diff --git "a/Data Collected/Kannada/MIT Manipal/\340\262\216\340\262\244\340\263\215\340\262\244\340\262\277\340\262\250\340\262\271\340\263\212\340\262\263\340\263\206\340\262\257_\340\262\244\340\262\277\340\262\260\340\263\201\340\262\265\340\263\201_\340\262\257\340\263\213\340\262\234\340\262\250\340\263\206.txt" "b/Data Collected/Kannada/MIT Manipal/\340\262\216\340\262\244\340\263\215\340\262\244\340\262\277\340\262\250\340\262\271\340\263\212\340\262\263\340\263\206\340\262\257_\340\262\244\340\262\277\340\262\260\340\263\201\340\262\265\340\263\201_\340\262\257\340\263\213\340\262\234\340\262\250\340\263\206.txt" new file mode 100644 index 0000000000000000000000000000000000000000..c9910ac70b955f583f797be01261626a5b962093 --- /dev/null +++ "b/Data Collected/Kannada/MIT Manipal/\340\262\216\340\262\244\340\263\215\340\262\244\340\262\277\340\262\250\340\262\271\340\263\212\340\262\263\340\263\206\340\262\257_\340\262\244\340\262\277\340\262\260\340\263\201\340\262\265\340\263\201_\340\262\257\340\263\213\340\262\234\340\262\250\340\263\206.txt" @@ -0,0 +1,182 @@ +( ಸತ್ಯ ದರ್ಶನ ಎಂಬ ಅಭಿಪ್ರಾಯದ - ವಿವಾದದ - ಭಾಗವನ್ನು ಚರ್ಚಾಪುಟಕ್ಕೆ ಹಾಕಿದೆ ) +ಎತ್ತಿನ ಹೊಳೆ ತಿರುವು ಯೋಜನೆಗೆ ನಡು ಅರಣ್ಯದಲ್ಲಿರುವ ಹೊಂಗಡ ಹಳ್ಳ , ಎತ್ತಿನ ಹೊಳೆ , ಕಾಡುಮನೆ ಹೊಳೆ , ಕೇರಿಹೊಳೆಗಳಿಗೆ ಒಟ್ಟು ಎಂಟು ಜಾಗಗಳಲ್ಲಿ ಒಡ್ಡುಗಳನ್ನು ನಿರ್ಮಿಸಲಾಗಿದೆ . +ಅಲ್ಲಿಂದ ವಿದ್ಯುತ್ ಚಾಲಿತ ಬೃಹದಾಕಾರದ ಮೋಟರ್‌ಗಳನ್ನು ಅಳವಡಿಸಿ ದೊಡ್ಡಗಾತ್ರದ ಪೈಪ್‌ಗಳ ಮೂಲಕ ನೀರೆತ್ತಿ ಸಕಲೇಶಪುರ ತಾಲ್ಲೂಕಿನ ಹರವನಹಳ್ಳಿ ಬಳಿಯಲ್ಲಿ ನಿರ್ಮಿಸುವ ವಿಶಾಲವಾದ ವಿತರಣಾ ತೊಟ್ಟಿಗೆ ಬಿಡಲಾಗುವುದು . +ಈ ಕಾರ್ಯಕ್ಕೆ ಬೃಹದಾಕಾರದ ಪೈಪ್ ಅಳವಡಿಸಲು ಹಾಗೂ ವಿದ್ಯುತ್ ಸರಬರಾಜಿಗೆ ಅರಣ್ಯದೊಳಗೆ 120 ಅಡಿ ಅಗಲದ ಜಾಗವನ್ನು ತೆರವುಗೊಳಿಸಲಾಗುವುದು . +ಇದಕ್ಕೆ ಕನಿಷ್ಠ 60 ಕಿ .ಮೀ ವ್ಯಾಪ್ತಿಯಷ್ಟು ಅರಣ್ಯ ನಾಶ ಮಾಡಿ ಆ ಪ್ರದೇಶವನ್ನು ಸಮಗೊಳಿಸಿ ಭೂಮಿಯ ಒಳಭಾಗದಲ್ಲಿ ಕೊಳವೆಗಳನ್ನು ಹೂಳಲಾಗುವುದು . +ಇದರಿಂದ 400 ಎಕರೆಗೂ ಮೀರಿದ ಅರಣ್ಯ ನಾಶವಾಗುವ ಸಾಧ್ಯತೆ ಇದೆ . +ಕರ್ನಾಟಕ ಸರಕಾರ " ನೇತ್ರಾವತಿ / ನೇತ್ರಾವತಿ ನದಿ ತಿರುವು ಯೋಜನೆ " ಗೆ " ಎತ್ತಿನಹೊಳೆ ಯೋಜನೆ " ಎಂಬ ಹೆಸರಿನಲ್ಲಿ ಅಡಿಪಾಯ ಹಾಕಿದೆ . +" ಕುಡಿಯುವ ನೀರಿನ ಯೋಜನೆ " ಎಂಬ ಹೆಸರಿನಲ್ಲಿ ಲ್ಲಿ ಕೇಂದ್ರ ಸರಕಾರದ ಅರಣ್ಯ ಮತ್ತು ಪರಿಸರ ಇಲಾಖೆಯ ಕಾನೂನುಗಳಿಂದ ಪಾರಾಗಿ ಈ ಯೋಜನೆಯನ್ನು ಕರ್ನಾಟಕದಲ್ಲಿ ನೀರಾವರಿ ಯೋಜನೆಗಳನ್ನು ಕಾರ್ಯಗತಗೊಳಿಸುವ ಕನೀನಿನಿಗೆ ( ಕರ್ನಾಟಕ ನೀರಾವರಿ ನಿಗಮ ನಿಯಮಿತ ) ವಹಿಸಲಾಗಿದೆ . +( ಕರ್ನಾಟಕದಲ್ಲಿ ಸಾಮಾನ್ಯವಾಗಿ ಕುಡಿಯುವ ನೀರಿನ ಯೋಜನೆಗಳನ್ನು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಕಾರ್ಯಗತಗೊಳಿಸುತ್ತದೆ ) . +ಕನೀನಿನಿ ಈ ಯೋಜನೆಯ ಸಾಧ್ಯತಾ ವರದಿಯನ್ನು ಇ .ಐ .ಟೆಕ್ನಾಲಜೀಸ್ ಎಂಬ ಖಾಸಗಿ ಸಂಸ್ಥೆಯಿಂದ ಮಾಡಿಸಿದೆ.ಕೃಷಿ ಹೆಸರಿನಲ್ಲಿ ಈ ಯೋಜನೆ ಕೈಗೆತ್ತಿಕೊಂಡಿದ್ದು , ಹತ್ತಾರು ನಗರಗಳಿಗೆ ಕುಡಿಯುವ ನೀರಿನ ಜೊತೆಗೆ ಕೃಷಿಗೂ ನೀರು ಒದಗಿಸಲಾಗುವುದೆಂದು ಹೇಳಲಾಗುತ್ತಿದೆ . +ಸಾಮಾನ್ಯವಾಗಿ ರಾಜ್ಯದ ಹಾಗೂ ದೇಶದ ಶೇ 65 ಭಾಗ ಒಣ ಭೂಮಿ ಬೇಸಾಯ ಮಾಡಲಾಗುತ್ತಿದೆ . +ನೀರಾವರಿ (ನಾಲಾನೀರು) ಆಶ್ರಯಿಸಿ ಬೆಳೆ ಬೆಳೆಯುತ್ತಿರುವುದರಿಂದ ಕೃಷಿಯ ವೈವಿಧ್ಯ ನಾಶವಾಗಿದೆ . +ಮಂಡ್ಯ ಭಾಗದಲ್ಲಿ ನಾಲಾನೀರು ಬರುವ ಮೊದಲು ಹತ್ತಾರು ನಮೂನೆಯ ಬೆಳೆ ಬೆಳೆಯಲಾಗುತ್ತಿತ್ತು . +ಈಗ ಕೇವಲ ಭತ್ತ , ಕಬ್ಬು ಬೆಳೆಗೆ ಸೀಮಿತವಾಗಿದೆ . +ಅಣೆಕಟ್ಟೆಯ ನೀರಿಂದ ಬೆಳೆಯುತ್ತಿರುವ ಬೆಳೆ ಕಬ್ಬು , ಅಲ್ಲಿನ ಸಕ್ಕರೆ ಕಾರ್ಖಾನೆಗಳೆಲ್ಲಾ ಬಂಡವಾಳಶಾಹಿಗಳದ್ದು . +ಕಬ್ಬಿನ ಉಳಿದ ಭಾಗದಿಂದ ತಯಾರಾಗುವ ಮದ್ಯವನ್ನು ತಯಾರಿಸುವ ಘಟಕಗಳೂ ರಾಜಕಾರಣಿಗಳ ಮತ್ತು ಬಂಡವಾಳಶಾಹಿಗಳ ಅಧೀನದಲ್ಲಿವೆ . +ಅಂತ್ಯದಲ್ಲಿ ಬಂಡವಾಳಶಾಹಿಗಳಿಗೆ ಲಾಭವೆಂದು ಹೇಳುತ್ತಾರೆ . +ದೇಶಕ್ಕೆ ಯಥೇಚ್ಛವಾಗಿ ಬೇಕಿರುವ ಎಣ್ಣೆ ಕಾಳು,ಬೇಳೆ, ಕಿರುಧಾನ್ಯಗಳನ್ನು ಬೆಳೆಯುತ್ತಿರುವುದು ಒಣ ಭೂಮಿಯಲ್ಲಿ . +ಎಣ್ಣೆ ಕಾಳುಗಳನ್ನು ವಿದೇಶಗಳಿಂದ ತರಿಸಿಕೊಳ್ಳಲು ಲಕ್ಷಾಂತರ ಕೋಟಿ ಹಣವನ್ನು ಪ್ರತಿ ವರ್ಷ ವ್ಯಯ ಮಾಡಲಾಗುತ್ತಿದೆ . +ನದಿ ತಿರುವು, ಅಣೆಕಟ್ಟೆ, ನಾಲಾಗಳಿಂದ ಕೃಷಿಯಲ್ಲಿನ ವಿವಿಧತೆಯನ್ನು ಕೊಲೆ ಮಾಡಿದಂತಾಗುತ್ತದೆ . +ಇವುಗಳನ್ನು ನಿರ್ಮಿಸುವ ಬದಲು ಕಿರುಧಾನ್ಯ ಬೆಳೆಗಳಿಗೆ ಉತ್ತೇಜನ ನೀಡಿದರೆ ಸಾಕು . +ರಾಜ್ಯದ ರೈತರ ಬದುಕು ಹಸನಾಗುವುದರಲ್ಲಿ ಅನುಮಾನವಿಲ್ಲ . +ರಾಜ್ಯದಲ್ಲಿ ಮಳೆನೀರು ಸಂಗ್ರಹ ಯೋಜನೆಯನ್ನು ಕಡ್ಡಾಯಗೊಳಿಸಿ ಬೋಳು ಗುಡ್ಡಗಳಲ್ಲಿ ಗಿಡ ಮರಗಳನ್ನು ಬೆಳೆಸಿದರೆ ಬರಗಾಲ ಹತ್ತಿರ ಸುಳಿಯದು . +ಯೋಜನೆಯಿಂದಾಗಿ ನೂರಾರು ಕಾಫಿ ಬೆಳೆಗಾರರು ನಿರಾಶ್ರಿತರಾಗಲಿದ್ದಾರೆ . +ಅಲ್ಲದೇ ಇಲ್ಲಿನ ಕೃಷಿಕರ ಜಮೀನಿಗೆ ಉತ್ತಮ ಪರಿಹಾರ ನೀಡಿದರೆ ಊರನ್ನೇ ಬಿಟ್ಟು ಹೋಗಲು ಸಜ್ಜಾಗಿದ್ದಾರೆ . +ಮಲೆನಾಡು ಭಾಗದ, ಅದರಲ್ಲೂ ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕು, ಸರ್ಕಾರಿ ಸೌಲಭ್ಯ ವಂಚಿತ ತಾಲ್ಲೂಕೆಂದರೆ ತಪ್ಪಿಲ್ಲ . +ಹಳ್ಳಿಗಳಲ್ಲಿ ಉತ್ತಮ ರಸ್ತೆಗಳಿಲ್ಲ, ನೀರಿನ ಸೌಲಭ್ಯವಿಲ್ಲ, ಸರಿಯಾದ ವಿದ್ಯುತ್ ಸಂಪರ್ಕವಿಲ್ಲ, ಒತ್ತುವರಿ ಸಮಸ್ಯೆ, ಅಧಿಕ ಮಳೆಯಿಂದಾಗಿ ಪ್ರತಿ ವರ್ಷ ಬೆಳೆಹಾನಿ, ಬೆಲೆಕುಸಿತ, ಕಾರ್ಮಿಕರ ಸಮಸ್ಯೆ, ನಕ್ಸಲ್ ಹಾವಳಿ, ಕಾಡಿನಲ್ಲಿ ನಡೆಯುವ ಬೃಹತ್ ಯೋಜನೆಗಳಿಂದ ಪ್ರಾಣಿಗಳು ಕಾಡು ತೊರೆದು ಕೃಷಿ ಭೂಮಿಗೆ ದಾಳಿ , ಸರ್ಕಾರಿ ಅಧಿಕಾರಿಗಳ ದಬ್ಬಾಳಿಕೆ ಹೀಗೆ ಹತ್ತಾರು ಸಮಸ್ಯೆಗಳಲ್ಲಿ ಗ್ರಾಮಸ್ಥರು ದಿನದೂಡುತ್ತಿದ್ದಾರೆ . +ತಮ್ಮ ಜಮೀನಿಗೆ ಸೂಕ್ತ ಬೆಲೆ ನೀಡಿದರೆ ಮಲೆನಾಡು ತೊರೆದು ಹೊರ ಹೋಗಲು ತಯಾರಾಗಿರುವ ಒಂದು ವರ್ಗವಿದ್ದರೆ , ನದಿ ತಿರುವು ಯೋಜನೆಯನ್ನು ವಿರೋಧಿಸುವ ಇನ್ನೊಂದು ವರ್ಗವೂ ಪ್ರತಿಭಟನೆಗೆ ಸಜ್ಜಾಗಿದೆ . +ಅರಣ್ಯ ನಾಶಗೊಳಿಸಿ ಎತ್ತಿನಹೊಳೆ ಯೋಜನೆ ರೂಪುಗೊಳಿಸುವುದು ಪಶ್ಚಿಮಘಟ್ಟಕ್ಕೇ ಮಾರಕ ಎನ್ನುತ್ತಾರೆ ಜಲತಜ್ಞರಾದ ಅಯ್ಯಪ್ಪ ಮಸಗಿ . +ಈ ಹಿಂದೆ ಕುದುರೆಮುಖ ಅರಣ್ಯದಲ್ಲಿ ಗಣಿಗಾರಿಕೆ ಮಾಡಿದ್ದರಿಂದ ಹತ್ತು ವರ್ಷಗಳ ಕಾಲ ಆ ಭಾಗದಲ್ಲಿ ಸರಿಯಾಗಿ ಮಳೆಯಾಗಲಿಲ್ಲ . +ಲಿಂಗನ ಮಕ್ಕಿ ಜಲಾಶಯ ತುಂಬಲಿಲ್ಲ . +ನೀರಿನ ಅಭಾವ ನೀಗಿಸುವುದು ಅವಶ್ಯ . +ಆದರೆ ಪರಿಸರವನ್ನು ನಾಶಮಾಡಿ ಕಾರ್ಯಸಾಧಿಸುವುದು ನಾಡಿಗೇ ಒಳಿತಲ್ಲ . +ಇದರ ಪರಿಣಾಮ ಮುಂದೊಂದು ದಿನ ಮಲೆನಾಡಿಗರಿಗೇ ಮಾರಕವಾಗಲಿದೆ ಎನ್ನುತ್ತಾರೆ ಅವರು . +ಕನೀನಿನಿ (ಕರ್ನಾಟಕ ನೀರಾವರಿ ನಿಗಮ ನಿಯಮಿತ )ಎತ್ತಿನಹೊಳೆ ಯೋಜನೆಯ ಕುರಿತಂತೆ ಯೋಜನಾವರದಿಯನ್ನು ತಯಾರಿಸಿ ಸರಕಾರಕ್ಕೆ ಸಲ್ಲಿಸಿತು . +ಸರಕಾರ ಆ ವರದಿಯನ್ನು ಅಧ್ಯಯನ ಮಾಡಿ ವರದಿಯ ಮೇಲೆ ವರದಿ ಕೊಡುವಂತೆ ಜಲಸಂಪನ್ಮೂಲ ಇಲಾಖೆಯ ಮುಖ್ಯ ಎಂಜಿನಿಯರರಿಗೆ ಸೂಚಿಸಿತು . +ಅವರು ಅದನ್ನು ಸಂಬಂಧಿಸಿದ ಹಲವು ವಿಭಾಗಗಳಿಗೆ ಕಳಿಸಿ, ಆ ವಿಭಾಗಗಳ ವರದಿ ಕೇಳಿದರು . +ಅವುಗಳ ಪೈಕಿ ಒಂದು ವಿಭಾಗವೇ ಜಲವಿಜ್ಞಾನ ಘಟಕ . +ಈ ವಿಭಾಗವು ಯೋಜನಾಪ್ರದೇಶದಲ್ಲಿ ದೊರೆಯಬಹುದಾದ ನೀರಿನ ಪ್ರಮಾಣವನ್ನು ತನ್ನದೇ ಮಳೆಯ ಅಂಕಿಅಂಶಗಳ ಮೇಲೆ ತನ್ನದೇ ಕ್ರಮದಲ್ಲಿ ಲೆಕ್ಕ ಮಾಡಿ ಪ್ರತ್ಯೇಕವಾದ ಒಂದು ವರದಿಯನ್ನೇ 21-06-2012 ರಂದು ಮುಖ್ಯ ಎಂಜಿನಿಯರರಿಗೆ ಒಪ್ಪಿಸಿತು. +ಈ ವರದಿಯಲ್ಲಿ ಸರಕಾರವು ಪರಿಗಣಿಸಲೇ ಬೇಕಾದ ಹಲವು ಅಂಶಗಳಿವೆ : +೨ .ಮೂರು ಖಾಸಗಿ ಪ್ಲಾಂಟರುಗಳ ಮಾಪನದ ಅಂಕಿಅಂಶಗಳು ವರದಿಯಲ್ಲಿ ಇವೆ . +1 .ಶ್ರೀ ಡಿ.ಪಿ .ಕಲ್ಲಪ್ಪನವರ ಕೊಟ್ಟನಹಳ್ಳಿ ಖಾಸಗಿ ಮಳೆಮಾಪನ ಕೇಂದ್ರ - 6030 ಮಿಮೀ +2 .ಶ್ರೀ ಸಿದ್ದೇಗೌಡರ ಹೊಂಗಡಹಳ್ಳ ಮಳೆಮಾಪನ ಕೇಂದ್ರ - 6060 ಮಿಮೀ +3 .ಕಾಡಮನೆ ಕಾಫಿ ಎಸ್ಟೇಟ್ ಕಂಪೆನಿಯ ಮಳೆಮಾಪನ ಕೇಂದ್ರ .- 6540 ಮಿಮೀ +ಆದರೆ ಕೈಬಿಟ್ಟ - 1 .ಕನೀನಿನಿಯ ಭದ್ರಾ ಮೇಲ್ದಂಡೆ ಯೋಜನಾವಲಯದ ಮುಖ್ಯ ಎಂಜಿನಿಯರ್ ದೆಹಲಿಗೆ ಬರೆದ ಪತ್ರದಲ್ಲಿ : 6500 ಮಿ.ಮೀ . +2 .ಕನೀನಿನಿಯ ಯೋಜನಾ ವರದಿಯಲ್ಲಿ : 6280 ಮಿ.ಮೀ +3 .ಕನೀನಿನಿಯ ತಪ್ಪು ಲೆಕ್ಕಾಚಾರವನ್ನು ತಿದ್ದಿದಾಗ : 6210 ಮಿ.ಮೀ +4 .ನಾಲ್ಕೂ ಖಾಸಗಿ ಮಳೆಮಾಪನ ಕೇಂದ್ರಗಳನ್ನು ಪರಿಗಣಿಸಿದಾಗ : 5695 ಮಿ.ಮೀ +5 .ಜಲಸಂಪನ್ಮೂಲ ಇಲಾಖೆಯ 22 ವರ್ಷಗಳ ಅಂಕಿಅಂಶದ ಸರಾಸರಿ : 3072 ಮಿ.ಮೀ . +6 .http : / / www.samsamwater.com / climate / ಎಂಬ ಜಾಲತಾಣದ ಪ್ರಕಾರ ಸುಮಾರು 3000 ಮಿ.ಮೀ +ಆದ್ದರಿಂದ ಈಯೋಜನೆಯ ಸಫಲತೆಯ ಬಗೆಗೆ ಬಲವಾದ ಸಂಶಯ ಉದ್ಭವಿಸಿದೆ.ಇದು ರೂ 12912.36 ಕೋಟಿಯ ಯೋಜನೆ . +ವ್ಯರ್ಥವಾದರೆ ದೊಡ್ಡ ನಷ್ಟ . +ಬಯಲು ಸೀಮೆಗೆ ನೀರೂ ಇಲ್ಲ. +ಪಶ್ಚಿಮಘಟ್ಟ ನಾಶ ಮಾಡುವ ಇಂತಹ ಯೋಜನೆಗೆ ಕೇಂದ್ರ ಪರಿಸರ ಮತ್ತು ಅರಣ್ಯ ಮಂತ್ರಾಲಯ ಅನುಮತಿ ನೀಡಲು ಸಾಧ್ಯವೇ ಇಲ್ಲ ಎಂಬುದನ್ನು ಮನಗಂಡ ರಾಜ್ಯ ಸರ್ಕಾರ ಈ ಯೋಜನೆಯ ಹೆಸರನ್ನೇ ಬದಲಾ­ಯಿಸಿದೆ . +ಆರಂಭ­­ದಲ್ಲಿ ಸ್ಕೀಂ ಫಾರ್‌ ಡೈವರ್ಷನ್‌ ಆಫ್‌ ಫ್ಲಡ್‌ ವಾಟರ್‌ ಫ್ರಮ್‌ ಸಕಲೇಶಪುರ (ವೆಸ್ಟ್‌ )ಟು ಕೋಲಾರ್‌ /ಚಿಕ್ಕಬಳ್ಳಾಪುರ (ಇಸ್ಟ್‌ ) ಎಂಬ ಹೆಸರನ್ನು ಯೋಜನೆಗೆ ಇಡಲಾಗಿತ್ತು . +ನಂತರ ಎತ್ತಿನಹೊಳೆ ಯೋಜನೆ ಎಂದು ಎರಡನೆ ಬಾರಿ ಹೆಸರು ಬದಲಾವಣೆ ಮಾಡ­ಲಾಯಿತು . +ಕೇಂದ್ರದಿಂದ ಪರಿಸರ ಮತ್ತು ಸಾಮಾಜಿಕ ವರದಿ ಅನುಮತಿ ತಪ್ಪಿಸಿಕೊಳ್ಳುವುದಕ್ಕಾಗಿ , ‘ ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆ ’ ಎಂದು ಹೆಸರು ಬದಲಾವಣೆ ಮಾಡಿ­ಕೊಂಡಿದೆ ಎಂದು ಮಲೆನಾಡು ಜನಪರ ಹೋರಾಟ ಸಮಿತಿ ಅಧ್ಯಕ್ಷ ಕಿಶೋರ್‌­ಕುಮಾರ್‌ ‘ ಪ್ರಜಾವಾಣಿ ’ ಗೆ ತಿಳಿಸಿದರು . +10 ಸಾವಿರ ಹೆಕ್ಟೇರ್‌ಗಿಂತ ಹೆಚ್ಚಿನ ಕೃಷಿ ಭೂಮಿಗೆ ನೀರು ಒದಗಿಸುವ ಯಾವುದೇ ನೀರಾವರಿ ಯೋಜನೆಗೆ ಕೇಂದ್ರದ ಅನುಮತಿ ಬೇಕು . +ಆದರೆ , ಈ ಯೋಜನೆಯಲ್ಲಿ ಸುಮಾರು 28 ಸಾವಿರ ಹೆಕ್ಟೇರ್ ಕೃಷಿ ಭೂಮಿಗೆ ನೀರು ಒದಗಿಸುವ ಉದ್ದೇಶ ಇದೆ ಎಂದು ಕರ್ನಾಟಕ ನೀರಾವರಿ ನಿಗಮ ಯೋಜನಾ ವರದಿಯಲ್ಲಿ ಹೇಳಿದೆ . +ಕಾಲುವೆಯಲ್ಲಿ ನೀರು ಸರಬರಾಜು ಮಾಡುವಾಗ ಸುಮಾರು 100 ಮೆಗಾವಾಟ್‌ ವಿದ್ಯುತ್‌ ಉತ್ಪಾದನೆ ಮಾಡುತ್ತೇವೆ ಎಂದು ವರದಿಯಲ್ಲಿ ಉಲ್ಲೇಖ ಮಾಡಿದ್ದಾರೆ . +50 ಮೆಗಾವಾಟ್‌ ವಿದ್ಯುತ್‌ ಉತ್ಪಾದನೆ ಮಾಡಬೇಕಾ­ದರೂ ಕೇಂದ್ರ ಪರಿಸರ ಮತ್ತು ಅರಣ್ಯ ಮಂತ್ರಾಲಯದ ಅನುಮತಿ ಅಗತ್ಯ. +‘ಎನ್ವಿರಾನ್‌ಮೆಂಟಲ್‌ ಇಂಪ್ಯಾಕ್ಟ್‌ ಅಸೆಸ್‌­ಮೆಂಟ್‌ ನೋಟಿಫಿಕೇಷನ್– 2006’ ಪ್ರಕಾರ , ಮೇಲೆ ಉಲ್ಲೇಖಿಸಿದ ಎಲ್ಲ ಅನುಮತಿ ಪಡೆಯ­ಬೇಕು . +ಯೋಜನೆಯನ್ನು ಅರಣ್ಯ ಪ್ರದೇಶ­ದೊಳಗೆ ಅನು­ಷ್ಠಾನ ಮಾಡುವುದರಿಂದ ಅರಣ್ಯ ಇಲಾಖೆಯ ಅನುಮತಿಯೂ ಬೇಕು . +2009ರ ತಿದ್ದು­ಪಡಿಯಂತೆ ಕುಡಿಯುವ ನೀರಿನ ಯೋಜನೆ­ಯಾದರೆ ಅನುಮತಿ ಬೇಡ ಎಂಬುದನ್ನೇ ಮುಂದಿ­ಟ್ಟು­­ಕೊಂಡು , ವನ್ಯಜೀವಿ ಸಂರಕ್ಷಣಾ ಕಾಯಿದೆ , ಅರಣ್ಯ ಕಾಯ್ದೆ , ಜೀವ ವೈವಿಧ್ಯ ಕಾಯ್ದೆಗಳನ್ನು ಸಂಪೂರ್ಣವಾಗಿ ಉಲ್ಲಂಘಿಸಿ ಕಾಮಗಾರಿ ಆರಂಭಿಸಿರುವುದನ್ನು ಪ್ರಶ್ನಿಸಿ ನ್ಯಾಯಾ­­­ಲಯ ಮೆಟ್ಟಿಲು ಹತ್ತಲು ಪರಿಸರವಾದಿ­ಗಳು ಹಾಗೂ ವಿವಿಧ ಸಂಘಟನೆಗಳು ಮುಂದಾ­ಗಿವೆ . +ವಿವಾದಿತ ಎತ್ತಿನಹೊಳೆ ಯೋಜನೆ ಸಂಬಂಧ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ ) ಸೇರಿದಂತೆ ತಜ್ಞರು ರಿಮೋಟ್‌ ಸೆನ್ಸಿಂಗ್‌ (ಸೂಕ್ಷ್ಮ ಸಂವೇದಿ ) ನಂತಹ ತಂತ್ರಜ್ಞಾನಗಳನ್ನು ಆಧರಿಸಿ ಪರಿಷ್ಕೃತ ವರದಿ ಪ್ರಕಟಿಸಿದ್ದು , ಅದರಲ್ಲಿ ಕೂಡ ಎತ್ತಿನಹೊಳೆಯಲ್ಲಿ ಲಭ್ಯವಿರುವ ನೀರಿನ ಪ್ರಮಾಣ 9.55 ಟಿಎಂಸಿ ಎಂದು ದೃಢೀಕರಿಸಲಾಗಿದೆ . +ಅದರಲ್ಲಿ ಎತ್ತಿನಹೊಳೆ ಜಲಾನಯನ ಪ್ರದೇಶದಲ್ಲಿ ನೀರಿನ ಲಭ್ಯತೆ 9.55 ಟಿಎಂಸಿ ಇದ್ದು, ಅದರಲ್ಲಿ 5.84 ಟಿಎಂಸಿ ಸ್ಥಳೀಯ ಅವಶ್ಯಕತೆಗಳನ್ನು ಪೂರೈಸಲಿಕ್ಕಾಗಿಯೇ ಬೇಕಾಗುತ್ತದೆ ಎಂದು ವಿಜ್ಞಾನಿಗಳು ಪುನರುಚ್ಚರಿಸಿದ್ದಾರೆ . +ಖುದ್ದು ಸ್ಥಳ ಪರಿಶೀಲನೆ ಅಲ್ಲದೆ , ಭಾರತೀಯ ಹವಾಮಾನ ಇಲಾಖೆ, ರಿಮೋಟ್‌ ಸೆನ್ಸಿಂಗ್‌ ಮತ್ತು ಜಲವಿಜ್ಞಾನದ ದತ್ತಾಂಶಗಳನ್ನು ಆಧರಿಸಿ ಎತ್ತಿನಹೊಳೆ ಜಲಾನಯನ ಪ್ರದೇಶದಲ್ಲಿನ ಮಳೆ ಪ್ರಮಾಣ , ತಾಪಮಾನ , ಭೂಮಿಯ ಬಳಕೆ ಮತ್ತಿತರ ಅಂಶಗಳನ್ನು ಅಧ್ಯಯನ ಮಾಡಿ ವರದಿ ಸಿದ್ಧಪಡಿಸಲಾಗಿದೆ . +ಅದರಂತೆ ಎತ್ತಿನಹೊಳೆ ಜಲಾನಯನ ಪ್ರದೇಶದ ಒಟ್ಟಾರೆ ವ್ಯಾಪ್ತಿಯ ಪೈಕಿ ಶೇ .45.08ರಷ ್ಟು ಪರಿಸರ ಅರಣ್ಯ , ಶೇ .29.05 ಕೃಷಿ , ಶೇ .24.06 ಹುಲ್ಲುಗಾವಲು ಪ್ರದೇಶವಾಗಿದೆ . +ಅಲ್ಲಿ ಬೀಳುವ ವಾರ್ಷಿಕ ಮಳೆ 3000 - 5000 ಮಿ.ಮೀ .(ರಾಜ್ಯ ಸರ್ಕಾರದ ಸಾಂಖೀÂಕ ಇಲಾಖೆ ಪ್ರಕಾರ) ಆಗಿದ್ದು , 5.84 ಟಿಎಂಸಿ ಕೃಷಿ , ತೋಟಗಾರಿಕೆ , ಜಾನುವಾರು ಮತ್ತಿತರ ಉದ್ದೇಶಗಳಿಗೆ ಬಳಕೆಯಾಗುತ್ತಿದೆ . +2 ಟಿಎಂಸಿ ಜಲಚರಗಳಿಗೆ ಮೀಸಲಾಗಿದೆ ಎಂದು 14 ಪುಟಗಳ ವರದಿಯಲ್ಲಿ ಸ್ಪಷ್ಟಪಡಿಸಲಾಗಿದೆ . +ಎತ್ತಿನಹೊಳೆ ಯೋಜನೆಗಾಗಿ ಪಶ್ಚಿಮ ಘಟ್ಟದ ಜೀವವೈವಿಧ್ಯನಿರ್ಲಕ್ಷಿಸುತ್ತಿರುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟಿರುವ ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯು ( ಎನ್‌ ಜಿಟಿ ) , ಈ ಕುರಿತು ಕೇಂದ್ರ ಮತ್ತು ರಾಜ್ಯ ಸರ್ಕಾರಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡಿತು . +‘ ಯೋಜನೆಯಿಂದ ಪರಿಸರಕ್ಕೆ ಧಕ್ಕೆ ಎದುರಾಗಲಿದೆ ’ ಎಂದು ಕೆ.ಎನ್‌ .ಸೋಮಶೇಖರ್‌ ಸಲ್ಲಿಸಿರುವ ಅರ್ಜಿಯ ವಿಚಾರಣೆ ಕೈಗೆತ್ತಿಕೊಂಡ ನ್ಯಾಯಮೂರ್ತಿ ಸ್ವತಂತ್ರಕುಮಾರ್ ನೇತೃತ್ವದ ಪೀಠವು , ಪಶ್ಚಿಮಘಟ್ಟದ ವಿಚಾರವಾಗಿ ಕೇಂದ್ರ ಸರ್ಕಾರವು ಮೃದುಧೋರಣೆ ತಳೆಯುತ್ತಿರುವುದು ಸರಿಯಲ್ಲ ಎಂದು ತಿಳಿಸಿತಲ್ಲದೆ , ‘ ಈ ಕುರಿತು ಸರ್ಕಾರಕ್ಕೆ ಜವಾಬ್ದಾರಿಯೇ ಇದ್ದಂತಿಲ್ಲ ’ ಎಂದು ಅಚ್ಚರಿ ವ್ಯಕ್ತಪಡಿಸಿತು . +ಯೋಜನೆಗಾಗಿ ಒಟ್ಟು 13.90 ಹೆಕ್ಟೆರ್‌ ಅರಣ್ಯ ಭೂಮಿ ಉಪಯೋಗಿ ಸುತ್ತಿದ್ದು , 4,995 ಮರಗಳನ್ನು ಕಡಿಯುವ ಅಗತ್ಯವಿದೆ ಎಂದು ರಾಜ್ಯ ಸರ್ಕಾರ ತಿಳಿಸುತ್ತಿದ್ದಂತೆಯೇ , ‘ ಯೋಜನೆ ಗಾಗಿ ಈಗಾಗಲೇ ಒಟ್ಟು 2,700 ಮರ ಕಡಿಯಲಾಗಿದೆ . +ಅದಕ್ಕೆ ಬದಲಾಗಿ ಸಸಿ ನೆಡುವ ಕುರಿತು ಯೋಚಿಸಲಾಗಿದೆಯೇ ’ ಎಂದು ನ್ಯಾಯಮೂರ್ತಿಯವರು ಪ್ರಶ್ನಿಸಿ ದರು . +ಅರ್ಜಿದಾರರ ಪರ ವಕೀಲರಾದ ಪ್ರಿನ್ಸ್‌ ಐಸಾಕ್‌ ಮತ್ತು ರಿತ್ವಿಕಾ ದತ್ತಾ , ಪಶ್ಚಿಮಘಟ್ಟದಲ್ಲಿನ ಜೀವ ವೈವಿಧ್ಯಕ್ಕೆ ಸಾಕಷ್ಟು ಧಕ್ಕೆ ಉಂಟಾಗಲಿದೆ . +ಈ ಯೋಜನೆ ಸ್ಥಗಿತಗೊಳಿಸಬೇಕು ’ ಎಂದು ಮನವಿ ಮಾಡಿದರು. ನೇತ್ರಾವತಿ ನೀರಿಗೆ ಸಮುದ್ರದಲ್ಲಿ ಜಲಾಶಯ ( ಪ್ರಜಾವಾಣಿ ) +ನೇತ್ರಾವತಿ ನದಿ ಅರಬ್ಬಿ ಸಮುದ್ರ ಸೇರುವ ಜಾಗದಲ್ಲಿ ಅಥವಾ ಸಮುದ್ರದೊಳಗೇ ಅಣೆಕಟ್ಟು ನಿರ್ಮಿಸಿ , ಅಪಾರ ಪ್ರಮಾಣದಲ್ಲಿ ಸಿಹಿ ನೀರು ಸಂಗ್ರಹಿಸಿ ಬೆಂಗಳೂರು ಮಾತ್ರವಲ್ಲ , ಇಡೀ ರಾಜ್ಯಕ್ಕೆ ಪೂರೈಕೆ ಮಾಡಬಹುದು . +ಇಂತಹದೊಂದು ವಿಶಿಷ್ಟ ಯೋಜನೆಯೊಂದನ್ನು ಭಾರತೀಯ ವಿಜ್ಞಾನ ಸಂಸ್ಥೆಯ ಸಿವಿಲ್‌ ಎಂಜಿನಿಯರಿಂಗ್‌ ವಿಭಾಗದ ವಿಜ್ಞಾನಿ ಪ್ರೊ .ಟಿ.ಜಿ.ಸೀತಾರಾಮ್‌ ಅವರು ರೂಪಿಸಿದ್ದಾರೆ . +ಟಿ.ಜಿ.ಸೀತಾರಾಮ್‌ ಅವರು ಈ ಕುರಿತು ಯೋಜನಾ ವರದಿಯೊಂದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನೀಡಿದ್ದಾರೆ . +ಯೋಜನೆಯ ಬಗ್ಗೆ ‘ ಪ್ರಜಾವಾಣಿ ’ ಗೆ ಮಾಹಿತಿ ನೀಡಿದ ಸೀತಾರಾಮ್‌ , ‘ ಕಡಿಮೆ ಖರ್ಚಿನಲ್ಲಿ ಅನುಷ್ಠಾನಗೊಳಿಸಬಹುದಾ ವಿಶಿಷ್ಟ ಯೋಜನೆ ಇದು . +ವಿಶ್ವದ ಹಲವು ರಾಷ್ಟ್ರಗಳಲ್ಲಿ ಯಶಸ್ವಿ ಆಗಿರುವ ಯೋಜನೆಯೂ ಹೌದು . +ಬೆಂಗಳೂರು ಮತ್ತು ಸುತ್ತಮುತ್ತಲಿನ ಜಿಲ್ಲೆಗಳಲ್ಲಿನ ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸಲು ಅತ್ಯುತ್ತಮವಾದ ಪರ್ಯಾಯ ಯೋಜನೆ ಇದಾಗಿದೆ ’ . +‘ ಕುಡಿಯುವ ನೀರಿಗಾಗಿ ನೆರೆಯ ರಾಜ್ಯಗಳ ಜೊತೆ ಕದನ , ಜಿಲ್ಲೆ–ಜಿಲ್ಲೆಗಳ ನಡುವೆ ಕಿತ್ತಾಟ ನಡೆಯುತ್ತಿರುವಾಗ ಹೊಸ ಯೋಜನೆ ಕರ್ನಾಟಕದ ಪಾಲಿಗೆ ಆಶಾಕಿರಣವಾಗಿದೆ ’ ಎಂದರು. +‘ ಮಳೆಗಾಲದ ನಾಲ್ಕು ತಿಂಗಳಲ್ಲಿ ನೇತ್ರಾವತಿ ನದಿ ಮತ್ತು ಉಪನದಿಗಳಿಂದ 123 ಟಿಎಂಸಿ ಅಡಿ ನೀರು ಅರಬ್ಬಿ ಸಮುದ್ರ ಸೇರುತ್ತದೆ . +ಇದ ಲ್ಲದೇ , ಪಶ್ಚಿಮ ವಾಹಿನಿಯಾಗಿ ಹರಿ ಯುವ 13 ಉಪ ನದಿಗಳಿಂದ ರಾಜ್ಯ ದಲ್ಲಿ ಸಮುದ್ರಕ್ಕೆ ಸೇರುವ ನೀರು 2,200 ಟಿಎಂಸಿ ಅಡಿಗಳು . +ಹೀಗಾಗಿ ರಾಜ್ಯದಲ್ಲಿ ಕುಡಿಯುವ ನೀರಿನ ಕೊರತೆ ಇದೆ ಎಂಬುದನ್ನು ಒಪ್ಪಲಾಗದು . +ಇರುವ ನೀರನ್ನೇ ಸಮರ್ಪಕವಾಗಿ ಬಳಸಿಕೊ ಳ್ಳಲು ಯೋಜನೆ ರೂಪಿಸಿಕೊಳ್ಳುವ ಇಚ್ಛಾಶಕ್ತಿ ತೋರಿಸಿದರೆ ಸಾಕು ’ ಎಂಬ ಖಚಿತ ನಿಲುವು ಅವರದು. +‘ ಕುಡಿಯುವ ನೀರಿನ ಕೊರತೆ ನೀಗಿಸಲು ಅತ್ಯುತ್ತಮ ಪರಿಹಾರ ವೆಂದರೆ , ಸಮುದ್ರಕ್ಕೆ ಹರಿದುಹೋಗುವ ನದಿಯ ಪ್ರವಾಹದ ನೀರನ್ನು ಸಮುದ್ರದ ತಟದಲ್ಲೇ ಅಣೆಕಟ್ಟು ನಿರ್ಮಿಸಿ ಸಂಗ್ರಹಿಸುವುದು . +ಇದರ ಉಪಯೋಗ ಹಲವು . +ಅಣೆಕಟ್ಟು ನಿರ್ಮಿಸಲು ಭೂಮಿ ಬೇಕಿಲ್ಲ , ಹಿನ್ನೀರಿನ ಸಮಸ್ಯೆಯೂ ಇಲ್ಲ , ಪರಿಸರ ನಾಶವೂ ಆಗುವುದಿಲ್ಲ . +ಶುದ್ಧ ನೀರನ್ನು ಅತ್ಯಂತ ಕಡಿಮೆ ಬೆಲೆಯಲ್ಲಿ ಮೇಲೆತ್ತಿ ಪೂರೈಸಬಹುದು ’ ಎಂದರು. +‘ ಸಮುದ್ರದಲ್ಲೇ ಅಣೆಕಟ್ಟು ನಿರ್ಮಿಸಿ ನದಿ ನೀರು ಸಂಗ್ರಹಿಸುವುದರಿಂದ ಉಪ್ಪು ನೀರು ಸೇರುವುದಿಲ್ಲವೇ ಎಂಬ ಪ್ರಶ್ನೆ ಉದ್ಭವಿಸುವುದು ಸಹಜ . +ಸಿಹಿನೀರಿನಿಂದ ಉಪ್ಪು ನೀರನ್ನು ಪ್ರತ್ಯೇಕಿಸಲು ಬ್ರೇಕ್‌ ವಾಟರ್‌ ಮಾದರಿಯ ಬೃಹತ್‌ ತಡೆಗೋಡೆ ನಿರ್ಮಿಸಬೇಕಾಗುತ್ತದೆ . +ಇದರ ಒಳಗೆ ಜಿಯೋಸಿಂಥೆಟಿಕ್‌ ಲೈನರ್‌ ಹಾಕಲಾಗುತ್ತದೆ . +ಜೊತೆಗೆ ಜಿಯೋಮೆಂಬ್ರೇನ್‌ ಅಳವಡಿಸುವುದರಿಂದ ಸಿಹಿ ನೀರಿಗೆ ಉಪ್ಪು ನೀರು ಸೇರುವುದಿಲ್ಲ . +ಸಮುದ್ರ ನೀರಿನ ಸಾಂದ್ರತೆ ಅಧಿಕವಾಗಿರುವುದರಿಂದ ಮತ್ತು ಸಮುದ್ರದೊಳಗೆ ಇಳಿಜಾರು ಇರುವುದರಿಂದ ಉಪ್ಪುನೀರು ಅಣೆಕಟ್ಟು ಪಾರಾಗಿ ಜಲಾಶಯದೊಳಗೆ ಬರುವ ಸಾಧ್ಯತೆ ತೀರಾ ಕಡಿಮೆ ’ ಎಂಬ ಅಭಿಪ್ರಾಯ ಸೀತಾರಾಮ್‌ ಅವರದು.ಜಲಾಶಯದಲ್ಲಿ ವರ್ಷವಿಡೀ ಸಿಹಿ ನೀರನ್ನು ಸಂಗ್ರಹಿಸಿಡಬಹುದು . +85 ಟಿಎಂಸಿ ಅಡಿ ನೀರು ಸಂಗ್ರಹಿಸಿದರೆ ಬೆಂಗಳೂರು ಮಾತ್ರವಲ್ಲದೆ , ಇಡೀ ರಾಜ್ಯಕ್ಕೆ ಕುಡಿಯುವ ಉದ್ದೇಶಕ್ಕೆ ಬಳಸಬಹುದು . +ಕುಡಿಯುವ ನೀರಿಗಾಗಿ ತಮಿಳುನಾಡು , ಗೋವಾ ರಾಜ್ಯಗಳ ಮುಂದೆ ಗೋಗರೆಯುವ ಅಗತ್ಯವೇ ಇರುವುದಿಲ್ಲ . +ಅಲ್ಲದೆ , ಕರಾವಳಿಯ 1,900 ಹೆಕ್ಟೇರ್‌ಗೆ ಭೂಮಿಗೆ ನೀರಾವರಿ ಉದ್ದೇಶಕ್ಕೂ ಇದೇ ನೀರನ್ನು ಬಳಸಬಹುದಾಗಿದೆ ಎಂದು ವಿವರಿಸಿದರು. +ಮಂಗಳೂರು ನಗರದ ಹೊರಗೆ ನೇತ್ರಾವತಿ , ಕುಮಾರಧಾರಾ ಮತ್ತು ಗುರುಪುರ ನದಿಗಳು ಅರಬ್ಬಿ ಸಮುದ್ರವನ್ನು ಸೇರುತ್ತವೆ . +ಹೀಗೆ ನದಿ ಸೇರುವ ಜಾಗದಲ್ಲಿ ಸಮುದ್ರದ ನೀರು ಪ್ರತ್ಯೇಕಿಸಲು 500 ಮೀಟರ್‌ ಅಗಲದ ಬ್ಯಾರೇಜ್‌ ನಿರ್ಮಿಸಬೇಕಾಗುತ್ತದೆ . +ಈ ಬ್ಯಾರೇಜ್‌ ಉಪ್ಪು ನೀರು ಪ್ರವೇಶಿಸುವುದನ್ನು ತಡೆಯುವುದರ ಜೊತೆಗೆ ಸಮುದ್ರದ ಅಲೆಯನ್ನೂ ತಡೆಯುತ್ತದೆ. +ನೇತ್ರಾವತಿ , ಕುಮಾರಧಾರಾ ನದಿಗಳು ಸಮುದ್ರ ಸೇರುವ ಜಾಗದಲ್ಲಿ ಸಮುದ್ರ ತಡೆಗೋಡೆ ನಿರ್ಮಿಸಿ ಸಣ್ಣ ಅಣೆಕಟ್ಟು ನಿರ್ಮಿಸಿದರೆ 4 ಟಿಎಂಸಿ ಅಡಿ ನೀರು ಸಂಗ್ರಹಿಸಬಹುದು . +ಅಥವಾ ಸಮುದ್ರದೊಳಗೇ ಸಮಾನಾಂತರವಾಗಿ 15 ಕಿ.