diff --git "a/Data Collected/Kannada/MIT Manipal/Kannada-Scrapped-dta/\340\262\265\340\262\276\340\262\227\340\263\215\340\262\246\340\263\207\340\262\265\340\262\277-3-part-2.txt" "b/Data Collected/Kannada/MIT Manipal/Kannada-Scrapped-dta/\340\262\265\340\262\276\340\262\227\340\263\215\340\262\246\340\263\207\340\262\265\340\262\277-3-part-2.txt" new file mode 100644 index 0000000000000000000000000000000000000000..2196cbf71a164675d81c892c5676651b67b2482e --- /dev/null +++ "b/Data Collected/Kannada/MIT Manipal/Kannada-Scrapped-dta/\340\262\265\340\262\276\340\262\227\340\263\215\340\262\246\340\263\207\340\262\265\340\262\277-3-part-2.txt" @@ -0,0 +1,1100 @@ +ಶಾನೆ ಮಂದಿಗೆ ಚಲೋ ಭೋಜನ ದೊರಕಿತು. +ಚಂಚಲನೇತ್ರರ ಭಂಡಾರದಲ್ಲಿ ಏನು ಕಡಿಮೆ? +ಸಾವಿರಾರು ಜನರಿಗೆ ಅನ್ನಶಾಂತಿಯಾಗುತ್ತಲೇ ವಾಗ್ದೇವಿಯ ಪುತ್ರನು ದೀರ್ಫಾಯು ಆಗಲೆಂದು ಮನಃಪೂರ್ತಿಯಾಗಿ ಆಶೀರ್ವಾದ ಮಾಡಿ ಬ್ರಾಹ್ಮಣರು ಅವನ ಗುಣಗಳನ್ನು ವರ್ಣಿಸುತ್ತಾ ತಮ್ಮ ಮನೆಗಳಿಗೆ ತೆರಳಿದರು. +ವಾಗ್ದೇವಿಯು ಭಾಗೀರ ಯೂ ಮಾಡಿದ ಪರಾಮರ್ಶದಿಂದ ಸೂರ್ಯನಾರಾಯಣನು ಬೇಗ ಬೆಳೆದನು. +ಸರಿಯಾದ ಪ್ರಾಯದಲ್ಲಿ ಕೇಶ ಛೇದನ ವಿಧಿಯು ಆಯಿತು. +ಆ ಕಾಲದಲ್ಲಿ ಇಷ್ಟಮಿತ್ರ ಭಾಂಧವರು ಬೇಕಾದ ಉಡುಗೊರೆಗಳನ್ನು ಹುಡುಗಗೆ ಕಳುಹಿಸಿಕೊಟ್ಟ- ತರುವಾಯ ವಿದ್ಯಾಭ್ಯಾಸಕ್ಕೆ ಮುಹೂರ್ತ ಮಾಡಿತು. +ವಿದ್ಯೆಯು ಅವನಿಗೆ ಬಹು ಬೇಗ ಹತ್ತುವದಾಯಿತು. +ಆಲಸ್ಯವಿಲ್ಲದೆ ಶಾಲೆಗೆ ಹೋಗುವದೂ ತನ್ನ ಪಾಠಗಳನ್ನು ಚೆನ್ನಾಗಿ ಕಲಿಯುವದೂ ಉಪಾಧ್ಯಾಯರಿಗೂ ಹೆತ್ತವರಿಗೂ ವಿಧೇಯನಾಗಿ ನಡಕೊಳ್ಳುವದೂ ಅವನ ಪ್ರಮುಖ ಲಕ್ಷ್ಮಣಗಳಾಗಿದ್ದುವು. +ಸತ್ಯತೀಲನೂ ಧೈರ್ಯಶಾಲಿಯೂ ಸ್ನೇಹಾಭಿಮಾನಿಯೂ ಆಗಿರುವ ದೆಸೆಯಿಂದ ಅವನನ್ನು ಮೆಚ್ಚದವರು ಬಹು ಕಡಿಮೆ. +ಅವನ ಸದ್ಗುಣಗಳೆಲ್ಲ ಅನುದಿನ ವೃದ್ಧಿಯಾಗಿ ಪೂರ್ಣತ್ವ ಹೊಂದಿ ಪುರಜನರ ಮನಸ್ಸನ್ನು ಅವನ ಕಡೆಗೆ ಆಕರ್ಷಣ ಮಾಡಿಕೊಂಡವು. +ಇವನೇ ದ್ವಿತೀಯ ಸೂರ್ಯನೆಂದು