From 5dffb596e1febe8bede8122c2cfcab970fd2d3c9 Mon Sep 17 00:00:00 2001 From: Narendra VG Date: Mon, 17 Apr 2023 15:44:51 +0530 Subject: [PATCH] Upload New File --- .../\340\262\254\340\262\262\340\262\277.txt" | 223 ++++++++++++++++++ 1 file changed, 223 insertions(+) create mode 100644 "Data Collected/Kannada/MIT Manipal/Kannada-Scrapped-dta/\340\262\254\340\262\262\340\262\277.txt" diff --git "a/Data Collected/Kannada/MIT Manipal/Kannada-Scrapped-dta/\340\262\254\340\262\262\340\262\277.txt" "b/Data Collected/Kannada/MIT Manipal/Kannada-Scrapped-dta/\340\262\254\340\262\262\340\262\277.txt" new file mode 100644 index 0000000..590bf19 --- /dev/null +++ "b/Data Collected/Kannada/MIT Manipal/Kannada-Scrapped-dta/\340\262\254\340\262\262\340\262\277.txt" @@ -0,0 +1,223 @@ +ಅವಳು ಭಾಗಶಃ ಚಟ್ಟೆಯಾದ ಕಪ್ಪು ಬಣ್ಣಕ್ಕೆ ತಿರುಗಿದ ಅಲ್ಯೂಮೀನಿಯಂ ತಟ್ಟೆಯೊಳಗೆ ಸ್ವಲ್ಪ ಹಾಲು ಸುರಿದು ಅದಕ್ಕೆ ಸ್ವಲ್ಪ ನೀರನ್ನು ಬೆರೆಸಿ, ಒಲೆಯ ಮೇಲಿಟ್ಟು ಮುಚ್ಚಳ ಮುಚ್ಚಿದಳು. +ಒಲೆಯ ಬದಿಯಲ್ಲಿದ್ದ ಬೂದಿರಾಶಿಯ ಪಕ್ಕದಿಂದ ಗರಗಸದ ಹುಡಿಯನ್ನು ಕೈಯಿಂದ ತೆಗೆದು ಒಲೆಯ ಒಳಗೆ ಹಾಕಿದಳು. +ಗರಗಸದ ಹುಡಿಯ ಮೇಲೆ ಚಿಮಿಣಿಯೆಣ್ಣೆಯನ್ನು ಸ್ವಲ್ಪ ಸುರಿದು ಕಡ್ಡಿ ಗೀರಿ ಬೆಂಕಿ ಹಚ್ಚಿದಳು. +ಬೆಂಕಿ ಹೊತ್ತುತಿದ್ದಂತೆ ಒಲೆಯ ಹಿಂಬದಿಯಲ್ಲಿದ್ದ ಕಟ್ಟಿಗೆಯ ತುಂಡುಗಳನ್ನು ತೆಗೆದು ಗರಗಸದ ಹುಡಿಯ ಮೇಲೆ ಇಟ್ಟಳು. +ಸ್ವಲ್ಪ ಹೊತ್ತು ಉರಿದ ಕಟ್ಟಿಗೆ ನಂದ ತೊಡಗಿದಂತೆ ಅವಳು ಊದುಕೊಳವೆಯನ್ನು ತೆಗೆದುಕೊಂಡು ಊದತೊಡಗಿದಳು. +ಕೆಂಡ ಜಾಸ್ತಿ ಕೆಂಪಗಾಗುತಿತ್ತೇ ಹೊರತು ಬೆಂಕಿ ಹಿಡಿಯಲಿಲ್ಲ. +ಅಲ್ಲಿಯೇ ರಾಶಿ ಹಾಕಿದ್ದ ಒಣ ತರಗೆಲೆಗಳನ್ನು ತೆಗೆದು ಕೆಂಡದ ಮೇಲೆ ಹಾಕಿ ಮತ್ತೂ ಜೋರಾಗಿ ಊದತೊಡಗಿದಳು. +ಉಸಿರಿನ ರಭಸಕ್ಕೆ ಕೆಂಡದ ಮೇಲಿನ ಬೂದಿ ಹಾಗೂ ಗರಗಸದ ಹುಡಿಯು ಹಾರಿ ಅವಳ ತಲೆಕೂದಲು, ಕಣ್ಣು, ಮೂಗು ಹಾಗೂ ಕೆನ್ನೆಯ ಮೇಲೆ ಕುಳಿತುಕೊಂಡವು. +ಊದಿದಷ್ಟೂ ಹೊಗೆಯೇ ಬರತೊಡಗಿ ಆ ಹೊಗೆಯು ಇಡೀ ಅಡುಗೆ ಕೋಣೆಯನ್ನು ಆವರಿಸಿ ಅವಳಿಗೆ ದಮ್ಮು ಕಟ್ಟಿದಂತಾಯಿತು. +ಊದುಕೊಳವೆಯನ್ನು ಅಲ್ಲಿಯೇ ಬಿಸಾಡಿ ಕೆಮ್ಮುತ್ತಾ ಅವಳು ಬಾಗಿಲ ಹತ್ತಿರ ಬಂದು ಅಂಗಳವನ್ನು ದೃಷ್ಟಿಸಿದಳು. +“ಯಾಕೋ ಮಗಾ, ಆ ಹೇಂಟೆಯನ್ನು ಕೈಯಲ್ಲಿ ಹಿಡಿದುಕೊಂಡು ಹಿಂಸೆ ಕೊಡುತ್ತೀಯಾ? +ಬಿಟ್ಟು ಬಿಡು ಅದನ್ನು” ಅವಳು ಜೋರಾಗಿ ಕೂಗಿ ಹೇಳಿದಳು. + “ಇಲ್ಲಮ್ಮಾ ನಾನು ಬಿಡೋಲ್ಲ, ಆ ಕೆಂಪು ಹುಂಜಕ್ಕೆ ಎಷ್ಟು ಕೊಬ್ಬು ನೋಡು. +ನಮ್ಮ ಹೇಂಟೆಯನ್ನು ಬೆನ್ನಟ್ಟಿ ಕಚ್ಚುತ್ತಾನೆ. +ನಾನು ಬಿಡೋಲ್ಲ” ಹೀಗೆ ಹೇಳುತ್ತಾ ಆ ಹುಡುಗ ಸಣ್ಣ ಸಣ್ಣ ಕಲ್ಲುಗಳನ್ನು ಹೆಕ್ಕಿಕೊಂಡು ಹುಂಜಕ್ಕೆ ಎಸೆಯತೊಡಗಿದ. +ಆದರೂ ಹುಂಜ ಅವನ ಸುತ್ತು ತಿರುಗುವುದು ನಿಲ್ಲಿಸಲಿಲ್ಲ. +ಅಡುಗೆ ಕೋಣೆಯ ಹೊಗೆ ಕಡಿಮೆಯಾದಂತೆ ಅವಳು ಪುನಃ ಒಲೆಯ ಬದಿಗೆ ಬಂದಳು. +ಸ್ವಲ್ಪ ಸೀಮೆಯೆಣ್ಣೆಯನ್ನು ಕಟ್ಟಿಗೆಯ ಮೇಲೆ ಜಾಸ್ತಿ ಸುರಿದಳು. +ಕಡ್ಡಿಗೀರಿ ಬೆಂಕಿ ಹೊತ್ತಿಸಿ ಅದು ನಂದನಂತೆ ಆಗಾಗ್ಗೆ ಸ್ವಲ್ಪ ಸ್ವಲ್ಪವೇ ತರಗೆಲೆಯನ್ನು ಹಾಕಿ ಬೆಂಕಿಯು ಕಟ್ಟಿಗೆಯನ್ನು ಆವರಿಸುವಂತೆ ಮಾಡಿದಳು. +ಬೆಂಕಿಯು ಕಟ್ಟಿಗೆಯನ್ನು ಸಂಪೂರ್ಣ ಆವರಿಸಿದಂತೆ ಅವಳು ನಿರಾಳಲಾದಳು. +ಹಾಲು ಕುದಿಯುತ್ತಿದ್ದಂತೆ ಪಾತ್ರೆಯನ್ನು ಒಲೆಯಿಂದ ಕೆಳಗಿಳಿಸಿ ಸಕ್ಕರೆ ಹಾಕಿ ಎರಡು ಗ್ಲಾಸಿಗೆ ಸುರಿದಳು. +ತಿನ್ನಲು ಏನಾದರೂ ಇದೆಯೆ?ಎಂದು ಪಕ್ಕದಲ್ಲಿದ್ದ ಹಲಗೆಯ ಸೆಲ್ಫ್ ಮೇಲೆ ಕೈಯಾಡಿಸಿದಳು. +ಒಂದು ಪ್ಲಾಸ್ಟಿಕ್ ಪೊಟ್ಟಣ ಕೈಗೆ ಸಿಕ್ಕಿತು. +ಅದರಲ್ಲಿದ್ದ ರಸ್ಕ್, ತುಂಡುಗಳನ್ನು ಕೈಹಾಕಿ ಹೊರಗೆ ತೆಗೆದಳು. +ಆದರೆ ಸಣ್ಣ ಸಣ್ಣ ಇರುವೆಗಳು ರಸ್ಕಿನ ತುಂಡುಗಳನ್ನು ಮುತ್ತಿಕೊಂಡಿದ್ದು ಅವುಗಳು ಅವಳ ಕೈಗೂ ಹರಡಿಕೊಂಡಿತು. +ರಸ್ಕಿನ ತುಂಡುಗಳನ್ನು ಒಮ್ಮೆ ಜೋರಾಗಿ ನೆಲಕ್ಕೆ ಕೊಡವಿಕೊಂಡಳು. +ಇರುವೆಗಳು ಚದುರಿಹೋದ ಮೇಲೆ ಅವಳು ರಸ್ಕ್‌ಗಳನ್ನು ಹೆಕ್ಕಿಕೊಂಡಳು. +“ಬಾ ಮಗೂ ಬಾ. +ಹಾಲು ಕುಡಿದು ಆಮೇಲೆ ಆಡುವಿಯಂತೆ”. +ಅವಳು ಜೋರಾಗಿ ಕೂಗಿ ಮಗನನ್ನು ಕರೆದಳು. +ತಾಯಿಯ ಕರೆ ಕೇಳಿದ ಕೂಡಲೇ ಹುಡುಗ ಕೈಯಲ್ಲಿದ್ದ ಹೇಂಟೆಯನ್ನು ಅಲ್ಲಿಯೇ ಬಿಸಾಡಿ ಅಡುಗೆ ಕೋಣೆಗೆ ಓಡಿಬಂದು ಅವಳ ಹತ್ತಿರ ಕುಳಿತನು. +ರಸ್ಕಿನ ತುಂಡುಗಳನ್ನು ಹಾಲಿಗೆ ಮುಳುಗಿಸಿ ಅವನು ಗಬ ಗಬ ತಿನ್ನುವುದನ್ನೇ ಅವಳು ತದೇಕಚಿತ್ತದಿಂದ ನೋಡುತಿದ್ದಳು. +ಅವನ ಗ್ಲಾಸಿನ ಹಾಲು ಮುಗಿಯುತಿದ್ದಂತೆ ಅವಳು ತನ್ನ ಗ್ಲಾಸಿನ ಹಾಲನ್ನು ಕೂಡಾ ಅವನ ಗ್ಲಾಸಿಗೆ ಸುರಿದು ತಾನು ಹಾಲು ಕುಡಿದಂತೆ ಅನುಕರಣೆ ಮಾಡಿದಳು. +“ಮಗಾ, ಇನ್ನು ಆಟ ಆಡಬೇಡ. +ಸ್ನಾನ ಮಾಡಿಸುತ್ತೇನೆ. +ನಾಳೇ ಹಬ್ಬ. +ನಾನು ಒಳ್ಳೆಯ ಮದರಂಗಿ ತಂದಿದ್ದೇನೆ ನೋಡು. +ನಿನ್ನ ಕೈ ತುಂಬಾ ಚಿತ್ರ ಬಿಡಿಸುತ್ತೇನೆ. +ನಾಳೆ ಬೆಳಗ್ಗೆ ನೋಡುವಿಯಂತೆ.” +ನಿನ್ನ ಕೈಯ ಮದರಂಗಿ ಜಾಸ್ತಿ ಕೆಂಪು ಆದರೆ ನೀನು ತುಂಬಾ ಅದೃಷ್ಟವಂತನು ಎಂದು ಅರ್ಥ. +ಅವಳು ಮಗುವನ್ನು ಆಲಂಗಿಸುತ್ತಾ ಹೇಳಿದಳು. +“ಹಾಗಾದರೆ ನೀನು ಕೂಡಾ ಮದರಂಗಿ ಇಡಮ್ಮಾ. +ನೋಡುವ, ಯಾರ ಕೈ ಜಾಸ್ತಿ ಕೆಂಪಾಗುತ್ತದೆ ಮತ್ತು ಯಾರು ಹೆಚ್ಚು ಅದೃಷ್ಟವಂತರು ಎಂದು” ಹುಡುಗ ತಾಯಿಯ ಸೆರಗನ್ನು ಎಳೆಯುತ್ತಾ ಹೇಳಿದ. +“ಇಲ್ಲ ಮಗೂ ನಾನು ಆ ಅದೃಷ್ಪ ಪಡಕೊಂಡು ಬಂದಿಲ್ಲ”ಉಮ್ಮಳಿಸಿ ಬರುವ ದುಃಖವನ್ನು ತಡೆದುಕೊಳ್ಳುತ್ತಾ ಅವಳು ಎದ್ದು ನಿಂತಳು. +ಹುಡುಗ ಆಂಗಳಕ್ಕೋಡಿದ. +ಅವಳು ಅಡುಗೆ ಕೋಣೆ ಸೇರಿದಳು. +ಬಹಳ ಕಷ್ಟದಿಂದ ಆ ಒಲೆಯೊಂದಿಗೆ ಹೋರಾಡಿ ಒಂದಿಷ್ಟು ಅನ್ನ ಬೇಯಿಸಿದಳು. +ನಾಳೆ ಹಬ್ಬವಾದರೂ ಮನೆಯಲ್ಲಿ ಪದಾರ್ಥಕ್ಕೆ ಬೇಕಾದ ಸಾಮಾಗ್ರಿ ಇರಲಿಲ್ಲ. +ಅಳಿದುಳಿದ ಒಂದಿಷ್ಟು ಒಣ ಮೀನಿನ ತುಂಡುಗಳನ್ನು ಸುಟ್ಟು ತಿಂದರಾಯಿತು ಎಂದುಕೊಂಡಳು. +ಕತ್ತಲಾದೊಡನೆ ಒಳಗೋಡಿ ಬಂದ ಮಗನನ್ನು ಸ್ನಾನ ಮಾಡಿಸಿ ಊಟ ಬಡಿಸಿ ಮದರಂಗಿ ಇಡಲು ಮಲಗುವ ಕೋಣೆಗೆ ಕರಕೊಂಡು ಹೋದಳು. +ಮಗನಿಗೆ ಇಪ್ಟವಾದಂತೆ ಅವನು ಹೇಳಿದ ರೀತಿಯಲ್ಲಿ ಅವನ ಎರಡೂ ಕೈಗಳಿಗೆ ಮದರಂಗಿಯಿಂದ ಚಿತ್ರಗಳನ್ನು ಬಿಡಿಸಿದಳು. +ಹುಡುಗ ತನ್ನ ಕೈಗಳು ಬಟ್ಟೆ ಬರೆಗಳಿಗೆ ತಾಗದಂತೆ ಬಹಳ ಜಾಗ್ರತೆ ವಹಿಸಿ ಅಂಗಾತ ಮಲಗಿ ನಿದ್ರೆ ಹೋದನು. +ಜಗತ್ತಿನ ಕಪಟವನ್ನರಿಯದ ತನ್ನ ಮಗುವಿನ ಮುಗ್ದ ಮುಖವನ್ನು ಅವಳು ಎವೆಯಿಕ್ಕದೆ ನೋಡಿದಳು. +ಸ್ವಲ್ಪ ಹೊತ್ತಿನ ನಂತರ ಅವಳಿಗೆ ಏನೋ ಅಲೋಚೆನೆ ಬಂತು. +ತನ್ನ ಎರಡೂ ಕೈಗಳನ್ನು ನೋಡಿಕೊಂಡಳು. +ಕಪ್ಪು ಬಣ್ಣಕ್ಕೆ ತಿರುಗಿದ ಗಾಜಿನ ಬಳೆಗಳನ್ನು ತೊಟ್ಟುಕೊಂಡ ಹಾಲು ಬಣ್ಣದ ದುಂಡಗಿನ ತನ್ನ ಸುಂದರ ಬಿಳಿ ಕೈಗಳನ್ನು ಜೋಡಿಸಿಕೊಂಡು ಮತ್ತೊಮ್ಮೆ ನೋಡಿಕೊಂಡಳು. +ಅವುಗಳ ಸೌಂದರ್ಯಕ್ಕೆ ತಾನೇ ಮಾರು ಹೋದಳು. +ಈ ಸುಂದರ ಕೈಗಳ ಮೇಲೆ ಮದರಂಗಿಯ ಚಿತ್ತಾರ ಬಿಡಿಸಲು ಅವಳಿಗೆ ಮನಸ್ಸಾಯಿತು. +ಅವಳು ಮದರಂಗಿಯ ಟ್ಯೂಬನ್ನು ಕೈಗೆತ್ತಿಕೊಂಡಳು. +ಆದರೆ ಯಾಕೋ?ಅವಳ ಕಣ್ಣುಗಳು ಹನಿಗೂಡಿದವು. +ಕೈಗಳು ನಡುಗತೊಡಗಿದವು. +ಟ್ಯೂಬನ್ನು ದೂರ ಬಿಸಾಡಿ ಮಗುವಿನ ಪಕ್ಕ ಬೋರಲಾಗಿ ಮಲಗಿಕೊಂಡಳು. +ಬೆಳಗ್ಗಿನ ಜಾವ ಹದವಾಗಿ ಕೊರೆಯುತ್ತಿರುವ ಚಳಿಗೆ ಅವಳಿಗೆ ಎಚ್ಚರವಾಯಿತು. +ಲೋಕದ ಪರಿವೆಯಿಲ್ಲದೆ ಮಲಗಿದ ಮಗುವಿನ ಮೈಮೇಲೆ ಅಲ್ಲಿಯೇ ಹಗ್ಗದಲ್ಲಿ ನೇತುಹಾಕಿದ ತನ್ನ ಹಳೆಯ ಸೀರೆಯನ್ನು ಹೊದಿಸಿದಳು. +ರಾತ್ರಿ ಸುಮಾರು ಹೊತ್ತಿನವರೆಗೂ ನಿದ್ರೆ ಬಾರದಿದ್ದುದರಿಂದ ಅವಳ ಕಣ್ಣುಗಳು ಉರಿಯುತಿದ್ದುವು. +ಹಣೆ ಸಿಡಿಯುತಿತ್ತು. +ಬೆಳಗ್ಗಿನ ಫಲಹಾರ ಮುಗಿಯಿತು. +ಅವಳು ಮಗುವನ್ನು ಸ್ನಾನ ಮಾಡಿಸಿ ತಾನು ವಾರದ ಸಂತೆಯ ದಿನ ರಸ್ತೆ ಬದಿಯಲ್ಲಿ ರಾಶಿ ಹಾಕಿ ಬಟ್ಟೆ ಬರೆ ಮಾರುವವನಿಂದ ಚೌಕಾಶಿ ಮಾಡಿಕೊಂಡು ಮಗನಿಗೆ ಒಂದು ಚಡ್ಡಿ ಹಾಗೂ ಟೀ ಶರ್ಟ್‌ ಖರೀದಿಸಿದ್ದಳು. +ಅದನ್ನು ಮಗನಿಗೆ ತೋರಿಸದೆ ಒಮ್ಮೆಲೇ ಖುಷಿ ಮಾಡಿಸಲು ಅಡಗಿಸಿಟ್ಟಿದ್ದಳು. +ಇವತ್ತು ಅದನ್ನು ತನ್ನ ಹಳೆಯ ಬಟ್ಟೆ ಕಟ್ಟಿನಿಂದ ಹೊರತೆಗೆದು ಮಗನಿಗೆ ತೋರಿಸಿದಳು. +ಹುಡುಗನ ಸಂತೋಷಕ್ಕೆ ಪಾರವೇಯಿರಲಿಲ್ಲ. +ಅವನು ಬೇಗ ಬೇಗನೆ ಹೊಸ ಬಟ್ಟೆಗಳನ್ನು ಧರಿಸಿ ಕುಣಿದಾಡಿದ. +ಏಕೋ ಅವನ ಮುಖ ಒಮ್ಮೆಲೆ ಸಣ್ಣಗಾಯಿತು. +“ಅಮ್ಮಾ, ನಿನಗೆ ಹೊಸ ಬಟ್ಟೆ ಇಲ್ಲವೇನಮ್ಮಾ”? +ಅವಳು ಉತ್ತರಕ್ಕಾಗಿ ತಡವರಿಸಿದಳು. +ಮತ್ತು ಸ್ವಲ್ಪ ಹೊತ್ತು ಅಲೋಚನೆಯಲ್ಲಿ ಬಿದ್ದಳು. +“ಇದೆ ಮಗು. +ನನಗೆ ತುಂಬಾ ಬಟ್ಟೆ ಬರೆಯಿದೆ. +ಅದರಲ್ಲಿ ಒಂದನ್ನು ಉಟ್ಟುಕೊಳ್ಳುತ್ತೇನೆ. +ಇವತ್ತು ಹಬ್ಬ ತಾನೇ…. . ನೀನೀಗ ಮಸೀದಿಗೆ ಹೋಗು ಹಿಂದೆ ಬರುವಾಗ ನಾನು ರೆಡಿಯಾಗಿರುತ್ತೇನೆ”. +ಅವಳು ನಗೆಯ ಮುಖವಾಡ ತೋರಿಸಿದಳು. +“ಇಲ್ಲಮ್ಮಾ ನಾನು ಮಸೀದಿಗೆ ಹೋಗುವುದಿಲ್ಲ. +ಎಲ್ಲರೂ ಅವರವರ ತಂದೆ, ಅಣ್ಣ, ತಮ್ಮ, ಚಿಕ್ಕಪ್ಪ, ದೊಡ್ಡಪ್ಪರೊಂದಿಗೆ ಮಸೀದಿಗೆ ಹೋಗುತ್ತಾರೆ. +ರಸ್ತೆಯಲ್ಲಿ ಹೋಗುವಾಗ ಅವರ ನಗೆ- ತಮಾಷೆ ನನಗೆ ಹೊಟ್ಟೆಕಿಚ್ಚು ತರಿಸುತ್ತದೆ. +ನನಗೆ ಯಾರಿದ್ದಾರಮ್ಮಾ? +ನಾನು ಹೋಗುವುದಿಲ್ಲ”. +ಅವನು ಅಳತೊಡಗಿದನು. +ಅವಳು ಒಮ್ಮೆ ಅಧೀರಳಾದಳು. +ಒತ್ತಿ ಬರುವ ಕಣ್ಣೀರನ್ನು ತಡೆದುಕೊಂಡಳು. +ಮಗನನ್ನು ತನ್ನ ಬಳಿ ಸೆಳೆದುಕೊಂಡು ಅವನ ತಲೆಕೂದಲ ಮೇಲೆ ಕೈಯನ್ನಾಡಿಸಿದಳು. +ಮುಖವನ್ನು ಮುದ್ದಿಸಿದಳು. +ತೇವಗೊಂಡ ಕಣ್ಣಿಂದ ಮಗುವಿನ ಕೆನ್ನೆ ತೋಯಿಸಿದಳು. +ಹುಡುಗ ತಾಯಿಯನ್ನು ದಿಟ್ಟಿಸಿ ನೋಡಿದ. +ಅವನು ಗಟ್ಟಿ ಸ್ವರದಲ್ಲಿ ಹೇಳಿದ. +“ನೀನು ಅಳಬೇಡಮ್ಮಾ. +ನಾನು ಒಬ್ಬನೇ ಮಸೀದಿಗೆ ಹೋಗುತ್ತೇನೆ. +ಒಬ್ಬನೇ ನನಗೆ ಯಾರೂ ಬೇಡ” ಹುಡುಗ ತಾಯಿಯನ್ನು ಅಪ್ಪಿ ಹಿಡಿದನು. +“ನೀನು ಒಬ್ಬನಲ್ಲ ಮಗೂ. +ನಿನಗೆ ದೇವರಿದ್ದಾನೆ. +ನಿನ್ನ ಎಡಬಲಕ್ಕೆ ಮಲಕುಗಳಿವೆ. +ನಿನಗೆ ಅವರ ರಕ್ಷಣೆಯಿದೆ. +ನೀನು ಹೋಗು ಮಗೂ” ಅವಳು ಗದ್ಗದಿತ ಕಂಠದಿಂದ ಹೇಳಿದಳು. +ಹುಡುಗನ ಕೈ ಹಿಡಿದು ರಸ್ತೆವರೆಗೂ ಬಂದಳು. +ಅವಳ ಕೈ ನಡುಗುತಿತ್ತು. +ರಸ್ತೆ ಬದಿಯ ಲೈಟ್ ಕಂಬದ ಮರೆಯಲ್ಲಿ ನಿಂತು ಮಗುವನ್ನು ಕಳುಹಿಸಿಕೊಟ್ಟಳು. +ಹುಡುಗ ತಲೆತಗ್ಗಿಸಿಕೊಂಡು ಒಬ್ಬ ನಡೆದು ಹೋಗುತಿದ್ದುದ್ದನ್ನು ಅವಳು ಬಹಳ ಹೊತ್ತು ನೋಡುತ್ತಾ ನಿಂತಳು. +ಇದುವರೆಗೂ ಒತ್ತಿ ಹಿಡಿದ ಕಣ್ಣೀರು ಧಾರಾಕಾರವಾಗಿ ಹರಿಯತೊಡಗಿತು. +ರಸ್ತೆಯ ಎರಡೂ ಬದಿಗಳಲ್ಲಿ ಜಮಾತಿನವರು ಗುಂಪು ಗುಂಪಾಗಿ ಮಸೀದಿಗೆ ನಡೆದು ಹೋಗುತ್ತಿದ್ದರು. +ಹೊಸ ಹೊಸ ಕಲರ್ ಕಲರ್ ಬಟ್ಟೆಗಳು! +ಶೂ ಚಪ್ಪಲಿಗಳು! +ವಿವಿಧ ಆಕಾರದ ಟೊಪ್ಪಿಗಳು! +ಕೆಲವರು ಜೋಕ್ಸ್ ಕಟ್ ಮಾಡಿಕೊಂಡು ನಗಾಡುತ್ತಾ ಹೋಗುತಿದ್ದರೆ ಇನ್ನು ಕೆಲವರು ಹೆಗಲಿಗೆ ಕೈಹಾಕಿಕೊಂಡು ಮಧ್ಯಾಹ್ನ ನಂತರದ ಸಿನಿಮಾ ಪ್ರೋಗ್ರಾಂ ಬಗ್ಗೆ ಚರ್ಚಿಸುತ್ತಾ ಹೋಗುತಿದ್ದರು. +ಸೆಂಟಿನ ಪರಿಮಳ ಅವಳ ಮೈಮನಕ್ಕೆ ಪುಳಕ ನೀಡುತಿತ್ತು. +ಕೆಲವು ಚಿಗುರು ಮೀಸೆಯ ಪುಂಡ ಹುಡುಗರು ಕೈ ಬೀಸಿಕೊಂಡು, ನಗಾಡುತ್ತಾ ನಡೆದು ಹೋಗುವಾಗ ಅವಳು ಅವರನ್ನು ಕದ್ದು ಕದ್ದು ನೋಡಿದಳು. +ಅವಳಿಗೆ ತನ್ನ ಹಿಂದಿನ ನೆನಪಾಯಿತು. +ಯಾಕೋ?ಮನಸ್ಸು ಸ್ಥಿಮಿತ ಕಳೆದುಕೊಳ್ಳುವುದನ್ನು ತಡೆಯಲು ಅವಳು ಸೀರೆಯ ಸೆರಗನ್ನು ತಲೆಗೆ ಎಳೆದುಕೊಂಡು ಮನೆಯ ಕಡೆಗೆ ಓಡಿದಳು. +ಮನೆಯ ಒಳಗೆ ಬಂದು ಮುಂಬಾಗಿಲು ಭದ್ರ ಪಡಿಸಿ ಹಾಸಿಗೆಯ ಮೇಲೆ ಬೋರಲು ಬಿದ್ದುಕೊಂಡಳು ಜೋರಾಗುತ್ತಿರುವ ಎದೆಯ ಬಡಿತವನ್ನು ನಿಯಂತ್ರಿಸಲು ಅವಳು ಎದ್ದು ಬಚ್ಚಲು ಕೋಣೆಗೆ ಹೋಗಿ ಮುಖಕ್ಕೆ ತಣ್ಣೀರು ಚಿಮುಕಿಸಿಕೊಂಡಳು. +ಎಷ್ಟೋ ಹೊತ್ತಿನ ನಂತರ ಅವಳ ಮನಸ್ಸು ಸ್ಥಿಮಿತಕ್ಕೆ ಬಂತು. +ಹಾಗೆಯೇ ಅವಳು ಮುಂಬಾಗಿಲು ತೆರೆದು ಅಂಗಳಕ್ಕೆ ಬಂದಳು. +ಅಂಗಳದಲ್ಲಿ ಹಿಂದಿನ ದಿನವೂ ಬಂದ ಆ ಕೆಂಪು ಹುಂಜ ಹಲವು ಹೇಂಟೆಗಳೊಂದಿಗೆ ಚಕ್ಕಂದವಾಡುತ್ತಾ ಕಾಳುಗಳನ್ನು ಹೆಕ್ಕಿ ತಿನ್ನುತಿದ್ದುವು. +ಅವಳಿಗೆ ಅ ಹುಂಜವನ್ನು ನೋಡುವಾಗ ರೋಷ ನೆತ್ತಿಗೇರಿತು. +“ಹಾಳು-ಮುಂಡೇವು” ಅವಳು ಶಪಿಸುತ್ತಾ ಅಂಗಳದಿಂದ ಒಳಬಂದು ಮುಂಬಾಗಿಲಲ್ಲಿ ನಿಂತಳು. +ದೂರದಲ್ಲಿ ನೆರೆಮನೆಯ ಅಜ್ಜಿ ತನ್ನ ಮನೆಯ ಕಡೆಗೆ ಬರುವುದು ಕಾಣಿಸಿತು. +ಅಜ್ಜಿ ಮನೆಯಂಗಳ ತುಳಿಯುತಿದ್ದಂತೆ ಅವಳು ನಗುತ್ತಾ ಅಜ್ಜಿಯನ್ನು ಸ್ವಾಗತಿಸಿದಳು. +“ಈಗ ಪ್ರಾರ್ಥನೆಯ ಸಮಯ ಮಗೂ. +ಇವತ್ತು ಬಲಿದಾನದ ಹಬ್ಬ. +ಹೀಗೆಲ್ಲಾ ಮೆಟ್ಟಿಲಲ್ಲಿ ನಿಂತುಕೊಂಡು ಅಲೋಚಿಸಬಾರದು. +ಒಳಗೆ ಬಾ ಮಗಳೇ”. +ಅಜ್ಜಿ ಅವಳ ಉತ್ತರಕ್ಕೂ ಕಾಯದೆ ಒಳಗೆ ಹೋದಳು. +ಅವಳು ಕೂಡಾ ಏನೂ ಉತ್ತರಿಸದೆ ಅಜ್ಜಿಯನ್ನು ಹಿಂಬಾಲಿಸದಳು. +ಅಜ್ಜಿ ತನ್ನ ಕೈಯಲ್ಲಿದ್ದ ಪಾತ್ರೆಯನ್ನು ಅವಳಲ್ಲಿ ಕೊಟ್ಟಳು. +“ಇದರಲ್ಲಿ ಬಿಸಿ ಬಿಸಿ ಎಟ್ಟಿ ಬಿರಿಯಾನಿ ಇದೆ ಮಗಳೇ. +ಹಾಗೆಯೇ ಸ್ವಲ್ಪ ಕೋಸಂಬರಿ ಕೂಡಾ ಮಾಡಿದ್ದೇನೆ. +ಮಗುವಿಗೆ ಎಟ್ಟಿ ಬಿರಿಯಾನಿ ಇಷ್ಟ ತಾನೇ? +ಉಳಿದರೆ ರಾತ್ರಿ ಬಿಸಿ ಮಾಡಿ ತಿಂದು ಬಿಡು. +ಅಜ್ಜಿ ಅವಳ ಉತ್ತರಕ್ಕೂ ಕಾಯದೆ ಹೊರಟು ನಿಂತಳು. +ಅವಳಿಗೆ ಅಜ್ಜಿಯ ಮುಖ ನೋಡಿದೊಡನೆ ಅಳು ತಡೆಯಲಾಗಲಿಲ್ಲ. +ಅಜ್ಜಿಯ ಭುಜಕ್ಕೆ ಒರಗಿ ಗಳಗಳನ ಅತ್ತು ಬಿಟ್ಟಳು. +“ಅಳ್ಬೇಡ ಮಗಳೇ, ದೇವರು ಪರೀಕ್ಷಿಸಲು ಕೆಲವೊಮ್ಮೆ ನಮಗೆ ಈ ರೀತಿ ಕಷ್ಟ ಕೊಡುತ್ತಾನೆ, ಎದುರಿಸಬೇಕು. +ಕತ್ತಲೆಯ ಹಿಂದೆ ಬೆಳಕಿದೆ. +ಹೋಗು ಸ್ನಾನ ಮಾಡು, ಹೊಸ ಬಟ್ಟೆ ಬರೆ ಉಟ್ಟುಕೋ. +ಇವತ್ತು ಒಳ್ಳೆಯ ದಿನ. +ಶುದ್ಧ ಮನಸ್ಸಿನಿಂದ ದೇವರನ್ನು ಬೇಡಿಕೋ. +ನಮ್ಮ ಬೇಡಿಕೆಗಳು ಖಂಡಿತ ಈಡೇರುತ್ತದೆ. +ಅವನು ಎಲ್ಲರ ಬೇಡಿಕೆಗಳನ್ನು ಈಡೇರಿಸುತ್ತಾನೆ. +ಇದರಲ್ಲಿ ಸಂಶಯಬೇಡ ಮಗಳೇ” ಅವಳು ಅಜ್ಜಿಯನ್ನು ದೃಷ್ಟಿಸಿ ನೋಡಿದಳು. +ನನ್ನನ್ನು ಸಮಾಧಾನ ಪಡಿಸಲು ಈ ಅಜ್ಜಿ ಎಷ್ಟು ವರ್ಷಗಳಿಂದ ಈ ರೀತಿ ಮಾತಾಡುತ್ತಿದ್ದಾಳೆ! +ಎಷ್ಟು ಹಬ್ಬಗಳು ಹಾದು ಹೋದವು! ಅಜ್ಜಿಯ ನಂಬಿಕೆಯನ್ನು ಈ ವರ್ಷವಾದರೂ ಈಡೇರಿಸು ದೇವರೇ” ಅವಳು ಮನದಲ್ಲೇ ದೇವರನ್ನು ಬೇಡಿಕೊಂಡಳು. +ಅಜ್ಜಿ ಹೊರಟು ಹೋದ ಕೂಡಲೇ ಅವಳು ಲವಲವಿಕೆಯಿಂದ ಸ್ನಾನ ಮುಗಿಸಿ ಬಂದಳು. +ಬಟ್ಟೆಯ ಕಟ್ಟು ಬಿಚ್ಚಿ, ಅದರಲ್ಲಿದ್ದ ಸೀರೆಗಳಲ್ಲಿ ಅವಳಿಗೆ ಇಷ್ಟವಾದ ಹಾಗೂ ಅವನಿಗೂ ಇಷ್ಟವಾದ ಸೀರೆಯೊಂದನ್ನು ಆರಿಸಿ, ಉಟ್ಟುಕೊಂಡಳು. +ಎಣ್ಣೆ ಹಾಕಿ ತಲೆ ಬಾಚಿಕೊಂಡಳು. +“ಓ ದೇವರೇ, ಈ ವರ್ಷವಾದರೂ ನನ್ನ ಮೇಲೆ ಕೃಪೆದೋರು. +ನನ್ನ ಮಗನನ್ನು ಅನಾಥನನ್ನಾಗಿ ಮಾಡಬೇಡಪ್ಪಾ…. . ” ಅವಳು ಅಳುತ್ತಾ ದೇವರನ್ನು ಪ್ರಾರ್ಥಿಸಿಕೊಂಡಳು. +ರಸ್ತೆಯಲ್ಲಿ ಜಮಾತಿನವರು ಪ್ರಾರ್ಥನೆ ಮುಗಿಸಿ ಗುಂಪು ಗುಂಪಾಗಿ ಮಾತಾಡಿಕೊಂಡು, ನಗಾಡಿಕೊಂಡು ಮನೆಯ ಕಡೆಗೆ ಹೋಗುವುದನ್ನು ಕೇಳಿಸಿಕೊಂಡಳು. +ಇನ್ನೇನು!ಮಗ ಬರುವ ಹೊತ್ತಾಯಿತು. +ತಾನು ಅತ್ತದ್ದು ಮಗನಿಗೆ ಗೊತ್ತಾಗದಿರಲೆಂದು ಅವಳು ಪುನಃ ಮುಖ ತೊಳದುಕೊಂಡು ಮಗನ ಬರವನ್ನು ನಿರೀಕ್ಷಿಸುತ್ತಿದ್ದಳು. +ಮನೆಗೆ ಬಂದ ಮಗ ನಗು-ನಗುತ್ತಾ ಊಟ ಮುಗಿಸಿ ತನ್ನ ಹೊಸ ಬಟ್ಟೆ ಬರೆ ತೋರಿಸಲು ನೆರೆಮನೆಗೆ ಓಡಿದನು. +ಎಟ್ಟಿ ಬಿರಿಯಾನಿಗೆ ಕೈಯಿಕ್ಕಿದ ಅವಳಿಗೆ ಊಟ ಮಾಡಲಾಗಲಿಲ್ಲ. +ಅಜ್ಜಿಯ ಮಾತು ಕಿವಿಯಲ್ಲಿ ಗುಣುಗುಟ್ಟುತಿತ್ತು. +“ಕತ್ತಲೆಯ ಹಿಂದೆ ಬೆಳಕಿದೆ ಮಗಳೇ. +ಇವತ್ತು ಪವಿತ್ರ ದಿನ. +ನಿನ್ನ ಪ್ರಾರ್ಥನೆಗಳು ಈಡೇರುತ್ತವೆ” ಅವಳಿಗೆ ಯಾವುದೋ ಹುರುಪು ಮೈ ಮೇಲೆ ಬಂದ ಹಾಗಾಯಿತು. +ಅವಳು ಊಟ ಮಾಡದೆ ಕೈ ತೊಳೆದು ಕೊಂಡಳು. +ಪ್ರತೀ ಕ್ಷಣ, ಪ್ರತೀ ಹೊತ್ತೂ ಅವಳು