ಮೀ ಉದ್ದದ ತಡೆಗೋಡೆಗಳನ್ನು ನಿರ್ಮಿಸಿ ಅದನ್ನು ಕೂಡಿಸುವ ಬ್ಯಾರೇಜ್‌ ನಿರ್ಮಿಸಬೇಕು . +100 ಟಿಎಂಸಿ ಅಡಿ ಪ್ರವಾಹದ ನೀರು ಸಂಗ್ರಹಿಸಲು ಸಾಧ್ಯವಿದೆ . +ಮಳೆಗಾಲದಲ್ಲಿ ವಿಪರೀತ ಪ್ರವಾಹ ಉಂಟಾಗಿ ಅಣೆಕಟ್ಟು ತುಂಬಿದರೆ ಹೆಚ್ಚುವರಿ ನೀರನ್ನು ಕ್ರಸ್ಟ್‌ ಗೇಟ್‌ಗಳನ್ನು ತೆರೆದು ಸಮುದ್ರಕ್ಕೆ ಬಿಡಬಹುದು . +ಸಮುದ್ರ ಸೇರುವ ಭಾಗದಿಂದ ತುಸು ದೂರದಲ್ಲಿ ಬ್ಯಾರೇಜ್‌ ನಿರ್ಮಿಸಿಯೂ ನದಿ ನೀರನ್ನು ಸಂಗ್ರಹಿಸಬಹುದು . +ಸಂಪೂರ್ಣ ಸಮುದ್ರದ ಮಧ್ಯೆಯೇ ನೀರನ್ನು ಸಂಗ್ರಹಿಸಿಡಲು ಜಲಾಶಯ ನಿರ್ಮಿಸುವುದು . +ನದಿ ನೀರನ್ನು ಅದರೊಳಗೇ ಸೇರುವಂತೆ ವ್ಯವಸ್ಥೆ ಮಾಡಬಹುದು. +ಬೆಂಗಳೂರು ನಗರ ಸಮುದ್ರ ಮಟ್ಟದಿಂದ ಸುಮಾರು 950 ಮೀಟರ್‌ ಎತ್ತರದಲ್ಲಿ ಇದೆ . +ಸಮುದ್ರದ ಜಲಾಶಯದಿಂದ ಪಂಪ್‌ ಮಾಡಿದ ನೀರನ್ನು ದೊಡ್ಡ ಕೊಳವೆಗಳ ಮೂಲಕ ಎತ್ತಿನ ಹೊಳೆ ಯೋಜನೆಗಾಗಿ ಸಕಲೇಶಪುರ ಬಳಿ ನಿರ್ಮಿಸುತ್ತಿರುವ ನೀರು ಪೂರೈಕೆ ಜಾಲಕ್ಕೆ ಸೇರಿಸಿದರೆ ಅಲ್ಲಿಂದ , ಹಾಸನ , ಬೆಂಗಳೂರು , ಚಿಕ್ಕಬಳ್ಳಾಪುರ , ಕೋಲಾರದವರೆಗೂ ಪೂರೈಸಬಹುದು . +ಎತ್ತಿನ ಹೊಳೆಯಲ್ಲಿ ನೀರಿನ ಇಳುವರಿ ತೀರಾ ಕಡಿಮೆ ಇದೆ ಎಂಬ ಅಭಿಪ್ರಾಯವೂ ಇದೆ . +ಈ ಕಾರಣದಿಂದ ಸಮುದ್ರದಲ್ಲಿ ಅಣೆಕಟ್ಟಿನಿಂದ ನೀರನ್ನು ಪಂಪ್‌ ಮಾಡಿ ಪೈಪ್‌ ಮೂಲಕ ಹಾಯಿಸಿ ತರಬಹುದು ಎನ್ನುತ್ತಾರೆ ಸೀತಾರಾಮ್‌. +ಸಮುದ್ರದ ತಟದಿಂದ 10 –12 ಕಿ.ಮೀ ವ್ಯಾಪ್ತಿಯಲ್ಲಿ ಸಮುದ್ರದ ಆಳ 20 ಮೀಟರ್‌ ಇದೆ . +ನದಿ ಸಮುದ್ರ ಸೇರುವ ಜಾಗದಲ್ಲಿ ಆಳ 5 ರಿಂದ 6 ಮೀಟರ್‌ ಮಾತ್ರ . +ಇಲ್ಲಿ ಅತ್ಯಂತ ಕಡಿಮೆ ವೆಚ್ಚದಲ್ಲಿ ಜಿಯೋ ಸಿಂಥೆಟಿಕ್‌ ಬಳಸಿಕೊಂಡು ಸಮುದ್ರ ತಡೆಗೋಡೆ ಮತ್ತು ಬ್ಯಾರೇಜ್‌ ಅನ್ನು ಅತ್ಯಂತ ತ್ವರಿತಗತಿಯಲ್ಲಿ ನಿರ್ಮಾಣ ಮಾಡುವ ಆಧುನಿಕ ತಂತ್ರಜ್ಞಾನ ಲಭ್ಯವಿದೆ . +ಈ ವಿಧಾನವು ಲವಣಮುಕ್ತ ನೀರು ಪಡೆಯುವ ತಂತ್ರಜ್ಞಾನಕ್ಕಿಂತ ಕಡಿಮೆ ವೆಚ್ಚದಲ್ಲಿಯೇ ನಿರ್ಮಿಸಬಹುದು ಎನ್ನುತ್ತಾರೆ. +1 ಬಿಸಿಎಂ ( ಬಿಲಿಯನ್‌ ಕ್ಯೂಬಿಕ್‌ ಮೀಟರ್‌ ) ನೀರು ಸಂಗ್ರಹಿಸಲು ರೂ.1,500 ರಿಂದ ರೂ.2,000 ಕೋಟಿ ವೆಚ್ಚವಾಗುತ್ತದೆ . +ತಲಾ 30 ಕಿಲೊ ಲೀಟರ್‌ ನೀರು ಪಂಪ್‌ ಮಾಡಲು ರೂ.20 ವೆಚ್ಚವಾಗುತ್ತದೆ . +ಚೀನಾ , ದಕ್ಷಿಣ ಕೊರಿಯಾ ಹಲವು ದೇಶಗಳಲ್ಲಿ ಇಂತಹ ಯೋಜನೆ ಯಶಸ್ವಿಯಾಗಿದೆ . +ಭಾರತದಲ್ಲಿ ಅನುಷ್ಠಾನವಾದರೆ ರಾಜ್ಯಗಳ ಮಧ್ಯದ ಜಲವ್ಯಾಜ್ಯ ತಪ್ಪಿಸಬಹುದು . +ಇದು ಪ್ರೊ.ಟಿ.ಜಿ .ಸೀತಾರಾಮ್‌ ಅವರ ಯೋಜನೆ ಮತ್ತು ಅಭಿಪ್ರಾಯ. +ಮಂಗಳೂರಿನಲ್ಲಿ ಎತ್ತಿನಹೊಳೆ ತಿರುವು ಯೋಜನೆಗೆ ಸಂಬಂಧಿಸಿ ಮರ ಕಡಿಯಲು ಅಥವಾ ಇತರ ಯಾವುದೇ ಕಾಮಗಾರಿಗಳಿಗೆ ಕೇಂದ್ರ ಪರಿಸರ ಮತ್ತು ಅರಣ್ಯ ಇಲಾಖೆ ಪರವಾನಗಿ ನೀಡಿಲ್ಲ ಎಂದು ಅರಣ್ಯ , ಪರಿಸರ ಮತ್ತು ಹವಾಮಾನ ಬದಲಾವಣೆ ಇಲಾಖೆ ಸಚಿವ ಅನಿಲ್‌ ಮಾಧವ ಧವೆ ಹೇಳಿದರು . +ರಾಜ್ಯ ಸರ್ಕಾರದ ವತಿಯಿಂದ ಕಾಮಗಾರಿ ನಡೆಯುತ್ತಿರಬಹುದು . +ಈ ಯೋಜನೆಯ ವಿಚಾರ ರಾಷ್ಟ್ರೀಯ ಹಸಿರು ಪೀಠದ ಮುಂದಿರುವುದರಿಂದ ಮಧ್ಯಪ್ರವೇಶಿಸಿ ಯಾವುದೇ ಆದೇಶ ನೀಡುವುದು ಸಾಧುವಲ್ಲ . +ಆದ್ದರಿಂದ ಹಸಿರು ಪೀಠದ ಆದೇಶಕ್ಕೆ ಕಾಯುತ್ತಿರುವುದಾಗಿ ಹೇಳಿದರು. +ಅರಣ್ಯ ಸಚಿವ ಬಿ.ರಮಾನಾಥ ರೈ : ಎತ್ತಿನಹೊಳೆ ಯೋಜನೆಯ ಕಾಮಗಾರಿಗಾಗಿ ಮರಗಳನ್ನು ಕಡಿಯಲು ಅನುಮತಿ ನೀಡಿಲ್ಲ ಎಂಬ ಕೇಂದ್ರ ಅರಣ್ಯ ಮತ್ತು ಪರಿಸರ ಖಾತೆ ರಾಜ್ಯ ಸಚಿವ ಅನಿಲ್‌ ಮಾಧವ್‌ ದವೆ ಅವರ ಹೇಳಿಕೆಯನ್ನು ಅಲ್ಲಗಳೆದರು . +‘ ಕೇಂದ್ರ ಅರಣ್ಯ ಮತ್ತು ಪರಿಸರ ಸಚಿವಾಲಯದ ಅನುಮತಿಯನ್ನು ಪಡೆದ ಬಳಿಕವೇ ರಾಜ್ಯ ಸರ್ಕಾರ ಕಾಮಗಾರಿ ಆರಂಭಿಸಿದೆ . +ಬೃಹತ್‌ ಯೋಜನೆಗಳ ಕಾಮಗಾರಿಯನ್ನು ಕೇಂದ್ರ ಸರ್ಕಾರದ ಅನುಮತಿ ಇಲ್ಲದೇ ಆರಂಭಿಸಲು ಸಾಧ್ಯವಿಲ್ಲ . +ಅದು ಎಲ್ಲರಿಗೂ ತಿಳಿದಿರುವ ಸಾಮಾನ್ಯ ಜ್ಞಾನ . +ಎತ್ತಿನಹೊಳೆ ಯೋಜನೆ ಕುಡಿಯುವ ನೀರು ಪೂರೈಕೆ ಯೋಜನೆ ಎಂಬ ಕಾರಣಕ್ಕಾಗಿ ಅನುಮತಿ ಲಭಿಸಿದೆ . +13.79 ಹೆಕ್ಟೇರ್‌ ಅರಣ್ಯ ಜಮೀನನ್ನು ಯೋಜನೆಗಾಗಿ ಬಳಸಿಕೊಳ್ಳಲು 2016ರ ಸೆಪ್ಟೆಂಬರ್‌ 15ರ ಂದು ಕೇಂದ್ರ ಅರಣ್ಯ ಮತ್ತು ಪರಿಸರ ಇಲಾಖೆ ಒಪ್ಪಿಗೆ ಸೂಚಿಸಿದೆ ಎಂದು ಅದಕ್ಕೆ ಸಂಬಂಧಿಸಿದ ಪತ್ರವನ್ನು ಪ್ರದರ್ಶಿಸಿದರು. +1 Jan , 2017 +ಎತ್ತಿನಹೊಳೆ ಯೋಜನೆ ಆರಂಭದಿಂದಲೂ ಗೊಂದಲದ ಗೂಡಾಗಿಯೇ ಇದೆ . +ಎತ್ತಿನಹೊಳೆಯಲ್ಲಿ 24 ಟಿಎಂಸಿ ಅಡಿ ನೀರು ಸಿಗುವ ಸಾಧ್ಯತೆ ಬಗ್ಗೆ ಪರ ವಿರೋಧದ ಚರ್ಚೆಗಳು ನಡೆಯುತ್ತಿವೆ . +ಯೋಜನೆ ಅನುಷ್ಠಾನವಾದರೆ ನೇತ್ರಾವತಿ ನದಿ ಮತ್ತು ಪಶ್ಚಿಮಘಟ್ಟಕ್ಕೆ ಆಗುವ ಧಕ್ಕೆ ತಪ್ಪಿದ್ದಲ್ಲ ಎಂಬುದು ಪರಿಸರವಾದಿಗಳ ವಾದ . +ಪರಿಸರಕ್ಕೆ ಮತ್ತು ಕರಾವಳಿ ಜನರಿಗೆ ತೊಂದರೆ ಆಗದಂತೆ ನೀರನ್ನು ಶಾಶ್ವತ ಬರಪೀಡಿತ ಜಿಲ್ಲೆಗಳಿಗೆ ಹರಿಸಿ ಕುಡಿಯುವ ನೀರಿನ ಸಮಸ್ಯೆ ನೀಗಿಸಲು ಬದ್ಧ ಎಂದು ಸರ್ಕಾರ ಪ್ರತಿಪಾದಿಸುತ್ತಿದೆ . +ಎತ್ತಿನಹೊಳೆ ಯೋಜನೆ ಜಾರಿಯೇ ಅಸಹಜ ; ವಿಜಯಕುಮಾರ್‌ ಸಿಗರನಹಳ್ಳಿ ; 1 Jan , 2017 Archived 2017-01-01 at the Wayback Machine . +ಪೂರ್ವಕ್ಕೆ ಹರಿಯುವ ಕಾವೇರಿ , ಕೃಷ್ಣಾ , ಪಾಲಾರ್‌ , ಉತ್ತರ ಪಿನಾಕಿನಿ , ದಕ್ಷಿಣ ಪಿನಾಕಿನಿ ಮುಂತಾದ ನದಿಗಳಲ್ಲಿ ಹರಿಯುವ ನೀರೆಲ್ಲ ಬಳಕೆಯಾಗಿದೆ ಅಥವಾ ಎಲ್ಲೆಲ್ಲಿ ಬಳಕೆಯಾಗಬೇಕು ಎಂಬುದು ನಿಷ್ಕರ್ಷೆಯಾಗಿದೆ . +ಕೋಲಾರ ಸೇರಿದಂತೆ ಬಯಲುಸೀಮೆ ಜಿಲ್ಲೆಗಳಲ್ಲಿ ಮೇಲ್ಮೈ ನೀರು ಮತ್ತು ಅಂತರ್ಜಲದ ತೀವ್ರ ಅಭಾವವಿದೆ . +ಪಶ್ಚಿಮಕ್ಕೆ ಹರಿಯುವ ನದಿಗಳ ನೀರು ಅತಿ ಸ್ವಲ್ಪವಷ್ಟೇ ಬಳಕೆಯಾಗಿದೆ . +ಭವಿಷ್ಯದಲ್ಲಿಯೂ ಸ್ವಲ್ಪ ಮಾತ್ರ ಬಳಕೆಯಾಗುವ ಸಂಭವವಿದೆ . +ಹೀಗಾಗಿ ಅದನ್ನು ಪೂರ್ವಕ್ಕೆ ಹರಿಸುವ ಕಲ್ಪನೆ ಸಹಜವಾಗಿಯೇ ತಲೆದೋರುತ್ತದೆ . +ಎತ್ತಿನಹೊಳೆ ಯೋಜನೆ ; ನೀರಿನ ಹರಿವಿಗೆ ಅಡ್ಡಿ ಸಹಜ ; ಮಂಜುನಾಥ ಹೆಬ್ಬಾರ್‌ ; 1 Jan , 2017 Archived 2017-01-01 at the Wayback Machine.7 Jan , 2017 +ಎತ್ತಿನ ಹೊಳೆ ಯೋಜನೆಯಲ್ಲಿ ಹೊಂಗಡ ಹಳ್ಳ , ಎತ್ತಿನ ಹೊಳೆ , ಕಾಡು ಮನೆ ಹೊಳೆ , ಕೇರಿಹೊಳೆಗಳಿಗೆ ಒಟ್ಟು ಎಂಟು ಜಾಗಗಳಲ್ಲಿ ನೀರು ಸಂಗ್ರ ಹಾಗಾರಗಳನ್ನು ನಿರ್ಮಿಸಲಾಗುತ್ತಿದೆ . +ಈ ಪೈಕಿ ಆರು ಸಂಗ್ರಹಾಗಾರಗಳ ಕಾಮಗಾರಿ ಪೂರ್ಣಗೊಂಡಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು . +ಕೋಲಾರ , ಚಿಕ್ಕಬಳ್ಳಾಪುರ , ರಾಮ ನಗರ , ಬೆಂಗಳೂರು ಗ್ರಾಮಾಂತರ , ತುಮಕೂರು , ಚಿಕ್ಕಮಗಳೂರು ಮತ್ತು ಹಾಸನ ಜಿಲ್ಲೆಗಳ 64 ಲಕ್ಷ ಜನರಿಗೆ ಕುಡಿಯುವ ನೀರು ಪೂರೈಸುವ ಈ ಯೋಜನೆ , ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಗಳಲ್ಲಿ ಒಂದು . +ಎತ್ತಿನ ಹೊಳೆ ಯೋಜನೆಯಲ್ಲಿ 24 ಟಿಎಂಸಿ ಅಡಿ ನೀರು ಲಭ್ಯತೆ ಬಗ್ಗೆ ಇರುವ ಅನುಮಾನಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಕೆಲಸ ನಿರ್ವಹಿಸಬೇಕು ಎಂದು ಜಲ ಸಂಪನ್ಮೂಲ ಸಚಿವ ಎಂ.ಬಿ .ಪಾಟೀಲ ಹೇಳಿದರು. +ನೇತ್ರಾವತಿ ಹಾಗೂ ಕುಮಾರಧಾರ ನದಿಗಳಿಗೆ ನೀರೊದಗಿಸುವ ಐದು ಹಳ್ಳಗಳ ನೀರನ್ನು ಬಯಲುನಾಡಿನ ಕಡೆಗೆ ಹರಿಯಿಸುವ ಯೋಜನೆ ಇದು . +ನೇತ್ರಾವತಿ , ಕುಮಾರಧಾರಾ ತಿರುವು ಯೋಜನೆ ಇದಲ್ಲ . +ಏಕೆಂದರೆ ವಾರ್ಷಿಕ ಸರಾಸರಿ ನೇತ್ರಾವತಿಯಲ್ಲಿ 548 ಟಿಎಂಸಿ ಅಡಿ ಹಾಗೂ ಕುಮಾರಧಾರಾದಲ್ಲಿ 220 ಟಿಎಂಸಿ ಅಡಿ ನೀರಿನ ಹರಿವು ಇದೆ . +ಈ ಪೈಕಿ ಎತ್ತಿನ ಹೊಳೆಗೆ ಬಳಕೆಯಾಗುತ್ತಿರುವುದು 24.01 ಟಿಎಂಸಿ ಅಡಿ ಮಾತ್ರ . +ಅಂದರೆ 768 ಟಿಎಂಸಿ ಅಡಿಯಲ್ಲಿ ಅತ್ಯಲ್ಪ ನೀರನ್ನು ಮಾತ್ರ ಎತ್ತಿನಹೊಳೆ ಯೋಜನೆಗೆ ಕೆಂಪುಹೊಳೆ , ಹೊಂಗದ ಹಳ್ಳ , ಕೇರಿಹೊಳೆ , ಕಾಡುಮನೆ ಹೊಳೆ–1 , 2 ಹಾಗೂ ಎತ್ತಿನ ಹೊಳೆಯ ಎರಡು ಉಪಹೊಳೆಗಳ ನೀರನ್ನು ಬಳಸಿಕೊಳ್ಳಲಾಗುತ್ತದೆ . +ಜಲಾನಯನ ಪ್ರದೇಶದಲ್ಲಿ ಲಭ್ಯವಾಗುವ 34.26 ಟಿಎಂಸಿ ಅಡಿ ನೀರಿನ ಪೈಕಿ 24.01 ಟಿಎಂಸಿ ನೀರು ಬಳಸಿಕೊಳ್ಳಲಾಗುತ್ತದೆ . +ಹೊಳೆಗಳ ಹರಿವಿನ ಮಧ್ಯೆ ಕಿರು ಕಟ್ಟೆ ಕಟ್ಟಿ ಸುಮಾರು 940 ಅಡಿ ಎತ್ತರಕ್ಕೆ ಪಂಪ್‌ ಮಾಡಿ ನೀರು ಹರಿಸಲಾಗು ತ್ತದೆ . +ಸಕಲೇಶಪುರ ತಾಲ್ಲೂಕಿನಿಂದ ಕೋಲಾರದ ಶ್ರೀನಿವಾಸಪುರದವರೆಗೆ ನಾನಾ ಹಂತಗಳಲ್ಲಿ ಯೋಜನೆ ಅನುಷ್ಠಾನ ವಾಗಬೇಕು . +260 ಕಿ.