From 8cff998d2a7b601bbbf6e311760ad22015c5c50b Mon Sep 17 00:00:00 2001 From: Narendra VG Date: Mon, 17 Apr 2023 15:35:26 +0530 Subject: [PATCH] Upload New File --- ...2\340\263\213\340\262\225\340\262\250.txt" | 842 ++++++++++++++++++ 1 file changed, 842 insertions(+) create mode 100644 "Data Collected/Kannada/MIT Manipal/Kannada-Scrapped-dta/\340\262\225\340\262\250\340\262\225\340\262\276\340\262\265\340\262\262\340\263\213\340\262\225\340\262\250.txt" diff --git "a/Data Collected/Kannada/MIT Manipal/Kannada-Scrapped-dta/\340\262\225\340\262\250\340\262\225\340\262\276\340\262\265\340\262\262\340\263\213\340\262\225\340\262\250.txt" "b/Data Collected/Kannada/MIT Manipal/Kannada-Scrapped-dta/\340\262\225\340\262\250\340\262\225\340\262\276\340\262\265\340\262\262\340\263\213\340\262\225\340\262\250.txt" new file mode 100644 index 0000000..b276a31 --- /dev/null +++ "b/Data Collected/Kannada/MIT Manipal/Kannada-Scrapped-dta/\340\262\225\340\262\250\340\262\225\340\262\276\340\262\265\340\262\262\340\263\213\340\262\225\340\262\250.txt" @@ -0,0 +1,842 @@ +ಕನಕದಾಸರು ಕವಿ ವಿಶಿಷ್ಟವಾದ ಸಹಜ ಪ್ರತಿಭೆಯಿಂದ ಉದಾರತೆಯಿಂದ,ವಸ್ತುವೈವಿಧ್ಯ ಹಾಗೂ ಛಂದೋ ವೈವಿಧ್ಯತೆಯಿಂದ, ಸಮಕಾಲೀನ ಪ್ರಜ್ಞೆಯಿಂದ ಹರಿದಾಸ ಸಾಹಿತ್ಯ ಪರಂಪರೆಯಲ್ಲಿ ವಿಶಿಷ್ಟ ಸ್ಥಾನವನ್ನು ಪಡೆದಿದ್ದಾರೆ. +ಕನಕದಾಸರು ದಾಸರಲ್ಲಿ ಕವಿಗಳು ಇದೇ ಅವರ ವೈಶಿಷ್ಟ್ಯ. +ಕನಕದಾಸರು ಹಲವಾರು ಭಾವಪೂರ್ಣ ಕೀರ್ತನೆಗಳನ್ನು ರಚಿಸಿದ್ದಾರೆ. +ಅವರ ಸಾಹಿತ್ಯ ರಚನೆ ಕೇವಲ ಕೀರ್ತನೆಗಳಿಗೆ ಸೀಮಿತಗೊಳ್ಳದೆ, ಮೋಹನತರಂಗಿಣಿ, ನಳಚರಿತ್ರೆ, ಹರಿಭಕ್ತಿಸಾರ, ರಾಮಧಾನ್ಯಚರಿತ್ರೆ,ನೃಸಿಂಹಸ್ತವ ಎಂಬ ಕೃತಿಗಳನ್ನೂ ರಚಿಸಿದ್ದಾರೆ. +ನೃಸಿಂಹಸ್ತವ ಉಪಲಬ್ಧವಿಲ್ಲ. +ತತ್ತ್ವ-ನೀತಿ ಭಕ್ತಿಗಳಿಂದ ಮುಪ್ಪುರಿಗೊಂಡ ಹರಿಭಕ್ತಿಸಾರ, ನಳದಮಯಂತಿಯರ ಹೃದಯಸ್ಪರ್ಶಿಯಾದ ಪಾತ್ರ ಚಿತ್ರಣದ ನಳಚರಿತ್ರೆ, ಜನಾದರಣೇಯವಾಗಿದೆ. +ಅಂದಿನ ಸಮಾಜದಲ್ಲಿ ನೆಲಸಿದ್ದ ವರ್ಗ, ವರ್ಣದ ಅಂತರವನ್ನು ವ್ಯಂಗ್ಯವಾಗಿ, ಮಾರ್ಮಿಕವಾಗಿ ಎತ್ತಿತೋರಿಸುವ ರಾಮಧಾನ್ಯ ಚರಿತ್ರೆಯು ವಿನೂತನವಾಗಿದ್ದು ಕನ್ನಡ ಕಾವ್ಯಲೋಕದಲ್ಲಿ ಅನನ್ಯ ಕೃತಿಯೆನಿಸಿದೆ. +ಕನಕದಾಸರು ತಮ್ಮ ಸ್ವೋಪಜ್ಞ ಸಾಧನೆ-ಸಿದ್ಧಿಗಳಿಂದ ದಾಸ ಪರಂಪರೆಯಲ್ಲಿ ಮಹತ್ವದ ಸ್ಥಾನವನ್ನು ಪಡೆದಿದ್ದಾರೆ. +ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ದಾಸಶ್ರೇಷ್ಠರಲ್ಲಿ ಒಬ್ಬರಾದ ಕನಕದಾಸರ ೫ಂಂನೆಯ ಜಯಂತ್ಯುತ್ಸವದ ಅಂಗವಾಗಿ ಡಾ.ದೇ.ಜವರೇಗೌಡ ಅವರ ಅಧ್ಯಕ್ಷತೆಯಲ್ಲಿ ಡಾ.ಹೆಚ್‌.ಜೆ.ಲಕ್ಕಪ್ಪಗೌಡ,ಡಾ.ಬರಗೂರು ರಾಮಚಂದ್ರಪ್ಪ ಮತ್ತು ಡಾ.ಸಾ.ಶಿ.ಮರುಳಯ್ಯನವರ ನ್ನೊಳಗೊಂಡ ಸಂಪಾದಕ ಮಂಡಳಿಯನ್ನು ರಚಿಸಿ, ಕನಕದಾಸರ ಸಮಗ್ರ ಸಾಹಿತ್ಯವನ್ನು ಕನಕಸಾಹಿತ್ಯ ದರ್ಶನ ಎಂಬ ಹೆಸರಿನಲ್ಲಿ ನಾಲ್ಕು ಸಂಪುಟಗಳಲ್ಲಿ ಹೊರತಂದಿತ್ತು. +ಕನಕ ಸಾಹಿತ್ಯ ದರ್ಶನದ ನಾಲ್ಕು ಸಂಪುಟಗಳು ಅಲಭ್ಯವಾಗಿದ್ದು ಅದಕ್ಕೆ ಸಾರ್ವಜನಿಕರಿಂದ ಅಪಾರ ಬೇಡಿಕೆಯಿರುವುದರಿಂದ ಪ್ರಸಕ್ತ. +ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಮೂರು ಸಂಪುಟಗಳ ಶೀರ್ಷಿಕೆಯಲ್ಲಿ ಅಲ್ಪ ಬದಲಾವಣೆಯೊಂದಿಗೆ ಮರುಮುದ್ರಣ ಮಾಡಲಾಗುತ್ತಿದೆ. +ಮತ್ತು ಹೊಸದಾಗಿ ಪ್ರೊ||ಸುಧಾಕರ ಅವರು ಸಂಪಾದಿಸಿರುವ ಮೋಹನ ತರಂಗಿಣಿ ಕೃತಿಯನ್ನು ಗದ್ಯಾನುವಾದದೊಂದಿಗೆ ಪ್ರಕಟಿಸಲಾಗುತ್ತಿದೆ. +ಕನಕದಾಸರ ಸಮಗ್ರ ಸಾಹಿತ್ಯ ಸಂಪುಟಗಳನ್ನು ಮರುಮುದ್ರಿಸಲು ಸಹಕರಿಸಿದ ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರದವರಿಗೂ, ಈ ಸಂಪುಟದ ಸಂಪಾದಕರಾದ ಡಾ.ಸಾ.ಶಿ.ಮರುಳಯ್ಯ ಅವರಿಗೂ ನನ್ನ ಕೃತಜ್ಞತೆಗಳು ಸಲ್ಲುತ್ತವೆ. +ಸದರಿ ಸಂಪುಟಗಳನ್ನು ಹೊರತರಲು ಒಪ್ಪಿಗೆ ನೀಡಿದ ಇಲಾಖೆಯ ಕಾರ್ಯದರ್ಶಿಗಳಾದ ಶ್ರೀ ಬಸವರಾಜು ಅವರಿಗೂ, ಈ ಸಂಪುಟಗಳನ್ನು ಹೊರತರಲು ಸಹಕರಿಸಿದ ಶ್ರೀ ಕಾ.ತ.ಚಿಕ್ಕಣ್ಣ, ಜಂಟಿ ನಿರ್ದೇಶಕರು (ಆಡಳಿತ), ಶ್ರೀ ಬಲವಂತರಾವ್‌ಪಾಟೀಲ್‌, ಜಂಟಿ ನಿರ್ದೇಶಕರು (ಸು.ಕ.), ಶ್ರೀಮತಿ ವೈ.ಎಸ್‌.ವಿಜಯಲಕ್ಷ್ಮಿ ಕಾರ್ಯಕ್ರಮ ಅಧಿಕಾರಿ ಮತ್ತು ಪ್ರಕಟಣಾ ಶಾಖೆಯ ಸಿಬ್ಬಂದಿಯವರಿಗೆ ನನ್ನ ಕೃತಜ್ಞತೆಗಳು ಸಲ್ಲುತ್ತವೆ. +ಈ ಸಂಪುಟಗಳನ್ನು ಅಂದವಾಗಿ ಮುದ್ರಿಸಿಕೊಟ್ಟ ಮಯೂರ ಪ್ರಿಂಟ್‌ ಕ್ಯಡ್ಸ್‌ನ ಮಾಲೀಕರು ಹಾಗೂ ಸಿಬ್ಬಂದಿ ವರ್ಗದವರಿಗೆ ನನ್ನ ಕೃತಜ್ಞತೆಗಳು. +ಕನ್ನಡ ಹರಿದಾಸ ಪರಂಪರೆಯಲ್ಲಿ ವೈಶಿಷ್ಟ್ಯಪೂರ್ಣ ವ್ಯಕ್ತಿತ್ವವುಳ್ಳ ಕನಕದಾಸರ ಕೃತಿಗಳನ್ನು ಸುಲಭ ಬೆಲೆಯಲ್ಲಿ ಕನ್ನಡಿಗರಿಗೆ ಒದಗಿಸುವುದು ನಮ್ಮ ಆಶಯವಾಗಿದೆ. +ಈ ಸಂಪುಟಗಳ ಪ್ರಯೋಜನವನ್ನು ಓದುಗರು ಪಡೆದುಕೊಂಡರೆ ನಮ್ಮ ಶ್ರಮಸಾರ್ಥಕ. +ಡಾ.ಮನು ಬಳಿಗಾರ್‌ ಆಯುಕ್ತರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ. +ಪುರಂದರದಾಸರ ಪಂಚ ಶತಮಾನೋತ್ಸವ ಜರುಗಿದ ಐದಾರು ವರ್ಷಗಳ ಅಂತರದಲ್ಲಿಯೇ ಯುಗಪುರುಷ ಕನಕದಾಸರ ಐನೂರನೆಯ ವರ್ಷದ ಉತ್ಸವವನ್ನಾಚರಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡ ಸರ್ಕಾರದ ಧೋರಣೆ ಸ್ವಾಗತಾರ್ಹವಾದದ್ದು. +ಕನಕದಾಸರನ್ನೂ, ಅವರ ಸಾಹಿತ್ಯವನ್ನೂ ಕುರಿತ ಪ್ರಶಸ್ತಿ ಗ್ರಂಥವನ್ನು ಪ್ರಕಟಿಸುವ ಯೋಜನೆ ಆ ಕಾರ್ಯಕ್ರಮದ ಒಂದು ಭಾಗವಾಗಿದೆ. +ಮೂರು ವರ್ಷಗಳ ಅವಧಿಯೊಳಗೆ ಸಾಹಿತ್ಯ ಕೃತಿಗಳನ್ನು ಹಾಗೂ ಪ್ರಶಸ್ತಿ ಗ್ರಂಥವನ್ನು ಸಂಪಾದಿಸಿ ಹೊರತರುವ ಹೊಣೆಯನ್ನು ಸರ್ಕಾರ ೨೮-೪-೧೯೮೯ನೆಯ ದಿನಾಂಕದ ತನ್ನ ನಿರೂಪದ ಮೂಲಕ ಕೆಳಗಿನ ಸಂಪಾದಕ ಮಂಡಲಿಗೆ ವಹಿಸಿತು. +ಡಾ.ದೇ.ಜವರೇಗೌಡ ಅಧ್ಯಕ್ಷರು ,ಡಾ.ಹೆಚ್‌.ಜೆ.ಲಕ್ಕಪ್ಪಗೌಡ ಸದಸ್ಯರು, ಶ್ರೀ ಬರಗೂರು ರಾಮಚಂದ್ರಪ್ಪ ಸದಸ್ಯರು,ಡಾ.ಸಾ.ಶಿ.ಮರುಳಯ್ಯ, ಸದಸ್ಯರು,ನಿರ್ದೇಶಕರು, ಕನ್ನಡ ಮತ್ತು ಸಂಸ್ಕತಿ ನಿರ್ದೇಶನಾಲಯ. +೬೨-೬-೧೯೮೯ರಂದು ಮಂಡಲಿಯ ಪ್ರಥಮ ಸಭೆಯು, ಸಂಪಾದನಾ ವಿಧಾನವನ್ನು ನಿರ್ಧರಿಸಿತು. +ಆ ಪ್ರಕಾರ ನಿಶ್ಚಿತ ವೇಳೆಯೊಳಗೆ “ಕನಕ ಸಾಹಿತ್ಯದರ್ಶನ' ಗಂಥ ಹೊರಬರುತ್ತಿರುವುದು ಸಂತೋಷದ ಸಂಗತಿ. +ಯಾರೇ ಸಂಪಾದಕರಿರಲಿ, ಅವನು ಎದುರಿಸಬೇಕಾದ ಕೆಲವು ಸಮಸ್ಯೆಗಳನ್ನು ಮುಂದಿನವರ ಅವಗಾಹನೆಗಾಗಿ ಇಲ್ಲಿ ನಿರೂಪಿಸಿದರೆ ಅಪ್ರಸ್ತುತವಾಗಲಾರದೆಂದು ಭಾವಿಸಿದ್ದೇನೆ. +ವಿಷಯ ಹಾಗೂ ಲೇಖಕರ ಆಯ್ಕೆ ಮತ್ತು ಹೊಂದಾಣಿಕೆ ಮೊದಲ ಸಮಸ್ಯೆ. +ಈ ಅಂಶದಲ್ಲಿ ಮಂಡಲಿಯ ಒಮ್ಮತ ಅಗತ್ಯವಾದ್ದರಿಂದ, ಪ್ರಸಕ್ತ ವಿಷಯದಲ್ಲಿ ಆಸಕ್ತಿ ಇಲ್ಲದ ಕೆಲವು ಹೆಸರುಗಳು ಪಟ್ಟಿಯಲ್ಲಿ ನುಸುಳಿಕೊಳ್ಳುವುದು ಸಹಜ. +ಪ್ರತ್ಯುತ್ತರಕ್ಕೆಂದು ಸ್ಟಾಂಪು ಹಚ್ಚಿದ ಲಕೋಟೆ ಕಳಿಸಿದರೂ, ಅದರ ವಾಪಸಾತಿಗಾಗಿ ತಿಂಗಳುಗಟ್ಟಳೆ ಕಾಯಬೇಕಾಗುತ್ತದೆ ; +ಕೆಲವರಂತು ಉತ್ತರಿಸುವುದೇ ಇಲ್ಲ. +ಲೇಖನ ಬರೆಯಲೊಪ್ಪಿಕೊಂಡವರು "ಅನಾನುಕೂಲ'ಗಳ ದೆಸೆಯಿಂದಾಗಿ ಹೆಚ್ಚು ಹೆಚ್ಚು ಸಮಯ ಕೇಳುತ್ತಾರೆ. +ಮೂರ್ನಾಲ್ಕು ತಿಂಗಳಾದ ನಂತರ ತಮಗೆ ಪುರಸೊತ್ತಾಗಲಿಲ್ಲವೆಂದು ಕೆಲವರು ಬರೆದು ಕೈ ತೊಳೆದುಕೊಳ್ಳುತ್ತಾರೆ. +ಅವರನ್ನು ಕೈಬಿಟ್ಟು ಬೇರೆಯವರಿಗೆ ಪತ್ರ ಬರೆದಾಗಲೂ ಇದೇ ಕ್ರಮ ಪುನರಾವೃತ್ತವಾಗುತ್ತದೆ. + ಬೇರೆಯವರಲ್ಲಿ ಕೆಲವರು ಉತ್ತರಿಸುತ್ತಾರೆ, ಕೆಲವರು ಉತ್ತರಿಸುವುದಿಲ್ಲ. +ಲೇಖನಕ್ಕೆ ಬೇಕಾದ ಮಾಹಿತಿಯನ್ನು ಸಂಗ್ರಹಿಸಿದ್ದಾಯಿತು. +ಬರೆಯುವುದೊಂದೇ ಉಳಿದಿರುವ ಕೆಲಸವೆಂದು ಅಲ್ಪಮಂದಿ ಲೇಖಕರು ಬರೆದು ಮೂರು ತಿಂಗಳಾದರೂ ಲೇಖನ ಹೊರಬರುವ ಸೂಚನೆ ಕಾಣುವುದಿಲ್ಲ. +ಪ್ರಾಯಶಃ ಕೆಲಸಕ್ಕಡ್ಡಿಯಾಗುವುದೇ ಆ ಹಿಡಿಮಂದಿಯ ಉದ್ದೇಶವಾಗಿರುವಂತೆ ತೋರುತ್ತದೆ. +ಲೇಖನಗಳು ಕೈಸೇರಿದ ನಂತರ ಅವುಗಳನ್ನು ಸಂಪಾದಿಸುವ ಕಾರ್ಯ ಮತ್ತೂ ಜಟಿಲವಾದುದು. +ಕೆಲವು ವಿಷಯಕ್ಕೆ ತಕ್ಕಂತೆ ಸಿದ್ಧಗೊಂಡ ಲೇಖನಗಳ ಜತೆಗೆ, ಅತಿವ್ಯಾಪ್ತಿ ಅಪೂರ್ಣತೆ ಅಸಮಗ್ರತೆಯಿಂದ ಕೂಡಿದ ಲೇಖನಗಳೂ ಸೇರಿಕೊಳ್ಳುತ್ತವೆ. +ಎರಡನೆಯ ಗುಂಪಿಗೆ ಸೇರಿದ ಲೇಖನಗಳನ್ನು ಪುನರಾವರ್ತನೆಗಾಗಿ ಹಿಂದಿರುಗಿಸಿದರೆ, ಕೋಪಿಸಿಕೊಳ್ಳುವ ಮಿತ್ರರೂ ಉಂಟು. +ಕೆಲವರು ಗೊಣಗಿಕೊಂಡು,ಕೆಲವರು ಹೃತ್ಪೂರ್ವಕವಾಗಿ ತಮ್ಮ ಲೇಖನಗಳನ್ನು ತಿದ್ದಿ, ತೀಡಿ ಹಿಂದಿರುಗಿಸುತ್ತಾರೆ; +ಕೆಲವರು ಪುನರಾವರ್ತನೆ ಮಾಡದೆಯೇ ಹಳೆಯದನ್ನೆ ನಕಲುಮಾಡಿ ಕಳಿಸುತ್ತಾರೆ; +ಪುನರಾವರ್ತನೆ ಸಾಧ್ಯವಿಲ್ಲ. +ಅಗತ್ಯವೂ ಇಲ್ಲ, ತಾವು ಬರೆದದ್ದನ್ನೇ ಅಚ್ಚುಮಾಡಿಸಿರೆಂದು ಅಥವಾ ಹಿಂದಿರುಗಿಸಿರೆಂದು ಬರೆದವರೂ ಇದ್ದಾರೆ ; +ಏನೂ ಬರೆಯದೆ, ಉತ್ತರವನ್ನು ಸಹ ಕೊಡದಿರುವವರೂ ಇದ್ದಾರೆ. +ಕೊನೆಗುಳಿಯುವುದು, ಕೆಲವು ಪ್ರಬಂಧಗಳಲ್ಲಿ ನಿರ್ಲಕ್ಷ್ಯದಿಂದಲೋ,ಅಜ್ಞಾನದಿಂದಲೋ ಉಳಿದಿರುವ ಕಾಗುಣಿತದ ತಪ್ಪುಗಳನ್ನು ತಿದ್ದುವ, ಅನಾವಶ್ಯಕವಾದ,ಪುನರಾವರ್ತನೆಯಾಗಬಹುದಾದ ಸಂಗತಿಗಳಿಗೆ ಕತ್ತರಿ ಪ್ರಯೋಗ ಮಾಡುವ ಕೆಲಸ. +ಕತ್ತರಿ ಪ್ರಯೋಗ ಮಾಡಿದರೂ, ಪುನರಾವರ್ತನೆಗಳು ಇಂಥದೊಂದು ಸಂಕಲನ ಗ್ರಂಥದಲ್ಲಿ ಅನಿವಾರ್ಯವೆಂಬುದನ್ನು ವಿದ್ವಜ್ಜನರು ಬಲ್ಲರು. +ಎಷ್ಟು ತಿಣುಕಿದರೂ ಕೈಬರಹದ ಮೋಡಿಯಿಂದಾಗಿ ಸಂಪಾದಕ ಗುರುತಿಸಲಾಗದ ಅಕ್ಷರಗಳು ಉಳಿದೇ ಉಳಿಯುತ್ತವೆ. +ಗ್ರಂಥಗಳಿಂದ ಉದ್ಭೃತಗೊಳ್ಳುವ ಭಾಗಗಳಲ್ಲಿಯೂ ಅನೇಕ ತಪ್ಪುಗಳುಳಿಯುತ್ತವೆ. +ಕ್ಷಿಪ್ರವಾಗಿ ಗ್ರಂಥ ಮುದ್ರಣ ಮಾಡಬೇಕಾದ ಸಂದರ್ಭದಲ್ಲಿ ಎಷ್ಟು ಎಚ್ಚರಿಕೆ ವಹಿಸಿದರು ಈ ಕೆಲವು ತಪ್ಪಗಳು ನಿಂತು ಬಿಡುವ ಸಂಭವವುಂಟು. +ತಪ್ಪುಗಳೇನಾದರೂ ನುಸುಳಿದ್ದರೆ ಲೇಖಕ, ಸಂಪಾದಕ, ಕರಡು ತಿದ್ದುಗಾರ ಮತ್ತು ಮುದ್ರಕರೆಲ್ಲರೂ ಹೊಣೆಗಾರರೆಂದು ಈ ಸಂದರ್ಭದಲ್ಲಿ ಹೇಳಬೇಕಾಗಿದೆ. +ಲೇಖನಗಳನ್ನು ಸಂಪಾದಿಸಿದ ಬಗ್ಗೆ ಒಂದೆರಡು ಮಾತು ಅತ್ಯವಶ್ಯ ಸಮಿತಿಯ ಅಧ್ಯಕ್ಷರು ಲೇಖನಗಳನ್ನೊಮ್ಮೆ ಓದಿ, ತಮ್ಮ ಅಭಿಪ್ರಾಯದೊಡನೆ ಸಂಪಾದಕ ಮಂಡಲಿಯ ಮುಂದಿಡುತ್ತಾರೆ. +ಅವರು ಅಧ್ಯಕ್ಷರಿಗೆ ಪೂರ್ಣ ಒಪ್ಪಿಗೆಯಾಗಿರುವ ಲೇಖನಗಳ ಮೇಲೆ ಕಣ್ಣಾಡಿಸಿ, ತಮ್ಮ ಸಮ್ಮತಿಯನ್ನು ಸೂಚಿಸುತ್ತಾರೆ. +ಅಧ್ಯಕ್ಷರಿಗೆ ಪೂರ್ಣ ಒಪ್ಪಿಗೆಯಾಗದ ಪ್ರಬಂಧಗಳನ್ನು ಸದಸ್ಯರು ಮನೆಗೆ ಕೊಂಡೊಯ್ದು ಓದಿ, ಟಿಪ್ಪಣಿ ಮಾಡಿಕೊಂಡು ಬರುತ್ತಾರೆ. +ಆ ಟಿಪ್ಪಣಿಗಳ ಹಿನ್ನೆಲೆಯಲ್ಲಿ ಅವುಗಳನ್ನು ಸಭೆಯಲ್ಲಿ ಪುನರ್ವಿಮರ್ಶಿಸಿ, ಅನಿವಾರ್ಯವೆಂದು ತೋರಿದಾಗ ಮಾತ್ರ,ಪುನರಾವರ್ತನೆಗೆಂದು ಕೆಲವನ್ನು ಲೇಖಕರಿಗೆ ಹಿಂದಿರುಗಿಸಿರುವುದುಂಟು. +ಹೀಗೆ ಹಿಂದಿರುಗಿಸುವಾಗ ಮಂಡಲಿಯ ಸದಸ್ಯರು ಬುದ್ಧಿವಂತರೆಂಬ ಭಾವನೆಯಾಗಲಿ,ಲೇಖಕರ ವಿದ್ವತ್ತಿನ ಬಗ್ಗೆ ಸಂಶಯವಾಗಲಿ ಇಲ್ಲ. +ಮಂಡಲಿ ರೂಪಿಸಿಕೊಂಡ ಚೌಕಟ್ಟಗೆ ಹೊಂದಿಕೊಳ್ಳುವಂತೆ, ಒಟ್ಟು ಗ್ರಂಥದ ಹಿನ್ನೆಲೆಯಲ್ಲಿ ಸಾಧ್ಯವಾದಷ್ಟು ಸಮಗ್ರತೆಯನ್ನು ಸಾಧಿಸುವ ದೃಷ್ಟಿಯಿಂದ ಲೇಖನಗಳನ್ನು ಪುನರ್ವಿಮರ್ಶಿಸುವಂತೆ ಲೇಖಕರಿಗೆ ಕಳಿಸಿಕೊಡಲಾಗುತ್ತದೆ. +ಹೀಗಿರುವಾಗ ಒಬ್ಬರು ಮಿತ್ರರು ಬರೆದರು :"ನಾನು ಹಲವು ವರ್ಷಗಳಿಂದ ಅಧ್ಯಾಪನ ವೃತ್ತಿ ಕೈಗೊಂಡು ಸಾಹಿತ್ಯ ಕ್ಷೇತ್ರದಲ್ಲಿ ಸಾಕಷ್ಟು ಕೃಷಿಮಾಡಿ, ವಿದ್ವಾಂಸರ ಮೆಚ್ಚುಗೆ ಪಡೆದಿದ್ದೇನೆ. +ಪ್ರಸ್ತುತ ಲೇಖನವನ್ನು ವಿದ್ವಾಂಸರು ಪ್ರಶಂಸಿಸಿದ್ದಾರೆ. +ನಾನು ತಿದ್ದುಪಡಿ ಮಾಡಬೇಕಾದದ್ದೇನೂ ಇಲ್ಲ"ಎಂದು. +"ಲೇಖನಗಳನ್ನು ಬಿಡಿಬಿಡಿಯಾಗಿ ನೋಡಿದಾಗ ಅವು ಸ್ಪಯಂಪೂರ್ಣವಾಗಿ,ನ್ಯೂನತೆಗಳಿಂದ ಮುಕ್ತವಾಗಿ ತೋರುತ್ತವೆ ; + ಆದರೆ ಇಡೀ ಗ್ರಂಥದ ಹಿನ್ನೆಲೆಯಲ್ಲಿ ನೋಡಿದಾಗ ಕೆಲವು ಅರೆಕೊರೆಗಳು ಕಾಣುತ್ತವೆ ; + ದೋಷ ಶೋಧವಾಗಲಿ ಖಂಡನೆಯಾಗಲಿ ಸಮಿತಿಯ ಉದ್ದೇಶವಲ್ಲ. +ಲೇಖಕರ ವಿದ್ವತ್ತನ್ನು ಅಭಿರುಚಿಯನ್ನು ಅನುಭವವನ್ನು ಗಮನದಲ್ಲಿರಿಸಿಕೊಂಡೇ ಸಮಿತಿ ಅವರನ್ನು ಆಯ್ಕೆ ಮಾಡಿದೆ. +ಬಿಟ್ಟು ಹೋಗಿರುವ ಅಂಶಗಳನ್ನು ಸೇರಿಸಬೇಕೆಂಬುದು ಸಮಿತಿಯ ಅಭಿಪ್ರಾಯ. +ವಿಷಯ ಪ್ರತಿಪಾದನೆಯ ಬಗ್ಗೆ. +ವಾಕ್ಯರಚನೆಯ ಬಗ್ಗೆ, ಅಭಿಪ್ರಾಯ ಸಮರ್ಥನೆಯ ಬಗ್ಗೆ ಸಮಿತಿ ತಲೆಹಾಕುವುದಿಲ್ಲ. +ನಿಮ್ಮ ವಿದ್ವತ್ತು ಸರಿಯಾಗಿ ಪ್ರಕಾಶಕ್ಕೆ ಬರಲೆಂದೇ ಈ ಕ್ರಮಕೈಗೊಂಡಿದೆ ಎಂದವರಿಗೆ ಸಮಿತಿಯ ಅಧ್ಯಕ್ಷರು ಪತ್ರ ಬರೆದಾಗ, ಕೆಲವರಿಗೆ ಸಮಾಧಾನವಾಗಿದೆಯೆಂದು ಅವರು ಬರೆದ ಉತ್ತರಗಳಿಂದ ಸ್ಪಷ್ಟವಾಗಿದೆ. +ಅವರಿಗೆ ತೊಂದರೆಯಾದದ್ದಕ್ಕಾಗಿ ನಾನು ನನ್ನ ಮತ್ತು ಮಂಡಲಿಯ ಪರವಾಗಿ ಕ್ಷಮೆಯಾಚಿಸುತ್ತೇನೆ. +ಸಮಿತಿ ಯಾವೊಂದು ಲೇಖನವನ್ನು ತಿರಸ್ಕರಿಸಿಲ್ಲ. +ಲೇಖಕರು ವ್ಯಕ್ತಪಡಿಸಿರುವ ಅಭಿಪ್ರಾಯಗಳಿಗೆ ಅವರೇ ಜವಾಬ್ದಾರರು. +ಕಣ್ಣಲ್ಲಿ ಕಣ್ಣಿಟ್ಟುಕೊಂಡು ನೋಡಿದರೂ,ಹಸ್ತಪ್ರತಿಗಳಲ್ಲಿರುವ ದೋಷಗಳು ಅಚ್ಚಿನಲ್ಲಿಯೂ ಪುನರಾವರ್ತನೆಯಾಗಿವೆ. +ಶ್ರೀ ಶಾರದಾಪ್ರಸಾದರು ಕರಡು ತಿದ್ದುವುದರಲ್ಲಿ ಜಾಣರು; +ಕರಡಿನ ಬಹುಭಾಗದ ಮೇಲೆ ನಾನೂ ಕಣ್ಣಾಡಿಸಿದ್ದೇನೆ ; +ಹ.ಕ.ರಾಜೇಗೌಡರು ಸಂತೋಷದಿಂದ ಕರಡು ತಿದ್ದಿದ್ದಾರೆ. +ಆದರೂ ಕೆಲವು ದೋಷಗಳು ಉಳಿದಿರಲಾಗಿ ವಾಚಕರು ಕ್ಷಮಿಸುವರೆಂದು ನಂಬಿದ್ದೇನೆ. +ಸದ್ಯಕ್ಕೆ ಈ ಪ್ರಶಸ್ತಿ ಗ್ರಂಥ ಹೊರಬಂದಿದೆ. +ಕನಕ ಸಾಹಿತ್ಯವನ್ನೊಳಗೊಂಡ ಎರಡು ಸಂಪುಟಗಳು ಈ ವರ್ಷ ತುಂಬುವುದರೊಳಗಾಗಿ ಮುದ್ರಣಗೊಂಡು ಹೊರ ಬರಲಿವೆಯೆಂದು ಮಂಡಲಿಯ ಪರವಾಗಿ ಆಶ್ವಾಸನೆ ನೀಡಬಯಸುತ್ತೇನೆ. +ಈ ಪವಿತ್ರ ಕಾರ್ಯದಲ್ಲಿ ಸಹಾಯ ಹಸ್ತನೀಡಿ, ಸಂತೋಷದಿಂದ ಸಹಕರಿಸಿದ,ಕನ್ನಡ ನಾಡಿನ ಸಂಪತ್ತೆನ್ನಬಹುದಾದ ವಿದ್ವಜ್ಜನರು ಮನಸ್ಸು ಮಾಡದಿದ್ದರೆ ಈ ಕೃತಿ ಇಷ್ಟು ಬೇಗ ಖಂಡಿತವಾಗಿಯೂ ಹೊರಗೆ ಬರುತ್ತಿರಲಿಲ್ಲವೆಂದು ವಿನಯಪೂರ್ವಕವಾಗಿ ಒಪ್ಪಿಕೊಳ್ಳುತ್ತೇನೆ. +ಕನಕದಾಸರು ನನ್ನ ಮೆಚ್ಚುಗೆಯ ಸಂತ ಕವಿಗಳಲ್ಲೊಬ್ಬರು. +ಅವರಿಗೆ ಕೈಂಕರ್ಯ ಸಲ್ಲಿಸುವ ಅವಕಾಶವನ್ನು ಕಲ್ಪಿಸಿಕೊಟ್ಟದ್ದಕ್ಕಾಗಿ ಕರ್ನಾಟಕ ಸರ್ಕಾರದ ಉಪಕಾರವನ್ನು ಕೃತಜ್ಞತೆಯಿಂದ ಸ್ಮರಿಸುತ್ತೇನೆ. +ಸಂಪಾದಕ ಮಂಡಲಿಯ ಸದಸ್ಯ ಮಿತ್ರರು ತುಂಬ ಪ್ರೀತಿಯಿಂದ ಸೌಜನ್ಯದಿಂದ ನನ್ನೊಡನೆ ಸಹಕರಿಸಿದ್ದಾರೆ. +ಅವರೆಲ್ಲರೂ ಕನ್ನಡನಾಡಿನ ಖ್ಯಾತ ವಿದ್ವಾಂಸರು, ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯದ ನಿರ್ದೇಶಕರಾದ ಶ್ರೀ ಐ.ಎಂ.ವಿಠಲಮೂರ್ತಿಯವರು ತರುಣರು, ಉತ್ಸಾಹಶೀಲರು, ದಕ್ಷರು,ಸುಸಂಸ್ಕೃತರು ; + ಈ ಇಲಾಖೆಗೆ ಹೇಳಿ ಮಾಡಿಸಿದಂಥವರು. +ಈ ಗ್ರಂಥ ಆದಷ್ಟುಬೇಗ ಬರಬೇಕೆನ್ನುವ ದೃಷ್ಟಿಯಿಂದ ಮಂಡಲಿಗೆ ಎಲ್ಲ ಸಹಕಾರ ನೀಡಿದರು. +ಸಹಾಯಕ ನಿರ್ದೇಶಕರೂ ಸ್ವಯಂ ಸಾಹಿತಿಗಳೂ ವಿವೇಕಿಗಳೂ ಆದ ಶ್ರೀ ಕಾ.ತ.ಚಿಕ್ಕ್ರಣ್ಣನವರ ಸಹಾಯ ಸಹಕಾರಗಳಿಂದ ಮಂಡಲಿಯ ಕೆಲಸ ಸುಸೂತ್ರವಾಗಿ ನಡೆಯಿತು. +ಜಂಟಿ ನಿರ್ದೇಶಕರಾದ ಶ್ರೀ ದೇವರಸಯ್ಯನವರ, ಉಪನಿರ್ದೇಶಕರಾದ ಶ್ರೀ ಎಸ್‌.ವಿಶ್ವನಾಥ್‌ ಅವರ ಸೌಜನ್ಯ ಕಾರ್ಯೋತ್ಸಾಹ ಯಾವಾಗಲೂ ನೆನಪಿನಲ್ಲುಳಿಯುವಂಥವು. + ನಿರ್ದೇಶಕರ ಆಪ್ತ ಸಹಾಯಕಿ ಮೊದಲುಗೊಂಡು,ನಿರ್ದೇಶನಾಲಯದ ಸಿಬ್ಬಂದಿವರ್ಗದ ಜನರ ಮನಃಪೂರ್ವಕವಾದ ಸಹಾಯವನ್ನು ನಾನೆಂದೂ ಮರೆಯಲಾರೆ. +ಇಂಥ ಬೃಹದ್ಭಂಥವನನ್ನು ಒಂದು ತಿಂಗಳಲ್ಲಿ ಅಚ್ಚುಕಟ್ಟಾಗಿ ಮುದ್ರಿಸುವುದೊಂದು ಸಾಹಸವೇ ಸರಿ. +ಶ್ರೀ ಮೀರಾ ಪ್ರಿಂಟರ್ಸ್‌ನ ಮಾಲೀಕರಾದ ಶ್ರೀ ಕೆ.ಪಿ.ಪುಟ್ಟಸ್ವಾಮಿಯವರು ಹಗಲಿರುಳು ದುಡಿದು ಈ ಅದ್ಭುತವನ್ನು ಸಾಧಿಸಿದ್ದಾರೆ. +ಕನ್ನಡ ಅಧ್ಯಯನ ಸಂಸ್ಥೆಯ ಶ್ರೀ ಶಾರದಾಪ್ರಸಾದರು ಕರಡು ತಿದ್ದುವಲ್ಲಿ ತುಂಬ ಶ್ರಮ ವಹಿಸಿದ್ದಾರೆ. +ಮಂಡಲಿಯ ಸದಸ್ಯರಲ್ಲದಿದ್ದರೂ, ನನ್ನ ಮೇಲಣ ಪ್ರೀತಿಯಿಂದ ಪ್ರಸಿದ್ಧ ಸಂಶೋಧಕರಾದ ಶ್ರೀ ಹ.ಕ.ರಾಜೇಗೌಡರು ನಾನಾ ರೀತಿಯಲ್ಲಿ ನನಗೆ ಸಹಾಯ ಮಾಡಿದ್ದಾರೆ. +ಶ್ರೀ ಮೈ.ನಾ.ಶರ್ಮಾ ಅವರು ಸುಂದರವಾದ ಮುಖಪುಟವನ್ನು ರಚಿಸಿಕೊಟ್ಟದ್ದಾರೆ. +ಈ ಎಲ್ಲ ಮಹನೀಯರಿಗೂ, ನಾನು ಹೃತ್ಪೂರ್ವಕ ಧನ್ಯವಾದಗಳನ್ನ ಅರ್ಪಿಸುತ್ತೇನೆ. +ಕನಕದಾಸರು ಕನ್ನಡ ನಾಡು ನುಡಿ ಸಂಸ್ಕೃತಿಯಲ್ಲಿ ಬೆರೆತುಹೋಗಿರುವ ಒಬ್ಬ ಧೀಮಂತ ವ್ಯಕ್ತಿ . +ದಾಸ ಸಾಹಿತ್ಯದಲ್ಲಿ ಅವರದು ವೈಶಿಷ್ಟ್ಯಪೂರ್ಣವಾದ ವರ್ಚಸ್ಸು. +ಸಾಮಾನ್ಯ ಬದುಕಿನಿಂದ ಒಡಮೂಡಿ, ಕೀರ್ತನಕಾರರಾಗಿ, ಸಂತರಾಗಿ,ಸಮಾಜ ಸುಧಾರಕರಾಗಿ ಅವರು ಕನ್ನಡ ಸಾಂಸ್ಕೃತಿಕ ಜಗತ್ತಿಗೆ ನೀಡಿರುವ ಕೊಡುಗೆ ಅನನ್ಯವಾದದ್ದು. +ಅವರು ಸಮಾಜದ ಅಂಕುಡೊಂಕುಗಳನ್ನು ತಿದ್ದಿ, ಮಾನವತೆಯನ್ನು ಮೆರೆದ ಕ್ರಾಂತಿಕಾರಿ ಕವಿ. +ಅವರು ತಮ್ಮ ಬದುಕು ಮತ್ತು ಕೃತಿಗಳ ಮೂಲಕ ಪ್ರತಿಪಾದಿಸಿರುವ ಜೀವನದರ್ಶನ ಸಾರ್ವಕಾಲಿಕ ; +ವಿಚಾರಪೂರ್ಣ,ತಮ್ಮ ಕೀರ್ತನೆ ಹಾಗೂ ಕಾವ್ಯಗಳಲ್ಲಿ ಕಾವ್ಯಗುಣದ ಜೊತೆಗೆ ಸಾಮಾಜಿಕ ಕಳಕಳಿಯನ್ನು, ದೇಸೀಸತ್ತ್ವವನ್ನು ಮೆರೆದಿದ್ದಾರೆ. +ಈ ಸಂತ ಶ್ರೇಷ್ಠ ಕವಿಯ ೫ಂಂನೆಯ ಜಯಂತ್ಯುತ್ಸವವನ್ನು ರಚನಾತ್ಮಕವಾಗಿ ಹಾಗೂ ಅರ್ಥವತ್ತಾಗಿ ಆಚರಿಸಲು ಸರ್ಕಾರವು ತೀರ್ಮಾನಿಸಿತು. +೧೯೮೮ರಲ್ಲಿ ಮಾನ್ಯ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ರಾಜ್ಯಮಟ್ಟದ ಸಲಹಾ ಸಮಿತಿಯನ್ನು ರಚಿಸಲಾಯಿತು. +ವರ್ಷಾದ್ಯಂತ ನಾಡಿನ ಎಲ್ಲೆಡೆ ಕನಕದಾಸರ ಜಯಂತ್ಯುತ್ಸವವನ್ನು ಆಚರಿಸುವುದರ ಜೊತೆಗೆ ಕನಕದಾಸರ ಸಮಗ್ರ ಕೃತಿಗಳು ಕನ್ನಡಿಗರಿಗೆ ಲಭ್ಯವಾಗುವಂತೆ ಮಾಡುವ ದಿಸೆಯಲ್ಲಿ ಪ್ರಕಟನಾ ಯೋಜನೆಯೊಂದನ್ನು ಕೈಗೊಳ್ಳಲಾಯಿತು. +ಸರ್ಕಾರವು ಡಾ.ದೇ.ಜವರೇಗೌಡ, ಪೊ.ಎಲ್‌.ಎಸ್‌.ಶೇಷಗಿರಿರಾವ್, ಪೊ.ಹೆಚ್‌.ಜೆ.ಲಕ್ಕಪ್ಪಗೌಡ ಹಾಗೂ ಡಾ.ದೇವೇಂದ್ರ ಕುಮಾರ್‌ ಹಕಾರಿ ಇವರನ್ನೊಳಗೊಂಡಂತೆ ಒಂದು ಸಂಪಾದಕ ಮಂಡಳಿಯನ್ನು ರಚಿಸಿತು. +ಇವರು ಮೊದಲಿಗೆ ಸಂಪಾದಿಸಿಕೊಟ್ಟ “ಜನಪ್ರಿಯ ಕನಕ ಸಂಪುಟ'ವನ್ನು ಸುಲಭ ಬೆಲೆಯಲ್ಲಿ ಪ್ರಕಟಿಸಲಾಯಿತು. + ಅದಕ್ಕೆ ದೊರೆತ ಅಪಾರ ಜನಪ್ರಿಯತೆಯನ್ನು ಪರಿಗಣಿಸಿ,ಅದರ ಎರಡನೆಯ ಮುದ್ರಣವನ್ನು ಹೊರತರಲಾಯಿತು. +ಪ್ರಸಕ್ತ, ಸಂಪಾದಕ ಮಂಡಳಿಯು ಸಂಪಾದಿಸಿ ಕೊಟ್ಟಿರುವ “ಕನಕ ಸಾಹಿತ್ಯದರ್ಶನ-ಸಂಪುಟ-೧” ಗ್ರಂಥ ಪ್ರಕಟವಾಗುತ್ತಿದೆ. +ಇದು ಕನಕದಾಸರ ಸಮಗ್ರ ಸಾಹಿತ್ಯವನ್ನು ಕುರಿತು ಎಲ್ಲ ನಿಟ್ಟಿನಿಂದ ವಿವೇಚಿಸಿ, ಮೌಲ್ಯಮಾಪನ ಮಾಡಿರುವ ಲೇಖನಗಳ ಸಂಕಲನ. +ನಾಡಿನ ಪ್ರತಿಭಾನ್ವಿತ ವಿದ್ವಾಂಸರು ತಮ್ಮ ಅಮೂಲ್ಯ ಲೇಖನಗಳಿಂದ ಈ ಗ್ರಂಥದ ಗೌರವವನ್ನು ಹೆಚ್ಚಿಸಿದ್ದಾರೆ. +ಈ ಬೃಹತ್‌ ಕೃತಿ ಕನ್ನಡಿಗರಿಗೆ ಕನಕದಾಸರ ಜೀವನ ದರ್ಶನ ಹಾಗೂ ಸಾಹಿತ್ಯಿಕ ಕೊಡುಗೆಗಳ ಸಮಗ್ರ ಪರಿಚಯವನ್ನು ಮಾಡಿಕೊಡುತ್ತದೆಂಬುದರಲ್ಲಿ ಸಂಶಯವಿಲ್ಲ. +ಈ ಗ್ರಂಥವನ್ನು ಜಯಂತ್ಯುತ್ಸವದ ಮುಕ್ತಾಯ ಸಮಾರಂಭದಲ್ಲಿ ಬಿಡುಗಡೆ ಮಾಡಲು ನಿರ್ಧರಿಸಿ, ತ್ವರಿತವಾಗಿ ಮುದ್ರಣ ಕಾರ್ಯವನ್ನು ಕೈಗೊಳ್ಳಲಾಗಿದೆ. +ಈ ಕಾರ್ಯದಲ್ಲಿ ನಮ್ಮೊಡನೆ ಸಹಕರಿಸಿದ ಸಂಪಾದಕ ಮಂಡಳಿಯವರಿಗೆ ಹಾಗೂ ಲೇಖಕರಿಗೆ ನನ್ನ ಕೃತಜ್ಞತೆಗಳು. +ಅತ್ಯಂತ ಶೀಘ್ರವಾಗಿ ಹಾಗೂ ಅಚ್ಚುಕಟ್ಟಾಗಿ ಮುದ್ರಿಸಿ ಕೊಟ್ಟರುವ ಶ್ರೀ ಮೀರಾ ಪ್ರಿಂಟರ್ಸ್‌ನ ಶ್ರೀ ಕೆ.ಪಿ.ಪುಟ್ಟಸ್ವಾಮಿ ಅವರಿಗೆ ನನ್ನ ಕೃತಜ್ಞತೆಗಳು. +ಸದ್ಯದಲ್ಲಿಯೇ ಕನಕದಾಸರ ಸಮಗ್ರ ಕೃತಿಗಳ ಸಂಕಲನವನ್ನು ಪ್ರಕಟಿಸಲು ಕ್ರಮಕೈಗೊಳ್ಳುತ್ತಿದೆ. +ಈ ಗ್ರಂಥ ಕನಕದಾಸರ ಸಾಹಿತ್ಯ-ಜೀವನ ಸಂದೇಶವನ್ನು ಸಹ್ಯದಯ ವಾಚಕರಿಗೆ ತಲುಪಿಸಿದರೆ ನಮ್ಮ ಶ್ರಮ ಸಾರ್ಥಕ. +ಕನಕದಾಸರ ಸಮಗ್ರ ಜೀವನ ಚರಿತ್ರೆ. +ಡಾ.ಸಾ.ಶಿ.ಮರುಳಯ್ಯ ಒಂದು ಪರ್ಷಿಯಾ ದೇಶದ ಓರ್ವ ದಾರ್ಶನಿಕ ಕವಿ ಒಂದೆಡೆಯಲ್ಲಿ ಹೀಗೆ ಹೇಳಿದ್ದಾನೆ . + ಮೊದಲ ಹಾಗೂ ಕಡೆಯ ಪುಟಗಳನ್ನು ಕಳೆದುಕೊಂಡ ಪುಸ್ತಕ ಈ ವಿಶ್ವ . + ಈ ಪುಸ್ತಕ ಹೇಗೆ ಪ್ರಾರಂಭವಾಯಿತು ಗೊತ್ತಿಲ್ಲ ; + ಹೇಗೆ ಮುಕ್ತಾಯ ಆಗಿದೆ ತಿಳಿದಿಲ್ಲ. +ಮಾನವ ತನಗೆ ಬುದ್ಧಿಬಂದಾಗಿನಿಂದಲೂ ಕಳೆದು ಹೋದ ಆ ಪುಟಗಳನ್ನು ಹುಡುಕುತ್ತಿದ್ದಾನೆ. + ಈ ಹುಡುಕುವಿಕೆ ಮತ್ತು ಅದರ ಪರಿಣಾಮ ಇವುಗಳನ್ನು ತತ್ತ್ವ ಜಿಜ್ಞಾಸೆ ಎಂದು ಕರೆಯುತ್ತಾರೆ. +ಇಂಥದೇ ಅನ್ವೇಷಣೆ ಸಂತಕವಿ ಕನಕದಾಸರ ಬಗೆಗೆ ಇತ್ತೀಚಿನ ದಿನಗಳಲ್ಲಿ ನಡೆದಿದೆ. +ಈ ಕಾರ್ಯ ಇನ್ನೂ ಮುಗಿದಿಲ್ಲ, ಮುಗಿಯುವಂತೆ ಕಾಣುವುದೂ ಇಲ್ಲ. +ಹಾಗಂದುಕೊಂಡು ಕೈಚೆಲ್ಲಿ ಕೂರುವಂತೆಯೂ ಇಲ್ಲ. +ಕನಕದಾಸರ ಜೀವನ ಚರಿತ್ರೆಯು ಮೊದಲ ಮತ್ತು ಕಡೆಯ ಪುಟಗಳನ್ನು ಕಳೆದುಕೊಂಡ ಸಂಪುಟವಾದರೂ ಅವರೇ ರಚಿಸಿದರೆನ್ನಲಾದ ಕೀರ್ತನೆಗಳು ಮತ್ತು ಕಾವ್ಯಗಳು ಎಂಬ ಪಠ್ಯಭಾಗ ಲಭ್ಯವಿದೆ. +ಈ ಉಪಲಬ್ಧಿಯನ್ನು ಹೆಕ್ಕಿ ನೋಡಿ, ಇಲ್ಲವೆ ಹಲವು ಸ್ಥಳೀಯ ಐತಿಹ್ಯಗಳನ್ನು ಆಧರಿಸಿ, ಇಲ್ಲವೆ ಕೆಲವು ಉಲ್ಲೇಖ ಉದ್ದರಣೆಗಳನ್ನು ಮಾನ್ಯಮಾಡಿ,ಕಳೆದುಹೋಗಿರುವ ಪುಟಗಳನ್ನು ಪುನಃ ರಚಿಸಬಹುದಾಗಿದೆ. +ಪ್ರಸಕ್ತ ರಚನೆ ಆ ಸಂಬಂಧದ ಅಧಿಕೃತ ಮಾಹಿತಿ ದೊರೆಯುವವರೆಗೆ ಮಾನ್ಯ. +ಜನ ಹೇಳಿಕೆಗೆ ಬೆಲೆಕೊಡುವುದಾದರೆ ಕನಕ ಬಾಡನಾಡಿನ ದಣ್ಣಾಯಕ. +ತಂದೆ ಬೀರಪ್ಪ ತಾಯಿ ಬಚ್ಚಮ್ಮ ತನ್ನ ಹುಟ್ಟು ಹೆಸರು ಕನಕದಾಸನೆಂದಲ್ಲ, ತಿಮ್ಮಪ್ಪನೆಂದು. +ತಿಮ್ಮಪ್ಪ ಕನಕದಾಸನಾದದ್ದಕ್ಕೆ ಭೂಗರ್ಭದಲ್ಲಿದ್ದ ನಿಧಿ ದೊರೆತುದು ಕಾರಣವೆಂದು ಐತಿಹ್ಯ ಹೇಳಿದರೂ ತಿರುಪತಿ ತಿಮ್ಮಪ್ಪನಿಗೆ ಕನಕಗಿರಿ ವಾಸನೆಂಬ ಪರ್ಯಾಯ ನಾಮವೂ ಇದೆ ಎಂಬುದನ್ನು ಮರೆಯುವಂತಿಲ್ಲ. +ಏನೇ ಇರಲಿ ಭೂತಿಯೊಂದು ವಿಭೂತಿತ್ಚವನ್ನು ಪಡೆದದ್ದು ಇಲ್ಲಿನ ವೈಶಿಷ್ಟ್ಯ. +ಭೂತಿ ಎಂದರೆ ಸಹಜ ಸ್ಥಿತಿಯಲ್ಲಿ ಇರುವುದು. +ವಿಭೂತಿ ಎಂದರೆ ವಿಶೇಷ ರೀತಿಯಲ್ಲಿ ಆದದ್ದು. +ಕಲ್ಲು ಭೂತಿ, ಅದರಿಂದಾದ ಕಲಾಕೃತಿ ವಿಭೂತಿ ; +ಮಣ್ಣು ಭೂತಿ, ಅದರಿಂದ ಮಾಡಿದ ಗಣೇಶ ಪ್ರತಿಮೆ ವಿಭೂತಿ. +ಅಂತೆಯೇ ಗದಾಧರ ಭೂತಿಯಾದರೆ, ಶ್ರೀರಾಮಕೃಷ್ಣ ಪರಮಹಂಸ ವಿಭೂತಿ . + ನರೇಂದ್ರ ಭೂತಿಯಾದರೆ, ಸ್ವಾಮಿ ವಿವೇಕಾನಂದ ವಿಭೂತಿ ; + ತಿಮ್ಮಪ್ಪ ಭೂತಿಯಾದರೆ, ಕನಕದಾಸ ಶ್ರೀಮದ್ವಿಭೂತಿ. +ಈ ವಿಭೂತಿ ಪುರುಷನು ಸಂತನಾಗುವ ಮುನ್ನ ಡಣ್ಣಾಯಕನಾಗಿದ್ದ. +ಆತನದೇ ಒಂದುಕ್ತಿ ಹೇಳುತ್ತದೆ ದೊರೆತನವ ಬಿಡಿಸಿ, ಸುಸ್ಥಿರ ಮಾರ್ಗ ತೋರಿಸಿದೆ ನರಮಾತ್ರದವನೆನದೆ ಹರಿಯೆ! ಎಂದು. +ಈ “ದೊರೆತನ” ಬೇರಾವುದೂ ಅಲ್ಲ, ವಿಜಯನಗರ ಸಾಮ್ರಾಜ್ಯದ ಸಾಮಂತಾಧಿಕಾರ. +ಬಾಡ ವಿಜಯನಗರ ಚಕ್ರಾಧಿಪತ್ಯದ ಉತ್ತರದ ಗಡಿನಾಡು; +ಮೇಲಿಂದ ಮೇಲೆ ದಾಳಿ ಬರುತ್ತಿದ್ದ ಷಾಹೀ ರಾಜ್ಯವೊಂದರ ಮೇರೆ. +ಸಾಮ್ರಾಜ್ಯದ ಕೀರ್ತಿಗೆ ಕಳಂಕ ತರದಂತಹ ಸಾಹಸಾಭರಣನಿದ್ದಿರಬೇಕು ಆತ. +ಈ ಮೊನೆಗಾರಧಣಿ ಸವಾರಿ ಹೋರಟರೆ ಛತ್ರ ಭೇರಿ ನಗಾರಿಗಳು ಭೋರೆಂದು ಪೊಂಗಹಳೆ ಮೊರೆಯುತ್ತಿದ್ದುವಂತೆ . +ಇವನ ಶಸ್ತ್ರಶಾಸ್ತ್ರಾಭ್ಯಾಸಗಳೆರಡೂ ಆನೆಗೊಂದಿಯಲ್ಲಿ ನಡೆದಿದ್ದಿರಬೇಕು. +ಕ್ಷತ್ರಿಯೋಚಿತ ಶಸ್ತ್ರಾಭ್ಯಾಸದೆಡೆ ಗೊತ್ತಿಲ್ಲವಾದರೂ, ಶಾಸ್ತ್ರಾಧ್ಯಯನದ ನೆಲೆಗೊತ್ತಿದೆ. +ಅದು ಶ್ರೀವೈಷ್ಣವ ಮಹಾಮತ ಸ್ಥಾಪನಾಚಾರ್ಯ ಶ್ರೀ ರಾಮಾನುಜರ ಶಿಷ್ಯಪರಂಪರೆಯ ಶ್ರೀ ತಾತಾಚಾರ್ಯರ ಶ್ರೀಮಠವಿದ್ದ ಆನೆಗೊಂದಿಯಲ್ಲಿ. +ತಾತಾಚಾರ್ಯರುಕನ್ನಡ ರಮಾರಮಣ ಶ್ರೀ ಕೃಷ್ಣದೇವರಾಯನ ಆಸ್ಥಾನದಲ್ಲಿದ್ದರೆಂಬುದಕ್ಕೆ ಸಾಕಷ್ಟು ಸಾಕ್ಷ್ಯಾಧಾರಗಳಿವೆ. +ಆದರೆ ಕನಕದಾಸನಿಗೆ ದಾಸದೀಕ್ಷೆ ದೊರೆತದ್ದು, ಅವನ ದಾಸ ಜೀವನ ಸಾಗಿದ್ದು ಅದೇ ವಿಜಯನಗರದ ವ್ಯಾಸರಾಯರ ಶ್ರೀಮಠದಲ್ಲಿ. +ದ್ವೈತಮತ ಸಂಸ್ಥಾಪಕರಾದ ಮಧ್ವಾಚಾರ್ಯರ ಶಿಷ್ಯ ಪ್ರಶಿಷ್ಯ ಪರಂಪರೆಯ ನರಹರಿತೀರ್ಥ, ಶ್ರೀಪಾದರಾಜ ಮತ್ತೆ ಅವನ, ಶಿಷ್ಯ ವ್ಯಾಸರಾಯ. +ಈ ವ್ಯಾಸರಾಯರು“ಶೇಷಾಶೇಷ ಪ್ರಹ್ಲಾದನ ಅವತಾರವೆಂದು ಪ್ರಸಿದ್ಧರಾಗಿದ್ದಾರೆ. +ವಾದಿರಾಜ,ವಿಜಯೀಂದ್ರ, ಪುರಂದರದಾಸ, ವೈಕುಂಠದಾಸ ಈ ಮೊದಲಾದ ಅವರ ಶಿಷ್ಯರಲ್ಲಿ ಕನಕದಾಸನೂ ಒಬ್ಬ. + ಆದ್ದರಿಂದಲೇ ಆತ್ಮ ಪರಮ ಪುರುಷೋತ್ತಮನ ಕೃಪಾಪಾತ್ರನಾದ ಪ್ರಹ್ಲಾದಕುಮಾರನನ್ನು ಕುರಿತ ಒಂದು ಪ್ರಶಂಸಾ ಪದ್ಯದಲ್ಲಿ-“ಕೂಸನು ಕಂಡೀರಾ ಸುಪ್ರಹ್ಲಾದನ ಕಂಡೀರಾ ನಮ್ಮ ಕೂಸನು ಕಂಡೀರಾ'ಎಂಬ ಪಲ್ಲವಿ ಹಾಡಿದ್ದಾರೆ. +ಎರಡು ಚರಣಗಳಲ್ಲಿ ಅವನು ಹಿರಣ್ಯಕಶಿಪುವಿನ ಮಗನಾಗಿ ಜನಿಸಿ, ನರಸಿಂಹನನ್ನು ಕಂಬದಲ್ಲಿ ತೋರಿದ ಮಹಾತ್ಮೆಯನ್ನು ಹೊಗಳಿದ್ದಾನೆ. +ಮೂರನೆಯ ಹಾಗೂ ಕಡೆಯ ಚರಣದಲ್ಲಿ ಸ್ಪಷ್ಟವಾಗಿ ತನ್ನ ಗುರು ವ್ಯಾಸರಾಯರನ್ನು ಪ್ರಹ್ಲಾದನೊಡನೆ ಸಮೀಕರಿಸಿದ್ದಾನೆ ; +ತನ್ನ ಗುರುಭಕ್ತಿಯನ್ನು ಆ ಮೂಲಕ ಪ್ರಕಟಸಿ ಧನ್ಯನಾಗಿದ್ದಾನೆ. +ವ್ಯಾಸರಾಯರದು ತುಂಬಾ ಉದಾತ್ತ ವ್ಯಕ್ತಿತ್ವ. +ಅದಕ್ಕೆ ಕೀಳು ಕಿಲುಬು ತಿಳಿದಿರಲಿಲ್ಲ. + ಸ್ವಾರ್ಥ-ಸಂಕುಚಿತತೆಗಳು ಗೊತ್ತಿರಲಿಲ್ಲ. +ಜಾತಿಗಿಂತಲೂ ಮಿಗಿಲಾದ ಜ್ಯೋತಿ ಒಂದಿದೆ. +ಆ ಜ್ಯೋತಿ ಇದ್ದೆಡೆಯಲ್ಲಿ ದೈವತ್ವವಿದೆ ಎಂದು ಎಲ್ಲರಲ್ಲೂ ದೇವನನ್ನು ಕಂಡ, ಎಲ್ಲೆಡೆಯೂ ಮಂಗಳವನ್ನೇ ಗುರುತಿಸಿದ ಯಜು ಬುದ್ಧಿ ಅವರದು. +ತಮ್ಮ ಶ್ರೀ ಮಠದಲ್ಲಿ ಆಗಾಗ ನಡೆಯುತ್ತಿದ್ದ ವ್ಯಾಸಕೂಟ, ದಾಸಕೂಟಗಳ ತಿಕ್ಕಾಟದಲ್ಲಿ ವ್ಯಾಸರಾಯರು ತುಂಬ ಎಚ್ಚರಿಕೆಯಿಂದ ತಮ್ಮ ಪಾತ್ರವನ್ನು ನಿರ್ವಹಿಸುತ್ತಿದ್ದುದುಂಟು. +ಪ್ರತಿಭೆಯನ್ನು ಗುರುತಿಸುವ ಗೌರವಿಸುವ ದೊಡ್ಡಗುಣ ಅವರದು. +ಪುರಂದರದಾಸರ ಈ ಹಾಡಿನ ಆಂತರ್ಯದಲ್ಲಿ ಅಡಗಿರುವ ಅಂಶ ಕನಕದಾಸನ ಪವಾಡ ಅಲ್ಲ. + ಅವನ ಮೇಧಾವಿತನವೂ ಅಲ್ಲ ; + ಅಲ್ಲಿ ಸುವೇದ್ಯವಾಗುವುದು ಕನಕ ದರ್ಶನ . + ದೇವನು ಎಲ್ಲೆಡೆಯೂ ಇದ್ದಾನೆ. +ಅವನು ಅಣುವಿನಲ್ಲಿ ಅಣುವಾಗಿದ್ದಾನೆ. + ಘನದಲ್ಲಿ ಘನವಾಗಿದ್ದಾನೆ ; + ನೀರಿನಲ್ಲಿ ತಂಪಾಗಿದ್ದಾನೆ. +ಗಾಳಿಯಲ್ಲಿ ವೇಗವಾಗಿದ್ದಾನೆ, +ಸೂರ್ಯನಲ್ಲಿ ತೇಜಸ್ಸಾಗಿದ್ದಾನೆ. +ಚಂದ್ರನಲ್ಲಿ ಕಾಂತಿಯಾಗಿದ್ದಾನೆ. +ನಕ್ಷತ್ರದಲ್ಲಿ ನಗೆಯಾಗಿದ್ದಾನೆ. +ಹಕ್ಕಿಯ ಕಂಠದಲ್ಲಿ ಹಾಡಾಗಿದ್ದಾನೆ. + ಹೂವಿನಲ್ಲಿ ಪರಿಮಳವಾಗಿದ್ದಾನೆ. + ಕಲ್ಲಿನಲ್ಲಿ ಘನೀಭೂತವಾಗಿ ಕುಳಿತಿದ್ದಾನೆ. +ಎಲ್ಲ ಸಚರಾಚರ ಚೇತನಗಳಲ್ಲೂ ಸುಪ್ತಶಕ್ತಿಯಾಗಿದ್ದು, ಗುಪ್ತಗಾಮಿಯಾಗಿ, ಸದಾ ಸ್ಪಂದಿಸುತ್ತಾ ವಿನೂತನ ಸೃಷ್ಟಿಯ ಕ್ರತುಶಕ್ತಿ ತಾನಾಗಿದ್ದಾನೆ. +ಆ ಜಗತ್‌ಶಕ್ತಿ ಆದಿಶಕ್ತಿ, ಪರಾತ್ಪರ ಶಕ್ತಿಯ ಅಸ್ತಿತ್ವವು ವ್ಯಾಸಕೂಟದ ಜಡರಿಗೆ ತಾತ್ವಿಕ ತಿಳಿವಾಗಿದ್ದರೆ, ಕನಕದಾಸನಿಗೆ ಅದೊಂದು ಸಹಜಾನುಭವವೇ ಆಗಿದ್ದಿತು. +ಈ ಹಿರಿಮೆಯನ್ನು ಜಗಜ್ಜಾಹೀರು ಮಾಡಿದ ಕೀರ್ತಿ ವ್ಯಾಸರಾಯರದು. +ಅವರ ಶ್ರೀ ಮಠದಲ್ಲಿ ಸಂಸ್ಕೃತವನ್ನಾಶ್ರಯಿಸಿದ ವ್ಯಾಸಕೂಟದವರೂ, ಕನ್ನಡವನ್ನು ದುಡಿಸಿಕೊಂಡ ದಾಸಕೂಟದವರೂ ಇದ್ದರಷ್ಟೆ. +ಅವರು ಯಾರು ಏನೇ ಆಗಿರಲಿ; +ವ್ಯಾಸರಾಯರ ದೃಷ್ಟಿಯಲ್ಲಿ ಪುರಂದರದಾಸ ಕನ್ನಡದ ಹೇಮಕೂಟ ; +ಕನಕದಾಸ ಆ ಹೇಮಕೂಟದ ನೆತ್ತಿಯ ಮೇಲೆ ಹಾರಾಡುವ ಕನ್ನಡ ಬಾವುಟ . +ಮೇಲೆ ಉದ್ಧರಿಸಿದ ದಾಸವರೇಣ್ಯರ ಧ್ವನಿಪೂರ್ಣ, ಅರ್ಥಪೂರ್ಣ ಕೀರ್ತನೆ ಕನಕದಾಸನ ಕಾಲನಿರ್ಧಾರಕ್ಕೆ ತುಂಬಾ ಸಹಕಾರಿಯಾಗಿದೆ. +ವ್ಯಾಸರಾಯ ಪುರಂದರದಾಸ ಮತ್ತು ಕನಕದಾಸ ಇವರು ಸಮಕಾಲೀನರು. +ಈ ಮೂವರೂ ಜಗತ್ವಸಿದ್ಧ ಚಕ್ರವರ್ತಿಗಳಲ್ಲೊಬ್ಬನಾದ ವಿಜಯ ನಗರದ ಶ್ರೀಕೃಷ್ಣದೇವರಾಯನ (ಕ್ರಿ.ಶ.೧೫ಂ೯-೧೫೨೯) ವೈಭವದ ದಿನಗಳಲ್ಲಿ ಬದುಕು ಮಾಡಿದವರು. +ಅವನ ಆಸ್ಥಾನದ ಭಕ್ತಿ ಗೌರವ ಮನ್ನಣೆಗಳಿಗೆ ಪಾತ್ರರಾಗಿದ್ದವರು. +ವ್ಯಾಸರಾಯರು ಅಂದು ಇದ್ದುದಕ್ಕೆ ಅವರಿಗೆ ಸಂಬಂಧಿಸಿದ ಅಂದರೆ ಆಳುವ ಪ್ರಭುವಿನಿಂದ ಅವರಿಗೆ ವ್ಯಾಸ ಸಮುದ್ರವನ್ನು ನಿರ್ಮಿಸುವುದಕ್ಕಾಗಿ ದೊರೆತ ಉಂಬಳಿ ವಿಷಯ ಹೊತ್ತ ೧೫೨೭ನೆಯ ಇಸವಿಯದೆಂದು ಹೇಳಲಾದ ಶಿವಮೊಗ್ಗೆಯ ಒಂದು ಶಾಸನ ಸಾಕ್ಷಿ ಹೇಳುತ್ತದೆ. +ಕನಕದಾಸನು ವಿಜಯನಗರದಲ್ಲಿದ್ದುದಕ್ಕೆ, ಅವನು ಶ್ರೀಕೃಷ್ಣದೇವರಾಯನ ಅಭಿಮಾನಿ ಆಶ್ರಿತನಾಗಿದ್ದುದಕ್ಕೆ, ಶ್ರೀ ಕೃಷ್ಣದೇವರಾಯನನ್ನೂ,ಅವನ ಆಸ್ಥಾನ ವೈಭವವನ್ನೂ ಕಂಡುಂಡುದಕ್ಕೆ ಮೋಹನ ತರಂಗಿಣಿಯ ದ್ವಾರಕಾ ಪುರವರ್ಣನ ಹಾಗೂ ಶ್ರೀಕೃಷ್ಣನ ಗುಣಸಂಕೀರ್ತನಗಳು ಪುರಾವೆಯನ್ನೊದಗಿಸುತ್ತವೆ. +"ದಾಸರೆಂದರೆ ಪುರಂದರ ದಾಸರಯ್ಯಾ' ಎಂಬ ವ್ಯಾಸರಾಯರ ಪ್ರಶಂಸೆಗೆ ಪುರಂದರದಾಸರು ಪಾತ್ರರಾಗಿದ್ದರಷ್ಟೆ. +ಹಾಗೆಯೇ ಶಿಷ್ಯರೆಂದರೆ ಕನಕದಾಸರಯ್ಯಾ ಎಂಬ ಪ್ರಶಸ್ತಿಗೆ ಕನಕದಾಸರು ಪಾತ್ರರಾಗಿದ್ದರೆ ಅತಿಶಯೋಕ್ತಿಯಲ್ಲ. +ಕನಕಣ್ಣನ ಗುಣಗಳನ್ನು ಗಣಿಸಿದ ಆ ಮಹಾತ್ಮರು ಅದನ್ನು ಪ್ರಕಟಪಡಿಸಲು ಅನೇಕ ಯತ್ನಗಳನ್ನು ಮಾಡಿದ್ದಾರೆ. +ಅವುಗಳಲ್ಲಿ ಮೇಲೆ ಹಾಡಿದ ಅವರದೇ ರಚನೆ ಪ್ರತ್ಯಕ್ಷ ಸಾಕ್ಷಿಯಾಗಿದೆ. +ಅದಕ್ಕೆ ಪ್ರತಿಯಾಗಿ ಕನಕದಾಸರೂ ಸಹ ಆನಂದತೀರ್ಥ ಮಧ್ವಾಚಾರ್ಯರನ್ನೂ ವ್ಯಾಸರಾಯರನ್ನೂ ತುಂಬು ಹೃದಯದಿಂದ ಸ್ಮರಿಸಿದ್ದಾರೆ. +ಕನಕದಾಸರೂ ಪುರಂದರದಾಸರೂ ವ್ಯಾಸರಾಯರ ಸಮಕಾಲೀನರೂ ಶಿಷ್ಯರೂ ಆಗಿದ್ದುದಕ್ಕೆ ಸಾಕಷ್ಟು ಅನ್ಯಾಧಾರಗಳಿವೆ, ಪ್ರತೀತಿಯೂ ಇದೆ ; +ಅಂತೆಯೇ ಕನಕದಾಸನ ಮೋಹನ ತರಂಗಿಣಿಯ ಒಂದು ಪದ ಹೀಗೆ ಹೇಳುತ್ತದೆ : +ಹುತ್ತದ ಹೆಸರು ಪಡೆದ ವಾಲ್ಮೀಕಿಯ ಮತ್ತು ಮತ್ಸ್ಯಗಂಧಿಯ ಮಗನಾದ ವ್ಯಾಸನ ಪ್ರಸಿದ್ಧ ಪುರಾಣಗಳನ್ನು ಕನ್ನಡಿಸಿದ ಕವಿಶ್ರೇಷ್ಠರಾದ ಕುಮಾರವಾಲ್ಮೀಕಿ (ಕ್ರಿ.ಶ.೧೫ಂಂ) ಮತ್ತು ಕುಮಾರವ್ಯಾಸ (ಕ್ರಿ.ಶ.೧೪೩ಂ)ಇವರನ್ನು ಅತ್ಯಾನಂದದಿಂದ ಕೊಂಡಾಡುತ್ತೇನೆ ಎಂದಿದ್ದಾನೆ. +ಇದರಿಂದ ಕನಕ ಈ ಕವಿದ್ವಯರಿಗಿಂತ ಈಚಿನವನು. +ಕಾಖಂಡಿಕಿ ಮಹೀಪತಿರಾಯನ ಮಗಕಾಖಂಡಿಕಿ ಕೃಷ್ಣರಾಯನು ಹರಿಪದವನಜಮಧುಪರಾದ ಶ್ರೀಪಾದರೇ ಮೊದಲಾದ ಅನೇಕ ಜನ ದಾಸಪುಂಗವರುಗಳನ್ನು ಅನುದಿನವೂ ಸ್ಮರಿಸುತ್ತೇನೆಂದು ಹೇಳುತ್ತಾರೆ, +ಏಡುಕೊಂಡಲವಾಸ ತಿರುಪತಿಯ ವೆಂಕಟರಮಣನನ್ನು ಅಂಕಿತವಾಗುಳ್ಳ ಪ್ರಸಿದ್ಧ ತೆಲುಗು ಕೀರ್ತನಕಾರ, ವಾಗ್ಗೇಯನಿಧಿ ತಾಳಪಾಕ ಅನ್ನಮಾರ್ಯನನ್ನೂ ಕಾಗಿನೆಲೆ ಆದಿಕೇಶವ ಅಂಕಿತವುಳ್ಳ ಕನ್ನಡದ ಕವಿ, ಕೀರ್ತನಾಚಾರ್ಯ ಕನಕದಾಸನನ್ನೂ ಜೊತೆ ಜೊತೆಯಲ್ಲಿಯೇ ಕೊಂಡಾಡಿದ್ದಾನೆ. +ಪುರಂದರದಾಸರು ವಿಶ್ವವಿಖ್ಯಾತ ಸಂಗೀತಗಾರ ತ್ಯಾಗರಾಜನಿಗೆ ಅಪ್ರತ್ಯಕ್ಷ ಗುರುವಾಗಿದ್ದರೆ, ಅನ್ನಮಾರ್ಯನಿಗೆ ಪ್ರತ್ಯಕ್ಷ ಸಂಗೀತ ಶಿಕ್ಷಾಗುರು ಆಗಿದ್ದರು. +ಇಂತಹ ಪುರಂದರರ ಶಿಷ್ಕ ಅನ್ನ ಮಾರ್ಯರನ್ನೂ ಪುರಂದರ ದಾಸರ ಆತ್ಮೀಯ ಗೆಳೆಯ ಕನಕದಾಸರನ್ನೂ ಅನನ್ಯ ಭಕ್ತಿಯಿಂದ ಸ್ಮರಿಸಿರುವ ಕಾಖಂಡಿಕಿ ಕೃಷ್ಣರಾಯ ಕ್ರಿಸ್ತಶಕ ಹದಿನೇಳನೆಯ ಶತಮಾನದವನು. +ಆದ್ದರಿಂದ ಕನಕ ಕಾಖಂಡಿಕಿ ಕೃಷ್ಣರಾಯನಿಗಿಂತ ಹಿಂದಿನವನು. +ಇದರ ಕೂಡೆ ಸಿಗುವ ಮತ್ತೊಂದು ಪೋಷಕಾಧಾರವೆಂದರೆ ಕನಕದಾಸನೇ ತನ್ನ ಮೋಹನ ತರಂಗಿಣಿಯಲ್ಲಿ ಬಳಸಿರುವ "ಪೆಟಲಂಬಿನವರು' ಎಂಬ ಶಬ್ದ "ಪೆಟಲಂಬು' ಎಂಬುದು ಪಿಸ್ತೂಲು, ತುಪಾಕಿ ಅಥವಾ ಬಂದೂಕ. +ಈ ಪೆಟಲಂಬು ಅಥವಾ ಬಂದೂಕಧಾರಿಗಳ ದರ್ಶನ ಕನ್ನಡಿಗರಿಗಾದದ್ದು ೧೫೨ಂರಲ್ಲಿ ನಡೆದ ರಾಯಚೂರು ಯುದ್ಧದಲ್ಲಿ. +ಆದ್ದರಿಂದ ಕನಕದಾಸನ ಜೀವಿತಾವಧಿಯನ್ನು ಕ್ರಿ.