From 7aba07b8f176951824fad4244a3046f39eb0eeff Mon Sep 17 00:00:00 2001 From: Narendra VG Date: Mon, 17 Apr 2023 15:40:21 +0530 Subject: [PATCH] Upload New File --- ...6\340\263\207\340\262\265\340\262\277.txt" | 1652 +++++++++++++++++ 1 file changed, 1652 insertions(+) create mode 100644 "Data Collected/Kannada/MIT Manipal/Kannada-Scrapped-dta/\340\262\265\340\262\276\340\262\227\340\263\215\340\262\246\340\263\207\340\262\265\340\262\277.txt" diff --git "a/Data Collected/Kannada/MIT Manipal/Kannada-Scrapped-dta/\340\262\265\340\262\276\340\262\227\340\263\215\340\262\246\340\263\207\340\262\265\340\262\277.txt" "b/Data Collected/Kannada/MIT Manipal/Kannada-Scrapped-dta/\340\262\265\340\262\276\340\262\227\340\263\215\340\262\246\340\263\207\340\262\265\340\262\277.txt" new file mode 100644 index 0000000..0deb159 --- /dev/null +++ "b/Data Collected/Kannada/MIT Manipal/Kannada-Scrapped-dta/\340\262\265\340\262\276\340\262\227\340\263\215\340\262\246\340\263\207\340\262\265\340\262\277.txt" @@ -0,0 +1,1652 @@ +“ಅವಳ್ಯಾರು ವಾಗ್ದೇವಿಯೇ? +ಆಹಾ!ಸಾಕ್ಷಾತ್‌ ಅಜನರಾಣಿಯೇ ಸರಿ.” +“ಪರಾಕೆ!ಅಜನರಾಣಿಗಾದರೂ ನಾಸಿಕನಾಸ್ತಿ. +ವಾಗ್ದೇವಿಗೆ ಆ ಅಂಗವು ಸಂಪೂರ್ಣತೆಯುಳ್ಳದ್ದಾಗಿದೆ ಆದಕಾರಣ ಬೊಮ್ಮನ ಪತ್ನಿಗಿಂತ ವಾಗ್ದೇವಿಯೇ ಹೆಚ್ಚು ರೂಪವತಿಯೆಂದು ನನ್ನ ಅಭಿಪ್ರಾಯ.” +“ಪೂರ್ವಾಶ್ರಮದಲ್ಲಿ ನಮ್ಮ ಆಣ್ಣಗೆ ಇವಳು ನಾದಿನಿ. +ನಾವು ಸನ್ಯಾಸ ಪಡಕೊಂಡ ತರುವಾಯ ಅವಳನ್ನು ಇದು ಮೊದಲು ನೋಡಲಿಲ್ಲವು. +ಇವಳ ರೂಪಲಾವಣ್ಯವನ್ನು ಈಗ ನೋಡಿದರೆ, ಷಡ್ವೈರಿಗಳನ್ನು ನಿಗ್ರಹಮಾಡಿದ ಯತಿಯಾದರೂ ಸೋಥೋಗನೇ?” +“ಪರಾಕೆ!ಸೃಷ್ಟಿಸ್ಥಿಲಯಕ್ಕೆ ಕಾರಣಭೂತರಾದ ಅಜ ಹರಿ ರುದ್ರ– ಇವರೇ ಒಬೊಬ್ಬರನ್ನು ಕಟ್ಟಿಕೊಂಡ ಮೇಲೆ, ಮಾನನ ಜನ್ಮದಲ್ಲಿ ಹುಟ್ಟಿ ದವನ ಪಾಡೇನು?” +ಈ ಸಂಭಾಷಣೆಯು ಕುಮುದಪುರದಲ್ಲಿ ಕಾಳಿಕಾ ನದಿಯ ತೀರದಲ್ಲಿ ಸ್ವಾನವನ್ನು ಗೈದು, ಶುಚಿರ್ಭೂತರಾಗಿರುತ್ತಿದ್ದ ಚಂಚಲನೇತ್ರ ಶ್ರೀಪಾದಂ ಗಳಿಗೂ ಅವರ ಅಚ್ಚುಮೆಚ್ಚಿನ ಪಾರುಪತ್ಯಗಾರ ವೆಂಕಟಪತಿಯಾಚಾರ್ಯಗೂ ನಡೆಯುತ್ತಲಿತ್ತು. +ಪರಿಚಾರಕನಾದ ಹಯಗ್ರೀವಮಾಣಿಯು ಒಂದು ಶಬ್ದ ವಾದರೂ ಕಿವಿಗೆ ಕೇಳದವನಂತೆ ಅತ್ತಿತ್ತ ನೋಡುತ್ತಾ ನಿಂತುಕೊಂಡಿದ್ದನು. +ಅವನನ್ನು ನೋಡಿ ವೆಂಕಟಪತಿಯು ಶ್ರೀಪಾದಂಗಳೊಡನೆ, “ಪರಾಕೆ!ಹುಟ್ಟು ಕಿವುಡನಾದ ಈ ಮಾಣಿಯ ಅವಸ್ಥೆಯು ನಿಜವಾಗಿ ಕನಿಕರಪಡಲಿಕ್ಕೆ ಯೋಗ್ಯವಾದ್ದೇ. +ನಾವು ಏನೇನು ಮಾತಾಡಿವೆನೆಂದು ಅವನಿಗೆ ಸ್ವಲ್ಪವಾದರೂ ಗೊತ್ತಾಯಿತೇ? +ಶ್ರೀಹರಿ!ನಿನ್ನ ಮಹಿಮೆಯು ಅಪಾರವಾದದ್ದು. +ಇಷ್ಟು ಒಳ್ಳೇ ಹುಡುಗನಿಗೆ ಕರ್ಣದೋಷವನ್ನು ನೀನು ಕೊಟ್ಟ ದೆಸೆಯಿಂದ ಅವನ ಜನ್ಮವೇ ವ್ಯರ್ಧವಾಯಿತು” ಎಂದನು. +“ಇಂಧಾ ಕುಂದು ಈ ಯೌವನ ನಸ್ಥನಿಗೆ ಇದ್ದಿಲ್ಲವಾದರೆ ಈಗ ನಮ್ಮಿಬ್ಬರಿಗಾದ ಸಂಭಾಷಣೆಯನ್ನು ಅವನು ಊರಲ್ಲೆಲ್ಲಾ ಲವಮಾತ್ರದಲ್ಲಿ ಪ್ರಕಟಪಡಿಸಿ ನಾಚಿಗೆಗೇಡು ಮಾಡಿಬಿಡುತಿದ್ದ ನಲ್ಲವೇ? +ಇವನಂತಿರುವ ಚಾಕರನು ದೇವರ ದಯದಿಂದಲೇ ನಮಗೆ ದೊರಕಿ ದನು” ಎಂದು ಚಂಚಲನೇತ್ರರು ಹೇಳಿದರು. +ಆಗ ವೆಂಕಟಪತಿಯು “ಸತ್ಯ ಸತ್ಯ ತ್ರಿವಾಚಾ” ಎಂದು ಉದ್ದಂಡ ನಮಸ್ಕಾರ ಮಾಡಿದನು. +“ಓಹೋ!ಇಂದು ಆಷಾಢ ಏಕಾದಶಿ, ತಪ್ತಮುದ್ರಾಧಾರಣೆಯಾಗ ಬೇಕು. +ಇದಕ್ಕಾಗಿಯೇ ವಾಗ್ದೇವಿಯು ನದೀ ತೀರದಲ್ಲಿ ಸ್ನಾನ ಮಾಡುತ್ತಿರುವಳು. +ಬಹು ಜನರು ಆ ನದೀ ತೀರದಲ್ಲಿ ಕೂಡಿರುವದು ಇದೇ ಉದ್ದಿಶ್ಯ ವಾಗಿರಬೇಕು.” ಎಂದು ಚಂಚಲನೇತ್ರರು ಹೇಳಿದರು. +ಈ ಮಾತನ್ನು ಕೇಳಿ ತನ್ನ ಮಠದಲ್ಲಿ ನಡಿಯಬೇಕಾಗಿರುವ ಮುದ್ರಾಧಾರಣಗೋಷ್ಠಿಯೇ ಇವರಿಗೆ ಫಕ್ಕನೆ ಮರೆತು ಹೋಗುವದು ಸ್ವಲ್ಪ ಆಶ್ಚರ್ಯವಾಗಿ ವೆಂಕಟ ಪತಿಗೆ ತೋರಿತು. +ಚಂಚಲನೇತ್ರರ ಮನಸ್ಸನ್ನು ಪೂರ್ಣವಾಗಿ ವಾಗ್ದೇವಿಯು ಆಕರ್ಷಣೆ ಮಾಡಿಕೊಂಡಿರುವ ದೆಸೆಯಿಂದ ತಾನು ಯಾವ ತಾವಿಗೆ ಹೋಗ ಬೇಕು, ಏನು ಮಾಡಬೇಕು ಎಂಬ ಗೊಡವೆಯೇ ಇಲ್ಲದೆ ಅವರು ಒಂದು ಗೊಂಬೆಯಂತೆ, ಹಿಂದಿನಿಂದ ಆಚಾರ್ಯ ಮುಂದಿನಿಂನ ಮಾಣಿ ಇವರೊಡನೆ ಮೆಲ್ಲಮೆಲ್ಲನೆ ಅಡಿಯಿಡುತ್ತಾ ತಮ್ಮ ಮಠವನ್ನು ಹೇಗಾದರೂ ಪ್ರವೇಶ ಮಾಡಿದರು. +ಅಲ್ಲಿ ಆಗಬೇಕಾಗಿರುವ ನಿತ್ಯ ಕರ್ಮಾನುಷ್ಠಾನಗಳನ್ನು ನಡಿಸುವಾಗ ಈ ಯತಿಗಳು ಎಂದಿನಂತೆ ಜಾಗರೂಕತೆ ಯುಳ್ಳವ ಕಾಣಲಿಲ್ಲ. +ಅವರು ಒಬ್ಬನ ಕೂಡೆ ಇನ್ನೊಬ್ಬನು ಕುಸುಗುಟ್ಟಲಿಕ್ಕೆ ತೊಡಗಿದನು. +ವಾಗ್ದೇವಿಯು ಜತಿ ಅಂಚಿನ ಹೊಂಬಣ್ಣದ ಶಾಲೆಯನ್ನುಟ್ಟು ಜರತಾರಿ ಕುಪ್ಪಸವನ್ನು ತೊಟ್ಟುಕೊಂಡು, ಉಂಗುರ ಕೂದಲು ಎಳೆದು,ದುಂಡಗಾದ ತುರುಬು ಕಟ್ಟಿಕೊಂಡಿದ್ದಳು. +ಅದರಲ್ಲಿ ಒಂದು ಗುಲಾಬಿ ಹೂವು ಮುಡಿಸಿತ್ತು. +ಹಣೆಯಲ್ಲಿ ದಿವ್ಯವಾಗಿ ಕುಂಕುಮದಬೊಟ್ಟು ಅತೀ ಸಪೂರವಾಗಿ ಹಚ್ಚಿಕೊಂಡು, ಮಂದಸ್ಮಿತವದನವುಳ್ಳವಳಾಗಿ ಸೆರಗನ್ನು ಎಳಕೊಳ್ಳುತ್ತಾ, ಒಂದು ಕಣ್ಣಿನದೃಷ್ಟಿಯು ಸ್ವಲ್ಪ ಓರೆಯಾಗಿರುವದರಿಂದ ಮುಖದ ಕಾಂತಿಯು ಮತ್ತಷ್ಟು ವೃದ್ಧಿಯಾಗಿ ಅಪೂರ್ವವಾದ ಸ್ತ್ರೀರತ್ನನೆಂದು ಎಲ್ಲರು ಸಮ್ಮತ ಪಡುವ ಹಾಗೆ ಕಾಲಿನ ಉಂಗುರಗಳ ಝಣತ್ಕಾರದಿಂದಲೇ ಗುಂಪಿನ ಮಧ್ಯದಿಂದ ಕ್ಷಣಮಾತ್ರದಲ್ಲಿ ದಾರಿಯನ್ನು ಬಿಡಿಸಿಕೊಂಡು, ಮುದ್ರಾಧಾರಣೆ ಯಾಗತಕ್ಕ ಸ್ಥಲಕ್ಕೆ ಮದದಾನೆಯೋಪಾದಿ ನಡೆದಳು. +ಚಂಚಲನೇತ್ರರಿಗೂ ಒಂದು ಓರೆಕಣ್ಣಿರುವದು. +ಗುಂಪಿನ ಮಧ್ಯದಿಂದ ಯಾರೋ ಒಬ್ಬನು-“ಕ್ವಚಿತ್‌ ಕಾಣಾ ಭವೇಶ್‌ ಸಾಧು ಕ್ವಚಿಶ್‌ ಕಾಣಿ ಪತಿವ್ರತಾ” ಎಂದು ದೊಡ ಸ್ವರದಿಂದ ಒದರಿದನು. +ಆಗ ಚಂಚಲನೇತ್ರರು ಮುದ್ರಾಧಾರಣೆಯ ಸ್ಥಾನಕ್ಕೆ ಬಂದು, ಆಸನಾರೂಢರಾಗಿದ್ದರಷ್ಟೆ. +ಪ್ರಥಮದಲ್ಲಿಯೇ ಅವಳ ದೃಷ್ಟಿಯು ಅವರ ದೃಷ್ಟಿಗೆ ಸಮ್ಮಿಳಿತವಾಯಿತು. +ತಮ್ಮಿಬ್ಬರಿಗೂ ತುಸು ಓರೆದೃಷ್ಟಿಯಿರುವ ಕಾರಣ ಈ ಹಾಸ್ಯರೂಪದ ಶ್ಲೋಕವು ಯಾರ ಬಾಯಿಯಿಂದ ಬಂದುದೆಂದು ಅವರು ಮನಸ್ಸಿನಲ್ಲಿಯೇ ಕೊಂಚ ಖಿನ್ನರಾದರು. +ಆದರೂ ಯತಿಶ್ರೇಷ್ಟರು ಇನ್ನೊಮ್ಮೆ ವಾಗ್ದೇವಿಯ ಮುಖಾವಲೋಕನಮಾಡುತ್ತಲೇ ಹಿಂದೆ ನಡ ದದ್ದೆಲ್ಲ ಮರವೆಗೆ ಬಂದು ಆನಂದಾಬ್ಧಿಯಲ್ಲಿ ಮನಸ್ಸನ್ನು ಓಲಾಡಿಸಿಬಿಟ್ಟರು. +ಮುದ್ರಾಧಾರಣೆಯನ್ನು ಮಾಡಿಸಿಕೊಳ್ಳುವದಕ್ಕಾಗಿ ಮಠದ ಶಿಷ್ಯ ದೊಡ್ಡ ಸಮೂಹವು ನೆರೆದಿತ್ತು. +ಒಂದೊಂದು ಸಾರಿ ಮೂವರನ್ನು ಸಾಲಾಗಿ ನಿಲ್ಲಿಸಿ, ಮುದ್ರಾಂಕಿತವು ಎಡೆಬಿಡದೆ ನಡೆಯುತ್ತಿತ್ತು. +ಶ್ರೀಪಾದಂಗಳ ಸಮೀಪವಿದ್ದ ವೈದಿಕರುಸುದರ್ಶನಮಹಾಜ್ವಾಲಾ ಕೋಟಿಸೂರ್ಯಸಮಪ್ರಭಾಅಜ್ಞಾನಾ ಧಶಮೇನ್ನಿತ್ಯಂ ವಿಷ್ಣುರ್ಮಾರ್ಗಂಪ್ರದರ್ಶಯ॥ +ಎಂದು ಗಂಭೀರಸ್ತರದಿಂದ ಘೋಷಿಸುತ್ತಲಿದ್ದರು. +ಆವರ ಎದುರಿಗೆ ಒಂದು ಹರಿವಾಣವಿತ್ತು. +ಆಗಾಗ ಪಾರಪತ್ಯಗಾರನು ಹರಿವಾಣದಿಂದ ಕಾಣಿಕೆಯ ಹಣವನ್ನು ರಿಕ್ತಮಾಡಿ, ಪುನಃ ಅದನ್ನೇ ಇಡುತ್ತಿದ್ದನು. +ಬೆಳ್ಳಿಯ ಮತ್ತು ಭಂಗಾರದ ಉದ್ದವಾದ ಹಿಡಿಗಳುಳ್ಳ ಶಂಕಚಕ್ರ ಮುದ್ರೆಗಳನ್ನು ಮುದ್ರಾ ಧಾರಣೆಯ ಹೋಮಾಗ್ನಿಯಲ್ಲಿ ಚೆನ್ನಾಗಿ ಕಾಯಿಸಿ, ಶ್ರೀಪಾದಂಗಳ ಕೈಯಲ್ಲಿ ವೈದಿಕರು ಕೊಡುತ್ತಲೇ, ಅವರು ಸಮ್ಮುಖದಲ್ಲಿ ನಿಂತಿರುವ ಶಿಷ್ಯರಿಗೆ ಜಾಗ್ರತೆ ಯಾಗಿ ಮುದ್ರೆಯೊತ್ತಿಬಿಡುವರು. +ಧೈರ್ಯಸ್ತರು ಮೈಯನ್ನು ರವೆಯಷ್ಟಾದ ರೂ ಅಲುಗಿಸದೆ ಸ್ತಬ್ಧರಾಗಿ ನಿಂತುಕೊಂಡು, ನೋಡುವವರ ಶ್ಲಾಘನೆಗೆ ಪಾತ್ರರಾಗುವರು. +ಪುಕ್ಕರು ಹೆದರಿ ತಮ್ಮನ್ನು ಸುಟ್ಟು ತೆಗೆಯುವರೆಂಬ ಭ್ರಮೆಯಿಂದ ಹಿಂದೆಸರಿಯುವರು. +ಆಗ ಬಲಿಷ್ಟರು ಅವರ ತೋಳುಗಳನ್ನು ಹಿಡಿದು ಸರಿ ಯಾಗಿ ನಿಲ್ಲಿಸಿ, ಹಾಸ್ಯವದನರಾಗಿ ವಿನೋದವನ್ನುಂಟು ಮಾಡುವರು. +ಗಂಡಸರೇ ಹೀಗೆ ಹೆದರಿ ಬಿಟ್ಟರೆ ತಮ್ಮ ಅವಸ್ಥೆ ಇನ್ನು ಹೇಗಾಗುವದೋ ಎಂಬ ಅನುಮಾನದಿಂದ ಅಬಲೆಯರನೇಕರು ಹಿಂಜಿ ಹಿಂದೆ ಸರಿಯ ತೊಡಗಿದರು. +ವಾಗ್ದೇವಿಗೆ ಅಂಥಾ ಭಯ ಲೇಶವಾದರೂ ಇರಲಿಲ್ಲ. +ಆದರೂ ತಾನೊಬ್ಬಳೇ ಮುಂದೆ ಬಿದ್ದರೆ, ಬೇರೆ ಹೆಂಗಸರೂ ಗಂಡಸರೂ ತನ್ನ ಧೈರ್ಯ ವನ್ನು ಕಂತು ಯದ್ವಾ ತದ್ವಾ ಆಡಿಬಿಡುವರೆಂಬ ಅಂಜಿಕೆಯಿಂದಲೋ ಇನ್ನಾವ ಕಾರಣದಿಂದಲೋ ಎಲ್ಲರಿಗಿಂತಲೂ ಹಿಂದೆ ನಿಂತುಕೊಂಡಿದ್ದಳು. +ಆಕಾಶದಲ್ಲಿ ಅಸಂಖ್ಯಾತ ನಕ್ಷತ್ರಗಳ ಪ್ರಭೆಯಿಂದ ಚಂದ್ರನ ಕಾಂತಿಯಾಗಲೀ ಬಿಂಬವಾಗಲೀ ಕುಂದುವ ಹಾಗಿಲ್ಲವಷ್ಟೆ. +ಹಾಗೆಯೇ ವಾಗ್ದೇವಿಯು ಎಲ್ಲರ ಹಿಂದೆ ಅವಿತುಕೊಂಡವಳಂತೆ ನಿಂತುಕೊಂಡಿದ್ದರೂ ಅವಳ ಪ್ರಸನ್ನತೆಯು ಯಾರಿಗೂ ಮರೆಯಾಗಿರಲಿಲ್ಲ. +ಅವಳ ಕಟಾಕ್ಷವನ್ನೇ ಈಕ್ಷಿಸಿಕೊಂಡಿರುವ ಚಂಚಲನೇತ್ರರಿಗನಕ ಸಂಪೂರ್ಣವಾಗಿ ಗೋಚರವಾಗುತ್ತಿತ್ತು. +ಅಲ್ಲಿ ನೆರೆದ ಅಬಲಾವೃಂದದಲ್ಲಿ ಈ ಯುವತಿಯ ಮೋಹನಶಕ್ತಿಯೂ ಲಾವಣ್ಯವೂ ಇನ್ನೊಬ್ಬ ಸ್ತ್ರೀಯಲ್ಲಿ ಇರುತ್ತಿದ್ದರೆ ಚಂಚಲನೇತ್ರಯತಿಗಳ ಹೃದಯದಲ್ಲಿ ಅವಳ ಅನುಬಿಂಬನು ಸರ್ವಥಾ ನೆಲೆಯಾಗದೆ ಲೋಕದಲ್ಲಿ ಸೌಂದರ್ಯದಲ್ಲಿ ಒಬ್ಬಳಿಗಿಂತ ಮತ್ತೊಬ್ಬಳು ಉತ್ಕೃಷ್ಟವಾಗಿರುವಳೆಂಬ ಪರಿಜ್ಞಾನವು ಉತ್ಪತ್ತಿ ಯಾಗಿ, ಅವರ ಮನಸ್ಸು ಸುಸ್ಥಿರವಾಗುತ್ತಿತ್ತು. +ಗಂಡಸರೆಲ್ಲರೂ ಮುದ್ರಾಧಾರಣೆ ಮಾಡಿಸಿಕೊಂಡರು. +ಹೆಂಗಸರಲ್ಲಿಯೂ ಅನೇಕರು ಮುದ್ರಾಂಕಿತ ಹೊಂದಿ ಕೆಲಸಾರಿದರು. +ಬಹು ಮಂದಿ ಸ್ತ್ರೀಯರು ಉಳಿದರು. +ಅವರೆಲ್ಲರಿಗೂ ಬೇಗ ಬೇಗ ಸುಧಾರಿಸೋಣಾಯಿತು. +ಕಟ್ಟಕಡೆಯಲ್ಲಿ ವಾಗ್ದೇವಿಯು ಮಾಯಾಜಾಲವನ್ನು ಬೀಸುತ್ತಾ ಎದುಗಿಗೆ ಬಂದು ತಲೆಬಾಗಿಸಿ ನಿಂತುಕೊಂಡಳು. +ಚಂಚಲನೇತ್ರರು ತಪ್ತಮುದ್ರೆಯನ್ನು ಒದ್ದೆ ಅಂಗವಸ್ತ್ರದ ಗಳಿಗೆ ಮೇಲೆ ಚೆನ್ನಾಗಿ ಒತ್ತುವದರಿಂದ ಅದರ ಉಷ್ಣತೆ ಯನ್ನು ಆದಷ್ಟು ತಣಿಸಿ, ಒಂದೊಂದು ಕೈಮೇಲೆ ಒಂದೊಂದು ಮುದ್ರೆ ಯನ್ನು ಬಹುಸೂಕ್ಷ್ಮವಾಗಿ ಒತ್ತಿಬಿಟ್ಟು, ತೀರ್ಥಪ್ರಸಾದವನ್ನು ಪ್ರೀತಿ ಪೂರ್ವಕವಾಗಿ ಅನುಗ್ರಹಿಸಿ, ಅವಳ ಕೃತಜ್ಞತೆಗೆ ಪಾತ್ರರಾದರು ಮುದ್ರಾ ಧಾರಣೆಯ ಕೆಲಸವು ತೀರಿದ ತರುವಾಯ ಶ್ರೀಪಾದಂಗಳ ಫಲಹಾರವು ಮುಗಿಯಿತು. +ಸಾಯಂಕಾಲ ವೆಂಕಟಪತಿ ಆಚಾರ್ಯನು ಪ್ರಣಾಮಮಾಡಿ ನಿಂತುಕೊಂಡಾಗ ತನ್ನ ಸಮೀಪದಲ್ಲಿ ಕೂತು ಕೊಳ್ಳುವದಕ್ಕೆ ಶ್ರೀ ಪಾದಂಗಳ ಆಜ್ಞೆಯಾಯಿತು. +ಹಾಗೆಯೇ ಅವರಲ್ಲಿ ಗುಪ್ತ ಸಂಭಾಷಣೆಗೆ ಪ್ರಾರಂಭ ವಾಯಿತು. +ಶ್ರೀಪಾದ– “ವೆಂಕಟಪತಿ! +ನಮಗೆ ಸನ್ಯಾಸವಾಗಿ ಹದಿನೈದು ಸಂವತ್ಸರಗಳಾದವು. +ಈಗ ನಮ್ಮ ವಯಸ್ಸು ಮೂವತ್ತು ವರುಷ. +ಇದು ವರಿವಿಗೂ ನಾವು ಷಡ್ವೈರಿಗಳನ್ನು ಜಯಿಸಿ ಕೀರ್ತಿಯನ್ನು ಹೊಂದಿದೆವು.” +ವೆಂಕಟಪತಿ– “ಪರಾಕೆ!ಶ್ರೀಪಾದಂಗಳವರು ಅತಿ ಪರಿಶುದ್ಧರೆಂದು ಇಡೀ ಲೋಕವೇ ಕೊಂಡಾಡುವಾಗ ಬಣಗು ಮನುಷ್ಯನಾದ ನಾನು ಹೆಚ್ಚಿಗೆ ಏನು ಹೇಳಲಿ?” +ಶ್ರೀಪಾದ- “ಅದಂತಿರಲಿ ನಮಗೆ ಈಗ ಪ್ರಾಪ್ತವಾದ ಸಂಕಟವನ್ನು ಕುರಿತು ಕೊಂಚ ಪ್ರಸ್ತಾಪ ಮಾಡಿಬಿಡುತ್ತೇವೆ; +ಇನ್ನೊಬ್ಬರ ಕಿವಿಗೆ ಅದು ಬೀಳಬಾರದು.” +ವೆಂಕಟಪತಿ– “ಅಪ್ಪಣೆಯಾಗುವದು ಬರಾಬರಿ. +ಇಲ್ಲಿ ಈಗ ಬೇರೆ ಯಾರೂ ಇಲ್ಲ. +ಕೆಪ್ಪಮಾಣಿ ಒಬ್ಬ ಇದ್ದಾನೆ.” +ಶ್ರೀಪಾದ–“ಕೆಪ್ಪನಿರಲಿ, ಪರ್ವಾ ಇಲ್ಲ. +ಹಾಗಾದರೆ ಹೇಳುತ್ತೇವೆ ಕೇಳು. +ನಮಗೆ ಏನೋ ಕೆಟ್ಟ ಗ್ರಹಗತಿ ಹಿಡಿಯುವ ಹಾಗಿದೆ. +ಇಲ್ಲವಾದರೆ ಇದುವರೆಗೆ ಪ್ರಪಂಚವಿಚಾರ ಸೋಕದೆ ಇರುವ ನಮಗೆ ತತ್ಕಾಲದಲ್ಲಿ ವಿಷ ಯಾತುರತೆ ಕಾಡುವದ್ಯಾಕೆ?” +ವೆಂಕಟಪತಿ– “ಪರಾಕೆ!ವಿಧಿ ಬರೆದ ಬರಹ ಬೆನ್ನಬಿಡದೆಂಬ ನುಡಿಯು ಸರ್ವಧಾ ಸಟೆಯಲ್ಲ. +ಮಾನುಷಿಕ ವಿಚಾರವು ಏಕರೀತಿಯಲ್ಲಿ ನಡೆಯುವದುಂಟೇ ? +ಸರ್ವಕಾರ್ಯಗಳಿಗೆ ಕಾರಣಭೂತನಾದ ಬುದ್ದಿಯು ದೈವಪ್ರೇರಿತವಾದದ್ದೆಂದು ನನ್ನ ಮತ. +ಸರ್ವಜ್ಞರಾದ ಶ್ರೀಪಾದಂಗಳ ಸನ್ನಿಧಿಯಲ್ಲಿ ಹೆಚ್ಚಿಗೆ ಅರಿಕೆ ಮಾಡಲೇ?” +ಶ್ರೀಪಾದ- “ಇಂದಿನ ವಿಚಾರಕ್ಕೆ ನಿನ್ನ ಮತವೇ ಉಪಯುಕ್ತ ವಾಗಿದೆ ಸತ್ಕೀರ್ತಿಯನ್ನು ಹೋಗಲಾಡಿಸಿಕೊಳ್ಳುವ ಕಾಲವು ಬಂದೊದ ಗಿತಲ್ಲಾ!ಏನು ಮಾಡಬಹುದು.?” +ವೆಂಕಟಪತಿ – “ಅಪ್ಪಣೆಯಾದರೆ ಸಣ್ಣದೊಂದು ಮಾತು ಹೇಳಿಬಿಡುತ್ತೇನೆ. +”ಶ್ರೀಪಾದ – “ಓಹೋ !ಆಗತ್ಯವಾಗಿ ಹೇಳಪ್ಪಾ.” +ವೆಂಕಟಪತಿ -“ಮನಸ್ಸು ಎಂದೆಂದೂ ಚಂಚಲವೆ, ಅದರ ಚಂಚಲ್ಯವನ್ನು ತೆಗದು ಅದನ್ನು ಸರಿಪಡಿಸಲಿಕ್ಕೆ ವಿವೇಕಶಕ್ತಿಯೊಂದೇ ಉಪಾಯ ಆದಕಾರಣ ಶ್ರೀಪಾದಂಗಳವರು ವಿವೇಕದಿಂದ ವಿಚಾರಮಾಡಿ ನೋಡಿದರೆ, ವಿಷಯಾತುರತೆಯನ್ನು ಪ್ರಯಾಸವಿಲ್ಲದೆ ದೂರಪಡಿಸಿ, ಸತ್ಕೀರ್ತಿಯನ್ನು ಬೆಳಸಬಹುದು. +ವಿಶೇಷ ಹೇಳಲಿಕ್ಕೆ ಬಡ ಕಿಂಕರನು ಶಕ್ಯನಲ್ಲ.” +ಶ್ರೀಪಾದ -.” ಜ್ಞಾನೋಪದೇಶ ಮಾಡುವುದು ಕಷ್ಟದ ಕೆಲಸವಲ್ಲ. +ಅದರಂತೆ ನಡೆಯುವದೇ ಪ್ರಯಾಸ. +ವಿವೇಕವನ್ನು ಹೊಡೆದೋಡಿಸುವ ದುರ್ವ್ಯಸನವು ಮನಸ್ಸಿಗೆ ತಗಲಿಬಿಟ್ಟರೆ ಮಾಡತಕ್ಕದ್ದೇನು? +ಯಾವ ಯತ್ನವೂ ನಡೆಯುವಯವಾಗಿಲ್ಲ, ವಾಗ್ದೇವಿಯ ಸುಪ್ರಸನ್ನತೆಯನ್ನು ದೊರಕಿಸಿಕೊಳ್ಳುವುದು ಹೇಗೆ ? +ಎಂಬ ಯೋಚನೆಯಲ್ಲದೆ ಮತ್ತೊಂದು ಮಗದೊಂದು ಯಾವುದೂ ಈಗ ನಮ್ಮ ಮನಸ್ಸಿಗೆ ಹೋಗುವಹಾಗಿಲ್ಲ. +ಬಹು ಭಾಷಣದಿಂದ ಸಮಯ ವ್ಯರ್ಥವಾಗಿ ಕಳೆಯಬೇಕೇಕೆ ? +ನನ್ನ ಪ್ರಾಣವೇ ನಮಗೆ ಭಾರವಾಗಿ ತೋರುತ್ತದೆ ಅದು ಒಡಲು ಬಿಟ್ಟು ಹೋದರಾದರೂ ಆಗುತಿತ್ತು. +ಶ್ರೀಹರಿ !ಏನು ಮಾಡಬಹುದು?” +ವೆಂಕಟಪತಿ… – “ಸ್ವಾಮೀ !ಶ್ರೀಹರಿಯನ್ನು ಭಕ್ತಿಪೂರ್ವಕವಾಗಿ ಮನಸ್ಸಿನಲ್ಲಿ ಧ್ಯಾನಿಸಿದರೆ, ಎಂಥಾ ಸಂಕಷ್ಟವೂ ಪರಿಹಾರವಾಗುವುದು. +ಪ್ರಕೃತದ ದುರ್ವ್ಯಸವು ದೂರಾಗುವುದು ಏನು ಆಶ್ಚರ್ಯ? +ಆದಪ್ರಯುಕ್ತ ವಾಗ್ದೇವಿಯ ಪ್ರಸ್ತಾಪವು ಈಗಲೇ ಅಂತ್ಯವಾಗಲೆಂದು ನಮ್ಮ ವಿಜ್ಞಾಪನೆ.” +ಶ್ರೀಪಾದ- “ನಿನ್ನ ಜ್ಞಾನ ಸುಡು ನಮ್ಮ ಸೇವೆಯಲ್ಲಿ ಇದ್ದೇ ಈ ಜ್ಞಾನವನ್ನು ನೀನು ಪಡೆದಿಯಲ್ಲವೆ?’ +ವೆಂಕಟಪತಿ- “ಹೌದು ಆದಕಾರಣವೇ ಅದೇ ಜ್ಞಾನವನ್ನು ತಮ್ಮ ಪಾದಕ್ಕೆ ಅರ್ಪಿಸಿದೆ. +ಇದೊಂದು ಅನ್ಯಾಯವೇ ಸ್ವಾಮೀ ?” +ಶ್ರೀಪಾದ- ನಮ್ಮ ಉದ್ದೇಶವು ನಿಮ್ಮ ಜ್ಞಾನೋಪದೇಶ ಪಡೆಯುವುದಲ್ಲ. +ವಾಗ್ದೇವಿಯು ಕ್ಷಿಪ್ರದಲ್ಲಿ ನಮ್ಮ ಕೈವಶವಾಗುವ ಪ್ರಯತ್ನ ನಿನ್ನಿಂದ ನಡೆಯುವುದಾದರೆ ಹೇಳು. +ಇಲ್ಲವಾದರೆ ನಡೆ, ಬೇರೆಯವರ ಪರಿಮುಖ ವಾದರೂ ನಮ್ಮ ಸಂಕಲ್ಪಸಿದ್ಧಿಯಾಗುವ ಹಾಗೆ ನೋಡಿಕೊಳ್ಳುವೆವು.” +ವೆಂಕಟಪತಿ– “ಬುದ್ಧಿ!ಚರಣಕಮಲಗಳನ್ನು ನಿರಂತರ ಧ್ಯಾನಿಸುವ ತಮ್ಮ ಆಜ್ಞಾಧಾರಕನ ಮೇಲೆ ಇಷ್ಟು ಬೇಸರನಾಗುವಹಾಗಿನ ಅನ್ಯಾಯ ಯಾವದೂ ನನ್ನಿಂದ ನಡೆಯಲ್ಲ. +ನನ್ನ ಸಣ್ಣ ಬುದ್ದಿಗೆ ಕಂಡ ಅಭಿಪ್ರಾಯ ವನ್ನು ನಿಮ್ಮಸನ್ನಿಧಿಯಲ್ಲಿ ಅರಿಕೆ ಮಾಡಿದ ನನ್ನ ಅಪರಾಧವನ್ನು ವಾತ್ಸಲ್ಯ ವಿಟ್ಟು ಕ್ಷಮಿಸಬೇಕಾಗಿ ಬೀಡಿಕೊಳ್ಳುತ್ತೇನೆ. +ಅಪ್ಪಣೆಯಾಗಲಿ ಈಗಲೇ ವಾಗ್ದೇವಿಯನ್ನು ಕಂಡು, ಸನ್ನಿಧಿಯ ಆಜ್ಞೆಯನ್ನು ಅವಳಿಗೂ ಅವಳ ತಂದೆ ತಾಯಿಗಳಿಗೂ ತಿಳಸಿ ಪ್ರತ್ಯುತ್ತರವನ್ನು ಪಡೆದು ಬರುವೆನು. +ಶ್ರೀಪಾದ-ವೆಂಕಟಪತಿ!ಸ್ವಲ್ಪ ಕಠಿನಮಾತು ಅಡಿಬಿಟ್ಟೆವೆಂದು ಸಿಟ್ಟುತಾಳಕೋಬೇಡಾ. +ನಿನ್ನಂಥಾ ಅಪ್ತನು ಇನ್ನೊಬ್ಬ ನಮಗಿರುವನೇ? +ವಾಗ್ದೇವಿಯನ್ನು ಮಾತನಾಡಿಸಿ ಪ್ರತ್ಯುತ್ತರವನ್ನು ತಿಳಿಸುವೆನೆಂದು ಹೇಳಿದೆ. +ಅಷ್ಟುಮಾತ್ರದಿಂದ ನಮ್ಮ ಮನಸ್ಸು ತೃಪ್ತಿಯಾಗಿ ನಿನ್ನ ಮೇಲೆ ನಮ್ಮ ದಯವು ಉಂಟಾಗದು. +ನೀನು ಮನಃಪೂರ್ತಿಯಾಗಿ ಭಗೀರಧಪ್ರಯತ್ನ ದಿಂದಲಾದರೂ ನಮ್ಮ ವಾಂಛೆಯನ್ನು ಪೂರೈಸದಿದ್ದರೆ, ನಮ್ಮ ಪ್ರಾಣದಾಶೆ ನೀನು ಸರ್ವಥಾ ಮಾಡಬೇಡ. +ಸಾವಿರ ಮಾತಾಡಿ ಏನು ಪುರುಷಾರ್ಥವಿದೆ?” +ವೆಂಕಟಪತಿ– “ಪರಾಕೆ!ನಾನು ನಡಿಸುವ ಪ್ರಯತ್ನವು ಎಂದಾದರೂ ಸಾಧ್ಯವಾಗದೆ ಹೋದೀತೇ? +ಹೋದ ಕೆಲಸ ನೆರವೇರಿಸದೆ ವೆಂಕಟಪತಿಯು ಹಿಂದೆ ಬರುವನೇನು?” +ಶ್ರೀಪಾದ– “ಶಹಬಾಸ್‌!ತಾಮಸಮಾಡಬೇಡ, ನಡೆ!ನಿನಗೇನು ಬೇಕು? ಹೇಳಿಬಿಡು. ಈಗಲೇ ತಕ್ಕೋ,” +ವೆಂಕಟಪತಿ– “ನನಗೇನೂ ಬೇಡ. +`ಅಟ್ಟಮೇಲ ಒಲೆ ಉರಿಯು ವುದು, ಕೆಟ್ಟಮೇಲೆ ಬುದ್ಧಿಬರುವುದು’ ಎಂಬುದೊಂದು ಗಾದೆ ಇದೆ. +ಶ್ರೀಪಾದಂಗಳವರು ಇನ್ನೊಮ್ಮೆ ದೇವರ ಮುಂದೆ ಕುಳಿತು ಸ್ಥಿರಬುದ್ಧಿಯಿಂದ ಪುನರಾಲೋಚನೆ ಮಾಡುವುದು. +ಉತ್ತಮವೆಂದು ಹೇಳಿಬಿಡುತ್ತೇನೆ. +ಕಿಂಕರನ ಮೇಲೆ ಸಿಟ್ಟಾಗಬಾರದು. +ಸಂಸ್ಥಾನದ ಕೀರ್ತಿಯ ಮೇಲೆ ದೃಷ್ಟಿಯಿರಲಿ.” +ಶ್ರೀಪಾದ “ತನ್ನ ವಿನಾ ನಮ್ಮ ಸಂಕಲ್ಪವು. +ಸಿದ್ಧಿಯಾಗದೆಂದು ನಿನಗೆ ಗರ್ವಹತ್ತಿ ಹೋಯಿತಲ್ಲವೇ? ಚಿಂತೆಯಿಲ್ಲ. +ಕೆಪ್ಪಮಾಣಿಯಿಂದ ಈ ಕೆಲಸವನ್ನು ಜಯಪ್ರದಮಾಡಿಸುವುದು ನೋಡುತ್ತೀಯಾ? +ನಮ್ಮ ಸಾಮರ್ಥ್ಯವನ್ನು ನಿನಗೆ ತೋರಿಸುವೆವು. +ನೀನೀಗ ಮನೆಗೆ ಹೋಗು ವೃರ್ಥವಾಗಿ ನಮ್ಮ ಸಮಯವನ್ನು ಹಾಳುಮಾಡಬೇಡ!”ವೆಂಕಟಪತಿ ಆಚಾರ್ಯನು ಶ್ರೀಪಾದಂಗಳ ಮಾನವನ್ನು ಉಳಿನು ವುದು ತೀರಾ ಅಸಾಧ್ಯವಾದುದರಿಂದ ತನ್ನ ತಪ್ಪನ್ನು ಕ್ಷಮಿಸಬೇಕಾಗಿ ಕಣ್ಣೀರಿಟ್ಟು, ಯತಿಗಳ ಮುಂದೆ ಅಡ್ಡಬಿದ್ದು, ಅಪ್ಪಣೆಯಾದ ಕೆಲಸವನ್ನು ತಾಮಸನವಿಲ್ಲದೆ ನೆರವೇರಿಸುವೆನೆಂದು ವಾಗ್ದತ್ತಮಾಡಿದನು… +ಚಂಚಲ ನೇತ್ರರು ಅತಿ ಸಂತೋಷದಿಂದ ವೆಂಕಟಪತಿಯನ್ನು ಕೂಡಲೇ ವಾಗ್ದೇವಿಯ ಮನೆಯ ಕಡೆಗೆ ಕಳುಹಿಸಿ,-ಇವನು ಇನ್ನೇನೆಲ್ಲಾ ಪೀಕಲಾಟ ಮಾಡಿಬಿಡು ವನೋ ಎಂಬ ಅನುಮಾನದಿಂದ, ಬಂಗಿ ತಿಂದನನ ಅವಸ್ಥೆಯನ್ನು ತಾಳಿ ಕೊಂಡರು. +ವೆಂಕಟಪತಿಯು ತನಗೆ ಉಪ್ಪನ್ನು ಕೊಟ್ಟು ಸಾಕಿದ ಗುರುವಿನ ಆಜ್ಞೆಯನ್ನು ಮೀರುವುದು ಪಾಪಕೃತ್ಯವೆಂದು ಹೆದರಿದರೂ, ಆಶ್ರಮ ಪಡ ಕೊಂಡಂದಿನಿಂದ ಯಾವುದೊಂದೂ ಅಪವಾದಕ್ಕೆ ಒಳಪಡದೆ ಸನ್ಮಾರ್ಗದಲ್ಲಿ ನಡೆದು ಖ್ಯಾತಿಗೊಂಡಿರುವ ಮಠಾಧಿಪತಿಯ ಪಾತಿತ್ಯಕ್ಕೆ ತಾನೂ ಹೊಣೆ ಯಾಗುವುದಾಯಿತೆಂಬ ವ್ಯಸನದಿಂದ ಬೆಂಡಾದನು. +ಪರಂತು ತನ್ನಿಂದಾಗುವಷ್ಟರಮಟ್ಟಿಗೆ ಜ್ಞಾನಮಾರ್ಗವನ್ನು ಸೂಚಿಸಿದರೂ, ‘ಮೂರ್ಖಂಗೆ ಹೇಳಿದ ಬುದ್ಧಿ, ಘೋರ್ಕಲ್ಲ ಮೇಲೆ ಹೊಯಿದ ಮಳೆ’ ಎಂಬಂತಾದ ಮೇಲೆ ತಾನಿನ್ನೇನು ಮಾಡಲಿ!ಸನ್ಯಾಸಿಗೆ ಕೆಡುವ ಕಾಲ ಬಂದಿರುವುದೇ ನಿಶ್ಚಯ; +ದೇವರು ಇಟ್ಟಹಾಗೆ ಆಗುವುದು; +ತಾನು ಆಜ್ಞೆ ಮೀರುವನಲ್ಲವೆಂದು ವಾಗ್ಚೇವಿಯ ಮನೆ ಕಡೆಗೆ ತೆರಳಿದನು. +ಅವಳ ಮನೆಯಿಂದ ಸ್ವಲ್ಪದೂರದಲ್ಲಿ ಜೋಯಿಸರಲ್ಲಿ ಹೆಸರುಗೊಂಡ ಬಣಗೂರ ತಿಪ್ಪಾಶಾಸ್ತ್ರಿಯು ಕವಡಿಚೀಲವನನ್ನು ಕಂಕುಳಲ್ಲಿ ಹೆಟ್ಟಿಕೊಂಡು, ಏಕಾದಶಿಯಾದರೂ ತಾಂಬೂಲವನ್ನು ಜಗಿಯುತ್ತಾ, ಸಟಸಟನೆ ನಡೆಯು ತಿದ್ದನು. +ಅವನು ವೆಂಕಟಪತಿ ಆಚಾರ್ಯನನ್ನು ಫಕ್ಕನೆ ನೋಡಿ–“ಆಚಾರ್ಯರೇ!ಯಾವಲ್ಲಿಗೆ, ಸವಾರಿ” ಎಂದು ಕೇಳಿದನು. +ವಾಗ್ದೇವಿಯ ಮನೆಗೆ ಹೋಗುವುದಾಗಿ ಪ್ರತ್ಯುತ್ತರ ಕೊಡಲಿಕ್ಕೆ ವೆಂಕಟಪತಿಯು ನಾಚಿಕೊಂಡು– “ಎಲ್ಲಿಗೂ ಇಲ್ಲ. +ಹೀಗೆಯೇ ತಿರುಗಾಡುತ್ತೇನೆ; +ತಾನು ಹೊರಟದ್ದೆಲ್ಲಿಗೆ?” ಎಂದು ಪುನಃ ಪ್ರಶ್ನೆಮಾಡಿದನು. +“ತಮ್ಮಣ್ಣ ಭಟ್ಟನಲ್ಲಿಂದ ಕರೆ ಬಂದಿತ್ತು, ಅಲ್ಲಿಗೆ ಹೊರಟೆ” ಎಂದು ಜೋಯಿಸನು ಹೇಳಿದನು. +“ದಯಮಾಡೋಣಾಗಲಿ, ನನಗೆ ಬೇರೆ ಕಡೆಯಲ್ಲಿ ಕೆಲಸವಿದೆ” ಎಂದು ವೆಂಕಟಪತಿಯು ಅಲ್ಲಿಯೇ ಇರುವ ಕುರುಮಾರ್ಗಕ್ಕೆ ತಿರುಗಿದನು. +ತಮ್ಮಣ್ಣ ಭಟ್ಟನು ವಾಗ್ದೇವಿಯ ತಂದೆ. +ಜೋಯಿಸಗೆ ಅವನು ಬರಮಾಡುವ ಕೆಲಸವೇನೋ ತಿಳಿಯಬೇಕೆಂಬ ಆತುರದಿಂದ, ವೆಂಕಟಪತಿಯು ಕುರುಮಾರ್ಗದಿಂದ ಮೆಲ್ಲಗೆ ಅದೇ ಮನೆಯ ಬಳಿಗೆ ಹೋಗಿ, ತನ್ನನ್ನು ಯಾರೂ ನೋಡದಂತೆ ಆ ಮನೆಯ ಹೊರ ಜಗಲಿಯಲ್ಲಿ ಸುಮ್ಮನೆ ಕುಳಿತುಕೊಂಡನು. +ಮನೆಯ ಬಾಗಿಲು ಮುಚ್ಚಿತ್ತು. +ತಿಪ್ಪಾಶಾಸ್ತ್ರಿಯು ಹೊರಗಿನಿಂದ “ಭಾಗೀರಥಿ ಅಮ್ಮ!ಭಾಗೀರಥಿ ಅಮ್ಮ!” ಎಂದುಕರೆದನು. +ವಾಗ್ದೇವಿಯು–“ಅಮ್ಮಾ!ಅಮ್ಮಾ!ತಿಪ್ಪಾಶಾಸ್ತ್ರಿಗಳು ಬಾಗಲಲ್ಲಿ ಕರೆಯುತ್ತಾರೆ” ಎಂದು ತಾಯಿಗೆ ಕರೆದು ಹೇಳಿದಳು. +“ಮಗಳೇ!ಕಾಲುಮುಟ್ಟಿ ನಮಸ್ಕಾರಮಾಡು” ಎಂದು ಭಾಗೀ ರಥಿಯು ಕದವನ್ನು ತೆರೆದಳು. +ಜೋಯಿಸನು ಒಳಕ್ಕೆ ಪ್ರವೇಶಿದ ಕೂಡಲೇ ವಾಗ್ದೇವಿಯು ಅವನಿಗೆ ಒಂದು ಮಣೆಯನ್ನು ಕೊಟ್ಟು ಕೂರಿಸಿ, ಕಾಲುಮುಟ್ಟಿ ನಮಸ್ಕಾರಮಾಡಿ, ನಿಂತುಕೊಂಡಳು. +“ಸೌಭಾಗ್ಯವತೀ ಭವ” ಎಂದು ಆಶೀರ್ವಾದಮಾಡಿ ಜೋಯಿಸನು “ತಮ್ಮಣ್ಣ ಭಟ್ಟರು ಎಲ್ಲಿ?” ಎಂದು ಕೇಳಿದನು. +“ಅಂಗಡಿ ಬೀದಿಗೆ ಹೋಗಿರುವರು. +ಈಗತಾನೇ ಮರಳಿ ಬರುವರು” ಎಂದು ವಾಗ್ದೇವಿಯ ತಾಯಿಯು ಪ್ರತ್ಯುತ್ತರಕೊಟ್ಟಳು. +“ಜೋಯಿಸರೇ!ನಮ್ಮ ಮೇಲೆ ಇಷ್ಟು ಬೇಸರವ್ಯಾಕೆ? +ತಮ್ಮ ದರುಶನವಿಲ್ಲದೆ ಬಹು ದಿವಸಗಳಾದವು. +ವಾಗ್ದೇವಿಯನಕ ತಮ್ಮ ಧ್ಯಾನದಲ್ಲಿಯೇ ಇದ್ದಾಳೆ. +ನಮ್ಮವರಂತೂ ತಮ್ಮನ್ನ ಸ್ವಪ್ನದಲ್ಲಿಯೂ ಕಾಣುತ್ತಲಿದ್ದಾರೆ. +ನಾನು ಅವರಿವರ ಹತ್ತಿರ ತಮ್ಮ ವಿಷಯದಲ್ಲಿ ವಿಚಾರಿಸುತ್ತಾ ಇದ್ದೇನೆ. +ನೋಡಿರಿ!ಬಡವರ ನೆನಪು ಯಾರೂ ಇಡರು. +ಅದೊಂದು ಆಶ್ಚರ್ಯವಲ್ಲ; +ಆದರೂ ನೋಡಿಬಿಡುವಾ ಎಂದು ನಮ್ಮವರ ಹತ್ತಿರ ಪ್ರಸ್ತಾಸಮಾಡಿದಾಗ, ಅವರು ತಮಗೆ ಜನ ಕಳುಹಿಸಿದರು. +ಈ ಸಂಬಂಧ ಕೋಪಮಾಡಬೇಡಿ. +ನಾವು ಕೇವಲ ಬಡವರು. +ತಮ್ಮ ಆಶ್ರಿತರು, ಎಂದೆಂದೂ ತಮ್ಮ ಉಪಕಾರ ಮರೆಯುವರಲ್ಲ” ಎಂದು ಭಾಗೀರಥಿಯು ಸವಿಯಾದ ಮಾತುಗಳಿಂದ ಜೋಯಿಸನನ್ನು ಉಪಚರಿಸಿದಳು. +ಅವನು ಉಬ್ಬೇರಿ–“ಏನವ್ವಾ! +ನಿಮ್ಮನ್ನು ನಾನು ಮರೆತು ಬಿಡುವದುಂಟೇ? +ಬಡವರಾದರೇನಾಯಿತು? +ನನಗೆ ಅಂಥವರ ಮೇಲೆಯೇ ಹೆಚ್ಚು ಅಂತಃ ಕರಣ. +ಶ್ರೀಕೃಷ್ಣನು ವಿದುರನನ್ನು ಪ್ರೀತಿಸಲಿಲ್ಲವೇ? +ಒಂದು ಜಾತಕ ಸಂದರ್ಭ ನೋಡಲಿಕ್ಕೆ ಕರೆ ಬಂದುದರಿಂದ ಶಂಬೂರಿಗೆ ಒಬ್ಬ ಶೆಟ್ಟಿಯ ಮನೆಗೆ ಹೋಗಿದ್ದೆ. +ಅಲ್ಲಿ ಕೊಂಚ ತಾಮಸವಾಯಿತು. +ಇಲ್ಲವಾದರೆ ನಿಮ್ಮ ಲ್ಲಿಗೆ ಮೊದಲೇ ಬರುವವನಾಗಿದ್ದೆ. +ಹಲವು ಮಾತುಗಳಿಂದೇನು? +ನಿಮ್ಮ ಮಗಳ ಜಾತಕವನ್ನು ಸೂಕ್ಷ್ಮರೀತಿಯಲ್ಲಿ ಪರಿಶೋಧಿಸಿ, ಸ್ಫುಟಮಾಡಿ ತಂದಿರುವೆ. +ಇನ್ನಾದರೂ ನನ್ನನ್ನು ದೂರುವದು ಬಿಡುವಿರಾ” ಎಂದು ಪ್ರತ್ಯುಪಚಾರದ ಮಾತುಗಳಿಂದ ಭಾಗೀರಥಿಯನ್ನು ಜೋಯಿಸನು ಸಮಾಧಾನಮಾಡಿದನು. +“ಹಾಗಾದರೆ ನಮ್ಮ ಮೇಲೆ ತಮ್ಮ ದಯ ಪೂರ್ಣ ಉಂಟಾಯಿತು; +ಇನ್ನು ನಮಗೇನು ಕಡಿಮೆ?” ಎಂದು ಕಡೆಗಣ್ಣು ನೋಟದಿಂದ ವಾಗ್ದೇವಿಯು ಜೋಯಿಸಗಿಗೆ ತಡೆಗಟ್ಟಿ ಬಿಟ್ಟಳು. +ಅಷ್ಟರಲ್ಲಿ ತಮ್ಮಣ್ಣ ಭಟ್ಟನು ಬಂದು- “ಸ್ವಾಮೀ!ಸ್ವಾಮೀ!ಜೋಯಿಸರಿಗೆ ನಮೋನಮಃ! +ನಮ್ಮ ಮೇಲೆ ಇಷ್ಟು ಉದಾಸೀನವ್ಯಾಕೆ? +ತಮ್ಮ ಭೇಟಿಯಿಲ್ಲದೆ ಬಹು ದಿವಸಗಳು ಕಳೆದವು. +ನಮ್ಮಿಂದೇನು ಅಪರಾಧ ನಡಿಯಿತೋ ತಿಳಿಯದು” ಎಂದು ತಮ್ಮಣ್ಣಭಟ್ಟನು ಹಲ್ಲುಕಿರಿದನು. +ಭಾಗೀರಥಿಯು ಗಂಡನನ್ನು ಕುರಿತು-“ನಿಮ್ಮ ರಗಳೆ ಯಾವಾಗಲೂ ಮುಗಿಯುವದೇ ಇಲ್ಲ. +ಜೋಯಿಸರಿಗೆ ನಮ್ಮ ಮೇಲೆ ಉದಾಸೀನವಾದರೆ, ನಿಮ್ಮ ಮಗಳ ಜಾತಕವನ್ನು ಸೂಕ್ಷ್ಮರೀತಿಯಿಂದ ಸ್ಫುಟಮಾಡಿ ಇಷ್ಟು ಪ್ರೀತಿಯಿಂದ ನಮ್ಮ ಮನೆಬಾಗಿಲಿಗೆ ಹೊತ್ತುಕೊಂಡು ಬರುವರೇನು? +ಅವರಿಗೆ ನಾವು ಗಂಟು ಕೊಟ್ಟಿರುವೆವೇ?” ಎಂದು ಗದರಿಸಿ ಬಿಟ್ಟಳು. +ಅಷ್ಟರಲ್ಲಿ ವಾಗ್ದೇವಿಯು “ಅಪ್ಪಯ್ಯಾ! +ಕಾಳೀ ದನ ಹಟ್ಟಿಗೆ ಇನ್ನೂ ಕೂಡಲಿಲ್ಲ. +ಎಲ್ಲಿಗೆ ಹೋಯಿತೋ, ಯಾರು ಕಟ್ಟಿ ಹಾಕಿ ಬಿಟ್ಟರೋ ತಿಳಿಯದು” ಎಂದು ತಂದೆಗೆ ದೂರುಕೊಟ್ಟಳು. +ಮುದುಕಗೆ ಸ್ವಲ್ಪ ಸಿಟ್ಟುಬಂತು. +“ಯಾರು ಕಟ್ಟಿ ಹಾಕಿದರೋ ಏನಾಯಿತೋ, ಅದಕ್ಕೆ ಹುಲಿ ಹಿಡಿಯಲಿ! +ಈ ದುಃಖ ಯಾವಾಗಲೂ ತಪ್ಪುವುದೇ ಇಲ್ಲ” ಎಂದನು. +“ಮೊಟ್ಟ ಮೊದಲು ನಿಮ್ಮ ಬಾಯಿಯಿಂದ ಹೊರಡುವದೇ ಅವಾಚ್ಯ ವಷ್ಟೆ! +ದನವನ್ನು ಹುಲಿ ಹಿಡಿದರೆ ಹಾಲೆಂದು ಗಲಗಚ್ಚಿ ಕುಡಿಯುವಿರೇನು? +ಪಶುಗಳಿಗೆ ಬುದ್ಧಿಯುಂಟೇ? +ನೀವು ಇಷ್ಟು ವಿವೇಕಶೂನ್ಯರಾದರೆ ಸಂಸಾರ ನಡೆಯುವದು ಹ್ಯಾಗೆ?” ಎಂದು ಭಾಗೀರಥಿಯು ಪತಿಯ ಮೇಲೆ ಜರಿದುಬಿದ್ದಳು. +“ಅವ್ವಾ!ವೃದ್ಧರಲ್ಲವೇ? +ಅವರಿಗೆ ಅಷ್ಟು ನಿಷ್ಠೂರವಾಡಬೇಡಿ. +ದಣಿದು ಬಂದವರು ಏನೋ ಅಡಿಬಿಟ್ಟರು; + ಚಿಂತೆ ಇಲ್ಲ” ಎಂದು ತಿಪ್ಪಾ ಶಾಸ್ತ್ರಿಯು ಭಾಗೀರಥಿಗೆ ಬುದ್ಧಿ ಹೇಳಿ, ಗಂಡಹೆಂಡಿರಲ್ಲಿ ಜಗಳ ಬೆಳೆಯ ದಂತೆ ಮಾಡಿದನು. +ಹಾಗೆಯೇ ತಮಣ್ಣಭಟ್ಟನು ಸೂಟೆಯನ್ನು ಬೀಸಿಕೊಂಡು ದನವನ್ನು ಹುಡುಕಿ ತರುವದಕ್ಕೆ ಬೇಗನೆ ಹೊರಹೊರಟನು. +ಅಷ್ಟರಲ್ಲಿ ಭಾಗೀರಥಿಯು ಬೆಕ್ಕು ಏನೋ ಗಡಿಬಿಡಿ ಮಾಡುತ್ತದೆ, ನೋಡಿ ಬರುವೆನೆಂದು ಮನೆಯೊಳಕ್ಕೆ ಹೋಗಿ ಬಿಟ್ಟಳು. +ವಾಗ್ದೇವಿಯೂ ತಿಪ್ಪಾಶಾಸ್ತ್ರಿಯೂ ಇಬ್ಬರೇ ಸಂಭಾಷಣೆಗೆ ಉಪಕ್ರಮಿಸಿದರು. +ವಾಗ್ದೇವಿ- ಜೋಯಿಸರೇ, ನನ್ನ ಜಾತಕ ಸ್ಫುಟ ಮಾಡಿದ್ದು ನಿಜವೇನು? +ತಿಪ್ಪಾಶಾಸ್ತ್ರಿ- ನನ್ನ ಮಾತಿನ ಮೇಲೆ ಭರವಸೆ ಇಲ್ಲವೇ? +ವಾಗ್ದೇವಿ- ಹಾಗೇನು ನಾನು ಹುಚ್ಚಳೇ? +ತಮ್ಮ ಮಾತು ನಂಬದಿರಲಾರೆ. +ಮುಖ್ಯವಾಗಿ ನೋಡಿರಿ; +ತಂದೆತಾಯಿಗಳು ನನಗೆ ಒಬ್ಬ ಮೊದ್ದು ಜಂತುವನ್ಮು ಗಂಡನನ್ನಾಗಿ ಜೋಡಿಸಿದರಲ್ಲ. +ಊಟವೊಂದು ಪರಿಷ್ಕಾರ ವಾದರೆ ಅವರಿಗೆ ಮತ್ತೊಂದು ಬೇಡ. +ಸ್ವಸ್ಥವಾಗಿ ಶಯನ ಮಾಡುವರು. +ಯಾರು ದುಡಿಯುತ್ತಾರೆ, ಏನು ತಾನು ಎಂಬ ಗೊಡವೆಯು ಅವರಿಗಿಲ್ಲ. +ಅವರ ಕೈ ಹಿಡಿದು ಈಗ ಎಂಟು ವರ್ಷವಾಯಿತು. +ಉಡಲಿಕ್ಕೆ ಒಂದು ಶಾಲೆಯಾಗಲೀ ತೊಡಲಿಕ್ಕೆ ಒಂದು ಕುಪ್ಪಸವಾಗಲೀ, ಒಂದೇ ಒಂದುಕಾಸಿನ ಚಿನ್ನವಾಗಲೀ ಅವರಿಂದ ನನಗೆ ದೊರತಿದ್ದಿಲ್ಲ. +ನನ್ನ ಬುದ್ಧಿಯಿಂದಲೇ ಅಲ್ಪ ಸ್ವಲ್ಪ ಉಡಿಗೆ ತೊಡಿಗೆ ಚಿನ್ನಚಿಗುರು ಮಾಡಿಕೊಂಡಿರುವೆ. +ಅದಾದರೂ ಹ್ಯಾಗೆ ದೊರಕಿಸಿಕೊಂಡೆನೆಂಬ ಜ್ಞಾನವು ಆ ಪ್ರಾಣಿಗೆ ಉಂಟೇ? +ಶ್ರಿ$ಹರಿಯು ಲೋಕದಲ್ಲಿ ಇನ್ನೆಂಥೆಂಧಾ ಪ್ರಾಣಿಗಳನ್ನು ಸೃಷ್ಟಿಮಾಡಿರುವನೋ ಕಾಣೆ! +ತಿಪ್ಪಾಶಾಸ್ತ್ರಿ-“ ಅಷ್ಟು ಒಳ್ಳೇ ಗಂಡನು ದೊರಕಬೇಕಾದರೆ ಹೆಂಡತಿಯು ಏಳೇಳು ಜನ್ಮದಲ್ಲಿಯೂ ಎಷ್ಟೋ ಸುಕೃತ ಮಾಡಿರಬೇಕು. +ಇನ್ನೊಬ್ಬ ಗಂಡ ನಾದರೆ ಹೊಡೆದು ನಿನ್ನ ಹಲ್ಲು ಮುರಿಯುತ್ತಿದ್ದಿಲ್ಲವೇ? +ಇವನು ಕೈಬೆರಳು ಎತ್ತಬಲ್ಲನೇ? +ವಾಗ್ದೇವಿ ಕೈ ಬೆರಳು ಎತ್ತುವದು ಬಿಟ್ಟುಸಿಟ್ಟನಿಂದ ನಾನೇ ಕೈ ಬೇರಿದರೂ ಸುಮ್ಮನಿರುವರು ಪಾಪ!? +ತಿಪ್ಪಾಶಾಸ್ತ್ರಿ- “ನಿನಗೆ ರಾಕ್ಷಸಗಣ, ಅವನಿಗೆ ಮಾನುಷಗಣವಾದು ದರಿಂದ ಹಾಗೆಯಾಗಲಿಕ್ಕೆ ಕಾರಣ, ಮತ್ತೇನೂ ಅಲ್ಲ.” +ವಾಗ್ದೇವಿ-“ಅವರ ಜಾತಕ ತಾವು ನೋಡಿರುವಿರಷ್ಟೆ. +ಅದರಲ್ಲಿ ಏನೂ ಬಲವಿಲ್ಲವೇ?” +ತಿಪ್ಪಾಶಾಸ್ತಿ-ಆಯುಷ್ಯ ಗಟ್ಟಿಯದೆ. +ಮತ್ತೆಲ್ಲ ಸೊನ್ನೆ ಕೇವಲ ಕೇಮದ್ರುಮ ಯೋಗವೆನ್ನಬೇಕು.” +ವಾಗ್ದೇವಿ-“ಈ ಯೋಗದ ಫಲವೇನೋ?” +ತಿಪ್ಪಾಶಾಸ್ತ್ರಿ-“ಭಿಕ್ಷೆಬೇಡಿಕೊಂಡಿರೋಣ ಎಂಬರ್ಥ- ಕಾಸೊಂದೂ ದುಡಿಯಲಾರನು” +ವಾಗ್ದೇವಿ-“ನನ್ನ ಜಾತಕ ಹ್ಯಾಗೆ?ಅದಾದರೂ ಕೇಳುವ? +ತಿಪ್ಪಾಶಾಸ್ತ್ರಿ- “ತಬ್ಲಿ ಅಲ್ಲ. +ಈಗ ನಡಿಯುವ ದಶಾಂತರ್ದಶೆಯೂ ಗೋಚರದಲ್ಲಿ ಗ್ರಹಗಳು ನಿಂತ ಭಾವವೂ ಅತಿ ಶುಭಕರ. +ಇನ್ನೂ ಎಂಟೇ ದಿವಸಗಳೊಳಗೆ ನಿನ್ನ ದರ್ಬಾರಿಗೆ ಎಣೆ ಇರದು. +ಆಗ ತಿಪ್ಪನನ್ನ ಮರೆಯದೆ ಕರೆಕಳುಹಿಸಿದರೆ ಮುಂದಿನ ವೃದ್ಧಿಯ ಉಪಾಯವೆಲ್ಲ ಹೇಳಿಕೊಡುವೆನು. +ರಾತ್ರೆಯಾಯಿತು, ಮನೆಯಲ್ಲಿ ನೆಂಟರು ಬಂದಿರುವರು. +ಇನ್ನೊಮ್ಮೆ ಮಾತನಾಡಬಹುದು.?ಎಂದು ತಿಪ್ಪಾಶಾಸ್ತ್ರಿಯು ಅವಸರದಿಂದೆದ್ದು ತನ್ನ ಮನೆಗೆ ಬಂದನು. +ವಾಗ್ದೇವಿಯು ಬಾಗಿಲು ಹಾಕಿ ತಿಪ್ಪಾಶಾಸ್ತ್ರಿಯು ಹೇಳಿದ ಜಾತಕ ಭಾವವನ್ನು ಕುರಿತು ತಾಯಿಯ ಕೂಡೆ ಪ್ರಸ್ತಾಸಿಸುತ್ತಿರುವಾಗ ವೆಂಕಟಪತಿ ಆಚಾರ್ಯನು ಮೆಲ್ಲನೆ ಜಗಲಿಯಿಂದ ಕೆಳಗಿಳಿದು ಬಾಗಲಿಗೆ ಕೈತಟ್ಟಿ “ಭಾಗೀರಥಿ!ಭಾಗೀರಥಿ” ಎಂದು ಕರೆದನು. +“ಯಾರದು” ಎಂದು ವಾಗ್ದೇವಿಯು ಒಳಗಿನಿಂದ ಕೇಳಿದಳು. +“ನಾನು ವೆಂಕಟಪತಿ” ಎಂಬ ಉತ್ತರ ಸಿಕ್ಕಿತು. +“ಆಚಾರ್ಯರ ಸ್ವರದಂತೆ ನನ್ನ ಕಿವಿಗೆ ಕೇಳಿಸಿತು, ಮಗಳೇ!ಬೇಗ ಬಾಗಿಲು ತೆರೆ?ಎಂದು ಭಾಗೀರಥಿಯು ಕೊಟ್ಟ ಅನುಜ್ಞೆಗನುಸಾರವಾಗಿ ಸಾವಕಾಶ ಮಾಡದೆ ಅವಳು ಕದ ತೆರೆದಳು. +ಆಚಾರ್ಯನ ಸವಾರಿಯು ಒಳಗೆ ಬಂದ ಹಾಗಾಯಿತು. +“ಇದೇನು, ಆಚಾರ್ಯರೇ! +ಬಡವರ ಮನೆಗೆ ಭಾಗೀರಥಿ ಬಂದಂತಾಯಿತು. +ಕೂರಿ ಎಂದು ಮಣೆಯನ್ನು ಕೊಟ್ಟು, ವಾಗ್ದೇವಿಯು ಆಚಾರ್ಯರ ಕಾಲುಮುಟ್ಟಿ ನಮಸ್ಕಾರ ಮಾಡಿ, ಭಯಭಕ್ತಿಯಿಂದ ನಿಂತುಕೊಂಡಳು. +ಕೂರವ್ವಾ, ಕೂರು” ಎಂದು ಆಚಾರ್ಯನು ಅವಳನ್ನು ತನ್ನ ಸಮೀಪ ಕುಳ್ಳಿರಿಸಿಕೊಂಡು “ಸಣ್ಣದೊಂದು ಪ್ರಸ್ತಾಸ ಮಾಡುವದಕ್ಕಾಗಿ ಬಂದಿರುವೆನು, ಮನಸ್ಸಿದ್ದರೆ ಕೇಳಿಬಿಡು” ಎಂದು ಹೇಳಲು, ಅಪ್ಪಣೆಯಾಗಲೆಂದು ತಾಯಿಯೂ ಮಗಳೂ ಏಕರೀತಿಯಾಗಿ ಹೇಳಿಕೊಂಡರು. +ವೆಂಕಟಪತಿ- “ಹಾಂಗಾದರೆ ಸಂಕ್ಷೇಪವಾಗಿ ಹೇಳಿಬಿಡುತ್ತೇನೆ. +ವಾಗ್ದೇವಿಯ ಮೇಲೆ ಶ್ರೀಪಾದಂಗಳವರು ಪೂರ್ಣ ಅನುಗ್ರಹವನ್ನಿಟ್ಟಿರುವರು. +ಅದಕ್ಕೆ ಪ್ರತಿಯಾಗಿ ಅವಳ ಅಂತಃಕರಣವನ್ನು ಅವರು ಬಯಸುವರು.? +ವಾಗ್ದೇವಿ- “ಪೂರ್ವಾಶ್ರಮದಲ್ಲಿ ಅವರಿಗೆ ನಾನು ನಾದಿನಿ. +ಈಗ ಅನಕಾ ಅವರ ಮಠದ ಶಿಷ್ಯಮಂಡಳಿಗೆ ಸೇರಿರುವವಳು. +ಹೀಗಾಗಿ ಗುರುಗಳ ಪ್ರೀತಿಯು ನನ್ನ ಮೇಲೆ ಇರುವದು ಆಶ್ಚರ್ಯವೆಂದು ನಾನು ತಿಳುಕೊಳ್ಳುವದಿಲ್ಲ. +ಬಡವಳಾದ ನನ್ನ ಮೇಲೆ ಗುರುಗಳ ಅನುಗ್ರಹವಾದದ್ದಕ್ಕಾಗಿ ಬಹಳ ಕೃತಜ್ಞತೆಯುಳ್ಳವಳಾಗಿರುತ್ತೇನೆ.? +ವೆಂಕಟಪತಿ- “ನನ್ನ ಮಾತಿನ ಅನ್ವಯ ತಿಳಿದವಳಂತೆ ನೀನು ಕೊಟ್ಟ ಪ್ರತ್ಯುತ್ತರಕ್ಕೆ ಮೆಚ್ಚಿದೆ. +ಮಾತಿನ ಚಮತ್ಕಾರ ಹೀಗಿರಬೇಕು.” +ವಾಗ್ದೇವಿ- “ಆಚಾರ್ಯರೇ, ತಾವು ಅನ್ನ ತಿಂದಷ್ಟು ನಾನು ಉಪ್ಪು ತಿಂದವಳಲ್ಲ. +ತಮ್ಮ ಮಾತಿನ ಅನ್ವಯ ನಿಜವಾಗಿ ಹ್ಯಾಂಗಿರೋದೋ ನಾನು ತಿಳಿದವಳಲ್ಲ. +ತಿಳಿದಿದ್ದರೆ ತಮ್ಮ ಮಾತಿಗೆ ಸರಿಯಾದ ಪ್ರತ್ಯುತ್ತರ ಕೊಡುತ್ತಿದ್ದೆ.” +ವೆಂಕಟಪತಿ- “ಶ್ರೀಪಾದಂಗಳವರು ನಿನ್ನ ಮೇಲೆ ಮೋಹಪಟ್ಟಿರುವ ರೆಂಬ ತಾತ್ಪರ್ಯ ನಿನಗೆ ಸೂಚಿಸಿದೆ, ಮತ್ತೇನೂ ಅಲ್ಲ.” +ವಾಗ್ದೇವಿ- “ಧನ್ಯಳಾದೆನೆಂದು ನಾನು ಹೇಳಬೇಕೇ? +ಆದರೆ ಯತಿಗಳ ಮೋಹ ಒಂದೇ ವಸ್ತುವಿನ ಮೇಲೆ ನೆಲೆಗೊಂಡಿರುವದೆಂಬ ಭರವಸೆ ಮಾಡ ಕೂಡದು. +ಅದಲ್ಲದೆ ನಮ್ಮ ಶ್ರೀಪಾದಂಗಳವರು ಅತಿ ಪರಿಶುದ್ಧರೆಂಬ ಖ್ಯಾತಿಯು ಊರಲ್ಲೆಲ್ಲಾ ಹಬ್ಬಿಕೊಂಡಿದೆ. +ಈಗ ಮಾತ್ರ ಅವರು ವಿಷಯಾ ತುರವುಳ್ಳ ವರೆಂಬ ಮಾತು ಪ್ರಚುರವಾದರೆ, ಬೆಡಗಿನಲ್ಲಿ ನನಗಿಂತಲೂ ಮಿಗಿಲೆನಿಸಿಕೊಳ್ಳುವ ಅನೇಕ ಸ್ತ್ರೀಗಳಿರುವಾಗ, ನನ್ನ ಮೇಲೆಯೇ ಅವರ ದೃಷ್ಟಿ ಬಿದ್ದ ಕಾರಣವೇನೋ ತಿಳಿಯದು.” +ವೆಂಕಟಪತಿ– “ಆ ಕಾರಣವನ್ನು ಕಾಲಾನುಭಾಗದಲ್ಲಿ ನೀನೇ ಅವ ರಿಂದ ತಿಳಿಯುವದು ನ್ಯಾಯವಾದ ಮಾರ್ಗವೆಂದು ನನಗೆ ತೋರುತ್ತದೆ. +ಶ್ರೀಪಾಂಗಳವರ ಕಡೆಯಿಂದ ನಾನು ಈಗ ಬಂದಿರುವ ಉದ್ದೇಶವೇನೆಂಬುದು ನಿನಗೆ ಚನ್ನಾಗಿ ತಿಳಿಯಬಂತಲ್ಲ. +ಇನ್ನು ತಡಮಾಡದೆ ಒಂದು ಖಂಡಿತವಾದ ಉತ್ತರವನ್ನು ಕೊಟ್ಟು ಬಿಟ್ಟರೆ, ಅವರಿಗೆ ಅದನ್ನು ಅರಿಕೆ ಮಾಡಿ ಬಿಡುವೆನು. +ವಾಗ್ಧೇವಿ–“ನಾನೇನು ಉತ್ತರಕೊಡಲಿ!? +ವೆಂಕಟಪತಿ– “ಹಾಗಾದರೆ ನಿನ್ನ ಪ್ರೀತಿಗೆ ಅವರು ಪಾತ್ರರಾಗುವ ನಿರೀಕ್ಷೆಯು ವ್ಯರ್ಥವೆಂದು ತಿಳಿಸಿಬಿಡುತ್ತೇನೆ — ರಾತ್ರಿಯಾಯಿತು; ಹೋಗಲೇ?” +ಭಾಗೀರಧಿ– “ಆಚಾರ್ಯರೇ!