ಹಲವರು ಅವನಿಗೆ ಹೊಗಳುವರು. +ಒಂಬತ್ತನೇ ವರುಷದಲ್ಲಿ ಅವನಿಗೆ ಬ್ರಹ್ಮ ಪ್ರತಿಷ್ಠೆಗೆ ಮುಹೂರ್ತ ನೋಡಿತು. +ಆಬಾಚಾರ್ಯನು ಈ ಶುಭಕಾರ್ಯಕ್ಕೆ ಅಭಿಮಂತ್ರಣ ಪತ್ರಗಳನ್ನು ಬರೆದು ಊರೂರಿಗೆ ಕಳುಹಿಸಿದನು. +ಒಂದು ಪತ್ರಿಕೆ ವೇದವ್ಯಾಸ ಉಪಾಧ್ಯಗೂ ಇತ್ತು. +ವೇದವ್ಯಾಸ ಉಪಾಧ್ಯನ. +ಅಭಿಮಂತ್ರಣ ಪತ್ರಿಕೆಯನ್ನು ಹಿಡಕೊಂಡು ಒಬ್ಬರ ಕೂಡೆಯೂ ಆಲೋಚನೆ ಕೇಳದೆ ರಾಜನ ದರ್ಬಾರಿಗೆ ಹೋಗಿ ಮತ್ತೊಂದು ಮನವಿಯನ್ನು ಕೊಟ್ಟಿನು ಅದನ್ನು ಕಿರೀದಿವಾನರು ನೋಡಿ ಮತಾಧಿಪತಿಗಳಿಂದ ನಿವೃತ್ತಿ ಪಡಕೂಳ್ಳಬೇಕೆಂದು ತಿರುಗಿ ಕೊಟ್ಟರು. +ಅದನ್ನು ಹಿಡಕೊಂಡು ಪ್ರಥಮತಃ ತಾನು ನಡಕೊಂಡ ರೀತಿಯಲ್ಲಿ ನೃಸಿಂಹ ಪುರ ಮೊದಲುಗೊಂಡು ಶಾಂತಿಪುರ ಮಠದ ಪರಿಯಂತರ ನಡೆದಾಡಿ ಆಯಾ ಸನ್ಯಾಸಿಗಳಿಗೆ ತೋರಿಸಿದನು. +ಅವರು ಅದನ್ನು ಮನ್ನಿಸಲಿಲ್ಲ. +ಇಂಥ ಹಟವನ್ನು ಸಾಧಿಸುವದರಿಂದ ಕ್ಷೇಮ ಸಿಕ್ಕದು ಸುಮ್ಮನಿರೆಂದು ಬಾಲಮುಕುಂದಾಚಾರ್ಯನು ಬಹುತರದಲ್ಲಿ ಬೋಧಿಸಿದನು. +ವೇದವ್ಯಾಸ ಉಪಾಧ್ಯನು ಕೇಳದೆ ಹೋದನು. +“ಪ್ರಾಣತ್ಕಾಗವಾವರೂ ಮಾಡುವೆನು; ಛಲ ಪೂರೈಸದಿರಲಾರೆನು” ಎಂದು ಖಂಡಿತವಾಗಿ ಪ್ರತಿವಚನ ಕೊಟ್ಟ ಸಂಬಂಧ ಬಾಲಮುಕುಂದಾಚಾರ್ಯಗೆ ರೇಗಿತು. +ಒಡನೆ ಅವನು ಹರಿಪದಾಂಬುಜ ತೀರ್ಥರಿಗೆ ಈ ವಿದ್ಯ ಮಾನವನ್ನು ತಿಳಿಸಿದನು. +ಅವರಿಗೂ ಸಿಟ್ಟು ಬಂದು ಇನ್ನೊಮ್ಮೆ ಅವನನ್ನು ಎಚ್ಚರಿಸುವದಕ್ಕೆ ಪಾರುಪತ್ಯಗಾರಗೆ ಅಪ್ಪಣೆ ಮಾಡಿದರು. +ಹಾಗೆ ಅವನು ಎರಡುಸಲ ವೇದವ್ಯಾಸಗೆ ಸ್ವಾಮಿಗಳ ಆಜ್ಞೆಯ ತಾತ್ಪರ್ಯವನ್ನು ತಿಳಿಸಿದನು. +ಆದರೂ ವೇದವ್ಯಾಸನ ಮನಸ್ಸಿಗೆ ಸ್ವಾಮಿಗಳ ಅಪ್ಪಣೆಯು ಹತ್ತಲಿಲ್ಲ. +ಅವರು ಆ ಮೂರ್ಖನನ್ನು ಕ್ಷಣ ತಾಮಸ ಮಾಡದೆ ಉದ್ಯೋಗದಿಂದ ತಪ್ಪಿಸಿ ಮಠದಿಂದ ಹೊರಗೆ ಮಾಡುವುದಕ್ಕೆ ಬಾಲಮುಕುಂದಾಚಾರ್ಯಗೆ ನಿರೂಪಿಸಿದರು. +ಅವನು ಹಾಗೆಯೇ ಪ್ರವರ್ತಿಸಬೇಕಾಯಿತು. +ವೇದವ್ಯಾಸನ ಅನ್ನ ಸ್ಥಿತಿಯು ಅವನ ಸ್ವಬುದ್ಧಿಯಿಂದಲೇ ತಪ್ಪಿಹೋಯಿತು. +ಅದರಿಂದ ಅವನಿಗೆ ಸಿಟ್ಟೇರಿತು. +ಹಣ ಕೊಟ್ಟು ವಕೀಲರನ್ನು ಕಟ್ಟಿಕೊಳ್ಳುವದಕ್ಕೆ ಕೈಯಲ್ಲ ಕಾಸಿಲ್ಲ. +ಯಾರಿಂದಾದರೂ ಹೇಳಿಸಿ ಧರ್ಮಕ್ಕೆ ನಕಾಲು ತೆಗೆದುಕೊಳ್ಳುವಂತೆ ಮಾಡಲಿಕ್ಕೆ ಭೀಮಾಚಾರ್ಯನ ಹಾಗಿನ ಸಹಾಯಕನು ಆವನಿಗೆ ದೊರಕದೆ ಅವನ ಗತಿಯು ಬಹುತುಚ್ಚವಾಯಿತು. +ಆದರೂ ಅವನು ಕಂಗೆಡಲಿಲ್ಲ. +ಹೆಂಡತಿಯ ಮನೋಭಾನ ತಿಳಿಯಲಿಕ್ಕೆ ಪ್ರಸ್ತಾಪಿಸಿದಾಗ ಗಂಡನ ಹಟವು ಅವಳ ಮನಸ್ಸಿಗೂ ಒಪ್ಪದೆ- “ಈ ಹಾಳು ವ್ಯಾಪಾರ ತಮಗೇಕೆ? +ಸ್ವದೇಶಕ್ಕೆ ಹೋಗಿ ಯಾಚಕ ವೃತ್ತಿಯಿಂದ ಜೀವನ ನಡಿಸುವದು ಉತ್ತಮ? ಎಂದಳು. +ಅವಳ ಮಾತು ಅವನಿಗೆ ಹಿತವಾಗಲಿಲ್ಲ. +ಮುಂದೆ ಅನುಸರಿಸಬೇಕಾದ ಕ್ರಮವನ್ನು ಯೋಚಿಸುವದಕ್ಯೋಸ್ಟರ ತನ್ನ ಊರಲ್ಲಿರುವ ಸ್ನೇಹಿತರನ್ನು ಕೇಳಿ ನೋಡುವ ಆಸೆಯಿಂದ ಅವನು ಪತ್ನಿಯ ಸಹಿತ ಕುಮುದಪುರಕ್ಕೆ ಬಂದು ಅಲ್ಲಿ ಇರುವ ಪಿತ್ರಾರ್ಜಿತ ಮನೆಯಲ್ಲಿ ಉಳಕೊಂಡನು. +ಜೀವನಕ್ಕೆ ವೃತ್ತಿ ಯಾವದೂ ಇಲ್ಲದೆ ನಿತ್ಯ ನೈವೇದ್ಯಕ್ಕೆ ತತ್ವಾರ ಉಂಟಾಗದ ಹಾಗೆ ವೈನಮಾಡುವ ಅಗತ್ಯ ಬಿತ್ತು. +ಎಲ್ಲೆಲ್ಲಿ ತಿರುಗಿದರೂ ಅವನ ಪ್ರಯತ್ನವು ಸಫಲವಾಗಲಿಲ್ಲ. +ಗೀರ್ವಾಣದಲ್ಲಿ ಚೆನ್ನಾಗಿ ಪರಿಚಿತಿ ಇದ್ದವನೊಬ್ಬಗೆ ಅನೃಸ್ಥಿತಿ ದೊರಕುವದಿಲ್ಲವೆಂಬ ಪಶ್ಟಾತ್ತಾಪವು ಬಹಳ ದೊಡ್ಡದೇ ಸರಿ, ಒಂದಾನೊಂದು ದಿನ ಸ್ನೇಹಿತರ ಕೂಟದಲ್ಲಿ ತನ್ನ ಸಂಕಷ್ಟಗಳನ್ನು ಅವನು ವಿವರಿಸಿ ಹೇಳಿದಾಗ ಅವರೆಲ್ಲರೂ ಅನುತಾಪ ಪಟ್ಟು ತಮ್ಮಿಂದಾಗುವ ಸಹಾಯವನ್ನು ಅವನಿಗೆ ಮಾಡಬೇಕೆಂಬ ಶುದ್ಧ ಮನಸ್ಸಿ ನಿಂದ ಕುಮುದಪುರದ ಪ್ರಮುಖ ಬ್ರಾಹ್ಮಣರ ಒಂದು ಸಣ್ಣ ಸಭೆಯನ್ನು ಮಾಡಿ ಈ ವಿಷಯದಲ್ಲಿ ಚರ್ಚೆ ನಡೆಸಿದರು. +ಅವರೆಲ್ಲರೂ ಐಕಮತ್ಯವಾಗಿ ಒಂದು ಸಂಸ್ಕ್ರತ ಶಾಲೆಯನ್ನು ಕೂಡಲೇ ಸ್ಥಾಪಿಸಿ ಅದರಲ್ಲಿ ವೇದವ್ಯಾಸ ಉಪಾಧ್ಯನನ್ನು ಪ್ರಧಾನ ಉಪಾಧ್ಯಾಯನಾಗಿ ನೇಮಿಸುವದಕ್ಕೆ ನಿರ್ಣಯ ಮಾಡಿದರು. +ಆ ನಿರ್ಣಯವು ನೆರವೇರುವದಕ್ಕೆ ತಾಮಸವಾಗಲಿಲ್ಲ. +ಸುದಿನ ದಲ್ಲಿ ಶಾಲೆಯು ಸ್ಥಾಪಿಸಿ ಸಾಕಷ್ಟು ವಿದ್ಯಾರ್ಥಿಗಳನ್ನು ಒಟ್ಟುಗೂಡಿಸಿ ವೇದ ವ್ಯಾಸನ ದಾರಿದ್ರ್ಯ ನಿವಾರಣೆಯ ಉಪಾಯ ವರ್ತಿಸೋಣಾಯಿತು. +ವೇದ ವ್ಯಾಸ ಉಪಾಧ್ಯನ ಹಿರೇ ಮಗ ವೇಣುಗೋಪಾಲ ಉಪಾಧ್ಯನು ತಂದೆಯಷ್ಟೇ ಅಭಿಜ್ಞತೆಯುಳ್ಳ ಪಂಡಿತನು. +ವೇದವ್ಯಾಸನ ಪರೋಕ್ಷದಲ್ಲಿ ಅವ ನಿಂದ ಶಾಲೆಯ ಉದ್ಯೋಗವನ್ನು ನಡಿಸುವದಕ್ಕೆ ಅನುಕೂಲವಾಯಿತು. +ಚಂಚಲನೇತ್ರರನ್ನು ಸೋಲಿಸಿ ಕೀರ್ತಿ ಹೊಂದಬೇಕೆಂಬ ದೊಡ್ಡ ಆತುರವು ಳ್ಳ ಈ ಹಟವಾದಿ ಭೂಸುರನು ಶಾಲೆಯ ವಹಿವಾಟು ಮಗನಿಗೆ ವಹಿಸಿಕೊಟ್ಟು ಭೀಮಾಚಾರ್ಯನಷ್ಟೆ ಯುಕ್ತಿವಂತನಾದ ಒಬ್ಬ ಸ್ಟೇಹಿತನು ದೊರಕುವುದಿಲ್ಲವೆಂಬ ವ್ಯಥೆಯಲ್ಲಿರುವ ಕಾಲದಲ್ಲಿ ನಿರುದ್ಯೋಗಿಯಾಗಿ ತಿರುಗಾಡಿ ಕೊಂಡು ಸಮಯ ಕಳೆಯುವ ಪೋಕರಿಗಳ ಗರುವಾಗಲಿಕ್ಕೆ ಯೋಗ್ಯನಾದ ಅಪರಾಜಿತ ಸೆಟ್ಟಿ ಎಂಬ ಜೈನನು ಅವನಿಗೆ ಗಂಟುಬಿದ್ದನು. +ಸೆಟ್ಟಿಯ ಡೊಳ್ಳು ಮಾತಿಗೆ ಹಾರುವನು ಮರುಳಾಗಿ ತನ್ನ ಈ ನವ ಸ್ನೇಹಿತನಿಂದ ಅಗಾಧಕಾರ್ಯಗಳನ್ನು ಚಮತ್ಕಾರದಿಂದ ಮಾಡಿಸಿಕೊಂಡು ಬಿಡಲಿಕ್ಕೆ ದೇವರು ಪೂರ್ಣ ದಯವಿಟ್ಟರೆಂದು ಹೆಚ್ಚಳಪಟ್ಟನು. +ತನ್ನ ವಾದದ ಸ್ವಭಾವವನ್ನು ವೇದವ್ಯಾಸನು ಆದ್ಯಂತ ವಿವರಿಸಿದನು. +ಅಪರಾಜಿತ ಸೆಟ್ಟಿ ಆದನ್ನು ಲಾಲಿಸಿ ಕೇಳೆ ಕಣ್ಣಾಲಿಗಳನ್ನು ತಿರುಗಿಸುತ್ತ ತುಟಿಗಳನ್ನು ಮುದುರಿಸಿಕೊಂಡು ತರ್ಜನಿ ಬೆರಳನ್ನು ಬಾಣಾಕಾರವಾಗಿ ಮೂಗಿನ ಮೇಲೆ ಸಲ್ಲಿಸಿ ಊರ್ಧ್ವದ್ದಷ್ಟಿಯಿಂದ ಕೊಂಚ ಸಮಯಾಲೋಚನೆ ಗೈಯ್ಯುವಂತೆ ಕಾಣಿಸಿಕೊಂಡು ತಟ್ಟನೆ-“ಉಪಾಧ್ಯರೇ!ಪ್ರಥಮದಲ್ಲಿಯೇ ತಾವು ಮಾರ್ಗ ತಪ್ಪಿದ್ದೀರಷ್ಟೇ. +ನನ್ನ ಪರಿಚರ್ಯ ತಮಗೆ ಆದಿಯಲ್ಲಯೇ ಉಂಟಾಗುತ್ತಿದ್ದರೆ ನಾನು ನಡಿಸತಕ್ಕ ವೈನವೇ ಬೇರೆ ಇತ್ತು. +ಈಗ ಏನು ಮಾಡಲಿ” ಎಂದು ನಿಟ್ಟುಸಿರುಬಿಟ್ಟನು . +ಅಹಾ!ಇಂಧಾ ವೀರನ ಭೇಟಿಯು ತನಗೆ ಪೂರ್ವ ದಲ್ಲಿಯೇ ಸಿಕ್ಕುತ್ತಿದ್ದರೆ ಆಶಾಭಂಗವಾಗುತ್ತಿದ್ದಿಲ್ಲ. +ತನ್ನ ದುರದೃಷ್ಟ ದಿಂದಲೇ ಜಯಸ್ತ್ರೀಯು ತೊಲಗಿದ್ದಾಳೆಂದು ಕೈಯಿಂದ ಹಣೆತಟ್ಟಿ ಕೊಂಡನು ಹಾಗಾದರೆ ಇನ್ನು ಮುಂದೆ ತನ್ನ ಸಾಧನೆಯು ನಿಷ್ಪ್ರಯೋಜಕವೆಂಬ ಭಯದಿಂದ ಮುಖ ಸಣ್ಣದ ಮಾಡಿಕೊಂಡ ಬ್ರಾಹ್ಮಣನನ್ನು ನೋಡಿ ಅಪರಾಜಿತ ಸೆಟ್ಟಿಯು ಮುಗುಳು ನಗೆಯಿಂದ–“ಉಪಾಧ್ಯರೇ! ಹೆದರಬೇಡಿ. +ಭಗೀರಥ ಪ್ರಯತ್ನ ಮಾಡಿ ನಿಮಗೆ ಜಯ ಉಂಟಾಗುವ ಹಾಗೆ ನೋಡದೆ ಸುಮ್ಮಗಿರಲಾರೆ”ನೆಂದು ಭಾಷೆ ತೊಟ್ಟುಕೊಂಡನು. +ಉಪಾಧ್ಯನು ಧನ್ಯನಾದೆನೆಂದನು. +“ಬರಿ ಕೈಯಿಂದ ಮೊಳಹಾಕಿದರೆ ಪುರುಷಾರ್ಥವೇನಿದೆ?” ಎಂಬ ಅಪರಾಜಿ ತನ ಪ್ರಶ್ನೆಗೆ “ಆ ಮಾತೊಂದೂ ಹೇಳಬೇಡಿ. +ಒಂದು ಚಿಕ್ಕಾಸೂ ನನ್ಫ ಹತ್ತಿರ ಇಲ್ಲ. +ನಿಮ್ಮ ಸಹಾಯವೂ ಬೇಡ. +ಬಂದ ದಾರಿಯಿಂದಲೇ ಹೊರಟು ಬಿಡುತ್ತೇನೆ. +ಪ್ರೀತಿ ಇರಲಿ” ಎಂದು ವೇದವ್ಯಾಸನು ತನ್ನ ಪ್ರಾಣಸಖನ ತಳ್ಳಿಯನ್ನು ಬಿಡಲಿಕ್ಕೆ ಸಿದ್ಧನಾದನು. +ಓಹೋ!ಈ ಅಲ್ಬಮತಿಯನ್ನು ಹೋಗಬಿಟ್ಟಿರೆ ತನ್ನ ಪಾಯವೇ ತಸ್ಪಿಹೋಗುವುದೆಂಬ ಹೆದರಿಕೆಯಿಂದ ಸೆಟ್ಟಿಯು “ನಾನು ಚೇಷ್ಟೆಗೆ ಹೇಳಿದ ಮಾತು ವಿಪರೀತವಾಯಿತೇ? ಉಪಾಧ್ಯರೇ, ನೀವು ಒಂದು ಕಾಸೂ ಕೊಡಬೇಡಿ. +ಖರ್ಚು ಅತಿ ಅಗತ್ಯಬಿದ್ದರೆ ನನ್ನ ಕೈಯಿಂದ ಹಣ ಹಾಕುವೆನು. +ನಾನೇನು ಭಿಕಾರಿಯಲ್ಲ. +ನಿಮ್ಮಿಂದಲೂ ಹೆಚ್ಚು ಛಲಹಿಡಿದು ನಿಮ್ಮ ಶತ್ರುಗಳನ್ನು ಸದೆ ಬಡಿಯದೆ ಇದ್ದರೆ ನನ್ನ ಈ ಮೀಸೆಯಾಕೆ?” ಎಂದು ಕೊನೆ ಮೀಸೆಗಳನ್ನು ಎಳೆಯುತ್ತಾ ಉಪಾಧ್ಯನದನ್ನು ತಟ್ಟಿದನು. +ವೇದವ್ಯಾಸನು ತನಗೆ ಇಂಥಾ ಹಿತಚಿಂತಕನು ಏಳೇಳು ಜನ್ಮದಲ್ಲಿಯೂ ಸಿಕ್ಕುವುದು ದುರ್ಲಭವೆಂದೆಣಿಸಿ ಕೃತಾರ್ಥನಾಗಿ ತನ್ನ ಗೆಳೆ ಯನನ್ನು ತಬ್ಬಿಕೊಂಡನು ಪರಸ್ಪರಾಲಿಂಗನದಿಂದ ಮಿತ್ರರಿಬ್ಬರೂ ಸ್ನೇಹ ಬದ್ದರಾದರು. +ಗೆಳೆಯರೀರ್ವರೂ ಗಂಡಭೇರುಂಡ ಪಕ್ಷಿಗಳಂತೆ ಹಗಲು ರಾತ್ರಿ ಒಟ್ಟಿ ನಲ್ಲಿ ಇದ್ದು ವಿವಿಧ ಪ್ರಸ್ತಾವಗಳನ್ನು ಮಾಡುತ್ತಾ ಸಮಯ ಕಳೆದರು. +ಅವರು ರಾಜನ ಕುಲಗುರುವಾದ ಸ್ವಯಂಜ್ಯೋತಿ ಗುರುಗಳ ಮಠಕ್ಕೆ ಹೋಗಿ, ಆ ಸನ್ಯಾಸಿಯನ್ನು ಕಂಡರು. +ಅಪರಾಜಿತನು ವೇದವ್ಯಾಸ ಉಪಾಧ್ಯನ ಗುರ್ತು ಸನ್ಯಾಸಿಗೆ ಹೇಳಿದನು. +ಅವರು ಹಿಂದೆ ಅವನನ್ನು ರಾಜನ ದರ್ಬಾರಿನಲ್ಲಿ ನೋಡಿದ ನೆನಪು ಒಂದು ಸಂತೋಷಪಟ್ಟರು. +ತಮ್ಮ ಮಠದ ಮೇಲೆ ಅಭಿಮಾನವಿಟ್ಟು ಇಲ್ಲಿವರೇಗೆ ಒಂದ ಗೀರ್ವಾಣ ಭಾಷಾಗ್ರಗಣ್ಯಗೆ ಸಾಭಿಮಾನ ಮಾಡಿ, ಬಿಡಾರ ಸಾಹಿತ್ಯಗಳನ್ನು ಒದಗಿಸಿಕೊಟ್ಟು ಚಂದವಾಗಿ, ಪರಾಮರ್ಶಿಸೆಂದು ಮಠದ ಕಾರ್ಯಸ್ಥ ಶಿವರಾಮ ಸೆಟ್ಟಗೆ ಆಜ್ಞಾಸಿಸಿದರು. +ಕಾರ್ಯಸ್ಥನು ಗುರುವಿನ ಅಪ್ಪಣೆಯನ್ನು ನಡೆಸಿದನು. +ವಿಪ್ರಗೆ ಭೋಜನಾದಿ ಸತ್ಕಾರಗಳು ಅವನ ನಿರೀಕ್ಷಣೆಯನ್ನು ಮಿಗುವ ರೀತಿಯಲ್ಲಿ ಆದವು ಸ್ವಯಂ ಜ್ಯೋತಿ ಪರಮಹಂಸರು ಸಂಸ್ಕೃತದಲ್ಲಿ ಕಡಿಮೆ ಪಾಂಡಿತ್ಯವುಳ್ಳ ವರಲ್ಲ. +ವೇದ ವ್ಯಾಸ ಉಪಾಧ್ಯನು ಆವರ ಒಟ್ಟ ನಲ್ಲಿ ಎರಡು ಮೂರು ದಿವಸ ತರ್ಕಮಾಡಿ ನೋಡಿದಾಗ ತನ್ನಷ್ಟು ದೊಡ್ಡ ಸಂಸ್ಕೃತ ಪಂಡಿತವಿಲ್ಲವೆಂಬಂತ ತಾಳಿಕೊಂಡ ಗರ್ವವು ವ್ಯರ್ಥವಾಗಿತೋರಿ ಸನ್ಯಾಸಿಯ ಪ್ರಾಜ್ಞತೆಗೆ ಮೆಚ್ಚಿದನು. +ಉಪಾ ಧ್ಯನ ಪಾಂಡಿತ್ಯವು ಸಾಮಾನ್ಯವಾದುದಲ್ಲವೆಂದು ಸ್ವಯಂಜ್ಯೋತಿ ಗುರು ವರ್ಯರು ನಿಶ್ಚೈಸಿ ಒಳ್ಳೇ ವಸ್ತ್ರಾಲಂಕಾರಗಳನ್ನು ಅವನಿಗೆ ಉಚಿತವಾಗಿ ಕೊಟ್ಟು, ಸನ್ಮಾನಿಸಿದರು. +“ವಿಶೇಷವೇನಾದರೂ ಅರಿಕೆ ಮಾಡಲಿಕ್ಕಿದೆಯೋ” ಎಂದು ವಿಚಾರಿಸಿದಾಗ ಅಪರಾಜಿತ ಸೆಟ್ಟಿಯು ಪ್ರಣಾಮಮಾಡಿ, ಈ ಬ್ರಾಹ್ಮಣನು ಸನ್ನಿಧಾನದ ಭೇಟಿಗೆ ಬಂದ ಉದ್ದೇಶವನ್ನು ಸಂಪೂರ್ಣವಾಗಿ ವಿವರಿಸಿದನು. +“ಲೌಕಿಕ ವಿಚಾರವನ್ನೇ ಬಿಟ್ಟು ನಿರ್ವಾಣವನ್ನು ಹೊಂದಲಪೇಕ್ಷಿತ ನಾದ ಪರಮಹಂಸನೊಬ್ಬನು ಇಂಥಾ ವಾಭಾಟದಲ್ಲಿ ಮಾಡತಕ್ಕದ್ದೇನೂ ಇಲ್ಲವು. +ಆದರೆ ಈ ರಾಜ್ಯದಲ್ಲಿ ಒಡ್ಡೋಲಗದ ಕ್ರಮಕ್ಕನುಸರಿಸಿ ಮತ ಸಂಬಂಧವಾದ ವಿವಾದಗಳಲ್ಲ ರಾಜದ್ವಾರದಲ್ಲಿ ಅರಸನು ತನ್ನ ಕುಲಗುರು ವನ್ನು ಮಂತ್ರಾಲೋಚಕನಾಗಿ ತನ್ನ ಅರ್ಧಾಸನದಲ್ಲಿ ಕುಳ್ಳಿರಿಸುವ ಪದ್ಧ ತಿಯು ಪರಂಪರೆಯಾಗಿ ನಡೆದು ಬರುತ್ತದೆ. +ಅವನ ಅಭಿಪ್ರಾಯವನ್ನು ಸ್ವೀಕರಿಸುವುದಕ್ಕೆ ಅರಸು ಸರ್ವಧಾ ಬದ್ದನಲ್ಲ. +ನೃಪಾಲನು ತನಗೆ ಯುಕ್ತ ವೆಂತ ಕಾಣುವ ವಿಧಿಯನ್ನು ಕೊಡುತ್ತಾನೆ. +ಅವನ ಸ್ವಾತಂತ್ರ್ಯಕ್ಕೆ ಯಾವ ನೊಬ್ಬ ಮಂತ್ರಾಲೋಚಕನ ತಡೆಯೂ ಇರುವುದಿಲ್ಲ.” ಹೀಗೆ ಸನ್ಯಾಸಿಯು ಹೇಳಿದುದರಿಂದ ವೇದವಾಸ್ಯನು ಕಂಗೆಟ್ಟನು. +ಅಪರಾಜಿತ ಸೆಟ್ಟಿಯು ಪುನಃ ಪ್ರಣಾಮಮಾಡಿ ಶರಣಾಗತನಾದ ಹಾರುವಗೆ ಅಭಯವಾಗಬೇಕೆಂದು ಸೆರಗು ಒಡ್ಡಿ ಬೇಡಿಕೊಂಡನು: “ಜನಧರ್ಮ ಪಾಲಿಸು?” ಎಂದು ಅಪರಾ ಜಿತಗೆ ಆಜ್ಞೆಯಾಯಿತು. +ಬಳೆಕ ಅವರು ತನ್ನ ನೌಕರನೊಬ್ಬನನ್ನು ಕಳು ಹಿಸಿ ಅರಮನೆಯ ಭಕ್ಷಿ ಆದಿರಾಜನನ್ನು ಕರೆಸಿ ಅವನ ಕೂಡೆ ಅಂತರಂಗದಲ್ಲಿ ಏನೋ ಮಾತಾಡಿ ವೇದವ್ಯಾಸ ಉಪಾಧ್ಯನನ್ನು ಅವನ ಸಂಗಡ ಕಳು ಹಿಸಿದರು. +ಅಪರಾಜಿತನು ಅವರಿಬ್ಬರ ಹಿಂದೆಯೇ ಹೋದನು. +ಆದಿರಾಜನು ಆ ಬ್ರಾಹ್ಮಣನನ್ನೂ ಅವನ ಸಂಗಡಿಗನನ್ನೂ ಮನೆಗೆ ಕರಕೊಂಡು ಹೋಗಿ ದಿವಾನ ಕಚೇರಿಯ ಒಬ್ಬ ಕಾರ್ಕೂನನನ್ನು ಕರತರಿಸಿ ಅವನ ಕೂಡೆ ಸ್ನೇಹ ಭಾವದಿಂದ ಸಂಭಾಷಣೆ ಮಾಡಿ ವೇದವ್ಯಾಸ ಉಪಾಧ್ಯನ ಛಲನಡೆಯಲಿಕ್ಕೆ ಉಪಾಯ ನಡೆಸಬೇಕೆಂದು ಅಪೇಕ್ಷಿಸಿದನು. +ಅರಸನ ಒಡ್ಡೋಲಗದಲ್ಲಿ ಪೇಚಾಡುವ ಕಾಲವು ಇನ್ನೂ ಒದಗಲಿಲ್ಲ ಆಯಾ ಊರಿನವರು ಒಗ್ಗಟ್ಟಾಗಿ ಮತ ವಿರುದ್ಧವಾದ ಕಾರ್ಯವನ್ನು ನಡೆಸಕೂಡದೆಂದು ಕಟ್ಟು ಮಾಡಲಿಕ್ಕೆ ಸ್ವತಂತ್ರಿಕರಾಗಿರುತ್ತಾರೆ. +ಅವರ ಕಟ್ಟು ಮುರಿಯುವುದು ಅನ್ಯರಿಗೆ ಅಸಾಧ್ಯ. +ಒಂದುವೇಳೆ ಅಂಥಾ ಕಟ್ಟಿನಿಂದ ತಡೆಯಲ್ಲಟ್ಟವನು ದ್ರವ್ಯ ಬಲದಿಂದ ಕಲಹ ಹೊಡೆದಾಟ ಮುಂತಾದ ಉಪದ್ರವ ಕೊಡಲಿಕ್ಕೆ ನೋಡುವುದಾದರೆ ಸ್ಥಳಿಕ ಕಾರ್ಬಾರಿ ಕೊತ್ವಾಲರು ತಮ್ಮ ಅಧಿಕಾರವನ್ನು ನಡೆಸದೆ ಇರಲಿಕ್ಕಿಲ್ಲ. +“ಜಗಲಿ ಹಾರದ ಬಡ್ಡಿ ಗಗನ ಹಾರ್ಯಾಳೆ” ಎಂಬಂತೆ ಇಷ್ಟು ಸಣ್ಣ ವ್ಯವಸ್ಥೆ ಮಾಡಲಿಕ್ಕೆ ಬುದ್ಧಿ ಚಾತುರ್ಯವಿಲ್ಲದವನು ರಾಜನ ಒಡ್ಡೋ ಲಗಕ್ಕೆ ಬಂದು, ಏನು ಮಾಡುವ ಹಾಗಿದೆ? +ಕಾರ್ಕೂನನ ಈ ಪ್ರತಿವಾಕ್ಯ ವನ್ನು