ಶ.೧೫ಂಂ ರಿಂದ ಕ್ರಿ.ಶ.೧೬ಂಂ ರವರೆಗೆ ಎಂದಿಟ್ಟುಕೊಳ್ಳಬಹುದು. +ವ್ಯಾಸರಾಯರೂ (ಕ್ರಿ.ಶ.೧೪೪೭-೧೫೩೯) ಪುರಂದರದಾಸರೂ (ಕ್ರಿ.ಶ.೧೪೮ಂ-೧೫೪ಂ) ಬೃಂದಾವನಸ್ಮರಾದ ಮೇಲೂ ಕನಕದಾಸರು ಬದುಕಿದ್ದರೆಂದು ತಿಳಿಯುವುದರಿಂದ ಕ್ರಿಸ್ತಶಕ ಹದಿನಾರನೆಯ ಶತಮಾನದ ಮಧ್ಯಭಾಗವನ್ನು ಅಂದರೆ ಕ್ರಿ.ಶ.೧೫೫ಂನ್ನು ಕನಕದಾಸರಿದ್ದ ಕಾಲವೆಂದು ನಿರ್ಧರಿಸಿ ಹೇಳಬಹುದು. +ಮೂರು ಕನಕದಾಸರ ಕುಲವನ್ನು ಗುರುತಿಸಲು ಅನೇಕ ವ್ಯರ್ಥಪ್ರಯತ್ನಗಳು ನಡೆದಿವೆ. +ಅಂಥವುಗಳಲ್ಲಿ ನಮ್ಮದೂ ಒಂದು. +ಮೊದಲನೆಯದು ರಾ.ನರಸಿಂಹಾಚಾರ್ಯರು (ಕ್ರಿ.ಶ.೧೯೧೯) ಇವನು ಬೇಡರವನೆಂದೂ,ಅಂಡೆಯ ಕುರುಬಜಾತಿಯವನೆಂದೂ ಅವರಿವರು ಹೇಳುತ್ತಾರೆ ಎಂದು ಜನಹೇಳಿಕೆಯನ್ನಿತ್ತಿದ್ದಾರೆ. +ಆದರೆ ಕನಕನ ಕುಲದ ಬಗೆಗೆ ಇವರದು ಯಾವ ವಿಧದ ಕಮಿಟ್‌ಮೆಂಟೂ ಇಲ್ಲ. +ಎರಡನೆಯವರು ಕಟ್ಟಿ ಶೇಷಾಚಾರ್ಯರು. +ಇವರು ಕನಕದಾಸನು ತನ್ನ ಮೋಹನ ತರಂಗಿಣಿಯ ಪೀಠಿಕಾ ಭಾಗದಲ್ಲಿ ಶ್ರೀ ರಾಮಾನುಜರನ್ನೂ, ಅವರ ಶಿಷ್ಯ ಪರಂಪರೆಯ ತಾತಾಚಾರ್ಯರನ್ನೂ ಸ್ಮರಿಸಿರುವುದರಿಂದ ಶ್ರೀ ವೈಷ್ಣವ ಮತದ ಬಗೆಗೆ ಒಲವುಳ್ಳವನೆಂತಲೂ, ಅದೇ ಕೃತಿಯಲ್ಲಿ ತ್ರಿವಿಕ್ರಮ ದಾಸಸ್ಯದಾಸರನ್ನು ಅಂದರೆ ವಾದಿರಾಜರನ್ನು ಸ್ಮರಿಸಿರುವುದರಿಂದ ಮತ್ತು ಹರಿಭಕ್ತಿಸಾರದ ಆಂತರಿಕ ಪ್ರಮಾಣಗಳಿಂದ ಕನಕದಾಸನು ಮಾಧ್ವಮತ ನಂಬಿಕೆಯವನೆಂದೂ, ಕೀರ್ತನೆಯೊಂದರಲ್ಲಿ “ಮುಟ್ಟಲಮ್ಮರು ಎನ್ನ ಬಂಧುಗಳು ಕಂಡರೆ ಅಟ್ಟಿಬಿಡುವುತಲಿಹರೊ ಕೃಷ್ಣ' ಎಂಬ ಸಾಲಿನ ಆಧಾರದ ಮೇಲೆ, ಕನಕದಾಸರು ಯಾವ ಕುಲದವರೆಂಬುದು ಗೊತ್ತಾಗುವುದಿಲ್ಲ. + ಆದರೆ ಮುಟ್ಟಿಸಿಕೊಳ್ಳದಂತಹ ಒಂದು ಜಾತಿಯವರಾಗಿದ್ದರೆಂದು ಹೇಳಬಹುದು ಎಂತಲೂ ಹೇಳುತ್ತಾರೆ. +ಅಂತೆಯೇ, “ನಾವು ಕುರುಬರು ನಮ್ಮ ದೇವರೊ ಬೀರಯ್ಯ'. + ಎಂಬ ಕೀರ್ತನೆಯ ಆಧಾರದ ಮೇಲೆ ಕನಕದಾಸರನ್ನು ಕುರುಬ ಕುಲದವರೆಂದು ನಿರ್ಧರಿಸಲಾಗದು ಎಂದು ಎಚ್ಚರಿಸಿದ್ದಾರೆ. +ಒಟ್ಟಿನಲ್ಲಿ ಕಟ್ಟಿಯವರ ದೃಷ್ಟಿಯಲ್ಲಿ ಕನಕದಾಸ ಓರ್ವ ಅಸ್ಪಶ್ಯ;ಆದರೆ ಯಾವ ಕುಲಜ ತಿಳಿಯದು. +ಮೂರನೆಯವರು, ಬೆಟಗೇರಿ ಕೃಷ್ಣಶರ್ಮ ಮತ್ತು ಬೆಂಗೇರಿ ಹುಚ್ಚುರಾವ್‌ರವರು. +ಇವರು 'ಶ್ರೀಕನಕದಾಸರ ಭಕ್ತಿಗೀತೆಗಳು' ಎಂಬ ತಮ್ಮ ಸಂಪಾದನ ಕೃತಿಯ ಮುನ್ನುಡಿಯಲ್ಲಿ, "ಕನಕದಾಸರು ಹುಟ್ಟಿದ ಜಾತಿಯಾವುದೆಂಬುದೂ ಒಂದು ಒಡೆಯಲಾರದ ಒಗಟೇ ಆಗಿದೆ. +ಅವರನ್ನು ಕುರುಬ ಜಾತಿಯವರೆಂದು ಹೇಳುವ ಪರಂಪರೆಯೂ ಇದೆ. +ನಾಯಕ (ಬೇಡ)ಜಾತಿಯವರೆಂದು ಹೇಳುವ ಪರಂಪರೆಯೂ ಇದೆ.' + ಎಂದು ಹೇಳಿ ಎಲ್‌.ಜಿ.ಹಾವನೂರರ ಅಭಿಪ್ರಾಯವನ್ನು ಎತ್ತಿಹಿಡಿದಿದ್ದಾರೆ. + “ಹಾವನೂರರ ಪ್ರಕಾರ ಕನಕದಾಸರು “ದಾಸಪಂಗಡ' ಎಂಬ ಒಂದು ದಾಸವರ್ಗಕ್ಕೆ ಸೇರಿದವರು. +ಇವರ ವಂಶೀಕರು ಕಾಗಿನೆಲೆಯ ಸಮೀಪದ ಕುಮ್ಮೂರು ಗ್ರಾಮದಲ್ಲಿ ಈಗಲೂ ಇದ್ದಾರೆ. +ಇವರಿಗೆ ೬೬ ಗ್ರಾಮಗಳ ವಾಲ್ಮೀಕಿ ಅಥವಾ ನಾಯಕರ ಜಗಳವನ್ನು ತೀರಿಸುವ ಹಕ್ಕು ಇದೆ. +ಆ ಹಕ್ಕು ಆನೆಗೊಂದಿಯ ತಾತಾಚಾರ್ಯರು ಕೊಟ್ಟ "ಶ್ರೀಮುಖ'ದಿಂದ ಪ್ರಾಪ್ತವಾದದ್ದು. +ಕುರಿಸಾಕಣೆ ಈ ದಾಸರ ಕುಲ ಕಸುಬು. +ಪ್ರತಿಯೊಬ್ಬನ ಮನೆಯಲ್ಲೂ ಡೊಳ್ಳು ಇದೆ-ಎಂಬಂಶಗಳನ್ನು ಆಧರಿಸಿ,ರಾಮಾನುಜರನ್ನೂ ತಾತಾಚಾರ್ಯ ಗುರುಗಳನ್ನೂ ಭಕ್ತಿಯಿಂದ ಕೊಂಡಾಡಿದ ಕನಕದಾಸರು ನಾಯಕ ಜಾತಿಯವರಾಗಿಯೇ ಇರಬಹುದೆಂದು ಹೇಳುವುದು ಯುಕ್ತಿಯುಕ್ತವೆನಿಸುತ್ತಿದೆ. +ಕುರುಬರೆಂದು ಹೇಳುವುದಕ್ಕೆ ಯಾವ ಅನುಮಾನದ ಆಧಾರಗಳೂ ನಮಗೆ ಸಿಕ್ಕುವುದಿಲ್ಲ. +ಏಕೆಂದರೆ ಬೀರಯ್ಯನ ಭಕ್ತರಾಗಿರುವ ನಮ್ಮ ಉತ್ತರ ಕರ್ನಾಟಕದ ಕುರುಬರೆಲ್ಲರೂ ಸಿದ್ಧರ ಉಪಾಸನಾ ಪರಂಪರೆಗೆ ಸೇರಿದವರಾಗಿದ್ದಾರೆ. + ರಾಮಾನುಜೀಯ ವೈಷ್ಣವ ಮತದ ಸಂಬಂಧ ಅವರಿಗೆಸ್ವಲ್ಪವೂ ಇಲ್ಲ. +"ಒಡೆಯರು' ಎಂಬ ಹೆಸರು ಪುರೋಹಿತ ವರ್ಗದ ಕುರುಬರಲ್ಲಿದೆ. +ಅವರಂತೂ ಸಂಪೂರ್ಣವಾಗಿ ವೀರಶೈವ ಆಚಾರಗಳ ಪ್ರಭಾವಕ್ಕೆ ಒಳಗಾಗಿರುವರು ಎಂದಿದ್ದಾರೆ. +ಇದು ವಿಚಾರ ಪ್ರಚೋದಕವೂ ಹೆಚ್ಚು ಅರ್ಥಪೂರ್ಣವೂ ಆದ ಹೇಳಿಕೆ. +ಏಕೆಂದರೆ ಕುರುಬರು ಅಥವಾ ಹಾಲು ಮತಸ್ಥರು ಕರ್ನಾಟಕದ ಮೂಲನಿವಾಸಿಗಳು. +ಫಾದರ್‌ ಹೆರಾಸ್‌ರವರು ಹರಪ್ಪಾ ಮತ್ತು ಮೊಹೆಂಜದಾರೊ ಉತ್ಪನನದ ಸಂದರ್ಭದಲ್ಲಿ ದೊರೆತ ಚಿತ್ರಲಿಪಿಯ ಆಧಾರದ ಮೇಲೆ ಈ ಭೂಪ್ರದೇಶದ ಮೂಲನಿವಾಸಿಗಳು “ಕಳ್‌ಅರು' ಅಂದರೆ ಹಾಲು. +ಕಳ್‌ ಉತ್ಪಾದಕರು ಹಾಲು ಮತಸ್ಥರು. +ಕೃಷಿ ಮತ್ತು ಪಶುಪಾಲನೆ ಅವರ ಮೂಲ ಕಸಬು. +ಈ ಕಳ್‌ಅರ ನಾಡು ಕನ್ನಡನಾಡು ಎಂದಾಯಿತು ಎಂದು,ಕನ್ನಡನಾಡು ಜನಾಂಗವಾಚಿ ಶಬ್ದವೆಂದು ಊಹಿಸುತ್ತಾರೆ. +ಆದರೆ ಹೆರಾಸ್‌ರವರನ್ನು ಒಪ್ಪದವರೂ ಇದ್ದಾರೆ. +ಏನೇ ಇರಲಿ ಆರ್ಯರ ಆಗಮನಕ್ಕಿಂತಲೂ ಮುಂಚೆ ಈ ನಾಡಿನಲ್ಲಿದ್ದ ಮೂಲನಿವಾಸಿಗಳು ದ್ರಾವಿಡರು; +ಅವರ ಔಪಾಸನಾ ದೇವತೆ ರುದ್ರ. +ಈ ರುದ್ರನನ್ನು ಆರ್ಯರು ತಮ್ಮ ವೇದದಲ್ಲಿ ಸೇರಿಸಿಕೊಂಡು ಉಪಾಸಿಸುವಾಗ ಕಳ್‌ಆರು ಅನ್ನುವುದು ಕಳ್ಳರು ಎಂಬ ತಪ್ಪ ಅರ್ಥದಲ್ಲಿ ಗ್ರಹಿಕೆಯಾದ್ದರಿಂದ ಖುಗ್ಬೇದದ ರುದ್ರಾಧ್ಯಾಯದಲ್ಲಿ ನಮಕ-ಚಮಕ ಸಂದರ್ಭದಲ್ಲಿ ರುದ್ರನನ್ನು ಕುರಿತ ಅನುವಾಕದ ಖಯಕ್ಕು"ತಸ್ಕರಾಣಾಂ ತೇ ನಮೋ ನಮ? ಎಂದು ಪ್ರಯೋಗ ಗೊಂಡಿದೆ. +ಇಲ್ಲಿ ಹಾಲುಉತ್ಪಾದಕರ ಕುಲದೇವತೆಯೇ ನಿನಗೆ ನಮಸ್ಕಾರ ಎನ್ನುವುದರ ಬದಲು, ಕಳ್ಳನೇ ನಿನಗೆ ನಮಸ್ಕಾರ ಎಂದಾಗಿದೆ. +ಅಂದಿನಿಂದಲೂ ಈ ಕುರುಬ ಜನಾಂಗದವರು ಶಿವಾರಾಧಕರು ಎಂದು ತಿಳಿಯುತ್ತದೆ. +ಅಂತೆಯೆ ಇವರು ರೇವಣಸಿದ್ಧ ಸಂಪ್ರದಾಯದವರು. +ವೀರಶೈವವನ್ನು ಒಪ್ಪಿಕೊಂಡ ಇಷ್ಟಲಿಂಗಧಾರಿ "ಓಡೆಯ'ಕುಲದವರು. +ಇವರು ಉತ್ತರ ಕರ್ನಾಟಕದಲ್ಲಿ ತುಮಕೂರು ಜಿಲ್ಲಾಚಿಕ್ಕನಾಯಕನಹಳ್ಳಿ ಮೊದಲಾದೆಡೆಗಳಲ್ಲಿ ಇಂದಿಗೂ ಇದ್ದಾರೆ. +ಇವರೆಲ್ಲರೂ ಶಿವಾರಾಧಕರು. +ಹನ್ನೆರಡನೆಯ ಶತಮಾನ ಒಂದು ಸಂಕ್ರಮಣ ಕಾಲವಷ್ಟೆ ಅಂದು. +ಬಹುಶಃ ಕೆಲವರು ರೇವಣಸಿದ್ಧ ಸಂಪ್ರದಾಯಕ್ಕೂ, ಮತ್ತೆ ಕೆಲವರು ವೈಷ್ಣವ ಸಂಪ್ರದಾಯಕ್ಕೂ ಸೇರಿದ್ದಿರಬಹುದು. +ಈ ಹೇಳಿಕೆಗೆ ಬೇಲೂರು ಕೇಶವ ದಾಸರಲ್ಲಿ ಸಮರ್ಥನೆ ಹುಡುಕಬಹುದು. +ಅವರು ಹೇಳುತ್ತಾರೆ"ಕರ್ನಾಟಕದಲ್ಲಿ ಶೈವಮತವು ತಲೆಯೆತ್ತಿದಾಗಿನಿಂದ ಕುರುಬರು ಶಿವನನ್ನು ಕುಲದೈವವೆಂದು ಪೂಜಿಸುತ್ತಿದ್ದರು. +ಮಹಾದೇವನನ್ನು ಬೀರಪ್ಪ (ವೀರಪ್ಪ)ನೆಂದು ಕರೆದಾಗಿನಿಂದ ಕುರುಬ ದೇವರಿಗೆ ಬೀರೇದೈವರೆಂದು ಹೆಸರಾಯಿತು. +ರಾಮಾನುಜಾಚಾರ್ಯರು ಹೊಯ್ಸಳ ನಾಡಿನಲ್ಲಿ ನೆಲೆಸಿ ವಿಷ್ಣುಭಕ್ತಿಯನ್ನು ಉಪದೇಶಿಸಿದ ಮೇಲೆ, ಕುರುಬರಲ್ಲಿ ಅನೇಕರು ತಿರುಪತಿಯ ವೆಂಕಟೇಶನನ್ನು ಪೂಜಿಸಲಾರಂಭಿಸಿದರು. +ಭಸ್ಮಕ್ಕೆ ಬದಲಾಗಿ ಕುಂಕುಮ ತಿಲಕವು ಆ ಜನರಮತ ಚಿಹ್ನೆಯಾಯಿತು ಎಂದರು. +ಎಸ್‌.ಕೆ.ರಾಮಚಂದ್ರರಾಯರೂ, "ಮೊದಲಿಗೆ ಇವರೆಲ್ಲ ಶೈವರು. +ಕಾಳಹಸ್ತೀಶ್ಚರನ (ತಿರುಕಾಳತ್ತಿ ದೇವರ) ಒಕ್ಕಲು. +ಆದರೆ,ಒಂದು ಕಾಲಕ್ಕೆ ಕುರುಬರೆಲ್ಲ ತಿರುಪತಿಯ ದೇವರ ಒಕ್ಕಲಾದರು ಎನ್ನುತ್ತಾರೆ. +ಇವರ ಮೊದಲ ಮಾತು ದಿಟವೆನಿಸಿದರೂ ಕುರುಬರೆಲ್ಲರೂ ಆದರು ಎಂಬ ಮಾತು ಪೂರ್ಣ ಸತ್ಯ ಅಲ್ಲ. +ಕಾಳಹಸ್ತೀಶನಿಗೆ ನಡೆದುಕೊಳ್ಳುವ ಕುಲಗಳು ಇಂದಿಗೂ ಜೀವಂತವಿವೆ. +ಬಳ್ಳಾರಿ ಜಿಲ್ಲೆಯ ಹೂವಿನ ಹಡಗಲಿ ತಾಲೂಕು ಮೈಲಾರದಲ್ಲಿರುವ ಮೈಲಾರಲಿಂಗನು ಶಿವನ ಅವತಾರಿಯೆ. +ಮಲ್ಲಾಸುರ ಮಣಿಕಾಸುರರನ್ನು ಕೊಂದು ಲೋಕಕಂಟಕ ನಿವಾರಣೆ ಮಾಡಿದನೆಂಬ ನಂಬಿಕೆ ಇದೆ. +ತುಂಬಾ ಭಯಭಕ್ತಿಯಿಂದ ಪವಾಡರೂಪದಲ್ಲಿ ಇಂದಿಗೂ ಮೈಲಾರಲಿಂಗನ ಜಾತ್ರೆ ಪ್ರತಿ ವರ್ಷವೂ ನಡೆಯುತ್ತದೆ. +ಬೆಂಗಳೂರು, ಕೋಲಾರ ಪ್ರದೇಶಗಳಲ್ಲಿರುವವರು ತಿರುಪತಿ ತಿಮ್ಮಪ್ಪನಿಗೆ ನಡೆದುಕೊಳ್ಳುತ್ತಿದ್ದರೂ ಇವರು ಶಿವೋಪಾಸಕರೆ. +ಬಹುಶಃ ಕುರುಬ ಕುಲದ ಕನಕದಾಸನ ಪೂರ್ವಜರು ವೀರಶೈವಧರ್ಮೀಯರಾದ ವಿಜಯನಗರದ ಸಂಗಮ ವಂಶದವರ ಅವನತಿಯ ನಂಂತರ ಪ್ರಾಬಲ್ಯಕ್ಕೆ ಬಂದ ವೈಷ್ಣವ ಪಾರಮ್ಯವನೊಪ್ಪಿದ ತುಳುವ ಮನೆತನದ ಅರಸರ ಕಾಲದಲ್ಲಿ ಎಷ್ಟು ಉಪಾಸಕರಾಗಿದ್ದಿರಬೇಕು. +ರಾಜಕಾರಣ ಮತ ಧರ್ಮದ ಬೆನ್ನೆಲುಬು. +ಯಾವುದೇ ಕಾಲದ ಯಾವುದೇ ದೇಶದ ಯಾವುದೇ ಮತಧರ್ಮವಿರಲಿ ಅದು ಆಳ್ಬವನ ಮರ್ಜಿಯಿಂದ ಬದುಕುತ್ತದೆ ಎಂಬುದು ಕಟುವಾದರೂ ಸತ್ಯ ಆದ್ದರಿಂದ ಕನಕದಾಸರು ಕಾಲಧರ್ಮಕ್ಕೆ ಮಣಿದು ನಡೆದಿದ್ದರೆ ಆಶ್ಚರ್ಯವೇನಲ್ಲ. +ಅಲ್ಲದೆ ಕುರುಬರಲ್ಲಿ ನೂರಾರು ಬೆಡಗುಗಳು, ಕಟ್ಟುಗಳು ಇಂದಿಗೂ ಜೀವಂತ ಇವೆ. +ಇವುಗಳಲ್ಲಿ ತಿರುಪತಿಗೆ ನಡೆದುಕೊಳ್ಳುವ ವರ್ಗವೂ ಇದೆ. +ಅಂಥವುಗಳಲ್ಲಿ ಒಂದಾಗಿದ್ದಿರಬಹುದು ಕನಕದಾಸರ ಕುಲ. +ಇಲ್ಲಿ ಹಾವನೂರರು ಒಡ್ಡುವ ಜಾನಾಂಗಿಕ ಆಧಾರ ನಿಜಕ್ಕೂ ವಿಚಾರಣೀಯ. +ಇದಕ್ಕೆ ಪೋಷಕವಾಗಿ ಕನಕದಾಸನ ಹೆಸರಿಗೆ ಸಂಬಂಧಿಸಿದ ಮತ್ತೊಂದು ಅಂಶವನ್ನು ಇಲ್ಲಿ ಚರ್ಚಿಸಬಹುದು. +ಕನಕದೀಕ್ಷೆ ಪಡೆದ ಮೇಲೆ “ಕನಕದಾಸ' ಎಂದಾದ ಎಂದು ಕೆಲವರು ಹೇಳುತ್ತಾರೆ. +ಇದು ವಾಸ್ತವ ಸತ್ಯ ಆಗಿರಲಾರದು. +ಕಾಳಿದಾಸ,ದೇವದಾಸ ಇದ್ದ ಹಾಗೆ ಕನಕದಾಸ ಇದ್ದಾನೆ. +ರಾಮಧಾನ್ಯ ಚರಿತ್ರೆ, ಹರಿಭಕ್ತಿಸಾರ,ನಳಚರಿತ್ರೆಗಳಲ್ಲಿ ಅಂಕಿತ ಹೊರತು ಕನಕದಾಸನ ಹೆಸರಿಲ್ಲ. +ಕನಕ, ಕನಕಪ್ಪ, ಕನಕದಾಸೋತ್ತಮ ಎಂಬ ಹೆಸರಿನ ಉಲ್ಲೇಖಗಳಲ್ಲಿ "ಕನಕ, ಕನಕಪ್ಪ' ಎಂಬವು ಕೇವಲ ಛಂದಸ್ಸಿನ ಸೌಕರ್ಯಕ್ಕಾಗಿ ಬಂದವುಗಳು. +ಆದರೆ “ಕನಕದಾಸ' ಎಂಬುದೇ ಬಹಳೆಡೆಗಳಲ್ಲಿ ಪ್ರಯೋಗಗೊಂಡಿದೆ. +ಅಲ್ಲದೆ ನಾವು ಹಿಂದೆ ನೋಡಿದಂತೆ ಕನಕದಾಸದಾಸದೀಕ್ಷೆ ಪಡೆದು ದಾಸನಾಗುವ ಮುನ್ನ, ತನ್ನ ಅರಮನೆಯಲ್ಲಿದ್ದ ಆಮೋದದ ದಿನಗಳಲ್ಲಿ ಮೋಹನ ತರಂಗಿಣಿಯನ್ನು ಬರೆದಿದ್ದಾನೆ. +ಅದರಲ್ಲಿ “ಕನಕದಾಸ'ಎಂದಿದೆಯಾದ್ದರಿಂದ ಕನಕನಿಗೆ "ದಾಸ' ಎಂಬುದು ಉಪವರ್ಗವಾಗಿ ಬಂದದ್ದಲ್ಲ ಜನ್ಮತಃ ಜೊತೆಗೂಡಿ ಬಂದ ಹೆಸರು ಎನ್ನಿಸುತ್ತದೆ. +ಅಲ್ಲದೆ ಈ ದಾಸ ಪಂಗಡದವರು ಕುರುಬ ಕುಲದ ಒಂದು ವರ್ಗಕ್ಕೆ ಸೇರಿದವರೆಂದು ಇತ್ತೀಚಿನ ಅಧ್ಯಯನದಿಂದ ತಿಳಿದು ಬರುವುದರಿಂದ ಕನಕದಾಸರು ದಾಸವರ್ಗದ ಕುರುಬರವನೆಂದು ನಿರ್ಧರಿಸಿ ಹೇಳಬಹುದು. +“ಆತ್ಮ ಯಾವ ಕುಲ, ಜೀವ ಯಾವ ಕುಲ ಆತನೊಲಿದ ಮೇಲೆ ಯಾತರ ಕುಲವಯ್ಯ ಎಂದಾತನಿಗೆ ಕುಲವೆಂಬುದಿಲ್ಲ ಮಾನವ ಕುಲವಲ್ಲದೆ ! +ಅದರಿಂದಲೆ ಕನಕದಾಸರು ತಮ್ಮನ್ನು ಪ್ರಶ್ನಿಸಿದವರಿಗೆ ಹೇಳಿದರು. +ಅವನು ಮಾಡಿದ ನರರೂಪಕ್ಕೆ ಜಾತಿಯಾವುದೆಂದು ಹೇಳಲಿ ?ಪ್ರತಿಯಾಗಿ ಪ್ರಶ್ನಿಸಿದರು; +ಹರಿದಾಸರು ಎನ್ನ ಬಂಧು ಬಳಗಾದರು ಹರಿಯ ಶ್ರೀಮುದ್ರೆ ಆಭರಣವಾಯಿತು ಎಂದು ಸಾರಿ ಹೇಳಿದರು. +"ಕುಲ ಕುಲ ಕುಲವೆಂದು ಹೊಡೆದಾಡದಿರಿ ನಿಮ್ಮ ಕುಲದ ನೆಲೆಯನೇನಾದರು ಬಲ್ಲಿರಾ ? ಎಂದು ಪಶ್ನಿಸಿ ನಕ್ಕಿದ್ದರು ಕೂಡ. +ಇಷ್ಟಾದರೂ ಕುಲದ ವ್ಯಾಕುಲದಲ್ಲಿ ತೊಳಲಿ ಬಳಲುವ ಸಮಾಜಕ್ಕೆ ಅವನ ಹೃದಯದಾಶಯ ಹಿಡಿಸಲಿಲ್ಲ. +ಬುದ್ಧ,ಬಸವ, ಕನಕ,ಕಬೀರ ಮೊದಲಾದವರು ವಿಶ್ವಮಾನವರು, ಅಂಥವರನ್ನು ಕುಲದ ಸಂಕುಚಿತ ಸಂಕೋಲೆಯಲ್ಲಿ ಸ್ಥಗಿತರಾಗುವಂತೆ ಮಾಡಬಾರದು. +ಆದರೂ ಮೋಹಭರಿತ ಮಾನವ ಕುಲ ತನ್ನ ಕಕ್ಕುಲತೆಯನ್ನು ವ್ಯಕ್ತಪಡಿಸಿ, ಕನಕದಾಸರು"ಹುಟ್ಟಿನಿಂದ ಶೂದ್ರರಾಗಿ, ನಿಷ್ಠೆಯಿಂದ ಬ್ರಾಹ್ಮಣರಾಗಿ, ಇಷ್ಟದಿಂದ ಭಾಗವತರಾಗಿ,ಕಟ್ಟಕಡೆಗೆ ದೇವರನ್ನು ಕಂಡವರಾಗಿ ಪುಣ್ಯಕ್ಷೋಕರೆನಿಸಿದರು. +ಕನಕದಾಸರ ಬಾಳು ವಿಕಾಸಗೊಂಡಿರುವುದು ಮೂರು ಮಜಲುಗಳಲ್ಲಿ: +ಅವರ ಜನ್ಮಸ್ಥಳ ಬಾಡ, ಎಹಾರಸ್ಥಳ ವಿಜಯನಗರ ಮತ್ತು ವಾಸಸ್ಥಳ ಕಾಗಿನೆಲೆ. +ಅವರ ಕೃತಿಗಳನ್ನು ಅನುಲಕ್ಷಿಸಿಯೇ ಅದನ್ನು ಗುರುತಿಸಬೇಕಾಗುತ್ತದೆ. +ಅವರ ಕೃತಿಗಳ ಸಂಖ್ಯೆ ಆರು ಎಂದಿದ್ದಾರಷ್ಟೆ . +ಅವುಗಳಲ್ಲಿ ರಾಮಾಯಣ, ಮಹಾಭಾರತ ಮತ್ತು ಭಾಗವತಗಳಲ್ಲಿ ತಮ್ಮ ವಸ್ತುಗಳನ್ನು ಹುಡುಕಿಕೊಂಡ ರಾಮಧಾನ್ಯಚರಿತ್ರೆ, ನಳಚರಿತ್ರೆ ಮತ್ತು ಮೋಹನ ತರಂಗಿಣಿ ಕಾವ್ಯಗಳೂ, ನೃಸಿಂಹಸ್ತವ,ಹರಿಭಕ್ತಿಸಾರ ಎಂಬ ಭಕ್ತಿ ರಚನೆಗಳೂ, ಕೀರ್ತನೆಗಳೆಂಬ ಗೇಯಗೀತೆಗಳೂ,ಮೇಲಿನ ಮೂರು ಭೂಮಿಕೆಗಳಲ್ಲಿ ಅರಳಿವೆ ಎನಿಸುತ್ತದೆ. +ಕನಕದಾಸನ ಬಾಲ್ಯ ಮತ್ತು ಯೌವನದ ದಿನಗಳು ವಿಜಯನಗರ ಸಾಮ್ರಾಜ್ಯದ ಗಡಿನಾಡ ಕೋಟೆಯಾದ ಬಾಡದಲ್ಲಿ ಕಳೆದಿವೆ. +ಶಿಕ್ಷಣ ಮಾತ್ರ ನಾವು ಹಿಂದೆಯೇ ಹೇಳಿದಂತೆ ಆನೆಗೊಂದಿಯಲ್ಲಿ, ತಾತಾಚಾರ್ಯರ ಶ್ರೀಮಠದಲ್ಲಿ. +ಕೀಳು ಕುಲದವನಾದರೂ ದಣಾಯಕನ ಪುತ್ರನಾದ ಕನಕನಿಗೆ ಶಿಷ್ಯಸ್ಥಾನ ಗಿಟ್ಟಿಸಿಕೊಳ್ಳುವುದು ಕಷ್ಟವಾಗಿದ್ದಿರಲಿಕ್ಕಿಲ್ಲ. +ಅಂತೂ ಉತ್ತಮ ರೀತಿಯ ಆಧ್ಯಾತ್ಮ ಶಿಕ್ಷಣ ಅಲ್ಲಿ ಲಭಿಸಿದೆ. +ಸ್ವಭಾವತಃ ಅಧ್ಯಾತ್ಮ ಚಿಂತಕನಾದ ಆತ ಅಲ್ಲಿ ಕಲಿತದ್ದನ್ನು ಬಾಡದಲ್ಲಿ ಬೆಳಗಿದ್ದಾನೆ. +ನೃಸಿಂಹಸ್ತವ ಮತ್ತು ಮೋಹನ ತರಂಗಿಣಿ ಕಾವ್ಯಗಳನ್ನು ರಚಿಸುವ ಮೂಲಕ ಇವೆರಡೂ ಕೃತಿಗಳನ್ನು ಕವಿ ಕನಕದಾಸ ತಾನು ನಾಡೊಡೆಯನಾಗಿದ್ದ ಅವಧಿಯಲ್ಲಿ ರಚಿಸಿದ್ದಿರಬೇಕು. +ಈ ಸೂಕ್ಷ್ಮವನ್ನು ಅವನ ಕೃತಿಗಳಲ್ಲಿಯೇ ಹುಡುಕೋಣ. +ಮೊದಲನೆಯದಾಗಿ ಈ ಎರಡೂ ಕೃತಿಗಳಲ್ಲಿ ಅನೇಕ ಅಂಶ ಸಾಮ್ಯತೆ ಇದೆ. +ನೃಸಿಂಹಸ್ತವ ಎಂಬ ಒಂದು ಸಣ್ಣ ಸಾಂಗತ್ಯಗ್ರಂಥದಲ್ಲಿ (97 ಪದ್ಯ) ಮೊದಲು ಕಾಗಿನೆಲೆಯ ಮೇಲೆ ಮಂಗಳವೂ ಅನಂತರ ರಾಮಾನುಜ ಸ್ತುತಿಯೂ ಇರುವುದರಿಂದ ಇದೂ ಏತತ್ಮತವಾಗಿರಬಹುದೆಂದು ತೋರುತ್ತದೆ? +ಇವೆರಡೂ ಏತತ್ಕತವಷ್ಟೇಅಲ್ಲ, ಏಕಕರ್ತೃ ಕೃತಗಳು ಹೌದು, ಏಕಭಾವ ಪ್ರಕಾಶಗಳೂ ಹೌದು. +ತರಂಗಿಣಿಯಲ್ಲಿ ಮುಂದುವರಿದ ಕನಕದಾಸರು ಶ್ರೀ ವೈಷ್ಣವಧರ್ಮ ಸಂಸ್ಥಾಪನಾಚಾರ್ಯ ವಿಶಿಷ್ಟಾದ್ವೈತದ್ಕುಮಣಿ ಶ್ರೀ ರಾಮಾನುಜಾಚಾರ್ಯರ ಶಿಷ್ಠ ಪರಂಪರೆಯಲ್ಲಿ ಬಂದ ತಮ್ಮ ಶಿಕ್ಷಾಗುರು ಶ್ರೀ ತಾತಾಚಾರ್ಯರನ್ನು ಸ್ಮರಿಸಿ, “ಎಲೈ ವಿಶಾಲಾಕ್ಷಿಯೆ, ಹರಿಶರಣರ ಪಾದಧೂಳಿಯನ್ನು ನೆತ್ತಿಯಲ್ಲಿ ಆಂತು ಶ್ರೀರಾಮಾನುಜರ ಸಿದ್ಧಾಂತವನ್ನುನೆನೆದು, ಅತ್ಯಂತ ಪ್ರೀತಿಯಿಂದ ಕಥೆ ಹೇಳುತ್ತೇನೆ ಕೇಳು ಎಂದು ಶ್ರೀಕೃಷ್ಣನದ್ವಾರಕಾಪುರದ ಬ್ರಾಹ್ಮಣೋತ್ತಮರ ಮಂದಿರಗಳಲ್ಲಿ ನಿತ್ಯವೂ “ರಾಮಾನುಜ ವ್ಯಾಖ್ಯಾನ'ದ ಒಳ್ಳೊಳ್ಳೆಯ ತತ್ತ್ವ, ಸಾಮವೇದ ಘೋಷಣೆ ಕೇಳುತ್ತಿದ್ದುವೆಂದು ಹೇಳುತ್ತಾರೆ. + ಇಲ್ಲಿ ಕಾಲವಿಪರ್ಯದ ಪರಿವೆ ಇಲ್ಲ ಕನಕದಾಸರಿಗೆ. +ದ್ವಾಪರಯುಗದ ಕೃಷ್ಣನ ದ್ವಾರಕಾಪುರದಲ್ಲಿ, ಕಲಿಯುಗದ ಅದರಲ್ಲೂ ಕ್ರಿಸ್ತಶಕ ಹನ್ನೆರಡನೆಯ ಶತಮಾನದ ಶ್ರೀರಾಮಾನುಜರ ವ್ಯಾಖ್ಯಾನ ಪಠಣ ನಡೆಯುತ್ತಿತ್ತು ಎಂಬಲ್ಲಿ ಕವಿಯ ಗುರುಭಕ್ತಿ ವೇದ್ಯವಾಗುತ್ತದೆ ಅಥವಾ ಕವಿಯ ಸಮಕಾಲೀನಪ್ರಜ್ಞೆ ಹೇಗೆ ಜಾಗ್ರತವಾಗಿ ಕೃತಿಯಲ್ಲಿ ಅವತರಿಸಿದೆ ಎಂಬುದು ತಿಳಿಯುತ್ತದೆ. +ತರಂಗಿಣಿಯಲ್ಲಿ ಎಲ್ಲಿಯೂ ವ್ಯಾಸರಾಯರನ್ನಾಗಲಿ ಪುರಂದರದಾಸರನ್ನಾಗಲಿ ಕನಕದಾಸರು ಸ್ಮರಿಸದೆ ಇರುವುದರಿಂದ ತಮಗೆ ವ್ಯಾಸರಾಯರ ಸಾನ್ನಿಧ್ಯ, ಪುರಂದರರ ಸಖ್ಯ ದೊರೆಯುವ ಮೊದಲೇ ಇವುಗಳನ್ನು ರಚಿಸಿದ್ದಿರಬೇಕು ಎನ್ನಿಸುತ್ತದೆ. +ರಚಿಸಿದ್ದರೂ ತಮ್ಮ ಶಿಕ್ಷಣ ಮುಗಿದ ಆನಂತರದಲ್ಲಿ,ಬಾಡದಕೋಟೆಯ ಡಣಾಯಕ ಪದವಿಯನ್ನು ಸ್ವೀಕರಿಸಿದ ತಮ್ಮ ತಾರುಣ್ಯದ ದಿನಗಳಲ್ಲಿ ಪ್ರಕಾಶಗೊಳಿಸಿದ್ದಿರಬೇಕು. +ಕೃತಿಯಲ್ಲಿ ಬರುವ ಶೃಂಗಾರ, ಆಸ್ಥಾನವೈಭವ ಮತ್ತು ಪಾಂಡಿತ್ಯದ ಆರ್ಭಟ ಇವೇ ಮೊದಲಾದ ಆಂತರಿಕ ಪ್ರಮಾಣಗಳಿಂದ ನಿರ್ಧರಿಸಬಹುದು. +ಮೋಹನ ತರಂಗಿಣಿ ಒಂದು ಮಹಾಕಾವ್ಯ. +ಶೃಂಗಾರ ಮತ್ತು ಸೌಂದರ್ಯಗಳು ಅದರ ಮೂಲದ್ರವ್ಯ. +ಬಳುಕು ಛಂದಸ್ಸಾದ ಸಾಂಗತ್ಯದಲ್ಲಿ ರಚಿಸಿದ್ದರೂ ಈ ಮಹಾ ಕವಿ ವೈವಿಧ್ಯವನ್ನು ಮೆರೆದಿದ್ದಾನೆ. +ಅದು ಅವನ ಕವಿತಾಶಕ್ತಿಯ ಹೆಗ್ಗಳಿಕೆ. +ಅವನೇ ಹೇಳುವಂತೆ, ಗೆಣ್ಣುಗೊಳ್ಳದ ಬೆಳ್ಗಬ್ಬಿನ ರಸದಂತೆ ಬಣ್ಣಿತವಾದ ಕಥಾಮೃತ ಡಣಾಯಕ ಪದವಿಯನ್ನು ಸ್ವೀಕರಿಸಿದ ತರುಣದಲ್ಲಿ. +ತನ್ನ ತುಂಬು ತಾರುಣ್ಯದ ದಿನಗಳಲ್ಲಿ ಮೋಹದ ಮಡದಿಯ ಪ್ರಣಯ ಪ್ರಪಂಚದಲ್ಲಿ ಮೋಹಕ ಸಾಮ್ರಾಟನಾಗಿ ಮೆರೆದಿದ್ದಾನೆ. + ಅದರಿಂದಾಗಿ ತನ್ನ ಪ್ರೇಯಸಿಗೆ ಕಥೆ ಹೇಳಿದಂತೆ ಕಲ್ಪಿಸಿಕೊಂಡು, ಸರಸ ಸಂಭಾಷಣೆ, ರಸಿಕಸಂಬೋಧನೆ, ರಸಶೃಂಗಾರ ವರ್ಣನೆಗಳನ್ನು ತುಂಬಿ ಕಾವ್ಯ ರಚನೆ ಮಾಡಿದ್ದಾನೆ. +ಅವನ ರಸಿಕತೆಯಲ್ಲಿ ತಾರುಣ್ಯದ ಒಗರು, ಹುಳಿ ತುಂಬಿವೆ. +ಕಂಡು ಹಾಡಿದ, ಕೇಳಿ ಮೆಚ್ಚಿದ ಹೆಣ್ಣು ಅವನ ಮೋಹಮದಿರೆ “ಸುಜ್ಞಾನ ವಧೂಟಿ'. +ಅವಳು ಕಾಮಶಾಸ್ತ್ರದ “ಶ್ರೀ'ಕಾರವೆಂಬ ಅಕ್ಷರದ ಆಕಾರದಂತೆ ಮುದ್ದಾಗಿ ಮುರುಟಿಕೊಂಡಿರುವ ಕಿವಿಯುಳ್ಳವಳು,ಬಡನಡುವಿನ ಬೆಡಗಿ, ಭಾಮಿನಿಯರನ್ನೆ, ಕೊಡಮೊಲೆಯ ಹೆಣ್ಣು ವಿಶಾಲನೇತ್ರೆ ಏನೆಲ್ಲ ಆಗಿದ್ದಾಳೆ ಕನಕದಾಸನ ರಸಿಕತೆ ಇಲ್ಲಿ ಓತಪ್ರೋತವಾಗಿದೆ. +ರುಕ್ಮಿಣಿ ಕೃಷ್ಣನನ್ನು ಕುರಿತು ತನಗೊಂದು ಮಗುಬೇಕು ಎಂದಳಂತೆ. +ಇಂತಹ ಸಂಭೋಗಶ್ಶಂಗಾರದ ಪೂರ್ಣಾನುಭವಿ ಎಂದಿಗೂ ದಾಸದೀಕ್ಷೆಯನ್ನು ಪಡೆದ ಸಂತನಾಗಿದ್ದಿರಲಾರ ಆಗ. +ವಿಜಯ ನಗರದ ಅರಸು, ತನ್ನ ಸ್ವಾಮಿ, ಒಡೆಯ,ಸಾರ್ವಭೌಮ, ಶ್ರೀಕೃಷ್ಣ ದೇವರಾಯನನ್ನು ತನ್ನ ಕಾವ್ಯನಾಯಕ ಶ್ರೀ ಕೃಷ್ಣನೊಡನೆ ಸಮೀಕರಿಸಿ ಹೇಳುವುದು. + ಪಂಪ ರನ್ನರಂತೆ ಸಮೀಕರಣ ನೇರವಾಗಿಲ್ಲದಿದ್ದರೂ ಕೃಷ್ಣನ ವ್ಯಾಜದಲ್ಲಿ ಕೃಷ್ಣದೇವರಾಯನ ಬಹುವಿಧ ಬಣ್ಣನೆ ಬಿತ್ತರಗೊಂಡಿರುವುದು ಸತ್ಯ. +ಇಂಥೆಡೆಗಳಲ್ಲಿ ಶ್ರೀಹರಿಯ ಅನನ್ಯಸ್ಮರಣೆಗಿಂತ,ಮನುಕುಲತಿಲಕ ಶೀಕೃಷ್ಣದೇವರಾಯನ ವೈಭವೀಕರಣ ಎದ್ದುಕಾಣುತ್ತದೆ. +ದೈವಭಕ್ತಿಗೆ ಮಿಗಿಲಾದ ರಾಜಭಕ್ತಿ ಸ್ಫುಟಗೊಳ್ಳುತ್ತದೆ. +ಇದನ್ನೆಲ್ಲ ಗಮನಿಸಿದರೆ ಕಲೌಕಿಕಾ ಪೇಕ್ಷೆಯನ್ನೊಲ್ಲದ ಯಾವನೇ ಅಪರೋಕ್ಷ ಜ್ಞಾನಿ, ಆಧ್ಯಾತ್ಮಶುಕಿ ಇಂದಿದ್ದು ನಾಳೆ ಅಳಿಯುವ ಹುಲುಮಾನವನ ಹೊಗಳಿಕೆಗಾಗಿ ತನ್ನ ತಪ್ಪನ್ನು ವ್ಯಯಮಾಡಲಾರ. +ಅವನಿಗೆ ನರಸ್ತುತಿಗಿಂತ ಹರಸ್ತುತಿ ಮಿಗಿಲಾಗುತ್ತದೆ. +ಆತ ಆತ್ಮರತನಾಗುತ್ತಾನೆ, ಇಲ್ಲವೆ ಆತ್ಮಾನಂದ ಸಾಧಕ ಚೈತನ್ಯ ಚಿಂತಕನಾಗುತ್ತಾನೆ. +ಮಾನವ ಮಟ್ಟದಿಂದ ಮೇಲೆ ನಿಂತ ಆತ ಮಾನವನಿಗಿಂತಲೂ ಕೆಳಗಿಳಿದು ಅವನ ಬಣ್ಣನೆಗೆ ತೊಡಗಲಾರ. +ಲೋಕ ಕವಿಯಾಗಿದ್ದರೆ ಆ ಮಾತು ಬೇರೆ,ಆದರೆ ಕನಕದಾಸನಂಥ ಸಿದ್ಧ ಪುರುಷನನ್ನು, ಋಷಿಕವಿಯನ್ನು ರಾಜನಾದವನಿಂದ ಪೂರ್ಣಗೊಳಿಸಿಕೊಳ್ಳಬೇಕಾದ ಲೌಕಿಕಾಪೇಕ್ಷೆಗಳು ಯಾವುವೂ ಕಾಡುವುದಿಲ್ಲ; +ಕಾಡಬಾರದು ಕಾಡಿದರೆ ಅವನು ಕವಿಯಾಗಬಹುದು, ಖುಷಿಯಾಗಲಾರ. +ಆದ್ದರಿಂದ ಕನಕದಾಸನು ತನ್ನಾಳ್ದವನನ್ನು ಅಂತೆಲ್ಲ ಬಣ್ಣಿಸಬೇಕಾಗಿದ್ದರೆ ಅವನಿನ್ನೂ ಕೃಷ್ಣದೇವರಾಯನ ಅಧೀನರಾಜನಾಗಿ, ಆಸ್ಥಾನಿಕನಾಗಿ, ಗಡಿರಕ್ಷಣೆಯ ದಣಾಯಕನಾಗಿ, ಇಲ್ಲವೆ ನೆಚ್ಚಿನ ಸೇನಾನಿಯಾಗಿ ಬದುಕು ಮಾಡುತ್ತಿದ್ದಿರಬೇಕು. +ಆ ಜೋಳವಾಳಿಯ ಕಾರಣದಿಂದಾಗಿ ತನ್ನ ಕೃತಜ್ಞತೆಯ ಸಮೀಕರಣ ಸಾಧ್ಯವಾಗಿದೆ ಎನ್ನಿಸುತ್ತದೆ. +ಒಟ್ಟಿನಲ್ಲಿ, ಮೋಹನ ತರಂಗಿಣಿ ಕನಕದಾಸನ ಚೊಚ್ಚಲಕೃತಿಯಾಗಿದ್ದು, ತನ್ನ ಅಧೀನ ಆಡಳಿತಾಧಿಕಾರದ ಅವಧಿಯಲ್ಲಿ ತನ್ನ ಭೋಗ ಭೂಮಿಬಾಡದಲ್ಲಿ ರಚಿತವಾದದ್ದು ಎಂದು ಹೇಳಬಹುದು. +ಕನಕದಾಸರ ಬದುಕಿಗೊಂದು ತಿರುವು ಕೊಟ್ಟ ಸ್ಥಳ ವಿಜಯನಗರದ ವ್ಯಾಸರಾಯರ ಶ್ರೀಮಠ. +ಅವರು ದಾಸದೀಕ್ಷೆಯನ್ನು ಪಡೆದದ್ದು ಅಲ್ಲಿಯೇ. +ಅಲ್ಲಿ ಪುರಂದರದಾಸರ ಸಖ್ಯ ವ್ಯಾಸರಾಯರ ವಾತ್ಸಲ್ಯಗಳು ಲಭಿಸಿದುವು. +ಕುಲದ ಕಹಿ ಉಣಿಸು ದೊರೆತದ್ದು ಅಲ್ಲಿಯೇ ಆಶುಕವಿಯಾಗಿ ಅನೇಕ ಕೀರ್ತನೆಗಳನ್ನು ಕರ್ನಾಟಕ ಸಂಗೀತ ಪದ್ಧತಿಯಲ್ಲಿ ಹಾಡಿದರು. +ಉಪಲಬ್ಧವಿರುವ ನೂರಾರು ಕೀರ್ತನೆಗಳು ಜನ್ಮ ತಳೆದದ್ದೂ ಹಂಪೆಯಲ್ಲಿ,ರಾಯರ ಆಶ್ರಯದಲ್ಲಿ. +ತುಂಗಭದ್ರಾ ತರಂಗಿಣಿಯ ತೀರದಲ್ಲಿ, ನಿಸರ್ಗದ ಪರಿಶುದ್ಧ ಹಾಗೂ ಪ್ರಶಾಂತ ಪರಿಸರದಲ್ಲಿ. +ಒಟ್ಟಿನಲ್ಲಿ ಅವರ ಕೀರ್ತನೆಗಳ ಕಂಡರಣೆ ವ್ಯಾಸದೇಗುಲದಲ್ಲಿ. +ನಳಚರಿತ್ರೆ, ಹರಿಭಕ್ತಿಸಾರ ಮತ್ತು ರಾಮಧಾನ್ಯ ಚರಿತ್ರೆಗಳನ್ನು ದಾಸರು ಬಹುಶಃ ಎಲ್ಲಾ ತ್ಯಾಗ ಭೋಗಗಳನ್ನೂ ಮುಗಿಸಿ ಕಾವ್ಯಯೋಗದಲ್ಲಿ ಮಗ್ನರಾದಾಗ; +ಕಾಗಿನೆಲೆಯಲ್ಲಿ ಅಂತಿಮ ಕರೆಯ ಆಗಮನ ನಿರೀಕ್ಷೆಯಲ್ಲಿದ್ದಾಗ ರಚಿಸಿದ್ದಿರಬಹುದು. +ಈ ಕೃತಿಗಳಲ್ಲಿ ಶ್ರೀವೈಷ್ಣವ ಅಥವಾ ಮಾಧ್ವ ಪಂಥಗಳ ಪ್ರಸ್ತಾವವಿಲ್ಲ ; +ಆಗಿಹೋದ ಗುರುಗಳ ಸ್ಮರಣವಿಲ್ಲ ; +ಆಳಿ ಬಾಳಿದ ಪ್ರಭುವಿನ ಪ್ರಶಂಸೆ ಪ್ರಶಸ್ತಿಗಳಿಲ್ಲ. +ಇಲ್ಲಿರುವುದು ಪ್ರಾಂಜಲ ಮನಸ್ಸಿನ ಶುದ್ಧಸಾಹಿತ್ಯ . +ಇಲ್ಲಿನದು ಅಪ್ರತಿಹತ ಶಕ್ತಿಯೆನಿಸಿದ ದೈವದ ಪ್ರಭಾವ ಪ್ರಾಚುರ್ಯಗಳ ಬಿತ್ತರಣೆ. +ಈ ಮೂರೂ ಕೃತಿಗಳಲ್ಲಿ ಆದಿಕೇಶವನ ಅಂಕಿತ ಸಾಮಾನ್ಯವಿದೆ. +ಕನ್ನಡ ಸಾಹಿತ್ಯ ಪರಿಷತ್ತು ಪ್ರಕಟಿಸಿದ ಹರಿಭಕ್ತಿ ಸಾರಕ್ಕೆ ಸರಳಭಾವ ವಿವರಣೆ ಇತ್ತ ಎನ್‌.ರಂಗನಾಥಶರ್ಮರು ಇದಕ್ಕೆ “ಬೇಲೂರು ನಿವಾಸ ಚೆನ್ನಕೇಶವ'ಎಂದು ಅರ್ಥೈಸಿದ್ದಾರೆ. +ಆದರೆ "ಸುರಪುರ' ಎಂಬುದಕ್ಕೆ “ಬೇಲೂರು' ಎಂಬರ್ಥ ಹೇಗೆ ಬಂತೋ ತಿಳಿಯದು. +ಬಹುಶಃ ಇಲ್ಲಿನ “ಸುರಪುರ' “ವರಪುರ' ಎಂದೇ ಇದ್ದಿರಬೇಕು. +ಆದ್ದರಿಂದ “ವರಪುರನಿಲಯ ಚೆನ್ನಿಗರಾಯ” ಎಂದರೆ, ಕನಕನ ಕುಲದೇವತೆ ಬಾಡದ ಚೆನ್ನಕೇಶವನಲ್ಲದೆ ಬೇರಲ್ಲ. +ಇಲ್ಲಿ "ಪುರದಾದಿಕೇಶವ', “ವರಪುರದಾದಿಕೇಶವ' ಎಂಬ ಇಬ್ಬರು ಕೇಶವರಿದ್ದಾರೆ. +ಇವರಲ್ಲಿ ಮೊದಲನೆಯವನು ಕಾಗಿನೆಲೆಯ ಆದಿಕೇಶವ ಸ್ವಾಮಿ, ಎರಡನೆಯವನು ಬಾಡದ ಆದಿಕೇಶವ ಸ್ವಾಮಿ. +ಈ ಕೃತಿಯನ್ನು ನುಡಿಸಿದವನು ಕಾಗಿನೆಲೆಯ ಶ್ರೀ ಅಥವಾಸಿರಿಯಾದಿ ಕೇಶವ,. +ಇದನ್ನು ಶ್ರದ್ಧಾಭಕ್ತಿಯಿಂದ ಬರೆದು ಓದಿ. + ಕೇಳಿದವರನ್ನು ಅನಾಕುಲದಿಂದ ಕರುಣಿಸುವವನು ಬಾಡದಾದಿ ಕೇಶವ |! +ಬಾಡ ಅಥವಾ ವಾಡ ಎಂಬುದಕ್ಕೆ “ಪುರ' ಎಂದರ್ಥ. + ರಂಗನಾಥ ಶರ್ಮ ಹೇಳುವ "ಬೇಲೂರು' ಎಂದಲ್ಲ. +ಬೇಲೂರು ಚೆನ್ನಕೇಶವನಿಗೂ ಇಲ್ಲಿನ ಬಾಡದಾದಿ ಕೇಶವನಿಗೂ ಯಾವ ಸಂಬಂಧವೂ ಇಲ್ಲ. +ಇಲ್ಲಿ ಗಮನಿಸಬೇಕಾದ ಮತ್ತೊಂದು ಮಾತಿದೆ : +ಹರಿಭಕ್ತಿಸಾರ ಪೂರ್ಣಗೊಂಡ ಮೇಲೆ ಭಿನ್ನ ಛಂದಸ್ಸಿನ ಹೊಸದೊಂದು “ಮಂಗಳ ಪದ' ಇದೆ. +ಇದು ಬಹುಶಃ ಕನಕದಾಸರ ರಚನೆ ಆಗಿರಲಾರದು. +ಒಂದು ವೇಳೆ ಆಗಿದ್ದರೆ "ಹರಿಭಕ್ತಿಸಾರ'ಕ್ಕಾಗಿ, ಅದರ ರಚನಾ ಸಂದರ್ಭದಲ್ಲಿ ಬರೆದದ್ದಲ್ಲ. +ಬೇರೆಡೆ ಹಾಡಿಕೊಂಡದ್ದನ್ನು ಇಲ್ಲಿ ತಂದು ಸೇರಿಸಿದ್ದಾರೆ. +ಇಷ್ಟಾದರೂ ಇದು ಪ್ರಕ್ಷಿಪ್ತವೆಂಬ ಗುಮಾನಿ ಪ್ರಬಲವಾಗಿ ಉಳಿಯುತ್ತದೆ. +ಏಕೋ ಏನೊ ಕೆಲವರಿಗೆ “ವರಪುರ ನಿಲಯ ಚೆನ್ನಿಗರಾಯ', “ವರಪೌರಚೆನ್ನಿಗರಾಯ” ಎಂದ ಕೂಡಲೆ ಥಟ್ಟನೆ ಬೇಲೂರ ಚೆನ್ನಕೇಶವ ಅವರ ಕಣ್ಣೆದುರಲ್ಲಿ ಬಂದು ನಿಲ್ಲುತ್ತಾನೆ. +ಆದರೆ ಬೇಲೂರ ವಿಜಯನಾರಾಯಣನು ಚೆನ್ನಕೇಶವ ಎಂದು ಕರೆಸಿಕೊಂಡದ್ದು ಇತ್ತೀಚೆಗೆ. +ವಿಷ್ಣುವರ್ಧನನು ಚೋಳರಿಂದ ತಲಕಾಡನ್ನು ಗೆದ್ದುದರ ಅಗ್ಗಳಿಕೆಗಾಗಿ, “ತಲಕಾಡು ಗೊಂಡ' ಎಂಬ ಬಿರುದನ್ನಾಂತುದಲ್ಲದೆ,ತಾನು ಸಾಧಿಸಿದ ವಿಜಯದ ಸಂಕೇತವಾಗಿ ಬೇಲೂರು, ತಲಕಾಡು, ಮೇಲುಕೋಟೆ,ತೊಣ್ಣೂರು ಮತ್ತು ಗದಗ-ಈ ಖದೆಡೆಗಳಲ್ಲಿ ಹೇವಿಳಂಬಿ ಚೈತ್ರ ಶುದ್ಧ ಪಂಚಮೀ ಶನಿವಾರ (20 ಮಾಚ್‌ 111) ದಂದು ವಿಜಯನಾರಾಯಣರನ್ನು ಸಂಸ್ಥಾಪಿಸಿದನೆಂದು ಅವನೇ ಹಾಕಿಸಿದ ಶಾಸನವು ಸಾರುತ್ತಿದೆ. +ಆದ್ದರಿಂದ ಬೇಲೂರಲ್ಲಿರುವಾತ “ವಿಜಯ ನಾರಾಯಣ' “ಚೆನ್ನಕೇಶವ' ಅಲ್ಲ ; +ಕಾಗಿನೆಲೆ ಮತ್ತು ಬಾಡಗಳಲ್ಲಿರುವಾತ “ಆದಿಕೇಶವ ! . +ಇಂತಿಷ್ಟು ವಿಚಾರ ಮಂಥನದ ಅಂತ್ಯದಲ್ಲಿ ಕನಕದಾಸರ ಕೃತಿಗಳ(ಕಾವ್ಯವಾಗಲಿ, ಕೀರ್ತನೆ ಆಗಲಿ) ಅಂಕಿತ "ಆದಿಕೇಶವ' ಎಂದುಳಿಯುತ್ತದೆ. +ಮಿಕ್ಕಂತೆ ಬೇರೆ ಯಾವುದೇ ಅಂಕಿತವಿದ್ದರೂ ಅದು ಕನಕದಾಸರದ್ದಲ್ಲ ಎಂಬ ಸ್ಪಷ್ಟೀಕರಣ ನೀಡಬೇಕಾಗುತ್ತದೆ. +ಏಕೆಂದರೆ “ಮೈಸೂರು ವಿಶ್ವವಿದ್ಯಾನಿಲಯದ ಪ್ರಾಚೀನ ಪುಸ್ತಕಾಲಯದಲ್ಲಿ “ದಾಸರ ಪದಗಳು ಅಥವಾ ದಾಸರ ಹಾಡುಗಳು'ಎಂಬ ಕಟ್ಟುಗಳಿವೆ. +ಅದರಲ್ಲಿ ಎಲ್ಲ ದಾಸರ ಹಾಡುಗಳೂ ಇವೆ. +ಕನಕದಾಸರ ಹಾಡುಗಳು ಪ್ರತ್ಯೇಕ ಇದ್ದಂತೆ ಕಾಣುವುದಿಲ್ಲ. +ಕಾಲಕ್ರಮದಲ್ಲಿ ಕನಕದಾಸರ ಹಾಡುಗಳನ್ನು ಸಂಗ್ರಹಿಸಿ ಪ್ರಕಟಿಸಿದಂತೆ ತೋರುತ್ತದೆ. +ಇತರರ ಕೃತಿಗಳೂ ಇವರ ಹಾಡುಗಳೊಂದಿಗೆ ಬೆರೆತಿರುವುದೂ ಉಂಟು. +ಉದಾಹರಣೆಗೆ ಮುಪ್ಪಿನಷಡಕ್ಷರಿಯ “ತಿರುಕೋರ್ವನೂರಮುಂದೆ' ಎಂಬುದು ಕನಕದಾಸರ ಹಾಡುಗಳಲ್ಲಿ ಸೇರಿಹೋಗಿದೆ. +ಕನಕದಾಸರ ವಾಕ್ಚಿತ್ರದಲ್ಲಿ ಕೂಡ ಬಳಕೆಯಾಗಿದೆ. +ಹಾಗೆಯೇ ಕನಕದಾಸರ ಕೃತಿಯೊಂದು ಪುರಂದರದಾಸರ ಕೃತಿಗಳಲ್ಲಿ (ದೌಪದಿ ವಸ್ತ್ರಾಪಹರಣ)ಸೇರಿಹೋದುದೂ ಉಂಟು. +ಕನಕದಾಸರ ಕೃತಿಗಳ ಬಗ್ಗೆ ಇನ್ನೂ ಹೆಚ್ಚಿನ ಸಂಶೋಧನೆ ನಡೆಯಬೇಕಾಗಿದೆ ಎನ್ನಿಸುತ್ತದೆ. +ಅದಕ್ಕೆ ಮೊದಲು ಸಮಗ್ರ ಸಂಕಲನ, ಶುದ್ಧ ಸಂಪಾದನ, ಪ್ರಬುದ್ಧ ಪರಿಷ್ಕರಣಗಳ ಅಗತ್ಯ ಇದೆ. +ಕಾಗದದ ಮೇಲಿರುವ- ಓಲೆ ಗರಿಗಳ ಮೇಲಲ್ಲ-ಕೀರ್ತನೆ ತೊಳಸಂಬಟ್ಟಿಯನ್ನು ತೊಡೆದುಹಾಕಿ, ಕೂಲಂಕಷವಾಗಿ ಪರಿಶೀಲಿಸಿ ಶುದ್ಧ ಪಾಠಾಂತರಗಳೊಡನೆ ಶುದ್ಧಪ್ರತಿಯನ್ನು “ಹೊರತರುವ ಅಗತ್ಯ ಇದೆ ಎಂಬುದಕ್ಕೆ ಯಾವ ವಿರೋಧವೂ ಇರಲಾರದು. +ಕನಕದಾಸರು ತಮ್ಮ ಕಡೆಯ ದಿನಗಳನ್ನು ಕಾಗಿನೆಲೆಯಲ್ಲಿ ಕಳೆದಿರಬಹುದು. +ಮೇಲಿನ ಕೃತಿತ್ರಯಗಳು ಆ ವೇಳೆಯಲ್ಲಿ ರಚಿತವಾದುವೆಂದು ಗುರುತಿಸಿದ್ದಾಯಿತು. +ಆದರೆ ಅವರ ಬದುಕಿನಲ್ಲಾದ ಬದಲಾವಣೆಗೆ ಅವರ ಮನಃಪರಿವರ್ತನೆಗೆ,ವೀರ ವೈರಾಗ್ಯಕ್ಕೆ ಒದಗಿಬಂದ ಸಂದರ್ಭ ಸ್ಪಷ್ಟವಾಗಿ ತಿಳಿಯುತ್ತಿಲ್ಲ. +ಕಲಿ ಇದ್ದವನುಕವಿ ಆಗಿರುವುದರಲ್ಲಿ ಆಶ್ಚರ್ಯವೇನೂ ಇಲ್ಲ. +ಅದು ಸಹಜ. +ಅದಕ್ಕೆ ಸಂಪಾದಿಗಳು ಪ್ರಮಾಣ ಭೂತರಾಗಿದ್ದಾರೆ. +ಆದರೆ ಸಾಮಂತನು ಸಂತನಾದದ್ದು ಸುದ್ದಿ . +ಬಹುಶಃ “ನೀನು ನನ್ನ ದಾಸನಾಗು. . . . . . ದಾಸನಾಗು' ಎಂಬ ಯಾವುದೋ ಅವ್ಯಕ್ತದ ಕರೆ ಅಥವಾ “ಚಿಕ್ಕಂದು ಮೊದಲೆ ನಾನು ರಂಗಯ್ಯ ನೀನೇ ದಿಕ್ಕೆಂದು ನಂಬಿದೆನೊ ರಂಗಯ್ಯ? +ಎಂಬ ಅಂತರಂಗದ ಅಚಲ ನಂಬಿಕೆ ಇದ್ದಿರಬೇಕು. +ಇವೆರಡಕ್ಕೂಮಿಗಿಲಾದ ಕಾರಣ ತನಗಾದ ರಣರಂಗದ ಸೋಲು ಎನ್ನಿಸುತ್ತದೆ. +ಕನಕದಾಸರೇ ಬರೆದ ಕೀರ್ತನೆಯೊಂದು ಇದಕ್ಕೆ ಸಾಕಷ್ಟು ಮಾಹಿತಿ ಒದಗಿಸುತ್ತದೆ. +ಆರಂಭದ ಪಲ್ಲವಿ, ಅನುಪಲ್ಲವಿ ಹಾಗೂ ಮೊದಲ ಚರಣಗಳಲ್ಲಿ ಶ್ರೀ ಹರಿಯ ವಾತ್ಸಲ್ಯ ಅಭಿವ್ಯಕ್ತವಾಗಿದೆ ;ಶ್ರೀಹರಿಯೆ, ಮೂಲ ಸದ್ಗುರು ನೀನಾಗಿ ನನಗೆ ಮಂತ್ರೋಪದೇಶ ಮಾಡಿದೆ. +ನಿನ್ನ ಸೇವಾ ಸಾನ್ನಿಧ್ಯ ದೊರೆತದ್ದೂ ನಿನ್ನ ಕಾರುಣ್ಯದಿಂದ. +ಮೊದಮೊದಲು ನಿನ್ನ ಉಪದೇಶವನ್ನು ಪ್ರತಿಭಟಿಸಿ ಮೆರೆದೆ. +ಅದನ್ನೆಲ್ಲ ನೀನು ಕ್ಷಮಿಸಿಬಿಟ್ಟೆ ಎಂದು ಅವನ ಗುಣಗಾನಗೈದು, "ಸುದತಿ ಮಕ್ಕಳ ಮೋಹ ಮದವೇರಿನಾನಿರಲು ಪದುಮಾಕ್ಷ ನೀ ಬಂದು ಪದೇ ಪದೇ ಸಾರಿದೆಯೊ' ಎಂದು ಅವನ ಔದಾರ್ಯವನ್ನು ಹೊಗಳುತ್ತದೆ. +ಇಲ್ಲಿ ಕನಕದಾಸ ಹುಟ್ಟು ಸಂನ್ಯಾಸಿಯೊ ಸಂತನೊ ಆಗಿರಲಿಲ್ಲ, ಎಲ್ಲರಂತೆ ಓರ್ವ ಸಂಸಾರಿಯಾಗಿದ್ದ. +ತನ್ನ ಹೆಂಡತಿ ಮಕ್ಕಳಲ್ಲಿ ವಿಶೇಷ ಪ್ರೇಮ ಪ್ರೀತಿ ಉಳ್ಳವನೂ ಆಗಿದ್ದ ಎಂಬುದು ವೇದ್ಯವಾಗುತ್ತದೆ. +ಆದರೆ ಅವನ ಮಡದಿ ಮಕ್ಕಳ ಬಗೆಗೆ ಹೆಚ್ಚು ಮಾಹಿತಿ ಇಲ್ಲ. +ಕನಕದಾಸನು ತನ್ನ ಯೌವನದ ದಿನಗಳಲ್ಲಿ ಮೋಹಕ್ಕೆ ವಶನಾಗಿ, ಮದವೇರಿ ಮೆರೆಯುತ್ತಿದ್ದಾಗ ಪದೇ ಪದೇ ಹತ್ತಿರ ಬಂದು “ಇದು ಸಲ್ಲ, ಇದು ಸಲ್ಲ' ಎಂದು ಉಸುರುತ್ತಿದ್ದುದುಂಟಂತೆ . + ಆದರೂ ಅದು ಅವನ ಕಾಮಭರಿತ ಕಿವಿಗಳನ್ನು ಪ್ರವೇಶಿಸಲೇ ಇಲ್ಲ. +ಬಯಸಿದ ಕಾಮವನ್ನು ತಣಿಸುವುದರಲ್ಲೆ ದಿನಗಳು ಕಳೆದದ್ದಾಯಿತು. +ಉಂಡಷ್ಟೂ ಹಸಿವು, ಕುಡಿದಷ್ಟೂ ದಾಹ ಎಂಬಂತಹ ಕಾಮ ಕಡೆಯವರೆಗೂ ತೃಪ್ತಿಗೊಳ್ಳಲಿಲ್ಲ. +ಆಗ ಭಕ್ತೋದ್ಧಾರಕ ಮತ್ತೆ ಮಾರ್ಗ ಹುಡುಕಿದ. +ಅಂದರೆ ವಿಜಯನಗರದ ಸಾಮ್ರಾಟನ ಪರವಾಗಿ, ಗಡಿ ಪ್ರದೇಶದಲ್ಲಿದ್ದ ತನ್ನ ಆಡಳಿತ ವ್ಯಾಪ್ತಿಯ ವಲಯಕ್ಕೆ ದಾಳಿ ಬಂದ ಶತ್ರುಗಳನ್ನು ಪ್ರತಿಭಟಿಸಿ ಕನಕದಾಸನು ಯುದ್ಧಮಾಡುವಂತೆ ಮಾಡಿ, ಆ ಘೋರ ಸಂಗ್ರಾಮದಲ್ಲಿ ಸೋಲು ಸಂಭವಿಸುವಂತೆಸಗಿ, ಕಡೆಗೆ ರಣಾಂಗಣದಲ್ಲಿ ತನ್ನ ಬೆನ್ನು ಹತ್ತಿ ಬಂದ ವೀರರಾಹುತರ ಬಲವಾದ ಹೊಡೆತಕ್ಕೆ ಪ್ರಜ್ಞಾಶೂನ್ಯನಾಗಿ ಬೀಳುವಂತೆ ಮಾಡಿದನಂತೆ . +ಆ ಮಹತ್ವದ ಘಟನೆ ಅವನ ಬದುಕಿಗೊಂದು ಹೊಸ ತಿರುವು ಕೊಟ್ಟಿತು. +ಅವನ ವೀರತ್ವ ವೈರಾಗ್ಯಕ್ಕೆ ಒಲಿಯಿತು , ಮಣಿಯಿತು. + ಆ ನುಡಿಗೆ ಮಣಿದು ಮಹಾತ್ಮನಾದ. +“ನಾನು ಇಲ್ಲ,ನೀನೆ ಎಲ್ಲ' ಎಂಬುದನ್ನು ಸಾರಿ ಸಂತನಾದ. +ರಾಜನೆಂಬವನೊಬ್ಬ ಹಗಲು ದರೋಡೆಕೋರ. +ಕಳ್ಳನ ಮನೆಯನ್ನೆ ಕೊಳ್ಳೆ ಹೊಡೆಯುವ ಬಹುದೊಡ್ಡ ಕಳ್ಳ. +ಅವನೆಂತು ಪ್ರಜಾಪಾಲಕನೊ ಅಂತೆಯೇ ಪ್ರಜಾಪೀಡಕನೂ ಆಗಿದ್ದಾನೆ. +ಸಿಕ್ಕಿದ ಶತ್ರುವರ್ಗವನ್ನು ಸುಲಿದು, ಸೂರೆಗೈವ ಲೂಟಕಾರ, ಕಗ್ಗೊಲೆಯ ಕಟುಕ. +ಇಂತಹ ಕಲುಷಿತವಾದ ದೊರೆತನದಿಂದ ದೂರಮಾಡಿ, ಶ್ರೀಹರಿಯ ಪದಭಕ್ತನೆನಿಸುವ ಭಾಗ್ಯವನ್ನು ಕರುಣಿಸಿದನಂತೆ ಆ ಕಾಗಿನೆಲೆಯಾದಿ ಕೇಶವ. + ಕಪ್ಪೆಚಿಪ್ಪಿನಲ್ಲಿ ಬಿದ್ದ ಸ್ವಾತಿಮಳೆಯ ಒಂದು ಹನಿ ತೋರ ಮುತ್ತಾದಂತೆ ಪರಮಾತ್ಮನ ಪದಶುಕ್ತಿ ಸೇರಿದ ಜೀವಾತ್ಮ ಮೌಲಿಕದ ಮುತ್ತಾಗುತ್ತದೆ; + ಬೆಳಕು ಬೆಳಗಲಿ ಬೆರೆದು ವಿಶ್ವ ಜ್ಯೋತಿಯಾಗುತ್ತದೆ. +ಸಾಗರವನ್ನು ಸೇರಿದ ಹನಿಸಾಗರದ ಸಾಮರ್ಥ್ಯ ಪಡೆದಂತೆ ಸಾಗರವೆ ತಾನಾದಂತೆ ಅಮರತ್ವವನ್ನು ಪಡೆಯುತ್ತದೆ. +ಆಗ ಅದರಲ್ಲಿ ರವಿಯ ತಾಪವೂ ಇಲ್ಲ. +ಶಶಿಯ ಶೈತ್ಯವೂ ಇಲ್ಲ. +ಯಾವುದೇ ಬಗೆಯ ತಿರೋಹಿ ತತ್ವವಿಲ್ಲದ ತೀರ್ಥವಾಗುತ್ತದೆ. + ಕನಕದಾಸ ಅಂತಾದವನು, ಕನ್ನಡಾಂಬೆಯ ಕೀರ್ತಿಗೆ ಕುಡಿಯಾಗಿ ಮೂಡಿದವನು. +ಕನಕದಾಸ ಋಷಿಕವಿ, ಸಂತಕವಿ, ಮಹಾಕವಿ ; +ಖ್ಯಾತ ಕೀರ್ತನಕಾರನೂ ಅಹುದು. +ಗಂಗೆಯಂತೆ ನಿರ್ಮಲ, ಅಗ್ನಿಯಂತೆ ಪರಿಶುದ್ಧ ಆದ ಆತನ ಪ್ರಾಂಜಲ ಮನಸ್ಸು ಆನಂದದಿಂದ ಹಾಡಿಕೊಂಡಿತು . +ಕನಕದಾಸರ ಮೂಲ ಸ್ಥಳ? +ಕನಕದಾಸರು ಕನ್ನಡನಾಡಿನ ಒಬ್ಬ ಪ್ರತಿಭಾನ್ವಿತ ಕವಿ,ಕಲಿ,ಸಂತ ಎಂದು ಈವರೆಗೆ ಅವರ ಬಗ್ಗೆ ಬರೆದ ವಿದ್ವಾಂಸರೆಲ್ಲರೂ ಅಭಿಪ್ರಾಯಪಟ್ಟಿದ್ದಾರೆ. +ಈ ಬಗೆಗೆ ಕವಿಚರಿತೆಕಾರರು “ಕನಕದಾಸ ಸು.