ಅವಸರ ಮಾಡಲಾಗದು. +ಅವಳು ಕೈಕಾಲಲ್ಲಿ ಬದ್ಧವಾದರೇನಾಯಿತು? +ಅವಳು ಮಗುವಲ್ಲವೆ? +ಇನ್ನೂ ಬುದ್ಧಿ ತಿಳಿದವಳಲ್ಲ. +ಯಾವ ಮಾತಿಗೆ ಯಾವ ಉತ್ತರ ಕೊಡಬೇಕೆಂಬ ಜ್ಞಾನ ಅವಳಿಗದೆ ಏನು? +ತಾವು ಸಿಟ್ಟು ಮಾಡಿ ಹೊರಟುಬಿಟ್ಟರೆ ಶ್ರೀಪಾದಂಗಳ ಸಂಕಲ್ಪಕ್ಕೆ ಹಾನಿಬಾರದೇ?” +ವೆಂಕಟಪತಿ– “ನಾನು ಸಿಟ್ಟು ತಾಳಲಿಲ್ಲ. +ವಾಗ್ದೇವಿಯ ಉತ್ತರವು ಗುರುಗಳ ಕಾರ್ಯಕ್ಕೆ ಹಿತವಾದ್ದಲ್ಲವೆಂದು ಮಂದಟ್ಟಾದ ಕಾರಣ ಹೋಗ ಲಿಕ್ಕೆ ಹೊರಟೆ; ಮತ್ತೇನಲ್ಲ” +ಭಾಗೀರಥಿ– “ಆಚಾರ್ಯರೇ! +ನಿಧಾನವಾಗಿ ಕೇಳಬೇಕು. +ನಾವು ಕೇವಲ ಬಡವರು. +ಉಳುಕೊಳ್ಳಲಿಕ್ಕೆ ಸ್ವಂತ ಮನೆಯಾಗಲೇ ಉಣ್ಣು ತಿನ್ನಲಿಕ್ಕೆ ಕಟ್ಟಿಟ್ಟ ಬದುಕಾಗಲೀ ಉಳ್ಳವರಲ್ಲ. +ವಾಗ್ದೇವಿಯ ಗಂಡನು ಅವಳ ಪೂರ್ವಾರ್ಜಿತ ಕರ್ಮದಿಂದ ಪಶುವಿನಂತೆ ಹೆಡ್ಡ. +ಅದರೂ ಅವಳು ಪತಿ ಭಕ್ತಿಬಿಟ್ಟು ಪರಪುರುಷನ ಮೋರೆಯನ್ನು ಈ ವರೆಗೆ ನೋಡಿದವಳಲ್ಲ. +ಶ್ರೀಪಾದಂಗಳವರ ಅನುಗ್ರಹ ಅವಳಮೇಲೆ ಆದ್ದು ನಮ್ಮ ಪೂರ್ವಪುಣ್ಯವೇ ಸರಿ. +ಪರಂತು ಲೋಕಾಪವಾದಕ್ಕೆ ಯಾರೂ ಬೀಳಬಾರದು. +ಎಷ್ಟು ಸಣ್ಣ ಕಾರ್ಯವಾದರೂ, ಅದರ ಪೂರ್ವಾಪರವನ್ನು ಸರಿಯಾಗಿ ಗ್ರಹಿಸದೆ, ಪತಂಗವು ಬೆಂಕಿಯಲ್ಲಿ ಬೀಳುವಂತೆ ಅಡ್ಡಾದಿಡ್ಡಿಯಾಗಿ ನಡೆದರೆ ಇತ್ತಟ್ಟಿಗೂ ನಾಳೆ ಬಾಧಕ ಬಾರದೇ? +ಗುರುಗಳಿಗೆ -ವಾಗ್ದೇವಿಯ ಮೇಲೆ ಮನಸ್ಸಾಯಿ ತೆಂದು ತಮ್ಮ ಅಪ್ಪಣೆಯಾಯಿತು. +ಮುಂದಿನ ಕೆಲಸ ಹ್ಯಾಗೆ ನಡಿಯಬೇಕು, ಏನೆಂಬ ವಿವರವೆಲ್ಲಾ ತಮ್ಮಿಂದ ತಿಳಿಯುವದರ ಮೊದಲು ತಮಗೆ ನಾವು ಹ್ಯಾಗೆ ಖಂಡಿತ ಉತ್ತರ ಕೊಡೋಣ? +ಒಬ್ಬ ವೇಶ್ಯಾ ಸ್ತ್ರೀಯ ಕೂಡೆ ತಾವು ಇಂಥಾ ಪ್ರಶ್ನೆ ಕೇಳಿದರೆ ಅವಳು ಏನೂ ಅಂಜಿಕೆ ಇಲ್ಲದೆ ತತ್‌ಕ್ಷಣ ತನ್ನ ಮನಸ್ಸಿನ ಭಾವವನ್ನು ಅರಿಕೆಮಾಡಿ ಬಿಡುವಳು. +ಯಾಕೆಂದರೆ ಅದು ಅವಳ ವೃತ್ತಿಗೆ ಒಪ್ಪಿದ ಕೆಲಸ. +ನಮ್ಮ ಸಂಗತಿಯು ಹಾಗಲ್ಲವಷ್ಟೆ? +ಉಭಯ ಕಡೆಯಲ್ಲಿಯೂ ಮರ್ಯಾದೆಗೆ ಹಾನಿ ಬರ ಬಾರದಲ್ಲಾ. +ನಾವು ತಮ್ಮ ಮಠದ ಶಿಷ್ಯರು, ಸ್ವಜಾತಿಯವರು. +ಹೀಗಿರುವಾಗ ತಮ್ಮ ಯಜಮಾನರ ಗೌರವವೂ ಕೀರ್ತಿಯೂ ಎಷ್ಟರ ಮಟ್ಟಿಗೆ ತಮ್ಮ ಕಾಪಾಡುವಿಕೆಯಲ್ಲಿ ಇರಬೇಕಾದ್ದೆಂದು ನಾನು ಹೇಳಬೇಕೇ? +ಹಾಗೆಯೇ ತಮ್ಮ ಬಡ ಆಶ್ರಿತರಾದ ನಮ್ಮ ಮರ್ಯಾದೆಯು ಹಾಳಾಗದಂತೆ ನೋಡಿಕೊಳ್ಳುವ ಜಾಗ್ರತೆ ಯಾರು ತಕ್ಕೊಳ್ಳಬೇಕಾದ್ದೆಂದು ತಾವು ತಿಳಕೊಂದ್ದೀರೋ ಕಾಣೆ! +ವೆಂಕಟಪತಿ– “ಸರಿ!ಸರಿ! +ನೀನು ಹೇಳಿದ ಮಾತು ಅಲ್ಲವೆನ್ನು ವರ್ಯಾರು? +ಇತ್ತಟ್ಟಿಗೂ ಮಾತಿನವಾಸಿ ಬಾರದಂತೆಯೂ, ಊರಲ್ಲಿ ಜನರು ಬಿಟ್ಟು ಆಡದಂತೆಯೂ ಎತ್ತುಗಡೆ ಮಾಡುವದು ನನ್ನ ಕೆಲಸವೇ. +ಅದನ್ನು ಎಂದಾದರೂ ಮರೆಯಲಾರೆ.” +ಭಾಗೀರಥಿ– “ನಾವು ನಡಿಯಬೇಕಾದ ಕ್ರಮ ಅಪ್ಪಣೆಯಾಗಲಿ” +ವೆಂಕಟಪತಿ- “ತಾಯಿ ಮಗಳಾದ ನಿಮ್ಮಿಬ್ಬರ ಮನೋಗತ ಮುಂದಾಗಿ ನಾನು ತಿಳಿಯದೆ ಮುಂದಿನ ಪ್ರಸ್ತಾಪವೊಂದೂ ಮಾಡವಲ್ಲೆ.” +ಭಾಗೀರಥಿ– “ವಾಗ್ದೇವಿ!ನಿನ್ನ ಮನಸ್ಸಿನ ತಾತ್ಪರ್ಯ ಈಗಲೇ ಹೇಳಿಬಿಡು. +ನಾಳೆ ‘ಅಮ್ಮಾ ನೀನು ಮಾಡಿ ಹಾಕಿದ ವ್ಯಾಪಾರವಿದು’ ಎಂದು ನನ್ನನ್ನು ದೂರಲಾಗದು.” +ವಾಗ್ದೇವಿ– “ನಾನು ಏನೂ ಅರಿತವಳಲ್ಲ. +ನಿನ್ನ ಅಪ್ಪಣೆಯಂತೆ ನಡೆಯುವದೇ ನನ್ನ ಮತ. +ಅದರೂ ಅಪ್ಪಯ್ಯನ ಕೂಡೆ ಮುಂದಾಗಿ ಮಾತನಾಡದೆ, ನಮ್ಮ ಮನಸ್ಸಿಗೆ ಬಂದಂತೆ ಆಚಾರ್ಯರಿಗೆ ಉತ್ತರ ಕೊಟ್ಟುಬಿಡುವದು ನ್ಯಾಯವೇನು’? +ಭಾಗೀರಥಿ–“ಆ ಯೋಚನೆ ನಿನಗೆ ಬೇಡ. +ಅದೆಲ್ಲಾ ನಾನು ಸುದಾರಿಸಿಬಿಡುವೆನು. +ನಾವು ಹೇಳುವ ಮಾತು ಯಾವದಾದರೂ ಅವರು ಈ ವರೆಗೆ ಒಪ್ಪದ್ದುಂಟೇನು?” +ವಾಗ್ದೇವಿ– “ಹಾಗಾದರೆ ಆಚಾರ್ಯರ ಕೂಡೆ ಸಕಲ ವಿಷಯ ಗಳಲ್ಲಿಯೂ ನೀನೇ ಮಧ್ಯಸ್ಥಿಕೆ ಮಾಡಿದರೆ ಸಾಕೆಂದು ನನ್ನ ಮನಸ್ಸಿಗೆ ತೋರುತ್ತದೆ. +ಸುಮ್ಮಗೆ ಅವರ ಸಮಯವನ್ನು ಹಾಳು ಮಾಡಬಾರದು.” +ಭಾಗೀರಥಿ— “ವಾಗ್ದೇವಿಗನಕಾ ಶ್ರೀಪಾದಂಗಳವರ ಪಾದಾರವಿಂದ ಸೇವೆಯನ್ನು ಮಾಡಿಕೊಂಡಿರಲಿಕ್ಕೆ ತುಂಬಾ ಮನಸ್ಸಿದೆ. +ನನ್ನ ಮನಸ್ಸಿನ ಭಾವ ಪ್ರತ್ಯೇಕವಾಗಿ ಹೇಳಬೇಕೆಂದಿಲ್ಲ. +ನಮ್ಮ ಯಜಮಾನರ ಆಕ್ಷೇಪ ನಿವಾರಣೆಮಾಡುವದು ಪ್ರಯಾಸವಲ್ಲ. +ಅದೆಲ್ಲಾ ನಾನು ನೋಡಿಕೋಥೇನೆ. +ವಾಗ್ದೇವಿಯ ಪತಿಯು ಈ ವಿಚಾರದಲ್ಲಿ ವಿಘ್ನಕಾರಕನಾಗಲಾರನು. +ಈ ವರಿಗೆ ನಡೆದಂತೆಯೇ ಏಕ ಗೃಹಕೃತ್ಯದಲ್ಲಿಯೇ ಇರಬೇಕಲ್ಲದೆ ಒಬ್ಬರು ಇನ್ನೊಬ್ಬರನ್ನಗಲಿ ಇರಲಿಕ್ಕಾಗುವುದಿಲ್ಲ. +ಇದು ವರೆಗೆ ನಾವು ದರಿದ್ರಾವಸ್ಥೆಯೆನ್ನೆನುಭವಿಸಿ ಸಾಕಾಯಿತು. +ದೊಡ್ಡವರನ್ನು ಆಶ್ರಯಿಸಿದ ಮೇಲೆ ದಾರಿದ್ರ್ಯವು ಪುನರಪಿ ನಮ್ಮನ್ನು ಸೋಕಬಾರದು. +ಎಷ್ಟು ಹೀನವೃತ್ತಿ ಮಾಡುವದಾದವರೂ ಸುಖದೊರಕಬೇಕು. +ವಿಷಯಾಭಿಲಾಷೆ ಮಾಡುವ ಗಂಡಸರ ಮನಸ್ಸು ಕೆಸುವಿನ ಎಲೆಯ ಮೇಲೆ ನಿಂತ ನೀರಿನಂತಿರುವುದು. +ಶ್ರೀಪಾದಂಗಳವರ, ‘ಮಮತೆಯು ಪ್ರಕೃತ ವಾಗ್ದೇವಿಯ ಮೇಲೆ ಎಷ್ಟು ಸಂಪೂರ್ಣತೆಯುಳ್ಳದ್ದಾಗಿದ್ದರೂ ಮನಸ್ಸಿನ ಬಯಕೆಯು ತೀರಿದ ಮೇಲೆ ಅನ್ಯಸ್ತ್ರೀಯರ ಮಾಯಾಜಾಲದಲ್ಲಿ’ ಅವರು ಸಿಲುಕಲಾರರೆಂಬ ನಂಬಿಕೆ ಇಡಕೂಡದು. +ಒಮ್ಮೆ ಹಾಗಾದರೆ ಯತಿಗಳಿಗೆ ವಾಗ್ದೇವಿಯ ಹಂಬಲೇ ಇರಲಾರದು. +ಆಗ ನಾವೆಬ್ಲರೂ ದಾರಿಯಲ್ಲಿ ಬೀಳಬೇಕಾಗುವುದು. +ಆದಕಾರಣ ತಮ್ಮ ಅನುಜ್ಞೆ ಹ್ಯಾಗಾಗುತ್ತದೆಂದು ನೋಡುತ್ತೇನೆ.” +ವೆಂಕಟಪತಿ- “ಅಮ್ಮಾ, ನಿನ್ನ ಅಭಿಪ್ರಾಯ ಒಂದಿಷ್ಟಾದರೂ ಲೋಪ ವಿಲ್ಲದೆ ಹೇಳಿಬಿಡು. +ನಾನು ನನ್ನ ಯಜಮಾನರ ಕಾರ್ಯಸಾಧನೆಗೋಸ್ಕರ ನಿಮ್ಮ ಬಳಿಗೆ ಬಂದಿರುವೆನು. +ನಿಮ್ಮ ಒಳ್ಳಿತನ್ನು ಗಳಿಸಿಕೊಳ್ಳಲಿಕ್ಕೆ ಮುಂಜಾ ಗ್ರತೆ ತಕ್ಕೊಳ್ಳ ಬೇಕಾದ್ದು ನೀವೇಸರಿ, ನಿಮ್ಮ ಅಪೇಕ್ಷೆಯನ್ನು ಬಾಯಿ ಯಿಂದಲೇ ತಿಳಿಯುವದೆಕ್ಕೆ ನಾನು ಆಶೆಪಡುತ್ತೇನೆ. +ವಿಹಿತಮಾರ್ಗವು ಅದೇಸರಿ.? +ಭಾಗೀರಥಿ- “ನಾನಿನ್ನೇನು ಹೇಳಲಿ, ಸರ್ವವನ್ನು ಬಲ್ಲವರಾದ ತಮಗೆ ನಾನು ಹೆಚ್ಚಿಗೆ ಅರಿಕೆ ಮಾಡಲಿಕ್ಕೆ ಶಕ್ತಳಲ್ಲ.” +ವೆಂಕಟಪತಿ- “ಪರಶು ಕಬ್ಬಿಣಕ್ಕೆ ಸ್ಪರ್ಶವಾದ ಮೇಲೆ ಅದು ಚಿನ್ನ ವಾಗುವದಲ್ಲದೆ ಪೂರ್ವವತ್‌ ಕಬ್ಬಿಣ ಎಂದಾದರೂ ಆಗುವದೇ. +ಶ್ರೀಪಾದಂ ಗಳವರ ಸೇವೆಯಲ್ಲಿ ಅಮರಿದ ಮೇಲೆ ನಿಮಗೆ ದಾರಿದ್ರ್ಯವೆಲ್ಲಿಂದ ಕಾಡುವದು? +ನಿಮಗೆ ವಾಸ್ತವ್ಯಕ್ಕೆ ಯೋಗ್ಯವಾದ ಒಂದು ದೊಡ್ಡಮಮನೆಯನ್ನು ಸೋಪಸ್ಕರ ಗಳ ಸಮೇತ ಲವಕಾಲದಲ್ಲಿ ಸಿದ್ಧಪಡಿಸುವೆನು. +ಊಟಕ್ಕೆ ಬೇಕಾಗುವ ಅಕ್ಕಿ ಮೊದಲಾದ ವಿಶಿಷ್ಟ ಪದಾರ್ಥಗಳು ಅನುದಿನ ನಿಮ್ಮ ಮನೆಬಾಗ ಲಿಗೆ ಬಂದು ಬೀಳುವಂತೆ ಆವಾವ ಭೂಮಿ ವಕ್ಲುಗಳಿಗೆ ನೇಮಿಸಿಡುತ್ತೇವೆ. +ಇನ್ನೇನು ಅಪೇಕ್ಷೆಯದೆ?” +ಭಾಗೀರಥಿ- “ಶ್ರೀಪಾದಂಗಳವರಿಗೆ ದೊಡ್ಡ ಕೋಟಿಯಂತಿರುವ ಮಠವಿದೆ. +ಅದರಲ್ಲಿ ನಮ್ಮಂಥಾ ಸಾವಿರ ಕುಟುಂಬಗಳು ಅವರಿಗೇನೊಂದು ಅನಾನುಕೂಲತೆಯಾಗದಂತೆ ವಾಸ್ತವಿಸಿಕೊಂಡಿರಲಿಕ್ಕೆ ಸಂದರ್ಭವಿದೆ. +ನಿತ್ಯವು ವಾಗ್ದೇವಿಯು ಶ್ರೀಪಾದಂಗಳವರನ್ನು ಅಗಲದೆ ಅವರ ದೃಷ್ಟಿಯು ಅವರ ಹೆಸರಿನಂತೆ ಅನ್ಯ ಸ್ತ್ರೀಯರ ಮೇಲೆ ಬಿದ್ದರೂ ಅವರ ಮನಸ್ಸನ್ನು ತನ್ನ ಕಡೆಗೇನೇ ಎಳಕೊಳ್ಳಲಿಕ್ಕೆ ಸುಲಭವಾಗುವ ಹಾಗೆ ಅವರ ಸಮೀಪ ದಲ್ಲಿಯೇ ಇರಬೇಕು. +ಆದ ಪ್ರಯುಕ್ತ ನಮಗೆಲ್ಲರಿಗೂ ಮಠದಲ್ಲಿಯೇ ಆಶ್ರಯ ಸಿಗಬೇಕು. +ನಮ್ಮವರಿಗೂ ವಾಗ್ದೇವಿಯ ಗಂಡಗೂ ಮಠದಲ್ಲಿ ಅವರ ಯೋಗ್ಯತೆಗೆ ತಕ್ಕವಾದ ಉದ್ಯೋಗಗಳನ್ನು ಕೊಡಬೇಕು. +ಆವಾಗ ನೋಡುವ ಜನರಿಗೆ ಅಡ್ಡಾದಿಡ್ಡಿಯಾಗಿ ಆಡಲಿಕ್ಕೆ ಆಸ್ಪದವಾಗಲಾರದು. +ಇದಕ್ಕೂ ಮಿಕ್ಕಿ ವಾಗ್ದೇವಿಯ ಅಪೇಕ್ಷೆ ಯಾವದಾದರೂ ಇರುವದಾದರೆ ಅವಳನ್ನೇ ವಿಚಾರಿಸಿಕೊಳ್ಳಿ.” +ವೆಂಕಟಪತಿ–“ನಿಮ್ಮ ಅಪೇಕ್ಷೆ ಯಾವದೂ ಅಸಾಧಾರಣವೆಂದು ಹೇಳಲಾರೆ. +ವಾಗ್ದೇವಿ!ನೀನು ಪ್ರತ್ಯೇಕವಾಗಿ ಬಯಸುವದೇನಾದರೂ ಇದೆಯೇ?” +ವಾಗ್ದೇವಿ– “ನನ್ನಲ್ಲಿ ಗಂಡು ಸಂತತಿ ದೇವರು ಅನುಗ್ರಹಿಸಿದರೆ ಚೊಚ್ಚಲು ಮಗನು ಮುಂದಿನ ಯತಿಪಟ್ಟಕ್ಕೆ ಬರುವಂತೆ ಅವನಿಗೆ ಶ್ರೀಪಾದಂಗಳವರು ಆಶ್ರಮಕೊಟ್ಟು ಶಿಷ್ಯನಾಗಿಮಾಡಬೇಕು. +ಈ ವಾಗ್ದಾ ನವನ್ನು ಪಟ್ಟದ ದೇವರ ಮುಂದೆ ಮಾಡಿದನಕ ನಾನು ಮುಂದಿನ ಪ್ರಸಂಗಕ್ಕೆ ಒಡಂಬಡುವವಳಲ್ಲ. +ಬೇರೆ ಪ್ರಸ್ತಾಪವೆಲ್ಲಾ ಅಮ್ಮ ಹೇಳಿದಂತೆಯೇ ಸರಿ. +ಅವಳ ಮಾತಿಗೆ ಅಡ್ಡಬರಲಾರೆ.” +ವೆಂಕಟಪತಿ–“ವಾಗ್ದೇವಿ ಹೇಳಿದ ಮಾತು ಈಗಲೇ ಶ್ರೀಪಾದಂಗ ಳವರ ಕಿವಿಗೆ ಬಿದ್ದರೆ ಅವರು ಏನು ಹೇಳುವರೋ! +ಕ್ರಮೇಣ ಅದರ ನಿಷ್ಕರ್ಷೆ ಮಾಡಬಹುದೆಂದು ನನ್ನ ಅಭಿಪ್ರಾಯ. +ಈಗ ಅವಸರವೇನು?” +ಭಾಗೀರಥಿ:–“ಮಗಳೇ, ಆಚಾರ್ಯರ ಮಾತಿಗೆ ಮರ್ಯಾದೆ ಕೊಡು; ಅವರು ನಮ್ಮ ಶುಭವನ್ನೇ ಚಿಂತಿಸುವವರಲ್ಲವೇ?? +ವಾಗ್ದೇವಿ– “ಒಲ್ಲೆ ನಾನು ಕೇಳುವ ವರವು ಮುಂದಾಗಿಯೇ ಅನುಗ್ರಹಿಸೋಣಾಗಲಿ.? +ವೆಂಕಟಪತಿ– “ಹೆಚ್ಚು ಎಳದರೆ ತುಂಡು ಆಗಲಿಕ್ಕಿಲ್ಲವೇ? ”ವಾಗ್ದೇವಿ–“ಆಗಲಿ. +ನನ್ನ ಪತಿ ಸೇವೆಯಲ್ಲಿಯೇ ನಾನು ಇದ್ದು ಕೊಳ್ಳುನೆನು. +ಯತಿಯ ಆಶ್ರಯವೇ ಬೇಡ” +ವೆಂಕಟಪತಿ– “ಭಾಗೀರಥಿ ಅಮ್ಮಾ, ನೀವು ಇನ್ನೊಮ್ಮೆ ನಿಮ್ಮ ಮಗಳಿಗೆ ಬುದ್ಧಿ ಹೇಳಿಬಿಡಿ. +ದೇವರ ಮುಂದೆ ಯತಿಗಳು ವಾಗ್ದಾನ ಕೊಡ ಬೇಕಾಗಿ ವಾಗ್ದೇವಿ ಮಾಡುವ ಹಟ ಹೆಚ್ಚಿನದೆಂದು ನಿಮ್ಮ ಮನಸ್ಸಿಗೆ ತೋರದೆ ಹೋಗದು. +ಕಾಲಾನುಭಾಗದಲ್ಲಿ ಅವಳ ಮನೋರಥವು ಪೂರ್ಣ ವಾಗದೆ ಉಳಿಯದು. +ಈಗಲೇ ಆ ಪ್ರಸ್ತಾಸ ಮಾಡುವದು ಪರಿಷ್ವಾರವಲ್ಲ. +ಅವಳನ್ನು ನೀವು ಒಳಗೆ ಕರಕೊಂಡು ಹೋಗಿ ಅವಳ ಬುದ್ಧಿಯನ್ನು ತುಸು ತಿದ್ದಿ ಬಿಟ್ಟರೆ ಆಗುತ್ತಿತ್ತು” +ಭಾಗೀರಥಿಯು ಮಗಳ ಮೇಲೆ ಸಿಟ್ಟು ತಾಳಿದವಳಂತೆ ತೋರಿಸಿ ಕೊಂಡು, ಮಗಳನ್ನು ಚಿಕ್ಕ ಮನೆಯ ಒಳಗೆ ಕರಕೊಂಡು, ಅಲ್ಲಿ ಶಾನೆ ಹೊತ್ತು ವಾಗ್ದೇವಿಯ ಕೂಡೆ ಸಣ್ಣ ಸ್ವರದಿಂದ ಜಿಜ್ಞಾಸ ಮಾಡುವದರಲ್ಲಿ ಬಿದ್ದಳು. +ಆವಳು ಠಕ್ಕು ಮಾಡುತ್ತಾಳೆಂಬ ಗುಟ್ಟು ವೆಂಕಟಪತಿ ಆಚಾರ್ಯಗೆ ತಿಳಿಯದೆ ತನ್ನ ಬುದ್ಧಿವಂತಿಕೆಗೆ ಯತಿಗಳು ಮೆಚ್ಚದಿರರೆಂದು ಅರ್ಧತಾಸಿನ ವರೆಗೂ ಹೊರಗೆ ಕೂತುಕೊಂಡನು. +ಕೊನೆಗೆ ಪರ್ವತವು ಗರ್ಭತಾಳಿ ದಂತಾಯಿತು. +“ನೀನು ಎಷ್ಟು ಬಡಕೊಂಡರೂ ಇದೊಂದು ವಿಷಯದಲ್ಲಿ ನನ್ನ ಛಲ ಸರ್ವಥಾ ಬಿಡಲಾರೆ” ಎಂದು ಗಟ್ಟಿಯಾಗಿ ವಾಗ್ದೇವಿಯು ಹೇಳು ವುದು ಆಚಾರ್ಯನ ಕಿವಿಗೆ ಬಿತ್ತು. +“ಹಾಗೆಯೇ?ಇನ್ನು ನೀನು ನನ್ನ ಮಗಳೆಂದು ಸರ್ವಥಾ ಭಾವಿಸಲಾರೆ. +ನೀನೂ ನಿನ್ನ ಗಂಡನೂ ಕ್ಷಣ ತಾಮಸ ಮಾಡದೆ ಬೇರೆ ಹೋಗಬೇಕು. +ನಿನಗೆ ನಾನು ಅನ್ನ ಹಾಕಲಾರೆ! +ದಿಂಡೆ!ನಡಿ!’ ಎಂದು ದೀರ್ಥಸ್ವರದಿಂದ ಗದರಿಸುವುದೂ ಕೇಳಿಸಿತು. +ಆಚಾರ್ಯನು ಕಣ್ಣೆತ್ತಿ ನೋಡುವಾಗ ಭಾಗೀರಥಿಯು ಮಗಳನ್ನು ದೂಡಿ ಕೊಂಡು ಕರಾಳವದನಳಾಗಿ ಹೊಡೆಯುವದಕ್ಕೆ ಚೀರಿಕೊಂಡು ಮಗಳ ಸಹಿತ ಕೋಣೆಯಿಂದ ಹೊರಗೆ ಬರುವುದೂ ಕಣ್ಣಿಗೆ ಬಿತ್ತು. +ಆಹಾ!ಇನ್ನೆಂಥಾ ನಿಷ್ಟಲಂಕ ಮನಸು ಭಾಗೀರಧಿಗದೆ: ಮಗಳೆಂಬ ವಾತ್ಸಲ್ಯವಿಡದೆ ಸಿಟ್ಟಿನ ವಶವಾಗಿ ಹಟಮಾಡುವ ಮಗಳನ್ನು ತತ್ಕಾಲ ಶಿಕ್ಷಿಸುವ ಈ ಪುಣ್ಯ ತಾಯಿಯನ್ನು ಎಷ್ಟು ಹೊಗಳಬಹುದು. +ಈಗ ತಾನು ಸುಮ್ಮಗಿದ್ದು ತಾಯಿ ಮಗಳಿಗೆ ವಿವೇಕ ಮಾಡದೆ ಇದ್ದರೆ ಶ್ರೀಪಾದಂಗಳವರ ಸಂಕಲ್ಪಸಿದ್ಧಿಗೆ ವಿಘ್ನ ಬರುವುದೆಂಬ ಭಯದಿಂದ ವೆಂಕಟಪತಿ ಆಚಾರ್ಯನು ಮಗಳಿಗೆ ಹೊಡೆಯುವದಕ್ಕೆ ಸಿದ್ಧಳಾಗಿರುವ ಭಾಗೀರಧಿಯನ್ನು ಕರೆದು “ಸಾಕುಮಾಡು, ಕೈ ಮುಂದರಿಸಬೇಡ; +ವಾಗ್ದೇವಿಯ ಹಟವನ್ನು ಪೂರೈಸಲಿಕ್ಕೆ ಅನುಕೂಲ ವಾಗುವ ಹಾಗೆ ಪ್ರಯತ್ನಮಾಡಲೇ ಬೇಕು. +ಅವಳ ಮನಸ್ಸಿನಲ್ಲಿ ಅಹಿತ ಹುಟ್ಟುವಹಾಗಿನ ಕರ್ತವ್ಯವನ್ನು ಮಾಡುವದಕ್ಕೆ ಅವಳನ್ನು ಬಲತ್ಯರಿಸುವದು ನ್ಯಾಯವಲ್ಲ. +ಬೇರೆ ಯಾವದೊಂದು ತರ್ಕವಿಲ್ಲವಷ್ಟೆ. +ಇಲ್ಲಿ ನಡೆದ ಪ್ರಸ್ತಾಪವನ್ನು ವಿಸ್ತಾರವಾಗಿ. +ಶ್ರೀಪಾದಂಗಳವರಿಗೆ ವಿಜ್ಞಾಪಿಸಿ ಅವರ ಆಜ್ಞೆಯನ್ನು ಕ್ಷಿಪ್ರ ತಿಳಿಸುವೆ” ಎಂದು. +ಭಾಗೀರಥಿಗೆ ಹೇಳಿ ಮಠಕ್ಕೆ ಮರಳಿದನು. +ದನವನ್ನು ಹುಡುಕಿ ತರುವುದಕ್ಕೆ ಹೋದ ತಮ್ಮಣ್ಣ ಭಟ್ಟನು ದನ ವನ್ನು ಅಟ್ಟಿಕೊಂಡು ಬಂದು, ಹಟ್ಟಿಯಲ್ಲಿ ಕೂಡಿಸುವಾಗ ಮನೆಯೊಳಗೆ ತನ್ನ ಪತ್ನಿಗೂ ವೆಂಕಟಪತಿ ಅಚಾರ್ಯಗೂ ನಡೆಯುತ್ತಿರುವ ಸಂಭಾಷಣೆ ಯನ್ನು ಕೇಳುತ್ತ, ಹೊರಗೆಯೇ ನಿಂತು ಕೊಂಡನು. +ವೆಂಕಟಪತಿ ಆಚಾರ್ಯನು ಹೊರಟು ಹೋದಾಕ್ಷಣ ತಮ್ಮಣ್ಣ ಭಟ್ಟನು ಬಾಗಿಲು ದೂಡಿ ಒಳಗೆ ಬಂದು, “ಇಷ್ಟು ಹೊತ್ತಾಯಿತು. +ದನ ಹ್ಯಾಗಾದರೂ ಸಿಕ್ಕಿದಂತಾಯಿತು?ಎಂದು ದಣು ಆರಿಸುವುದಕ್ಕೆ ಗೋಡೆಗೆ ಎರಗಿ ಕೂತುಕೊಂಡನು. +ವಾಗ್ದೇವಿಯ ಗಂಡ ಆಬಾಚಾರ್ಯನು ಮನೆಯ ಹಿಂಬದಿ ಜಗಲಿಯಲ್ಲಿ ಬಿದ್ದು ಕೊಂಡು ನಿದ್ರಿಗೈಯುತ್ತಿರುವಾಗ ಭಾಗೀರಧಿಯೂ ವೆಂಕಟಪತಿ ಆಚಾರ್ಯರೂ ಮಾಡುವ ಸಂವಾದವನ್ನು ಕೊಂಚ ಕೊಂಚ ಕೇಳಿ ಇನ್ನು ಮುಂದೆ ಮಠದಲ್ಲಿ ನಮಗೆ ಭೋಜನವಾದರೂ ಪರಿಷ್ಠಾರವಾದೀತಷ್ಟೇ. +ವಾಗ್ದೇವಿಯು ಯಾವಲ್ಲಿದ್ದರೂ ತನಗೇನೆಂದು ಸಂತೋಷಚಿತ್ತನಾಗಿ ಸುಮ್ಮಗಿದ್ದನು. +ರಾತ್ರೆ ಫಲಾಹಾರಕ್ಕೆ ಕಡಬು ಕಾಯಿಹಾಲು ಮಾಡಿತ್ತು. +ಅದನ್ನು ಮನೆಯವರೆಲ್ಲರೂ ಬೇಕಾದಷ್ಟು ತಕ್ಕೊಂಡು ನಿದ್ರೆಗೈಯುವುದಕ್ಕೆ ಹೋದಾಗ ಭಾಗೀರಥಿಯು ತನ್ನ ಪತಿಯ ಕೂಡೆ ವೆಂಕಟಪತಿ ಆಚಾರ್ಯನು ಬಂದ ಉದ್ದೇಶವನ್ನೂ ತನಗೂ ಆತಗೂ ನಡೆದ ಮಾತುಗಳನ್ನೂ ವಾಗ್ದೇವಿಯೂ ತಾನೂ ಮಾಡಿದ ಯುಕ್ತಿಯ ಅಂದವನ್ನೂ ತಿಳಿಸಿ ನೆಗಾಡಿದಳು. +ನಡೆದ ಪ್ರಸ್ತಾಪವು ತನಗೆ ಸ್ನಲ್ಪವಾದರೂ ಅಹಿತವಲ್ಲವೆಂದು ಗಂಡನು ಪ್ರತ್ಯುತ್ತರ ಕೊಟ್ಟನು. +ಆದರೆ ಮಠದಲ್ಲಿ ತನಗೆ ಸಣ್ಣ ಕೆಲಸ ಯಾವದಾದರೂ ಕೊಟ್ಟರೆ ಒಡಂಬಡುವವನಲ್ಲ. +ತನ್ನ ಗೌರವಕ್ಕೆ ಯೋಗ್ಯವಾದ ಅಧಿಕಾರವಿರುವ ಉದ್ಯೋಗ ಸಿಕ್ಕುವ ಹಾಗೆ ವೆಂಕಟಪತಿ ಆಚಾರ್ಯಗೆ ತಿಳಿಸಬೇಕಾಗಿ ಪತ್ನಿ ಯನ್ನು ಅಪೇಕ್ಷಿಸಿದನು. +“ಅದರ ಬಿಸಾತೇನು? +ಇನ್ನು ಮಠವೇ ನಮ್ಮ ದಾಗುವದಾಯಿತಲ್ಲ. +ವೆಂಕಟಪತಿಯು ಹೆಸರಿಗೆ ಮಾತ್ರ ಪಾರುಪತ್ಯಗಾರ ನಾಗಿರಬೇಕಲ್ಲದೆ ಯಾವದೊಂದು ಆದಾಯ ವೆಚ್ಚವಾದರೂ ತಮ್ಮ ಕೈ ಮಿಕ್ಕಿ ಹೋಗುವದುಂಟೇ?” ಎಂದು ಭಾಗೀರಥಿಯು ಹೇಳೋಣ, ತಮ್ಮಣ್ಣ ಭಟ್ಟನು ಹೆಂಡತಿಯ ಚಾತುರ್ಯಕ್ಕೆ ಮೆಚ್ಚಿ ಶಹಬಾಸ್‌ ಎಂದನು. +ಇನ್ನು ಮುಂದೆ ಊಟಕ್ಕನಕ ಏನೂ ತತ್ವಾರವಿರದು. +ಮಠದಲ್ಲಿ ಒಂದು ಉದ್ಯೋಗವು ಪ್ರಾಪ್ತವಾಗುವುದು. +ತನ್ನಷ್ಟಕ್ಕೆ ತಾನು ಇದ್ದರೆ ನಾಲ್ಕು ಕಾಸು ಗಂಟಿಗೆ ಬಿದ್ದೀತು. +ಮರ್ಯಾದೆಯಿಂದ ಕಾಲಕ್ಷೇಪಕ್ಕೆ ಒಂದು ಮಾರ್ಗವನ್ನು ಜೀವರು ತೋರಿಸಿ ಕೊಟ್ಟಂತಾಯಿತು ಎಂಬ ಹರುಷದಿಂದ ಆಚಾರ್ಯನು ಅರ್ಧರಾತ್ರಿ ಪರಿಯಂತರ ನಿದ್ರೆ ಬಾರದೆ ಭವಿಷ್ಯತ್‌ ಕಾಲ ದಲ್ಲಿ ತನ್ನ ಪತ್ನಿಯು ಯತಿಗಳ ಪ್ರಸಾದದಿಂದ ಏನೇನು ಮಹತ್ಕಾರ್ಯ ಗಳನ್ನು ಮಾಡುವಳೋ ನೋಡಲಿಕ್ಕಿದ್ದೀತೆಂದು ಹಿಗ್ಗಿದನು. +ವಾಗ್ದೇವಿಯು ತಿಪ್ಪಾಶಾಸ್ತ್ರಿಯ ಪ್ರವಾದನೆಯು ಈಡೇರುವ ಸಮಯವು ಒದಗಿತೆಂಬ ಉಲ್ಲಾಸ ದಿಂದ ಇಡೀರಾತ್ರೆ ಮನೋಹರವಾದ ಕನಸುಗಳನ್ನು ಕಂಡಳು. +ಐಶ್ವರ್ಯದ ರಾಶಿಯೇ ತಮ್ಮ ಕೈವಶವಾಗುವದೆಂಬ ಕೋರಿಕೆಯಿಂದ ಭಾಗೀರಥಿಯೂ ತಮ್ಮಣ್ಣ ಭಟ್ಟನೂ ಇಡೀರಾತ್ರೆ ಅನೇಕ ವಿಷಯಗಳಲ್ಲಿ ಶುಷ್ಕವಾದ ಮಾಡುತ್ತಾ ನಿದ್ರೆಯ ಗೊಡವೆಯಿಲ್ಲದೆ ಸಮಯ ಕಳೆದರು. +ಮರುದಿವಸ ದ್ವಾದಶಿಯಷ್ಟೆ ಸಕಾಲದಲ್ಲಿ ಪಾರಣೆಯಾಗುವುದಕ್ಕೆ ಭಾಗೀರಥಿಯು ಬಹುಬೇಗ ಎದ್ದು ವಾಗ್ದೇವಿಯನ್ನು ಎಬ್ಬಿಸಿ ಚಲೋದಾದ ಭೋಜನವಾಗುವಂತೆ ಶೀಘ್ರ ಅಡಿಗೆ ಮಾಡಿ ಬಿಟ್ಟು, ಗಂಡಸರನ್ನು ಅವಸರದಿಂದೆಚ್ಚರಿಸಿ ಸ್ನಾನಕ್ಕೆ ಹೋಗಹೇಳಿದಳು. +ಆದರೆ ಆಬಾಚಾರ್ಯನು ನಿದ್ರಾಲಸ್ಯದಲ್ಲಿಯೇ ಇರುವದನ್ನು ನೋಡಿ ವಾಗ್ದೇವಿಯು ಪತಿಯನ್ನು ಅನುಪಮಪ್ರೇಮದಿಂದ ಮೈತಟ್ಟ ಎಬ್ಬಿಸಿ ಕುಂಡ್ರಿಸಿ ತರುವಾಯ ಸರಸೋ ಕ್ತಿಗಳಿಂದ ಅವನ ಆಲಸ್ಯವನ್ನು ಪರಿಹರಿಸಿ ಬೇಗ ಮುಖಪ್ರಕ್ಷಾಳನ ಸ್ನಾನಾದಿಗಳನ್ನು ತೀರಿಸಿ ಭೋಜನಕ್ಕೆ ಸಿದ್ಧವಾಗಿರಬೇಕೆಂದು ಹೇಳಿದಳು. +ಸಣ್ಣಕರುವು ಕಿವಿಗೆ ಗಾಳಿ ಹೊಗುತ್ತಲೇ ಕುಣಿದಾಡುವಂತೆ ಆಬಾಚಾರ್ಯನು ಆನಂದಮಯನಾಗಿ ಇದೇ ಸುದಿನ ಇನ್ನು ಉದಾಸೀನ ಮಾಡಲಾಗದೆಂದು ಪತ್ನಿಯ ಅನುಜ್ಞೆಯಂತೆ ನಡಕೊಂಡು ಭೋಜನಕ್ಕೆ ಅನುವಾದನು. +ಸೂರ್ಯೋದಯವಾಗಬೇಕಾದರೆ ದ್ವಾದಶಿ ವ್ರತವೂ ಸಂಪೂರ್ಣವಾಯಿತು. +ವೆಂಕಟಪತಿ ಆಚಾರ್ಯನು ಮುಂಚಿನ ರಾತ್ರಿ ಮಾಡಿದ ಪ್ರಸ್ತಾಪವೆಲ್ಲ ಸ್ವಪ್ನದಲ್ಲಿ ಪಲ್ಲಕ್ಕಿ ಏರಿದಂತಾಗುವದೋ ಎಂಬ ಅನುಮಾನದಿಂದ ವಾಗ್ದೇ ವಿಯು ಆಗಾಗ್ಗೆ ಬಾಗಿಲ ಕಡೆಗೆ ದೃಷ್ಟಿಹಾಕುತ್ತಾ ಇನ್ನೂ ವೆಂಕಟಪತಿ ಆಚಾರ್ಯ ಕಣ್ಣಿಗೆ ಬೀಳುವದಿಲ್ಲವಲ್ಲಾ, ಅವನು ಯತಿಗಳ ಮನಸ್ಸನ್ನು ತಿರುಗಿಸಿ ಮೋಸ ಕೊಟ್ಟು ಬಿಟ್ಟಿರೆ ಮಾಡೋದೇನೆಂಬ ಯೋಚನೆಯಲ್ಲಿ ಬಿದ್ದಳು. +“ವೆಂಕಟಪತಿಯು ಮನೆಯಲ್ಲಿ ಕುಂಭಕರ್ಣ ವ್ರತಾಚರಣೆಯಲ್ಲಿ ಅಮರಿ ಕೊಂಡಿರುವುದಿಲ್ಲವಷ್ಟೆ ಇಲ್ಲವಾದರೆ ಇಷ್ಟು ಸಣ್ಣ ಕೆಲಸಮಾಡಿಕೊಂಡು ಬರುವುದಕ್ಕೆ ಎಷ್ಟು ಸಾವಕಾಶವಪ್ಪ! +ತಾನುಮಾಡಿದ್ದು ಉತ್ತಮ, ಮಗ ಮಾಡಿದ್ದು ಮಧ್ಯಮ, ಆಳುಮಾಡಿದ್ದು ಹಾಳೆಂಬ ಗಾದೆಯು ನಿಜವಾದದ್ದು. +ನಾವು ಸ್ವತಃ ಈ ಕಾರ್ಯವನ್ನು ನೆರವೇರಿಸುವುದಕ್ಕೆ ಹೊರಟರೆ ಇಷ್ಟು ಸಮಯ ಬೇಕಾಗುವುದೇ? +ನಮ್ಮ ಪದವಿಯು ಸೆರೆಮನೆಯಲ್ಲಿ ವಾಸಮಾಡಿ ಕೊಂಡಿರುವವರ ಹಾಗಿದೆ. +ಸರ್ವಕೆಲಸಗಳೂ ಇನ್ನೊಬ್ಬನಿಂದಾಗಬೇಕು; ನಮ್ಮ ಶತ್ರುಗಳಿಗೂ ಸನ್ಯಾಸಬೇಡ; +ನಾವು ಜ್ಞಾನಶೂನ್ಯರೆಂಬಂತೆ ವೆಂಕಟ ಪತಿಯು ಮೊದಲೇ ನಮಗೆ ತತ್ವಜ್ಞಾನ ಹೇಳಲೆಸಗಿದನು; +ನಾವು ಅವ ನನ್ನು ಗದರಿಸಿಬಿಟ್ಟಮೇಲೆ, ಪೌರುಷವನ್ನಾಡಿ ಅರೆಮನಸ್ಸಿನಿಂದ ಹೊರಟು ಹೋದನು. +ಯಾವ ಠಾವಿಗೆ ಹೋದನೋ, ಏನೆಲ್ಲ ಮಾಡಿರುವನೋ ಶ್ರೀಹರಿಗೇ ಗೋಚರ”ವೆಂದು ಚಂಚಲನೇತ್ರರು ಬಹು ಅವಸರದಿಂದ ಆಗಾಗ್ಗೆ ಬಾಗಲ ಕಡೆಗೆ ನೋಡುತ್ತಾ ವೆಂಕಟಪತಿಯ ಪುನರಾಗಮನ ನಿರೀಕ್ಷಣೆಯಲ್ಲಿಯೇ ಇದ್ದುಕೊಂಡರು. +ವೇದವ್ಯಾಸ ಉಪಾಧ್ಯನು ತನ್ನ ಪಾಂಡಿತ್ಯಕ್ಕೆ ಶ್ರೀಪಾದಂಗಳವರು ಮೆಚ್ಚದಿರಲಾರರೆಂಬ ಭರವಸೆಯಿಂದ ಸುಸ್ವರದಿಂದ ಪುರಾಣವನ್ನು ಓದಿ ಅದರ ಅರ್ಥವನ್ನು ವಿವರಿಸಿ ಕ್ಷಣೇ ಕ್ಷಣೇ ಕಣ್ಣೆತ್ತಿನೋಡುತ್ತಾ, ಗವಾಕ್ಷದ ಎದುರು ಕುಂತಿರುವನು. +ಕೇಳಲಿಕ್ಕೆ ಬಂದವರನೇಕರು ಹೊರಪಾರ್ಶ್ವದಲ್ಲಿ ನಿಂತುಕೊಂಡಿರುವರು. +ಚಂಚಲನೇತ್ರರ ಮನಸ್ಸು ಸಂಪೂರ್ಣವಾಗಿ ವಾಗ್ದೇವಿಯ ಮೇಲೆಯೇ ಸ್ಥಿರಗೊಂಡು ಅನ್ಯ ಪ್ರಸಕ್ತಿಗೆ ವ್ಯಾಪಿಸಲಾರದೆ, ಇರುವ ದಶೆಯಿಂದ ಪೂರ್ಣಮರವೆಯಲ್ಲಿರುತ್ತಿರುವ ಆ ಯತಿಗಳು “ವೇದವ್ಯಾಸ ಉಪಾಧ್ಯನು ಇನ್ನೂ ಕಾಣುವುದಿಲ್ಲ. +ಎಲ್ಲಿಗೆ ಹೋಗಿಬಿಟ್ಟನೋ?” ಎಂದು ನುಡಿದರು. +ಸಮ್ಮುಖದಲ್ಲಿ ಪುರಾಣಹೇಳುವ ಆ ಉಪಾಧ್ಯನು ಬೆರಗಾಗಿ ಈ ಯತಿಗೆ ಹುಚ್ಚು ಹಿಡಿಯಿತೋ ಎಂಬ ಅನುಮಾನದಿಂದ ಗೋಣು ಎತ್ತಿ ನೋಡಲು, ತನ್ನ ಹುಚ್ಚುತನವನ್ನು ತಾನೇ ಅರಿತು, ಚಂಚಲನೇತ್ರರು ವೆಂಕಟಪತಿ ಆಚಾರ್ಯನೆನ್ನುವದರ ಬದಲಾಗಿ ಉಪಾಧ್ಯನ ಹೆಸರು ಹೇಳಿಬಿಟ್ಟೆ ವೆಂದು ಹಾಸ್ಯಮುಖವನ್ನು ತಾಳಿ ತಕ್ಕಮಟ್ಟಿಗೆ ಸುಧಾರಿಸಿಕೊಂಡರು. +ಪರಂತು ಈ ದೆಸೆಯಿಂದ ವೇದವ್ಯಾಸ ಉಪಾಧ್ಯಗೂ ಅವನಂತೆ ಬೇರೆ ಕೆಲವ ರಿಗೂ ಸಂಶಯ ನಿವಾರಣೆಯಾಗಲಿಲ್ಲ. +ಹಾಗೆಯೇ ಶಂಭೂರ ತಿಮ್ಮಣ್ಣಾಚಾರ್ಯನೆಂಬ ಪ್ರಮುಖ ಗ್ರಹಸ್ಥನು ಪ್ರಣಾಮಮಾಡಿ ತೀರ್ಥ ಪ್ರಸಾದಕ್ಕೆಂದು ಅಪ್ಪಣೆಯಾಗಲೆಂದು ಭಯ ಭಕ್ತಿ ಯಿಂದ ನಿಂತುಕೊಂಡಿರುವಾಗ “ಏನು ತಿಮ್ಮಣ್ಣಾಚಾರ್ಯರೇ, ನಿಮ್ಮ ಮಗನ ಉಪನಯನ ಯಾವಾಗ” ಎಂದು ಯತಿಗಳು ಪ್ರಶ್ನೆಮಾಡಿದರು. +“ಪರಾಕೆ, ನನ್ನ ಮಗನ ಉಪನಯನವಾಗಿ ಈಗ ಒಂದು ತಿಂಗಳಾಯಿತು; +ಉಪನಯನಕಾಲದಲ್ಲಿ ಸನ್ನಿಧಿಯ ಸವಾರಿಯು ಚಿತ್ತೈಸೋಣಾಗಿ ಸೇವಕನ ಕೃತಾರ್ಥತೆಯನ್ನು ಪಡಕೊಂಡ ವಿಷಯವು ಬೇಗನೇ ಮರವೆಗೆ ಬಂದು ಹೋಯಿತೇ? +ಇನ್ನು ನನಗೆ ಇರುವದು ಹೆಣ್ಣು ಮಕ್ಕಳೇ ಸರಿ” ಎಂದು ತಿಮ್ಮಣ್ಣಾಚಾರ್ಯನು ಕೊಟ್ಟ ಪ್ರತ್ಯುತ್ತರವು ಚಂಚಲನೇತ್ರರನ್ನು ನಾಚಿಕೆ ಯಲ್ಲಿ ಮುಳುಗಿಸಿ ಬಿಟ್ಟಿತು. +ತ್ರೀಪಾದಂಗಳವರ ಮನಸ್ಸಿಗೆ ಏನೋ ಭ್ರಮೆ ತಗಲಿಕೊಂಡಿರುವು ದೆಂಬ ಅನುಮಾನಕ್ಕೆ ಆಸ್ಪದವಾಗುವಂತೆ ಅವರು ಆ ರಾತ್ರೆ ವೆಂಕಟಪತಿ ಆಚಾರ್ಯನು ಮರಳಿ ಬರುವ ಪರಿಯಂತರ, ಅಜೇ ರೀತಿಯಲ್ಲಿ ಅಸಹಾಸ್ಯ ಕರವಾದ ಹಲವು ಚೇಷ್ಟೆಗಳನ್ನು ತೋರಿಸಿಕೊಂಡರು. +ವೇದವ್ಯಾಸ ಉಪಾಧ್ಯನು ಹೇಳುವ ಪುರಾಣವು ಚಂಚಲನೇತ್ರರ ಕಿವಿಗೆ ಸಾವಿನ ಮನೆಯಲ್ಲಿ ಆಗುವ ರೋದನದಂತೆ ಕೇಳಿಸುತಿತ್ತು. +ಇವನು ಬೇಗ ಪುಸ್ತಕವನ್ನು ಕಟ್ಟಿ ಮನೆಗೆಹೋಗದೆ ವೃಥಾ ಕಂಠಶೋಷಣೆ ಮಾಡು ತ್ತಾನೆಂಬ ಸಿಟ್ಟಿನಿಂದ ಸನ್ಯಾಸಿಯು ಫಕ್ಕನೆ ಎದ್ದು ನಿಂತುಕೊಂಡು, ‘ಇವನ ಸುಟ್ಟ ಪುರಾಣವಿನ್ನೂ ಮುಗಿಯುವದಿಲ್ಲ. +ವೆಂಕಟಪತಿಯು ಯಾವ ಸುಡು ಗಾಡಿಗೆ ಹೋಗಿಬಿಟ್ಟನೋ ತಿಳಿಯದು” ಎಂದು ಸಿಂಹಾಸನವಿರುವ ಕೋಣೆ ಯಿಂದ ಮತ್ತೊಂದು ಕೋಣೆಗೆ ಹೋಗಿ ಮಂಚದ ಮೇಲೆ ಬಿದ್ದುಕೊಂಡರು. +ವೇದವ್ಯಾಸ ಉಪಾಧ್ಯನು ಪುರಾಣ ಪುಸ್ತಕವನ್ನು ಕಟ್ಟಿ ಬಿಟ್ಟು ಸನ್ಯಾಸಿಯ ಹಿಂದೆಯೇ ಬೇರೆ ಕೋಣೆಗೆ ಪ್ರವೇಶಿಸಿ “ನನ್ನ ಪುರಾಣ ಇಂದಿಗೆ ಮುಗಿಯಿತು. +ಇನ್ನು ಮುಂದೆ ಪುರಾಣ ಹೇಳಲಿಕ್ಕೆ ಚಿತ್ತಕ್ಕೆ ಯುಕ್ತತೋರು ನವರಿಗೆ ನೇಮಕವಾಗಬಹುದು” ಎಂದು ನಮಸ್ಕಾರಮಾಡಿ ಪ್ರತ್ಯುತ್ತರ ವನ್ನು ಕಾಯದೆ ಮಠವನ್ನು ಬಿಟ್ಟು ವಾಯುವೇಗದಿಂದೆಂಬಂತೆ ಹೊರ ಬೀದಿಯನ್ನು ಸೇರಿ ಹಿಂದೆ ಮುಂದೆ ನೋಡದೆ ನಡೆಯುತ್ತಿರುವಾಗ ಎದುರಿ ನಿಂದ ಬರುತ್ತಿರುವ ವೆಂಕಟಪತಿ ಆಚಾರ್ಯನು ಅವನನ್ನು ನೋಡಿ ಏನೋ ವೈಷಮ್ಯ ನಡೆದಿರಬೇಕೆಂಬ ಸಂಶಯದಿಂದ,- “ಉಪಾಧ್ಯರೇ!ಎಲ್ಲಿಗೆ ಅವಸರ ದಿಂದ ಹೋಗುತ್ತೀರಿ?” ಎಂದು ವಿಚಾರಿಸಿದನು. +ತನಗೂ ಚಂಚಲನೇತ್ರರಿಗೂ ಹುಟ್ಟದ ಚಿಕ್ಕ ಕಲಹದ ವೃತ್ತಾಂತ ವನ್ನು ಉಪಾಧ್ಯನು ವಿವರಿಸಿದನು. +ವೆಂಕಟಪತಿಯು ಆಶ್ಚರ್ಯಪಟ್ಟು ಸದ್ಗುಣಭರಿತನೆಂದು ಲೋಕದಲ್ಲೆಲ್ಲಾ ಖ್ಯಾತಿಗೊಂಡ ತನ್ನ ಧಣಿಯು ಕಡು ಮೂರ್ಖನಾಗಿ ಹೋದನೆಂಬ ವ್ಯಸನದಿಂದ ತಲೆತಗ್ಗಿಸಿಕೊಂಡು ವೇದವ್ಯಾಸ ಉಪಾಧ್ಯಗೆ ಪ್ರತ್ಯುತ್ತರ ಕೊಡದೆ ಮಠದ ಕಡೆಗೆ ಬಂದನು. +ಸನ್ಯಾಸಿಯು ಮರುಳು ಹಿಡಿದವನಂತೆ ಮಂಚದ ಮೇಲೆ ಬಿದ್ದು ಕೊಂಡಿರುವ ವದಂತಿಯು ಮಠದ ಚಾಕರರಿಂದ ವೆಂಕಟಪತಿಯು ಅರಿತು ಅವರ ಕೂಡೆ ಏನೊಂದೂ ಚರ್ಚೆಮಾಡದೆ ಮಂಚದ ಕೋಣೆಯ ಒಳಗೆ ಬಂದು ಸಮ್ಮುಖದಲ್ಲಿ ನಿಂತು ಪ್ರಣಾಮಮಾಡಿದ ವೇಳೆಯಲ್ಲಿ ಚಂಚಲ ನೇತ್ರರು ನಗುತ್ತಾ ಎದ್ದು ಕೂತುಕೊಂಡು- “ವೆಂಕಟಪತಿಯೇ!ನೀನು ಹೋದ ಕೆಲಸ ಮಾಡಿಕೊಂಡು ಬಂದಿಯಾ? +ಬೇಗನೇ ಹೇಳಿ ಬಿಡು. +ಉದ್ದ ಉದ್ದ ಮಾತುಗಳಿಂದ ನಮ್ಮ ಪ್ರಾಣವನ್ನು ತೆಗಿಯಬೇಡ ಮಹಾಯಾ ಧಣಿಯಕಾಂಕ್ಷೆಯನ್ನು ವೃದ್ಧಿಪಡಿಸಬೇಡ” ಎಂದು ಬೇಡಿಕೊಳ್ಳುವ ಯಜಮಾನನನ್ನು ಕುರಿತು ವೆಂಕಟಪತಿಯು— “ಬುದ್ಧೀ!ತಮ್ಮ ಕೆಲಸವನ್ನು ಜಯಪ್ರದ ಮಾಡಿಕೊಂಡೇ ಬಂದಿರುವೆನು; +ಇಷ್ಟು ಸಂಕ್ಷೇಪದಲ್ಲಿಯೇ ಈ ಪ್ರಸ್ತಾಸನನ್ನು ತೀರಿಸಿಬಿಡಲೋ, ವಿವರಗಳನ್ನು ಅದ್ಯಂತನಾಗಿ ಅರಿಕೆ ಮಾಡಲೋ, ಅಪ್ಪಣೆಯಾಗಲಿ” ಎಂದನು. +ತನ್ನ ಅವಸರವು ವೆಂಕಟಪತಿಯನ್ನು ಸಿಟ್ಟಿಗೆಬ್ಬಿಸಿತೆಂಬ ಹೆದರಿಕೆಯಿಂದ ಚಂಚಲನೇತ್ರರು– “ನಿನ್ನಷ್ಟು ಸ್ವಾಮಿಭಕ್ತಿಯುಳ್ಳವನಿನ್ನೊಬ್ಬನನ್ನು ಇದು ವರೆಗೂ ನಾವು ಕಾಣಲಿಲ್ಲ. +ಕೆಲಸವನ್ನು ಜಯಿಸಿಕೊಂಡು ಬಂದೆ ನಿನ್ನ ಸಾಹಸವು ನಮ್ಮ ಪ್ರಾಣವಾಯುವನ್ನು ಒಡಲು ಬಿಟ್ಟು ಅತ್ತಿತ್ತ ಚಲಿಸ ದಂತೆ ಕಟ್ಟಿ ಹಾಕಿಬಿಟ್ಟಿತು ಇನ್ನೂ ವಿವರಗಳನ್ನೆಲ್ಲಾ ಒಂದೂ ಬಿಡದೆ ಹೇಳಿ ನಮ್ಮ ಕೃತಜ್ಞತೆಗೆ ಪಾತ್ರನಾಗು” ಎಂದು ಪ್ರೇಮಯುಕ್ತವಾಗಿ ಪಾರುಪತ್ಯ ಗಾರಗೆ ಯತಿಗಳಪ್ಪಣೆಯಾಯಿತು. +ವೆಂಕಟಪತಿಯು ತನಗೂ ವಾಗ್ದೇವಿಗೂ ಅವಳ ತಾಯಿ ಭಾಗೀರಥಿಗೂ ನಡೆದ ಸಂಭಾಷಣೆಯನ್ನು ಒಂದು ಅಕ್ಷರ ವಾದರೂ ಬಿಡದೆ ನಿವೇದಿಸಿದನು. +ಚಂಚಲನೇತರು ಅಡಿಗಡಿಗೆ ಹರುಷವನ್ನು ತಾಳಿದರು. +ಪರಂತು ವಾಗ್ದೇವಿಯು ತಾಯಿಯ ಮಾತನ್ನು ಉಲ್ಲಂಘಿಸಿ, ದೇವರ ಸನ್ಮುಖದಲ್ಲಿ ಪ್ರಮಾಣಪೂರ್ವಕ ವಾಗ್ದತ್ತವನ್ನೀಯಲು ಅಪೇಕ್ಷಿ ಸಿದ ವಿಷಯವು ಅವರ ಮನಸ್ಸಿಗೆ ಅತಿವಿಪರೀತನಾಗಿ ತೋರಿರವಷ್ಟು ಕೋಪವನ್ನುಂಟುಮೂಡಿತೆಂಬ ಹಾಗೆ ಅವರ ಮುಖದ ವರ್ಣಭೇದದಿಂದ ಅರಿತ ವೆಂಕಟಪತಿಯು ಇದೇ ತನ್ನ ಸಾಧನೆಗೆ ಸುಸಮಯನೆಂಬ ಕೋರಿಕೆ ಯಿಂದ ತನ್ನ ಅಭಿಪ್ರಾಯವನ್ನು ತಿಳಿಸಲಿಕ್ಕೆ ಆಜ್ಞೆಯನ್ನು ಬೇಡಿದಾಗ- ಹೇಳಪ್ಪಾ ಹೇಳೆಂದು ಸ್ವಾಮಿಗಳ ಅನುಜ್ಞೆ ಯಾಯಿತು. +ವೆಂಕಟಪತಿ “ತಾನು ಇಚ್ಛಿಸುವ ವಾಗ್ದಾನವನ್ನು ಪಟ್ಟದ ಜೀವರ ಮುಂದೆ ಕೊಡೋಣಾಗಬೇಕಾಗಿ ವಾಗ್ದೇವಿಯು ಅಪೇಕ್ಷಿಸುವದ್ಯಾಕೆ? +ದೇವರ ಮೇಲೆ ಶ್ರೀಪಾದಂಗಳವರಿಗೆ ಪೂರ್ಣಭಯಭಕ್ತಿ ಇರುವದರಿಂದ ತಾನು ಅಪೇಕ್ಷಿಸುವ ರೀತಿಯಲ್ಲಿ ಕೊಡೋಣಾಗುವ ಭಾಷೆಗೆ ಮುಂದೆ ಭಂಗ ಬಾರದೆಂಬ ವಿಶ್ವಾಸದಿಂದ ಎಂಬಂತೆ ನನ್ನ ಭಾವನೆ ಚಿತ್ತಕ್ಕೆ ಯಾವ ರೀತಿ ಯಲ್ಲಿ ಅನ್ವಯನಾಗಿಯದೋ ಅರಿಯದು. +ಚಂಚಲನೇ– “ನಮಗೂ ಹಾಗೆಯೇ ಕಾಣುತ್ತದೆ.” +ವೆಂಕಟಪತಿ “ಹಾಗಾದರೆ ಶ್ರೀಪಾದಂಗಳವರು ಪೂಜಿಸಿಕೊಂಡು ಬರುವ ದೇವರ ಮೇಲೆ ಕೇವಲ ವೇಶ್ಯಾಸ್ತ್ರೀಯಿಂದಲೂ ನಿಕೃಷ್ಟಳಾದ ವಾಗ್ಚೇವಿಗಿರವಷ್ಟು ನಂಬಿಕೆಯು ಶ್ರೀಪಾದಂಗಳವರಿಗೆ ಇಲ್ಲವೆಂಬ ಹಾಗಾಯಿತು. +ಇನ್ನೇನು ಅರಿಕೆ ಮಾಡಲಿ. +ಚಂಚಲನೇ “ವೆಂಕಟಪತಿ ನಿನ್ನ ಮಾತಿಗೆ ಅರ್ಧವಾಗುವುದಿಲ್ಲ. +ಭಯಭಕ್ತಿಶೂನ್ಯರಾಗಿ ನಾವು ಪಟ್ಟದ ದೇವರ ಪೂಜೆ ನಡೆಸಿಕೊಂಡು ಬರುತ್ತೇವೆಂಬ ಅನುಮಾನ ನಿನಗೆ ಹುಟ್ಟಿದ್ದು ಬಹುಚೋದ್ಯವೇ ಸರಿ.” +ವೆಂಕಟಪತಿ-“ಚೋದ್ಯವೇ, ಶ್ರೀಪಾದಂಗಳವರಿಗೆ ತನ್ನ ದೇವರ ಮೇಲೆ ನಿಜವಾದ ಭಯಭಕ್ತಿಯಿರುವದಾದರೆ ವಾಗ್ದೇವಿಯ ಮಾಯಾಜಾಲವನ್ನು ಕತ್ತರಿಸಲಿಕ್ಕೆ ಅನ್ಯಸಾಧನ ಬೇಕಾಗದು. +ತನಗೆ ತಗಲಿಕೊಂಡಿರುವ ಮೋಹವನ್ನು ಜಯಿಸಿಲಿಕ್ಕೆ ಸಾಮರ್ಥ್ಯಕೊಡೆಂದು ನಿಷ್ಠಳಂಕ ಮನಸ್ಸಿನಿಂದ ದೇವರನ್ನು ಬೇಡಿಕೊಂಡರೆ ದುರ್ವ್ಯಸನವಾವುದೂ ಸನ್ನಿಧಿಗೆ ಸೋಕೀತೇ ಸ್ವಾಮಿ. +ಬಡವನ ಅರಿಕೆಯು ನಿಸ್ಸಾರವೆನ್ನಬಾರದು.” +ಚಂಚಲನೇ–“ಸರಿ, ಸರಿ, ನಿನ್ನ ಜ್ಞಾನೋಪದೇಶವು ಪುನಃ ತಲೆ ದೋರಿತೇನು?” +ವೆಂಕಟಪತಿ–“ಪರಾಕೆ, ದೊಡ್ಡ ದೊಡ್ಡ ರಾಜ್ಯಗಳನ್ನಾಳುವ ಪ್ರಭು ಗಳು ಮಂತ್ರಿಗಳ ಆಲೋಚನೆಯನ್ನು ಯಾವ ಕಾರ್ಯಕ್ಕಾದರೂ ಮುಂದಾಗಿತಿಳುಕೊಳ್ಳುವುದೂ ತಾನಾಗಿ ಯಾರನ್ನೂ ಕೇಳದೆ ಮಾಡದೆ ಒಂದುಕಾರ್ಯವನ್ನು ತೊಡಗಿಬಿಟ್ಟ ವೇಳೆಯಲ್ಲಾದರೂ ಮಂತ್ರಿಗಳು ಆಕ್ಷೇಪಿಸಿ ತಮ್ಮ ನ್ಯಾಯವಾದ ಅಭಿಪ್ರಾಯವನ್ನು ತಿಳಿಸಿದರೆ ಅದನ್ನು ಒಪ್ಪಿಕೊಂಡು ನಡಿಯುವದೂ ಲೋಕರೂಢಿಯಷ್ಟೆ. +ಪ್ರಧಾನಿಯು ತನ್ನ ಚಾಕರವೆಂಬ ಒಂದೇ ಕಾರಣದಿಂದ ಅವನು ತನಗೆ ಬುದ್ಧಿ ಹೇಳತೊಡಗಿದನೇ ಎಂದು ಅರಸು ಕನಲಿದರೆ ರಾಜ್ಯಭಾರ ಸರಿಯಾಗಿ ನಡೆಯುವದೇ ಸ್ವಾಮೀ? +ಚರಣ ಕಿಂಕರನಾದ ನನ್ನ ಮನಸ್ಸಿಗೆ ಕಂಡ ಅಭಿಪ್ರಾಯವನ್ನು ಸನ್ನಿಧಿಗೆ ಸೂಚಿಸಿದ ದೆಶೆಯಿಂದ ನಾನು ಜ್ಞಾನೋಪದೇಶ ಮಾಡನೋಡುತ್ತೇನೆಂದು ನೆನಸಿ ಧಿಕ್ಕರಿಸುವದು ನ್ಯಾಯವೋ? +ಈ ವಿಚಾರವನ್ನು ಮುಂದಾಗಿ ಮಾಡಬೇಕೆಂಬ ನನ್ನ ವಿನಂತಿಯನ್ನು ತಿರಸ್ಕರಿಸಬಾರದು.” +ಚಂಚಲನೇ-“ಅರಸೂ ಪ್ರಧಾನಿಯೂ ಇವರಿಬ್ಬರಿಂದಲೇ ರಾಜ್ಯಭಾರ ನಡೆಯುವದೇನು ಹುಚ್ಚಪ್ಪಾ! +ಆರಸಿಗೆ ಯೋಗ್ಯವಾದ ಪಟ್ಟದರಾಣಿ ಇಲ್ಲದೆ ರಾಜ್ಯ ನಡೆದೀತೇ? +ಅಷ್ಟು ವಿಚಾರಶೂನ್ಯನಾದ ನಿನ್ನ ಒಣ ಹರಟೆಯನ್ನು ಕೇಳುತ್ತಾ ನಾವು ಸಮಯ ಕಳೆಯಬೇಕನ್ನುವಿಯಾ?” +ವೆಂಕಟಪತಿ-“‌ಸನ್ನಿಧಿಯ ಈ ಕಕ್ಷಿಯ ತಾತ್ಪರ್ಯ ನನ್ನ ಮನಸ್ಸಿಗೆ ಹೊಗಲಿಲ್ಲ. +ಅರಸನಿಗೆ ರಾಣಿಯು ಇರುವುದು ಸಹಜವೇ? +ಚಂಚಲನೇ–“ನಾವು ಅರಸು ಪ್ರಧಾನಿ ಎಂಬಂತೆ ಭಾವಿಸುವದಾದರೆ ನಮಗೆ ಆದಿಯಲ್ಲಿ ಒಂದು ರಾಣಿಯನ್ನು ಮಾಡಿಕೊಡು ಆ ಮೇಲೆ ನೀನು ಪ್ರಧಾನಿ ಖರೆ… +ನಿನ್ನ ಆಲೋಚನೆಯನ್ನು ನಾವು ತೆಗಿದುಹಾಕಲಾಕೆವು. +“ವೆಂಕಟಪತಿ–“ಪರಾಕೆ! +ಘನವಿಚಾರದಲ್ಲಿ ಕುಚೋದ್ಯರೂಪವಾದ ಆಕ್ಷೇಪವು ತರ್ಕಯೋಪಾದಿಯಲ್ಲಿ ತೋರುವುದಲ್ಲದೆ. +ಪ್ರಯೋಜನಕ್ಕೆ ಬೀಳುವುದೇ? +ಹೆಚ್ಚಿಗೆ ಭಿನ್ನನಿಸಿಕೊಳ್ಖಲಿಕ್ಕೆ ನನ್ನಲ್ಲಿ ಶಕ್ತಿಯಿಲ್ಲ. +ನನ್ನ ಸರ್ವಾಪರಾಧಗಳನ್ನು ಕ್ಷಮಿಸಬೇಕೆಂದು ಪ್ರಾರ್ಥಿಸುತ್ತೇನೆ; +ಸನ್ನಿಧಿಯ ಆಜ್ಞೆ ಮೀರುವವನಲ್ಲ.” +ಚಂಚಲನೇ–“ಕ್ಷಿತೀಶನು ಸಚಿವನ ಆಲೋಚನೆಯನ್ನನುಸರಿಸಿ ನಡೆಯುತ್ತಾನೆ. +ನಾವು ಈಗ ಮಾಡಿಕೊಂಡಿರುವ ಸಂಕಲ್ಪವು ರಾಜಕಾರ್ಯ ದಂತಿರುವುದಿಲ್ಲ ತೀರಾ ದೇಹಸಬಂಧವಾಗಿ ನಾವು ಹುಡುಕುವ ಸುಖದಾಯಕ ಉಪಾಯ. +ಇದಕ್ಕೆ ಮಂತ್ರಾಲೋಚನೆ ಬೇಕೇನಯ್ಯಾ? +ಹಿಂದೆ ರಾವಣಾಸುರನು ಮಂತ್ರಿಗಳೂ ಮಿತ್ರರೂ ಬಂಧುಬಾಂಧವರೂ ಹಲವು ಪರಿ ಯಲ್ಲಿ ಹೇಳಿದಬುದ್ಧಿ ಯನ್ನು ಧಿಕ್ಕರಿಸಿ ತನ್ನ ಛಲವನ್ನೇ ಸಾಧಿಸಿದ ದೆಸೆಯಿಂದ ಅವನಿಗೆ ಸಾಯುಜ್ಯ ದೊರೆಯಲಿಲ್ಲವೇ? +ನವನ್ಯಾಕರಣಿಯಾದ ಆ ಖಳನು ಕಡುಮೂರ್ಖನೇನು?” +ವೆಂಕಟಪತಿ–“ಸನ್ನಿಧಿಯಿಂದ ಆರಿಸಲ್ಪಟ್ಟ ಉಪಮೆಯು ಈಗಿನ ಪ್ರಸ್ತಾಪಕ್ಕೆ ಪ್ರಾಸಂಗಿಕವಾದದ್ದೇ? +ವ್ಯಾಕರಣಿಯು ಇನ್ನೊಬ್ಬನ ಹೆಂಡತಿ ಯನ್ನು ಎತ್ತಿಹಾಕುವುದಕ್ಕೋಸ್ಕರ ಕಪಟಸನ್ಯಾಸವೇಷವನ್ನು ಹಾಕಿಕೊಂಡು ಸೀತಾಹರಣವನ್ನು ಮಾಡಿದಪ್ರಯುಕ್ತ, ರಾವಣಸನ್ಯಾಸಿ ಎಂಬ ಗುಣನಾಮ ವನ್ನು ಧರಸಿದನು. +ಅಂಥಾ ಸ್ವಭಾವದ ಮಹಾನುಭಾವರನ್ನು ರಾವಣ ಸನ್ಯಾಸಿ ಎಂದು ಕರೆಯುವ ರೂಢಿಬಿದ್ದದೆ. +ಸನ್ನಿಧಿಯ ಸತ್ಟ್ರೀರ್ತಿಗೆ ಪ್ರಕತದ ಚಿಂತನೆಯು ಉಪಯುಕ್ತವೆಂದು ತಿಳಿದುಕೊಳ್ಳೋಣಾಗುವುದಾದರೆ ಕೇವಲ ಮೂಢಮತಿಯಾವ ನಾನು ಹೇಳತಕ್ಕದ್ದೇನಿದೆ?” +ಚಂಚಲನೇ–“ಪ್ರಾಪಂಚಿಕ ವ್ಯವಹಾರಗಳಲ್ಲಿ ದೇವರನ್ನು ಕಟ್ಟಿಕೊಳ್ಳ ಬಾರದು ವೆಂಕಟಪತಿ! +ದೇವರೇ ಗತಿಯೆಂದು ಅಡಿಗೆಮಾಡದೆ ಕೂತವರಿಗೆ ಅನ್ನ ದೊರೆಯುವುದೇ? +ಪುರುಷ ಪ್ರಯತ್ನಗಳಿಂದ ನೆರವೇರುವ ಕೆಲಸಗಳ ಲ್ಲಿಯೂ ಮಾನುಸಿಕ ಇಚ್ಛೆಗಳನ್ನು ಪೂರೈಸುವ ವಿಷಯದಲ್ಲಿಯೂ ದೇವರನ್ನು ಕರೆಯ. +ಪ್ರದರಿಂದ ಪ್ರಯೋಜನವಿಷೆಯೇ? +ನೀನು ಇಷ್ಟು ಬುದ್ಧಿ ಶೂನ್ಯನೇ?? +ವೆಂಕಟಪತಿ… ಪರಾಕ!