From 94ea4cfce7d90f5b6341270ce7d3839ae51c1d9a Mon Sep 17 00:00:00 2001 From: Narendra VG Date: Mon, 26 Sep 2022 05:11:12 +0530 Subject: [PATCH] Upload New File --- ...2\262\340\263\215\340\262\262\340\262\277_.txt" | 14 ++++++++++++++ 1 file changed, 14 insertions(+) create mode 100644 "Data Collected/Kannada/MIT Manipal/\340\262\205\340\262\265\340\262\225\340\262\276\340\262\266\340\262\270\340\262\256\340\262\276\340\262\250\340\262\244\340\263\206__\340\262\266\340\262\277\340\262\225\340\263\215\340\262\267\340\262\243\340\262\246\340\262\262\340\263\215\340\262\262\340\262\277_.txt" diff --git "a/Data Collected/Kannada/MIT Manipal/\340\262\205\340\262\265\340\262\225\340\262\276\340\262\266\340\262\270\340\262\256\340\262\276\340\262\250\340\262\244\340\263\206__\340\262\266\340\262\277\340\262\225\340\263\215\340\262\267\340\262\243\340\262\246\340\262\262\340\263\215\340\262\262\340\262\277_.txt" "b/Data Collected/Kannada/MIT Manipal/\340\262\205\340\262\265\340\262\225\340\262\276\340\262\266\340\262\270\340\262\256\340\262\276\340\262\250\340\262\244\340\263\206__\340\262\266\340\262\277\340\262\225\340\263\215\340\262\267\340\262\243\340\262\246\340\262\262\340\263\215\340\262\262\340\262\277_.txt" new file mode 100644 index 0000000..edb3d8c --- /dev/null +++ "b/Data Collected/Kannada/MIT Manipal/\340\262\205\340\262\265\340\262\225\340\262\276\340\262\266\340\262\270\340\262\256\340\262\276\340\262\250\340\262\244\340\263\206__\340\262\266\340\262\277\340\262\225\340\263\215\340\262\267\340\262\243\340\262\246\340\262\262\340\263\215\340\262\262\340\262\277_.txt" @@ -0,0 +1,14 @@ +ಶಿಕ್ಷಣಕ್ಷೇತ್ರದಲ್ಲಿ ಜನ್ಮ ,ಜಾತಿ ,ಸಂಪತ್ತು ಅಥವಾ ಇನ್ನು ಯಾವುದೇ ಕಾರಣಗಳಿಂದ ಯಾವುದೇ ಜನಾಂಗಕ್ಕೆ ಇರುವ ವಿಶೇಷ ಅವಕಾಶ ಅಥವಾ ಅನುಕೂಲತೆಗಳನ್ನು ತೆಗೆದುಹಾಕುವುದೇ ಸಮಾನತಾ ತತ್ತ್ವದ ಮುಖ್ಯ ಉದ್ದೇಶ. +ಬುದ್ಧಿಶಕ್ತಿ ,ವಿದ್ಯಾರ್ಹತೆ ,ಶಕ್ತಿ ಸಾಮರ್ಥ್ಯಗಳು, ಪ್ರತಿಭೆ, ಕ್ರಿಯಾಸಾಮರ್ಥ್ಯ ಈ ದೃಷ್ಟಿಯಿಂದ ಒಬ್ಬೊಬ್ಬರಿಗೂ ವ್ಯತ್ಯಾಸವುಂಟು . +ಸಮಾಜದಲ್ಲೂ ಒಬ್ಬೊಬ್ಬನ ಯೋಗ್ಯತೆ,ಆದಾಯ,ವ್ಯವಹಾರಗಳಲ್ಲಿ ಭೇದವಿದೆ . +ಆದರೆ ಯಾವುದೇ ಕಾರಣದಿಂದಾಗಲೀ ಶಿಕ್ಷಣಾವಕಾಶಗಳನ್ನು ಏರ್ಪಡಿಸುವಾಗ ವ್ಯಕ್ತಿ ವ್ಯಕ್ತಿಗೆ ಭೇದ ತೋರಿಸಬಾರದು . +ಯಾವ ಭೇದಭಾವವನ್ನೂ ಮಾಡದೆ ಎಲ್ಲರಿಗೂ ಸಮಾನ ಅವಕಾಶಗಳನ್ನು ಕಲ್ಪಿಸಿಕೊಡುವುದು ಸರ್ಕಾರದ ಕರ್ತವ್ಯ . +ವೈಜ್ಞಾನಿಕ, ರಾಜಕೀಯ, ಸಾಮಾಜಿಕ ಮತ್ತು ಆರ್ಥಿಕ ರಂಗಗಳಲ್ಲಿ ಸರಿಯಾದ ತರಬೇತಿ ಯನ್ನು ಕೊಟ್ಟು ಎಲ್ಲರೂ ಸ್ವತಂತ್ರರಾಗಿ ಜೀವನ ನಿರ್ವಹಣೆ ಮಾಡುವಂತಾಗಬೇಕು . +ಎಲ್ಲರಿಗೂ ಒಂದೇ ರೀತಿಯ ಅವಕಾಶಗಳನ್ನು ಒದಗಿಸಿಕೊಟ್ಟು,ಒಂದೇ ಪ್ರಕಾರದ ತರಬೇತಿಯನ್ನು ಕೊಟ್ಟು ಎಲ್ಲರನ್ನೂ ಸಿರಿವಂತರನ್ನಾಗಿ, ಸಾಹಿತಿಗಳನ್ನಾಗಿ ಇಲ್ಲವೆ ವಿಜ್ಞಾನಿಗಳನ್ನಾಗಿ ಪರಿವರ್ತಿಸುವುದು ಉದ್ದೇಶವಲ್ಲ . +ವಿವಿಧ ಗುಣಧರ್ಮಗಳಿಂದ ತುಂಬಿದ ಮಾನವ ಸಮಾಜದಲ್ಲಿ ಇದು ಸಾಧ್ಯವೂ ಅಲ್ಲ . +ಆದರೆ ಯಾವುದೇ ರಂಗದಲ್ಲಿ ಯಾವುದೇ ಕಾರಣಗ ಳಿಂದ ಮಾನವ - ಮಾನವನಲ್ಲಿ ಭೇದಭಾವವನ್ನು ಕೃತಕರೀತಿಯಲ್ಲಿ ಕಲ್ಪಿಸದೆ , ಅವನ ಆವಶ್ಯಕತೆಗಳನ್ನು ಪೂರೈಸಿ ಅವನ ಹಿತಾಸಕ್ತಿಗಳನ್ನು ರಕ್ಷಿಸುವುದು ಸರ್ಕಾರದ ಮತ್ತು ಸಮಾಜದ ಆದ್ಯಕರ್ತವ್ಯ . +ಹಾಗೆಂದ ಮಾತ್ರಕ್ಕೆ ಉನ್ನತ ವ್ಯಾಸಂಗಕ್ಷೇತ್ರದಲ್ಲಿ ಅನರ್ಹರಿಗೂ ಸ್ಥಾನವಿರಬೇಕೆಂದಲ್ಲ . +ಅಧಿಕಾರ ಇದ್ದವನಿಗೆ ಮಾತ್ರ ವಿದ್ಯೆ ಎಂಬುದನ್ನು ನೆನಪಿನಲ್ಲಿಡಬೇಕು . +ಇದೊಂದೇ ಶಿಕ್ಷಣಕ್ಷೇತ್ರದಲ್ಲಿ ಅವಕಾಶ ಹಂಚಿಕೆಯ ಧ್ಯೇಯವಾಗಿರಬೇಕು . +ಉಳಿದ ಯಾವ ಕಾರಣಕ್ಕಾಗಿಯೂ ಯಾರಿಗೂ ಅದನ್ನು ಇಲ್ಲವೆನ್ನಲಾಗದು . +ಆದ್ದರಿಂದ ಅವರವರ ಯೋಗ್ಯತೆಗನುಗುಣವಾಗಿ, ಅವರ ಗುಣಲಕ್ಷಣ ಮತ್ತು ಒಲವುಗಳು ಪೂರ್ಣವಾಗಿ ಅಭಿವೃದ್ಧಿಗೊಳ್ಳುವಂತೆ ಎಲ್ಲರಿಗೂ ಸಾಕಷ್ಟು ಸರಿಯಾದ ಅವಕಾಶಗಳನ್ನು ಇಲ್ಲವೆ ಅನುಕೂಲತೆಗಳನ್ನು ಒದಗಿಸುವುದೇ ಇದರಲ್ಲಿ ಅಡಗಿರುವ ಮುಖ್ಯ ತತ್ತ್ವ . -- GitLab