From 953372a3436fc8856a053f04a85eac488d547a5a Mon Sep 17 00:00:00 2001 From: Narendra VG Date: Mon, 26 Sep 2022 05:12:39 +0530 Subject: [PATCH] Upload New File --- ...5\340\263\215\340\262\267\340\262\243.txt" | 250 ++++++++++++++++++ 1 file changed, 250 insertions(+) create mode 100644 "Data Collected/Kannada/MIT Manipal/\340\262\225\340\262\277\340\262\265\340\263\201\340\262\241\340\262\260_\340\262\266\340\262\277\340\262\225\340\263\215\340\262\267\340\262\243.txt" diff --git "a/Data Collected/Kannada/MIT Manipal/\340\262\225\340\262\277\340\262\265\340\263\201\340\262\241\340\262\260_\340\262\266\340\262\277\340\262\225\340\263\215\340\262\267\340\262\243.txt" "b/Data Collected/Kannada/MIT Manipal/\340\262\225\340\262\277\340\262\265\340\263\201\340\262\241\340\262\260_\340\262\266\340\262\277\340\262\225\340\263\215\340\262\267\340\262\243.txt" new file mode 100644 index 0000000..8bf6f12 --- /dev/null +++ "b/Data Collected/Kannada/MIT Manipal/\340\262\225\340\262\277\340\262\265\340\263\201\340\262\241\340\262\260_\340\262\266\340\262\277\340\262\225\340\263\215\340\262\267\340\262\243.txt" @@ -0,0 +1,250 @@ +ಕಿವುಡಿನ ವಿಷಯವಾಗಿ ಜನಕ್ಕೆ ಹೆಚ್ಚು ಅಜ್ಞಾನವಿದೆ . +ಕಿವಿ ಕೇಳುವುದು ಮಂದವಾಗಿರುವುವನನ್ನು ತಿಳಿಗೇಡಿ , ಗರ್ವಿ , ಅಸಡ್ಡೆಯವ - ಎನ್ನುವರು . +ಕಿವಿಗೆ ಏನೂ ಕೇಳಿಸದ ಮಕ್ಕಳ ವಿಷಯದಲ್ಲಂತೂ ಇದು ಇನ್ನೂ ವಿಪರೀತ . +ಮಕ್ಕಳಲ್ಲಿ ಕಿವುಡತನ ಒಂದು ದೊಡ್ಡ ವಿಕಲತೆ ; ಮಿದುಳಿಗೆ ಆಗುವ ಹಾನಿ , ಬುದ್ಧಿ ಮಾಂದ್ಯಗಳನ್ನು ಬಿಟ್ಟರೆ , ಕಿವುಡೇ ಮಕ್ಕಳಲ್ಲಿನ ದೊಡ್ಡತೊಡಕು , ಬಾಳಿನುದ್ದಕ್ಕೂ ಕುರುಡರಿಗಾಗಿ ದುಡಿದ . +ಹೆಸರಾಂತ ಹೆಲನ್ ಕೆಲರ್ ( ನೋಡಿ - ಕೆಲರ್ , - ಹೆಲನ್ - ಆಡಮ್ಸ್ ) ತಾನು ಕಿವುಡಿ ಕುರುಡಿ ಎಂಬುದನ್ನು ಮರೆಯದೆ ಇನ್ನೊಮ್ಮೆ ತಾನು ಮರುಹುಟ್ಟು ಪಡೆಯುವುದಾದರೆ ಕುರುಡರಿಗಿಂತಲೂ ಕಿವುಡರಿಗಾಗೇ ದುಡಿಯುವುದಾಗಿ ತನ್ನ ಇಳಿ ವಯಸ್ಸಿನಲ್ಲಿ ಹೇಳಿದಳು . +ಕುರುಡು ಮತ್ತು ಇತರ ಅಂಗವಿಕಲತೆಗಳ ಹಾಗೆ ಕಿವುಡತನ ಕಣ್ಣಿಗೆ ಕಾಣದಿರುವುದೇ ತೊಂದರೆ . +ಜನಸಾಮಾನ್ಯರಿಗೆ ಗೊತ್ತಾಗದ ಹಲವಾರು ವಿಶೇಷ ತೊಡಕುಗಳನ್ನು ವ್ಯಕ್ತಿಗೆ ಇದು ತಂದೊಡ್ಡುತ್ತದೆ . +ಕಿವಿ ಕೇಳದ ಮಗು ಕಿವುಡಾಗಿರುವಂತೆ ಮೂಕೂ ಆಗುತ್ತದೆ . +ಕೇಳಿ ಕೇಳಿ ಮಗು ಸರಿಯಾಗಿ ಮಾತನಾಡುವುದನ್ನು ಅಭ್ಯಾಸ ಮಾಡಬೇಕು . +ಬಲು ಮುಖ್ಯವಾದ ಈ ಹೆದ್ದಾರಿ ಇಲ್ಲವಾದರೆ , ಅದರ ಸುತ್ತಲೂ ಆಡಿದ್ದನ್ನು ಕೇಳಿಸಿಕೊಳ್ಳದು ; ತಾನೂ ಆಡಿದ್ದೂ ತನಗರಿವಿಲ್ಲವಾಗುವುದು . +ಅಂಥ ಮಗುವನ್ನು ಮೂಗ ಎನ್ನುವುದು ನಿಜವಾಗಿ ಸರಿಯಿಲ್ಲ . +ಕಿವುಡ ಮಗು ಕೂಡ ಮಾತಾಡಬಲ್ಲುದು . +ಅದರ ಮಾತಿನ ಅಂಗಗಳೂ ಚೆನ್ನಾಗೇ ಇರುತ್ತವೆ . +ಮಾತಾನಾಡವುದಕ್ಕೆ ಅದಕ್ಕೆ ಗೊತ್ತಾಗುವ ಹಾಗೆ ಹೇಳಿಕೊಡಬೇಕಷ್ಟೆ . +ಆದ್ದರಿಂದ ಆ ಮಗುವನ್ನು ಕಿವುಡ ಎಂದು ಮಾತ್ರ ಹೇಳಬಹುದು . +ಮಾತಿಲ್ಲದ ಈ ತೊಡಕು ಮುಂದೆ ಮಗುವಿನ ಮನೋಭಾವನೆಯ ವಿಕಾಸಕ್ಕೂ ಕಲಿಕೆಗೂ ಅಡ್ಡಿಯಾಗುವುದು.ಕಿವುಡ , ಮಂದಗಿವಿಯವ ಎಂಬ ಮಾತುಗಳಿಗೆ ವಿವರಣೆ ಅಗತ್ಯ . +ತನ್ನ ಮನದಲ್ಲಿರುವುದನ್ನು ಇನ್ನೊಬ್ಬರಿಗೆ ತಿಳಿಸಿಕೊಡಲಾಗದಷ್ಟು ಕಿವುಡು ಕೂರಾಗಿದ್ದರು ಕೇಳುವ ಸಾಧನವನ್ನು (ಹಿಯರಿಂಗ್ ಎಯ್ದ್ ) ಹಾಕಿಕೊಂಡೋ ಇಲ್ಲದೆಯೋ ಸಮಾಜದಲ್ಲಿ ಹಾಗೂ ನಡೆದುಕೊಳ್ಳುತ್ತಿರುವವ ಮಂದಗಿವಿಯವ . +ಈತ ಕೇಳುವ ಸಾಧನದ ನೆರವಿನಿಂದ ಚೆನ್ನಾಗಿ ಮಾತಾಡುತ್ತ , ವಿದ್ಯೆ ಕಲಿತು ಕಸಬು ಹಿಡಿದು ಉಳಿದವರೊಂದಿಗೆ ಸಂಪರ್ಕ ಬೆಳಸಬಲ್ಲ . +ಕಿವುಡರಿಗೆ ಕಿವುಡು ಇನ್ನೂ ಜೋರಾಗಿರುತ್ತದೆ . +ಕೇಳು ಸಾಧನವನ್ನು ಹಾಕಿಕೊಂಡರೂ ಆಳವಾದ ವಿಶೇಷ ಕಲಿಕೆಯಿಲ್ಲದೆ ಜನರಲ್ಲಿ ಹೆಚ್ಚಾಗಿ ಬೆರೆಯಲಾರರು. +ಹುಟ್ಟು ಕಿವುಡರಿಗೂ ಇಲ್ಲವೇ ಮಾತಾಟ ಮತ್ತು ನುಡಿಗಳನ್ನು ಕಲಿವ ಮೊದಲೇ ಎಳೆತನದಲ್ಲೇ ಕಿವಿ ಕೇಳದಂತಾದವರಿಗೂ ವಯಸ್ಸಾದ ಮೇಲೆ ಕಿವುಡಾಗುವವರಿಗೂ ವ್ಯತ್ಯಾಸಗಳು ಇದ್ದೇ ಇವೆ . +ಯಾರೂ ಪೂರಾ ಕಿವುಡರಲ್ಲ . +ಎಂಥ ಕಿವುಡಿದ್ದರೂ ಮಗುವಿಗೆ ಇನಿತಾದರೂ ಕೇಳಿಸುವಂತಿರುತ್ತದೆ . +ಪೂರಾ ಕಿವುಡು ಬಲು ಅಪರೂಪ . +ಅಂಥವರು ತಮಗೆ ಕೇಳಿಸದಿದ್ದರೂ ಸದ್ದುಗಳನ್ನು ಹಿಡಿಯಬಲ್ಲರು . +ಗುಡುಗಿನಂಥ ಕೆಲವು ಸದ್ದುಗಳನ್ನು ಕಿವುಡ ಮಕ್ಕಳೂ ಕೇಳಬಲ್ಲುವೆಂದು ಗೊತ್ತಾಗಿದೆ . +ಕಿವುಡರ ಕಲಿಕೆಯಲ್ಲಿ ಮುಖ್ಯವಾದ ಅಂಶವೆಂದರೆ ಅವರಲ್ಲಿ ಇರುವ ಅಲ್ಪ ಶ್ರವಣ ಶಕ್ತಿಯನ್ನು ಬಳಸಿಕೊಳ್ಳುವ ವಿಷಯ , ಇದಕ್ಕೋಸ್ಕರವೇ ಎಲ್ಲ ಕಿವುಡ ಮಕ್ಕಳಿಗೂ ಕೇಳುವ ಸಾಧನವನ್ನು ಹಾಕಿಕೊಳ್ಳುವಂತೆ ನಿಯಮಿಸುವುದು. +ತನ್ನ ಸುತ್ತಲ ಪ್ರಪಂಚದಲ್ಲಿ ಸಕ್ರಿಯ ಪಾತ್ರ ವಹಿಸುವಂತೆ ವ್ಯಕ್ತಿಯನ್ನು ಪ್ರೋತ್ಸಾಹಿಸುವುದೇ ಈ ಶಿಕ್ಷಣದ ಧ್ಯೇಯ . +ಮಾತಾಡುತ್ತ ,ಕೆಲಸ ಗೇಯುತ್ತ , ಬಾಳುತ್ತ , ಅವನು ಉಳಿದವರೆಲ್ಲರೊಂದಿಗೆ ಸೇರುವಂತಾಗಬೇಕು . +ಆದರೆ ಈಗಿರುವ ಹಣದ ಮುಗ್ಗಟ್ಟು ಮತ್ತು ಶಾಲೆಗಳ ಸ್ಥಿತಿಗತಿಗಳನ್ನು ನೋಡಿದರೆ ಎಲ್ಲ ಕಿವುಡು ಮಕ್ಕಳಿಗೂ ಯುಕ್ತ ಶಿಕ್ಷಣ ಕೊಡುವುದು ಅಸಾಧ್ಯವೆನಿಸುತ್ತದೆ. +ಪ್ರಪಂಚದ ಬೇರೆಡೆಗಳಲ್ಲಿ ಹೇಗೊ ಹಾಗೆ ಭಾರತದಲ್ಲೂ ಕಿವುಡರ ಶಿಕ್ಷಣ ಬಹು ಹಿಂದಿನಿಂದಲೂ ನಡೆದಿದೆ . +ಕ್ರಿ.ಶ .1555ರ ಸುಮಾರಲ್ಲಿ ಯೂರೋಪಿನಲ್ಲಿ ಈ ಬಗ್ಗೆ ಕೆಲಸ ನಡೆದಂತೆ ದಾಖಲೆಗಳಿವೆ . +ಅರಿಸ್ಟಾಟಲ್ ಕೂಡಾ ಕಿವುಡರ ಕಲಿಕೆಯ ಬಗ್ಗೆ ವಿವೇಚಿಸಿ ಅವರಿಗೆ ಶಿಕ್ಷಣ ಆಗದು ಎಂದಿದ್ದ . +ಭಾರತದಲ್ಲಿ ಸುಮಾರು 80 ವರ್ಷಗಳ ಹಿಂದೆ ಈ ಕೆಲಸಕ್ಕಾಗಿ ಶಾಲೆಗಳನ್ನು ತೆರೆದರು . +ಇದಕ್ಕೂ ಮುಂಚೆ , ಕಿವುಡರ ಕಲಿಕೆಗಾಗಿ ಅಲ್ಲೊಂದಿಲ್ಲೊಂದು ಯತ್ನಗಳಾಗಿರಬೇಕು . +19ನೇಯ ಶತಮಾನದ ನಡುವೆ ಮೈಸೂರು ಸಂಸ್ಥಾನದಲ್ಲಿ ಒಂದು ಕಡೆ ಒಬ್ಬ ಶಿಕ್ಷಕ ಕಿವುಡ ಮಗುವಿಗೆ ಮಾತು ಕಲಿಸಲು ಯತ್ನಿಸಿದ್ದನ್ನು ಕೇಳಿದ್ದುಂಟು . +ಹಿಂದೆ ಕಿವುಡ ಮೂಗ ದೊರೆಯೊಬ್ಬ ಮೈಸೂರು ಸಂಸ್ಥಾನವನ್ನು ಆಳಿದ್ದ . +ಚಿಕ್ಕದೇವರಾಯನ ಮಗನಾದ ಕಂಠೀರವ ಒಡೆಯರ್ ಹುಟ್ಟು ಕಿವುಡನಾಗಿದ್ದರೂ ಮೈಸೂರನ್ನಾಳುತ್ತಿದ್ದ (1704 -1713) . +ಅವನನ್ನು ಮೂಕರಸು ಎನ್ನುತ್ತಿದ್ದರಂತೆ . +ಇಂಥ ಸಾಧನೆ ಮತ್ತೆಲ್ಲೂ ಇದ್ದಿರಲಾರದು. +ಭಾರತದ ಕಿವುಡರ ಶಾಲೆಗಳಲ್ಲಿ ಬಹುವಾಗಿ ಕಲಿಸಲು ಕೈಸನ್ನೆಯ ಭಾಷೆಯನ್ನು ಬಳಸುತ್ತಿದ್ದಾರೆ . +ಕಿವುಡರಿಗೆ ಕಲಿಸಲು ಕೈಸನ್ನೆ ಭಾಷೆಯನ್ನು ಬಳಸಬೇಕೇ ಬೇಡವೇ ಎಂಬ ವಿವಾದ ಹಳೆಯದಾದರೂ ಇನ್ನೂ ಬಗೆಹರಿದಿಲ್ಲ . +ಕಿವುಡರಿಗೆ ಈ ಭಾಷೆ ಬಲುಚೆನ್ನಾಗಿ ಹಿಡಿಸುತ್ತದೆಂದು ಕೆಲವರ ಅನಿಸಿಕೆ . +ಬರಿಯ ಕೈಸನ್ನೆಯ ಭಾಷೆಯನ್ನು ಕಲಿತವರು ಇತರರೊಂದಿಗೆ ಹೊಂದಿಬಾಳುವುದು ಬಹು ಕಷ್ಟವೆಂದು ಇತರ ಕೆಲವರ ಅನಿಸಿಕೆ . +ಅಲ್ಲದೆ ಕೈಸನ್ನೆಯ ಭಾಷೆಯನ್ನೆ ನೆಚ್ಚಿದಾಗ ವ್ಯಕ್ತಿಯಲ್ಲಿರುವ ಅಲ್ಪ ಸ್ವಲ್ಪ ಶ್ರವಣಶಕ್ತಿಯೂ ಅಭಿವ್ಯಕ್ತಿಶಕ್ತಿಯೂ ನಾಶವಾಗಬಹುದು ಎಂಬುದೂ ಇನ್ನೊಂದು ಅಂಶ.ಕಿವುಡು ಮಗುವಿಗೆ ಮೊದಲಿಂದಲೆ ಕೇಳುವ ಮತ್ತು ಮಾತನಾಡುವ ಅವಕಾಶಗಳನ್ನು ಹೆಚ್ಚು ಹೆಚ್ಚಾಗಿ ಒದಗಿಸಬೇಕೆಂದು ತಜ್ಞರ ಅಭಿಪ್ರಾಯ . +ಒಳ್ಳೊಳ್ಳೆಯ ಕೇಳು ಸಾಧನಗಳೂ ಸುಧಾರಿತ ಕಲಿಕೆಯ ಉಪಕರಣಗಳೂ ಸಿಗುತ್ತಿರುವ ಈಗಿನ ಕಾಲದಲ್ಲಿ ಮಗುವಿನ ಕಿವಿಯ ಶಕ್ತಿಯನ್ನೂ ನಾಲಗೆಯ ಶಕ್ತಿಯನ್ನೂ ಪೂರ್ತಿಯಾಗಿ ಬಳಸಿಕೊಳ್ಳುವ ಅವಕಾಶವಿದೆ . +ಕಿವುಡ ಮಕ್ಕಳಿಗೆ ಮುಖ್ಯವಾಗಿ ಕಿವಿಯ ಮೂಲಕ ಮಾತ್ರವೇ ಕಲಿಸಬೇಕೆಂದು ಈಗಲೂ ನಂಬಿರುವ ಜನರಿದ್ದಾರೆ . +ತುಟಿಯೋದುವುದನ್ನು (ಲಿಪ್ ರೀಡಿಂಗ್ ) ಕಲಿಸಲೂ ಅವರು ಒಪ್ಪರು. +ಎಳೆಯ ಮಕ್ಕಳಿಗೆ ಕೈಸನ್ನೆಯ ಭಾಷೆಯನ್ನು ಮೊದಲು ಹೇಳಿಕೊಟ್ಟು ಬರ ಬರುತ್ತ ಅದಕ್ಕೆ ಬದಲಾಗಿ ಮಾತನಾಡುವುದನ್ನು ಕಲಿಸಬೇಕೆಂಬ ಹೊಸ ತಂಡವೊಂದು ಹುಟ್ಟಿಕೊಳ್ಳುತ್ತಿದೆ . +ಈ ವಿಚಾರವಾಗಿ ಯಾವ ಇತ್ಯರ್ಥವೂ ಆಗದಿರುವುದರಿಂದ ಈ ಬೇಡಿಕೆಗಳ ಆಗುಹೋಗುಗಳನ್ನು ಮುಂದಿನ ಸಂಶೋಧನೆಯೇ ನಿರ್ಧರಿಸಬೇಕು. +ಇಷ್ಟಾದರೂ ತೀರ ಎಳೆತನದಲ್ಲೇ ಕಿವುಡರ ಶಿಕ್ಷಣ ಮೊದಲಾಗಬೇಕು ಎನ್ನುವುದರಲ್ಲಿ ಬಹುಮಟ್ಟಿನ ಒಮ್ಮತವಿರುವಂತಿದೆ . +ಹಲವು ಕಾರಣಗಳಿಂದ ಇದು ಮುಖ್ಯವೆನಿಸಿದೆ . +ಇಂತಿಷ್ಟೆಂದು ವಯಸ್ಸನ್ನು ಖಚಿತವಾಗಿ ಹೇಳಲು ಬಾರದಿದ್ದರೂ ಮಗುವಿನ ಜೀವದಲ್ಲಿ ಅದರ ಮನಸ್ಸು ಭಾಷೆಯ ಕಲಿಕೆಯ ಕಡೆಗೆ ವಾಲುವ ಒಂದು ಹಂತವಿದೆ . +ಆಗ ಅದರ ಸಕಲ ಇಂದ್ರಿಯಗಳೂ ಮನಸ್ಸೂ ಭಾಷೆಯತ್ತ ಕೆಲಸ ಮಾಡುತ್ತಿರುತ್ತವೆ . +ಈ ವಯಸ್ಸಿನಲ್ಲಿ ಮಗುವಿಗೆ ಕಲಿಸದಿದ್ದರೆ ಮಿದುಳಿನಲ್ಲಿ ಭಾಷೆಗೆ ಸಂಬಂಧಿಸಿದ ಈ ಭಾಗಗಳು ಸರಿಯಾಗಿ ವಿಕಾಸವಾಗದೆಂಬ ಶಂಕೆಯೂ ಇದೆ . +ಎಳೆತನದಲ್ಲೇ ಕಲಿಕೆ ಮೊದಲಾಗುವುದು ಮುಖ್ಯ . +ಆರೋಗ್ಯವಂತ ಮಕ್ಕಳು ಎಳೆಯ ವಯಸ್ಸಲ್ಲೇ ಕಲಿಯುತ್ತಿರುವರು . +ಕಿವುಡ ಮಗುವಿಗೆ ಈ ಎಳೆಯ ವಯಸ್ಸಿನಲ್ಲೇ ತರಬೇತು ದೊರೆಯದಾದರೆ ಆರೋಗ್ಯವಂತ ಮಕ್ಕಳಿಗಿಂತ ಅದು ಹಿಂದೆ ಬೀಳುತ್ತದಾಗಿ ಮುಂದಿನ ಕಲಿಕೆಗೆ ಇನ್ನೂ ಕಷ್ಟವಾಗುತ್ತದೆ . +ಆದ್ದರಿಂದ ಕಿವುಡಿನ ಶಂಕೆ ಎದ್ದಕೂಡಲೇ ಮಗುವಿನ ಶಿಕ್ಷಣಕ್ಕಾಗಿ ವಿಶೇಷವಾಗಿ ಏರ್ಪಾಡು ಮಾಡಬೇಕು . +ತೀರ ಎಳೆಮಗುವಿಗೂ ಕೇಳುವ ಸಾಧನವನ್ನು ಒದಗಿಸಬೇಕು . +ಕಿವುಡ ಮಗುವಿಗೆ ಬೇಗನೆ ಶಿಕ್ಷಣ ಕೊಡುವ ಬಲು ದೊಡ್ಡ ಜವಾಬ್ದಾರಿ ಹೆತ್ತವರದು . +ಮೊದಲು ಅವರು ಒಬ್ಬ ಶ್ರವಣ ಪರಿಣತನ ,ಕಿವಿ ಮೂಗು ಗಂಟಲು ವೈದ್ಯನ (ಇಎನ್‍ಟಿ ಸ್ಪೆಷಲಿಸ್ಟ್ ) ಸಲಹೆ ಪಡೆಯಬೇಕು . +ಮಗುವನ್ನು ಚೆನ್ನಾಗಿ ಪರೀಕ್ಷಿಸಿ , ಕೇಳುವ ಸಾಧನವನ್ನು ಆರಿಸಿಕೊಟ್ಟು ಮನೆಯಲ್ಲಿ ಮಗುವಿಗೆ ಈ ದಿಸೆಯಲ್ಲಿ ತಂದೆ ತಾಯಿಗಳು ಹೇಗೆ ನೆರವಾಗಬಹುದೆಂದೂ ಇವರು ಸೂಚಿಸುತ್ತಾರೆ . +ಕೇಳುವ ಸಾಧನವನ್ನು ಮಗು ಯಾವಾಗಲೂ ಹಾಕಿಕೊಂಡಿರಬೇಕಲ್ಲದೆ , ಮಗುವಿನೊಂದಿಗೆ ಮನೆಯವರು ಬಹಳ ಮಾತಾಡುತ್ತಿರಬೇಕು . +ಹೆಚ್ಚೆಚ್ಚಾಗಿ ಮಾತಾಡಿದಷ್ಟೂ ಮಕ್ಕಳಿಗೆ ಭಾಷೆ ಚೆನ್ನಾಗಿ ತಿಳಿದು ಮುಂದೆ ಅವರ ವಿದ್ಯಾಭ್ಯಾಸ ಸುಗಮವಾಗುವುದು . +ಈ ಮಾತು ಕೇವಲ ಕಿವುಡು ಮಕ್ಕಳಿಗೆ ಮಾತ್ರ ಅನ್ವಯವಾಗಬೇಕಾದ್ದಿಲ್ಲ . +ಹೆಚ್ಚು ಹೆಚ್ಚು ಮಾತಿನಿಂದ ಇತರ ಮಕ್ಕಳೂ ಸಂಪುಷ್ಟವಾಗಿ ಬೆಳೆಯುತ್ತವೆ . +ವಾಕ್ ಮತ್ತು ಶ್ರವಣ ಚಿಕಿತ್ಸಾಲಯಗಳೂ ಅಖಿಲಭಾರತ ವಾಕ್‍ಶ್ರವಣ ಸಂಸ್ಥೆಗಳಂಥವೂ ಕಿವುಡರ ಶಿಕ್ಷಣದ ವಿಚಾರವಾಗಿ ಹೆತ್ತವರಿಗೆ ಮೇಲಿಂದ ಮೇಲೆ ಸಲಹೆ ನೀಡುತ್ತಿರುವರು . +ಎಳೆಯ ವಯಸ್ಸಿನಲ್ಲಿ ಶಿಕ್ಷಣ ಆರಂಭಿಸಿ ಬಲವಾದ ತಳಹದಿ ಹಾಕಿದಲ್ಲಿ ,ಕಿವುಡ ಮಕ್ಕಳು ವಿಶೇಷ ಶಾಲೆಗಳ ಬದಲಾಗಿ ಸಾಧಾರಣ ಶಾಲೆಗಳಿಗೇ ಹೋಗಬಹುದು . +ಮೈಸೂರು ನಗರದಲ್ಲೇ ಎಷ್ಟೋ ಕಿವುಡ ಮಕ್ಕಳು ಕೇಳುವ ಸಾಧನವನ್ನು ಹಾಕಿಕೊಂಡು ಈಗ ಸಾಧಾರಣ ಶಾಲೆಗಳಿಗೇ ಹೋಗುತ್ತಿರುವರು . +1 ಕೇಳುವ ಸಾಧನ : ಮಗುವಿನಲ್ಲಿ ಶ್ರವಣಶಕ್ತಿಯನ್ನು ಪೂರ್ಣ ಬಳಸಲು ಇದು ನೆರವಾಗುತ್ತದೆ . +ಇದರಿಂದ ಮಗುವಿಗೆ ಎಲ್ಲ ಸದ್ದುಗಳೂ ಕೇಳಿಸದಿರಬಹುದು . +ಆದರೂ ಎಂದಿಗಿಂತಲೂ ಹೆಚ್ಚು ಸದ್ದುಗಳು ಕೇಳಿಸುವುದಂತೂ ದಿಟ . +2 ತರಬೇತು :ಕೇಳು ಸಾಧನವನ್ನು ಮಗುವಿಗೆ ತೊಡಗಿಸಿದರೆ ಸಾಲದು . +ಮಗು ಅದನ್ನು ಬಳಸಬೇಕು . +ಸದ್ದುಗಳನ್ನು ಆಲಿಸುವುದನ್ನೂ ಒಂದು ಸದ್ದಿಂದ ಇನ್ನೊಂದರ ವ್ಯತ್ಯಾಸ ಹಿಡಿವುದನ್ನೂ ಸದ್ದುಗಳಿಗೆ ಅರ್ಥ ಕೊಡುವುದನ್ನೂ ತಿಳಿಸಿ ಕೊಡಬೇಕು . +ಬೇರೆ ಬೇರೆ ಸದ್ದುಗಳ ಆಟಗಳನ್ನು ಯೋಜಿಸಬೇಕು . +ಸ್ವರ, ನಾದಗಳನ್ನು ಗುರುತಿಸುವಂತೆ ಸರಳ ಸಂಗೀತವನ್ನೂ ಹೇಳಿ ಕೊಡಬೇಕು . +ಮುಂದೆ ಅವರು ಮಾತಾಡುವಂತಾದಾಗ ಸರಿಯಾದ ಲಯವೂ ಸ್ವರವೂ ಮಾತಿನಲ್ಲಿ ಮೂಡುತ್ತವೆ . +3 ಭಾಷೆ : ಕಿವುಡಿನ ಬಲು ದೊಡ್ಡ ವಿಕಲತೆ ಎಂದರೆ ಭಾಷೆ . +ಆದ್ದರಿಂದ ಭಾಷೆಯನ್ನು ಕಲಿಸುವುದರಲ್ಲಿ ಕಿವುಡ ಮಗುವಿಗೆ ಹೆಚ್ಚಿನ ನೆರವು ನೀಡುವುದು ಮುಖ್ಯ . +ಕಿವುಡ ಮಕ್ಕಳಿಗೆ ಭಾಷೆಯನ್ನು ಕಲಿಸಲು ಹಲವು ದಾರಿಗಳಿದ್ದರೂ ಸಾಮಾನ್ಯವಾಗಿ ಸುತ್ತಮುತ್ತ ನಡೆವವನ್ನು ವಿವರಿಸುವ ಮಾತುಗಳನ್ನು ಬಳಸುವುದು ಒಳ್ಳೆಯ ಮಾರ್ಗ , ಕಣ್ಣೆದುರಿನ ಅನುಭವದೊಂದಿಗೆ ನುಡಿಯನ್ನು ಕೂಡಿಸಿದರೆ ಕಲಿಕೆ ಇನ್ನೂ ಸುಲಭ . +ಆದ್ದರಿಂದ ಭಾಷೆ ಕಲಿಸಲು ಬಲು ಮುಖ್ಯ ಶಿಕ್ಷಕರೆಂದರೆ ಹೆತ್ತವರೇ . +ಯಾವಾಗಲೂ ಮಗುವಿನೊಂದಿಗೆ ಅವರು ಮಾತಾಡುತ್ತಿರಬೇಕು . +ಮಕ್ಕಳಿಗೆ ಅರ್ಥವಾಗುವ ಹಾಗೆ ಪದಗಳನ್ನೂ ವಾಕ್ಯಗಳನ್ನೂ ಮತ್ತೆ ಮತ್ತೆ ಹೇಳುತ್ತಿರಬೇಕು . +ಮಗು ತಾನಾಗೇ ಮಾತಾಡಿ ಭಾಷೆ ಬಳಸುವಂತೆ ಒತ್ತಾಸೆ ಕೊಡಬೇಕು . +ಕಿವುಡ ಮಕ್ಕಳಿಗೆ ಮಾತುಕಲಿಯಲು ಬಲು ಕಷ್ಟವಾಗುತ್ತದೆ . +ಆದರೂ ಅವು ಕಲಿತೇ ಕಲಿಯುತ್ತದೆ ಎನ್ನುವುದನ್ನು ಮರೆಯಬಾರದು . +ಭಾಷೆಗಾಗಿ ಎಲ್ಲ ಇಂದ್ರಿಯಗಳ ಅರಿವನ್ನೂ ಬಳಸಿಕೊಂಡು ಮಗುವಿನ ಕುತೂಹಲ , ಆಸಕ್ತಿಗಳನ್ನು ಹೆಚ್ಚಿಸುವ ಯಾವ ಸಂದರ್ಭವನ್ನೂ ಬಿಡಬಾರದು . +4 ಮಾತಾಡುವುದು :ಕಿವಿ ಕೇಳಿಸದ್ದರಿಂದ ಮಗುವಿಗೆ ಮಾತು ಬರುವುದಿಲ್ಲವೆಂಬುದನ್ನು ಮರೆಯಬಾರದು . +ಕಿವುಡರಿಗೆ ಮಾತಾಡುವುದನ್ನು ಕಲಿಸುವಾಗ ಇತರ ಇಂದ್ರಿಯಗಳ ಪಾತ್ರ ನಮ್ಮ ಅರಿವಿಗೆ ಬರುವುದು . +ಒಂದು ಗೊತ್ತಾದ ಶಬ್ದವನ್ನು ಬಾಯಿಂದ ಹೇಳುವುದು ಹೇಗೆಂದು ಮಗು ತಿಳಿಯಬೇಕು . +ಇದಕ್ಕಾಗೇ ಕಿವುಡರಿಗೆ ಕಲಿಸುವವರು ಅನೇಕರು ಕನ್ನಡಿಗಳ ಮುಂದೆ ಮಾತಾಡುತ್ತಾರೆ . +ಕನ್ನಡಿಯನ್ನು ಮಗು ನೋಡುತ್ತದೆ . +ಕಲಿಸುವವನು ಆಡುವುದನ್ನು ಕಂಡು .ಅದನ್ನು ಅನುಕರಿಸಲು ಯತ್ತಿಸುತ್ತದೆ . +ಕೇಳುವ ಸಾಧನದ ಮೂಲಕ ಕಲಿಸುವವನ ಮಾತೂ ತನ್ನದೂ ಮಗುವಿಗೆ ಕೇಳಿಸುತ್ತದೆ . +ಬೇಕೆಂದಾಗೆಲ್ಲ ಗಂಟಲು , ಮೂಗುಗಳ ಕಂಪನಗಳನ್ನೂ ತನ್ನ ಬಾಯಿಂದ ಹೊರಬೀಳುವ ಉಸಿರನ್ನೂ ತನ್ನ ಕೈಗಳಿಂದ ಮುಟ್ಟಿ ತಿಳಿಯಬಹುದು . +ಕಿವಿ ಮಂದವಾಗಿದ್ದರೂ ಹೀಗೆ ಅದು ಮಾತಾಡುವುದನ್ನು ಕಲಿಯುತ್ತದೆ . +ಶಬ್ದಗಳನ್ನು ಮಗು ನೋಡುವಂಥ ನೋಟದ ಚಿತ್ರಗಳನ್ನೂ ಮಗು ಮುಟ್ಟಿ ತಿಳಿವ ಬೇರೆ ಬೇರೆ ಪೆಟ್ಟಿಗೆಗಳ ಕಂಪನಗಳಾಗಿ ಮಾರ್ಪಡಿಸುವ ಇನ್ನೂ ಕೆಲವು ಸಲಕರಣೆಗಳನ್ನು ಇಂದಿನ ತಂತ್ರಗಳಲ್ಲಿ ಬಳಸುವುದುಂಟು . +ಹೀಗೆ ತನಗೆ ಕಲಿಸುವವ ಮಾತಾಡಿದಾಗ ತಾನು ಕಂಡಿದ್ದನ್ನೂ ಅರಿತಿದ್ದನ್ನೂ ತನ್ನ ಮಾತಿನೊಂದಿಗೆ ಮಗು ಹೋಲಿಸಿ ನೋಡುತ್ತದೆ . +ಶಬ್ದಗಳ ಬೇರೆ ಬೇರೆ ಭಾಗಗಳು ಇನ್ನೂ ಜೋರಾಗಿ ಕೇಳುವಂತೆ ಮಾಡುವ ವಿಶೇಷ ಹೇಳುವ ಸಾಧನಗಳನ್ನು ಕೆಲವು ಪರಿಣತರು ಬಳಸುತ್ತಿದ್ದಾರೆ . +ಕಲಿಸುವವನ ತುಟಿಗಳ ಚಲನೆಯನ್ನು ಮೊಗದ ಚಹರೆಯನ್ನೂ ಗಮನಿಸುತ್ತ ಮಗು ನುಡಿಯನ್ನು ಕಲಿವ ವಿಧಾನವಿದು . +ಕಿವಿ ಚೆನ್ನಾಗಿ ಕೇಳುವವರು ಕೂಡ ಕೊಂಚಮಟ್ಟಿಗೆ ತುಟಿಯೋದುವರು . +ಆದರೆ ಕಿವುಡ ಮಗುವಿಗಂತೂ ಇದರಿಂದ ಹೆಚ್ಚಿನ ಪ್ರಯೋಜನವಿದೆ . +ಅಷ್ಟೂ ಇಷ್ಟು ಕಿವಿಗೆ ಕೇಳಿಸಿದ್ದಕ್ಕೆ ತುಟಿಯೋದು ಇನ್ನಷ್ಟು ಅರ್ಥ ಕೊಡುವುದರಿಂದ ಮಗುವಿನ ಕಲಿಕೆ ಇನ್ನೂ ಚೆನ್ನಾಗುವುದು . +ಇತ್ತೀಚೆಗೆ ಶಿಕ್ಷಕರು ತುಟಿಯೋದಿಗೆ ಅಷ್ಟು ಪ್ರಾಮುಖ್ಯ ಕೊಡುತ್ತಿಲ್ಲ. +ಬೋಧನೆ , ಓದು , ಬರವಣಿಗೆ ಮತ್ತಿತರ ವಿಷಯಗಳೇ ಅಲ್ಲದೆ ಇವೆಲ್ಲ ವಿಚಾರಗಳನ್ನೂ ಕಿವುಡರ ಶಾಲೆಗಳಲ್ಲಿ ತಿಳಿಸಿಕೊಡುವರು. +ಬಡಗಿ ಕೆಲಸ , ದರ್ಜಿಕೆಲಸ ಮೊದಲಾದ ಕಸಬಿನ ಶಿಕ್ಷಣಕ್ಕೆ ಅನೇಕ ಶಾಲೆಗಳಲ್ಲಿ ಅವಕಾಶವಿದೆ . +ತೀರ ಎಳೆತನದಲ್ಲಿ ಸರಿಯಾದ ರೀತಿಯಲ್ಲಿ ತರಬೇತಿ ಕೊಡಲು ಮೊದಲು ಮಾಡಿದರೆ ಕಿವುಡರು ಸಮಾಜದಲ್ಲಿ ಸ್ವತಂತ್ರವಾಗಿ ಬದುಕು ನಡೆಸುವಷ್ಟು ಸಮರ್ಥರಾಗುತ್ತಾರೆ . +ಮೈಸೂರಿನ ಅಖಿಲಭಾರತ ವಾಕ್‍ಶ್ರವಣ ಸಂಸ್ಥೆಯಲ್ಲಿ ಹೆತ್ತವರಿಗೆ ನೆರವಾಗಿ ಅವರ ಮಕ್ಕಳಿಗೆ ದಾರಿ ತೋರಲು ಎಲ್ಲ ಅನುಕೂಲಗಳೂ ಇವೆ . +ಮೈಸೂರು ,ಗುಲ್ಬರ್ಗಗಳಲ್ಲಿ ಕಿವುಡರಿಗಾಗಿ ಮೈಸೂರು ಸರ್ಕಾರದ ಶಾಲೆಗಳಿವೆ . +ಕಿವುಡರ ನೆರವಿಗಾಗಿರುವ ಸಂಘವೊಂದು ಬೆಂಗಳೂರಿನಲ್ಲಿ ಖಾಸಗಿಯಾಗಿ ಶಾಲೆಯೊಂದನ್ನು ಚೆನ್ನಾಗಿ ನಡೆಸುತ್ತಿದೆ . +ವಯಸ್ಕ ಕಿವುಡರ ತರಬೇತಿಗಾಗಿ ಹೈದರಾಬಾದಿನಲ್ಲಿ ಭಾರತ ಸರಕಾರ ಒಂದು ಶಾಲೆಯನ್ನು ನಡೆಸುತ್ತಿದೆ. +ಮುಂಬಯಿ ,ಲಕ್ನೊ ,ಕಲ್ಕತ್ತಗಳಲ್ಲಿ ಕಿವುಡರ ಶಿಕ್ಷಕರ ತರಬೇತುವನ್ನು ಕೊಡುತ್ತಿದ್ದಾರೆ . +ಅಖಿಲಭಾರತ ವಾಕ್‍ಶ್ರವಣ ಸಂಸ್ಥೆಯ ವತಿಯಿಂದ ಮೈಸೂರಿನಲ್ಲೂ ಇಂಥ ಏರ್ಪಾಡು ಆಗಲಿದೆ.ಭಾರತ ಸರ್ಕಾರದ ಸಮಾಜ ಏಳಿಗೆ ಶಾಖೆಯ ವತಿಯಿಂದ ಅಂಗವಿಕಲರ ಶಿಕ್ಷಣದ ರಾಷ್ಟ್ರೀಯ ಸಲಹಾಮಂಡಲಿ 1955ರಿಂದಲೂ ಕೆಲಸ ಮಾಡುತ್ತಿದೆ . +ಅಂಗವಿಕಲರ , ಕಿವುಡರ ಶಿಕ್ಷಣ , ತರಬೇತು , ಮರುವಸತಿ , ನೌಕರಿ , ಏಳಿಗೆಗಳ ವಿಚಾರವಾಗಿ ಆಗಿಂದಾಗ್ಗೆ ಸರ್ಕಾರಕ್ಕೆ ಇದು ಸಲಹೆಗಳನ್ನು ನೀಡುತ್ತದೆ. +ಕಿವುಡರ ಅಖಿಲಭಾರತ ಒಕ್ಕೂಟ 1955ರಲ್ಲಿ ಸ್ಥಾಪನೆಯಾಯಿತು . +ಇದರ ಕೇಂದ್ರ ಕಚೇರಿ ನವದೆಹಲಿಯಲ್ಲಿದೆ . +ಕಿವುಡರಲ್ಲಿ ಒಗ್ಗಟ್ಟು , ಅವರ ಹಿತಸಾಧನೆ ಅಭಿಪ್ರಾಯಗಳ ಪ್ರಚಾರ ಇದರ ಧ್ಯೇಯಗಳು . +ಪ್ರತಿವರ್ಷ ಬಾವುಟ ದಿನವನ್ನು ಆಚರಿಸಿ ಕಿವುಡ ಮೂಕರ ಏಳಿಗೆಗಾಗಿ ಹಣ ಕೂಡಿಹಾಕಿ , ಕಿವುಡರಿಗಾಗಿ ಅಚ್ಚುಕೂಟ ಭಾವಚಿತ್ರಣ ಸಂಸ್ಥೆ , ಕಲಿಸುವ ಶಾಲೆ , ತಾಂತ್ರಿಕ ಶಾಲೆಗಳನ್ನು ತೆರೆಯಲಾಗುವುದು , ಸರ್ಕಾರ ಮತ್ತಿತರಡೆಗಳಿಂದ ಬರುವ ಚಂದಾ ದತ್ತಿ , ಪುದುವಟ್ಟು , ಇಡಿಗಂಟುಗಳೇ ಇದರ ಮುಖ್ಯ ವರಮಾನ . +ಹುಟ್ಟಿನಿಂದಲೊ ಎಳೆಯ ವಯಸ್ಸಲ್ಲೊ ಕಿವಿ ಕೇಳದಂತಾದವರಿಗೆ , ಕಿವಿ ಮಂದವಾದವರಿಗೆ ಇಲ್ಲವೆ ವಯಸ್ಸಾದ ಮೇಲೆ ಕಿವುಡಾದವರಿಗೆ ಕಲೆ , ವಿದ್ಯೆಗಳನ್ನು ಕಲಿಸುವಿಕೆ , ಮತ್ತವರ ಏಳಿಗೆಯ ಸಾಧನೆಗಳ ಬಗ್ಗೆ ಹೊರದೇಶಗಳಲ್ಲಿ ಸಾಕಷ್ಟು ಕೆಲಸ ನಡೆದಿದೆ . +ಹುಟ್ಟಿನಿಂದಲೇ ಹೀಗಾದವರ ತರಬೇತೇ ಬೇರೆ , ಕಿವುಡಾದ ವಯಸ್ಕನಿಗೆ ಮತ್ತೆ ಕಲಿಸುವುದೇ ಬೇರೆ . +ಮುಂದುವರಿದ ನಾಡುಗಳಲ್ಲೂ ಹುಟ್ಟು ಕಿವುಡರಿಗೆ ಏನನ್ನೂ ಕಲಿಸುವುದು ಸಾಧ್ಯವೇ ಇಲ್ಲವೆಂಬ ನಂಬಿಕೆ 16ನೇಯ ಶತಮಾನದ ತನಕ ಇತ್ತು . +ಪೂರ್ವಿಕರಲ್ಲಿ ಈ ನಂಬಿಕೆಗೆ ಎರಡು ಕಾರಣಗಳಿದ್ದುವು . +ವಿದ್ಯೆಯನ್ನು ಕಲಿಸುವುದೆಲ್ಲ ಮುಖ್ಯವಾಗಿ ಬಾಯಿ ಮಾತಿನಿಂದ ನಡೆಯುತ್ತಿದ್ದುದರಿಂದ ಕಿವುಡರಿಗದು ದಕ್ಕದಂತಾಗಿತ್ತು . +ಅಲ್ಲದೆ .