತಿಯೊಂದು ಹಿತಾಸಕ್ತಿಗಳು ಎಷ್ಟರ ಮಟ್ಟಿಗೆ ತೃಪ್ರವಾಗಿವೆ ಎಂದು ಹೇಳುವುದು ನನ್ನ ಕೆಲಸವಲ್ಲ. +ಈ ಸಂಯುಕ್ತ ರಾಜ್ಯದ ವಿಷಯದಲ್ಲಿ ನಾವು ಯಾವ ನಿರ್ಣಯ ತೆಗೆದುಕೊಳ್ಳಬೇಕು ಎಂದು ಪರಿಶೀಲಿಸುವಾಗ ನಾವು ಪರಿಗಣಿಸಬಹುದಾದಂತಹ ದೃಷ್ಟಿಕೋನಗಳು ಇವಿಷ್ಟು ಮಾತ್ರವೇ ಎಂಬ ಪ್ರಶ್ನೆಯನ್ನು ಯಾರಾದರೂ ಕೇಳಬಹುದು. +ಇದುವರೆಗೆ ಪ್ರಸ್ತಾಪಿಸಿದ ದೃಷ್ಟಿಕೋನಗಳಲ್ಲದೇ ನಾವು ಗಮನಿಸಬೇಕಾದ ಇತರ ದೃಷ್ಟಿಕೋನಗಳೂ ಇವೆ. +ಅವುಗಳಲ್ಲಿ ಸ್ವತಂತ್ರ ಪ್ರಜೆಗಳ ದೃಷ್ಟಿಕೋನ ಒಂದಿದೆ. +ಸಂಯುಕ್ತ ರಾಜ್ಯದ ಬಗ್ಗೆ ಅವರ ನಿಲುವು ಏನು? +ಸಂಯುಕ್ತ ರಾಜ್ಯವು ಇವರನ್ನು ಪರಿಗಣಿಸಿದಂತೆಯೇ ಇಲ್ಲ. +ಆದಾಗ್ಯೂ ಅವರೇ ಈ ವಿಷಯಕ್ಕೆ ಹೆಚ್ಚು ಸಂಬಂಧ ಇರುವವರು. +ಫೆಡರಲ್‌ ಸಂವಿಧಾನವು ಅವರ ಸ್ವಾತಂತ್ರ್ಯಕ್ಕೆ ವಿಪತ್ಕಾರಿಯಾಗಲಾರದೆಂದು ಅವರು ಆಶಿಸಬಹುದೇ? +ಈ ಯೋಜನೆಯು ಕಾರ್ಯಗತವಾದಲ್ಲಿ ಅದು ಸ್ಟತಂತ್ರ ಪ್ರಜೆಗೆ ಸದಾ ವಿಪತ್ಕಾರಿಯಾಗುವುದು ಮತ್ತು ಬಡವರಿಗೆ ಆತಂಕಕಾರಿಯಾಗವುದು ಖಚಿತ. +ರಾಜರುಗಳ ದಬ್ಬಾಳಿಕೆಗೆ ಅವರನ್ನು ಸಿಲುಕಿಸಿದಾಗ ಯಾವ ಸ್ವಾತಂತ್ರ್ಯವಿರಲು ಸಾಧ್ಯ? +ಪಟ್ಟಭದ್ರ ಹಿತಾಸಕ್ತಿಗಳ ಹಕ್ಕುಗಳು ಸಂಪೂರ್ಣವಾಗಿ ಬೇರುಬಿಟ್ಟಿರುವ ಮೇಲ್ಮನೆಗಳಿರುವಾಗ ಮತ್ತು ಆಸ್ತಿಗೆ ಸಂಬಂಧಿಸಿದ ಕಾನೂನುಗಳನ್ನು ಮಂಡಿಸುವಾಗಲೂ ಮತ್ತು ಅಂಗೀಕರಿಸುವಾಗಲೂ ಸರಕಾರದ ಒಪ್ಪಿಗೆ ಬೇಕಾಗಿರುವಾಗ ಯಾವ ಆರ್ಥಿಕ ಪ್ರಗತಿ ಸಾಧ್ಯವಿದೆ? +ಉಪಸಂಹಾರ ನಾನು ಬಹುಶಃ ಅವಶ್ಯಕತೆಗಿಂತ ಹೆಚ್ಚುಕಾಲ ನಿಮ್ಮನ್ನು ನಿಲ್ಲಿಸಿಕೊಂಡಿದ್ದೇನೆಂದು ತೋರುತ್ತದೆ. +ಇದು ಸಂಪೂರ್ಣ ನನ್ನ ತಪ್ಪಲ್ಲ. +ವಿಷಯದ ವ್ಯಾಪ್ತಿ ಈ ಉಪನ್ಯಾಸ ಬೆಳೆಯಲು ಒಂದು ಕಾರಣವಾಗಿದೆ. +ಉಪನ್ಯಾಸ ಮೊಟಕುಗೊಳಿಸದೇ ಇರುವುದಕ್ಕೆ ಇನ್ನೂ ಒಂದು ಕಾರಣವಿದೆಯೆಂದು ನಾನು ಒಪ್ಪಿಕೊಳ್ಳಲೇಬೇಕಾಗಿದೆ. +ನಾವು ಇಂದು ಒಂದು ಹಳೆಯ ಯುಗ ಬದಲಾಗಿ ಹೊಸಯುಗ ಆರಂಭವಾಗುತ್ತಿರುವ ಹಂತದಲ್ಲಿದ್ದೇವೆ. +ಹಳೆಯ ಯುಗವು ರಾನಡೆ, ಅಗರ್ಕರ್‌, ತಿಲಕ್‌, ಗೋಖಲೆ,ವಾಚ್ಛಾ, ಸರ್‌ ಫಿರೋಜ್‌ಷಾ ಮೆಹತಾ, ಸುರೇಂದ್ರನಾಥ ಬ್ಯಾನರ್ಜಿಯವರ ಯುಗವಾಗಿತ್ತು. +ಹೊಸ ಯುಗವು ಗಾಂಧಿಯವರ ಯುಗವಾಗಿದ್ದು ಇಂದಿನ ತಲೆಮಾರನ್ನು ಗಾಂಧಿ ತಲೆಮಾರೆಂದೇ ಕರೆಯಲಾಗಿದೆ. +ಹಳೆಯ ಮತ್ತು ಹೊಸಯುಗಗಳೆರಡನ್ನೂ ಬಲ್ಲವನಾದ ನನಗೆ ಈ ಎರಡೂ ಯುಗಗಳಲ್ಲಿ ಕೆಲವು ನಿರ್ದಿಷ್ಟ ವ್ಯತ್ಯಾಸಗಳು ಕಂಡುಬರುತ್ತವೆ. +ನಾಯಕತ್ವದ ರೀತಿಯಲ್ಲಿ ಅಗಾಧವಾದ ಬದಲಾವಣೆಯಾಗಿದೆ. +ರಾನಡೆಯವರ ಯುಗದಲ್ಲಿ ನಾಯಕರುಗಳು ಭಾರತದ ಆಧುನೀಕರಣಕ್ಕಾಗಿ ಶ್ರಮಿಸಿದರು. +ಗಾಂಧಿಯವರಯುಗದಲ್ಲಿ ನಾಯಕರು ಅದನ್ನು ಪುರಾತತ್ವದ ಜೀವಂತ ಪ್ರತೀಕವನ್ನಾಗಿಸುತ್ತಿದ್ದಾರೆ. +ರಾನಡೆಯವರ ಯುಗದಲ್ಲಿ ನಾಯಕರು ತಮ್ಮ ವಿಚಾರಗಳು ಮತ್ತು ಕೃತಿಗಳನ್ನು ತಮ್ಮ ಅನುಭವಗಳ ಆಧಾರದ ಮೇಲೆ ನಿರೂಪಿಸಿದ್ದರು. + ಇಂದಿನ ಯುಗದ ನಾಯಕರು ತಮ್ಮ ಅಂತರ್ವಾಣಿಯಿಂದ ಮಾರ್ಗದರ್ಶನ ಪಡೆಯುತ್ತಾರೆ. +ಅವರ ಬೌದ್ಧಿಕ ಸ್ಥಿತಿಯಲ್ಲಿಯೂ ಅಲ್ಲದೆ ಅವರ ಬಾಹ್ಯ ರೂಪದ ಬಗ್ಗೆಯೂ ಭಿನ್ನ ದೃಷ್ಟಿಕೋನ ಹೊಂದಿರುತ್ತಾರೆ. +ಹಳೆಯ ಯುಗದ ನಾಯಕರು ಸರಿಯಾದ ಉಡುಪು ಧರಿಸುವುದರಲ್ಲಿ ಅಭಿಮಾನಪಡುತ್ತಿದ್ದರು. + ಆದರೆ ಇಂದಿನ ನಾಯಕರು ಅರೆನಗ್ನರಾಗಿರುವುದರಲ್ಲಿಯೆ ಅಭಿಮಾನ ಹೊಂದಿರುತ್ತಾರೆ. +ಗಾಂಧಿಯುಗದ ನಾಯಕರಿಗೆ ಈ ವ್ಯತ್ಯಾಸದ ಅರಿವಿದೆ. +ಆದರೆ ಇದರಿಂದ ನಾಚಿಕೆಪಡದೆ ಗಾಂಧಿ ಯುಗದ ಭಾರತ ರಾನಡೆಯವರ ಕಾಲದ ಭಾರತಕ್ಕಿಂತ ಶ್ರೇಷ್ಠವೆಂದು ಹೇಳಿಕೊಳ್ಳುತ್ತಿದ್ದಾರೆ. +ಗಾಂಧಿ ಯುಗವು ಕ್ಷೋಭೆ ಮತ್ತು ನಿರೀಕ್ಷಣೆಯ ಯುಗವಾಗಿದ್ದು, ರಾನಡೆಯವರ ಯುಗ ಹೀಗಿರಲಿಲ್ಲ ಎಂದು ಅವರು ಹೇಳುತ್ತಾರೆ. +ರಾನಡೆ ಯುಗ ಮತ್ತು ಗಾಂಧಿ ಯುಗಗಳೆರಡರಲ್ಲೂ ಜೀವಿಸಿದ ಜನರು ಎರಡೂ ಯುಗಗಳಲ್ಲಿರುವ ವ್ಯತ್ಯಾಸವನ್ನು ಒಪ್ಪಿಕೊಳ್ಳುತ್ತಾರೆ. +ಅದೇ ಸಮಯದಲ್ಲಿ ಅವರು ರಾನಡೆಯವರ ಭಾರತದಲ್ಲಿ ಕ್ಷೋಭೆ ಕಡಿಮೆ ಇದ್ದರೂ ಅದು ಹೆಚ್ಚು ಸತ್ಯ ಸ್ಪರೂಪಿಯಾಗಿತ್ತು . +ಅದರಲ್ಲಿ ನಿರೀಕ್ಷೆ ಕಡಿಮೆಯಾಗಿದ್ದರೂ ಅದು ಹೆಚ್ಚು ತಿಳುವಳಿಕೆಯ ಯುಗವಾಗಿತ್ತೆಂದು ಹೇಳಬಲ್ಲರು. +ರಾನಡೆಯವರ ಯುಗದಲ್ಲಿ ಸ್ತ್ರೀಪುರುಷರು ತಮ್ಮ ಜೀವನದ ಸಂಗತಿಗಳ ಅಧ್ಯಯನ ಮತ್ತು ಪರಿಶೀಲನೆಯಲ್ಲಿ ನಿರತರಾಗಿದ್ದರು . +ಇದಕ್ಕಿಂತಲೂ ಹೆಚ್ಚಾಗಿ ಸಂಪ್ರದಾಯಬದ್ಧ ಶ್ರೀಸಾಮಾನ್ಯರ ಸಮೂಹ ವಿರೋಧವನ್ನು ಎದುರಿಸಿ ತಮ್ಮಜೀವನ ಮತ್ತು ನಡತೆಗಳನ್ನು ತಮ್ಮ ಸಂಶೋಧನೆಯ ಫಲವಾಗಿ ದೊರೆತ ಜ್ಞಾನದ ಪ್ರಕಾರ ನಿರೂಪಿಸಿಕೊಳ್ಳುವ ಪ್ರಯತ್ನ ಮಾಡಿದರು. +ಗಾಂಧಿ ಯುಗದಲ್ಲಿ ಕಂಡು ಬರುವಂತೆ ರಾನಡೆ ಯುಗದಲ್ಲಿ ರಾಜಕಾರಣಿ ಮತ್ತು ಅಧ್ಯಯನ ಶೀಲತೆಯ ನಡುವೆ ವಿಚ್ಛೇದನವಿರಲಿಲ್ಲ. + ರಾನಡೆಯವರ ಕಾಲದಲ್ಲಿ ಅಧ್ಯಯನಶೀಲನಾಗಿರದ ರಾಜಕಾರಣಿಯನ್ನು ಅಪಾಯಕಾರಿ ಎಂದಲ್ಲದಿದ್ದರೂ, ಅಸಹನೀಯ ಕಿರಿಕಿರಿ ಎಂದು ಪರಿಗಣಿಸಲಾಗುತ್ತಿತ್ತು . + ಗಾಂಧಿ ಯುಗದಲ್ಲಿ ಅಧ್ಯಯನ ತಿರಸ್ಕರಿಸಿಲ್ಲವಾದರೂ ಅದು ರಾಜಕಾರಣಿಗೆ ಆವಶ್ಯವಾಗಿರಬೇಕಾದ ಅರ್ಹತೆ ಎಂದು ಪರಿಗಣಿಸಲಾಗಿಲ್ಲವೆಂಬುದು ನಿಜ. +ನನಗನ್ನಿಸಿದ ಮಟ್ಟಿಗೆ ಈ ಗಾಂಧಿ ಯುಗವು ಭಾರತದ ಕರಾಳ ಯುಗವಾಗಿದೆ ಎಂಬುದರಲ್ಲಿ ಸಂಶಯವಿಲ್ಲ. +ಜನರು ತಮ್ಮ ಆದರ್ಶಗಳಿಗಾಗಿ ಭವಿಷ್ಯದತ್ತ ನೋಡುವ ಬದಲು ಪ್ರಾಚೀನತೆಯತ್ತ ನೋಡುವ ಯುಗ ಇದಾಗಿದೆ. +ಜನರು ಸ್ವತಃ ಚಿಂತನ ಮಾಡದೆ ಇರುವುದರಿಂದ ತಮ್ಮ ಜೀವನದ ಸಂಗತಿಗಳನ್ನು ಕುರಿತ ಅಧ್ಯಯನ ಮತ್ತು ಪರಿಶೀಲನೆಯನ್ನು ಮಾಡದೆ ಇರುವ ಯುಗವಿದು. +ಅಧ್ಯಯನ ಮತ್ತು ಅನುಭವಗಳು ತೋರಿದ ಮಾರ್ಗದಲ್ಲಿ ನಡೆಯಲು ನಿರಾಕರಿಸಿ ಅತೀಂದ್ರಿಯ ವಾದಿಗಳು ಮತ್ತು ಸ್ವಪ್ರತಿಷ್ಠತರು ತೋರಿದ ಕರಾಳ ಮಾರ್ಗದಲ್ಲಿ ನಡೆಯ ಬಯಸುವ ಆಜ್ಜಾನಿಗಳ ಪ್ರಜಾಪ್ರಭುತ್ವ ಒಂದು ದುಃಖದಾಯಕ ಸಂಗತಿ. +ಇಂತಹ ಯುಗದಲ್ಲಿ ಫೆಡರಲ್‌ ಯೋಜನೆಯ ಕೇವಲ ವಿವರಣೆಗಿಂತ ಹೆಚ್ಚಿನ ಪರಿಶೀಲನೆ ಅವಶ್ಯಕವೆಂದು ನನಗನಿಸಿತು. +ನಿಶ್ವೇಷವಲ್ಲದಿದ್ದರೂ ಪೂರ್ಣವಾದ ಪರಿಶೀಲನೆಯ ಅವಶ್ಯವಿದ್ದುದರಿಂದ ಮತ್ತು ಸೂತ್ರಾಂಧತೆಯಿಂದಲ್ಲವಾದರೂ ಸ್ಪಷ್ಟವಾಗಿ ಹೇಳಿ ಸಂಯುಕ್ತ ರಾಜ್ಯ ಯೋಜನೆಯ ಉದ್ಭಾಟನೆಯಿಂದಾಗಬಹುದಾದ ಅಪಾಯಗಳತ್ತ ಲಕ್ಷ್ಯ ಸೆಳೆಯುವುದೇ ನನ್ನ ಉದ್ದೇಶವಾಗಿದೆ. +ಈ ಉಪನ್ಯಾಸ ಸಿದ್ಧಪಡಿಸುವಲ್ಲಿ ಇದೇ ಉದ್ದೇಶವನ್ನು ನನ್ನ ಮುಂದೆ ನಿರ್ಣಯಿಸುವುದು ನಿಮಗೆ ಬಿಟ್ಟ ವಿಷಯ. +ಉಪನ್ಯಾಸದ ವಿಸ್ತಾರವನ್ನು ಅದರ ಗಾಢತೆ ಭರಿಸದೇ ಹೋಗಿದ್ದಲ್ಲಿ ನಾನು ನನ್ನ ತಿಳುವಳಿಕೆಯ ಪ್ರಕಾರ ನನ್ನ ಕರ್ತವ್ಯ ಮಾಡಿದ್ದೇನೆಂದಷ್ಟೇ ಹೇಳ ಬಲ್ಲೆ. +ನಾನು ಒಕ್ಕೂಟ ವ್ಯವಸ್ಥೆಯ ವಿರೋಧಿಯಲ್ಲ. +ನಾನು ಏಕಾತ್ಮಕ ಸರಕಾರದ ಪಕ್ಷಪಾತಿಯಾಗಿರುವೆನೆಂಬುದನ್ನು ಒಪ್ಪಿಕೊಳ್ಳುತ್ತೇನೆ. +ನನ್ನ ಅಭಿಪ್ರಾಯದಲ್ಲಿ ಭಾರತಕ್ಕೆ ಅದರ ಅವಶ್ಯಕತೆ ಇದೆ. +ಆದರೆ ಪ್ರಾಂತೀಯ ಸ್ವಾಯತ್ತತೆ ಇರಬೇಕೆಂದರೆ ಸಂಯುಕ್ತ ರಾಜ್ಯ ಸ್ಪರೂಪ ಸರಕಾರ ಅನಿವಾರ್ಯ. +ಆದರೆ ಭಾರತ ಸರಕಾರ ಕಾಯ್ದೆಯಲ್ಲಿ ಅಡಕವಾಗಿರುವ ಫೆಡರಲ್‌ ಯೋಜನೆಯ ಬಗ್ಗೆ ನಾನು ಭಯಭೀತನಾಗಿದ್ದೇನೆ. +ಸಾಕಷ್ಟು ಕಾರಣಗಳನ್ನು ನೀಡುವ ಮೂಲಕ ನನ್ನ ವಿರೋಧವನ್ನು ಸಮರ್ಥಿಸಿಕೊಂಡಿರುವೆನೆಂದು ನನಗನಿಸಿದೆ. +ಎಲ್ಲರೂ ಅವುಗಳನ್ನು ಪರಿಶೀಲಿಸಿ ತಮ್ಮ ಸ್ವಂತ ನಿರ್ಣಯಕ್ಕೆ ಬರಬೇಕೆಂದು ನಾನು ಬಯಸುತ್ತೇನೆ. +ಪ್ರಾಂತೀಯ ಸ್ಥಾಯತ್ತತೆ ಸಂಯುಕ್ತ ರಾಜ್ಯ ಯೋಜನೆಗಿಂತ ಭಿನ್ನವಾಗಿದೆ ಎಂಬ ಅಂಶವನ್ನು ನಾವೆಲ್ಲರೂ ಅರಿತುಕೊಳ್ಳಬೇಕು. +ಗವರ್ನರ್‌ಗಳು ಆಶ್ವಾಸನೆ ನೀಡಿದಂತೆ ಗವರ್ನರ್‌-ಜನರಲ್ಲರೂ ತಮ್ಮ ವಿಶೇಷ ಜವಾಬ್ದಾರಿಗಳಡಿಯಲ್ಲಿ ತಮ್ಮ ಅಧಿಕಾರವನ್ನು ಚಲಾಯಿಸುವುದಿಲ್ಲವೆಂದು ಆಶ್ವಾಸನೆ ನೀಡುವ ಪಕ್ಷದಲ್ಲಿ ಸಂಯುಕ್ತ ರಾಜ್ಯವನ್ನು ಒಪ್ಪಿಕೊಳ್ಳಬಹುದೆಂದು ಹೇಳುವವರಿಗೆ ನಾನು ಎರಡು ಸಂಗತಿಗಳನ್ನು ತಿಳಿಸ ಬಯಸುತ್ತೇನೆ. +ಮೊದಲನೆಯದಾಗಿ, ಗವರ್ನರ್‌-ಜನರಲ್‌ರು ಇಂತಹ ಯಾವುದೇ ಆಶ್ವಾಸನೆಯನ್ನು ಕೊಡಲಾರರು ಎಂದು ನನಗೆ ಖಚಿತವಿದೆ. +ಏಕೆಂದರೆ ಅವರು ತಮ್ಮ ಅಧಿಕಾರಗಳನ್ನು ಪ್ರಭುತ್ವದ ಹಿತಾಸಕ್ತಿ ಮತ್ತು ರಾಜ್ಯಗಳ ಹಿತಾಸಕ್ತಿಗಳಿಂದಾಗಿಯೂ ಚಲಾಯಿಸುತ್ತಾರೆ. +ಎರಡನೆಯದಾಗಿ ಅವರು ಹಾಗೆ ಮಾಡಿದಾಗ್ಯೂ ಸಂಯುಕ್ತ ರಾಜ್ಯದ ಸ್ವರೂಪ ಬದಲಾಗುವುದಿಲ್ಲ. +ರಾಜ್ಯಗಳ ಪ್ರಾತಿನಿಧ್ಯಕ್ಕಾಗಿ ನಾಮಕರಣ ಪದ್ಧತಿಯ ಬದಲು ಚುನಾವಣೆಯ ಪದ್ಧತಿಯನ್ನನುಸರಿಸುವುದರಿಂದ ಸಂಯುಕ್ತ ರಾಜ್ಯ ಹೆಚ್ಚು ಗ್ರಾಹ್ಯವಾಗುವುದೆಂದು ತಿಳಿದಿರುವವರಿಗೆ ನಾನು ಹೇಳುವುದೇನೆಂದರೆ, ಅವರ ವಿವರದ ವಿಷಯವನ್ನು ಮೂಲಭೂತವೆಂದು ತಪ್ಪಾಗಿ ಪರಿಗಣಿಸುತ್ತಿದ್ದಾರೆ. +ಯಾವುದು ಮೂಲಭೂತ,ಯಾವುದು ಅಲ್ಲವೆಂಬುದನ್ನು ಗಮನಿಸೋಣ. +ಇದರ ಬಗ್ಗೆ ತಪ್ಪು ಕಲ್ಪನೆ ಬೇಡ, ಮೋಸ ಹೋಗುವುದೂಬೇಡ. +ಎರಡನ್ನೂ ಸಾಕಷ್ಟು ಅನುಭವಿಸಿದ್ದೇನೆ. +ಜವಾಬ್ದಾರಿಯನ್ನು ವಿಸ್ತರಿಸಿಕೊಳ್ಳುವುದು ಮತ್ತು ಅಭಿವೃದ್ಧಿ ಹೊಂದುವುದು ಇವೇ ಮುಂದಿರುವ ನಿಜವಾದ ಸವಾಲುಗಳಾಗಿವೆ. +ಇದು ಸಾಧ್ಯವೇ ಇದೇ ನಿರ್ಣಾಯಕ ಪ್ರಶ್ನೆ. +ಪ್ರಾಂತೀಯ ಸ್ವಾಯತ್ತತೆಯನ್ನು ಅಪ್ಪಿಕೊಂಡು ಕೇಂದ್ರದಲ್ಲಿ ಜವಾಬ್ದಾರಿಯನ್ನು ಗಾಳಿಯಲ್ಲಿ ತೂಗಾಡಲು ಬಿಡುವುದು ನಿರರ್ಥಕ. +ಕೇಂದ್ರದಲ್ಲಿ ಜವಾಬ್ದಾರಿ ಇರದೆ ಪ್ರಾಂತೀಯ ಸ್ವಾಯತ್ತತೆ ಬರೀ ಟೊಳ್ಳು ಎಂದು ನನಗೆ ಸಂಪೂರ್ಣ ಮನವರಿಕೆಯಾಗಿದೆ. +ನಮ್ಮ ದೃಷ್ಟಿಕೋನವನ್ನೇ ಒಪ್ಪಿಕೊಳ್ಳುವಂತೆ ಒತ್ತಾಯಪಡಿಸಲು ನಾವು ಏನು ಮಾಡಬೇಕು ಎಂದು ಚರ್ಚೆ ಮಾಡಲು ಇದು ಸೂಕ್ತ ವೇದಿಕೆಯಲ್ಲ. +ಈ ಫೆಡರಲ್‌ ಯೋಜನೆಯ ಅಪಾಯಗಳೇನು ಎಂಬ ವಿಷಯದಲ್ಲಿ ನಿಮಗೆ ಸಾಕಷ್ಟು ವಿಚಾರಗಳನ್ನು ಒದಗಿಸುವಲ್ಲಿ ನಾನು ಯಶಸ್ವಿಯಾಗಿದ್ದರೆ ನನಗೆ ಅಷ್ಟೇ ಸಾಕು. +ಕೋಮು ಪ್ರಾತಿನಿಧ್ಯದ ಬಿಕ್ಕಟ್ಟು: +ಒಂದು ಪರಿಹಾರ ಮಾರ್ಗ ಮಾನ್ಯ ಅಧ್ಯಕ್ಷರೆ,ಅಖಿಲ ಪರಿಶಿಷ್ಟ ಜಾತಿಗಳ ಒಕ್ಕೂಟದ ವಾರ್ಷಿಕ ಅಧಿವೇಶನದಲ್ಲಿ ಮಾತನಾಡಲು ನನ್ನನ್ನು ಆಹ್ವಾನಿಸಿದ್ದಕ್ಕಾಗಿ ಕೃತಜ್ಞತೆಗಳು. +ಪರಿಶಿಷ್ಟ ಜಾತಿಗಳು ಇಷ್ಟೊಂದು ಬೃಹತ್‌ ಪ್ರಮಾಣದಲ್ಲಿ ಸೇರಿರುವುದನ್ನು ಕಂಡು ನನಗೆ ಸಂತೋಷವಾಗಿದೆ. +ಹುಟ್ಟಿದ ಅತ್ಯಲ್ಪ ಕಾಲದಲ್ಲಿಯೇ ಬೃಹತ್ತಾಗಿ ಬೆಳೆದಿರುವ ಸಂಘಟನೆಯ ಏಳಿಗೆ ಅತ್ಯದ್ಭುತವಾಗಿದೆ. +ಭಾರತದೆಲ್ಲೆಡೆಯಿಂದ ಈ ಒಕ್ಕೂಟದ ಅಡಿಯಲ್ಲಿ ಒಂದಾಗಿರುವ ಪರಿಶಿಷ್ಟ ಜಾತಿ ಒಕ್ಕೂಟವನ್ನೇ ತಮ್ಮ ಏಕೈಕ ಪ್ರತಿನಿಧಿಯನ್ನಾಗಿಸಿಕೊಂಡಿರುವುದು ಪ್ರಶ್ನಾತೀತವಾಗಿದೆ. +ನಮ್ಮ ಸಂಘಟನೆ ಎದುರಿಸಿದ ಸಂಕಷ್ಟಗಳನ್ನು ಗಮನಿಸದಿದ್ದರೆ ಅಲ್ಪ ಕಾಲದಲ್ಲಿಯೇ ಅದು ಬೆಳೆದ ಎತ್ತರವನ್ನು ಮುಕ್ತ ಕಂಠದಿಂದ ಶ್ಲಾಘಿಸಿಲಾಗದು. +ನಮ್ಮ ಜನಗಳನ್ನು ಮರುಳು ಮಾತುಗಳಿಂದ, ಹುಸಿ ಆಶ್ವಾಸನೆಗಳಿಂದ ಮೋಸ ಮಾಡುವ ಇತರ ರಾಜಕೀಯ ಪಕ್ಷಗಳ ದಲ್ಲಾಳಿಗಳೂ ಇದ್ದಾರೆ. +ನಾವು ಬದುಕುತ್ತಿರುವ ಕಾಲಮಾನದ ಸಂಕೀರ್ಣತೆಗಳನ್ನು ಅರಿಯದ ಅಜ್ಞಾನ ನಮ್ಮ ಜನರಲ್ಲಿದೆ. +ಮಾತ್ರವಲ್ಲ, ಸಂಘಟನೆಯ ಮೂಲಕ ಸಾಧಿಸಬಹುದಾದ ರಾಜಕೀಯ ಗುರಿಗಳ ಕುರಿತೂ ಅವರು ಅರಿಯರು. +ನಮ್ಮಲ್ಲಿ ಅಗತ್ಯವಾದ ಸಂಪನ್ಮೂಲಗಳ ಕೊರತೆಯಿದೆ. +ಹಣದ ಅಭಾವವಿದೆ. +ನಮ್ಮದೆ ಪತ್ರಿಕೆಯೂ ಇಲ್ಲ. +ದೇಶಾದ್ಯಂತ ನಮ್ಮ ಜನಗಳು ಕ್ರೂರ ದಬ್ಬಾಳಿಕೆ, ಶೋಷಣೆಗೆ ಪ್ರತಿನಿತ್ಯ ಒಳಗಾಗುತ್ತಿದ್ದರೂ ಅವು ಪತ್ರಿಕೆಗಳಲ್ಲಿ ವರದಿಯಾಗುವುದಿಲ್ಲ. +ರಾಜಕೀಯ ಹಾಗೂ ಸಾಮಾಜಿಕ ವಿಷಯಗಳಿಗೆ ಸಂಬಂಧಿಸಿದಂತೆ ಇರುವ ನಮ್ಮ ನಿಲುವುಗಳನ್ನು ಪತ್ರಿಕೆಗಳು ವ್ಯವಸ್ಥಿತ ಸಂಚಿನ ಮೂಲಕ ಹತ್ತಿಕ್ಕುತ್ತಿವೆ. +ನಮ್ಮ ಜನರಿಗೆ ಶಿಕ್ಷಣ ಒದಗಿಸಲು, ಸಹಾಯ ಹಸ್ತ ಚಾಚಲು, ಸಂಘಟಿಸಿ ಹೋರಾಟಗಳನ್ನು ಅಣಿಗೊಳಿಸಲು ಅಗತ್ಯವಾದ ಧನ ಬಲವೂ ನಮ್ಮಲ್ಲಿಲ್ಲ. +ಇನ್ನು ನಾವು ಎದುರಿಸಬೇಕಾದ ಪ್ರತಿಕೂಲಗಳು. +ಈ ಎಲ್ಲಾ ಕಷ್ಟಗಳಿದ್ದರೂ ನಮ್ಮ ಒಕ್ಕೂಟವು ಇಷ್ಟು ಪ್ರಮಾಣದಲ್ಲಿ ಬೆಳೆದಿರುವುದಕ್ಕೆ ಕಾರಣ ಈ ಸಂಘಟನೆಯನ್ನು ಕಟ್ಟಲು ಮತ್ತು ಬೆಳೆಸಲು ನಮ್ಮಜನರ ನಿಃಸ್ವಾರ್ಥ ಮತ್ತು ಅವಿರತ ಶ್ರಮವೇ ಆಗಿದೆ. +ಮುಂಬಯಿ ನಗರ ಪರಿಶಿಷ್ಟ ಜಾತಿಗಳ ಒಕ್ಕೂಟದ ಅಧ್ಯಕ್ಷರಾದ ಶ್ರೀಯುತ ಗಣಪತಿ ಮಾಧವ ಜಾಧವ್‌ ಅವರಿಗೆ ಅವರು ಮಾಡಿದ ಸೇವೆಗಾಗಿ ಅವರನ್ನು ಅಭಿನಂದಿಸಲು ನೀವು ಸಮ್ಮತಿಸುವಿರೆಂದು ಭರವಸೆ ನನಗಿದೆ. +ಎಲ್ಲರಿಗೂ ತಿಳಿದಿರುವಂತೆ ಅವರುಅದ್ಭುತ ಸಂಘಟನಾ ಸಾಮರ್ಥ್ಯವುಳ್ಳವರು. +ಈ ಅಧಿವೇಶನದ ಯಶಸ್ಸಿಗೆ ಬಹುಮಟ್ಟಿಗೆ ಅವರ ಮತ್ತು ಅವರ ಸಹಚರರುಗಳ ಪ್ರಯತ್ನವೇ ಕಾರಣ. +ಸಾಮಾನ್ಯವಾಗಿ, ಇಂತಹ ಸಮ್ಮೇಳನದಲ್ಲಿ ನಾನು, ಪರಿಶಿಷ್ಟ ಜಾತಿಯವರು ಎದುರಿಸುತ್ತಿರುವ ಯಾವುದಾದರೂ ಸಾಮಾಜಿಕ ಮತ್ತು ರಾಜಕೀಯ ಸಮಸ್ಯೆಯ ಕುರಿತು ಮಾತನಾಡಬೇಕೆಂದು ನಮ್ಮ ಜನ ನಿರೀಕ್ಷಿಸಬಹುದು. +ಆದರೆ ನಾನು ಇಷ್ಟು ಸಂಕುಚಿತ ವಿಷಯದ ಮೇಲೆ ಭಾಷಣ ಮಾಡಬಯಸುವುದಿಲ್ಲ. +ಇದಕ್ಕೆ ಬದಲು ಸಾಮಾನ್ಯ ಮತ್ತು ವ್ಯಾಪಕವಾದ ಸಮಸ್ಯೆಯೆನಿಸಿದ ಭಾರತದ ಭಾವೀ ಸಂವಿಧಾನದ ರೂಪುರೇಷೆಗಳ ವಿಷಯವಾಗಿ ಮಾತನಾಡಲಿದ್ದೇನೆ. +ಈ ನಿರ್ಣಯಕ್ಕೆ ಬರಲು ಕಾರಣಗಳನ್ನು ನಾನೇ ವಿವರಿಸಬೇಕಾಗುತ್ತದೆ. +ಸದ್ಯದಲ್ಲಿ ಪರಿಶಿಷ್ಟಜಾತಿಗಳ ಚಳುವಳಿಯನ್ನು ನಡೆಸಿಕೊಂಡು ಹೋಗುವ ಮತ್ತು ಅದರ ದಿನನಿತ್ಯದ ಸಮಸ್ಯೆಗಳನ್ನು ಎದುರಿಸಲು ಜವಾಬ್ದಾರಿ ನನ್ನ ಮೇಲಿಲ್ಲ. +ನಾನಿರುವ ಸ್ಥಾನದ ಕಾರಣ ನಾನು ಅದರ ಹೊರಗಿದ್ದೇನೆಯಲ್ಲದೆಅದನ್ನು ನಿರ್ವಹಿಸುವ ಇಚ್ಛೆಯೂ ನನಗಿಲ್ಲ. +ಈ ಕಾರಣದಿಂದಲೇ ನಾನು ಪರಿಶಿಷ್ಟ ಜಾತಿಗಳ ಸಂಬಂಧಿಸಿದ ವಿಷಯದ ಮೇಲೆ ಮಾತನಾಡುವುದಿಲ್ಲ. +ಪರಿಶಿಷ್ಟ ಜಾತಿಗಳವರು ಸ್ಪಾರ್ಥಿಗಳಾಗಿದ್ದಾರೆಂಬ ಆಪಾದನೆ ಸಾಮಾನ್ಯವಾಗಿದೆ. +ಅವರು ಸದಾ ತಮ್ಮ ಬಗ್ಗೆಯೇ ಆಸಕ್ತರಾಗಿದ್ದು, ದೇಶದ ರಾಜಕೀಯ ಸಮಸ್ಯೆಗಳಿಗೆ ಯಾವುದೇ ಪರಿಹಾರ ಸೂಚಿಸುವಂತಹ ಯಾವುದೇ ರಚನಾತ್ಮಕ ಸಲಹೆಗಳನ್ನು ಕೊಡಲಾರರು ಎಂದೂ ಹೇಳಲಾಗಿದೆ. +ಇದು ಸಂಪೂರ್ಣ ಸುಳ್ಳು. +ಇದು ನಿಜವೇ ಆಗಿದ್ದರೂ ಅಸ್ಪಶ್ಯರು ಮಾತ್ರ ಅಪರಾಧಿಗಳಾಗುವುದಿಲ್ಲ. +ಭಾರತದ ಅನೇಕ ಜನರು ರಚನಾತ್ಮಕ ಸಲಹೆಗಳನ್ನು ನೀಡುತ್ತಾರೆ. +ಇದಕ್ಕೆ ಕಾರಣ ರಚನಾತ್ಮಕ ಸಲಹೆಗಳನ್ನು ನೀಡಲುಜನ ಅಸಮರ್ಥರೆಂದಲ್ಲ. +ಎಲ್ಲಾ ರಚನಾತ್ಮಕ ಸಲಹೆಗಳು ಹೊರಬರದಿರುವುದಕ್ಕೆ ಕಾಂಗ್ರೆಸ್‌ನಿಂದ ಬರದ ಯಾವುದೇ ಸಲಹೆಯನ್ನು ಗೌರವಿಸಬಾರದು ಮತ್ತು ಅದನ್ನು ಸ್ವೀಕರಿಸಲಾಗದು ಎಂದು ಜನ ಸಾಮಾನ್ಯರ ಮನಸ್ಸಿನ ಮೇಲೆ ಬೇರೂರುವಂತಹ ದೀರ್ಫವಾದ ಮತ್ತು ಸತತ ಅಪಪ್ರಚಾರವೇ ಕಾರಣ. +ಈ ಭಾವನೆಯೇ ದೇಶದಲ್ಲಿ ರಚನಾತ್ಮಕ ವಿಚಾರಗಳನ್ನು ಹಾಳುಗೆಡಹಿದೆ. +ಆದಾಗ್ಯೂ,ಪರಿಶಿಷ್ಟ ಜಾತಿಗಳ ಮೇಲೆ ಮಾಡಲಾದ ಈ ಆಪಾದನೆಯನ್ನು ಸಕಾರಾತ್ಮಕವಾಗಿ ವಿರೋಧಿಸಿ ಅವರೂದೇಶದ ರಾಜಕೀಯ ಪ್ರಗತಿಗಾಗಿ ರಚನಾತ್ಮಕ ಸಲಹೆಗಳನ್ನು ನೀಡಲು ಸಮರ್ಥರಾಗಿದ್ದಾರೆ ಎಂಬುದನ್ನು ತೋರಿಸಬೇಕೆಂಬುದು ನನ್ನ ವಿಚಾರ. + ದೇಶ ಬಯಸಿದರೆ ಈ ಸಲಹೆಗಳನ್ನು ಪರಿಶೀಲಿಸಬಹುದು. +ಇದು ನಾನು ಈ ಸಂದರ್ಭದಲ್ಲಿ ಮಾತನಾಡಲು ಸಾರ್ವತ್ರಿಕ ಆಸಕ್ತಿಯ ವಿಷಯವನ್ನು ಆರಿಸಿಕೊಳ್ಳಲು ಇದು ಎರಡನೆಯ ಕಾರಣವಾಗಿದೆ. +ಸಂವಿಧಾನ ರಚಿಸುವ ಜವಾಬ್ದಾರಿನನ್ನ ಮನಸ್ಸಿನಲ್ಲಿರುವ ಸಾಂವಿಧಾನಿಕ ಸೂಚನೆಗಳನ್ನು ಮಂಡಿಸುವ ಮೊದಲು ಎರಡು ಪೂರ್ವಭಾವಿ ಪ್ರಶ್ನೆಗಳನ್ನು ಎತ್ತಬಯಸುತ್ತೇನೆ. +ಮೊದಲನೆಯದಾಗಿ, ಭಾರತದ ಸಂವಿಧಾನವನ್ನು ಯಾರು ರಚಿಸಬೇಕು? +ಈ ಪ್ರಶ್ನೆ ಪ್ರಸ್ತುತವಾಗಿದೆ. +ಏಕೆಂದರೆ, ಬ್ರಿಟಿಷ್‌ ಸರಕಾರವೇ ಭಾರತದ ಸಂವಿಧಾನವನ್ನು ರಚಿಸಬೇಕೆಂದು ಕೇಳದೇ ಇದ್ದರೂ, ಉಂಟಾಗಿರುವ ಬಿಕ್ಕಟ್ಟನ್ನು ನಿವಾರಿಸಿ ಅವರೇ ಸಂವಿಧಾನವನ್ನು ರಚಿಸುವರೆಂಬ ಭರವಸೆಯನ್ನಿಟ್ಟುಕೊಂಡಿರುವ ಅನೇಕ ಜನರಿದ್ದಾರೆ. +ಇದು ಸಂಪೂರ್ಣ ದೋಷಪೂರಿತವಾದ ವಿಚಾರವಾಗಿದ್ದು ಇದನ್ನು ಹೊರಗೆಡಹಬೇಕಾಗಿದೆ. +ಬ್ರಿಟಿಷ್‌ರಿಂದ ರಚಿತವಾದ ಮತ್ತು ಹೇರಲಾದ ಸಂವಿಧಾನ ಒಂದು ಕಾಲದಲ್ಲಿ ಸಾಧ್ಯವಿತ್ತು. +ಆದರೆ ನಾವು ಯಾವ ರೀತಿಯ ಸಂವಿಧಾನಕ್ಕಾಗಿ ಹಂಬಲಿಸುತ್ತಿದ್ದೇವೆಯೋ ಅಂತಹ ಸಂವಿಧಾನವನ್ನು ಹೊರಗಿನಿಂದ ಹೇರಲು ಸಾಧ್ಯವಿಲ್ಲ. +ಭಾರತದ ಹಿಂದಿನ ಸಂವಿಧಾನ ಮತ್ತು ಮುಂದೆ ಬರಲಿರುವ ಸಂವಿಧಾನಗಳಲ್ಲಿ ಮೂಲಭೂತ ವ್ಯತ್ಯಾಸವಿದೆ. +ಯಾರು ಬ್ರಿಟಿಷರೇ ಭಾರತದ ಸಂವಿಧಾನವನ್ನು ರಚಿಸಬೇಕೆಂದು ಈಗಲೂ ಹೇಳುತ್ತಿದ್ದಾರೆಯೋ ಅವರಿಗೆ ಈ ವ್ಯತ್ಯಾಸದ ಅರಿವು ಇದ್ದಂತಿಲ್ಲ. +ಹಿಂದಿನ ಸಂವಿಧಾನಗಳಲ್ಲಿ ವ್ಯವಸ್ಥೆ ಕುಸಿದು ಉಂಟಾಗುವ ತುರ್ತು ಪರಿಸ್ಥಿತಿಯ ಕಲಮುಗಳಿದ್ದುದು ಒಂದು ಮುಖ್ಯ ವ್ಯತ್ಕಾಸ. +ಆದರೆ ಭಾರತದ ಹೊಸ ಸಂವಿಧಾನದಲ್ಲಿ ಇಂತಹ ತುರ್ತು ಪರಿಸ್ಥಿತಿಯ ಕಲಮುಗಳು ಇರುವುದು ಸಾಧ್ಯವಿಲ್ಲ. +ಭಾರತೀಯರು ಇಂತಹ ಕಲಮುಗಳನ್ನು ಖಂಡಿಸುತ್ತಾರೆ. +ಈಗಾಗಲೇ ೧೯೩೫ ರ ಭಾರತ ಸರಕಾರ ಕಾಯ್ದೆಯ ೯೩ ನೆಯ ಕುಪ್ರಸಿದ್ಧ ವಿಧಿಯನ್ನು ಖಂಡಿಸಲಾಗಿದೆ. +ಏಕೆಂದರೆ, ಈ ಕಾಯ್ದೆಯಲ್ಲಿ ೯೩ನೆಯ ವಿಧಿಯ ಸ್ಥಾನ ಮತ್ತು ಕಾರಣಗಳು ಜನರಿಗೆ ಗೊತ್ತಿಲ್ಲ. +ರಾಜಕೀಯ ಜೀವನವನ್ನು ರೂಪಿಸುವ ಮುಖ್ಯ ಅಂಶಗಳನ್ನು ನಾವು ಗಮನದಲ್ಲಿಟ್ಟುಕೊಂಡಾಗ ಇದರ ಮಹತ್ವ ತಿಳಿಯುತ್ತದೆ. +ಮೊಟ್ಟಮೊದಲನೆಯ ಅಂಶವೆಂದರೆ, ಶಾಂತಿ ಸುವ್ಯವಸ್ಥೆ ರಾಜಕೀಯ ವ್ಯವಸ್ಥೆಗೆ ಔಷಧವಿದ್ದಂತೆ. +ರಾಜಕೀಯ ವ್ಯವಸ್ಥೆಯಲ್ಲಿ ಜಾಡ್ಯ ಕಾಣಿಸಿಕೊಂಡಾಗ ಈ ಔಷಧವನ್ನು ಪ್ರಯೋಗಿಸಲೇಬೇಕಾಗುತ್ತದೆ. +ಇದು ಎಷ್ಟು ಮಹತ್ವದ್ದಾಗಿದೆಎಂದರೆ, ಈ ಔಷಧಿಯನ್ನು ಕೊಡದೇ ಇರುವುದು ಸಮಾಜ ಮತ್ತು ನಾಗರಿಕತೆಯ ವಿರುದ್ಧ ಎಸಗಿದ ಅಪರಾಧ ಎಂದು ಪರಿಗಣಿಸಬೇಕಾಗುತ್ತದೆ. +ಎರಡನೆಯ ಅಂಶವೆಂದರೆ, ಯಾವ ಸರಕಾರಕ್ಕೂ ಆಳುವ ಶಾಶ್ವತ ಹಕ್ಕು ಇಲ್ಲದಿದ್ದರೂ ಕೂಡ, ಆಡಳಿತ ನಡೆಸಲು ಎಂದರೆ ಶಾಂತಿ ಸುವ್ಯವಸ್ಥೆ ಕಾಪಾಡಿಕೊಂಡು ಹೋಗಲು ಯಾವುದಾದರೂ ಒಂದು ಸರಕಾರ, ಅದಕ್ಕಿಂತಲೂ ಒಳ್ಳೆಯ ಇನ್ನೊಂದು ಸರಕಾರ ಅದರ ಸ್ಥಾನಕ್ಕೆ ಬರುವವರೆಗಾದರೂ ಇರಬೇಕೆಂಬುದು ನಿಜ. +ತುರ್ತು ಪರಿಸ್ಥಿತಿಯ ಕಲಮು ಈ ಎರಡೂ ಉದ್ದೇಶಗಳನ್ನು ಈಡೇರಿಸುತ್ತದೆ. +ಆದ್ದರಿಂದ ಅದು ಜನರ ಶಾಂತಿ ಮತ್ತು ಸಮಾಧಾನಗಳಿಗೆ ಅಮೂಲ್ಯವಾದದ್ದಾಗಿದೆ. +ದೇಶವನ್ನು ಅರಾಜಕತೆಯಿಂದ ರಕ್ಷಿಸಲು ಇದೊಂದೇ ಮಾರ್ಗ. +ಏಕೆಂದರೆ ಸಾಂವಿಧಾನಿಕ ಸರಕಾರ ವಿಫಲಗೊಂಡಾಗ ತುರ್ತು ಪರಿಸ್ಥಿತಿಯ ವಿಧಿ ಸರಕಾರವನ್ನು ನಡೆಸಿಕೊಂಡು ಹೋಗಲು ಸಹಾಯಕವಾಗುವ ಉಪಯುಕ್ತತೆಯನ್ನು ಹೊಂದಿದೆ. +ಈ ಹಿಂದೆ ಸಾಂವಿಧಾನಿಕ ಸರಕಾರ ಮತ್ತು ಸಂವಿಧಾನ ವಿಫಲಗೊಂಡಾಗ ಜಾರಿಗೊಳಿಸುವ ಸರಕಾರದ ನಡುವಣ ವ್ಯತ್ಯಾಸ ಸಮಂಜಸವಾಗಿತ್ತು. +ಏಕೆಂದರೆ ಬ್ರಿಟಿಷ್‌ ಸರಕಾರವು ಭಾರತೀಯರಿಗೆ ಸಾಂವಿಧಾನಿಕ ಸರಕಾರದ ಹಕ್ಕನ್ನು ನೀಡಿತ್ತು ಮತ್ತು ಸಂವಿಧಾನ ವಿಫಲಗೊಂಡಾಗ ತಾನೇ ಆಳುವ ಹಕ್ಕನ್ನು ತನ್ನಲ್ಲಿಟ್ಟುಕೊಂಡಿತ್ತು. +ಭಾರತದ ಭವಿಷ್ಯದ ಸಂವಿಧಾನದಲ್ಲಿ ಈ ವ್ಯತ್ಯಾಸವನ್ನು ಉಳಿಸಿಕೊಳ್ಳುವುದು ಸಾಧ್ಯವಿಲ್ಲ. +ಭಾರತೀಯರಿಗೆ ಸಾಂವಿಧಾನಿಕ ಸರಕಾರದ ಹಕ್ಕನ್ನು ಕೊಡುವುದರೊಂದಿಗೆ ತುರ್ತುಪರಿಸ್ಥಿತಿಯಲ್ಲಿ ತಾವೇ ಆಳುವ ಹಕ್ಕನ್ನು ತಮ್ಮ ಕೈಯಲ್ಲಿಟ್ಟುಕೊಳ್ಳುವುದು ಅಸಾಧ್ಯವಾಗುವುದು. +ಇದಕ್ಕೆ ಕಾರಣಗಳು ಸುಸ್ಪಷ್ಟವಾಗಿವೆ. +ಹಿಂದಿನ ಸಂವಿಧಾನವು ಭಾರತವನ್ನು ಬ್ರಿಟಿಷ್‌ ಚಕ್ರಾಧಿಪತ್ಯದಲ್ಲಿ ಸ್ವಾತಂತ್ರ್ಯ ಪಡೆದ ಒಳರಾಷ್ಟ್ರವೆಂದು ಪರಿಗಣಿಸಿರಲಿಲ್ಲ. +ಭವಿಷ್ಯದ ಸಂವಿಧಾನವು ಭಾರತವನ್ನು ಆಧಿಪತ್ಯ ಹೊಂದಿರುವ ಒಳರಾಷ್ಟ್ರವೆಂಬ ಗ್ರಹಿಕೆಯ ಆಧಾರದ ಮೇಲೆ ರಚಿತವಾಗಲಿದೆ. +ತುರ್ತು ಪರಿಸ್ಥಿತಿಯಲ್ಲಿ ಹಸ್ತಕ್ಷೇಪ ಮಾಡುವುದು ಅಧಿಪತ್ಯ ಹೊಂದಿರದ ರಾಷ್ಟ್ರದಲ್ಲಿ ಮಾತ್ರ ಸಾಧ್ಯ . +ಆಧಿಪತ್ಯ ಮತ್ತು ತುರ್ತುಪರಿಸ್ಥಿತಿಯ ಕಲಮುಗಳಲ್ಲಿ ಹೊಂದಾಣಿಕೆಯಾಗದೇ ಅದು ವಿರೋಧಾಭಾಸವೆನಿಸುವುದು. +ಆಧಿಪತ್ಯ ಹೊಂದಿದ ಒಳರಾಷ್ಟ್ರದಲ್ಲಿ ಅಥವಾ ಒಂದು ಸಂಪೂರ್ಣ ಸ್ವತಂತ್ರ ರಾಷ್ಟ್ರದಲ್ಲಿ ಸಾಂವಿಧಾನಿಕ ಸರಕಾರ ಅಥವಾ ಬಂಡಾಯ ಮೂರನೆಯ ಮಾರ್ಗವೇ ಇಲ್ಲ. +ಇದರ ಅರ್ಥವೇನು ? +ಇದರ ಅರ್ಥವೆಂದರೆ, ಆಧಿಪತ್ಯ ಹೊಂದಿದ ಭಾರತಕ್ಕೆ ತುರ್ತು ಪರಿಸ್ಥಿತಿಯ ಸಾಧ್ಯತೆಯ ಆಧಾರದ ಮೇಲೆ ಸಂವಿಧಾನವನ್ನು ರಚಿಸುವುದು ಸಾಧ್ಯವಿಲ್ಲ. +ಇದನ್ನೇ ಇನ್ನೊಂದುರೀತಿಯಲ್ಲಿ ಹೇಳಬೇಕೆಂದರೆ, ಕೇವಲ ವಿಧೇಯತೆಯನ್ನು ಪಡೆಯುವ ಉದ್ದೇಶದಿಂದ ಮಾತ್ರವಲ್ಲದೆ,ಇಡೀ ಜನತೆಯ ಗೌರವ ಮತ್ತು ಆದರವನ್ನು ಪಡೆಯುವಂತಹ ಸಂವಿಧಾನವನ್ನು ರಚಿಸಬೇಕು. +ಎಲ್ಲರೂ ಅಲ್ಲದಿದ್ದರೂ ಕೊನೆಪಕ್ಷ ಭಾರತದ ರಾಷ್ಟ್ರೀಯ ಜೀವನದ ಪ್ರಮುಖ ಘಟಕಗಳು ಆ ಸಂವಿಧಾನವನ್ನು ಎತ್ತಿ ಹಿಡಿಯಲು ಸಿದ್ಧವಿರಬೇಕು. +ಸಂವಿಧಾನವನ್ನು ಭಾರತೀಯರಿಂದಲೇ ಮತ್ತು ಭಾರತೀಯರಿಗಾಗಿ ಹಾಗೂ ಭಾರತೀಯರ ಸ್ವಯಂ ಸಮ್ಮತಿಯಿಂದ ರಚಿಸಿದಾಗಲೇ ಇದು ಸಾಧ್ಯ. +ಸಂವಿಧಾನವನ್ನು ಬ್ರಿಟಿಷ್‌ ಸರಕಾರವು ಒತ್ತಾಯಪೂರ್ವಕವಾಗಿ ಹೇರಿದ್ದೇ ಆದರೆ ಕೆಲವರು ಅದನ್ನು ಒಪ್ಪಿಕೊಳ್ಳಬಹುದು. +ಇನ್ನು ಕೆಲವರು ವಿರೋಧಿಸಬಹುದು. +ಹೀಗಾದಾಗ ದೇಶದಲ್ಲಿ ಸಂವಿಧಾನ ವಿರೋಧ ಘಟಕವೊಂದು ಸೃಷ್ಟಿಯಾಗಬಹುದು. +ಅದು ಸಂವಿಧಾನವು ಕಾರ್ಯಗತವಾಗಲು ಸಹಾಯಕವಾಗುವ ಬದಲು ಅದನ್ನು ಮುರಿಯುವುದರಲ್ಲಿಯೇ ನಿರತವಾಗುವುದು. +ಸಂವಿಧಾನ ವಿರೋಧಿ ಪಕ್ಷವು ಸಂವಿಧಾನದ ವಿವಾದವನ್ನೇ ತನ್ನ ಕರ್ತವ್ಯವೆಂದು ಭಾವಿಸಿ ಲ್ಯಾಟನ್‌ ಅಮೆರಿಕಾದ ಮಾದರಿಯಲ್ಲಿ ಸಂವಿಧಾನದ ಕಾರ್ಯಾಚರಣೆಯಲ್ಲಿ ನಿರತವಾದ ಪಕ್ಷದ ವಿರುದ್ಧ ಸಮರ ಸಾರುವುದು. +ಬ್ರಿಟಿಷರು ತಾವು ಅದನ್ನು ಜಾರಿಗೊಳಿಸಲು ಇಲ್ಲಿ ಉಳಿಯುವುದೇ ಸಾಧ್ಯವಿಲ್ಲದಿರುವಾಗ ಅವರು ಭಾರತದ ಸಂವಿಧಾನ ರಚಿಸುವುದು ನಿಷ್ಟ್ರಯೋಜಕ. +ಯಾವುದೇ ಒಂದು ಶಕ್ತಿಶಾಲಿ ಘಟಕ ಅಥವಾ ಅಂತಹ ಘಟಕಗಳ ಸಮೂಹ ಸಂವಿಧಾನವನ್ನು ಬಲವಂತವಾಗಿ ಇತರರ ಮೇಲೆ ಜಾರಿಗೊಳಿಸಿದರೂ ಇದೇ ಪರಿಣಾಮ ಉಂಟಾಗುತ್ತದೆ. +ಆದ್ದರಿಂದ ಭಾರತೀಯರಿಗೆ ಆಧಿಪತ್ಯ ರಾಷ್ಟ್ರದ ಸ್ಥಾನ ಬೇಕಾಗಿದ್ದರೆ. +ಅವರು ಸಂವಿಧಾನ ರಚಿಸುವ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ, ಎಂಬುದು ನನ್ನ ದೃಢ ಅಭಿಪ್ರಾಯವಾಗಿದೆ. +ಈ ಪರಿಸ್ಥಿತಿಯಿಂದ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ. +ಸಂವಿಧಾನ ರಚನಾ ಸಮಿತಿ :ನಾನು ಎತ್ತಲಿರುವ ಎರಡನೆಯ ಪ್ರಶ್ನೆಯೆಂದರೆ : ಸಂವಿಧಾನವನ್ನು ರಚಿಸುವ ಅಧಿಕಾರವನ್ನು ಹೊಂದಿದ ಸಾಂವಿಧಾನಿಕ ರಚನಾ ಸಮಿತಿ ಇರಬೇಕೆ, ಎಂಬುದು. +ಈ ಬಗೆಯ ಸಮಿತಿಯ ಕುರಿತು ಎಲ್ಲರೂ ಮಾತನಾಡುತ್ತಿದ್ದಾರೆ. +ತನ್ನ ಸಚಿವರ ರಾಜೀನಾಮೆಯ ಮೊದಲು, ಕಾಂಗ್ರೆಸ್‌ ಪಕ್ಷವು, ತಾನು ಅಂಗೀಕರಿಸಿದ ನಿರ್ಣಯದಲ್ಲಿ ಭಾರತದ ಸಂವಿಧಾನವನ್ನು ಭಾರತೀಯರು ಒಳಗೊಂಡ ಸಮಿತಿಯೇ ರಚಿಸಬೇಕು, ಎಂದು ಒತ್ತಾಯಿಸಿದೆ. +ಕ್ರಿಪ್ಸ್‌ ಅವರ ಪ್ರಸ್ತಾವನೆಯಲ್ಲಿ ಈ ವಿಷಯವನ್ನು ಸೇರಿಸಲಾಗಿತ್ತು. +ಸಪ್ರು ಸಮಿತಿ ಸಹ ಇದೇ ನಿಲುವನ್ನು ಅನುಸರಿಸಿತು. +ಸಂವಿಧಾನ ಸಮಿತಿ ಸೂಚನೆಗೆ ನಾನು ಸಂಪೂರ್ಣವಾಗಿ ವಿರೋಧಿಯಾಗಿದ್ದೇನೆಂದು ಹೇಳಲೇಬೇಕಾಗಿದೆ. +ಇದು ಅತ್ಯಂತ ಅಪಾಯಕಾರಿ ಯೋಜನೆಯಾಗಿದ್ದು, ಇದು ದೇಶದಲ್ಲಿ ಆಂತರಿಕಯುದ್ಧಕ್ಕೆಡೆ ಮಾಡಬಹುದೆಂಂದು ನಾನು ಭಾವಿಸಿದ್ದೇನೆ. +ಮೊದಲನೆಯದಾಗಿ ಈ ಸಮಿತಿಯ ಅವಶ್ಯಕತೆ ಏನು ಎಂಬುದೇ ನನಗೆ ಅರ್ಥವಾಗುತ್ತಿಲ್ಲ. +ಅಮೆರಿಕಾ ಸಂಯುಕ್ತ ಸಂಸ್ಥಾನಗಳ ಸಂವಿಧಾನವನ್ನು ರಚಿಸುವಾಗ ಅಮೆರಿಕಾದ ಸಂವಿಧಾನ ಪಿತೃಗಳು ಇದ್ದ ಪರಿಸ್ಥಿತಿಯಲ್ಲಿ ಇಂದು ಭಾರತೀಯರು ಇಲ್ಲ. +ಅವರು ಸ್ಪತಂತ್ರ ಜನತೆಗೆ ಸೂಕ್ತವಾದಂತಹ ವಿಚಾರಗಳನ್ನು ನಿರೂಪಿಸಬೇಕಾಗಿತ್ತು. +ತಾವು ಉಲ್ಲೇಖಿಸಬಹುದಾದಂತಹ ಯಾವುದೇ ಸಂವಿಧಾನದ ಮಾದರಿಗಳಿರಲಿಲ್ಲ. + ಭಾರತೀಯರು ಇಂತಹ ಪರಿಸ್ಥಿತಿಯಲ್ಲಿಲ್ಲ. +ಸಂವಿಧಾನದ ಸಂಬಂಧದ ವಿಚಾರಗಳು ಮತ್ತು ಸಂವಿಧಾನದ ರೂಪರೇಷೆಗಳು ಸಿದ್ಧವಾಗಿವೆ. +ವೈವಿಧ್ಯತೆಗೆ ಇರುವ ಅವಕಾಶ ಅತಿ ಕಡಿಮೆ. +ನಾವು ಆರಿಸಿಕೊಳ್ಳಬಹುದಾದಂತಹ ಮಾದರಿಗಳು ಎರಡು ಅಥವಾ ಮೂರು ವಿಧಗಳಿಗಿಂತ ಹೆಚ್ಚಿಲ್ಲ. +ಮೂರನೆಯದಾಗಿ, ಭಿನ್ನಾಭಿಪ್ರಾಯವಿರಬಹುದಾದಂತಹ ಕ್ಲಿಷ್ಟವಾದ ಸಾಂವಿಧಾನಿಕ ಪ್ರಶ್ನೆಗಳು ಯಾವುವೂ ಇಲ್ಲ. +ನಮ್ಮ ಹೊಸ ಸಂವಿಧಾನ ಸಂಯುಕ್ತ ರಾಜ್ಯ ಮಾದರಿಯಾಗಿರಬೇಕೆಂಬುದಾಗಿ ಒಪ್ಪಿಕೊಳ್ಳಲಾಗಿದೆ. +ಕೇಂದ್ರಕ್ಕೆ ಮತ್ತು ಪ್ರಾಂತ್ಯಗಳಿಗೆ ಕೂಡ ಮಾಡಬೇಕಾದ ವಿಷಯಗಳ ಬಗ್ಗೆಯೂ ಹೆಚ್ಚೂ ಬಾಬ್ತುಗಳ ಹಂಚಿಕೆಯ ವಿಷಯದಲ್ಲಾಗಲೀ ಮತದಾನದ ವ್ಯವಸ್ಥೆಯ ಬಗ್ಗೆಯಾಗಲೀ ನ್ಯಾಯಾಂಗ, ಶಾಸಕಾಂಗ ಮತ್ತು ಕಾರ್ಯಾಂಗಗಳ ನಡುವಣ ಸಂಬಂಧಗಳ ವಿಚಾರದಲ್ಲಾಗಲೀ ಯಾವ ವಿವಾದವೂ ಇಲ್ಲ. +ಅನೇಕ ದಿನಗಳಿಂದ ಉಳಿದಿರುವ ಏಕೈಕ ವಿವಾದಾತ್ಮಕ ವಿಷಯವೆಂದರೆ ಕೇಂದ್ರ ಮತ್ತು ಪ್ರಾಂತ್ಯಗಳಿಗೆ ಸೇರದೆ ಉಳಿದ ಅಧಿಕಾರಗಳು ಕೇಂದ್ರದ ಕೈಯಲ್ಲಿರಬೇಕೇ ಅಥವಾ ಪ್ರಾಂತ್ಯಗಳಿಗಿರಬೇಕೇ ಎಂಬುದು. +ಆದರೆ ಇದು ಅಷ್ಟು ತಲೆ ಕೆಡಿಸಿಕೊಳ್ಳುವಂತಹ ವಿಷಯವಲ್ಲ. +ನಿಜವಾಗಿಯೂ, ಪ್ರಸ್ತುತ ಭಾರತ ಸರಕಾರ ಕಾಯಿದೆ (೧೯೩೫) ಯಲ್ಲಿರುವ ವ್ಯವಸ್ಥೆಯನ್ನು ಅಳವಡಿಸಿಕೊಳ್ಳುವುದು ಅತ್ಯಂತ ಸಮಂಜಸ ಹೊಂದಾಣಿಕೆ ಎನಿಸುವುದು. +ಇದನ್ನು ಮಾನ್ಯ ಮಾಡಿದಾಗ ಸಂವಿಧಾನಕ್ಕೆ ಜೀವ ನೀಡಲು ಸಂವಿಧಾನ ಸಭೆಯ ಅವಶ್ಯಕತೆ ತೋರುವುದಿಲ್ಲ. +ಭಾರತದ ಸಂವಿಧಾನದ ಬಹಳಷ್ಟು ಭಾಗಗಳನ್ನು ಈಗಾಗಲೇ ೧೯೩೫ ರ ಭಾರತ ಸರಕಾರದ ಕಾಯಿದೆಯಲ್ಲಿ ಬರೆಯಲಾಗಿರುವುದರಿಂದ, ಈ ಘಟ್ಟದಲ್ಲಿ ಇನ್ನೊಮ್ಮೆ ಅದನ್ನೇ ಬರೆಯಲು ಸಂವಿಧಾನ ಸಭೆಯನ್ನು ನೇಮಿಸುವುದೆಂದರೆ ಅಧಿಕಾರದ ಆಡಂಬರ ತೋರಿಕೆಯಾಗುವುದು. +೧೯೩೫ರ ಭಾರತ ಸರಕಾರ ಕಾಯಿದೆಯಲ್ಲಿ ನಮ್ಮ ಆಧಿಪತ್ಯ ಮತ್ತು ರಾಜ್ಯ ಸ್ಥಾನಕ್ಕೆ ಧಕ್ಕೆಯಾಗುವಂತಹ ಕಲಮುಗಳನ್ನು ಕೈಬಿಡುವುದು ಮಾತ್ರ ಈಗ ಮಾಡಬೇಕಾದ ಕೆಲಸ. +ಸಂವಿಧಾನ ರಚನಾ ಮಂಡಳಿಗೆ ವಹಿಸಬೇಕಾದ ಒಂದೇ ಕಾರ್ಯವೆಂದರೆ ಕೋಮುವಾದದ ಸಮಸ್ಯೆಗೆ ಪರಿಹಾರ ಕಂಡುಹಿಡಿಯುವುದು. +ಮಂಡಳಿಯ ಕಾರ್ಯವ್ಯಾಪ್ತಿಯಲ್ಲಿ ಬರಬೇಕಾದ ವಿಷಯಗಳು ಏನೇ ಇರಲಿ ಅವುಗಳಲ್ಲಿ ಕೋಮು ಪ್ರಶ್ನೆಯನ್ನು ಸೇರಿಸಬಾರದೆಂಬುದು ನನ್ನ ಖಚಿತವಾದ ಅಭಿಪ್ರಾಯ. +ಸಪ್ರು ಸಮಿತಿ ಸೂಚಿಸಿರವ ಸಂವಿಧಾನ ಸಭೆಯ ರಚನೆಯನ್ನು ಪರಿಶೀಲಿಸಿ. + ಅದರ ಒಟ್ಟು ಸಂಖ್ಯೆ ೧೬ಂ ಎಂದು ನಿಗದಿಪಡಿಸಲಾಗಿದೆ. +ಇವರ ಚುನಾವಣೆ ಜಂಟಿ ಆಯ್ಕೆದಾರರಿಂದ ಆಗಲಿದ್ದು ಪ್ರಾಂತ್ಯಗಳ ಶಾಸನ ಸಭೆಗಳ ಸದಸ್ಯರು ಅನುಪಾತ ಪ್ರಾತಿನಿಧ್ಯ ಪದ್ಧತಿ ಮತ್ತು ಹಾಜರಿದ್ದು ಮತನೀಡಿದ ಸದಸ್ಯರಮುಕ್ಕಾಲು ಪಾಲು (ಮೂರು-ನಾಲ್ಕಾಂಶ) ಸದಸ್ಯರ ಸಮ್ಮತಿಯ ಪ್ರಕಾರ ನಿರ್ಣಯವಾಗಬೇಕು. +ಅಲ್ಪಸಂಖ್ಯಾತರು ಈ ಬಗೆಯ ಶಾಸನ ಸಭೆಯನ್ನು ಸುರಕ್ಷಿತ ಎಂದು ಒಪ್ಪಿಕೊಳ್ಳಲು ಸಾಧ್ಯವೆ ? + ಈ ಸಭೆಯಲ್ಲಿ ನಿಷ್ಪಕ್ಷಪಾತವಾದ ನಿರ್ಣಯಗಳನ್ನು ತೆಗೆದುಕೊಳ್ಳಬಲ್ಲರೆಂಬ ಭರವಸೆ ಹೊಂದಲು ಸಾಧ್ಯವೇ? +ಇನ್ನೂ ಎರಡು ಪ್ರಶ್ನೆಗಳು ಉದ್ಭವಿಸುತ್ತವೆ. +ಇಂತಹ ಸಭೆಗೆ ಚುನಾಯಿತನಾದ ಒಂದು ಅಲ್ಪಸಂಖ್ಯಾತವರ್ಗದ ಪ್ರತಿನಿಧಿ ನಿಜವಾದ ಪ್ರತಿನಿಧಿಯಾಗಬಲ್ಲನು ಎಂಬ ಭರವಸೆ ಸಾಧ್ಯವೆ ? + ಎರಡನೆಯದಾಗಿ ಇಂತಹ ಸಭೆ ಯಾವುದೆ ಒಂದು ಅಲ್ಪಸಂಖ್ಯಾತ ವರ್ಗದ ಬೇಡಿಕೆಗಳ ಬಗ್ಗೆ ಮಾಡಲಾಗುವ ನಿರ್ಣಯಗಳು ಆ ವರ್ಗದ ಮೇಲೆ ಬಲವಂತವಾಗಿ ಹೇರಲಾದಂತಹುಗಳಾಗಿರುವುದಿಲ್ಲ ಎಂಬ ಭರವಸೆಯನ್ನು ನೀಡಬಲ್ಲದೆ? +ಈ ಎರಡು ಪ್ರಶ್ನೆಗಳಲ್ಲಿ ಯಾವುದರ ವಿಷಯದಲ್ಲಿಯೂ ಅಲ್ಪಸಂಖ್ಯಾತರು ಈ ಪ್ರಶ್ನೆಗಳನ್ನು ಕೈಗೆತ್ತಿಕೊಳ್ಳುವ ಮೊದಲು ಕ್ರಿಪ್ಸ್‌ ಸೂಚಿಸುವ ಸಂವಿಧಾನ ಸಭೆಗೂ ಸಪ್ಪು ಸೂಚಿಸುವ ಸಂವಿಧಾನಿಕ ಸಭೆಗೂ ಇರುವ ವ್ಯತ್ಯಾಸಗಳನ್ನು ಗುರುತಿಸಬೇಕು. +ಅವು ಇಂತಿವೆ :(೧) ಸಪ್ರು ಸಮಿತಿಯು ಸಂವಿಧಾನ ಸಭೆಗೆ ನಿಗದಿಪಡಿಸಿದ ಒಟ್ಟು ಸದಸ್ಯರ ಸಂಖ್ಯೆ ೧೬ಂ. +ಸರ್‌ ಸ್ಟ್ಯಾಫರ್ಡ್‌ ಕ್ರಿಪ್ಸ್‌ರವರು ಯಾವ ಸಂಖ್ಯೆಯನ್ನೂ ನಿಗದಿಪಡಿಸಿರಲಿಲ್ಲ. +ಆದರೆ ಅವರ ಯೋಜನೆಯ ಸಂಬಂಧಪಟ್ಟ ಕಲಮಿನಲ್ಲಿ ಸಂವಿಧಾನ ಸಭೆಯ ಪ್ರಾಂತೀಯ ಶಾಸನ ಸಭೆಗಳಒಟ್ಟು ಸದಸ್ಯರ ಸಂಖ್ಯೆಯ ಶೇಕಡಾ ೧ಂ ರಷ್ಟು ಸದಸ್ಯರನ್ನು ಹೊಂದಿರಬೇಕೆಂದು ಸೂಚಿಸಲಾಗಿದೆ. +ಎಂದರೆ ಸುಮಾರು ೧೫೮ ಸದಸ್ಯರಿರಬೇಕೆಂದು ಹೇಳಿದಂತಾಯಿತು. +ಆದ್ದರಿಂದ ಎರಡೂ ಯೋಜನೆಗಳ ನಡುವಣ ವ್ಯತ್ಯಾಸ ಕೇವಲ ೨ ಸ್ಥಾನಗಳು. +(೨) ಸಂವಿಧಾನ ಸಭೆಗೆ ಚುನಾವಣಾ ಪದ್ಧತಿ ಜಂಟಿ ಆಯ್ಕೆದಾರರಿಂದ ಮತ್ತು ಅನುಪಾತ ಪ್ರಾತಿನಿಧ್ಯ ಪದ್ಧತಿಯದಾಗಿರಬೇಕೆಂದು ಸಪ್ರು ಸಮಿತಿ ಸೂಚಿಸಿದೆ. +ಈ ಸಭೆಯ ರಚನೆಯ ಸಂಬಂಧ ಚುನಾವಣಾ ಪದ್ಧತಿಯಲ್ಲಿ ಸಪ್ರು ಸಮಿತಿ ಮತ್ತು ಕ್ರಿಪ್ಸ್‌ ಯೋಜನೆಯಲ್ಲಿ ಯಾವ ವ್ಯತ್ಯಾಸವೂ ಇಲ್ಲ. +(೩) ಕ್ರಿಪ್ಸ್‌ ಪ್ರಸ್ತಾವನೆಯಲ್ಲಿ ಕೋಮುವಾರು ಮೀಸಲಾತಿಗೆ ಅವಕಾಶವಿಲ್ಲ. +ಈ ವಿಷಯದಲ್ಲಿ ಸಪ್ತು ಪ್ರಸ್ತಾವನೆ ಮತ್ತು ಕ್ರಿಪ್ಸ್‌ ಯೋಜನೆಗಳಲ್ಲಿ ವ್ಯತ್ಯಾಸವಿದೆ. +ಸಪ್ರು ಪ್ರಸ್ತಾವನೆಯಲ್ಲಿ ಕೆಲವು ನಿರ್ದಿಷ್ಟ ಕೋಮುಗಳಿಗೆ ನಿಗದಿಯಾದ ಪ್ರಮಾಣದಲ್ಲಿ ಸ್ಥಾನಗಳನ್ನು ಕಾಯ್ದಿರಿಸಲಾಗಿದೆ. +ಇದು ವಿಶೇಷ ವ್ಯತ್ಯಾಸವೇನೂ ಅಲ್ಲ. +ಏಕೆಂದರೆ, ಕ್ರಿಪ್ಸ್‌ ಯೋಜನೆ ಸಂಖ್ಯೆಯನ್ನು ನಿಗದಿಗೊಳಿಸದಿದ್ದರೂ ಅನುಪಾತ ಪ್ರಾತಿನಿಧ್ಯ ಯೋಜನೆಯಿಂದಾಗಿ ಅದು ಮೀಸಲಾತಿಯೇ ಆಗಿತ್ತು. +ಎರಡೂ ಯೋಜನೆಗಳ ಪ್ರಕಾರ ಪ್ರಾತಿನಿಧ್ಯದ ಪ್ರಮಾಣದಲ್ಲಿನ ವ್ಯತ್ಯಾಸ ಈ ಕೆಳಗಿನ ವಿವರ ಪಟ್ಟಿಯಿಂದ ಕಂಡುಬರುತ್ತದೆ. +ಸಪ್ರು ಸಮಿತಿಯು ಸಂವಿಧಾನ ಸಭೆಯ ರಚನೆಯಲ್ಲಿ ಪ್ರತಿಯೊಂದು ಕೋಮಿಗೆ ದೊರೆಯಬೇಕಾದ ಸಂಖ್ಯೆಯನ್ನು ನಿಗದಿಮಾಡಿದೆಯಲ್ಲದೇ, ಮುಸಲ್ಮಾನರ ಮತ್ತು ಹಿಂದೂಗಳ ನಡುವೆ ಸಮಾನತೆಯನ್ನು ಕಲ್ಪಿಸಿದೆ. + ಈ ಸಮಾನತೆಯನ್ನು ನೀಡಿದ ಪ್ರತಿಯಾಗಿ ಸಂವಿಧಾನ ಸಭೆಗೆ ಚುನಾವಣೆಗಳನ್ನು ಜಂಟಿ ಆಯ್ಕೆ ಆಧಾರದ ಮೇಲೆ ನಡೆಸುವಂತೆ ಕೇಳಲು ಈ ರೀತಿ ಮಾಡಲಾಗಿದೆ ಎಂದು ಸಮಿತಿ ವಿವರಿಸಿದೆ. +ಈ ವಿಷಯದಲ್ಲಿ ಸಪ್ರು ಸಮಿತಿಯು ಕ್ರಿಪ್ಸ್‌ ಪ್ರಸ್ತಾವನೆಯನ್ನು ಸಂಪೂರ್ಣವಾಗಿ ಅಪಾರ್ಥ ಮಾಡಿಕೊಂಡಿದೆ. +ಕ್ರಿಪ್ಸ್ ಪ್ರಸ್ತಾವನೆಯಲ್ಲಿ ಜಂಟಿ ಆಯ್ಕೆ ವ್ಯವಸ್ಥೆಗೆ ಅವಕಾಶ ಮಾಡಿಕೊಡಲಾಗಿದೆ. +ಅದರ ಒಂದು ಕಲಮಿನಲ್ಲಿ ಈ ರೀತಿ ಹೇಳಲಾಗಿದೆ. +“ಪ್ರಾಂತೀಯ ಶಾಸನ ಸಭೆಗಳ ಕೆಳ ಸದನಗಳ ಸದಸ್ಯರುಗಳು ಏಕ ಚುನಾಯಿತ ಸಮೂಹವಾಗಬೇಕು”. +ಇದು ಒಂದು ವರ್ಗದ ಕಣ್ಣಿಗೆ ಬೆಣ್ಣೆ ಇನ್ನೊಂದು ಸಮುದಾಯದ ಕಣ್ಣಿಗೆ ಸುಣ್ಣ ಹಚ್ಚುವ ತಂತ್ರವಾಗಿದೆ. +ಜಂಟಿ ವಿಧಾನದ ಮೂಲಕ ಚುನಾವಣೆಗೆ ನಡೆಯಬೇಕು ಎಂದು ಇನ್ನೊಂದು ರೀತಿಯಲ್ಲಿ ಇಲ್ಲಿ ಹೇಳಲಾಗಿದೆಯಷ್ಟೆ. +(೪) ಕ್ರಿಪ್ಟ್‌ ಪ್ರಸ್ತಾವನೆಯ ಪ್ರಕಾರ ಶಾಸನ ಸಭೆಯ ನಿರ್ಣಯಗಳು ಮತ ನೀಡಿದವರ ಮತ್ತು ಉಪಸ್ಥಿತರಿದ್ದ ಸದಸ್ಯರ ಬಹುಮತದಿಂದ ಅಂಗೀಕಾರವಾಗಬೇಕು ಸಪ್ರು ಯೋಜನೆಯಂತೆ ನಿರ್ಣಯಗಳನ್ನು ಉಪಸ್ಥಿತರಿದ್ದು ಮತ್ತು ಮತ ನೀಡಿದವರ ಮುಕ್ಕಾಲುಪಾಲು ಸದಸ್ಯರ ಸಮ್ಮತಿಯಿಂದ ಅಂಗೀಕಾರವಾಗಬೇಕು. +ಇನ್ನು ಈಗಾಗಲೇ ಪ್ರಸ್ತಾಪಿಸಿದ ಎರಡು ಪ್ರಶ್ನೆಗಳನ್ನು ಪರಿಶೀಲಿಸೋಣ. +ಮೊದಲನೆಯ ಪ್ರಶ್ನೆಯ ಸಂಬಂಧವಾದ ಪರಿಸ್ಥಿತಿ ಹೀಗಿದೆ? +ಅದರ ವಿಷಯದಲ್ಲಿ ಅಭಿಪ್ರಾಯ ವ್ಯಕ್ತಪಡಿಸುವ ಮೊದಲು ಪ್ರಾಂತೀಯ ಶಾಸನ ಸಭೆಗಳ ಕೋಮುವಾರು ವಿತರಣೆಯನ್ನು ತಿಳಿದುಕೊಳ್ಳುವುದು ಅವಶ್ಯಕ. +ಈ ಕೆಳಗಿನ ಪಟ್ಟಿಯಲ್ಲಿ ಪರಿಸ್ಥಿತಿಯನ್ನು ವಿವರಿಸಲಾಗಿದೆ. +ಅವರ ಪರಸ್ಪರ ಸ್ಥಾನಗಳ' ಆಧಾರದ ಮೇಲೆ ವಿವಿಧ ಕೋಮುಗಳಲ್ಲಿ ಸ್ಥಾನಗಳನ್ನು ಹೇಗೆ ಹಂಚಬಹುದಾಗಿದೆ ಎಂಬ ಊಹೆಯ `ಆಧಾರದ ಮೇಲೆ ಮಾಡಲಾಗಿದೆ. +ಸಪ್ರು ಸಮಿತಿಯ ಪ್ರಸ್ತಾವನೆಯಲ್ಲಿ ಮಾಡಲಾಗಿರುವ ಮತ್ತು ಕ್ರಿಪ್ಸ್‌ ಪ್ರಸ್ತಾವನೆಯಲ್ಲಿ ಮಾಡದಿರುವ ಈ ಕೋಮುವಾರು ಮೀಸಲಾತಿಯ ಪ್ರಯೋಜನ ಸರಿ ಇದೆಯೇ ? + ಇದು ಒಂದು ಕೋಮಿನವರು ಇತರ ಕೋಮುಗಳ ಸದಸ್ಯರ ಚುನಾವಣೆಯ ಮೇಲೆ ಎಷ್ಟರ ಮಟ್ಟಿಗೆ ಪ್ರಭಾವ ಬೀರಬಲ್ಲರೆಂಬುದನ್ನು ಅವಲಂಬಿಸಿದೆ. +ಈ ದಿಶೆಯಲ್ಲಿರುವ ಸಾಧ್ಯತೆಗಳೇನು ? +ಈ ಪಟ್ಟಿಯ ಆಧಾರದ ಮೇಲೆ ಕೆಳಕಂಡ ತೀರ್ಮಾನಕ್ಕೆ ಬರಬಹುದು: +ಅ) ಒಟ್ಟು ಮತಗಳ ಸಂಖ್ಯೆ ೧.೫೭೭ ಮತ್ತು ಚುನಾಯಿಸಬೇಕಾದ ಒಟ್ಟು ಸ್ಥಾನಗಳ ಸಂಖ್ಯೆ ೧೬ಂ ಎಂದು ಇಟ್ಟುಕೊಂಡಾಗ ಅನುಪಾತ ಪ್ರಾತಿನಿಧ್ಯ ಪದ್ಧತಿಯಂತೆ ದೇಯಾಂಶ ಅಥವಾ ಪಡೆಯಲೇಬೇಕಾದ ಸಂಖ್ಯೆ ಸ್ಥೂಲವಾಗಿ ೧ಂ% ೧ ೬ ೧೧ ಆಗುವುದು. +ಆ) ದೇಯಾಂಶ ೧೧ ಎಂದು ಇಟ್ಟುಕೊಂಡರೆ ಹಿಂದೂಗಳಲ್ಲಿ ೨೧೭, ಮುಸಲ್ಮಾನರಲ್ಲಿ ೪೪,ಮತ್ತು ಯುರೋಪಿಯರಲ್ಲಿ ೩೫ ಹೆಚ್ಚಿನ ಮತಗಳಿರುತ್ತವೆ . +ಆದರೆ ಪರಿಶಿಷ್ಟ ಜಾತಿಗಳಿಗೆ ೬೯, ಭಾರತೀಯ ಕ್ರಿಶ್ಚಿಯನ್ನರಿಗೆ ೫೬, ಮತ್ತು ಸಿಖ್ಹರಿಗೆ ೫೨ ಮತಗಳ ಕೊರತೆ ಬೀಳುತ್ತದೆ. +ಇದೇ ವಿಷಯವನ್ನು ಇನ್ನೊಂದು ರೀತಿ ಹೇಳಬೇಕೆಂದರೆ -೧) ಹಿಂದೂಗಳು ತಮ್ಮ ೨೧೭ ಹೆಚ್ಚುವರಿ ಮತಗಳ ಸಹಾಯದಿಂದ ತಮ್ಮನ್ನೇ ಅವಲಂಬಿಸುವ ೨ಂ ಹಿಂದೂಯೇತರ ಸದಸ್ಯರನ್ನೂ, ಮುಸಲ್ಮಾನರು ತಮ್ಮ ೪೪ ಹೆಚ್ಚುವರಿ ಮತಗಳ ಸಹಾಯದಿಂದ ತಮ್ಮನ್ನೇ ಅವಲಂಬಿಸುವ ೪ ಮುಸಲ್ಮಾನೇತರರನ್ನೂ ಯುರೋಪಿಯನ್ನರು ೩೫ ಹೆಚ್ಚುವರಿ ಮತಗಳಿಂದ ತಮ್ಮನ್ನೇ ಅವಲಂಬಿಸುವ ೩ ಯುರೋಪಿಯನೇತರರನ್ನು ಚುನಾಯಿಸಬಲ್ಲರು. +೨) ೬೯ ಮತಗಳ ಕೊರತೆಯಿರುವ ಪರಿಶಿಷ್ಟ ಜಾತಿಗಳವರು ಸ್ವಂತ ಮತ ಬಲದಿಂದ ಸದಸ್ಯರನ್ನು ಮಾತ್ರ ಚುನಾಯಿಸಬಲ್ಲರು. +ಉಳಿದ ೭ ಸ್ಥಾನಗಳಿಗೆ ಅವರು ಹಿಂದೂ,ಮುಸಲ್ಮಾನ ಅಥವಾ ಯುರೋಪಿಯನ್ನರ ಮತಗಳನ್ನು ಅವಲಂಬಿಸಬೇಕಾಗುತ್ತದೆ. +೫೬ ಮತಗಳ ಕೊರತೆಯಿರುವ ಭಾರತೀಯ ಕ್ರಿಶ್ಚಿಯನ್ನರು ಸ್ವಂತ ಮತಬಲದಿಂದ ೨ ಸ್ಥಾನಗಳಿಗೆ ಮಾತ್ರ ಚುನಾಯಿಸಬಲ್ಲರು. +ಉಳಿದ ೫ ಸ್ಥಾನಗಳಿಗೆ ಅವರು ಹಿಂದೂ, ಮುಸಲ್ಮಾನ ಮತ್ತು ಯುರೋಪಿಯನ್ನರ ಮತದಾರರನ್ನು ಅವಲಂಬಿಸಬೇಕಾಗುತ್ತದೆ. +ಇದೇ ವಸ್ತು ಸ್ಥಿತಿ. +ಆದ್ದರಿಂದ ಚಿಕ್ಕ ಅಲ್ಪಸಂಖ್ಯಾತ ಕೋಮುಗಳಿಗೆ ಕೊಡಲಾಗಿರುವ ಹೆಚ್ಚಿನ ಪ್ರಾತಿನಿಧ್ಯ ಕಣ್ಣೊರೆಸುವ ತಂತ್ರವಾಗಿದೆ. +ಅವರ ಪ್ರಾತಿನಿಧ್ಯ ಎಷ್ಟರ ಮಟ್ಟಿಗೆ ಪರಾವಲಂಬಿಯಾಗಿದೆ ಎಂದರೆ ಅದು ನಿಜವಾದ ಪ್ರಾತಿನಿಧ್ಯವೇ ಆಗಿಲ್ಲ. +ಇನ್ನು ಎರಡನೆಯ ಪ್ರಶ್ನೆಯನ್ನು ತೆಗೆದುಕೊಳ್ಳೋಣ. +ನಿರ್ಣಯ ತೆಗೆದುಕೊಳ್ಳಲು ಸೂಚಿಸಿರುವ ನಿಯಮ ಸುರಕ್ಷಿತವೆ ? + ಕ್ರಿಪ್ಟ್‌ ಸಾಧಾರಣ ಬಹುಮತದ ನಿಯಮವನ್ನು ಸೂಚಿಸಲಾಗಿದೆ. +ಇಂತಹ ಅಸಂಬದ್ಧವಾದ ಸೂಚನೆಯನ್ನು ತಿಳುವಳಿಕೆಯುಳ್ಳ ಯಾವ ವ್ಯಕ್ತಿಯೂ ಮಾಡಲಾರ. +ಸಂವಿಧಾನಕ್ಕೆ ಸಂಬಂಧಿಸಿದ ಪ್ರಶ್ನೆಗಳನ್ನು ಸಾಧಾರಣ ಬಹುಮತದ ನಿರ್ಣಯಕ್ಕೆ ಬಿಟ್ಟಂತಹ ಯಾವ ನಿದರ್ಶನವೂ ನನಗೆ ತಿಳಿದ ಮಟ್ಟಿಗೆ ಎಲ್ಲಿಯೂ ಇಲ್ಲ. +ಕ್ರಿಪ್ಸ್‌ ಸೂಚನೆಯಲ್ಲಿ ಬಹುಮತದ ನಿಯಮವನ್ನು ಅಲ್ಪಸಂಖ್ಯಾತರ ಹಿತರಕ್ಷಣೆಯ ನೆಪದಿಂದ ಅಳವಡಿಸಲಾಯಿತು. +ಈ ವ್ಯವಸ್ಥೆಯು ಬ್ರಿಟನ್ನಿನ ಸಂಸತ್ತು ತನ್ನ ಸಾರ್ವಭೌಮತ್ವವನ್ನು ತ್ಯಜಿಸಿ ಭಾರತಕ್ಕೆ ಸ್ವಾತಂತ್ರ್ಯ ನೀಡುವ ಮೊದಲು ಬ್ರಿಟಿಷ್‌ ಪ್ರಭುತ್ವ ಮತ್ತು ಸಂವಿಧಾನ ಸಭೆಯ ನಡುವಣ ಒಪ್ಪಂದದ ಪ್ರಕಾರ ಜಾರಿಗೆ ಬರತಕ್ಕದ್ದು. +ಈ ಒಪ್ಪಂದವು ಸಂವಿಧಾನವನ್ನು ತಳ್ಳಿಹಾಕುವ ಸ್ಥಿತಿಯಲ್ಲಿದ್ದ ಪಕ್ಷದಲ್ಲಿ ಈ ಒಪ್ಪಂದಕ್ಕೆ ಅರ್ಥವಿರುತ್ತಿತ್ತು. +ಇದು ಅಸಾಧ್ಯವೆನಿಸಿತ್ತು. +ಏಕೆಂದರೆ ಕ್ರಿಪ್ಟ್‌ ಸೂಚನೆಯ ಪ್ರಕಾರ ಭಾರತವು ಆಧಿಪತ್ಯ ರಾಜ್ಯ ಇಲ್ಲವೇ ಸ್ವತಂತ್ರ ರಾಷ್ಟ್ರವಾಗಲು ಸ್ವತಂತ್ರವಾಗಿದೆ. +ಭಾರತವು ಆಧಿಪತ್ಯ ರಾಷ್ಟ್ರವಾದ ಕ್ಷಣವೇ ಈ ಒಪ್ಪಂದ ಸಂವಿಧಾನವನ್ನು ರದ್ದುಗೊಳಿಸಲಾರದು ಎಂದು ಕಾನೂನು ರೂಪಿಸುವಅಧಿಕಾರ ಪಡೆಯುತ್ತದೆ. +ಹೀಗಾದಾಗ ಈ ಒಪ್ಪಂದವು ಅಲ್ಪಸಂಖ್ಯಾತರು ತಮ್ಮ ಮನೆಯ ಗೋಡೆಗಳಿಗೆತೂಗುಹಾಕಲು ಯೋಗ್ಯವಾದ ಕ್ಯಾಲೆಂಡರ್‌ ಅಂದಂತಾಗುತ್ತದೆ. +ಐರಿಷ್‌ ಒಪ್ಪಂದಕ್ಕೆ ಇದೇ ಗತಿಯಾಗಿತ್ತು. +ಎಲ್ಲಿಯವರೆಗೆ ಐರ್ಲೆಂಡ್‌ ಆಧಿಪತ್ಯ ರಾಷ್ಟ್ರವಾಗಿರಲಿಲ್ಲವೋ ಅಲ್ಲಿಯವರೆಗೆ ಐರಿಷ್‌ ಒಪ್ಪಂದ ಆ ದೇಶದ ಸಂವಿಧಾನವನ್ನು ಕಡೆಗಣಿಸುತ್ತಿತ್ತು. +ಆದರೆ ಐರ್ಲೆಂಡ್‌ ಆಧಿಪತ್ಯ ರಾಷ್ಟ್ರವಾದಾಕ್ಷಣವೇ ಒಪ್ಪಂದದಲ್ಲಿದ್ದ ಸಂವಿಧಾನವನ್ನು ಕಡೆಗಣಿಸುವ ಅಧಿಕಾರವನ್ನು ಐರಿಷ್‌ ಫ್ರೀ ಸ್ಟೇಟ್‌ನ ಸಂಸತ್ತು ತನ್ನ ಒಂದು ಸಂಕ್ಷಿಪ್ತ ಮತ್ತು ಸರಳ ಕಾನೂನಿನಿಂದ ರದ್ದುಗೊಳಿಸಿತು. +ಈ ಬಗ್ಗೆ ಬ್ರಿಟನ್ನಿನ ಸಂಸತ್ತು ಏನೂ ಮಾಡಲಾಗಲಿಲ್ಲ. +ಏಕೆಂದರೆ ಐರ್ಲೆಂಡ್‌ ಆಧಿಪತ್ಯ ರಾಷ್ಟ್ರವಾದ್ದರಿಂದ ತಾನೂ ಏನೂ ಮಾಡಲು ಬರುವುದಿಲ್ಲವೆಂಬ ವಿಷಯವನ್ನು ಅದು ತಿಳಿದುಕೊಂಡಿತ್ತು. +ಕ್ರಿಪ್ಸ್‌ರಂತಹ ಪ್ರಖ್ಯಾತ ವ್ಯಕ್ತಿ ಅಲ್ಪಸಂಖ್ಯಾತರ ಹಿತರಕ್ಷಣೆಗಾಗಿ ಇಂತಹ ಅಸಂಬದ್ಧ ಪ್ರಸ್ತಾವನೆಯನ್ನು ಹೇಗೆ ಮಾಡಿದರೆಂಬುದು ನನಗೆ ಅರ್ಥವಾಗುತ್ತಿಲ್ಲ. +ಸಪ್ತು ಪ್ರಸ್ತಾವನೆಯ ಸೂಚನೆಗಳು ಸ್ವಲ್ಪ ಉತ್ತಮವಾದುವೆಂದು ತೋರುತ್ತದೆ. +ಆದರೆ ಅವು ನಿಜವಾಗಿಯೂ ಉತ್ತಮವಾಗಿವೆಯೇ ? +ಅವು ಉತ್ತಮವಾದುವುಗಳಲ್ಲ ಎಂಬುದು ಖಚಿತವಾಗಿದೆ. +ಯಾವುದೇ ಒಂದು ಅಭಿಪ್ರಾಯ ಮುಕ್ಕಾಲು ಭಾಗದ ಬಹುಮತ ಪಡೆಯಬೇಕಾದರೆ ೧೬ಂ ಸದಸ್ಯರಲ್ಲಿ೧೨ಂ ಸದಸ್ಯರು ಅದನ್ನು ಒಪ್ಪಿಕೊಳ್ಳಬೇಕಾಗುತ್ತದೆ. +ಇದು ಒಂದು ಸುಧಾರಿತ ಅಥವಾ ಉತ್ತಮ ಸೂಚನೆ ಎಂದು ಒಪ್ಪಿಕೊಳ್ಳುವ ಮುಂಚೆ ಈ ೧೨ಂ ಸದಸ್ಯರು ಒಂದುಗೂಡಬಹುದೇ ಎಂಬುದನ್ನು ತಿಳಿದುಕೊಳ್ಳಬೇಕಾಗುತ್ತದೆ. +ಹಿಂದೂ ಮತ್ತು ಮುಸಲ್ಮಾನರು ಒಟ್ಟಾಗಿ ೧ಂ೨ ಸದಸ್ಯರಿದ್ದರೆ ಅವರಿಗೆ ಇತರ ೧೮ ಸದಸ್ಯರ ಅವಶ್ಯಕತೆ ಬೀಳುತ್ತದೆ. +ವಿಶೇಷ ಸ್ಥಳಗಳ ಬಹುತೇಕ ಸದಸ್ಯರು ಮತ್ತು ಇನ್ನೂ ಇತರ ಕೆಲವರು ಇವರಿಗೆ ಲಭಿಸಬಹುದು. +ಇದು ಸಂಭವಿಸಿದರೆ, ಸಂವಿಧಾನ ಸಭೆಯ ನಿರ್ಣಯಗಳನ್ನುಪರಿಶಿಷ್ಟ ಜಾತಿಗಳು, ಸಿಖ್ಹರು, ಭಾರತ ಕ್ರಿಶ್ಚಿಯನ್ನರು ಮುಂತಾದವರ ಮೇಲೆ ಬಲವಂತವಾಗಿ ಹೇರಿದಂತಾಗುವುದರಲ್ಲಿ ಸಂಶಯವೇ ಇಲ್ಲ. +ಇದೇ ರೀತಿ ಮುಸಲ್ಮಾನರನ್ನು ಬೇರ್ಪಡಿಸಿದರೆ ನಿರ್ಣಯಗಳು ಸಂಯುಕ್ತ ನಿರ್ಣಯಗಳಾಗಿರದೆ ಮುಸಲ್ಮಾನರನ್ನು ಬೇರ್ಪಡಿಸಿದರೆ, ನಿರ್ಣಯಗಳು ಸಂಯುಕ್ತ ನಿರ್ಣಯಗಳಾಗಿರದೆ ಮುಸಲ್ಮಾನೇತರರು ಮುಸಲ್ಮಾನರ ಮೇಲೆ ಹೇರಿದ ನಿರ್ಣಯಗಳಾಗುತ್ತವೆ. +ಕೆಲವು ಕೋಮುಗಳು ಇತರ ಕೆಲವು ಕೋಮುಗಳಿಗೆ ಅಡ್ಡಿಯುಂಟು ಮಾಡಲು ಕೈಗೊಳ್ಳಬಹುದಾದ ಸಂಯೋಜನೆ . + ಪರಿವರ್ತನೆಗಳ ಸಾಧ್ಯತೆಯನ್ನು ಸಪ್ತು ಸಮಿತಿ ಪರಿಗಣಿಸಿಲ್ಲವೆಂದು ಹೇಳಲು ನನಗೆ ವಿಷಾದವೆನಿಸುತ್ತದೆ. +ಸಪ್ರು ಸಮಿತಿಯು ಮುಕ್ಕಾಲು ಪಾಲು ಬಹುಮತದಲ್ಲಿ ಪ್ರತಿಯೊಂದು ಘಟಕಾಂಶದ ಶೇಕಡಾ ೫ಂರಷ್ಟನ್ನು ಕೂಡಿದ್ದಾಗಿರಬೇಕೆಂದು ಹೇಳಿದ್ದ ಪಕ್ಷದಲ್ಲಿ ಸ್ವಲ್ಪ ಮಟ್ಟಿನ ಸಂರಕ್ಷಣೆಯಾದರೂ ಸಾಧ್ಯವಿತ್ತು. +ಅಮೆರಿಕಾದ ಸಂಯುಕ್ತ ಸಂಸ್ಥಾನಗಳು ಸಂವಿಧಾನ ರಚಿಸಿದ ಪದ್ಧತಿಯನ್ನನು ಸರಿಸಿ ಸಪ್ರು ಸಮಿತಿಯ ಸಂವಿಧಾನ ಸಭೆಯಲ್ಲಿ ಕೋಮುಗಳಿಗೆ ಸಂಬಂಧಿಸಿದ ನಿರ್ಣಯದ ಭಾಗಗಳನ್ನು ಸಭೆಯ ಹೊರಗಿನ ಅಲ್ಪಸಂಖ್ಯಾತ ಪ್ರತಿನಿಧಿಗಳ ಸಮ್ಮತಿ ಪಡೆಯಬೇಕೆಂದು ಸೂಚಿಸಬಹುದಿತ್ತು . +ಸಪ್ತು ಸಮಿತಿಯು ರೂಪಿಸಿರುವ ಸಂವಿಧಾನ ಸಭೆಯ ಪ್ರಸ್ತಾವನೆಯಲ್ಲಿ ಇಂತಹ ಯಾವುದೇ ಸೂಚನೆಗಳಿಗೆ ಸ್ಥಾನವಿಲ್ಲದಾಗಿದೆ. +ತತ್ಪರಿಣಾಮವಾಗಿ ಸಂವಿಧಾನ ಸಭೆಯು ಒಂದು ಪ್ರಲೋಭನಕಾರಿ ಜಾಲವಾಗಿದೆ. +ಶಾಸನ ಸಭೆಯ ಯೋಜನೆಯ ವಿರುದ್ಧ ಇನ್ನೂ ಅನೇಕ ತರ್ಕಗಳಿವೆ. +ನನ್ನ ದೃಷ್ಟಿಯಲ್ಲಿ ಅತ್ಯಂತ ಮಹತ್ವವೆನಿಸಿದ ಒಂದು ತರ್ಕವನ್ನು ಮಾತ್ರ ಇಲ್ಲಿ ಹೇಳಬಯಸುತ್ತೇನೆ. +ಸ್ಕಾಟ್ಲೆಂಡ್‌ ಮತ್ತುಇಂಗ್ಲೆಂಡ್‌ಗಳ ಒಕ್ಕೂಟದ ಇತಿಹಾಸವನ್ನು ಓದಿದಾಗ, ಸ್ಕಾಟ್ಲೆಂಡಿನ ಸಂಸತ್ತಿನ ಒಪ್ಪಿಗೆಯನ್ನು ಪಡೆಯುವುದಕ್ಕೋಸ್ಕರ ನಡೆದ ಲಂಚ ಮತ್ತು ಭ್ರಷ್ಟಾಚಾರಗಳನ್ನು ಓದಿ ನನಗೆ ಆಘಾತವಾಯಿತು. +ಸ್ಕಾಟ್ಲೆಂಡಿನ ಇಡೀ ಸಂಸತ್ತನ್ನು ಕೊಂಡುಕೊಳ್ಳಲಾಯಿತು. +ಭಾರತದ ಸಂವಿಧಾನ ಸಭೆಯಲ್ಲಿ ಆಸಕ್ತ ಗುಂಪುಗಳು ಬಯಸಿದ ನಿರ್ಣಯಗಳಿಗೆ ಬೆಂಬಲ ಪಡೆದುಕೊಳ್ಳಲು ಲಂಚ ಮತ್ತು ಭ್ರಷ್ಟಾಚಾರದ ಸಾಧ್ಯತೆಗಳು ನಿಶ್ಚಿತ. +ಇದರ ಪರಿಣಾಮಗಳನ್ನು ಕಡೆಗಣಿಸಲಾಗದು. +ಇದು ಸಂಭವಿಸಿದರೆ ಇದು ಸಂವಿಧಾನ ಸಭೆಯ ಅಪಹಾಸ್ಯವೆನಿಸುವುದಲ್ಲದೆ, ತನ್ನ ನಿರ್ಣಯಗಳನ್ನು ಬಲಾತ್ಕಾರವಾಗಿ ಜಾರಿಗೊಳಿಸುವ ಪ್ರಯತ್ನಗಳು ದೇಶದಲ್ಲಿ ಆಂತರಿಕ ಯುದ್ಧಕ್ಕೆಮಾಡುವುದೆಂದು ನನ್ನ ಖಚಿತ ಅಭಿಪ್ರಾಯ. +ನನ್ನ ಅಭಿಪ್ರಾಯದಲ್ಲಿ ಸಂವಿಧಾನ ಸಜೆಯ ಸಲಹೆ ಲಾಭದಾಯಕವಾಗುವುದಕ್ಕಿಂತ ಹೆಚ್ಚಾಗಿ ಅಪಾಯಕಾರಿಯಾಗಿದೆ. +ಆದ್ದರಿಂದ ಅದನ್ನು ಒಪ್ಪಿಕೊಳ್ಳಬಾರದು. +ಹೊಸ ದೃಷ್ಟಿಕೋನದ ಆವಶ್ಯಕತೆ ಶಾಸನ ಸಭೆಯ ರಚನೆಯೇ ಸೂಕ್ತವಾದ ವಿಧಾನವಲ್ಲವೆಂದರೆ ಪರ್ಯಾಯ ವ್ಯವಸ್ಥೆ ಯಾವುದು ಎಂದು ನನ್ನನ್ನೇ ಕೇಳಲಾಗುವುದು. +ಇಂತಹ ಪ್ರಶ್ನೆಯನ್ನು ಎದುರಿಸಬೇಕಾಗುವುದೆಂದು ನನಗೆ ಗೊತ್ತು. +ಕೋಮು ಪ್ರಶ್ನೆ ಬಿಡಿಸಲಾರದ ಕಗ್ಗಂಟಾಗಿರುವುದಕ್ಕೆ ಕಾರಣ ನನ್ನ ಅಭಿಪ್ರಾಯದಲ್ಲಿ ಅದು ಬಿಡಿಸಲಾರದ ಕಗ್ಗಂಟಾಗಿರುವ ಪ್ರಶ್ನೆಯಾಗಿದೆ. + ಅಥವಾ ನಾವಿನ್ನೂ ಶಾಸನ ಸಭೆಯ ಸೂತ್ರವನ್ನು ಬಳಸಿಕೊಂಡಿಲ್ಲದಿರುವ ಕಾರಣಕ್ಕಾಗಿ ಅಲ್ಲ. +ಅದನ್ನು ನಿವಾರಿಸಲು ನಮ್ಮ ವಿಧಾನ ಅಥವಾ ಮಾರ್ಗ ಮೂಲಭೂತವಾಗಿಯೇ ತಪ್ಪಾಗಿದೆಯಾದ್ದರಿಂದ ಅದು ಬಿಡಿಸಲಾರದ ಪ್ರಶ್ನೆಯಾಗಿದೆ. +ಈಗಿನ ನಮ್ಮಮಾರ್ಗ, ವಿಧಾನಗಳನ್ನು ಅವಲಂಬಿಸಿದೆಯೇ ಹೊರತು ತತ್ವಗಳನ್ನಲ್ಲ. +ತತ್ನಗಳಿಲ್ಲದಿರುವಿಕೆಯೇ ಒಂದು ಸೂತ್ರವಾಗಿದೆ. +ಕೇವಲ ವಿಧಾನಗಳ ಸರಣಿಯೇ ಇದೆ. +ಒಂದು ವಿಧಾನ ವಿಫಲವಾದರೆ ಇನ್ನೊಂದು ವಿಧಾನವನ್ನು ಪ್ರಯೋಗಿಸಲಾಗುವುದು. +ಒಂದು ವಿಧಾನದಿಂದ ಇನ್ನೊಂದು ವಿಧಾನ ಓಲಾಡುವುದೇ ಕೋಮು ಸಮಸ್ಯೆ ಕಗ್ಗಂಟಾಗಲು ಕಾರಣ. +ತತ್ವ, ನೀತಿ ಇಲ್ಲದಿರುವುದರಿಂದಲೇ ಯಾವುದೇ ವಿಧಾನದ ವೈಫಲ್ಯದ ಕಾರಣಗಳು ತಿಳಿಯುವುದಿಲ್ಲ. +ತತ್ವ ಅಥವಾ ನೀತಿಯೇ ಯಶಸ್ವಿಯಾಗುವ ಭರವಸೆಯೂ ಇಲ್ಲ. +ಕೋಮು ಸಮಸ್ಯೆಯ ನಿವಾರಣೆಯ ಪ್ರಯತ್ನಗಳು ಬಲಿಷ್ಠ ಗೂಳಿಯ ಎದುರು ದೊಗ್ಗಾಲೂರುವ ಬಲಹೀನರನ್ನು ತುಳಿಯುವ ರೂಪದಲ್ಲಿವೆ. + ಒಂದು ಕೋಮು ಬಲಶಾಲಿಯಾಗಿದ್ದರೆ ಅದು ರಾಜಕೀಯ ಸವಲತ್ತುಗಳಿಗೆ ಒತ್ತಾಯ ಹೇರುತ್ತದೆ. +ಇಂಥ ಕೋಮಿನ ಬೆಂಬಲ ಪಡೆಯಲು ರಿಯಾಯಿತಿಗಳನ್ನು ನೀಡಲಾಗುತ್ತದೆ. +ಅದರ ಬೇಡಿಕೆಗಳ ನ್ಯಾಯಯುತ ಪರಿಶೀಲನೆಯನ್ನು ಮಾಡಲಾಗುವುದಿಲ್ಲ. +ಅರ್ಹತೆಯ ಆಧಾರದ ಮೇಲೂ ನಿರ್ಣಯವಾಗುವುದಿಲ್ಲ. +ಇದರ ಫಲವಾಗಿ ಸವಲತ್ತುಗಳ ಬೇಡಿಕೆಗೂ ಕೊನೆಯಿಲ್ಲ ಮತ್ತು ರಿಯಾಯಿತಿಗಳಿಗೂ ಕೊನೆಯಿಲ್ಲ. +ಒಂದು ಅಲ್ಪ ಸಂಖ್ಯಾತ ಕೋಮಿನವರು ಪ್ರತ್ಯೇಕ ಚುನಾಯಕ ಹಕ್ಕಿನ ಬೇಡಿಕೆಯನ್ನು ಮುಂದಿಡುತ್ತಾರೆ. +ಇದನ್ನು ಕೊಡಮಾಡಲಾಗುವುದು. +ಇದರ ಹಿಂದೆಯೇ ಇನ್ನೊಂದು ಕೋಮಿನವರು, ಅವರು ಅಲ್ಪ ಸಂಖ್ಯಾತರೇ ಆಗಿರಲಿ, ಬಹು ಸಂಖ್ಯಾತರೇ ಆಗಿರಲಿ, ತಮಗಾಗಿ ಪ್ರತ್ಯೇಕ ಚುನಾಯಕ ಹಕ್ಕನ್ನು ಬೇಡುತ್ತಾರೆ. +ಅದನ್ನೂ ಮನ್ನಿಸಲಾಗುವುದು. +ಜನಸಂಖ್ಯೆಯ ಆಧಾರದ ಮೇಲೆ ಪ್ರತ್ಯೇಕ ಪ್ರಾತಿನಿಧ್ಯದಲ್ಲಿ ಅಧಿಕ ಮೌಲ್ಯವಿರಬೇಕೆಂದು ಕೇಳಲಾಗುವುದು. +ಅದನ್ನೂ ಮನ್ನಿಸಲಾಗುವುದು. +ಇದರ ಹಿಂದೆಯೇ ಅಲ್ಪಸಂಖ್ಯಾತರ ಮೇಲೆ ಶಾಸನಬದ್ಧ ಬಹುಮತದೊಂದಿಗೆ ಬಹು ಸಂಖ್ಯಾತರಿಗೆ ಪ್ರತ್ಯೇಕ ಚುನಾಯಕ ಹಕ್ಕನ್ನು ಉಳಿಸಿಕೊಳ್ಳುವ ಅಧಿಕಾರವನ್ನು ನೀಡಬೇಕು ಎಂದು ಕೇಳುವರು; +ಇದನ್ನೂ ಒಪ್ಪಿಕೊಳ್ಳಲಾಗುವುದು. +ನಂತರ, ಇನ್ನೊಂದು ಬಹುಸಂಖ್ಯಾತ ಕೋಮಿಗೆ ಆಳ್ವಿಕೆ ಅಸಹ್ಯವಾಗಿರುವುದರಿಂದ ಇತರ ಅಲ್ಪ ಸಂಖ್ಯಾತರ ಮೇಲೆ ಆ ಬಹುಸಂಖ್ಯಾತರ ಆಳ್ವಿಕೆಯ ಹಕ್ಕಿಗೆ ಚ್ಯುತಿ ಬರದಂತೆ, ಆಕ್ರಮಣಕಾರಿ ಬಹುಸಂಖ್ಯಾತ ಕೋಮಿನ ಬಹುಮತವನ್ನು ಸಮಾನತೆಯ ಸ್ಥಾನಕ್ಕೆ ಇಳಿಸಬೇಕು. +ನಿರಂತರ ಸಾಂತ್ಟನಪರವಾದ ಇಂತಹ ನೀತಿಗಿಂತ ಅಸಂಬದ್ಧ ಮತ್ತು ಅವಿವೇಕದ ಇನ್ನೊಂದು ನೀತಿ ಇರಲಾರದು. +ಇದು ಕೊನೆಯಲ್ಲಿದ ಸಾಂತ್ವನಗೊಳಿಸುವಿಕೆಯ ಮಿತಿಯಿಲ್ಲದ ಬೇಡಿಕೆಯಾಗಿದೆ. +ಇಂತಹ ತಂತ್ರವನ್ನು ಬಳಸುವ ಪ್ರಯತ್ನದಲ್ಲಿರುವ ಕೋಮಿನವರನ್ನು ನಾನು ನಿಜವಾಗಿಯೂ ದೂಷಿಸುತ್ತಿಲ್ಲ. +ಇಂತಹ ತಂತ್ರ ಲಾಭದಾಯಕವೆನಿಸಿರುವುದರಿಂದ, ಮತ್ತು ಹೆಚ್ಚು ಹೆಚ್ಚು ಬೇಡಿಕೆಗಳನ್ನು ನಿಗದಿಗೊಳಿಸುವ ಯಾವ ತತ್ವಗಳೂ ಇಲ್ಲದಿರುವುದರಿಂದ ಇವುಗಳನ್ನು ಗಿಟ್ಟಿಸಿಕೊಳ್ಳುವುದು ಸಾಧ್ಯ ಎಂದು ಮನವರಿಕೆಯಾಗಿರುವುದರಿಂದ ಆ ಕೋಮಿನವರು ಇಂತಹ ತಂತ್ರಗಳನ್ನು ಬಳಸುತ್ತಾರೆ. +ಅದೇ ಇನ್ನೊಂದು ಕಡೆ ಆರ್ಥಿಕ ಬಡತನ, ಸಾಮಾಜಿಕ ಅವನತಿ, ಶೈಕ್ಷಣಿಕ ಹಿಂದುಳಿದಿರುವಿಕೆಯಿಂದ ಬಳಲುತ್ತಿರುವ ಇನ್ನೊಂದು ಕೋಮಿನವರಿದ್ದು ಅವರನ್ನು ಯಾವುದೇ ನಾಚಿಕೆ ಮತ್ತು ಮರುಕವಿಲ್ಲದೆ ಶೋಷಿಸಲಾಗುತ್ತಿದ್ದು,ಅವರು ಸಮಾಜದಿಂದ ಪರಿತ್ಯಕ್ತರಾಗಿ, ಸರಕಾರದಿಂದ ತಿರಸ್ಕೃತರಾಗಿ, ರಕ್ಷಣೆಯ ಭದ್ರತೆ ಇಲ್ಲದೆ ನ್ಯಾಯ,ನೀತಿ ಮತ್ತು ಸಮಾನ ಆವಶ್ಯಕತೆಗಳಿಂದ ವಂಚಿತರಾಗಿ ತೊಳಲುತ್ತಿದ್ದಾರೆ. +ಇಂತಹ ಕೋಮಿನವರು ಯಾವುದೇ ರೀತಿಯ ಸಂರಕ್ಷಣೆಗಳನ್ನು ಹೊಂದಲಾರರು ಎಂದು ಹೇಳಲಾಗುತ್ತಿದೆ. +ಇದಕ್ಕೆ ಕಾರಣ ಅವರಿಗೆ ವಿಶೇಷ ಸವಲತ್ತುಗಳನ್ನು ಪಡೆಯಲು ಆಧಾರಗಳಿಲ್ಲವೆಂದಲ್ಲ. +ಆದರೆ ಈ ಬಾಯಿಬಡುಕರು ಈ ಕೋಮಿನವರು ತಮ್ಮ ಬೇಡಿಕೆಗಳನ್ನು ಪರಿಣಾಮಕಾರಿಯಾಗಿ ಪ್ರತಿಪಾದಿಸಲು ಬೇಕಾದಂತಹ ರಾಜಕೀಯ ಸಂಘಟನೆಯನ್ನು ಹೊಂದಿಲ್ಲವೆಂಬುದನ್ನು ಅರಿತಿದ್ದಾರೆ. +ಇಂತಹ ತಾರತಮ್ಯ ನೀತಿಗೆ ಕೋಮುವಾರು ಸಮಸ್ಯೆಗೆ ಸಂಬಂಧಪಟ್ಟವರನ್ನು ನಿರ್ಬಂಧಿಸುವಂತಹ ಯಾವುದೇ ತತ್ವ ಅಥವಾ ಅಧಿಕಾರವಿಲ್ಲದಿರುವುದೇ ಕಾರಣವಾಗಿದೆ. +ಈ ಮೂಲ ತತ್ವಗಳ ಅಭಾವ ಇನ್ನೊಂದು ಹಾನಿಕಾರಕ ಪರಿಣಾಮಕ್ಕೆಡೆ ಮಾಡಿದೆ. +ಇದರಿಂದ ಸಾರ್ವಜನಿಕ ಅಭಿಪ್ರಾಯ ತನ್ನ ಪಾತ್ರವನ್ನು ನಿರ್ವಹಿಸಲು ಸಾಧ್ಯವಾಗುವುದಿಲ್ಲ. +ಸಾರ್ವಜನಿಕರಿಗೆ ವಿಧಾನಗಳು ಮಾತ್ರ ಗೊತ್ತಿದ್ದು, ಒಂದು ವಿಧಾನ ವಿಫಲವಾದಾಗ ಇನ್ನೊಂದನ್ನು ಸೂಚಿಸಲಾಗುತ್ತದೆ ಅಷ್ಟೆ . +ಆದರೆ ಒಂದು ವಿಧಾನ ಏಕೆ ವಿಫಲವಾಯಿತು ಮತ್ತು ಇನ್ನೊಂದು ವಿಧಾನ ಹೇಗೆ ಯಶಸ್ವಿಯಾಗಬಲ್ಲದು ಎಂಬುದರ ಅರಿವು ಸಾರ್ವಜನಿಕರಿಗೆ ಇರುವುದಿಲ್ಲ. +ಇದರ ಪರಿಣಾಮವಾಗಿ, ಸಾರ್ವಜನಿಕರು ಮೊಂಡುತನದ ಮತ್ತು ಹಟಮಾರಿ ಜನರ ಮನ ಒಲಿಸಿ ಅವರನ್ನು ದಾರಿಗೆ ತರುವುದಕ್ಕಾಗಿ ಸಂಘಟಿತರಾಗದೆ, ಕೋಮುವಾರು ಸಮಸ್ಯೆಯ ಮೇಲಣ ತೋರಿಕೆಯ ಚರ್ಚೆಯಾದಾಗ ಅದನ್ನು ಕೇವಲ ಅಸಹಾಯಕ ಮತ್ತು ಮೂಕ ಪ್ರೇಕ್ಷಕರಾಗಿ ನೋಡುತ್ತಿರುತ್ತಾರೆ. +ನಾನು ಪ್ರಸ್ತಾಪಿಸಲಿರುವ ಕೋಮುವಾರು ಸಮಸ್ಯೆಯ ಪರಿಹಾರ ಎರಡು ವಿಚಾರಗಳನ್ನವಲಂಬಿಸಿದೆ: +೧) ಕೋಮುವಾದಿ ಸಮಸ್ಯೆಗೆ ಪರಿಹಾರ ಸೂಚಿಸುವ ಮುನ್ನ ಅಂತಿಮ ಪರಿಹಾರವನ್ನು ನಿರ್ಣಯಿಸುವಲ್ಲಿ ಆಧಾರವೆನಿಸುವ ಮತ್ತು ಮೂಲ ತತ್ವಗಳೆನಿಸುವ ಸೂತ್ರಗಳನ್ನು ನಿರೂಪಿಸಬೇಕು. +೨) ಈ ಆಧಾರ ಸೂತ್ರಗಳೇನೇ ಇರಲಿ ಅವುಗಳನ್ನು ಸಂಬಂಧಪಟ್ಟವರೆಲ್ಲರಿಗೂ ನಿರ್ಭಯವಾಗಿ ಮತ್ತು ಯಾವುದೇ ಪಕ್ಷಪಾತ ತೋರದ ರೀತಿಯಲ್ಲಿ ಅನ್ವಯಿಸಬೇಕು. +ಕೋಮು ಪ್ರಾತಿನಿಧ್ಯ ಸಮಸ್ಯೆ : ಪರಿಹಾರ ಪ್ರಸ್ತಾವನೆಗಳು ಇದುವರೆಗೆ ಕೆಲವು ಪ್ರಾಸ್ತಾವಿಕ ಅಂಶಗಳ ಮೇಲೆ ನನ್ನ ವಿಚಾರಗಳನ್ನು ಸ್ಪಷ್ಟಪಡಿಸಲಾಗಿದ್ದು ಇನ್ನು ಮೇಲೆ ಮುಖ್ಯ ವಿಷಯವನ್ನು ಪ್ರಸ್ತಾಪಿಸುವೆ. +ಕೋಮುವಾದದ ಸಮಸ್ಯೆಯಲ್ಲೂ ಮೂರು ಪ್ರಶ್ನೆಗಳು ಉದ್ಭವಿಸುತ್ತವೆ: +(ಅ) ಶಾಸಕಾಂಗದಲ್ಲಿ ಪ್ರಾತಿನಿಧ್ಯದ ಪ್ರಶೆ; +(ಬ) ಕಾರ್ಯಾಂಗದಲ್ಲಿ ಪ್ರಾತಿನಿಧ್ಯದ ಪ್ರಶ್ನೆ ; +ಮತ್ತು(ಕ) ಸೇವಾ ವರ್ಗಗಳಲ್ಲಿ ಪ್ರಾತಿನಿಧ್ಯದ ಪ್ರಶ್ನೆ; +(ಅ) ಸಾರ್ವಜನಿಕ ಸೇವಾ ವಲಯದಲ್ಲಿ ಪ್ರಾತಿನಿಧ್ಯ ಕೊನೆಯ ಪ್ರಶ್ನೆಯನ್ನೇ ಮೊದಲೆತ್ತಿಕೊಂಡಾಗ ಇದು ವಿವಾದಾತ್ಮಕ ವಿಷಯವೇ ಎನಿಸುವುದಿಲ್ಲ. +ಸಾರ್ವಜನಿಕ ಸೇವಾ ವರ್ಗಗಳಲ್ಲಿ ಎಲ್ಲಾ ಕೋಮುಗಳಿಗೆ ನಿಗದಿತ ಪ್ರಮಾಣದಲ್ಲಿ ಪ್ರಾತಿನಿಧ್ಯ ದೊರೆಯಬೇಕು ಮತ್ತು ಯಾವುದೇ ಒಂದು ಕೋಮಿಗೆ ಏಕಸ್ವಾಮ್ಯತ್ವವಿರಕೂಡದೆಂಬ ತತ್ವವನ್ನು ಭಾರತ ಸರಕಾರ ಮನ್ನಿಸಿದೆ. +ಈ ತತ್ವವನ್ನು ಭಾರತ ಸರಕಾರದ ೧೯೩೪ ಮತ್ತು ೧೯೪೩ ನಿರ್ಣಯಗಳಲ್ಲಿ ಅಳವಡಿಸಲಾಗಿದ್ದು ಇದನ್ನು ಕಾರ್ಯಗತಗೊಳಿಸಲು ಅಗತ್ಯವಾದ ನಿಯಮಗಳನ್ನೂ ಸಿದ್ಧಗೊಳಿಸಲಾಗಿದೆ. +ಈ ನಿಯಮಗಳಿಗೆ ವ್ಯತಿರಿಕ್ತವಾಗಿ ಮಾಡಲಾದ ನೇಮಕಾತಿಗಳು ಅನೂರ್ಜಿತವೆಂದು ಪರಿಗಣಿಸಲಾಗುವುದೆಂದು ಸಹ ಗೊತ್ತುಪಡಿಸಲಾಗಿದೆ. +ಆಡಳಿತಾತ್ಮಕ ಆಚರಣೆಗಳನ್ನು ಕಾಯ್ದೆಬದ್ಧವನ್ನಾಗಿ ಪರಿವರ್ತಿಸುವುದೊಂದೇ ಈಗ ಮಾಡಬೇಕಾದ ಕಾರ್ಯವಾಗಿದೆ. +ಭಾರತ ಸರಕಾರದ ಕಾನೂನಿಗೆ ಒಂದು ಪಟ್ಟಿಯನ್ನು ಸೇರಿಸುವುದರ ಮೂಲಕ ಇದನ್ನು ಮಾಡಬಹುದು. +ಈ ಪಟ್ಟಿಯಲ್ಲಿ ೧೯೩೪ ಮತ್ತು ೧೯೪೩ ರ ಠರಾವುಗಳಲ್ಲಿ ಅಡಗಿರುವ ಅಂಶಗಳು ಮತ್ತು ವಿವಿಧ ಪ್ರಾಂತ್ಯಗಳಲ್ಲಿರುವ ನಿಯಮಗಳನ್ನು ಅಳವಡಿಸಿ ಇದನ್ನು ಸಂವಿಧಾನಾತ್ಮಕ ಕಾನೂನಿನ ಅಂಗವನ್ನಾಗಿ ಮಾಡಬೇಕು. +(ಬ) ಕಾರ್ಯಾಂಗದಲ್ಲಿ ಪ್ರಾತಿನಿಧ್ಯ ಈ ಪ್ರಶ್ನೆಯಿಂದ ಮೂರು ಸಮಸ್ಯೆಗಳು ಉದ್ಭವಿಸುತ್ತವೆ: +೧) ಕಾರ್ಯಾಂಗದಲ್ಲಿ ಪ್ರಾತಿನಿಧ್ಯದ ಪ್ರಮಾಣ; +೨) ಕಾರ್ಯಾಂಗದ ಸ್ವರೂಪ; +೩) ಕಾರ್ಯಾಂಗದ ಸ್ಥಾನಗಳನ್ನು ತುಂಬುವ ಪದ್ಧತಿ ಅಥವಾ ವಿಧಾನ. +೧) ಪ್ರಾತಿನಿಧ್ಯದ ಪ್ರಮಾಣ:ಈ ಪ್ರಶ್ನೆಯನ್ನು ಪರಿಹರಿಸಲು, ಹಿಂದೂಗಳು, ಮುಸಲ್ಮಾನರು ಮತ್ತು ಪರಿಶಿಷ್ಟ ಜಾತಿಗಳ ಪ್ರಾತಿನಿಧ್ಯ ಶಾಸಕಾಂಗದಲ್ಲಿ ಅವರ ಪ್ರಾತಿನಿಧ್ಯದ ಪ್ರಮಾಣಕ್ಕೆ ಸಮನಾಗಿರಬೇಕೆಂಬ ತತ್ವವನ್ನು ಅನುಸರಿಸಬೇಕು. +ಇತರ ಅಲ್ಪಸಂಖ್ಯಾತರಾದ ಸಿಖ್ಜ್ಬರು, ಭಾರತೀಯ ಕ್ರಿಶ್ಚಿಯನ್ನರು, ಆಂಗ್ಲೋ-ಇಂಡಿಯನ್ನರ ವಿಷಯದಲ್ಲಿ ಅವರಿಗೆ ಶಾಸಕಾಂಗದಲ್ಲಿ ನೀಡಲಾದ ಪ್ರಮಾಣಕ್ಕೆ ಸಮನಾದ ಪ್ರಾತಿನಿಧ್ಯವನ್ನು ಕಾರ್ಯಾಂಗದಲ್ಲಿ ಕೊಡುವುದು ಕಷ್ಟವಾಗಬಹುದು. +ಅವರು ಅತಿ ಕಡಿಮೆ ಸಂಖ್ಯೆಯಲ್ಲಿರುವ ಕಾರಣ ಈ ಕಷ್ಟ ಉಂಟಾಗುವುದು. +ಅವರು ತಮ್ಮ ಜನಸಂಖ್ಯೆಗನುಗುಣವಾಗಿ ಕಾರ್ಯಾಂಗದಲ್ಲಿ ಪ್ರಾತಿನಿಧ್ಯ ಹೊಂದಬೇಕಾದರೆ ಕಾರ್ಯಾಂಗವನ್ನು ವಿಪರೀತ ಪ್ರಮಾಣದಲ್ಲಿ ವಿಸ್ತರಿಸಬೇಕಾಗುತ್ತದೆ. +ಆದ್ದರಿಂದ ಹೆಚ್ಚೆಂದರೆ ಅವರಿಗೆ ಮಂತ್ರಿಮಂಡಲದಲ್ಲಿ ಒಂದು ಅಥವಾ ಎರಡು ಸ್ಥಾನಗಳನ್ನು ಕಾಯ್ದಿರಿಸಿ, ಹೊಸ ಸಂವಿಧಾನ ಅಸ್ತಿತ್ವಕ್ಕೆ ಬಂದ ನಂತರ ಸಾಂಸದಿಕ ಕಾರ್ಯದಶಿಗಳ ಸಂಖ್ಯೆಯನ್ನು ಹೆಚ್ಚಿಸಿ ಅವರಿಗೆ ನ್ಯಾಯಯುತ ಪ್ರಾತಿನಿಧ್ಯ ನೀಡುವ ಸಂಪ್ರದಾಯವನ್ನು ಆರಂಭಿಸಬೇಕು. +೨) ಕಾರ್ಯಾಂಗದ ಸ್ವರೂಪ ಕಾರ್ಯಾಂಗದ ರಚನೆಯಲ್ಲಿ ಈ ಕೆಳಕಂಡ ತತ್ವಗಳನ್ನನುಸರಿಸಬೇಕೆಂದು ನನ್ನ ಸೂಚನೆ: +೧) ಬಹುಸಂಖ್ಯಾತರು ಮತ್ತು ಅಲ್ಪಸಂಖ್ಯಾತರ ನಡುವೆ ನಿರಂತರವಾದ ವೈಷಮ್ಯವಿರುವಂತಹ ಭಾರತ ದೇಶದಲ್ಲಿ ಬಹುಸಂಖ್ಯಾತರಿಂದ ಅಲ್ಪಸಂಖ್ಯಾತರ ಮೇಲೆ ಜರುಗಬಹುದಾದ ಕೋಮುವಾರು ಪಕ್ಷಪಾತ ಅಪಾಯವು ಸದಾಕಾಲ ಅಲ್ಪಸಂಖ್ಯಾತರಿಗೆ ಭೀತಿಯನ್ನುಂಟು ಮಾಡುವ ಕಾರಣ, ಶಾಸಕಾಂಗದ ಅಧಿಕಾರಕ್ಕಿಂತ ಕಾರ್ಯಾಂಗದ ಅಧಿಕಾರವು ಹೆಚ್ಚು ಪ್ರಾಮುಖ್ಯವಾದುದ್ದಾಗಿದೆ ಎಂಬ ಅಂಶವನ್ನು ನಾವು ಗಮನಿಸಬೇಕು. +೨) ಮೇಲೆ (೧) ರಲ್ಲಿ ಹೇಳಿದ ಅಂಶದಿಂದಾಗಿ, ಚುನಾವಣೆಗಳಲ್ಲಿ ಬಹುಮತ ಪಡೆದ ಪಕ್ಷ. +ಅದು ಬಹುಮತದ ವಿಶ್ವಾಸವನ್ನೂ ಹೊಂದಿದೆ ಎಂಬ ಗ್ರಹಿಕೆಯ ಮೇಲೆ, ಸರಕಾರ ರಚಿಸುವ ಹಕ್ಕನ್ನು ಹೊಂದಿದೆ ಎಂದು ಹೇಳುವುದು ಭಾರತದಲ್ಲಿರುವ ಪರಿಸ್ಥಿತಿಯಲ್ಲಿ ಅಸಮರ್ಥನೀಯ. +ಭಾರತದಲ್ಲಿ ಬಹುಮತವೆಂದರೆ ಕೋಮು ಬಹುಮತವೇ ಹೊರತು ರಾಜಕೀಯ ಬಹುಮತವಲ್ಲ. +ಇದರಲ್ಲಿರುವ ವ್ಯತ್ಯಾಸದಿಂದಾಗಿ ಇಂಗ್ಲೆಂಡಿನಲ್ಲಿರುವ ಗ್ರಹಿಕೆ ಭಾರತದ ಪರಿಸ್ಥಿತಿಯಲ್ಲಿ ಸಮರ್ಥನೀಯವಾಗಲಾರದು. +೩) ಕಾರ್ಯಾಂಗವು ಶಾಸಕಾಂಗದಲ್ಲಿ ಬಹುಮತ ಹೊಂದಿರುವ ಪಕ್ಷದ ಸಮಿತಿಯಂತಿರಲಾರದು. +ಅದು ಶಾಸಕಾಂಗದಲ್ಲಿನ ಬಹುಮತ ಪಕ್ಷ ಮಾತ್ರವೇ ಅಲ್ಲದೆ ಅಲ್ಪಸಂಖ್ಯಾತರ ನಿಯೋಗವೂ ಆಗಿರುವ ರೀತಿಯಲ್ಲಿ ಅದನ್ನು ರಚಿಸಬೇಕು. +೪) ಕಾರ್ಯಾಂಗವು ಶಾಸಕಾಂಗದಲ್ಲಿ ತನ್ನ ಅವಧಿ ಮುಗಿಯುವವರೆಗೂ ಕಿತ್ತು ಹಾಕಲಾರದ ಅರ್ಥದಲ್ಲಿ ಅದು ಆ ಸಂಸದೀಯ ಪದ್ಧತಿಯದಾಗಿರಬೇಕು. +೫) ಕಾರ್ಯಾಂಗದ ಸದಸ್ಯರು ಶಾಸಕಾಂಗದ ಸದಸ್ಯರಿಂದ ಚುನಾಯಿತರಾದ ಮತ್ತು ಸದನದಲ್ಲಿ ಕುಳಿತುಕೊಳ್ಳುವ, ಮಾತನಾಡುವ, ಮತ ನೀಡುವ ಮತ್ತು ಪ್ರಶ್ನೆಗಳಿಗೆ ಉತ್ತರ ನೀಡುವ ಹಕ್ಕನ್ನು ಪಡೆದ ಸದಸ್ಯರಿಂದ ಕೂಡಿದ ಕಾರ್ಯಾಂಗವಾಗಿರಬೇಕೆಂಬ ಅರ್ಥದಲ್ಲಿ ಅದು ಸಂಸದೀಯ ಕಾರ್ಯಾಂಗವಾಗಿರಬೇಕು. +ಓ) ಸ್ಥಾನಗಳನ್ನು ತುಂಬುವ ವಿಧಾನ ಈ ಸಂಬಂಧದಲ್ಲಿ ಕೆಳಗೆ ಹೇಳಲಾಗುವ ತತ್ವಗಳನ್ನು ಸೂಚಿಸುತ್ತೇನೆ. +ಅ) ಸರಕಾರದ ಕಾರ್ಯಕಾರೀ ಮುಖ್ಯಸ್ಥರಾದ ಪ್ರಧಾನ ಮಂತ್ರಿಗಳು ಇಡೀ ಸದನದ ವಿಶ್ವಾಸ ಹೊಂದಿರಬೇಕು. +ಬ) ಮಂತ್ರಿಮಂಡಲದಲ್ಲಿ ಪ್ರಾತಿನಿಧ್ಯ ಪಡೆದ ಯಾವುದೇ ಅಲ್ಪಸಂಖ್ಯಾತ ಪ್ರತಿನಿಧಿ ಶಾಸಕಾಂಗದಲ್ಲಿ ತನ್ನ ಕೋಮಿನ ಸದಸ್ಯರ ವಿಶ್ವಾಸ ಹೊಂದಿರಬೇಕು. +ಕ) ಮಂತ್ರಿಮಂಡಲದ ಸದಸ್ಯರನ್ನು ಭ್ರಷ್ಟಾಚಾರ ಅಥವಾ ದೇಶದ್ರೋಹದ ದೋಷಾರೋಪಣೆಯ ಮೇಲೆ ಸದನವು ಮಾತ್ರ ಕಿತ್ತು ಹಾಕಬಹುದೇ ಹೊರತು ಇನ್ನಾವ ರೀತಿಯಲ್ಲಿಯೂ ಅವನನ್ನು ಪದಚ್ಯುತಗೊಳಿಸಲಾಗದು. +ಈ ತತ್ವಗಳನ್ನನುಸರಿಸಿ, ಪ್ರಧಾನ ಮಂತ್ರಿ ಮತ್ತು ಬಹುಸಂಖ್ಯಾತ ಕೋಮಿನ ಮಂತ್ರಿ ಮಂಡಳದ ಸದಸ್ಯರನ್ನು ಇಡೀ ಸದನವು ವರ್ಗಾಯಿಸಬಹುದಾದ ಏಕಮತ ಪದ್ಧತಿಯ ಮೂಲಕ ಚುನಾಯಿಸಬೇಕು. + ಮಂತ್ರಿ ಮಂಡಲದಲ್ಲಿನ ವಿವಿಧ ಅಲ್ಪಸಂಖ್ಯಾತ ಕೋಮಿನ ಪ್ರತಿನಿಧಿಗಳನ್ನು ಶಾಸಕಾಂಗದಲ್ಲಿ ಪ್ರತಿ ಅಲ್ಪ ಸಂಖ್ಯಾತ ಕೋಮಿನ ಸದಸ್ಯರ ವರ್ಗಾಯಿಸಬಹುದಾದ ಏಕಮತ ಪದ್ಧತಿಗನುಗುಣವಾಗಿ ಚುನಾಯಿಸಬೇಕು. +(ಕ) ಶಾಸಕಾಂಗದಲ್ಲಿ ಪ್ರಾತಿನಿಧ್ಯ:ಇದು ಅತ್ಯಂತ ಕಠಿಣವಾದ ಪ್ರಶ್ನೆ. +ಇತರ ಎಲ್ಲಾ ಪ್ರಶ್ನೆಗಳು ಈ ಪ್ರಶ್ನೆಗೆ ಇರುವ ಪರಿಹಾರವನ್ನೇ ಅವಲಂಬಿಸಿವೆ. +ಇದರಲ್ಲಿ ಎರಡು ಅಂಶಗಳಿವೆ:೧).ಪ್ರಾತಿನಿಧ್ಯದ ಪ್ರಮಾಣ, ಮತ್ತು೨) ಚುನಾಯಕ ಸಮುದಾಯದ ಸ್ವರೂಪ. +(೧) ಪ್ರಾತಿನಿಧ್ಯದ ಪ್ರಮಾಣ ಮೊದಲು ನಾನು ನನ್ನ ಸೂಚನೆಗಳನ್ನು ಮಂಡಿಸಿ ನಂತರ ಅವುಗಳ ಆಧಾರ ತತ್ವಗಳನ್ನು ವಿವರಿಸುವೆ. +ನನ್ನ ಸೂಚನೆಗಳನ್ನು ಈ ಕೆಳಗೆ ಕೊಟ್ಟಿರುವ ಪಟ್ಟಿಗಳಲ್ಲಿ ಕೊಡಲಾಗಿದೆ. +ಈ ಪಟ್ಟಿಗಳಲ್ಲಿ ಬ್ರಿಟಿಷ್‌ ಭಾರತದ ವಿವಿಧ ಕೋಮುಗಳಿಗೆ ಕೇಂದ್ರ ಶಾಸಕಾಂಗ ಮತ್ತು ಪ್ರಾಂತೀಯ ಶಾಸಕಾಂಗದಲ್ಲಿ ನೀಡಬೇಕಾದ ಪ್ರಾತಿನಿಧ್ಯದ ಪ್ರಮಾಣವನ್ನು ತಿಳಿಸಲಾಗಿದೆ. +ಶಾಸಕಾಂಗದಲ್ಲಿ ಸೂಚಿಸಲಾದ ಪ್ರಾತಿನಿಧ್ಯದ ಪ್ರಮಾಣ +ವಿ.ಸೂ: ಈ ಕೆಳಗಿನ ಪಟ್ಟಿಗಳಲ್ಲಿ ನೀಡಲಾಗಿರುವ ಶೇಕಡಾವಾರು ಜನಸಂಖ್ಯೆಯಲ್ಲಿ ಆದಿ ಜನಾಂಗದ(ಬುಡಕಟ್ಟಿನ) ಜನಸಂಖ್ಯೆಯನ್ನು ಬಿಟ್ಟಿರುವುದರಿಂದ ಇದಕ್ಕೂ ಮತ್ತು ಜನಗಣತಿಯ ಸಂಖ್ಯೆಯಲ್ಲಿ ವ್ಯತ್ಯಾಸವಿದೆ. +ಅಲ್ಪಸಂಖ್ಯಾತರ ಮೇಲೆ ಇದರ ಪರಿಣಾಮ:೧೯೩೫ ರ ಭಾರತ ಸರಕಾರ ಕಾಯ್ದೆಯಲ್ಲಿ ನಿಗದಿಗೊಳಿಸಲಾದ ಮತ್ತು ಈಗಿನ ಸೂಚನೆಗಳಲ್ಲಿ ಕೊಡಲಾದ ವಿವಿಧ ಅಲ್ಪಸಂಖ್ಯಾತರ ಪ್ರಾತಿನಿಧ್ಯದಲ್ಲಿ ಉಂಟಾಗುವ ಬದಲಾವಣೆಗಳನ್ನು ಪಟ್ಟಿಯ ರೂಪದಲ್ಲಿ ವಿವರಿಸುವುದು ಅಪೇಕ್ಷಣೀಯ. +ಸೂಚನೆಗಳಲ್ಲಿ ಅಡಕವಾಗಿರುವ ಮೂಲ ತತ್ವಗಳು. +ಇನ್ನು ಈ ವಿತರಣೆಯನ್ನು ಯಾವ ಮೂಲ ತತ್ವಗಳ ಆಧಾರದ ಮೇಲೆ ಮಾಡಲಾಗಿದೆ ಎಂಬುದನ್ನುವ ವಿವರಿಸುವೆ. +ಅವುಗಳು:-೧) ಬಹು ಸಂಖ್ಯಾತರ ಆಳ್ವಿಕೆ ಸೈದ್ಧಾಂತಿಕವಾಗಿ ಅಸಂಬದ್ಧ ಮತ್ತು ಆಚರಣೆಯಲ್ಲಿ ಅಸಮರ್ಥನೀಯ. +ಬಹು ಸಂಖ್ಯಾತ ಕೋಮಿನ ಬಹುಮತ ಸಂಬಂದ್ಧವೇ ಹೊರತು ಸಮಗ್ರವಲ್ಲ. +೨) ಶಾಸಕಾಂಗದಲ್ಲಿ ಬಹುಮತ ಕೋಮಿಗೆ ನೀಡಲಾದ ಪ್ರಾತಿನಿಧ್ಯದ ಬಹುಮತವು ಆ ಕೋಮು ಅತಿ ಚಿಕ್ಕ ಅಲ್ಪ ಸಂಖ್ಯಾತರ ಸಹಾಯದಿಂದ ತನ್ನ ಆಳ್ವಿಕೆಯನ್ನು ಸ್ಥಾಪಿಸಿಕೊಳ್ಳುವ ಪ್ರಮಾಣದಲ್ಲಿರಬಾರದು. +೩) ಬಹುಮತ ಹೊಂದಿರುವ ಒಂದು ಕೋಮು ಅಲ್ಪಸಂಖ್ಯಾತರಲ್ಲಿಯೇ ದೊಡ್ಡದಾದ ಇನ್ನೊಂದು ಕೋಮಿನೊಡನೆ ಒಂದಾಗಿ ಇತರ ಅಲ್ಪಸಂಖ್ಯಾತರ ಹಿತಾಸಕ್ತಿಗಳನ್ನು ನಿರ್ಲಕ್ಷಿಸುವಂತೆ ಆಗದ ರೀತಿಯಲ್ಲಿ ಸ್ಥಳಗಳ ಹಂಚಿಕೆ ಮಾಡಬೇಕು. +೪) ಎಲ್ಲಾ ಅಲ್ಪಸಂಖ್ಯಾತ ಗುಂಪುಗಳು ಒಂದಾಗಿ ಬಹುಮತ ಕೋಮಿನ ಮೇಲೆ ಅವಲಂಬನೆಯಾಗದೆ ತಮ್ಮದೇ ಸರಕಾರ ರಚಿಸಲು ಸಾಧ್ಯವಾಗುವ ರೀತಿಯಲ್ಲಿ ಸ್ಥಳಗಳ ಹಂಚಿಕೆಯಾಗಬೇಕು. +೫) ಬಹುಸಂಖ್ಯಾತರಿಂದ ಪಡೆದ ಮೊತ್ತವನ್ನು ವಿವಿಧ ಅಲ್ಪಸಂಖ್ಯಾತ ಗುಂಪುಗಳ ಸಾಮಾಜಿಕಸ್ಥಾನ, ಆರ್ಥಿಕ ಪರಿಸ್ಥಿತಿ ಮತ್ತು ಶೈಕ್ಷಣಿಕ ಮಟ್ಟಕ್ಕನುಗುಣವಾಗಿ ವಿಪರ್ಯಯ ಪ್ರಮಾಣದಲ್ಲಿ ಅಲ್ಪ ಸಂಖ್ಯಾತ ಗುಂಪುಗಳಿಗೆ ಹಂಚಬೇಕು. + ಎಂದರೆ, ಇದ್ದುದರಲ್ಲಿಯೇ ಉತ್ತಮ ಸಾಮಾಜಿಕ,ಆರ್ಥಿಕ ಮತ್ತು ಶೈಕ್ಷಣಿಕ ಮಟ್ಟವನ್ನು ಹೊಂದಿರುವ ಅಲ್ಪಸಂಖ್ಯಾತ ಗುಂಪಿಗೆ ಕಡಿಮೆ ಸಂಖ್ಯಾಬಲ ಹೊಂದಿರುವ ಮತ್ತು ಯಾರ ಶೈಕ್ಷಣಿಕ, ಆರ್ಥಿಕ ಮತ್ತು ಸಾಮಾಜಿಕ ಮಟ್ಟ ಕಡಿಮೆ ಇದೆಯೋ ಇವರಿಗಿಂತಲೂ ಕಡಿಮೆ ಸ್ಥಳಗಳನ್ನು ನೀಡಬೇಕು. +ಪ್ರಾತಿನಿಧ್ಯವೆಂದರೆ ಸಮತೋಲನ ಪ್ರಾತಿನಿಧ್ಯ ಎಂದು ನನ್ನ ಅಭಿಪ್ರಾಯ. + ಯಾವ ಒಂದು ಕೋಮೂ ತನ್ನ ಸಂಖ್ಯಾ ಬಲದಿಂದಾಗಿ ಇತರರ ಮೇಲೆ ತನ್ನ ಆಧಿಪತ್ಯವನ್ನು ಹೇರುವಂತಿರಬಾರದು. +ಕೇಂದ್ರ ಮತ್ತು ಪ್ರಾಂತ್ಯಗಳಲ್ಲಿ ಹಿಂದೂ ಬಹುಮತಕ್ಕೆ ಮುಸಲ್ಮಾನರೂ ಮತ್ತು ಮುಸಲ್ಮಾನರ ಬಹುಮತಕ್ಕೆ ಹಿಂದೂ ಮತ್ತು ಸಿಖ್ಬರು ಹಾಕುವ ಅಭ್ಯಂತರ ಸಂಪೂರ್ಣ ನಿವಾರಣೆಯಾಗಬೇಕು. +ವಾಯವ್ಯಗಡಿ ಪ್ರಾಂತದಲ್ಲಿ ಅಲ್ಪ ಸಂಖ್ಯಾತರ ಸಂಖ್ಯೆ ಸಂಬಂಧ ಬಹುಮತ ತತ್ವವೂ ಕೂಡ ಸಹಾಯಕವಾಗದಷ್ಟು ಕಡಿಮೆ ಇರುವುದರಿಂದ ಆ ಪ್ರಾಂತದ ಪ್ರಾತಿನಿಧ್ಯಕ್ಕಾಗಿ ನಾನು ಯಾವ ಯೋಜನೆಯನ್ನೂ ನಿರೂಪಿಸಿಲ್ಲ. +ಮತದಾರ ಸಮುದಾಯದ ಸ್ಪರೂಪಮತದಾರರ ಪ್ರಶ್ನೆಯ ವಿಷಯದಲ್ಲಿ ಈ ಕೆಳಗೆ ಹೇಳಲಾದ ಸೂಚನೆಗಳನ್ನು ಒಪ್ಪಿಕೊಳ್ಳಬೇಕು. +೧) ಒಕ್ಕೂಟ ಮತದಾರರ ಅಥವಾ ಪ್ರತ್ಯೇಕ ಮತದಾನದ ವ್ಯವಸ್ಥೆ ಒಂದು ನಿಗದಿತ ಗುರಿಯನ್ನು ಸಾಧಿಸುವ ಸಾಧನ ಮಾತ್ರ. +ಅದು ತಾತ್ವಿಕವಲ್ಲ. +೨) ಅಲ್ಪ ಸಂಖ್ಯಾತರು ತಮ್ಮ ಪ್ರತಿನಿಧಿಗಳು ನಾಮ ಮಾತ್ರರಾಗಿರದೆ ನಿಜವಾದ ಪ್ರತಿನಿಧಿಗಳನ್ನು ಆರಿಸುವಂತೆ ಅನುಕೂಲಮಾಡಿಕೊಡುವುದೇ ಇದರ ಉದ್ದೇಶ +೩) ಪ್ರತ್ಯೇಕ ಮತದಾನ ವ್ಯವಸ್ಥೆಯು ಅಲ್ಪ ಸಂಖ್ಯಾತರು ತಮ್ಮ ವಿಶ್ವಾಸ ಹೊಂದಿದ ಪ್ರತಿನಿಧಿಗಳನ್ನೇ ಆಯ್ಕೆ ಮಾಡಲು ಸಂಪೂರ್ಣ ಭರವಸೆ ನೀಡುವುದಾಗಿದ್ದು, ಒಕ್ಕೂಟ ಚುನಾಯಕ ವ್ಯವಸ್ಥೆ ಎಲ್ಲಾ ಅಲ್ಪ ಸಂಖ್ಯಾತರಿಗೆ ಸಮಾನ ರಕ್ಷಣೆ ನೀಡುತ್ತದೆ ಎಂಬ ಅಂಶವನ್ನು ಕಡೆಗಣಿಸಲಾಗದು. +೪) ಪ್ರತಿಯೊಬ್ಬ ಅಲ್ಪ ಸಂಖ್ಯಾತ ಮತದಾರ ಎರಡು ಮತಗಳನ್ನು ಹೊಂದಿರುವ ಮತ್ತು ಒಂದು ಕನಿಷ್ಠ ಶೇಕಡಾ ಪ್ರಮಾಣದ ಅಲ್ಪಸಂಖ್ಯಾತರ ಮತಗಳನ್ನು ಪಡೆಯಲೇಬೇಕಾದಂತಹ ನಾಲ್ಕು ಸದಸ್ಯರ ಮತಕ್ಷೇತ್ರಗಳ ವ್ಯವಸ್ಥೆಯನ್ನು ಒಂದು ಸಾಧ್ಯ ಪರ್ಯಾಯ ವ್ಯವಸ್ಥೆಯಾಗಿ ಪರಿಗಣಿಸಬಹುದು. +ಇದುವರೆಗೆ ಪರಿಶೀಲಿಸದೆ ಇರುವ ವಿಷಯಗಳು(೧) ವಿಶೇಷ ಸುರಕ್ಷೆಯ ಪ್ರಶ್ನೆ ಕೆಲವು ನಿರ್ದಿಷ್ಟ ಅಲ್ಪಸಂಖ್ಯಾತರ ಪರವಾಗಿ ಮಂಡಿಸಲಾದ ಇನ್ನೂ ಕೆಲವು ಬೇಡಿಕೆಗಳಿವೆ . +ಅವುಗಳೆಂದರೆ ;-೧).ಅಲ್ಪಸಂಖ್ಯಾತರ ಸ್ಥಿತಿಗತಿಗಳ ಬಗೆಗೆ ವರದಿ ಮಾಡಲು ಒಬ್ಬ ಶಾಸನಬದ್ಧ ಅಧಿಕಾರಿಯ ನೇಮಕಕ್ಕೆ ಅವಕಾಶ ಮಾಡುವುದು. +೨) ಶಿಕ್ಷಣಕ್ಕೆ ಸರಕಾರದ ಧನಸಹಾಯದ ಬಗೆ ಶಾಸನಬದ್ಧ ಅವಕಾಶ ಕಲ್ಪಿಸುವುದು. +೩) ಭೂ ಹಿಡುವಳಿಯ ಶಾಸನಬದ್ಧ ವ್ಯವಸ್ಥೆ. +ಇದು ಕೋಮುವಾರು ವಿಷಯವಲ್ಲವಾದ್ದರಿಂದ ಇಲ್ಲಿ ಇದನ್ನು ಹೆಚ್ಚು ಬೆಳೆಸಬಯಸುವುದಿಲ್ಲ. +(೨) ಆದಿ ಜನಾಂಗ (ಬುಡಕಟ್ಟುಗಳು)ಆದಿ ಬುಡಕಟ್ಟುಗಳ ಜನಾಂಗ, ಸಿಖ್ಜ್ಬರು, ಆಂಗ್ಲೋ-ಇಂಡಿಯನ್ನರು, ಭಾರತೀಯ ಕ್ರಿಶ್ಚಿಯನ್ನರು ಮತ್ತು ಪಾರ್ಸಿಗಳಿಗಿಂತ ಹೆಚ್ಚಿನ ಸಂಖ್ಯೆಯಲ್ಲಿರುವರಾದರು ನನ್ನ ಸೂಚನೆಗಳಲ್ಲಿ ಅವರು ಸೇರಿಲ್ಲವೆಂಬುದು ಸ್ಪಷ್ಟವಿದೆ. +ನನ್ನ ಯೋಜನೆಯಲ್ಲಿ ಅವರನ್ನು ಏಕೆ ಸೇರಿಸಿಲ್ಲ ಎನ್ನುವುದಕ್ಕೆ ಕಾರಣಗಳಿವೆ. +ಬುಡಕಟ್ಟಿನ ಜನರು ತಮಗೆ ದೊರೆತ ರಾಜಕೀಯ ಅವಕಾಶಗಳ ಸದುಪಯೋಗ ಮಾಡಿಕೊಳ್ಳುವಷ್ಟು ರಾಜಕೀಯ ಪ್ರಜ್ಞೆಯನ್ನು ಬೆಳೆಸಿಕೊಂಡಿಲ್ಲದ ಕಾರಣ ಅವರನ್ನು ಯಾರಾದರೂ, ಎಂದರೆ ಬಹುಸಂಖ್ಯಾತಕೋಮಿನವರಾಗಲೀ, ಅಥವಾ ಅಲ್ಪ ಸಂಖ್ಯಾತ ಕೋಮಿನವರೇ ಆಗಲೀ, ತಮ್ಮ ತಮ್ಮ ಅನುಕೂಲಕ್ಕನುಸಾರವಾಗಿ ಉಪಯೋಗಿಸಿಕೊಳ್ಳುವುದರ ಮೂಲಕ ಸಮತೋಲನವನ್ನು ತಪ್ಪಿಸಬಹುದು. +ಇದರಿಂದ ಬುಡಕಟ್ಟಿನವರಿಗೆ ಯಾವ ಉಪಯೋಗವೂ ಆಗುವುದಿಲ್ಲ. +ಅವರ ಬೆಳವಣಿಗೆಯ ಸದ್ಯದ ಪರಿಸ್ಥಿತಿಯಲ್ಲಿ ಈ ಹಿಂದುಳಿದ ವರ್ಗಗಳ ಬೆಳವಣಿಗೆಗಾಗಿ ದಕ್ಷಿಣ ಆಫ್ರಿಕಾದ ಸಂವಿಧಾನದಲ್ಲಿ "ಪ್ರತ್ಯೇಕಿತ ಕ್ಷೇತ್ರಗಳ ಆಡಳಿತಕ್ಕಾಗಿರುವ ರೀತಿಯಲ್ಲಿ ಒಂದು ಶಾಸನಬದ್ಧ ಆಯೋಗವನ್ನು ರಚಿಸುವುದು ವಿಹಿತವೆಂದು ನನಗನಿಸುತ್ತದೆ. +ಈ ಪ್ರತ್ಯೇಕಿತ ಕ್ಷೇತ್ರಗಳಿರುವ ಪ್ರತಿಯೊಂದು ಪ್ರಾಂತ್ಯವೂ ಅದರ ಆಡಳಿತ ವೆಚ್ಚಕ್ಕಾಗಿ ಪ್ರತಿ ವರ್ಷ ಒಂದು ನಿಗದಿತ ಮೊತ್ತವನ್ನು ಕಡ್ಡಾಯವಾಗಿ ಕೊಡುವ ವ್ಯವಸ್ಥೆ ಮಾಡಬೇಕು. +(೩) ಭಾರತೀಯ ಸಂಸ್ಥಾನಗಳುನನ್ನ ಯೋಜನೆಯಲ್ಲಿ ಭಾರತೀಯ ಸಂಸ್ಥಾನಗಳನ್ನೂ ಸೇರಿಸಿಲ್ಲವೆಂಬುದನ್ನು ಗಮನಿಸಬೇಕು. +ಈ ಮುಂದೆ ಹೇಳಲಾಗುವ ಕರಾರುಗಳು ಮತ್ತು ನಿಯಮಗಳನ್ನು ಒಪ್ಪುವುದಾದರೆ ಅವುಗಳನ್ನು ಸೇರಿಸಲು ನನ್ನ ವಿರೋಧವಿಲ್ಲ. +೧) ಬ್ರಿಟಿಷ್‌ ಭಾರತ ಮತ್ತು ಭಾರತೀಯ ಸಂಸ್ಥಾನಗಳ ನಡುವೆ ವಿಭಜಿತ ಸಾರ್ವಭೌಮತ್ವ ವ್ಯವಸ್ಥೆಯ ದ್ವಂದ್ವ ವರ್ಗೀಕರಣವನ್ನು ಕೈಬಿಡಬೇಕು. +೨) ಬ್ರಿಟಿಷ್‌ ಭಾರತ ಮತ್ತು ಭಾರತೀಯ ಸಂಸ್ಥಾನಗಳನ್ನು ಪ್ರತ್ಯೇಕಿಸುವ ನ್ಯಾಯಿಕ ಮತ್ತು ರಾಜಕೀಯ ಎಲ್ಲೆಗಳು ಇಲ್ಲದಂತಾಗಬೇಕು. +ಬ್ರಿಟಿಷ್‌ ಭಾರತ ಮತ್ತು ಭಾರತೀಯ ಸಂಸ್ಥಾನಗಳು ಎಂಬ ಪ್ರತ್ಯೇಕ ಘಟಕಗಳಿರಬಾರದು. +ಅವುಗಳ ಬದಲು ಒಂದು ಏಕೀಕೃತ ಭಾರತ ಅಸ್ತಿತ್ವದಲ್ಲಿರಬೇಕು. +೩) ಇವುಗಳನ್ನು ಒಂದುಗೂಡಿಸುವ ಷರತ್ತುಗಳು ಮತ್ತು ನಿಯಮಗಳು ಭಾರತವು ಮುಂದೆ ಬ್ರಿಟಿಷ್‌ ಚಕ್ರಾಧಿಪತ್ಯದ ಒಂದು ಒಳರಾಷ್ಟ್ರವಾಗಿ ಸಂಪೂರ್ಣ ಮತ್ತು ಪೂರ್ವಭಾವಿ ಅಧಿಕಾರ ಹೊಂದುವುದಕ್ಕೆ ಅಡ್ಡಿಯಾಗಬಾರದು. +ಈ ಉದ್ದೇಶಗಳನ್ನು ಈಡೇರಿಸಲು ಸಹಾಯಕವಾಗುವಂತಹ ಬ್ರಿಟಿಷ್‌ ಭಾರತ ಮತ್ತು ಭಾರತೀಯ ಸಂಸ್ಥಾನಗಳನ್ನು ಒಂದುಗೂಡಿಸಲು ಒಂದು ಯೋಜನೆಯನ್ನು ಸಿದ್ಧಗೊಳಿಸಿದ್ದೇನೆ. +ಈ ಯೋಜನೆಯ ವಿವರಗಳಿಂದ ಈ ಭಾಷಣವನ್ನು ಬೆಳೆಸಲು ನನಗೆ ಇಚ್ಛೆಯಿಲ್ಲ. +ಸದ್ಯದಲ್ಲಿ ಬ್ರಿಟಿಷ್‌ ಭಾರತವು ಭಾರತೀಯ ಸಂಸ್ಥಾನಗಳ ಸಮಸ್ಯೆಯ ತೊಡಕಿನಲ್ಲಿ ಸಿಕ್ಕಿಕೊಳ್ಳದೆ ತನ್ನ ಗುರಿ ಸಾಧನೆಯತ್ತ ಮುನ್ನಡೆಯುವುದು ಒಳ್ಳೆಯದು. +ಈ ಸೂಚನೆಗಳ ಹಿನ್ನೆಲೆಯಲ್ಲಿ ಪಾಕಿಸ್ತಾನ ಏಕೀಕೃತ ಭಾರತವನ್ನೇ ದೃಷ್ಟಿಯಲ್ಲಿಟ್ಟುಕೊಂಡು ನನ್ನ ಸೂಚನೆಗಳನ್ನು ಮಾಡಿದ್ದೇನೆ. +ಮುಸಲ್ಮಾನರಿಗೆ ಈ ಯೋಜನೆಯಲ್ಲಿ ಪಾಕಿಸ್ತಾನಕ್ಕಿಂತಲೂ ಹೆಚ್ಚಿನ ಭದ್ರತೆ ಸಿಗುವುದರಿಂದ ಅವರು ಪಾಕಿಸ್ತಾನಕ್ಕೆ ಬದಲಾಗಿ ಇದನ್ನು ಒಪ್ಪಿಕೊಳ್ಳುವರೆಂಬ ಭರವಸೆಯಿಂದ ಈ ಯೋಜನೆಯನ್ನು ಮಾಡಲಾಗಿದೆ. +ನಾನು ಪಾಕಿಸ್ತಾನದ ವಿರೋಧಿಯಲ್ಲ. +ಅದನ್ನು ಸ್ವಯಂ ನಿರ್ಣಯಾಧಿಕಾರದ ತತ್ವದ ಆಧಾರದ ಮೇಲೆ ಬೇಡಲಾಗಿದೆ ಎಂದು ನಂಬಿದ್ದೇನೆ. +ಈ ತತ್ವವನ್ನು ಈಗ ಮಾಡಲು ಸಿದ್ಧನಿದ್ದೇನೆ. +ಅದೇನೆಂದರೆ ಮುಸಲ್ಮಾನರುಅದೇ ಕ್ಷೇತ್ರದ ಮುಸಲ್ಮಾನೇತರಿಗೂ ಈ ತತ್ವವನ್ನು ಅನ್ವಯಿಸುವುದಕ್ಕೆ ಅಡ್ಡಿ ಮಾಡಬಾರದು. +ಆದರೆ ಸುಭದ್ರತೆಗಾಗಿ ನಾನು ಇದಕ್ಕಿಂತಲೂ ಉತ್ತಮವಾದ ಇನ್ನೊಂದು ಯೋಜನೆಯತ್ತ ಮುಸಲ್ಮಾನರ ಗಮನ ಸೆಳೆಯಬಯಸುತ್ತೇನೆ. + ನನ್ನ ಯೋಜನೆ ಪಾಕಿಸ್ತಾನದ ಯೋಜನೆಗಿಂತಲೂ ಉತ್ತಮವಾದದ್ದೆಂದು ನಾನು ಹೇಳಬಲ್ಲೆ. +ನನ್ನ ಯೋಜನೆಯ ಪರವಾದ ಅಂಶಗಳನ್ನು ಈಗ ಹೇಳಬಯಸುತ್ತೇನೆ. +ಅವುಗಳುಹೀಗಿವೆ:೧) ಪಾಕಿಸ್ತಾನ ಯೋಜನೆಯ ಆಧಾರವಾಗಿರುವ ಕೋಮು ಬಹುಮತದ ಅಪಾಯವು ನನ್ನ ಯೋಜನೆಯಲ್ಲಿ ಇರುವುದಿಲ್ಲ. +೨) ನನ್ನ ಯೋಜನೆಯಲ್ಲಿ ಮುಸಲ್ಮಾನರು ಈಗ ಹೊಂದಿರುವ ಹೆಚ್ಚಿನ ಪ್ರಾಮುಖ್ಯತೆಯನ್ನು ಬದಲಾಯಿಸಿಲ್ಲ. +೩) ಮುಸಲ್ಮಾನೇತರ ಪ್ರಾಂತಗಳಲ್ಲಿ ತಮಗೆ ದೊರೆಯುವ ಪ್ರಾತಿನಿಧ್ಯದಲ್ಲಿ ಹೆಚ್ಚಳವಾಗುವುದರಿಂದ ಅಲ್ಲಿ ಮುಸಲ್ಮಾನರ ಸ್ಥಾನ ಬಲಗೊಳ್ಳುತ್ತದೆ. +ಈ ಲಾಭ ಅವರಿಗೆ ಪಾಕಿಸ್ತಾನದಲ್ಲಿ ದೊರೆಯುವುದಿಲ್ಲ. +ಆಗ ಅವರ ಸ್ಥಿತಿ ಈಗಿರುವುದಕ್ಕಿಂತಲೂ ಅಸಹಾಯಕವಾದುದಾಗುವುದು. +ಹಿಂದೂಗಳಿಗೆ ಒಂದು ಮಾತು:ಕೋಮುವಾರು ಪ್ರಶ್ನೆಯ ಸಂಬಂಧ ಉದ್ಭವಿಸಿರುವ ಅನೇಕ ಸಮಸ್ಯೆಗಳು ಬಹುಮತ ಆಳ್ವಿಕೆ ಪರಮ ಶ್ರೇಷ್ಠವಾದದ್ದೆಂದು ಮತ್ತು ಅದನ್ನು ಯಾವ ಕಾರಣಕ್ಕಾಗಿಯೂ ಕೈಬಿಡಲಾಗದು ಎಂಬ ಹಿಂದೂಗಳ ಅಚಲ ನಂಬಕೆ ಕಾರಣವಾಗಿದೆ. +ಆದರೆ ಇದೂ ಅಲ್ಲದೆ, ವ್ಯಕ್ತಿಗಳು ಮತ್ತು ರಾಷ್ಟಗಳ ನಡುವೆ ಉದ್ಭವಿಸುವ ಸಮಸ್ಯೆಗಳ ನಿವಾರಣೆಗೆ ಒಮ್ಮತ ಅಥವಾ ಸರ್ವಾನುಮತ ಎಂಬ ಇನ್ನೂ ಒಂದು ತತ್ವ ಇದೆ ಎಂಬುದನ್ನು ಹಿಂದೂಗಳು ಅರಿತಂತೆ ತೋರುವುದಿಲ್ಲ. +ಹಿಂದೂಗಳು ಈ ತತ್ವವನ್ನು ಪರಿಶೀಲಿಸುವ ಪ್ರಯತ್ನ ಮಾಡಿದ್ದೇ ಆದರೆ ಈ ತತ್ವ ಕೇವಲ ಕಾಲ್ಪನಿಕವಲ್ಲ. + ಅದು ಇಂದು ಆಚರಣೆಯಲ್ಲಿರುವ ತತ್ವ ಎಂಬುದು ಅವರಿಗೆ ಅರಿವಾಗುವುದು. +ಅವರು ನ್ಯಾಯದರ್ಶಿಗಳ ಪದ್ಧತಿಯನ್ನೇ ತೆಗೆದುಕೊಳ್ಳಲಿ. +ನ್ಯಾಯದರ್ಶಿ ಪದ್ಧತಿಯ ವಿಚಾರಣೆಯಲ್ಲಿ ಒಮ್ಮತದ ತತ್ವವನ್ನೇ ಪಾಲಿಸಿಕೊಂಡು ಬರಲಾಗಿದೆ. +ನ್ಯಾಯದರ್ಶಿಗಳ ಅಭಿಪ್ರಾಯ ಒಮ್ಮತದ್ದಾಗಿದ್ದಾಗ ಮಾತ್ರ ನ್ಯಾಯಾಧೀಶನು ಅದನ್ನು ಒಪ್ಪಿಕೊಳ್ಳಲೇಬೇಕಾಗುತ್ತದೆ. +ಲೀಗ್‌ ಆಫ್‌ ನೇಷನ್ಸ್‌ (ರಾಷ್ಟ್ರಸಂಘ)ದ ಇನ್ನೊಂದು ನಿದರ್ಶನವನ್ನು ತೆಗೆದುಕೊಳ್ಳೋಣ. +ಈ ಸಂಸ್ಥೆಯಲ್ಲಿ ನಿರ್ಣಯಗಳನ್ನು ಮಾಡಲು ಇದ್ದ ತತ್ವ ಯಾವುದು ? + ಅದುಒಮ್ಮತದ ತತ್ವವೇ ಆಗಿತ್ತು. +ಆದ್ದರಿಂದ ಹಿಂದೂಗಳು ಶಾಸಕಾಂಗ ಮತ್ತು ಕಾರ್ಯಾಂಗಗಳಲ್ಲಿ ನಿರ್ಣಯ ಮಾಡುವಾಗ ಒಮ್ಮತದ ನಿಯಮವನ್ನು ಮನ್ನಿಸಿದ್ದೇ ಆದರೆ ಭಾರತದಲ್ಲಿ ಕೋಮುವಾರು ಸಮಸ್ಯೆ ಎಂಬುದೇ ಇರುವುದಿಲ್ಲ. +ಅಲ್ಪಸಂಖ್ಯಾತರಿಗೆ ಹಿಂದೂಗಳು ಸಂವಿಧಾನಾತ್ಮಕ ಸಂರಕ್ಷಣೆಗಳನ್ನು ನೀಡಲು ಸಿದ್ಧರಿಲ್ಲದಿದ್ದರೆ,ಒಮ್ಮತದ ನಿಯಮವನ್ನಾದರೂ ಒಪ್ಪಿಕೊಳ್ಳಲು ಸಿದ್ಧರಿದ್ದಾರೆಯೇ ಎಂದು ಹಿಂದೂಗಳನ್ನು ಯಾರಾದರೂ ಕೇಳಬಹುದು. +ದುರದೃಷ್ಟವಶಾತ್‌ ಇವೆರಡರಲ್ಲಿ ಯಾವುದನ್ನೂ ಒಪ್ಪಿಕೊಳ್ಳಲು ಹಿಂದೂಗಳು ಸಿದ್ಧರಿಲ್ಲ. +ಬಹುಮತ ಆಳ್ವಿಕೆಯ ವಿಷಯವಾಗಿ ಹಿಂದೂಗಳು ಯಾವ ಇತಿಮಿತಿಗಳನ್ನೂ ಒಪ್ಪಲು ಸಿದ್ಧರಿಲ್ಲ. +ಅವರಿಗೆ ಬೇಕಾಗಿರುವುದು ಪರಿಪೂರ್ಣ ನಿಚ್ಚಳ ಬಹುಮತ. +ಸಂಬದ್ಧ ಬಹುಮತದಿಂದಲೂ ಅವರಿಗೆ ತೃಪ್ತಿ ಇಲ್ಲ. +ಪರಿಪೂರ್ಣ ಬಹುಮತವನ್ನೇ ಒತ್ತಿ ಒತ್ತಿ ಹೇಳುವುದು ಮತ್ತು ಅದನ್ನು ರಾಜ್ಯ ಶಾಸ್ತ್ರಜ್ಜರು ಒಪ್ಪಬಹುದೇ ಎಂಬ ವಿಚಾರವನ್ನು ಹಿಂದೂಗಳು ಪರಿಶೀಲಿಸಬೇಕು. +ಹಿಂದೂಗಳು ಹಟ ಹಿಡಿದಿರುವ ಪರಿಪೂರ್ಣ ಬಹುಮತದ ಆಳ್ವಿಕೆಯ ತತ್ವವನ್ನು ಅಮೆರಿಕ ಸಂಯುಕ್ತ ಸಂಸ್ಥಾನಗಳ ಸಂವಿಧಾನವೂ ಕೂಡ ಅನುಮೋದಿಸಿಲ್ಲವೆಂಬ ವಿಷಯ ಹಿಂದೂಗಳಿಗೆ ಗೊತ್ತಿರಲಿಕ್ಕಿಲ್ಲ. +ಅಮೆರಿಕ ಸಂವಿಧಾನದ ಸಹಾಯದಿಂದಲೇ ಈ ವಿಷಯವನ್ನು ವಿವರಿಸುವೆ. +ಮೂಲಭೂತಹಕ್ಕುಗಳನ್ನು ಉಲ್ಲೇಖಿಸಿರುವ ವಿಧಿಯನ್ನೇ ತೆಗೆದುಕೊಳ್ಳೋಣ. +ಆ ವಿಧಿಯ ಅರ್ಥವೇನು ? + ಮೂಲಭೂತ ಹಕ್ಕುಗಳಲ್ಲಿರುವ ವಿಷಯಗಳು ಅತ್ಯಂತ ಮಹತ್ವದ ವಿಷಯಗಳಾಗಿದ್ದು ಅವುಗಳಲ್ಲಿ ಹಸ್ತಕ್ಷೇಪ ಮಾಡಲು ಕೇವಲ ಪರಿಪೂರ್ಣ ಬಹುಮತವೇ ಆಧಾರವಾಗಲಾರದು. +ಇದೇ ದೇಶದ ಸಂವಿಧಾನದಿಂದ ಇನ್ನೊಂದು ನಿದರ್ಶನವನ್ನು ತೆಗೆದುಕೊಳ್ಳೋಣ. +ಸಂವಿಧಾನದ ಯಾವುದೇ ಭಾಗವನ್ನು ೩/೪ ಅಂಶ ಬಹುಮತ ಅನುಮೋದಿಸದೇ ಮತ್ತು ರಾಜ್ಯಗಳಿಂದ ಒಪ್ಪಿಗೆ ಪಡೆಯದೇ ತಿದ್ದುಪಡಿ ಮಾಡುವಂತಿಲ್ಲ. + ಇದರಅರ್ಥವೇನು ? + ಅಮೆರಿಕದ ಸಂವಿಧಾನದ ಪ್ರಕಾರ ಕೆಲವು ವಿಷಯಗಳಲ್ಲಿ ಕೇವಲ ಬಹುಮತ ನಿಯಮ ಸಾಲದು ಹಾಗೂ ಅಸಮರ್ಥ ಎಂಬುದು ಇದರ ಅರ್ಥ. +ಅನೇಕ ಹಿಂದೂಗಳಿಗೆ ಈ ಎಲ್ಲಾ ಸಂಗತಿಗಳು ಸುಪರಿಚಿತ. +ಆದರೆ ದುರ್ದೈವವೆಂದರೆ ಅವರು ಇವುಗಳ ಸರಿಯಾದ ಅರ್ಥ ತಿಳಿದುಕೊಳ್ಳುವುದಿಲ್ಲ. +ಹಾಗೆ ತಿಳಿದುಕೊಂಡ ಪಕ್ಷದಲ್ಲಿ ತಾನು ಪ್ರತಿಪಾದಿಸುತ್ತಿರುವ ಬಹುಮತ ಆಳ್ವಿಕೆಯ ತತ್ವ ಪರಿಪೂರ್ಣವಲ್ಲ ಎಂಬುದರ ಅರಿವು ಅವರಿಗುಂಟಾಗುತ್ತದೆ. +ಬಹುಮತೀಯ ಆಳ್ವಿಕೆಯನ್ನು ಒಂದು ತತ್ವವನ್ನಾಗಿ ಮಾನ್ಯ ಮಾಡಿಲ್ಲ. + ಆದರೆ ಅದನ್ನು ಒಂದು ನಿಯಮವನ್ನಾಗಿ ಮಾತ್ರ ಸಹಿಸಿಕೊಳ್ಳಲಾಗಿದೆ. +ಅದನ್ನು ಸಹಿಸಿಕೊಳ್ಳಲು ಕಾರಣಗಳನ್ನೂ ಸಹ ತಿಳಿಸಬಯಸುತ್ತೇನೆ. +ಅದನ್ನು ಸಹಿಸಿಕೊಳ್ಳಲು ಎರಡು ಕಾರಣಗಳಿವೆ: ೧) ಬಹುಮತವೆಂದರೆ ಯಾವಾಗಲೂ ರಾಜಕೀಯ ಬಹುಮತ ಎಂದರ್ಥ. +೨) ರಾಜಕೀಯ ಬಹುಮತದ ನಿರ್ಣಯವು ಅಲ್ಪಸಂಖ್ಯಾತರ ಅಭಿಪ್ರಾಯಗಳನ್ನು ಸಾಕಷ್ಟು ಅಳವಡಿಸಿಕೊಳ್ಳುವುದರಿಂದ ಅಲ್ಪಸಂಖ್ಯಾತರು ಆ ನಿರ್ಣಯದ ವಿರುದ್ಧ ಬಂಡೇಳುವ ಗೋಜಿಗೆ ಹೋಗುವುದಿಲ್ಲ. +ಭಾರತದಲ್ಲಿ ಬಹುಮತವೆಂದರೆ ರಾಜಕೀಯ ಬಹುಮತವಲ್ಲ. +ಭಾರತದಲ್ಲಿ ಬಹುಮತ ಹುಟ್ಟುತ್ತದೆಯಾದರೂ ಅದು ರೂಪಿತವಾಗುವುದಿಲ್ಲ. +ಕೋಮುವಾರು ಬಹುಮತ ಮತ್ತು ರಾಜಕೀಯ ಬಹುಮತದ ನಡುವಣ ವ್ಯತ್ಯಾಸ ಇಷ್ಟೇ. +ರಾಜಕೀಯ ಬಹುಮತವು ನಿಗದಿಪಡಿಸಿದ ಅಥವಾ ಶಾಶ್ಚತ ಬಹುಮತವಲ್ಲ. +ಅದು ಯಾವಾಗಲೂ ರೂಪಿತವಾಗುವ, ವಿರೂಪಿತವಾಗುವ ಮತ್ತು ಪುನಃ ರೂಪಿತವಾಗುವ ಬಹುಮತ. +ಕೋಮು ಬಹುಮತ ಶಾಶ್ವತವಾಗಿದ್ದು ತನ್ನ ಮನೋಭಾವನೆಯಲ್ಲಿ ಅದು ನಿಶ್ಚಲವಾದದ್ದು . +ಅದನ್ನು ನಾಶಮಾಡಬಹುದೇ ಹೊರತು ಬದಲಾಯಿಸಲು ಸಾಧ್ಯವಿಲ್ಲ. + ರಾಜಕೀಯ ಬಹುಮತಕ್ಕೇ ಇಷ್ಟು ಅಭ್ಯಂತರ, ವಿರೋಧವಿರುವಾಗ ಕೋಮು ಬಹುಮತಕ್ಕೆ ಇರುವ ವಿರೋಧ ಇನ್ನಷ್ಟು ಹಾನಿಕರವಿರಬೇಕು? +ಹಿಂದೂಗಳು ಜಿನ್ನಾರವರನ್ನು ಅವರು ೧೯೩ಂ ರಲ್ಲಿ ತಮ್ಮ ಹದಿನಾಲ್ಕು ಅಂಶಗಳನ್ನು ರೂಪಿಸಿದಾಗ ಬಹುತೇಕ ಆಳ್ವಿಕೆಯ ತತ್ವವನ್ನು ಪ್ರತಿಪಾದಿಸುತ್ತಾ ಈ ಹದಿನಾಲ್ಕು ಅಂಶಗಳಲ್ಲಿ ಒಂದು ಅಂಶದ ಪ್ರಕಾರ ಪ್ರಾಮುಖ್ಯತೆಯನ್ನು ಕೊಡುವಾಗ ಬಹುಮತವು ಅಲ್ಪಮತದ ಸ್ಥಾನಕ್ಕೆ ಅಥವಾ ಸಮಾನತೆಯ ಸ್ಥಾನಕ್ಕೆ ಇಳಿಯದಂತೆ ನಿರ್ಬಂಧ ಹಾಕಬೇಕೆಂದು ಏಕೆ ಹೇಳಿದರು ಎಂದು ಕೇಳಲು ಸಾಧ್ಯವಿದೆ. +ಇನ್ನೂ ಮುಂದುವರಿದು ಹಿಂದೂಗಳು ಜಿನ್ನಾರವರನ್ನು ಅವರು ಮುಸಲ್ಮಾನ ಪ್ರಾಂತ್ಯಗಳಲ್ಲಿ ಮುಸಲ್ಮಾನ ಬಹುಮತದ ಪರವಾಗಿದ್ದರೆ ಕೇಂದ್ರದಲ್ಲಿ ಹಿಂದೂ ಬಹುಮತವನ್ನು ಏಕೆ ವಿರೋಧಿಸುತ್ತಾರೆ ಎಂದೂ ಅವರನ್ನು ಕೇಳಬಹುದು. +ಈ ಪ್ರಶ್ನೆಗಳು ಜಿನ್ನಾರವರ ನಿಲುವು ಅಸಂಬದ್ಧ ಎಂಬ ನಿರ್ಣಯಕ್ಕೆ ಎಡೆಮಾಡಿಕೊಡುವುದೆಂಬುದನ್ನು ಹಿಂದೂಗಳು ಅರಿತುಕೊಳ್ಳಬೇಕು. +ಇವುಗಳು ಬಹುಮತ ತತ್ವವನ್ನು ಪ್ರತಿಪಾದಿಸಲಾರವು. +ರಾಜಕೀಯದಲ್ಲಿ ಬಹುಮತ ತತ್ವವನ್ನು ಕೈಬಿಡುವುದರಿಂದ ಜೀವನದ ಇತರ ಕ್ಷೇತ್ರಗಳಲ್ಲಿ ಹಿಂದೂಗಳ ಮೇಲೆ ಪರಿಣಾಮವಾಗಲಾರದು. +ಸಾಮಾಜಿಕ ಜೀವನದಲ್ಲಿ ಅವರು ಬಹುಸಂಖ್ಯಾತರಾಗಿಯೇ ಉಳಿಯುವರು. +ಅವರು ವಾಣಿಜ್ಯ ಮತ್ತು ವ್ಯಾಪಾರದಲ್ಲಿ ಈಗ ಹೊಂದಿರುವ ಏಕಸ್ವಾಮ್ಯತ್ತವನ್ನು ಹೊಂದುವರು. +ಅದೇ ರೀತಿ ಆಸ್ತಿಯಲ್ಲಿಯೂ ಒಮ್ಮತ ತತ್ವವನ್ನು ಒಪ್ಪಿಕೊಳ್ಳುವಂತೆ ಕೇಳುತ್ತಿಲ್ಲ. +ಮತ್ತು ಅವರನ್ನು ಬಹುಮತ ತತ್ವವನ್ನು ಕೈಬಿಡುವಂತೆ ಕೇಳುತ್ತಿಲ್ಲ. + ಸಂಬದ್ಧ ಬಹುಮತ ತತ್ವದಿಂದ ತೃಪ್ತಿಯಾಗಬೇಕೆಂದು ಮಾತ್ರ ಅವರನ್ನು ಕೇಳುತ್ತಿದ್ದೇನೆ. +ಇಷ್ಟನ್ನು ಒಪ್ಪಿಕೊಳ್ಳುವುದು ಅವರಿಗೆ ಅತಿಯಾಗುವುದೇ? +ಇಂತಹ ಯಾವುದೇ ತ್ಯಾಗಕ್ಕೆ ಸಿದ್ಧರಾಗದೇ ಹಿಂದೂ ಬಹುಮತೀಯರು" . +ಹೊರಗಣ ಪ್ರಪಂಚಕ್ಕೆ ಅಲ್ಪ ಮತೀಯರು ಭಾರತದ ಸ್ವಾತಂತ್ರ್ಯಕ್ಕೆ ಅಡ್ಡಿಯಾಗುತ್ತಿದ್ದಾರೆ ಎಂದು ಹೇಳುವುದು ಅಸಮರ್ಥನೀಯ. +ಈ ಸುಳ್ಳು ಪ್ರಚಾರದಿಂದ ಯಾವ ಲಾಭವೂ ಆಗುವುದಿಲ್ಲ. +ಏಕೆಂದರೆ ಅಲ್ಪ ಸಂಖ್ಯಾತರು ಅಂತಹ ಯಾವ ಅಡ್ಡಿಯನ್ನೂ ಒಡ್ಡಿಲ್ಲ. +ಅವರು ತಮಗೆ ತೃಪ್ತಿಕರವಾದ ಸಂರಕ್ಷಣೆ ಕೊಡುವುದಾದರೆ ಸ್ವಾತಂತ್ರ್ಯ ಮತ್ತು ಅದರಲ್ಲಡಗಿರುವ ಅಪಾಯಗಳಲ್ಲಿ ತಮ್ಮನ್ನು ಸಿಲುಕಿಸಿಕೊಳ್ಳಲು ಸಿದ್ಧರಿದ್ದಾರೆ. +ಅಲ್ಪಸಂಖ್ಯಾತರು ತೋರುತ್ತಿರುವ ಇಂತಹ ಸದ್ಧಾವನೆಗೆ ಹಿಂದೂಗಳು ತಾವು ಆಭಾರಿಯಾಗಿರಬೇಕಾಗಿಲ್ಲ ಎಂಬ ಭಾವನೆಯನ್ನು ಬೆಳೆಸಿಕೊಳ್ಳಬಾರದು. +ಇದನ್ನು ಐರ್ಲೆಂಡಿನಲ್ಲಿ ಸಂಭವಿಸಿದ ಘಟನೆಗೆ ಹೋಲಿಸಬಹುದು. +ಐರಿಷ್‌ರಾಷ್ಟ್ರೀಯರ ನಾಯಕ ಮಿಸ್ಟರ್‌ ರೆಡ್‌ಮಂಡ್ರ್‌ ಉಲ್ಬ್ಸ್ಸ್ಟ್‌ರದ ನಾಯಕ ಕಾರ್ಸನ್ನನಿಗೆ ಈ ರೀತಿ ಹೇಳಿದ:“ಏಕೀಕೃತ ಐರ್ಲೆಂಡಿನ ರಚನೆಗೆ ಒಪ್ಪಿಕೊಳ್ಳಿ. +ನಿಮಗೆ ಬೇಕಾದ ಯಾವುದೇ ಸಂರಕ್ಷಣೆಗಳನ್ನು ಕೇಳಿರಿ. +ಅವುಗಳನ್ನು ಕೊಡಲಾಗುವುದು”. +ಕಾರ್ಸನ್‌, ಇದಕ್ಕೆ ಉತ್ತರವಾಗಿ: “ನಿಮ್ಮ ಸಂರಕ್ಷಣೆಗಳಿಗೆ ಧಿಕ್ಕಾರ,ನಾವು ನಿಮ್ಮಿಂದ ಆಳಿಸಿಕೊಳ್ಳಲು ಸಿದ್ಧರಿಲ್ಲ” ಎಂದು ಹೇಳಿದನೆನ್ನಲಾಗಿದೆ. +ಆದರೆ ಭಾರತದಲ್ಲಿ ಅಲ್ಪಸಂಖ್ಯಾತರು ಹೀಗೆ ಹೇಳಿಲ್ಲ. +ಅವರು ಸಂರಕ್ಷಣೆಗಳಿಂದ ತೃಪ್ತರಾಗಲು ಸಿದ್ಧರಿದ್ದಾರೆ. +ಇದು ಅಗಾಧವಲ್ಲವೇ ಎಂದು ನಾನು ಹಿಂದೂಗಳನ್ನು ಕೇಳುತ್ತೇನೆ. +ಇಷ್ಟು ಸಾಕೆಂದು ನನಗನಿಸುತ್ತದೆ. +ಉಪಸಂಹಾರ ಕೋಮುವಾದ ಸಮಸ್ಯೆಯ ಪರಿಹಾರಕ್ಕೆ ಇವು ನನ್ನ ಮನಸ್ಸಿನಲ್ಲಿದ್ದ ಕೆಲವು ಸೂಚನೆಗಳು. +ಇವುಗಳಿಗೆ ಅಖಿಲ ಭಾರತ ಪರಿಶಿಷ್ಟ ಜಾತಿಗಳ ಸಂಯುಕ್ತ ಸಂಘ ಬದ್ಧವಲ್ಲ. +ಇವುಗಳಿಗೆ ನಾನೂ ಬಾಧ್ಯನಲ್ಲ. +ಈ ಸೂಚನೆಗಳನ್ನು ಮುಂದಿಡುವ ಮೂಲಕ ಒಂದು ಹೊಸ ಮಾರ್ಗದ ಶೋಧನೆ ಮಾತ್ರ ಮಾಡುತ್ತಿದ್ದೇನೆ. +ನಾನು ಮಾಡಿರುವ ಪ್ರಸ್ತಾವನೆಗಳಿಗಿಂತ ಅದರೊಳಗೆ ಅಡಗಿರುವ ತತ್ವಗಳಿಗೆ ಹೆಚ್ಚಿನ ಒತ್ತು ಕೊಟ್ಟಿದ್ದೇನೆ. +ಈ ತತ್ವಗಳನ್ನು ಒಪ್ಪಿಕೊಂಡಿದ್ದೇ ಆದರೆ ಇದುವರೆಗೆ ನಮ್ಮನ್ನು ಪೀಡಿಸುತ್ತಿರುವ ಕೋಮುವಾರು ಪ್ರಶ್ನೆಯ ಪರಿಹಾರ ಅಷ್ಟು ಕಠಿಣವಾದ್ದದ್ದೆನಿಸಲಾರದೆಂಬ ಭರವಸೆ ನನಗಿದೆ. +ಭಾರತದಲ್ಲಿ ಉಂಟಾಗಿರುವ ಬಿಕ್ಕಟ್ಟನ್ನು ಪರಿಹರಿಸುವುದು ಅಷ್ಟು ಸುಲಭವಲ್ಲ. +ಒಬ್ಬ ಇತಿಹಾಸಕಾರ ೧೮೬೭ ರ ಜರ್ಮನಿಯ ಒಕ್ಕೂಟಕ್ಕೆ ಮುಂಚಿನ ಪರಿಸ್ಥಿತಿಯನ್ನು “ದೈವದತ್ತ ಗೊಂದಲ' ಎಂದು ವರ್ಣಿಸಿದುದನ್ನು ಓದಿದ ನೆನಪುಂಟು. +ಇದು ಜರ್ಮನಿಯ ವಿಷಯದಲ್ಲಿ ನಿಜವಾಗಿತ್ತೋ ಇಲ್ಲವೋ ನನಗೆ ಗೊತ್ತಿಲ್ಲ. +ಆದರೆ ಇದು ಭಾರತದಲ್ಲಿನ ಇಂದಿನ ಪರಿಸ್ಥಿತಿಯ ಅತ್ಯಂತ ಸೂಕ್ತ ವರ್ಣನೆಯಾಗಿದೆ. +ಜರ್ಮನಿಯ ಈ ಪರಿಸ್ಥಿತಿಯನ್ನು ಯುದ್ಧಕ್ಕೆ ಮುಂಚಿನ ಮಾನಸಿಕ ದೃಷ್ಟಿಕೋನದಿಂದ ಮತ್ತು ಒಂದೇ ಭವಿಷ್ಯದಲ್ಲಿ ನಂಬುಗೆಯನ್ನು ಬೆಳೆಸಿಕೊಳ್ಳುವುದರ ಮೂಲಕ ಒಂದೇ ಬಾರಿಗಲ್ಲದಿದ್ದರೂ ಹಂತ ಹಂತಾಗಿ ಈ ಗೊಂದಲದಿಂದ ಪಾರಾಯಿತು. +ಆದರೆ ಭಾರತವು ಇಂತಹ ಗೊಂದಲದಿಂದ, ಅಸ್ಪವ್ಯಸ್ತತೆಯಿಂದ ಒಂದು ವ್ಯವಸ್ಥೆಯನ್ನು ನಿರೂಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿಲ್ಲ. +ಇದಕ್ಕೆ ಅವಕಾಶಗಳಿರಲಿಲ್ಲವೆಂದಲ್ಲ. +ಹಾಗೆ ನೋಡಿದರೆ ಅನೇಕ ಅವಕಾಶಗಳಿದ್ದವು. +೧೯೨೭ ರಲ್ಲಿ ಲಾರ್ಡ್‌ ಬರ್ಕೆನ್‌ಹಡ್‌ ಭಾರತೀಯರಿಗೆ ಭಾರತಕ್ಕಾಗಿ ಒಂದು ಸಂವಿಧಾನವನ್ನು ರಚಿಸುವಂತೆ ಸವಾಲನ್ನು ಹಾಕಿದಾಗ ಅಂತಹ ಮೊದಲನೆಯ ಅವಕಾಶ ಒದಗಿತ್ತು. +ಈ ಸವಾಲನ್ನು ಒಪ್ಪಿಕೊಳ್ಳಲಾಯಿತು. +ಹೊಸ ಸಂವಿಧಾನ ರಚನೆಗಾಗಿ ಒಂದು ಸಮಿತಿಯನ್ನು ರಚಿಸಲಾಯಿತು. +ಆ ಸಮಿತಿ ಸಂವಿಧಾನವನ್ನು ರಚಿಸಿತು. +ಅದನ್ನು ನೆಹರೂ ಸಂವಿಧಾನವೆಂದು ಕರೆಯಲಾಯಿತು. +ಇದನ್ನು ಭಾರತೀಯರು ಒಪ್ಪದ ಕಾರಣ ಯಾವ ಮರುಕವನ್ನೂ ತೋರದೆ ಅದರ ಸಮಾಧಿ ಮಾಡಲಾಯಿತು. +೧೯೩ಂ ರಲ್ಲಿ ದುಂಡುಮೇಜಿನ ಪರಿಷತ್ತು ಸೇರಿದಾಗ ಭಾರತೀಯರಿಗೆ ಎರಡನೆಯ ಅವಕಾಶ ದೊರಕಿತು. +ಅಲ್ಲಿಯೂ ಸಹ ಭಾರತೀಯರು ತಮ್ಮದೇ ಆದ ಸಂವಿಧಾನವನ್ನು ರಚಿಸುವಲ್ಲಿ ವಿಫಲರಾದರು. +ಇತ್ತೀಚೆಗೆ ಸಪ್ರು ಸಮಿತಿಯು ಮಾಡಿದ ಪ್ರಯತ್ನ ಮೂರನೆಯದಾಗಿದೆ. +ಈ ಸಮಿತಿಯ ಪ್ರಸ್ತಾವನೆ ಬಿದ್ದುಹೋಗಿದೆ. +ಇನ್ನೊಮ್ಮೆ ಪ್ರಯತ್ನ ಮಾಡಲು ಉತ್ಸಾಹವಾಗಲಿ, ಆಸೆಯಾಗಲೀ ಉಳಿದಿಲ್ಲ. +ಪ್ರತಿಯೊಂದು ಪ್ರಯತ್ನವೂ ವಿಫಲವಾಗುವುದು ನಿಶ್ಚಿತವೆಂಬ ಭಾವನೆಯಿಂದ ಇನ್ನಾವ ಪ್ರಯತ್ನವೂ ಬೇಡ ಎಂಬ ಹತಾಶಾಭಾವನೆ ಉಂಟಾಗಿದೆ. +ಆದಾಗ್ಯೂ ಯಾವ ಭಾರತೀಯನೂ ಸತ್ತು ಬಿದ್ದ ನಾಯಿ ಹೊಲಸುನಾರುವಂತೆ ಈ ಬಿಕ್ಕಟ್ಟನ್ನು ನಾರಲು ಬಿಡುವಷ್ಟು ಜಡವಾಗಿ ಎದೆಗುಂದಬಾರದು. +ತಾನು ಈ ದೇಶದಲ್ಲಿ ನಡೆಯುತ್ತಿರುವ ನಾಯಿ ಜಗಳದ ನಿಸ್ಸಹಾಯಕ ಸಾಕ್ಷಿಯಾಗಿರದೆ ಇನ್ನೇನೂ ಮಾಡಲು ಸಾಧ್ಯವಿಲ್ಲ ಎಂಬ ಹತಾಶ ಭಾವನೆಯನ್ನೂ ತಳೆಯಬಾರದು. +ಹಿಂದಿನ ವೈಫಲ್ಯಗಳು ಯಾರನ್ನೂ ಎದೆಗುಂದಿಸಬೇಕಾಗಿಲ್ಲ. +ಅವು ನನ್ನನ್ನು ಅಧೈರ್ಯಗೊಳಿಸಿಲ್ಲ. +ಏಕೆಂದರೆ, ಕೋಮುವಾರು ಪ್ರಶ್ನೆಯ ವಿಷಯದಲ್ಲಿ ಒಪ್ಪಂದಕ್ಕೆ ಬರುವ ಎಲ್ಲಾ ಪ್ರಯತ್ನಗಳು ವಿಫಲವಾಗಿದ್ದರೂ, ಈ ವೈಫಲ್ಯಗಳ ಕಾರಣ ಭಾರತೀಯರಲ್ಲಿ ಯಾವುದೋ ದೋಷವಿದೆಯೆಂದಲ್ಲ, ಅದು ಮುಖ್ಯವಾಗಿ ಅವರು ಅನುಸರಿಸುತ್ತಿರುವ ಮಾರ್ಗದಲ್ಲಿರುವ ದೋಷದಿಂದಾಗಿದೆ. +ನನ್ನ ಸೂಚನೆಗಳನ್ನು ನಿರ್ವಿಕಲ್ಪವಾಗಿ ಪರಿಶೀಲಿಸಿದ್ದೇ ಆದರೆ ಅವರು ಅವುಗಳನ್ನು ಒಪ್ಪಬಹುದೆಂಬ ಭರವಸೆ ನನಗಿದೆ. +ಅವು ಒಂದು ರೀತಿಯಲ್ಲಿ ಹೊಸವಿಧಾನಗಳಾಗಿದ್ದು ನನ್ನ ದೇಶ ಬಾಂಧವರಿಗೆ ಅವುಗಳನ್ನು ಆಗ್ರಹಪೂರ್ವಕವಾಗಿ ಅರ್ಪಿಸುತ್ತಿದ್ದೇನೆ. +ಈ ಭಾಷಣವನ್ನು ಮುಗಿಸುವ ಮುನ್ನ ನನ್ನ ಸೂಚನೆಗಳಿಗೆ ಕೆಲವು ಮಾರ್ಪಾಟುಗಳನ್ನು ಸೂಚಿಸಬಹುದೇ ಹೊರತು ಅವುಗಳನ್ನು ಸಂಪೂರ್ಣವಾಗಿ ನಿರಾಕರಿಸುವುದು ಸುಲಭದ ಕೆಲಸವಲ್ಲ ಎಂದು ನನ್ನನ್ನು ಟೀಕಿಸುವವರನ್ನು ಎಚ್ಚರಿಸಬಯಸುತ್ತೇನೆ. +ಅವರು ಅವುಗಳನ್ನು ನಿರಾಕರಿಸುವುದೇ ಆದರೆ ಯಾವ ತತ್ವಗಳ ಆಧಾರದ ಮೇಲೆ ಅವುಗಳನ್ನು ನಿರಾಕರಿಸುತ್ತಾರೆಂಬುದನ್ನು ಅವರು ತಿಳಿಸಬೇಕಾಗುತ್ತದೆ. +ರಾಜ್ನಗಳು ಮತ್ತು ಅಲಸಂಖ್ಣಾತರು:ಭಾವೀ ಭಾರತದ ಸಂವಿಧಾನವನ್ನು ರೂಪಿಸುವ ಕೆಲಸವನ್ನು ಸಂವಿಧಾನ ಸಭೆಗೆ ವಹಿಸುವುದು ನಿಶ್ಚಿತವಾದ ಕೂಡಲೇ, ಅಖಿಲಭಾರತ ಅನುಸೂಚಿತ ಜಾತಿಗಳ ಒಕ್ಕೂಟದ ಕಾರ್ಯಕಾರಿ ಸಮಿತಿಯು ಅನುಸೂಚಿತ ಜಾತಿಗಳ ಹಿತಾಸಕ್ತಿಗಳ ರಕ್ಷಣೆಯ ಬಗ್ಗೆ ಒಕ್ಕೂಟದ ಪರವಾಗಿ ಸಂವಿಧಾನ ಸಭೆಗೆ ಮಂಡಿಸಲು ಮನವಿ ಪತ್ರವೊಂದನ್ನು ಸಿದ್ಧಪಡಿಸಲು ನನ್ನನ್ನು ಕೇಳಿಕೊಂಡಿತು. +ನಾನು ಬಹಳಸಂತೋಷದಿಂದಲೇ ಈ ಕೆಲಸವನ್ನು ಕೈಗೆತ್ತಿಕೊಂಡೆ. +ನನ್ನ ಪರಿಶ್ರಮದ ಫಲಿತಗಳು ಈ ಕಿರು ಪುಸ್ತಿಕೆಯಲ್ಲಿ ಅಡಕವಾಗಿದೆ. +ಈ ಮನವಿ ಪತ್ರವು ಮೂಲಭೂತ ಹಕ್ಕುಗಳು, ಅಲ್ಪಸಂಖ್ಯಾತರ ಹಕ್ಕುಗಳು ಮತ್ತು ಅನುಸೂಚಿತ ಜಾತಿಗಳಿಗಾಗಿ ಇರಬೇಕಾದ ಹಕ್ಕುಗಳು ಮತ್ತು ರಕ್ಷಣೆಗಳನ್ನು ವ್ಯಾಖ್ಯಾನಿಸುತ್ತದೆ. +ಅನುಸೂಚಿತ ಜಾತಿಗಳು ಅಲ್ಪಸಂಖ್ಯಾತರಲ್ಲವೆಂಬ ದೃಷ್ಟಿಯನ್ನು ಹೊಂದಿರುವವರು ಈ ವಿಷಯದಲ್ಲಿ ನಾನು ಅಧಿಕೃತ ಮಿತಿಗಳನ್ನು ಮೀರಿ ಹೋಗಿದ್ದೇನೆಂದು ಅನುಸೂಚಿತ ಜಾತಿಗಳು ಅಲ್ಪಸಂಖ್ಯಾತರಲ್ಲವೆಂಬುದು ಬಲಿಷ್ಠ ಮತ್ತು ಮೇಲ್ದಾತಿ ಬಹುಸಂಖ್ಯಾತ ಹಿಂದೂಗಳು ತೆಗೆದಿರುವ ಹೊಸವರಸೆ. +ಇದನ್ನು ಅನುಸೂಚಿತ ಜಾತಿಯ ಜನರು ಅಂಗೀಕರಿಸಬೇಕೆಂದು ಅವರು ಬಯಸುತ್ತಾರೆ. +ಬಹುಸಂಖ್ಯಾತರ ವಕ್ತಾರರು ಬಹುಸಂಖ್ಯಾತ ಪದದ ಅರ್ಥ ಮತ್ತು ವ್ಯಾಪ್ತಿಯನ್ನು ವ್ಯಾಖ್ಯಾನಿಸಲು ಆಸ್ಥೆ ತೋರಿಲ್ಲ. +ನಿರ್ಮಲ ಮತ್ತು ಮುಕ್ತಮನಸ್ಸಿನ ಯಾರೇ ಆಗಲಿ ಇದನ್ನು ಒಂದು ಸಾಮಾನ್ಯ ಪಸ್ತಾಪವೆಂದು ತಿಳಿದು ಇದಕ್ಕೆ ಎರಡು ರೀತಿಯಲ್ಲಿ ಅರ್ಥ ವಿವರಣೆ ಕೊಡಬಹುದು. +ನಾನಂತೂ ಅದನ್ನು ಹೀಗೆ ತಿಳಿಯುತ್ತೇನೆ. +ಅನುಸೂಚಿತ ಜಾತಿಗಳು ಬರೀ ಅಲ್ಪಸಂಖ್ಯಾತರಲ್ಲ. +ಅನುಸೂಚಿತ ಜಾತಿಗಳು ಅಲ್ಪಸಂಖ್ಯಾತರಿಗಿಂತ ಹೆಚ್ಚು ಎಂದು ನಾನು ವ್ಯಾಖ್ಯಾನಿಸುತ್ತೇನೆ. +ನಾಗರಿಕರಿಗೆ ಮತ್ತು ಅಲ್ಪಸಂಖ್ಯಾತರಿಗೆ ನೀಡುವಂಥ ಯಾವುದೇ ರಕ್ಷಣೆ ಅನುಸೂಚಿತ ಜಾತಿಯ ಜನರಿಗೆ ಸಾಲದು. +ಅಂದರೆ ಅವರ ಸಾಮಾಜಿಕ, ಆರ್ಥಿಕ ಎಂದರೆ ಇತರ ನಾಗರಿಕರು ಹಾಗೂ ಇತರ ಅಲ್ಪಸಂಖ್ಯಾತರು ಪಡೆಯುವ ಸವಲತ್ತುಗಳ ಜೊತೆಗೆ ಅನುಸೂಚಿತ ಜನರಿಗೆ ಬಹುಸಂಖ್ಯಾತರ ದಬ್ಬಾಳಿಕೆ ಮತ್ತು ಅವರು ತೋರುವ ತಾರತಮ್ಯದ ವಿರುದ್ಧ ವಿಶೇಷ ರಕ್ಷಣೆಗಳು ಅಗತ್ಯವಾಗಿವೆ. +ಇನ್ನೊಂದು ಅರ್ಥವಿವರಣೆ ಹೀಗಿದೆ. +ಅನುಸೂಚಿತ ಜನರು ಅಲ್ಪಸಂಖ್ಯಾತರಿಗಿಂತ ಭಿನ್ನವಾಗಿದ್ದಾರೆ. +ಆ ಕಾರಣದಿಂದ ಅವರು ಅಲ್ಪಸಂಖ್ಯಾತರು ಕೇಳಬಹುದಾದಂಥ ಸಂರಕ್ಷಣೆಗೆ ಅರ್ಹರಲ್ಲ. +ಈ ವಿವರಣೆ ಎಷ್ಟು ಅಸಂಬದ್ಧ ಎಂದರೆ ಯಾವ ವಿವೇಕಿಯೂ ಸೊಪ್ಪು ಹಾಕಬೇಕಾದ್ದಿಲ್ಲ. +ಅದನ್ನು ಉಪೇಕ್ಷಿಸಿದರೆ ಅನುಸೂಚಿತ ಜಾತಿ ಜನರನ್ನು ಮನ್ನಿಸಬೇಕು. +ಅನುಸೂಚಿತ ಜಾತಿಗಳು ಅಲ್ಪಸಂಖ್ಯಾತರಲ್ಲ ಎಂಬ ನನ್ನ ವಾದವನ್ನು ಒಪ್ಪುವವರೆಲ್ಲ ನಾಗರಿಕರ ಎಲ್ಲ ಮೂಲಭೂತ ಹಕ್ಕುಗಳು ಅಲ್ಪಸಂಖ್ಯಾತರಿಗೆ ರಕ್ಷಣೆಗೆ ನೀಡುವ ಎಲ್ಲ ಅವಕಾಶಗಳಲ್ಲದೆ ವಿಶೇಷ ಸಂರಕ್ಷಣ ಸವಲತ್ತುಗಳನ್ನು ಅವರಿಗೆ ನೀಡಬೇಕೆಂಬ ನನ್ನ ಬೇಡಿಕೆಯನ್ನೂ ಒಪ್ಪುತ್ತಾರೆಂಬ ಭರವಸೆ ನನಗಿದೆ. +ಈ ಮನವಿ ಪತ್ರವನ್ನು ಸಂವಿಧಾನ ಸಭೆಗೆ ಒಪ್ಪಿಸಬೇಕೆಂದು ಉದ್ದೇಶಿಸಲಾಗಿತ್ತು. +ಸಾರ್ವಜನಿಕರಿಗೆ ತಿಳಿಸಬೇಕೆಂಬ ಉದ್ದೇಶವಿರಲಿಲ್ಲ. +ಆದರೆ ಇದರ ಬೆರಳಚ್ಚು ಪ್ರತಿಯನ್ನು ಓದುವ ಅವಕಾಶವನ್ನು ಹೊಂದಿದ್ದ ನನ್ನ ಸವರ್ಣೀಯ ಹಿಂದೂ ಗೆಳೆಯರು, ಅದಕ್ಕೆ ಇನ್ನೂ ಹೆಚ್ಚಿನ ಪ್ರಚಾರವನ್ನು ಕೊಡಲು ನನಗೆ ಒತ್ತಾಯ ಮಾಡಿದ್ದಾರೆ. +ಇದು ಸಂವಿಧಾನ ಸಭೆಯ ಸದಸ್ಯರ ಉಪಯೋಗಕ್ಕೆಂದೇ ತಯಾರಿಸಿದ್ದರೂ ಅದನ್ನು ಸಾರ್ವಜನಿಕರಿಗೆ ಲಭ್ಯವಾಗುವಂತೆ ಮಾಡುವುದು, ಸಭ್ಯತೆಂತು ಯತಾವುದೇ ಉಲ್ಲಂಘನೆಯಾಗುವುದಿಲ್ಲವೆಂದು ಭಾವಿಸಿದ್ದೇನೆ. +ಆದ್ದರಿಂದ ಅವರ ಇಚ್ಛೆಯನ್ನು ಪೂರೈಸಲು ನಾನು ಒಪ್ಪಿದ್ದೇನೆ. +ಸಾಮಾನ್ಯ ಭಾಷೆಯಲ್ಲಿ ನನ್ನ ಅಭಿಪ್ರಾಯಗಳನ್ನು ನಿರೂಪಿಸುವುದಕ್ಕೆ ಬದಲು ಸಂವಿಧಾನದ ಅನುಚ್ಛೇದಗಳ ರೂಪದಲ್ಲಿ ಮನವಿ ಪತ್ರದ ಕರಡನ್ನು ತಯಾರಿಸಿದ್ದೇನೆ. +ಪುಷ್ಟಿ ಮತ್ತು ಖಚಿತತೆಯನ್ನು ನೀಡುವುದಕ್ಕಾಗಿ ಈ ವಿಧಾನವು ಹೆಚ್ಚು ಸಹಾಯಕವೆಂದು ನಾನು ನಂಬಿದ್ದೇನೆ. +ಅನುಸೂಚಿತ ಜಾತಿಗಳ ಒಕ್ಕೂಟವು ಕಾರ್ಯಕಾರಿ ಸಮಿತಿಯ ಪ್ರಯೋಜನಕ್ಕಾಗಿ ನಾನು ಕೆಲವು ವಿವರಣೆ ಮತ್ತು ಇತರ ಅಂಕಿ ಅಂಶಗಳ ಸಾಮಗ್ರಿಯನ್ನು ಸಿದ್ಧಪಡಿಸಿದ್ದೆ. +ಸಾಮಾನ್ಯ ಓದುಗನಿಗೆ ಈ ಟಿಪ್ಪಣಿಗಳು ಮತ್ತು ಅಂಕಿಅಂಶಗಳು ಉಪಯೋಗವಾಗುವ ಸಂಭವವಿದೆಯೆಂದು ಮುದ್ರಿಸಲಾಗಿದೆ. +ಸಂವಿಧಾನ ಸಭೆಯು ಎದುರಿಸಬೇಕಾದ ಹಲವಾರು ಸಮಸ್ಯೆಗಳಿವೆ. +ಎಲ್ಲರಿಗೂ ತಿಳಿದಿರುವಂತೆ,ಅವುಗಳಲ್ಲಿ ಎರಡು ಅತ್ಯಂತ ಕಠಿಣವಾಗಿದೆ. +ಒಂದು: ಅಲ್ಪಸಂಖ್ಯಾತರ ಸಮಸ್ಯೆ; +ಎರಡು: ದೇಶೀ ರಾಜ್ಯಗಳಿಗೆ ಸಂಬಂಧಿಸಿದ್ದು. +ದೇಶೀ ರಾಜ್ಯಗಳ ಸಮಸ್ಯೆಯನ್ನು ನಾನು ಆಳವಾಗಿ ಅಧ್ಯಯನ ಮಾಡಿದ್ದೇನೆ. +ಆ ವಿಷಯದ ಬಗ್ಗೆ ನನ್ನವೇ ಆದ ನಿರ್ದಿಷ್ಟ ಮತ್ತು ಸ್ಪಷ್ಟವಾದ ಅಭಿಪ್ರಾಯಗಳಿವೆ. +ಸಂವಿಧಾನ ಸಭೆಯು ಆ ರಾಜ್ಯಗಳ ಸಮಿತಿಗೆ ನನ್ನನ್ನು ಚುನಾಯಿಸುತ್ತದೆ ಎಂದು ಆಶಿಸಿದ್ದೆ. +ಆದರೆ ಆ ಕೆಲಸದಲ್ಲಿ ಇತರರು ಹೆಚ್ಚು ಸಮರ್ಥರೆಂದು ಭಾವಿಸಿ ಅವರನ್ನು ಚುನಾಯಿಸಲಾಗಿದೆ. +ಅದಕ್ಕೆ ಇನ್ನೊಂದು ಕಾರಣವಿದ್ದರೂ ಇರಬಹುದು; +ಏನೆಂದರೆ ನಾನು ಯಾವ ಆಶ್ರಯಕ್ಕೂ ಪಾತ್ರನಲ್ಲದ್ದರಿಂದ ಅನಪೇಕ್ಷಿತನೆಂದು ಅವರು ನನ್ನನ್ನು ಬಿಟ್ಟಿರಬಹುದು. +ಅದರಿಂದ ನನಗೆ ದುಃಖವಾಗಿಲ್ಲ. +ಆ ಸಮಿತಿಯ ಸಮಾಲೋಚನೆಗಾಗಿ ನನ್ನ ಅಭಿಪ್ರಾಯಗಳನ್ನು ಮಂಡಿಸುವುದಕ್ಕಾಗಿ ಉತ್ಸುಕನಾಗಿದ್ದೆ. +ನನ್ನನ್ನು ಅದರಿಂದ ಬಿಟ್ಟ ಕಾರಣಕ್ಕೆ ನನಗೇನೂ ದುಃಖವಿಲ್ಲ. +ಆದರೆ ಸಮಿತಿಯ ಪರಿಶೀಲನೆಗೂ ನನ್ನ ಅಭಿಪ್ರಾಯಗಳನ್ನು ಮಂಡಿಸಲು ಅವಕಾಶವೊಂದು ಕಳೆದುಹೋದ ಕಾರಣ ವಿಷಾದವಾಗಿದೆ. +ಆದ್ದರಿಂದ ಅದಕ್ಕಿಂತ ಒಳ್ಳೆಯದಾದ್ದನ್ನು ಮಾಡಲು ಯೋಚಿಸಿದ್ದೇನೆ. +ಅದೇನೆಂದರೆ ನಾಗರಿಕರ, ಅಲ್ಪಸಂಖ್ಯಾತ ಮತ್ತು ಅನುಸೂಚಿತ ಜಾತಿಗಳ ಹಕ್ಕುಗಳೊಂದಿಗೆ ಆ ವಿಚಾರಗಳನ್ನೂ ಈ ಸಣ್ಣ ಪುಸ್ತಕದಲ್ಲಿ ಸೇರಿಸಿದ್ದೇನೆ. +ಇದರಿಂದ ಹೆಚ್ಚು ಜನರು ಅವುಗಳು ಏನು ಎಂಬುದನ್ನು ತಿಳಿಯಲು ಅನುಕೂಲವಾಗುತ್ತದೆ. +ಅವುಗಳ ಮಹತ್ವವನ್ನು ಅವರು ಅಳೆಯಬಹುದು . +ಅವರು ಸೂಕ್ತವೆಂದು ಭಾವಿಸಿದವುಗಳನ್ನು ಉಪಯೋಗ ಮಾಡಿಕೊಳ್ಳಬಹುದು. +ಭಾರತದ ಸಂಯುಕ್ತ ರಾಜ್ಯಗಳ ಸಂವಿಧಾನ ಉದ್ದೇಶಿತ ಪ್ರಸ್ತಾವನೆ:ಬ್ರಿಟಿಷ್‌ ಭಾರತದ ಬೇರೆ ಬೇರೆ ಆಡಳಿತ ಘಟಕಗಳಾದ ಪ್ರಾಂತ್ಯಗಳು, ಕೇಂದ್ರಾಡಳಿತ ಪ್ರದೇಶಗಳು ಮತ್ತು ದೇಶೀ ರಾಜ್ಯಗಳಲ್ಲಿ ವಾಸಿಸುವ ನಾವು ಈ ಪ್ರದೇಶಗಳ ಒಂದು ಅಖಂಡ ಒಕ್ಕೂಟ ರಚಿಸುವ ದೃಷ್ಟಿಯಿಂದ-ಪ್ರಾಂತ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಮತ್ತು ದೇಶೀ ರಾಜ್ಯಗಳು ಭಾರತದ ಸಂಯುಕ್ತ ರಾಜ್ಯಗಳು ಎಂಬ ಅಂಕಿತನಾಮದ ಮೇರೆಗೆ, ಶಾಸಕಾಂಗ,ಕಾರ್ಯಾಂಗ ಮತ್ತು ಆಡಳಿತಾತ್ಮಕ ಉದ್ದೇಶಗಳಿಗಾಗಿ, ರಾಷ್ಟನಿಕಾಯವನ್ನಾಗಿ ಒಗ್ಗೂಡಿಸಲು ಕಟ್ಟಳೆಮಾಡುತ್ತೇವೆ . +ಆ ರೀತಿಯ ಒಕ್ಕೂಟವು ವಿಘಟನೆಗೊಳ್ಳತಕ್ಕದ್ದಲ್ಲ. +ಹಾಗೆ ರೂಪಿಸಿದ ಅನಭೇದ್ಯ ಅದು ವಿಘಟಿತಗೊಳ್ಳತಕ್ಕುದಲ್ಲ. +ನಮಗಾಗಿ ಮತ್ತು ನಮ್ಮ ಮುಂದಿನ ಪೀಳಿಗೆಗಾಗಿ ಭಾರತ ಸಂಯುಕ್ತ ರಾಜ್ಯಗಳಾದ್ಯಂತ ಸ್ವಯಮಾಡಳಿತ ಮತ್ತು ಒಳ್ಳೆಯ ಸರ್ಕಾರ ಇವೆರಡನ್ನೂ ಪಡೆದುಕೊಳ್ಳುವ. +೨. ಜೀವಸ್ಥಾತಂತ್ರ್ಯ ಮತ್ತು ಸುಖಾನ್ವೇಷಣೆಗೆ ಮತ್ತು ವಾಕ್‌ ಸ್ವಾತಂತ್ರ್ಯ ಮತ್ತು ಮುಕ್ತ ಧಾರ್ಮಿಕ ಆಚರಣೆಗೆ ಪ್ರತಿಯೊಬ್ಬ ಪ್ರಜೆಯ ಹಕ್ಕನ್ನೂ ಸಮರ್ಥಿಸುವ; +೩.ಬಡತನದಲ್ಲಿ ಮುಳುಗಿರುವ ವರ್ಗಗಳಿಗೆ, ಉತ್ತಮ ಅವಕಾಶಗಳನ್ನು ಕಲ್ಪಿಸುವ ಮೂಲಕ ಸಾಮಾಜಿಕ, ರಾಜಕೀಯ, ಆರ್ಥಿಕ ಅಸಮತೆಯನ್ನು ತೆಗೆದುಹಾಕುವ; +೪.ಪ್ರತಿಯೊಬ್ಬ ಪ್ರಜೆಗೂ ಕೊರತೆಯಿಲ್ಲದ, ಭಯವಿಲ್ಲದೆ ಸ್ವಾತಂತ್ರ್ಯ ಸವಿಯಲು ಅನುವುಮಾಡಿಕೊಡುವ ಹಾಗೂ +೫.