ಲೌಕಿಕ ವಿಷಯಗಳಲ್ಲಿ ಒಂದಾದರೂ ಧೈವಾಧೀನಕ್ಕೆ ಹೊರಪಟ್ಟಿರುವುದಿಲ್ಲವೆಂದು ನನ್ನ ಮತ. +ನಾಸ್ತಿಕರು ಏನೂ ಆಂದುಕೊಳ್ಳಲ್ಲಿ”ಚಂಚಲನೇ— “ನಿನ್ನ ಮತವನ್ನೇ ಅನುಸರಿಸೋಣ. +ದೈವಾಧೀನಕ್ಕೆ ಯಾವದೊಂದು ವಿಷಯವೂ ಬಾಹಿರವಲ್ಲವಷ್ಟೆ! +ಹಾಗಾದ ಮೇಲೆ ನಮ್ಮ ಮನಸ್ಸಿನ ಬೇರೂರಿಹೋದ ವಾಗ್ದೇವಿ ಚಿಂತನೆಯು ದೈವ ಪ್ರೇರಿತವಲ್ಲ ವೆಂದು ನೀನು ಹೇಳುವಿಯಾ? +ವೆಂಕಟಪತಿ– ಬೆಂಕಿಯಲ್ಲಿ ಕೈ ಹಾಕಿದರೆ ಕೈ ಸುಡುವದೆಂದು ಎಲ್ಲ ರಿಗೂ ಗೊತ್ತಿರುವದು. +ಒಬ್ಬನು ಮೂಡತನದಿಂದ ಕೈ ಸುಟ್ಟುಕೊಂಡರೆ ಅದು ದೈವಪ್ರೇರಿತ ಕೃತ್ಯವೆನ್ನಬಹುದೇ? +ಒಳ್ಳೆದು ಕೆಟ್ಟದು ಯಾವದೆಂದು ತಿಳಿಯುವ ಬುದ್ದಿಯನ್ನು ದೇವರು ಪ್ರಾಣಿಗಳಗೆಲ್ಲೂ ಸಾಮಾನ್ಯವಾಗಿ ಕೊಟ್ಟಿರುವನು. +ಅಂಧಾ ಬುದ್ಧಿಗನುಸಾರವಾಗಿ ನಡೆಯದೆ, ತಪ್ಪಿ ಬೀಳುವ ಮನುಷ್ಯನು ದೇವರನ್ನು ಸರ್ವಧಾ ದೂರ ಕೂಡದು ಯತಿಯು ತಾನು ಆಚರಿಸಬೇಕಾದ ವ್ರತವನ್ನು ಪೂರ್ಣವಾಗಿ ತಿಳಿದು ಗೃಹಸ್ಥ್ರಾಶ್ರಮದ ಸುಖವನ್ನು ತ್ಯಜಿಸಿ, ಸನ್ಯಾಸಕ್ಕೆ ನಿರ್ದೇಶಿಸಲ್ಪಟ್ಟ ಕರ್ಮವನ್ನು ಕೈಕೊಂಡು ಬಳಿಕ ಯಮಶಿಕ್ಷೆಗೆ ಗುರಿಯಾಗುವ ಹಾಗಿನ ವಿಷಯಲಂಪಟತ್ವ ಮುಂತಾದ ದುಷ್ಕರ್ಮಗಳನ್ನು ಮನಸಿಟ್ಟು, ಅದೆಲ್ಲಾ ದೈವಪ್ರೇರಿತ ಬುದ್ಧಿ ಎಂದು ಹೇಳುವದಕ್ಕೆ ಶಾಸ್ತ್ರಸಮ್ಮತವಾದ ಆಧಾರವಿಲ್ಲ. +ಆದ ಪ್ರಯುಕ್ತ ಇಂಥಾ ಸನ್ಯಾಸಿಗಳು ತಮ್ಮ ಧರ್ಮವನ್ನುಲ್ಲಂಘಿಸಿ ಪಾಪಕೃತ್ಯಗಳಲ್ಲಿ ಆಸಕ್ತರಾಗು ವದು ಯಮ ಯಾತನೆಗೆ ಗುರಿಯಾಗುವದಕ್ಕೆಂದು ನನ್ನ ಮನಸ್ಸಿಗೆ ತೋರುವ ನ್ಯಾಯ ಸನ್ನಿಧಿಗೆ ಅರಿಕೆ ಮಾಡಿದೆ. +ಸೇವಕನ ಮೇಲೆ ಕೃಪೆ ಇರಲಿ? +ಚಂಚಲನೇ… “ವೆಂಕಟಪತಿ, ನೀನು ಬರೇ ಹೆಡ್ಡ. +ಶಿಖಾ ಯಜ್ಞೋ ಪವೀತವನ್ನು ತ್ಯಜಿಸಿದ ಸನ್ಯಾಸಿಗೆ ಯಮಬಾಥೆ ಸರ್ವಥಾ ತಟ್ಟದೆಂಬ ಗುಟ್ಟು ನೀನು ಇದುವರೆಗೂ ತಿಳಿಯಲೇ ಇಲ್ಲ.” +ವೆಂಕಟಪತಿ– “ಈಗ ಅಪ್ಪಣೆಯಾದ ಗುಟ್ಟಿನ ಒಳಗೆ ಇನ್ನೊಂದು ಗುಟ್ಟು ಅದೆ. +ಚಂಚಲನೇ- “ಅದ್ಯಾವದು?” +ವೆಂಕಟಪತಿ-“ತಲೆಯನ್ನು ಬೋಳಸಿಕೊಂಡು ಯಜ್ಞೋಪವೀತ ವನ್ನು ಹರಿದು ಬಿಟ್ಟಾಕ್ಷಣ ಯಮಬಾಧೆಯು ತಟ್ಟದಿರುವದು ನಿಜವಾದರೆ, ಯಮನು ಶ್ರಮುನಿಪಟ್ಟಣವನ್ನುಬೇಗನೇ ಬಿಟ್ಟು ಘಟ್ಟಹತ್ತಬೇಕಾಗುವುದು. +ಪಾಪಿಷ್ಠರೆಲ್ಲರೂ ಯಮನ ಹೆದರಿಕೆಯುಳ್ಳವರೆಂದು ಲೋಕವೇ ಬಲ್ಲದು. +ಎಂಥಾ ಸಾವಿಯಾದರೂ ತನಗಿಷ್ಟವಿರುವ ಸಕಲ ದುರಾಚಾರವನ್ನು ನಡೆಸಿ, ಅಂತ್ಯಕಾಲದಲ್ಲಿ ಸನ್ಯಾಸವನ್ನು ತಕ್ಕೊಂಡುಬಿಟ್ಟರೆ ಯಮಸದನಕ್ಕೆ ಯಾರೊಬ್ಬನೂ ಹೋಗಲಾರನು. +ಹಾಗಾದರೆ ಯಮನ ಉದ್ಯೋಗ ಮಿನಾಹಿ ಯಲ್ಲಿ ಬರುವದಲ್ಲದೆ ಲೋಕದಲ್ಲಿ ಪಾಪಿಗೊಬ್ಬಗಾದರೂ ಪಾಪ ಭಯ ಲೇಶವಾದರೂ ಇರದು. +ಸನ್ಯಾಸವು ಸ್ವರ್ಗಕ್ಕೆ ಹೋಗುವದಕ್ಕೆ ಸುಂಕಪಾವತಿ ಚೀಟೆಂದು ಎಣಿಸುವದು ಬರೇ ಹುಚ್ಚುತನವೇ ಸರಿ. +ಧರ್ಮವನ್ನು ಬಿಟ್ಟು ದುರಾಚಾರದಲ್ಲಿ- ಮಗ್ನನಾದ ಸನ್ಯಾಸಿಗೆ ಯಮಬಾಧೆ ಸರ್ವಥಾ ತಪ್ಪದು.? +ಚಂಚಲನೇ-. . “ಹಾಗಾದರೆ ಸನ್ಯಾಸಿಗೂ ಇತರ ಮಾನವರಿಗೂ ನನೂ ಬೇಧವಿಲ್ಲವೆನ್ನುತ್ತಿಯೋ? +ವೆಂಕಟಪತಿ– “ಅಲ್ಲ, ಸನ್ಯಾಸವು ದೊಡ್ಡ ಪದವಿಯೇ. +ಪರಂತು ಕರ್ಮಭ್ರಷ್ಟನಾದ ಸನ್ಯಾಸಿಯು ಇತರ ಪಾಪಿಗಳಿಗಿಂತಲೂ ಕಡೆ. +ಅಂಥವನು ಪತಿತನಾಗುವದರಿಂದ ಯಮಯಾತನೆಯು ಅವನಿಗೆ ಒಂದು ದಿವಸಕ್ಕಾದರೂ ಬಿಟ್ಟು ಹೋಗದು. +ಚಂಚಲನೇ– “ಎಂಥಾ ಪಾಪಕ್ಕೂ ಪ್ರಾಯಶ್ಚಿತ್ತ ಉಂಟಷ್ಟೇ. +ದುಷ್ಕರ್ಮಿಯಾದ ಸನ್ಯಾಸಿಯು ಸಕಾಲದಲ್ಲಿ ಪ್ರಾಯಶ್ಚಿತ್ತ ಮಾಡಿಕೊಂಡರೆ ಅವನಿಗೆ ಯಮನ ಶಿಕ್ಷೆಯ ಭಯವೆಲ್ಲಿಯದು? +ವೆಂಕಟಪತಿ– “ಸಕಾಲ ಯಾವದೆಂದು ಅಫ್ಸಣೆಯಾಗಲಿ, ಪರಾಕೆ? +ಚಂಚಲನೇ– “ಪಾಪಭಯ ಯಾವ ಸಮಯದಲ್ಲಿ ಹುಟ್ಟಿತೋ ಅದೇ ತಕ್ಕ ಕಾಲವೆಂದು ತಿಳುಕೋ? +ವೆಂಕಟಪತಿ… “ವಾಗ್ದೇವಿಯನ್ನು ವರಿಸಿಕೊಳ್ಳುವದೂ ಅವಳ ಬಯಕೆಯನ್ನು ಈಡೇರಿಸುವೆನೆಂದು ಪಟ್ಟದ ದೇವರ ಮುಂದೆ ಪ್ರಮಾಣ ಪೂರ್ವಕವಾಗಿ ವಾಗ್ದಾನ ಕೊಡುವದೂ ಪಾಪಕೃತೃವಲ್ಲವೆಂಬಂತೆ ಸನ್ನಿಧಿ ಯಿಂದ ಈಗ ತಿಳುಕೊಳ್ಳೋಣಾಗಿಯದೋ ಅಧವಾ ಇಂಧಾ ದುಷ್ಟರ್ಮವು ಪುಣ್ಯಕೆಲಸವೆಂದು ಎಣಿಸೋಣಾಗಿಯದೋ ತಿಳಿಯದು. ” +ಚಂಚಲನೇ “ನಿನ್ನ ಕುತರ್ಕಕ್ಕೆ ನಾವು ಪ್ರತ್ಯುತ್ತರ ಕೊಡಲಾರೆವು ಪಾಪ ಭಯ ಹುಟ್ಟುವ ಪರಿಯಂತರ ಪಾಶ್ಚಾತಾಪಕ್ಕೆ ಅವಕಾಶ ಉಂಟೆಂದು ನಾವು ಮೊದಲೇ ನಿನಗೆ ಅಪ್ಪಣೆಕೊಡಲಿಲ್ಲವೇ?” +ವೆಂಕಟಪತಿ– “ಪ್ರಕೃತ ಸನ್ನಿಧಿಯ ಮನಸ್ಸು ಸೂರೆಗೊಂಡಿರುವ ವಾಗ್ದೇವಿಯ ಚಿಂತನೆಯು ಪಾಪಕೃತ್ಯವೋ ಎಂಬ ಪ್ರಶ್ನೆಗೆ ಸನ್ನಿಧಿಯ ಉತ್ತರ ದೊರಕುವ ತನಕ ನಾನು ಜಿಜ್ಞಾಸವನ್ನು ಕಡೆಹೊಂದಿಸಲಾರೆ. +ಚಂಚಲನೇ- “ಅದು ಪುಣ್ಯಕೃತ್ಯನೆಂದು ಹೇಳಲಾಗದು.” +ವೆಂಕಟಪತಿ– “ಹಾಗಾದರೆ ಪಾಪಭಯ ಈಗಲೇ ಹುಟ್ಟಿತು ಪ್ರಾಯಶ್ಚಿತ ಮಾಡಿಕೊಳ್ಳುವ ಸಮಯ ಮುಂದಿಲ್ಲ ಸ್ವಾಮಿ.” +ಚಂಚಲನೇ– “ಪಾಪಕೃತ್ಯವನ್ನು ಇನ್ನೂ ಮಾಡಲೇ ಇಲ್ಲ. +ವಾಗ್ದೇವಿಯು ನಮ್ಮ ಕೈಗೆ ಇನ್ನೂ ಸಿಕ್ಳಲೇ ಇಲ್ಲ. +ಪ್ರಾಯಶ್ಚಿತ್ತ ಈಗಲೇ ಮಾಡಿಕೊಳ್ಳಬೇಕಾಗಿ ನೀನೆನ್ನುವ ಮಾತಿಗೆ ಅರ್ಥವದೇಯೋ?” +ವೆಂಕಟಪತಿ– “ಒಂದು ಕೃತ್ಯವು ಪಾಪವೆಂದರಿಯದೆ ಅದನ್ನು ಮಾಡಿ, ಬಿಟ್ಟು, ಅದು ಪಾಪವೆಂದು ತಿಳಿದೆ ಮೇಲೆ ಪಶ್ಚಾತ್ತಾಪ ಸಹಜವಾಗಿ ಉಂಟಾಗುವದು. +ಪ್ರಕೃತದ ಪ್ರಸ್ತಾಪದಲ್ಲಿ ಸನ್ನಿಧಿಯಿಂದ ಸಂಕಲ್ಪಿಸಲ್ಪಟ್ಟ ಕಾರ್ಯವು ಪಾಪ ಕೃತ್ಯನೆಂದು ಆದಿಯಲ್ಲಿಯೇ ಸಮಾಧಾನವಾಗಿರುವ ಕಾರಣ ಪ್ರಾಯಶ್ಚಿತ್ತ ಮಾಡತಕ್ಕ ಕಾಲವು ಇದೇ ಸರಿ.” +ಚಂಚಲನೇ- “ಈಗ ನಾವು ಮಾಡತಕ್ಕ ಕೆಲಸವೇನೆಂದು ನಿನ್ನ ತಾತ್ಪರ್ಯ?” +ವೆಂಕಟಪತಿ– “ವಾಗ್ದೇವಿಯ ಪ್ರಸ್ತಾಪವನ್ನು ನಿಶೇಧವಾಗಿ ಬಿಟ್ಟು ಅವಳ ಕುರಿತು ಇಷ್ಟು, ಪರಿಯಂತ ಮನಸ್ಸಿನಲ್ಲಿ ಮಾಡಿಕೊಂಡ ದುಃಸಂಕಲ್ಪವೆಂಬ ಪಾಪವನ್ನು ಮಾನಸಾಂತರಪಡುವದರ ಮೂಲಕ ಪರಿಹರಿಸಿಕೊಳ್ಳ ಬೇಕೆಂಬ ನನ್ನ ಮತ” +ಚಂಚಲನೇ-“ವೆಂಕಟಪತಿ!ನಾವು ಪ್ರತಿನಿತ್ಯ ಮಾಡುವ ನಾರಾ ಯಣ ಸ್ಮರಣೆಗಿಂತ ದೊಡ್ಡಪ್ರಾಯಶ್ಚಿತ್ತ ಉಂಟೇನಪ್ಪಾ? +ಆಯಾಯ ದಿನ ಮಾಡಲ್ಪಟ್ಟ ಪಾಪವೆಲ್ಲವೂ ಸದಾಕಾಲ ನಡೆಯುವ ಹರಿನಾಮಸ್ಮರಣೆಯಿಂದ ಭಸ್ಮವಾಗಿ ಹೋಗುತ್ತದೆ. +ವಾಗ್ದೇವಿಯ ಚಿಂತನೆಯು ಅಂಥಾ ಪ್ರಾಯಶ್ಚಿತ್ತ ಕೈ ಮೀರಿ ಹೋಗುವ ಪಾಪವಲ್ಲವೆಂದು ಚೆನ್ನಾಗಿ ತಿಳುಕೋ. +ದೊಡ್ಡ ಬುದ್ಧಿ ವಂತನೆಂಬಂತೆ ಹೆಚ್ಚು ಗಳಹುವದರಿಂದ ನಿನ್ನ ಹುಚ್ಚುತನವೇನಾದರೂ ಮರೆಯಾಗದು. +ಇನ್ನೂ ನೀನು ಹೀಗಿಯೇ ಅಧಿಕಪ್ರಸಂಗಮಾಡಿ ಕಾಲ ಹರಣಮಾಡುವದಕ್ಕೆ ನೋಡುತ್ತೀಯಾದರೆ ಬೇಗನೇ ನಮ್ಮ ಎದುರಿನಿಂದ ನಡೆದುಬಿಡು. +ವಾಗ್ದೇವಿಯನ್ನು ನಿನ್ನ ಸರಿಮುಖವಲ್ಲದೆ, ಅನ್ಯಥಾ ಕರಿಸಿ ಕೊಳ್ಳುವದಕ್ಕೆ ಆಗುವುದಿಲ್ಲವಾದರೆ ನಿನ್ನನ್ನು ವಾದ್ಯದಿಂದ ತರಿಸಿ ಕೊಳ್ಳುವೆವು. +ಇನ್ನು ನಿನ್ನ ಮುಖಾವಲೋಕನ ನಮಗಾಗಬಾರದು.? +ವೆಂಕಟಪತಿಯ ತರ್ಕದಿಂದ ಚಂಚಲನೇತ್ರರಿಗೆ ಉಂಟಾದ ದೊಡ್ಡ ಸಿಟ್ಟನ್ನು ಸೈರಿಸಲಾರದೆ ಅವರು ಒಡನೆ ಮಂಚದಿಂದೆದ್ದು ಮತ್ತೊಂದು ಕೋಣೆಯ ಒಳಗೆ ಹೋಗಿ ಬಾಗಿಲುಗಳನ್ನು ಮುಚ್ಚಲಿಕ್ಕೆ ತಿರುಗಿ ನಿಂತ ಸಮಯವನ್ನು ನೋಡಿ ವೆಂಕಟಪತಿ ಆಚಾರ್ಯನು ತನ್ನ ಧಣಿಯ ವಾದಕ್ಕೆ ಅಡ್ಡಬಿದ್ದು, ತಿಳಿಯದೆ ಬಂದ ಅಪರಾಧ ವಿಶಿಷ್ಟವನ್ನು ಒಮ್ಮೆ ಕ್ಷಮಿಸಬೇಕಾಗಿ ಉಭಯ ಹಸ್ತಗಳನ್ನು ಜೋಡಿಸಿ ಬೇಡಿಕೊಂಡಾಗ, ಹೆಚ್ಚು ಎಳೆದರೆ ಹರಿದುಹೋದೀತೆಂಬ ಗಾದೆಯನ್ನು ನೆನಪಿಗೆ ತಂದ, ಚಂಚಲ ನೇತ್ರರು ಅರ್ಧ ಸಿಟ್ಟು ಅರ್ಧ ಸಂತೋಷಚಿತ್ತದಲ್ಲಿದ್ದಂತೆ ತೋರಿಸಿಕೊಂಡು, “ಒಳ್ಳೇದು ನಮ್ಮ ಆಜ್ಞೆಯನ್ನು ಸಾವಕಾಶವಿಲ್ಲದೆ ಅನುಸರಿಸಿದರೆ ನಿನಗೆ ನಾವು ಪೂರ್ವವಶ್‌ ನಡಿಸಿಕೊಂಡು ಹೋಗಲಿಕೈ ಅಭ್ಯಂತರವಾಗದು; +ಇನ್ನು ಮುಂದೆಯೂ ನಮಗೇನೇ ಬುದ್ಧಿ ಹೇಳತೊಡಗಿದರೆ ಪ್ರಯಾಸಪಡ ಬೇಕಾಗುವದು, ನೋಡಿಕೋ” ಎಂದು ಗದರಿಸಿಬಿಟ್ಟರು. +ಹುಚ್ಚನಂತೆ ಕೋಪ ಮಾಡಿ ಪಾರುಪತ್ಯ ಬಿಟ್ಟುಹೋದರೆ ತನಗಿಂತಲೂ ಅಧಿಕ ಬುದ್ಧಿ ಯವನು ಇನ್ನೊಬ್ಬನು ಕ್ಷಣಾರ್ಧದಲ್ಲಿ ಸನ್ಯಾಸಿಗೆ ಸಿಕ್ಕುವನು ಮತ್ತು ಹೆಚ್ಚು ಚಾತುರ್ಯದಿಂದ ವಾಗ್ದೇವಿಯನ್ನು ಮಠಕ್ಕೆ ತರಲಿಕೈ ಮಾಡಿದ ವೈನದ ಪ್ರಯೋಜನವು ತನಗೆ ಒಂದಿಷ್ಟಾದರೂ ಸಿಕ್ಕದೆ ಹೋಗುವದೆಂಬ ಭಯದಿಂದ ವೆಂಕಟಪತಿಯು ಕೈಮುಗಿದು ನಿಂತುಕೊಂಡು, ವಾಗ್ದೇವಿ ಯನ್ನು ಅವಳ ಬಳಗದ ಸಮೇತ ಯಾವ ದಿವಸ ಮಠಪ್ರವೇಶಮಾಡಿಸ ಬೇಕೆಂದು ತಿಳಿಯಲಪೇಕ್ಷಿಸಿದನು. +ನಾಳೆ ದಿವಸವೇ ಪ್ರಶಸ್ತವೆಂದು ಚಂಚಲನೇತ್ರರೆಂದರು. +ಅನ್ನ ಉಳಿಯಬೇಕಾದರೆ ಇಂಧಾ ಮೂಢ ಸನ್ಯಾಸಿಗೆ ಜ್ಞಾನವನ್ನು ಹೇಳಬಾರದು. +ಬೇವಿನ ಎಲೆಯನ್ನು ತಿನ್ನುವವನು ಕಹಿಯಾದ ಕೂಡಲೇ ತಾನೇ ಬಿಡುವನು. +ಮುಂದೆ ಬರಬಹುದಾದ ಕೇಡು ನಿವಾರಣೆಗೆ ಮಠದಲ್ಲಿ ಯಥೇಷ್ಟ ದುಡ್ಡಿದೆ. +ಸನ್ಯಾಸಿಯ ಉಪ್ಪನ್ನ ಇಷ್ಟು ದಿನ ತಿಂದುಕೊಂಡಿದ್ದ ನೆನಪಿನಿಂದ ಅವನು ವ್ಯರ್ಥವಾಗಿ ಕೆಟ್ಟುಹೋಗದಂತೆ ನ್ಯಾಯವಾದ ಮಾತು ಹೇಳಿದರೆ ಅವನು ಸಿಟ್ಟು ತಾಳಿ ವಿವೇಕಶೂನ್ಯನಾದ ಬಳಿಕ ತನಗೆ ಬಂದ ಆಪತ್ತೇನು? +ವಾಗ್ದೇವಿಯು ಮಠಪ್ರವೇಶವಾದ ಮೇಲೆ ಅವಳ ತಂದೆಯು ಅವಳ ಬಲದಿಂದ ಮಠದಲ್ಲಿ ಸರ್ವಾಧಿಕಾರವನ್ನು ನೋಡಲಿಕ್ಕೆ ಪ್ರಯತ್ನಿಸಿ ತನ್ನ ಬಾಯಿಗೆ ಅಡ್ಡಬರುವನೋ ಎಂಬದೊಂದು ಹೆದರಿಕೆಯಿದೆ. +ಪರಂತು ಅವನು ಅಷ್ಟು ಪ್ರತಾಪ ನಡಿಸುವ ಸಾಮರ್ಥ್ಯವುಳ್ಳ ವನಲ್ಲ. +ತನ್ನ ಸ್ವಾತಂತ್ರ್ಯಕ್ಕೆ ಮೋಡಮುಸುಕದೆಂದು ವೆಂಕಟಪತಿ ಆಚಾರ್ಯನು ಧೈರ್ಯ ಗುಂದದೆ ಮರುದಿವಸವಾಗಬೇಕಾದ ವಧೂಪ್ರವೇಶಕ್ಕೆ ಅವಶ್ಯ ಬೀಳುವ ಸಕಲ ಸಾಹಿತ್ಯಗಳನ್ನು ಒದಗಿಸಿ, ಮರುದಿನ ಪ್ರಾತಃಕಾಲ ವಾಗ್ದೇವಿಯ ಮರೆ ಕಡೆಗೆ ತೆರಳಿದನು. +ಪುರಾಣ ಪುಸ್ತಕವನ್ನು ಕಟ್ಚಿ ರೋಷದಿಂದ ಹೊರಟುಹೋದ ವೇದ ವ್ಯಾಸ ಉಪಾಧ್ಯನು ಮನೆಗೆ ತಲ್ಪಿದಾಗ ಗಂಡನ ಮುಖದ ಸ್ಥಿತಿಯಿಂದ ಏನೋ ವೈಷಮ್ಯ ನಡೆದಿರಬೇಕೆಂಬ ಅನುಮಾನದಿಂದ ಅವನ ಪತ್ನಿ ಸುಶೀಲಾಬಾಯಿಯು ಸಮಯವರಿತು ಖಿನ್ನತೆಯ ಕಾರಣವನ್ನು ತಿಳಿದಳು. +ಆಹಾ!ಗ್ರಹಗತಿಯ ದೋಷವೇ! +ಹಿಂದೆ ಎಷ್ಟೋ ಕಾಲದಿಂದ ನಡೆದು ಬಂದು, ಮುಂದೆ ಕೈಕಾಲು ಬೀಳುವವರೆಗೂ ನಡಕೊಂಡು ಬರಲಿಕ್ಕಿದ್ದ ಉಪಜೀವನಕ್ಕೆ ಒಮ್ಮೆಗೆ ಹಾನಿ ಬಂದುಹೋಯಿತಲ್ಲಾ! +ಬಡವನ ಸಿಟ್ಟು ದವಡೆಗೆ ಕೇಡು ಎಂಬ ಗಾದೆಯಾಯಿತು. +ಶ್ರೀಪಾದಂಗಳವರಿಗೆ ಈಗ ಕರುಣ ಹುಟ್ಟುವಂತೆ ಹೇಳಿಕೊಳ್ಳಬಹುದೆಂದರೆ ವಲ್ಲಭನು ಸ್ವೇಚ್ಛೆಯಿಂದ ಉದ್ಯೋಗವನ್ನು ಬಿಟ್ಟುಬಂದಿರುವನಷ್ಟೆ? +ನೀನಾಗಿ ಬಿಟ್ಟುಹೋದ ಉದ್ಧೋಗ ನೀನೇ ಅಪೇಕ್ಷಿಸುವದಕ್ಕೆ ನಾಚುವದಿಲ್ಲವೇ?ಎಂಬ ಪ್ರತ್ನುತ್ತರ ಶ್ರೀಪಾದಂಗಳವರ ಬಾಯಿಯಿಂದ ಹೊರಟರೆ ಕೃಷ್ಣವದನ ಮಾಡಿಕೊಂಡು ಮರಳಬೇಕಾಗುವದು. +ಸುಮ್ಮನಿದ್ದರೆ ಅನ್ನದ ಮಡಕೆಯು ಅಟ್ಟಕ್ಕೇರು ವದು ಪುಣ್ಯಾತ್ಮನಿನ್ನೊಬ್ಬನಿಗೆ ಪುರಾಣ ಹೇಳುವ ಕೆಲಸ ನೇಮಕವಾಗು ವದು. +ಇಂಥಾ ಉಭಯ ಸಂಕಟದಲ್ಲಿ ಬೀಳುವದಾಯಿತಲ್ಲಾ!ಎಂಬ ವ್ಯಸನ ಆ ಪತಿವ್ರತಿಗೆ ತಾಗಿತು. +ಸಿಟ್ಟು ತಣಿದ ಮೇಲೆ ವೇದವ್ಯಾಸ ಉಪಾಧ್ಯನು ಹುಚ್ಛುತನದಿಂದ ಅನ್ನವನ್ನು ಕಳಕೊಂಡು ನಾಚಿಕೆಗೆ ಗುರಿಯಾದೆನೆಂಬ ಅನುತಾಪದಲ್ಲಿ ಬಿದ್ದನು. +ಶತಪ್ರಯತ್ನ ಮಾಡಿ ಆ ಉದ್ಯೋಗವನ್ನು ಪುನಃ ಪಡೆಯಬೇಕೆಂಬ ಹಟವು ವೇದವ್ಯಾಸ ಉಪಾಧ್ಯಗೆ ಅಂಟಿಕೊಂಡಿತು. +ಆದರೆ ಮುಂದಿನ ಸಾಧನೆಯನ್ನು ನಡೆಸುವ ಅಂದವನ್ನು ತಿಳಿಯದೆ, ತನ್ನಂತೆ ಚಿಂತೆಯಲ್ಲಿರುವ ಪ್ರೀತಿಯ ವಲ್ಲಭೆಯನ್ನು ಕೇಳಿದನು. +ಅವಳು ಸ್ಪಲ್ಪ ಹೊತ್ತು ಆಲೋಚಿಸಿ, ವೆಂಕಟಪತಿ ಆಚಾರ್ಯರನ್ನು ಹಿಡಿದರೆ ಕೆಲಸ ಕೈಗೂಡವದೆಂದು ಸೂಚಿಸಿದಳು. +ಕಾಂತೆಯ ಸೂಚನೆಯನ್ನನುಸರಿಸಿ, ಆ ಬಡ ಬ್ರಾಹ್ಮಣನು ವೆಂಕಟ ಪತಿ ಆಚಾರ್ಯನ ಮನೆಯ ಕಡೆಗೆ ಹೋದನು. +ಆದರೆ ಅವನು ಎಲ್ಲಿಗೋ ಹೊರಟು ಹೋಗಿರುವನೆಂದು ತಿಳಿದು ಅಲ್ಲಿಂದ ಹೊರಬಿದ್ದನು. +ಚಿಂತೆಯೂ ಅವಸರವೂ ನಾಚಿಕೆಯೂ ಆತ್ಮಧಿಕವಾದರೆ ಬುದ್ಧಿಯ ಬಲವೇ ಕುಂದಿಹೋಗಿ ಯಾವ ಸಮಯದಲ್ಲಿ ಯಾವ ಕೃತ್ಯವನ್ನು ಮಾಡ ಬೇಕೆಂಬ ಜ್ಞಾನಶೂನ್ಯವಾಗಿ ಮನಸ್ಸಿನಲ್ಲಿ ವಿಕಲ್ಪವೂ ಚಂಚಲವೂ ಭಯವೂ ನೆಲೆಗೊಂಡು, ಕಾರ್ಯಸಾಧನೆಗೆ ವಿಘ್ನವುಂಟಾಗುವ ಅವಸ್ಥೆಯು ವೇದ ವ್ಯಾಸ ಉಪಾಧ್ಯನಂತೆ ಕಂಗೆಟ್ಟ ಜನರಿಗೆ ಬರುವದುಂಟು, ಈ ದೆಸೆಯಿಂದ ವಿವೇಕವೈಕಲ್ಯ ಹೊಂದಿದ ಆ ಬಡವನು ಸಮಯ ಕಳೆದರೆ ತನ್ನ ಉದ್ಯೋಗಕ್ಕೆ ಇನ್ನೊಬ್ಬನು ನೇಮಕವಾಗಿ ತನ್ನ ಪ್ರಯತ್ನ ವ್ಯರ್ಧನಾಗುವದೆಂಬ ಹೆದರಿಕೆಯಿಂದ ನೆಟ್ಟಿಗೆ ಮಠಕ್ಕೆ ಹೋಗಿ ಚಂಚಲನೇತ್ರರಿಗೆ ವಂದಿಸಿ ನಿಂತು ಕೊಂಡನು. + ಸರ್ವ ಅಪರಾಧಗಳನ್ನು ಕಮಿಸಿ, ತನ್ನ ಬಡತನದ ಕಡೆಗೆ ಲಕ್ಷ್ಯವಿಟ್ಟು ಜೀವನೋಪಾಯವನ್ನು ಪುನಃ ಅನುಗ್ರಹಿಸಬೇಕೆಂದು ವಿನಯದಿಂದ ಬೇಡಿಕೊಂಡನು. +“ನಿನ್ನ ಬಡತನದ ಪರಿಮಾಣಕ್ಕೆ ಮೀರುವ ಅಹಂಕಾರವೂ ಸಿಟ್ಟೂ ನಿನ್ನ ವೃದ್ಧಿಯ ಶತ್ರುಗಳು. +ಈ ಶತ್ರುಗಳನ್ನು ಜಯಿಸಲಿಕ್ಕೆ ನಿರುದ್ಯೋಗ ಮತ್ತು ಅನ್ನ ಪ್ರಮುಷ್ಟತೆಯೇ ಮುಖ್ಯವಾದ ಆಯುಧಗಳು. +ನಮ್ಮ ವಚನವು ಸತ್ಯವೋ ಹ್ಯಾಗೆಂದು ನೀನು ಕೆಲವು ದಿವಸ ಪರೀಕ್ಷೆಮಾಡಿ ನೋಡಿದರೆ ಗೊತ್ತಾಗುವುದು. +ನಮ್ಮ ಮಠದಲ್ಲಿ ನಿನಗೆ ಇರುತ್ತಿದ್ದ ಸಣ್ಣ ಉದ್ಯೋಗವನ್ನು ನೀನಾಗಿಯೇ ಬಿಟ್ಟು ಹೋದಿಯಲ್ಲ. +ಬಾಯಿಯಿಂದ ಬಿಸಾಡಿದ ಎಂಜಲನ್ನವನ್ನು ಪುನಃ ಬಯಸುವಿಯಾ? +ನೀನು ಕಡು ಮೂರ್ಖನೇ ಸರಿ. +ನಮ್ಮ ಮಠದಲ್ಲಿ ಇರಲಿಕ್ಕೆ ಯೋಗ್ಯನಲ್ಲ. +ನಮ್ಮ ಕಣ್ಣ ಮುಂದೆ ನಿಲ್ಲದೆ ಬೇಗನೇ ತೊಲಗು” ಎಂದು ಶ್ರೀಪಾದಂಗಳವರು ಕಟ್ಟಾಜ್ಞೆ ಮಾಡಿದರು. +ವೇದವ್ಯಾಸ ಉಪಾಧ್ಯನ ಮುಖ ಕಪ್ಪಾಯಿತು, ಕಣ್ಣಲ್ಲಿ ನೀರು ಬಂತು. +ಅವಸರದಿಂದ ಅಪಜಯವಾಯಿಕೆಂಬ ತಿಳುವಳಿಕೆಯು ಹುಟ್ಟಿತು. +ಹಾಗೆಯೇ ಅವನು ಮಠದಿಂದ ಹೊರಟು, ಪುನಃ ವೆಂಕಟಪತಿ ಆಚಾರ್ಯನನ್ನು ಹುಡುಕಾಡುತ್ತಾ ಹೋದಾಗಲೂ ಆಚಾರ್ಯನು ಮನೆಯಲ್ಲಿ ಸಿಕ್ಕಲಿಲ್ಲ. +ಯಾವಲ್ಲಿ ಹೋದನೆಂಬ ನಿರೀಕ್ಷೆಯಿಂದ ಕಾದು ಕೂತು ಸಾಕಾಯಿತು. +ಮನೆಯಿಂದ ಹೊರಟ ಮುಹೂರ್ತವೇ ಒಳ್ಳೆದಲ್ಲವಾದ ಕಾರಣ ಅಪಜಯವಾಯಿತು. +ಇನ್ನೊನ್ಮು ನೋಡೋಣ, ಈಗ ಮನೆಗೆ ಹೋಗುವದೇ ಒಳ್ಳೆ ತೆಂದು ಬಂದುಬಿಟ್ಟನು. +ಹೆಂಡತಿಯು ಗಂಡನ ಮುಖದ ಮೇಲೆ ವ್ಯಾಪಿಸಿದ ಅಪಜಯ ಪ್ರದರ್ಶಕವರ್ಣವನ್ನು ನೋಡಿ, ಸ್ವಲ್ಪಹೊತ್ತು ಮಾತಾಡದೆ ಸುಮ್ಮನಾದಳು. +ವೇದವ್ಯಾಸ ಉಪಾಧ್ಯನು ನಿಟ್ಟುಸಿರುಬಿಡುತ್ತಾ, ಜಗಲಿಯ ಮೇಲೆ ಕೂತು, ಚಿಂತಾಕ್ರಾಂತನಾಗಿರುವುದನ್ನು ಈಕ್ಷಿಸುವ ಅವನ ವಲ್ಲಭೆಯು ಮೃದುಸ್ವರ ದಿಂದ ಗಂಡನನ್ನು ಮಾತನಾಡಿಸಿ, ನಡೆದ ವೃತ್ತಾಂತವನ್ನು ಕೇಳಿದ ಬಳಿಕ ತಾನಿಬ್ಬರೂ ಅದೃಷ್ಟಹೀನರಾದ ದೆಸೆಯಿಂದ ಪ್ರಾಪ್ತವಾದ ದುರವಸ್ಥೆಯ ಕುರಿತು ದುಃಖಪಟ್ಟು ಪ್ರಯೋಜನವಿಲ್ಲ. +ಸೃಷ್ಟಿಯಲ್ಲಿ ಸರ್ವಜೀವಿಗಳನ್ನು ಆಹಾರಪಾನಾದಿಗಳಿಂದ ಪಾಲಿಸುವ ಪರಮಾತ್ಮನು ಅವನನ್ನು ನಿರಂತರ ಭಕ್ತಿಯಿಂದ ಧ್ಯಾನಿಸುವವರ್ಯಾರನ್ನೂ ಮರೆಯುವದಿಲ್ಲ. +ಅವನನ್ನೇ ಎಡೆಬಿಡದೆ ಪೂಜನಾದಿ ಉಪಚಾರಗಳಿಂದ ಸಂತೋಷಸಡಿಸಿ, ಅವನನ್ನು ದಯವನ್ನು ಗಳಿಸುವ ಸುಮಾರ್ಗವನ್ನು ಸೂಚಿಸಿದಾಗ ತನ್ನ ಅರ್ಧಾಂಗಿಯ ಸೂಚನೆ ಯನ್ನು ಅನುವರ್ತಿಸಿ, ವೇದವ್ಯಾಸ ಉಪಾಧ್ಯನು ಅಂದಿನಿಂದ ನಿತ್ಯವೂ ದೇವರ ಧ್ಯಾನವನ್ನು ಮಾಡುವುದರಲ್ಲಿ ನಿರತನಾದನು. +ವೇದವ್ಯಾಸ ಉಪಾಧ್ಯನು ಪುರಾಣಹೇಳುವ ವೃತ್ತಿಯನ್ನು ಬಿಟ್ಟು ಹೋದನೆಂಬ ವಾರ್ತೆಯು ಊರಲ್ಲೆಲ್ಲ ಹಬ್ಬಿ, ಅವನ ಉದ್ಯೋಗ ತನಗಾಗ ಬೇಕು, ತನಗಾಗಬೇಕೆಂದು ಹಲವು ಯೋಗ್ಯ ಉಮೇದ್ವಾರರು ಶ್ರೀಪಾದಂಗ ಳವರ ಆಪ್ತರನ್ನು ಆಶ್ರಯಿಸಲಿಕ್ಕೆ ಪ್ರಾರಂಭಿಸಿದರು. +ಕೆಲವರು ಮಧ್ಯಸ್ಥರನ್ನು ಆರಿಸದೆ ತಾವಾಗಿಯೇ ಶ್ರೀಪಾದಂಗಳ ಭೇಟಯನ್ನು ಮಾಡಿ, ತಮ್ಮ ಆಶೆಯನ್ನು ತಿಳಿಸಿದಾಗ, ಈಗ ಅವಸರಮಾಡಬೇಡಿ; +ಚೆನ್ನಾಗಿ ಆಲೋಚನೆ ಮಾಡಿ ತಕ್ಕ ಪುರಾಣಿಕನನ್ನು ಆರಿಸಲಿಕ್ಕೆ ಸಮಯ ಬೇಕಾಗಿದೆ. +ಆ ಉದ್ಯೋಗದ ಮೇಲೆ ಅಪೇಕ್ಷೆಯಿರುವವರ ಮನವಿಗಳನ್ನೆಲ್ಲಾ ನಿಧಾನವಾಗಿ ಮನ ಸ್ಸಿಗೆ ತಕ್ಕೊಂಡು ಉತ್ತರ ಕೊಡುವದಾಗಿಯೂ ನಿಷ್ಕರ್ಷೆಯಾಯಿತು. +ತನ್ಮಧ್ಯ ಪ್ರರಾಣಪಠಣವು ಲೋಪವಾಗದ ಹಾಗೆ ಮಠದಲ್ಲಿ ಇರುವ ಪ್ರಾಜ್ಞ ರೊಳಗೆ ಮುದ್ದಣ್ಣಾಚಾರ್ಯನನ್ನು ತತ್ಕಾಲಕ್ಕೆ ಮಾತ್ರ ನೇಮಿಸೋ ಣಾಯಿತು. +ಮುದ್ದಣ್ಣಾಚಾರ್ಯನು ಸಂಸ್ಕೃತದಲ್ಲಿ ಚೆನ್ನಾಗಿ ಪರಿಶ್ರಮ ಉಳ್ಳವನೇ. +ತಕ್ಕಮಟ್ಟಿಗೆ ಅಹಂಕಾರದಲ್ಲಿಯೂ ಕಡಿಮೆಯವನಲ್ಲ. +ನಡುಪ್ರಾಯದವ ನಾಗಿ ಒಳ್ಳೇ ರೂಪವಂತನೂ ಹೌದು, ಆದರೆ ಸ್ವಲ್ಪ ಉಗ್ಗುಮಾತಿನವನಾಗಿ ಸರ್ವಜನರ ಹಾಸ್ಯಕ್ಕೆ ಗುರಿಯಾಗುವ ದುರದೃಷ್ಟವಂತನು. +ಈ ಅವಗುಣ ಹ್ಯಾಗೂ ಇರಲಿ. +ವಾಗ್ದೇವಿಯ ಕುರಿತು ತಾನು ಮನಸ್ಸಿನಲ್ಲಿ ಮಾಡಿರುವ ಸಂಕಲ್ಪವು ಈಡೇರುವ ಪರಿಯಂತರ ಬೇರೆ ಯಾವ ಕಾರ್ಯಕ್ಕೂ ಮನಸ್ಸು ಹತ್ತಲಿಕ್ಕೆ ಸಮ್ಮತಿಸದಿರುವ ಕಾರಣದಿಂದ ಯತಿಗಳು ಬೇರೆ ವಿಷಯಗಳ ತೀರ್ಮಾನವನ್ನು ಮುಂದರಿಸಿಟ್ಟರು. +ವೆಂಕಟಪತಿ ಆಚಾರ್ಯನು ವಾಗ್ದೇವಿ ಯನ್ನು ಮಠಕ್ಕೆ ಕರತರುವ ದೊಡ್ಡ ಕಾರ್ಯದಲ್ಲಿ ಅಮರಿರುನ ಕಾರಣದಿಂದ ಅವನನ್ನು ಕೇಳದೆ ಯಾರೊಬ್ಬನನ್ನು ಪುರಾಣಿಕನಾಗಿ ಸ್ಥಿರವಾಗಿ ನೇಮಿಸಲಿಕ್ಕೆ ಮನ ಒಡಂಬಡದೆ ಶ್ರೀಪಾದಂಗಳವರು ಮಾಡಿದ ನೇಮಕವು ಪುರಾಣ ಕೇಳಲಿಕ್ಕೆ ಒಟ್ಟು ಕೂಡುವ ಜನಸ್ತೋಮಕ್ಕೆ ವಿನೋದಕಾರಕವಾಯಿತು. +“ಅಮ್ಮಾ!ವೆಂಕಟಪತಿ ಆಚಾರ್ಯರು ಡೊಳ್ಳಾಡಿಸಿಕೊಂಡು ಬರುತ್ತಾರೆ, ಏನೆಲ್ಲ ಚವಡಿಮಾಡಿ ಶ್ರೀಪಾದಂಗಳವರ ಮನಸ್ಸೇ ತಿರುಗಿಸಿಬಿಟ್ಟಿರೋ ಎಂಬ ಸಂಶಯ ವ್ಯರ್ಥವಾಗಿ ತಾಳಿದೆವಲ್ಲ” ಎಂದು. +ವಾಗ್ದೇವಿಯು ಹೇಳುವ ದನ್ನು ಕೇಳ ಭಾಗೀರಧಿಯು ಬಾಗಲಲ್ಲ ನಿಂತು ನೋಡಲು, ವೆಂಕಟಪತಿಯು ಮೆಲ್ಲಮೆಲ್ಲಗೆ ಅಡಿ ಇಡುತ್ತಾ ಬರುವದನ್ನು ಕಂಡು “ಆಚಾರ್ಯರೇ!ದ್ವಾದಶಿ ಜೋರಾಯಿತೇ? +ಅತಿ ಮಂದಗಮನಕ್ಕೆ ಕಾರಣವೇನೋ ತಿಳಿಯದು” ಎಂದಳು. +“ಅಪ್ಪಾ!ಮಷ್ಕಿರಿಮಾಡುತ್ತೀರೇನು? +ಮೊದಲೇ ದ್ವಾದಶಿ, ಆ ಮೇಲೆ ಸ್ವಲ್ಪವಾದರೂ ವಿಶ್ರಾಂತಿತಕ್ಕೊಳ್ಳದೆ ಉಂಡೊಡನೆ ಎದ್ದು ಬಂದು ಬಿಟ್ಟೆ ಬಾಲಾರ್ಕನ ಪ್ರಭೆಯು ತಲೆಯ ಮೇಲೆ ಬೀಳುವದು. +ಎಂಧಾ ಯವ್ವನಸ್ಥ ನಾದರೂ ಸೋಥೋಗನೇ! +ನನ್ನ ಬಿಸಾತೇನದೆ?” ಎನ್ನುತ್ತಾ ಆಚಾರ್ಯನು ಒಳಗೆ ಒಂದನು. +ಆಗಲೇ ವಾಗ್ದೇವಿಯು ಆಚಾರ್ಯನ ಕಾಲುಮುಟ್ಟಿ ನಮಸ್ಕಾರ ಮಾಡಿ ಕೈಕಾಲು ತೊಳಯಲಿಕ್ಕೆ ನೀರು ಕೊಟ್ಬಬಳಕ ಅವನನ್ನು ಒಂದು ಚೌಕದ ದೊಡ್ಡಮಣೆಯ ಮೇಲೆ ಕುಳ್ಳಿರಿಸಿಕೊಂಡು, ಅತೀ ಸಮಾನದಲ್ಲಿ ತಾನೂ ಕೂತುಕೊಂಡು, ಏಲಕ್ಕಿ, ಪಚ್ಚಕರ್ಪೂರ, ಕುಂಕುಮಕೇಸರಿ ಮಿಶ್ರಿ ಮಾಡಿದ ತಿಳೀ ಸಕ್ರೆ ಪಾನಕವನ್ನುಆಚಾರ್ಯಗೆ ಹೊಟ್ಟ ತುಂಬಾ ಕುಡಿಸಿದಳು. +ಎಳೆಬಿಸಿಲಿಗೆ ನಡಕೊಂಡು ಬಂದ ವೆಂಕಟಪತಿಗೆ ವಾಗ್ದೇವಿಯು ಕೊಟ್ಟ ಪಾನಕವು ಅತಿಹಿತವಾಯಿತು. +ತದುಪರಿ ಚಿಗುರು ವೀಳ್ಯದೆಲೆಗಳನ್ನು ನಾರು ತೆಗೆದು ಕರ್ಪೂರಚೂರ್ಣಯುಕ್ತವಾದ ಸುಣ್ಣವನ್ನು ಹಚ್ಚಿ ವಾಗ್ದೇವಿಯು ಆಚಾರ್ಯಗಿಗೆ ಒಂದು ತಾಂಬೂಲ ಚರ್ವಣವನ್ನು ಕೋಮಲವಾದ ತನ್ನ ಕೈಯಿಂದ ಮಾಡಿಸಲು ಸ್ವರ್ಗ ಮರ್ತ್ಯ ಪಾತಾಳವೆಂಬ ಈ ಮೂರು ಲೋಕ ಗಳೂಳಗೆ ಯಾವದರಲ್ಲಿ ತಾನು ವಾಸಿಸಿಕೊಂಡಿರುತ್ತೇನೆಂಬುದು ಆತನಿಗೆ ತಿಳಿಯದೆ ಹೋಯಿತು. +ಸ್ವಲ್ಪ ಸಮಯ ವಿಶ್ರಮಿಸಿಕೊಂಡು ವೆಂಕಟಪತಿಯು ತಾನು ಬಂದ ಮುಖ್ಯ ಉದ್ದೇಶವನ್ನು ಬೇಗನೇ ನೆರವೇರಿಸಬೇಕೆಂಬ ಆತುರವನ್ನು ತೋರಿಸಿಕೊಂಡನು. +ವಾಗ್ದೇವಿಯು ಇನೊಮ್ಮೆ ತಾಂಬೂಲಚರ್ವಣವಾಗ ಬೇಕೆಂದು ಹಟಹಿಡಿದು ಅವನನ್ನು ಸಂತೋಷಪಡಿಸಿದಳು. +ಎರಡಾವರ್ತಿ ತಾಂಬೂಲಾದಿಗಳಿಂದ ತೃಪ್ತಿಹೊಂದಿದ ವೆಂಕಟಪತಿ ಆಚಾರ್ಯನು “ಇನ್ನು ಮಠಕ್ಕೆ ಹೋಗುವಾ ನಡಿ” ಎಂದು ಭಾಗೀರಧಿ ಕೂಡೆ ಹೇಳಲಾಗಿ “ಏನೇ ವಾಗ್ದೇವಿ. +ಆಚಾರ್ಯರು ಏನು ಹೇಳುತ್ತಾರೆ ಕೇಳು” ಎಂದಳು. +“ಆಚಾರ್ಯರು ಹೇಳಿದೆ ಹಾಗೆ ಕುಣಿದರೆ ನಾಳೆ ಎರಡು ಕೈಯಿಂದ ಉಣ್ಣ ಬೇಕಾಗುವುದು; ಆಚಾರ್ಯರಿಗೆ ಸಕ್ರೆಪಾನಕದ ತಂಪಿನಿಂದ ಮರವೆ ಹೆಚ್ಚಾಯಿತೆಂದು” ವಾಗ್ದೇವಿಯು ಉತ್ತರಕೊಟ್ಟಳು. +“ನಾನು ಯಾವುದೂ ಮರೆಯಲಿಲ್ಲ, ಬೇಕಾದಷ್ಟು ಭಂಡಿಗಳನ್ನು ಸಿದ್ಧಪಡಿಸಿರುವೆನು?ಎಂದು ಆಚಾರ್ಯನು ಪ್ರತ್ಯುತ್ತರಕೊಟ್ಟನು. +“ಅಚಾರ್ಯರೇ, ನಿಜವಾಗಿ ನಿಮಗೆ ಮರವೆ ಹೆಚ್ಚಾಗಿದೆ. +ಇಲ್ಲವೇ ಇನ್ನೂ ಠಕ್ಕುಮಾಡುತ್ತೀರಿ; +ನನ್ನ ಮುಖ್ಯವಾದ ಪ್ರಶ್ನೆಯ ಉತ್ತರವು ಮುಂದಾಗಿ ದೊರೆಯದೆ ಮನೆಯಿಂದ ಹೊರಡಲಿಕ್ಕೆ ನಾನು ಹುಚ್ಚಳಲ್ಲ?ಎಂದು ವಾಗ್ದೇವಿಯು ನಗುತ್ತ ಹೇಳಿದಳು. +ಆಚಾರ್ಯನು ಆ ಪ್ರಶ್ನೆ ಯಾವುದೆಂಬದು ತನಗೆ ತಿಳಿಯದೆ ವಿಸ್ಮಯ ಪಡುವವನಂತೆ ಅವಳ ಮುಖವನ್ನೆ ನೋಡಿಕೊಂಡಿರುವಾಗ ವಾಗ್ದೇವಿಯು ಸಿಟ್ಟಿನಿಂದ ಮುಖವನ್ನುಬ್ಬಿಸಿಕೊಂಡು ಥಟ್ಟಿನೆ ಆಚಾರ್ಯನಿಗೆ ಬೆನ್ನುಹಾಕಿ ಒಳಗೆ ನಡೆದುಬಿಟ್ಟಳು. + “ಏನೇ ಸಿಟ್ಟು ನೀನು ಗುತ್ತಿಗೆ ವಹಿಸಿಕೊಂಡಿದ್ದೀಯಾ?ಮರವೆಗೆ ಬಂದೆ ಮಾತು ಯಾವುದು? +ಏನು ತಾನು ಎಂದು ವಿಚಾರಿಸಿಕೊಳ್ಳುವ ಮೊದಲೇ ನಿನಗೆ ರೇಗಿತೇ? +ಈ ನಿನ್ನ ಶುಂಠ ಬುದ್ಧಿ ಯಿಂದ ಮುಂದೆ ಚೆನ್ನಾಗಿ ಬದುಕಿಕೊಂಡಿರಬಹುದು?ಎಂದು ಭಾಗೀರಥಿಯು ಮಗಳಿಗೆ ಗದರಿಸಿದಂತೆ ಮಾತನಾಡಿದಳು. +ಮರವೆಗೆ ಬಂದ ವಿಷಯ ಯಾವುದೆಂಬುದು ಆಚಾರ್ಯನಿಗೂ ಭಾಗೀರ ಧಿಗೂ ಜ್ಞಾಪಕದಲ್ಲಿದ್ದರೂ ಅವರಿಬ್ಬರೂ ಏನೂ ಅರಿಯದವರಂತೆ ತೋರಿಸಿ ಕೊಂಡರು. +“ವ್ಯರ್ಧವಾಗಿ ಸಮಯ ಹಾಳಾಗುತ್ತದೆ, ಶ್ರೀಪಾದಂಗಳವರ ಅವಸರಕ್ಕನಕ ಮಿತವೇ ಇಲ್ಲ. +ನನ್ನ ಮೇಲೆ ಸಿಟ್ಟುತಾಳುವರೋ ಏನೋ! +ಯಾವ ವಿಷಯ ನಿಷ್ಕರ್ಷೆಯಾಗಬೇಕೆಂದು ತಿಳಿಯದೆ ನಾನು ಕಾಡಿನಲ್ಲಿಬಿದ್ದವನಂತಾಗಿದ್ದೇನೆ. +ಅವ್ವಾ!ನಿಮ್ಮ ಮಗಳಿಗೆ ಕೇಳಿ ನನಗೆ ತಿಳಿಸಿಬಿಟ್ಟರೆ ದೊಡ್ಡ ಉಪಕಾರವಾದೀತು” ಎಂದು ವೆಂಕಟಪತಿ ಆಚಾರ್ಯನು ಹೆಡ್ಡನಂತೆ ನುಡಿಯಲೆಸಗಿದನು. +ಭಾಗೀರಥಿಯು ಸುಮ್ಮಗಾದರೂ ಸಿಡುಮೋರೆಮಾಡಿಕೊಂಡು ಒಳಗೆ ಹೋಗಿ ನಗುತ್ತ ಕುಂತಿರುವ ಮಗಳ ಮುಖವನ್ನು ನೋಡಿ ಗದರಿಸಿದಂತೆ ಯುಕ್ತಿನಡಿಸಿ ಸ್ವಲ್ಪ ಹೊತ್ತಿನಮೇಲೆ ಹೊರಗೆ ಬಂದು, “ಆಚಾರ್ಯರೇ!ತುಟಿಗೆ ಮೀರಿದ ಹಲ್ಲಿಗೆ ಏನುಮಾಡಲಿ” ಎಂದು ಬಿಸುಸುಯ್ಯುವುದನ್ನು ಕಂಡು ವೆಂಕಟಪತಿಯು, “ಅಪ್ಪಾ!ಹಾಗೆಲ್ಲಾ ಹೇಳಲಾಗದು, ಇದು ಕಲಿಯುಗ “ಅಬ್‌ಕಾ ಜಮಾನಾ ಖೋಟಾ, ಬಾಪ ಕುಮಾರ ಬೇಟಾ’ ಎಂಬಂತಾಗಿದೆ. +ಜಗಳಾಡಲಿಕ್ಕೆ ಮನಸ್ಸು ಕೊಡಬೇಡಿ; +ಯಾವ ವಿಷಯದಲ್ಲಿ ಈಗ ಹೆಚ್ಚು ಕಡಮೆಯಾಯಿತೆಂಬ ಸೂಚನೆ ಮಾತ್ರ ಗೊತ್ತಾದರೆ ಚಮತ್ಕಾರದಲ್ಲಿ ಕುಂದೆಲ್ಲಾ ಪರಿಹರಿಸುವೆನು” ಎಂದು ವೆಂಕಟಪತಿಯು ಬಹು ಆತುರದಿಂದ ಕೇಳಿಕೊಂಡಂತೆ ಮಾಡಿದನು. +“ಶ್ರೀಪಾದಂಗಳವರು ಪಟ್ಟದ ದೇವರ ಮುಂದೆ ಪ್ರಮಾಣಮಾಡಿ ವಾಗ್ದತ್ತ ಮಾಡಬೇಕೆಂಬ ಹುಚ್ಚು ಅವಳಿಗೆ ಅಂಟಿಕೊಂಡಿದೆ. +ಅದು ಸರ್ವಥಾ ಬಿಡಲಿಲ್ಲವಷ್ಟೇ. +ಇದಕ್ಕೆ ನಿವೃತ್ತಿ ಹೇಳ ನೋಡುವ. +ನನ್ನ ಪೂರ್ವಾರ್ಜಿತದಿಂದ ಇಂಥಾ ಮುಗ್ಧೆಯು ನನ್ನ ಬಸುರಲ್ಲಿ ಬಂದಳಲ್ಲಾ” ಎಂದು ಭಾಗೀರಥಿಯು ತನ್ನ ಕಪಾಲವನ್ನು ಕೈಗಳಿಂದ ಬಡಕೊಂಡಳು. +“ಅವ್ವಾ!ಅವ್ವಾ!ಹಾಗೇನೂ ಮಾಡಬೇಡಿ. +ಆ ಪ್ರಶ್ನೆಯನ್ನು ಮರಿಯಲಿಲ್ಲ; +ಅದರ ಪ್ರಸ್ತಾಪವನ್ನು ಶ್ರೀಪಾದಂಗಳವರ ಕೂಡೆ ಮಾಡಿದ್ದೇನೆ. +ಹೆಚ್ಚು ಸಮಯ ಚರ್ಚೆಮಾಡಿ ಅವರ ಒಪ್ಪಿಗೆಯನ್ನು ಪಡಕೊಂಡಿರುತ್ತೇನೆ. +ಪರಂತು ಅದರ ಪಸ್ತಾಪ ಈ ಹೊತ್ತು ಮಾತ್ರ ಮರೆತು ಹೋಯಿತು. +ಇನ್ನಾದರೂ ವಾಗ್ದೇವಿಗೆ ಸಮಾಧಾನಮಾಡಿ ಬೇಗನೆ ಹೊರಡುವಂತೆ ಮಾಡಿ” ಎಂದು ವೆಂಕಟಪತಿಯು ಭಾಗೀರಥಿಯ ಕೂಡೆ ಹೇಳಿದನು. +ಆಗಲೇ ಭಾಗೀರಥಿಯು ಗಾಳಿಯಂತೆ ತವಕದಿಂದ ಒಳಗೆ ಹೋಗಿ “ಜಗಳಗಂಟೀ! ಬೇಗಬಾ. +ನಿನ್ನ ಪ್ರಶ್ನೆಯನ್ನು ಆಚಾರ್ಯರು ಮರಿಯಲಿಲ್ಲ” ಎಂಬೋಣ, ವಾಗ್ದೇವಿಯು ನೆಗಾಡುತ್ತಾ ಹೊರಗೆ ಬಂದಳು. + ಆಚಾರ್ಯನ ಮೇಲೆ ಸಿಟ್ಟುತಾಳಿದ್ದಕ್ಕಾಗಿ ಪಶ್ಚಾತ್ತಾಪಪಟ್ಟಿರುವೆನೆಂದು ಕ್ಷಮೆಯನ್ನು ಬೇಡಿಕೊಂಡಳು. +“ವಾಗ್ದೇವಿ!ಇನ್ನು ಮುಂದೆ ನೀನೇ ನನ್ನ ಒಡತಿಯಲ್ಲವೇ! +ನಿನ್ನ ಚಿತ್ತದ ಮೇಲೆ ನನ್ನ ಅನ್ನವೇ ಹೊಂದಿಕೊಂಡಿರುವಕಾರಣ ನೀನು ನನ್ನಲ್ಲಿ ಕ್ಷಮೆ ಕೇಳುವುದಕ್ಕಿಂತಲೂ ನಾನು ನಿನ್ನ ಮುನಿಸಿನಿಂದ ವಿಮುಕ್ತನಾಗುವುದೇ ನನ್ನ ಮುಂಜಾಗ್ರತೆಯಾಗಿರಬೇಕು. +ಬಡವರ ಮೇಲೆ ಪರಿಪೂರ್ಣವಾಗಿ ಅನುಗ್ರಹವನ್ನಿಟ್ಟು ಅವರ ಕೃತಜ್ಞತೆಗೆ ಪಾತ್ರಳಾದರೆ ನಿನಗೆ ದೇವರು ನಿರಂತರವಾಗಿ ರಕ್ಷಿಸುವನು. +ಇನ್ನು ತಾಮಸ ಮಾಡುವದು ಯುಕ್ತವಲ್ಲ. +ಸರ್ವರೂ ಬಂಡಿಯನ್ನೇರುವುದಕ್ಕೆ ಸಿದ್ಧರಾಗಬೇಕು: +ಹೀಗೆಂದು ವೆಂಕಟಪತಿ ಆಚಾರ್ಯನು ಹೇಳಿದೊಡನೆ ಸಣ್ಣ ಬುದ್ಧಿಯಿಂದ ತಾನು ಮಾಡಿದ ಎಷ್ಟು ಅಪರಾಧಗಳಿದ್ದರೂ ಮರೆತು ಬಿಡಬೇಕಾಗಿ ವಾಗ್ದೇವಿಯು ಆಚಾರ್ಯನ ಎರಡುಕಾಲುಗಳನ್ನು ಬಿಗಿದಪ್ಪಿ ತನ್ನ ಕಡೆಗಣ್ಣ ನೋಟದಿಂದ ಅವನ ಹೃದಯವನ್ನು ಮೃದುಮಾಡಿದಳು. +ಮಠಾಭಿಮುಖ ಪ್ರಯಾಣಕ್ಕೆ ಪ್ರಾರಂಭವಾಯಿತು. +ಮೊದಲು ಸಾಮಾನೆಲ್ಲಾ ಬಂಡಿಗಳ ಮೇಲೆ ಇಡಲ್ಪಟ್ಟಿತು. +ತರುವಾಯ ಒಳ್ಳೇ ಎತ್ತು ಗಳನ್ನು ಜೋಡಿಸಿರುವ ಜಟ್ಕಾಬಂಡಿಯಲ್ಲಿ ಭಾಗೀರಥಿ, ವಾಗ್ದೇವಿ ಗಂಡಸರ ಸಮೇತ ಕೂತುಕೊಂಡರು. +ವೆಂಕಟಪತಿ ಆಚಾರ್ಯನು ಅದೇ ಬಂಡಿಯಲ್ಲಿ ಮುಹೂರ್ತವಾಗಬೇಕೆಂದು ಅಪೇಕ್ಷಿಸಿದರೂ ಅವನು ಒಪ್ಪದೆ ಪಾದಚಾರಿ ಯಾಗಿ ಸಾಮಾನು ಬಂಡಿಗಳ ಸಂಗಡ ಮುಂದಿನಿಂದ ಹೋದನು. +ವಾಗ್ದೇವಿಯ ಮನೆಯಿಂದ ಚಂಚಲನೇತ್ರರ ಮಠಕ್ಕೆ ಹೆಚ್ಚು ದೂರ ವಿರಲಿಲ್ಲ. +ಹೆಚ್ಚು ಕಡಿಮೆ ಒಂದುವರೆ ಹರದಾರಿಯೆನ್ನಬಹುದು. +ಚಂಚಲ ನೇತ್ರರು ವಾಗ್ದೇವಿಯ ಬರುವಿಕೆಯನ್ನು ಕಾಯುತ್ತಾ, ಒಮ್ಮೆ ಆ ಗವಾಕ್ಷದಿಂದ ಒಮ್ಮೆ ಈ ಗವಾಕ್ಷದಿಂದ ಬೀದಿಕಡೆಗೆ ನೋಡುತ್ತಾ, ಬೀದಿಯಲ್ಲಿ ಯಾರನ್ನೂ ಕಾಣದೆ ಖಿನ್ನರಾಗಿ ತಮ್ಮ ಕೋಣೆಗೆ ತಿರುಗಿ ಒಂದು ರವಷ್ಟು ತಡೆದು ಪುನಃ ಹಾಗೆಯೇ ಗವಾಕ್ಷಗಳ ಬಳಿಗೆ ಹೋಗಿ ಸಮಯವನ್ನು ಕಳೆದು ಸಿಟ್ಟಿನಿಂದ. +“ವೆಂಕಟಪತಿಗೆ ದಾರಿಯಲ್ಲಿ ಹುಲಿ ಹಿಡಿಯಲಿಲ್ಲವಷ್ಟೆ ಎಂಬ ಅನುಮಾನದ ಮಾತನ್ನು ತಮ್ಮಷ್ಟಕ್ಕೆ ಅಂದುಕೊಂಡರು. +ಈ ರೀತಿಯಲ್ಲಿ ಚಂಚಲನೇತ್ರರು ಅವಸರಪಟ್ಟು ಸಿಟ್ಟು ತಡೆಯಲಾರದೆ ಎದುರಿಗೆ ಸಿಕ್ಕಿದ ಸೇವಕರಿಗೆಲ್ಲಾ ಒಂದಲ್ಲ ಒಂದು ನೆವನ ಹುಡುಕಿ ಯದ್ವಾತದ್ವ ಬಯ್ಯುತ್ತಾ ಕೋಲಿನಿಂದಲೂ ಕೈಯಿಂದಲೂ ಹೊಡಿಯುತ್ತಾ ಕಾಲಿನಿಂದ ಒದೆಯುತ್ತ ಪಿತ್ತೋವದ್ರವದಿಂದ ಬುದ್ಧಿ ಭ್ರಂಶವಾದವರಂತೆ ಮಾಡುವ ಚರ್ಯಗಳು ಕೆಲವರಿಗೆ ವಿನೋದ ಕರವಾದವು ಬೇರೆ ಕೆಲವರಿಗೆ ನೋವು ಉಂಟುಮಾಡಿದುವು; +ಒಟ್ಟಿನ ಮೇಲೆ ಈ ಸನ್ಯಾಸಿಗೆ ಒಂದು ಕೆಟ್ಟ ಕಾಲವು ಸಮೀಪಿಸಿದ ಹಂಗೆ ತೋರುವದಾಗಿ ಕೆಲವು ವೃದ್ಧ ನೌಕರರು ಪ್ರಕಟವಾಗಿ ಹೇಳಲಾರಂಭಿಸಿದರು. +ಕೆಪ್ಟಮಾಣಿಯು ಏನೂ ತಿಳಿಯದವನ ಹಾಗೆ ಅತ್ತಿತ್ತ ನೋಡುತ ಫಕ್ಕನೆ ಒಂದು ಗವಾಕ್ಷದಿಂದ ನೋಡಿ ಬೀದಿಯಲ್ಲಿ ಏನೋ ವಿಶೇಷವಿದೆ ಎಂಬ ತಿಳುವಳಿಕೆ ಹುಟ್ಟುವ ರೀತಿಯಲ್ಲಿ ಹಾಸ್ಯ ವದನವನ್ನು ಮಾಡಿದನು ಚಂಚಲನೇತ್ರರು ಅದೇ ಗವಾಕ್ಷದ ಎಡೆಗಳಿಂದ ಈಕ್ಷಿಸಿದರೂ ಸಾಮಾನು ಗಳು ತುಂಬಿದ ಬಂಡಿಗಳ ಸಂಗಡ ವೆಂಕಟಪತಿ ಆಚಾರ್ಯನು ಬರುವದು ತೋರಿಬಂತು. +ಸ್ವಲ್ಪ ಹಿಂದೆ ಸಾರಟುಬಂಡಿಯಲ್ಲಿ ಪೌರ್ಣಮಿ ಚಂದ್ರನಂತೆ ಮುಖವುಳ, ಹಸನ್ಮುಖಿ ವಾಗ್ದೇವಿಯು ತನ್ನ ಹೆತ್ತವರ ಮತ್ತು ಗಂಡನ ಒಟ್ಟಿನಲ್ಲಿ ಕೂತುಕೊಂಡಿರುವುದು ಯತಿಗಳ ಕಣ್ಣಿಗೆ ಬಿತ್ತು. +ಆಗಲೆ ಅವರಿಗೆ ಉಂಟಾದ ಹರುಷವು ಇನ್ನೆಷ್ಟೆಂದು ಹೇಳಬಹುದು! +“ವಾಗ್ದೇವಿ ಬಂದಳು ದಗಡಿ” ಎಂದು ಘಟ್ಟಿಯಾಗಿ ಉಚ್ಚರಿಸುತ್ತ ಉಕ್ತಿ ಬರುವ ಸಂತೋಷವನ್ನು ತಡಕೊಳ್ಳಲಾರದೆ ಥೊಪ್ಪನೆ ನೆಲದ ಮೇಲೆ ಬಿದ್ದು ಹೊರಳಿದರು. +ಕೆಪ್ಟಮಾಣಿಯು ತನ್ನ ಧನಿಗಳ ಹುಚ್ಚುತನವನ್ನು ಕಂಡು ತುಸು ನಕ್ಕನು. +ಅದು ಚಂಚಲನೇತ್ರರ ದೃಷ್ಟಿಗೆಬಿತ್ತು. +ಅವರು ಈಗಲೇ ಸಿಟ್ಟಿನಿಂದ ಎದ್ದು ಭಡಿಯಿಂದ “ಛಟಛಟ’ ಬೆನ್ನಿನಮೇಲೆ ಅಸಂಖ್ಯಾತ ಏಟುಗಳನ್ನು ಕೊಟ್ಟಭರಕ್ಕೆ ಬಡಹುಡುಗನು ಮೂರ್ಛೆಹೊಂದಿದನು. +ಸಮೀಪವಿದ್ದ ಬೇರೆ ಸೇವಕನೊಬ್ಬನು ಬೇಗನೇ ಅವನ ಕಣ್ಣುಗಳಿಗೂ ಮುಖಕ್ಕೂ ನೀರನ್ನು ಚಿಮುಕಿಸಿ, ಅವನನ್ನು ಅಲ್ಲಿಂದ ಎತ್ತಿ ಇನ್ನೊಂದು ಠಾವಿನಲ್ಲಿ ಕುಳ್ಳಿರಿಸಿ ಬಹು ಕನಿಕರದಿಂದ ಅವನ ಜಾಗ್ರತೆ ತೆಕ್ಕೊಳ್ಳಲು ಅವನು ಚೇತರಿಸಿ ತನ ಗಾದಶಿಕ್ಷೆಯ ಜ್ಞಾಪಕದಿಂದ ಕಣ್ಣೀರಿಡುತ್ತ ಒಂದು ಮೂಲೆಯಲ್ಲಿ ಕೂತನು. +ಮಠದಲ್ಲಿರುವ ಹಲವರು ಹೆಚ್ಚು ಪಶ್ಚಾತ್ತಾಪಪಟ್ಟು ಯತಿಗಳ ಚಿತ್ತವೇ ಇತ್ತಲಾಗೆ ಭೇದವಾದ ಕಾರಣವೇನೆಂದು ತಿಳಿಯದೆ ಬೆರಗಾಗಿ ಇನ್ನು ಮುಂದೆ ತಮ್ಮ ಸ್ಥಿತಿ ಹ್ಯಾಗೆಲ್ಲಾ ಆಗುವದೋ ಎಂಬ ಅನುಮಾನದಲ್ಲಿ ಬಿದ್ದರು. +ಚಂಚಲನೇತ್ರರ ಮನಸ್ಸಿಗೆ ಅದ್ಯಾವದೂ ಹೋಗದು. +ಅವರ ಚಿತ್ತವು ದೃಢವಾಗಿ ವಾಗ್ದೇವಿಯ ಮೇಲೆ ಬಿದ್ದುಹೋದ ದೆಸೆಯಿಂದ ಅದೊಂದು ವಿಷಯ ತೀರುವ ಮೊದಲು ಇನ್ನೊಂದು ಎಷ್ಟು ದೊಡ್ಡ ಪ್ರಸಕ್ತಿ ಯಾದರೂ ಅವರಿಗೆ ನಾಟದು. +ಸಾಮಾನು ತುಂಬಿದ ಬಂಡಿಗಳ ಎತ್ತುಗಳು ಮೆಲ್ಲಮೆಲ್ಲನೆ ಬರುವುದು ಸಹಜ. +ವಾಗ್ದೇವಿಯು ಕೂತುಕೊಂಡಿರುವ ಸಾರಟಿನ ಎತ್ತುಗಳು ಕಾಣಲಿಕ್ಕೆ ಪುಷ್ಟಿ ಯಾಗಿದ್ದರೂ ಸಾರಟು ಮೆಲ್ಲಗೆ ಎಳೆಯುವ ದೆಸೆಯಿಂದ ಚಂಚಲ ನೇತ್ರರ ಅವಸರವು ಹದಮೀರಿತು. +“ಈ ಕತ್ತೆ ವೆಂಕಟಪತಿಯು ಒಂದೆರಡು ಕಾಸಿನ ಆಸೆಯಿಂದ ಒಂದು ಹಳೇ ಸಾರಟು ಮತ್ತು ಕೆಲಸಕ್ಕೂ ಬೇಡದ ಎತ್ತುಗಳ ಜೋಡಿಯನ್ನು ಎಲ್ಲಿಂದ ಹೊರಕಿಸಿಕೊಂಡನೋ ಕಾಣೆ; +ತಾನಾದರೂ ಒಂದು ಬಂಡಿಯನ್ನೇರಿದನೇ!ದ್ವಾದಶಿಯ ನೆವದಿಂದ ಭೀಮನಂತಿ ಅನ್ನದ ಮುದ್ದೆ ಮುದ್ದೆಗಳನ್ನು ನುಂಗಿಬಿಟ್ಟು ಹೊಟ್ಟೆಯನ್ನು ಹರಿವಿಯಂತೆ ಉಬ್ಬಿಸಿಕೊಂಡು ಬಂಗಿ ಮೆದ್ದೆವನಂತೆ ಬಹುಮೆಲ್ಲಗೆ ನಡಕೊಂಡು ಬರುತ್ತಾನಲ್ಲ. +ಮುಂದಿನಿಂದ ಬರುವವನ ಚುರುಕುತನವೇ ಹೀಗಾದ ಮೇಲೆ ಹಿಂದಿನಿಂದ ಬರುವವರ ಸ್ಥಿತಿಯನ್ನು ಕುರಿತು ಮಾತಾಡಿ ಏನು ಪ್ರಯೋಜನ? +ಇನ್ನೊಂದು ಸಾರಟಾದರೂ ಮಾಡಿ ವಾಗ್ದೇವಿ ಒಬ್ಬಳನ್ನೇ ಕೂರಿಸಿತರಬಹು ದಿತ್ತು ಹಾಗೂ ಮಾಡಡೆ ಅವಳ ಮನೆಯಲ್ಲಿದ್ದ ನಾಯಿ ಬೆಕ್ಕುಗಳನ್ನು ಒಂದೇ ಸಾರಟಿನಲ್ಲಿ ತುರುಬಿಬಿಟ್ಟವನೇ ಇಂಥ ಬುದ್ಧಿಹೀನನನ್ನು ಮಠದಲ್ಲಿ ಪಾರುಪತ್ಯಕ್ಕೆ ನೇಮಿಸಿದ ನನ್ನ ಹಲ್ಲುಗಳನ್ನು ಮೊದಲು ಕಳಚಿ ಬಿಡುವವ ರ್ಯಾರಿಲ್ಲವಷ್ಟೆ” ಇಂತಹ ನುಡಿಗಳಿಂದ ಹಲವು ಪರಿಯಲ್ಲಿ ಚಂಚಲನೇತ್ರರು ಅವಸರದಿಂದ ಸಿಟ್ಟನ್ನು ಸಹಿಸಕೂಡದೆ ಒಮ್ಮೆ ಒಳಗೆ ಒಮ್ಮೆ ಹೊರಗೆ ಹೋಗುತ್ತ ಬರುತ್ತ ಇರುವುದನ್ನು ಕೆಪ್ಪಮಾಣಿಯು ನೋಡಿ ದಂಡ ಸನ್ಯಾಸಿಯ ಪಕ್ಕೆಯ ಎಲುಬುಗಳನ್ನು ಮುರಿದು ಬಿಡಲೋ ಎಂಬಂತೆ ಕ್ರೋಧವನ್ನು ತಾಳಿಕೊಂಡರೂ ಮುಯ್ಯಿಗೆ ಮುಯ್ಯಿ ತೀರಿಸುವ ಕಾಲವು ಮುಂದೆ ದೊರಕದಿರದೆಂದು ಎಣಿಸಿ ಪೆಟ್ಟಿನ ವೇದನೆಯನ್ನೂ ಆ ಸಂಬಂಧ ಉಂಟಾದ ನಾಚಿಕೆಯನ್ನೂ ಸೈರಿಸಲಾರದೆ ವ್ಯಸನಸಡುತ್ತ ಒಂದು ಮೂಲೆಗೆ ಸೇರಿಕೊಂಡನು. +ಹಾಗೂ ಹೀಗೂ ಸಾಮಾನಿನ ಬಂಡಿಗಳು ಮಠದ ಮುಂಬಾಗಿಲಿನ ಎದುರು ನಿಂತವು. +ವೆಂಕಟಪತಿ ಆಚಾರ್ಯನು ಅವುಗಳಲ್ಲಿ ಇದ್ದ ಸಾಮಾನು ಗಳನ್ನೆಲ್ಲ ಜೋಕೆಯಿಂದ ಕೆಳಗೆ ಇಳಿಸಿ ನೇಮಿಸಿದ ಕೋಣೆಯಲ್ಲಿ ಇಡುವಂತೆ ಆಯಾ ಸೇವಕರಿಗೆ ಅಜ್ಞಾಪಿಸಿ ಸಾರಟುಬಂಡಿಯಲ್ಲಿ ಕುಂತಿರುವ ವಾಗ್ದೇವಿ ಯನ್ನೂ ಅವಳ ಬಳಗವನ್ನೂ ಅವರಿಗೋಸ್ಟರ ಆರಿಸಿರುವ ಕೋಣೆಗಳಲ್ಲಿ ಪ್ರವೇಶ ಮಾಡಿಸಿಬಿಟ್ಟು ಬಿಸಿಲಲ್ಲಿ ಒರಲಿಬಂದವರಾದ ಕಾರಣ ತೃಷನಿವಾರಣಾರ್ಥವಾಗಿ ಉತ್ಕೃಷ್ಟವಾದ ಪಾನಕವನ್ನೂ ಸಕ್ರೆ ಪಂಚಕಜ್ಜಾಯ ಲಾಡು ಚಿರೋಟಿ ಮೊದಲಾದ ತಿಂಡಿಗಳನ್ನೂ ಒದಗಿಸಿಕೊಟ್ಟು ತಾನೂ ಅವರ ಸಂಗಡಲೇ ಫಲಾಹಾರಮಾಡಿದ ಬಳಿಕ ಚಲೋ ವೀಳ್ಯದೆಲೆ, ಗೋಟಡಿಕೆ, ಖೊಬರಿ ಚೂರು, ಮುತ್ತಿನಚಿಪ್ಪುಗಳಿಂದ ಮಾಡಿದ ಸುಣ್ಣಸಹಿತ ಸರ್ವೋಪಚಾರ ಗಳಿಂದ ಮುಂದಿನ ಒಡತಿಯನ್ನೂ ಅವಳ ಬಳಗವನ್ನೂ ಸಂತೋಷಪಡಿಸಿ ಈ ಶುಭವಾರ್ತೆಯನ್ನು ಯಜಮಾನರಿಗೆ ತಿಳಿಸುವುದಕ್ಕೋಸ್ಕರ ಚಂಚಲನೇತ್ರರ ಸನ್ನಿಧಿಯಲ್ಲಿ ಪ್ರಣಾಮಮಾಡಿ ಬಾಯಿಗೆ ಕೈಯಿಟ್ಟು ನಿಂತುಕೊಂಡನು. +“ವೆಂಕಟಪತಿ!ನಿನ್ನಷ್ಟು ಆಪ್ತ ನಮಗಿನ್ಯಾರು ದೊರಕುವನು! +ನೀನು ಲೇಶವಾದರೂ ಸಾವಕಾಶವಿಲ್ಲದೆ ಮಾಡಿದ ಉಪಕಾರವನ್ನು ನಾವು ಸರ್ವಥಾ ಮರೆಯಲಾರವು. +ಇನ್ನು ಮುಂದೆ ಸಕಲ ವಿಷಯಗಳಲ್ಲಿಯೂ ನೀನೇ ನಮ್ಮ ಮಠದ ವೃದ್ಧಿಯ ಮೇಲೆ ದೃಷ್ಟಿಇಡಬೇಕಪ್ಪಾ” ಎಂಬ ಉಪಚಾರದ ಮಾತು ಗಳಿಂದ ಚಂಚಲನೇತ್ರರು ಪಾರುಪತ್ಯಗಾರನ ಮನಸ್ಸಿಗೆ ಹರುಷವನ್ನುಂಟು ಮಾಡಿದರು. +ವೆಂಕಟಪತಿ–“ಪರಾಕೆ!ನಾನು ಸರ್ವದಾ ಶ್ರೀಪಾದಂಗಳವರ ಉಪ್ಪನ್ನು ತಿಂದುಕೊಂಡಿರುವ ಸೇವಾನುಸೇವಕನೇ, ಇಷ್ಟು ದಿವಸಗಳವರಿಗೂ ಶ್ರೀಪಾದಂಗಳವರ ಕೃಪೆಯು ನನ್ನಮೇಲೆ ಪೂರ್ಣವಾಗಿ ಇದ್ದುದರಿಂದ ನನಗೆ ಯಾವ ತರದ ಹೆದರಿಕೆಯೂ ಇರಲಿಲ್ಲ. +ಮುಂದಿನಗತಿ ಹ್ಯಾಗಾಗುವದೋ ನೋಡಲಿಕ್ಕುಂಟು. +ಚಂಚಲನೇ-“ವೆಂಕಟಪತಿ!ಹಾಗ್ಯಾಕೆ ಹೇಳುತ್ತಿ? +ನಿನ್ನ ಮನಸ್ಸಿನಲ್ಲಿ ವಿಕಲ್ಪ ಯಾಕೆ ಹುಟ್ಟಿತು?” +ವೆಂಕಟಪತಿ “ನನ್ನ ಮನಸ್ಸು ಸ್ವಚ್ಛವಾಗಿಯೇ ಉಂಟು. +ಇದುವರೆಗೆ ಶ್ರೀಪಾದಂಗಳವರ ಪಾರುಪತ್ಯಗಾರನಾಗಿ ಸಂಸ್ಥಾನದ ವಿಶಿಷ್ಟ ಕಾರ್ಯಗಳಲ್ಲಿ ಶಕ್ತಿಮೀರಿ ಕಷ್ಟಸಟ್ಟು ಸನ್ನಿಧಿಯ ಮಮತೆಯನ್ನು ಪೂರ್ಣವಾಗಿ ಗಳಸಿಕೊಂಡೆನು. +ಅಂಧ ಮಮತೆಗೆ ಇನ್ನು ಮುಂದೆ ಒಬ್ಬ ಸ್ತ್ರೀಯು ಭಾಗಿಯಾಗುವ ಪ್ರಯುಕ್ತ ನಾನು ಒಡೆಯ ಒಡತಿ ಇವರಿಬ್ಬರ ಮನಸ್ಸಿಗನಸರಿಸಿ ನಡೆಯಬೇಕಾಗುವುದು. +ಇಬ್ಬರು ಧನಿಗಳ ಸೇವೆಯು ಕಷ್ಟಕರದ್ದು ಮತ್ತು ಗಂಡಾಂತರಕ್ಕೆ ಆಸ್ಪದ ಕೊಡುವ ಹಾಗಿನದು’`ಚಂಚಲನೇ–“ನಿನ್ನ ಮಾತಿನ ತಾತ್ಚರ್ಯ ಈಗ ನಮ್ಮ ಮನಸ್ಸಿಗೆ ಹೊಕ್ಕಿತು. +ಇನ್ನು ಮುಂದಿ ನಮ್ಮ ಪ್ರೀತಿಯು ಪೂರ್ಣವಾಗಿ ವಾಗ್ದೇವಿಯ ಮೇಲೆ ಸ್ಥಿರಪಟ್ಟು ಅವಳ ಮನಸ್ಸಿನಂತೆ ನಾವು ನಡಿಯುವ ಸಂಭವವಿರುವದ ರಿಂದ ನಿನ್ನ ಗೊಡವೆ ನಮಗಿರಲಾರದೆಂಬ ಹಾಗೆ ನಿನಗೆ ಸಂಶಯಹುಟ್ಟಿ ತಲ್ಲವೇ? +ಆಹಾ ನೀನೆಂಥ ಬುದ್ಧಿ ಹೀನ! +ಕಾಲಿನ ಪಾದರಕ್ಷೆಯನ್ನು ಯಾವ ನೊಬ್ಬನು ತಲೆಯ ಮೇಲೆ ಇಟ್ಟುಕೊಳ್ಳುವನೇ? +ಸ್ತ್ರೀಯು ಎಷ್ಟು ಮೋಹಿತ ಳಾದರೂ ಅವಳ ಮೇಲೆ ಒಬ್ಬನಿಗಿರುವ ಪ್ರೀತಿಗೂ ಸಕಲ ಕಾರ್ಯಗಳನ್ನು ವಿಶ್ವಾಸದಿಂದ ನಡಿಸುವ ಕಾರ್ಯಸ್ಥನ ಮೇಲೆ ಇರುವ ನಂಬಿಕೆಗೂ ಏನೂ ಭೇದವಿಲ್ಲವೇ? +ಇಷ್ಟು ನೀನು ತಿಳಿಯದೆ ಹೋದೆಯಲ್ಲ!” +ವೆಂಕಟಪತಿ–“ ಅಪ್ಪಣೆಯಾಗುವುದು ನ್ಯಾಯವೇ ಸನ್ನಿಧಿಯ ಪ್ರೀತಿಯು ನನ್ನ ಮೇಲೆ ನಿರಂತರನಾಗಿರುವುದೆಂದು ಕೋರುತ್ತೇನೆ. +ಅದು ಹಾಗಿರಲಿ, ಈಗ ಮಠಪ್ರವೇಶವಾದ ವಾಗ್ದೇವಿಗೂ ಅವಳ ಗಂಡಗೂ ತಂದೆ ತಾಯಿಗಳಿಗೂ ಸನ್ನಿಧಿಯ ಬಳಿಗೆ ಕರಿಸಿಕೊಂಡು ಅವರಿಗೆ ಮಠದಲ್ಲಿ ವಾಸವಾಗಿರುವದಕ್ಕೆ ಕಂಠೋಕ್ತವಾದ ಒಂದು ಅಪ್ಪಣೆ ಫಲಮಂತ್ರಾಕ್ಷತೆ ಸಮೇತವಾಗಲಿ.” +ಪಾರುಪತ್ಯಗಾರನ ಈ ಮಾತು ಚಂಚಲನೇತ್ರರಿಗೆ ಸರಿಯಾಗಿ ತೋಚಿತು. +ಹಾಗಾಗಲೆಂದು ಅವರ ಅಜ್ಞೆಯಾಗೋಣ, ವೆಂಕಟಪತಿ ಆಚಾರ್ಯನು ತಮ್ಮಣ್ಣಭಟ್ಟಗೂ ಆಚಾರ್ಯಗೂ ಭಾಗೀರಧಿಗೂ ವಾಗ್ದೇವಿಗೂ ಕರಕೊಂಡು ಶ್ರೀಪಾದಂಗಳವರ ಸಿಂಹಾಸನದ ಕೋಣೆಗೆ ಬಂದನು. +ಅವರೆಲ್ಲರೂ ಶ್ರೀಪಾದಂಗಳವರಿಗೆ ದಂಡ ಪ್ರಣಾಮಮಾಡಿ ನಿಂತು ಕೊಂಡಾಗ ಕೂರಬೇಕೆಂದಾಜ್ಞೆಯಾಯಿತು. +ಇಷ್ಟುದಿನ ಸರಿಯಾದ ಒಂದು ಮನೆಯಿಲ್ಲದೆ, ಹೆಚ್ಚು ಪ್ರಯಾಸ ಪಟ್ಟೆವು. +ಶ್ರೀಪಾದಂಗಳವರ ಕೃಪೆಯಿಂದ ತಮಗೆ ಮಠದಲ್ಲಿ ವಾಸ್ತವ್ಯಕ್ಕೆ ಸ್ಥಳಸಿಕ್ಕಿದ್ದು ತಮ್ಮ ಪೂರ್ವಪುಣ್ಯ; +ಸನ್ನಿಧಿಯ ಅಜ್ಞಾಧಾರಕರಾಗಿ ವಾಸ ಮಾಡಿಕೊಂಡಿರಲಿಕ್ಕೆ ಅಪ್ಬಣೆಯಾಗಲೆಂದು ತಮ್ಮಣ್ಣ ಭಟ್ಟನು ಕೈಮುಗಿದು ಹೇಳಿಕೊಂಡನು. +ತಮ್ಮಣ್ಣ ಭಟ್ಟನ ಅಪೇಕ್ಷೆಯಂತೆ ಅವನು ಸಕುಟುಂಬ ನಾಗಿಮಠದಲ್ಲಿ ವಾಸ್ತವಿಸಿಕೊಂಡಿರುವುದು ತನ್ನ ಮನಸ್ಸಿಗೆ ಅತಿಹಿತಕರವಾಗಿ ರುವದೆಂದು ಸನ್ಯಾಸಿಗಳ ಪ್ರತ್ಯುತ್ತರವಾಯಿತು. +ತಾನೂ ತನ್ನ ಅಳಿಯ ಆಬಾ ಚಾರ್ಯನೂ ನಿರುದ್ಯೋಗಿಗಳಾಗಿ ಹೊಟ್ಟೆಹೊರುವುದೇ ಅತಿ ಪ್ರಯಾಸವಾದ ದೆಸೆಯಿಂದ ಸನ್ನಿಧಿಯ ಮರೆಹೊಕ್ಕ ಮಾತ್ರದಿಂದ ದಾರಿದ್ರ್ಯವು ಇನ್ನು ಮುಂದೆ ತಮ್ಮನ್ನಗಲಿತೆಂಬ ಕೋರಿಕೆ ಹುಟ್ಟಿಯದೆ ಎಂದು ತಮ್ಮಣ್ಣ ಭಟ್ಟನು ಅರಿಕೆ ಮಾಡಿಕೊಂಡನು. +ಮುಗುಳುನಗೆಯಿಂದ ಶ್ರೀಪಾದಂಗಳು ತಮ್ಮ ಆಶ್ರಿತರ್ಯಾರಿಗೂ ಬಡತನ ಸೋಕದೆಂದರು.” ಹಲವು ಮಾತುಗಳಾಡ ಬೇಕ್ಯಾಕೆ? +ಚರಣಕಿಂಕರರಾದ ನಮ್ಮೆಲ್ಲರನ್ನು ಕರುಣದಿಂದ ಪಾಲಿಸಬೇಕು?ಎಂದು ಮಾವ ಅಳಿಯಂದಿರು ತಮ್ಮ ಮಡದಿಯರ ಸಮೇತ ಸಾಷ್ಟಾಂಗ ವೆರಗಿದರು. +ಸಂಸ್ಥಾನದ ಮೇಲೆ ವಿಶ್ವಾಸವಿಟ್ಟು ನಡಕೊಂಡರೆ ದೇವರು ಬಿಟ್ಟುಹಾಕಲಿಕ್ಕಿಲ್ಲವಾಗಿ ಚಂಚಲನೇತ್ರರು ಅಭಯ ವಚನವನ್ನು ದಯ ಪಾಲಿಸಿ, ಫಲಮಂತ್ರಾಕ್ಷತೆಯನ್ನು ಕೊಡಲಿಕ್ಕೆ ಹವಣಿಸಿದರು. +ಮಂತ್ರಾಕ್ಷತೆ ಕೊಡುವ ವೇಳೆಯಲ್ಲಿಯೇ ತಮ್ಮಣ್ಣಭಟ್ಟಗೆ ಜರಿಕಂಬಿಯ ಪಟ್ಟೆಮಡಿ, ಆಬಾಚಾರ್ಯರಿಗೆ ಉತ್ತಮವಾದ ಕಾಶ್ಮೀರ ಶಾಲುಜೋಡಿ, ಭಾಗೀರಥಿಗೆ ಉತ್ಕೃಷ್ಟವಾದ ಕಲಾಬತ್ತಿನ ಶಾಲೆ ಉಡುಗೊರೆ ಆಯಿತು. +ಮದದಾನೆಯಂತೆ ಮೆಲ್ಲಮೆಲ್ಲನೆ ಅಡಿ ಇಡುತ್ತಾ ಮುಂದೆಬಂದು, ಅಧೋಮುಖಿಯಾಗಿ ನಿಂತುಕೊಂಡಿರುವ ವಾಗ್ದೇವಿಯನ್ನು ಚಂಚಲ ನೇತ್ರರು ಆಪಾದಮಸ್ತಕ ಪರಿಯಂತ ಸಂಪೂರ್ಣಕಟಾಕ್ಷದಿಂದ ನೋಡಿ ಬಿಟ್ಟು, ಉಕ್ಕಿಬರುವ ಪ್ರಮಾದದಿಂದ ಫಲಮಂತ್ರಾಕ್ಷತೆಯನ್ನು ಅನುಗ್ರಹಿಸಿ ತಾರಾಮಂಡಲದ ಚಿತ್ರವನ್ನು ಜರಿಯ ನೂಲಿನಿಂದ ಬಹು ಸೂಕ್ಷ್ಮವಾಗಿ ಬಿಡಿಸಿರುವ ಸೆರಗುಳ್ಳ ಆಕಾಶವರ್ಣದ ಬುಗುಡಿ ಅಂಚಿನ ಸೀರೆಯನ್ನು ದಾಳಿಂಬ ಬಣ್ಣದ ಕಂಚುಕಿ ಸಹಿತ ಉಚಿತವಾಗಿ ಕೊಟ್ಟರು. +“ರಾತ್ರೆ ಪೂಜೆ ಯು ಬೇಗವಾಗುವದು; +ಎಲ್ಲರೂ ಬಂದು ಪ್ರಸಾದ ಪಡಕೊಂಡು ಹೋಗಬೇಕು” ಎಂದು ಶ್ರೀಪಾದಂಗಳವರ ಅನುಜ್ಞೆಯಾಯಿತು. +ಹಾಗೆಯೇ ತಮ್ಮಣ್ಣಭಟ್ಟನು ಆದಿಯಾಗಿ ಎಲ್ಲರೂ ಅವರ ವಾಸಸ್ಟಾನಕ್ಟೋಸ್ಟರ ನೇಮಿಸಲ್ಪಟ್ಟ ಕಟ್ಟೋಣದ ಭಾಗವನ್ನು ಸೇರಿಕೊಂಡರು. +ಚಂಚಲನೇತ್ರರು ವೆಂಕಟಪತಿಯನ್ನು ಸಮೀಪ ಕರೆದು, ಪ್ರಮಾಣ ಪಡಿಸಿ, ವಾಗ್ದಾನ ಕೊಡಬೇಕೆಂಬ ಹಟವನ್ನು ವಾಗ್ದೇವಿಯು ಇನ್ನೂ ಮರಿಯಲಿಲ್ಲವೇ ಎಂದು ವಿಚಾರಿಸಲಾಗಿ ಜೀವ ಹೋದರೂ ಅವಳು ಹಟ ಬಿಡುವವಳಲ್ಲ. +ಈ ವಿಷಯದಲ್ಲಿ ತಾನು ಮಾಡಿದ ಪ್ರಯತ್ನವು ನಿಷ್ಫಲ ವಾಯಿತು; +ಬೇರೆ ನಿವೃತ್ತಿ ಕಾಣದೆಂದು ವೆಂಕಟಪತಿಯು ಉತ್ತರಕೊಟ್ಟನು. +ಇಂಥ ಇಕ್ಕಟ್ಟಿನಲ್ಲಿ ಈಗ ಆಲೋಚನೆ ಮಾಡುವಂಥಾದ್ದೇನೂ ಇಲ್ಲ. +ಮೊದಲೇ ನೋಡಬೇಕಿತ್ತು ಎಂಬ ಪಾಶ್ಚಾತ್ತಾಪದ ಮಾತು ನಿಟ್ಟುಸಿರ ನೊಡನೆ ಚಂಚಲನೇತ್ರರ ಬಾಯಿಯಿಂದ ಬಂದು ಹೋಯಿತು. +ವೆಂಕಟ ಪತಿಯ ಕಣ್ಣಿಗೆ ನೀರು ಬಂತು. +“ಪರಾಕೆ!ದೊಡ್ಡ ದೊಡ್ಡ ಆಲೋಚನೆಯು ಮನಸ್ಸಿಗೆ ಹತ್ತುವ ಸಮಯವು ಇದಲ್ಲ. +ಉಪಯೋಗಿಸಿಕೊಳ್ಳುವ ಉದ್ದಿಶ್ಯ ಸಾಹಸಪಟ್ಟು ತರಿಸಿಕೊಂಡಿರುವ ವಸ್ತುವನ್ನು ಸಂತೋಷಚಿತ್ತದಿಂದ ಸ್ವೀಕರಿಸುವದೇ ಕರ್ತವ್ಯ; +ಅನ್ಯಥಾ ಯೋಜನೆ ಮಾಡುವದು ಯೋಗ್ಯವಲ್ಲ ವೆಂದು ನಾನು ಪ್ರತ್ಯೇಕ ಹೇಳಬೇಕ್ಯಾಕೆ? +ಸರ್ವವು ಬಲ್ಲ ಚರಣಾರವಿಂದ ಗಳಿಗೆ ಪೂರ್ಣ ಪರಾಂಬರಿಕೆ ಇದೆಯಷ್ಟೇ” ಎಂದು ಚಾತುರ್ಯದ ಮಾತಿ ನಿಂದ ವೆಂಕಟಪತಿ ಆಚಾರ್ಯನು ತನ್ನ ಧನಿಯ ಮನಸ್ಸಿಗೆ ಹತ್ತಿದ ಅನಿತ್ಯ ವ್ಯಾಕುಲವನ್ನು ವರಿಹರಿಸಿಬಿಟ್ಟನು. +ಚಂಚಲನೇತ್ರರ ಹೃದಯದಲ್ಲಿ ಕೂಡಲೇ ಆಹ್ಲಾದವು ಪುನಃ ಸ್ಥಾಪನೆಯಾಯಿತು. +ರಾತ್ರಿ ಪೂಜೆಯೊಂದು ಶೀಘ್ರಮಾಡಿಬಿಟ್ಟರೆ ತನ್ನ ಮನೋರಥ ಪೂರ್ಣವಾಗಲಿಕ್ಕೆ ಬೇರೊಂದು ಅಭ್ಯಂತರವಿರಲಾರದು; +ಭವಿಷ್ಯ ವಿಚಾರ, ಕ್ರಮೇಣ ನೋಡೋಣ; +ಆ ಚಿಂತೆ ಈವಾಗ್ಯಾಕೆಂದು ಯತಿಗಳು ದೃಢಚಿತ್ತರಾಗಿ ಸೂರ್ಯಾಸ್ತಮಯದ ನಿರೀಕ್ಷಣೆಯಲ್ಲಿದ್ದುಕೊಂಡರು. +ರಾತ್ರಿ ಸಾವಕಾಶವಿಲ್ಲದೆ ಸ್ನಾನತೀರಿಸಿ, ಪೂಜೆಗೆ ಕೂತರು. +ಅಂದು ದ್ವಾದಶಿ ಯಾದ ಕಾರಣ ಪುರಾಣವಿರಲಿಲ್ಲ. +ಇದು ಬಹು ಅನುಕೂಲವಾಯಿತು. +ಇಲ್ಲವೇ ಮುದ್ದಣ್ಣಾಚಾರ್ಯನ ಉಗ್ಗುವಾಚಕಕ್ಕೆ ಸನ್ಯಾಸಿಗೆ ಇಲ್ಲದ ಕೋಪ ಬಂದು ವಿಪರೀತವಾಗುತ್ತಿತು. +ಹೃದಯದಲ್ಲಿ ವಾಗ್ದೇವಿಯ ಬಿಂಬವನ್ನು ಪ್ರತಿಷ್ಠಿಸಿಕೊಂಡು, ಚಂಚಲ ನೇತ್ರರು ದೇವರ ಪೂಜೆಯನ್ನು ತೀರಿಸಿದರು. +ಆಜ್ಞೆಗನುಗುಣನಾಗಿ ವಾಗ್ದೇವಿಯು ಬಳಗದೊಡನೆ ತೀರ್ಥಪ್ರಸಾದಕ್ಕೆ ಸಕಾಲದಲ್ಲಿ ಬಂದೊದಗಿದಳು. +ತೀರ್ಥಪ್ರಸಾದವಾಯಿತು ರಾತ್ರಿಯೂಟದ ಏರ್ಪಾಟುಮಾಡುವ ನೆವನದ ಮೇಲೆ ಭಾಗೀರಥಿಯು ಗಂಡನನ್ನೂ ಅಳಿಯನನ್ನೂ ಕರಕೊಂಡು ಬಿಡಾರಕ್ಕೆ ಹೋದಳು. +ವಾಗ್ದೇವಿಯ ಊಟವು ಮೊದಲೇ ಆಗಿತ್ತು. +ವೆಂಕಟ ಪತಿ ಆಚಾರ್ಯನೂ ವಾಗ್ದೇವಿಯೂ ಯತಿಗಳ ಸಮ್ಮುಖದಲ್ಲಿ ನಿಂತುಕೊಂಡಿರು ವಾಗ– “ಏನೇ ವಾಗ್ದೇವಿ! +ದೇವರ ಮುಂದೆ ಪ್ರಮಾಣಮಾಡದೆ ಮುಂದಿನ ಪ್ರಸಂಗ ನಡಿಯ ಕೂಡದೆಂಬ ಛಲವನ್ನು ಬಿಡವಲ್ಲೆಯಾ?” ಎಂದು ಚಂಚಲ ನೇತ್ರರು ಪ್ರೇಮಪುರಸ್ಸರ ಪ್ರಶ್ನೆಮಾಡಿದರು. +“ಪರಾಕೆ!ಇಷ್ಟು ಸಣ್ಣ ವಾಗ್ದಾನದ ಪ್ರಸಕ್ತಿಯಲ್ಲಿ ಶ್ರೀಪಾದಂಗಳವರು ನನ್ನ ಮನಸ್ಸಿಗೆ ವಿರೋಧವಾಗಿ ನಡಿಯಬೇಕೆಂಬ ಹಟಹಿಡಿಯುವದು ನೋಡುವಾಗ ಅಬಲೆಯಾದ ನನ್ನ ಮನಸ್ಸಿಗೆ ಹೆಚ್ಚು ಸಂಶಯವಾಗುವದು ಆಶ್ಚರ್ಯವೇ! +ಹೆಚ್ಚಿಗೆ ಏನು ಅರಿಕೆಮಾಡಲಿ. +ಅಪ್ಪಣೆಯಾದರೆ ಊಟಕ್ಕೆ ಹೋಗುತ್ತೇನೆ. +ಮತ್ತೆಲ್ಲ ನಾಳೆ ನೋಡಬಹುದಷ್ಟೆ” ಎಂದು ವಾಗ್ದೇವಿಯು ಪೂಜಾಗೃಹದಿಂದ ಹೊರಗೆ ಹೊರಡಲಿಕ್ಕೆ ಸನ್ನದ್ಧಳಾದಳು. +“ಒಂದೇ ಸರ್ತಿ ಸಿಟ್ಟುಮಾಡಬೇಡ; ಸ್ವಲ್ಪ ಕೂರು” ಎಂದು ಅಪ್ಪಣೆ ಯಾಯಿತು. +ಅದಕ್ಕನುಸರಿಸಿ, ವಾಗ್ದೇವಿಯು ಹಾವಾಡಿಗನು ಸರ್ಪಕ್ಕೆ ತಡೆ ಕಟ್ಟುವ ರೀತಿಯಲ್ಲಿ ತನ್ನ ಮೋಹನ ಶಕ್ತಿಯಿಂದ ಚಂಚಲನೇತ್ರರನ್ನು ಸ್ತಬ್ಧ ಮಾಡಿಬಿಟ್ಟಳು. +ಮಠದ ಪಾರುಪತ್ಯಗಾರನನ್ನು ಸಾಕ್ಷಿಯಿಟ್ಟು ವಾಗ್ದೇವಿಯ ಅಪೇಕ್ಷೆ ಯಂತೆ ಪಟ್ಟದ ದೇವರ ಮುಂದೆ ಪ್ರಮಾಣವಾಕ್ಯ ಉಚ್ಚರಿಸಿ, ವಾಗ್ದೇವಿಗೆ ಗಂಡು ಪಿಂಡ ಜನಿಸಿದರೆ ಅವನಿಗೆ ಆಶ್ರಮಕೊಟ್ಟು ತನ್ನ ಉತ್ತರಾಧಿಕಾರಿ ಯಾಗಿ ನೇಮಿಸುವೆನೆಂದು ವಾಚಾದತ್ತಮಾಡಿ– “ಇನ್ನಾದರೂ ನಿನ್ನ ಮನಸ್ಸಿನ ವಿಕಲ್ಪಹೋಯಿತೇ?” ಎಂದು ಚಂಚಲನೇತ್ರರು ಕೇಳಿದರು. +ವಾಗ್ದೇವಿಯು ಅವರ ಪಾದಗಳಿಗೆ ಅಡ್ಡಬಿದ್ದು– “ಸ್ವಾಮೀ!ಕೇವಲ ಮೂಢಳು; ಮತ್ತು ಕಡುಪಾಪಿಷ್ಟಳಾದ ನನ್ನ ತನುವನ್ನು ಶ್ರೀಪಾದಂಗ ಳವರ ಸೇವೆಗೆ ಒಪ್ಪಿಸಿಕೊಟ್ಟಿದ್ದೇನೆ. +ಅದನ್ನು ಪವಿತ್ರಮಾಡಬೇಕು” ಎಂದು ಬಹುದೀನಭಾವದಿಂದ ಬೇಡಿಕೊಂಡಳು. +ಸರಿ, ಇಲ್ಲಿ ವಾಗ್ದೇವಿಯ ಪರಿಗ್ರಹವು ಪೂರ್ಣವಾಯಿತು. +ಚಂಚಲ ನೇತ್ರರ ಅಪೇಕ್ಷೆಯೂ ವಾಗ್ದೇವಿಯ ಹಟವೂ ವೆಂಕಟಪತಿ ಆಚಾರ್ಯನ ಸಾಧನೆಯೂ ಏಕಪ್ರಕಾರ ನೆರವೇರಿದವು. +ಅಂದಿನಿಂದ ಚಂಚಲನೇತ್ರರ ನಡವಳಿಕೆಯ ರೀತಿಯೇ ಮಾರ್ಪಾಟ ವಾಯಿತು. +ಅವರು, “ಯತಿರೂಪದ ಸಂಸಾರಿಕರಾಗಿ ಕ್ಷಣಮಾತ್ರ ವಾಗ್ದೇವಿ ಯನ್ನು ಅಗಲದೆ, ನಾಚಿಕೆಯನ್ನು ನಿಶ್ಶೇಷವಾಗಿ ತೊರೆದುಬಿಟ್ಟು ಕಪಟ ಸನ್ಯಾಸಿ ಎಂಬ ಮರಭಿಧಾನವನ್ನು ಪಡಕೊಂಡರು. +ಊರಲ್ಲಿ ಜನರು ತನ್ನ ಕುರಿತು ಏನೇನಾಡುತ್ತಾರೆ? +ತಾನು ವಾಗ್ದೇವಿಯ ಮೋಹಜಾಲದಲ್ಲಿ ಸಿಲುಕುವದರ ಮುಂಚೆ ನಡಕೊಳ್ಳುತ್ತಿದ್ದ ಸನ್ಮಾರ್ಗಕ್ಕೂ ಈಗ ನಡಿಯುವ ರೀತಿಗೂ ಏನು ವ್ಯತ್ಯಾಸವಿದೆ? +ತನಗೆ ಈಗ ಸದಾಚಾರಿಯನ್ನಬಹುದೋ? +ತಾನು ದುರಾಚಾರದಲ್ಲಿ ಮಗ್ನನಾಗಿರುವದು ನಿಜವೋ ಎಂಬ ವಿಚಾರವೇ ಚಂಚಲನೇತ್ರರ ಮನಸ್ಸಿಗೆ ಹೋಗದೆ ಅವರು ಕೇವಲ ಮೂಢಮತಿಯಾ ದದ್ದು ಅವರ ಪೂರ್ವಕರ್ಮದ ದೋಷವೇ. +ಮೊದಲು ವೆಂಕಟಪತಿ ಆಚಾ ರ್ಯನು ಯಾವ ವಿಷಯದಲ್ಲಾದರೂ ಆಲೋಚನೆಯನ್ನು ಹೇಳಿದರೆ ಅದರ ಸಾಧಕ ಬಾಧಕ ಮನಸ್ಸಿನಲ್ಲಿ ಚನ್ನಾಗಿ ಮಥಿಸಿ ನೋಡದನಕ ಒಮ್ಮೆಯೇ ಹಾಗಾಗಲೆಂದು ಹೇಳುವದು ಚಂಚಲನೇತ್ರರ ವಾಡಿಕೆಯಾಗಿರಲಿಲ್ಲ. +ಸಕಲ ಆದಾಯ ವೆಚ್ಚದಲ್ಲಿಯೂ ತಾನೆ ಸ್ವತಂತ್ರಿಯಾಗಿ ಒಂದು ಆಜ್ಞೆಯನ್ನು ಕೊಟ್ಟು ಅದಕ್ಯನುಸರಿಸಿ ಸೇವಕರೆಲ್ಲರೂ ನಡಿಯಬೇಕಲ್ಲದೆ; +ಹಾಗಲ್ಲ ಸ್ಟಾಮಿ, ಹೀಗೆ ಎಂಬ ಬುದ್ಧಿ ಮಾತಾಗಲೀ ವಕ್ರೋಕ್ತಿಯಾಗಲೀ ಹೇಳು ವದು ಯಾವನ ಬುರುಡೆಯಲ್ಲಿಯೂ ಬರೆದಿರಲಿಲ್ಲ. +ಪ್ರಕೃತದ ಪ್ರವರ್ತನೆಯು ಹ್ಯಾಗೆ? +ಲೌಕಿಕಕಾರ್ಯಗಳಲ್ಲೆಲ್ಲ ವೆಂಕಟ ಪತಿ ಆಚಾರ್ಯನು ಏನು ಮಾಡಿದರೂ ಯಾರೊಬ್ಬರೂ ಕೇಳುವ ಹಾಗಿರಲಿಲ್ಲ. +ಮಠದ ಪಾರುಪತ್ಯ ಸಮಗ್ರ ಅವನ ಮುಷ್ಟಿಯೊಳಗೆ ಅಡಕವಾಗಿರುವದು. +ಪೂಜೆಪುನಸ್ಕಾರವೆಲ್ಲಾ ಯತಿಗಳ ಕೈಯಿಂದಲೇ ನಡಿಯದೆ ನಿರ್ವಾಹವಿಲ್ಲವಷ್ಟೆ. +ಆವಾವ ಕಾಲದಲ್ಲಿ ಆಗಬೇಕಾದ ದೇವತಾ ವಿನಿಯೋಗಗಳು ಸಾಂಗವಾಗಿ ನಡಿಯುವಲ್ಲಿ ಏನೊಂದೂ ಅಡ್ಡಲು ಇದ್ದಹಾಗೆ ಕಾಣುತಿದ್ದಿಲ್ಲ. +ಸಣ್ಣ ಹುಡುಗರು ಅರ್ಥ ತಿಳಿಯದೆ ಬಾಯಿಪಾಠ ಹೇಳುವ ರೀತಿಯಲ್ಲಿ ಈ ಯತಿ ಗಳು ಭಕ್ತಿ ವಿರಹಿತವಾದ ಪೂಜೆಯನ್ನು ಆದಷ್ಟು ಬೇಗನೆ ತೀರಿಸಿ, ದೇವರಿಗೆ ಏರಿಸಿದ ಹೂವನ್ನು ಪ್ರಥಮತಾ ಒದ್ದೆ ಅಂಗವಸ್ತ್ರದಲ್ಲಿ ಮುಚ್ಚಿಟ್ಟು ವಾಗ್ದೇವಿ ಗೆ ಅರ್ಪಿಸುವ ಮೊದಲು ತೀರ್ಥಪ್ರಸಾದ ಬೇರೆಯವರಿಗೆ ಸಿಕ್ಕುವದು ದುರ್ಲಭವಾಯಿತು. +ಬೆಕ್ಕು ಕಣ್ಣುಮುಚ್ಚಿ ಹಾಲು ಕುಡಿಯುವಂತೆ ಚಂಚಲ ನೇತ್ರರು ತನ್ನ ದುರಾಚಾರದ ಸುದ್ದಿಯು ಯಾರಿಗೂ ಸಿಕ್ಕಲಿಲ್ಲವೆಂಬ ನಂಬಿಕೆಯಿಂದ ದುರಂಹಂಕಾರವನ್ನು ತಾಳಿಕೊಂಡು, ಪೂರ್ವಕ್ಕಿಂತಲೂ ಈಗ ಒಂದು ಬಣ್ಣ ಹೆಚ್ಚಾಗಿ ಸದಾಚಾರದಲ್ಲಿರುವವನಂತೆ ತೋರಿಸಿಕೊಳ್ಳಲಿಕ್ಕೆ ಪ್ರಯತ್ನಪಡುವವರಾದರು. +ಮಠದಲ್ಲಿರುವ ಚಾಕರರೆಲ್ಲರೂ ಧಣಿಗಳಿಗೆ ಮುಂಚೆನಂತೆ ಹೆದರಿಕೊಂಡು ನಡಿಯುವದು ಕಡಿಮೆಯಾಯಿತು. +ಸಣ್ಣಸಣ್ಣ ತಪ್ಪುಗಳನ್ನಾಗಲೀ ತಕ್ಕಮಟ್ಟಗೆ ಬೊಡ್ಡ ತಪ್ಪುಗಳನ್ನಾಗಲೀ ಮಾಡುವ ಸೇವಕರನ್ನು ಚಂಚಲನೇತ್ರರು ಕೆಲಸದಿಂದ ತೆಗೆದು ಬಿಡಲಿಕ್ಕೆ ಅಂಜ ಬೇಕಾಯಿತು. +ಯಾಕೆಂದರೆ ತಾನು ಮಾಡಿಕೊಂಡ ಗುಪ್ತಸಂಸಾರದ ವರ್ತ ಮಾನವನ್ನು ಚಾಕರರೇ ಪ್ರಚುರಪಡಿಸಿ, ವಿವಿಧ ಹಾನಿಯನ್ನುಂಟುಮಾಡಿ ಬಿಟ್ಟರೆ ಕಷ್ಟಪಡುವದಾಗುವದೆಂಬ ಭಯವು ಅವರಲ್ಲಿ ಇಂಬು ಗೊಂಡಿತು. +ಮಠದಲ್ಲಿ ತುಂಬಿಟ್ಟ ದ್ರವ್ಯವು ಯಥೇಷ್ಟವಿತ್ತು. +ಚಂಚಲನೇತ್ರರ ಗುರುಗಳ ಮತ್ತು ಪರಮಗುರುಗಳ ಕಾಲದಿಂದ ಒಟ್ಟುಮಾಡಿಡೋಣಾದ ವಿತ್ತಕ್ಕೆ ಇವರು ತಾನೇ ಕೂಡಿಸಿಕೊಂಡು ಬಂದದ್ದಲ್ಲದೆ, ಅನಾವಶ್ಯಕ ವೆಚ್ಚ ಮಾಡಿ, ಖಜಾನೆಯನ್ನು ಟೊಳ್ಳುಮಾಡಿರಲಿಲ್ಲ. +ವಾಗ್ದೇವಿಯ ಕಾಲು ಮಠಕ್ಕೆ ತಗಲಿದ ಕೂಡಲೇ ನೀರು ತುಂಬಿಟ್ಟ ಕೊಡಪಾನಕ್ಕೆ ತನ್ನಷ್ಟಕ್ಕೆ ರಂಧ್ರವಾಗಿ ನೀರು ಸುರಿದು ಹೋಗುವ ಗತಿಯಾಯಿತು. +ಪೇಟೆಯಲ್ಲಿರುವ ಪ್ರಖ್ಯಾತಪಟ್ಟ ಸರಾಫರೆಲ್ಲರೂ ಹಳೇ ನಗಗಳಿಗೆ ಚಂದಾಗಿ ಒಪ್ಪಹಾಕಿಸಿ, ಝಗಮಗವಾಗಿ ಕಣ್ಣಿಗೆ ಶೋಭಿಸುವ ರೀತಿಯಲ್ಲಿ ಒಂದೊಂದನ್ನೇ ತಂದು ಅಂತರಂಗದಲ್ಲಿ ಭಾಗೀರಧಿಗೆ ತೋರಿಸಿದರು. +ಅವಳು ಅವುಗಳ ಕ್ರಯ ಮೊದಲಾದ ವಿವರಗಳನ್ನು ತಿಳಿದು ಮಗಳ ಮುಂದೆ ಇಟ್ಟು ಬಿಟ್ಟಾಕ್ಷಣ ತಾಮಸವಿಲ್ಲದೆ ವಾಗ್ದೇವಿಯು ಚಂಚಲನೇತ್ರರಿಂದ ಬೇಕಾದ ಹಣವನ್ನು ಈಸುಕೊಂಡು ಸರಾಫನ ಪೆಟ್ಟಿಗೆಯನ್ನು ತುಂಬಿಸಿಬಿಡುವಳು. +ಎಷ್ಟೋ ವರ್ಷಗಳಂದೆ ಗಿರಾಕಿಗಳಿಲ್ಲದೆ ಮಳೆಗೆಯಲ್ಲಿ ಬಿದ್ದಿರುವ ಊಚು ಸೀರೆಗಳನ್ನು ಬಿಸಿಲಿಗೆ ಹಾಕಿ ಒಣಗಿಸಿ ರೇಷ್ಮೆ ಚೌಕದಲ್ಲಿ ಕಟ್ಟಿ, ನವಾಯಿತರು ಮಠಕ್ಕೆ ಬರುವವರಾದರು. +ಭಾಗೀರಥಿಯ ಕಣ್ಣಿಗೆ ಅಂಧಾ ಸೀರೆಗಳು ಬೀಳುವದೇ ತಡ, ನವಾಯಿತರು ಗೆದ್ದರು. +ಅವರು ಹೇಳಿದ ಕ್ರಯಕ್ಕೆ ವಾಗ್ದೇವಿಯು ಅವುಗಳನ್ನು ಕೊಂಡುಕೊಂಡು ಚಂಚಲನೇತ್ರರಿಂದ ಕ್ರಯಕೊಡಿಸುವಳು. +ಕೇಳಿಕೇಳಿದ ಹಾಗೆ ಹಣಕೊಟ್ಟು ಯತಿಗಳು ಸೊಥೋ ದರು, ವಾಸ್ತವ್ಯ. +ಮೊದಲೇ ಧನಾಭಿಲಾಶೆಯಿಂದ ಊಟಪಾಟದಲ್ಲಿಯೂ ಬಹುಮಿತವಾಗಿ ಖರ್ಚುಮಾಡುವ ಆ ಸನ್ಫಾಸಿಯು ವಾಗ್ದೇವಿಯನ್ನು ಮೆಚ್ಚಿಸಿಕೊಳ್ಳುವ ಆಶೆಯಿಂದ ಹಣದ ಮೇಲೆ ಮೋಹವಿಡಲಿಲ್ಲ. +ಪೂರ್ಣಮಿಯ ಚಂದ್ರನಂತಿರುವ ವಾಗ್ದೇವಿಯ ಮುಖದ ಶೀತಳ ಕಿರಣ ಗಳಿಂದಲೇ ಚಂಚಲನೇತ್ರರ ಚಿತ್ತಾಪಹಾರವಾಗಬೇಕಾದ ಪ್ರಯುಕ್ತ ಅವಳ ಸಿಟ್ಟಿಗೆ ಉತ್ತೇಜನ ಕೊಡಬಹುದಾದ ಯಾವದೊಂದು ಕೃತ್ಯವೂ ಶ್ರೀಪಾದಂಗಳವರ ಮನಸ್ಸಿಗೆ ಒಗ್ಗದು. +ಧನ ಶೋಕವು ಸಣ್ಣವೇ? +ಸರ್ವಧಾ ಅಲ್ಲ. +ಆದರೂ ಏನು ನಿವೃತ್ತಿಯದೆ! +ಯಾವ ಶೋಕವಾವರೂ ದಿನೇದಿನೇ ಏರುತ್ತಾ ಬರುವದಾದರೆ ಅದರ ಗೊಡವೆಯನ್ನು ಬಿಡುವದೇ ಲೇಸು. +ಸನ್ಯಾಸಿಗೆ ದ್ರವ್ಯದಾಶೆ ಯಾಕೆ? +ನಾರಾಯಣ ಸ್ಮರಣೆಯೇ ನವವಿಧಿಯಲ್ಲವೇ? +ಹಾಗಲ್ಲವಾದರೂ ಪರ್ವಾ ಇಲ್ಲ. +ಮಠಕ್ಕೆ ಹಲವು ವಿಧದ ಆದಾಯದ ಮೂಲಗಳವೆ. +ಹಣದ ಪೆಟ್ಟಿಗೆಗಳು ರಿಕ್ತವಾದ ಹಾಗೆ ತುಂಬಲಿಕ್ಕೆ ಅಡ್ಡಿ ಇಲ್ಲದಿರುವಾಗ ವಾಗ್ದೇವಿಯು ಬೇಕಾ ದಷ್ಟು ದ್ರವ್ಯ ವೆಚ್ಚಮಾಡಿದರೆ ಹೆದರುವವನ್ಯಾರು? +ದ್ರವ್ಯದಾಶೆ ಸನ್ಯಾಸಿಗಾ ಗಲಿ ಗೃಹಸ್ಥನಿಗಾಗಲಿ ಅತಿ ದೊಡ್ಡ ದುರ್ಗುಣವಷ್ಟೇ! +ಅಂಥಾ ಅವಗುಣ ವನ್ನು ಅಂಗೀಕರಿಸಿಕೊಳ್ಳಬಹುದೇ ಎಂಬ ಜ್ಞಾನದಿಂದ ಚಂಚಲನೇತ್ರರು ತನ್ನ ಮನಸ್ಸನ್ನು ಒಡಂಬಡಿಸಿಕೊಂಡರು. +ಇನ್ನೇನು ಮಾಡಬಹುದು? +ವಾಗ್ದೇವಿಯು ವಾದ್ಯದಿಂದ ಕರತರಲ್ಪಟ್ಟ ಮಾರಿಯಲ್ಲವೇ? +ಅವಳ ಒಡನಾಟದ ಸುಖವನ್ನು ಕುಂದಿಲ್ಲದೆ ಅನುಭವಿಸ ಬೇಕಾದರೆ ಪ್ರಾಣತ್ಯಾಗ ಒಂದಲ್ಲದೆ ಬೇರೆ ಯಾವ ನಷ್ಟವಾದರೂ ಸಹಿಸಿ ಕೊಳ್ಳುವುದಕ್ಕೆ ಅಂಜುವ ನರನು ಬರೇ ನಿರ್ಜೀವ ವಸ್ತುವಿಗಿಂತಲೂ ಕಡೆ ಎಂಬ ಹಾಗಿನ ತಾತ್ಪರ್ಯವು ಈ ಸನ್ಯಾಸಿಯ ಮನಸ್ಸಿನಲ್ಲಿ ನೆಲೆಸಿತ್ತು; +ಒಂದು ವೇಳೆ ಪೂರ್ವಜನ್ಮದಲ್ಲಿ ಇವಳು ತಾನು ಆರಾಧಿಸಿದ ದೈವತವೋ? +ಕೃಪಣತ್ವದಿಂದ ಆರಾಧನೆಯಲ್ಲಿ ನ್ಯೂನಬಂದುಹೋದಕಾರಣ ಆ ಊನ ಪರಿಹರಿಸಿಕೊಂಡು ಸಗುಣರೂಪದಿಂದ ಪ್ರತ್ಯಕ್ಷಳಾದಳೆಂಬ ಭಾವನೆಯಿಂದ ವಾಗ್ದೇವಿಯನ್ನು ಸ್ಟೀಕರಿಸಿಕೊಂಡಾಯಿತು. +ಇದರಲ್ಲಿ ಪಾಪವಿರುವುದು ಹ್ಯಾಗೆ? +ಹುಚ್ಚರು ಬೇಕಾದ್ದು ಆಡಿಕೊಳ್ಳಲಿ. +“ಅಂಡೆ ಬಾಯಿಯಾದರೂ ಕಟ್ಟಬಹುದು ದೊಂಡೆಬಾಯಿ ಕಟ್ಟ ಕೂಡದು” ಎಂಬ ಈ ಸಿದ್ಧಾಂತವು ಯತಿಗಳ ಜ್ಞಾನಚಕ್ಷುವನ್ನು ಮೆಲ್ಲಮೆಲ್ಲನೆ ತೆರೆದುಬಿಟ್ಟಿತು… +ಏವಂಚ ತಾನು ವಾಗ್ದೇವೀಹರಣದಿಂದ ಲೋಕಾಪವಾದಕ್ಕಾಗಲೀ ಸಹಿಸಕೂಡದಷ್ಟು ನಷ್ಟ ಅಥವಾ ವ್ಯಾಕುಲಕ್ಕಾಗಲೀ ಆಸ್ಪದ ಕೊಡಲಿಲ್ಲವೆಂಬ ನಿರ್ಧಾರವನ್ನು ಮಾಡಿಕೊಂಡು, ದಿನೇದಿನೇ ಅಮಿತ ಸುಖವನ್ನನುಭವಿಸುತ್ತಾ ದೇವರನ್ನು ಸಂಪೂರ್ಣ ಮರೆತು ಲೋಕೈಕನಾಥನು ಸೃಷ್ಟಿಸಿದ ಪ್ರಾಣಿಗಳಲ್ಲಿ ತನಗೂ ವಾಗ್ದೇವಿಗೂ ಸದೃತವಾದ ರೂಪವಂತರಾಗಲೀ ಸುಖಿಗಳಾಗಲೀ ಇನ್ನು ಹುಟ್ಟಿ ಬರಬೇಕಿದೆ ಈ ಮೊದಲೇ ಹುಟ್ಟಿದ ಅನ್ಯರಾರಿಲ್ಲವೆಂದು ಚಂಚಲ ನೇತ್ರರು ಬಹಿರಂಗವಾಗಿ ಹೇಳಲಿಕ್ಕೂ ಅಂಜಲಿಲ್ಲ. +ವಾಗ್ದೇವಿಯ ತಂದೆತಾಯಿಗಳು ಮಗಳ ದೆಸೆಯಿಂದ ಅತ್ಯಾನಂದವನ್ನು ಅನುಭವಿಸುವ ಉತ್ತಮ ಸ್ಥಿತಿಗೆ ಬಂದರು. +ಅದೇನು ಆಶ್ಚರ್ಯ? +ಉಣ್ಣಲಿಕ್ಕೆ ತಿನ್ನಲಿಕ್ಕೆ ಏನೂ ಕಡಿಮೆಯುಂಟೇ? +ಅವರಿಗೆ ಯೋಚನೆ ಯಾವದಾದರೂ ಇರಲಿಕ್ಕೆ ಕಾರಣವೇ ಇಲ್ಲ. +ಮೃಷ್ಟಾನ್ನಭೋಜನದಿಂದ ಮೈ ಬಣ್ಣವು ಪುತ್ಥಳಿ ಚಿನ್ಮದ ವರ್ಣಕ್ಕೂ ಮಿಗಿಲಾಯಿತ್ತು. +ದೇಹದಲ್ಲಿ ಬಲವೂ ಸುಷ್ಟಿಯೂ ವೃದ್ಧಿ ಯಾಗುತ್ತಾ ಬಂದು, ಮೊದಲು ಅವರನ್ನು ನೋಡಿದವರಿಗೆ ಈಗ ಫಕ್ಚನೆ ಗುರ್ತು ಸಿಕ್ಕುವುದು ಪ್ರಯಾಸವಾಯಿತೆನ್ನಬಹುದು. +ಶ್ರೀಪಾದಂಗಳವರ ದಯಾಭಿಲಾಷಿಗಳಾಗಿ ಬರುವವರಲ್ಲಿ ಅನೇಕರು ಮೊದಲು ವಾಗ್ದೇವಿಯ ಪಿತನನ್ನು ಕಂಡು, ತನ್ನ ಬರುವಿಕೆಯ ಉದ್ದೇಶವನ್ನು ವಿನಯಪೂರ್ವಕ ವಾಗಿ ತಿಳಿಸಿ, ಅದು ನೆರವೇರಲಿಕ್ಕೆ ಅವಶ್ಯವಿರುವ ಸಹಾಯವನ್ನು ದೊರ ಕಿಸಿಕೊಳ್ಳುವುದಕ್ಕೆ ಅವನಿಂದ ವಾಗ್ದಾನ ನಡಕೊಳ್ಳುವ ಮುಂಚೆ ಯತಿಗಳ ಮಠದ ಬಾಗಿಲಿಗೆ ಹೋಗಲಿಕ್ಕೆ ಹೆದರುವರು. +ಸಣ್ಣಸಣ್ಣ ಸಂಗತಿಗಳಲ್ಲಿ ತಮ್ಮಣ್ಣಭಟ್ಟನು ವೆಂಕಟಪತಿ ಆಚಾರ್ಯನನ್ನು ಕಂಡು, ಇಂಧಿಂಥವಗೆ ಇಂಥಿಂಥಾ ಕೆಲಸವಾಗಬೇಕೆಂದು ತಿಳಿಸಿದರೆ ಸಾಕು. +ಅವನು ಕೊಟ್ಟ ವಾಗ್ದಾನಗಳು ನೆರವೇರುತ್ತಿದ್ದುವು. +ವಿಷೇಷ ಕಾರ್ಯಗಳಾದರೆ ವಾಗ್ದೇವಿಯ ಮುಖೇನ ಆಗಬೇಕು. +ಅವಳು ತಾನೆ ಶ್ರೀಪಾದಂಗಳವರಿಗೆ ಅರಿಕೆಮಾಡಿ ಅವರು ವಿನೋದರೂವನಾಗಿ ಒಲ್ಲೆನೆಂದರೆ ಅವರ ಕಿವಿಯನ್ನು ಹಿಂಡಿ– “ಸಾಕು ನೀನು ಹೇಳದಂತಾಗಲಿ” ಎಂಬ ನುಡಿಯನ್ನು ಸನ್ಯಾಸಿಯ ಬಾಯಿ ಯಿಂದ ಹೊರಡಿಸದೆ ಮ್ಲಾನವದನಳನಗಿ ಹಿಂತಿರಿಗಿ ಬರುವ ಕಾಲ ಉಂಟೇ? +ಇಹದಲ್ಲಿ ಸ್ತ್ರೀಮೋಹಕ್ಕೆ ಮರುಳಾದವನು ಚಂದ್ರನಲ್ಲವೇ? +ಆಬಾಚಾರ್ಯನ ಕಾರಭಾರಿನ ವೃತ್ತಾಂತ ಕೇಳಲಿಕ್ಕೆ ವಾಚಕರಿಗೆ ಇಷ್ಟ ವಿರಬಹುದು. +ಅವನು ಮುಂಜಾನೆ ಎದ್ದು ಮುಖಪ್ರಕ್ಷಾಳನ ಮಾಡಿದಾಕ್ಷಣ ದೇವಸ್ಥಾನಕ್ಕೆ ಹೋಗಿ ದೇವರಿಗೆ ಕೈ ಮುಗಿಯುವದು ಬಿಟ್ಟು ಭೋಜನ ಶಾಲೆಗೆ ಬಂದು ಆ ಹೊತ್ತು ಎಷ್ಟು ಬಗೆ ಪಲ್ಯ, ನಿತ್ಯಗಟ್ಲೆಗಿಂತ ಹೆಚ್ಚಿನ ಭಕ್ಷಭೋಜ್ಯಾದಿಗಳು ಆಗುವ ಸಂಭವವದೆಯೋ ಎಂಬ ವರ್ತಮಾನವನ್ನು ಜಾಗ್ರತೆಯಿಂದ ಸಂಗ್ರಹಿಸಿದ ಮೇಲೆ ಅತ್ತೆ ಮಾವಂದಿರನ್ನು ಕಂಡು ಅವರಿಗೆ ವಂದಿಸಿ ಪತ್ನಿಯ ಮುಖಾವಲೋಕನದ ಸುಖವನ್ನನುಭವಿಸಿ ಒಂದಾನೊಂದು ವೇಳೆ ಸಿಟ್ಟುತಾಳಿ — “ಏನೇ ವಾಗೀ! +ನಿನಗೆ ಯಾರೂ ಕೇಳುವವರಿಲ್ಲವೇ ಒಳ್ಳೇಶಾಲೆ ಉಟ್ಟು ಕುಪ್ಪಸ ತೊಟ್ಟುಕೊಂಡು ತುಳಸಿಕಟ್ಟೆ ಎದುರು ಚಲೋದಾಗಿ ರಂಗೋಲೆ ಬರೆದು, ಹೂವುಗಳಿಂದ ಅಲಂಕರಿಸುವದು ಬಿಟ್ಟು ಇನ್ನೂ ಮುಖಮಜ್ಜನ ಮಾಡದೆ ಸುಮ್ಮಗೆ ದೈವದಂತೆ ಕೂತುಬಿಟ್ಟಿದ್ದೀಯಲ್ಲ? +ದಿನವಹಿ ನಿನಗೆ ಬುದ್ಧಿಹೇಳಬೇಕೇ? +‘ಕುದುರೆಗೆ ಹಿಷಾರೆ ಕತ್ತೆಗೆ ಲತ್ತೆ’ ಎಂಬ ಗಾದೆ ಕೇಳಿ ಬಲ್ಲಿಯಾ? +ಕತ್ತೆಯಂತೆ ನಿನ್ನ ಅವಸ್ಥೆ ಕಾಣಿಸುತ್ತದೆ. +ಈಗ ಒಂದು ಏಟು ಕೊಟ್ಟು ಬಿಟ್ಟರೆ ನಾಲ್ಕು ಗಾವುದವರೆಗೂ ಉರುಳಾಡ ಬೇಕು. +ಛೀ ಥೂ, ಎನ್ನಿಸಿಕೊಂಡನಕ ಯಾವ ಕೆಲಸವಾದರೂ ಮಾಡಲಾರೆಯಾ” ಎಂದು ಕೋಪಾಟೋಪದಿಂದ ದವಡೆಗೆ ಹೊಡಿಯಲಿಕ್ಕೆ ಕೈ ಎತ್ತುವ ಕಾಲದಲ್ಲಿ ಭಾಗೀರಧಿಯು ಅಡ್ಡತಡದು ಮಗಳಿಗೆ ಗದರಿಸಿ ಅಳಿಯನ ಸಿಟ್ಟು ತಣಿಸುವಳು. +ವಾಗ್ದೇವಿಯು ಗಂಡಗೆ ಸಿಟ್ಟು ಬಂದಾಗ ಗಡಗಡನೆ ನಡುಗಿ ಈಗ ಹೊಡೆಯುವನೋ ಆಗ ಹೊಡಿಯುವನೋ ಎಂಬ ಹೆದರಿಕೆಯಿಂದಿರುವವಳ ವೇಷವನ್ನು ಧರಿಸಿಕೊಳ್ಳುವಳು. +ಅವಳು ಕ್ಷಣಸಾವಕಾಶವಿಲ್ಲದೆ ದಪ್ಪವಾದ ಮೊಸರಿನಲ್ಲಿ ಜೀರಸಾಲೆಬತ್ತದ ಅವಲಕ್ಕಿ ನೆನೆಹಾಕಿ ಎಳೇಮೆಣಸು ಹಸಿ ಶುಂಠಿ ಚೂರು ಬೆರಸಿ -“ಹೌದೇನು! +ಮೊಸರು ಅವಲಕ್ಕಿ ಮಡಗಿ ಎಷ್ಟು ಹೊತ್ತಾಯಿತು? +ಒಳಗೆ ಬರಬಾರದೇನು! +ದಿನಾಲು ನಿಮಗೆ ಹೇಳಿಹೇಳಿ ಸಾಯುವವರ್ಯಾರು? +ಹೊತ್ತಿಗೆ ಇಷ್ಟು ತಿನ್ನಲಕ್ಕೆ ಉದಾಸೀನವಾದರೆ ಮಾಡ ತಕ್ಕದ್ದೇನು” ಎಂದು ಸಮೀಪವಿದ್ದವರಿಗೆ ಮೆಚ್ಚಿಸುವಳು. +“ರವಷ್ಟು ತಡಿಯೇ, ನಾನಿನ್ನೂ ಸೂರ್ಯನಮಸ್ಕಾರ ಮಾಡಲಿಲ್ಲ. +ನಿನ್ನ ಅವಲಕ್ಕಿ ಯಾರಿಗೆ ಬೇಕು? +ದಿಂಡೆ ಹೆಂಗಸು? +ಹೀಗೆಂದು ಗದರಿಸಿ ಬಿಟ್ಟ ಗಂಡನು ಮೋರೆ ಗಂಟುಹಾಕಿಕೊಳ್ಳುವದೂ ಇತ್ತು. +ಅಂಥಾ ಸಮಯದಲ್ಲಿ ಸುಮ್ಮನೆ ಅವಲಕ್ಕಿ ಹಾಳಾಗ ಬೇಕ್ಯಾಕೆ? +ಕೆಪ್ಪಮಾಣಿಯಾದರೂ ತಿನ್ನಲೆಂದು ವಾಗ್ಧೇ ವಿಯು ಅವನನ್ನು ಕರಿಯಲಿಕ್ಕೆ ನೋಡಿ– “ಸೂರ್ಯನಮಸ್ಕಾರ ನಾಳೆ?ಎಂದು ಬೇಗನೆ ಒಳಗೆ ಹೋಗಿ ಅವಲಕ್ಕಿಯನ್ನು ಸಂಪೂರ್ಣವಾಗಿ ಹೊಟ್ಟೆ ಯಲ್ಲಿಳಿಸಿ ಬಿಟ್ಟು ತೇಗುತ್ತಾ ಆ ಹೊಟ್ಟೆಬಾಕನು ಹೊರಗೆ ಬರುವನು. +ಹಗಲು ಸಮಯ ಅಬಾಚಾರ್ಯನು ಆಗಿಂದಾಗ್ಯೆ ಪತ್ನಿಯ ಮೇಲಣ ವಿಚಾರವನ್ನು ಮಾಡಿ ಅವಳ ನ್ಯೂನಾತಿರಿಕ್ತಗಳನ್ನು ಕ್ಷಣಕ್ಷಣ ತಿದ್ದುತ್ತಾ ಈ ದಂಪತಿಗಳ ಮರ್ಮವನ್ನು ತಿಳಿಯದ ಜನರಿಗೆ ಅವನು ಸಾಕ್ಷಾತ್‌ ಯಮನೆಂಬಂತೆ ಕಾಣಿಸಿಕೊಳ್ಳುವನು. +ಪರಂತು ಮಠದಲ್ಲಿರುವ ಸರ್ವ ಜನರಿಗೂ ಆಬಾಚಾರ್ಯನ ಕಡದುಗಾರಿಕೆ ಚನ್ನಾಗಿ ಗೊತ್ತಿತ್ತು. +ಅವನು ಹೆಂಡತಿಯ ಮೇಲೆ ನಡಿಸುವ ಶಿಕ್ಷೆರಕ್ಷೆಯು ಸೂರ್ಯನು ಉದಯಾಚಲಕ್ಕೆ ಬಂದ ತರುವಾಯ ಅಸ್ತಾಚಲಕ್ಕೆ ಹೋಗುವ ಪರಿಯಂತರ ಹನ್ನೆರಡು ತಾಸುಗಳಷ್ಟು ಸಮಯಕ್ಕೆ ಮಾತ್ರ ಮಿತವಾಗಿರುವದಲ್ಲದೆ ದೀಪ ಹಚ್ಚಿದ ಮೇಲೆ ಅವಳ ಮೇಲೆ ಪತಿಯು ಎಳ್ಳಿನಷ್ಟು ಸ್ವತಂತ್ರ ಉಳ್ಳವನಾಗಿರಲಿಲ್ಲ. +ಹೀಗಾಗಿ ಅವನು ಪುಣ್ಯವಂತನೆಂದು ಅತ್ತೆ ಮಾವಂದಿರು ಸಹ ಅವನ ಮೇಲೆ ಅಮಿತ ಪ್ರೀತಿಯಿಂದ ಇರುವರು. +ವಾಗ್ದೇವಿ ಅನಕಾ ಪತಿಯನ್ನು ನೋಡಿದಾಕ್ಷಣ ಬೆಚ್ಚಿ ಬಿದ್ದು ಸಂದು ಮೂಲೆಯಲ್ಲಿ ಅಡಗಿಕೊಳ್ಳುವಳು. +ಎಷ್ಟು ಮುಂಜಾಗ್ರತೆಯಿಂದ ನಡಕೊಂಡರೂ ಇವರು ಮಠದಲ್ಲಿ ಆವಾಸ ಮಾಡಿಕೊಂಡಿರುವ ಉದ್ದೇಶವು ಸಜೀವ ಪ್ರಾಣಿಗಳಿಗೆಲ್ಲ ಚೆನ್ನಾಗಿ ಗೊತ್ತಿರುವದು. +ಒಂದಾನೊಂದು ದಿನ ಗ್ರಹಣಕಾಲದಲ್ಲಿ ನದೀಸ್ನಾನಕ್ಕೆ ವಾಗ್ದೇವಿಯು ಪತಿ ಮತ್ತು ತಂದೆತಾಯಿಗಳ ಸಮ್ಮೇಳದಲ್ಲಿ ಮಂದಗಮನೆಯಾಗಿ ಹೋಗುವಾಗ ಅದೇ ಉದ್ದಿಶ್ಯ ನದಿತೀರಕ್ಕೆ ಬರುವವರಲ್ಲಿ ಕೆಲವು ಕಾಕ ಪೋಕರು ವಾಗ್ದೇವಿಯನ್ನು ಹಾಸ್ಯವದನಯುಕ್ತರಾಗಿ ನೋಡಿದರು. +ಆಬಾಚಾರ್ಯನು ಅವರನ್ನು ಕಂಡಾ ಬಟ್ಟೆ ಬೈದು ಗದರಿಸಿ ದೂರಮಾಡಿದನು. +ಕೂಡಲೇ ಇನ್ನೂ ಕೆಲವರು ಹಾಗೆಯೇ ಮಾಡತೊಡಗಿದರು. +ಆಚಾರ್ಯನು ಸುಮ್ಮಗಿರಲಿಲ್ಲ. +ದಿಂಡರಾದ ಆ ಯೌವನಸ್ತರಿಗೆ ವಿವಿಧರೀತಿಯಲ್ಲಿ ಹೆದರಿಸಿ ತನ್ನ ಪ್ರತಾಪ ವನ್ನು ಮೆರೆಸಿಬಿಟ್ಟೆನೆಂಬ ಅಹಂಕಾರದಿಂದ ಮುಂದ್ವರಿಯುತ್ತಿರಲು ಕೆಲವು ಯೌವನಸ್ಥರ ಗುಪ್ತಭೋಧನೆಯಿಂದ ಉತ್ತೇಜನ ಹೊಂದಿದ ಶುದ್ಧ ಪಟಿಂಗ ನೊಬ್ಬನು– “ಕ್ವಚಿತ್‌ ಕಾಣೆ ಭವೇತ್ಸಾಧು ಸ್ವಚಿತ್‌ ಕಾಣೀ ಪತಿವ್ರತಾ” ಎನ್ನುತ್ತಾ ವಾಗ್ದೇವಿಯ ಮುಖವನ್ನು ಈಕ್ಷಿಸಿ ಗಹಗಹಿಸಿ ನಕ್ಕನು. +ಕವನಕಟ್ಟಿ ನಿಂದೆಯನ್ನು ಇನ್ನೊಬ್ಬನು ಮಾಡಿದನು. +ಆಗ ಮತ್ತೊ ಬ್ಬನು ಅವನಂತೆಯೇ ಇನ್ನೊಂದು ಕುಚೋದ್ಯರೂಪವಾದ ಪದ್ಯ ಮಾಡಿ ರಾಗದಿಂದ ಹಾಡಿ ತನ್ನ ಸಂಗಡಿಗರ ಸಮೇತ ನಕ್ಕನು. +ಕುಹಕಿಗಳಾದ ಬೇರೆ ಕೆಲವರು ನಿರಾತಂಕವಾಗಿ ನಗಲಿಕ್ಕೆ ಪ್ರಾರಂಭಿಸಿದರು. +ಆಬಾಚಾರ್ಯನು ಸುಮ್ಮಗಿರದೆ ಹಿಡುಕೊಂಡಿರುವ ಬೆತ್ತವನ್ನು ಬೀರುತ್ತಾ ಆ ದುರ್ಜನರನ್ನು ಓಡಿಸಿಕೊಂಡು ಹೋದನು. +ತಕ್ಕಷ್ಟು ದೂರ ದಲ್ಲಿ ಅವರು ಬೇರೆ ತಂಡಗಳಾಗಿ ನಿಂತುಕೊಂಡು ವಿವಿಧ ಹಾಸ್ಯಕರವಾದ ಪದ್ಯಗಳನ್ನು ರಚಿಸಿ ಆಚಾರ್ಯರಿಗೆ ನಮಸ್ಕಾರ ಹಾಕಿರೋ ಎಂದರು. +ಪೋಕರೆಲ್ಲರೂ ಕೈಚಪ್ಪರಿಸಿದರು. +ವಾಗ್ದೇವಿಯ ತಂದೆ ತಾಯಿಗಳು ಹೆಚ್ಚು ವ್ಯಥೆಯನ್ನು ತಾಳಿ ವಾಗ್ದೇವಿ ಯನ್ನು ಇಂಧ ಸಮೂಹದ ಮಧ್ಯದಿಂದ ತಕ್ಕೊಂಡು ಬಂದದ್ದು ದೊಡ್ಡ ಹೇಸಾಟನಾಯಿತೆಂದರು. +ಆಬಾಚಾರ್ಯನು ಶುದ್ಧ ಬುದ್ಧಿ ಹೀನನಂತೆ ವರ್ತಿ ಸುತ್ತಾನೆಂಬ ನಾಚಿಕೆಯನ್ನು ಸಹಿಸಲಾರದೆ ವ್ಯಾಕುಲದಿಂದ ಅವರೆಲ್ಲರು ಮಠಕ್ಕೆ ಹಿಂತಿರುಗಿ ಬಂದರು. +ಒಡನೆ ವಾಗ್ದೇವಿಯು ಚಂಚಲನೇತ್ರರನ್ನು ಕಂಡು ಮಳೆಯ ನೀರಂತೆ ಕಣ್ಣುಗಳಿಂದ ಜಲಧಾರೆಯನ್ನು ಸುರಿಸಿಕೊಳ್ಳುತ್ತ ತನಗಂದಾದ ಮಾನಭಂಗದ ವೃತ್ತಾಂತವನ್ನು ವಿವರಿಸಿ ಪ್ರಾಣವು ಈಗಲೇ ಈ ಭ್ರಷ್ಟಶರೀರವನ್ನು ತೊಲಗಿ ಹೋದರೆ ಧನ್ಯಳಾಗುತ್ತಿದ್ದೆನೆಂದು ಬಹು ಪರಿಯಿಂದ ಮರುಗಿದಳು. +ಸನ್ಯಾಸಿಯು ಮಿತಿಮಾರಿದ ಕೋಪದಿಂದ ನಡು ಗುತ್ತಾ ಔಡುಗಳನ್ನು ಕಚ್ಚಿಕೊಂಡು, ಕಣ್ಣಾಲಿಗಳನ್ನು ಗರಗರನೆ ತಿರುಗಿಸುವ ಬರಕ್ಕೆ ವಾಗ್ದೇವಿಯ ದೂಷಕರನ್ನು ಆವಾಗಲೇ ಸನ್ಯಾಸಿಯು ಕೊಂದು ಹಾಕಿ ಬಿಡುವ ಯೋಚನೆಯಲ್ಲಿರುವನೋ ಎಂಬ ದೊಡ್ಡ ಭೀತಿಯು ಅವಳ ಮನಸ್ಸಿಗೆ ಹೊಕ್ಕಿತು. +ಸೂರ್ಯನು ಪಶ್ಚಿಮಕಡಲಿಗೆ ಬೀಳಬೇಕಾದರೆ ಆ ಕುನ್ನಿಗಳಿಗೆ ಬುದ್ಧಿ ಕಲಿಸದಿದ್ದರೆ ತನ್ನ ಮುಖಾವಲೋಕನವೇ ಮಾಡ ಬೇಡೆಂದು ಚಂಚಲನೇತ್ರರು ವಾಗ್ದೇವಿಗೆ ಸಮಾಧಾನಗೊಳಿಸಿ ಕಳುಹಿಸಿ ವೆಂಕಟಪತಿ ಆಚಾರ್ಯನನ್ನು ಕೂಡಲೇ ಬರಮಾಡಿಕೊಳ್ಳುವುದಕ್ಕೆ ಜನದ ಮೇಲೆ ಜನವನ್ನು ಕಳುಹಿಸಿಕೊಟ್ಟರು. +ನದೀ ಸ್ಪಾನಕ್ಕೆ ಹೋಗಿರುವ ವೆಂಕಟಪತಿಯು ಧಣಿಯ ಆಜ್ಞೆಯಾಯಿ ತೆಂಬ ವಚನ ಕಿವಿಗೆ ಬಿದ್ದ ಕ್ಷಣ ತೀವ್ರವಾಗಿ ಸ್ನಾನವನ್ನು ತೀರಿಸಿಕೊಂಡು ಶ್ರೀಪಾದಂಗಳ ಸಮಾಪಕ್ಕೆ ಬಂದು ಪ್ರಣಾಮಮಾಡಿ ಅವರ ಮುಖವನ್ನು ಈಕ್ಷಿಸುವಾಗ ಯಮನನ್ಮಾದರೂ ಕಣ್ಣುಬಿಟ್ಟು ನೋಡಬಹುದು, ಸಿಟ್ಟಿನಿಂದ ಮುಖ ವಿಕಾರವಾದ ಚಂಚಲನೇತ್ರರನ್ನು ನೋಡಲಿಕ್ಕೆ ಭಯವಾಗಿ ತಲೆಯನ್ನು ಬಾಗಿಸಿಕೊಂಡು ನಿಂತನು. +ಅರೆಘಳಿಗೆ ಪರಿಯಂತರ ಮಾತಾಡದೆ ಸುಮ್ಮನಿದ್ದ ಮೇಲೆ “ನಮ್ಮ ಪ್ರಿಯಳನ್ನು ಹೀನಿಸಿದ ನಾಯಿಗಳ್ಯಾರು ವೆಂಕಟಪತೀ!ಗೊತ್ತಿದ್ದರೆ ಹೇಳು; +ಇಲ್ಲವಾದರೆ ಬೇಗ ತಿಳುಕೊಂಡು ಅರಿಕೆ ಮಾಡು; +ಈ ಸಣ್ಣ ಕೆಲಸ ನಿನ್ನಿಂದಾಗದಿದ್ದರೆ ಮನೆಗೆ ನಡೆದುಬಿಡು. +ನಮ್ಮ ಮುಂದೆ ದಂಡವಶ್‌ ನಿಂತುಕೋಬ್ಯಾಡ” ಎಂದು ಧನಿಗಳ ಅಪ್ಪಣೆಯಾಯಿತು. +ಕೊಂಚ ಸಮಯ ಕೊಟ್ಟರೆ ವಿಚಾರಿಸಿ ಸಕಲ ವೃತ್ತಾಂತವನ್ನು ಪೂರ್ಣವಾಗಿ ಅರಿಕೆಮಾಡುವದಾಗಿ ವಿಜ್ಞಾಪಿಸಿ ವೆಂಕಟಪತಿ ಆಚಾರ್ಯನು ವಾಗ್ದೇವಿಯನ್ನೂ ಅವಳ ತಂದೆ ತಾಯಿಗಳನ್ನೂ ಅವಳ ಪತಿಯನ್ನೂ ಕಂಡು ಅವರನ್ನು ಅವಮರ್ಯಾದಿ ಮಾಡಿದ ಪೋಕರಿಗಳ್ಯಾರೆಂಬ ಅನುಭವವನ್ನು ತಕ್ಕಮಟ್ಟಿಗೆ ಸಂಗ್ರಹಿಸಿ ಪುನಃ ನದಿಯ ಬಳಿಗೆ ಹೋಗಿ ಪ್ರಥಮತಃ ತನಗೆ ಮಾತಾಡಲಿಕ್ಕೆ ಸಿಕ್ಕಿದ ತಿಪ್ಪಾಶಾಸ್ತ್ರಿಯ ಸಂಗಡ ಸಂಭಾಷಣೆಯನ್ನು ಮಾಡಿ, ತಿಳಿಯಬೇಕಾಗಿರುವ ಸಮಾಚಾರವನ್ನು ಆದ್ಯಂತ ಅರಿತುಕೊಂಡು, ಮಠಕ್ಕೆ ಮರಳಿ ಚಂಚಲನೇತ್ರರಿಗೆ ತಿಳಿಸಿದನು. +ಬಹಿರಂಗವಾಗಿ ಕೆಣಕುವಷ್ಟು ಧೈರ್ಯಗೊಂಡ ಕಡುಮೂರ್ಬರನ್ನು ತಾಮಸವಿಲ್ಲದೆ ಶಿಕ್ಷಿಸಿದನಕ ಭಿಕ್ಷೆ ತಕ್ಕೊಳ್ಳಲಾರೆನೆಂದು ಚಂಚಲನೇತ್ರರು ಹಟಹಿಡಿದರು. +ವಾಗ್ದೇವಿಯು ನಾಚಿಕೆಯಿಂದ ಮೋರೆಯೆತ್ತಲಾರದೆ ಕತ್ತಲೆಕೋಣೆ ಯನ್ನು ಪ್ರವೇಶಿಸಿ ಕಣ್ಣೀರು ಸುರಿಸುತ್ತಾ ಕೂತುಕೊಂಡಳು. +ಅವಳ ತಂದೆ ತಾಯಿಗಳು ಬಹುಖಿನ್ನರಾಗಿ ಅಲ್ಲಲ್ಲಿ ಅಡಗಿಕೊಂಡರು. +ಆಬಾಚಾರ್ಯನು ಹಂದಿಯಂತೆ ನಾಚಿಕೆಯನ್ನು ತೊರೆದುಬಿಟ್ಟು ಅಂದು ಊಟಕ್ಕೆ ಎಲೆಹಾಕುವಾಗ ಎಷ್ಟು ಹೊತ್ತಾಗುವುದೋ ಎಂಬ ಯೋಚನೆಯಲ್ಲಿಯೇ ಬಿದ್ದನು ವಾಗ್ದೇವಿಯ ಚಿಂತೆಗೆ ತುದಿಮೊದಲೇ ಇರಲಿಲ್ಲ. +ಭಾಗೀರಧಿಯು ಎಷ್ಟಾವರ್ತಿ ಕರೆದಾಗ್ಯೂ ಅವಳು ಪ್ರತ್ಯುತ್ತರ ಕೊಡದೆ ಇದ್ದುಕೊಂಡಳು. +ಅವಮರ್ಯಾದೆಯ ದೆಸೆಯಿಂದ ಸಂತಾಸಗ್ರಸ್ಮಳಾಗಿಗುವಾಗ ವಾಗ್ದೇ ವಿಗೆ ತಿಪ್ಪಾಶಾಸ್ತ್ರಿಯ ನೆನಪು ಬಂತು. +ಅಹಾ!ಸಂತೋಷಪ್ರಾಪ್ತಿಸಿದಾಗ ಮರೆಯದೆ ಕರೆಸಿಕೊಂಡರೆ ಮುಂದಿನ ವೃದ್ಧಿಯ ಉಪಾಯವನ್ನೆಲ್ಲ ಹೇಳುವೆ ನೆಂದು ಅನುರಾಗ ಪೂರ್ವಕವಾಗಿ ವಾಗ್ದತ್ತಮಾಡಿದ ಆಪ್ತನನ್ನು ಮರೆತು ಬಿಟ್ಟ ಸಂಬಂಧ ಈ ಅಪಮಾನಕ್ಕೆ ಒಳಗಾದೆನೆಂಬ ಅನುಮಾನವು ವಾಗ್ದೇ ವಿಯ ಮನಸ್ಸಿಗೆ ಸೇರಿತು. +ಆವಾಗಲೇ ಪತಿಯನ್ನು ಕರೆದು, ತಿಪ್ಪಾ ಶಾಸ್ತ್ರಿಯನ್ನು ಹುಡುಕಿ ತರಬೇಕಾಗಿ ತನಗಿರುವ ಅಪೇಕ್ಷೆಯನ್ನು ಗೃಹಿಣಿಯು ತಿಳಿಸಿದೊಡನೆ ಆಬಾಚಾರ್ಯನು ಊಳಿಗದವನಹಾಗೆ ಹೊರಟು, ತಿಪ್ಪಾಶಾಸ್ತ್ರಿ ಯನ್ನು ಕಂಡು ವಾಗ್ದೇವಿಯ ಅಪೇಕ್ಷೆಯನ್ನು ತಿಳಿಸಿದನು. +ಸಂತೋಷಪಟ್ಟು ಶಾಸ್ತ್ರಿಯು ಆಬಾಚಾರ್ಯನ ಸಂಗಡಲೇ ಹೊರಟುಬಂದು, ವಾಗ್ದೇವಿಯನ್ನು ಕಂಡನು. +ತನಗೆ ಉಂಟಾದ ಮಾನಭಂಗವನ್ನು ಅಶ್ರುಜಲವಿಳಿಸುತ್ತಾ ವಾಗ್ದೇ ವಿಯು ಮುದ್ದುಗೆಳೆಯ ತಿಪ್ಪಾಶಾಸ್ತ್ರಿಗೆ ತಿಳಿಸಿ, ಅವನ ಕಾಲಿನ ಮೇಲೆ ಬಿದ್ದು ದುಃಖಪಡುತ್ತಾ ಹೊರಳಾಡಿದಳು. +ಈ ಪ್ರಲಾಪವನ್ನು ನೋಡಿ ತಿಪ್ಪಾ ಶಾಸ್ತ್ರಿಯ ಎದೆಯು ಬಿರಿಯಿತು. +ಆ ಮೋಹನಾಂಗಿಯನ್ನು ಎಬ್ಬಿಸಿ ಸಮ್ಮುಖ ದಲ್ಲಿ ಕೂರಿಸಿ–“ವಾಗೀ!ಚಿಂತೆ ಬಿಡು; +ಅವಸರ ಮಾಡಬೇಡ. +ನಿನ್ನ ಪ್ರೀತಿಯ ಒಡೆಯರು ಮುಯ್ಯಿಗೆಮುಯ್ಯಿ ತೀರಿಸದೆ ಸುಮ್ಮಗಿರುವರೆಂದು ಭಾವಿಸಿದಿಯಾ? ಛೀ ಹಾಗೆ ನೆನಸ ಬೇಡ. +ನಿನ್ನ ಶತ್ರುಗಳಿಗೆ ಬುದ್ಧಿ ಕಲಿಸದೆ, ಇಂದು ಭಿಕ್ಷೆಯನ್ನು ಅವರು ಮುಟ್ಟಿಲಾರರು. +ಈಗ ಅವರು ಪಾರುಪತ್ಯ ಗಾರನ ಸಂಗಡ ಇದೇ ವಿಷಯದಲ್ಲಿ ಸಂಭಾಷಣೆ ಮಾಡುವ ಗೋಪ್ಯವು ಪ್ರಶ್ನೆಭಾವದಿಂದ ತಿಳಯುತ್ತದೆ. +ಅದು ಹಾಗಿರಲಿ. +ನಿನ್ನ ಮಾನಹಾನಿಯ ಮಾತುಗಳನ್ನಾಡಿದ ದುಷ್ಟರ್ಯಾರಿಂಬುದು ಗೊತ್ತಿದೆ. +ಅವರಿಗೆ ಈ ದಿನವೇ ಛಿದ್ರಮಾಡಿ ಬಿಡುತ್ತೇನೆ. +ಅವರ ಹಾಡು ಏನಾಗುತ್ತದೆಂದು ನೋಡು” ಎಂದು ಅವಳಗೆ ಚೆನ್ನಾಗಿ ಧೈರ್ಯ ಹೇಳಿ, ನಾಳೆ ಬರುವೆನೆಂದು ಮರಳಿ ಹೊರಡುವಾಗ ವಾಗ್ದೇವಿಯು ತಿಪ್ಪಾಶಾಸ್ತ್ರಿಯ ಕುತ್ತಿಗೆಯನ್ನು ಮೃದುವಾದ ಉಭಯ ತೋಳುಗಳಂದಲೂ ಬಿಗಿದಪ್ಬಿ– “ಏ!ನನ್ನ ಬಾಲ್ಯಾಸ್ತದ ಸ್ನೇಹಿತನೇ! +ರಕ್ಕು ಹೇಳಿ, ನಡೆದು ಬಿಡುತ್ತೀಯಾ? +ವಾಗ್ದೇವಿಯ ಮೇಲೆ ನಿನಗೆ ಅಷ್ಟು ಉಪೇಕ್ಷೆಯಾಯಿತೇ? +ಶ್ರೀಹರೀ!