ಮಾತಿನ ಅಂಗಗಳಿಗೂ ಕಿವಿಗೂ ಏನೋ ನೇರಸಂಬಂಧ ಇದೆಯೆಂದು ನಂಬಿದ್ದ ಕಾಲವದು . +ಆದ್ದರಿಂದ ಮಾತನ್ನು ಕೇಳಿಸಿಕೊಂಡು ಅರ್ಥ ಮಾಡಿಕೊಂಡು ಮಾತನಾಡಲಾಗದ್ದಕ್ಕೆ , ಮಾತಿನ ಅಂಗವೇ ಊನವಾದಂತೆ ತಿಳಿದು . +ಮೂಕತನ ಸರಿಪಡಿಸಲಾಗದ ವಿಕಲತೆ ಎಂದು ಆ ಜನ ಭಾವಿಸಿದ್ದರು . +ಹುಟ್ಟು ಕಿವುಡಿನ ಪರಿಣಾಮವೇ ಮೂಕತನ , ಕಿವುಡು ಕೂಸಿಗೆ ಮಾತುಗಳು ಕೇಳಿಸಲಾಗದ್ದರಿಂದಲೇ ಮೂಕತನ ತೋರುವುದೆಂದು ವೈದ್ಯರಿಗೂ ಶಿಕ್ಷಕರಿಗೂ ಅರಿವಾದ ಮೇಲೇ ಕಿವುಡರಿಗೂ ವಿದ್ಯೆ ಕಲಿಸುವ ನಿಜವಾದ ಯತ್ನಗಳು ಮೊದಲಾದುವು. +16ನೆಯ ಶತಮಾನದಲ್ಲಿ ಮೊಟ್ಟಮೊದಲಾಗಿ .ಕಿವುಡರಿಗೆ ಮಾತಾಡಲು , ಓದಲು ಬರೆಯಲು ಕಲಿಸಲು ಎದೆಗುಂದದೆ ಹೆಣಗಾಡಿದವ ಸ್ವೇನಿನ ಸಂನ್ಯಾಸಿ ಷಿಡ್ರೊಪಾನ್ಸ್ ಡಿ ಲಿಯೋನ್ . +ಇವನ ಮುಂಚೆಯೇ ಹೆಕ್ಲಾಮಿನ ಪಾದ್ರಿಯೊಬ್ಬ ಕಿವುಡ ಹುಡುಗನಿಗೆ ಬಾಯಿಂದ ಉಚ್ಚರಿಸುವುದನ್ನು ಹೇಳಿಕೊಟ್ಟಿದ್ದನ್ನೂ ಜಿರೊನಿಮೊ ಕಾರ್ಡೆನೊ (1501 -76) ತನ್ನ ಪುಸ್ತಕದಲ್ಲಿ ಹುಟ್ಟಾಕಿವುಡಮೂಕನಾಗಿದ್ದವನೊಬ್ಬ ಓದಿ ಬರೆವುದನ್ನು ಕಲಿತು , ಮನದಲ್ಲಿದ್ದುದನ್ನು ಹೇಳುವಂತಾದುದನ್ನೂ ಪಿಡ್ರೊಪಾನ್ಸ್ ಕೇಳಿದ್ದಿರಬಹುದು . +ಸ್ವೇನಿಗನಾದ ಜುವನ್ ಪಾಬ್ಲೊ ಬೋನೆ ಕಿವುಡರ ಶಿಕ್ಷಣದ ಮೇಲಿನ ಮೊದಲ ಪುಸ್ತಕವನ್ನು ತನ್ನ ತಾಯ್ನುಂಡಿಯಲ್ಲಿ ಬರೆದ (1620) . +ಇದೇ ವಿಚಾರವಾಗಿ ಇಂಗ್ಲಿಷ್‍ನಲ್ಲಿ ಮೊದಲ ಪುಸ್ತಕ ಬರೆದವ ಜಾನ್ ಬುಲ್ವರ್ (1648) . +ಕೆಲವೇ ವರ್ಷಗಳಲ್ಲಿ ಆಕ್ಸ್‍ಫರ್ಡಿನ ವೈದ್ಯ ವಿಲಿಯಂ ಹೋಲ್ಡರೂ ಗಣಿತಜ್ಞ ಜಾನ್ ವಾಲಿಸನೂ ಕಿವುಡರಿಗೆ ಕಲಿಸುತ್ತ , ತಮ್ಮ ವಿಧಾನಗಳ ವಿಚಾರಗಳನ್ನು ಬರೆದಿಟ್ಟರು . +ಇಕ್ಕೈಸನ್ನೆಯ ಅಕ್ಷರಮಾಲೆಯ ನೆರವಿನಿಂದ ಬರೆದು ಓದುವುದನ್ನು ಕಲಿಸುವ ರೀತಿಗಳನ್ನು ಜಾರ್ಚ್‍ಡಲ್ಗಾರ್ನೋ ಪ್ರಕಟಿಸಿದ (1680) . +ಹೀಗೆ ಕಿವುಡರಿಗೆ ಕಲಿಸುವುದರಲ್ಲಿ ಯೂರೋಪಿನಲ್ಲೂ ಆಸಕ್ತಿ ಹುಟ್ಟಿತು. +18ನೆಯ ಶತಮಾನದಲ್ಲಿ ಬೇರೆ ಬೇರೆ ತೆರೆನ ಎರಡು ಶಿಕ್ಷಣ ಪದ್ಧತಿಗಳು ತಲೆಹಾಕಿದುವು . +ಕೈಸನ್ನೆಗಳಿಂದ ಕಿವುಡರಿಗೆ ವಿದ್ಯೆ ಕಲಿಸುವ ಫ್ರಾನ್ಸಿನ ಪದ್ಧತಿಯನ್ನು ಚಾರಲ್ಸ್ ಮೈಕೇಲ್ ಜಾರಿಗೆ ತಂದ . +ಸ್ವಾಮ್ಯುಅಲ್ ಹೀನಿಕೆ ಜಾರಿಗೆ ತಂದ ತುಟಿಯೋದಿನ (ಲಿಪ್ ರೀಡಿಂಗ್ ) ಜರ್ಮನಿಯ ಪದ್ಧತಿಯನ್ನು ಮೋರಿಟ್ಚ್ ಹಿಲ್ ( 1805 - 74 ) ಇನ್ನಷ್ಟು ಸುಧಾರಿಸಿದ . +ಇವರಿಬ್ಬರಲ್ಲಿ ,ಚಾರಲ್ಸ್ ಮೈಕೇಲ್ ಕಿವುಡರಲ್ಲಿ ತೋರುತ್ತಿದ್ದ ದಯಾಪರತೆ , ದಾನಶೀಲತೆ , ಹೇರಾಸಕ್ತಿಗಳು ಬ್ರಿಟನ್ , ಅಮೆರಿಕಗಳ ಎಷ್ಟೋ ಶಿಕ್ಷಕರ ಮೆಚ್ಚುಗೆ ಪಡೆದುವು . +ಅವರಲ್ಲಿ ಕೆಲವರು ಪ್ಯಾರಿಸ್ಸಿನಲ್ಲಿದ್ದ ಅವನ ಶಾಲೆಗೆ ಭೇಟಿಯಿತ್ತು , ಸದ್ದಿಲ್ಲದೆ ತಿಳಿಸಿಕೊಡುವ ಅವನ ಪದ್ಧತಿಯನ್ನು ಒಪ್ಪಿಕೊಂಡರು . +ವಾಡಿಕೆಯ ಕೈಸನ್ನೆಗಳಿಂದ ತಮ್ಮ ಅನಿಸಿಕೆಗಳನ್ನು ತಿಳಿಸುವ ಒಂದು ಪದ್ಧತಿಯನ್ನು ಆತ ಕಂಡುಹಿಡಿದು ಸುಧಾರಿಸಿದ . +ತಮಗೆ ಕಲಿಸಿಕೊಟ್ಟವರೊಂದಿಗೂ ಕೈಸನ್ನೆಗಳನ್ನು ಅರಿತು ಬಳಸುವ ಸಾಮಾನ್ಯರೊಂದಿಗೂ ಕಿವುಡರು ಚೆನ್ನಾಗಿ ಬೆರೆತು,ಬದುಕಿ ಬಾಳುವಂತಾಗಬೇಕೆಂದೇ ಅವನ ಗುರಿಯಾಗಿತ್ತು . +ಇದರೆದುರಾಗಿ,ಜರ್ಮನಿಯಲ್ಲಿ ಜಾರಿಯಲ್ಲಿದ್ದ ತುಟಿಯೋದಿನ ಪದ್ಧತಿಯ ಗುರಿ ಸಾಮಾನ್ಯ ಜನರೊಂದಿಗೇ ಹೆಚ್ಚೂ ಕಡಿಮೆ ಸರಾಗವಾಗಿ ಮಾತಾಡುವಾಗ ತುಟಿಯಾಡುವುದನ್ನು ಗಮನಿಸುತ್ತ ಅರಿತುಕೊಳ್ಳವಂತೆ ತುಟಿಯೋದೆ ಮಾತಾಡುವುದನ್ನು ಕಲಿಸುವುದಾಗಿತು . +ಇವೆರಡು ಪದ್ಧತಿಗಳೂ ಯೂರೋಪು ,ಅಮೆರಿಕಗಳಲ್ಲಿ ಆಗಿಂದಲೂ ರೂಢಿಯಲ್ಲಿವೆ . +ಥಾಮಸ್ ಬ್ರೆಯ್ಡ್‍ವುಡ್ ಎಡಿನ್‍ಬರೋದಲ್ಲಿ ಕಿವುಡರಿಗಾಗಿ ತೆರೆದುದೇ ಬ್ರಿಟನ್ನಿನಲ್ಲಿ ಮೊದಲನೆಯ ಶಾಲೆ . +1785ರಲ್ಲಿ ಇದನ್ನು ಲಂಡನ್ನಿಗೆ ವರ್ಗಾಯಿಸಲಾಯಿತು . +ತುಟಿಯೋದಿನ ಪದ್ಧತಿಯನ್ನಿಲ್ಲಿ ಅನುಸರಿಸಲಾಗುತ್ತಿತ್ತು 6 - 7 ವರ್ಷಗಳಲ್ಲಿ ಮೊದಲನೆಯ ಸರ್ಕಾರಿ ಶಾಲೆಯೊಂದು ಆರಂಭವಾಯಿತು . +ಮುಂದಿನ ಶತಮಾನದಲ್ಲಿ ಕೊನೆಯ ಪಕ್ಷ ಇಪ್ಪತ್ತಾದರೂ ಕಿವುಡ ಮೂಗರ ಪಾಲನಾಲಯಗಳು ತಲೆಯೆತ್ತಿದುವು . +ಬಹುಪಾಲು ಇವಲ್ಲಿ ಸದ್ದಿಲ್ಲದೆ ತಿಳಿಸಿಕೊಡುವ ಪದ್ಧತಿಯೇ ಚಾಲ್ತಿಯಲ್ಲದ್ದು ರೂಢಿಯಾಯಿತು . +ಇಷ್ಟಾದರೂ ತುಟಿಯೋದಿನ ಮೂಲಕ ಹೇಳಿಕೊಡುವುದರಲ್ಲಿ ಆಸಕ್ತರಾದ ಕೆಲವರು ಶಿಕ್ಷಕರೂ ಇದ್ದರು.