ದೇವರೊಡನೆ ಪ್ರಾರ್ಥಿಸಿಕೊಂಡಳು. +ನೆರಮನೆಯವರು ಜೋರಾಗಿ ಟೇಪ್ ರೆಕಾರ್ಡರ್ ಹಾಕಿದ್ದು ಹಳೆಯ ಹಿಂದಿ ಸಿನಿಮಾ ಹಾಡು ಅಲೆ-ಅಲೆಯಾಗಿ ತೇಲಿ ಬರುತ್ತಿತ್ತು. +ಇವತ್ತು ಯಾಕೋ ಆ ಹಾಡು ಅವಳಿಗೆ ತುಂಬಾ ಇಷ್ಟವಾಯಿತು. +ಅವಳು ಕಿವಿ ಅಗಲಿಸಿಕೊಂಡು ಹಾಡನ್ನು ಕೇಳುತ್ತಿದ್ದಳು. + “ಅಯೆಗಾ…. ಅಯೆಗಾ…. ಅಯೆಗಾ…. ಅಯೆಗಾ ಅನೇವಾಲಾ…. . ಅಯೆಗಾ…. ಅಯೆಗಾ…. ”ಹುಡುಗ ಹೇಂಟೆಯನ್ನು ಎತ್ತಿ ಕೊಂಡು ಅವಳ ಭುಜಕ್ಕೆ ತಾಗಿಸುವವರೆಗೂ ಅವಳು ಹಾಡು ಕೇಳುವುದರಲ್ಲಿ ತಲ್ಲೀನಳಾಗಿದ್ದಳು. +ಬೆಳಕು ಕರಗಿ ಕತ್ತಲೆ ನಿಧಾನವಾಗಿ ಭೂಮಿಯನ್ನು ಆವರಿಸುತ್ತಿತ್ತು. +“ಬಿಟ್ಟು ಬಿಡು ಮಗಾ ಆ ಹೇಂಟೆಯನ್ನು. +ಯಾಕೆ ಅದಕ್ಕೆ ಹಿಂಸೆ ಕೊಡುತ್ತೀಯಾ…. . ” ಅವಳು ಮಗನಿಗೆ ಗದರಿಸುವ ಧ್ವನಿಯಲ್ಲಿ ಹೇಳಿದಳು. +“ಇಲ್ಲಮ್ಮಾ, ನಾನು ಬಿಡಲ್ಲ. +ಆ ಕೆಂಪು ಹುಂಜ ಬೇರೆ ಹೇಂಟೆಗಳನ್ನಲ್ಲದೆ, ನಮ್ಮ ಹೇಂಟೆಯನ್ನೂ ಬೆನ್ನಟ್ಟಿ ಕಚ್ಚುತ್ತದೆ. +ನಾನು ಬಿಡಲ್ಲ. +ಇವತ್ತು ಅ ಹುಂಜಕ್ಕೆ ಬುದ್ದಿ ಕಲಿಸುತ್ತೇನೆ”. +ಹುಡುಗ ತಾಯಿಯ ಉತ್ತರವನ್ನೂ ಕಾಯದೇ ಹೇಂಟೆಯೊಂದಿಗೆ ಅಂಗಳಕ್ಕಿಳಿದ. +ಅಂಗಳದ ಮೂಲೆಯಲ್ಲಿದ್ದ ಹರಿದ ಬೆತ್ತದ ಬುಟ್ಟಿಯನ್ನು ತಂದು ಹೇಂಟೆಯನ್ನು ಅದರೊಳಗೆ ಮುಚ್ಚಿಟ್ಟ. +ಬುಟ್ಟಿಯ ಮೇಲೆ ಮರದ ಮಣೆಯನ್ನು ಬೋರಲು ಹಾಕಿದ. +ಬುಟ್ಟಿಯೊಳಗಿಂದ ಹೇಂಟೆ ಹೊರಬರಲು “ಕುಟು…. . ಕುಟು” ಶಬ್ಧ ಮಾಡುತ್ತಿತ್ತು. +ಅ ಕೆಂಪು ಹುಂಜ ತನ್ನ ಗೆಳತಿಯರೊಂದಿಗೆ ಬುಟ್ಟಿಗೆ ಪ್ರದಕ್ಷಿಣೆ ಬರುತ್ತಿತ್ತು. +“ಹಾಗೇ ಸಾಯುತ್ತಿರು” ಅವನು ಹುಂಜವನ್ನು ಓರೆಗಣ್ಣಿನಿಂದ ನೋಡುತ್ತಾ ಹಲ್ಲು ಮಸದುಕೊಂಡು ಮನೆಯೊಳಗೆ ಬಂದ. +ರಾತ್ರಿ ಸುಮಾರು ಹೊತ್ತಿನವರೆಗೂ ಹುಡುಗನಿಗೆ ಕಥೆ ಹೇಳುತ್ತಾ ಆಟ ಆಡಿಸುತ್ತಾ ಅವಳು ಸಮಯ ಕಳೆದಳು. +ಅದರೂ ಅವಳ ಕಿವಿಯೆಲ್ಲಾ ಬಾಗಿಲ ಕಡೆಗೇ ಇತ್ತು. +ಅವಳು ಮೈಯೆಲ್ಲಾ ಕಣ್ಣಾಗಿಸಿಕೊಂಡು ಕಾಯುತ್ತಾ ಇದ್ದಳು. +ಇವತ್ತು ಅವರು ಬಂದೇ ಬರುತ್ತಾರೆ. +ಹೌದು, ಅವರಿಗೆ ಖಂಡಿತ ಇಂದು ನನ್ನ ನೆನಪಾಗುತ್ತದೆ. +ನನ್ನ ಪ್ರಾರ್ಥನೆಯನ್ನು ದೇವರು ಖಂಡಿತ ಸ್ವೀಕರಿಸುತ್ತಾನೆ. +ಕಥೆ ಕೇಳುತ್ತಾ ನಿದ್ದೆ ಹೋದ ಮಗುವನ್ನು ಒಮ್ಮೆ ಪ್ರೀತಿಯಿಂದ ನೋಡಿ, ಅವನ ಹಾಲುಗೆನ್ನೆಗೆ ಬಾಗಿ ಮುತ್ತಿಕ್ಕಿದಳು. +ಮತ್ತೊಮ್ಮೆ ಎದ್ದು ಕಿಟಕಿ ತೆರೆದು ಹೊರಗೆ ನೋಡಿದಳು. +ತಂಪಗಿನ ಗಾಳಿ ಬೀಸಿ ಬರುತ್ತಿತ್ತು. +ಚಂದಿರನ ಬೆಳಕಿತ್ತು. +ಅವಳು ಅಧೀರಳಾಗಲಿಲ್ಲ. +ಕತ್ತಲೆಯ ಹಿಂದೆ ಬೆಳಕಿದೆ, ಖಂಡಿತ ಬೆಳಕಿದೆ. +ಅವಳಿಗೆ ಏನೋ ನೆನಪಾಯಿತು. +ಅವಳು ನಾಚಿದಳು, ಆ ಕತ್ತಲೆಯಲ್ಲಿ ಅವಳ ಮೈಯಲ್ಲಿ ಸಣ್ಣಗೆ ನಡುಕ ಉಂಟಾಯಿತು. +ಮೊದಲ ರಾತ್ರಿಯ ಸುಂದರ ನೆನಪು! +ತನ್ನ ಕೈ ಹಿಡಿದು ಹತ್ತಿರ ಸೆಳೆದ ಅವರು ಅವಳಿಗೆ ಒಂದು ಸಣ್ಣ ಪೊಟ್ಟಣ ಉಡುಗೊರೆ ನೀಡಿದ್ದರು. +“ಏನದು”?