diff --git "a/Data Collected/Kannada/MIT Manipal/\340\262\252\340\262\260\340\262\277\340\262\270\340\262\260_\340\262\266\340\262\277\340\262\225\340\263\215\340\262\267\340\262\243.txt" "b/Data Collected/Kannada/MIT Manipal/\340\262\252\340\262\260\340\262\277\340\262\270\340\262\260_\340\262\266\340\262\277\340\262\225\340\263\215\340\262\267\340\262\243.txt" new file mode 100644 index 0000000000000000000000000000000000000000..15426cd48dddb3029fd94a394b557cdb9ff6dd25 --- /dev/null +++ "b/Data Collected/Kannada/MIT Manipal/\340\262\252\340\262\260\340\262\277\340\262\270\340\262\260_\340\262\266\340\262\277\340\262\225\340\263\215\340\262\267\340\262\243.txt" @@ -0,0 +1,51 @@ +ಪರಿಸರ ಶಿಕ್ಷಣದ ಕಲ್ಪನೆ ಪ್ರಪ್ರಥಮವಾಗಿ ಮೂಡಿ ಬ೦ದದ್ದು ೧೯೭೨ರಲ್ಲಿ ಮಾನವನು ಸಮಾಜಜೀವಿ ಎನ್ನುವ ಹಾಗೆ ಆತನು ಪರಿಸರ ಅಥವಾ ಪ್ರಕೃತಿಯ ಕೂಸು. +ಅವನ ಸುತ್ತಮುತ್ತಲು ವೈವಿದ್ಯಮಯವಾದ ನಿಸರ್ಗದ ಸೊಬಗು ಇದೆ . +ಅ೦ದರೆ ಆತನ ಸುತ್ತಮುತ್ತಲು ಹಲವಾರು ಮರಗಿಡಗಳಿವೆ. +ವಿವಿಧ ಪ್ರಕಾರದ ಪ್ರಾಣಿಪಕ್ಷಿಗಳಿವೆ.