ಮೀ ಉದ್ದ ತೆರೆದ ಕಾಲುವೆ ಹಾಗೂ ಪೈಪ್‌ಲೈನ್ ಮೂಲಕ ನೀರು ಹರಿಯುತ್ತದೆ . +ಕಾಲುವೆಯ ಮಾರ್ಗದುದ್ದಕ್ಕೂ ಬರುವ ತಾಲ್ಲೂಕುಗಳ ಕೆರೆ ತುಂಬಿಸುವುದು ಯೋಜನೆಯ ರೂಪುರೇಷೆ . +ಒಮ್ಮೆ ಏತನೀರಾವರಿ ಮೂಲಕ ನೀರೆತ್ತಿ ನಾಲೆಗೆ ಹರಿಸಿದರೆ ತುಮಕೂರು ಜಿಲ್ಲೆ ಕೊರಟಗೆರೆ ತಾಲ್ಲೂಕಿನಲ್ಲಿ ನಿರ್ಮಾಣವಾಗಲಿರುವ ಬೈರಗೊಂಡ್ಲು ಜಲಾಶಯದವರೆಗೆ ನೀರು ಗುರುತ್ವಾಕರ್ಷಣೆ ಬಲದ ಮೇಲೆ ಹರಿಯಲಿದೆ . +ಕುಂದಣ ಎಂಬಲ್ಲಿ 70 –80 ಮೀಟರ್ ನೀರನ್ನು ಮತ್ತೆ ಪಂಪ್‌ ಮೂಲಕ ಮೇಲೆತ್ತಿ ಚಿಕ್ಕಬಳ್ಳಾಪುರ–ಕೋಲಾರ ಜಿಲ್ಲೆಗೆ ಹರಿಸಲಾಗುತ್ತದೆ . +ಬೈರಗೊಂಡ್ಲುವಿನವರೆಗೆ ಕಾಮಗಾರಿ ಅಂತಿಮಗೊಂಡಿದ್ದು , ಜಲಾಶಯ ಕಾಮಗಾರಿ ಗುತ್ತಿಗೆ ನೀಡಬೇಕಿದೆ . +ಕೋಲಾರ–ಚಿಕ್ಕಬಳ್ಳಾಪುರ ನಾಲೆ ಮತ್ತು ಫೀಡರ್ ಕಾಲುವೆಗಳ ಅಂದಾಜು ಪ್ರಕ್ರಿಯೆ ಸದ್ಯ ನಡೆಯುತ್ತಿದೆ. +ಬರದ ಬೇಗೆಯಿಂದ ಬಳಲುತ್ತಾ , ಕುಡಿಯುವ ನೀರಿಗೂ ಹಾಹಾಕಾರ ಪಡುತ್ತಿರುವ ಬಯಲುನಾಡಿನ ಜಿಲ್ಲೆಗಳಿಗೆ ನೀರೊದಗಿಸುವ ಆಶಯದಿಂದ ಅಂದು ಜಲಸಂಪನ್ಮೂಲ ಸಚಿವರಾಗಿದ್ದ ಬಸವರಾಜ ಬೊಮ್ಮಾಯಿ ಈ ಯೋಜನೆ ರೂಪಿಸಿದರು . +ನೇತ್ರಾವತಿ ಹಾಗೂ ಕುಮಾರಧಾರ ನದಿಗಳಿಗೆ ನೀರೊದಗಿಸುವ ಐದು ಹಳ್ಳಗಳ ನೀರನ್ನು ಬಯಲುನಾಡಿನ ಕಡೆಗೆ ಹರಿಯಿಸುವ ಯೋಜನೆ ಇದು . +ಹಾಗಂತ ನೇತ್ರಾವತಿ ,ಕುಮಾರಧಾರಾ ತಿರುವು ಯೋಜನೆ ಇದಲ್ಲ . +ಏಕೆಂದರೆ ವಾರ್ಷಿಕ ಸರಾಸರಿ ನೇತ್ರಾವತಿಯಲ್ಲಿ 548 ಟಿಎಂಸಿ ಅಡಿ ಹಾಗೂ ಕುಮಾರಧಾರಾದಲ್ಲಿ 220 ಟಿಎಂಸಿ ಅಡಿ ನೀರಿನ ಹರಿವು ಇದೆ . +ಈ ಪೈಕಿ ಎತ್ತಿನ ಹೊಳೆಗೆ ಬಳಕೆಯಾಗುತ್ತಿರುವುದು 24.01 ಟಿಎಂಸಿ ಅಡಿ ಮಾತ್ರ . +ಅಂದರೆ 768 ಟಿಎಂಸಿ ಅಡಿಯಲ್ಲಿ ಅತ್ಯಲ್ಪ ನೀರನ್ನು ಮಾತ್ರ ಪೂರ್ವದ ಕಡೆಗೆ ಹರಿಸಲಾಗುತ್ತದೆ . +ಎತ್ತಿನಹೊಳೆ ಯೋಜನೆಗೆ ಕೆಂಪುಹೊಳೆ , ಹೊಂಗದ ಹಳ್ಳ , ಕೇರಿಹೊಳೆ , ಕಾಡುಮನೆ ಹೊಳೆ–1,2 ಹಾಗೂ ಎತ್ತಿನ ಹೊಳೆಯ ಎರಡು ಉಪಹೊಳೆಗಳ ನೀರನ್ನು ಬಳಸಿಕೊಳ್ಳಲಾಗುತ್ತದೆ . +ಜಲಾನಯನ ಪ್ರದೇಶದಲ್ಲಿ ಲಭ್ಯವಾಗುವ 34.26 ಟಿಎಂಸಿ ಅಡಿ ನೀರಿನ ಪೈಕಿ 24.01 ಟಿಎಂಸಿ ನೀರು ಬಳಸಿಕೊಳ್ಳಲಾಗುತ್ತದೆ. +ಹೊಳೆಗಳ ಹರಿವಿನ ಮಧ್ಯೆ ಕಿರು ಕಟ್ಟೆ ಕಟ್ಟಿ ಸುಮಾರು 940 ಅಡಿ ಎತ್ತರಕ್ಕೆ ಪಂಪ್‌ ಮಾಡಿ ನೀರು ಹರಿಸಲಾಗು ತ್ತದೆ . +ಸಕಲೇಶಪುರ ತಾಲ್ಲೂಕಿನಿಂದ ಕೋಲಾರದ ಶ್ರೀನಿ ವಾಸಪುರದವರೆಗೆ ನಾನಾ ಹಂತಗಳಲ್ಲಿ ಯೋಜನೆ ಅನು ಷ್ಠಾನ ವಾಗಬೇಕಿದೆ . +260 ಕಿ.ಮೀ ಉದ್ದ ತೆರೆದ ಕಾಲುವೆ ಹಾಗೂ ಪೈಪ್‌ಲೈನ್ ಮೂಲಕ ನೀರು ಹರಿಯುತ್ತದೆ . +ಕಾಲುವೆಯ ಮಾರ್ಗದುದ್ದಕ್ಕೂ ಬರುವ ತಾಲ್ಲೂಕುಗಳ ಕೆರೆ ತುಂಬಿಸುವುದು ಯೋಜನೆಯ ರೂಪುರೇಷೆ . +ಒಮ್ಮೆ ಏತನೀರಾವರಿ ಮೂಲಕ ನೀರೆತ್ತಿ ನಾಲೆಗೆ ಹರಿಸಿದರೆ ತುಮಕೂರು ಜಿಲ್ಲೆ ಕೊರಟಗೆರೆ ತಾಲ್ಲೂಕಿನಲ್ಲಿ ನಿರ್ಮಾಣವಾ ಗಲಿರುವ ಬೈರಗೊಂಡ್ಲು ಜಲಾಶಯದವರೆಗೆ ನೀರು ಗುರುತ್ವಾಕರ್ಷಣೆ ಬಲದ ಮೇಲೆ ಹರಿಯಲಿದೆ . +ಕುಂದಣ ಎಂಬಲ್ಲಿ 70 –80 ಮೀಟರ್ ನೀರನ್ನು ಮತ್ತೆ ಪಂಪ್‌ ಮೂಲಕ ಮೇಲೆತ್ತಿ ಚಿಕ್ಕಬಳ್ಳಾಪುರ–ಕೋಲಾರ ಜಿಲ್ಲೆಗೆ ಹರಿಸಲಾಗುತ್ತದೆ . +ಬೈರಗೊಂಡ್ಲುವಿನವರೆಗೆ ಕಾಮಗಾರಿ ಅಂತಿಮಗೊಂಡಿದ್ದು , ಜಲಾಶಯ ಕಾಮಗಾರಿ ಗುತ್ತಿಗೆ ನೀಡಬೇಕಿದೆ . +ಕೋಲಾರ–ಚಿಕ್ಕಬಳ್ಳಾಪುರ ನಾಲೆ ಮತ್ತು ಫೀಡರ್ ಕಾಲುವೆಗಳ ಅಂದಾಜು ಪ್ರಕ್ರಿಯೆ ಸದ್ಯ ನಡೆಯುತ್ತಿದೆ. +ಭೂ ಪರಿಹಾರದಲ್ಲಿ ನುಸುಳಿದ ರಾಜಕಾರಣ ಬೈರಗೊಂಡ್ಲು ಜಲಾಶಯಕ್ಕೆ ನಾನಾ ಅಡ್ಡಿ ; ಮಂಜುನಾಥ್‌ ಹೆಬ್ಬಾರ್‌ ; d : 08 ಮಾರ್ಚ್ 2020 , ಕರ್ನಾಟಕದ ನದಿಗಳು +ಕಳಸಾ - ಬಂಡೂರಿ ನಾಲಾ ಯೋಜನೆ +ಕಸ್ತೂರಿರಂಗನ್ ವರದಿ ಮತ್ತು ಪಶ್ಚಿಮ ಘಟ್ಟ ಸಂರಕ್ಷಣೆಯೋಜನೆಗೆ ಚಾಲನೆ ನೀಡಿದ ವರ್ಷದಲ್ಲಿ ರೂ.12,912 ಕೋಟಿ ಇದ್ದ ಮೊತ್ತ ಈಗ ರೂ.24 , 982 ಕೋಟಿ ತಲುಪಿದೆ . +2012ರಲ ್ಲಿ ರೂಪುಗೊಂಡು 2014ರ ಫೆಬ್ರುವರಿಯಲ್ಲಿ ಸರ್ಕಾರವು ಆಡಳಿತಾತ್ಮಕ ಒಪ್ಪಿಗೆ ನೀಡಿದ ಈ ಯೋಜನೆ.