ನಾಚಿಕೆ ಹೆದರಿಕೆ ಎಲ್ಲಾ ಮಿಶ್ರವಾಗಿತ್ತು ಅವಳ ಸ್ವರದಲ್ಲಿ. +“ಇದು ಸೆಂಟು. +ಬಹಳ ಪರಿಮಳದ ಸೆಂಟು. +ಇದರ ಹೆಸರು ಜನ್ನತುಲ್ ಪಿರ್ದೌಸು” ಅವರು ಸೆಂಟು ಬಾಟಲಿಯ ಮುಚ್ಚಳ ತೆಗೆದು ಬೆರಳಿಗೆ ಸೆಂಟು ತಾಗಿಸಿ ಅವರ ಹಾಗೂ ನನ್ನ ಬಟ್ಟೆಗಳ ಮೇಲೆ ಒರಸಿದರು. +ಒಮ್ಮೆಯಲ್ಲ ಹಲವು ಬಾರಿ. +ಆ ಪರಿಮಳ ಹಾಗೂ ಅವರ ಹಿತವಾದ ಅಪ್ಪುಗೆ ಎಲ್ಲವನ್ನೂ ಮರೆಸಿತ್ತು. +ನೆನಪುಗಳು ಮರುಕಳಿಸಿದಾಗ ಅವಳು ಎದ್ದು ಸೀದಾ ಮಲಗುವ ಕೋಣೆಯತ್ತ ತೆರಳಿದಳು. +ಸೆಲ್ಪಿನ ಮೂಲೆಯಲ್ಲಿ ಅದೇ ಸೆಂಟು ಬಾಟಲಿ ಧೂಳು ಹಿಡಿದು ಹಾಗೆಯೆ ಇತ್ತು. +ಅವಳು ಬಾಟಲಿಯನ್ನು ಕೈಗೆತ್ತಿಕೊಂಡು ಸೆಂಟನ್ನು ತನ್ನ ಉಟ್ಟುಕೊಂಡ ಬಟ್ಟೆಯ ಮೇಲೆ ಒರೆಸಿಕೊಂಡಳು ರೂಮೆಲ್ಲಾ ತುಂಬಿದ ಸೆಂಟಿನ ಪರಿಮಳದಿಂದ ಅವಳಿಗೆ ನಿದ್ರೆ ಅವರಿಸಿದ್ದು ಎಚ್ಚರವಾದಾಗ ಬೆಳಗಾಗಿತ್ತು. +ಅವಳು ಎದ್ದು ಅಡುಗೆ ಕೋಣೆಗೆ ಹೋದಳು. +ಎಟ್ಟಿ ಬಿರಿಯಾನಿ ಹಾಗೆಯೇ ಇತ್ತು. +ಪಾತ್ರೆಯತ್ತಿ ಮೂಸಿ ನೋಡಿದಳು. +ಅನ್ನ ಹಳಸಿ ಹೋಗಿತ್ತು. +ಅವಳು ಅದನ್ನು ತನ್ನ ಹೇಂಟೆಗೆ ಹಾಕಲು ಅಂಗಳಕ್ಕೆ ಬಂದಳು. +ಬುಟ್ಟಿಯೊಳಗಿಂದ ಹೇಂಟೆ “ಕುಟು…ಕುಟು” ಶಬ್ಧ ಮಾಡುತ್ತಿತ್ತು. +“ಅಯ್ಯೋ ದೇವರೇ! +ಈ ಹುಡುಗ ಯಾಕೆ ಹೀಗೆ ತ್ರಾಸ ಕೊಡುತ್ತಾನೆ. +ಈ ಹೇಂಟೆ ನಿನ್ನ ಮಧ್ಯಾಹ್ನದಿಂದ ಏನೂ ತಿಂದಿಲ್ಲ. +ಪಾಪ ತುಂಬಾ ಹಸಿದಿರಬಹುದು”. +ಅವಳು ತನ್ನಷ್ಟಕ್ಕೇ ಗುಣುಗುಟ್ಟುತ್ತಾ ಬುಟ್ಟಿ ತಂದು ಅನ್ನವನ್ನು ಹೇಂಟೆಯ ಎದುರು ಚೆಲ್ಲಿದಳು. +ಹಸಿವಿನಿಂದ ಕಂಗಾಲಾಗಿದ್ದ ಹೇಂಟೆ ಅನ್ನವನ್ನು ಒಂದೇ ಸಮನೆ ತಿನ್ನತೊಡಗಿತು. +ಅನತಿ ದೂರದಲ್ಲಿ ಹಲವು ಬಿನ್ನಾಣಗಿತ್ತಿಯರ ಮಧ್ಯೆ ಇದ್ದ ಅ ಕೆಂಪು ಹುಂಜ ಅವಳ ಹೇಂಟೆಯನ್ನು ಕಂಡೊಡನೆ ಹೊಸ ಹುರುಪಿನಿಂದ ತನ್ನ ರೆಕ್ಕೆಗಳನ್ನು ಬಿಚ್ಚಿಕೊಂಡು ಓಡಿ ಬರತೊಡಗಿತು. +“ಥೂ… ಹಲ್ಕಾ…. ಶೂವರ್. ” ಅವಳು ಬಾಗಿ ಕಲ್ಲು ಹೆಕ್ಕಿ ಬೀಸಿದಳು. +ಅದಾವುದರ ಪರಿವೆಯಿಲ್ಲದ ಆ ಹುಂಜ ಮತ್ತೂ ಧಾವಿಸಿ ಬರುತ್ತಿತ್ತು. +ಹೆದರಿದ ಅವಳ ಹೇಂಟೆ ಅನ್ನ ತಿನ್ನುವುದನ್ನು ಬಿಟ್ಟು ಓಡತೊಡಗಿತು. +ಆದರೂ ಆ ಕೆಂಪು ಹುಂಜ ಅದನ್ನು ಬೆನ್ನಟ್ಟಿಕೊಂಡು ಹೋಗಿ ತನ್ನ ಕೊಕ್ಕಿನಿಂದ ಅದರ ನೆತ್ತಿಯನ್ನು ಕಚ್ಚಿ ಹಿಡಿಯಿತು ಅವಳು ಮುಖ ಬೇರೆ ಕಡೆ ತಿರುಗಿಸಿದಳು. -- GitLab