ಒಳಸಂಚು ಮತ್ತು ವಿದೇಶೀ ಆಕ್ರಮಣಗಳ ವಿರುದ್ಧ ರಕ್ಷಣೆ ಒದಗಿಸಿಕೊಡುವ ದೃಷ್ಟಿಯಿಂದ ಈ ಸಂವಿಧಾನವನ್ನು ಭಾರತೀಯ ಸಂಯುಕ್ತ ಸಂಸ್ಥಾನಗಳಿಗಾಗಿ ಸ್ಥಾಪಿಸುತ್ತೇವೆ. +ಪ್ರಸ್ತಾವಿತ ಅನುಚ್ಛೇದ ೧ ಭಾಗ ೧: ಭಾರತದ ಒಕ್ಕೂಟಕ್ಕೆ ದೇಶೀಸಂಸ್ಥಾನ (ರಾಜ್ಯ)ಗಳ ಸೇರ್ಪಡೆ. +ಖಂಡ ೧: ಅರ್ಹ ದೇಶೀ ಸಂಸ್ಥಾನಗಳು ಮತ್ತು ಒಕ್ಕೂಟಕ್ಕೆ ಅವುಗಳ ಸೇರ್ಪಡೆ. +ಖಂಡ ೨: ಅರ್ಹತೆ ಪಡೆದೂ ಒಕ್ಕೂಟಕ್ಕೆ ಸೇರದಿರುವ ಸಂಸ್ಥಾನಗಳು ಮತ್ತು ಭಾರತದ ಒಕ್ಕೂಟಕ್ಕೆ ಸೇರಲು ಅನರ್ಹವಾದ ರಾಜ್ಯಗಳ ಸಂಬಂಧ. +ಖಂಡ ೩. ಅನರ್ಹ ದೇಶೀ ಸಂಸ್ಥಾನಗಳನ್ನು ಆಡಳಿತ ಘಟಕಗಳನ್ನಾಗಿ ಪುನರ್‌ ರಚಿಸಿ ಅವನ್ನು ರಾಜ್ಯಗಳನ್ನಾಗಿ ಪರಿವರ್ತಿಸಿ ಒಕ್ಕೂಟ ಸೇರಲು ಅರ್ಹವಾಗುವಂತೆ ಕ್ರಮಕೈಗೊಳ್ಳಲು ಒಕ್ಕೂಟಕ್ಕೆ ಇರುವ ಅಧಿಕಾರ. +ಖಂಡ ೪: ಒಕ್ಕೂಟದೊಳಗೇ ಹೊಸ ರಾಜ್ಯಗಳ ರಚನೆ. +ಅನುಚ್ಛೇದ ೧ ಕಲಮು ೨: ಭಾರತೀಯ ಸಂಯುಕ್ತ ರಾಜ್ಯಗಳು ಮತ್ತು ಹೊಸ ಪ್ರದೇಶ. +ಖಂಡ ೧: ಒಕ್ಕೂಟಕ್ಕೆ ವಿದೇಶೀ ರಾಜ್ಯಗಳ ವಿಲೀನ ಖಂಡ ೨: ಒಕ್ಕೂಟದಿಂದ ಹೊಸ ರಾಜ್ಯಗಳ ಕೈವಶ ಮತ್ತು ವಿಲೀನಗೊಳಿಸಿಕೊಳ್ಳದೆ ಇಟ್ಟುಕೊಳ್ಳುವುದು. +ಅನುಚ್ಛೇದ ೧ - ವಿಭಾಗ ೧ ಒಕ್ಕೂಟಕ್ಕೆ ಹೊಸ ರಾಜ್ಯಗಳ ಸೇರ್ಪಡೆ . +ಅರ್ಹತೆ ಪಡೆದ ದೇಶೀ ಸಂಸ್ಥಾನವೊಂದು ಒಕ್ಕೂಟ ಸೇರಲು ಬಯಸಿ ಸಲ್ಲಿಸುವ ಅರ್ಜಿಯನ್ನು ಕೇಂದ್ರಶಾಸಕಾಂಗ ಆ ಬಗ್ಗೆ ನಿಗದಿಪಡಿಸಿದ ಸಂವಿಧಾನಾತ್ಮಕ ನಿಯಮಗಳಿಗನು ಸಾರವಾಗಿ ಪರಿಶೀಲಿಸಿ,ಆ ಸಂಸ್ಥಾನ ಎಲ್ಲ ರೀತಿಯಲ್ಲಿ ಅರ್ಹವಾದದ್ದೆಂದು ನಿರ್ಣಯವಾದ ಮೇಲೆ ಅದನ್ನು ಒಕ್ಕೂಟಕ್ಕೆ ಸೇರಿಸಿಕೊಳ್ಳಬಹುದು. +ಅರ್ಹ ದೇಶೀಸಂಸ್ಥಾನಗಳ ಪಟ್ಟಿಯನ್ನು ಒಕ್ಕೂಟಕ್ಕೆ ಸೇರಲು ಅನುಕೂಲವಾಗುವಂತೆ ತಯಾರು ಮಾಡತಕ್ಕದ್ದು. +ಯಾವ ರಾಜ್ಯವಾಗಲಿ, ಒಕ್ಕೂಟ ನಿಗದಿಪಡಿಸುವ ಸರಿಸುಮಾರಾದ ವಿಸ್ತೀರ್ಣ. + ತನ್ನ ಪ್ರಜೆಗಳ ಸುಖ ಶಾಂತಿಗೆ ಸಾಕಾಗುವ ಪ್ರಾಕೃತಿಕ ಸಂಪನ್ಮೂಲಗಳು. + ಸ್ವಾಯತ್ತವಾಗಿ ಕಾರ್ಯನಿರ್ವಹಿಸಲು ಬೇಕಾಗುವ ಆದಾಯ ಮತ್ತು ಜನಸಂಖ್ಯೆ. + ವಿದೇಶೀ ಆಕ್ರಮಣ ನಿಗ್ರಹಿಸುವ, ಆಂತರಿಕ ಕ್ಷೋಭೆಗಳನ್ನು ನಿವಾರಿಸಿ ಕಾನೂನು ಮತ್ತು ಶಿಸ್ತು ಕಾಪಾಡುವ ಶಕ್ತಿ ಹಾಗೂ ಆಧುನಿಕ ರಾಜ್ಯವೊಂದು ತನ್ನ ಜನರಿಗೆ ಕೊಡಬಹುದಾದ ಕನಿಷ್ಠ ಮಟ್ಟದ ಒಳ್ಳೆಯ ಆಡಳಿತ . + ಜನ ಕಲ್ಯಾಣವನ್ನು ಕಲ್ಪಿಸಿಕೊಡಲು ಸಾಧ್ಯವಿಲ್ಲವೆಂದರೆ ಅಂಥ ಸಂಸ್ಥಾನ ಒಕ್ಕೂಟ ಸೇರಲು ಅರ್ಹವಾದದ್ದೆಂದು ಪರಿಗಣಿಸುವಂತಿಲ್ಲ. +ಖಂಡ ೨ ಒಕ್ಕೂಟ ಸೇರದೆ ಇರುವ, ಆದರೆ ಸೇರಲು ಅರ್ಹತೆಯುಳ್ಳ ಸಂಸ್ಥಾನದ ಪ್ರದೇಶ ಮತ್ತು ಅನರ್ಹವಾದ ಸಂಸ್ಥಾನಗಳ ಪ್ರದೇಶಗಳನ್ನು ಒಕ್ಕೂಟದಲ್ಲಿ ಅಂತರ್ಗತವಾಗಿರುವ ಪ್ರದೇಶಗಳೆಂದೇ ಪರಿಗಣಿಸತಕ್ಕದ್ದು ಮತ್ತು ಎಲ್ಲ ಕಾಲಕ್ಕೂ ಅವು ಅಂತರ್ಗತವಾದ ಒಕ್ಕೂಟದ ಪ್ರದೇಶಗಳೆಂದು ತಿಳಿದು, ಕೇಂದ್ರೀಯ ಶಾಸಕಾಂಗ ನಿಗದಿ ಪಡಿಸುವ ಸಂವಿಧಾನಾತ್ಮಕ ನಿಯಮಗಳು ಅವುಗಳಿಗೆ ಅನ್ವಯವಾಗತಕ್ಕದ್ದು. +ಖಂಡ ೩ಒಕ್ಕೂಟ ಸೇರಲು ಅನರ್ಹವಾದ ದೇಶೀ ಸಂಸ್ಥಾನಗಳ ಪ್ರದೇಶಗಳನ್ನು ಸುಧಾರಿಸುವ, ಪುನಾರಚಿಸುವ,ಮರು ಹಂಚಿಕೆ ಮಾಡುವ ಮತ್ತು ಇತರ ಪ್ರದೇಶಗಳೊಡನೆ ವಿಲೀನಗೊಳಿಸಿ ಒಕ್ಕೂಟಕ್ಕೆ ಸೇರಿಸಿಕೊಳ್ಳುವಅಧಿಕಾರ ಭಾರತೀಯ ಸಂಯುಕ್ತ ಸಂಸ್ಥಾನಕ್ಕಿರುತ್ತದೆ. +ಖಂಡ ೪ ಸಂಸ್ಥಾನವೊಂದು ರಾಜ್ಯವಾಗಿ ಒಕ್ಕೂಟಕ್ಕೆ ಸೇರ್ಪಡೆಯಾದ ಮೇಲೆ ಆ ರಾಜ್ಯದ ಪ್ರದೇಶದಲ್ಲಿ ಮತ್ತೊಂದು ಹೊಸ ರಾಜ್ಯದ ರಚನೆಗಾಗಲಿ, ಎರಡು ಮೂರು ರಾಜ್ಯಗಳ ಕೆಲವು ಪ್ರದೇಶಗಳನ್ನು ಸೇರಿಸಿ ಹೊಸ ರಾಜ್ಯದ ರಚನೆಗಾಗಲಿ ಸಂಬಂಧಪಟ್ಟ ಎಲ್ಲ ರಾಜ್ಯ ಮತ್ತು ಕೇಂದ್ರ ಶಾಸಕಾಂಗಗಳ ಅನುಮತಿಯಿಲ್ಲದೆ ಅವಕಾಶವಿರುವುದಿಲ್ಲ. +ಅನುಚ್ಛೇದ ೧ - ಭಾರತೀಯ ಸಂಯುಕ್ತ ಸಂಸ್ಥಾನಗಳು ತನ್ನೊಳಗೆ ಸಹಜ ಭಾಗವಾಗಬಹುದಾದ ಅಥವಾ ತನ್ನ ಗಡಿಯಲ್ಲಿರುವ ಪ್ರದೇಶವನ್ನು ಪರಸ್ಪರ ಒಪ್ಪುವ ನಿಯಮಗಳಿಗನುಗುಣವಾಗಿ ಸೇರ್ಪಡೆ ಮಾಡಿಕೊಳ್ಳಬಹುದು. +ಆದರೆ ಈ ಸೇರ್ಪಡೆ ಸಂವಿಧಾನಕ್ಕನು ಗುಣವಾಗಿರಬೇಕು ಹಾಗೂ ಕನಿಷ್ಠ ಪಕ್ಷ ಒಕ್ಕೂಟದ ಅರ್ಧದಷ್ಟುರಾಜ್ಯ ಶಾಸಕಾಂಗಗಳಾದರೂ ಈ ಕ್ರಮಕ್ಕೆ ತರಾವುಗಳ ಮೂಲಕ ತಮ್ಮ ಒಪ್ಪಿಗೆಯನ್ನು ಕೊಟ್ಟರಬೇಕು. +ಭಾರತೀಯ ಸಂಯುಕ್ತ ಸಂಸ್ಥಾನವು ಹೊಸ ಪ್ರದೇಶವನ್ನು ವಶಪಡಿಸಿಕೊಳ್ಳಬಹುದು . +ಅದನ್ನು ಒಕ್ಕೂಟದಲ್ಲಿ ಅಂತರ್ಗತವಾಗದ ಪ್ರದೇಶವೆಂದು ಪರಿಗಣಿಸತಕ್ಕದ್ದು. +ಒಕ್ಕೂಟದ ಶಾಸಕಾಂಗವು ಅವಕಾಶ ಮಾಡಿಕೊಡುವವರೆಗೆ, ಸಂಯುಕ್ತ ಸಂಸ್ಥಾನಗಳ ಸಂವಿಧಾನವು ಈ ಅಂತರ್ಗತವಾಗದ ಪ್ರದೇಶಕ್ಕೆ ಅನ್ವಯಿಸುವುದಿಲ್ಲ. + ಕಲಮು ೧ - ಪ್ರಜೆಗಳ ಮೂಲಭೂತ ಹಕ್ಕುಗಳು ಕಲಮು ೨ - ಮೂಲಭೂತ ಹಕ್ಕುಗಳ ಮೇಲಿನ ಆಕ್ರಮಣದ ವಿರುದ್ಧ ಪರಿಹಾರಗಳು. +ಭಾರತೀಯ ಸಂಯುಕ್ತ ರಾಜ್ಯಗಳಲ್ಲಿ ಹುಟ್ಟಿದ ಅಥವಾ ಅವುಗಳಲ್ಲಿ ಸಂವಿಧಾನಾತ್ಮಕವಾಗಿ ಸಹಜವಾಗಿ ಭಾರತೀಯರಾದವರು, ಭಾರತೀಯರು ಮತ್ತು ಅವರು ವಾಸಿಸುವ ರಾಜ್ಯದನಾಗರಿಕರಾಗಿರುತ್ತಾರೆ. +ವರ್ಗದಿಂದಾಗಿ, ಹುಟ್ಟಿನಿಂದಾಗಿ, ವೈಯಕ್ತಿಕವಾಗಿ, ಕೌಟುಂಬಿಕವಾಗಿ,ಧಾರ್ಮಿಕ ಅಥವಾ ಧಾರ್ಮಿಕ ಆಚರಣೆಯಿಂದಾಗಿ ಮತ್ತು ಸಾಂಪ್ರದಾಯಿಕವಾಗಿ ಇರಬಹುದಾದ ಸವಲತ್ತು ಅಥವಾ ಅನರ್ಹತೆಯನ್ನು ರದ್ದುಪಡಿಸಲಾಗಿದೆ. + + ಯಾವುದೇ ಸವಲತ್ತುಗಳನ್ನಾಗಲಿ, ವಿನಾಯತಿಗಳನ್ನಾಗಲಿ ಮೊಟಕುಗೊಳಿಸುವ ಯಾವುದೇ ಆಚರಣೆ ಅಥವಾ ಸಂಪ್ರದಾಯ ಅಥವಾ ಕಾನೂನನ್ನು ಮಾಡಿ, ಯಾವುದೇ ರಾಜ್ಯವೂ ಹೇರತಕ್ಕದ್ದಲ್ಲ. +ನ್ಯಾಯಾಂಗ ವಿಚಾರಣೆಯಿಲ್ಲದೆ ಯಾವುದೇ ವ್ಯಕ್ತಿಯ ಜೀವವನ್ನಾಗಲಿ,ಆಸ್ತಿಯನ್ನಾಗಲಿ ಹರಣ ಮಾಡಲಾಗದು. +ಹಾಗೆಯೇ ಯಾವ ವ್ಯಕ್ತಿಗೇ ಆದರೂ ರಾಜ್ಯವು ತನ್ನ ಪ್ರದೇಶದಲ್ಲಿ ಸಮಾನ ನ್ಯಾಯಾಂಗ ರಕ್ಷಣೆಯನ್ನು ಕೊಡತಕ್ಕದ್ದು. +ಕಾನೂನಿನ ಕಣ್ಣಲ್ಲಿ ಎಲ್ಲ ಪ್ರಜೆಗಳೂ ಸಮಾನರು ಮತ್ತು ಸಮಾನ ನಾಗರಿಕ ಹಕ್ಕುಗಳನ್ನುಳ್ಳವರು. +ಈಗಿನ ಕಾನೂನು, ನಿಬಂಧನೆ, ಆಜ್ಞೆ, ಸಂಪ್ರದಾಯ ಕಾನೂನಿನ ಅರ್ಥಗಳ ರೀತ್ಯಾಯಾರ ಮೇಲೂ ಇರಬಹುದಾದ, ಹೇರಲಾದ ಎಲ್ಲ ಅನರ್ಹತೆ, ಪಕ್ಷಪಾತ ಮತ್ತು ದಂಡಗಳು. +ಈ ಸಂವಿಧಾನ ಜನರಿಗೆ ಬಂದ ದಿನದಿಂದ ರದ್ದಾಗತಕ್ಕದ್ದು. + ಸಾರ್ವಜನಿಕ ಉಪಯೋಗಕ್ಕೆಂದು ನಿಯೋಜಿತವಾದ, ನಿರ್ವಹಿಸಲು ಪರವಾನಗಿ ಪಡೆದ ಯಾವುದೇ ಸ್ಥಳ, ನಿವಾಸ, ಸವಲತ್ತು. +ಹೋಟೆಲ್‌, ತಂಗುದಾಣ, ವಿದ್ಯಾಕೇಂದ್ರಗಳು, ರಸ್ತೆ,ದಾರಿ, ಕೆರೆ, ಬಾವಿ, ಮತ್ತಿತರ ನೀರು ಸರಬರಾಜು ತಾಣ, ಸಾರ್ವಜನಿಕ ಮನರಂಜನಾ ಪ್ರದೇಶ, ವಸತಿ ಸ್ಥಳ ಮುಂತಾದವುಗಳ ಕಾನೂನಿನನ್ವಯ ಎಲ್ಲರಿಗೂ ನಿಷಿದ್ಧವಿರುವುದನ್ನು ಬಿಟ್ಟು - ಉಪಯೋಗವನ್ನು ನಿರಾಕರಿಸುವವರು ತಪ್ಪಿತಸ್ಥರು ಮತ್ತು ದಂಡನಾರ್ಹರು. +ಸಾರ್ವಜನಿಕರಿಂದ ಅಥವಾ ಸಾರ್ವಜನಿಕರಿಗಾಗಿ ನಡೆಯುವ ಯಾವುದೇ ಸಂಸ್ಥೆಗಳು,ಅನುಕೂಲಗಳು, ಸವಲತ್ತುಗಳು ಎಲ್ಲರಿಗೂ ಸಮಾನವಾಗಿ ಸೇರತಕ್ಕದ್ದು. +ಧರ್ಮ, ಜಾತಿ, ಪಂಥ, ಹೆಣ್ಣು, ಗಂಡು ಅಥವಾ ಸಾಮಾಜಿಕ ಸ್ಥಾನಗಳೇ ಆಧಾರವಾಗಿ ಯಾವುದೇ ಸಾರ್ವಜನಿಕ ಕಛೇರಿ, ಕಸುಬು, ವ್ಯಾಪಾರ ಮುಂತಾದವುಗಳಿಂದ ಯಾವ ನಾಗರಿಕನೂ ಅನರ್ಹನಾಗತಕ್ಕದ್ದಲ್ಲ. +(೧) ಭಾರತೀಯ ನಾಗರಿಕನಾದವರು ದೇಶದಲ್ಲಿ ಎಲ್ಲಾದರೂ ವಾಸಮಾಡಬಹುದು. +ಸಾರ್ವಜನಿಕ ಶಿಸ್ತು, ನೈತಿಕ ಉಲ್ಲಂಘನೆಯ ಕಾರಣಗಳ ಹೊರತು ನಾಗರಿಕರ ವಾಸಸ್ಥಾನದ ಹಕ್ಕನ್ನು ಮೊಟಕುಗೊಳಿಸುವ ಕಾನೂನು ಮಾಡಕೂಡದು. +(೨) ಭಾರತದ ಯಾವುದೇ ರಾಜ್ಯಕ್ಕೆ ಸೇರಿದ ಅಧಿಕೃತ ಪ್ರಜೆಯೊಬ್ಬ ದೇಶದ ಯಾವುದೇ ಭಾಗದಲ್ಲಿ ನೆಲೆಯಾಗಬಹುದು. +ಸಾರ್ವಜನಿಕ ಶಾಂತಿ, ನೀತಿ ಪಾಲನೆಯ ಕಾರಣಗಳಿಗಲ್ಲದೆ ಯಾವ ಪ್ರಜೆಯ ವಾಸ್ತವ್ಯದ ಹಕ್ಕನ್ನು ರದ್ದು ಮಾಡುವುದಾಗಲಿ,ತಿರಸ್ಕರಿಸುವುದಾಗಲಿ ಕೂಡದು. +(೩) ನಾಗರಿಕರೊಬ್ಬರು ಹೊಸದಾಗಿ ನೆಲೆಯೂರುವ ಯಾವುದೇ ರಾಜ್ಯ ತನ್ನ ನಾಗರಿಕರಿಂದ ಪಡೆಯುವ ತೆರಿಗೆಗಳನ್ನಲ್ಲದೆ ಯಾವುದೇ ಹೊಸ ತೆರಿಗೆ ವಿಧಿಸಕೂಡದು. +ವಾಸ್ತವ್ಯದ ಹಕ್ಕನ್ನು ಪಡೆಯುವವರು ತೆರಬೇಕಾದ ಗರಿಷ್ಠ ಶುಲ್ಕವನ್ನು ಕೇಂದ್ರ ಶಾಸಕಾಂಗದ ತೀರ್ಮಾನದನ್ವಯ ನಿಗದಿಗೊಳಿಸತಕ್ಕದ್ದು. +(೪) ರಾಜ್ಯವೊಂದು ಈ ಕೆಳಕಂಡ ರೀತಿಯ ವ್ಯಕ್ತಿಗಳಿಂದ ನೆಲೆಗೊಳ್ಳುವ ಹಕ್ಕನ್ನು ಹಿಂದೆಗೆದುಕೊಳ್ಳುವುದನ್ನಾಗಲಿ ಅಥವಾ ನಿರಾಕರಿಸುವುದನ್ನಾಗಲಿ ಮಾಡಬಹುದು. +(ಎ) ರೂಢಿಗತ ಅಪರಾಧಗಳು(ಬಿ) ರಾಜ್ಯದಲ್ಲಿರುವ ಮತೀಯ ಸಮತೋಲನವನ್ನು ಏರುಪೇರು ಮಾಡುವ ದೃಷ್ಟಿಯಿಂದ ನೆಲೆಗೊಳ್ಳಬಯಸುವವರು. +(ಸಿ) ಬದುಕಲು ಯಾವುದೇ ನಿಗದಿತ ಆದಾಯವಿದೆಯೆಂದು, ರಾಜ್ಯದ ಮೇಲೆ ಖಾಯಂ ಹೊರೆಯಾಗುವುದಿಲ್ಲವೆಂದು ನೆಲೆಗೊಳ್ಳುವ ರಾಜ್ಯಕ್ಕೆ ಸಾಬೀತು ಮಾಡಲಾಗದವರು. +(ಡಿ) ಅವಶ್ಯಕತೆಯಿದ್ದಾಗ ಮೂಲ ರಾಜ್ಯವೊಂದು ಬೇರೆ ರಾಜ್ಯಗಳಲ್ಲಿ ನೆಲೆಸುವ ತನ್ನ ನಿವಾಸಿಗಳಿಗೆ ಸರಿಯಾದ ಸಹಾಯ ಮಾಡಲು ನಿರಾಕರಿಸಿದಾಗ ತಾನು ಜನಿಸಿದ ಪ್ರದೇಶದಲ್ಲಿ ಸಾರ್ವಜನಿಕರ ದಾನದಿಂದ ಶಾಶ್ವತವಾಗಿ ಅವಲಂಬಿಸಿರದ,ಸ್ವತಃ ದುಡಿಯುವ ಸಾಮರ್ಥ್ಯವುಳ್ಳ ಮತ್ತು ನಿರುದ್ಯೋಗದ ವಿರುದ್ಧ ಭದ್ರತೆ ನೀಡಬಲ್ಲ ವ್ಯಕ್ತಿಗೆ ಷರತ್ತು ವಿಧಿಸಿ ನೆಲೆಗೊಳ್ಳಲು ಅನುಮತಿಸಬಹುದು. +ಹೊರದೂಡುವ ಪ್ರತಿಕ್ರಮವೂ ಭಾರತ ಸರ್ಕಾರದಿಂದ ದೃಢೀಕರಣವಾಗಬೇಕು. +ವಾಸಸ್ಥಾನ ಮತ್ತು ಪಾಳೆಯಗಳ ನಡುವಿನ ವ್ಯತ್ಯಾಸವನ್ನು ವ್ಯಾಖ್ಯಾನಿಸಿ. +ವಾಸ ಹೂಡಿದನ ಅವಧಿಯಲ್ಲಿ ಆ ಜನರಿಗಿರಬೇಕಾದ ರಾಜಕೀಯ ಮತ್ತು ನಾಗರಿಕ ಹಕ್ಕುಗಳನ್ನು ಕೇಂದ್ರಶಾಸಕಾಂಗ ನಿಗದಿಗೊಳಿಸತಕ್ಕದ್ದು. +ಕೇಂದ್ರ ಸರ್ಕಾರವು ಯಾವುದೇ ಜಾತಿಗೆ ಕೊಡಬಹುದಾದ ಕಿರುಕುಳದ ವಿರುದ್ಧ, ಆಂತರಿಕಕ್ಷೋಭೆ ಮತ್ತು ಹಿಂಸೆಯ ವಿರುದ್ಧ ರಕ್ಷಣೆ ಕೊಡತಕ್ಕದ್ದು. +ಯಾವುದೇ ವ್ಯಕ್ತಿಯನ್ನು ಬಲಾತ್ಕಾರದಿಂದ ಕೆಲಸ ಮಾಡಿಸುವುದು, ದಾಸ್ಯಕ್ಕೆ ಒಳಪಡಿಸುವುದು,ಅಪರಾಧ ಮತ್ತು ಶಿಕ್ಷಾರ್ಹ. +ಮನೆಯ ಅನುಚಿತತೋಧ, ಆಕ್ರಮಣ, ಜಪ್ತು ಮುಂತಾದವುಗಳ ಮೂಲಕ ಪ್ರಜೆಗಳು ತಮ್ಮ ಪಾಡಿಗೆ ತಾವು ಜೀವಿಸುವ ಹಕ್ಕನ್ನು ಶಾಂತಿಯಿಂದ ನಿರ್ದಿಷ್ಟ ಕಾನೂನಿನ ಬೆಂಬಲವಿಲ್ಲದೆ ಹತ್ತಿಕ್ಕಲಾಗದು. +ಸಂಭವನೀಯ ಕಾರಣಕ್ಕಲ್ಲದೆ, ಸತ್ಯವಚನ ಪ್ರಮಾಣಾನುಸಾರವಾಗಲ್ಲದೆ ವಾರಂಟನ್ನು ಹೊರಡಿಸಲಾಗದು, ಹಾಗೆ ಹೊರಡಿಸುವಾಗ ಶೋಧಿಸಬೇಕಾದ ಸ್ಥಳದ ಮತ್ತು ಬಂಧಿಸಬೇಕಾದ ವ್ಯಕ್ತಿಯ ಅಥವಾ ಸರಕುಗಳ ವಿವರಣೆಯನ್ನು ಪಡೆದುಕೊಳ್ಳಬೇಕು. +ನಾಗರಿಕ ಮತದಾನದ ಹಕ್ಕನ್ನು, ಅಪ್ರಾಪ್ತ ವಯಸ್ಕರು, ಜೈಲುವಾಸ ಅನುಭವಿಸಿದವರು ಮತ್ತು ಬುದ್ಧಿಭ್ರಮಣೆಯಾದವರಿಗಲ್ಲದೆ, ಇತರರಿಗೆ ನಿರಾಕರಿಸುವುದನ್ನಾಗಲಿ, ಮೊಟಕುಗೊಳಿಸುವುದನ್ನಾಗಲಿ ಮಾಡತಕ್ಕದ್ದಲ್ಲ. +ಸಾರ್ವಜನಿಕ ಶಿಸ್ತು-ನೀತಿ ಕಾರಣಗಳ ಹೊರತಾಗಿ ಜನರ ವಾಕ್‌ ಸ್ವಾತಂತ್ರ್ಯ, ಪತ್ರಿಕಾಸ್ವಾತಂತ್ರ್ಯ, ಸಂಘಟನಾ ಸ್ವಾತಂತ್ರ್ಯ . + ಸಭೆ ಸೇರುವ ಸ್ವಾತಂತ್ರ್ಯಗಳನ್ನು ಮೊಟಕುಗೊಳಿಸುವ ಕಾನೂನನ್ನು ರಚಿಸಲಾಗದು. +ಹಿಂದಿನಿಂದ ಅನ್ವಯವಾಗುವ ಯಾವುದೇ ವಿಧೇಯಕವನ್ನು ಸ್ಥಾನಬಲವಿರುವ ಮಾತ್ರಕ್ಕೆ ಮಂಜೂರು ಮಾಡತಕ್ಕದ್ದಲ್ಲ. +ಸಾರ್ವಜನಿಕ ಶಿಸ್ತು ಮತ್ತು ನೈತಿಕತೆಯ ಸಾಮರಸ್ಯದೊಡನೆ ಎಲ್ಲರಿಗೂ ಬಹಿರಂಗವಾದ ಆಚರಣೆ ಮತ ಬೋಧನೆ . + ಮತಾಂತರವೂ ಸೇರಿದಂತೆ ಧರ್ಮವನ್ನು ಮುಕ್ತನಾಗಿ ಅನುಸರಿಸಲು ಮತ್ತು ಆತ್ಮಸಾಕ್ಷಿಗನುಗುಣವಾಗಿ ಬದುಕಲು ಸರ್ಕಾರ ರಕ್ಷಣೆ ಕೊಡಬೇಕು. +ಯಾವ ವ್ಯಕ್ತಿಯ ಮೇಲೂ ಬಲಾತ್ಕಾರದಿಂದ ಧಾರ್ಮಿಕ ಸಂಸ್ಥೆಯ ಸದಸ್ಯತ್ವವನ್ನಾಗಲಿ,ಧಾರ್ಮಿಕ ನಡವಳಿಕೆಯನ್ನಾಗಲಿ, ಧಾರ್ಮಿಕ ನೀತಿಯನ್ನಾಗಲಿ ಹೇರಕೂಡದು. +ಆದರೆ ತಂದೆತಾಯಿಯರು ತಮ್ಮ ಮಕ್ಕಳು ೧೬ ವರ್ಷದವರಾಗುವವರೆಗೆ ಯಾವ ಧಾರ್ಮಿಕವಿದ್ಯೆ ಕಲಿಯಬೇಕು ಎನ್ನುವ ಬಗ್ಗೆ ನಿರ್ಧಾರ ಕೈಗೊಳ್ಳಬಹುದು. +ಜಾತಿ, ಪಂಥ, ಮತ ಕಾರಣವಾಗಿ ಯಾರೂ ಯಾವುದೇ ದಂಡಕ್ಕೆ ಒಳಗಾಗಬಾರದು. +ಹಾಗೆಯೇ ನಾಗರಿಕ ಜವಾಬ್ದಾರಿಯ ನಿರ್ವಹಣೆಯಿಂದ ಅವರನ್ನು ತಪ್ಪಿಸಕೂಡದು. + ರಾಷ್ಟ್ರವು ಯಾವ ಧರ್ಮವನ್ನೂ ರಾಷ್ಟ್ರಧರ್ಮವೆಂದು ಮಾನ್ಯ ಮಾಡತಕ್ಕದ್ದಲ್ಲ. +ಯಾವುದೇ ಧರ್ಮದ ಅನುಯಾಯಿಗಳು ಸಂಘಟತರಾಗಲು ಸ್ವತಂತ್ರರು . +ಅವರು ಬಯಸಿದಲ್ಲಿ ತಮ್ಮ ಸಂಘಟನೆಗೆ ಅನುಕೂಲವಾಗುವ ಕಾಯ್ದೆ ಮಾಡಲು ಸರ್ಕಾರವನ್ನು ಕೇಳುವ ಹಕ್ಕು ಇರತಕ್ಕದ್ದು. +ಎಲ್ಲ ಧರ್ಮೀಯರಿಗೂ ಅನ್ವಯಿಸುವ ಕಾಯ್ದೆಗಳಿಗೆ ಒಳಪಟ್ಟು ಪ್ರತಿ ಧಾರ್ಮಿಕ ಸಂಘಟನೆಯೂ ತನ್ನನ್ನು ತಾನು ನಿಯಂತ್ರಿಸಿಕೊಳ್ಳುವ ಸ್ವಾತಂತ್ರ್ಯ ಹೊಂದಿರುತ್ತದೆ. +ಧಾರ್ಮಿಕ ಸಂಘಗಳ ನಿಯಮಗಳ ಪ್ರಕಾರ ಅವುಗಳು ತಮ್ಮ ಸದಸ್ಯರಿಂದ ಅವರು ಸ್ವಇಚ್ಛೆಯಿಂದ ಕೊಟ್ಟಲ್ಲಿ ಕಾಣಿಕೆ-ವಂತಿಗೆಗಳನ್ನು ಪಡೆಯಬಹುದು. +ಧಾರ್ಮಿಕ ಸಮಾಜಕ್ಕೆ ಖರ್ಚಾಗುವ ಹಣವನ್ನು ಸದಸ್ಯನಲ್ಲದವನಿಂದ ಬಲಾತ್ಕಾರವಾಗಿ ವಸೂಲು ಮಾಡತಕ್ಕದ್ದಲ್ಲ. +ಈ ಮೇಲ್ಮಾಣಿಸಿದ ಅಪರಾಧಗಳೆಲ್ಲಾ ಮೇಲ್ನೋಟಕ್ಕೆ ತೋರುವ ಅಪರಾಧಗಳೆಂದು ಪರಿಗಣಿತವಾಗುತ್ತವೆ. +ಅಪರಾಧಿಗಳೆಂದು ಸಾಬೀತಾದವರಿಗೆ ವಿಧಿಸಬೇಕಾದ ಶಿಕ್ಷೆಯಬಗ್ಗೆ ಕೇಂದ್ರ ಶಾಸಕಾಂಗ ಕಾಯ್ದೆ-ಕಾನೂನನ್ನು ಮಾಡತಕ್ಕದ್ದು. +ಮೂಲಭೂತ ಹಕ್ಕುಗಳ ಉಲ್ಲಂಘನೆಯ ಏರುದ್ಧ ಪರಿಹಾರಗಳು ಕಾರ್ಯಾಂಗ ದಬ್ಬಾಳಿಕೆಯ ವಿರುದ್ಧ ನ್ಯಾಯಾಂಗ ರಕ್ಷಣೆ +ಭಾರತ ಸಂಯುಕ್ತ ಸಂಸ್ಥಾನವು ಈ ಮುಂದಿನ ಅವಕಾಶಗಳನ್ನು ಕಲ್ಪಿಸುತಕ್ಕದ್ದು. + ೧. ಭಾರತದ ನ್ಯಾಯಾಂಗ ಅಧಿಕಾರವು ಸರ್ವೋಚ್ಛ ನ್ಯಾಯಾಲಯದಲ್ಲಿ ಇರತಕ್ಕದ್ದು. +೨. ಎಲ್ಲ ಇತರೆ ನ್ಯಾಯಾಲಯಗಳು ಅಥವಾ ಒಂದು ನ್ಯಾಯಾಲಯದ ಅಧಿಕಾರವನ್ನು ಚಲಾಯಿಸುವಂತಹ ಅಧಿಕಾರಗಳ ಉಸ್ತುವಾರಿ ಅಧಿಕಾರವನ್ನು ಸರ್ವೋಚ್ಛ ನ್ಯಾಯಾಲಯಕ್ಕೆ ನೀಡತಕ್ಕದ್ದು. + ೩. ತೊಂದರೆಗೊಳಗಾದ ವ್ಯಕ್ತಿಯ ಅಹವಾಲಿನ ಆಧಾರದ ಮೇಲೆ ಹೇಬಿಯಸ್‌ ಕಾರ್ಪಸ್‌,ಶೋ ವಾರಂಟೋ ಪ್ರಾಹಿಬಿಷನ್‌, ಸರ್ಷಿಯೋರೋರೈ-ಮ್ಯಾಂದಮಸ್‌ ಮುಂತಾದ ವಿಶೇಷಾಧಿಕಾರದ ಆಜ್ಞಾ ಪತ್ರಗಳನ್ನು ಜಾರಿಗೊಳಿಸುವ ಅಧಿಕಾರ ಸರ್ವೋಚ್ಛ ನ್ಯಾಯಾಲಯಕ್ಕೆ ಇರತಕ್ಕದ್ದು. + ೪.ರಿಟ್‌ ಅರ್ಜಿ ಸಲ್ಲಿಸುವ ಹಕ್ಕನ್ನು ದಂಗೆ ಅಥವಾ ಆಕ್ರಮಣದ ಕಾರಣಗಳಿಲ್ಲದೆ ಮೊಟಕುಗೊಳಿಸುವುದಾಗಲಿ, ಅಮಾನತ್ತಿನಲ್ಲಿಡುವುದಾಗಲಿ ಸಲ್ಲದು. +ಖಂಡಅಸಮಾನತೆಯಿಂದ ನಡೆಸಿಕೊಳ್ಳುವುದರ ವಿರುದ್ಧ ರಕ್ಷಣೆ . +ಕೇಂದ್ರ ಮತ್ತು ರಾಜ್ಯಗಳ ಶಾಸಕಾಂಗ ಮತ್ತು ಕಾರ್ಯಾಂಗಗಳ ಪ್ರಾಧಿಕಾರದ ವ್ಯಾಪ್ತಿಯು ಈ ಕೆಳಗಿನ ಪರಿಮಿತಿಗಳಿಗೆ ಒಳಪಟ್ಟಿರತಕ್ಕದ್ದು. +ಪ್ರಜೆಗಳ ಈ ಕೆಳಕಂಡ ಹಕ್ಕುಗಳ ವಿರುದ್ಧ ಯಾವ ಶಾಸಕಾಂಗ, ಕಾರ್ಯಾಂಗಗಳೂ ಕಾನೂನು- ಆಜ್ಞೆಗಳನ್ನು ಮಾಡಲು ಅಧಿಕಾರವಿರುವುದಿಲ್ಲ. +ಒಪ್ಪಂದಗಳನ್ನು ನೋಡಿಕೊಂಡು ಜಾರಿಗೊಳಿಸುವುದು, ಕೋರ್ಟಿನಲ್ಲಿ ಖಟ್ಟೆ ಹೂಡುವುದು. +ಖಟ್ಟೆಗಳಲ್ಲಿ ಭಾಗಿಗಳಾಗುವುದು. +ಸಾಕ್ಷಿಯಾಗುವುದು, ಆಸ್ತಿಯ ಉತ್ತರಾಧಿಕಾರ ಪಡೆಯುವುದು,ಕೊಳ್ಳುವುದು, ಮಾರುವುದು, ಭೋಗ್ಯ ಮಾಡಿಕೊಳ್ಳುವುದು ಮತ್ತು ಸ್ವಂತ ಆಸ್ತಿಯನ್ನು ವಿಲೇವಾರಿ ಮಾಡುವುದು. +ಸಂವಿಧಾನ ನಿಯಮಗಳಿಗೆ ಒಳಪಟ್ಟು ಎಲ್ಲ ವರ್ಗಗಳಿಗೆ ಸಮುಚಿತವಾಗಿ ಸಿಗಬೇಕಾದ ನಿಗದಿತ ಪ್ರಾತಿನಿಧ್ಯದ ಅನುಸಾರವಾಗಿ, ಸರ್ಕಾರಿ ಸೇವೆಗೆ ಮತ್ತು ಸೈನ್ಯಕ್ಕೆ ಸೇರಿಕೊಳ್ಳುವ ಅರ್ಹತೆ ಪಡೆಯುವುದು. +ಎಲ್ಲ ಪ್ರಜೆಗಳಿಗೂ ಅನ್ವಯಿಸುವ ಕಾನೂನುಗಳ ಮಿತಿಯಲ್ಲಿ ಎಲ್ಲ ವಸತಿಗೃಹ, ವಿದ್ಯಾಕೇಂದ್ರ,ಹೋಟೆಲು, ನದಿ, ಬಾವಿ, ಕೆರೆ, ನೀರಿನ ಸೌಕರ್ಯ, ಸಾರ್ವಜನಿಕ ವಾಹನ ಸಾರಿಗೆ ಸೌಕರ್ಯ, ರಸ್ತೆ ನದಿ, ವಾಯುಸಂಚಾರ ಸೌಲಭ್ಯ ಹಾಗೂ ಮನರಂಜನಾ ಸೌಲಭ್ಯಗಳು ಸರ್ವಸಮಾನವಾಗಿ ಮತ್ತು ಪರಿಪೂರ್ಣವಾಗಿ ಜನಾಂಗ, ವರ್ಗ, ವರ್ಣ ಮತ್ತು ಪಂಥಗಳ ಭೇದವಿಲ್ಲದೆ ಎಲ್ಲರಿಗೂ ದೊರೆಯತಕ್ಕದ್ದು. +ಸಾರ್ವಜನಿಕರಿಗೆ ಅಥವಾ ಯಾವುದೇ ಧರ್ಮದ ಅನುಯಾಯಿಗಳಿಗೆಂದು ನಿಗದಿಯಾಗಿರುವ,ಎಲ್ಲ ಧಾರ್ಮಿಕ ಮತ್ತು ಧರ್ಮದತ್ತಿಗಳ ಉಪಯೋಗವನ್ನು ಯಾವ ಭೇದವೂ ಇಲ್ಲದೆ ಪಡೆಯಲು ಎಲ್ಲರೂ ಅಥವಾ ಆಯಾ ಧರ್ಮದ ಅನುಯಾಯಿಗಳು ಅರ್ಹರು. +ಯಾವುದೇ ಸಂಪ್ರದಾಯ ಅಥವಾ ರೂಢಿ ಅಥವಾ ಧಾರ್ಮಿಕ ಆಚರಣೆ ಅಥವಾ ಸಂಪ್ರದಾಯಗಳ ಆಧಾರದ ಮೇಲೆ ಯಾವುದೇ ಕಾನೂನಿನ ಪ್ರಯೋಜನ ಮತ್ತು ಸರ್ಕಾರದರಕ್ಷಣೆಗಳಿಂದ ಯಾರನ್ನೂ ವಂಚಿಸತಕ್ಕದ್ದಲ್ಲ. +ದಂಡನೆ, ಶಿಕ್ಷೆ ಮುಂತಾದವು ಎಲ್ಲ ತಪ್ಪಿತಸ್ಥರಿಗೂ ಸಮಾನವಾಗಿರತಕ್ಕದ್ದು. +ಸರ್ಕಾರದ ಕಾನೂನಿನ ರಕ್ಷಣೆ ಎಲ್ಲರಿಗೂ ಸಮಾನ ಹಾಗೂ ಪೂರ್ಣವಾಗಿ ಲಭಿಸತಕ್ಕದ್ದು. +ಸಾರ್ವಜನಿಕ ಆಡಳಿತಾಧಿಕಾರಿಗಳು, ಖಾಸಗಿ ಕಾರ್ಲಾನೆ ಹಾಗೂ ವಾಣಿಜ್ಯ ಸಂಸ್ಥೆಗಳು ಮಾಲೀಕರು ಯಾರನ್ನೇ ಆಗಲಿ, ಜಾತಿ, ಧರ್ಮ ಸಾಮಾಜಿಕ ಸ್ಥಾನಮಾನಗಳ ಆಧಾರದ ಮೇಲೆ ತಾರತಮ್ಯದಿಂದ ನೋಡುವುದು ಅಪರಾಧವೆಂದು ಪರಿಗಣಿಸತಕ್ಕದ್ದು. +ಇಂಥ ಆಪಾದನೆಗಳ ವಿಚಾರಣೆ ಈ ಕಾರಣಕ್ಕಾಗಿ ರಚಿತವಾಗುವ ನ್ಯಾಯಮಂಡಳಿಗಳ ವ್ಯಾಪ್ತಿಗೆ ಸೇರತಕ್ಕದ್ದು. +ಸೂಕ್ತ ಶಾಸನದ ಮೂಲಕ ಈ ಅವಕಾಶಗಳನ್ನು ಜಾರಿಗೊಳಿಸಲು ಕೇಂದ್ರ ಶಾಸನ ಸಭೆಗೆ ಅಧಿಕಾರವಿರತಕ್ಕದ್ದು . + ಆ ಕರ್ತವ್ಯವು ಕಡ್ಡಾಯವಾಗಿರತಕ್ಕದ್ದು. +ಆರ್ಥಿಕ ಶೋಷಣೆಯ ವಿರುದ್ಧ ರಕ್ಷಣೆ ಭಾರತ ಸಂಯುಕ್ತ ಸಂಸ್ಥಾನವು ಈ ಕೆಳಗಿನ ವಿಧಿಗಳನ್ನು ತನ್ನ ಸಂವಿಧಾನದ ಭಾಗವೆಂದು ಘೋಷಿಸತಕ್ಕದ್ದು. + ಇತರೆ ಕೈಗಾರಿಕೆಗಳನ್ನು ನಡೆಸಲು ಅವಶ್ಯವಾದ ಮೂಲ ಕೈಗಾರಿಕೆಗಳು, ಹಾಗೂ ಮುಂದೆ ಮೂಲ ಕೈಗಾರಿಕೆಗಳಿಂದ ನಡೆಯತಕ್ಕದ್ದು. +ಮೂಲ ಕೈಗಾರಿಕೆಗಳಲ್ಲದೆ ಅತ್ಯಾವಶ್ಯಕ ಕೈಗಾರಿಕೆಗಳು ಸರ್ಕಾರದ ಒಡೆತನಕ್ಕೆ ಸೇರತಕ್ಕದ್ದು. +ಅವುಗಳನ್ನು ಸರ್ಕಾರವೇ ಆಗಲಿ ಅಥವಾ ಸರ್ಕಾರ ಸ್ಥಾಪಿಸುವ ನಿಗಮಗಳಿಂದ ನಡೆಸತಕ್ಕದ್ದು. +ಜೀವವಿಮೆ ಸರ್ಕಾರಿ ಸ್ವಾಮ್ಯದಲ್ಲಿದ್ದು ಶಾಸಕಾಂಗ ನಿಗದಿಪಡಿಸಿದಂತೆ ಪ್ರತಿಯೊಬ್ಬ ವಯಸ್ಕನಿಂದಲೂ ಅವನ ದುಡಿಮೆಯನ್ನನುಸರಿಸಿ ಸರ್ಕಾರ ಜೀವವಿಮೆ ಮಾಡಿಸತಕ್ಕದ್ದು. +ಕೃಷಿ ಒಂದು ಸರ್ಕಾರಿ ಕೈಗಾರಿಕೆಯಾಗಿರತಕ್ಕದ್ದು. +ಖಾಸಗಿಯವರ ಅಧೀನದಲ್ಲಿರುವ ಕೈಗಾರಿಕೆ, ವಿಮೆ, ಕೃಷಿಭೂಮಿಗಳನ್ನು ಯಾವುದೇ ಅವರ ಸ್ವಂತದ್ದಾಗಿರಲಿ, ಗೇಣಿಯಾಗಿರಲಿ, ಭೋಗ್ಯದಲ್ಲಿರಲಿ, - ಸರ್ಕಾರ ಡಿಬೆಂಚರ್‌ ರೂಪದಲ್ಲಿ ಯೋಗ್ಯ ಪರಿಹಾರ ನೀಡಿ ಅವುಗಳ ಮೇಲೆ ಸೂಕ್ತ ಹಕ್ಕು ಪಡೆಯಬೇಕು. +ಆದರೆ ಭೂಮಿಗೆ ಕೊಡುವ ಪರಿಹಾರದ ಮೊತ್ತ ನಿಗದಿ ಮಾಡುವಾಗ ಅದರ ಪ್ರಾಮುಖ್ಯ,ಏರಬಹುದಾದ ಬೆಲೆ ಮುಂತಾದವುಗಳಿಗೆ ಯಾವುದೇ ವಿಶೇಷ ಗಮನ ಕೊಡತಕ್ಕದ್ದಲ್ಲ. +ಈ ಡಿಬೆಂಚರ್‌ ರೂಪದ ಪರಿಹಾರವನ್ನು ನಗದು ರೂಪದಲ್ಲಿ ಡಿಬೆಂಚರ್‌ದಾರ ಯಾವಾಗ ಪಡೆಯಬೇಕೆನ್ನುವುದನ್ನು ಸರ್ಕಾರವೇ ತೀರ್ಮಾನಿಸತಕ್ಕದ್ದು. +ಈ ಡಿಬೆಂಚರ್‌ಗಳ ವರ್ಗಾವಣೆಗೆ ಮತ್ತು ವಾರಸುದಾರಿಕೆಗೆ ಆಸ್ಪದವಿರತಕ್ಕದ್ದು. +ಆದರೆ ರಾಷ್ಟೀಕೃತ ಕೈಗಾರಿಕೆಗಳಿಂದ ಡಿಬೆಂಚರ್‌ ವರ್ಗಾವಣೆ ಪಡೆದುಕೊಂಡವರಿಗಾಗಲಿ,ವಾರಸುದಾರಿಕೆ ಪಡೆದುಕೊಂಡವರಿಗಾಗಲಿ, ಭೂಮಿಯನ್ನು ಪಡೆಯುವ, ಬಡ್ಡಿ ಪಡೆಯುವ,ಅಥವಾ ಅದರ ಮೇಲೆ ಯಾವುದೇ ರೀತಿಯ ಹಕ್ಕು ಚಲಾಯಿಸುವ ಅಧಿಕಾರವಿರುವುದಿಲ್ಲ. +ಸರ್ಕಾರಿ ಕಾನೂನಿನನ್ವಯ ಡಿಬೆಂಚರ್‌ದಾರ ನಿಗದಿತ ಬಡ್ಡಿಯನ್ನು ನಗದು ರೂಪದಲ್ಲಿ ಅಥವಾ ಸರ್ಕಾರದ ತೀರ್ಮಾನದಂತೆ ಇನ್ನಾವುದೇ ರೂಪದಲ್ಲಿ ಪಡೆಯಬಹುದು. +ಕೃಷಿ ಕೈಗಾರಿಕೆಯನ್ನು ಈ ಕೆಳಕಂಡಂತೆ ವ್ಯವಸ್ಥೆಗೊಳಿಸಬೇಕು. +ಸರ್ಕಾರ ಸ್ವಾಧೀನಪಡಿಸಿಕೊಂಡ ಭೂಮಿಯನ್ನು ನಿಗದಿತ ಪ್ರಮಾಣದಲ್ಲಿ ವಿಭಾಗಿಸಿ ಗ್ರಾಮನಿವಾಸಿಗಳು ಈ ಕೆಳಕಂಡ ನಿಬಂಧನೆಗಳ ರೀತ್ಕಾ ಗೇಣಿದಾರರಂತೆ ಬೇಸಾಯಮಾಡಲು ಬಿಟ್ಟು ಕೊಡತಕ್ಕದ್ದು. +ಸಾಮೂಹಿಕ ವ್ಯವಸಾಯ ಪದ್ಧತಿಯಂತೆ ಆ ಭೂಮಿಯನ್ನು ಸಾಗುವಳಿ ಮಾಡತಕ್ಕದ್ದು. +ಸರ್ಕಾರದ ಕಾನೂನು ಮತ್ತು ನಿರ್ದೇಶನದಂತೆ ಭೂಸಾಗುವಳಿ ಪಡೆಯತಕ್ಕದ್ದು. +ಉತ್ಪಾದನೆಯ ಖರ್ಚು ಮುಂತಾದ್ದನ್ನು ಬಿಟ್ಟು ಗೇಣಿದಾರರು ಉತ್ಪನ್ನದಲ್ಲಿ ನಿಗದಿಯಾಗಿ ಪಾಲು ಪಡೆಯತಕ್ಕದ್ದು. +ಭೂಮಾಲೀಕ, ಗೇಣಿದಾರ, ಭೂಹೀನ ಕೃಷಿಕಾರ್ಮಿಕ ಎಂಬ ವ್ಯತ್ಯಾಸವಿಲ್ಲದಂತೆ ಜಾತಿ ಆಧಾರಿತ ತಾರತಮ್ಯವಿಲ್ಲದಂತೆ, ಎಲ್ಲ ಗ್ರಾಮಸ್ಥರಿಗೂ ಭೂಮಿಯನ್ನು ಕೃಷಿಗೆ ಬಿಟ್ಟುಕೊಡತಕ್ಕದ್ದು. +ಸಾಮೂಹಿಕ ಕೃಷಿಗೆ ಬೇಕಾಗುವ ಹಣ, ಮತ್ತಿತರ ಅನುಕೂಲತೆಗಳಾದ ನೀರು,ದನ, ಉಪಕರಣಗಳು, ಗೊಬ್ಬರ, ಬೀಜ ಇತ್ಯಾದಿಯನ್ನು ಒದಗಿಸುವುದು ಸರ್ಕಾರದಹೊಣೆ. +ಸಾಮೂಹಿಕ ಕೃಷಿ ಭೂಮಿಯ ಉತ್ಪನ್ನದ ಮೇಲೆ ಸರ್ಕಾರಕ್ಕೆ ಈ ಕೆಳಕಂಡ ಅಧಿಕಾರವಿರುತ್ತದೆ. + ಭೂ ಕಂದಾಯಕ್ಕಾಗಿ ಒಂದು ಪಾಲು ತೆಗೆದಿಡತಕ್ಕದ್ದು. +ಸರ್ಕಾರಿ ಡಿಬೆಂಚರ್‌ ಹೊಂದಿದವರಿಗೆ ಸಾಲ ತೀರಿಸುವ ಸಲುವಾಗಿ ಮತ್ತೊಂದು ಪಾಲು ತೆಗೆದಿಡತಕ್ಕದ್ದು . + ಸರ್ಕಾರ ತಾನು ಒದಗಿಸಿದ ಬಂಡವಾಳವನ್ನು ವಾಪಸು ಪಡೆಯುವಂತಾಗಬೇಕು . +ಕಾನೂನುಗಳನ್ನು ಧಿಕ್ಕರಿಸಿದವರಿಗೆ, ಗೇಣಿಯ ನಿಬಂಧನೆಗಳನ್ನು ಮುರಿದು,ಸರ್ಕಾರ ಕೊಟ್ಟ ಬಂಡವಾಳವನ್ನು ಸದುಪಯೋಗಪಡಿಸಿಕೊಳ್ಳದೆ ಸಾಮೂಹಿಕ ಕೃಷಿಯ ಯಶಸ್ಸಿನ ವಿರುದ್ಧ ನಡೆದುಕೊಳ್ಳುವವರಿಗೆ ದಂಡನೆ ವಿಧಿಸಲು ಸರ್ಕಾರಕ್ಕೆ ಅಧಿಕಾರವಿರತಕ್ಕದ್ದು. + ಸಾಮೂಹಿಕ ಕೃಷಿ ಯೋಜನೆಯನ್ನು ಆದಷ್ಟು ಬೇಗ ಜಾರಿಗೊಳಿಸಬೇಕು. + ಆದರೆ, ಸಂವಿಧಾನ ಜಾರಿಗೆ ಬಂದ ಹತ್ತು ವರ್ಷ ಅವಧಿಯೊಳಗೆ ಅದು ಜಾರಿಯಾಗತಕ್ಕದ್ದೇ ಹೊರತು ಯಾವುದೇ ಕಾರಣಕ್ಕಾಗಿ ಆ ಅವಧಿಯನ್ನು ವಿಸ್ತರಿಸಲಾಗದು. +ಅಲ್ಪಸಂಖ್ಯಾತರ ರಕ್ಷಣೆಗಾಗಿ ನಿಯಮಗಳು :ಭಾರತ ಸಂಯುಕ್ತ ಸಂಸ್ಥಾನದ ಈ ಕೆಳಗಿನ ನಿಯಮಗಳನ್ನು ಪಾಲಿಸತಕ್ಕದ್ದು. +ಕೋಮು ಕಾರ್ಯಾಂಗದ ವಿರುದ್ಧ ರಕ್ಷಣೆ :ಕೇಂದ್ರದ ಅಥವಾ ರಾಜ್ಯದ ಕಾರ್ಯಾಂಗದ ಶಾಸನ ಸಭೆಯು ಅವಧಿಗೆ ಮುನ್ನವೇ ತನ್ನ ಅಧಿಕಾರ ಕಳೆದುಕೊಳ್ಳತಕ್ಕದ್ದಲ್ಲ ಅನ್ನುವ ಅರ್ಥದಲ್ಲಿ ಅದು ಸಂಸತ್ತಿಗೆ ಅತೀತವಾಗಿರುತ್ತದೆ. + ಕಾರ್ಯಾಂಗದ ಸದಸ್ಯರು, ಶಾಸಕಾಂಗದ ಸದಸ್ಯರಲ್ಲದಿದ್ದರೂ ಅವರಿಗೆ ಶಾಸನ ಸಭೆಯಲ್ಲಿ ಭಾಗವಹಿಸುವ, ಮಾತನಾಡುವ, ಮತಹಾಕುವ, ಪ್ರಶ್ನೆಗಳಿಗೆ ಉತ್ತರ ಕೊಡುವ ಅಧಿಕಾರವಿರತಕ್ಕದ್ದು. + ಶಾಸಕಾಂಗದ ಸದಸ್ಯರೆಲ್ಲರೂ ಸೇರಿ ವರ್ಗಾವಣೆಯಾಗಬಹುದಾದ ಏಕಮಾತ್ರ ಮತ ಚಲಾಯಿಸಿ ಪ್ರಧಾನ ಮಂತ್ರಿಯನ್ನು ಆರಿಸತಕ್ಕದ್ದು. +ಸಚಿವ ಸಂಪುಟದಲ್ಲಿರಬೇಕಾದ ವಿವಿಧ ಅಲ್ಪಸಂಖ್ಯಾತರ ಪ್ರತಿನಿಧಿಗಳನ್ನು ಆಯಾ ವರ್ಗಗಳಿಗೆ ಸೇರಿದ ಶಾಸಕರು ವರ್ಗಾವಣೆಯಾಗಬಲ್ಲ ಏಕಮಾತ್ರ ಮತ ಚಲಾಯಿಸಿ ಚುನಾಯಿಸತಕ್ಕದ್ದು. + ಸಚಿವ ಸಂಪುಟದಲ್ಲಿರಬೇಕಾದ ಬಹುಸಂಖ್ಯಾತ ವರ್ಗಗಳ ಸದಸ್ಯರನ್ನು ಶಾಸಕಾಂಗದ ಎಲ್ಲ ಸದಸ್ಯರೂ ವರ್ಗಾವಣೆಯಾಗಬಲ್ಲ ಏಕಮಾತ್ರ ಮತ ಚಲಾಯಿಸಿ ಚುನಾಯಿಸತಕ್ಕದ್ದು. +ಸಚಿವ ಸಂಪುಟದ ಸದಸ್ಯನೊಬ್ಬ ಶಾಸನ ಸಭೆಯ ಖಂಡನೆಗೊಳಗಾಗಿಯೂ ಮತ್ತು ಇತರ ಕಾರಣಗಳಿಗಾಗಿಯೊ ರಾಜೀನಾಮೆ ನೀಡಬಹುದು. +ಆದರೆ ಭ್ರಷ್ಟನೆಂದೊ ಅಥವಾ ಪಿತೂರಿಗಾರನೆಂದೊ ದೋಷಾರೋಪನೆ ಮಾಡಿ ಸಭೆ ತೀರ್ಮಾನಿಸದೆ ಯಾರನ್ನೂ ಸಂಪುಟದಿಂದ ತೆಗೆಯತಕ್ಕದ್ದಲ್ಲ. +ಸಾಮಾಜಿಕ ಮತ್ತು ಅಧಿಕಾರಿಗಳ ಶೋಷಣೆಯ ವಿರುದ್ಧ ಅಲ್ಪಸಂಖ್ಯಾತರ ವ್ಯವಹಾರಗಳ ಅಧೀಕ್ಷಕನೆಂಬ ಅಧಿಕಾರಿಯೊಬ್ಬರನ್ನು ನೇಮಿಸತಕ್ಕದ್ದು. +ಈ ಅಧೀಕ್ಷಕ ಹುದ್ದೆ ೧೯೩೫ ರ ಸಂವಿಧಾನದ ಕಲಂ ೧೬೬ ರ ಮೇರೆಗೆ ನೇಮಕ ಮಾಡಲ್ಪಟ್ಟ ಲೆಕ್ಕ ಪತ್ರ ಪರಿಶೋಧಕನ ಅಂತಸ್ತಿಗೆ ಸಮಾನವಾಗಿರತಕ್ಕದ್ದು. +ಸರ್ವೋಚ್ಛ ನ್ಯಾಯಾಯಲದ ನ್ಯಾಯಾಧೀಶನೊಬ್ಬನನ್ನು ವಜಾ ಮಾಡುವ ರೀತಿಯಲ್ಲಲ್ಲದೆ ಬೇರೆರೀತಿಯಲ್ಲಿ ಆ ವ್ಯಕ್ತಿಯನ್ನು ವಜಾ ಮಾಡಲಾಗದು. +ಅಲ್ಬಸಂಖ್ಯಾತರ ಕಲ್ಯಾಣ ಕಾರ್ಯ, ಸರ್ಕಾರ, ಕೇಂದ್ರ-ರಾಜ್ಯಗಳು ಅವರನ್ನು ನಡೆಸಿಕೊಳ್ಳುವರೀತಿ, ಯೋಜನೆಗಳ ಜಾರೀಕರಣ ಅಥವಾ ದುರುಪಯೋಗ. + ಸರ್ಕಾರ ಮತ್ತು ಅಧಿಕಾರಿಗಳಿಂದ ಅವರಿಗಾಗಬಹುದಾದ ಅನ್ಯಾಯ ಇತ್ಯಾದಿಗಳನ್ನು ಕುರಿತಂತೆ ಸಮಗ್ರ ವಾರ್ಷಿಕ ವರದಿಯನ್ನು ಅಧೀಕ್ಷಕ ತಯಾರಿಸತಕ್ಕದ್ದು. + ಈ ವಾರ್ಷಿಕ ವರದಿಯನ್ನು ಕೇಂದ್ರ - ರಾಜ್ಯಗಳ ಶಾಸನಸಭೆಯಲ್ಲಿ ಮಂಡಿಸತಕ್ಕದ್ದು. +ಸಂಸತ್ತು - ಶಾಸನ ಸಭೆಗಳಲ್ಲಿ ವರದಿಯ ಚರ್ಚೆಗೆ ಸರ್ಕಾರಗಳು ಸಾಕಷ್ಟು ಸಮಯಾವಕಾಶ ಕಲ್ಪಿಸತಕ್ಕದ್ದು. +ಸಮಾಜದ ಬಹಿಷ್ಕಾರದ ವಿರುದ್ಧ ರಕ್ಷಣೆ :ಕೆಳಗೆ ವ್ಯಾಖ್ಯಾನಿಸಿರುವ ಮೇರೆಗೆ, ಸಾಮಾಜಿಕ ಬಹಿಷ್ಕಾರ, ಅದಕ್ಕೆ ಕೊಡುವ ಕುಮ್ಮಕ್ಕು, ಪ್ರೇರೇಪಣೆ,ಬಹಿಷ್ಕಾರದ ಬೆದರಿಕೆ ಮುಂತಾದವನ್ನು ಅಪರಾಧವೆಂದು ಪರಿಗಣಿಸತಕ್ಕದ್ದು. +ಬಹಿಷ್ಕಾರದ ವ್ಯಾಖ್ಯಾನ : ವ್ಯಕ್ತಿಯೊಬ್ಬ ಈ ಕೆಳಕಂಡ ಸಂದರ್ಭಗಳಲ್ಲಿ ಮತ್ತೊಬ್ಬನಿಗೆ ಬಹಿಷ್ಕಾರ ಹಾಕಿದ ತಪ್ಪಿತಸ್ಥನಾಗುತ್ತಾನೆ. +(ಎ) ಸಾಮಾನ್ಯವಾಗಿ ಎಲ್ಲರ ವಿಷಯದಲ್ಲಿಯೂ ನಡೆಯುವಂತೆ ವರ್ತಿಸದೆ ಮನೆ,ಜಮೀನುಗಳನ್ನು ಬಾಡಿಗೆಗೆ, ಉಪಯೋಗಕ್ಕೆ ನಿರಾಕರಿಸಿದಾಗ, ಬಾಡಿಗೆಗೆ ಕೆಲಸಮಾಡಲು ಒಪ್ಪದಿರುವಾಗ ಅಥವಾ ಮತ್ತೊಬ್ಬನೊಡನೆ ವ್ಯವಹರಿಸದಿದ್ದಾಗ ಒಬ್ಬನಿಂದ ಸಹಾಯ ಪಡೆಯಲು ಅಥವಾ ಆತನಿಗೆ ಸಹಾಯ ಮಾಡಲು ನಿರಾಕರಿಸಿದಾಗ +ಅಥವಾ (ಬಿ) ಮೂಲಭೂತ ಹಕ್ಕುಗಳಿಗೆ ಅಥವಾ ಸಂವಿಧಾನದಲ್ಲಿ ಘೋಷಿಸಿರುವ ಇತರ ನಾಗರಿಕ ಹಕ್ಕುಗಳಿಗೆ ವಿರುದ್ಧವಲ್ಲದ, ಸಮಾಜದ ಪ್ರಚಲಿತ ಸಂಪ್ರದಾಯಗಳನ್ನು ಲಕ್ಷಿಸಿಯೂ ಅಂಥ ವ್ಯಕ್ತಿಯೊಡನೆ ಸಾಮಾನ್ಯವಾಗಿ ಇಟ್ಟುಕೊಳ್ಳಬೇಕಾದ ಸಾಮಾಜಿಕ, ಔದ್ಯೋಗಿಕ ಮತ್ತು ವ್ಯಾವಹಾರಿಕ ಸಂಬಂಧಗಳಿಂದ ವಿಮುಖನಾದಾಗ, +ಅಥವಾ (ಸಿ) ಒಬ್ಬರ ನ್ಯಾಯಬದ್ಧ ಹಕ್ಕುಗಳ ಚಲಾವಣೆಯ ವಿರುದ್ಧ ಪ್ರವೇಶಿಸಿ, ಆತನಿಗೆ ಯಾವುದೇ ತೊಂದರೆಯುಂಟುಮಾಡಿದಾಗ . +ಬಹಿಷ್ಕಾರದ ಅಪರಾಧ: ಯಾರೇ ಆಗಲಿ, ವ್ಯಕ್ತಿಯೊಬ್ಬರು ನ್ಯಾಯಬದ್ಧವಾಗಿ ತಾನು ಮಾಡಬಹುದಾದ ಕೆಲಸ ಮಾಡಿದ ಕಾರಣಕ್ಕಾಗಿ ಅಥವಾ ಕಾನೂನು ರೀತ್ಯಾಮಾಡಬೇಕಾಗಿಲ್ಲದ್ದನ್ನು ಮಾಡದೆ ಬಿಟ್ಟಾಗ ಅಥವಾ ಕಾನೂನು ರೀತ್ಯಾ ಮಾಡಬಾರದ ಕೆಲಸವನ್ನು ಬಲಾತ್ಕಾರದಿಂದ ಮಾಡಿಸಿ, +ಅಥವಾ ಮಾಡಬಹುದಾದ ಕೆಲಸವನ್ನು ಮಾಡದಂತೆತಡೆದು ಅಥವಾ ವ್ಯಕ್ತಿಯೊಬ್ಬರ ದೇಹ, ಮನಸ್ಸು, ಕೀರ್ತಿ, ಅಸ್ತಿ, ಜೀವನ ಮತ್ತು ವ್ಯವಹಾರಕ್ಕೆಕುಂದು ಬರುವಂತೆ ಬಹಿಷ್ಕಾರ ಹಾಕಿ, ಅಥವಾ ಅಂಥ ವ್ಯಕ್ತಿಯ ಹಿತೈಷಿಗಳಿಗೆ ಬಹಿಷ್ಕಾರಹಾಕಿದವರು, ಬಹಿಷ್ಕಾರದ ಅಪರಾಧಕ್ಕೆ ಪಕ್ಕಾಗುತ್ತಾರೆ. +ಬಹಿಷ್ಕಾರಕ್ಕೆ ಪ್ರಚೋದಿಸುವ ಅಥವಾ ಕುಮ್ಮಕ್ಕು ಕೊಟ್ಟ ಅಪರಾಧ:(ಎ) ಯಾರೇ ಆಗಲಿ, ಸಾರ್ವಜನಿಕ ಬಹಿಷ್ಕಾರವನ್ನು ಸೂಚಿಸುವ, ಪ್ರಕಟಿಸುವ ಅಥವಾ ಪ್ರಸಾರ ಮಾಡುವ, ಅಥವಾ(ಬಿ) ಬಹಿಷ್ಕಾರಕ್ಕೆ ಕಾರಣವಾಗುವ, ಆಗಬಲ್ಲ ಯಾವುದೇ ಕೆಲಸ ಮಾಡುವ, ಅಚ್ಚುಮಾಡುವ ಅಥವಾ ಹೇಳಿಕೆಯನ್ನು ಪ್ರಚರಪಡಿಸುವ, ವದಂತಿ ಹಬ್ಬಿಸುವ, +ಅಥವಾ(ಸಿ) ಬೆಲೆ ಯಾವುದೇ ರೀತಿಯಲ್ಲಿ ಯಾವ ವ್ಯಕ್ತಿಯನ್ನಾಗಲಿ, ವರ್ಗವನ್ನಾಗಲಿ ಬಹಿಷ್ಕರಿಸುವಂತೆ ಪ್ರಚೋದಿಸುವವರು ಮತ್ತು ಬೆಂಬಲಿಸುವವರು, ಬಹಿಷ್ಕಾರ ಹಾಕಿದ ತಪ್ಪಿತಸ್ಥರೆಂದು ಪರಿಗಣಿಸತಕ್ಕದ್ದು. +ವಿವರಣೆ : ಬಹಿಷ್ಕಾರಕ್ಕೆ ಒಳಗಾದ, ಒಳಗಾಗಬಹುದಾದ ವ್ಯಕ್ತಿಯ ಅಥವಾ ನೇರವಾಗಿ,ಪ್ರತ್ಯಕ್ಷವಾಗಿ ಕಾಣಿಸದೆ - ಆತನ, ಆ ವರ್ಗದ ಕ್ರಿಯೆ, ನಡತೆ ಅಥವಾ ಅದರ ಇಲ್ಲದಿರುವಿಕೆಯ ಬಗ್ಗೆ ಪ್ರಸ್ತಾಪಿಸಿ, ನಿರ್ದಿಷ್ಟ ರೀತಿಯಲ್ಲಿ ಬಹಿಷ್ಕಾರಕ್ಕೆ ಕಾರಣವಾಗುವವರನ್ನು ಅಪರಾಧಿಗಳೆಂದು ಪರಿಗಣಿಸತ್ಕದ್ದು. +ಬಹಿಷ್ಕಾರದ ಬೆದರಿಕೆ ಹಾಕಿದ ಅಪರಾಧ :ಯಾರೇ ಆಗಲಿ ಕಾನೂನಿನ ರೀತ್ಯಾ ತಾನು ಮಾಡಬಹುದಾದ ಕೆಲಸ ಮಾಡಿದ ಕಾರಣಕ್ಕಾಗಿ,ಅಥವಾ ಕಾನೂನು ರೀತ್ಯಾ ಮಾಡಬೇಕಾಗಿಲ್ಲದ್ದನ್ನು ಮಾಡದೆ ಇದ್ದಾಗ, ಕಾನೂನು ರೀತ್ಯಾಮಾಡಬೇಕಾಗಿಲ್ಲದ್ದನ್ನು ಬಲಾತ್ಕಾರದಿಂದ ಮಾಡಿಸಬೇಕೆಂದು ಮಾಡಿಸಿ +ಅಥವಾ ಮಾಡಬಹುದಾದ ಕೆಲಸವನ್ನು ಮಾಡದಂತೆ ತಡೆದಾಗ, ಅಂಥ ವ್ಯಕ್ತಿಗಳಿಗೆ ಅಥವಾ ಅವರ ಹಿತೈಷಿಗಳಿಗೆ ಬಹಿಷ್ಕಾರದ ಬೆದರಿಕೆ ಹಾಕಿದವರನ್ನು ತಪ್ಪಿತಸ್ಥರೆಂದು ಪರಿಗಣಿಸತಕ್ಕದ್ದು. +ವಿನಾಯಿತಿ - ಈ ಕೆಳಗಿನವು ಬಹಿಷ್ಕಾರವಲ್ಲ. +(೧) ಅಧಿಕೃತ ಕಾರ್ಮಿಕ ವಿವಾದದ ಸಂದರ್ಭದಲ್ಲಿ ಮಾಡಬಹುದಾದ ಕಾರ್ಯ. +(೨) ಸಾಮಾನ್ಯ ವ್ಯಾಪಾರ ಸ್ಪರ್ಧೆಯ ಸನ್ನಿವೇಶದಲ್ಲಿ ಮಾಡಬಹುದಾದ ಕಾರ್ಯ ಈ ಮೇಲ್ಮಾಣಿಸಿದ ಅಪರಾಧಗಳೆಲ್ಲಾ ಮೇಲ್ನೋಟಕ್ಕೆ ಕಾಣುವ ಶಿಕ್ಷಾರ್ಹ ಅಪರಾಧಗಳೆಂದು ಪರಿಗಣಿತವಾಗತಕ್ಕದ್ದು. +ಕೇಂಂದ್ರಶಾಸಕಾಂಗವು ಈ ಅಪರಾಧಗಳಿಗೆ ವಿಧಿಸಬೇಕಾದ ಶಿಕ್ಷೆಯನ್ನುನಿಗದಿಗೊಳಿಸತಕ್ಕದ್ದು. +ಅಲ್ಪಸಂಖ್ಯಾತರ ಕಲ್ಯಾಣವೂ ಸೇರಿದಂತೆ ಕೇಂದ್ರ ಸರ್ಕಾರದ ಯಾವುದೇ ಉದ್ದೇಶಗಳಿಗಾಗಿ ಹಣಖರ್ಚು ಮಾಡುವ ಸರ್ಕಾರಗಳ ಅಧಿಕಾರ ಕೇಂದ್ರ, ರಾಜ್ಯ ಶಾಸಕಾಂಗಗಳ ಕಾನೂನುಗಳ ರೀತ್ಯಾ ಯಾವ ಉದ್ದೇಶಕ್ಕಾಗಿ, ಖರ್ಚು ಮಾಡಬೇಕೆಂಬ ಬಗ್ಗೆ ನಿರ್ದೇಶನವಿರಲಿ - ಇಲ್ಲದಿರಲಿ, ಅಲ್ಪಸಂಖ್ಯಾತರ ಕಲ್ಯಾಣದ ಉದ್ದೇಶದಿಂದ ಹಣ ಮಂಜೂರು ಮಾಡುವ ಕೇಂದ್ರ-ರಾಜ್ಯ ಸರ್ಕಾರಗಳ ಅಧಿಕಾರವನ್ನು ಮೊಟಕುಗೊಳಿಸಲು ಅಥವಾ ಹಿಂತೆಗೆದುಕೊಳ್ಳಲು ಸಾಧ್ಯವಿಲ್ಲ. +ಪರಿಶಿಷ್ಟ ಜಾತಿಗಳಿಗಾಗಿ ಇರುವ ರಕ್ಷಣೆಗಳು: ಖಾತರಿಗಳು (ಗ್ಯಾರಂಟಿಗಳು)ಶಾಸಕಾಂಗದಲ್ಲಿ ಪ್ರಾತಿನಿಧ್ಯದ ಹಕ್ಕು ಭಾರತ ಸಂಯುಕ್ತ ರಾಷ್ಟಗಳ ಸಂವಿಧಾನವು ಪರಿಶಿಷ್ಟಜಾತಿಗಳ ಈ ಕೆಳಗಿನ ಹಕ್ಕುಗಳಿಗೆ ಖಾತರಿ ನೀಡತಕ್ಕದ್ದು. +ಶಾಸಕಾಂಗಗಳಲ್ಲಿ ಪ್ರಾತಿನಿಧ್ಯದ ಹಕ್ಕು(೧) ಪ್ರಾತಿನಿಧ್ಯದ ಪ್ರಮಾಣ ಎ (೧) ಪರಿಶಿಷ್ಟ ಜಾತಿಗಳಿಗೆ ಕೇಂದ್ರ-ರಾಜ್ಯ ಶಾಸಕಾಂಗಗಳಲ್ಲಿ ಕನಿಷ್ಠ ಪ್ರಾತಿನಿಧ್ಯವಿರತಕ್ಕದ್ದು. +ಗುಂಪು ಸಂವಿಧಾನವಿದ್ದ ಪಕ್ಷದಲ್ಲಿ ಗುಂಪು ಶಾಸಕಾಂಗದಲ್ಲಿ ಪರಿಶಿಷ್ಟ ಜಾತಿಗಳ ಜನಸಂಖ್ಯೆಯನ್ನಾಧರಿಸಿ ಅದಕ್ಕೆ ಪ್ರಮಾಣವಾದ ಪ್ರಾತಿನಿಧ್ಯ ಕೊಡಬೇಕು. +ಯಾವುದೇ ಅಲ್ಪಸಂಖ್ಯಾತ ಗುಂಪೂ ತನ್ನ ಜನಸಂಖ್ಯೆಯ ಪ್ರಮಾಣಕ್ಕಿಂತ ಹೆಚ್ಚಿನ ಪ್ರಾತಿನಿಧ್ಯಬೇಕೆಂಬ ಬೇಡಿಕೆಗೆ ಅವಕಾಶ ಕೊಡಕೂಡದು. +(೨) ಸಿಂಧ್‌ ಮತ್ತು ವಾಯವ್ಯ ಪ್ರಾಂತದ ಪರಿಶಿಷ್ಟಜಾತಿಗಳಿಗೆ ಸಲ್ಲಬೇಕಾದ ಪ್ರಾತಿನಿಧ್ಯ ದೊರೆಯತಕ್ಕದ್ದು. +(೩) ಅಪಾರ ಪ್ರಮಾಣದ ಜಾತೀಯ ಬಹುಮತವನ್ನು ತಗ್ಗಿಸಬೇಕಾದ ಅವಶ್ಯಕತೆ ಬಿದ್ದಾಗ,ಅದರ ಬಹುಮತವನ್ನು ತರ್ಕ ಸಮ್ಮತವಾದ ಪ್ರಮಾಣಕ್ಕೆ ತಗ್ಗಿಸಿ, ಯಾವುದೇ ಬೇರೆ ಗುಂಪುಗಳಪ್ರಾತಿನಿಧ್ಯ ಹೆಚ್ಚಿಸತಕ್ಕದ್ದು. +ಆದರೆ ಈ ಕಡಿತವನ್ನು ಯಾವ ಕಾರಣಕ್ಕಾಗಿಯೂ ಅಲ್ಪಸಂಖ್ಯಾತರಿಗೆ ಅನ್ಯಾಯವಾಗುವ ರೀತಿಯಲ್ಲಿ ಮಾಡಲಾಗದು. +(೪) ಹೀಗೆ ಬಹುಮತೀಯರ ಪಾಲಿನ ಸ್ಥಾನವನ್ನು ತಗ್ಗಿಸಿದಾಗ ಸಂಭವಿಸುವ ಹೆಚ್ಚುವರಿ ಸ್ಥಾನಗಳು ಯಾವುದೇ ಒಂದು ಗುಂಪಿಗೆ ಹೋಗತಕ್ಕದ್ದಲ್ಲ. +ಆದರೆ ಈ ಹೆಚ್ಚುವರಿಯಲ್ಲಿ ಎಲ್ಲ ಅಲ್ಪಸಂಖ್ಯಾತರಿಗೂ ಈ ಕೆಳಗಿನ ರೀತ್ಯಾ ಸಮಾನ ಸ್ಥಾನಗಳು ಸಿಕ್ಕತಕ್ಕದ್ದು. + ೧.ಆರ್ಥಿಕ ಸ್ಥಿತಿ ,೨. ಸಾಮಾಜಿಕ ಸ್ಥಾನಮಾನ ಹಾಗೂ ೩. ಶೈಕ್ಷಣಿಕ ಪ್ರಗತಿ. + (ಬಿ) ವಿಶೇಷ ವರ್ಗ ಹಿತಾಸಕ್ತಿಗಳಿಗೆ ಪ್ರಾತಿನಿಧ್ಯವಿರ ತಕ್ಕದ್ದಲ್ಲ. +ಆದರೆ ಪ್ರಾತಿನಿಧ್ಯ ಕೂಡಲೇ ಬೇಕೆಂದಾಗ, ಆ ವಿಶೇಷ ಗುಂಪಿನವರು ಯಾವ ವರ್ಗಕ್ಕೆ ಸೇರಿದವರೊ ಆ ವರ್ಗದ ಪಾಲಿನಿಂದಲೇ ತೆಗೆದು ತುಂಬಬೇಕು. +೨. ಚುನಾವಣಾ ವಿಧಾನ(ಎ) ಶಾಸಕಾಂಗಗಳಿಗೆ. +(ಎ) ಪೂನಾ ಒಪ್ಪಂದದ ಪ್ರಕಾರ ಜಾರಿಯಾದ ಚುನಾವಣಾ ವಿಧಾನವನ್ನು ರದ್ದುಪಡಿಸತಕ್ಕದ್ದು. +(ಬಿ) ಅದರ ಸ್ಥಾನದಲ್ಲಿ ಪ್ರತ್ಯೇಕ ಚುನಾವಣಾ ಪದ್ಧತಿಯನ್ನು ಜಾರಿಮಾಡತಕ್ಕದ್ದು. +(ಸಿ) ವಯಸ್ಕ ಮತದಾನವಿರತಕ್ಕದ್ದು. +(ಡಿ) ಮತದಾರನೊಬ್ಬ ಎಷ್ಟು ಪ್ರತಿನಿಧಿಗಳನ್ನು ಚುನಾಯಿಸಬಹುದೋ ಅಷ್ಟೂ ಜನರಿಗೆ ಅಥವಾ ಅಷ್ಟು ಮತಗಳನ್ನು ಒಬ್ಬನೇ ಪ್ರತಿನಿಧಿಗೆ ಕೊಡಲು ಅವಕಾಶವಿರತಕ್ಕದ್ದು. +(ಬಿ) ಸ್ಥಳೀಯ ಸಂಸ್ಥೆಗಳ ಚುನಾವಣೆಗಳು +:ಕೇಂದ್ರ - ರಾಜ್ಯ ಶಾಸಕಾಂಗಗಳ ಪ್ರತಿನಿಧಿಗಳನ್ನು ಚುನಾಯಿಸುವ ಮತ್ತು ಪ್ರಾತಿನಿಧ್ಯವನ್ನು ನಿಗದಿಗೊಳಿಸುವ ಕ್ರಮವನ್ನೇ ಸ್ಥಳೀಯ ಸಂಸ್ಥೆಗಳ ಚುನಾವಣೆ ಮತ್ತು ಪ್ರಾತಿನಿಧ್ಯದ ಪ್ರಮಾಣದ ವಿಷಯಗಳಲ್ಲೂ ಅನುಸರಿಸತಕ್ಕದ್ದು. +ಸಚಿವ ಸಂಪುಟದಲ್ಲಿ ಪ್ರಾತಿನಿಧ್ಯದ ಹಕ್ಕು ಕೇಂದ್ರ-ರಾಜ್ಯ ಸಂಪುಟದಲ್ಲಿ ಪರಿಶಿಷ್ಟ ಜಾತಿಗಳಿಗೆ ಕನಿಷ್ಠ ಪ್ರಾತಿನಿಧ್ಯವಾದರೂ ಇರತಕ್ಕದ್ದು. +ಗುಂಪು ಸಂವಿಧಾನವಿದ್ದರೆ ಆ ಗುಂಪು ಸಂಪುಟದಲ್ಲೂ ಒಟ್ಟು ಜನಸಂಖ್ಯೆಯಲ್ಲೆ ಪರಿಶಿಷ್ಟ ಜಾತಿಗಳ ಶೇಕಡಾವಾರು ಪ್ರಮಾಣದ ಆಧಾರದ ಮೇಲೆ ಪ್ರಾತಿನಿಧ್ಯವಿರತಕ್ಕದ್ದು. +ಆದರೆ ಯಾವುದೇ ಅಲ್ಪಸಂಖ್ಯಾತ ವರ್ಗವೂ ತನ್ನ ಜನಸಂಖ್ಯೆಯ ಶೇಕಡಾವಾರು ಪ್ರಾತಿನಿಧ್ಯಕ್ಕಿಂತ ಹೆಚ್ಚಿನ ಪ್ರಾತಿನಿಧ್ಯ ಕೇಳಲು ಸಾಧ್ಯವಿರಕೂಡದು. +(೨) ಬಹುಸಂಖ್ಯಾತ ವರ್ಗಗಳ ಅತಿಹೆಚ್ಚಿನ ಬಹುಮತವನ್ನು ತಗ್ಗಿಸುವ ಅವಶ್ಯಕತೆಯಿದ್ದು ತಗ್ಗಿಸಿದಾಗ ಉಳಿಯುವ ಸ್ಥಾನಗಳನ್ನು ಎಲ್ಲ ಅಲ್ಪಸಂಖ್ಯಾತ ವರ್ಗಗಳಿಗೂ ಈ ಕೆಳಗಿನಆಧಾರದ ಮೇಲೆ ಸಮಾನವಾಗಿ ಹಂಚತಕ್ಕದ್ದು. +೧.ಅವರ ಆರ್ಥಿಕ ಪರಿಸ್ಥಿತಿ,೨. ಸಾಮಾಜಿಕ ಸ್ಥಾನಮಾನ ಮತ್ತು ೩. ಶೈಕ್ಷಣಿಕ ಮಟ್ಟ. +ಸರ್ಕಾರಿ ಸೇವೆಯಲ್ಲಿ ಪ್ರಾತಿನಿಧ್ಯದ ಹಕ್ಕು:ಪರಿಶಿಷ್ಟಜಾತಿಗಳಿಗೆ ಸರ್ಕಾರಿ ಸೇವೆಯಲ್ಲಿ ಈ ಕೆಳಕಂಡಂತೆ ಪ್ರಾತಿನಿಧ್ಯವಿರತಕ್ಕದ್ದು. +೧. ಕೇಂದ್ರ ಸರ್ಕಾರದ ಸೇವೆಯಲ್ಲಿ: ಪ್ರಾತಿನಿಧ್ಯ ಪ್ರಮಾಣವು ಭಾರತದ ಒಟ್ಟು ಜನಸಂಖ್ಯೆಯಲ್ಲಿ ಪರಿಶಿಷ್ಟ ಜಾತಿಗಳ ಜನಸಂಖ್ಯೆಯ ಶೇಕಡಾವಾರಿನಷ್ಟಾದರೂ ಇರತಕ್ಕದ್ದು. +೨. ರಾಜ್ಯ ಮತ್ತು ಇತರ ಗುಂಪಿನ ಪ್ರಾಂತ್ಯಗಳ ಸೇವೆಯಲ್ಲಿ: ಆಯಾ ರಾಜ್ಯದ ಅಥವಾ ಭಾರತದಲ್ಲಿನ ಅವರ ಶೇಕಡಾವಾರು ಜನಸಂಖ್ಯೆಯಷ್ಟು. +೩. ಪುರಸಭೆ ಮತ್ತು ಸ್ಥಳೀಯ ಸಂಸ್ಥೆಗಳ ಸೇವೆಗಳಲ್ಲಿ : ಆಯಾ ಪುರಸಭೆ ಸ್ಥಳೀಯ ಸಂಸ್ಥೆಗಳಿರುವ ಪ್ರದೇಶದ ಪರಿಶಿಷ್ಟ ಜಾತಿಗಳ ಶೇಕಡಾವಾರು ಜನಸಂಖ್ಯೆಯಷ್ಟು ಆದರೆ ಯಾವುದೇ ಅಲ್ಪಸಂಖ್ಯಾತ ವರ್ಗವೂ ತನ್ನ ಶೇಕಡಾವಾರು ಜನಸಂಖ್ಯೆಗಿಂತ ಹೆಚ್ಚಿನ ಪ್ರಾತಿನಿಧ್ಯ ಕೇಳಬಾರದು +(೨) ಪರಿಶಿಷ್ಟ ವರ್ಗಗಳ ಸೇವೆಯಲ್ಲಿನ ಶೇಕಡಾವಾರು ಪ್ರಾತಿನಿಧ್ಯವನ್ನು, ಅರ್ಹತೆ, ವಿದ್ಯೆ, ವಯಸ್ಸುಗಳ ಕಾರಣಗಳಿಲ್ಲದೆ ಕಡಿತಗೊಳಿಸತಕ್ಕದ್ದಲ್ಲ. +(೩) ಭಾರತ ಸರ್ಕಾರದ ೧೯೪೨, ೧೯೪೫ ನೆಯ ಇಸವಿಯ ಕಾಯಿದೆಗಳು ಪರಿಶಿಷ್ಟ ಜಾತಿಗಳ ಸೇವಾ ಪ್ರವೇಶಕ್ಕೆ ಸಂಬಂಧಿಸಿದಂತೆ ನಿಗದಿಗೊಳಿಸಿರುವ ರಿಯಾಯಿತಿಗಳನ್ನಾಗಲಿ,ನಿಯಮಗಳನ್ನಾಗಲಿ ರದ್ದುಪಡಿಸಲು ಸಾಧ್ಯವಿಲ್ಲ. +(೪) ನೇಮಕಾತಿ ವಿಧಾನ ಮತ್ತು ಕಾಯಿದೆಗಳು ಭಾರತ ಸರ್ಕಾರದ ೧೯೪೨ ಮತ್ತು ೧೯೪೫ರ ತೀರ್ಮಾನದಂತೆ ಇರತಕ್ಕದ್ದು. +(೫) ಹುದ್ದೆಗಳಿಗೆ ನೇಮಕಾತಿ ಮಾಡುವ ಎಲ್ಲ ಆಯೋಗಗಳಲ್ಲೂ ಪರಿಶಿಷ್ಟಜಾತಿಗಳಿಗೆ ಸೇರಿದ ಒಬ್ಬ ಪ್ರತಿನಿಧಿಯಾದರೂ ಇರತಕ್ಕದ್ದು. +ವಿಶೇಷ ಹೊಣೆಗಾರಿಕೆಗಳು:೧.ಪರಿಶಿಷ್ಟ ಜಾತಿಗಳ ಕಲ್ಯಾಣಕ್ಕಾಗಿ ಭಾರತ ಸಂಯುಕ್ತ ಸಂಸ್ಥಾನವು ಈ ಕೆಳಕಂಡ ವಿಶೇಷ ಹೊಣೆಗಾರಿಕೆಗಳನ್ನು ಪೂರೈಸತ್ಕದ್ದು. +ಪರಿಶಿಷ್ಟ ಜಾತಿಗಳ ಉನ್ನತ ವಿದ್ಯಾಭ್ಯಾಸದ ಪೂರೈಕೆಗಾಗಿ ಕೇಂದ್ರ-ರಾಜ್ಯ ಸರ್ಕಾರಗಳು ಹಣಕಾಸಿನ ಜವಾಬ್ದಾರಿಯನ್ನು ಹೊರುವುದಲ್ಲದೆ. +ಆಯವ್ಯಯ ಪತ್ರಗಳಲ್ಲಿ ಅದಕ್ಕಾಗಿ ಸಾಕಷ್ಟು ಹಣ ಕಾದಿರಿಸತಕ್ಕದ್ದು. +ಈ ಖರ್ಚು ಎಲ್ಲ ಸರ್ಕಾರಗಳ ವಿದ್ಯಾ ಖಾತೆಯ ಖರ್ಚಿನಲ್ಲಿ ಮೊದಲ ಆದ್ಯತೆ ಪಡೆದಿರತಕ್ಕದ್ದು. +೨.ಪರಿಶಿಷ್ಟ ಜಾತಿಗಳ ಪ್ರಾಥಮಿಕ ಮತ್ತು ಪ್ರೌಢ ವಿದ್ಯಾಭ್ಯಾಸದ ಖರ್ಚಿಗೆ ಹಣ ಕೊಡಿಸುವ ಜವಾಬ್ದಾರಿ ರಾಜ್ಯ ಸರ್ಕಾರಗಳಿದ್ದು ಮತ್ತು ಆಯಾ ರಾಜ್ಯಗಳ ಪರಿಶಿಷ್ಟ ಜಾತಿಗಳಶೇಕಡಾವಾರು ಜನಸಂಖ್ಯೆಯ ಪ್ರಮಾಣದಷ್ಟು ಹಣವನ್ನು ತಮ್ಮ ಆಯವ್ಯಯಗಳಿಂದ ಈ ಬಾಬ್ತಿಗಾಗಿ ಖರ್ಚು ಮಾಡತಕ್ಕದ್ದು. +೩. ಪರಿಶಿಷ್ಟ ಜಾತಿಗಳು ಹೊರದೇಶಗಳಲ್ಲಿ ವಿದ್ಯಾರ್ಜನೆಗಾಗಿ ಮಾಡುವ ಖರ್ಚಿನ ಜವಾಬ್ದಾರಿ ಕೇಂದ್ರ ಸರ್ಕಾರದ್ದು. + ಹಾಗೂ ಕೇಂದ್ರ ಆಯವ್ಯಯ ಪತ್ರದಲ್ಲಿ ಈ ಬಾಬ್ತಿಗಾಗಿ ವಾರ್ಷಿಕ ರೂ.೧ಂ ಲಕ್ಷವನ್ನು ಕಾದಿರಿಸತಕ್ಕದ್ದು. +ರಾಜ್ಯಸರ್ಕಾರಗಳು ಎಲ್ಲರ ಪ್ರಾಥಮಿಕ ವಿದ್ಯಾಭ್ಯಾಸಕ್ಕಾಗಿ ಖರ್ಚು ಮಾಡುವ ಹಣದಿಂದ ಈ ವಿಶೇಷ ಧನ ಮಂಜೂರಾತಿಗಳು ಹೊರತಾದುವು ಮತ್ತು ವಿಶೇಷವಾದುವೆಂದೇ ಪರಿಗಣಿಸಬೇಕು. +ರಕ್ಷಣಾ ಸೌಲಭ್ಯಗಳ ಮಂಜೂರಾತಿ ಮತ್ತು ಈ ಸೌಲಭ್ಯಗಳ ತಿದ್ದುಪಡಿರಕ್ಷಣೆಗಾಗಿ ಸವಲತ್ತುಗಳು . +ಭಾರತ ಸಂವಿಧಾನವು ಈ ಕೆಳಕಂಡ ಸೌಲಭ್ಯಗಳನ್ನು ಒಳಗೊಂಡಿರುತ್ತದೆ. +ಕಲಮು ೪ ರಲ್ಲಿ ನಮೂದಿಸಲಾಗಿರುವ ಎಲ್ಲ ಸವಲತ್ತುಗಳನ್ನು ಸಂವಿಧಾನ ಒಳಗೊಂಡಿರತಕ್ಕದ್ದು ಮತ್ತು ಅದು ಭಾರತ ಸಂವಿಧಾನ ಕಾಯ್ದೆಯ ಒಂದು ಭಾಗವಾಗಿರತಕ್ಕದ್ದು. +ಈ ಕೆಳಕಂಡ ರೀತಿಯಲ್ಲಿ ಅಲ್ಲದೆ, ಪರಿಶಿಷ್ಟ ಜಾತಿಗಳಿಗಿರುವ ಸವಲತ್ತುಗಳ ತಿದ್ದುಪಡಿಯಾಗಲಿ. +ಬದಲಾವಣೆಯಾಗಲಿ, ರದ್ದತಿಯಾಗಲಿ ಮಾಡತಕ್ಕದ್ದಲ್ಲ. +ಸಂಸತ್ತಿನ ಸದನಗಳಲ್ಲಿ ಹೆಚ್ಚು ಪ್ರಾತಿನಿಧಿಕವಾದ ಮಂಡಲಿ ಈ ಕೆಳಗಿನ ರೀತಿಯಲ್ಲಿ ಮಾತ್ರ ಪರಿಶಿಷ್ಟ ಜಾತಿಗಳಿಗಿರುವ ಸವಲತ್ತುಗಳನ್ನೊಳಗೊಂಡ ಅನುಚ್ಛೇದ ೨ರ ೪ ರ ಯಾವುದೇ ಭಾಗವನ್ನು ತಿದ್ದುಪಡಿ ಮಾಡಲು - ರದ್ದು ಮಾಡಲು ಸಾಧ್ಯ. +(೧) ತಿದ್ದುಪಡಿ ಅಥವಾ ರದ್ಧತಿ ಸೂಚನೆಯನ್ನು ಠರಾವೊಂದರ ರೂಪದಲ್ಲಿ ಮಾತ್ರ ಸಂಸತ್ತಿನ ಮಂಡಲಿಯ ಮಂಡನೆಯಲ್ಲಿ ಮಾಡಲು ಸಾಧ್ಯ. +(೨) ಈ ರೀತಿಯ ಯಾವುದೇ ಠರಾವನ್ನು ಈ ಕೆಳಕಂಡಂತೆ ಅಲ್ಲದೆ ಬೇರೆ ರೀತಿಯಲ್ಲಿ ಮಂಡಿಸಲಾಗದು. + ೧.ಸಂವಿಧಾನ ಜಾರಿಗೆ ಬಂದ ೨೫ ವರ್ಷಗಳ ನಂತರ ಮತ್ತು ೨. ಠರಾವನ್ನು ಮಂಡಿಸುವವರು ಕನಿಷ್ಠ ೬ ತಿಂಗಳು ಮುಂಚಿತವಾಗಿ ಠರಾವಿನ ಬಗ್ಗೆಸದನಕ್ಕೆ ನೋಟೀಸ್‌ ಕೊಟ್ಟ ನಂತರ + (೩) ಇಂಥ ಠರಾವು ಅಂಗೀಕರವಾದ ತಕ್ಷಣ ಶಾಸಕಾಂಗದ ವಿಸರ್ಜನೆಯಾಗಿ ಹೊಸ ಚುನಾವಣೆ ನಡೆಯತಕ್ಕದ್ದು. +(೪) ಹೊಸದಾಗಿ ಚುನಾಯಿತವಾದ ಸಂಸತ್ತಿನ ಸದನದಲ್ಲಿ ಹಿಂದೆ ಅಂಗೀಕೃತವಾದ ಠರಾವನ್ನು ಅದರ ಮೂಲರೂಪದಲ್ಲಿ ಮತ್ತೆ ಮಂಡಿಸಿ ಪರಿಶೀಲಿಸತಕ್ಕದ್ದು. +(೫) ಪ್ರತ್ಯೇಕ ಮತದಾನದ ಮೂಲಕ ಚುನಾಯಿತರಾದ ಪರಿಶಿಷ್ಟ ಜಾತಿಗಳ ಪ್ರತಿನಿಧಿಗಳ ಮೂರನೇಎರಡು ಭಾಗ ಹಾಗೂ ಸದನದ ಮೂರನೇ ಎರಡು ಭಾಗದಷ್ಟು ಪ್ರತಿನಿಧಿಗಳು ಈಠರಾವನ್ನು ಅಂಗೀಕರಿಸದೆ ಅದು ಅಂಗೀಕೃತವಾಯಿತೆಂದು ಪರಿಗಣಿಸತಕ್ಕದ್ದಲ್ಲ. +ದೇಶೀ ಸಂಸ್ಥಾನಗಳಲ್ಲಿ ಪರಿಶಿಷ್ಟ ಜಾತಿಗಳಿಗಾಗಿ ಇರಬೇಕಾದ ರಕ್ಷಣೆಗಳು :ದೇಶೀಸಂಸ್ಥಾನಗಳಲ್ಲಿ ಪರಿಶಿಷ್ಟ ಜಾತಿಗಳಿಗಿರುವ ಸವಲತ್ತುಗಳು ದೇಶೀಯ ಸಂಸ್ಥಾನಗಳು ಈ ಕೆಳಕಂಡ ಷರತ್ತುಗಳೊಡನೆ ಮಾತ್ರ ಒಕ್ಕೂಟಕ್ಕೆ ಸೇರಿಸಿಕೊಳ್ಳುವ ಅವಕಾಶವನ್ನು ಭಾರತ ಸಂವಿಧಾನವು ಕೊಡತಕ್ಕದ್ದು. +ಸಂವಿಧಾನದ ಅನುಚ್ಛೇದ ೨ ಕಲಮು ೪ ಒಳಗೊಂಡಿರುವ ಪರಿಶಿಷ್ಟ ಜಾತಿಗಳಿಗಿರುವ ಎಲ್ಲ ಸವಲತ್ತುಗಳನ್ನು ದೇಶೀಯ ಸಂಸ್ಥಾನಗಳು ಕೊಡತಕ್ಕದ್ದು. +ಸಂಸ್ಥಾನಗಳ ಸಂವಿಧಾನ ಈ ಸವಲತ್ತುಗಳನ್ನು ಒಳಗೊಳ್ಳುವುದರ ಷರತ್ತಿನ ಮೇಲೆ ಮಾತ್ರ ಅವು ಒಕ್ಕೂಟಕ್ಕೆ ಸೇರಲು ಅರ್ಹ. +ವ್ಯಾಖ್ಯಾನ:ಪರಿಶಿಷ್ಟ ಜಾತಿಗಳು ಒಂದು ಅಲ್ಪಸಂಖ್ಯಾತ ವರ್ಗ +೧) ಅನುಚ್ಛೇದ ೨ರ ಉದ್ದೇಶಕ್ಕೆ ಸಂಬಂಧಿಸಿದಂತೆ, ೧೯೩೬ ಪರಿಶಿಷ್ಟ ಜಾತಿಗಳಿಗೆ ಸಂಬಂಧಿಸಿದ ಆಜ್ಞೆಯ ಮೇರೆಗೆ, ೧೯೩೫ ರ ಭಾರತ ಸರ್ಕಾರಿ ಕಾಯ್ದೆಯನ್ವಯ ಪರಿಶಿಷ್ಟ ಜಾತಿಗಳು ಅಲ್ಪಸಂಖ್ಯಾತವೆಂದು ಪರಿಗಣಿತವಾಗತಕ್ಕದ್ದು. +ಪರಿಶಿಷ್ಟ ಜಾತಿಗಳು ಮತ್ತು ವಾಸಸ್ಥಾನದ ಬದಲಾವಣೆ . +೨) ಅನುಚ್ಛೇದ ೨ ರ ಉದ್ದೇಶಕ್ಕಾಗಿ, ಒಂದು ರಾಜ್ಯದಲ್ಲಿ ಪರಿಶಿಷ್ಟ ಜಾತಿ ಎಂದು ಪರಿಗಣಿತವಾಗುವ ಜಾತಿಯೊಂದು ಭಾರತದ ಎಲ್ಲೆಡೆಯೂ ಪರಿಶಿಷ್ಟ ಜಾತಿಯೆಂದೇ ಪರಿಗಣಿತವಾಗತಕ್ಕದ್ದು. +ಪರಿಶಿಷ್ಟ- ೧ ವಿವರಣಾತ್ಮಕ ಟಿಪ್ಪಣಿಗಳು:ಜನವರಿ ೨೨, ೧೯೪೭ ಬುಧವಾರ, ಸಂವಿಧಾನ ರಚನಾಸಭೆಯು ಅಂಗೀಕರಿಸಿದ ಉದ್ದಿಶ್ಯಗಳಠರಾವಿಗೆ ಈ ಪ್ರಸ್ತಾವನೆ ಸಂವಿಧಾನಾತ್ಮಕ ಸ್ವರೂಪ ರೂಪಗಳನ್ನು ಕೊಡುತ್ತದೆ. +ಅನುಚ್ಛೇದ ೧ - ಸೆಷನ್‌ ೧ಖಂಡಗಳು ೧ ರಿಂದ ೪:ಆರುನೂರಕ್ಕೂ ಹೆಚ್ಚು ದೇಶೀ ಸಂಸ್ಥಾನಗಳನ್ನು ಒಕ್ಕೂಟಕ್ಕೆ ಸೇರಿಸಿಕೊಳ್ಳುವ ಕ್ರಮ ಅನೇಕ ಜಟಲ ಪ್ರಶ್ನೆಗಳನ್ನು ಎದುರಿಸಲೇಬೇಕಾಗುತ್ತದೆ. +ಅವುಗಳಲ್ಲಿ ದೇಶೀ ಸಂಸ್ಥಾನಗಳನ್ನು ಒಕ್ಕೂಟಕ್ಕೆ ಸೇರಿಸಿಕೊಳ್ಳುವುದಕ್ಕೆ ಸಂಬಂಧಪಟ್ಟದ್ದೇ ಅತಿ ಜಟಿಲವಾದ ಪ್ರಶ್ನೆ ಪ್ರತಿಯೊಂದು ಸಂಸ್ಥಾನವೂ ತಾನು ಸಾರ್ವಭೌಮರಾಜ್ಯವೆಂದೇ ಹೇಳಿಕೊಂಡು ಒಕ್ಕೂಟಕ್ಕೆ ಸೇರುವ ತನ್ನ ಹಕ್ಕನ್ನೇ ಪ್ರತಿಪಾದಿಸುತ್ತಿದೆ. +ಸಂಸ್ಥಾನದ ಪ್ರದೇಶದ ವಿಸ್ತಾರ, ಜನಸಂಖ್ಯೆ ಪ್ರಮಾಣ, ಆದಾಯ ಮತ್ತು ಸಂಪನ್ಮೂಲಗಳ ದೃಷ್ಟಿಯಿಂದ ದೇಶೀ ಸಂಸ್ಥಾನಗಳಲ್ಲಿ ಬೇರೆ ಬೇರೆ ವರ್ಗಕ್ಕೆ ಸೇರುತ್ತವೆ. +ಒಕ್ಕೂಟಕ್ಕೆ ಸೇರುವ ಪ್ರತಿಯೊಂದು ರಾಜ್ಯಕ್ಕೂ ತನ್ನ ಆಡಳಿತವನ್ನು ತಾನೇ ನಡೆಸುವ, ಶಾಂತಿ-ಶಿಸ್ತುಗಳನ್ನು ಕಾಪಾಡಿಕೊಳ್ಳುವ, ತನ್ನ ಜನರ ಆರ್ಥಿಕ ಪ್ರಗತಿಗೆ ಬೇಕಾದ ಸಂಪನ್ಮೂಲಗಳನ್ನು ಹೊಂದಿರಬೇಕಾದ ಹಾಗೂ ಆಧುನಿಕ ರಾಜ್ಯಾಡಳಿತಕ್ಕೆ ಬೇಕಾದದ್ದನ್ನೆಲ್ಲಾ ಹೊಂದಿರಬೇಕಾದ ಅವಶ್ಯಕತೆ ಸ್ವಯಂವೇದ್ಯವಾಗಿದೆ. +ಇಲ್ಲವಾದಲ್ಲಿ ಭಾರತ ಸಂಯುಕ್ತ ಸಂಸ್ಥಾನದ ಮೇಲೆ ಬಲಹೀನ ರಾಜ್ಯಗಳು ದೊಡ್ಡ ಹೊರೆಯಾಗುತ್ತವೆ. +ಯಾವ ರೀತಿಯಲ್ಲಿಯೂ ಅವು ಸಹಾಯಕವಾಗಲಾರವು. +ತುರ್ತು ಸಮಯಗಳಲ್ಲಿ ಈ ಸಣ್ಣ ಬಲಹೀನ ರಾಜ್ಯಗಳನ್ನು ಕೇಂದ್ರ ಸರ್ಕಾರವು ತನ್ನ ಹಿಡಿತದಲ್ಲಿಟ್ಟುಕೊಳ್ಳಲು ಸಾಧ್ಯವಾಗುವುದಿಲ್ಲ. +ಆದ್ದರಿಂದ ಈ ರಾಜ್ಯಗಳು ಒಕ್ಕೂಟಕ್ಕೆ ಸೇರಲು ಇರುವ - ಇರಬೇಕಾದ ಅರ್ಹತೆಯ ಬಗ್ಗೆ ಕೂಲಂಕುಷವಾಗಿ ವಿಚಾರಮಾಡದೆ ಸೇರಲು ಅವಕಾಶ ಕೊಟ್ಟರೆ ಅದು ಭಯಂಕರ ತೊಂದರೆಗಳಿಗೆ ಆಹ್ವಾನಕೊಟ್ಟಂತೆ, ಈ ಅಪಾಯದ ನಿವಾರಣೆಗಾಗಿ ಸಂವಿಧಾನದ ವಿಧಿ - ೨ ದೇಶೀ ಸಂಸ್ಥಾನಗಳನ್ನು ಎರಡು ವರ್ಗಗಳಲ್ಲಿ ವಿಭಾಗಿಸುತ್ತದೆ. +೧. ಅರ್ಹ ದೇಶೀಸಂಸ್ಥಾನಗಳು ೨. ಅರ್ಹತೆಯಿಲ್ಲದ ದೇಶೀ ಸಂಸ್ಥಾನಗಳು ಒಕ್ಕೂಟಕ್ಕೆ ಸೇರಿಕೊಳ್ಳುವ ಮೊದಲ ಹಂತವಾಗಿ ದೇಶೀಸಂಸ್ಥಾನಗಳ ಪಟ್ಟಿಯೊಂದನ್ನು ತಯಾರಿಸಲು ಈ ವಿಧಿಯು ಅವಕಾಶ ಮಾಡಿಕೊಡುತ್ತದೆ. +ಭಾರತ ಸಂವಿಧಾನದ ತಾತ್ವಿಕ ತಳಹದಿಯ ಮೇಲೆ ರಚಿಸಿದ ಸರ್ಕಾರವುಳ್ಳ, ಮೇಲಿನ ಅರ್ಹತೆಗಳನ್ನು ಹೊಂದಿದ ರಾಜ್ಯವೊಂದು ಸಂಸತ್‌ ರಚಿಸುವ ವಿಧೇಯಕದ ಮೇರೆಗೆ ಒಕ್ಕೂಟ ಸೇರಲು ಹಾಕಿದ ಅರ್ಜಿಯನ್ನು ಪರಿಶೀಲಿಸಿ. + ಅದು ಸರಿಯೆಂದು ತೀರ್ಮಾನವಾದ ಮೇಲೆ ಆ ರಾಜ್ಯವನ್ನು ಒಕ್ಕೂಟಕ್ಕೆ ಸೇರಿಸಿಕೊಳ್ಳಬಹುದು. +ಅರ್ಹತೆಯಿಂದ ರಾಜ್ಯಗಳ ಪ್ರದೇಶಗಳನ್ನು ಒಕ್ಕೂಟದ ಪ್ರದೇಶಗಳೆಂದೇ ಪರಿಗಣಿಸತಕ್ಕದ್ದು . + ಭಾರತ ಸರ್ಕಾರವು ಆ ಪ್ರದೇಶಗಳನ್ನು ಸೂಕ್ತ ರಾಜ್ಯಗಳನ್ನಾಗಿ ವಿಂಗಡಿಸಬಹುದು. +ಈ ಅವಧಿಯಲ್ಲಿ ಆಯಾರಾಜ್ಯಗಳ ರಾಜರು ಭಾರತ ಸಂವಿಧಾನದ ಉಸ್ತುವಾರಿಯಲ್ಲಿ ತಮ್ಮ ರಾಜ್ಯಗಳ ಆಡಳಿತ ನಡೆಸತಕ್ಕದ್ದು. +ಬ್ರಿಟಿಷ್‌ ಆಧಿಪತ್ಯದ ಪ್ರಾಂತವಾಗಲಿ - ದೇಶೀ ರಾಜ್ಯಗಳ ಪ್ರದೇಶವಾಗಲಿ, ಒಕ್ಕೂಟಕ್ಕೆ ಸೇರಿರಲಿ ಅಥವಾ ಸೇರದಿರಲಿ ಎಲ್ಲವೂ ಭಾರತದಲ್ಲಿ ಅಂತರ್ಗತವಾದ ಪ್ರದೇಶಗಳೆಂದೇ ಪರಿಗಣಿತವಾಗಿದ್ದು ಅಧಿನಿಯಮ೪ ರ ರಾಜ್ಯವೊಂದು ಒಕ್ಕೂಟ ಸೇರಿದ ನಂತರ ಅದರ ಏಕತೆ ಸಮಗ್ರತೆಯನ್ನು ಉಳಿಸತಕ್ಕದ್ದು. +ಅಧಿನಿಯಮ ೪ ರಲ್ಲಿ ವಿವರಿಸಿರುವಂತೆ ಅಲ್ಲದೆ ಅದರ ವಿಭಜನೆಗೆ ಅವಕಾಶವಿಲ್ಲ. +ಅನುಚ್ಛೇದ ೧ - ಸೆಷನ್‌ ೨ಖಂಡ ೧ ಮತ್ತು ೨ಗಡಿಯಲ್ಲಿರುವ ಸ್ವತಂತ್ರ ರಾಜ್ಯಗಳನ್ನು ಒಕ್ಕೂಟಕ್ಕೆ ಸೇರಿಸಿಕೊಳ್ಳಲು ಅನುಚ್ಛೇದ ೧ ಅವಕಾಶವೀಯುತ್ತದೆ. +ಆದರೆ ಆ ರಾಜ್ಯಗಳು ಒಕ್ಕೂಟ ಸೇರಲು ಬಯಸಿದಲ್ಲಿ ಮಾತ್ರ ಇದು ಸಾಧ್ಯವಾಗುತ್ತದೆ. +ಭಾರತ ಒಕ್ಕೂಟವು ಪ್ರಾಂತಗಳನ್ನು ವಶಕ್ಕೆ ತೆಗೆದುಕೊಳ್ಳಲು, ತನ್ನೊಳಗೆ ವಿಲೀನಗೊಳಿಸಿಕೊಳ್ಳಲು ಅಥವಾ ಪ್ರತ್ಯೇಕ ಪ್ರಾಂತವೆಂದು ಪರಿಗಣಿಸಲು ಅನುಚ್ಛೇದ ೨ ಅವಕಾಶ ಮಾಡಿಕೊಡುತ್ತದೆ. +ಅನುಚ್ಛೇದ ೨ - ಸೆಷನ್‌ ೧ ಸಂವಿಧಾನವು ಮೂಲಭೂತ ಹಕ್ಕುಗಳನ್ನು ಒಳಗೊಂಡಿರಬೇಕು ಎನ್ನುವ ಬಗ್ಗೆ ವಿವಾದವಿರಲುಸಾಧ್ಯವಿಲ್ಲ. +ಈ ಹಕ್ಕುಗಳ ಅವಶ್ಯಕತೆಯ ಬಗ್ಗೆ ಹಿಂದಿನ ಮತ್ತು ಹೊಸ ಸಂವಿಧಾನಗಳು ಸಾರಿ ಹೇಳಿವೆ. +ಭಾರತದ ಪರಿಸ್ಥಿತಿಗೆ ಸಂವಾದಿಯಾಗಿರುವ, ವಿವಿಧ ದೇಶಗಳ ಸಂವಿಧಾನಗಳಿಂದ ಈ ವಿಧಿಯಲ್ಲಿರುವ ಮೂಲಭೂತ ಹಕ್ಕುಗಳನ್ನು ಹಕ್ಕು ತೆಗೆದುಕೊಳ್ಳಲಾಗಿದೆ. +ಅನುಚ್ಛೇದ ೨ - ಸೆಷನ್‌ ೨ಖಂಡ ೧ಹಕ್ಕುಗಳನ್ನು ಚಲಾಯಿಸುವಾಗ ಎದುರಾಗುವ ಸಮಸ್ಯೆಗಳ ಪರಿಹಾರಗಳನ್ನೂ ಒಳಗೊಂಡಿದ್ದಾಗ ಮಾತ್ರ ಅವು ನಿಜಹಕ್ಕುಗಳೆನಿಸಿಕೊಳ್ಳುತ್ತವೆ. +ಒಬ್ಬ ವ್ಯಕ್ತಿಯ ಹಕ್ಕುಗಳು ಅತಿಕ್ರಮಣಕ್ಕೊಳಗಾದಾಗ, ಆತ ಕಾನೂನಿನ ರೀತ್ಯ ಪರಿಹಾರ ಪಡೆಯಲು ಸಾಧ್ಯವಿಲ್ಲವೆಂದಾದರೆ ಅಂಥ ವ್ಯಕ್ತಿಗೆ ಹಕ್ಕುಗಳನ್ನು ದಯಪಾಲಿಸಿಯೂ ಉಪಯೋಗವಿಲ್ಲ. +ಪರಿಣಾಮವಾಗಿ, ಸಂವಿಧಾನವು ಹಕ್ಕುಗಳನ್ನು ನೀಡುವಾಗ,ಅವುಗಳ ಅತಿಕ್ರಮಣವನ್ನು ತಡೆಯಲು ಶಾಸಕಾಂಗ ಮತ್ತು ಕಾರ್ಯಾಂಗಗಳಿಗೆ ಅವಕಾಶ ಕಲ್ಪಿಸುವುದು ಅಗತ್ಯವಾಗುತ್ತದೆ. +ಈ ಕಾರ್ಯವನ್ನು ಸಾಮಾನ್ಯವಾಗಿ ನ್ಯಾಯಾಂಗಕ್ಕೆ ವಹಿಸಲಾಗುತ್ತದೆ. +ನ್ಯಾಯಾಲಯಗಳನ್ನು ಸಂವಿಧಾನವು ನೀಡಿರುವ ಹಕ್ಕುಗಳ ವಿಶೇಷ ರಕ್ಷಕನೆಂದು ನೇಮಿಸಲಾಗುತ್ತದೆ. +ಈ ಖಂಡವು ಇದಕ್ಕಿಂತ ಹೆಚ್ಚಿನದೇನನ್ನೂ ಮಾಡುವುದಿಲ್ಲ. +ಕಾರ್ಯಾಂಗವು ತನ್ನ ಪ್ರಾಧಿಕಾರವನ್ನು ದುರುಪಯೋಗಪಡಿಸಿಕೊಂಡು ಜನರನ್ನು ಪೀಡಿಸುವ ವಿರುದ್ಧ ವಿಚಾರಣೆ ನಡೆಸಲು ನ್ಯಾಯಾಂಗಕ್ಕೆ ಈ ಖಂಡವು ಕೇಂದ್ರ ಅಧಿಕಾರಗಳನ್ನು ನೀಡುತ್ತದೆ. + ಈ ಅಧಿಕಾರವು ರಿಟ್‌ಗಳನ್ನು ಜಾರಿಮಾಡುವ ರೂಪದಲ್ಲಿರುತ್ತವೆ. +ಉಚ್ಛ ನ್ಯಾಯಾಲಯಗಳು ಭಾರತ ಸರ್ಕಾರದ ಹೆಸರಿನಲ್ಲಿ ಈ ಅಧಿಕಾರ ಹೊಂದಿರುತ್ತದೆ. +ಈ ನಿಯಮಗಳು ಎರಡು ಮಿತಿಗಳಿಗೆ ಒಳಪಟ್ಟಿರುತ್ತವೆ. +ಮೊದಲನೆಯದಾಗಿ ಪ್ರಾಂತೀಯ ಉಚ್ಚನ್ಯಾಯಾಲಯಗಳಿಗೆ ಮಾತ್ರ ಭಾರತ ಸರ್ಕಾರದ ಹೆಸರಿನಲ್ಲಿ ಈ ಅಧಿಕಾರವಿರುತ್ತದೆ; + ಎಲ್ಲ ಕೋರ್ಟುಗಳಿಗೂ ಇರುವುದಿಲ್ಲ. +ಎರಡನೆಯದಾಗಿ ಈ ಅಧಿಕಾರವು ಭಾರತದ ಶಾಸಕಾಂಗದ ಕಾನೂನಿನ ಪರಿಧಿಯೊಳಗೆ ಇರುತ್ತದೆ. +ಮೂರನೆಯದಾಗಿ ತೊಂದರೆಗೊಳಗಾದ ವ್ಯಕ್ತಿಗೆ ೧೯೩೫ ರ ಸರ್ಕಾರಿ ಕಾಯ್ದೆಯು ಕೊಡುವ ರಕ್ಷಣೆ ಸೀಮಿತವಾದದ್ದು ಮತ್ತು ಕಡಿಮೆ ಎನ್ನಿಸಬಹುದು. +ಆದ್ದರಿಂದ ಈ ವಿಧಿಯು ಎರಡು ಉದ್ದೇಶಗಳನ್ನು ಪೂರೈಸುತ್ತದೆ. +(೧) ಇಂಗ್ಲಿಷ್‌ ಕಾನೂನಿನ ವಿಶೇಷ ಅಧಿಕಾರದ ರಿಟ್‌ನಂತೆ ಈ ವಿಧಿ ನ್ಯಾಯಾಂಗಕ್ಕೆ ಸಂಪೂರ್ಣ ಅಧಿಕಾರ ಕೊಡುತ್ತದೆ. +(೨) ಯಾವುದೇ ವಿಧದಲ್ಲಿಯೂ ಶಾಸಕಾಂಗವು ಈ ಹಕ್ಕುಗಳನ್ನು ಉಲ್ಲಂಘಿಸದ ಹಾಗೆ ನಿಯಂತ್ರಿಸುತ್ತದೆ. +ಭಾರತದಂಥ ಜಾತಿಗಸ್ತ ಮನಸ್ಸಳ್ಳ ಒಂದು ಪರಿಸರದಲ್ಲಿ ಅಧಿಕಾರದಲ್ಲಿರುವವರು ತಮ್ಮ ಜಾತಿಯವರಲ್ಲದವರ ಬಗ್ಗೆ ತಾರತಮ್ಯ ಮಾಡುವುದಿಲ್ಲವೆಂದು ಭಾವಿಸುವುದು ಕಷ್ಟ. +ಈ ಪರಿಸರದಲ್ಲಿ ಅಸ್ಪಶ್ಯರನ್ನು ನಡೆಸಿಕೊಳ್ಳುವುದಂತೂ ಅತಿನಿಕೃಷ್ಣವಾಗಿ. +ಹಿಂದೂ ಅಧಿಕಾರಿಗಳು ಅಸ್ಪಶ್ಯಯ್ಯರನ್ನು ನಡೆಸಿಕೊಳ್ಳುವ ಬಗ್ಗೆ ೫ ನೇ ನವೆಂಬರ್‌ ೧೮೯೨ ನೇ, ಸಂಖ್ಯೆ ೭೨೩ ಮದ್ರಾಸ್‌ ಸರ್ಕಾರದ ಕಂದಾಯ ಮಂಡಳಿಯ ನಡಾವಳಿ ಒಂದು ಸ್ಪಷ್ಟ ಚಿತ್ರಣ ನೀಡುತ್ತದೆ. +ಆ ವರದಿ ಹೇಳುತ್ತದೆ. +"೧೩೪ ಇಲ್ಲಿಯವರೆಗೆ ಅಸ್ಪಶ್ಯರ ಮೇಲೆ ನಡೆಯುತ್ತಿದ್ದ ವಿವಿಧ ರೀತಿಯ ದಬ್ಬಾಳಿಕೆಗಳ ಸ್ವರೂಪ ಮಾತ್ರ ತಿಳಿದಿತ್ತು ಅದನ್ನು ಸ್ವಲ್ಪ ವಿವರಿಸುವ ಅಗತ್ಯ ಇದೆ. +ಪಾರಯ್ಯ ಜನರನ್ನು ಶಿಕ್ಷಿಸಲು ಅವರ ಯಜಮಾನರು - +(೧) ಅವರ ಮೇಲೆ ಗ್ರಾಮ ಪಂಚಾಯಿತಿ ಅಥವಾ ಕ್ರಿಮಿನಲ್‌ ಕೋರ್ಟುಗಳಲ್ಲಿ ಸುಳ್ಳು ಕೇಸುಗಳನ್ನು ಹಾಕುತ್ತಾರೆ. +(೨) ಸರ್ಕಾರಕ್ಕೆ ಅರ್ಜಿ ಸಲ್ಲಿಸಿ ಪಾರಯ್ಯ ಕೇರಿಗಳ ಸುತ್ತ ಇರುವ ಹಾಲಿ ಜಮೀನನ್ನು ಮಂಜೂರು ಮಾಡಿಸಿಕೊಂಡು ಅವರ ದನಕರುಗಳನ್ನು ಮುಟ್ಟುಗೋಲು ಹಾಕಿಕೊಳ್ಳುವುದು, ಅಥವಾ ಅವರು ದೇವಸ್ಥಾನಕ್ಕೆ ಹೋಗುವ ದಾರಿಗೆ ಅಡ್ಡಬಂದು ತೊಂದರೆ ಕೊಡುವುದು. +(೩) ಪಾರಯ್ಯ ಕೇರಿಗಳಿರುವ ಪ್ರದೇಶವನ್ನು ಮಿರಾಸಿದಾರರು ತಮ್ಮ ಹೆಸರಿನಲ್ಲಿರುವಂತೆ ತಪ್ಪಾಗಿ ಸೇರಿಸಿಕೊಂಡು ತಗಾದೆ ಮಾಡುವುದು. +(೪) ಪಾರಯ್ಯಗಳ ಗುಡಿಸಿಲುಗಳನ್ನು ಕೆಡವಿ ಅವರ ಮನೆಯ ಅಕ್ಕಪಕ್ಕ ಇರುವ ಬೆಳೆಯನ್ನು ನಾಶಮಾಡುವುದು. +(೫) ಲಾಗಾಯ್ತು ಮಾಡುತ್ತಿದ್ದ ಭೂಮಿಯ ಮೇಲಿನ ಅವರ ಹಕ್ಕು ನಿರಾಕರಿಸುವುದು. +(೬) ಪಾರಯ್ಯಗಳ ಜಮೀನುಗಳಲ್ಲಿನ ಫಸಲನ್ನು ಬಲಾತ್ಕಾರವಾಗಿ ಕಟಾವು ಮಾಡಿ, ಅವರು ಅದನ್ನು ವಿರೋಧಿಸಿದಾಗ ಅವರ ಮೇಲೆ ಕಳ್ಳತನ ಮತ್ತು ದೊಂಬಿಯ ಆಪಾದನೆ ಮಾಡುವುದು. +(೭) ಅವರಿಗೆ ಮೋಸಮಾಡಿ ಸುಳ್ಳು ದಾಖಲಾತಿಗಳನ್ನು ಸೃಷ್ಟಿಸಿ, ಅವರ ನಾಶಕ್ಕೆ ಕಾರಣರಾಗುವುದು. +(೮) ಪಾರಯ್ಯ ಭೂಮಿಗಳಿಗಿರುವ ನೀರಿನ ಆಸರೆಯನ್ನು ತಪ್ಪಿಸುವುದು. +(೯) ಉಪಗೇಣಿದಾರರ ಭೂಮಿಯನ್ನು “ಗೇಣಿ ಬಾಕಿಯಿದೆ” ಎಂಬ ನೆಪದಲ್ಲಿ ಕಾನೂನಿನ ಯಾವ ನಿಯಮವನ್ನೂ ಪಾಲಿಸದೆ ವಶಕ್ಕೆ ತೆಗೆದುಕೊಳ್ಳುವುದು. +“೧೩೫. ಈ ಅನ್ಯಾಯಗಳ ವಿರುದ್ಧ ದೂರು ಕೊಡಲು ಸಿವಿಲ್‌ ಮತ್ತು ಕ್ರಿಮಿನಲ್‌ ನ್ಯಾಯಾಲಯಗಳಿವೆ ಎಂದು ಹೇಳಲಾಗುತ್ತದೆ. +ಕೋರ್ಟುಗಳಿವೆ ನಿಜ. +ಆದರೆ ಭಾರತ ದೇಶ ಕೋರ್ಟು ಮೆಟ್ಟಿಲು ಹತ್ತಬಲ್ಲ ಛಾತಿ ಉಳ್ಳವರನ್ನು ಸೃಷ್ಟಿಸುತ್ತಿಲ್ಲ . +ನ್ಯಾಯಾಲಯಕ್ಕೆ ಹೋಗಲು ಬೇಕಾದ ಹಣ,ಖಟ್ಲೆ ನಡೆಯುವಷ್ಟು ಕಾಲ ಜೀವಿಸಲು ಬೇಕಾದ ಸಂಪತ್ತು ಬೇಕಲ್ಲವೇ ? +ಮೇಲಾಗಿ ಈ ರೀತಿಯ ಬಹಳಷ್ಟು ಕೇಸುಗಳ ಮೊದಲನೆ ಕೋರ್ಟಿನ ಹಂತದಲ್ಲೇ ತೀರ್ಮಾನವಾಗಿ ಬಿಡುತ್ತದೆ. +ಈ ಕೋರ್ಟುಗಳು ಅನೇಕ ವೇಳೆ ಮಹಾಭ್ರಷ್ಟ ಅಧಿಕಾರಿಗಳ ಕೈಯಲ್ಲಿರುತ್ತವೆ. +ಹಾಗೂ ಹಲವಾರು ಕಾರಣಗಳಿಗಾಗಿ ಇವರು ತಮ್ಮ ವರ್ಗಕ್ಕೆ ಸೇರಿದವರಾದ ಭೂಮಾಲಿಕರ ಪರವಾಗಿರುತ್ತಾರೆ. +“೧೩೬. ಈ ಅಧಿಕಾರಿವರ್ಗ ಬೇರೆ ಅಧಿಕಾರಿಗಳ ಮೇಲೆ ಬೀರುವ ಪ್ರಭಾವದ ಬಗ್ಗೆ ಹೆಚ್ಚು ಹೇಳಬೇಕಾದದ್ದೇನೂ ಇಲ್ಲ. +ಭಾರತೀಯ ಅಧಿಕಾರಗಳ ಮೇಲಿನ ಅವರ ಪ್ರಭಾವ ವಿಪರೀತವಾದದ್ದಾದರೆ, ಯೂರೋಪಿಯನ್ನರ ಮೇಲಿನ ಪ್ರಭಾವವಂತೂ ಹೇಳಲಸದಳ. +ಮೇಲಿನಿಂದ - ಕೆಳಗಿನವರೆಗಿನ ಎಲ್ಲ ಆಫೀಸುಗಳನ್ನೂ ಈ ಅಧಿಕಾರಗಳ ಪ್ರತಿನಿಧಿಗಳು ತುಂಬಿರುತ್ತಾರೆ. +ಅವರ ಹಿತಕ್ಕೆ ಧಕ್ಕೆ ತರುವಂಥದ್ದೇನೂ ಆಗಲು ಸಾಧ್ಯವಿಲ್ಲ. +ಆದರೂ ಒಂದು ಕೇಸಿನ ದಾಖಲಾತಿಯಿಂದ ಹಿಡಿದು ಅದರ ತೀರ್ಮಾನವಾಗುವ ಎಲ್ಲ ಹಂತಗಳಲ್ಲೂ ಅಧಿಕಾರಗಳ ಪ್ರಭಾವ ಎಡೆಬಿಡದೆ ನಡೆದೇ ಇರುತ್ತದೆ.” +ಪಂಜಾಬ್‌ ಭೂ ವರ್ಗಾವಣೆಗೆ ಕಾಯ್ದೆಯ ಶಾಸಕಾಂಗವೊಂದು ಅಸ್ಪಶ್ಯರ ಮೇಲೆ ದಬ್ಬಾಳಿಕೆ ನಡೆಸುವುದಕ್ಕೊಂದು ನಿದರ್ಶನ. +ಬಹುಸಂಖ್ಯಾತರ ದಬ್ಬಾಳಿಕೆಯಿಂದ ಹಲವಾರು ಅಲ್ಪಸಂಖ್ಯಾತರು ನರಳುತ್ತಿರಬಹುದು. +ಆದ್ದರಿಂದಲೇ ಭಾರತದ ಎಲ್ಲ ಪ್ರಜೆಗಳಿಗೂ ಕಾನೂನಿನ ರಕ್ಷಣೆ ಮತ್ತು ಪ್ರಯೋಜನ ಸಿಗಬೇಕೆಂಬ ನಿಯಮ ಇರತಕ್ಕದ್ದು. +ಅಮೆರಿಕಾ ಸಂಯುಕ್ತ ಸಂಸ್ಥಾನದ ಕಾಂಗ್ರೆಸ್ಸು ಇದೇ ರೀತಿಯ ನೀಗ್ರೋಗಳ ವಿರುದ್ಧದ ದಬ್ಬಾಳಿಕೆಯ ವಿರುದ್ಧ೧೮೬೬ ಮತ್ತು ೧ ಮಾರ್ಚ್‌ ೧೮೭೫ ರಲ್ಲಿ ಪಾಸು ಮಾಡಿದ ನಾಗರಿಕ ಹಕ್ಕುಗಳ ರಕ್ಷಣಾ ವಿಧಿಯಿಂದ ಈ ಕಲಮು ೨ ರ ವಿವರಗಳನ್ನು ತೆಗೆದುಕೊಳ್ಳಲಾಗಿದೆ. +ಮೂಲಭೂತ ಹಕ್ಕುಗಳು ನಿಜವಾಗಿರಬೇಕಾದರೆ ಪಕ್ಷಪಾತ - ತಾರತಮ್ಯ ಎಂಬ ಪಿಡುಗಿನ ವಿರುದ್ಧ ಅವುಗಳನ್ನು ರಕ್ಷಿಸಬೇಕು. +ಅದೂ ಕೂಡ ತಾರತಮ್ಯ ಪಕ್ಷಪಾತಗಳ ತವರೂರಾಗಿರುವ ಮತ್ತು ಅವುಗಳನ್ನು ಅವ್ಯಾಹಕವಾಗಿ ನಡೆಸಲು ಆಸ್ಪದವಿರುವ ಭಾರತದಂಥ ರಾಷ್ಟ್ರದ ಸಾಮಾಜಿಕ ಪರಿಸರದಲ್ಲಿ ಮೂಲಭೂತ ಹಕ್ಕುಗಳಿಗೆ ಯಾವುದೇ ಅರ್ಥವಿರಲು ಸಾಧ್ಯವಿಲ್ಲ. +ಅಮೆರಿಕಾದ ಕಾಂಗ್ರೆಸ್ಸು ಇತ್ತೀಚೆಗೆ,ನೀಗ್ರೋಗಳನ್ನು ತಾರತಮ್ಯ - ಪಕ್ಷಪಾತದಿಂದ ರಕ್ಷಿಸಲು ಜಾರಿಮಾಡಿದ ಮಸೂದೆಯನ್ನು ಇಲ್ಲಿ ಅನುಸರಿಸುವ ಅಗತ್ಯವಿದೆ. +ಈ ಅಧಿನಿಯಮದ ಹಿಂದಿನ ಉದ್ದೇಶವಿಷ್ಟು: ಸರ್ಕಾರ ಉದ್ಯಮಕ್ಕೂ ಅವಕಾಶ ನಿರಾಕರಿಸಿದೆ. +ಅತ್ಯಂತ ಹೆಚ್ಚಿನ ಉತ್ಪಾದನೆ ಸಾಧಿಸುವುದು ಮತ್ತು ಅದನ್ನು ಸಮಾನವಾಗಿ ಹಂಚಿಕೆಯಾಗುವಂತೆ ನೋಡಿಕೊಳ್ಳುವುದು. +ಸರ್ಕಾರ ಕೃಷಿಯನ್ನು ಸಹಕಾರಿ ಬೇಸಾಯದ ಮೂಲಕ ನಡೆಸಿ, ಸರ್ಕಾರದ ಅಧೀನದಲ್ಲಿರಿಸಿಕೊಳ್ಳಲು ಮತ್ತು ಕೈಗಾರಿಕಾ ಕ್ಷೇತ್ರದಲ್ಲಿ ಒಂದು ರೀತಿಯ ಆಧುನಿಕತೆ ಸ್ಥಾಪಿಸಲು ಈ ವಿಧಿ ನಿಯೋಜಿಸುತ್ತದೆ. +ಕೃಷಿ ಮತ್ತು ಕೈಗಾರಿಕೆಗಳಿಗೆ ಬೇಕಾದ ಬಂಡವಾಳ ಒದಗಿಸಲು ಹೊಣೆಗಾರಿಕೆಯನ್ನು ಈ ವಿಧಿಯು ಅನಾಮತ್ತಾಗಿ ಸರ್ಕಾರದ ಮೇಲೆ ಹಾಕುತ್ತದೆ. +ಸರ್ಕಾರಿ ಬಂಡವಾಳವಿಲ್ಲದೆ ಭೂಮಿ,ಕೈಗಾರಿಕೆಗಳು ಒಳ್ಳೆಯ ಉತ್ಪನ್ನ ಕೊಡಲು ಸಾಧ್ಯವಿಲ್ಲ. +ಈ ಎರಡು ಉದ್ದೇಶಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ವಿಮೆಯು ಸರ್ಕಾರಿ ಸ್ವಾಮ್ಯದಲ್ಲಿರಬೇಕೆಂದು ಈ ವಿಧಿಯು ಬಯಸುತ್ತದೆ. +ಖಾಸಗಿ ಕಂಪನಿಯೊಂದು ವಿಮಾ ಹಣವನ್ನು ಹಿಂದಿರುಗಿಸಲು ಕೊಡಬಹುದಾದ ಗ್ಯಾರಂಟಿಗಿಂತ ಹೆಚ್ಚಿನ ಗ್ಯಾರಂಟಿಯನ್ನು ಸರ್ಕಾರಕೊಡಬಲ್ಲದು. +ಏಕೆಂದರೆ ಸರ್ಕಾರ ತನ್ನ ಇಡೀ ಸಂಪತ್ತಿನೊಂದಿಗೆ ಅದಕ್ಕೆ ಹೊಣೆಯಾಗಿರುತ್ತದೆ. +ಜೊತೆಗೆ ಸರ್ಕಾರವೂ ತನ್ನ ಆರ್ಥಿಕ ಯೋಜನೆಗಳನ್ನು ಕಾರ್ಯರೂಪಕ್ಕಿಳಿಸಲು ಬೇಕಾದ ಹಣವನ್ನು ವಿಮೆಯಿಂದ ಪಡೆದು ಹೆಚ್ಚು ಬಡ್ಡಿ ವಸೂಲು ಮಾಡುವ ಖಾಸಗಿ ಕ್ಷೇತ್ರದ ಸಾಲದಿಂದ ತಪ್ಪಿಸಿಕೊಳ್ಳಬಹುದು. +ಭಾರತದ ತ್ವರಿತ ಕೈಗಾರಿಕಾ ಅಭಿವೃದ್ಧಿಗೆ ಸರ್ಕಾರದ ಸಾಮ್ಯವಾದಿ ಆರ್ಥಿಕತೆ ಅತ್ಯಗತ್ಯ. +ಖಾಸಗಿ ಬಂಡವಾಳ ಈ ಕೆಲಸವನ್ನು ಮಾಡಲಾರದು. +ಯುರೋಪಿನಲ್ಲಿ ಖಾಸಗಿ ಬಂಡವಾಳ ಈಗಾಗಲೇ ಉಂಟುಮಾಡಿರುವ ಆರ್ಥಿಕ ಅಸಮಾನತೆಗಳು ನಮಗೆ ಅದರ ವಿರುದ್ಧ ಎಚ್ಚರಿಕೆಯ ಮುನ್ಸೂಚನೆಯಾಗಬೇಕು. +ಗೇಣಿ ಕಾಯ್ದೆಗಳಿಂದ ಮತ್ತು ಹಿಡುವಳಿಗಳನ್ನು ಸಂಚಿತಗೊಳಿಸುವ ಕ್ರಮಗಳಿಂದ ಯಾವುದೇ ಪ್ರಯೋಜನವಾಗಲಾರದು. +ಅವು ಕೃಷಿಯನ್ನು ಶ್ರೀಮಂತಗೊಳಿಸಲಾರವು. +ಕೃಷಿ ಕೂಲಿಗಳಾದ ಅಸ್ಪೃಶ್ಯರಿಗಂತೂ ಇದರಿಂದ ಏನೂ ಪ್ರಯೋಜನವಿಲ್ಲ. +ಹಿಡುವಳಿಗಳ ಸಂಚಿತಗೊಳಿಸುವಿಕೆಯಾಗಲಿ -ಗೇಣಿ ಕಾಯ್ದೆಗಳಾಗಲಿ ಆ ಸಮಸ್ಯೆಗೆ ಪರಿಹಾರವಿಲ್ಲ. +ಈ ಖಂಡದಲ್ಲಿ ಸೂಚಿತವಾಗಿರುವಂತೆ ಸಂಘಟಿತವಾಗುವ ಕೃಷಿಕ್ಷೇತ್ರಗಳು ಮಾತ್ರ ಅವರಿಗೆ ಸಹಾಯಕವಾಗಬಲ್ಲವು. +ಅಲ್ಲಿ ಶೋಷಣೆಗೆ ಅವಕಾಶವಿರುವುದಿಲ್ಲ. +ಅದು ಯಾರ ಹಿತಕ್ಕೂ ಅಡ್ಡಿಬರುವುದಿಲ್ಲ. +ಆದ್ದರಿಂದ ಈ ಸೂಚನೆಗೆ ಯಾರ ಪ್ರತಿರೋಧವೂ ಬರುವಂತಿಲ್ಲ. +ಎರಡು ರೀತಿಯಲ್ಲಿ ಈ ಯೋಜನೆ ವಿಶಿಷ್ಟವಾದದ್ದು. +ಒಂದು: ಅದು ಪ್ರಮುಖ ಆರ್ಥಿಕ ಕ್ಷೇತ್ರದಲ್ಲಿ ಪ್ರಭುತ್ವ ಸಮಾಜವನ್ನು ಪ್ರತಿಪಾದಿಸುತ್ತದೆ. +ಎರಡು: ಸರ್ಕಾರಿ ಸಮಾಜವಾದದ ಸ್ಥಾಪನೆಯನ್ನು ಅದು ಶಾಸಕಾಂಗದ ಮರ್ಜಿಗೆ ಬಿಡುವುದಿಲ್ಲ. +ಬದಲಾಗಿ ಸಂವಿಧಾನಾತ್ಮಕ ಕಾನೂನೇ ಸರ್ಕಾರಿ ಸಮಾಜವಾದವನ್ನು ಸ್ಥಾಪಿಸುವಂತೆ ಮಾಡುವುದಲ್ಲದೆ, ಶಾಸಕಾಂಗ ಮತ್ತು ಕಾರ್ಯಾಂಗಗಳು ಈ ಉದ್ದೇಶವನ್ನು ಬದಲಾಯಿಸದಂತೆಯೂ ವಿಧಿಸುತ್ತದೆ. +ಇದನ್ನು ಸಂವಿಧಾನಾತ್ಮಕ ಕಾನೂನು ತಜ್ಞರು ತಕ್ಷಣವೇ ವಿರೋಧಿಸಬಹುದು. +ಈ ಸೂಚನೆ ಮಾಮೂಲಿ ಮೂಲಭೂತ ಹಕ್ಕುಗಳ ವ್ಯಾಪ್ತಿಯನ್ನು ಮೀರುವುದಿಲ್ಲವೇ ? +ಎಂದು ಖಂಡಿತಾ ಪ್ರಶ್ನಿಸುತ್ತಾರೆ. +ನನ್ನ ಉತ್ತರವಿದು: ಇಲ್ಲ - ಅದು ಹಾಗಲ್ಲ. +ಹಾಗೆ ಕಾಣುವವರ ಮೂಲಭೂತ ಹಕ್ಕುಗಳ ಪರಿಕಲ್ಪನೆಯೇ ಸಂಕುಚಿತ ನೆಲೆಯುಳ್ಳದ್ದು. +ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಈ ಸಂಕುಚಿತ ನೆಲೆಯ -ಮೂಲಭೂತ ಹಕ್ಕುಗಳನ್ನು ಮಾತ್ರ ಅಡಕಗೊಳಿಸಿಕೊಳ್ಳುವ ಸಂವಿಧಾನಾತ್ಮಕ ಕಾನೂನಿನ ಕಕ್ಷೆಯೊಳಗೇ ಪ್ರಭುತ್ವ ಸಮಾಜವಾದಕ್ಕೆ ಸಮರ್ಥನೆ ಕಾಣಬಹುದು. +ಕಾನೂನಿನ ಪ್ರಕಾರ ಸಮಾಜವೊಂದರ ಆರ್ಥಿಕ ಸಂರಚನೆಯನ್ನು ನಿರ್ದಿಷ್ಟಗೊಳಿಸುವುದಾದರೂ ಯಾತಕ್ಕೆ ? +ವ್ಯಕ್ತಿಯೊಬ್ಬನ ಸ್ವಾತಂತ್ರವನ್ನು ರಕ್ಷಿಸಿ ಇತರರು ಆತನ ಹಕ್ಕುಗಳ ಮೇಲೆ ಆಕ್ರಮಣ ಮಾಡದಂತೆ ತಡೆಯುವುದು ತಾನೇ ಮೂಲಭೂತ ಹಕ್ಕುಗಳ ಹಿಂದಿನ ಉದ್ದೇಶ ? +ವ್ಯಕ್ತಿ ಸ್ವಾತಂತ್ರ್ಯ ಮತ್ತು ಸಮಾಜದ ಆರ್ಥಿಕ ಸ್ಟರೂಪಗಳ ನಡುವಿನ ಸಂಬಂಧ ಎಲ್ಲರಿಗೂ ಮೇಲ್ನೋಟಕ್ಕೆ ಕಾಣಿಸದಿರಬಹುದು. +ಆದರೆ ಇವೆರಡರ ಸಂಬಂಧ ನಿಜವಾದದ್ದು ಗೋಚರಿಸುತ್ತದೆ. +ಈ ಕೆಳಗಿನ ವಿಚಾರಗಳನ್ನು ಗಮನದಲ್ಲಿಟ್ಟುಕೊಂಡಾಗ ಈ ಸಂಬಂಧ ನಿಚ್ಚಳವಾಗಿದೆ. +ರಾಜಕೀಯ ಜನತಂತ್ರವು ಈ ಕೆಳಗಿನ ನಾಲ್ಕು ತರ್ಕಗಳ ಮೇಲೆ ನಿಂತಿರುತ್ತದೆ. +(೧) ವ್ಯಕ್ತಿ ತನಗೆ ತಾನೇ ವಿಧಾನವೂ, ಗುರಿಯೂ ಹೌದು. +(೨) ವ್ಯಕ್ತಿಯಿಂದ ಬೇರ್ಪಡಿಸಲಾಗದ ಕೆಲವು ನಿರ್ದಿಷ್ಟ ಹಕ್ಕುಗಳಿವೆ ಮತ್ತು ಅವುಗಳನ್ನು ಸಂವಿಧಾನ ರಕ್ಷಿಸತಕ್ಕದ್ದು. +(೩) ಯಾವುದೇ ಸವಲತ್ತನ್ನು ಪಡೆಯುವುದಕ್ಕೆ ಪೂರ್ವ ಷರತ್ತಾಗಿ ವ್ಯಕ್ತಿಯು ತನ್ನ ಸಂವಿಧಾನಾತ್ಮಕ ಹಕ್ಕುಗಳನ್ನು ಬಿಟ್ಟುಕೊಡತಕ್ಕದ್ದಲ್ಲ. +(೪) ಬೇರೆಯವರ ಮೇಲೆ ಅಧಿಕಾರ ನಡೆಸುವ ಅಧಿಕಾರವನ್ನು ಪ್ರಭುತ್ವವು ಖಾಸಗಿ ವ್ಯಕ್ತಿಗಳಿಗೆ ಅಧಿಕಾರವನ್ನು ನಿಯೋಜಿಸತಕ್ಕದ್ದಲ್ಲ. +ಸ್ವಲಾಭಕ್ಕಾಗಿಯೇ ಇರುವ ಹಾಗೂ ಖಾಸಗಿ ಜನರ ನಿಯಂತ್ರಣದಲ್ಲಿರುವ ಸಾಮಾಜಿಕಾರ್ಥಿಕ ವ್ಯವಸ್ಥೆಯ ಕಾರ್ಯವೈಖರಿಯನ್ನು ಅಧ್ಯಯನ ಮಾಡುವವರಿಗೆ ಇಂಥ ವ್ಯವಸ್ಥೆ ಹೇಗೆ ಮೇಲ್ಮಾಣಿಸಿದ ಕೊನೆಯ ಎರಡು ಪ್ರಜಾತಂತ್ರದ ಆಧಾರಸ್ತಂಭಗಳನ್ನು ಧಿಕ್ಕರಿಸಿ ಕಾರ್ಯ ನಿರ್ವಹಿಸುತ್ತದೆ ಎಂದು ಮನವರಿಕೆಯಾಗುತ್ತದೆ. +ಹೊಟ್ಟೆಪಾಡಿಗಾಗಿ ಎಷ್ಟೊಂದು ಜನ ತಮ್ಮ ಸಂವಿಧಾನಾತ್ಮಕ ಹಕ್ಕುಗಳನ್ನು ತ್ಯಾಗ ಮಾಡಬೇಕು ? +ಖಾಸಗಿ ಮಾಲೀಕರ ಕಪಿಮುಷ್ಟಿಯಲ್ಲಿ ಎಷ್ಟು ಜನ ನರಳಬೇಕು ? +ಮೂಲಭೂತ ಹಕ್ಕುಗಳಿಂದ ನಿರುದ್ಯೋಗಿಗಳಿಗೇನಾದರೂ ಪ್ರಯೋಜನವಾಗುವುದೇ ಎಂದು ಅವರನ್ನೆ ಕೇಳಿ. +ಕೆಲಸ ಎಷ್ಟು ಹೊತ್ತು ಮಾಡಬೇಕು ಎಂದು ಹೇಳಿದೆ. +ಕಾರ್ಮಿಕ ಸಂಘ ಸೇರಕೂಡದು. +ಮುಂತಾದ ಪೂರ್ವ ಷರತ್ತುಗಳೊಡನೆ ಕೂಲಿಸಿಗುವ ಒಂದು ಕೆಲಸ ಮತ್ತು ವಾಕ್‌ ಸ್ವಾತಂತ್ರ್ಯ, ಧಾರ್ಮಿಕ ಸ್ಥಾತಂತ್ರ್ಯಗಳಲ್ಲಿ ಯಾವುದನ್ನಾದರೂ ಆಯ್ಕೆ ಮಾಡಿಕೊಳ್ಳಲು ನಿರುದ್ಯೋಗಿಯೊಡನೆ ಹೇಳಿ ನೋಡಿ. +ಅವನ ಆಯ್ಕೆ ಯಾವುದಾಗುತ್ತದೆ ಅನ್ನುವ ಬಗ್ಗೆ ಅನುಮಾನವಿರಲು ಸಾಧ್ಯವೇ ? +ಅದು ಬೇರೆಯಾಗಲು ಹೇಗೆ ಸಾಧ್ಯ? +ಹಸಿವಿನ ಬಾಧೆ, ತಲೆಯ ಮೇಲಿನ ಸೂರೊಂದನ್ನು ಕಳೆದುಕೊಳ್ಳುವ ಭಯ. + ಉಳಿಸಲು ಸಾಧ್ಯವಾಗಬಹುದಾದದ್ದನ್ನು ಕಳೆದುಕೊಳ್ಳುವ ಭಯ. + ಮಕ್ಕಳನ್ನು ಅನಿವಾರ್ಯವಾಗಿ ಶಾಲೆ ಬಿಡಿಸಬೇಕಾಗಬಹುದೆಂಬ ಭಯ. + ಬೇರೆಯವರ ಮೇಲೆ ಹೊರೆಯಾಗಬಹುದು . +ಬೇರೆಯವರುತನ್ನ ಅಂತ್ಯಕ್ರಿಯೆಗಳನ್ನು ಮಾಡಬೇಕಾಗಬಹುದು ಎಂಬ ಭೀತಿ . + ಇವು ಮೂಲಭೂತ ಹಕ್ಕುಗಳನ್ನು ಆಯ್ಕೆಮಾಡಿಕೊಳ್ಳಲು ಮನುಷ್ಯನಿಗೆ ಅವಕಾಶ ಕೊಡುವುದಿಲ್ಲ. +ಕೆಲಸ ಮಾಡಿ ಹೊಟ್ಟೆ ಹೊರಕೊಳ್ಳುವುದಕ್ಕಾಗಿ ನಿರುದ್ಯೋಗಿಳು ಅನಿವಾರ್ಯವಾಗಿ ಮೂಲಭೂತ ಹಕ್ಕುಗಳನ್ನು ಬಿಟ್ಟು ಕೊಡಬೇಕಾಗುತ್ತದೆ. +ಕೆಲಸವಿದ್ದವರ ಪಾಡಾದರೂ ಏನು ? + ಮೂಲಭೂತ ಹಕ್ಕುಗಳು ಜಾರಿಯಾದರೆ ಸಾಕು, ಅವು ಅವರ ಸ್ವಾತಂತ್ರವನ್ನು ರಕ್ಷಿಸುತ್ತವೆ ಎಂದು ಸಂವಿಧಾನ ನ್ಯಾಯವಾದಿಗಳು ತಿಳಿಯುತ್ತಾರೆ. + ಆರ್ಥಿಕ,ಸಾಮಾಜಿಕ ಇತ್ಯಾದಿ ಖಾಸಗಿ ಕ್ಷೇತ್ರಗಳಲ್ಲಿ ಪ್ರಭುತ್ವದ ಹಸ್ತಕ್ಷೇಪವಿಲ್ಲದಿದ್ದರೆ, ಉಳಿಯುವುದೇ ಸ್ವಾತಂತ್ರ್ಯ ಎಂದು ಅವರು ವಾದಿಸುತ್ತಾರೆ. + ಈ ಶೇಷಾಂಶವನ್ನು ಹೆಚ್ಚಿಸಿ ಪ್ರಭುತ್ವದ ಹಸ್ತಕ್ಷೇಪವನ್ನು ಕಡಿಮೆಮಾಡುವುದೇ ಅತ್ಯಗತ್ಯವಾಗಿ ಆಗಬೇಕಾದ್ದು. +ಪ್ರಭುತ್ವದ ಹಸ್ತಕ್ಷೇಪವಿಲ್ಲದಾಗ ಉಳಿಯುವುದೇ ಸ್ವಾತಂತ್ರ್ಯವೆನ್ನುವುದು ನಿಜವೇ. +ಆದರೆ ಇದೊಂದೇ ಅದನ್ನು ಇತ್ಯರ್ಥಗೊಳಿಸಲಾರದು. +ಉತ್ತರಿಸಬೇಕಾದ ಇನ್ನೊಂದು ಪ್ರಶ್ನೆಯೂ ಇದೆ. +ಮೇಲೆ ವಿವರಿಸಿದ ಸ್ವಾತಂತ್ರ್ಯ ಮೇಲ್ನೋಟಕ್ಕೆ ಭೂಮಾಲೀಕರು ಗೇಣಿಹೆಚ್ಚಿಸಲು ಕೂಲಿ ಕಡಿಮೆ ಮಾಡಲು ಇರುವ ಸ್ವಾತಂತ್ರ್ಯವಾಗಿ ಬಿಡುತ್ತದೆ. +ಇದು ಹೀಗೆಯೇ ಇರುತ್ತದೆ. +ಬೇರೆ ರೀತಿಯಾಗಿರಲು ಸಾಧ್ಯವಿಲ್ಲ. +ಏಕೆಂದರೆ ಕಾರ್ಮಿಕ ಸಮೂಹವನ್ನು ತೊಡಗಿಸಿಕೊಂಡು ಹೇರಳ ಉತ್ಪಾದನೆ ಮಾಡುವಂಥ ಅರ್ಥವ್ಯವಸ್ಥೆಯಲ್ಲಿ ಕೆಲಸವನ್ನು ಮತ್ತು ಕೈಗಾರಿಕೆಗಳನ್ನು ಸತತವಾಗಿ ಮುಂದುವರೆಸಿಕೊಂಡು ಹೋಗಲು ಅವಶ್ಯಕವಾದ ಕಾನೂನು - ಕಟ್ಟಳೆಗಳನ್ನು ಯಾರಾದರೊಬ್ಬರು ಮಾಡಲೇಬೇಕಾದ ಅನಿವಾರ್ಯತೆಯಿದೆ. +ಪ್ರಭುತ್ವ ಅದನ್ನು ಮಾಡದಿದ್ದರೆ ಖಾಸಗಿ ಮಾಲೀಕ ಮಾಡುತ್ತಾನೆ. +ಇಲ್ಲದಿದ್ದರೆ ಜೀವನ ದುಸ್ತರವಾಗುತ್ತದೆ. +ಇದನ್ನು ಹೀಗೂ ಹೇಳಬಹುದು. +ಪ್ರಭುತ್ವದ ಹಿಡಿತದಿಂದ ಮುಕ್ತವಾದ ಪರಿಸ್ಥಿತಿ ಖಾಸಗಿ ಮಾಲೀಕರ ಸರ್ವಾಧಿಕಾರವಾಗಿ ಬಿಡುತ್ತದೆ. +ಹೀಗಾಗುವುದನ್ನು ತಡೆಯುವುದಾದರೂ ಹೇಗೆ ? +ಜೀವನದ ಮೂಲಭೂತ ಹಕ್ಕುಗಳಿಂದ ಸ್ವಾತಂತ್ರ್ಯ ಮತ್ತು ಸುಖದ ಅನ್ವೇಷಣೆಯಿಂದ ವಂಚಿತವಾಗದಂತೆ ಉದ್ಯೋಗಿಗಳನ್ನು, ನಿರುದ್ಯೋಗಿಗಳನ್ನು ಹೇಗೆ ರಕ್ಷಿಸುವುದು ? +ರಾಜಕೀಯ ಕ್ಷೇತ್ರದಲ್ಲಿ ಸರ್ಕಾರ ಯದ್ವಾತದ್ವಾ ಕಡಿವಾಣ ಹಾಕುವುದನ್ನು ತಡೆಯಬೇಕಾಗುತ್ತದೆ . +ಆರ್ಥಿಕ ಕ್ಷೇತ್ರದಲ್ಲಿ ಬಲಿಷ್ಠರು ಬಲಹೀನರನ್ನು ಶೋಷಿಸದಂತೆ ತಡೆಯಲು ಶಾಸಕಾಂಗದ ಸಾಮಾನ್ಯ ಅಧಿಕಾರವನ್ನು ಉಪಯೋಗಿಸಿಕೊಳ್ಳಬೇಕಾಗುತ್ತದೆ. +ಇವೇ ಪ್ರಜಾಸತ್ತಾತ್ಮಕ ಸರ್ಕಾರಗಳು ಇದಕ್ಕೆ ಕಂಡುಕೊಂಡಿರುವ ಪರಿಹಾರಗಳು, ಆದರೂ ಈ ಕ್ರಮಗಳು ಅಷ್ಟೇನೂ ಪರಿಣಾಮಕಾರಿಯಲ್ಲವೆಂದು ಸಾಬೀತಾಗಿದೆ. +ಬಲಹೀನರು ಶಾಸಕಾಂಗದ ರಕ್ಷಣೆಯನ್ನು ಯಶಸ್ವಿಯಾಗಿ ಪಡೆಯಬಲ್ಲರೇ ಎನ್ನುವುದು ಅನುಮಾನಾಸ್ಪದ ಸಂಗತಿ. +ವಯಸ್ಕ ಮತದಾನದ ಮೂಲಕ ಚುನಾಯಿತವಾಗುವ ಶಾಸಕಾಂಗಗಳೂ -ಸರ್ಕಾರಗಳೂ ಕೂಡಾ ಬಲಿಷ್ಠರ ಕೈಗೊಂಬೆಗಳೇ ಆಗಿವೆ. +ಹೀಗಿರುವಾಗ ಅವು ಬಲಿಷ್ಠರ ವಿರುದ್ಧ +ಬಲಹೀನರ ಸ್ವಾತಂತ್ರ್ಯವನ್ನೂ ಹಿತಗಳನ್ನು ರಕ್ಷಣೆ ಮಾಡುತ್ತವೆ ಎನ್ನುವುದು ಭ್ರಮೆ. +ಈ ಯೋಜನೆ ಬೇರೊಂದು ಕ್ರಮವನ್ನು ಅನುಸರಿಸುತ್ತದೆ. +ಅದು ಸರ್ಕಾರದ ದಬ್ಬಾಳಿಕೆಯನ್ನೇ ಅಲ್ಲದೆ ಬಲಾಢ್ಯರು ಬಲಹೀನರನ್ನು ಶೋಷಿಸುವುದನ್ನೂ ತಡೆಗಟ್ಟುತ್ತದೆ. +ಆದ್ದರಿಂದ ಈ ಎರಡು ಯೋಜನೆಗಳಲ್ಲಿ ಬಲಿಷ್ಠರ ದಬ್ಬಾಳಿಕೆಯ ವಿರುದ್ಧವೂ ರಕ್ಷಣೆ ನೀಡುವ ಯೋಜನೆ ಸಹಜವಾಗಿಯೇ ಹೆಚ್ಚು ಪರಿಣಾಮಕಾರಿಯಾಗುತ್ತದೆ. +ಈ ವಿವರಣೆಗಳ ಹಿನ್ನಲೆಯಲ್ಲಿ ನೋಡಿದಾಗ ಈ ಯೋಜನೆ ಮೂಲತಃ ವ್ಯಕ್ತಿ ಸ್ವಾತಂತ್ರ್ಯವನ್ನು ಕಾಪಾಡುವ ಮಾಧ್ಯಮವಾಗಿ ಬಿಡುತ್ತದೆ. +ಆದ್ದರಿಂದ ಇದು ಸಂವಿಧಾನಾತ್ಮಕ ಕಾನೂನಿನ ಪರಿಧಿಯನ್ನು ಮೀರಿಹೋಗುತ್ತದೆ ಎಂದು ಯಾವ ಸಂವಿಧಾನ ನ್ಯಾಯವಾದಿಯೂ ತಗಾದೆ ಮಾಡಲಾರ. +ಈ ತನಕ ಈ ಯೋಜನೆ ಕೇವಲ ವ್ಯಕ್ತಿ ಸ್ವಾತಂತ್ರ್ಯವನ್ನು ರಕ್ಷಿಸುವ ಸಾಧನವಾಗಿಯೇ ಪರಿಗಣಿತವಾಗಿದೆ. +ಆದರೆ ಈ ಯೋಜನೆಗೆ ಇನ್ನೊಂದು ಮುಖವೂ ಇದೆ. +ಅದೇ ಪ್ರಜಾಸತ್ತಾತ್ಮಕ ಜನತಂತ್ರವನ್ನು ಧಿಕ್ಕರಿಸದೆ, ಆದರೆ ಅದರ ಮರ್ಜಿಗೂ ಬಿಡದೆ ಪ್ರಭುತ್ವ ಸಮಾಜವಾದವನ್ನು ಸ್ಥಾಪಿಸುವುದು. +ಪ್ರಭುತ್ವ ಸಮಾಜವಾದವನ್ನು ಟೀಕಿಸುವವರು ಮತ್ತು ಅದನ್ನು ಬೆಂಬಲಿಸುವವರು ಒಂದು ಪ್ರಶ್ನೆಯನ್ನು ಕೇಳುತ್ತಾರೆ. +ಪ್ರಭುತ್ವ ಸಮಾಜವಾದವನ್ನು ಸಂವಿಧಾನ್ಮಕ ಕಾನೂನಿನ ಒಂದು ಭಾಗವಾಗಿಸುವ ಅವಶ್ಯಕತೆ ಏನಿದೆ ? +ಸಾಮಾನ್ಯ ಕಾನೂನಿನ ಪ್ರಕ್ರಿಯೆಯಲ್ಲೇ ಶಾಸಕಾಂಗ ಈ ನಿಟ್ಟಿನಲ್ಲಿ ಕೆಲಸ ಮಾಡಲು ಏಕೆ ಬಿಡಬಾರದು? +ಆದರೆ ಇದರ ಅನಿವಾರ್ಯತೆಯನ್ನು ಅರ್ಥ ಮಾಡಿಕೊಳ್ಳುವುದು ಕಷ್ಟದ ಕೆಲಸವೇನಲ್ಲ. +ಯೋಜನೆಗಳನ್ನು ಕೈಬಿಡುವುದಾಗಲಿ ಅಥವಾ ಅಮಾನತ್ತಿನಲ್ಲಿಡುವುದಾಗಲಿ ಯೋಜನಾಬದ್ಧ ವ್ಯವಸ್ಥೆಯ ಯಶಸ್ಸಿಗೆ ಮಾರಕವಾಗುತ್ತದೆ. +ಅದು ಅಖಂಡವಾಗಿ ಮುಂದುವರಿಯಬೇಕಾದದ್ದು. +ಅದನ್ನು ಹೇಗೆ ಅಖಂಡವಾಗಿ ಮುಂದುವರಿಸಿಕೊಂಡು ಹೋಗಬಹುದು ಎನ್ನುವುದೇ ಸಮಸ್ಯೆ. + ಅದನ್ನು ಸಂಸದೀಯ ಪ್ರಜಾಸತ್ತೆ ಎನ್ನಿಸಿಕೊಳ್ಳುವ ವ್ಯವಸ್ಥೆಯಲ್ಲಿ ಪ್ರಜಾಸತ್ತಾತ್ಮಕ ಸರ್ಕಾರವೊಂದು ಮಾಡಲಾಗದು. +ಅಲ್ಲಿ ಶಾಸಕಾಂಗ ಕಾರ್ಯಾಂಗಗಳ ನೀತಿ ತತ್‌ಕ್ಷಣಕ್ಕೆ ಬಹುಮತವಿರುವುದರಿಂದ ರೂಪಗೊಳ್ಳುತ್ತದೆ. +ಒಂದು ಚುನಾವಣೆಯಲ್ಲಿ ಬಹುಮತ ಪಡೆದವರು ಕೃಷಿ - ಕೈಗಾರಿಕೆಗಳಲ್ಲಿ ಪ್ರಭುತ್ವ ಸಮಾಜವಾದದ ಪರವಾಗಿದ್ದು, ಇನ್ನೊಂದು ಚುನಾವಣೆಯಲ್ಲಿ ಗೆದ್ದವರು ಅವರ ವಿರುದ್ಧವಾಗಿದ್ದರೆ, ಎರಡನೆ ಗುಂಪಿನವರು ತಮ್ಮ ಅಧಿಕಾರ ಚಲಾಯಿಸಿ ಮೊದಲಿನ ಗುಂಪಿನವರು ಮಾಡಿದ್ದನ್ನು ತಿರುವು ಮುರುವು ಮಾಡಬಹುದು. +ಇದು ಪುನರಾವರ್ತನೆಯಾಗುವ ಸಾಧ್ಯತೆಯೂ ಇರುತ್ತದೆ. + ಹಾಗಾದಾಗ ಅದಕ್ಕೆ ಕೊನೆ-ಮೊದಲು ಇರುವುದೇ ಇಲ್ಲ. +ಸಮಾಜದ ಆರ್ಥಿಕ ರಚನೆಯು ಪ್ರಭುತ್ವ ಸಮಾಜವಾದದ ತಳಹದಿಯ ಮೇಲೆ ರೂಪುಗೊಳ್ಳಬೇಕೆನ್ನುವವರು ಅದನ್ನು ಸಾಮಾನ್ಯ ಅಧಿಕಾರವನ್ನು ಚಲಾಯಿಸಿ ಮೂಲಭೂತ ಉದ್ದೇಶಕ್ಕೆ ಕೊಡಲಿಪೆಟ್ಟು ಹಾಕಲು ಬಿಡಬಾರದು. +ಈ ಕಾರಣಗಳಿಗಾಗಿ ರಾಜಕೀಯ ಪ್ರಜಾಸತ್ತೆಯೇ ಅಸಮರ್ಥವೆನಿಸುತ್ತದೆ. +ಇದಕ್ಕೆ ಪರ್ಯಾಯವಾದರೂ ಏನು ? +ಸರ್ವಾಧಿಕಾರವೇ ಇದಕ್ಕಿರುವ ಪರ್ಯಾಯ. +ಪ್ರಭುತ್ವ ಸಮಾಜವಾದದ ಯಶಸ್ಸಿಗೆ ಬೇಕಾದ ಸ್ಥಿರತೆಯನ್ನು ಸರ್ವಾಧಿಕಾರಿ ವ್ಯವಸ್ಥೆಯೊಂದು ನೀಡುತ್ತದೆ. +ಇದರಲ್ಲಿ ಸಂಶಯವಿಲ್ಲ. +ಆದರೆ ಸರ್ವಾಧಿಕಾರದ ವಿರುದ್ಧ ಒಂದು ಬಲವತ್ತರವಾದ ತಗಾದೆ ಇದೆ. + ಅದನ್ನೆದುರಿಸಲೇಬೇಕು ವ್ಯಕ್ತಿ ಸ್ವಾತಂತ್ರ್ಯವನ್ನು ಎತ್ತಿ ಹಿಡಿಯುವವರೆಲ್ಲಾ ಸಂಸದೀಯ ಪ್ರಜಾಸತ್ತೆ ಆದರ್ಶಪ್ರಾಯವಾದದ್ದು; + ಆ ಸರ್ಕಾರವೊಂದೇ ಮುಕ್ತ ಸಮಾಜವನ್ನು ನೀಡಬಲ್ಲದ್ದೆಂದು ಸರ್ವಾಧಿಕಾರಿ ವ್ಯವಸ್ಥೆಯನ್ನು ವಿರೋಧಿಸುತ್ತಾರೆ. +ಆದ್ದರಿಂದ ಸ್ವಾತಂತ್ರ್ಯ ಪ್ರಿಯರೆಲ್ಲಾ ಸಂಸದೀಯ ಪ್ರಜಾಸತ್ತೆಯನ್ನು ಬಿಟ್ಟುಕೊಡಲು ಸಿದ್ಧವಿರುವುದಿಲ್ಲ. +ಅವರಿಗೆ ಪ್ರಭುತ್ವ ಸಮಾಜವಾದದಲ್ಲಿ ಎಷ್ಟೇ ಕಾಳಜಿ ಇರಲಿ, ಸಂಸದೀಯ ಪ್ರಜಾಸತ್ತೆಯೊಡನೆ ಸರ್ವಾಧಿಕಾರವನ್ನು - ಬದಲು ಮಾಡಿಕೊಳ್ಳಲು ಸಿದ್ಧರಿರುವುದಿಲ್ಲ. +ಆದ್ದರಿಂದ ಸರ್ವಾಧಿಕಾರವಿಲ್ಲದೆ ಪ್ರಭುತ್ವ ಸಮಾಜವಾದದ ಸ್ಥಾಪನೆ ಹಾಗೂ ಸಂಸದೀಯ ಪ್ರಜಾತಂತ್ರದೊಡನೆ ಪ್ರಭುತ್ವ ಸಮಾಜವಾದದ ಸ್ಥಾಪನೆ - ಇದು ಮುಂದಿರುವ ಸಮಸ್ಯೆ. +ಈ ಇಕ್ಕಟ್ಟನಿಂದ ಪಾರಾಗಲು ಇರುವುದು ಒಂದೇ ದಾರಿ ಎನಿಸುತ್ತದೆ. +ಅದೇ ಸಂಸದೀಯ ಜನತಂತ್ರವನ್ನು ಉಳಿಸಿಕೊಂಡು ಪ್ರಭುತ್ವ ಸಮಾಜವಾದವನ್ನು ಸಂವಿಧಾನದಲ್ಲೇ ಕಾನೂನಾಗಿ ವಿಧಿಸುವುದು. +ಆಗ, ಆ ಕಾನೂನನ್ನು ತೆಗೆದುಹಾಕುವುದಾಗಲಿ ತಿದ್ದುವುದಾಗಲಿ, ಅಮಾನತ್ತಿನಲ್ಲಿಡುವುದಾಗಲಿ, ಸಂಸದೀಯ ಬಹುಮತದ ಅಧಿಕಾರ ವ್ಯಾಪ್ತಿಗೆ ಬರುವುದಿಲ್ಲ. +ಈ ರೀತಿಯಲ್ಲಿ ಮಾತ್ರವೇ - ಸಮಾಜವಾದವನ್ನು ಸ್ಥಾಪಿಸುವ, ಸಂಸದೀಯ ಜನತಂತ್ರವನ್ನು ಉಳಿಸಿಕೊಳ್ಳುವ, ಸರ್ವಾಧಿಕಾರವನ್ನು ನಿವಾರಿಸಿಕೊಳ್ಳುವ - ಮೂರು ಧ್ಯೇಯಗಳೂ ರಾಜಕೀಯ ರಚನೆಯನ್ನು ಮಾತ್ರ ನಿರ್ದಿಷ್ಟಗೊಳಸಿ, ಆರ್ಥಿಕ ರಚನೆಯನ್ನು ತನ್ನಿಷ್ಟಕ್ಕೆ ಬಿಡುವ ಈಗಿನ ಸಂವಿಧಾನದಿಂದ ಮೇಲೆ ವಿವರಿಸಿದ ಸಂವಿಧಾನ ಬೇರೆಯಾಗುತ್ತದೆ. +ಇದರ ಫಲಿತಾಂಶವೆಂದರೆ,ಆರ್ಥಿಕ ರಚನೆಯಿಂದ ರೂಪುಗೊಳ್ಳುವ ಶಕ್ತಿಗಳು ರಾಜಕೀಯ ರಚನೆಯನ್ನು ಪ್ರತಿನಿಧಿಸುವ ಶಕ್ತಿಗಳಿಂದ ಭಿನ್ನವಾಗಿ, ರಾಜಕೀಯ ರಚನೆಯನ್ನು ರಚನಾತ್ಮಕವಾಗಿ ಧಿಕ್ಕರಿಸುವ ಬಲ ಪಡೆಯುತ್ತದೆ. +ಸರ್ವಾಧಿಕಾರವಿಲ್ಲದ ಪ್ರಭುತ್ವವೆ. +ಸಮಾಜವಾದವನ್ನು ಸಂಸದೀಯ ಜನತಂತ್ರದೊಂದಿಗೆ ಬೇಕೆನ್ನುವವರು ಈ ಯೋಜನೆಯನ್ನು ಸ್ವಾಗತಿಸಲೇಬೇಕು. +ಒಬ್ಬ ವ್ಯಕ್ತಿ, ಒಂದೇ ಮೌಲ್ಯ ಎನ್ನುವ ತತ್ವವೇ ಪ್ರಜಾಸತ್ತೆಯ ಆತ್ಮ ಆದರೆ ದುರದೃಷ್ಟವಶಾತ್‌ಒ ಬ್ಬ ವ್ಯಕ್ತಿ ಒಂದು ಮತಕ್ಕೆ ಸೀಮಿತಗೊಳ್ಳುವ ರಾಜಕೀಯ ವ್ಯವಸ್ಥೆಗೆ ಮಾತ್ರ ಪ್ರಜಾಸತ್ತೆ ಇಂಬು ಕೊಟ್ಟಿದೆ. +ತಮಗೆ ತೋಚಿದಂತೆ ಆರ್ಥಿಕ ಸ್ವರೂಪ ರೂಪಿಸುವ ಕೆಲಸವನ್ನು ಅದು ಬಲಾಡ್ಯರಿಗೆ ಬಿಟ್ಟುಕೊಟ್ಟಿದೆ. +ಏಕೆಂದರೆ ಸರ್ಕಾರವನ್ನು ಜನರಿಗೆ ಜವಾಬ್ದಾರಿಗೊಳಿಸುವ ಮತ್ತು ಸರ್ಕಾರ ಜನರನ್ನು ದಮನಗೊಳಿಸದಂತೆ ತಡೆಯುವ ಸಂವಿಧಾನಾತ್ಮಕ ಕಾನೂನನ್ನು ರಚಿಸುವುದೇ ಪ್ರಜಾಪ್ರಭುತ್ವದ ಪರಿಪೂರ್ಣ ಸಂವಿಧಾನವೆಂಬ ಓಬೀರಾಯನ ಕಾಲದ ಕಲ್ಪನೆಗೆ ಸಂವಿಧಾನ ನ್ಯಾಯವಾದಿಗಳು ಅಂಟಿಕೊಂಡಿರುವುದರಿಂದ ಇದೆಲ್ಲ ನಡೆಯುತ್ತಿದೆ. +ಪ್ರಜಾಸತ್ವಾತ್ಮಕವೆನಿಸಿಕೊಳ್ಳುವ ಎಲ್ಲಾ ರಾಷ್ಟ್ರಗಳ ಸಂವಿಧಾನ ಕಾನೂನುಗಳೂ ವಯಸ್ಕ ಮತದಾನ. +ಮೂಲಭೂತ ಹಕ್ಕುಗಳನ್ನು ಕೊಡುವುದರಲ್ಲೇ ತೃಪ್ತಿಪಡೆದಿವೆ. +ವಾಸ್ತವವಾಗಿ ಇದನ್ನು ಮೀರಿಹೋಗಬೇಕಾಗುತ್ತದೆ ಅನ್ನುವ ಅರಿವೇ ಅವರಿಗೆ ಬಂದಿಲ್ಲ. +ಹಳೆಯಕಾಲದ ಸಂವಿಧಾನ ನ್ಯಾಯವಾದಿಗಳು,ರಾಜಕೀಯ ವ್ಯವಸ್ಥೆಯ ರೂಪು-ರೇಷೆಗಳನ್ನು ನಿರ್ಧರಿಸುವುದೇ ಸಂವಿಧಾನಾತ್ಮಕ ಕಾನೂನಿನ ಕೆಲಸವೆಂದು ನಂಬಿದ್ದರು. +ಒಬ್ಬ ವ್ಯಕ್ತಿ ಒಂದು ಮೌಲ್ಯವೆನ್ನುವ ತತ್ವವನ್ನು ಜನತಂತ್ರ ಸಾಕಾರಗೊಳಿಸಲು ಸಾಧ್ಯವಾಗಬೇಕಾದರೆ, ಸಮಾಜದ ಆರ್ಥಿಕ ರಚನೆಯ ರೂಪು-ರೇಷೆಗಳನ್ನು ನಿರ್ಧರಿಸುವುದು ಅನಿವಾರ್ಯವೆಂದು ಅವರೆಂದೂ ಮನಗಾಣಲಿಲ್ಲ. +ಕಾನೂನಿನ್ವಯ ವ್ಯಾಖ್ಯಾನಿಸಬೇಕಾದ ಕಾಲವಂತೂ ಸನ್ನಿಹಿತವಾಗಿದೆ. +ಇತ್ತೀಚೆಗೆ ಸಂವಿಧಾನ ರಚನೆಯ ಹಂತಕ್ಕೆ ಬಂದಿರುವ ಭಾರತದಂಥ ಎಲ್ಲ ರಾಷ್ಟ್ರಗಳೂ,ಇತರ ರಾಷ್ಟ್ರಗಳು ಮಾಡಿರುವ ತಪ್ಪುಗಳನ್ನು ಮಾಡಬೇಕಾಗಿಲ್ಲ. +ಬೇರೆಯವರ ತಪ್ಪುಗಳಿಂದ ಈರಾಷ್ಟ್ರಗಳು ಪಾಠ ಕಲಿತು, ತಿದ್ದುಕೊಳ್ಳಬೇಕು. + ಭಾರತ ಸರ್ಕಾರ ೧೯೧೯ ಮತ್ತು ೧೯೩೫ ರ ಕಾನೂನುಗಳ ಪ್ರಕಾರ ಪ್ರಾಂತ-ಕೇಂದಗಳಲ್ಲಿ ರಚಿಸಲಾದ ಸಚಿವಸಂಪುಟಗಳು (ಕಾರ್ಯಾಂಗ) ಸಂವಿಧಾನ ನ್ಯಾಯವಾದಿಗಳು ಸಂಸದೀಯ ಸಂಪುಟಗಳು ಎಂದು ಕರೆಯುವ ಬ್ರಿಟಿನ್ನಿನ ಮಾದರಿಯವು. +ಅವು ಅಮೆರಿಕಾ ಮಾದರಿಯ - ಸಂಸತ್ತಿನ ಹೊರಗಿನಿಂದಲೂ- ಪ್ರಾತಿನಿಧ್ಯವಿದ್ದ ಸಂಪುಟಗಳಲ್ಲ. +ನಮ್ಮ ಮುಂದಿರುವ ಪ್ರಮುಖ ಪ್ರಶ್ನೆಯೆಂದರೆ - ನಾವು ಅದೇ ಮಾದರಿಯನ್ನು ಉಳಿಸಿಕೊಳ್ಳಬೇಕೇ? +ಅಥವಾ ಬಿಟ್ಟುಕೊಡಬೇಕೇ? ಅನ್ನುವುದು. +ಬಿಟ್ಟರೆ, ಬೇರೆ ಯಾವಮಾದರಿಯ ಸಂಪುಟ ರಚಿಸಿಕೊಳ್ಳಬೇಕು ? +ಅದಕ್ಕೆ ಮುಂಚೆ ಬ್ರಿಟನ್‌ ಮಾದರಿಯ ಸಂಪುಟದ ವೈಶಿಷ್ಟ್ಯವನ್ನು ಅದನ್ನೇ ಇಲ್ಲಿ ಅಳವಡಿಸಿಕೊಂಡರೆ ಹೊಮ್ಮುವ ಸಾಧಕ-ಬಾಧಕಗಳನ್ನೂ ವಿಶ್ಲೇಷಣೆ ಮಾಡುವುದು ಒಳ್ಳೆಯದು. +ಬ್ರಿಟನ್‌ ಮಾದರಿ ಸಂಪುಟದ ವೈಶಿಷ್ಟ್ಯ ಈ ಕೆಳಗಿನಂತಿದೆ. +೧) ಶಾಸಕಾಂಗದಲ್ಲಿ ಬಹುಮತಗಳಿಸುವ ಪಕ್ಷಕ್ಕೆ ಸರ್ಕಾರ ರಚಿಸುವ ಹಕ್ಕು ಇರುತ್ತದೆ. +೨) ಬಹುಮತಗಳಿಂದ ಪಕ್ಷ ತನ್ನ ಪಕ್ಷಕ್ಕೆ ಸೇರದವರನ್ನು ಸರ್ಕಾರದಿಂದ ಹೊರಗಿಡುವ ಅಧಿಕಾರವನ್ನು ಹೊಂದಿರುತ್ತದೆ. +೩) ಹೀಗೆ ರಚಿತವಾದ ಸರ್ಕಾರ ಶಾಸಕಾಂಗದಲ್ಲಿ ತನಗೆ ಬಹುಮತವಿರುವವರೆಗೆ ಅಧಿಕಾರದಲ್ಲಿರುತ್ತದೆ. +ಬಹುಮತ ಕಳೆದುಕೊಂಡ ತತ್‌ಕ್ಷಣ ಅದು ಅದೇ ಶಾಸಕಾಂಗದಿಂದ ರಚಿತವಾಗುವ ಅಥವಾ ಹೊಸ ಚುನಾವಣೆಯ ನಂತರ ರಚಿತವಾಗುವ ಸರ್ಕಾರಕ್ಕೆ ತೆರವುಮಾಡಲು ರಾಜೀನಾಮೆ ಕೊಡಲೇಬೇಕಾಗುತ್ತದೆ. +ಬ್ರಿಟಿಷ್‌ ಮಾದರಿಯನ್ನು ಭಾರತದಲ್ಲಿ ಅನುಸರಿಸಿದರೆ ಉಂಟಾಗುವ ಪರಿಣಾಮಗಳನ್ನು ಈ ಕೆಳಕಂಡಂತೆ ಗುರ್ತಿಸಬಹುದು. +೧) ಬಹುಮತವಿರುವ ಪಕ್ಷದ ಸಚಿವ ಸಂಪುಟದ ಬ್ರಿಟಿಷ್‌ ಮಾದರಿ ಸರ್ಕಾರ, ಅದು ರಾಜಕೀಯ ಬಹುಮತವೆಂಬ ನೆಲೆಯ ಮೇಲೆ ನಿಂತಿರುತ್ತದೆ. +ಭಾರತದಲ್ಲಿ ಬಹುಮತ ಕೋಮು ಆಧಾರಿತವಾದದ್ದು. +ಪಕ್ಷಗಳ ರಾಜಕೀಯ-ಸಾಮಾಜಿಕ ಕಾರ್ಯಕ್ರಮಗಳೇನೇ ಇರಲಿ,ಬಹುಮತವೆನ್ನುವುದು ಕಷ್ಟ ಜಾತ್ಯಾಧಾರಿತ ಬಹುಮತದ ಸ್ವರೂಪ-ಗುಣಗಳನ್ನು ಹೊಂದಿರುತ್ತದೆ. +ಅದು ಬದಲಾಗುವುದು ದುಸ್ಸಾಧ್ಯ. +ಈ ಹಿನ್ನಲೆಯಲ್ಲಿ ನೋಡಿದಾಗ ಬ್ರಿಟಿಷ್‌ ಮಾದರಿಯನ್ನು ಒಪ್ಪಿಕೊಂಡರೆ ಅಧಿಕಾರವನ್ನು ಶಾಶ್ವತವಾಗಿ ಕೋಮುವಾದಿ ಬಹುಮತದ ಕೈಗೆ ಕೊಟ್ಟಂತಾಗುತ್ತದೆ. +೨) ಅಲ್ಪಸಂಖ್ಯಾತರ ಪಕ್ಷಗಳ ಪ್ರತಿನಿಧಿಗಳಿಗೆ ಸಚಿವ ಸಂಪುಟದಲ್ಲಿ ಪ್ರಾತಿನಿಧ್ಯ ಕೊಡಬೇಕೆಂಬ ನಿಯಮವನ್ನೇನೂ ಬ್ರಿಟಿಷ್‌ ಮಾದರಿ ಸರ್ಕಾರ ಬಹುಮತವಿರುವ ಪಕ್ಷದ ಮೇಲೆ ವಿಧಿಸುವುದಿಲ್ಲ. +ಇದನ್ನು ಭಾರತಕ್ಕೆ ಅನ್ವಯಿಸಿದರೆ ಆಗುವ ಪರಿಣಾಮಗಳಂತೂ ಸ್ಪಷ್ಟವಾಗಿಯೇ ಇವೆ. +ಅದು ಬಹುಸಂಖ್ಯಾತ ಕೋಮನ್ನು ಆಳುವ ವರ್ಗವನ್ನಾಗಿಸಿದರೆ, ಅಲ್ಪಸಂಖ್ಯಾತರನ್ನು ಆಳಿಸಿಕೊಳ್ಳುವವರನ್ನಾಗಿಸುತ್ತದೆ. +ಅರ್ಥಾತ್‌, ತನ್ನ ಪ್ರಕಾರ ಅಲ್ಪಸಂಖ್ಯಾತರ ಹಿತಕ್ಕಾಗಿ ಏನು ಮಾಡಬೇಕೆನ್ನಿಸುತ್ತದೋ ಹಾಗೆ ಆಡಳಿತ ನಡೆಸಲು ಈ ಜಾತಿವಾದಿ ಬಹುಮತಕ್ಕೆ ಸ್ವಾತಂತ್ರ್ಯವಿರುತ್ತದೆ. +ಈ ಪರಿಸ್ಥಿತಿಯನ್ನು ಪ್ರಜಾತಂತ್ರವೆಂದು ಕರೆಯಲಾಗದು. +ಅದನ್ನು ಸಾಮ್ರಾಜ್ಯಶಾಹಿಯೆಂದೇ ಕರೆಯಬೇಕಾಗುತ್ತದೆ. +ಮೇಲಿನ ಪರಿಣಾಮಗಳ ಹಿನ್ನೆಲೆಯಲ್ಲಿ ಬ್ರಿಟಿಷ್‌ ಮಾದರಿ ಸಂಪುಟ ರಚನೆಯ ಅಳವಡಿಕೆ ಭಾರತದ ಅಲ್ಪಸಂಖ್ಯಾತರ, ಮತ್ತು ವಿಶೇಷವಾಗಿ ಅಸ್ಪಶ್ಯರ ಪ್ರಾಣಕ್ಕೆ-ಸ್ವಾತಂತ್ರ್ಯಕ್ಕೆ ಮತ್ತು ನೆಮ್ಮದಿಯ ಬಾಕ್ದೆಗೆ ಮಾರಕವಾಗುತ್ತದೆ ಎನ್ನುವುದು ಸುಸ್ಪಷ್ಟವಾಗುತ್ತದೆ. +ಅಸ್ಪಶ್ಯರ ಸಮಸ್ಯೆಯಂತೂ ಅವರು ಎದುರಿಸಲಾಗದಷ್ಟು ಭಯಂಕರವಾದದ್ದು. +ನಾಚಿಕೆ ಬಿಟ್ಟುಎಲ್ಲ ರೀತಿಯ ದೌರ್ಜನ್ಯ ಮತ್ತು ಅಸಮಾನತೆಗಳನ್ನು ಅವರ ಮೇಲೆ ಹೇರುವ, ಅವರನ್ನು ಕಂಡರೆ ಆಗದ ಅಸಂಖ್ಯಾತ ಹಿಂದೂ ಜನವರ್ಗ ಅವರನ್ನು ಸುತ್ತುವರಿದಿದೆ. +ದಿನನಿತ್ಯ ನಡೆಯುವ ಈ ದಬ್ಬಾಳಿಕೆ-ದೌರ್ಜನ್ಯಗಳ ನಿವಾರಣೆಗಾಗಿ ಅವರಿಗೆ ಆಡಳಿತದ ಸಹಾಯ ಬೇಕಾಗುತ್ತದೆ. +ಈ ಆಡಳಿತದ ರಚನೆ ಮತ್ತು ಗುಣವಾದರೂ ಎಂಥವು ? +ಸಂಕ್ಷಿಪ್ತವಾಗಿ ಹೇಳಬೇಕೆಂದರೆ, ಭಾರತದ ಆಡಳಿತ ಸಂಪೂರ್ಣವಾಗಿ ಹಿಂದೂಗಳ ಕೈಯಲ್ಲಿದೆ. +ಅವರ ಸ್ವಾಮ್ಯಕ್ಕೆ ಒಳಪಟ್ಟದೆ. +ಅಡಿಯಿಂದ ಮುಡಿಯವರೆಗೆ ಅದು ಅವರ ಹಿಡಿತದಲ್ಲಿದೆ. +ಅವರ ಹಿಡಿತವಿಲ್ಲದೆ ಯಾವ ಇಲಾಖೆಯೂ ಇಲ್ಲ. +ಪೋಲಿಸ್‌,ನ್ಯಾಯಾಂಗ, ಕಂದಾಯ, ಹಾಗೆ ನೋಡಿದರೆ ಆಡಳಿತದ ಎಲ್ಲ ವಿಭಾಗಗಳೂ ಅವರ ಹಿಡಿತದಲ್ಲೇ ಇವೆ. +ಅವರ ಒಂದೇ ಒಂದು ಉದ್ದೇಶವೆಂದರೆ ಅಸ್ಪಶ್ಯರನ್ನು ಕೀಳಾಗಿ ಕಂಡು, ಅವರನ್ನು ಕಾನೂನಿನ ಸೌಲಭ್ಯಗಳಿಂದ ವಂಚಿಸುವುದಲ್ಲದೆ, ದಬ್ಬಾಳಿಕೆ-ದೌರ್ಜನ್ಯಗಳ ವಿರುದ್ಧ ಕಾನೂನು ಕೊಡುವ ರಕ್ಷಣೆಯಿಂದಲೂ ಅವರನ್ನು ವಂಚಿಸುವುದೇ ಆಗಿದೆ. +ಅತ್ತದರಿ-ಇತ್ತಪುಲಿ ಎಂಬಂತೆ, ಹಿಂದೂ ಜನರ ಮತ್ತು ಹಿಂದೂ ಆಡಳಿತದ ಮಧ್ಯೆ ಅವರು ಇರಬೇಕಾಗಿದೆ. +ಒಬ್ಬ ಅವರ ವಿರುದ್ಧ ದಬ್ಬಾಳಿಕೆ ನಡೆಸಿದರೆ ಇನ್ನೊಬ್ಬ ದಬ್ಬಾಳಿಕೆ ನಡೆಸಿದವರನ್ನು ಶಿಕ್ಷಿಸದೆ ರಕ್ಷಿಸುತ್ತಾನೆ. +ಈ ಹಿನ್ನೆಲೆಯಲ್ಲಿ ಅಸ್ಪಶ್ಯರಿಗೆ ಸ್ವರಾಜ್ಯ ಎಷ್ಟರ ಮಟ್ಟಿಗೆ ಅರ್ಥಪೂರ್ಣವಾಗುತ್ತದೆ ? + ಮತ್ತು ಅದರಿಂದೊದಗುವ ಪ್ರಯೋಜನವಾದರೂ ಏನು ? +ಅದರ ಅರ್ಥವಿಷ್ಣೆ ಈಗ ಅದು ಕೇವಲ ಹಿಂದೂಗಳ ಕೈಲಿರುವ ಆಡಳಿತವಾದರೆ, ಸ್ವರಾಜ್ಯದಲ್ಲಿ ಇದರ ಜೊತೆಗೆ ಶಾಸಕಾಂಗ - ಸಚಿವ ಸಂಪುಟಗಳೂ ಅವರ ಕೈಸೇರುತ್ತವೆ. +ಅಂಥ ಪರಿಸ್ಥಿತಿಯ ಸ್ವರಾಜ್ಯದಲ್ಲಿ ಅಸ್ಪಶ್ಯರ ಕಷ್ಟಕೋಟಲೆಗಳು ಇಮ್ಮಡಿಸುತ್ತವೆ ಅನ್ನುವ ಬಗ್ಗೆ ಅನುಮಾನವೇ ಇಲ್ಲ. +ಯಾಕೆಂದರೆ ವಿರೋಧಿಯಾದ ಆಡಳಿತದ ಜೊತೆಗೆ ಒಂದು ನಿರ್ಲಕ್ಷ್ಯದ ಶಾಸಕಾಂಗವೂ, ಉದಾಸೀನದಿಂದಿರುವ ಕಾರ್ಯಾಂಗವೂ ಸೇರಿಕೊಳ್ಳುತ್ತವೆ. +ಶಾಸಕಾಂಗ ಕಾರ್ಯಾಂಗಗಳ ನಿಯಂತ್ರಣವಿಲ್ಲದ ವಿಷಪೂರಿತ-ಕ್ರೂರ ದಬ್ಬಾಳಿಕೆ ನಡೆಸುವಲ್ಲಿ ಅದು ಪರ್ಯವಸಾನವಾಗುತ್ತದೆ. +ಅದನ್ನೇ ಬೇರೆ ಮಾತುಗಳಲ್ಲಿ ಹೇಳಬೇಕಾದರೆ, ಹಿಂದೂಗಳು ಮತ್ತು ಹಿಂದೂ ಧರ್ಮ ತಮ್ಮ ಮೇಲೆ ವಿಧಿಸಿರುವ ನಿಕೃಷ್ಟ ಸ್ಥಿತಿಯಿಂದ ತಪ್ಪಿಸಿಕೊಳ್ಳುವ ಯಾವ ಮಾರ್ಗವೂ ಅಸ್ಪ ಶ್ರರಿಗಿರುವುದಿಲ್ಲ. +ವಿಶೇಷವಾಗಿ ಅಲ್ಪಸಂಖ್ಯಾತ-ಅಸ್ಪಶ್ಯ ವರ್ಗಗಳ ಹಿತದೃಷ್ಟಿಯಿಂದ ಬ್ರಿಟಿಷ್‌ ಮಾದರಿ ಕಾರ್ಯಾಂಗದ ಅಳವಡಿಕೆಯನ್ನು ವಿರೋಧಿಸಬೇಕಾಗಿದೆ. +ಆದರೆ ಇದರಲ್ಲಿ ಒಂದು ಸಾಮಾನ್ಯ ಕಾರಣವನ್ನಂತೂ ಎತ್ತಿಹೇಳಲೇಬೇಕು. +ಬ್ರಿಟನ್ನಿನ ಸಚಿವ ಸಂಪುಟ ವ್ಯವಸ್ಥೆ ಅಲ್ಲಿಯ ಜನರಿಗೆ ಸುಭದ್ರ ಸರ್ಕಾರವನ್ನು ಕೊಟ್ಟಿದೆ. +ಇದಂತೂ ನಿಸ್ಸಂದೇಹ. +ಇಲ್ಲಿ ಪ್ರಶ್ನೆಯೆಂದರೆ: ಭಾರತದಲ್ಲೂ ಅದೇ ರೀತಿ ಅದು ಸುಭದ್ರ ಸರ್ಕಾರವನ್ನು ಕೊಡಲು ಸಾಧ್ಯವೇ ? + ಸಾಧ್ಯತೆಗಳಂತೂ ತೀರಾ ಕಡಿಮೆ. +ಭಾರತದಲ್ಲಿರುವ ಅಸಂಖ್ಯಾತಜಾತಿ-ಮತಗಳನ್ನು ನೋಡಿದರೆ ಇಲ್ಲಿನ ಶಾಸಕಾಂಗದಲ್ಲಿ ಅತಿ ಹೆಚ್ಚು ಪಕ್ಷಗಳು-ಗುಂಪುಗಳು ಇರುವ ಸಾಧ್ಯತೆ ಇದೆ. +ಹಾಗಾದರೆ, ಬಹುಮತ ಕಳೆದುಕೊಂಡ ಪಕ್ಷ ರಾಜೀನಾಮೆ ಕೊಡಬೇಕೆಂದು ನಿಯಮವಿರುವ ಬ್ರಿಟಿಷ್‌ ಮಾದರಿಯ ಕಾರ್ಯಾಂಗವೊಂದು ಭಾರತದ ಪರಿಸರದಲ್ಲಿ ಅಭದ್ರತೆಗೆ ಗುರಿಯಾಗುತ್ತದೆ. +ಯಾಕೆಂದರೆ ಈ ಗುಂಪುಗಳು-ಪಕ್ಷಗಳು ಕ್ಷುಲ್ಲಕ ಕಾರಣಗಳಿಗಾಗಿ ಮತ್ತೆ ಮತ್ತೆ ಒಡೆಯುವ - ಒಂದುಗೂಡುವ ಸಾಧ್ಯತೆ ಹೆಚ್ಚು. +ಕೆಲವು ಪ್ರಮುಖ ಪಕ್ಷಗಳು ಈಗಿರುವಂತೆ ಮುಂದುವರಿಯುತ್ತವೆಂದು ನಂಬಲಾಗದು. +ಭಾರತದಲ್ಲಿನ ಬ್ರಿಟಿಷ್‌ರ ಸಮಸ್ಯೆ ಪರಿಹಾರಗೊಂಡ ತತ್‌ಕ್ಷಣವೇ, ಈ ಪಕ್ಷಗಳನ್ನು ಒಟ್ಟಾಗಿ ಹಿಡಿದಿಟ್ಟರುವ ಕೊಂಡಿ ಕಳಚಿ ಅವು ಒಡೆದು ಹೋಳಾಗುತ್ತವೆ. +ಪದೇ ಪದೇ ಸರ್ಕಾರ ಬದಲಾಗುವುದೆಂದರೆ ಅದು ಅರಾಜಕತೆಯೇ. +ಈಗಿನ ಸಂವಿಧಾನದ ೯೩ ನೇ ಕಲಂ ಅದಕ್ಕೆ ಪರಿಹಾರವನ್ನೇನೋ ಸೂಚಿಸಿದೆ. +ಆದರೆ ಸ್ವತಂತ್ರ ಭಾರತದ ಸಂವಿಧಾನ ಈ ಕಲಮನ್ನು ಒಳಗೊಂಡಿರುವುದಿಲ್ಲ. +ಆದ್ದರಿಂದ ೯೩ ನೇಕಲಂಗೆ ಪರ್ಯಾಯವೊಂದನ್ನು ಕಂಡುಕೊಳ್ಳಬೇಕು. +ಬ್ರಿಟಿಷ್‌ ಮಾದರಿ ಸಚಿವ ಸಂಪುಟ ಭಾರತಕ್ಕೆ ಹೊಂದುವುದಿಲ್ಲವೆಂಬುದೇ ಈ ಮೇಲಿನ ವಿವರಗಳ ಸಾರಾಂಶ. +ಈ ಕೆಳಗೆ ವಿವರಿಸಲಾದ ಉದ್ದೇಶಗಳಿಗೆ ಪೂರಕವಾಗಿ ಕಾರ್ಯ ನಿರ್ವಹಿಸುವ ಒಂದು ಕಾರ್ಯಾಂಗವ್ಯವಸ್ಥೆಯನ್ನು ಈ ಖಂಡದಲ್ಲಿ ಸೂಚಿಸಲಾಗಿದೆ. +೧) ಸರ್ಕಾರ ರಚಿಸುವ ವಿಷಯದಲ್ಲಿ ಅಲ್ಪಸಂಖ್ಯಾತರ ಮಾತಿಗೆ ಮನ್ನಣೆ ಕೊಡದೆ ಬಹುಸಂಖ್ಯಾತರು ಸರ್ಕಾರ ರಚಿಸುವುದನ್ನು ತಡೆಯಲು +೨) ಬಹುಸಂಖ್ಯಾತರ ಆಡಳಿತವನ್ನು ಸಂಪೂರ್ಣ ಹತೋಟಿಯಲ್ಲಿಟ್ಟುಕೊಂಡು ಅಲ್ಪಸಂಖ್ಯಾತರಮೇಲೆ ದಬ್ಬಾಳಿಕೆ ನಡೆಸುವ ಸಾಧ್ಯತೆಯನ್ನು ತಡೆಯಲು +೩) ಅಲ್ಪಸಂಖ್ಯಾತರ ಬೆಂಬಲ ಹಾಗೂ ವಿಶ್ವಾಸ ಗಳಿಸದ ಅಲ್ಪಸಂಖ್ಯಾತ ಪ್ರತಿನಿಧಿಗಳನ್ನು ಬಹುಮತವಿರುವ ಪಕ್ಷ ತನ್ನ ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳುವುದನ್ನು ತಡೆಯಲು +೪) ಒಳ್ಳೆಯ ಮತ್ತು ದಕ್ಷ ಆಡಳಿತ ಕೊಡಬಲ್ಲ ಸುಭದ್ರ ಸಚಿವ ಸಂಪುಟವನ್ನು ಒದಗಿಸಲುಈ ಖಂಡವು ಅಮೆರಿಕಾ ಮಾದರಿಯದಾಗಿದ್ದು, ವಿಶೇಷವಾಗಿ ಭಾರತೀಯ ಅಲ್ಪಸಂಖ್ಯಾತರ ಹಿತದೃಷ್ಟಿಯಿಂದ ಭಾರತೀಯ ಪರಿಸರಕ್ಕೆ ಹೊಂದುವಂತೆ ರೂಪಿತವಾಗಿದೆ. +ಜವಾಬ್ದಾರಿ ಸರ್ಕಾರತತ್ವಕ್ಕೆ ಅನುಗುಣವಾಗಿಲ್ಲವೆಂದು ಇಲ್ಲಿ ಸೂಚಿತವಾಗಿರುವ ಕಾರ್ಯಾಂಗ ಮಾದರಿಯ ಬಗ್ಗೆ ತಗಾದೆ ತೆಗೆಯುವಂತೆಯೂ ಇಲ್ಲ. +ಬ್ರಿಟಿಷ್‌ ಮಾದರಿಯ ಕಾರ್ಯಾಂಗದ ಅನುಭವವಿರುವ ಭಾರತೀಯರು ಕೇವಲ ಅದೊಂದೇ ಪ್ರಜಾಸತ್ತಾತ್ಮಕ ಜವಾಬ್ದಾರಿ ಸರ್ಕಾರವಲ್ಲ ಎನ್ನುವ ಸತ್ಯವನ್ನು ಮರೆಯುತ್ತಾರೆ. +ಅಮೆರಿಕಾ ಮಾದರಿಯ ಕಾರ್ಯಾಂಗವೂ ಸಹ ಅಷ್ಟೇ ಪ್ರಜಾಸತ್ತಾತ್ಮಕ ಜವಾಬ್ದಾರಿ ಸರ್ಕಾರ. +ವ್ಯಕ್ತಿಯೊಬ್ಬ ಕೇವಲ ಶಾಸಕಾಂಗದ ಸದಸ್ಯನಾಗಿ ಚುನಾಯಿತನಾಗದ ಕಾರಣಕ್ಕಾಗಿ ಸಚಿವ ಸಂಪುಟ ಸೇರಲು ಅನರ್ಹನಾಗುತ್ತಾನೆನ್ನುವುದರ ಬಗ್ಗೆ ಏನೂ ತಕರಾರಿಲ್ಲ. +ಯಾರೇ ಆಗಲಿ ಮಂತ್ರಿಯಾಗುವ ಮುಂಚೆ ತನ್ನ ಕ್ಷೇತ್ರದಿಂದ ಅವನು ಆರಿಸಿ ಬಂದಿರಲೇಬೇಕೆಂಬ ನಿಯಮ ನೂರು ವರ್ಷಗಳಿಗೂ ಹೆಚ್ಚು ಕಾಲ ಬ್ರಿಟನ್ನಿನಲ್ಲೂ ಇತ್ತು. +ಇತ್ತೀಚೆಗಷ್ಟೆ ಅದನ್ನು ಕೈಬಿಡಲಾಗಿದೆ. +ಆದ್ದರಿಂದ ಅದು ಜವಾಬ್ದಾರಿ ಸರ್ಕಾರತತ್ವಕ್ಕೆ ವಿರುದ್ಧವಾಗಿದೆ ಎಂದು ತಕರಾರು ಎತ್ತುವಂತಿಲ್ಲ. +ಇಲ್ಲಿನ ಸೂಚನೆಯಂತೂ ಅಮೆರಿಕಾ ಮಾದರಿಯ ಸುಧಾರಿತ ರೂಪವಾಗಿದೆ; +ಯಾಕೆಂದರೆ ಇದರ ಪ್ರಕಾರ ಸಚಿವ ಸಂಪುಟದ ಸದಸ್ಯರು ಶಾಸನಸಭೆಯಲ್ಲಿ ಕುಳಿತು ಮಾತನಾಡುವ, ಪ್ರಶ್ನೆಗಳಿಗೆ ಉತ್ತರ ಕೊಡುವ ಹಕ್ಕು ಪಡೆದಿರುತ್ತಾರೆ. +ಈ ಪ್ರಸ್ತಾವನೆ ವಿವಾದಾಸ್ಪದವಲ್ಲ. +ಅಲ್ಪಸಂಖ್ಯಾತರ ಶೋಷಣೆ-ದಬ್ಬಾಳಿಕೆಗಳ ವಿರುದ್ಧ ಇರುವ ಅತ್ಯುತ್ತಮ ಪರಿಹಾರವೆಂದರೆ, ವಿಚಾರಣೆ, ಪ್ರಚಾರ ಮತ್ತು ಚರ್ಚೆ. +ಇದಕ್ಕೆ ಅವಕಾಶ ಮಾಡಿಕೊಡುವುದೇ ಈ ರಕ್ಷಣೆಯ ಉದ್ದೇಶ. +ಹಿಂದೆ ಸಪ್ರೂ ಸಮಿತಿ ಕೂಡಾ ಇಂಥದೇ ಒಂದು ಪರಿಹಾರವನ್ನು ಶಿಫಾರಸು ಮಾಡಿತು. +ಸಾಮಾಜಿಕ ಬಹಿಷ್ಕಾರ ಎನ್ನುವುದು ಜಾತಿವಾದಿ ಹಿಂದೂಗಳು ಅಸ್ಪಶ್ಯರ ನೆತ್ತಿಯ ಮೇಲೆ ಸಹ ಝಳಪಿಸುವ ಖಡ್ಗ. +ಹಿಂದೂಗಳ ಕೈಯಲ್ಲಿ ಅದೆಂಥ ಭಯಾನಕ ಸಾಧನವೆಂಬುದು ಹರಿಜನರಿಗೆ ಮಾತ್ರ ತಿಳಿದಿದೆ. +ಅಸ್ಪಶ್ಯರ ಸಮಸ್ಯೆಗಳ ಬಗ್ಗೆ ವಿಚಾರಣೆ ನಡೆಸಲು ೧೯೨೮ ರಲ್ಲಿ ಮುಂಜೈ ಸರ್ಕಾರ ನೇಮಿಸಿದ ಸಮಿತಿಯ ವರದಿ ಈ ಸಾಮಾಜಿಕ ಬಹಿಷ್ಕಾರದ ಅಸ್ತ್ರ ಪಡೆಯಬಹುದಾದ ವಿವಿಧ ರೂಪುಗಳನ್ನು ಕುರಿತಂತೆ ವಿವರವಾಗಿ ಹೇಳಿದೆ. +ಕೆಳಗೆ ಕೊಟ್ಟರುವ ವಿವರಗಳು ಆ ಸಮಿತಿಯ ವರದಿಯಿಂದ ಉದ್ಭರಿಸಿದವೇ ಆಗಿವೆ. +ಹಿಂದೂ ಜನ ಅಸ್ಪಶ್ಯರ ವಿರುದ್ಧ ಈ ಅಸ್ತ್ರವನ್ನು ಎಷ್ಟು ಭಯಾನಕವಾಗಿ ಬಳಸುತ್ತಾರೆ ಎನ್ನುವುದನ್ನು ಸರಳವಾಗಿ ಎಲ್ಲರಿಗೂ ಅರ್ಥವಾಗುವಂತೆ ಈ ವರದಿ ವಿವರಿಸಿದೆ. +ಆಸಮಿತಿ ಹೇಳುತ್ತದೆ:“ಅಸ್ಪಶ್ಯರು ಎಲ್ಲ ಸಾರ್ವಜನಿಕ ಸೌಲಭ್ಯಗಳನ್ನು ಅನುಭವಿಸಲು ನೆರವಾಗುವಂತೆ ನಾವು ಹಲವಾರು ರೀತಿಯ ಪರಿಹಾರಗಳನ್ನು ಶಿಫಾರಸು ಮಾಡಿದ್ದರೂ, ಅವರ ಸಂಕಷ್ಟಗಳನ್ನು ನೋಡಿದರೆ ಇನ್ನೂ ಬಹಳಷ್ಟು ಕಾಲ ಈ ಹಕ್ಕುಗಳನ್ನು ಅವರು ಉಪಯೋಗಿಸಿಕೊಳ್ಳಲು ಸಾಧ್ಯವಿಲ್ಲವೆಂಬ ಭಯ ಕಾಡುತ್ತದೆ. +ಈ ನಿಟ್ಟನಲ್ಲಿರುವ ಮೊದಲ ಸಂಕಷ್ಟವೆಂದರೆ, ಸಂಪ್ರದಾಯವಾದಿ ಕಂದಾಚಾರಿ ವರ್ಗಗಳು ಅಸ್ಪಶ್ವ್ಯರಮೇಲೆ ಎಸಗುವ ನೇರ ಆಕ್ರಮಣದ ಹಿಂಸೆ. +ಪ್ರತಿಯೊಂದು ಹಳ್ಳಿಯಲ್ಲಿಯೂ ದಮನಿತರ ವರ್ಗದ ಪ್ರಮಾಣ ಅಲ್ಪಸಂಖ್ಯಾತವಾಗಿರುತ್ತದೆಂಬುದನ್ನು ಇಲ್ಲಿ ಗಮನಿಸಬೇಕು. +ಅದಕ್ಕೆ ವಿರುದ್ಧವಾಗಿ ಕಂದಾಚಾರಿಗಳು ಬಹು ಸಂಖ್ಯಾತರಾಗಿರುತ್ತಾರೆ. +ಆದ್ದರಿಂದ ಈ ಬಹುಸಂಖ್ಯಾತರು ದಮನಿತ ವರ್ಗದವರು ತಮ್ಮ ಹಕ್ಕುಗಳನ್ನು ಅತಿಕ್ರಮಿಸಬಹುದಾದ ಎಲ್ಲ ವಿಧಾನಗಳನ್ನು ತಡೆಯಲು ಯಾವುದೇ ಮಟ್ಟಕ್ಕೆ ಬೇಕಾದರೂ ಹೋಗಬಲ್ಲರು. +ಪೋಲೀಸರು ಮೊಕದ್ದಮೆ ಹೂಡಿ ವಿಚಾರಣೆ ನಡೆಸಬಹುದೆಂಬ ಭಯ ಕಂದಾಚಾರಿಗಳ ಹಿಂಸೆಯ ಬಳಕೆಯನ್ನು ನಿಯಂತ್ರಿಸಿದೆ ಮತ್ತು ಅದರ ಪರಿಣಾಮವಾಗಿ ಅಂಥ ಮೊಕದ್ದಮೆಗಳು ಅಪರೂಪವಾಗಿದೆ. +ಅಸ್ಪಶ್ಯರ ಇಂದಿನ ಆರ್ಥಿಕ ಪರಿಸ್ಥಿತಿಯಿಂದ ಎರಡನೆಯ ಸಮಸ್ಯೆ ಉದ್ಭವಿಸುತ್ತದೆ. +ಈ ಪ್ರಾಂತ್ಯದ ಬಹುತೇಕ ಎಲ್ಲಾ ಕಡೆ ಅಸ್ಪಶ್ಯರು ಆರ್ಥಿಕವಾಗಿ ಸ್ಪತಂತ್ರರಲ್ಲ. +ಅವರಲ್ಲಿ ಕೆಲವರು ಕಂದಾಚಾರಿಗಳ ಜಮೀನಿನಲ್ಲಿ ಗೇಣಿದಾರರಾಗಿ ದುಡಿಯುತ್ತಾರೆ. +ಉಳಿದವರಲ್ಲಿ ಕೆಲವರು ಕಂದಾಚಾರಿಗಳ ಕೃಷಿ ಕೂಲಿಗಳಾಗಿದುಡಿದರೆ, ಮಿಕ್ಕವರು ಗ್ರಾಮದ ಸೇವಕರಾಗಿ ಕಂದಾಚಾರಿಗಳು ಕೊಟ್ಟದ್ದರಲ್ಲಿ ಜೀವನ ಸಾಗಿಸುತ್ತಾರೆ. +ಅಸ್ಪಶ್ಯರು ತಮ್ಮ ಹಕ್ಕುಗಳ ಚಲಾವಣೆಗೆ ತೊಡಗಿದಾಗ, ಕಂದಾಚಾರಿಗಳು ತಮ್ಮ ಕೈಲಿರುವ ಆರ್ಥಿಕ ಅಧಿಕಾರ ಅಸ್ತವನ್ನು ಅವರ ವಿರುದ್ಧ ಬಳಸಿಕೊಂಡ ಅನೇಕ ಘಟನೆಗಳನ್ನು ನಾವು ಕೇಳಿದ್ದೇವೆ. +ಅವು ಗೇಣೀದಾರರನ್ನು ಒಕ್ಕಲೆಬ್ಬಿಸುವುದು, ಕೂಲಿಗೆ ಕರೆಯದಿರುವುದು, ಗ್ರಾಮಸೇವೆಯಲ್ಲಿದ್ದವರಿಗೆ ಅವರಿಗೆ ಕೊಡಬೇಕಾದ ಮಾಮೂಲಿಯನ್ನು ನಿಲ್ಲಿಸುವುದು - ಹೀಗೆ ಈ ಬಹಿಷ್ಕಾರ ವಿವಿಧ ರೂಪು ಪಡೆಯುತ್ತದೆ. +ಎಲ್ಲರೂ ಸಾಮಾನ್ಯವಾಗಿ ಓಡಾಡುವ ರಸ್ತೆಯನ್ನು ಅಸ್ಪಶ್ಯರು ಬಳಸದಂತೆ ನಿಲ್ಲಿಸಲು ಮತ್ತು ಬನಿಯಾ ಅಂಗಡಿಗಳಲ್ಲಿ ಅವರಿಗೆ ಜೀವನಾತ್ಮಕ ವಸ್ತುಗಳನ್ನು ಮಾರದಂತೆ ತಡೆಯಲು, ಈ ಬಹಿಷ್ಕಾರವನ್ನು ವ್ಯವಸ್ಥಿತವಾಗಿ ಮತ್ತು ವ್ಯಾಪಕವಾಗಿ ಬಳಸಲಾಗುತ್ತದೆ. +ಸಾಕ್ಷಿಗಳ ಪ್ರಕಾರ ಕೆಲವು ವೇಳೆ ಕ್ಷುಲ್ಲಕ ಕಾರಣಗಳಿಗೂ ಸಾಮಾಜಿಕ ಬಹಿಷ್ಕಾರವನ್ನು ಹೇರಲಾಗುತ್ತದೆ. +ಸಾಮಾನ್ಯವಾಗಿ ಅಸ್ಪಶ್ಯರು ತಮ್ಮ ಹಕ್ಕಿನ ಮೇರೆಗೆ ಊರಿನ ಬಾವಿಯಿಂದ ನೀರು ಸೇದಲು ಪ್ರಯತ್ನಿಸಿದಾಗ ಈ ಬಹಿಷ್ಕಾರ ಹಾಕುತ್ತಾರೆ. +ಅಸ್ಪಶ್ಯನೊಬ್ಬ ಜನಿವಾರ ಹಾಕಿದಾಗ, ಸ್ವಲ್ಪ ಜಮೀನನ್ನು ಕೊಂಡಾಗ, ಒಳ್ಳೆ ಬಟ್ಟೆ ಧರಿಸಿದಾಗ, ಒಡವೆ ಹಾಕಿಕೊಂಡಾಗ,ಹಾಗೂ ಗಂಡನ್ನು ಕುದುರೆ ಮೇಲೆ ಕೂರಿಸಿ ಮದುವೆ ದಿಬ್ಬಣ ತೆಗೆದಾಗ ಬಹಿಷ್ಕಾರ ಹಾಕಿರುವುದರ ಅನೇಕ ಪುರಾವೆಗಳಿವೆ. +೧೯೨೮ ರಲ್ಲಿ ಇದನ್ನೆಲ್ಲಾ ಹೇಳಲಾಗಿದೆ. +ಆದರೆ ಅದು ಅಲ್ಲಿಗೇ ನಿಂತಿತೆಂದು ಹೇಳಲಾಗದು. +ಇದಕ್ಕೆ ನಿದರ್ಶನವಾಗಿ ಪಂಜಾಬಿನ ಖೇರಿ ಜಿಸ್ಸೂರ್‌ ಗ್ರಾಮದ ಅಸ್ಪಶ್ಯರು, ರೊಹಾಟಿಕ್‌ ಜಿಲ್ಲಾಧಿಕಾರಿಗೆ ಫೆಬ್ರವರಿ ೧೯೪೭ ರಲ್ಲಿ ಕೊಟ್ಟು ಮನವಿಯನ್ನು - ನನಗೆ ಅದರ ಪ್ರತಿಯನ್ನು ಕಳಿಸಿದ್ದಾರೆ - ಇಲ್ಲಿಕೊಡುತ್ತಿದ್ದೇನೆ. +ಅದರ ವಿವರ ಹೀಗಿದೆ. +ಖೇರಿ ಜಿಸ್ಸೂರ್‌ ಗ್ರಾಮದ ಪರಿಶಿಷ್ಟ ಜಾತಿಗೆ (ಚಮ್ಮಾರರು) ಸೇರಿದ ನಾವು, ನಮಗೆ ಈ ಗ್ರಾಮದ ಹಿಂದೂ ಜಾಟ್‌ ಜನ ಕೊಡುವ ಕಿರುಕುಳ ಮತ್ತು ಅಮಾನವೀಯ ಹಿಂಸೆಯಿಂದ ಉದ್ಭವಿಸಿರುವ ನಮ್ಮ ನಿಕೃಷ್ಟಸ್ಥಿತಿ, ಕಷ್ಟ ಕಾರ್ಪಣ್ಯಗಳತ್ತ ನಿಮ್ಮ ಕೃಪಾ ದೃಷ್ಟಿ ಹರಿಯಲೆಂದು ಬೇಡುತ್ತೇವೆ. +ನಾಲ್ಕು ತಿಂಗಳ ಹಿಂದೆ ಊರಿನ ಚಾವಡಿಯಲ್ಲಿ ಜಾಟ್‌ ಜನರೆಲ್ಲಾ ಸೇರಿ, ನಮಗೆ ಇನ್ನು ಮುಂದೆ ಕೃಷಿ ಕೂಲಿಯಾಗಿ ದಿನವೊಂದಕ್ಕೆ ಒಂದು ಸೇರಿನಷ್ಟು ಧಾನ್ಯದ ಪಿಂಡಿಯನ್ನು ಮಾತ್ರ ಕೊಡುವುದಾಗಿ ಹೇಳಿದ್ದಾರೆ. +ಅದಕ್ಕೆ ಮುಂಚೆ ನಮಗೆ ಎರಡು ಹೊತ್ತು ಊಟ ಹಾಕುವುದರ ಜೊತೆಗೆ, ಒಬ್ಬ ತಲೆಯ ಮೇಲೆ ಹೊರುವಷ್ಟು ಧಾನ್ಯವುಳ್ಳ ಹುಲ್ಲಿನ ಪಿಂಡಿ ಮತ್ತು ಎಂಟು ಆಣೆಯನ್ನು ದಿನವೊಂದಕ್ಕೆ ಕೂಲಿಯಾಗಿ ಕೊಡುತ್ತಿದ್ದರು. +ಅವರು ನಿಗದಿ ಮಾಡಿದ ಹೊಸ ಕೂಲಿ ನಮ್ಮ ಜೀವನಕ್ಕೆ ಸಾಕಾಗುವಂತಿರಲಿಲ್ಲವಾದ್ದರಿಂದ ನಾವು ಕೂಲಿ ಮಾಡಲು ನಿರಾಕರಿಸಿದೆವು. +ಸಿಟ್ಟಿಗೆದ್ದ ಅವರು ನಮ್ಮ ವಿರುದ್ಧ ಸಾಮಾಜಿಕ ಬಹಿಷ್ಕಾರ ಹಾಕಿದರು. +ನಮ್ಮ ದನ ಕರುಗಳು ಗೋಮಾಳದಲ್ಲಿ ಮೇಯಲು ಕಾನೂನಿನ ಯಾವುದೇ ಸಮರ್ಥನೆಯಿಲ್ಲ. + ಅಕ್ರಮ ತೆರಿಗೆ ಕೊಡದೆ ಬಿಡುವುದಿಲ್ಲವೆಂದರು. +ಊರಿನ ಹೊಂಡದಲ್ಲಿ ನಮ್ಮ ದನಗಳು ನೀರು ಕುಡಿಯಲು ಬಿಡಲಿಲ್ಲ. +ನಾವು ವಾಸಿಸುವ ಬಸ್ತಿಗಳನ್ನು ಸ್ವಚ್ಛ ಮಾಡದಂತೆ ಊರಿನ ಜಾಡಮಾಲಿಗಳನ್ನು ತಡೆದದ್ದರಿಂದ, ಕಸದ ತಿಪ್ಪೆಗಳು ಬೆಳೆದು ನಮಗೆ ರೋಗರುಜಿನ ಬರುವಂಥ ಪರಿಸ್ಥಿತಿ ಒದಗಿದೆ. +ನಾವು ನಿಕೃಷ್ಟ ಸ್ಥಿತಿಯಲ್ಲಿ ವಾಸಿಸುವಂಥ ಪರಿಸ್ಥಿತಿಯನ್ನವರು ಉಂಟು ಮಾಡಿರುವರಲ್ಲದೆ, ನಮ್ಮ ಹೆಂಡತಿಯರು,ತಂಗಿಯರು ಮತ್ತು ಹೆಣ್ಣು ಮಕ್ಕಳ ಬಗ್ಗೆ ತುಚ್ಛವಾಗಿ ವರ್ತಿಸುತ್ತಿದ್ದಾರೆ. +ನಮ್ಮನ್ನು ಅನೇಕ ಕಷ್ಟ ಕಾರ್ಪಣ್ಯಗಳಿಗೆ ಸಿಲುಕಿಸಲಾಗಿದೆ. +ಶಾಲೆಗೆ ಹೋಗುವ ನಮ್ಮ ಮಕ್ಕಳನ್ನು ಅಮಾನವೀಯವಾಗಿ ಹಳಿಸುತ್ತಿದ್ದಾರೆ. +ನಾವು ಈಗಾಗಲೇ ನಮ್ಮ ಸ್ಥಿತಿಯ ಬಗ್ಗೆ ಒಂದು ಮನವಿಯನ್ನು ನಿಮಗೆ ಅರ್ಪಿಸಿದ್ದೆವು. +ಆದರೆ ಅದರ ಬಗ್ಗೆ ಈವರೆಗೂ ಯಾವುದೇ ಕ್ರಮಕ್ಕೆಗೊಂಡಿಲ್ಲವೆಂದು ವಿಷಾದದಿಂದ ಹೇಳಬೇಕಾಗಿದೆ. +ರೋಹಟಕ್‌ನ ಪೋಲೀಸ್‌ ಇನ್‌ಸ್ಪೆಕ್ಟರು, ತಹಸಿಲ್ದಾರರ ಹತ್ತಿರ ನಮ್ಮ ಮನವಿ ತೋಡಿಕೊಂಡೆವು. +ಆದರೆ ಸರಿಯಾದ ವಿಚಾರಣೆಯನ್ನವರು ನಡೆಸಲಿಲ್ಲವೆಂದು ಹೇಳಲೇಬೇಕಾಗಿದೆ. +ಜೊತೆಗೆ ಬಡವರ ಮತ್ತು ಅಮಾಯಕರ ಕಷ್ಟನಿವಾರಣೆಯ ಕಡೆ ಅವರು ಗಮನಕೊಟ್ಟಿಲ್ಲ. +ಆದ್ದರಿಂದ ನಮ್ಮ ಮನವಿಯನ್ನು ಪರಿಶೀಲಿಸಿ, ಜಾಟರು ನಮಗೆ ಕೊಡುತ್ತಿರುವ ವಿವಿಧ ರೀತಿಯ ಕಿರುಕುಳ, ಬೆದರಿಕೆಗಳಿಂದ ರಕ್ಷಿಸುವ ಕ್ರಮ ಕೈಗೊಳ್ಳಬೇಕೆಂದು ತಮ್ಮಲ್ಲಿ ನಾವು ಬೇಡುತ್ತೇನೆ. +ನಮಗೆ ದಯಾಮಯವಾದ ನಿಮ್ಮ ಕಚೇರಿಯಲ್ಲದೆ ಬೇರೆ ದಾರಿಯಿಲ್ಲ. +ಅಗತ್ಯ ಕ್ರಮ ಕೈಗೊಂಡು, ಮರ್ಯಾದೆಯಿಂದ ಮಾನವನ ಜನ್ಮಸಿದ್ಧ ಹಕ್ಕಾದ ಶಾಂತಿಯುತ ಬಾಳ್ವೆ ನಡೆಸಲು ನಮಗೆ ಅವಕಾಶ ಮಾಡುಕೊಡುತ್ತೀರೆಂದು ಆಶೀಸುತ್ತೇವೆ. +ನಿಮ್ಮ ವಿಧೇಯರು,ಪರಿಶಿಷ್ಟ ಜಾತಿಗಳವರು(ಚಿಮ್ಮಾರರು)ಖೇರಿ ಜೆಸ್ಟೂರ್‌ ಗ್ರಾಮ ರೋಹಟಕ್‌ ತಹಸಿಲ್‌ ಮತ್ತು ಜಿಲ್ಲೆ. +|೧೯೨೮ ರಲ್ಲಿ ಯಾವ ಪರಿಸ್ಥಿತಿ ಇತ್ತೋ ಇಂದಿಗೂ ಅದೇ ಸ್ಥಿತಿ ಇದೆಯೆಂದು ಇದರಿಂದ ಸಾಬೀತಾಗುತ್ತದೆ. +ಅಸ್ಪಶ್ಯರ ಸ್ಥಿತಿ ಮುಂಬಯಿ ಪ್ರಾಂತದಲ್ಲಿ ಹೇಗಿದೆಯೋ ಇಡೀ ದೇಶದಲ್ಲಿ ಹಾಗೆಯೇ ಇದೆ. +ಹಿಂದೂಗಳು ಸಾಮಾಜಿಕ ಬಹಿಷ್ಕಾರವನ್ನು ಹೇಗೆ ಘೋಷಿಸುತ್ತಾರೆಂದು ಇತ್ತೀಚೆಗೆ ಪ್ರಾಂತ ಶಾಸಕಾಂಗಗಳಿಗೆ ನಡೆದ ಚುನಾವಣಾ ಸಮಯದಲ್ಲಿ ಆದದ್ದನ್ನು ನೆನಪಿಸಿಕೊಂಡರೆ ತಿಳಿಯುತ್ತದೆ. +ಬಹಿಷ್ಕಾರ ಶಿಕ್ಷಾರ್ಹ ಅಪರಾಧವೆಂದು ವಿಧಿಸಿದಾಗಲೇ ಅಸ್ಪಶ್ಯರು ಹಿಂದೂಗಳ ದಾಸ್ಯದಿಂದ ಸ್ವತಂತ್ರರಾಗಲು ಸಾಧ್ಯ. +ಬಹಿಷ್ಕಾರದ ಅಸ್ತ್ರ ಅಸ್ಪಶ್ಯರಿಗೆ ಮಾತ್ರವೇ ಸೀಮಿತವಾಗಿಲ್ಲ. + ಈಗೀಗ ಬೇರೆ ಕೋಮುಗಳ ವಿರುದ್ಧವೂ ಅದನ್ನು ಬಳಸಲಾಗುತ್ತಿದೆ. +ಆದ್ದರಿಂದಲೇ ಎಲ್ಲ ಅಲ್ಪಸಂಖ್ಯಾತರ ಹಿತದೃಷ್ಟಿಯಿಂದಲೂ ಈ ರಕ್ಷಣೆಯನ್ನು ಒದಗಿಸುವುದು ಸೂಕ್ತ. +ಬಹಿಷ್ಕಾರಕ್ಕೆ ಸಂಬಂಧಪಟ್ಟ ಎಲ್ಲ ವಿವರಗಳನ್ನೂ ೧೯೨೨ ರ ಬರ್ಮಾ ಬಹಿಷ್ಕಾರ ವಿರೋಧಿ ಕಾಯಿದೆಯಿಂದ ಅನಾವತ್ತಾಗಿ ತೆಗೆದುಕೊಳ್ಳಲಾಗಿದೆ. +ಈ ರೀತಿಯ ಸವಲತ್ತುಗಳನ್ನು ೧೯೩೫ ರ ಭಾರತ ಸರ್ಕಾರಿ ಕಾಯಿದೆಯ ೧೫ಂ ನೇ ಭಾಗದಲ್ಲಿ ಈಗಾಗಲೇ ನಮೂದಿಸಲಾಗಿದೆ. +ಈ ಅಧಿನಿಯಮದಲ್ಲಿ ಹೊಸದೇನೂ ಇಲ್ಲ. +ಶಾಸಕಾಂಗಗಳಲ್ಲಿರ ಬೇಕಾದ ಪ್ರಾತಿನಿಧ್ಯದ ಬೇಡಿಕೆಯನ್ನು ಪೂನಾ ಒಪ್ಪಂದದಲ್ಲಿಯೇ ಪೂರೈಸಲಾಗಿದೆ. +ಪುನರ್‌ ವಿಮರ್ಶೆ ಮಾಡಬೇಕಾಗಿರುವುದೆಂದರೆ, (೧)ಪ್ರಾತಿನಿಧ್ಯದ ಪ್ರಮಾಣ (೨) ಹೆಚ್ಚುವರಿ ಪ್ರಾಮುಖ್ಯತೆ (೩) ಚುನಾವಣೆ ವ್ಯವಸ್ಥೆ. +(೧) ಪ್ರಮಾಣ ಪರಿಶಿಷ್ಟ ಜಾತಿಗಳಿಗೆ ಕೊಡಲಾದ ಪ್ರಾತಿನಿಧ್ಯದ ಪ್ರಮಾಣವನ್ನು ಪೂನಾ ಒಪ್ಪಂದದ ೧ ನೇ ಅಧಿನಿಯಮ ಒಳಗೊಂಡಿದೆ. +ಇತರ ಕೋಮುಗಳಿಗೆ ವಿಶಿಷ್ಟ ಸ್ಥಾನಗಳನ್ನು ಮತ್ತು ವಿಶಿಷ್ಟಾಸಕ್ಕಿಗಳಿಗೆ ನಿರ್ದಿಷ್ಟ ಸ್ಥಾನಗಳನ್ನು ಗೊತ್ತುಪಡಿಸಿದ ನಂತರ ಉಳಿಯುವ ಸ್ಥಾನಗಳ ಆಧಾರದ ಮೇಲೆ ಆ ಪ್ರಮಾಣವನ್ನು ನಿಗದಿಮಾಡಲಾಗಿತ್ತು. +ಈ ಹಂಚಿಕೆಯಿಂದ ಪರಿಶಿಷ್ಟ ಜಾತಿಗಳವರಿಗೆ ಬಹಳ ಅನ್ಯಾಯವಾಗಿದೆ. +ವಿಶೇಷ ವರ್ಗಗಳಿಗೆ, ಹೆಚ್ಚುವರಿ ಪ್ರಾತಿನಿಧ್ಯಕ್ಕೆಂದು ತೆಗೆದು ಸ್ಥಾನಗಳ ಖೋತಾವನ್ನು ಪರಿಶಿಷ್ಟ ವರ್ಗಗಳ ಭಾಗದಿಂದ ತೆಗೆದಿರಿಸುವುದು ಸಮಂಜಸವಾಗಿಲ್ಲ. + ಈ ಸ್ಥಾನಗಳ ಹಂಚಿಕೆಯನ್ನು ಪೂನಾ ಒಪ್ಪಂದಕ್ಕೆ ಮುನ್ನ ಪ್ರಾತಿನಿಧ್ಯ ಕೊಟ್ಟಾಗಲೇ ಮಾಡಲಾಗಿತ್ತು. +ಆದ್ದರಿಂದ ಈ ಅನ್ಯಾಯವನ್ನು ಆಗ ಸರಿಪಡಿಸಲಾಗಲಿಲ್ಲ. +(೨) ಹೆಚ್ಚುವರಿ ಪರಿಶಿಷ್ಟ ಜಾತಿಗಳವರು ಮತ್ತೊಂದು ಅನ್ಯಾಯಕ್ಕೂ ಒಳಗಾಗಿದ್ದಾರೆ. + ಅದು ಅವರ ಪಾಲಿನ ಸೀಟುಗಳ ಹಕ್ಕಿಗೆ ಸಂಬಂಧಪಟ್ಟದ್ದು. +ಹೆಚ್ಚುವರಿ ಸೀಟುಗಳ ಹಕ್ಕಿನ ವಿಷಯ ಎರಡು ವಿವಾದಗಳಿಗೆ ಆಸ್ಪದ ಮಾಡಿಕೊಟ್ಟಿರುವುದನ್ನು ಎಲ್ಲರೂ ಕಾಣಬಹುದಾಗಿದೆ. +ಒಂದು ಬಹುಸಂಖ್ಯಾತರು ಮತ್ತು ಅಲ್ಪಸಂಖ್ಯಾತರ ನಡುವಿನದಾದರೆ,ಇನ್ನೊಂದು ಅಲ್ಪಸಂಖ್ಯಾತರ ವಿವಿಧ ಗುಂಪುಗಳು ನಡುವಿನದಾಗಿದೆ. +ಮೊದಲನೆಯ ವಿವಾದ ಹೆಚ್ಚುವರಿ ತತ್ವಕ್ಕೆ ಸಂಬಂಧಪಟ್ಟಿದೆ. +ಅಲ್ಪಸಂಖ್ಯಾತರಿಗೆ ತಮ್ಮ ಜನಸಂಖ್ಯೆಯ ಶೇಕಡಾವಾರಿಗಿಂತ ಹೆಚ್ಚಿನ ಪ್ರಾತಿನಿಧ್ಯ ಪಡೆಯುವ ಹಕ್ಕಿಲ್ಲವೆಂದು ಬಹುಸಂಖ್ಯಾತರು ಪಟ್ಟುಹಿಡಿಯುತ್ತಾರೆ. +ಅವರು ಯಾಕಾದರೂ ಈ ಹಠಮಾಡುತ್ತಾರೆಂದು ಅರ್ಥವಾಗುವುದಿಲ್ಲ. + ತಮ್ಮ ಜನಸಂಖ್ಯೆಯ ಶೇಕಡಾವಾರನ್ನು ಮುಂದುಮಾಡಿ ಬಹು ಸಂಖ್ಯಾತರು, ಬಹುಸಂಖ್ಯಾತರಾಗಿಯೇ ಉಳಿದು,ಬಹುಸಂಖ್ಯಾತರಂತೆ ವರ್ತಿಸುವುದಕ್ಕೋ ಅಥವಾ ಅಲ್ಪಸಂಖ್ಯಾತರ ಹೆಚ್ಚುವರಿಯಲ್ಲಿ ಎಷ್ಟೇ ಭಾಗಪಡೆದರೂ ಅವರು ಅಲ್ಪಸಂಖ್ಯಾತರಾಗಿ ಉಳಿದು, ಬಹುಸಂಖ್ಯಾತರು ಅವರ ಮೇಲೆ ತಮ್ಮ ಯಜಮಾನಿಕೆ ನಡೆಸುವಂತೆ ಇರಲೆಂದೋ ಅದು ಮೊದಲಿನ ನೆಲೆಯದ್ದಾದರೆ ಅದರಿಂದ ಬಹುಸಂಖ್ಯಾತರ ಆಡಳಿತ ತತ್ವದ ಉಲ್ಲಂಘನೆಯಾಗುತ್ತದೆ. + ಸರಿಯಾಗಿ ಅರ್ಥ ಮಾಡಿಕೊಂಡರೆ ಬಹುಸಂಖ್ಯಾತರ ತೀರ್ಮಾನಕ್ಕೆ ಅಲ್ಪಸಂಖ್ಯಾತರು ಒಂದು ರೀತಿ ಒಪ್ಪಿಗೆ ಕೊಟ್ಟಂತೆಯೂ ಆಗುತ್ತದೆ. +ಇದು ಬಹುಸಂಖ್ಯಾತರ ಉದ್ದೇಶವಿರಲಾರದು. +ಅದನ್ನು ಉದಾರರೀತಿಯಲ್ಲಿ ವ್ಯಾಖ್ಯಾನ ಮಾಡಬೇಕಾಗುತ್ತದೆ. +ಮತ್ತು ಮೊದಲನೆಯದಕ್ಕಿಂತ ಈ ಎರಡನೆಯದೇ ಬಹುಸಂಖ್ಯಾತರ ಉದ್ದೇಶ ಮತ್ತು ವಾದವೆಂದು ಊಹಿಸಿಕೊಳ್ಳಬೇಕಾಗುತ್ತದೆ. +ಕೋಮುವಾದಿ ಬಹುಸಂಖ್ಯಾತರು, ಬಹುಸಂಖ್ಯಾತರಾಗಿ ಉಳಿದು,ರಾಜಕೀಯವಾಗಿ ಸಲ್ಲದ ಬಹುಮತೀಯರ ಹಕ್ಕುಗಳನ್ನು ಹೊಂದುವ ಪಟ್ಟು ಹಿಡಿಯುತ್ತಾರೆ ಅನ್ನುವ ಹಿನ್ನೆಲೆಯಲ್ಲಿ ಹೆಚ್ಚುವರಿ ಭಾಗ ಪಡೆದೂ ಅಲ್ಪ ಸಂಖ್ಯಾತರ ಗುಂಪೊಂದು ಅಲ್ಪಸಂಖ್ಯಾತವಾಗಿಯೇ ಉಳಿಯುತ್ತದೆ ಎನ್ನುವುದನ್ನು ಒಪ್ಪಿಕೊಳ್ಳಬೇಕಾಗುತ್ತದೆ. +ಆದರೆ ಪೂರ್ಣ ಸೋಲಿಗೂ ಹೆಚ್ಚು ಕಡಿಮೆ ಗೆಲುವೆಂದೇ ಹೇಳಬಹುದಾದ ಆದರೆ ಗೆಲುವಲ್ಲದ ಸೋಲಿಗೂ ವ್ಯತ್ಯಾಸವಿದೆ. +ಇದು ಹೇಗೆಂದರೆ,ಕ್ರಿಕೆಟ್‌ ಆಟಗಾರರು ಕೆಲವು ರನ್‌ಗಳ ಅಂತರದಿಂದ ಸೋಲುವುದಕ್ಕೂ ನಡುವಿನ ವ್ಯತ್ಯಾಸವಿದ್ದಂತೆ. +ಇನ್ನಿಂಗ್ಸ್‌ ಅಂತರದ ಸೋಲು ಹಾಗಲ್ಲ. +ಈ ರೀತಿಯ ನಿರಾಸೆ ಒಂದು ಅಲ್ಪಸಂಖ್ಯಾತ ಗುಂಪಿನ ರಾಜಕೀಯ ಜೀವನದಲ್ಲಿ ಉಂಟಾದರೆ ಅದು ಅವರ ನೈತಿಕ ಪತನಕ್ಕೆ, ನಿರಾಸೆಗೆ ದಾರಿ ಮಾಡಿಕೊಡುತ್ತದೆ. +ಈ ನಿಟ್ಟಿನಲ್ಲಿ ನೋಡಿದಾಗ, ಶೇಕಡಾವಾರು ಜನಸಂಖ್ಯೆ ಆಧಾರಿತ ಪ್ರಾತಿನಿಧ್ಯಕ್ಕೆ ಬಹುಸಂಖ್ಯಾತರುತ್ತ ಪಟ್ಟು ಹಿಡಿಯುವುದು ತಪ್ಪು . +ಅಲ್ಪಸಂಖ್ಯಾತರಿಗೆ ಬೇಕಾಗಿರುವುದು ಕೇವಲ ಹೆಚ್ಚಿನ ಪ್ರಾತಿನಿಧ್ಯವಲ್ಲ,ಸಕ್ರಿಯ ಪರಿಣಾಮಕಾರಿಯಾದ ಪ್ರಾತಿನಿಧ್ಯ. +ಪರಿಣಾಮಕಾರಿ ಪ್ರಾತಿನಿಧ್ಯವೆಂದರೇನು ? +ಸಹಜವಾಗಿಯೇ ಬಹುಸಂಖ್ಯಾತರ ಬಹುಮತದ ಮುಂದೆ ತಾವು ಏನೂ ಮಾಡಲು ಸಾಧ್ಯವಿಲ್ಲ ಎನ್ನುವ ಸ್ಥಿತಿಯಿಂದ ಪಾರಾಗಲು ಸಹಾಯಕವಾಗಬಲ್ಲ ಸಂಖ್ಯೆಯಲ್ಲಿ ಅಲ್ಪಸಂಖ್ಯಾತರ ಪ್ರಾತಿನಿಧ್ಯ ಇರುವುದರ ಮೇಲೆ ಅವರ ಪರಿಣಾಮಕಾರಿತ್ವ ಆಧಾರಿತವಾಗಿರುತ್ತದೆ. +ಏಕೆಂದರೆ ಒಂದೇ ಅಲ್ಪಸಂಖ್ಯಾತ ಗುಂಪಿನ ಅಥವಾ ಕೆಲವು ಗುಂಪುಗಳು ಒಟ್ಟುಗೂಡಿದಾಗಿನ ಜನಸಂಖ್ಯೆ ಶೇಕಡಾವಾರು ಸಾಕಷ್ಟು ಪ್ರಾತಿನಿಧ್ಯಗಳಿಸಿಕೊಳ್ಳುವ ಪ್ರಮಾಣದಲ್ಲಿದ್ದಾಗ ಪರಿಣಾಮಕಾರಿ ಪ್ರಾತಿನಿಧ್ಯವಾಗುತ್ತದೆ. +ಆದರೆ ಈ ರೀತಿಯ ಸಾಧ್ಯತೆ ಇಲ್ಲದೆಯೂ ಹೋಗಬಹುದು. +ಏಕೆಂದರೆ ಅಲ್ಪಸಂಖ್ಯಾತರ ಜನಸಂಖ್ಯೆ ಶೇಕಡಾವಾರು ಒಂದನ್ನೇ ಪ್ರಾತಿನಿಧ್ಯದ ಆಧಾರವೆಂದು ತೆಗೆದುಕೊಂಡಾಗ ಪರಿಣಾಮಕಾರಿ ಪ್ರಾತಿನಿಧ್ಯಗಳಿಸಿಕೊಳ್ಳುವದು ಅಸಾಧ್ಯವಾಗುತ್ತದೆ. +ಆದರೆ ಈ ಆಧಾರದ ಮೇಲೆ ಪ್ರಾತಿನಿಧ್ಯವಿರಬೇಕೆಂದು ಪಟ್ಟುಹಿಡಿಯುವುದೆಂದರೆ ಅಲ್ಬ ಸಂಖ್ಯಾತರ ಪ್ರಾತಿನಿಧ್ಯದ ಹಕ್ಕು ಮತ್ತು ರಕ್ಷಣೆಗಳನ್ನು ಅವಹೇಳನನ ಮಾಡಿದಂತಾಗುತ್ತದೆ. +ಹಾಗಾಗದಿರಲು ಬಹುಸಂಖ್ಯಾತರಿಗೆ ಅವರ ಜನಸಂಖ್ಯೆಯ ಶೇಕಡಾವಾರಿನ ಮೇಲೆ ಪಡೆಯುವ ಪ್ರಾತಿನಿಧ್ಯದಿಂದ ಕಡಿತ ಮಾಡಿ ಅಲ್ಪಸಂಖ್ಯಾತರ ಪ್ರಾತಿನಿಧ್ಯದ ಹಕ್ಕಿನ ರಕ್ಷಣೆ ಮಾಡುವುದು ಅನಿವಾರ್ಯವಾಗುತ್ತದೆ. +ಬಹುಸಂಖ್ಯಾತರು ನ್ಯಾಯವಂತರೂ, ನಿಸ್ಕಹರೂ ಆಗಿರಬೇಕೆಂದರೆ ಈ ಕಡಿತಕ್ಕೆ ಅವರು ಒಪ್ಪಲೇಬೇಕು. +ಇದು ಹೊಂದಾಣಿಕೆಯ ಪ್ರಶ್ನೆಯೇ ಹೊರತು, ತಾತ್ವಿಕ ಪ್ರಶ್ನೆಯಲ್ಲ. +ಆದ್ದರಿಂದ ಹೆಚ್ಚುವರಿ ಪ್ರಾತಿನಿಧ್ಯದ ತತ್ವಕ್ಕೆ ಯಾವುದೇ ರೀತಿಯ ತಗಾದೆಯೂ ಇರುವಂತಿಲ್ಲ. +ಹೆಚ್ಚುವರಿ ಬೇಡಿಕೆ ಎಲ್ಲಾ ಅಲ್ಪಸಂಖ್ಯಾತರಿಗೆ ಸೇರಿದ್ದು ಮತ್ತು ಎಲ್ಲೆಲ್ಲಿ ಬಹುಸಂಖ್ಯಾತರು ಹೆಚ್ಚಿನ ಸಂಖ್ಯೆಯಲ್ಲಿರುತ್ತಾರೋ, ಅಲ್ಲಲ್ಲಿ ಪರಿಶಿಷ್ಟಾತಿಯವರು ಅಲ್ಪಸಂಖ್ಯಾತರ ಜೊತೆ ಸೇರಬೇಕು. +ಆದರೆ ಹಾಲಿ ಇರುವ ಹೆಚ್ಚುವರಿಯ ಸಮಸ್ಯೆಯೆಂದರೆ ವಿವಿಧ ಅಲ್ಪಸಂಖ್ಯಾತರಿಗೆ ನಿಗದಿಪಡಿಸಿರುವ ಅಸಮಾನ ಹಂಚಿಕೆ. +ಕೆಲವು ಅಲ್ಪಸಂಖ್ಯಾತರು ಅದರಲ್ಲಿ ಸಿಂಹಪಾಲು ಪಡೆದಿದ್ದರೆ. +ಅಸ್ಪಶ್ಯರಂಥವರಿಗೆ ಏನೂದಕ್ಕಿಲ್ಲ. +ಒಂದು ತಾತ್ವಿಕ ನೆಲೆಯನ್ನಾಧರಿಸಿ ಈ ನ್ಯೂನತೆಯನ್ನು ಸರಿಪಡಿಸಿ ಎಲ್ಲರಿಗೂ ಸರಿಯಾದ ಭಾಗ ದಕ್ಕುವಂತೆ ಹಂಚಿಕೆ ಮಾಡಬೇಕಾಗಿದೆ. +(೩) ಚುನಾವಣಾ ಕ್ಷೇತ್ರಗಳು ಪರಿಶಿಷ್ಟ ವರ್ಗಗಳಿಗೆಂದು ನಿಗದಿಯಾಗಿರುವ ಸ್ಥಾನಗಳಿಗೆ ನಡೆಯುವ ಚುನಾವಣಾ ಕ್ರಮದ ಬಗ್ಗೆ ಪೂಜಾ ಒಪ್ಪಂದದ ೨,೩ ಮತ್ತು ೪ ನೇ ಅಧಿನಿಯಮಗಳಲ್ಲಿ ವಿಶದಪಡಿಸಲಾಗಿದೆ. +ಅದು ಎರಡುರೀತಿಯ ಚುನಾವಣೆಗಳಿಗೆ ಅವಕಾಶ ಕೊಟ್ಟಿದೆ. +(೧) ಪ್ರಾಥಮಿಕ ಚುನಾವಣೆ (೨) ಕೊನೆಯ ಚುನಾವಣೆ. +ಪ್ರಾಥಮಿಕ ಚುನಾವಣೆಯಲ್ಲಿ ಪರಿಶಿಷ್ಟ ಜಾತಿಗಳ ಮತದಾರರು ಪ್ರತ್ಯೇಕವಾಗಿ ಮತ ಚಲಾಯಿಸುತ್ತಾರೆ. +ಅದಿರುವುದು ಕೇವಲ ಕೊನೆಯ ಚುನಾವಣೆಯಲ್ಲಿ ಪರಿಶಿಷ್ಟ ವರ್ಗಗಳಿಗೆ ಮೀಸಲಾದ ಸ್ಥಾನಗಳಿಗೆ ಸ್ಪರ್ಧಿಸುವ ಅರ್ಹತೆ ಪಡೆಯಲು ಮಾತ್ರ ಕೊನೆಯ ಚುನಾವಣೆಯಲ್ಲಿ ಇತರ ಎಲ್ಲಾ ಹಿಂದೂಗಳು ಮತ್ತು ಪರಿಶಿಷ್ಟ ಜಾತಿಗಳವರು ಜಂಟಿಯಾಗಿ ಮತ ಚಲಾಯಿಸುತ್ತಾರೆ. +ಮತ್ತು ಫಲಿತಾಂಶವನ್ನು ಅದೇ ನಿರ್ಧರಿಸುತ್ತದೆ. + ಪೂನಾ ಒಪ್ಪಂದದ ೫ ನೇ ಕಲಮು ಈ ಪ್ರಾಥಮಿಕ ಚುನಾವಣೆಗಳು ೧ಂ ವರ್ಷ ಅವಧಿಗೆ ಮಾತ್ರ ಎಂದು ವಿಧಿಸುತ್ತದೆ. +೧೯೪೭ ರ ನಂತರ ನಡೆಯುವ ಚುನಾವಣೆಗಳಲ್ಲಿ ಮೀಸಲು ಕ್ಷೇತ್ರಗಳು ಮಾತ್ರ ಇರುತ್ತವೆ ಮತ್ತು ಎಲ್ಲರೂ ಜಂಟಿಯಾಗಿಯೇ ಮತ ಚಲಾಯಿಸುತ್ತಾರೆ. +೩.ಹಿಂದೂಗಳು ಈ ಎರಡು ಚುನಾವಣೆಗಳ (ಪ್ರಾಥಮಿಕ ಮತ್ತು ಕೊನೆಯ) ಪದ್ಧತಿಯನ್ನು ಮತ್ತಷ್ಟು ಕಾಲ ವಿಸ್ತರಿಸಲು ಒಪ್ಪಿಕೊಂಡರೂ ಅದು ಪರಿಶಿಷ್ಟ ಜಾತಿಯವರಿಗೆ ತೃಪ್ತಿಕೊಡದು. +ಪ್ರಾಥಮಿಕ ಚುನಾವಣೆಗಳ ಮುಂದುವರಿಕೆಗೆ ಎರಡು ತಕರಾರುಗಳಿವೆ. +ಮೊದಲನೆಯದಾಗಿ ಅದು ಪರಿಶಿಷ್ಟರು ತಮ್ಮ ಅತ್ಯುನ್ನತ ಅಭ್ಯರ್ಥಿಯನ್ನು ಆಯ್ಕೆ ಮಾಡಲು ಸಹಾಯಕವಾಗಿಲ್ಲ. +ಇಲ್ಲಿ ಕೊನೆಗೆ ಲಗತ್ತಿಸಿರುವ ಪರಿಶಿಷ್ಟ ೩ ನ್ನು ನೋಡಿದರೆ ಪ್ರಾಥಮಿಕ ಚುನಾವಣೆಗಳಲ್ಲಿ ಅತಿ ಹೆಚ್ಚು ಮತಪಡೆಯುವ ಪರಿಶಿಷ್ಟ ಜಾತಿಗಳ ಅಭ್ಯರ್ಥಿ ಕೊನೆಯ ಚುನಾವಣೆಯಲ್ಲಿ ಸೋಲುವುದೂ, ಪ್ರಾಥಮಿಕ ಚುನಾವಣೆಯಲ್ಲಿ ಅತಿ ಕನಿಷ್ಠ ಮತಪಡೆದು ಸೋಲುವ ಪರಿಶಿಷ್ಟಜಾತಿಗಳ ಅಭ್ಯರ್ಥಿ ಕೊನೆಯ ಚುನಾವಣೆಯಲ್ಲಿ ಗೆಲ್ಲುವುದೂ ಸ್ಪಷ್ಟವಾಗುತ್ತದೆ. +ಪ್ರಾಥಮಿಕ ಚುನಾವಣೆಯೆನ್ನುವುದು ಬಹುತೇಕ ಒಂದು ನಾಟಕವಾಗಿ ಬಿಟ್ಟಿದೆ. +ಅದರಿಂದ ಅಂಥ ಪ್ರಯೋಜನವೇನೂ ಕಾಣುತ್ತಿಲ್ಲ. +ಕಳೆದ ಚುನಾವಣೆಗಳಲ್ಲಿ ಪರಿಶಿಷ್ಟ ವರ್ಗಗಳಿಗೆ ಮೀಸಲಾದ ೧೫೧ ಕ್ಷೇತ್ರಗಳ ಪೈಕಿ ಕೇವಲ ೪೩ ಕ್ಷೇತ್ರಗಳಲ್ಲಿ ಪ್ರಾಥಮಿಕ ಚುನಾವಣೆ ನಡೆಯಿತು. +ಯಾಕೆಂದರೆ ಪರಿಶಿಷ್ಟ ಜಾತಿಗಳ ಅಭ್ಯರ್ಥಿಗಳಿಗೆ ಎರಡು-ಪ್ರಾಥಮಿಕ ಮತ್ತು ಕೊನೆಯ-ಚುನಾವಣೆಗಳಿಗೆ ತಗುಲುವ ವೆಚ್ಚವನ್ನು ಭರಿಸಲು ಸಾಧ್ಯವೇ ಇಲ್ಲ. +ಅಂಥ ವ್ಯವಸ್ಥೆಯನ್ನು ಉಳಿಸಿಕೊಳ್ಳುವುದರಲ್ಲಿ ಯಾವುದೇ ಪ್ರಯೋಜನವಿಲ್ಲ. +ಪೂನಾ ಒಪ್ಪಂದದ ಪ್ರಕಾರ ಇನ್ನು ಮುಂದೆ ಜಾರಿಗೆ ಬರುವ ಜಂಟಿ ಮತದಾನದ ವ್ಯವಸ್ಥೆಯಲ್ಲಿ ಮೀಸಲು ಸ್ಥಾನಗಳಿಗೆ ನಡೆಯುವ ಚುನಾವಣೆಗಳಂತೂ ಇನ್ನೂ ಅಧ್ವಾನವಾಗಿರುತ್ತವೆ. +ಪರಿಶಿಷ್ಟ ವರ್ಗಗಳ ಮತದಾನದ ಹಕ್ಕನ್ನು ಹೇಗೆ ಪೂರ್ಣ ನಕಾರಗೊಳಿಸಿ ಬಿಡಬಹುದು ಎಂದುದನ್ನು ಕಳೆದ ಚುನಾವಣೆಗಳ ಫಲಿತಾಂಶಗಳು ಸಾಬೀತು ಮಾಡಿದುವು. +ಪರಿಶಿಷ್ಟ ೩ ರಲ್ಲಿ ಕೊಟ್ಟಿರುವ ಅಂಕಿ-ಅಂಶಗಳನ್ನು ನೋಡಿದರೆ ಹೇಗೆ ಹಿಂದೂ ಓಟುಗಳು ಪರಿಶಿಷ್ಟ ಜಾತಿಗಳ ಅಭ್ಯರ್ಥಿಗಳ ಆಯ್ಕೆಯನ್ನು ತೀರ್ಮಾನಿಸಿವೆ ಎಂದು ಸ್ಪಷ್ಟವಾಗುತ್ತದೆ. +ಹಿಂದೂಗಳು ಪ್ರಾಥಮಿಕ ಚುನಾವಣೆಯಲ್ಲಿ ಸೋತ ಪರಿಶಿಷ್ಟ ಜಾತಿ ಅಭ್ಯರ್ಥಿಗಳನ್ನು ಗೆಲ್ಲಿಸಿದ್ದಾರೆ. + ಹಿಂದೂಗಳ ಮತ್ತು ಪರಿಶಿಷ್ಟ ಜಾತಿಗಳ ಓಟುಗಳ ನಡುವೆ ಇರುವ ಅಗಾಧ ಅಂತರವೇ ಇದಕ್ಕೆ ಮುಖ್ಯ ಕಾರಣ; + ಸೈಮನ್‌ ಸಮಿತಿಯಂತೂ ಸಣ್ಣ ಪ್ರಮಾಣದಲ್ಲಿರುವ ಪರಿಶಿಷ್ಟ ಜಾತಿಯವರ ಓಟುಗಳು ಮಿಸಲು ಕ್ಷೇತ್ರಗಳು ಹೇಗೆ ನಿಷ್ಠಿಯವಾಗುತ್ತವೆ ಎನ್ನುವುದನ್ನು ಸ್ಪಷ್ಟವಾಗಿಯೇ ಗುರುತಿಸಿದೆ. +ಈ ಅಸಮ ಅಂತರವನ್ನು ಕಡೆಗಣಿಸಲಾಗದು. +ವಯಸ್ಕ ಮತದಾನವಿರುವವರೆಗೂ ಅದು ಇರುತ್ತದೆ. +ಆದ್ದರಿಂದ ನ್ಯೂನತೆ ಇಲ್ಲದೆ ಪರಿಶಿಷ್ಟ ಜಾತಿಗಳ ನಿಜವಾದ ಅಭ್ಯರ್ಥಿಗಳು ಆರಿಸಿ ಬರುವಂಥ ಒಂದು ಸೂಕ್ತಕ್ರಮವನ್ನು ಕೈಗೊಳ್ಳುವುದು ಅನಿವಾರ್ಯ. +ಇಂಥ ಒಂದು ವಿಧಾನದಲ್ಲಿ ಈ ಕೆಳಗೆ ನಮೂದಿಸಿರುವ ಅಂಶವನ್ನು ರದ್ದುಪಡಿಸಬೇಕಾಗುತ್ತದೆ. +ಅನಗತ್ಯ ಕಾರಣವಾಗುವುದರಿಂದ ಪ್ರಾಥಮಿಕ ಚುನಾವಣೆಗಳನ್ನು ಹಾಗೂ (1) ಅದರ ಜಾಗದಲ್ಲಿ ಪ್ರತ್ಯೇಕ ಚುನಾವಣಾ ವ್ಯವಸ್ಥೆಯನ್ನು ಪರ್ಯಾಯವಾಗಿಸ ಬೇಕಾಗುತ್ತದೆ. +ರಾಜಕೀಯ ಕಣದಲ್ಲಿ ಪರಿಶಿಷ್ಟ ಜಾತಿಗಳ ಮತ್ತು ಇತರ ಹಿಂದೂಗಳ ನಡುವೆ ವೈಷಮ್ಯಕ್ಕೆ ದಾರಿ ಮಾಡಿಕೊಟ್ಟಿರುವ ವಿಷಯಗಳಲ್ಲಿ ಮತದಾನವೂ ಒಂದು ಪರಿಶಿಷ್ಟ ಜಾತಿಯವರಂತೂ ಪ್ರತ್ಯೇಕ ಚುನಾವಣಾ ವ್ಯವಸ್ಥೆಯೇ ಬೇಕೆಂದು ಪಟ್ಟು ಹಿಡಿಯುತ್ತಾರೆ. +ಹಿಂದೂಗಳು ಅಷ್ಟೇ ತೀಕ್ಷ್ಣವಾಗಿ ಅದನ್ನು ವಿರೋಧಿಸುತ್ತಾರೆ. +ಈ ವೈರತ್ವವನ್ನು ನಿವಾರಿಸಿ, ಇಬ್ಬರ ಮಧ್ಯೆ ಶಾಂತಿಯುತ ಸಹಬಾಳ್ವೆ ಸಾಧ್ಯವಾಗಬೇಕಾದರೆ,ಒಂದು ಒಪ್ಪಂದಕ್ಕೆ ಬರಲೇಬೇಕು. +ಅದಕ್ಕಾಗಿ ಅವರ ವಾದದಲ್ಲಿರುವ ಸರಿ-ತಪ್ಪುಗಳನ್ನು ಗುರುತಿಸಿ ಪರಿಹಾರ ಕಂಡುಹಿಡಿಯಬೇಕು. +ಪರಿಶಿಷ್ಟಜಾತಿಗಳವರು ಅಲ್ಪಸಂಖ್ಯಾತರಲ್ಲ. +ಪರಿಶಿಷ್ಟಜಾತಿಗಳವರು ಹಿಂದೂ ಧರ್ಮದವರೇ ಆದ್ದರಿಂದ ಅವರಿಗೆ ಪ್ರತ್ಯೇಕ ಚುನಾವಣಾ ಸೌಲಭ್ಯವಿರಕೂಡದು. + ಪ್ರತ್ಯೇಕ ಚುನಾವಣೆಗಳು ಅಸ್ಪೃಶ್ಯತೆಯನ್ನು ಮುಂದುರಿಸಿಕೊಂಡು ಹೋಗಲುಸಹಾಯಕವಾಗುತ್ತವೆ. + ಪ್ರತ್ಯೇಕ ಚುನಾವಣಾ ವ್ಯವಸ್ಥೆ ರಾಷ್ಟ್ರವಿರೋಧಿ - ಮತ್ತು ಪ್ರತ್ಯೇಕ ಚುನಾವಣೆಗಳು ಬ್ರಿಟಿಷ್‌ ವಸಾಹತು ಶಾಹಿಗಳ ಕೈಯಲ್ಲಿ ದಾಳಿಗಳಂತಾಗಿ ಆ ಸವಲತ್ತು ಇರುವ ಅಲ್ಪಸಂಖ್ಯಾತರನ್ನು ರಾಷ್ಟ್ರೀಯ ಹಿತಕ್ಕೆ ವಿರುದ್ಧವಾಗಿ ವರ್ತಿಸುವಂತೆ ಮಾಡುತ್ತದೆ. +ಈ ವಾದಗಳು ಸಮಂಜಸವಾಗಿವೆಯೇ ? +ಪರಿಶಿಷ್ಟ ಜಾತಿಗಳವರು ಅಲ್ಪಸಂಖ್ಯಾತರಲ್ಲವೆನ್ನುವುದು, “ಅಲ್ಪಸಂಖ್ಯಾತ' ಪದವನ್ನು ತಪ್ಪಾಗಿ ಅರ್ಥಮಾಡಿಕೊಂಡಿರುವುದರ ಫಲ. +ಧರ್ಮದಿಂದ ಬೇರಾಗಿರುವುದೊಂದೇ ಅಲ್ಪಸಂಖ್ಯಾತ ಪಟ್ಟವನ್ನು ಪಡೆಯುವ ಮಾನದಂಡವಲ್ಲ. +ಒಂದು ಸಾಮಾಜಿಕ ವರ್ಗ “ಅಲ್ಪಸಂಖ್ಯಾತವೇ' ಅಥವಾ ಅಲ್ಲವೇ ಎನ್ನುವುದನ್ನು ನಿರ್ಧರಿಸಲು ಸಾಮಾಜಿಕ ತಾರತಮ್ಯ ನಿಜವಾದ ಪರೀಕ್ಷೆ. +“ಅಲ್ಪಸಂಖ್ಯಾತ' ಪದವನ್ನು ವ್ಯಾಖ್ಯಾನಿಸಲು ಧಾರ್ಮಿಕ ನೆಲೆಗಿಂತ ಸಾಮಾಜಿಕ ನೆಲೆಯೇ ಹೆಚ್ಚು ತಾರ್ಕಿಕ ಮತ್ತು ವೈಚಾರಿಕವೆಂದು ಗಾಂಧಿ ಕೂಡ ಅಭಿಪ್ರಾಯಪಟ್ಟಿದ್ದರು. +೨೧ ನೇ ಅಕ್ಟೋಬರ್‌ ೧೯೩೧ ರ "ಹರಿಜನ' ಪತ್ರಿಕೆಯ ಸಂಪಾದಕೀಯದಲ್ಲಿ ಬಹುಸಂಖ್ಯಾತವೆನ್ನುವ ಕಲ್ಪನೆ ಎಂಬ ಶಿರೋನಾಮೆಯಡಿಯಲ್ಲಿ ಬರೆಯುತ್ತಾ,ಭಾರತದಲ್ಲಿ ಪರಿಶಿಷ್ಟ ಜಾತಿಗಳವರು ಮಾತ್ರವೇ ಅಲ್ಪಸಂಖ್ಯಾತರೆಂದು ಅವರು ಅಭಿಪ್ರಾಯಪಟ್ಟದ್ದಾರೆ. +ಪರಿಶಿಷ್ಟ ಜಾತಿಗಳವರು ಹಿಂದೂಗಳಾದ್ದರಿಂದ ಅವರು ಪ್ರತ್ಯೇಕ ಚುನಾವಣೆಯನ್ನು ಬೇಡುವಂತಿಲ್ಲವೆಂದು ವಾದಿಸುವುದೆಂದರೆ, ಆ ವಾದವನ್ನು ಬೇರೆ ರೀತಿಯಲ್ಲಿ ಮಂಡಿಸಿದಂತಾಗುತ್ತದೆ. +ಧಾರ್ಮಿಕ ಸಂಬಂಧದ ತಳಹದಿಯ ಮೇಲೆ ಸಂವಿಧಾನಾತ್ಮಕ ರಕ್ಷಣೆ, ಸವಲತ್ತುಗಳನ್ನು ತೀರ್ಮಾನ ಮಾಡುವುದೆಂದರೆ, ಈ ಧಾರ್ಮಿಕ ಮಾನ್ಯತೆಯ ಜೊತೆಗಿರಬಹುದಾದ ಅಮಾನವೀಯ ಸಾಮಾಜಿಕ ತಾರತಮ್ಯ ಮತ್ತು ತುಳಿತಗಳನ್ನು ಕಡೆಗಣಿಸಿದಂತಾಗುತ್ತದೆ. +ಪ್ರತ್ಯೇಕ ಚುನಾವಣಾ ಸವಲತ್ತುಗಳನ್ನು ಪಡೆದಿರುವ ಅಲ್ಪಸಂಖ್ಯಾತರು ಧಾರ್ಮಿಕ ಅಲ್ಪಸಂಖ್ಯಾತರೂ ಆಗಿರುವುದರಿಂದ, ಧಾರ್ಮಿಕ ಪ್ರತ್ಯೇಕತೆಯೊಂದಿಗೆ ಪ್ರತ್ಯೇಕ ಚುನಾವಣಾ ಕ್ಷೇತ್ರಗಳು ಅಂಟಿಕೊಂಡಿವೆ ಎಂಬ ನಂಬಿಕೆ ಮೂಡಿದೆ. +ಅದು ಸರಿಯಲ್ಲ. +ಮುಸ್ಲಿಮರು ಈ ಸವಲತ್ತುಗಳನ್ನು ಪಡೆದಿರುವುದು ಅವರು ಜೇರೆ ಧರ್ಮದವರೆಂದಲ್ಲ. +ಹಿಂದೂಗಳು ಮತ್ತು ಮುಸ್ಲಿಮರ ನಡುವಿನ ಸಾಮಾಜಿಕ ಸಂಬಂಧಗಳಲ್ಲಿ ತಾರತಮ್ಯಗಳಿವೆ ಎನ್ನುವ ಕಾರಣಕ್ಕಾಗಿ ಮತ್ತು ಇದೇ ಮೂಲಭೂತ ಕಾರಣ. +ಇದನ್ನೇ ಬೇರೆ ಮಾತುಗಳಲ್ಲಿ ಹೇಳಬೇಕಾದರೆ,ಪ್ರತ್ಯೇಕ ಚುನಾವಣಾ ವ್ಯವಸ್ಥೆಗೂ, ಧರ್ಮಕ್ಕೂ ಯಾವ ಸಂಬಂಧವೂ ಇಲ್ಲ. +ಅದು ಸಾಮಾಜಿಕ ಕಾರಣಗಳಿಂದ ಪ್ರೇರಿತವಾದದ್ದು. +೧೯೩೫ ರ ಭಾರತ ಸರ್ಕಾರಿ ಕಾಯ್ದೆಯ ಪ್ರಕಾರ ಭಾರತೀಯ ಕ್ರೈಸ್ತರಿಗೆ ಈ ಸವಲತ್ತು ಕೊಟ್ಟಿರುವುದರಲ್ಲೂ ಈ ವಿಷಯವನ್ನು ಸ್ಪಷ್ಟಪಡಿಸಲಾಗಿದೆ. +ಯುರೋಪಿಯನ್ನರು,ಆಂಗ್ಲೋ ಇಂಡಿಯನ್ನರು ಮತ್ತು ಭಾರತೀಯ ಕ್ರೈಸ್ತರೆಂದು ಕ್ರೈಸ್ತರನ್ನು ವಿಭಜಿಸಲಾಗಿದೆ. +ಅವರೆಲ್ಲಾ ಒಂದೇ ಧರ್ಮದ ಅನುಯಾಯಿಗಳಾದರೂ, ಒಂದೊಂದು ವಿಭಾಗದವರಿಗೂ ಪ್ರತ್ಯೇಕ ಚುನಾವಣಾ ವ್ಯವಸ್ಥೆಯ ಸವಲತ್ತು ಕೊಡಲಾಗಿದೆ. +ಈ ಸವಲತ್ತು ಧಾರ್ಮಿಕ ನೆಲೆಯದ್ದಲ್ಲ. +ಸಾಮಾಜಿಕ ಭಿನ್ನತೆಯ ನೆಲೆಯಿಂದ ಪ್ರೇರಿತವಾಗಿದೆಯೆಂದು ಸ್ಪಷ್ಟವಾಗುತ್ತದೆ. +ಹಿಂದೂಗಳು ಮತ್ತು ಅಸ್ಪಶ್ಶರ ನಡುವೆ ಸಾಮರಸ್ಯ ಬೆಳೆಯುವುದರಲ್ಲಿ ಪ್ರತ್ಯೇಕ ಚುನಾವಣೆಗಳು ತೊಡಕಾಗುತ್ತವೆ ಎನ್ನುವ ವಾದಕ್ಕೆ ಮಾನಸಿಕ ಗೊಂದಲಗಳೇ ಕಾರಣ. +ಚುನಾವಣೆಗಳು ನಡೆಯುವುದು ಐದು ವರ್ಷಕ್ಕೊಮ್ಮೆ ಜಂಟಿ ಮತದಾನವೇ ಸರಿ ಎಂದಿಟ್ಟುಕೊಂಡರೂ, ಐದು ವರ್ಷಗಳಲ್ಲಿ ಒಂದು ದಿನ ಮಾತ್ರ ಒಟ್ಟಾಗಿ ಮತಚಲಾಯಿಸಿ, ಮಿಕ್ಕಂತೆ ಉತ್ತರಧೃವ - ದಕ್ಷಿಣಧೃವಗಳಂತೆ ಬದುಕಿದರೆ, ಅಂಥ ಮತದಾನ ಅಸ್ಪಶ್ಯರ - ಹಿಂದೂಗಳ ನಡುವೆ ಸಾಮರಸ್ಯವನ್ನು ಬೆಳೆಸುವುದಾದರೂ ಹೇಗೆ ? +ಹಾಗೆಯೇ,ಪ್ರತ್ಯೇಕ ಚುನಾವಣಾ ವ್ಯವಸ್ಥೆಯ ಪ್ರಕಾರ ಐದು ವರ್ಷಗಳಲ್ಲಿ ಒಂದು ದಿನ ಮಾತ್ರ ಅವರು ಬೇರೆ ಬೇರೆಯಾಗಿ ಮತಚಲಾಯಿಸುವುದಾದರೆ, ಅದು ಹೇಗೆ ಸಾಮರಸ್ಯವನ್ನು ಕೆಡಿಸುತ್ತದೋ, ಅರ್ಥವಾಗುವುದು ಕಷ್ಟ. +ಹಿಂದೂ-ಅಸ್ಪಶ್ಯರ ನಡುವೆ ಸಾಮರಸ್ಯ ಬೆಳೆಸುವುದರಲ್ಲಿ ನಿರತರಾಗಿರುವವರಿಗೆ ಒಂದು ದಿನದ ಪ್ರತ್ಯೇಕ ಮತದಾನ ಹೇಗೆ ಅಡ್ಡಿಯಾಗುತ್ತದೆ ಹಿಂದೂ-ಅಸ್ಸಶ್ಯರ ನಡುವೆ. +ಸಹಭೋಜನ,ಅಂತರ್ಜಾತಿ ವಿವಾಹಗಳು ನಡೆಯುವುದನ್ನು ಪ್ರತ್ಯೇಕ ಚುನಾವಣಾ ವ್ಯವಸ್ಥೆ ಹೇಗೆ ತಪ್ಪಿಸಲು ಸಾಧ್ಯ ? +ಆದ್ದರಿಂದ ಪ್ರತ್ಯೇಕ ಚುನಾವಣಾ ವ್ಯವಸ್ಥೆ ಅವರ ನಡುವಿನ ಪ್ರತ್ಯೇಕತೆಯನ್ನು ಶಾಶ್ವತವಾಗಿ ಮುಂದುವರಿಸುತ್ತದೆ ಎನ್ನುವ ವಾದದಲ್ಲಿ ಯಾವುದೇ ಹುರುಳಿಲ್ಲ. + ಪ್ರತ್ಯೇಕ ಚುನಾವಣಾ ವ್ಯವಸ್ಥೆ ರಾಷ್ಟ್ರವಿರೋಧಿ ಭಾವನೆಗಳಿಗೆ ಕಾರಣವಾಗುತ್ತದೆ ಅನ್ನುವುದೂ ನಮ್ಮ ಅನುಭವಗಳಿಗೆ ವಿರುದ್ಧವಾಗಿದೆ. +ಸಿಖ್‌ ಧರ್ಮದ ಅನುಯಾಯಿಗಳಿಗೆ ಈ ಸವಲತ್ತಿದೆ. +ಸಿಖ್ಜ್ಬರು ರಾಷ್ಟ್ರವಿರೋಧಿಗಳೆಂದು ಹೇಳಲು ಸಾಧ್ಯವಿಲ್ಲ. +೧೯ಂ೯ ರಿಂದಲೂ ಮುಸ್ಲಿಮರಿಗೆ ಪ್ರತ್ಯೇಕ ಚುನಾವಣಾ ವ್ಯವಸ್ಥೆಯಿದೆ. +ಇಂಥ ವ್ಯವಸ್ಥೆಯಲ್ಲಿಯೇ ಜಿನ್ನಾ ಗೆಲ್ಲುತ್ತಿದ್ದದ್ದು. +ಆದರೂ ೧೯೩೫ ರವರೆಗೂ ಜಿನ್ನಾ ರಾಷ್ಟ್ರೀಯತೆಯ ಹರಿಕಾರರಾಗಿದ್ದರು. +ಭಾರತೀಯ ಕ್ರೈಸ್ತರಿಗೂ ಈ ಸವಲತ್ತಿದೆ. +ಆದರೂ ವಾಸ್ತವವಾಗಿ ಕಾಂಗ್ರೆಸ್‌ ಟಿಕೆಟ್‌ ಮೇಲೆ ಆರಿಸಿ ಬಂದಿದ್ದರೂ ಅವರಲ್ಲಿ ಬಹಳಷ್ಟು ಜನ ಕಾಂಗ್ರೆಸ್‌ ಪಕ್ಷಪಾತಿಗಳೆಂದು ರುಜುವಾತಾಗಿದೆ. +ಆದ್ದರಿಂದ ರಾಷ್ಟೀಯತೆಗೂ ಚುನಾವಣಾ ವ್ಯವಸ್ಥೆಗೂ ಯಾವುದೇ ಸಂಬಂಧವಿಲ್ಲ. +ಅವು ಚುನಾವಣಾತೀತವಾದ ಪ್ರಭಾವದ ಫಲವೆಂದು ಹೇಳಬಹುದಾಗಿದೆ. +ಈ ವಾದದಲ್ಲಿ ಯಾವುದೇ ಹುರುಳಿಲ್ಲ. +ಅದು ಪಲಾಯನವಾದವಲ್ಲದೆ ಮತ್ತೇನಲ್ಲ. +ಅದೇನೇ ಇರಲಿ, ಸ್ವತಂತ್ರ ಭಾರತದಲ್ಲಿ ಪ್ರತ್ಯೇಕ ಚುನಾವಣಾ ಕ್ಷೇತ್ರಗಳಿಗೆ ಸಂಬಂಧಿಸಿದ ಇಂಥ ಎಲ್ಲವಾದಗಳಿಗೂ ಪೂರ್ಣ ವಿರಾಮ ಹಾಕಬೇಕು. + ಪ್ರತ್ಯೇಕ ಚುನಾವಣಾ ವ್ಯವಸ್ಥೆಯ ವಿರೋಧಿಗಳ ವಾದವು ಎಲ್ಲ ತರ್ಕಕ್ಕೂ, ಅನುಭವಕ್ಕೂ ಯಾಕೆ ನಿಲುಕುವುದಿಲ್ಲವೆಂದರೆ, ಅವರ ಆ ಬಗೆಗಿನ ನಿಲುವಿನಲ್ಲೇ ಮೂಲಭೂತ ತಪ್ಪಿದೆ. +ಈ ತಪ್ಪು ಎರಡು ರೀತಿಯದು. +ಚುನಾವಣಾ ವ್ಯವಸ್ಥೆಗೂ ಧಾರ್ಮಿಕ ಅಥವಾ ಕೋಮುವಾದಿ ಸಂಬಂಧಗಳಿಗೂ ಯಾವುದೇ ಹೊಂದಾಣಿಕೆ ಸಾಧ್ಯವಿಲ್ಲ. +ಶಾಸಕಾಂಗಗಳಿಗೆ ಅಲ್ಪಸಂಖ್ಯಾತರ ನಿಜ ಪ್ರತಿನಿಧಿಯನ್ನು ಆರಿಸುವ ವ್ಯವಸ್ಥೆಯಲ್ಲದೆ ಈ ಪದ್ಧತಿ ಬೇರೇನೂ ಅಲ್ಲ. +ವ್ಯವಸ್ಥೆ ಅಲ್ಪಸಂಖ್ಯಾತರ ರಕ್ಷಣೆಗೆ ಸಂಬಂಧಿಸಿದ್ದು; ಆದ್ದರಿಂದ ಚುನಾವಣಾಕ್ರಮ ಜಂಟಿಯಾಗಿರಬೇಕೋ ಅಥವಾ ಪ್ರತ್ಯೇಕವಾಗಿರಬೇಕೋ ಎನ್ನುವುದರ ತೀರ್ಮಾನವನ್ನು ಅಲ್ಪಸಂಖ್ಯಾತರಿಗೇ ಬಿಡಬೇಕು. +ಬಹುಸಂಖ್ಯಾತರ ಪ್ರತ್ಯೇಕ ಚುನಾವಣಾ ಬೇಡಿಕೆಯ ಹಾಗೂ ಅಲ್ಪಸಂಖ್ಯಾತರ ಈ ಬೇಡಿಕೆಯ ನಡುವೆ ಇರುವ ವ್ಯತ್ಯಾಸಗಳನ್ನು ತಿಳಿಯುವಲ್ಲಿ ಅವರು ವಿಫಲರಾಗುತ್ತಾರೆ. +ಇಂಥ ಬೇಡಿಕೆಯನ್ನು ಮಂಡಿಸಲು ಬಹುಸಂಖ್ಯಾತರಿಗೆ ಯಾವುದೇ ಹಕ್ಕಿಲ್ಲ. +ಕಾರಣವಂತೂ ಬಹಳ ಸರಳ. +ಅಂಥ ಬೇಡಿಕೆಯ ಪ್ರಕಾರ ಅಲ್ಪಸಂಖ್ಯಾತರ ಒಪ್ಪಿಗೆಯಿಲ್ಲದೆ ಬಹುಸಂಖ್ಯಾತರು ಸರ್ಕಾರ ರಚಿಸುವ ಹಕ್ಕನ್ನು ಪಡೆದಂತಾಗುತ್ತದೆ. +ಅಳಿಸಿಕೊಳ್ಳುವವರ ಒಪ್ಪಿಗೆಯ ಮೇರೆಗೆ ಸರಕಾರ ರಚಿಸಬೇಕೆನ್ನುವ ಪ್ರಸಿದ್ಧ ಜನತಾಂತ್ರಿಕ ಸಂಪ್ರದಾಯಕ್ಕೇ ಇದು ವಿರುದ್ಧವಾದದ್ದು. +ಆದರೆ ಹೇಗಿದ್ದರೂ ಅಲ್ಪಸಂಖ್ಯಾತರು ಬಹುಸಂಖ್ಯಾತರನ್ನುಆಳುವ ಸಂಭವವಿರುವುದಿಲ್ಲವಾದ್ದರಿಂದ ಜನತಾಂತ್ರಿಕ ವ್ಯವಸ್ಥೆಗೆ ವಿರುದ್ಧವಾದ ಅಂಥ ಹಕ್ಕಿನಿಂದ ತಮ್ಮ ಹಿತರಕ್ಷಣೆಗನುಕೂಲವಾಗುವ ಚುನಾವಣಾ ವ್ಯವಸ್ಥೆಯ ಸ್ವರೂಪವನ್ನು ನಿರ್ಧರಿಸುವ ಹಕ್ಕು ಅಲ್ಪಸಂಖ್ಯಾತರಿಗಿದೆಯೆಂದೂ ಒಪ್ಪಿಕೊಳ್ಳುವುದಾದರೆ ಯಾವ ದುಷ್ಪಲವೂ ಸಂಭವಿಸುವುದಿಲ್ಲ. + ಈ ಸಮಸ್ಯೆಯ ಬಗೆಗೆ ತಾಳಬಹುದಾದ ಸರಿಂಯತಾದ ನಿಲುವು ಕೆಳಕಂಡ ಸಿದ್ಧಸತ್ಯಗಳನ್ನವಲಂಬಿಸಿದೆ. +ಚುನಾವಣಾ ವ್ಯವಸ್ಥೆ ಅಲ್ಪಸಂಖ್ಯಾತರ ರಕ್ಷಣೆಯ ಸಾಧನವಾದ್ದರಿಂದ, ಜಂಟಿ ವ್ಯವಸ್ಥೆಯಿರಬೇಕೋ, ಪ್ರತ್ಯೇಕ ವ್ಯವಸ್ಥೆಯಿರಬೇಕೋ ಎನ್ನುವ ಪ್ರಶ್ನೆಯ ತೀರ್ಮಾನವನ್ನು ಅಲ್ಪಸಂಖ್ಯಾತರಿಗೇ ಬಿಡಬೇಕು. +ಅಲ್ಪಸಂಖ್ಯಾತರು, ಬಹುಸಂಖ್ಯಾತರ ಮೇಲೆ ಪ್ರಭಾವ ಬೀರುವಷ್ಟು ದೊಡ್ಡ ಪ್ರಮಾಣದಲ್ಲಿದ್ದರೆ ಅವರು ಜಂಟಿ ಮತದಾನ ಪದ್ಧತಿಯನ್ನೇ ಆರಿಸಿಕೊಳ್ಳುತ್ತಾರೆ; +ಹಾಗಿಲ್ಲದೆ ಕಡಿಮೆ ಪ್ರಮಾಣದಲ್ಲಿದ್ದರೆ -ತಮ್ಮ ಇರುವಿಕೆಯೇ ಅಳಿಸಿ ಹೋಗುವಂಥ ಭಯವಿದ್ದಾಗ ಅವರು ಪ್ರತ್ಯೇಕ ಮತದಾನ ವ್ಯವಸ್ಥೆಯನ್ನು ಆರಿಸಿಕೊಳ್ಳುತ್ತಾರೆ. +ಆಳುವ ವರ್ಗದ ಸ್ಥಿತಿಯಲ್ಲಿರುವುದರಿಂದ ಮತದಾನ ವ್ಯವಸ್ಥೆಯ ತೀರ್ಮಾನದಲ್ಲಿ ಬಹುಸಂಖ್ಯಾತರ ಅಭಿಪ್ರಾಯಕ್ಕೆ ಯಾವ ಪಾತ್ರವೂ ಇರುವಂತಿಲ್ಲ. +ಅಲ್ಪಸಂಖ್ಯಾತರು ಜಂಟಿ ಮತದಾನ ವ್ಯವಸ್ಥೆಯ ಪರವಾಗಿ ತೀರ್ಮಾನಿಸಿದರೆ ಬಹುಸಂಖ್ಯಾತರು ಅದಕ್ಕೆ ಒಪ್ಪಬೇಕು. +ಹಾಗೆಯೇ ಅಲ್ಪಸಂಖ್ಯಾತರು ತಮಗೆ ಪ್ರತ್ಯೇಕ ಮತದಾನವೇ ಬೇಕೆಂಬ ತೀರ್ಮಾನಕ್ಕೆ ಬಂದರೂ ಬಹುಸಂಖ್ಯಾತರು ಅದನ್ನು ತಿರಸ್ಕರಿಸದೆ ಒಪ್ಪಿಕೊಳ್ಳಬೇಕು. +ಅಂದರೆ ಬಹುಸಂಖ್ಯಾತರು ಅಲ್ಪಸಂಖ್ಯಾತರ ತಿರ್ಮಾನಕ್ಕಾಗಿ ಎದುರು ನೋಡಬೇಕು ಮತ್ತು ಅದನ್ನು ಒಪ್ಪಬೇಕು. +ಪೂನಾ ಒಪ್ಪಂದದಲ್ಲಿ ಅಡಕವಾಗಿಲ್ಲ ಎಂಬ ಕಾರಣದಿಂದ ಅದಕ್ಕೆ ಹೊರತಾದದ್ದೆಂದು ಈ ಬೇಡಿಕೆ ಕೋರಬಹುದು. +ಅದು ಸರಿಯಿಲ್ಲ. +ವಾಸ್ತವವಾಗಿ ಅಂಥ ಅವಕಾಶವೊಂದು ಅಲ್ಲಿ ಇಲ್ಲದಿದ್ದರೆಅದು ಆಗ್ಗೆ ಅವಶ್ಯಕವಾಗಿರಲಿಲ್ಲ. +ಎರಡು ಕಾರಣಗಳಿಗಾಗಿ ಈ ರೀತಿ ಮಾಡಲಾಯಿತು. +ಒಂದು,ಪೂನಾ ಒಪ್ಪಂದದ ಸಮಯದಲ್ಲಿ ಕಾನೂನಿನ ಪ್ರಕಾರ ಕಾರ್ಯಾಂಗದಲ್ಲಿ ಯಾವ ಕೋಮಿಗೂ ನಿರ್ದಿಷ್ಟ ಪ್ರಮಾಣದ ಪ್ರಾತಿನಿಧ್ಯವಿರಲಿಲ್ಲ. + ಎರಡು, ಸೂಚನಾ ದಸ್ತಾವೇಜು ಕಾರ್ಯಾಂಗದಲ್ಲಿ ಕೋಮುಗಳ ಪ್ರಾತಿನಿಧ್ಯವನ್ನು ಸರಿಯಿಸುವಂತೆ ನೋಡಿಕೊಳ್ಳುವ ಅವಶ್ಯಕತೆ ಪ್ರಾಂತ ಗೌರ್ನರುಗಳಿಗಿತ್ತು. +ಪರಿಶಿಷ್ಟ ಜಾತಿಗಳಿಗಿರಬೇಕಾದ ಪ್ರಾತಿನಿಧ್ಯದ ಪ್ರಮಾಣವನ್ನು ನಿಗದಿಪಡಿಸಬೇಕಾದ ಅವಶ್ಯಕತೆಯಿದೆ ಎಂದು ಈಗ ಅನುಭವ ತೋರಿಸಿಕೊಟ್ಟಿದೆ. +ಇದು ಹೊಸ ಬೇಡಿಕೆಯೇನೂ ಅಲ್ಲ. +ಪರಿಶಿಷ್ಟ ಜಾತಿಗಳಿಗೆ ಸರ್ಕಾರಿ ಸೇವೆಯಲ್ಲಿ ಪ್ರಾತಿನಿಧ್ಯವಿರಬೇಕೆಂದು ಪೂನಾ ಒಪ್ಪಂದದ ೮ ನೇ ಅಧಿನಿಯಮ ಹೇಳುತ್ತದೆ. +ಆದರೆ ಅದು ಪ್ರಾತಿನಿಧ್ಯದ ಪ್ರಮಾಣದ ಬಗ್ಗೆ ಏನೂ ಹೇಳುವುದಿಲ್ಲ. +ಈ ಬೇಡಿಕೆ ಸಮಂಜಸವಾದದ್ದೆಂದು ಭಾರತ ಸರ್ಕಾರ ಒಪ್ಪಿದೆ ಮತ್ತು ಇರಬೇಕಾದ ಪ್ರಾತಿನಿಧ್ಯದ ಪ್ರಮಾಣ ಕುರಿತೂ ವ್ಯಾಖ್ಯಾನಿಸಿದೆ. +ಅದಕ್ಕೆ ಒಂದು ಕಾಯ್ದೆಯ ನೆಲೆ ಒದಗಿಸುವುದೊಂದೆ ಈಗ ಉಳಿದಿರುವ ಅಂಶ. +ಇದು ಹೊಸ ಬೇಡಿಕೆಯೇನೂ ಅಲ್ಲ. +ಪೂನಾ ಒಪ್ಪಂದದ ೯ ನೇ ಅಧಿನಿಯಮ ಪರಿಶಿಷ್ಟ ಜಾತಿಗಳವರ ವಿದ್ಯಾಭ್ಯಾಸಕ್ಕಾಗಿ ಸಾಕಾಗುವಷ್ಟು ಹಣವನ್ನು ಮೀಸಲಿಟ್ಟು ಖರ್ಚು ಮಾಡಬೇಕೆಂದು ಸ್ಪಷ್ಟಪಡಿಸುತ್ತದೆ. +ಸರ್ಕಾರ ಈ ಬಾಬ್ತು ಎಷ್ಟು ಜವಾಬ್ದಾರಿ ಹೊರುತ್ತದೆ ಎನ್ನುವುದನ್ನು ನಿರ್ದಿಷ್ಟಗೊಳಿಸುವುದೇ ಇಲ್ಲಿಯ ಅಗತ್ಯವಾಗಿದೆ. +ಈ ವಿಷಯದಲ್ಲಿ ೧೯೩೫ ರ ಭಾರತ ಸರ್ಕಾರದ ಕಾಯ್ದೆಯ ೮೩ ನೇ ವಿಭಾಗ,ಆಂಗ್ಲೋ ಇಂಡಿಯನ್ನರ, ಯುರೋಪಿಯನ್ನರ ವಿದ್ಯಾಭ್ಯಾಸಕ್ಕೆ ಸಂಬಂಧಪಟ್ಟಂತೆ ಮತ್ತು ಅಲಿಗಢ್‌ಮತ್ತು ಬನಾರಸ್‌ ಹಿಂದೂ ವಿಶ್ವವಿದ್ಯಾಲಯಗಳಿಗೆ ಕೇಂದ್ರಸರ್ಕಾರದ ಅನುದಾನ ಕುರಿತಂತೆ ಹೇಳುವುದರತ್ತ ಗಮನಹರಿಸಬೇಕು . + ಅದೇ ಪ್ರಕಾರ ಪರಿಶಿಷ್ಟ ಜಾತಿಗಳ ವಿದ್ಯಾಭ್ಯಾಸಕ್ಕೆ ಅನುದಾನ - ಹಣ ವಿನಿಯೋಗಿಸಬೇಕು. +ಇದು ಇಂದಿನ ಪರಿಸ್ಥಿತಿ ಸಮರ್ಥಿಸುವ ಹೊಸ ಬೇಡಿಕೆ. +ಹಿಂದೂಗಳು ಹಾಲಿ ಗ್ರಾಮದೊಳಗೆ ವಾಸಿಸಿದರೆ, ಅಸ್ಪಶ್ಯರು ಪ್ರತ್ಯೇಕ ಪ್ರದೇಶಗಳಲ್ಲಿ ವಾಸಿಸುತ್ತಾರೆ. +ಇಲ್ಲಿನ ಉದ್ದೇಶವೆಂದರೆ, ಅಸ್ಪಶ್ಯರನ್ನು ಹಿಂದೂಗಳ ಕಪಿಮುಷ್ಠಿಯಿಂದ ಪಾರುಮಾಡುವುದೇ ಆಗಿದೆ. +ಈಗಿರುವ ಪರಿಸ್ಥಿತಿ ಮುಂದುವರೆಯುವವರೆಗೂ ಹಿಂದೂಗಳ ಹಿಡಿತದಿಂದ ಅಸ್ಪಶ್ಯರು ಬಿಡಿಸಿಕೊಳ್ಳುವುದಾಗಲಿ, ಅಸ್ಪಶ್ಯತೆಯಿಂದ ಪಾರಾಗುವುದಾಗಲಿ ಸಾಧ್ಯವಿಲ್ಲ. +ಒಂದೇ ಗ್ರಾಮದಲ್ಲಿ ಹತ್ತಿರ ಹತ್ತಿರ ವಾಸಮಾಡುವ ಸ್ಥಿತಿಯೇ ಅಸ್ಪಶ್ಯರಿಗೆ ಅಸ್ಪಶ್ಶರೆಂದು ಹಣೆಪಟ್ಟಿ ಹಚ್ಚಲು ಮತ್ತು ಹಿಂದೂಗಳು ಅವರನ್ನು ಅಸ್ಪಶ್ಯರೆಂದು ಕಾಣಲು ಸಹಾಯಕವಾಗಿದೆ. +ಹೇಳಿ ಕೇಳಿ ಭಾರತ ಹಳ್ಳಿಗಳ ದೇಶ ಮತ್ತು ಈ ಗ್ರಾಮ ವ್ಯವಸ್ಥೆ ಎಲ್ಲಿಯವರೆಗೆ ಅಸ್ಪಶ್ಯರನ್ನು ಗುರುತಿಸಲು, ಹೊರಗಿಡಲು ಪೂರಕವಾಗಿ ಬಿಡುತ್ತದೋ ಅಲ್ಲಿಯವರೆಗೆ ಅಸ್ಪಶ್ಯತೆಯಿಂದ ಅವರಿಗೆ ಮುಕ್ತಿಯಿಲ್ಲ. +ಈ ಗ್ರಾಮ ವ್ಯವಸ್ಥೆ ಮತ್ತು ಪ್ರತ್ಯೇಕತೆಗಳು ಅಸ್ಪಶ್ವತೆಯನ್ನು ಹೇರಿ ಅದನ್ನು ಮುಂದುವರಿಸುತ್ತಿವೆ. +ಆದ್ದರಿಂದ ಈ ವ್ಯವಸ್ಥೆಯನ್ನು ಅಂತ್ಯಗೊಳಿಸಬೇಕೆಂದು ತಗಾದೆ ಮಾಡುತ್ತಾರೆ . + ಸಾಮಾಜಿಕವಾಗಿ ಬೇರೆಯಾಗಿರುವ ತಮ್ಮನ್ನು ಭೌಗೋಳಿಕವಾಗಿ ಮತ್ತು ಪ್ರಾಂತಿಕವಾಗಿ ಬೇರೆ ಮಾಡಬೇಕೆಂದೂ ಒತ್ತಾಯಿಸುತ್ತಾರೆ. +ಅಸ್ಪಶ್ಶರೇ ಪ್ರತ್ಯೇಕವಾಗಿ ವಾಸಿಸುವಂಥ - ಯಾವುದೇ ಮೇಲು - ಕೀಳು ಭಾವನೆಗಳಿಗೆ, ಸ್ಹಶ್ಯ ದ ಅಸ್ಪಶ್ಯ ಭೇದಗಳಿಗೆ ಅವಕಾಶವಿಲ್ಲದ ಪ್ರತ್ಯೇಕ ಗ್ರಾಮಗಳ ವ್ಯವಸ್ಥೆ ಮಾಡಬೇಕೆಂದು ಅವರು ಒತ್ತಾಯಿಸುತ್ತಾರೆ. +ಈ ಪ್ರತ್ಯೇಕ ವಾಸ್ತವ್ಯದ ಬೇಡಿಕೆಗೆ ಹಳ್ಳಿಯಲ್ಲಿನ ಅಸ್ಪಶ್ಯರ ಆರ್ಥಿಕ ಪರಿಸ್ಥಿತಿ ಇನ್ನೊಂದು ಕಾರಣ. +ಅವರ ಸ್ಥಿತಿ ತೀರಾ ಕನಿಕರನೀಯವೆಂಬ ಸತ್ಯವನ್ನು ಯಾರೂ ಅಲ್ಲಗಳೆಯಲಾರರು. +ಅವರು ಭೂರಹಿತ ಕೂಲಿಗಳು. +ಹಿಂದೂಗಳು ತಮ್ಮ ಖುಷಿಗನುಸಾರವಾಗಿ ನಿಯಮಿಸಿದ ಉದ್ಯೋಗವನ್ನವರು ಅವಲಂಬಿಸಬೇಕಾಗಿದೆ. +ತಮಗೆ ಲಾಭದಾಯಕವಾಗುವ ರೀತಿಯಲ್ಲಿ ಹಿಂದೂಗಳ ನಿಷ್ಕರ್ಷಿಸಿದ ಕೂಲಿಯಿಂದಲೇ ಅವರು ಬದುಕಬೇಕಾಗಿದೆ. +ಅಸ್ಪಶ್ಯತೆಯೇ ಕಾರಣವಾಗಿ, ಅಸ್ಪೃಶ್ಯರು ಬೇರೆ ಯಾವ ವೃತ್ತಿ-ವ್ಯಾಪಾರಗಳನ್ನೂ ಕೈಗೊಳ್ಳುವಂತಿಲ್ಲ. +ಹಿಂದೂಗಳು ಅಂಥವರೊಡನೆ ವ್ಯವಹರಿಸುವುದೂ ಇಲ್ಲ. +ತಮ್ಮ ಜೀವನಾಧಾರಕ್ಕೆ ಹಿಂದೂಗಳನ್ನೇ ಅವಲಂಬಿಸಿ ಹಿಂದೂ ಗ್ರಾಮಗಳ ಪ್ರತ್ಯೇಕ ಪ್ರದೇಶಗಳಲ್ಲಿ ಅವರು ವಾಸಿಸುವ ತನಕ ಅವರು ತಮ್ಮ ಜೀವನಕ್ಕೆ ಅವಶ್ಯಕವಾದದ್ದನ್ನು ಗಳಿಸಲು ಸಾಧ್ಯವಿಲ್ಲ. +ಬಡತನ ಮತ್ತು ಕೀಳುಸ್ಥಿತಿಗಳ ಜೊತೆಗೆ, ಹಿಂದೂಗಳ ಮೇಲಿನ ಅವರ ಆರ್ಥಿಕಾವಲಂಬನೆ ಹಲವಾರು ಪರಿಣಾಮಗಳಿಗೆ ದಾರಿಮಾಡಿಕೊಟ್ಟಿದೆ. +ತನ್ನ ಮತದ ಒಂದು ಭಾಗವಾಗಿರುವ ಜೀವನ ವಿಧಿವಿಧಾನಗಳು ಹಿಂದೂವಿಗಿವೆ. +ಹಿಂದೂವಿಗೆ ಹಲವಾರು ಸವಲತ್ತುಗಳನ್ನು ಒದಗಿಸಿಕೊಡುವ ಆ ಕಟ್ಟಳೆಗಳು ಅಸ್ಪಶ್ಯರ ಮೇಲೆ ಮಾನವ ಫನತೆ ಗೌರವಗಳಿಗೆ ವಿರುದ್ಧವಾಗಿ ಅಮಾನವೀಯ ಕ್ರೌರ್ಯವನ್ನೇ ಹೇರುತ್ತವೆ. +ಹಿಂದೂಗಳು ಧರ್ಮದ ಹೆಸರಿನಲ್ಲಿ ತಮ್ಮ ಮೇಲೆ ನಡೆಸುವ ದೌರ್ಜನ್ಯ, ಅನ್ಯಾಯಗಳ ವಿರುದ್ಧ ಭಾರತದಾತ್ಯಂತ ಅಸ್ಪಶ್ಯರು ಹೋರಾಟ ನಡೆಸಿದ್ದಾರೆ. +ಪ್ರತಿದಿನ ಪ್ರತಿಯೊಂದು ಹಳ್ಳಿಯಲ್ಲಿಯೂ ಹಿಂದೂಗಳ ಮತ್ತು ಅಸ್ಪಶ್ಯರ ನಡುವೆ ನಿರಂತರವಾಗಿ ಹೋರಾಟ ನಡೆಯುತ್ತಿದೆ. +ಆದರೆ ಆ ಹೋರಾಟಗಳಿಗೆ ಯಾವುದೇ ಪ್ರಚಾರ ಸಿಕ್ಕುತ್ತಿಲ್ಲ. +ಲೋಕದ ದೃಷ್ಟಿಯಲ್ಲಿ ಹಿಂದೂ ಜನರ ದೌರ್ಜನ್ಯಪೂರಿತ ಸ್ವಾತಂತ್ರ್ಯಕ್ಕೆ ಧಕ್ಕೆಯಾಗುತ್ತದೆಂದು ಹಿಂದೂ ಪತ್ರಿಕಾಮಾಧ್ಯಮ ಆ ಹೋರಾಟಗಳ ಬಗ್ಗೆ ಮೌನತಾಳುತ್ತದೆ. +ಆದರೂ ಸ್ಪಶ್ಯ ದ ಅಸ್ಪಶ್ಯರ ನಡುವೆ ಭೀಕರ ಹೋರಾಟ ನಡೆದಿರುವುದಂತೂ ನಿಜ. +ಇಂದಿನ ಗ್ರಾಮ ವ್ಯವಸ್ಥೆಯಲ್ಲಿಸ್ವಾತಂತ್ರ್ಯ ಮತ್ತು ಘನತೆಗಳಿಗಾಗಿ ಅಸ್ಪಶ್ಯರು ನಡೆಸುತ್ತಿರುವ ಹೋರಾಟದ ಹಾದಿ ಕಂಟಕಮಯವಾಗಿದೆ. +ಇದು ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಬಲಾಢ್ಯರಾಗಿರುವ ಹಿಂದೂಗಳ ಮತ್ತು ಬಡತನದ ಬೇಗೆಯಲ್ಲಿ ಬೇಯುತ್ತಿರುವ, ಅಲ್ಪಸಂಖ್ಯಾತ ಅಸ್ಪಶ್ಯರ ನಡುವಿನ ಹೋರಾಟವಾಗಿದೆ. +ಅಸ್ಪಶ್ಯರನ್ನು ದಮನ ಗೈಯುವಲ್ಲಿ ಹಿಂದೂಗಳು ಬಹುತೇಕವಾಗಿ ಜಯಗಳಿಸುತ್ತಾರೆ. +ಇದಕ್ಕೆ ಕಾರಣ ಹಲವಾರು ಪೋಲಿಸ್‌ ಮತ್ತು ಮ್ಯಾಜಿಸ್ಟ್ರೇಟ್‌ ವರ್ಗ ಯಾವಾಗಲೂ ಹಿಂದೂಗಳ ಪಕ್ಷ ವಹಿಸಿಕೊಳ್ಳುತ್ತಾರೆ. +ಅಸ್ಪಶ್ಯರ ಮತ್ತು ಹಿಂದೂಗಳ ಜಗಳದಲ್ಲಿ ಅಸ್ಪಶ್ಯರು ಪೋಲೀಸರಿಂದ ರಕ್ಷಣೆಯನ್ನಾಗಲಿ, ನ್ಯಾಯಾಧೀಶರಿಂದ ನ್ಯಾಯವನ್ನಾಗಲಿ ಎಂದೂ ಪಡೆಯುವುದಿಲ್ಲ. +ಪೋಲೀಸರು ಮತ್ತು ನ್ಯಾಯಾಧೀಶರು ತಮ್ಮ ಕರ್ತವ್ಯಕ್ಕಿಂತ ಮಿಗಿಲಾಗಿ ತಮ್ಮ ವರ್ಗವನ್ನು ಪ್ರೀತಿಸುತ್ತಾರೆ. +ಆದರೆ ಹಳ್ಳಿಗಳಲ್ಲಿರುವ ದೀನ ಅಸ್ಪಶ್ಯರ ವಿರುದ್ಧ ಬಳಸುತ್ತಿರುವ ಆರ್ಥಿಕ ಶಕ್ತಿಯೇ ಹಿಂದೂಗಳ ಶಸ್ತ್ರಾಗಾರದಲ್ಲಿರುವ ಪ್ರಬಲ ಅಸ್ತ್ರ ಪಲಾಯನವಾದವೆಂದು ಈ ಸೂಚನೆಯನ್ನು ಜರಿಯಬಹುದು. +ಆದರೆ ಇದಕ್ಕಿರುವ ಏಕೈಕ ಪರ್ಯಾಯವೆಂದರೆ ನಿರಂತರ ದಾಸ್ಯ. +ಬಹುಸಂಖ್ಯಾತ ಮತ್ತು ಅಲ್ಪಸಂಖ್ಯಾತ ಕೋಮುಗಳ ಸಮಸ್ಯೆ ಇರುವ ಯಾವ ರಾಷ್ಟ್ರದಲ್ಲಿಯೇ ಆಗಲಿ, ಒಂದು ರೀತಿಯ ರಾಜಕೀಯ ಅಧಿಕಾರ ಹಂಚಿಕೆಯ ಒಪ್ಪಂದವಿದ್ದೇ ಇರುತ್ತದೆ. +ಇಂಥ ಒಂದು ಒಡಂಬಡಿಕೆ ದಕ್ಷಿಣ ಆಫ್ರಿಕದಲ್ಲಿದೆ. +ಕೆನಡಾದಲ್ಲಿಯೂ ಹಾಗೆಯೇ ಇದೆ. +ಕೆನಡಾದಲ್ಲಿ,ಇಂಗ್ಲಿಷ್‌ ಮತ್ತು ಫ್ರೆಂಚರ ನಡುವಿನ ಅಧಿಕಾರ ಹಂಚಿಕೆಯ ವ್ಯವಸ್ಥೆ ಸೂಕ್ಷ್ಮ ವಿಷಯಗಳಿಗೂ ಹರಡಿದೆ. +ತನ್ನ “ಎವಲ್ಯೂಷನ್‌ ಆಫ್‌ ದಿ ಡೊಮಿನಿಯನ್‌ ಆಫ್‌ ಕೆನಡಾ' ಎನ್ನುವ ಕೃತಿಯಲ್ಲಿ ಪೋರಿಟ್‌ ಎಂಬ ಮಹಾಶಯ ಈ ವಿಷಯವಾಗಿ ವಲಂರಿನಂತೆ ಹೇಳುತ್ತಾನೆ: +“ಭಾಗಶಃ ಜನಾಂಗೀಯ ಮತ್ತು ಭಾಷಿಕ ಕಾರಣಗಳಿಗಾಗಿ, ಮತ್ತು ಭಾಗಶಃ ಸರ್ಕಾರಿ ಸವಲತ್ತುಗಳ ವಿತರಣೆಯ ಬಗೆಗೆ ಬಹಳ ಕಾಲದಿಂದಲೂ ಇರುವ ಕಲ್ಪನೆಗಳಿಂದಾಗಿ, ಸಂಸತ್ತಿನ ಸಭಾಪತಿ ಸ್ಥಾನದಲ್ಲಿ ಒಬ್ಬರನ್ನೇ ಎರಡು, ಮೂರು ಅವಧಿಗೆ ಚುನಾಯಿಸುವ - ಚುನಾವಣೆಗಳಲ್ಲಿ ರಾಜಕೀಯ ಪಕ್ಷಗಳ ಬಹುಮತವೇನೇಯಿರಲಿ - ವೆಸ್ಟ್‌ಮಿನಿಸ್ಟರ್‌ ಮಾದರಿ ಸಂಪ್ರದಾಯಕ್ಕೆ ಒಟ್ಟಾವದಲ್ಲಿನ ಪರಿಸ್ಥಿತಿ ತೀರಾ ವಿರುದ್ಧವಾಗಿದೆ. +ಒಟ್ಟಾವದಲ್ಲಿ ಪ್ರತಿ ಸಂಸತ್ತಿನ ಅವಧಿಯಲ್ಲೂ ಹೌಸ್‌ ಆಫ್‌ ಕಾಮನ್ಸ್‌ ಸಭೆಯ ಅಧ್ಯಕ್ಷ ಸ್ಥಾನಕ್ಕೆ ಹೊಸಬರೇ ಇರುತ್ತಾರೆ. +ಒಂದೇ ರಾಜಕೀಯ ಪಕ್ಷ ಎರಡು ಮೂರು ಸಂಸತ್‌ಗಳಲ್ಲಿ(ಚುನಾವಣೆಗಳಲ್ಲಿ ಬಹುಮತ ಪಡೆದರೂ) ಅಧಿಕಾರ ಸ್ಥಾನಕ್ಕೆ ಬಂದರೂ ಒಮ್ಮೆ ಅಧ್ಯಕ್ಷನಾದವನು ಇಂಗ್ಲಿಷ್‌ ಹಿನ್ನಲೆಯವನಾಗಿದ್ದರೆ, ಇನ್ನೊಂದು ಅವಧಿಗೆ ಫ್ರೆಂಚ್‌ ಕೆನಡಿಯನ್ನನೇ ಅಧ್ಯಕ್ಷನಾಗಬೇಕೆನ್ನುವ ಸಂಪ್ರದಾಯವಿದೆ. +“ಒಂದು ಅವಧಿಯಲ್ಲಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರಿಬ್ಬರು ಒಂದೇ ಜನಾಂಗಕ್ಕೆ ಸೇರಿದವರಾಗಿರ ಕೂಡದು ಎನ್ನುವ ಕಟ್ಟಳೆಯೂ ಇದೆ. +ಅಧ್ಯಕ್ಷ ಫ್ರೆಂಜ್‌-ಕೆನಡಿಯನ್‌ ಆಗಿದ್ದರೆ, ಸಮಿತಿಗಳ ಅಧ್ಯಕ್ಷನೂ ಆಗಿರುವ ಉಪಾಧ್ಯಕ್ಷ ಇಂಗ್ಲಿಷ್‌ ಮಾತನಾಡುವ ಕೆನಡಿಯನ್ನನೇ ಆಗಬೇಕು. +ಯಾಕೆಂದರೆ ಸದನದ ಕಟ್ಟಳೆಯ ಪ್ರಕಾರ ಉಪಾಧ್ಯಕ್ಷನಾಗುವ ಸದಸ್ಯನಿಗೆ, ಹಾಲಿ ಅಧ್ಯಕ್ಷರ ಭಾಷೆಯಲ್ಲದ ಭಾಷೆಯ ಸಂಪೂರ್ಣ ಜ್ಞಾನವಿರಲೇಬೇಕು. +“ಚುನಾಯಿತರಲ್ಲದೆ ನಿಯುಕ್ತರಾದ ಕಾರ್ಯದರ್ಶಿ, ಸಹಾಯಕ ಕಾರ್ಯದರ್ಶಿ ಮತ್ತು ಸಾರ್ಜೆಂಟ್‌-ಅಟ್‌-ಆರ್ಮ್‌ ಮತ್ತು ಉಪ ಸಾರ್ಜೆಂಟ್‌ ಪದವಿಗಳಿಗೂ ಇದೇ ರೀತಿ ಎರಡೂ ಜನಾಂಗಗಳಿಂದ ನೇಮಕ ಮಾಡಬೇಕಾದ ಸಂಪ್ರದಾಯವಿದೆ. +“ಸಂಸತ್ತಿನ ಸೆನೆಟ್‌ ಮತ್ತು ಕೆಳಮನೆಗಳಿಗೆ ಸಂಬಂಧಿಸಿದ ಎಲ್ಲ ಮುಖ್ಯ - ಅ ಮುಖ್ಯ ಹುದ್ದೆಗಳಿಗೂಈ ಕಟ್ಟಳೆಗಳ ಹಾಗೂ ಸಂಪ್ರದಾಯಗಳ ಪ್ರಕಾರವೇ ನೇಮಕಾತಿ ನಡೆಯುತ್ತದೆ. +ಈ ಅಧಿಕಾರಗಳಅಂದರೆ ಎರಡೂ ಸದನಗಳ ನೌಕರ ಪರಿಚಾರಕ ಚಾಕರರೂ ಸೇರಿದಂತೆ ಎಲ್ಲರ ಹಾಜರಾತಿ ಪುಸ್ತಕದಲ್ಲಿ ಫ್ರೆಂಚ್‌ ಕೆನಡಿಯನ್‌ ಮತ್ತು ಬ್ರಿಟಿಷ್‌ ಕೆನಡಿಯನ್‌ ಹೆಸರುಗಳು ಸೇರಿರುತ್ತವೆ. +“ಹುದ್ದೆಗಳ ಹಂಚಿಕೆಗೆ ಆಧಾರವಾದ ಈ ಕಟ್ಟಳೆ ಮತ್ತು ಸಂಪ್ರದಾಯಗಳು ಕೆನಡಿಯನ್‌ಒಕ್ಕೂಟಕ್ಕಿಂತಲೂ ಹಳೆಯವು. +ಕ್ವಿಬೆಕ್‌ ಮತ್ತು ಅಂಟಾರಿಯೋ ಸಂಯುಕ್ತ ಸಂಸ್ಥಾನಗಳು ಎಷ್ಟು ಹಳೆಯವೊ, ಅವು ಸಹ ಅಷ್ಟೇ ಹಳೆಯವು. +ಆ ಒಕ್ಕೂಟದಲ್ಲಿ ಎರಡೇ ಎರಡು ಪ್ರಾಂತ್ಯಗಳಿದ್ದಾಗಿನ ಮತ್ತು ಕ್ವಿಬೆಕ್‌ ಹಾಗೂ ಅಂಟಾರಿಯೋಗಳು ಶಾಸನಸಭೆಗೆ ಸಮಸಮ ಸದಸ್ಯರನ್ನು ಚುನಾಯಿಸುತ್ತಿದ್ದಾಗಿನ ಕಾಲಕ್ಕೆ ಅವು ಸೇರಿದವಾಗಿವೆ.” +“ಕೆಳಮನೆಯ ೨೩೪ ಸದಸ್ಯರಲ್ಲಿ ಕೇವಲ ೬೫ ಸದಸ್ಯರನ್ನು ಮಾತ್ರ ಈಗ ಕ್ವಿಬೆಕ್‌ ಚುನಾಯಿಸುತ್ತದೆ. +ಅದರ ಜನಸಂಖ್ಯೆ ಡೊಮೆನಿಯನ್ನಿನ ಶೇಕಡಾ ೨೫ ರಷ್ಟೂ ಇಲ್ಲ. +ಡೊಮೆನಿಯನ್ನಿಗೆ ಅದರಿಂದ ಬರುವ ಆದಾಯ ಆರನೇ ಒಂದರಷ್ಟನ್ನೂ ಮೀರುವುದಿಲ್ಲ. +ಆದರೆ ತನ್ನ ಹಕ್ಕುಗಳ ಮತ್ತು ಹಿತಾಸಕ್ತಿಗಳ ರಕ್ಷಣೆಗಾಗಿ ಕೆಳಮನೆಯ ಅಧಿಕಾರ ಸ್ಥಾನಗಳಲ್ಲಿ ತನಗೆ ಸಮಾನ ಪ್ರಾತಿನಿಧ್ಯವಿರಬೇಕೆಂದೇ ಕ್ವಿಬೆಕ್‌ ಪರಿಗಣಿಸಿದೆ. +ಯಾವ ರಾಜಕೀಯ ಪಕ್ಷವೇ ಆಗಲಿ, ಅಧಿಕಾರದಲ್ಲಿರುವಾಗ ಫ್ರೆಂಚ್‌ ಕೆನಡಾದ ಬೆಂಬಲದ ಮೇಲೆ ನಿಂತಿರಬೇಕೆಂಬುದೇ ಈ ಹಂಚಿಕೆಯ ಹಿಂದಿರುವ ತತ್ವ ಆದ್ದರಿಂದ ಕ್ವಿಬೆಕ್‌ನ ಸಂವಿಧಾನಾತ್ಮಕ ಸವಲತ್ತುಗಳನ್ನಾಗಲಿ, ಅಧಿಕಾರ ಸ್ಥಾನಗಳನ್ನಾಗಲಿ ಧಿಕ್ಕರಿಸಲು ಸಾಧ್ಯವಿಲ್ಲ. +ಅದನ್ನು ಧಿಕ್ಕರಿಸುವುದಾದರೆ ಪ್ರತ್ಯೇಕ ಶಾಲಾ ಪದ್ಧತಿಯನ್ನು ರಕ್ಷಿಸುವ ಬ್ರಿಟಷ್‌ ಉತ್ತರ ಅಮೆರಿಕಾದ ಕಾಯ್ದೆಯನ್ನು ರದ್ದುಮಾಡಿದಂತಾಗುತ್ತದೆ.” +ಅಲ್ಪಸಂಖ್ಯಾತರ ದುರದೃಷ್ಟವಿರಬೇಕು, ಭಾರತೀಯ ರಾಷ್ಟ್ರೀಯತೆ ಒಂದು ಹೊಸ ಸಿದ್ಧಾಂತವನ್ನು ರೂಪಿಸುತ್ತಿದೆ. +ಅದನ್ನು ಬಹುಸಂಖ್ಯಾತರು ತಮ್ಮ ಇಷ್ಟ ಬಂದಂತೆ ಅಲ್ಪ ಸಂಖ್ಯಾತರನ್ನಾಳುವ ದೈವದತ್ತಹಕ್ಕು ಎಂದು ಕರೆಯಬಹುದು. +ಅಲ್ಪಸಂಖ್ಯಾತರು ಅಧಿಕಾರ ಹಂಚಿಕೊಳ್ಳಲು ಕೇಳುವುದೆಲ್ಲಾ ಕೋಮುವಾದವೆಂದೂ, ಅಧಿಕಾರದ ಮೇಲಿನ ಬಹುಸಂಖ್ಯಾತರ ಏಕಸ್ವಾಮ್ಯವನ್ನು ರಾಷ್ಟ್ರೀಯತೆಯೆಂದೂ ಕರೆಯಲಾಗುತ್ತಿದೆ. +ಇಂಥ ರಾಜಕೀಯ ತತ್ವಗಳಿಂದ ಪ್ರೇರಿತವಾದ ಬಹುಸಂಖ್ಯಾತರು ಅಧಿಕಾರದಲ್ಲಿ ಪಾಲು ಪಡೆಯುವ ಅಲ್ಪಸಂಖ್ಯಾತರ ಹಂಬಲವನ್ನು ಮಾನ್ಯ ಮಾಡುವುದಿಲ್ಲ. +ಸಚಿವ ಸಂಪುಟದಲ್ಲಿ ಅಲ್ಪಸಂಖ್ಯಾತನಿಗೆ ಪ್ರಾತಿನಿಧ್ಯವಿರಬೇಕೆಂಬ ಸಂಪ್ರದಾಯವನ್ನವರು ಮುರಿದಿರುವುದರಲ್ಲಿ ಇದು ಸ್ಪಷ್ಟವಾಗಿದೆ. +೧೯೩೫ ರ ಭಾರತ ಸರ್ಕಾರಿ ಕಾಯ್ದೆಯಂತೂ ಪ್ರಾಂತ ಗವರ್ನರುಗಳಿಗೆ ಈ ವಿಷಯದಲ್ಲಿ ನಿರ್ದೇಶನವನ್ನೇ ಕೊಟ್ಟಿದೆ. +ಇಂಥಾ ಪರಿಸ್ಥಿತಿಯಲ್ಲಿ ಪರಿಶಿಷ್ಟ ಜಾತಿಗಳವರ ಹಕ್ಕುಗಳನ್ನು ಸಂವಿಧಾನದ ಒಂದು ಭಾಗವನ್ನಾಗಿ ಮಾಡದೆ ಬೇರೆ ವಿಧಿಯಿಲ್ಲ. +ಇದೂ ಹೊಸ ಬೇಡಿಕೆಯಲ್ಲ. +ಪರಿಶಿಷ್ಟ ಜಾತಿಗಳ ಮೀಸಲು ಕ್ಷೇತ್ರಗಳು ಹಿಂದೂ ಮತ್ತು ಪರಿಶಿಷ್ಟ ಜಾತಿಗಳವರ ಪರಸ್ಪರ ಸಮ್ಮತಿಯಿರುವವರೆಗೂ ಮುಂದುವರಿಯತಕ್ಕದ್ದು ಎಂದು ಅವಕಾಶ ಕೊಡುವ ಪೂನಾ ಒಪ್ಪಂದದ ೬ ನೇ ಅಧಿನಿಯಮದ ಬದಲಿಗೆ ಈ ಅಧಿನಿಯಮವನ್ನು ಸೇರಿಸಲಾಗುತ್ತಿದೆ. +ಈ ವ್ಯವಸ್ಥೆಯ ತಿದ್ದುಪಡಿ ಅಥವಾ ಬದಲು ಮಾಡುವ ವಿಷಯದಲ್ಲಿ ಪರಿಶಿಷ್ಟ ವರ್ಗಗಳ ಅಭಿಪ್ರಾಯವೇನು ಎಂದು ತಿಳಿಯಲು ಸೂಕ್ತ ವ್ಯವಸ್ಥೆಯೊಂದು ಇಲ್ಲವಾದ ಕಾರಣ, ಆ ಅಭಿಪ್ರಾಯ ತಿಳಿಯಲು ಮಾಡುವ ಯೋಜನೆ ಪೂನಾ ಒಪ್ಪಂದದ ೬ ನೇ ಅಧಿನಿಯಮದ ಬದಲಿಗೆ ಬರುತ್ತದೆ. +ಇದೇ ರೀತಿಯ ಉದ್ದೇಶ ಹೊಂದಿರುವ ಸೂಚನೆಗಳನ್ನು ಬದಲಿಸುವ ವ್ಯವಸ್ಥೆ ಅಮೆರಿಕಾ, ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ಸಂವಿಧಾನಗಳಲ್ಲಿದೆ. +ಇಂಥ ವಿಷಯಗಳನ್ನು ಕುರಿತಂತೆ ವಿಚಾರ ಮಾಡುವಾಗ ಎರಡು ವಿಚಾರಗಳನ್ನು ದೃಷ್ಟಿಯಲ್ಲಿಟ್ಟುಕೊಂಡಿರಬೇಕು. +ಈ ರೀತಿ ರಕ್ಷಣೆಗಳ ದೃಷ್ಟಿಯಿಂದ ಒದಗಿಸಿರುವ ವಿಚಾರಗಳನ್ನು ತಳ್ಳಿಹಾಕುವಂತಿಲ್ಲ. +ಈ ರಕ್ಷಣೆಗಳ ಪುನರ್ವಿಮರ್ಶೆಯ ಬಗ್ಗೆ ಅವಿರತ ಹೋರಾಟಗಳು ಯಾವ ರೀತಿಯಲ್ಲೂ ಅನವಶ್ಯಕ. +ಹೊಸದಾಗಿ ಆಯ್ಕೆಯಾಗುವ ಕೇಂದ್ರ ಮತ್ತು ರಾಜ್ಯ ಶಾಸಕಾಂಗಗಳು ತಮ್ಮ ಶಾಸನಗಳ ಪೀಠಿಕಾ ಭಾಗದಲ್ಲಿ ಉಲ್ಲೇಖಿಸಿರುವ ಜವಾಬ್ದಾರಿಗಳನ್ನು ಯಶಸ್ವಿಯಾಗಿ ಪೂರೈಸಬೇಕಾದರೆ, ಧಾರ್ಮಿಕ ಮತ್ತು ವರ್ಗ ಹಿತಾಸಕ್ತಿಗಳು ಈ ರಕ್ಷಣೆಗಳ ಬದಲಾವಣೆ ಬಗ್ಗೆ ಎತ್ತುವ ತಗಾದೆಗಳಿಂದ ಬಾಧಿತವಾಗಕೂಡದು. +ಆದ್ದರಿಂದ ಏನೇ ಬದಲಾವಣೆ ಅವಶ್ಯವಾದರೂ, ಅದಕ್ಕೆ ೨೫ ವರ್ಷಗಳ ಅವಧಿಯನ್ನು ನಿಷ್ಕರ್ಷಿಸಲಾಗಿದೆ. +ಬ್ರಿಟಿಷ್‌ ಪ್ರಾಂತ್ಯಗಳಲ್ಲಿ ಪರಿಶಿಷ್ಟ ಜಾತಿಗಳಿರುವ ಸವಲತ್ತುಗಳನ್ನು ದೇಶೀ ರಾಜ್ಯಗಳ ಪರಿಶಿಷ್ಟ ಜಾತಿಗಳವರಿಗೂ ದೊರೆಯುವಂತೆ ವಿಸ್ತರಿಸಬೇಕೆಂಬುದೇ ಈ ವಿಧಿಗಳ ಉದ್ದೇಶವಾಗಿದೆ. +ಒಕ್ಕೂಟ ಸೇರಬಯಸುವ ದೇಶೀ ರಾಜ್ಯವೊಂದರ ಸಂವಿಧಾನದಲ್ಲಿ ಈ ಎಲ್ಲ ರಕ್ಷಣೆಗಳೂ ಅಡಕವಾಗಿದೆಯೆಂದು ಸಾಬೀತು ಮಾಡತಕ್ಕದ್ದೆಂದು ಈ ವಿಧಿಯಲ್ಲಿ ಸ್ಪಷ್ಟಪಡಿಸಲಾಗಿದೆ. +ಪರಿಶಿಷ್ಟ ಜಾತಿಗಳು ಅಲ್ಪಸಂಖ್ಯಾತವೇ ಅಥವಾ ಅಲ್ಲವೇ ಎನ್ನುವುದು ವಾದಗ್ರಸ್ತವಾಗಿದೆ. +ಈ ವಾದಕ್ಕೆ ಇತಿಶ್ರೀ ಹಾಡುವುದೇ ಈ ಪ್ರಥಮ ವಿಧಿಯ ಉದ್ದೇಶವಾಗಿದೆ. +ಭಾರತದ ಬೇರೆ ಯಾವ ಅಲ್ಪಸಂಖ್ಯಾತರಿಗೆ ಹೋಲಿಸಿದರೂ ಪರಿಶಿಷ್ಟ ಜಾತಿಗಳವರು ಹೆಚ್ಚು ಅಧ್ವಾನದ ಸ್ಥಿತಿಯಲ್ಲಿದ್ದಾರೆ. +ಆದ್ದರಿಂದ ರಕ್ಷಣೆ ಪಡೆಯಲು ಅವರು ಬೇರೆ ಅಲ್ಪಸಂಖ್ಯಾತರಿಗಿಂತ ಹೆಚ್ಚು ಅರ್ಹರು ಮತ್ತು ಅವರಿಗೆ ಅದರ ಅವಶ್ಯಕತೆಯೂ ಇತರರಿಗಿಂತ ಹೆಚ್ಚಾಗಿದೆ. +ಅವರನ್ನು ಅಲ್ಪಸಂಖ್ಯಾತರೆಂದು ಪರಿಗಣಿಸುವುದೇ ನಾವು ಮಾಡಬಹುದಾದ ಕನಿಷ್ಠ ಸಹಾಯ. +ಪ್ರಾಂತಿಕ ಎಲ್ಲೆಕಟ್ಟುಗಳನ್ನು ಮೀರುವುದೇ ಎರಡನೆಯ ವಿಧಿಯ ಉದ್ದೇಶವಾಗಿದೆ. +ಪರಿಶಿಷ್ಟ ಜಾತಿಯವನೊಬ್ಬ ಬೇರೊಂದು ಪ್ರಾಂತ್ಯಕ್ಕೆ ಸ್ಥಳಾಂತರಗೊಂಡಾಗ ಹಿಂದಿನ ಪ್ರಾಂತ್ಯದಲ್ಲಿ ತಾನು ಪಡೆಯುತ್ತಿದ್ದ ರಾಜಕೀಯ ಸವಲತ್ತುಗಳಿಂದ ಯಾವ ಕಾರಣದಿಂದಲೂ ವಂಚಿತನಾಗಕೂಡದು. +ಪೂನಾ ಒಪ್ಪಂದದ ಪ್ರಾಂತೀಯ ಶಾಸಕಾಂಗಗಳಲ್ಲಿ ದಲಿತವರ್ಗಗಳ ಚುನಾವಣಾ ಕ್ಷೇತ್ರಗಳಿಗೆ ಸಂಬಂಧಿಸಿದ ಮೀಸಲು ಪ್ರಾತಿನಿಧ್ಯ ಕೆಳಗೆ ನಮೂದಿಸಿದಂತೆ ಇರತಕ್ಕದ್ದು. +ಈ ಅಂಕಿಗಳು ಪ್ರಧಾನಿಯವರ ಘೋಷಣೆಯಂತೆ ಇದ್ದ ಪ್ರಾಂತೀಯ ಪರಿಷತ್ತುಗಳ ಒಟ್ಟು ಜನಸಂಖ್ಯೆಯನ್ನು ಆಧರಿಸಿವೆ. +ಈ ಕೆಳಗಿನ ನಿಬಂಧನೆಗಳಿಗೆ ಒಳಪಟ್ಟು ಈ ಕ್ಷೇತ್ರಗಳ ಚುನಾವಣೆ ಜಂಟೀ ಮತದಾನದ ಮೂಲಕ ನಡೆಯತಕ್ಕದ್ದು. +ಒಂದು ಕ್ಷೇತ್ರದಲ್ಲಿ ದಲಿತ ವರ್ಗಗಳಿಗೆ ಸೇರದ ಎಲ್ಲ ನೋಂದಾಯಿತ ಮತದಾರರೂ ಒಂದು ಚುನಾವಣಾ ಮತಕ್ಷೇತ್ರವಾಗಿ ಒಂದೇ ಮತ ಚಲಾಯಿಸುವ ಮೂಲಕ ಮೀಸಲು ಕ್ಷೇತ್ರಗಳಿಗೆ ೪ ಜನ ಅಭ್ಯರ್ಥಿಗಳನ್ನು ಆಯ್ಕೆ ಮಾಡುತ್ತಾರೆ. +ಈ ಪ್ರಾಥಮಿಕ ಚುನಾವಣೆಗಳಲ್ಲಿ ಕ್ರಮವಾಗಿ ಅತಿ ಹೆಚ್ಚು ಮತಗಳಿಸುವ ೪ ಜನ ಅಭ್ಯರ್ಥಿಗಳು ಕೊನೆಯ ಜಂಟಿ ಮತದಾನದ ಚುನಾವಣೆಯಲ್ಲಿ ಅಭ್ಯರ್ಥಿಗಳಾಗುತ್ತಾರೆ. +ಕೇಂದ್ರ ಶಾಸಕಾಂಗ ಚುನಾವಣೆ ಕೂಡಾ ಇದೇ ರೀತಿ ಜಂಟೀ ಮತದಾನ ಮತ್ತು ಮೀಸಲು ಕ್ಷೇತ್ರಗಳ ಮೂಲಕವೇ ನಡೆಯತಕ್ಕದ್ದು. +ಮೇಲೆ ಅಧಿನಿಯಮ ೨ ರಲ್ಲಿ ಪ್ರಾಂತ ಶಾಸಕಾಂಗಗಳ ಮೀಸಲು ಕ್ಷೇತ್ರಗಳ ಚುನಾವಣೆ ಬಗ್ಗೆ ವಿವರಿಸಿದ ರೀತಿಯಲ್ಲಿಯೇ ಪ್ರಾಥಮಿಕ ಚುನಾವಣೆಗಳು ನಡೆಯುತ್ತವೆ. +ಕೇಂದ್ರ ಶಾಸಕಾಂಗದಲ್ಲಿ ಬ್ರಿಟಿಷ್‌ ಭಾರತದ ಸಾಮಾನ್ಯ ಚುನಾವಣಾ ಕ್ಷೇತ್ರಗಳ ಮೊತ್ತದ ಶೇಕಡಾ ೧೮ ರಷ್ಟನ್ನು ದಲಿತ ವರ್ಗಗಳಿಗಾಗಿ ಮೀಸಲಾಗಿರಿಸತಕ್ಕದ್ದು. +ಅಧಿನಿಯಮ ೬ ರಲ್ಲಿ ಸೂಚಿತವಾಗಿರುವಂತಹ, ಪರಸ್ಪರ ಒಪ್ಪಂದದ ಮೂಲಕ ಕೇಂದ್ರ ಮತ್ತು ಪ್ರಾಂತ ಶಾಸಕಾಂಗಗಳ ಮೀಸಲು ಕ್ಷೇತ್ರಗಳಿಗೆ ನಡೆಯುವ ಪ್ರಾಥಮಿಕ ಚುನಾವಣಾ ವ್ಯವಸ್ಥೆ -ಮುಂಚೆಯೇ ರದ್ದಾಗಿದ್ದ ಪಕ್ಷದಲ್ಲಿ - ಮೊದಲ ಹತ್ತು ವರ್ಷಗಳ ನಂತರ ರದ್ದಾಗತಕ್ಕದ್ದು. +ಅಧಿನಿಯಮಗಳು ೧ ಮತ್ತು ೪ ರಲ್ಲಿ ಸೂಚಿತವಾಗಿರುವಂತೆ ಕೇಂದ್ರ - ಪ್ರಾಂತ ಶಾಸಕಾಂಗಗಳಲ್ಲಿನ ದಲಿತವರ್ಗಗಳ ಮೀಸಲು ಪ್ರಾತಿನಿಧ್ಯ ಈ ಒಪ್ಪಂದಕ್ಕೆ ಭಾಗಿಗಳಾದವರ ಪರಸ್ಪರ ಒಪ್ಪಂದದ ಮೇಲೆ ಮೊದಲೇ ರದ್ದಾಗಿದ್ದರೆ ೧ಂ ವರ್ಷಗಳ ನಂತರವೇ ರದ್ದಾಗತಕ್ಕದ್ದು. +ಕೇಂದ್ರ - ರಾಜ್ಯ ಶಾಸಕಾಂಗಗಳ ಚುನಾವಣೆಗಳಿಗಾಗಿ ದಲಿತರಿಗಿರ ಬೇಕಾದ ಮತದಾನದ ಅರ್ಹತೆಗೆ ಲೋಥಿಯನ್‌ ಸಮಿತಿ ವರದಿಯೇ ಆಧಾರವಾಗಿರತಕ್ಕದ್ದು. +ದಲಿತ ವರ್ಗಗಳಿಗೆ ಸೇರಿದವನೆಂಬ ಕಾರಣಕ್ಕಾಗಿ ಯಾರೂ ಸ್ಥಳೀಯ ಸಂಸ್ಥೆಗಳ ಚುನಾವಣೆಗಾಗಲಿ, ಸರ್ಕಾರಿ ಸೇವೆಗಾಗಲಿ ಅನರ್ಹನೆಂದಾಗಕೂಡದು. +ಈ ಕ್ಷೇತ್ರಗಳಲ್ಲಿ ದಲಿತ ವರ್ಗಗಳು ಸೂಕ್ತ ಪ್ರಾತಿನಿಧ್ಯವನ್ನು ಪಡೆಯಲು - ಸರ್ಕಾರಿ ಸೇವೆಗೆ ನಿಗದಿಪಡಿಸುವ ವಿದ್ಯಾರ್ಹತೆಯ ನಿಬಂಧನೆಗಳಿಗೆ ಒಳಪಟ್ಟು - ಅವಕಾಶಗಳನ್ನು ಕಲ್ಪಿಸಿಕೊಳ್ಳತಕ್ಕದ್ದು. +ವಿದ್ಯಾಭ್ಯಾಸಕ್ಕೆಂದು ತೆಗೆದಿಡುವ ಮೊತ್ತದಿಂದ ಪ್ರತಿಯೊಂದು ಪ್ರಾಂತ ಸರ್ಕಾರವೂ ದಲಿತರ ಶೈಕ್ಷಣಿಕ ಸೌಲಭ್ಯಗಳಿಗೆಂದು ಸೂಕ್ತವಾದ ಮೊತ್ತವನ್ನು ತೆಗೆದಿಡತಕ್ಕದ್ದು. +ಪರಿಶಿಷ್ಟ - ೩ಪೂನಾ ಒಪ್ಪಂದದ ಅನಾನುಕೂಲಗಳು: ಪರಿಶಿಷ್ಟ ವರ್ಗಗಳು ಶಾಸಕಾಂಗಗಳಿಗೆ ತಮ್ಮ ಆಯ್ಕೆಯ ಪ್ರತಿನಿಧಿಗಳನ್ನು ಚುನಾಯಿಸಲು ಅವಕಾಶಮಾಡಿಕೊಡುವ ಯೋಜನೆಯೊಂದನ್ನು ರೂಪಿಸುವುದೇ ಪೂನಾ ಒಪ್ಪಂದದ ಉದ್ದೇಶವಾಗಿತ್ತು. +ಈ ಉದ್ದೇಶ ಸಂಪೂರ್ಣ ವಿಫಲಗೊಂಡಿದೆ ಎಂದು ಈ ಕೆಳಗಿನ ಅಂಕಿ-ಅಂಶಗಳಿಂದ ಸಾಬೀತಾಗಿದೆ. +೧೯೪೬ ರ ಫೆಬ್ರವರಿಯಲ್ಲಿ ನಡೆದ ಚುನಾವಣಾ ಫಲಿತಾಂಶಗಳಿಂದ ಈ ಅಂಕಿಅಂಶಗಳ ವಿವರಗಳನ್ನು ತೆಗೆದುಕೊಳ್ಳಲಾಗಿದೆ. +ಈ ಅಂಕಿ-ಅಂಶಗಳನ್ನು ತಃಖ್ತೆಗಳಲ್ಲಿ ತರಲಾಗಿದೆ. +ಕೊನೆಯ ಚುನಾವಣೆಯಲ್ಲಿ ಗೆದ್ದ ಹಿಂದೂ ಅಭ್ಯರ್ಥಿಗಳು ಮತ್ತು ಪರಿಶಿಷ್ಟ ಜಾತಿಗಳ ಅಭ್ಯರ್ಥಿಗಳು ಗಳಿಸಿದ ಮತಗಳನ್ನು ಮೊದಲ ಸರಣಿ ತೋರಿಸುತ್ತದೆ. +ಕೊನೆಯ ಚುನಾವಣೆಯಲ್ಲಿ ಪರಿಶಿಷ್ಟ ಜಾತಿಗಳ ಅಭ್ಯರ್ಥಿಗಳು ಗೆಲ್ಲಲು ಎಷ್ಟು ಕ್ಷೇತ್ರಗಳಲ್ಲಿ ಮೀಸಲಾತಿ ಸೌಕರ್ಯದ ಅವಶ್ಯಕತೆಯಿತ್ತು. +ಎಷ್ಟು ಕ್ಷೇತ್ರಗಳಲ್ಲಿ ಈ ಸೌಕರ್ಯದ ಅವಶ್ಯಕತೆಯಿರಲಿಲ್ಲ ಎನ್ನುವುದನ್ನು ಎರಡನೇ ಸರಣಿ ತೋರಿಸುತ್ತದೆ. +ಮೀಸಲು ಕ್ಷೇತ್ರಗಳಲ್ಲಿರುವ ಹಿಂದೂಗಳ ಮತ್ತು ಪರಿಶಿಷ್ಟ ಜಾತಿಗಳವರ ಓಟುಗಳ ಸಾಪೇಕ್ಷ ಶಕ್ತಿಯನ್ನು ತೋರಿಸುತ್ತದೆ . +ಮೂರನೇ ಸರಣಿಯು ಕೊನೆಯ ಚುನಾವಣೆಯಲ್ಲಿ ಗೆದ್ದ ಪರಿಶಿಷ್ಟ ಜಾತಿಗಳವರ ಪ್ರಾಥಮಿಕ ಚುನಾವಣೆಯಲ್ಲಿನ ಸ್ಥಾನವನ್ನು ನಾಲ್ಕನೇ ಸರಣಿ ತೋರಿಸುತ್ತದೆ. +ಈ ಅಂಕಿ-ಅಂಶಗಳಿಂದ ಮೂಡುವ ನಿರ್ಣಯಗಳು ಅವನ್ನು ಪರೀಕ್ಷಿಸ ಬಯಸುವವರ ಗಮನವನ್ನು ತಪ್ಪಿಸಿಕೊಳ್ಳಲಾರವು. +ಈ ಅಂಕಿ-ಅಂಶಗಳು ಈ ಕೆಳಗಿನ ಪ್ರಸ್ತಾವಗಳನ್ನು ಸಾಬೀತು . +ಅಂತಿಮ ಚುನಾವಣೆಯಲ್ಲಿ ಗೆದ್ದ ಪ್ರತಿಯೊಬ್ಬ ಪರಿಶಿಷ್ಟ ಜಾತಿಗಳ ಅಭ್ಯರ್ಥಿಯೂ ಹಿಂದೂಗಳ ಓಟಿನಿಂದ ಗೆದ್ದಿದ್ದಾನೆಯೇ ಹೊರತು ಪರಿಶಿಷ್ಟ ಜಾತಿಗಳವರ ಮತಗಳಿಂದಲ್ಲ. +ಸವರ್ಣೀಯ ಹಿಂದೂ ಅಭ್ಯರ್ಥಿಗಳು ಗಳಿಸಿದಷ್ಟೇ ಮತಗಳನ್ನು ಕೆಲವೊಮ್ಮೆ ಅವರಿಗಿಂತ ಹೆಚ್ಚಿನ ಮತಗಳನ್ನು ಪಡೆದು ಪರಿಶಿಷ್ಟ ಜಾತಿಯ ಅಭ್ಯರ್ಥಿಗಳು ಮತಗಳ ಎಣಿಕೆಯಲ್ಲಿ ತುದಿ ಮುಟ್ಟಿದರು. + ಎರಡನೆಯದಾಗಿ, ಕೇವಲ ಕೆಲವೇ ಕ್ಷೇತ್ರಗಳಲ್ಲಿ ಮಾತ್ರ ಪರಿಶಿಷ್ಟ ಜಾತಿಯವರಿಗೆ ಮೀಸಲಾತಿ ಸೌಕರ್ಯದ ಅವಲಂಬನೆ ಅವಶ್ಯಕವೆಂದು ಕಂಡಿದೆ. +ಇದಂತೂ ತೀರಾ ಅನಿರೀಕ್ಷಿತ ಸಂಗತಿ. +ಪರಿಶಿಷ್ಟ ಜಾತಿಗಳ ಮತಸಾಮರ್ಥ್ಯ ಅಲ್ಲವಾದದ್ದೆಂದೂ,ಪರಿಶಿಷ್ಟಜಾತಿಯ ಅಭ್ಯರ್ಥಿಗಳಿಗೆ ಪರಿಶಿಷ್ಟ ಜಾತಿಯ ಮತದಾರರೇ ಓಟು ಮಾಡಿದ್ದರೆ ಅಂಥ ಸಂಗತಿ ಸಂಭವಿಸುತ್ತಿರಲಿಲ್ಲವೆಂದೂ, ವಿವಿಧ ಚುನಾವಣಾ ಕ್ಷೇತ್ರಗಳಲ್ಲಿನ ಪರಿಶಿಷ್ಟ ಜಾತಿಗಳ ಮತಸಾಮರ್ಥ್ಯವನ್ನು ಸವರ್ಣೀಯ ಹಿಂದೂಗಳ ಮತಸಾಮರ್ಥ್ಯದೊಡನೆ ಯಾರಾದರೂ ಹೋಲಿಸಿದ್ದಾದರೆ ಸ್ಪಷ್ಟವಾಗುತ್ತದೆ. + ಆದರೂ ಈ ಫಲಿತಾಂಶ ಮತ್ತು ಓಟುಗಳು ಬಂದಿರುವುದು ನಿಜ. +ಆದ್ದರಿಂದಲೇ ಪರಿಶಿಷ್ಟಜಾತಿಗಳ ಅಭ್ಯರ್ಥಿಗಳ ಅಂತಿಮ ಚುನಾವಣೆಯ ಫಲಿತಾಂಶ ಹಿಂದೂ ಓಟುಗಳಿಂದಲೇ ಇತ್ಯಾತ್ಮಕವಾಗಿ ನಿಯಂತ್ರಿಸಲ್ಪಟ್ಟಿದೆಯೆಂದು ಸಾಬೀತಾಗುತ್ತದೆ. +ಪ್ರಾಥಮಿಕ ಮತ್ತು ಅಂತಿಮ ಚುನಾವಣೆಗಳ ಫಲಿತಾಂಶವನ್ನು ಹೋಲಿಸಿ ನೋಡಿದವರಿಗೆ ಪ್ರಾಥಮಿಕ ಚುನಾವಣೆಗಳಲ್ಲಿ ಸೋತ ಪರಿಶಿಷ್ಟಜಾತಿಯ ಅಭ್ಯರ್ಥಿ ಅಂತಿಮ ಚುನಾವಣೆಯಲ್ಲಿ ಗೆದ್ದಿರುವುದು ಕಂಡುಬರುತ್ತದೆ. +ಪ್ರಾಥಮಿಕ ಚುನಾವಣೆಯೇ ಅಂತಿಮವೆಂದೂ ಚುನಾವಣಾ ಕ್ಷೇತ್ರ ಏಕ ಸದಸ್ಯಕ್ಷೇತ್ರವೆಂದೂ ಪರಿಗಣಿಸಿದಾಗ ಈ ಮಾತಿನ ಯಥಾರ್ಥತೆ ಸಿದ್ಧವಾಗುತ್ತದೆ. +ಹಿಂದೂ ಮತ್ತು ಪರಿಶಿಷ್ಟಜಾತಿಗಳವರ ಒಟ್ಟು ಓಟುಗಳ ಪ್ರಮಾಣದಲ್ಲಿರುವ ಅಂತರ ಬಹಳ. + ಈ ಅಂತರ ವಯಸ್ಕ ಮತದಾನ ಪದ್ಧತಿಯಿದ್ದಾಗಲೂ ಇದ್ದೇ ಇರುತ್ತದೆ; + ಆದ್ದರಿಂದ ಪರಿಶಿಷ್ಟಜಾತಿಗಳು ತಮ್ಮ ನಿಜವಾದ ಪ್ರತಿನಿಧಿಯನ್ನು ಆಯ್ಕೆ ಮಾಡುವಲ್ಲಿ ಜಂಟಿ ಮತದಾನ ವ್ಯವಸ್ಥೆ ಸಹಾಯಕವಾಗುವುದಿಲ್ಲ. +ಪರಿಶಿಷ್ಟ ಜಾತಿಗಳವರು ಪ್ರಾಥಮಿಕ ಚುನಾವಣೆಯಲ್ಲಿ ಸೋಲಿಸಿದ ಅಭ್ಯರ್ಥಿಗಳು ಹಿಂದೂ ಮತಗಳ ನೆರವಿನಿಂದ ಅಂತಿಮ ಚುನಾವಣೆಯಲ್ಲಿ ಆಯ್ಕೆಯಾಗುವುದರಿಂದ ಪೂನಾ ಒಪ್ಪಂದ ಪರಿಶಿಷ್ಟ ಜಾತಿಗಳವರನ್ನು ಮತರಹಿತರನ್ನಾಗಿಸಿದೆ. +ಆದ್ದರಿಂದ ಪೂನಾ ಒಪ್ಪಂದ ಹಾನಿಕಾರಕವಾಗಿದೆ. +ಗಾಂಧೀಜಿಯವರ ಉಪವಾಸದಿಂದ ಉದ್ಭವಿಸಿದ ಒತ್ತಡದಿಂದಾಗಿ ಮತ್ತು ಪರಿಶಿಷ್ಟಜಾತಿಗಳವರು ಚುನಾವಣೆಯಲ್ಲಿ ಹಿಂದೂಗಳು ಕೈಹಾಕುವುದಿಲ್ಲವೆಂದು ಮಾತುಕೊಟ್ಟಿದ್ದರಿಂದ ಪೂನಾ ಒಪ್ಪಂದವನ್ನು ಒಪ್ಪಿಕೊಳ್ಳಲಾಯಿತು. +ಮೊದಲನೆ ಸರಣಿಗೆದ್ದ ಸವರ್ಣೀಯ ಹಿಂದೂ ಅಭ್ಯರ್ಥಿಗಳು ಪಡೆದ ಮತಗಳನ್ನು ಗೆದ್ದ ಪರಿಶಿಷ್ಟ ಜಾತಿಯ ಅಭ್ಯರ್ಥಿಗಳು ಪಡೆದ ಮತಗಳೊಡನೆ ಹೋಲಿಸಲಾಗಿದೆ. +ಎರಡನೇ ಸರಣಿ ಪರಿಶಿಷ್ಟ ಜಾತಿಗಳ ಅಭ್ಯರ್ಥಿಗಳು ಚುನಾವಣೆಯಲ್ಲಿ ಗೆಲ್ಲಲು ಮೀಸಲಾತಿ ಅವಶ್ಯಕವಾದ ಕ್ಷೇತ್ರಗಳ ವಿವರಗಳು ಪರಿಶಿಷ್ಟ ಜಾತಿಗಳವರಿಗೆ ವಿವಾದ ಹಿಂದೂ ಅಭ್ಯರ್ಥಿಗಳು ಪರಿಶಿಷ್ಟ ಜಾತಿಗಳ ಎರಡೂ ಗೆಲ್ಲಲು ಮೀಸಲಾತಿ ಪ್ರಾಂತ್ಯ ಮೀಸಲಾದ ಕ್ಷೇತ್ರಗಳ ಕ್ಕೊಳಗಾದ ಹೆಚ್ಚಾಗಿದ್ದರಿಂದಲೇ ಹೆಚ್ಚಾಗಿದ್ದರಿಂದರೇ ವರ್ಗದವರು. +ಜನಸಂಖ್ಯೆಯ ಅಂಕಿಅಂಶಗಳು ೧೯೪೧ ರಲ್ಲಿ ಪರಿಶಿಷ್ಟ ಜಾತಿಯವರ ಜನಸಂಖ್ಯೆ ೪೮,೭೯೩,೧೮ಂ ಎಂದು ಲೆಕ್ಕ ಹೇಳಲಾಗಿತ್ತು. +ಈ ಸಂಖ್ಯೆ ಸರಿಯೆಂದು ಒಪ್ಪಬಹುದೆ ? +ಈ ವಿಷಯವನ್ನು ನಿಷ್ಕರ್ಷೆ ಮಾಡುವ ಮುನ್ನ ಈ ಕೆಳಗಿನ ಅಂಶಗಳನ್ನು ಗಣನೆಗೆತೆಗೆದುಕೊಳ್ಳಬೇಕಾದ್ದು ಅತ್ಯವಶ್ಯಕ. +೧)೧೯೩೧ ರಲ್ಲಿದ್ದ ಪರಿಶಿಷ್ಟ ಜಾತಿಗಳ ಸಂಖ್ಯೆಗೆ ಹೋಲಿಸಿದರೆ ೧೯೪೧ ರಲ್ಲಿ ಅವರ ಜನಸಂಖ್ಯೆ ಇಳಿದಿದೆ. +೨) ಈ ಅವಧಿಯಲ್ಲಿ ಇತರ ಎಲ್ಲ ಕೋಮುಗಳ ಜನಸಂಖ್ಯೆ ಶೇಕಡಾ ೧೫ ರಷ್ಟು ಹೆಚ್ಚಿದೆ. +೧೯೩೧ ಮತ್ತು ೧೯೪೧ ರಲ್ಲಿ ಪರಿಶಿಷ್ಟ ಜಾತಿಗಳ ಜನಸಂಖ್ಯೆಯನ್ನು ಕಂಡುಕೊಳ್ಳಲು ಅನುಸರಿಸಿದ ಕ್ರಮ ಒಂದೇ ರೀತಿಯಾದದ್ದೇ ಹೇಗೆ ಇದಕ್ಕೆ ಉತ್ತರ ಹೌದೆನ್ನುವುದೇ ಆಗಿದೆ. +ಲೋಢಿಯಾನ್‌ಸಮಿತಿ “ಅಸ್ಪಶ್ಯರು' ಎನ್ನುವುದಕ್ಕೆ ಮಾಡಿದ ವ್ಯಾಖ್ಯಾನದ ಆಧಾರದ ಮೇಲೆ ೧೯೩೧ ರ ಜನಗಣತಿಯನ್ನು ಮರು ವಿಮರ್ಶೆ ಮಾಡಿದ ಫಲವೇ ೧೯೩೧ ರ ಅಂಕಿ-ಅಂಶಗಳು. +೧೯೪೧ ರಲ್ಲೂ ಇದೇ ಕ್ರಮವನ್ನು ಅನುಸರಿಸಲಾಗಿತ್ತು. +ಆದ್ದರಿಂದ ೧೯೩೧ ರಲ್ಲಿ ಪರಿಶಿಷ್ಟ ಜಾತಿಗಳ ಅಂದಾಜು ಹೆಚ್ಚಾದದ್ದರಿಂದ ೧೯೪೧ರಲ್ಲಿ ಅವರ ಜನಸಂಖ್ಯೆ ಇಳಿಮುಖವಾಯಿತೆಂದು ಹೇಳುವಂತಿಲ್ಲ. +ಅಜ್ಮೀರ್‌, ಮೇವಾಡ ಮತ್ತು ಗ್ವಾಲಿಯರ್‌ ರಾಜ್ಯಗಳ ಪರಿಶಿಷ್ಟ ಜಾತಿಗಳ ಜನಸಂಖ್ಯೆಯ ಅಂಕಿ-ಅಂಶಗಳನ್ನು ೧೯೪೧ ರ ಜನಗಣತಿ ಕೊಟ್ಟಲ್ಲವೆನ್ನುವುದು ನಿಜ. + ಆದರೆ ೧೯೩೧ ರಲ್ಲಿದ್ದ ಈ ರಾಜ್ಯಗಳ ಪರಿಶಿಷ್ಟ ಜಾತಿಗಳ ಜನಸಂಖ್ಯೆಯನ್ನು ೧೯೪೧ ರ ಅವರ ಜನಸಂಖ್ಯೆಗೆ ಸೇರಿಸಿದಾಗ ಬರುವ ಮೊತ್ತವೂ ೪೯,೫೩೮,೧೪೫. + ಇದೂ ಕೂಡ ಅವರ ಜನಸಂಖ್ಯೆಯ ಇಳಿಮುಖವನ್ನೇ ತೋರಿಸುತ್ತದೆ. +ಈ ಅವಧಿಯಲ್ಲಿ ಪರಿಶಿಷ್ಟ ಜಾತಿಗಳ ಜನಸಂಖ್ಯೆಯ ಇಳಿಮುಖಕ್ಕೆ ಮತ್ತು ಇತರರ ಜನಸಂಖ್ಯೆಯ ಹೆಚ್ಚಳಕ್ಕೆ ಯಾವದೇ ಸಮರ್ಥ ವಿವರಣೆಯಿಲ್ಲ. +ಭಾರತದ ಜನಗಣತಿ ಹಲವು ದಶಕಗಳಿಂದ ನಿಖರವಾದ ಜನಾಂಗಸ್ಥಿತಿ ವಿವರಣೆಯಾಗಿ ಉಳಿದಿಲ್ಲ. +ಅದು ರಾಜಕೀಯದಿಂದ ತುಂಬಿದೆ ಎಂಬ, ಜನಸಂಖ್ಯಾಶಾಸ್ತ್ರದ ವಿದ್ಯಾರ್ಥಿಯ ನಂಬಿಕೆಯನ್ನು ಇದು ದೃಢೀಕರಿಸುತ್ತದೆ. +ಪ್ರತಿಯೊಂದು ಕೋಮೂ ಬೇರೆ ಕೋಮುಗಳ ವಿರುದ್ಧವಾಗಿ ತನ್ನ ಜನಸಂಖ್ಯೆಯ ಮೊತ್ತವನ್ನು ಕೃತ್ತಿಮವಾಗಿ ಹೆಚ್ಚಿಸಿಕೊಂಡು ಹೆಚ್ಚಿನ ರಾಜಕೀಯ ಅಧಿಕಾರವನ್ನು ಗಳಿಸಿಕೊಳ್ಳಲು ಹವಣಿಸುತ್ತಿವೆ. +ಬೇರೆಲ್ಲಾ ಕೋಮುಗಳ ದುರಾಸೆಗೆ ಪರಿಶಿಷ್ಟಪಾತಿಯವರು ಬಲಿಯಾಗುತ್ತಾರೆ. +ಜನಗಣತಿಯನ್ನು ಪ್ರಚಾರಕರ ಹಾಗೂ ಗಣಕರ ಮೂಲಕ ತಮ್ಮ ನಿಯಂತ್ರಣದಲ್ಲಿಟ್ಟುಕೊಂಡು ಬೇರೆ ಕೋಮುಗಳವರು ಈ ಆಟ ಹೂಡಿದ್ದಾರೆ. +ಆದ್ದರಿಂದ, ಈ ಮೇಲಣ ವಿವರಣೆಯ ಹಿನ್ನಲೆಯಲ್ಲಿ ಆಜ್ಮೀರ್‌, ಮೇವಾಡ ಮತ್ತು ಗ್ವಾಲಿಯರ್‌ ರಾಜ್ಯಗಳ ಪರಿಶಿಷ್ಟಜಾತಿಗಳ ಜನಸಂಖ್ಯೆಯ ಜೊತೆಗೆ ೧೯೪೧ ರಲ್ಲಿ ಒಟ್ಟಿನ ಜನಸಂಖ್ಯೆಯಲ್ಲಿ ಹೆಚ್ಚಿರುವ ಶೇ.೧೫ ರಷ್ಟನ್ನು ಸೇರಿಸಿದಾಗ ಲಭ್ಯವಾಗುವ ಮೊತ್ತವೇ ಪರಿಶಿಷ್ಟ ಜಾತಿಗಳವರ ಈಗಿನ ಒಟ್ಟು ಜನಸಂಖ್ಯೆಯೆಂದು ಘೋಷಿಸುವುದಾದರೆ ಅವರಿಗೆ ನ್ಯಾಯ ದೊರೆತಂತಾಗುತ್ತದೆ. +ಭಾರತದಲ್ಲಿ ಸಣ್ಣ ಹಿಡುವಳಿ ಮತ್ತು ಅವುಗಳ ಪರಿಹಾರಗಳು ಪ್ರಕಟಣೆ: +ಕೃಷಿಯ ಮಹತ್ವ:ಜೀವನೋಪಾಯದ ಆರ್ಥಿಕ ವಿಧಾನಗಳ ಅಧ್ಯಯನ ಯಾವಾಗಲೂ ಮಹತ್ವವಾಗಿದೆ. +ಈ ವಿಧಾನಗಳು ಸಾಮಾನ್ಯವಾಗಿ ಉದ್ಯಮ ಅಥವಾ ಸೇವಾ ರೂಪದವುಗಳಾಗಿರುತ್ತವೆ. +ಉದ್ಯಮಗಳಿಗೆ ನಾವು ಸೀಮಿತವಾದರೆ ಅವುಗಳನ್ನು ಪ್ರಧಾನ ಮತ್ತು ಅಧೀನವೆಂದು ವಿಭಜಿಸಬಹುದು. +ಪ್ರಧಾನ ಕೈಗಾರಿಕೆಗಳು ಭೂಮಿಯಿಂದ, ಮಣ್ಣಿನಿಂದ ಮತ್ತು ನೀರಿನಿಂದ ಉಪಯುಕ್ತ ವಸ್ತುಗಳನ್ನು ಹೊರತೆಗೆಯುವಂತಹವು. +ಬೇಟೆಯಾಡುವುದು, ಮೀನು ಹಿಡಿಯುವುದು ಪ್ರಾಣಿಗಳನ್ನು ಸಾಕುವುದು,ಮರಕಡಿಯುವುದು, ಗಣಿ ತೋಡುವುದು ಇಂತಹ ಕೆಲಸಗಳಿಂದ ಕೂಡಿರುವುವು. +ಸಹಜವಾಗಿ ದೊರೆಯುವ ಪದಾರ್ಥಗಳನ್ನು ಹೊರತೆಗೆಯುವ ಅಥವಾ ಪಡೆಯುವ ಈ ಉದ್ದಿಮೆಗಳು ಎರಡು ವಿಧದಲ್ಲಿ ಮೂಲಭೂತವಾಗಿವೆ. +ಅವು ಭೌತಿಕ ಪ್ರಪಂಚದಿಂದ ಮಾನವನ ಜೀವಿತಕ್ಕೆ ಮೂಲಸಂಪನ್ಮೂಲಗಳನ್ನೊದಗಿಸುವ ಉಪಯುಕ್ತ ವಸ್ತುಗಳನ್ನು ಹೊರತೆಗೆಯುತ್ತವೆ. +ಅವು ಅಧೀನವಾದ ಅಥವಾ ಸರಕುಗಳನ್ನು ಉತ್ತರಿಸುವ ಉದ್ದಿಮೆಗಳಿಗೆ ಕಚ್ಚಾ ವಸ್ತುಗಳನ್ನು ಒದಗಿಸುತ್ತವೆ. +ಏಕೆಂದರೆ ಡಾ.