ನನ್ನ ಪ್ರಾಣವು ಈ ನನ್ನ ಕಲ್ಮಶ ದೇಹವನ್ನು ಬಿಟ್ಟುಹೋಗುವುದಿಲ್ಲವಲ್ಲ! +ನಾನು ಈ ನರ ಜನ್ಮದಲ್ಲಿ ಯಾಕೆ ಹುಟ್ಟಿದೆ?” ಎಂದು ಹಲುಬಿದಳು. +ತಿಪ್ಪಾಶಾಸ್ತ್ರಿಯ ಮನಸ್ಸು ಕರಗಿತು. +ಆ ಶೋಕ ನೋಡಿದರೆ ಬಂದೆ ಕಲ್ಲಾದರೂ ದ್ರವಿಸುವದು. +ನರನಾದ ಶಾಸ್ತ್ರಿಯ ಹೃದಯ ದ್ರವಿಸುವುದು ಏನು ಆಶ್ಚರ್ಯ? +ತಿಪ್ಪಾಶಾಸ್ತ್ರಿಯು ಕಂಬನಿ ತುಂಬಿದ ಕಣ್ಣುಗಳಂದಲೂ ಗದ್ಗದ ಸ್ವರದಿಂದಲೂ ವಾಗ್ದೇವಿಯನ್ನು ತಾನು ಸರ್ವಥಾ ಠಕ್ಕು ಮಾಡುವವನಲ್ಲವೆಂದು ಹಲವು ದೃಷ್ಟಾಂತಗಳಿಂದ ಸಮಾಧಾನಗೊಳಿಸಿ, ಅವಳನ್ನು ನಿಂದಿಸಿದ ದಿಂಡರನ್ನು ನಿಪಾತಮಾಡಿಬಿಡುವೆನೆಂದು ಭಾಷೆಯನ್ನು ಕೊಟ್ಟು ಮರುದಿವಸ ಅಗತ್ಯವಾಗಿ ಬಂದು ಮುಂದಿನ ಆಲೋಚನೆ ಹೇಳುವುದಾಗಿ ನಂಬಿಸಿ, ಮನೆಗೆ ಮರಳಿದನು. +ಇತ್ತ ವೆಂಕಟಪತಿ ಆಚಾರ್ಯನು ಶ್ರೀಪಾದಂಗಳ ಸಂಗಡ ಹೆಚ್ಚು ಸಮ ಯದವರೆಗೆ ಅವರ ಅವಕೃಪೆಗೆ ಪಾತ್ರರಾದ ದುರಾತ್ಮರ ಶಿಕ್ಷೆಯ ಕುರಿತು ಚರ್ಚೆಮಾಡಿ, ಅವರನ್ನು ಹೊಡಿಸಿ, ಅಂಗಹೀನ ಮಾಡುವುದಕ್ಕೆ ಯತಿಗಳು ಮಾಡಿದ ನಿರ್ಣಯವು ಬಲವಾದ ಕಾರಣಗಳಿಂದ ಅನುಚಿತವೆಂದು ಅವರನ್ನು ಒಡಂಬಡಿಸಿದನು. +“ಬೇರೆ ಉಪಾಯವೇನದೆ?” ಎಂದು ಚಂಚಲನೇತ್ರರು ಅತ್ಯವಸರದಿಂದ ಕೇಳಲು, ಅವರೆಬರೂ ಮಠದ ಶಿಷ್ಯರೇ, ಅವರನ್ನು ಬಹಿ ಷ್ಕಾರದ ಮೂಲವಾಗಿ ದಂಡಿಸುವಷ್ಟು ಪ್ರಶಸ್ತವಾದ ಇನ್ನೊಂದು ವೈನವಿರಲಾರದೆಂದು ವೆಂಕಟಪತಿಯು ಅರುಹಿದನು. +ಅವನ ಅಭಿಪ್ರಾಯದಲ್ಲಿ ಚಂಚಲನೇತ್ರರು ಏಕೀಭವಿಸಿ, ಈ ಸಂಕಲ್ಪವು ಸಿದ್ಧಿಯಾಗುವ ಉಪಕ್ರಮವನ್ನು ಬೇಗನೇ ವರ್ತಿನೆಂದು ಅಪ್ಪಣೆಕೊಟ್ಟರು. +ಇಂದೇ ಅದನ್ನು ಕಡೆಗಾಣಿರುವನೆಂದು ಪ್ರಣಾಮಮಾಡಿ, ವೆಂಕಟಪತಿಯು ಹೊರಟನು. +ವಾಗ್ದೇವಿಯನ್ನು ನಿಂದಿಸಲಕ್ಕೆ ಪವಿತ್ರಕರ್ತರಾವದರು ಐದುಮಂದಿ ಯೌವನಸ್ತರು ಅವರ್ಯಾರೆಂದರೆ -ತಿರಚಲ ಉಪೇಂದ್ರಾಚಾರ್ಯನ ಕುಮಾರ ವಿಘ್ನೇಶ್ವರ, ಚಿಂತೂರು ಕೇಶವಾಚಾರ್ಯನ ಮಗ ಶ್ರೀಧರ, ವರಹಾರ ರಾಮಚಂದ್ರ ಉಪಾ ಧ್ಯನ ದತ್ತ ಪುತ್ರ ನರಸಿಂಹ, ಕಾಚೂರು ತಿರ್ಮಲರಾಯನ ಪೌತ್ರ ಆದಿನಾರಾಯಣ, ಶ್ರೀಪುರ ಬಾಲಕೃಷ್ಣ ಐತಾಳನ ದೌಹಿತ್ರ ಡೊಣ್ಯ. +ಈ ವ್ಯಕ್ತಿಗಳು ಒಬ್ಬರಿಗೊಬ್ಬರು ಮಿಗುವ ದುರಾಚಾರಿಗಳು; +ದಿನೇ ದಿನೇ ಸಾಧು ಸಜ್ಜನರಿಗೂ ಅಬಲೆಯರಿಗೂ ನಿರ್ಭೀತಿಯಿಂದ ಉಪದ್ರಕೊಟ್ಟು ಆನಂದಪಡುವ ಕುಹಕರು. +ಇವರ ಯಜಮಾನರು ಆಢ್ಯರಾಗಿರುವ ದೆಸೆಯಿಂದ ಅವರ ಮೇಲೆ ಬೀಳಲಿಕ್ಕೆ ಪುರವಾಸಿಗಳು ಹೆಚ್ಚು ಅಂಜುವರು. +ಕ್ರಮೇಣ ಸಿಕ್ಕಿ ಬಿದ್ದರೆ ಹಿಂದೆ ಮಾಡಿದ ಉಪಟಳೆಯ ಫಲವನ್ನು ಅನುಭವಿಸುವರೆಂಬ ಕೋರಿಕೆಯಿಂದ ಅನೇಕರು ಕಾದುಕೊಂಡಿರುವರು. +ವೆಂಕಟಪತಿ ಆಚಾರ್ಯನು ಅವರಿಗೆ ಬುದ್ಧಿ ಕಲಿಸುವುದಕ್ಕೆ ನಡೆಸುವ ಯತ್ನವುತ್ವರ್ಯವಾಗಿ ಕೈ ಗೂಡುವುದು ಸುಲಭವಾಗಿ ತೋರಲಿಲ್ಲ. +ಆದರೂ ಅನುಭವಸ್ಥ ಮತ್ತು ಚಾತುರ್ಯವಂತನಾದ ಆಚಾರ್ಯನು ಧೈರ್ಯಗುಂದದೆ ತಿಪ್ಪಾಶಾಸ್ತ್ರಿಯ ಸಹಾಯವನ್ನು ಪಡಕೊಂಡು, ಕೆಲವು ಪ್ರಮುಖ ಪಟ್ಟಣವಾಸಿಗಳಿಂದ ಶ್ರೀಪಾದಂಗಳವರಿಗೆ ಆ ಪೋಕರಿ ಹುಡುಗರ ಪುಂಡಾಟಕೆಯ ಮತ್ತು ಕ್ರಿಯಾಭ್ರಷ್ಟತನದ ಕುರಿತು ದೊಡ್ಡದೊಂದು ಬಿನ್ನ ವತ್ತಳೆಯನ್ನು ಬರೆಸಿ, ಅದನ್ನು ಚಂಚಲನೇತ್ರರ ಕೈಗೆ ಸಿಕ್ಕುವ ಹಾಗೆ ಮಾಡಿದನು. +ಅವರು ತಮ್ಮ ವೀರನಾದ ಪಾರುಪತ್ಯಗಾರಗೆ ಮೆಚ್ಚಿ ಚಂದಾಗಿ ಶ್ಲಾಘನೆ ಮಾಡಿದರು. +ಆ ಮೇಲೆ ತತ್ಕಾಲ ಹೆಚ್ಚಿಗೆ ಪರ್ಯೇಷಣೆ ನಡೆಸದೆ ಆ ದುರಾತ್ಮರೈವರನ್ನು ಬಹಿಷ್ಕಾರಮಾಡಿ, ರಾಯಸ ಪತ್ರವನ್ನು ಕೊಟ್ಟರು. +ಈ ಸಂಬಂಧ ಆ ಯೌವನಸ್ಥರ ಹಿರಿಯರೂ ಬಂಧು ಬಾಂಧವರೂ ಯತಿಗಳ ಮೇಲೆ ಬಹು ವೈರಭಾವ ತಾಳಿ ಅವರ ಬಹಿಷ್ಠಾರವನ್ನು ಮನ್ನಿಸದೆ ದುಶ್ಶೀಲರಾದ ತಮ್ಮ ಕುಮಾರರನ್ನು ಕೂಡಿ ನಡೆದರೆ ಈ ಸನ್ಯಾಸಿಯಿಂದ ಆಗೋದೆಲ್ಲಾ ನೋಡಿಬಿಡಬಹುದೆಂದು ಹಟವನ್ನು ಸಾಧಿಸಲೆಸಗಿದರು. +ಚಂಚಲನೇತ್ರರು ಅವರ ಪ್ರಾಬಲ್ಯ ಕಿಂಚಿತ್ತಾದರೂ ಗಣ್ಯಮಾಡದೆ, ಬಹಿಷ್ಠಾರ ಪತ್ರವನ್ನು ಅವಜ್ಞೆ ಮಾಡಿದ ಪ್ರತಿ ಒಬ್ಬಗೂ ಕಟ್ಟುಮಾಡಿ ಇಟ್ಟರು. +ಹೀಗಾಗಿ ಮರಾಧಿಪತಿಗಳಿಗೂ ಅವರ ಶಿಷ್ಯರಲ್ಲಿ ಪ್ರಮುಖರಾದ ಅನೇಕರಿಗೂ ಮನಃಕ್ಷೇಶ ಉಂಟಾಯಿತು. +ನಾನಾ ಅನರ್ಧವಾಗುವ ಸಂಭವವು ಒದಗಿತು… +ಹಾಗಾದರೂ ಚಂಚಲನೇತ್ರರು ಕುಗ್ಗದೆ ಪಾರುಪತ್ಯ ಗಾರನ ಕೂಡೆ ಸಮಯಾನುಸಾರ ಗುಪ್ತಾಲೋಚನೆಮಾಡಿ, ಶತ್ರುಗಳ ಅಸ್ತ್ರ ಗಳಿಗೆ ಪ್ರತ್ಯಸ್ತ್ರವನ್ನು ಹೂಡುತ್ತಾ, ಫಲವನ್ನು ಸಂಪೂರ್ಣವಾಗಿ ಸಾಧಿಸುವು ದಕ್ಕೆ ಪ್ರತಿಜ್ಞೆ ಮಾಡಿಕೊಂಡರು. +ಈ ಸಾಧನೆಗೆ ವಿಘ್ನಬಾರದ ಹಾಗೆ ತಿಪ್ಪಾಶಾಸ್ತ್ರಿಯ ಸ್ನೇಹವನ್ನು ಬೆಳೆ ಸುವುದು ವೆಂಕಟಪತಿಗೆ ಅವಶ್ಯವಾಯಿತು. +ವಾಗ್ದೇವಿಯಂತೂ ತಿಪ್ಪಾಶಾಸ್ತ್ರಿ, ಯ ನೆರಳಿಗೂ ವಂದಿಸಿ, ಮೋಹಪಡುವವಳಾಗಿರುವ ದೆಸೆಯಿಂದ ಅವನ ಅಭೀಪ್ಸಿತ ನಿರಾತಂಕವಾಗಿ ಪೂರ್ಣವಾಗುವ ಸಮಯವು ಬಂತು. +ಅವನು ದೊಡ್ಡ ಜೋಯಿಸನಾಗಿ ಬಹುಜನ ಹಂಗಿಕರ ಸಹಾಯ ಉಳ್ಳವರಾದುದ ರಿಂದ ಮರದ ಶಿಷ್ಯಮಂಡಳಿಯಲ್ಲಿ ಇತ್ತಂಡಗಳಾಗುವ ಗಂಡಾಂತರ ಸಂಭವಿಸಿದ ವೇಳೆಯಲ್ಲಿ ಅವನ ಸ್ನೇಹವು ಮಠಕ್ಕೆ ಪ್ರಯೋಜನಕರವಾಗಿ ತೋರಿತು. +ಚಂಚಲನೇತ್ರರಿಗೆ ಅವನ ಮೇಲೆ ಹೆಚ್ಚು ಪ್ರೀತಿ ಉಂಟಾಯಿತು. +ಅವನಿಗೆ ಯಾವರೀತಿಯಲ್ಲಿ ಮಠದಲ್ಲಿ ತನ್ನ ಹಂಗಿನಲ್ಲೇ ಇಡಲಿಕ್ಕೆ ಅನು ಕೂಲಮಾಡುವುದೆದೆಂಬ ಯೋಚನೆ ಹುಟ್ಟಿತು. +ವೇದವ್ಯಾಸ ಉಪಾಧ್ಯನ ಪುರಾಣಿಕೆಯನ್ನು ಅವನಿಗೆ ಕೂಡಿಸಿದರೆ ಅವನು ತನ್ನನಗಲಿರಲಿಕ್ಕಿಲ್ಲವೆಂಬ ನಿರೀಕ್ಷಣೆಯು ವಾಗ್ದೇವಿಯಲ್ಲಿದ್ದರೂ ಯೌವನಸ್ಥನಾದ ಅವನ ವಿಷಯ ಯತಿ ಯಕೂಡೆ ಪ್ರಸ್ತಾಪಿಸಿದರೆ ಯತಿಯ ಮನಸ್ಸಿನಲ್ಲಿ ತನ್ನ ಮೇಲೆ ಸಂಶಯವೂ ಅವನ ಮೇಲೆ ಮತ್ಸರವೂ ಜನಿಸಿ ಇಬ್ಬರಿಗೂ ಕಾರ್ಯಹಾನಿಯಾಗಿ ನಷ್ಟ ಕಷ್ಟಭ್ರಷ್ಟವಾಗುವುದು. +ತತ್ರಾಪಿ ವೆಂಕಪತಿ ಆಚಾರ್ಯನ ಪರಿಮುಖ ಶ್ರೀಪಾದಂಗಳವರ ಕೂಡೆ ಪ್ರಸ್ತಾಸಿವ ಯತ್ನ ನಡಿಸಿದರೂ ಆಚಾರ್ಯಗೂ ಅಂಥಾ ಅನುಮಾನವೇ ಹುಟ್ಟಿ, ಮುಂದೆ ತಮ್ಮಿಬ್ಬರಿಗೂ ಕಷ್ಟಬರಲಿಕ್ಕೆ ಸಾಕೆಂಬ ಹೆದರಿಕೆಯಿಂದ ವಾಗ್ದೇವಿಯು ಮೌನವಾಗಿರಬೇಕಾಯಿತು. +ಪುರಾಣ ಓದುವ ಉದ್ಯೋಗದ ಆಸೆಯು ತಿಪ್ಪಾಶಾಸ್ತ್ರಿಯಲ್ಲಿ ತುಂಬಾ ಇತ್ತು. +ಬಾಯಿಬಿಟ್ಟು ಒಮ್ಮೆ ವಾಗ್ದೇವಿಗೆ ಅವನ್ನು ಅಂತರಂಗದಲ್ಲಿ ತಿಳಿಸಿದಾಗ ಅವಳು ತನ್ನ ಮನಸ್ಸಿನ ಗುಟ್ಟು ಅವನಿಗೆ ಕೂಡದೆ, ಸ್ಫಾಮಿಗಳ ಕೂಡೆ ಸಮಯ ನೋಡಿ ಅರಿಕೆ ಮಾಡಿಕೊಳ್ಳುವೆನೆಂದು ಸುಳ್ಳು ವಾಗ್ದಾನವನ್ನು ಕೊಟ್ಟು, ಮರ್ಯಾದೆಯನ್ನುಳಿಸಿಕೊಂಡರೂ ಮನಸ್ಸಿನಲ್ಲಿ ಬಹಳ ವ್ಯಸನ ತಾಳಿಕೊಂಡಿರುವಂತಾಯಿತು ಈ ಮರ್ಮುವು ವೆಂಕಟಪತಿ ಅಚಾರ್ಯನಿಗೆ ಕೊಂಚವಾದರೂ ತಿಳದಿರಲಲ್ಲ. +ತಿಪ್ಪಾಶಾಸ್ತ್ರಿಯ ಸ್ನೇಹವು ಮಠದ ಪ್ರಕೃತದ ಇಕ್ಕಟ್ಟು ಪರಿಹರಿಸುವುದಕ್ಕೆ ಉಪಯುಕ್ತವಾದದ್ದೆಂಬ ಒಂದೇ ಕಾರಣದಿಂದ ವೆಂಕಟಪತಿ ಆಚಾರ್ಯನು ಧನಿಯ ಹತ್ತಿರ ಕ್ರಮೇಣ ಈ ವಿಷಯದಲ್ಲಿ ಮಾತಾಡಿದಾಗ ತಿಪ್ಪನನ್ನು ಪ್ರರಾಣಿಕನಾಗಿ ನೇನಿಸಲಿಕ್ಕೆ ಯತಿಗಳು ತುಂಬಾ ಸಂತೋಷಪಟ್ಟರು ಅವನು ಈ ಉದ್ಯೋಗದ ಮೇಲೆ ಮನಸ್ಸಿರುವು ವಾಗಿ ತೋರಿಸಿಕೊಳ್ಳದಿದ್ದರೂ ವೆಂಕಟಪತಿ ಆಚಾರ್ಯನು ತಾನಾಗಿ ಒಂದು ದಿವಸ ಪ್ರಸ್ತಾಪವತ್ವೇನ ಶ್ರೀಪಾದಂಗಳವರಿಗೆ ಅವನ ಮೇಲಿರುವ ಅನುಗ್ರಹದ ಸಮವಿಶೇಷವನ್ನು ತಿಳಿಸಿದಾಗ ತಿಪ್ಬಾಶಾಸ್ತ್ರಿಗೆ ಅತ್ಯಾನಂದವಾಯಿತು. +ಪುರಾಣಿಕನಾಗಿ ಯತಿಯ ಸೇವೆಯನ್ನು ಮಾಡುವುದಕ್ಕೆ ತನಗೆ ಹೆಚ್ಚು ಅತುರಮಿರವುದಾಗಿ ಅವನು ಒಪ್ಪಿಕೊಂಡನು. +ವೆಂಕಟಪತಿ ಆಚಾರ್ಯನು ಸಾವಕಾಶಮಾಡದೆ ಮುದ್ದಣ್ಣಾಚಾರ್ಯನನ್ನು ಮಠದಲ್ಲಿ ಬೇರೊಂದು ಕೆಲಸಕ್ಕೆ ನೇಮಿಸಿ, ಪುರಾಣಿಕೆಯನ್ನು ತಿಪ್ಪಾಶಾಸ್ತಿಗೆ ಕೊಡಿಸಿ, ಸ್ವಾಮಿಗಳ ದೊಡ್ಡ ಮಿತ್ರನಾಗಿಮಾಡಿದನು. +ಈ ಶಾಸ್ತ್ರಿಯು ಸಂಸ್ಕೃತದಲ್ಲಿ ಚೆನ್ನಾಗಿ ಪರಿಶ್ರಮವಿದ್ದು, ಹೆಚ್ಚು ಅನು ಭವಸ್ಥನಾದುದರಿಂದ ಪುರಾಣಹೇಳುವ ಕೆಲಸದಲ್ಲಿ ಹೆಸರುಗೊಂಡನು ಸರ್ವರಿಗೂ ಅವನ ಮೇಲೆ ಅನುದಿನ ಪ್ರೀತಿ ಹೆಚ್ಚುತ್ತಾ ಬಂತು. +ಈ ನೇಮಕ ದಿಂದ ವಾಗ್ದೇವಿಗಾದ ಹರುಷಕ್ಕೆ ಮಿತವೇ ಇಲ್ಲ. +ತಿಪ್ಬಾಶಾಸ್ತ್ರಿಗೆ ನಿರಂತರ ತನ್ನ ಸಾಪೀಪ್ಯವೇ ದೊರಕತು. +ಅವನ ಆಸೆಯನ್ನು ಪೂರೈಸುವುದಕ್ಕೆ ಸ್ವಲ್ಪ ವಾದರೂ ಸಹಾಯ ಮಾಡದೆ ಇದ್ದರೂ ತನ್ನ ದಯದಿಂದಲೇ ಉದ್ಯೋಗ ಸಂಪಾದಿಸಿದೆನೆಂದು ಅವನು ತಿಳಿದುಕೊಂಡಿರುವನು. +ಮಂದಿನ ಕಾರ್ಯ ದೇವರು ಇಟ್ಟ ಹಾಗೆ ಆಗಲೆಂದು ವಾಗ್ದೇವಿಯು ಉತ್ಕರ್ಷಯುಕ್ತಳಾದಳು. +ತಿಪ್ಪಾಶಾಸ್ತ್ರಿಗೆ ಪುರಾಣಹೇಳುವುದಕ್ಕೆ ನೇಮಿಸಿದ ಸುದ್ದಿಯು ಸಿಕ್ಕಿದ ಕೂಡಲೇ ವೇದವ್ಭಾಸ ಉಪಾಧ್ಯನು ಮುಖಭಂಗಿತನಾದನು. +ಆಹಾ, ತನ್ನ ಉದ್ಯೋಗವು ತನಗೆ ಪುನಃ ಬೇಗನೆ ದೊರೆಯ ಬಹುದೆಂಬ ಆಸೆಯು ಭಂಗವಾಯಿತು. +ವಿಷ್ಣುವಿನ ಆರಾಧನೆ ಬಹು ಪ್ರಯಾಸವಟ್ಟು ಮಾಡಿದರೂ ತನ್ನ ಸೇವೆಯನ್ನು ಶ್ರೀಹರಿಯು ಅಂಗೀಕರಿಸಿಕೊಳ್ಳ ಲಿಲ್ಲವಷ್ಪೇ! +ಇದು ಪೂರ್ವಾರ್ಜಿತವೇ! +ಇನ್ನು ಏನುಮಾಡಲೆಂದು ದೀರ್ಘಸ್ವರದಿಂದ ರೋದನಮಾಡುವಾಗ ಪತಿಪ್ರತಾ ಶಿರೋಮಣಿಯಾದ ಅವನ ಪತ್ನಿಯು ಗಂಡನನ್ನು ಸಮಾಧಾನಪಡಿಸುವುದಕ್ಕೆ ತೊಡಗಿದಳು. +“ವಿಷ್ಣುನಿನ ಆರಾಧನೆ ಮಾಡಿದ್ದಕ್ಕಾಗಿ ಏನೂ ಪಶ್ಚಾತ್ತಾಪ ಪಡಬೇಡಿ. +ಅದೆಂದೂ ನಿರರ್ಥಕವಾಗದು. +ಹರಿಯು ತನ್ನ ಭಕ್ತರನ್ನು ಕಷ್ಟದಲ್ಲಿ ಹಾಕಿ ಅವರ ಭಕ್ತಿಭಾವವನ್ನು ಪರೀಕ್ಷಿಸಿನೋಡುತ್ತಾನಲ್ಲದೆ, ಅವರನ್ನು ಬಿಟ್ಟೇಹಾಕುವುದು ಅವನ ಬಿರುದಿಗೆ ವಿರೋಧ, ಚಂಚಲನೇತ್ರರ ಮಠದಲ್ಲಿಯೇ ಉದ್ದೋಗವಾಗಬೇಕೆಂದು ನಮ್ಮ ಅಭಿಮತವಲ್ಲ. +ಹಾಗಾದರೂ ನಮ್ಮ ಜೀವನೋಪಾಯ ನಡೆಯಬೇಕೆಂಬುದು ನಮ್ಮ ಪ್ರಧಾನ ಉದ್ದೇಶವಷ್ಟೇ ಇನ್ನೆಲ್ಲಿಯಾದರೂ ಅನ್ನಸ್ಥಿತಿ ನಮಗೆ ದೊರಕದೆಂಬ ಅನುಮಾನವ್ಯಾಕೆ? +ದೇವರ ಮೇಲೆ ಕೊಂಚವಾದರೂ ಅವಿಶ್ವಾಸವಿಡದೆ ಅವನನ್ನೇ ಏಕಭಾವದಿಂದ ಧ್ಯಾನಿಸಿದರೆ ನಮ್ಮ ಅಭೀಷ್ಪವನ್ನು ಅವನು ಕ್ಷಿಪ್ರ ಸಲ್ಲಿಸುವನು” ಎಂದು ಅವಳು ತನ್ನ ಗಂಡಸಿಗೆ ಜ್ಞಾನಹೇಳದಳು. +ಅವಳ ಅಭಿಪ್ರಾಯವನ್ನು ಅವನು ಒಪ್ಪಿ, ಬೇರೆ ಯಾವುದಾದರೂ ಊರಿಗೆ ಹೋಗುವುದು ಒಳ್ಳೆಯದೆಂದು ನಿರ್ಣಯ ಮಾಡಿದನು. +ಅಷ್ಟರಲ್ಲಿ ಈ ಬಡಬ್ರಾಹ್ಮಣನ ಸಿಟ್ಟುವೃದ್ಧಿ ಯಾಗುವುದಕ್ಕೆ ಇನ್ನೊಂದು ಹೇತು ಉಂಟಾಯಿತು. +ವಾಗ್ದೇವಿಯನ್ನು ನಿಂದೆಮಾಡಿದ ಪಂಚಯೌವನಸ್ಥ ರಲ್ಲಿ ವಿಫ್ನೇಶ್ವರನೆಂಬವನು ವೇದವ್ಯಾಸ ಉಪಾಧ್ಯನ ಸೋದರ ಅಳಿಯನು. +ಇವನು ಅಪರೂಪವಾಗಿ ಸೋದರಮಾವನ ಮನೆಗೆ ಹೋಗಿಬರುವ ಪದ್ಧತಿಯಿರುವುದು. +ಬಹಿಷ್ಠಾರನಲ್ಲಿರುವವನಿಗೆ ಸಂಪರ್ಕನಾದನೆಂಬ ನೆವವನ್ನು ಹುಡುಕಿ, ಪ್ರಥಮತಃ ವೇದವ್ಯಾಸ ಉಪಾಧ್ಯಗೆ ಚಂಚಲನೇತ್ರರು ಬಹಿಷ್ಕಾರ ಪತ್ರ ಕೊಟ್ಟರು. +ಉರಿಯುವ ಬೆಂಕಿಗೆ ತುಪ್ಪ ಹೊಯಿದಂತಾಯಿತು. +ಮೊದಲೇ ಉದ್ಯೋಗವು ತಪ್ಪಿದ್ದಕ್ಕಾಗಿ ಹೆಚ್ಚು ವ್ಯಥೆಯಲ್ಲಿರುವ ವೇದವ್ಯಾಸ ಉಪಾಧ್ಯನು ಬಹಿಷ್ಕಾರಪತ್ರಿಕೆಯು ತಲ್ಪಿದಾಗ ಮಹಾಕೋಪ ತಾಳಿ, ತನ್ನನ್ನು ವ್ಯರ್ಧವಾಗಿ ಕಷ್ಟಬಡಿಸುವ ದಿಂಡ ಸನ್ಯಾಸಿಗೆ ಬುದ್ಧಿ ಕಲಿಸುವಗೋಸ್ಟರ ಒಂದು ಸಣ್ಣ ವೈನಮಾಡಲಿಕ್ಕೆ ಉದ್ಯುಕ್ತನಾದನು. +ಆವನ ಪತ್ನಿಯು ಶಾಂತ ಸ್ವಭಾವವುಳ್ಳವಳಾದರೂ “ಇಂಧಾ ಘೋರವಾದ ಅನ್ಯಾಯ ನಡೆದ ಮೇಲೆ ಅದನ್ನು ಸಹಿಸಿಕೊಂಡಿರಕೂಡದು. +ಮುಯ್ಯಿಗೆ ಮುಯ್ಯಿ‌ ತೀರಿಸಲೇಬೇಕೆಂಬ ಹಾಗೆ ಗಂಡನಿಗೆ ಆಲೋಚನೆ ಕೊಟ್ಟಳು. +ಹೆಂಡತಿಯ ಅನುಮತಿ ಸಿಕ್ಕಿದ ಮೇಲೆ ಯಾರ ಲಕ್ಷ್ಯ್ಯವೂ ಮಾಡದೆ, ವೇದವ್ಯಾಸ ಉಪಾಧ್ಯನು ತನ್ನ ಆಪ್ತರಾದ ಕೆಲವರ ಹತ್ರ ಮುಂದಿ ಮಾಡಬೇಕಾದ ಉಪಾಯವನ್ನು ಕುರಿತು ಆಲೋಚನೆಮಾಡಿ, ಅವರ ಮನೋಗತವನ್ನು ತಿಳಿದು ಸ್ಥಿರಮನಸ್ಸಿನಿಂದ ತನ್ನ ಇಚ್ಛೆಯನ್ನು ಪೂರೈಸಿಕೊಳ್ಳುವುದಕ್ಕೆ ಕೊಂಚ ಸಮಯ ಊರು ಬಿಟ್ಟು ಹೋಗುವ ಅಗತ್ಯವಿರುವುದರಿಂದ ಪಯಣಕ್ಕೆ ಬೇಕಾದ ಸನ್ನಾಹಗಳನ್ನು ಮಾಡುವುದಕ್ಕೆ ಉದ್ಯುಕ್ತನಾದನು. +ಚಂಚಲನೇತ್ರರ ಮಠವಿರುವ ಕುಮುದಪರವು ಶ್ರೀಮದ್ವೀರ ನರಸಿಂಹರಾಯನ ವಸಂತನಗರವೆಂದು ವಾಡಿಕೆಯಾಗಿ ಕೆರೆಯಲ್ಪಡುವ ರಾಜ್ಯದ ಒಂದು ಪಟ್ಟಣವಾಗಿರುತ್ತದೆ. +ಇದರಂತೆಯೇ ಇನ್ನೂ ಐದು ಪಟ್ಟಣಗಳು ಆ ನಗರಕ್ಕೆ ಇರುವುವು. +ಅವುಗಳ ಹೆಸರುಗಳು: ಅರಸನ ಅರಮನೆ ಇರುವ ನೃಸಿಂಹಪುರ, ಅವನ ನೆಂಟರಿಷ್ಟರು ಇರುವ ಕೋಮಲಪುರ, ಸೈನ್ಯದ ಮುಖ್ಯ ಸ್ಥಾನವಾದ ಕ್ಷತ್ರಿಯಪುರ, ವ್ಯಾಪಾರ ಪ್ರಾಮುಖ್ಯಸ್ಥಳವಾದ ವರ್ತಕಪುರ, ವಿವಿಧ ಧಾನ್ಯ ದವಸಗಳು ಬೆಳೆಯುವ ಪ್ರಧಾನ ಊರಾದ ಶಾಂತಿಪುರ. +ಹೀಗೆ ಐದು ಪಟ್ಟಣಗಳೂ ಅವುಗಳ ಉಪಪಟ್ಟಣಗಳೂ ಹಳ್ಳಿಪಳ್ಳಿಗಳೂ ಕಾಡುಪ್ರದೇಶಗಳೂ ಅಸಂಖ್ಯಾತವಾಗಿರುವ ಆ ದೊಡ್ಡ ರಾಜ್ಯಕ್ಕೆ ಷಟ್ಪುರ ನಗರವೆಂಬ ಪುರಾತನ ಹೆಸರು ಇರುವದು. +ಈ ಆರು ಪಟ್ಟಣಗಳಲ್ಲಿ ಕೋಮಲಪುರ ಬಿಟ್ಟು, ಬೇರೆ ಐದು ಪುರಗಳಲ್ಲಿ ಪ್ರತಿ ಒಂದರಲ್ಲಿಯೂ ಬಹು ಮಂದಿ ಬ್ರಾಹ್ಮಣರು ವೇದಜ್ಞರಾಗಿ ಅಗ್ರಹಾರಗಳಲ್ಲಿ ಉಪಜೀವನ ನಡಿಸಿ ಕೊಂಡಿರುವರು. +ಒಂದೊಂದು ಪಟ್ಟಣಕ್ಕೆ ಒಂದೊಂದು ಸನ್ಯಾಸಿಯ ಮಠ ವಿರುವುದು. +ನೃಸಿಂಹಪುರದಲ್ಲಿ ಜ್ಞಾನಸಾಗರತೀರ್ಧರು, ವರ್ತಕಪುರದಲ್ಲಿ ಅಚಲನೇತ್ರರು, ಕ್ಷತ್ರಿಯಪುರದಲ್ಲಿ ಪೂರ್ವಾನಂದತೀರ್ಥರು, ಶಾಂತಿಪುರದಲ್ಲಿ ಹರಿಪದಾಂಬುಜ ತೀರ್ಥರು ಹೀಗೆ ನಾಲ್ಕು ಯತಿಗಳು. +ಕುಮುದ ಪುರದ ಚಂಚಲನೇತ್ರರು ಕೂಡಿ ಐವರು ಯತಿಗಳು ಐಶ್ಚರ್ಯದಲ್ಲಿಯೂ ವಿದ್ಯೆಯಲ್ಲಿಯೂ ಒಬ್ಬರಿ ಗೊಬ್ಬರು ಮಿಗಿಲೆನಿಸಿಕೊಂಡರು. +ಇವರೆಲ್ಲರಿಗೂ ಅವಾವ ಮಠಕ್ಕೆ ಸೇರಿದ ಶಿಷ್ಯರ ಮೇಲೆ ಪೂರ್ಣವಾದ ಅಧಿಕಾರವಿರುವದಾದರೂ ನೃಸಿಂಹಪುರಮಠಕ್ಕೆ ಬಂದು ಹೆಚ್ಚಿನ ಸ್ವಾತಂತ್ರ್ಯವಿರುವದು. +ಬೇರೆ ನಾಲ್ಕು ಮಠಾಧಿಪತಿಗಳ್ಯಾರಾದರು ಶಿಷ್ಯನನ್ನು ಆರಿಸಿ ಆಶ್ರಮಕೊಡುವ ಮುಂಚೆಯೇ ಮುಕ್ತರಾದರೆ ಅಂಥ ಮಠಕ್ಕೆ ಯೋಗ್ಯನಾದವನೊಬ್ಬಗೆ ಆಶ್ರಮ ಕೊಡುವ ಸ್ವತಂತ್ರವು ಆ ಒಂದು ಮಠಕ್ಕೆ ಮಾತ್ರವಿರುವದು. +ಹಾಗೆಯೇ ತಕ್ಕ ಕಾರಣಗಳದ್ದರೆ ಬೇರೆ ಮಠ ಗಳ ಅನುಮತಿಯಿಂದ ಯಾವದೊಂದು ಮಠದ ಅಯೋಗ್ಯ ಶಿಷ್ಯನನ್ನು ತ್ಯಜಿಸಿ ಇನ್ನೊಬ್ಬಗೆ ನೃಸಿಂಹಪುರದ ಸನ್ಯಾಸಿಗಳು ಆಶ್ರಮ ಕೊಡಬಹುದು ಈ ಸನ್ಯಾಸಿಗಳು ತಾವೇ ಒಂದು ದೊಡ್ಡ ಅನ್ಯಾಯಮಾಡಿದರೆ ಉಳಿದ ನಾಲ್ಕು ಮಠದವರು ಅವರನ್ನು ವಿಚಾರಮಾಡಿ, ರಾಜ್ಯವೊಡೆಯನ ಪರಿಮುಖಿ ಶಿಕ್ಷೆಗೆ ಗುರಿಪಡಿಸಬಹುದು. +ಈಗ ವಿವರಿಸುವ ಈ ಕಟ್ಟು ಬಹು ಪುರಾತನದ್ದು. +ಅದು ಈ ವರೆಗೆ ಯಾವನೊಬ್ಬ ಸನ್ಯಾಸಿಯಿಂದಾದರೂ ಭಂಗವಾಗದೆ ಅನು ಸರಿಸೋಣಾಗಿಯದೆ. +ವೇದವ್ಯಾಸ ಉಪಾಧ್ಯನು ಚಂಚಲನೇತ್ರರಿಂದ ಉಂಟಾದ ಅನ್ಯಾಯ ವನ್ನು ಸಹಿಸಲಕ್ಕೆ ಕೂಡದೆ, ಅವರು ಮಾಡುವ ಅನಾಚಾರ ಮುಂತಾದ ನ್ಯೂನತೆಗಳನ್ನು ನೃಸಿಂಹಪುರ ಮಠಾಧಿಪತಿಗಳ ತಿಳುವಳಿಕೆಗೆ ತರುವ ಗೋಸ್ಟರ ಒಂದು ಬಿನ್ನವತ್ತಳೆಯನ್ನು ಬರೆದು, ಜ್ಞಾನತೀರ್ಥ ಶ್ರೀಪಾದಂಗಳವರ ಸನ್ನಿಧಿಗೆ ಒಪ್ಪಿಸಿದನು. +ಅವರು ಅದನ್ನು ಓದಿಸಿನೋಡಿ ಇಡೀ ನಗರ ದಲ್ಲಿ ಅತಿ ಪವಿತ್ರರೆನಿಸಿಕೊಂಡ ಯತಿಶ್ರೇಷ್ಠರಾದ ಚಂಚಲನೇತ್ರರು ಆ ಬಿನ್ನಹಪತ್ರದಲ್ಲಿ ಬರೆದಿರುವ ಹಾಗೆ ದುಷ್ಕೃತೃಗಳನ್ನು ಮಾಡಿ ತಮ್ಮ ಮಠಕ್ಕೂ ತಮ್ಮ ಸುನಾಮಕ್ಕೂ ಲಾಂಛನ ತಗಲುವಂತೆ ನಡಕೊಳ್ಳುವ ದಾಗಿ ನಂಬಲಿಕ್ಕೆ ಸರ್ವಧಾ ಮನಸ್ಸು ಒಡಂಬಡದೆ, ವೇದವ್ಯಾಸ ಉಪಾಧ್ಯ ನನ್ನು ತೀರಾ ಧಿಕ್ಕರಿಸಿ,- “ಎಲೋ, ಕುಹಕಿಯೇ! +ಸುಚರತರಾದ ಯತಿಗ ಳನ್ನು ದ್ವೇಷಮೂಲಕವಾಗಿ ಅಥವಾ ಬೇರೆಯವರ ದುರ್ಭೋಧನೆಯಿಂದ ನಾಯಿಬೊಗಳುವಂತೆ ನಿಂದಿಸುವಿಯಾ? +ನಿನ್ನ ಮುಖಾವಲೋಕನ ಮಾಡಿ ದರೇನೇ ಸಚೇಲಸ್ನಾನಮಾಡಬೇಕಾಗುವುದು. +ನಮ್ಮ ಕಣ್ಣೆದುರು ನಿಲ್ಲದೆ ನಡೆದು ಬಿಡು, ಇಲ್ಲವಾದರೆ ಹರಿಕಾರರನ್ನು ಕರೆದು, ನಿನ್ನನ್ನು ದಬ್ಬಿಸಿಬಿಡ ಬೇಕಾಗುವದು” ಎಂದು ಆತಿ ರೋಷದಿಂದ ಹೇಳಿದರು. +ವೇದವ್ಯಾಸ ಉಪಾಧ್ಯನು ಕೊಂಚವಾದರೂ ಹೆದರದೆ, ಘಟ್ಟಿಯಾಗಿ ನಿಂತುಕೊಂಡು “ಪರಾಕೇ!ನೀತಿ ಮಾಡುವಿರೆಂಬ ಆಶೆಯಿಂದ ವಾದಾ ಕ್ರಾಂತನಾಗಿರುವ ಕಿಂಕರನಾದ ನನ್ನನ್ನು ಕ್ಷಣತಾಮಸವಿಲ್ಲದೆ ತುಚ್ಛೀಕರಿಸಿ ಅನುಗ್ರಹಿಸಿದ. +ಶ್ವಾನೋಪನಾಮವನ್ನು ಭಕ್ತಿಪೂರ್ವಕವಾಗಿ ಸ್ವೀಕರಿಸಿ ಕೋಥೇನೆ. +ಸಮರ್ಥರ ಮನೆಯ ಶ್ವಾನಕ್ಕೆ ಸರ್ವರೂ ಮರ್ಯಾದೆ ಕೊಡುವರೆಂಬ ವಚನವಿದೆ. +ಆದುದರಿಂದ ನಾನು ಸರ್ವಧಾ ಕುಗ್ಗದೆ ಚರಣಾರವಿಂದ ಗಳಿಗೆ ನಮಿಸುತ್ತೇನೆ” ಎಂದು ಯತಿಶ್ರೇಷ್ಟರಿಗೆ ಪ್ರಣಾಮಮಾಡಿ, ಮೋರೆ ಸಣ್ಣದು ಮಾಡಿಕೊಂಡು, ಬೇಗನೆ ಬೀದಿಗೆ ಬಂದು ಬಿಟ್ಟನು. +ಅಲ್ಲಿ ಕಾಣಸಿಕ್ಕಿದ ಸ್ನೇಹಿತನೊಬ್ಬನು ಸ್ನಾನಕ್ಕೆ ತನ್ನಲ್ಲಿಗೆ ದಯಮಾಡ ಬೇಕೆಂದು ಅಪೇಕ್ಷಿಸಿ, ವೇದವ್ಯಾಸನನ್ನು ಕರತಂದು ಸನ್ಮಾನ ಉಪಚಾರ ಗಳಿಂದ ದಿವ್ಯ ಭೋಜನವನ್ನಿತ್ತು, ತೃಪ್ವಿಪಡಿಸಿದ ನಂತರ ವ್ಯಾಕುಲದ ಮುದ್ರೆ ಒತ್ತಲ್ಪಟ್ಟಿರುವ ಅವನ ಮುಖವನ್ನು ನೋಡಿ, ಅವನ ಸಂಕಷ್ಟದ ಪರಿಯನ್ನು ತಿಳಿದು ಸಿಟ್ಟುಗಾರರಾದ ಜ್ಞಾನಸಾಗರ ತೀರ್ಥರ ದರ್ಶನಕ್ಕೆ ಉಚಿತವಾದ ಸಮಯವು ಭಿಕ್ಷೆಯಾದ ಮೇಲೆ ಎಂಬ ಗುಟ್ಟು ತಿಳಿಯದೆ, ಅವರನ್ನು ಅಕಾಲದಲ್ಲಿ ಕಂಡುದರಿಂದ ಬಂದ ದೋಷಕ್ಕೆ ತತ್ಕಾಲನಿವಾರ ಣೋಪಾಯವಿಲ್ಲದ ಕಾರಣ ಉಳಕೆ ಮೂರು ಮರಾಧಿಪತಿಗಳನ್ನು ಕಂಡು, ಕಾರ್ಯಸಾಧನೆ ಮಾಡಿಕೊಳ್ಳುವದು ಉತ್ತಮವೆಂದು ಆ ಸ್ನೇಹಿತನು ಹೇಳಿದ ಬದ್ದಿಯನ್ನನುಸರಿಸಿ ಉಪಾಧ್ಯನು ಮರುದಿವಸ ಕ್ಷತ್ರಿಯಪುರಕ್ಕೆ ಹೊರಟು, ಸೂರ್ಣಾನಂದತೀರ್ಥರ ಭೇಟಿ ವಡೆಯುವದಕ್ಕೆ ಅವರ ಮಠಕ್ಕೆ ಬಂದನು. +ಆವಾಗಲೇ ಯತಿಗಳು ಭಿಕ್ಷೆತಕ್ಕೊಂಡಾಗಿ ಕೊಂಚ ನಿದ್ರೆ ಗೈಯುವ ದಕ್ಕ ಇಚ್ಛಿಸುವ ಸಮಯವಾಯಿತು. +ಯಾರೊಬ್ಬನನ್ನೂ ಕೇಳದೆ, ವೇದವ್ಯಾಸನು ಅವರ ಸಿಂಹಾಸನದ ಕೋಣೆಗೆ ಪ್ರವೇಶಿಸಿ ಪ್ರಣಾಮ ಮಾಡಿದನು. +ಅರೆನಿದ್ರೆಯಿಂದ ತೂಗುವ ಕಣ್ಣುಗಳಂದ ಪೂರ್ಣಾನಂದರು ಅವನನ್ನು ನೋಡಿ ನಾರಾಯಣ ನಾಮವನ್ನು ಅರ್ಧ ಧ್ವನಿಯಿಂದ ಉಚ್ಚರಿಸಿ, ಕೂರಿಸಿಕೊಂಡು, ಅವನನ್ಯಾರೆಂದು ತಿಳಿದು, ಬಂದ ಉದ್ದಿಶ್ಯ ಕೇಳಿದರು. +ಉಪಾಧ್ಯನು ಬಾಯಿಯಿಂದ ಹೆಚ್ಚು ಮಾತಾಡದೆ ವಿಜ್ಞಾಪನಾವತ್ರವನ್ನು ಸಮ್ಮುಖದಲ್ಲಿ ಇರಿಸಿದನು. +ಯತಿಗಳು ಅದನ್ನು ತಾವೇ ಓದಿನೋಡಿ, ನಿದ್ರಾಭಂಗವಾದ ಕೆಟ್ಟ ಸಮಯದಲ್ಲಿ ಹುಟ್ಟಿದ ಸಿಟ್ಟಿನಿಂದ ಉಪಾಧ್ಯನ ಮುಖದ ಮೇಲೆ ಆ ಪತ್ರವನ್ನು ಬಿಸಾಡಿ-“ಪರಿಶುದ್ಧರಾದ ಚಂಚಲನೇತ್ರ ಶ್ರೀಪಾದಂಗಳವರ ಮೇಲೆ ಚಾಡಿಮಾತುಗಳಿಂದ ನಮಗೆ ವೈರ ಉಂಟಾಗುವ ಹಾಗಿನ ಕುಯುಕ್ತಿ ನಡಿಸುವದಕ್ಕಾಗಿ ಬಂದಿಯಾ? +ಕತ್ತೆ!ತೊಲಗು” ಎಂದು ಅಪ್ಪಣೆ ಕೊಟ್ಟರು. +ಶ್ವಾನೋಪನಾಮಕ್ಕೆ ಗಾರ್ದಭೋಪನಾಮ ಕೂಡಿಸಿಕೊಂಡ ಹಾಗಾಯಿತು. +ಹೆಚ್ಚುಮಾತಾಡಿದರೆ ಅಂಗುಷ್ಠ ಮತ್ತು ತರ್ಜಸಿ ಬೆರಳುಗಳನ್ನು ಅರ್ಧ ಚಂದ್ರಾಕೃತಿಯಾಗಿ ಬಿಡಿಸಿಕೊಂಡು, ಕುತ್ತಿಗೆಯ ಸಮಾಸಕ್ಕೆ ತರುವದಕ್ಕೆ ಸಿದ್ದವಾಗಿರುವ ಹೆರಿಕಾರರನ್ನು ನೋಡಿ, ವೇದವ್ಯಾಸ ಉಪಾಧ್ಯನು ದಾರಿಯ ಮೇಲೆ ಬಂದು ನಿಂತು ತಂಗಾಳಿಯನ್ನು ಉಶ್ವಾಸಿಸಿಕೊಂಡನು. +ಮುಖ್ಯವಾಗಿ ತಾನು ಮನೆಯಿಂದ ಹೊರಟ ಮುಹೂರ್ತವು ಕೆಟ್ಟದ್ದಾಗಿರಬೇಕು. +ಹಾಗಲ್ಲದಿದ್ದರೆ ಹೀಗೆ ಅಪಜಯಸ್ತ್ರೀಯು ತನ್ನ ಬೆನ್ನು ಹಿಡಿಯು ವದಕ್ಕಿರಲಿಲ್ಲವೆಂದು ಸಂತಾಪವಡುತ್ತಿರುವ ಸಮಯದಲ್ಲಿ ಮತ್ತೊಬ್ಬ ಸ್ನೇಹ ತನು ರಾತ್ರಿ ಊಟಕ್ಕೆ ತನ್ನಲ್ಲಿಗೆ ಕರಕೊಂಡು ಹೋಗಿ ದಿವ್ಯ ಊಟದಿಂದ ಗೆಳೆಯನನ್ನು ಸಂತೋಷಪಡಿಸಿ, ಅವನು ಆ ಪುರಕ್ಕೆ ಬಂದ ಉದ್ದೇಶವನ್ನು ಅರಿತು ಹೆಚ್ಚು ಪಶ್ಚಾತ್ತಾಪಪಟ್ಟನು. +ಉದ್ವೇಗದಿಂದ ಸಂಕಲ್ಪಸಿದ್ಧಿಯಾಗುವುದಿಲ್ಲ. +ಸಂಸ್ಥಾನಾಧಿಪತಿಗಳ ದರ್ಶನ ಪಡೆಯುವದಕ್ಕೆ ಸರಿಯಾದ ಕಾಲ ವನ್ನು ಬಲ್ಲವರಿಂದ ತಿಳಿದು ಅವರ ಪಾರುಪತ್ಯಗಾರರನ್ನು ಮುಂದಾಗಿ ಕಂಡು, ಅವರ ಸಹಾಯದ ಬಲವನ್ನು ದೊರಕಿಸಿಕೊಳ್ಳದೆ ಒಮ್ಮಿಂದೊಮ್ಮೆ ಎದುರಿಗೆ ಬೀಳುವದು ಕಾರ್ಯಹಾನಿಯ ಮುಖ್ಯಕಾರಣನೆಂದು ಈ ಸ್ನೇಹಿತನು ಸೂಚನಾರೂಪವಾಗಿ ಆಡಿದ ಮಾತುಗಳನ್ನು ಮನಸ್ಸಿನಲ್ಲಿಟ್ಟುಕೊಂಡು, ವ್ಯಾಕುಲದಿಂದ ಮುಖಕಂದಿದ ಅ ಬ್ರಾಹ್ಮಣನು ಮರುದಿವಸ ಮುಂಜಾನೆ ವರ್ತಕ ಪುರಾಭಿಮುಖನಾದನುಅಲ್ಲಿಗೆ ತಲ್ಪುತ್ತಲೇ ನೆಟ್ಟಿಗೆ ಮಠಕ್ಕೆ ಹೋಗುವುದು ಸರಿಯಲ್ಲವಾದುದರಿಂದ ಮಠದ ಪಾರುಪತ್ಯಗಾರ ವೆಂಕಟರಾಮಾಚಾರ್ಯನ ಭೇಟಿಯನ್ನು ಮಾಡುವ ಬಯಕೆಯಿಂದ ವೇದವ್ಯಾಸ ಉಪಾಧ್ಯನು ಅವನ ಮರೆಗೆ ಹೋಗುವಾಗ ವೃದ್ಧಿಸೂತಕದ ದೆಶೆಯಿಂದ ಮಠ ಪ್ರವೇಶ ಮಾಡಲಿಕ್ಕೆ ಅವನಿಗೆ ಸಂದರ್ಭವಿಲ್ಲವೆಂದು ತಿಳಿದು ಒಂತು. +ಸೂತಕ ನಿವಾರಣೆಯಾಗುವ ವರೆಗೂ ಪರ ಊರಲ್ಲಿರಲಿಕ್ಕೆ ಮನಸ್ಸಿಲ್ಲದೆ ಅವನು ಬೈಸಾರಿ ಸಮಯ ಗುರು ದರ್ಶನಕ್ಕೆ ಹೊರಟನು. +ಅಚಲನೇತ್ರರ ಪೂರ್ವಾಶ್ರಮದ ಸಹೋದರಿಯ ಗಂಡನು ಅಂದು ತೀರಿಕೊಂಡನೆಂಬ ದುಃಖಕರವಾದ ವಾರ್ತೆಯು ಸಿಕ್ಕಿ ಬಹುಚಿಂತಾಕ್ರಾಂತರಾಗಿ ಅವರು ಕುಂತಿರುವ ಸಮಯ ಉಪಾಧ್ಯನು ದಂಡ ಪ್ರಣಾಮ ಮಾಡಿ, ನಿಂತು ಕೊಂಡನು. +“ಧಾರಪ್ಪಾ!ಯಾಕೆ ಬಂದಿಯೊ” ಎಂಬ ಪ್ರಶ್ನೆ ಗಳಿಗೆ ಉತ್ತರಕೊಟ್ಟು, ತನ್ನ ಕೈಯಲ್ಲಿರುವ ಬಿನ್ನವತ್ತಳೆಯನ್ನು ಸ್ವಾಮಿಗಳ ಎದುರು ಇರಿಸಿದಾಗ ಗುರುಗಳು ಅದನ್ನು ಬಿಡಿಸಿನೋಡಿ– “ಇವನ್ಯಾರೋ ಮುದಿಕಾಗೆ. +ತಪೋಬಲಿಗಳಾದ ಚಂಚಲನೇತ್ರರನ್ನು ನಿರ್ನಿಮಿತ್ತವಾಗಿ ನಿಂದಿಸುವವನು. +ಇವನನ್ನು ಹೊರಗೆ ದೂಡಿರಿ” ಎಂದು ಆಜ್ಞೆ ಮಾಡಿದರು. +ಸಾವಕಾಶಮಾಡದೆ ಹರಿಕಾರನು ಉಪಾಧ್ಯನನ್ತು ರಟ್ಟೆಹಿಡಿದು, ಅಂಗಳಕ್ಕೆ ಇಳಸಿ ಬಿಟ್ಟನು. +ಬಾಯಿಮುಚ್ಚಿ ಉಪಾಧ್ಯನು ಬೀದಿಗೆ ಇಳಿದು ಕಣ್ಣೀರು ಸುರಿಸುತ್ತಾ ಒಂದು ಅತ್ವತ್ಥ ವೃಕ್ಷದ ಅಡಿಯಲ್ಲಿ ನಿಂತಿರುವ ವೇಳೆಯಲ್ಲಿ ಅವನ ಸಹಾ ಧ್ಯಾಯಿ ಸುಂದೂರು ಭೀಮಾಚಾರ್ಯನು ಸಮಿಪಿಸಿ, ನಮಸ್ಕಾರಮಾಡಿ ಬಡವನಾದ ತನ್ನ ಗೃಹಕ್ಕೆ ದಯಮಾಡಿ, ಭೋಜನಸುಖವನ್ನು ಪಡೆಯಬೇಕೆಂದು ಬೇಡಿಕೊಂಡನು. +ವೇದವ್ಯಾಸನು ಸಹಾಧ್ಯಾಯಿಯ ಮನೆಯಲ್ಲಿ ಮೃಷ್ಟಾನ್ನ ಭೋಜನಗೈದು, ಪ್ರಾಣಸ್ನೇಹಿತನು ತನ್ನ ಆಗತಿಯ ಕುರಿತು ಮಾಡಿದ ಪ್ರಶ್ನೆಗಳಿಗೆ ಕೊಟ್ಟ ಪ್ರತ್ಯುತ್ತರಗಳಿಂದ ಅವನಿಗುಂಟಾದ ವ್ಯಸನವು ಭಾರಿಯಾಗಿ ತೋರಿ ನಆಚಾರ್ಯನು ಅದರ ನಿವಾರಣೆಯ ಯುಕ್ತಿಯನ್ನು ಮಾಡಲಿಕ್ಕೆ ಪವಿತ್ರಕರ್ತನಾಗಬೇಕೆಂದು ನಿಶ್ಚಯಿಸಿ– “ಇಷ್ಟು ಸಣ್ಣ ಕೆಲಸಕ್ಕೆ ಹೆದರುವಿಯಾ! +ಭೀಮಾಚಾರ್ಯನ ಜೀವ ಒಂದಿದ್ದರೆ ನಿನ್ನ ಸಂಗಡ ಯಮಲೋಕದ ತನಕವಾದರೂ ಬಂದು ಜಯಶ್ರೀಯು ನಿನ್ನನ್ನು ವರಿಸುವಂತೆ ಪ್ರಯತ್ನಮಾಡುವೆನು?” ಎಂದು ಭಾಷೆಕೊಟ್ಟು ಮರುದಿನ ಸಾಯಂಕಾಲದ ವರೆಗೂ ಅವನನ್ನು ತನ್ನಲ್ಲಿಯೇ ನಿಲ್ಲಿಸಿಕೊಂಡು ಕಡಬು ಕಾಯಿಹಾಲು ಹಸಿಗೇರು ಬೀಜದ ಪಲ್ಯ ಮೊದಲಾದ ರುಚಿಕರವಾದ ಹಲವು ಶಾಕಗಳು ಎರಡು ಬಗೆ ಹುಳಿ ಎರಡು ಬಗೆ ತೊವ್ವೆ ಎರಡು ಬಗೆ ಸಾರು ಪರಮಾನ್ನ ಸಕ್ರೆಭಕ್ಷ ಎಲೆ ಅಲಂಕಾರಕ್ಕೆ ಕೋಸಂಬರಿ ಸುದಾಹಾಕಿ ವೇದ ವ್ಯಾಸ ಉಪಾಧ್ಯನ ಒಡಲಲ್ಲಿರುವ ಪರಮಾತ್ಮನನ್ನು ತೃಪ್ತಿಪಡಿಸಿದನು. +ಮರುದಿನ ಬೆಳಗಾಗುತ ಉಪಾಧ್ಯನು ಭೀಮಾಚಾರ್ಯನನ್ನು ಬೇಗನೆ ಎಬ್ಬಿಸಿ ಅವನ ಸಂಗಡ ಶಾಂತಿಪುರಕ್ಕೆ ಹೋಗಿ, ಒಂದು ಬಿಡಾರವನ್ನು ಹೊಕ್ಕನು. +ಹಾಗೆಯೇ ಗುರುದರ್ಶನ ಮಾಡಿಬಿಡೋಣವೇವೆಂದು ಕೇಳಲು “ನೀನು ಬಹು ಉದ್ವೇಗಿ; +ನಿನ್ನ ಮತಿಹೀನತೆಯಿಂದಲೇ ಕಾರ್ಯಸಾಧನೆಯು ಕೆಟ್ಟುಹೋಗಿ “ಶ್ವಾನ” “ಗಾರ್ದಭ ”“ಕಾಕ” ಹೀಗೆ ಮೂರು ಅಡ್ಡ ಹೆಸರುಗನನ್ನು ಸಂಪಾದಿಸಿ, ತ್ರಯೋಪನಾಮಿ ಉಪಾಧ್ಯನಾಗಿದ್ದೀ. +ಇನ್ನು ಕೋಣನೆನ್ನಿಸಿಕೊಳ್ಳುವ ಬಿರುದೊಂದು ಉಳಿದದೆ. +ಅದು ಸಿಕ್ಕಿತೇ ಊರಿಗೆ ಮರಳಬಹುದೆಂ”ದು ಭೀಮಾಚಾರ್ಯನು ಉಪಾಧ್ಯಗೆ ಹೀನಿಸಿದನು. +ಉಪಾಧನು ಸ್ವಲ್ಪ ಲಜ್ಜಾಯಮಾನನಾದರೂ– “ಪುನಃ ಕಾಚೇನ ಕೋಚಯ’” ಎಂಬ ವಚನಕ್ಕೆ ಸರಿಯಾಗಿ– “ನಿಮ್ಮ ಅಧಿಕಪ್ರಸಂಗ ಅಂತಿರಲಿ, ನಿಮಗೆ ನನ್ನ ಸಂಗಡ ಬರಲಿಕ್ಕೆ ಸಂದರ್ಭವಾಗದಾದರೆ ನಾನೇ ಹೋಗಿಬರುವೆನು” ಎಂದು ಹೊರಟನು. +“ಇವನಿಗೆ ಮುಂದಾಗಿ ಧೈರ್ಯಕೊಟ್ಟು ಕೆಟ್ಟೆನಲ್ಲಾ! +ಹ್ಯಾಗಾದರೂ ಅವನನ್ನು ಸಂಬಾಳಿಸ ಹೋದರೆ ಮರ್ಯಾದಿ ಕಳಕೊಂಡ ಹಾಗುಗುವುದು ಎಂಬ ಭಯದಿಂದ ಭೀಮಾಚಾರ್ಯನು ಉಪಾಧ್ಯನ ಬೆನ್ನುಹಿಡದು ಅಗೋ!ಮುಂಚೆ ಗುರುಗಳ ಸಂದರ್ಶನದಿಂದ ಹೆಚ್ಚು ಪ್ರಯೋಜನವಿರದು. +ಅವರ ಮಠದ ಪಾರುಪತ್ಯಗಾರ ಬಾಲಮುಕುಂದಾ ಚಾರ್ಯನ ಭೇಟಿ ತಕ್ಕೊಂಡು, ಅವನ ಅಲೋಚನೆ ದೊರಕಿದ ಮೇಲೆ ಮುಂದಿನ ಅನುಸಂಧಾನ ನೋಡೋಣ?” ಎಂದು ಹೇಳಿದ ಬುದ್ಧಿಯು ವೇದ ವಯಾಸ ಉಪಾಧ್ಯಗೆ ವಧ್ಯವಾಯಿತು ಹಾಗೆಯೇ ಸಹಾಧ್ಯಾಯಿಗಳೀರ್ವರೂ ಬಾಲಮುಕುಂದಾಚಾರ್ಯನ ಗೃಹಕ್ಕೆ ಹೋಗಿ, ಅವನಿಗ ವಿನಯಪೂರ್ವಕ ನಮಸ್ಕಾರ ಮಾಡಿದರು ವೇದ ವ್ಯಾಸನು ಬಂದ ಕೆಲಸದ ಸ್ವಭಾವವನ್ನು ಭೀಮಾಚಾರ್ಯನು ಬಾಲ ಮುಕುಂದಾಚಾರ್ಯಗೆ ವಿವರಿಸಿದನು. +ಬೇರೆ ಮೂರು ಮಠಾಧಿಪತಿಗಳನ್ನು ಕಂಡಿಯೋ ಎಂದು ಬಾಲಮುಕುಂದನು ಉಪಾಧ್ಯಗೆ ಮಾಡಿದ ಪ್ರಶ್ನೆಗೆ ಲೋಪವಿಲ್ಲದ ಪ್ರತ್ಯುತ್ತರವನ್ನು ಭೀಮಾಚಾರ್ಯನೇ ಕೊಟ್ಟನು. +ಆ ವೇಳೆ ಬಾಲಮುಕುಂದಗೆ ಕಿಸ್ಸನೆ ನೆಗೆಬಂದರೂ ನಗೆಯನ್ನು ತಡೆದಿಟ್ಟು ತನ್ನಿಂದಾಗ ಬೇಕಾದ ಸಹಾಯ ಯಾವದೆಂದು ಕೇಳಿದನು. +“ಸರ್ವವೂ ತಮ್ಮಿಂದಾಗ ಬೇಕು” ಎಂದು ಭೀಮಾಚಾರ್ಯನು ಅವನ ಸ್ವಾಭಾವಿಕ ವಾಚಾಲತ್ವದಿಂದ ಹೇಳಿಕೊಂಡನು. +ಉಪಾಧ್ಯಗೆ ಕೂಡುವಷ್ಟು ಸಹಾಯಮಾಡಲಿಕ್ಕೆ ತುಂಬಾ ಮನಸ್ಸಿದ್ದರೂ ತನ್ನ ಧನಿಗಳು ಸಾಧುಯತಿಗಳೆಂಬದರಿಂದ ತನ್ನ ಪ್ರಯತ್ನ ಪೂರ್ಣವಾಗಿ ನಡಿಯುವದೆಂಬ ಧೈರ್ಯ ಸರ್ವಧಾ ಹೇಳವಲ್ಲೆನೆಂದು ಅವನು ಪ್ರತ್ಯುತ್ತರಕೊಟ್ಟನು. +ವಾಗ್ದೇವಿಯು ಅತೀ ಸುಂದರಸ್ತ್ರೀ ಎಂಬದು ಉಪಾಧ್ಯನ ಸಂಭಾಷಣೆ ಯಿಂದ ತಿಳಿದುಬಂದುದರಿಂದ ಕೋಮಲಂಂಗಿಯರಾದ ಜವ್ವನೆಯರಿಗೆ ಭಯಾನಕನಾಗಿ ತೋರುವ ಆತಿ ಮನೋಹರ ಪುರುಷನಾದ ಬಾಲಮುಕುಂದನು ಅವಳ ಮುಖನಿರೀಕ್ಷಣೆಯ ಸುಖವನ್ನಾದರೂ ಪಡೆಯಬೇಕೆಂದು ಇಚ್ಛೆಯುಳ್ಳವನಾದನು. +ಅದನ್ನು ಪೂರೈಸಿಕೊಳ್ಳುವದಕ್ಕೆ ಅನುಕೂಲವಾಗುವ ಹಾಗಿನ ಸಮಯವು ಇದೇ. +ವೇದವ್ಯಾಸನ ಬಿನ್ನವತ್ತಳೆಯ ನೆವನಹಿಡಿದು, ಮಠಾಧಿಪತಿಗಳ ಕಡೆಯಿಂದ ಗೃಹಸ್ಥರು ಕುಮುದಪುರದಲ್ಲಿ ಸಭೆಮಾಡಿ, ಒಂದು ಅನ್ವೇಷಣವನ್ನು ಮಾಡುವ ಹಾಗೆ ನಿರೂಪವಾದರೆ ತನ್ನ ಬಯಕೆಯು ತೀರುವದು. + ಈ ಮರುಳ ಉಪಾಧ್ಯನು ಕಾರ್ಯಸಾಧನೆಯ ಕ್ರಮವೇ ತಿಳಿಯದೆ, ಯದ್ವಾತದ್ವಾ ಮಾಡಿಹಾಕಿಬಿಟ್ಟನಲ್ಲ! +ಇದು ಮಹತ್ಕಾರ್ಯ ಇದರಲ್ಲಿ ತನ್ನ ಧನಿಗಳೊಬ್ಬರೇ ಮುಂದರಿಸಲಕ್ಕೆ ಸಂದರ್ಭವಿಲ್ಲ! +ಏನು ಉಪಾಯ ವರ್ತಿಸಬಹುದೆಂಬ ಚಿಂತೆಯು ಅವನಿಗೆ ತಗಲಿಕೊಂಡಿತು ಆದರೆ ತನ್ನಮನೋಭಾವವನ್ನು ವ್ಯಕ್ತಪಡಿಸದೆ ಸುಮ್ಮಗಿದ್ದು, ಸಾಯಂಕಾಲ ದೀವಟಿಗೆ ಸಲಾಮಿನ ಕಾಲ ಮಠಕ್ಕೆ ಬಂದರೆ ಸ್ವಾಮಿಗಳಿಗೆ ಕಾಣಲಿಕ್ಕೆ ಅನುಕೂಲವಿರುವದೆಂದು ಭೀಮಾಚಾರ್ಯಗೆ ತಿಳಿಸಿದನು. +ಬಾಲಮುಕುಂದಾಚಾರ್ಯನು ಸೂಚಿಸಿದ ಸಮಯಕ್ಕೆ ಭೀಮಾಚಾ ರ್ಯನು ವೇದವ್ಯಾಸ ಉಪಾಧ್ಯನನ್ನು ಕರೆದುಕೊಂಡು ಮಠಕ್ಕೆ ಬಂದನು ಹರಿಪದಾಂಬುಜತೀರ್ಥರು ಬಹು ನಿಧಾನಿಗಳು. +ಪ್ರಣಿಪಾತಮಾಡಿ ನಿಂತು ಕೊಂಡ ವಿಪ್ರರೀರ್ವರನ್ನೂ ಸಮ್ಮುಖದಲ್ಲಿ ಕುಳ್ಳರಿಸಿಕೂಂಡು, ಯಾವ ಉದ್ದಿಶ್ಶ ಎಲ್ಲಿಂದ ಬರೋಣಾಯಿತೆಂದು ಕೇಳದಾಗ ಬಾಲಮುಕುಂದಾಚಾರ್ಯನು ವೇದವ್ಯಾಸ ಉಪಾಧ್ಯನ ಸ್ಮಿತಿಗತಿಯನ್ನೆಲ್ಲಾ ಸವಿಸ್ತಾರವಾಗಿ ತಿಳಿಸಿ, ಅವನು ತಂದ ಬಿನ್ನವತ್ತಳೆಯನ್ನು ಗುರುಗಳ ಮುಂದೆ ಇರಿಸಿದನು. +ಅವರು ಅದನ್ನು ತಾವೇ ಓದಿ ನೋಡಿ ಚಂಚಲನೇತ್ರರ ಮೇಲೆ ಹೇಳೋಣಾಗುವ ಅಪವಾದಗಳನ್ನು ನಂಬಲಿಕ್ಕೆ ಆಗುವುದಿಲ್ಲ. +ದ್ವೇಷಸಾಧನೆ ಮಾಡುವ ಜನರು ಅಡ್ಡಾದಿಡ್ಡಿಯಾಗಿ ಆಡುವರು. +ಆದು ಹ್ಯಾಗೂ ಇರಲಿ ಹೆಚ್ಚು ಅನುಭವಸ್ಥರಾದ ಬೇರೆ ಮೂರು ಮಠಾಧಿಪತಿಗಳು ಪ್ರವೇಶಿಸಲಿಕ್ಕ ನಿರಾಕರಿಸಿದ ಪ್ರಸಕ್ತಿಯಲ್ಲಿ ತನ್ನಿಂದ ಕೈಹಾಕಕೂಡುವುದಿಲ್ಲವೆಂದು ಖಂಡಿತ ವಾದ ಉತ್ತರಕೊಟ್ಟರು. +ಆಗ ಭೀಮಾಚಾರ್ಯನು ವಕೀಲನಂತೆ ಹೆಚ್ಚು ಸಮಯ ಯತಿಗಳ ಕೂಡೆ ಜಿಜ್ಞಾಸೆ ಮಾಡಿದನು. +ಪರಂತು ಯತಿಗಳು ಒಮ್ಮೆ ಕೊಟ್ಟ ತೀರ್ಪನ್ನು ಪುನರಾಲೋಚನೆ ಮಾಡಲಿಕ್ಕಿಲ್ಲವೆಂದು ಹೇಳಿ ಬಿಟ್ಟರು. +ವೇದವ್ಯಾಸ ಉಪಾಧ್ಯನು ಒಳ್ಳೇ ಪಂಡಿತನೆಂದು ತೋರುವುದರಿಂದ ತನ್ನ ಮಠದಲ್ಲಿ ಹುಡುಗರಿಗೆ ಪಾಠ ಹೇಳಿಕೊಂಡಿದ್ದರೆ ಒಳ್ಳೇ ಸಂಬಳ ಸಿಕ್ಕೀತೆಂದು ಅನುಗ್ರಹ ವಚನವನ್ನು ಕೊಡುವುದಕ್ಕಿಂತ ಹೆಚ್ಚಿನ ಉಪಕೃತಿ ಯನ್ನು ಮಾಡಲಸಂದರ್ಭವೆಂತ ಮಧುರೋಕ್ತಿಯಿಂದ ಭೀಮಾಚಾರ್ಯ ನನ್ನು ನಸುನಗುತ್ತಾ ಉಪಚರಿಸಿದರು. +ಹಾಗಾಗಲಿ ಒಂದು ವೇಳೆ ರಾಜ ಸ್ಥಾನದಿಂದ ವೇದವ್ಯಾಸ ಉಪಾಧ್ಯನ ದೂರಿನ ಕುರಿತು ಬೇರೆ ನಾಲ್ಕು ಮಠ ದವರು ವಿಚಾರಣೆ ನಡೆಸಬೇಕಾಗಿ ಅಪ್ಪಣೆಯಾದರೆ ತಮ್ಮ ಹಟಪೂರೈಸ ಲಿಕ್ಕೆ ಅನುಕೂಲವಾಗುವುದು. +ಇನ್ನು ಇಲ್ಲಿ ಹೆಚ್ಚು ಚರ್ಚೆಮಾಡದೆ ಅಪ್ಪಣೆತಕ್ಕೊಂಡು ನಡೆದುಬಿಡುವಾ ಎಂದು ಅಂತರಂಗದಲ್ಲಿ ಭೀಮಾ ಚಾರ್ಯನು ಹೇಳಿದ ಮಾತು ವೇದವ್ಯಾಸಗೆ ಸರಿಯಾಗಿ ತೋರಿತು. +ಬಿಡಾರಕ್ಕೆ ಹೋಗಲಿಕ್ಕೆ ಅಪ್ಪಣೆ ಪಡಕೊಂಡು, ಆಚಾರ್ಯನೂ ಉಪಾಧ್ಯನೂ ಒಟ್ಟಿನಲ್ಲಿ ಹೊರಟರು. +ಅವರ ಬೆನ್ನಿಗೆ ಬಾಲಮುಕುಂದನು ಬಂದು ರಾತ್ರಿ ಭೋಜನಕ್ಕೆ ತನ್ನಲ್ಲಿಗೆ ದಯಮಾಡುವ ಹಾಗೆ ಅಪೇಕ್ಷಿಸಿ, ಅವರಿಬ್ಬರನ್ನೂ ಸಂಗಡ ಕರೆದುಕೊಂಡುಹೋಗಿ ಅವರಿಗೆ ಸತ್ಕಾರ ಮಾಡಿ ದಣಿಸಿದನು. +ಭೋಜನದ ತರುವಾಯ ತಾಂಬೂಲಾದಿ ಉಪಚಾರಗಳು ಅಂತ್ಯವಾಗುವ ಮೊದಲು ಅವರೊಳಗೆ ಸಂಭಾಷಣೆ ನಡಿಯಿತು. +ಬಾಲಮುಕುಂದ -“ಆ‌ಚಾರ್ಯರೇ, ತಮ್ಮ ಸ್ನೇಹಿತನ ಕಾರ್ಯಕ್ಕೆ ನಾನು ಚೆನ್ನಾಗಿ ಮನಸ್ಸು ಕೊಡಲಿಲ್ಲವೆಂಬ ಅನುಮಾನ ತಮಗುಂಟಾಗಿಯದೆಂದು ತಿಳಿಯುತ್ತೇನೆ.” +ಭೀಮಾಚಾರ್ಯ–“ತಾವು ಎಂದೂ ಹಾಗೆ ತಿಳಿದುಕೊಳ್ಳಬಾರದು. +ನನ್ನ ಸ್ವಭಾವ ತಾವು ಅರಿತವರಲ್ಲ. +ವೇದವ್ಯಾಸನು ಜಯಹೊಂದುವ ಮಾರ್ಗವನ್ನೇಬಿಟ್ಟು ಕಾರ್ಯಹಾನಿಗೆ ಆಮಂತ್ರಣ ಕೊಟ್ಟನು. +ಹಿಂದು ಮುಂದು ನೋಡದೆ, ಸಂಸ್ಥಾನಾಧಿಪತಿಗಳ ಮುಂದೆ ಬಿದ್ದು, ಸಮಯೋಚಿತ ತಿಳಿಯದೆ, ಪ್ರಥಮತಃ ಅವರ ಸಿಟ್ಟಿಗೆ ಒಳಗಾದರೆ ಮಾಡತಕ್ಕದ್ದೇನು?” +ವೇದವ್ಯಾಸ–“ಸರ್ವರಿಗೂ ಬುದ್ಧಿ ಏಕಪ್ರಕಾರವಾಗಿದೆಯೇ? +ಏನು ಮಾಡಲಿ! +ನನ್ನ ಗ್ರಹ ಗತಿಯ ದೋಷದಿಂದ ಅಪಜಯವಾಯಿತು. +ನಾನು ತೊಡಗಿದ ಕಾರ್ಯ ಯಾರೂ ವಿಹಿತವಲ್ಲದ್ದೆನ್ನರು.” +ಭೀಮಾಚಾರ್ಯ–“ನಮ್ಮ ಅವಗುಣಗಳು ನಮಗೆ ತಿಳಿಯುವುದಿಲ್ಲ. +ನಮ್ಮ ತಪ್ಪುಗಳನ್ನು ಅನ್ಯರೇ ಕಂಡುಹಿಡಿಯುವರು.? +ವೇದವ್ಯಾಸ–“ತಪ್ಪುಗಳನ್ನು ಮಾಡದ ಮನುಜನ್ಯಾರು? +ಎಂಥಾ ಮತಿವಂತನೂ ತಪ್ಪಿಬೀಳುವುದುಂಟು. +ಮಿಕ್ಕಾದವರ ಪಾಡೇನು?” +ಬಾಲಮುಕುಂದ—“ಈ ಶುಷ್ಕ ವಾದವು ಹಾಗಿರಲಿ. +ಕಾರ್ಯಚಿಂತನೆ ಮುಂದರಿಯಲಿ, ‘ಕಂಡಂತೆ ಆಡಿದರೆ ಕಂಡದಂಧ ಉರಿ’ ಎನ್ನುವರು. +ಉಪಾ ಧ್ಯರೆ!ಸರ್ವಥಾ ಸಿಟ್ಟುಮಾಡಬೇಡಿ. +ತಾವು ಕೊಂಚವಾದರೂ ತಾಳ್ಮೆಯುಳ್ಳವರಲ್ಲ. +ಎಷ್ಟು ಸತ್ಯವಂತರಾದರೇನು?” +ಭೀಮಾಚಾರ್ಯ–“ತಮ್ಮ ಅಪ್ಪಣೆ ವಿಹಿತವೇ. +ನಾನೀ ಬಡಬ್ರಾಹ್ಮಣನ ಪಕ್ಷ ಹಿಡಿದಾಯಿತು. +ಇನ್ನು ಅವನನ್ನು ಎಂದೂ ಬಿಡೆ. +ಮುಖ್ಯತಃ ನಾವು ತಮ್ಮ ಮರೆಹೊಕ್ಕ ಮೇಲೆ ಇನ್ನೊಬ್ಬರ ಅಶ್ರಯ ಬೇಡಲಾರೆವು ನಮಗೆ ಮನಃಪೂರ್ವಕವಾಗಿ ಸಹಾಯ ಮಾಡುವುದಕ್ಕೆಮೀ ಇನ್ನೊಬ್ಬ ಮಹಾರಾಯನು ಸಿಕ್ಕನು.” +ಬಾಲ ಮುಕುಂದ–“ಸ್ವಾಮೀ! +ಹಾಗೆ ನನ್ನನ್ನು ಹೊಗಳಬಾರದು. +ನಾನು ಅಷ್ಟು ಬುದ್ಧಿವಂತನಲ್ಲ. +ತಮ್ಮಂಥವರ ದಯೆಯಿಂದ ಮರ್ಯಾದಿ ಯಿಂದ ಕಾಲಕ್ಷೇಪ ಮಾಡಿಕೊಂಡು ಬರುತ್ತೇನೆ.” +ಭೀಮಾಚಾರ್ಯ– “ತಮ್ಮ ಪಾದದಾಣೆ ವೇದವ್ಯಾಸನು ನಿಷ್ಕಪಟಿ. +ಅವನು ಬರೇ ದ್ವೇಷ ಸಾಧನೆಗೋಸ್ಟರ ಇಷ್ಟು ಪ್ರಯಾಸಪಡುವವನಲ್ಲ. +ಅವರಿಗಾದ ಅನ್ಯಾಯವು ಘೋರವಾದದ್ದು.” +ಬಾಲ ಮುಕುಂದ–“ಆಚಾರ್ಯರೇ ಹಾಗೆಂದರೆ ಕೇಳುವವನಲ್ಲ ಅವನಿಗಾದ ಅನ್ಯಾಯ ಯಾವುದು?” +ಭೀಮಾಚಾರ್ಯ–“ಅವನ ಅನ್ನವನ್ನೇ ಚಂಚಲನೇತ್ರರು ತೆಗೆಯಲಿಲ್ಲವೇ?? +ಬಾಲ ಮುಕುಂದ “ಒಂದು ವೇಳೆ ಕೋಪದಿಂದ ಯತಿಗಳ ಬಾಯಿಯಿಂದ ಅವಾಚ್ಯವೇ ಬಂತೆನ್ನುವಾ. +ಅಷ್ಟು ಮಾತ್ರದಿಂದ ಇವರು ಪುಸ್ತಕವನ್ನು ಕಟ್ಟಿಟ್ಟು ಹೋಗಿಬಿಡಬೇಕೇ?” +ಭೀಮಾಚಾರ್ಯ–“ತಮ್ಮ ಮಾತು ನ್ಯಾಯವಾದದ್ದೇ. +ಆದರೂ ಶ್ರೀಪಾದಂಗಳವರ ಬಾಯಿಯಿಂದ ಅಂಧಾ ಅಭಾಸದ ಮಾತು ಹೊರಟ ಸಮ್ಮಂಧ ಉಪಾಧ್ಯಗೆ ಸಿಟ್ಟು ಬರಲಿಕ್ಕೆ ಒಳ್ಳೆ ಕಾರಣವಿತ್ತು. +ಈಗ ಅವನ ಜೀವನ ನಡಿಯುವದು ಹ್ಯಾಗೆ? ”. +ಬಾಲಮುಕುಂದ–“ಜೀವನೋವಾಯವನ್ನು ನಮ್ಮ ಶ್ರೀಪಾದಂಗಳವರು ವಾಗ್ದತ್ತಮಾಡಿ ಆಯಿತಲ್ಲ–ನಮ್ಮ ಮಠದಲ್ಲಿ ಯೋಗ್ಯವಾದ ಉದ್ಯೋಗವನ್ನು ಕೊಡಲಿಕ್ಕೆ ಅವರು ತುಂಬಾ ಸಂಶೋಷಉಳ್ಳವರಾಗಿರುತ್ತಾರೆ. +ಇನ್ನೇನಾಗಬೇಕು?” +ವೇದವ್ಯಾಸ–“ಸ್ವಾಮಾ, ಶ್ರೀಪಾದಂಗಳವರು ನನ್ನ ಮೇಲೆ ಇಟ್ಟಿ ರುವ ಕೃಪೆಗಾಗಿ ಅವರನ್ನು ಸದಾ ವಂದಿಸುವೆನು. +ಶ್ವಾನಸೂಕರವು ಹೊಟ್ಟೆ ಹೊರೆವುದಿಲ್ಲವೇ?’ +ಬಾಲಮುಕುಂದ–“ಆ ಯತಿಗಳ ಮೇಲೆ ತಾವು ಹಟ ಹಿಡಿಯತಕ್ಕ ಕಾರಣ ಇನ್ಯಾವದು?” +ಭೀಮಾಚಾರ್ಯ—“ನಿರ್ನಿಮಿತ್ತವಾಗಿ ಆ ಬಡಬ್ರಾಹ್ಮಣನನ್ನು ಬಹಿ ಷ್ಕಾರಕ್ಕೆ ಒಳಪಡಿಸಿದ್ದು ನೀತಿಯೇ? +ತನ್ನ ಕಾಲಬುಡದಲ್ಲಿರುವ ಕುಂಬಳ ಕಾಯಿ ಬಿಟ್ಟು ಅನ್ಯರ ಕಣ್ಣಿನಲ್ಲಿ ಸಾಸಿವೆಯನ್ನು ಹುಡುಕುವುದು ಯೋಗ್ಯವೇನು?” +ಬಾಲಮುಕುಂದ–“ಆ ಮಾತು ಸರಿಯೇ.? +ಭೀಮಾಚಾರ್ಯ- “ಹಾಗಾದರೆ ವೇದವ್ಯಾಸನ ಸಾಧನೆಯು ದುಸ್ಸಾ ಧನೆಯೇ?” +ಬಾಲಮುಕುಂದ – ದುಸ್ಸಾಧನೆಯಾಗಲೀ ಸುಸಾಧನೆಯಾಗಲೀ ಒಂದು ಕಾರ್ಯದಲ್ಲಿ ಒಬ್ಬನು ಪ್ರವೇಶಿಸಬೇಕಾದರೆ ಅದನ್ನು ಪೂರೈಸಿಕೊಳ್ಳಬಹುದೋ ಎಂಬ ವಿಚಾರಮಾಡಬೇಕು. +ಸಮರ್ಧರಲ್ಲಿ ದ್ವೇಷಕಟ್ಟಕೊಳ್ಳು ವಷ್ಟು ಹುಚ್ಚುತನ ಇನ್ನೊಂದಿರದು.? +ವೇದವ್ಯಾಸ–ಸ್ಟಾಮೀ ಅನಾವಶ್ಯಕ ದ್ವೇಷನಾಧನೆಗೆ ನಾನು ಹೊರಟ ವನಲ್ಲ. +ಯತಿಗಳಿಂದ ತನಗಾದ ಅಪಕಾರಗಳನ್ನೆಲ್ಲ ಸಹಿಸದೆ ಬಹಿಷ್ಕಾರ ಪತ್ರಿಕೆ ಹುಟ್ಟಿದ ಮೇಲೆ ನಿರ್ವಾಹ ವಿಲ್ಲದುದರಿಂದ ಎದುರಿಗೆ ನಿಲ್ಲಬೇಕಾಯಿತು.? +ಬಾಲಮುಕುಂದ–“ಆ ಮಾತು ಹಾಗಿರಲಿ. +ನಿಮ್ಮಿಂದ ಇನ್ನಾದರೂ ಈ ಸಾಧನೆ ನಡಿಯುವುದು ಪ್ರಯಾಸವೆಂತ ನನ್ನ ಮನಸ್ಸಿಗೆ ತೋರುತ್ತೆ.” +ಭೀಮಾಚಾರ್ಯ–“ತಾವೇ ಇಷ್ಟು ಅಪಧೈರ್ಯದ ಮಾತು ಹೇಳಿ ದರೆ ನನ್ನಿಂದ ಆಗುವುದೇನು? +ವೇದವ್ಯಾಸ ಉಪಾಧ್ಯಗೆ ತಮ್ಮ ಆಶ್ರಯ ಸಿಕ್ಕುವ ಹಾಗಿಲ್ಲವಾದರೆ ನಾನು ಇಲ್ಲಿಂದಲೇ ಊರಿಗೆ ಮರಳುತ್ತೇವೆ. +ವೇದ ವ್ಯಾಸನು ಹೊಳೆಗೆ ಹಾರಲಿ.?” +ಬಾಲಮುಕುಂದ—“ಈ ದ್ವಿಜೋತ್ತಮನನ್ನು ಬಿಟ್ಟು ಹಾಕಬಹುದೇ? +ಒಂದು ಸಣ್ಣ ಆಲೋಚನೆ ಹೇಳಿಬಿಡುತ್ತೇನೆ. +ಅದನ್ನು ಪ್ರಕಟಪಡಿಸದೆ ಅನುಸರಿಸಿದರೆ ಪ್ರಯೋಜನ ಸಿಕ್ಕುವುದು. +ವೇದವ್ಯಾಸ ಮತ್ತು ಭೀಮಾಚಾರ್ಯ – ತಮ್ಮ ಪಾದದಾಣೆ ಪ್ರಕಟ ಮಾಡುವುದಿಲ್ಲ. +ಮಾಡತಕ್ಕ ಯುಕ್ತಿ ಯಾವುದೋ ಅಪ್ಪಣೆಯಾಗಲಿ. +ಬಾಲಮುಕುಂದ–“ಷಟ್ಪುರ ನಗರವನ್ನಾಳುವ ಅರಸು ಅತಿ ಪ್ರತಾಪಿಯೂ ನೀತಿವಂತನೂ ಧರ್ಮಪರಿಪಾಲಕನೂ ಎಂಬ ಖ್ಯಾತಿಯು ರಾಜ್ಯದಲ್ಲೆಲ್ಲಾ ತುಂಬಿಯದೆ. +ಪಂಚಮಠದಲ್ಲಿರುವ ಯಾವನೊಬ್ಬ ಸನ್ಯಾಸಿಯೂ ಮಾಡಿದ ಅಪರಾಧವನ್ನು ಉಳಕೆ ನಾಲ್ಕು ಮತಾಧಿಪತಿಗಳು ಬಚ್ಚಿಟ್ಟು ಬಿಟ್ಟರೆ, ಅದರ ವಿಚಾರವನ್ನು ಪ್ರಧ್ವಿಪಾಲಕರು ಮಾಡುವ ಸಂಪ್ರದಾಯವಿದೆ. +ಆದುದರಿಂದ ಆ ವೇದವ್ಯಾಸ ಉಪಾಧ್ಯನು ಕಂಗೆಡುವದ್ಯಾಕೆ? +ನೃಸಿಂಹಪುರಕ್ಕೆ ಶೀಘ್ರ ಹೋಗಿ ರಾಜದ್ವಾರದಲ್ಲಿ ದೂರು ಹೇಳಿದರೆ ನಿವೃತ್ತಿ ಸಿಕ್ಕದಿರದು. +ಬಳಿಕ ತಾವು ನನ್ನನ್ನು ಕಂಡರೆ ಮುಂದಿನ ಉಪಾಯ ಹೇಳುವೆನು. +ಸಾವಕಾಶ ಮಾಡದೆ ಆ ಪಟ್ಟಣಕ್ಕೆ ತೆರಳಿ ಬೇಕಾದ ರಾಜಸೇವಕ ರನ್ನು ಆದಿಯಲ್ಲಿ ಕಂಡು ಜಾಗ್ರತೆಯಿಂದ ವ್ಯವಹರಿಸಿದರೆ ಪ್ರಯಾಸವಿಲ್ಲದೆ ಕೆಲಸ ಕೈಗೂಡುವದು ಸಾವಿರ ಮಾತ್ಯಾಕೆ? +ಚತುರೋವಾಯದಲ್ಲಿ ಘಟ್ಟಿಗನಾದ ಬಾಲಮುಕುಂದನು ತನ್ನ ಮನಸ್ಸಿನ ಬಯಕೆಯಂತೆಯೇ ದ್ವಿಜರೀರ್ವರ ಹಟವು ಪೂರ್ಣವಾದರೆ ಯತಿಯ ಮುಂದಿನ ಅವಸ್ಥೆಯು ಹ್ಯಾಗಾದರೇನೆಂಬ ತಾತ್ಕಾಲದ ಪರಿಗಣನದಿಂದ ಸೂಚಿಸಿದ ಉಪಾಯವು ಬುದ್ಧಿವಂತಿಗೆಯ ಲಕ್ಷಣವೆನ್ನಬಹುದು. +ವೇದವ್ಯಾಸ ಉಪಾಧ್ಯನೂ ಭೀಮಾಚಾರ್ಯನೂ ನೃಸಿಂಹಪುರಕ್ಕೆ ತಾಮಸ ಮಾಡದೆ ಪಯಣವಾದರು. +ಅಲ್ಲಿ ಕುಮಾರ ರಾಯನೆಂಬ ವರ್ತಕನ ಮನೆಯತ್ತ ಒಂದು ಕೋಣೆಯನ್ನು ಬಾಡಿಗೆಗೆ ಮಾಡಿಕೊಂಡು ಉಳಕೊಂಡರು. +ರಾಜಸ್ಥಾನದ ಪ್ರಮುಖ ಉದ್ಯೋಗಸ್ವರ ಗುಣದೋಷಗಳನ್ನೂ ಚಿತ್ರಪ್ರಕೃತಿಯನ್ನೂ ಬಲ್ಲವರಿಂದ ವಿಚಾರಿಸಿ ತಿಳುಕೊಂಡು ಪ್ರಧಮದಲ್ಲಿ ಒಬ್ಬ ವಕೀಲನ ಸಹಾಯವನ್ನು ಪಡೆಯುವಗೋಸ್ಕರ ಪರಂತು ಗೋವಿಂದ ಪಂಡಿತನೆಂಬ ಹೆಸರುಹೋದ ವಕೀಲನ ಮನೆಗಭಿಮುಖವಾದರು. +ಪುಣ್ಯವತಾತ್‌ ಮನೆಯ ಬಾಗಿಲಲ್ಲಿಯೇ ಗಾಳಿಗೆ ಮೈಯೊಡ್ಡಿ ಕೂತಿರುವ ಪಂಡಿತನನ್ನು ಕಂಡು ನಮಸ್ಕರಿಸಿ ತಾವು ಬಂದ ಉದ್ದೇಶವನ್ನು ಅವನಿಗೆ ತಿಳಿಸಿದರು . +ದೇವ ಬ್ರಾಹ್ಮಣರ ಮೇಲೆ ಅತಿ ವಿಶ್ವಾಸವುಳ್ಳ ಆ ನ್ಯಾಯಶಾಲಿಯು ಉಭಯ ದ್ವಿಜರನ್ನು ಅಧಿಕವಾಗಿ ಉಪಚರಿಸಿ ಅವರ ಆಗಮನದ ಕಾರಣವನ್ನು ವಿಚಾರಿಸಿ ಹೆಚ್ಚು ಸಮಯದವರೆಗೂ ಚೆನ್ನಾಗಿ ಆಲೋಚನೆ ಮಾಡಿದ ಬಳಕ ಅವರ ಕೆಲಸವನ್ನು ತಾನು ಸುಧಾರಿಸಿಕೊಡುವೆನೆಂದು ಭರವನೆ ಕೊಟ್ಟು ಅವರಿಗೆ ಮರುದಿವಸ ಮುಂಜಾನೆ ಬರಹೇಳಿದನು. +ಅವನ ಅನುಜ್ಞೆಯನ್ನನುಸರಿಸಿ ಮರುದಿನ ಬೆಳಿಗ್ಗೆ ವೇದವ್ಯಾಸನೂ ಭೀಮಾಚಾರ್ಯನೂ ವಕೀಲನನ್ನು ಕಂಡಾಗ ಅವನು ಬರೆದಿಟ್ಟ ಅರ್ಜಿಯ ಮಸೂದೆಯನ್ನು ಭೀಮಾಚಾರ್ಯನಿಗೆ ತೋರಿಸಿದನು. +ಆಚಾರ್ಯನು ಮಾತಿನಲ್ಲಿ ಅತಿ ಚಪಲನೂ ಮಿಶಶ್ಲಾಘನಾಯುಕ್ತ ವಾದ ಕರ್ಣಮಧುರ ಭಾಷಣದಿಂದ ಅತಿ ಕಠಿಣ ಹೃದಯವನ್ನಾದರೂ ದ್ರವಿಸುವ ಶಕ್ತಿಯುಳ್ಳವನಾದುದರಿಂದ ಆ ಮಸೂದೆಯನ್ನು ಅಡಿಗಡಿಗೆ ಓದಿ ನೋಡುತ್ತಾ “ವ್ಹಾ!ವ್ಹಾ!ಈ ವಕೀಲ ಘಟ್ಟಿಗ, ಇವನನ್ನಗಲಬಾರದು” ಎಂದು ವಕೀಲನು ಕೇಳುವಷ್ಟು ಮೆಲ್ಲಗೆ ವೇದವ್ಯಾಸನ ಕಿವಿಯಲ್ಲಿ ಹೇಳಿದನು. +ಆ ಮಾತು ಕೇಳುತ್ತಲೇ ಸ್ತೌತ್ಯ ಪ್ರಿಯನಾದ ಪರಂತು ಗೋವಿಂದ ಪಂಡಿತನು, “ಧರಾಮರರೇ!ತಮ್ಮ ಆಶೀರ್ವಾದವನ್ನು ಮಾತ್ರವೇ ನಾನು ಬಯಸುವವನಲ್ಲದೆ ತಮ್ಮ ದುಡ್ಡಿನ ಮೇಲೆ ಅಭಿಲಾಷೆಯುಳ್ಳವನಲ್ಲ ಬಲ್ಲಿರೋ! +ತಾವು ಕೈಕೊಂಡ ಕಾರ್ಯವು ಕೊಳೆತ ಬೆರಳನ್ನು ಕೊಯ್ಯುವ ವಿಚಾರವಾಗಿದೆ. +ಅದಕ್ಕೆ ನನ್ನಿಂದ ಕೂಡುವಷ್ಟು ಸಹಾಯಮಾಡಿ ಕೀರ್ತಿ ಪಡೆಯ ಬೇಕೆಂಬುದೊಂದೇ ಕುತೂಹಲವಲ್ಲದೆ ಮತ್ತೊಂದು ಆಶೆ ನನಗಿಲ್ಲ. +ನೋಡಿರಿ!ತಾವುಗರು ಇನ್ನುಮುಂದೆ ಭೋಜನಕ್ಕು ನಮ್ಮಲ್ಲಿಯೇ ಇದ್ದು ಕೊಳ್ಳಿ. +ಬಿಡಾರ ಮತ್ತೊಂದು ಮಗುದೊಂದು ಯಾಕೆ?” ಎಂದನು. +ತಾವು ಹೊರಟ ಮುಹೂರ್ತದ ಬಲದಿಂದ ತಮಗೆ ಇಷ್ಟು ಸುಲಭವಾಗಿ ಎಲ್ಲವು ಸಾನುಕೂಲವಾಗುವದಾಯಿತೆಂದು ಹಾರುವನಿಬ್ಬಲೂ ಒಂದು ಪುರುಷ ಪ್ರಮಾಣ ಏರಿದರು. +ಪ್ರತ್ಯೇಕ ಒಂದು ಬಿಡಾರದ ಯೋಚನೆ ಇನ್ಯಾಕೆ? +ಖರ್ಚು ಉಳಿಯಿತು. +ಧರ್ಮಕ್ಕೆ ವಕಾಲತ್ತು ಮಾಡಲಿಕ್ಕೂ ಪುಣ್ಯಾತ್ಮನು ಒಪ್ಪಿದ್ದಾನೆ. +ಇನ್ನು ರಾಜಾಸಾಹೇಬರಂತೆ ತಿರುಗುವಾ ಕೇಳುವವನ್ಯಾರು? +ನಾನು ನಿನ್ನ ಸಂಗಡ ಹೊರಟ ಕಾರಣ ನಿನಗ ಇಷ್ಟು ಅನುಕೂಲ ದೊರೆಕಿತು. +ಇಲ್ಲವಾದರೆ ಎನ್ನ ಹೆಸರಿಗೆ ಇನ್ನೂ ಕೆಲವು ಗುಣಸಾನಗಳನ್ನು ಕೂಡಿಸಿಕೊಳ್ಳಬಹುದಿತ್ತು” ಎಂದು. +ಭೀಮಾಚಾರ್ಯನು ವೇದವ್ಯಾಸ ಉಪಾಧ್ಯನನ್ನು ಚೇಷ್ಟೆ ಮಾಡಿನನು . +“ತಮ್ಮ ಮಾತು ಸತ್ಯವೇ” ಎಂದು ವೇದವ್ಯಾಸನು ಉತ್ತರಕೊಟ್ಟು ಸುಮ್ಮನಾದನು. +ಅವನ ಮನಸ್ಸಿನ ಭಾವನೆ ಭೀಮಾಚಾರ್ಯನಮೇಲೆ ಶುದ್ಧವಾಗಿರಲ್ಲ. +ಈ ಹರ್ಕುಬಾಯಿ ಬ್ರಾಹ್ಮಣನು ತನಗೇ ಗಂಟುಬಿದ್ದನೆಂಬ ಚಿಂತೆಯನ್ನು ಬಯಲುಪಡಿಸದೆ ಸಹಿಸಿಕೊಂಡನು. +ವಸಂತನಗರದ ದರ್ಬಾರಿನ ವರ್ಣನೆಯನ್ನು ಸ್ವಲ್ಪ ಮಟ್ಟಿಗಾದರೂ ಇಲ್ಲಿ ಮಾಡಬೇಕಾಗಿದೆ. +ಶ್ರೀಮದ್‌ ವೀರನರಸಿಂಹಭೂಪತಿಯು ಶ್ರೇಷ್ಟ ಮತಿಯುಳ್ಳವನು. +ನ್ಯಾಯ ಪರಿಪಾಲನೆಯಲ್ಲಿ ತಾನೇ ಬಹು ಸೂಕ್ಷ್ಮವಿಚಾರ ಮಾಡುವ ಸದ್ಗುಣವಂತನು. +ಆದರೂ ತನ್ನ ಕೈಕೆಳಗಿನ ಅಹಲ್ಲೆಕಾರರ ಅಭಿಪ್ರಾಯವನ್ನು ತಿಳುಕೊಳ್ಳುವ ಪೂರ್ವಪದ್ಧತಿಯನ್ನು ಯಾವ ಸಂಗತಿಯಲ್ಲಾದರೂ ಬಿಟ್ಟು ಬಿಡುವವನಲ್ಲ. +ಅವನು ಜನಮತದವನಾದಾಗ್ಯೂ ಅನ್ಯ ಮತಸ್ಥರ ಮೇಲೆ ಎಷ್ಟಾದರೂ ದ್ವೇಷವಿಡದೆ ಅವರನ್ನು ಬಹು ಅನು ರಾಗದಿಂದ ಪಾಲಿಸುವನು. +ಆದಿಕೇಶವ ರಾವ್‌ ಎಂಬ ಹಿರೀದಿವಾನ, ಚನ್ನ ಬಸವಯ್ಯನೆಂಬ ಕಿರೀ ದಿವಾನ ಹೀಗೆ ಇಬ್ಬರು ಪ್ರಧಾನಿಗಳು ದಿನವಹಿ ದರ ಬಾರಿನಲ್ಲಿ ಹಾಜರಿರುವರು. +ಹಿರೀ ದಿನಾನನು ಒಳ್ಳೆ ಕುಶಲ ಬುದ್ಧಿಯುಳ್ಳ ವನು ಮತ್ತು ಮಿತಭಾಷಿ. +ಕಿರೀ ದಿನಾವನು ಸ್ವಲ್ಫ ಮಂದಬುದ್ಧಿಯುಳ್ಳ ಅಧಿಕ ಪ್ರಸಂಗಿ, ಇವರಿಬರೂ ಸ್ವಮತಾಭಿಮಾನಿಗಳಾಗಿ ಅನ್ಯ ಮತದ್ವೇಷಿಗಳು. +ಆದಿಕೇಳವರಾಯನು ಕಡುವೈಷ್ಣವನು: ಶಿವನಾಮೋಚ್ಛಾರಣ ಅವನ ಕಿವಿಗೆ ಬಿದ್ದೊಡನೆ ತನ್ನ ಎರಡೂ ಕಿವಿಗಳಿಗೂ ಬೆರಳುಗಳನ್ನು ಸೇರಿಸಿಬಿಟ್ಟು “ರಾಮ ರಾಮ” ಎನ್ನುವನು. + ರಾಮನಾಮೋಚ್ಚಾರವು ಚನ್ನಬಸವಯ್ಯನ ಶ್ರೋತೇಂದ್ರಿಯಕ್ಕೆ ಬೀಳುವ ಮೊದಲೇ ಅವನು ಕವಿಗಳನ್ನು ಬೆರಳುಗಳಿಂದ ಮುಚ್ಚಿಕೊಂಡು “ಶಿವಾ ಶಿವಾ” ಎನ್ನುವನು. +ಹಿರೀ ದಿವಾನರಿಗೆ ಮೀರಮುನಷಿ ಅಶ್ವತ್ಥ ನಾರಾಯಣರಾಯ. +ಕಿರೀ ದಿವಾನರ ದೊಡ್ಡ ಮುನಷಿ ವೀರಭದ್ರಯ್ಯ. +ಅವರಿಬ್ಬರಿಗೂ ತಮ್ಮ ಧನಿಗಳಂತೆ ಅನ್ಯ ಮತದ್ವೇಷ ಪುಷ್ಪಳವಿರುವುದು. +ರಾಜಸ್ಥಾನದಲ್ಲಿ ನಡೆಯುವ ಪ್ರತಿ ಚರ್ಚೆಯಲ್ಲಿಯೂ ಅದಿಯಲ್ಲಿ ಕಿರೀ ಪ್ರಧಾನಿಯ ಅಭಿಪ್ರಾಯ, ಕಡೆಗೆ ಹಿರೀ ಪ್ರಧಾನಿಯ ಆಲೋಚನೆ ತಕ್ಕೊಂಡು ಅರಸನು ಅವೆರಡನ್ನು ಚೆನ್ನಾಗಿ ಮಧಿಸಿ ನೋಡಿ ತೀರ್ಪನ್ನು ನುಡಿಯುವ ವಾಡಿಕೆಯು ನಡೆಯುವದು. +ಹೆಚ್ಚಾಗಿ ಮತ ಸಂಬಂಧವಾದ ವಿವಾದಗಳಲ್ಲಿ ರಾಜನು ಸ್ವಯಂಜ್ಯೋತಿ ಗರುವರ್ಯನೆಂಬ ಅಭಿದಾನವುಳ್ಳ. +ಸ್ವಜಾತಿ ಸನ್ಯಾಸಿಯನ್ನು ಕರೆಸಿ ಅರ್ಧಾಸನ ಕೊಟ್ಟು ಕೂರಿಸಿ ಭಯಭಕ್ತಿಯಿಂದ ಅವರ ಅಭಿಪ್ರಾಯವನ್ನು ಕೇಳುವದಿತ್ತು. +ಆದರೆ ಅವರ ಅಭಿಪ್ರಾಯವು ಮನಸ್ಸಿಗೆ ಸರಿಕಾಣದೆ ಹೋದರೆ ಅದನ್ನು ತೃಜಿಸಿ ಅರಸನು ಯುಕ್ತ ಕಂಡಂತೆ ತೀರ್ಮಾನಿಸುವಷ್ಟು ನಿರ್ಧಾರವುಳ್ಳವನಾದ ಕಾರಣ ಗುರುವರ್ಮನು ಅನೇಕ ಸಾರಿ ತನ್ನ ಖಂಡಿತವಾದ ಸಿದ್ಧಾಂತವನ್ನು ತಿಳಿಸದೆ “ಜಿನಧರ್ಮವನ್ನು ಪಾಲಿಸು” ಎಂದು ಹೇಳಿಮೌನ ತಾಳುವನು. +ಆ ಮಾತು ಅವನ ಬಾಯಿಯಿಂದ ಬಿದ್ದಾಕ್ಷಣ ಸಿಂಹಾಸನದ ಎದುರು ಇರುವ ದೊಡ್ಡಘಂಟೆಯ ಸೂತ್ರವನ್ನು ಜಮೇದಾರ ರಾಮಸಿಂಗನು ಎಳೆಯುವನು. +ಆಗ ಘಂಟೆಯು ಗಂಭೀರವಾದ ಸ್ವರವನ್ನುಂಟು ಮಾಡುವದು. +ಕೂಡಲೇ ಕ್ಷಿತೀರನು ತೀರ್ಪು ವಿಧಿಸುವನು. +ಅದರ ಪ್ರವರ್ತನೆಯು ಚೊಕ್ಕವಾಗಿ ನಡಿಯಲಿಕ್ಕೆ ಬೇಕಾದ ಸಿಬ್ಬಂದಿಯು ಸಿದ್ಧವಿರುತ್ತದೆ. +ಒಟ್ಬಿನ ಮೇಲೆ ರಾಜದ್ವಾರದಲ್ಲಿ ನಡೆಯುವ ಆಚಾರ ವಿಚಾರವೆಲ್ಲಾ ಶ್ಲಾಘನೆಗೆ ಯೋಗ್ಯವಾದದ್ದೇ. +ಭೀಮಾಚಾರ್ಯನು ವೇದವ್ಯಾಸ ಉಪಾಧ್ಯನ ಸಂಗಡ ದಿವಾನರ ಹಜೂರು ಕಚೇರಿಯಲ್ಲಿ ಸಂದರ್ಭವಿರುವಷ್ಟರ ಮಟ್ಟಿಗೆ ಕೆಲವು ಉದ್ಯೋಗ ಸ್ಥರ ಭೇಟಮಾಡಿ ತಮ್ಮ ಸಂಕಷ್ಟಗಳ ಭಾರವನ್ನು ಮೆಲ್ಲಗೆ ತಿಳಿಸಿದಾಗ ತಮ್ಮಿಂದಾಗುವ ಸಹಾಯ ಮಾಡುವೆವೆಂದು ಆವರು ಧೈರ್ಯಕೊಟ್ಟರು. +ದಿವಾನರ ಮನೆಗಳಿಗೆ ಹೋಗಿ ಅವರನ್ನು ಕಾಣುವುದು ಅಥವಾ ಬೇರೆಯವರ ಪರಮುಖ ತಮ್ಮ ಬಯಕೆಯ ಕುರಿತು ಪ್ರಸ್ತಾಪ ಮಾಡಿಸುವುದು. +ಕಾರ್ಯ ಸಾಧನೆಗೆ ಪ್ರತಿಕೂಲವಾದ್ದೆಂದು ತಿಳಿದು ಅಂಧಾ ವಕ್ರಮಾರ್ಗವನ್ನು ಬಿಟ್ಟು ವಕೀಲನ ಬುದ್ಧಿವಂತಿಗೆ ಮೇಲೆಯೇ ವಿಶ್ವಾಸವಿಟ್ಟು ಕೊಂಡಿದ್ದರು. +ವಕೀಲನು ಮಾಡಿದ ಮಸೂದೆಯ ನಕಲು ಬರದು ಅದಕ್ಕೆ ಆ ರಾಜ್ಯದಲ್ಲಿ ವಾಡಿಕೆ ಯಿರುವ ದರ್ಬಾರಿನ ರಸ ಚೀಟುಗಳನ್ನು ಅಂಟಿಸಿ ಅದಕ್ಕೆ ವೇದವ್ಯಾಸ ಉಪಾಧ್ಯನು ಇಬ್ಬರು ಗೃಹಸ್ಥರ ಸಾಕ್ಷಿಸಮೇತ ತನ್ನ ಸಹಿಯನ್ನು ಮಾಡಿದ ಬಳಿಕ ವಕಾಲತು ಸಹಿತ ಓಲಗ ಶಾಲೆಯ ಮುಂದುಗಡೆ ಇರುವ ಪೆಟ್ಟಿಗೆಯಲ್ಲಿ ಹಾಕಿದನು. +ಅದು ಅದೇ ಸಾಯಂಕಾಲ ಅರ್ಜಿಗುಮಾಸ್ತ ದಾಮೋದರ ಪಂತನ ಕೈವಶವಾಯಿತು. +ಈತನ ಸ್ನೇಹವನ್ನು ಭೀಮಾಚಾರ್ಯನು ಮೊದಲೇ ಮಾಡಿಕೊಂಡಿದ್ದನು. +ಅವನು ಮರೆಯದೆ ಈ ಅರ್ಜಿಯು ಬೇಗನೆ ಸುನಾವಣಿಯಾಗುವ ಹಾಗಿನ ಉಪಾಯ ವರ್ತಿಸಿ ಅವರ ಪರಾಮರ್ಶಕ್ಕೆ ನಿಶ್ಚಯಿಸಿದ ದಿವಸ ಹಗಲು ಎರಡು ತಾಸಿಗೆ ಹಾಜರಾಗಬೇಕೆಂಬಾಜ್ಞೆ ಇರುವ ಇಸ್ತಿಹಾರನ್ನು ವೇದವ್ಯಾಸ ಉಪಾಧ್ಯನ ವಕೀಲನಿಗೆ ಮುಟ್ಟಿಸಿದನು. +ನಿಯಮಿತ ದಿನ ಭೀಮಾಚಾರ್ಯನೂ ವೇದವ್ಯಾಸ ಉಪಾಧ್ಯನೂ ವಕೀಲನ ಸಂಗಡ ರಾಜಸ್ಥಾನಕ್ಕೆ ಹೋದರು ಅರಸನು ಕ್ಲಪ್ತ ಸಮಯಕ್ಕೆ ವಾಡಿಕೆಯಾದ ಸಪರಿವಾರ ಸಮೇತ ಓಲಗ ಶಾಲೆಗೆ ಪ್ರವೇಶಿಸಿ ಸಿಂಹಾಸನ ದಲ್ಲಿ ಕುಳಿತುಕೊಂಡಾಕ್ಷಣ ಸರ್ವರೂ ಎದ್ದುನಿಂತು ನಮನಮಾಡಿ ಕೂರ ಬಹುದೆಂದು ಕೈ ಸಂಜ್ಞೆಯಿಂದ ರಾಜಾಜ್ಞೆಯಾದ ಬಳಿಕ ತಮ್ಮ ತಮ್ಮ ಸ್ಥಾನಕ್ಕೆ ಹೋದರು. +ವೇದವ್ಯಾಸನ ಅರ್ಜಿಯು ಮತಸಂಬಂಧವಾದ ವಿವಾದವಾಗಿರುವುದರಿಂದ ಅದನ್ನು ತೀರಿಸುವ ಕಾಲದಲ್ಲಿ ರಾಜನ ಸ್ವಜಾತಿ ಗುರುವರ್ಯರಿರಬೇಕಾದ್ದು ಪೂರ್ವಕಟ್ಟಳೆಯ ಪ್ರಕಾರ ಅಗತ್ಯವಾಯಿತು. +ಸ್ವಯಂ ಜ್ಯೋತಿ ಗುರುವರ್ಯರಿಗೆ ಮುಂದಾಗಿ ದಿವಾನರ ಕಚೇರಿಯಿಂದ ಸೂಚನೆ ಕೊಟ್ಟಿರುತಿತ್ತು. +ಅದಕ್ಕನುಗುಣವಾಗಿ ಗುರುವರ್ಯರು ತಮ್ಮ ಬಿರುದಾವಳಿ ಸಮೇತ ಓಲಗ ಶಾಲೆಗೆ ಬಂದರು. +ಎಲ್ಲರೂ ಎದ್ದುನಿಂತು ಅವರಿಗೆ ಯಥೋಚಿತ ಅಭಿವಂದನೆ ಮಾಡಿದರು. +ರಾಜನು ದಂಡಪ್ರಣಾಮಮಾಡಿ ಗುರುವಿಗೆ ಕೈ ಕೊಟ್ಟು ಅರ್ಧಾಸನವನನ್ನಿತ್ತನು. +ಉಭಯತರೂ ಕೊಂಚಹೊತ್ತು ಪರಸ್ಪರ ಯೋಗಕ್ಷೇಮವನ್ನು ಕುರಿತು ಪ್ರಶ್ನೋತ್ತರ ಮಾಡಿದ ಮೇಲೆ ಅಂದು ನೇಮಿಸಲ್ಪಟ್ಟ ಕೆಲಸದ ವಿನಿಯೋಗಕ್ಕೆ ಮನಸ್ಸು ಕೊಟ್ಟರು. +ಜಮೇದಾರ ರಾಮಸಿಂಗನು ‘ಎದ್ದಾಸ ಉಪಾದಿ, ಎದ್ದಾಸ ಉಪಾದಿ ಎದ್ವಾಸ ಉಪಾದಿ ಎಂದು ಮೂರಾವರ್ತಿ ಒದರಿದನು. +ವೇದವ್ಯಾಸ ಉಪಾಧ್ಯನು ಆಗ್ಯೆ ಕೋಣನಂತೆ ಒಂದು ಮೂಲೆಯಲ್ಲಿ ನಿದ್ರಾವಸ್ಥೆಯಲ್ಲಿ ಬಿದ್ದುಕೊಂಡಿದ್ದನು. +ಭೀಮಾಚಾರ್ಯನು ಶೀಘ್ರ ಅವನನ್ನು ಎಬ್ಬಿಸಿ “ಎ ಖೋಡಿ ನಿನ್ನವಾಲೆ ಕಳೀತು! +ಮೂರಾವರ್ತಿ ಕರೆದರೂ ಸುಟ್ಟ ನಿದ್ರೆ ನಿನಗೆ ಇನ್ನೂ ಕಾಡುತ್ತದೆಯೇ? +ಬಾ ಎಂದು ಗದರಿಸಲು, ವೇದವ್ಯಾಸನು ನಾರಾಯಣ ಸ್ಮರಣೆ ಪುರಸ್ಸರ ಕಣ್ಣುಗಳನ್ನು ತಿಕ್ಕಿಕೊಳ್ಳುತ್ತಾ ಅರ್ಜಿದಾರರು ನಿಂತು ಕೊಳ್ಳುವ ಸ್ಟಾನಕ್ಕೆ ಒಂದು ರಾಜನಿಗೆ ಸಲಾಂ ಕೊಟ್ಟನು. +ಮೀರಮುನಷಿ ಅಶ್ವತ್ಥನಾರಾಯಣನ ಸಂಕೇತಕ್ಕನುಗುಣ ವಾಗಿ ದಾಮೋದರಪಂತರು ಎದ್ದು ನಿಂತು ವೇದವ್ಯಾಸನ ಮನವಿಯನ್ನು ಓದಲಾರಂಭಿಸಿದನು. +ಹ್ಯಾಗೆಂದರೆ-“ಶ್ರೀಮದ್‌ರಾಜಾಧಿರಾಜಮಹ:ರಾಜ ವಸಂತನಗರದ ಭೂಪತಿಗಳ ಸಂಸ್ಥಾನಕ್ಕೆ ಕುಮುದಪುರದ ವೇದವ್ಯಾಸ ಉಪಾಧ್ಯನು ಅತಿ ವಿನಯದಿಂದ ಬರಕೊಂಡ ಅರ್ಜಿ, ದೇವರು! +ನಾನು ಗೀರ್ವುಣ ಭಾಷೆಯಲ್ಲಿ ಅಭಿಜ್ಞತೆ ಯುಳ್ಳವದಾದ ಕಾರಣ ಕುಮುದಪುರದ ಶ್ರೀಮಠ ಚಂಚಲನೇತ್ರ ಯತಿಗಳು ತನ್ನ ಮನದ ನನ್ನನ್ನು ಪುರಾಣಿಕನಾಗಿ ನೇಮಿಸಿರುತ್ತಿದ್ದರು. +ನಾನು ಆ ಉದ್ಯೋಗವನ್ನು ಸರಿಯಾಗಿ ನಡಿಸಿಕೊಂಡು ಬರುತ್ತಿದ್ದೆ. +ಈ ಯತಿಗಳು ಷಡ್ವೈರಿಗಳನ್ನು ಜಯಿಸಿದವರೆಂಬ ಪ್ರಖ್ಯಾತಿಯುಳ್ಳವರಾಗಿ ತಮ್ಮ ಸದ್ಗುಣದಿಂದ ಸಕಲ ಜನರಿಗೂ ಮಾನ್ಯರಾಗಿರುವ ಕಾಲದಲ್ಲಿ ದುರದೃಷ್ಟದಿಂದಲೋ ದುರ್ದಶೆಯಿಂದಲೋ ವಾಗ್ದೇವಿ ಎಂಬ ಹೆಸರಿನ ಒಬ್ಬಕೆಯ ಮೋಹಜಾಲ ದಲ್ಲಿ ಸಿಕ್ಕಿಬಿದ್ದು ಯತಿಯಾಗಿ ತಾನು ನಡಿಯಬೇಕಾದ ಮಾರ್ಗವನ್ನೇ ಪರಿತ್ಯಜಿಸಿ ಹೆಸರು ಪೂರ್ತಿ ಸನ್ಯಾಸಧರ್ಮವನ್ನು ನಡೆಸುವ ತೀರಾ ಕಪಟ ಸನ್ಯಾಸಿಯಂತೆ ಪ್ರವರ್ತಿಸುವದರಿಂದ ಹುಟ್ಟುವ ಅಸಹ್ಯವನ್ನು ತಡೆಯ ಕೂಡದೆ ಒಂದು ದಿನ ಏಕಾಂತದಲ್ಲಿ ನಾನು ರವಷ್ಟು ಅನುವಾದಿಸಿದ್ದಕ್ಕಾಗಿ ಅವರು ಏಕಾಏಕಿ ಪ್ರಕೋಪಿಸಿ ನನ್ನ ಮೇಲೆ ದ್ವೇಶತಾಳಿದರು. +ಮತ್ತು ನನ್ನನ್ನು ಉದ್ಯೋಗದಿಂದ ತೆಗೆದುಹಾಕಿದರು. +ನಾನು ಸುಮ್ಮಗಾದೆ. +ಹಾಗೆಯೇ ಕೆಲವು ದಿವಸಗಳಲ್ಲಿ ನದೀ ಸ್ಥಾನಕ್ಕೆ ಹೋಗುವ ನೆವನದಿಂದ ವಾಗ್ದೇವಿಯು ತನ್ನ ವೆಂಪುತೋರಸುವದಕ್ಕಾಗಿ ಗೆಳೆಯರ ಕೂಟದಿಂದ ಪರಿವೃತಳಾಗಿ ಮಾಡುತ್ತಿದ್ದ ವರ್ಯಟನವನ್ನು ಕೆಲವು ಯವ್ವನಸ್ಥರು ನೋಡಿ ಪದ್ಯರೂಪವಾಗಿ ಅವಳನ್ನು ನಿಂದಿಸಿದ ಸಿಟ್ಟಿನಿಂದ ಚಂಚಲ ನೇತ್ರ ಸ್ವಾಮಿಗಳು ಆ ಯೌವ್ವನಸ್ಥರನ್ನು ಬಹಿಷ್ಕರಿಸಿ ಅವರನ್ನು ಸಂಪರ್ಕವಾಗಿ ನಡಕೊಂಡರೆಂಬ ಹೇತುವಿನಿಂದ ಮರ್ಯಾದಸ್ಪರಾದ ಬೇರೆ ಕೆಲವರನ್ನು ಸಹಾ ತ್ಯಜಿಸಿಟ್ಟಿದ್ದಾರೆ. +ಈ ಯತಿಗಳ ಭ್ರಷ್ಟತನದಿಂದ ಇಡೀ ಬ್ರಾಹ್ಮಣ್ಯಕ್ಕೆ ಅಸೂಯೆ ಉಂಟಾಗಿಯದೆ. +ಹಾಗೆ ತ್ಯಜಿಸಲ್ಪಟ್ಟಿವರಲ್ಲಿ ನಾನು ಒಬ್ಬನಾದುದರಿಂದ ನಾನು ಮಾಡುವ ಅನ್ಯಾಯದ ಬಾಧೆಯನ್ನು ತಡೆಯಲಿ ಕ್ಕಾಗದೆ ವಸಂತನಗರದಲ್ಲಿರುವ ಬೇರೆ ನಾಲ್ಕು ಮರಾಧಿಪತಿಗಳಿಗೆ ಬರಹ ಮೂಲಕವಾಗಿ ಅರಿಕೆ ಮಾಡಿಕೊಂಡೆನು. +ಆದರೆ ಅವರ್ಯಾರೂ ನನ್ನ ಮನವಿಗೆ ಕಿವಿಕೊಡದೆ ನನಗೆ ಧಿಕ್ಕರಿಸಿ ಬಿಟ್ಟಿದ್ದಾರೆ. +ಹೀಗಾಗಿ ನನ್ನ ಸಂಕಷ್ಟವು ಮತ್ತೂ ಹೆಚ್ಚಾಗಿಯದೆ ಆದುದರಿಂದ ಮಹಾಸ್ವಾಮಿಯ ಓಲಗದಲ್ಲಿ ನಿವೃತ್ತಿ ಹೊಂದುವ ಆಶೆಯಿಂದೆ ಸನ್ನಿಧಾನದ ಮರೆಹೊಕ್ಳಿರುತ್ತೇನೆ. +ನೀತಿ ಪರಿಪಾಲ ನಾರ್ಥವಾಗಿ ಮಹಾಸ್ವಾಮಿಗಳ ಸರ್ಕಾರದವರು ಲೋಕನಿಂದ್ಯವಾದ ಕೃತ್ಯ ದಲ್ಲಿ ಅಮರಿಕೊಂಡಿರುವ ಸ್ತ್ರೀಲಂಪಟ ಯತಿಯನ್ನು ದಂಡಕ್ಕೆ ಗುರಿಪಡಿಸ ಬೇಕಾಗಿ ದೀನಭಾವದಿಂದ ಬೇಡಿಕೂಳ್ಳುತ್ತೇನೆ” +“ ದೇವರು ಓದಿ ಹೇಳಿದ ಅರ್ಜಿಯನ್ನು ನೀನು ಬರಕೊಂಡದ್ದೋ? +ಅದರಲ್ಲಿ ಬರೆದ ಸಂಗತಿಗಳೆಲ್ಲ ಯಥಾರ್ಥವೋ?” ಎಂದು ಮೀರಮುನಷಿಯವರಿಂದ ಕೇಳಲ್ಪಟ್ಟಾಗ “ಅರ್ಜಿಯಲ್ಲಿ ಅನೃತ ಒಂದಾದರೂ ಇಲ್ಲ, ಶ್ರೀರಾಮನಾಣೆ” ಎಂದು ವೇದವ್ಯಾಸ ಉಪಾಧ್ಯನು ಪ್ರಮಾಣ ಮಾಡಿ ಹೇಳಿದನು. +ರಾಮಾ ಎಂಬ ಶಬ್ದವನ್ನು ಕೇಳಿದೊಡನೆ ಕಿರಿ ದಿವಾನನು ತನ್ನ ಕಿವಿಗಳಲ್ಲಿ ಕೈಬೆರಳು ಗಳನ್ನು ಹೊಗಿಸಿಬಿಟ್ಟು “ಶಿವಾ ಶಿವಾ ಎನ್ನಬಾರದೇ ಹಾರುವಾ” ಎಂದನು. +“ಶಿವಾ ಶಿವಾ” ಎಂಬ ಶಬ್ದ ಕೇಳುತ್ತಲೇ ಹಿರೀ ಪ್ರಧಾನನು ತನ್ನ ಕಿವಿಗಳನ್ನು ತದ್ರೀತಿ ಮುಚ್ಚಿಕೊಂಡು “ರಾಮ ರಾಮ” ಎಂದನು. +ಕೊಂಚ ಸಮಯದ ವರೆಗೆ ಹಿರೆ ಮತ್ತು ಕಿರೆ ದಿನಾನರು ಗಾಳಿಯೂ ಮಿಸುಕಾಡದಂತೆ ಕಿವಿಗಳನ್ನು ಮುಚ್ಚಿಕೊಂಡೇ ಅವರವರ ದೇವರ ನಾಮಗಳನ್ನು ಉಚ್ಚರಿಸಿದರು. +ಶಾನೆ ಹೊತ್ತು ಹೀಗೆ ಕಳೆದರೆ ಅರಸನು ಕೋಪಿಸುವನೆಂಬ ಹೆದರಿಕೆಯಿಂದ ಉಭ ಯ ದಿವಾನರು ತಮ್ಮ ಕಿವಿಗಳಿಗೆ ಅವುಗಳ ಸ್ವಾತಂತ್ರ್ಯವನ್ನು ಕೊಟ್ಟರು. +“ನೀನು ಮನವಿಯಲ್ಲಿ ಯತಿಯ ಮೇಲೆ ಬರೆದಿರುವ ಅಪವಾದವನ್ನು ಪ್ರತಿ ಪಾದನ ಮಾಡುವಿಯಾ?” ಎಂದು ಅರಸನು ಪ್ರಶ್ನೆಮಾಡಲು, “ಮಹಾ ಸ್ವಾಮಾ, ನನ್ನ ಕೇಳಿಕೆಯನ್ನು ಪ್ರತಿಪಾದಿಸುವದಕ್ಕೆ ಸಿದ್ಧನಾಗಿರುತ್ತೇನೆ. +ವಿಚಾರಣೆಗೆ ಮಾತ್ರ ಅಪ್ಪಣೆಯಾಗಲಿ” ಎಂದು ವೇದವ್ಯಾಸನು ಬೇಡಿ ಕೊಂಡನು. +ಅರ್ಜಿದಾರನ ವಕೀಲನು ಏನಾದರೂ ಹೇಳಿಕೊಳ್ಳುವದಕ್ಕೆ ಆಶೆಯುಳ್ಳವನೋ ಎಂದು ಕಿರೀದಿವಾನನು ಕೇಳಿದಾಗ ವಕೀಲನು ಸಣ್ಣದೊಂದು ಉಪನ್ಯಾಸವನ್ನು ಮಾಡಿದನು. +ಹ್ಯಾಗೆಂದರೆ–ಮಹಾಸ್ವಾಮಿ, ಸಕಲಸಂಗತಿಗಳು ಫಿದ್ವಿಯ ಅರ್ಜಿಯಲ್ಲಿ ಕೂಲಂಕಷವಾಗಿ ಬರಿಯೋಣಾಗಿದೆ. +ಪರಂತು ಅವುಗಳ ಯಥಾರ್ಥಕತೆಯನ್ನು ನಿಷ್ಕರ್ಷೆ ಮಾಡುವ ಹಾಗೆ ಒಂದು ನ್ಯಾಯವಾದ ವಿಚಾರಣೆಯು ಅಗತ್ಯವದೆಯಷ್ಟೇ. +ಪರಂತು ಫಿದ್ವಿಯು ಮಾರ್ಗತಪ್ಪಿ ಸನ್ನಿಧಾನದ ಮುಂದೆ ಬಂದವನಲ್ಲ. +ಅಂದರೆ ಅವನು ಮುಂದಾಗಿ ನಾಲ್ಕು ಮಠಾಧಿಪತಿಗಳಿಗೆ ಚಂಚಲನೇತ್ರರ ದೂರನ್ನು ಹೇಳಿದ್ದಾನೆ. +ಪರಂತು ಆ ಯತಿಗಳು ಫಿದ್ವಿಯ ಮಾತಿಗೆ ಕಿವಿಗೊಡದೆ ಅವನನ್ನು ತುಚ್ಛೇಕರಿಸಿದ ದೆಸೆಯಿಂದ ಅವನು ಕಳೆಗುಂದಿ ಮಹಾಸ್ವಾಮಿಯ ಪಾದಗಳ ಮುಂದೆ ಬಂದು ನಿವೃತ್ತಿ ಹೊಂದುವನೆಂಬ ಕೋರಿಕೆಯಲ್ಲಿದ್ದಾನೆ. +ಮುಖ್ಯವಾಗಿ ಅವನು ಮುಯ್ಯಿಗೆ ಮುಯ್ಯಿ ತೀರಿಸಲಿಕ್ಕೆ ಬಂದವನಲ್ಲ, ಅವನ ನಿಜಸ್ಥಿತಿ ತಿಳಿದವರು ಅವನ ಮೇಲೆ ಅಂಥಾ ಅನುಮಾನ ಗ್ರಹಿಸಲಿಕ್ಕಿಲ್ಲ. +ಅಂದರೆ ಇಡೀ ಬ್ರಹ್ಮಸಮೂಹಕ್ಕೇನೆ ಕುಂದು ಬರುವ ಹಾಗಿನ ಕುಮಾರ್ಗ ವನ್ಶು ಚಂಚಲನೇತ್ರರು ಅವಲಂಬಿಸಿ ಲೋಕನಿಂದ್ಯಕ್ಕೆ ಗುರಿಯಾಗಿರುವದರಿಂದ ಫಿದ್ವಿಯು ಕೇಳಿಕೊಳ್ಳುವ ನಿವೃತ್ತಿಯು ಅವನೊಬ್ಬನ ಮಟ್ಟಿಗೆ ಮಾತ್ರವಲ್ಲ, ಸರ್ವಲೋಕೋಪಕಾರಾರ್ಥವಾಗಿ ಅವನು ವದ್ದಾಡುವದಾಗಿರುತ್ತದೆ. +ಪರಂತು ಏವಂಚ ಇಂಥಾ ಮೊಕದಮೆಯಲ್ಲಿ ಮಹಾಸ್ವಾಮಿಗಳ ಅಪ್ಪಣೆಯಾಗದಿದ್ದರೆ ನೀತಿಯೇ ಮುಳುಗುವದಾಗುತ್ತದೆ. +ಪರಂತು ಹೆಚ್ಚಿಗೆ ಅರಿಕೆ ಮಾಡಿಕೊಳ್ಳಲಿಕ್ಕೆ ನಾನು ಶಕ್ತನಲ್ಲ. +ಇನ್ನೂ ಫಿದ್ವಿಯ ಪುಣ್ಯ ಮಹಾ ಸ್ವಾಮಿಯ ಚಿತ್ತವೆನ್ನುತ್ತೇನೆ, ಪರಂತು ಬೇರೇನು ಹೇಳಲಿ ಪರಾಕೆ”ವಕೀಲನ ಭಾಷಣದಲ್ಲಿ ಅಡಗಿರುವ ಪರಂತು ಎಂಬ ಶಬ್ದಗಳನ್ನು ಭೀಮಾಚಾರ್ಯನು ಜಾಗ್ರತೆಯಿಂದ ಎಣಿಸಿಕೊಂಡು ನೆನಸಿನಲ್ಲಿ ಇಟ್ಟು ಕೊಂಡನು. +ಮತ್ತು ಮುಗುಳು ನಗೆಯಿಂದ ವೇದವ್ಯಾಸನ ಮೋರೆಯನ್ನು ನೋಡುತ್ತಾ “ಪರಂತು” ಗಳ ಮಾಲೆಯನ್ನು ಮಾಡಿಸಿ ನಿನ್ನ ಕುತ್ತಿಗೆಗೆ ಹಾಕಿಕೊ, ಕಾಸೊಂದು ಖರ್ಚಿಲ್ಲದೆ ಅದೃಶ್ಯಾಭರಣ ಒಂದು ದೊರಕಿಸಿಕೊಂಡಂತಾಯಿತು.” ಎಂದನು. +ವಾಡಿಕೆಯಂತೆ ಕಿರೀದಿವಾನರ ಅಭಿಪ್ರಾಯ ಮುಂದಾಗಿ ತಿಳಿಯುವ ಅವಶ್ಯವಿದೆ, ಎಂದು ಮಹಾಸ್ವಾಮಿಯ ಅಪ್ಪಣೆಯಾಯಿತು. +ಆಗ ಚೆನ್ನಬಸವಯ್ಯನು ಎದ್ದು ನಿಂತು ಮಾತಾಡಲಿಕ್ಕೆ ಉಪಕ್ರಮಿಸಿದನು. +“ಮಹಾಸ್ವಾ ಮಿಯ ಪಾದಕ್ಕೆ ನಮೋ ನಮಃ! +ಈ ಹಾರುವನ ಮನವಿಯಲ್ಲಿ ಒಬ್ಬ ಸನ್ಯಾ ಸಿಯ ಮೇಲೆ ಘೋರವಾದ ದೋಷಾರೋಪಣೆ ತುಂಬಾ ಇದೆ. +ಹಾರುವರ ಮಕ್ಕಳು ಇಂಥಾ ಭಂಡಾಟ ಮಾಡಬಹುದೇ? +ಬಾಯಿಯಲ್ಲಿ ಬಣ್ಣಾಚಾರ ನಡತೆಯಲ್ಲಿ ಅನಾಚಾರವಾಯಿತಲ್ಲ! +ಪ್ರಪಂಚದ ಗೊಡವೆಯನ್ನು ಬಿಡಬೇ ಕಾದ ಯತಿಯು ಸ್ತ್ರೀಮೋಹಕ್ಕೆ ಒಳಗಾಗಿ ಮನಸ್ವಿ ನಡಕೊಳ್ಳುವದಾದರೆ ಅವನ ಗುರುತ್ವ ಹ್ಯಾಗೆ ಉಳದೀತು? +ಅವನು ಶಿಷ್ಯರಿಗೆ ಹೇಗೆ ಮಾನ್ಯನಾದಾನು? +ಲೋಕದಲ್ಲಿ ಧರ್ಮಾಧರ್ಮ ವಿಚಾರ ಹ್ಯಾಗೆ ನಡೆದೀತು? +ಮಹಾ ಸ್ವಾಮಿಯ ರಾಜ್ಯದಲ್ಲಿ ಇದುವರಿವಿಗೂ ಇಂಥಾ ಹೊಲಸು ನಡೆದಂತೆ ನನ್ನ ಅನುಭವದಲ್ಲಿಲ್ಲವು. +ಈಗ ಎದುರಿಗೆ ಬಂದಿರುವ ಪ್ರಕರಣದಲ್ಲಿ ಶೀಘ್ರ ಅನ್ವೇಷಣ ಮಾಡುವದೇ ಕರ್ತವ್ಯವೆಂದು ನನ್ನ ಮನಸ್ಸಿಗೆ ತೋರುತ್ತೆ. +ಆ ಕಪಟ ಯತಿಯನ್ನೂ ಅವನ ಸತಿಯನ್ನೂ ರಾಜದ್ವಾರಕ್ಕೆ ಕರತರಿಸಿ ಶಿಕ್ಷೆಗೆ ಗುರಿ ಪಡಿಸುವದು ನ್ಯಾಯವಾದೀತೆಂಬ ನನ್ನ ವಿಜ್ಞಾಪನೆಯು ಮಹಾಸ್ವಾಮಿಯ ಚಿತ್ತಕ್ಕೆ ಒಡಂಬಡಿಕೆಯಾಗುವದೆಂದು ಭಾವಿಸುತ್ತೇನೆ. +ಹೆಚ್ಚಿಗೆ ಅರಿಕೆ ಮಾಡಿಕೊಳ್ಳಲಿಕ್ಕೆ ಪಾದಸೇವಕನು ಶಕ್ತನಲ್ಲ.” +ಹಿರೇ ದಿವಾನರ ಅಭಿಪ್ರಾಯ ಹ್ಯಾಗೆಂದು ಅರಸನು ಕೇಳಿದನು. +ಆದಿ ಕೇಶವರಾಯನು ಬಿನ್ನವಿಸಿದ್ದೇನಂದರೆ–“ಮಹಾಸ್ವಾಮಿಯ ಪಾದಕ್ಕೆ ಬಡಕಿಂಕರನು ಹೆಚ್ಚು ಸಮಯ ಅರಿಕೆ ಮಾಡಿಕೊಳ್ಳತಕ್ಕದ್ದೇನದೆ? +ಈ ಮೊಖದಮೆಯಲ್ಲಿ ದೋಷಾರೋಪಣೆ ಮಾಡ ಲ್ಪಟ್ಟ ಯತಿಯು ವೈಷ್ಣವಮತದ ಸನ್ಯಾಸಿಯಾಗಿ ಅದೇ ಮತದವನಾದ ನನಗೂ ಮಾನ್ಯನಾದ ಪ್ರಯುಕ್ತ ನನ್ನ ಅಭಿಪ್ರಾಯ ಎಷ್ಟು ನಿಷ್ಪಕ್ಷಪಾತದ್ದಾದರೂ ನಾನು ವಶೀಲಿ ಮಾಡುತ್ತೇನೆಂಬ ಅಪವಾದ ಜನರು ನನ್ನ ಮೇಲೆ ಹಾಕದೆ ಇರಲಾರರು. +ಅದು ಹಾಗಿರಲ್ಲಿ ಪ್ರಕೃತದ ವಿಚಾರದಲ್ಲಿ ನನ್ನ ಅಭಿಪ್ರಾಯ ಹೇಳುವದಕ್ಕೆ ನಾನು ಅಂಜತಕ್ತ ಅಗತ್ಯವೇನೂ ಇಲ್ಲ. +ಒಬ್ಬ ಯತಿಯ ಮೇಲೆ ಒಬ್ಬಾತನು ಎದುರು ನಿಂತು ದೋಷಾರೋಪಣೆ ಮಾಡುವದಕ್ಕೆ ಧೈರ್ಯಪಟ್ಟಾಗ ಅದನ್ನು ಕುರಿತು ಪರಿಶೋಧನೆ ಮಾಡಿ ವ ಸತ್ಯಾಸತ್ಯ ನಿಷ್ಕರ್ಷೆಮಾಡುವದು ಬೇರೆ ನಾಲ್ಕು ಮಠದವರ ಕೆಲಸವಾಗಿತ್ತು. +ಪರಂತು ಅವರು ವಾದಿಯ ಬಿನ್ನಪವನ್ನು ಗಣ್ಯಕ್ಕೆ ತಾರದೆ ಸುಮ್ಮಗಿರುವದು. +ಕೇವಲ ಅನ್ಯಾಯವಾದ್ದೆಂತ ನಾನು ತಿಳಕೋಥೇನೆ. +ವಾದಿಯು ಮಹಾಸ್ವಾಮಿಯ ಮುಂದೆ ತಂದ ಮನವಿಯು ನಿಷ್ಠಾರಣವಾ ದ್ದೆಂದು ಯಾರೂ ಹೇಳಕೂಡದು. +ವಿಚಾರಮಾಡತಕ್ಕ ಮರಾಧಿಪತಿಗಳು ಈ ವಿಷಯದಲ್ಲಿ ಪ್ರವೇಶಿಸದೆ ಇದ್ದಕಾರಣ ವಾದಿಯು ಮಹಾಸ್ವಾಮಿಗೆ ದೂರು ಕೊಟ್ಟಿದ್ದು ಸರಿಯಾದ್ದೇ, ಯತಿಯನ್ನೂ ವಾಗ್ದೇವಿಯನ್ನೂ ಕರತರಿಸಿ ಶಿಕ್ಷೆಗೆ ಗುರಿಪಡಿಸಬೇಕೆಂಬಂತೆ ಕಿರೀ ದಿನಾನರು ಅಭಿಪ್ರಾಯಪಟ್ಟಿದ್ದು ಉಚಿತವೆಂದು ನಾನು ಹ್ಯಾಗೆ ಹೇಳಲಿ! +ಮತಸಂಬಂಧವಾದ ಕಾರ್ಯದಲ್ಲಿ ಬೇರೆ ಮರಾಧಿಪತಿಗಳು ಪ್ರವೇಶಿಸಿ, ತಮ್ಮ ಹಾಗೆ ಮಠಾಥಿಪತಿಯಾದ ಇನ್ನೊಬ್ಬ ಸನ್ಯಾಸಿಯ ಮೇಲೆ ಬಂದ ಅವಪಾದದ ಮೂಲಶೋಧನೆ ಮಾಡದೆ ಹೋದರೆ ಮಹಾಸ್ವಾಮಿಯ ಸರ್ಕಾರದಿಂದ ಆಯಾ ಮಠಕ್ಕೆ ಸಲ್ಲುವ ತಸ್ದೀಕುಇನಾಮು ಉತ್ತಾರ ಇತ್ಯಾದಿ ಉಚಿತಗಳನ್ನು ತಾಮಸವಿಲ್ಲದೆ ಜಫ್ತುಮಾಡುವ ಅಗತ್ಯಬೀಳುವದೆಂದು ಎಚ್ಚರಿಸಿ, ಅವರು ಆ ಮೇಲೆಯೂ ಸುಮ್ಮಗಿದ್ದುಕೊಂಡರೆ ಮಹಾಸ್ವಾಮಿಯ ಸನ್ನಿಧಿಯಿಂದಲೇ ಮುಂದಿನ ವಿಚಾರಣೆಯು ನಡಿಯುವದು ವಿಹಿತನಾದ ಮಾರ್ಗವೆಂತ ನನಗೆ ತೋರುತ್ತದೆ. +ಹೆಚ್ಚು ಅರಿಕೆಮಾಡಿ ಕೊಳ್ಳಲಿಕ್ಕೆ ಶಕ್ತನಲ್ಲ, ಮಹಾಸ್ವಾಮೀ!”ಬಳಿಕ ಅರಸನು ತನ್ನ ಗುರುವಿನ ಮುಖವನ್ನು ನೋಡಿದಾಗ ಕೊಂಚ ಸಮಯ ಬಾಯಿಬಿಚ್ಚದೆ ಕೊನೆಗೆ “ಜಿನಧರ್ಮವನ್ನು ಪಾಲಿಸು?ಎಂದು ದೀರ್ಫಸ್ವರದಿಂದ ಗುರುವರ್ಯನು ಹೇಳಿದನು. +ಆ ಕ್ಷಣ ಜಮೇದಾರ ರಾಮಸಿಂಗನು ಘಂಟೆಯ ಸೂತ್ರವನ್ನು ಎಳೆದನು ಘಂಟೆಯಿಂದ ಗಂಭೀರನಾದ ಹುಟ್ಟಿತು. +“ಹಿರೇ ದಿವಾನರ ಅಭಿಪ್ರಾಯವು ನ್ಯಾಯವಾದ್ದು. +ಮಿಕ್ಕ ನಾಲ್ಕು ಸನ್ಯಾಸಿಗಳು ವೇದವ್ಯಾಸ ಉಪಾಧ್ಯನ ಮನವಿಯನ್ನು ಕುರಿತು ಯುಕ್ತವಾದ ಪರಾಮರ್ಶೆಯನ್ನು ಮಾಡದೆ ಪಕ್ಷಪಾತ ಮಾಡಿದರೆ ಅವರಿಗೆ ಸರ್ಕಾರದಿಂದ ಸಿಕ್ಕುವ ಇನಾಮು ಮರ್ಯಾದೆ ಕಳಕೊಳ್ಳ ಬೇಕಾಗುವದೆಂದು ಅವರಿಗೆ ಎಚ್ಚರಿಸಿ, ಆಜ್ಞಾ ಪ್ರಕಾರ ಹೋಗಬೇಕು. +ಅವರು ಅದನ್ನು ಮನ್ನಿಸದೆ ಹೋದ ಪಕ್ಷದಲ್ಲಿ ಮನವಿದಾರನು ಪುನಃ ಅರಿಕೆ ಮಾಡಿಕೊಂಡರೆ ನೋಡಬಹುದು” ಎಂದು ರಾಜಾಜ್ಞೆಯಾಯಿತು. +ಈ ತೀರ್ಪು ಸರ್ವರಿಗೂ ಹಿತವಾಯಿತು. +ಭೀಮಾಚಾರ್ಯನು ಅತಿ ಸಂತೋಷಪಟ್ಟನು. +ತಾನು ವೇದವ್ಯಾಸ ಉಪಾಧ್ಯನ ಪಕ್ಷಹಿಡಿದು ಮಾಡಿದ ಪ್ರಯತ್ನವು ಸಫಲವಾಯಿತು. +ಅದರ ಅವಸಾನವು ಹ್ಯಾಗೂ ಆಗಲಿ; +ಇನ್ನು ತಾನು ಊರಿಗೆ ಹೋಗುವದೇ ಸೈ; +ನೀನು ಬೇಕಾದ್ದು ಮಾಡೆಂದು ಗೆಳೆಯಗೆ ಹೇಳಲಾಗಿ– “ಆಹಾ!ನನ್ನ ಕೊರಳು ಕೊಯ್ಯುವ ಯುಕ್ತಿ ಮಾಡುವಿರಾ, ಆಚಾರ್ಯರೇ? +ತಮ್ಮ ಪ್ರಯತ್ನದ ಬಲದಿಂದ ನಾನು ಗೆದ್ದ ಹಾಗಾಯಿತು. +ಮುಂದೆ ನಡೆಯ ತಕ್ಕ ಕೆಲಸವಂತೂ ಪ್ರಯಾಸವಾದ್ದು. +ಇದು ತಮಗೆ ಚೆನ್ನಾಗಿ ಗೊತ್ತಿದ್ದು ನನ್ನ ಕೈಬಿಡಲಿಕ್ಕೆ ನೋಡುತ್ತೀರಾ, ಸ್ವಾಮೀ? +ತಮ್ಮ ಭಕ್ತನಾದ ನನ್ನ ಮೇಲೆ ಪೂರ್ಣ ವಾತ್ಸಲ್ಯವಿಟ್ಟು ನಡಿಸಬೇಕು” ಎಂದು ವೇದವ್ಯಾಸನು ನಮಿಸಿದನು. +ಇವರೊಳಗೆ ಹೀಗೆ ಸಂಭಾವಣೆ ನಡಿಯುವಾಗ ಪರಂತು ಗೋವಿಂದ ಪಂಡಿತರು ಬಂದು– “ಆಚಾರ್ಯರೇ!ತಮ್ಮ ಪಂಥ ಗೆದ್ದ ಹಾಗಾಯಿತು” ಎಂದರು. +*ಸ್ವಾಮೀ ತಮ್ಮ ಸಾಹಸದಿಂದ ಗೆದ್ದೆವು: ಮುಂದೆ ಆಗತಕ್ಕ ಮಹತ್ಕಾರ್ಯ ಹೀಗೆಯೇ ಇದೆ. +ತಮ್ಮ ಕಟಾಕ್ಷದ ಪ್ರಭಾವದಿಂದ ಬಡ ವೇದವ್ಯಾಸನು ಜಯಪಡಬೇಕಲ್ಲದೆ ಅವನೊಬ್ಬನ ಕೈಯಿಂದ ಏನಾಗುವದು? +“ಏಕೋ ದೇವೋ ಕೇಶವೋವಾ ಶಿವೋವಾ.’ ಕಡೇವರಿಗೂ ಯಾರಾದರೂ ಒಬ್ಬನನ್ನೇ ನಂಬಬೇಕಲ್ಲದೆ ಇದ್ದವರ ಕೈಕಾಲು ಹಿಡಿದು ಏನು ಪುರುಷಾರ್ಥವಿದೆ? +ಕರುಣಿಗಳಾದ ತಮ್ಮ ಮೇಲೆ ವೇದವ್ಯಾ ಸನು ಪೂರ್ಣ ವಿಶ್ವಾಸವಿಟ್ಟರುವದು ದಿಟ. +ಅವನನ್ನು ಸರ್ವಧಾ ಬಿಟ್ಟು ಹಾಕ ಬಾರದು” ಎಂದು ಭೀಮಾಚಾರ್ಯನು ಪಂಡಿತಗೆ ಹೊಗಳಿ ಚೆನ್ನಾಗಿ ಉಬ್ಬಿ ಸಿಬಿಟ್ಟನು. +“ಆಚಾರ್ಯರೇ!ತಾವು ನನ್ನ ತೀರ್ಥರೂಪರಿಗೆ ಸಮಾನರಾಗಿದ್ದೀರಿ; +ತಮ್ಮ ಮಾತು ನನ್ನ ತಲೆಯ ಮೇಲೆ ಇರಲಿ. +ವೇದವ್ಯಾಸ ಉಪಾಧ್ಯನು ಹೆದರಬೇಕ್ಯಾಕೆ? +ಪ್ರತಿಫಲವಾಗಿ ನಾನು ಒಂದು ಕಾಸಾದರೂ ಈಸುಕೊಳ್ಳದೆ ಅವನಿಗೆ ಪೂರ್ಣಸಹಾಯ ಮಾಡಲಿಕ್ಕೆ ಅನುಮತಿಸಿದ್ದೇನೆ; +ಸಾವಿರ ಮಾತ್ಯಾಕೆ?” ಎಂದು ಧೈರ್ಯಕೊಟ್ಟು ಅಂದು ರಾತ್ರೆ ಭೋಜನಕ್ಕೆ ಬೇರೆ ಎಲ್ಲಿಗೂ ಹೋಗಕೂಡದು; +ತನ್ನಲ್ಲಿಗೇನೇ ಬರಬೇಕಾಗಿ ವಕೀಲನು ವಿಪ್ರರಿಬ್ಬರಿಗೂ ಹೇಳಿಕೊಂಡನು. +ಆ ರಾತ್ರಿ ವಕೀಲರಲ್ಲಿ ದಿವ್ಯಭೋಜನವಾಯಿತು. +ಮರುದಿನ ಬೆಳಿಗ್ಗೆ ದ್ವಿಜರೀರ್ವರೂ ಗೋವಿಂದ ಪಂಡಿತನ ಅಪ್ಪಣೆ ಪಡಕೊಂಡು, ಹರ್ಷದಿಂದ ನೃಸಿಂಹಪುರಕ್ಕೆ ತೆರಳಿ, ನೃಪತಿಯ ಪರವಾನೇ ಕಾದುಕೊಂಡಿದ್ದರು. +ಒಂದೆರಡು ದಿನಗಳಲ್ಲಿ ಅರಮನೆಯ ದೊಡ್ಡಮುದ್ರೆ ಒತ್ತಿರುವ ಪರವಾನೆಯು ಜ್ಞಾನ ಸಾಗರತೀರ್ಧರಿಗೆ ತಲ್ಪಿತು. +ಅವರು ಅದನ್ನು ಓದಿಸಿಕೇಳಿದಾಗ ವೇದವ್ಯಾಸ ಉಪಾಧ್ಯನ ಮನವಿಯ ಮೇಲೆ ನೃಪತಿಯು ಕೊಟ್ಟ ಅಪ್ಪಣೆಯ ಅಂದವು ತಿಳಿಯಿತು. +“ಅಹಾ!ಈ ಹಾರುವನು ಚಾಣಿಕ್ಯನ ಹಾಗೆ ಒಳ್ಳೆ ಸಾಹಸಿಯೇ ಸೈ. +ಶ್ರೀಪಾದಂಗಳ್ಳಾರೂ ಅವನಿಗೆ ಇಂಬುಗೊಡದೆ ನಮ್ಮಂತೆಯೇ ಧಿಕ್ಕರಿಸಿಬಿಟ್ಟರೇ!” +ಮನವಿದಾರನು ಪಟ್ಟಣದಲ್ಲೆಲ್ಲಾದರೂ ಬಂದಿರುವನೋ ವಿಚಾರಿಸಿ ಹೇಳಬೇಕಾಗಿ ಸ್ವಾಮಿಗಳು ಅಪ್ಪಣೆಕೊಟ್ಟರು. +ಮಠದ ಹರಿಕಾರರು ಅಲ್ಲಲ್ಲಿ ತಿರುಗಾಡಿ ನೋಡುವಾಗ ವೇದವ್ಯಾಸ ಉಪಾಧ್ಯನೂ ಭೀಮಾಚಾರ್ಯನೂ ಮಿಠಾಯಿ ಸಂತೆಯ ಸಮಾಸ ತಿರುಗಾಡಿ ಕೊಂಡಿದ್ದರು. +ಆ ವದಂತಿಯನ್ನು ಶ್ರೀಪಾದಂಗಳಿಗೆ ಚಾಕರರು ತಿಳಿಸಿದರು. +ಸ್ವಾಮಿಗಳು ತನ್ನ ಮರದ ಪಾರುಪವತ್ಯಗಾರ ರಾಧಾಕೃಷ್ಣಾಚಾರ್ಯ ನನ್ನು ಕರಸಿಕೊಂಡು, ಭೂಪಾಲನ ಪರವಾನೆಯನ್ನು ಅವನಿಗೆ ತೋರಿಸಿ ಅವನ ಆಲೋಚನೆಯನ್ನು ಕೇಳಿದರು. +ವೇದವ್ಯಾಸ ಉಪಾಧ್ಯನು ಆರಂಭದಲ್ಲಿ ಮಠಕ್ಕೆ ಬಂದು ಹೇಳಿಕೊಂಡಾಗ ಅವನಿಗೆ ಯಾವದೊಂದು ಸುಸೂತ್ರನಾದ ಉತ್ತರಕೊಡದೆ, ಧಿಕ್ಕರಿಸಿಬಿಟ್ಟ ಸಮಾಚಾರವನ್ನು ಕೇಳಿ, ಕೊಂಚ ವಿಸ್ಮಯಪಟ್ಟನೆಂದು ಪಾರುಪತ್ಯಗಾರನು ಬಿನ್ನನಿಸಿದನು. +ಈಗ ಅನುಸರಿಸ ಬೇಕಾದ ಕ್ರಮ ಹೇಳಬೇಕಾಗಿ ಜ್ಞಾನಸಾಗರರು ಪಾರುಪತ್ಯಗಾರಗೆ ಅಪೇಕ್ಷಿಸಿದರು. +ಸನ್ನಿಧಿಯಿಂದಲೇ ಅವಶ್ಯವಿರುವ ವಿಚಾರಣೆ ನಡೆದು, ವೇದವ್ಯಾಸನ ಮನವಿಯ ಇತೃರ್ಧವಾಗಲಿಕ್ಕೆ ಪೂರ್ವದ ಕಟ್ಟಿನ ಪ್ರಕಾರ ಸ್ವತಂತ್ರ ವಿದ್ದರೂ ದುರ್ದಾನಕ್ಕೆ ಸಮಾನವಾದ ಈ ವಿಷಯದಲ್ಲಿ ಬೇರೆ ಮೂರು ಮಠದವರಿಗೂ ಬರೆದು ಅವರ ಅಭಿಪ್ರಾಯ ತಿಳುಕೊಂಡು ಮುಂದರಿಸುವದು ಒಳ್ಳೆಯದೆಂದು ರಾಧಾಕೃಷ್ಣಾಚಾರ್ಯನು ಕೊಟ್ಟ ಆಲೋಚನೆಯು ಶ್ರೀಪಾದಂಗಳ ಮನಸ್ಸಿಗೆ ಸಮ್ಮತವಾಗಿ, ಹಾಗೆ ವರ್ತಿಸುವುದಕ್ಕೆ ಅವರು ಅವನಿಗೆ ಅಪ್ಪಣೆ ಕೊಟ್ಟರು. +ಪಾರುಪತ್ಯಗಾರನು ನೃವಾಲನ ಪರವಾನೆಯ ಸಹಿ ನಕಲುಗಳನ್ನು ಮಾಡಿಸಿ, ಬೇರೆ ಮೂರು ಮಠಾಧಿಪತಿಗಳಿಗೂ ಕಳುಹಿಸಿಕೊಟ್ಟು, ಆವರ ಅಭಿಪ್ರಾಯ ಶೀಘ್ರತಿಳಿಸಬೇಕೆಂದು ಅಪೇಕ್ಷಿಸಿನು. +ಆಶ್ರಮಜ್ಯೇಷ್ಠರಾದ ಜ್ಞಾನತೀರ್ಥರು ಇದನ್ನು ಕುರಿತು ಸೂಚಿಸುವ ಮಾರ್ಗಕ್ಕೆ ಅಸ್ತು ಎಂಬುದಾಗಿ ತಮ್ಮ ಭಾವವನ್ನು ಪೂರ್ಣಾನಂದ ತೀರ್ಥರೂ ಅಚಲನೇತ್ರರೂ ತಿಳಿಸಿದರು. +ಹರಿಪದಾಂಬುಜತೀರ್ಧರು ಬಾಲಮುಕುಂದಾ ಚಾರ್ಯನನ್ನು ಕರಿಸಿ ಅವನ ಕೂಡೆ ಗುಪ್ತಾಲೋಚನೆ ಮಾಡಿದರು ಕೊಂಚಸ ಮಯ ಅವನು ಚಿಂತಿಸಿ ಚಂಚಲನೇತ್ರರ ಕೂಡೆ ಮುಖತಃ ಚರ್ಚೆ ಮಾಡಿ ಮುಂದಿನ ಕೆಲಸವನ್ನು ಮಾಡುವುದು ಒಳ್ಳೆಯದೆಂದು ತನ್ನ ಮತವೆಂದನು. +“ಬಾಲಮುಕುಂದನೇ!ನೀನೇ ನರಸಿಂಹ ಪುರದ ತನಕ ಹೋಗಿ ಆಶ್ರಮದಲ್ಲಿ ಹಿರಿಯರಾದ ಜ್ಞಾನಸಾಗರರನ್ನು ಕಂಡು, ನಿನ್ನ ಮನಸ್ಸಿಗೆ ಯುಕ್ತತೋರುವಂತೆ ಈ ಕಾರ್ಯವನ್ನು ನಿರ್ವಹಿಸು”ಎಂದು ಹರಿನದಾಂಬು ಜತೀರ್ಥರ ಅಪ್ಪಣೆಯಾಯಿತು. +ದೀರ್ಘದರ್ಶಿಯಾದ ಬಾಲಮುಕುಂದಾಚಾರ್ಯನು ಯಜಮಾನರು ಕೊಟ್ಟ ಅನುಜ್ಞೆಗನುಸರಿಸಿ ವ್ಯರ್ಧವಾಗಿ ಸಮಯ ಕಳೆಯದೆ ಸಂತೋಷ ಚಿತ್ತದಿಂದ ತನ್ನ ಗೌರವಕ್ಕೆ ಯೋಗ್ಯವಾದ ರೀತಿಯಲ್ಲಿ ಸೇವಕ ಜನರನ್ನು ಸಂಗಡ ಕರೆದುಕೊಂಡು ವಾಹನಾರೂಢನಾಗಿ ನೃಸಿಂಹಪುರಕ್ಕೆ ತಲ್ಪಿದನು ಈ ವರದಿಯು ಮಠಕ್ಕೆ ಮುಟ್ಟಿತು. +ಜ್ಯಾನಸಾಗರ ತೀರ್ಥರು ತನ್ಮು ಮಠಕ್ಕೆ ಬಾಲಮುಕುಂದಾಚಾರ್ಯನನ್ನು ಕರೆಸಿಕೊಂಡರು. +ಅವನಿಗೆ ಮಧ್ಯಾಹ್ನ ಭೋಜನವು ಮಠದಲ್ಲಿಯೀ ಆಯಿತು. +ಅನಂತರ ಬಾಲಮುಕುಂದನು ಯತಿಗಳ ಸಮಯವನ್ನು ನೋಡಿ, ತಾನು ಹರಿವದಾಂಬುಜ ತೀರ್ಥರಿಂದ ಕಳುಹಿಸಲ್ಪಟ್ಟಿವನೆಂದು ತಿಳಿಸಿದರು. +ಅವರ ಅಭಿಪ್ರಾಯವನ್ನು ತಿಳೆಯಲಿಕ್ಕೆ ಅಶೆಪಡುತ್ತೇನೆಂದು ಜ್ಞಾನಸಾಗರರು ಹೇಳದಾಗ-“ಅವರು ವಿಶೇಷ ಹೇಳ ತಕ್ಕದ್ದೇನೂ ಇಲ್ಲ. +ಒಂದು ಅಪವಾದವು ಚಂಚಲನೇತ್ರರ ಮೇಲೆ ಬಂದಿರು ವಾಗ ಅದನ್ನು ಕುರಿತು ಉಳಿದ ಮಠದವರು ವಿಚಾರತಕ್ಕೊಳ್ಳಲಿಲ್ಲನೆಂಬ ಮಾತಿನ ವಾಶಿ ಬಾರದಂತೆ ಒಂದೊಂದು ಮಠದ ಕಡೆಯಿಂದ ಒಬ್ಬೊಬ್ಬ ಪ್ರಮುಖ ಮನುಷ್ಯನು ಆರಿಸಲ್ಪಡಬೇಕು; +ಅಂಥಾ ನಾಲ್ವರು ಕುಮುದ ಪುರಕ್ಕೆ ತೆರಳಿ, ಅಲ್ಲಿ ಕೂಲಂಕಷವಾದ ವರ್ತಮಾನವನ್ನು ಸಂಗ್ರಹಿಸಿ, ಮರಳಿ ಬಂದನಂತರ ಮಿಕ್ಕ ಶ್ರೀಪಾದಂಗಳವರು ಅದನ್ನೆಲ್ಲ ಚೆನ್ನಾಗಿ ಶೋಧಿಸಿ ನೋಡಿ ಯುಕ್ತವೆಂದು ತೋರುವ ಇತ್ಯರ್ಥವನ್ನು ಮಾಡಿದರೆ ರಾಜದ್ವಾರದಲ್ಲಿ ವೇದವ್ಳಾಸನು ಸುನರಪಿ ಹೋಗತಕ್ಕ ಅಗತ್ಯ ಬೀಳದು. +ತತ್ರಾಪಿ ಅಂಧಾ ಇತ್ಯರ್ಥವನ್ನು ಸಮ್ಮತಿಸದೆ ಅವನುಎರಡನೆ ಮನವಿಮಾಡಿ ಕೊಂಡರೆ ರಾಜನು ಅದರಲ್ಲಿ ಪ್ರವೇಶಿಸಲಿಕ್ಕೆ ನಿರಾಕರಿಸಿಬಿಡುವನು. +ಹೀಗೆ ನನ್ನ ಧನಿಗಳು ಅಭಿಪ್ರಾಯ ಪಡುವರು?