From 8f89aa3ca0aa031f2ed086ecabc19e86b380198d Mon Sep 17 00:00:00 2001 From: Narendra VG Date: Mon, 26 Sep 2022 05:10:46 +0530 Subject: [PATCH] Upload New File --- ...2\225\340\263\215\340\262\267\340\262\243.txt" | 15 +++++++++++++++ 1 file changed, 15 insertions(+) create mode 100644 "Data Collected/Kannada/MIT Manipal/\340\262\206\340\262\260\340\263\213\340\262\227\340\263\215\340\262\257\340\262\266\340\262\277\340\262\225\340\263\215\340\262\267\340\262\243.txt" diff --git "a/Data Collected/Kannada/MIT Manipal/\340\262\206\340\262\260\340\263\213\340\262\227\340\263\215\340\262\257\340\262\266\340\262\277\340\262\225\340\263\215\340\262\267\340\262\243.txt" "b/Data Collected/Kannada/MIT Manipal/\340\262\206\340\262\260\340\263\213\340\262\227\340\263\215\340\262\257\340\262\266\340\262\277\340\262\225\340\263\215\340\262\267\340\262\243.txt" new file mode 100644 index 0000000..cca6258 --- /dev/null +++ "b/Data Collected/Kannada/MIT Manipal/\340\262\206\340\262\260\340\263\213\340\262\227\340\263\215\340\262\257\340\262\266\340\262\277\340\262\225\340\263\215\340\262\267\340\262\243.txt" @@ -0,0 +1,15 @@ +ಸತ್ವಪುರ್ಣವಾಗಿ ತೃಪ್ತಿ ಸಮಾಧಾನಗಳಿಂದ ತುಂಬಿದ ಸಾರ್ಥಕ ಜೀವನ ನಡೆಸಲು ಅವಶ್ಯವಾದ ದೇಹಶಕ್ತಿಯನ್ನೂ ಬುದ್ಧಿಶಕ್ತಿಯನ್ನೂ ವೃದ್ಧಿಪಡಿಸಿಕೊಳ್ಳುವುದೇ ಆರೋಗ್ಯಶಿಕ್ಷಣದ ಗುರಿ . +ಉತ್ತಮ ಆರೋಗ್ಯ ಸಾಧಕ ಅಭ್ಯಾಸಗಳನ್ನು ಬೆಳೆಸುವ ಉದ್ದೇಶದಿಂದ ಜನರ ಜ್ಞಾನದಲ್ಲೂ ಮನೋಭಾವದಲ್ಲೂ ಚರ್ಯೆಯಲ್ಲೂ ಪರಿವರ್ತನೆ ಮೂಡಿಸುವುದೇ ಸಾಮಾನ್ಯ ಶಿಕ್ಷಣದ ಉದ್ದೇಶವಷ್ಟೆ . +ಆರೋಗ್ಯಶಿಕ್ಷಣದ ಮೂಲ ಉದ್ದೇಶವೂ ಅದೇ ಆಗಿದೆ . +ಆರೋಗ್ಯಶಿಕ್ಷಣ ಇಬ್ಬಗೆಯಾಗಿದೆ : +ಜನಸಮುದಾಯದ ಹಿತಾರ್ಥವಾಗಿ ನಡೆಯುವ ಸಾರ್ವಜನಿಕ ಶಿಕ್ಷಣ . +ಮಕ್ಕಳ ಆರೋಗ್ಯ ರಕ್ಷಣೆಯ ಸಲುವಾಗಿ ನಡೆಯುವ ಶಾಲಾ ಆರೋಗ್ಯಶಿಕ್ಷಣ. +ವೈದ್ಯಶಾಸ್ತ್ರ ವಿಚಾರದಲ್ಲಿ ಪ್ರಯೋಗಶಾಲೆಗಳಲ್ಲಿ ನಡೆಸಿದ ಪ್ರಯೋಗ ಸಿದ್ಧಾಂತಗಳನ್ನು ಮಾನವಕೋಟಿಯ ದಿನ ದಿನದ ಬಾಳಿಗೆ ಅನ್ವಯಿಸಲು ಬಹು ದೀರ್ಘ ಕಾಲದಿಂದಲೂ ಮಹತ್ವದ ಕಾರ್ಯಕ್ರಮವೆಂದು ಒಪ್ಪಿಕೊಳ್ಳಲಾದ ಈ ಬಗೆಯ ಆಧುನಿಕ ಜನಾರೋಗ್ಯ ನೀತಿಶಿಕ್ಷಣ ಈಚೆಗೆ ಹೆಚ್ಚು ಹೆಚ್ಚು ಬಳಕೆಗೆ ಬರುತ್ತಿದೆ . +ನಾನಾ ಆರೋಗ್ಯ ಕಾರ್ಯಕ್ರಮಗಳ ಬಗ್ಗೆ ಸಾರ್ವಜನಿಕರಿಂದ ಇನ್ನಷ್ಟು ಹೃತ್ಪೂರ್ವಕ ಸಹಕಾರ ಪಡೆಯಲು ಅದರಿಂದ ಅನುಕೂಲವಾದೀತೆಂಬ ನಿರೀಕ್ಷೆಯಿದೆ . +ಆರೋಗ್ಯಶಿಕ್ಷಣಕ್ಕೆ ನಮ್ಮ ದಿನನಿತ್ಯದ ಜೀವನದಲ್ಲಿ ಮನೆ, ಆಸ್ಪತ್ರೆ, ಪಾಠಶಾಲೆ, ಉತ್ಸವ, ಜಾತ್ರೆಗಳು, ವ್ಯವಸ್ಥಿತವಾಗಿ ಏರ್ಪಟ್ಟ ಗೋಷ್ಠಿಗಳು ಇವೇ ಮೊದಲಾಗಿ ಎಷ್ಟೋ ಅವಕಾಶಗಳು ಇವೆ . +ವೇತನ ಪಡೆಯುವ ಕಾರ್ಯಕರ್ತರಿಂದ ಹಿಡಿದು,ಸಮಾಜದ ಮುಂದಾಳುಗಳಂಥ ಸ್ವಯಂಸೇವಾಕರ್ತರವರೆಗಿನ ಸಕಲ ಕಲ್ಯಾಣ ಕಾರ್ಯಕರ್ತರೂ ಆರೋಗ್ಯ ಶಿಕ್ಷಕರೇ ಸರಿ . +ಆರೋಗ್ಯಶಿಕ್ಷಣ ಕಾರ್ಯರೂಪಕ್ಕೆ ಬರಲು ಸೂಕ್ತ ಜ್ಞಾನಾರ್ಜನೆಯೂ, ಈ ವಿಚಾರದಲ್ಲಿ ಅತ್ಯಾಧುನಿಕ ಜ್ಞಾನವನ್ನು ಸಂಪಾದಿಸಿಕೊಂಡು ಅದನ್ನು ಬಳಕೆಗೆ ತರುವ ನೈಪುಣ್ಯವೂ ಬೇಕಾಗುವುದು . +ಇದರ ಜೊತೆಗೆ, ಆರೋಗ್ಯಶಿಕ್ಷಣದ ವಿಧಾನಗಳನ್ನೂ ಅರಿತಿರಬೇಕು; ಶ್ರವಣ , ವೀಕ್ಷಣ ಸಾಧನಗಳಂಥ ಶಿಕ್ಷಣ ಮಾಧ್ಯಮಗಳನ್ನು ಬಳಸುವ ಕ್ರಮವನ್ನೂ ತಿಳಿದಿರಬೇಕು . +ನಮ್ಮ ದೇಶಕ್ಕೆ ಸ್ವಾತಂತ್ರ್ಯ ಲಭಿಸಿದ ತರುವಾಯ, ಪ್ರಜಾಪ್ರಭುತ್ವವನ್ನು ಅಳವಡಿಸಿಕೊಂಡಿರುವ ಭಾರತ ಆರೋಗ್ಯ ಶಿಕ್ಷಣಕ್ಕೆ ವಿಶೇಷ ಮಹತ್ತ್ವ ನೀಡಿದೆ . +ಸಾರ್ವಜನಿಕ ಆರೋಗ್ಯ ಇಲಾಖೆ, ಗ್ರಾಮಾಂತರ ಆರೋಗ್ಯ ಕೇಂದ್ರಗಳು, ಸರ್ಕಾರದ ಪ್ರಚಾರ ಇಲಾಖೆ, ರೆಡ್ಕ್ರಾಸ್ ಸಂಸ್ಥೆ - ಇವೇ ಮೊದಲಾದುವು ಈ ಬಗ್ಗೆ ಸಾಕಷ್ಟು ಕೆಲಸವನ್ನು ನಿರ್ವಹಿಸುತ್ತಿವೆ . +ಅಂಗಸಾಧನೆ; ಕ್ರೀಡೆಗಳು;ದೈಹಿಕ ಚಟುವಟಿಕೆಗಳು . -- GitLab