ಪ್ರ್ಯಾಂಕ್ಷಿನ್‌ ಅವರ ಮಾತಿನಲ್ಲಿ ಹೇಳಬೇಕಾದರೆ “ಸಿದ್ಧಪಡಿಸಿದ ವಸ್ತುಗಳು ಕೇವಲ ರೂಪಾಂತರಗೊಂಡ ವಸ್ತುಗಳು”. +ರಾಷ್ಟೀಯ ದೃಷ್ಟಿಯಿಂದಲೂ ಸಹ ಪ್ರಧಾನ ಉದ್ಯಮಗಳ ಮಹತ್ವ ಪ್ರಶ್ನಾತೀತ. +ಅವು ಎಷ್ಟೇ ಮಹತ್ವದವಾಗಿದ್ದರೂ ಕೂಡ, ಕೃಷಿ ಅಥವಾ ಒಕ್ಕಲುತನ ಅವೆಲ್ಲವುಗಳಿಗಿಂತ ಪ್ರಮುಖವಾದುದು. +ಎಲ್ಲಾ ಉದ್ಯಮಗಳಲ್ಲಿ ಅವು ಪ್ರಾಥಮಿಕವೇ ಆಗಿರಲಿ ಇಲ್ಲದಿರಲಿ, ಕೃಷಿ ಅತ್ಯಂತ ಪ್ರಾಚೀನವಾದದ್ದು ಮತ್ತು ಶಾಶ್ವತವಾದದ್ದು, ಅದು ಆಹಾರದ ಉತ್ಪಾದನೆಗೆ ಸಂಬಂಧಿಸಿರುವುದರಿಂದ ಅದರ ಸಮಸ್ಯೆಗಳತ್ತ ನಮ್ಮ ಗಂಭೀರ ಆಲೋಚನೆಗಳನ್ನು ಸೆಳೆಯಲು ಯೋಗ್ಯವಾಗಿದೆ. +ಭಾರತದಂತಹ ದೇಶವು ಸಂಪೂರ್ಣವಾಗಿ ಕೃಷಿಯನ್ನೇ ಅವಲಂಬಿಸಿರುವುದರಿಂದ ಅದರ ಮಹತ್ವವನ್ನು ಉತ್ಪ್ರೇಕ್ಷಿಸುವ ಅವಶ್ಯವಿಲ್ಲ. +ಏನನ್ನು ಉತ್ಪಾದಿಸಬೇಕು. +ಉತ್ಪಾದನೆಯ ಅಂಶಗಳ ಸರಿಯಾದ ಪ್ರಮಾಣ, ಹಿಡುವಳಿಯ ಗಾತ್ರ, ಭೂ ಹಿಡುವಳಿಯ ಹಕ್ಕು ಮುಂತಾದವುಗಳು ಕೃಷಿ ಉತ್ಪಾದನೆಯ ಬಗ್ಗೆ ನೇರವಾಗಿ ವ್ಯವಹರಿಸುವ ಕೃಷಿ ಅರ್ಥನೀತಿ ಎದುರಿಸಬೇಕಾದ ಸಮಸ್ಯೆಗಳಾಗಿವೆ. +ಹಿಡುವಳಿಗಳ ಗಾತ್ರವು ಕೃಷಿ ಉತ್ಪಾದಕತೆಯ ಮೇಲೆ ಪರಿಣಾಮ ಬೀರುವುದರಿಂದ ಈ ಪ್ರಬಂಧದಲ್ಲಿ ಹಿಡುವಳಿಗಳ ಗಾತ್ರದ ಸಮಸ್ಯೆಯನ್ನು ಮಾತ್ರ ಪರಿಶೀಲಿಸುವ ಪ್ರಯತ್ನ ಮಾಡಲಾಗಿದೆ. +ಭಾರತದಲ್ಲಿ ಸಣ್ಣ ಹಿಡುವಳಿಗಳು:ಕೆಲವು ದೇಶಗಳಲ್ಲಿ ಅಧಿಕವಾಗಿ ಸಣ್ಣ ಹಿಡುವಳಿಗಳು ಮಾತ್ರವಿದ್ದರೆ, ಇತರ ದೇಶಗಳಲ್ಲಿ ದೊಡ್ಡಹಿಡುವಳಿಗಳಿರುತ್ತವೆ. +ಅ್ಯಡಮ್‌ ಸ್ಮಿಥ್‌ ಅವರ ಪ್ರಕಾರ ಸೈನಿಕ ಜೀವನದ ವ್ಯವಸ್ಥೆಯ ಒತ್ತಡದಿಂದಾಗಿ ಆಚರಣೆಯಲ್ಲಿ ಬಂದ ಆಸ್ತಿಗೆ ಕೇವಲ ಹಿರಿಯ ಮಗನ ಹಕ್ಕಿನ ನಿಯಮ (ಜೇಷ್ಠಾಧಿಕಾರ) ದಿಂದಾಗಿ ದೊಡ್ಡ ಹಿಡುವಳಿಗಳ ನಿರ್ಮಾಣ ಮತ್ತು ಉಳಿವಿಗೆ ದಾರಿಯಾಗಿದೆ. +ಅದೇ ರೀತಿ ಒಂದು ರಾಷ್ಟ್ರದ ಶಾಂತಿಯುತ ಜೀವನದಿಂದಾಗಿ ಆಸ್ತಿಯಲ್ಲಿ ಎಲ್ಲರಿಗೂ ಸಮಪಾಲಿನ ಆಧಾರದಲ್ಲಿ ಭೂಮಿಯ ವಿಭಜನೆ. +ಉಪ-ವಿಭಜನೆಗಳಿಂದಾಗಿ ಸಣ್ಣ ಹಿಡುವಳಿಗಳು ನಿರ್ಮಾಣವಾಗಿವೆ. +ಅವರೇ ಹೇಳುವಂತೆ :"ಚೆರವಸ್ತುಗಳನ್ನು ಪರಿಗಣಿಸಿದಂತೆ ಭೂಮಿಯನ್ನು ಜೀವನ ಮತ್ತು ಅನುಭೋಗದ ಏಕೈಕ ಸಾಧನವೆಂದು ಪರಿಗಣಿಸಲಾದಾಗ, ಉತ್ತರಾಧಿಕಾರದ ಸ್ವಾಭಾವಿಕ ನಿಯಮದಂತೆ ಅದನ್ನು ಕುಟುಂಬದ ಎಲ್ಲಾ ಮಕ್ಕಳಲ್ಲಿ ವಿಭಜಿಸಲಾಗುವುದು. + ಈ ಎಲ್ಲ ಮಕ್ಕಳ ಜೀವನ ಮತ್ತು ಉಪಭೋಗ ತಂದೆಗೆ ಸಮಾನ ರೀತಿಯಲ್ಲಿ ಪ್ರಿಯವಾಗಿರುವುದರಿಂದ ಚಿಕ್ಕ ಹಿಡುವಳಿಗಳು ಹೆಚ್ಚುತ್ತಾ ಹೋಗುತ್ತವೆ. +ಆದರೆ ಭೂಮಿಯನ್ನು ಕೇವಲ ಜೀವನೋಪಾಯದ ಸಾಧನವಾಗಿಯಲ್ಲದೇ ಅಧಿಕಾರ ಬಲ ಮತ್ತು ರಕ್ಷಣೆಯ ಸಾಧನವನ್ನಾಗಿ ಪರಿಗಣಿಸಿದಾಗ ಅದು ಅವಿಭಾಜಿತವಾಗಿ ಒಬ್ಬನಿಗೇ ಹಸ್ತಾಂತರವಾಗುವುದು ಶ್ರೇಷ್ಠವನಿಸಿತು. +ಆಗಿನ ಆರಾಜಕ ಮತ್ತು ಅವ್ಯವಸ್ಥೆಯ ಕಾಲದಲ್ಲಿ ಭೂಮಿಯ ವಿಭಜನೆಯೆಂದರೆ ಅದರ ವಿನಾಶವೇ ಆಗಿತ್ತಲ್ಲದೆ ಅದರ ಪ್ರತಿಯೊಂದು ಭಾಗವನ್ನು ನೆರೆಹೊರೆಯವರ ವಿರೋಧ ಮತ್ತು ಕಬಳಿಕೆಗೆ ಒಡ್ಡಿದಂತೆಯೇ ಆಗಿತ್ತು. +ಆದ್ದರಿಂದ ಭೂ ಆಸ್ತಿಯ ಉತ್ತರಾಧಿಕಾರದ ಹಕ್ಕಿನ ಜೇಷ್ಠಾಧಿಕಾರ ನಿಯಮ ಜಾರಿಗೆ ಬಂದಿತು. +ಇದರಿಂದ ದೊಡ್ಡ ಹಿಡುವಳಿಗಳ ರಕ್ಷಣೆಗೆ ಅನುವಾಯಿತು.” +ಇದರಿಂದಾಗಿ ಇಂಗ್ಲೆಂಡ್‌ ದೊಡ್ಡ ಹಿಡುವಳಿಗಳ ದೇಶವಾಗಿದೆ. +ಕ್ರಾಂತಿ ತರುವಾಯದ ಫಾನ್ಸ್‌ಸಣ್ಣ ಹಿಡುವಳಿಗಳ ದೇಶವಾಗಿದೆ. +ಇದೇ ರೀತಿ ಹಾಲೆಂಡ್‌ ಮತ್ತು ಡೆನ್ಮಾರ್ಕ್‌ ಕೂಡ. +ಭಾರತದತ್ತ ಹೊರಳಿದಾಗ ೧೮೯೬-೯೭ ಮತ್ತು ೧೯ಂಂ-೧ ರ ಕಾಲದಲ್ಲಿ ಪ್ರತ್ಯೇಕವಾಗಿ ಮತ್ತು ನೇರವಾಗಿ ಹೊಂದಿದ ಹಿಡುವಳಿಗಳ ಗಾತ್ರದ ವಿವರ ಹೀಗಿದೆ. +ಇತ್ತೀಚೆಗೆ ಬರೋಡಾ ಸಂಸ್ಥಾನದಿಂದ ಹೆಚ್ಚು ಸೀಮಿತವಾದರೂ ಅತ್ಯಂತ ನಿಖರವಾಗಿ ದೊರೆತ ಅಂಕಿಅಂಶಗಳಿವು. +ಈ ರಾಜ್ಯದ ಭೂ ಹಿಡುವಳಿಯ ಅಂಕಿ ಅಂಶಗಳನ್ನು ಬಿಘಾಗಳಲ್ಲಿ ಈ ಕೆಳಗಿನ ತಖ್ತೆಯಲ್ಲಿ ಕೊಡಲಾಗಿದೆ. +ಡಾ. ಹೆಚ್‌. ಎಸ್‌ ಮಾನ್‌ ಮತ್ತು ಅವರ ಸಹೋದ್ಯೋಗಿಗಳು ನಡೆಸಿದ ಇನ್ನೊಂದು ಸಮೀಕ್ಷೆಯಿಂದ ಪುಣೆಯ ಹತ್ತಿರದ ಪಿಂಪಲಾ-ಸೌದಾಗರ್‌ ಗ್ರಾಮದ ಸಣ್ಣ ಹಿಡುವಳಿಗಳ ಬಗ್ಗೆ ಹೆಚ್ಚು ನಿಖರವಾದ ಸಂಗತಿ ತಿಳಿಯುತ್ತದೆ. +ಆ ಗ್ರಾಮದ ಹಿಡುವಳಿಯ ಗಾತ್ರವನ್ನು ಈ ಕೆಳಗಿನ ತಖ್ತೆಯಲ್ಲಿ ಕೊಡಲಾಗಿದೆ. +“ಈ ಪಟ್ಟಿಯಲ್ಲಿ ಸಾಧಾರಣ ಆಕಾರದ ಮೋಡಲ್‌ (110661) ಹಿಡುವಳಿ ೧ ಮತ್ತು ೨ ಎಕರೆಗಳ ನಡುವೆ ಇದೆ. + ಒಂದು ಮೋಡ್‌ ಎಂದರೆ ಅನೇಕ ನಿದರ್ಶನಗಳಲ್ಲಿ ಪದೇ ಪದೇ ಸಂಭವಿಸುವ ಸಂಖ್ಯಾತ್ಮಕ ಸರಾಸರಿ ಹಿಡುವಳಿಗಳ ಸರಾಸರಿ ಗಾತ್ರ ಮುಂಬಯಿ ಪ್ರಾಂತ್ಯದಲ್ಲಿ ೨೫.೯ ಎಕರೆಗಳಿಂದ ಪಿಂಪಲಾ-ಸೌದಾಗರ್‌ದಲ್ಲಿ ಒಂದು ಅಥವಾ ಎರಡು ಎಕರೆಗಳಿಗೆ ವ್ಯತ್ಯಾಸವಾಗುವುದು ಈ ತಖ್ರೆಗಳಿಂದ ವ್ಯಕ್ತವಾಗುತ್ತದೆ. +ಕ್ಷೇಣಿಸುತ್ತಿರುವ ಹಿಡುವಳಿಗಳ ಗಾತ್ರ ಭಾರತದ ಕೃಷಿಗೆ ಅತ್ಯಂತ ಹಾನಿಕರವೆಂದು ಹೇಳಲಾಗಿದೆ. +ಸಣ್ಣ ಹಿಡುವಳಿಗಳ ಅನೇಕ ಅನಿಷ್ಟಗಳಿವೆ ಎಂಬುದು ನಿಸ್ತಂಶಯ. +ಈ ಚಿಕ್ಕ ಹಿಡುವಳಿಗಳು ಅಚ್ಚುಕಟ್ಟಾಗಿದ್ದರೆ ಅಥವಾ ಒಂಂದುಗೂಡಿದವುಗಳಾಗಿದ್ದರೆ ಈ ಅನಿಷ್ಟಗಳು ಎಷ್ಟೋ ಕಡಿಮೆಯಾಗುತ್ತಿದ್ದವು. +ದುರದೃಷ್ಟವೆಂದರೆ ಅವು ಹಾಗಿಲ್ಲ. +ಒಬ್ಬ ರೈತನ ಹಿಡುವಳಿಗಳು ಕಂದಾಯದ ದೃಷ್ಟಿಯಿಂದ ಒಂದುಗೂಡಿದವುಗಳಾಗಿದ್ದರೂ ಉಳುವ ದೃಷ್ಟಿಯಿಂದ ಗ್ರಾಮದ ಎಲ್ಲೆಡೆ ಚದುರಿ ಹೋದ ಸಣ್ಣ ತುಂಡುಗಳಿಂದ ಕೂಡಿದ್ದು ಅವುಗಳ ನಡುವೆ ಇತರರಿಗೆ ಸೇರಿದ ಭೂಮಿಗಳೂ ಇರುತ್ತವೆ. +ಅವು ಎಷ್ಟರಮಟ್ಟಿಗೆ ಚದುರಿಹೋಗಿವೆ ಎಂಬುದನ್ನುಒಂದು ನಕಾಶೆಯ ಸಹಾಯದಿಂದ ಮಾತ್ರ ಚಿತ್ರಿಸಲು ಸಾಧ್ಯ. +ಇಲ್ಲಿ ನಕಾಶೆಯನ್ನು ಕೊಡಲು ೨. ಬರೋಡಾ ಸಂಸ್ಥಾನದಲ್ಲಿ ಸಣ್ಣ ಮತ್ತು ಚದುರಿದ ಹಿಡುವಳಿಗಳನ್ನು ಕೋಢೀಕರಿಸುವುದಕ್ಕಾಗಿ ಶಿಫಾರಸ್ಸು ಮಾಡಲು ೧೯೧೭ ರಲ್ಲಿ ನೇಮಕಗೊಂಡ ಸಮಿತಿಯ ವರದಿ. +ಸಾಧ್ಯವಿಲ್ಲದಿರುವುದರಿಂದ ನಾವು ಒಂದು ಹಿಡುವಳಿಯಲ್ಲಿ ಎಷ್ಟು ಪ್ರತ್ಯೇಕ ತುಂಡುಗಳಿವೆಯೆಂದುತಿಳಿದುಕೊಳ್ಳುವುದರಲ್ಲಿಯೇ ತೃಪ್ತಿಯಾಗಬೇಕು. +ಪ್ರತಿಯೊಂದು ಹಿಡುವಳಿಯಲ್ಲಿರುವ ಕುಣುಕುಗಳ ಸಂಖ್ಯೆಯಿಂದ ಅವು ಅಷ್ಟರಮಟ್ಟಗೆ ವಿಚ್ಛೆದ್ರವಾಗಿವೆ ಎಂಬುದು ತಿಳಿಯುವುದು. +ಈ ಪಶ್ನೆ ಗೆ ಸಂಬಂಧಿಸಿದಂತೆ ಇಡೀ ಭಾರತದ ಅಂಕಿ ಸಂಖ್ಯೆಗಳು ಲಭ್ಯವಿಲ್ಲ. +ಆದರೆ ಸನ್ಮಾನ್ಯ ಜಿ. ಎಫ್‌. ಕೀಂಟಿಜ್‌ ಅವರು ೧೯೧೬ರಲ್ಲಿ ಸರ್ಕಾರಕ್ಕೆ ಸಲ್ಲಿಸಿದ ತಮ್ಮ ಟಿಪ್ಪಣಿಯಲ್ಲಿ” ಮುಂಬಯಿ ಪ್ರಾಂತ್ಯದ ಎಲ್ಲಾ ಜಿಲ್ಲೆಗಳಿಂದ ವಿಶೇಷ ಅಂಕಿಸಂಖ್ಯೆಗಳನ್ನು ಸಂಗ್ರಹಿಸಿದ್ದಾರೆ. +ಅವರ ಅಂಕಿ ಅಂಶಗಳನ್ನು ಈ ಕೆಳಗಿನ ತಖ್ತೆಯಲ್ಲಿ ಅರ್ಥವಾಗುವರೀತಿಯಲ್ಲಿ ಜೋಡಿಸಲಾಗಿದೆ . +ಈ ಅಮೂಲ್ಯ ಟಿಪ್ಪಣಿಯ ಪ್ರತಿಯನ್ನು ಒದಗಿಸಿದ್ದಕ್ಕಾಗಿ ಈ ಲೇಖಕರು ಅವರಿಗೆ ಆಭಾರಿಯಾಗಿದ್ದಾರೆ. +ಇಂತಹ ಸಣ್ಣ ಮತ್ತು ಚದುರಿದ ಹಿಡುವಳಿಗಳು ನಮ್ಮ ದೇಶದ ಈ ಬೃಹತ್‌ ರಾಷ್ಟ್ರೀಯ ಉದ್ದಿಮೆಯ ವಿಷಯದಲ್ಲಿ ಕಳವಳಕ್ಕೆ ಕಾರಣವಾಗಿದೆ. +ತುಲನಾತ್ಮಕ ಅಂಕಿ ಸಂಖ್ಯೆಗಳು ಭಾರತದ ಆರ್ಥಿಕ ಜೀವನದ ಬಗ್ಗೆ ಈ ಎರಡು ಗಮನಾರ್ಹ ಮತ್ತು ಅಷ್ಟೇ ದುಃಖದಾಯಕ ಅಂಶಗಳನ್ನು ಹೊರಹಾಕುವ ಮೂಲಕ ಈ ಕಳವಳವನ್ನು ಇನ್ನೂ ಹೆಚ್ಚಿಸುತ್ತವೆ . +(೧) ಇದು ಬಹುಮಟ್ಟಿಗೆ ಕೃಷಿ-ಪ್ರಧಾನ ದೇಶ ಮತ್ತು (೨) ಇದರ ಕೃಷಿ ಉತ್ಪಾದಕತೆ ಅತ್ಯಂತ ಕಡಿಮೆಯದಾಗಿದೆ. +ಈ ಎರಡೂ ಸತ್ಯಸಂಗತಿಗಳು ನೋವನ್ನುಂಟು ಮಾಡುವಂತಹವುಗಳಾಗಿದ್ದು ಈ ಕನಿಷ್ಠ ಉತ್ಪಾದಕತೆಯ ಕಾರಣಗಳನ್ನು ಕುರಿತು ಅನೇಕರನ್ನು ಚಿಂತಿಸುವಂತೆ ಮಾಡಿದೆ. +ಇದರ ಪರಿಣಾಮವಾಗಿ, ಕೃಷಿ ಹಿಡುವಳಿಗಳ ಅತಿ ಹೆಚ್ಚು ವಿಭಾಗಗಳು, ಉಪವಿಭಾಗಗಳು ಮತ್ತು ವಿಚ್ಛೆದ್ರತೆಯ ಬಗ್ಗೆ ಗಮನವನ್ನು ಕೇಂದ್ರೀಕರಿಸಲಾಗಿದೆ. +ಹಿಡುವಳಿಗಳ ವಿಸ್ತರಣ ಮತ್ತು ಕ್ರೋಢೀಕರಣದ ಮೂಲಕ ಕೃಷಿ ಉತ್ಪಾದಕತೆಯನ್ನು ಹೆಚ್ಚಿಸಬಹುದೆಂಬ ದೃಡ ವಿಶ್ವಾಸವನ್ನು ವಾದ ಮಾಡಲಾಗುತ್ತಿದೆ. +ಕ್ರೋಢೀಕರಣ ಹಿಡುವಳಿಗಳ ಕ್ರೋಢೀಕರಣ ಕಾರ್ಯರೂಪದ ಸಮಸ್ಯೆಯಾಗಿದ್ದರೆ ಅವುಗಳ ವಿಸ್ತರಣೆ ಸೈದ್ಧಾಂತಿಕದ್ದಾಗಿದ್ದು ಅವುಗಳ ಗಾತ್ರದ ನಿರ್ಣಾಯಕ ತತ್ವಗಳ ಚರ್ಚೆ ಅವಶ್ಯವೆನಿಸಿದೆ. +ವಿಸ್ತರಣೆಯ ಸೈದ್ಧಾಂತಿಕ ಪ್ರಶ್ನೆಯ ಪರಿಶೀಲನೆಯನ್ನು ಮುಂದಕ್ಕೆ ಹಾಕಿ ಕ್ರೋಢೀಕರಣದ ಸಮಸ್ಯೆಯನ್ನು ಕೈಗೆತ್ತಿಕೊಂಡರೆ ಅದು ಕೆಳಗಿನ ಎರಡು ಸಮಸ್ಯೆಗಳನ್ನು ಸ್ಪಷ್ಟಪಡಿಸುತ್ತಿದೆ. +(೧) ಈಗ ಅಸ್ತಿತ್ವದಲ್ಲಿರುವ ಸಣ್ಣ ಮತ್ತು ಚದುರಿಹೋಗಿರುವ ಹಿಡುವಳಿಗಳನ್ನು ಹೇಗೆ ಒಂದುಗೂಡಿಸುವುದು . +(೨) ಒಮ್ಮೆ ಒಂದುಗೂಡಿಸಿದನಂತರ ಅವುಗಳನ್ನು ಅದೇ ಗಾತ್ರದಲ್ಲಿ ಮುಂದುವರಿಯುವಂತೆ ಮಾಡುವ ಬಗೆ ಹೇಗೆ. +ಈ ಪ್ರಶ್ನೆಗಳನ್ನು ಒಂದೊಂದಾಗಿ ಪರಿಶೀಲಿಸೋಣ. +ಭೂಮಿಯನ್ನು ಉಪ-ವಿಭಾಗಗಳನ್ನಾಗಿ ವಿಭಜಿಸುವುದೆಂದರೆ ಭೂಮಿಯನ್ನು ತುಂಡರಿಸುವುದೆಂದು ಅರ್ಥವೇನಲ್ಲ. +ಆದರೆ ದುರದೃಷ್ಟವೆಂದರೆ ಭೂಮಿಯನ್ನು ತುಂಡರಿಸುವುದೆಂದು ಅರ್ಥವೇನಲ್ಲ. +ಆದರೆ ದುರದೃಷ್ಟದಿಂದ ಅದು ಹಾಗಾಗಿದೆ. +ಪ್ರತಿಯೊಬ್ಬ ವಾರಸುದಾರನು ಸಾಧ್ಯವಾದ ಮಟ್ಟಿಗೆ ಮೃತರ ಒಂದು ಖಾತೆಯಡಿಯಲ್ಲಿ ಬರುವ ಇಡೀ ಭೂಮಿಯನ್ನು ಪಡೆದುಕೊಳ್ಳುವ ಬದಲು ಪ್ರತಿ ಸರ್ವೆ ನಂಬರ್‌ನಲ್ಲಿಯೂ ಪ್ರತ್ಯೇಕ ಪಾಲು ಪಡೆಯಬಯಸುತ್ತಾನೆ. +ಎಂದರೆ, ವಾರಸುದಾರನು ಭೂಮಿಯನ್ನು ಸರ್ವೆ ನಂಬರಿನ ಆಧಾರದ ಮೇಲೆ ಭಾಗ ಮಾಡಿಕೊಳ್ಳದೆ ಪ್ರತಿ ಸರ್ವೆ ನಂಬರಿನಲ್ಲಿಯೂ ಭಾಗ ಪಡೆದುಕೊಳ್ಳುವುದರ ಮೂಲಕ ಭೂಮಿಯ ವಿಚ್ಛಿದ್ರತೆಗೆ ಕಾರಣವಾಗುತ್ತಾರೆ. +ಹೀಗೆ ವಿಚ್ಛದ್ರಗೊಳಿಸುವುದರಿಂದ ಪ್ರತಿಯೊಬ್ಬರಿಗೂ ಸಮಾನವಾಗಿ ಹಂಚಿಕೊಟ್ಟಂತಾಗುವುದಾದರೂ ಒಂದು ಕಾಲದಲ್ಲಿ ಯುರೋಪಿನಲ್ಲಿ ಸಂಭವಿಸಿದ್ದಂತೆ ಭಾರತದ ಕೃಷಿಯನ್ನುಸಾಕಷ್ಟು ಅಸಮರ್ಥಗೊಳಿಸಿದೆ. +ಶ್ರಮದ ಮತ್ತು ದನಗಳ ಶಕ್ತಿಯ ಹಾನಿ, ಅವಶ್ಯಕವಾಗಿ ಬೇಲಿ ಮತ್ತು ಬದುಕಿನ ನಿರ್ಮಾಣ ಮತ್ತು ಗೊಬ್ಬರದ ನಷ್ಟ ಇದರ ಪರಿಣಾಮ. +ಇದರಿಂದ ಬೆಳೆಗಳ ರಕ್ಷಣೆ,ಭಾವಿಗಳನ್ನು ತೋಡುವುದು ಮತ್ತು ಶ್ರಮದ ಉಳಿತಾಯದ ಸಾಧನೆಗಳ ಬಳಕೆ ಅಸಾಧ್ಯವಾಗುವುದು. +ಇದರಿಂದ ಸಾಗುವಳಿಯಲ್ಲಿ ಬದಲಾವಣೆಗಳನ್ನು ಮಾಡುವುದು. + ರಸ್ತೆಗಳ, ನೀರಿನ ಕಾಲುವೆಗಳ ನಿರ್ಮಾಣ ಮುಂತಾದವು ಕಷ್ಟವಾಗುವುದಲ್ಲದೆ ಉತ್ಪಾದನೆಯ ವೆಚ್ಚವೂ ಹೆಚ್ಚುವುದು. +ವಿಚ್ಛಿದ್ರತೆಯ ಈ ಅನಾನುಕೂಲತೆಗಳನ್ನು ಈ ಪಟ್ಟಿಗಳ ಪುನರ್ವಿರಚನೆ ಆಥವಾ ಕ್ರೋಢೀಕರಣದ ಪಕ್ರಿಯೆಯ ಸಂಬಂಧದಲ್ಲಿ ನೆನಪಿಗೆ ತಂದುಕೊಳ್ಳಬೇಕಾಗುತ್ತದೆ. +ಎಲ್ಲಾ ವಿಧಾನಗಳೂ ಅಷ್ಟೇ ಪರಿಣಾಮಕಾರಿಯಾದವುಗಳಲ್ಲವಾದರೂ ಪಟ್ಟಿಗಳ ಪುನರ್ವಿರಚನೆಯ ಅನೇಕ ವಿಧಾನಗಳಿವೆ. +ಸ್ವಸಂತೋಷದಿಂದ ಅದಲು ಬದಲು ಮಾಡಿಕೊಳ್ಳುವ ವಿಧಾನ ಒಂದಾದರೂ ಅದನ್ನವಲಂಬಿಸುವುದು ಕಷ್ಟ ಆದರೆ ಅನುಭವದಾರನ ಹಕ್ಕಿನ ನಿರ್ಬಂಧಿತ ಮಾರಾಟವು ಹೆಚ್ಚು ಉಪಯುಕ್ತವೆನಿಸಬಹುದು. +ಏಕೆಂದರೆ, ಇದರನ್ವಯ ಸರ್ವೆ ನಂಬರುಗಳ ಹರಾಜು ನಡೆದಾಗ, ಹಿಡುವಳಿದಾರರು ಅವುಗಳನ್ನು ಬಿಟ್ಟುಕೊಟ್ಟಾಗ ಅಥವಾ ಕಂದಾಯದ ಬಾಕಿಗಾಗಿ ಮುಟ್ಟುಗೋಲು ಹಾಕಿಕೊಂಡಾಗ ಅಂತಹ ಭೂಮಿಗೆ ಸಂಲಗ್ನವಾದ ಭೂಮಿಯನ್ನು ಹೊಂದಿರುವವರಿಗೆ ಮಾತ್ರ ಹರಾಜಿನಲ್ಲಿ ಭಾಗವಹಿಸಲು ಅವಕಾಶ ಕೊಡಬೇಕು. +ಈ ಪುನರ್ರಚನೆಯ ಪ್ರಕ್ರಿಯೆಗೆ ಹೆಚ್ಚು ಸಹಾಯವಾಗುವಂತೆ ಪೂರ್ವ-ಖರೀದಿಯ ಹಕ್ಕನ್ನು ತಮ್ಮ ಭೂಮಿಯನ್ನು ಮಾರಬಯಸುವ ರೈತರ ನೆರೆಹೊರೆಯ ಭೂಮಿಯವರಿಗೇ ನೀಡುವುದು ಒಳ್ಳೆಯದು. +ಈ ವಿಧಾನಗಳು ಅತಿ ಚಿಕ್ಕ ಪ್ರಮಾಣದಲ್ಲಿ ಅಪೇಕ್ಷಿತ ಫಲ ನೀಡಬಲ್ಲವೆಂಬುದನ್ನು ನಾವು ಒಪ್ಪಿಕೊಳ್ಳಲೇಬೇಕು. +ಭೂಮಿಯ ವಿಚ್ಛಿದ್ರತೆಯ ಅನಿಷ್ಟಗಳು ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿದ್ದು ಅವುಗಳನ್ನು ಎದುರಿಸಲು ಕ್ರೋಢಿಕರಣದ ವ್ಯಾಪಕ ಯೋಜನೆ ಅವಶ್ಯ. +ಆದ್ದರಿಂದ ಗ್ರಾಮದ ಭೂಮಿಯಲ್ಲಿ ಅರ್ಧಕ್ಕಿಂತಲೂ ಹೆಚ್ಚು ಭೂಮಿಯಲ್ಲಿ ವ್ಯವಹರಿಸುವ ಎರಡು ಮೂರಾಂಶ ಖಾತೆದಾರರು ಸರಕಾರಕ್ಕೆ ಅರ್ಜಿ ಸಲ್ಲಿಸಿದಲ್ಲಿ ಸರಕಾರವು ಕಡ್ಡಾಯವಾಗಿ ಆ ಗ್ರಾಮದ ಚದುರಿಹೋಗಿರುವ ಭೂಮಿಗಳನ್ನು ಪುನಃ ಒಂದುಗೂಡಿಸುವ ಕಾರ್ಯವನ್ನು ಕೈಗೊಳ್ಳಬೇಕೆಂದು ವಾದಿಸಲಾಗಿದೆ. +ಈ ಕಡ್ಡಾಯವಾಗಿ ಪುನಃ ಒಂದುಗೂಡಿಸುವಿಕೆಯ ಕಾರ್ಯವನ್ನು ಎರಡು ತತ್ವಗಳ ಮೇಲೆ ಕಾರ್ಯಗತಗೊಳಿಸಬೇಕು . + (೧) “ಆರ್ಥಿಕವಾಗಿ ಲಾಭದಾಯಕ ಘಟಕ' ಮತ್ತು (೨) “ಮೂಲಸ್ವಾಮ್ಯ ಅಥವಾ ಒಡೆತನ”ದ ಆಧಾರದ ಮೇಲೆ ಈ ಎರಡು ಕೃತ್ಯಗಳ ಶ್ರೇಷ್ಠತೆಯನ್ನು ಕುರಿತು ಬರೋಡಾಸಮಿತಿ ಈ ರೀತಿ ಹೇಳಿದೆ. +“ಪ್ರತಿಯೊಂದು ಹಿಡುವಳಿಯ ಬೆಲೆಯನ್ನು ಮೊದಲು ಗೊತ್ತುಮಾಡಿಕೊಂಡ ನಂತರ ಮೊದಲಿನ ಮೇರೆ ಅಥವಾ ಬದುವುಗಳನ್ನು ತೆಗೆದುಹಾಕಲಾಗುತ್ತದೆ. +ರಸ್ತೆಗಳನ್ನು ಗುರುತಿಸಿ ಸಾರ್ವಜನಿಕ ಉಪಯೋಗಕ್ಕೆ ಬೇಕಾದ ಭೂಮಿಯನ್ನು ತೆಗೆದಿಡಬೇಕಾಗುತ್ತದೆ. +ಉಳಿದ ಭೂಮಿಯನ್ನು ಹೊಸ ಭಾಗಗಳನ್ನಾಗಿ ರಚಿಸಲಾಗುವುದು. +ಹೀಗೆ ಹೊಸ ಭಾಗಗಳನ್ನು ರಚಿಸುವಾಗ ಸ್ಥಳೀಯ ಮಣ್ಣು, ವ್ಯವಸಾಯ ಮುಂತಾದ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಒಂದು ಕುಟುಂಬಕ್ಕೆ ಪೂರ್ಣ ಕೆಲಸ ನೀಡಿ ಅದರ ಜೀವನಕ್ಕೆ ಸಾಕಷ್ಟು ಉತ್ಪನ್ನ ನೀಡುವಂತೆ ಅವುಗಳ ಗಾತ್ರವನ್ನು ನಿರ್ಧರಿಸಬೇಕು. +ಈ ಹೊಸ ತುಂಡುಭೂಮಿಗಳನ್ನು ಹಿಂದಿನ ಅನುಭವದಾರರಿಗೇ ಹರಾಜಿನ ಮೂಲಕ ಮಾರಬಹುದು. +ಸಾಗುವಳಿದಾರರನ್ನು ಬಹುಸಂಖ್ಯೆಯಲ್ಲಿ ಅವರ ಭೂಮಿಗಳಿಂದ ಹೊರಹಾಕುವುದನ್ನು ತಪ್ಪಿಸಲು ಭೂಖರೀದಿಯ ಮೇಲೆ ನಿರ್ಬಂಧಗಳನ್ನು ಹೇರಬಹುದು. +ಹೀಗೆ ಬಂದ ಖರೀದಿ ಹಣವನ್ನು ಒಂದು ನಿಗದಿತ ಪ್ರಮಾಣದಲ್ಲಿ ಈ ತುಂಡು ಭೂಮಿಗಳ ಮೊದಲಿನ ಮಾಲಿಕರಲ್ಲಿ ವಿಭಜಿಸಬಹುದು. +ಇದರಲ್ಲಿ ಒಂದು ಭಾಗವನ್ನು ಖರ್ಚಿಗಾಗಿ ಕಾದಿರಿಸಬೇಕು. +ಇದಕ್ಕೆ ಸರಕಾರವೂ ಒಂದು ಭಾಗವನ್ನು ನೀಡಬೇಕು ಇನ್ನೊಂದು ವಿಧಾನವೆಂದರೆ,ಗ್ರಾಮದ ಎಲ್ಲಾ ಭೂಮಿಯನ್ನು ಸ್ವಾಧೀನಪಡಿಸಿಕೊಂಡು ಅವುಗಳನ್ನು ಹೊಸ ಭಾಗಗಳಲ್ಲಿ ರಚಿಸಿ ನಗರಾಭಿವೃದ್ಧಿ ಮಂಡಳಿಗಳು ಅಥವಾ ಸರಕಾರವು ನಗರಗಳಲ್ಲಿ ಹೊಸ ರಸ್ತೆಗಳನ್ನು ನಿರ್ಮಿಸುವಾಗ ಅಥವಾ ನಗರಗಳ ಬಡಾವಣೆಯನ್ನು ನಿರ್ಮಿಸುವಾಗ ಮಾಡುವಂತೆ ಈ ಹೊಸದಾಗಿ ರಚಿಸಿದ ಭೂಮಿಯನ್ನು ಹರಾಜಿನ ಮೂಲಕ ಮಾರಬಹುದು. +ಆದರೆ ಕೃಷಿ ಭೂಮಿಯ ಸುಧಾರಣೆಗಾಗಿ ನಾವು ಈ ವಿಧಾನದ ಶಿಫಾರಸ್ಸು ಮಾಡುವುದಿಲ್ಲ. +ಇದು ಸಟ್ಟಾವ್ಯಾಪಾರಕ್ಕೆಡೆ ಮಾಡಬಹುದಾಗಿದ್ದು ಇದರಿಂದ ಅನೇಕ ಸಣ್ಣ ಹಿಡುವಳಿದಾರರಿಗೆ ತೊಂದರೆಯುಂಟು ಮಾಡುವಷ್ಟು ಸಂಖ್ಯೆಯಲ್ಲಿ ಅವರನ್ನು ಭೂಮಿಯಿಂದ ಹೊರತಳ್ಳುವ ಸಾಧ್ಯತೆ ಇದೆ. +“ಎರಡನೆಯ ವಿಧಾನದ ಪ್ರಕಾರ ಭೂಮಿಯನ್ನು ಪುನಃ ಒಂದುಗೂಡಿಸಲು ನಿರ್ಧರಿಸಿದಾಗ ಖಾತೆದಾರರ ಮತ್ತು ಅವರ ಹಿಡುವಳಿಗಳ ಪಟ್ಟಿಯನ್ನು ಮಾಡಲಾಗುವುದು ಮತ್ತು ಪಂಚರು ಅವುಗಳ ಮಾರುಕಟ್ಟೆಯ ಬೆಲೆಯನ್ನು ನಿರ್ಧರಿಸುವರು. +ನಂತರ ಪ್ರತಿಯೊಬ್ಬ ಖಾತೆದಾರನಿಗೂ ಅವರ ಮುಂಚಿನ ಹಿಡುವಳಿಯ ಪ್ರಮಾಣಕ್ಕನುಗುಣವಾಗಿ ಮತ್ತು ಸಾಧ್ಯವಾದ ಮಟ್ಟಿಗೆ ಅದೇ ಬೆಲೆಯ ಹೊಸ ಭೂಮಿಯನ್ನು ನೀಡಲಾಗುವುದು. +“ಬೆಲೆಯಲ್ಲಿನ ವ್ಯತ್ಯಾಸದ ಹಣವನ್ನು ನಗದು ರೂಪದಲ್ಲಿ ಕೊಡುವ ಮೂಲಕ ಹೊಂದಾಣಿಕೆ ಮಾಡಲಾಗುವುದು. +ಈ ವಿಧಾನದಲ್ಲಿ ಯಾವ ಖಾತೆದಾರನಿಗೂ ಭೂಮಿಯನ್ನು ತಪ್ಪಿಸಿದಂತಾಗುವುದಿಲ್ಲ. +ಪ್ರತಿಯೊಬ್ಬನಿಗೂ ಅವಕಾಶ ಮಾಡಿಕೊಟ್ಟು ಮೊದಲಿನ ಚಿಕ್ಕ ಮತ್ತು ಚದುರಿ ಹೋಗಿದ್ದ ಭೂಮಿಯ ಬದಲು ಅವೆಲ್ಲವುಗಳ ಒಟ್ಟು ಗಾತ್ರದ ಒಂದೇ ತುಂಡು ಭೂಮಿಯನ್ನು ಪಡೆಯುತ್ತಾನೆ. +ಅತಿ ಚಿಕ್ಕಹಿಡುವಳಿದಾರರು ರೈತರಾಗಿ ಮುಂದುವರಿಯಲು ಅಶಕ್ತರಾಗಿರುವಂತಹವರು ಮಾತ್ರ ತಮ್ಮ ಸಣ್ಣ ತುಂಡುಭೂಮಿಯನ್ನು ಕಳೆದುಕೊಳ್ಳಬಹುದು. +ಆದರೆ ಅವರು ತಮ್ಮ ಭೂಮಿಯ ಪೂರ್ಣ ಬೆಲೆಯನ್ನು ಹಣದ ರೂಪದಲ್ಲಿ ಪಡೆಯುವುದರಿಂದ ಅವರಿಗೂ ಅನುಕೂಲವಾಗುವುದು”. +ಬರೋಡಾ ಸಮಿತಿಯ ಎರಡನೆಯ ವಿಧಾನವನ್ನೇ ಆರಿಸಿಕೊಳ್ಳಲು ಕಾರಣವೇನೆಂದರೆ: +“ಅದು ಯಾರನ್ನೂ (ಬಹುಶಃ ಅತಿ ಕಡಿಮೆ ಗಾತ್ರದ ಹಿಡುವಳಿದಾರರ ಹೊರತು) ಭೂಮಿಯಿಂದ ಹೊರಹಾಕಬಾರದೆಂಬ ತತ್ವವನ್ನು ತಮ್ಮ ಮೂಲ ಪ್ರಾರಂಭಿಕ ಆಧಾರವನ್ನಾಗಿಟ್ಟುಕೊಂಡಿದೆ. +ಅದು ಅತಿ ಚಿಕ್ಕ ವ್ಯಕ್ತಿಗೂ ತನ್ನ ಸ್ಥಿತಿಯನ್ನು ಸುಧಾರಿಸಿಕೊಳ್ಳುವ ಅವಕಾಶ ನೀಡುತ್ತದೆ. +ಪ್ರತಿ ಭೂ ಹಿಡುವಳಿದಾರನೂ ತನ್ನ ಹಳೆಯ ಸಣ್ಣ ಚದುರಿದ ಭೂಮಿಯ ಬೆಲೆಯ ಪ್ರಮಾಣಕ್ಕನುಗುಣವಾಗಿ ಹೊಸ ಅಚ್ಚುಕಟ್ಟಾದ ಭೂಮಿಯನ್ನು ಪಡೆಯುವನು. +ಈ ರೀತಿಯಲ್ಲಿ ಹಿಂದಿನ ಉಪ-ವಿಭಾಗಗಳು ಮತ್ತು ಅವುಗಳ ಅನಿಷ್ಟಗಳು ಇಲ್ಲದಾಗುವುವು” . +ಕ್ರೋಢೀಕರಣದ ವಿಷಯದಲ್ಲಿ, ಪ್ರೊಫೆಸರ್‌ ಹೆಚ್‌.ಎಸ್‌.ಜೆವೊನ್ಸ್‌ರವರು ಹೀಗೆ ಹೇಳಿದ್ದಾರೆ : +“ಮೇಲೆ ವಿವರಿಸಿದೆ ಗ್ರಾಮಗಳ ಪುನರ್‌ರಚನೆ ಮಾಡುವ ವಿಧಾನದ ಆಯ್ಕೆಯ ಮಾರ್ಗದರ್ಶಿ ಸೂತ್ರಗಳು ಈ ಮುಂದೆ ಹೇಳಿದಂತಿರಬೇಕು. +ಮೊದಲನೆಯದಾಗಿ, ಸಾಧ್ಯವಾದ ಮಟ್ಟಗೆ ಒತ್ತಾಯ ಅಥವಾ ಕಡ್ಡಾಯವನ್ನು ತಪ್ಪಿಸಬೇಕು. +ಆಯಾ ಕ್ಷೇತ್ರದ ಅರ್ಧಕ್ಕಿಂತಲೂ ಹೆಚ್ಚು ಮಾಲೀಕರು ಬಯಸದಿದ್ದರೆ ಯಾವುದೇ ಬದಲಾವಣೆಯನ್ನು ಕಡ್ಡಾಯವಾಗಿ ಹೇರಬಾರದೆಂಬ ತತ್ವವನ್ನು ಅನುಸರಿಸಬೇಕು. +ಯಾವುದೇ ಕ್ಷೇತ್ರದಲ್ಲಿ ಈ ಷರತ್ತು ಒಪ್ಪಿಗೆಯಾಗದ ಪಕ್ಷದಲ್ಲಿ-ಸರಕಾರದ ಉಸ್ತುವಾರಿ ಉಳಿದ ಅಲ್ಪಸಂಖ್ಯಾತರನ್ನು ಹಿಡುವಳಿಗಳ ಮರು ಹಂಚಿಕೆಗೆ ಕಾನೂನು ಮಾರ್ಗವನ್ನನುಸರಿಸಿಯಾದರೂ ಒತ್ತಾಯಮಾಡುವುದು ಸೂಕ್ತವೆನಿಸುವುದು. + ಎರಡನೆಯದಾಗಿ - ಈ ಕಾರ್ಯಾಚರಣೆಯ ಖರ್ಚು ಆದಷ್ಟು ಕಡಿಮೆ ಇರಬೇಕು. + ಮೂರನೆಯದಾಗಿ, ಕೆಲವು ವರ್ಷಗಳಲ್ಲಿ ಬೇರೆ ಬೇರೆ ಕಡೆ ಪುನರ್ರ್‌ಚನೆಯಲ್ಲಿ ಸಾಧ್ಯವಾದಷ್ಟು ಮಾರ್ಪಾಟು ಮಾಡುವ ಅವಕಾಶವಿರುವಂತೆ ನೋಡಿಕೊಳ್ಳಬೇಕು. + ಏಕೆಂದರೆ ಈ ಇಡೀ ಕಾರ್ಯಾಚರಣೆ ಪ್ರಾಯೋಗಿಕ ಹಂತದಲ್ಲಿದ್ದು ವಿವಿಧ ವಿಧಾನಗಳ ಪ್ರಯೋಗದ ನಂತರ ಕೊನೆಗೆ ಶಾಶ್ವತ ನಿಯಮಗಳನ್ನು ಆಯ್ಕೆ ಮಾಡಲು ಸಾಧ್ಯವಾಗುವುದು. +ನಾಲ್ಕನೆಯದಾಗಿ, ಪುನರ್‌ರಚಿತವಾದ ಗ್ರಾಮಗಳಲ್ಲಿ ಪ್ರಸ್ತುತ ಗೇಣಿ ಕಾನೂನಿನಲ್ಲಿ ಗಣನೀಯ ಬದಲಾವಣೆಯ ಅವಶ್ಯಕತೆಯ ಸಾಧ್ಯತೆಯನ್ನು ಎದುರಿಸಬೇಕಾಗುತ್ತದೆ. +ಪರಿಪೂರ್ಣತೆಯ ಕಾರಣದಿಂದ ನಾನು ಇನ್ನೊಂದು ಐದನೆಯ ತತ್ವ ಮತ್ತು ನಿಸ್ತರಶಯವಾದ ಷರತ್ತನ್ನು ಸೇರಬಯಸುತ್ತೇನೆ. +ಅದೇನೆಂದರೆ ಭೂಮಿಯ ಮರು ಹಂಚಿಕೆಯನ್ನು ಸಾಧ್ಯವಾದಷ್ಟು ಅತ್ಯಂತ ನೀತಿ ಸಮ್ಮತವಾದ ಆಧಾರದ ಮೇಲೆ ಮಾಡಬೇಕು. + ಮುಂಚಿನ ಉಳುಮೆಯ ಮಾಲೀಕತ್ವದಿಂದ ಯಾರನ್ನಾದರೂ ತಪ್ಪಿಸಲಾಗಿದ್ದರೆ ಅವರಿಗೆ ಧಾರಾಳವಾದ ಪರಿಹಾರ ನೀಡಬೇಕು”. + ಹಿಡುವಳಿಗಳನ್ನು ಕಡ್ಡಾಯವಾಗಿ ಕ್ರೋಢೀಕರಿಸುವ ವಿಧಾನದ ಬಗ್ಗೆ ಪ್ರೊಫೆಸರ್‌ ಜೆವೊನ್ಸ್‌ ಮತ್ತು ಬರೋಡಾ ಸಮಿತಿ ಕೂಡ ಕ್ರೋಢೀಕರಣ ಕೋರಿ ಬಂದ ಅರ್ಜಿಗಳ ವಿಚಾರಣೆ ಮಾಡಿ ಅದನ್ನು ಕಾರ್ಯಗತಗೊಳಿಸಲು ಮತ್ತು ಯಾವುದೇ ವ್ಯಕ್ತಿಗೆ ಈ ವಿಚಾರಣೆಯಲ್ಲಿ ತನಗೆ ಅನ್ಯಾಯವಾಗಿದೆ ಎಂದು ಅನಿಸಿದರೆ ಅದಕ್ಕೆ ತಡೆಯಾಜ್ಞೆ ನೀಡುವಂತೆ ನ್ಯಾಯಾಲಯಕ್ಕೆ ಅರ್ಜಿ ಮಾಡುವ ಹಕ್ಕಿನೊಂದಿಗೆ ಕಮೀಷನರುಗಳನ್ನು ನೇಮಿಸಬೇಕೆಂಬ ಸೂಚನೆ ಮಾಡಿದ್ದಾರೆ. +ಹೀಗೆ ಕ್ರೋಢೀಕೃತವಾದ ಹಿಡುವಳಿಯನ್ನು ಉಳಿಸಿಕೊಂಡು ಹೋಗುವ ಸಮಸ್ಯೆಗೆ ಶಾಸಕನ ರಕ್ಷಣೆಯ ಅವಶ್ಯಕತೆ ಇದೆ. +ಹಿಂದೂಗಳು ಮತ್ತು ಮುಸಲ್ಮಾನರುಗಳಲ್ಲಿ ಆಚರಣೆಯಲ್ಲಿರುವ ಉತ್ತರಾಧಿಕಾರದ ಕಾನೂನು ಭೂಮಿಯ ಉಪ-ವಿಭಜನೆಗೆ ಕಾರಣವಾಗಿದೆ ಎಂಬುದನ್ನು ಅನೇಕರು ಯಾವುದೇ ಪ್ರಶ್ನೆ ಮಾಡದೇ ಒಪ್ಪುತ್ತಾರೆ. +ಒಬ್ಬ ಹಿಂದೂ ಅಥವಾ ಮಹಮೃದೀಯನ ಮರಣದ ನಂತರ ಅವರ ವಾರಸುದಾರರು ಯಾವುದೇ ಅಡ್ಡಿ ಆತಂಕವಿಲ್ಲದೇ ಮರಣ ಹೊಂದಿದವರ ಆಸ್ತಿಯ ಸಮಪಾಲಿಗೆ ಹಕ್ಕುದಾರರಾಗುತ್ತಾರೆ. +ಇಂತಹ ಉತ್ತರಾಧಿಕಾರದ ಕಾನೂನು ಇರುವಾಗ ಕ್ರೋಢೀಕರಿಸಲಾದ ಹಿಡುವಳಿ ಬಹುಕಾಲ ಅದೇ ಸ್ಥಿತಿಯಲ್ಲಿ ಉಳಿಯಲಾರದು. +ಕ್ರೋಢೀಕರಣದ ನಂತರವೂ ಉತ್ತರಾಧಿಕಾರದ ಕಾನೂನಿನಲ್ಲಿ ಬದಲಾವಣೆಯಾಗದೇ ಹೋದರೆ ಅದು ಪುನಃ ಸೈಸಿಫಸನ ಕೆಲಸದಂತೆಯೇ ಆಗುತ್ತದೆ.” +ಆದರೆ ಅಸ್ತಿತ್ವದಲ್ಲಿರುವ ಉತ್ತರಾಧಿಕಾರದ ಕಾನೂನನ್ನು ಬದಲಾಯಿಸುವುದು ಹೇಗೆ ? + ಸಮನಾದ ಉಪವಿಭಜನೆಯ ಕಾನೂನು ಅಲ್ಲದಿದ್ದರೂ, ನಾವು ಜೇಷ್ಠಾಧಿಕಾರದ ವಾರಸು ಕಾನೂನನ್ನಾದರೂ ಇಟ್ಟುಕೊಳ್ಳಬಹುದೇ ? + ಈ ವಿಷಯದಲ್ಲಿ ಬರೋಡಾ ಸಮಿತಿಯ ಆಲೋಚನೆ ಏನೆಂದರೆ,ದ ಕನ್ಸಾಲಿಡೇಷನ್‌ ಆಫ್‌ ಅಗ್ರಿಕಲ್ಚರಲ್‌ ಹೋಲ್ಡಿಂಗ್‌ ಇನ್‌ ದ ಯುನೈಟೆಡ್‌ ಪ್ರಾವಿನ್ಸಸ್‌, ಈ ಗ್ರಂಥದ ಪ್ರತಿಯನ್ನು ಒದಗಿಸಿದ್ದಕ್ಕಾಗಿ ಈ ಲೇಖಕರು ಪ್ರೊ.ಜೆವೊನ್ಸ್‌ ಅವರಿಗೆ ಋಣಿಯಾಗಿದ್ದಾರೆ. +ಈ ಎರಡೂ ವಿಧಾನಗಳಲ್ಲದೆ ಇನ್ನೊಂದು ಮೂರನೆಯ ವಿಧಾನವೂ ಇದೆ. +ಒಬ್ಬ ತಂದೆಗೆ ಅವನು ತನ್ನ ವಾರಸುದಾರನಿಗೆ ಅವನ ಉಪಜೀವನಕ್ಕೆ ಅವಶ್ಯವೆನಿಸುವಷ್ಟು ಪಾರ್ಸ್‌ ಲೆಜಿಟಿಮಾ ಎಂದು ಹೇಳಲಾದ ಆಸ್ತಿಯನ್ನು ಕೊಟ್ಟು ಆಸ್ತಿಯ ಉಳಿದ ಭಾಗವನ್ನು ತನ್ನ ಇಚ್ಛಾ ಪ್ರಕಾರ ತಿರ್ಮಾನಿಸುವ ಸ್ವಾತಂತ್ರ್ಯವನ್ನು ನೀಡುವುದು ಅದಾಗಿದೆ. +ಇದರನ್ವಯ ಜರ್ಮನರು ಅರೆನ್ಸನ್‌ರೆಕ್ಟ್‌ ಎಂಬ ಅವಕಾಶ ನೀಡುವ ಶಾಸನವನ್ನು ಅನವಶ್ಯಕವಾಗಿ ಭೂಮಿಯನ್ನು ತುಂಡರಿಸುವಂತಹ ಉತ್ತರಾಧಿಕಾರದ ಕಾನೂನುಗಳ ದುಷ್ಪರಿಣಾಮ ನಿವಾರಿಸಲು ಮಾಡಿದ್ದಾರೆ. +ಇದು ಕೆಲವು ಅಂಶಗಳಲ್ಲಿ ಬರೋಡಾಸಮಿತಿಯ ಸೂಚನೆಗಳನ್ನು ಮತ್ತು ಇನ್ನು ಕೆಲವು ಅಂಶಗಳಲ್ಲಿ ಆನರಬಲ್‌ ಮಿಸ್ಟರ್‌ ಕೀಟಿಂಗ್ಸ್‌ ಅವರ ಸಲಹೆಗಳನ್ನು ಮುಂಭಾವಿಸಿದೆ. + “ಅದನ್ನು ಆಚರಣೆಗೆ ತರಬೇಕೆಂಬ ಅವಶ್ಯಕತೆ ಇಲ್ಲ. +ಒಳ್ಳೆಯ ಕೃಷಿ ದೃಷ್ಟಿಯಿಂದ ನಿಗದಿಪಡಿಸಲಾದ ಮಿತಿಗಿಂತ ಪ್ರಮಾಣದಲ್ಲಿ ಉಪ-ವಿಭಾಗಗಳನ್ನಾಗಿ ಒಡೆಯದಿರುವುದೇ ಈಗಿನ ಅವಶ್ಯಕತೆ. +ಭೂಮಿಯ ಉಪವಿಭಜನೆಗೆ ನಿಗದಿಪಡಿಸಲಾದ ಗಾತ್ರಕ್ಕಿಂತ ಕಡಿಮೆಯಾಗದ ರೀತಿಯಲ್ಲಿ ಒಂದು ಹಿಡುವಳಿಯನ್ನು ವಿಭಜಿಸಲು ಅಡ್ಡಿ ಇಲ್ಲ. +ಆದರೆ ಈ ಉಪ-ವಿಭಜನೆಯಿಂದ ಹಿಡುವಳಿಯು ಲಾಭದಾಯಕವಾಗದಂತೆ ಆಗುವುದಾದಾಗ ಕುಟುಂಬದ ಇತರ ಸದಸ್ಯರು ಆ ಹಿಡುವಳಿಯನ್ನು ಪುನಃ ಉಪ-ವಿಭಜನೆ ಮಾಡಲುಒತ್ತಾಯಿಸದಂತೆ ತಡೆಯಬೇಕು. +ಅದನ್ನು ಪುನಃ ವಿಭಜಿಸುವುದರ ಬದಲು ಅದರಲ್ಲಿ ಎಲ್ಲರೂ ಕೂಡಿ ವ್ಯವಸಾಯ ಮಾಡುವಂತೆ ಅಥವಾ ಅದನ್ನು ಕುಟುಂಬದ ಒಬ್ಬನಿಗೆ ಇಡಿಯಾಗಿ ಕೊಡಬೇಕು . +ಅವನು ಕುಟುಂಬದ ಇತರ ಸದಸ್ಯರ ಅವರವರ ಪಾಲಿನ ಭೂಮಿಯ ಬೆಲೆಗೆ ಸಮನಾದ ಮೊತ್ತವನ್ನು ಪರಿಹಾರವಾಗಿ ನೀಡಬೇಕು.” +ಸ್ಥಿರಾಸ್ತಿಯನ್ನು, ವಾರಸುದಾರರಲ್ಲಿ ಅದರ ವಿಭಜನೆಯಿಂದ ಅವರಿಗೆ ತೊಂದರೆಯಾಗುವಷ್ಟು ಸಣ್ಣ ವಿಭಾಗಗಳಾಗುವುದಾದರೆ, ಅದನ್ನು ವಾರಸುದಾರರಲ್ಲಿ ಯಾರು ಹೆಚ್ಚು ಹಣ ಕೊಡಲುಮುಂದಾಗುವರೋ, ಹಾಗೆ ಯಾರೂ ಇಷ್ಟಪಡದಿದ್ದಲ್ಲಿ ಹೊರಗಿನವರಿಗೆ ಹರಾಜಿನಲ್ಲಿ ಪಡೆಯುವಂತೆ ಅವಕಾಶ ನೀಡಿ, ಬಂದ ಹಣವನ್ನು ಮಾನ್ಯ ಮಾಡಲಾದ ಪಾಲಿನ ಸರಿಸಮಾನ ವಿಭಾಗಗಳನ್ನಾಗಿ ಮಾಡುವ ತತ್ವವನ್ನು ೧೮೯೩ ರ ಇಂಡಿಯನ್‌ ಪಾರ್ಟಷನ್‌ ಅ್ಯಕ್ಟ್‌, ನಂ.೪, ಭಾಗ ೨ ರಲ್ಲಿ ಮಾನ್ಯಮಾಡಲಾಗಿದೆ. +ಅದರ ಉಲ್ಲೇಖ ಹೀಗಿದೆ :"ಯಾವುದೇ ಆಸ್ತಿ ವಿಭಜನೆಯ ದಾವೆಯಲ್ಲಿ, ಅದು ಈ ಕಾಯ್ದೆ ಜಾರಿಗೆ ಬರುವ ಮುನ್ನವೇ ಹೂಡಲಾಗಿದ್ದರೆ ವಿಭಜನೆಗೆ ಡಿಕ್ರಿಯಾಗಿದ್ದರೆ, ದಾವೆಗೆ ಸಂಬಂಧಿಸಿದ ಆಸ್ತಿಯ ಸ್ವರೂಪದ ಕಾರಣ,ಅಥವಾ ಅದರ ಪಾಲುದಾರರ ಸಂಖ್ಯೆಯಿಂದಾಗಿ, ಅಥವಾ ಇನ್ನಾವುದೇ ಎಶೇಷ ಸಂದರ್ಭದಿಂದಾಗಿ,ಆ ಆಸ್ತಿಯನ್ನು ಅನುಕೂಲಕರವಾದ ಅಥವಾ ನ್ಯಾಯಸಮ್ಮತವಾದ ರೀತಿಯಲ್ಲಿ ವಿಭಜಿಸಲು ಸಾಧ್ಯವಿಲ್ಲದಿದ್ದರೆಮತ್ತು ಆಸ್ತಿಯನ್ನು ಮಾರಿ ಬಂದ ಹಣವನ್ನು ಎಲ್ಲಾ ಪಾಲುದಾರರಲ್ಲಿ ಹಂಚುವುದು ಹೆಚ್ಚುಲಾಭದಾಯಕವೆನಿಸಿದರೆ, ನ್ಯಾಯಾಲಯವು ತನಗೆ ಸೂಕ್ತವೆನಿಸಿದಲ್ಲಿ ವೈಯಕ್ತಿಕವಾಗಿ ಅಥವಾ ಸಾಮೂಹಿಕವಾಗಿ ಆಸಕ್ತಿಯುಳ್ಳ ಪಾಲುದಾರರ ಕೋರಿಕೆಯ ಮೇರೆಗೆ ಒಂದರ್ಧದಷ್ಟು ಅಥವಾ ಅದಕ್ಕಿಂತ ಹೆಚ್ಚು ಭಾಗದ ಆಸ್ತಿಯನ್ನು ಮಾರುವಂತೆ ಮತ್ತು ಅದರಿಂದ ಬಂದ ಹಣವನ್ನು ಹಂಚಿಕೊಡಬೇಕೆಂಂದು ಆದೇಶ ನೀಡಬಹುದು.” +ಉತ್ತರಾಧಿಕಾರದ ಕಾನೂನನ್ನು ಬದಲಾಯಿಸುವ ಯುಕ್ತತೆಯನ್ನು ಒಪ್ಪಿಕೊಂಡರೆ, ಮೊದಲೇ ಗೊತ್ತಾದ ಲಾಭದಾಯಕ ಘಟಕಕ್ಕಿಂತ ಕಡಿಮೆ ಗಾತ್ರಕ್ಕೆ ಇಳಿಸುವುದಾದರೆ ವಿಭಜನೆಯನ್ನು ನಿರಾಕರಿಸುವ ಅಧಿಕಾರವನ್ನು ನ್ಯಾಯಾಲಯಗಳಿಗೆ ನೀಡುವಂತೆ ಸಿವಿಲ್‌ ಪ್ರೊಸೀಜರ್‌ ಕೋಡಿಗೆ ತಿದ್ದುಪಡಿಮಾಡಬೇಕಾಗುತ್ತದೆ. +ಈ ಸಮಸ್ಯೆಯನ್ನು ನಿವಾರಿಸಲು ಮುಂಬಯಿ ಪ್ರಾಂತ್ಯದ ಕೃಷಿ ನಿರ್ದೇಶಕರಾಗಿದ್ದ ಅನಬರಲ್‌ ಮಿಸ್ಟರ್‌ ಜೆ. ಎಫ್‌. ಕೀಟಿಂಗ್‌ ಅವರು ಪ್ರತಿಪಾದಿಸಿದ ಇನ್ನೊಂದು ವಿಧಾನವಿದೆ. +ಅವರ ಕರಡು ಮಸೂದೆಗೆ ಲಗತ್ತಿಸಿದ ಧ್ಯೇಯಗಳು ಮತ್ತು ಕಾರಣಗಳ ಹೇಳಿಕೆಯಲ್ಲಿ ಅವರು ಹೀಗೆ ಹೇಳಿದ್ದಾರೆ. +“ ಈ ಮಸೂದೆಯ ಉದ್ದಿಶ್ಯ ಭೂಮಾಲಿಕರು ಬಯಸಿದಲ್ಲಿ ತಮ್ಮ ಭೂಮಿಗಳನ್ನು ಪುನಃವಿಭಜಿಸದಂತೆ ತಡೆಯುವುದು. +ಬೇರೆ ರೀತಿಯಲ್ಲಿ ಸಾಧ್ಯವಿದ್ದರೆ ತಮ್ಮ ಹಿಡುವಳಿಗಳ ಶಾಶ್ಚತ ಕ್ರೋಢೀಕರಣವನ್ನು ಮಾಡುವುದು; +ಮತ್ತು ಹಿಡುವಳಿಯಲ್ಲಿರದ ಭೂಮಿಗಳ ವಿಷಯದಲ್ಲಿಯೂ ಇದೇ ಫಲಿತಾಂಶವನ್ನು ಪಡೆಯುವಂತೆ ಸರಕಾರಕ್ಕೆ ಸಾಧ್ಯವಾಗುವಂತೆ ಮಾಡುವುದೇ ಆಗಿದೆ. +ಸೂಚಿತ ಕಾನೂನು ಅನುಕೂಲಕಾರಕ ಮಾತ್ರವಾಗಿದ್ದು ಆಸಕ್ತಿ ಹೊಂದಿರುವ ಯಾವುದೇ ಹಿಡುವಳಿದಾರನು ಬಯಸಿದಲ್ಲಿ ಮಾತ್ರ ಇದನ್ನು ಅನ್ವಯಿಸಲಾಗುವುದು. +“ ಈ ಉದ್ದೇಶಗಳನ್ನು ಈಡೇರಿಸುವುದಕ್ಕಾಗಿ ಈ ಮಸೂದೆಯಲ್ಲಿ ಅಡಕವಾಗಿರುವ ಯೋಜನೆ ಸಂಕ್ಷಿಪ್ತವಾಗಿ ಈ ರೀತಿ ಇದೆ. +ಲಾಭದಾಯಕ ಹಿಡುವಳಿ ಎಂದು ಪರಿಗಣಿಸಬೇಕಾದರೆ ಆ ಭೂಮಿಯ ಭಾಗವು ನಿಯಮಗಳಿಗನುಸಾರವಾಗಿ ಗೊತ್ತುಪಡಿಸಲಾದ ರಿಜಿಸ್ಟರಿನಲ್ಲಿ ಹಾಗೆಂದು ದಾಖಲಾಗಿರಬೇಕು. +ಈ ಭೂಮಿಯು ಉಪಭೋಗದಲ್ಲಿದ್ದರೆ ಅದರಲ್ಲಿ ಆಸಕ್ತಿ ಹೊಂದಿರುವ ವ್ಯಕ್ತ ಕಲೆಕ್ಟರರಿಗೆ ಅರ್ಜಿ ಮಾಡಿಆ ಭೂಮಿಯ ಲಾಭದಾಯಕ ಹಿಡುವಳಿಯಾಗಿದೆ ಎಂದು ದಾಖಲೆ ಮಾಡಿಸುವ ಜವಾಬ್ದಾರಿ ಹೊಂದಿರುತ್ತಾರೆ. +ಅರ್ಜಿಯನ್ನು ತಿರಸ್ಕರಿಸಲು ಸಾಕಷ್ಟು ಅಧಿಕಾರವಿಲ್ಲದಿದ್ದರೆ, ಕಲೆಕ್ಟರರು ೧೮೯೪ರ ಭೂಸ್ವಾಧೀನ ಕಾಯ್ದೆ (ಲ್ಯಾಂಡ್‌ ಅಕ್ಕಿಜಿಷನ್‌ ಆಕ್ಟ್‌, ೧೮೯೪) ಯಲ್ಲಿ ಗೊತ್ತುಪಡಿಸಲಾದ ವಿಧಾನದಂತೆಯೇ ವಿಚಾರಣೆಯನ್ನು ನಡೆಸುತ್ತಾರೆ. +ಈ ವಿಚಾರಣೆಯಿಂದ ಆಸಕ್ತರಾದ ಎಲ್ಲರೂ ಒಪ್ಪಿರುವುದಾಗಿ ತಿಳಿದುಬಂದರೆ ಆ ಭೂಮಿಯ ದಾಖಲೆ ಮಾಡಲಾಗುವುದು. +ಭೂಮಿ ಸಂಪೂರ್ಣವಾಗಿ ಸರಕಾರದ ವಶದಲ್ಲಿದ್ದರೆ ವಿಚಾರಣೆಯಿಲ್ಲದೆ ಅದರ ದಾಖಲೆ ಮಾಡಲಾಗುವುದು. +ಯಾವುದೇ ಸಂದರ್ಭದಲ್ಲಿ ಒಂದು ಹಿಡುವಳಿ ಒಂದೇ ಹೆಸರಿನಲ್ಲಿ ದಾಖಲಾಗಬೇಕು. +ದಾಖಲಾದ ಹಿಡುವಳಿಯ ಮಾಲಿಕನ ಹೊರತು ಇತರ ಎಲ್ಲರ ಹಕ್ಕುಗಳನ್ನು ಈ ದಾಖಲಾತಿ ರದ್ದುಪಡಿಸುತ್ತದೆ. +ತದನಂತರ ಮಾಲಿಕನು ಆ ಭೂಮಿಯನ್ನು ವಿಭಜಿಸದೆ ತನ್ನ ಮಾಲಿಕತ್ವದಲ್ಲಿರುವವರೆಗೆ ಅದನ್ನು ಅವಿಭಾಜಿತವಾಗಿ ಏಕವಾಗಿ ಇಟ್ಟುಕೊಳ್ಳಬೇಕು. +ಅವನು ಅದನ್ನು ಏಕೆ ಘಟಕದ ರೂಪದಲ್ಲಿ ಅಂದರೆ ಇಡಿಯಾಗಿ ಮಾರಬಹುದು. +ಅಡವಿಡಬಹುದು ಅಥವಾ ಇನ್ನಾವುದೇ ರೀತಿಯಲ್ಲಿ ವಿಲೇವಾರಿ ಮಾಡಬಹುದು. + ಆದರೆ ಅದರ ಒಂದು ಭಾಗವನ್ನು ಮಾರಲು ಬರುವುದಿಲ್ಲ . + ಆ ಹಿಡುವಳಿಯನ್ನು ವಿಭಜಿಸುವಂತಹ ಯಾವುದೇ ಕ್ರಮ ತೆಗೆದುಕೊಳ್ಳುವಂತಿಲ್ಲ. +ಹಿಡುವಳಿದಾರನ ಮರಣಾನಂತರ ಅವನು ತನ್ನ ಮೃತ್ಯುಪತ್ರ ಅಥವಾ ಉಯಿಲಿನಲ್ಲಿ ಅದನ್ನು ಯಾರಿಗೂ ಕೊಡಮಾಡದೆ ಇದ್ದ ಪಕ್ಷದಲ್ಲಿ ಅದು ಒಬ್ಬನೇ ವಾರಸುದಾರನಿಗೆ ದೊರೆಯುವುದು. +ಈ ಮಸೂದೆಯ ವಿಧಿಗಳ ಉಲ್ಲಂಘನೆಯಾಗಿದ್ದರೆ (ಉದಾಹರಣೆಗೆ ಹಿಡುವಳಿದಾರನು ತನ್ನ ಹಿಡುವಳಿಯಒಂದು ಭಾಗವನ್ನು ಅಡವಿಟ್ಟಿದ್ದರೆ, ಅಡವಿಟ್ಟುಕೊಂಡವನು ಅದನ್ನು ವಶಕ್ಕೆ ತೆಗೆದುಕೊಳ್ಳಲು ಡಿಕ್ರಿಪಡೆದುಕೊಂಡಿದ್ದರೆ )ಕಲೆಕ್ಟರರು ನ್ಯಾಯಾಲಯವು ತನ್ನ ಡಿಕ್ರಿ ಅಥವಾ ಆಜ್ಞೆಯನ್ನು ತಳ್ಳಿಹಾಕುತ್ತದೆ. +ಕಲೆಕ್ಟರರು ಭೂಮಿಯನ್ನು ಅನಧಿಕೃತವಾಗಿ ಹೊಂದಿರುವ ವ್ಯಕ್ತಿಯನ್ನು ಭೂಮಿಯಿಂದ ಹೊರಹಾಕಬಹುದು. +ಭೂಮಿಯ ಭಾಗವು ಒಮ್ಮೆ ಲಾಭದಾಯಕ ಹಿಡುವಳಿ ಎಂದು ದಾಖಲಾದರೆ ಕಲೆಕ್ಟರರ ಸಮೃತಿಯಿಲ್ಲದೆ ಅದನ್ನು ರದ್ದುಗೊಳಿಸಲು ಬರುವುದಿಲ್ಲ. +ರದ್ದತಿಗೆ ಅನುಮತಿ ನೀಡಬಹುದಾದ ಆಧಾರಗಳನ್ನು ನಿಯಮಗಳಿಗನುಸಾರವಾಗಿ ವಿಧಿಸಲಾಗುವುದು . + ಮುಖ್ಯವಾಗಿ ಆರ್ಥಿಕ ಕಾರಣದಿಂದಾಗಿ ರದ್ಧತಿ ಅವಶ್ಯವೆಂದು ತೋರಿದರೆ ಮಾತ್ರ ಅದಕ್ಕೆ ಅವಕಾಶ ಕೊಡಲಾಗುವುದು”. +ಕ್ರೋಢೀಕರಣದ ಎರಡು ಪ್ರಶ್ನೆಗಳ ಮೇಲಣ ಈ ಚರ್ಚೆಯನ್ನು ಮುಕ್ತಾಯಗೊಳಿಸುವಾಗ ಈ ಸಮಸ್ಯೆಯನ್ನು ಅದರ ಪ್ರತಿಪಾದಕರು ಸಮಗ್ರವಾಗಿ ನೋಡಿಲ್ಲವೆಂದೇ ಹೇಳಬೇಕಾಗುತ್ತದೆ. +ಬರೋಡಾ ಸಮಿತಿ ಮಾತ್ರ ಕ್ರೋಢೀಕರಣ ಮಾಡುವುದೂ ಅಲ್ಲದೇ ಕ್ರೋಢೀಕರಿಸಲಾದ ಹಿಡುವಳಿಯನ್ನು ರಕ್ಷಿಸಿಕೊಂಡು ಹೋಗುವುದನ್ನೂ ಲಕ್ಷ್ಚಿಸಿದೆ. +ಪ್ರೊಫೆಸರ್‌ ಜಿವೊನ್ಸ್‌ರವರು ಕ್ರೋಢೀಕರಣದ ಪರಿಣಾಮಗಳನ್ನು ಉಳಿಸಿಕೊಂಡು ಹೋಗಲು ಯಾವ ವಿಧಾನಗಳನ್ನೂ ಸೂಚಿಸಿಲ್ಲ. +ಕೀಟಿಂಗ್‌ ಅವರು ಕ್ರೋಢೀಕರಣವನ್ನು ಪರಿಶೀಲಿಸಲೇಇಲ್ಲ. +ಅವರು ಮುಂದೆ ವಿಚ್ಛಿದ್ರಗೊಳಿಸುವಿಕೆಯನ್ನು ತಡೆಯುವ ಬಗ್ಗೆ ಮಾತ್ರ ಹೇಳಿದ್ದಾರೆ. +ಆದರೆ ಲಾಭದಾಯಕ ಹಿಡುವಳಿ ಎಂದು ದಾಖಲೆಯಾದ ಮೇಲೂ ವಿಚ್ಛೆದ್ರತೆಯಾಗುವುದು. +ಅವರ ವಿಧಾನದ ಪ್ರಕಾರ ಹಿಡುವಳಿಯು ದಾಖಲಾಗುವ ಸಮಯದಲ್ಲಿದ್ದ ಹಾಗೆ ಉಳಿಸಿಕೊಂಡು ಹೋಗುವಲ್ಲಿ ಮಾತ್ರ ಯಶಸ್ವಿಯಾಗುವುದು. +ಎಂದರೆ ಅದರ ಗಾತ್ರ ಕುಗ್ಗುವುದಕ್ಕೆ ಅವರು ಅವಕಾಶ ಕೊಡುವುದಿಲ್ಲ. +ಆದರೆ ಅದೇ ಕಾಲಕ್ಕೆ ಅವು ಸಣ್ಣವೂ ಹಾಗೂ ಚದುರಿದವುಗಳೂ ಆಗಿರುತ್ತದೆ. +ಕೀಟಿಂಗ್‌ ಅವರು ಹೇಳಿದಂತೆ ಕಾನೂನು ಮಾಡಿದಾಗ್ಯೂ ಪರಿಸ್ಥಿತಿ ಹೆಚ್ಚು ಕಡಿಮೆ ಇದ್ದ ಹಾಗೆಯೇ ಇರುತ್ತದೆ. +ನಿಜವಾದ ಕ್ರೋಢೀಕರಣ ಪ್ರೊಫೆಸರ್‌ ಜಿವೊನ್ಸ್‌ ಮತ್ತು ಬರೋಡಾ ಸಮಿತಿಯ ಗುರಿಯಾಗಿತ್ತು. +ಈ ಉದ್ದೇಶಕ್ಕಾಗಿ ಅವರು ಪ್ರತಿಪಾದಿಸಿದ ತತ್ವಗಳು ಹೆಚ್ಚೂ ಕಡಿಮೆ ಒಂದೇ ಆಗಿದ್ದವು; +ಮತ್ತು ಅವುಗಳನ್ನು ಕಾರ್ಯಗತಗೊಳಿಸುವಲ್ಲಿಯೂ ಅವು ಒಂದೇ ರೀತಿಯಾಗಿದ್ದವು. +ಕ್ರೋಢೀಕೃತ ಹಿಡುವಳಿಗಳನ್ನು ಇದ್ದಂತೆ ಉಳಿಸಿಕೊಂಡು ಹೋಗಲು ಮಿಸ್ಟರ್‌ ಕೀಟಿಂಗ್‌ ಮತ್ತು ಬರೋಡಾ ಸಮಿತಿ ಒಬ್ಬನೇ ವ್ಯಕ್ತಿಯ ಉತ್ತರಾಧಿಕಾರದ ನಿಯಮವನ್ನು ಸ್ಥಾಪಿಸಿದ್ದಾರೆ. +ಬರೋಡಾಸಮಿತಿಯು ಭೂಮಿಯ ವಿಭಜನೆಯ ಪರಿಣಾಮವಾಗಿ ಲಾಭದಾಯಕವಲ್ಲದ ಹಿಡುವಳಿಗಳಾದಾಗ ಮಾತ್ರ ಈ ನಿಯಮವು ಅನ್ವಯಿಸುತ್ತದೆ. +ಆಗಲೂ ಕೂಡ ವಾರಸುದಾರನು ಭೂಮಿಯನ್ನು ಕಳೆದುಕೊಳ್ಳಲಿರುವ ವಾರಸುದಾರರಿಂದ ಅವರಿಗೆ ದೊರೆಯಬೇಕಾದ ಪಾಲಿನ ಭೂಮಿಯನ್ನು ತಾನೇ ಕೊಂಡುಕೊಳ್ಳುವಂತೆ ಕಡ್ಡಾಯಗೊಳಿಸುತ್ತದೆ. +ಕೀಟಿಂಗ್‌ ಅವರು ಈ ರೀತಿ ಮಾಡದೆ ಭೂಮಿಯನ್ನು ಕಳೆದುಕೊಂಡ ವಾರಸುದಾರರಿಗೆ ಯಾವ ಪರಿಹಾರವನ್ನೂ ನೀಡಿಲ್ಲ. +ಕ್ರೋಢೀಕರಣದ ಈ ಯೋಜನೆಗಳ ಬಗ್ಗೆ ಹೆಚ್ಚು ಗಂಭೀರ ಸ್ವರೂಪದ ಟೀಕೆ ಎಂದರೆ ಕ್ರೋಢೀಕೃತ ಹಿಡುವಳಿಯು ವಿಸ್ತಾರಗೊಂಡ ಹಿಡುವಳಿಯೂ ಆಗಿರಬೇಕೆಂಬ ಅಂಶವನ್ನು ಗುರುತಿಸುವಲ್ಲಿ ವಿಫಲವಾಗಿವೆ. +ಭಾರತದಲ್ಲಿ ಕೃಷಿ ಸಣ್ಣ ಮತ್ತು ಚದುರಿರುವ ಹಿಡುವಳಿಗಳ ದೋಷದಿಂದ ಬಳಲುತ್ತಿದೆ ಎಂದಾಗ ನಾವು ಕ್ರೋಢೀಕರಣ ಮಾತ್ರವಲ್ಲ ಅವುಗಳ ವಿಸ್ತರಣೆಯನ್ನೂ ಮಾಡಬೇಕಾಗುತ್ತದೆ. +ಕ್ರೋಢೀಕರಣದಿಂದ ಚದುರಿಹೋಗಿರುವ ಹಿಡುವಳಿಗಳ ಅನಿಷ್ಟಗಳು ನಿವಾರಣೆಯಾಗಬಹುದೆಂಬುದನ್ನು ನಾವು ಮನಸ್ಸಿನಲ್ಲಿಟ್ಟುಕೊಳ್ಳಬೇಕು. +ಆದರೆ ಅದು ಲಾಭದಾಯಕ ಎಂದರೆ ವಿಸ್ತರಿತ ಹಿಡುವಳಿಯಾಗಿರದ ಹೊರತು ಸಣ್ಣ ಹಿಡುವಳಿಗಳ ಅನಿಷ್ಟಗಳ ನಿವಾರಣೆಯಾಗುವುದಿಲ್ಲ. +ಸಮಿತಿ ಮತ್ತು ಕೀಟಿಂಗ್‌ ಇಬ್ಬರೂ ಪ್ರಶ್ನೆಯ ಈ ಅಂಶವನ್ನು ಕಡೆಗಣಿಸಿದ್ದಾರೆ. +ಎಲ್ಲಾ ಪ್ರತಿಪಾದಿಗಳಲ್ಲಿ ಪ್ರೊಫೆಸರ್‌ ಜೆವೊನ್ಸ್‌ರವರು ಮಾತ್ರ ಕ್ರೋಢೀಕರಣದ ಸರಣಿಯಲ್ಲಿ ಹಿಡುವಳಿಗಳ ವಿಸ್ತರಣೆಯೂ ಆಗಬೇಕೆಂಬ ಅಂಶವನ್ನು ಸದಾ ತಮ್ಮ ಗಮನದಲ್ಲಿಟ್ಟುಕೊಂಡಿದ್ದಾರೆ. +ಹಿಡುವಳಿಗಳ ವಿಸ್ತರಣೆಯು ಅವುಗಳ ಕ್ರೋಢೀಕರಣದಷ್ಟೇ ಮಹತ್ವದ್ದಾಗಿದೆ ಎಂದು ಒಪ್ಪಿಕೊಂಡು ಈಗ ಅವುಗಳ ಗಾತ್ರವನ್ನು ಯಾವ ರೀತಿ ನಿಯಂತ್ರಿಸಬೇಕೆಂಬ ವಿಷಯವನ್ನು ಚರ್ಚಿಸೋಣ. +ನಮ್ಮ ಹಿಡುವಳಿಗಳು ಲಾಭದಾಯಕ ಹಿಡುವಳಿಗಳಾಗಿರಬೇಕೆಂದು ನಮ್ಮ ಕೃಷಿಯಲ್ಲಿ ಆಸಕ್ತಿ ಹೊಂದಿರುವವರೆಲ್ಲರೂ ಬಯಸುತ್ತಾರೆ. +ಈ ಹೊಸ, ನಿಖರ ಮತ್ತು ವೈಜ್ಞಾನಿಕ ಪದವನ್ನು ನೀಡಿದವರು ಲಭದಾಯಕ ಹಿಡುವಳಿಯ ನಿಖರವಾದ ಮತ್ತು ವೈಜ್ಞಾನಿಕ ವ್ಯಾಖ್ಯೆಯನ್ನು ನೀಡಿದ್ದರೆ ನಾವು ಅವರಿಗೆ ಹೆಚ್ಚು ಕೃತಜ್ಞರಾಗಿರಬಹುದಿತ್ತು. +ಆದರೆ ದೊಡ್ಡ ಹಿಡುವಳಿಯು ಲಾಭದಾಯಕ ಹಿಡುವಳಿ ಎನಿಸುವುದೆಂದು ನಂಬಲಾಗಿದೆ. +ಪ್ರೊಫೆಸರ್‌ಜೆವೊನ್ಸ್‌ರೂ ಸಹ ಈ ಭಾವನೆಗೆ ಬಲಿಯಾಗಿ ಮೋಸ ಹೋಗಿದ್ದಾರೆ ಎಂದು ಹೇಳಬಹುದು. +ಒಂದುಹಿಡುವಳಿಯ ಗಾತ್ರ ಎಷ್ಟಿರಬೇಕೆಂದು ಚರ್ಚಿಸುವಾಗ ಕ್ರೋಢೀಕರಣವಾದ ಗ್ರಾಮದಲ್ಲಿ ಗಾತ್ರ ೨೯ಮತ್ತು ೩ಂ ಎಕರೆಗಳಷ್ಟಿರಬೇಕೆಂದು ಅವರು ಅಧಿಕಾರವಾಣಿಯಿಂದ ಹೇಳುತ್ತಾರೆ. + ಆದರೆ ಅದು ಈಗಾತ್ರದ್ದೇ ಏಕಾಗಿರಬೇಕು? +ಅದು ೧ಂಂ ಅಥವಾ ೨ಂಂ ಎಕರೆಗಳಷ್ಟು ಏಕಾಗಬಾರದು? +ರೂಢಿಬಿಂದುವನ್ನು ಈ ರೀತಿ ಗೊತ್ತುಪಡಿಸಲು ಕಾರಣವೆಂದರೆ ರೈತನಿಗೆ ಅದರಿಂದ ಹೆಚ್ಚಿನ ಜೀವನ ಮಟ್ಟಹೊಂದಲು ಸಾಧ್ಯವಾಗುವಷ್ಟು ಉತ್ಪನ್ನವಾಗುವುದೆಂದು ಪ್ರೊಫೆಸರ್‌ ಜೆವೊನ್ಸ್‌ರವರು ಹೇಳುವರೆಂದು ನಾವು ಊಹಿಸಬಹುದು. +ಭಾರತದಲ್ಲಿ ಸಾಮಾನ್ಯ ಜೀವನ ಮಟ್ಟವನ್ನು ಹೆಚ್ಚಿಸುವ ವಿಷಯ ಒಂದೇ ಅವರ ಗಮನದಲ್ಲಿದ್ದು ಅದನ್ನು ಅವರ ಕಿರುಪುಸ್ತಕದುದ್ದಕ್ಕೂ ಬೇಸರವಾಗುವಷ್ಟರ ಮಟ್ಟಿಗೆ ವಾದಿಸಿದ್ದಾರೆ. +ಅವರ ಸಿದ್ಧಾಂತದಲ್ಲಡಗಿರುವ ದೋಷವನ್ನು ನಂತರ ಪರಿಶೀಲಿಸೋಣ. +ಅವರು ತಮ್ಮ ಮಾದರಿ ಹಿಡುವಳಿಗೆ ಯಾವುದೇ ಬಲವಾದ ಆರ್ಥಿಕ ಕಾರಣಗಳನ್ನು ನೀಡಿಲ್ಲ. +ಬರೋಡಾ ಸಮಿತಿಯ ವಿಷಯದಲ್ಲಿ ಇದು ಇನ್ನೂ ಅನಾಹುತಕಾರಿಯಾಗಿದೆ. +ಪ್ರೊಫೆಸರ್‌ಜೆವೊನ್ಸ್‌ರವರು ಕೊನೆಪಕ್ಷ ಲಾಭದಾಯಕ ಹಿಡುವಳಿಯ ಒಂದು ವ್ಯಾಖ್ಯೆಗಾದರೂ ಅಂಟಿಕೊಂಡಿದ್ದಾರೆ. +ಆದರೆ ಬರೋಡಾ ಸಮಿತಿ ಅನೇಕ ವ್ಯಾಖ್ಯೆಗಳ ದೋಷದಿಂದ ನರಳುತ್ತದೆ. +ಬರೋಡಾ ರಾಜ್ಯದ ಹಿಡುವಳಿಗಳ ಸರಾಸರಿ ಗಾತ್ರದ ಬಗ್ಗೆ ಈ ಮುಂಚೆ ನೀಡಲಾದ ತಖ್ತೆಯಲ್ಲಿ ತೋರಿಸಿರುವ ಗಾತ್ರವನ್ನು ಕುರಿತು ಮಾತನಾಡುವಾಗ ಸಮಿತಿಯು ಕ್ರೋಢೀಕರಣವನ್ನು ಬಯಸಿದ್ದಾಗ್ಯೂ, ಅದು ಅಸ್ತಿತ್ವದಲ್ಲಿದ್ದ ಹಿಡುವಳಿಯ ಗಾತ್ರದಿಂದ ತೃಪ್ತಿಯಾಗಿತ್ತೆಂಬ ಅಂಶ ಈ ಕೆಳಗಿನ ಉಲ್ಲೇಖದಿಂದ ಸ್ಪಷ್ಟವಾಗುತ್ತದೆ . +“ಒಬ್ಬ ಖಾತೆದಾರನ ಸರಾಸರಿ ಹಿಡುವಳಿ ಈ ಸಂಖ್ಯೆಗಳ ಅಚ್ಚುಕಟ್ಟಾದ ಹೊಲವಾಗಿದ್ದರೆ ಅದು ಅತ್ಯಂತ ತೃಪ್ತಿಕರವಾದ ಪರಿಸ್ಥಿತಿಯಾಗಿದ್ದು ಇನ್ನೇನನ್ನೂ ಮಾಡುವ ಅವಶ್ಯಕತೆಯಿಲ್ಲ”. +ಆದರೆ ಆ ಸಮಿತಿ ತಾನು ವಿಚಾರಿಸಿ ವರದಿ ಮಾಡಬೇಕಾದ ಪ್ರಶ್ನೆಯನ್ನೇ ಮರೆತು ಅದರ ಯಾವುದೇ ಆಳವಾದ ವಿಶ್ಲೇಷಣೆಯನ್ನೂ, ವಿಚಾರಣೆಯನ್ನೂ ಮಾಡದೆ ಈ ರೀತಿ ಹೇಳಿದೆ . +“ಒಂದು ಮಾದರಿ ಲಾಭದಾಯಕ ಹಿಡುವಳಿ ಎಂದರೆ ೩ಂ ರಿಂದ ೫೯ ಬಿಘಾಗಳ ಸಾಕಷ್ಟುಒಳ್ಳೆಯ ಭೂಮಿ ಒಂದೇ ಘಟಕದಲ್ಲಿದ್ದು ಕೊನೆಪಕ್ಷ ಒಂದು ನೀರಾವರಿ ಬಾವಿ ಮತ್ತು ಆ ಹಿಡುವಳಿಯಲ್ಲಿಯೇ ಇರುವ ಒಂದು ಮನೆಯನ್ನು ಹೊಂದಿರಬೇಕು.” +ಹಿಡುವಳಿಗಳ ಈಗಿರುವ ಗಾತ್ರ ಮಾದರಿ ಗಾತ್ರವಾಗಿದ್ದರೆ ಅವುಗಳನ್ನು ಏಕೆ ವಿಸ್ತರಿಸಬೇಕು ? +ಇದಕ್ಕೆ ಸಮಿತಿ ಯಾವ ಉತ್ತರವನ್ನೂ ಕೊಡುವುದಿಲ್ಲ. +ಇಷ್ಟೇ ಅಲ್ಲ ಸಮಿತಿಯು ಮಾದರಿ ಆರ್ಥಿಕಹಿಡುವಳಿಗೆ ಈಗಾಗಲೇ ತಾನೇ ನಿಗದಿಪಡಿಸಿದ ಪರಿಪೂರ್ಣಾತ್ಮಕ ಮಿತಿಗೂ ಅಂಟಿಕೊಳ್ಳುವುದಿಲ್ಲ. +ಅದು “ಲಾಭದಾಯಕ ಘಟಕ” ದ ತತ್ವದ ಆಧಾರದ ಮೇಲೆ ಒಂದು ಗ್ರಾಮದ ಚದುರಿಹೋಗಿರುವ ಜಮೀನುಗಳ ಪುನರ್‌ ವ್ಯವಸ್ಥೆಯ ಯೋಜನೆಯ ಚರ್ಚೆ ಮಾಡುವಾಗ ಆರ್ಥಿಕ ಹಿಡುವಳಿಯ ಮೂರನೆಯ ಮಾದರಿಯನ್ನು ಮುಂದಿಡುತ್ತದೆ. +ಈ ಮಾದರಿಯನ್ನು ಸಾಧಿಸಲು ಅದು ಹೀಗೆ ಹೇಳುತ್ತದೆ : +“ಪ್ರತಿಯೊಂದು ಹೊಸ ಹಿಡುವಳಿಯೂ ಮಣ್ಣು, ಸಾಗುವಳಿ ಮುಂತಾದ ಸ್ಥಳೀಯ ಪರಿಸ್ಥಿತಿಗನುಗುಣವಾಗಿ ಲಾಭದಾಯಕ ಜಮೀನಾಗುವ ಗಾತ್ರದ್ದಾಗಿರಬೇಕು. + ಎಂದರೆ, ಅದು ಒಂದುಕುಟುಂಬ ಪೂರ್ಣ ಅದರಲ್ಲಿ ನಿರತವಾಗುವಂತಿದ್ದು, ಆ ಕುಟುಂಬದ ಜೀವನಾಧಾರವಾಗುವಂತಹ ಭೂಮಿಯ ಘಟಕವಾಗಿರಬೇಕು.” +ಹೀಗೆ ಪರಿಪೂರ್ಣ ಸಮಚಿತ್ತದಿಂದ (೧) ಬರೋಡಾ ಸಮಿತಿಯು ಮಾದರಿ ಲಾಭದಾಯಕ ಹಿಡುವಳಿಯ ಬಗ್ಗೆ ಅಷ್ಟು ಬಲವಾಗಿಯಲ್ಲವಾದರೂ ಮೂರು ತತ್ವಗಳನ್ನು ಹಿಡಿದುಕೊಂಡಿದೆ. +ಆದ್ದರಿಂದ ಈ ಸಮಿತಿಯ ವರದಿಯು ಗೊಂದಲಮಯ ತರ್ಕದಿಂದ ಕೂಡಿರುವುದು ಆಶ್ಚರ್ಯವೇನಲ್ಲ. +ಆದಾಗ್ಯೂ ಅದು ಈ ವಿಷಯದ ಮೇಲಣ ಸಂಗತಿಗಳು ಅಮೂಲ್ಯ ಅಗರವಾಗಿದೆ. +ಗೌರವಾನ್ವಿತ ಕೀಟಿಂಗ್‌ ಅವರ ಪ್ರಕಾರ ಲಾಭದಾಯಕ ಹಿಡುವಳಿ ಎಂದರೆ :"ತರ ವೆಚ್ಚವನ್ನು ಪೂರೈಸಿ ತಾನು ಮತ್ತು ತನ್ನ ಕುಟುಂಬ ಸಾಕಷ್ಟು ನೆಮ್ಮದಿಯಿಂದ ಜೀವನ ಸಾಗಿಸಲು ಬೇಕಾಗುವಷ್ಟು ಉತ್ಪಾದನೆ ಮಾಡುವ ಹಿಡುವಳಿ". +ಲಾಭದಾಯಕ ಹಿಡುವಳಿಯ ಈ ವ್ಯಾಖ್ಯೆಯನ್ನು ಬರೋಡಾ ಸಮಿತಿ ಒಪ್ಪಿಕೊಳ್ಳಬಹುದೆಂದು ನಾವು ನಿರೀಕ್ಷಿಸಬಹುದು: + ಏಕೆಂದರೆ, ಇದು ಈ ಮೊದಲೇ ಕೊಟ್ಟರುವ ಸಮಿತಿಯ ಮೂರನೆಯ ವ್ಯಾಖ್ಯೆಯಿಂದ ಭಿನ್ನವಾಗಿಲ್ಲ. +ಸಮಿತಿಯು ಒಪ್ಪಿಕೊಳ್ಳುವುದೆಂದೇ ಇಟ್ಟುಕೊಂಡು ಈ ವ್ಯಾಖ್ಯೆ ಎಷ್ಟರಮಟ್ಟಿಗೆ ಸಮಂಜಸವಾಗಿದೆ ಎಂದು ಪರಿಶೀಲಿಸೋಣ. +ಪ್ರೊಫೆಸರ್‌ ಜಿವೊನ್ಸ್‌ರವರ ವ್ಯಾಖ್ಯೆಯೂ ಸೇರಿದಂತೆ ಎಲ್ಲಾ ವ್ಯಾಖ್ಯೆಗಳು ಲಾಭದಾಯಕ ಹಿಡುವಳಿಯನ್ನು ಉಪಭೋಗದ ದೃಷ್ಟಿಯಿಂದ ನೋಡಿರುವವೇ ಹೊರತು ಉತ್ಪಾದನೆಯ ದೃಷ್ಟಿಯಿಂದಲ್ಲ. +ಇದೇ ಅವುಗಳ ತಪ್ಪು; +ಏಕೆಂದರೆ ಉಪಭೋಗ ಅಥವಾ ಬಳಕೆ ಲಾಭದಾಯಕ ಹಿಡುವಳಿಯ ಅಂಶಗಳನ್ನು ನಿರ್ಣಯಿಸುವ ಸರಿಯಾದ ಮಾನದಂಡವಲ್ಲ. +ಒಂದು ಜಮೀನಿನಲ್ಲಿ ರೈತನು ತೊಡಗಿಸಿದ ಪ್ರತಿಯೊಂದು ಅಂಶದ ಪ್ರಮಾಣಕ್ಕಿಂತ ಹೆಚ್ಚು ಉತ್ಪಾದನೆ ಬಂದರೂ ಕೂಡ ಅದು ರೈತನ ಕುಟುಂಬದ ನಿರ್ವಹಣೆಗೆ ಸಾಕಾದಷ್ಟು ಉತ್ಪಾದಿಸುವುದಿಲ್ಲವೆಂಬ ಕಾರಣದಿಂದ ಲಾಭದಾಯಕವಾಗಿಲ್ಲ ಎಂಬ ತೀರ್ಮಾನಕ್ಕೆ ಬರುವುದು ಮೂರ್ಖತನ. +ರೈತನ ಕುಟುಂಬದ ಸದಸ್ಯರನ್ನೂ ಅವರ ಉಪಯೋಗಕ್ಕಿರುವ ಶ್ರಮಿಕ ಶಕ್ತಿ ಎಂದೇ ಪರಿಗಣಿಸಬೇಕು. +ಭಾರತದಲ್ಲಿರುವ ಸಾಮಾಜಿಕ ರೂಢೀಯಂತೆ ಅವರಲ್ಲಿ ಹೆಚ್ಚಾಗಿರುವ ಕೆಲವರನ್ನು ಜೋಪಾನ ಮಾಡಬೇಕಾಗಬಹುದು. +ಆದರೆ ನಮ್ಮ ಸಾಮಾಜಿಕ ರೂಢಿಗಳ ಒತ್ತಾಯದಿಂದ, ತಾನು ತನ್ನ ಕೆಲಸಕ್ಕೆ ಉಪಯುಕ್ತ ರೀತಿಯಲ್ಲಿ ಬಳಸಲಾರದ ತನ್ನ ಕುಟುಂಬದ ಇತರ ಸದಸ್ಯರ ನಿರ್ವಹಣೆ ಮಾಡಬೇಕಾಗಿದ್ದರೂ ಕುಟುಂಬದಲ್ಲಿ ಕೆಲಸ ಮಾಡಬಲ್ಲವರನ್ನೂ ಮತ್ತು ತನ್ನ ಅಶ್ರಿತರನ್ನೂ ಪೋಷಿಸಲು ಸಾಕಾಗುವುದಿಲ್ಲ ಎಂಬ ಕಾರಣಕ್ಕಾಗಿಯೇ ಜಮೀನಿನ ಉತ್ಪಾದನೆಯ ವಿಷಯದಲ್ಲಿ ತಪ್ಪು ಹಿಡಿಯಬಾರದಂತೆ ನಾವು ಎಚ್ಚರಿಕೆ ವಹಿಸಬೇಕು. +ಈ ರೀತಿ ಲೆಕ್ಕಾಚಾರ ಮಾಡುವ ಪದ್ಧತಿಯಿಂದ ಯಶಸ್ವಿಯಾಗಿ ಕೆಲಸ ಮಾಡುವಂತಹ ಅನೇಕ ಉದ್ದಿಮೆಗಳನ್ನೂ ವಿಫಲ ಅಥವಾ ನಿರರ್ಥಕವಾದವುಗಳೆಂದು ಸಾರಬೇಕಾಗುತ್ತದೆ. +ಒಬ್ಬ ಉದ್ಯಮಿಯ ಕುಟುಂಬ ಮತ್ತು ಅವನ ಜಮೀನು ಅಥವಾ ಉದ್ಯೋಗದ ಉತ್ಪಾದನೆಯ ನಡುವೆಯಾವ ಆರ್ಥಿಕ ಸಂಬಂಧವೂ ಇರಲಾರದು. +ನಿಜವಾದ ಆರ್ಥಿಕ ಸಂಬಂಧ ತೊಡಗಿಸಲಾದ ಹಣಮತ್ತು ಒಟ್ಟು ಉತ್ಪಾದನೆ ಇವುಗಳ ನಡುವೆ ಮಾತ್ರ ಇರಲು ಸಾಧ್ಯ . +ತಾನು ತೊಡಗಿಸಿದ ಎಲ್ಲಾ ಸಂಪನ್ಮೂಲಗಳಿಗೆ ಸೂಕ್ತವಾದ ಉತ್ಪಾದನೆಯಾದ ಪಕ್ಷದಲ್ಲಿ ಅದು ತನ್ನ ಕುಟುಂಬದ ನಿರ್ವಹಣೆಗೆ ಸಾಕಾಗುವುದಿಲ್ಲವೆಂಬ ಕಾರಣದಿಂದಲೇ ಯಾವ ಪ್ರಜ್ಞಾವಂತ ಉದ್ಯಮಿಯೂ ತನ್ನ ಉದ್ಯಮವನ್ನು ಮುಚ್ಚೆ ಬಿಡುವ ವಿಚಾರ ಮಾಡುವುದಿಲ್ಲ. +ಉದ್ಯಮಿಯ ಕುಟುಂಬದ ಗಾತ್ರ ಮತ್ತು ಉದ್ಯಮ ಇಲ್ಲವೆ ಜಮೀನುಗಳ ಒಟ್ಟು ಉತ್ಪನ್ನ ಇವುಗಳ ನಡುವೆ ಆರ್ಥಿಕ ಸಂಬಂಧವೂ ಇರುವುದಿಲ್ಲ. +ನೈಜ ಆರ್ಥಿಕ ಸಂಬಂಧವಿರುವುದು ಒಟ್ಟು ಉತ್ಪಾದನೆ ಹಾಗೂ ತೊಡಗಿಸಿದ ಹಣ ಇವುಗಳ ನಡುವೆ. +ಒಟ್ಟು ಉತ್ಪಾದನೆ ತೊಡಗಿಸಿದ ಹಣಕ್ಕೆ ಹೆಚ್ಚಾದರೆ ತಿಳುವಳಿಕೆಯುಳ್ಳ ಯಾವ ವ್ಯಕ್ತಿಯೂ ಅದನ್ನು ಮುಚ್ಚುವ ವಿಚಾರ ಮಾಡಲಾರ. +ಇದು ಸ್ಪಷ್ಟವಿದೆ; +ಏಕೆಂದರೆ, ಉತ್ಪಾದನೆಯು ಉಪಭೋಗ ಅಥವಾ ಬಳಕೆಗಾಗಿದೆಯಾದರೂ,ಅದು ಅದನ್ನು ಉತ್ಪಾದಿಸಲು ಯಾರು ಸಹಾಯಕರಾಗಿತ್ತಾರೋ ಅವರ ಬಳಕೆಗಾಗಿ ಮಾತ್ರ ಇದೆ. +ಉತ್ಪಾದನೆ ಮತ್ತು ಹೂಡಲಾದ ಸಂಪನ್ಮೂಲಗಳ ನಡುವಣ ಸಂಬಂಧವೇ ನಿಜವಾದ ಆರ್ಥಿಕ ಸಂಬಂಧ ಎಂದು ಅರ್ಥವಾದರೆ ಯಾವುದೇ ಜಮೀನು ಉತ್ಪಾದನೆಯ ದೃಷ್ಟಿಯಿಂದ. +ಉಪಭೋಗದ ದೃಷ್ಟಿಯಿಂದಲ್ಲ,ಲಾಭದಾಯಕವೆಂದು ನಾವು ಹೇಳಬಹುದು. +ಉಪಭೋಗದ ಆಧಾರದ ಮೇಲೆ ನೀಡಲಾದ ಲಾಭದಾಯಕ ಹಿಡುವಳಿಯ ವ್ಯಾಖ್ಯೆ ಲಾಭದಾಯಕ ಹಿಡುವಳಿಯ ಅಪಾರ್ಥವೆನಿಸುವುದು. + ಏಕೆಂದರೆ ಅಂತಹ ಹಿಡುವಳಿ ಉತ್ಪಾದನೆಯ ಉದ್ದಿಮೆಯಾಗಿದೆ. +ಮುಂದುವರಿಯುವ ಮೊದಲು ಉತ್ಪಾದನೆಯ ದೃಷ್ಟಿಯಿಂದ ಲಾಭದಾಯಕ ಹಿಡುವಳಿಯ ಅರ್ಥವನ್ನು ತಿಳಿದುಕೊಳ್ಳಲು ಸಹಾಯಕವಾಗುವಂತಹ ಕೆಲವು ಮಾತುಗಳನ್ನು ಹೇಳುವ ಮೂಲಕ ನಮ್ಮ ದಾರಿಯನ್ನು ಸುಗಮಗೊಳಿಸಿಕೊಳ್ಳಬೇಕಾಗಿದೆ. +ಸ್ಪರ್ಧಾತ್ಮಕ ಸಮಾಜದಲ್ಲಿ ಬಳಕೆದಾರರು ಅಥವಾ ಉತ್ಪಾದಕರಾಗಿ ಅದರ ಸದಸ್ಯರ ದೈನಂದಿನ ವ್ಯವಹಾರಗಳು ಬೆಲೆಯ ಆಧಿಪತ್ಯದ ನಿಯಂತ್ರಣಕ್ಕೊಳಗಾಗಿರುವುವೆಂದು ಆರಂಭದಲ್ಲಿಯೇ ಪೀಠಿಕಾರೂಪವಾಗಿ ಹೇಳಬೇಕಾಗುತ್ತದೆ. +ಆದ್ದರಿಂದ ಇಲ್ಲಿ ನಾವು ಬೆಲೆಯ ಅಧಿಪತ್ಯದಲ್ಲಿಯೇ ಉತ್ಪಾದನೆಯನ್ನು ವಿಶ್ಲೇಷಿಸಬೇಕಾಗುತ್ತದೆ. +ಪ್ರಮುಖವಾಗಿ ಉತ್ಪಾದನೆಯ ಆಧುನಿಕ ಪ್ರಕ್ರಿಯೆ ಉದ್ಯಮಿಯ ಮುಖಂಡತ್ವದಲ್ಲಿದ್ದು ಅದು ಅವನ ನಿರ್ದೇಶನ ಮತ್ತು ಮೇಲ್ವಿಚಾರಣೆಗೊಳಪಟ್ಟಿರುತ್ತದೆ; +ಅವನಿಂದಲೇ ಕಾರ್ಯಗತವಾಗುತ್ತದೆ. +ಕಾರ್ಮಿಕರನ್ನು ನೇಮಿಸಿಕೊಳ್ಳುವ ಮತ್ತು ಸಲಕರಣೆಗಳ ಸರಕುಗಳನ್ನು ಪಡೆದುಕೊಳ್ಳುವವರೆಲ್ಲರೂ ಉದ್ಯಮಿಗಳು ಅಥವಾ ವ್ಯವಸ್ಥಾಪಕರು ಅವನ ಲೆಕ್ಕಾಚಾರ ಇಂದಿನ ಆರ್ಥಿಕ ಸಮಾಜದಲ್ಲಿ ಉತ್ಪಾದನೆಯಾಗಲಿರುವ ವಸ್ತು ಮಾರಾಟಕ್ಕಿರಲಿ, ಇಲ್ಲದಿರಲಿ, ಆ ವಸ್ತುವಿನ ಬೆಲೆಯ ಆಧಾರದ ಮೇಲಲ್ಲದೆ ವೆಚ್ಚದ ಮೌಲ್ಯದ ಆಧಾರದ ಮೇಲೆ ಮಾಡಲಾಗುತ್ತದೆ. +ಉದ್ಯಮಿಯ ಲಾಭಕ್ಕಾಗಿ ಉತ್ಪಾದನೆ ಮಾಡಲು ತಾನು ವೆಚ್ಚ ಮಾಡುವ ಹಣವನ್ನು ವಿವಿಧ ರೀತಿಯಲ್ಲಿ ತೊಡಗಿಸುವನು. +ಉತ್ಪಾದನೆಯ ಅಂಶಗಳ ರೀತಿಯಲ್ಲಿ ಅಥವಾ ಉದ್ಯಮಿಯ ಖರ್ಚಿನಂತೆ ಈ ತೊಡಗಿಸಲಾದ ಬಂಡವಾಳಗಳು ಪರಂಪರಾನುಗತವಾಗಿ ಕೂಲಿ (ಕೂಲಿಕಾರರಿಗೆ) ಲಾಭಗಳು, ಬಾಡಿಗೆ ಭೂಮಿಗೆ ಮತ್ತು ಬಡ್ಡಿ (ಬಂಡವಾಳದ ಮೇಲೆ)ಗೆ ಸೀಮಿತವಾಗಿವೆ. +ಔದ್ಯೋಗಿಕ ಸಂಗತಿಗಳು ಈ ರೀತಿಯ ವರ್ಗೀಕರಣಕ್ಕೆ ಪುಷ್ಟಿ ನೀಡುವುದಿಲ್ಲ. +ಇವೂ ಅಲ್ಲದೆ ವಿತರಣಾ ಪಕ್ರಿಯೆಯಲ್ಲಿ ಪಾಲ್ಗೊಂಡ ಮತ್ತು ಉತ್ಪಾದನಾ ಪಕ್ರಿಯೆಯಲ್ಲಿ ಸಮೀಪದಿಂದಾಗಲೀ ಅಥವಾ ದೂರದಿಂದಾಗಲಿ ಕೆಲಸ ಮಾಡುವ ಇತರಬ ಅನೇಕ ಅಂಶಗಳಿವೆ ಎಂದು ತರ್ಕ ಮಾಡಲಾಗಿದೆ. +ಆದರೆ ಎಷ್ಟು ಅಂಶಗಳಿವೆ ಮತ್ತು ಅವು ಯಾವ ಪ್ರಮಾಣದಲ್ಲಿ ಅಥವಾ ವಿಧದಲ್ಲಿ ಭಿನ್ನವಾಗಿವೆ ಎಂಬುದು ಅಪ್ರಸ್ತುತ. + ಉತ್ಪಾದನೆಯಲ್ಲಿ ಯಾವುದು ಮುಖ್ಯವೆಂದರೆ ಅವುಗಳನ್ನು ಒಂದುಗೂಡಿಸುವ ಪ್ರಕ್ರಿಯೆ. +ಉತ್ಪಾದನೆಯ ಅವಶ್ಯಕ ಅಂಶಗಳ ಸಂಯೋಜನೆಯು ಪ್ರಮಾಣದ ನಿಯಮವೆಂದು ಕರೆಯಲಾದ ತಂತ್ರದಿಂದ ಪ್ರಭಾವಿತವಾಗುವುದು. +ಉದ್ದಿಮೆಯಲ್ಲಿ ಬಳಸಲಾದ ಉತ್ಪಾದನೆಯ ವಿವಿಧ ಅಂಶಗಳಲ್ಲಿ ಸರಿಯಾದ ಪ್ರಮಾಣವಿಲ್ಲದೇ ಹೋದರೆ ಅನಾನುಕೂಲವಾಗುವುದೆಂದು ಅದು ಹೇಳುತ್ತದೆ. +ವಿಸ್ತಾರಗೊಂಡಾಗ ಇನ್ನಿತರ ಅಂಶಗಳಿಗೆ ಹೋಲಿಸಿದಾಗ ಒಂದು ಹೆಚ್ಚು ಪ್ರಮಾಣ ಅಥವಾ ಗಾತ್ರದ ನ್ಯೂನತೆ ಎಲ್ಲ ಅಂಶಗಳ ದಕ್ಷತೆಯನ್ನು ಕುಂಠಿತಗೊಳಿಸಿ ಒಟ್ಟು ಉತ್ಪಾದನೆಯ ಮೇಲೆ ಪರಿಣಾಮ ಬೀರುತ್ತದೆ. +ಒಂದು ಅಂಶದ ಪ್ರಮಾಣವು ಎರಡರಲ್ಲಿಯೂ ಅತಿ ಹೆಚ್ಚು ದಕ್ಷತೆಯನ್ನುಂಟು ಮಾಡಬೇಕಾದರೆ ಇನ್ನೊಂದು ಅಂಶ ಗೊತ್ತಾದ ಪ್ರಮಾಣದಲ್ಲಿ ಮಾತ್ರ ಕೆಲಸ ಮಾಡಬೇಕೆಂಬುದೇ ಈ ತತ್ವದ ಅರ್ಥ. +ಅಂಶಗಳ ಈ ಪರಸ್ಪರಾವಲಂಬನೆಯನ್ನು ಗಮನದಲ್ಲಿಟ್ಟುಕೊಂಡಾಗ ಇವುಗಳ ಲಾಭದಾಯಕ ದಕ್ಷತೆಯ ಸಂಯೋಜನೆಯಿಂದ ಉತ್ಪಾದಕನು ಒಂದು ಅಂಶದ ಪ್ರಮಾಣದಲ್ಲಿ ವ್ಯತ್ಯಾಸ ಮಾಡಿದರೆ ಇನ್ನೊಂದು ಅಂಶದಲ್ಲಿಯೂ ಅದೇ ರೀತಿ ವ್ಯತ್ಯಾಸ ಮಾಡಲೇಬೇಕಾಗುತ್ತದೆ. +ಏಕೆಂದರೆ, ಉತ್ಪಾದನೆಯ ಪ್ರತಿಯೊಂದು ಅಂಶವೂ ಅತಿ ಹೆಚ್ಚು ಸಹಯೋಗ ನೀಡುವಂತೆ ಮಾಡುವುದೇ ದಕ್ಷ ಉತ್ಪಾದನೆಯ ಪ್ರಮುಖ ಗುರಿಯಾಗಿದೆ. +ಅದು ತನ್ನ ಸಹ ಅಂಶದೊಡನೆ ಅಗತ್ಯವಾದ ಕ್ಷಮತೆಯಿಂದ ಸಹಕರಿಸುವುದರ ಮೂಲಕ ಇದು ಸಾಧ್ಯ. +ಆದ್ದರಿಂದ ಪ್ರಮಾಣದ ಬದಲಾವಣೆಯೊಂದಿಗೆ ಉದ್ದೇಶವೂ ಬದಲಾಗುವುದಾದರೂ ಎಲ್ಲಾ ಅಂಶಗಳೂ ಕೂಡಿದ ಒಂದು ಮಾದರಿ ಪ್ರಮಾಣವೆಂಬುದೊಂದಿದೆ. +ಈ ಪ್ರಮಾಣಗಳು ಉತ್ಪಾದನೆಯ ಅಂಶಗಳ ಬೆಲೆಯಲ್ಲಿ ಉಂಟಾಗುವ ವ್ಯತ್ಯಾಸಗಳ ಪ್ರಭಾವದಿಂದುಂಟಾಗುವ ಪ್ರತಿನಿಧಾನ ಅಥವಾ ಬದಲಿಕೆಯ ತತ್ವದಿಂದ ಪ್ರಭಾವಿತವಾಗುತ್ತದೆ ಎಂಬುದನ್ನು ಒಪ್ಪಿಕೊಳ್ಳಲೇಬೇಕು. +ಈ ತತ್ವ ಸೀಮಿತವಾಗಿದ್ದು ಎಲ್ಲಾ ಲಾಭದಾಯಕ ಉತ್ಪಾದನೆಯನ್ನು ರೂಪಿಸುವ ಪ್ರಮಾಣದ ನಿಯಮವನ್ನು ನಿರರ್ಥಕಗೊಳಿಸಲಾರದು. +ಮತ್ತು ಇದನ್ನು ಯಾವ ಉತ್ಪಾದಕನೂ ನಿರ್ಭಯವಾಗಿ ಕಡೆಗಣಿಸಲಾರ. +ಲಾಭದಾಯಕ ಹಿಡುವಳಿಯ ವ್ಯಾಖ್ಯೆಯ ಬಗ್ಗೆ ಮೇಲೆ ತಿಳಿಸಲಾದ ಹೇಳಿಕೆಗಳನ್ನು ಉತ್ಪಾದನೆಗೆ ಅನ್ವಯಿಸಿದಾಗ, ಕೃಷಿಯನ್ನು ಒಂದು ಲಾಭದಾಯಕ ಉದ್ದಿಮೆ ಎಂದು ಪರಿಗಣಿಸಿದಾಗ ಸಣ್ಣ ಅಥವಾ ದೊಡ್ಡ ಹಿಡುವಳಿಯ ಪ್ರಶ್ನೆ ತಾನಾಗಿಯೇ ಉದ್ಭವಿಸುವುದಿಲ್ಲ. +ಒಬ್ಬ ರೈತನ ಹಿಡುವಳಿಯು ದೊಡ್ಡದಾಗಿದೆಯೋ ಅಥವಾ ಸಣ್ಣದಾಗಿಯೋ ಎಂಬ ಅಂಶ ಆತನ ಹಿಡುವಳಿಯನ್ನು ಲಾಭದಾಯಕವನ್ನಾಗಿ ಮಾಡಲು ಆತ ಹೊಂದಿರುವ ಉತ್ಪಾದನೆಯ ಇತರ ಅಂಶಗಳನ್ನವಲಂಬಿಸಿದೆ. +ಕೇವಲ ಭೂಮಿಯ ಗಾತ್ರದಲ್ಲಿ ಯಾವುದೇ ಆರ್ಥಿಕ ಅರ್ಥ ಇರುವುದಿಲ್ಲ. +ತತ್ಪರಿಣಾಮವಾಗಿ, ದೊಡ್ಡ ಹಿಡುವಳಿಯು ಲಾಭದಾಯಕ ಮತ್ತು ಸಣ್ಣ ಹಿಡುವಳಿಯು ಲಾಭದಾಯಕವಲ್ಲ ಎಂದು ಹೇಳುವುದು ಅರ್ಥಶಾಸ್ತ್ರದ ಭಾಷೆಯಲ್ಲ. +ಉತ್ಪಾದನೆಯ ಇತರ ಅಂಶಗಳ ಪ್ರಮಾಣ ತಪ್ಪೋ ಸರಿಯೋ ಎಂಬುದರ ಮೇಲೆ ಒಂದು ಭೂಮಿಯ ಘಟಕ ಲಾಭದಾಯಕವೋ ಅಲ್ಲವೋ ಎಂಬುದನ್ನು ಅವಲಂಬಿಸಿದೆ. +ಆದ್ದರಿಂದ ಸಣ್ಣ ಜಮೀನು ಲಾಭದಾಯಕವಾಗಿರಬಹುದು. +ಹಾಗೆಯೇ ದೊಡ್ಡ ಜಮೀನು ಕೂಡ. +ಏಕೆಂದರೆ ಅದು ಲಾಭದಾಯಕವೋ ಅಲ್ಲವೋ ಎಂಬುವುದು ಭೂಮಿಯ ಗಾತ್ರವನ್ನವಲಂಬಿಸಿಲ್ಲ. +ಆದರೆ ಅದು ಭೂಮಿಯೂ ಸೇರಿದಂತೆ ಉತ್ಪಾದನೆಯ ಇತರ ಎಲ್ಲಾ ಅಂಶಗಳ ಸರಿಯಾದ ಪ್ರಮಾಣವನ್ನವಲಂಬಿಸಿದೆ. +ಆದ್ದರಿಂದ ಲಾಭದಾಯಕ ಹಿಡುವಳಿಯು ಒಂದು ಟೊಳ್ಳು ವಿಚಾರವಾಗದಂತಾಗಬೇಕಾದರೆ ಅದು ಭೂಮಿ, ಬಂಡವಾಳ ಮತ್ತು ವಿಧಾನ ಮುಂತಾದವುಗಳ ಸಮ್ಮಿಳನವಾಗಿದ್ದು ಈ ಪ್ರತಿಯೊಂದು ಅಂಶವೂ ತನ್ನ ಪ್ರಮಾಣಕ್ಕನುಗುಣವಾಗಿ ಇತರ ಅಂಶಗಳೊಳಗೂಡಿ ಅತಿ ಹೆಚ್ಚು ಕೊಡುಗೆ ನೀಡುವಂತಿರಬೇಕು. +ಎಂದರೆ ಒಂದು ಲಾಭದಾಯಕ ಹಿಡುವಳಿಯ ನಿರ್ಮಾಣಕ್ಕಾಗಿ ರೈತನು ತನ್ನ ಭೂಮಿಯನ್ನು ಕೌಶಲ್ಯದಿಂದ ನಿರ್ವಹಿಸಿದರೆ ಮಾತ್ರ ಸಾಲದು. +ಅವನು ಪರಿಣಾಮಕಾರಿ ಸಾಗುವಳಿಗಾಗಿ ಅವಶ್ಯವಾದ ಉತ್ಪಾದನೆಯ ಇತರ ಸಾಧನಗಳನ್ನು ಸರಿಯಾದ ಪ್ರಮಾಣದಲ್ಲಿ ಹೊಂದಿರಬೇಕು. +ಏಕೆಂದರೆ ಅವುಗಳಿಲ್ಲದೆ ಪರಿಣಾಮಕಾರಿ ಉತ್ಪಾದನೆ ಸಾಧ್ಯವಿಲ್ಲ. +ಅವನ ಸಾಧನಗಳ ವೃದ್ಧಿಯಾದರೆ ಅವನ ಕೃಷಿ ಉತ್ಪಾದನೆಯ ಮೇಲೆ ಪ್ರಭಾವ ಬೀರುವ ಉತ್ಪತ್ತಿಯ ಇಳುವರಿಯ ನಿಯಮವೇ ಪ್ರಮಾಣದ ನಿಯಮದ ವ್ಯಾಪಕ ಅನ್ವಯಕ್ಕೆ ಅಡ್ಡಿಯುಂಟು ಮಾಡಿದೆ. +ಎಂದು ಅನೇಕ ಅರ್ಥಶಾಸ್ತ್ರಜರ ಅಭಿಪ್ರಾಯವಾಗಿದೆ. +ಸಂಕ್ಷಿಪ್ತದಲ್ಲಿ, ಉತ್ಪತ್ತಿಯ ಇಳುವರಿಕೆ ನಿಯಮವು ಯಾವುದೇ ಜಮೀನಿನಲ್ಲಿ ಹೆಚ್ಚು ಪ್ರಮಾಣಿದಲ್ಲಿ ಬಂಡವಾಳ ಮತ್ತು ಕ್ರಮವನ್ನು ಒದಗಿಸುತ್ತಾ ಹೋದಂತೆ ಅದರ ಉತ್ಪಾದನೆ ಕಡಿಮೆಯಾಗುತ್ತಾ ಹೋಗುತ್ತದೆ. +ಉತ್ಪಾದನೆಯ ಭೂಮಿಯೇತರ ವೆಚ್ಚಗಳು ದ್ವಿಗುಣವಾದಾಗ ಉತ್ಪಾದನೆ ದ್ವಿಗುಣಕ್ಕಿಂತ ಕಡಿಮೆಯಾಗುತ್ತದೆ. +ಇದು ಉತ್ಪತ್ತಿಯ ಇಳುವರಿಕೆಯ ನಿಯಮದ ಸಾಮಾನ್ಯ ಪ್ರತಿಫಲವೆಂದು ಹೇಳುವುದಾದರೆ ಇದರಲ್ಲಿ ಕೃಷಿ ಉತ್ಪಾದನೆಗೆ ವಿಶಿಷ್ಟವಾದುದೇನೂ ಇಲ್ಲ. +ಭೂಮಿ ದ್ವಿಗುಣಗೊಳ್ಳದೇ ಅದರ ಮೇಲಣ ವೆಚ್ಚ ಮಾತ್ರ ದ್ವಿಗುಣಗೊಳ್ಳುವುದರಿಂದ ಉಂಟಾದ ಹೆಚ್ಚಿನ ಉತ್ಪಾದನೆ ಹೆಚ್ಚಿನ ಖರ್ಚಿನ ಪ್ರಮಾಣಕ್ಕಿಂತ ಕಡಿಮೆ ಇರುತ್ತದೆ. +ಉತ್ಪತ್ತಿ ಹೆಚ್ಚಬೇಕಾದರೆ ಎಲ್ಲಾ ಅಂಶಗಳನ್ನು ಪ್ರಮಾಣಕ್ಕನುಗುಣವಾಗಿ ಹೆಚ್ಚಿಸಬೇಕೆಂದು ಹೇಳುವ ಇನ್ನೊಂದು ರೀತಿ. +ಆದರ ಹಾಗೆ ಹೇಳಿದಾಗ, ಉತ್ಪತ್ತಿಯ ಇಳುವರಿಯ ನಿಯಮವು ಪ್ರಮಾಣ ನಿಯಮದ ಅಸಂಬದ್ಧ ನಿಯಮವೆನಿಸುವುದಿಲ್ಲವೇ ? +ಹಿಡುವಳಿಗಳ ವೃದ್ಧಿಯೂ ಆಗುವುದು. +ಅವನ ಸಾಧನಗಳು ಕುಗ್ಗಿದರೆ ಅವನ ಹಿಡುವಳಿಯ ಗಾತ್ರವೂ ಕುಗ್ಗುವುದು. +ಇಲ್ಲಿ ಮುಖ್ಯ ಅಂಶವೆಂದರೆ ಸಾಧನಗಳು ಮತ್ತು ಹಿಡುವಳಿ ಪರಸ್ಪರ ಪ್ರಮಾಣವನ್ನು ತಪ್ಪಿರಬಾರದು. +ಅವು ಪ್ರಮಾಣಕ್ಕನುಗುಣವಾಗಿರಬೇಕು ಮತ್ತು ಅವಶ್ಯಬಿದ್ದರೆ ಪ್ರಮಾಣಕ್ಕನುಗುಣವಾಗಿ ವ್ಯತ್ಯಾಸಗೊಳ್ಳಬೇಕು. +ಇದುವರೆಗೆ ಮಾಡಲಾದ ತರ್ಕದ ಧಾಟ ಪ್ರತ್ಯಕ್ಷ ಆಚರಣೆಯ ಆಧಾರವಿಲ್ಲದೇ ಇಲ್ಲ. +ಇದನ್ನು ಭಾರತದಲ್ಲಿ ಮುಂಬಯಿ ಪ್ರಾಂತ್ಯದ ಸರ್ವೆ ಮತ್ತು ಸೆಟ್ಟಮೆಂಟ್‌ದ ಕರ್ತೃಗಳೇ ಮಾನ್ಯ ಮಾಡಿ ಅದನ್ನುಅನ್ವಯಿಸಿರುವುದು ಅರ್ಥಶಾಸ್ತ್ರಜ್ಞರ ದೃಷ್ಟಿಯಲ್ಲಿ ಒಂದು ಸಂತೋಷದ ಸಂಗತಿ. +ಪ್ರಸಿದ್ಧ ಜಂಟಿ ವರದಿಯಲ್ಲಿ ಈ ಸಮಸ್ಯೆಯ ಮೇಲೆ ಬೆಳಕು ಚೆಲ್ಲುವಂತಹ ಚರ್ಚೆಯಾಗಿದೆ. +ಡೆಕ್ಕನ್‌ದಲ್ಲಿ ಸರ್ವೇಪದ್ಧತಿಯನ್ನು ಜಾರಿಗೊಳಿಸಲು ನಿಯೋಜಿತ ಅಧಿಕಾರಿಗಳಿಗೆ ಭೂಕಂದಾಯ ವಿಧಿಸುವುದಕ್ಕಾಗಿ ಹೇಗೆ ಭೂಮಿಯ ಬೆಲೆ ಕಟ್ಟುವುದು ಎಂಬುದೇ ಸಮಸ್ಯೆಯಾಗಿತ್ತು. +ಅದು ಜಮೀನಿನ ಬೆಲೆಯ ಆಧಾರದ ಮೇಲಿರಬೇಕೇ ಅಥವಾ ಗ್ರಾಮದ ಎಲ್ಲಾ ಭೂಮಿಗಳ ಆಧಾರದ ಮೇಲಿರಬೇಕೇ ಅಥವಾ ಒಬ್ಬ ವ್ಯಕ್ತಿಯ ಅಥವಾ ಅವರು ಮಾಲಿಕರಾಗಿರಲಿ ಇಲ್ಲವೆ ಅನುಭವದಾರರಾಗಿರಲಿ ಜೊತೆ-ವಾರಸುದಾರರ ಅಥವಾ ಪಾಲುದಾರರ ಎಲ್ಲಾ ಹಿಡುವಳಿಗಳ ಮೇಲಿರಬೇಕೇ? + ಬಹಳ ವಿಚಾರ ವಿನಿಮಯ ಮತ್ತು ಚರ್ಜೆಯನಂತರ ಅಂತಿಮವಾಗಿ ಜಮೀನಿನ ಆಧಾರದ ಮೇಲೆ ಕಂದಾಯ ವಿಧಿಸುವ ಪದ್ಧತಿಯನ್ನು ಸರಿಸಲಾಯಿತೆಂಬುದು ಅನೇಕರಿಗೆ ಗೊತ್ತಿದೆ. +ಆದರೆ ಇದನ್ನನುಸರಿಸಿದುದರ ಕಾರಣಗಳು ಮಾತ್ರ ಕೆಲವರಿಗೇ ಗೊತ್ತು. +ಜಂಟಿ ವರದಿಯಿಂದ ಆಯ್ದ ಈ ವಿವರಣಾತ್ಮಕ ಭಾಗಗಳು ಕುತೂಹಲಕಾರಿ ಮತ್ತುಬೋಧಪ್ರದವಾಗಿವೆ: +“ಪ್ಯಾರಾ ೬ ಒಂದು ಗ್ರಾಮದ ಕಂದಾಯವನ್ನು ಅತಿ ಚಿಕ್ಕ ಭಾಗಗಳನ್ನಾಗಿ (ಒಂದೇ ಸರ್ವೇನಂಬರಿನಿಂದ ನಮೂದಿತವಾದ) ವಿಂಗಡಿಸುವುದರ ಸ್ಪಷ್ಟ ಅನುಕೂಲತೆ ಎಂದರೆ ವರ್ಷ ವರ್ಷಕ್ಕೆ ರೈತರು ತಾವು ಪಡೆದಿರುವ ಹೆಚ್ಚು ಕಡಿಮೆ ಕೃಷಿ ಬಂಡವಾಳಕ್ಕನುಗುಣವಾಗಿ ತನ್ನ ಜಮೀನಿನ ಗಾತ್ರವನ್ನುಹೆಚ್ಚಿಸಲು ಇಲ್ಲವೆ ತಗ್ಗಿಸಲು ಅನುಕೂಲವಾಗುವುದು. +ಇದು ಭಾರತದಾದ್ಯಂತ ಸೀಮಿತ ಸಂಪನ್ಮೂಲಗಳನ್ನು ಪಡದಿರುವ ರೈತರಿಗೆ ಅಗಣಿತ ಮಹತ್ವದ್ದಾಗಿದೆ. +“ಪ್ಯಾರಾ ೭ ರೋಗ ಅಥವಾ ಇತರ ಕಾರಣಗಳಿಂದ ಕೆಲವು ಎತ್ತುಗಳು ಸತ್ತು ಹೋದರೆ ರೈತರಿಗೆ ತಾನು ಮೊದಲು ಹೊಂದಿದ ಗ್ರಾಮದ ಭೂಮಿಯನ್ನು ಲಾಭದಾಯಕವಾಗಿ ಉಳುವುದು ಸಾಧ್ಯವಾಗುವುದಿಲ್ಲ. +ಮತ್ತು ಅಂತಹ ಹಾನಿ ಸಂಭವಿಸಿದಾಗ ಅವನ ಜಮೀನನ್ನು ಕುಗ್ಗಿಸುವ ಅನುಕೂಲವಿಲ್ಲದೇ ಹೋದರೆ ಅನತಿ ಕಾಲದಲ್ಲಿ ಅವನ ವಿನಾಶವಾಗುವುದು ಖಚಿತ.” +ಈ ತೀರ್ಮಾನದ ಬೆಳಕಿನಲ್ಲಿ ನಿರ್ಣಯಿಸುವುದಾದರೆ ಹಿಡುವಳಿಗಳ ಗಾತ್ರವನ್ನು ಕ್ರಮಪಡಿಸುವ ಸೂಚನೆ ತಪ್ಪು ಗಹಿಕೆಯದಾಗಿದ್ದು ವ್ಯರ್ಥವೆಂದು ತೋರುತ್ತದೆ. +ಏಕೆಂದರೆ ಪ್ರೊಫೆಸರ್‌ ರಿಚರ್ಡ್‌ಟಿ.ಎಲೀ ಹೇಳುವಂತೆ “ಈ ಪ್ರಶ್ನೆಗೆ (ಜಮೀನಿನ ಗಾತ್ರ ಎಷ್ಟಿರಬೇಕೆಂಬ ಬಗ್ಗೆ) ಸರಳವಾದ ಉತ್ತರ ಕೊಡಲು ಸಾಧ್ಯವಿಲ್ಲ ಎಂಬುದು ಸ್ಪಷ್ಟವಿದೆ. +ಬಹುಶಃ ಭೂಮಿಯ ಬೆಲೆ ಅಥವಾ ಅದು ತರಬಹುದಾದಂತಹ ಬಾಡಿಗೆ ಅತ್ಯಂತ ಮಹತ್ವದ ಅಂಶವಾಗಿದೆ. + ಬಾಡಿಗೆಯೂ ಅಲ್ಲದೆ, ತಾನು ಹೊಂದಿರುವ ಬಂಡವಾಳದ ಮೊತ್ತ,ತಾನು ಪರಿಣತಿ ಹೊಂದಿರುವ ಉಳಿಮೆಯ ವಿಧಾನ, ತಾನು ಪಡೆಯಬಹುದಾದ ಕಾರ್ಮಿಕರ ಕೆಲಸದ ಗುಣಮಟ್ಟ, ಮಾರುಕಟ್ಟೆಯ ಸಾಮೀಪ್ಯ ಮತ್ತು ಸಾಗಣಿಕೆಯ ಸೌಲಭ್ಯ ಈ ಎಲ್ಲಾ ಅಂಶಗಳನ್ನು ರೈತನು ತಾನು ಎಷ್ಟು ದೊಡ್ಡ ಜಮೀನನ್ನು ನಿರ್ವಹಿಸಬಲ್ಲ . + ಎಷ್ಟರಮಟ್ಟಿಗೆ ಅದರಲ್ಲಿ ಕೃಷಿ ಮಾಡಬಲ್ಲಎಂದು ನಿರ್ಧರಿಸುವಲ್ಲಿ ಗಣನೆಗೆ ತೆಗೆದುಕೊಳ್ಳಬೇಕು. +“ಇದು ಪ್ರಾಥಮಿಕವಾಗಿ ವ್ಯಕ್ತಿಯು ತಾನೇ ನಿರ್ಣಯಿಸಬೇಕಾದ ಖಾಸಗಿ ಲಾಭದ ಪ್ರಶ್ನೆಯಾಗಿದೆ. +ಆದರೆ ವಾಣಿಜ್ಯ ಶಾಸ್ತ್ರದ ಅತ್ಯಂತ ಕಠಿಣ ಶಾಖೆಯೆನಿಸಿದ ಜಮೀನಿನ ಲೆಖ್ಹಾಚಾರ ಶಾಸ್ತ್ರವನ್ನು ಬೆಳೆಸುವುದರಲ್ಲಿ ಮತ್ತು ರೈತನನ್ನು ಬೆಲೆಗಳು, ಕೂಲಿ ಮತ್ತು ಸಾಗಾಣಿಕೆಯ ಖರ್ಚಿನಲ್ಲಾಗುವ ಬದಲಾವಣೆಗಳಿಗೆ ಚೈತನ್ಯಪೂರ್ಣನಾಗಿದ್ದು ತನ್ನ ಕೃಷಿ ಸಂಸ್ಥೆ ಅದಕ್ಕೆ ಹೊಂದುಕೊಳ್ಳುವಂತೆ ಶಾಸಕರು ಮತ್ತು ವೈಜ್ಞಾನಿಕವಾಗಿ ಅಧ್ಯಯನ ಮಾಡುವ ವಿದ್ಯಾರ್ಥಿಗಳು ಸಹಾಯ ಮಾಡಬೇಕು.” +ಪ್ರೊಫೆಸರ್‌ ಎಲೇ ಅವರು ಚೆನ್ನಾಗಿ ಪರಿಶೀಲನೆ ಮಾಡಿ ನೀಡಿದ ಅಭಿಪ್ರಾಯದಿಂದ ಒಂದು ಹಿಡುವಳಿಯ ಗಾತ್ರವನ್ನು ನಿಗದಿಗೊಳಿಸಲು ಸಾಹಸ ಮಾಡುವವರಿಗೆ ತಮ್ಮಲ್ಲಿ ಸದ್ಭಾವನೆಯಿದ್ದಾಗ್ಯೂ ಅವರ ಪರಾರ್ಥಕ ಉದ್ದೇಶಗಳು ವಿನಾಶಕಾರಿಯಾಗುತ್ತವೆ ಎಂದು ಮನವರಿಕೆಯಾಗುತ್ತದೆ; +ಏಕೆಂದರೆ ರೈತನ ಹೊರತು ಇನ್ನಾರೂ ಹಿಡುವಳಿಯ ಗಾತ್ರವನ್ನು ನಿರ್ಣಯಿಸಲಾರರು ಎಂಬ ಸತ್ಯ ಸ್ಪಷ್ಟವಾಗುತ್ತದೆ. +ಹಿಡುವಳಿಗಳ ಗಾತ್ರ ಕಾಲ ಕಾಲಕ್ಕೆ ವ್ಯತ್ಯಾಸವಾಗುವುದೆಂಬುದನ್ನು ಅವರು ಅರಿತುಕೊಳ್ಳುವುದು ಒಳ್ಳೆಯದು. +ತನ್ನ ಸಾಧನಗಳಲ್ಲುಂಟಾದ ವ್ಯತ್ಯಾಸಗಳಿಗನುಗುಣವಾಗಿ ಅವನು ತನ್ನ ಜಮೀನಿನ ಗಾತ್ರವನ್ನು ಹೊಂದಿಸಿಕೊಳ್ಳಬೇಕಾಗುತ್ತದೆ. +ಯಾವುದೊ ಒಂದು ಸಂದರ್ಭದಲ್ಲಿ ಅವನು ಸಣ್ಣ ಹಿಡುವಳಿಯನ್ನು ಹೊಂದಬಯಸುತ್ತಾನೆ. +ಇನ್ನೊಂದು ಸಂದರ್ಭದಲ್ಲಿ ಅವನು ದೊಡ್ಡ ಹಿಡುವಳಿಯ ಪರವಾಗಿ ನಿರ್ಣಯಿಸುತ್ತಾನೆ. +ಆದ್ದರಿಂದ ಲಾಭದಾಯಕ ಉತ್ಪಾದನೆಯ ವಿಷಯದಲ್ಲಿ ವ್ಯತ್ಯಾಸಗಳೊಂದಿಗೆ ಬದಲಾಗುವ ಸೌಲಭ್ಯವಿರಬೇಕಾಗಿರುವುದರಿಂದ ಹಿಡುವಳಿಯ ಗಾತ್ರವನ್ನು ಕಾನೂನಿನನ್ವಯ ಗೊತ್ತುಪಡಿಸುವವನು ಬುದ್ಧಿವಂತ ಅರ್ಥಶಾಸ್ತ್ರಜ್ಮನೆನಿಸಿಕೊಳ್ಳಲಾರ. +ಹಿಡುವಳಿಯ ಗಾತ್ರವನ್ನು ಗೊತ್ತುಪಡಿಸುವುದೆಂದರೆ ಅವನು ಅದನ್ನು ದೊಡ್ಡ ಹಿಡುವಳಿಯನ್ನಾಗಿ ಮಾಡಬಹುದೇ ಹೊರತು ಲಾಭದಾಯಕ ಹಿಡುವಳಿಯನ್ನಲ್ಲ. +ಏಕೆಂದರೆ, ಲಾಭದಾಯಕ ಹಿಡುವಳಿ ಕೇವಲ ಭೂಮಿಯ ಗಾತ್ರದ ವಿಷಯವಲ್ಲ. +ಅದು ಒಂದು ಜಮೀನನ್ನು ಪರಿಣಾಮಕಾರಿಯಾಗುವಂತೆ ಉಳಲು ಅವಶ್ಯವಾದ ಸಾಧನಗಳ ಹೊಂದಾಣಿಕೆಯ ವಿಷಯವಾಗಿದೆ. +ಪರಿಹಾರಗಳ ವಿಮರ್ಶೆಹಿಡುವಳಿಗಳ ಗಾತ್ರದಲ್ಲಿ ಕುಗ್ಗಿವೆ . + ಕೃಷಿ ದಾಸ್ತಾನು ವೃದ್ಧಿಯಾಗಿದೆ ಎಂದು ತೋರಿಸಿಕೊಟ್ಟಾಗ ಮಾತ್ರ ನಮ್ಮ ಕೃಷಿಗೆ ಹಿಡಿದಿರುವ ರೋಗಗಳಿಗೆ ಅಸ್ತಿತ್ವದಲ್ಲಿರುವ ಹಿಡುವಳಿಗಳ ವಿಸ್ತರಣೆಯಿಂದ ಸಾಧ್ಯ ಎಂಬ ಪ್ರಸ್ತಾವನೆಯನ್ನು ಪರಿಗಣಿಸಬಹುದು. +ಜಮೀನುಗಳ ಗಾತ್ರದ ಬಗ್ಗೆ ಇದ್ದ ಸಂಗಾತಿಗಳು ಈಗಾಗಲೇ ದಾಖಲಾಗಿವೆ. +ಕೃಷಿ ದಾಸ್ತಾನಿನಲ್ಲೇನಾದರೂ ಹೆಚ್ಚಳವಾಗಿದೆಯೇ ಎಂಬುದನ್ನು ಮಾತ್ರ ಈಗ ನೋಡಬೇಕಾಗಿದೆ. +ಶ್ರೀಯುತ ಕೆ.ಎಲ್‌.ದತ್ತಾ ಅವರು ತಮ್ಮ ಸುದೀರ್ಫವಾದ ಸಮೀಕ್ಷೆಯಲ್ಲಿ ಹೇಳಿರುವಂತೆ. +“೧೭೮ ಕೃಷಿ ಭೂಮಿಯನ್ನು ದಕ್ಷತೆಯಿಂದ ಸಾಗುವಳಿ ಮಾಡದ ಕಾರಣ ಕೃಷಿ ಉತ್ಪನ್ನದಸರಬರಾಜು ಇಳಿಮುಖವಾಗಿದೆ ಎಂದು ಬಹುತೇಕ ಭಾರತೀಯರು ನಂಬಿರುವಂತಿದೆ. +ನೇಗಿಲು, ಎತ್ತುಗಳುಮತ್ತು ಕೂಲಿಯ ಅಭಾವ ಮತ್ತು ದುಬಾರಿ ಬೆಲೆಯಿಂದಾಗಿ ಭೂಮಿಯನ್ನು ಮುಂಚಿನಷ್ಟು ಕಾಳಜಿಯಿಂದಮತ್ತು ದಕ್ಷತೆಯಿಂದ ಸಾಗುವಳಿ ಮಾಡಲಾಗುತ್ತಿಲ್ಲ ಎಂದು ಹೇಳಲಾಗಿದೆ. +ಸಾಗುವಳಿಯ ಖರ್ಚಿನಲ್ಲಿಉಳಿತಾಯ ಮಾಡುವ ಉದ್ದೇಶದಿಂದ ಸಾಗುವಳಿದಾರರು ಮುಂಚೆ ಮಾಡಿದಷ್ಟು ಉಳುಮೆಯನ್ನುಈಗ ಮಾಡುತ್ತಿಲ್ಲ ಮತ್ತು ಗೊಬ್ಬರ ಕೊಡುವುದು, ಕಳೆ ತೆಗೆಯುವುದು ಮತ್ತು ನೀರಾವರಿಗಾಗಿ ಭಾವಿಗಳನ್ನುತೋಡುವುದು ಎಲ್ಲವನ್ನು ಈಗ ಕಡಿಮೆ ಮಾಡಲಾಗಿದೆ. +“೧೭೯, ನೇಗಿಲು ಎಳೆಯುವ ಎತ್ತುಗಳ ಅಥವಾ ದನಗಳ ಅಭಾವವನ್ನು ಕುರಿತು ಬರಗಾಲದ ದುಃಖದಾಯಕ ಪರಿಣಾಮಗಳಿಗೆ ಅಂಕಿ ಅಂಶಗಳೇ ಸಾಕ್ಷಿಯಾಗಿವೆ. +ಬರಗಾಲದ ಅನಿವಾರ್ಯ ಪರಿಣಾಮವೆಂದರೆ, ದನಗಳ ಸಂಖ್ಯೆಯಲ್ಲಿ ಉಂಟಾಗುವ ಕೊರತೆ, ಈ ಕೊರತೆಯನ್ನು ಪರಿಸ್ಥಿತಿ ಸುಧಾರಿಸಿದರೆ ಮುಂದಿನ ಕೆಲ ವರ್ಷಗಳಲ್ಲಿ ಸರಿಪಡಿಸಿಕೊಳ್ಳಬಹುದಾಗಿದೆ. +ಇತ್ತೀಚಿನ ವರ್ಷದ ತಖ್ತೆಯಲ್ಲಿ ನಮೂದಿಸಲಾದ ದನಗಳ ಸಂಖ್ಯೆ ಕೆಲ ವಲಯಗಳಲ್ಲಿ ಎಂದರೆ ಅಸಾಮ್‌, ಬುಂಂದೇಲ್‌ಖಂಡ,ಆಗ್ರಾ ಪ್ರಾಂತ್ಯಗಳು-ಉತ್ತರ ಮತ್ತು ಪಶ್ಚಿಮ, ಗುಜರಾತ್‌, ಡೆಕ್ಕನ್ನ, ಬೀರಾರ್‌, ಉತ್ತರ ಮದ್ರಾಸ್‌ ಮತ್ತು ಪಶ್ಚಿಮ ಮದ್ರಾಸ್‌ಗಳಲ್ಲಿ, ಮೊದಲಿದ್ದಕ್ಕಿಂತಲೂ (೧೮೯೩-೯೪) ಕಡಮೆಯಾಗಿದೆ. +ಈ ಅಂಕಿ ಸಂಖ್ಯೆಗಳನ್ನೇ ಹೆಚ್ಚಾಗಿ ಅವಲಂಬಿಸಲು ಸಾಧ್ಯವಿಲ್ಲದಿದ್ದಾಗ್ಯೂ, ಕೆಲವು ಪ್ರದೇಶಗಳಲ್ಲಿ ದನಗಳ ಅಭಾವವಿದೆ ಎಂದು ತೋರಿಸಲು ಉಪಯೋಗಿಸಬಹುದಾಗಿದೆ.” +ಬಂಡವಾಳದ ಸ್ಥಿತಿಯ ವಿಷಯವಾಗಿ ಮಿಸ್ಟರ್‌ ಎಲಿಯಟ್‌ ಜೇಮ್ಸ್‌ರವರು ಹೀಗೆ ಹೇಳುತ್ತಾರೆ: +“ರೈತರು ಮಾದರಿ ಜಮೀನುಗಳಲ್ಲಿ ಪ್ರದರ್ಶಿಸಲಾದ ಒಳ್ಳೆಯ ಸಾಗುವಳಿ ಪದ್ಧತಿಯ ಫಲಿತಾಂಶಗಳನ್ನು ಉತ್ಸುಕತೆಯಿಂದ ನೋಡುತ್ತಾರೆ. +ಶ್ರೇಷ್ಠ ದರ್ಜೆಯ ಸಾಗುವಳಿ ಮತ್ತು ಸರಿಯಾದ ಗೊಬ್ಬರದ ಬಳಕೆಯಿಂದ ಹೆಚ್ಚು ಬೆಳೆ ತೆಗೆಯಬಹುದೆಂದು ಅವರು ತಿಳಿದಿದ್ದರೂ ಅವರು ಮಾದರಿ ಜಮೀನಿನಲ್ಲಿ ಮಾಡಲಾದ ಪ್ರಯೋಗಗಳಿಂದ ಹೆಚ್ಚಿಗೆ ಪ್ರಯೋಜನ ಹೊಂಂದಲಾರರು. +ಬಂಡವಾಳ ಅವರ ಅತ್ಯಂತ ಹೆಚ್ಚಿನ ಅವಶ್ಯಕತೆಯಾಗಿದೆ.” +ತನ್ನ ಕೃಷಿ ಸಾಮಗ್ರಿ ಪ್ರಾಚೀನವಾಗಿದ್ದು ಅದರ ಕ್ಷಮತೆ ಕಡಮೆಯಾಗಿದೆ ಎಂದು ಮತ್ತು ಅದರ ಸ್ಥಾನದಲ್ಲಿ ಇನ್ನೂ ಒಳ್ಳೆಯ ಸಾಮಗ್ರಿಗಳನ್ನು ಉಪಯೋಗಿಸುವುದು ಸಾಧ್ಯವಿಲ್ಲವೆಂಬ ಅಂಶ ರೈತನಿಗೆಗೊತ್ತಿದೆ ಎಂದು ಇವೇ ಗ್ರಂಥಕರ್ತರು ಹೇಳುತ್ತಾರೆ: +“ಶ್ರೇಷ್ಠ ದರ್ಜೆಯ ದನಗಳು, ಶ್ರೇಷ್ಠ ದರ್ಜೆಯ ಸಲಕರಣೆಗಳು ಹಣದ ಅಭಾವದಿಂದ ಅವನಿಗೆ ಬಹು ದುಬಾರಿ ಎನಿಸುತ್ತವೆ.” +ಬರೋಡಾ ರಾಜ್ಯದ ಬಗ್ಗೆಯೂ ಕೂಡ ಇದೇ ರೀತಿಯ ಸಂಗತಿಗಳನ್ನು ಇನ್ನೊಂದು ಸಂದರ್ಭದಲ್ಲಿ ವಾಣಿಜ್ಯ ಮತ್ತು ಕೈಗಾರಿಕೆ ನಿರ್ದೇಶಕರಾಗಿದ್ದ ಶ್ರೀಯುತ ಎಫ್‌.ಬಿ.ನಾನಾವತಿಯವರೂ ಸಂಗ್ರಹಿಸಿದ್ದಾರೆ. +ದುರದೃಷ್ಟವೆಂದರೆ ಅವರು ತಾವೇ ಸದಸ್ಯರಾಗಿದ್ದು ರಾಜ್ಯದಲ್ಲಿ ಹಿಡುವಳಿಗಳ ಕ್ರೋಢೀಕರಣಕ್ಕಾಗಿ ನೇಮಿಸಲ್ಪಟ್ಟದ್ದ ಬರೋಡಾ ಸಮಿತಿಯ ತೀರ್ಮಾನಗಳ ಮೇಲೆ ಈ ಸತ್ಯ ಸಂಗತಿಗಳು ಪ್ರಭಾವ ಬೀರುವಂತೆ ಮಾಡಲಿಲ್ಲ. +ಬಹುಶಃ ಅವು ಒಂದು ಹಿಡುವಳಿಯ ಗಾತ್ರಕ್ಕೂ ಮತ್ತು ಉತ್ಪಾದನೆಯ ಸಾಧನೆಗಳಿಗೂ ಯಾವ ಸಂಬಂಧವೂ ಇಲ್ಲ ಎಂದು ತಿಳಿದುದೇ ಅದಕ್ಕೆ ಕಾರಣವಾಗಿರಬೇಕು. +ಅವರು ವ್ಯಥೆಪಡುತ್ತಾ ಹೀಗೆ ಹೇಳಿದ್ದಾರೆ:“ರೈತರು ಸಾಕಷ್ಟು ಜಾನುವಾರುಗಳನ್ನು ಹೊಂದಿಲ್ಲ. +ಇಂದು (೧೯೧೩) ಅವರಿಗೆ ಜಮೀನುಗಳಲ್ಲಿ ಬಳಸಲು ೮,೩೪,೯ಂ೧ ಜಾನುವಾರುಗಳಿವೆ. + ಎಂದರೆ ಪ್ರತಿ ೩೬ ಬೀಫಘಾ ಜಮೀನಿಗೆ ಒಂದು ಜೊತೆ ಜಾನುವಾರು ಇದ್ದಂತಾಯಿತು. +ಸರಾಸರಿ ಒಂದು ಜೊತೆ ಒಳ್ಳೆಯ ಎತ್ತುಗಳು ೨೫ ಬೀಘಾ ಜಮೀನನ್ನು ಸಾಗುವಳಿ ಮಾಡಬಲ್ಲವು. +ಆದರೆ ಈಗಿರುವ ತಳಿ ಬಹಳ ಕೃಶವಾಗಿದ್ದು ಒಂದು ಜೊತೆ ಹೆಚ್ಚೆಂದರೆ ೨ಂಬೀಘಾಗಳನ್ನು ಉಳಬಹುದು. +ಈಗಿನ ವಾಸ್ತವಿಕ ಸರಾಸರಿ ೩೬ ಬೀಘಾಗಳಷ್ಟಾಗುತ್ತದೆ. +ಇಂತಹ ಪರಿಸ್ಥಿತಿಯಲ್ಲಿ ಅವುಗಳಿಗೆ ಆಳವಾಗಿ ಉಳುಮೆ ಮಾಡಲಾಗಲಿಕ್ಕಿಲ್ಲ. +ಅದು ಮೇಲೆ ಮೇಲೆ ಕೆದರಿದಂತಾಗಬಹುದು. +ಚಿಕ್ಕ ಸಾಗುವಳಿದಾರರಿಗೆ ಎತ್ತುಗಳೇ ಇರಲಿಕ್ಕಿಲ್ಲ. +ಇದ್ದರೂ ಅವರ ಕಡೆಒಂದೇ ಎತ್ತು ಇರಬಹುದು. +ಅವರು ತಮ್ಮಂತಹ ಪರಿಸ್ಥಿತಿಯಲ್ಲಿರುವ ಸ್ನೇಹಿತರ ಸಹಾಯದಿಂದ ತಮ್ಮ ಭೂಮಿಯ ಸಾಗುವಳಿ ಮಾಡುತ್ತಿರಬಹುದು. +ಸಾಗುವಳಿಯ ಉಪಕರಣಗಳ ವಿಷಯದಲ್ಲಿ ಹೇಳುವುದಾದರೆ ಈ ರಾಜ್ಯ (ಬರೋಡಾ)ದಲ್ಲಿ ೧,೫೪,೩೬೪ ನೇಗಿಲುಗಳಿವೆ. + ಎಂದರೆ ಇಬ್ಬರು ಖಾತೆದಾರರಿಗೆ ಒಂದು ನೇಗಿಲು ಇದ್ದಂತಾಯಿತು. +ಸಾಗುವಳಿದಾರರ ಮತ್ತು ಗೇಣಿದಾರರ ಸಂಖ್ಯೆ ಮೂರು ಲಕ್ಷಕ್ಕಿಂತಲೂ ಹೆಚ್ಚಾಗಿದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಬೇಕು. +ಇವರಲ್ಲಿ ಪ್ರತಿಯೊಬ್ಬನಿಗೂ ಸಲಕರಣೆಗಳು ಬೇಕು. +ಆದ್ದರಿಂದ ಸರಾಸರಿಯು ಮೇಲೆ ಹೇಳಿದುದಕ್ಕಿಂತಲೂ ಕಡಿಮೆಯೇ ಇರಬೇಕು. +ಈ ಕೆಳಗಿನ ತಖ್ತೆಯಲ್ಲಿ ತೋರಿಸಿರುವಂತೆ ರಾಜ್ಯದಲ್ಲಿ ಕೃಷಿ ಉತ್ಪಾದನೆಯ ಸಲಕರಣೆಗಳು೧೮೯೮ ರಿಂದ ಈಚೆಗೆ ಸಾಕಷ್ಟು ಕಡಿಮೆಯಾಗಿವೆ : +ಪರಿಸ್ಥಿತಿ ಹೀಗಿರುವಾಗ ವಿಸ್ತರಿಸಲಾದ ಹಿಡುವಳಿಗಳಿಗೆ ಈಗ ಉಪಯೋಗದಲ್ಲಿರುವ ಸಲಕರಣೆಗಳು ಸಾಕಾಗುವುದಿಲ್ಲವೆಂದೂ ಅಲ್ಲದೇ ಚಿಕ್ಕದಾಗಿರುವ ಈಗಿನ ಹಿಡುವಳಿಗಳೇ, ಭೂಮಿಯನ್ನು ಬಿಟ್ಟರೆ ಲಭ್ಯವಿರುವ ಉತ್ಪಾದನೆಯ ಇತರ ಸಲಕರಣೆಗಳಿಗೆ ದೊಡ್ಡವಾಗಿವೆ ಎಂದು ಹೇಳುವುದು ಹೆಚ್ಚು ಸೂಕ್ತವಲ್ಲವೇ? +ನಮ್ಮ ಸಿದ್ಧಾಂತದ ಪ್ರಕಾರ ಅರ್ಥೈಸಲಾದ ಇಂತಹ ಸತ್ಯಸಂಗತಿಗಳ ಹಿನ್ನೆಲೆಯಲ್ಲಿ ಸದ್ಯದ ಹಿಡುವಳಿಗಳು ಅವು ಅತಿ ಚಿಕ್ಕವಾಗಿವೆ ಎಂಬ ಕಾರಣಕ್ಕಾಗಿ ಅಲ್ಲ. + ಆದರೆ ಅವು ಅತಿ ದೊಡ್ಡವಾದುವುಗಳಾಗಿವೆ ಎಂಬ ಕಾರಣಕ್ಕಾಗಿ ಅವು ಲಾಭದಾಯಕವಾಗಿಲ್ಲವೆಂಬ ತೀರ್ಮಾನಕ್ಕೆ ನಾವು ಬರಬೇಕಾಗುತ್ತದೆ. +ಸದ್ಯದ ಹಿಡುವಳಿಗಳನ್ನು ನಾವು ಮಾಡಿದ ಲಾಭದಾಯಕ ಪದದ ಅರ್ಥದಲ್ಲಿ ಲಾಭದಾಯಕವಾಗುವಂತೆ ಮಾಡಲು ಅವುಗಳ ಗಾತ್ರದಲ್ಲಿ ಕಡಿಮೆ ಮಾಡಬೇಕೆಂದು ವಾದಿಸೋಣವೇ ? +ಬೇಸರಗೊಳ್ಳದ ವಾಚಕರು ಇದೇ ಏಕೈಕ ತಾರ್ಕಿಕ ಮತ್ತು ಅನಿವಾರ್ಯ ತೀರ್ಮಾನವೆಂದು ತಿಳಿದುಕೊಳ್ಳಬಹುದು. +ಆದರೆ ಈ ತೀವರ್ನಾನ ದೇಶದಲ್ಲಿರುವ ಪ್ರಮುಖ ಅಭಿಪ್ರಾಯಕ್ಕೆ ವಿರುದ್ಧವಾಗಿದೆ. +ತೀರ್ಮಾನ ವಿರುದ್ಧವಾಗಿರುವುದೇನೋ ನಿಸ್ಸಂಶಯ, ಆದರೆ ಅದು ಯಾವ ರೀತಿಯಲ್ಲಿಯೂ ಅನಿವಾರ್ಯವಲ್ಲ. +ಏಕೆಂದರೆ, ನಮ್ಮ ಮೂಲಾಧಾರ ವಿಚಾರಗಳಿಂದ ನಾವು ಅತ್ಯಂತ ತರ್ಕಬದ್ಧವಾಗಿ ಮತ್ತು ಹೆಚ್ಚು ಸಮರ್ಥವಾಗಿ ಕೃಷಿ ಸಲಕರಣೆಗಳು ಮತ್ತು ಸಾಧನೆಗಳನ್ನು ಹೆಚ್ಚಿಸುವಂತೆ ಮತ್ತು ಇದರ ಕಾರಣದಿಂದಾಗಿ ಲಾಭದಾಯಕವೂ ಆಗುವಂತಹ ಹಿಡುವಳಿಗಳ ವಿಸ್ತರಣೆ ಅವಶ್ಯಕ ಎಂದು ವಾದ ಮಾಡಬಹುದು. +ತತ್ಪರಿಣಾಮವಾಗಿ, ಭಾರತದಲ್ಲಿ ಕೃಷಿ ಕೃಶವಾಗುತ್ತಿರುವುದಕ್ಕೆ ಪರಿಹಾರ ಹಿಡುವಳಿಗಳ ವಿಸ್ತರಣೆಯ ವಿಷಯದಲ್ಲೆಲ್ಲ ಆದರೆ ಅದರ ಪರಿಹಾರ ಹೆಚ್ಚಿನ ಬಂಡವಾಳ ಮತ್ತು ಮೂಲ ಸರಕುಗಳ ಹೆಚ್ಚಳದಲ್ಲಿದೆ. +ಉಳಿತಾಯದಿಂದ ಬಂಡವಾಳ ಉತ್ಪನ್ನವಾಗುತ್ತದೆ . +ಎಲ್ಲಿ ಹೆಚ್ಚುವರಿ ಇದೆಯೋ ಅಲ್ಲಿ ಉಳಿತಾಯ ಸಾಧ್ಯ ಎಂಬುದು ಎಲ್ಲರಿಗೂ ಗೊತ್ತಿರುವ ಸಂಪತ್ತಿನ ಉತ್ಪತ್ತಿಯ ಅರ್ಥಶಾಸ್ತ್ರದ ತತ್ವವಾಗಿದೆ. +ನಮ್ಮ ಜನತೆಯ ಮೂಲಾಧಾರವಾದ ಕೃಷಿಯಿಂದ ನಮಗೇನಾದರೂ ಹೆಚ್ಚುವರಿ ಉತ್ಪನ್ನವಿದೆಯೇ? +ಈ ಪ್ರಶ್ನೆಗೆ “ಇಲ್ಲ' ಎಂದೇ ಒಮ್ಮತದಿಂದ ಒಪ್ಪಿಕೊಳ್ಳುತ್ತೇವೆ. +ಹಿಡುವಳಿಗಳ ವಿಸ್ತರಣೆ ಮತ್ತು ಕ್ರೋಢೀಕರಣದ ಮೂಲಕ ಕೊರತೆ ಆರ್ಥಿಕ ಪರಿಸ್ಥಿತಿಯನ್ನು ಹೆಚ್ಚುವರಿ ವ್ಯವಸ್ಥೆಯನ್ನಾಗಿ ಪರಿವರ್ತಿಸುವ ಪರಿಹಾರವನ್ನು ಒಪ್ಪಿಕೊಳ್ಳುತ್ತೇವೆ. +ನಾವು ಒಪ್ಪದೇ ಇರುವ ಅಂಶವೆಂದರೆ ಈ ಉದ್ದೇಶವನ್ನು ಸಾಧಿಸಲು ಅನುಸರಿಸುವ ವಿಧಾನ. +ಏಕೆಂದರೆ, ಭಾರತದಲ್ಲಿ ಸಣ್ಣ ಹಿಡುವಳಿಗಳ ದೋಷ ಮೂಲಭೂತವಾಗಿಲ್ಲ. + ಆದರೆ ಅದು ತನ್ನ ಮೂಲ ದೋಷವೆನಿಸಿರುವ ಸಾಮಾಜಿಕ ಅರ್ಥವ್ಯವಸ್ಥೆಯಲ್ಲಿರುವ ಅವ್ಯವಸ್ಥೆ ಅಥವಾ ತಪ್ಪುಹೊಂದಾಣಿಕೆಯಿಂದ ಹುಟ್ಟಿದ್ದು ಎಂದು ನಾವು ನಂಬಿದ್ದೇವೆ. +ತತ್ಪರಿಣಾಮವಾಗಿ, ಶಾಶ್ವತ ಪರಿಹಾರ ನೀಡಬೇಕೆಂದಿದ್ದರೆ ನಾವು ಮೂಲ ರೋಗಕ್ಕೇ ಹೋಗಬೇಕು. +ಆದರೆ ಹಾಗೆ ಮಾಡುವ ಮೊದಲು ನಾವು ದೋಷಯುತ ಸಾಮಾಜಿಕ ಅರ್ಥವ್ಯವಸ್ಥೆಯಿಂದ ಹೇಗೆ ಬಳಲುತ್ತಿದ್ದೇವೆ ಎಂಬುದನ್ನು ತಿಳಿದುಕೊಳ್ಳಬೇಕಾಗಿದೆ. +ಭಾರತವು ಬಹುಮಟ್ಟಿಗೆ ಕೃಷಿ ಪ್ರಧಾನದೇಶವೆಂದು ಪದೇ ಪದೇ ಹೇಳಲಾಗುತ್ತಿದೆ. +ಆದರೆ ಸಾಗವಳಿಯಲ್ಲಿರುವ ಭೂಮಿ ವಿಶಾಲವಾಗಿದ್ದಾಗ್ಯೂ, ಅದರ ಜನಸಂಖ್ಯೆಯ ಪ್ರಮಾಣದಿಂದ ಬಹಳ ಕಡಿಮೆ ಭೂಮಿ ಸಾಗುವಳಿಯಾಗುತ್ತಿದೆಎಂಬ ಅಂಶ ಅನೇಕರಿಗೆ ಗೊತ್ತಿಲ್ಲ. +೧೮೯೫ ರ ಸಾಲಿಗೆ ಕೊಡಲಾದ ಮ್ಯೂಲ್‌ ಹಾಲ್‌ರ ಅಂಕಿ ಸಂಖ್ಯೆಗಳಿಂದ ಈ ಅಂಶ ಸ್ಪಷ್ಟವಾಗುತ್ತದೆ. +ಈ ಅಸಾಧಾರಣ ವಿದ್ಯಮಾನದ ಅರ್ಥವೇನು ? +ಅತ್ಯಂತ ಕನಿಷ್ಠ ಪ್ರಮಾಣದ ಹಿಡುವಳಿಯಲ್ಲಿ ಅತ್ಯಧಿಕ ಕೃಷಿಕರು ಸಾಗುವಳಿ ಮಾಡುತ್ತಿದ್ದಾರೆ ಎಂದರೆ, ಕೃಷಿಯಲ್ಲಿ ಅವಶ್ಯಕತೆಗಿಂತ ಹೆಚ್ಚು ತೊಡಗಿಸಿಕೊಂಡಿದ್ದಾರೆ ಮತ್ತು ಸೋಮಾರಿಯಾಗಿದ್ದಾರೆ ಎಂದರ್ಥ. +ಭಾರತೀಯ ಕೃಷಿಯಲ್ಲಿ ಸೋಮಾರಿ ಶ್ರಮಿಕರು ಎಷ್ಟಿದ್ದಾರೆ ಎಂದು ನಿಖರವಾಗಿ ಹೇಳಲಾಗದು. +ಈ ಬಗೆಯ ಸೋಮಾರಿ ಕೃಷಿಕರ ಇರುವನ್ನು ಮೊದಲು ಪತ್ತೆ ಹಚ್ಚಿದ ಸರ್‌ ಜೇಮ್ಸ್‌ ಕೇರ್ಡ್‌ ಅವರು ೧೮೮೪ ರಲ್ಲಿ ಮುಂದಿನಂತೆ ಅಭಿಪ್ರಾಯಪಟ್ಟಿದ್ದಾರೆ. +“ಇಂಗ್ಲೆಂಡಿನಲ್ಲಿ ಸಾಗುವಳಿ ಮಾಡಲಾದ ಪ್ರತಿ ಚದುರ ಮೈಲಿ ಭೂಮಿ ೫ಂ ಜನರಿಗೆ ಉದ್ಯೋಗವನ್ನು-೨೫ ಜನ ಪುರುಷರು, ಚಿಕ್ಕವರು ಮತ್ತು ವಯಸ್ಸಾದವರು, ಮತ್ತು ೨೫ ಸ್ತ್ರೀಯರು ಹಾಗೂ ಹುಡುಗರು - ಈ ಪ್ರಮಾಣದಲ್ಲಿ ನೀಡುತ್ತದೆ. +ಭಾರತದಲ್ಲಿ ಸಾಗುವಳಿಯಾದ ಭೂಮಿಯಲ್ಲಿ ಪ್ರತಿ ಚದುರ ಮೈಲಿಯಲ್ಲಿ ಇದರ ನಾಲ್ಕರಷ್ಟು ಅಥವಾ ೨ಂಂ ಜನರಿಗೆ ಅನುವು ಮಾಡಿಕೊಟ್ಟರೆ ಅದು ಜನಸಂಖ್ಯೆಯ ಒಂದು-ಮೂರಾಂಶವನ್ನು ಮಾತ್ರ ಉಪಯೋಗಿಸಿಕೊಳ್ಳಬಹುದು.” +೧೮೮೧ ರಲ್ಲಿ ೨೫೪ ಮಿಲಿಯ (ದಶಲಕ್ಷ) ಒಟ್ಟು ಜನಸಂಖ್ಯೆಯ ಎರಡು-ಮೂರಾಂಶ ಜನರು ಕೃಷಿಕರೆಂದು ದಾಖಲಾಗಿತ್ತು. +ಅಂದಾಜಿನಂತೆ ಒಂದು ಮೂರಾಂಶ, ಜನರನ್ನು ತೆಗೆದುಕೊಂಡರೂ ಅದೇ ಪ್ರಮಾಣದ ಜನಸಂಖ್ಯೆ ಯಾವ ಉತ್ಪಾದಕ ಕೆಲಸವನ್ನೂ ಮಾಡದೆ ನಿಷ್ಕ್ರಿಯ ಅಥವಾ ಸೋಮಾರಿಯಾಗಿತ್ತೆಂದು ಧಾರಾಳವಾಗಿ ಹೇಳಬಹುದು. +ಭಾರತದಲ್ಲಿ ಹೆಚ್ಚುತ್ತಿರುವ ಗ್ರಾಮೀಣಕರಣದಿಂದ ಮತ್ತು ಸಾಗುವಳಿಯಲ್ಲಿರುವ ಸತತವಾಗಿ ಕಡಿಮೆಯಾಗತ್ತಿರುವ ಭೂಮಿಯ ಪ್ರಮಾಣದಿಂದಾಗಿ, ನಿಷ್ಠಿಯ ಕೆಲಸಗಾರರ ಸಂಖ್ಯೆ ಬಹಳ ಹೆಚ್ಚಾಗಿರಬಹುದು. +ಈ ಸೋಮಾರಿ ಕೆಲಸಗಾರರಿಂದ ಉಂಟಾಗುವ ಆರ್ಥಿಕ ಪರಿಣಾಮಗಳು ಎರಡು ವಿಧವಾಗಿವೆ. +ಮೊದಲನೆಯದಾಗಿ, ಇದರಿಂದ ನಮ್ಮ ಕೃಷಿಕರು ಭೂಮಿಯ ಮೇಲೆ ಹಾಕುತ್ತಿರುವ ಒತ್ತಡದ ಪ್ರಮಾಣವನ್ನು ಹೆಚ್ಚಿಸುತ್ತದೆ. +ಈ ಒತ್ತಡ ಎಷ್ಟು ಹೆಚ್ಚಿದೆಯೆಂದು ಅಂಶ ಈ ಕೆಳಗೆ ಕಾಣಿಸಿದ ಪರಿಣಾತ್ಮಕ ತಖ್ತೆಯಿಂದ ತಿಳಿದುಬರುತ್ತದೆ : +ಇದರ ಪರಿಣಾಮ ಸ್ಪಷ್ಟವೇ ಇದೆ. +ಬೇರೆಯವರು ಏನೇ ಹೇಳಿರಲಿ ಈ ಆಗಾಧವಾದ ಒತ್ತಡವೇ ಜಮೀನಿನ ಉಪವಿಭಜನೆಗೆ ಪ್ರಮುಖ ಕಾರಣವಾಗಿದೆ. +ಜಮೀನಿನ ಮೇಲೆ ಇರುವ ಒತ್ತಡದ ಪರಿಣಾಮವನ್ನು ಅರಿತುಕೊಳ್ಳದೇ ಇರುವುದರಿಂದ ಉತ್ತರಾಧಿಕಾರದ ಕಾನೂನು ಒಂದು ದೊಡ್ಡ ಆತಂಕವಾಗಿದೆ. +ಉತ್ತರಾಧಿಕಾರ ಅಥವಾವಾರಸು ಕಾನೂನು ಭೂಮಿಯ ವಿಭಜನೆಗೆ ಕಾರಣವಾಗಿದೆ ಎಂದು ಹೇಳುವುದು ವಸ್ತು ಸ್ಥಿತಿಯನ್ನು ತಲೆಕೆಳಗು ಮಾಡಿದಂತೆ. +ಕೇವಲ ಕಾನೂನಿನ ಅಸ್ತಿತ್ವವನ್ನು ಒಂದು ಸಂಕಟವೆಂದು ದೂರಲಾಗದು. +ಸಂಕಟ ಅಥವಾ ಬೇನೆ ಅದರ ಉಪಯೋಗದಿಂದ ಉಂಟಾಗುತ್ತದೆ. +ಅದು ಹಾನಿಕರವಾಗಿದ್ದರೂಅದರ ಉಪಯೋಗವನ್ನು ಏಕೆ ಮಾಡುತ್ತೇವೆ ? + ಏಕೆಂದರೆ ಅದು ಲಾಭದಾಯಕವಾಗಿದೆ. +ಇದರಲ್ಲಿಸೋಜಿಗದ ಸಂಗತಿ ಏನೂ ಇಲ್ಲ. +ವ್ಯವಸಾಯ ಏಕೈಕ ಉದ್ಯೋಗವಾಗಿರುವಾಗ, ಏನೂ ಇಲ್ಲದಿರುವುದಕ್ಕಿಂತ ಒಂದು ತುಂಡು ಭೂಮಿಯನ್ನಾದರೂ ಹೊಂದುವುದು ಲೇಸು. +ಆದ್ದರಿಂದ ತುಂಡುಭೂಮಿಗೆ ಪ್ರಾಮುಖ್ಯತೆ ನೀಡುವಂತಹ ಪರಿಸ್ಥಿತಿಯಲ್ಲಿ ಲೋಪ ಅಡಗಿದೆ. +ಈ ಪ್ರಾಮುಖ್ಯ ನೀಡಲು ಹೆಚ್ಚು ಜನ ತಮ್ಮ ಜೀವನ ಸಾಗಿಸಲು ಸಂಪೂರ್ಣವಾಗಿ ಕೃಷಿಯನ್ನವಲಂಬಿಸಿರುವುದೇ ಕಾರಣ. +ಕೃಷಿಯನ್ನು ಹೊರತುಪಡಿಸಿ ಅವಲಂಬನೆಗೆ ಇನ್ನಾವ ಮಾರ್ಗವನ್ನೂ ಹೊಂದಿರದ ಜನ ಎಷ್ಟೇ ಚಿಕ್ಕದಾಗಿದ್ದರೂ ಒಂದು ತುಂಡುಭೂಮಿಯನ್ನು ಪಡೆದುಕೊಳ್ಳಲು ಸರ್ವ ಪ್ರಯತ್ನ ಮಾಡುತ್ತಾರೆ. +ಆದ್ದರಿಂದ ಉತ್ತರಾಧಿಕಾರ ಕಾನೂನು ಆಪತ್ತಿಗೆ ಕಾರಣವಾಗಿರದೆ ಅದನ್ನು ಉಪಯೋಗಿಸುವಂತೆ ಮಾಡುವ ಭೂಮಿಯ ಮೇಲಣ ಒತ್ತಡವೇ ಕಾರಣವಾಗಿದೆ. +ಜನರು ಭೂಮಿಯ ಸಣ್ಣ ತುಂಡುಗಳಲ್ಲಿ ಸಾಗುವಳಿಯನ್ನು,ಪೊಫೆಸರ್‌ ಜೆವೊನ್ಸ್‌ರವರು ತಿಳಿದಿರುವಂತೆ, ತಮ್ಮ ಜೀವನ ಮಟ್ಟ ಕಡಿಮೆಯದಾಗಿದೆ ಎಂಬ ಕಾರಣಕ್ಕಾಗಿ ಮಾಡುತ್ತಿಲ್ಲ.” +ಆದರೆ ಸದ್ಯದ ಪರಿಸ್ಥಿತಿಯಲ್ಲಿ ಹಾಗೆ ಮಾಡುವುದೊಂದೇ ಲಾಭದಾಯಕ ಎಂಬ ಕಾರಣದಿಂದ ಅವರಿಗೆ ಇತರ ಯಾವುದೇ ಲಾಭದಾಯಕ ಮಾರ್ಗವಿದ್ದಲ್ಲಿ ಅವರು ಭೂಮಿಯ ಸಣ್ಣ ತುಂಡುಗಳಿಗೆ ಎಂದಿಗೂ ಪ್ರಾಶಸ್ತ್ಯ ಕೊಡುತ್ತಿರಲಿಲ್ಲ. +ಆದ್ದರಿಂದ ಚಿಕ್ಕ ಜಮೀನುಗಳ ಈ ವ್ಯಾಪಕ ಪರಿಸ್ಥಿತಿಗೆ ಅಥವಾ ಈ ಕುಬ್ಬ ಸಂಸ್ಕೃತಿಗೆ ಭೂಮಿಯ ಮೇಲಿರುವ ಅಗಾಧ ಒತ್ತಡವೇ ಕಾರಣ. +ನಮ್ಮ ರೈತರು ಎಷ್ಟೇ ಚಿಕ್ಕ ಭೂಮಿಯಾದರೂ ಅದರಲ್ಲಿ ತಮ್ಮನ್ನು ಉತ್ಪಾದನಕಾರಕ ರೀತಿಯಲ್ಲಿ ತೊಡಗಿಸಿಕೊಳ್ಳಲು ಹೋರಾಟ ನಡೆಸಿರುವರಾದರೂ,ಸರ್‌ ಜೇಮ್ಸ್‌ ಶೇರ್ಕ್‌ಯವರು ತೀರ್ಮಾನಿಸಿರುವಂತೆ ಅವರಲ್ಲಿ ಅನೇಕರು ನಿಷ್ಕ್ರಿಯರಾಗಿಯೇ ಉಳಿದಿರುವರೆಂಬುದು ನಿಜ. +ನಿಷ್ಕ್ರಿಯ ಬಂಡವಾಳದಲ್ಲಿ ಒಂದು ಪ್ರಮುಖ ಅಂಶದಲ್ಲಿ ವ್ಯತ್ಯಾಸವಿದೆ. +ಬಂಡವಾಳ ಅಸ್ತಿತ್ವದಲ್ಲಿರುತ್ತದೆ,ಆದರೆ ಜೀತ ಜೀವಿಸುತ್ತದೆ. +ಎಂದರೆ,ನಿಷ್ಕ್ರಿಯವಾದ ಬಂಡವಾಳ ಗಳಿಸುವುದಿಲ್ಲ. +ಅಂತೆಯೇ ಅದು ತನ್ನ ಉಳಿವಿಗೆ ಅನುಭೋಗಿಸುವುದೂ ಇಲ್ಲ. +ಆದರೆ ಜೀತದಾರ ಜೀವಿಸುವುದಕ್ಕಾಗಿ ದುಡಿಯದಿದ್ದರೆ ಅನುಭೋಗಿಸಲಾರ. +ಆದ್ದರಿಂದ ನಿಷ್ಠ್ಕಿಯತ ಜೀತ ಒಂದು ವಿಪತ್ತು. +ಅದು ಉತ್ಪತ್ತಿಯಿಂದ ಜೀವಿಸಲಾಗದಿದ್ದಲ್ಲಿ ಕೊಳ್ಳೆಹೊಡೆದು ಅಥವಾ ಲೂಟಿಮಾಡಿ ಬದುಕಬೇಕಾಗುತ್ತದೆ. +ಹೀಗಾಗಿ ನಿಷ್ಕ್ರಿಯವಾದ ಜೀತ ಭಾರತದ ಜೀವಾಳವನ್ನು ಒಂದು ಹುಣ್ಣಾಗಿ ಕೊರೆಯುತ್ತಿದೆ. +ಅದು ನಮ್ಮ ರಾಷ್ಟ್ರೀಯ ಲಾಭಾಂಶಕ್ಕೆ ತನ್ನ ಪಾಲು ಸಲ್ಲಿಸುವ ಬದಲಾಗಿ ಅದನ್ನೇ ತಿಂದು ಬದುಕುತ್ತದೆ. +ಆದುದರಿಂದ,ನಿಷ್ಕ್ರಿಯ ಶ್ರಮದ ಮತ್ತೊಂದು ದುಷ್ಪರಿಣಾಮವೆಂದರೆ ರಾಷ್ಟೀಯ ಲಾಭಾಂಶದಲ್ಲಿ (ಉತ್ಪಾದಕತೆ)ಉಂಟಾಗುವ ಇಳಿತ. +ಒಬ್ಬ ವ್ಯಕ್ತಿಯ ಆದಾಯದಂತೆ ಒಂದು ಸಮಾಜದ ಆದಾಯವು (೧) ಪ್ರಯತ್ನದಿಂದ,ಮತ್ತು (೨)ಇರುವ ಸಂಪನ್ಮೂಲದ ಬಳಕೆಯಿಂದ ಉಂಟಾಗುತ್ತದೆ. +ಒಬ್ಬ ವ್ಯಕ್ತಿಯ ಅಥವಾ ಸಮಾಜದ ಒಟ್ಟು ಆದಾಯ ಉಪಯೋಗದಲ್ಲಿರುವ ಜೀತ ಅಥವಾ ಈಗಾಗಲೇ ಪಡೆದುಕೊಂಡಿರುವ ಉತ್ಪಾದನಕಾರಕ ಸಂಪನ್ಮೂಲಗಳಿಂದ ದೊರೆಯುವುದೆಂದು ಧಾರಾಳವಾಗಿ ಹೇಳಬಹುದು. +ಮುಂಚೆ ಹೇಳಲಾದ,ಪ್ರಸ್ತಾವನೆ ಪೊಫೆಸರ್‌ ಜೆವೊನ್ಸ್‌ ಅವರು ಭಾರತದ ಕೃಷಿ ಕನಿಷ್ಠ ಜೀವನ ಮಟ್ಟದಿಂದಾಗಿ ಕೃಶವಾಗುತ್ತಿದೆ ಎಂಬ ಭಾವನೆಯನ್ನು ಓದುಗರ ಮನಸ್ಸಿನ ಮೇಲೆ ಉಂಂಟುಮಾಡಿದ್ದಾರೆ. +ಉಚ್ಛಜೀವನ ಮಟ್ಟದಿಂದ ದೊಡ್ಡ ಹಿಡುವಳಿಗಳು ಅವಶ್ಯವೆನಿಸುವುವು ಮತ್ತು ಅಂತಹವರು ಸಣ್ಣ ಹಿಡುವಳಿಗಳಲ್ಲಿರುವ ಬದಲು ವಲಸೆ ಹೋಗಬಯಸುತ್ತಾರೆ. +ಹಿಡುವಳಿ ಮತ್ತು ಜೀವನ ಮಟ್ಟದಲ್ಲಿ ಸಂಬಂಧವಿದೆ ಎಂಬ ಅವರ ವಾದ ಕಡಿಮೆ ವಿಚಾರವುಳ್ಳ ಓದುಗರಲ್ಲಿ ತಪ್ಪು ಭಾವನೆ ಮೂಡಿಸಬಹುದಾಗಿರುವುದರಿಂದ,ಸಂಕ್ಷಿಪ್ತ ವಿವರಣೆಯ ಅಗತ್ಯವಿದೆ. +ಜೀವನ ಮಟ್ಟ ಎಂದರೆ ರೂಢಿ ನಿಯಮಿತವಾದ ಉಪಭೋಗ ಅಥವಾ ಬಳಕೆ. +ಅದರ ಬಳಕೆಯ ಒಂದು ಮಟ್ಟದ ಆಳವನ್ನು ಯಾವುದು ನಿರ್ಣಯಿಸುತ್ತದೆ? +ಉತ್ಪಾದನೆಯ ಮಟ್ಟದಿಂದ ಎಂಬುದು ನಿಸ್ಸಂಶಯ. +ಜೀವನ ಮಟ್ಟದ ಏರಿಕೆಯಿಂದ ಹೆಚ್ಚಿನ ಉತ್ಪಾದನೆಗೆ ಪ್ರೇರಣೆಯುಂಟಾಗುವುದೆಂಬ ಹೇಳಿಕೆಯ ಸತ್ಯವನ್ನು ಒಪ್ಪಿಕೊಳ್ಳೋಣ. +ಆದರೆ ಕೃತಿಗಿಂತ ಬಯಕೆಯನ್ನೇ ನಿರೀಕ್ಷಿಸುವುದು ಮೂರ್ಖತನ. +“ಪ್ರವಾಸ ಅಥವಾ ಶಿಕ್ಷಣದಿಂದ ಉಂಟಾದ ಪ್ರತ್ಯಕ್ಷ ಉತ್ಪನ್ನ ಮಾತ್ರ ಮಟ್ಟದಲ್ಲಿ ಏರಿಕೆಗೊಳಿಸಬಹುದೇ ಹೊರತು ಬಯಕೆ ಅಲ್ಲ. +ಹೆಚ್ಚುವರಿ ಉತ್ಪಾದನೆಯ ಅವಕಾಶ ಉಚ್ಛ ಜೀವನಮಟ್ಟಕ್ಕೆ ದಾರಿಯಾಗುವುದರಿಂದ ಸಣ್ಣ ಹಿಡುವಳಿಗಳನ್ನು ಬಯಸಲಾಗುವುದಿಲ್ಲ ಎಂದು ಪ್ರೊ.ಜೆವೊನ್ಸ್‌ರವರ ಅರ್ಥವಾದರೆ ನಾವು ಅವರೊಡನೆ ಸಮೃತಿಸೋಣ. +ಅರು ಜೀವನ ಮಟ್ಟದ ಪ್ರಶ್ನೆಯನ್ನು ಕೈಬಿಟ್ಟು ಹೆಚ್ಚಿನ ಉತ್ಪಾದನೆಗೆ ಒತ್ತುಕೊಟ್ಟರೆ ಅವರ ವಾದ ಹೆಚ್ಚು ಅರ್ಥಪೂರ್ಣವಾಗುತ್ತಿತ್ತು. +ಆದರೆ ಅದನ್ನು ತಲೆ ಕೆಳಗೆ ಮಾಡುವುದು ಸರಿಯಲ್ಲ. +ಏಕೆಂದರೆ ಆಗ ಉತ್ಪಾದನೆಗೆ ಇಲ್ಲವೆ ಲೂಟಿಗೆ ಕಾರಣವಾಗುವುದು. +ಉತ್ಪಾದನೆಯ ಹೆಚ್ಚಳದ ಬಗ್ಗೆ ಹೇಳಿದ ಜೀವನ ಮಟ್ಟದ ಏರಿಕೆಯ ಬಗ್ಗೆ ಮಾತನಾಡುವುದು ತುಂಟತನವಲ್ಲದಿದ್ದರೂ,ಶ್ರದ್ಧಾಪೂರ್ವಕ ಬಯಕೆ ಎನಿಸುವುದು. +ಸಮಾಜ ಇಂದು ತನಗೆ ಬೇಕಾದದ್ದನ್ನು ಇಂದೇ ಪಡೆದುಕೊಳ್ಳಬೇಕು ಅಥವಾ ತನ್ನ ಹಿಂದಿನ ಉತ್ಪಾದನೆಯಿಂದ ತೆಗೆದುಕೊಳ್ಳಬೇಕು. +ಈ ಆಧಾರದಂತೆ ನಿರ್ಣಯಿಸಿದರೆ ನಮ್ಮ ಸಮಾಜದ ಬಹುಭಾಗ ಸದ್ಯದಲ್ಲಿ ಅತಿ ಕಡಿಮೆ ಪ್ರಯತ್ನ ಮಾಡುತ್ತಿದೆ;ಅಲ್ಲದೆ ಅದು ತನ್ನ ಜೀವಿತಕ್ಕಾಗಿ ಪಡೆದುಕೊಳ್ಳವಂತಹ ಯಾವುದೇ ಗಣನೀಯ ಸಂಪನ್ಮೂಲಗಳನ್ನು ಹೊಂದಿಲ್ಲ. +ಆದ್ದರಿಂದ ನಮ್ಮ ಅರ್ಥ ವ್ಯವಸ್ಥೆಯಲ್ಲಿ ಬಂಡವಾಳದ ಅಭಾವ ಎದ್ದು ಕಾಣುತ್ತಿದೆ ಎಂಬುದರಲ್ಲಿ ಸಂಶಯವಿಲ್ಲ. +ಬಂಡವಾಳವೆಂದರೆ ಘನೀಕೃತವಾದ ಹೆಚ್ಚುವರಿ;ಉತ್ಪನ್ನ ಮತ್ತು ಇದು ಹೆಚ್ಚುವರಿ ಪ್ರಯತ್ನದ ಫಲವಾಗಿದೆ. +ಎಲ್ಲಿ ಪ್ರಯತ್ನವಿರುವುದಿಲ್ಲವೋ ಅಲ್ಲಿ ಗಳಿಕೆಯಿಲ್ಲ,ಹೆಚ್ಚುವರಿಯಿಲ್ಲ,ಮತ್ತು ಬಂಡವಾಳವೂ ಇರುವುದಿಲ್ಲ. +ಇದುವರೆಗೆ ನಮ್ಮ ದೋಷಯುಕ್ತ ಸಾಮಾಜಿಕ ಅರ್ಥ ವ್ಯವಸ್ಥೆ ನಮ್ಮ ಕೃಷಿಯ ಕರ್ಷಣಕ್ಕೆ ಹೇಗೆ ಹೊಣೆಯಾಗಿದೆಯೆಂದು ತಿಳಿಸಿದ್ದೇವೆ. +ಕೃಷಿಯ ಮೇಲೆ ನಮ್ಮ ಸಂಪೂರ್ಣ ಅವಲಂಬನೆಗೆ ಹೇಗೆ ಸಣ್ಣ ಮತ್ತು ಚದುರಿದ ಹಿಡುವಳಿಗೆ ಕಾರಣವಾಗಿದೆ ಎಂಬುದನ್ನು ಸಾಬೀತುಪಡಿಸಿದ್ದೇವೆ. +ನಮ್ಮ ಕೃಷಿಯನ್ನು ಉತ್ಪಾದನಕಾರಿಯಾಗಿ ಬಳಸಲಾಗದ ನಮ್ಮ ಜನಸಂಖ್ಯೆಯ ಹೆಚ್ಚಿನ ಭಾಗ ಹೇಗೆ ನಿಷ್ಕ್ರಿಯವಾಗಿದೆ ಎಂಬುದನ್ನು ಸ್ಪಷ್ಟಪಡಿಸಿದ್ದೇವೆ. +ನಿಷ್ಕ್ರಿಯ ಜೀತವಿರುವುದರಿಂದ ಹೇಗೆ ನಮ್ಮ ದೇಶವನ್ನು ಬಂಡವಾಳ ರಹಿತ ದೇಶವನ್ನಾಗಿ ಮಾಡಿದೆ ಎಂಬುದನ್ನೂ ತೋರಿಸಿಕೊಟ್ಟದ್ದೇವೆ. +ಈ ನಮ್ಮ ಸಮಸ್ಯೆಯ ವಿಶ್ಲೇಷಣೆಯಿಂದ ಪ್ರಸ್ತುತ ಸಾಮಾಜಿಕ ಅರ್ಥವ್ಯವಸ್ಥೆಯಲ್ಲಿ ಕ್ರೋಢೀಕರಣ ಮತ್ತು ವಿಸ್ತರಣೆಯ ಪರಿಹಾರಗಳು ಹೇಗೆ ವಿಫಲಗೊಳ್ಳಲಿವೆ ಎಂಬುದನ್ನು ತಿಳಿದುಕೊಳ್ಳುವುದು ಸುಲಭ. +ಸಣ್ಣ ಹಿಡುವಳಿಗೇ ಮೂಲಭೂತ ಅನಿಷ್ಟಗಳೆಂದು ಭಾವಿಸುವವರು ಸಹಜವಾಗಿಯೇ ಅವುಗಳ ವಿಸ್ತರಣೆಯನ್ನು ಪ್ರತಿಪಾದಿಸುತ್ತಾರೆ. +ಇದು ದೋಷಯುಕ್ತ ರಾಜಕೀಯ ಅರ್ಥ ವ್ಯವಸ್ಥೆಯಾಗಿದ್ದು,ಥಾಮಸ್‌ ಅರ್ನಾಲ್ಡ್‌ ಒಮ್ಮೆ ಹೇಳಿದಂತೆ “ದೋಷಯುಕ್ತ ರಾಜಕೀಯ-ಅರ್ಥ ವ್ಯವಸ್ಥೆ ಅಪರಾಧದ ಜನಕ”. +ಹಿಡುವಳಿಯ ವಿಸ್ತರಣೆಯಿಂದಲೇ ಅದು ಲಾಭದಾಯಕವಾಗುವುದಿಲ್ಲವೆಂಬುದೂ ಸ್ಪಷ್ಟ. +ಅಲ್ಲದೆ ಈ ಕೃತಕ ವಿಸ್ತರಣೆಯ ಯೋಜನೆ ಅನೇಕ ಸಾಮಾಜಿಕ ಕೆಡಕುಗಳಿಂದ ತುಂಬಿದೆ. +ಇದು ಭವಿಷ್ಯದಲ್ಲಿ ಸೃಷ್ಟಿಸಲಿರುವ ಭೂರಹಿತ ಮತ್ತು ಉಚ್ಛಾಟನೆಗೊಂಡ ಜನರ ಸೈನ್ಯ ವ್ಯಕ್ತಿಯ ದೃಷ್ಟಿಯಲ್ಲಿ ಹರ್ಷದಾಯಕವೂ ಆಗಿಲ್ಲ ಇಲ್ಲವೇ ರಾಷ್ಟ್ರದ ದೃಷ್ಟಿಯಿಂದ ಸಮ್ಮತವೂ ಆಗಿಲ್ಲ. +ಸದ್ಯದ ಹಿಡುವಳಿಗಳನ್ನು ವಿಸ್ತಾರಗೊಳಿಸಿ ಅವು ಲಾಭದಾಯಕವಾಗುವಂತೆ ಮಾಡಲು ಸಾಕಷ್ಟು ಬಂಡವಾಳ ಮತ್ತು ಮೂಲ ಸರಕುಗಳನ್ನು ಒದಗಿಸಿದಾಗ್ಯೂ ನಾವು ಸರಿಯಾದ ಪರಿಹಾರವನ್ನು ಒದಗಿಸಿದಂತೆ ಆಗುವುದಿಲ್ಲ. +ಮತ್ತು ನಮ್ಮ ಸದ್ಯದ ನಿಷ್ಕ್ರಿಯ ಶ್ರಮಿಕ ಸಮೂಹವನ್ನು ವೃದ್ಧಿಸುವ ಮೂಲಕ ಅವುಗಳ ಕೆಡುಕುಗಳನ್ನು ಹೆಚ್ಚಿಸಲು ಸಹಕಾರಿಯಾಗುತ್ತೇವೆ. +ಏಕೆಂದರೆ,ಬಂಡವಾಳಶಾಹಿ ಕೃಷಿಗೆ ನಮ್ಮ ಇಂದಿನ ಸಾಗುವಳಿ ಪದ್ಧತಿಯಲ್ಲಿ ಬೇಕಾಗುವಷ್ಟು ಜನ ಬೇಕಾಗುವುದಿಲ್ಲ. +ವಿಸ್ತರಣೆ ಸಾಧ್ಯವಿಲ್ಲದೇ ಹೋದಾಗ ನಾವು ಕ್ರೋಢೀಕರಣ ಮಾಡಬಹುದೇ? +ಪ್ರಸ್ತುತ ಸಾಮಾಜಿಕ ಅರ್ಥ ವ್ಯವಸ್ಥೆಯಡಿಯಲ್ಲಿ ಕೋಢೀಕರಣವೂ ಸಾಧ್ಯವಿಲ್ಲ ಎಂದು ನಾವು ತೋರಿಸಬಹುದು. +ಕೋಢೀಕೃತ ಹಿಡುವಳಿಗಳ ಉಪ-ವಿಭಜನೆ ಮತ್ತು ಛಿದ್ರಗೊಳಿಸುವಿಕೆಯನ್ನು ತಪ್ಪಿಸುವುದರ ಮೂಲಕ ನಿಜವಾದ ಪರಿಹಾರ ದೊರೆಯಲಾರದು. +ಅದಕ್ಕೆ ಬದಲಾಗಿ ಇದು ಒಂದು ಕಾನೂನಾತ್ಮಕ ಕಣ್ಣೊರೆಸುವಿಕೆ ಯತಂತ್ರವೆನಿಸುವುದು. +ಪ್ರತ್ಯಕ್ಷ ಆಚರಣೆಯಲ್ಲಿ ಏಕವ್ಯಕ್ತಿ ಉತ್ತರಾಧಿಕಾರದ ನಿಯಮದ ಅರ್ಥವನ್ನು ನಾವು ಮೊದಲೇ ಅರಿತುಕೊಂಡರೆ ಇದು ಸುಲಭವಾಗಿ ಅರ್ಥವಾಗುತ್ತದೆ. +ಇದಕ್ಕಾಗಿ ನಾವು ಸರ್ವೇದಾಖಲೆಗಳಲ್ಲಿ ಅದರಿಂದಾಗುವ ಬದಲಾವಣೆಗಳನ್ನು ಗಮನಿಸಬೇಕಾಗುತ್ತದೆ. +ಮುಂಬಯಿಯ ಭೂಕಂದಾಯ ಸಂಹಿತೆಯ ಅಧ್ಯಾಯ-೧ ವಿಭಾಗ ೩,ಖಂಡ (೫)ರ ಪ್ರಕಾರ :“ಸರ್ವೇ ನಂಬರು” ಎಂದರೆ ಒಂದು ಭೂಮಿಯ ಭಾಗ,ಅದು ತರುವ ಗ್ರಾಮ,ಪಟ್ಟಣ ಅಥವಾ ನಗರದ ಸರ್ವೇ ದಾಖಲೆಗಳಲ್ಲಿ ಅದರ ವಿಸ್ತೀರ್ಣ ಮತ್ತು ಇತರ ವಿವರಗಳನ್ನು ಪ್ರತ್ಯೇಕವಾಗಿ ಒಂದು ಸೂಚಕ ಸಂಖ್ಯೆಯಡಿಯಲ್ಲಿ ದಾಖಲು ಮಾಡಲಾಗಿರುತ್ತದೆ,ಮತ್ತು ಅದರಲ್ಲಿ ಸರ್ವೇ ನಂಬರಿನ ಮಾನ್ಯ ಮಾಡಲ್ಪಟ್ಟ ಹಿಸ್ಸೆ ಅಥವಾ ಪಾಲೂ ಸೇರಿರುತ್ತದೆ. +ಮತ್ತು ಖಂಡ (೭)ರ ಪ್ರಕಾರ :“ಒಂದು ಸರ್ವೇ ನಂಬರಿನ ಮಾನ್ಯ ಮಾಡಲಾದ ಹಿಸ್ಸೆ ಅಥವಾ ಪಾಲು” ಎಂದರೆ ಪ್ರತ್ಯೇಕವಾಗಿ ಕಂದಾಯ ವಿಧಿಸಲಾದ ಮತ್ತು ದಾಖಲೆಯಾದ ಸರ್ವೆ ನಂಬರಿನ ಉಪ-ವಿಭಾಗ.” +ಏಕವ್ಯಕ್ತಿ ಉತ್ತರಾಧಿಕಾರದ ನಿಯಮವನ್ನು ಜಾರಿಗೊಳಿಸಿದ ನಂತರ ಒಂದು ಸರ್ವೆ ನಂಬರಿನಡಿಯಲ್ಲಿ ಬರುವ ಭೂಮಿಯ ಭಾಗವನ್ನು ಒಂದು ಮಾದರಿ ಲಾಭದಾಯಕ ಹಿಡುವಳಿಯಾಗಲು ನಿಗದಿಪಡಿಸಿದ ಗಾತ್ರದ ಪ್ರಕಾರ ರಚಿಸಲಾಗುವುದು. +ಎರಡನೆಯದಾಗಿ,ಅಂತಹ ಸರ್ವೇ ನಂಬರಿನ ಯಾವುದೇ ಉಪ-ಭಾಗದ ಪ್ರತ್ಯೇಕ ದಾಖಲಾತಿ ಮಾಡುವುದಕ್ಕೆ ನಿರಾಕರಿಸುವುದು ಅಗತ್ಯ,ಎಂದರೆ ಒಂದು ಭೂಮಿಯ ಭಾಗವನ್ನು ಪ್ರತ್ಯೇಕ ಸರ್ವೇ ನಂಬರಿನೊಂದಿಗೆ ದಾಖಲು ಮಾಡಲು ಅದು ಲಾಭದಾಯಕ ಹಿಡುವಳಿಯ ಗಾತ್ರಕ್ಕಿಂತ ಕಡಿಮೆ ಇರಬಾರದು. +ಆಗಲೂ ಕೂಡ ಲಾಭದಾಯಕ ಹಿಡುವಳಿಯೆಂದು ಹೇಳಬಹುದಾದಷ್ಟು ದೊಡ್ಡದಾಗಿದ್ದರೂ ಅದನ್ನು ಒಬ್ಬನ ಹೆಸರಿನಲ್ಲಿಯೇ ದಾಖಲೆ ಮಾಡಲಾಗುವುದು. +ನಾವು ಬರೋಡಾ ಸಮಿತಿಯ ಯೋಜನೆಯನ್ನು ಆಚರಣೆಗೆ ತಂದರೆ ಇದೇ ಪರಿಸ್ಥಿತಿ ಉಂಟಾಗುತ್ತದೆ. +ಮಿಸ್ಟರ್‌ ಕೀಟಿಂಗ್‌ ಪ್ರಕಾರ ದೊಡ್ಡದಾದ ಮತ್ತು ಅಚ್ಚುಕಟ್ಟಾದ ಭೂಮಿಯು ಒಂದೇ ಸರ್ವೆ ನಂಬರಿನಲ್ಲಿರುವ ಬದಲು ಒಬ್ಬನ ಹೆಸರಿನಲ್ಲಿಯೇ ಸಣ್ಣ ಮತ್ತು ಚದುರಿದ ಹಿಡುವಳಿಗಳ ಅನೇಕ ಸರ್ವೇ ನಂಬರುಗಳಿರಬಹುದು. +ಅದರಿಂದ ಯಾವ ಉದ್ದೇಶವೂ ಈಡೇರುವುದಿಲ್ಲವಾದ್ದರಿಂದ ಕೀಟಿಂಗ್‌ ಅವರ ಯೋಜನೆಯನ್ನು ಕೈಬಿಟ್ಟು,ಕ್ರೋಢೀಕೃತ ಹಿಡುವಳಿಗೆ ಏಕವ್ಯಕ್ತಿ ಉತ್ತರಾಧಿಕಾರದ ನಿಯಮದ ಪ್ರಕಾರ ಒಂದು ಗೊತ್ತಾದ ಗಾತ್ರಕ್ಕಿಂತ ಕಡಿಮೆ ಇದ್ದರೆ ಆ ಭೂಮಿಯ ತುಂಡನ್ನು ಕಾನೂನಿನನ್ವಯ ಮಾನ್ಯ ಮಾಡಲು ನಿರಾಕರಿಸುವುದರಿಂದ ಕ್ರೋಢೀಕೃತ ಹಿಡುವಳಿಯ ಉಪ-ವಿಭಾಗ ಮಾಡುವುದನ್ನು ತಪ್ಪಿಸಿದಂತಾಗುತ್ತದೆ ಎಂದು ಹೇಳಲಾಗಿದೆ. +ಭೂಮಿಯ ವಿಭಜನೆಗೆ ಅದನ್ನು ಮಾಡಿದ ಸಂದರ್ಭಕ್ಕನುಗುಣವಾಗಿ ಲಾಭದಾಯಕ ಅಥವಾ ಲಾಭದಾಯಕವಾಗಿರುವ ಅನೇಕ ಕಾರಣಗಳಿರಬಹುದು. +ಮಿಸ್ಟರ್‌ ಕೀಟಿಂಗ್‌ ಅವರು ಹೇಳಿದಂತೆ ಯಾವುದೇ ಕಾರಣಕ್ಕಾಗಿ ಭೂಮಿಯ ವಿಭಜನೆಗೆ ಅವಕಾಶ ಕೊಡದೆ ಇರುವುದರಿಂದ ಭೂಮಿಯ ಬೆಲೆಯಲ್ಲಿ ಗಂಭೀರ ಸ್ವರೂಪದ ಕುಸಿತ ಉಂಟಾಗಬಹುದು. +ಸಾಮಗ್ರಿಗಳ ಅಭಾವ ಉಂಟಾದಾಗ,ಉಪ-ವಿಭಜನೆಯ ಅವಶ್ಯಕತೆಯುಂಟಾದಾಗ ಅದಕ್ಕೆ ಅವಕಾಶ ಕೊಡದೇ ಇರುವುದರಿಂದ ಹಾನಿಕಾರಕ ಪರಿಸ್ಥಿತಿ ನಿರ್ಮಾಣವಾಗುತ್ತದೆ. +ಈ ಪರಿಣಾಮ ಸಾಧಿಸಬೇಕಾದ ಗುರಿಗೆ ವಿರುದ್ಧವೆನಿಸುವುದು. +ಇದೂ ಅಲ್ಲದೆ ಆರ್ಥಿಕ ಪರಿಸ್ಥಿತಿಯ ಒತ್ತಡದಿಂದ ಅವಶ್ಯ ಬಿದ್ದಾಗ ಕಾನೂನಿನನ್ವಯ ಭೂಮಿಯ ವಿಭಜನೆಯನ್ನು ತಪ್ಪಿಸುವುದೆಂದರೆ ವಾಸ್ತವಿಕವಾಗಿ ಅದನ್ನು ತಪ್ಪಿಸಿದಂತಾಗುವುದಿಲ್ಲ. +ಕ್ರೋಢೀಕರಣದ ಮತ್ತು ವಿಸ್ತರಣೆಯ ಪ್ರತಿಪಾದಕರು ಗಮನ ನೀಡದೇ ಇದ್ದ ದೋಷಗಳೆನಿಸಿದ ಭೂಮಿಯ ಮೇಲೆ ಜನಸಂಖ್ಯೆಯ ಒತ್ತಡ ಮತ್ತು ಕೃಷಿ ಸಾಮಗ್ರಿಗಳ ಅಭಾವವನ್ನು ಒಪ್ಪಿಕೊಂಡರೂ ನಾವು ಹಿಡುವಳಿಗಳ ವಿಭಜನೆಯನ್ನು ಸಂತೋಷದಿಂದ ನಿರೀಕ್ಷಿಸಬೇಕು. +ಇಂತಹ ಅನಿವಾರ್ಯ ಪ್ರವೃತ್ತಿಯ ವಿರುದ್ಧವಾಗಿ ಕಾನೂನು ಮಾಡಿದರೆ ಮತ್ತು ಪ್ರತ್ಯೇಕ ಸರ್ವೇ ನಂಬರನ್ನು ಕೊಡಲು ಅಗತ್ಯವಾದ ಒಂದು ಮಿತಿಗಿಂತ ಕಡಿಮೆ ಇರುವ ಹಿಡುವಳಿಗಳ ದಾಖಲೆ ಮಾಡಲು ನಿರಾಕರಿಸಿದರೆ ಕೊನೆಯ ಪಕ್ಷ ಈ ಮೂಲಕವಾದರೂ ನಿವಾರಿಸಬಹುದೆಂದು ತಿಳಿದುಕೊಂಡದ್ದನ್ನು ನಿವಾರಿಸಲು ಸಾಧ್ಯವಿಲ್ಲವೆಂಬುದನ್ನು ನಾವು ಅರಿತುಕೊಳ್ಳಬೇಕು. +ಆದರೆ ಅದು ನಿಜಸ್ಥಿತಿಯನ್ನು ಮರೆಮಾಚುವ ದಾಖಲೆಯನ್ನು ಸೃಷ್ಟಿಸುತ್ತದೆ. +ಉಪವಿಭಜನೆ ಮತ್ತು ವಿಚ್ಛಿದ್ರಗೊಳಿಸುವಿಕೆಯನ್ನು ತಡೆಯಲು ಸೂಚಿಸಲಾದ ಮಾರ್ಗಗಳ ಕುರಿತ ನಮ್ಮ ಟೀಕೆ ಇದಾಗಿದ್ದು,ಕ್ರೋಢೀಕರಣ ಯೋಜನೆಯ ಬಗ್ಗೆ ನಮ್ಮ ಅಭಿಪ್ರಾಯ ವ್ಯಕ್ತಪಡಿಸಲು ಬಹಳ ಅವಧಿ ಬೇಕಿಲ್ಲ. +ಕ್ರೋಢೀಕರಣ ಮತ್ತು ಅದರ ರಕ್ಷಣೆ ಎಷ್ಟು ನಿಕಟ ಸಂಬಂಧ ಹೊಂದಿದೆ ಎಂದರೆ ಒಂದನ್ನು ಬಿಟ್ಟು ಇನ್ನೊಂದರ ವಿಚಾರ ಮಾಡಲೂ ಆಗುವುದಿಲ್ಲ. +ಒಂದು ಕ್ರೋಢೀಕೃತ ಹಿಡುವಳಿಯನ್ನು ನಮಗೆ ರಕ್ಷಿಸಲು ಸಾಧ್ಯವಿಲ್ಲದಿದ್ದರೆ,ಯೋಜನೆ ಎಷ್ಟೇ ಸುಸಂಗತವಾಗಿದ್ದರೂ ಕ್ರೋಢೀಕರಣ ಮಾಡುವುದರ ಪ್ರಯೋಜನವಾದರೂ ಏನು? +ನಮ್ಮ ಸಾಮಾಜಿಕ-ಅರ್ಥ ವ್ಯವಸ್ಥೆಯಲ್ಲಿ ಪರಿಣಾಮಕಾರಿ ಬದಲಾವಣೆಗಳನ್ನು ಮಾಡದೆ ಸೈಸಿಫಸನ ಕೆಲಸವೇ ನಮಗೆ ಗತಿ. +ಈ ಹೆಚ್ಚುವರಿ ಮತ್ತು ನಿಷ್ಕ್ರಿಯ ಶ್ರಮಿಕ ಸೇರಿದಂತೆ ಹಿಡುವಳಿಗಳ ಕ್ರೋಢೀಕರಣ ಮತ್ತು ವಿಸ್ತರಣೆಯ ಕೇಡುಗಳು ಅವುಗಳ ಅನುಕೂಲಗಳಿಗಿಂತ ಹೆಚ್ಚು ಪ್ರಧಾನವಾಗಿರುವುದರಿಂದ ಪ್ರೊಫೆಸರ್‌ ಗಿಲ್‌ಬರ್ಟ್‌ಸ್ಲೇಟ್‌ ಅವರು ಇವುಗಳನ್ನು ಪರಿಗಣಿಸುವುದಿಲ್ಲ. +ಪ್ರೊಫೆಸರ್‌ ಸ್ಲೇಟ್‌ ಅವರ ನಿಲುವಿಗೆ ವಿರುದ್ಧವಾಗಿ ಈ ಕೇಡುಗಳಿಂದ ತಪ್ಪಿಸಿಕೊಳ್ಳಬಹುದೆಂದು ನಾವು ನಂಬಿರುವುದರಿಂದ ಮತ್ತು ನಾವು ಅವುಗಳನ್ನು ತಪ್ಪಿಸಲು ಕಾತರರಾಗಿರುವುದರಿಂದ ಹಿಡುವಳಿಗಳ ವಿಸ್ತರಣೆಯನ್ನು ಸಾಧಿಸಲು ವಿವಿಧ ಪರಿಹಾರ ಮಾರ್ಗಗಳನ್ನು ಪ್ರತಿಪಾದಿಸುತ್ತಾರೆ. +ತತ್ಪರಿಣಾಮವಾಗಿನಾವು ಪ್ರಾಥಮಿಕವಾಗಿ ಈ ನಿಷ್ಕ್ರಿಯ ಶ್ರಮಿಕ ಜನತೆಯ ಬಗ್ಗೆ ನಮ್ಮ ಪ್ರಯತ್ನಗಳನ್ನು ಮಾಡಬೇಕೆಂದುನಮ್ಮ ಅಭಿಪ್ರಾಯ. +ನಾವು ಈ ಶ್ರಮವನ್ನು ಕೃಷಿಯೇತರ ಉತ್ಪಾದನಾ ಕ್ಷೇತ್ರಗಳಲ್ಲಿ ತೊಡಗಿಸುವಲ್ಲಿ ಯಶಸ್ವಿಯಾದರೆ,ಒಂದೇ ಏಟಿನಲ್ಲಿ ಭಾರತದಲ್ಲಿ ಭೂಮಿಯ ಮೇಲಿರುವ ಸದ್ಯದ ಒತ್ತಡವನ್ನು ಕಡಿಮೆ ಮಾಡುವುದೂ ಅಲ್ಲದೆ ಅದರ ಮೇಲಿರುವ ಪ್ರಾಮುಖ್ಯವನ್ನೂ ನಾಶಗೊಳಿಸಿದಂತಾಗುತ್ತದೆ. +ಇದೂ ಅಲ್ಲದೇ ಶ್ರಮವನ್ನು ಉತ್ಪನ್ನಕಾರಿಯಾಗಿ ತೊಡಗಿಸಿದ್ದೇ ಆದರೆ ಅದು ಇಂದಿನ ಹಾಗೆ ಲೂಟಿ ಅಥವಾ ದರೋಡೆ ಮಾಡಿ ಜೀವನ ಸಾಗಿಸುವುದಿಲ್ಲ ಮತ್ತು ಅದು ತನ್ನಲ್ಲಿಟ್ಟುಕೊಳ್ಳಲು ದುಡಿಯುವುದಿಲ್ಲ. +“ದಿ ವ್ಹಿಲೇಜ್‌ ಇನ್‌ ದಿ ಮೆಲ್ಟಿಂಗ್‌ ಪಾಟ್‌ ಜರ್ನಲ್‌ ಆಫ್‌ ದಿ ಇಂಡಿಯನ್‌ ಎಕನಾಮಿಕ್‌ ಸೊಸೈಟಿ ಸಂಪುಟ-೧,ನಂ.೧ ಪುಟ ೧೦. +ಪೊಫೆಸರ್‌ ಜೆವೊನ್ಸ್‌ ಅವರು ಹೆಚ್ಚುವರಿ ಕೃಷಿಕ ಜನಸಂಖ್ಯೆಯನ್ನು ಪಟ್ಟಣಗಳಿಗೆ ಸಾಗಿಸುವ ಬಗ್ಗೆ ಹೇಳಿರುತ್ತಾರೆ. +ಅವರು ಹೆಚ್ಜುವರಿ ಜನಸಂಖ್ಯೆಯ ದೋಷ ಇದೆ ಎಂದು ಮಾನ್ಯ ಮಾಡಿರುವರೆಂದು ತಿಳಿದು ಈ ಲೇಖಕರಿಗೆ ಸಂತೋಷವೆನಿಸಿದೆ. +ಆದರೆ ಈ ಕೇಡು ನಮ್ಮ ಕೃಷಿಯ ಇತರ ಎಲ್ಲಾ ಕೇಡುಗಳ ಜನಕ ಎಂಬುದನ್ನು ಅವರು ಅರಿತಿಲ್ಲ. +ಭಾರತದ ಔದ್ಯೋಗಿಕರಣವು ಪ್ರೊ.ಜೆವೊನ್ಸ್‌ ಅವರು ತಮ್ಮ ಎಲ್ಲಾ ಜ್ಞಾನ ಮತ್ತು ಪ್ರಭಾವವನ್ನು ಬೀರಿ ವಿರೋಧಿಸುತ್ತಿರುವ ಅಂಶವಾಗಿದ್ದು,ಅವರ ಹೆಚ್ಚುವರಿ ಜನಸಂಖ್ಯೆಯನ್ನು ಪಟ್ಟಣಗಳಿಗೆ ಸಾಗಿಸಬೇಕೆಂಬ ಪರಿಹಾರ ಆಶ್ಚರ್ಯಕರ ಏಕೆಂದರೆ ಪಟ್ಟಣಗಳಿಗೆ ವಲಸೆ ಹೋಗುವುದೆಂದರೆ ಭಾರತದ ಔದ್ಯೋಗಿಕರಣವೆಂಬುದರ ಸೌಮ್ಯೋಕ್ತಿ. +ಭಾರತದಲ್ಲಿ ಕೆಲವೇ ಪಟ್ಟಣಗಳಿವೆ ಎಂಬುದನ್ನು ಪ್ರೊ.ಜೆವೊನ್ಸ್‌ ಅವರು ಮರೆತಿದ್ದಾರೆ. +ಅವರಂತೆ ನಾವೂ ಹೆಚ್ಚುವರಿ ಜನಸಂಖ್ಯೆಯ ಕೇಡು ಇದೆ ಎಂದು ನಂಬಿದರೆ,ಅದೆಷ್ಟೇ ಅಪ್ರಿಯವಾಗಿರಲಿ,ಉಳಿದಿರುವ ಏಕೈಕ ತರ್ಕಬದ್ಧವಾದ ಮತ್ತು ಅನಿವಾರ್ಯ ತೀರ್ಮಾನವೆಂದರೆ ಹೆಚ್ಚು ಹೆಚ್ಚು ಪಟ್ಟಣಗಳ ನಿರ್ಮಾಣ,ಎಂದರೆ ಔದ್ಯೋಗೀಕರಣ. +ಆದರೆ ಉಳಿತಾಯ ಮಾಡಿ ಹೆಚ್ಚುವರಿಯನ್ನುಂಟು ಮಾಡುತ್ತದೆ;ಹೆಚ್ಚು ಉಳಿತಾಯವೆಂದರೆ ಹೆಚ್ಚು ಬಂಡವಾಳ ಸಂಕ್ಷಿಪ್ತದಲ್ಲಿ,ಸೋಜಿಗವೆಂದು ತೋರಿದರೂ,ಔದ್ಯೋಗೀಕರಣ ಭಾರತದ ಕೃಷಿ ಸಮಸ್ಯೆಗಳಿಗೆ ಅತ್ಯಂತ ಬಲವಾದ ಪರಿಹಾರ,ಔದ್ಯೋಗೀಕರಣದ ಸಂಚಿತ ಪರಿಣಾಮಗಳೆಂದರೆ:ಒತ್ತಡವನ್ನು ಕಡಿಮೆ ಮಾಡಿ ಬಂಡವಾಳ ಮತ್ತು ಮೂಲ ಸರಕುಗಳ ಹೆಚ್ಚಳದಿಂದ ಹಿಡುವಳಿಗಳ ವಿಸ್ತರಣೆಗೆ ಆರ್ಥಿಕ ಅವಶ್ಯಕತೆಯನ್ನು ಬಲವಂತವಾಗಿ ಸೃಷ್ಟಿಸುತ್ತದೆ. +ಇಷ್ಟೇ ಅಲ್ಲ. +ಔದ್ಯೋಗೀಕರಣವು ಭೂಮಿಯ ಮೇಲಿರುವ ಆಸೆಯನ್ನು ನಿವಾರಿಸುವುದರ ಮೂಲಕ ಅದರ ಉಪ-ವಿಭಜನೆ ಮತ್ತು ಛಿದ್ರೀಕರಣಕ್ಕೆ ಅವಕಾಶಗಳನ್ನು ಕಡಿಮೆ ಮಾಡುವುದು. +ಔದ್ಯೋಗೀಕರಣ ಸ್ವಾಭಾವಿಕವಾದ ಹಾಗೂ ಪ್ರಭಾವೀ ಪರಿಹಾರವಾಗಿದೆ,ಮತ್ತು ಇರುವರೆಗೆ ನಾವು ಪರಿಶೀಲಿಸಿದ ತಪ್ಪು ಗ್ರಹಿಕೆಯ ಯೋಜನೆಗಳಿಗಿಂತ ಇದು ಹೆಚ್ಚು ಪ್ರಶಸ್ತ ನಿವಾರಣೆಯಾಗಿದೆ. +ಕಾನೂನು ಮಾಡುವುದರ ಮೂಲಕ ಅನೇಕ ಸಾಮಾಜಿಕ ಕೇಡುಗಳ ಬೆಲೆ ತೆತ್ತು ನಮಗೆ ದೊರೆಯುವುದು ಮೋಸದ ಅಥವಾ ಕೃತ್ರಿಮ ಆರ್ಥಿಕ ಹಿಡುವಳಿ. +ಆದರೆ ಔದ್ಯೋಗೀಕರಣದ ಮೂಲಕ ವಿಸ್ತಾರವಾದ ಲಾಭದಾಯಕ ಹಿಡುವಳಿಯ ಒಂದು ಪರಿಶುದ್ಧ ಲಾಭದ ರೂಪದಲ್ಲಿ ನಮಗೆ ಸಿಕ್ಕೇ ಸಿಗುವುದು. +ವಿಸ್ತರಣೆಯೂ ಸೇರಿದಂತೆ ಹಿಡುವಳಿಗಳ ಕ್ರೋಢಿಕರಣ ಹಾಗೂ ಕ್ರೋಢೀಕರಿಸಲಾದ ಹಿಡುವಳಿಗಳನ್ನು ರಕ್ಷಿಸಿಕೊಂಡು ಹೋಗುವುದಕ್ಕೆ ಇರುವ ಒಂದು ಪರಿಹಾರ ಮಾರ್ಗದ ಅರ್ಥವೆಂದರೆ,ನಾವು ಕೃಷಿಯಲ್ಲಿರುವ ದೋಷಗಳನ್ನು ಔದ್ಯೋಗೀಕರಣದ ನಿರಿಚ್ಛಾ ಪ್ರತಿಕ್ರಿಯೆಯ ಪರಿಣಾಮಗಳಿಂದ ನಿವಾರಿಸಬಯಸುತ್ತೇವೆ. +ಈ ಪರಿಹಾರ ಕಾರ್ಯ ಸಾಧ್ಯವಲ್ಲದ ಕಾಲ್ಪನಿಕ ಸ್ವರೂಪದ್ದಾಗಿದೆ ಎಂದು ದೂಷಿಸಲು ಅವಕಾಶವಾಗಬಾರದೆಂಬ ದೃಷ್ಟಿಯಿಂದ ಇದರ ಪರವಾದ ಪ್ರಮಾಣವನ್ನು ಕೊಡಬಯಸುತ್ತೇನೆ. +ಔದ್ಯೋಗೀಕರಣದ ನಿರಿಚ್ಛಾ ಪ್ರತಿಕ್ರಿಯೆಯಿಂದ ಅಮೆರಿಕದಲ್ಲಿ ಕೃಷಿ ಸುಧಾರಣೆಯಾಯಿತೆಂಬುದರ ಅಧ್ಯಯವನ್ನು ೧೮೮೩ರಲ್ಲಿ ಮಾಡಲಾಗಿದೆ. +ಈ ಬಗ್ಗೆ ಲಂಡನ್‌ ಟಾಯಮ್ಸ್‌ ನಲ್ಲಿ ಕೊಡಲಾದ ಸಾರಾಂಶದಿಂದ ವಿವರವಾಗಿ ಉಲ್ಲೇಖಿಸೋಣ :“ಅಮೆರಿಕ ಸಂಯುಕ್ತ ಸಂಸ್ಥಾನದ ಕೃಷಿ ಇಲಾಖೆಯ ಇತರ ಉದ್ಯಮಗಳೊಡನೆ ಕೃಷಿಯ ಬೆಲೆ ಯಾವ ಪ್ರಮಾಣದಲ್ಲಿ ಏರುತ್ತದೆಯೋ ಅದೇ ಪ್ರಮಾಣದಲ್ಲಿ ವ್ಯವಸಾಯದ ಜಮೀನಿನ ಬೆಲೆ ಇಳಿಯುತ್ತದೆ ಎಂದು ಸಂಖ್ಯಾಶಾಸ್ತ್ರಜ್ಞನು ತನ್ನ ವರದಿಯಲ್ಲಿ ತೋರಿಸಿಕೊಟ್ಟಿದ್ದಾನೆ. +ಎಂದರೆ,ಎಲ್ಲಿ ಎಲ್ಲಾ ಕಾರ್ಮಿಕರು ಕೃಷಿ ನಿರತರಾಗಿರುತ್ತಾರೋ ಅಲ್ಲಿಯ ಭೂಮಿಯ ಬೆಲೆ ಅವರರ್ಧದಷ್ಟು ಜನ ಕೃಷಿ ಕಾರ್ಮಿಕರಾಗಿರುವಲ್ಲಿನ ಭೂಮಿಯ ಬೆಲೆಗಿಂತ ಕಡಿಮೆ ಇರುತ್ತದೆ. +ಎಲ್ಲಿ ಅವರಲ್ಲಿ ಕಾಲು ಭಾಗ ಜನರು ಕೃಷಿ ನಿರತರಾಗಿರುತ್ತಾರೋ ಅಲ್ಲಿ ಜಮೀನು ಮತ್ತು ಅದರ ಉತ್ಪನ್ನಗಳು ಇನ್ನೂ ಹೆಚ್ಚು ಬೆಲೆಯುಳ್ಳವಾಗಿರುತ್ತವೆ. +ಒಂದು ರಾಜ್ಯಕ್ಕೆ ವಿವಿಧ ಬಗೆಯ ಉದ್ದಿಮೆಗಳು ಹೆಚ್ಚು ಉಪಯುಕ್ತವಾಗುತ್ತದೆ,ಮತ್ತು ಜಮೀನಿನ ಸಮೀಪದಲ್ಲಿಯೇ ಕಾರ್ಖಾನೆ ಇದ್ದರೆ ಆ ಜಮೀನಿನ ಮತ್ತು ಅದರ ಬೆಳೆಯ ಬೆಲೆ ಹೆಚ್ಚುತ್ತದೆ ಎಂಬ ಸಂಗತಿಯನ್ನು ಅಂಕಿಅಂಶಗಳು ಸಾಬೀತುಪಡಿಸಿವೆ. +ಅಮೆರಿಕ ಸಂಯುಕ್ತ ಸಂಸ್ಥಾನಗಳನ್ನು ಇಡೀ ಜನಸಂಖ್ಯೆಯನ್ನು ಕೃಷಿಕಾರ್ಮಿಕರ ಪ್ರಮಾಣಕ್ಕನುಗುಣವಾಗಿ ನಾಲ್ಕು ವಿಭಾಗ ಅಥವಾ ವರ್ಗಗಳಲ್ಲಿ ವಿಭಜಿಸಿದಾಗ ಮತ್ತು ಶೇಕಡಾ ೩ಂ ರಷ್ಟು ಕೃಷಿ ಮತ್ತು ಕೃಷಿ ಕಾರ್ಮಿಕರನ್ನು ಹೊಂದಿರುವ ರಾಜ್ಯಗಳನ್ನು ಮೊದಲನೆಯ ವರ್ಗದಲ್ಲಿ,೩ಂ ಕ್ಕಿಂತ ಹೆಚ್ಚು ಮತ್ತು ೫ಂ ರಿಂದ ೭ಂ ರಷ್ಟು ಹೊಂದಿರುವುದನ್ನು ಮೂರನೆಯ ವರ್ಗದಲ್ಲಿ,ಮತ್ತು ೭ಂ ಅಥವಾ ಅದಕ್ಕೂ ಹೆಚ್ಚಿರುವ ರಾಜ್ಯಗಳನ್ನು ನಾಲ್ಕನೆಯ ವರ್ಗದಲ್ಲಿ ವಿಂಗಡಿಸಿದಾಗ ಭೂಮಿಯ ಬೆಲೆಯು ಕೃಷಿ ಜನಸಂಖ್ಯೆಯ ವಿಪರ್ಯಯ ಪ್ರಮಾಣದಲ್ಲಿರುತ್ತದೆ. +ಸಂಪೂರ್ಣವಾಗಿ ಕೃಷಿ ವಿಭಾಗವಾಗಿರುವ ನಾಲ್ಕನೆಯ ವರ್ಗದಲ್ಲಿ ಭೂಮಿಯ ಬೆಲೆ ಪ್ರತಿ ಎಕರೆಗೆ ೫.೨೮ ಡಾಲರಗಳಾಗಿದ್ದು,ಅದರ ನಂತರದ ವರ್ಗದಲ್ಲಿ ಅದು ೧೩.0೩ ಡಾಲರುಗಳಾಗಿದ್ದು,ಮೂರನೆಯದರಲ್ಲಿ ೨೨.೨೧ಡಾಲರುಗಳಾಗಿದ್ದು, ಸಿದ್ಧವಸ್ತುಗಳನ್ನು ತಯಾರಿಸುವ ಜಿಲ್ಲೆಗಳಲ್ಲಿ ಅದು ೪ಂ.