ಕಿವುಡರಿಗೆ ಸಂಬಂಧಿಸಿದ ಇನ್ನೂ ಎಷ್ಟೋ ವಿಚಾರಗಳೊಂದಿಗೆ,ಇವೆರಡೂ ಪದ್ಧತಿಗಳ ಅಗುಹೋಗುಗಳನ್ನೂ ಚರ್ಚಿಸಿ ವಿಮರ್ಶಿಸಲು,ಕಿವುಡರಿಗೆ ಕಲಿಸುವವರ ಮೊದಲನೆಯ ಅಂತರರಾಷ್ಟ್ರೀಯ ಕೂಟ (1880) ಮಿಲಾನಿನಲ್ಲಿ ಸೇರಿತ್ತು . +ಅಲ್ಲಿ ಫ್ರಾನ್ಸಿನ ಪದ್ಧತಿಗಿಂತ ಜರ್ಮನಿಯವರ ಗುರಿ, ಪದ್ಧತಿಗಳ ಕಡೆಗೇ ಬಹುಮತವೂ ಹೆಚ್ಚು ಒಲವೂ ತೋರಿಬಂತು . +ಇಂಗ್ಲೆಂಡಲ್ಲಿ ಈ ಪದ್ಧತಿಯಲ್ಲಿ ನಿರತರಾಗಿದ್ದವರಲ್ಲಿ ಮುಖ್ಯನಾದವ ಥಾಮಸ್ ಆರ್ನಲ್ಡ್ . +ಮಾಡಿತೋರಿಸಿಕೊಡುವ ಇವನ ಕಲಿಕೆ ಪದ್ಧತಿ , ವಿಧಾನ , ರೀತಿಗಳು ಈಗಲೂ ಹೆಸರಾಗಿವೆ . +ಬ್ರಿಟನ್ನಿನಲ್ಲಿ ಕಿವುಡ ಮಕ್ಕಳಿಗೆ ಶಿಕ್ಷಣಕ್ಕೆ ಅವಕಾಶ ಮಾಡಿಕೊಡುವ ಪಾರ್ಲಿಮೆಂಟಿನ ಮೊಟ್ಟಮೊದಲಿನ ಮಸೂದೆ 1893ರಲ್ಲಿ ಕಾಯಿದೆಯಾಯಿತು . +7 - 16 ವಯಸ್ಸಿನ ಕಲಿಸಬಲ್ಲ ಎಲ್ಲ ಕಿವುಡ ಮಕ್ಕಳಿಗೂ ಶಿಕ್ಷಣ ಕೊಡಲು ಈ ಕಾಯಿದೆ ಕಡ್ಡಾಯಪಡಿಸಿದ್ದರಿಂದ ಕಿವುಡರಿಗಾಗಿ ಎಷ್ಟೋ ಶಾಲೆಗಳು ತೆರೆದವು . +ಇವೆಲ್ಲ ತುಟಿಯೋದಿನ ಪದ್ಧತಿ ಅನುಸರಿಸಿದುವು . +ಪ್ರಪಂಚದ ಎರಡು ಮಹಾಯುದ್ಧಗಳ ನಡುವೆ ಕಿವುಡಮಕ್ಕಳಿಗೆ ಎಳೆಯದರಲ್ಲೆ ಶಿಕ್ಷಣ ದೊರೆತು , ಒಂದಿಷ್ಟು ಕಿವಿ ಕೇಳಿಸುವವರಿಗಾಗಿ ಗುಂಪಿನಲ್ಲಿ ಕೇಳುವ ಸಾಧನಗಳು (ಹಿಯರಿಂಗ್ ಎಯ್ಡ್‍ಸ್ ) ಶಾಲೆಗಳಿಗೆ ದೊರೆತವು. +ಇಂಗ್ಲೆಂಡಿನ 1944ರ ವಿದ್ಯಾಭ್ಯಾಸ ಕಾಯಿದೆಯಂತೆ , ಹೆತ್ತವರು ಇಷ್ಟಪಟ್ಟರೆ , ಕಿವುಡಾಗಿ ವಿಕಲರಾದ ಮಕ್ಕಳಿಗೆ ಎರಡನೆಯ ವಯಸ್ಸಿನಿಂದಲೇ ಕಲಿಸುವ ಏರ್ಪಾಡನ್ನು ಸ್ಥಳೀಯ ವಿದ್ಯಾಧಿಕಾರಿಗಳು ಮಾಡುವುದು ಅವರ ಕರ್ತವ್ಯ . +ಐದನೆಯ ವರ್ಷದಿಂದ ಶಿಕ್ಷಣ ಕಡ್ಡಾಯವಾಗುತ್ತದೆ . +ವಿದ್ಯಾಮಂತ್ರಿ ಬೇರೆ ಏರ್ಪಾಡುಮಾಡದಿದ್ದಲ್ಲಿ ಕಿವುಡರೆನಿಸಿಕೊಂಡ ಎಲ್ಲ ಮಕ್ಕಳಿಗೂ ವಿಶೇಷ ಶಾಲೆಯಲ್ಲಿ ಕಲಿಸಬೇಕು . +5ರಿಂದ 16 ವರ್ಷಗಳ ತನಕ ಪೂರಾ ಶಿಕ್ಷಣ ಕಡ್ಡಾಯ . +19-19 ವರ್ಷಗಳ ಕಿವುಡರಿಗೂ ಮಂದಗಿವಿಯವರಿಗೂ ಇನ್ನೂ ಮುಂದಿನ ಶಿಕ್ಷಣ ಕೊಡಲೂ ವಿದ್ಯಾಧಿಕಾರಿಗಳಿಗೆ ಅಧಿಕಾರವಿದೆ . +ಈ ಕಲಿಕೆ ಒಂದು ಹೊತ್ತಿನದಾಗಿರಬಹುದು . +ಇಲ್ಲವೇ ಹೆತ್ತವರು ಇಷ್ಟಪಟ್ಟರೆ , ವಿಶೇಷ ಇಲ್ಲವೇ ತಾಂತ್ರಿಕ ಶಾಲೆಯಲ್ಲಿ ಎರಡು ಹೊತ್ತೂ ಪಾಠ ನಡೆಸಬಹುದು . +ಸರ್ಕಾರಿ ಶಾಲೆಯಲ್ಲಿನ ಶಿಕ್ಷಣಕ್ಕೆ ಶುಲ್ಕವಿಲ್ಲ . +ಆದರೆ ಹೆತ್ತವರು ಖಾಸಗಿ ಶಾಲೆಗಳಲ್ಲೂ ಶುಲ್ಕ ತೆತ್ತು ಓದಿಸಬಹುದು . +5 ವರ್ಷಗಳ ಕೆಳಗಿರುವ ಮಕ್ಕಳಲ್ಲಿ ಕಿವಿ ಮಂದವಾಗಿರುವುದನ್ನು ತಿಳಿಯಲು ಹೆತ್ತವರ , ಹೆರಿಗೆಯ , ಮಕ್ಕಳ ಪಾಲನೆಯ ಕೇಂದ್ರಗಳವರು , ಎಳೆಯ ಮಕ್ಕಳ ಶಾಲೆಗಳವರೂ ಮನೆ ವೈದ್ಯರು , ಕಿವಿವೈದ್ಯರು , ಮಕ್ಕಳ ವೈದ್ಯರೊಂದಿಗೆ ಬೆರೆತು ನೆರವಾಗಬೇಕು . +ಮಾತಾಡುವ ವಯಸ್ಸಿಗೆ ಬರುವ ಮುಂಚೆಯೇ ಸದ್ದುಮಾಡಿದರೆ ಮಗು ಪ್ರತಿಕ್ರಿಯೆ ತೋರದ್ದನ್ನು ಗಮನಿಸಬೇಕು . +ಹಸುಗೂಸುಗಳು ಮತ್ತು ಎಳೆಯ ಮಕ್ಕಳ ಕಿವುಡನ್ನು ಪರೀಕ್ಷಿಸಲು ಒಂದು ವಿಶೇಷ ವಿಧಾನವಿದೆ. +5 - 7 ವಯಸ್ಸಿನ ಮಕ್ಕಳಿಗೂ ಅವರವರ ಆಳವಿಗೆ ತಕ್ಕಂತೆ ಇದೇ ವಿಧಾನ ಆಗಬಹುದು ; ಇಲ್ಲವೇ ಎಷ್ಟೋ ಬಾರಿ ಆಡಿಯೊಮೀಟರಿನಿಂದ ಪರೀಕ್ಷಿಸಬಹುದು . +ಈ ಮೀಟರಿನಲ್ಲಿ ಎರಡು ಬಗೆಗಳಿವೆ . +ಆಡಿದ ಮಾತು ಕೇಳಿಸುವುದನ್ನು ಒಂದು ಪರೀಕ್ಷಿಸಿದರೆ , ಇನ್ರ್ನೆಂದು ಶ್ರುತಿಕವಲಿನಿಂದ ಏಳುವ ಅಚ್ಚ ದನಿಗಳನ್ನು ಕೇಳಿಕೆಯನ್ನು ಪರೀಕ್ಷಿಸುತ್ತದೆ . +ದನಿಯ ಏರನ್ನು ಎರಡರಲ್ಲೂ ಚೆನ್ನಾಗಿ ಹತೋಟಿಯಲ್ಲಡಬಹುದು . +ಅವಕಾಶ ಇಲ್ಲವಾದ್ದರಿಂದ ಇನ್ನೂ ಬಳಕೆಗೆ ಬಾರದಿರುವ ಆಲಿಸುವ ಒಳಬಲವನ್ನು ಐದು ವರ್ಷ ಮೀರದವರಲ್ಲಿ ಅಳೆಯಬೇಕು . +ಆಲಿಸುವ ಬಲವನ್ನು ಶಾಲಾಮಕ್ಕಳ ಎಂದಿನ ವೈದ್ಯ ಪರೀಕ್ಷೆಯಲ್ಲೋ ಪಾಠಗಳಲ್ಲಿ ಹಿಂದೆ ಬೀಳುವ್ಯದರಿಂದಲೋ ಗುರಿತಿಸಿ ಗಮನಿಸಬಹುದು . +ಶಾಲೆ ಸೇರುವ ಮುಂಚಿನ ವಯಸ್ಸಿನ ಕಿವುಡು ಮಕ್ಕಳನ್ನು ಮುಖ್ಯವಾಗಿ 3 ತಂಡಗಳಲ್ಲಿ ವಿಂಗಡಿಸಬಹುದು . +3 ಅಡಿಗಳು ಇಲ್ಲವೇ ಇನ್ನೂ ದೂರದಿಂದ ಬರುವ ಸುಮಾರು ಗಟ್ಟಿಯಾದ ದನಿಯನ್ನು ಕೇಳಿಸಿಕೊಳ್ಳುವವು , ಒಂದು ಅಡಿಯೊಳಗೆ ಮಾತ್ರ ಗಟ್ಟಿಸದ್ದನ್ನು ಆಲಿಸಬಲ್ಲವರು , ಬರೀ ಕಿವಿಯಿಂದ ಏನೂ ಕೇಳದವರು - ಹೀಗೆ . +ಐದರೊಳಗಿನವರು ಮಾತು ಕೇಳಿಸಿಕೊಳ್ಳಬಲ್ಲರೆಂಬುದನ್ನು ಕಂಡುಕೊಂಡರೆ , ಮನೆಯಲ್ಲೂ ಕೂಸುಗಳ ಶಾಲೆಯಲ್ಲೂ ತರಬೇತೊಂದಿಗೆ ತೀರ ಎಳೆಯ ವಯಸಿಂದಲೇ ತುಟಿಯೋದಿಂದ ಕಲಿವುದನ್ನೂ ರೂಢಿಸಿಕೊಳ್ಳಬಹುದು . +ಉಳಿದಿರುವ ಕೇಳಿಕೆಯ ಬಲ , ಕಿವುಡಾದ ವಯಸ್ಸು ಕಲಿಕೆಯ ಮಟ್ಟಗಳಿಗೆ ತಕ್ಕಂತೆ , ಶಾಲೆಗೆ ಹೋಗುವೆ ಮಕ್ಕಳ ಶಿಕ್ಷಣವನ್ನು ರೂಪಿಸಬೇಕು. +ಕಿವಿ ಮಂದವಾಗಿರುವ ಮಕ್ಕಳನ್ನು ಹೀಗೆ ವಿಂಗಡಿಸಬಹುದು : ಸಾಮಾನ್ಯ ಶಾಲೆಯಲ್ಲಿ ಚೆನ್ನಾಗಿ ಮುಂದುವರಿಯಲು ತೊಡಕಾಗದಷ್ಟು ಕೊಂಚವೇ ಕಿವುಡಾದ ಮಕ್ಕಳು , ತರಗತಿಯಲ್ಲಿ ಕೂರಲು ಸರಿಯಾದ ಜಾಗ ಕೊಟ್ಟು , ತುಟಿಯೋದುವುದರಲ್ಲಿ ವಿಶೇಷ ತರಬೇತಿನ ನೆರವನ್ನೋ ಕೇಳುವ ಸಾಧನವನ್ನೋ ಇಲ್ಲವೇ ಇವೆರಡನ್ನೋ ಪಡೆದು , ಅರೆಬರೆ ಕಿವುಡಾಗಿದ್ದರೂ ಎಂದಿನ ಸಾಮಾನ್ಯ ಶಾಲೆಯಲ್ಲಿ ಕಲಿಯುತ್ತಿರುವ ಮಕ್ಕಳು ; ಪೂರಾ ಕಿವುಡಾಗದಿದ್ದರೂ ಕಿವುಡ ಎನಿಸಿಕೊಂಡು ಕಿವುಡರಿಗಾಗಿರುವ ವಿಶೇಷ ಶಾಲೆಯಲ್ಲಿ ಕಲಿಯುತ್ತಿರುವ ಮಕ್ಕಳು . +ಕಿವುಡರಿಗಾಗಿ ಬ್ರಿಟನ್ನಿನಲ್ಲಿ ಸರ್ಕಾರದ ವಿಶೇಷ ಶಾಲೆಗಳಿವೆ . +ದಿನದ ಶಾಲೆಗಳು ಸರ್ಕಾರದವು . +ಅನ್ನವಸತಿಗಳೂ ದೊರೆವ ವಿದ್ಯಾಶಾಲೆಗಳು ಖಾಸಗಿಯವು . +ಖಾಸಗಿಯವರು ನಡೆಸುವ ದಿನದ ಶಾಲೆಗಳೂ ಇವೆ . +ಎಲ್ಲ ಖಾಸಗಿ ಶಾಲೆಗಳಿಗೂ ಸರ್ಕಾರ ಮನ್ನಣೆಯಿತ್ತು ಒಬ್ಬ ವಿದ್ಯಾರ್ಥಿಗೆ ಇಷ್ಟೆಂದು ಕೊಡುಗೆ ಕೊಡುತ್ತದೆ . +ಬ್ರಿಟನ್ನಲ್ಲಿ ಬಾಯ್ದೆರೆಯದೇ ಅಲ್ಲದೆ ಸದ್ದಿಲ್ಲದ ಕೈಸನ್ನೆಯ ವಿಧಾನಗಳೆರಡರಲ್ಲೂ ಕಲಿಸುತ್ತಿರುವರು . +ಕಿವಿಯಿಂದ ಕೇಳಿಸಿಕೊಳ್ಳಲಾರದ ಮಕ್ಕಳು ಇಂಗ್ಲಿಷನ್ನು ಅರಿತು ಚೆನ್ನಾಗಿ ಬಳಸುವಂತಾಗಲೆಂಬುದೇ ಮುಖ್ಯ ಗುರಿ . +ಆದರೆ ಮಾನಸಿಕ ಹಾಗೂ ಸಾಮಾಜಿಕ ಗುರಿಗಳಲ್ಲಿ ಇವೆರಡೂ ಒಂದಕ್ಕೊಂದು ಭಿನ್ನವೆನಿಸಿವೆ. +ಸಾಮಾನ್ಯವಾಗಿ , ಯೋಚಿಸುವುದರಲ್ಲಿ ಪದಗಳ ಪಾತ್ರ , ಜನಸಾಮನ್ಯರೊಂದಿಗೆ ವಿಚಾರ ವಿನಿಮಯ ನಡೆಸಲೋಸುಗ ತುಟಿಯೋದುವುದರ , ಮಾತಿನ ಪಾತ್ರ , ಇವುಗಳ ಹೆಚ್ಚಳಿಕೆಯನ್ನು ತುಟಿಯೋದಿನ ವಿಧಾನ ಒತ್ತಿಹೇಳುತ್ತದೆ . +ಅವನ ಕಲಿಕೆಯೂ ಇನ್ನೊಬ್ಬರಿಗೆ ತಿಳಿಸುವ ರೀತಿಯೂ ಕೇವಲ ಬೆರಳಿನ ಕಾಗುಣಿತ , ಕೈಸನ್ನೆಳು . +ಬರವಣಿಗೆಗಳಿಗೆ ಮಿತಿಗೊಂಡಿರುವುದಕ್ಕಿಂತಲೂ ತುಟಿಯೋದಿನ ವಿಧಾನ ಚೆನ್ನಾಗಿ ಕೈಗೂಡಿರುವ ವಿದ್ಯಾರ್ಥಿ ತನ್ನ ಮನೆಯಲ್ಲೂ ಕೆಲಸಮಾಡುವ ಪರಿಸರದಲ್ಲೂ ಸಾಮಾಜಿಕವಾಗಿ ತುಂಬುಜೀವನ ನಡೆಸಬಲ್ಲನೆಂಬುದು ನಿಜ . +ಆದ್ದರಿಂದ ಮೂಲತಃ ಕಿವುಡು , ಮೂಕತನದ ವಿಕಲತೆಯ ವಿಚಾರವಾಗಿ ಯೋಚಿಸುವುದರಲ್ಲಿ ತುಟಿಯೋದಿನ ಹಾಗೂ ಸದ್ಧಿಲ್ಲದೆ ವಿಧಾನಗಳು ಎರಡೂ ಬೇರೆ ಬೇರೆ ಬಗೆಗಳನ್ನು ಸೂಚಿಸುವುವು . +ಆಲಿಸುವ ಪ್ರಪಂಚದಲ್ಲಿ ಕಿವುಡ ಮಗು ಬದುಕಿ ಬಾಳಿ ಅದರೊಂದಿಗೆ ಸಂಪರ್ಕ ಬೆಳೆಸಿ ಎಂದಿನ ಸಮಾಜದಲ್ಲಿ ಎಷ್ಟೇ ಮಿತವಾದರೂ ತನ್ನ ಪಾತ್ರವನ್ನು ವಹಿಸುವಂತೆ ಮಾಡುವ ಗುರಿ ತುಟಿಯೋದಿನ ವಿಧಾನಕ್ಕಿದೆ. +ಕಿವುಡ ಮಗುವಿಗೆ ಸದ್ದಿಲ್ಲದೆ ವಿಧಾನದ ಕಲಿಕೆಯಲ್ಲಿ ಎಷ್ಟೇ ತರಬೇತು ಕೊಟ್ಟರೂ ಅದರ ಸಮಾಜ ಬಾಳುವೆ , ಚಟುವಟಿಕೆಗಳು ಬೆರಳಿಂದ ಕಾಗುಣಿತ ಬಿಡಿಸುವವರ , ಕೈಸನ್ನೆ ಅರಿತವರು ಮಾತ್ರ ಇರುವ ಸಮಾಜಕ್ಕೆ ಮಿತಿಗೊಂಡಿರುತ್ತದೆ . +ಸಾಧಾರಣ ಮಕ್ಕಳಲ್ಲಿ ಇರುವ ಹಾಗೇ ಕಿವುಡ ಮಕ್ಕಳಲ್ಲೂ ಅವುಗಳ ಬುದ್ದಿಶಕ್ತಿ , ಅಳವು , ಇಷ್ಟ . +ಹಿಂದಿನ ಅನುಭವ . +ಪರಿಸರ - ಇವೆಲ್ಲ ಒಬ್ಬೊಬ್ಬನಲ್ಲೂ ಬೇರೆ ಬೇರೆ . +ಆದುದರಿಂದ ತುಟಿಯೋದುವುದರಲ್ಲೂ ಮಾತಾಡುವುದರಲ್ಲೂ ಎಲ್ಲರೂ ಅಷ್ಟೇ ಚೆನ್ನಾಗಿ ಕಲಿಯಲಾರದಾದರೆ , ಸದ್ದಲ್ಲದೆ ವಿಧಾನದಿಂದ ಕಲಿಸುವ ತರಗತಿಗೆ ವರ್ಗವಾಗುವುದು. +ಒಳ್ಳೆಯ ಕೇಳುವ ಸಾಧನವಿರುವ , ಚೆನ್ನಾಗಿ ಮುಂದುವರಿಸಿ ಕಿವುಡರ ಶಾಲೆಗಳಲ್ಲಿ ಕೊಂಚವಾದರೂ ಕಿವಿಕೇಳುವ ಮಕ್ಕಳು ಆಲಿಸುವುದರೊಂದಿಗೆ ತುಟಿಯೋದಿ ಮಾತಾಡಲು ಯತ್ನಿಸುವುವು. +ತೀರ ಕಿವುಡಾದ ಮಗು ಕೇವಲ ತುಟಿಯೋದಿ ತಿಳಿದುಕೊಳ್ಳುತ್ತದೆ . +ಹೆಜ್ಜೆ ಹೆಜ್ಜೆಯಾಗಿ , ತುಟಿಗಳ ಮೇಲೆ ಪದಗಳು ಮೂಡುವುದನ್ನು ನೋಡಲು ಅವಕಾಶ ಕೊಡುತ್ತ ಬರುವುದರಿಂದ , ಕಿವುಡ ಮಗುವಿನ ಯೋಜನೆ , ಅದರ ಸಮಾಜ ಜೀವನ , ತಿಳಿವಳಿಕೆಯ ಗಳಿಕೆಗಳಲ್ಲಿ ಅದರ ಪಾತ್ರ ಮುಖ್ಯವಾಗಬಹುದು . +ಕಿವಿ ಸರಿಯಾಗಿ ಕೇಳಿಸುವ ಮಗುವಿನಷ್ಟು ಬೇಗನೆ ಈ ಮಗು ಕಲಿಯಲಾರದು . +ಏಕೆಂದರೆ , ಕಿವಿ ಕೇಳುವ ಮಗು ಶಾಲೆಗೆ ಬರುವ ಹೊತ್ತಿಗೇ ಅರ್ಥವಾಗುವ ರೂಪದಲ್ಲಿ ಬಳಕೆಯ ಮಾತುಗಳನ್ನು ತಿಳಿದು ಬಳಸುವಂತಿರುವುದು . +ಆದರೆ,ಕಿವುಡ ಮಗು ಶಾಲೆಗೆ ಕಾಲಿಟ್ಟಮೇಲೇ ಮಾತಾಡಲು ಕಲಿಯಬೇಕಾಗುತ್ತದೆ . +ತುಟಿಯೋದು .ಜೊತೆಗೆ ಉಚ್ಚಾರ - ಇವೆರಡನ್ನೂ ಹೊಚ್ಚ ಹೊಸದಾಗಿ ಕಲಿಯಲೇಬೇಕು . +ಗೊತ್ತಾದ ನೆರವೂ ವಿಶೇಷ ತರಬೇತೂ ಇಲ್ಲದೆ ತನಗೆ ತಾನೇ ಇವೆರಡನ್ನೂ ಇದು ಕಲಿವಂತಿಲ್ಲ . +ಇನ್ನೊಬ್ಬರಿಗೆ ಕೇಳಿಸುವ ಅರ್ಥವಿರುವ , ಉಚ್ಚರಿಸುವ ಮಾತನ್ನು ಆಡಲು, ಮಗುವಿನ ಮುಟ್ಟಿ ತಿಳಿವ ಅರಿವು ತಾಳಗತಿಯನ್ನು ಗಮನಿಸುವ ಒಳಬಲವೂ ಮುಖ್ಯವಾದುವು . +ಕಿವುಡು ಮಗು ಕೊಂಚವಾದರೂ ಅಲಿಸಬಹುದಾದರೆ , ಅದಕ್ಕೆ ಅರ್ಥವಾಗುವ ಮಾತನ್ನು ಕೇಳುವುದರ ಜೊತೆಗೇ ತುಟಿಯೋದುತ್ತಿದ್ದರೆ ,ನುಡಿ ಬೇಗನೆ ಹತ್ತುತ್ತದೆ . +ಅದರ ಮಾತಿನ ಮಟ್ಟವೂ ಮೇಲಾಗುತ್ತದೆ . +ಬರುಬರುತ್ತ ಬಾಯ್ದೆರೆಯ ಶಿಕ್ಷಣಕ್ಕೆ ತಕ್ಕನಾಗುವ ಕಿವುಡ ಮಗು ಮಾತಿಲ್ಲದ ಗತಿಯಿಂದ ಮಾತುಗಳು ತುಂಬಿ ಬರುತ್ತವೆ . +ಬೇರೆಯವರು ಸರಿಯಾಗಿ ಉಚ್ಚರಿಸಿ ಆಡಿದ ಮಾತನ್ನು ತಿಳಿವಂತಾಗುತ್ತದೆ . +ಕಿವುಡ ಮಗುವಿನ ಕಲಿಕೆಯ ಮೊದಲ ಹಂತಗಳಲ್ಲಿನ ತುಟಿಯೋದಿನ ಪಾತ್ರ ಮುಂದೆಂದಾದರೂ ಕಿವುಡಾದ ವಯಸ್ಕನದಕ್ಕಿಂತ ಬೇರೆ ಆಗಿರುವುದು . +ಕಿವುಡ ಮಗು ತಿಳಿದುಕೊಂಡು ಪದ ಸಂಪತ್ತನ್ನು ಹೆಚ್ಚಿಸಿಕೊಳ್ಳುವ ತುಟಿಯೋದುವುದೇ ಮುಖ್ಯ ದಾರಿ . +ಆದರೆ ವಯಸ್ಕನಿಗೂ ಮಾತು ಕಲಿತಮೇಲೆ ಕಿವುಡಾದ ಮಗುವಿಗೂ ತನಗಾಗಲೇ ಗೊತ್ತಿರುವ ನುಡಿಯನ್ನು ಅರಿಯಲು ತುಟಿಯೋದುವುದು ಒಂದು ಹೊಸದಾರಿ ಅಷ್ಟೆ.