diff --git "a/Data Collected/Kannada/MIT Manipal/Kannada-Scrapped-dta/\340\262\254\340\262\277.\340\262\260\340\262\202\340\262\227\340\262\270\340\263\215\340\262\265\340\262\276\340\262\256\340\262\277.txt" "b/Data Collected/Kannada/MIT Manipal/Kannada-Scrapped-dta/\340\262\254\340\262\277.\340\262\260\340\262\202\340\262\227\340\262\270\340\263\215\340\262\265\340\262\276\340\262\256\340\262\277.txt" new file mode 100644 index 0000000000000000000000000000000000000000..8d1734b8b9ea84655462effdc6d646787db7e4d3 --- /dev/null +++ "b/Data Collected/Kannada/MIT Manipal/Kannada-Scrapped-dta/\340\262\254\340\262\277.\340\262\260\340\262\202\340\262\227\340\262\270\340\263\215\340\262\265\340\262\276\340\262\256\340\262\277.txt" @@ -0,0 +1,494 @@ +ಕರ್ನಾಟಕ ಜಾನಪದ ಪರಿಷತ್ತಿನ ಹಲವು ಯೋಜನೆಗಳಲ್ಲಿ ಜನಪದ ಪುಸ್ತಕ ಪ್ರಕಟಣೆ ಒಂದು. +ಇದರಲ್ಲಿ ವಿದ್ವತ್‌ ಗ್ರಂಥಗಳ ಪ್ರಕಟಣೆಗಳೇ ಹೆಚ್ಚು. +ಇವುಗಳ ಜೊತೆಗೆ “ಜನಪ್ರಿಯ ಜಾನಪದ ಪುಸ್ತಕ ಮಾಲೆ"ಯನ್ನು ಪ್ರಾರಂಭಿಸಿದೆ. +ಜಾನಪದವನ್ನು ಜನಸಾಮಾನ್ಯರಿಗೆ ತಲುಪಿಸುವುದು ಇದರ ಮುಖ್ಯ ಉದ್ದೇಶ. +ಇದರಲ್ಲಿ ಜಾನಪದಕ್ಕೆ ದುಡಿದಿರುವ, ದುಡಿಯುತ್ತಿರುವ ಕಲಾವಿದರು. +ಕಲೆಗಳು, ಸಂಗ್ರಾಹಕರು, ವಿದ್ವಾಂಸರು. +ಸ್ವಾರಸ್ಯಕರವಾದ ಉಪಯುಕ್ತವಾದ ಜನಪದ ಗೀತ ಸಾಹಿತ್ಯದ ಸೋದಾಹರಣ ವ್ಯಾಖ್ಯಾನ-ಮೊದಲಾದ ವಿಷಯಗಳಿಗೆ ಸಂಬಂಧಿಸಿದಂತೆ. +ನಾಡಿನ ಪ್ರಸಿದ್ಧ ಸಾಹಿತಿ ಸಂಶೋಧಕರಿಂದ ಕಿರುಗ್ರಂಥಗಳನ್ನು ಬರೆಯಿಸಿ, ಪ್ರಕಟಿಸಿ, ಕೇವಲ ಹತ್ತು ರೂಪಾಯಿ ಬೆಲೆಗೆ ಒದಗಿಸಲು ಯೋಜಿಸಿದೆ. +ಕಡಿಮೆ ಅವಧಿಯಲ್ಲಿ ಓದಿಕೊಳ್ಳಬಹುದಾದ ಈ ಗ್ರಂಥಗಳು ಹಲವು ಮಾಹಿತಿಗಳನ್ನು ಸಂಕ್ಷಿಪ್ತವಾಗಿ ತಿಳಿಯಪಡಿಸುತ್ತವೆ. +ಈ ಜನಪ್ರಿಯ ಪುಸ್ತಕ ಮಾಲೆಗೆ ಪ್ರಸಿದ್ಧ ಲೇಖಕರಾದ ಕ್ಯಾತನಹಳ್ಳಿ ರಾಮಣ್ಣ ಅವರು ಅರ್ಚೆಕ ಬಿ.ರಂಗಸ್ವಾಮಿ ಅವರನ್ನು ಕುರಿತು ಕಿರುಹೊತ್ತಿಗೆಯನ್ನು ಬರೆದುಕೊಟ್ಟಿದ್ದಾರೆ. +ಲೇಖಕರಿಗೂ ಗಂಥ ಪ್ರಕಟಣಾ ಸಲಹಾ ಸಮಿತಿಯ ಸದಸ್ಯರಿಗೂ ಕೃತಜ್ಞತೆಗಳನ್ನು ಅರ್ಪಿಸಿ, ಸಹೃದಯರು ಈ ಪುಸ್ತಕವನ್ನು ಸ್ವಾಗತಿಸಬೇಕೆಂದು ಕೇಳಿಕೊಳ್ಳುತ್ತೇನೆ. +ಅರ್ಚಕ ಬಿ.ರಂಗಸ್ಥಾಮಿ ಜಾನಪದ ಕ್ಷೇತ್ರದಲ್ಲಿ ಕೆಲಸ ಮಾಡಿದ ವಿದ್ವಾಂಸರು. +೧೯೩೩ ರಲ್ಲಿ ಪ್ರಕಟವಾದ “ಹುಟ್ಟಿದ ಹಳ್ಳಿ-ಹಳ್ಳಿಯ ಹಾಡು” ಎಂಬ ಗ್ರಂಥದಿಂದ ಪ್ರಸಿದ್ಧರಾದರು. +ಮಂಡ್ಯ ಜಿಲ್ಲೆಯ ಕೃಷ್ಣರಾಜಪೇಟೆ ತಾಲ್ಲೂಕಿನ ಬಂಡಿಹೊಳೆ ಎಂಬುದು ಇವರು ಹುಟ್ಟಿದ ಊರು, ಬಂಡಿಹೊಳೆ ಗ್ರಾಮದ ಬಳಿ ಇರುವ ಹೇಮಗಿರಿ ಎಂಬ ಕ್ಷೇತ್ರದ ಶ್ರೀ ರಂಗನಾಥಸ್ವಾಮಿ ದೇವಾಲಯದಲ್ಲಿ ವಂಶಪಾರಂಪರ್ಯವಾಗಿ ಅರ್ಚಕ ವೃತ್ತಿ ಮಾಡಿಕೊಂಡು ಬಂದುದರಿಂದ ಬಿ.ರಂಗಸ್ಟಾಮಿ. + ಭಟ್ಟರ ಹೆಸರಿನೊಂದಿಗೆ "ಅರ್ಚಕ" ಎಂಬ ಶಬ್ದವು ಬಳಕೆಯಾಗುತ್ತಲೇ ಬಂದಿದೆ. +ಅರ್ಚಕ ಬಿ.ರಂಗಸ್ಥಾಮಿ ಅವರು ಹುಟ್ಟದ್ದು ೧೮೯೫ ರಲ್ಲಿ. +ತಂದೆ ನಾರಾಯಣಭಟ್ಟರು, ತಾಯಿ ಬಿಳಿಗಿರಿ ರಂಗನ ಸನ್ನಿಧಿಯಲ್ಲಿ ಹುಟ್ಟಿದ ಶೇಷಮ್ಮನವರು. +ತಂದೆ ನಾರಾಯಣಬಟ್ಟರಿಗೆ ನಾಲ್ಕು ಮಕ್ಕಳು : ಎರಡುಹೆಣ್ಣು,ಎರಡು ಗಂಡು. +ಮೊದಲನೆಯ ಮಗಳು ರುಕ್ಕಮ್ಮನವರನ್ನು ಅಕ್ಕಿ ಹೆಬ್ಬಾಳಿಗೂ ಎರಡನೆಯ ಮಗಳು ಜಾನಕಮ್ಮನವರನ್ನು ಮಿದ್ಲೆಗೂ ಮದುವೆ ಮಾಡಿಕೊಟ್ಟಿದ್ದರು. +ಮೂರನೆಯವರು ರಂಗಸ್ವಾಮಿಯವರು. +ರಂಗಸ್ವಾಮಿಯವರ ವಿದ್ಯಾಬ್ಯ್ಯಾಸವು ಬಂಡಿಹೊಳೆಂತುಲ್ಲೆ ಪ್ರಾರಂಭವಾಯಿತು. +ಪ್ರಾಥಮಿಕ ಶಾಲೆಯ ನಾಲ್ಕನೆಯ ತರಗತಿಯವರೆಗೆ ಬಂಡಿಹೊಳೆಯಲ್ಲೆ ವ್ಯಾಸಂಗ ಮಾಡಿದ್ದಪ್ಣಿ ಉಳಿದಂತೆ ಬಾಲಕನಾಗಿದ್ದಾಗಲೆ ತಂದೆಯವರಿಂದ ಬಾಯಿಪಾಠವಾಗಿದ್ದ "ಅಮರಕೋಶ" ಮುಂತಾದ ಸಂಸ್ಕೃತ ಪಾಠಗಳಿಂದಾಗಿ ಅವರು ಮೈಸೂರಿನ ಸಂಸ್ಕೃತ ಪಾಠ ಶಾಲೆಗೆ ಕಳುಹಿಸಲ್ಪಟ್ಟರು. +ಮೈಸೂರಿನಲ್ಲಿ ಮಗನನ್ನು ಇರಿಸಿ ಓದಿಸುವಷ್ಟು ಸ್ಥಿತಿವಂತರಾಗಿರಲಿಲ್ಲ ತಂದೆ ನಾರಾಯಣಭಟ್ಟರು. +ಮೈಸೂರಿನಲ್ಲಿ ಅರಮನೆಯ ಆಶ್ರಯದಲ್ಲಿ ಒಂದು ಉಚಿತ ಎದ್ಯಾರ್ಥಿ ನಿಲಯ ನಡೆಯುತ್ತಿತ್ತು. +ಅದನ್ನು “ರಾಮಾನುಜ ಕೂಟ" ಎಂದು ಕರೆಯುತ್ತಿದ್ದರು. +ಆ ರಾಮಾನುಜ ಕೂಟದಲ್ಲಿ ರಂಗಸ್ವಾಮಿಯವರು ಹನ್ನೆರಡು ೫ ವರ್ಷ ಇದ್ದರು. +ಅಲ್ಲಿಗೆ ಅವಧಿ ಮುಗಿಯಿತು. +ಆದರೆ ವ್ಯಾಸಂಗ ಇನ್ನೂ ಪೂರ್ಣವಾಗಿರಬಿಲ್ಲ. +ಆದ್ದರಿಂದ ರಂಗಸ್ವಾಮಿಯವರು ಇನ್ನೂ ಕಲವು ವರ್ಷಗಳು ಮೈಸೂರಿನಲ್ಲಿ ಇರಬೇಕಾಗಿತ್ತು ಆದರೆ ಊಟದ ಸಮಸ್ಯೆ ಎದುರಾಗಿತ್ತು. +ತಂದಿ ನಾರಾಯಣ ಭಟ್ಟರಿಗೆ ಪರಿಚಿತರಾಗಿದ್ದ ಕೆಲವು ಹಿತೈಷಿಗಳ ನೆರವಿನಿಂದ ಸಮಸ್ಯೆ ಬಗೆಹರಿಯಿತು. +ದಿನಕ್ಕೊಂದು ಮನೆಯಲ್ಲಿ ಊಟದ ವ್ಯವಸ್ಥೆ ಆಯಿತು. +ಹೀಗೆ, ವಾರದ ಏಳು ದಿನಗಳು ಏಳು ಮನೆಗಳಲ್ಲಿ ಊಟ. +ಈ ವ್ಯವಸ್ಥೆಗೆ 'ವಾರಾನ್ನ' ಎಂದು ಹೆಸರು. +ವಾರಕ್ಕೊಂದು ಸಲ ಒಂದು ಮನೆಯ ಊಟ ಆಗುತ್ತಿದ್ದುದರಿಂದ ವಾರಾನ್ನ ಎಂಬ ಹೆಸರು ಬಳಕೆಯಾಗುತ್ತಿತ್ತು. +ರಂಗಸ್ವಾಮಿಯವರಿಗೆ ತಮ್ಮ ವ್ಯಾಸಂಗ ಮುಗಿಯುವವರೆಗೆ ವಾರಾನ್ನ ಲಭ್ಯವಾಗಲಿಲ್ಲ. +ಅದು ಸಿಕ್ಕಿದ್ದು ನಾಲ್ಕು ವರ್ಷ ಮಾತ್ರ. +ವ್ಯಾಸಂಗೆ ಮುಗಿಯಲು ಇನ್ನೂ ನಾಲ್ಕು ವರ್ಷ ಮೈಸೂರಿನಲ್ಲಿ ಇರಬೇಕಾಗಿತ್ತು. +ತಂದೆ ನಾರಾಯಣ ಭಟ್ಟರಿಗೆ ಮಗನ ವ್ಯಾಸಂಗವನ್ನು ಹೇಗಾದರೂ ಮಾಡಿ ಪೂರ್ಣಗೊಳಿಸಲೇಬೇಕು ಎಂಬ ಛಲ ಇತ್ತು. +ಆದ್ದರಿಂದ ಮಗನಿಗೆ ಪ್ರತ್ಯೇಕ ಕೋಣೆಯನ್ನು ಗೊತ್ತುಮಾಡಿ,ಹಳ್ಳಿಯಿಂದ ಕಾಳು ಅಕ್ಕಿ ಮುಂತಾದ ಎಲ್ಲ ಪರಿಕರಗಳನ್ನೂ ಒದಗಿಸಿಕೊಟ್ಟರು. +ರಂಗ ಸ್ವಾಮಿಯವರು ತಮ್ಮ ವ್ಯಾಸಂಗದ ಕೊನೆಯ ನಾಲ್ಕು ವರ್ಷಗಳು ತಾವೇ ಸ್ವತಃ ಆಡುಗೆ ಮಾಡಿಕೊಂಡು, ವ್ಯಾಸಂಗವನ್ನು ಮುಗಿಸಿದರು. +ಹೀಗೆ ಮುಕ್ತಾಯವಾದ ಇಷ್ಪತ್ತು ವರ್ಷಗಳ ವ್ಯಾಸಂಗದಲ್ಲಿ, ರಂಗಸ್ವಾಮಿಯವರು ಮೂರು ನಿಟ್ಟಿನಲ್ಲಿ ವಿದ್ವತ್ತನ್ನು ಗಳಿಸಿದರು. +ಅವು ಯಾವುವೆಂದರೆ : ೧.ಯಜುರ್ವೇದದ ಪೂರ್ಣ ಅಧ್ಯಯನ ೨. ಸಂಸ್ಕೃತದಲ್ಲಿ ನಾಟಕಾಂತ ಸಾಹಿತ್ಯ ೩. ಆಗಮದಲ್ಲಿ ವಿದ್ವತ್ತು. +ತಂದೆ ನಾರಾಯಣಭಟ್ಟರು ರಂಗಸ್ವಾಮಿಯವರಿಗೆ ವ್ಯಾಸಂಗ ಮುಗಿಯುವವರೆಗೆ ಕಾಯದೆ ನಡುವೆಯೇ ವಿವಾಹವನ್ನು ನೆರವೇರಿಸಿದರು. +ಆಗಮ ಮುಗಿಸಿಕೊಂಡು ರಜೆಗಾಗಿ ಬಂದಿದ್ದಾಗ, ಮಿಕ್ಷೆಯ ಸಂಬಂಧಿಕರ ಹೆಣ್ಣುಮಗಳು ಕಮಲಮ್ಮನವರೊಡನೆ ರಂಗಸ್ಥಾಮಿಯವರ ವಿವಾಹ ನೆರವೇರಿತು. +ಆಗ ಅವರ ವಯಸ್ಸು ಇಪ್ಪತ್ತೊಂದು. +ವರ್ಷ ೧೯೧೬ಆಗಿನ್ನೂ ಕಮಲಮ್ಮ ಬಾಲೆಯಾಗಿಯೇ ಇದ್ದವರು. +ತಂದೆಯವರ ಅಪೇಕ್ಷೆ ಹಾಗಿದ್ದರೆ ವಿಧಿಯ ೬ ಅರ್ಚಕ ಬಿ.ರಂಗಸ್ವಾಮಿಅಪೇಕ್ಷೆ ಬೇರೆಯೇ ಇತ್ತು. +ಆಗೆಲ್ಲ ಫ್ಲೇಗು ಕಾಲರಾಗಳ ಕಾಲ, ಸೂಕ್ತ ಚಿಕಿತ್ಸೆಯೂ ಸಿಗದಿದ್ದ ಕಾಲ. +ಮದುವೆಯಾದ ಐದೇ ತಿಂಗಳಲ್ಲಿ ಕಮಲಮ್ಮನವರು, ದಾಂಪತ್ಯ ಎಂದರೇನು ಎಂದು ತಿಳಿಯುವ ಮೊದಲೇ, ಫ್ಲೇಗಿಗೆ ತುತ್ತಾದರು. +ಆಗ ಅವರ ವಯಸ್ಸು ಹದಿನಾಲ್ಕು. +ಇದು ರಂಗಸ್ವಾಮಿಯವರ ಜೀವನದಲ್ಲಿ ಮರೆಯಲಾಗದ ನೋವಿನ ಪಸಂಗವಾಗಿ ಉಳಿದುಬಿಟ್ಟಿತು. +ಅದೇ ನೋವಿನಲ್ಲಿದ್ದಾಗ ರಂಗಸ್ವಾಮಿಯವರು ಸಂಸ್ಕೃತದಲ್ಲಿ ಕೆಲವು ಶೋಕಗೀತೆಗಳನ್ನು ಬರೆದರು. +ಎಷ್ಟೋ ವರ್ಷಗಳ ಅನಂತರ ಅವರು ಬರೆದ ಶ್ರೀ ವೈಖಾನಸೆ ಆಲಯಾರಾಧನಾ ಪದ್ಧತಿ ಎಂಬ ಆಗಮ ಗ್ರಂಥದ ಪೀಠಿಕೆಯಲ್ಲಿ ಆ ಶೋಕಗೀತೆಗಳ ಕೆಲವು ಸಾಲುಗಳನ್ನು ಬಳಸಿಕೊಂಡರು. +ಸಂದರ್ಭ,ಅರ್ಥ, ಬೇರೆಯೇ ಇತ್ತು. +ಶ್ರೀನಿವಾಸನ ದಯೆಯಿಂದ ಈ ಕೃತಿಯು ಸಂಪೂರ್ಣವಾಗಲಿ ಎಂಬ ಹಾರೈಕೆಯ ನುಡಿಯಾಗಿ ಶೋಕಗೀತೆಯ ಸಾಲುಗಳು ಇಲ್ಲಿ ಬಳಕೆಯಾದುವು. +ಕಮಲಮ್ಮನವರ ಸಾವು ನಾರಾಯಣಭಟ್ಟರಿಗೂ ನೋವನ್ನುಉಂಟು ಮಾಡಿತ್ತು. +ಆದರೆ ಅವರು ಸುಮ್ಮನೆ ಕೂರಲಿಲ್ಲ. +ಮಗನಿಗಾಗಿ ಇನ್ನೊಂದು ವಧುವಿನ ಬೇಟೆಯಲ್ಲಿ ಮನಸ್ಸು ಮುಳುಗಿತ್ತು. +ಎಲ್ಲಿಯೂ ಸೂಕ್ತ ಹುಡುಗಿ ಗೋಚರಿಸಲಿಲ್ಲ. +ಕಮಲಮ್ಮನವರ ತಂಗಿಯೊಬ್ಬಳನ್ನು ಬಂಧುಗಳೊಬ್ಬರಿಗೆ ದತ್ತು ಮಾಡಿಕೊಡಲಾಗಿತ್ತು. +ಈ ವಿಚಾರ ನೆನಪಿಗೆ ಬಂದದ್ದೇ ನಾರಾಯಣ ಭಟ್ಟರು ಪ್ರಯತ್ನ ಪ್ರಾರಂಭಿಸಿದರು. +ಪ್ರಯತ್ನ ಫಲಿಸಿತು. +ಅರ್ಚಕ ಬಿ.ರಂಗಸ್ವಾಮಿಯುವರು ಎರಡನೆಯ ಸಲ ಹಸೆಮಣೆ ಏರಿದ್ದರು. +ಮೊದಲನೆಯ ಸತ್ನಿ ಕಮಲಮ್ಮನವರು ತೀರಿಕೊಂಡ ವರ್ಷದ ಮೇಲೆ ಅವರ ತಂಗಿ ಸೀತಾಲಕ್ಷ್ಮಮ್ಮನವರು ರಂಗಸ್ವಾಮಿಯವರ ಎರಡನೆಯ ಪತ್ನಿಯಾಗಿ ಬಂದರು. +ನಾಕು ವರ್ಷಗಳ ಅವಿರತ ಸಂಸಾರ ಸಾಕಷ್ಟು ಸುಖಮಯವಾಗಿಯೇ ಕಳೆಯಿತು. +ಶೇಷಮ್ಮ ಕಮಲಮ್ಮ ಎಂಬ ಇಬ್ಬರು ಹೆಣ್ಣುಮಕ್ಕಳೂ ಹುಟ್ಟಿದರು. +ಆಮೇಲೆ ಮೂರನೆಯ ಹೆರಿಗೆಯ ಸಂದರ್ಭದಲ್ಲಿ ಸೀತಾಲಕ್ಷ್ಮಮೃನವರು ವಿಧಿವಶರಾದರು. +ಆ ಇಬ್ಬರುಹೆಣ್ಣುಮಕ್ಕಳು ರಂಗಸ್ವಾಮಿಯವರ ಅಕ್ಕನ ಮನೆಯಲ್ಲಿ ಬೆಳೆದು, ವಯಸ್ಕರಾದಾಗ ಕ್ರಮವಾಗಿ ಆಕ್ಕಿ ಹೆಬ್ಬಳು ಹಾಗೂ ಹಾಸನದ ಬಳಿಯ ಅಗಳೆ ಎಂಬ ೭ಊರುಗಳಲ್ಲಿಗೆ ಮದುವೆ ಮಾಡಿಕೊಡಲಾಯಿತು. +ಮೂರನೆಯ ಹೆಂಡತಿಯಾಗಿ ಬಂದು ಕೊನೆಯವರೆಗೆ ಇದ್ದವರು ಹಾಸನದ ಬಳಿಯ ಮುದುಗೆರೆಯ ಹೆಣ್ಣುಮಗಳು. +ಇವರಲ್ಲಿ ರಂಗಸ್ವಾಮಿಯವರಿಗೆ ಎಳು ಮಕ್ಕಳಾದುವು: ಐದುಹೆಣ್ಣು ಎರಡು ಗಂಡು. +ಅಷ್ಟೆಲ್ಲ ಸಂಸ್ಕೃತ ವಿದ್ವತ್ತನ್ನು ಗಳಿಸಿ, ಆಗಮದ ಪ್ರೊಥೆಸರ್‌ ಆಗಬಹುದಾಗಿದ್ದ ಇಂಥ ವಿದ್ದಾಂಸರಲ್ಲಿ ಜನಪದ ಸಾಹಿತ್ಯದ ಬಗ್ಗೆ ಆಸಕ್ತಿ ಪುಟ್ಟದ್ದು ಹೇಗೆ? +ಅದರ ಬಗ್ಗೆ ಕೆಲಸ ಮಾಡಲೇಬೇಕೆಂದು ಪ್ರಚೋದಿಸಿದ್ದು ಯಾವ ಶಕ್ತಿ ಭಟ್ಟರ ಸಂಸ್ಕೃತ ವಿದ್ಯಾಭ್ಯಾಸದ ಕಾಲದಲ್ಲಿ ನಡುನಡುವೆ ಸಿಕ್ಕುತ್ತಿದ್ದ ಅಧ್ಯಯನ ರಜೆಯಲ್ಲಿ ಊರಿಗೆ ಬಂದಾಗ ದೊಡ್ಡಮ್ಮನ ಹಬ್ಬ ಎಂದು ಕರೆಸಿಕೊಳ್ಳುತ್ತಿದ್ದ ಎಲ್ಲಮ್ಮನ ಹಬ್ಬದ ಸಂದರ್ಭಗಳಲ್ಲಿ ಗುಡಿಯ ಮುಂದೆ ಕುಳಿತು ಕುಣಿತಗಳನ್ನು ನೋಡುತ್ತಿದ್ದುದೇ ಜಾನಪದದ ಬಗ್ಗೆ ಆಸಕ್ತಿ ಬೆಳೆಯಲು ಕಾರಣ; +ಅದೇ ಪ್ರಚೋದಕ ಶಕ್ತಿಯೂ ಕೂಡ. +ರಂಗದಲ್ಲಿ ಕುಳಿತು ನೋಡುವುದರಲ್ಲಿ ತಲ್ಲೀನರಾಗಿದ್ದಾಗ, ಕೋಲಾಟದ ಪದಗಳು, ರಂಗದ ಹಾಡುಗಳು, ಮುಂತಾದುವೆಲ್ಲ ಬೇರೆ ಬೇರೆ ಎಂದು ತೋಚಿತು. +ಅವನ್ನು ಹೇಗಾದರೂ ಮಾಡಿ ವಿಂಗಡಿಸಲೇಬೇಕು ಎಂಬ ಆಸೆ ಉದ್ಭವಿಸಿತು. +ಸುಗ್ಗಿಯಕಾಲದಲ್ಲಿ ಊರೂರಿನ ಮೇಲೆ ಬರುತ್ತಿದ್ದ ತೊಗಲು ಗೊಂಬೆಯವರು,ದೊಂಬಿದಾಸರು, ತಮ್ಮ ಹಳ್ಳಿಯ ಹೆಣ್ಣುಮಕ್ಕಳು ಹಾಡುತ್ತಿದ್ದ ಕುಟ್ಟುವ ಬೀಸುವ ಮದುವೆಯ ಹಾಡುಗಳು, ಇತ್ಯಾದಿ ಪರಂಪರೆಗಳನ್ನು ಕಣ್ಣಿಂದ ನೋಡಿ,ಕಿವಿಯಿಂದ ಕೇಳಿ, ಅನುಭವಿಸುತ್ತಿದ್ದುವರ ಫಲವಾಗಿ ಭಟ್ಟರಾಡಿದ ಮಾತುಗಳಿವು: +“ಶಿಷ್ಟ ಸಾಹಿತ್ಯದಲ್ಲಿ ಕಂಡುಬರುವ ನವರಸಗಳನ್ನೂ ಅವುಗಳ ಪ್ರಭಾವಗಳನ್ನೂ ಪಾಮರ ಸಾಹಿತ್ಯದಲ್ಲಿಯೂ ಕಂಡೆ, ಇಂದಿಗೂ ಕಾಣುತ್ತಿದ್ದೇನೆ.” +ಮೈಸೂರಿನಲ್ಲಿದ್ದ ಅವಧಿಯಲ್ಲಿ ಆಲೂರು ವೆಂಕಟರಾಯರು, ಪ್ರೊಫೆಸರ್‌ ಹಿರಿಯಣ್ಣನವರು, ವೆಂಕಟಕೃಷ್ಣಯ್ಯನವರು, ಮುದವೀಡು ಕೃಷ್ಣರಾಯರು,ಮುಂತಾದವರೆಲ್ಲರ ಕನ್ನಡದ ಬಗೆಗಿನ ಉಪನ್ಯಾಸಗಳನ್ನು ಕೇಳುತ್ತಿದ್ದರು. +“ನಾವು ಹಳ್ಳಿಯವರು. + ವಿದ್ಯಾವಂತರಾದ ಮೇಲೆ ನಾವು ಹಳ್ಳಿಗಳಿಗೆ ಹೋಗಬೇಕು. +ಜನ ಜೀವನವನ್ನು ಉತ್ತಮಪಡಿಸಬೇಕು. +ಆಗ ಮಾತ್ರ ಓದಿದ್ದು ಸಾರ್ಥಕವಾಗುತ್ತದೆ ಇತ್ಯಾದಿಯಾಗಿ ಅವರು ಉಪನ್ಯಾಸದಲ್ಲಿ ಹೇಳುತ್ತಿದ್ದರು. +ಅಂಥ ಮಾತುಗಳಿಂದ ಪ್ರಭಾವಿತರಾದ ಅರ್ಚಕ ರಂಗಸ್ಥಾಮಿ ಭಟ್ಟರು ಬಂಡಿಹೊಳೆಯಲ್ಲಿ ಸ್ವಾವಲಂಬನೆಗೆ ದಾರಿಯಾಗುವಂಥ ಒಂದು ಆಶ್ರಮವನ್ನು ಸ್ಥಾಪಿಸಿದರು. +ಆ ಆಶ್ರಮದಲ್ಲಿ,ನೂಲುವುದು, ಬಟ್ಟೆ ಹೊಲೆಯುವುದು,ಚಾಪೆ ಹೆಣೆಯುವುದು,ಬೆತ್ತದ ಹೆಣಿಗೆ,ಹೀಗೆ ಬಗೆಬಗೆಯ ಕೆಲಸಗಳು ನಡೆಯುತ್ತಿದ್ದವು. +ಆಶ್ರಮ ಸ್ಥಾಪಿಸುವ ಮೊದಲೇ ಭಟ್ಟರು ಮೈಸೂರಿನಲ್ಲಿದ್ದಾಗ “ವಿಶ್ವಕರ್ನಾಟಕ” ಎಂಬ ಪತ್ರಿಕೆಯಲ್ಲಿದ್ದ ಒಂದು ಲೇಖನದಿಂದ ಪ್ರಭಾವಿತರಾಗಿದ್ದರು. +“ಪಾಮರರ ಸಾಹಿತ್ಯವನ್ನು ಉದಾಸೀನ ಮಾಡಬೇಡಿ”ಎಂಬ ಶಿರೋನಾಮೆ ಇದ್ದ ಲೇಖನ ಅದು. +ಹೀಗೆ ಏನೆಲ್ಲ ಪರಿಸ್ಥಿತಿಗಳ ನಡುವೆ, ಏನೆಲ್ಲ ಪ್ರಭಾವಗಳ ನಡುವೆ. +ಭಟ್ಟರ ಸಂಗ್ರಕಕಾರ್ಯ ಮುಂದುವರಿದಿತ್ತು. +ಭಟ್ಟರು ಮಗುವಾಗಿದ್ದಾಗ ಎತ್ತಿ ಆಡಿಸಿದ ಬಂಡಿಹೊಳೆಯ ತಾಯಂದಿರಿಂದ ಬರೆದುಕೊಳ್ಳಲು ಪ್ರಾರಂಭಿಸಿದ ಮೇಲೆ ಪರಿಸರದಲ್ಲಿ ತೀವ್ರ ಪ್ರತಿಕ್ರಿಯೆಗಳು ಕಂಡುಬಂದುವು. +ತಂದೆ ನಾರಾಯಣ ಭಟ್ಕರು ಯಾವ ಪ್ರತಿಕ್ರಿಯೆಯನ್ನೂ ವ್ಯಕ್ತಪಡಿಸಲಿಲ್ಲ. ತಟಸ್ಥರಾಗಿಬಿಟ್ಟರು. +ಅವರ ಈ ತಾಟಸ್ಥ್ಯದಿಂದಲೇ ಅವರಿಗೆ ಈ ಕೆಲಸ ಇಷ್ಟವಾಗಿಲ್ಲ ವೆಂಬುದನ್ನರಿತ ರಂಗಸ್ವಾಮಿಯವರು ಬಹುಪಾಲು ಸಾಹಿತ್ಯವನ್ನು ಅವರಿಗೆ ತಿಳಿಯದಂತೆಯೆ ಸಂಗ್ರಹಿಸಿದರು. +ಮೈಸೂರಿನ ಸಂಸ್ಕೃತ ಶಾಲೆಯಲ್ಲಿ ಸಹಪಾಠಗಳಾಗಿದ್ದ ಅನೇಕ ಪಂಡಿತರು “ಓದೋಕೆ ಕೈಲಾಗದೆ ಈ ಆಟಾನೆಲ್ಲಾ ಆಡ್ತಾ ಇದ್ದಾನೆ ಎಂದು ವ್ಯಂಗ್ಯದಿಂದ ಇರಿಯುತ್ತಿದ್ದರು. +ಸಂಗ್ರಹಕಾಲದಲ್ಲಿ ಭಟ್ಟರು ಎಷ್ದೆಲ್ಲ ಕಿರುಕುಳ ಹಿಂಸೆ ಅನುಭವಿಸಿದ್ದಾರೆರಬುದನ್ನು "ಹುಟ್ಟಿದ ಹಳ್ಳಿ-ಹಳ್ಳಿಯ ಹಾಡು" ಪ್ರಕಟವಾದ ನಲವತ್ತು ವರ್ಷಗಳ ಅನಂತರ ಅವರು ಆಡಿದ ಒಂದೇ ಒಂದು ಮಾತಿನಿಂದ ಅರಿಯಬಹುದು :“ವ್ಯಂಗ್ಯವೂ ಕೂಡ ಸದುಪಯೋಗವಾಗಬೇಕು. +ಇನ್ನೊಬ್ಬರ ಮನಸ್ಸನ್ನುನೋಯಿಸುವಂಥ ವ್ಯಂಗ್ಯ ಬೇಡ.” +ಅರ್ಚಕ ಬಿ. ರಂಗಸ್ವಾಮಿ ೯ ಸಂಗ್ರಹಕಾರ್ಯ ಹಾಗೂ ಹೀಗೂ ಮುಗಿಯಿತು. +ಅಚ್ಚು ಮಾಡಿಸಬೇಕು. +ಹೇಗೆ? ಕೈಯಲ್ಲಿ ಹಣವಿಲ್ಲ. +ಪ್ರಯತ್ನ ನಿಲ್ಲಲಿಲ್ಲ. +ಹಲವರಲ್ಲಿ ಕೋರಿಕೆ ಇಟ್ಟು ಅಲೆದಾಡಿದರು. +ಪ್ರಯೋಜನವಾಗಲಿಲ್ಲ ಯಾರೋ ಒಂದು ಸಲಹೆ ನೀಡಿದರು. + ಆ ಸಲಹೆಯನ್ನೂ ಪಾಲಿಸಿ ಬಿಡೋಣವೆನ್ನಿಸಿತು ಭಟ್ಟರಿಗೆ. +ಆ ಕಾಲಕ್ಕೆ ಕೃಷ್ಣರಾಜೇಂದ್ರ ಮಿಲ್ಲಿನ ಆಧಾರ ಸ್ತ೦ಭವಾಗಿದ್ದ ಜೈನಮತಸ್ಥರಾದ ಶ್ರೀ ಶಾಂತರಾಜ ಶಾಸ್ತಿಗಳು ಧರ್ಮವನ್ನೂ ಧರ್ಮದ ಅನುಯಾಯಿಗಳನ್ನೂ ತುಂಬ ಪ್ರೋತ್ಸಾಹಿಸುತ್ತಿದ್ದವರು. +ಅವರದೇ ಒಂದು ಮುದ್ರಣಾಲಯವೂ ಇತ್ತು. +ಭಟ್ಟರು ಕಡೆಯ ಪ್ರಯತ್ನವಾಗಿ ಶಾಂತರಾಜ ಶಾಸ್ತ್ರಿಗಳ ಮೊರೆಹೊಕ್ಕರು. +ಮುದ್ರಣಾಲಯಕ್ಕೆ ಕಂತಿನ ಮೇಲೆ ಹಣ ಪಾವತಿ ಮಾಡಲು ಒಪ್ಪಿಗೆ ದೊರೆಯಿತು. +"ಹುಟ್ಟಿದ ಹಳ್ಳಿ-ಹಳ್ಳಿಯ ಹಾಡು" ಕಡೆಗೂ ಪ್ರಕಟವಾಯಿತು. +ಈ ಗಂಥವನ್ನು ಸಿದ್ಧಪಡಿಸುವ ಹಾಗೂ ಅಜ್ಚು ಹಾಕಿಸುವ ಹಿನ್ನೆಲೆಯಲ್ಲಿರುವ ತಮ್ಮ ಉದ್ದೇಶವನ್ನು ಅರ್ಚಕ ಬಿ.ರಂಗಸ್ಥಾಮಿ ಭಟ್ಟರು ಹೀಗೆ ಹೇಳಿದ್ದಾರೆ : +“ಹಸ್ತಪ್ರತಿ ಕಳೆದುಹೋದರೆ ಶ್ರಮವೆಲ್ಲ ವ್ಯರ್ಥವಾಗುತ್ತದೆ. +ಅಚ್ಚಾದರೆ ದೇಶದಲ್ಲಿಎಲ್ಲಾದರೂ ಇರುತ್ತದೆಂಬ ಸಮಾಧಾನ. +ನಮಗೂ ಕಾಲ ದೇಶ ಸ್ಥಿರವಿಲ್ಲ. +ಸಾಹಿತ್ಯವೂ ಅಷ್ಟೆ ಅದ್ದರಿಂದ, ಆ ಕಾಲದಲ್ಲಿ ಜನಗಳು ಹೇಗಿದ್ದರು, ಜನಜೀವನ ಹೇಗಿತ್ತು. +ಎಂದು ತಿಳಿಸಿಕೊಡುವುದಕ್ಕೇ ಅಚ್ಚು ಹಾಕಿಸಿದ್ದಾಯಿತು.” +ಆರ್ಚಕ ರಂಗಸ್ಥಾಮ ಭಟ್ಟರ ಬದುಕಿನ ಕೊನೆಯ ದಿನಗಳು ಅಷ್ಟೇನೂ ಚೆನ್ನಾಗಿರಲಿಲ್ಲ. +ಹೇಮಗಿರಿ ದೇವಾಲಯದ ಭೂಮಿ ಇತ್ತು. +ಜೊತೆಗೆ ಪಿತ್ರಾರ್ಜಿತವಾದ ಭೂಮಿಯೂ ಇತ್ತು. +ಗೇಣಿದಾರರು ವರ್ಷಕ್ಕೊಮ್ಮೆ ತಂದುಕೊಡುತ್ತಿದ್ದ ಧಾನ್ಯಗಳಿಂದ ಭಟ್ಟರ ಸಂಸಾರ ಚೆನ್ನಾಗಿಯೇ ನಡೆಯುತ್ತಿತ್ತು. +ಉಳುವವನಿಗೇ ಭೂಮಿ ಎಂಬ ಕಾನೂನು ಬಂದಮೇಲ ಗೇಣಿದಾರರೆಲ್ಲ ಕೈ ಕೊಟ್ಟರು. +ಕೇಳಿದರೆ ಅಮಾನುಷವಾಗಿ ವರ್ತಿಸಿದರು. +ಭಟ್ಟರು ಸೋತರು. + ಕೈ ಚೆಲ್ಲಿ ಕುಳಿತರು. +ದೇವಾಲಯದಲ್ಲಿ ದಕ್ಷಿಣೆ ಮಂಗಳಾರತಿ ಮುಂತಾದ ರೂಪದಲ್ಲಿ ಬರುತ್ತಿದ್ದ ಮುಡಿಗಾಸಿನಲ್ಲೆ ಜೀವನ ಸಾಗಬೇಕಾಗಿತ್ತು. +ನಡುವೆ ಸ್ವಲ್ಪ ಕಾಲ ಮದುವೆ ಗೃಹಪ್ರವೇಶ ಮುಂತಾದ ಶುಭ ಕಾರ್ಯಗಳಲ್ಲಿ ಪೌರೋಹಿತ್ಯವನ್ನೂ ಮಾಡಿದರು. +ಎಷ್ಟು ಶ್ರಮಪಟ್ಟರೂ ಆ ದೊಡ್ಡ ಸಂಸಾರವನ್ನು ತೂಗಿಸುವುದು ಕಷ್ಟವಾಗಿತ್ತು. +ಇಷ್ಟಾದರೂ ಆ ರಂಗನಾಥ ಹೇಗೋ ನಡೆಸುತ್ತಾನೆ ಎಂಬ ಅಚಲ ನಂಬಿಕೆಯೂ ಇತ್ತು. +ಭಟ್ಟರನ್ನು ಕೊನೆಯ ತನಕ ಉತ್ಸಾಹಿಯನ್ನಾಗಿ ಸುಖಿಯನ್ನಾಗಿ ಇರಿಸಿದ್ದು ಬಹುತಃ ಆ ನಂಬಿಕೆಯೇ. +ಹೀಗೆ ಆರ್ಜಕ ರಂಗಸ್ವಾಮಿ ಭಟ್ಟರು ಹಲವು ವರ್ಷಗಳ ಕಷ್ಟ ಕೋಟಲೆಗಳನ್ನು ಅನುಭವಿಸಿ ೨೯ ಸೆಪ್ಟೆಂಬರ್‌೧೯೯೧ ರಲ್ಲಿ ಇಹಲೋಕ ತ್ಯಜಿಸಿದರು. +ಇದು ಪ್ರಕಟವಾದದ್ದು ೧೯೩೩ ರಲ್ಲಿ. +ಮೈಸೂರು ವಿಶ್ವವಿದ್ಯಾನಿಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಿಂದ ೧೯೭೧ ರಲ್ಲಿ ಪರಿಷ್ಕೃತ ಮುದಣ ಪ್ರಕಟವಾದಾಗ ಗ್ರಂಥದ ಶೀರ್ಷಿಕೆ 'ಹುಟ್ಟಿದ ಹಳ್ಳಿ' ಎಂಬುದಾಗಿ ತುಂಡು ಹಾಕಲ್ಪಚ್ಟಿತು. +ಕನ್ನಡ ಜಾನಪದ ಕ್ಷೇತ್ರದಲ್ಲಿ “ಹುಟ್ಟಿದ ಹಳ್ಳಿ-ಹಳ್ಳಿಯ ಹಾಡು" ಗ್ರಂಥದ ಪ್ರಕಟಣೆಯು ಇಂದು ಮಹತ್ವ ಘಟ್ಟ, ಇದು ಸಮಗ್ರ ಜಾನಪದ ದೃಷ್ಟಿಯನ್ನೊಳಗೊಂಡ ಗ್ರಂಥ. +ಬಂಡಿಹೊಳೆ ಎಂಬ ಒಂದು ಹಳ್ಳಿಯನ್ನು ಕೇಂದ್ರವನ್ನಾಗಿ ಇಟ್ಟುಕೊಂಡು ರಚಿತಿದಾದ ಕೃತಿ ಇದಾಗಿದ್ದರೂ ಸಮಗ್ರ ಬಯಲು ಸೀಮೆಯ ಹಳ್ಳಿಗಳ ಜೀವನಾಡಿ ಇದರಲ್ಲಿ ಅಡಗಿದೆ. +ಜನಜೀವನದ ವೈವಿಧ್ಯ,ಪರಂಪರಾನುಗತ ಸಂಸ್ಕೃತಿಯ ಪದರುಗಳು. +ಬಂಡಿಹೊಳೆಗೆ ಮಾತ್ರ ಸೀಮಿತವಾಗದೆ ಎಲ್ಲ ಹಳ್ಳಿಗಳ ಸಂಸ್ಕೃತಿಯ ಸಾರ ಸತ್ವಗಳು ಇಲ್ಲಿ ಮೇಳೈಸಿರುವುದನ್ನು ಕಾಣಬಹುದು. +"ಹುಟ್ಟದ ಹಳ್ಳಿಯಲ್ಲಿ ಅರ್ಚಕ ರಂಗಸ್ವಾಮಿಯವರ ವಿಚಾರಧಾರೆಯು"ಅರಿಕೆಯ ಮಟದಿಂದಲೇ ಪ್ರಾರಂಭವಾಗುತ್ತದೆ. +ಹೆಸರಿಗೆ ಪಾಮರ ಸಾಹಿತ್ಯವೆಂಬುದು ದಿಟ. +ಆದರೆ ಫಸದ ಝರಿಯು ಪಂಡಿತ ಸಾಹಿತ್ಯದಜೊತೆಯಲ್ಲಿಯೇ ಹರಿಯುವುದು. +ಮೇಲಿನ ತೊಗಟೆಯಾದ ಭಾಷೆಯು ಮಾತ್ರ ಹಳ್ಳಿಯದು. +ಸಂಸ್ಕೃತ ಪಂಡಿತರೊಬ್ಬರಿಂದ ಇಂಥ ಮಾತು ಬಂದಿದೆಯೆಂದರೆ ಅದೊಂದು ಪ್ರಶಸ್ತಿ ಇದ್ದಂತೆ. +ತಮ್ಮ ಹಳ್ಳಿಯಲ್ಲಿ ಮಾತ್ರವೇ ಭಟ್ಟರು ಸಂಗಹಕಾರ್ಕ ಮಾಡಿದ್ದರೂ ಸಮಸ್ಯೆಗಳು ಅವರನ್ನು ಬಿಟ್ಟಿಲ್ಲ. +ಎಲ್ಲರಿಗೂ ಎದುರಾದಂತೆ ಅರ್ಚಕ ಬಿ. ರಂಗಸ್ವಾಮಿಯವರಿಗೂ ಎದುರಾಗಿವೆ. +ಅಂಥ ಸಂದರ್ಭವನ್ನು ಕುರಿತು ಹೇಳುವಾಗ ಅವರಾಡಿರುವ ಮಾತುಗಳಿವು : +“ ನಾವು ಹಳ್ಳಿಯವರಿಗಿಂತ ಹಳ್ಳಿಯವರಾಗಿ ಅವರಲ್ಲೇ ಕಲೆತು ಪ್ರೀತಿಯಿಂದೆ ಕಾರ್ಯಸಾಧನೆ ಮಾಡಬೇಕು. +ಕೆಲವರು ನಾಚಿಕೆಯಿಂದ ಹಾಡುಗಳನ್ನು ಹಾಡುವುದಿಲ್ಲ. +ಕೆಲವರು ಅಯ್ಯೋ ಅರ್ಧಮರ್ಧ ವಿಚಾರಗಳನ್ನು ಏನು ಹೇಳುವುದೆಂದು ಸುಮ್ಮನಾಗುವರು. +ಇತರರು ಇದೇನೋ ಗಂಡಾಂತರ ಬಂದಿತೆಂದು ಭಾವಿಸುವರು.” +ಇಂಥ ಅನುಭವಗಳು ಬಹುಪಾಲು ಎಲ್ಲ ಕ್ಷೇತ್ರ ಕಾರ್ಯಕರ್ತರಿಗೂ ಒಂದಲ್ಲ ಒಂದು ಸಂದರ್ಭದಲ್ಲಿ ಆಗಿಯೇ ಇರುತ್ತವೆ. +ರಂಗಸ್ವಾಮಿಯವರು ಯಾವೊಂದು ಸಣ್ಣ ವಿಚಾರವನ್ನೂ ಕಡೆಗಣಿಸದೆ ಪರಿಗಣಿಸಿರುವುದು ಗ್ರಂಥದ ಉದ್ದಕ್ಕೂ ಕಂಡುಬರುತ್ತದೆ. +ಊರಿನ ಚಿತ್ರ, ಹೇಮಗಿರಿಯ ಚಿತ್ರ. +ಹೇಮಾವತಿಯ ಚಿತ್ರ,ಸುಗ್ಗಿಯ ಚಿತ್ರ-ಹೀಗೆ ಈ ಗ್ರಂಥವು ಸಚಿತ್ರವಾಗಿ ಪ್ರಕಟವಾಗಿದ್ದರೆ ಹೆಚ್ಚು ಸೊಗಸು ಪ್ರಾಪ್ತವಾಗುತ್ತಿತ್ತು ಎಂಬ ಭಾವನೆಯನ್ನೂ ಭಟ್ಟರು ತೋಡಿಕೊಂಡಿದ್ದಾರೆ. +ಹುಟ್ಟಿದ ಹಳ್ಳಿಯು ಬಂಡಿಹೊಳೆಯ ನೈಜ ಚಿತ್ರಣದಿಂದ ಪ್ರಾರಂಭವಾಗುತ್ತದೆ : +“ಬಂಡಿಹೊಳೆಯು ಸಣ್ಣ ಹಳ್ಳಿ; +ನೂರೈವತ್ತೆರಡು ಮನೆಗಳು ಇರುತ್ತವೆ. +ಜನಸಂಖ್ಯೆ ಸ್ವಲ್ಪ ಹೆಚ್ಚು ಕಡಿಮೆ ಒಂಬೈನೂರು. +ಪೂರ್ವ ದಿಕ್ಕಿಗೆಬೆಟ್ಟದ ಸಾಲು. +ಉಳಿದ ದಿಕ್ಕುಗಳಲ್ಲಿ ಹೇಮಾವತೀ ನದಿ ಈ ಊರಿನ ಎಲ್ಲೆಯೆಂದು ಹೇಳಬಹುದು.” + ಮುಮ್ಮಡಿ ಕೃಷ್ಣರಾಜ ಒಡೆಯರ್‌ ಅವರ ತಾಯಿಯವರಾದ ದೇವರಾಜಮ್ಮಣ್ಣಿಯವರು ಶ್ರೀಕಂಠೇಶ್ವರ ಸ್ವಾಮಿಯ ದೇವಾಲಯವನ್ನು ಕಟ್ಟಸಿ, ಆದರ ನಿರ್ವಹಣೆಗಾಗಿ. +ಗೃಹಸಹತವಾದ ಭೂದಾನ ಮಾಡಿರುವ ಶಾಸನದ ಪೂರ್ಣಪಾಠವನ್ನು ಭಟ್ಟರು ನೀಡಿ ಈ ಶಾಸನದಂತೆ ನಮ್ಮೂರು ಈಗಲೂ ಸರ್ವಸಾಮಾನ್ಯವಾಗಿ ಉಳಿದಿರುವುದು" ಎಂದು ಹೇಳುತ್ತಾರೆ. +ಆ ಕಾಲದಲ್ಲಿ ಇದ್ದ ಬಟಮಾನ್ಯ ಪದ್ಧತಿಯ ಪಸ್ತಾಪವಿದೆ. +ಬೆಳೆದಿದ್ದರಲ್ಲಿ ಅರ್ಧ ವೃತ್ತಿವಂತರಿಗೆ ಸಲ್ಲುತ್ತಿತ್ತು; +ಅರ್ಧ ಮಾತ್ರ ಬೆಳೆದವರಿಗೆ ಉಳಿಯುತ್ತಿತ್ತು. +ಹಂಚಿ ತಿನ್ನುವ ವಿಶಾಲ ಮನೋಭಾವ ಈ ಬಟಮಾನ್ಯ ವ್ಯವಸ್ಥೆಯ ಹಿನ್ನೆಲಿಯಲ್ಲಿದೆ. +ಅಂಥ ವಿಶಾಲ ಮನೋಭಾವ ಇದ್ದ ಕಾಲ ೧೮೨೬ ರಲ್ಲಿಇತ್ತು. +ಹೊಂಚಿ ತಿನ್ನುವ ಕಾಲ ಅದಾಗಿರಲಿಲ್ಲ. +ಹುಟ್ಟಿದ ಹಳ್ಳಿ ಕೃತಿ ರಚೆನೆಯ ಕಾಲಕ್ಕೆ ಭಟ್ಟರು ವಯಸ್ಕರಾಗಿದ್ದರು. +ಅವರ ಬಾಲ್ಯದ ಪರಿಸರಕ್ಕೂ ವಯಸ್ಕ ಪರಿಸರಕ್ಕೂ ಹಳ್ಳಿಯಲ್ಲಿ ಸಾಕಷ್ಟು ಮಾರ್ಪಾಡು ಆಗಿತ್ತು. +ಬಾಲ್ಯದ ಪರಿಸರವನ್ನು ಚಿತ್ರಿಸುವಾಗ ಅವರಾಡಿರುವ ಮಾತುಗಳಿವು : +“ದನಕರುಗಳನ್ನು ಮನೆಯೊಳಗೆ ಕಟ್ಟುತ್ತಿದ್ದರು. . . ನಮ್ಮೂರಿನ ವಾರ್ಷಿಕ ಉತ್ಪನ್ನವು ನಾಲ್ಕು ತಿಂಗಳುಗಳಿಗೆ ಸಾಕಾಗುವಂತಿತ್ತು. + ಮೂರು ತಿಂಗಳು ಕೂಲಿಯಿಂದ ಜೀವನ, ಇನ್ನುಳಿದ ತಿಂಗಳುಗಳಲ್ಲಿ ಗದ್ದೆ ಹೊಲ ಮಾರಿ ಜೀವನ. +ಬೆಳೆಯು ಕಮ್ಮಿಯಾದ ವರ್ಷ ನಮ್ಮೂರಿನ ಪಾಡು ದೇವರಿಗೆ ಪ್ರೀತಿ. . . ಬಡತನ ಹೆಚ್ಚಿದ್ದುದರಿಂದ ರೈತರು ಅಜ್ಜ ಮುತ್ತಜ್ಜರು ಹೂತಿಟ್ಟಿದ್ದ ರೂಪಾಯಿಗಳನ್ನು ಕೊಟ್ಟಿದ್ದರು. +ಹರಕು ಬಟ್ಟೆಯು ಸಾರ್ವತ್ರಿಕವಾಗಿತ್ತು. +ತಲಿಗೆ ಎಣ್ಣೆ ಕಾಣದವರೂ, ಎರಡು ಹೊತ್ತು ಊಟವಿಲ್ಲದೆ ಇರುವವರೂ ಅನೇಕರಿದ್ದರು. + ಕೊಟ್ಟ ಕಾಳುಗಳನ್ನು ಶಟ್ಟಿಕೊಳ್ಳಲು ತಮಗೆ ಬಟ್ಟೆಯಿಲ್ಲದುದರಿಂದ ಕಷ್ಟಪಡುವವರನ್ನೂ ನಾಚಿಕೊಳ್ಳುವವರನ್ನೂ ನೋಡಿತು ಈ ಕಣ್ಣು, ಮರುಗಿತು ಈ ಮನವು. + ಬಂಡಯ ಮೇಲೆ ಬೆಳೆ ಬೆಳೆದರೂ ಬಡತನವು ಇಂಗದೆ ಹೋಯಿತು. + ಜೋಡು ಕಂಡ ಕಾಲುಗಳು ನಮ್ಮೂರಿನಲ್ಲಿ ಎಲ್ಲೋ ನೂರಕ್ಕೊಂದು. + ಹತ್ತಿಪ್ಪತ್ತು ಜನರು ಓದು ಬರಹ ಬಲ್ಲವರಿದ್ದರು. +ಎಲ್ಲೋ ಒಂದೊಂದು ಮನೆಯ ಅಟ್ಟದ ಮೇಲೆ ಓಬೀರಾಯನ ಕಾಲದ ರಾಟಿಗಳಿದ್ದವು. +ಮಂದಲಿಗೆ ಕಸಬು ಸ್ವತಂತ್ರವಾದ ಕೈಗಾರಿಕೆಯಾಗಿ ಬಹು ಜನರು ಮಾರುವುದಕ್ಕಲ್ಲದಿದ್ದರೆ ಮನೆಗಾದರೂ ನೇಯ್ಬುಕೊಳ್ಳುತ್ತಿದ್ದರು. +ಹೊಲಿಗೆ ಯಂತ್ರ,ನೇಯುವ,ಮಗ್ಗಗಳೂ ಇದ್ದವು. +ಬಡಗಿಗಳೂ ಕುಂಬಾರರೂ ಹಳೇ ಸಂಪ್ರದಾಯದವರಾದ್ದರಿಂದ ಅವರ ಕೈಗಾರಿಕೆಗಳೂ ಹಳೇ ತರಹದಲ್ಲೇ ಇದ್ದುವು.” +ಮುಂದುವರಿಯುತ್ತ ಭಟ್ಟರು, ಅಲ್ಲಿದ್ದ ನಾಲ್ಕೈದು ಮನೆ ಬ್ರಾಹ್ಮಣರಲ್ಲಿದ್ದ ಆಚರಣೆಗಳನ್ನೂ ನಡೆವಳಿಕೆಗಳನ್ನೂ ಸಂಕ್ಷಿಪ್ತವಾಗಿ ವರ್ಣಿಸಿ, ಒಕ್ಕಲು ಮಕ್ಕಳ ಸಮೂಹದಲ್ಲಿ ಬಳಕೆಯಲ್ಲಿದ್ದ ವಿವಾಹಪೂರ್ವ ಆಚರಣೆಗಳನ್ನು ವಿವರಿಸಿದ್ದಾರೆ. +ಗಂಡಿನವರು ಹೆಣ್ಣಿಗಾಗಿ ಕೊಡುತ್ತಿದ್ದ 'ಮದಗಡ'ವನ್ನೂ ಪ್ರಸ್ತಾಪಿಸಿದ್ದಾರೆ. +ಮದುವೆಯ ಸಂಭ್ರಮದ ಚಿತ್ರವೂ ಇದೆ. +ಒಂದು ಶುಭಕಾರ್ಯವಾಗಲಿ, ದುಃಖದ ಸನ್ನಿವೇಶವಾಗಲಿ, ಊರಿಗೆ ಊರೇ ನಿಂತು ನೆರವೇರಿಸುತ್ತಿದ್ದೆ ವಾತಾವರಣ +ಅಂದು ಇತ್ತು ಹೀಗೆ ವರ್ಣಿಸುವಾಗ ಭಟ್ಟರು ನಡುನಡುವೆ ಬರುವ ಸಾಂದರ್ಭಿಕ ಆಚರಣೆಗಳನ್ನೂ ಆ ಆಚರಣೆಗಳ ಹಿನ್ನೆಲೆಯಲ್ಲಿರುವ ನಂಬಿಕೆಗಳನ್ನೂ ಬಿಡದೆ ಚಿತ್ರಿಸುತ್ತಾ ಹೋಗುತ್ತಾರೆ. +ನಮ್ಮ ಸಂಸ್ಕೃತಿ ಎಂಬುದು ಇಲ್ಲಿ ಎಳೆ ಎಳೆಯಾಗಿ ಬಿಚ್ಚಿಕೊಳ್ಳುತ್ತ ಸಾಗುತ್ತದೆ. +ಬಸವಣ್ಣ ಓಡಿಹೋಗಿ ಈಶ್ವರನಲ್ಲಿ ಅವಿತುಕೊಂಡಾಗ ಬೇಸಾಯದ ಕೆಲಸ ಸ್ಥಗಿತಗೊಂಡದ್ದು, ಕಂಗಾಲಾದ ಒಕ್ಕಲು ಮಕ್ಕಳು ವಿಶ್ವಕರ್ಮನ ಸಹಾಯದಿಂದ ಬಸವಣ್ಣನನ್ನು ಹಿಂದಕ್ಕೆ ಪಡೆದದ್ದು-ಇಂಥ ಐತಿಹ್ಯಗಳು ಕೂಡ ಅಲ್ಲಲ್ಲಿ ಪ್ರವೇಶ ಪಡೆದಿವೆ. +ಗುಡ್ಳು ಕೂಡೋ ಶಾಸ್ತ್ರ ಶೈವ ವೈಷ್ಣವ ಸಂಪ್ರದಾಯಗಳ ದೇವರಿಗೂ ಭಕ್ತರಿಗೂ ನಡುವೆ ಕೊಂಡಿಯಾಗಿ ವ್ಯವಹರಿಸುವ "ದಾಸ' ಮತ್ತು'ಮರುಸ' ಆಚರಣೆಗಳು, ಮರುಮದುವೆಯ ವಿವರಗಳು, ಅನೈತಿಕ ಸಂಬಂಧಗಳ ಇತ್ಯರ್ಥದ ರೀತಿಗಳು, ನ್ಯಾಯ. +ಪದ್ಧತಿ ಮತ್ತು ಅದರ ವಿವರಗಳು,ಕೊಡುಕೊಳುವ ಸಂಬಂಧಗಳಲ್ಲಿ ದೇವರುಗಳ ಪಾತ್ರ, ಬಲೆ ಹಾಕಿ ಹಂದಿಯನ್ನು ಬೇಟೆಯಾಡುವ ರೀತಿ, ಮೀನಿನ ಬೇಟೆ, ಮೊಲದ ಬೇಟೆ, ರಂಗದ ಹಬ್ಬದ ಸಂದರ್ಭದಲ್ಲಿ ರಂಗದ ಕುಣಿತದಲ್ಲಿ ಭಾಗವಹಿಸುವ ಗಂಡಸರ ವರ್ಣನೆಯ ಸೊಗಸು, ಅವರು "ತಲೆಗೆ ಮಲ್ಲಿಗೆ ಮೊಗ್ಗು ಮುಡಿದು ಶಾಂಬೂಲ ಹಾಕಿಕೊಂಡು" ಕುಣಿತ ಮಾಡುವ ರೀತಿಗಳು. +ಹೀಗೆ, ಮೊದಲ ಗದ್ಯಭಾಗದಲ್ಲಿ ನಮ್ಮ ಜನಪದದ ಸಂಸ್ಕೃತಿಯ ವಿರಾಟ ಪ್ರದರ್ಶನ ನಮಗಾಗುತ್ತದೆ. +ಈಗ ಪ್ರತಿಯೊಂದು ಹಳ್ಳಿಯಲ್ಲಿಯೂ ಎಂದು ಹೇಳಲಾಗದಿದ್ದರೂ. +ಈಗಲೂ ಅಲ್ಲಲ್ಲಿ ಒಂದು ದೊಡ್ಡ ಗಾತ್ರದ ಹಾಗೂ ಒಂದು ಸಣ್ಣ ಗಾತ್ರದ,ಕಲ್ಲಿನ ಗು೦ಡುಗಳು ಊರಿನ ಮಧ್ಯದಲ್ಲಿ ಬಿದ್ದಿರುವುದನ್ನು ಕಾಣಬಹುದು. +ಬಂಡಿಹೊಳೆಯಲ್ಲೂ ಅಂಥ ಕಲ್ಲುಗಳು ಇದ್ದವು. +ಆ ಕಲ್ಲುಗಳು ಕೂಡ ನಮ್ಮ ಸಂಸ್ಕೃತಿಯ ಭಾಗವೇ ಆಗಿರುವುದರಿಂದ ಭಟ್ಟರ ಕಣ್ಣಿನಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಿಲ್ಲ. +ಅವನ್ನು ಕುರಿತು ಭಟ್ಟರು ಹೀಗೆ ಬರೆದಿದ್ದಾರೆ : “ರಂಗದಬೀದಿಯಲ್ಲಿ ಎರಡು ಅಳೀಮೈಯ್ಯನ ಗುಂಡುಗಳಿದ್ದುವು. +ಒಂದು ಸಣ್ಣದು; ಇನ್ನೊಂದು ಅದಕ್ಕೆ ಸ್ವಲ್ಪ ದೊಡ್ಡದು. +ಆ ವರ್ಷ ಹೊಸದಾಗಿ ನಮ್ಮೂಂಗೆ ಅಳಿಯಂದಿರಾಗಿ ಬಂದಿರುವವರು ಆ ಗುಂಡುಗಳನ್ನು ಎತ್ತಿ ಮಂಡಿಯ ಮೇಲಿಟ್ಟುಕೊಂಡು ಅನಂತರ ಅಲ್ಲಿಂದ ಹೆಗಲ ಮೇಲಿಟ್ಟುಕೊಂಡು ಎದ್ದು ಸರಿಯಾಗಿ ನಿಂತು ಹಿಂಭಾಗಕ್ಕೆ ಎಸೆಯಬೇಕು. +ಇಲ್ಲದೆ ಹೋದರೆ ಸಪ್ಪೆ ಅಳೀಮೈಯ್ಯ ಎಂದು ನಮ್ಮೂರ ಹುಡುಗರು ಗೇಲಿ ಮಾಡಿಬಿಡುತ್ತಿದ್ದರು.” +ಇಲ್ಲಿಗೆ "ಹುಟ್ಟದ ಹಳ್ಳಿ' ಯ ಮೊದಲ ಗದ್ಯಭಾಗ ಮುಗಿದು ಕೋಲಾಟದ ಪದಗಳು ಪ್ರಾರಂಭವಾಗುತ್ತವೆ. +ಮೂವತ್ತಾರು ಪುಟಗಳಷ್ಟು ವಿಸ್ತಾರವಾಗಿ ಹರಡಿರುವ ಮೂವತ್ತು ಕೋಲು ಪದಗಳು ಇಲ್ಲಿವೆ. +ನಮ್ಮ ಜನಪದ ಸಾಹಿತ್ಯ ಎಷ್ಟು ಸಮೃದ್ಧವಾಗಿದೆ ಎಂಬುದಕ್ಕೆ ಮೊದಲ ಪದದಲ್ಲೆ ವರ್ಣನೆಗಳಿವೆ :ಹತ್ತೂ ಸಾವಿರ್ದದ್ದ ಎತ್ತಿನೇಲ್ಛೇರ್ಕೊಂಡು. +ಮತ್ತೇ ಸಾವಿರದಾ ಕೈಯ್ಯಲ್ಲಿ ಹಿಡಿದೂ ಆರು ಸಾವಿರದ್ದ ಹೋರೀ ಮೇಲ್ಟೇರ್ಕೊಂಡು ಬಂದೀವ್ನಿ ಬಾರೊ ಬಸ್ಟಣ್ಣ ಮುಂದುವರಿದು ಕೋಲಾಟದ ಬಾಗುಬಳುಕುಗಳನ್ನುಳ್ಳ ಕುಣಿತದ ರೀತಿಯನ್ನೂ ಈ ಮೊದಲ ಪದ ವರ್ಣಿಸುತ್ತದೆ : +ಅವರಾಡಿ ಇವರಾಡಿ ತೋಳಾಡಿ ಭುಜವಾಡಿ ನಾಗಾರ ಸೆಡೆಯಂತೆ ನಡುವಾಡಿ-ನಮ್ಮುಟ್ಟಿ ನೀನಾಡಿ ದಣ್ವ್ಯಿಲ್ಲೋ ಕೋಲೆಪ್ರಾರಂಭದಲ್ಲಿ “ಸುಮ್ಮನೆ ಕೋಲು ಮತ್ತು ತಾಳ ಯುಲ್ಲರಿಗಳನ್ನು ಲಯಕ್ಕೆಸರಯಾಗಿ ಸದ್ದು ಮಾಡುತ್ತಾ ನಿಂತಲ್ಲೇ ನಿಂತಿರುವರು. +ಮುಂದಕ್ಕೆ ಪದ್ಮದಂತೆ,ಚದ್ರದ೦ತೆ, ಕೋಟೆಯಂತೆ, ಸೈನಿಕರಂತೆ ವ್ಯೂಹಗಳನ್ನು ರಚಿಸಿಕೊಂಡು, ಒಬ್ಬರ ಕೈಯಲ್ಲಿರುವ ಕೋಲಿಗೆ ಇನ್ನೊಬ್ಬರು ಟಕ್ಕಿ ಹೊಡೆಯುತ್ತಾ ಹಾಡುವರು.” +ಪೌರಾಣಿಕ ಕಥಾ ಭಾಗಗಳನ್ನುಳ್ಳ ಪ್ರಸಂಗಗಳೂ ಈ ಕೋಲುಪದಗಳಲ್ಲಿ ಕಾಣಿಸಿಕೊಳ್ಳುತ್ತವೆ. +ಅಂಥ ಸಂದರ್ಭಗಳಲ್ಲಿ ರಂಗಸ್ವಾಮಿ ಭಟ್ಟರು ತಮ್ಮ ಮಾತುಗಳಲ್ಲಿ ಸಂಕ್ಷಿಪ್ತವಾಗಿ ವಿವರಣೆ ನೀಡುತ್ತ ಮತ್ತೆ ಪದವನ್ನು ಮುಂದುವರಿಸುತ್ತಾರೆ. +ಕೋಲಾಟದ ಪದಗಳಲ್ಲಿ ಒಗಟನ್ನು ಹೇಳುವ, ಇನ್ನೂಂದು ಸಂಪುಟ ಒಗಟನ್ನು ಬಿಡಿಸಿ, ಪ್ರತಿಯಾಗಿ ತಾನೊಂದು ಒಗಟನ್ನು ಒಡ್ಡುವ ಚಿತ್ರಗಳು ಅಲ್ಲಲ್ಲಿ ಬರುತ್ತವೆ. +ಅಂಥದೊಂದು ಪದವನ್ನು ಸಂಗ್ರಹಿಸಿರುವ ಭಟ್ಟರು,ಕಲಾವಿದರು ಸಮಯಸ್ಫೂರ್ತಿಯಿಂದ ಆ ಕ್ಷಣದಲ್ಲಿ ಹೊಸ ಹೊಸ ರಚನೆಗಳನ್ನುನಿರ್ಮಿಸಿಕೊಳ್ಳುತ್ತಿದ್ದ ಸಂಗತಿಯನ್ನು ಹೇಳುತ್ತಾರೆ. +ಸಂಗ್ರಹ ಕಾಲದ ಸಮಸ್ಯೆಗಳು ಸಾರ್ವಕಾಲಿಕವಾದವು. +ಸಮಸ್ಯೆಗಳು ಯಾವ ರೂಪದಲ್ಲಿ ಎದುರಾಗುತ್ತವೆ ಎಂದು ಹೇಳಲು ಸಾಧ್ಯಾವಿಲ್ಲ. +ಜನಪದ ಹಾಡುಗಾರಿಕೆಯಲ್ಲಿ ಪದಗಳು ಸಾಲುಗಳು ಪುನರಾವರ್ತನೆಯಾಗುವುದು ಒಂದು ಸಾಮಾನ್ಯ ಗುಣ. +ಸಂಗ್ರಹಿಸುವಾಗ ಅಥವಾ ಸಂಗ್ರಹಿಸಿದ್ದನ್ನು ಓದುಗರಿಗೆ ನೀಡುವಾಗ, ಅಂಥ ಪುನರಾವರ್ತನೆಗಳನ್ನು ಉಳಿಸಿಕೊಳ್ಳಬೇಕೆ ಅಥವಾ ಅವನ್ನು ನಿವಾರಿಸಿ ಶುದ್ಧರೂಪದಲ್ಲಿ ಅಥವಾ ವಾಸ್ತವ ರೂಪದಲ್ಲಿ ನೀಡಬೇಕೆ ಎಂಬ ಜಿಜ್ಞಾಸಿ ರಂಗಸ್ವಾಮಿ ಫಟ್ಟರನ್ನೂ ಕಾಡದೆ ಬಿಟ್ಟಿಲ್ಲ. +ಅವರು ಕಡೆಯಲ್ಲಿ ನಿರ್ಧಾರಕ್ಕೆ ಬಂದದ್ದು ಹೀಗೆ : + ಕೆಲವು ಪದ್ಯಗಳನ್ನು ಸಂಪೂರ್ಣವಾಗಿ ಬರೆದಿಲ್ಲ. +ಏಕೆಂದರೆ-ಒಂದು ರಥವರ್ಣನೆಗೆ ಆರಂಭಿಸಿದರೆ ಚಕ್ರದಿಂದ ಕಳಶದವರೆಗೆ ಪ್ರತಿಯೊಂದು ಪದಾರ್ಥವನ್ನು ವರ್ಣಿಸಿ ಆದರಲ್ಲಿ ಮೇಲಿನ ಸಾಲಿನ ಅರ್ಥವನ್ನೇ ಮತ್ತೆ ಕೆಳಗಿನ ಸಾಲಿನ ಪೂರ್ವಾರ್ಧವನ್ನಾಗಿ ತೆಗೆದುಕೊಂಡಿರುವರು. +ಆ ರೀತಿ ಪ್ರತಿಯೊಂದನ್ನು ಹೇಳುವುದು ಕೋಲಾಟದವರ ಗತ್ತಿಗೂ ಮುಂದಿನ ಪದವನ್ನು ಜ್ಹಾಪಿಸಿಕೊಳ್ಳುವುದ್ಕೂ ಅನುಕೂಲವೇ ವಿನಾ ಬರವಣಿಗೆಯಲ್ಲೂ ಆ ರೀತಿ ಬರೆದರೆ ಬೇಜಾರಾಗಬಹುದೆಂದು ಬಿಟ್ಟದ್ದಾಗಿದೆ. +ಅಪ್ಪೇ ಅಲ್ಲ, ಭಟ್ಟರು ಆ ಮಾತನ್ನು ಮುಂದುವರಿಸಿ, ಪ್ರಾದೇಶಿಕ ಭಿನ್ನತೆಯನ್ನೂ ಭಿನ್ನಪಾಠಗಳನ್ನೂ ಪ್ರಸ್ತಾಪಿಸಿ, ಅಂಥವುಗಳ ಸಂಗ್ರಹದ ಅಗತ್ಯತೆಯನ್ನೂ ಗುರುತಿಸಿದ್ದಾರೆ : + “ನಮ್ಮೂರಲ್ಲಿ ಮುದುಕರು ಇನ್ನೂ ಬೇರೆಬೇರೆ ಪದಗಳನ್ನು ಹಾಡುತ್ತಿದ್ದರು; + ಪ್ರತಿಯೊಂದು ಹಳ್ಳಿಯಲ್ಲೂ ಇದೇ ರೀತಿ ಬೇರೆ ಬೇರೆ ಪದ್ಯಗಳು ರಸದೃಷ್ಟಿಯಿಂದ ಶ್ರೇಷ್ಠವಾಗಿ ರಚಿಸಲ್ಪಟ್ಟಿವೆ. +ಸಾಹಿತಿಗಳು ಸಂಗ್ರಹಿಸಬೇಕಾಗಿ ಪ್ರಾರ್ಥನೆ. +ರಂಗಸ್ಥಾಮಿ ಭಟ್ಟರ ಈ ಮಾತಿನಿಂದ ಜಾನಪದದ ಬಗಿಗಿನ ಆಸಕ್ತಿ,ಪ್ರೀತಿ,ಎಷ್ಟು ಗಾಢವಾಗಿತ್ತೆಂಬುದು ತಿಳಿದುಬರುತ್ತದೆ. +ಓಕುಳಿಯು ಜನಪದ ಆಚರಣೆಗಳಲ್ಲೆಲ್ಲ ಅತ್ಯಂತ ವರ್ಣಮಯವಾದದ್ದು. +ಕೋಲು ಪದಗಳ ಪ್ರಸ್ತಾಪ ಮುಗಿಯುತ್ತಿದ್ದಂತೆಯೆ ಭಟ್ಟರು ಓಕುಳಿಯ ರೀತಿನೀತಿಗಳನ್ನು ಸಂಗ್ರಹಿಸಿ ಕೊಡುತ್ತಾರೆ. +ಓಕ್ಕೀಯ ಗುಂಡೀಗೆ ನಾಕೂ ಚಿನ್ನದ ಕಂಭಚಿನ್ನಾದಾ ಕಂಭಾ ಏಳೇಳೋ-ಹನುಮಂತಾನಿನ್ನಾ ರಂಗಾದೊಳೆಲ್ಲಾ ಐಭೋಗಾ ಓಕುಳಿಯ ವೈಭವವನ್ನು ವರ್ಣಿಸಲು ಈ ಒಂದು ತ್ರಿಪದಿಯೇ ಸಾಕು. +ಕೇವಲ ಹಾಡನ್ನು ಕೊಟ್ಟು ಭಟ್ಟರು ಕೈಬಿಡಲಾರರು. +ಆ ಸಂಪ್ರದಾಯಕ್ಕೆ ಸಂಬಂಧ ಪಟ್ಟ ವಿವರಗಳನ್ನು ಕೊಟ್ಟಾಗಲೇ ಆವರಿಗೆ ಸಮಾಧಾನ. +ಕೋಲಾಟ ಮುಗಿಯುತ್ತಿದ್ದಂತೆ "ರಂಗದ ಬೀದಿಯಲ್ಲೇ ಇರುವ ಓಕುಳಿ ಗುಂಡಿಯಲ್ಲಿ ಆರತಿ ನೀರು ಮಾಡಿ ತುಂಬಿ ಪರಸ್ಪರ ಎರಜಾಡುವರು. +ಪ್ರತಿ ಮನೆಯ ಮುಂದೆ ಒಂದೊಂದು ಹಂಡೆಯ ತುಂಬಾ ಓಕುಳಿ ಮಾಡಿಡುವ ಪದ್ಧತಿ. +ಊರಿನ ಬೀದಿಯ ಸುತ್ತಲೂ ಓಕುಳಿಯಾಡಿ ಹೊಳೆಗೆ ಹೋಗಿ ಸ್ನಾನ ಮಾಡಿ ಬರುವರು." + ಓಕುಳಿ ಇಲ್ಲಿ ಪ್ರತ್ಯೇಕ ಆಚೆರಣೆಯಾಗಿಲ್ಲ; + ರಂಗದ ಹಬ್ಬದ ಅಂಗವಾಗಿ ಆಚರಿಸಲ್ಪಡುತ್ತದೆ. +ಮುಂದಿನ ಗದ್ಯಭಾಗವು “ದೊಡ್ಡಮ್ಮನ ಕತೆ. +ಈ ಕತೆ ಮಾರಮ್ಮನ ಕತೆಯನ್ನು ಹೋಲುತ್ತದೆ. +ಮಾರಮ್ಮನ ಕತೆಯ ಒಂದು ಪಾಠ ಶಾಂತರದಲ್ಲಿ ಗಂಡನ ಕುಲವನ್ನು ತಿಳಿದ ಮಾರಮ್ಮ ಕೋಪಗೊಂಡು "ನನ್ನ ಗುಡಿಯ ಮುಂದ ಕಲ್ಲಾಗಿ ನಿಲ್ಲುವಂತೆಯೂ, ಹಬ್ಬದ ಸಂದರ್ಭದಲ್ಲಿ ಬರುವ ಭಕ್ತರುನಿನ್ನ ನೆತ್ತಿಯ ಮೇಲೆ ಕೆಂಡ ಸುರಿಯುವಂತೆಯೂ" ಶಪಿಸುತ್ತಾಳೆ. +ಆ ಶಾಪದ ಫಲವಾಗಿಯೇ ಇಂದಿಗೂ ಮಾರಿಗುಡಿಯ ಮುಂದೆ ಒಂದು ಕಲ್ಲು ನಿಂತಿರುತ್ತದೆ; +ಎತ್ತರದಲ್ಲಿ ವ್ಯತ್ಕಾಸವಿರುತ್ತದೆಯಷ್ಟೆ. +ರಂಗಸ್ವಾಮಿ ಭಟ್ಟರು ಇಲ್ಲಿ ಕೊಟ್ಟಿರುವ ದೊಡ್ಡಮ್ಮನ ಕತೆಯೂ ಅಷ್ಟೆ ಮಾರಮ್ಮನಂತೆ ಇಲ್ಲಿ ದೊಡ್ಡಮ್ಮನೂ ಶಾಪಹಾಕುತ್ತಾಳೆ. +ಆದರೆ 'ಕಲ್ಲಾಗು'ಎಂದಲ್ಲ, ತಂದೆಯ ಮನೆಗೆ ಹೋಗಿ ತನ್ನ ತಂದೆಯನ್ನು ಕೇಳುತ್ತಾಳೆ, "ನಾಯಿಮುಟ್ಟಿದ ಮಡಕೆ ಶುದ್ದಿಯಾಗುವುದು ಹೇಗೆ?"