diff --git "a/Data Collected/Kannada/MIT Manipal/\340\262\252\340\263\215\340\262\260\340\262\247\340\262\276\340\262\250\340\262\256\340\262\202\340\262\244\340\263\215\340\262\260\340\262\277_\340\262\256\340\263\201\340\262\246\340\263\215\340\262\260\340\262\276_\340\262\257\340\263\213\340\262\234\340\262\250\340\263\206.txt" "b/Data Collected/Kannada/MIT Manipal/\340\262\252\340\263\215\340\262\260\340\262\247\340\262\276\340\262\250\340\262\256\340\262\202\340\262\244\340\263\215\340\262\260\340\262\277_\340\262\256\340\263\201\340\262\246\340\263\215\340\262\260\340\262\276_\340\262\257\340\263\213\340\262\234\340\262\250\340\263\206.txt" new file mode 100644 index 0000000000000000000000000000000000000000..5fb4c7485c0945595b64f307f79add7767a1a5b3 --- /dev/null +++ "b/Data Collected/Kannada/MIT Manipal/\340\262\252\340\263\215\340\262\260\340\262\247\340\262\276\340\262\250\340\262\256\340\262\202\340\262\244\340\263\215\340\262\260\340\262\277_\340\262\256\340\263\201\340\262\246\340\263\215\340\262\260\340\262\276_\340\262\257\340\263\213\340\262\234\340\262\250\340\263\206.txt" @@ -0,0 +1,16 @@ +ಪ್ರಧಾನಮಂತ್ರಿ ಮುದ್ರಾ ಯೋಜನೆ +ದೇಶದ ಸೂಕ್ಷ್ಮ ವ್ಯವಹಾರ ವ್ಯಾಪಾರ ಘಟಕಗಳ ಅಭಿವೃದ್ಧಿ ಹಾಗು ಅವುಗಳಿಗೆ ಆರ್ಥಿಕ ನೆರವು ನೀಡಲು ಸ್ಥಾಪಿತವಾದ ಕೇಂದ್ರ ಸರ್ಕಾರಿ ಅಧೀನ ಸಂಸ್ಥೆಯೇ ಮುದ್ರಾ [ Micro Units Development and Refinance Agency (MUDRA ) . +೨೦೧೬ ನೇ ಇಸವಿಯ ಹಣಕಾಸು ಬಜೆಟ್ ಮಂಡನೆಯ ಸಂಧರ್ಭದಲ್ಲಿ ಕೇಂದ್ರ ಹಣಕಾಸು ಸಚಿವರು ಮುದ್ರಾ ಯೋಜನೆಯನ್ನು ಘೋಷಣೆ ಮಾಡಿದರು . +ಮುದ್ರಾ ಯೋಜನೆಯ ಮುಖ್ಯ ಉದ್ದೇಶ ಸೂಕ್ಷ್ಮ ಉದ್ದಿಮೆಗಳಿಗೆ ಆರ್ಥಿಕ ಸಹಾಯ ಮಾಡುವ ಮೂಲಕ ಉತ್ತೇಜನ ನೀಡುವುದು . +ಇದುವರೆಗೂ ಕೇಂದ್ರ ಸರ್ಕಾರದಿಂದ ಒಂದು ಲಕ್ಷ ಕೋಟಿ ರೂಪಾಯಿಗಳನ್ನು ಮುದ್ರಾ ಯೋಜನೆಯ ಮೂಲಕ ಯೋಗ್ಯ ವ್ಯಕ್ತಿಗಳಿಗೆ ಒದಗಿಸಿಕೊಡಲಾಗಿದೆ . +ಪ್ರಧಾನಿ ನರೇಂದ್ರ ಮೋದಿ ಯೋಜನೆಯ ಬಗ್ಗೆ ಸ್ಪಷ್ಟ ನಿಲುವು ಹೊಂದಿದ್ದು ಭಾರತದ ಯುವಜನತೆ ಉದ್ಯೋಗ ಸೃಷ್ಟಿಕರ್ತರಾಗಬೇಕೇ ಹೊರತು ಉದ್ಯೋಗ ಅರಸಿ ಅಲೆಯುವರಾಗಬಾರದು ಎನ್ನುವ ಧ್ಯೇಯದೊಂದಿಗೆ ಯೋಜನೆ ಆರಂಭಿಸಿದ್ದು ಯುವಜನತೆ ಇದರ ಸದುಪಯೋಗ ಪಡೆದುಕೊಂಡು ದೇಶದ ಭವಿಷ್ಯವನ್ನು ಇನ್ನು ಎತ್ತರಕ್ಕೆ ಕೊಂಡೊಯ್ಯಬೇಕು ಎಂದು ಕರೆ ನೀಡಿದ್ದಾರೆ . +ಸೂಕ್ಷ್ಮ ಉದ್ದಿಮೆಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಆರಂಭವಾಗಿರುವ ಮುದ್ರಾ ಯೋಜನೆಯನ್ನು ಕೊಡುವ ಸಾಲದ ಪ್ರಮಾಣದ ಆಧಾರದ ಮೇಲೆ ಮೂರು ಭಾಗಗಳಾಗಿ ವಿಂಗಡಿಸಲಾಗಿದೆ . +ಶಿಶು ಸಾಲ ಯೋಜನೆ - ಐವತ್ತು ಸಾವಿರ ರೂಪಾಯಿಗಳವರೆಗೆ ಸಾಲ. +ಕಿಶೋರ ಸಾಲ ಯೋಜನೆ - ಐವತ್ತು ಸಾವಿರ ರೂಪಾಯಿ ಮೇಲ್ಪಟ್ಟು ಹಾಗು ಐದು ಲಕ್ಷಕ್ಕಿಂತ ಕಡಿಮೆ ಸಾಲ. +ತರುಣ ಸಾಲ ಯೋಜನೆ - ಐದು ಲಕ್ಷಕ್ಕೆ ಮೇಲ್ಪಟ್ಟು ಹಾಗು ಹತ್ತು ಲಕ್ಷ ರೂಪಾಯಿಗಳವರೆಗೆ ಸಾಲಮನಿ ಕಂಟ್ರೋಲ್ ಎಂಬ ವೆಬ್ ತಾಣ ನಡೆಸಿದ ಸಮೀಕ್ಷೆಯ ಪ್ರಕಾರ ಸೆಪ್ಟೆಂಬರ್ ೧ ,೨೦೧೫ ರ ವರೆವಿಗೂ ೧೬೫೦೦೦ ಜನರಿಗೆ ಓವರ್ ಡ್ರಾಫ್ಟಿಂಗ್ ಸೌಲಭ್ಯ ಒದಗಿಸಿಕೊಟ್ಟಿದ್ದು ಸರ್ಕಾರವು ಈ ಮೂಲಕ ೧೫೭,೪೦೦,೦೦೦ ಡಾಲರ್ ( ಬಲ್ಲ ಮೂಲಗಳ ಪ್ರಕಾರ ,ಆದರೆ ಸರ್ಕಾರದಿಂದ ದೃಡೀಕರಿಸಲಾಗಿಲ್ಲ ) ಹಣವನ್ನು ಚಲಾವಣೆಗೆ ತಂದಿದೆ . +ಸೆಪ್ಟೆಂಬರ್ ೨೬ ,೨೦೧೫ರ ದಿನಾಂತ್ಯದ ವೇಳೆಗೆ ಬ್ಯಾಂಕುಗಳು ಸುಮಾರು ೨೭ ಲಕ್ಷ ಸಣ್ಣ ಉದ್ದಿಮೆದಾರರಿಗೆ ೨೪೦ ಬಿಲಿಯನ್ ರೂಪಾಯಿ ಹಣವನ್ನು ಮುದ್ರಾ ಯೋಜನೆಯಡಿಯಲ್ಲಿ ಸಾಲವಾಗಿ ನೀಡಿವೆ . +೨೦೧೬ ರ ಏಪ್ರಿಲ್ ೭ ನೇ ತಾರೀಖಿನಷ್ಟರಲ್ಲಿ ಗುಜರಾತ್ ರಾಜ್ಯವೊಂದರಲ್ಲೇ ಸುಮಾರು ೯.೫ ಲಕ್ಷ ಫಲಾನುಭವಿಗಳಿಗೆ ಮುದ್ರಾ ಬ್ಯಾಂಕ್ ನ ಶಿಶು ಸಾಲ ವಿಭಾಗದ ಸಾಲ ದೊರಕಿದೆ . +ಇದರ ಒಟ್ಟು ಮೊತ್ತ ಸುಮಾರು ಎರಡು ಸಾವಿರದ ನೂರ ಹನ್ನೊಂದು ಕೋಟಿ ರೂಪಾಯಿಗಳಾಗಿದೆ . +೮೫೦೩೯ ಫಲಾನುಭವಿಗಳಿಗೆ ಕಿಶೋರ ಸಾಲ ವಿಭಾಗದಲ್ಲಿ ಸಾಲ ಮಂಜೂರಿಗೆ ಸುಮಾರು ೧೮೪೨ ಕೋಟಿ ರೂಪಾಯಿಗಳನ್ನು ಬಳಸಿಕೊಳ್ಳಲಾಗಿದೆ . +೨೫೮೫೨ ಫಲಾನುಭವಿಗಳಿಗೆ ಸುಮಾರು ೧೮೭೫ ಕೋಟಿ ರೂಪಾಯಿ ವೆಚ್ಚ ಮಾಡಿ ಮುದ್ರಾದ ತರುಣ ಸಾಲ ಯೋಜನೆಯಲ್ಲಿ ಸಾಲ ದೊರಕಿಸಿಕೊಡಲಾಗಿದೆ . +ಭಾರತೀಯ ದಲಿತ ವಾಣಿಜ್ಯ ಮಂಡಳಿಯ ಇಂಗ್ಲೀಷ್ ವಿಕಿಪೀಡಿಯಾ ಪುಟಮುದ್ರಾ ಬ್ಯಾಂಕ್ ಪ್ರಯೋಜನಗಳೇನು ,ಒನ್ ಇಂಡಿಯಾ ಕನ್ನಡ ಪತ್ರಿಕಾ ವರದಿ