ಅಲ್ಲದೆ ವೈವಿಧ್ಯಮಯವಾದ ಕೀಟ ಪ್ರಪಂಚವಿದೆ. +ಈ ಜೀವಿಗಳೇ ಅಲ್ಲದೆ ಹಲವಾರು ಮಹಾನದಿ , ಸಾಗರ ಸರೋವರಗಳಿವೆ ; ದೊಡ್ಡ ದೊಡ್ಡ ಪರ್ವತ ಶಿಖರಗಳಿವೆ ; ಗಾಳಿ , ಬೆಳಕು ಹಾಗೂ ಖನಿಜ ಸ೦ಪತ್ತನ್ನೊಳಗೊ೦ಡ ಪ್ರಕೃತಿ ಮಾತೆ ಇದ್ದಾಳೆ . +ಪರಿಸರ ಶಿಕ್ಷಣ ನಮ್ಮ ಸುತ್ತಮುತ್ತಲಿನ ಪರಿಸರ ಸಮಸ್ಯೆಗಳನ್ನು ಗುರುತಿಸಿ ಆ ಸಮಸ್ಯೆಗಳಿಗೆ ಪರಿಹಾರ ಹುಡುಕುವ ಸಾಮರ್ಥ್ಯವನ್ನು ಬಲಪಡಿಸುವ ಒಂದು ಕಲಿಕೆಯ ಸಾಧನವಾಗಿದೆ . +ಪರಿಸರಕ್ಕೆ ವೈಜ್ಞಾನಿಕ ನಿರೂಪಣೆಯನ್ನು ನೀಡುವುದಾದರೆ, ಜೀವಿಯ ಮೆಲೆ ಜೈವಿಕವಾಗಿ ಪರಿಣಾಮವನ್ನು ಬೀರುವ೦ತ ಎಲ್ಲಾ ಬಾಹ್ಯ ಕಾರಣಗಳನ್ನು ಒಟ್ಟಾರೆ ಪರಿಸರ ಎಂದು ಕರೆಯಬಹುದಾಗಿದೆ. +ಪರಿಸರ ಎಂಬ ಪದವನ್ನು ಶಬ್ದಶಃವಾಗಿ ಅರ್ಥೈಸಿದಾಗ ಸುತ್ತುವರಿದ೦ಥದ್ದು ಅಥವಾ ಆವರಿಸಿರುವ೦ಥದ್ದು ಎ೦ದಾಗುತ್ತದೆ.ಅಂದರೆ ವಿವಧ ಬಾಹ್ಯ ವಸ್ತುಗಳಿ೦ದ ಕೂಡಿ ಆದ೦ತಹ ಮೊತ್ತವೇ ಪರಿಸರ . +ಭೌತಿಕ ಪರಿಸರ : ಇದು ನೆಲ , ಜಲ , ಗಾಳಿ , ಗುಡ್ಡ , ಹೊಳೆ , ಕಾಡು , ಸರೋವರ , ಖನಿಜ , ಗ್ರಹ , ನಕ್ಷತ್ರ ಮುಂತಾದವುಗಳನ್ನು ಒಳಗೊಂಡಿದೆ . +ಜೀವಿಗಳನ್ನೊಳಗೊಂಡ ಪರಿಸರ ಇದಾಗಿದೆ . +ಪ್ರಾಣಿಗಳು, ಸಸ್ಯಗಳು ಹಾಗು ಇತರೆ ಪ್ರತಿಯೊಂದು ಜೀವಿಯ ಉತ್ಪತ್ತಿಗೆ ನೆರವು ನೀಡುತ್ತದೆ . +ವಿವಿದ ವಸ್ತುಗಳು, ಒಡವೆಗಳು, ಮನೆ - ಮಾರು, ಸಂಚಾರ - ಸೌಲಭ್ಯಗಳು, ಸಂಪರ್ಕ - ಸಾಧನೆಗಳು ಹಾಗು ಲಾಭ ನೀಡಬಲ್ಲ ಸಾಕುಪ್ರಾಣಿಗಳು ; ವ್ಯಾಪಾರ, ವ್ಯವಸಾಯ ಹೀಗೆ ಮುಂತಾದವುಗಳನ್ನು ಒಳಗೊ೦ಡಿದೆ . +ಇದೂ ಸಹ ಮಾನವನ ಬದುಕಿಗೆ ಅತ್ಯಾವಶ್ಯಕವಾದ ಪರಿಸರವಾಗಿದೆ. +ಸಮಾಜದಲ್ಲಿ ಜಾರಿಯಲ್ಲಿರುವ ವಿವಿಧ ಆಚಾರ ವಿಚಾರಗಳು ಪಧ್ಧತಿಗಳು ಸಂಪ್ರದಾಯಗಳು, ಧರ್ಮ ಕಾನೂನು ಪರಂಪರೆ, ಲೋಕಾರೂಡಿ ನೈತಿಕ ನಿಯಮ, ನಂಬುಗೆ, ಸಾಹಿತ್ಯ, ಕಲೆ ಮುಂತಾದವುಗಳು ಸಾಮಾಜಿಕ ಪರಿಸರದ ಅಂಗಗಳಾಗಿವೆ . +ಪರಿಸರದಲ್ಲಿನ ಗಾಳಿ , ನೀರು , ಭೂಮಿ ಇವುಗಳ ಭೌತಿಕ , ರಾಸಾಯನಿಕ ಮತ್ತು ಜೈವಿಕ ಗುಣಲಕ್ಷಣಗಳಲ್ಲಿ ಅನಪೇಕ್ಷಿತ ಬದಲಾವಣೆಗಳಾಗುವುದನ್ನು ಪರಿಸರ ಮಾಲಿನ್ಯ ಎಂದು ಕರೆಯುತ್ತಾರೆ . +ಪ್ರಸ್ತುತ ದಿನಗಳಲ್ಲಿ ಮಾನವನಿಗೆ ಕೈಗಾರಿಕ ಚಟುವಟಿಕೆಗಳಲ್ಲಿ ಅತ್ಯುಪಯುಕ್ತವೆನಿಸಿದ ಸಾಮಾಗ್ರಿಗಳು ಅಪಾರ ಸಂಖ್ಯೆಯಲ್ಲಿ ಉತ್ಪಾದನೆಗೊಳ್ಳುತ್ತಿವೆ . +ಇದು ನಮಗೆ ಅಭಿವೃದ್ದಿಯ ಸಂಕೇತವಾಗಿ ಗೋಚರಿಸಿದರೆ ಈ ಚಟುವಟಿಕೆಗಳು ನಮಗೂ ಹಾಗೂ ನಮ್ಮ ಪರಿಸರಕ್ಕೆ ಹಾನಿಕರವಾಗಿ ಪರಿಣಮಿಸಿ ಅಪಾಯದ ಗಂಟೆಯನ್ನು ಬಾರಿಸುತ್ತಿದೆ . +ವಾಯು ಮಂಡಲದಲ್ಲಿ ಯಾವುದೇ ಘಟಕದ ಸಾರತೆ ಹೆಚ್ಚಿ ಅದರಿಂದ ಜೀವಿಗಳ ಪರಿಸರಕ್ಕೆ ಹಾನಿಯುಂಟಾದರೆ ಅಂತಹ ಪರಿಸ್ಥಿತಿಯನ್ನು ವಾಯುಮಾಲಿನ್ಯ ಎಂದು ಕರೆಯುತ್ತಾರೆ . +ಜೀವನಾಧಾರವಾದ ಆಮ್ಲಜನಕದ ಆಗರ ವಾಯುಮಂಡಲದಲ್ಲಿನ ವಿವಿಧ ಅನಿಲಗಳ ಮಿಶ್ರಣವೇ ವಾಯುಮಾಲಿನ್ಯದ ಕಾರಕಗಳು ಅಂದರೆ ಉದಾಹರಣೆಗೆ ಧೂಳು . +ಓಝೋನ್ ಒಂದು ಅನಿಲವಾಗಿದ್ದು, ಅದು ಸ್ವತಂತ್ರವಾಗಿ ಗಾಳಿಯಲ್ಲಿ ಚಿಕ್ಕ ಪ್ರಮಾಣದಲ್ಲಿ ಅಸ್ಥಿತ್ವದಲ್ಲಿರುವ ಹಾಗೂ ಮೂರು ಆಮ್ಲಜನಕದ ಪರಮಾಣುಗಳ ತ್ರಿಬಂಧ ಅಣುಗಳಿಂದ ಕೂಡಿರುತ್ತದೆ. +ಭೂಮಿಯಿಂದ ಸುಮಾರು ೧೦ - ೩೦ಕಿ.