ಎಂದು ಉತ್ತರಕೊಟ್ಟನು. +ಹರಿಪದಾಂಬುಜರು ನಿಜವಾಗಿ ವಿಚಕ್ಷಣರಾದ ಕಾರಣ ಇಷ್ಟು ಒಳ್ಳೆ ಯ ಉಪಾಯವನ್ನು ಹುಡುಕಿದ್ದಕ್ಕಾಗಿ ಜ್ಞಾನಸಾಗರರು ಅವರನ್ನು ಸ್ವಲ್ಪ ಹೊಗಳಿದರು ಬೇರೆ ಎರಡು ಮಠದವರು ತಮಗೆ ಯುಕ್ತಕಂಡಂತೆ ವರ್ತಿಸಿ ದ್ದಲ್ಲಿ ತಾವು ಅನ್ಯಥಾ ಹೇಳತಕ್ಕದ್ದೇನಿಲ್ಲವೆಂದು ಉತ್ತರಕೊಟ್ಟರುವರು. +ಈಗ ತಕ್ಕ ಪುರುಷನನ್ನು ಆರಿಸಿದರೆ ಆಯಿತಷ್ಟೆ? +ತಮ್ಮ ಮಠದಿಂದ ಪಾರು ಪತ್ಯಗಾರ ರಾಧಾಕೃಷ್ಣಾಚಾರ್ಯನೇ ಸಾಕೆಂದು ಜ್ಞಾನಸಾಗರರು ನಿರ್ಣ ಯಿಸಿ, ಪೂರ್ಣಾನಂದತೀರ್ಥರಿಗೂ ಅಚಲನೇತ್ರರಿಗೂ ತಾವು ಮಾಡಿದ ನೇಮಕವನ್ನು ತಿಳಿಸಿದರು. +ಕ್ಷತ್ರಿಯಪುರದ ಮಠದಿಂದ ಪಾರುಪತ್ಯಗಾರ ಸೂರ್ಯನಾರಾಯಣಾಚಾರ್ಯನೂ ವರ್ತಕಪುರದ ಮಠದಿಂದ ಅಲ್ಲಿಯ ಪಾರುಪತ್ಯಗಾರ ವೆಂಕಟರಮಾಚಾರ್ಯನೂ ನೇಮಿಸಲ್ಪಟ್ಟು, ನರಸಿಂಹ ಪುರಕ್ಕೆ ಅವರಿಬ್ಬರೂ ಬಂದರು. +ಶಾಂತಿಪುರ ಮಠದ ಕಡೆಯಿಂದ ಬಾಲಮು ಕುಂದಾಚಾರ್ಯನನ್ನು ನೇಮಿಸಿರುವದಾಗಿ ಹರಿಪದಾಂಬುಜರಿಂದ ಅವನು ಉತ್ತರ ತರಿಸಿಕೊಟ್ಟನು. +ಸುಮುಹೂರ್ತದಲ್ಲಿ ನಾಲ್ವರು ಪಾರುಪತ್ಯಗಾರರು ನೃಸಿಂಹಪುರ ಮಠದ ರಾಯಸಪತ್ರವನ್ನು ತಕ್ಕೊಂಡು, ಅವರವರ ಚಾಕರರ ಸಮೇತ ಕಮುದವುರಕ್ಕೆ ಹೊರಟರು. +ವೇದವ್ಯಾಸ ಉಪಾಧ್ಯನೂ ಮನಸ್ಸಿ ದ್ದರೆ ಅವರ ಸಂಗಡ ಹೋಗಬಹುದೆಂದು ನೃಸಿಂಹಪುರ ಮಠದಿಂದ ರಾಯ ನಪತ್ರಪು ಹೊರಟಿತು. +ನೃಸಿಂಹಪುರ ಮಠದ ಪಾರುಪತ್ಯಗಾರ ರಾಧಾಕೃಷ್ಣಾಚಾರ್ಯನ ಬುದ್ಧಿವಂತಿಗೆಯು ಸಾಮಾನ್ಯವಲ್ಲ. +ದೊಡ್ಡ ಕಾರ್ಯಗಳಲ್ಲಿ ಜಯಸಿಕ್ಳುವಂತೆ ವೈನಂಗಳನ್ನು ಮಾಡುವ ಸಾಮರ್ಥ್ಯ್ಯವುಳ್ಳವನು. +ಮತ್ತು ಸಿಟ್ಟಿನ ವಶವಾಗದೆ ಎಂಥಾ ಮೂರ್ಖನಿಗಾದರೂ ಅನುನಯಯುಕ್ತವಾದ ವಾಕ್‌ಚಾತುರ್ಯ ದಿಂದ ತನ್ನ ಪಕ್ಷಕ್ಕೆ ಆಕರ್ಷಿಸಿಕೊಂಡು, ಅವನಿಂದ ಸಿಕ್ಕುವಷ್ಟು ಪ್ರಯೋಜನವನ್ನು ದೊರಕಿಸಿಕೊಳ್ಳುವ ಮತಿವಂತ ಪುರುಷನೇ ಸರಿ. +ಕ್ಷತ್ರಿಯಪುರ ಮಠದ ಪಾರುಪತ್ಯಗಾರ ಸೂರ್ಯನಾರಾಯಣಾ ಚಾರ್ಯನು ಬಹುಸಾಧು. +ಒಳ್ಳೇ ಭೋಜನದ ಅಭಿರುಚಿಯಿರುವವನೂ ನಿಷ್ಠಾವಂತನೂ ಖರೆ. +ಆದರೆ ಎತ್ತಿದವರ ಕೂಸೆಂಬ ಗಾದೆಯಂತೆ ಯಾರೇನು ಹೇಳಿದರೂ ಹೌದೆನ್ನುವವನೇ. +ವರ್ತಕಪುರ ಮಠದ ಪಾರುಪತ್ಯಗಾರ ವೆಂಕಟಿರಾಮಾಚಾರ್ಯನು ಜ್ಞಾನಿಯೂ ವೈರಾಗ್ಯಪರನೂ ನೀತಿಶೀಲನೂ ಪರಾಪೇಕ್ಷೆಯಿಲ್ಲದವನೂ ಹೌದು. +ಪರಂತು ಮಿತಿಮೀರಿದ ಆಲಸ್ಯವುಳ್ಳವನು. +ಸ್ವಕಾರ್ಯದಲ್ಲಿಯೂ ಹಟಸಾಧನೆ ಮಾಡತಕ್ಕವನಲ್ಲ. +ದೊಡ್ಡ ಐಶ್ವರ್ಯವಂತನಾದುದರಿಂದ ಯಾರ ಬಿಸಾತು ಮಾಡುವ ಅಗತ್ಯವು ಅವನಿಗೆ ಬೀಳುತ್ತಿದ್ದಿಲ್ಲ. +ಇನ್ನು ವರ್ಣಿಸಲಿಕ್ಕೆ ಉಳಿದ ಬಾಲಮುಕುಂದಾಚಾರ್ಯನು ಶಾಂತಿ ಪುರಮಠದ ಪಾರುಪತ್ಯಗಾರ. +ಆ ಮರದ ಹೆಸರಿಗೆ ಹೋಲುವ ಶಾಂತಗುಣವುಳ್ಳ ಬಹುಸುಂದರ ಪುರುಷನು. +ಮಾತಿನಲ್ಲಿ ದೊಡ್ಡ ಚಮತ್ಕಾರ ಉಳ್ಳವನು. +ಕೋಪವು ಅವನಿಗೆ ಸರ್ವಥಾ ಸೋಕದು; ಖರ್ಚುಗಾರ, ಹಣದಲ್ಲಿ ಕಡಿಮೆ ಯವನಲ್ಲ. +ಇವನ ಮುಖವನ್ನೀಕ್ಷಿಸಿದ ಮಾತ್ರದಲ್ಲಿ ಎಂಧಾ ಕಠಿಣ ಹೃದಯವೂ ದ್ರವಿಸುವದು; +ಎಂಥಾ ಸಿಟ್ಟಿನವನೂ ಒಮ್ಮೆಗೆ ಶಾಂತನಾಗುವನು. +ವೇದವ್ಯಾಸನ ಪ್ರಕರಣವನ್ನು ಪ್ರಥಮ ವಿಮರ್ಶೆ ಮಾಡುವದಕ್ಕೋಸ್ಕರ ಮಠಾಧಿಪತಿಗಳಿಂದ ನೇಮಿಸೋಣಾದ ಆ ನಾಲ್ವರಲ್ಲಿ ಸಭಾನಾಯಕ ನಾಗುವದಕ್ಕೆ ಬಾಲಮುಕುಂದನೊಬ್ಬನೇ ಯೋಗ್ಯನೆಂದು ಅವರು ತಮ್ಮೊಳಗೆ ನಿಶ್ಚಯಿಸಿ ಅವನನ್ನು ಅಧ್ಯಕ್ಷನಾಗಿ ನೇಮಿಸಿದರು. +ಬಾಲಮುಕುಂದನು ತನಗಷ್ಟು ದೊಡ್ಡ ಕರ್ತವ್ಯ ನಡಿಸುವಷ್ಟು ಯೋಗ್ಯತೆ ಇಲ್ಲವೆಂದು ಹೆಸರು ಪೂರ್ತಿ ಆಕ್ಷೇಸ ಮಾಡಿದರೂ ಕ್ರಮೇಣ ತನ್ನ ಸಹಕಾರಿಗಳ ಅಪೇಕ್ಷೆಯಂತೆ ಅಧ್ಯಕ್ಷನಾಗಲಿಕ್ಕೆ ಒಡಂಬಟ್ಟನು. +ಸಭಾಸದರು ಒಟ್ಟಿನಲ್ಲಿಯೇ ಊಟಪಾಟ ಮಾಡಿಕೊಂಡು, ಕುಮುದಪುರದ ಅಂಜನೇಯಾಲಯದ ಹೊರಪೌಳಿಯಲ್ಲಿ ಉಳಕೊಂಡರು. +ವೇದವ್ಯಾಸ ಉಪಾಧ್ಯನ ಪಕ್ಷಕ್ಕೆ ಸೇರಿದ ಭೀಮಾಚಾರ್ಯಗೂ ಬಾಲಮುಕುಂದಾಚಾರ್ಯಗೂ ಪರಸ್ಪರ ಸ್ನೇಹ ಮೊದಲೇ ಬಿದ್ದ ದೆಸೆಯಿಂದ ಅವರಿಬ್ಬರೂ ಒಂದೇ ಬಿಡಾರದಲ್ಲಿ ಉಳುಕೊಳ್ಳುವದಕ್ಕೆ ಆಸ್ಪದವಾಯಿತು. +ಈ ಸಂಬಂಧ ವೇದ ವ್ಯಾಸಗೆ ಅಸಂತೋಷವಾಗಲಿಲ್ಲ. +ಭೀಮಾಚಾರ್ಯನನ್ನು ತನ್ನ ಮನೆಯಲ್ಲಿರಿಸಿಕೊಂಡು, ಒಳ್ಳೇ ಊಟ ಹಾಕಬೇಕಾಗುವ ಅನಿವಾರ್ಯ ನಿವಾರಣೆಯಾದ ಹಾಗಾಯಿತಲ್ಲವೇ? +ಬಾಯಿಯಿಂದ ಮಾತ್ರ ಬಡವನ ಮನೆಗೆ ತಮ್ಮ ಚರಣಗಳ ಮುದ್ರೆ ತಗಲುವದುಂಟೇ ಎಂಬ ಅಸಮಾಧಾನ ಸೂಚಕವಾಕ್ಕಗಳನ್ನು ಉಚ್ಚರಿಸಿದನು. +ಭೀಮಾಚಾರ್ಯನಿಗೆ ಅಂಜನೇಯಾಲಯದಲ್ಲಿ ಮಠದವರ ಕಡೆಯಿಂದ ಸಿಕ್ಕುವ ಛಲೋ ಭೋಜನದ ಸುಖದಿಂದ ವೇದ ವ್ಯಾಸನ ಪ್ರಸಂಗವೇ ಮರೆತು ಹೋಯಿತು. +ವಿನೋದರೂಪವಾಗಿ ಬಾಲ ಮುಕುಂದನು-“ಆಚಾರ್ಯರೇ, ತಮ್ಮಶಿಷ್ಯ ವೇದವ್ಯಾಸನೆಲ್ಲಿ?” ಎಂದು ಕೇಳಿದರೆ ದಂತ ಶೂನ್ಯನಾದ ಬಾಯಿಯನ್ನು ಪೂರಾ ತೆರೆಯದೆ, ಅರೆ ನಗೆಯಿಂದ “ಪರಾಶರಾತ್ಮಜಂ ವಂದೇ ಶುಕತಾಶತಂ ತಪೋನಿಧಿಂಗ ಎಂದು ಕೈಜೋಡಿಸಿ ಸುಮ್ಮಗಿರುವನು. +ಬಾಲಮುಕುಂದನಂತೆ ಬೇರೆ ಮಠಗಳ ಪ್ರತಿನಿಧಿಗಳಿಗೂ ಭೀಮಾಚಾರ್ಯನು ಅಚ್ಚುಮೆಚ್ಚಿನವನಾಗಿ ಅನರನ್ನಗಲದೆ ಆಪ್ತಭಾವವನ್ನು ಬೆಳಸಿದನು ಕುಮುದಪುರವು ವಸಂತ ನಗರದ ಪಟ್ಟಣಗಳಲ್ಲಿ ಆರೋಗ್ಯಕರವಾಗಿದ್ದು ಅತಿ ಸುಖದಾಯಕ ಪ್ರದೇಶವಾದ ಕಾರಣ ಪಾರುಪತ್ಯಗಾರರಿಲ್ಲರೂ ಪರಿವಾರ ಸಮೇತವಾಗಿ ಅಲ್ಲಿ ಹೆಚ್ಚು ದಿವಸಗಳು ಉಳುಕೊಳ್ಳುವದಕ್ಕೆ ಇಚ್ಛಿತರಾದರು. +ಭೀಮಾಚಾರ್ಯನು ಅವರ ಮನಸ್ಸಿಗೆ ರವಷ್ಟಾದರೂ ಕರಕರೆಯಾಗದಂತೆ ಆಗಾಗ್ಗೆ ತನ್ನ ನಾಲಿಗೆಯ ಚಮತ್ಕಾರದಿಂದ ಅವರಿಗೆ ಕರ್ಣೋಲ್ಲಾಸ ಮಾಡುತ್ತಾ, ಇನ್ನೊಂದು ಠಾವಿಗೆ ಯಾರಾದರೂ ಕರೆದರೂ ಹೋಗವಲ್ಲನು. +“ದೊಡ್ಡ ಮನುಷ್ಯರ ಎಡೆಯಲ್ಲಿ ನಿಮಗೆ ಹ್ಯಾಗೆ ಪೂರೈಸುತ್ತದೆ, ಆಚಾರ್ಯರೇ!ಎಂದು ವೇದವ್ಯಾಸ ಉಪಾಧ್ಯನು ಅಪರೂಪವಾಗಿ ಕೇಳಿದರೆ- “ನೀಚಾರ್ರಯಂ ನಕರ್ತವ್ಯಂ, ಕರ್ತವ್ಯಂ ಮಹದಾತ್ರಯಂ” ಈ ವಚನ ಕೇಳರಿಯೆಯಾ ಎಂಬ ಉತ್ತರದಿಂದ ಅವನ ಬಾಯಿ ಮುಚ್ಚಿಸುವನು. +ತನ್ನ ಶೀಲವನ್ನು ಕುರಿತು ಪರಿಶೋಧನೆ ಮಾಡುವದಕ್ಕೋಸರ ಮಠಾಧಿಪತಿಗಳಿಂದ ನೇಮಿಸಲ್ಪಟ್ಟ ಪ್ರತಿನಿಧಿಗಳ ಸಭೆಯು ಯಾವಾಗ್ಗೆ ಕೂಡುವದೋ ತಿಳಿಯದೆಂದು ಚಂಚಲನೇತ್ರರು ಸ್ವಲ್ಪ ಚಿಂತೆಯಲ್ಲಿದ್ದ ಹಾಗೆ ಕಂಡು, ವೆಂಕಟಪತಿಯು ಅವಸರ ಒಳ್ಳೆದಲ್ಲವೆಂದನು. +ಯತಿಗಳು ಆ ಮಾತಿಗೆ ಮೆಚ್ಚಿದರು. +ಹ್ಯಾಗಾದರೂ, ಅವರು ತಮ್ಮ ಮಥಕ್ಕೆ ಬಂದು ಒಂದು ದಿವಸವಾದರೂ ತಮ್ಮನ್ನು ಕಾಣದೆ ಇದ್ದದ್ದು ಸ್ಪಲ್ಪ ಆರ್ಚರ್ಯವಲ್ಲವೋ?ಎಂದು ಚಂಚಲನೇತ್ರರು ಪ್ರಶ್ನೆಮಾಡಿದರು. +ಅವರು ಮತಾಧಿಪತಿಗಳ ಪ್ರತಿ ನಿಧಿಗಳಾಗಿ ಬಂದಿರುವ ದೆಸೆಯಿಂದ ಮಠದ ಕಡೆಯಿಂದ ಮುಂದಾಗಿ ಅವರನ್ನು ಅಮಂತ್ರಣ ಮೂಲಕ ಕರಸಿಕೊಂಡ ವಿನಾ ಅವರ ಆಗಮನವನ್ನು ನಿರೀಕ್ಷಿಸುವದು ವ್ಯರ್ಥವೆಂದು ವೆಂಕಟಪತಿಯು ಕೊಟ್ಟ ಉತ್ತರವು ಮಾನ್ಯವಾಯಿತು. +“ಹಾಗಾದರ ನಾಳೆ ಮಠದಲ್ಲಿ ನರಸಿಂಹ ಜಯಂತಿ ಆಚರಣೆ ಗದ್ದಲದಿಂದ ಆಗುವ ಹಾಗೆ ನೋಡಿಕೊಂಡು ಆಚಾರ್ಯರಿಗೆಲ್ಲಾ ಕರಿಸಿಕೊಳ್ಳುವ ಜಾಗ್ರತೆ ಇಡು” ಎಂದು ವೆಂಕಟಪತಿಗೆ ನಿರೂಪವಾಯಿತು. +ವೆಂಕಟಪತಿ ಆಚಾರ್ಯನು ಅಂಜನೇಯಾಲಯಕ್ಕೆ ತೆರಳಿ, ಅಲ್ಲಿ ವಸತಿಮಾಡಿಕೊಂಡಿರುವ ನಾಲ್ವರು ಆಚಾರ್ಯರನ್ನೂ ಕಂಡು, ಚಂಚಲನೇತ್ರರ ಅಪೇಕ್ಷೆಯನ್ನು ವಿದಿತಮಾಡಿ, ಪ್ರತ್ಯುತ್ತರ ಕೇಳಿಕೊಂಡನು. +ಶ್ರೀಪಾದಂಗಳವರ ಆಜ್ಞೆಯಂತೆ ವರ್ತಿಸದೆ ಇರುವ ಪಾಪಿ ತಮ್ಮ ಕೂಟದಲ್ಲಿ ಯಾರೂ ಇಲ್ಲವೆಂದು ಸರಸೋಕ್ತಿಯಿಂದ ಅವರೆಲ್ಲರ ಸಮ್ಮತವನ್ನು ಬಾಲಮುಕುಂದಾಚಾರ್ಯನು ಅವಗತ ಮಾಡಿದ್ದಕ್ಕಾಗಿ ಮಿಕ್ಕವರೆಲ್ಲರೂ ಸಂತೋಷಪಟ್ಟರು. +ಭೀಮಾಚಾರ್ಯನು ಇಂಥಾ ಸಂದುಕಟ್ಟಿನ ಸಮಯದಲ್ಲಿ ಈ ಸ್ಥಳದಲ್ಲಿ ಇರಬಾರದಿತ್ತು. +ಅವನಿಗೆ ಪ್ರತ್ಯೇಕವಾಗಿ ಅಭಿಮಂತ್ರಣವಿಲ್ಲ. +ವೆಂಕಟಪತಿ ಆಚಾರ್ಯನು ದೊಡ್ಡ ಚಮತ್ಕಾರಿ. +ಮೊದಲು ನಾಲ್ಕುಮಂದಿ ಆಚಾರ್ಯ ಗೆ ವ್ಯಕ್ತವಾಗಿ ಅಭಿಮಂತ್ರಣ ಕೊಟ್ಟು ಆ ಮೇಲೆ ಸರ್ವರೂ ಭೋಜನಕ್ಕೆ ದಯಮಾಡಬೇಕಾಗಿ ಶ್ರೀಪಾದಂಗಳವರ ಅಪೇಕ್ಷೆಯೆಂಬ ಮಾತಿನ ಮೂಲಕ ಮಾಡಿದ ಸರ್ವಸಾಧಾರಣ ಹೇಳಿಕೆಯಲ್ಲಿ ಭೀಮಾಚಾರ್ಯನು ಸೇರಲಿಲ್ಲವೆನ್ನಕೂಡದು. +ವೆಂಕಟಪತಿಯ ಯತ್ನಕ್ಕೆ ಒಂದು ಪ್ರತೀಕಾರಮಾ ಡಿ ನೋಡುವದಕ್ಕೋಸ್ಕರ ಭೀಮಾಚಾರ್ಯನು ಫಕ್ಕನೆ ಎದ್ದು ತಾನು ಆ ಬಿಡಾರವಾಸಿಯಲ್ಲವೆಂಬ ಅನ್ವಯವಾಗುವಂತೆ “ಬಾಲಮುಕುಂದಾಚಾ ರ್ಯರೇ!ನನಗೀಗ ಅಪ್ಪಣೆಯಾಗಲಿ; ಬೇರೊಂದು ಊರಿಗೆ ಹೋಗುವ ಜಂಬರವಿದೆ” ಎಂದು ಪೌಳಿಯಿಂದ ಕೆಳಗೆ ಇಳಿದನು. +ವೆಂಕಟಪತಿಯು ಭೀಮಾಚಾರ್ಯನನ್ನು ಕುರಿತು–“ಸ್ವಾಮೀ!ತಮಗೆ ಪ್ರತ್ಯೇಕವಾಗಿ ಭೋಜನಕ್ಕೆ ಹೇಳಲಿಲ್ಲವೆಂಬ ವಿಕಲ್ಪ ಉಂಟಾಗಬಾರದು. +ತಮ್ಮನ್ನು ಅಭಿಮಂತ್ರಣದಲ್ಲಿ ಸೇರಿಸಿರುತ್ತೇನೆ. +ತಮಗೆ ತಕ್ಕ ಸಾಭಿಮಾನ ಮಾಡುವ ದಕ್ಕೆ ಶ್ರೀಪಾದಂಗಳವರಿಗೆ ತುಂಬಾ ಮನಸ್ಸು ಅದೆ. +ಅವರಿಗೆ ತಮ್ಮ ಪರಿ ಚಯವಿಲ್ಲವೆಂಬ ಅನುಮಾನ ತಮ್ಮ ಮನಸ್ಸಿನಲ್ಲಿ ಅದೆಯೋ ಅರಿಯೆ” ಎಂದು ವೆಂಕಟಪತಿ ಆಚಾರ್ಯನು ಅಂದಾಗ ಸ್ವಾಮಿಗಳಿಗೆ ತನ್ನ ಪರಿಚರ್ಯವಿರಬಹುದು; +ಆದರೆ ತಮ್ಮೊಳಗೆ ಹೆಚ್ಚು ಬಳಕೆ ಇಲ್ಲದೆ ತಾನು ದೂರವಾಗಿ ದ್ದೇನೆಂದು ಭೀಮಾಚಾರ್ಯನ ಪ್ರತಿವಚನವಾಯಿತು. +ಆಗಲೇ ಅವನನ್ನು ಕೈ ಹಿಡುಕೊಂಡು ವೆಂಕಟಪತಿಯೇ ಮಠಕ್ಕೆ ಕರತಂದು ಮಮತಾಪೂರ್ವಕ ಮರಾಧೀಶರ ಭೇಟಿಯನ್ನು ಮಾಡಿಸಿದನು. +ಚಂಚಲನೇತ್ರರು ಭೀಮಾಚಾರ್ಯನನ್ನು ಏಕಾಂತ ಕೋಣೆಗೆ ಕರ ಕೊಂಡು ಕೊಂಚ ಸಮಯ ಅಂತರಂಗದಲ್ಲಿ ವೇದವ್ಯಾಸ ಉಪಾಧ್ಯನ ಅನ ಹತಿಯನ್ನು ಕುರಿತು ಪ್ರಸ್ತಾಪಿಸಿದರು. +ಬಳಿಕ “ನಾಳೆ ಭೋಜನಕ್ಕೆ ವೆಂಕಟ ಪತಿ ಅಭಿಮಂತ್ರಣ ಕೊಟ್ಟಿರುವನಷ್ಟೆ?ಎಂದು ವಿಚಾರಿಸಲ್ಕು “ಹೌದು ಪರಾಕೆ! +ನನಗೆ ಅಭಿಮಂತ್ರಣಬೇಕೇ! +ನಾನು ಸತತ ಚರಣಕಮಲಗಳ ಭ್ರಮರನಲ್ಲವೇ?” ಎಂದು ಬಹು ದೀನತೆಯಿಂದ ಬಿನ್ನವಿಸಿ, ಬಿಡಾರಕ್ಕೆ ಹೋಗುವದಕ್ಕೆ ಅಪ್ಪಣೆಕೇಳಿ, ಪ್ರಣಾಮ ಮಾಡಿದನು. +ಚಂಚಲನೇತ್ರರು ಕಾಶ್ಮೀರ ಶಾಲುಜೋಡಿಯನ್ನು ಉಡುಗೊರೆಮಾಡಿ ಭೀಮಾಚಾರ್ಯನನ್ನು ಸಾದರದಿಂದ ಕಳುಹಿಸಿ ಕೊಟ್ಟರು. +ಉಡುಗೊರೆಯನ್ನು ಬಗಲಾಗೆ ಮಡಿಸಿಕೊಂಡು ಅವನು ಮರಳಿದನು. +ಬಾಲಮುಕುಂದಾಚಾರ್ಯನು ನಸುನಗುತ್ತ “ಆಚಾರ್ಯರೇ!ತಮ್ಮ ಮುಖ ಉಲ್ಲಾಸದಿಂದ ಬೆಳಗುತ್ತಿದೆ” ಎಂದು ಮೋರೆ ಯನ್ನೇ ನೋಡಲು, ನಡೆದ ವೃತ್ತಾಂತವನ್ನು ವಿವರಿಸಿ, ತನಗೆ ಸಿಕ್ಕಿದ ಉಡು ಗೊರೆಯನ್ನು ತೋರಿಸಿದನು. +ಭಾಪುರೆ!ತಮ್ಮ ಬುದ್ಧಿವಂತಿಗೆಗೆ ಮೆಚ್ಚಿದೆ ನೆಂಇಪ್ಪತ್ತು ಔತಣದ ದಿನವು ಉದಯವಾಯಿತು. +ಮಠಕ್ಕೆ ಭೋಜನಕ್ಕೆ ಅಭಿಮಂತ್ರಣ ಪಡೆದವರೆಬ್ಲರೂ ಶೀಘ್ರ ಸ್ನಾನ ಜಪಾನುಷ್ಟಾನವನ್ನು ತೀರಿಸಿ ಬಿಟ್ಟು ಹೆಚ್ಚು ಮೌಲ್ಯದ ಪಟ್ಟೆಮಡಿಗಳನ್ನು ಧರಿಸಿಕೊಂಡು ಕ್ಲಪ್ತ ಸಮಯಕ್ಕೆ ಮಠಕ್ಕೆ ತಲ್ಪಿದರು. +ಅವರೆಲ್ಲರನ್ನೂ ನೋಡಿ ಚಂಚಲನೇತ್ರರು ಹರ್ಷಿತರಾದರು. +ಭೀಮಾಚಾರ್ಯನು ವೆಂಕಟವತಿ ಆಚಾರ್ಯನ ಬೆನ್ನು ಬಿಡುತ್ತಿದ್ದಿಲ್ಲ. +ಅವರಿಬ್ಬರೂ ಏನೋ ವಿಶೇಷ ಪ್ರಮೇಯದಭಲ್ಲಿ ಸಂವಾದಿಸಿ ಕೊಂಡಿರುವ ಹಾಗೆ ತೋರುತ್ತಿತ್ತು. +ಯಾವ ವಿಷಯದಲ್ಲಿ ಅವರಲ್ಲಿ ಅಂತರಂಗ ಸಂಭಾಷಣೆಯಾಗುತ್ತಿತ್ತೆಂಬ ಗುಟ್ಟು ಯಾರಿಗೂ ಗೊತ್ತಾಗಲಿಲ್ಲ. +ಭೀಮಾ ಚಾರ್ಯನು ವೇದವ್ಯಾಸ ಉಪಾಧ್ಯನ ಮುಖ್ಯ ಸ್ನೇಹಿತನಾಗಿ ಅವನ ಹಟ ಸಾಧನೆಯು ಜಯವಾಗುವಂತೆ ಪ್ರಯತ್ನಮಾಡುವವನೆಂಬ ವದಂತಿಯು ಕುಮುದಪುರದಲ್ಲಿ ಸಿದ್ಧವಾಗಿರುತ್ತ ಚಂಚಲನೇತ್ರರ ಮಠದ ಮೇಲಣಭಿ ಮಾನಿಯಾಗಿ ತೋರುವ “ಈ ಹೊಸವಪರಿಯೇನಪ್ಪ” ಎಂದು ಕೆಲವರು ತಮ್ಮೊಳಗೆ ಕುಸುಕುಟ್ಟಿದರು. +ಆ ಹೊತ್ತು ನರಸಿಂಹಜಯಂತಿಯ ಉತ್ಸವ ನೋಡಲಿಕ್ಕೂ ಮಠದಲ್ಲಿ ಸಿಕ್ಕುವ ರುಚಿಕರವಾದ ಭೋಜನದ ಸುಖವನ್ನನು ಭವಿಸುವದಕ್ಕೂ ನೆರೆ ಊರುಗಳಿಂದಲೂ ಬ್ರಾಹ್ಮಣರನೇಕರು ಮಡದಿ ಮಕ್ಕಳೊಡಗೂಡಿ ಬಂದಿದ್ದರು. +ತಮ್ಮಣ್ಣ ಭಟ್ಟನೂ ಆಬಾಚಾರ್ಯನೂ ಸೊಂಟ ಕಟ್ಟಿ ತರಾತುರಿಯಿಂದ ಮಠದಲ್ಲಿ ಅತ್ತಿತ್ತ ಹೋಗುತ್ತ ಬರುತ್ತ ಇರುವದ ರಿಂದ ಮಠದ ಕಾರ್ಯಗಳಲ್ಲಿ ಅವರು ಹೆಚ್ಚು ಆಸಕ್ತಿಯುಳ್ಳರೆಂಬ ಹಾಗೆ ಬೇರೆಯವರಿಗೆ ತೋರುತಿತ್ತು. +ವಾಗ್ದೇವಿಯು ಚಂಚಲನೇತ್ರರ ವಶವಾದಂದಿನಿಂದ ಅವಳ ಆಭರಣ ಗಳು ದಿನಂಪ್ರತಿ ಅಧಿಕವಾಗುತ್ತಾ ಬಂದವು. +ಅವುಗಳೆಲ್ಲವನ್ನು ಅವಳು ಧರಿಸಿಬಿಟ್ಟರೆ ಅವಳ ಸೌಂದರ್ಯಕ್ಕೆ ರತೀ ಜೀವಿಯು ಸ್ವಲ್ಪನಾಚುವಳೆನ್ನ ಬಹುದು. +ಸಾಮಾನ್ಯ ಪುರುಷನು ಆ ಶ್ರೀರತ್ನವನ್ತು ಕಣ್ಣೆತ್ತಿ ನೋಡಲಿಕ್ಕೆ ಧೈರ್ಯಪಡುವದು ಅಪರೂಪ. +ವಾಗ್ದೇವಿ ಆದಿನ ನಿತ್ಯ ಮನೆಯಲ್ಲಿ ಧರಿಸಿ ಕೊಳ್ಳುವ ಅತಿ ಸಾಮಾನ್ಯ ಅಲಂಕಾರಯುಕ್ತಳಾಗಿ ನಿರ್ಮಲವಾದ ಒಂದು ಸಾಧಾರಣ ಉಡಿಗೆಯಲ್ಲಿ ಗೆಳತಿಯರ ಮೇಳದಲ್ಲಿ ಒತ್ತಟ್ಟು ಕೂತುಕೊಂಡಿದ್ದಳು. +ಬಾಲಮುಕುಂದಾಚಾರ್ಯನು ಸುಮ್ಮಗೆ ಅತ್ತಿತ್ತ ನೋಡಿಕೊಂಡಿರುವ ವೇಳೆಯಲ್ಲಿ ಅವನ ದೃಷ್ಟಿಯು ಈ ರೂಪವತಿಯ ಮೇಲೆ ಬಿತ್ತು. +ಅವರಿಬ್ಬರಲ್ಲಿ ಪರಸ್ಪರ ಮೋಹಭಾವಗಳ ಐಕ್ಯತೆ ಒಡನೆ ಉಂಟಾಯಿತು. +ಅವಳಷ್ಟು ಉತ್ಕೃಷ್ಟವಾದ ಭಾಸುರಾಂಗನೆಯು ಅಂದು ಅಲ್ಲಿ ನೆರೆದ ಹೆಂಗಸರ ಸಮೂಹದಲ್ಲಿ ಇನ್ನೊಬ್ಬಳು ಅವನ ಕಣ್ಣಿಗೆ ಬೀಳಲಿಲ್ಲವಾದುದರಿಂದ ವಾಗ್ದೇವಿ ಇವಳೇ ಎಂದು ಅವನ ಮನಸ್ಸಿಗೆ ಮಂದಟ್ಟಾಯಿತು. +ವಿಶೇಷ ಆಭರಣ ವೇನೂ ಅವಳು ಧರಿಸಿಕೊಳ್ಳದೆ ಇದ್ದುದು ತಾನೊಬ್ಬಳು ಸಾಮಾನ್ಯ ಸ್ತ್ರೀಯೆಂಬ ಗ್ರಹಿಕೆ ಪರಊರ ಜನರಲ್ಲಿ ಜನಿಸುವ ಉದ್ದಿಶ್ಯವಾಗಿರಬೇಕೆಂದು ಅವನ ಮನಸ್ಸಿಗೆ ತೋಚಿತು. +ತನ್ನನ್ನು ವರಿಸಿಕೊಂಡ ಯತಿಯ ಮೇಲೆ ವೇದವ್ಯಾಸ ಉಪಾಧ್ಯನು ಮಾಡಿದ ಮನವಿಯನ್ನು ಕುರಿತು ವಿಚಾರಣೆ ನಡಿಸುವುದಕ್ಕೋಸ್ಕರ ನಾಲ್ಕು ಮಠಾಧಿಪತಿಗಳು ಕಳುಹಿಸಿಕೊಟ್ಟ ಪ್ರತಿನಿಧಿಗಳಲ್ಲಿ ಇವನೊಬ್ಬನೆಂಬುದು, ಅವಳಿಗೆ ಗೊತ್ತಿತ್ತು. +ಈ ವಿಟನನ್ನ ತಾನು ಪ್ರೇಮಪಾರದಿಂದ ಬಂಧಿಸದೆ ಹೋದರೆ ಸ್ವಾಮಿಕಾರ್ಯವು ಕೆಟ್ಟುಹೋಗು ವುದು, ತನ್ನ ಬಾಳ್ವೆಯು ವ್ಯರ್ಥವಾಗುವುದು. +ದೈವವಶಾತ್‌ ಈ ದಿನ ತಮ್ಮಿಬ್ಬರ ಪರಸ್ಸರ ದೃಷ್ಟಿಸಂದರ್ಶನದಿಂದ ಮನಸ್ಸಿಗೆ ಉಂಟಾದ ಆನಂದ ವನ್ನು ಸಹಜವಾದ ರೀತಿಯಲ್ಲಿ ಅನುಭವಿಸುವುದೇ ಲೇಸು. +ಆ ಬಳಿಕ ವೇದ ವ್ಯಾಸ ಉಪಾಧ್ಯನು ಘಟ್ಟ ಹತ್ತಲಂದು ವಾಗ್ದೇವಿಯು ತನ್ನ ಮನಸ್ಸಿನಲ್ಲಿ ಅಂದುಕೊಳ್ಳುತ್ತ ಹಸನ್ಮುಖಿಯಾದಳು. +ಬಾಲಮುಕುಂದನೂ ವಾಗ್ದೇವಿಯೂ ನೋಡುವವರಿಗೆ ಸಂಶಯ ಉಂಟಾಗದಂತೆ ಕಣ್ಗಳ ಭಾಷೆಯಿಂದ ತಮ್ಮ ಮನಸ್ಸಿನ ಅಂತಸ್ಥ ಒಬ್ಬರಿಗೊಬ್ಬರು ಅವಗತ ಮಾಡಿದರು. +ಒಂದೆರಡು ಸಲ ಮಾತ್ರ ಭೀಮಾಚಾರ್ಯನು ಇವರಿಬ್ಬರ ನೇತ್ರ ಸಂಧಾನ ವನ್ನು ಹೌದೋ ಅಲ್ಲವೋ ಕಂಡನೆನ್ನಬೇಕು. +ಕೆಪ್ಪಮಾಣಿಗೆ ಮಾತ್ರ ಈ ಗುಟ್ಟು ಪೂರ್ಣವಾಗಿ ಸಿಕ್ಕಿತು ಬೇರೆ ಯಾರ ಕಣ್ಣಿಗೂ ಈ ಮಾಟ ಗೋಚರವಾಗಲಿಲ್ಲ. +ಸ್ವಾಮಿಗಳು ಪೂಜೆಗೆ ಪ್ರಾರಂಭ ಮಾಡಿದರು. +ಜನರೆಲ್ಲ ದೇವರ ಮುಂಭಾಗದಲ್ಲಿ ಸಾಲಾಗಿ ನಿಂತುಕೊಂಡು ಮಂಗಳಾರತಿಯನ್ನು ನೋಡುವದರಲ್ಲಿ ಇದ್ದರು. +ಪೂಜೆ ಅಂತ್ಯವಾದ ಮೇಲೆ ಊಟಕ್ಕೆ ಎಲೆ ಹಾಕಿತು. +ಪಂಚಮಠದ ಪಾರುಪತ್ಯಗಾರರಿಗೂ ಭೀಮಾಚಾರ್ಯರಿಗೂ ಶ್ರೀಪಾದಂಗಳವರ ಪಕ್ಕದಲ್ಲಿ ಮರ್ಯಾದೆಯ ಎಲೆ ಕೊಡೋಣಾಯಿತು. +ಮೃಷ್ಠಾನ್ನಭೋಜನ ವಾದ ತರುವಾಯ ನಾಲ್ಕು ಮಂದಿ ಪಾರುಪತ್ಯಗಾರರಿಗೂ ಸಂತುಷ್ಟಿಯಾಗುವ ಹಾಗೆ ಉಡುಗೊರೆ ಆಯಿತು. +ತಾಂಬೂಲಾದಿಗಳಿಂದ ಅವರನ್ನು ತೃಪ್ತಿಸಿ ಆದ ಮೇಲೆ– “ವೇದವ್ಯಾಸ ಉಪಾಧ್ಯನ ಮನವಿಯ ಕುರಿತು ವಿಮೋಚನೆ ನಡಿಯುವದಕ್ಕೆ ದಿನ ನೇಮಕವಾಯಿತೇ?’ ಎಂದು ಚಂಚಲನೇತ್ರರು ಪ್ರಶ್ನ ಮಾಡಿದರು. +ಶ್ರೀಪಾದಂಗಳವರ ನಿರೂಪ ಪಡಕೊಂಡು ದಿನ ನೇಮಿಸ ಬೇಕಾಗಿರುವದರಿಂದ ಇದುವರಿಗೂ ಛಾನಸವಾಯಿತಂದು ಬಾಲಮುಕುಂ ದಾಚಾರ್ಯನು ಉತ್ತರಕೊಟ್ಟನು. +ತನ್ನ ಆಜ್ಞೆಯ ಅಗತ್ಯವೇನದೆ? +ಇಷ್ಟ ವಿದ್ಧ ರೀತಿಯಲ್ಲಿ ವಿಚಾರಣೆ ಮಾಡೋಣವೇ ಕರ್ತವ್ಯವೆಂದು ಚಂಚಲನೇತ್ರ ಕೆಂದರು ವಿಚಾರಣೆ ತೊಡಗುವ ದಿನ ತನ್ನ ಕಡೆಯಿಂದ ಯಾರಾದರೂ ಕಾದು ಇರುವ ಅಗತ್ಯವಿದೆ ಎಂದು ಯತಿಗಳು ಹೇಳಿದರು. +ಅಗತ್ಯವಾಗಿ ಇರಬೇಕೆಂದು ಬಾಲಮುಕುಂದಾಚಾರ್ಯನು ಅರಿಕೆ ಮಾಡಿಕೊಂಡನು ಅಂದಿನಿಂದ ನಾಲ್ಕನೇ ದಿನ ಸೋಮವಾರ ಸಭೆಯ ಊಳಿಗ ಉಪಕ್ರಮಿಸುವದಕ್ಕೆ ನಿರ್ಣಯ ಮಾಡಿ ಪಾರುಪತ್ಯಗಾರರು ಯತಿಗಳ ಅಪ್ಪಣೆಯನ್ನು ಪಡಕೊಂಡು ಬಿಡಾರಕ್ಕೆ ನಡೆದರು. +ಭೀಮಾಚಾರ್ಯನು ಬೇಕೆಂತ ಪಾರುಪತ್ಯಗಾರರ ಕೂಟದಿಂದ ತಪ್ಪಿಸಿ ಕೊಂಡು ವಾಗ್ದೇವಿಯ ಬಿಡಾರದ ಕಡೆಗೆ ಅಕಸ್ಮಾತ್ತಾಗಿ ಬರುವಾಗ ಸ್ವಲ್ಪ ದೂರದಿಂದ ಅವನನ್ನು ನೋಡಿ ಭಾಗೀರಥಿಯು— “ಆಚಾರ್ಯರೇ! +ಇಲ್ಲಿ ವರೆಗೆ ದಯಮಾಡಿ ಬಡವರಾದ ನಮ್ಮ ಮೇಲೆ ಕನಿಕರವಿಟ್ಟು ಸಣ್ಣದೊಂದು ತಾಂಬೂಲ ಸೇವೆಯನ್ನು ಸ್ವೀಕರಿಸಿರಿ” ಎಂದು ಅಪೇಕ್ಷಿಸಿದಳು. +ಇದೊಂದು ಶುಭಕಾಲವೆಂಬ ಗ್ರಹಿಕೆಯಿಂದ ವಾಗ್ದೇವಿಯು ಭೀಮಾಚಾರ್ಯನ ಪಾದಗಳಿಗೆ ಬಿದ್ದು ಕೈ ಜೋಡಿಸಿ ನಿಂತುಕೊಂಡಳು. +ಭೀಮಾಚಾರ್ಯಗೆ ಸಂಹರ್ಷನಾಯಿತು ಬಾರೆಂದು ಅವಳಿಗೆ ಸಮ್ಮುಖದಲ್ಲಿ ಕೂಡ್ರಿಸಿಕೊಂಡನು. +ತರುವಾಯ ಸ್ವತೇವ ಸಂಭಾಷಣೆಗೆ ಆರಂಭವಾಯಿತು. +ಅದನ್ನು ಮುಂದೆ ವಿವರಸಿಯದೆ ಬಾಲಮುಕುಂದನು ಶ್ಲಾಘನೆ ಮಾಡಿದನು. +ಹಾಗೂ ಹೀಗೂ ಅಂದಿನ ದಿನ ಕಳೆಯಿತು. +ಭಾಗೀರಥಿ– “ಆಚಾರ್ಯರೇ!ತಮ್ಮ ಬರುವಿಕೆಯು ನಮ್ಮ ಪೂರ್ವ ಪುಣ್ಯದ ಫಲವೇ. +ತಮಗೆ ಬಹುಶಃ ನಮ್ಮ ಗುರುತವಿಲ್ಲ. +ನಮ್ಮ ಮೂಲ ಸ್ಥಾನ ತಮ್ಮ ಹೆಂಡತಿ ಭೀಮಕ್ಕನ ತೌರುಮನೆ ಇರುವ ಸಮಂತಪೇಟೆ. +ಇತ್ತಲಾಗಿ ನಾವು ಆ ಊರು ಬಿಟ್ಟು ಈ ಪಟ್ಟಣಕ್ಕೆ ಬಂದಿರುವೆವು. +ಪಲಾಶದ ಮರ ಘಟ್ಟಕ್ಕೆ ಹೋದರೂ ಅದಕ್ಕೆ ಮೂರೆ ಎಲೆ ಎಂಬ /ಣಜಿಯಂತೆ ಎಲ್ಲಿಗೆ ಹೋದರೂ ದರಿದ್ರಾವಸ್ಥೆ ನಮ್ಮ ಬೆನ್ನು ಬಿಡಲೇ ಇಲ್ಲ. +ಉಣ್ಣಲಿಕ್ಕೆ ಕೂಳೂ ಉಡಲಿಕ್ಕೆ ವಸ್ತ್ರವೂ ಉಳಕೊಳ್ಳಲಿಕ್ಕೆ ಜಾಗೆಯೂ ಸೊನ್ನೆ. +ಕೆಲವು ತಿಂಗಳ ಮುಂಚೆ ಶ್ರೀಪಾದಂಗಳವದ ನಮ್ಮ ಮೇಲೆ ದಯವಿಟ್ಟು ಮಠದಲ್ಲಿ ಸಂಶ್ರ ಯ ಕೊಟ್ಟಿರುವ ಕಾರಣ ಕಷ್ಟಗಳ ಹೊರೆ ಸ್ವಲ್ಫ ಜಗ್ಗಿದಂತಾಗಿಯದೆ.” +ಭೀಮಾಚಾರ್ಯ– “ನೀನು ನನ್ನ ಹೆಂಡತಿಯ ತೌರುಮನೆ ಊರಿನವಳು ಹೌದು. +ಅವಳು ಆಗಾಗ್ಗೆ ನಿನ್ನ ಪ್ರಸ್ತಾಪ ಮಾಡುವದಿತ್ತು ಏನು ಮಾಡೋಣ? +ಪಾಪ!ಹೋದ ವರುಷ ಅವಳ ಹೋಮ ಮಾಡಿದೆ ಈಗ ಏಕಾಂಗಿಯಾಗಿ ನಿಶ್ಚಿಂತನಾಗಿದ್ದೇನೆ.” +ಭಾಗೀರಥಿ– “ಅಹಾ, ತೀರಿಹೋದಳೇನು? +ಎಂಧಾ ಸುಲಕ್ಷಣ ಹೆಂಗಸು!ಎಷ್ಟು ಗುಣವಂತ!ಪಾಪವೇ!” +ಭೀಮಾಚಾರ್ಯ — “ಹೋದ ಜೀವ ಬರುವದೇನು? +ಪಶ್ಚಾತ್ತಾಪ ಪಟ್ಟು ಪ್ರಯೋಜನವಿದೆಯೇ? +ನಿಮ್ಮನ್ನೆಲ್ಲಾ ನೋಡಿ ಸಂತೋಷವಾಯಿ ತಮ್ಮ ನಾಳೆ ಊರಿಗೆ ಹೋಗುವದಕ್ಕೆ ಸನ್ನದ್ಧನಾಗಿದ್ದೇನೆ. +ಇಲ್ಲಿಗೆ ಬಂದು ಬಹುದಿವಸವಾಯಿತು.? +ವಾಗ್ದೇವಿ– “ಅಯ್ಯೋ!ವೇದವ್ಯಾಸ ಉಪಾಧ್ಯಗೆ ದಾರಿಯಲ್ಲಿ ಹಾಕಿ ಬಿಡುವಿರೇ!” +ಭೀಮಾ— “ಮತ್ತೇನು ಮಾಡಲಿ? +ಅವನನ್ನು ನನ್ನ ಕುತ್ತಿಗೆಗೆ ಕಟ್ಟಿ ಕೊಳ್ಳಲೇ?” +ವಾಗ್ದೇವಿ– “ಹಾಗೆ ಹೇಳಬಹುದೇನು? +ಒಬ್ಬನ ಪಕ್ಷ ಹಿಡಿದ ಮೇಲೆ ಅವನನ್ನು ಬಿಟ್ಟು ಹಾಕಿದರೆ ಅಪಖ್ಯಾತಿಗೆ ಕಾರಣವಲ್ಲವೇ? +ಭೀಮಾ– “ವಾಹ್ಹಾ, ನೀನು ಸಣ್ಣ ಮೂರ್ತಿಯಲ್ಲ, ನಾನು ವೇದ ವ್ಯಾಸ ಉಪಾಧ್ಯನ ಪಕ್ಷ ಹಿಡಿದೆನೆಂದು ನಿನಗೆ ಯಾರು ಹೇಳದರವ್ವಾ!” +ವಾಗ್ದೇವಿ–“ಹೌದಾದ ಮಾತು ಯಾರು ಹೇಳದರೇನು?” +ಭೀಮಾ– “ಭಾಗೀರಥಿ!ನಿನ್ನ ಮಗಳು ಸಾಮಾನ್ಯ ಹೆಂಗಸೆಂದು ತಿಳಿಯಬೇಡ. +ಅವಳಿಗೆ ದೇವರು ಒಳ್ಳೇದು ಮಾಡಲಿ.” +ಭಾಗೀರಧಿ– ವಿಪ್ರವಾಕ್ಯೋ ಜನಾರ್ಧನ ಎಂಬ ವಚನವಿದೆ. +ಆದರೆ ಪ್ರಕೃತದ ಅವಾಯಿ ನೋಡಿದರೆ ನಮಗೆ ಪರಿಣಾಮವಾಗುವ ಹಾಗಿಲ್ಲ. +ಅನ್ನಕ್ಕೆ ತತ್ವಾರ ಆಗುವ ಕಾಲ ಬಂದೊದಗಿಯದೆ, ಪರಾಕೆ!? +ಭೀಮಾ–“ಎಂಧಾ ಅವಾಯಿ?”ವಾಗ್ದೇವಿ ತಮ್ಮ ಅಪ್ತ ವೇದವ್ಯಾಸನ ಅವಾಯಿ. +ಅದರಲ್ಲಿ ನಾವು ಸುಧಾರಿಸಿಕೊಂಡ ಮೇಲಷ್ಟೆ ಜೀವರು ಒಳ್ಳೇದು ಮಾಡಬೇಕಾದ್ದು. +ತನ್ಮಧ್ಯ ಆಶೀರ್ವಾದ ಕೊಟ್ಟ ತಾವೇ ನಮ್ಮ ಮೇಲೆ ಹೂಡಿದ ಬ್ರಹ್ಮಾಸ್ರ ಉಂಟಷ್ಟೆ? +ಭೀಮಾ– “ನನಗೆ ಹಾಗ್ಯಾಕೆ ದೂರುವಿ. +ನಾನು ನಿನಗೆ ಸರ್ವಥಾ ದೋಷಕಾರಿಯಾಗೆನು. +ದೇವರು ನಿನಗೆ ಒಳ್ಳೇದು ಮಾಡಲಿ ಎಂಬ ನನ್ನ ಆಶೀರ್ವಾದ ದೇವರೇ ನಿಜವಾಗಿ ನಡಿಸದೆ ಇರಲಾರನು. +ನಾನು ಮನಃ ಪೂರ್ತಿಯಾಗಿ ಹೇಳಿದ ವಚನವಲ್ಲವೇ? +ಅದು ಎಂದೂ ಹುಸಿಯಾಗದು.? +ವಾಗ್ದೇವಿ– “ಹಾಗಾದರೆ ತಾವು ಈ ಹೊತ್ತಿನಿಂದ ವೇದವ್ಯಾಸನ ಪಕ್ಷಬಿಟ್ಟು ನಮ್ಮ ಪಕ್ಷಕ್ಕೆ ಬಂದದ್ದು ನಿಜವಷ್ಟೆ? +ತಾವೇ ನಮ್ಮ ಗುರು ಹಿರಿಯರು, ತೀರ್ಥರೂಪ ಸಮಾನರು. +ಪುನಃ ತಮ್ಮ ಕಾಲಿಗೆ ಬಿದ್ದಿದ್ದೇನೆ. +ಅನಾಥೆಯಾದ ನನ್ನನ್ನು ರಕ್ಷಿಸುವದಾಗಿ ವಾಗ್ದತ್ತ ಕೊಟ್ಟತನಕ ಏಳೆ.? +ಭೀಮಾ– “ನಾರಾಯಣ, ನಿನ್ನನ್ನು ಎಂದೂ ಬಿಟ್ಟು ಹಾಕಲಾರೆ, ಎದ್ದೇಳು. +ಭಾಗೀರಥಿ – “ಆಚಾರ್ಯರ ಮಾತು ಪೂರ್ಣವಾಗಿ ನಂಬಿಕೊ. +ಅವರ ಅಪ್ಪಣೆ ಮೀರಬೇಡ. +ವೇದವ್ಯಾಸ ಉಪಾಧ್ಯ ಹುಚ್ಚುಮುಂಡೆಗಂಡ. +ಅವನ ಮುಖ ಇನ್ನು ಆಚಾರ್ಯರು ನೋಡರು. +ನನಗೆ ಅವರ ನಂಬಿಕೆ ಚಂದಾಗಿ ಅದೆ.” +ಭೀಮಾ– “ವೇದವ್ಯಾಸ ಉಪಾಧ್ಯನು ಶ್ರೀಪಾದಂಗಳ ಮೇಲೆ ಮುನವಿ ಮಾಡಿದ ಕಾರಣ ಅದರ ಸತ್ಯತ್ವ ಶೋಧನೆ ಮಾಡುವದಕ್ಕೆ ಇತರ ಮರಾಧಿಪತಿಗಳು ಪ್ರತಿನಿಧಿಗಳನ್ನು ನೇಮಿಸಿರುವರು. +ಈ ಪ್ರಕರಣದಿಂದ ನಿನಗಾಗಲಿ ನಿನ್ನ ಮಗಳಿಗಾಗಲಿ ಬಾಧಕ ಯಾವದೊ ನನಗೆ ತಿಳಿಯದು. +ಆದಕಾರಣ ವೇದವ್ಯಾಸನ ಪಕ್ಷ ನಾನು ಬಿಡಬೇಕೆಂಬ ಅಗತ್ಯವಿಲ್ಲವಷ್ಟೇ.” +ವಾಗ್ದೇವಿ– “ಸರಿ, ಸರಿ, ಶ್ರೀಪಾದಂಗಳವರ ಮೇಲೆ ಆದ ಮನವಿ ಯಲ್ಲಿ ನನಗೇನು ಸಂಬಂಧವಿಲ್ಲವೆಂತ ಅನ್ನುವಿರಾ? +ನನ್ನನ್ನು ಶ್ರೀಪಾದಂಗ ಳವರು ಇಟ್ಟು ಕೊಂಡಿದ್ದರೆಂಬುದು ಅವನ ಸಾಧನೆಯಾಗಿರುತ್ತದೆ. +ತಾವು ಹೀಗೆ ಹೇಳುವದು ಅತಿ ಆಶ್ಚರ್ಯವೇ ಸರಿ? +ಭೀಮಾ– “ಅವನ ಸಾಧನೆ ಹಾಗಿರಲಿ. +ಸತ್ಯತ್ವ ಹ್ಯಾಗೆ? +ನಿನಗೂ ಯತಿಗಳಗೂ ಸ್ನೇಹ ಉಂಟೇನು?” +ವಾಗ್ದೇವಿ– “ಅಲ್ಲವೆಂದರೆ ತಾವು ನಂಬುವಿರೋ? +ಆ ಮಾತು ಸುಡಿ. +ತಮ್ಮ ಮರೆ ಹೊಕ್ಕಿದ್ದೇನೆ. +ನನ್ನನ್ನು ಇನ್ನು ರಕ್ಷಿಸುವ ಬಹುಭಾರ ತಮಗೆ ಕೂಡಿಯದೆ. +ಹೆಚ್ಚು ಪ್ರಶ್ನೆಗಳಿಂದ ನನ್ನ ಸ್ವರೂಪನಾಶನಮಾಡಬೇಡಿ. +ತಮ್ಮ ಮೇಲೆ ಪಿತೃಭಾವ ಇಟ್ಟದ್ದೇನೆ.” +ಭೀಮಾ–“ ಹಾಗಾದರೆ ವೇದವ್ಯಾಸನ ಸಾಧನೆಯು ಸುಳ್ಳಲ್ಲ. +ಅವನ ಪಕ್ಷವನ್ನು ನಾನು ಬಿಡುವುದು ನ್ಯಾಯವೇ?” +ವಾಗ್ದೇವಿ–“ನನಗೂ ಶ್ರೀಪಾದಂಗಳವರಿಗೂ ಸ್ಪೇಹವಿದ್ದರೆ ವೇದ ವ್ಯಾಸನ ಅಪ್ಪನ ಗಂಟು ಮುಗದ್ದೇನು?” +ಭೀಮಾ–“ಹಾಗಲ್ಲ, ಅವನ ಉದ್ಯೋಗವನ್ನು ಸ್ವಾಮಿಗಳು ತೆಗೆದರಲ್ಲ?” +ವಾಗ್ದೇವಿ–“ನಾನು ಹೇಳಿ ತೆಗಿಸಿದೆನೇ? +ನಾನು ಇಲ್ಲಿಗೆ ಬರುವ ಮೊದಲೇ ನಡೆದ ಕರ್ಮಕ್ಕೆ ನಾನು ಹೊಣೆಯೇನು?” +ಭೀಮಾ–“ಈಗಲಾದರೂ ನೀನು ಸ್ವಾಮಿಗಳಿಗೆ ಹೇಳಿ ಅವನ ಉದ್ಯೋಗವನ್ನು ಅವನಿಗೆ ತಿರುಗಿ ಕೊಡಿಸಿದರೆ ಮುಂದೆ ಯಾವುದೊಂದು ರಗಳೆಯಿರಲಿಕ್ಕಿಲ್ಲವಷ್ಟೇ?” +ವಾಗ್ದೇವಿ–“ಚಲೋ ಮಾತು, ತಮ್ಮ ಅಪೇಕ್ಷೆಯಂತೆ ಶ್ರೀಪಾದಂಗ ಳವರು ನಡೆಸಿದರೆ ಅವರ ಮರ್ಯಾದೆಯನ್ನು ಅವರೇ ಕಳಕೊಂಡ ಹಾಗಾಗಲಿಕ್ಶಿಲ್ಲವೇ? +ಅವನು ಯಾವ ದೊಡ್ಡ ಮನುಷ್ಯನೆಂತ ಹೆದರಬೇಕೋ ತಿಳಿಯದು.” +ಭೀಮಾ–“ಅವನು ಎಷ್ಟು ಸಣ್ಣ ಮನುಷ್ಯನಾದರೂ ಈಗ ಎದುರು ನಿಂತು ದ್ವೇಷ ಸಾಧಿಸುತ್ತಾನಲ್ಲ?” +ವಾಗ್ದೇವಿ–“ಅವನು ತಮ್ಮ ಬಲದಿಂದ ಹಾರಾಡುತ್ತಾನೆ. +ತಮ್ಮ ಸಹಾಯ ತಪ್ಪಿದರೆ ಅವನನ್ನು ಒಂದು ಹಳೆ ನಾಯಿಯಾದರೂ ಕಣ್ಣೆತ್ತಿ ನೋಡದು? +ಈ ಪ್ರಮೇಯದ ಪೂರ್ವಾಪರವನ್ನು ಸ್ವಲ್ಪವಾದರೂ ವಿಚಾರಿಸಿ ತಿಳುಕೊಳ್ಳದೆ ಗಪ್ಪನೆ ತಾನಿದ್ಬೇನೆ ಹೆದರ ಬೇಡವೆಂದು ವೇದವ್ಯಾಸ ಉಪಾಧ್ಯಗೆ ಮಾತುಕೊಟ್ಟ ತನ್ನ ಹೆಡ್ಡತನಕ್ಕೆ ಭೀಮಾಚಾರ್ಯನು ಪಶ್ಚಾತ್ತಾಪ ಪಟ್ಟನು. +ಈ ದೆಸೆಯಿಂದ ಅವನು ವಾಗ್ದೇವಿಯ ವಾದಕ್ಕೆ ಪ್ರತ್ಯುತ್ತರಕೂಡದೆ ಉಭಯ ಸಂಕಟದಲ್ಲಿ ಬಿದ್ದವನಂತೆ ಅವನ ಮುಖಚ್ಛಾಯೆಯಿಂದ ತಿಳಿದು ವಾಗ್ದೇವಿಯು ಇದೇ ಕಾಲೋಚಿತವೆಂದು ಮಿತಿಯಿಲ್ಲದೆ ಕಣ್ಣೀರಿಡುತ್ತಾ ಆಚಾರ್ಯನ ಕಾಲಿಗೆ ಅಡ್ಡಬಿದ್ದು ಗದ್ಗದ ಕಂಠದಿಂದ ಮಾಡುವ ಪ್ರಲಾಪ ವನ್ನು ನೋಡಿ ಅವನ ಮನಸ್ಸು ಕರಗಿತು. +ಆಹಾ!ಈ ಮೂಢ ವೇದವ್ಯಾ ಸನ ಪಕ್ಷವನ್ನು ಹಿಡುಕೊಂಡು ದೊಡ್ಡ ಇಕ್ಕಟ್ಟಿನಲ್ಲಿ ಸಿಕ್ಕಿ ಬಿದ್ದೆನೆಂಬ ಚಿಂತೆ ಯಿಂದ ಕೊಂಚಸಮಯ ಅನುತ್ತರನಾಗಿದ್ದರೂ ವಾಗ್ದೇವಿಯ ದುಃಖವನ್ನು ಕಂಡು, ಅವನಿಗೆ ಬಹಳ ಅನುತಾಪವಾಯಿತು. +ಮುಂದರಿಸಿ ಹೋದ ಕೆಲಸಕ್ಕೆ ಈಗ ನಿವೃತ್ತಿಯಿಲ್ಲ. +ಇನ್ನು ನಡಿಯಲಿಕ್ಕಿರುವ ವಿಚಾರಣೆಯು ಪ್ರಧಾನವಾದದ್ದು. +ಅದರಲ್ಲಿ ವೇದವ್ಯಾಸನ ಕೈಕಾಲು ಮುರಿಯುವ ಉಪಾಯ ಮಾಡಿದರೆ ವಾಗ್ದೇವಿಯ ಪಕ್ಷವೇ ಗೆಲ್ಲುವದೆಂದು ಅವಳನ್ನು ಆಚಾರ್ಯನು ಸಂತವಿಸುತ್ತಿರುವಾಗ ಭಾಗೀರಥಿಯು ಮನೆಯ ಒಳಗಿಂದ ಬೆಳ್ಳಿಯ ಹರಿವಾ ಣದಲ್ಲಿ ಅಪೂರ್ವವಾದ ತಿಂಡಿ, ಬೆಳ್ಳಿಯ ಚಂಬೆನಲ್ಲಿ ಬಿಸಿ ಬಿಸಿ ಚಾ ನೀರನ್ನು ಬೆಳ್ಳಿಯ ಪಂಚಪಾತ್ರೆ ಸಮೇತ ಕೈಯಲ್ಲಿ ಹಿಡುಕೊಂಡು ಆಚಾರ್ಯನ ಮುಂದೆ ಮಡಗಿ ದೂರ ಕೂತುಕೊಂಡಳು. +ವಾಗ್ದೇವಿಯು ಚಾ ನೀರನ್ನು ಪಂಚಪಾತ್ರಿಯಲ್ಲಿ ಬೇಕಾದ ಹಾಗೆ ಹೊಯಿದುಕೊಟ್ಟು, ಅವನ ತೃಷೆಯನ್ನು ನಿವಾರಣೆ ಮಾಡಿದಳು. +ಹರಿವಾಣದಲ್ಲಿದ್ದ ತಿಂಡಿಯನ್ನು ಸಾವಕಾಶವಿಲ್ಲದೆ ಆಚಾರ್ಯನು ವಿನಿಯೋಗಿಸಿದನು. +ದ್ವಿಜಗೆ ತೃಪ್ತಿಯಾಯಿತು. +ಸುಡು ಮೋರೆಯ ವೇದವ್ಯಾಸನ ಪಕ್ಷಕ್ಕೆ ಸೇರಿ, ದೂರಿಸಿ ಕೊಳ್ಳುವದಕ್ಕಿಂತ ಸಹಾಯಹೀನಳಾದ ವಾಗ್ದೇವಿಗೊಂದು ಉಪಕಾರ ಮಾಡಿದರೆ ಅವಳು ಜನ್ಮ ಜನ್ಮಾಂತರಕ್ಕೂ ಮರೆಯಳೆಂದು ಭಾವಿಸಿ, ಅಂದಿನಿಂದ ಅವಳ ಹಿತ ಚಿಂತಕ ನಾಗಲಿಕ್ಕೆ ಸಮ್ಮತಿಸಿ ಅವಳಿಗೆ ನಂಬಿಗೆಯನ್ನು ಕೊಟ್ಟು, ಮರುದಿವಸ ಬರುವದಾಗಿ ಹೇಳಿ ಹೊರಟನು. +ವೇದವ್ಯಾಸ ಉಪಾಧ್ಯನ ಪ್ರಾಣಸಖನನ್ನು ತನ್ನ ಪಕ್ಷಕ್ಕೆ ತಿರುಗಿಸಿ ಕೊಂಡ ಹಾಗಾಯಿತು. +ಬಾಲಮುಕುಂದಾಚಾರ್ಯನನ್ನು ಕೈವಶಮಾಡಿಕೊಳ್ಳದೆ ಜಯಪೊರೆಯುವದು ಪ್ರಯಾಸ ಹೀಗೆ ಯೋಚನೆಯಲ್ಲಿ ಮಗಳೂ ತಾಯಿಯೂ ಒಟ್ಬಿನಲ್ಲಿ ಶಾನೆ ಹೊತ್ತು ಕಳೆದರು. +ಚಿಂತೆ ಯಾಕೆ? +ಈ ಕಾರ್ಯ ವನ್ನು ತಾನೇ ಸುಧಾರಿಸುವದಾಗಿ ತಾಯಿಯು ಒಪ್ಪಿಕೊಂಡು, ಗಂಡನನ್ನು ಕರೆದು, ಅವನ ಕಿವಿಯಲ್ಲಿ ಮೆಲ್ಲಗೆ ಏನೋ ಮಾತಾಡಿದಳು ಅದ್ಯಾವ ದೊಡ್ಡ ಕೆಲಸವೆಂದು ನಗುತ್ತಾ, ಅವನು ಅಂಜನೇಯಾಲಯಕ್ಕೆ ಹೋಗಿ ಬಾಲಮು ಕುಂದಾಚಾರ್ಯನ ಸಮಯ ಹಾರೈಯಿಸುತ್ತಾ, ಅತ್ತಿತ್ತ ನೋಡಿಕೊಂಡು, ತಾನು ಬೇರೆ ಏನೋ ಕೆಲಸದ ಮೇಲೆ ಬಂದವನಂತೆ ಆ ದೇವಾಲಯದ ಅರ್ಚಕನ ಕೂಡೆ ಸಂಭಾಷಣೆ ಮಾಡುತ್ತಾ, ಒಂದು ಮೂಲೆಯಲ್ಲಿ ಕೂತು ಕೊಂಡನು. +ಬಾಲ ಮುಕುಂದನು ಒಬ್ಬನೇ ಕೂತುಕೊಂಡಿರುವ ಒಳ್ಳೇ ಸಮಯವನ್ನು ನೋಡಿ, ತಮ್ಮಣ್ಣ ಭಟ್ಟನು ದೂರದಿಂದ ಬಗ್ಗಿ ದೊಡ್ಡ ನಮಸ್ಕಾರ ಮಾಡಿದನು. +ಬಾಲಮುಕುಂದನು ಆ ಬ್ರಾಹ್ಮಣನನ್ನು ಸಮೀಪ ಕೂರಿಸಿ ಕೊಂಡು, ಅವನ ಗುರ್ತು ಮಾಡಿಕೊಂಡ ಮೇಲೆ ಬಂದ ಕಾರ್ಯವೇನೆಂದು ಮೆಲ್ಲಗೆ ಕೇಳಿದಾಗ ತಮ್ಮಣ್ಣ ಭಟ್ಟನು ಅವನ ಕಿವಿಯಲ್ಲಿ ವಾಗ್ದೇವಿಯು ತಮ್ಮ ದರುಶನಾಭಿಲಾಹಿಯಾಗಿರುವಳೆಂದು ಹೇಳಿದನು. +ತಾನು ಚಿಂತನೆ ಮಾಡಿಕೊಂಡಿರುವ ಕಾರ್ಯವು ಕೈಗೂಡುವ ಸಂದರ್ಭ ಸುಲಭವಾಗಿ ಸಿಕ್ಕಿ ದ್ದಕ್ಕಾಗಿ ಉಲ್ಲಾ ಸಪಟ್ಟು, ಅವನು ತಮ್ಮಣ್ಣಭಟ್ಟನನ್ನು ಒಂದು ಗೋಪ್ಯ ಸ್ಥಳಕ್ಕೆ ಕರಕೊಂಡು, ಅಲ್ಲಿ ರವಷ್ಟು ಅಂತರಂಗ ಮಾತಾಡಿದನು. +ತಮ್ಮಣ್ಣ ಭಟ್ಟನು ಶೀಘ್ರ ಹೆಂಡತಿಯ ಬಳಿಗೆ ಬಂದು, ಗುಟ್ಟಿನಲ್ಲಿ ಏನೋ ಹೇಳಿದನು. +“ಸೈ ಇನ್ನು ಚಿಂತೆ ಬಿಡಿ’ ಎಂದು ಸಂತೋಷದಿಂದ ಅವಳು ಮಗಳನ್ನು ಕಂಡು, ಅವಳಿಗೆ ಗುಪ್ತ ಅನುಜ್ಞೆಗಳನ್ನು ಕೊಟ್ಟಳು. +ವಾಗ್ದೇವಿಯ ಮುಖಚಂದ್ರಗೆ ಪೂರ್ಣಮಿಯ ದಿನದಂತೆ ಪೂರ್ಣಕಲೆಗಳೇರಿದವು. +ಅವಳು ಸಮಯ ಹಾಳುಮಾಡದೆ, ಏನೋ ದೊಡ್ಡ ಕೆಲಸದಲ್ಲಿ ಪ್ರವರ್ತಿಸುತ್ತಿಗುವ ಹಾಗೆ ಕಾಣುತ್ತಿತ್ತು. +ಬಗೆಬಗೆ ಹೂವು, ಪನ್ನೀರು, ಗಂಧ, ಊದುಬತ್ತಿ ಇತ್ಯಾದಿ ಸುಗಂಧ ವಸ್ತುಗಳ ಪರಿಮಳವು ದಾರಿಗರ ಘ್ರಾಣೇಂದ್ರಿ ಯದಲ್ಲಿ ತುಂಬಿತು. +ತಮ್ಮಣ್ಣ ಭಟ್ಟನು ಬೇಗ ಒಂದಿಷ್ಟು ಉಂಡುಬಿಟ್ಟು, ಮುಸುಕು ಹಾಕಿಕೊಂಡು, ಮಠದ ಎದುರು ಮುಚ್ಚಿರುವ ಅಂಗಡಿಯ ಬಾಜಾರಿ ಹಲಿಗೆಯ ಮೇಲೆ ಘಳಿಗೆಗೊಮ್ಮೆ ತಲೆಯೆತ್ತಿ ನೋಡುತ್ತಾ, ನಿದ್ರಾವಸ್ಥೆಯನ್ನು ತಾಳಿ, ಬಿದ್ದು ಕೊಂಡನು. +ಬೀದಿಯಲ್ಲಿ ಜನರ ಸಂಚಾರ ಕಡಿಮೆಯಾಗುವ ವೇಳೆಯಲ್ಲಿ ಒಬ್ಬ ಯೌವನಸ್ಥನು ಮುಸಲ್ಮಾನರಂಶೆ ಅರಬಿ ಅಂಗಿಯನ್ನು ಆಪಾದ ಮಸ್ತಕ ಪರಿಯಂತರ ಹೊದ್ದು ಕೊಂಡು, ಕೈಯಲ್ಲಿ ಬೆತ್ತವನ್ನು ಹಿಡುಕೊಂಡು ಬರುವದಕ್ಕೂ ತಮ್ಮಣ್ಣ ಭಟ್ಟನು ತಲೆಯೆತ್ತಿ ನೋಡುವದಕ್ಕೂ ಸಮಯವಾಯಿತು. +ತಮ್ಮಣ್ಣ ಭಟ್ಟನು ಬೀದಿಗೆ ಇಳಿದು ಆ ಯೌವನಸ್ಥನನ್ನು ತನ್ನ ಮನೆಯ ಒಳಗೆ ಕರಕೊಂಡು ಬಾಗಲು ಹಾಕಿ ಬಿಟ್ಟನು. +ಶಾನೆ ಸಮಯ ಕಳೆದ ಮೇಲೆ ಅವನು ಬಾಗಲು ತೆರದು ಬೀದಿಗೆ ಇಳಿದನು ತಮ್ಮಣ್ಣ ಭಟ್ಟನು ಅವನ ಹಿಂದುಗಡೆಯಿಂದ ಹತ್ತಿಪ್ಪತ್ತು ಮಾರು ದೂರಹೋಗಿ ಅಪ್ಪಣೆ ಪಡಕೊಂಡು ಹಿಂತಿರುಗಿ ತನ್ನ ಮನೆಯ ಒಳಹೊಕ್ಕು ಶಯನ ಹಾಕಿದನು. +ಭಾಗೀರಥಿಯು ಗಂಡನನ್ನು ಕುರಿತು– “ಹೌದೇನು!