ಅಪರಾಜಿತ ಸೆಟ್ಟಿಯು ವೇದವ್ಯಾಸ ಉಪಾಧ್ಯಗೆ ವಿವರಿಸಿ ಹೇಳಿ ತನ್ನ ಸಂಗಡ ಬಂದರೆ ಮುಂದಿನ ಉಪಾಯ ಸುಲಭವಾಗಿದೆಯೆಂದು ಅವನಿಗೆ ಧೈರ್ಯ ಕೊಟ್ಟನು. +ಆದಿರಾಜಗೆ ಅವರಿಬ್ಬರೂ ನಮಸ್ಕಾರ ಮಾಡಿ, ಅಲ್ಲಿಂದ ಹೊರಟು ಕ್ಷಿಪ್ರ ಕುಮುದಪುರಕ್ಕೆ ಬಂದರು. +ಭೋಜನವಾದ ಮೇಲೆ ಅಪರಾಜಿತನು ವೇದವ್ಯಾಸನನ್ನು ಕಟ್ಟಿ ಕೊಂಡು ಬೀದಿ ಬೀದಿಯಲ್ಲಿ ಕಾಣಸಿಕ್ಕಿದವರ ಕೂಡೆ–“ಇಗೋ ಚಂಚಲ ನೇತ್ರರ ಛಟ ಹಾರಿಸಿ ಬಿಡುತ್ತೇನೆ. +ಬ್ರಹ್ಮಸಭೆ ಕೂಡಿಸಿ ಉಪನಯನವಾಗ ದಂತೆ ಕಟ್ಟು ಮಾಡಿಸಿಬಿಡುತ್ತೇನೆ. +ಫಸಾದ ಮಾಡಲಿಕ್ಕೆ ನೋಡುವವರನ್ನು ಕೊತ್ವಾಲರಿಂದ ಕೋಳ ಹಾಕಿಸಿ ಬಿಡುತ್ತೇನೆ. +ಸ್ವಯಂಜ್ಯೋತಿ ಗುರುಗಳ ಅಪ್ಸಣೆಗನುಸರಿಸಿ ವೇದವ್ಯಾಸನ ಸಹಾಯಕ್ಕೆ ಬಂದ ಅಪರಾಜಿತ ಸೆಟ್ಟಿ ಎಂದರೆ ನಾನೇ” ಎಂದು ಮೀಸೆಯನ್ನು ಎಳೆಯಲಿಕ್ಕೆ ಪ್ರಾರಂಭಿಸಿದನು. +ಒಂದೆರಡು ತಾಸಿನಲ್ಲಿ ಈ ವರದಿ ಊರಳ್ಗೆಲ್ಲಾ ಹಬ್ಬಿತು. +ಅನು ಚಂಚಲ ನೇತ್ರರ ಕಿವಿಗೂ ಬಿತ್ತು. +ವಾಗ್ದೇವಿಗೂ ಅದು ತಿಳಿಯಿತು. +ಉಪನಯನಕ್ಕೆ ಇನ್ನು ಒಂದೇ ವಾರ ಉಳಿಯಿತು. +ದುಸ್ಮಾನರು ತಮ್ಮ ಗುಂಡಾಂತರ ಮಾಡ ಲಿಕ್ಕೆ ನೋಡುವರೆಂದು ಅವರಿಬ್ಬರೂ ಬಹಳ ವಿಲಾಪ ಮಾಡಿದರು. + ಶ್ರೀಪಾದಂಗಳು ವೆಂಕಟಪತಿ ಆಚಾರ್ಯನನ್ನು ಕರೇ ಕಳುಹಿದರು. + ಪಾರುಪತ್ಯ ಗಾರನು ಅಂದು ಆಪರಾಜಿತನು ಹುಟ್ಟಿಸಿದ ಗಾಬರಿ ಕೇಳಿ, ಮಠದ ಕಡೆಗೆ ಬರುವವನಾಗಿದ್ದನು. + ಶುಭ ಕೆಲಸಕ್ಕೆ ವಿಘ್ನಬರುವ ಸಂಭವವಿದೆ ಎಂಬ ಚಿಂತೆಯಲ್ಲಿರುವ ಧನಿಯ ಮುಖವನ್ನು ನೋಡಿ ವೆಂಕಟಪತಿಯು ಅವರಿಗೆ ಚೆನ್ನಾಗಿ ಧೈರ್ಯಹೇಳಿದನು. + “ವೇದವ್ಯಾಸನನ್ನೆತ್ತಿ ಕೊಂಡ ಈ ಹೊಸ ವೀರನ್ಯಾರಪ್ಪಾ, ವೆಂಕಟಪತಿ ಸ್ವಲ್ಪ ಹೇಳು ಎಂದು ಚಂಚಲನೇತ್ರರು ಕೇಳಿದಾಗ “ಪರಾಕೆ, ಅವನು ಬಿಳೀ ಕಾಗೆಯಲ್ಲ ಶುದ್ಧ ಡಬ್ಬುಗಾರ; + ವೇದವ್ಯಾಸನ ಮೇಲೆ ಪ್ರೀತಿಯುಳ್ಳವನಲ್ಲ. + ಅವನಿಗೆ ಸಹಾಯ ಮಾಡುನ ನೆವನ ದಿಂದ ಕೈಗೆ ದುಡ್ಡು ಹತ್ತುವ ಉಪಾಯ ಮಾಡಲಿಕ್ಕೆ ಬಂದವನಾಗಿರಬೇಕು? ಎಂದು ವೆಂಕಟಪತಿಯು ಉತ್ತರಕೊಟ್ಟನು. + ಆದಾಗ್ಯೂ ಚಂಚಲನೇತ್ರರಿಗೆ ಹತ್ತಿದ ದಿಗಿಲು ಪೂರ್ಣವಾಗಿ ನಿವಾರಣೆಯಾಗದೆ, ಪಾರುಪತ್ಯಗಾರನನ್ನು ಹತ್ತಿರ ಕರೆದು “ದುಡ್ಡು ವೆಚ್ಚವಾದರೂ ಪರ್ವಾಯಿಲ್ಲ. + ಈ ಡಾಂಭಿಕ ಸೆಟ್ಟಿಯನ್ನು ಒಲಿಸು ಜಾಫ್ಯ ಮಾಡಲಾಗದು” ಎಂದು ಅಪ್ಪಣೆ ಕೊಟ್ಟರು. + ವೆಂಕಟಪತಿಯು