೧೫೫೦:ಈತನು ಮೋಹನತರಂಗಿಣಿ, ರಾಮಧಾನ್ಯ ಚರಿತ್ರೆ,ನಳಚರಿತ್ರೆ,ಹರಿಭಕ್ತಿಸಾರ ಈ ಗ್ರಂಥಗಳನ್ನು ಬರೆದಿದ್ದಾನೆ. +ಅಲ್ಲದೆ ವಿಷ್ಣುಸ್ತುತಿ ರೂಪವಾದ ಹಲವು ಹಾಡುಗಳನ್ನು ಬರೆದಿದ್ದಾನೆ. +ಇವನು ಪ್ರಾಯಿಕವಾಗಿ ಕಾಗಿನೆಲೆಯ ಆದಿಕೇಶವ ದೇವರ ಅಂಕಿತದಲ್ಲಿ ತನ್ನ ಗ್ರಂಥಗಳನ್ನು ಬರೆದಿರುವುದರಿಂದ ಧಾರವಾಡ ಜಿಲ್ಲೆಯ ಕಾಗಿನೆಲೆ ಈತನ ಸ್ಥಳವೆಂದು ತೋರುತ್ತದೆ. +ಇವನು ಬೇಡರವನೆಂದೂ ಧಾರವಾಡ ಜಿಲ್ಲೆಯ ಕೋಡ ತಾಲ್ಲೂಕು ಬಾಡಗ್ರಾಮದಲ್ಲಿ ಹುಟ್ಟಿ ಕಾಗಿನೆಲೆಯ ಆದಿಕೇಶವ ದೇವಸ್ಥಾನದಲ್ಲಿ ಸತ್ತನೆಂದು ಹೇಳುತ್ತಾರೆ. +ಈತನು ಅಂಡೇ ಕುರುಬರ ಜಾತಿಯವನೆಂದೂ ವ್ಯಾಸರಾಯನ ಸೇವೆಯನ್ನು ಮಾಡಿ ಜ್ಞಾನಿಯಾದನೆಂದೂ ಕೆಲವರು ಹೇಳುತ್ತಾರೆ” ಎಂದು ಅಭಿಪ್ರಾಯಪಟ್ಟಿದ್ದಾರೆ. +ಅನಂತರ ಕನಕದಾಸರ ಬಗ್ಗೆ ಬರೆದ ವಿದ್ವಾಂಸರೆಲ್ಲರೂ ಅವರು ಹುಟ್ಟಿದ ಸ್ಥಳದ ಬಗೆಗೆ ಕವಿಚರಿತೆಕಾರರ ಅಭಿಪ್ರಾಯವನ್ನೆ ಒಪ್ಪಿ ಪ್ರತಿಪಾದಿಸಿಕೊಂಡು ಬಂದಿದ್ದಾರೆ. +ಕನಕದಾಸರ ಜಾತಿಯ ಬಗ್ಗೆ ಸ್ವಲ್ಪಮಟ್ಟಿನ ಚರ್ಚೆ ನಡೆದಿದ್ದರೂ ಅವರು ಕುರುಬರು ಎಂದು ಬಹುತೇಕ ವಿದ್ವಾಂಸರು ಒಪ್ಪಿದ್ದಾರೆ. +ಆದರೆ ಕನಕದಾಸರ ಸಮಗ್ರ ಸಾಹಿತ್ಯವನ್ನು ಪರಿಶೀಲಿಸಿದ ಯಾರಿಗಾದರೂ ಇವರು ಧಾರವಾಡ ಜಿಲ್ಲೆಂಯ ಬಾಡದಲ್ಲಾಗಲಿ ಕಾಗಿನೆಲೆಯಲ್ಲಾಗಲಿ ಹುಟ್ಟಿ ಬೆಳೆದವರಲ್ಲವೆಂದು ಖಚಿತವಾಗಿಯೇ ತಿಳಿಯುತ್ತದೆ. +ತಮ್ಮ ಕಾವ್ಯಗಳಲ್ಲಿಯಾಗಲಿ,ಕೀರ್ತನೆಗಳಲ್ಲಿಯಾಗಲಿ ಕನಕದಾಸರು ತಮ್ಮ ಸ್ವವಿಷಯಗಳನ್ನು ಹೇಳಿಕೊಂಡಿಲ್ಲ. +ಪೂರ್ವಕ ವಿಸ್ಮರಣೆಯನ್ನೂ ಮಾಡಿಲ್ಲ. +ಆದುದರಿಂದ “ಕನಕದಾಸರ ವಿಷಯವಾಗಿ ತಾಮ್ರಪಟಗಳಲ್ಲಿ,ಶಿಲಾಶಾಸನಗಳಲ್ಲಿ ಏನೂ ದೊರೆಯುವುದಿಲ್ಲ. +ಆ ಕಾಲದ ಗ್ರಂಥಗಳಲ್ಲಿ ಅವರ ಹೆಸರಿನ ಸದ್ದು ಕೇಳಿ ಬರುವುದಿಲ್ಲ.” +ಈ ಹಿನ್ನೆಲೆಯಲ್ಲಿ ಕನಕದಾಸರ ಕಾವ್ಯಗಳು ಮತ್ತು ಕೀರ್ತನೆಗಳಲ್ಲಿ ದೊರೆಯುವಂಥ ಸ್ಥಳಗಳು ಮತ್ತು ಅವುಗಳ ವರ್ಣನೆ,ಕನಕದಾಸರ ಸಾಹಿತ್ಯದ ಭಾಷೆ. +ಅವರು ತಮ್ಮ ಸಾಹಿತ್ಯದಲ್ಲಿ ಪ್ರಯೋಗಿಸಿರುವ ಪದಪುಂಜಾದಿಗಳೂ,ಆಗಿನ ಕಾಲದ ಜನಜೀವನ ಮುಂತಾದುವುಗಳ ಆಧಾರದಿಂದ ಕನಕದಾಸರು ಹುಟ್ಟಿ ಬೆಳೆದ ಸ್ಥಳ ಯಾವುದು? +ಯಾವ ಕಾರಣದಿಂದ ಅವರು ತಮ್ಮ ಹುಟ್ಟೂರಿನಿಂದ ಬೇರೆ ಬೇರೆ ಕಡೆ ಅಲೆದಾಡಿದರೆಂಬುದನ್ನು ಇಲ್ಲಿ ವಿವೇಚಿಸಲಾಗಿದೆ. +ಮನುಷ್ಯನ ಜೀವನದ ಮೇಲೆ ಅಗಾಧವಾದ ಪ್ರಭಾವ ಮತ್ತು ಪರಿಣಾಮ ಬೀರುವುದು ಅವನ ಬಾಲ್ಯದ ದಿನಗಳು. +ಆ ದಿನಗಳಲ್ಲಿ ಅವನು ಕಂಡುಂಡ ಅವನ ಪರಿಸರ,ಜನಜೀವನ,ಗಿಡ ಮರ,ಹಳ್ಳಕೊಳ್ಳ,ಬೆಟ್ಟಗುಡ್ಡ,ಪ್ರಾಣಿಪಕ್ಷಿ,ಊಟತಿಂಡಿ, ಒಡವೆ ವಸ್ತ್ರಗಳು ಕೊನೆಯವರೆಗೆ ಅವನ ಮನಃಪಟಲದಲ್ಲಿ ಅಚ್ಚೊತ್ತಿ ಉಳಿಯುತ್ತವೆ. +ಅಂತಹವನು ಸಾಹಿತಿಯೋ,ಕಲಾವಿದನೋ ಆದರೆ ಈ ಅನುಭವಗಳು ಅವನ ಕೃತಿಗಳಲ್ಲಿ ಅನಿವಾರ್ಯವಾಗಿ ಮೂಡಿಬರುತ್ತವೆ. +ಬಾಲ್ಯದ ಈ ಪ್ರಭಾವಗಳಿಂದ ಯಾವ ವ್ಯಕ್ತಿಯೂ ಅಷ್ಟು ಸುಲಭವಾಗಿ ಮುಕ್ತನಾಗುವುದು ಅಸಂಭವವೆಂದೇ ಮಾನವ ಶಾಸ್ತ್ರಜರ ಅಭಿಪ್ರಾಯ. +ಜಗತ್ತಿನ ಯಾವನೆ ಕವಿ,ಸಂತ,ಕಲಾವಿದನನ್ನು ತೆಗೆದುಕೊಂಡರೂ ಅಂತಹವರನ್ನು ರಾಜ ಮಹಾರಾಜರು,ಚಕ್ರವರ್ತಿಗಳು ಅತುಲೈಶ್ವರ್ಯದಲ್ಲಿ ಮುಳುಗಿಸಿದ್ದರೂ ಅವರು ತಮ್ಮ ತಾಯಿ ನೆಲವನ್ನು ಹಂಬಲಿಸಿರುವುದನ್ನು ಕಾಣಬಹುದು. +ಕನ್ನಡ ಸಾಹಿತ್ಯವನ್ನೆ ತೆಗೆದುಕೊಂಡರೂ ಆದಿಕವಿ ಪಂಪನಿಂದ ಕುವೆಂಪುವರೆಗೆ ಈ ತಾಯ್ನೆಲದ ಪ್ರೇಮವನ್ನು ಕಾಣಬಹುದು. +ಇದರಿಂದ ಬಾಲ್ಯ ಮತ್ತು ಆ ಪರಿಸರ ವ್ಯಕ್ತಿಯ ಮೇಲೆ ಅಮಿತ ಪ್ರಭಾವ ಬೀರುತ್ತದೆಂಬುದು ಸ್ಪಷ್ಟವಾಗುತ್ತದೆ. +ಕನಕದಾಸರ ಸಮಗ್ರ ಸಾಹಿತ್ಯವನ್ನು ಈ ಹಿನ್ನೆಲೆಯಲ್ಲಿ ಪರಿಶೀಲಿಸಿದಾಗ ಅವರ ಜೀವನದ ಅನೇಕ ಸಂಗತಿಗಳು ಬೆಳಕಿಗೆ ಬರುತ್ತವೆ. +ಮೊದಲನೆಯದಾಗಿ ಕನಕದಾಸರ ಹುಟ್ಟು ಮತ್ತು ಬಾಲ್ಯ ಜೀವನ ಕುರಿತು ಪರಿಶೀಲಿಸಬಹುದು. +ಉದಾಹರಣೆಗೆ ಈ ಪದ್ಯಗಳನ್ನು ನೋಡಬಹುದು. +ಮೇಲಿನ ಪದ್ಯಗಳು ಕನಕದಾಸರ ಬಾಲ್ಯ ಜೀವನ ಅಷ್ಟೇನೂ ಒಳ್ಳೆಯದಾಗಿರಲಿಲ್ಲವೆಂಬುದನ್ನು ತಿಳಿಸುತ್ತವೆ. +ಚಿಕ್ಕಂದಿನಲ್ಲಿಯೇ ಇವರು ತಂದೆ-ತಾಯಿಗಳನ್ನು ಕಳೆದುಕೊಂಡುದರಿಂದ ತಮ್ಮ ಯೌವನದ ಕೆಲವು ದಿನಗಳ ಮಟ್ಟಿಗಾದರೂ ದಿಕ್ಕೆಟ್ಟ ಜೀವನ ನಡೆಸಿರುವ ಸಾಧ್ಯತೆಗಳಿವೆ. +ಇದರಿಂದಾಗಿ ಸಮಾಜದಲ್ಲಿ ನಿಂದನೆಗೆ ಗುರಿಯಾಗಿ ಜೀವನ ನಿರ್ವಹಣೆ ಕಷ್ಟವಾಗಿರಬೇಕು. +ಈ ಕಾರಣದಿಂದಾಗಿ ಅವರು ಸೇನೆಯನ್ನು ಸೇರಿರುವ ಸಾಧ್ಯತೆ ಕಂಡುಬರುತ್ತದೆ. +ಮಾಳಿಗೆಯ ಮನೆ,ತುರುವು,ಧನ,ಧಾನ್ಯ,ಭೂಮಿ ತನ್ನಲ್ಲಿದ್ದೂ ಅದನ್ನು ಅನುಭವಿಸಲಾಗಲಿಲ್ಲ ಎಂಬಂತಹ ಅನೇಕ ಮಾತುಗಳು ಕನಕದಾಸರ ಸಾಹಿತ್ಯದಲ್ಲಿ ಬರುತ್ತವೆ. +ಇದರಿಂದ ಕನಕದಾಸರು ತಮ್ಮ ಬಾಲ್ಯದ ದಿನಗಳಲ್ಲಿ ಪ್ರಾಯಃ ತಂದೆತಾಯಿಯರ ಮಾತು ಕೇಳದೆ ಅಡ್ಡದಾರಿ ಹಿಡಿದಿರಬೇಕು. +ಆ ನೋವಿನಿಂದಾಗಿ ಅವರ ತಂದೆ ತಾಯಿಯರು ಕೊರಗಿ ತೀರಿಕೊಂಡಿರಬೇಕು. +ಈ ಕಾರಣದಿಂದಾಗಿ ಅವರು ಮತ್ತೆ ತಮ್ಮ ಹುಟ್ಟೂರಿಗೆ ಹೋಗದೆ ಜೀವನ ನಿರ್ವಹಣೆಗಾಗಿ ಸೇನೆಯನ್ನು ಸೇರಿರುವ ಸಾಧ್ಯತೆಗಳು ಕಂಡು ಬರುತ್ತವೆ. +ಕನಕದಾಸರು ತಮ್ಮ ಬಾಲ್ಯದ ದಿನಗಳಲ್ಲಿ ದಾರಿ ತಪ್ಪಿದುದರಿಂದ ಓದು ಬರಹ ಕಲಿತಂತೆ ಕಾಣುವುದಿಲ್ಲ. +ಇದರಿಂದ ಕನಕದಾಸರು ಒಬ್ಬ ಜನಪದ ಕವಿಯಾಗಿದ್ದಿರಬಹುದೆಂದು ಊಹಿಸಲವಕಾಶವಿದೆ. +ಕನಕದಾಸರು ಇತರ ದಾಸರಿಗಿಂತ ಹೆಚ್ಚಾಗಿ ಜಾನಪದ ಧಾಟಿಯ ಮಟ್ಟುಗಳನ್ನು ಬಳಸಿಕೊಂಡು ಹೆಚ್ಚು ಶಕ್ತಿಯುತವಾಗಿ ಆಡುನುಡಿಗಳನ್ನು ಬಳಸಿದ್ದಾರೆ. + ಇಂದಿಗೂ ನಮ್ಮಲ್ಲಿ ಅನೇಕ ಜನಪದ ಕವಿಗಳು,ಗಾಯಕರು ಓದು ಬರಹ ಬರದಿದ್ದರೂ ಸಹ ಸಾವಿರಾರು ಪುಟಗಳಷ್ಟು ಸಾಹಿತ್ಯವನ್ನು ಕಂಠಸ್ಥವಾಗಿಯೇ ಹಾಡುವುದನ್ನು ಕಾಣಬಹುದು. +ಈ ದಿಸೆಯಲ್ಲಿ ಮಂಟೇಸ್ವಾಮಿ ಕಾವ್ಯ ಜುಂಜಪ್ಪನ ಕಾವ್ಯ,ಮಲೆಮಾದೇಶ್ವರನ ಕಾವ್ಯ,ಕೆಂಪೇಗೌಡನ ಚರಿತ್ರೆ ಮುಂತಾದುವುಗಳನ್ನು ನೋಡಬಹುದು. +ಕನಕದಾಸರ ಮೇಲಿನ ಪದ್ಯದಲ್ಲಿ ತಾವು ಅಕ್ಷರ ಕಲಿಯದಿದ್ದ ಬಗ್ಗೆ ಅತ್ಯಂತ ನೋವಿನಿಂದ ಹೇಳಿಕೊಂಡಿದ್ದಾರೆ ಅನ್ನಿಸುತ್ತದೆ. +ಅನೇಕ ಸಂದರ್ಭದಲ್ಲಿ ಕವಿಗಳು ತಾವೇನೂ ಅಂತಹ ಪಂಡಿತರಲ್ಲವೆಂದೂ ವ್ಯಾಕರಣ ಛಂದಸ್ಸು ತಿಳಿಯದವರೆಂದೂ ತಮ್ಮ ಕಾವ್ಯದಲ್ಲಿರಬಹುದಾದ ತಪ್ಪನ್ನು ಬುಧರು ತಿದ್ದಿಕೊಳ್ಳಬೇಕೆಂದು ವಿನಯಕ್ಕಾಗಿ ಹೇಳಿಕೊಳ್ಳುವ ಸಂಪ್ರದಾಯವಿದೆ. +ಆದರೆ ಕನಕದಾಸರ ಮೇಲಿನ ಪದ್ಯ ತಮಗೆ ಓದು ಬರಹ ಬರದೆಂಬುದನ್ನು ಸ್ಪಷ್ಟವಾಗಿ ಪ್ರತಿಪಾದಿಸುತ್ತದೆ. +ಕಾವ್ಯಗಳನ್ನು ಓದುಬರಹ ಬರದವರು ಕೂಡ ಕಂಠಸ್ಥವಾಗಿ ಕಟ್ಟಿ ಹಾಡುತ್ತಿದ್ದ. +ಹಾಡುತ್ತಿರುವ ಉದಾಹರಣೆಗಳು ನಮ್ಮಲ್ಲಿ ಹೇರಳವಾಗಿವೆ. +ರಾಮಾಯಣ,ಮಹಾಭಾರತಗಳಿಗೆ ಈ ಹೇಳಿಕೆಯನ್ನು ಅನ್ವಯಿಸಲಾಗುತ್ತದೆ. +ಬಸವಣ್ಣ,ಸರ್ವಜ್ಞ ಮುಂತಾದವರು ವಚನಗಳನ್ನು ಕಟ್ಟಿ ಹಾಡಿದುದು ಹೀಗೆಯೇ ಎಂಬ ಅಭಿಪ್ರಾಯವುಂಟು. +ಕಾಲಕ್ರಮೇಣ ಅವುಗಳನ್ನು ಬರೆದಿಡಲಾಯಿತೆಂದು ಹೇಳುತ್ತಾರೆ. +ಕನಕದಾಸರ ಕೃತಿಗಳು ಸಹ ಹೀಗೆಯೇ ಕಂಠಸ್ಥವಾಗಿದ್ದು ಅನಂತರ ಬರಹ ರೂಪ ಪಡೆದವೆಂದು ಊಹಿಸಲವಕಾಶವಿದೆ. +ಕನಕದಾಸರು ಆರಂಭದಲ್ಲಿ ಒಬ್ಬ ಜನಪದ ಕವಿ. +ಗಾಯಕ,ಕಲಾವಿದ ಆಗಿದ್ದ ಸಾಧ್ಯತೆಯಿದೆ. +ಅವರ ಕಾವ್ಯಗಳಲ್ಲಿಯೇ ಈ ಬಗೆಗೆ ಅನೇಕ ಉದಾಹರಣೆಗಳು ದೊರೆಯುತ್ತವೆ. +ತಾಳಮದ್ದಳೆ,ಯಕ್ಷಗಾನ,ಗೊಂಬೆಯಾಟ,ತೊಗಲು ಗೊಂಬೆಯಾಟ ರಾಗಿ ಬೀಸುವ ಪದ ಮುಂತಾದ ಗ್ರಾಮಕಲೆಗಳನ್ನು ಕುರಿತು ಕನಕದಾಸರ ಅತ್ಯಂತ ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ. +ಮೇಲಿನ ಉದಾಹರಣೆಗಳು ಕನಕದಾಸರು ತಮ್ಮ ಸುತ್ತಿನಲ್ಲಿ ಪ್ರಚಲಿತವಿದ್ದ ವಿವಿಧ ಗ್ರಾಮಕಲೆಗಳನ್ನೂ ಬಲ್ಲವರೆಂಬುದು ಶ್ರುತಪಡಿಸುತ್ತವೆ. +ಆದುದರಿಂದಲೇ ಅವರು ಸಂದರ್ಭ ದೊರೆತಾಗಲೆಲ್ಲಾ ಇವುಗಳನ್ನು ಉಲ್ಲೇಖಿಸುತ್ತಾರೆ. +ಇದರೊಂದಿಗೆ ಕನಕದಾಸರ ಬಹುತೇಕ ಕೀರ್ತನೆಗಳು ಜನಪದ ಗೀತೆಗಳಂತಿರುವುದನ್ನು ಕಾಣಬಹುದು. +ಮೇಲಿನ ಉದಾಹರಣೆಗಳು ಕನಕದಾಸರು ಒಳ್ಳೆಯ ಜನಪದ ಗೀತರಚಕರೂ ಗಾಯಕರೂ ಆಗಿದ್ದರೆಂಬುದನ್ನು ಶ್ರುತಪಡಿಸುತ್ತವೆ. +ಆದುದರಿಂದ ಮೊದಮೊದಲಿಗೆ ಜನಪದ ಕವಿ ಗಾಯಕರಾಗಿದ್ದ ಕನಕದಾಸರು ಸೇನೆಗೆ ಸೇರಿ ಅಧಿಕಾರದಲ್ಲಿ ಮುಂದೆ ಬಂದು ರಾಜಾಸ್ಥಾನ ಮತ್ತು ಅಲ್ಲಿನ ಶಿಷ್ಟರ ಸಂಪರ್ಕವನ್ನು ಪಡೆದರು. +ಅದರ ಪ್ರಭಾವವನ್ನೂ ಅವರ ಸಾಹಿತ್ಯದಲ್ಲಿ ಗುರುತಿಸಬಹುದಾಗಿದೆ. +ಈ ಆಧಾರಗಳಿಂದ ಕನಕದಾಸರು ಹಳ್ಳಿಯ ಕುರುಬ ಕುಟುಂಬದಲ್ಲಿ ಹುಟ್ಟಿ ಎಳವೆಯಲ್ಲಿಯೇ ಪ್ರಾಯಃ ಕಲೆ ಮತ್ತು ಸಾಹಿತ್ಯದತ್ತ ಆಕರ್ಷಿತರಾಗಿ ಹುಡುಗ ದಾರಿ ತಪ್ಪಿದನೆಂಬ ಟೀಕೆಗೆ ಒಳಗಾಗಿ,ಆ ಕಲೆಯ ಕ್ಷೇತ್ರದ ವ್ಯಾಮೋಹಗಳಿಗೂ ಬಲಿಯಾಗಿ,ಜೀವನ ನಿರ್ವಹಣೆಗೆ ಸೇನೆಯನ್ನು ಸೇರಿ ಅಧಿಕಾರ ಗದ್ದುಗೆ,ಆಸ್ಥಾನದ ವೈಭೋಗಗಳನ್ನು ಅನುಭವಿಸಿ ಹಣ್ಣಾಗಿ ದಾಸರಾದರೆಂಬುದರಲ್ಲಿ ಅನುಮಾನವಿಲ್ಲ. +ಜನಪದ ಮತ್ತು ಶಿಷ್ಟ ಎರಡರ ರಸವನ್ನೂ ಹೀರಿ ಬೆಳೆದರು. +“ಪಂಪನಂತೆ ಕನಕನಾಯಕ ಕವಿಯೂ ಅಹುದು,ಕಲಿಯೂ ಅಹುದು. +ಕಲಿತನ ಕವಿತನಗಳೆರಡೂ ಅವನ ಹುಟ್ಟುಗುಣ. +ಸಂತತನವೂ ಅಷ್ಟೇ ಅವನು ಲೌಕಿಕಾಭ್ಯುದಯದ ಶಿಖರವನ್ನೇರುತ್ತಿರುವಾಗಲೇ ಅವನ ಕಾವ್ಯಶಕ್ತಿ ಗಿಡದ ಮೊಗ್ಗಿನಂತೆ,ಸ್ಥಾತಿಯ ಮುತ್ತಿನಂತೆ ಹೊರಹೊಮ್ಮುತ್ತದೆ. +ನೃಸಿಂಹಸ್ಕವ ಉದ್ಭವಗೊಂಡು ಹಾಡುಗಬ್ಬದ ರೂಪದಲ್ಲಿ ದೇವರಿಗೆ ನಿವೇದನೆಗೊಂಡಿರಬೇಕೆಂದು ತೋರುತ್ತದೆ. +ಬಂಧನವನ್ನು ತೆಗೆದಕೂಡಲೇ ನಿರಂತರವಾಗಿ ತಂತಿಯಲ್ಲಿ ವಿದ್ಯುತ್‌,ಚಿಲುಮೆಯಲ್ಲಿ ನೀರು ಪ್ರವಹಿಸುವಂತೆ ಅವನ ಕಾವ್ಯಧಾರೆ ಅವಿಚ್ಛಿನ್ನವಾಗಿ ಉಕ್ಕುತ್ತದೆ.” +ಮನುಷ್ಯ ತಾಯಿ ನೆಲವನ್ನೂ ಮರಗಿಡಗಳು ತಾಯಿ ಬೇರನ್ನೂ ಮರೆಯುವುದಿಲ್ಲವೆಂಬುದು ನಂಬಿಕೆ. +ತಾನು ಬದುಕಿದ ಸತ್ವವನ್ನು ಹೀರಿ ಬೆಳೆಯುವ ಮರಗಳಂತೆಯೇ ಮನುಷ್ಯ ಕೂಡ ತನ್ನ ತಾಯಿ ನೆಲದ ಸತ್ವದಿಂದ ಪರಿಪುಷ್ಪನಾದಾಗ ಮಾತ್ರ ಅವನಿಗೆ ಶಕ್ತಿ ಬರುತ್ತದೆ. +ಕನಕದಾಸರು ಸಹ ತಮ್ಮ ಹುಟ್ಟೂರಿನ ಪರಿಸರವನ್ನೇ ತಮ್ಮ ಸಾಹಿತ್ಯದಲ್ಲಿ ತಂದಿದ್ದಾರೆ. +ಆದರೆ ಅವರು ಅನೇಕ ಸ್ಥಳದ ಆದಿಕೇಶವರನ್ನು ಕುರಿತು ಕೀರ್ತನೆಗಳನ್ನು ರಚಿಸಿರುವುದರಿಂದ ಮತ್ತು ಈಗಾಗಲೇ ಅವರು ಬಾಡದಲ್ಲಿ ಹುಟ್ಟಿ ಬೆಳೆದವರು ಎಂದು ನಿರ್ಧಾರವಾಗಿರುವುದರಿಂದ ಈ ಬಗ್ಗೆ ಯಾರೂ ಅಷ್ಟಾಗಿ ಗಮನ ಹರಿಸಿದಂತೆ ಕಾಣುವುದಿಲ್ಲ. +ಕನಕದಾಸರ ಒಟ್ಟು ಸಾಹಿತ್ಯದಲ್ಲಿ ಮೂಡಿ ಬಂದಿರುವ ಪರಿಸರವನ್ನು ಗಮನಿಸಿ ಹೇಳುವುದಾದರೆ ಅದು ಬಾಡದ ಅಥವಾ ಕಾಗಿನೆಲೆಯ ಪರಿಸರಕ್ಕಿಂತ ಭಿನ್ನವಾಗಿರುವುದನ್ನು ಕಾಣಬಹುದಾಗಿದೆ. +ಈ ದೃಷ್ಟಿಯಿಂದ ಕನಕದಾಸರು ತಮ್ಮ ಕೃತಿಗಳಲ್ಲಿ ಹೆಸರಿಸಿರುವ ಎಲ್ಲಾ ಸ್ಥಳಗಳನ್ನು ಪರಿಶೀಲಿಸುವುದು ಅಗತ್ಯ. +ಆಗ ಮಾತ್ರ ಅವರ ನಿಜವಾದ ಸ್ಥಳವನ್ನು ಗುರುತಿಸಲು ಸಹಾಯವಾಗಬಹುದೆಂದು ತೋರುತ್ತದೆ. +ಈಗ ಹಾಸನ ಜಿಲ್ಲೆಯ ಒಂದು ತಾಲ್ಲೂಕು ಕೇಂದ್ರವಾಗಿರುವ ಬೇಲೂರು ಒಂದು ಕಾಲದಲ್ಲಿ ಕನ್ನಡ ನಾಡಿನ ಪ್ರಖ್ಯಾತ ರಾಜವಂಶಗಳಲ್ಲೊಂದಾದ ಹೊಯ್ಸಳ ವಂಶದವರ ರಾಜಧಾನಿಯಾಗಿತ್ತು. +ಕಲೆ,ಸಂಸ್ಕೃತಿ,ಸಾಹಿತ್ಯಗಳ ನೆಲೆಯಾಗಿತ್ತು. +ಬೊಪ್ಪಲೆ ಬೊಮ್ಮಲೆ,ಪದುಮಲೆ,ಶಾಂತಲೆಯರಂತಹ ಕಲಾರಾಧಕರೂ ಕಲಾವಿದರೂ ಆದ ರಾಣಿಯರ ನೆಲೆವೀಡಾಗಿತ್ತು. +ಧಾರ್ಮಿಕ ಆಂದೋಲನದ ರಂಗವೂ ಆಗಿತ್ತು. +ಈ ಊರಿಗೆ ಸುರಪುರ,ವರಪುರ,ಶ್ರೀಪುರ,ವೇಲಾಪುರ,ಸೌಭಾಗ್ಯಪುರ ಎಂದೆಲ್ಲಾ ಹೆಸರುಗಳಿದ್ದ ಬಗ್ಗೆ ಶಾಸನಾಧಾರಗಳೂ ದೊರೆಯುತ್ತವೆ. +ಅನೇಕ ಹೆಸರಾಂತ ರಾಜರು,ಪ್ರಧಾನಿ,ದಂಡನಾಯಕ,ಕವಿ,ಕಲಾವಿದರಿಗೆ ಅದು ಆಶ್ರಯ ಸ್ಥಾನವಾಗಿತ್ತು. +ಇಂದಿಗೂ ಲೋಕವಿಖ್ಯಾತವಾದ ದೇವಾಲಯಗಳನ್ನು ಹೊಂದಿ ಜನಾಕರ್ಷಣೆ ಮತ್ತು ಆದರಣೆಯನ್ನು ಗಳಿಸಿಕೊಂಡಿದೆ. +ಆ ಊರನ್ನು ಕುರಿತು ಅನೇಕ ಕವಿಗಳು ಹಾಡಿ ಹೊಗಳಿದ್ದಾರೆ. +ಕನಕದಾಸರ ಸಾಹಿತ್ಯವನ್ನು ಪರಿಶೀಲಿಸಿದ ಮೇಲೆ ಅದರ ಬಹುಪಾಲು ಬೇಲೂರಿನಲ್ಲಿ ರಚಿತವಾಗಿದೆಯೆಂದು ಹೇಳಲು ಬೇಕಾದಷ್ಟು ಆಧಾರಗಳು ದೊರೆಯುತ್ತವೆ. +ಕನಕದಾಸರ ನಳಚರಿತ್ರೆ,ರಾಮಧಾನ್ಯ ಚರಿತ್ರೆ ಮತ್ತು ಹರಿಭಕ್ತಿಸಾರ ಕಾವ್ಯಗಳು ಬೇಲೂರಿನ ಚನ್ನಕೇಶವನಿಗೆ ಅಂಕಿತವಾಗಿವೆ. +ನಳಚರಿತೆಯ ಮೊದಲ ಮೂರು ಪದ್ಯಗಳಲ್ಲಿ ಕವಿ ವರಪುರದ ಚನ್ನಿಗರಾಯನನ್ನು ಸ್ತುತಿಸಿದ್ದಾನೆ. +ಪ್ರತಿಸಂಧಿಯ ಕೊನೆಯ ಪದ್ಯದಲ್ಲಿ ಮತ್ತೆ ಚನ್ನಿಗರಾಯನನ್ನು ಸ್ಮರಿಸುತ್ತಾನೆ. +ನಳಚರಿತೆಯನ್ನು ರಚಿಸಿದ ಕಾಲದಲ್ಲಿ ಕನಕದಾಸರಿಗೆ ಉತ್ತರ ಕರ್ನಾಟಕದ ಅಂದರೆ ತುಂಗಭದ್ರಾ ನದಿಯಿಂದ ಆಚೆಗಿನ ಯಾವ ಸ್ಥಳಗಳ ಪರಿಚಯವೂ ಇರಲಿಲ್ಲವೆಂಬುದು ಈ ಕಾವ್ಯವನ್ನು ಅಭ್ಯಸಿಸಿದ ಯಾರಿಗಾದರೂ ಅರಿವಾಗುತ್ತದೆ. +ಈ ಕಾರಣದಿಂದಾಗಿಯೇ ನಳಚರಿತ್ರೆ ಕನಕದಾಸರ ಮೊದಲನೆಯ ಕಾವ್ಯ ಎಂದು ಹೇಳಬಹುದಾಗಿದೆ. +ರಾಮಧಾನ್ಯ ಚರಿತೆ ಕನಕದಾಸರ ಮತ್ತೊಂದು ಜನಪ್ರಿಯ ಕೃತಿ. +ಇದು ರಾಗಿ ಮತ್ತು ಭತ್ತಗಳ ಮಧ್ಯೆ ನಡೆದ ವಾಗ್ವಾದ ರೂಪದಲ್ಲಿದೆ. +ಇದು ವರ್ಗ ಜಾತಿಗಳ ಹೋರಾಟದ ಕತೆಯಾಗಿದ್ದು,ಆ ಕಾಲದ ಸಾಮಾಜಿಕ ಪರಿಸ್ಥಿತಿಯನ್ನು ಪ್ರತಿಬಿಂಬಿಸುತ್ತದೆ. +ತಾನು ಹುಟ್ಟಿದ ಜಾತಿಯೇ ಕಾರಣವಾಗಿ ತಾನನುಭವಿಸಿದ ಮಾನಸಯಾತನೆಗಿಲ್ಲಿ ಇಂಬು ದೊರೆತಿದೆ. +ಈ ಕಾವ್ಯ ನಳಚರಿತ್ರೆಯ ಬಗೆಗಿನ ಟೀಕೆಗೆ ಅವಹೇಳನಕ್ಕೆ ಉತ್ತರ ಎಂದು ಭಾವಿಸಬಹುದಾಗಿದೆ. +ಶೂದ್ರನೊಬ್ಬ ಕಾವ್ಯ ರಚಿಸಿದುದು ಮೇಲು ವರ್ಗದವರಲ್ಲಿ ಮತ್ಸರ ಉಂಟುಮಾಡಿರಬಹುದು. +ಅವರು ಈ ಕವಿಯನ್ನು ಇವನಲ್ಲೇನು ಶಕ್ತಿಯಿದೆ ಎಂದು ಹೀಯಾಳಿಸಿರಬಹುದು. +ಹಂಗಿಸಿದಾಗ ರಾಗಿ ಅನಿವಾರ್ಯವಾಗಿ ತನ್ನ ಶಕ್ತಿಯ ಬಗ್ಗೆ ಉತ್ತರ ಕೊಡಬೇಕಾಯಿತು. +ಈ ಕೃತಿಯೂ ಬೇಲೂರಿನಲ್ಲಿಯೇ ರಚಿತವಾಗಿದೆ. +ಮೇಲಿನ ಪದ್ಯಗಳು ರಾಮಧಾನ್ಯ ಚರಿತೆ ಬೇಲೂರಿನಲ್ಲಿಯೇ ರಚಿತವಾಗಿದೆಯೆಂಬುದನ್ನು ದೃಢಪಡಿಸುತ್ತವೆ. +ಹರಿಭಕ್ತಿಸಾರ ಬೇಲೂರಿನಲ್ಲಿ ರಚಿತವಾದ ಕನಕದಾಸರ ಮೂರನೆಯ ಕಾವ್ಯ. +ಈ ಹೊತ್ತಿಗೆ ಕನಕದಾಸರ ಮನಸ್ಸು ಹೃದಯ ಸಾಕಷ್ಟು ಮಾಗಿ ಬರುವ ಟೀಕೆ ಟಿಪ್ಪಣಿಗಳನ್ನು ಸಹಿಸುವ ಶಕ್ತಿಯನ್ನು ಪಡೆದುಕೊಂಡಿತ್ತು. +ಆದುದರಿಂದಲೇ ಕವಿ ಎಲ್ಲವನ್ನೂ ಮರೆತು ತನ್ನೊಳಗನ್ನು ಪರಾಮರ್ಶೆಗೆ ಒಳಪಡಿಸಿ ಹರಿಭಕ್ತಿಯ ಪ್ರವಾಹದಲ್ಲಿ ತೇಲಿ ಹೋಗಿರುವುದು ಕಂಡು ಬರುತ್ತದೆ. +ಹರಿಭಕ್ತಿಸಾರ ಸಂಪೂರ್ಣವಾಗಿ ಕವಿ ತನ್ನ ಅಂತರಂಗವನ್ನು ವರಪುರದ ಚೆನ್ನಿಗರಾಯನಿಗೆ ತೆರೆದು ತನ್ನನ್ನು ಕಾಪಾಡುವಂತೆ ಪ್ರಾರ್ಥಿಸುವ ಕೃತಿ. +ಸುರಪುರ,ವರಪುರ,ಬೇಲೂರು ಈ ಮೂರೂ ಹೆಸರುಗಳನ್ನು ಈ ಕೃತಿಯಲ್ಲಿ ಕಾಣಬಹುದಾಗಿದೆ. +“ಸುರಪುರ ಅಥವಾ ವರಪುರದ ಚೆನ್ನಿಗರಾಯನ ಸ್ತುತಿ ನಳಚರಿತ್ರೆ,ರಾಮಧಾನ್ಯಚರಿತ್ರೆ ಮತ್ತು ಹರಿಭಕ್ತಿಸಾರ ಇವುಗಳಲ್ಲಿ ಬಂದಿದೆ. +ಸುರಪುರ ಅಥವಾ ವರಪುರ ಎಂದರೆ ಬೇಲೂರು ಎಂದೂ ಕನಕದಾಸನು ಬೇಲೂರಿನಲ್ಲಿ ನೆಲಸಿದಾಗ ಈ ಕೃತಿಗಳನ್ನು ರಚಿಸಿರಬೇಕೆಂದೂ ತಿಳಿಯಲಾಗಿದೆ. +ಅವಲ್ಲಿಗೆ ಜನಗಳಲ್ಲಿರುವ ಪ್ರತೀತಿಯಿಂದ ಈ ಗ್ರಂಥಗಳು ಕನಕದಾಸನವೇ ಎಂದು ಭಾವಿಸಲಾಗಿದೆ. +ಕನಕದಾಸನು ಸ್ತುತಿಸಿದದು ಬೇಲೂರು ಚನ್ನಕೇಶವನಾಗಿರದೆ ಕಾಗಿನೆಲೆಯ ಬಳಿಯಲ್ಲಿಯೇ ಇರುವ ಇಂಗಳಗುಂಡಿಯ ಚೆನ್ನಕೇಶವನಿರಬಹುದೆಂದು ತರ್ಕಿಸಲಾಗಿದೆ. +ಈ ಚೆನ್ನಕೇಶವ ಕನಕದಾಸನ ಉಪಾಸ್ಯದೈವತನಾಗಿದ್ದನೆಂದು ಜನವಾರ್ತೆಯಿದೆ. +ಅಲ್ಲದೆ ಬೇಲೂರನ್ನು ವೇಲಾಪುರ ಎಂದು ಕರೆಯುವ ಪದ್ಧತಿ ಇರುವುದೇ ಹೊರತು ವರಪುರ ಎಂದು ಕರೆಯಲಾರರು ಎಂಬ ಅಭಿಪ್ರಾಯವಿದೆ. +ಆದರೆ ಇಂಗಳಗುಂಡಿಗೆ ವರಪುರವೆಂದು ಕರೆಯಬಹುದೇ ಎಂಬುದನ್ನು ಪರಿಶೀಲಿಸಬೇಕು. +ಈ ವಿಷಯದಲ್ಲಿ ನಡೆಸುವ ಸತ್ಯಶೋಧನೆ ಕನಕದಾಸನು ರಚಿಸಿದ ಕೃತಿಗಳ ಸ್ಥಳಗಳ ವಿಷಯದಲ್ಲಿ ಹೊಸಬೆಳಕನ್ನು ಬೀರಬಹುದು"ಎಂಬ ಅನುಮಾನಗಳನ್ನು ಕನಕದಾಸರೆ ಪರಿಹರಿಸಿಬಿಟ್ಟಿದ್ದಾರೆ. +ಕಾವ್ಯಗಳಲ್ಲಿಯಲ್ಲದೆ ತಮ್ಮ ಅನೇಕ ಕೀರ್ತನೆಗಳನ್ನು ಕೂಡ ಕನಕದಾಸರು ವರಪುರ, ಸುರಪುರ, ಸೌಭಾಗ್ಯಪುರದ ಚೆನ್ನಕೇಶವನಿಗೆ ಅಂಕಿತ ಮಾಡಿದ್ದಾರೆ. +ಕೆಲವು ಉದಾಹರಣೆಗಳನ್ನು ನೋಡಬಹುದು. +ಕನಕದಾಸರ ಕೀರ್ತನೆಗಳಲ್ಲಿ ಬರುವ ವರಪುರ ಅಥವಾ ಬೇಲೂರು ಚೆನ್ನಕೇಶವನ ಅಂಕಿತದಲ್ಲಿ ರಚನೆಗೊಂಡಿರುವ ಕೀರ್ತನೆಗಳು ಅವರ ಮೊದಮೊದಲ ರಚನೆಗಳೆಂದು ಊಹಿಸಲೂ ಅವಕಾಶವಿದೆ. +ಅಷ್ಟೇ ಅಲ್ಲ ಎಷ್ಟೋ ಕೀರ್ತನೆಗಳಲ್ಲಿ ಯಾವ ಊರನ್ನೂ ಹೆಸರಿಸದೆ ಕೇವಲ ಆದಿಕೇಶವನೆಂದು ಅಂಕಿತ ಮಾಡಿರುವುದೂ ಉಂಟು. +ಈ ಎಲ್ಲ ಆಧಾರಗಳಿಂದ ಕನಕದಾಸರು ತಮ್ಮ ಜೀವಿತದ ಯೌವ್ವನದ ಕಾಲದಲ್ಲಿ ಬೇಲೂರಿನಲ್ಲಿದ್ದವರೆಂದು ಸ್ಪಷ್ಟವಾಗುತ್ತದೆ. +ಬೇಲೂರು, ಕಾಗಿನೆಲೆ,ಬಾಡಗಳಲ್ಲದೆ ಕನಕದಾಸರು ಇನ್ನು ಅನೇಕ ಊರುಗಳ ಆದಿಕೇಶವರಿಗೆ ಅಂಕಿತ ಮಾಡಿ ಕೀರ್ತನೆಗಳನ್ನು ರಚಿಸಿರುವುದು ಕಂಡುಬರುತ್ತದೆ. +ಈ ಕೀರ್ತನೆಗಳು ಆಯಾ ದೇವತೆಗಳನ್ನು ಪ್ರತ್ಯಕ್ಷ ಕಂಡಾಗ ರಚಿತವಾದವೆಂಬುದರಲ್ಲಿ ಯಾವ ಅನುಮಾನವೂ ಕಂಡು ಬರುವುದಿಲ್ಲ. +ಹಾಗಾದರೆ ಕನಕದಾಸರು ಈ ಊರುಗಳಿಗೆ ಯಾಕಾಗಿ ಯಾವಾಗ ಹೋಗಿದ್ದರೆಂಬ ಸಮಸ್ಯೆಯು ತಲೆಎತ್ತುತ್ತದೆ. +ಅವರು ದಾಸರಾದುದರಿಂದ ಈ ಎಲ್ಲಾ ಸ್ಥಳಗಳಿಗೆ ತೀರ್ಥಯಾತ್ರೆಗೆ ಹೋಗಿದ್ದರೆಂದು ಈ ಸಮಸ್ಯೆಯನ್ನು ಪರಿಹರಿಸಿಬಿಡಬಹುದು. +ಆದರೆ ಅವರು ಸೇನೆಯಲ್ಲಿದ್ದು ತಮ್ಮ ಜೀವಿತದ ಕಡೆಗಾಲದಲ್ಲಿ ಸರ್ವಸಂಗ ಪರಿತ್ಯಾಗ ಮಾಡಿದರೆಂದು ತಿಳಿಯುವುದರಿಂದ ಪ್ರಾಯಃ ಅವರು ಸೇನೆಯೊಂದಿಗೆ ಈ ಊರುಗಳಿಗೆ ಹೋಗಿ ಬಂದಿರಬೇಕೆಂದು ತರ್ಕಿಸಲು ಚಾರಿತ್ರಿಕ ಆಧಾರಗಳು ಇಂಬು ಕೊಡುತ್ತವೆ. +ಶ್ರೀರಂಗಪಟ್ಟಣದ ರಂಗನಾಥನ ಅಂಕಿತದಲ್ಲಿ ಕನಕದಾಸರು ಕೀರ್ತನೆ ರಚಿಸಿದ್ದಾರೆ. +ಶ್ರೀರಂಗಪಟ್ಟಣ ಕಾವೇರಿ ದ್ವೀಪದಲ್ಲಿರುವ ಪಶ್ಚಿಮ ರಂಗಕ್ಷೇತ್ರ. +ಇದು ಗೌತಮ ಮುನಿ ತಪಸ್ಸು ಮಾಡಿದ ಸ್ಥಳ. +ಗೌತಮ ಕ್ಷೇತ್ರವೆಂದೂ ಪುರಾಣ ಪ್ರಸಿದ್ಧವಾದ ಸ್ಥಳ. +ಸುಮಾರು ಹದಿನೈದನೆಯ ಶತಮಾನದ ಆದಿಭಾಗದಲ್ಲಿ ನಾಗಮಂಗಲದಿಂದ ಆಳುತ್ತಿದ್ದ ವಿಜಯನಗರದ ಸಾಮಂತ ತಿಮ್ಮಣ್ಣ ಈ ಸ್ಥಳದಲ್ಲಿ ಕೋಟೆಯನ್ನು ಕಟ್ಟ ನಗರವೊಂದನ್ನು ನಿರ್ಮಿಸಿದ. +ಈ ಕಡೆಯ ಆಡಳಿತ ನೋಡಿಕೊಳ್ಳಲು ವಿಜಯನಗರ ಅರಸರು ಇಲ್ಲಿ ಒಬ್ಬ ರಾಜಪ್ರತಿನಿಧಿಯನ್ನು ಇಟ್ಟಿದ್ದರು. + ಕನಕದಾಸರು ಶ್ರೀರಂಗಪಟ್ಟಣದಲ್ಲಿ ಕೆಲವು ಕಾಲವಾದರೂ ಇದ್ದಿರಬೇಕೆಂಬ ಆಧಾರಗಳಿವೆ. +ಶ್ರೀರಂಗಪಟ್ಟಣದ ಹತ್ತಿರದ ಮಾದೇಶ್ವರ ಪುರದ ಬಳಿ ಕಾವೇರಿ ತೀರದಲ್ಲಿ ಕನಕನಕಲ್ಲು ಎಂಬ ಸ್ಥಳವಿದೆ ಕನಕದಾಸರು ಅಲ್ಲಿ ಕುಳಿತು ಧ್ಯಾನ ಮಾಡುತ್ತಿದ್ದರೆಂಬ ಪ್ರತೀತಿಯೂ ಜನರಲ್ಲಿದೆ. +ಉಮ್ಮತ್ತೂರು ಮೈಸೂರು ಜಿಲ್ಲೆಯ ಚಾಮರಾಜನಗರ ತಾಲ್ಲೂಕಿನಲ್ಲಿದೆ. +ಒಂದು ಕಾಲದಲ್ಲಿ ಶಿವನಸಮುದ್ರ ಸೀಮೆಯೆಂದು ಹೆಸರಾದ ಪ್ರಾಂತ್ಯವೊಂದರ ರಾಜಧಾನಿಯಾಗಿತ್ತು. +ತಲಕಾಡಿನ ಗಂಗವಂಶದ ಗಂಗರಾಜನೆಂಬುವನು ಈ ಪ್ರಾಂತ್ಯದ ಸಾಮಂತನಾಗಿ ಆಳುತ್ತಿದ್ದ. +ಹೊಯ್ಸಳರ ಸಾಮಂತರಾಗಿದ್ದ ಇವನು ವಿಜಯನಗರದ ಸಂಘಟನೆಯಲ್ಲಿ ಸೇರಿದವನಾದರೂ ತಾನು ಗಂಗವಂಶದವನು ಸ್ವತಂತ್ರರಾಜ ಎಂಬ ಹಮ್ಮು ಇದ್ದೇ ಇದ್ದಿತು. +೧೫ಂ೯ರಲ್ಲಿ “ಕೃಷ್ಣದೇವರಾಯನು ಪಟ್ಟಕ್ಕೆ ಬಂದಾಗ ಅವನ ಪಟ್ಟಾರೋಹಣ ಕಾಲದಲ್ಲಿ ಸಾಮ್ರಾಜ್ಯದ ಸ್ಥಿತಿ ತೃಪ್ತಿಕರವಾಗಿರಲಿಲ್ಲ.” + ದಕ್ಷಿಣದ ಅನೇಕ ಸಾಮಂತರು ತಾವು ಸ್ವತಂತ್ರರೆಂದು ಘೋಷಿಸಿಕೊಂಡರು. +“ಇದೇ ಕಾಲಕ್ಕೆ ಮಲೆತು ನಿಂತಿದ್ದ ಉಮ್ಮತ್ತೂರಿನ ನಾಯಕ ಗಂಗರಾಯನೊಡನೆ ಕೃಷ್ಣದೇವರಾಯನು ಯುದ್ಧನಿರತನಾದನು. +ಗಂಗರಾಯನು ವೀರ ನರಸಿಂಹರಾಯನ ಆಳ್ವಿಕೆಯ ಕೊನೆಗಾಲದಿಂದಲೇ ವಿಜಯನಗರದ ವಿರುದ್ಧ ಕತ್ತಿಕಟ್ಟಿದ್ದನು. +ಕೃಷ್ಣದೇವರಾಯನು ಗಂಗರಾಯನ ಮೇಲೆ ಯುದ್ಧ ಪ್ರಾರಂಭಿಸಿದನು. +ಈ ಯುದ್ಧಾಚರಣೆ ಸುಮಾರು ೧೫೧ಂರಿಂದ ೧೫೧೨ರವರೆಗೂ ಮುಂದುವರಿದಿರಬೇಕು. +ಕೃಷ್ಣದೇವರಾಯನು ಉಮ್ಮತ್ತೂರನ್ನು ಗಂಗರಾಯನ ಮುಖ್ಯ ಕಾರ್ಯಸ್ಥಾನವಾದ ಶಿವನಸಮುದ್ರ ಸೀಮೆಯನ್ನೂ ಆಕ್ರಮಿಸಿದನು. +ಶಿವನಸಮುದ್ರವನ್ನು ಹಿಡಿಯಲು ಸುಮಾರು ಒಂದು ವರ್ಷಕಾಲ ಹೋರಾಡಬೇಕಾಯಿತು. +ಈ ಸಮರದಲ್ಲಿ ಗಂಗರಾಯನು ಸೋತು ಪಲಾಯನ ಮಾಡಿ ಕಾವೇರಿ ನದಿಯಲ್ಲಿ ಮುಳುಗಿ ಮೃತನಾದನು. +ಕೃಷ್ಣದೇವರಾಯನು ಜಯಿಸಿದ ಈ ನೂತನ ರಾಜ್ಯವು ವಿಜಯನಗರ ಸಾಮ್ರಾಜ್ಯದ ನೂತನ ಪ್ರಾಂತವಾಯಿತು. +ಶ್ರೀರಂಗಪಟ್ಟಣ ಅದರ ರಾಜಧಾನಿಯಾಯಿತು. +ಸ್ಥಳೀಯ ಆಡಳಿತವು ಮೂರು ಮಂದಿ ಸ್ಥಾನೀಕ ನಾಯಕರಲ್ಲಿ ನಿಯುಕ್ತವಾಯಿತು. +ಬೆಂಗಳೂರಿನ ಕೆಂಪೇಗೌಡನೂ ಅವರಲ್ಲೊಬ್ಬ.” +ಕನಕದಾಸರು ಉಮ್ಮತ್ತೂರಿನ ರಂಗನಾಥನ ಅಂಕಿತದಲ್ಲಿ 'ಕನಕಪುರದಾದಿ ಕೇಶವರಾಯ' ಎಂದು ಕೀರ್ತನೆಗಳನ್ನು ರಚಿಸಿರುವುದರಿಂದ ಅವರು ಉಮ್ಮತ್ತೂರಿಗೆ ಬಂದಿದ್ದರೆಂಬುದು ಖಚಿತವಾಗುತ್ತದೆ. +ವಿಜಯನಗರದ ಸೇನೆಯು ಉಮ್ಮತ್ತೂರಿನಿಂದ ಕೊಡಗಿನ ನಂಜರಾಜಪಟ್ಟಣದಿಂದ ಆಳುತ್ತಿದ್ದ ನಂಜರಾಜನ ಮೇಲೆ ದಂಡೆತ್ತಿ ಹೋದುವೆಂದು ಚಾರಿತ್ರಿಕ ಆಧಾರಗಳು ಹೇಳುತ್ತವೆ. +ವಿಜಯನಗರದ ವಿರುದ್ಧ ತಿರುಗಿ ಬಿದ್ದವರಲ್ಲಿ ನಂಜರಾಜನೂ ಒಬ್ಬ. +ಕಲ್ಲಹಳ್ಳಿಯ ಮೂರನೆಯ ಮಂಗರಸನ ತಂದೆ ಈ ಯುದ್ಧದಲ್ಲಿ ಪಾಲುಗೊಂಡು ಸತ್ತುದನ್ನು ಕುಮಾರರಾಮ ಸಾಂಗತ್ಯ ಬರೆದ ನಂಜುಂಡ ಕವಿ ಉಲ್ಲೇಖಿಸುತ್ತಾನೆ. +ರಾಯದಳ,ರಾಯರಾವುತರು ಎಂದರೆ ಕೃಷ್ಣದೇವರಾಯನ ಸೇನೆ ಎಂದು ಈಗಾಗಲೇ ಚರಿತ್ರಕಾರರು, ವಿದ್ವಾಂಸರು ಒಪ್ಪಿದ್ದಾರೆ. +ಈ ಸೇನೆಯಲ್ಲಿ ಕನಕದಾಸರೂ ಇದ್ದು ಕೊಡಗಿನ ಭಾಗದಲ್ಲಿ ಸಂಚಾರ ಮಾಡಿರುವುದರಿಂದಲೇ ಅವರಿಗೆ ತಮ್ಮ ನಳಚರಿತ್ರೆಯ ಕಾಡಿನ ವರ್ಣನೆಯನ್ನು ವಿಶೇಷವಾಗಿ ಕಾಡಿಗೆ ಬೆಂಕಿ ಬೀಳುವುದನ್ನು,ಆನೆಗಳು ಹಿಂಡುಹಿಂಡಾಗಿ ನುಗ್ಗುವುದನ್ನು ನೈಜವಾಗಿ ಚಿತ್ರಿಸಲು ಸಾಧ್ಯವಾಯಿತೆಂದು ಹೇಳಬಹುದು. +ಕನಕದಾಸರ ನಳಚರಿತ್ರೆಯಲ್ಲಿ ರಾಯರಾವುತ ದಳದ ಉಲ್ಲೇಖ ದೊರೆಯುತ್ತದೆ. +ನಂಜರಾಜ ಪಟ್ಟಣದ ಯುದ್ಧದೊಂದಿಗೆ ವಿಜಯನಗರವು ದಕ್ಷಿಣದಲ್ಲಿ ನೀಲಗಿರಿಯವರೆಗೆ ತನ್ನ ಹಿಡಿತವನ್ನು ಭದ್ರಗೊಳಿಸಿತು. +ಈ ಹೊತ್ತಿಗೆ ಕೃಷ್ಣದೇವರಾಯ ಅತ್ಯಂತ ಸಮರ್ಥನೆಂಬುದೂ ಮುಸಲ್ಮಾನರ ದಾಳಿಯನ್ನು ತಡೆಯಬಲ್ಲ ಶಕ್ತನೆಂಬುದೂ ಖಚಿತವಾಗಿತ್ತು. +ಸಾಮ್ರಾಜ್ಯದಲ್ಲಿ ಶಾಂತಿ ನೆಲೆಸಿತು. +ಹೀಗಾಗಿ ಉಮ್ಮತ್ತೂರು,ನಂಜರಾಜ ಪಟ್ಟಣದ ಕಡೆಗೆ ಹೋಗಿದ್ದ ವಿಜಯನಗರದ ಸೇನೆಯು ಮುಂದೆ ಬಹಳ ಕಾಲದವರೆಗೆ ಬೇಲೂರಿನಲ್ಲಿಯೇ ನೆಲೆನಿಂತ ಬಗ್ಗೆ ಚಾರಿತ್ರಿಕ ಆಧಾರಗಳಿವೆ. +ಈ ಶಾಂತಿ ಸಮಯದಲ್ಲಿ ಬೇಲೂರಿನಲ್ಲಿ ನಿಂತ ಕನಕದಾಸ ತನ್ನ ಮೂರು ಕಾವ್ಯಗಳು ನಳಚರಿತ್ರೆ,ರಾಮಧಾನ್ಯಚರಿತ್ರೆ ಮತ್ತು ಹರಿಭಕ್ತಿಸಾರಗಳನ್ನು ರಚಿಸಿರುವ ಸಾಧ್ಯತೆಯೂ ಇದೆ. +ವಿಜಯನಗರ ತನ್ನ ಅಭ್ಯುದಯದ ಹಮ್ಮಿನಲ್ಲಿ ಮೈಮರೆತಿರುವಾಗ ಅತ್ತ ಬಹಮನಿ ಸುಲ್ತಾನರು ಗರಿಗಟ್ಟಿಕೊಂಡು ಯುದ್ಧ ಸನ್ನದ್ಧರಾಗತೊಡಗಿದರು. +ಕೃಷ್ಣದೇವರಾಯ ತನ್ನ ಆರು ವರ್ಷದ ಮಗನಿಗೆ ಪಟ್ಟ ಕಟ್ಟಿದ. +ಅವನನ್ನು ವಿಷ ಹಾಕಿ ಕೊಲ್ಲಲಾಯಿತು. +ಮುಂದೆ “ಕೃಷ್ಣದೇವರಾಯನ ಅನಂತರ ವಿಜಯನಗರ ಸಾಮ್ರಾಜ್ಯದಲ್ಲಿ ಯಾದವೀಕಲಹಗಳು ತಾಂಡವವಾಡ ತೊಡಗಿದವು.” +ಈ ಸಂದರ್ಭವನ್ನು ಉಪಯೋಗಿಸಿಕೊಂಡ “ಸುಲ್ತಾನನ ಮಿತ್ರಕೂಟದ ಸೇನೆಗಳು ದಕ್ಷಿಣಾಭಿಮಖವಾಗಿ ಹೊರಟು ಸಾಮ್ರಾಜ್ಯವನ್ನು ಪಾಳುಗೆಡವಿದವು.” + ಈ ಮುಂಚೆಯೇ ಕೃಷ್ಣದೇವರಾಯನ ಅಂತಿಮ ದಿನಗಳಲ್ಲಿಯೇ ಬಹಮನಿ ಸುಲ್ತಾನರ ಸೇನೆ ವಿಜಯನಗರದ ಮೇಲೆ ದಾಳಿಮಾಡಿ ರಾಯಚೂರನ್ನು ವಶಪಡಿಸಿಕೊಂಡವು. +ವಿಜಯನಗರದ ಇತರ ಕೇಂದ್ರಗಳಲ್ಲಿದ್ದ ಸೇನೆ ರಾಯಚೂರಿನತ್ತ ಧಾವಿಸಿತು. +ಬೇಲೂರಿನಲ್ಲಿದ್ದ ಕನಕದಾಸರ ಸೇನೆಯೂ ರಾಯಚೂರಿನತ್ತ ಧಾವಿಸಿತು. +ರಾಯಚೂರಿನ ಕನಕಗಿರಿ,ಕನಕನಕಟ್ಟೆಯ ಹತ್ತಿರ ನಡೆದ ಈ ಯುದ್ಧದ ವರ್ಣನೆಯನ್ನು ಪ್ರವಾಸಿ ನ್ಯೂನಿಜ್‌ ವಿವರಿಸುತ್ತಾನೆ. +ಕನಕದಾಸರು ಈ ಸ್ಥಳಗಳಿಗೆ ಹೋಗಿದ್ದರೆಂಬುದನ್ನು ಅವರು ಇಲ್ಲಿನ ಆದಿಕೇಶವನ ಅಂಕಿತದಲ್ಲಿ ರಚಿಸಿರುವ ಕೀರ್ತನೆಗಳು ಪ್ರತಿಪಾದಿಸುತ್ತವೆ. +ಈ ವಿಜಯನಗರದ ಸೇನೆ ಆ ಭಾಗದಲ್ಲಿ ಅನೇಕ ದಿನಗಳ ಕಾಲ ನಿಂತಿತು. +ಈ ಯುದ್ಧದಲ್ಲಿ ಕೃಷ್ಣದೇವರಾಯನಿಗೆ ಜಯವೂ ದೊರೆಯಿತು. +ಆದುದರಿಂದಲೇ ಈ ವಿಜಯದ ತರುವಾಯ ಕೃಷ್ಣದೇವರಾಯ ರಾಯಚೂರಿಗೆ ಧಾವಿಸಿ ಅದನ್ನು ಪುನಃ ವಶಪಡಿಸಿಕೊಂಡನು. +ಕನಕದಾಸರು ತಮ್ಮ ಸೇನೆಯೊಂದಿಗೆ ಅಲ್ಲಿಯೇ ನಿಂತರು. +ಕೃಷ್ಣದೇವರಾಯನ ಮಗನ ಮರಣಾನಂತರ ವಿಜಯನಗರದ ಸಿಂಹಾಸನಕ್ಕೆ ಕಿತ್ತಾಟ ಆರಂಭವಾಯಿತು. +ಪ್ರವಾಸಿಗಳ ಹೇಳಿಕೆಯನ್ನು ಗಮನಿಸಿ ಹೇಳುವುದಾದರೆ ಯಾವ ಹಿಂದೂ ಧರ್ಮ ರಕ್ಷಣೆ ಮತ್ತು ಸಂಘಟನೆಯ ಧ್ಯೇಯದಿಂದ ಅದು ಅಸ್ತಿತ್ವಕ್ಕೆ ಬಂದಿತ್ತೋ ಅದನ್ನು ಮರೆತು ತಮ್ಮ ಸ್ವಾರ್ಥ ಅಧಿಕಾರಲಾಲಸೆಯ ಬೆನ್ನು ಹತ್ತಿದ ರಾಜವಂಶದದವರು,ಸಾಮಂತರು ಅದರ ಅವನತಿಗೂ ಕಾರಣರಾದರು. +ಈ ಸುಸಂದರ್ಭವನ್ನು ಉಪಯೋಗಿಸಿಕೊಂಡ ಬಹಮನಿ ಸುಲ್ತಾನರು ದಕ್ಷಿಣದತ್ತ ತಮ್ಮ ಸೇನೆಯನ್ನು ನುಗ್ಗಿಸಿ ಹಿಂದೂ ದೇವಾಲಯಗಳನ್ನು ದ್ವಂಸ ಮಾಡಲಾರಂಭಿಸಿದರು. + ಛಿದ್ರಭಿದ್ರವಾಗಿದ್ದ ವಿಜಯನಗರದ ಸೇನೆ ಏನೂ ಮಾಡುವ ಸ್ಥಿತಿಯಲ್ಲಿರಲಿಲ್ಲ. +ಆದರೂ ಎಚ್ಚಮನಾಯಕ,ಕನಕದಾಸರಂಥವರು ತಮ್ಮ ಶಕ್ತಿಮೀರಿ ಆ ಸಾಮ್ರಾಜ್ಯದ ರಕ್ಷಣೆಗೆ ಶ್ರಮಿಸಿದರು. +ಅಂಥ ಒಂದು ಸಂದರ್ಭದಲ್ಲಿ ಕನಕದಾಸರ ಸೇನೆ ಬಿಜಾಪುರದ ಸುಲ್ತಾನರ ಸೇನೆಯನ್ನು ಬಾಡ ಹತ್ತಿರ ಎದುರಿಸಿದ ಆಧಾರಗಳು ದೊರೆಯುತ್ತವೆ. +ಈ ಊರು ಆ ಯುದ್ಧದಲ್ಲಿ ಸಂಪೂರ್ಣವಾಗಿ ನಾಶವಾಯಿತೆಂದೂ ಸ್ಥಳಗತೆಗಳು ಹೇಳುತ್ತವೆ. +ಈ ಸಮಯದಲ್ಲಿ ಕನಕದಾಸರು ಬಾಡದ ಆದಿಕೇಶವನ ಅಂಕಿತದಲ್ಲಿ ಕೀರ್ತನೆಗಳನ್ನು ರಚಿಸಿರಬೇಕು. +ಈ ಯುದ್ಧಗಳೊಂದಿಗೆ ವಿಜಯನಗರ ಸಾಮ್ರಾಜ್ಯ ಸಂಪೂರ್ಣವಾಗಿ ನಾಶವಾಯಿತೆಂದು ಹೇಳಬಹುದು. +ಬಾಡದ ಯುದ್ಧದಲ್ಲಿ ಸೋತನಂತರ, ವಿಜಯನಗರ ಸಾಮ್ರಾಜ್ಯದ ಅಭ್ಯುದಯ ಪತನ ಎರಡನ್ನೂ ಕಂಡ ಕನಕದಾಸರಿಗೆ ವೈರಾಗ್ಯವುಂಟಾಗಿದ್ದರೆ ಆಶ್ಚರ್ಯವಿಲ್ಲ. +ಈ ಹೊತ್ತಿಗೆ ಅವರ ಸೇನೆಯೂ ನಾಶವಾಗಿತ್ತು . +ಆದುದರಿಂದ ಕನಕನಾಯಕ ಕನಕದಾಸರಾಗಿ ಕಾಗಿನೆಲೆಯಲ್ಲಿ ನೆಲೆ ನಿಂತರೆಂದು ಹೇಳಲು ಸಾಕಷ್ಟು ಆಧಾರಗಳು ದೊರೆಯುತ್ತವೆ. +ಕನಕದಾಸರು ತಮ್ಮ ಕಾವ್ಯ ಮತ್ತು ಕೀರ್ತನೆಗಳಲ್ಲಿ ಉಲ್ಲೇಖಿಸಿರುವ ಸ್ಥಳಗಳಲ್ಲಿ ಬೇಲೂರಿಗೆ ಮೊದಲ ಸ್ಥಾನವೂ ಕಾಗಿನೆಲೆಗೆ ಎರಡನೆಯ ಸ್ಥಾನವೂ ದೊರೆತಿದೆ. +ಮಿಕ್ಕ ಊರುಗಳಲ್ಲಿ ಅವರು ಕೆಲಕಾಲ ಮಾತ್ರ ತಂಗಿರಬೇಕು. +ಆದುದರಿಂದ ಕನಕದಾಸರು ಬೇಲೂರು ಮತ್ತು ಕಾಗಿನೆಲೆಯಲ್ಲಿ ತಮ್ಮ ಜೀವಿತದ ಹೆಚ್ಚು ಕಾಲವನ್ನು ಕಳೆದಿರುವರೆಂಬುದರಲ್ಲಿ ಯಾವ ಸಂಶಯವೂ ಇಲ್ಲ. +ಆಹಾರ ಪದ್ಧತಿ ಮನುಷ್ಯನ ಮೂಲನೆಲೆಯನ್ನು ಕಂಡುಹಿಡಿಯುವಲ್ಲಿ ಮಹತ್ವದ ದಾಖಲೆಯಾಗುತ್ತದೆ. +ಮನುಷ್ಯ ತನ್ನ ಎಳವೆಯಲ್ಲಿ ಊಟೋಪಚಾರಗಳನ್ನು ಮುಂದೆ ಅವನು ಎಂಥದೇ ಸ್ಥಾನಮಾನಗಳಿಸಿದರೂ ಮರೆಯಲಾರ. +ಈ ಹಿನ್ನೆಲೆಯಲ್ಲಿ ಕನಕದಾಸರ ರಾಮಧಾನ್ಯ ಚರಿತ್ರೆ ಕನಕದಾಸರ ಆಹಾರ ರಾಗಿ ಎಂಬುದನ್ನು ಪ್ರತಿಪಾದಿಸುತ್ತದೆ. +ಈ ಸೇನೆಯಲ್ಲಿ ವಿಭಿನ್ನ ಆಹಾರಪದ್ಧತಿಯ ಲಂಕೆಯವರು, ಸುಗ್ರೀವನ ಕಡೆಯವರು ಇದ್ದರು. +ಋಷಿಗಳು ಹೆಡಗೆಗಳಲ್ಲಿ ಹೊರಿಸಿ ತರಿಸಿದ ಭಕ್ಷ್ಯ ಭೋಜ್ಯಗಳು ಈ ಸೈನಿಕರಿಗೆ ರುಚಿಸಿದವೋ ಇಲ್ಲವೋ ಎಂದುಕೊಂಡ ರಾಮ ಆಂಜನೇಯನನ್ನು ಕೇಳಿದ. +ಆಗ ಆಂಜನೇಯ ರಾಗಿಯನ್ನು ತನಿಯಾದ ಭಕ್ಷ್ಯ ಎಂದು ರಾಮನಿಗೆ ಹೇಳಿದ. +ಆಗ ರಾಮ ಎಲ್ಲಾ ಆಹಾರ ಧಾನ್ಯಗಳನ್ನು ತರಿಸಿದ. +ಅಲ್ಲಿ ಸೇರಿದ್ದ ಮುನಿಗಳೆಲ್ಲರೂ ತಮತಮಗೆ ಪ್ರಿಯವಾದ ಧಾನ್ಯವನ್ನು ಎತ್ತಿಹಿಡಿದರು. +ಇದರಿಂದ ರಾಮನಿಗೆ ಗೊಂದಲವಾಯಿತು. + ಕನಕದಾಸರು ರಾಗಿ ಮುಖ್ಯ ಆಹಾರವಾಗುಳ್ಳ ಪ್ರದೇಶದವರೆಂಬುದನ್ನು ಸಾಬೀತು ಪಡಿಸುತ್ತವೆ. +ಇಲ್ಲಿ ಮುಖ್ಯವಾಗಿ ಗಮನಿಸಬೇಕಾದ ಅಂಶವೆಂದರೆ ರಾಗಿಯೇ ನಮ್ಮ ದೇಶಕ್ಕೆ ಅತಿಶಯ ಆಹಾರ ಎಂದು ಹೇಳುವವನು ಗೌತಮಮುನಿ. +ಗೌತಮಕ್ಷೇತ್ರ ಅಪ್ಪಟ ರಾಗಿಯ ಪ್ರದೇಶವೆಂಬುದನ್ನೂ ಗಮನಿಸಬೇಕು. +ಕನ್ನಡ ನಾಡಿನ ರಾಗಿ ಬೆಳೆಯುವ ಪ್ರದೇಶವಾದ ಹಳೇ ಮೈಸೂರು ಭಾಗದಲ್ಲಿ ಅನೇಕ ರಾಗಿಯ ಪ್ರಾಚೀನ ತಳಿಗಳನ್ನು ಗ್ರಾಮಸ್ಥರು ಈಗಲೂ ಬೆಳೆಯುತ್ತಾರೆ. +ಅವುಗಳೆಂದರೆ ನರೆದಲಗ, ಬುಂಡಿಗ, ಕೆದರಿಗ, ಹೆಬ್ಬಳಿಗ ಇತ್ಯಾದಿ. +ಇವುಗಳ ತೆನೆಯ ಮುಂದೆ ಈಗಿನ ಇಂಡಾಫ್‌ ಇತ್ಯಾದಿ ರಾಗಿಯ ತಳಿಗಳು ಏನೇನೂ ಪ್ರಯೋಜನವಿಲ್ಲವೆಂದು ಹಳಬರು ಹೇಳುವುದುಂಟು. +ಈ ಪ್ರಾಚೀನ ರಾಗಿಯ ತಳಿಗಳಲ್ಲಿ ನರೆದಲಗ ಜಾತಿಯನ್ನು ವಿಶೇಷವಾಗಿ ಹಾಸನ ಜಿಲ್ಲೆಯಲ್ಲಿ ಬೆಳೆಯುತ್ತಾರೆ. +ಈಗಲೂ ಅಲ್ಲಿ ಬೇಲೂರು, ಹಾಸನ ಮತ್ತು ಹೊಳೆನರಸೀಪುರ ಪ್ರದೇಶದಲ್ಲಿ ಈ ಜಾತಿಯ ರಾಗಿಯನ್ನು ಪ್ರಧಾನವಾಗಿ ಬೆಳೆಯುತ್ತಾರೆ. +ಈ ಆಧಾರಗಳಿಂದ ಕನಕದಾಸರು ನರೆದಲಗನನ್ನು ಧಾನ್ಯಗಳ ಪಟ್ಟಿಯಲ್ಲಿ ಕೊಡುತ್ತಾರೆ. +ಆದುದರಿಂದ ಅವರು ಈ ಸ್ಥಳಕ್ಕೆ ಸಂಬಂಧಿಸಿದವರೆಂದು ಹೇಳಲವಕಾಶವಿದೆ. +ಧಾರ್ಮಿಕ ಪರಿಸರ ಮತ್ತು ರೀತಿ ನೀತಿಗಳು ಒಬ್ಬ ವ್ಯಕ್ತಿಯ ಮೂಲಸ್ಥಳವನ್ನು ಗುರುತಿಸುವಲ್ಲಿ ಸಹಾಯಕವಾಗುತ್ತವೆ. +ಕನಕದಾಸರ ಧಾರ್ಮಿಕ ನಿಲುವು ಅವರ ಮೋಹನತರಂಗಿಣಿ ಕಾವ್ಯದಲ್ಲಿ ಯಾವ ಸಂದಿಗ್ಧಕ್ಕೂ ಎಡೆಯಿಲ್ಲದಂತೆ ನಿರೂಪಿತವಾಗಿದೆ. +ಕನಕದಾಸರ ಮೇಲಿನ ಹೇಳಿಕೆ ಅವರು ರಾಮಾನುಜ ಪಂಥದ ವೈಷ್ಣವ ಧರ್ಮಾನುಯಾಯಿಗಳೆಂಬುದನ್ನು ಖಚಿತವಾಗಿಯೇ ಪ್ರತಿಪಾದಿಸುತ್ತದೆ. +ಅವರು ಬೇರಾವ ಧಾರ್ಮಿಕ ಮುಖಂಡರನ್ನೂ ಸ್ಮರಿಸಿರುವುದು ಅವರ ಸಾಹಿತ್ಯದಲ್ಲಿ ಕಂಡು ಬರುವುದಿಲ್ಲ. +ಕನ್ನಡನಾಡಿನಲ್ಲಿ ಪ್ರಧಾನವಾಗಿ ಈಗಿನ ಹಳೆಯ ಮೈಸೂರು ಭಾಗದಲ್ಲಿ ಈ ಧರ್ಮ ಇಂದಿಗೂ ಪ್ರಬಲವಾಗಿರುವುದನ್ನು ಕಾಣಬಹುದು. +ಧಾರ್ಮಿಕ ಮತ್ತು ರಾಜಕೀಯ ಒತ್ತಡಗಳಿಂದಾಗಿ ತಮಿಳುನಾಡಿನಿಂದ ಓಡಿಬಂದ ರಾಮಾನುಜಾಚಾರ್ಯ ಮೊದಲು ನೆಲೆ ನಿಂತುದು ನಾಗಮಂಗಲ ತಾಲ್ಲೂಕಿನ ಪಡುವಲ ಪಟ್ಟಣದ ಹತ್ತಿರವಿರುವ ಬಸವನ ಬೆಟ್ಟದ ಪಾಂಡವರ ಗುಹೆಯಲ್ಲಿ. +ಮುಂದೆ ತೊಂಡನೂರಿನಿ೦ದ ಆಳುತ್ತಿದ್ದ ಹೊಯ್ಸಳ ಯುವರಾಜ ಬಿಟ್ಟಿದೇವನ ಪರಿಚಯವಾಗಿ ಅಲ್ಲಿಗೆ ಹೋದರು. +ಒಂದನೆಯ ಬಲ್ಲಾಳನ ಅಕಾಲ ಮರಣದಿಂದಾಗಿ ಅಧಿಕಾರಕ್ಕೆ ಬಂದ ಬಿಟ್ಟಿದೇವ ನಾನಾ ಕಾರಣಗಳಿಗಾಗಿ ಶ್ರೀವೈಷ್ಣವ ಧರ್ಮ ಸ್ವೀಕರಿಸಿ ವಿಷ್ಣುವರ್ಧನನಾದ. +ಆಗ ರಾಮಾನುಜರ ನೆಲೆಹೊಯ್ಸಳರ ರಾಜಧಾನಿಯಾದ ಬೇಲೂರಿಗೆ ಸ್ಥಳಾಂತರವಾಯಿತು. +ರಾಜ ಒಪ್ಪಿದ ಧರ್ಮ ಆ ರಾಜ್ಯದಲ್ಲಿ ಪ್ರಚಾರವಾಗಿಯೇ ಆಗುತ್ತದೆ. +ಗ್ರಾಮಾಂತರ ಜನರು ಕೂಡ ಈ ಧರ್ಮವನ್ನು ಆಚರಿಸಿದರು ಮತಾಂತರವಾಗದೆ. +ಈಗಲೂ ಬೇಲೂರಚನ್ನಕೇಶವನಿಗಾಗಲಿ, ಮೇಲುಕೋಟೆಯ ಚಲುವರಾಯನಿಗಾಗಲಿ ಗ್ರಾಮಾಂತರದ ಭಕ್ತರೇ ಹೆಚ್ಚು. + ಈ ಜನರಲ್ಲಿ ಶಿವ ವಿಷ್ಣುಗಳಲ್ಲಿ ಯಾವ ಭೇದವೂ ಇಲ್ಲ. +ಕನಕದಾಸರೂ ಕೂಡ ಈ ಸಂಪ್ರದಾಯದ ಗ್ರಾಮಾಂತರ ಧಾರ್ಮಿಕ ಸಂಸ್ಕೃತಿಗೆ ಸೇರಿದವರು. +ಹರಿಯ ಮಹಿಮೆಯನ್ನು ಹೇಳುವ ಕಾವ್ಯದ ಮೊದಲನೆಯ ಪದ್ಯದಲ್ಲಿಯೇ ಗಿರಿಜೆಯರಸನನ್ನು ನೆನೆಯುತ್ತಾರೆ. +ಆದುದರಿ೦ದ “ಕನಕದಾಸರು ಮಾಧ್ವರೋ ರಾಮಾನುಜೀಯರೊ ಎಂಬ ಬಗ್ಗೆ ವಾದ ವಿವಾದ ನಡೆದಿದೆ. +ಅವರ ಕಾವ್ಯಗಳಲ್ಲಿ ಕ್ವಚಿತ್ತಾಗಿ ಗೋಚರಿಸುವ ಕೆಲವು ಶಿಥಿಲ ಕಾರಣಗಳಿಂದ ಅವರನ್ನು ಆ, ಈ ಪಂಗಡಕ್ಕೆ ಸೇರಿಸುವುದುಂಟು. +ಆದರೆ ಅವರು ಯಾವ ಮತವನ್ನೂ ತಿರಸ್ಕರಿಸದೆ, ಯಾವ ದೇವರನ್ನೂ ಬಹಿಷ್ಕರಿಸದೆ ಎಷ್ಟು ಶಿವರಲ್ಲಿ ಭೇದವೆಣಿಸದೆ ಆತ್ಮಸಾಕ್ಷಾತ್ಕಾರ ಮಾಡಿಕೊಂಡು ಕಾವ್ಯಕ್ಷೇತ್ರ ಆಧ್ಯಾತ್ಮಿಕ ಕ್ಷೇತ್ರಗಳೆರಡರಲ್ಲಿಯೂ ಸಮಾನ ಖ್ಯಾತಿಯನ್ನು ಗಳಿಸಿದ ಮಹಾನುಭಾವರು.” +ಪರಿಸರ, ಆ ಪರಿಸರದ ಮರಗಿಡ, ಪ್ರಾಣಿಪಕ್ಷಿ ಮಳೆಬೆಳೆಗಳು ಒಬ್ಬ ವ್ಯಕ್ತಿಯ ಮೂಲಸ್ಥಳವನ್ನು ಗುರುತಿಸುವಲ್ಲಿ ಸಹಾಯಕವಾಗುತ್ತವೆ. +ಕನಕದಾಸರ ಕಾವ್ಯಗಳಲ್ಲಿ ಬರುವ ಈ ಪರಿಸರ ಪ್ರಜ್ಞೆಯನ್ನು