ಎಂದು. +ಅದಕ್ಕೆ ತಂದೆ, “ಆ ಮಡಕೆಯೊಳಗೆ ಒಂದು ತುಳಸಿ ದಳ ಹಾಕಿ ಬೆಂಕಿಯಲ್ಲಿ ಸುಟ್ಟುಬಿಟ್ಟರೆ ಶುದ್ಧಿ ಆಯಿತೆಂದು ತಿಳಿಯಬಹುದು” ಎನ್ನುತ್ತಾನೆ. +ತಂದೆಯ ಮನೆಯಿಂದ ಹಿಂದಕ್ಕೆ ಬಂದ ದೊಡ್ಡಮ್ಮ ಬಾಯಿಗೆ ಒಂದು ತುಳಸಿ ದಳ ಹಾಕಿಕೊಂಡು, ಒಲೆಯಲ್ಲಿದ್ದ ಬೆಂಕಿ ಕೆಂಡವನ್ನು ಉರಿಮಾಡಿ ಮನೆಯ ನಾಲ್ಕೂ ಮೂಲೆಗೆ ಬೆಂಕಿ ಹಚ್ಚಿ ತನ್ನ ಮಗು ಮಲಗಿದ್ದ ಹಾಸಿಗೆ ಮೇಲೆ ಕೂತುಕೊಳ್ಳುತ್ತಾಳೆ. +ಬೆಂಕಿಯ ಜ್ವಾಲೆಗಳು ಧಗಧಗನೆ ಮನೆಯನ್ನೆಲ್ಲ ಆವರಿಸತೊಡಗಿದಾಗ “ಅತ್ತೆಯೇ, ನಿನ್ನ ವಂಚಕ ಮಗನು ಕೋಣನಾಗಿ ಹುಟ್ಟಲಿ, ಅದನ್ನು ಕಡಿದು ಅದರ ನಾಲಗೆಯನ್ನು ಬೇಯಿಸಿ ನಿನಗೆ ಊಟಕ್ಕೆ ಬಡಿಸಲಿ, ಅದನ್ನು ತಿಂದು ನೀನು ತೃಪ್ತಿಪಡು,ಅವನನ್ನು ಕಡಿಯುವಾಗ ನನ್ನ ಬಾಗಿಲಿಗೆ ಮರೆಯಾಗಿ ತೆರೆಯಿರಲಿ” ಎಂಬುದಾಗಿ ಶಪಿಸುತ್ತಾಳೆ. +ಆತ್ಮಾಹುತಿ ಮಾಡಿಕೊಳ್ಳುತ್ತಾಳೆ. +ಆ ಕತೆಯನ್ನು ಹೇಳಿದ ರಂಗಸ್ವಾಮಿ ಭಟ್ಟರು “ಇದೆಲ್ಲ ಅಜ್ಜಿ ಕತೆ, ಯಾರೂ ನಂಬತಕ್ಕುದಲ್ಲ” ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. +ಮುಂದೆ ಮತ್ತೆ ಪದ್ಯಭಾಗ ಪ್ರಾರಂಭವಾಗುತ್ತದೆ. +ಇಲ್ಲಿ ಭಟ್ಟರು ದೇವರಪದಗಳನ್ನು ಸಂಗ್ರಹಿಸಿಕೊಟ್ಟಿದ್ದಾರೆ. +ಇವು ದೊಡ್ಡಮ್ಮನನ್ನು ಕುರಿತ ಪದಗಳು. +ಆರು ಪುಟಗಳಷ್ಟು ತ್ರಿಪದಿಗಳು. +ಹಬ್ಬದ ಸಂದರ್ಭದಲ್ಲಿ ಹಾಡಿಸಿಕೊಳ್ಳುವ ಈ ಪದಗಳ ನಡುವೆ ಭಟ್ಟರು ಆಚರಣೆಗೆ ಸಂಬಂಧಿಸಿದ ಕೆಲವು ಮಾತುಗಳನ್ನುಹೇಳಿದ್ದಾರೆ ; + “ ರಾತ್ರಿಯ ಹೊತ್ತಿಗೆ ಊರ ಹೊರಗಿರುವ ಬೇವಿನ ಮರದ ಕೆಳಗೆ ದೊಡ್ಡಮ್ಮನನ್ನು ಬಿಟ್ಟು ಬರುತ್ತಿದ್ದರು. +ಮಣ್ಣಿನಲ್ಲಿ ಒಂದು ವಿಗ್ರಹವನ್ನು ಮಂಗಳವಾರದ ದಿನವೇ ಮಾಡಿಸಿ ಹೊಳೆಯ ಸಮೀಪದಿಂದ ತರುತ್ತಿದ್ದರು. +ಅದನ್ನೇ ಊರ ಹೊರಗೆ ಬಿಟ್ಟು ಬರುವುದು, ಎಲ್ಲಿಯು ಹೊಲೆಯರ ಜಾತಿಯವಳು. +ಉತ್ಸವವು ಹೊರಟಾಗ ಅವಳಿಗೆ ಅನೇಕರು ದುಡ್ಡು ಕಾಸುಗಳನ್ನು ಬಹುಮಾನವಾಗಿ ಕೊಡುತ್ತಿದ್ದರು. +ಹೊಲೆಯರಲ್ಲಿ ಕೆಲವರು ಕೋಣನ ಕಾಲಿನ ಮೂಳೆಯನ್ನು ಬಲಗೈಯಲ್ಲಿ, ಹೆಂಡದ ಬುರುಡೆಯನ್ನು ಎಡಗೈಯಲ್ಲಿ ಹಿಡಿದು ನೀಗೋ ಜನಗಳಂತೆ ನರ್ತನ ಮಾಡುತ್ತಿದ್ದರು. +"ದೇವರ ಪದಗಳು" ಎಂಬ ಶೀರ್ಷಿಕೆಯಲ್ಲಿ ದೊಡ್ಡಮ್ಮನನ್ನು ಕುರಿತ ಹಾಡುಗಳು ಮುಗಿದ ಕೂಡಲೆ ಮತ್ತೆ ಬದುಕಿನ ಚಿತ್ರಗಳು ಬಿಚ್ಚಿಕೊಳ್ಳುತ್ತದೆ. +ಒಕ್ಕಲಿಗರ ಚರಾಸ್ತಿಯಾದ ದನಕರುಗಳನ್ನು ಸಾಕುವ ಸಜೀವ ನಿರೂಪಣೆಯಿದೆ. +ಎಂಟರಿಂದ ಹದಿನಾಲ್ಕು ವರ್ಷದೊಳಗಿನ ಹೆಣ್ಣು ಮಕ್ಕಳು ಗಂಡುಮಕ್ಕಳು ದನಕರುಗಳನ್ನು ಮೇಯಿಸಲು ಹೋಗುವ ಕ್ರಿಯೆಯ ವಿವರಗಳಿವೆ. +ಅವರ ಹಿಂದೆ ಮೂರು ನಾಲ್ಕು ವರ್ಷದ ಹುಡುಗರು ಹೊರಟು, ಸಗಣಿಯನ್ನು ಸಂಗ್ರಹಿಸಿ ಶಿನ್ಪೆಯನ್ನು ಬೆಳೆಸುವ ಚಿತ್ರವಿದೆ. +ಒಳ್ಳೆಯ ಜಾತಿಯ ಹೋರಿಗಳೂ ಹಸುಗಳೂ ಅಪರೂಪವಾಗಿರುವುದಕ್ಕೆ ಜರ್ಮನಿ ಯುದ್ಧವಾದಾಗ ಯಾರೋ ಕೆಂಪು ಜನರು ಬಂದು ಹೋರಿಗಳನ್ನೆಲ್ಲಾ ಕೊಂಡುಕೊಂಡು ಹೋದುದೇ ಕಾರಣವೆಂದು ಜನರಾಡಿಕೊಳ್ಳುತ್ತಿದ್ದ ಸಂಗತಿಯನ್ನು ಭಟ್ಟರು ಹೇಳುತ್ತಾರೆ. +ಪಶುಪಾಲನೆಯ ಬಗ್ಗೆ ಹೇಳುವಾಗ ಪಶುವೈದ್ಧದ ಬಗ್ಗೆಯೂ ಹೇಳಿರುವುದು ಭಟ್ಟರ ಸಮಗ್ರ ದೃಷ್ಟಿಸಾಮರ್ಥ್ಯಕ್ಕೆ ಒಂದು ಉದಾಹರಣೆ. + ಪಶುವೈದ್ಯ ಸಮಗ್ರ ಸಂಗ್ರಹ ಇಲಿಲ್ಲವಾದರೂ ಭಟ್ಟರ ಆಲೋಚನೆ ಆ ದಿಕ್ಕಿನಲ್ಲೂ ಹರಿದಿರುವುದೇ ಇಲ್ಲಿ ವೈಶಿಷ್ಟ್ಯ. +ಜೊತೆಜೊತೆಗೆ ನಂಜಿಕೆಯೂ ಸುಳಿಯುತ್ತದೆ. +ಈ ವಾಕ್ಕಗಳನ್ನುನೋಡಿ : “ ದನಗಳಿಗೆ ಸಾಮಾನ್ಯವಾಗಿ ಒದಗುವ ಕಾಯಿಲೆಗಳಿಗೆಲ್ಲಾ ನಮ್ಮೂರವರೇ ಚಿಕಿತ್ಸೆ ಮಾಡುತ್ತಿದ್ದರು . +ಚಪ್ಪೇರೋಗದ ಉಚ್ಛಾಟ ಹೆಚ್ಚಿದಾಗ ಊರು ಮಧ್ಯದಲ್ಲಿರುವ ಗೋಗಲ್ಲು ಪೂಜೆ ಮಾಡುವ ವಾಡಿಕೆ. +ಗೋಗಲ್ಲಿನೊಳಗೆ ಒಂದು ಯಂತ್ರವನ್ನು ಕೊರೆದಿದ್ದರು. +ಕೆಲವರು ಗೊಡ್ಡು ಹಸುಗಳಲ್ಲಿ ಉಳುತ್ತಿದ್ದರು. +ಉತ್ಪರೆ ಗಬ್ಬವಾಗುವುದೆಂದು ಹೇಳುತ್ತಿದ್ದರು. +ಕರು ಹಾಕಿದ ಮೇಲೂ ಉತ್ತು ಅಭ್ಯಾಸವಾಗಿರುವ ದನವೆಂದು ಉಳಲು ಕಟ್ಟುತ್ತಿದ್ದರು.” +ಹೀಗೆ ಹೇಳುತ್ತ ಭಟ್ಟರು ಹಬ್ಬಗಳ ಸಂದರ್ಭಗಳಲ್ಲಿ ದನಕರುಗಳಿಗೆ ಆರೈಕೆ, ಆಲಂಕಾರ ಮಾಡುತ್ತಿದ್ದ ವಿಚಾರವನ್ನೂ ತಿಳಿಸುತ್ತಾರೆ. +ರೈತರ ಬದುಕು ಬಹುಪಾಲು ಶ್ರಮವನ್ನೆ ಆಧರಿಸಿದ್ದು. +ಮೇಲಿಂದ ಮೇಲೆ ಕಷ್ಟಗಳೆಂಬ ವಿಪತ್ತುಗಳು ಎರಗುವುದು ಒಂದು ಸಾಮಾನ್ಯ ಸಂಗತಿ. +ಏನೇ ಕಷ್ಟಗಳು ಬಂದರೂ ಅವರಲ್ಲಿದ್ದ ಚರಾಸ್ತಿಯೇ ಅವರ ಗುರಾಣಿಯಾಗುತ್ತಿತ್ತು. +ಚರಾಸ್ತಿಯಿಂದಲೇ ಅವರ ಸುಖದ ಸಂದರ್ಭಗಳು ಒದಗುತ್ತಿದ್ದವು. +ಅದ್ದರಿಂದಲೇ “ಕಟ್ಟರೂ ಬಸವಣ್ಣನಿಂದ. +ಬದುಕಿದರೂ ಬಸವಣ್ಣನಿಂದ" ಎಂಬ ಮಾತು ರೂಢಿಯಲ್ಲಿತ್ತು. +ಗದ್ಯಭಾಗ ಮುಂದುವರೆಯುತ್ತದೆ. +ಇಲ್ಲಿ ಯಾವ ಯಾವ ಮಾಸದಲ್ಲಿ ಏನೇನು ಆಚರಣೆಳು ಕಾಣಿಸಿಕೊಳ್ಳುತ್ತವೆ. +ಅವುಗಳ ವಿರ್ವಹಣೆ ಹೇಗೆ ಮುಂತಾದ ವಿವರಗಳು ಲಭ್ಯವಾಗುತ್ತವೆ. +ಚೈತ್ರ, ವೈಠಾಖ, ಜ್ಯೇಷ್ಠ, ಆಷಾಢ, ಶ್ರಾವಣ,ಭಾದ್ರಪದ, ಆಶ್ವಯುಜ, ಕಾರ್ತಿಕ, ಮಾರ್ಗಶಿರ, ಪುಷ್ಯ. ಮಾಘ. ಫಾಲ್ಗುಣ-ಹೀಗೆ ಎಲ್ಲ ಮಾಸಗಳ ಆಚರಣೆಗಳೂ ಪ್ರಸ್ತಾಪವಾಗಿವೆ. +ಮಾರ್ಗಶಿರ, ಪುಷ್ಯ ಮಾಸಗಳಿಂದರೆ ಆದು ಸುಗ್ಗಿಯ ಕಾಲ. + “ಹೋಯಿಲ್ಲೊ ರಂಗ, ಹೋಯಿಲ್ದೊಸ್ವಾಮಿ' ಎಂದು ಎಲ್ಲರೂ ಹರ್ಷಣ್ಟು ಮಾಡುವ ಕಾಲ. +ಆಯಗಾರರು ವರ್ಷವೆಲ್ಲ ದುಡಿದದ್ದಕ್ಕೆ ವರ್ಷಕ್ಕಾಗುವಷ್ಟು ಧಾನ್ಯವನ್ನು ಸಂಗ್ರಹಿಸಿಕೊಳ್ಳುವ ಕಾಲ. + ಇಂಥ ಕಾಲದಲ್ಲಿ ನಡೆದ ಒಂದು ಘಟನೆಯನ್ನು ರಂಗಸ್ವಾಮಿ ಭಟ್ಟರು ಮಾತುಗಳಲ್ಲೆ ಕೇಳಿದರ ಸ್ವಾರಸ್ಯ ಹೆಚ್ಚು :ಒಂದು ದಿನ ನಮ್ಮೂರ ಅಕ್ಕಸಾಲಿಗನ ಮನೆಯಲ್ಲಿ ಜಗಳವಾಗುತ್ತಿತ್ತು. +ಹೊಸಬರಿಬ್ಬರು ನಾವು ನಿಮಗೆ ಹಿರೀ ಮಕ್ಕಳು, ನಮಗೆ ಕೊಡುವುದನ್ನುಕೊಡಿ ಎಂದು ಆಚಾರಿಯ ಕಾಲುಕಾಲಿಗೆ ಬೀಳುತ್ತಿದ್ದರು. +ಇದ್ದೆನು ಗದ್ದಲ ಎಂದು ಕೇಳುವ ಹೊತ್ತಿಗೆ ಕಂಕಳು ಚೀಲದಿ೦ದ ಒಂದು ಹಿತ್ತಾಳೆ ಹಲಗೆಯ ಶಾಸನವನ್ನು ತೆಗೆದು ನೋಡಿ ಸ್ವಾಮಿ, ಇದೇನು ನಾವು ಮಾಡಿದ್ದೆ. +ಹಿಂದಿಲಿಂದ ಬಂದದ್ದು ಎಂದು ತೋರಿಸಿದರು. +ಅದರಲ್ಲಿ ಹೀಗಿತ್ತು-“ಹಿಂದೊಂದಾನೊಂದು ಕಾಲದಲ್ಲಿ ಕಾಂಚೀ ನಗರದ ರಾಜನು ಅಲ್ಲಿನ ಕಾಳಿಕಾಮ್ಯನವರ ರಥೋತ್ಸವ ಸಮಯದೊಳ್‌ ಕಂಚಿನ ತೇರಂ ತೆಪ್ಪದ ಮೇಲಿಟ್ಟುಸರೋವರದೊಳಗೆ ತೆಪ್ಲೋತ್ಸವ ಮಹೋತ್ಸವ ದರ್ಶನದಿಂ ಆನಂದ ಲಹರಿಯಲ್ಲಿರುವಾಗ ಇದ್ದಕಿದ್ದ ಹಾಗೆ ತೆಪ್ಪದೊಡನೆ ತೇರೂ ಮುಳುಗಿಹೋಯಿತು. +ಆಗಲಾ ನೃಪಂ ಅಧಿಕ ಚಿಂತಾಕುಲನಾಗಿ ಮಂಚದ ಮೇಲೆ ಮೊಕ್ಕಡೆಯಾಗಿ ಮಲಗಲು ಈ ಸಮಾಚಾರವು ನಗರದಲ್ಲಿ ಹರಡಿ ಜನರೆಲ್ಲಾ ಹಾಹಾಕಾರಪಟ್ಟರು. +ರಾಜನು ಆ ತೇರನ್ನು ಯಾರು ಮೇಲೆತ್ತುವರೋ ಅವರಿಗೆ ಬೇಕಾದ್ದು ಕೊಡುವೆನೆಂದು ಡಂಗೂರ ಹೊಡಿಸಿದನು. +ಅನೇಕರು ಪ್ರಯತ್ನಪಟ್ಟು ನಿರಾಶರಾದರು. +ಕಡೆಗೆ ಗೊಲ್ಲರ ಕೆಲಸ ಮಾಡಿಕೊಂಡು ಅರಮನೆಯಲ್ಲಿದ್ದ ಇಬ್ಬರು ಹುಡುಗರು ಅನೇಕ ಉಪಾಯಗಳಿಂದ ರಾಜಗೊಡಂಬಡಿಸಿ ತಮ್ಮ ಮಂತ್ರ ಶಕ್ತಿಯಿಂದ ತೆಪ್ಪ ಸಹಿತವಾಗಿ ತೇರನ್ನು ಮೇಲಕ್ಕೆತ್ತಿ ತೆಪ್ಪೋತ್ಸವವನ್ನು ಸಾಂಗವಾಗಿ ನೆರವೇರಿಸಿದರು. +ಈ ಕಾರಣಕ್ಕಾಗಿ ರಾಜನು ಅವರಿಗೆ ಶಾಸನಮಾಡಿ ಕೊಟ್ಟಿರುವನು. +ಅದರಲ್ಲಿ ಕಾಶಿಯಿಂದ ರಾಮೇಶ್ವರದ ವರೆಗಿನ ಎಲ್ಲಾ ಎಶ್ತಕರ್ಮನ ಸಂತತಿಯವರು ಈ ಕಂಚೇಗೊಲ್ಲರಿಗೆ ಭತ್ಯ ದುಡ್ಡು ಮಿರಾಸೆಕೊಟ್ಟು ತಲತಲಾಂತರದಲ್ಲೂ ಕಾಪಾಡಿಕೊಂಡು ಬರಬೇಕೆಂದಿದೆ. +ಈ ಬಗೆಯ ಕತೆಯನ್ನುಳ್ಳ ಹಿತ್ತಾಳೆ ತಗಡಿನ ಶಾಸನದಲ್ಲಿ ಕೆಲವು ತೆಲುಗು ಅಕ್ಷರಗಳಿರುವುದನ್ನೂ, ಭಾಷೆಯೂ ತೆಲುಗೇ ಆಗಿರುವುದನ್ನೂ, ಭಟ್ಟರು ದಾಖಲಿಸಿದ್ದಾರೆ. +ಹಾಗೆ ಬಹುಮಾನ ಪಡೆದವರ ಸಂತತಿಯವರನ್ನು ಪುಣಜ ಮಕ್ಕಳು ಎಂದೂ, ಹಳೇ ಮಕ್ಕಳು ಎಂದೂ, ಕರಯುವುದಿದೆ. + ಅವರು ಆಚಾರಿಯಿಂದ ಒಕ್ಕಳ ಭಕ್ತೆ ಪಡೆಯಲು ಶಾಸನದ ನೆರವು ಪಡೆದಿದ್ದರು. +ರಂಗಸ್ವಾಮಿ ಭಟ್ಟರು ಗುರುತಿಸಿರುವಂತೆ ಬಂಡಿಹೊಳೆಯಲ್ಲಿ ಮೂರು ಅಂತಸ್ಥಿನ ಜನರಿದ್ದರು : “ಒಂದು ಯಜಮಾನಿಕೆ, ಎರಡನೇದು ಆಳುತನ. +ಮೂರನೇದು ಇವರಿಬ್ಬರ ದಳ್ಳಾಳತನ.” + ಈ ಎರಡನೆಯ ಹಾಗೂ ಮೂರನೆಯ ವರ್ಗದ ಬಹುಪಾಲು ಜನ ರೈತರ ಮನೆಗಳಲ್ಲಿ ಜೀತಗಾರರಾಗಿದ್ದವರೇ. +ಈ ಸಂದರ್ಭದಲ್ಲಿ ಕೂಡ ಭಟ್ಟರ ಸಾಮಾಜಿಕ ದೃಷ್ಟಿ ಹರಿದಿದೆ. +“ಬಡತನ, ಕೊಳಕುವೃತ್ತಿ, ಅವಿದ್ಯೆ, ಇವುಗಳೇ ಅವರು ಜೀತಗಾರರಾಗುವುದಕ್ಕೆ ಕಾರಣ” ಎನ್ನುತ್ತಾರೆ ಅವರು. +ಜೀತಗಾರರ ಮನೆಯ ಹೆಂಗಸರಾಗಲಿ, ಯಜಮಾನಿಕೆ ನಡೆಸುವವರ ಮನೆಯ ಹೆಂಗಸರಾಗಲಿ ಮೈತುಂಬ ಬಚ್ಟೆಯುಡುತ್ತಿದ್ದರು. +ಇಲ್ಲಿಂದ ಮುಂದಕ್ಕೆ ಸ್ವಲ್ಪ ಭಾಗವು ಸಾವಿನ ವಿಚಾರಗಳಿಂದ ಕೂಡಿದೆ. +ಆ ಕಾಲದಲ್ಲಿ ಹೆಣ ಹೊರುವುದಕ್ಕೆಂದೇ ನಿರ್ದಿಷ್ಟ ಜನ ಇರುತ್ತಿದ್ದ ಸುಳಿವು ಇಲ್ಲಿದೆ. +ಹೆಣವನ್ನು ಹೊತ್ತು ಊರ ಹೊರಗೆ ಹೋದಾಗ ಅಥವಾ ಒಪ್ಪಮಾಡುವ ಪ್ರದೇಶ ಹತ್ತಿರ ಬಂದಾಗ, ಅಲ್ಲಿ ಹೆಣವನ್ನು ಇಳುಕಿ ಇಂಡೇಕೂಳು ಹಾಕುವುದು, ಪೂಜೆ, ಇತ್ಯಾದಿ ವಿಧಿಗಳನ್ನು ನಡೆಸಲಾಗುತ್ತದೆ. +ಅದು ಶ್ಮಶಾನದ ಒಡೆಯ ಹರಿಶ್ಚಂದನಿಗೆ ಸಲ್ಲಿಸುವ ಕಾಣಿಕೆ ಅಥವಾ ಗೌರವ ಎಂದು ಅರ್ಥೈಸಲಾಗುತ್ತದೆ. +ಆದರೆ, ಅಲ್ಲಿ ಹೆಣ ಇಳುಕುವ ಉದ್ದೇಶ ಬೇರೆಯೇ ಇದೆಯೆಂದು "ಹುಟ್ಟಿದ ಹಳ್ಳಿ" ಯಿಂದ ತಿಳಿದು ಬರುತ್ತದೆ. +ಭಟ್ಟರು ಹೇಳುತ್ತಾರೆ:“ಅರ್ಧ ದಾರಿಯಲ್ಲಿದ್ದ ಹೆಣವಿಡೊ ಬಸ್ತೀ ಮರದ ಕೆಳಗೆ ಮೃತದೇಹವನ್ನಿಳುಕಿ ಮುಂದುಗಡೆ ಹೊರುತ್ತಿದ್ದವರು ಹಿಂದುಗಡೆಗೂ ಹಿಂದುಗಡೆಯವರು ಮುಂದುಗಡೆಗೂ ಬದಲಾಯಿಸಿಕೊಳ್ಳುತ್ತಿದ್ದರು.” + ಈಗ ನಾವು ಆಚರಿಸುವ ವಿಧಿಗಳಿಗಿಂತ, ನಂಬಿಕೆಗಳಿಗಿಂತ, ಇದು ಸೂಕ್ತವಾದ, ವಾಸ್ತವವಾದ,ವಿಚಾರವಿರುವಂತೆ ತೋರುತ್ತದೆ. +ನಮಗೆ ಅಪರಿಚಿತವಾದ ಅನೇಕ ಆಚರಣೆಗಳು "ಹುಟ್ಟಿದ ಹಳ್ಳಿ" ಯಲ್ಲಿವೆ. +ಗ್ರಂಥದ ಬಹುಪಾಲು ಎಲ್ಲ ಭಾಗಗಳಲ್ಲೂ ಕಾಣಸಿಗುವಂತೆ ಈ ಸಾವಿನ ಸಂದರ್ಭದಲ್ಲೂ ಕಾಣಿಸಿಕೊಳ್ಳುತ್ತವೆ. +“ಬಸರಿಯುರು ಸತ್ತರೆ ಆವರನ್ನು ಕಾಡು ಗಿಡದಲ್ಲಿರಿಸಿ ಕತ್ತಿನ ನೇರಕ್ಕೆ ಕವೆ ಕಡ್ಡಿಯನ್ನು ಕೊಟ್ಟುಎಲೆ ಮುಚ್ಚಿ ಗಡಿಗೆಯಲ್ಲಿ ನೀರಿಟ್ಟು ಬಂದುಬಿಡುತ್ತಿದ್ದರು? +ಎಂಬಂಥ ಚಿತ್ರ ಅತ್ಯಂತ ಅಪರೂಪವಾದುದು. +ಒ೦ದು ನಂಬಿಕೆಯಿದೆ. +ಸಂಸ್ಕಾರದಲ್ಲಿ ಸಾಮಾನ್ಯವಾಗಿ: ಹೆಣವನ್ನು ಹೂಳುವುದೇ ಹೆಚ್ಚು ತೊನ್ನು ಇರುವವರು ಸತ್ತಾಗ ಹೂತರೆ ಮಳೆ ಬರುವುದಿಲ್ಲ ಎಂಬುದು ನಂಬಿಕೆ. +ಆದ್ದರಿಂದ ತೊನ್ನು ಇರುವವರು ಸತ್ತಾಗ ಸುಡುವುದು ಪದ್ಧತಿಯಾಗಿದೆ. +ಉತ್ತರ ಕ್ರಿಯೆಗಳ ಸವಿವರ ವಿವರಣೆ ಈ ಭಾಗದಲ್ಲಿದೆ. +ಸತ್ತವರನ್ನು ಸ್ವರ್ಗಕ್ಕೆ ಕಳುಹಿಸುವ ವಿವರಗಳು ಸ್ಥಾರಸ್ಯಕರವಾಗಿವೆ. +ಸತ್ತವರ ಉತ್ತರಾಧಿಕಾರಿಯಾಗುವ ಹಕ್ಕನ್ನು ತಲೆ ಬೋಳಿಸಿಕೊಳ್ಳುವ ಕ್ರಿಯೆಯಲ್ಲಿ ಗುರುತಿಸುವ ಮನೋಭಾವ ಇಲ್ಲಿ ಪ್ರಸ್ತಾಪವಾಗಿದೆ. +ಈಗ ರಂಗಸ್ವಾಮಿ ಭಟ್ಟರ ದೃಷ್ಟಿ ಹೆಮಗಿರಿ ಬೆಟ್ಟದ ಕಡೆಗೆ ಹರಿಯುತ್ತದೆ. +ಪಶ್ಚಿಮಾಭಿ ಮುಖಿಯಾಗಿ ಹರಿಯುವ ಹೇಮಾವತಿ ನದಿಯ ದಂಡೆಯಲ್ಲಿರುವ ಹೇಮಗಿರಿ ಬೆಟ್ಟದಲ್ಲಿ ಭೃಗುಮಹರ್ಷಿಯು ತವಸ್ಪು ಮಾಡಿ ದೇವರನ್ನು ಪ್ರತ್ಯಕ್ಷ ಮಾಡಿಕೊಂಡ ಸಂಗತಿ ಇಲ್ಲಿದೆ. +ಅವರು ತಪಸ್ಸಿಗೆ ಕುಳಿತಿದ್ದರೆನ್ನಲಾದ ಬಂಡೆಗೆ ಗಾಯತ್ರಿ ಶಿಲೆ ಎಂದು ಹೆಸರು ಬಂದಿದೆ. +ಬೆಟ್ಟದ ಮೇಲಿರುವ ಒಂದು ಪುಟ್ಟ ಗುಹೆಯನ್ನು ಭೃಗು ಕ್ಷೇತ್ರ ಎಂದು ಕರೆಯುತ್ತಾರೆ. +ಮೂವತ್ತು ವರ್ಷಗಳ ಹಿಂದೆ ಬೆಟ್ಟದ ತುಂಬ ಬೇವಿನ ಮರಗಳು ಇದ್ದುವು. +ಭಟ್ಟರು ಕೂಡ ತಮ್ಮಗ್ವಂಥದಲ್ಲಿ ಈ ಬಗ್ಗೆ ಹೇಳಿದ್ದಾರೆ. +ಇಲ್ಲಿ ಚಿನ್ನ ಸಿಕ್ಕುವುದೆಂದು ಯಾರೋ ಕೆಂಪು ಜನರು ಬಂದು ಅಲ್ಲಲ್ಲಿ ಅಗೆದು ಹಾಗೇ ಬಿಟ್ಟುಹೋಗಿರುವ ವಿಚಾರಕೂಡ 'ಹುಟ್ಟಿದ ಹಳ್ಳಿ'ಯಲ್ಲಿ ಇದೆ. +ಬಂಡಿಹೊಳೆಯ ದಕ್ಷಿಣ ದಿಕ್ಕಿನಲಿ ಹೊಸಪಟ್ಟವೆಂಬ ಕೋಟೆಯಿದೆ. +ಆ ಕೋಟೆ ಕಟ್ಟುವಾಗ ಬಂಡಿಹೊಳೆಯ ಜನ ಅಲ್ಲಿ ಕೂಲಿಗಾಗಿ ಹೋಗುತ್ತಿದ್ದರು. +ಬಡತನದಿಂದಾಗಿ ಗರ್ಭಿಣಿಯರೂ ಕೂಲಿಗೆ ಹೋಗುತ್ತಿದ್ದುದುಂಟು. + “ಐದು ತಿಂಗಳಿಗೆ ಒಳಪಟ್ಟ ಗರ್ಭಿಣಿಯರು ಕೂಲಿಗೆ ಬಂದರೆ ಹೊಟ್ಟೆಯೊಳಗಿರುವ ಮಗುವಿಗೆ ಅರ್ಧ ಕೂಲಿ ಕೊಡುತ್ತಿದ್ದರಂತೆ? +ಎಂಬ ಕುತೂಹಲಕರ ಅಂಶವನ್ನೂಭಟ್ಟರು ಇಲ್ಲಿ ದಾಖಲಿಸಿದ್ದಾರೆ. +ಕೋಟೆ ಕಟ್ಟಿಸುತ್ತಿದ್ದ ನವಾಬರ ಇನ್ನೂ ಕೆಲವು ಅಪರೂಪದ ಸಂಗತಿಗಳು ಇಲ್ಲಿವೆ. +ಅನೇಕ ಐತಿಹ್ಯಗಳು "ಹುಟ್ಟಿದ ಹಳ್ಳಿ"ಯಲ್ಲಿವೆ. +ಪಾಂಡವರ ಹೊಲ,ಕುರೋದ್ವೊಲ (ಇದು ಕೌರವರ ಹೊಲ ಇರಬಹುದೆಂದು ಭಟ್ಟರುಊಹಿಸುತ್ತಾರೆ). +ಪಾಂಡವರ ಗುಹೆ. +ಪಾಂಡವರ ಬಂಡೆ, ಹೀಗೆ ಐತಿಹೃಗಳನ್ನೆಲ್ಲ ಒಂದು ಕಡೆ ಶುಷ್ಕವಾಗಿ ಸಂಗ್ರಹಿಸದೆ, ನಡೆದುವು ಎನ್ನಲಾದ ಅನೇಕ ಸ್ವಾರಸ್ಯಕರ ಪ್ರಸ೦ಗಗಳ ನಡುವೆ ಐತಿಹ್ಯಗಳ ಬಗ್ಗೆ ಹೇಳಿದ್ದಾರೆ. +ಎಷ್ಟೋ ಸಂದರ್ಭಗಳಲ್ಲಿ ಮುಗ್ಧತೆ ಎ೦ಬುದು ಯುರುಪಯೋಗ ಆಗುವಸಂಭವವಿದೆ. +ಮೌಢ್ಯ ಎಂಬುದು ಮುಗ್ಧತೆಯ ನೆರಳು, ಕೆಲವರು ಇನ್ನೊಬ್ಬರ ಮುಗ್ಧತೆಯನ್ನು ದಡ್ಡತನವಂದು ತಿಳಿದು ಅದನ್ನು ತಿಮ್ಮ ಮನೋರಂಜನೆಗಾಗಿ ಬಳಸಿಕೊಳ್ಳುತ್ತಾರೆ. +ಒಮ್ಮೊಮ್ಮೆ ಹಾಗೆ ಮಡುವುದು ತಿರುಗು ಬಾಣವಾಗಿಯೂ ಎರಗಿಬಿಡುತ್ತದೆ. +ಅಂಥ ಒಂದು ಸಂದರ್ಭವನ್ನು ರಂಗಸ್ವಾಮಿ ಭಟ್ಟರು, ಜನರ ರೀತಿನೀತಿಗಳನ್ನು ತಿಳಿಸಿಕೊಡುವ ಸಲುವಾಗಿ, ಇಲ್ಲಿ ನೀಡಿದ್ದಾರೆ. +ಇದು ಒಬ್ಬ ಬಡ ಗೌಡ ಹಾಗೂ ಒಬ್ಬ ಶ್ರೀಮಂತ ಗೌಡನ ನಡುವೆ ನಡೆದ ಸಂಭಾಷಣೆ :(ಸ್ಥಾಮೀ, ನಮ್ಮ ಜನಗಳೇ ಮೋಡ ಜನಗಳು. +ಅದಕ್ಕೊಂದು ತಾರಕಣಕೊಡ್ತೀವಿ ಕೇಳಿ, ನಮ್ಮವನೊಬ್ಬ ಒಬ್ಬ ದೊಡ್ಡ ಮನುಷ್ಯರ ಬಳಗೆ ಹೋದ. +ಅವರು ಮಾತು ಮಾತಿನ ಮೇಲೆ“ಏನಯ್ಯಾ ಗೌಡ, ತಾಳೀ ಕಟ್ಟಿಕೊಳ್ಳುತ್ತಾರಂತಲ್ಲ ಅದ್ದ್ವಾ?ಗೆ)“ಅಯ್ಯೊ ಅದೇನು ಗೊತ್ತಿಲ್ದಾ, ಈಗ ನೀವು ಸತ್ಟೋದ್ರಿ ಅಂತ ತಿಳ್ಕೋಳಿ. +ಆಮ್ಯಾಲೆ ಇಗೋ ನಾನಿವ್ಮಿ. +ನಿಮ್ಮ ಹೆಂಡ್ತ್ಯೋರು ತಮ್ಮ ತಾಳೀ ತೆಗೆದು ನನ್ನಕೈಗೆ ಕೊಡ್ತಾರೆ ಅ೦ತ ತಿಳ್ಕೋಳಿ. +ನಾನು ಆ ತಾಳೀನ ನಿಮ್ದೆಂಡ್ರ ಶತ್ತಿಕ್ಕಟ್ಟಿದೆಆದೇ ತಾಳಿ ಕಟ್ಕೋಳೋದು. +ಪ್ರಶ್ನೆ ಕೇಳಿದ ಶ್ರೀಮಂತೆ ಗೌಡ ಸುಸ್ತೋ ಸುಸ್ತು! +ಭಟ್ಟರು ಈ ಪ್ರಸಂಗವನ್ನು ಹೇಳಿ “ಇದಕ್ಕೆಲ್ಲಾ ಅವಿದ್ಯೆಯೇ ಕಾರಣ” ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾರೆ. +ವಿದ್ಯಾವಂತರಾದವರು ಹಳ್ಳಿಗಳಗೆ ಹಿಂತಿರುಗಿ ಬಂದು ಹಳ್ಳಿಗಳ ಸೇವೆಯನ್ನು ತ್ರಿಕರಣ ಶುಧ್ದವಾಗಿ ಸ್ವೀಕರಿಸಬೇಕು ಎಂಬುದು ಭಟ್ಟರ ಆತಯ. +ಪ್ಲೇಗು ಕಾಲರಾ ರೋಗಗಳು ಆಗೆಲ್ಲ ಸಾಮಾನ್ಯ ಅವು ಬಂದಂಥ ಸಂದರ್ಭದಲ್ಲಿ ನಮ್ಮ ಜನ ಹೇಗೆ ವರ್ತಿಸುತ್ತಿದ್ದರು ಎಂಬ ಮುಗ್ದ ನಡವಳಿಕೆಗಳನ್ನು ಭಟ್ಟರು ಅಷ್ಟೇ ಮುಗ್ಧತೆಯಿಂದ ಚಿತ್ರಿಸುತ್ತಾರೆ. +ಆ ರೋಗಗಳ ಬಗ್ಗೆ ಇದ್ದ ಜನಗಳ ಭಾವನೆ, ಮೈಸೂರು ಮಹಾರಾಜರ ಬಗ್ಗೆ ಇದ್ದ ಗೌರವ, ನಂಬಿಕೆ,ಇತ್ಯಾದಿಗಳಲ್ಲ ಒಂದಕ್ಕೊಂದು ಹೇಗೆ . +ಸಹಜ ಬಾಂಧವ್ಯ ಹೊಂದಿದ್ದುವು-ಎಂಬ ಸುಂದರ ಚಿತ್ರಣಗಳಿವೆ. +ನಮ್ಮ ಜನಪದರು ಎಷ್ಟು ಮುಗ್ಧರೆಂದರೆ, ಅವರ ಕೋಪ ಎಂದೂ ದ್ವೇಷವಾಗಿ ಪರಿವರ್ತಿತವಾಗುತ್ತಿರಲಿಲ್ಲ. +ಅದೊಂದು ತಾತ್ಕಾಲಿಕ ಸ್ಥಿತಿ,ನಾಗರಿಕರಾದವರು ಹಳ್ಳಿಗರಿಂದ ಕಲಿಯುವಂಥದು ಬಹಳವಿದೆ. +ಪರಸ್ಪರ ಹೊಡೆದಾಡಿದರೂ ಮಾರನೇ ದಿನ “ಮಾವ, ಉಣ್ಣಾಕ್ಸರೋಕಿಲ್ವಾ, ಏನೋ ರಾಹುಕಾಲ, ಹೊಡದಾಡಿದೊ, ಕೈಗೆ ನೀರೀಸಿಕೊ” ಎಂದು ಹೇಳುವಂಥ ಮಧುರವೂ ಅನುಕರಣೀಯವೂ ಆದ ಬಾಂಧವ್ಯ ಮರುಕೊಳಿಸಿ ಬಿಡುತ್ತದೆ. +ಭಟ್ಟರ ಆಸಕ್ತಿ ಕೇವಲ ತಮ್ಮ ಹಳ್ಳಿಯ ಜನರಿಗೆ ಮಾತ್ರ ಸೀಮಿತವಲ್ಲ. +ಇದು ಗ್ರಂಥದ ಉದ್ದಕ್ಕೂ ಗೋಚರಿಸುವ ಲಕ್ಷಣ. +ಪರಿಸರದ ಬದಲಾಣಿಗಳನ್ನುಗುರುತಿಸುತ್ತಾರೆ. +ಹಳೆಯದೆಲ್ಲ ಕಣ್ಮರೆಯಾಗುವುದನ್ನು ಕಂಡು ವಿಷಾದಿಸುತ್ತಾರೆ. +ಏನನ್ನೊ ಕಳೆದುಕೊಳ್ಳುತ್ತಿರುವ ಬಾವನೆ ಅವರನ್ನು ಮುತ್ತುತ್ತದೆ. +ನಮ್ಮ ಕಲೆಗಳೂ ಅಷ್ಟೆ. +ಈ ಬಗ್ಗೆಯೂ ರಂಗಸ್ವಾಮಿ ಭಟ್ಟರು ದುಃಖದಿಂದಲೆ ದಾಖಲಿಸುತ್ತಾರೆ: +“ನಮ್ಮೂರಿಗೆ ಹೆಣ್ಣು ವೇಷದವರು, ಪುತ್ತಲೀ ಗೊಂಬೆ ಆಟದವರು,ಚಕ್ಕಳಗೊಂಬೆ ಆಟದವರು ಬರುತ್ತಿದ್ದರು. +ಇವರೆಲ್ಲಾ ವ್ಯವಸಾಯಗಾರರಾಗಿದ್ದು ವರ್ಷಕ್ಕೆ ಮೂರು ನಾಲ್ಕು ತಿಂಗಳು ಊರುಗಳ ಮೇಲೆ ಹೋಗಿ ಆಟವಾಡಿದುಡ್ಡು ಸಂಪಾದಿಸುತ್ತಿದ್ದರು. +ಹಳೇ ಕಾಲದಿಂದ ಹಳ್ಳಿಗಳಲ್ಲಿ ಆಟ ಕಲಿಸುವ ಯಜಮಾನನಿಗೆ ಭಾಗವತನೆಂದು ಹೆಸರು. +ಹಾಡುಗಾರಿಕೆಗೆ ಯಕ್ಷಗಾನವೆಂದು ಹೆಸರು . +ಬರುತ್ತ ಬರುತ್ತಾ ಯಕ್ಷಗಾನದ ಆಟವೂ ಅಲ್ಲ, ಮೈಸೂರಲ್ಲಿ ಆಡುವನಾಟಕವೂ ಅಲ್ಲ. + ಹೀಗಾಗಿ ಪಂಚೆ ಉಟ್ಟಕೊಂಡು ಇಂಗ್ಲಿಣ್‌ ಟೋಪಿ ಹಾಕಿಕೊಂಡ ಮನುಷ್ಯನಂತಹ ಆಟಗಳಿಗೆ ಆರಂಭವಾಯ್ತು” ವಿಷಾದ ಹೆಚ್ಚು ಹೊತ್ತು ನಿಲ್ಲುವುದಿಲ್ಲ. +ಭಟ್ಟರು ನಿರ್ವಿಕಾರ ಮನಸ್ಸಿನಿಂದ ಯಕ್ಷಗಾನ, ಬಯಲಾಟ ನಡೆಯುತ್ತಿದ್ದ ರೀತಿ ನೀತಿಗಳನ್ನೂ ಆಚರಣೆಗಳನ್ನೂ ವರ್ಣಿಸುತ್ತ ಮುಂದೆ ಸಾಗುತ್ತಾರೆ. +ಜನ ಹೊಸ ಹೊಸ ಪ್ರಯೋಗಗಳತ್ತ ವಾಲತೊಡಗಿದಾಗ ಹಳೆಯ ಸಂಪ್ರದಾಯದ ಭಾಗವತರಿಗೆ ಗೌರವ ಹಾಗೂ ಸಂಭಾವನೆಗಳ ಕೊರತೆ ಉಂಟಾದುದರಿ೦ದಲೋ ಏನೋ “ಅಯ್ಯೋ ಇದೆಲ್ಲಾ ನರಕವಿ ಮಾಡಿದ್ದು. +ನಮ್ಹತ್ತಿರ ಇರುವ ಆಟಗಳು ವರಕವಿ ಮಾಡಿದ್ದು” ಎಂದು ನಿರಾಶೆಯಿಂದ ಒಟಗುಟ್ಟುತ್ತಿದ್ದ ಅಂಶವನ್ನೂ ಭಟ್ಟರು ಬಿಡದೆ ದಾಖಲಿಸುತ್ತಾರೆ. +ತಾವು ಓದಿದ ಕಾದಂಬರಿ ಮುಂತಾದ ಕಾವ್ಯಗಳಲ್ಲಿ ಬರುವ ವರ್ಣನೆಗಳು ಅರ್ಥವಾದರೂ ವಸ್ತುಗಳ ಚಿತ್ರಗಳನ್ನು ಕಲ್ಪಿಸಿಕೊಳ್ಳುವುದು ಕಷ್ಟವಾಗುತ್ತಿತ್ತು. +ಯಕ್ಷಗಾನ ಪ್ರಸಂಗಗಳಲ್ಲಿ ಕಾಣ ಬರುವ ಆಭರಣಗಳನ್ನು ನೋಡುವಾಗ ಅಲ್ಲಿ ಓದಿದ್ದು ಇದೇ ಇರಬಹುದು ಎಂದು ಭಟ್ಟರಿಗೆ ಅನ್ನಿಸುತ್ತಿತ್ತಂತೆ. +ಕಾವ್ಯದಲ್ಲಿ ಓದದ ಹಂಸದ ಚಲನೆಯ ವರ್ಣನೆಯು ಹೇಮಗಿರಿಯ ಬಳಿ ಹರಿಯುವ ಹೇಮಾವತಿ ನದಿಯಲ್ಲಿ ಬಿಳಿಯ ಕೂಕ್ಕರೆಯೊಂದು ನೀರು ಕುಡಿಯುವಾಗ ಭಟ್ಟರ ಮನಸ್ಸಿನಲ್ಲಿ ಸಾಕಾರಗೊಳ್ಳುತ್ತಿತ್ತು. +ಹೀಗೆ ಏನೆಲ್ಲ ನೋಡಿದರೂ ಏನೆಲ್ಲ ಕಲಿತರೂ ಇಲ್ಲ ತಮ್ಮ ಹಳ್ಳಿಯಿಂದಲೇ ಎಂಬ ಭಾವ ಅವರಲ್ಲಿ ಸಂಚರಿಸುತ್ತಿತ್ತು. +ಆದ್ದರಿಂದ ನೇರವಾಗಿ ಹೇಳುತ್ತಾರೆ : “ಎಷ್ಟೋ ವಿಷಯಗಳಲ್ಲಿ ಗುರುವಿನಂತೆ ಶಿಕ್ಷಕವಾಗಿದ್ದಿತು "ಹುಟ್ಟದ ಹಳ್ಳಿ" ಇಲ್ಲಿಂದ ಮುಂದೆ ಮತ್ತೆ ಪದ್ಯಭಾಗ ಪ್ರಾರಂಭವಾಗುತ್ತದೆ. +ಈ ಭಾಗವನ್ನು ಅವರು "ಬೀಸುವ ಪದಗಳು" ಎಂದು ಕರೆದಿದ್ದಾರೆ. +ಇವು “ನಮ್ಮೂರ ಮಾಳಮ್ಮ ಗೌಡತಿ ಹಾಡಿದ ಹಾಡುಗಳು” ಎಂದು ದಾಖಲಿಸಿದ್ದಾರೆ. +ಈ ಭಾಗದಲ್ಲಿ ಒಟ್ಟುರಿ ಹಾಡುಗಳಿವೆ, ಇವುಗಳಲ್ಲಿ ಸಂಕ್ಷಿಪ್ತ ರೂಪದ ಸುಮಾರು ೦ಿಗಣ ಕಥನಗೀತೆಗಳಾಗಿವೆ. +ಉಳಿದವೆಲ್ಲ ಬಿಡಿಗೀತೆಗಳು ಅಥವಾ ವರ್ಣನ ಗೀತೆಗಳು. +ಕನ್ನಡ ಜನಪದ ಸಾಹಿತ್ಯದಲ್ಲಿ ಕಥನಗೀತೆಗಳ ವಿಭಾಗದಲ್ಲಿ ಬರುವ "ನುಚ್ಚಾಯ್ತುನೀರ ಹೊಳೆಯಾಗೆ” ಎಂಬುದು ಒಂದು ಪ್ರಸಿದ್ಧ ಕಥನಗೀತೆ. +ಆದರ ವಿಶಿಷ್ಟಪಾಠಾಂತರವೊಂದು ಇಲ್ಲಿದೆ. +"ರಾಜಕುಮಾರ" ಎಂಬ ಶೀರ್ಷಿಕೆ ಇದಕ್ಕಿದೆ. +ಇಪ್ಪತ್ತಕ್ಕೂ ಹೆಚ್ಚು ಪಾಠಾಂತರಗಳಲ್ಲಿ ಲಭ್ಯವಾಗಿರುವ ಉತ್ತರದೇವಿಯ ಒಂದುಪಾಠಾಂತರ ಇಲ್ಲಿದೆ. +ಚಲುವರಾಯಸ್ಥಾಮಿ, ಕೆಂಪಮ್ಮ ಜಾಮುಂಡೀ,ದೇವೀರಿ,ನಂಜುಂಡ, ಭೈರವ, ಹೇಮಗಿರಿ ರಂಗ, ನಾಟನಹಳ್ಳಿ ಹೊನ್ನಾಲದಮ್ಮ ತಿರುಪತಿ ತಿಮ್ಮಪ್ಪ, ಬೆಟ್ಟದಪುರದ ಮಳ್ಲೈಯ್ಯ, "ಪತಿವ್ರತೆಯಾದ ಹೆಣ್ಣುಮಗಳು" ಎಂಬ ಶೀರ್ಷಿಕೆಯಲ್ಲಿ `ಕುಸುಮಾಲೆ'-ಮುಂತಾದ ಕಥನ ಗೀತೆಗಳು ಇಲ್ಲಿ ಸಂಗ್ರಹಿತವಾಗಿವೆ. +ಈ ಕಥನ ಗೀತೆಗಳ ಸಂಗ್ರಹದ ವೈಶಿಷ್ಟ್ಯವೆಂದರೆ, ರಂಗಸ್ವಾಮಿ ಭಟ್ಟರು ನಡುನಡುವೆ ಅಗತ್ಯವೆನಿಸಿದಲೆಲ್ಲ ವ್ಯಾಖ್ಯಾನ, ವಿವರಣೆ, ನೀಡಿರುವುದು. +ಈ ಕ್ರಮವು ಅನೇಕ ಸಲ ಅನಗತ್ಯವೆನಿಸುತ್ತದೆ. +ಹಾಡುಗಾರರು ಅಥವಾ ಹಾಡುಗಾರ್ತಿಯರು, ಹಾಡುವಾಗ ಮರೆವಿನಿಂದಲೋ ಅಥವಾ ಇನ್ನಾವುದೋ ಕಾರಣದಿ೦ದಲೋ, ಕಥೆಯ ಸಂದರ್ಭಗಳನ್ನು ಮೊರ್ಣ ರೂಪದಲ್ಲಿ ಹಾಡಲು ಸಾಧ್ಯವಾಗುವುದಿಲ್ಲ. +ಕಥೆಯು ಎಲ್ಲಿಂದ ಎಲ್ಲಿಗೋ ಹಾರಿಬಿಟ್ಟಿರುತ್ತದೆ. +ನಿಸ್ತಂತು ಕಥೆಯೊಂದು ಕೇಳುಗರನ್ನು ಗೊಂದಲದಲ್ಲಿ ಮುಳುಗಿಸುತ್ತದೆ. +ಆಂಥ ಸಂದರ್ಭಗಳಲ್ಲಿ ವಿವರಣೆ ಅಥವಾ ವ್ಯಾಖ್ಯಾನ ಅನಿವಾರ್ಯವಾಗುತ್ತದೆ. +ರಂಗಸ್ವಾಮಿ ಭಟ್ಟರು ಈ ನಿಟ್ಟಿನಿಂದ ಇಲ್ಲಿ ಯಶಸ್ವೀ ಸಂಗ್ರಹಕಾರರೆನಿಸುತ್ತಾರೆ. +ಮುಂದಿನ ಘಟ್ಟ ಗಾದೆಗಳದು. +"ಕೆಲವು ಗಾದೆಗಳು" ಎಂಬ ಶಿರ್ಷಿಕೆಯಡಿ ಭಟ್ಟರು ೬೬೪ ಗಾದೆಗಳನ್ನು ಸಂಗ್ರಹಿಸಿಕೊಟ್ಟದ್ದಾರೆ. +ಹೆಚ್ಚು ಬಳಕೆಯಲ್ಲಿರುವ ಜನಪ್ರಿಯ ಗಾದೆಗಳು, ತುಂಬ ಅಪರೂಪದ ಗಾದೆಗಳು, ಕೆಲವೇ ಕೆಲವು ಮುಕ್ಕು ಗಾದೆಗಳು, ಅಲ್ಪಸ್ವಲ್ಪ ಮಾರ್ಪಾಡಿನೊಂದಿಗೆ ಅನಂತರದ ಹಲವಾರು ಸಂಕನಗಳಲ್ಲಿ ಕಾಣಿಸಿಕೊಂಡಿರುವ ಗಾದೆಗಳು-ಹೀಗೆ ಹಲವು ಬಗೆಯ ಗಾದೆಗಳು ಇಲ್ಲಿವೆ. +ಅತೀ ಆಸೆ ಗತೀ ಕೇಡು, ಅಕ್ಕೀ ಮೇಲಾಸೆ ನೆಂಟರ ಮೇಲೆ ಇಷ್ಟ,ಉಂಡ ಮನೆಗೆ ಎರಡು ಬಗೆಯೋನು, ಮುಂತಾದ ಅತಿಬಳಕೆಯ ಗಾದೆಗಳಿರುವಂತೆಯೇ; +ಎತ್ತಿಲ್ಲದೋನಿಗೆ ಎದೆಯಿಲ್ಲ, ಊಟಾ ಸಿಕ್ಕೋದು ಮೊಕದ ಮಣ್ಯ ಸೀರೇ ಸಿಕ್ಕೋದು ಮಗಳ ಮಣ್ಯ. +ನೀನು ಭತ್ತಾ ಕುಟ್ಟು ನಾನು ಭುಜ ಹಾರಿಸುತ್ತೀನಿ ಅಂದಳಂತೆ, ಹೊಲದಲ್ಲಿರುವ ಹಸುರನ್ನೂ ಹೊಟ್ಟೆಯಲ್ಲಿರೋ ಬಸಸ್ನೂ ನೆಚ್ಚುವರ್ಕಾರು. +ಮುಂತಾದ ಅಪರೂಪದ ಬಳಕೆಯಗಾದೆಗಳೂ ಇಲ್ಲಿ ಸಂಗ್ರಹಗೊಂಡಿವೆ. +ಅಲ್ಪಸ್ವಲ್ಪ ಬದಲಾವಣೆಯೊಡನೆ ಅಥವಾ ಇಲ್ಲಿರುವ ರೂಪದಲ್ಲಿಯೇ ಅನಂತರ ಪ್ರಕಟವಾದ ಎಷ್ಟೋ ಗಾದೆಗಳ ಸಂಗ್ರಹಗಳಲ್ಲಿ ಬಹಳಷ್ಟು ಗಾದೆಗಳು ಪುನರಾವರ್ತನೆಯಾಗಿವೆ-ಎಂಬ ಅಂಶವೇ ಇಲ್ಲಿನ ಗಾದೆಗಳ ಮಹತ್ವವನ್ನು ಸಾರುತ್ತದೆ. +ಮುಂದಿನ ಗದ್ಯಭಾಗವ್ಳು ಹಲವು ಸ್ವಾರಸ್ಯಕರ ಸಂಗತಿಗಳನ್ನು ಒಳಗೊಂಡಿದೆ. +ಬಂಡಿಹೊಳೆ ಅತಿ "ಹಿಡಿಕಟ್ಟಿ'ನ ಹಳ್ಳಿ. +ಅಂದರೆ ಪರಂಪರಾಗತವಾಗಿ ಒಂದ ಯಾವುದೇ ಕಾರೃವಾಗಿರಲಿ, ಯಾವ ಊನವೂ ಇಲ್ಲದಂತೆ, ಯಾವುದೇ ಬದಲಾಣೆಯಿಲ್ಲದಂತೆ, ನಡೆಯಬೇಕೆಂಬುದು ಇಲ್ಲಿನ ಜನಗಳ ಅಪೇಕ್ಷೆ. +ಸ್ವಲ್ಪ ವ್ಯತ್ಯಾಸವಾದರೂ ಮುಜುಗರ ಅವರನ್ನು ಕಾಡುತ್ತದೆ. +ಊರಿಗೆ ಬರುವ ಸರ್ಕಾರ ಆಧಿಕಾರಿಯೊಬ್ಬ ಊರಿನ ಸಮೀಕ್ಷೆಗಾಗಿ ಊರನ್ನು ಸುತ್ತುವಾಗ ಅಪ್ತದಕ್ಷಿಣೆಯಾಗಿ ಸುತ್ತಿದರೆ `ಊರಿಗೆ ಏನೋ ಕೇಡು ಕಾದಿದೆ' ಎಂದು ಜನ ನಂಬುತ್ತಿದ್ದರು. +ಮೂರು ಪ್ರದಕ್ಷಿಣೆ ಬರಬೇಕಾದ ದೇವರ ಉತ್ಸವವು ಗುಡಿಯ ಸುತ್ತ ಒಂದೇ ಸುತ್ತು ಬಂದರೆ ಅದು ಕೂಡ ಜನರ ಪಾಲಿಗೆ ದುಃಸ್ಹಪವಾಗುತ್ತಿತ್ತು. +ದೊಡ್ಡಮ್ಮನ ಹಬ್ಬದ ಸಂದರ್ಭದಲ್ಲಿ ನಿರ್ದಿಷ್ಟ ಸ್ಥಳವೊಂದರಿಂದ ಅಮ್ಮನನ್ನು ತರುವುದು ವಾಡಿಕೆ. +ಒಮ್ಮೆ ಕಾರಣಾಂತರಗಳಿ೦ದ ಬೇರೆ ಹತ್ತಿರದ ಸ್ಥಳದಿಂದ ತಂದುಬಿಟ್ಟರು. +ಜನರು ಅಸಮಾಧಾನಗೊಂಡರು. +ಹೇಳಿದರೆ ಊರ ಯಜಮಾನರು ಕೇಳುವುದಿಲ್ಲ. +ಆದ್ದರಿಂದ ಒಂದು ಉಪಾಯ ಮಾಡಿದರು. +ದೊಡ್ಡಮ್ಮನ ಉತ್ಸವವು ಆಂಜನೇಯಸ್ವಾಮಿ ಗುಡಿಯ ಬಳಿಗೆ ಬರುತ್ತಿದ್ದಂತೆ ಒಬ್ಬನ ಮೇಲೆ ದೇವರು ಬಂದೇಬಿಟ್ಟಿತು. +“ಏನಿರೊ-ಮಾಮೂಲು ಜಾಗದಿಂದ ನನ್ನ ತಂಗಿ ದೊಡ್ಡಮ್ಮನನ್ನು ಯಾಕೆ ತರಲಿಲ್ಲ. +ನಿಮ್ಮ ಊರನ್ನು ಧ್ವಂಸಮಾಡಿ ಬಿಡುವೆನು. +ನಾನು ವೀರಾಂಜನೇಯನೆಂದು ಗೊತ್ತಿಲ್ಲವೋ? +ಎಂದು ಗರ್ಜಿಸಿ, ನೆಗೆದು, ಹಾರಿ, ಕುಪ್ಪಳಿಸಿ ಎಷ್ಟು ಜನರು ಹಿಡಿದರೂ ದಕ್ಕದೆ ಗಲಾಟೆ ಮಾಡಿದನು.” +ಹೆದರಿದ ಊರಿನ ಮುಖಂಡರು ಹರಕೆ ಕಟ್ಟಿ ಕ್ಷಮೆ ಕೇಳಿದ ಮೇಲೆ ಉತ್ಸವ ಮುಂದುವರಿಯಿತು. +ಹೀಗೆ ಈ ಗದ್ಯಭಾಗವು ಸ್ವಾರಸ್ಯಕರವಾಗಿ ಮುಂದುವರಿಯುತ್ತದೆ. +ಈ ಪ್ರಸಂಗವನ್ನು ಹೇಳಿ ರಂಗಸ್ವಾಮಿ ಭಟ್ಟರು “ಇಂದಿಗೂ ನಾವು ನಮ್ಮ ಹಿರಿಯರ ನಡೆನುಡಿಯನ್ನರಿಯಲು ಹಳ್ಳಿಗಳನ್ನೆ ಶರಣು ಹೊಂದಬೇಕಾಗಿದೆ.” ಎಂಬ ಅಭಿಪ್ರಾಯಕ್ಕೆ ಬರುತ್ತಾರೆ. +ಮಕ್ಕಾಡುವ “ಕಣ್ಣಾಮುಚ್ಚಾಲೆ'ಯಾಟವನ್ನು ಸೊಗಸಾಗಿ ವಿಶ್ಲೇಷಿಸಲಾಗಿದೆ. +ಹಾಗೆ ನೋಡಿದರೆ ಮಕ್ಕಳು ಅಡುವ ಪ್ರತಿಯೊಂದು ಆಟದ ಹಿನ್ನೆಲೆಯಲ್ಲಿಯೂ ಇಂಥ ಮಹತ್ವ ಇದೆಯೇನೋ ಎನ್ನಿಸಿ ಬಿಡುವಷ್ಟು ಭಟ್ಟರ ವಿಶ್ಲೇಷಣೆ ಶಕ್ತಿಯುತವಾಗಿದೆ. +ಮುಂದುವರಿಯುತ್ತ ಭಟ್ಟರು ಸಾಧಿಸಿರುವ ಇನ್ನೊಂದು ಮಹತ್ನದ ಆಂಶವೆಂದರೆ, ಹಳ್ಳಿಯ ಮಾತಿನ ರೀತಿಗಳ ಮೂಲಕವೆ ಸಾಮಾಜಿಕ ಅಧ್ಯಯನಾರ್ಹ ಚಿತ್ರಗಳನ್ನು ಸೃಷ್ಟಿಸಿಬಿಡುತ್ತಾರೆ. +ಅಂಥ ಒಂದೆರಡು ಸಂಭಾಷಣೆಗಳನ್ನು ನೋಡಬಹುದು: +ಮುದುಕ: ಏನ್ಲಾ ಮಗಾ ನಿಮ್ಮಪ್ಪನ್ನುಟ್ಟೆ ಆಪಾರ ಜಗಾ ಅಡ್ತಿದ್ದೆಇಳ್ಳಲ್ಲೀ +ಹುಡುಗ: ಅಯ್ಯೋ, ನಮ್ಮೂರಲ್ಲಿ ಹಾಲುಣ್ಣೋ ಪುಣ್ಕಾತ್ಮರೇ ಇಲ್ಲಾ,ನಮ್ಮಪ್ಪ ಕಿರೀ ಹೆಂಡ್ತಿ ಮಾತ ಕೇಳ್ಕೊಂಡು ತಭ್ಲೀಗೋಳಾದನಮ್ಮ ಇಷ್ಟು ಓಂಕಾರ ಗತಿ ಹತ್ತಸ್ತಾನಲ್ಲಾ. +ನೋಡಾನೇ,ಮೂರು ಕೋರ್ಟುಗಂಟಾ ಆಗ್ಲಿ ಫುಲ್‌ ಬೆಂಚುಗಂಟಹತ್ತೀನಿ. +ಅವಳಿಗೆ ನನು ಶರಣಾಗಿತನಾದರೆ ನಾಮು ಈ ಊರಲ್ಲಿ ಹೊಗೇ ಹಾಕ್ಕೊಂಡು ಇರೋ ಕಾಯ್ತದಾ! +ಸಮ್ಮಪ್ಪಣಿಗೇ ನಾನು ಹುಟ್ಟದ್ರ ನೋಡೋ ಮೊಡ್ಡಪ್ಪಾ ಆಶಾರ್ಕತ್ನಾರಾ,ಮುದುಕ; ಆ ಅದಿದ್ಲೀ ಯಾರ್ಕನೇ ಬಿಸ್ಸು ಯಾರು ತೊಗಂಡಾರು. +ಒಂದೂ ಅನ್ನು. +ಏನೋ ಅವ್ಳೂದೇ ಸೋರು ನೀರಿಗೆ ಕೈಯೊಡ್ಡಿ ಬಂದವಳೆ? +ನಿಂಗೂದೇ ಅವ್ನೇ ಆಗ್ಬೇಕು. +ಯಾಕ್ಚೈದು ಸುಮ್ದೆ ಕರ್ಮಾ ಕಟ್ಲೊಂಡಿ, ಹ್ಯಾಂಗೊ ಹಾಂಗೆ ಎಲೇಮರೇ ಕಾಯ್ದಂಗೆ ಇರ್ಲಾ ಮಗ, ಹೇಳ್ಲೋರೂಆಗೋಕಿಲ್ಲ, ಕೇಳ್ಳೋರೂ ಆಗೋಕಿಲ್ಲ. +ಹುಡುಗ; ದೊಡ್ಡಪ್ಪ ನಮ್ಗೇ ಅದ್ಯಾಕೇ ನಮ್ಮೂರ್ಲೇ ನೀನು ಹಿರೀಕ,ಮುಮ್ಮನ್ಹ. +ನಿನ್ಶಾತ್ಕಾಕೆ ತೆಗ್ಯೋನೆ. +ಐನೋರು : ಏನೋ ಗೌಡ, ಜಗಳಾ ಬಿಡಿಸೋಕೆ ಬಂದ್ರೆ ನನ್ನೇತಳ್ಳಿಟ್ಟಲ್ಲೋ. +ಗೌಡ : ಅಯ್ಯೋ ಆಪಾಟಿ ರಣಾಗ್ರದಲ್ಲಿ ರಕ್ತದ ಕೋಡೀ ಹರೀತಿರೋವಾಗ ನಿಮ್ಮ್ಯಾರು ಕೇಳ್ತಾರೆ, ಯಾಕ್ಗೆ ಜ್ಞಾನಸುದ್ದಾಗಿದ್ದಾತು. +ಅದಲ್ಬೆ ನೋಡಿ ನಮ್ಮಸ್ಟ ಜಗಾಬಿಡ್ಬೋಕ್ಸಂದ್ರೆ ಹೆಂಗೆ ಅಂತೀರಿ, ಇಲ್ಲಾ ಎರ್ಟೇಟು ಕೂಡೋಹಂಗಿರ್ಜೇಕು, ಇಲ್ಲಾ ಎದ್ದೇಟು ತಿನ್ನೋ ಹಂಗಿರಬೇಕು. +ಇಂಥ ಸಂಭಾಷಣೆಗಳು ಈ ಗ್ರಂಥದಲ್ಲಿ ಸುಮಾರು ಮೂವತ್ತು ಇವೆ. +ಇವಿಷ್ಟೇ ಸಂಭಾಷಣೆಗಳನ್ನು ಆಧರಿಸಿ ಡಾಕ್ಕೊರಲ್‌ ನಿಬಂಧದಂಥ ಒಂದುಅಧ್ಯಯನ ಗ್ರಂಥವನ್ನು ರಚಿಸಬಹುದು. +ಅಷ್ಟು ಸಮೃದ್ಧವಾದ ಸಾಮಗ್ರಿ ಈ ಸಂಭಾಷಣೆಗಳಲ್ಲಿ ಅಡಗಿದೆ. +ಈ ಸಂಭಾಷಣೆಗಳ ನಡುವೆ ಶೈತರುಬೂದುಗುಂಬಳ ಕಾಯಿಯನ್ನು ಯಾಕೆ ತಿನ್ನಬಾರದು ಎಂಬುದಕ್ಕೆ ಒಂದು ಸ್ವಾರಸ್ಯಕರವಾದ ಕತೆಯನ್ನು ಭಟ್ಟರು ಹೇಳಿದ್ದಾರೆ; +ಆದು ರಾಮಾಯಣದಕಾಲದ ಒಂದು ಪ್ರಸಂಗವನ್ನು ಕುರಿತದ್ದು. +ಸಂಭಾಷಣಾ ವಿಭಾಗ ಮುಗಿಯುತ್ತಿದ್ದಂತೆ 'ಮದುವೆ ಹಾಡುಗಳು'ಪ್ರಾರಂಭವಾಗುತ್ತವೆ. +ಇವು ಬೋರಮ್ಮ ಗೌಡತಿಯಿಂದ ಸಂಗಹಿಸಿದವು. +ಪ್ರಾರ್ಥನೆಯಿಂದ ಹಿಡಿದು ಮದುವೆಯ ಪ್ರತಿಯೊಂದು ಘಟ್ಟವನ್ನು ಕುರಿತೂ ಕ್ರಮಬದ್ಧವಾಗಿ ಸಂಗ್ರಹಿಸಲಾಗಿದೆ. +ನಡುವೆ ಒಂದು ಭಾಗವನ್ನು ಬೇರೆಯಾರಿಂದಲೋ ಸಂಗ್ರಹಿಸಿರುವಂತೆ ತೋರುತ್ತದೆ. +ನಿರ್ದಿಷ್ಟ ಹಾಡೊಂದರ ಪ್ರಾರಂಭದಲ್ಲಿ 'ಈ ಹಾಡು ಸ್ಟಲ್ಪ ಬುದ್ಧಿ ವಿಕಲ್ಪವುಳ್ಳ ಹೆಂಗಸು ಹೇಳಿದ್ದರಿಂದಪ್ರಾಸಗಳು ಸರಿಯಾಗಿಲ್ಲ" ಎಂಬ ಟಿಪ್ಪಣಿಯನ್ನು ನೀಡಿದ್ದಾರೆ. +ಕೊನೆಯಲ್ಲೊಂದು ಗದ್ಯಭಾಗವಿದೆ. +ಹಳ್ಳಿಗಳ ಬಗ್ಗೆ ಅರ್ಚಕ ಬಿ. ರಂಗಸ್ವಾಮಿ ಅವರಿಗೆ ಎಂಥ ಅಗಾಧ ಪ್ರೀತಿಯಿತ್ತು ಎಂದು ತಿಳಿಯಲು ಈ ಭಾಗವನ್ನು ಓದಬೇಕು. +ಗ್ರಾಮೋದ್ಧಾರ ಎಂಬುದು ಭಟ್ಟರ ಈಡೇರದ ಕನಸಾಗಿಯೇ ಉಳಿದುಹೋಯಿತು. +"ಹುಟ್ಟದ ಹಳ್ಳಿ"ಯ ಈ ಕಡೆಯ ಭಾಗದಲ್ಲಿಹಲವಾರು ಉಲ್ಲೇಖಾರ್ಹ ಮಾತುಗಳಿವೆ. +ಅವನ್ನೆಲ್ಲ ಗ್ರಂಥವನ್ನು ಓದಿಯೇ ಅರಿಯಬೇಕು, ಒಂದು ಕಡೆ ಭಟ್ಟರು ಹೇಳುತ್ತಾರೆ : +“ಕುಗ್ರಾಮ ವಾಸವೂ ಕುಲಹೀನನ ಸೇವೆಯೂ ಬ್ಯಾಡಪ್ಪಾ ಬ್ಯಾಡ ಎಂದು ಒಬ್ಬ ಕವಿಯು ನುಡಿದಿರುವನು. +"ಒಳ್ಳೆಯವರ ಮಾನ ಹಳ್ಳೀಲಿ ಹೋಯಿತು" ಎನ್ನುವ ಗಾದೆಯೂ ಹಳ್ಳಿಯ ವಾಸವನ್ನು ಹೀಯಾಳಿಸುತ್ತದೆ. +ಹಾಗಾದರೆ ಹಳ್ಳಿಯಲ್ಲಿ ವಾಸ ಮಾಡುವುದುಯಾವುದೋ ಪಾಪದ ಪ್ರಾಯಶ್ಚಿತ್ರಕ್ಯಾಗಿಯೋ” ಹಳ್ಳಿಯಿಂದ ನಗರಕ್ಕೆ ವಲಸ ಹೋಗುವವರಿಗೇ ನೇರವಾಗಿ ಹೇಳಿದಂತಿರುವ ಒಂದು ಮಾತು ಇದು :“ಈಚೀಚೆಗೆ ಹಳ್ಳಿಯ ವಾಸವೂ ಹೋಯಿತು. +ಜೊತೆಯಲಿ ಆತ್ಮಬಲವೂ ಹೋಯಿತು. +"ಭಟ್ಟರು ತಮ್ಮ ಪ್ರೀತಿಯನ್ನು ಹಳ್ಳಿಗೇ ಸೀಮಿತಗೊಳಿಸಿ ಕೊಳ್ಳುವುದಿಲ್ಲ. +ಹಳ್ಳಿಗೆ ಒಳ್ಳೆಯದನ್ನು ಹಾರೈಸುವಾಗಲೇ ಪಟ್ಟಣಗಳನ್ನೂ, ಕಡೆಗೆ ವಿಶ್ವಪ್ರಜ್ಞೆಯನ್ನೂ ಮರೆಯುತ್ತಾರೆ : + “ಹಳ್ಳಿಗರು ಜ್ಞಾನದ ಬೆಳಕನ್ನು ಕಾಣಲಿ. +ಅವರಲ್ಲಿ ಪ್ರಾಚೀನ ಭರತಖಂಡದ ಸಭ್ಯಕನವೂ ಪರಾಕ್ರಮವೂ ಪ್ರಕಾಶಿಸಲಿ. +ಪಟ್ಟಣಿಗರೂ ಹಳ್ಳಿಗರೂ ಮೈತ್ರಿಯಿಂದ ಬಾಳಲಿ. +ವಿಶ್ವದ ಹೃದಯವು ಶುದ್ಧವಾಗಿ, ಪರಸ್ಪರ ಪ್ರೇಮವು ಬೆಳಗಲಿ.” +ಅರ್ಚಕ ಬಿ. ರಂಗಸ್ವಾಮಿ ಅವರು ಬರೆದದ್ದು 'ಹುಟ್ಟಿದ ಹಳ್ಳಿ' ಒಂದೇ ಅಲ್ಲ. +ಆದರ ಎರಡನೆಯ ಭಾಗವನ್ನೂ ಬರೆದಿದ್ದರು; +ಹಸ್ತಪ್ರತಿಯು ಹಸ್ತಾಂತರದ ಪರಿಣಾಮವಾಗಿ ಕಾಣೆಯಾಗಿದೆ. +'ರಾಮಾಯಣದ ಕೆಲವು ವಿಚಾರಗಳು ಎಂಬ ಮಸ್ತಕ ೧೯೭೨ ರಲ್ಲಿ ಪ್ರಕಟವಾಗಿದೆ. +ಇದಕ್ಕೆ ಬರೆದಿರುವ “ಪೀಠಿಕೆ'ಎಂಬ ಪುಟದಲ್ಲಿ ಅರ್ಚಕರು ಪ್ರಾಸ್ತಾವಿಕವಾಗಿ 'ಹುಟ್ಟಿದ ಹಳ್ಳಿ'ಯನ್ನು ಪ್ರಸ್ತಾಪಿಸಿದ್ದಾರೆ. +"ರಾಮಾಯಣದ ಕೆಲವು ವಿಚಾರಗಳು" ಎಂಬ ಪುಸ್ತಕಕ್ಕೆ ಯಾರಾದರೂ ದೊಡ್ಡವರ ಮೂಲಕ ಮುನ್ನುಡಿ ಬರೆಯಿಸಬೇಕೆಂಬ ಆಕಾಂಕ್ಷೆಯು ಭಟ್ಟರ ಮನಸ್ಸಿನಲ್ಲಿ ಮೂಡಿದಾಗ ಅವರಿಗೆ ಕೂಡಲೆ "ಹುಟ್ಟಿದ ಹಳ್ಳಿ"ಯ ಬಗ್ಗೆಪ್ರಬುದ್ಧ ಕರ್ಣಾಟಕ' ಪತ್ರಿಕೆಯಲ್ಲಿ ಬಂದ ವಿಮರ್ಶೆ ನೆನಪಾಗುತ್ತದೆ. +"ಹುಟ್ಟಿದಹಳ್ಳಿ"ಯಲ್ಲಿ ವಿಷಯವು ಕ್ರಮಬದ್ಧವಾಗಿಲ್ಲ-ಎಂಬ ಟೀಕೆ ಆ ವಿಮರ್ಶೆಯಲ್ಲಿತ್ತು. +ಹಾಗೆ "ರಾಮಾಯಣ"ಕ್ಕೂ ಟೀಕೆ ಬಂದರೆ ಮುನ್ನುಡಿ ಬರೆದ ದೊಡ್ಡವರ ಮಾತಿಗೆ ನಾವಾಗಿ ನ್ಯೂನತೆ ತಂದ ಹಾಗಾಗುತ್ತದೆ ಎಂಬ ಭಾವನೆ ಭಟ್ಟರ ಮನಸ್ಸಿಗೆ ಬಂದುದರಿ೦ದ ಯಾರಿಂದಲೂ ಮುನ್ನುಡಿ ಬರೆಯಿಸಲಿಲ್ಲವಂತೆ. +'ಹುಟ್ಟಿದ ಹಳ್ಳಿ'ಯು ೧೯೭೧ ರಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಕನ್ನಡ ಆಧ್ಯಯನ ಸಂಸ್ಥೆಯಿಂದ ಪುನರ್ಮುದ್ರಣ ಆದ ಸಂದರ್ಭದಲ್ಲಿ ಕ್ರಮಬದ್ಧವಾಗಿ ಪರಿಷ್ಕರಿಸಲಾಗಿದೆ. +"ರಾಮಾಯಣದ ಕೆಲವು ವಿಚಾರಗಳು" ಗ್ರಂಥದಲ್ಲಿ ಕೆಲವು ಪಾತ್ರಗಳನ್ನು ಪರಿಚಯಿಸಲಾಗಿದೆ. +ರಾಮಾಯಣದಲ್ಲಿ ಬರುವ ಕೆಲವು ಸ್ಥಳಗಳ ಪ್ರಸ್ತಾಪವಿದೆ. +ಸುಗ್ರೀವಾಜ್ಞೆ ವಾಲ್ಮೀಕಿಯ ಭಾವನೆಗಳು, ಅರಾಜಕೀಯ ದೇಶದ ಬಾಳು. +ಆಗಿನ ಕಾಲದ ಬಾಣ ಭೇದಗಳು (ಇದರಲ್ಲಿ ೪೦ ಬಗೆಯ ಬಾಣಗಳನ್ನು ಹೆಸರಿಸಲಾಗಿದೆ). +ರಾಮಾಯಣದಲ್ಲಿದ್ದು ನಮ್ಮ ಪಾಡಿನಲ್ಲಿ ಪ್ರಚಾರದಲ್ಲಿರುವ ಮಾತುಗಳು-ಮುಂತಾದ ಶೀರ್ಷಿಕೆಗಳಲ್ಲಿ ವಿಶೇಷ ಆಲೋಚನೆಗಳಿವೆ. +ಭಟ್ಟರು ಇನ್ನೂ ಕೆಲವು ಗ್ರಂಥಗಳನ್ನು ಬರಿದಿದ್ದಾರೆ ಶ್ರೀ ವೈಖಾನಸೆ ಆಲಯಾರಾಧನಾ ಪದ್ಧತಿ. +ಹೇಮಗಿರಿಯ ಮಹಾತ್ಮೆ, ಉಪಯುಕ್ತಾಂಶ ಸಂಗ್ರಹಣ, ಯಜುರ್ವೇದ ಸಂಧ್ಯಾವಂದನ,ಆಲಯಂಕುರಾರ್ಪಣ, ಪುರಾಣತ್ರಯ, ಸನಾತನ ಧರ್ಮ, ನಾಡಗೌಡತಿ ಕೆಂಪಮ್ಮ ಮುಂತಾದವು. +ಇವುಗಳಲ್ಲಿ ಇನ್ನೂ ಪ್ರಕಟವಾಗಬೇಕಾದವೂ ಇವೆ. +ಹುಟ್ಟಿದ ಹಳ್ಳಿಯ ಕೊನೆಯ ಗದ್ಯಭಾಗವು ಮುಗಿಯುವ ಮುಂಚೆ ರಂಗ ಪ್ರಾರ್ಥನೆ ಎಂಬೊಂದು ಶೀರ್ಷಿಕೆಯಿದೆ. +ಭಟ್ಟರು ತಮ್ಮ ಆರಾಧ್ಯ ದೈವವಾದ ಹೇಮಗಿರಿಯ ರಂಗನಾಥನನ್ನು ಕುರಿತು ಆಡಿರುವ ಮಾತುಗಳು ಅದರಲ್ಲಿವೆ; +ಅದು ರಂಗನಾಥನೊಡನೆ ನಡೆಸಿದ ಸಂಭಾಷಣೆಯೂ ಹೌದು. +ಆದರೆ, ಅಲ್ಲಿ ರಂಗಸ್ಟಾರಿ ಭಟ್ಟರು ವಾಸ್ತವವಾಗಿ ತಮ್ಮನ್ನು ತಾವೇ ಅನಾವರಣಗೊಳಿಸಿಕೊಳ್ಳುತ್ತಾರೆ. +“ನಾವು ಕರ್ಮದ ಮೂಟೆ ಹೊತ್ತುಕೊಂಡು ನಿನ್ನ ಬೆಟ್ಟವನ್ನು ಹತ್ತಲಾರೆವು. +ಆ ಮೂಟೆಯನ್ನು ನಾವು ಹೇಮಾವತಿಯಲ್ಲಿ ಸ್ನಾನ ಮಾಡುವಾಗ ಅಲ್ಲೇ ತಳ್ಳಬಿಡು. +ನಾನು ಪುಸ್ತಕದ ಹಾಳೆಗಳನ್ನು ತಿರುವಿ ಹಾಕುವಂತೆ ನನ್ನ ಆಯುಸ್ಸಿನ ದಿನಗಳು ಮಗುಚಿ ಹಾಕಲ್ಪಡುತ್ತಿವೆ. +ಆಯಾ ದಿನಗಳೆಂಬ ಹಾಳೆಗಳಲ್ಲಿ ನನ್ನ ಎಲ್ಲಾ ಪಾಪ ಪುಣ್ಯಗಳು ಬರೆಯಲ್ಪಟ್ಟು ದೇಹಾಂತ್ಯದಲ್ಲಿ ನಿನ್ನ ಮುಂದೆ ಅವು ಓದಲ್ಪಡುತ್ತದೆ. + ಮುಂದಿನ ಕ್ಷಣದಲ್ಲಿ ನನಗೆ ನಂಬಿಕೆಯಿಲ್ಲ. + ಹೇಮಗಿರೀಶನೆ, ನಿನಗೆ ಹುಟ್ಟಿದ ಹಳ್ಳಿಗರ ಪರವಾಗಿ ಈ ದೀನನ ವಂದನೆಯು.”-ಇವು “ಹುಟ್ಟಿದ ಹಳ್ಳಿ' ಗ್ರಂಥದ ಕೊನೆಯ ಮಾತುಗಳು. +ಬಾಲ್ಯ ಯೌವನ ವೃದ್ಧಾಪ್ಯಗಳಾದಿಯಾಗಿ ಅರ್ಚಕ ಬಿ. ರಂಗಸ್ಥಾಮಿಭಟ್ಟರು ತಮ್ಮ ಜೀವನವಿಡೀ ಪ್ರಾಮಾಣಿಕವಾಗಿ ಬದುಕಿದವರು. +ಆ ಪ್ರಾಮಾಣಿಕತೆಗೆ ಮೂಲ ನೆಲೆಯೂ ಮೂಲ ಧನವೂ ಆಗಿದ್ದುದು ಅವರ ಮಗುವಿನಂಥ ಮುಗ್ಧ ಮನಸ್ಸು. +ಗ್ರಾಮದ ಸಂಪ್ರದಾಯಸ್ಥ ಅರ್ಚಕರಾಗಿದ್ದ ರಂಗಸ್ವಾಮಿಯವರು ತಮ್ಮ ವಿಶಿಷ್ಟವಾದ "ಹುಟ್ಟಿದ ಹಳ್ಳಿ ಹಳ್ಳಿಯ ಹಾಡು" ಗ್ರಂಥವನ್ನು ಪ್ರಕಟಿಸಿದ ಮೂವತ್ತು ವರ್ಷದ ಮೇಲೆ ಜಾನಪದ ವೈಜ್ಞಾನಿಕ ವಿದ್ವಾಂಸರೆ ಗಮನ ಸೆಳೆದರು. +ಒಂದು ಹಳ್ಳಿಯ ಎಲ್ಲಾ ರೀತಿಯ ಸಾಹಿತ್ಯವನ್ನು ಕಲೆ ಹಾಕಿದ್ದು ಅವರವಿಶೇಷ. +ಇತರ ಸಾಹಿತ್ಯ ಸಂಗ್ರಹಕ್ಕೂ ಕೈಹಾಕಿದ್ದು ಹೊಸ ಪ್ರವೃತ್ತಿ . +ರಂಗಸ್ವಾಮಿಯವರಿಗೆ ಗೊತ್ತಿದ್ದೋ ಗೊತ್ತಿಲ್ಲದೆಯೋ ಹುಟ್ಟಿದ ಹಳ್ಳಿ ಸಮಗ್ರ ಜಾನಪದದ ಅತ್ಯುತ್ತಮ ಗ್ರಂಥವಾಗಿ ರೂಪುಗೊಂಡಿತು. +ಅದುಬಂಡಿಹೊಳೆಯ ಸಮಗ್ರ ಜನಜೀವನ ವಿಧಾನದ ಸಾರಸಂಗ್ರಹ ಗ್ರಂಥ ಅದು. + ಒಂದು ಊರಿನ ಅಧ್ಯಯನವಾದರೂ ಬಯಲು ಸೀಮೆಯ ಸಂಪ್ರದಾಯದ ಅಧ್ಯಯನ ಗ್ರಂಥವಾಗಿದೆ.