ತನ್ನೊಂದಿಗೋ ಬೇರೆಯವರೊಂದಿಗೋ ಜನ ಕೇಳಿಸುವ ದೂರದಲ್ಲಿ ಮಾತಾಡುತಿರುವಾಗ ಕಿವಿ ಚೆನ್ನಾಗಿ ಕೇಳುವ ಮಗು ಪದಗಳು , ವಾಕ್ಯಗಳ ಪೂರ್ತಿ ಪಾಠವನ್ನು ಆಲಿಸುವುದು . +ಆದರೆ ಅದೇ ಕಿವುಡ ಮಗು ತುಟಿಯೋದುತ್ತಿರುವಾಗ ಪದಗಳ ವಾಕ್ಯಗಳ ಪೂರ್ತಿ ಪಾಠವನ್ನು ಅಲ್ಲೊಂದಿಲ್ಲೊಂದು ಮಾತ್ರ ತಿಳಿದುಕೊಳ್ಳಬಲ್ಲುದು . +ಓದಿಸುವುದರಿಂದ ಪೂರ್ತಿ ಪಾಠಗಳನ್ನು ತಿಳಿಸಿಕೊಡಬಹುದು . +ಈ ಕಾರಣದಿಂದಲೇ ತುಟಿಯೋದುವುದನ್ನು ಆರಂಭಿಸಿದ ಮೇಲೆ , ಅದರ ಜೊತೆಗೆ ಓದುವುದನ್ನೂ ಕಲಿಸುತ್ತ ಬಂದರೆ ಒಳ್ಳೆಯದು . +ಒಟ್ಟಿನಲ್ಲಿ ಕಿವಿಕೇಳುವಷ್ಟು ಆಲಿಸುತ್ತ ತುಟಿಯೋದುತ್ತ ಮಾತಾಡುತ್ತ , ಓದುವುದಾದರೆ ಮಾತ್ರ ಕಿವುಡ ಮಗುವಿಗೆ ಹೇಳಿಕೊಟ್ಟಿದ್ದು ಚೆನ್ನಾಗಿ ಹತ್ತಿ ನಿಲ್ಲುತ್ತದೆ . +ಬ್ರಿಟನ್ನಿನಲ್ಲಿ ಇಕ್ಕೈಸನ್ನೆಯ ಅಕ್ಷರಮಾಲೆಯೂ ಅಮೇರಿಕ ಮತ್ತಿತರ ದೇಶದಲ್ಲಿ ಒಂಟಿಕೈಸನ್ನೆಯದೂ ಚಾಲ್ತಿಯಲ್ಲಿವೆ . +ಪುರಾತನ ಕಾಲದಿಂದಲೂ ಅಂಕಿಗಳನ್ನು ಬೆರಳುಗಳಲ್ಲಿ ಸನ್ನೆಮಾಡಿ ತೋರುವ ವಾಡಿಕೆಯಿದೆ . +ಮೂಕನುಡಿಯಾಗಿ ಬೆರಳುಗಳಿಂದ ಕಾಗುಣಿತ ಬಿಡಿಸುವ ಒಂದು ಬಗೆ ಮಧ್ಯಯುಗದಲ್ಲಿ ಬಳಕೆಯಲ್ಲಿದ್ದಂತೆ ತೋರುತ್ತದೆ . +ಮೂರು ಒಂಟಿಕೈ ಅಕ್ಷರಮಾಲೆಗಳನ್ನು ಕಾಸ್ಮಾಸರ್ ಕೊನೆಲ್ಲಿಯಸ್ (1579) ವಿವರಿಸಿದ್ದ . +ಇವನ್ನು ಅನುಸರಿಸಿ ಬೋನೆ ಒಂಟಿ ಕೈಬೆರಳು ಅಕ್ಷರ ಮಾಲೆಯನ್ನು ಬಣ್ಣಸಿದ . +ಗಲ್ಲಾಡೆಟ್ ಇದನ್ನೇ ಫ್ರಾನ್ಸಿಗೂ ಆಮೇಲೆ ಅಮೆರಿಕಕ್ಕೂ ತಂದ . +ಬ್ರಿಟನ್ ಒಂದನ್ನು ಬಿಟ್ಟರೆ , ಉಳಿದೆಲ್ಲ ನಾಡುಗಳಲ್ಲೂ ಈಗ ಜಾರಿಯಲ್ಲಿರುವ ಬೆರಳು ಕಾಗುಣಿತ ಈ ವಿಧಾನವೇ ; ಇಕ್ಕೈಸನ್ನೆಯ ಇಂಗ್ಲಿಷ್ ಕಾಗುಣಿಯ ಬ್ರಿಟಿನ್ನಿನಲ್ಲಿ ಜಾರಿಯಲ್ಲಿದೆ.ಬೆರಳು ಕಾಗುಣಿತದಲ್ಲಿ ಇಂಗ್ಲಿóಷ್ ಅಕ್ಷರಮಾಲೆಯ ಒಂದೊಂದು ಅಕ್ಷರವನ್ನೂ ಬಿಡಿಸಬೇಕು . +ಕೈಸನ್ನೆ ಅಕ್ಷರಮಾಲೆಯಿಂದ ಕಲಿತ ನುಡಿ ಬಾಯ್ದೆರೆಯಿಂದ ಕಲಿತ ಹಾಗೇ ಇರುವುದು . +ಮಾತಾಡುವುದನ್ನು ಬಿಟ್ಟರೆ , ಬೆರಳು ಕಾಗುಣಿತದಿಂದಲೋ ಬರೆದ ಇಂಗ್ಲಿಷಿಂದಲೋ ಕಿವುಡ ತನ್ನ ಮನದಲ್ಲಿರುವುದನ್ನು ಹೊರಪಡಿಸುವನು . +ಬೆರಳು ಕಾಗುಣಿತ ತಿಳಿದು ಬಳಸುವವರೊಂದಿಗೆ ಮಾತ್ರ ಇದು ಫಲಕಾರಿ . +ಆದರೆ ದೂರದಿಂದ ತುಟಿಯೋದುವುದು ಕಷ್ಟ . +ಚೂರದಿಂದಲೇ ಕಂಡು ತಿಳಿಯಬಹುದಾದ್ದರಿಂದ ಹುಟ್ಟು ಕಿವುಡರ ಕೂಟಗಳಲ್ಲಿ ಕೈಸನ್ನೆ ವಿಧಾನ ಹೆಚ್ಚು ಬಳಕೆಗೆ ಬರುತ್ತದೆ . +ತಮಗೆ ತಾವೆ ಮಾತನಾಡುವುದು ಅಭ್ಯಾಸವಾಗುವ ಮೊದಲೇ ಕಿವಿ ಕೇಳಲಿ ಕೇಳದಿರಲಿ , ಎಲ್ಲ ಎಳೆಯ ಮಕ್ಕಳೂ ಹೆಚ್ಚು ಕಡಿಮೆಯಾಗಿ ತೋರುವ ಹಾವಭಾವಗಳಿಗೆ ಈ ಪದವನ್ನು ಬಳಸುವುದಿಲ್ಲ . +ವಾಡಿಕೆಯಲ್ಲಿರುವ ಹಾವಭಾವ ಸನ್ನೆಗಳನ್ನು ಕಿವುಡರೂ ಎಷ್ಟೋ ಬಾರಿ ತಂತಮ್ಮಲ್ಲೇ ಬಳಸುತ್ತಾರೆ . +ವಾಡಿಕೆಯಲ್ಲಿರುವವನ್ನೇ ತಮ್ಮ ಸನ್ನೆಗಳನ್ನಾಗಿ ರೂಪಿಸಿಕೊಂಡಿರುವು . +ಒಂದೊಂದು ಸನ್ನೆಗೂ ಅವರದೇ ಬೇರೆ ಅರ್ಥವಿದೆ . +ಸದ್ದಿಲ್ಲದೆ ಸನ್ನೆ ಪದ್ಧತಿಯೊಂದಿಗೆ ಇವೂ ಉಳಿದು ಬಂದಿವೆ . +ಇವುಗಳಲ್ಲಿ ಬಹುಪಾಲು ಪದಗಳನ್ನು ಸೂಚಿಸದೆ , ಮನೋಭಾವನೆಗಳನ್ನು ತೋರಿಸುವುವು . +ಇದರ ಬಳಕೆಯಲ್ಲಿ ಯಾವ ವ್ಯಾಕರಣ ಸೂತ್ರಗಳೂ ಇಲ್ಲ . +ಆದರೆ ಈ ಪದ್ಧತಿಯ ಮೂಲಕರ್ತರು ಇದಕ್ಕೆ ವ್ಯಾಕರಣ ಸೂತ್ರಗಳನ್ನೂ ಹೇಳಬಹುದೆನ್ನುವರು . +ಸರ್ ರಿಚರ್ಡ್ ಪೇಜೆಟ್ ಇಂದಿನ ಹಾವ ಭಾವ ಸನ್ನೆಗಳ ಪದ್ಧತಿಯನ್ನು ರೂಪಿಸಿದ್ದಾನೆ . +ಶಾಲೆ ಕಲಿಕೆ ಮುಗಿದ ಮೇಲೆ ಹೊಟ್ಟೆಪಾಡಿಗಾಗಿ ಮುಂದೆ ಇವರೆಲ್ಲ ಒಂದು ಕಸಬನ್ನು ಹಿಡಿಯುವುದರಿಂದ , ಕಿವುಡರಿಗೆ ಕಲಿಸುವಾಗಲೆಲ್ಲ ಕಸಬಿಗಾಗಿ ತರಬೇತು ಕೊಡುವುದು ಮುಖ್ಯ . +ಕೈಯಿಂದ ಮಾಡಲಾಗದ ಕಸಬನ್ನು ಹಿಡಿಯುವವರು ಅಪರೂಪ . +ಎಲ್ಲ ಕಿವುಡರ ಶಾಲೆಗಳಲ್ಲೂ ಕೈಕೆಲಸದ ಕಸಬುಗಳನ್ನು ಕಲಿಸುವ ಏರ್ಪಾಡುಗಳಿರುತ್ತವೆ . +ಇನ್ನೂ ಕೆಲವಲ್ಲಿ ಕಸಬು ಹಿಡಿಯಲು ಕುಶಲ ಕಲೆಗಳನ್ನೂ ಓದಿನ ಜೊತೆಗೋ ಕೊನೆಯ 3 ವರ್ಷಗಳಲ್ಲೋ ಕಲಿಸುವರು . +ಕಿವುಡರು , ಮಂದಗಿವಿಯವರು ಎಂದರೆ ಯಾವ ತೆರನ ವೈದ್ಯ ಚಿಕಿತ್ಸೆ ಇಲ್ಲವೇ ಶಸ್ತ್ರಕ್ರಿಯೆಯಿಂದಲೂ ಸರಪಡಿಸಲಾಗದ ಕಿವುಡು ಅನುಭಿಸುತ್ತಿರುವವರು . +ಇದಕ್ಕೆ ಎರಡು ಪರಿಹಾರಗಳಿವೆ . +ತುಟಿಯೋದುವುದು ಒಂದು ; ತಕ್ಕನಾದ ಕೇಳುವ ಸಾಧನವನ್ನು ಹಾಕಿಕೊಂಡು ಬಳಸುವುದು ಎರಡನೆಯದು . +ಆದರೆ ಬಹು ಮಟ್ಟಿಗೆ ಇವೆರಡೂ ಸೇರಿದರೇ ಅನುಕೂಲ ಹೆಚ್ಚು . +ತುಟಿಯೋದುವುದನ್ನು ಕೆಲವು ಶಾಲೆಗಳಲ್ಲಿ ಮಾತ್ರ ಕಲಿಸುವರು . +ಕೆಲವೆಡೆ ಇವರಿಗಾಗಿ ಮಿತ್ರ ಮಂಡಲಿಗಳೂ ಇವೆ . -- GitLab