ಮಿ ಎತ್ತರದಲ್ಲಿ ಸ್ಟ್ರೇಟೋಗೋಳದಲ್ಲಿ ಹೊರಹೊಮ್ಮುವ ಹಾನಿಕಾರಕ, ಅತಿ ನೇರಳೆ ಕಿರಣಗಳಿಂದ ಜೀವ ಸಂಕುಲವನ್ನು ರಕ್ಷಿಸುವ ಅನಿಲ ಇದಾಗಿದೆ. +ಅಂತೆಯೇ ಅದನ್ನು,"ನೈಸರ್ಗಿಕ ಭೂರಕ್ಷಕ ಕೊಡೆ " ಅಥವಾ " ಸೌರ ಕೊಡೆ " ಇತ್ಯಾದಿ ಎನ್ನುತ್ತಾರೆ. +ಮಾನವನ ಆರೊಗ್ಯವನ್ನು ಆಮ್ಲಜನಕ ಎಂಬ ಅನಿಲ ನಿರ್ಣಯಿಸಿದರೆ , ಪೃಥ್ವಿಯ ಆರೋಗ್ಯ ವನ್ನು ಓಝೋನ್ ಎಂಬ ಅನಿಲ ನಿರ್ಣಯಿಸುತ್ತದೆ . +ಜೆಟ್ ವಿಮಾನಗಳಲ್ಲಿನ ಅಪೂರ್ಣ ದಹನಕ್ಕೊಳಗಾದ ಇಂಧನ :ಕ್ಲೋರೋಫ಼್ಲೂರೋ ಕಾರ್ಬನ್ ಗಳು, ಮೀತೇನ್ ಗಳೂ ಓಝಾನ್ ವಲಯಕ್ಕೆ ಅಪಾಯಕಾರಿಗಳೆಸಿದೆ . +ಇದರ ನಾಶದಿಂದ ಅತೀ ನೇರಳೇ ಕಿರಣಗಳು ಭೂಮಿಯನ್ನು ಸುಲಭವಾಗಿ ತಲುಪುತ್ತವೆ . +ವಿಜ್ಞಾನಿಯ ಪ್ರಕಾರ ಸ್ಟ್ರೇಟೋವಲಯದಲ್ಲಿರುವ ಓಝೋನ್ ಮೊತ್ತದಲ್ಲಿ ಶೇಕಡ ೧೦ರಷ್ಟು ಸೋರಿದರೂ , ಶೇಕಡ ೨೫೦ರಿಂದ ೫೦೦ರಷ್ಟು ಅತೀ ನೇರಳೇ ಕಿರಣಗಳು ಮಾನವನ ಶರೀರವನ್ನು ಭೇದಿಸುತ್ತದೆ. +ಅಗಾಧ ಪ್ರಮಾಣವು ಫೋಟಾನ್ ಕಿರಣಗಳನ್ನು ನಮ್ಮ ಚರ್ಮ ರಾಸಾಯನಿಕ ಬಂಧಕಗಳು ಹೀರಿಕೊಂಡಾಗ ಡೀ ಎನ್ ಎ ವಿಭಜನೆ ಪ್ರಚಂಡ ವೇಗದಲ್ಲಿ ಉಂಟಾಗಿ ಚರ್ಮದ ಕ್ಯಾನ್ಸರ್ ರೊಗಕ್ಕೆ ಬಲಿಯಾಗುವುದು ಶತಃಸಿದ್ದ . +ಈ ಭೂಮಿಯು ಅಥವಾ ಭೂಮಿಯ ಮೇಲಿನ ಅನಿಲಗಳು ಸೂರ್ಯನ ವಿಕಿರಣಗಳನ್ನು ಹೀರಿಕೊಳ್ಳದ್ದಿದ್ದರೆ ಭೂಮಿಯು ಅತಿ ಹೆಚ್ಚಿನ ಶೀತಕ್ಕೊಳಗಾಗಿ ಜೀವಿಗಳ ಜೀವನ ಅಸಹನೀಯವಾಗುತ್ತದೆ . +ಒಂದುವೇಳೆ ಈ ಭೂಮಿಯು ಅಥವಾ ಭೂಮಿಯ ಮೇಲಿನ ಅನಿಲಗಳು ಸೂರ್ಯನ ವಿಕಿರಣಗಳನ್ನು ಗರಿಷ್ಟ ಪ್ರಮಾಣದಲ್ಲಿ ಹೀರಿಕೊಂಡರೆ ಭೂಮಿಯು ಅತಿ ಹೆಚ್ಚಿನ ಶಾಖಕ್ಕೊಳಗಾಗಿ ಜೀವಿಗಳ ಜೀವನ ಅಸಹನೀಯವಾಗುತ್ತದೆ . +ಮಾನವನ ಪ್ರಕೃತಿಯ ಮೇಲಿನ ನಿರಂತರ ಅತ್ಯಾಚಾರದಿಂದಾಗಿ ವಾತಾವರಣದಲ್ಲಿ ಇಂಗಾಲದ ಡೈಆಕ್ಸೈಡ್ ದ ಪ್ರಮಾಣ ವಿಪರೀತ ಹೆಚ್ಚಳಗೊಂಡು ವರ್ಷದಿಂದ ವರ್ಷಕ್ಕೆ ನಮ್ಮ ಭೂಮಿಯು ಕ್ರಮೇಣವಾಗಿ ಶಾಖದ ಕರಿನೆರಳಿಗೆ ತುತ್ತಾಗುತ್ತಿದೆ . +ವಿಶ್ವದಾದ್ಯಂತ ಕೈಗಾರಿಕೆಗಳ ಶಾಖೋತ್ಪನ್ನ ವಿದ್ಯುತ್ ಘಟಕಗಳ ಹಾಗೂ ವಾಹನಗಳ ಅನಪೇಕ್ಷಿತವಾಗಿ ವಾತಾವರಣದಲ್ಲಿ ಸಂಚಯನವಾಗುತ್ತಲಿದೆ . +ಜೀವಿಗಳ ಮೇಲೆ ಗುರುತರ ಪರಿಣಾಮ ಉಂಟಾಗುತ್ತದೆ . +ಮಾನವನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ . +ಮಳೆಯ ಮಾದರಿಯಲ್ಲಿ ಬದಲಾವಣೆಯುಂಟಾಗುತ್ತದೆ . +ಸಮುದ್ರದ ಮಟ್ಟದಲ್ಲಿ ಏರಿಕೆ ಉಂಟಾಗುತ್ತದೆ . +ಕೃಷಿ ಸಂಪತ್ತು ವಿನಾಶದ ಅಂಚಿಗೆ ಬಂದು ತಲುಪುತ್ತದೆ. +ಸಾಗರದ ಮೇಲ್ಪದರನ್ನು ಬಿಸಿಗೊಳಿಸುವ ಪ್ರಕೃತಿಯ ಒಂದು ಬಿರುಗಾಳಿಯೇ -" ಎಲ್ ನಿ ನೋ ". +ಸಾಮನ್ಯವಾಗಿ ಪ್ರತಿ ಎರಡರಿಂದ ಏಳು ವರ್ಷಗಳ ಅಂತರದಲ್ಲಿ ಸೃಷ್ಟಿಯಾಗುತ್ತಲೇಯಿರುವ ಇದು ಒಂದು ಕಡೆ ಭೀಕರೋಪಾದಿಯ ಕ್ಷಾಮವನ್ನು ಸೃಷ್ಟಿಸಿದರೆ , ಮತ್ತೊಂದು ಕಡೇ ರುದ್ರ ಭಯಾನಕ ಜಲಾಪ್ರಳಯವನ್ನೇ ಹುಟ್ಟಿಸಿ ಪ್ರಕೃತಿಯನ್ನು ನಜ್ಜು ಗುಜ್ಜು ಮಾಡಿಬಿಡುತ್ತದೆ . +ಸಾಮನ್ಯವಾಗಿ ಡಿಸ್ಸೆಂಬರ್ ತಿಂಗಳಿನಲ್ಲಿ ನಿಧಾನವಾಗಿ ತಲೆಯೆತ್ತುವ ಈ "ಎಲ್ ನಿ ನೋ " ಪ್ರಕ್ರಿಯೇ ಏಪ್ರಿಲ್ ತನಕ ಮುಂದುವರೆಯುತ್ತದೆ . +ಶಾಂತ ಸಾಗರದ ಮೇಲ್ಬಾಗವನ್ನು ತಂಪು ಗೊಳಿಸುವ ಇದು ಭಾರತದ ಪಾಲಿಗಂತು ಉತ್ತಮ ಸಂಗತಿ - "ಲಾ ನಿನೋ " . +"ಎಲ್ ನಿ ನೋ " ಭೂಮಂಡಲಕ್ಕೆ ವಿಪತ್ಕಾರಿಯಾಗಿದ್ದರೆ , "ಲಾನಿನೋ " ಭೂಮಂಡಲಕ್ಕೆ ಒಂದು ದೃಷ್ಟಿಯಲ್ಲಿ ವರದಾನವಾಗಿ ಪರಿಣಮಿಸಿದೆ. +ಅಂದರೆ ಕ್ಷಾಮಪೀಡಿತ ಪ್ರದೇಶಗಳಿಗೆ ನೆಮ್ಮದಿಯ ಭವವನ್ನುಂಟು ಮಾಡುತ್ತದೆ. +ಆದ ಕಾರಣ ಎಲ್ ನಿ ನೋ "ಮತು " ಲಾ ನಿನೋ " ಗಳನ್ನು ಭೂಮಾತೆಯ ಗರ್ಬದಿಂದ ಜನ್ಮವೆತ್ತಿದ ಎರಡು " ವಿಭಿನ್ನ ಸ್ವಭಾವದ ಎರಡು ಕೂಸುಗಳು ಎಂದು ಕರೆಯಲಾಗಿದೆ +ಪರಿಸರ ಪ್ರಜ್ಞೆ ಜೀವಜಾಲವನ್ನು ಸೃಜಿಸಿದವನು ಮಾನವನಲ್ಲ . +ಅವನು ಆ ಜಾಲದಲ್ಲಿ ಒಂದು ಎಳೆ ಮಾತ್ರ +ಪರಿಸರ ಎಂಬ ಈ ಜೀವಜಾಲದಲ್ಲಿ ಜೀವಿಗಳು ಒಂದನ್ನೊಂದು ಪ್ರತ್ಯಕ್ಷ ಅಥವ ಪರೋಕ್ಷವಾಗಿ ಅವಲಂಬಿಸಿ ಪರಸ್ಪರ ಪ್ರಭಾವಿಸುತ್ತಿರಿತ್ತವೆ . +ಈ ರೀತಿಯ ಪರಸ್ಪರ ಅವಲಂಬನೆಯು ಸಕಲ ಜೀವಿಗಳನ್ನೂ ಆಹಾರ ಸರಪಳಿಯ ರೂಪದಲ್ಲಿ ಬೆಸೆದು ,ಅವುಗಳ ಪರಸ್ಪರ ಪ್ರಭಾವಗಳನ್ನು ಇನ್ನು ನಿಕಟಗೊಳಿಸಿ ಜೀವಜಾಲವನ್ನಾಗಿಸಿದೆ . +ಜೈವಿಕ ವೈವಿಧ್ಯತೆಯನ್ನು ಕಾಪಡುವುದು . +ವಿಷಪೂರಿತ ವಸ್ತುಗಳ ಮತ್ತು ತ್ಯಾಜ್ಯಗಳ ಅನಧಿಕೃತ ಮಾರಾಟವನ್ನು ತಡೆಗಟ್ಟುವುದು ಪರಿಸರಕ್ಕೆ ಹಾನಿಯಾಗದ ಅಗ್ಗವಾದ ಶಕ್ತಿಮೂಲಗಳ ಅನ್ವೇಷಣೆ +ಭೂ ಸಂಪನ್ಮೂಲಗಳಾದ ಅರಣ್ಯ , ಮಣ್ಣು ಗಳ , ಭದ್ರತೆಯನ್ನು ಸಂರಕ್ಷಿಸುವುದು +ಜೈವಿಕ ತಂತ್ರಜ್ನಾನವನ್ನು,ಅಪಾಯಕಾರಕ ತ್ಯಾಜ್ಯಗಳನ್ನು ಪರಿಸರ ತತ್ವಗಳ ಚೌಕಟ್ಟಿಗೆ ಹೊಂದಿಸಿ ಬಳಸುವುದು .