ಗಮನಿಸಿದ ಯಾರಿಗಾದರೂ ಈ ಕವಿಗೆ ಗ್ರಾಮಾಂತರ ಬದುಕಿನ ದಟ್ಟವಾದ ಅನುಭವವಿರುವುದು ಕಂಡುಬರುತ್ತದೆ. +ಕನಕದಾಸರು ತಾವು ತಮ್ಮ ಬಾಲ್ಯ ಮತ್ತು ಯೌವ್ಹನಗಳಲ್ಲಿ ಕಂಡ ಪ್ರಾಣಿ ಪಕ್ಷಿಗಳ ಚಿತ್ರ ಇಲ್ಲಿ ಧ್ವನಿತಗೊಂಡಿದೆ. +ಮೇಲಿನ ಎಲ್ಲ ಪರಿಸರಕ್ಕೆ ಸಂಬಂಧಿಸಿದ ಉದಾಹರಣೆಗಳು ಕನಕದಾಸರು ಒಂದು ಕಡೆ ಮಲೆನಾಡನ್ನೂ ಒಂದು ಕಡೆ ಬಯಲುನಾಡನ್ನೂ ಕೂಡಿಸುವ ಸ್ಥಳದವರೆಂಬುದನ್ನು ಧ್ವನಿಸುತ್ತವೆ. +ಭಾಷೆ ಮನುಷ್ಯನ ಮೂಲ ಸ್ಥಳವನ್ನು ಗುರುತಿಸುವಲ್ಲಿ ಅಂತಿಮ ತೀರ್ಮಾನ ಎಂದು ಅಭಿಪ್ರಾಯವಿದೆ. +ಪ್ರತಿಭಾನ್ವಿತ ಕವಿ, ಗಾಯಕರ ರಚನೆಗಳಲ್ಲಿ ಅವನ ಪರಿಸರದ ಭಾಷೆ ನುಡಿಗಟ್ಟು, ಗಾದೆ ಮುಂತಾದುವುಗಳು ಒಂದಲ್ಲ ಒಂದು ರೀತಿಯಲ್ಲಿ ಅಭಿವ್ಯಕ್ತವಾಗುತ್ತವೆ. +ಕನಕದಾಸರ ಸಾಹಿತ್ಯದಲ್ಲಿ ಇಂತಹ ಲೆಕ್ಕವಿಲ್ಲದಷ್ಟು ಭಾಷಾಪ್ರಯೋಗಗಳು ಕಂಡುಬರುತ್ತವೆ. +ಅವುಗಳಲ್ಲಿ ಕೆಲವು,ಕನಕದಾಸರ ಸಾಹಿತ್ಯದಲ್ಲಿ ದೊರೆಯುವ ಗ್ರಾಮ್ಯ ಪದಗಳನ್ನು ಕಾಣಬಹುದು. +ಕಂಡಿ, ಕೊಂಪೆ, ಹೊಲ, ಬೀಜ, ನೇಗಿಲು, ಎತ್ತು,ಹೂಡು,ಹಗ್ಗ, ಗಿಡ ಮರ, ಗೊಂಬೆ, ನಾಟಕ, ಬಾಡು, ನೆಂಟ, ಹೆಂಟೆ, ಮೂಡೆ,ವಾಡೆ, ಬೀಡು, ಹಾದಿ, ಬೀದಿ, ರಾಗಿ, ಭತ್ತ ತಂದೆ, ಅಣ್ಣ, ತಮ್ಮ ಅಕ್ಕ, ಅತ್ತೆ,ಮಾವ, ಹೆಂಡ್ರಿ, ಮಕ್ಳು, ಎಳ್ಳು ಹೊತ್ತಾರೆ, ರಾಗಿಕಲ್ಲು, ಉಂಡ, ಹಟ್ಟ, ಕೊಟ್ಟಿಗೆ,ಪೆಟ್ಟಿಗೆ, ಬಚ್ಚಲು ಇತ್ಯಾದಿ . +ಈ ಎಲ್ಲವೂ ಕನಕದಾಸರು ಭಾಷೆಯ ದೃಷ್ಟಿಯಿಂದ ಕೂಡ ದಕ್ಷಿಣ ಕರ್ನಾಟಕದ ಗ್ರಾಮಾಂತರ ಪ್ರದೇಶಕ್ಕೆ ಸೇರಿದವರೆಂಬುದನ್ನು ಖಚಿತವಾಗಿಯೆ ಸಾಬೀತು ಪಡಿಸುತ್ತವೆ. +ಕನಕದಾಸರ ಜಾತಿಯ ಬಗೆಗೂ ಸ್ವಲ್ಪ ಮಟ್ಟನ ವಿವಾದವಿದೆಯಷ್ಟೆ. +ಈ ಸಮಸ್ಯೆಯನ್ನು ಅವರ ಸಾಹಿತ್ಯವೇ ಅತ್ಯಂತ ಸುಲಭವಾಗಿ ಪರಿಹರಿಸುತ್ತದೆ. +ನಾಯಕ ಎಂಬುದರಿಂದ ಕೆಲವರು ಇವರನ್ನು ಜಾತಿಯಲ್ಲಿ ಬೇಡರೆಂದು ಊಹಿಸಲವಕಾಶವಾಗಿರಬಹುದು. +ಆದರೆ ಇಲ್ಲಿ ನಾಯಕ ಎಂಬುದು ಸೇನೆಯ ಒಂದು ಹಂತ . +ಈಗಲೂ ಭಾರತೀಯ ಸೇನೆಯಲ್ಲಿ ನಾಯಕ್‌ಸುಬೇದಾರ್‌ಎಂಬ ಒಂದು ಹುದ್ದೆಯಿದೆ. +ಅಲ್ಲದೆ ಈ ರೀತಿ ಸೇವೆಯಲ್ಲಿ ಪಾಲುಗೊಂಡ ಬೇಲೂರು ಸುತ್ತಿನ ಅನೇಕ ಒಕ್ಕಲಿಗರು, ಕುರುಬರು ಇತ್ಯಾದಿಯವರು ಸಗನನಾಯಕ, ಚಿಕ್ಕನಾಯಕ, ಅಣ್ಣಯ್ಯ ನಾಯಕ ಎಂದು ಹೆಸರಿಟ್ಟುಕೊಂಡಿರುವ ಸಂಪ್ರದಾಯ ಈಗಲೂ ಪ್ರಚಲಿತವಿದೆ. +ಕನಕನಾಯಕ ಎಂಬುದು ಸೇನೆಯ ಹುದ್ದೆಯ ಸೂಚಕವೇ ವಿನಹ ಜಾತಿಯ ಸೂಚಕವಲ್ಲ. +ಕನಕದಾಸರು ಹುಟ್ಟಬಂದ ಜಾತಿಯ ಬಗ್ಗೆ ಅವರದೇ ಉದಾಹರಣೆಗಳನ್ನು ನೋಡಬಹುದು. +ಕನಕದಾಸರು ಯಾವುದಕ್ಕೆ ಬೇಕಾದರೂ ಈ ಪ್ರತಿಮೆಗಳನ್ನು ಹಿಡಿದಿರಲಿಕೋಲು ಹಿಡಿದು ಆಡು, ಕುರಿಗಳನ್ನು ಕಾಯ್ದವನಿಗಲ್ಲದೆ ಬೇರೆಯವರಿಗೆ ಈ ಚಿತ್ರಗಳನನ್ನು ಕೊಡಲು ಸಾಧ್ಯವೇ ಇಲ್ಲ. +ಅಲ್ಲದೆ ತಾನು ಕಾಗಿನೆಲೆಯಾದಿ ಕೇಶವನನ್ನು ಭಜಿಸುವ ಹುಚ್ಚು ಕುರುಬ ಎಂದು ಕವಿಯೇ ಹೇಳಿಕೊಂಡಿರುವುದರಿಂದ ಕನಕದಾಸರ ಜಾತಿಯ ಬಗೆಗೆ ಸಂಶಯಗಳು ಉಳಿಯುವುದಿಲ್ಲ. +ಕನಕದಾಸರು ಯೋಧರು, ಯುದ್ಧಗಳಲ್ಲಿ ಪಾಲುಗೊಂಡವರು ಎಂಬುದಕ್ಕೆ ಕೂಡ ಅವರ ಸಾಹಿತ್ಯದಲ್ಲಿ ವಿಪುಲವಾದ ಉದಾಹರಣೆಗಳು ದೊರೆಯುತ್ತವೆ. +ವಿಜಯನಗರದ ಸೇನೆಯ ಬಾಹುಳ್ಯವನ್ನು ಕುರಿತು ಅನೇಕ ವಿದೇಶಿ ಪ್ರವಾಸಿಗರು ವಿವರಿಸಿದ್ದಾರೆ. +ನ್ಯೂನಿಜ್‌ ಎಂಬ ಪ್ರವಾಸಿ “ಕೃಷ್ಣದೇವರಾಯನ ಸೇನೆಯು ಹತ್ತು ಲಕ್ಷ ಪದಾತಿಗಳಿಂದಲೂ ಐದು ಸಾವಿರ ಗಜಗಳಿಂದಲೂ ಕೂಡಿತ್ತು” ಎಂದು ವರ್ಣಿಸಿದ್ದಾನೆ. +ಈ ಹಿನ್ನೆಲೆಯಲ್ಲಿ ಕನಕದಾಸರು ವಿಜಯನಗರ ಸೇನೆಯಲ್ಲಿದ್ದರೆಂಬುದು ನಿಸ್ಸಂಶಯವಾಗಿದೆ. +ಕನಕದಾಸರ ಕಾಲದಲ್ಲಿ ಚಾತುರ್ವರ್ಣ್ಯ ಪದ್ಧತಿ ಪ್ರಬಲವಾಗಿಯೇ ಜಾರಿಯಲ್ಲಿದ್ದಿತು. +ಅದರ ಬಿಸಿಯನ್ನು ಕನಕದಾಸರು ಅಪಾರವಾಗಿಯೇ ಅನುಭವಿಸಿರಬೇಕು. +ಉತ್ತಮ ಕುಲದವರ ಹೀಯಾಳಿಕೆಗೆ ಗುರಿಯಾಗಿರಬೇಕು. +ಈ ನೋವು ಅವರ ಸಾಹಿತ್ಯದಲ್ಲಿ ವಿಪುಲವಾಗಿಯೇ ಕಂಡುಬರುತ್ತದೆ. +ವರ್ಣಪದ್ಧತಿ ಜಾರಿಯಲ್ಲಿತ್ತು ಎಂಬುದಕ್ಕೆ ಉದಾಹರಣೆಗಳು. +ಇಂತಹ ವಾತಾವರಣದಲ್ಲಿ ಕವಿಯಾದ ಕನಕದಾಸರು ಈ ವರ್ಣದ ಕಹಿಯನ್ನು ಉಂಡವರು. +ಪ್ರಾಯಃ ಯಾವುದೋ ಒಂದು ಸಂದರ್ಭದಲ್ಲಿ ಕನಕದಾಸರು ಹಂಪೆಯಲ್ಲಿ ವ್ಯಾಸರಾಯರನ್ನು ಕಂಡಿರಬಹುದು. +ಆಗ ಕನಕದಾಸರ ಪ್ರತಿಭೆಯನ್ನು ಗುರುತಿಸಿ ಗೌರವಿಸಿರಬೇಕು. +ಇದನ್ನು ಸಹಿಸದ ವ್ಯಾಸರಾಯರ ಶಿಷ್ಯರು ಹಂಗಿಸಿರಬೇಕು. +ಆದುದರಿಂದಲೇ ಕನಕದಾಸರು“ಕನಕದಾಸರ ಮೇಲೆ ದಯೆ ಮಾಡಲು ವ್ಯಾಸಮುನಿ ಮಠದವರೆಲ್ಲದೂರಿಕೊಂಬರೊ” ಎಂದಿರುವುದಷ್ಟೇ ಅಲ್ಲ ಈ ಮತಾಂಧರಿಗೆ ಸೂಕ್ತ ಉತ್ತರವನ್ನು ನೀಡಿದ್ದಾರೆ. +ಮೇಲಿನ ಮಾತುಗಳು ಕನಕದಾಸರು ಅನುಭವಿಸಿದ ಮತೀಯ ವರ್ತನೆಗಳ ಕಹಿ ಅನುಭವದಿ೦ದ ಮೂಡಿದ ನೋವಿನ ಸವಿಯಾಗಿವೆ. +ಹೀಗೆ ಅವರ ಒಟ್ಟು ಜೀವನವನ್ನು ಪರಿಶೀಲಿಸಿದಾಗ ಒಬ್ಬ ಸಾಮಾನ್ಯ ಹಳ್ಳಿಯ ಹುಡುಗ ತನ್ನ ಸ್ವಪ್ರತಿಭೆ ಮತ್ತು ಸ್ವಶಕ್ತಿಯಿಂದ ಅಧ್ಯಾತ್ಮದ ಉತ್ತುಂಗಕ್ಕೇರಿದ ಪವಾಡದ ಕಥನವಾಗುತ್ತದೆ. +ಕನಕದಾಸರ ಬಗೆಗಿನ ಈ ಎಲ್ಲ ಆಧಾರಗಳು ಅವರು ದಕ್ಷಿಣ ಕರ್ನಾಟಕ ಭಾಗದವರು, ವಿಶೇಷವಾಗಿ ಹಾಸನ ಜಿಲ್ಲೆಯ ಯಾವುದೋ ಹಳ್ಳಿಯಲ್ಲಿ ಹುಟ್ಟಿದವರೆಂಬುದನ್ನು ನಿಸ್ಸಂದಿಗ್ಧವಾಗಿ ಪ್ರತಿಪಾದಿಸುತ್ತವೆ. +ಆದುದರಿಂದ ಕನಕದಾಸರು ಹಾಸನ ಜಿಲ್ಲೆಯ ಒಂದು ಹಳ್ಳಿಯ ಕುರುಬ ಮನೆತನದಲ್ಲಿ ಹುಟ್ಟಿದವರು. +ಎಳವೆಯಲ್ಲಿಯೇ ಕಾರಣಾಂತರದಿಂದ ಮನೆಬಿಟ್ಟ ಇವರು ಮುಂದೆ ವಿಜಯನಗರದ ಸೇನೆಯನ್ನು ಸೇರಿದರು. +ಸೇನೆಯಲ್ಲಿ ಅವರು ತೋರಿದ ಕಾರ್ಯ ಸಾಹಸಗಳಿಂದಾಗಿ ಅವರಿಗೆ ನಾಯಕ ಪದವಿ ದೊರೆಯಿತು. +ಕೃಷ್ಣದೇವರಾಯನ ಸೇನೆ ಉಮ್ಮತ್ತೂರು, ಶ್ರೀರಂಗಪಟ್ಟಣ, ನಂಜರಾಜಪಟ್ಟಣಗಳ ಮೇಲೆ ದಂಡೆತ್ತಿ ಬಂದಾಗ ಕನಕದಾಸರೂ ಅದರಲ್ಲಿದ್ದರು. +ಆದುದರಿಂದಲೇ ಅವರು ಆ ಊರುಗಳ ಆದಿಕೇಶವರ ಅಂಕಿತದಲ್ಲಿ ಕೀರ್ತನೆಗಳನ್ನು ರಚಿಸಿದರು. +ಸಾಮ್ರಾಜ್ಯದಲ್ಲಿ ಶಾಂತಿ ನೆಲಸಿದುದರಿಂದ ಸೇನೆ ಬೇಲೂರಿನಲ್ಲಿ ನಿಂತಿತು. +ಅಲ್ಲಿ ಸೇನೆ ನಿಲ್ಲಲು ತಮ್ಮ ತಾಯಿ ನೆಲದ ದೃಷ್ಟಿಯಿಂದ ಕನಕದಾಸರೇ ಕಾರಣರೂ ಆಗಿರಬಹುದು. +ಆ ಬಿಡುವಿನ ಸಮಯದಲ್ಲಿ ಚಿಕ್ಕಂದಿನಿಂದ ಅವರನ್ನು ತಾಳೆಮದ್ದಳೆ ಮತ್ತು ಯಕ್ಷಗಾನ ರೂಪದಲ್ಲಿ ಆಕರ್ಷಿಸಿದ್ದ ನಳಚರಿತ್ರೆಯನ್ನು ಭಾಮಿನಿಯಲ್ಲಿ ರಚಿಸಿ ಹಾಡಿದರು. +ಇದನ್ನು ಕೇಳಿದ ಉತ್ತಮ ವರ್ಗದವರು,ಶೂದ್ರನಿಗೆ ಕಾವ್ಯರಚನೆ ಸಾಧ್ಯವೆ ? ಎಂದರು. +ಅದಕ್ಕೆ ಉತ್ತರವಾಗಿ ಕನಕದಾರು ರಾಮಧಾನ್ಯಚರಿತೆ ರಚಿಸಿ ಅವರಿಗೆ ಉತ್ತರ ಕೊಟ್ಟರು. +ಮುಂದೆ ಹರಿಭಕ್ತಿಸಾರ ಮತ್ತು ಅನೇಕ ಕೀರ್ತನೆಗಳನ್ನು ಬೇಲೂರು ಚೆನ್ನಕೇಶವನ ಅಂಕಿತದಲ್ಲಿ ರಚಿಸಿ ಹಾಡಿದರು. +ಕೃಷ್ಣದೇವರಾಯನ ಆಡಳಿತದ ಕೊನೆಯ ದಿನಗಳಲ್ಲಿಯೇ ವಿಜಯನಗರದ ಶಾಂತಿಯ ದಿನಗಳು ಮುಗಿದವು. +ಬಹಮನಿ ಸುಲ್ತಾನರು ಮತ್ತೆ ವಿಜಯನಗರದ ಮೇಲೆ ತಮ್ಮ ದಾಳಿಯನ್ನು ಆರಂಭಿಸಿದರು. +ರಾಯಚೂರಿನ ಕನಕಗಿರಿಯ ಹತ್ತಿರ ಎರಡೂ ಸೇನೆಗಳಿಗೂ ಘೋರ ಯುದ್ಧ ನಡೆಯಿತು. +ಕನಕದಾಸರ ಸೇನೆಯೂ ಈ ಯುದ್ಧದಲ್ಲಿ ಪಾಲುಗೊಂಡಿತು. +ಆಗ ಕನಕದಾಸರು ಕನಕಗಿರಿಯ ಆದಿಕೇಶವನ ಅಂಕಿತದಲ್ಲಿ ಕೀರ್ತನೆಗಳನ್ನು ರಚಿಸಿದರು. +ಈ ಯುದ್ಧದಲ್ಲಿ ವಿಜಯನಗರಕ್ಕೆ ಜಯ ದೊರೆಯಿತು. +ರಾಯಚೂರನ್ನು ವಿಜಯನಗರ ಮತ್ತೆ ವಶಪಡಿಸಿಕೊಂಡಿತು. +ಕನಕದಾಸರ ಸೇನೆ ಅಲ್ಲಿಯೇ ಕೆಲವು ಕಾಲ ಬೀಡುಬಿಟ್ಟಿತು. +ಈಗ ಆಧುನಿಕ ಯುಗದಲ್ಲೂ ಈ ಪದ್ಧತಿ ಇದೆ. +ಶ್ರೀ ಕುವೆಂಪು ಅವರ ಶೂದ್ರತಪಸ್ವಿ ಕುರಿತು ಮಾಸ್ತಿ ಮುಂತಾದ ಉತ್ತಮ ಕುಲದವರು ಟೀಕೆ ಮಾಡಿದಾಗ ಕುವೆಂಪು ಮಾರ್ನುಡಿ ಬರೆದರು. +ಆಗ ಕನಕದಾಸರು ಆ ಭಾಗದಲ್ಲೆಲ್ಲಾ ಸುತ್ತಾಡಿದರೆಂಬುದಕ್ಕೆ ಅವರ ಸಾಹಿತ್ಯದಲ್ಲಿ ಆಧಾರಗಳು ದೊರೆಯುತ್ತವೆ. +ಕೃಷ್ಣದೇವರಾಯನ ಸಾವಿನೊಂದಿಗೆ ವಿಜಯನಗರದ ಅರಸರಲ್ಲಿ ಅನೈಕ್ಯತೆ ಉಂಟಾಯಿತು. +ಇದನ್ನು ಅರಿತ ಬಹಮನಿ ಸುಲ್ತಾನರು ಸಂಘಟಿತರಾಗಿ ಮತ್ತೆ ವಿಜಯನಗರದ ಮೇಲೆ ಎಲ್ಲಾ ಕಡೆಯಿಂದಲೂ ದಾಳಿಯನ್ನು ಆರಂಭಿಸಿದರು. +ಗುಲ್ಬರ್ಗಾ ಸುಲ್ತಾನರು ರಾಯಚೂರು ಕಡೆಯಿಂದಲೂ, ಬಿಜಾಪುರ ಸುಲ್ತಾನರು ಧಾರವಾಡದ ಕಡೆಯಿಂದಲೂ ತಮ್ಮ ದಾಳಿಯನ್ನು ಆರಂಭಿಸಿದರು. +ಸುಲ್ತಾನರ ಈ ದಾಳಿಯನ್ನು ಒಂದು ಕಡೆ ಎಚ್ಚಮನಾಯಕ, ಮತ್ತೊಂದು ಕಡೆ ಕನಕನಾಯಕ ಎದುರಿಸಿ ಹಿಂದೂ ಸಾಮ್ರಾಜ್ಯವನ್ನು ರಕ್ಷಿಸಲು ಸರ್ವ ಪ್ರಯತ್ನವನ್ನೂ ಮಾಡಿದರು. +ವಿಜಾಪುರದ ಸೇನೆ ಮತ್ತು ವಿಜಯನಗರದ ಸೇನೆಗಳು ಈಗಿನ ರಾಣಿಬೆನ್ನೂರಿನ ಸುತ್ತ ಮುತ್ತ ಅಹರ್ನಿಶಿ ಹೋರಾಡಿದ ಆಧಾರಗಳಿವೆ. +ವಿಜಯನಗರದ ಈ ಸೇನೆಯ ನಾಯಕರಾಗಿದ್ದವರು ಕನಕದಾಸರು ಎಂದು ತಿಳಿಯಬಹುದಾಗಿದೆ. +ಆಗ ಬಾಡ ಒಂದು ಮುಖ್ಯ ಸ್ಥಳವಾಗಿದ್ದು ಸುಲ್ತಾನನ ಸೇನೆ ಅದನ್ನು ಮುತ್ತಿತು. +ವಿಜಯನಗರ ಸೇನೆ ಜೀವನದ ಹಂಗು ತೊರೆದು ಹೋರಾಡಿತು. +ಆದರೆ ಅವರಿಗೆ ಅಪಜಯ ಕಾದಿತ್ತು. + ಗುಡಿಗೋಪುರಗಳೂ,ಮನೆಮಠಗಳು ಮುಸಲ್ಮಾನರ ದಾಳಿಗೆ ತುತ್ತಾಗಿ ನೆಲಕಚ್ಚಿದವು. +ಕನಕದಾಸರು ಈ ಭಿನ್ನಾವಶೇಷಗಳಲ್ಲಿ ಅಲೆದಾಡಿದರು. +ಅವರು ತಮ್ಮ ಜೀವಿತ ಕಾಲದಲ್ಲಿಯೇ ಆ ಸಾಮ್ರಾಜ್ಯದ ಉತ್ತುಂಗತೆ ಮತ್ತು ಅವನತಿಯನ್ನು ಕಂಡರು. +ಹರಿಸಿದ ರಕ್ತಪಾತ ಆದ ಸಾವು ನೋವು ಆಧ್ಯಾತ್ಮಿಯಾದ ಅವರ ಮನಕಲಕಿ ವಿರಾಗದ ಕಡೆ ಎಳೆದವು. +ಮತ್ತೆ ತಮ್ಮ ತಾಯ್ನಾಡಿಗೆ ಹೋಗುವ ಆಸೆಯೂ ಉಳಿಯಲಿಲ್ಲ. +ಅವರ ಪ್ರೀತಿಯ ಬೇಲೂರು ಹಳೆಬೀಡುಗಳೂ ಮುಸಲರ ದಾಳಿಗೆ ತುತ್ತಾಗಿ ಹಾಳಾಗಿದ್ದವು. +ಕನಕದಾಸರ ಮನಸು ಇದರಿಂದ ರೋಸಿ ಹೋಯಿತು. +ಅವರು ಈ ಎಲ್ಲಾ ಲೌಕಿಕವನ್ನು ತೊರೆದು ವಿರಾಗಿಯಾದರು. +ಬಾಡದಿಂದ ಕಾಗಿನೆಲೆಗೆ ಹೋದರು. +ಅದು ಈ ದಾಳಿಗೆ ತುತ್ತಾಗಿರಲಿಲ್ಲ. +ಅಲ್ಲಿ ಅವರು ನಿಂತರು. +ತಮ್ಮ ಆರಾಧ್ಯ ದೈವ ಆದಿಕೇಶವನ ಒಂದು ಚಿಕ್ಕಗುಡಿಯನ್ನು ಕಟ್ಟಿಸಿಕೊಂಡರು. +ತಾವು ಕಂಡ ವಿಜಯನಗರದ ವೈಭವವನ್ನು ತಾವು ಮೆಚ್ಚಿದ ಕೃಷ್ಣದೇವರಾಯನನ್ನು ಮೋಹನ ತರಂಗಿಣಿ ಕಾವ್ಯರಚಿಸಿ ಹಾಡಿ ಚಿರಂತನಗೊಳಿಸಿದರು. +ಮತ್ತೆ ಯಾವುದೇ ಆಸೆ ಉಳಿಯಲಿಲ್ಲ. +ಆದಿಕೇಶವನನ್ನು ಕುರಿತು ಹಾಡಿದರು. +ಹಾಡು ಹಾಡುತ್ತಲೇ ಇಹವನ್ನು ತೊರೆದರು. +ಅವೇ ಇಂದು ಕಾಗಿನೆಲೆಯಾದಿ ಕೇಶವನ ಅಂಕಿತದಲ್ಲಿ ಇರುವ ಕನಕದಾಸರ ಕೀರ್ತನೆಗಳು. +ಕನಕದಾಸರು ಹೀಗೆ ಹಾಸನ ಜಿಲ್ಲೆಯ ಹಳ್ಳಿಯ ಒಂದು ಕುರುಬ ಮನೆತನದಲ್ಲಿ ಹುಟ್ಟಿ ಕವಿಯಾಗಿ, ಕಲಿಯಾಗಿ, ಸಂತರಾಗಿ ಕಾಗಿನೆಲೆಯ ಆದಿಕೇಶವನಲ್ಲಿ ಐಕ್ಯಗೊಂಡರು. +ಶ್ರೀಮನ್ಮಧ್ವಾಚಾರ್ಯರ, ರಾಮಾನುಜಾಚಾರ್ಯರ, ಶಂಕರಾಚಾರ್ಯರ ಹಾಗೂ ವೀರಶೈವ ದಾರ್ಶನಿಕರ ದ್ವೈತ-ವಿಶಿಷ್ಟಾದ್ವೈತ-ಅದ್ವೈತ-ಶಕ್ತಿ ವಿಶಿಷ್ಟಾದ್ವೈತ-ಸಿದ್ಧಾಂತ-ಪ್ರಮೇಯಗಳ ಆಧಾರದ ಮೇಲೆ ರೂಪುಗೊಂಡ ಭಕ್ತಿಪಂಥಗಳು ಕರ್ನಾಟಕದಲ್ಲಿ ೧೪-೧೫-೧೬ನೆಯ ಶತಮಾನಗಳುದ್ದಗಲಕ್ಕೂ ವಿಜೃಂಭಿಸಿವೆ. +ಬಸವಣ್ಣನವರ ಷಟ್‌ಸ್ಥಲ ಸಿದ್ಧಾಂತದ ಷಡ್ಡಿಧ ಭಕ್ತಿಪಂಥ ಶರಣಮಾರ್ಗವಾಗಿ ಕರ್ನಾಟಕಾಂಧ್ರಾದಿ ಭಾಗಗಳಲ್ಲಿ ಏತತ್ದೂರ್ವದಲ್ಲೆಲ್ಲ ಪ್ರಸಾರಗೊಂಡಿತ್ತು. +ಜನಾಂಗವನ್ನು ಕಟ್ಟಲು ಆರ್ಯ ಸಂಸ್ಕೃತಿಯನ್ನು ರಕ್ಷಿಸಲು ಇಂಥ ಭಕ್ತಿಮಾರ್ಗಕ್ಕಿಂತ ಪ್ರೌಢತಮ ವೇದಾಗಮೋಪನಿಷತ್‌ ಜ್ಞಾನಮಾರ್ಗಗಳು ಆಗ ಸಾಮಾನ್ಯ ಜನಜಾಗೃತಿಗೆ ಪ್ರಶಸ್ತವಾಗಿರಲಿಲ್ಲ. +ಜನ ಜಾಗೃತಿಗೆ ಅದು ಅತ್ಯಂತ ಮಹತ್ವದ ಕಾಲವಾಗಿತ್ತು . +ಕಾರಣ : ಹಿಂದೂ ಸಂಸ್ಕೃತಿಯ ವಿನಾಶಕ್ಕೆ ಒದಗಿದ್ದ ಪರಕೀಯರ ರಕ್ತವನ್ನೇ ಹೆಪ್ಪಗಟ್ಟಿಸುವಂತಹ ಕರಾಳ ಕೃತ್ಯಗಳು. +ಆಗಿನ ಭಾರತೀಯರಿಗೆ ತಮ್ಮ ಉಳಿವಿಗಾಗಿ ಭಕ್ತಿಪಂಥದ ಮಾರ್ಗವನ್ನನುಸರಿಸಿ ನೆಮ್ಮದಿಗೊಳ್ಳುವುದಕ್ಕಿಂತ ಬೇರೆ ಮಾರ್ಗಗಳು ಅನುಕೂಲಕರವಾಗಿ ಪರಿಣಮಿಸಲಿಲ್ಲ. +ಇದಕ್ಕೆಲ್ಲ ಭಾರತದಲ್ಲಿ ಆಗ ಕ್ಷಾತ್ರಶಕ್ತಿಗೆ ಕವಿದಿದ್ದ ಕತ್ತಲು ಕಾರಣ ಎನ್ನಬಹುದು. +ಸುಸಂಸ್ಕೃತರು ಆತ್ಮಶಕ್ತಿಯ ಬೆಳವಣಿಗೆಯನ್ನು ಬದಿಗಿರಿಸಿ, ಸರ್ವಜ್ಞನೂ, ಸರ್ವ ಕರ್ತೃವೂ,ಸರ್ವವ್ಯಾಪಕನೂ ಆದ ಪರಮಾತ್ಮನೇ ನಮಗೆ ದಾತಾರ-ಕರ್ತಾರ-ಭರ್ತಾರ-ಹರ್ತಾರ ; +ಎಲ್ಲವನ್ನೂ ಅವನಿಂದಲೇ ಬೇಡಿ ಪಡೆದು ಸುಖಿಸಬೇಕು. +ಇಂತಹ ನಂಬಿಕೆಗಳನ್ನು ಪುರಾಣ ಪ್ರಜ್ಞೆಯಿಂದ ಜನತೆಯಲ್ಲಿ ಬಿತ್ತಿ ಅವರಲ್ಲಿ ಸ್ಥೈರ್ಯ-ಧೈರ್ಯ-ನೆಮ್ಮದಿ-ಮನರಂಜನೆ-ಆದ್ಯಾತ್ಮಿಕ ನಿಲುವು ಸಾಮಾಜಿಕ ಪ್ರಜ್ಞೆಯನ್ನುಂಟುಮಾಡುವುದು ಅನಿವಾರ್ಯವೂ ಆಯಿತೆಂದು ತೋರುತ್ತದೆ. +ರಾಷ್ಟ್ರಸಂಘಟನೆಗೆ ಆ ಕಾಲದಲ್ಲಿ ಯತ್ಕಿಂಚಿತ್‌ ಸಹಾಯವಾಯಿತೆನ್ನಬಹುದು. +ಇಂಥ ಭಕ್ತಿಪಂಥದ ಗಾಳಿ ಕೇವಲ ಕರ್ನಾಟಕದಲ್ಲಿ ಬೀಸಿತೆಂದಲ್ಲ ; +ಸಮಕಾಲೀನ ಭಾರತದ ಉದ್ದಗಲಕ್ಕೂ ಮುಖ್ಯವಾಗಿ ದಕ್ಷಿಣ ಭಾರತದಲ್ಲಿ ಬೀಸಿರುವುದನ್ನು ಕಾಣುತ್ತೇವೆ. +ಕರ್ನಾಟಕದಲ್ಲಿ ಶ್ರೀಮನ್ಮಧ್ವಾಚಾರ್ಯರ ಪ್ರಮೇಯಗಳ ಮೂಲಕ ರೂಪುಗೊಂಡ ಭಕ್ತಿಪಂಥದ ಹರಿಕಾರರಾಗಿ ಹಿಂದೂ ಸಮಾಜದಲ್ಲಿ ಜಾಗೃತಿ ಮೂಡಿಸುವ ಕಾರ್ಯದಲ್ಲಿ ಸೋಸಲೆ ಮಠದ ವ್ಯಾಸರಾಯರು, ಸೋದೆಮಠದ ವಾದಿರಾಜರು, ಮುಳಬಾಗಿನಲಿನ ಶ್ರೀಪಾದರಾಯರು, ವಿಜಯದಾಸರು, ಪ್ರಸನ್ನ ವೆಂಕಟದಾಸರು, ಜಗನ್ನಾಥ ದಾಸರು, ಪುರಂದರದಾಸರು, ಕನಕದಾಸರುಗಳು ಮಾಡಿದ ಕ್ರಾಂತಿ ಸ್ಮರಣೀಯ. +ಈ ಪಂಥದವರಿಗೆ ದಕ್ಷಿಣ ಭಾರತದ ವೈಷ್ಣವ ಕೇಂದ್ರಗಳೆನಿಸಿದ್ದ ಉಡುಪಿ-ಬೇಲೂರು-ತಿರುಪತಿ-ಪಶ್ಚಿಮರಂಗ-ಮಧ್ಯರಂಗ-ಪೂರ್ವರಂಗ, ಪಂಢರಪುರ, ಮುಳುಬಾಗಿಲು, ಸೋದೆ, ಸೋಸಲೆ-ಮಂತ್ರಾಲಯ-ಹಂಪೆ (ಆನೆಗುಂದಿ)-ಅಹೋಬಲ-ಬಾಡ, ಬಂಕಾಪುರ ಇತ್ಯಾದಿ ಸ್ಥಾನಗಳು ತಾವು ಕಂಡುಂಡ ಭಕ್ತಿಜೀವನ ಸಿದ್ಧಾಂತ ಪಸಾರ ಕೇಂದ್ರಗಳೆನಿಸಿದುವು. +ಮೇಲೆ ಹೇಳಿದ ದಾರ್ಶನಿಕರ, ಶಾಸ್ತ್ರಜ್ಜರ, ಸಾಧಕರ, ತತ್ತ್ವಾರ್ಥ ಚಿಂತಕರ, ಶ್ರೋತ್ರೀಯರ ಮಧ್ಯದಲ್ಲಿ ಎಲ್ಲರ ಗಮನವನ್ನು ಸೆಳೆದ ಅತ್ಯಂತ ಮಹತ್ವದ,ಸಾಹಸದ ವ್ಯಕ್ತಿ ದಾಸವರ್ಯ ಕನಕದಾಸ. +ಕರ್ನಾಟಕದಲ್ಲಿ ವ್ಯಾಸರಾಯರು,ಶ್ರೀಪಾದರಾಯರು, ವಾದಿರಾಜರು, ಪುರಂದರ,ಕನಕದಾಸಾದಿಗಳು ಭಕ್ತಿಮಾರ್ಗ ಪ್ರಸಾರ ಮಾಡುತ್ತಿದ್ದ ಹಿಂಚು ಮುಂಚಿನ ಕಾಲದಲ್ಲಿ ಮಹಾರಾಷ್ಟ್ರದಲ್ಲೂ ವೈಷ್ಣವ ಭಕ್ತಿಪಂಥಗಳು ತಲೆಯೆತ್ತಿದ್ದವು. +ಇವಕ್ಕೆ ಕನ್ನಡನಾಡಿನಲ್ಲಿ ಆಗ ಇದ್ದ ಪಂಢರಾಪುರ ಕೇಂದ್ರವಾಗಿತ್ತು. +ಆ ಪಂಥಗಳು ಜನಪ್ರಿಯವಾಗಿದ್ದವು. +ಅವುಗಳಲ್ಲಿ ನಾಥಪಂಥಕ್ಕೆ ಸೇರಿದ ಮುಕುಂದರಾಜ, ಮಹಾನುಭಾವ ಪಂಥದ ಚಕ್ರಧರ ಮತ್ತು ಕೇಶವಾನಂದ ಹಾಗೂ ಮಹದಂಬೆಯರು, ವಾರಕರೀಪಂಥದ ಜ್ಞಾನೇಶ್ವರ ಮತ್ತು ಆತನ ಶಿಷ್ಯ ನಾಮದೇವ-ಮುಂತಾದವರನ್ನು ಹೆಸರಿಸಬಹುದು. +ಬಂಗಾಳದಲ್ಲಿ ಚೈತನ್ಯಪಂಥದ ಅನುಯಾಯಿಗಳ ಪ್ರಭಾವ ಅತ್ಯಧಿಕವಾಗಿತ್ತು. + ತಮಿಳುನಾಡು ಆಂಧ್ರಪ್ರದೇಶಗಳಲ್ಲೂ ಭಕ್ತಿಪಂಥದವರು ಹುಟ್ಟಕೊಂಡಿದ್ದರು. +ಬಸವಣ್ಣನ ಕಾಲದ ಶೂನ್ಯಸಿಂಹಾಸನವು ರಾಜಕೀಯ ವಿಪ್ಲವ ಕಾರಣವಾಗಿ ಮೂಲೆಗುಂಪಾದನಂತರ ಹರದನಹಳ್ಳಿ (ಈಗಿನ ಚಾಮರಾಜನಗರ ತಾಲ್ಲೂಕು)ಯಲ್ಲಿ ೧೪ನೆಯ ಶತಮಾನದಲ್ಲಿ ಪುನಃ ಸ್ಥಾಪನೆಯಾದ ಮೇಲೆ, ಆ ಕೇಂದ್ರದಿಂದ ವೀರಶೈವ ಭಕ್ತಿಪಂಥವು ತಲೆಯೆತ್ತಿ ಅನೇಕ ಮಠ ಮಾನ್ಯ ಸ್ಥಾಪನೆ ಮಾಡಿದುದೂ, ಆ ಕೇಂದ್ರಗಳಿಂದ ಭಕ್ತಿವಾಹಿನಿ ಹಲವು ಹನ್ನೊಂದು ಮುಖವಾಗಿ ಹರಿದುದೂ ಇಲ್ಲಿ ಜ್ಞಾಪಿಸಿಕೊಳ್ಳಬೇಕಾದ ಅಂಶ. +ಇವೆಲ್ಲ ಆಗ ಜನಾಂಗವನ್ನುಕಟ್ಟುವ ಕಾರ್ಯಮಾಡಿದವು. +ಹುಟ್ಟಾಶೂದ್ರತ್ವದ ಹಣೆಪಟ್ಟಿಯನ್ನು ಬಿಗಿದುಕೊಂಡೇ ಉದಯಗೊಂಡು ತನ್ನ ಅಸಾಧಾರಣ ಭಕ್ತಿಭಾವ, ಸಂಸ್ಕಾರ, ವಿದ್ವತ್ತು,ಸಿದ್ಧಿಸಾಧನೆಗಳಿಂದ ಎಲ್ಲಕ್ಕೂ ಮಿಗಿಲಾಗಿ ವೈರಾಗ್ಯ ಪ್ರವೃತ್ತಿಯಿಂದ ಶ್ರೋತ್ರಿಯ ವರ್ಗವೆಲ್ಲ ಇವನು ನಮ್ಮವನೆಂದು ಗುರುತಿಸಿ ಆದರಿಸುವಂತಹ ವ್ಯಕ್ತಿತ್ವ ರೂಪಿಸಿಕೊಂಡ ಕನಕದಾಸ ನಿಜವಾಗಿ ಓರ್ವ ಆಶ್ಚರ್ಯಜನಕ ವ್ಯಕ್ತಿ. +ಧಾರ್ಮಿಕ ಶ್ರದ್ಧಾಭಕ್ತಿ ವಿಶೇಷಗಳು ಸಾಮಾಜಿಕ ವಿಧಿವಿಧಾನಗಳಾಗಿ ಜಾತಿ ಜಾತಿಗಳ, ಧರ್ಮಧರ್ಮಗಳ ಅನೇಕ ಕಟ್ಟು ಕಟ್ಟಳೆಗಳಿಂದ ಕೂಡಿ, ಭಿನ್ನಭಿನ್ನ ಸಿದ್ಧಾಂತಗಳಡಿಯಲ್ಲಿ ಭಿನ್ನಭಿನ್ನವಾಗಿಯೇ ಆಚಾರ ವಿಚಾರ ವಿಶಿಷ್ಟವಾದ ಜನಜೀವನ ಸಾಗುತ್ತಿದ್ದ ಆ ಕಾಲದಲ್ಲಿ ಶೂದ್ರವರ್ಗದ ಕನಕದಾಸ ಶ್ರೋತ್ರಿಯ ವರ್ಗದ ಮಧ್ಯದಲ್ಲಿ ಸ್ಥಾನಮಾನ ದೊರಕಿಸಿಕೊಳ್ಳುವುದಾಗಲಿ, ಪ್ರಶಂಸೆಗೆ ಪಾತ್ರವಾಗುವುದಾಗಲಿ ಊಹೆಗೂ ನಿಲುಕದ ಒಂದು ಮಹತ್ತರ ಸಾಧನೆಯೇ ಅನಬೇಕು. +ಶ್ರೋತ್ರಿಯ ವರ್ಗ ಇವನ ಭಕ್ತಿ ಜೀವನದ ಔನ್ನತ್ಯಕ್ಕೆ, ತರ್ಕಬುದ್ದಿಗೆ,ಸಿದ್ಧಿ ಸಾಧನೆಗಳಿಗೆ ಒಪ್ಪಿ, ತಮ್ಮ ಸೈದ್ಧಾಂತಿಕ ನಿಲುವಿನ ಉನ್ನತ ವ್ಯಕ್ತಿತ್ವ ಮುದ್ರೆಯನ್ನೇನೋ ಒತ್ತಿತ್ತು ನಿಜ. + ಆದರೆ ಧಾರ್ಮಿಕ ನಿತ್ಯ ನೈಮಿತ್ತಿಕ ಆಚರಣೆಯ ವಿಧಿ ವಿಧಾನಗಳಿಂದ ಮತ್ತು ತಮ್ಮ ಅರ್ಚಾಮೂರ್ತಿಗಳ ಪೂಜಾದಿ ಪ್ರತ್ಯಕ್ಷ ವ್ಯವಹಾರಗಳಿಂದ ದೂರವಿರಿಸಿದ್ದಂತೂ ನಿಜ. +ಇದೊಂದು ಕೊರತೆಯೆಂದು ಕನಕದಾಸನೂ ಬಹುಶಃ ಭಾವಿಸಲಿಲ್ಲವೊ ಏನೊ ! + ವಶಿಷ್ಠನಿಂದ ಬಲವಂತವಾಗಿ ಮಹಾಬ್ರಾಹ್ಮಣತ್ವದ ಮುದ್ರೆಯನ್ನು ಸೆಳೆದುಕೊಂಡ ಕ್ಷತ್ರಿಯ ವಿಶ್ವಾಮಿತ್ರನಂತೆ ಇವನೇನೂ ಮಾಡಲಿಲ್ಲ ; + ಹಾಗೆ ಮಾಡುವ ಶಕ್ತಿ ಕನಕದಾಸನಲ್ಲಿತ್ತೋ ಇಲ್ಲವೊ ಆ ಮಾತು ಬೇರೆ. +ಅವನು ಚತುರ್ವರ್ಣ ವ್ಯವಸ್ಥೆಯನ್ನು ಒಪ್ಪಿ,ಶೂದನಾಗಿದ್ದುಕೊಂಡು, ಬ್ರಹ್ಮಬಂಧುವಾಗಿಯೇ ತಾನು ಪಡೆಯಬೇಕಾದ ಸಾಧನ ಸಂಪತ್ತನ್ನೂ ಅನುಭವದಾಳವನ್ನೂ ಕಂಡುಂಡು ತೃಪ್ರಭಾವದಿಂದ ಕರ್ನಾಟಕಾಂಧ್ರ ತಮಿಳುನಾಡುಗಳ ವೈಷ್ಣವ ಕ್ಷೇತ್ರಗಳನ್ನು ಗಾಳಿಯಂತೆ ಸುಳಿದು ಸುತ್ತಿ ಸಂದರ್ಶಿಸಿ ಅಲ್ಲಲ್ಲಿನ ಅರ್ಚಾಮೂರ್ತಿಗಳನ್ನು ಕಂಡಾಗ ಆದ ಅಪೂರ್ವಾನುಭವಗಳನ್ನು ಸುಲಭ ಭಾಷೆಯ ನೇರ ನುಡಿಮಾಲೆಯ ಹಾಡುಗಳಿಂದ ಕೊಂಡಾಡಿದ್ದಾನೆ. +ಛಂದೋಬದ್ಧ ಕಾವ್ಯಗಳಲ್ಲಿ ಅಭಿವ್ಯಕ್ತಿಗಳನ್ನು ಕ್ರೊಢೀಕರಿಸಿದ್ದಾನೆ. +ಭಕ್ತಿಯ ಹೊನಲು ಹರಿಸಿದ್ದಾನೆ. +ಅವನ ಅಭಿವ್ಯಕ್ತಿಗಳೆಲ್ಲ ಕ್ಷೇತ್ರವರ್ಣನೆ, ಪುರಾಣಪ್ರಸಕ್ತಿ,ಅರ್ಚಾಮೂರ್ತಿ ವೈಭವ, ಅವುಗಳ ಸ್ವರೂಪವನ್ನು ಲೌಕಿಕ ಪಾರಮಾರ್ಥಿಕ ದೃಷ್ಟಿಯಿಂದ ವರ್ಣಿಸುವಿಕೆ, ಬಾಳಿನ ಬರಡುತನದ ಅಳಲು, ಭಕ್ತ ಜೀವನದ ದೈವಸಾಕ್ಷಾತ್ಕಾರದ ಹಾದಿ ಈಶ್ವರಾನುಗ್ರಹದಿಂದುಂಟಾದ ಆನಂದ,ಆ ಮಹಾನಂದ ಸಾಗರದಲ್ಲಿ ಮುಳುಗಿಹೋದ ತನ್ಮಯತೆಗಳಲ್ಲಿ ಪರ್ಯವಸಾನಗೊಂಡಿವೆ. +ಆಡುಮಾತುಗಳ ಸೊಗಸಿನ ದೇಶಿಯಿಂದ,ಗೇಯಗುಣದ ಗಂಭೀರತೆಯಿಂದ ಭಾವ ಪುಷ್ಟಿತುಷ್ಟಿಗಳಿಂದ, ಅನಂತ ಜೀವನಾನುಭವಸಾರವೇ ಸಾಕಾರಗೊಂಡು ಜನಮನೋಭೂಮಿಕೆಯಲ್ಲಿ ನೇರವಾಗಿ ಪ್ರವೇಶಿಸಿ ಚಿಂತನಶೀಲರನ್ನಾಗಿಸುವ ಸತ್ವಭೂಯಿಷ್ಠವಾಗಿವೆ ಎನ್ನಬಹುದು. +ಒಗಟು-ಮುಂಡಿಗೆ-ಪ್ರಚ್ಛನ್ನಾರ್ಥ-ಬೆಡಗು ಬಿನ್ನಾಣಗಳ ಕಸರತ್ತನ್ನೂ ಅಲ್ಪಸ್ವಲ್ಪ ಮೆರೆದಿದ್ದರೂ ಅತ್ಯಂತ ಗೌಣ. +ಮಾನವ ಸಮುದಾಯ ಸಾಮಾನ್ಯಕ್ಕೆಲ್ಲ ಹೂಂದಿಕೊಳ್ಳಬಲ್ಲ ಕನಕದಾಸರ ಈ ಅನುಭವದಾಳವೇ ಪುರಂದರಾದಿ ದಾಸಕೂಟದವರ ಮತ್ತು ವ್ಯಾಸರಾಯಾದಿ ವ್ಯಾಸಕೂಟದವರ ಮಧ್ಯದಲ್ಲಿ ತನ್ನ ವೈಶಿಷ್ಟ್ಯಪೂರ್ಣ ಸ್ಥಾನಮಾನಗಳನ್ನು ಭದ್ರಪಡಿಸಿಕೊಳ್ಳಲು ಸಾಧ್ಯವಾಯಿತು. +ಇಷ್ಟೊಂದು ಮೇಲ್ಮಟ್ಟದ ವ್ಯಕ್ತಿತ್ವ ಸಂಪಾದಿಸಿದ್ದರೂ ತಾನು ನಂಬಿದ್ದ ತನ್ನ ಇಷ್ಟ ದೈವಗಳನ್ನು ತಾನೇ ತನ್ನ ಕೈಯಿಂದ ಪೂಜಿಸಿ ತೃಪ್ತಿಪಡುವ ಅವಕಾಶ ಕೊನೆಯವರೆಗೆ ದೊರೆಯದಿದ್ದಾಗ ತಾನಿದ್ದ ತಾಣದಲ್ಲೆ ಆ ಎಲ್ಲ ದೇವತೆಗಳನ್ನು ಆದಿಕೇಶವ, ಚೆನ್ನಕೇಶವ,ತಿಮ್ಮಕೇಶವ-ಎಂದು ಹೆಸರಿಸಿ, ಗುಡಿಗುಂಡಾರ ನಿರ್ಮಿಸಿ ಅವುಗಳಲ್ಲಿ ಪ್ರತಿಷ್ಠಾಪಿಸಿಕೊಂಡ ಕೈಯಾರ ಮುಟ್ಟಿ ಪೂಜಿಸಿ, ಮನಮುಟ್ಟಿ ಧ್ಯಾನಿಸಿ,ಉತ್ಸಾಹದಿಂದ ಮಹೋತ್ಸವಾದಿಗಳನ್ನಾಚರಿಸಿ “ಅನ್ಯಮಿಂದ್ರಂ ಕರಿಷ್ಯಾಮಿ”ಎನ್ನುವಂತಹ ಧೈರ್ಯ ಸಾಹಸಗಳನ್ನು ಮೆರೆದು ತೃಪ್ತಭಾವದಿಂದ ಕೊನೆಯುಸಿರೆಳೆದ ಬಹುದೊಡ್ಡ ಇನ್ನೊಬ್ಬ ಶೂದ್ರ ತಪಸ್ವಿ ಕನಕದಾಸ.” +೨. ವಿಗ್ರಹಾರಾಧನೆಯನ್ನು ತತ್ತ್ವಶಾಸ್ತ್ರಜ್ಮರನೇಕರು ತಳ್ಳಿಹಾಕಬಹುದು ; +ವಿಜ್ಞಾನ ಯುಗಆ ಬಗೆಯ ಚಿಂತನೆಯನ್ನೂ ಅಲ್ಲಗಳೆಯಬಹುದು. +ಆದರೆ ಮದ್ವಮತ ಸಂಪ್ರದಾಯದಲ್ಲಿ ಆಧೇಯ ಶಕ್ತಿ ಒಪ್ಪಿತವಾಗಿದೆ. +"ಅನ್ಯಾಹಿತ ಶಕ್ತಿರಾಧೇಯ ಶಕ್ತಿ” ಎನ್ನುತ್ತಾರೆ ಮಧ್ವಾಚಾರ್ಯರು. +ವಿಧಿವತ್ತಾಗಿ ಪ್ರತಿಷ್ಠಾಪಿಸಲ್ಪಟ್ಟ ಪ್ರತಿಮೆಯಲ್ಲಿ ಆಧೇಯ ಶಕ್ತಿಯಿಂದ ದೇವತೆಯ ಶಕ್ತಿ ಉತ್ಪನ್ನವಾಗುತ್ತದೆ-ಎಂಬುದೇ ಅವರ ತೀರ್ಮಾನ. +ಆ ಸಂಪ್ರದಾಯ ಮತ್ತು ರಾಮಾನುಜ ಸಂಪ್ರಯ ಸಂಪ್ರದಾಯಗಳೆರಡರಲ್ಲೂ ವಿಶ್ವಾಸ ತಳೆದಿದ್ದ ಕನಕದಾಸರು, ಆ ಎರಡೂ ಸಂಪದಾಯದ ವಿಗ್ರಹಾರಾಧನೆಯಲ್ಲಿ ಕೊನೆಯವರೆಗೂ ಶ್ರದ್ಧಾಸಕ್ತಿ ಹೊಂದಿ ತಾನು ಕಾಣಬೇಕಾದುದನ್ನು ಕಂಡುಂಡ ವ್ಯಕ್ತಿ. +ಇಂಥ ಓರ್ವ ಸಾಹಸ ಜೀವನದ ದ್ರಷ್ಟಾರನ ಬಗೆಗೆ ವಸ್ತುನಿಷ್ಠ ಸುಸ್ಪಷ್ಟಚರಿತ್ರೆಯಿಲ್ಲದಿರುವುದು ಬಹುದೊಡ್ಡ ಕೊರತೆಯೆನಿಸಿದೆ. +ಸುಮಾರು ೯೮ ವರ್ಷಗಳ ನಿಡುಬಾಳು ಸವೆಸಿದ ಈ ಮಹಾಸಾಹಸಿಯ ಉಜ್ವಲ ಬದುಕಿನ ಹೋರಾಟದ ಚರಿತ್ರೆ ಕಾರ್ಯಕಾರಣ ಸಂಬಂಧರಹಿತ ಪರಂಪರಾಗತ ಅನೇಕ ಕಡೆಗಳಿಂದಲೂ, ತರ್ಕ ಬದ್ಧವಲ್ಲದ ಹಾಗೂ ಅವೈಜ್ಞಾನಿಕವೆನ್ನಿಸಬಹುದಾದ,ಅನುಭವದ ಕಕ್ಷೆಗೆ ಬಾರದ, ಅತಿರಂಜಿತವೆನಿಸಬಹುದಾದಂತಹ ಐತಿಹ್ಯಗಳಿಂದ ಹಾಸುಹೊಕ್ಕಾಗಿದೆ. +ಈ ಕಥಾನಕಗಳಲ್ಲಿ ಟೊಳ್ಳುಗಟ್ಟಿಗಳೆಷ್ಟೆಂಬುದನ್ನು ತರ್ಕಬದ್ಧವಾಗಿ ಯೋಚಿಸಿ ಯೌಗಿಕವಾಗಿ, ವೈಜ್ಞಾನಿಕ ಸ್ಥೂಲ ನಿಯಮವ್ಯಾಪ್ತಿಗೆ ಅಳವಡದ ಮನೋವಿಜ್ಞಾನ ದೃಷ್ಟಿಯಿಂದ, ಐತಿಹಾಸಿಕ ಸಾಕ್ಷ್ಯಾಧಾರಗಳಿಂದ ವಿಚಾರಿಸಬೇಕಾಗಿದೆ. +ನಮ್ಮ ದೇಶದಲ್ಲಿ ಪ್ರಾಚೀನ ಕಾಲದಿಂದಲೂ ಧಾರ್ಮಿಕ ಮಹಾಪುರುಷರೆಲ್ಲರನ್ನೂ ಲೋಕಕ್ಕೆ ಪರಿಚಯಿಸುವಾಗಲೆಲ್ಲ ಈ ಅಘಟಿತ ಘಟನೆಗಳ ತಂತ್ರದ ಬಣ್ಣಬರೆಗಳನ್ನು ಅವರ ಜೀವನದುದ್ದಕ್ಕೂ ಮೆತ್ತಿ ಅತಿರಂಜನೆಗೊಳಿಸಿ ಹೇಳುತ್ತಲೇ ಬಂದಿದ್ದಾರೆ. +ಈ ತಂತ್ರಕ್ಕೆ ರಾಮಾಯಣ ಮಹಾಭಾರತ ಕಾಲದಿಂದಲೂ ಅಪ್ಟೆ ಏಕೆ ಪುರಾಣ ಯುಗದಿಂದಲೂ ಸಾಮಾನ್ಯ ಜನಮನ ಒಗ್ಗಿಹೋಗಿದೆ. +ಅಂಥ ಘಟನಾವಳಿಗಳೇ ನಮಗೆ ನೈಜಚರಿತ್ರೆಗಳೆನಿಸಿ ಬಿಟ್ಟವೆ. +ಮಹಚೇತನಗಳ ಬಗೆಗೆ ಈ ತಂತ್ರಕ್ಕಂಟಿಕೊಂಡು ಹೇಳದಿದ್ದರೆ ನಾವು ಅವರನ್ನು ದೊಡ್ಡವರೆಂದು ಒಪ್ಪಿಕೊಳ್ಳುವುದಕ್ಕೆ ಸಾಧ್ಯವಿಲ್ಲದಷ್ಟು ಪವಾಡ ಕಥೆಗಳ ಮೋಡಿ ನಮ್ಮನ್ನು ಮರುಳುಗೊಳಿಸಿ ಬಿಟ್ಟಿದೆ. +ಜನತೆಯ ಈ ಅಭಿರುಚಿಗನುಗುಣವಾಗಿಯೇ ಪ್ರತೀತಿಗಳು, ಕತೆಗಳು, ಐತಿಹ್ಯಗಳೂ ಕಾಳಕಳೆದಂತೆಲ್ಲ ಮೈದುಂಬಿ ನೈಜ ಇತಿಹಾಸವನ್ನೇ ಮರೆಮಾಚುವಷ್ಟು ಹುಲುಸಾಗಿ ಬೆಳೆದಿವೆ. +ಇದರಿಂದ ಮಹಾಸಾಹಸಿಗಳಾದವರ ಸಾಹಸ ಜೀವನದ ನೈಜತೆಗೆ ಅಪಚಾರವಾಗಿ ಬಿಡುವುದುಂಟು. +ಪ್ರಾಚೀನ ಭಾರತೀಯರಲ್ಲಿ ಇತಿಹಾಸಪ್ರಜ್ಞೆ ಬೆಳೆದುದೇ ಈ ಜಾಡಿನಲ್ಲಿ. +೩.ಈಗ ಅನೇಕರು ಕನಕದಾಸರು ಕ್ರಿಶ.ಸು.೧೫ಂ೮ರಲ್ಲಿ ಜನಿಸಿ ೧೬ಂ೬ರಲ್ಲಿ ಕಾಗಿನೆಲ್ಲಿಯಲ್ಲಿ ದೇಹಬಿಟ್ಟರೆಂದು ಅಭಿಪ್ರಾಯಪಡುತ್ತಾರೆ. +೪.'ಇತಿಹಾಸ'-ಎಂದು ಇಂದು ನಾವು ಯಾವುದನ್ನು ಕರೆಯುತ್ತೇವೆಯೋ ಈ ನಂಬಿಕೆ ನಮ್ಮ ಹಿಂದಿನವರಿಗಿರಲಿಲ್ಲ. +ಅದರಲ್ಲಿ ಪುರಾಣ ಎಂದರೆ ಹಿಂದೆನಡೆದು ಹೋದ ಕಥೆ, ಅಡ್ಡಕಥೆಗಳು(ಆಖ್ಯಾಯಿಕೆಗಳು) ದೃಷ್ಟಾಂತಗಳು, ಧರ್ಮಶಾಸ್ತ್ರ ಮತ್ತು ಅರ್ಥಶಾಸ್ತ್ರ-ಎಲ್ಲವೂ ಇರಬೇಕು. +ಈ ಲಕ್ಷಣ ಸಾಮಾನ್ಯವಾಗಿ ರಾಮಾಯಣ ಮಹಾಭಾರತಗಳಿಗೆ ಅನ್ವಯಿಸುತ್ತದೆ. +ಇವುಗಳಲ್ಲಿ ಇತಿಹಾಸ ಇದೆ. +ಅದು ವಸ್ತು ನಿಷ್ಠವಲ್ಲ. +ಆದುದರಿಂದ ಇಂದಿನ ಇತಿಹಾಸ ಪ್ರಜ್ಞೆಗೆ ಇವು ಆಧಾರ ಗ್ರಂಥಗಳೆನಿಸುವುದಿಲ್ಲ. +ಇಲ್ಲಿ ಅವಾಸ್ತವದೊಡನೆ ವಾಸ್ತವವನ್ನು ಹೆಣೆದಿರುವುದೇ ಅಧಿಕ. +ಇಷ್ಟರಿಂದಲೇ ಇವು ಅಪ್ರಯೋಜಕವೆಂದಲ್ಲ. +ಸಮಗ್ರ ಭಾರತೀಯರ ಭಾವೈಕ್ಕಕ್ಕೆ ಅಂಶಿಕವಾಗಿ ಪರೋಕ್ಷದಲ್ಲಿ ಕೆಲಸ ಮಾಡಿವೆ. +ಅಷ್ಟೇ ಸತ್ಯವಾಗಿ ಭ್ರಮಾತ್ಮಕ ಐತಿಹಾಸಿಕ ಪಜ್ಞೆಯನ್ನುಂಟು ಮಾಡಿವೆ. +ಅವಾಸ್ತವವಾದ ಸ್ವರ್ಗಲೋಕವನ್ನು ವಾಸ್ತವವಾದ ಜಗತ್ತಿನೊಡನೆ ಬೆಸೆದು ಭೂ-ಸ್ವರ್ಗಲೋಕ ಸಂಬಂಧದ ಕತೆಗಳನ್ನು ತುಂಬಿಕೊಂಡು ನಿಂತಿವೆ. +ಮುಂದೆ ಹುಟ್ಟಿದ ನಮ್ಮ ಸಾಹಿತ್ಯರಾಶಿಯೆಲ್ಲ ಈ ಎರಡು ಮಹಾಗ್ರಂಥಗಳ ಕಥನ ಸಂವಿಧಾನದಲ್ಲಿಯೇ ಹುಟ್ಟಿ ಬೆಳೆದು ವಸ್ತುನಿಷ್ಠ ಇತಿಹಾಸ ಗ್ರಂಥಗಳ ಅಭಾವವಾಗಿ ಭಾರತೀಯ ಜನಾಂಗ ಇತಿಹಾಸ ಪ್ರಜ್ಞೆಯಿಂದಲೇ ದೂರವಾಗಿ ಉಳಿದುಬಿಟ್ಟಿತು. +ಇಲ್ಲದ ಸ್ವರ್ಗಲೋಕದಲ್ಲಿ ಸಾಮ್ರಾಜ್ಯ ಕಟ್ಟಿ ಅದರಲ್ಲಿ ಮೈಮರೆತರು. +ಈ ಕಾರಣದಿಂದ ಇವರು ಅನುಭವಿಸಿದ ಭಾವನೆ ಅನೂಹ್ಯವಾದುದು. +ಅಪೂರ್ವ ಪ್ರಜ್ಞಾಶೀಲರನ್ನು, ಧರ್ಮಾತ್ಮರನ್ನು, ತಪಸ್ವಿಗಳನ್ನು ಅಪ್ಟೇ ಏಕೆ ಐತಿಹಾಸಿಕ ಮಹಾಪುರುಷರನ್ನೂ ಕೂಡ ಭಾರತೀಯರು ಕಂಡದ್ದು ಪೌರಾಣಿಕ ಪ್ರಜ್ಞೆಯ ಹಿನ್ನೆಲೆಯಿಂದಲೇ. +ಶಂಕರಾಚಾರ್ಯ, ಮಧ್ವಾಚಾರ್ಯ,ರಾಮಾನುಜಾಚಾರ್ಯ, ಬಸವಣ್ಣ, ಪ್ರಭುದೇವ, ಸಿದ್ಧರಾಮ, ಬುದ್ಧ, ಮಹಾವೀರಾದಿ ಐತಿಹಾಸಿಕ ಮಹಾಪುರುಷರ ಜೀವನದುದ್ದಕ್ಕೂ ಇಂಥ ಅನೇಕ ಐತಿಹ್ಯಗಳ ಪವಾಡಕಥೆಗಳ ದಂದುಗವನ್ನು ಕಾಣುತ್ತಲೇ ಇದ್ದೇವೆ. +ಕನಕದಾಸನ ಸಮಕಾಲೀನರೇ ಆಗಿರುವ ವ್ಯಾಸರಾಯ, ವಾದಿರಾಜ ಪುರಂದರ ದಾಸರುಗಳ ಚರಿತ್ರೆಯುದ್ದಕ್ಕೂ ಇವು ಹಾಸುಹೊಕ್ಕಾಗಿವೆ. +ಅವನ್ನು ಸುಳ್ಳೆಂದು ತರ್ಕಬದ್ಧವಲ್ಲೆಂದು ಬೆರಳು ತೋರಿಸುವುದಕ್ಕೂ ನಮಗೆ ಹೆದರಿಕೆ. +ಏಕೆಂದರೆ,ಅವರನ್ನು ಒಂದಾನೊಂದು ದೇವತೆಯ ಅವತಾರವೆಂದು ಅವರ ಹುಟ್ಟಿನೊಡನೆಯೇ ಹೆಣೆಯಲ್ಪಟ್ಟ ದೈವೀ ಭಾವನೆಯ ಕಥೆಯನ್ನು ಒಪ್ಪಿಕೊಂಡೇ ಅವರ ಚರಿತ್ರೆಯನ್ನು ತಿಳಿಯಲು ಪ್ರಯತ್ನಿಸುತ್ತೇವೆ. +ವೈಜ್ಞಾನಿಕ ಪ್ರಜ್ಞೆಯಿಂದ ಎಚ್ಚೆತ್ತಿರುವ ಇಂದೂ ಕೂಡ ಜನತೆಯನ್ನು ಈ ದೇವರುಗಳು ದೈವಗಳು-ಇವುಗಳ ಸುತ್ತಲಿನ ಹೇಳಿಕೆ ಕೇಳಿಕೆಗಳೇ ಮೊದಲಾದ ಘಟನಾವಳಿಗಳ ಭ್ರಮಾತ್ಮಕ ಜಗತ್ತಿನಿಂದ ವಾಸ್ತವ ಪ್ರಪಂಚಕ್ಕೆ ತಂದು ತತ್ತ್ವಶಾಸ್ತ್ರದ ಶಾಸ್ತ್ರೀಯತೆಯಲ್ಲಿ ಮಗ್ನರನ್ನಾಗಿಸುವುದೇ ಕಷ್ಟದ ಕೆಲಸವಾಗಿ ಬಿಟ್ಟಿದೆ. +ಜನತೆಯನ್ನು ಕೆಲವು ಮೂಲಭೂತ ನಂಬುಗೆಗಳ ಆಧಾರದ ಮೇಲೆ ಕಟ್ಟುವ ಕಾರ್ಯ ಜಟಿಲಗೊಂಡಿದೆ. +ಯಾವುದು ತರ್ಕಬದ್ಧವೆಂಬುದರಲ್ಲಿ ಸಂಶಯವುಂಟಾಗಿ ಎಲ್ಲ ಮೂಲಗಳನ್ನೂ ಗಾಳಿಗೆ ತೂರಿ ಬಿಡುವ ಪ್ರವೃತ್ತಿ ಇಂದು ಅಧಿಕಗೊಂಡುಬಿಟ್ಟಿದೆ. +ಇತ್ತೀಚೆಗೆ ಇತಿಹಾಸ ಪ್ರಜ್ಞೆಯಿಂದ, ಕಾರ್ಯಕಾರಣ ಸಂಬಂಧದ ಪ್ರಜ್ಞೆಯಿಂದ ಎಲ್ಲವನ್ನೂ ವಿಚಾರಿಸುವ ಮನೋಭಾವ ಬೆಳೆಯತೊಡಗಿರುವುದು ಸಂತೋಷದ ಸಂಗತಿ. +ಅವಾಸ್ತವವನ್ನು ವಾಸ್ತವದೊಡನೆ ಹೆಣೆಯುವ ಪ್ರವೃತ್ತಿ ಕಡಿಮೆಯಾಗಿದೆ. +ವಾಸ್ತವವನ್ನು ಯಥಾರ್ಥರೀತಿಯಲ್ಲಿ ವಿಶ್ಲೇಷಣೆಗೊಳಗು ಮಾಡುವಲ್ಲಿ ಶ್ರದ್ಧೆ ತಳೆಯುತ್ತಿರುವುದು ಶುಭಸೂಚನೆಯೇ ಅನ್ನಬೇಕು. +ಈ ದಿಸೆಯಲ್ಲಿ ಕನಕದಾಸರ ಅಸಾಧಾರಣ ವ್ಯಕ್ತಿತ್ವದ ಸುತ್ತ ಮೆತ್ತಿಕೊಂಡಿರುವ ಪ್ರಚಲಿತ ನಂಬಿಕೆ, ಪ್ರತೀತಿ, ಕಲ್ಪನೆಗಳಲ್ಲಿ ಟೊಳ್ಳೆಷ್ಟು ಗಟ್ಟಿಯೆಷ್ಟು ಎಂಬುದರ ಬಗೆಗೆ ಪ್ರಕೃತ ಸ್ವಲ್ಪ ವಿಚಾರ ಮಾಡುವುದೇ ನನ್ನ ಲೇಖನದ ಗುರಿಯಾಗಿದೆ. +ಕನಕದಾಸರಿಂದ ನಡೆದುವು ಎಂದು ಹೇಳಲಾಗುತ್ತಿರುವ ಅನೇಕ ಪವಾಡದ ಕಥೆಗಳಲ್ಲಿ ಉಡುಪಿ ಕ್ಷೇತ್ರದ ಶ್ರೀಕೃಷ್ಣದೇವಾಲಯದಲ್ಲಿ ತನಗೆ ಪ್ರವೇಶ ಪ್ರತಿಬಂಧಕವಾದಾಗ, ಶ್ರೀಕೃಷ್ಣನಲ್ಲಿ ದರ್ಶನ ಕೊಡೆಂದು ಮಾಡಿಕೊಂಡ ಪ್ರಾರ್ಥನೆಯನ್ನು ಮನ್ನಿಸಿ, ಪೂರ್ವಕ್ಕೆ ಮುಖ ಮಾಡಿಕೊಂಡು ನಿಂತ ಆ ವಿಗ್ರಹವು ಪಶ್ಚಿಮದ ಕಡೆಯಲ್ಲಿ ಗುಡಿಯ ಹೊರಗಡೆ ನಿಂತಂಥ ಕನಕದಾಸನತ್ತ ಮೊಗದಿರುಹಿ ದೇವಾಲಯದ ಗೋಡೆಯಲ್ಲಿ ತೂತುಂಟಾಗುವಂತೆ ಮಾಡಿ,ದರ್ಶನಕೊಟ್ಟ ಪ್ರಸಂಗ ಮತ್ತು ವ್ಯಾಸರಾಯರು ಕೆರೆ ಕಟ್ಟಿಸುವ ಸಮಯದಲ್ಲಿ ಕೆರೆಯ ತೂಬಿನ ಬಾಯಿ ಹತ್ತಿರ ನೀರು ಸರಾಗವಾಗಿ ಹರಿದು ಹೋಗಲು ಪ್ರತಿಬಂಧಕವಾದ ಬಂಡೆಯೊಂದನ್ನು ಸೀಳಲು ಕನಕದಾಸರ ಪ್ರಭಾವದಿಂದ ರೂಪಗೊಂಡು ನಿಂತ ಯಮನ ಕೋಣವೇ ತನ್ನ ಕೋಡುಗಳಿಂದ ಬಂಡೆಯನ್ನು ಸೀಳಿ ನೀರು ಸರಾಗವಾಗಿ ಹರಿದುಹೋಗುವಂತೆ ಮಾಡಿದ ಪ್ರಸಂಗ-ಇವೆರಡೂ ಬಹು ಜಿಜ್ಞಾಸೆಗೊಳಗು ಮಾಡಿದವುಗಳಾಗಿವೆ. +೫.ಭಾರತೀಯರಲ್ಲಿ ಇತಿಹಾಸ ಪ್ರಜ್ಞೆ ಚುರುಕುಗೊಂಡಿರುವುದು ಬ್ರಿಟಿಷರು ಇಲ್ಲಿ ತಮ್ಮ ಸುವ್ಯಸ್ಥಿತ ರಾಜಸತ್ತೆಯನ್ನು ಪ್ರಾರಂಭಿಸಿದ ಮೇಲೆ. +ಅವರೇ ನಮಗೆ ನಮ್ಮ ಇತಿಹಾಸ ಸಂಗ್ರಹಣೆ ಪ್ರಚೋದಕರು. +ನಮ್ಮ ಸಮಗ್ರ ಮತ್ತು ನೇರ ಇತಿಹಾಸವಿಲ್ಲದ್ದರಿಂದ ಪರಕೀಯರು ನಮ್ಮ ಬಗೆಗೆ ಬರೆದ ಬರವಣಿಗೆಗಳು, ಅಷ್ಟಿಷ್ಟು ನಮ್ಮವರ ತಾಮ್ರಪಟ-ಶಾಸನ-ಕಾವ್ಯ-ಬಖೈರು ಮುಂತಾದವುಗಳಲ್ಲಿನ ವಸ್ತುನಿಷ್ಠಾಂಶಗಳ ಸಂಗ್ರಹಣೆಗಳು ಮುಂತಾದವುಗಳಿಂದ ವ್ಯವಸ್ಥಿತ ಇತಿಹಾಸ ರೂಪುಗೊಳ್ಳುತ್ತಿರುವುದು ಸಂತೋಷದ ಸಂಗತಿಯೇ. +ಕರ್ನಾಟಕದ ಮಟ್ಟಿಗೆ ಹೇಳುವುದಾದರೆ ನಮ್ಮ ಬಗೆಗೆ ನಮಗೆ ಗೊತ್ತಾಗಿರುವುದು ತೀರ ಅತ್ಯಲ್ಪ. +ಅನೇಕ ಚಕ್ರಾಧಿಪತ್ಯಗಳು ಹುಟ್ಟಿ ಬೆಳೆದ ಈ ನಾಡಿನ ಸಹಸ್ರ ಸಹಸ್ರ ವರ್ಷಗಳ ಉಜ್ವಲ ಚರಿತ್ರೆಯ ಬಗೆಗೆ ಆಗಬೇಕಾದ ಸಂಶೋಧನೆ ಗುಡ್ಡದಷ್ಟು. +ಇನ್ನುಳಿದ ಐತಿಹ್ಯಗಳಲ್ಲಿ ಕೆಲವುಯುಕ್ತಿ ಯುಕ್ತವಾದವುಗಳು. +ಕೆಲವು ಅವರು ಸಾಧಿಸಿದ್ದ ಭಕ್ತಿಯೋಗಜನ್ಯ ಅಪರೋಕ್ಷ ಜ್ಞಾನಾನುಭವಗಳಿಗೆ ಸಂಬಂಧಿಸಿದವುಗಳು. +ಇತರ ಕೆಲವು ಪ್ರಸಂಗಗಳು ಭಕ್ತಿ ಯೋಗಾನಂದದಲ್ಲಿ ತನ್ನ ಹೃದಯ ಗುಹೆಯಲ್ಲೇ ಕಂಡ ಖಂಡಸಾಕ್ಷಾತ್ಕಾರಗಳು. +ಉಳಿದ ಕೆಲವು ತಳಬುಡವಿಲ್ಲದೆ ಕಾಲಕಾಲಕ್ಕೆ ಕೈಕಾಲು ಮೂಡಿ ಬೆಳೆದು ನಿಂತ ಹೇಳಿಕೆ ಕೇಳಿಕೆಗಳು. +ಇಂಥ ಕಥೆಗಳು ಕನಕದಾಸಾದಿ ಹರಿದಾಸ ಪರಂಪರೆಯಲ್ಲೇ ಬೆಳೆದು ಬಂದಿವೆಯೆಂದೇನೂ ಅಲ್ಲ. +ಕರ್ನಾಟಕಾಂಧ್ರ ತಮಿಳುನಾಡಿನ ಭಕ್ತಿಪಂಥದ ಶೈವಾಚಾರ್ಯರಲ್ಲೂ, ಶಿವಶರಣರಲ್ಲೂ,ಮಹಾರಾಷ್ಟಮತ್ತು ಉತ್ತರಭಾರತದಲ್ಲಿ ಪ್ರಸಿದ್ಧರಾದ ಭಕ್ತಿ ಪಂಥದ ರಮಾನಂದ-ಕಬೀರ-ನಾನಕ-ಚೈತನ್ಯ-ಮೀರಾಬಾಯಿ-ಜ್ಞಾನದೇವ-ನಾಮದೇವ-ತುಕಾರಾಮ ಏಕನಾಥ-ಗೋರಾಕುಂಬಾರಾದಿಗಳ ಜೀವನದಲ್ಲೂ-ಅಂಟಿ ಬಂದಿವೆ. +ಇಂಥ ಹಿರಿಯ ಭಕ್ತಿಪಂಥದ ಮಹಾಪುರುಷರು ಎರಡು ಮೂರು ಶತಮಾನಗಳ ಕಾಲ ವಿಸ್ತಾರದಲ್ಲಿ ಭಾರತದ ಉದ್ದಗಲಕ್ಕೂ ಉದಯಗೊಂಡುದಕ್ಕೆ ಈ ಪೂರ್ವದಲ್ಲಿ ಹೇಳಿರುವಂತೆ ಸಮಾಜ ಜೀವನ ರಾಜಕೀಯ ಗೊಂದಲಗಳ ಕಾರಣವಾಗಿ ಅನೇಕ ಸಂಕೀರ್ಣತೆಗೊಳಗಾದುದು. + ಹಿಂದೂ ಸಮಾಜ ಮತ್ತು ಧರ್ಮಗಳಿಗೆ ಪರಕೀಯರ ಪದಾಕ್ರಾಂತ ಕಾರಣವಾಗಿ ಬಂದೊದಗಿದ ಕುತ್ತು-ಮೊದಲಾದುವು ಕಾರಣವಾಗಿದ್ದವು. +ಇಂಥ ಭಗವದ್ಧ್ಭಕ್ತರ ಬಗೆಗೆ ಅಂದಿನ ಜನತೆಗೆ ಅಪಾರ ಶ್ರದ್ಧಾಸಕ್ತಿ ಬೆಳೆದು ಅವರ ಜೀವನ ಘಟನೆಗಳು ದೈವೀಪ್ರೇರಣೆಗಳೆಂಬ ಭಾವನೆ ನಲಿಯಿತು. +ಆ ಭಾವನೆಗಳೇ ಕಾಲಕಾಲಕ್ಕೆ ಬೆಳೆದು ಹೇಳಿಕೆ ಕೇಳಿಕೆಗಳಾಗಿ ವಿಸ್ತಾರಗೊಂಡು ಹೋದುವು. +ಪವಾಡಕಥೆ, ಪ್ರತೀತಿ, ನಂಬಿಕೆಗಳನ್ನು ಪೌರಾಣಿಕರು-ಪುರೋಹಿತರು-ಪ್ರವಚನಕಾರರು-ಹರಿಕಥಾ ವಿದ್ವಾಂಸರು ರಂಜನೆಗೊಳಿಸಿ, ಜನಮನವನ್ನು ಅವುಗಳಿಗೆ ಒಗ್ಗಿಸಿಬಿಟ್ಟರು. +ಇಂಥ ಕಥೆಗಳನ್ನು ಅಲ್ಪಸ್ವಲ್ಪ ಬದಲಾವಣೆಯಿಂದ ಒಂದು ಸಂಪ್ರದಾಯದವರು ಮತ್ತೊಂದು ಸಂಪ್ರದಾಯದವರಿಂದ ಪಡೆದು ತಾವೂ ತಮ್ಮವರಿಗೆ ಸಂಬಂಧಿಸಿಕೊಂಡು ಕೈಕಾಲು ಮೂಡಿಸಿದರು. +ಅಂದಿನ ಸಾಮಾನ್ಯ ಜನತೆಯ ಅಜ್ಞತೆಯನ್ನು ಈ ಘಟನೆಗಳು ಪ್ರತಿಬಿಂಬಿಸುತ್ತವೆ, ಎನ್ನಬಹುದು. -- GitLab