೯೧ ಡಾಲರುಗಳಷ್ಟಾಗಿರುತ್ತದೆ ಎಂದು ಸ್ಥಿರಪಡಿಸಲಾಗಿದೆ. +ಇದರಿಂದ ಸಂಮಿಶ್ರ ಜಿಲ್ಲೆಗಳು ವಿಪುಲ ಸೌಕರ್ಯ ಹೊಂದಿರುವುದು ಕಂಡುಬರುತ್ತದೆ. +ಆದಾಗ್ಯೂ ಭೂಮಿಯ ಬೆಲೆಯೂ ಹೆಚ್ಚಾಗಿರುವುದಲ್ಲದೆ, ಎಕರೆ ವಾರು ಉತ್ಪನ್ನವೂ ಹೆಚ್ಚಾಗಿದೆ ಮತ್ತು ಕೃಷಿ ಕಾರ್ಮಿಕರಿಗೆ ಕೊಡುವ ಕೂಲಿಯೂ ಹೆಚ್ಚಾಗಿರುತ್ತದೆ. +ಸಿದ್ಧವಸ್ತುಗಳನ್ನು ತಯಾರಿಸುವುದು ಮತ್ತು ವೈವಿಧ್ಯಮಯವಾದ ಉದ್ದಿಮೆಗಳು ಸಿದ್ಧವಸ್ತುಗಳ ತಯಾರಕರಿಗೆ ಮಾತ್ರವಲ್ಲ. +ಕೃಷಿಕರಿಗೂ, ಲಾಭದಾಯಕ ಮತ್ತು ಅನುಕೂಲವೆನಿಸುತ್ತವೆ.” +ನಾವು ಸೂಚಿಸಿರುವ ಪರಿಹಾರ ಸಿದ್ಧಾಂತ ಎಂಬುದು ಇದರಿಂದ ವ್ಯಕ್ತವಾಗುತ್ತದೆ. +ಔದ್ಯೋಗೀಕರಣವು ಹಿಡುವಳಿಗಳ ವಿಸ್ತರಣೆಗೆ ಅನುವು ಮಾಡಿಕೊಡುವುದಲ್ಲದೆ ಅದು ಭೂಮಿಯ ಉಪಣ-ವಿಭಜನೆ ಮತ್ತು ವಿಚ್ಛಿದ್ರೀಕರಣಕ್ಕೆ ಅತ್ಯಂತ ಪರಿಣಾಮಕಾರಿ ಪ್ರತಿಬಂಧಕವಾಗುವುದೆಂದು ಯಾವ ಪ್ರತಿಭಟನೆಯ ಭಯವೂ ಇಲ್ಲದೆ ಹೇಳಬಹುದು. +ಇದನ್ನು ಒಪ್ಪಿಕೊಂಡರೂ, ಕ್ರೋಢೀಕರಣಕ್ಕೆ ಔದ್ಯೋಗೀಕರಣ ಪೂರ್ಣ ಪರಿಹಾರವಲ್ಲ ಎಂದು ಹೇಳಬೇಕಾಗುತ್ತದೆ. +ಇದಕ್ಕಾಗಿ ನೇರ ಪರಿಹಾರಗಳು ಅವಶ್ಯ ಎಂಬುದೂ ನಿಜವಿರಬಹುದು. +ಔದ್ಯೋಗೀಕರಣವೇ ಕ್ರೋಢೀಕರಣವನ್ನುಂಟು ಮಾಡಲಾರದಾದರೂ ಅದು ಕ್ರೋಢೀಕರಣಕ್ಕೆ ಸಹಾಯಕವಾಗುವುದೆಂಬುದು ಸತ್ಯ ಸಂಗತಿ. +ಎಲ್ಲಿಯವರೆಗೆ ಭೂಮಿಗೆ ಪ್ರಾಶಸ್ತ್ಯವಿರುತ್ತದೆಯೋ ಅಲ್ಲಿಯವರೆಗೆ ಕ್ರೋಢೀಕರಣವು ಅದನ್ನು ಎಷ್ಟೇ ನ್ಯಾಯಯುತ ತತ್ವಗಳ ಆಧಾರದ ಮೇಲೆ ಜಾರಿಗೊಳಿಸಿದಾಗ್ಯೂ ಅದು ಸುಲಭ ಸಾಧ್ಯವಿಲ್ಲ ಎಂಬುದು ನಿರ್ವಿವಾದಾತ್ಮಕ ಸತ್ಯವಾಗಿದೆ. +ಔದ್ಯೋಗೀಕರಣದಿಂದ ಅನಿವಾರ್ಯವಾಗಿ ಆಗಲೇಬೇಕಾದ, ಭೂಮಿಯ ಪ್ರಾಮುಖ್ಯತೆಯನ್ನು ಇಳುವರಿಗೊಳಿಸುವುದೇನೂ ಸಣ್ಣ ಸಾಧನೆಯಲ್ಲ. +ಕ್ರೋಢೀಕರಣದ ಇನ್ನೊಂದು ಅಂಶವೂ ಇದೇ ನಿರ್ಣಯಕ್ಕೆಡೆ ಮಾಡಿದೆ. + ಔದ್ಯೋಗೀಕರಣ ಕೋಢೀಕರಣವು ಕ್ರೋಢೀಕರಣಕ್ಕೆ ಮುನ್ನವೇ ಆಗಬೇಕು. +ಭವಿಷ್ಯದಲ್ಲಿ ಕ್ರೋಢೀಕೃತ ಹಿಡುವಳಿಯ ಉಪವಿಭಜನೆ ಮತ್ತು ವಿಚ್ಛಿದ್ರೀಕರಣವಾಗದಂತೆ ಪ್ರತಿಬಂಧಕಗಳನ್ನು ನಿರ್ಮಿಸದೇಹೋದರೆ, ಕ್ರೋಢೀಕರಣದ ನಮ್ಮ ಯೋಜನೆಗಳು ನಿರರ್ಥಕ ಎಂಬುದನ್ನು ನಾವು ಎಂದಿಗೂ ಮರೆಯಬಾರದು. +ಔದ್ಯೋಗೀಕರಣ ಮಾತ್ರ ಅಂತಹ ಪ್ರತಿಬಂಧಕವಾಗಬಲ್ಲದು, ಕಾರಣ ಅದರಿಂದಲೇ ನಾವು ಹೇಳಿರುವಂತೆ ಭೂಮಿಯ ಉಪ-ವಿಭಜನೆಗೆ ಕಾರಣವಾದ ವಿಪರೀತ ಒತ್ತಡವು ತಗ್ಗಬಹುದಾಗಿದೆ. +ಆದ್ದರಿಂದ ಸಣ್ಣ ಮತ್ತುಚದುರಿದ ಹಿಡುವಳಿಗಳ ರೋಗದಿಂದ ನಮ್ಮ ಕೃಷಿ ಬಳಲುತ್ತಿದ್ದರೆ ಅದನ್ನು ನಿವಾರಿಸಲು ಔದ್ಯೋಗೀಕರಣವೇ ನಿರಾಕರಿಸಲಾರದಂಂತಹ ಪರಿಹಾರವಾಗಿದೆ. +ವಿವಿಧ ದೇಶಗಳ ಸಂಖ್ಯೆಗಳು ವರ್ಷಗಳೊಂದಿಗೆ ಹೊಂದಿಕೆಯಾಗುವುದಿಲ್ಲ. +೩ ವರ್ಷಗಳ ವ್ಯತ್ಯಾಸವಿರಬಹುದು. +ವಿವಿಧ ದೇಶಗಳ ಆರ್ಥಿಕ ಪ್ರವೃತ್ತಿಯ ಸಮೀಕ್ಷೆಯ ನಂತರ ಸರ್‌ ರಾಬರ್ಟ್‌ ಗಿಫಿನ್‌ ಅವರು ಈ ತೀರ್ಮಾನಕ್ಕೆ ಬಂದಿದ್ದಾರೆ . +“ಪ್ರತಿಯೊಂದು ದೇಶದಲ್ಲಿ ಜನರ ಸಂಪನ್ಮೂಲಗಳ ಹೆಚ್ಚಳದಿಂದ ಉಂಟಾದ ಬಯಕೆಗಳ ಹೆಚ್ಚಳದಿಂದ ಕೃಷಿ ಮತ್ತು ಗಣಿ ಹಾಗೂ ತತ್ಸಂಬಂಧವಾದ ಉದ್ಯೋಗಗಳ ಪ್ರಮಾಣ ಇಳಿಯುವುದು ಶತಸ್ಸಿದ್ಧ. +ಅಂತಯೇ ವಿಶಾಲಾರ್ಥದಲ್ಲಿ ಬಳಸಲಾದ ವಸ್ತುಗಳನ್ನು ಸಿದ್ಧಪಡಿಸುವಂತಹ ನಾನಾ ವಿಧದ ಉದ್ಯೋಗಗಳಲ್ಲಿ ಹೆಚ್ಚಳವಾಗುವುದು.” +ಆದರೆ ಭಾರತದ ಅಂಕಿ ಸಂಖ್ಯೆಗಳು ಈ ನಿಯಮದ ಸಮರ್ಥನೆಗಾಗಿ ಒಬ್ಬ ತಜ್ಞರು ವ್ಯಕ್ತಪಡಿಸಿದ ವ್ಯಾಪಕ ಪ್ರವೃತ್ತಿಗೆ ವ್ಯತಿರಿಕ್ತವಾಗಿವೆ. +ಆರಂಭದಲ್ಲಿ ಕೃಷಿ ಪ್ರಧಾನವಾದ ಅಮೆರಿಕ ಸಂಯುಕ್ತ ಸಂಸ್ಥಾನದಂತಹ ಇತರ ದೇಶಗಳ ಪ್ರಗತಿದಾಯಕ ಔದ್ಯೋಗಿಕ ರಾಷ್ಟ್ರಗಳಾಗುತ್ತಿದ್ದರೆ, ಭಾರತವು ನಗರೀಕರಣವನ್ನು ಕಡೆಗಣಿಸುವ ಶೋಚನೀಯ ಪ್ರಕ್ರಿಯೆಯನ್ನು ಅನುಭವಿಸುತ್ತಿದ್ದು ಅವಶ್ಯಕತೆಗಿಂತ ಹೆಚ್ಚಾಗಿ ತನ್ನ ಗ್ರಾಮೀಣ ಜನಸಂಖ್ಯೆಯ ಗಾತ್ರವನ್ನು ಹೆಚ್ಚಿಸಿಕೊಳ್ಳುತ್ತಿದೆ. +ಈ ವಿಪತ್ಕಾರೀ ಪ್ರವಾಹವನ್ನು ಎಷ್ಟು ಬೇಗ ತಡೆಯುತ್ತೇವೆಯೋ ಅಷ್ಟು ಕ್ಷೇಮಕರವಾಗುವುದು. +ಏಕೆಂದರೆ, ಅಸಕ್ತ ವ್ಯಕ್ತಿಗಳು ಏನೇ ಹೇಳಬಹುದಾದಾಗ್ಯೂ ನಮ್ಮ ರಾಷ್ಟೀಯ ಎಸ್ಸೇಸ್‌ ಇನ್‌ ಫೈನಾನ್ಸ್‌, ಎರಡನೆಯ ಸರಣಿ, ಪುಟ. +ಪ್ರೊಫೆಸರ್‌ ಜೆವೊನ್ಸ್‌ ಅವರು ಮುಂಬಯಿಯಲ್ಲಿ ೧೯೧೫ ರ ಡಿಸೆಂಬರ್‌ ತಿಂಗಳಲ್ಲಿ ಜರುಗಿದ ಇಂಡಿಯನ್‌ ಇಂಡಸ್ಟಿಯಲ್‌ಕಾನ್‌ಫರೆನ್ಸ್‌ನಲ್ಲಿ ಮಂಡಿಸಿದ “ಕ್ಯಾಪಿಟಲಿಸ್ಟಿಕ್‌ ಡೆವಲಪ್‌ಮೆಂಟ್‌ ಆಫ್‌ ಅಗ್ರಿಕಲ್ಚರ್‌” ಎಂಬ ಪ್ರಬಂಧದಲ್ಲಿ ಔದ್ಯೋಗಿಕರಣದ ಅರ್ಥ ವ್ಯವಸ್ಥೆಯ ಬಗ್ಗೆ ಸರ್‌ ಹೆನ್ರಿ ಕಾಟನ್‌ ಅವರು ಹೇಳಿದುದಕ್ಕಿಂತ ಹೆಚ್ಚು ಸತ್ಯವಾದ ಮತ್ತು ಹಿತವಾದ ಮಾತನ್ನು ಯಾರೂ ಹೇಳಲಾರರು. +“ಭಾರತದಲ್ಲಿ ಅತಿ-ಕೃಷಿಯ ಅಪಾಯವಿದೆ” ಎಂದು ಅವರು ಹೇಳಿದ್ದಾರೆ. +ವಿರೋಧವಾಗಿ ವಾದಿಸಿದ್ದಾರೆ. +ಆದಾಗ್ಯೂ ಔದ್ಯೋಗಿಕರಣವೇ ಬಂಡವಾಳ ಶಾಹಿ, ಕೃಷಿಗೆ ಸಾಧನ ಎಂದು ಪ್ರೊಫೆಸರ್‌ಜೆವೊನ್ಸ್‌ ಅವರ ವಿರುದ್ಧ ವಾದಿಸಬಹುದು. +ಅವರ ಪ್ರಬಂಧದ ಅವಶ್ಯಕ ತಿದ್ದುವಿಕೆಗಾಗಿ ಅರ್‌ ರಾಬರ್ಟ್‌ ಗಿಫಿನ್‌ ಅವರ ಎಸ್ಸೇನ್‌ ಇನ್‌ ಫೈನಾನ್ಸ್‌ ಮೊದಲನೆಯ ಸರಣಿಯ 1% ನೆಯ ಪ್ರಬಂಧವನ್ನು ಓದಿನೋಡಿ. +ಶ್ರೀಯುತ ರಸೆಲ್‌ ಮತ್ತು ಸಾಮಾಜಿಕ ಪುನಾರಚನೆ :ಮಾನ್ಯಶ್ರೀ ಬರ್‌ಟ್ರಿಂಡ್‌ ರಸೆಲ್‌ ಅವರ ಸಾಮಾಜಿಕ ಪುನಾರಚನೆಯ ತತ್ವ ಪುಸ್ತಕದ ವಿಮರ್ಶೆ. +ಜರ್ನಲ್‌ ಆಫ್‌ ದಿ ಇಂಡಿಯನ್‌ ಎಕನಾಮಿಕ್‌ ಸೊಸೈಟಿ ಸಂಪುಟ . +೧೯೧೮ ರಸೆಲ್‌ ಮತ್ತು ಸಾಮಾಜಿಕ ಪುನಾರಚನೆ :ರಸೆಲ್ಲರ “ಸಾಮಾಜಿಕ ಪುನಾರಚನೆಯ ತತ್ವಗಳು” ಯುದ್ಧಕ್ಕೆ ಸಂಬಂಧಿಸಿದ ಕೃತಿ. +ಒಟ್ಟಾರೆ,ಯುದ್ಧ ಸಂಬಂಧಿ ಕೃತಿಯು ಒಂದೋ ಯುದ್ಧ ಪರವಾದ ಪ್ರಚಾರ ಸಾಮಗ್ರಿಯಾಗಿರುತ್ತದೆ ಇಲ್ಲವೇಯುದ್ಧವನ್ನು ಪ್ರತಿರೋಧಿಸುವ ಆಂದೋಲನಾ ಸಾಹಿತ್ಯವಾಗಿರುತ್ತದೆ. +ರಸೆಲ್ಲರ ಈ ಕೃತಿ ಒಟ್ಟಾರೆ ಎರಡನೆಯ ಪಂಗಡಕ್ಕೆ ಸೇರಿದ್ದಾದರೂ ಅದೇ ವರ್ಗದ ಇತರೆ ಕೃತಿಗಳಿಗಿಂತ ಅದು ಭಿನ್ನವಾಗಿದೆ. +ಕೆಲವು ಯುದ್ಧ ಪ್ರತಿರೋಧಿ ಕೃತಿಗಳಲ್ಲಿ ಬಲಿಷ್ಠ ಆಕ್ರಮಣಕಾರರು ಜನರ ರಾಷ್ಟೀಯ ಆಶಯಗಳನ್ನು ಕಡೆಗಣಿಸಿ ಕೆಲವು ರಾಷ್ಟ್ರಗಳನ್ನು ತಮ್ಮ ಕೃತ್ರಿಮ ಭೌಗೋಳಿಕ ಪರಿಧಿಯೊಳಗೆ ಸೇರಿಸಿಕೊಂಡಿರುವುದರ ವಿರುದ್ಧ ವಾದಮಾಡುತ್ತವೆ. +ಯುದ್ಧದ ಲೆಕ್ಕಾಚಾರದಲ್ಲಿ ಹೇಗೆ ಗೆದ್ದವರ ಲಾಭವೂ ಅಂತಿಮವಾಗಿ ನಷ್ಟವಾಗಿ ಪರಿಣಮಿಸುತ್ತದೆ ಎನ್ನುವುದನ್ನು ಅಂಗೆಲ್‌ರ “ಗ್ರೇಟ್‌ ಇಲ್ಯೂಷನ್‌'' ಅಂಥ ಕೃತಿಗಳು ತೋರಿಸಿಕೊಡುತ್ತವೆ. +ಆದರೆ ರಸೆಲ್ಲರ ವಿಶ್ಲೇಷಣೆಯಂತೂ ತೀರಾ ಭಿನ್ನವಾಗಿದೆ. +ಮೇಲೆ ಹೇಳಿದ ರೀತಿಯ ವೈಚಾರಿಕ ಕರೆಗಳಿಂದಲೇ ಯುದ್ಧಗಳನ್ನು ತಡೆಗಟ್ಟಲು ಸಾಧ್ಯವಿಲ್ಲವೆಂದು ಅವರ ನಂಬಿಕೆ. +ಅವರು ಹೇಳುತ್ತಾರೆ : ಯದ್ಧ ನಿವಾರಣೆ ವೈಚಾರಿಕತೆಯಿಂದ ಮಾತ್ರವಲ್ಲ. + ಯುದ್ಧ ವಿರೋಧಿಯಾದ, ನೈಜವಾದ ಜೀವನ ಪ್ರವೃತ್ತಿ ಮತ್ತು ಅನುರಾಗಗಳಿಂದೊಡಗೂಡಿದ ಬದುಕಿನಿಂದ ಸಾಧ್ಯ . + ಈಗ ಕೇವಲ ಪ್ರಜ್ಞಾಪೂರ್ವಕ ಚಿಂತನೆಯ ಜೀವನವನ್ನೇ ಅಲ್ಲ ಜೀವನದ ಆವೇಗವನ್ನು ಬದಲಾಯಿಸಬೇಕಾದ ಅವಶ್ಯಕತೆ ಇದೆ.” + ರಸೆಲ್ಲರ ವಿಶ್ಲೇಷಣೆ ಹೇಗೆ ಭಿನ್ನವೋ ಆತನ ಸಾಮಾಜಿಕ ತತ್ವವೂ ಭಿನ್ನ. +“ಯುದ್ಧದಿಂದ ಕಲಿಯಬೇಕಾದ್ದು ಎಂದರೆ ಮಾನವನ ಕಾರ್ಯಚಟುವಟಕೆಯಿಂದ ಹೊಮ್ಮುವ ಕಾರಂಜಿಗಳ ಬಗೆಗಿನ ಒಂದು ದೃಷ್ಟಿ. +ಅವು ಏನಾಗಿವೆ ಮತ್ತು ಮುಂದೆ ಏನಾಗಬಹುದು ಎನ್ನುವುದನ್ನು ಯುದ್ಧದಿಂದ ಕಲಿಯಬಹುದೆನ್ನುವುದೂ ಒಂದು ದೃಷ್ಟಿ. + ಈ ದೃಷ್ಟಿಕೋನ ಸರಿಯಾದದ್ದಾದರೆ ಬಿಕ್ಕಟ್ಟಿನ ಸ್ಥಿತಿಯಲ್ಲಿ ಈಗಾಗಲೇ ತಿಳಿದಿರುವ ಸಾಂಪ್ರದಾಯಿಕ ಉದಾರವಾದಿ ತತ್ವಕ್ಕಿಂತ,ಬಿಕ್ಕಟ್ಟಿಗೆ ಮುಖಾಮುಖಿಯಾಗಿ ನಿಲ್ಲಬಲ್ಲ ಒಂದು ರಾಜಕೀಯ ತತ್ವವನ್ನು ಕೊಡಬಲ್ಲದು.” +ತಮ್ಮ ಈ ಮನೋಧರ್ಮಕ್ಕೆ ಸರಿಹೊಂದುವ ಚರ್ಯಾಮೂಲ ಮನಶಾಸ್ತ್ರೀಯ ಧೋರಣೆಯನ್ನವರು ಸ್ವೀಕರಿಸುತ್ತಾರೆ. +ಮನೋವಿಜ್ಞಾನದಲ್ಲಿ ಆದ ಹೊಸ ಬೆಳವಣಿಗೆ ಮತ್ತು ಅದರಿಂದ ಲಭಿಸುವ ಮುಖ್ಯ ಕೊಡುಗೆಯೆಂದರೆ ಮಾನವ ಕ್ರಿಯೆಯಿಂದಲೇ ಎಲ್ಲವೂ ಚಿಮ್ಮುತ್ತದೆ ಅನ್ನುವ ದೃಷ್ಟಿ ಮಾನವನ ಕ್ರಿಯೆಗಳನ್ನು ಬಾಹ್ಯ ಕಾರಣಗಳೇ ನಿಯಂತ್ರಿಸುತ್ತವೆ ಎಂಬ ತತ್ವವನ್ನು ಇದು ಬುಡಮೇಲಾಗಿಸುತ್ತದೆ. +ಇದು ನಿಜವಾದರೆ ಸುಪ್ತ ಜೀವಿಯೊಂದು ಇರಲೇಬೇಕೆಂದು ಆ ಚರ್ಯಾಮೂಲ ಮನೋವಿಜ್ಞಾನಿ ಹೇಳುತ್ತಾರೆ. +ಮಾನವನ ಮೂಲ ಪ್ರವೃತ್ತಿಯ ಬಗ್ಗೆ ತಿಳಿದುಕೊಳ್ಳುವುದು ಹೆಚ್ಚು ಉಪಯುಕ್ತ. +ಅದು ಜೈವಿಕವಾಗಿ ಅಸಾಧ್ಯ ಮಾನವನೊಳಗೆ ಕ್ರಿಯೆಯ ಕಾರಂಜಿಗಳಿರುತ್ತವೆ . + ಯಾಕೆಂದರೆ ಕೆಲವು ನಿರ್ದಿಷ್ಟ ಕ್ರಿಯೆಗಳಲ್ಲಿ ತೊಡಗಲೆಂದೇ ಆಗ ಹುಟ್ಟಿರುತ್ತಾನೆಂದು ಆ ತತ್ವ ಪ್ರತಿಪಾದಿಸುತ್ತದೆ. +ಬಾಹ್ಯ ಒತ್ತಡಗಳು ಕ್ರಿಯೆಯನ್ನು ಪ್ರೇರೇಪಿಸಲಾರವು. +ಅವು ಕ್ರಿಯೆಯ ಹಾದಿಯನ್ನು ಪುನರ್‌ ನಿರ್ದೇಶಿಸಬಹುದು. +ಕ್ರಿಯೆ ಪ್ರವೃತ್ತಿಗಳ ಗತಿ ಸಾಮಾಜಿಕ ಸನ್ನಿವೇಶಗಳಿಂದ ಮಾರ್ಪಾಡಾಗುತ್ತದೆ ಎಂದು ಈ ವರ್ತನ ಮನೋವಿಜ್ಞಾನಿ ಹೇಳುತ್ತಾನೆ. +ಈ ಮೂಲ ಪ್ರವೃತ್ತಿಯಲ್ಲಾಗುವ ಮಾರ್ಪಾಡುಗಳು ಬಹಳ ಮುಖ್ಯ ಶಿಕ್ಷಣ ಪದದ ವಿಶಾಲಾರ್ಥದಲ್ಲಿ ಅವೇ ಶಿಕ್ಷಣವಾಗಿಬಿಡುತ್ತವೆ. +ಆಗುವ ಎಲ್ಲ ಮಾರ್ಪಾಡುಗಳನ್ನು ಮತ್ತು ಸಂಸ್ಥೆಗಳನ್ನು ನಿವಾರಿಸಿಕೊಂಡು ಸಾಮಾಜಿಕ ಹಿತಕ್ಕೆ ಕಾರಣವಾಗಬಲ್ಲ ಮಾರ್ಪಾಡುಗಳನ್ನು ಉಳಿಸಿ-ಬೆಳಿಸಿಕೊಂಡುಹೋಗುವ ಕೆಲಸ ಸುಧಾರಕನಿಗೆ ಸೇರಿದ್ದು, ಅದು ಏನಾದರಾಗಲಿ, ಅನಿರ್ದಿಷ್ಟ ಮಾರ್ಪಾಡುಗಳನ್ನು ಮಾಡಲು ಈ ಪ್ರವೃತ್ತಿಗಳಿಗೆ ಸಾಧ್ಯವೆನ್ನುವುದೇ ಹೆಚ್ಚು ಸಾಮಾಜಿಕ ಮೌಲ್ಯವುಳ್ಳದ್ದು. +ರಸೆಲ್‌ ಹೇಳುವ ಹಾಗೆ ಇದು ಹೇಗೆ ಸಾಧ್ಯವೆಂದರೆ “ಮನುಷ್ಯನ ಪ್ರವೃತ್ತಿಗಳು ಮೊದಲಿನಿಂದಲೂ ತನ್ನ ಮೂಲ ಮನೋಧರ್ಮಗಳಿಂದಲೇ ಛಿದ್ರಗೊಂಡಿರುವುದಿಲ್ಲ. +ಕೆಲವು ಮಿತಿಗಳಿಗೆ ಒಳಪಟ್ಟು ಆತನ ಜೀವನಕ್ರಮ ಪರಿಸ್ಥಿತಿಯ ಒತ್ತಡದಿಂದ ಅವು ಬಹಳಮಟ್ಟಿಗೆ ಮಾರ್ಪಾಡಾಗುವುದುಂಟು. +ಈ ಮಾರ್ಪಾಡಿನ ಸ್ವರೂಪದ ಅಧ್ಯಯನ ಬಹಳ ಮುಖ್ಯ. +ರಾಜಕೀಯ ಮತ್ತು ಸಾಮಾಜಿಕ ಸಂಸ್ಥೆಗಳು ಸಮಾಜದ ಮೇಲೆ ಉಂಟುಮಾಡುವ ಒಳಿತು-ಕೆಡುಕುಗಳ ನಿಷ್ಕರ್ಷೆ ಮಾಡುವಾಗ ಈ ಅಧ್ಯಯನದ ಪರಿಣಾಮಗಳನ್ನು ಗಮನಿಸಲೇಬೇಕಾಗುತ್ತದೆ. +ರಾಜ್ಯ, ಯುದ್ಧ, ಆಸ್ತಿ, ಶಿಕ್ಷಣ, ವಿವಾಹ ಮತ್ತು ಧರ್ಮ ಎನ್ನುವ ವ್ಯವಸ್ಥೆಗಳ ಕೆಳಗೆ ಮಾನವನ ಸ್ವಭಾವ ಮಾರ್ಪಾಡಾಗಿರುವ ಬಗೆಯನ್ನು ಕುರಿತು ರಸೆಲ್‌ ಆರು ಉಜ್ವಲ ಅಧ್ಯಾಯಗಳಲ್ಲಿ ಚರ್ಚಿಸುತ್ತಾರೆ. +ಈ ಅಧ್ಯಯನ ಒಳಗೊಂಡಿರುವ ಸಾಮಾಜಿಕ ತತ್ವಗಳನ್ನು ಸಂಕ್ಷಿಪ್ರಗೊಳಿಸಿ ಸ್ಪಷ್ಟಪಡಿಸಲು ಸಾಧ್ಯವೇ ಇಲ್ಲ. +ಆ ಅಧ್ಯಯನಗಳು ಅವು ವಿವರಿಸುವ ವಿವಿಧ ವಿಷಯಗಳಿಗೆ ಜೀವಂತ ಕೊಡುಗೆಗಳಾಗಿವೆ. +ಅಮೂಲ್ಯ ಸಲಹೆಗಳಿರುವ ವಿಚಾರ ಪ್ರಚೋದಕ ಕೃತಿಗಳನ್ನು ಮೂಲದಲ್ಲಿಯೇ ಅಭ್ಯಸಿಸಬೇಕು. +ಈ ಕ್ರಮ ವಿಮರ್ಶೆಯ ದೃಷ್ಟಿಯಿಂದ ಅಸಾಂಪ್ರದಾಯಿಕವಾದದ್ದೆಂಬುದು ನಿಜ. +ಆದರೆ ಈ ವಿಮರ್ಶೆಒಂದು ಆರ್ಥಿಕ ನಿಯತಕಾಲಿಕಕ್ಕಾಗಿ ಬರೆದದ್ದಾದ್ದರಿಂದ ಹಾಗೂ ಆಸ್ತಿಯೆಂಬ ವ್ಯವಸ್ಥೆ ಮಾನವನ ಪ್ರವೃತಿಯನ್ನು ಹೇಗೆ ಬದಲಾಯಿಸಿದೆ ಎನ್ನುವ ರಸೆಲ್ಲರ ವಿಶ್ಲೇಷಣೆಯನ್ನು ವಿಶೇಷವಾಗಿ ಗಮನಕ್ಕೆ ತೆಗೆದುಕೊಳ್ಳಬೇಕಾಗಿರುವುದರಿಂದ ಇದಕ್ಕೆ ಸಮರ್ಥನೆಯಿದೆ. +ವಿಮರ್ಶೆಗೆ ಮುನ್ನ, ರಸೆಲ್‌ ಯುದ್ಧದ ತಾತ್ವಿಕತೆ ಹೇಗೆ ಅಭಿವೃದ್ಧಿ ತತ್ವಗಳಿಗೆ ಸಂಬಂಧಿಸಿದೆ ಎಂದು ವಿಶ್ಲೇಷಿಸುತ್ತಾರೆ ಅನ್ನುವುದರ ಚರ್ಚೆ ಅರ್ಥಪೂರ್ಣವಾಗಿರುತ್ತದೆ. +ಈ ಕೃತಿ ಯುದ್ಧ ವಿರೋಧಿಯಾದ್ದರಿಂದ, ರಸೆಲ್ಲರ ಕೃತಿಯಲ್ಲಿ ನಿಷ್ಠ್ರಿಯಾ ವಾದವನ್ನು ಕಾಣುವವರು ಅವರನ್ನು ಪೂರ್ಣ ತಪ್ಪಾಗಿ ಗ್ರಹಿಸುತ್ತಾರೆ. +ಯಾಕೆಂದರೆ ಯುದ್ಧ ನಿವಾರಣಾಕಾಂಕ್ಷಿಯಾದರೂ ಅವರು ಸ್ಪಷ್ಟವಾಗಿ ಹೇಳುತ್ತಾರೆ. +“ಆವೇಗದಿಂದ ಉಂಟಾಗುವ ಯುದ್ಧಗಳಿಂದ ವಿನಾಶ ಸಂಭವಿಸಿದರೂ, ಆ ವೇಗ ಉಡುಗಿರುವ ಒಂದು ರಾಷ್ಟ್ರಕ್ಕಿಂತ, ಆವೇಗದಿಂದಿರುವ ಒಂದು ರಾಷ್ಟ್ರಕ್ಕೆ ಒಳ್ಳೆಯ ಭವಿಷ್ಯವಿರುತ್ತದೆ. +ಆವೇಗ ಜೀವಂತಿಕೆಯ ಅಭಿವ್ಯಕ್ತಿ ಅದು ಅಸ್ತಿತ್ವದಲ್ಲಿರುವಾಗ ಸಾವಿನ ಕಡೆಗಲ್ಲದೆ ಜೀವಂತಿಕೆಯ ಕಡೆ ಸಾಗುವ ಭರವಸೆ ಕೊಡುತ್ತದೆ. +ಆವೇಗರಾಹಿತ್ಯವೇ ಸಾವು, ಸಾವಿನಿಂದ ಯಾವುದೇ ಹೊಸ ಸೃಷ್ಟಿ ಸಾಧ್ಯವಿಲ್ಲ” ಆತ ಮುಂದುವರಿದು “ರಾಷ್ಟ್ರಗಳನ್ನು ಯುದ್ಧಗಳ ಕಡೆಗೊಯ್ಯುವ ಈ ಆವೇಗಗಳು ಪ್ರಗತಿಪರ ಅಥವಾ ಸತ್ವಯುತ ಜೀವನಕ್ಕೂ ಅವಶ್ಯಕ. +ಕಲ್ಪನಾ ಸಾಮರ್ಥ್ಯ ಮತ್ತು ಸಾಹಸ ಪ್ರಿಯತೆಗಳಿಲ್ಲದಾಗ ಒಂದು ಸಮಾಜ ನಿಂತ ನೀರಿನಂತಿರುತ್ತದೆ ಮತ್ತು ಅದು ಕೊಳೆತು ನಾರಲು ಪ್ರಾರಂಭಿಸುತ್ತದೆ. +ಮಾನವ ಚಟುವಟಿಕೆಗಳನ್ನು ಉತ್ತೇಜಿಸಿ, ಕೇವಲ ಸಂಪ್ರದಾಯ ಮೃಗೀಯವಲ್ಲದ ಮತ್ತು ವಿನಾಶಕಾರಿಯಲ್ಲದ ಘರ್ಷಣೆ ಅವಶ್ಯಕವಾಗುತ್ತದೆ. +ಒಬ್ಬರ ಗುರಿ ಸಾಧನೆಯ ಬಯಕೆಯನ್ನಾಗಲೀ, ಎಲ್ಲರ ಒಳಿತಿನೊಂದಿಗೆ ತಳುಕು ಹಾಕಿಕೊಂಡ ಭಾವನೆಯನ್ನಾಗಲಿ ನಾಶ ಮಾಡಲು ಬುದ್ಧಿವಂತನೊಬ್ಬ ಮುಂದಾಗಲಾರ. +ಸಾವು,ವಿನಾಶ ಮತ್ತು ದ್ವೇಷಗಳ ಪರಿಣಾಮ ಮಾತ್ರವೇ ಕೇಡು. +ಇವುಗಳಿಂದ ಹೊಮ್ಮುವ ಆವೇಗಗಳು ಯುದ್ಧದಲ್ಲಿ ಪರ್ಯವಸಾನವಾಗದಂತೆ ತಡೆಯುವುದೇ ಸಮಸ್ಯೆ . +ಕ್ರಿಯೆಯೇ ಅಭಿವೃದ್ಧಿಯ ಮೂಲ ಎನ್ನುವುದೇ ಇವೆಲ್ಲದರ ತಾತ್ಪರ್ಯ. +ರಸೆಲ್ಲರು ಯುದ್ಧವಿರೋಧಿಯೆಂದು ಒತ್ತಿ ಹೇಳಬೇಕು. +ಆದರೆ ಅವರು ಕ್ರಿಯಾಶೂನ್ಯತೆಯ ಪರವಲ್ಲ. +ಯಾಕೆಂದರೆ ಅವರ ಪ್ರಕಾರ ಕ್ರಿಯಾಶೀಲತೆ ಅಭಿವೃದ್ಧಿ ಪಥದ್ದಾದರೆ, ಕ್ರಿಯಾಶೂನ್ಯತೆ ಸಾವಿಗೆ ಮತ್ತೊಂದು ಹೆಸರು. +ಇದನ್ನು ಪ್ರೊ.ಡ್ಯೂಯಿ ಅವರ ಮಾತುಗಳಲ್ಲಿ ಹೇಳಬೇಕೆಂದರೆ, ರಸೆಲ್‌ “ಶಕ್ತಿಯನ್ನು ಹಿಂಸಾತ್ಮಕ ಕೃತಿಗಳಿಗೆ ಬಳಸುವುದಕ್ಕೆ” ಮಾತ್ರ ವಿರೋಧಿಯೇ ಹೊರತು “ಶಕ್ತಿಯನ್ನು ಶಕ್ತಿಯಾಗಿ ಬಳಸುವುದಕ್ಕಲ್ಲ. +ಅವರು ಅದರ ಕಟ್ಟಾ ಬೆಂಬಲಿಗರು. +ಯಾವುದಾದರೂ ಧ್ಯೇಯೋದ್ದೇಶವಿಲ್ಲದ ಎಲ್ಲ ಚಟುವಟಿಕೆಗಳು ನಿಷ್ಟಮೋಜಕವಾದ ಅವಿವೇಶಕ್ಕಿಂತ ಕಡೆಯಾಗುವಂತೆ, ಶಕ್ತಿಯ ಬಳಕೆಯಿಲ್ಲದೆ ಎಲ್ಲ ಆದರ್ಶಗಳೂ ಪೊಳ್ಳಾಗುತ್ತವೆನ್ನುವುದ್ದು ಅವರ ವಿರೋಧಿಗಳು ನೆನಪಿಟ್ಟುಕೊಳ್ಳಬೇಕಾಗಿದೆ. +ಆದ್ದರಿಂದ ಗುರಿ ಮತ್ತು ದಾರಿಗಳು (ಅಂದರೆ ಶಕ್ತಿಯ ಕ್ರಿಯಾತ್ಮಕತೆ) ಸಹವರ್ಶಿಗಳು, ಹಾಗೂ ಗುರಿದಾರಿಯನ್ನು ಸಮರ್ಥಿಸುತ್ತದೆ ಎನ್ನುವ ನಾಣ್ಣುಡಿಯಲ್ಲಿ ಸತ್ಯವಿದೆ. +ಆದರೆ ಆ ನಾಣ್ಣುಡಿಯನ್ನು ತಪ್ಪಾಗಿ ಗ್ರಹಿಸಿ ಅದನ್ನು ವಿಕೃತಗೊಳಿಸಲಾಗಿದೆ. +ಯಾಕೆಂದರೆ ಗುರಿ ದಾರಿಯನ್ನು ಸಮರ್ಥಿಸುವುದಿಲ್ಲವಾದರೆ ಅದಕ್ಕೆ ಸಮರ್ಥನೆ ಯಾವುದು ? + ಆದರೆ ನಾವು ಗುರಿಸಾಧನೆಗಾಗಿ ಬಳಸುವ ಸಾಧನೆಗಳನ್ನು ಸರಿಯಾಗಿ ನಿಯಂತ್ರಿಸದಿರುವುದೇ ಇಲ್ಲಿನ ಸಮಸ್ಯೆ. +ಈ ಸಾಧನಗಳನ್ನು ಒಮ್ಮೆ ನಾವು ಬಳಸಿದಾಗ ಅದು ಹಲವಾರು ಗುರಿಗಳನ್ನು ಸಾಧಿಸಬಲ್ಲದು, ಉದ್ದೇಶಿತ ಗುರಿಯೊಂದನ್ನೇ ಅಲ್ಲ. +ಆದರೆ ನಮ್ಮ ಗುರಿ ಸಾಧಿಸಲೇಬೇಕೆಂಬ ಛಲದಿಂದ ಅದಕ್ಕೆ ನಿರ್ದೇಶನ ಗುಣವಾಚೆಯನ್ನು ತಗುಲಿಸಿ ಅದೇ ಸಮಯಕ್ಕೆ ಸಾಧಿಸಲಾಗುವ ಇತರ ಗುರಿಗಳ ಬಗ್ಗೆ ಗಮನಹರಿಸುವುದಿಲ್ಲ. +ಉತ್ತಮ ಪ್ರಯೋಗಶೀಲ ಬದುಕಿನ ಜರೂರುಗಳಿಗೆ ತಕ್ಕಂತೆ ಒಂದು ಗುರಿಗೆ ಪರಮ ಮೌಲ್ಯ ನಿರ್ಣಯ ಮಾಡಬೇಕಾಗುತ್ತದೆ. +ಆದರೆ ಹಾಗೆ ಮಾಡುವಾಗ ಆ ಪಕ್ರಿಯೆಯಲ್ಲಿ ಅಡಗಿರುವ ಇತರ ಗುರಿಗಳಿಗೆ ಧಕ್ಕೆಯಾಗದಂತೆ ಎಚ್ಚರವಹಿಸಬೇಕು. +ಅತ್ಯಗತ್ಯ ನಾವು ಶಕ್ತಿಯನ್ನು ಒಂದು ಗುರಿಸಾಧನೆಗಾಗಿ ಬಳಸಲೇಬೇಕು; +ಹಾಗೆ ಬಳಸುವಾಗ, ಉಳಿಸಿಕೊಳ್ಳಲು ಯೋಗ್ಯವಾದ ಗುರಿಗಳನ್ನು ಆ ಪ್ರಕ್ರಿಯೆಯಲ್ಲಿ ನಾಶವಾಗದಂತೆ ನೋಡಿಕೊಳ್ಳುವುದೇ ಇಲ್ಲಿಯ ಸಮಸ್ಯೆ. +ಹಾಲಿ ನಡೆಯುತ್ತಿರುವ ಯುದ್ಧಕ್ಕೆ ಇದನ್ನು ಅನ್ವಯ ಮಾಡಿನೋಡಿದಾಗ, ಇಲ್ಲಿ ಶಕ್ತಿಯ ಬಳಕೆಯ ಅವಶ್ಯಕತೆಯೇ ಇಲ್ಲವೆಂದು ನನಗನಿಸುತ್ತದೆ. +ವಿನಾಶಕಾರಿ ಹಿಂಸೆಯ ಸಮರ್ಥನೆಯೇ ಈಗ ಅತ್ಯಗತ್ಯವಾದದ್ದು ಹಿಂಸಾತ್ಮಕ ಮಾರ್ಗ ಒಂದರಿಂದಲೇ ಗುರಿಸಾಧನೆ ಸಾಧ್ಯ. +ಅನ್ಯಥಾ ಶರಣಂ ನಾಸ್ತಿ, ಹಾಗೂ ಜಗತ್ತಿನ ಸುಭದ್ರತೆಯನ್ನು ಕಾಪಾಡುವ ಇತರ ಉಪಯುಕ್ತ ಗುರಿಗಳಿಗೆ ಹಿಂಸಾಪಕ್ರಿಯೆಯಲ್ಲಿ ಯಾವುದೇ ತೊಂದರೆಯಾಗುವುದಿಲ್ಲವೆಂದು ಜಗತ್ತು ಒಪ್ಪಿಕೊಳ್ಳುವಂತೆ ಯುದ್ಧ ನಿರತವಾದ ಒಂದಲ್ಲ ಒಂದು ರಾಷ್ಟ್ರ ಸಮರ್ಥಿಸಿಕೊಳ್ಳಬೇಕು. +ಹಿಂಸೆ ಎಲ್ಲ ಕಾಲಕ್ಕೂ ತ್ಯಾಜ್ಯವಲ್ಲವೆನ್ನುವುದು ನಿಜವಾದರೂ, ಪ್ರತಿಭಟನೆಗೆ ಅಹಿಂಸಾ ಮಾರ್ಗವೇ ಉತ್ತಮವೆನಿಸಿದಾಗ ಅದನ್ನು ಬಳಸಬಹುದು. +ಅದರ ಜಾಣ್ಮೆಯಿಂದ ಆ ಶಕ್ತಿಯನ್ನು ನಿಯಂತ್ರಿಸಬೇಕಾದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. +ಸಂಕ್ಷಿಪ್ತವಾಗಿ ಹೇಳುವುದಾದರೆ, ಗುರಿಸಾಧನೆಗೆ ನಾವು ಶಕ್ತಿಯನ್ನು ಬಳಸಬೇಕು; +ಅದನ್ನು ರಚನಾತ್ಮಕ ಶಕ್ತಿಯಾಗಿ ಬಳಸಬೇಕೇ ಹೊರತು, ವಿನಾಶಕಾರಿ ಹಿಂಸೆಯಾಗಿ ಅಲ್ಲ. +ಏಕಾಸ ತತ್ವಕ್ಕೆ ಸಂಬಂಧಿಸಿದಂತೆ ಯುದ್ಧ ಸಿದ್ಧಾಂತದ ಸುದೀರ್ಫ್ಥ ಚರ್ಚೆಯನ್ನು ಅವಶ್ಯವಾದರೆ ಒಂದಲ್ಲ ಹಲವಾರು ದುರ್ಬಲಗೊಳಿಸಿದ ಸಂದರ್ಭಗಳ ಮೂಲಕ ಸಮರ್ಥಿಸಿಕೊಳ್ಳಲು ಸಾಧ್ಯ. +ಯೂರೋಪಿನ ಯುದ್ಧ ಶಕ್ತಿ ಸಿದ್ಧಾಂತದ ವಿರುದ್ಧ ಇಲ್ಲಸಲ್ಲದ ವಾದಗಳನ್ನು ಒಡ್ಡಿ ವಿವೇಚನಾ ರಹಿತವಾಗಿ ಹೀಗಳೆದಿದೆ . + ಕ್ರಿಯಾಶೂನ್ಯತಾ ತತ್ವವನ್ನೂ ಆ ಪ್ರತಿರೋಧ ಸಿದ್ಧಾಂತವನ್ನೂ ದೊಡ್ಡದಾಗಿ ಎತ್ತಿಹಿಡಿದಿದೆ. +ಈ ಕೃತಿ ಯುದ್ಧ ವಿರೋಧಿ ಎಂಬ ಕಾರಣಕ್ಕಾಗಿ ಅಲ್ಲ; +ಆತನಿಗೆ ಆರು ತಿಂಗಳ ಕಾರಾಗಾರ ವಾಸದಶಿಕ್ಷೆ ವಿಧಿಸಿದ್ದು ಈಗ ವಿಮರ್ಶೆ ಮಾಡುತ್ತಿರುವ ಕೃತಿ ರಚನೆ ಮಾಡಿದ್ದಕ್ಕಾಗಿಯೂ ಅಲ್ಲ, ಆತ ಯುದ್ಧವಿರೋಧಿ ನಿಲುವು ತಳೆದ ಕಾರಣಕ್ಕಾಗಿ. +ಆದರೆ ಯುದ್ಧ ಕೆಟ್ಟ ಪರಿಣಾಮಗಳಿಗೆ ಹಾದಿ ಮಾಡಿ ಕೊಡುತ್ತದೆಯಾದ್ದರಿಂದ ಪ್ರತಿಭಟನೆ ಮತ್ತು ಕ್ರಿಯಾತ್ಮಕತೆಗೆ ಬೆಂಬಲ ಕೊಡಬಾರದೆಂದು, ಕೆಲವರು ಇದನ್ನು ತಮ್ಮ ಕ್ರಿಯಾಶೂನ್ಯ ಭಾವನೆಗಳ ಸಮರ್ಥನೆಗೆ ಬಳಸಿಕೊಳ್ಳುವ ಸಾಧ್ಯತೆ ಇದೆ. +ಆದ್ದರಿಂದಲೇ ಈ ಶಕ್ತಿಯ ಬಳಕೆಯ ಖಂಡನೆಯಲ್ಲಿ ರಸೆಲ್ಲರ ಪಾಲು ಎಷ್ಟೆಂದು ತಿಳಿಯುವ ಅವಶ್ಯಕತೆಯಿತ್ತು. +ರಸೆಲ್ಲರ ಭಾರತೀಯ ಓದುಗರ ಪೂರ್ವಗ್ರಹ ಮನೋಭಾವವೇ ಮತ್ತೊಂದು ಸಮರ್ಥನೀಯ ವಿಷಯವಾಗುತ್ತದೆ. +ಶಕ್ತಿಯ ಸಿದ್ಧಾಂತಕ್ಕೆ ಪರ್ಯಾಯವಾಗಿ ರಸೆಲ್‌ ಪ್ರತಿಪಾದಿಸುವುದು. +ಪೌರ್ವಾತ್ಯ ತತ್ವಶಾಸ್ತ್ರ ನಿಖರವಾಗಿ ಹೇಳುವುದಾದರೆ ಭಾರತೀಯ ತತ್ವಶಾಸ್ತ್ರ ಅದು ನಮಗೆ ಸ್ಪಷ್ಟವಾಗಿಯೇ ಮನದಟ್ಟಾಗುತ್ತದೆ. +ಆದ್ದರಿಂದಲೇ ರಸೆಲ್ಲರ ಮನೋಧರ್ಮದ ನಿಖರ ವಿಶ್ಲೇಷಣೆಯನ್ನು ಭಾರತೀಯ ಓದುಗರ ಮುಂದಿಡುವ ಅವಶ್ಯಕತೆ ಮುಖ್ಯವಾಗಿ ಕಂಡದ್ದು. +ಮುಂಜಾಗ್ರತೆ ವಹಿಸದಿದ್ದರೆ ಅವರ ಪ್ರಶಾಂತ ಜೀವನದ ಬಗೆಗಿನ ಹಾಗೂ ಅಪ್ರತಿರೋಧ ಸಿದ್ಧಾಂತ ಬಗೆಗಿನ ಅವರ ತಾತ್ವಿಕ ಪೂರ್ವಗ್ರಹದ ಹಾತೊರೆತದಿಂದಾಗಿ ರಸೆಲ್‌ನ ಕೃತಿಯಲ್ಲಿ ತಮ್ಮ ಜೀವನದ ದೃಷ್ಟಿಯ ಸಮರ್ಥನೆಯನ್ನು ಕಂಡುಕೊಳ್ಳಬಹುದೆಂಬ ಭಯ ನನಗಿದೆ. +ಭಾರತೀಯರ ಜೀವನದೃಷ್ಟಿ ವ್ಯಾವಹಾರಿಕವಾದದ್ದೇ ? +ತನ್ನ ಸಿನಿಕತನದಿಂದಾಗಿ ನೀತ್ಸೆ ಕ್ರೈಸ್ತ ಧರ್ಮದ ಬಗ್ಗೆ ಮಾತನಾಡುತ್ತಾ ಕ್ರಿಶ್ಚಿಯನ್‌ ಇದ್ದವನೊಬ್ಬನೇ, ಅವನನ್ನು ಗಲ್ಲಿಗೇರಿಸಲಾಯಿತು ಎಂದು ನುಡಿದನು. +ಕ್ರೈಸ್ತಧರ್ಮದ್ದು ಅವ್ಯವಹಾರಿಕ ಜೀವನದೃಷ್ಟಿ ಎನ್ನುವ ಅರ್ಥ ಬರುವಂತೆ ಹೇಳಿದನು. +ಈ ಹೇಳಿಕೆ ಕ್ರಿಶ್ಚಿಯನ್‌ ಜೀವನ ದೃಷ್ಟಿಯ ಬಗ್ಗೆ ನಿಜವಾದದ್ದಾದರೆ, ಪೂರ್ವದೇಶಗಳ ಜನರ ಜೀವನದೃಷ್ಟಿಯ ಬಗ್ಗೆ ಅದು ಇನ್ನೂ ಹೆಚ್ಚು ಸತ್ಯವೆಂದು ಒಪ್ಪಬೇಕಾಗುತ್ತದೆ. +ಯಾಕೆಂದರೆ ಕ್ರೈಸ್ತಧರ್ಮ ಪಾಶ್ಚಾತ್ಯ ದೇಶಗಳಲ್ಲಿ ಹೆಚ್ಚು ಪ್ರಚಲಿತವಿದ್ದರೂ ಅದರ ಸತ್ಯ ಮತ್ತು ಮೂಲಗಳಿರುವುದು ಪೂರ್ವದೇಶಗಳಲ್ಲೇ. +ಅಷ್ಟೇ ತೀಕ್ಷ್ಣವಾಗಿ ಅಲ್ಲದಿದ್ದರೂ ಖಂಡನಾರ್ಹವಾದದ್ದೆಂದರೆ ರಸೆಲ್ಲರು ಈ ಅಪ್ರತಿರೋಧ ತಾತ್ವಿಕ ದೃಷ್ಟಿಯ ಬಗೆಗೆ ತಾಳುವ ನಿಲುವು. +ಇನ್ನೂ ಭಯಂಂಕರವಾದದ್ದೆಂದರೆ, ಭಾರತೀಯರು ತಮ್ಮ ರಾಷ್ಟ್ರ ಅನುಭವಿಸಿದ ಕಷ್ಟಕೋಟಲೆಗಳ ಹಿನ್ನೆಲೆಯಲ್ಲೂ ತಾತ್ವಿಕವಾಗಿ ಅಸಾಧ್ಯವಾದದ್ದೆಂದು ಸಾಬೀತಾದ ಇದೇ ಜೀವನದೃಷ್ಟಿಗೆ ಜೋತು ಬಿದ್ದಿರುವದು. +ಅಷ್ಟೇ ಅಲ್ಲ ಭಾರತೀಯರ ಪ್ರಸಕ್ತ ರಾಷ್ಟೀಯತಾ ದಿನಗಳಲ್ಲಿ ಎಲ್ಲಾ ಭಾರತೀಯವಾದದ್ದೇ ಆಗಿರಬೇಕೆಂದು ಪಟ್ಟುಹಿಡಿದು ಅದನ್ನೇ ಸಮರ್ಥಿಸಿಕೊಂಡು ಎತ್ತಿ ಹಿಡಿಯುವ ಸಾಧ್ಯತೆಯಿದೆ. +ಯುದ್ಧದ ಪರಿಣಾಮದಿಂದಾಗಿ ಲಬ್ಧವಾಗಿರುವ ಪೌರ್ವಾತ್ಯ ಮತ್ತು ಪಾಶ್ಚಾತ್ಯಗಳ ನಡುವಿನ ಅಂತರಗಳನ್ನು ಗಮನಿಸಿ. +ಯುದ್ಧ ಮತ್ತು ವಿನಾಶಗಳಿಗೆ ಕಾರಣವಾದ ಪಶ್ಚಿಮದ ವಿಪರೀತ ಭೌತವಾದದಿಂದ ತಾನು ಮುಕ್ತವಾಗಿರುವುದಾಗಿ, ಸ್ಪಪ್ರಶಂಸೆಯ ರೂಪದಲ್ಲಿ ತನ್ನ ಪ್ರಾಧಾನ್ಯವನ್ನು ಪ್ರದರ್ಶಿಸಿಕೊಳ್ಳಲು ಪೂರ್ವ ಕಾತರವಾಗಿದೆಯೆಂಬುದು ಅಂತಹ ಅಂತರಗಳಲ್ಲೊಂದು. +ಆದರೆ ಪಾಶ್ಚಾತ್ಯದೇಶಗಳ ಈ ರೀತಿಯ ಕ್ರೂರ ಭೇದ ಸಮರ್ಥನೀಯವಲ್ಲ. +ನಾವೆಲ್ಲ ಭೌತವಾದಿಗಳೇ ಎನ್ನುವುದನ್ನು ಮರೆಯುವ ಸ್ಪಭಾವದವು ಪೂರ್ವ ದೇಶಗಳು. +ಯುದ್ಧದ ವಿಷಯದಲ್ಲಿ ಬಹುಶಃ ಪಶ್ಚಿಮವನ್ನು ನಾವು ದೂರಬಹುದು. +ಆದರೆ ಅದು ತಿರುಗಿಸಿ ಹೇಳಬಹುದು. +“ಕ್ರಿಯಾ ಶೂನ್ಯರಾಗಿರುವುದು ಸತ್ತಂತೆ; +ಜೀವನ ತ್ರಿಯಾತ್ಮಕವಾದದ್ದು. +ಕ್ರಿಯಾಹೀನರಾಗಿರುವುದಕ್ಕಿಂತಲೂ ಯುದ್ಧದಲ್ಲಿ ಹಿಂಸಾತ್ಮಕ ಕೃತ್ಯಕ್ಕಿಳಿದು ಕ್ರಿಯಾಶೀಲರಾಗುವುದೇ ಲೇಸು. +ಯಾಕೆಂದರೆ ನಾವು ಕ್ರಿಯಾತ್ಮಕವಾದಾಗಲೇ ಒಳ್ಳೆಯ ಕೆಲಸಗಳಾಗುವ ಸಾಧ್ಯತೆಗಳೂ ಇರುತ್ತವೆ.” + ಹೀಗೆ ಇದು ಆಶ್ಚರ್ಯಕರವಾದರೂ, ಯುದ್ಧ ವಿರೋಧಿ ರಸೆಲ್‌, ಯುದ್ಧ ಮಾನವನ ಅಭಿವೃದ್ಧಿಗೆ ಸಹಾಯಕವಾಗುತ್ತದೆಂದು ಯೋಚಿಸುತ್ತಲೇ ಸಾವು ವಿನಾಶಗಳಿಗೆ ಸಹಕಾರಣವಾಗುತ್ತದೆಂದು ಅದನ್ನು ಖಂಡಿಸುತ್ತಾರೆ. +ಆತ ಸೌಮ್ಯರೂಪದ ಯುದ್ಧವನ್ನು ಸ್ವಾಗತಿಸುತ್ತಾರೆ. +ಯಾಕೆಂದರೆ ಅವರ ಪ್ರಕಾರ “ಪ್ರತಿಯೊಬ್ಬ ವ್ಯಕ್ತಿಗೂ ಒಂದಲ್ಲ ಒಂದು ರೀತಿಯ ಸ್ಪರ್ಧೆಯ ಅವಶ್ಯಕತೆ ಇದೆ. +ಅಡಜಣೆಗಳನ್ನೆದುರಿಸುವಲ್ಲಿ ತನ್ನ ಶಕ್ತಿ ಸಾಮರ್ಥ್ಯಗಳನ್ನು ತೊಡಗಿಸುವ ಒಂದು ಅನುಭವ ಆತನಿಗೆ ಬರುತ್ತದೆ.” + ಅಂದರೆ, ತಾನು ಬೆಳೆಯುತ್ತಿರುವುದಾಗಿ ಆತ ಭಾವಿಸುತ್ತಾನೆ. +ಅತಿ ಪ್ರಾಚೀನ ಸಂಸ್ಕೃತಿಗಳಲ್ಲೆಲ್ಲಾ ಭಾರತವೊಂದೇ ತನ್ನ ಇರವನ್ನು ಅನೂಚಾನವಾಗಿ ಸಾಬೀತು ಮಾಡಿಕೊಂಡಿರುವ ದೇಶವೆಂಬ ಕಾರಣವನ್ನು ಮುಖ್ಯವಾಗಿ ಭಾರತೀಯ ಜೀವನದೃಷ್ಟಿಯ ಬೆಂಬಲಕ್ಕೆ ತೆಗೆದುಕೊಳ್ಳಲಾಗುತ್ತದೆ. +ಮೇಲಿಂದ ಮೇಲೆ ಕಿವಿಯ ಮೇಲೆ ಬೀಳುವ ಹಲವಾರು ಜನರ ಇಂಥ ಅಭಿಪ್ರಾಯಗಳನ್ನು ಸುಲಭವಾಗಿ ತಳ್ಳಿಹಾಕುವಂತಿಲ್ಲ. +ಈ ಹೇಳಿಕೆಯ ಸಮರ್ಥನೆ ಅಥವಾ ನಿರಾಕರಣೆಯವಾಗ್ದಾದದಲ್ಲಿ ತೊಡಗಲು ನನಗೆ ಇಷ್ಟವಿಲ್ಲ. +ಭಾರತದ ಪರಂಪರಾಗತ ಉಳಿವನ್ನು ಒಪ್ಪಿಕೊಳ್ಳುತ್ತಾ ನಾನು ಅದಕ್ಕಿಂತ ಮುಖ್ಯವಾದ ಒಂದು ಅಭಿಪ್ರಾಯ ತಿಳಿಸಬಯಸುತ್ತೇನೆ. +ಉಳಿವು ನಾನಾ ರೀತಿಯಲ್ಲಿರುತ್ತದೆ. +ಅವೆಲ್ಲವೂ ಸಮಾನ ಸ್ವಾಗತಕ್ಕರ್ಹವಾದುವೇನಲ್ಲ. +ಉದಾಹರಣೆಗೆ, ಬಲಹೀನ ಜನಾಂಗಗಳೂ ಉಳಿದುಕೊಂಡು ಬರಲು ಹಿಂದೆಗೆಯುವ ಪ್ರವೃತ್ತಿ ಸಹಾಯಕವಾಗಿರುತ್ತದೆ. +ಆದ್ದರಿಂದ ಎಲ್ಲ ಸಂದರ್ಭಗಳಿಗೂ ಎದೆಯೊಡ್ಡಿನಿಲ್ಲುವ ಶಕ್ತಿ ಉಳಿವಿಗೆ ಸಹಾಯಕವಾಗುತ್ತದೆ. +ಆ ಕಾರಣದಿಂದಾಗಿ ರೂಢಿಯಲ್ಲಿರುವ ಸಾಮಾನ್ಯ ನಂಬಿಕೆಯಂತೆ, ಜನಾಂಗವೊಂದು ಅತಿ ಹೆಚ್ಚು ಕಾಲ ಉಳಿದುಕೊಂಡು ಬಂದಿರುವ ಕಾರಣವೊಂದರಿಂದಲೇ ಅವರು ಬೆಳೆಯುತ್ತಾ ಪ್ರತಿಪಥದಲ್ಲಿದ್ದಾರೆಂದು ಹೇಳಲಾಗದು. +ಹೀಗಾಗಿ ಕೇವಲ ಉಳಿಯುವಿಕೆಯೊಂದೇ ಅಲ್ಲದೆ, ಅದರ ಬದುಕಿನ ಗುಣಮಟ್ಟ ಹಾಗೂ ಉಳಿದಿರುವ ಹಂತ ಬಹಳ ಮುಖ್ಯ. +ರಸೆಲ್ಲರನ್ನು ಓದುವ ಭಾರತೀಯರು ಬದುಕಿರುವುದರಿಂದಲೇ ತೃಪ್ತಿಪಡದೆ, ತಮ್ಮ ಬದುಕಿನ ಗುಣಮಟ್ಟದ ಬಗ್ಗೆ ಶೋಧನೆ ಮಾಡಿಕೊಂಡರೆ ಅವರು ಖಂಡಿತವಾಗಿಯೂ ತಮ್ಮ ಜೀವನ ಮೌಲ್ಯಗಳನ್ನು ಪುನರ್‌ ವಿಮರ್ಶಿಸುವ ಅವಶ್ಯಕತೆಯನ್ನು ಮನಗಾಣುತ್ತಾರೆಂದು ನನ್ನ ದೃಢ ನಂಬಿಕೆ. +ಯುದ್ಧ ಸಂಬಂಧಿ ತಾತ್ವಿಕತೆಯನ್ನು ಕುರಿತ ರಸೆಲ್ಲರ ಮನೋಭಾವದ ಬಗ್ಗೆ ಇಷ್ಟು ಸಾಕು. +ಈಗ ಆಸ್ತಿಯ ಪರಿಣಾಮಗಳನ್ನು ಕುರಿತ ಅವರ ವಿಶ್ಲೇಷಣೆಯ ಕಡೆ ಗಮನ ಹರಿಸೋಣ. +ರಸೆಲ್‌ ಇಂದಿನ ಸಮಾಜಗಳ, ವಿವಿಧ ಆರ್ಥಿಕ ವ್ಯವಸ್ಥೆಗಳನ್ನು, ಅವುಗಳಿಂದ ಉದ್ಭವಿಸುವ ಸಾಮಾಜಿಕ ರೋಗಗಳನ್ನು ಮತ್ತು ಅವುಗಳ ಪರಿಹಾರಗಳನ್ನು ಕುರಿತು ವಿಮರ್ಶೆ ಮಾಡುತ್ತಾರೆ. +ತಮ್ಮ ವಿಮರ್ಶೆಯನ್ನು ಅವರೇ ಹೀಗೆ ಸಂಕ್ಷೇಪಗೊಳಿಸುತ್ತಾರೆ. +“ಪ್ರಸಕ್ತ ವ್ಯವಸ್ಥೆಯ ಕೇಡುಗಳು ಗ್ರಾಹಕ, ಉತ್ಪಾದಕ ಮತ್ತು ಬಂಡವಾಳಗಾರ ಇವರ ವಿಭಿನ್ನ ಆಸಕ್ತಿಗಳ ಪ್ರತ್ಯೇಕತೆಯ ಫಲ. +ಈ ಮೂರು ವರ್ಗಗಳಲ್ಲಿ ಯಾವ ವರ್ಗಕ್ಕೂ ಜನತೆಗಿರುವಂಥ ಆಸಕ್ತಿಗಳಿಲ್ಲ . +ಅಥವಾ ಅವರಲ್ಲಿ ಯಾವ ಎರಡು ವರ್ಗಗಳ ನಡುವೆಯೂ ಸಮಾನ ಆಸಕ್ತಿಗಳಿಲ್ಲ. +ಗ್ರಾಹಕ ಮತ್ತು ಬಂಡವಾಳಗಾರರ ನಡುವಿನ ಸಂಬಂಧವನ್ನು ಸಹಕಾರಿ ವ್ಯವಸ್ಥೆ ಬೆಸೆಯಬಲ್ಲದು. +ಕಾರ್ಮಿಕ ಯಜಮಾನ್ಯ ಪದ್ಧತಿ ಉತ್ಪಾದಕ ಮತ್ತು ಬಂಡವಾಳಗಾರರ ಹಿತಾಸಕ್ತಿಗಳನ್ನು ಒಟ್ಟುಗೂಡಿಸಬಲ್ಲದು. +ಯಾವುದೇ ಆಗಲಿ ಮೂರು ವರ್ಗಗಳನ್ನು ಒಂದುಗೂಡಿಸುವುದಿಲ್ಲ. +ಅಥವಾ ಜನತೆಯ ಹಿತಾಸಕ್ತಿಯ ಜೊತೆಕೈಗಾರಿಕೋದ್ಯಮಿಗಳ ಹಿತವನ್ನು ಬೆಸೆಯಗೊಡುವುದಿಲ್ಲ. +ಆದ್ದರಿಂದ ಯಾವುದೇ ಆಗಲಿ ಕೈಗಾರಿಕಾ ಅಶಾಂತಿಯನ್ನಾಗಲೀ, ಸರ್ಕಾರ ಮಧ್ಯೆ ಪ್ರವೇಶಿಸುವುದನ್ನಾಗಲೀ ತಡೆಯಲು ಶಕ್ತವಲ್ಲ. +ಆದರೆ ಸದ್ಯದ ವ್ಯವಸ್ಥೆಗಿಂತ ಯಾವುದಾದರೊಂದು ಉತ್ತಮವೆಂದೇ ಹೇಳಬಹುದು. +ಪ್ರಾಯಶಃ ಉಭಯ ಸಮ್ಮಿಶ್ರಣದಿಂದ ಪ್ರಸಕ್ತ ಕೈಗಾರಿಕಾ ವ್ಯವಸ್ಥೆಯ ನ್ಯೂನತೆಗಳನ್ನು ಸರಿಪಡಿಸಬಹುದು. +ಪುರುಷರು ಮತ್ತು ಸ್ತ್ರೀಯರು ಹೋರಾಟ ಮಾಡಿ ರಾಜಕೀಯ ಜನತಂತ್ರವನ್ನು ಗಳಿಸಿಕೊಂಡರೂ, ಅವರು ಕೈಗಾರಿಕಾ ಜನತಂತ್ರವನ್ನು ಗಳಿಸಲು ಹೋರಾಟ ಮಾಡದೇ ಇರುವುದು ನಿಜವಾಗಿಯೂ ಆಶ್ಚರ್ಯಕರ. +ಸಹಕಾರಿ ಮಾದರಿಯ ಕೈಗಾರಿಕಾ ಜನತಂತ್ರದಿಂದ ಅಥವಾ ಸರ್ಕಾರದ ಉದ್ದೇಶ ಸಾಧನೆಗಾಗಿಯೇ ವ್ಯಾಪಾರ ಅಥವಾ ಕೈಗಾರಿಕೆಯನ್ನು ಏಕ ಘಟಕವಾಗಿ ಮಾನ್ಯ ಮಾಡುವುದರಿಂದ ಅಸಂಖ್ಯಾತ ಪ್ರಯೋಜನಗಳಾಗುತ್ತವೆ ಎಂದು ನಂಬಿಕೆ. +ಇದು ಕೂಡಾ ಒಂದು ರೀತಿಯ ಕಾರ್ಮಿಕ ಯಜಮಾನ್ಯ ರೀತಿಯ ಸ್ವರಾಜ್ಯ ವ್ಯವಸ್ಥೆ ಬಯಸುವಂಥಾದ್ದೆ. +ಸರ್ಕಾರೀ ಘಟಕಗಳು ಭೌಗೋಳಿಕ ಪರಿಧಿಯೊಳಗೇ ಇರಬೇಕೆನ್ನುವುದಕ್ಕೆ ಕಾರಣವಿಲ್ಲ. +ಹಿಂದೆ ಸಂಪರ್ಕ ಯಜಮಾನ್ಯ ರೀತಿಯ ಸ್ವರಾಜ್ಯ ವ್ಯವಸ್ಥೆ ಬಯಸುವಂಥಾದ್ದೆ. +ಸರ್ಕಾರೀ ಘಟಕಗಳು ಭೌಗೋಳಿಕ ಪರಿಧಿಯೊಳಗೇ ಇರಬೇಕೆನ್ನುವುದಕ್ಕೆ ಕಾರಣವಿಲ್ಲ. +ಹಿಂದೆ ಸಂಪರ್ಕ ಮಾಧ್ಯಮಗಳ ಅಭಾವವಿದ್ದ ಕಾರಣ ಅದು ಅವಶ್ಯಕವಾಗಿತ್ತು. +ಆದರೆ ಈಗ ಅದರ ಅವಶ್ಯಕತೆಯಿಲ್ಲ. +ಈ ತರಹ ಒಂದು ವ್ಯವಸ್ಥೆಯಲ್ಲಿ ಹಲವಾರು ಜನ ತಮ್ಮ ಕೆಲಸದ ಬಗ್ಗೆ ಹೆಮ್ಮೆಪಡಲು ಸಾಧ್ಯವಿದೆ; +ಮತ್ತು ಈಗ ಕೆಲವೇ ಕೆಲವು ಅದೃಷ್ಟಶಾಲಿಗಳನ್ನುಳಿದು ಬಹಳ ಜನಕ್ಕೆ ನಿರಾಕರಿಸಲಾಗಿರುವ ಸೃಜನಾತ್ಮಕ ಪ್ರವೃತ್ತಿಗಳಿಗೆ ಹೊರಗಂಡಿಯನ್ನು ತೆರೆದಂತಾಗುತ್ತದೆ. +ಇಂಥ ವ್ಯವಸ್ಥೆ ಭೂಮಿಯ ಖಾಸಗಿ ಒಡೆತನದ ರದ್ಧತಿ ಮತ್ತು ಬಂಡವಾಳಗಾರರ ನಿಯಂತ್ರಣವನ್ನು ಬಯಸುತ್ತದೆ. +ಆದರೆ ಸಮಾನಗಳಿಕೆಯನ್ನೇನೂ ಅದು ಬಯಸುವುದಿಲ್ಲ. +ಸಮಾಜವಾದದಂತೆ, ಅದು ಚಲನ ರಹಿತ ಮತ್ತು ಅಂತಿಮ ವ್ಯವಸ್ಥೆಯಲ್ಲ. +ಅದು ಶಕ್ತಿ ಮತ್ತು ಉಪಕ್ರಮಗಳಿಗೆ ಬೇಕಾದ ಚೌಕಟ್ಟಗಿಂತ ಬೇರೆಯಾದದ್ದೂ ಅಲ್ಲ, ಹೆಚ್ಚಿನದೂ ಅಲ್ಲ. +ಈ ತರದ ಯಾವುದಾದರೊಂದು ಇಂಥ ವಿಧಾನದ ಮೂಲಕ ಮಾತ್ರ ಔದ್ಯೋಗೀಕರಣಕ್ಕಗತ್ಯವಾದ ಬೃಹತ್‌ತಾಂತ್ರಿಕ ವ್ಯವಸ್ಥೆಯೊಡನೆ ವ್ಯಕ್ತಿಯ ಮುಕ್ತ ವಿಕಾಸವನ್ನು ಹೊಂದಿಸಬಹುದೆಂಬ ನಂಬಿಕೆ ನನಗಿದೆ.” +ಪೃಥಕೃತ ನೈತಿಕತೆಯನ್ನು ಬೆಳೆಸುವುದೇ ಅಲ್ಲದೆ, ವ್ಯಕ್ತಿಯ ವಿಕಾಸವನ್ನು ಕುಂಠಿತಗೊಳಿಸಿ ಕಾರ್ಮಿಕರನ್ನು ದಾಸ್ಯಕ್ಕೊಳಪಡಿಸುತ್ತದೆ ಎನ್ನುವುದೇ ಕೈಗಾರಿಕಾ ವ್ಯವಸ್ಥೆಯ ಬಗೆಗಿರುವ ಸಾಮಾನ್ಯ ಟೀಕೆಯಾಗಿದೆ. +ಅಂಥ ಫಲಿತಾಂಶಗಳನ್ನು ನಿವಾರಿಸುವ ಸಲುವಾಗಿ, ಆರ್ಥಿಕ ಸಂಸ್ಥೆಗಳ ಸಾಮಾಜಿಕ ಪರಿಣಾಮಗಳನ್ನು ತಾತ್ವಿಕವಾಗಿ ಗ್ರಹಿಸುವ, ವಿಶಾಲ ಧೋರಣೆಯಿಂದ ಹಾಗೂ ಮುಂಜಾಗ್ರತಾ ದೃಷ್ಟಿಯಿಂದ ರಸೆಲ್‌ ಆ ಕಡೆಗೆ ಗಮನ ಹರಿಸುತ್ತಾರೆ. +ಆಸ್ಮಿಯು ಉಂಟುಮಾಡುವ ಮಾನಸಿಕ ಪ್ರಭಾವಗಳ ವಿಶ್ಲೇಷಣೆಯ ವಿಷಯದಲ್ಲೂ ಇದೇ ರೀತಿಯ ತಾತ್ವಿಕತೆಯನ್ನು ರಸೆಲ್‌ ಅನುಸರಿಸಿದ್ದರೆ ಚೆನ್ನಾಗಿರುತ್ತಿತ್ತು. +ಆದರೆ ಆಸ್ತಿಯ ಬಗೆಗಿನ ಅವರ ಚರ್ಚೆಯಲ್ಲಿ ಹಲವಾರು ತಪ್ಪು ಗಹಿಕೆಗಳಿವೆ. +ಅವನ್ನು ಎತ್ತಿ ತೋರಿಸುವುದು ಅವಶ್ಯಕ. +“ಹಣದ ವ್ಯಾಮೋಹ” ಎನ್ನುವುದರ ಮೇಲಿನ ಚರ್ಜೆಯಲ್ಲಿಯೇ ಅವರ ಮೊದಲ ತಪ್ಪು ಗ್ರಹಿಕೆ ಕಾಣುತ್ತದೆ. +“ಮಾನವ ಕಲ್ಕಾಣಕ್ಕಾಗಿ ಯಾವ ಕಾಣಿಕೆಯನ್ನೂ ಕೊಡದೆ ಸಾಹಸದ ಹೊಗಳಿಕೆಯತ್ತ,ಯಶಸ್ಸಿನ ರಹಸ್ಯವನ್ನು ಕುರಿತ ತಪ್ಪು ಸಿದ್ಧಾಂತದಿಂದ ತಮ್ಮ ಸ್ವಭಾವವನ್ನು ವಿಕೃತಗೊಳಿಸಿಕೊಳ್ಳುವತ್ತ ಧನದ ವ್ಯಾಮೋಹ ಮನುಷ್ಯರನ್ನು ಎಳೆದೊಯ್ಯತ್ತದೆ ಎಂಬ ಅವರ ಹೇಳಿಕೆಯಲ್ಲಿ ಪ್ರಥಮ ಅಪಾರ್ಥಕಲ್ಪನೆಯಿದೆ. +ಅದು ಸ್ವಭಾವೋದ್ದೇಶಗಳ ನಿರ್ಜೀವ ಏಕರೂಪತೆಯನ್ನು ಬೆಳೆಸುತ್ತದೆ; +ಜೀವನಾನಂದವನ್ನು ಕುಂಠಿತಗೊಳಿಸುತ್ತದೆ. +ಒತ್ತಡ ಮತ್ತು ಶ್ರಮಗಳನ್ನು ಹೇರಿ ಇಡೀ ಜನಾಂಗವನ್ನು ಆಲಸ್ಯ ಭ್ರಾಂತಿ ನಿವಾರಣೆಗಳ ಕಡೆಗೆ ನೂಕಿ ಹತಾಶಗೊಳಿಸುತ್ತದೆ. +ಈ ಭಾವನೆಯಲ್ಲಿ ಪ್ರಾಚೀನತೆಯು ಸೂಚನೆಯಿದೆ. +ಅದು ಬಹುಶಃ ಒಂದಾನೊಂದು ಕಾಲದಲ್ಲಿ ಸಾಕಷ್ಟು ಸಮರ್ಥನೆಯುಳ್ಳ ಮೂಲಭೂತ ಜೀವನದರ್ಶನವಾಗಿಯೂ ಒದಗಿ ಬಂದಿತ್ತು. +ಒಂದು ಸಮಾಜದ ತಾತ್ವಿಕ ನಂಬಿಕೆ ಮತ್ತು ಆರ್ಥಿಕ ಜೀವನಗಳ ನಡುವಿನ ಸಂಬಂಧ ಸಾಮಾನ್ಯ ತಿಳಿವಳಿಕೆಗಿಂತ ಹೆಚ್ಚು ಗಾಢವಾದದ್ದು? +ಸಣ್ಣ ಪುಟ್ಟ ವೈಭವೀಕರಣಗಳ ಹೊರತು ಚರಿತ್ರೆಯ ಆರ್ಥಿಕ ವಿಶ್ಲೇಷಣೆ ಸಮರ್ಥನೀಯವಾದದ್ದು. +“ಹಣದ ವ್ಯಾಮೋಹ” ವಿರುದ್ಧದ ನೀತಿವಾದಿಗಳ ಹಳೆಯ ಆರೋಪ ಅವರ ಲೌಕಿಕ ಭೋಗದ ಮೇಲಿನ ಆರೋಪದ ಒಂದು ಭಾಗ ಮಾತ್ರ . +ಈ ನಂಬಿಕೆಗೆ ಕಾರಣವಾದ ಆರ್ಥಿಕ ಪರಿಸ್ಥಿತಿಯಲ್ಲೇ ಅದು ಸಮರ್ಥನೆಯನ್ನು ಕಂಡುಕೊಳ್ಳುತ್ತದೆ. +ಇದನ್ನೆಲ್ಲ ನೆನಪಿಸಿಕೊಂಡಾಗ, ಇಲ್ಲದವರ ಹುಳಿದ್ರಾಕ್ಷಿಯ ತತ್ವ ಮಾನವ ಸಹಜ ನಂಬಿಕೆಗಳಲ್ಹೊಂದೆಂಬುದನ್ನು ಹಾಗೂ ನಾವು ಪ್ರಯತ್ನಿಸಿದರೂ ಪಡೆಯಲಾಗದ ವಸ್ತು ಮೌಲ್ಯಗಳನ್ನೆಲ್ಲ ಅದು ಏಕೆ ವ್ಯಾಪಿಸಿಕೊಂಡಿದೆಯೆಂಬುದನ್ನು ಅರಿತುಕೊಳ್ಳಲು ಸುಲಭವಾಗುತ್ತದೆ. +ನಾವು ಯಾವುದೇ ವಸ್ತುವನ್ನು ಬಯಸಿ ಪಡೆಯಲು ವಿಫಲವಾದಾಗ, ಅದು ಪಡೆಯಲರ್ಹವಾದದ್ದಲ್ಲವೆಂದು ವಾದ ಮಾಡುತ್ತೇವೆ. +ಆದ್ದರಿಂದಲೇ ಕೆಳಸ್ತರದವರ ಮತ್ತು ಯಶೋನ್ವಿತದ ಮತೀಯ ಭಿನ್ನತೆ ಇರುವಂತೆಯೇ ಲೌಕಿಕ ವಸ್ತುಗಳ ಬಗೆಗಿನ ಶ್ರೀಮಂತರ ಮತ್ತು ಬಡವರ ದೃಷ್ಟಿಕೋನಗಳಲ್ಲಿ ಈ ನೈಜ ವ್ಯತ್ಯಾಸಗಳಿವೆ. +ಪ್ರತಿಯೊಂದೂ ತನ್ನ ಉದಾತ್ತ ನೈತಿಕ ಸ್ವಭಾವಕ್ಕನು ಗುಣವಾಗಿ ತಾನು ಮಾಡುವ ಎಲ್ಲ ಕೆಲಸಗಳಿಗೂ ಸಮರ್ಥನೆಯನ್ನು ಅಂದರೆ ಅನೈತಿಕತೆಯಲ್ಲಿಯೇ ನೈತಿಕತೆಯನ್ನು ಕಾಣುವ ತನ್ನ ನಡವಳಿಕೆಯನ್ನು ಆದರ್ಶೀಕರಿಸಿ ಬಿಡುತ್ತದೆ. +ಪ್ರಾಚೀನ ಜಗತ್ತಿನಂತೆ ಇಡೀ ಪ್ರಪಂಚ ಆರ್ಥಿಕ ರೋಗವನ್ನನುಭವಿಸುತ್ತಿದ್ದಾಗ್‌ ಮಾನವ ಶ್ರಮದ ಉತ್ಪಾದನೆ ಅತ್ಯಂತ ಕೆಳಗಿನ ಮಟ್ಟದಲ್ಲಿದ್ದಾಗ,ಉತ್ಪಾದನೆಯನ್ನು ಹೆಚ್ಚಿಸಲು ಯಾವ ಪ್ರಯತ್ನವೂ ನಡೆಯದಿದ್ದಾಗ, ಸಂಕ್ಷೇಪವಾಗಿ ಹೇಳುವುದಾದರೆ,ಇಡೀ ಜಗತ್ತೇ ಬಡತನದಿಂದ ಬಳಲುತ್ತಿದ್ದಾಗ ನೀತಿವಾದಿಗಳು ಸಹಜವಾಗಿಯೇ ಬಡತನವನ್ನು ವೈಭವೀಕರಿಸಿ,ಅದೇ ಆದರ್ಶವೆಂದು ಪ್ರಚಾರ ಮಾಡಿದ್ದು ಮತ್ತು ಐಹಿಕ ಸುಖಗಳನ್ನು ತ್ಯಜಿಸುವಂತೆ ಬೋಧನೆ ಮಾಡಿದ್ದು ಸಹಜವೇ ಸರಿ. +ಯಾಕೆಂದರೆ ಐಹಿಕ ಸುಖ ದೊರೆಯುವಂತಿರಲಿಲ್ಲ. +ಅಗ್ಗದ ವಸ್ತು ಅಸಹ್ಯವೆಂದು ನಂಬುವ, ದುಂದು ವೆಚ್ಚಕ್ಕಂಟಿಕೊಂಡಿರುವ ಭೋಗ ಸಮೃದ್ಧ ಆರ್ಥಿಕ ವ್ಯವಸ್ಥೆಯುಳ್ಳ ಸಮಾಜದಂತೆ. +ಎಟುಕದ ವಸ್ತು ಕೆಟ್ಟದ್ದಾಗಿರಬೇಕೆಂದು ಕ್ಷೇಶಮಯ ಆರ್ಥಿಕ ವ್ಯವಸ್ಥೆಯ ಸಮಾಜ ನಂಬುತ್ತದೆ. +ಹಣದ ಮೇಲಿನ ವ್ಯಾಮೋಹದ ಕೆಡುಕುಗಳನ್ನು ಕುರಿತ ರಸೆಲ್ಲರ ಮರು ಹೇಳಿಕೆಯ ಈ ಚಾರಿತ್ರಿಕ ಮೌಲ್ಯಕ್ಕೆ ಯಾವುದೇ ತಾತ್ವಿಕ ಮೌಲ್ಯ ಸಂಗೊಳಿಸುವುದಿಲ್ಲ. +ಈ ತಪ್ಪುಗ್ರಹಿಕೆ ಹಣ ವ್ಯಾಮೋಹದ ಉದ್ದೇಶಗಳ ಸಮಂಜಸ ವಿಶ್ಲೇಷಣೆಯ ಅಭಾವದಿಂದ ಹುಟ್ಟಿದ್ದು. +ಒಂದು ಆರೋಗ್ಯ ಪೂರ್ಣ ಮನಸ್ಸಿನಲ್ಲಿ ಹಣದ ವ್ಯಾಮೋಹವೆನ್ನುವಂಥ ಅಮೂರ್ತ ಕಲ್ಪನೆಯಿರುವುದೇ ಸಾಧ್ಯವಿಲ್ಲವೆಂದು ವಾದಿಸಬಹುದು. +ಯಾವುದೇ ಒಂದು ಉದ್ದೇಶಕ್ಕಾಗಿ ಹಣದ ಮೇಲಿನ ವ್ಯಾಮೋಹವಿರುತ್ತದೆ. +ಆ ಉದ್ದೇಶದಲ್ಲಿಯೇ ಘನತೆ ಅಥವಾ ನಾಚಿಕೆಗೇಡಿನ ಅಂಶಗಳು ಒಳಗೊಂಡಿರುತ್ತವೆ. +ಈ ದೃಷ್ಟಿಯಿಂದ ವ್ಯಕ್ತಿಗಳಲ್ಲಿ "ಶೀಲ ಸಂಬಂಧವಾದ ನಿರ್ಜೀವ ಏಕರೂಪತೆ" ಸಾಧ್ಯವಿಲ್ಲ. +ಯಾಕೆಂದರೆ ಹಣದ ಮೇಲೆ ವ್ಯಾಮೋಹವಿದ್ದರೂ ವಿವಿಧ ಸಂದರ್ಭದ ಅವರ ಉದ್ದೇಶಗಳಲ್ಲಿ ಭಿನ್ನತೆಯಿರುವ ಸಾಧ್ಯತೆಯಿರುತ್ತದೆ. +ಹೀಗಾಗಿ ಹಣದಾಸೆಯ ಗುರಿಯೂ ಸ್ವಭಾವ ವೈವಿಧ್ಯತೆಯಲ್ಲಿ ಪರ್ಯವಸಾನವಾಗಬಹುದು. +ನಮ್ಮ ಜೀವನದ ಉತ್ಪಾದನಾ ದೃಷ್ಟಿಯಿಂದ ರಸೆಲ್ಲರ ಪ್ರಮೇಯ ಅಭದಧ್ರವಾಗಿ ಕಂಡರೆ ಗ್ರಾಹಕರ ದೃಷ್ಟಿಯಲ್ಲಂತೂ ಅದು ನೆಲ ಕಚ್ಚಿಬಿಡುತ್ತದೆ. +ಹಸಿವನ್ನು ಇಂಗಿಸುವುದರಿಂದ ಮಾನವ ಸ್ವಾಭಾವ ಅಪಮೌಲ್ಯಗೊಳ್ಳುತ್ತದೆಂಬುದನ್ನು ಸಾಬೀತು ಮಾಡುವುದಕ್ಕೆ ನಮಗೆ ಬೆಂಬಲ ಸಿಗಬೇಕಾದದ್ದು ಗ್ರಾಹಕ ಜೀವನದ ಕಡೆಯಿಂದಲೇ ಹೊರತು ಉತ್ಪಾದನೆಯ ಪರಿಶೀಲನೆಯಿಂದಲ್ಲ. +ನಮಗೆ ಗೊತ್ತಿರುವ ಗ್ರಾಹಕ ನಿಯಮಗಳ ಹಿನ್ನೆಲೆಯಲ್ಲಿ ಈ ರೀತಿಯ ಅಪಮೌಲ್ಯೀಕರಣ ಸಾಧ್ಯವೇ?” + ನಾವು ಮುಂದೆ ವಿಶ್ಲೇಷಿಸಿರುವಂತೆ ಇದಕ್ಕೆ ಉತ್ತರ ನಕಾರಾತ್ಮಕವಾದುದಾಗಿರುತ್ತದೆ. +ಅನುಭೋಗ ನಿಯಮಗಳು ಮೌಲ್ಯದ ಪ್ರಯೋಜನವಾದದ ಆರ್ಥಿಕ ತತ್ವದಿಂದ ಪ್ರಾಪ್ತವಾದ ನಿಗಮಗಳೆಂಬುದನ್ನು ಗಮನಿಸಬೇಕಾಗುತ್ತದೆ. +ಕೋರ್ನಾಟ್‌, ಗೊಸೆನ್‌, ವಾಲ್‌ರಸ್‌ಮೆಂಜರ್‌ ಮತ್ತುಜೆವೂನ್ಸ್‌ರ ಸಾಂಪ್ರದಾಯಕ ತತ್ವಗಳಿಗೆ ಪ್ರತಿಕ್ರಿಯೆಯಾಗಿ ರೂಪಿತವಾದ ಅದು ಪ್ರಯೋಜನವನ್ನು ಬಾಹ್ಯವಸ್ತುವಿನಲ್ಲಿ ಅಥವಾ ಪರಿಸ್ಥಿತಿಯಲ್ಲಿ ಇರುವ ಗುಣವೆಂದು ಭಾವಿಸುವುದಿಲ್ಲ. + ಈ ವಿಷಯದ ಅತ್ಯುತ್ತಮ ಚರ್ಚೆಗೆ ಎಸ್‌.ಎನ್‌.ಪಾಟನ್‌ ಅವರ ಎ ಥಿಯರಿ ಆಫ್‌ ಕನಸಂಷನ್‌ ಎಂಬ ಗ್ರಂಥವನ್ನು ನೋಡಿ. +ಮಾನವನ ಅವಶ್ಯಕತೆಗಳನ್ನು ಪೂರೈಸುವ ಅದರ ಶಕ್ತಿಯನ್ನವಲಂಬಿಸಿದೆಯೆಂದು ಹೇಳುತ್ತದೆ. +ಆದ್ದರಿಂದ ಒಂದು ವಸ್ತುವಿನ ಉಪಯೋಗ ಬೇರೆ ಬೇರೆ ಸ್ಥಿತಿಗಳಲ್ಲಿ ಜೀವಿ ಬಯಸುವ ತೃಪ್ತಿಯನ್ನಾದಧರಿಸಿ ಬದಲಾಗುತ್ತಿರುತ್ತದೆ. +ನಮ್ಮ ಮೂಲಭೂತ ಅವಶ್ಯಕತೆಯಾದ ಆಹಾರ ಸಹ ನಮ್ಮ ಹಸಿವು ಮತ್ತು ಅಜೀರ್ಣಗಳಿಗನುಸಾರವಾಗಿ ನಮಗೆ ಆನಂದ ಅಥವಾ ಅಸಹ್ಯ ಭಾವನೆಯನ್ನು ಉತ್ಪಾದಿಸುತ್ತದೆ. +ಆದ್ದರಿಂದ ತೃಪ್ತಿ ಜಾಸ್ತಿಯಾದಂತೆ ಪ್ರಯೋಜನ ಕಡಿಮೆಯಾಗುತ್ತದೆ. +ನಿರ್ದಿಷ್ಟ ಅಂಗದ ಅಥವಾ ಅಂಗ ಸಮೂಹದ ಆನಂದದಾಯಕ ಕ್ರಿಯೆಯೇ ತೃಪ್ತಿಯನ್ನುವುದಾದರೆ ತೃಪ್ತಿ ಕೊಡುವ ವಸ್ತುವಿಗೆ ಅಂಗದೊಡನೆಯಿರುವ ಸಂಬಂಧವನ್ನು ಪ್ರತಿನಿಧಿಸುವ ವಕ್ರರೇಖೆ ಅಂಗದ ಧರ್ಮದೊಡನೆ ವಿಲೋಮ ಕ್ರಮದಿಂದ ಬದಲಾಗುತ್ತದೆ. +ರಸೆಲ್ಲರು ಈ ಮನೋವಿಶ್ಲೇಷಣಾ ಪರಿಣಾಮಗಳ ಬಗ್ಗೆ ಎಚ್ಚರವಹಿಸಿದ್ದರೆ ಪ್ರಸಕ್ತ ತಪ್ಪುಗ್ರಹಿಕೆಯನ್ನು ನಿವಾರಿಸಿಕೊಳ್ಳಬಹುದಿತ್ತು. +ಮನೋವಿಶ್ಲೇಷಣೆಯ ನಿಜವಾದ ಅರ್ಥವಾದರೂ ಏನು ? + ಒಂದು ವಸ್ತುವಿನ ಪ್ರಯೋಜನ ಒಮ್ಮೊಮ್ಮೆ ಏಕೆ ಶೂನ್ಯವಾಗುತ್ತದೆ ಅಥವಾ ಒಮ್ಮೊಮ್ಮೆ ನೇತ್ಯಾತ್ಮಕವಾಗುತ್ತದೆ ? + ಇದು ಏಕೆ ಹೀಗಾಗುತ್ತದೆನ್ನುವುದನ್ನು ಈ ರೀತಿ ವಾದಿಸಬಹುದು. +ಯಾವುದೋ ಒಂದು ಹಂತದಲ್ಲಿ ವಸ್ತುವಿನಿಂದ ಅಂಗವೊಂದು ಪಡೆಯುವ ತೃಪ್ತಿ ಸ್ಥಗಿತಗೊಳ್ಳಲಾಗಿ ಆ ವಸ್ತುವಿನ ಬಳಕೆ ಅಪ್ರಯೋಜಕವೆನಿಸಿಬಿಡುತ್ತದೆ. +ಅಥವಾ ಬೇರೆ ರೀತಿಯ ತೃಪ್ತಿ ಪಡೆಯಬಯಸುವ ಬೇರೆ ಅಂಗಗಳು, ತಮ್ಮ ಹಿತವನ್ನೇ ಲಕ್ಷಿಸದೇ ಬೇರೊಂದು ಅಂಗ ಅತಿಯಾಗಿ ಬಳಸುವುದರ ವಿರುದ್ಧ ಗದ್ದಲವೆಜ್ಜಿಸಬಹುದು. +ಎರಡನೆಯ ಅಭಿಪ್ರಾಯವನ್ನು ಸಮರ್ಥಿಸುವ ಪ್ರೊ.ಗಿಡಿಂಗ್ಸ್‌ ಹೇಳುತ್ತಾರೆ. +“ಒಂದು ಅಂಗದ ಅಥವಾ ಒಂದು ಗುಂಪಿನ ಅಂಗಗಳ ಅವಶ್ಯಕತೆಯನ್ನು ಧಾರಾಳವಾಗಿ ಪೂರೈಸುವಲ್ಲಿ ಇತರ ಅಂಗಗಳು ನಷ್ಟ ಅನುಭವಿಸುವಂತಾದರೆ,ಕಡೆಗಣಿಸಲ್ಪಟ್ಟ ಅಂಗಗಳು ಪ್ರತಿಭಟಿಸುತ್ತವೆ. +ಈ ಅಂಗಗಳನ್ನು ತೃಪ್ತಿಪಡಿಸುವುದು ನಮಗೆ ಅನಿವಾರ್ಯವಾಗಿ ಬಿಡುತ್ತದೆ. +ಕಡೆಗಣಿಸಲ್ಪಟ್ಟ ಅಂಗಗಳ ಹಸಿವು ಸಾಮಾನ್ಯವಾಗಿ ನಮ್ಮ ಪ್ರಜ್ಞೆಯನ್ನು ಆವರಿಸಿಬಿಡುತ್ತದೆ; +ಮತ್ತು ತನ್ನ ಅಗತ್ಯಕ್ಕಿಂತ ಹೆಚ್ಚಿನ ಲಾಭವನ್ನು ಪಡೆದಿರುವ ಅಂಗದ ಕಡೆಯಿಂದ ನಮ್ಮ ಗಮನವನ್ನು ಮತ್ತು ಪ್ರಯತ್ನಗಳನ್ನು ತಮ್ಮ ಕಡೆಗೆ ಸೆಳೆಯುತ್ತದೆ. +ಈ ಎರಡು ಪರ್ಯಾಯ ವಿವರಣೆಗಳಲ್ಲಿ ಪ್ರೊ.ಗಿಡಿಂಗ್ಸ್‌ರ ವಿವರಣೆಯೇ ಹೆಚ್ಚು ಸಮಂಜಸವಾದದ್ದು. +ನಡಾವಳಿಯ ಪೂರ್ವ ಸಿದ್ಧಾಂತಕ್ಕೆ ಸಂಬಂಧಿಸಿದಂತೆ ಶಾರೀರಿಕ ಅಂಗ ಕ್ರಿಯಾತ್ಮಕವಾಗಿ,ಹಸಿವೆಯೆನ್ನುವುದು ಶರೀರದ ಎಲ್ಲ ಅಂಗಗಳಿಗೂ ಇದೆ . + ತಮ್ಮ ಅವಶ್ಯಕತೆಗೆ ತಕ್ಕಂತೆ ಅವು ನಮ್ಮ ಪ್ರಜ್ಞೆಯನ್ನು ತಮ್ಮ ಜೀವಿಯ ಕ್ರಿಯಾಶೀಲ ಅಸ್ತಿತ್ವದ ಬಗೆಗಿನ ವರ್ತನಾತ್ಮಕ ಆಧಾರಕಲ್ಪನೆಯನ್ನು ಗಮನದಲ್ಲಿರಿಸಿಕೊಂಡರೆ, ಪ್ರತಿಯೊಂದು ಅಂಗಕ್ಕೂ ಉಚಿತವಾದ ವಿವಿಧ ತೃಪ್ತಿಗಾಗಿ ಇಡೀ ಜೀವಿಯ ಈ ಹಸಿವು ಇದ್ದೇ ಇರುತ್ತದೆಂದು ಭಾವಿಸುವುದೇ ಸರಿ; + ಆ ಪ್ರತಿಯೊಂದು ಅತೃಪ್ತಾಂಗ ಪ್ರತಿಭಟನೆಯನ್ನು ಹುಟ್ಟಿಸುತ್ತದೆ. +ಈ ಪ್ರತಿಭಟನೆಯೇ ಅನುಭೋಗ ವೈವಿಧ್ಯ ನಿಯಮವೆಂದು ಕರೆಯುವ ತತ್ವಕ್ಕೆ ಒತ್ತಾಯಪೂರ್ವಕವಾಗಿ ಅಧೀನಗೊಳಿಸುತ್ತದೆ. +ಇದು ನಿಜವಿದ್ದರೆ, ಒಂದು ಅಂಗ ನಿರಂತರ ಪ್ರಾಬಲ್ಯದ ಮೂಲಕ ಹೇಗೆ ಇಡೀ ಜೀವಿಯನ್ನು ಊನಗೊಳಿಸುತ್ತದೆಂದು ಅರ್ಥ ಮಾಡಿಕೊಳ್ಳುವುದು ಕಷ್ಟ . +ಮತ್ತೊಂದು ಕಡೆ ಒಂದು ಸಲಕ್ಕೊಂದೆಯಾದರೂ ಎಲ್ಲ ಕಾಮನೆಗಳಿಗೂ ತಮ್ಮದೇ ಸರದಿಯಿರುತ್ತದೆ. +ಅದೃಷ್ಟವಶಾತ್‌,ತನ್ನ ಸಹಜ ರಚನೆಯಿಂದಾಗಿ ಮಾನವ ಪ್ರಕೃತಿ ಅನುಕೂಲ ವಾತಾವರಣದಲ್ಲಿ ಏಕಮುಖದ ವಿಕಾಸಕ್ಕಲ್ಲದೆ ತನ್ನ ಸಂಪೂರ್ಣ ವಿಕಾಸಕ್ಕೆ ಅನುಕೂಲಕರವಾಗಿದೆ. +ತಾನು ಹಂಬಲಿಸುವ ಬೌದ್ಧಿಕ ಅಥವಾ ಅಧ್ಯಾತ್ಮಿಕ ವಿಕಾಸಕ್ಕೆ ಸಂಬಂಧಿಸಿದ ನಾನಾ ವಿಧದ ಆಹಾರ ಸಾಮಗ್ರಿಯನ್ನು ಪಡೆಯಲು ಅದು ಶಕ್ತವಾಗಿದೆಯೆ ಎನ್ನುವುದು ಅದರ ಹಿಡಿತಕ್ಕೆ ಮೀರಿದ್ದು. +ಆಹಾರ ವೈವಿಧ್ಯದ ಅಭಾವದಿಂದ ಅದು ಕುಂಠಿತವಾದರೆ,ತನ್ನಿಂದಾಗಿ ಅಲ್ಲ, ಸಾಮಾಜಿಕ ದೋಷದಿಂದಾಗಿ ಎಂದು ತಿಳಿಯಬೇಕು. +ರಸೆಲ್ಲರ ಇನ್ನೊಂದು ಆಪಾದನೆಯೆಂದರೆ, ಸ್ಟಾಮ್ಯ ಪ್ರವೃತ್ತಿಯೇ ಮೂರ್ತಸ್ವರೂಪ. +ತಾಳಿಯ ಆಸ್ತಿಯೇ ಯುದ್ಧಕ್ಕೆ ಕಾರಣವಾಗುತ್ತದೆ ಎನ್ನುವುದು, ರಸೆಲ್ಲರ ವಾದವನ್ನು ಒಪ್ಪಬಹುದು. +ಆದರೆ ಆಸ್ತಿಯ ಪರಿಣಾಮಗಳನ್ನು ರಸೆಲ್‌ರಿಗಿಂತ ಫೆಡರಿಕ್‌ ನೀತ್ಸೆ ಅವರು ಹೆಚ್ಚು ಸಮಂಜಸವಾಗಿ ಅರ್ಥಮಾಡಿಕೊಂಡಿದ್ದರೆಂದು ಹೇಳಬೇಕಾಗುತ್ತದೆ. +ಈ ಪರಿಣಾಮ ಕುರಿತು ಥೂಸಿಡೈಡಿಸ್‌ ತಮ್ಮ ಕಥೆಯೊಂದರಲ್ಲಿ ಮನೋಜ್ಞವಾಗಿ ಚಿತ್ರಿಸುತ್ತಾರೆ. +ಒಬ್ಬ ರೈತ ತನ್ನ ಬೆಳೆ ಕಟಾವು ಮಾಡಿ ಬಣವೆಯೊಡ್ಡಿ ಅದರ ಪಕ್ಕದಲ್ಲಿ ಕುಳಿತು, ಮಾರುಕಟ್ಟೆ ಮತ್ತು ತನ್ನ ವ್ಯಾಪಾರ ಲಾಭದ ಲೆಕ್ಕಾಚಾರದ ವಿಷಯವಾಗಿ ಮೆಲಕು ಹಾಕಲಾರಂಭಿಸುತ್ತಾನೆ. +ಹೀಗೆ ಆಲೋಜನೆಯಲ್ಲಿ ಮುಳುಗಿದ್ದಾಗ, ಒಬ್ಬ ದರೋಡೆಕೋರ ದಿಢೀರ್‌ ಪ್ರತ್ಯಕ್ಷವಾಗುತ್ತಾನೆ. +ಧುತ್ತೆಂದು ಜಾಗೃತಗೊಂಡ ರೈತ ಪ್ರತಿಭಟಿಸದೆ ಆ ದರೋಡೆಕೋರನಿಗೆ ತನ್ನ ಬಣವೆಯ ಅರ್ಧಭಾಗ ಕೊಡಲು ಒಪ್ಪಿ, ತನಗೆ ಅರ್ಧವಾದರೂ ಉಳಿಯಿತಲ್ಲಾ ಎಂದು ದೇವರಿಗೆ ವಂದಿಸುತ್ತಾನೆ. +ಇದು ನಿಜವೋ ಸುಳ್ಳೋ ಏನಾದರಾಗಲಿ ಸಾಮಾನ್ಯವಾಗಿ ಗ್ರಹಸಲಾಗದ ಸತ್ಯಾಂಶವಂತೂ ಅದರಲ್ಲಿದೆ. +ಕಾಲಾನುಕ್ರಮದಲ್ಲಿ ಮನುಷ್ಯ ಗಳಿಸುವ ಭರದಲ್ಲಿ ಹೇಗೆ ತನ್ನ ಪಶು ವೃತ್ತಿಯನ್ನು ಬಿಟ್ಟುಕೊಟ್ಟನೆಂದು ಅಳೆಯುವುದು ಸಾಧ್ಯವಿಲ್ಲ. +ಆದರೆ ಹಾಗಾಗಿರುವುದಂತೂ ನಿಜ. +ಇದು ಸ್ಪಷ್ಟವಾಗಿ ತಿಳಿದಿದ್ದರಿಂದಲೇ ನೀತ್ಸೆ ತನ್ನ ಅಧಿಮಾನವ ಆಸ್ತಿವಂತನಾಗಿರಲು ಬಿಡಲಿಲ್ಲ. +ಚೌಕಾಶಿಯಲ್ಲಿ ತನ್ನ ಗಳಿಕೆಯನ್ನು ಕಳೆದುಕೊಳ್ಳಬಹದೆಂಬ ಭಯದಿಂದ ತಾನು ಅಪೇಕ್ಷಿಸಿದ ಪಾತ್ರವನ್ನು ಆ ಮಾನವ ನಿರ್ವಹಿಸಲಾರನೇನೋ ಎಂಬ ಶಂಕೆ ನೀತ್ಸೆಯದು ಆದ್ದರಿಂದ ಸಮಸ್ಯೆ ಆಸ್ತಿಗೆ ಸಂಬಂಧಿಸಿದ್ದಲ್ಲ ಅದರ ವಿಷಯ ಹಂಚಿಕೆಗೆ ಸೇರಿದ್ದೆಂದು ತಿಳಿಯಬೇಕಾಗಿದೆ. +ಯಾಕೆಂದರೆ ಆಸ್ತಿವಂತರಿಗಿಂತ, ಆಸ್ತಿಯಿಲ್ಲದವರು, ಅದನ್ನು ಪಡೆಯಲು ಹೆಚ್ಚಿನ ವಿನಾಶಕಾರಿ ಕೃತ್ಯಗಳಲ್ಲಿ ತೊಡಗುತ್ತಾರೆ. +ಆಧುನಿಕ ಕಾಲದ ಕೈಗಾರಿಕಾ ವ್ಯಾಜ್ಯಗಳು ಇದಕ್ಕೆ ಮತ್ತೊಂದು ಉದಾಹರಣೆ. +ಮುಷ್ಕರ ಹೂಡಿದ ಕಾರ್ಮಿಕರು ಯಜಮಾನರಿಗಿಂತ ಹೆಚ್ಚಿನ ಹಿಂಸಾಕೃತ್ಯಗಳಲ್ಲಿ ತೊಡಗುತ್ತಾರೆನ್ನುವುದನ್ನು ಈ ಮೇಲಿನ ಹೇಳಿಕೆಯ ಹಿನ್ನೆಲೆಯಲ್ಲೇ ಅರ್ಥಮಾಡಿಕೊಳ್ಳಬೇಕು. +ಆಸ್ತಿ ಈಡಿನ ಇರುವಿಕೆ ಕತ್ತಿಯನ್ನು ಮೊಂಡಾಗಿಸಿದರೆ, ಇಲ್ಲದಿರುವಿಕೆ ಅದನ್ನು ಮೊನಚಾಗಿಸುತ್ತದೆ. +ಹೀಗಾಗಿ ಆಸ್ತಿ ಆಕ್ರಮಣಕಾರಿ ಜಗಳಗಂಟಿತನದಿಂದ ಕೂಡಿದ್ದು, ಆದರೆ ಅದಕ್ಕೆ ಪರಿಹಾರ ರೂಪದ ಪ್ರತಿಫಲ ಇಲ್ಲದಿಲ್ಲ. +ರಸೆಲ್ಲರ ದೃಷ್ಟಿಕೋನವನ್ನೇ ವ್ಯಾಪಿಸಿಕೊಂಡಿರುವ ಮೂಲಭೂತ ತತ್ವದ ಬಗ್ಗೆ ಮೌನವಹಿಸಿ ಮುಂದುವರಿದರೆ ಅನ್ಯಾಯ ಮಾಡಿದಂತಾಗುತ್ತದೆ. +ಅವರು ಹೇಳುತ್ತಾರೆ. +“ಮಾನವನ ಆಸೆ ಆಕಾಂಕ್ಷೆಗಳನ್ನುಸೃಜನಾತ್ಮಕ ಮತ್ತು ಸ್ವಾಮ್ಯಾತ್ಮಕವೆಂದು ವಿಂಗಡಿಸಬಹುದು. +ಕ್ರಿಯೆಯಿಲ್ಲದೆ ಅಸ್ತಿತ್ರವಿರದ ವಸ್ತುಗಳನ್ನು ಸೃಷ್ಟಿಸಲು ನಮ್ಮ ಕೆಲವು ಕ್ರಿಯೆಗಳು ನಿರ್ದೇಶಿತವಾಗಿರುತ್ತವೆ. + ಮಿಕ್ಕವು ಹಾಲಿಯಿರುವ ಅಥವಾ ಹೊಸದಾಗಿ ಗಳಿಸುವುದರ ಕಡೆ ಕೇಂದ್ರೀಕೃತವಾಗಿರುತ್ತವೆ. +ಸೃಜನಾತ್ಮಕ ಚಟುವಟಿಕೆಗಳಲ್ಲಿ ಅಧಿಕವಾಗಿ, ಸ್ವಾಮ್ಯ ಪ್ರವೃತ್ತಿಗಳಲ್ಲಿ ಕನಿಷ್ಠವಾಗಿ ತೊಡಗಿರುವಂಥಾದ್ದೇ ಅತ್ಯುತ್ತಮ ಜೀವನ.” + ಮನಸ್ಸಿನ ಆವೇಗಗಳನ್ನು ಈ ರೀತಿ ವಿಭಜಿಸಲುಸಾಧ್ಯವೇ ? + ಸ್ಥಾಧೀನಪಡಿಸಿಕೊಳ್ಳ ಬಯಸುವ ಪ್ರವೃತ್ತಿಯೊಂದಿದೆಯೇ ? +ಈ ವಿಶಾಲ ಪ್ರಶ್ನೆಯ ಚರ್ಚೆ ಈ ವಿಮರ್ಶೆಯ ವ್ಯಾಪ್ತಿಗೆ ಹೊರತಾದದ್ದು. +ಇಲ್ಲಿ ನಾನು ಕೇವಲ ಒಂದು ಅನುಮಾನವನ್ನಷ್ಟೇ ವ್ಯಕ್ತಪಡಿಸಲು ಇಷ್ಟಪಡುತ್ತೇನೆ. +ಮಾನವ ಸ್ವಭಾವದ ವೈವಿಧ್ಯತೆಯನ್ನು ಸಹಜ ಪ್ರವೃತ್ತಿಯೆಂದೆಣಿಸುವ ರಸೆಲ್ಲರ ತಾತ್ಮಿಕ ನೆಲೆ ಸುಭದ್ರವಾಗಿಲ್ಲ. +ಅಡಚಣೆಗಳಿಲ್ಲದ ಆವೇಗ ಸೃಜನಾತ್ಮಕ ಕ್ರಿಯೆಗೆ ದಾರಿ ಮಾಡಿಕೊಡುತ್ತದೆ. +ಅದರ ಫಲ ಎಲ್ಲರಿಗೂ ಹಂಚಿಕೆಯಾಗುತ್ತದೋ ಇಲ್ಲವೋ ಎನ್ನುವುದು ಆವೇಗ ಅಥವಾ ಪ್ರವೃತ್ತಿಗಳಿಗೆ ಸಂಬಂಧಿಸಿದ್ದಲ್ಲ. +ವೈಯಕ್ತಿಕವೊ ಅಲ್ಲವೋ ಎನ್ನುವ ಅರ್ಥದಲ್ಲಿ ಅದರ ಉತ್ಪಾದನೆಯ ವಿಧಾನವನ್ನೂ, ಸಾಮುದಾಯಿಕವೋ ಅಲ್ಲವೋ ಎನ್ನುವ ಅರ್ಥದಲ್ಲಿ ಅದರ ಬಳಸುವ ವಿಧಾನವನ್ನೂ ಅದು ಅವಲಂಬಿಸಿದೆ. +ಸಾಮೂಹಿಕ ಪ್ರಯತ್ನಗಳಿಂದ ಉತ್ಪಾದನೆಯಾದದ್ದಾಗಿರಲಿ, ಎಲ್ಲರ ಉಪಯೋಗಕ್ಕೂ ಬರುವಂಥದಾಗಲಿ, ಯಾರೂ ಅದನ್ನು ಸ್ವಾಧೀನಪಡಿಸಿಕೊಳ್ಳುವ ಹಕ್ಕನ್ನು ಸ್ಥಾಪಿಸಲಾಗದು. +ಉದಾಹರಣೆಯಾಗಿ ಮೊದಲನೆಯದಕ್ಕೆ ಆದಿ ಮಾನವರ ಸಾಮೂಹಿಕ ಬೇಟೆಯನ್ನೂ, ಎರಡನೆಯದಕ್ಕೆ ಒಂದು ಕುಟುಂಬದ ಪರಿಸ್ಥಿತಿಯನ್ನೂ ತೆಗೆದುಕೊಳ್ಳಬಹುದು. +ಸಾರ್ವಜನಿಕ ಸ್ಮಾರಕಗಳ ಮೇಲೆ ಹೇಗೆ ಯಾರೊಬ್ಬರೂ ಪ್ರತ್ಯೇಕ ಸ್ವಾಮ್ಯದ ಹಕ್ಕನ್ನೇ ಸಂಸ್ಥಾಪಿಸಲಾಗದೋ ಹಾಗೆಯೇ ಲಿಖಿತ ಫಲಕಗಳಿಗಾಗಿ ಅಥವಾ ಅಲಂಕಾರಿಕ ವಸ್ತುಗಳಿಗಾಗಿ ಯಾರೊಬ್ಬರೂ ತನ್ನ ಖಾಸಗಿ ಸ್ವಾಮ್ಯದ ಹಕ್ಕನ್ನು ಚಲಾಯಿಸಲಾಗದು. +ಯಾಕೆಂದರೆ ಅವು ಮನೆಗೆ ಸೇರಿದವು. +ಆದರೆ ಕುಟುಂಬದ ಎಲ್ಲ ವ್ಯಕ್ತಿಗಳೂ ತಮ್ಮ ತಮ್ಮ ಬಟ್ಟೆಗಳ ಮೇಲೆ ತಮ್ಮದೇ ಹಕ್ಕು ಚಲಾಯಿಸುತ್ತಾರೆ. +ಯಾಕೆಂದರೆ ಅವು ವೈಯಕ್ತಿಕವಾದುವು. +ಆದ್ದರಿಂದ ಅದು ಕೇವಲ ಉತ್ಪಾದನೆಯ ಮತ್ತು ಉಪಯೋಗದ ಪ್ರಶ್ನೆ. +ಮನುಷ್ಯ ಸ್ವಾಮ್ಯ ಪ್ರವೃತ್ತಿಗೆ ಸಂಬಂಧಿಸಿದ ಮನಸ್ಸಿನ ಆವೇಗಗಳ ಪ್ರಶ್ನೆಯಲ್ಲ. +ಹೇಗೆ ಸೃಜನಾತ್ಮಕ ಮತ್ತು ಸ್ವಾಮ್ಯಾತ್ಮಕ ಕ್ರಿಯೆಗಳು ಬೇರೆ ಬೇರೆ ಸ್ತರದಲ್ಲಿರುವಂಥವು; +ಮತ್ತು ಸೃಜನಾತ್ಮಕಕ್ರಿಯೆಯನ್ನು ಹಿಗ್ಗಿಸುವುದಾಗಲಿ, ಸ್ವಾಮ್ಯಾತ್ಮಕ ಕ್ರಿಯೆಯನ್ನು ನಿಯಂತ್ರಿಸುವುದಾಗಲಿ ಬೇರೆ ಬೇರೆ ರೀತಿಯವಾಗಿರುತ್ತವೆ. +ಒಂದು ಹೆಚ್ಚಳ ಇನ್ನೊಂದನ್ನು ಕುಗ್ಗಿಸಬೇಕಾಗಿಲ್ಲ. +ಇದರೊಂದಿಗೆ ನಾವು ರಸೆಲ್ಲರ ಕೃತಿಯ ವಿಮರ್ಶೆಯನ್ನು ಮುಗಿಸಬೇಕು. +ಅದರಲ್ಲಿ ಸಮಾಜದ ಭವಿಷ್ಯ ಪುನಾರಚನೆಯ ಅಡಿಗಲ್ಲಾಗಿ ಉಪಯೋಗಕ್ಕೆ ಬರುವಂಥದು ಬಹಳವಿದೆ. +ಸಾಮಾಜಿಕ ಜೀವನದ ಮನೋವೈಜ್ಞಾನಿಕ ನೆಲೆಗೆ ಪ್ರಾಧಾನ್ಯ ನೀಡಿದ್ದಕ್ಕಾಗಿ ರಸೆಲ್ಲರಿಗೆ ಪೂರ್ಣ ಕೀರ್ತಿ ಸಲ್ಲಬೇಕು. +ವ್ಯಕ್ತಿ ಮತ್ತುಸಮಾಜದ ನಡುವಣ ಸಂಬಂಧದ ಸರಿಯಾದ ಗ್ರಹಿಕೆಯ ಮೇಲೆ ಸಾಮಾಜಿಕ ಪುನರ್‌ ರಚನೆ ಅವಲಂಬಿತವಾಗುತ್ತದೆ. +ಈ ಸಮಸ್ಯೆ ಹಲವಾರು ಸಮಾಜ ವಿಜ್ಞಾನಿಗಳ ಅರಿವಿಗೆ ಎಟುಕದಂತಾಗಿದೆ. +ಸಾಂಸ್ಥಿಕ ಸಂಬಂಧವಾದ ಆ ವೇಗವೆನ್ನುವ ರಸೆಲ್‌ರ ಸಂಬಂಧದ ಕಲ್ಪನೆ ನಿಸ್ಸಂದಿಗ್ಳವಾಗಿ ಸತ್ಯತಮವೆನ್ನಬಹುದಾಗಿದೆ. +ಆದರೂ ಈ ವಿಷಯವನ್ನು ಮತ್ತು ಕೃತಿ ಎತ್ತುವ ಹಲವಾರು ಸಮಸ್ಯೆಗಳನ್ನುಅರ್ಥಮಾಡಿಕೊಳ್ಳಲು ರಸೆಲ್ಲರ ಮೂಲಕೃತಿಯನ್ನೇ ಅಧ್ಯಯನ ಮಾಡಲು ನಾನು ಓದುಗರಲ್ಲಿ ವಿನಂತಿಸಿಕೊಳ್ಳುತ್ತೇನೆ. +ರಸೆಲ್‌ರನ್ನು ತಪ್ಪಾಗಿ ಗ್ರಹಿಸುವ ಸಂಭವವಿರುವಲ್ಲಿ, ಅವರಿಗೆ ಯುಕ್ತವಾದ ಸ್ಥಾನವನ್ನು ನಿಷ್ಕರ್ಷಿಸುವಷ್ಟರ ಮಟ್ಟಿಗೆ ಮತ್ತು ಅವರ ಕೆಲವು ತಪ್ಪು ಕಲ್ಪನೆಗಳು ಅಜಾಗರೂಕ ಓದುಗನ ಲಕ್ಷ್ಯದಿಂಂದ ವಂಚಿತವಾಗಬಾರದೆನ್ನುವ ಕಾರಣಕ್ಕಾಗಿ ನಾನು ಈ ವಿಮರ್ಶೆಯಲ್ಲಿ ಸೀಮಾ ರೇಖೆಯನ್ನು ಹಾಕಿಕೊಂಡಿದ್ದೇನೆ. +ಈ ಎರಡೂ ವಿಷಯಗಳಲ್ಲಿ ರಸೆಲ್ಲರಿಗೆ ಮತ್ತು ಅವರ ಓದುಗರಿಗೆ ನನ್ನ ಕರ್ತವ್ಯ ನೆರವೇರಿಸಲು ಪ್ರಯತ್ನಿಸಿದ್ದೇನೆ. +