ಬಾಲಮುಕುಂದಾಚಾರ್ಯನು ನಮ್ಮ ಕೈವಶವಾದ ಹಾಗಾಯಿತು. +ನಿಮ್ಮ ಸಾಹಸಕ್ಕೆ ಮೆಚ್ಚಿದೆ. +ನಾರಾಯಣಾಚಾರ್ಯನನ್ನು ಮೊದಲೇ ಬಗ್ಲಿಗೆ ಹಾಕಿ ಆಯಿತು. +ಇನ್ನು ಆ ಗ್ರಾಮಸಿಂಹ ವೇದವ್ಯಾಸನು ಬಗುಳುತ್ತಿರಲಿ ಎಂದು ಹರುಷವನ್ನು ತಡೆಯಲಾರದೆ ಬಾಯಿತುಂಬಾ ನೆಗಾಡಿ ಬಿಟ್ಟಳು. +ಈ ಸಂಭಾಷಣೆಯನ್ನು ಕೇಳುತ್ತಿದ್ದ ವಾಗ್ದೇವಿಯು ಹಾಗೆಯೇ ನಕ್ಕಳು. +ಬಾಲಮುಕುಂದಾಚಾರ್ಯನು ಅಂಜನೇಯಾಲಯದ ಸಮಾಪವಾಗುವಾಗ ತಾನು ಹೊದ್ದುಕೊಂಡಿದ್ದ ಅರಬಿ ಅಂಗಿಯನ್ನು ತೆಗೆದು ಸುರುಳಿಮಾಡಿ ಕಂಕುಳಲ್ಲಿಟ್ಟುಕೊಂಡು, ತೀವ್ರವಾಗಿ ನಡಿಯುತ್ತಿದ್ದನು. +ಹಿಂದಿನಿಂದ ಯಾರೋ ಬಂದಂತೆ ತೋರಿ ನೋಡೋಣ, ದೊಣ್ಣೆಯನ್ನು ಹಿಡುಕೊಂಡು ಕಂಬಳಿಮುಸುಕು ಹಾಕಿ ಕೊಂಡು ಹಿಂಬಾಲಿಸಿ ಬರುವ ಭೀಮಾಚಾರ್ಯನನ್ನು ಕಂಡು, ಅಲ್ಲಿಯೇ ಸ್ತಬ್ಧನಾದನು. +ಅವನು– “ಆಚಾರ್ಯರೇ ತಾವು ಒಬ್ಬರೇ ಅಂಗರಕ್ಷಣೆಗೆ ಯಾರಿಗೂ ಸಂಗಡ ತಕ್ಳೊಳ್ಳದೆ ಮರಳಿ ಬರುವದು ನೋಡಿ ಭದ್ರತೆಯ ಚಿಂತನೆಯಿಂದ ತಮ್ಮ ಬೆನ್ನು ಬಿಡದೆ ಬಂದೆ” ಎಂದು ವಿನೋದಪೂರ್ವಕವಾಗಿ ಹೇಳಿ ನಕ್ಕನು. +ಬಾಲಮುಕುಂದಾಚಾರ್ಯಗೆ ಚೇಳು ಕಚ್ಚಿದಂತಾಯಿತು. +ತನಗೆ ಗುಟ್ಟು ತಿಳಿದ ದೆಸೆಯಿಂದ ಏನೂ ಬಾಧ ಕವಿಲ್ಲ. +ಮನಸ್ಸಿನಲ್ಲಿ ರವಷ್ಟಾದರೂ ಸಂದೇಹವಿರಬಾರದೆಂದು ಭೀಮಾಚಾರ್ಯನು ಬಾಲಮುಕುಂದನ ಕೈಹಿಡುಕೊಂಡು, ಇಬ್ಬರೂ ಬಿಡಾರ ಪ್ರವೇಶವಾದರು. +ಸಾಯಂಕಾಲ ಸಮಯ ತಮ್ಮಣ್ಣ ಭಟ್ಟನೂ ಬಾಲಮುಕುಂದನೂ ಅಂತರಂಗ ಮಾತಾಡುವ ಸಮಯದಲ್ಲಿ ಭೀಮಾಚಾರ್ಯನು ಬಂದು ಕಿಟಕಿಯಿಂದ ನೋಡಿ ಅದರಲ್ಲಿ ಏನೋ ವಿಶೇಷವದೆ ಎಂಬ ಅನುಮಾನದಿಂದ ರಾತ್ರೆಕಾಲ ನಿದ್ರೆಹೋಗದೆ ಕಾದುಕೊಂಡಿದ್ದನು. +ಬಾಲಮುಕುಂದನು ವೇಷ ಮರಸಿ ಹೊರಡುವದು ಆವನ ಕಣ್ಣಿಗೆ ಬಿದ್ದಿತು. +ಒಂದು ಫರ್ಲಾಂಗಿನಷ್ಟು ದೂರದಿಂದ ಮೆಲ್ಲಗೆ ಅವನು ಹಿಂಬಾಲಿಸಿ ಬಂದು, ಕುರುದಾರಿಯಿಂದ ಚಂಚಲನೇತ್ರರ ಮಠದ ಬಾಗಿಲಲ್ಲಿರುವ ದೊಡ್ಡ ಅಶ್ವತ್ತ ಮರದ ಕಟ್ಟೆಯಲ್ಲಿ ಅಡಗಿನಿಂತು, ತಮ್ಮಣ್ಣ ಭಟ್ಟನು ಬಾಲಮುಕುಂದನನ್ನು ತನ್ನ ಬಿಡಾರದ ಒಳಗೆ ಹೊಗಿಸಿಬಿಟ್ಟ ಚಮತ್ಕಾರವನ್ನು ನೋಡುತಿದ್ದನು. +ಮರುದಿನ ಬೆಳಗ್ಗೆ ಭೀಮಾಚಾರ್ಯನ ಸವಾರಿಯು ವಾಗ್ದೇವಿಯ ಬಿಡಾರಕ್ಕೆ ಹೋಯಿತು ಅವಳು ತಾಯಿತಂದೆಗಳ ಸಮೇತ ಅವನಿಗೆ ದೇವರಂತೆ ವಿನಮಿಸಿ, ಆಸನಕೊಟ್ಟು ಕಾಲುಮುಟ್ಟಿ ನಮಸ್ಕಾರ ಮಾಡಿದಳು ಆಚಾರ್ಯನ ರಸನಾ ಶಕ್ತಿಯನ್ನು ಸೋಲಿಸುವ ಹಾಗಿನ ರುಚಿಕರವಾದ ಪದಾರ್ಧಗಳುಳ್ಳ ಫಲಾಹಾರ ಸಹಿತ ಚಲೋ ಕಾಫಿಯನ್ನು ಉಣ್ಣಿಸುವುದ ರಿಂದ ಅವರು ಇವನನ್ನು ದಣಿಸಿದರು. +ಜರಿ ಅಂಚಿನದೊಂದು ಬನಾರಸಿ ಪಟ್ಟೆ ಮಡಿಯನ್ನೂ ಹೊಳೆಯುವ ಕೆಂಪಿನ ಕಿಡಿಗಳನ್ನು ಕುಂಡ್ರಿಸಿರುವ ಒಂದು ಚಿನ್ನದ ಉಂಗುರವನ್ನೂ ವಾಗ್ದೇವಿಯು ಭೀಮಾಚಾರ್ಯಗೆ ಕೊಟ್ಟು ಸ್ವೀಕರಿಸಬೇಕೆಂದು ಅಪೇಕ್ಷಿಸಿದಳು. +ಗುಣವಂತೆಯಾದ ಈ ವಿಲಾಸಿನಿ ಸ್ತ್ರೀಯ ಕೈಯಿಂದ ತನಗೆ ಸಿಕ್ಕಿದ ಉಚಿತವನ್ನು ಪ್ರೇಮದಿಂದ ಅಂಗೀಕರಿಸಿ “ನಿನಗೆ ಸದಾ ಶ್ರೀಹರಿಯು ಪೂರ್ಣ ಅನುಗ್ರಹವಿಟ್ಟು ನಡೆಸಲಿ” ಎಂದು ಸಂಪೂರ್ಣಾಶೀರ್ವಾದ ಮಾಡಿ, ತಾಂಬೂಲವನ್ನು ತಕ್ಕೊಂಡು, ಮಧ್ಯಾ ಹ್ನಕ್ಕೆ ಮರಳಿ ಬರುವೆನೆಂದು ಹೊರಟು ಹೋದನು. +ಬಾಲಮುಕುಂದಾಚಾರ್ಯನು ತನ್ನ ಗುಟ್ಟು ಹೊರಗೆ ಬಿತ್ತೆಂಬ ಚಿಂತೆಯನ್ನು ತೋರಿಸಿಕೊಳ್ಳದೆ ಹಾಸ್ಯವದನ ಮಾಡಿಕೊಂಡರೂ ಭೀಮಾಚಾರ್ಯನನ್ನು ನೋಡಿದೊಡನೆ ಕೊಂಚ ನಾಚಿಕೆಯಿಂದ ತಲೆಯನ್ನು ಎತ್ತಲಾರದೆ ಕುಳಿತುಕೊಂಡಿರುವುದನ್ನು ನೋಡಿ, ಭೀಮಾಚಾರ್ಯನು ಅವನನ್ನು ಏಕಾಂತ ಸ್ಥಳಕ್ಕೆ ಕರ ಕೊಂಡು, ಅಲ್ಲಿ ಸ್ವಲ್ಪ ಸಮಯ ಅವನ ಕೂಡೆ ಸಂಭಾಷಣೆ ಮಾಡಿದನು. +“ನನ್ನ ಮತ್ತು ನಿನ್ನ ಮೇಲೆ ಪೂರ್ಣವಿಶ್ವಾಸವಿಟ್ಟರುವ ಅಬಲೆಯನ್ನೂ ದಂಡಧಾರಿಯಾದ ಚಂಚಲನೇತ್ರ ಸನ್ಯಾಸಿಯನ್ನೂ ಶುಂಠನಾದ ವೇದ ವ್ಯಾಸನ ಹೊಟ್ಟೆ ಕಿಚ್ಚಿಗೆ ಬಲ ಅರ್ಪಿಸದೆ, ಕ್ಷಿಪ್ರ ಅವರನ್ನು ವಿಮೋಚಿಸುವ ಆಲೋಚಕೆ ಮಾಡುವುದೇ ಲೇಸು” ಎಂದು ಭೀಮಾಚಾರ್ಯನು ಹೇಳಲು ಬಾಲಮುಕುಂದನು ಆ ಮಾತು ಒಪ್ಪಿಕೊಂಡನು ಮಧ್ಯಾಹ್ನಕ್ಕೆ ಭೀಮಾ ಚಾರ್ಯನು ಮರೆಯದೆ ವಾಗ್ದೇವಿಯ ಬಿಡಾರಕ್ಕೆ ಹೋಗಿ ಬೇಕಾದ ಉಪಚಾರಗಳನ್ನು ಕೈಕೊಂಡು, ತನ್ನನ್ನು ತೀರ್ಥರೂಪರಂತೆ ನಂಬಿಕೊಂಡಿರುವ ವಾಗ್ದೇವಿಗೆ ಪೂರ್ಣ ಭರವಸೆಯನ್ನು ಹೇಳಿ, ಹೊರಟು ಬಂದನು. +ವೇದವ್ಯಾಸ ಉಪಾಧ್ಯನ ಮನವಿಯನ್ನು ಇತ್ಯರ್ಥಿಸಲಿಕ್ಕೆ ನೇಮಿಸೋಣಾದ ದಿವಸವು ಬಂದಿತು. +ಚಂಚಲನೇತ್ರರ ಕಡೆಯಿಂದ ಪಾರುಪತ್ಯಗಾರ ವೆಂಕಟಪತಿ ಆಚಾರ್ಯನು ಸಕಾಲದಲ್ಲಿ ಬಂದು ಸಭೆಯ ಮುಂದೆ ಕೂತು ಕೊಂಡನು. +ಬಾಲಮುಕುಂದಾಚಾರ್ಯನು ಅಗ್ರಸ್ಥಾನದಲ್ಲಿ ಕುಳಿತನು. +ವೇದವ್ಯಾಸ ಉಪಾಧ್ಯನು ಬಂದ ಬಳಿಕ ಅವನನ್ನು ಕುರಿತು-“ನಿನ್ನ ಮನವಿ ಯಲ್ಲಿ ನಿವರಿಸಲ್ಪಟ್ಟ ವಿಷಯಗಳನ್ನು ಸಿದ್ಧಾಂತವಡಿಸುವುದಕ್ಕೋಸ್ಕರ ಸಾಕ್ಷ ವೇನಿದೆ?” ಎಂದು ಬಾಲಮುಕುಂದನು ಪ್ರಶ್ನೆಮಾಡಿದನು. +“ನನ್ನ ಹೇಳಿಕೆ ಗಳೆಲ್ಲ ವಾಸ್ತವ್ಯವೆಂಬುದಕ್ಕೆ ಚಂಚಲನೇತ್ರರನ್ನೂ ವಾಗ್ದೇವಿಯನ್ನ್ಹೂ ಕರೆಸಿ ವಿಚಾರಣೆ ಮಾಡಿದರೆ ಸಾಕು. +ಅವರ ಒಪ್ಪಿಗೆಗಳಿಂದಲೇ ಆನೇಕ ಪ್ರಮೇಯಗಳು ವ್ಯಕ್ತವಾಗುವುವು” ಎಂದು ಉತ್ತರಕೊಟ್ಟನು. +ಬಾಲಮುಕುಂದಾಚಾರ್ಯನು ಖೋ ಎಂದು ನಕ್ಕನು. +ಅಂತೆಯೇ ಎಲ್ಲರೂ ನಗಲಿಕ್ಕೆ ತೊಡಗಿದರು: +ವೇದವ್ಯಾಸ ಉಪಾಧ್ಯಗೆ ಸಿಟ್ಟು ಬಂತು. +ಕುತ್ಸಿತ ಮಾತುಗಳನ್ನು ಆಡುವುದಕೈಸಗಿದನು. +ಈ ದೆಸೆಯಿಂದ ಸಭಾನಾಯಕಗೂ ಸಭಾಜನರಿಗೂ ವಿಪರೀತ ಸಿಟ್ಟು ಬಂದು, ಈ ಮೂರ್ವಗೆ ಬಹಿಷ್ಕಾರ ಪತ್ರ ಕೊಡುವುದೇ ಲೇಸೆಂದು ತೋರಿತು. +ಇದೇ ತನ್ನ ವೈನ ನಡೆಯಲಿಕ್ಕೆ ಸರಿಯಾದ ಸಮಯವೆಂದು ಭೀಮಾಚಾರ್ಯನು ಮುಕುಳಿತ ಹಸ್ತನಾಗಿ ಸಭೆಯವರ ಸಮ್ಮುಖದಲ್ಲಿ ನಿಂತು, ಸಣ್ಣದೊಂದು ಭಾಷಣವನ್ನು ಮಾಡಿದನು. +“ವಸಂತನಗರದ ಮಠಾಧಿಪತಿಗಳ ಆಜ್ಞೆಯನ್ನನುಸರಿಸಿ, ಅವರ ಪ್ರತಿ ನಿಧಿಗಳು ಸಭೆ ಮಾಡಿ, ಚಂಚಲನೇತ್ರ ಸನ್ಯಾಸಿಗಳ ಶೀಲವನ್ನು ಕುರಿತು ಪರಿಶೋಧನೆ ಮಾಡುವದಕ್ಕಾಗಿ ಅಗತ್ಯವಾದ ಸಾಕ್ಷಿಯನ್ನು ಕೊಡೆಂದು ವಾದಿಯ ಕೂಡೆ ಕೇಳಿದಾಗ ನ್ಯಾಯವಾದ ಪ್ರತಿವಾಕ್ಯಕೊಡದೆ ಹುಡುಗಾಟಕೆಯ ಮಾತುಗಳನ್ನು ಆಡುವ ಮೂರ್ಖನನ್ನು ಸಭಾ ಜನರು ಈಗಲೇ ಶಿಕ್ಷಿಸುವುದು ಅನ್ಯಾಯವೆನ್ನಕೂಡದು. +ಪರಂತು ಅವನು ಏನೂ ತಿಳಿಯದ ಮೂಢನೆಂಬ ಹಾಗೆ ಅವನ ಮಾತುಗಳ ಸ್ವಭಾವದಿಂದಲೇ ತಿಳಿಯಲಿಕ್ಕೆ ಅನುಕೂಲವಿರುವುದು ನಾನು ಹೆಚ್ಚೇನು ಅರಿಕೆ ಮಾಡಲಿ? +ಮುಖ್ಯ ಅವನ ಸಹಸ್ರ ಅಪರಾಧಗಳಿದ್ದರೂ ಅವನ ಬುದ್ದಿವೈಕಲ್ಯವನ್ನು ಆಲೋಚನೆಗೆ ತಕ್ಕೊಂಡು ಅವನ ಅಪರಾಧಗಳನ್ನೆಲ್ಲಾ ಕ್ಷಮಿಸಬೇಕೆಂದು ವಿನಯದಿಂದ ನಾನು ಸಭಾಪತಿಗಳನ್ನೂ ಸಭಾಜನರನ್ನೂ ಬೇಡಿಕೊಳ್ಳುತ್ತೇನೆ. +ಭೂಲೋಕ ದಲ್ಲಿ ಅನೇಕ ಮಠಾಧಿಪತಿಗಳು ಪೂರ್ವಾಶ್ರಮದ ನೆಂಟರಿಷ್ಟರಿಗೆ ಸಹಾಯ ಮಾಡುವ ಇಚ್ಚೆಯಿಂದ ದ್ರವ್ಯವನ್ನಾಗಲೀ ಉಳಕೊಳ್ಳಲಿಕ್ಕೆ ಬಿಡಾರವನ್ನೂ ಕೊಡುವ ವಾಡಿಕೆಯು ಅನಾದಿಯಿಂದ ನಡೆದು ಬಗುತ್ತದೆ. +ವಾಗ್ದೇವಿಯನ್ನು ಅವಳ ಗಂಡನ ಮತ್ತು ತಂದೆ ತಾಯಿಗಳ ಸಮೇತ ಮರದಲ್ಲಿ ಉಳಕೊಳ್ಳುವದಕ್ಕೆ ಜಾಗಕೊಟ್ಟ ಮಾತ್ರದಿಂದ ಯತಿಗಳ ಪರಿಶುದ್ಧತೆಗೆ ಕುಂದುಬರಲಿಕ್ಕೆ ಕಾರಣವಿಲ್ಲವು. +ಇದನ್ನೆಲ್ಲಾ ಆಲೋಚಿಸದೆ, ದೀಪದ ಮೇಲೆ ಬಿದ್ದ ಪತಂಗ ದಂತೆ ಬಡಿದಾಡಿಕೊಳ್ಳುವ ವೇದವ್ಯಾಸನ ಹುಚ್ಚಾಟಕ್ಕೆ ಯಾರಿಗೆ ಸಿಟ್ಟುಬಾರದು? +ಅವನು ಮನವಿಯಲ್ಲಿ ಹೇಳುವ ದೂರುಗಳನ್ನು ಸ್ಥಾಸಿಸುವುದಕ್ಕೆ ಸಾಕ್ಷಿಯನ್ನು ತರುವುದೇ ಅಸಾಧ್ಯ. +ಒಬ್ಬನ ಮೇಲೆ ಅವರವರು ಮಾಡಿದ ಪಾಪಕ್ಕೆ ಅವರವರೇ ಹೊಣೆಯಾಗಿರುವರು. +‘ಮಾಡಿದವನ ಪಾಪ ಆಡಿ ದವನ ತಲೆ ಮೇಲೆ’ ಎಂಬ ಗಾದೆಯಂತೆ ವೇದವ್ಯಾಸನ ಗತಿಯಾಗುವದಾಯಿತು. +ಇದು ಅವನ ಗ್ರಹಗತಿಯೇ ಸರಿ. +ಈಗ ಅವನು ಮಾಡಿದ ಅಪ್ರ ಬದ್ಧತೆಯನ್ನು ಸಭೆಯವರು ಸಂಪೂರ್ಣವಾಗಿ ಕ್ಷಮಿಸಿಬಿಟ್ಟು, ಇಷ್ಟು ದಿವಸ ಈ ಪುರದಲ್ಲಿ ಉಳುಕೊಂಡು, ಪಡಕೊಂಡ ಸಮಾಚಾರದ ಮೇಲೆ ತಮ್ಮ ಚಿತ್ತಕ್ಕೆ ಯುಕ್ತತೋರುವಂತೆ ಒಂದು ಬಿನ್ನವತ್ತಳೆಯನ್ನು ಶ್ರೀಪಾದಂಗಳವರಿಗೆಲ್ಲರಿಗೂ ಬರೆದುಕೊಳ್ಳ ಬೇಕಾಗಿ ನಾನು ಬಡ ವೇದವ್ಯಾಸನ ಕಡೆಯಿಂದ ಮಾಡುವ ಈ ಕಡೇ ಅರಿಕೆಯನ್ನು ನಡಿಸಿಕೊಡಬೇಕೆಂದು ಕಡ್ಡಿ ಮುರಿದು ಹೇಳಿಕೋತೇನೆ.?” +ಹೀಗೆ ಮಾತಾಡಿದ ತರುವಾಯ ಭೀಮಾಚಾರ್ಯನು ವೇದವ್ಯಾಸ ನಿಗೆ ಹಸ್ತ ಸಂಕೇತದಿಂದ ತಿಳಿಸಿದ ಬುದ್ಧಿಮಾರ್ಗವನ್ನನುಸರಿಸಿ, ಅವನು ತನ್ನ ಅಪರಾಧಗಳನ್ನು ಕ್ಷಮಿಸಬೇಕೆಂದು ಸಭೆಯ ಮುಂದೆ ಅಡ್ಡ ಬಿದ್ದು ಹೇಳಿಕೊಂಡನು. +ಆಗ ಬಾಲಮುಕುಂದಾಚಾರ್ಯನು ಹೇಳಿದ್ದೇನೆಂದರೆ:“ವೇದವ್ಯಾಸ ಉಪಾಧ್ಯನ ಕುಯುಕ್ತಿಗಳು ಸಾಮಾನ್ಯವಾದುವುಗಳಲ್ಲ. +ತಾರ್ಕಣೆ ಮಾಡಕೂಡದ ಅಸಹ್ಯಕರವಾದ ದೋಷಾರೋಹಣೆಯನ್ನು ಒಬ್ಬ ಯತಿಯ ಮೇಲೆ ಮಾಡಿಬಿಟ್ಟು, ರಾಜದ್ವಾರದ ವರೆಗೂ ಮಠಾಧಿಪತಿಗಳನ್ನು ದೂರಿ, ನಮ್ಮನ್ನೆಲ್ಲಾ ವ್ಯರ್ಥವಾಗಿ ದಣಿಸಿದ್ದಕ್ಕಾಗಿ ನಾವು ಶಾನೆ ಪಶ್ಚಾತ್ತಾಪ ಪಡುವದಾಯಿತು. +ತನ್ನಿಂದಾಗದ ಕಾರ್ಯದಲ್ಲಿ ಪ್ರವರ್ಶಿಸಿದ ಈ ಬಣಗು ಮನುಷ್ಯನ ಮೇಲೆ ಮಠಾಧಿಸತಿಗಳು ವೈಮನಸ್ಸು ತಾಳುವುದು ಏನು ಆಶ್ಚರ್ಯ? +ಗಂಡನಾಜ್ಞೆಯೊಳಗಿರುವ ಹೆಂಡತಿಯೊಬ್ಬಳು ತಂದೆತಾಯಿಗಳ ಸಮೇತ ಪೂರ್ವಾಶ್ರಮದಲ್ಲಿ ಸಂಬಂಧವಿರುವ ಯತಿಯ ಮಠದಲ್ಲಿ ವಾಸ ಮಾಡಿಕೊಂಡಿದ್ದರೆ ಅವಳ ಪಾತಿವ್ರತ್ಯಕ್ಕೆ ಲಾಂಛನ ತಗಲದು. +ಅವಳು ದುಶ್ಶೀಲಳಾದರೆ ಗಂಡನು ಸುಮ್ಮಗಿರನು; +ಯತಿಯು ನಿರ್ದೋಷಿಯಲ್ಲದಿದ್ದರೆ ಶಿಷ್ಯಮಂಡಲಿಯು ಮೌನಧಾರಣೆ ಮಾಡಿಕೊಂಡಿರುವುದೇ? +ವೇದವ್ಯಾಸ ಉಪಾಧ್ಯನೊಬ್ಬನೇ ಆ ಬಡ ಸ್ತ್ರೀಯನ್ನೂ ಪವಿತ್ರರಾದ ಚಂಚಲನೇತ್ರ ಶ್ರೀಪಾದಂಗಳವರನ್ನೂ ದಣಿಸಬೇಕೆಂಬ ಆತುರದಿಂದ ಒದ್ದಾಡುವುದು ಒಂದು ಲೋಕೋಪಕಾರ ಕೃತ್ಯವನ್ನು ಮಾಡುವದಕ್ಕಲ್ಲ. +ದ್ವೇಷವನ್ನು ಪೂರೈಸಿಕೊಳ್ಳುವದಕ್ಕಾಗಿರಬೇಕು. +ಅವನು ಹೇಳುವ ದೂರು ವಿಹಿತವಾದರೆ ಒಬ್ಬನಾದರೂ ಸಾಕ್ಷಿ ಕೊಡಲಿಕ್ಕೆ ಮುಂದೆ ಬಾರದಿರನು. +ಆದಕಾರಣ ಚಂಚಲನೇತ್ರರಾಗಲೀ ವಾಗ್ದೇವಿಯಾಗಲೀ ಕಲ್ಮಷರಹಿತರೆಂದೇ ಸಭೆಯವರೂ ಅಭಿಪ್ರಾಯ ಪಡಬೇಕಾಗಿರುತ್ತದೆ. +ಸಭಾಸದರಲ್ಲಿ ಯಾರಾದರೂ ಇದಕ್ಕೆ ವಿರೋಧವಾದ ಭಾವನೆಯುಳ್ಳವರಾದರೆ ಈಗಲೇ ತಿಳಿದರೆ ಉತ್ತಮವಿತ್ತು. +ನಾನು ಹೆಚ್ಚಿಗೆ ಹೇಳತಕ್ಕದ್ದಿಲ್ಲ.” +ಬಾಲಮುಕುಂದಾಚಾರ್ಯನು ಪಡುವ ಅಭಿಪ್ರಾಯಕ್ಕೆ ತಾವು ಸರ್ವರೂ ಒಡಂಬಡುತ್ತೇವೆಂದು ಉಳಿದ ನಾಲ್ಕು ಆಚಾರ್ಯರೂ ಹೇಳಿದರು ತಮ್ಮ ಐಕಮತ್ಯವಾದ ಇತ್ಯರ್ಥವನ್ನು ಮಠಾಧಿಪತಿಗಳ ಪರಾಂಬರಿಕೆಗೆ ತರುವುದು ಮಾತ್ರ ಉಳಿದಿದೆ. +ಸಭೆಯ ಕೆಲಸವೆಲ್ಲಾ ಮುಗಿಯಿತೆಂದು ಸಭಾಪತಿಯು ತಿಳಿಸಿದನು. +ಮನಸ್ಸಿದ್ದರೆ ವೇದವ್ಯಾಸ ಉಪಾಧ್ಯನು ಮಠಾಧಿ ಪತಿಗಳ ಸಭೆಯ ಮುಂದೆ ಬರಬಹುದಾಗಿ ಅವನಿಗೂ ತಿಳೆಸೋಣಾಯಿತು. +ಅವನು ಕೃಷ್ಣನದನನಾಗಿ ಹೊರವಂಟನು. +ಭೀಮಾಚಾರ್ಯನೂ ವೆಂಕಟಪತಿ ಆಚಾರ್ಯನೂ ಒಟ್ಟಿನಲ್ಲಿ ಚಂಚಲ ನೇತ್ರರ ಮಠಕ್ಕೆ ಹೋದರು. +ಸಭೆಯ ತೀರ್ಮಾನವನ್ನು ವೆಂಕಟಪತಿ ಆಚಾರ್ಯದಿಂದ ತಿಳಿದು ಚಂಚಲನೇತ್ರರು ಸಂತೋಷಪಟ್ಟರು. +ಭೀಮಾಚಾರ್ಯನು ಊರಿಗೆ ಹೋಗಲಿಕ್ಕೆ ಅಪ್ಪಣೆಯನ್ನು ಅಪೇಕ್ಷಿಸಿದನು. +ಶ್ರೀಪಾದಂಗಳವರು ಅವರಿಗೆ ನೂರು ರೂವಾಯಿ ಸಂಯುಕ್ತವಾದ ಫಲ ಮಂತ್ರಾಕ್ಷತೆಯನ್ನು ಕೊಟ್ಟು, ಮಠದ ಮೇಲೆ ಅಭಿಮಾನವಿಟ್ಟು ನಡೆದು ಕೊಳ್ಳಬೇಕಾಗಿ ಅಪ್ಪಣೆ ಕೊಟ್ಟರು. +ಕಿಂಕರನು ಆಜ್ಞಾಧಾರಕನೇ?” ಎಂದು ಅಡ್ಡಬಿದ್ದು ಭೀಮಾಚಾರ್ಯನು ಮಠದಿಂದ ಹೊರಟು ವಾಗ್ದೇವಿಯನ್ನು ಕಂಡನು. +ಸಭೆಯಲ್ಲಿ ಆದ ಇತ್ಯರ್ಥದ ಸಮಾಚಾರವೆಲ್ಲಾ ಅವಳಿಗೆ ಮೊದಲೆ ತಿಳಿದಿತ್ತು. +ಅವಳು ಆಚಾರ್ಯನ ಕಾಲಿಗೆ ಬಿದ್ದು, -‌ತಮ್ಮ ಅನುಗ್ರಹ ದಿಂದ ಮರ್ಯಾದೆ ಉಳಿದರೂ ಇನ್ನು ಮುಂದೆ ಈ ಶತ್ರುಗಳ ಬಾಧೆಯು ತಪ್ಪಲಾರದಾದ್ದರಿಂದ ನನ್ನನ್ನು ಬಿಟ್ಟುಹಾಕಬಾರದು?” ಎಂದು ಬೇಡಿ ಕೊಂಡಲ್ಲಿ ಭೀಮಾಚಾರ್ಯನು ಅವಳಿಗೆ ಖಂಡಿತವಾದ ಅಭಯಕೊಟ್ಟು. +ಅವಳಿಂದ ಸತ್ಕರಿಸಲ್ಪಟ್ಟವನಾಗಿ ಇನ್ನು ಕೆಲವು ತಿಂಗಳಲ್ಲಿ ಬರುವೆನೆಂದು ವಾಗ್ದತ್ತಮಾಡಿ ಹೊರಟನು. +ಆಚಾರ್ಯರೆಲ್ಲರೂ ಅವರವರ ಊರಿಗೆ ಹೋಗಲಿಕ್ಕೆ ಅನುವಾದರೂ ಬಾಲಮುಕುಂದನು ತಾಮಸ ಮಾಡುತ್ತಿದ್ದನು. +ಯಾಕಂದರೆ ತಮ್ಮಣ್ಣ ಭಟ್ಟನು ಪ್ರತಿಸಾಯಂಕಾಲ ಅವನನ್ನು ಕಂಡು ಅವನ ಭೇಟಿಯು ವಾಗ್ದೇವಿಗೆ ದೊರಕುವ ಉಪಾಯವನ್ನು ಸಫಲವಾಗಿ ನಡೆಸುತ್ತಾ ಬಂದನು. +ಇವರಿಬ್ಬರ ಅನ್ಯೋನ್ಯ ಮಿತ್ರತ್ವವು ದಿನೇ ದಿನೇ ವೃದ್ಧಿಯಾಗುತ್ತಾ ಬಂದುದರಿಂದ ಅವರ ಅಗಲುವಿಕೆಯು ಶಾನೆ ಸಂಕಟಕರವಾಯಿತು. +ಕೊನೆಗೆ ನಿರ್ವಾಹವಿಲ್ಲದೆ ಬಾಲಮುಕುಂದನು ಮನಸ್ಸನ್ನು ಗಟ್ಟಿ ಮಾಡಿ ಹೊರಟನು. +“ಅನಾಥೆ ಯಾದ ನನ್ನನ್ನು ಸದಾ ರಕ್ಷಿಸು” ಎಂದು ವಾಗ್ದೇವಿಯು ಕಂಬನಿ ತುಂಬಿದ ಕಣ್ಣುಗಳಿಂದ ತನ್ನ ಪೂರ್ಣ ಮೋಹನ ಶಕ್ತಿಯನ್ನು ಅನನ ಮೇಲೆ ಪಸರಿದ ವೇಳೆಯಲ್ಲಿ ಬಾಲಮುಕುಂದನ ಹೃದಯವು ಬೆಣ್ಣೆಯಂತೆ ಕರಗಿತು. +“ಒಡಲಲ್ಲಿ ಜೀವವಿರುವ ವರೆಗೆ ನೀನು ಮುಡಿದ ಹೂವು ಬಾಡದು, ಧೈರ್ಯವಾಗಿರು” ಎಂದು ಅವಳನ್ನು ಸಂಪೂರ್ಣ ಮಮತೆಯಿಂದ ಸಂತೈಸಿ, ಅರೆ ಮನಸ್ಸಿನಿಂದ ಅವಳನ್ನು ಅಗಲಿ ಕುಮುದಪುರದಿಂದ ತನ್ನ ಸಂಗಡಿಗರೊಡನೆ ಭೀಮಾಚಾರ್ಯನನ್ನು ಕರಕೊಂಡು ಮರಳಿದನು. +ವೇದವ್ಯಾಸ ಉಪಾಧ್ಯನು ಕಂಗೆಟ್ಟು ನರಳುತ್ತ ತನ್ನ ಅಪಜಯದ ವದಂತಿಯನ್ನು ಪತ್ನಿಗೆ ತಿಳಿಸಿದನು. +ಆ ಪತಿವ್ರತೆಯ ಸಂತಾಪವು ಹೆಚ್ಚಿತು. +“ಸಮರ್ಥರ ಮೇಲೆ ಸೊಂಟ ಕಟ್ಟಿದರೆ ಬಡವರಿಗೆ ಎಂದಾದರೂ ಜಯಸಿಕ್ಕುವದುಂಟೀ? +ಈ ಗ್ರಹಿಕೆಯು ಮೊದಲೇ ಇಲ್ಲದೆ, ಶೂನ್ಯ ಬುದ್ಧಿಯಿಂದ ನಡೆದ ಕಾರ್ಯವು ಶೂನ್ಯವೇ ಆಯಿತು. +ಆದರೂ ಪರಮಾತ್ಮನು ಕರು ಣಾಳು; ಅವನನ್ನು ನೆಚ್ಚಿದವರನ್ನು ಬಿಡುವವನಲ್ಲ.” + ಇಂಥಾ ಜ್ಞಾನೋಕ್ತಿ ಗಳಿಂದ ಅವಳು ಗಂಡನನ್ನು ಸಮಾಧಾನ ಪಡಿಸಿದಳು. +ಮಠಾಧಿಪತಿಗಳ ಸಭೆಯು ಹ್ಯಾಗೂ ಕೂಡಲಿಕ್ಕುಂಟು. +ಆಗ ಇದರ ಅವಸಾನ ಹ್ಯಾಗಾ ಗುತ್ತೋ ನೋಡಬೇಕೆಂಬ ಆಶೆಯಿಂದ ವೇದವ್ಯಾಸ ಉಪಾಧ್ಯನು ಹೆಂಡತಿಯ ಅನುಮತಿಯಿಂದ ಹೊರಟನು. +ಆಚಾರ್ಯರೆಲ್ಲರೂ ಸ್ವಲ್ಪ ಮುಂದಾಗಿ ಹೊರಟರು. +ವೇದವ್ಯಾಸ ಉಪಾಧ್ಯನು ಅವರ ಬೆನ್ನು ಹಿಡಿದನು. +ಭೀಮಾಚಾರ್ಯಗೂ ಈತಗೂ ಸಂಭಾ ಷಣೆ ನಡಿಯಿತು. +ವೇದವ್ಯಾಸ–“ಆಚಾರ್ಯರೇ!ನನ್ನ ಮೇಲೆ ತಮಗೂ ವೈಮನಸ್ಸು ಉಂಟಾದ ಹಾಗೆ ತೋರುತ್ತೆ.” +ಭೀಮಾಚಾರ್ಯ–“ಆಚಾರ್ಯರ ಸಭೆಯ ಮುಂದೆ ನಿನಗೆ ಬಂದ ಸಂಕಷ್ಟದಿಂದ ತಪ್ಪಿಸಿದ ಉಪಕಾರಕ್ಕೆ ಪ್ರತಿಯಾಗಿ ದೂರುತ್ತಿಯಾಷೇ! +ಕೃತಘ್ನನೇ, ಇಷ್ಟು ಕೊಳಕು ಮನಸ್ಸಿನವನಾದ ನಿನಗೆ ಜಯ ಹ್ಯಾಗೆ ದೊರಕುವದು?” +ವೇದವ್ಯಾಸ–“ನಾನು ತಮ್ಮನ್ನು ದೂರಿದೆನೇ? +ತಾವು ನನ್ನ ಮೇಲೆ ಮುಂಚೆ ಇಟ್ಟ ಪ್ರೀತಿಯು ಈಗ ಕೊಂಚ ಕಡಿಮೆಯಾಯಿತೋ ಎಂಬ ಸಂದೇಹ ಹುಟ್ಟದ ಪ್ರಯುಕ್ತ ಹಾಗಂದೆ; +ಸಿಟ್ಟು ಮಾಡಿಕೋಬ್ಯಾಡಿ.? +ಭೀಮಾಚಾರ್ಯ–“ಮೈಯುರಿಯುವ ಮಾತಿಗೆ ಸಿಟ್ಟು ಉಂಟೇ? +ದೇವರು ಅವರವರ ಮನಸ್ಸಿನ ಸ್ಥಿತಿ ಪರೀಕ್ಷಿಸಿ ಅದಕ್ಕೆ ತಕ್ಕದಾಗಿ ಲಕ್ಷವಿಡುತ್ತಾನೆ.? +ವೇದವ್ಯಾಸ–“ಸೋತುಹೋದವನಿಗೆ ಎಲ್ಲವರೂ ಹೀನಿಸುವದು ಲೋಕರೂಢಿಯಷ್ಟೇ.? +ಭೀಮಾಚಾರ್ಯ–“ನಿನ್ನೊಬ್ಬನ ಮಾತೇ ಪ್ರಮಾಣವೆಂದು ಸಭೆಯ ವರು ಚಂಚಲನೇತ್ರರನ್ನು ಅಪರಾಧಿಗಳಾಗಿ ನಿರ್ಣಯಿಸಬೇಕಿತ್ತೇನು?” +ವೇದವ್ಯಾಸ–“ಹಾಗೆ ಹೇಳ ಒಲ್ಲೆ. +ಸಾಕ್ಷ ನುಡಿಯಲಿಕ್ಕೆ ನನ್ನ ಕಡೆಯಿಂದ ಯಾರು ಬರುವರು? +ನಾನು ಕೇವಲ ಬಡವನು. +ವೆಂಕಟಪತಿ ಆಚಾರ್ಯನೂ ತಿಪ್ಪಾಶಾಸ್ತ್ರಿಯೂ ಒಂದೇ ರಥದಲ್ಲಿ ಕೂತರೆಂಬಂತೆ ನನ್ನ ಕಡೆ ಸಾಕ್ಷಿಗಾರರಿಗೆಲ್ಲಾ ಹೆದರಿಸಿಯೋ ಲಂಚಕೊಟ್ಟೋ ವಿವಿಧ ರೀತಿ ಯಿಂದ ತಿರುಗಿಸಿಬಿಟ್ಟಿರು. +ಮತ್ತೆ ನಾನೇನು ಬಡಕೊಳ್ಳಲೇ! +ಭೀಮಾಚಾರ್ಯ–“ಒಡೆಯನ ಮರ್ಯಾದೆ ಕಾಯುವದು ಚಾಕರರ ಧರ್ಮವಲ್ಲವೇನು?” +ವೇದವ್ಯಾಸ–“ಹೌದಪ್ಪಾ; ಒಡೆಯನಿಗಿಂತಲೂ ಒಡತಿಯ ದಾಕ್ಷಿಣ್ಯ ಮುರಿಯುವ ಮಗನ್ಯಾರು? +ನನ್ನ ಆಯುಷ್ಯ ತೀರುವ ತನಕ ನಾನು ಹೇಳ ಕೊಂಡರೂ ನನ್ನ ಮಾತಿಗೆ ಕಿವಿಗೊಡುವವರಿಲ? +ಅವಳಾದರೋ ಒಮ್ಮೆ ಕಡೆಗಣ್ಣಿನ ನೋಟದಿಂದ ನೋಡಿಬಿಟ್ಟರೂ ಸರಿ. +ಅತ್ತು ಹೇಳಿಕೊಂಡರೂ ಸರಿ, ಅವಳ ಪಕ್ಷವನ್ನು ಹಿಡಿಯಲಿಕ್ಕೆ ತಾಮಸಮಾಡುವವನ್ಯಾರು? +ಮುಖ್ಯ ಅವಳ ಸುಪ್ರಸನ್ನತೆಯನ್ನುಗಳಿಸಿಕೊಂಡವನು ತ್ರಿಭುವನದಲ್ಲಿಯೂ ಧನ್ಯನೇ, ಸಾವಿರ ಮಾತ್ಯಾಕೆ?” +ಈ ಸಂಭಾಷಣೆಯು ಮುಂದುವರಿಯಲಿಕ್ಕೆ ಭೀಮಾಚಾರ್ಯನು ಬಿಡಲಿಲ್ಲ. +ಯಾಕಂದರೆ ವೇದವ್ಯಾಸ ಉಪಾಧ್ಯನ ಮಾತಿನಲ್ಲಿ ದ್ವಯಾರ್ಥ ವಿದ್ದ ಹಾಗೆ ಅವನ ಮನಸ್ಸಿಗೆ ತೋಚಿತು. +ತನ್ನ ಮೇಲೆ ಬಹುಶ ಈತ ಗೇನೋ ಅನುಮಾನ ಉಂಟಾಗಿಯದೆಂದು ಭೀಮಾಚಾರ್ಯನು ತಿಳು ಕೊಂಡನು. +ಇವರಿಬ್ಬರ ಸಂವಾದವನ್ನು ಕೇಳುತ್ತಿದ್ದ ಬಾಲಮುಕುಂದಾ ರ್ಚಾಯನು ತನ್ನ ಮೇಲೆ ವೇದವ್ಯಾಸಗೆ ಸಂಶಯ ಹುಟ್ಟಿಯದೆಂಬ ಹಾಗೆ ಗ್ರಹಿಸಿದನು. +ಕಳ್ಳನ ಮನಸು ಕಳ್ಳಗೆ ನೋಯುವದೇನು ಆಶ್ಚರ್ಯ! +ಹಾಗೂ ಹೀಗೂ ಐವರಾಚಾರ್ಯರೂ ಅವರ ಪರಿವಾರ ಜನರೂ ವೇದವ್ಯಾಸ ಉಪಾಧ್ಯನೂ ನೃಸಿಂಹಪುರಕ್ಕೆ ತಲಪಿದರು. +ಆ ಮಠಾಧಿಪತಿಗಳಿಗೆ ಆಚಾ ರ್ಯರು ತಮ್ಮ ವಿಚಾರಣೆಯ ಫಲವನ್ನು ನಿವೇದಿಸಿದರು. +ವೇದವ್ಯಾಸನು ಸೋತ ಸಮಾಚಾರವು ಅವರ ಕಿವಿಗೆ ರಮ್ಯವಾಯಿತು. +ಬೇರೆ ಮೂರು ಮಠಾಧಿಪರು ತಮ್ಮ ಮಠದಲ್ಲಿ ಒಟ್ಟು ಕೂಡಿ ಆಲೋಚನೆಯಾದ ಮೇಲೆ ರಾಜದ್ವಾರದ ಪರವಾನೆಗೆ ಉತ್ತರ ಬರೆದುಕೊಳ್ಳುವದು ನ್ಯಾಯವಾದ ಕ್ರಮವೆಂಬ ಅಭಿಪ್ರಾಯವನ್ನು ಅವರಿಗೆ ಆವಾವ ಪಾರುಸತ್ಯಗಾರರ ಪರಿಮುಖ ತಿಳಿಸಿದಾಗ ಅವರು, ಅದಕ್ಕೆ ಸಮ್ಮತಿಸಿ ನೃಸಿಂಹಪುರಕ್ಕೆ ತೆರಳಿದರು. +ನಾಲ್ಕು ಮಠದವರು ವೇದವ್ಯಾಸ ಉಪಾಧ್ಯನನ್ನು ಕರೆಸಿ, ತಮ್ಮ ಮುಂದೆ ನಿಲ್ಲಿಸಿಕೊಂಡು, ಬಾಲಮುಕುಂದಾಚಾರ್ಯನು ನಿವರಿಸಿದ ವೃತ್ತಾಂತವನ್ನೆಲ್ಲಾ ಸ್ವಸ್ಥ ಚಿತ್ತದಿಂದ ಅವಧರಿಸಿ, ಚಂಚಲನೇತ್ರರು ನಿರ್ದೋಷಿ ಗಳೆಂದೂ ವಾಗ್ದೇವಿಯ ಪಾತಿವ್ರತ್ಯ ನಿರಾನುಮಾನಕರವಾದ್ದೆಂದೂ ಇತ್ಯರ್ಧ ಮಾಡಿದರು. +ಹಾಗೆಯೇ ನಯ ನುಡಿಯಿಂದ ಉತ್ತರವನ್ನು ಬರಸಿ ಮಠದ ಪದ್ಧತಿಗನುಸರಣೆಯಿಂದ ರಾಜನಿಗೆ ಆಶೀರ್ವಾದ ಸಹಿತ ಶ್ರೀಮುಡಿ ಗಂಧ ಪ್ರಸಾದ ಉತ್ಕೃಷ್ಟವಾದ ಉಚಿತಗಳೊಡನೆ ಮರ್ಯಾದೆ ಪೂರ್ವಕವಾಗಿ ಕಳುಹಿಸಿಕೊಟ್ಟಿರು. +ರಾಜನು ಅವರ ತೀರ್ಮಾನದಲ್ಲಿ ಏಕೀಭವಿಸಿದನು. +ವೇದವ್ಯಾಸ ಉಪಾಧ್ಯನು ಮಾಡಿದ ಮನನಿಯು ಸ್ವತೇವ ಸುಳ್ಳೆಂದು ಕಂಡ ಮೇಲೆ ಅವನನ್ನು ಜಾತಿಯಿಂದ ತ್ಯಜಿಸಬೇಕೆಂದು ಕೆಲವು ಆಚಾರ್ಯರು ಆಲೋಚನೆ ಕೊಟ್ಟರು. +ಆದರೆ ಅಂಥಾ ಕಠಿಣವಾದ ಶಿಕ್ಷೆಯನ್ನು ಕೊಡುವುದು ಉಚಿತವಲ್ಲ. +ಅವನಿಗಾದ ಅಪಜಯನೇ ಅವನ ಹಾರಾಟ ವನ್ನು ನಿಲ್ಲಿಸಲಿಕ್ಕೆ ಸಾಕೆಂದು ಬಾಲಮುಕುಂದಾಚಾರ್ಯನು ಪಟ್ಟ ಅಭಿಪ್ರಾಯವು ಮಠಾಧಿಪತಿಗಳಿಗೆ ಸರಿಯಾಗಿ ಕಂಡುಬಂತು. +ವೇದವ್ಯಾಸ ಉಪಾಧನು ಮಾತ್ರ ಸುಮ್ಮಗಿರಲಿಲ್ಲ. +ಅವನು ಅರಸುಗಳ ಒಡ್ಡೊಲಗಕ್ಕೆ ಪುನಃ ಇನ್ನೊಂದು ಮನವಿಯನ್ನು ಮಾಡಿದನು. +ಇವನ ತಳ್ಳಿ ಇನ್ನು ಒಳ್ಳೇದಲ್ಲ ವೆಂದು ಮುಂಚಿನ ಸ್ನೇಹಿತರೂ ವಕೀಲರೂ ದೂರವಾದರು. +ಸರಕಾರದಲ್ಲಿ ನಡೆದುಬರುವ ಕ್ರಮಕ್ಕನುಗುಣವಾಗಿ ಆ ಮನವಿಯು ವಿಮರ್ಶೆಗೆ ಇಡ ಲ್ಪಟ್ಟ ದಿನವನ್ನು ಕಾಣಿಸಿ ಮನವಿದಾರಗೆ ನಿರೂಪ ಕೊಡೋಣಾಯಿತು. +ಅವನು ತೀರಾ- ಸಹಾಯ ಹೀನನಾದ ದೆಸೆಯಿಂದ ಅಂದು ರಾಜದ್ವಾರಕ್ಕೆ ಹೋಗಲೇ ಇಲ್ಲ. +ಮನವಿಯು ತಿರಸ್ಕರಿಸಲ್ಪಟ್ಟಿತು. +ಮುಖ್ಯ ತಾತ್ಪರ್ಯ– ವೇದವ್ಯಾಸ ಉಪಾಧ್ಯಗೆ ಇತಿಶ್ರೀಯಾಯಿತು. +ಇದನ್ನು ಅವನ ಪ್ರಾಣ ಸಖ ಭೀಮಾಚಾರ್ಯನು ಕೇಳಿ, ಮಲಿನ ಚಿತ್ತವುಳ್ಳ ಪುರುಷಗೆ ಇಂಥಾ ಸೋಲು ಬರುವುದು ಜೋದ್ಯವಲ್ಲವೆಂದನು. +ವೇದವ್ಯಾಸ ಉಪಾಧ್ಯನು ವೃಥಾ ಸರ್ಕಾರದ ವರೆಗೆ ಹೋಗಿ ಕಪ್ಟ ಪಟ್ಟನೆಂಬ ವಿಷಾದದಲ್ಲಿರುವಾಗ ಬಾಲಮುಕುಂದಾಚಾರ್ಯನು ಅವನನ್ನು ಕರೆಸಿ ಶಾಂತಿಪುರ ಮಠದಿಂದ ಸ್ಥಾಪಿಸೋಣಾದ ಸಂಸ್ಕೃತ ಪಾಠಶಾಲೆಯಲ್ಲಿ ಉಪಾಧ್ಯಾಯನಾಗಿ ನೇಮಿಸಿ ಪತ್ನಿ ಸಮೇತ ಅಲ್ಲಿಯೇ ವಾಸಿಸಿಕೊಂಡಿರಲಿಕ್ಕೆ ಅನುಕೂಲ ಮಾಡಿಕೊಟ್ಟನು. +ಭೀಮಾಚಾರ್ಯನನ್ನು ಬಾಲಮುಕುಂದನು ಕೆಲವು ದಿವಸಗಳ ಪರಿಯಂತರ ತನ್ನಲ್ಲಿ ನಿಲ್ಲಿಸಿಕೊಂಡು ಔತಣಾದಿಗಳಿಂದ ತೃಪ್ತಿಪಡಿಸಿ ಊರಿಗೆ ಕಳುಹಿಸಿಕೊಟ್ಟನು. +ಇವರೊಳಗಿನ ಸ್ನೇಹವು ಹೆಚ್ಚುತ್ತಾ ಬಂದುದರಿಂದ ಭೀಮಾಚಾರ್ಯನು ಆಗಾಗ್ಯೆ ಶಾಂತಿಪುರಕ್ಕೆ ಬರುವದೂ ಅವರಿಬ್ಬರೂ ಅಸರೂಪವಾಗಿ ಕುಮುದಪುರಕ್ಕೆ ಹೋಗಿ ಭೀಮಾ ಚಾರ್ಯನು ಬಹಿರಂಗವಾಗಿಯೂ ಬಾಲಮುಕುಂದನು ಗುಪ್ತವಾಗಿಯೂ ವಾಗ್ದೇವಿಯನ್ನು ಕಂಡು ಅವಳು ಅವರವರ ಮೇಲೆ ಇಟ್ಟ ಭಾವಕ್ಕನುಗುಣ ವಾಗಿ ಅವಳಿಂದ ಸತ್ಯಾರ ನಡೆಯುವ ರೂಢಿಬಿತ್ತು. +ಭೀಮಾಚಾರ್ಯನು ಚಂಚಲನೇತ್ರರ ಕೂಡೆ ಹೆಚ್ಚು ಬಳಿಕೆ ಮಾಡಿಕೊಂಡು ಅವರ ವಿಶ್ಟಾಸಿಯಾದನು. +ವೇದವ್ಯಾಸ ಉಪಾಧ್ಯನು ಮಾಡಿದ ಮನವಿಯ ಪ್ರಕರಣದಲ್ಲಿ ತಾವು ಜಯಿಸಿದೆನೆಂಬ ಸಂತೋಷದಿಂದ ಚಂಚಲನೇತ್ರರೂ ವಾಗ್ದೇವಿಯೂ ನಿತ್ಯವೂ ಪುಷ್ಟಿಯಾಗುತ್ತಾ ಬಂದರು. +ಆಬಾಚಾರ್ಯನಿಗೆ ಕೂಳಿನ ಪ್ರಸಂಗವಲ್ಲದೆ ಇನ್ನೊಂದು ಮನಸ್ಸಿಗೆ ಹತ್ತುವ ಹಾಗಿಲ್ಲ. +ತಮ್ಮಣ್ಣ ಭಟ್ಟನೂ ಭಾಗೀರಧಿಯೂ ಮಗಳ ಪುಣ್ಯದಿಂದ ಸುಖದಲ್ಲಿದ್ದರು. +ವೆಂಕಟಪತಿ ಆಚಾರ್ಯನು ತನ್ನ ಯಜಮಾನನ ಮೇಲೆ ಬಂದು ನಿವಾರಣೆಯಾದ ಸಂಕಷ್ಟ ಬಹು ಸಣ್ಣದು. +ಇನ್ನು ಮುಂದೆ ಏನೇನವಾಂತರ ಬರುವದೋ ಎಂಬ ದೀರ್ಫಾಲೋಚನೆಯಲ್ಲಿ ಕಾಲದ ಸಂಜ್ಞೆಗಳನ್ನು ನಿರೀಕ್ಷಿಸುತ್ತಾ ಇದ್ದನು. +ವೇದವ್ಯಾಸ ಉಪಾಧ್ಯನ ಹೆಂಡತಿಯ ಚಿಂತೆಯು ರವಷ್ಟೂ ಕಡಿಮೆಯಾಗಲಿಲ್ಲಾ. +ಶಾಂತಿಪುರ ಮಠದಲ್ಲಿ ಪತಿಗೆ ಜೀವನೋಪಾಯ ದೊರಕಿದ ಆನಂದವು ಅವನಿಗೆ ಬಂದ ಅನ್ಯಾಯವಾದ ಅಸಜಯದಿಂದ ಹುಟ್ಟಿದ ವ್ಯಾಕುಲದಿಂದ ಭಗ್ನವಾಯಿತು. +ಬಹಿಷ್ಕಾರದಲ್ಲಿದ್ದ ಶಿಷ್ಯರು ಚಂಚಲನೇತ್ರರಿಗೆ ಪಾದಾಕ್ರಾಂತರಾಗಿ ಅಪರಾಧವನ್ನು ಕೊಟ್ಟು ಶುದ್ಧಪತ್ರಿಕೆ ಪಡಕೊಂಡರು. +ವಾಗ್ದೇವಿಯ ಮೇಲೆ ಕವನ ಕಟ್ಟಿದ ಕೆಲವು ದುರ್ಜನರು ಬಹು ಪ್ರಯಾಸದಿಂದ ಪುನೀತರಾದರು. +ಆ ಮೇಲೆ ಅವರು ವಾಗ್ದೇವಿಯ ಮುಖವನ್ನು ಕಣ್ಣೆತ್ತಿ ನೋಡಲರಿಯದೆ ಲಜ್ಜಾ ಭಂಡ ರೆನ್ನಿಸಿಕೊಂಡರು. +ತಿಪ್ಪಾಶಾಸ್ತ್ರಿಯು ವೆಂಕಟಪತಿ ಆಚಾರ್ಯನ ದೊಡ್ಡಮಿತ್ರನಾಗಿಯೂ ವಾಗ್ದೇವಿಯ ಮೆಚ್ಚಿನ ಜೋಯಸನಾಗಿಯೂ ಸುಖದಿಂದ ಕಾಲ ಕ್ಷೇಪ ಮಾಡಿಕೊಂಡಿದ್ದನು. +ವೇದವ್ಯಾಸನು ಮಾಡಿದೆ ಗಡಿಬಿಡಿಯು ನಿರರ್ಥಕವಾದ ವರ್ತಮಾನ ಸಿಕ್ಕಿದಾಕ್ಷಣ ತಿಪ್ಪಾಶಾಸ್ತ್ರಿಯು ವಾಗ್ದೇವಿಯನ್ನು ಕಂಡು, ಏನೇ ವಾಗೀ!ನನ್ನ ಪ್ರವಾದ ನೆರವೇರಿತಷ್ಟೇ, ಎಂದಾಗ ನಿಮ್ಮ ಜೋತಿಷ್ಯ ಎಂದಾದರೂ ಸಟೆಯಾಗುವದುಂಟೇ, ಎಂದು ಅವಳು ಅವನನ್ನು ಹೊಗಳಿ ಕಾಫಿನೀರನ್ನೂ ರೊಟ್ಟಿಯನ್ನೂ ಯಥೇಚ್ಛಕೊಟ್ಟು ತನ್ನ ಕೃತಜ್ಞತೆ ಯನ್ನು ಸಮರ್ಪಿಸಿದಳು. +ಸಂತೋಷವೇ ಯೌವನ. +ಯೌವನ ಕಾಲದಲ್ಲಿ ಸಂತೋಷವು ಪ್ರಾಪ್ತ ವಾದರೆ ಮತ್ತೆ ಹೇಳಲೇಕೆ? +ಯೌವನವೂ ಸಂತೋಷವು ಒಗುಮಿಗೆಯಾಗಿ ವಾಗ್ದೇವಿಯಲ್ಲಿ ಪ್ರವರ್ಧಮಾನವಾಗಿ ಅವಳ ಮುಖ ಕಾಂತಿಯೂ ಅಂಗೋ ಪಾಂಗಗಳ ಪ್ರಪುಲ್ಲತೆಯೂ ಕೇವಲ ಜರೆ ಬಂದೊದಗಿದ ನರನ ಮನಸ್ಸಿಗೂ ಚಾಂಚಲ್ಯ ಉಂಟುಮಾಡುವವುಗಳಾದುವು. +ನಿತ್ಯವೂ ಇವಳ ಮೈ ಸೊಬಗು ಆಬಾಲವೃದ್ಧರ ಕಣ್ಣಿಗೂ ರಂಜಿತವಾಗುತ್ತಾ ಬಂತು. +“ಏನವ್ಪಾ!ಇವಳನ್ನು ನೋಡಿಬಿಟ್ಟರೆ ರೋಮಾಂಛವಾಗುತ್ತದೆ.” ಎಂದು ಕೆಲವರು ಹೇಳತೊಡಗಿ ದರು. +“ಇವಳಿಗೆಲ್ಯಾರದೂ ದೃಷ್ಟಿ ತಗಲಿ ಒಂದಕ್ಕೊಂದು ಆಗಲಿಕ್ಕಿಲ್ಲವಷ್ಟೇ” ಎಂದು ಇನ್ನೂ ಕೆಲವರು ಹೇಳಿದರು. +ಆದರೆ ಅನುಭವವುಳ್ಳ ಸ್ತ್ರೀರು ವಾಗಿಗೆ ಗರ್ಭೋತ್ಪತಿಯಾಗಿದೆ ಎಂದು ತೋರುತ್ತೆ. +ಆಗಲಿ ಅಪ್ಪಾ, ಆಗಲೀ. +ಚಿನ್ನದ ಹಾಗಿರುವ ಹುಡುಗಿ, ಬಲು ಮೋಹನಾಂಗಿ ಅವಳಲ್ಲಿ ಪುತ್ರೋತ್ಸವವಾಗಲಿ” ಎಂದು ಹೇಳಿದರು. +ಭಾಗೀರಧಥಿಗೆ ಈ ಮರ್ಮವು ಮೊದಲೇ ಗೊತ್ತಾಗಿತ್ತು. +ವಾಗ್ದೇವಿ ಅನಕ ತಾನು ಗರ್ಭಿಣಿಯಾದ ಹರುಷವನ್ನು ಅನು ಭವಿಸುವುದರಲ್ಲೇ ಬಿದ್ದಳು. +ಕೆಲವು ದಿನಗಳ ಪರಿಯಂತರ ನೆರೆಕೆರೆಯ ಸ್ತ್ರೀಯರು ಭಾಗೀರಥಿಯ ಬಿಡಾರಕ್ಕೆ ಬಂದು ವಾಗ್ದೇವಿಯನ್ನು ಕಂಡು ಊಟಪಾಠಗಳಲ್ಲಿ ಇಡಬೇಕಾದ ಜಾಗ್ರತೆಯನ್ನು ತಿಳಿಸಿ ಅವಳನ್ನು ಹರಸಿದರು. +ಭಾಗೀರಥಿಗೆ ವೀಳ್ಯದೆಲೆಯ ಖರ್ಚು ಸ್ವಲ್ಪ ಹೆಚ್ಚಾದರೂ ಸಮಯ ಕಳೆಯಲಿಕ್ಕೆ ಅನುಕೂಲವಾಯಿತು. +ವಾಗ್ದೇವಿಯ ಇಷ್ಟಮಿತ್ರರೆಲ್ಲರೂ ಅವಳಿಗೆ ಗರ್ಭವಾದುದಕ್ಕಾಗಿ ಸಂತೋಷಪಟ್ಟರು. +ಹೊಟ್ಟಕಿಚ್ಚಿನ ಹೆಂಗಸರು ಚಿಟುಕು ಮುರಿದರು. +ವೆಂಕಟಪತಿ ಆಚಾರ್ಯನು ಈ ವಿದ್ಯಮಾಣವನ್ನು ಹೆಂಡತಿಯ ಪರಿಮುಖ ತಿಳಿದು ತಲೆದೂಗಿದನು. +ಮುಂದೆ ಅನರ್ಥಕ್ಕೆ ಹೇತು ಹುಟ್ಟುವ ಕಾಲವು ತಾನು ನಿರೀಕ್ಷಿಸಿದಂತೆಯೇ ಬಂತೆಂದು ಚಿಂತೆ ತಾಳಿದನು. +ಚಂಚಲನೇತ್ರರು ಅದನ್ನು ಕೇಳ ದಾಗಲೇ ಭಯದಿಂದ ನಡುಗಿದರು. +ಆದಿಯಲ್ಲಿ ವೆಂಕಟಪತಿ ಆಚಾರ್ಯನು ಹೇಳಿದ ಬುದ್ಧಿ ಮಾತುಗಳನ್ನು ತಿರಸ್ಕರಿಸಿದ್ದಲ್ಲವಾದರೆ ಮುಂದೆ ಅಪಖ್ಯಾತಿ ಬರುವ ಹಾಗಿತ್ತೇನು? +ಈಗ ಪಶ್ಚಾತ್ತಾಪ ಪಡುವದು ಬರೇ ವ್ಯರ್ಧವೇ. +ಹೀಗೆಂದು ಸ್ತಬ್ಧರಾದರು. +ಬಯಕೆ ಕೂಳಿನ ಗೌಜು ಹತ್ತಿತು. +ಪ್ರಥಮತ ಗಂಡನ ಕಡೆಯಿಂದ ಸೀಮಂತಪ್ರಸ್ತವಾಗಬೇಕಷ್ಟೆ. +ಅದಕ್ಕೆಬೇಕಾದ ಸನ್ನಾಹಗಳೆಲ್ಲ ವೆಂಕಟಪತಿ ಆಚಾರ್ಯನು ಮಾಡಿಕೊಟ್ಟನು. +ಮುರ್ಹೂತವಿಟ್ಟ ದಿವಸ ಆಬಾಚಾರ್ಯನು ಜರಿ ಅಂಚಿನ ದೊಡ್ಡ ಥೋತ್ರ ಉಟ್ಟು ಗುಲಾಬಿ ಬಣ್ಣದ ರೇಷ್ಮೆ ಸಾಗು ಸುತ್ತಿಕೊಂಡು ಹೂವಿನ ಶಾಲು ಹೊದ್ದುಕೊಂಡು ಕೈಗೆ ತೋಳುಸರಿಗೆ ಬಾಜಿ ಬಂದ ಸೊಂಟಕ್ಕೆ ಚಿನ್ನೃದ ನೇವ ಕಿವಿಗೆ ಫಳಫಳನೆ ಹೊಳೆಯುವ ಗಾಳಿ ವಂಟಿ ಹತ್ತು ಬೆರಳುಗಳಿಗೂ ಉಂಗುರಗಳನ್ನು ಸೇರಿಸಿ ಇಷ್ಟಮಿತ್ರರ ಗಡಣ ದಲ್ಲಿ ಚೀನಿ ವಾದ್ಯ, ಊರು ವಾದ್ಯ, ಬ್ಯಾಂಡ್‌ ಇತ್ಯಾದಿ ಕರ್ಣರಂಜಕ ವಾದ್ಯ ಘೋಷದಿಂದ ದಿಬ್ಬಣಮಾಡಿಕೊಂಡು ಪ್ರಸ್ತದ ಚಪ್ಪರಕ್ಕೆ ಬಂದನು. +ಅಲ್ಲಿ ಹೆಂಗಸರು ಗುಂಪು ಕೂಡಿರುತ್ತಿದ್ದರು. +ಮುಹೂರ್ತವು ತಪ್ಪಿ ಹೋಗದಂತೆ ನೇಮಿಸಲ್ಪಟ್ಟಗಳಿಗೆಯಲ್ಲಿ ಮದವಳತಿಯ ಶಿರದಲ್ಲಿ ಪುಷ್ಪವನ್ನು ಇಟ್ಟು ಕಟ್ಟು ಕಟ್ಟಳೆ ಲೋಪವಿಲ್ಲದೆ ನಡೆಸಿದರು. +ಗಂಡ ಹೆಂಡರಿಗೆ ಆರತಿ ಎತ್ತಿದರು. +ಈ ಸಂಭ್ರಮವನ್ನು ನೋಡಲಿಕ್ಕೆ ಬಂದ ಅನೇಕರು “ಆಬಾಚಾರ್ಯನು ಒಂದು ಲೆಕ್ಕದಲ್ಲಿ ಪುಣ್ಯವಂತನೇ ಸರಿ” ಎಂದರು. +ಇಷ್ಟು ಒಳ್ಳೆಯ ಗಂಡನು ಸಿಕ್ಕ ಬೇಕಾದರೆ ಹೆಂಡತಿಯು ಹದಿನಾಲ್ಕು ವರುಷ ತಪಸ್ಸು ಮಾಡಬೇಕಾಗುವದೆಂದು ಮಕ್ತೆ ಕೆಲವರೆಂದರು. +ಅವರವರಿಗೆ ಬೇಕಾದ ಹಾಗೆ ಹಲವರು ಆಡಿಕೊಂಡರು. +ಊಟಕ್ಕೆ ಎಲೆಹಾಕಿತು. +ಷಡ್ರಸಾನ್ಸ ಭೋಜನ ಬಗೆಬಗೆಯ ಕಜ್ಜಾಯಗಳನ್ನೂ ಸಕ್ರೆ ಭಕ್ಷಗಳನ್ನೂ ಯಥೇಷ್ಟವಾಗಿ ಬಳಸಿದರು. +ಉಂಡ ವರೆಲ್ಲಾ ಸಂಪೂರ್ಣ ತೃಪ್ತಿಹೊಂದಿ ಗರ್ಭಿಣಿಯು ಸುಖಮುಖಿಯಾಗಿ ಗಂಡು ಬಾಲನನ್ನು ಹೆರಲೆಂದು ಆಶೀರ್ವದಿಸಿ ಹೊರಟರು. +ಆಬಾಚಾರ್ಯನ ಸ್ನೇಹಿತರಲ್ಲಿ ಗುಪ್ತ ಕುಚೋದ್ಯಗಾರ ಶ್ರೀನಿವಾಸನೆಂಬ ಹುಡುಗನು– “ಆಚಾರ್ಯರೇ, ತಮ್ಮ ಪುಣ್ಯ ಬೇಗನೇ ಮಗನನ್ನು ಹೆಗಲ ಮೇಲೇರಿಸಿ ಕೊಂಡು ಕುಣಿದಾಡುವ ಸುಖವು ತಮಗೆ ಸಿಕ್ಕುವುದು.” ಎಂದು ಹಲ್ಲುಕಿರಿದನು. +ಅದೇನು ಅದ್ಭುತವೇ? +ಪ್ರಪಂಚದಲ್ಲಿ ನಡಿಯುವವಾಡಿಕೆಯಲ್ಲವೇ? +ಎಂದು ಆಬಾಚಾರ್ಯನು ಹಾಸ್ಯವದನ ಮಾಡಿದನು. +ಈ ವಿನೋದಕರವಾದ ಹಗಲು ಗಂಡನ ಅಂದಿನ ಶೃಂಗಾರವನ್ನು ನೋಡಿ ಅನೇಕ ಹೆಂಗಸರೂ ಗಂಡಸರೂ ಮನಸ್ಸಿನಲ್ಲಿಯೇ ನಕ್ಳು ಹಾಸ್ಯಮಾಡಿದರು. +ಗಂಡನ ಲೆಕ್ಕದ ಸೀಮಂತವಾದ ಮೇಲೆ ತಂದೆ ತಾಯಿಗಳು ಮಗಳಿಗೆ ಆದಷ್ಟು ಆಡಂಬರದಿಂದ ದಿವ್ಯವಾದ ಬಯಕೆಯ ಕೂಳು ಹಾಕಿದರು. +ಬಳಿಕ ನೆಂಟರಿಷ್ಟರು ನೆರೆಕೆರೆಯವರು ವಾಗ್ದೇವಿಯ ಗೌರವಕ್ಕೆ ಯೋಗ್ಯವಾದ ಔತಣಕೊಟ್ಟು, ಶೀರ ಕುಪ್ಪಸ ಉಡುಗೊರೆ ಮಾಡಿ ಅವಳ ಪ್ರೀತಿಯನ್ನು ಗಳಿಸಿಕೊಂಡರು. +ವೆಂಕಟಪತಿ ಆಚಾರ್ಯನು ತನ್ನ ಒಡತಿಯನ್ನು ಪತ್ನಿಯ ಪರಿಮುಖ ಮನೆಗೆ ಕರೆಸಿ ನೂರಾರು ರೂಪಾಯಿ ವೆಚ್ಚಮುಟ್ಟಸಿ, ದಿವ್ಯ ಔತಣದಿಂದ ಸಂತೃಪ್ತಿಪಡಿಸಿ, ಊಚುತರದ ವಸ್ತ್ರಾಲಂಕಾರವನ್ನು ಉಚಿತ ವಾಗಿಕೊಟ್ಟು, ತಕ್ಕೈಸಿದನು. +ಮಠದ ಹಂಗೀಕರೆಲ್ಲರೂ ಅವಳನ್ನು ಯಥಾನು ಶಕ್ತಿ ಉಪಚಾರಗಳಿಂದ ಮಾನಿಸಿದರು. +ತಿಪ್ಪಾಶಾಸ್ತ್ರಿಯು ಇಪ್ಪತ್ತು ಬಗೆಯ ಪಲ್ಯ, ಎರಡು ಬಗೆ ಹುಳಿ, ಎರಡು ಬಗೆ ತೊವೆ. +ನಾಲ್ಕು ಬಗೆ ಸಾರು, ಲೆಕ್ಕ ಮಿತಿ ಇಲ್ಲದ ಸಕ್ರೆ ಭಕ್ಷ, ಚಿತ್ರಾನ್ನ, ಕೇಸರಿಭಾತ್‌, ವಿವಿಧ ಕಜ್ಜಾಯ, ಐದು ಬಗೆಯ ಪಾಯಸ, ಯಳಚಿತ ಸಣ್ಣಕ್ಕಿ ಅನ್ನ ಇತ್ಯಾದಿ ಸ್ವಾದವುಳ್ಳ ಪಕ್ವಗಳಿಂದ ತನ್ನ ಬಾಲಾಪ್ಯದ ಗೆಳತಿಯನ್ನು ದಣಿಸಿದನು. +ಅವನು ಮಾಡಿದ ಉಡುಗೊರಯು ಸಾಮಾನ್ಯವಾದುದಲ್ಲ. +ಸೀಮಂತ ಪ್ರಸ್ತವಾದಂದಿನಿಂದ ಪ್ರಸೂತವಾಗುವ ದಿನದ ಪರಿಯಂತ ಅವಳಿಗೆ ಔತಣಕ್ಕೆ ಕರೆ ಬರುವ ಚಂದ ನೋಡಿ ಸಾಕಾಯಿತು. +ಗರ್ಭವತಿಯ ಔತಣದ ಹೇತುವಿ ನಿಂದ ಅನೇಕ ಶ್ರ್ರೀಯರು ಅವಳ ಸಂಗಡ ಹೊಟ್ಟೆ ತುಂಬಾ ಉಂಡು ದಣಿದರು. +ಶ್ರೀಪಾದಂಗಳವರು ದಿನೇ ದಿನೇ ವಾಗ್ದೇವಿಯ ಗರ್ಭಧಾರಣೆಯ ಕುರಿತು ಚಿಂತಾಕ್ರಾಂತರಾದರೂ ಕೊನೆಗೆ ವ್ಯಸನಪಡುವುದು ಹುಚ್ಚುತನ ವೆಂದು ನೆನೆಸಿ, ಅವಳ ಮನಸಾಭೀಷ್ಟವನ್ನು ದೇವರ ಪೂರೈಲೆಂದು ಶುದ್ಧ ಮನಸ್ಸಿನಿಂದ ದೇವರನ್ನು ಬೇಡಿಕೊಂಡರು. +ಗರ್ಭಿಣಿಗೆ ಊಟ ಉಪಚಾರ ಮಾಡಬೇಕೆಂಬ ಅರ್ತಿಯುಳ್ಳವರೆಲ್ಲರ ಲ್ಲಿಯೂ ಔತಣಕ್ಕೆ ಸಂದರ್ಭವಾಗಲಿಲ್ಲ. +ಪ್ರಸೂತಕಾಲವು ಬಂದೊದಗಿತು. +ಪ್ರಥಮ ಗರ್ಭವಾದ್ದರಿಂದ ಹೆಚ್ಚು ಜಾಗ್ರತೆ ತಕ್ಕೊಳ್ಳುವ ಅವಶ್ಯವಾಯಿತು. +ಹೆಸರು ಹೋದ ಸೂಲಗಿತ್ತಿ ಸುಬ್ಬು, ತಿಮ್ಮ, ಅಕ್ಕುಮುಂಡಿ ಇವರನ್ನು ಮುಂದಾಗಿ ಕರೆಸಿಕೊಂಡು, ಭಾಗೀರಧಿಯು ಲವಮಾತ್ರ ಸಾವಕಾಶವಿಲ್ಲದೆ ಬಾಣಂತಿಗೆ ಅವಶ್ಯವಾಗುವ ವಿಶಿಷ್ಟ ಔಷಧಗಳನ್ನೂ ಬೇರೆ ಸನ್ನಾಹಗಳನ್ನೂ ಒದಗಿಸಿಟ್ಟು ಕೊಂಡಳು. +ಹನ್ನೆರಡು ಗಂಟೆ ತೋಪಿಗೆ ಸರಿಯಾಗಿ ಸಮಯ ವನ್ನು ತಿದ್ದಿಟ್ಟ ಗಡಿಯಾರವನ್ನು ಒಂದು ಕೈಯಲ್ಲಿ ಹಿಡಿದುಕೊಂಡು ನೋಡುತ್ತಾ, ಇನ್ನೊಂದು ಕೈಯಿಂದ ಹುರಿಗಡ್ಲೆಕಾಳು ಒಂದೊಂದೇ ಬಾಯಿಯೊಳಗೆ ಹಾಕಿಕೊಳ್ಳುತ್ತಾ ಆಬಾಚಾರ್ಯನು ಹೊರಗೆ ಕೂತುಕೊಂಡನು. +ಶಿರೋದಯವಾಯಿತೆಂದು ಒಳಗೆ ಬಟ್ಟು ಬಡೆದ ಶಬ್ದದಿಂದ ತಿಳಿದಾಕ್ಷಣ ಅವನು ಗಡಿಯಾರದ ಸಮಯವನ್ನು ಒಂದು ಕಾಗದದ ಚೂರಿನಲ್ಲಿ ಬರೆದಿಟ್ಟುಕೊಂಡು, ಮರೆಯದೆ ಅದನ್ನು ತಿಪ್ಪಾಶಾಸ್ತ್ರಿಯ ಕೈಯಲ್ಲಿ ಕೊಟ್ಟನು ಕೂಸು ಗಂಡೋ ಹೆಣ್ಣೋ ಎಂದು ತಿಳಿಯುವದಕ್ಕೋಸ್ಕರ ಆಬಾಚಾರ್ಯನು ಸೂತಿಕಾ ಗ್ರಹದ ಬಾಗಿಲಲ್ಲಿ ನಿಂತು, ಪ್ರಧಾನ ಸೂಲಗಿತ್ತಿ ಸುಬ್ಬು ವನ್ನು ವಿಚಾರಿಸಿದನು. +ಮಗುವು ಅಳುವ ಸ್ವರಪರೀಕ್ಷೆಯಿಂದ ತಿಳಿಯುವಷ್ಟು ಬುದ್ಧಿ ತಮಗಿಲ್ಲವೇನೆಂದು ಅಡ್ಡ ಪ್ರಶ್ನೆಮಾಡಿದಾಗ ಅಚಾರ್ಯಗೆ ಸ್ವಲ್ಪ ನಾಚಿಗೆಯಾಗಿ ಅದೆಲ್ಲ ನಾನು ಚೆನ್ನಾಗಿ ಬಲ್ಲೆ ಎಂದು ಸುಮ್ಮಗೆ ಹೊರಗೆ ಹೋದನು. +ಎರಡು ಮೂರು ದಿನಗಳಮೇಲೆ ಮಗುವಿಗೆ ಮಾಸುವ ಸಮ ಯದಲ್ಲಿ ಗಂಡು ಕೂಸನ್ನು ನೋಡಿ ಹೆಣ್ಣು ಹುಟ್ಟಿರಬೇಕೆಂದು ತಾನು ಮೊದಲು ಭಾವಿಸಿದ್ದು ತಪ್ಪೆಂದು ಅವನಿಗೆ ಗೊತ್ತಾಯಿತು. +ವೃದ್ಧಿ ಸೂತಕ ನಿವಾರಣೆಯಾಗಿ, ಹನ್ನೆರಡನೇ ದಿನ ಶಿಶುವಿಗೆ ಕಿವಿ ಚುಚ್ಚಿ ತೊಟ್ಟಲಲ್ಲಿ ಹಾಕಿ ಜಾತಕ ಕರ್ಮವನ್ನು ತೀರಿಸಿದರು. +ಭಾನುವಾರ ಹುಟ್ಟಿದ ಹುಡುಗನಾದ ಕಾರಣ ಸೂರ್ಯನಾರಾಯಣನೆಂಬ ಹೆಸರಿಟ್ಟರು. +ಮಗುವಿನ ಸೌಂದರ್ಯ ನೋಡಿದವರೆಲ್ಲರೂ ಉಲ್ಲಾಸಪಟ್ಟರು. +ವಾಗ್ದೇ ವಿಗೂ ಭಾಗೀರಥಿಗೂ ತಮ್ಮಣ್ಣ ಭಟ್ಟಗೂ ಆ ಕೂಸು ಅಂಗೈ ಮೇಲಿನ ಲಿಂಗವೆಂಬಂತಾಯಿತು. +ಅರೆಗಳಿಗೆಯಾದರೂ ಅದನ್ನು ಕೆಳಗೆ ಇಳಿಸಿದವರಿಲ್ಲ. +ಆಬಾಚಾರ್ಯನು ಅದನ್ನು ಮರೆಯದೆ ಪ್ರತಿ ನಿತ್ಯವೂ ಸ್ವಲ್ಪ ಹೊತ್ತು ಆಡಿಸುವದಿತ್ತು. +ಆ ಮನಮೋಹನ ಪಿಂಡವನ್ನು ನೋಡಿ ಚಂಚಲನೇತ್ರರ ಹೃದಯದಲ್ಲಿ ಪ್ರೇಮರಸ ಉತ್ಪನ್ನವಾಯಿತು. +ದೇವರಿಂದ ಆಯುಷ್ಯ ಪಡೆದು ಜನ್ಮಕ್ಕೆ ಬಂದ ಹುಡುಗನಾದರೆ ಅವನು ತನ್ನ ಉತ್ತರಾಧಿಕಾರಿಯಾಗಲಿಕ್ಕೆ ಯೋಗ್ಯನೇ ಎಂದು ಅವರು ಬಾಯಿಬಿಟ್ಟು ವಾಗ್ದೇವಿಗೆ ಹೇಳಿದರು. +ಮಗುವಿನ ಪರಾಂಬರಿಕೆಯನ್ನು ವಾಗ್ದೇವಿಯು ಜತನದಿಂದ ತಕ್ಕೊಂಡದ್ದರಿಂದ ಆದು ಬೇಗನೆ ದೇಹ ಪುಷ್ಟಿಹೊಂದಿ ಪೂರ್ಣಮಿ ಚಂದ್ರನಂತೆ ವಿರಾಜಿಸಿತು. +ಅದಕ್ಕೆ ಆ ಪಾದ ಮಸ್ತಕ ಪರಿಯಂತರ ಚಿನ್ನಾಭರಣಗಳಿಂದ ತುಂಬಿದರು. +ದೃಷ್ಟಿ ತಾಗದ ಹಾಗೆ ಅದರ ಎರಡು ಗಲ್ಲಗಳಿಗೂ ಹಣೆಗೂ ಕಜ್ಜಲದ ಬೊಟ್ಟುಗಳನ್ನು ಇಟ್ಟರೆ ಅದರ ಸೌಂದರ್ಯವು ಮತ್ತಷ್ಟು ಅರಳುವದು. +ಬಾಲಲೀಲೆ ಯಿಂದ ಸರ್ವರಿಗೂ ಅದು ಮಂಜುಲವಾಯಿತು. +ಅದನ್ನು ಎತ್ತಿಕೊಂಡು ತಿರುಗಲಿಕ್ಕೆ ಒಬ್ಬನಾದರೂ ಹೇಸನು. +ಅದರ ಸರ್ವಾಂಗಗಳು ಅಷ್ಟು ನಿರ್ಮಲವಾಗಿದ್ದುವು! +ವಾಗ್ದೇವಿಗೆ ಪುತ್ರೋತ್ಸತ್ತಿಯಾದ ಒಸಗೆ ವೇದವ್ಯಾಸ ಉಪಾಧ್ಯಗೆ ಸಿಕ್ಕಿತು. +ಚಂಚಲನೇತ್ರರನ್ನು ಪೀಡಿಸಲಿಕ್ಕೆ ಇನ್ನು ಹೆಚ್ಚು ಪ್ರಯಾಸವಿರ ದೆಂದು ಅವನಿಗೆ ಕೂಂಚ ಧೈರ್ಯಬಂತು. +ಬಾಲಮುಕುಂದಾಚಾರ್ಯನು ಜನನದ ಸುವಾರ್ತೆಯನ್ನು ಕೇಳಿ, ಪುಳಕಿತನಾಗಿ ಭೀಮಾಚಾರ್ಯನ ಒಟ್ಟಿ ನಲ್ಲಿ ಕುಮುದಪುರಕ್ಕೆ ಹೋಗಿ ವಾಗ್ದೇವಿ ಪುತ್ರನ ದರ್ಶನ ಮಾಡಿ ಮಗುವಿಗೆ ಅಮೂಲ್ಯವಾದ ಪದಕ ಉಳ್ಳ ಸರವನ್ನು ಕೊಟ್ಟನು ಭೀಮಾಚಾರ್ಯನು ವಾಗ್ದೇವಿಯನ್ನು ನೋಡಿ ತುಂಬಾ ಸಂತೋಷಪಟ್ಟು ನಕ್ಕನು. +“ಸುಪುತ್ರ ನೊಬ್ಬನೇ ಸಾಕು.” +“ಏಕೋನಪಿ ಗುಣವಾನ್‌ ಪುತ್ರೋ ನಿರ್ಗುಣೇನ ಶತೈ ರಪಿ ಏಕಚಂದ್ರ ಜಗಜ್ಜ್ಯೋತಿ ನಕ್ಷತ್ರಂ ಕಿಂ ಪ್ರಯೋಜನಂ.” ಈ ವಚನ ವನ್ನು ಕೇಳರಿಯೆಯಾ?ಎಂದು ವಾಗ್ದೇವಿಗೆ ಕೇಳೋಣ ತಮ್ಮ ಆಶೀರ್ವಾದ ಕಟಾಕ್ಷದಿಂದ ಹಸುಳೆ ಪೂರ್ಣಾಯುವಾಗಲೆಂದಳು. +ಅನುಮಾನ ಪಡಬೇಡ ಶ್ರೀಪಾದಂಗಳವರ ಪ್ರಭಾವದಿಂದ ಈ ಹುಡುಗನು ಪ್ರತಾಪಿ ಪುರುಷನಾಗುವನು. +ಅವನ ಪರಾಂಬರಿಕೆಯನ್ನು ಚೆನ್ನಾಗಿ ಮಾಡೆಂದು ಬುದ್ಧಿ ಹೇಳಿ ಭೀಮಾಚಾರ್ಯನು ವಾಗ್ದೇವಿಯ ಮುಖವನ್ನೇ ನೋಡಲು ಅವಳು ಗಹ ಗಹಿಸಿ ನಕ್ಕಳು. +ಅಷ್ಟರಲ್ಲಿ ಸಾಲಗಾರರ ತಗಾದೆ ಜೋರಾಗಿಯದೆ ಎಂದು ಮಗ ನಾಗನಾಥನ ಕಾಗದಗಳು ಟಾಕೋಟಾಕ್‌ ಬಂದು ತಲ್ಲಿದ್ದರಿಂದ ಹೆಚ್ಚು ದಿವಸ ತಾಮಸ ಮಾಡಲಿಕ್ಕಾಗದೆ ಆಚಾರ್ಯನು ಊರಿಗೆ ಮರಳಿದನು. +ಹೋಗುವ ಸಮಯ ಅವನು ಚಂಚಲನೇತ್ರರನ್ನು ಕಂಡನು. +ಅವರು ಸಂತೋಷಪಟ್ಟು ಸ್ವಲ್ಪ ಹಣವನ್ನು ದಕ್ಷಿಣೆರೂಪವಾಗಿ ಕೊಟ್ಟು ಮನ್ನಣೆ ಮಾಡಿದರು. +ಏವಂಚ ವಾಗ್ದೇವಿಯ ಬಾಲನನ್ನು ನೋಡಲಿಕ್ಕೆ ಬಂದುದರಿಂದ ಭೀಮಾಚಾರ್ಯಗೆ ಕೊಂಚ ಲಾಭವೇ ಸಿಕ್ಕಿತು. +ಹುಡುಗನು ಲಕ್ಷ್ಮಣವಂತನೆಂದು ಅವನ ಮನಸ್ಸಿಗೆ ಹೋಯಿತು. +ಕ್ಲಪ್ತನಿರುವ ಕಾಲಾಂತರದಲ್ಲಿ ಮಗುವಿಗೆ ಅನ್ನಪ್ರಾಶನ ಪ್ರಸ್ತವನ್ನು ಮಾಡಿದರು. -- GitLab