diff --git "a/Data Collected/Kannada/MIT Manipal/Kannada-Scrapped-dta/Book5-\340\262\250\340\262\276\340\262\256\340\262\276\340\262\247\340\262\276\340\262\260\340\262\277_\340\262\206\340\262\241\340\263\201\340\262\255\340\262\276\340\262\267\340\263\206_\340\262\225\340\262\245\340\263\206\340\262\227\340\262\263\340\263\201.txt" "b/Data Collected/Kannada/MIT Manipal/Kannada-Scrapped-dta/Book5-\340\262\250\340\262\276\340\262\256\340\262\276\340\262\247\340\262\276\340\262\260\340\262\277_\340\262\206\340\262\241\340\263\201\340\262\255\340\262\276\340\262\267\340\263\206_\340\262\225\340\262\245\340\263\206\340\262\227\340\262\263\340\263\201.txt" new file mode 100644 index 0000000000000000000000000000000000000000..2b6c5820cd680e5da450a328a7740d0141d57317 --- /dev/null +++ "b/Data Collected/Kannada/MIT Manipal/Kannada-Scrapped-dta/Book5-\340\262\250\340\262\276\340\262\256\340\262\276\340\262\247\340\262\276\340\262\260\340\262\277_\340\262\206\340\262\241\340\263\201\340\262\255\340\262\276\340\262\267\340\263\206_\340\262\225\340\262\245\340\263\206\340\262\227\340\262\263\340\263\201.txt" @@ -0,0 +1,2117 @@ +ಅಜ್ಜವಿ-ಮೊಮ್ಮಗ ಇದ್ರು. +ಅವ ಅಜ್ಜವಿ‌ಕಲ್ ಯೇನೆಂದ? +‘‘ತಾನು ಕಾಶಿಗೆ ಹೋಗಬತ್ತೆ. +ಮೂರ ರೊಟ್ಟಿ ಸುಟಕೊಡು’’ ಅಂತ. +‘‘ಮಗನೇ, ಕಾಶಿಗೆ ಹೋದವರವರೆ, ಹೋದೋರ ಬಂದೋರಿಲ್ಲ. +ನೀ ಕಾಶಿಗೆ ಹೋಗ್ವದೆ ಬೇಡ’’ ಅಂತು. +ಆದ್ರೂ ಕೇಳದಿದ್ದೆ ಅಜ್ಜವಿಕೈಲ್ ಮೂರ್ ರೊಟ್ಟಿ ಸುಡ್ಸ ಕಂಡಿ ಹೋದ. +ಹೋಗ ಸುಮಾರ್ ರಾತ್ರೆಯಾಗೆಬಿಟ್ತು. +ರಾತ್ರಿ ಯೇನ್ ಮಾಡೋಕೆ ಬತ್ತದೆ? +ಗೌಡ-ಗೌಡತಿ ಮಾಳ ಕಾಯ್ತ ಇದ್ರು. +ಮೂರ ರಾಗಿರೊಟ್ಟಿ ತಂದ್ಕಂಡು, ‘‘ನಂಗೆ ಹೆಚ್ಚು. . . ’’ ‘‘ನಂಗೆ ಹೆಚ್ಚು. . . ’’ ಅಂದಿ ಜಗಳ ಮಾಡ್ತ ಕೂತಿದ್ರು. +ಇವನ ರೊಟ್ಟಿ ದಾರೀಲಿ ಕರ್ಚಾಗ ಬಿಡ್ತದೆ. +ಇವ ಹೋದ. +‘‘ನಮಗೆ ಯೆರಡೆರಡ್ ಬೇಡ. +ಅವನಿಗೆ ವಂದ ಕೊಟ್ಕಂಡಿ ತಿಂಬನಿ’’ ಅಂತ. +ಹಿಂಡ್ತಿ ಬೇಡ ಅಂತದೆ, ಆದ್ರೂ ಕೊಟ್ಕಂಡ್ ತಿಂದ. +ಬೆಳಗಾಗ, ‘‘ಯೆಲ್ಗ್ ಹೋಗ್ವವ? +ಯೆಲ್ಲಿದ್ ಬಂದವ?’’ ಕೇಳತ್ರು. +‘‘ತಾ ಕಾಶಿಗೆ ಹೋಗ ಬತ್ತೆ. +ಅಜ್ಜವಿ ಮೊಮ್ಮಗ’’, ‘‘ತಾ ವಂದ್ ಸುದ್ದಿ ಕೇಳ್ತೆ. +ಕೆಳಕ್ಕಂಬಾ ಕಾಶೀಲಿ. +ತಾ ಮಾಳಕಾಯ್ತೆ. +ಮಾಳದಾಗ ಹಂದಿ ರಾಶಿ ಬತ್ತದೆ. +ಬರ್ವದ ಕಮ್ಮಿಯಾಗೂದೋ ಕೇಳ್ಕ ಬಾ’’ ಅಂತ. +ಮುಂದೆ ಹೋದ ಕೂಡ್ಲೆಯ ಅವಗೆ ವಂದ ನರಿ ಶಿಕ್ತದೆ. +‘‘ಯಲ್ಗ್ ಹೋಗ್ವವ?’’ ಕೇಳ್ತದೆ. +‘‘ತಾನು ಕಾಶಿಗೆ ಹೋತೆ’’ ಅಂತ. +‘‘ನಂಗ್ ಹೋದ್ ಹೋದಲ್ಲಿ ಮಾಂಸ ಶಿಕ್ಕೂದೋ ಶಿಕ್ಕೂದಿಲ್ವೊ?ಕೇಳು’’ ಅಂತದೆ. +‘‘ಆಗೂದು’’ ಅಂತ. +ಮುಂದೆ ಹೋತಾ ಇರಬೇಕಾರೆ, ವಂದ ಮಾಯಿನ ಮರದ ಅಡಿ ಕೂತ್ಕಂತ. +ಮಾಯಿನ ಹಣ್ಣು ಪುಟಿ ಪುಟಿ ಪುಟಿ ಬೀಳ್ತದೆ. +ಇವಗೆ ಯೇನ ಹಸವಾಗಿ ಮರದ ಅಡಿ ಕುಳ್ಳುತನ ವಂದೇ ಹಣ್ ಹೆಕ್ಕಂಡಿ ತಿಂಬೂಕೆ ಹೋದ-- ಹುಳವಾಗ ಹೋತದೆ. +ಹಸ್ವಾಗಿ ಮಾತೆಲ್ಲ. +ಅಂದಿ ಚಿಂತಿ ಮೇನೆ ಅಲ್ಲೆ ಕೂತ ಬಿಡ್ತ. +ತೀಡ್ತ ಕುಂತ ಕೂಡ್ಲೆ ಪಾರ್ವತಿ-ಪರಮೇಶ್ವರ ವನವಾಸ್ಕ ಹೋಗ್ ಬರವರು. +ಗಂಡನ ಕೈಲಿ, ‘‘ಯಾರು ತೀಡ್ವರು. +ನೋಡ್ ಬರವ’’ ಅಂತು. +‘‘ನರಮನಸರ ಈ ಕಾಡಲ್ ಯೆಲ್ಲವ್ರೆ?’’ ಕೇಳ್ತ. +ಆದ್ರೂ ಕೇಳ್ಗದೆ ಕರಕ ಬತ್ತದೆ. +ಮಾಯಿನ ಮರದ ಅಡಿಗೆ ಬತ್ತರೆ, ‘‘ಯೇನ್ ತಾನ? +ಯಲ್ಲ್ ಹೋಗ್ವವ?’’ ಕೇಳತ್ರು. +ಕೇಳೂತನವ, ‘‘ಅಜ್ಜವಿ ಮೊಮ್ಮಗ್ನಾಗಿತ್ತು. +ದಿನಾ ಬೇಡ್ಕಂಬಂದ ತಿಂಬವ್ನಾಗಿತ್ತು. +‘ಕಾಶೀಗೆ ಹೋತೆ’ ಅಂದ ಹೇಳ್ ಮೂರ್ ರೊಟ್ಟಿ ಸುಡ್ಸಕಂಡ ಬಂದೆ ತಾನು. +ಆಸ್ರ ಬಾಯಿಗೆ ಆಸ್ರಿಲ್ಲ. +ಉಂಬೂಕಿ ಕೂತನೆ. +ಆಯಾರಿಲ್ದೆ ಬಿದ್ದನೆ.’’ +‘‘ಕಾಶಿಗೆ ನೆಡ್ದ ಹೋಕ್ಕೆ ಸಾದ್ದಿಲ್ಲ. . . ಹಿಂದೆ ಹೋಕ್ಕೆ ಸಾದ್ದಿಲ್ಲ. +ನನ್ ಜೀವ ಇಲ್ಲೇ ಹಾನಿ’’ ಅಂದ ಹೇಳ್ಕ ತೀಡ್ತ. +ಮೂರ ಹಳ್ ಮಂತ್ರಸ ಕೊಟ್ರು. +‘‘ನೀನು ತಿರಗಿ ಕಾಶಿಗೆ ಹೋಬೇಡ. +ಮನಿಗೂ ಹೋಬೇಡ. +ಬೆಳಿಗ್ಗೆ ಯೆದ್ದವ, ‘ಹನ್ನಯ್ಡು ಅಂಕಣ ಮನ್ಯಾಲಿ ಕನ್ನಡಿ ಕಡಕಟ್ಟಾಲಿ, ಈಳ್ಯಾಲಿ ಬಾಳ್ಯಾಲಿ’ ಅಂದ್ ಹೇಳಿ ಮಂತ್ರಸ ಹೊಡಿ’’ ಅಂದ್ ಹೇಳಿ ಹೇಳತ್ರು. +ಆವಾಗ್ ಅವ ಹಾಗೆ ಹೇಳಿ ಹೊಡಿತ. +ಊರೊರ್ಗೆಲ್ಲ ದಂಗ್ಲ ಸಾರ್ತ. +‘‘ಬೇಡ್ ಬೇಡ್ ಬೇಡ್ ಕಾಶಿಗ ಹೋಗುಕೆ ಬಂದನೆ. +ಮುಂದೆ ಹೋಗುಕೆ ಅಂಥ್ ಪುಣ್ಯ ಸಿಕ್ಲೆಲ್ಲ. +ಮನಿಕಟ್ ಮನೆವಳಗೆ ಗ್ರಾಪ್ರವೇಸ ಮಾಡ್ತೆ’’ ಅಂದಿ ದಂಗ್ಲ ಸಾರ್ದ. +ಸಾರಿ, ಅಲ್ಲಿ ಜನ ಕೂಡತ್ರು ಆವಗೆ. +ಅವ ಯೇನ ಹೇಳ್ದ? +“ಕಾಶಿಗೆ ಹೋಗ್ತೆ ಹೇಳಿ ಅಜ್ಜವಿ ಕಲಿ ಮೂರ್ ರೊಟ್ಟಿ ಸುಡ್ಸಕಂಡ ಬಂದಿದೆ. +ರೊಟ್ಯೆಲ್ಲಾ ತೀರ್ತು.” + ಗೌಡ-ಗೌಡತಿ ರೊಟ್ಟಿ ಕೊಟ ಇಟ್ಕಂಡ್ರು. +‘‘ಕೊಯ್ದ್ ಕುತ್ರಿ ಹಾಕುತನ, ಇದೆ ನಮನಿ ಹಂದ್ ಬತ್ತದ್ಯೋ’’ ಕೇಳಿರು. +ಮುಂದೆ ಕಾಶಿಗೆ ಹೋಕ್ ಮುಂದ್ ಬಂದೆ, ಬರುತನ ಮಾಯ್ನ್ ಮರದ ಅಡಿ ಕೂತೆ. +ನಂಗೆ ಊಟಯೆಲೆ ಆಯಾರ ಯೆಲ್ದೆ ಕುಂತ್ಕಂಡ್ ತೀಡ್ತಾ ಇರಬೇಕಾರೆ ಪಾರ್ವತಿ-ಪರಮೇಶ್ವರ ಬಂದ. +ಮೂರ ಹಳ್ ಮಂತ್ರಸ ಕೊಟ್ಟ. +‘ಕಾಶಿಗೆ ಹೋಗೋದೆ ಬೇಡ, ಮನಿಗೆ ಹೋಗೂದು ಬೇಡ. +ಹನ್ನೆಯ್ಡ್ ಅಂಕಣದ ಮನ್ಯಾಲಿ ಹೇಳಿ ಕಲ್ ಹಳ್ ಹೊಡಿ’ ಅಂದ್ರು. +‘ಸಣ್ಣಕ್ಕಿ ದೊಡ್ಡಕ್ಕಿ ಯೆಲ್ಲಾ ಆಲಿ. +ಊರೂರ್ಯೆಲ್ಲಾ ಕರ್ದ್ ಬಡ್ಸ್ವಟ್ಟು ಜಾತಿ ಅಡ್ಗಿ ಆಗ್ಲಿ’ ಅಂದಿ ಬೇಡಕಂಡಿದ್ದೆ. +ಊರೂರ್ಗೆ ಯೆಲ್ಲಾ ಊಟ ಹಾಕ್ತೆ ಅಂದಿ” ಅಂತ ಊಟ ಹಾಕ್ತ. +ಗೌಡ-ಗೌಡತಿ ಇಟ್ಕಂಡಿ ಉಳಿತ. +‘ಹೋಗಿರ್ ಕೇಳಿತಿದ್ದೆ ತಾನು’. +ಯೆಲ್ಲದಿರೆ ಯೆಂತ ಕೇಳ್ತೆ? +ಅಜ್ಜವಿನು ತನ್ ತಾವ ಕರ್ಸಕಂಡ. +ಸುಖ ಸಂತೋಸದಾಗ್ ವಳ್ದ. +ಚಲೋ ವಂದು ಅರಸು ಮನಿ, ಗಂಡ-ಹೆಂಡ್ತಿ ದೊಡ್ಡ ಮನ್ತಾನದಲ್ ಆಳ್ಕತಿದ್ರು. +ಆವಾಗೆ ಆ ಅರಸೂಗೆ ಗಂಡ್ ಹುಡ್ಗರಿಲ್ಲ. +ಸಂತತ್ಯಲ್ಲ, ಇದ್ರದು ನಿಚ್ಚಾ ಕೆಲ್ಸಯೇನಪ್ಪ ಅರಸು ಹಿಂಡ್ತಿದು, ಮನಿ ಸಮೀಪಕೇಯ್ ನಾಕ್ ಮಾರ್‍ ಹೆರ್ಗೆ ಹಳ್ಳದೆ. +ಅಲ್ಲಿ ವಂದ್ ಹೊಂಡ ಮಾಡ್ಕೊಂಡರೆ ಅವರು; +ನೀರು ಗೀರು ತೆಕ್ಕಂಡ್ ಹೋಗೂಕೆ. +ಅಲ್ಲೇನಾಗದೆ? +ವಂದು ಯೆಸಡು ಅದೆ. +ಕುಳಿ ತೆಕ್ಕಂಡಿ ಆ ನೀರ್ನಲ್ ಆಡ್ತಾ ಇರ್ತದೆ. +ಯೇಡಿ, ಏಡಿ ಹೇಳ್‌ತ್ರು ಅದಕ್ಕೆ. +ಇದು ‘‘ಅಬ್ಬಾ!’’ ಅಂತು. +ಮನ್ಸಿಗೆ ಆಲಚ್ನಿ ಹಾಕ್ತು ನೋಡ್ಕಂಡಿ. +ತಮ್ಮಂತಾ ಶಿರಿಮಂತರಿಗೇ ಅರಸ್ತಾನ್ದಲ್ಲಿ ಮಕ್ಕಳು ಮರಿ ಹುಡ್ಗರುಯೆಲ್ಲ. +ಇದು ಇಟ್ದೊಡ್ ಯೆಸಡು! +ಅಡ್ಗನ ನೀರು ಕಪ್ಪಾಗುವರಿಗೆ ಇಟ್ಟೆಲ್ಲ ಮರಿ ಹಾಕ್ತು ಹೇಳಿ ಮೇನಿದ್ ಕಲ್ ನೆಗ್ದ್ ಹೊತಾಕ್ತು ಕೊಲ್ಲುಕೆ. +ಚೆಂದ ಕಂಡ್ತು ಅದ್ಕೆ. +ಅಷ್ಟರಲ್ಲಿ ಇದ್ ಮಾಡ್ದ ಪಾಪದ ಕೆಲ್ಸ. +ಮತ್ ಯೆಯಡನೆ ವಂದ್ ಪಾಪ ಉತ್ಪನ್ನಾಗೊಯ್ತು. +ವಂದ್ ಹೆಚ್ ಕಡಾಮ್ಯಾಗೆ ಬದಿಕಂಡ್ತು ಅದರಲ್ಲಿ. +ಬದಿಕೊಂಡಿ, ಆ ಯೆಸಡು ತಾನ್ ಪ್ರಾಯಕ್ ಬಂದಾ ಹೇಳಾಯ್ತು. +ಅದ್ರ ಲೆಕ್ಕ ರಾತ್ರಿಗೆ ಅರಸಗೊಳ್ ಮನಿಕಂಡ್ ಯಾಳಿದಲ್ಲಿ ಸಪ್ನದಲ್ ಬಂದ್ ಕಾಣ್ಸಿಕೊಂಡ್ತು. +‘‘ಮತ್ತೆ ತನ್ನ ಹೇಳ್ಕೆಯಂತೆ ನೀನು ತನ್ಗೆ ವಂದ ದೊಡ್ ಬಾವಿ ಕಡಸಿ ಬಾವಿಲ್ ತಕಂಡ್ ಹೋಗೆ ಹಾಕ್ಬೇಕು. +ಇಲ್ ತನ್ಗೆ ಆಡ್ಲಿಕ್ ಆಗೋದೆಲ್ಲ’’ ಅವ, ‘‘ಅಬ್ಬ!ಇದ್ದೇನ್ ಕಷ್ಟ ಬಂತಪ್ಪ’’ ಅಂದ ಅರಸು. +‘‘ತಾ ಇಂತಾ ಕಡ್ಗೆ ಅವನೆ’’ ಹೇಳಿತ್ತು. +ಜನ್ರ ತಂದಿ ಬಾವಿ ಕಡಿಸ್ದ. +ಆ ಜನ್ರ ಕಲಿ, ‘‘ಇಂತಾ ಕಡೆಗೆ ಯೇಡಿ ಅದೆ. +ಆ ಯೇಡಿ ತಕಂಡ್ ಹೋಗಿ ಅದರೊಳ್ಗೆ ಬಿಡ್ರಪ್ಪ’’ ಅಂದ. +ಆಗ ಅವರು ಬಾವಿ ಕಡದ್ರು ಅವ್ರೆ ಹೊತ್ಕಂಡ್ ಹೋದ್ರು. +ನಾಕ್ಜನರ ಹೊರಿ, ಅಟ್ ದೊಡ್ಡ ಬಾವೀಲ್ ಹಾಕದ್ರು. +‘ಇನ್ ತನ್ಗೆ ತ್ರಾಸೆಲ್ಲ ಅಂಬುದ್ ಮಾಡ್‌ದ್ರು’ ಸಾಮಾನ್ಯ ಉಳ್ಕಂಡ. +ವಂದ್ ವರ್ಷಾಯ್ತು. +ಅಷ್ಟ್ರಾತನಕ ಸಪ್ನದಲ್ ಹೇಳ್ತು. +‘ತನ್ಗ ಇಂತಾ ಬಾವಿ ಕಡ್ದ್ ಹೀಗೆ ಮಾಡಿದ್ದೇನಿದ್ದೂ ಈಗೆ ಇದ್ರಲ್ಲಿ ತನ್ಗೆ ಸುತ್ತಿರಗೂಕೆ ಆಡೂಕೆ ತಾಮ್ ಸಾಕಾಗುದೆಲ್ಲ. +ದೊಡ್ ಮದ್ಗ ತೋಡ್‌ಬೇಕು. +ತೊಡ್ ನೀರಾದ ಕೂಡ್ಲೆ ಇಂತಾ ಕಡ್ಗೆ ಬಾವಿವಳಗೆ ಈ ಯೇಡಿ ಅದೆ. +ಆ ಯೇಡಿ ನೀವು ಯೆಂಟ್ ಜನ ಬೇಕಾತದೆ. +ಯೆಟ್ ಸಾಮಾನ ಬೇಕಾತದೆ ಅಂದ್ಕಂಡಿ ಮುಂಡಿ ಬಳ್ಳಿ ತಕಂಡಿ, ಆ ಮದ್ಗ್‌ಕ್ ಹೊತ್ಕಂಡಿ ಹೋಗಬೇಕು. +ಮದಗದಲ್ ಹಾಕಬೇಕು.’ +ರಾಜರ ಮನಿಲಿ ವಂದ್ ಮಡವಾಳವ ಬಟ್ಟೆ ಶೆಳೀಲಿಕ್ಕಿದಿದ್ದ. +ಅವನಿಗೆ ನೆಂಟ್ರ ಮನಿಗೆ ವಂದಿವ್ಸ ಹೋಗಬೇಕು ಹೇಳಿರೆ ಸೌಡಾಗುದಿಲ್ಲ. +ನಿತ್ಯ ಬಟ್ಟೆ ಶೆಳುದ್ ವಂದೇಯ. +ವಂದಾನೊಂದ ದಿವಸ ಇವತ್ ಹೋಗಬೇಕು, ನಾಳಿಗೆ ಹೋಗಬೇಕು ಹೇಳಿ ಯೆಷ್ಟೋ ದಿವಸ ಕಳದ ಹೋಯ್ತು. +ಆ ದಿವ್ಸ ರಾಜರ ಮನಿಹತ್ರ ಹೇಳ್ದ. +‘ನಾ ಇವತ್ತ್ ನೆಂಟ್ರ ಮನಿಗ್ ಹೋಗಬೇಕು’ ಹೇಳಿ ನೆಡ್ದ ಬಿಟ್ಟ. +ಅವ ಮೊಳೆಯಾಗಿ ಯೆಲ್ಲಾ ವಯ್ ಸ್ತ್ರ ಅದ್ದಿ, ವಂದ್ ಅಜ್ಜಿ ಮುದ್ಕಿ ಮನಿಲ್ ಹೋಗಿ ಕೂತ ಶನೀಪದಲ್ ವಂದ್ ಊರಲ್ಲಿ. +ಆ ಅಜ್ಜಿ ಮುದ್ಕಿ ಹತ್ರ ಹೇಳ್ತ ಯೇನಂದಿ? +‘‘ನಾನು ಇಲ್ಲೆ ಬಗಿಲ್ ಮನಿಕಳ್ತೆನೆ. +ಸಲ್ಪ ಜಾಗ ಕೊಡ್ಬೇಕು’’ ಅಂದ. +ಅಜ್ಜಿ ಮುದ್ಕಿ ಯೇನ್ ಹೇಳ್ತಾಳೆ? +ಹೇಳದ್ರೆ, ‘‘ನಿನ್ಗೆ ಜಾಗಕೊಡ್ಲಿಕ್ಕೆ ಅಡ್ಡಿಲ್ಲ. +ಹೊದಿಲಿಕ್ಕೆ ಮಾಡ್ಲಿಕ್ಕೆ ಯೆಲ್ಲಾ ಕೊಡ್ತೇನೆ. +ನಾನು ವಂದ್ ರಾಜ್ರ ಮನಿಲಿ ಕೆಲ್ಸಕೆ ಹೋಗ್ತೆ ಇದ್ದೆ. +ಅಲ್ಲಿ ಆ ದಿವಸ ಯೇನಾಗಿದೆ? +ನಂದು, ರಾಜ್ರ ಮನಿ ಹುಡುಗಿಗೆ ಆಳು ಅಲ್ಲಿದ್ ನಾನು ಅದ್ಕೆ ಕತೆ ದಿನಾಲೂ ಹೇಳ್ಬೇಕು. +ಇವತ್ ನಂದ ಬಾರಿ ಬಂದದೆ. +ಅದ್ಕೆ ಕತೆ ಹೇಳು ದಿವಸ ಇವತ್ತೆ ಆಗದೆ. +ನನ್ಗೆ ಕೆಲ್ಸ ಮಾಡಿ ಸಾಕಾಗದೆ ಕತೆನ್ನ ನೀನ್ ಹೇಳಬೇಕು. +’’ಆವಾಗ ಇವ ಹೇಳ್ತಾನೆ. +ಯೇನಂದ್ರೆ? +‘‘ಹಾಗಾದ್ರಜ್ಜಿ, ನೀನು ಆ ಹುಡ್ಗೀನೇ ಇಲ್ ಕರಕಂಬಾ. +ನಮ್ಮನಿಲ್ ವಬ್ಬ ಮೊಮ್ಮಗ ಬಂದನೆ. +ಚಲೋಕತೆ ಹೇಳ್ತಾನೆ; ಹೇಳಿ ಕರಕಂಡ ಬಾ ನಿನ್ ಮನಿಗೆ’’ ಅಂದ. +ಆವಾಗ ಅಜ್ಜಿ ಮುದ್ಕಿ ಅಲ್ ಹೋಗಿ ಆ ಹುಡ್ಗಿ ಹತ್ರೆ, ‘‘ಮಗಾ ಇವತ್ತೆ ನನ್ ಮೊಮ್ಮಗ ಬಂದನೆ ನನ್ನ ಮನಿಗೆ ನನಕಿಂತಾ ಚಲೋ ಕತೆ ಹೇಳ್ತಾನೆ. +ಮತ್ತು ನಂಮನಿಗೆ ಹೋಗ್ವ ಬಾ’’ ಹೇಳಿ ಕರಕಂಡ ಬಂತು ಅಜ್ಜಿ ತನ್ ಮನಿಗೆ. +ಆವಾಗೇ ಇವ್ರ ಊಟ ಬೀಟ ಮಾಡಿ, ಸಲ್ಪ ಮನಗದ್ರು. +ಆವಾಗೇನಾಯ್ತು ಹೇಳಿದ್ರೆ ಅಜ್ಜಿಗೆ ಕೆಲ್ಸ ಮಾಡಿ ಸಾಕಾಗ್ ಹೋಗಿತ್ತು. +ಅಜ್ಜಿಗೆ ಚಲೋ ನಿದ್ದೇನೆ ಬಿತ್ತು. +ಆವಾಗ ಇವ ಕತೆ ಹೇಳ್ತಾನೆ ಹುಡ್ಗಿ ಹತ್ರ. +ಹುಡ್ಗಿ ಹತ್ರೆ ಕತೆ, ‘‘ವಂದ್ ಊರಲ್ಲಿ ವಂದ ರಾಜನ ಮನ್ಯಲ್ಲಿ ವಂದ ಮಡವಾಳರವ ಇದ್ದ. +ಅವನಿಗೆ ನೆಂಟ್ರಮನಿಗೆ ವಂದ್ ದಿವಸ ಹೋಗಬೇಕು ಹೇಳದ್ರೆ ವಂದ್ ದಿವಸನೂ ಬಟ್ಟೆ ಶೆಳದಿ ಪುರಸತಿ ಹೇಳೊದಿಲ್ಲ. +ಆವಾಗೆ ವಂದಲ್ಲ ವಂದ್ ದಿವಸ ಆ ಮಡವಾಳರವನಿಗೆ ಸಲ್ಪ ಸಿಟ್ ಬಂದ್ ಹೋಯ್ತು. +ನೆಂಟ್ರಮನಿಗೆ ಹೋಗಲೇಬೇಕು ಹೇಳ್ ಕಾಣಿಸ್ತು.’’ +ಆವಾಗೆ ಇವಯೇನ್ ಹೇಳ್ತ, ಹುಡಗಿ ಹತ್ರ ‘‘ನೀ ಅಷ್ಟದೂರ ಮನಿಕಂಡಿದ್ರೆ ಕೇಳವಾಂಗಿಲ್ಲ. +ಚಲೋ ಕತೆ ಇದೆ.’’ ಮುಂದೆ ಬಂತು. +“ಸಲ್ಪ ನನ್ನ ಬುಡಕೆ ಬಂದಿ ಮನಿಕೊ” ಹೇಳಿ ಹೇಳ್ತ. +ಅದು ಹತ್ರ ಬಂತು. +ವಂದಾನೊಂದು ದಿವಸ ಮಡವಾಳರವ ನೆಂಟ್ರ ಮನಿಗೆ ಹೋಗಕಾಗದೆಯ ವಂದ್ ಅಜ್ಜಿ ಮುದ್ಕಿ ಮನಿಲಿ ಉಳಕಂಡ. +ಆಗೆ ಆ ಹುಡಗಿ ಹತ್ರೆ ಕತೆ ಹೇಳತೆ ಹೇಳತೆ ಇರಬೇಕಾದ್ರೆ ಹುಡ್ಗಿ ಮೇಲೆ ಕೆಲಸ ಸಲ್ಪ ಪೂರೈಸಿದ. +ಬೆಳಿಗ್ಗೆ ಎದ್ದಿ ಮಡವಾರವ ಮನಿಗೆ ಹೋದ. +ಆ ಹುಡಗೀನು ಮನಿಗೆ ಹೋಯ್ತು. +ಹೋಗಿ ಅಪ್ಪನ ಹತ್ರ ಈ ಹುಡುಗಿ ಹೇಳತಾಳೆ ‘‘ದಿವಸಾ ವಬ್ಬಬ್ಬ ಕತೆ ಹೇಳುವುದಾಗಿತ್ತು. +ಇನ್ನು ಕತೆ ನನಗೆ ಬೇಡ.’’ +ವಂದ್ ಬಟ್ಟ, ಬಟ್ನ ಹುಡುಗ. +ತಾಯಿ ಸತ್ ಹೋಯ್ತು. +ತಂದೆ ಇಟ್ಕಂಡ. +ಮೀಸಿ ಮಾಡಿ ದೊಡ್ಡ ಮಾಡ್ದ. +ತಂದಿನೂ ತೀರಕಂಡ. +ಹುಡ್ಗ ನಮ್ಮೂರ ರಾಜನ ಮನೆಗೆ ಹೋಕಂಡಿ ಉಳ್ದ. +ರಾಜನ ಮನೆಲಿ ಉಂಡ್ಕಂಡ್ ಉಳ್ದ. +ರಾಜನಿಗೆ ವಂದ್ ಹುಡ್ಗಿದ್ದಿತು. +ಅವನಿಗೆ ಇವಳಿಗೆ ಗನಾ ದೋಸ್ತ್ಯಾಯ್ತು. +ಆ ಹುಡ್ಗ ಅಂದ್ರೆ ಹೇಂಗಿದ್ದಿದ್ದ? +ಸೂರ್ಯ ಚಂದರಟ್ ಚಂದ ಇದ್ದಿದ್ದ. +ಆ ಕೂಸ್ಯೇನಂತು? +‘‘ಅಪ್ಪಾ, ಬಟ್ನ ಹುಡ್ಗನಿಗೇಯ ನನ್ ಮದಿ ಮಾಡ್ ಕೊಟ್ ಬಿಡು’’ ಅಂತು. +ರಾಜ, ‘‘ನಿನ್ಗೆ ಯೆಂತಕೆ? +ಇಲ್ಲೇ ಯಾವಾಗಿಂದ್ ಅವ್ನೆ. +ಅವ್ನಗೆ ಯಾರಾರೂ ಇಲ್ಲ. +ನಿನ್ನ ಹೊಟ್ಟಿಗ್ ಯೆಲ್ಲುಳೂದು? +ಈಗ ಅವ ನಮ್ಮನೇಲಿ ದೊಡ್ಡಾದ. +ಅವ್ನಿಗೆ ಮದ್ವೆ ಮಾಡಕೊಡು ಅಂತೆ ನೀನು? +ಅವ್ನಿಗೆ ಯೆಂತಾ ಅದೆ?’’ +‘ಹೀಂಗೆಯ ತನ್ಗೆ ಯಂತದೂ ಆಗ್ಲಿ. +ತನ್ ಹಣೀಲಿ ಯೇನ್ ಸಿಕ್ಕೊದು ತಾನ್ ಅದೇ ತಿಂತೆ. +ತೆಳ್ಯಾದ್ರೂ ಕುಡೀತೆ’. +ಅವ್ನಿಗೇ ಆಗ ನಗ್ನ ಮಾಡಕೊಟ್ಟ ರಾಜ. +ನಗ್ನ ಮಾಡಕೊಡೊಕೇಯ ವಂದ್ ಯೆಂಟ್ ದಿನಾ ಉಳದ್ರು. +ಯೆಂಟ್ ದಿನ್ನ ತಕ ನೋಡದ್ರು. +‘‘ತಂಗೀ, ನಿಮ್ಮನೆಗೆ ಹೋಗು. +ಮದ್ವೆ ಮಾಡಕೊಡು ಅಂತ ಹೇಳಿದ್ಯಲ್ಲಾ! +ಈಗ ನಿನ್ನ ಗಂಡನಿಗೆ ಕರ್ಕಂಡ್ ಹೋಗು’’ ಹೇಳದ್ರು. +ತಾಯಿ ಹುಗ್ಸಿ ಗಂಡನಿಗೆ ತೋಡೆ ದುಡ್ ಕೊಟ್ತು. +ಹೊಟ್ಟಿಗಿಲ್ಲ ಅಂದಿ. +ಹದ್ನೆಯ್ದ್ ದಿನಕಾಗ್ವಷ್ಟು ಐವತ್ ಕೊಟ್ತೊ, ನೂರ ಕೊಟ್ತು, ಯಾರಿಗೆ ತಿಳೀತದೆ? +ದುಡ್ ತಕಂಡ್ ಹೋದ್ರು. +ವಂದೆ ಮನೆ ಅದೆ? +ಮನೆ ಇಲ್ಲ. +ವಂದ್ ಅಜಿಮುದ್ಕಿ ಮನೆಗೆ ಹೋದ್ರು. +ಬೇಡ್ಕಂಡ್ ತಿಂಬ್ವದು. +ನನ್ ಹಾಗೇ ಬೇಡ್ಕಂಡ್ ತಿಂಬ್ವದು, ‘‘ಅಜ್ಜಿ ನನ್ಗೆ ವಂದ್ ತುತ್ ಅನ್ನ ಬೇಸ ಹಾಕು.’’ + ‘‘ಯೇ ಮಗ್ನೇ ಯೆಂತಾ ಅದೆ ನನಗೆ? +ರಾಜ್ರಮನೆ ಕಸ ತೆಗದಿ ವಂದ್ ನಾಡ ಶಿದ್ದೆ ಕಗ್ಗನಕ್ಕಿ ತರಬೇಕು. +ತಾನು ತಂದಿ ಅನ್ನ ಮಾಡ್ಕಂಡ ಉಣಬೇಕು.’’ +‘‘ನೀನು ಯೇನೂ ತರೂದ ಬೇಡ. +ಬೇಯ್ಸ್ ವಂದ್ ಹಾಕು’’ ಅಂತು. +‘‘ಆಗುದು’’ ಅಂತು. +ಆಗುದು ಅಂದ ಅವ್ರು ಅಲ್ಲೇ ಉಳ್ ದ್ರು. +ಹೆಂಡ್ತಿ ಅಟ್ ಚೆಂದ ಅದೆ. +ಆಗೆ ಆ ಮುದ್ಕಿಕೆ ಚೌರ ಮಾಡುಕೆ ಬತ್ತಿದ್ದ ವಂದ್ ಕೆಲ್ಸಿಯವ. +ಆ ಕೂಶ್ ಕಂಡಿ ಇವ ಮಳ್ಳಾಗ ಹೋದ ಆ ಕೆಲ್ಸಿಯವ. +ತಲೆ ಕೆತ್ತುದಿತ್ತು. +ಕೈ ತಲೆ ಮೇನೆ ಅದೆ. +ಅತ್ಲಾಗ ನೋಡ್ತೇ ಉಳೂದು. +ವಂದೇ ಸರ್ತಿ ನೋಡ್ತ. +ಕಡೆಗೆ ಮತ್ ತೆಗಿತ. +ಮತ್ತೆ ನೋಡ್ತೇ ಕೂತ. +ಮತ್ತ ವಂದ್ ಸರ್ತಿ ತೆಗ್ದ. +ಯೆಯ್ಡ್ ತಾಸಾಯ್ತು. +ವಳ್ಗೆ ಹೋಯ್ತು. +ಹೋಗುಕೇಯ (ಅಜ್ಜಿ ಕೂದ್ಲ) ತೆಗ್ದ. +ತೆಕ್ಕಂಡಿ ಅಲ್ಲೇ ಕೂತ್ಕಂಡ. +ಅದ್ ಹೆರಗೇ ಬರೋದಿಲ್ಲ. +ಕಂಡಾಪಟ್ಟೆ ಆಚೀಗ್ ನೋಡೋದಿಲ್ಲ. +ಬೇರೆ ರಾಜ್ನ ಮನೆಗೆ ಹೋದ. +‘‘ರಾಜ್ರೆ ವಂದು ಕೂಸದೆ. +ಆ ಕೂಸ್ ನಿಮ್ಗೆ, ನಿಮ್ಮ ಹೆಣ್ತಿ ನನ್ಗೆ. +ಆ ಬಟ್ನ ಹೆಣ್ತಿ ಅಟ್ ಚೆಂದದೆ. +ಆದ್ರ ನಿಮ್ಗ್ ತಂದ ಕೊಡ್ತೆ’’ ಅಂದ. +‘‘ಯೇನ್ ಚೆಂದದೆ ನೋಡಿ ನೀವು ಬಟ್ನ ಮನೆಗೆ ಹೋಗಹೇಳು’’ ಅಂದ. +ಬಟ್ಟನಿದ್ದಲ್ ಹೋಗಿ ಕೆಲ್ಸಿ, ‘‘ರಾಜರು ಕರ್ಕಂಡ ಬಾ ಅಂದ ಹೇಳರೆ ನಿನ್ಗೆ’’ ಅಂದ. +‘‘ಯೆಂತಕ್ಕೆ?’’ +‘‘ಯೆಂತಕೊಯೇನೋ? +ಬಟ್ನಿಗೆ ಕರ್ಕಂಡ್ ಬಾ ಅಂದರೆ ರಾಜ್ರು’’ ಅಂದ. +ಹೆಂಡ್ತಿ ಕೈಲ್ ಹೇಳ್ದ, ‘‘ವಳ್ಗೇ ಉಳಿ ನಾ ಬರೋತಕ ವಳ್ಗೆಂದ ದಾಟ್ ಹೆರ್ಗೆ ಬೀಳಬೇಡ’’ ಅಂದ. +‘‘ಹೂಂ’’ ಅಂತು. +“ನೀವು ಯೆಂತದಾರೂ ಹೇಳ್ ದ್ರೂ ‘ಆಗ’ ಅಂದ್ ಹೇಳಾಕ್ ಬನ್ನಿ. +ಮಾಡೂಕ ಸಾದ್ದಿಲ್ಲ ಅಂದ್ ಹೇಳಾಕೆ ಬಂದ್ ಬಿಡಿ ನೀವು” ಅಂದೆ ಹೆಣ್ತಿ ಹೇಳ್ತು. +‘‘ಯೆಲ್ಲಿದ್ದೊ ಹೋಗಿ ಬಟ್ರೆ, ವಂದ ರಸಬಾಳೆ ಕೊನಿ ತಂದ್ ಕೊಡಿ’’ ಅಂದೆ ಹೇಳದ್ರು ಅವ್ರು. +‘‘ಹೋಗೋಕಾಗೊದಿಲ್ಲ’’ ಅಂದು ಬಟ್ರು ಹಾಂಗೇ ಮನೆಗೆ ಹೋದ್ರು. +ಮೂರ ದಿನಾಗ್ಲಿಲ್ಲ, ಮುದ್ಕಿ ಚೌರ ಮಾಡಿ. +ಆದ್ರೂ ಮತ್ತೂ ಬಂದ ಆ ಕೆಲ್ಸಿ. +ಬಂದ್ಕಂಡ ಅದ್ ಹೆರ್ಗೆ ಬರುಕೆ ನೋಡ್ದ. +ಅದ್ ವಳ್ಗೇ ಉಳೀತು. +ಅವ ಚೌರ ಮಾಡೂಕೆ ಅತ್ಲಾಗಿತ್ಲಾಗ್ ನೋಡ್ದೇಯ ಚೌರ ಮಾಡೂಕೆ ತಡ ಮಾಡ್ದ. +‘‘ಇಟ್ ಸಣ್ಣಕದೆ ತಲೆ ಕೂದ್ಲು ಮತ್ ನಾಕ ದಿನ ಹೋಗ್ಲಿ’’ ಅಂತು ಮುದ್ಕಿ. +ಅಲ್ಲೇ ವಂದ್ ಯೆಯ್ಡ ತಾಸ್ ತಕ ಕೂತ. +ಕೂಸು ಹೆರ್ಗೆ ಬೀಳೊದೆಲ್ಲ. +ಮನೇಗ್ ಹೋದ. +ರಾಜರ ಮನೆಲ್ ಹೋಗೆ ಹೇಳ್ದ, “ಆ ಬಟ್ರ ಹಿಂಡ್ತಿ ಹೆರ್ಗೆ ಬೀಳಲಿಲ್ಲ. +ಆ ಮುದ್ಕಿ ಚೌರ ಮಾಡ್ತೆ ಅಂದ್ರೆ, ‘ಮೂರೇ ದಿನಾಯ್ತು ಕೂದ್ಲು ತೆಕ್ಕಂಬೂದಿಲ್ಲ’ ಅಂತು” ಅಂದ. +ಬಟ್ಟ ಮನಿದ್ದಲ್, ಬೆಟ್ಟದಲ್, ಅಡವೀಲ್ ವಂದ ಹಾದಿ ಹಿಡ್ಕಂಡ ಹೋದ. +ಆಗೆ ವರ್ಲೆ ಹುತ್ತಾಗಿ ವಂದ್ ಮುನಿ ಬೆಳ್ದ ಹೋಗನೆ. +ಪರ್ತಿ ಹುತ್ತಾಗೆ ಬೆಳ್ದ ಹೋಗುಕೇ ಯೇನ ಮಾಡ್ದ? +ಹೀಗೆ ಹೋಗ್ ಬಟ್ಟ ಅವನ್ ಕಾಲ್ ವತತೆ ಕೂತಬಿಟ್ಟ. +ಮುನಿದು, ಅಡ್ವಿಲ್ ಹೋಕ್ಕಂಡಿ ಸುಮಾರ್ ಹೊತ್ತ ತಕ ಆ ಮಣ್ನೆಲ್ಲಾ ಕರ್ಸ್ ತೆಗದಿ ಮುನಿದು ಕಾಲ್ ವತ್ತತೆ ಕೂತ. +ಜಪ ಮಾಡ್ತೇ ಕೂತದ್ದೇ. +‘‘ಯೆಲ್ಲಿ ಬಂದಿದ್ಯೊ? +ನರ ಮನಶ್ಯಾ?’’ ಅಂದಿ ಮುನಿ ಹೇಳ್ದ. +‘‘ಯೇನಿಲ್ಲ ನನ್ಗೆ ವಂದು ಹೆಣ್ಣ ತಂದುಕೊಡಬೇಕು.’’ +ಆಗೆ, ‘‘ನೀ ಹೋಗು. . . ಯೇಳ ಸಂದ್ರದ ಆಚೆ ಕೀಳ ಸಂದ್ರಕೆ ಹೋಗು. +ವಂದ ಬೆತ್ತ ಕೊಡ್ತೆ, ಬೆತ್ತ ಬೀಸುಕೇಯ ಕೀಳ ಸಂದ್ರದಲ್ ಹೋಗ್ತೆ’’ ಹೇಳ್ದ ಮುನಿ, ಕತ್ತಿ ಕೊಟ್ಟ. +ಮುನಿ, ‘‘ವಂದು ಗನಾ ಇಷ್ಟ ದೊಡ್ಡಗಳ ಬೆಟ್ಟದ್ದು ಕಡ್ಕಂಬಾ, ನೀನು ಕಡುಕೇಯ ನೆಲ ವಡದಿ ಯೆಯ್ಡು ಜನ ಮಕ್ಳು ಬತ್ರು ನಿನ್ನಿದಲ್ಲಿ, ನೀನು ತಾನಿದ್ದಲ್ ಬೆನ್ನಿಗೆ ಕರ್ಕಂಡ್ ಬಾ.’’ ಬೆಟ್ಟಕ್ಕೋಗಿ ಗಳ ಕಡದ. +ಆಗ ಹೋದ. +ಅದ್ರ ಬೆನ್ನೀಗೆ ಹೆಣ್ ಮಕ್ಳು ಯೆಯ್ಡ ಜನ ಬಂದ್ರು. +ಬರುಕೇಯ, ‘‘ಅಜ್ಜಾ ಬಂದೆ’’ ಅಂದ. +ಹಾಂಗೇಯ, ‘‘ಆ ಮಕ್ಕಳಿಗೆ ಹಾಗೇ ತಕಂಡ್ ಹೋಗುಕೇನ್ ಕೊಡ್ವಾಂಗಿಲ ಜನ್ರು. +ಅಟ್ ಚಂದ ಅವ್ರೆ. +ಗೋಡ್ಡೆ ವಡ್ಡ ಗೋಡ್ಡೆದಾರ ಬಂದ ಮಕ್ಕಳು, ತಾನೂ ಗಳೂನ್ ದಲ್ ಹಾಕ್ ಕೊಡ್ತೆ’’ ಅಂದ ಅವ್ಕೀಗೆ ಗನಾದಾಗದೆ. +ಆಗೆ ಗಳ್ನಲ್ ಹಾಕಕೊಟ್ಟ. +ಬೇರೆ ವಂದ ಬಾಟ್ಲಿ ಬುಯ್ಡಲ್ಲಿ ಕಮಂಡಲನೀರ್ ಹಾಕ ಕೊಟ್ಟ, ‘‘ನೀನು ಮನೆಗೋಗಿ ಗಳ ಕಡುಕೇಯ ಯೆಯ್ಡು ಜನ ಹೆಣ್ ಮಕ್ಳು ಹೆರ ಬೀಳತ್ರು. +ಬೀಳುಕೆಯ ನೀನು ಜನ್ರಿಗೆ ಕಾಣ್ಸೂಕಾಗ ವಳಗೇ ಉಳಿಸ್ ಬೇಕು.’’ +ಮಕ್ಕಳು ವಬ್ಬಬ್ರಿಗೆ ಹನ್ನೈಯ್ದು ವರ್ಷಾಗಿತ್ತು. +ಆಗೆ ವಳದ್ರು. +ಮೂರ್ ಜನ ಆಯ್ತು. . . ಅಂದ ಹೇಳ್ದ ಹಾಂಗಾಯ್ತು. +ಅವ್ನ ಹೆಂಡ್ತಿರೇ ಆಯ್ತು, ಆಗೆ ಚಂದದಿಂದ ಉಳದ್ರು. +ಕೆಲ್ಸಿ ದಿನಾಗೂ ಬಂದ ಹೋಗ್ತ. +ಕಡೇಗೆ ತಲೆ ಕೂದ್ಲು ಬಗೀಲ್ ನೆರೀತು. +ಬಂದ ಅವ ಬೆಳ್ಗಾ ಮುಂಚೆ. +ಅವ ಬಂದ ಶಮೆಲಿ ಮಂಡಿ ಬಾಚ್ತೇ ಇದ್ರು ಮೂರು ಜನ. +ಅಟ್ ಚೆಂದ ಅವರೆ! +ನೋಡ್ದ ಯೆಯ್ಡ ಜನಕೆ. +ಬೇಗ ಬೇಗ ವೋಡ ಹೋದ್ರು. +ಅಮ್ಮಗೆ ತಲಿ ಚೌರ ಮಾಡ್ದ. +ಯೆಯ್ಡ ತಾಸ್ ತಕಂಡ ಚೌರ ಮಾಡ್ದ. +ಅತ್ಲಾಗ ನೋಡ್ದ, ಇತ್ಲಾಗ ನೋಡ್ದ. +ಅವ್ರು ಬರೋದಿಲ್ಲ. +‘‘ರಾಜರೇ, ಬಟ್ಟರಿಗೆ ಮೂರ ಜನ ಹಿಂಡ್ರು. +ತಾನ್ ಇವ್ರ ತಂದ್ ಕೊಡ್ತೆ ಬಗೆಲ್ ಇದಾಗದೆ. +ಅವ್ರು ಯೆಟ್ ಚಂದ, ಬರೀ ಸೂರಿ-ಚಂದ್ರಾಂಗೆ ಅವ್ರೆ. +ಊರಲ್ಲೆಲ್ಲಾ ಅಟ್ ಚಂದ ಹೆಣ್ಮಕ್ಳ್ನ ನೋಡ್ಲಿಲ್ಲಾಗಿದೆ’’ ಅಂದ. +ರಾಜ, ‘‘ಬಟ್ಟನಿಗೆ ಬಂದ ಹೋಗಂದ ಹೇಳು’’ ಅಂದ, ಕೆಲ್ಸಿ ಕೂಡೆ. +ಕೆಲ್ಸಿ ಹೋಗೆ ಹೇಳ್ದ ಬಟ್ನ ಕೂಡೆ. +‘‘ರಾಜ್ರು ನಿಂಗ ಬಾ ಅಂದ್ ಹೇಳರೆ’’ ಅಂದ. +ಮೂರು ಜನ ಹೆಂಡ್ರು ಬರೀ ಚಿನ್ನನೇಯ ಆವಂಗೆ ಬಟ್ಟ ಹೋದ. +ಬರೂಕೇಯ ರಾಜ, ‘‘ನನ್ಗೆ ಯೆಂತದೋ ತಂದ ಕೊಡ್ಬೇಕು’’ ಅಂದ. +‘‘ಯಂತದು? +ನೀವ್ ಹೇಳಿ ನಾ ತಂದ ಕೊಡ್ತೆ’’ ಅಂದ. +‘‘ತನ್ಗೆ ಇಂತಾ ಕಡೆ ಹೋಗಿ ವಂದ ಸಾವ್ರ ಸಮಾರ್ ಬಂದಿ ತಂದ ಕೊಡು’’ ಅಂದ. +‘‘ಆಗೂದು’’ ಅಂದ ಹೇಳ್ದ. +ರಾಜ ಅವ್ರ ಮನೇಗೆ ಹೋದ. +ಯಾರೂ ಹೆರಗೇ ಬೀಳಲ್ಲಿಲ್ಲ. +‘‘ಆ ಹೆಣ್ ಮಕ್ಕಳಿಗೆ ಇಲ್ಲಿ ಕೆಲ್ಸ ಉಳಿತದೆ ಬರುಕಾಗುದಿಲ್ಲ?’’ +ಅಂದ ಬಾಗ್ಲದಲ್ ನಿತ್ಕಂಡಿ ಹಿರಿ ಹೆಣ್ತಿ ಹೇಳ್ತು. +ಹೋದ ಅವ ಸಮಾರ್ ಬಂದಿ ತಂದ್ ಕೊಟ್ಟ. +ಮರುದಿನ ಕೆಲ್ಸಿ ಬಂದ. +ಕೆಲ್ಸಿ ಕೂತಾಗೇಯ ಗಳದ ತುಂಡ ತಂದ ಹೊಡ್ದ. +ಗಳಾ ತುಂಡಾಗ್ವಾಗ ಮತ್ತೊಂದು ಹುಡ್ಗಿ ಹೆರಬಿತ್ತು. +ನಾಕ್ ಜನ ಆದ್ರಾ? +ನಾಕ್ ಜನ ಆದ್ರೂ ಇವ್ನ ಕೂಡ ತರುಕೆ ಆಗೂದಿಲ್ಲ. +ಕೆಲ್ಸಿಯವ ಬಟ್ನಿಗೆ ತೆಗೀಬೇಕಾಯ್ತು ಅಂದ್ ಮಾಡ್ದ. +ರಾಜ್ನ ಹತ್ರ ಹೋಗ್ ಹೇಳ್ದಾ. +‘‘ಅವ್ನಿಗೆ ಕೊಂದೇ ತೆಗೀಬೇಕಾಯ್ತು. +ಅಡ್ಗಿ ಮಾಡೂಕಾಯ್ತು. +ಯೆಲ್ಲಾ ಆಯ್ತು.’’ಹೆಣ್ತಿ ಹೇಳ್ತು. +‘‘ದೊಡ್ ಕೊಂಡ ತೆಗೀಬೇಕು ಬಾಗ್ಲಲ್ಲಿ’’ ಹೇಳ್, ‘‘ಕೆಂಡರಾಶಿಲಿ ದೂಡಬೇಕು’’ ಹೇಳ್ತು. +‘‘ನಿಂಗೆ ತೆಗಿಬೇಕು ಅಂದ್ ಮಾಡರೆ, ಕೊಂಡ ತೆಗಿದಿ ಮಾರಾಶಿ ಕೆಂಡ ಮಾಡಬೇಕು. +ಅಡಿಗಡಿಗೆ ಸುರಂಗ ಮಾಡಬೇಕು. +ಬೆಂಕಿ ಬೀಳುಕೇ ಅಲ್ ವಳಗ್ ಹೋಗಬೇಕು.’’ +‘‘ರಾಜ್ನ ಕರೆಲಿಕ್ ಹೋಗು ನೀನು’’ ಹೇಳ್ದ ಕೆಲ್ಸಿಗೆ. +ರಾಜ್ನ ಮನೆಗೆ ಹೋದಾ. +‘‘ರಾಜನ್ದು ಮಾವನಿಗೆ ತೋಲ್ ಸಂಗ್ಟಂತೆ. +ಬಟ್ಟ ಹೋಗ್ ಬರಬೇಕಂತೆ. +ಈಗೆ ತಾನ್ ಹೋಗು ಬದ್ಲು ಪಾತಾಳ ಲೋಕ್ಕೆ ನೀ ಹೋಗಬರತ್ಯೊ?’’ ಕೇಳ್ದಾ. +ಬಟ್ಟ ಕೊಂಡದಲ್ ಹಾರ ಸುರಂಗದಲ್ಲಿ ತಿರುಗಾಡಿ ತಿರುಗಿ ಬೇರೆ ಕಡೆ ಎದ್ದು ಬಂದ. +ಬಟ್ಟ ಕೆಲ್ಸಿಗೆ, ‘ಚೌರ ಮಾಡ್ಕಂಡ ಬರಬೇಕು ನೀನು, ಅಲ್ ಹೋದ್ರೆ ಬೇಕಟ್ ನಂದಗೋಕ್ಲ. +ನೀ ಹೋಗ್‌ ಚೌರ ಮಾಡ್ಕಂಡ್ ಬಾ ಬೇಕಟ್ ಶಿಕ್ಕೂದು ನಿನ್ಗೆ. +ಆ ಲೋಕದಲ್ ಬಾಳಟ್ ಶಿಕ್ಕೂದು ನಿನ್ಗೆ.’’ +ಹೋದ್ಯ ಸುತ್ತ ತಿರಗಾಡದ. +ಕೆಲ್ಸ್ಯವ್ನ ಕೂಡೆ, ‘‘ಹಾರೆ ಬಿಡು’’ ಅಂದ. +ಕಡಿಗೆ ಅವ ಸುಟ್ ಹೋದ. +ರಾಜರು, ‘‘ತಂದ ಕೊಟ್ರೆ ಅರ್ಧ ರಾಜ ಕೊಡ್ತೆ’’ ಹೇಳದ್ರು. +‘‘ಅವ ನಂಗೆ ಕೊಲ್ಲೂಕ ಮಾಡಿದ್ದಾ’’ ಮತ್ತಂದ್ ಕೋಲ್ ಹೊಡ್ದಾ. +ಐದ್ ಜನ ಮಾಡ್ಕಂಡಿ ಬಟ್ಟ ಉಳ್ದ. +ಕೆಲ್ಸಿ ಯೆಲ್ ಹೋದಾ? +ಅವನಿಗೆ ತೆಗೂಕ್ ಮಾಡಿದ್ದ ಅವ್ನೇ ಹೋದ. +ಬಟ್ಟ ತಿರಗಿದ. +ಕೆಲ್ಸಿ ಹಿಂಡ್ತಿ ಬಂದ್ ಕೇಳ್ತು, “ಅವ ಸುತ್ ತೆಗವಾಗ ಬಿದ್ ಸುಟ್ಹೋದ. +ಕೊಂಡ್ದಲ್ ಬಿದ್ ಸತ್ ಹೋದ್ನೊ ಯೇನೋ” ಅಂದ. +ರಾಜ ಅರ್ಧ ರಾಜಿ ಬಟ್ನಿಗೆ ಕೊಟ್ಟ. +ಸುಖ-ಸಂತೋಶ್ದಲ್ ರಾಜ್ನ ಮನೇಲುಳ್ದ. +ಗೌಡ ದೊಡ್ಡ ಕುಮರಿ ಮಾಡಿದ್ದ. +ಕುಮರಿಗೆ ದಿನಾಗು ಹೋಗ್ತ ಹೆಂಡ್ತಿ ಅನ್ನ ತಕಂಡೆ ಹೋಗ್ತಿತ್ತು. +ಗಂಡನಿಗೆ ಕೊಟ್ಟಾಕ್ ಹೋಗ್ತಿತ್ತು. +ಸಂಜಿಗೆ ಗಂಡ ಬತ್ತಿದ್ದ. +ಬಸ್ತಿದಲ್ ಉಳಿತು. +ತಿಂಗಳ ತುಂಬ್ತು. +ಕುನ್ನಿ ಸಾಕ್ತು. +ದಿನಾಗು ತಕಂಡ್ ಹೋಗ್ತಿತ್ತು ಗಂಡನಿಗೆ ಅನ್ನ. +ಬೆಳ್ಗಾ ಮುಂಚೆ ಹೋದ್ರೆ ಸಂಜ್ಯಾಗ್ತಿತ್ತು. +ಅನ್ನ ಕೊಟ್ಟಾಕ್ ಬರುಕೆ ಹೋಗ್ಲೇ ಇಲ್ಲ. +ಕುನ್ನಿ ಕುತ್ಗೆಗೆ ಚೀಟಿ ಕಟ್ಟಿ ಕಳಸತು. +‘ನನ್ಕೂಡೆ ಬರುಕಾಗುದಿಲ್ಲ. +ಮಾರ್ಗದಲ್ ಕುಂತಕಂಡನೆ.’ +ಅನ್ನ ಪಂಜಿಲ್ ಕಟ್ಟಿ ಅದ್ಕೆ ಕುತ್ಗಿಲಿ ಕಟ್ತು. +‘‘ನಿನ್ನ ವಡಿನಿಗ್ ತಕಂಡ ಹೋಗು’’ ಅಂತು. +ಕುನ್ನಿ ಬಂತು. +ಕುಯಿ ಕುಯಿ ಮಾಡ್ಕಂಡು ಅಳ್ಳೊ ಬಳ್ಳೊ ತೀಡ್ತು. +ತೀಡುಕೆ ಆಗ ಚೀಟಿ ನೋಡ್ಕಂಡ ಹೆಣ್ತಿ ಅಲ್ಲೇ ಅದೆ. +‘ಬೇಜರ’ ಅಂದ್ ಹೇಳಿ ಮಾರ್ಗದಲ್ಲೆಯೇ ಕೂತದೆ. +ಅನ್ನ ಕುನ್ನಿಗೆ ಬಿಡಿಸಿ ಹಾಕ್ದ. +ಬಡ್ಸಿ ಹಾಕಿ ಕೆಲಸ ಬಿಟ್ಟಿ ನೇಗ್ಲಬೀಗ್ಲ ಹೊತ್ಕಂಡ್ ಮನಿಗೆ ಬಂದ. +ಅನ್ನ ಇನ್ಯೆಲ್ಲ ಹೆಂಡ್ತಿಗೆ ಅಷ್ಟ ಸಂಗಟ. +ಹೆಂಣ್ತಿ ಜನ್ಯಾಗಿ ವಂದು ಮಗು. +ವಂದ ಮಾಶೇಶ, ವಂದ ಬಸವ. +ಮಾರ್ಗದಲ್ ಇರತ್ರು. +ಬಾಳಂತಿ ಸತ್ ಬೀಳ್ತದೆ. +ಮಾಶೇಶ ನೆಲನ್ ಅಡಿಗೆ ಹೋದ. +ಬಸ್ವ ಆ ಮಗು ಅಲ್ಲೇ ಇರ್‌ತ್ರು. +ಅದೇ ಮಾರ್ಗದಲ್ಲಿ ಬಂದ್ಕಂಡಿ ಬಸ್ವನಿಗೆ ತಂದ, ಮಗಿಗೆ ತಂದ ಬಂದಿ ಮೀಸ್ದ ಬಸುಗೆ ಕೊಟ್ಟಿಗಿಲಿಟ್ಟ. +ಮಾರಾಶಿ ದನ ಬಾಗಾತಿ ಮಾಡ್ಕಂಡ್ರೆ, ಹೆಣ್ಣು ವಂದು. +ಬದ್ಕು ಬಾಳಾ ಅದೆ. +ದೊಡ್ಡ ಮಾಡ್ಕಂಡಿ ಇಟ್ಕಂಡ. +ಯೆಯ್ಡ್ ಮೂರ್ ತಿಂಗ್ಳಾಯ್ತು. +ವರ್ಸಾಗೂಷ್ಟು ದೊಡ್ಡಾಗೆ ಹೋಯ್ತು. +ಐದ ವರ್ಸಾಯ್ತು. +‘‘ಮಗನೆ ನಾ ಗಂಜಿಗೆ ಅಕ್ಕಿ ಹಾಕಂಡೆ ಯೆಸ್ರು ಮಾಡ ಹೋಗ್ತೆ, ನೀ ಬೆಂಕಿ ಮುಂದ ಮಾಡು’’ ಅಂದ ಗೌಡ. +‘‘ಆಗುದು’’ ಅಂದ ಹೇಳ್ತು. +ವಂದ್ ಗೌಡತಿ ಬಂತು. +ಗಂಡಿಲ್ಲ ‘‘ತಂಗೀ ಸಣ್ಣ ಬೆಂಕಿ ಕೊಡು’’ ಅಂತಾ ಮಾರ್ಗದ ಮೇನ ಬಿದ್ದ ಕಲ್ಲ ತಂತು. +ಕಲ್ಲ ಗುಂಡ ಮಡ್ಕೆಲ್ ಹಾಕ್ತು. +ಕಲ್ಲ ಗುಂಡು ಗಾಬ್ರಿಲ್ ಹಾಕಿದ್ನೊ ಯಾರ್ಬಲ ಅಂದ್ಕಂಡು ಮಗಿಗೆ ಮೀಸ್ದ. +ಮೀಸ್ಕಂಡಿ ತಾನೂ ಮಿಂದ್ಕಂಡ ಬಂದ್ಕಂಡಿ ಊಟ ಮಾಡ್ದ. +ಮಗು ದೊಡ್ಡಾಯ್ತು. +ಹನ್ನೊಂದ ಹನ್ನೆರಡ್ ವರ್ಸಾಯ್ತು. +ಮಗೇ ಅಡ್ಗಿ ಮಾಡ್ತು. +ಮತ್ತೆ ಗೌಡತಿ ಬೆಂಕಿಗೆ ಬಂತು. +‘‘ವಳಗಡೆ ಐತೆ ತಕಂಡ್ ಹೋಗು’’ ಅಂತು. +ಕಲ್ ಗುಂಡ ತಕಂಡ ಅನ್ನಕೆ ಹಾಕ್ತು. +ಬರೀ ಕಲ್ ಗುಂಡೇಯಾ. +‘‘ಮಗ್ನೇ ಯಾವ ನಮೂನಿ ಕಲ್ಲೆ, ಕಲ್ ಹೆಕ್ಲಿಲ್ಲಾ’’ ಕೇಳ್ದ. +‘‘ನಾ ಹೆಕ್ಕಿದ್ದೆ. +ಗನಾ ಮಾಡ್ ಹೆಕ್ದೆ’’ ಅಂತು. . ಮರದಿನ ಮತ್ತೆ ಗೌಡತಿ ಬಂತು. +ನಾಕೈದ್ ದಿನ ಹಾಗೇ ಮಾಡ್ತು. +ಮಗು ಮಣಿಮೇನೆ ಉಣ್ಣು ಅಕ್ಕಿ ಹೆಕ್ಕಿ ಅನ್ನಕ್ಕಾಕ್ತು. +ಗೌಡತಿ ಕಲ್ಗುಂಡ್ ಹಾಕ್ತದೆ, ಹೋಗ್ತದೆ. +‘‘ಅಪ್ಪಾ, ನಾ ಮಣಿ ಮೇನೆ ಹೆಕ್ ಹಾಕಿದೆ. +ಮತ್ತೆ ಹ್ಯಾಂಗ್ ಮಾಡ್ ಹೆಕ್ಕಾಕ್ಲಿ ನಾನು’’ ಅಂತು. +ಗೌಡತಿ ಆಚೆ ಮನೇಲ್ ಕೇಳ್ಕಂಡು, ಮಜ್ಜಾನ ಬಂದ್ಕಂಡಿ, ‘‘ನಿನ್ನ ಅಪ್ನ ಕೈಲಿ ವಂದ ಚಿಕ್ಕಿ ತಕಂಡ್ ಬಾ ಹೇಳು’’ ಅಂತು. +ಸಣ್ಣಕ್ಕಿ ಅನ್ನ ಮಾಡಿ ಬುತ್ತಿ ಕಟ್ಟ್ ಕೊಡು. +‘‘ಚಿಕ್ಕಿ ಕರ್ಕಂಬಾ ಅಂದ್ ಹೇಳು ತನ ಕೂಡಾಗುದಿಲ್ಲ ಹೇಳು’’ ಅಂತು. +‘’ಅನ್ನದ ಮುದ್ದೆ ಮೇನಿಟ್ಟು ಹೇಳ್ತಾ ಕೊಟಾಕ್ ಹೋಯ್ತು’’ ಅಂದ್, ಸಣ್ಣಕ್ಕಿ ಅನ್ನ ಮಾಡ್ತು ಚಟ್ನಿ ಮಾಡಿ ಮುದ್ದೆ ಕಟ್ಟಿ ಅಪ್ನ ಕೂಡೆ ಬುತ್ತಿ ಕಟ್ ಕೊಡ್ತು. +ಗೌಡತಿ ಯೆಯ್ಡ ಶಿದ್ದೆ ಕರ್ಗನಕ್ಕಿ ಹಾಕಿ ಮುರಗಲ ಸೊಪ್ನ ಹಾಕಿ, ಬೇಯಿಸಿ, ಸಾರ ಮಾಡಿ ಬುತ್ತಿ ಕಟ್ಕಂಡ್ ಕೂತದೆ. +ಹುಳಿಸಪ್ಪ ಹಾಕಿ, ಕಾಯ ಚೂರ ಹಾಕದೆ ಚಟ್ನಿ ಅರದದೆ. +ತಕ್ಕಂಡಿ ಕೂತ್ಕಂಡದೆ. +ಇವ ಅಂಗಿ ಬಿಂಗಿ ಹಾಕಂಡ್ ತಯಾರಾದ. +ಇವ ಕೋಟ್ ಹಾಯ್ಕಂಡಿ ಬಿಸ್ಲ ಕೊಡೆ ತಕ್ಕಂಡ್ ತಲೆಗೆ ಸುತ್ ಸುತ್ಕಂಡ್ ಹೋದ. +ಹೋಗುಕೇಶಯ್ ಇದು ಅವ್ನ ಬೆನ್ನಿಗೆ ಹಿಂದ್ನ ದಾರ್ ಹೋಯ್ತು. +ಬೆನ್ನಕೇ ಈತು. +ಹೀಗೆ ಹಿಂತಿರುಗಿ ನೋಡ್ದ ಗೌಡ. +‘‘ನೀಯೆಲ್ ಹೋಗ್ತ್ಯೊ?’’ +ಅಂತಾ ಕೇಳ್ತು, ‘‘ನನ್ಗ ವಂದ್ ಹೆಣ್ತಿ ಬೇಕಾಗಿತ್ತು. +ಹೆಣ್ ಕೇಳ್ಕಂಡ್ ಬರ್ಗೀಕಂದ್ ಹೋಗ್ತೆ ತಾನು’’ ಅಂದ. +‘‘ಹಾಗಾರ ನೀಯೆಲ್ ಹೋಗ್ತೆ?’’ +‘‘ನನ್ಗೆ ವಂದ್ ಗಂಡು ಬೇಕಂದೊಳ ಹೋಗ್ತೆ’’ ಅಂತು. +ಪುಂಡಿ ಮಗೇಯ. +‘‘ನಾನೇ ಹೆಣ್ತಿ, ನೀನೇ ಗಂಡ’’ ಅಂತು ಅದು. +‘‘ಆಗೂದು’’ ಅಂದ. +ದೊಡ್ಡ ಅಶ್ವತ್ಥ ಕಟ್ಟೆ ಇತ್ತು. +‘‘ಕಟ್ಟೆ ಮೇನೆ ಪೊಟ್ಲೆ ಇಡವಾ’’ ಅಂತು. +‘‘ನಾ ಸಣ್ಣಕ್ಕಿ ಅನ್ನ ತಂದನೆ. +ನೀವ್ ಕೈಕಾಲ ತೊಳ್ಕಂಡ ಬನ್ನಿ. +ನಾವ್ ಊಟ ಮಾಡ್ವ’’ ಅಂತು. +ಆಗ್ಯೇನ ಮಾಡ್ತು? +ಸಣ್ಣಕ್ಕಿ ಪೊಟ್ಲೆ ತಾನಿಟ್ಕಂಡ್ತು. +ಕರ್ಗನಕ್ಕಿ ಪೊಟ್ಲೆ ಅವನ ಚಂಚಿಲ್ ಕೈಚೀಲದಲ್ ಹಾಕಿಟ್ತು, ಸುಮ್ನ ಕುಂತ್ತು. +ಅವ ಮೊಕ ತೊಳಕಂಡ್ ಬಂದ. +ಇದು, ‘ಬಿಡ್ಸಿ ಅನ್ನ’ ಅಂತು. +ಅವ ಬಿಡಿಸಿದ. +‘‘ನೋಡು, ಮಗು ಮಾಡ್ದು ಇದೇ ನಮೂನಿ. +ಕಗ್ಗನಕ್ಕಿ ಕೂಳ ಮಾಡಕೊಟ್ಟಿದೆ. +ಇದ್ ನೋಡಿ, ಅದ ಎಣ್ಬೇಡಿ ನೀವು. +ಸಣ್ಣಕ್ಕಿ ಅನ್ನ ಮಾಡನೆ, ಗನಾ ಚಟ್ನಿ ಮಾಡನೆ ನೀವು ಉಣ್ಣಿ.’’ +‘‘ಮುರಗನ ಸಪ್ನ ಸಾರು ತಿಂದರೆ ನೀವ್ ಬದ್ದೂರಿ’’ ಹೇಳ್ತು. +ತನ್ನ ಮಗಳ ಅದ್ ಮಾಡದ್ದ ಅವ ನೋಡಿದ್ದ. +ಆದ್ರೂ ಇದು ಇಷ್ಟು ತಜಿವಿಜಿ ಮಾಡದೆ ತಾ ಬರುತನ್ಕವ ಅಂದಿ ಮನಸಿಗೆ ತೆಳಕಂಡು ಉಂಡ. +ಅದಿಷ್ಟು ಉಣ್ತು. +ಕಗ್ಗನಕ್ಕಿ ಅನ್ನ ವಗದರು. +‘‘ಇದು ನನ್ಗೆ ಮೆಚ್ಚುದಿಲ್ಲ’’ ಅಂದಿ, ಅದೇ ಹೊತಾಕ್ತು. +ಯೆಯ್ಡು ಜನ ಅವ ಮುಂದೆ ಇದು ಹಿಂದೆ ಹಾಕಂಡ ಬಂತು. +ಮಗು, ‘‘ನನ್ನಪ್ಪ ಚಿಕ್ಕಿ ತಕಂಡ ಬರೂಕ ಹೋಗನೆ’’ ಅಂದಿ ಮನೆ ಮಾಡುಯೆಲ್ಲಾ ಚೊಕ್ಕಾಕ ಸಾರಸತು. +ಹಾದಿ-ಬೀದಿ ಚೊಕ್ ಮಾಡ್ತು. +ಹಲಿ ಬರಿತು. +ಶೇಡಿ ಅಂತಾ ಬಾಗ್ಲಲೆಲ್ಲಾವ ಬರಿತು. +ದೊಡ್ಡ ಹಶಿ ಹಾಶಿಡ್ತು. +ರಂಡೆ ಹಿಂದನ ದಾರೆ ಬಂದವ್ಳು. +ಇಷ್ಟ ಹೊಲ್ಸ ಮೆಟ್ಕಂಡ ಬಂತು. +ಹೊಲ್ಸ ಹಶಿಗೆ ಕಾಲ ಬಡ್ದ ಇಟ್ ಬಿಡ್ತು. +ಕೂತ್ಕಂಡ್ತು ಅವ್ನೂ ಬಂದ. +ಹಶೆ ಮೆಟ್ತು. +‘‘ಹಪ್ವಾಶ್ನೆ ಬತ್ತದೆ ಇಷ್ಟೆಂತಾ ಮಗು.’’ +‘‘ನೀಮುಂಜಿ’’ ಅಂತು. +‘‘ಮಗ್ನೆ ಯೆಂತಾ ಮಾಡ್ಕಂಡಿದೆ?’’ + ‘‘ಯೇನಿಲ್ಲ’’ ಅಂತು. +‘‘ನಾತ ಬತ್ತದ್ಯಲ್ಲೆ ಯಾವ ನಮೂನೆ ಮಾಡಿದ್ದೆ?’’ +‘‘ಯೇನ್?’’ + ‘‘ಯೇನೋ ನಾಮಾರ್ಗೆ ಬಳ್ಳಿ ಹೊಸ ಹಶೆ ಹಾಕಿದೆ.’’ + ಅವ ಹಸೆ ತೆಗೆದ ಚೊಕ್ಕ ಮಾಡಿಲ್ಲ. +ಆಗೆ ಇದು, ‘‘ಈ ನಮೂನಿ ಮಾಡ್ಕಂಡದೆ ಈ ರಾತ್ರಿಗೆ’’ ಆವಾಗಿ, ‘‘ದನ ಕಾಯಕೆ ಹಾಕಬೇಕು. +ವಳಗಿನ ಚಾಕ್ರಿ ಮಾಡೊದ್ ಬೇಡ’’ ಅಂತು. +‘‘ಮಗನೆ ದನಕಾವೂಕ ಹೋಗು’’ ಅಂದ. +‘‘ನೀನ್ ಕೂಡಾಗುದಿಲ್ಲ ಹಶೆ ಬೆಗೆಲ್ ತೊಳ್ದೆ ಹಾಕು’’ ಅಂದ. +ದನ ಬಿಡೊಕೆ ಹೋಯ್ತು. +ದನ ತಕಂಡಿ ಬಸವ್ನಿಗೆ ತಕಂಡ ಹೋಯ್ತು ಮಗು. +ಮಾಶೇಶ ನೆಲನ್ ಅಡಿಗೆ ಹೋಗಿನಲ್ಲ? +ದನಿಗೆ ಮೇಸ್ಕಂಡ್ ಕೊಟ್ಗಿಲ್ ತಕಂಡ್ ಬಂತು. +ಅನ್ನನೂ ಹಾಕುದಿಲ್ಲ ವಂದೆ ಸಟ್ಲ ಅನ್ನ ಮಾಡ್ಕಂಡ್ ಉಳಿತು. +ನೋಡಿ ನೋಡಿ ಸಾಕಾಯ್ತು ಮಾಶೇಶ, ಬಸ್ವಂಗೆ. +ದನ ಬಿಟ್ಕಂಡ್ ಹೋಯ್ತು. +ಆರ ತಾಸ್ನ ಬಿಸ್ಲಿಗೆ ಕರೆ ಮಿಂದ್ಕಂಡ್ ವಳಿತು. +ಬೆಟ್ಟದಲ್ಲಿ ಕೈ ಮುಕ್ಕಂಡ್ ಕಣ್ ಮುಚ್ಕಂಡ್ ದೇವ್ರಿಗೆ ಹೇಳ್ಕಂಡ್ ಕೂತ್ತು. +‘ದೆವ್ರೆ ನೀನೇ ನನ್ನ ಹೊಟ್ಟೆ ತುಂಬಬೇಕು’ ಅಂದಿ ಕಣ್ ಮುಚ್ಕಂಡ್ ಕುಂತಕಂಡ್ತು. +ಆಗ ಬಾಳೆ ಹೆಡೆ ಯೆರಡು ಹೆಡೆ ತುಂಬಿ ಸಣ್ಣಕ್ಕಿ ಅನ್ನ, ಬೇಕಾದ್ದಾಂಗ ಬಿತ್ತು. +ವಂದು ಯೆಡೆ ಗೋವಿಗೆ ಕೊಟ್ರು. +ವಂದ ಯೆಡೆ ತಾನು ಬಸ್ವ ಉಂಡ್ರು. +ದನ ಕಟ್ಕಂಡ್ ಬಂದ್ ಬಿಟ್ತು. +ಯಾರ್ ಕೂಡೂ ಹೇಳ್ಳಿಲ್ಲ. +೧೫ ದಿನಾಯ್ತು ಚಂದಾಗಿ ಗನಾಕಾಗದೆ ಸೂರಿ ಚಂದ್ರಾಗೆ ಆಗದೆ ಮಗು. +ದಿನಾಗೂ ಅದ್ದೇ ನಮೂನಿ ೧ ಯೆಡ್ಯ್ ತಾನು ಬಸ್ವ ಉಂಬೂದು, ವಂದು ಗೋವಿಗೆ ಕೊಡೊದು, ಹಾಗೇ ಮಾಡ್ಕಂಡಿ ಯೆಯ್ಡು ಮೂರೇ ತಿಂಗಳಾಯ್ತು. +ಚಿಕ್ಕಿ ಬಸ್ರಿ ಹತ್ನ ತಿಂಗಳಾಯ್ತು. +ಜನ್ನೆ ಆಯ್ತು. +ಜನ್ಯಾಗೋಕೇ ವಂದ ಹೆಣ್ ಮಗು ಆಯ್ತು. +ಮಗುಗೆ ತುಪ್ಪಕೆ ಬರಗಾಲ ಇಲ್ಲ. +ಹಾಲಿಗೆ ಬರಗಾಲ ಇಲ್ಲ. +ತುಪ್ಪದಲ್ಲಿ ಮೈಗುದ್ದುದು. +ಉಕ್ಳ ತೆಳಿ ಹೊಯ್ಯದು. +ತುಪ್ಪ ಹಾಕಂಡಿ ಸಾಟಿಯಾಗಿತ್ತು ಮಗು. +ಗಂಡನ ಕೂಡೆ ಅಡಿಗೆ ಮಾಡು ಅಂತು. +ಮಗು ಹೆಳ್ಕೆ ಅಂತು. +ಗಂಡನೆ ಅಡ್ಗೆ ಮಾಡಿ ಬಾಣಂತಿಗೆ ಮಗುಗೆ ಬಡ್ಸದ. +ಹೊಟ್ಟೆ ತುಂಬ ಹಾಕ್ದ. +ಹನ್ನೈಡ್ ದಿನಾಯ್ತು. +ಕಡಿಗೆ ಇದೆ ಗೌಡ್ತಿ ಅಡಿಗೆ ಮಾಡ್ತು. +ಬಾಗ್ಲಾ ಹಾಕಂಡ್ ತೀಡ್ತೆ ಉಳಿತು. +ಅಡ್ರ ಬಡ್ರಾಗ್ ದೊಡ್ಡಾಗ ಬಂತು. +ವಂದ ವರ್ಸಾಯ್ತು. +ಯೆಯ್ಡ್ ವರ್ಸಾಯ್ತು. +ಸಣ್ಣಕ್ಕಿ ಅನ್ನ ತುಪ್ಪದಲ್ಲೇ ಬೇಯ್ಸಿ ಮಗಿಗೆ ಹಾಕ್ತದೆ. +ಗನಾಕಾಗೂದಿಲ್ಲ ಜೀರಾಗೆ ಬಂತು ಇದು. +ಗೌಡತಿ, ‘‘ತನ್ ಮಗಿಗೆ ಸಣ್ಣಕ್ಕಿ ಅನ್ನ ತುಪ್ಪದಲ್ಲೇ ಬೆಯ್ಸಿ ಹಾಕ್ತೆ. +ಏನಂದ್ರೆ, ಅಳ್ಳ ಹಾಲ ನಂಜಿಗೆ ಬೆಳ್ಗಾಗ್ ಕುಡಿಕೆ ಕೊಡ್ತೆ. +ನನ್ನ ಮಗು ಜೀರಾಗಿದೆ. +ಗನಾಕ್ಯೆಂತಾ ಆಗುದಿಲ್ಲ.’’ +ಅದು, ‘‘ಆ ಮಗಿಗೆ ಬರೀ ಇಷ್ಟ ತೆಳಿ, ಇಟ್ಟನ್ನ ಹಾಕ್ತೆ ಅದ್ರಿ ಬರ್ಣ ನೋಡಾ ಚಂದ ಬಣ್ಣ್ ಬಂತು.’’ +ಮತ್ತೊಮ್ಮೆ, ‘‘ದೇವ್ರ ಆದ್ಕೆ ಹಾಗೆ ಅಟ್ ಬಣ್ಣ ಕೊಟ್ಟನೆ’’ ಅಂತಾ ಮಗು ದಿನಾಗು ಹಾಗೇ ಮಾಡ್ತದೆ, ತೂಗಮಂಚದಲ್ ತೂಗ್ರೆ ಏಳೊದಿಲ್ಲ. +ದನಾ ಯೆಲ್ಲಾ ಅದ್ರ ಬುಟ್ಕೆ ಉಳುದು ಅದ್ರ ಬಣ್ಣ ನೋಡಿ, ಚೆಂದ ಕಂಡಿ ನೋಡ್ತೆ ಉಳಿದೇರು. +ಅಪ್ಪ ದನಾನ ಹೊಟ್ಟೆ ತುಂಬುದಿಲ್ಲ ಯೆಂತ ಮಾಡ್ತೆ ಕೇಳ್ತ. +ದನ ಮೇಸ್ಕಂಡಿ ಬತ್ತದೆ. +ಯಂತ ಮಾಡ್ಲಿ ಯೆಂತ ಮಾಡ್ಲಿ’’ ಕೇಳ್ತು. +ಹದಿನಾರ ವರ್ಸನ ಮಗುವಾಗಿ ಚಂದ ಆಗಿ ಬಂತು. +ಇದು ತನ್ ಮಗಿನ ಕೂಡೆ (ಯೆಯ್ಡ ವರ್ಸ) ‘‘ಅಕ್ಕನ ಬೆನ್ನಿಗೋಗು ಯೇನ ಮಾಡ್ತದೆ ನೋಡ್ಕಂಡ್ ಬಾ’’ ಅಂತು. +೫ ವರ್ಷ ಹಿಡಿರಿ. +ಬಂದೆ ತೆಳ್ಯ ಹೇಳ ಅಂತು. +ಆರ ತಾಸಿಗೆ ಮಿಂದ್ಕಂಡಿ ‘ಭಗವಂತಾ’ ಅಂದಿ ಕೈ ಮುಗಿದ ಕೂತು, ಯೆರಡ ಯೆಡೆ ಸಣ್ಣಕ್ಕಿ ಅನ್ನ. +ವಂದ ಯೆಡೆದು ಆಕ್ಳಿಗೆ, ೧ ಬಸವಿಗೆ ತನಗೆ. +ಮಗು ವಂದ ಕಂಕ್ಳಲ್ ಹಾಕ್ಕಂಡ್ತು ಆವಾಗ ರಟ್ಟೆ ಬಿಟ್ಕಂಡ್ ಅನ್ನ ಉಣ್ತಿ ಕುತ್ತು. +ಸಂಜ್ಯಾಯ್ತು ದನ ಹೊಡ್ಕಂಡು ಬಂತು. +‘‘ತಂಗಿ, ಅಕ್ಕ ಯೇನ ಮಾಡ್ತದೆ?’’ +‘‘ಅಕ್ಕ, ದೊಡ್ಡ ಯೆಲೆ ಮೆನೆ ಅನ್ನ ಪಾಯ್ಸು ಯೆಲ್ಲಾ ಬೇಕಾದ ಆಗಿತ್ತು. +ನಾವುಂಡ್ರು ವಂದ ಯೆಡೆ ಆಕಳಿಗೆ ಕೊಟ್ತು. +ವಂದೆಯೆಡೆ ತಾನು ಬಸವ ತಿಂದ್ರು. +’’ಇದಕ್ ಶಿಟ್ ಬಂತು. +ರಾತ್ರಿ ಗಂಡನ ಕೂಡೆ, ‘‘ಯೇನ್ ಯೇಂತನ್ಗೆ ಸಂಗಟ ಜಿವ್ವೇ ಉಳೂದಿಲ್ಲ’’ ಅಂತು. +‘‘ಬಸವನಿಗೆ ಮೂರ ದಾರಿ ಕೂಡದಲ್ ಕುತ್ಗಿ ಕಡ್ದ ಹಾಕ್ ಬಂದ್ರೆ ತನ್ನ ಜೀವ ಉಳಿತದೆ’’ ಅಂತು. +‘‘ಇಲ್ಲಾ ನಂಜೀವ ಉಳೂದಿಲ್ಲ’’ ಅಂತು. +‘‘ತನ್ಗೆ ಹೆಣ್ತಿಲ್ದಾಗ್ ಆಗುದಲ್ಲ’’ ಅಂದ್ಕಂಡಿ, ಅವ ಮೂರ್ ದಾರಿ ಕೂಡ್ದಲ್ ಕುತ್ಗಿ ಕಡ್ದ ಹಾಕ ಬಂದ. +ಮಗು ರಾತ್ರಿಗೆ ಹೋಕ್ಕಂಡ್ ಬಸವನ ಕೂಡ ತೀಡ್ತೆ ಬಿದ್ದದೆ. +‘‘ಯೇನು ಹೆದ್ರಬೇಡ ತಂಗಿ ನೀನು. +ಮೂರ್ ದಾರಿ ಕೂಡ್ದಲ್ ಕುತ್ಗಿ ಕಡದ್ರೆ, ತಾನು ಚಿನ್ನದ ಕೋಡಾಗಿ ಅಷ್ಟೇ ದೊಡ್ಡ ಮೊಕ್ಯಾಗಿ ಯೆದ್ ಬತ್ತಿ. +ದೊಡ್ಡ ಸಾವ್ಕಾರ ಮನೆಲಿ ಮುಂದ ಬೇಟಿಗ್ ಹೋತ್ರು. +ಪರದಾನಿ ಹುಡ್ಗ ಅರಸು ಹುಡ್ಗ. +ಯಾರಾರೂ ಇಡೀ ಊರ್‌ನೋರ್ ಬಂದ್ರೂ, ಬಂದ್ರಿ ಕೀಳೂಕಾಗುದಿಲ್ಲ. +ಅವ್ರು ಕೀಳೊಕೊದ್ರು, ಅವರ ಕೂಡಾಗುದಿಲ್ಲ. +ಯಾರಾರ ಕೀಳೂಕೆ ಬಂದ್ರೆ ಬರುದಿಲ್ಲ ನಾನು. +ನಿನ್ ಕೂಡ್ ಕೇಳ್‌ತ್ರು. +ತಾನು ಕುದ್ರೆ ಮೇಲ್ ಕುಳ್ಸಕಂಡಿ ಮದಿಯಾಗ್ತೆ ಅಂತ್ರು. +ಆಗ ನೀ ಕೈಹಾಕದ್ರೆ ತಾನು ನಿನ್ ಕೈಲಿ ಯೆದ್ದು ಕವರಿಯಾಗ ಬತ್ತೆ. +ತೀಡಬೇಡ ತಾ ಅಣ್ಣ ಮಾಶೇಶನಿದ್ದಲ್ ಹೋಗ್ತೆ ತೀಡಬೇಡ’’ ಅಂತು. +ಬೆಳ್ಗೆ ಮುಂಚೆ ಮೂರ್ ದಾರಿ ಕೂಡ್ದಲ್ ತಕಂಡ ಹೋಗಿ ಕಡ್ದ. +ಚಿನ್ನದ ಕೋಡಾಗಿ ಯೆದ್ಬಂದ. +ತೀಡಿ ತೀಡಿ ದನುಗೆ ಕಾವ್ಕೆ ಹೋಗ್ಲಿಲ್ಲ. +ನಾಕೈದ ದಿನ ಉಣಲಿಲ್ಲ. +ಮನಿಕೂಡೆ ಉಳಿತು. +‘‘ಚಿಕ್ಕಿ ಹೊಡಿತು ದನ ಕಾವ್ಕೆ ಹೋಗೂದಿಲ್ಲ’’ ಅಂದಿ. +ನಾಕ್‌ನೆ ದಿನ್ಕೆ ಬೆಟ್ಟದಲ್ ಬಂತು. +ದನ ಕಾವೂಕೆ ಹೋದಲ್ಲಿ ಬಸವ ಚಿನ್ನದ ಕೋಡಾಗಿ ಬಂತು. +ಅರಸು ಹುಡ್ಗ ಪರದಾನಿ ಹುಡ್ಗ ಮೂರಗ ಬೇಟೆಗೆ ಬಂದಿರು. +ಕೀಳೊಕೆ ನೋಡದ್ರು. +ಬರಲೇ ಇಲ್ಲ. +ಡಂಗ್ರ ಸಾರದ್ರು. +ಇಂತಾ ಕಡೆ ಈ ನಮೂನ್ಯಾಗದೆ ಹೇಳಿ ಅಪ್ಪನಿಗೆ ಗೊತ್ತಾಯ್ತು. +ಅವನ ಕೂಡೂ ಆಗುದಿಲ್ಲ. +ಯಾರ್ ಬಂದ್ರು ಕೀಳಾಕಾಗುದಿಲ್ಲ. +ಅದು ದನ ಕಾವ್ಕೆ ಬಂತು. +‘‘ನೀ ಕಿತ್ರೆ ನಿನ್ಗೆ ತಕ್ಕಂತೆ ಆಗ್ಲಿ. +ಯೇಳುಪ್ಪರಿಗೆ ಮೇನ್ ನಿನ್ ಇಡ್ತೆ. +ನೀ ಕೆಲಸ ಮಾಡೂದ್ ಬೇಡ. +ಕೀಳು ನೋಡ್ವ’’ ಅಂದ. +ಇದು ಕಿತ್ತತು. +ಕುದ್ರೆ ಮೇನ್ ಕುಳ್ಸರು ತಕಂಡ ಹೋದ್ರು. +ಅಪ್ಪ, ಅವಿ ಅವನಿಗೆ ಮದುವೆ ಮಾಡ್ರು. +ಏಳುಪ್ಪರಿಗೆ ಮೇನೆ ಕುಂತರಾಯ್ತು. +ವಂದ ಗೋಮಯ ತಂದ್ ಗೋಮಯ್ದ ನೀರ್ ಹಾಕ್‌ದ್ರಾಯ್ತು. +ಮತ್ಯೇನಿಲ್ಲ, ಮೀವುದು ಉಣ್ಣುದು. +ಇಂತಾ ಕಡೇಲಿ ಅವಳ್ನ ಮದ್ವೀಗ್ ತಕಂಡ್ ಹೋದ್ರು ಅಂದಿ ಅಪ್ಪನಿಗೆ ಅವಿಗೆ ಸುದ್ದಿಯಾಯ್ತು. +ಮದಿಯಾಯ್ತು ಅಂದಿ ಅಲ್ಲಿ ಹೋಗಲಿಲ್ಲ ಅವ. +ವಂದು ವರ್ಸಾಯ್ತು. ಸುದ್ದಿಯಾಯ್ತು. +ಚಿಕ್ಕಯೇನಂತು- ‘‘ವಂದು ವರ್ಸಾಯ್ತು. +ಮಗಿನ ಜಾನವೇ ಇಲ್ಲ. +ಮದಿಯಾಗದ್ಯಂತೆ ನನ್ಗೆ ನೋಡ್ಬೇಕಂತ ಕಾಣ್ತದೆ. +ಕರ್ಕಂಬನ್ನಿ’’ ಅಂತು. +‘‘ಆಗುದೆ, ಹೋಗ್ತೆ. +ಯಂತ ಕೊಡ್ತೆ?’’ +‘‘ಬೆಲ್ಲ ಹಾಕಿ, ಅಕ್ಕಿ ಹಾಕಿ, ಕಾಯಿ ಹಾಕಿ ರೊಟ್ಟಿ ಮಾಡಕೊಡ್ತೆ’’ ಅಂತು. +ಕಾಸ್ಕನ ಸಪ್ಪ ಹಾಕ್ತು. +ರೊಟ್ಟಿ ಮಾಡಿ ಕೊಟ್ತು. +ಇದ ದೊಡ್ಡ ಪೊಟ್ಲೆ ಮಾಡ್‌ಕೊಟ್ತು. +ದೊಡ್ಡ ರಾಜ ಸಂಸ್ಥಾನದಲ್ಲಿ ಹೋದ. +ಅಲ್ಲಿ ಮರ್ಯಾದ್ಯೆಲ್ಲಿ ಹೋಗಾಕೆ. +ಸಂಜ ಕಡೆ ಹೋಗಿ ಪೊಟ್ಲೆ ಕೊಟ್ಗೆಗೋಡೆ ಮೇಗಿಟ್ಟ ಮಗಿಗೆ ಕೊಡುಕಾಗುದು ಅಂದಿ. +ಮಗು ಹೆರಗೇ ಬೀಳಲಿಲ್ಲ. +ಅವನಿಗಿಟ್ ಬಡಸರು. +ಉಂಡ ಅಲ್ಲೆ ಮನಿಕಂಡ. +ಮಗು ಕಪ್ಪಿಗೆ ಗೋಮಾಯಕ ಬಂತು. +ದನ ರೊಟ್ಟಿ ಬಗ್ಗ ಕಂಡ್ ತಿಂದಿ ಸತ್ಬಿದ್ಹೋಗದೆ. +ಮುಂದಿದ್ದದ್ದು, ಅತ್ಲಬದಿ ದನ ಅದೆ. +ಅಪ್ನ ಕೂಡೆ ಹೇಳ್ತು. +‘‘ದನ ಸತ್‌ಬಿದ್ದದೆ. +ಯಂತ ಮಾಡ್ಕಂಡ ಬಂದಿದೆ?’’ ಕೇಳ್ತು. +‘‘ರೊಟ್ಟಿ ಮಾಡ್ಕಂಡ್ ಬಂದಿದ್ದೆ. +ಚಿಕ್ಕಿ ಮಾಡ್ ಕೊಟ್ಟಿತ್ತು. +ಕರಕಂಡ್ ಬಾ ಅಂದದೆ’’ ಅಂದ. +‘ಬೇಗ ಹೋಗು ಆಸ್ರ ಕುಡು ಮೊದ್ಲೆ ಹೋಗು ನೀನ್ ಇಷ್ಟವಿಲ್ಲ’’ ಅಂತು. +‘‘ನಾ ಬರಾದಿಲ್ಲ’’ ಅಂತು. +ದನಕಾವ ಮಕ್ಳ ಬರತಕ, ಹಾಲ ಗೀಲ್ ತೆಗಾತನ್ಕ ಬಂದ ಗೌಡ. +ದನ ಸತ್ ಬಿದ್ದದೆ. +‘‘ರೋಗಾಯ್ತೆ ಯೇನಾಯ್ತು? +’’ ದನ ಯೆಲ್ಲಾ ಯಳ್ದಹಾಕ್ರು? +ಬಾಕಿದನ್ಕರ ಬಿಟ್ ಹಾಕಂಡ ಹೋದ್ರು. +ಅಲ್ ಹೋಕಂಡ್ ಹೆಂಡ್ತಿ ಕೂಡೆ ಬಯ್ದ. +‘‘ನನ ಮಗಳ ಸತ್ಹೋಗ್ಲಿ ಅಂದಿ ಕಾಸ್ಕನ್ ಕಾಯಿ ಹಾಕಿ ರೊಟ್ಟಿ ಮಾಡಿ ಕೊಟ್ಟಿದೆ. +ಕೊಟ್ಗೆ ದನ ಸತ್ಬಿತ್ತು. +ನನ್ಗೆ ಇಡ್ಸುದಿಲ್ಲ ಅಂದಿ ಬೇಗ ಬಂದೆ’’ ಅಂದ. +‘‘ಅದು ಕಾಯಿಬೆಲ್ಲ ಹಾಕ್ ಮಾಡ್ಕೊಟ್ಟಿದೆ. +ರೋಗ ಬಂದಿತ್ತು ದನಿಗೆ ಸತ್ಹೋಯ್ತು’’ ಅಂತು. +ಅವ, ‘‘ಅದರ ತಿಂದ ದನ ಸತ್ತದೆ. +ಬಾಕಿದನ ಅದೆ’’ ಅಂದ. +ನಂಬಲಿಲ್ಲ ಯೆಯ್ಡ ಮೂರ್ ವರ್ಸ ಹೋಯ್ತು. +ಚಿಕ್ಕಿ ಹೇಳ್ತು. +‘‘ಮಗಿಗೆ ನೋಡ್ಬೆಕಂದೆ ಕಾಣ್ತದೆ. +ಮಗಿಗೆ ಕರ್ಕಂಡ ಬನ್ನಿ’’ ಅಂತು. +‘‘ಅಲ್ದಿದ್ರೆ ತನ್ಗೆ ಜೀವವೆ ವಳ್ಯುದಿಲ್ಲ. +ನಾಕ್ ವರ್ಸಾಯ್ತು. +ಮಗಿಗೆ ನೋಡ್ದೇಯ. +’’ ನೋಡುಕಾರು ನೋಡ್ವ ಅಂತು ರೊಟ್ಟಿಕೊಡ್ಲಿಲ್ಲ. +ಕರಕಂಡ್ ಬರೂಕ್ ಹೋದ. +ರಾಜನ ಹತ್ರ, ‘‘ನಾಕದಿನ ಕಳಿಸಕೊಡಿ. +ನಮನಿಂದ್ ಹೊತ್ಕಂಡ ಬಂದಿ ಮದಿಯಾಗ್ರಿ- ಹೇಳ ಗೊತ್ತು. +ನನ್ನ ಹಿಂಡ್ತಿಗೆ ನೋಡ್ಬೇಕಂದಿ ರಾಶಿ ಅದೆ’’ ಅಂದ. +ಕಳಿಸಿ ಕೊಟ್ಟರು. +‘‘ಚಿನ್ನ ಬಣ್ಣ ರಾಶಿ, ೨ ದಿನಾಯ್ತು ಬಂದಿ ತಂಗಿ. +ತಲೆ ಕೆಸ್ರಾಗದೆ ತಂಗಿ. +ಮೀಯಿಸ್ವ ಚಿನ್ನ ಯೆಲ್ಲ ತೆಗಿ ಮಗನೆ. +ಕೆಮಿದು ಕಾಲ್ಗೆದಾ ಯೆಲ್ಲಾ ತೆಗ್ದಿ. +ತಂಗಿಗ್ ಹಾಕು ಮಗನೆ. +ಚೆಂದ ಕಾಣ್ತದೆ ನೋಡ್ವ’’ ಅಂತು. +ತಂಗಿಗೆ ಯೆಲ್ಲಾ ಚಿನ್ನ ಹಾಕ್ತು. +‘‘ಮಗಳ ಕೂಡೆ ದೊಡ್ಡ ಬೆಂಕಿ ಮಾಡು’’ ಅಂತು ನೀರ ಕೊದಿತದೆ. +‘’ತಲೆ ತಿಕ್ಕಕೊಡು ಮಗನೆ ಯೆಯ್ಡ್ ಕೊಡ ನೀರ ಹಾಕು’’ ಹೆರಿಮಗು ಕೂಡೆ. +ಈ ಮಗಳ ಕೂಡೆ, ‘‘ಅಕ್ಕ ನೀರಿಗೆ ಹೋಗುಕೇಯ ಅಕ್ಕನ ಗಂಡನ ಮನೆಗೆ ನೀ ಹೋಗು. +ಅಕ್ಕನ ಗಂಡನ ಮನೆಗೆ ನೀ ಹೋಗಬಹುದು ಮಗನೆ’’ ಅಂತು. +‘‘ಅದು ಬಾವಿಗೆ ಕೊಡಪಾನ ಹಾಕುಕೇಯ ಹಿಂದೆ ಹೋಗಿ ದೂಡ್ಹಾಕ್ಬುಡು’’ ಅಂತು ಮಗಳ ಕೂಡೆ. +‘‘ಅಷ್ಟು ಚಿನ್ನ ನಿನ್ಗೆ ಆಗುದು ಅಕ್ಕನ ಮನೆಗೆ ಹೋಗು ನೀನು’’ ಅಂತು. +ಅದು ನೀರಿಗೆ ಹೋಗುಕೇಯ ಅಕ್ಕನಿಗೆ ದೂಡ್ ಹಾಕಬಿಟ್ತು. +ಎಲ್ಲಾ ಬಿಳುತೇಯ ಮಾಶೇಶ ಬಸ್ವ ಅಡಿಗಿಂದಾನೆ ಉಗದು ತಕಂಡ್ ಹೋದ್ರು. +ಮಾಳ್ಗಿ ವಳಗಿಟ್ಕಂಡ್ತು ತಂಗಿಗೆ. +ಗಂಡನ ಕೈಲಿದ್ದದ್ದು ಹೆಂಡತಿಗೆ ಹಾಕಿದ್ದರ ಉಂಗ್ಲವಾ ತೆಗಿಲಿಲ್ಲ. +ಪಾತಾಳ ಲೋಕಕ್ಕೆ ಹೋದ್ರು. +ಅವ ತನ್ನ ಹಿಂಡ್ತಿಯಲ್ಲ ಅಂದಿ ತಂಗೀನ ಪಾಯಕಾನಿಲಿ ಹೊತಾಕಿದ್ದ. +ಅಕ್ಕ ಮನಿಕಂಡಲೆ ಮನಿಕಂಡಿತ್ತು. +ನಿತ್ತ್ ಹಾಂಗೆ ಮಾಡ್ತು. +ಉಂಗ್ಲ ಇಲ್ಲ ಕಯ್ಯಿಗೆ. +ಚಿಕ್ಕಿ ತನ್ನ ಮಗಳ್ನ ನೋಡುಕೊಯ್ತು. +ಬಯಿಲಕಡೆಗೆ ಆಗಿತ್ತು. +ಪಾಯಿಖಾನಿಗೆ ಹೋಗು ಅಂದ್ರು. +ಅವಿ ಬೈಲ ಕಡೆ ಮಾಡ್ತು. +‘‘ಯವ್ವ ಯೆಲ್ಲ ಬಯ್ಲ ಕಡೆ ಮಾಡ್ತ್ರು ಹೇಳಿ ನೀನೂ ಮಾಡ್ತ್ಯ’’ ಕೇಳ್ತು. +ಅವ್ ತಕಂಡ್ ಹೋಗಿ ಮೂರು ಕೊಡಪಾನ ನೀರ್ ಹೊಯ್ತು. +ದನಕಾವ ಮಕ್ಳು, ‘‘ಕಾಲಿಗಿಡಿಬೇಕು, ಕಲ್ಲಿಗೆ ಬಡಿಬೇಕು, ಚೊಕ್ಕಾಗ್ತದೆ’’ ಅಂದ್ರು ಆಗ ಕಾಲಿಗಿಡಿತು. +ನೆಲಕ್ಕೆ ಬಡಿತು. +ಸತ್ತೇ ಹೋಯ್ತು. +ತೀಡ್ತು ಹಾಂಗೇ ಮನಿಗೋಯ್ತು. +ಅವ್ರು ಸುಟ್ಟಿ ಬೂದಿ ಮಾಡದ್ರು. +ಅಕ್ಕ ಪಾತಾಳ ಲೋಕದಲ್ಲೇ ಉಳಿತು. +ಗಂಡ ಊರೂರ್ಯೆಲ್ಲಾ ಹುಡಕದ. +ಯೆಲ್ಲೆಲ್ಲೂ ಇಲ್ಲ. +ಬಳಗಾರ ಯೇಸ ತಕಂಡಿ, ಬಳೆ ತಕಂಡಿ ಇಡೀ ಊರಿಗೆ ಹೋಗಿ, ‘‘ಅಮ್ಮಾ ಬಳೆ ಬೇಕೋ’’ ಕೇಳ್ತ ಹೋದ. +ಯೆಲ್ಲೂ ಕಾಣದೆ ಹುಡುಕದ. +ಮಾರ್ಗದ ಮೇನಿತ್ತು. +ಹೆಂಡತಿಗೆ ಕೇಳಿತು. +‘‘ಅಣ್ಣ ಬಳಗಾರ ಬಂದರೆ ನನ್ಗೆ ಬಳೆ ಬೇಕಲ್ಲ’’ ಅಂತು. +ಕರದ ಮಾಳ್ಗಿಲಿ ಹೆರಗೆ ವಂದಕೈ ಕೊಡ್ತು. +ಕೈ ಕೊಡುಕೆ ಉಂಗ್ಲ ಕಂಡ್ತು. +ತನ ಹಿಂಡ್ತಿ ಅಂದ್ ಹೇಳಿ ತೆಳಿತು. +ಕಡೆಗೆ ಬಳೆ ಇಟ್ಟ. +‘‘ಇಲ್ಲಿ ಹ್ಯಾಂಗ್ ಬಂದಿದೆ?’’ ಕೇಳ್ದ. +ಅದು- ‘‘ನಾನು ನೀರ ಯೆತ್ತೂಕ ಬಂದಿದೆ. +ಚಿಕ್ಕಿ, ‘ಚಿನ್ನ ಯೆಲ್ಲ ಹಾಕು ಅಂತು ತಂಗಿಗೆ’ ನಾ ಹಾಕ್ದೆ. +‘ತಲೆ ಕೆಸ್ರಾಗದೆ ಮೀಸ್ಕೊಡ್ತೆ ಹೇಳ್ತು’ ಚಿಕ್ಕಿ. +ವಂದ್ ಕೊಡ ನೀರ್ ತರುಕೆ ಹೋಗಿದ್ದೆ. +ತಂಗಿ ನನ್ನ ದೂಡ್ ಹಾಕ್ತು. +ನಾನ್ ಅಡಿಗೋಗಿದೆ ಮಾಶೇಶ ಅಣ್ಣ ತಕಂಡ್ ಹೋಗ ಇಟ್ಕಂಡ್ತು ಅವತ್ತು. +’’ತನ್ನ ಗಂಡಗೆ ಹೆಂಡ್ತಿ ಅಂತ ತಿಳಿತು. +ವಜ್ರದ ಉಂಗ್ಲ ಅದೆ. +ಮಾಶೇಶ ಅವ್ರ ಕೂಡ್ಯಲ್ಲಾ ಕೆಳಗೆ ಮೊಕ ಮಾಡ್ಕಂಡೆ ಉಳಿತು. +‘‘ಹೆಡೆ ಮೇಲೆ ಮಾಡ್ಕಳೂಕಾಗಾ ತನ್ನ ತಂಗಿ ಗಂಡ ಬಂದನೆ’’ ಅಂತ ಮಾಶೇಶ ಹೇಳ್ತು. +‘‘ನಾಕ್ ದಿನ ಇಟ್ಕಂಡಿ ಕಳಿಸ್ಕೊಡ್ತೆ’’ ಅಂದ. +ಅಲ್ಲೇ ಉಳಿದ್ರು. +ತಂಗಿಗೆ, ತಂಗಿ ಗಂಡಗೆ ವಂದ ತಿಂಗ್ಳ ಇಟ್ಕಂಡ್ರು. +ತಂಗಿಗೆ ಶೀರಿನೊ, ಚಿನ್ನವೋ ಬೇಕಷ್ಟ ಕೊಟ್ಟು, ‘‘ಹೋಗಿ’’ ಅಂದ್ ಹೇಳಿ ಕಳಿಸಿಕೊಟ್ಟ. +ಸುಖ-ಸಂತೋಶದಲ್ಲಿ ವಳದ್ರು. +ರಾಜ, ಮಂತ್ರಿ ಇದ್ದರು. +ರಾಜಗೊಬ್ಬ ಹುಡುಗ. +ಮಂತ್ರಿಗೊಬ್ಬ ಹುಡುಗ. +ಶಾಲೆಗೆ ಹಾಕಿದರು. +ಕಲಿತ ಕೂಡಲೆ ಕಟ್ಟೆ ಕಟ್ಟಿಸಿದರು. +ರಾಜನ ಹುಡುಗ ಪ್ರಾಯಕ್ಕೆ ಬಂದ. +ಮಂತ್ರಿ ಹುಡುಗ ಹನ್ನೆರಡ ವರ್ಷದವ. +ರಾಜನ ಹುಡಗನಿಗೆ ಪ್ರಾಯದ ಹುಡುಗಿ ಮದುವೆ ಮಾಡಿದರು. +ಮಂತ್ರಿ ಹುಡ್ಗಗೆ ಹತ್ತ್ ವರ್ಷದ ಹುಡುಗಿ ಮದುವೆ ಮಾಡಿದರು. +ದಿನಾಲು ಕಟ್ಟೆ ಮೇಲೆ ಹವಾ ತಕ್ಕೊಕೆ ಬರ್ತಿದ್ರು. +ಅಪ್ಪ, ಅವಿಯೆಲ್ಲ ಶೋಬನ ತಯಾರಿ ಮಾಡಿದರು. +ರಾಜನ ಹುಡಗ, ‘‘ಮಂತ್ರಿ ಹುಡಗನದು ನನ್ನದು ಎರಡೂ ಒಂದೇ ಸಲ ಶೋಬನವಾಗಬೇಕು’’ ಅಂದ. +ಮಂತ್ರಿ ಹುಡ್ಗಗೆ ಹೆಣ್ತಿಗೆ ಪ್ರಾಯ ಮುಟ್ಟಲಿಲ್ಲಾಗಿತ್ತು. +ಆವಾಗೆ ಅವನಪ್ಪ ರಾಜ ಎಲ್ಲಾ ಶೋಬನ ಮಾಡೂದು ಬಂದು ಮಾಡಿದರು. +ರಾಜನ ಹುಡ್ಗನ ಹೆಣ್ತಿ ಮನಸ್ಸು ಸಣ್ಣ ಮಾಡ್ಕಂಡ್ತು. +ಆವಾಗ ಅಜ್ಜಿ ಮುದ್ಕಿ ದಿನಾಲು ಹೂಗಿನ ದಂಡೆ ರಾಜನ ಮನೆಗೆ ಹುಡಗಿಗೆ ತಂದು ಕೊಡತಿತ್ತು. +ಆ ದಿವಸ ಹೂಗಿನ ದಂಡೆ ತಂದ್ಕೂಡ್ಲೆ ಅದರ ಮೊಕ ಯೆಲ್ಲಾ ಬಾಡಿದ್ದ ನೋಡ್ತು. +ಆವಾಗ ಅಜ್ಜಿಮುದ್ಕಿ ಕೇಳು, ‘‘ಇವತ್ತು ನಿನ್ ಮೊಕ ಎಲ್ಲಾ ಬಾಡ್ಕಂಡದೆ.’’ +ಆವಾಗ ರಾಜಕುಮಾರನ ಹೆಂಡ್ತಿ ಹೇಳಿತು, ‘‘ನನ್ನ ಶೋಬನವಾಗಲಿಲ್ಲ. +ಮಂತ್ರಿ ಹುಡ್ಗನ ಹೆಂಡ್ತಿಗೂ ಪ್ರಾಯ ಬರಲಿಲ್ಲ. +ನನ್ನ ಬಾಳ್ವೆ ಹೀಗಾಯ್ತು’’ ಅಂತು. +ಅಜ್ಜಿ ಮುದ್ಕಿ, ‘‘ನಾ ಮಾಡ್ಸಿ ಹಾಕ್ತೆ. +ಹೆದ್ರಬೇಡ’’ ಅಂತು. +ಆವಾಗ ಅಜ್ಜಿಮುದ್ಕಿ ಮನೆಗೆ ಹೋಯ್ತು. +ಮಂತ್ರಿ ಹುಡ್ಗ ರಾಜನ ಹುಡಗ ಎರಡೂ ಜನ ಕುದ್ರೆ ಮೇನೆ ಕುಂತ್ಕಂಡಿ ತಿರ್ಗುಕ್ಹೋಗಿದ್ರು. +ಆ ಅಜ್ಜಿ ಮುದ್ಕಿ ಮನೆ ಹಾದಿಂದೇ ಬಂದ್ರು ಎರಡು ಜನ ಕುದ್ರೆ ಹತ್ತಿ. +ಆವಾಗ ಆ ಅಜ್ಜಿಮುದ್ಕಿ ಮಂತ್ರಿ ಹುಡ್ಗನ ಕೈಲಿ, ‘‘ಬಾ’’ ಹೇಳ್ತು. +ಮಂತ್ರಿ ಹುಡ್ಗನ ಬೆನ್ನಿಗೇ ರಾಜನ ಹುಡ್ಗ ಹೋಗೂಕ್ ಹಣ್ಕದ. +ಅಜ್ಜಿ ಮುದ್ಕಿ, ‘‘ಅಲ್ಲೇ ಉಳಿ. +ಮಂತ್ರಿ ಹುಡ್ಗ ಮಾತ್ರ ಬರಲಿ’’ ಹೇಳ್ತು. +ಅಲ್ಲೋಕಂಡ್ ಮಂತ್ರಿ ಹುಡ್ಗ ಕೇಳ್ದ. +‘‘ಯಂತಕ್ಕೆ ತನ್ಗೆ ಬಾ ಹೇಳದ್ದು?’’ ಕೇಳ್ದ. +ಆವಾಗ ಮುದ್ಕಿ ಹೇಳ್ತು- ‘‘ಅಕ್ಕಿ ಸೊಲದ್ರೆ ಬತ್ತ, ಬತ್ತ ಸೊಲಿದರೆ ಅಕ್ಕಿ’’ ಹೇಳ್ತು. +ಹಾಗೇಯ ಬಂದ ಅವ. +‘ಇದ್ಕೇಯಾ ತನ್ಗೆ ಕೇಳ್ತು ಹೇಳಿ’, ರಾಜನ ಹುಡ್ಗ ಮಂತ್ರಿ ಹುಡ್ಗನ ಕರೆದ, ‘‘ಯೆಂತಕ್ ಕರದಳು?’’ +ಹೇಳಿ, ‘‘ಅಕ್ಕಿ ಸೊಲಿದರೆ ಬತ್ತ, ಬತ್ತ ಸೊಲಿದರೆ ಅಕ್ಕಿ. . ಹೇಳ್ತು. ’’ +‘‘ಅದಲ್ವೇ ಅಲ್ಲ. +ಬೇರೇದೇ ಯೇನೋ ಹೇಳಿರ್ಬೇಕು ಮುದ್ಕಿ.’’ +‘‘ಇಲ್ಲ ಅದೇಯ ಹೇಳದ್ದು, ಬೇರೆಯೇನಿಲ್ಲ.’’ +ರಾಜನ ಹುಡ್ಗ ಹೇಳ್ದ, ‘‘ನಿನ್ ಜೋಸ್ತಿ ಇವತ್ತಿಂದ್ ಬಿಟ್ ಬಿಡ್ತೆ ನೀನು ಖರೆ ಹೇಳೂದಿಲ್ಲ. +ಸುಳ್ಳೇ ಹೇಳ್ತೆ’’ ಹೇಳ್ದ. +ಮನೆಗೆ ಹೋದವ ಸುಮ್ನೆ ಮುಸ್ಕ ಹಾಕಂಡ್ ಮನ್ಗಬಿಟ್ಟ ರಾಜನ ಹುಡಗ. +ಮಂತ್ರಿಗೆ ಹೆದರತಿದ್ದ ರಾಜನ ಹುಡ್ಗ. +ಆವಾಗ ಅಪ್ಪ ಅವಿ ಉಂಬೂಕೆ ಯೇಳ್ಸಿದ ಕೂಡ್ಲೆ ರಾಜನ ಹುಡ್ಗ ಹೇಳ್ದ. +‘‘ಮಂತ್ರಿ ಹುಡ್ಗನ ರಕ್ತ ತಂದ್ ತೋರ್ಸದರೆ ಮಾತ್ರ ತಾ ಉಣ್ತೆ. +ಇಲ್ಲಾದ್ರಿಲ್ಲ’’ ಹೇಳ್ದ. +ಮಂತ್ರಿಗೆ ಹೇಳಿ ಕಳಿಸಿದ ರಾಜ. +ಆವಾಗ ಮಂತ್ರಿ ಬಂದ್ಕಂಡ್, ‘‘ಯೆಂತಕೆ ಊಟ ಮಾಡುದಿಲ್ಲ?’’ ಕೇಳ್ದ. +‘‘ನಿನ್ನ ಹುಡಗನಿಗೆ ಈಗಿಂದೀಗ ಕೊಂದು, ರಕ್ತತಂದ್ ತೊರ್ಸದರೆ ಮಾತ್ರ ಉಣ್ತೆ. +ಇಲ್ಲಾದ್ರಿಲ್ಲ’’ ಹೇಳ್ದ. +‘‘ನಿನಗೆ ಮಂತ್ರಿ ಹುಡುಗನಿಗೆ ಯೆಂತಾ ಆಯ್ತೋ?’’ ಕೇಳ್ದ ಅಪ್ಪ. +‘‘ಯೆಂತಾ ಆದ್ರೂ ಆಯ್ತು. +ಮತ್ತದ್ರ ಕೇಳ್ ಪ್ರಯೋಜನವಿಲ್ಲ.’’ +ಅವನಿಗೆ ಮನೆಯೊಳಗೆ ಹುಗ್ಸಿಟ್ಟಿ ಬೆಟ್ಟ ಹೊನ್ನೆಮರನ ರಕ್ತತಂದ್ ತೊರ್ಸದ. +ಹಾಗೆಯೇ ಮನೆಕೂಡೆ ಉಳ್ದ ರಾಜನ ಹುಡುಗ. +ಅಪ್ಪ ಅವಿಕೈಲ್ಯೆಲ್ಲಾವ, ‘‘ಬೇಜಾರ ಬರೂಕೆ ಹಣಕತು.’’ ಹೇಳ್ ಹೇಳ್ದ. +ಹಾಗಾರೆ ಅವಿ ಹೇಳ್ತು, ‘‘ನೀ ಶೋಬ್ನಾಯ್ಕಂಡೆ ಹಿಂಡ್ತಿ ಕೂಡೆ ಮಾತಾಡ್ಕಂಡ್ ಉಳಿ.’’ + ‘‘ಇವತ್ತೇ ಶೋಬನ ಮಾಡಬೇಕು’’ ಹೇಳ್ ಹೇಳ್ದ. +ಅದೇ ದಿವ್ಸ ಶೋಬನ ಮಾಡಿದರು. +ಹಾಗೇ ಒಂದೆರಡು ದಿವ್ಸ ಹೆಂಡ್ತಿ ಕೈಲ್ ಮಾತಾಡ್ತೆ ಕುಂತ. +ಹಾಗೇ ಮತ್ತೂ ಬೇಜಾರ್ ಬರೂಕೆ ಹಣ್ಕತು. +ರಾಜ ಇವನಿಗೆ ಮತ್ತೆ ಬೇಲೆ ಮೇಲ್ ಹೋಕಂಡ್ ಮತ್ತೊಂದ್ ಕಟ್ಟೆ ಕಟ್ಸಿದ. +ಆವಾಗ ಕಟ್ಟೆ ಮೇಲ್ ಹೋಗ್ ದಿನಾಲು ಹವಾ ತಕ್ಕೊಳ್ಳುಕೆ ಕುಂತ. +ಆವಾಗೊಂದು ತಾವ್ರ ಧ್ವಜ ಹೇಳು ರಾಜನ ಹುಡ್ಗಿ ಬಂತು. +ದೋಣಿ ತಕಂಡ್ ಬಂತು. +ಕಟ್ಟೆ ಬುಡ್ಕೆ ಬಂದ್ಕಂಡಿ ಮೂರ್ ಒಲೆಗುಂಡ ಹೂಡ್ತು. +ಒಂದು ತಾಮ್ರದ ತಪ್ಪಲೇಲಿ ನೀರ ತಂದ್ ಇರ್ಸಿತು ಒಲೆ ಮೇಲೆ. +ಕಡೆಗದು ಸಮುದ್ರದಲ್ಲಿ ಕೆಳಮೊಕಾಕಂಡಿ ಇಳ್ಯೆ ಪಟ್ಟಿ ಬಿಟ್ತು. +ರಾಜನ ಹುಡ್ಗನಿಗೆ ಯಂತದೆಂದೂ ತಿಳಿಲಿಲ್ಲ. +ಹಾಗೇಯ ಮತ್ತೂ ಮನೆಗೋದ. +ಹಾಗೇಯ ಉಂಬೂಕೆ ಯೇಳ್ಸಿದ ಕೂಡ್ಲೆಯ ಊಟಾ ಮಾಡೂಕೆ ಯೇಳ್ಳಿಲ್ಲ. +‘‘ನಾ ಉಂಬೂದಿಲ್ಲ’’ ಹೇಳ್ದ. +‘‘ಯೆಂತ ಉಂಬೂದಿಲ್ವೊ?’’ ಕೇಳದ್ರು ಅಪ್ಪ, ಅವಿ. +‘‘ತನ್ಗೆ ಮಂತ್ರಿ ಹುಡ್ಗನ ಈಗಿಂದೀಗ ತಂದ್ ಕೊಡಬೇಕು’’ ಹೇಳ್ದ. +ಆವಾಗ ಮಂತ್ರಿನ್ ಹೇಳ್ ಕಳಿಸದ್ರು. +ಮಂತ್ರಿ ಬಂದ್ಕಂಡಿ ‘‘ಯೆಂತಾ ಆಯ್ತು?’’ ಹೇಳ್ ಕೇಳ್ದ ರಾಜ್ನ ಹತ್ರ. +“ಯೇ ನಿನ್ನ, ‘ತನಗೆ ನಿನ್ನ ಹುಡ್ಗನ ಈಗಿಂದೀಗ ತಂದ್ ಕೊಡಬೇಕು’ ಹೇಳ್ದ.” +“ಹಂಗಾರೆ ಆವಾಗ ಕೊಂದ ಹಾಕು ಹೇಳ್ದವ ನೀನೇಯ, ಈಗ ಕೊಂದಾಕದ ಮೇನೆ ಬತ್ನೂ ಅವ?” ಕೇಳ್ದ. +‘‘ಆವಾಗ ತಾ ಶಿಟ್ ಬಂದ್ ಹೇಳಿದ್ದೆ. +ಆದ್ರೆ ಈಗ ತಂದ್ ಕೊಡಬೇಕು.’’ +ಮಂತ್ರಿ ಹೇಳ್ದ, ‘‘ಕೆರೆ ಬುಡ್ಕ ನೀ ಹೋಕಂಡಿ, ಕುರ್ಚಿ ಹಾಕ್ಕಂಡಿ ಮೂರ್ ಸಲ ಕರಿ ನೀನು’’ ಹೇಳ್ದ. +ಹಾಗೇಯ ಕುರ್ಚಿಹಾಕ್ಕಂಡ್ ಮೂರಸಲ ಕರ್ದ. +ಆವಾಗ ಅವ ಕೆರೆ ಬದಿಂದ ಬಂದ ಅಲ್ಲಿ. +ಬಂದ್ಕಂಡ್, ‘‘ತನ್ನ ಕರ್ದದ್ಯೆಂತಕೆ?’’ ಕೇಳ್ ಕೇಳ್ದ. +‘‘ನಿನ್ನ ಕರದ್ದಕ್ಕೆ ಮೂರ್ ಮಾತು ನಿನ್ಕೈಲ್ ಮಾತಾಡ್ಬೇಕು ಹೇಳಿ ಬಂದಿದ್ದೆ.’’ +‘‘ನಾನ್ ದೇವಲೋಕದಲ್ ದೊಡ್ಡ ಮಂತ್ರಿ. +ತಾನ್ ಹೇಳ್ತೆ ನೀ ಕುಳ್ಳು’’ ಹೇಳ್ದ ಮಂತ್ರಿ ಹುಡ್ಗ ರಾಜನ ಹುಡ್ಗನ ಕೈಲಿ. +ಹಾಗೆಯೇ ರಾಜನ ಹುಡ್ಗ ಹೇಳ್ದ, ‘‘ಒಂದ್ ಹುಡಗಿ ಮೂರ್ ಒಲೆ ಗುಂಡು ಹೂಡಿ ತಾಮ್ರದ ತಪ್ಲಿ ಇಟ್ ವೀಳ್ಯದ್ ಪಟ್ಟಿ ಸಮುದ್ರದಲ್ಲಿ ಬಿಟ್ ಹೋಗದೆ ಕೆಳಮೊಕಾಗಿ.’’ +ಆವಾಗ ಮಂತ್ರಿ ಹುಡುಗ ಹೇಳ್ದ. +‘‘ಆ ತಪ್ಲೇಲ್ ನೀರು ತಂದಿಟ್ಟದ್ದು ತಾಮ್ರಧ್ವಜ ಹೇಳು ರಾಜನ ಹುಡ್ಗಿ ಅದು. +ವೀಳ್ಯೆಪಟ್ಟಿ ಬಿಟ್ ಹೋದಾಗೇ ನಿನ್ಕೈಲ್ ಬಾ ಹೇಳದೆ.’’ +ಹಾಗೇಯ ವಂದ್ ದೋಣಿ ತಕ್ಕಂಡಿ ಎರಡೂ ಜನ ಹೋದ್ರು. +ಹೋದ್ಕೊಡ್ಲೆಯ ಒಂದು ಅಜ್ಜಿ ಮುದ್ಕಿ ಮನೇಲ್ ಉಳದ್ರು. +ಅಜ್ಜಿ ಮುದ್ಕಿ ಹೂಗಿನ ದಂಡೆ ಮಾಡ್ಕಂಡು ದಿನಾಲು ತಕ್ಕಂಡ್ ಹೋಗ್ ಕೊಡತಿತ್ತು ಹುಡಗೀಗೆ. +ಮರುದಿವಸ ಮಂತ್ರಿ ಹುಡುಗ ಇವನೇ ಹೂಗಿನ ದಂಡೆ ಮಾಡಿದ. +ಆವಾಗ ಅಜ್ಜಿ ಮುದ್ಕಿ ಕೈಲ್ ಕೊಟ್ಟ ಕಳ್ಸದ. +ಆವಾಗ ಅದು ಹೂಗಿನ ದಂಡೆ ತಕಂಡ್ ಹೋಗ್ ಕೊಟ್ ಕೂಡ್ಲೆಯ ಹುಡುಗಿ ಯೆಂತಾ ಹೇಳ್ತು ಅಂತಂದ್ರೆ, ‘‘ಅಜ್ಜಿ ಈ ಹೂಗಿನ ದಂಡೆ ಇವತ್ ಕಟ್ದದೊರ್ಯಾರು?’’ ಹೇಳ್ ಕೇಳ್ತು. +‘‘ಚಲೋದಂಡೆ. ’’ +‘‘ಯಾರಿಲ್ಲ - ನಮ್ಮನೆಲ್ ದೊಡ್ ಮೊಮ್ಮಗಳ್ ಬಂದದೆ ಅದು ಕಟ್ಕೊಟ್ಟಿತ್ತು’’ ಅಂತು. +ಹಾಗೇಯ ಹುಡ್ಗಿ, ‘‘ನಾಳೆ ಬರ್ಬೇಕಾರೆ ನಿನ್ ಮೊಮ್ಮಗ್ಳಿಗೆ ಕರ್ಕಂಬಾ’’ ಹೇಳ್ತು. +ಮರುದಿವ್ಸ ಹೂಗಿನ ದಂಡೆ ಕಟ್ದ ಇವನೇಯ ಹೂಗಿನ ದಂಡೆ ಒಳಗೆ ಒಂದ್ ಚೀಟಿ ಬರದ. +‘ಒಂದು ಪಲಕು ಮತ್ತು ಒಂದು ಶೀರೆ ಕೊಟ್ಕಳ್ಸು’ ಹೇಳಿ. +ಅಜ್ಜಿ ತಕಂಡ್ ಹೋಗ್ ಕೊಟ್ತು. +ಹಾಗೇ ಅದು ಮುಡಿಬೇಕಾರೆ ಚೀಟಿ ಶಿಕ್ತು. +ಚೀಟಿ ಒದ್ ನೋಡ್ಕಂಡಿ ಪಲ್ಕು ಶೀರೆ ಕೊಟ್ಕಳ್ಸ್ತು ಅಜ್ಜಿ ಮುದ್ಕಿಕೈಲಿ. +ರಾಜನ ಹುಡಗನಿಗೆ ಪಲ್ಕು ಸೀರೆ ಉಡ್ಸಿ ಅಜ್ಜಿಮುದ್ಕಿ ಬೆನ್ನೀಗೆ ಕಳಿಸಿಕೊಟ್ಟ, ರಾಜನ ಹುಡ್ಗಿದಲ್ಲಿ. +ರಾಜನ ಹುಡ್ಗನ ಕೈಲಿ, ‘‘ರಾತ್ರೆ ನುಗ್ಲ ಬಿಡ್ತೆ ಆ ನುಗ್ಲ ಯೇಣಿ ಹತ್ತಿ ಅರಮನೆಗೆ ಬಾ’’ ಅಂತು. +ಮರುದಿವಸ ಹೂಗಿನ ದಂಡೆ ಕೊಟ್ ಬರ್ವಲ್ಲಿವರೆಗೆ ಇವರದು ಅಡ್ಗಿ ಬಿಡ್ಗಿಯೆಲ್ಲಾ ಆಗ್ಹೋಗದೆ. +ಮರದಿವಸ ರಾತ್ರೆ ಹೋಗ್ತೆ ಬತ್ತೆ ಉಳ್ದ ರಾಜನ ಹುಡಗ. +ಹಾಗೇಯ ಹುಡಗಿ ಸೋದರ ಮಾವನಿಗೆ ಸೂಟಿ ಬಿತ್ತು. +ಹಾಗೇಯ ಅವ ಬಂದ. +ಅಕ್ಕನ ಕೈಲಿ ಬಾವನ ಕೈಲಿ ಯೆಲ್ಲಾ ಹೇಳ್ದ. +‘ಹೀಗೀಗಾಯ್ತದೆ’ ಹೇಳಿ. +ಆವಾಗೆ ಆ ದಿವಸ ಕಾದುಕೊಂಡೆ ಕುಂತ್ರು. +ಆ ದಿವಸ ಎರಡು ಜನರಿಗೆ ಹಿಡಿದರು. +ಹಿಡ್ದಿ ಮನೆ ಒಳಗೊಂದು ಕತ್ಲೆ ಕೋಣಿತ್ತು. +ಕೋಣೆಯೊಳಗೆ ದೇವರ ಮನೆಯಿತ್ತು. +ಆ ಕೋಣೇಲ್ ತಂದ್ ಹಾಕಿಟ್ರು ಯರ್ಡೂಜನ್ರಿಗೂವ. +ಮರುದಿವಸ ಮಂತ್ರಿ ಹುಡಗನಿಗೆ ತೆಳಿತು. +ಎರಡೂ ಜನರ ಹಿಡ್ದು ಕೋಣೆಲಿ ಹಾಕಿಟ್ಟಿರು ಹೇಳಿ. +ಆವಾಗೆ ಮರುದಿವ್ಸ ಇಡೀ ಊರೆಲ್ಲ ಡಂಗ್ರ ಹೊಡೆದರು. +ಮನೆಗೊಬ್ಬೊಬ್ಬರು ಬರಬೇಕು ಹೇಳಿ ಡಂಗ್ರ ಹೊಡದಾನ್ ಹೇಳಿ. +ಈ ಮಂತ್ರಿ ಹುಡ್ಗ ಹೆಣ್ ಡ್ರೆಸ್ ಮಾಡ್ಕಂಬಂದ. +ಆ ಅಜ್ಜಿಮುದ್ಕಿ ಕೈಲಿ ಬಾಳೆಕೊನೆ, ಕಾಯಿ, ಕರ್ಪೂರಯೆಲ್ಲ ಕೊಟ್ಟ ಮುಟ್ಟಿಲ್ಹಾಕಿ ರಾಜನ ಮನೆಕೂಡ ಬಂದ್ರು. +ರಾಜನ ಕೈಲಿ ಹೇಳಿದರು. +‘‘ಮೊಮ್ಮಗ ಗಟ್ಟಕ್ಕೋದವ ಬಂದನೆ. +ಮತ್ತೆ ಒಂದ್ ಪೂಜೆ ಹೇಳ್ಕಂಡಿದ್ದೆ.’’ ರಾಜ ಹೇಳ್ದ. +‘‘ಇವತ್ ಪೂಜೆ ಕೊಡುಕಾಗುದಿಲ್ಲ’’ ಹೇಳ್ದ. +‘‘ಇಲ್ಲ, ಮೊಮ್ಮಗ್ಳಿಗೊಬ್ಳಿಗೆ ಒಳಗೆ ಬಿಟ್ತೆ.’’ +‘‘ಒಬ್ಬಳಿಗೆ ಹೆರಗೆ ಹಾಕಿ’’ ಹೇಳ್ತು ಅಜ್ಜಿ, ರಾಜ ಒಳಗೆ ಬಿಟ್ಟ ಹುಡಗೀಗೆ. +ಪೂಜೆ ಗೀಜೆ ಕೊಟ್ಟಾದ್ಕೂಡ್ಲೆ ಇವ ಹಾಕಿದ ಡ್ರೆಸ್ ರಾಜನ ಹುಡಗೀಗೆ ಕೊಟ್ರು. +ಬಾಳೆ ಕೊನೆ ಮುಟ್ಟಿಯಲ್ಲಾ ಹುಡುಗಿಕೈಲ್ ಕೊಟ್ ಕಳಿಸದ್ರು. +ಹೆರ್ಗೆ ಬಾಗಿಲ ಹಾಕಿದರು. +ಒಳಗಿದ್ದ ವಸ್ತ್ರ ಅಂಗಿ ಬಿಂಗಿ ಮಂತ್ರ ಶಕ್ತಿಂದ ಸುಟ್ ಬೂದಿ ಮಾಡಿಬಿಟ್ರು. +ಹಾಗೇಯ ಜನರೆಲ್ಲ ಬಂದ್ರು. +ಎರಡೂ ಜನರನ್ನು ಹೊರಗೆ ಹಾಕಿದ್ರು. +ಪಾರ್ಟು ತಕ್ಕಂಡ್ ಋಷಿಯಾಗಿ ಹೊರಗೆ ಬಿದ್ರು. +ರಾಜ ಕೇಳ್ದ ಪೋಲೀಸರೆಲ್ಲ ಹೇಳಿದರು, ‘‘ಹಾದಿಮೇಲ್ ಹೋಬೇಕಾರ್ ತಂದ ಹಾಕವ್ರೆ ಒಳ್ಗೆ’’ ಬಿಟ್ರು. +ಅಜ್ಜಿಮನೆಗೆ ಹೋದ್ರು ಅವ್ರು. +ಮರುದಿವಸ ಮಂತ್ರಿ ಹುಡ್ಗ ಅಜ್ಜಿಮುದ್ಕಿ ಡ್ರೆಸ್ ಮಾಡ್ಕಂಡ್. +ರಾಜನ ಹುಡ್ಗಗೆ ಹೆಣ್ ಹುಡ್ಗಿ ಡ್ರೆಸ್ ಮಾಡ್ದ. +ಕರ್ಕಂಡಿ ರಾಜನ ಮನೆಕಡೆ ಬಂದ. +ರಾಜನ ಕೈಲಿ ಮಂತ್ರಿ ಹುಡ್ಗ (ಅಜ್ಜಿವೇಷ) ಮೊಮ್ಮಗ ಗಟ್ಗೆ ಹೋಗನೆ. +ಮೊಮ್ಮಗಳು ಒಬ್ಳೇಯ. +ಮೊಮ್ಮಗಳ ನಿನ್ನ ಹುಡ್ಗಿದಲ್ಲಿ ಇಟ್‌ಹೊಗ್ತೆ ಅಂದ. +ರಾಜ, ‘‘ನಮ್ಮದೇನ ಅಡ್ಡಿಲ್ಲ. +ಹುಡ್ಗಿ ಅಡ್ಡಿಲ್ಲ ಹೇಳಿದರೆ ಅಡ್ಡಿಲ್ಲ’’ ಅಂದ. +ಹುಡ್ಗಿ ಕೇಳ್ಕಂಡ್ ಬಂದ, ‘‘ಹುಡ್ಗಿ ಇಲ್ಲೇ ಇಟ್ ಹೋಗ್ತೆ’’ ಅಂದ. +ಹಾಗೇ ಬಿಟ್ಟಾಕ ಬಂದ. +ಮತ್ತೆ ಹುಡಗಿ ಮಾವ ಬಂದಿದ್ದ. +ಅಕ್ಕ-ಬಾವ ಮಾತಾಡ್ಕಂಡು ಹೇಳಿದರು. +‘‘ಹುಡ್ಗಿದಲ್ಲಿ ಅಜ್ಜಿ ಹುಡ್ಗಿ ತಂದಿಟ್ಟಿ ಹೋಗದೆ’’ ಹೇಳಿ. +ಅವ ಹೋದ ಮೆತ್ತಿನಮೇನೆ. +ಹಾಗೇಯ ಅಲ್ಲೇ ಮಾತಾಡ್ತೆ ಅಲ್ಲೆ ಮನಿಕಂಡ ಹುಡ್ಗಿ ಮಾವ. +ಮೆತ್ತಿನ ಮೇಲೆ ಮಾವನ ಬುಡ್ಕೆ ಮನಿಕಂಡ್ತು ಆ ಹುಡ್ಗಿ. +ರಾಜನ ಹುಡಗ (ಹೆಣ್ಣು) ಇಚೆ ಮನಗಿದ. +ರಾತ್ರಿಕೂಡೆ ರಾಜನ ಹುಡ್ಗನ ಮಾವನ ಬದಿಗೆ ಹಾಕ್ತು. +ಹಾಗೇ ಮೈಮುಟ್ದ ಹೇಳ್ ಆಯ್ತು. +‘‘ಅಕ್ಕನ ಹುಡಗಿ ಮಾವ ಮೈಮುಟ್ದ’’ ಹೇಳ್ ಬೊಬ್ಬ ಹೊಡಿತು. +ಮೆತ್ತಿನ ಮೇಲೊಂದು ಗಂಡಿತ್ತಂತೆ. +ಗಂಡಿಲ್ ಬೊಬ್ಬೆಕೊಟ್ ಕೂಡ್ಲೆ ಹಾರಿಬಿಟ್ಟನಂತೆ ಮಾವ. +ಯಲ್ಗು ಪುಡಿಪುಡಿಯಾಯ್ತು. +ರಾಜನ ಹುಡ್ಗನಿಗೆ ಅಜ್ಜಿ ಮನೆಗೆ ಕಳಿಸದಳು. +ಬೆಳ್ಗಾದ್‌ಕೂಡ್ಲೆ ಅಪ್ಪನ ಕೈಲ್ ಹೇಳ್ತು. +‘‘ಹೀಗೀಗೆ ಮಾಡ್ಕಂಡು ಬೊಬ್ಬೆ ಮಾವ ಹಾಕುತ್ಲೂ ಕಿಡ್ಕಿಗಂಡಿಲ್ ಹಾರ್ಕಂಡಿ ಸತ್ಕಂಡನೆ ಹುಡ್ಗಿ ಯೆಲ್ಹೋಯ್ತು ಹೇಳಿ ಪತ್ತಿಲ್ಲ’’ ಅಂತು. +ಮರುದಿವಸ ಮಂತ್ರಿ ಹುಡ್ಗ ಅಜ್ಜಿ ಡ್ರೆಸ್ ಮಾಡ್ಕಂಬಂದ. +ರಾಜನ ಕೈಲಿ ‘‘ಮೊಮ್ಮಗ ಬಂದ. +ಮೊಮ್ಮಗಳಿಗೆ ಕರ್ಕಂಡ್ ಹೋಗ್ತೆ’’ ಹೇಳ್ತು. +ಹೇಳದ್ರ ರಾಜ ಹೇಳ್ದ, ‘‘ನಿನ್ನ ಮೊಮ್ಮಗಳು ಎಲ್ಲಿ ಓಡ್ಹೋಗದೆ ಪತ್ತಿಲ್ಲ’’ ಹೇಳ್ದ. +‘‘ಯೆಂತಾಮಾಡೂದು’’ ಕೇಳ್ದ. +ಇಲ್ಲಾಂದ್ಕೂಡ್ಲೆ ಅಜ್ಜಿಮುದ್ಕಿ ತೀಡೂಕೆ ಹಣ್ಕಬಿಡ್ತು. +ರಾಜ ಹೇಳ್ದ, ‘‘ನೀನು ತೀಡೂದೆ ಬೇಡ. +ತನ್ ಹುಡ್ಗಿನೇ ಕೊಡ್ತೆ ತಕಂಡ್ ಹೋಗು’’ ಹೇಳ್ದ. +ಅಜ್ಜಿಮುದ್ಕಿ ಬೆನ್ನಿಗೆ ಕಳಿಸಿಕೊಟ್ಟ. +ಕರ್ಕಬಂತು ಮನೆಗೆ. +ರಾಜನ ಹುಡ್ಗ ಮನೆಗೆ ಕರ್ಕಂಡ ಹೋದ. +ಮದಿಯಾಗಿ ಇಬ್ರ ಹೆಂಡ್ರ ಜೊತೆನೂ ಸುಖ-ಸಂತೋಶ್ದಲ್ಲಿ ವಳ್ದ. +ವಂದೂರ್ನಲ್ಲಿ ವಂದ್ ಅಜ್ಜಿರ್ತದೆ. +ಅಜ್ಜಿಗೆ ಯಾರೂ ಇರಲ್ಲ. +ವಬ್ಬಳೇಯ.. ಹೀಗೆ ಇರಬೇಕಾದ್ರೆ ವಂದಿವ್ಸ ಅನ್ನಬಾಗಿಸ್ತಾ ಇರಬೇಕಾದ್ರೆ ತಿಳಿ ಕೈಮೇನ್ ಬಿದ್ಬಿಡ್ತದೆ. +ಅದ್ ಕೈಮೇಲ್ ಗುಳ್ಯಾಗಿ ನಾಕೈದ್ ದಿನದ ಮೇಲೆ ವಡಿತದೆ. +ಆ ಗುಳ್ಳೆ ವಡ್ದ್ ನಂತ್ರ ಅದರೊಳಗೊಬ್ಬ ಚೋಟಣ್ಣ ಹುಟ್ತಾನೆ. +ಚೋಟಣ್ಣ ದೊಡ್ಡಾದ. +ಹೀಗೆ ವಂದಿವ್ಸ ಕಡಿಗೆ, ‘‘ಸೌದಿ ತಕಂಡ್ ಬರ್ತೇನೆ’’ ಅಂತ ಹೋಗ್ತಾ. +ಹೋಗ್ ವಂದ್ ಮರ ಹತ್ಕಂಡು ಸೌದಿ ಕಡಿತ್ ಇರಬೇಕಾರೆ ನಾಲ್ಕ್ ಜನ ಕಳ್ಳರು ಬರ್ತಾರೆ. +ಅವ್ರು ಬಂದವ್ರು ಇವ ಹತ್‌ದ ಮರದ ಕೆಳಗೇ ಕೂತಿರ್ತಾರೆ. +ಇವ ವಂದ್ ಯೆಲಿ ಮರಿಗೆ ಕೂತ್ಕಂಡಿರ್ತಾನೆ. +ಈ ಕಳ್ಳರು ತಾವ್ ತಂದ ಬಂಗಾರ, ದುಡ್ಡು ಯೆಲ್ಲಾ ಪಾಲ್ ಹಂಚ್ಕೊಳ್ಲಿಕ್ ಸುರುಮಾಡ್ತಾರೆ. +ಯೆಲ್ಲಾ ಸರಿ ನಾಲ್ಕ್ ಪಾಲ್ ಹಾಕಂತೇ ಇರಬೇಕಾರೆ, ‘ಪೊಲೀಸ್ ಪೊಲೀಸ್’ ಹೇಳ್ ಕೂಗ್ ಬಿಡ್ತಾನೆ. +ಕಳ್ಳರಷ್ಟೂ ಬಿಟ್ ಹಾಕ್ ವೊಡ್ಬಿಡ್ತಾರೆ. +ಇವ ಮರದಿಂದ ಕೆಳಗಿಳ್ದು ಆದಷ್ಟು ಕಟ್ಕಂಡ್ ಮನೆಗೆ ಬರ್ತಾನೆ. +ಹೀಗೇ ಇರಬೇಕಾದ್ರೆ. +ಅಜ್ಜಿ ಮನೆಲ್ ವಂದಿವ್ಸ ತುಳಿಸಿ ಹುಣ್ಣಿಮಿ ಪೂಜೆ. +ಯೆಲ್ಲಾ ಸಾಮಾನ ತಂದಿರ್ತಾರೆ. +ಬಾಳೆ ಹಣ್ ವಂದ್ ತಂದಿರೋಲ್ಲ. +ಆವಾಗ್ ಇವಂಗ್ ಪೂಜಿಗ್ ಬಾಳೆ ಹಣ್ ಬೇಕಾಯ್ತು. +ಅಂಗಡಿಗೆ ಹೋಗ್ತಾನೆ. +ಅಂಗಡಿ ಬಾಗ್ಲೆಲ್ಲಾ ಹಾಕಿರ್ತದೆ. +ಆವಾಗ ವಂದ್ ಸಣ್ಣ ಸಂದಿರ್ತದ. +ಅದ್ರೊಳ್ಗೆ ಇವ ವಳ್ಗೆ ಹೊಕ್ತಾನೆ. +ಹೊಕ್ ಬಾಳಿಹಣ್ ತಕಂಡ್ ಬರ್ತಾನೆ ಮನಿಗೆ. +ಇವ ಮಾರ್ನೆ ದಿವ್ಸ ಅಷ್ಟೇ ಹೊತ್ತಿಗೆ ಬಾಳೇ ಹಣ್ ತಿನ್ನೂ ಆಶ್ಯಾಗಿ ಅಂಗ್ಡಿಗ್ ಹೋಗ್ ಬಾಳಿಹಣ್ ಯೆಲ್ಲಾ ತಿಂದ್ ಅಲ್ಲೇ ಶಿಪ್ಪಿ ಹಾಕ್ ಬಂದ್ಬಿಡ್ತಾನೆ. +ಶೆಟ್ಟಿ ಬೆಳಿಗ್ಗೆ ಬಂದ್ ಬಾಗ್ಲ ತೆಗ್ದ ನೋಡ್ವಾಗ ಹಣ್ಣಿಲ್ಲಾ. +‘ಬಾಗ್ಲೆಲ್ಲಾ ಹಾಕ್ದಹಾಗೇ ಉಂಟು, ಬಾಳೇಹಣ್ ಯೆಲ್ಲಾ ತಿಂದ್‌ಹಾಕ್ ಹಾಕಿಬಿಟ್ಟಿದಾರೆ. +ಯಾವದೋ ವಂದ್ ಕಳ್‌ಬರ್ತಾನೆ. +ಇವತ್ ರಾತ್ರಿ ಅವ್ನ ಹಿಡೀಲೇ ಬೇಕು’ ಅಂತ ಹೇಳಿ, ಆ ದಿವ್ಸ ರಾತ್ರಿ ಅಂಗಡೀಲೇ ಕಾಯ್ತಾ ಇರ್ತಾನೆ. +ಈ ಚೋಟಣ್ಣ ದಿವಸಾ ಬರೋ ಹೊತ್ತಿಗೇ ಬಂದ. +ಬಂದವನೇ ವಳ್ಗ್ ಹೊಕ್ದ. +ಅಂಗ್ಡಿಯವ ನೋಡಿ ಅವನ ಹಿಡ್ದ್ ಬಿಡ್ತಾನೆ. +ಮಾರನೇ ದಿವಸ ಬೆಳಿಗ್ಗೆ, ‘ಇವನಿಗೆ ವಂದ್ ಶಿಕ್ಷಿ ಕೊಡಬೇಕಾಯ್ತು. +ಆವಾಗಿವ್ನಿಗೆ ಯಾವ ಶಿಕ್ಷಿ ಕೊಟ್ರೆ ಇವ ಸಾಯ್ತಾನಪ್ಪಾ?’ +ಅಂತ ಆಲೋಚ್ನೆ ಮಾಡಿ, ‘ಬಾವೀಲ್ ಹಾಕ್ಬೇಕಿವನ’ ಅಂತ ಹೇಳಿ ವಂದ್ ಬುಟ್ಟಿಗ್ ವಂದ ಹಗ್ಗಕಟ್ಟಿ, ಇವನ ಬುಟ್ಟಿ ವಳಗೆ ಹಾಕಿ ಬಾವಿವಳ್ಗ್‌ಬಿಡ್ತಾನೆ. +ಇವ ಯೇನ್ ಮಾಡದ್ರೂ ಬುಟ್ಟಿ ಮುಳುಗೂದಿಲ್ಲ. +ಆವಾಗ ಶೆಟ್ಟಿ ಹತ್ರ ಹೇಳ್ತಾನೆ ಅವ ಬಾವಿ ವಳಗಿಂದೇಯ, “ನನ್ನ ಜತಿಗೆ ಬುಟ್ಟಿವಳ್ಗೆ ವಂದ್ ಕಲ್ಲೂ ಹಾಕಿದ್ರೆ ತಾನ್ ಮುಳ್ಗತಿದ್ದೆ. +ನಿನ್ಗೆ ಅಷ್ಟೂ ಬುದ್ದಿ ಗುತ್ತಿಲ್ಲ. +ಅದ್ರಿಂದ್ ಮೇಲೆ ತೆಗಿ, ವಂದ್ ಕಲ್ ಹಾಕಬಿಡು” ಅಂತ ಹೇಳಿ ಚೋಟಣ್ಣ ಹೇಳ್ತಾನೆ. +ಹೀಗೇ ಶೆಟ್ಟಿ ಬುಟ್ಟಿ ಮೇಲೆ ಯೆತ್ತ್‌ತಾನೆ. +ಮೇಲೆ ಕಟ್ಟಿ ಮೇಲಿಟ್ಕಂಡು ಬುಟ್ಟಿಲ್ ಹಾಕ್ಬೇಕಂದಿ ಕಲ್ ತರಲಿಕ್ ಹೋಗ್ತಾನೆ. +ಚೋಟಣ್ಣ ತಪ್ಸಕಂಡ್ ಮನಿಗೆ ವೋಡ್ ಪರಾರ್ಯಾಗ್ತಾನೆ. +ಆಗ ಶೆಟ್ಟಿ ಬಂದ್ ಬುಟ್ಟಿಲ್ ನೋಡ್ತಾನೆ. +ಚೋಟಣ್ಣಿಲ್ಲಾ ಯೆಂಟ್ ದಿವಸ ಮದ್ಗಕ್ಕೆ ನೂರಾರ್ ಜನ ವಟ್ಟಾಗಿ ಕೆಲ್ಸ ಮಾಡ್‌ದ್ರು. +ಆ ಮದ್ಗದಲ್ಲಿ ನೀರು ಸಂಪಾಯ್ತು. +ಇಲ್ ಬಂದ್ರು. +ಈ ಬಾವಿ ವಳ್ಗನ್ದ ಯೇಡಿ ಹೊತ್ ಮೇಲ್ ಹಾಕಂಡ್ರು. +ಬಳ್ಳಿ ಮುಂಡಿಲ್ ಕಟ್‌ಕಂಡಿ ಹತ್ ಹದ್ನೈದ್ ಜನ ಹೊತ್ರು ಅದ್ನ. +ಆಗ ತಕಂಡ್ ಹೋಗ್ ಮದಗದಲ್ ಬಿಟ್ರು. +ಅದ್ ಆ ಮದಗದಲ್ಲಿ ಆ ನೀರ್ನಲ್ ಆಡ್ಕಂಡ್ ಉಳಿತು. +ಉಳ್ವಟ್‌ರಲ್ಲಿ ಆಗ ಮತ್ ಯೆಯ್ಡ್ ವರ್ಸಾಯ್ತು. +ಯೆಯ್ಡ್ ವರ್ಸ ಆದ್ ನಂತ್ರ ಮತ್ ಬಂತು. +ಬಂದಿ ಅರಸೂಗೆ ಸಪ್ನದಲ್ಲಿ, ‘ತಂಗೆ ಸುಕಪಡ್ಸಿದ್ಯಲ್ವೋ ಮದಗ ತೋಡ್ಸ್ ಹಾಕು ಅಂದೆ. ತೋಡ್ಸಹಾಕ್ದೆ. ಈಗ ಈ ಕಟ್ಟ್ ನಿಮ್ಗ ಬೇಡ. +ನನ್ಗೂ ಬೇಡ. +ತನ್ನ ವಂದು ಕುದ್ಲ ರೋಮಕ್ ಪೆಟ್ಟಾಗ್ದೆಗಿದ್ದಂತೆ ವಳಿತೆ. +ಸಮುದ್ರದಲ್ ಹಾಕಬೇಕು. +ಸಮುದ್ರದಲ್ ಹಾಕ್ಬಿಟ್ರೆ ತಾನ್ ಆನಂದದಲ್ ಉಳಿತ್ನಪ್ಪಾ. +ಪದೇ ಪದೇ ಲಾಕಲ್ಲಾ ಇದು’ ಅಂತು. +ಆವಾಗೆ ಮದ್ಗದನ್ ತೆಗ್ದ್ ಮೇನ್ ಹಾಕೂದು ಬಾಳ ಕಟ್ಟಬಂತು. +ಅಂತೂ ಮದ್ಗದಲಿನ್ ಯೇಳ್ಸಿ ಹೊತ್ರು ಸಮುದ್ರಕೇ ನೂರ್ ಜನ ಹಿಡ್ಕಂಡಿ ಗುಂಪಲ್ ಹಾಕದ್ರು. +ಆಗ ಅದ್ಕೆ ಪ್ರಾಯ ಬಂತು ಹೇಳಾಯ್ತು. +ಪ್ರಾಯ ಬಂದ ನಂತ್ರ ಅರಸೂಮನಿಗೆ ಸಪ್ನದಲ್ ಬಂತು. +ಬಂದಿ ತನ್ಗೆ, ‘ಲಗ್ನಾಗಬೇಕು. +ಮತ್ ನನ್ಗ್ ವಂದ್ ಹೆಣ್ ತಕಂಡ್ ಹೋಗಿ ಇಂತಾ ಕಡ್ಗೆ ಚಪ್ಪರ ಹಾಕಿ ಆ ಹುಡ್ಗಿ ತಕಂಡೋಗಿ ಯೆಯ್ಡ ಬದಿ ಬಲ್ಕೆ ಯೆಡಕೆ ದೀಪ ಹಚ್ಚಿ ಚಪ್ಪರದಲಿ ಇರಸಬೇಕು. +ಅಷ್ಟ ಚೆನ್ನ ಯೇನದೆ ಹಾಕೂದ್ ಹಾಕಿ ಕುಳ್ಸ್ ಬಂದ್ ಬಿಡಬೇಕು’ ಅಂತು. +‘‘ಯೇ ದೇವರೆ’’ ಅಂದ ಅವನಿಗೆ ಕಮ್ಮಿಲ್ಲ. +ವಂದ ಮಾಭಾಗ್ಯ ರಾಜ್ಯಕ ಕರಿ ಕೊಟ್ ಕರ್ಸದ. +ಮತ್ತೆ ಇಂತಾ ಕಡ್ಗನ ಏಡಿ ಅದ್ಕೆ ಲಗ್ನ ಮಾಡಬೇಕು. +‘‘ತನಗೆ ಹೆಣ್ ತಕಂಡ್ ಹೋಗ್ ಕುಳ್ಸಿ ಯೇನ ಲಗ್ನದಲಿ ಮಾಡು ಉಚ್ಚವ ಮಾಡೋದದೆ, ಮಾಡಿ ತಕಂಡ್ ಹೋಗ್ ಕುಳ್ಸಬಿಡ್ಬೇಕು ಅಂತ ಮಾಡ್ಲಿಕ್ಕೇ ಬೇಕು’’ ಹೇಳ್ದ. +‘‘ಬೇರೆ ರಾಜಕ್ ಅರಸು ತಾನೇ ಹೋಗ್ತನೆ. +ನೀನೇ ಹೋಬೇಕು’’ ಹೇಳದೆ. +ಸತ್ತಿವಂತನಾದ್ದರಿಂದ ಕಷ್ಟ ಪಾರಾತದೆ. +ಅವನ್ಗೇ ಆವಾಗ್ ಅಲ್ಲಿ ಯೇಳ್ ಜನ ಹೆಣ್ ಹುಡಗೀರು, ಚಿಕ್ಕಪ್ಪದೇ ಅಧಿಕಾರ. +ತಂದೆ-ತಾಯಿ ಸತ್‌ಹೋಗ್ಬಿಟ್ಟರೆ ಇವನ್ದೇ ಅಧಿಕಾರ, ಮಾಡಿದ್ದೇ ಕರೆ ಅಲ್ಲವೋ? +‘‘ಯೇನ ಬಂದ್ರಿ? +ಯೇನತಾನ?’’ + ‘‘ಮತ್ಯೇನೆಲ್ಲ ವಂದ್ ಹೆಣ್ ತನ್ ಮಗನಿಗೇ ಬೇಕು’ ಹೇಳ್ತನೆ. +ಇವ, “ವಂದ್ ಹುಡ್ಗಿ ಕೊಡುಕಡ್ಡಿಲ್ಲ, ವಂದ್ ಲಕ್ಸ ರೂಪೈ ಕೊಡ್ಬೇಕು.” +ಅವನೂ ವಂದ ಅರಸುವೇಯ. +ಅವಂಗೆ ಇವಗೆ ವಡನಾಟ ಸುರುವಾಯ್ತು ಹೇಳಾಯ್ತು. +ಮತ್ ಹೋಗ್‌ಲಿಲ್ಲಾ ಅಟದೂರೆ. +ಕಡಿಗೆ ಹೆಣ್ ತಂದ. +ಲಕ್ಷ ರೂಪೈ ಕೊಟ್‌ತಂದ. +ಸಮುದ್ರದ ತಟ್ಗೇಯ ಚಪ್ರಹಾಕಿ, ಅಂತೂ ಮಂಚಗಿಂಚ್ ಇರ್ಸಿ ಹೆಣ್ ತಕಂಡ್ ಹೋಗಿ ಕುಳ್ಸಿ ಯೆಯ್ಡ್ ಬದಿಗೂ ನಂದಾದೀಪ ಹಚ್ಚಿ ರಾತ್ರಿ ಮೂರಸಂಜೀಲ ಇಟ್‌ಬಂದರು. +ಬಂದ ನಂತ್ರ ಬೆಳಗ್ಗೆಗೆ ಹೋಗ ನೋಡುವಾಗ ಯೆಂತದೂ ಇಲ್ಲ. +ನುಂಕಂಡ ನಡ್ದೆಬಿಟ್ತು. +ಅದು ಮದ್ದಾತ್ರಿ ವೇಳಿದಲ್ ಬರಬೇಕಾದ್ರೆ ಸಮುದ್ರದ ನೀರ ಬಕ್ಕಂಡ್ ಬತ್ತದೆ. +ನುಂಕಂಡ್‌ತ್ತು ನಡ್ದೆಬಿಟ್ತು. +ಅಲ್ಯೆನೂ ಇಲ್ಲ. +ಬೆಳ್ಗಾಮುಂಚೆ ಚಪ್ರ ವಂದದೆ, ದೇಪ ಇಟ್‌ದ್ರು, ದೀಪ ಕತ್‌ತ ಅದೆ. +ಬೆಳ್ಗಾಗೆ ಪೋಲೀಸ್ರ ಸೂರ್ಯ ಉದ್ಯಾದ ಮೇಲೆ ಕಳ್ಸ್‌ದ, ನೋಡ್ಕಂಡ್ ಬಂದ್ ಹೇಳ್ರು. +ಯೆಂಟ್ಹತ್ ಕೋವಿ, ಕತ್ತಿ, ಈಟಿ, ಬಾಚಿ. . . ಅವ್ರೆ ಆಯುದ ತಕಂಡ್ ನಡ್ದೆಬಿಟ್ರು ಆ ಹೆಣ್ಣಿಲ್ಲ. +ದೀಪ ಕತ್‌ತ ಅದೆ. +ಚಪ್ರವೊಂದೆ ಅದೆ. +ಬಂದ್ ತಾಪ್ಡತೋಪ್ಡ ಅರಸೂಗ್ ತೆಳಿಸಿದ್ರು. +ಅಟ್ಟೂ ಅದೇ, ಹೆಣ್ಣಿಲ್ಲ. +ಯೇನ್ ಮಾಡ್ದೆ? +ಕೇಳ್ವೋರೆಲ್ಲ ಅಂದ್ ಸೂಮ್ಗ ಉಳ್ಕಬಿಟ್ರು. +ನಂತ್ರ ಮತ್ತೆ. +ಯೆಯ್ಡನೆ ವರ್ಸ ಬಂತು. +ಸಪ್ನದಲ್ಲಿ ಹೇಳ್ತು, ‘ಹಿಂದ್ ಯಾವ ರೀತಿ ಮಾಡಿದ್ದೆ ಅದ್ರಂತೆ ಮತ್ ಮದ್ಯಾಗಬೇಕು. +ಅದೇ ರೀತಿಂದ ಮತ್ತೆ. +ಹೆಣ್ ತಕಬಂದಿ ಅಲ್ ತಕಂಡ್ ಹೋಗ ಕುಳ್ಸಬೇಕು. +ಜಾಗ್ರತೀಲ್ ಆಗಬೇಕು. +ಯಲ್ಲಾದ್ರೆ ನಿನ ರಾಜ್ಯಕ್ಕೆ ಕೇಡ ಬರೊದು’ ಅಂದ. +‘ಯೆಲ್ಲಾ ಕಾಲ್ವೆ ನಾನು ಇಟ್ಟೆಲ್ಲಾ ಮಾಡ್ಕಂಡ್ ಬಂದ್ರೂ ಸುಕವೇ ಇಲ್ಲಾಯ್ತಲಾ? +ಈಗ ಮತೆ ಯಾರ ಕೊಡತ್ರು?’ +ಮಾರ್ನೆ ದಿವಸ ಹೋಗಿ ಅಲ್ಲೇ ಹೋದ ಯೇಳ ಜನ ಹೆಣ್ ಹುಡ್ಗಿರು ಕೇಳ್ ಬಂದಿದ್ದ. +ಯೇಳೂ ಜನ ಲಗ್ನ ಮಾಡಬೇಕು ಹೇಳಿದ್ದ. +ಆ ಅವನು ಮತ್ತೆ ಅಲ್ಗೇ ಹೋದ್ನ, “ತಾನ್ ಮತೆ ಬಂದ್ ಬಿಟ್ಟೆ ಗಂಡ್ ಹುಡ್ಗರು ಬಾಳ ಜನ ಅವರೆ ಹೆಣ್ಣೇ ಕಮ್ಮಿ ನಮ್ಮ ರಾಜ್ಯದಲ್ಲಿ” ಅಂದ. +‘‘ಅಡ್ಡಿಲ್ಲಪ್ಪಾ, ಮತ್ ಯೆಯ್ಡ ಲಕ್ಸ್ ರೂಪೈ ಕೊಡಬೇಕು’’. +‘‘ಅಡ್ಡಿಲ್ಲ ಕೊಡ್ತೆ. ’’ ಅವರ್ಗೆ ಇವರ್ಗೆ ಒಪ್ಪಂದಾಗಿ ಮಾತಾಡ್ರು. +ಆರ್ ಜನ ಉಳ್ದರೆ ಪ್ರಾಯಕ್ ಬಂದರೆ. +ಮತ್ತೊಂದ್ ಹೆಣ್ ಕೊಟ್ಟ. +ಇದೇ ನಮನ್ಯಾಯ್ತು. +ಆರು ಕಿರಿದೊಂದ್ ಉಳಿತದೆ. +ಹುಡ್ಗಿ ತಕಂಡ ಹೋದೋರು, ‘‘ಚಲೋದಾಗವರೋ? +ಹುಡ್ಗಿರೆಲ್ಲ?’’ ಕೇಳ್ತರು ‘‘ಚಲೋ ಸಂಪಾಗವ್ರೆ’’ ಕಣ್ ಕಟ್ ಮಾಡ್ತ. +ಮತ್ ಹೋದ ಮಂದಿಗ್ಯೆಲ್ಲಾ ಚಪ್ರ ಹಾಕಿ, ಕುರ್ಚಿ, ಮೇಜು, ಬೆಂಡು ಯೆಲ್ಲಾ ತಕಂಡ್ ಹೋಗ್ ಹೊಂಗ್ನಮಾಲಿ ಕೈಲ್ ತೊಟ್ ಕುಳ್ಸಿ, ‘ನಿನ ಗಂಡ ಬತ್ತ’ ಅಂದ್ ಹೇಳ್ಕಿ ‘ಇಟ್ ಬನಿ’ ಅಂದ ಬಂದ್ರು. +ಆವಾಗೆ ಅಲ್ಲಿ ಪರಮಾತ್ಮನ ಜಾನ ಮಾಡ್ತದೆ ಕಿರೀದು. +‘ತನ್ನ ತಂದಿಗೆ ಯೇಳ ಜನ ಹೆಣ್ ಮಕ್ಳು. +ನಾವ್ ಹುಟ್ಟಿ ತಾಯಿ-ತಂದೆ ತೀರ ಹೋಗಿರು. +ರಾಮ ರಾಮ. . . ಶಿವ ಶಂಕರ ಶಂಬೋ. . . ತನ್ ಗತಿಯೇನ್. +ಆರ್ ಜನ ಅಕ್ಕದಿರ ತಂದಿ, ವಬ್ರೂ ಕಾಂಬೋದೆಲ್ಲ. +ಯೇನಾಯ್ತು? +ಯೇನ್ ಹೋಯ್ತು ವಂದೂ ತೆಳೂದಿಲ್ಲ. +ನೀನೇ ಕಾಪಾಡ್ಬೇಕು’ ಅಂದಿ ಗೋಳ್ ಗುಡಿತದೆ, ತೀಡ್ತದೆ. +ಆವಾಗೆ ಆಕಾಶವಾಹಿನಿ ಆಯ್ತು; ಪರಮಾತ್ಮ ದೃಷ್ಟಿ ಇಟ್ಟ. +ವಂದ ಸನ್ಯಾಸಿ ರೂಪದಲ್ ಬಂದ ಕೂತ ಪರಮಾತ್ಮ, ಭಗವಂತ, ‘‘ಯೇನಾಯ್ತು ತಂಗಿ? +ನಿನ್ಗೆ ಯಾವುರಾಯ್ತು? +ಯಾವ ದೇಸಾಯ್ತು? +ಇಲ್ ಬಂದ್ ಕುಳ್ಳೊ ಕಾರಣಯೇನು?’’ ಕೇಳ್ದ. +‘‘ತೀಡಬೇಡ’’ ಅಂದ. +‘‘ನಿನ್ಗೆ ಯೇನ್ ಕಟ್ಟ ಬಂದ್ರೂ ಪಾರ್ ಮಾಡಕೊಡ್ತೆ. +ನೀನು ಸಾಂತ ರೀತಿಂದ ಉಳಿ’’ ಚಂದಾಗ್ ಹೇಳ್ದ. +ಹೋಗ್ ಸಪೋಟ್ ಕಾಲ್ಗೆ ಬಿದ್ದಬಿಡ್ತು. +‘‘ಯೆದ್ದೇಳು, ಯೆದ್ದೇಳು ಹೆದ್ರಬೇಡ’’ ಅಂದ. +ಆವಾಗ್ ಯೆದ್ ಕುಂತಕೊಂಡ್ತು. +ದುಕ್ಕ ಅಂತ್ರಸ್‌ಕಂಡಿ ಹೇಳ್ತು. +ಈ ರಾಜದಲ್ಲಿ ತಾನು ಬೇರೆ ರಾಜದ್ದು, ಈ ರಾಜದ ಅರಸ ಹೋಗಿ ತನ್ನ ಚಿಕ್ಕಪ್ಗೆ ಹೇಳಿ ಮತ್ತು ನಿ ವಂದ್ ಯೇಳ ಲಕ್ಸ ರೂಪಾಯಿ ತಕಂಡಿ ವನಂದ್ ಲಕ್ಸದಂತೆ ಯೆರ್ಸ್ ಕಂಡ್ ಬಂದಿದ್ದ. +ಆಟ್ ತಕಂಡಿ ಅವ ಅಕ್ಕದಿರ ತೆಕ ಬಂದಿದ್ದ. +ವಬ್ರೂ ಕಾಂಬೊದೆಲ್ಲ. +ತನ್ಗೆ ಇಂತಾ ಪರಿಸ್ಥಿತಿ ಬಂತು. +ಈ ಕಟ್ಟ ಪಾರಗಬೇಕು. +‘‘ಯೇ ತಂದೇ!ನಿನ್ನಿಂದ ಕಟ್ಟ ಪಾರಗಬೇಕು ಹೊರ್ತು ಬೇರೆಯಲ್ಲ’’ ಅಂತು ಮತ್ ಸಪೋಟ್ ಪಾದ್ಕ ಬಿತ್ತು. +ಆವಾಗೆ, ‘‘ಹೆದ್ರಬೇಡ. +ನೀನು ತನ್ನ ಹೆಳ್ಕೆಯಂತೆ ಕೇಳಬೇಕು. +ದುಕ್ಕ ಮಾಡುಕಿಲ್ಲ. +ನಿನ್ಗೆ ಧೈರ್ಯಾಗ್ಲಿ’’ ಹೇಳಿ. +ಶಬ್ದದಲ್ ಹೇಳಿ ದೈರಿ ಮಾಡ್ದ ಅದ್ಕೆ. +ಮಂತ್ರಿಸಿ ಮೂರ ಹಳ್ ಕೊಟ್ಟ ನೋಡಿ ಅದ್ರಕಲ್. +ಹಳ್ಳು ಕೈಮುಟ್ಟಿಲಿಟ್ಟ. +‘‘ನೋಡು, ನೀನು ಹಿಂಗೆ ಕುಂತಲ್ಲಿ ನಿನ್ ಮೊಕಸಾರೆ ಸಮುದ್ರ ನೀರ್ ಬಕ್ಕಂಡ್ ಬತ್ತದೆ. +ನೀ ಹೆದ್ರೂಕಾಗ. +ಗೋರ್ ಕಪ್ಪಾಗೂದು, ಆದಕೂಡ್ಲೆ ನೀ ಹೆದ್ರೂಕಾಗ. +ಈಗ್ ಅದು ನೀರ್ನಲ್ಲದೆ. +ನೀರ್ ತಪ್ಪಿ ದೆಡ ಹತ್‌ದಕೂಡ್ಲೆ ಬಿಂಬಿ ಆಕಾರ್ದಲ್ ಬರೂದು. +ಬೋರ್ಗುಡಿತದೆ ಹೆದ್ರೂಕಾಗ. +ದೆಡ ಹತ್ತ್‌ತು ಅಂದ ಕೂಡ್ಲೆ ನೀನು ಮೂರ್ ಹಳ್ಳ ಮಂತ್ರಿಸಿ ಹೊಡ್ದ ಬಿಡ್ಬೇಕು. +ತನ್ ಕಟ್ ಪಾರಾಗ್ಲಂದ್ ವಂದ್ ಹೊಡೆ. +ಬಿಂಬಿ ಆಕಾರದ್ದಲ್ ಬಂದಾಗ ಬೋರ್ಗುಡತದೆ. +ದಿಡಹತ್ತ್‌ತೂ ಅಂದ್ ಕೂಡ್ಲೆ ವಂದ್‌ ಹಳ್ಳ ಹೊಡೆ. +ವೋಡ್ ಕಳ್ಚಿ ಸಾಪ್ ನಿಜರೂಪಾಗಬೇಕು’’ ಅಂತ, ‘‘ಇದ್ದಿ ಬುದ್ದಿ ಕಲ್ತಂತ ಮನ್ಸಿನಾಗೆ ಬರಬೇಕು’ ಅಂತ ಹೊಡೆ ಯೆಯ್ದನೆಹಳ್ಳ. +‘ಕಪ್ ವರ್ಣಾಗಿತ್ತು ಕೆಂಪ ವರ್ಣಾಗಬೇಕು’’ ಅಂತ ಮೂರನೇದ ಹೊಡೆ. +‘‘ಮೂರೂ ಹಳ್ ಹೊಡಿತಲ್ವೊ? +ಸಾಪ ಸಮುದ್ರದಲ್ಲಿ ಸಂತೋಸ್ನಲ್ಲಿ ಬರಬೇಕಾಯ್ತು. +ಹಾಲಹರ್ದಂತೆ ನೀರ ಹರೀತದೆ” ಹೇಳಿ ಪರಮಾತ್ಮ ಅಲ್ಲೆಲ್ಲ. +ಪರಮಾತ್ಮ ಹೇಳಿದ ಹಾಗೆ ಮೂರು ಕಲ್ ಹಳ್ಳ ಮಂತ್ರಿಸಿ ಹೊಡಿತು. +ಮುಂದೆ ಬಂದಿ ಮಂಚದ ಮೇನ್ ಕುಂತ. +‘‘ಮಾಲಿ ಹಾಕು ಹೇಳನೆ ಪರಮಾತ್ಮ’’ ಮಾಲಿ ಹಾಕ್ಬಿಟ್ತು. +ಅವನೂ ತೆಗ್ದೆ ಹಾಕ್ದ. +ಅವ್ರು ಕುಂತ್ಕಂಡ ಚಂದದಲ್ ಉಳದ್ರು. +ಕತ್ತು ದೇಪತತಾ ಉಳೀತು. +ಬೆಳಗಾದ ಕೂಡ್ಲೆ ಅರಸು ಸಿಪಾಯಿಯರ ಕರದು, ‘ಹೋಗ್ ಬರ್ರಪ್ಪಾ, ಯೇನಾಯ್ತು ನೋಡ್ಕ ಬನಿ’ ಹೇಳ ಕಳ್ಗಸ್ದ. +ಹೋದ್ರು ತಾಪಡತೋಪ್ ಹೋಗಿ ನೋಡದ್ರು. +ಜ್ಯೋತಿ ಉರಿತದೆ. +ಸಕಲ ಸಂಪನ್ನ ಮೇಲ್ ಕುಂತರೆ ಅವರು. . . ಅವ ಸೂರಿ ಪ್ರಕಾಶವ್ನೆ. +ಬಂದ ಅರಸೂಗೆ ತಾಪ್ಡತೋಪ್ ಹೇಳದ್ರು. +ಅವನ ಮನಿಂದ ಅದ ಕುಂತಲ್ಲಿವರಿಗೆ ಮೆಟ ಮಟ್ಗೆ ತೋರಣ ಅಲ್ಲಿದ್ದಿಲ್ಲೂ ಹಾಕ್ಸ್‌ದ. +ಮಂದಿ ಮಾರ್ಬಲ ಆವಾಗೆ ರಾಜದವರೆಲ್ಲ ಕೂಡ್ಸಕಂಡಿ, ಸಂಗ್ರಯ ಸಮ ಮಾಡ್ಕಂಡ ಮಂಚಾಲ ತಕ್ಕ ಹೋಗಿ ಹತ್ತಕೊಂಡಿ, ಉಚ್ಚಯದ ಮೇನೆ ಬಂದು ಇವ್ರ ಮನೆಗೆ ತಂದಿ, ಆರತಿ ಗೀರತಿ ಯೆಲ್ಲಾ ಮಾಡಿ ವಳ್ಗ್ ತಕೊಂಡ. +ವಳ್ಗ್ ತಕೊಂಡಿ ಆ ರಾಜ್ಯ ಅವಗೆ ಅದಕೆ ಕೊಟ್ ಮನೀಲ ಇಟ್ಕಂಡ. +ಸುಕಸಂತೋಸದಲ್ ಉಳಕಂಡ್ರು. +ಪಾಪದ ಕೆಲಸ ಮಾಡ್ದ ಹಿಂಡ್ತಿ ಹೆರ್ಗೆ ಹಾಕಬಿಟ್ಟ. +ಅದಕ್ಕೂ ಸಂತೋಸದಲ್ ಇರ್ಸದ. +ಅಜ್ಜಿ-ಮೊಮ್ಮಗ ಇದ್ರು. +ಬಹಳ ಬಡತನ, ಬೇಡ್ಕಂಬಂದಿ ತಿನ್ನುದು. +‘‘ವಂದ್ ಬುತ್ತಿ ಕಟ್ ಕೊಡಜ್ಜವ್ವಾ. +ತಾನು ಊರ್ ತಿರಿಕಂಬತ್ತೆ’’ ಅಂದ್ ಹೇಳ್ತ. +‘‘ಬುತ್ತಿ ತಕಂಡ್ ಹೊರಟು ತಾರಿಮೇನ್ ತಿರ್ಗತ. +ಯೆಯಡ್ಡ ಬಿಲ್ಲಿ ಕೊಟ್ಟಿ ಆಚಿ ದಾಟ್ದ. +ತಾರ್ನವ ಯೇನ್ ಕಷ್ಟ ಬಂದ್ರೂ ಬೆಡ್ಕೊ, ತಾ ಬಂದ್ ಪರಿಹರ್ಸ ಕೊಡ್ತೆ’’ ಅಂತ. +ಮುಂಚೆ ಹುಲಿ ಶಿಕ್ತದೆ. +ಬೆಂಡ್ ಕಟ್ಟ ಹಾಕ್ತ, ಹುಲಿ ಕೇಳ್ತದೆ. +ಹುಲಿ ಸಿಕ್ದ ಕೂಡ್ಲೆ ‘‘ಯೆಲ್ಲ ಹೋಗ್ತೆ?’’ + ‘‘ತನ್ ಬಡಸ್ತನದ ತಕ್ಕಾಗಿ ಬೇಡ್ ಬೇಡ್ ಸಾಕಾಗಿ ಊರ ತಿರಿಕಂಬೂಕ ಬಂದಿದ್ದೆ’’ ಅಂದ. +‘‘ಯೇನ್ ಕಷ್ಟ ಬಂದ್ರು ಪರ್ಯಾರ ಮಾಡ್ತೆ’’ ಅಂತು ಮುಂದಕ್ ಹೋತ. +ಯೆರವಿ ಯೆಂಬತ್ ಕೋಟಿ ಶಿಕ್ತದೆ. +ಸೊಪ್ನ ಟೊಂಕಿ ತಕಂಡಿ ಹರೂ ನೀರಗೆ ಯೆರವಿ, ಆಚಿದ್ದ ಈಚಿ ಈಚಿದ್ ಆಚಿ ಮಾಡಿ ಹೊರ ಹಾಕ್ತ. +‘‘ಯೆಲ್ ಹೋಗ್ವವ? +ಬೇಡ್ಕಂತ ಬಂದವ.’’ +‘‘ಕಷ್ಟ ಊರ ತಿರಗ್ ಹೋಗಬವುದು” ಅಂದ. +‘‘ಕಷ್ಟ ಪರಿಹರ್ಸ ಕೊಡ್ತೆ’’ ಅಂತದೆ. +ಮತ್ ಗುಮ್ಮಕ್ಕಿ ಸಿಕ್ತದೆ. +ವಂದು ಗುಮ್ಮಕ್ಕ ಕೇಳ್ತದೆ. +‘‘ಹಾದೀಲ್ ಕೂತಿದಿಯೇ ಯೆಲ್ಗ್ ಹೋಗುವವ? +ಬೇಡ್ಕಂತ ಬಂದವ.’’ +‘‘ಊರ ತಿರಗೂಕೆ ಬಂದನೆ’’ ಅಂದ. +‘‘ಇದೇ ರಾಜನ ಮನಿಗೆ ಹೋಗು. +ಒಂದು ತುತ್ತ್ ಅನ್ನದೆ’’ ಅಂತು. +ರಾಜನ ಮನಿಗೆ ಹೋಗ್ತ ಅವ. +ರಾಜ್ನ ಹುಡುಗಿ ವಳಿತದೆ. +ಯಾರ ಬಂದ್ರೂ ನಗ್ನಾಗುಕಾಗುದಿಲ್ಲ. +ನಾಕ್ ಪಣ ಇಟ್ಟದೆ. +ವಂದ್ ನೂರಾ ವಂದ್ ಮಾಳ್ದಲ್ಲಿ ‘ಕೂ’ ಹೊಡ್ವದು. +ವಂದ ಮಾನ್ಗಕ್ಕಿ ಅನ್ನ ತಿನ್ನಬೇಕು. +ವಂದ ಕೊಟ್ಗಿ ದನ ಮುರಿಬೇಕು. +ವಂಚೀಲ ರಾಗಿ, ವಂಚೀಲ ಸಾಸ್ಮಿ ಬೇರ್ ಮಾಡಕೊಡ್ಬೇಕು. +(ಮಾಳ ಅಂದರೆ ಗದ್ದೆಯ ಬೆಳೆಯನ್ನು ಕಾಯಲು ಗದ್ದೆಯಲ್ಲೇ ಎತ್ತರದಲ್ಲಿ ಕೂಡ್ರಲು ಮಾಡಿದ ಮಾಡು)ವಂದಿನ ಯೇನಂದು ಪಣ ಇಟ್ತು? +ನೂರಾವಂದ್ ಮಾಳದಗೂ ಸರಿಯಾಗ್ ಕಾಯಬೇಕು. +ನೂರಾ ವಂದ್ ಮಾಳದಗೂ ಯಾರ್ ನೋಡುಕ್ ಬಂದ್ರೂ ಅಟ್‌ರಗೂ ಇದ್ದವ ಕೂಗು ಹೊಡಿಬೇಕು. +ಗುಮ್ಮಕ್ಕಿ ನೆನಕಂತ, ‘ಈ ಮಾಳಕಾವರೊಳಗೆ ನೀ ಬರಬೇಕು’ ಅಂದ ನೂರಾ ವಂದ್ ಗುಮ್ಮಕ್ಕಿ ಕರಕಬತ್ತದೆ. +ಯಾವ ಮಾಳಕ್ ಹೋದ್ರೂ ‘ಊಂ. . ಊಂ. . . ’ ಅಂತದೆ. +‘‘ಕೊಟ್ಟಗೀಲಿ ನೂರಾವಂದ್ ದನ ಉಳಿತದೆ. +ರಾತ್ರಿ ಬೆಳಗಾಗೂ ತನ ನೂರಾವಂದ್ ದನನೂ ತಿನಬೇಕು. +ನೂರಾವಂದ ತಲಿ ಗುಮಟೆ ಬೀಳಬೇಕು’’ ಅಂದಿ ಪಣ ಇಟ್ತು. +ಹುಲಿ ನೆನಕಂತ, ಹುಲಿ ಬಂದಿ ದನ ಅಟ್ಟೂ ಮುರ್ಕ ತಿಂದ್ಕಂಡಿ ತಲಿ ಬಿಟ್ ಹಾಕ್ ಹೋತದೆ. +‘‘ವಂದ್ ಚೀಲ ರಾಗಿ ವಂದ್ ಚೀಲ ಸಾಸ್ಮಿ ಬೆರಸಿ ರಾತ್ರಿ ಬೆಳಗಾಗುವವರಿಗೂ ವಂದ್ ಅಲಕ್ ಆಗದೆ ಬೇರ್ಮಾಡಕೋಡ್ಬೇಕು’’ ಅಂತು. +ಆವಗೆ ಯರ್ಗ ನೆನಕಂತ. +ಅವ, ‘ನೀ ಬಂದ್ ತನ್ಗೆ ಸಾಯತನ ಮಾಡ್ ಕೊಡಬೇಕು’ ಅಂದಿ. +ಯೆಂಬತ್ ಕೋಟಿ ಯರ್ಗೆ ಹೆಕ್ ಬೇರಮಾಡಿ ಹೋಗಬೇಕಾದರೆ ವಂದ್ ಗರ್ಭಿಣಿಯರಗ ವಂದ ಸಾಸ್ಮಿ ಕಚ್ಕ ಹೋತದೆ. +ಹುಡುಗಿ ಬೆಳಿಗ್ಗೆ ಬಂದದ್ದು ಅಳದು, ‘‘ವಂದ ಸಾಸ್ಮಿ ಕಮ್ಮಿ ಬಂದದೆ, ತಂದ ಕೊಡಬೇಕು. +ಯೆಲ್ದಗಿದ್ರೆ ನಾ ಇಟ್‌ಪಣ ಮುರಿತೆ?’’ ಅಂತದೆ. +‘‘ತಾತಂದ್ ಕೊಡ್ತೆ’’ ಅಂದಿ, ಯರ್ಗ ನಿದ್ದಲ್ ಹೋಗಿ ಸಾಸ್ಮಿ ತಂದ್ ಕೊಡ್ತ. +ಕೂಡಲೇಯ ಮತ್ತೊಂದು ಪಣ ಇಟ್ತು. +‘‘ವಂದ್ ಮಾನ್ಗಕ್ಕಿ ಅನ್ನ ಮಾಡಿ, ಕುಂಬಳಕಾಯಿ ಪಲ್ಯ ಮಾಡಿ ನಿರಾತ್ರಿ ಬೆಳಗಾಗೂವರಿಗೆ ಉಣಬೇಕು’’ ಅಂದಿ ಪಣ ಇಟ್ತು. +ತಾರ್ನವ್ನೇ ಬಂದಿ, ‘ಅನ್ನ ಉಂಡಿ ಕರ್ಚಮಾಡ್ಬೇಕು’ ಅಂದ. +ತಾರ್ನವ ಉಣ್ಣದೇಯೆಷ್ಟ ದಿವ್ಸಾಗಿತ್ತು ಯೇನೋ ಬಂದವ ಅಟ್ಟೂ ಅನ್ನ ತಿಂದ. +ತಿಂದ ತಿಂದ ನೆಲದ ಮಣ್ಣನ್ನೂ ವಂದ ಮುಟ್ಟಿ ತಿಂದ್ಕಂಡ್ ಹೋತ. +ಬೆಳಿಗ್ಗೆ ಬಂದ್ ಕದ ತೆಗಿತದೆ ಅದು ಪಣ ತೀರ್ತು ಅಂದಿ. +ಊರರ್ಗೆಲ್ಲ ಕರ್ಯ ಮುಟ್ಸತ ಜನ ಬಂದರು. +‘ನಗ್ನಾಗೂಕ್ ನಮ್ಮ ಕೈಲಾಗಲೆಲ್ಲ. +ಇವ ಚಿನ್ನದ ಕೂದ್ಲ ಪಾರ್ವತಿ ನಗ್ನಾತ’ ಅಂದಿ ಎಲ್ಲರೂ ಅಶ್ಚೀರ್ ಬೀಡ್‌ತ್ರು. +ಕುದ್ರಿ ತಕಂಡು, ಸಾಮಾನ ತಕಂಡಿ, ಹಿಂಡ್ತಿ ಕೂರ್‌ಕಂಡಿ ಅಜ್ಜಿಮನಿಗೇ ಬತ್ತ. +ಅಜ್ಜವಿ ಕೈಲ್ ಹೇಳ್ತ, ‘ತಿರ್ಗ್ ತಿರ್‌ಗಿ ಪಣ ಗೆದ್ದಿ ಲಗ್ನಾಗ್ ಬಂದೆ’ ಸುಕದಲ್ ವಳಿತ್ರು. +ಅರಸು ಮಂದಮತಿ. +ಚಿನ್ನದ ಕೋಳಿ ತಂದ್ರೆ ಪರಿಹಾರ. +ಅವನ ಮೂರ್ನೆ ಮಂಗಗೆ ಕಾಳಿಕಾಮ್ಮ ಪರಸರಾಮನ ಆಯಧ ಕೊಟ್ಟಿದೆ. +‘ಚಿನ್ನದ ಕೋಳಿ ತರ್ವಲ್ಲಿ ಹೋಗ್ ಹೋದೋರ್ ಕಂಡಿದ್ದೆ, ಬಂದೋರ್ ಕಾಣ್ಣಿಲ್ಲ’ ಅಂತರೆ. +ಹಿಂಡ್ತಿ ಮೂರ್ ಹಳ್ಳ ಕೊಡತ್ಲು. +ಯೇಳ ಸಮುದ್ರದಾಚಿ ಚಿನ್ನದ ಕೋಳಿ ಅದೆ. +ಬಿಸಲ್ನಲ್ಲಿ ಆರಾಂ ಕುಂತಕೊಂಡ. +ಗಂಡ್ ಬೇರುಂಡ, ಹೆಣ್ ಬೇರುಂಡ ಮರಿಗೆ ಆಯಾರ ತರೂಕ್ ಹೋದಾಗೆ ಸರ್ಪ ಮರಿ ತಿಂಬೂಕೆ ಬಂತು. +ಮರಿ, ‘‘ಮಾರಾಯ, ನಮ್ ಜೀವ ಇದ್ರೆ, ನಿನ್ನ ಜೀವ ಕಾಯತ್ರು ನಮ್ ತಾಯಿ-ತಂದೆ, ನೀನೇ ತಂದೆ-ತಾಯಿ’’ ಅಂತ ಗಿಜರತದೆ. +ಕೊಡ್ಲಿಂದ ಹೊಡೆದ ಸರ್ಪ ಸತ್ತಿತು ಮರಿಗೆ ಸಂತೋಸಾಯ್ತು. +‘‘ನಿನ್ನ ಕಾರ್ಯ ಮಾಡಿಕೊಡತೇವೆ.’’ +ತಾಯಿ-ತಂದಿ ಆಯಾರ ತಕಂಡಿ ಬಂದ್ರು, ಹಣ್ಣು ಹಂಪ್ಲಿ ಕಿಟ್ಟಬೇಕಾದ್ರೆ ಪಣ ಹೇಳಾಗದೆ. +‘ಅವ್ವಾ ತಾಯಿ ವಳಗೂ ನೀವಲ್ಲ, ತಂದಿ ವಳಗೂ ನೀವಲ್ಲ. +ನಮ್ಮ ಜೀವ ಕಾಪಾಡಿದವ ಈ ಮನಶ. +ಚಿನ್ನದ ಕೋಳಿ ತಗಬರೂಕೆ ಅವ ಬಂದನೆ. +ಯೇಳ್ ಸಮುದ್ರದಾಚೆ ಅವನ್ನ ತಕೊಂಡ ಹೋಗಿ ಬಿಟ್ ಹಾಕ್ ಬನ್ನಿ’ ಹೇಳ್ತದೆ. +ಅವ ಯೆರಡೂ ಹಕ್ಕಿ ರಟ್ಟಿ ಮೇಲೆ ಸಮುದ್ರ ದಾಟಿ ಹೋತ. +ವಂದ್ ಪಕ್ಕದ ಗಿರಿ ಕೊಟ್ ಹಾರ್ ಹೋತದೆ. +ಗಿರಿ ಹಿಂದೆ ಮುಂದೆ ಮಾಡಿ ಹಿಡದ್ರೆ ತಾ ಬತ್ತೆ. +ಹೇಳಾಕ್ ಹೋತದೆ. +ಅಲ್ಲಿ ವಂದ್ ಮರನಲ್ಲಿ ಪಿಶಾತಿ ಬೂತಂಗಳು, ರಕ್ಕಸರು ಯಲ್ಲವರು ಕಾಯತ ಇರತ್ರು. +ಮರಕೆ ಹೋದ ಮೇಲೆ ಚಿನ್ನದ ಕೋಳಿ ಅದೆ. +ಅವ ವಂದ್ ಗುಂಡ ಮಂತ್ರಿಸಿ ಹೊಡಿತ. +‘‘ಬೂತ, ಪಿಶಾತಿ, ರಕ್ಕಸರು ಏನೂ ಇದ್ದರೂ ಅಡ್ಡಾಗಿ ನಿಲ್ಲಬೇಕು’’ ಅಂದಿ ವಂದ್ ಕಲ್ ಹೊಡದ. +ಮರನಲ್ಲಿ ಯೆಲ್ಲಾ ಬಿಟ್ಟಿ ಸೊಮಗ್ ನಿತ್ ಬಿಟ್ರು. +ಚಿನ್ನದ ಕೋಳಿಯ ತೆಕಂಡ ಬಂದ. +ಗಿರಿ ಹಿಂದ್ ಮುಂದ್ ಮಾಡಿ ಹಿಡ್ದ. +ಆ ಹಕ್ಕಿ ಯೆಯಡೂ ಅಲ್ಲಿ ಹಾರ್ ಬಂತು. +ಕಟ್ಟೆಗೆ ತಂದ್ ಬಿಟ್ರು. +ಪುನಃ ನೆಂಟರ್ ಮನಿಗ್ ಬಂದ. +ಮಾವನ ಕೈಲಿ, ‘‘ನನ್ ಮನಿಗ್ ಹೋಗ್ತೆ’’ ಅಂದ. +ಹಿಂಡ್ತಿನ ಕರ್ಕಂಡ್ ಹೊಂಟ. +ಕೂಡಿ ಬಂದ್ರು. +ಸುಮಾರ್ ಕುಮಟೆಗೆ ಬಂದ. +ಸೂಳಿಮನೆ, ದಾರೀಲ್ ಸೂಳಿಮನೆ ಅದೆ. +ಪದ್ಮಾವತಿ ಅಲ್ಲಿ ಬೋರ್ಡ್ ಬರೆದಿಟ್ಟದೆ. +‘ನಾನು ಬರೆದ ಬೋರ್ಡನ ಅಕ್ಸರ ನೋಡಿ ಯಾವವ ಹಿಂದೆ ಹೋದನೋ ಅವ ನನ್ ಕಿಕ್ಕಾಲ್ ಗಂಡಿಲ್ ಮನ್ಗೆ ಹೋದಂತೇಯ’ ಹೇಳಿ ಬರದಿಟ್ಟಿದೆ. +ಬಂದ್ ನೋಡ್ದ. +ಮೊಕಸಾರೆ ಪಗಡಿ ಆಟ ಗೆದ್ಕಂಡ್ ಹೋಗ್ಬೇಕು. +ಅಡವಿಗೆ ಯೆಯ್ಡು ಜನ ಆಳಗೋಳ ಕಳ್ಸ್ ಕೊಟ್ಟ್. +‘‘ಮೂರ್ ಯೆಲಿ ಬುಡ್ಕ ಹಿಡ್ಕ ಬನ್ನಿ’’ ಅಂದ. +ಬುಟ್ಟಿಲ್ ಹಾಕಂಡ್ ಬತ್ತ ಸೀದಾ ಸೂಳಿಮನಿಗೆ ಹೋದ. +“ನೀನಿಟ್ ಪಂತ ಮಾಡಿ ಬೋರ್ಡ್ ಹಚ್ಚಿದೆ. +ನುಸ್ದ ಹೋದಾಂಗಾತದೆ! +ಪಗಡಿ ಆಡವ” ಅಂದ. +ಕೂತ್ರ ಆಡ್ತ ಇರಬೇಕಾದ್ರೆ ಬೆಕ್ನ ತಲಿಮೇಲೆ ಪಣತಗಿ ಇಟ್ಟು ಆಡ ಬತ್ತದೆ. +ಅದ್ಕೆ ಪಗಡಿ ಆಡಬೇಕಾದ್ರೆ ಗೆಲತದೆ. +ಅದು ಗೆದ್‌ತು. +ಮತ್ತೆ ಆಟ ಆಡ್ತಾ. +ಒಂದ್ ಯೆಲಿ ಬಿಟ್ದೇವ ನೋಡ್ತು ಬೆಕ್ಕು. +ಆಟವ ಇವ ಗೆದ್ದ. +ಮಗಳು ಬೆಕ್ಕು, ಹಿಡ್ಕ ಬಂದಿ ಅದ್ಕೆ ಮೂರೆ ಗುದ್ ಹೊಡಿತು. +ಅವಿಗೂ ಹೊಡಿತು. +‘‘ನೀನು ಹಾಲು ಹಣ್ಣ್ ಹಾಕ್ಲೆಲ್ಲ.’’ +ಅದು, ‘‘ನೀನು ಪಗಡಿ ಆಡಿ ಗೆದ್ದರೆ ನಾನೂ ಸೈತ ನಿಂದು’’ ಅಂದ್ ಪಣ ಇಡ್ತದೆ. +ಅವ ಸೋತ್ರೆ ಅದರ ಕೆಳಗಾಗಿ ದುಡಿಬೇಕು. +ಬೆಕ್ಕು ಹಿಡ್ಕಬಂದ. +ಅದ್ರ ತಲಿಮೇನ್ ದೀಪ ಇಟ್ತು ಮತ್ತೊಂದಾಟ ಆಡಿ ಮತ್ತು ಗೆಲ್ಲು ಟ್ಯಾಂನಲ್ಲಿ ಮತ್ತೊಂದ್ ಯೆಲಿ ಬಿಟ್ ಬಿಟ್ಟ. +ಆಗೂವ ಇವನೇ ಗೆದ್ದ. +ಮತ್ ವಳ್ಗೆ ಹೋಗಿ ಬೆಕ್ಕಿಗೆ ಗುದ್ ಹೊಡಿತು. +ಅವಿಗೂ ಹೊಡಿತು. +ಬೆಕ್ ತಕಬಂದ್ ಮತ್ ದೀಪ ಇಟ್ಟು, ಮತ್ತೆ ಪಗಡಿ ಆಡೂಕೆ ಕೂತ್ರು. +ಪಗಡೆ ಗೆಲ್ತದೆ ಅನ್ಬೇಕಾದ್ರೆ ಮತ್ಯೆಲಿ ಬಿಟ್ಬಿಟ್ಟು ಇವನೇ ಗೆದ್ದ. +ಬೆಳಗಾಯ್ತು. ವಳ್ಗೆ ಹೋಗ್ ಸಿಕ್ಕಬಿಟ್ತು. +ಸೋಳಿ ಹೇಳ್ತದೆ. +‘‘ಪಣ ಹೊತ್ತದಕೆ ನೀನ್ನ ಗೆದ್ದೆ. +ನೀನು ನನ್ನ ಬೆನ್ಗೆ ಬರಬೇಕು’’ ಅಂದ. +‘‘ಐಸರಿ ಅಟ್ಟೂ ನನ್ಗೆ ಕೊಡಬೇಕು.’’ +ಅವ್ನ ಹಿಂಡ್ತಿ ಮಕ್ಳು ಯೆಯ್ಡು ಜನ ತೂತ್ ಕೊಡದಲ್ ನೀರ ಹೊರತ್ರು. +ನೀರ್ ಹೊರಬೇಕಾದ್ರೆ ನೋಡ್ಕಂಡಿದ್ದ. +‘‘ಶಿಕ್ಷಿ ಗನಾ ಕೊಟ್ಟದೆ’’ ಅಂದ್ ನೋಡ್ಕಂಡಿದ್ದ. +ಕುದ್ರಿಗಿದ್ರಿ, ಸಾಯ್ಕಲ್, ಮೋಟರ್, ಯೆಲ್ಲಾ ಸೋತಿ ಸಾವ್ಕಾರ್ ಜನ ಅದ್ರ ಕೈಕೆಳಗೆ ದುಡೀತವ್ರೆ. +ಅವರ ಕತೆಯೆಲ್ಲಾ ಕೇಳ್ದ. +‘‘ಯಾವ ಯಾವ ಅರಸಗೊಳು? +ಯಾವ ಯಾವ ದೇಸಾಯ್ತು? +ನಿಮ್ಮ ಆಯಾದಿ ಹಿಡ್ಕಂಡಿ ನಿಮ್ ನಿಮ್ ದೇಸಕ್ ಹೋಗಿ.” +ಅವರವರ ದೇಸಕ್ ಅವರವರೂ ಪಾರು. +ತನ್ನ ಅಣದಿರನೂ ತಪ್ಸ್ಕೊಂಡ ಯೆಯಡೂ ಜನ್ರ್‌ನೂ ಕರಕೊಂಡ ಬಂದ. +ಬರಬೇಕಾದ್ರೆ ಇವನಕಲ್ ಯೇನಂದ್ರು? +‘‘ನೀನು, ತಮ್ಮ ನೀನು ಚಿನ್ನದ ಕೋಳಿ ತಂದಿದೆ. +ಅಪ್ಪ ತಮ್ಮ ಹೆರ್ಗ್ ಹಾಕ್ತ. +ಇದ್ ನಮ್ಮ ಕೈಲ್ಲಿ ಕೊಡು, ಈ ಹುಡ್ಗಿನೂ (ಅವನ ಹಿಂಡ್ತಿ) ಕೊಡು. +ಈ ಕುದ್ರಿ ಮೇಲೆ ನೀ ಹತ್ತು. +ಆ ಕುದ್ರಿ ಮೇನೆ ನಾವ್ ಹತತ್ರು.’ +ಚಿನ್ನದ ಕೋಳಿ ವಂದ್ ಕೊದ್ರಿ ಮೇಲೆ, ಹುಡ್ಗಿ ವಂದ್ ಕೊದ್ರಿ ಮೇಲ್ ಕುಳ್ಸಕೊಂಡ್ರು. +ಸಮಾನ ಮೂರ್ ಜನರೂ ಕೊದ್ರಿ ಹೊಡ್ಕಂತ್ ಬಂದ್ರು. +ಅಲ್ಲೊಂದ್ ಹಾಳು ಬಾವಿತ್ತು. +ಬಾವಿಲ್ ಇವ್ನ ದೂಕ್ ಕೆಡ್ಗ್‌ಬಿಟ್ರು. +ಅವ್ರ ಮುಂದೆ ಮನಿಗ್ ಬಂದ್ರು. +ಚಿನ್ನದ ಕೋಳಿ ಮನಿ ಕೋಳಗಂಬಕೆ ಕಟ್ಟಿಕೊಂಡ್ರು. +ಹಿರಿತಾಯಿ, ‘‘ಹುಡ್ಗಿ ಯಾಕ್ ತೀಡ್ತು?’’ ಅಂತ ಅಕಲ್ ಹಾಕ್ತ್ ಇದ್ದಿತ್ತು. +ಅದ ತೀಡ್ಕಂತ ಇತ್ತು. +ಹುಡ್ಗಿ ಅದ್ರ ತಾಯ್ಮನಿಗ್ ಹೋಯ್ತು. +‘‘ನೀವ್ ಯಾಕೆ ತೀಡತ್ರಿ?ಯೇನ್‌ತನ?’’ ಯೆಲ್ಲ ವಿಚಾರ ಕೇಳ್ಕಂತು. +ಅದ್ರದಲ್ಲಿ ಉಳಿತು ಅದು. +ಅವಗೆ ಪರ್ಸ್‌ರಾಮನ ಕೊಡ್ಲಿ ಇತ್ತು. +ಕಾಳಿಕಾಮ್ಮನ ಗುಡಿ ನೆನಕೊಂಡ. +ಕಾಳಿಕಾಮ್ಮ ಅವನ ಮೇನ್ ನದ್ರ ಇಟ್ಕೊಂಡಿ, ಅವನ ಮೇನೆ ತಕೊಂಡ ಬಂದ ಹಾಕತು. +ಹತ್ ಮನಿಗೆ ಬಂದ, ಅವನ ಹಿಂಡ್ತಿ ತಾಯ್ಮನೆಲ್ಲಿತ್ತು. +ಹೋಗೆ ನೋಡ್ದಾ. ಉಳ್ಕೊಂಡ. ಕಡಲೇಳು ಸಮುದ್ರದ ಆಚೆ ಬೂತಗಳು, ಮಾಸೇಸ ಯೆಲ್ಲಾ ವಟ್ಟಾಗಿ ಹುಡ್ಗ, ‘ಮತ್ ಮೊದ್ಲಿನಂತೆ ಆಬೇಕಂತ’ ಗುಂಡ್ ಹೊಡ್ದ್. +ಅಲ್ ಕೋಳಿ ತಂದ ಅಂಬುದು ತೆಳಕಂಡಿ ಪರಾ ಗಣಂಗಳು ಮಾಸೇಸ, ‘ಚಿನ್ನದ ಕೋಳಿ ತಂದವ ಯಾವವ?’ ಅಂದಿ ವಿಚಾರ ಮಾಡ್ತ ಬಂತು. +ಮಾಸೇಸ ಸ್ವತಃ ಬಂದದೆ. +ಅಪ್ಪ ಗಡಗಡ ನಡಗತ. +‘‘ಯಾರ್ ತಂದೋರು?’’ + ಅಣ್ಣದಿರು ತರ್ಲೆಲ್ಲಾ, ‘‘ಅಪ್ಪಾ, ನಾವ್ ತರ್ಲೆಲ್ಲಾ, ನಾವ್ ತರ್ಲೆಲ್ಲಾ. . . ’’ ‘‘ತಮ್ಮ ತಂದನೆ’’ ಅಂತ್ರು. +ಹುಡ್ಗನ್ (ತಮ್ನ) ಅಲ್ ಕರ್ಸರು. +ಆಗ, ‘‘ಮಗನೇ, ಮಾಸೇಸ ಬೂತಂಗಳು ಬಂದರೆ ಚಿನ್ನದ ಕೋಳಿ ನೀ ತಂದಿದ್ಯ?’’ +‘‘ನಾನೇ ತಂದವ’’ ಅಂದ. +‘‘ಇನ್ಯೇನ್ ಮಾಡಬೇಕು? +ಬಂದ್ರೆ ಬರಲಿ, ನಾ ನೋಡ್ಕಂತೆ’’ ಅಂದ. +ಮಾಸೇಸ ಮುಂದೆ ಬಂತು. +ಹುಡ್ಗಿ ಮಾಸೇಸನ ಎದುರಿಗೆ ನಿತ್‌ತ್ತು. +ಆಯ್ದ ಅದ್ಕೆ ಬಿಟ್ತು. +ಮಾಸೇಸ, ಕಲ್ಲಾಳ ಬೂತಂಗೊಳು ಆಚ್ ದೇವಕನ್ಯೊರು ಹುಡಗೀಗೆ ಸರಣು ಕೊಟ್ರು. +‘‘ನಮ್ಮ ತೆಗದೆ’’ ಅಂತ ಗೋಳ ಗೆಡಿತ್ರು. +‘‘ನೀಮ್ ಅಟ್ಟಿದ್ದವರು ಯಾಕೆ ಇಲ್ಲಿ ಬಂದ್ರಿ? +ನಾನು ಕಳ್ಸ್ ಕೊಡ್ತಿದ್ನಲ್ಲವೋ? +ನನ್ನ ಗಂಡನ ತೆಗೂಕ ಬಂದಿರಿ.’’ + ಚಿನ್ನದ ಕೋಳಿನು ಕೊಟ್ತು. +ಮಾಸೇಸ್ನ ಆಸಿವ್ರಾದ ಪಡಿತು ಹುಡಗಿ. +ಅವರ ಕಳ್ಸಿದ್ರು. +ಅರಸು ಸರಿ ಹೋದ. +ಈ ಹುಡಗ ಆ ಹುಡಗಿ (ಅವ್ನ ಹಿಂಡ್ತಿ) ತಂದಿ ಪಟ್ಟ ಕಟ್ದ. +ಯೆಯ್ಡ ಹುಡಗರ ಹೆರಗೆ ಹಾಕ್ದ. +ಚಂದ್ರಸೇನ ರಾಜ, ಕಲಾವತಿ ಹೆಂಡತಿ. +ಪ್ರೇಮದಿಂದಿದ್ದಿರು. ರಾಜಂಗಳದ ಹೊರಗೆ ನರಿ ಬಂದು ಹೆಬ್ಬಾಗಿಲ ಹತ್ತರ ಮಲಗಿತ್ತು. +ಕವಡೆ ಹಳ್ಳ ಮಣಿ ತಕಂಡು ಆಟ ಆಡತಿದ್ರು ರಾಜ-ರಾಣಿ. +ಅವ, ‘‘ಅಲ್ಲಿ ಹೆಬ್ಬಾಗಿಲ ಹತ್ರ ಹುಲಿ ಮಲಗಿದೆ’’ ಅಂತಾನೆ. +‘‘ಅದು, ನರಿ’’ ಹೇಳ್ತದೆ. +ಇಬ್ಬರಿಗೂ ವಾದ ಬೀಳ್ತದೆ. +ನನಗೆ ಎದರುತ್ತರ ಆಡತಿ ಎಂದು ಬಯ್ದು. +‘‘ಹುಲಿಯಾದರೆ ಘೋರಶಿಕ್ಷೆ ಕೊಡುವೆ. +ನರಿಯಾದರೆ ನನ್ನ ಶಿರಸ್ಸು ಕಡಕೊಳ್ಳ್‌ವೆ’’ ಎನ್ನುತಾನೆ. +ವಿಚಾರ ಮಾಡಿತು. +‘‘ತನಗೆ ಶಿಕ್ಷೆ ಎದರು ಆಗಲಿ. +ಇದು ಹುಲಿಯೆಂದು ಹೇಳು’’ ಹೇಳಿ, ಮಂತ್ರಿಗೆ ಬೋಧನೆ ಮಾಡ್ತು. +‘‘ಹುಲಿಯೇ’’ ಹೇಳತಾನೆ. +ಘೋರಡವಿಲಿ ಬಿಟ್ಟು ಬರಬೇಕೆಂದು ಆಜ್ಞೆ. +ಅದು ಉಪವಾಸ ಇರತದೆ. +ಬಸುರಿ ಅವಳು. +ಹಕ್ಕಿ-ಪಕ್ಷಿ ಉಪಚಾರ ಮಾಡತವೆ. +ನವಿಲು ಗರಿ ಸೂಡತದೆ. +ಪ್ರಾಣಿಗಳು ಉಚರಿಸುವವಲ್ಲಿ. +ಋಷಿಗಳ ವನ್ದ್ ಮಹಾತ್ಮೆ ಎಂದು ಅವರು, ‘‘ಯಾರು?’’ ಕೇಳತಾರೆ. +‘‘ವಾದ-ವಿವಾದ ಕಾರಣ ಪ್ರಾಣ ಕೊಡಬೇಕೆಂದು’’ ಅಂದಳು. +‘‘ಗಂಡು ಹುಡಗ ಹುಟ್ಟತಾನೆ’’ ಅಂದ ಮುನಿ. +ಎಂಟೊಂಬತ್ತು ತಿಂಗಳು ಮುನಿಗಳೇ ಸೀಮಂತ ಮಾಡತಾರೆ. +ಹುಡುಗ ಹುಟ್ಟಿದ. +ಜಗದೇಕವೀರ ಹೆಸರು. +ವನ್ದಲ್ಲಿ ತಾಯಿ ಮಗ ಇರುವಾಗ ಪಟ್ಟಣ ಶೆಟ್ಟಿ ಪೇಟಿಂದ್ ಬಂದ. +‘‘ನೀಮ್ ಯಾರು?’’ ಕೇಳಿದ. +‘‘ಚಂದ್ರಸೇನನ ಹೆಣ್ತಿ.’’ +‘‘ನಿನ್ನ ಪತಿಗೆ ಕಪ್ಪ ಕೊಡುವೆ. +ತಾನು ನಂಜೊತೆ ಬಂದಿರಿ’’ ಎಂದ. +ಮುನಿ ಒಪ್ಪಿಗೆ. +ಅಲ್ಲಿ ಹೋಗತಾರೆ. +ಅವನಿಗೆ, ‘‘ಮಗ ತಾನು ಚಿಕ್ಕಪ್ಪ ಶೆಟ್ಟಿ’’ ಎಂದ ಶೆಟ್ಟಿ, ಹುಡುಗ್ನ್ ವಿಚಾರ ಮಾಡಿದ. +‘‘ನಿನ್ನ ವಿಚಾರವೇನು ಕೇಳಿದ?’’ +ಹುಡುಗ, ‘‘ಬ್ರಹ್ಮಲಿಪಿ ಮೀರಲಾರ ಅಂತೆ ನಡಿಬೇಕು’’ ಅಂದಾ. +ಅವನಿಗೆ ತಾತ್ಸರವಾಯ್ತು. +ಮಗಗೆ ಕೇಳಿದ. +‘‘ತಾ ತಿಂದ ತೇಗತೇನೆ’’ ಅಂದ. +ಇವ ಹುಸಾರಿ ಇದ್ದ. +ತನ್ನ ಹೆಸ್ರ ಹೇಳನೆಂದು ಮಗ. +ಹುಡುಗ್ನ್ ಮುತ್ತು ರತ್ನ ವ್ಯಾಪಾರಕ್ ಕಳ್‌ಸ್ತಾನೆ. +ಇರಾಣ ದೇಸದವರು ಉಪ್ಪು ತಿನ್ನುವ ಜನರು, ಮನುಷ್ಯರನ್ನು ತಿನ್ನುವ ಪ್ರಾಣಿಗಳು, ಕುದುರೆ ಎಲ್ಲ ನೊಡರೆ, ಹೋದವರು ಅಕ್ಕಿಧೂಳು, ಉಪ್ಪಿನ ಮೂಟೆ ಕಳ್ಸಿ ಕೊಟ್ಟು ಮುತ್ತು-ರತ್ನ ತರುವದಾಗಿತ್ತು. +ಅವರು ನೋಡಿ- ‘ದೂಳಿಲ್ಲ’ ಅಂದು, ಮುತ್ತು ರತ್ನಾದಿ ಹೊಳೆಪಾಲು ಮಾಡಿದರು. +ಚಿಕ್ಕಪ್ಪ ಶೆಟ್ಟಿ ಜೀಪ ತರಲು ಸಾದ್ಯಾಯಿತು. +ತಾಯ ಹತ್ತರ ಹೇಳತಾನೆ ಹುಡುಗ, ‘‘ಚಿಕ್ಕಪ್ಪ ಶೆಟ್ಟಿ ಪರದೇಶಕ್ಕೆ ಹೋಗತಿದ್ದ. +ತಂದೆ ಹತ್ರ ನಾ ಹೋಗ ಬರತಿದ್ದೆ ಹಡಗ ಹತ್ತಿ’’ ಹೇಳತಾನೆ ಅವಿ, ‘‘ನಾವು ಚಲೋ ಇದ್ರೆ ಅವ ಏನ್ ಮಾಡುತಾನೆ?’’ ಅಂದು ಪಟ್ಟಣ ಶೆಟ್ಟಿಗೆ ಹೇಳಿದಳು. +ಶೆಟ್ಟಿ ನೆವನಕ್ಕೆ ಬೆಂಡ ಜಾತಿ ಹಡಗ ಮಾಡಿ ಕೊಡುತಾನೆ. +ಕಿಮ್ಮತ್ತ ಇಲ್ಲದ ವಸ್ತು ಹಾಕುತಾನೆ. +ಬೆಗಣಿ ಚಾಪರಕೆ ಇಂಥ ಸಾಮಾನ ತುಂಬತಾನೆ ಹೊರಟ ಹುಡಗ. +ಹಡಗ ನುಸಿಕೋಟಿಗೆ ಹೋಯಿತು. +ಅವನಿಗೆ ಹೊಗೆ ಹಾಕಿ ಬಹಳ ದ್ರವ್ಯ ಮುಂತಾದ ಕೊಟ್ಟರು. +ಬೇಡ, ಬಹಳ ಜನ ಬದುಕಿದರು. +‘‘ವಿಚಿತ್ರವಿದ್ದರೆ ಹೇಳಿ’’ ಅಂದ ಹುಡುಗ. +‘ಗುಡ್ಡದ ಮೇಲೆ ಪಾತಾಳ ಕೇತು ಎಂಬ ಮಾಯಾವಿ ಇದಾನು. +ಬೆಟ್ಟದಲ್ಲಿ ಅವನ ಪಾದ ನೋಡಿದರೆ ಎರಡು ಆಳುವರೆಗಿದೆ.’ +ಇವರು ಕಬೂಲಾಗರು ಹೋಗಲಿಕ್ಕೆ. +ಅವ ಒಬ್ಬನೆ ಹೋಗತಾನೆ. +ಒಬ್ಬಳು ನಾಗಕನ್ನಿಕೆ ಮಂಚದ ಮೇಲೆ ಮಲಗಿದ್ದಾಗ ಪಾತಾಳಕೇತು ಮಂಚ ಹೊತ್ತು ತಂದಿಟ್ಕಂಡಿದ್ದ. +ಅವಳಿಗೆ ಕಾಳಿಕಾದೇವಿ ದೇವರ ವರವಿದೆ. +‘ಇಪ್ಪತೈದನೇ ವರ್ಸದಲ್ಲಿ ನಿನ್ನ ಲಗ್ನಾಗತ್ಯೇನೆ’ ಎಂದು ಪಾತಾಳ್ ಕೇತುವನ್ನು ಹೊಗಳಿಕೊಂಡು ಜೀವನ ಮಾಡತಾಳೆ. +ಬಾವಿಕಟ್ಟೆಯಿಂದ ಸ್ಟ್ರಿಂಗ್ ಜಿಗಿದು ಬರವಂತೆ ಅವ ಮಾಡಿದ್ದ. +ಅವಳು ಗುಡ್ಡದ ಮೇಲೆ ಹವೆ ಬಗ್ಗೆ ಒಂದ್ ಮಣೆ ತಂದು ಆಡತಿತ್ತು. +ಆತ ಹೆದರಿಸಿದ್ದಾ. +‘ಮೂರು ಲೋಕದಲ್ಲೆಲ್ಲಿದ್ದರೂ ಗೊತ್ತಾಗುತ್ತದೆ. +ನರ ಮನುಷ್ಯರು ಬಂದರೆ ಬಾವಿಲಿ ಗುದ್ದಿ ಬಾ’ ಹೇಳತಾನೆ. +ಕವಡೆ ಬಿಟ್ಟೂ ಮಣೆ ಹಿಡಿದು ಜಿಗದಳು. +ಅವ ನೋಡಿದ. +ಇವಳ ನೋಡಿ ಮೋಹ ಬಂತು. +ಕವಡೆ ಹಳ್ಳಿದೆ ಇವಳಿಲ್ಲ. +ಯಂತ್ರದಿಂದ ಪಾಸಾಗಿರಬೇಕೆಂದು ಹಳ್ಳ ತಕ್ಕಂಡು ನುಸಿಕೋಟೆಗೆ ಬಂದ. +ಜನರ ಹತ್ರ ಹೇಳಿದ, ‘‘ನೀವು ಹೇಳಿದ್ದು ಹೌದು. +ಹುಡಗಿ ಕವಡೆ ಬಿಟ್ಟು ಹೋಗದೆ’’ ಹೇಳಿದ. +ಅವರು ಕೃತಜ್ಞತೆಯಲಿ ಸತ್ಕರಿಸಿದರು. +‘‘ವಂದ ತಿಂಗಳು ತಾಯಿದ್ದಲಿ ಹೋಗುವೆ’’ ಹೇಳಿ ಕೊಟ್ಟ ಮೌಲ್ಯ ವಸ್ತು ತಕ್ಕೊಂಡು ಬಂದನು. +ಬಂದ ಕೂಡಲೆ ಚಿಕ್ಕಪ್ಪ ಶೆಟ್ಟಿಯರು, ‘‘೧೫ ದಿವಸ ಮೊದಲೆ ಕಳಸಿ ಬಂದಿತು’’ ಎಂದ್ರು. +ಜಗದೇಕವೀರ ಸದ್ದಿನ ಕೋವಿ ಮಾಡಿದ. +ಕಲಾವತಿ ಶೆಟ್ಟಿಗೆ ಹೇಳಿದಳು. +ಅವ ತಾತ್ಸಾರ ಮಾಡಿದ. +‘ತಾನು ಬಾಲೆ ಎಂಬಾ ಮಗ ಪ್ರೇಮಕ್ಕೆ ಬೀಳ್‌ತಾನೆ’ ದ್ರವ್ಯ ತಡಿ ಹಾಕಿಸಿದ್ದ. +ಅವಳು ಶೆಟ್ಟಿಗೆ, ‘‘ನಮಗೆ ಇದರ ಮೇಲೆ ಆಶೆಯಿಲ್ಲ ಕೊಡುವ’’ ಅಂದಳು. +ಊಟ-ಉಪಚಾರ ಆಯ್ತು. +ಹಳ್ಳ ದೀಪ ಇಡುವ ಇದರೊಳಗೆ ಇಟ್ಟಿದ್ದ. +ತಾಯಿ ದೀಪ ತಾಗಿಸಬೇಕೆಂದು ಹೋಗುತಾಳೆ. +ದ್ರವ್ಯ ಹರಳ ಕಂಡಳು. +ನೋಡಿದ ಕೂಡಲೇ ‘‘ಇವಳು ಹರಳೇಕೆ?’’ ಎಂದು ಶೆಟ್ಟಿಯಿದ್ದಲ್ಲಿ ಹೋಗತಾಳೆ, ಹಳ್ಳ ಕೊಟ್ಟಳು. +ಅವ ಮಂತ್ರಿಗಳಿಗೆ ತೋರಿಸಿದ. +ಅವ, ‘‘ಇದ್ರ ಗಂಡ ಚಂದ್ರಸೇನನಿಗೆ ಕೊಟ್ಟರೆ ಸಂತಸ’’ ಎಂದ ಅವನಿಗೆ ಮುಟ್ಟಿಸಿದ. +ಅಲ್ಲಿ ಕೂಡಿದ ಆ ಸಭಾ ಪಂಡಿತರು, ‘‘ವಿಚಿತ್ರ ವಸ್ತು ಹೌದು. +ಆಡುವ ಮಣೆ. +ಹುಡುಗಿ ಇದ್ದರೆ ಮಾತ್ರ ದೇವಲೋಕದಲಿ ಆಡತಕ್ಕ ಹಳ್ಳು.’’ +‘‘ಎರಡೂ ವಸ್ತು ತಂದರೆ ಒಳ್ಳೆಯದು. +ಇಲ್ಲ ೧ ತಿಂಗಳ ನಂತರ ಶೊಲಕ್ಕೇರಿಸತೇವೆ’’ ಎನ್ನುತಾನೆ. +ಮೋರೆ ಸಣ್ಣ ಮಾಡಿಕೊಂಡು ಬರುತಾನೆ. +ಅವಳು ಮಗಗೆ ಹೇಳುತಾಳೆ. +ಆಗ, ‘‘ಸಾವಿರ ಮಾರು ಉದ್ದದ ನಾಲ್ಕು ಸರಪಳಿ, ಒಂದು ತೊಟ್ಟಿಲಬೇಕು, ತಕ್ಕಂಡ್ ಹೋಗು,’’ ‘‘ತಾ ಹೋಗಿ ಬರುವೆ’’ ಅಂದ. +ಹಾಗೆ ಹೇಳಿದ, ತಯಾರ ಮಾಡಿದ್ರು ಹೋಗ್ ಸಾಮಾನು ಹಾಕಿಕೊಂಡು ದೋಣಿಯ ಮೇಲೆ ಹೋಗತಾನೆ. +ಚಿಕ್ಕಪ್ಪ ಯೋಜನೆ ಹುಡುಕಿದ ಬುಸಕೋಟನಲ್ಲಿ ನಾಲ್ಕ ಪಿಸ್ತೂಲ ಹಾಕಂಡಿದ್ದ. +‘‘ನಾ ಬರತೇನೆ ಹೇಳಿದ ಊರ ನೋಡುವೆ’’ ಅಂದ. +ಕೂರಿಸಿಕೊಂಡು ಹೋದ. +ಊರವರು ಬಂದರು. +‘‘ಮತ್ತೇನು ಕೈಹಾಕ್‌ತೆ? +ಮೊದಲಿನಂತೆ ಮಾಡಿದರೆ ಸಾಯುವೆ’’ ಎಂದು ಹೇಳ್ದ್ರು. +ಪಾತಾಳ ಕೇತುವಿದ್ದಲ್ಲಿ ಹೋಗಬೇಕೆಂದು ಹೊರಟ, ಬಾವಿಲಿ ತೊಟ್ಟಲ ನಾಲ್ಕ ಸಿಪಾಯಿ ಸಹಾಯದಿಂದ ಸರಪಳಿ ಹಾಕಿ ಬಿಟ್ಟ, ‘‘ಅಲುಗಿಸಿದಾಗ ಜಗ್ಗಿ ನೆಗಿರಿ’’ ಅಂದ. +ಅಲ್ಲಿ ತನಕ ಮಳ್ಳನಂತಿದ್ದ ಚಿಕ್ಕಪ್ಪ ಶೆಟ್ಟಿ. +ಅವ ತೊಟ್ಟಿಲಲ್ಲಿಳಿದ ಸಂಗಮರವರಿಕಲ್ಲ ಅರಮನೆ ನೆಲಮಾಳಿಗೆಲಿ ಮುಂದೆ ಹತ್ತಿಪ್ಪತ್ತು ಖೋಲಿ, ದೊಡ್ಡ ಮನೆ ಹೋದ. +ಮೆಟ್ಲು ಹತ್ತಿ ಹೋದ. +ಪಾತಾಳಕೇತು ಮಲಗು ಬಿಡಾರ ಮನೆಲಿ ಮನಗಿ ಬಿಟ್ಟಿದ್ದ. +ರೂಪ ಡಿಂಬ ನೋಡಿ ದಿಗಲ ಬೀಳಬೇಕು. +ಒಳಗೆ ಪ್ರವೇಶ ಮಾಡಿದ ಹುಡಗಿ ಹಾರ ಹಾಕಿತು. +ಕೂಡ್ಲೆ ಉಪದೇಶಿಸಿದಳು. +‘‘ಇವ ಎದ್ದರೆ ಮಾಯಾವಿ. +ಅವ ಮುನಿದರೆ ಜಗತ್ತನ್ನೇ ನುಂಗುವ ಶಕ್ತಿಯದೆ’’ ಅಂದಳು. +‘‘ಹನ್ನೆರಡು ತಾಸು ರಾತ್ರಿಗೆ ಅಡವಿಗೆ ಹೋಗುತಾನೆ, ಹಗಲು ಯೆರಡು ತಾಸು ನಿದ್ರೆ. +ಮೃಷ್ಟಾನ್ನ ತಯಾರ ಮಾಡಿಕೊಡಬೇಕು. +ಅವನ ಆಹಾರ ಆನೆ, ಹಾವು, ಗಮಯ ಯಾವುದೂ ತಿನ್ನುತ್ತಾನೆ. +ಕಿವಿ ರಂದ್ರದಲ್ಲಿ, ಮೂಗಲಿ, ಕೈಲಿ, ಬಾಯಲ್ಲಿ ಕಟ್ಟಿ ತಂದು, ಹನ್ನೆರಡು ಕಾವಲಿ ನೀರು ಕಾಯುತ ಬೀಳತದೆ. +ತಂದು ಪ್ರಾಣಿಗಳ್ನ ಅದರಲ್ಲಿ ಚಲ್ಲಿದರಾಯ್ತು. +ಸಾಯತವೆ ಹಿಡದು ತಿಂಬುದು.’’ +ಆವಗ ಜಗದೇಕ ಕೇಳ್ದ, ‘‘ಶಕ್ತಿ ಬರಲಿಕ್ಕೆ ದೈತ್ಯರ ವರ ಇದೆ ಏನು?’’ + ‘‘ಅವ ಏಳು ಹೊತ್ತಾಯ್ತು’’ ಹೇಳಿ ಗೋಪ್ಯದಲ್ಲಿಟ್ಟಳು. +‘‘ಅವ ರಾತ್ರಿ ಸಂಚಾರ ಹೊರಟರೆ ಬೆಳಿಗ್ಗೆ ಬರುವುದು’’ ಅಂತ ಎಲ್ಲಾ ಮಾತುಕತೆ ನಡೆಸಿದರು, ಯುಕ್ತಿ ಮಾತು. +‘‘ವರ ಇರಬೇಕು. +ಗುಟ್ಟು ತಿಳಿದೂ ಬಿಡಬಹುದು. +ಅವನ ಲಗ್ನಾಗಲಿಕೆ ನೀನು ತಯಾರಾಗಬೇಕು. +ಅವನ ನಾಳೆ ೧೨ ಗಂಟೆಯೊಳಗೆ ಲಗ್ನಾಗು. +ತನ್ನ ಬೆಂಬಲ ಈತು.’’ + ‘‘ನಾಳೆ ನೀನು ವನಸಂಚಾರಕ್ಕೆ ಹೋಗುಕಿಲ್ಲ ಹೇಳು. +ಕಾಳಿಕಾದೇವ್ರು ಹೇಳಿತು ಹೇಳು.’’ + ‘‘ಪ್ರಾಣಿಗಳನು ತಿನ್ನದಿದ್ದರೆ ಬದುಕೆನು’’ ಎನ್ನುತಾನೆ. +‘‘ಅಲ್ಲಿ ಜೀವ ಬಿಡುವೆ ನೀನು. +ನಮಗೆ ವಿಪತ್ತು ಬರುವಂತೆ ಪ್ರಾಣಿಗಳು ಮಾಡಿದರೆ? +ತಾನು ಸಾಯುವೆ ಬಾವಿವಳಗೆ ಎನ್ನು’’ ಎಂದು ಹೇಳಿಕೊಟ್ಟಾ. +“ಅವ ಹಾಗಿಲ್ಲ ಹೀಗಿಲ್ಲ. +ಅನ್ನುವ ನಂಬೂಕಿಲ್ಲ. +‘ನೀನು ಈಶ್ವರನ ಆಣೆ ಮಾಡ್ತಿದೆ. +ಮುಟ್ಟಿ ಹೇಳಿದರೆ ನಂಬುವೆ’ ಎನ್ನು ಆಗಲವ ನಿಜ ಸಂಗತಿ ಹೇಳುತಾನೆ” ಅಂದ್ಕ ಹಾಗೇ ಅಂತದೆ. +ಅವನ ಹತ್ತರ ಮಾಯಾವಿ ಅವ ಹಾಗೇ ಅಂತಾನೆ. +‘‘ಹುಟ್ಟಿದ ಮನುಷ್ಯಗೆ ಮರಣ ಇದ್ದೆ ಇದೆ. +ಈಶ್ವರನ ಅಣೆ ಹಾಕಿ ಹೇಳಿದರೆ ನಂಬುವೆ’’ ಅಂತಾಳೆ. +ಇವ, ‘‘ಡಿಂಬದಂತ ಮರವಿದೆ. +ಎರಡು ಹೆಗೆಕೈಯಂತೆ ತಲೆಯಂತೆ ಅಕಾರ, ಅವನ ರೂಪಿನಂತೆ. +ಅದು ಈಶ್ವರನ ವರ. +ಈ ಮರ ನನ್ನ ದೇಹ, ಇದನ್ನು ಬೆಂಕಿ ಹಿಡಿದು ಕಡಿವಂತವರಿಲ್ಲ. +ಕಡಿವಂತ ಹತಾರ ಮೊಳೆಯ ಪೆಟ್ಟಿಗಿಲದೆ ಮಹಾದೊಡ್ಡ ತಲವಾರ ತೆಗಿಬೇಕು.’’ + ‘‘ಕೀಲಿ ತೆಗೆಬೇಕಲ್ಲ.’’ + ‘‘ಕೀಲಿ ಗಿಳಿ ಹೊಟ್ಟೆಯೊಳಗದೆ. +ಈಜಿ ದಿಡಕೆ ಹೋದರೆ ಆಚೆಗೆ ಹೋಗತದೆ. +ಗಿಳಿ ಮುರಿದ ಕೂಡಲೇ ಹೊಟ್ಟೆಯೊಳಗೆ ಕೀಲಿಯಿರತದೆ.’’ + ‘‘ಅದು ಸಾಧ್ಯವಿಲ್ಲ’’ ಅಂತದೆ. +ಇದು, ‘‘ಈಶ್ವರನ ಆಣೆ ಮುಟ್ಟಿ ಹೇಳಿರಿ’’ ಅಂತದೆ. +ಅಂತ ನಿಜ ಸಂಗತಿ ಆಣೆ ಮಾಡಿದ. +ಆಗ ಅದು, ‘‘ನಾಳೆ ಲಗ್ನಾಗುವ’’ ಅಂತು. +‘‘ನಿದ್ರೆ ಗೊರಕೇಲಿ ನನ್ನ ಶ್ವಾಸದಲ್ಲಿ ನೀ ಸಿಕ್ಕರೆ ಪಾರಾಗಲಾರೆ, ಪ್ರಾಣ ಹೋಗಬಹುದು, ದೂರ ಹೋಗಿರಬೇಕು’’ ಅಂತ ಹೇಳಿದ್ದ. +ಅವಗೆ ನಿದ್ರೆ ಬಿದ್ದ ಕೂಡಲೆ ಯೋಜನೆ ಮಾಡತಾರೆ ಅವರು. +ಅವಳ ಹತ್ರ ಒಂದು ತಂದ ಗಿಳಿ ಪಂಜರ ಇತ್ತು. +ಈ ಗಿಳಿಗೆ ಉಪದೇಸಿಸಿ, ಆ ಗಿಳಿಯನ್ನು ಪ್ರೇಮದ ಸರಸಾಟದಲಿ ಹಿಡಿದು ತರಬೇಕು ಅಂದಳು. +ಅದು ಗಿಳಿನ್ನ ಸುಲಭದಲ್ ಹಿಡಿಯುತದೆ. +ನದಿ ನಾಲ್ಕು ಮೈಲು ಪ್ರೇಮ ಹುಟ್ಟಿಸಿಕೊಂಡು ಗಿಳಿ ತರತದೆ. +ಜಗದೇಕಗೆ ಕೊಡತಾಳೆ. +ರಾತ್ರಿ ಸಂಚಾರಕೆ ಹೋದಾಗ ಮಾಡುವದು. +ಗಡಬಡೆಯಿಂದ ಬೇಗ ಎದೆಗುಂದದೆ ಕೀಲಿ ತೆಗೆದು ಹಕ್ಕಿ ಮುರಿದಾಗ ಸರೋವರ ಆರುತದೆ. +ಪೆಟ್ಟಿಗೆ ಮಿಂಚತದೆ ಇಪ್ಪತ್ತೇಳು ಹೆಡೆ ಮಾಶೇಷನೇ ತಲವಾರ. +ನೋಡಿದಾಗ ಅಂಜಿ ಹಿಂದೆ ಸರಿಬಾರ್ದು. +ಹೆಡೆ ಬಿಚ್ಚಿ ನಿಂತಿತ್ತು..ಮಾಶೇಷ. + ಓಡಿ ಹಿಡಿದರೆ ತಲವಾರವಾಯ್ತು ಮಾಶೇಷ. +ಆಗ ಹಿಡಿದ ಕೂಡಲೇ ತಲವಾರ ಮರದ ಬೇರಿಗೆ ಕತ್ತಿ ಹಾಕಿದ. +ಕಡಿದು ಹೋಯ್ತು ಮರದ ಯೆರಡು ಹೆಗೆ ಕಡಿದ. +ಅವ ಬರುವಾಗ ಘೋರ ಸಪ್ಪಳ, ಅಲ್ಲಿಂದ ಬರತಾನೆ. +ಅದು ಮನೆ ಹತ್ತರ ಅವ ಬರುವಾಗ, ಮುಂಡ ಬಗಿತಾನೆ, ಬಿದ್ದ ರಕ್ತದ ಕಾಲುವೆ ನೋಡಿ ನಾಗಕನ್ನಿಕೆ ಅದು ಹೆದರಿ ಹೋಗಿ ಬಿಟ್ಟಿತು ಹೌಹಾರಿ. +‘‘ಯಾವ ವಸ್ತುವೂ ಬೇಡ. +ಮೇಲೆ ಹೋಗುವೆ’’ ಅಂತದೆ. +ಮಾಣಿಕ್ಯ ಇತ್ಯಾದಿ ಇತ್ತು. +‘‘ಗಳಿಸಿದ್ದು ಮಾಣಿಕ್ಯ ಎಲ್ಲ ತಕ್ಕೊಂಡು ತೊಟ್ಟಿಲೊಳಗೆ ಹೋಗಬೇಕು’’ ಅಂದ. +ತಯರಾಗಲಿಲ್ಲ ಅವಳು. +‘‘ನೀನು ಮುಂದೆ ಹೋಗು ನಾ ಹಿಂದೆ ಬರುವೆ’’ ‘‘ತೊಟ್ಲ ಬಿಡು’’ ಅಂದ. +ಸಿಪಾಯರು ಸರಪಳಿ ಜಗ್ಗಿದಾಗ ಬಂದಳು ಮೇಲೆ ಹತ್ತಿ. +ಅದು ತೊಟ್ಲ ಬಿಟ್ತು ಕೆಳಗೆ. +ಹತ್ತು ಮಾರಿದ್ದಾಗ ಚಿಕ್ಕಪ್ಪ ಶೆಟ್ಟಿ ಎರಡೆರಡು ಪಿಸ್ತೂಲ ಹಿಡಿದು ಶಿಪಾಯರಿಗೆ, ‘‘ಜೀವ ಬೇಡಾದ್ರೆ ಒಗಿರಿ ಇಲ್ಲಾ ಬಿಡಿರಿ’’ ಎಂದ. +ಹೌಹಾರಿದರು. ಸರಪಳಿ ಹಿಡಿದು ಜಗ್ಗಿದ ಶಿಪಾಯರನ್ನು ಹೊಡೆದ ಅವ್ರು ಎರಡು ಜನ ಹೆದರಿ ಕೈ ಬಿಟ್ಟರು. +ಕೆಳಗೆ ಜಗದೇಕ ಬಿದ್ದ ತೊಟ್ಲ ಸಂಗಡ. +ಇದು ದೈತ್ಯನಿಂದ ತಪ್ಪಿ ಕ್ರೂರ ಚಿಕ್ಕಪ್ಪ ಕೈಗೆ ಶಿಕ್ತು. +ಅವ ಕೈಹಿಡಿದು ದೋಣಿನ್ನ್ ಎಳೆದು ಶಿಪಾಯರ ಕರೆದು ಹತ್ತಿಸಿ ಬಂದ. +ಆಗ ಮನೆಗೆ ಮುಟ್ಟಿದ ಪಟ್ಣಶೆಟ್ಟಿ ಚಂದ್ರಸೇನನಿಗೆ ಅವಧಿ ಕೊಟ್ಟಿದ್ದರ ಮೊದಲೆ ಮಣೆ - ಹೆಣ್ಣು ಒಪ್ಸ್‌ದ. +ಗಂಡನ ಪ್ರೇಮದಿಂದ ಊಟ ಬೇಡ ಚಿಂತೆ, ದೇವಭಕ್ತಿ ‘‘ಹದಿಮೂರು ದಿನ ಸಬೆ ನಡೆಬೇಕು’’ ಎಂದಿ ಚಂದ್ರಸೇನಗೆ ಹೇಳಿದಳು. +‘‘ನಾ ದೇವಲೋಕದ್ ಹೆಣ್ಣು ಇಲ್ಲಿರಬೇಕು ಅಂದರೆ ಗೀತಾ-ಪಾರಾಣ ಆಗಬೇಕು’’ ಅಂದಳು. +‘‘ಇಪ್ಪತ್ನಾಲ್ಕು ತಾಸೂ ನಡೇಬೇಕು ಖರ್ಚೂಕೊಡಿ’’ ಅಂದಳು. +ಒಪ್ಪಿ ಹಾಗೇ ಮಾಡಿದ. +ಬಾಜೂಗ್ ಒಂದು ಖುರ್ಚಿ ಇಡತಾಳೆ ಗಂಡಗೆ. +ತಾನು ಸಣ್ಣ ಕುರ್ಚಿಲಿ ಕೂತಿರ್ತಾಳೆ. +ಕೀರ್ತನೆಕಾರರು ಹರಿಕಥೆ ಹೇಳುತ್ತಿದ್ದರು. +ರಾತ್ರಿ ಹನ್ನೆರಡು ಕಳೆಯಿತು. +ಹದಿಮೂರನೇ ರಾತ್ರಿ ದಿನ ಗಂಡ ಬಂದ. +ಸಭೆಲಿ ಜಗದೇಕ ನಡ್ದ ಕತೆ ಎಲ್ಲ ಹೇಳ್ತ. +ಅವಗೆ ನಾಗಕನ್ನಿಕೆ ಮಾಲೆ ಹಾಕಿತು. +ಪಟ್ಟಣ ಶೆಟ್ಟಿಗೆ ನೆನಪು ಬೇಸರ. +ತಂದೆ ಮಗನ ತಂತ್ರಿಗೆ ಆನಂದಪಟ್ಟು ಕಲಾವತೀನ ಕರಸ್ತಾನೆ. +ಚಿಕ್ಕಪ್ಪ ಶೆಟ್ಟಿ ಕುತಂತ್ರಿಗೆ ಶಿಗಿದು ತೋರಣ ಮಾಡಲು ಅಪ್ಪಣೆ ಕೊಟ್ಟ. +ಮಗ್ನ ಲಗ್ನ ಮಾಡಿಸಿದ. +ಎಲ್ಲರೂ ಸುಖ-ಸಂತೋಶದಾಗೆ ವಳದ್ರು. +ಭಟ್ಟರಿಗೆ ಐದ್ ಜನ ಗಂಡ್ ಮಕ್ಳು. +ಹೆಂಡ್ತಿ ಸತ್ ಹೋಯ್ತು. +ಭಟ್ರು ಯತೆ ಮೇನೆ ಬಿದ್ರು. +ಐದ್ ಜನ ಗಂಡ್ ಮಕ್ಳೂ ಸತ್ ಹೋದ್ರು. +ಬೇಕಷ್ಟಿದೆ ಅವರಿಗೆ. +ತನ್ನ ಯಾರ್ ನೋಡೂರು ಹೇಳ್ ಅವರಿಗೆ ಮನಸಿಗೆ ಕಂಡ್ತು. +ರಾಜನ ಮನೆಲೆ ವಂದ್ ಹೆಂಗ್ಸು ಇತ್ತು. +ಅರ್ದ ಪರಾಯ ಅಗೂದು ಮಕ್ಕಳೇ ಇಲ್ಲ ಅವರಿಗೆ. +ಭಟ್ರು, ‘ತನ್ ಬೊಜ್ಜ ಕರ್ಮ ತಯಾರ್ ಮಾಡ್ತೆ’ ಅಂದ್ ಹೇಳಿ ಇಷ್ಟು ಗಾತ್ರ ದೊಡ್ಡ ಗಳ ಮಾಡ್ಕಂಡಿ, ಅದರಲ್ ಕುರ್ಜಾತ, ನಾಣ್ಣಿ, ಪವನ ತುಂಬ್ಕಂಡೆ, ಅರವಿ ಹಾಕಂಡ್ ದಾರಿ ನಡೆದ್ರು. +ಗೋಕರ್ಣೆಕ್ ಹೋಗಬೇಕಂದಿ ರಾಜನ ಮನೆಗೆ ಹೋದ್ರು. +‘‘ಮಗನೆ ಇದ್ ತಗಂಡ್ ಹೋಗ್ ವಳಗಿಡಿ’’ ಅಂದ್ರು. +ತಕಂಡ್ ಹೋದ್ರು. +ಆಸ್ರ ಬೀಸ್ರ ಕೊಡಲಿಲ್ಲ. +‘‘ರಾತ್ರಿ ಇದ್ರ್ಲ್‌ಯೆಂತಾ ಅದೆ?’’ ಹೇಳ ಅದ್ನ್ ಬಿಡ್ಸದ್ರು. +ಕುರ್ಜಾತ, ನಾಣ್ಣಿ ಅದೆ. +ಹರಿವಾಣದಲ್ ಸೊರಿಕಂಡಿ, ಮೇನ್ ಯೆಯ್ಡ ಪವನ ನಾಣ್ಯಿ ಹಾಕಿ, ಅಟ್ಟು ಕಲ್ ಗುಂಡ್ ಹಾಕಿ ಸಮಾ ಮಾಡಾರೆ, ಮೇಲೆ ಅರವಿ ತುರಕಾರೆ, ಹಾಗೆ ಉಳಿತು. +ಬೆಳಗಾಗ ಬಟ್ರು ‘‘ದೊಣ್ಣೆ ಕೂಡು’’ ಅಂದ್ರು. +ರಾಜನ ಹೆಂಡ್ತಿ, ‘‘ಬೇಡ ಉಳಿರಿ’’ ಅಂದಿ ಸೊಲ್ಗಿ ಮೇಲೆ ಹಾಲು ತುಪ್ಪ ಯೆಲ್ಲಾ ಹಾಕಿ ಕೊಟ್ತು. +‘‘ಉಳಿರಿ ನಾಳೆ ಹೋಗಬವ್ದು’’ ಅಂದಳು. +ಉಂಡ್ಕಂಡಿ, ತಿಂದ್ಕಂಡಿ ರಾಜನ ಕೂಡೆ ತನ್ನ ಕತೆ ಹೇಳಿದ್ರು. +‘‘ಹೋಗಿ ತಿರಗಿ ಹೀಗೆ ಬನ್ನಿ’’ ಅಂದ್ರು ರಾಜ. +ಬಟ್ರು ಗೋಕರ್ಣಿಕೆ ಹೋಗಿ ಮಕ್ಕಳ ಕಿರಿಯ ದಾನ, ವಸ್ತ್ರ ಬಿಸ್ತ್ರ ಯೆಲ್ಲಾ ಮಾಡಿರು. +ಹರಿವಾಣ ಹಿಡಿ ಅಂದ್ರು, ಹಿಡದ್ರು ಐದ್ ಜನ ಬಟ್ಟಕ್ಕೊಳು ಬರಿ ಕಲ್ಗುಂಡು ಯೆಯ್ಡ್ ಪವನ, ಯೆಯ್ಡ್ ನಾಣ್ಣಿ, ‘‘ನಿಮ್ಗೆ ಇನ್ನೊಂದ್ ಜನ್ಮಕ್ ಕೊಡ್ತೆ’’ ಹೇಳ್ರು. +ಸತ್ತೇ ಹೋದ್ರು. +ಕಾಯ ವಂದು, ತೆಕ್ಕಂಡ್ ರಾಜನ ಮನಿಲಿ ಬಂದ್ರು. +ರಾಣಿ ಬಸುರಾದ್ರು. +ಅರ್ದ ಪರಾಯಾಗಿತ್ತು. +‘‘ರಾಜನ ಹಿಂಡ್ತಿ ಬಸರಿ’’ ಅಂದ್ಹೇಳಿ ನಾಕೈದ್ ತಿಂಗ್ಳಾಯ್ತು. +ಏಳ್ ತಿಂಗ್ಳಿಗೆ ಊರೂರ್ ಕರದಿ ಬಯಕಿ ಹಾಕ್ರು. +ವಂಬತ್ ತಿಂಗಳಾಯ್ತು. +ಜನ್ನೆ ಆಯ್ತು.ಹುಡ್ಗ ಹುಟ್ದ. +ದಿನಾ ದಿನಾ ಇಂದ್ ನೋಡ್ರ ಯೆಯ್ಡ್ ತಿಂಗ್ಳ ಬಾಲೆ, ನಾಳೆ ನೋಡ್ರೆ ನಾಕ್ ತಿಂಗ್ಳ ಬಾಲೆ, ದೊಡ್ಡಾದ. +ಮುಂಜಿ ತಯ್ಯಾರ್ ಮಾಡ್ರು. +ಹದ್ನಾರ್ ವರ್ಸಕ್ ಮುಂಜಿಗೆ ತಯ್ಯಾರ್ ಮಾಡ್ದ್ರು. +ವಂದೇ ಹುಡ್ಗ. +‘‘ಅಪ್ಪ, ಯಾರಿಗೆ ಹೇಳ್ತಿ ಬಟ್ಟಕ್ಕೊಳಿಗೆ?’’ + ‘‘ಇಲ್ಲಿಗೇ ಬರೂರು ಮಗ್ನೆ’’ ಅಂದ ರಾಜ. +‘‘ಗೋಕಣ್ದ ಬಟ್ಟಕ್ಕೊಳಿಗೆ ಹೇಳಿ’’ ಅಂದ ಮಗ. +‘‘ಅಗೂದು’’ ಅಂದ ಅಪ್ಪ. +ಗೋಕಣ್ದ ಬಟ್ಟಕ್ಕೊಳಿಗೆ ಹೇಳ್ದ್ರು. +ಬಂದು ಮುಂಜಿ ಸಾಗ್ಸದ್ರು. +‘‘ಎಲ್ಲಾ ಚಾಕ್ರಿ ಆಯ್ತೇ?’’ ಕೇಳ್ದ. +‘‘ಆಯ್ತು’’ ಅಂದ್ರು. +‘‘ಅಮ್ಮ ಬೀಗದ ಕಾಯಿ ಕೊಡೆ ನಿಮ್ ಕೂಡ ಕೊಟ್ಟಿದ್ ತಕಂಡ್ ಬನ್ನಿ’’ ಅಂದ. +ಅದ್ಕೆ ಕಪಾಲ್ ಮೇಲ್ ಹೊಡ್ದ ಹಾಂಗೆ ಆಯ್ತು. +ತಿಳಿದ್ ಹೋಯ್ತು. +ಚಾವಿ ಕೊಟ್ತು. +ಹರವಾಣ ತಂದಿ, ‘‘ಹಿಡಿರಿ ಅಟ್ಟೂ ಜನ ಹಂಚ್ಕಳಿ ಋಣತೀರ್ತೂ ತೀರ್ತೂ?’’ ಅಂದ. +ಬಿದ್ ಬಿಟ್ಟ. +ಜೀವ ಹೋಯ್ತು ಹುಡ್ಗ೦ದು. +ಊಟ ಇಲ್ಲ.ಆಸ್ರಿ ಇಲ್ಲ. +ಬಟ್ಟಕ್ಕೊಳ್ ಯೆನಂದ್ರು? +‘‘ಅವ್ರು ಅಟ್ಟಕ್ಕೆ ಬಂದಿರು ನೀವ್ ತೀಡುದ್ ಪುಕ್ಸಾಟೆ’’ ಅಂದ್ರು. +ವಂದ್ ರಾಜ್ನಿಗೆ ವಂದ್ ಹುಡ್ಗ. +ಪರ್ದಾನಿಗೆ ವಂದ್ ಹುಡ್ಗ. +ಅವ್ರು ಪಿರಾಯಕ್ ಬಂದ್ರು. +‘‘ಗನಾ ನೆಂಟತನ ಬೇಕು. +ಈ ಪೋಟ್ ತಕಹೋಗು. +ಹೀಗೇ ಉಳೀಬೇಕು, ಚಂದ ಹುಡ್ಗಿ ಬೇಕು. +ಬೇರೆ ರಾಜಿಕ್ ಹೋಗಿ ತಲಾಸ್ ಮಾಡ್ಕಂಡ್ ಬರಬೇಕು’’ ಹೇಳಿ ಪರದಾನಿ ಕೂಡೆ ರಾಜ ಹೇಳ್ದ. +‘‘ಬೇರೆ ಬೇರೆ ಊರ್ ತಿರ್ಗು. +ಯೆಷ್ಟ ಊರದೆ ಯೆಲ್ಲಾ ಕಡೆ. +ರಾಜನ ಮನೇಲಿ, ಸಾವ್ಕಾರ ಮನೆಯ ತಿರ್ಗಬೇಕು. +ಅಷ್ಟ ಚಂದ ಹುಡ್ಗಿ ಶಿಕದ್ರೆ ತರಬೇಕು’’ ಅಂದ್ರು ಪರದಾನಿಗೆ. +ಪೋಟ್ ತಕಂಡ್ ಹುಡ್ಕೋಕ್ ಬಂದೋರು, ಅವರ ಮನೆ ಪರದಾನಿ ಇವರ ಮನೆ ಪರದಾನಿ ತಿರಗಿ ತಿರಗಿ ಅಂತೋರ ಶಿಕ್ದೆ ಯತೆ ಬಿಡ್ತೆ ಕೂತರೆ, ಹೋಳೆ ಆಚ್ಗೆ ಇಚ್ಗೆ, ಅವರಿಗೆ ಆಗ ಬಗೇಲ್ ಕಣ್ ಕೂರ್ತು. +ತಿರಗ್ ತಿರ್ಗಿ ನಾಕೈದ್ ದಿನಾಯ್ತು. +ಊಟೆಲ್ಲ, ಅಲ್ಲೇ ವರ್ಕ್ ಬಂದ್ ಹೋಯ್ತು ಅವರಿಗೆ. +ಈ ಪೋಟು ಆ ಪೋಟು ಬಡ್ದಾಡ್ಕಂತೇ (ಹಾರಾಡ್ತಿದೆ) ಬಿದ್ದಾರೆ. +ಮೇನ್ ಆಕಾಸಕ್ ಹೋಗೂದು, ಕೆಳ್ಗ ಬರೂದು ಯೆಯ್ಡೂ ಫೋಟಾ ವಟ್ಟಾಡಿ, ಇವರ್ ಯೆಚ್ರಾಗಿ ಹೀಗೆ ನೋಡ್ದ್ರು, ನೋಡೂಕ್ ಎರ್ಡೂ ಪೋಟು ಕೆಳ್ಗ್ ಬಂದ್ ಕೂತ್ತು. +ಪೋಟಾ ಅದೆ. +ಆಚೆ ಪೋಟಾ ಆಚೆ ಕುಳ್ತು ಈಚೆ ಪೋಟಾ ಈಚೆ ಕುಳ್ತು. +ಹೆಣ್ಣಿನ ಪೋಟಿದ್ದೋರು ದೋಣಿ ಮೇಲೆ ಆಚೆ ದಾಟಿದ್ರು, ದಾಟ್ ಹೋಗಿ ಅವರ ಹತ್ರ ಮಾತಾಡ್ದ್ರು. +ಹೆಣ್ಣಿನ ಪೋಟನ್ ತಕಂಡ್ ಬಂದವ್ನ್ ಕರ್ಕಂಡ ಆ ರಾಜನ ಮನೆಗ್ ಹೋದ್ರು. +ರಾಜ, ‘‘ನನ್ನ ಹುಡ್ಗಿಗ್ ತಕ್ಕನ್ ಹುಡ್ಗ ಶಿಕ್ದ. +ಮನ್ಸಿಗ್ ಹೋದ್ ಹುಡ್ಗ ಶಿಕ್ದ, ಇವ್ನಿಗೇ ಕೊಡಬೇಕು. +ಯಂಟನೇ ದಿನ್ಕೆ ಲಗ್ನಾ ಹಿಡಿಬೇಕು’’ ಹೇಳಿ ಹೇಳ್ ಕಳ್ಸರು ಪರದಾನಿ ಕೂಡೆ, ‘‘ನೀವ್ ಬನ್ನಿ ಮೂರ್ತ ಇಡೂಕೆ’’ ಹೇಳಿ ಹೆಣ್ಣಿನ ಬದಿ ಅರಸು ಕಾಗ್ತ ಕೊಟ್ಟ. +ಹೆಣ್ಣಿನ ಪೋಟೋನು ತಕಂಡ್ ಪರದಾನಿ ಮನೆಗ್ ಬಂದ. +‘‘ಆಗೂದು’’ ಅಂದ್ ಹೇಳ್ ಬಂದ. +ಅಪ್ಪ ಮೀವ್ಕ್ ಹೋದ, ಪರದಾನಿ ಹುಡ್ಗ ಪೋಟೋ ನೋಡ್ ಬಿಟ್ಟ. +ನನ್ನಪ್ಪ ನನ್ಗೆ ಇಷ್ಟು ಚಂದ ಹುಡ್ಗಿ ನೆಂಟಸ್ತನ ಮಾಡ್ಲಿಲ್ಲ ಹೆಳ್ದ. +ದಾತ್ ತಪ್ ಬಿಟ್ಟ. +ತಂದ್ ಜೀವ ಜೀವಾಯೇನಿಲ್ಲಾ. +ಬರೀ ಕೊಲ್‌ಗೆಟ್ಟಿ ಬಿದ್ದಾಂಗೇ ಬಿದ್ದ. +ವಂದ್ ತಾಸಿನ ಮೇಲೆ ಯೆಚ್ರಾಕ್ಕಂಡ್, ‘‘ಅಪ್ಪ ತನ್ಗ್ ಯೆಂತಾ ಇಷ್ಟ್ ಚಂದ ಹೆಣ್ ನೆಂಟಸ್ತನ ಮಾಡ್ಲಿಲ್ಲಾ’’ ಕೇಳ್ದ. +ಪರದಾನಿ, ‘‘ಅವ್ರಿಂದ್ ನಮ್ಮ ಸಂಸಾರ ಹೋಗ್ತದೆ ನಾವು ಅವ್ರ ಹೇಳ್ದಾಂಗೆ ಕೇಳಬೇಕು. +ನಿನ್ಗೆ ಇದ್ಕೂ ಚೆಂದ ಹೆಣ್ ತಂದ್ ಮದ್ವೆ ಮಾಡ್ಸೆ’’ ಅಂದ. +ಪರ್ದಾನಿ ಹುಡ್ಗ ಸುಮ್ನೆ ವಳ್ದ. +ತಕೊಂಡೋಗ್ ರಾಜನ ಕೈಲ್ ಪರದಾನಿ ಪೋಟೋ ಕೊಟ್ಟ, ಚೀಟಿನೂ ಕೊಟ್ಟ. +ಯೆಂಟ್ ದಿನ್ನ್ಕ್ ಮದ್ವೆಗ್ ತಯಾರಾಕ್ಕಂಡಿ, ಹೋಗದಿದ್ ಊರಿಗ್ಯೆಲ್ಲಾ ಪತ್ರ ಬರೆದ್ರು ಹೋದ ಊರಿಗ್ ಡಂಗುರ ಸಾರ್‌ದ್ರು. +ಪೇಟ್ ಪಟ್ಲ ಶೃಂಗಾರ ಮಾಡ್ಕಂಡಿ ದಿಬ್ಣ ತಕಂಡೋದ್ರು. +ದಿಬ್ಣ ಹೋಗ್ ಹೊಕ್ತು. +ಬಾಶಿಂಗ ಕಟ್ಕಂಡಿ ಮಂಟಪ್ದಲ್ಲಿ ಕುಂತಾನೆ ರಾಜ್ನ ಹುಡುಗ, ಮದ್‌ವಾಳ್ತಿ ತಂದ್ ಕೂರ್ಸುಕೇಯ ಪರದಾನಿ ಹುಡ್ಗನಿಗೆ ಮತ್ ಯೆಚ್ರ್ ತಪ್ ಹೋಯ್ತು. +‘‘ಅಟ್ ಚೆಂದ ಬೊಂಬೆ ತನ್ಗಾತ್ತಿತ್ತಲ್ಲ’’ ಹೇಳ್ ದಾತ್ ತಪ್ ಹೊಯ್ತು. +ಮದಿಯಾಯ್ತು. ಸಕ್ರೆ ಬಾಳೆಹಣ್ಣು ತಿಂದ್ರು. +ಊಟ ಮಾಡ್ಕಂಡ್ರು. +ಬೆಳಗಾಗೂಕೆಯ ದಿಬ್ಣ ತಕಂಡ್ ಮನೆಗೆ ಬಂದ್ರು. +ಮನೆ ತುಂಬಾಯ್ತು. +ಕಡೆಗ್ ದಿಬ್ಣ ಹೋಗ್ಲೆ ಇಲ್ಲ. +ಗಂಡ್ನ ಮನೆಲ್ ವಳ್ದದ್ದೇಯ. +ಒಂದ್ ವರ್ಸಾಯ್ತು. +ಕಡೆಗ್ ಅದು ಯೆರ್ಡ್ ಮೂರ್ ತಿಂಗಳ ಬಸ್ರಿ. +ಯೇಳ್ ತಿಂಗ್ಳಾಯ್ತು. +ಬಯ್ಕಿ ಹಾಕೂಕ್ ಬಂದ್ರು. +ಹಾಯ್ಕಂಡ್ ಅಪ್ನ ಮನೆಗ್ ಕರ್ಕಂಡ್ ಹೋದ್ರು. +ಕೂಸಿಗೆ ಕಡೆಗದ್ ಜನ್ಯಾಯ್ತು. +ಹುಡ್ಗ ಸುರಿಚಂದ್ರಂತವ್ನೇಯಾ. +ಜನ್ಯಾದ್ ನಾಕ್ ತಿಂಗ್ಳಾಯ್ತು. +ಅರಸ ಪರದಾನಿ ಕರ್ಸಿ, ‘‘ಪರದಾನಿ ಕರ್ಕಂಡ್ ಬಾ’’ ಅಂದ. +ಪರದಾನಿ ಕರ್ಕಂಡ್ ಬರಬೇಕೂ ಹೇಳಿ ‘‘ಆಗೂದು’’ ಅಂದ. +ಪರದಾನಿ ಮಗ ಅಪ್ ಬರೂಕೇ ವೋಡ್ತೇ ಬಂದ. +‘‘ರಾಜ್ನ ಹುಡ್ಗನ ಕೂಡೆ ತಾನೇ ಹೋಗ್ತೆ’’ ‘‘ಅಪ್ ಬೇಡ’’ ಅಂದ. +ನಾನು, ನೀನು ವಂದ್ ಬಾಳೆ ಮೇನ್ ಊಟ ಮಾಡ್ತ್ರು ನಾಹೋಗ್ಲೋ ಕೇಳ್ದ. +‘‘ಯೇನ್ ಮಾಡ್ತೆ ನೋಡು ನೀನು’’ ಅಂದ. +ರಾಜ್ನ ಹುಡ್ಗ, ‘‘ತಾನೇ ಹೋಗ್ತೆ’’ ಹಟ ಮಾಡ್ದ. +‘‘ನೀನೇ ಕರ್ಕಂಡ್ ಬಾ’’ ಅಂದರು. +ಮಜ್ಜಾನೆ ಹೋಗೂಕೆ ಮೊಕ ಗಿಕ ತೊಳ್ದ. +ಆಸ್ರ ಕುಡ್ದ. ಸಂಜೆಯಾಯ್ತು. +ಕುದ್ರೆ ತಾಂಕ್ಲ್ ಮೇನ್ ಹೋಗಿದ್ದಾ. +ಮಾರ್ನೆದಿನ ಬೆಳಗಾಗ, ‘‘ನಿಮ್ ಮಗಳಿಗೆ ಏನೇನ್ ಕೊಡ್ತಿ?’’ ಹೇಳಿ. +‘‘ಅರಸು ಇಂದೇ ಕರ್ಕಂಬಾ’’ ಹೇಳಿದ್ದ. +‘‘ಕಳಿಸ್ ಕೊಡಿ’’ ಅಂದ. +ಮಾಣಿಗೆ ಚಿನ್ನದ ಬಳಿ, ಹನಮಂತಿ ತಾಳಿ, ಕುತ್ಗಿಗೆ ಚಿನ್ನದ ಸರಪಳಿ ಮಾಡ್ಸ್ ಹಾಕುದ್ರು. +ಸಂಜಿ ಕಡೆಗೆ ತಯಾರಾಯ್ತು. +ಮಗಳಿಗೆ ಕೆಲ್ಸ ಮಾಡೂಕ್ ವಂದ ದಾಸಿ ಕಳ್ಸಕೊಟ್ರು. +ವಂದ್ ಆಕ್ಳ, ಆಕ್ಳ ಕರ ಪರದಾನಿ ಮಗ್ನ ಕೂಡೆ ಕಳಿಸ್ ಕೊಟ್ರು. +ಕಳಿಸ್ ಕೊಡುಕೇಯ ಕರ್ಕಂಡ್ ಬಂದ. +ಬಂದವ ಆ ಮಾರ್ಗದಲ್ ಬರುದಿಲ್ಲ, ಬೇರೆ ಮಾರ್ಗದಲ್ ಕರ್ಕಂಡ್ ಹೋಗ್ತ. +ತಮಜಾನ ಮೇನ್ ಬಂದಾರೆ. +ಅವ ಕುದ್ರೆ ತಾಂಕ್ಲ್ ಬೆಟ್ಟದ ದಾರೀಲೆ ತರ್ತ. +‘‘ಈ ದಾರಿಯಲ್ಲವೋ ಆ ದಾರಿ’’ ಅಂದ್ರು. +ಸಂಜೀ ಮಾಡೇ ಬಿಟ್ಟ. +ಬೆಟ್ಟದಲ್ಲಿ ಬೀಡ್ಕಿ ಹಾಕ್‌ದ್ರು. +ಅವ್ನ ಪದಾತು ಮಾಡ್ಕಂಡ್ರು. +ಅಲ್ಲೇ ಉಳ್ಕಂಡಿ ಅಲ್ಲೇ ಬೆಳಗಾಯ್ತು. +ಆ ದಿನ ಅದ್ರ ಮೈ ಮೇಕ್ ರಾತ್ರೆ ಕೈ ಹಾಕ್ಲಿಲ್ಲ. +ಬೆಟ್ಟದ ದಾರೀಲೇ ತಾಂಗ್ನೂ ತಿರಗ್ಸತ. +‘‘ಆ ದಾರ್ಯಲ್ವೋ ಪಾಪಿಷ್ಠ’’ ಅಂದ್ರು. +‘‘ಇದೇ ದಾರಿ ಅಂತ ಏನೋ ಮೋಸ ಮಾಡೂಕೆ ತನ್ಗ ತಂದಾನೆ. +ಮನೆಗೆ ತಂದಿಲ್ಲ’’ ಹೇಳಿ ಇದ್ಕೆ ಅನ್ಮಾನ ಹುಟ್ತು. +ಅನ್ಮಾನ ಉಂಟಾಗುಳೇಯ ಮಜ್ಜಾನ್ಕೆ ಅವ ಇಲ್ಲಾಗಿದ್ದ. +ಇಡೀ ಬೆಟ್ಟ ಹುಡ್ಕಿ ಮೂರ ಮೈಲದಲ್ಲಿ ವಂದ್ ಕಾಳಮ್ನ ಗುಡ್ಯದೆ. +ನೋಡ್ಕಂಡ್ ಬಂದ್ಳಂಡ್ ಸುಮ್ನುಳೀತು. +ಆಗ, ‘‘ಬೇಗ ಬಡ್ಸು’’ ಅಂದ ದಾಸಿ ಕೂಡೆ. +‘‘ಆಳ್ ಮಕ್ಳಿಗೆಲ್ಲಾ ಬಡ್ಸು’’ ಅಂದ. +ಅವರ್ಗೆಲ್ಲಾ, ‘‘ಮಲಗಿರೊ’’ ನೀವು ಅಂದ. +ಸಂಜಾಯ್ತು. ‘‘ಇದ್ರ ಕೂಡೆ ಹಸೆ ಹಾಕು’ ಅಂದ. +ಹುಡ್ಗನಿಗೆ ಹಾಲು ಬೀಲು ಎಲ್ಲ ಹೊಯ್ಯುತನ್ಕ ಮೂರ್ ತಾಸ್ ರಾತ್ರ್ಯಾಯ್ತು. +ಹೊಟ್ಯಲ್ ಕಳವಳಾಯ್ತು. +‘‘ತಾನು ಬೈಲ ಕಡೆ ಹೋಗಬೇಕು’’ ಅಂತು. +‘‘ತಾನೂ ಬತ್ತೆ’’ ಅಂದ. +‘‘ನೀ ಬರೂದ ಬೇಡಾ, ಗಂಡ್ಸರು ಸಂಗ್ತೀಗೆ ಬಂದ್ರೆ ಹೆಂಗ್ಸರಿಗೆ ನಾಚ್ಕ್ಯಲ್ಲ?’’ ಮತ್ತಂದ. +‘‘ತಾನೇ ಬತ್ತೆ ಈ ಯೆಣ್ ಜಾತಿ ಬಿಡೂದಿಲ್ಲ’’ ಹೇಳ್ತ. +‘‘ಲಾಟನ್ನು ನೀನೇ ಹಿಡ್ಕೊ. +ನಾನು ಬಗ್ಗೆಲ್ ಮರೆಗೆ ಕುತ್ಕಂತೆ. +ಸೀರೆ ಶರ್ಗ್ ಹಿಡ್ಕೊ’’ ಅಂತು. +‘‘ಹು’’ ಅಂದ. +ಸೀರೆ ಶರ್ಗ ಹಿಡ್ಕಂಡ. ಬಿಡಸತು. +ಅಡೀಗ್ ವಂದ್ ಕಿರ್ಗಣೆ ಇದ್ದಿತ್ತು. +ಶೀರೆ ವಂದ್ ಮರಕ್ ಕಟ್ತು ವೋಡ್ತು ಕಾಳಿಕಾಮ್ನ ಗುಡೀಗೆ, ‘‘ನಾನು ಪತುವರ್ತಿ ಹೆಂಗ್ಸಾದ್ರೆ ಬಗ್ದೆ ಬಾಗ್ಲ ತೆಗೀಬೇಕು ಇಲ್ಲಾರಿಲ್ಲ’’ ಅಂದ ಹೇಳ್ತು. +ಆಗ ಬೇಗೆ ಗುಡಿ ಬಾಗ್ಲ ತೆಗ್ದೆ ಹೋಯ್ತು. +‘‘ತಾ ಸತುವಂತಿ, ಪತುವರ್ತಿ ಹೆಂಗ್ಸಾದ್ರೆ ಬಾಗ್ಲ ಹೆಂಗಿದ್ದಿತೊ ಹಾಂಗೇ ಬಾಗ್ಲ ಹಾಕೇ ಉಳೀಬೇಕು’’ ಅಂತು. +ಬಾಗ್ಲ ಗಟ್ಟ್ಯಾಯ್ತು. +ಆಗ ದೇವಿಗೆ ಆಣ್ ಹಾಕ್ಕಂಡ್ ಮುಡುಕಂಡ ಕೂತದೆ. +‘‘ರಂಡೆ ಯೆಟ್ ಹೊತ್ತಾಯ್ತು ಬರೂದಿಲ್ಲ’’ ಹೇಳಿ ಕಪ್ಡ ಯೆಳ್ದ, ಮರಕ್ ಶಿಕ್ಸ್ ಹಾಕ ಹೋಗಿತ್ತು. +ಇವ ಹುಡೀಕಂತ ಲಾಟಣ್ ತಕಂಡ್ ಬಂದ. +‘‘ನನ್ಗೆ ಧಗ ಮಾಡ್ಕಂಡೆ ಇಲ್ ಬಂದಿದ್ದೆ?’’ ಕೇಳ್ದ. +‘‘ಆಳ್ ಮಕ್ಳು ಕೊಚ್‌ದ್ರೂ ಬರೂದಿಲ್ಲ’’ ಅಂದ. +‘‘ಈ ಕ್ಷಣ ಬಾ ಇಲ್ಲಾದ್ರೆ ಯೆಲ್‌ವ್ರಿಗೆ ರುಂಡ ಹಾರಸ್ತೆ’’ ಅಂದ. +ಅದು ಬಾಗ್ಲ ತೆಗುದಿಲ್ಲ. +ಆಳ್‌ಮಕ್ಳಿಗೆ, ‘‘ಬಾ ಅಂದದೆ’’ ಅಂದಿ ಕೈಲಿ ಯಳ್ಕಂಡ ಬಂದ. +ನಾಕೂ ಜನ್ಕೆ ಯಳ್ಕಂಡ್ ಬಂದ್ ಕುತ್ಗಿ ಕಡ್ದ. +‘‘ಆಕ್ಳಿಗೆ ಕರಿಗೆ ಕಡಿತೆ, ಹೆರಗ್ ಬಾ’’ ಅಂದ. +ಅದ್ ಕೇಳುದಿಲ್ಲ. +ದಾಸಿಗೆ, ಆ ಹುಡ್ಗನಿಗೆ ತಂದ. +‘‘ದಾಸಿ ಕಡೀತೆ ಬತ್ಯೊ ಇಲ್ವೊ?’’ +‘‘ಅಹ ಬರುದಿಲ್ಲ.’’ +‘‘ಹುಡ್ಗನಿಗೆ ಕಡಿತೆ.’’ + ‘‘ಬರೂದಿಲ್ಲ.’’ + ಹುಡ್ಗನಿಗೆ ಕಡಿದ. + ಬೆಳಗಾಯ್ತು. ವೋಡ ಹೋದ. +ಯಾವೂರಿಗೆ ಹೋದ್ನೋ ಯೇನೋ. +ಸುಮಾರೆ ಆರ್ ತಾಸ್ನ್ ಕೂಡೆ ಹೆರ್ಗ ಬಂತು. +‘‘ದೇವ್ರೇ ನಾ ಪತುವರ್ತಿ ಹೆಂಗ್ಸಾದ್ರೆ ಕದತೆಗೆ’’ ಹೇಳ್ತು. +ನಾಕೂ ಜನ್ರ ತಲೆ ಕೂಡ್ಸ್ ಹಾಕ್ತು. +ದಾಸಿ ತಲೆ ಕೂಡ್ಸ್ ಹಾಕ್ತು. +ಹುಡ್ಗನ ತಲೆ ಕೂಡ್ಸಿ ಇಡ್ತು. +ಆಕ್ಳು, ಆಕ್ಳ ಕರಿಗೆ ತಂತು. +ಮತ್ತೊಂದ್ ಸಾಲ್ನಲ್ಲಿ ಕೂಡ್ಸಿ ಇಟ್ತು. +ಇದ್ ಹೆರಗ್ ಬಿತ್ತು. +‘‘ನಾನು ದುಷ್ಟಬುದ್ಧಿಗೆ ಆವ್ತಿ ಕೊಟ್ಕಂಡಿ, ಆಗ ನೀವೇ ಜೀವ ಕೊಡ್ಸಬೇಕು’’ ಅಂದಿ, ದೇವಿಗೆ ಹೇಳ್ಕಂಡಿ ಹೆರಬಿದ್ ಬಂತು. +ಹೆರ್ಗೆ ಬರೂತೆಯ ಒಬ್ಬಂವ್ ಕತ್ತೆ ತಕಂಡ್ ಬಂದ. +‘‘ಇದು ನನ್ಗಾಗೂದು’’ ಹೇಳ್ದ. +‘‘ನೀ ಹಿಂಡ್ತಿ, ನಾ ಗಂಡ’’ ಅಂದ. +‘‘ಅಡ್ಡಿಲ್ಲ’’ ಹೇಳ್ತು ಹೆಂಗ್ಸು. +‘‘ನಾನು ಉಣ್ದೆ ನಾಕ್ ದಿನಾಯ್ತು. +ಇಟ್ ನೀರು, ಬೆಂಕಿ, ಅಕ್ಕಿ ಬಿಕ್ಕಿ ನೀ ತಕಂಡ್ ಬಾ. +ಅಡ್ಗಿ ಮಾಡ್ ಉಂಡ್ಕಂಡಿ ಯೇನು ಹೇಳ್ವೆ. +ಆಗ ಗಂಡ ಹಿಂಡ್ತಿ ಆಗೂಕಡ್ಡಿಲ್ಲ’’ ಹೇಳ್ತು. +ಅವ, ‘‘ಆಗೂದು’’ ಹೇಳಿ ಸಾಮಾನ್ ತರೂಕೆ ಹೊರಟ. +ಕತ್ತೆ ಮೇಲೆ ಹತ್ಕಂಡು ನೆಡೀತೂ. +ನೆಟ್ಕ ನಾಕು ಮೈಲೆ ಹೋತು. +ಅದ್ಯಲ್ಲ ತಕಂಡ್ ಬರೂತನ್ಕ ಹೆಂಗ್ಸೂ ಇಲ್ಲ ತೀಡ್ತೆ ಬಿದ್ದನೆ, ‘‘ಕತ್ತೆ ಇಲ್ಲ, ತನ್ ಗೆಂಟೆಲ್ಲಾ ಹೋಯ್ತು.’’ +ಮತ್ತೊಂದ್ ಕಡೆಗ್ ಹೋಗೂಕೇಯಾ ವಂದ್ ಸೊನ್ಗಾರವ್ ಸಿಕ್ದಾ. +‘‘ನನ್ಗೆ ಹಿಂಡ್ತಿಲ್ಲ. +ನೀನ್ ಹಿಂಡ್ತಿ ನಾನ್ ಗಂಡ’’ ಅಂದ. +‘‘ಅಡ್ಡಿಲ್ಲಾ’’ ಅಂತು. +ಸೊನಗಾರನ ಕೂಡೆ, ‘‘ಹಾಗಾರೆ ನಾಕ್ ದಿನಾಯ್ತು ಉಣ್ಣದೆ. +ನಾನು ನಿನ್ ಕೈಚೀಲ ಇಡು, ಅಕ್ಕಿ ಬೆಂಕಿ ಮತ್ತು ನೀರು ಅಟ್ ತಕಂಬಾ. +ಊಟ ಮಾಡ್ದಪಟೆಗೆ ಗಂಡ ಹಿಂಡ್ತಿ ಆಗ್ವ’’ ಅಂತು. +ಅಂವ ತರೂಕ್ ಹೋದ. +ಕಟ್ಲೆ ಚೀಲ ಇದ್ರ ಕೂಡ ಕೊಟ್ಟಾಕ್ ಹೋದ. +ಕತ್ತೆ ಮೇನ್ ಕೂತ್ಕಂಡ್ ಕಟ್ಲೆ ಚೀಲ ತಕಂಡ್ ನೇಡೀತು. +ಅಂವ ಅಕ್ಕಿ ತಕಂಡ್ ಬಂದ. +ಆಗ ವಬ್ಬ ಮುಸಲ್ಮಾನ್ನವ ಕುದ್ರೆ ಹತ್ಕಂಡ್ ಬಂದ. +ಹುಡ್ಗಿ ನೋಡ್ದ. +ಹುಡ್ಗಿ ನೋಡೂಕೇಯಾ, ‘‘ಅಚ್ಛಾ ಬುಡ್ಡಿ ಯೆಲ್ಲಿಗೋಗ್ತೆ ನೀನು’’ ಅಂದ. +ಅವ್ರ ಬಾಣೀಲೆ ಮಾತಾಡ್ದ. +‘‘ನಾನು, ಗಂಡ ನೀನು ಹಿಂಡ್ತಿ ಆಡ್ಡಿಲ್ಲಾ?’’ ‘‘ಅಡ್ಡಿಲ್ಲಾ’’ ಅಂತು. +‘‘ನಾ ನಾಕ್ ದಿನಾಯ್ತು ಉಣ್ಣದೇಯ. +ನೀನ್ ನನ್ನ ವಸ್ತ್ರ ಯೆಲ್ಲಾ ತಕಂಣ್ ಬೇಕು. +ನಿನ್ನ ದುಸ್ತ್ಯೆಲ್ಲಾ ಪೈಜಾಣ ಬೀಜಣ ಅಟ್ಟೂ ನನ್ಗೆ ಕೊಡ್ಬೇಕು’’ ಅಂದ್ ಹೇಳ್ತೂ. +‘‘ಅಡ್ಡಿಲ್ಲಾ’’ ಅಂದ. +ಶೀರೆ ಉಟ್ಕಂಡ, ರವ್ಕಿ ಹಾಕ್ಕಂಡಿ, ಮುಷ್ಕ ಹಾಕ್ಕಂಡ್ ಹೀಗ್ ಮಾಡ್ತೆ ಹೋಗ್ವಾಗೆ ಯೆಯ್ಡ್ ತಾಸಾಯ್ತು. +ಇದ್ ಕುದ್ರೆ ಹೊಡೀತು ನನ್ಗ್ ತೆಳೂದಿಲ್ಲ ಮಾಡ್ತು. +ಕಡೆಗ್ ಅಂವ ಹೋಗೂಕೆ ಕುದ್ರೆ ಹತ್ಕಂಡ್ ಹೋಯ್ತು. +ವಂದಲ್ಲಾ ವಂದ್ ಊರಿಗೆ ಹೋಯ್ತು. +ಅಲ್‌ವಂದ್ ಮುದ್ಕಿದಿತ್ತು. +ಅವರ ಮನೆಗೆ ಹೋಯ್ತು. +‘‘ಅಜ್ ಮುದ್ಕಿ ನನ್ಗ್ ವಂದ್ ತುತ್ ಅನ್ನ ಹಾಕು’’ ಅಂತು. +‘‘ನನ್ಗೆ ಬೇಡ್ಕಂಡ್ ಉಂಬೂದು. +ಅರಸೂ ಮನೆಗೆ ಕೆಲ್ಸ ಮಾಡ್ಕಂಡ ಬಾಗ್ಲ ಕಸತೆಗದಿ ಬಂದ್ ಒಂದ್ ಶಿದ್ದಕ್ಕಿ ತತ್ತೆ. +ನಿನಗೆ ಯೇನ್ ಹಾಕ್ಲಿ ? +ನಾಯೆಂತಾ ಉಣ್ಲೀ’’ ಅಂತು. +“ಉಂಬೂಕೆ ಯೇನು ಬರಗಾಲ ಮಾಡೂದಿಲ್ಲ. +ನಾನೇ ತಂದ್ ಹಾಕ್ತೆ ನೀ ಬೇಸ್ ಹಾಕು” ಅಂತು. +‘‘ನಿಮ್ಮೂರ್ನಾಗೆ ಗೌಜಿಯೆಂತದು?’’ ಕೇಳ್ತು. +ಮುದ್ಕಿ ಕೂಡೆ, ‘‘ರಾಜ (ರಾಜ್ಯ) ಗೆದ್ಕಂಡ್ ಹೋಗ್ತರಂತೆ. +ಬಾಕಿ ಜನಕೆ ರಾಜಗೆ(ರಾಜ್ಯಕ್ಕೆ) ನಾಳೆಗೆ ಇರ್ಸೂದಿಲ್ಲಂತೆ’’ ಅಂತು. +‘‘ಹೌದೊ’’ ಅಂತು. +ಮಗೂನ್ ಕೂಡೆ ತಲ್ವಾರ್ ಇದ್ದಿತ್ತು. +ಬೆಳ್ಗಾಗೂತನ್ಕ ಯೆಲ್ಲರಿಗೆ ಕಡ್ದ್ ರಾಶಿ ಹಾಕ್ ಬಂದ್ ಬಿಟ್ತು. +ಸವ್ರ್ ಹಾಕ್ ಬಿಟ್ತು. +ದಂಡಿಗ್ ಬಂದವ್ರುಗೆ ಬೆಳ್ಗಾದ್ರೆ ಯಾರೂ ಇಲ್ಲ. +ರಾಜ, ‘‘ದೇವ್ರೇ ಇದ್ಯಾವ್ ನಮ್ನೆ. +ಆಚರ್ಯ ಕಾಣ್ತದೆ’’ ಹೇಳಿ, ಬೆಳ್ಗಾ ಕೂಡೆ, ‘‘ಹೀಗೆ ಮಾಡ್ದವ್ನಿಗೆ ಪಟ್ಟಕಟ್ಬೇಕು’’ ಹೇಳ್ದ. +ಆಗ, ‘‘ಆನೆ ಕೂಡೆ ಮಾಲೆ ಹಾಕ್ಬೇಕು’’ ಅಂದಿ, ಆನೆಕೂಡೆ ಮಾಲೆ ಕೊಟ್ ಕಳ್ಸ್ಬಿಟ್ಟರು. +ಅಟ್ಟು ಜನ ಕೂತರೆ ಸಬೇಲಿ ಕಟ್ಟೆಬುಡ್ಕ ಇದ್ ಕೂತದೆ. +‘‘ನನ್ಗ್ ಹಾಕು.’’ +‘‘ನನ್ಗೆ ಹಾಕು’’ ಅಂದ್ರೂ ಹಾಕುದಿಲ್ಲ. +ಅದ್ಕೆ ಮಾಲೆ ಹಾಕ್ತು. +ಅದು ಮಾಲೆ ಹಾಕೂಕೆ ಕೊಡ್ಲಿಲ್ಲ. +‘‘ಅವ ಅಲ್ವೇ ಅಲ್ಲ’’ ಅಂದ್ರು. +ಕಡೆಗೆ ಹೆಣ್ಣಾನೆ ಕೂಡೆ ಮಾಲೆ ಕೊಟ್ ಕಳ್ಗರೆ. +ಹೆಣ್ಣಾನೆ ಆ ಹುಡ್ಗನ್ಗೇ ಹಾಕ್ತು. +‘‘ಬೇಡೂಕ್ ಬಂದವಂಗೆ ಮಾಲೆ ಹಾಕ್ತು ಅಬ್ಬ’’ ಹೇಳ್ತಾರೆ. +‘‘ಪಟ್ಟಕ್ ಕುಳ್ಸ್‌ಬೇಕು’’ ಅಂದ್ರು. +‘‘ಈಗ ಪಟ್ಟಕ್ ಕುಳ್ಳುಕೆ ಯೆಯ್ಡ್ ತಿಂಗ್ಳ ತಡ ಅದೆ. +ನಿಮ್ಮ ಮನೆಗೇ ಬಂದ್ ಉಳಿತೆ. +ಕಡೆಗ್ ನಾ ಪಟ್ಟಕ್ ಕುಳ್ತೆ’’ ಅಂದ. +ಅವನ ದುಡ್ಡದೆ, ರಾಜ್ನ ದುಡ್ಡದೆ ಮುಸಲ್ಮಾನನ ದುಡ್ಡದೆ. +ದೊಡ್ ಬಂಗ್ಲಿ ಕಟ್ ಹಾಕ್ತು. +ಏಳುಪ್ಪರಿಗೆ ಬಂಗ್ಲೆಲ್ ಕೂತದೆ. +ದಾರೀಲಿ ಬಾವಿ ಕಟ್ಸಿ ಬಂದವರಿಗ್ ಆಸ್ರ ಕುಡೂಕೆ ಹಗ್ಗ ಚಂಬು ಇಟ್ಟದೆ. +ಯಾರೇ ಬಂದ್ರೂ ಆಸ್ರ ಕುಡಿಬೇಕು. +ಆಗ ಕತ್ತೆ ತಕಂಡ್ ಹೋದವ ಬಂದ. +ತನ್ ಹಾಗೇ ವಂದ್ ಬೊಂಬೆ ಮಾಡಿ ಗೋಡೆಗೆ ಇಟ್ಟದೆ. +ಆಗ ಪರ್ದಾನಿ ಹುಡುಗ ಕರ್ಕಂಡ್ ಬರ್ಲಿಲ್ಲ ಹೇಳಿ, ಗಂಡ ಮಾವನ ಮನೆಗೆ ಹುಡ್ಕಕ್ ಹೋಗನೆ. +ಗಂಡನಿಗೆ ಮಳ್ಳ ಹಿಡ್ದಿ. +ಗಂಡ ಊರ್ ಮೇನ್ ಹೋದ. +ಅವ್ನ ತಮ್ಮ ತಾ ಹುಡಿಕಂಡ್ ಬತ್ತೆ ಹೇಳಿ, ಮರದ ಕುದ್ರೆ ವಂದ್ ನೂರು ರುಪೈ ಕೊಟ್ಟು ತಕಂಡಿದ್ದ. +ಅದು ಹೀಗೆ ಮಾಡೂಕೆ ಆಕಾಸದ ಮೇನ್ ಹೋಗ್ತದೆ. +ಹೀಗೆ ತಿರುಗಿಸೂಕೆ ಕೆಳಗೆ ಬತ್ತದೆ. +ಇದು ನೋಡಿತ್ತು. +ಮೈದ ಬಂದ. +ಬರೂಕೆಯ ಮತ್ತೊಂದ್ ರಾಜ್ನ ಮಗಳು ಯೇಳುಪ್ಪರ್ಗೆ ಮೇನೆ ಕೂತಿತ್ತು. +ಅದುನೋವೆ, ‘‘ಅಪ್ಪ ತನ್ಗೆ ಇದೇ ಗಂಡ ಬೇಕು’’ ಅಂತು. +ಅಪ್ಪ ಇವ್ನ ಕರೆದು ತಿರಗಿಸಿ ಕೆಳಗೆ ಬಂದ. +‘‘ತನ ಮಗಳ್ ಮದಿಯಾಗಬೇಕು’’ ಅಂದ. +‘‘ಆಗೂದಿಲ್ಲ’’ ಅಂದ. +‘‘ತಾಂಡೆವ್ರಿಗ್ ಕರ್ಕಬಂದು ನಿನ್ನ ರುಂಡ ಹಾರಸ್ತೆ,’’ ‘‘ಬರೂದಿಲ್ಲ’’ ಅಂದ. +ಅವ್ನಿಗೆ ಮದ್ವೆ ಮಾಡದ್ರು. +ಮದ್ವೆಯಾಗ್ ವಂದ್ ತಿಂಗ್ಳಾಯ್ತು. +ಆಗೆ ಇದು ಗಂಡನಿಗೆ ನೋಡ್ತೆ ಇತ್ತು. +ಗಂಡ ಬುಳು ಬುಳು ತೀಡ್ತೆ ಅವನೆ. +ಹೆಂಡ್ತಿ ಹೀಗೇ ನೋಡ್ತು. +‘‘ಎಂತಾಕ್‌ತೀಡ್ತ್ರಿ?’’ ಕೇಳ್ತು. +‘‘ನಾ ಬಂದಿದೆ ಹೀಗೆ’’ ಹೇಳ್ದ. +‘‘ಮದಿವ್ಯಾದೆ. ಅಣ್ಣನ ಹಿಂಡ್ತಿ ಹುಡ್ಕೋಕೆ ಬಂದಿದೆ. +ಹುಡೀಕಂಡಿ ಇದೇ ದಾರೀಲಿ ಬತ್ತೆ ತಾನು’’ ಅಂದ. +‘‘ಯೇಕಜಾತ ಆಗೂದಿಲ್ಲ. +ತಾನು ನಿಮ್ಮ ಬೆನ್ನಿಗೆ ಬರವವ್ನೇಯ’’ ಅಂತು. +‘‘ನೀರಿಲ್ಲ, ನೆಡೆ ಇಲ್ಲ. +ಆಕಾಸ್ಕ್ ಹೋಗೂದು ಕುದ್ರೆ. +ಯೆಂತಕ್ ಉಪಾಸ್ ಬೀಳುಕ್ ಬತ್ತೆ ಇಲ್ಲೇ ಇರು’’ ಅಂದ. +‘‘ನಿನ್ ಬೆನ್ನಿಗೇ ಬತ್ತೆ ಆಗೂದಿಲ್ಲ’’ ಅಂತು. +ಬೆನ್ನಿಗೆ ತಕಂಡ್ ಕುದ್ರೆ ಮೇನ್ ಕೂರ್ಸಕಂಡ್ ಹೋದ. +ಹೊಗುಕೇಯ ಇದ್ಕೆ, ‘‘ಆಶ್ರದಾವು ಬೇಡ ಅಂದಿನಲ್ಲ. +ಅಲ್ಲೆ ಉಳಿ ಅಂದಿನಲ್ಲ’’ ಅಂದ. +ದೊಡ್ಡ ಕೆರೆ ಕಂಡ್ತು. +ವಸ್ತ್ರ, ತಕಂಡೋಗ್ ನೆನಿಸ್ಕಂಡ್, ‘‘ಬನ್ನಿ ನಾ ಕುಡಿತೆ’’ ಅಂತು. +ಕೆರೆಕೂಡೆ ತಿರಗಿಸಿ ಬೆಟ್ಟದಲ್ಲಿಳಿಸಿ ಹೋಗೂಕೇಯ ಕಾಲು ಹುಗ್ದೇ ಹೊಯ್ತು. +ಮತ್ತೊಂದ್ ಕಾಲ್ ತೆಕ್ಕಂಡ. +ಅದೂ ಹುಗ್ದೇ ಹೋಯ್ತು. +ಸೊಂಟದವರೆಗೆ ಹುಗ್ದೇ ಹೋಯ್ತು. +ಕಡೆಗೆ ಬೊಬ್ಬೆ ಹಾಕಂಬಾಗೆ ದನಕಾವ್ ಮಕ್ಳ ಬಂದ ಯೆಳ್ಸ್ ಹಾಕಿದ್ರು. +ತಮ್ನ ಹಿಂಡ್ತಿ, ‘‘ಬರ್ವ, ಬರ್ಬ’’ ಅಂದಿ ಸುಮ್ನೆ ಉಳೀತು. ಕಪ್ಪಾಗೋಯ್ತು. +ಅದ್ ತೀಡ್ತೇ ಬಿದ್ದದೆ. +ಇದ್ಕೆ ಕುದ್ರೆ ತಿರಗೂಕೆ ತಿಳೀನಿಲ್ಲ. +ಕಡೆಗ್ ಶೆರ್ಗ್ ಹೀಗ್ ತಾಗ್ ಹೋಯ್ತು. +ಕುದ್ರೆ ಆಕಾಶಕ್ ಹಾರ್ ಹೋಯ್ತು. +ಮೇನ್ ಮೇನೆ ತಿರಕಂಡಿ ಅಕ್ಕ ಇದ್ದಿದ್ ಅಜ್ಜಮುದ್ಕಿ ಮನೆಗೆ ಹೋಗ್ ಇಳೀತು. +ಅಷ್ಟಕ್ ಅದ್ಕೆ ತಿರಗ್ಸೂದ್ ತಿಳಿದಿತ್ತು. +ಇದ್ಕೋ ಗುತ್ತಿದಿತು, ತನ್ ಮೈದನೇ ಕುದ್ರೆ ತಾನಿದ್ದಾಗ ನೂರು ರುಪ್ಯಾ ಕೊಟ್ ತಕಂಡಿದ್ದ. +ಇದ್ರ್ ಕೂಡೆ, ‘‘ಯೆಲ್ ಬಂದಿದೆ?’’ +‘‘ನನ್ ಗಂಡ ಆಸ್ರ್ ತರೂಕೆ ಹೋಗೀರು ತಾಸ್ ರಾತ್ರ್ಯಾಯ್ತು. +ಬರ್ಲೇ ಇಲ್ಲ. +ನನ್ ಕೂಡ್ ತಿರಗಸೂಕ್ ಆಗ್ಲಿಲ್ಲ. +ಕಡೆಗ್ ಶೆರ್ಗ್ ತಾಗೂಕ್ ಮೇನ್ ಹೋಯ್ತು, ಕೆಳಗ್ ಕೂತ್ತು. +ಮುದ್ಕಿ ಮನೇಲಿ’’ ಅಂತು. +‘‘ಯಾಕ್ ಬಂದಿದ್ದೆ?ಯೆಲ್ಲಾಯ್ತು?’’ ಕೇಳ್ತು. +‘‘ನಾ ಮುದ್ಕಿಮನೆಗೆ ಬಂದಿದೆ. +ನೀನು ನನ್ನ ತಂಗ್ಯಾಯ್ತಾ, ನಾ ಅಣ್ಣಾಯ್ತು’’ ಅಂತು. +ಸಾಯ್ಬಂದೆ ದುಸ್ತದೆ. +‘‘ಆಸ್ರ್ ತಗಂಡ್ ಬರೂಕೆ ಅಂಗೋಸ್ತ್ರ ಪಂಜಿ ತಕಂಡ್ ಹೋದೋರ ಬರ್ಲಿಲ್ಲ.’’ + ‘‘ನೀ ತಂಗಿ ನಾ ಅಣ್ಣ’’ ಅಂತು. +ಕತ್ತೆ ತಕಂಡ್ ಹೋದವ ಬಂದ. +ತನ್‌ಗೊಂದ್ ಪೋಟು, ತಂಗಿ ಪೋಟು ತೆಗಿತು. +ಗೋಡೆಗಿಡ್ತು. ಅವನ್ ಬಂದ್ಕಂಡಿ, ‘‘ನನ್ಗೆ ದಗ ಹಾಕ್ ಬಂದಿದೆ’’ ಅಂದ. +‘‘ಕೋಣೆಲ್ ಹಾಕ್ ಬೀಗ ಹಾಕಿ’’ ಅಂತು. +ಕದಹಾಕ್ ಬೀಗಹಾಕ್ರು. +ಸೊನಗಾರವ ಬಂದ. +ಅವಗೂ ಕೋಣೆಲ್ ಹಾಕ್ರು. +ಮುಸಲ್ಮಾನರವ ಬಂದ. +‘‘ರಂಡೆ ನನ್ಗ್ ದಗ ಹಾಕಂಡ್ ಕುದ್ರೆ ತಕಂಡ್ ಬಂದೆ’’ ಅಂದಿ ತೀಡ್ದ. +ಬೇರೆ ಕೋಣೆಲ್ ಹಾಕ್ರು. +ಕಡೆಗೆ ಮೈದ ಬಂದ. +‘‘ನನ್ನ ಅತ್ಗಿ ಕಂಡಾಂಗೇ ಕಾಣ್ತದೆ ಇದು. +ನನ್ನ ಹಿಂಡ್ತಿ ಕಂಡಾಂಗೆ ಕಾಣ್ತದೆ’’ ಅಂದಿ ಜೋರ್ನೆ ತೀಡ್ ಬಿಟ್ಟ. +‘‘ಅವ್ನಗೆ ಕೊಣೀಲ್ ಹಾಕಿ’’ ಅಂತು. +ಕೊಣೀಲ್ ಹಾಕ್ ಬೀಗ ಹಾಕ್‌ದ್ರು. +ಕಡೆಗ್ ಗಂಡ ಬಂದ. +ತಮ್ಮನ ಮದ್ಯಾದ್ ಗೊತ್ತಿಲ್ಲ. +‘ತನ್ ಹಿಂಡ್ತ್ಯಾಗಿತ್ತು’ ತೀಡ್ದ. +ಅವ್ನಗ್ ಕೊಣಿಲ್ ಹಾಕ್ ಬೀಗ ಹಾಕ್‌ದ್ರು. +ಕಡೆಗ್ ಪರದಾನಿ ಹುಡ್ಗ ದುಷ್ಟಬುದ್ಧಿ ಬಂದು, ‘‘ರಂಡೆ, ನನ್ಗ್ ದಗ ಹಾಕ್ ಓಡ್ ಬಂದಿದ್ದೆ’’ ಹೇಳಿ ಅವರ ಪೋಟೋ ಹರ್ದೇ ಹಾಕ್ದ. +‘‘ಅವ್ನೂ ಕೊಣಿಲ್ ಹಾಕು’’ ಅಂತು. +ಬೆಳಗಾಗೂತನ ಉಪಾಸೆಯ. +ಆಗ, ‘‘ವಬ್ಬಿಬ್ರಿಗೆ ಹೆರ್ಗ್ ತಕಂಬಾ’’ ಅಂತು. +ಕತ್ತೆ ತಂದವ್ನ ಕೂಡೆ, ‘‘ನೀನು ಪೋಟೋ ಕಂಡ್ಕಂಡ್ ಯೆಂತಾಕ್ ತೀಡ್ದೆ?’’ +‘‘ನನ್ಗೆ ಉಳಿ ಅಂದ ಹೇಳ್ಕ್ ದಗಾ ಹಾಕ್ದ ಹೆಣ್ಣು ಅವ್‌ಳೆ. . . ತೀಡ್ದೆ’’ ಅಂದ. +‘‘ಇನ್ ಮೇನೆ ದಾರೆ ಹೆಂಗ್ಸರ ಮೇನೆ ಆ ಮಾಡೂಕಾಗ’’ ಹೇಳಿ, ‘‘ಕತ್ತೆ ತಕಂಡ್ ಹೋಗು’’ ಹೇಳಿ ದುಡ್ಡು ಕೊಟ್ತು. +ಕಳಿಸ್ ಕೊಟ್ತು. +ಸೊನಗಾರನ ಹೆರಗ್ ತಕಂಡ್ ಬಂದ್ರು. +‘‘ಯೆಂತಕ್ ತೀಡ್ತೆ?’’ +‘‘ಸಾವಕಾರನ ಮನೆಗ್ ಚಿನ್ನ ಮಾಡೂಕ್ ತಕಂಡ್ ಬಂದಿದ್ದೆ. +ಅದು ಕಂಡ್ತು ತಕಂಡ್ ಹೋಯ್ತು. +ಅದೇ ಕಂಡಾಂಗೆ ಕಂಡ್ತು. +ಪೋಟೋ ಕಾಂಬೂಕೇಯ.’’ + ‘‘ಬೇರೆ ಹೆಂಗ್ಸರ ಮೇನ್ ಆಳ್ ಮಾಡೂಕಿಲ್ಲ. +ಆಗೂದೋ?’’ ಅಂತು. +‘‘ಆಗೂದು’’ ಅಂದ. +ಚಿನ್ನ ಬಿನ್ನ ಅಟ್ಟೂ ಕೊಟ್ತು. +ಇವ ಮುಸಲ್ಮಾನ್ನವ ಬಂದ. +‘‘ನನ್ಗೆ ನೀ ಸತಾಯ್ಸಿದೆ. +ನನ್ನ ಉಡ್ಗಿ ತಕಂಡ್ ನಂಗೆ ಈ ನಮ್ನಿ ಮಾಡಬೇಕು’’ ಅಂದಿ ತೀಡ್ದ. +‘‘ಅಕ್ಕಿ ಬಿಕ್ಕಿ ತಕಂಡ್ ಬಾ’’ ಅಂದ ಹೇಳಿ, ಹೆಂಗ್ಸು, ‘‘ಇದು ಕೊಟ್ಟಿ ಈ ನಮ್ನಿ ಮಾಡಿದ್ದೆ’’ ಅಂದ್ಕ ತೀಡ್ದ. +‘‘ಗನಾ ಕುದ್ರೆ ಹೆಕ್ಕೊ, ಬೇರೆ ಹೆಂಗ್ಸಿನ ಮೇನೆ ಆಶೆ ಮಾಡೂಕಿಲ್ಲ’’ ಅಂತು. +‘‘ಆಗೂದು’’ ಅಂದ. +ಹೊಸದೇ ಪೈಜಾಣ, ಅಂಗಿ, ತೊಪ್ಪಿ, ಹೊಸ್ತ ಕೊಟ್ತು. +ತಕಂಡ್ ಹೋದ. +ಕಡೆಗೆ ಗಂಡ, ಮೈದ ಉಳ್‌ದ್ರು. +ಮೈದನಿಗೆ ಹೆರಗೆತರಿಸ್ತು. +‘‘ಹೆಂಡ್ತಿ ಕಂಡಾಗೇ ಕಂಡ್ತು’’ ಅದ್ಕೆ ತೀಡ್ದೆ ಅಂದ. +‘‘ನಿನ್ ಹೆಂಡ್ತಿ ಸಿಕ್ರೆ ಇಟ್ಕಂತ್ಯೋ ಕೇಳ್ತು.’’ + ‘‘ಯೆನಡ್ಡಿಲ್ಲ.ಹಿಂಡ್ತಿ ಸಿಕ್ಕಿರೆ ಇಟ್ಕಂತಿದ್ದೆ’’ ಅಂದ. +‘‘ಖರೆಯಲ?’’ ‘‘ಖರೆಯ’’ ಅಂದ. +‘‘ಕೆಳಗೆ ಕುಳ್ಳು’’ ಅಂತು. +ಗಂಡನಿಗೆ ಕರಿತು. +‘‘ಯಂತಾ ತೊಂದ್ರಿ?’’ ಕೇಳ್ತು. +‘‘ನನ್ ಹಿಂಡ್ತಿ ಕಂಡಾಗೇ ಕಂಡ್ತು’’ ಅಂದ. +‘‘ಹೆಂಡ್ತಿ ಹೋಗ್ ನಾಕ್ ವರ್ಸಾಯ್ತು. +ಸಿಕ್ರೆ ಇಟ್ಕಂತ್ಯೋ’’ ಕೇಳ್ತು. +‘‘ಹೋ ಇಟ್ಕಂತಿದ್ದೆ. +ಅವ್ಳು ಬೆರೆಯೋರ ಮಕ ನೋಡ್ವಳಲ್ಲ’’ ಹೇಳ್ ತೀಡ್ದ. +ದುಷ್ಟ ಬುದ್ದಿ ಕರಿತು. +ಐದಾರ್ ಜನ ಹಿಡ್ಕಂಡ್ ಬಂದ್ರು. ಅವ್ನ. +ರುಂಡ ಹಾರ್ಸು ಹುಕುಂ ಕೊಟ್ತು. +ಆಗ ತಾಂಡೇಲ್ಕೊಳು ಪರದಾನಿ ಹುಡ್ಗನಿಗೆ ರುಂಡ ಹಾರ್ಸ್‌ದ್ರು. +ಆಗೇ ಪುಲ್ಲೇಸ್ರಿಗೆ ಆಳುಗಳಿಗೆ ಹೇಳ್ತು, ‘‘ಅವರಿಗೆ ಇಂತಿಂತಾ ಗಡ್ಡ ಬಂದದೆ.’’ + ಆಳ್ ಮಕ್ಳ ಕೂಡೆ, ‘‘ಚೌರ ಮಾಡ್ಕಂಡಿ ಮೀಸು’’ ಹೇಳ್ತು. +ಮಿಂದ್ಕಂಡ್ ಬಂದ್ರು ಅವ್ರು. +ಅಡ್ಗಿ ಮಾಡದ್ರು. +ಇದು ಗಂಡ್ಸನ ರೂಪಾತೆಗಿತು. +ಹೆಣ್ ರೂಪ ತಕಂಡ್ತು. +ಯೆಯ್ಡೂ ಜನ ಅಕ್ಕ ತಂಗಿ ಶೀರೆ ಉಟ್ಕಂಡ್ ಪಟ್ಟೆ ಉಟ್ಕಂಡ್ ಬಂದ್ರು. +ಗಂಡ, ಮೈದ ಮಿಂದ್ಕಂಡಿ ಬಂದ್ರು. ಅಡ್ಗಿಯಾಯ್ತಲ್ಲ. +ದೇವರ ಸಾಮಾನ, ಕಾಯಿ ಬಾಳೆಕೊನೆಯೆಲ್ಲಾ ತಕಂಡ್ ಅಕ್ಕ-ತಂಗಿ ಯೆದ್ರು. +ಯೆಲ್ಲಾ ಹೋಗರೆ ಮೈದ-ಮೈದನ ಹಿಂಡ್ತಿಯೆಲ್ಲ ಗಂಡ, ಮೈದ ಅಕ್ಕ-ತಂಗಿ ಹಿಂದ್ ಹೋದ್ರು. +ಹೋಕಂಡಿ ಕಾಳಿಕಾಮ್ಮನ ಗುಡಿಗ್ ಹೋದ್ರು. +‘‘ತಾ ಖರೆ ಪತುವರ್ತಿಯಾದರೆ ಕದ ತೆಗಿಬೇಕು’’ ಅಂತು. +ಕದ ತೆಗ್ದಬಿತ್ತು ಕಡೆಲಿ. +ಯೇನಂತು ದೇವ್ರಕೂಡೆ, ‘‘ತಾನು ಪತುವರ್ತಿ ಹೆಂಗ್ಸಾದ್ರೆ ದಾಸಿಗೆ, ಹುಡ್ಗನಿಗೇ, ನಾಕ ಜನ ಆಳಮಕ್ಳಿಗೆ, ಆಕಳಿಗೆ, ಕರಿಗೆ ಅಟ್ಟೂ ಜನ್ನಿಗೆ ಜೀವ ತರ್ಸ್ಬೇಕು ಇಲ್ಲಾದ್ರೆ ತಾನು ಕೈಕಾಲ್ ಜಪ್ಕಂಡ್ ಜೀವ ಕೊಡ್ತೆ’’ ಹೇಳ್ ದೇವ್ರಕೂಡೆ ಹೇಳ್ತು. +ಅಟ್ಟೂ ಜನ ನಿದ್ರಿಂದ್ ಯದ್ದವ್ರಾಂಗೆ ಯೆದ್ಕಂಡ್ರು. +‘‘ನಿನ್ ಹರ್ಕೆ ತೀರ್ತು’’ ಅಂದ್ ಹೇಳಾಕಿ, ಹುಡುಗಗ್ ತಕ್ಕಂಡಿ, ಗಂಡನಿಗೆ- ಬಿಂಡನಿಗೆ ತಕ್ಕಂಡಿ ಮನೆಗ್ ಬಂದಿ ಊಟ ಮಾಡ್‌ದ್ರು. +ಬಂದವ್ರಿಗ್ ಊಟ ಹಾಕದ್ರು. +ತಾನು ತನ್ ಗಂಡ ಪಟ್ಟಕ್ ಕೂತ್ರು. +‘‘ಊಟ ಉಪಚಾರಾಕಂಡಿ ತಾ ಬತ್ತೆ’’ ಅಂದ್ ಹೇಳಿ ಮನೆಗೆ ಕರ್ಕಂಡ್ ಹೋಯ್ತು. +ಮೈದನ ಹಿಂಡ್ತಿ ಅಪ್ಪನ ಮನೆಗೆ ಹೋಯ್ತು. +ಯೆಲ್ಲಾ ಅಲ್ಲಿ ಯೆಂಟ್ ದಿನ ಉಳಿದ್ರು. +ಉಳ್ಕಂಡಿ ಮನೆಗೆ ಹೋಯ್ತು. +ಅಲ್ಲಿ ಮನೇಲಿ ಮೈದನಿಗೇ ಮೈದನ ಹಿಂಡ್ತಿಗೆ ಪಟ್ಟಕೆ ಕೂರ್‌ಸ್ತು. +ತಾನ್ ಇಲ್ಲೇ ರಾಜಧಾನ್ಕೆ ಬಂತು. +ಅಲ್ಲಿ ರಾಜತನ ಮೈದ ಮೈದ್ನ ಹಿಂಡ್ತಿ ಆಳ್‌ದ್ರು. +ಸುಖ–ಸಂತೋಶದಾಗೆ ಉಳದ್ರು. +ರಾಜ, ‘‘ಮಕ್ಕಳೇ ಇಲ್ಲ. . . ’’ ಹಿಂಡ್ತಿ ಕಲ್ ಹೇಳ್ದ ಅವ, ‘‘ತಾನು ಊರ್ ಬಿಡ್ತೇ ಎಂಟ್ ದಿವಸದ ಮಾತೇಗೆ ಯಾರ್ ಕಲೂ ಹೇಳ್ ಬೇಡ ಹೋಗ್ತೆ’’ ಅಂದ. +‘‘ಹೋಗಿಬನ್ನಿ’’ ಅಂದ ಹೇಳ, ಅವಗೆ ಅಪ್ಣೆ ಕೊಟ್ಟೇಬಿಡ್ತು. +ಎಲ್ಲರೂ ಹೋಗ್ ರಾಜ್ನ ತಡ್ವರೇಯ, “ನಮ್ಮ ಹೊಟ್ಟೆ ಹೊರಿವರ್ಯಾರು?’’ + ‘‘ಯಂಟ್ ದಿವಸದಲ್ ಬತ್ತೆ’’ ಅಂದ. +ಹಿಂಡ್ತಿಗೆ ಯೆಲ್ಲಾ ವಳಗೇ ಆಗಬೇಕು. +ಆರ್ಯಾಣ ಅಡವಿಗೆ ಹೋಗಿ ತಪ್ಪಸಿಗೆ ಕೂತ; ನಾಕ್ ದಿನ ಕೂತ; + ಆರ್ ದಿನ ಕೂತ ದೇವ್ರ್ ಭೇಟಿ ಆಲೆಲ್ಲ, ‘ಜೀಮನೆ ತೆಕ್ಕ ಬಿಡವದು ಕೆರಿಲ್ ಹಾರ್ವದು’ ಅಂದ. +ಹೋಗ್ ಹಾರ್ ಬಿಡಬೇಕು ಅಂತ ಕೆರಿ ದಂಡಿಮೇನೆ ನಿತ್ತ. +ದೇವರು, ‘‘ತಡಿಯಪ್ಪ’’ ಅಂದಿ ತಡೆದ, ‘‘ಬೇಟ್ಯಾದ ಪರಮಾತ್ಮ, ನನಗೆ. +’’‘‘ಇಂತ ಕಷ್ಟ ಯೇನ್ ಬಂದ್ ಹೋತಪ್ಪ? +’’ ಕೇಳ್ದ. +‘‘ಯೇನಲ್ಲ ಸ್ವಾಮಿ, ನಂದು ರಾಜ್ಯ ಮಾದೊಡ್ಡ. ಹುಡ್ಗರೆಲ್ಲ. ಜೀವನೆ ನಾಶಮಾಡಬೇಕು’’ ಅಂದ. +‘‘ಹುಡ್ಗರು ಇಲ್ಲ ಅಂದ್ ಹೇಳೋಕೆ ಹೀಗ್ ನೋಡು’’ ಅಂದ, ರಾಜ್ನ ಕೆಲಿ- ‘‘ನೋಡು. . . ’’ ಅಲ್ ನೋಡ್ದ, ‘‘ಮಾಯ್ನ ಗಿಡದಾಗೆ ಮಾವ್ನ ಹಣ್ ತೂಗಾಡ್ತಾದೆ ಕೊಯ್ಕಬಾ’’ ಅಂದ. +ಮೇನೆ ಮೇನೆ ಹೋತದೆ. +‘‘ಇನ್ನೊಂದು ಸರ್ತಿ ಹೋಗು’’ ಅಂದ. +ಅವನ ಕೈಗೆ ಸಿಕ್ತು. +ಮಾವ್ನಹಣ್ ಸಿಕ್ಕುವರಿಗೆ ತಂದ್ ಇರಸಕಂಡ. +‘‘ನೀನು ಮಾಯ್ನ ಹಣ್ಣ ತಕಹೋಗಿ ಕೋಯ್ದಿ ಯೇರಡು ತಾಟಿ ಮಾಡಬೇಕು. +ರಸ ಬಂಗಾರದ ಹರಿವಾಣದಲ್ಲಿ ಹಿಂಡಿ ಹಿಂಡತಿಗೆ ಕೊಡು’’ ಅಂದ. +ಹಣ್ಣ ತಕಂಡ್ ಬಂದ ರಾಜದೊರೆಲ್ಲಾ ಬಂದ್ಕಂಡ್, ‘‘ಯೇನೇನು ಯಾವಾಗ ಬರೋರು?’’ ಕೇಳ್ತ ಬಿದ್ದರೆ ಹಣ ತಕ ಬಂದ ಮನಿಗೆ. +‘‘ಯೆಲ್ ಹೋಗಿರಿ, ಸ್ವಾಮೀ?’’ ಅಂದ. +ಹೇಳ್ಕಂಡಿ ಮೇರ್ ಬಾನ್ ಮಾಡ್ತು. +‘‘ಯೆಲ್ಲೆ ಹೋಗಿರಿ?’’ +‘‘ಹೋಗಿದ್ದೆ ಅಲ್ಲೆ’’ ಹೇಳ್ದ ಯೆರಡ ಹಣ್ಣ ಹೆಂಡ್ತಿ ಕೈಯಲ್ ಕೊಟ್ಟ. +ಬಂಗಾರದ ಹರಿವಾಣದಲ್ಲ್ ರಸ ಹಿಂಡಿ ಹಿಂಡ್ತಿ ಕೈಲ್ ಕೊಟ್ಟ. +ಗೊಟುಸಿಪ್ಪೆ ಕುನ್ನಿಗೆ ಹಾಕ್ತು ಗರ್ಭಿಣ್ಯಾಯ್ಯು ಕುನ್ನಿನೂ ಗಬ್ಬಾಯ್ತು. +ವಂಬತ್ ತಿಂಗಳಾಯ್ತು. +‘‘ಎನಾಯ್ತು? +ವಂದ್ ಹುಡಗ ಹುಟ್ದಿ ಅದ್ಕೆ’’ ಹುಟ್ಟುವರಿಗೆ ಬಟ್ರು ಕೇಳ್ತ. +ಯಲ್ಲಾ ಜಾತೀಲೂ ಅದ್ಯಲ್ಲಾ? +ಮೂರ್ ದಿನ್ಕೆ ಬಟ್ರ ಮನಿಗ್ ಹೋದ ರಾಜ. +‘‘ಯೇನಂದ್ ಬಂದಿದೆ?’’ +‘‘ಅವನ ಜನ್ನಿವಳ್ಗೆ ಹನ್ನೈಯ್ಡ್ ದಿವಸದ ಗಂಡಿಗೆ ಹನ್ನೈಯ್ಡವರ್ಸದ್ ಹೆಣ್ ಲಗ್ನ ಮಾಡಬೇಕ್.’’ +ಆವಾಗೆ, ‘‘ಹರಹರ ಹುಡ್ಗರ ಯಲ್ಲದೆಗಿದ್ದದ್ದೆ ವಂದ್ ಕಟ್ಟಾಗಿತ್ತು. +ಈಗ ಹುಟ್ಟದ್ದೆ ತಪ್ಪಾಯ್ತು’’ ಅಂದ ಮುನಿಕಂಬಿಟ್ಟ. +ಹೆಂಡ್ತಿ, ‘‘ಅಯ್ಯೋ ದೇವರೆ!’’ ಹೇಳಿ ರಾಜನ ಯಬ್ಬಿಸ್ತು. +‘‘ಹನ್ನೆಯ್ಡ ದಿನದ ಹುಡಗಗ ಹನ್ನೈಯ್ಡ ವರಶನ ಹಿಂಡ್ತಿ ಯೀಗ ಮದ್ವಿ ಮಾಡಬೇಕು.’’ +ಪರದಾನಿ ಬಂದ ರಾಜನ ಕೆಳಗಿದ್ದವ. +ಪರದಾನಿ, ‘‘ಅಯ್ಯೋ ದೇವ್ರೆ! +ಯೇನ ವಂದ್ ಕೆಲಸ ಮಾಡ್ದ?’’ +ಪರದಾನಿ ಮಗನ ಪೋಟ ತೆಗವದು, ‘‘ತೆಗದಿ ಈ ಪರದಾನಿ ಕಲ್ ಕೋಟ್ಟಿ ನೀ ತಕಂಡ್ ದೇಸಾಂತ್ರ್ ಹೋಗೋದು, ಯಾವ ರಾಜ್ನ ಮನ್ಲಿ ಹೆಣ್ಣದ್ಯೋ ತೆಳಕಂಡಿ ಮೂರ್ ದಿನದ್‌ವಳಗ್ ಬರಬೇಕು’’ ಅಂದ್ ಹೇಳಿ ಕಳಗದ. +ಹೋದ. ಹೋಗುವರಿಗೆ ಮತ್ತೊಂದು ರಾಜನ ಮನಿಗೆ ಹೋದ. +ಅವರೇನಂದರು ಅವ್ನ ಕಲಿ. +‘‘ಯೆಲ್ಲಿದ್ ಬಂದ್ರಿ?’’ +‘‘ಹಂಗಾದ್ರೆ ನೆಂಟ್ರೇ ವಂದ್ ಹುಡುಗ ಪರಾಯಕ್ ಬಂದನೆ ಲಗ್ನಮಾಡಬೇಕು ಹೇಳ್ ಬಂದನೆ’’ ಪೋಟು ಆ ಹುಡುಗಿಗೆ ತೋರ್ಸದ. +ಪೋಟು ನೋಡಿ ಅದು ವಪ್ಕಂಡ್ತು. +‘‘ಯಾವ ದಿವಸಾಗೂದು? +ಹನೈಯ್ಡ ದಿವಸದೊಳಗಾಗಬೇಕು ಲಗ್ನ. +ಇಂತಾ ದಿವಸ ಆಗೂದು. +ಮೂರೇ ದಿನದೊಳಗಡ್ಡಿಲ್ಲ’’ ಹೇಳ್ದ. +ತನ್ನ ಹುಡಗನ ಪೋಟೋ ತೋರ್ಸಿ ಹೆಣ್ ಕೇಳನೆ. +ತನ್ನ ಹುಡಗಗೆ, ‘‘ಬಾಸಿಂಗ ಕಟ್ಕ ಹೋಬೇಕು’’ ಅಂದ. +ಹುಡ್ಗನ ಹತ್ರ ಹೇಳ್ದ. +‘‘ಬಾಸಿಂಗ ಕಟ್ ಮದಿ ಮಾಡ್ರೂ ಆ ಹೆಂಗ್ಸೂ ಕೈ ಮುಟ್ಟಕಾಗ, ಸಂಗ್ತಿ ಮನಗೂಕಾಗ.’’ +ಸೊನಗಾರ ಮನ್ಗೆ ಹೋಗಿ ಲಿಂಗ ಬೆಳ್ಳೀದು ಮಾಡ್ಸಕ ಬಂದು, ಬಂದಿ ಹುಡ್ಗನ ಕೊಳ್ಳಿಗೆ ಕಟದ್ರು. +ಶಿಶುಕೊಳ್ಗೆ ಇಷ್ಟ್ ದೊಡ್ಡದು. +ಹುಡಗನ ಕಟ್ಕಂಡಿ ಊರಗೆ ಐದು ಜನ ಬಟ್ರ ಕರಕಂಡ್ರು. +ಬಟ್ರು ಶಿಶು, ಬಾಳಂತಿ, ಮದಮಗ ಯಲ್ಲವ ವಟ್ಟಾಕಂಡಿ ಹೋದ್ರು. +‘‘ನಾಡ್ದನ ಹನ್ನೆರಡ ದಿನ, ಹನ್ನೆರಡ್ ದಿನದೊಳಗಾಗಿ ಆಗಬೇಕು ಲಗ್ನ.’’ +ದಿಬ್ಬಣ ಕಟ್ಕಂಡ್ ಹೋದ್ರು. +ಬಟ್ಟರು ಯೇನಂದ್ರು? +‘‘ತಾಯಿ-ತಂದೆ ಲಗ್ನ ನೋಡೂಕಾಗ ಊರನೋರ್ ವಬ್ರೂ ವಳಗ ತಕಂಬೂಕಾಗ. +ವಂದ್ ಪರದೆ ಕಟ್ಕಂಬೇಕು’’ ಅಂದ್ರು. +ಕಟ್ಕಂಡಿ, ‘‘ದೇವ್ರೆ ವಂದ್ ಹುಡ್ಗಿಯಾಗಿತ್ತು. +ನಾವೇ ಬಟ್ರಕಲ್ ದಾರಿ ಯೆರಿಸ್ಬೇಕಾಯ್ತಲ್ಲ?’’ ಅಂದ್ರು. +ಹೋದೋರು ದಾರೀ ನೀರ್ ಬಿಟ್ರು. +ಈ ಹುಡ್ಗ್ನ ಕೊಳ್ಳನ್ ನಿಂಗಕೆ, ಕೈಮೇನೆ ಇಟ್ಕಂಡು ನೀರ್ ಬಿಡೂದು. +ಲಿಂಗಕೆ ಹೂಗ್ ಹಾಕಿ ಲಗ್ನದ ನೀರ್ ಬಿಟ್ರು. +ಪರದಾನಿ ಹುಡ್ಗ ಬಾಶಿಂಗ ಕಟಕೂತನೆ. +ಲಿಂಗ ತೆಗೆದ್ರು ದಾರಿ ಯರದ್ರು. +ಶಿಸನ ಕೊಳ್ಗೆ ಕಟ್ಟಿ ಹೋದ್ರು. +ತಿರುಗ್ ಬಂದ್ ಬಿಟ್ರು ಬಟಕೋಳು. +ದಿಬ್ಬಣದೋರು ಯೆಲ್ಲಾ ಉಂಡ್ರು. +ಹಸೆಹಾಕ ಹೆರ್ಗ ಮಲೂಗಿದರು. +ಮದಮಗ (ಪರದಾನಿ ಹುಡುಗ) ಹಾಸ್ಗಿ ಮೇನೆ ಮನಗಿದ. +ಪಕ್ಸಕ್ಕೂ ಮೈ ಮುಟ್ಟಲಿಲ್ಲ. +ಆ ಹುಡಗಿಗೆ ನಿದ್ರೆ ಬಿದ್ ಹೋಯ್ತು. +ಬಾಶಿಂಗ ಕಟ್ಕಹೋದವ್ನ ಯೇಳ್ಸ್ಕಂಡದ್ದು, ಶಿಶು ತೆಗದು ಅದರ ಮಗ್ಗಲದಲ್ ಮನಗಿಶಿದ್ರು. +ಚೀಟಿ ಬರ್ದಿ ಶಿಸನ ಮಗ್ಗುಲದಲ್ ಇಟ್ಟರೆ. +‘‘ಈ ಗಂಡನ್ನ ಸಾಕಿ ಸಲಗಿ ಸಂರಕ್ಷಿಣ ಮಾಡದ್ ಹೌದಾರೆ ನೀ ಮುತ್ತೈತನದಲ್ ಉಳೀಬೇಕು’’ ಅಂದಿ ಬರದರೆ. +‘‘ಅವ ನಿನ್ ಗಂಡ’’ ಹೇಳ್ ಬರದರೆ. +ಬೆಳಗಾಗೂದ್ರೊಳ್ಗೇಯ ಈ ಬಾಲಯ್ಯನು ತೀಡ್ತದೆ. +ಹಸ್ವಾಯ್ಕಂಡಿ, ‘‘ಇದೇನು? +ಈ ಬಾಲಿ ಇಲ್ ತೀಡ್ತದೆ?’’ ಈಚೆ ಬಳಚೂದು ಆಚೆ ಬಳ್ಚವದು. +ಚೀಟಿ ವೋದ್ಕಂಡಿ, ‘‘ಹರಹರ ಹಣೀಲ್ ಬರದದ್ದು. +ಇದ್ಕೆ ಯಾರ ಕೂಡ ಹೇಳದ್ರೆ ಸಾದ್ಯಿಲ್ಲ. +ತಪ್ಸೂಕೆ’’ ಅಂದ್ ಹೇಳ್ತು. +ಸಂರಕ್ಸಣಿ ಮಾಡ್ಕಂಡ್ ಮುತ್ತೈತನದಲ್ ಉಳೀಬೇಕು. +ವಸ್ತ್ರದ ಮೇಲೆ ವಸ್ತ್ರ ಹಾಕಂಡಿ ದಾಗಿನಿ ಹಾಕಂಡ್ತು. +ಶಿಸ ಯೇನ್ ಮಾಡ್ತು? +ಜೋಳ್ಗಿ ಮಾಡ್ಕಂಡ್ ಬೇಡ್ವರಾಗೇ ಬೆನ್ನಿಗ್ ಬಿಕ್ಕಂಡ್ತು, ಹೊಂಟ್ತು. +ಇದು ಹೋಗುವರಿಗೆ ವಂದಲ್ಲ ವಂದ್ ಊರ್ಗೆ ಹೋಗ್ ಮುಟ್ತು. +ಬೆಳಗಾಗುತನ್ನ ತನ ಮಗಳ ಪರದಾನಿ ಬಂದಿ ಕಸ್ಕಂಡ್ ನೆಡ್ದ್ನಲ್ಲ ಅಂದಿ ಬಾರಿ ಚಿಂತಿ ಮಾಡ್ರು. +ಹೋಗ್ ಹೋಗ್ ವಂದ್ ದೇಸ್ಕೆ ಹೋಯ್ತು. +ಇದ್ಕೆ ಬಾರಿ ಹಸ್ವಾಯ್ತು. +ಯೆಟ್ ಪರಾಯದ ಕನ್ಯೋ ಅದೇ ಪರಾಯದಾಗೆ ಇರಬೇಕು. +ಅವ ಪರಾಯಕ್ ಬರೂವರ್ಗೆ. +ಆವಾಗೆ ಯೇನ್ ಮಾಡ್ತು? ಹೋಯ್ತು. +ವಳ್ಳ ಆಸ್ರಾಯ್ತು. ಹಸ್ವಾಯ್ತು. +ವಂದ್ ಕಟ್ಟದೆ, ಅಲ್ಲಿ ಕಟ್ಟಿ ಕಾಲ್ಗೆ ವಂದ್ ಆಲ್ದ ಬೇರು ತೂಗಾಡ್ತದೆ, ತೂಗಾಡೂ ಬೀಣ್ಗೆ ಜೋಕಾಲಿ ಕಟ್ತು. + ಮನಗಿಸಿತು. ‘‘ಅವಗೆ ಹಣ್ ತಿಂದ್ಕಂಡಿ ಹಣ್ರಸ ತಂದ್ ಕುಡಿಸ್ಬೇಕು’’ ಹೇಳ್ಕಂಡಿ ಹೋಗಿ ಹಣ್ ತಿಂತು ರಸ ಕಟಕಂಡ್ತು. +ಪಾರ್ವತಿ-ಪರಮೇಶ್ವರ ಸ್ವಾರಿಗ್ ಹೊಗ್‌ತಿರು. +ಹೋಗ್ಬರಬೇಕಾದ್ರೆ, ‘‘ಆರಂಭ. +ಅಡವಿಲಿ ನರಮನಸರ ಯಾತದೆ. +ಹೋಗ್ ಬರ್ವನಿ’’ ಅಂತದೆ. +ಗಂಡನ ಕೂಡೆ, ‘‘ಈ ಅಡವೀಲಿ ಯೆಲ್ ಮನಶರವ್ರೆ?’’ ಮೇಲೆ ಕಟ್ದ ಜೇನು ಅವನ ಬಾಯ್ಗೆ ತೊಪ್ಪ ಬಿಡ್ತದೆ. +ಹೆಂಗ್ಸು ರಸ ತಂದದ್ ಕಂಡ್ತು. +ಬತ್ತದೆ ಬರವದರೆ ಅಲ್ಲಿ ನಾಕು ಬಳ್‌ಕಟ್ಟಿ ಬಟ್‌ಗೆಲ್ಲ ಅಮೃತ ತುಂಬದ್ರು. +ಅವ್ ತೀಡ್ದಾಗೆ ಆ ಬೊಟ್ ಬಾಯ್ಗೆ ಕೊಟ್ರು ಬಟ್ಟ ಕಡ್ದ, ಅಮೃತ ತುಂಬಿ ವಂದ್ ಬಟ್ಟ ಬಾಯ್ಗೆ ಕೊಟ್ರು. +ಮಲಗಿಸಿದರು. ಜೋಕಾಲಿಯಲಿ ಮೇನ್ ಇಟ್ ರಸ ಹಿಡ್ಕಂಡದೆ. +ಮತ್ ಕೇಳ್ರು, ‘‘ಹನ್ನೈಯ್ಡ ವರ್ಸದ ಹುಡಗಿಗೆ ಹನ್ನೈಯ್ಡ ದಿನದ ಶಿಸು ತಂದಿ ನಗ್ನ ಮಾಡ್‌ಬಿಟ್ರು. +ಏನ್ ಮಾಡಬೇಕಾಯ್ತು’’ ಅಂದಿ ಹೊಯ್ಕಂಡ್ತು. +ಆವಾಗೆ, ‘‘ನೀನ್ ಯೇನ್ ಸಂದಾಯ ಬಿಡಬೇಡ. +ಆರ್ ತಿಂಗಳ ಗಂಡು ಆರ್ ವರ್ಸನ ಗಂಡಾಗ್ತ, ಹನ್ನೆಯ್ಡ ವರ್ಸಾಗಿ ನಿನ್ನ ಮಗ್ಗಲಕ ಅವ ಬರೂವರ್ಗೆ ನೀನ್ ಯಾವ ಪರಾಯದಗಿದ್ದೆ ಅದೇ ಪರಾಯದಲ್ ನೀನಿರಬೇಕು.’’ +ಅದ್ಕೆ ಆಸರ್ವಾದ ಕೊಟ್ರು. +ನೆಡ್ದ್ ಬಿಟ್ರು. +ಅವನ ಬಾಯ್ಗೆ ವಂದ್ ಗುಟ್ಕ್ ಕೊಟ್ಕಂಡ್ತು, ನೆಡ್ದಬಿಡ್ತು. +ಹೋಗೂವರೆಗೆ ವಂದ್ ಮಡ್ವಾಳವ ಶೇರಿ ವಗಿತೆ ಇರತಿದ್ದ. +ಆ ದಿನ ಸೂಟಿ. +ಆ ದಿನ ಅವ ಬರಲೇ ಇಲ್ಲ. +ವಗೂಕೆ ಮಡವಾಳ ಮುದ್ಕಿ ಅರಸೂಮನ್ಗೆ ಹೊಗ್ ಕೊಡ್ತಿತ್ತು. +ಅದ್ರ ಹೆಸ್ರು ಹೂಗಾರ ನಿಂಗಮ್ಮ. +ಮಲ್ಲವ್ವಿ ಹೇಳಿ ಇದು ಹೋಕಂಡಿ ಅದ್ನ ಅರಬಿಯ ವಗಿತ ಕೂತದೆ. +ಬಂಗಾರ ಅರವಿಲ್ ಹಾಕದೆ. +ಶಿಸವ ಇದ್ರ ಮೇನ್ ಮನಗ್ಸದೆ. +ಅವ ಆಡ್ತೇ ಮನಗನೆ. +ಇದು ಕೂದ್ಲ ಬಿಟ್ಕಂಡದೆ. +‘‘ಎಳ ಮಕ್ಕಳ ಚೌಡಮ್ಮ ಕೂತದೆ’’ ಅಂತದೆ. +‘‘ತನ್ಗ್ ಬೇಡ ಹೋಗು’’ ಹೇಳಿ ಕೊಣಿತದೆ. +ಮುದ್ಕಿ ವೋಡೂಕ ತಯಾರಾಗದೆ. +ಹೇಳ್ತು ಅದು. +“ಅವ್ವಾ ನಾನು ಚೌಡಮ್ಮನಲ್ಲ. +ನರಮನಸತಿ. ಕೊಯ್ಕ ಹೂಗ. +ನನ್ಗೂ ಕೊಡು. +ತಾವ್ ತೋರ್ಸೆಯವ್ವಾ. +ನಾನು ನಿನ್ ಬೆನ್ಗೆ ಬತ್ನವ್ವಾ’’ ಅಂತು. +“ಅವ್ವಾ ನೀ ನರಮನಸ್ತಿಯಾದ್ರೆ ಬೆನ್ಗೆ ಬಾ” ಅಂತು. +ಹೋಯ್ತು. ಆ ಮನಸತಿ ಅವ್ಳ ಮನ್ಗೆ ಕರ್ಕಂಡ್ ಹೋಯ್ತು. +ಅವಗೆ ಜೋಕಾಲಿ ಕಟ್ ಮನಿಸ್ತು. +ಮೆತ್ ಹತ್ತತ್ತು. +‘‘ಅವ್ವಾ ಹುಡಗನ ಸಾಕಿ ಸಲ್ಗಿ ಸಂರಕ್ಸಣೆ ಮಾಡು. +ಹೂಗ ಕೊವ್ಕೆ ಹೋಬೇಡ’’ ಹೊನ್ ಸರ ತೆಗ್ದಿ ಕೊಟ್ತು. +ಅದ್ ಉಳಿತು. +ಸರ ತಕಂಡ್ತು. +‘‘ದೊಡ್ ಸಾವಕಾರ ತನ್ ಊರಲ್ ಅವ್ನೆ’’ ಅಂದಿ ಹೋಯ್ತು. +‘‘ನನಗೊಂದ್ ಯಮ್ಮಿ ತೆಗಿಸ್ ಕೊಡು’’ ಅಂತು ಸಲ್ಲುಹಣ ಸಲ್ಸತ್ತು. +ಯಮ್ಮೆ ಹೊಡ್ಕ ಕಟ್ಕ ಬಂತು. +ಯಲ್ಲಾ ಸಾಮಾನ್ ಸರಂಜಾಮಾಯ್ತು. +ಮೇಲುಪ್ಪರಿಗೆ ಮೇನೆ ಉಳಿತು ಅದು. +ಅನ್ನ-ಹಾಲು ಕೊಟ್ತು. +ಆರು ತಿಂಗಳ ಗಂಡು ಆರ್ ವರ್ಸನ ಗಂಡಾದ. +ಹೀಗೆ ಬೆಳಿತ್ ಬಂದ. +ಹನ್ನೈಯ್ಡ ವರ್ಸನ ಹೆಣ್ಣಾಗಿ ಅದೆ. +ಹನ್ನೈಯ್ಡ ವರ್ಸನ ಗಂಡಾದ ಹೇಳ್ದ ಯೇನಂದಿ? +‘‘ತಾನು ಕೇರಿಮೇನ್ ಹೋಬೇಕು. +ಆಡೂಕೆ ತನಗೊಂದ್ ಬೊಗ್ರಿಯಾಬೇಕು’’ ಅಂದ. +‘‘ಬೊಗ್ರಿಯಾಬೇಕು’’ ಅಂಬೂತನವ ಆಗ ಬೊಗ್ರಿ ಮಾಡ್ ಕೊಟ್ತು. +ಆಡ್ಕಂತೆ ಆಡ್ಕಂತ್ ಆಡ್ಕಂತಿ ಇಲ್ ವಂದ್ ಮನಿಗ್ ಅಲ್ ಬಂದು ದೊಡ್ಡ ಗಂಡಸು ಆದ. +ಅಲ್ಯೇನಾಗದೆ? +ಮಾದೊಡ್ ಸಾವ್ಕಾರ. +ಅಲ್ಯೇನಾಗದೆ ಕೇಳ್ದ್ರೆ ನಾಯ್ಕಿಣಿ ಮನಿಯದೆ. +ನಾಯ್ಕಿಣ್ಯ ಮಾದೊಡ್ ಸಾವ್ಕಾರ ಇಟ್ಕಂಡಿದ್ದ. +ದಿನಾಗೂ ಇವ ಅದೇ ನಾಯ್ಕಿಣಿ ಅಂಗಳದಲ್ ಆಡತಿದ್ದ. +ಆಡೂಕ್ ಹೋದ ಹುಡುಗನ ಕಂಡ್ಕಂಡಿ ನಾಯ್ಕಣಿಗೆ ಇವನ ಮೇನ್ ಮನಸಾಗಿ ಸಾವಕಾರ್ನೇ ದೂರ ಮಾಡೂಕ್ ಹಣ್ಕತು. +ಸಾವಕಾರ್ನೇ ದೂರ್ ಮಾಡಿ ಅವಗೆ ತನ್ನ ಮನಿಗ್ ಬಂದ ಕೂಡ್ಲೆ ಕಿಸಗೆಡವದು ಕಳಸ್ಬಿಡೂದು. +ಹುಡಗನ ಕರಕಂಡ್ ಪಗಡಿ ಆಡೂದು. +‘‘ಹೊತ್ತಿಂದ ಹೊತ್ಗೆ ಊಟ್ಕೆ ಬರೂದಿಲ್ಲ’’ ಹೇಳಿ, ಮೊಮ್ಮಗಳ ಕೂಡೆ ಹೋಗಿ, ‘‘ನಾಯ್ಕಿಣಿ ಹತ್ರ ಪಗಡೆ ಆಡೂಕ್ ಕೂತನೆ ಅವ.’’ +ಅದು, ‘‘ಹನ್ನೈಯ್ಡ ದಿವಸನ ಗಂಡ, ಹನ್ನೈಯ್ಡ ವರ್ಷನ ಹೆಣ್ಗೀ ಲಗ್ನ ಮಾಡದ್ರು. +ತಾನು ಸಾಕ್ ಸಂರಕ್ಷಣಿ ಮಾಡ್ಕಂಡು ದೇಸಾಂತರ ಬಂದು ದೊಡ್ಡ ಮಾಡ್ಕಂಡನೆ. +ನಿನ್ನ ಕಾಲ್ ಮಡನಲ್ಲಿ ಹಗ್ಗ ಹಾಕಂಡ್ ಜೀವ ಕೊಡ್ತೆ’’ ಅಂದಿ, ಚೀಟಿ ಬರ್ದಿ ಅಜ್ಜಿಕಲ್ ಕೊಟ್ತು. +ಕೊಡವರಿಗೆ ಅದ್ ತಕಂಡ್ ಹೋಯ್ತು. +ನಾಯ್ಕಿಣಿ ಕಲಿ ಚೀಟಿ ಕೊಟ್ತು. +ಪಗಡಿ ಮುಗ್ಸಿ ಚೀಟಿವೋತ್ತು. +ಆವಾಗ ಇವನ ಕಲ್ ಹೇಳ್ತು. +‘‘ಮತ್ತೆ ನಿಮ್ಗೆ ಹನ್ನೈಯ್ಡ ದಿವಸನ ಶಿಸುಗೆ ಹನ್ನೈಯ್ಡ ವರ್ಸನ ಹುಡ್ಗಿ ಲಗ್ನ ಮಾಡರೆ. +ನಿನ್ ಬೆನ್ನು ಕಟ್ಕಬಂದ್ ಹಿಂಡ್ತಿ ಅದೆ, ಅಜ್ಜಿಮಲ್ಲಿ ಹನ್ನೈಯ್ಡ ವರ್ಸನ ಲಗ್ನ ಮಾಡ್ದ ಹೆಂಡತಿ ಅದೆ.’’ +‘‘ಇಂದ್ ಹೋದೋರ್ ನೀವು, ‘ಯೇ ವಂದ್ ಚಂಬ್ ನೀರ್ ತಕಂಬಾ’ ಹೇಳಬೇಕು. +ನೀರ್ ಕೊಡ್ತದ್ಯೋ ನೋಡಿ, ‘ನೀರ್ ಬೆರ್ಸಿ ಕೊಡು’ ಅಂಬೇಕು. +ತಂದ್ ಕೊಡ್ತದ್ಯೋ ನೋಡಬೇಕು. +ನೀರ್ ಕಾಲ್ ತೊಳುಕ್ ಕೊಡ್ತದ್ಯೊ ನೋಡಬೇಕು. +ನೀರ್ ಮಿಂದ್ಕ ಬಂದೋರು ‘ಊಟಕ್ ಬಡ್ಸೆ’ ಅಂಬೇಕು. +ಅದು ಊಟಕ್ ಬಡ್ಸ್ತದ್ಯೋ ನೋಡಬೇಕು. +ನೀವು ಈಗ ಮನಿಗ್ಹೋಗಿ’’ ಹೇಳ ಕಳಗಸತು. +ಬಾಗ್ಲ ಹತ್ತೂವರಿಗೆ ‘‘ನೀರ್ ತಕಂಬಾರೆ’’ ಅಂದ, ದಡಗುಟ್ನ ಮೆತ್ ಇಳ್ದಿ ತಂದ್ಕೊಟ್ತು. +ಹರವಿತೆಗ್ದಿ ನೀರ್ ಬೆರ್ಸ್ಕೊಟ್ಟ್ತುನೀರ್ ಮಿಂದ್ಕಬಂದ. +ಬಂದವ, ‘‘ಯೇಗ್ ಊಟ್ಕೆ ಬಡ್ಸು’’ ಅಂದ. ಬಡಸ್ತು. ‘‘ಮಜ್ಗಿ ಹಾಲು ಯೆಲ್ಲ ತಯಾರ್ ಮಾಡಿಟ್ ಮೆತ್ ಹತ್ತು’’ ಅಂದ. +ಸುಖ–ಸಂತೋಸದಲ್ ವಳದ್ರು. +ಅಕ್ಕ-ತಂಗಿ ವಂದಿವ್ಸೆ ಯೆಯ್ಡ ಜನ ಮಕ್ಳು ಸಾಲಿಗ್ ಹೋಗೀರಂತೆ. +ಮಾಸ್ತರು, ‘’ಭಾಗಿಲಕ್ಷ್ಮಿ ಬಲಕನ ತೊಡಿ ಮೇನ ಕುಳ್ಳು, ನಿಧಿಲಕ್ಷ್ಮಿ ಸತ್ತ ಗಂಡ್ನ ಮದಿಯಾಗ್ವೋಳು. +ಯಡಕನ ತೊಡಿ ಮೇನ್ ಕುಳ್ಳು’’ ಅಂದ್ರು ಮಾಸ್ತರು. +ಇದು ಹಂಬ್ಲು ಇಟ್ಕಂಡಿ ದಿನಾಕೂ ಹಾಗೇ ಹೇಳತ್ರು. +ಹಂಬ್ಲನೇ ಆಗೂದೆಲ್ಲ ಅದ್ಕೆ ಮಾರದಿವ್ಸೆ ಮತ್ ಹೊದಾಗೂ ಹಾಂಗೇ ಹೇಳ್ ದ್ರು. +ಆಗೂ ಹಂಬ್ಲನೇ ಇಲ್ಲ. +ಮತ್ತೊಂದ್ ದಿವ್ಸೆ ಶೇರೀ ಉಟ್ಕಂಡ್ ಹೋಯ್ತು ಅದು. +ಹಾಂಗೇ ಹೇಳೂರೊಳಗೂವ, ‘‘ಭಾಗ್ಯಲಕ್ಷ್ಮಿ ಬಲಕನ ತೊಡಿ ಮೇಲ್ ಕುಳ್ಳು, ನಿಧಿಲಕ್ಷ್ಮಿ ಸತ್ತ ಗಂಡ್ನ ಮದಿಯಾಗ್ವೊಳು ಯಡಕನ ತೊಡಿ ಮೇನ್ ಕುಳ್ಳು’’ ಅಂದ್ರು. +ಅದು ಶೇರಿ ಶರೀಗ್‌ಗೆಣ್ ಹಾಕತು ಹಂಬ್ಲಾನೇ ಇರೋದೆಲ್ಲ ಹೇಳಿ. +ಬಂತು ಸಾಲಿಂದ ಮನಿಗೆ. +ಬಂದಿ ಅದ್ಕೆ ಹಂಬಲೆಲ್ಲ. +ಅವಿ ಅವ್ಳ ತಂಗಿಗೆ ಅದಕೆ ನೀರ್ ಹೋಯ್ತು. +ಹೊಯ್ಯು-ರೊಳಗುವ ಕಪಡ ಬಿಚ್ಚಿ ಶೇರಿ ಕಳ್ಚ್‌ತು. +ಕಡಿಗೆ ತಂಗಿ, ‘‘ಇದೆಂತಾ ಗೆಣ್ಣೀ ಕೇಳ್ತು ಅವಿ.’’ +ಅದು, ‘‘ಅವ್ವಾ, ಆಗ್ ಮಾಸ್ತರ್ ದಿನಾಕೂವ ಭಾಗಿಲಕ್ಷ್ಮಿ ಬಲಕನ ತೊಡಿಮೇನ ಕುಳ್ಳು ನಿಧಿಲಕ್ಷ್ಮಿ ಸತ್ತ ಗಂಡ್ನ ಮದಿಯಾಗ್ವೋಳು ಯಡಕನ ತಡಿ ಮೇನೆ ಕುಳ್ಳು ಹೇಳತ್ರು’’ ಅಂತು ಅದು. +ಆಗೇ ಅದೇ ತಲಿ ತಕಂಡಿ ಉಳಿತು ಅವಿ ಗಂಡನ ಕಲ್ ಹೇಳ್ತು. +ಗಂಡ್ನೂ ಅದೇ ತಲಿ ತಕಂಡ ತಕ್ಕಂಬೂರೊಳಗೂ ವಂದಿವ್ಸೆ ಯೇನ್ ಮಾಡ್ದ? +ಕಡಿಗೆ ವಂದ ಬುತ್ತಿ ಕಟ್ಕಂಡಿ, ರೊಟ್ಟಿ ಸುಟ್ಕಂಡಿ, ಅದ್ರ ಕರುಕ ಹೋದ . +‘‘ಅಜ್ಜಿ ಮನಿಗ್ ಹೋಗ್ವನೆ’’ ಹೇಳಿ ಹೋಗ ಹೋಗ್ ಹೋಗ್ ಹೋಗಿ, ‘‘ಅಪ್ಪಾ ಇದು ಅಜ್ಜಿ ಮನಿಗ್ ಹೋಗೂ ದಾರ್ಯಲ್ಲ’’ ಅಂತು. +ಅವ ಹೇಳ್ದ, ‘‘ನೀನು ಬರಲೆಲ್ಲ ರಾಶಿ ದಿವಸಾಯ್ತು ಬಂದೇಯ, ಇದೇ ದಾರ್ಯೇಯ’’ ಹೇಳಿ, ಅದೇ ದಾರೀಲಿ ಕರಕಹೋದ. +ಅಡವೀಗ್ ಹೋದ ಅವ. +ಕಡಿಗ್ ಹೋಗಿ ಹೋಗಿ ಕಟ್ಟೀಮೇನ್ ಹೋಗಿ ಕೂತ್ರು. +ಅಪ್ಪ-ಮಗಳು ಆಗೆ ಬುತ್ತಿ ತಕಂಡ್ ಉಂಡ್ರೂ. +ಮಗಳಿಟ್ಟು ಅಪ್ಪಿಟ್ಟು, ಅವ್ವನ ಬುತ್ತಿಯ ಹಾಗೇ ಇಟ್ಟ ಮಗಳಿಗೆ, ಅದು ಉಂಡ್ತು. +ಕಡಿಗೆ ಉಂಡಕಂಡಿ ಮಗಳ ತಲಿಬಗೀತ್ ಕೂತ. +ಕಾಲ ಮೇನ್ ಮನಿಸ್ಕಂಡಿ ಕಡಿಗ್ ಅಲ್ಲೇ ನೆದ್ರಿ ಬಂತು ಅದ್ಕೆ. +ಆಗೆ ಅಲ್ಲೇ ಹಗೂರಕ್ ಕಾಲ್ ತಪ್ಸಕಂಡ. +ಬುತ್ತಿ ತಲೆಬದಿಗಿಟ್ಟ, ಬಂದ್ ಬಿಟ್ಟ ಅವ. +ಬರುರೊಳಗೂವ ಹಾಂಗೇ ಯಚರಾಯ್ತು ಆ ಮಗೂಗೆ. +ಗೌಜಿ ಹೊಯ್ತದೆ ಅದು. +‘‘ನನ್ನಪ್ನ ಯಾವ್ ಹೂಲಿ ಹಿಡ್ಕ ತಿಂತ?’’ ಹೇಳಿ, ಗೌಜಿ ಹೊಡಿತು ಅದು. +ಆಗ್, ‘‘ಇನ್ನೇನ್ ಮಾಡ್ಬೇಕು?’’ ಅಂದ. +ಹೇಳಿ ಅದು ಅಲ್ಲೇ ಕಟ್ಟಿಮೇನ್ ಉಳಿತು. +ಹೋಬೇಕಾರೆ ಅವಿ ವಂದ್ಶಿದ್ದಕ್ಕಿ ಯಯ್ಡ ಬಿಲ್ಲಿ ಕೊಟ್ಟಿತ್ತು. +ಇದು ಅದ್ರ ಕಲೇ ಉಳಿದಿತ್ತು. +ವಂದ್ ಹೊಲಿರವ ವಂದ್ ಮಗಳ ಹೊಡ್ಕಂತ ಬಂದಿದ್ದ. +ಅದು ತೀಡ್ಕಂತ ಬತ್ತದೆ. +ಅವ ಜಪ್ತ ಬತ್ತ ಇದ್ಯೇನಂತು, ‘‘ನೀ ಅದ್ಕೆ ಯಂತಕ್ ಹೊಡಿತ್ಯೋ? +ನಂಗಾರೂ ಕೊಡೂ ಮಗುನ ನಾ ಇಟ್ಕಂತೆ’’ ಅಂತು. +‘‘ನನ್ ಅವಿ ವಂದ್ ಶಿದ್ದಕ್ಕಿ ಯೆಯ್ಡ ಬಿಲ್ಲಿ ಕೊಟ್ಟಿತ್ತು ಅದ್ನೇ ಕೊಡ್ತೆ’’ ಅಂತು. +ಕೊಡ್ತು ಅದ್ಕೆ ಮಗು ಅದು ಉಳ್ಕಂಡ್ರು. +ಇನ್ನೇನ್ ಮಾಡಬೇಕಾಯ್ತು? +ಯೆಯ್ಡೂ ಜನ ಉಳದ್ರು, ‘‘ನಾವು ಜೀವ ಸಂಸಾರ ಬಗ್ಗೆ ಬೇಡೂಕ್ ಹೋಗಬೇಕು’’ ಅಂದಿ ಬೇಡೋಕ್ ಹೋತು. +ಆಗ್ ಬಂದ್ರು ಬರೂರೊಳಗೂವ ವಂದ್ ಗೊಟ್ಟಿಲ್ ಬಿಳಕ್ ಕಂಡ್ತು. +ಇದೇನಂತು, ‘‘ನಿಧಿಲಕ್ಷ್ಮಿ, ಊರಬಂತು ಬೆಳಕ್ ಕಾಣ್ತದೆ’’ ಅಂತು. +ಹಾಂಗೆ ಬಂದ್ರು ಬೆಳಕ್ ನೋಡಕಂಡು. +ಅದೇ ಕಟ್ಟೆ ಮೇಲಿದ್ದಲ್ಲೆ ಹೆಣ್ ಗಿಳಿ, ಗಂಡ್ ಗಿಳಿ ಇತ್ತು. +ಹೆಣ್ ಗಿಳಿ ಶತ್ ಹೋಯ್ತು. +ಅದ್ಯೇನ್ ಮಾಡ್ತು? +ಹಿಂಡ್‌ದನ್ನ್‌ದ ಸೊಪ್ ಮುರೀತು. +ಮೂಗ್ಗೆ ಬಾಯ್ಲ ಯೆಲ್ಲ ರಸ ಹಿಂಡತು. +ಅದ್ಕೆ ಜೀಮ ಬಂತು. +ರಸ ಹಿಂಡಿ ಜಡಕ ಮಗುನ್‌ದಲ್ಲೆ ಹೊತಾಕ್ತು. +ಅದ್ರ ಮಗು ಹೆಕ್ಕಂತು ಇದು ಯೇನ್ ಮಾಡ್ತು? +ಹಿಂಡನದ ನಾಕೆಯಲಿ ಕೊಯತು. +ಹೆಗ್ಗಿನೂ ತುಮಕಿ ಯೇಯ್ಡ ಕೊಯಕಂಡತು ಕಡಿಗ್ ಬಂದ್ರು. +ದೇವಸ್ತಾನಕ್ ಬಂದ್ರು ವಂದ್ ದೇಪ ಕಚ್ಸಿ ಇಟ್ಟರೆ. +ಬೆಳಕ ನೋಡ್ಕಂತ್ ಬರುರೊಳಗೆ ಅಲ್ಲಿ ವಂದ್ ಹೆಣ ಮುಚ್ ಹಾಕಿಟ್ಟರೆ, ದೇಪ ಕಚ್ಸಿಟ್ಟರೆ. +ಆ ಹೆಣ ಹೀಂಗ್ ಮುಚ್ಲತೆಗ್ದ್ ನೋಡ್ತು ನಿಧಿಲಕ್ಷ್ಮಿ. +ಅದು ಕಾಲ್ಗೆ ಸೊಪ್ಪರಸಯೆಲ್ಲ ಹಿಂಡಿ ಅವ್ಗ್ ತಿಕ್ತು. +ಬಾಯ್ಗೆಯಲ್ಲ ತಿಕ್ತು, ಅವಗೆ ಜೀವ ಬಂತು ಹೊಲಿರವ್ನ ಮಗು ತಲಿಬುಡ್ಕೀದು, ಇದು ಕಾಲ್ ಬುಡ್ಕ್ ಈದು, ಮೂಗ್ಗೆ ಸೊಪ್ಪ ವಾಸ್ನಿ ಕೊಟ್ತು, ಜೀವ ಬಂತು. +ಅವೇನಂದ? +‘‘ಯಾವ ತಾಯಿ ಹೊಟ್ಟಿಲ್ ಹುಟ್ದ ಮಗಳವ್ರ? +ಜೀವ ತಕ್ಸದ್ದು? +ತಲಿ ಬದಿ ಕೂತದ್ದೋ? +ಕಾಲ ಬದಿ ಕೂತದೊ ಹೆಂಡ್ತಿ?’’ ಕೇಳ್ದ. +ಹೊಲೀರ್ ಮಗು, ‘‘ಕಾಲ ಬದಿ ಕೂತದ್ ಯಾಕ್ ಆಗೂದು? +ತಲಿ ಬದಿ ಕೂತದ್ದೇ ಹಿಂಡ್ತಿ’’ ಹೇಳ್ತು. +ನಿಧಿಲಕ್ಷ್ಮಿ, ‘‘ಆಯ್ತಪ್ಪಾ. +ನೀವಾರೂ ಗಂಡ ಹಿಂಡ್ತಿ ಆಕಂಡ್ ಉಳೀರಿ. +ನಿಮ್ಮನಿ ಶಗಣಿ ತಗೂಕ್ ನಾ ಬಂದ್ರೆ ನಂಗ್ ಹೊಟ್ಟಿಗ್ ಹಾಕಿ; ನಂಗೊಂದ್ ಬಿಡಾರ ಕಟ್ ಕೊಡಬೇಕು. +ಯೆಯ್ಡ ಬೊಂಬಿ ಮಾಡ ಕೊಡಬೇಕು’’ ಅಂತು. +ಕಡಿಗ್ ಅದ್ಕೆ ವಂದೆ ಹಳ್ಳದಾಚೆ ಬಿಡಾರ ಕಟ್ಕೊಟ್ರು. +‘‘ಆಗೂದು’’ ಹೇಳಿ ಯೆಯ್ಡ ಗೊಂಬೀನೂ ಮಾಡ್ ಕೊಟ್ರು. +ಇದು ಉಳ್ಕಂತು. +ದಿವಸಾಕೂ ಅವರ ಮನೆಗೆ ವಸ್ತ್ರ ಶಳೂಕೆ, ಸಗಣಿ ತಗೂಕೆ ಹೋತದೆ ಅದು. +ಅವ್ರು ಇಟ್ ಅನ್ನ ಕೊಡತ್ರು. +ಅನ್ನ ತಂದಿ ಹಳ್ಳದಾಗೆ ಬಿಡತದೆ, ಯೇನಂದ್ ಬಿಡ್ತದೆ? +‘‘ಸಾಕಸಲ್ಗೂ ಸಂಕ್ರ ತಂದೆ ನಿನ್ ಮೇನ್ ಬೇಜಾರಿಲ್ಲ ಅರಸೂ ಮಗ ಅರಿದೇ ಉಣ್ತ. +ನಾನು ಅರತ್‌ಕಂಡಿ ಉಣನಾರೆ’’ ಹೇಳಿ, ಅದು ಹಳ್ಳದಾಗೆ ಬಿಡೂದು. +ಕಡಿಗ್ ನಿಧಿಲಕ್ಷ್ಮಿ ಆ ಸೊಪ್ಪು ಹಿಂಡಿ ಯೆಯ್ಡ ಬೊಂಬಿಗೆ ಯೆಯ್ಡ ಜನ ಹುಡಗೀರ್ನ ಮಾಡ್ತು. +ನಿಧಿಲಕ್ಷ್ಮಿ ಹನ್ನೈಯ್ಡ ವರ್ಸನ ಹೆಣ್ಮಕಳ್ಳ ಮಾಡ್ತು ದಿವಸಾಕೂವ ಅದು ಕದ ಹಾಕಿ ಹೋದ್ರೆ ಕದ ತೆಗೂದೆಲ್ಲಾಗಿತ್ತು. +ಅದು ಬಂದೇ ಕದ ತಗಿಬೇಕು. +‘‘ಚಂದೂ ಚಂದಾಣದ ಗೊಂಬೆ ಬಾಗ್ಲ ತೆಗೀರಿ’’ ಅಂತು, ‘‘ಚಂದೂ ಚಂದಾಣದ ಗೊಂಬೆ ಕದ ತೆಗೀರಿ’’ ಅಂತು, ಕದ ತೆಗೀತು. +‘‘ಕತಿ ಹೇಳು’’ ಅಂತದು ಅವ್ಳಕಲ್ ಹೇಳ್‌ತ್ರು. +ಅದು ಹೇಳ್ತದೆ. +‘‘ಹಿಂದಾದ ಸುದ್ದಿ ಹೇಳಬೇಕೋ? +ಬರೂ ಸುದ್ದಿ ಹೇಳಬೇಕೋ?’’ ಕೇಳ್ತದೆ. +‘‘ನಾವು ನೀವು ಮುಂದಾಗೂ ಸುದ್ದಿ ನೋಡ್ತ್‌ರು ಹೋರ್ತು. +ಹಿಂದ್ನ ಸುದ್ದಿ ಹೇಳು’’ ಅಂತ್ರು. +ಆಗೆ ಇಲ್ ಆದ ಸುದ್ಯ ಅಟ್ಟೂ ಹೇಳ್ತು. +ನಾಲಿಗೋದ್ದು ವಟ್ಟೂ ಹೇಳ್ತು; ಮುಗಿಸ್ತ್ಯು ಕತ್ಯ. +ಅರಸೂಮಗ ಆಲಿಸ್ತೇ ವಳದ. +ಕಡಿಗೆ ಯೇನ್ ಮಾಡ್ತ? +ಹೋಲೀರ್ ಹುಡ್ಗಿ ಶಿಗದಿ ತೋಯ್ಣ ಹಾಕಿ ಮುಗ್ಸಿ ಬಂದ. +ಇದೇ ಮದಿಯಾಕಂಡ್ ಉಳೀತ ಅವ.