ಹೊರಟು ಕುಮುದಪುರದ ಸೆಟ್ಟಿಗಳ ಪೇಟೆಯಲ್ಲಿ ವ್ಯಾಪಾರ ಮಾಡುವ ದೊಡ್ಡ ಸಾಹುಕಾರ ನೇಮರಾಜ ಸೆಟ್ಟಿಯನ್ನು ಕಂಡು ಅಪರಾಜಿತನನ್ನು ಹೇಗಾದರೂ ತನ್ನ ಕೈವಶಮಾಡಿಕೊಡಬೇಕಾಗಿ ಅಪೇಕ್ಷಿಸಿ ಅದಕ್ಕೆ ಬೇಕಾದ ದ್ರವ್ಯಾನುಕೂಲ ಕೊಡಿಸಲಿಕ್ಕೆ ಸಮ್ಮತಿಸಿದನು. +ಅಪರಾಜಿತಸೆಟ್ಟಿಯೂ ವೇದವ್ಯಾಸನೂಕೈ ಕೈ ಹಿಡುಕೊಂಡು, ಪಟ್ಟಣ ವಾಸಿಗಳಾದ ಪ್ರಮುಖ ಬ್ರಾಹ್ಮಣರನ್ನು ಕಂಡು ಸೂರ್ಯನಾರಾಯಣನ ಉಪನಯನವು ತಡೆಯುವಂತೆ ಕಟ್ಟುಮಾಡುವ ವಿಷಯದಲ್ಲಿ ಅವರಿಗೆ ಹಲವು ತರದಲ್ಲಿ ದುರ್ಬೋಧನೆ ಕೊಟ್ಟರು. +ಕೆಲವರು ತಮಗ್ಯಾಕೆಂದು ತಲೆಹಂದಿಸಿದರು. +ಕೆಲವರ ಕಿವಿಗಳಿಗೆ ಸೆಟ್ಟಯ ಮಾತು ರಮ್ಯವಾಯಿತು. +ಹ್ಯಾಗೂ ಮರುದಿವಸ ಅಂಜನೇಯಾಲಯದಲ್ಲಿ ಬ್ರಹ್ಮಸಭೆ ಕೂಡುವದಕ್ಕೆ ನಿಶ್ಚಯ ಮಾಡಿ, ಬ್ರಾಹ್ಮಣರ ಮನೆಗಳಿಗೆಲ್ಲ ಹೇಳಿಕೆಯಾಯಿತು. +ವೇದವ್ಯಾಸನು ತನ್ನ ಆಶೆಯು ತೀರುವ ಕಾಲ ಬಂತೆಂದು ಹಾಸ್ಯವದನನಾಗಿ ತನ್ನ ಸ್ನೇಹ ತನ್ನ ಪರಾಕ್ರಮವನ್ನು ಹೆಂಡತಿಯ ಮುಂಡೆ ವರ್ಣಿಸಲಿಕ್ಕೆ ತೊಡಗಿದನು. +ಅವಳು ಪತಿಯ ಬುದ್ಧಿಗೆ ಮೆಚ್ಚದೆ, ಅವನು ಕೈಕೊಂಡ ಕಾರ್ಯವು ಯಶಸ್ಕರ ವಾದದ್ದಲ್ಲವೆಂದು ದುಮ್ಮಾನ ತಾಳಿದಳು. +ಮತ್ತು ಬಾಯಿಬಿಟ್ಟು ಗಂಡಗೆ ಹಾಗೆಯೇ ಹೇಳಿದಳು. +ಅವನು ಅವಳ ಮಾತು ಗಣ್ಯಮಾಡಲಿಲ್ಲ. +ಹೆಚ್ಚು ಮಾತಾಡಿದರೆಸತಿಯು ಸಿಟ್ಟುತಾಳುವನೆಂಬ ಭಯದಿಂದ ಅವಳು ಚಿಂತಾ ತುರಳಾಗಿ ಸುಮ್ಮಗಿದ್ದು ಕೊಂಡಳು. +ಸಾಯಂಕಾಲವಾಯಿತು. +ಅಪರಾಜಿತಸೆಟ್ಟಿಯು ಬಿಡಾರ ಸೇರುವದಕ್ಕೆ ಹೊರಟಾಗ ದಾರಿಯಲ್ಲಿ ನೇಮರಾಜಸೆಟ್ಟಿಯ ಚಾಕರನೊಬ್ಬನು ಅನನನ್ನು ಕಂಡು ರಾತ್ರೆಭೋಜನಕ್ಕೆ ತನ್ನ ಧನಿಯ ಮನೆಗೆ ದಯಮಾಡಬೇಕೆಂದು ಅವರ ಅಪೇಕ್ಷೆ ಅದೆ ಎಂದನು. +ಅಪರಾಜಿತನು ಹೆಕ್ಕಳಿಸಿ, ಅವನ ಸಂಗಡಲೇ ಆ ಸಾವಕಾರನ ಮನೆಗೆ ಹೋದನು. +ನೇಮರಾಜನು ಈ ಪೋಲಿಗಾರಗೆ ಅವನ ಸ್ವರೂಪಕ್ಕೆ ಮಿಕ್ಕಿದ ಸಾಭಿಮಾನದಿಂದ ತರಗು ಎಂಬ ಹೆಸರುಹೋದ ಭಕ್ಷ್ಮ ಸಹಿತ ದೊಡ್ಡದೊಂದು ಔತಣವನ್ನು ಮಾಡಿಸಿದಾಕ್ಷಣ ತಾನಿರುವ ಠಾವು ಆಕಾಶವೋ ಭೂಮಿಯೋ ಎಂಬುದು ಅವನಿಗೆ ತಿಳಿಯದೆ ಹೋಯಿತು. +“ವೇದವ್ಯಾಸ ಉಪಾಧ್ಯಗೆ ಮುಂಗೈಗೆ ಬೆಲ್ಲಕಾಣಿಸಿಬಿಟ್ಟಿದ್ದಿಯಫ್ಟೆ. ಸಾವಿರ ರೂಪಾಯಿ ಗಂಟು ಮಠದಿಂದ ಕೂಡಿಸುವೆನು. +ಸೂರ್ಯನಾರಾಯಣನ ಉಪನಯನಕ್ಕೆ ವಿಘ್ನಕಾರಕನಾಗಬೇಡ. +ಒಳ್ಳೇ ಮಾತಿನಿಂದ ಕೇಳುತ್ತಿಯಾ? ಬೆನ್ನಿಗೆ ಮುಷ್ಟಿ ಪೂಜೆ ಆಗಬೇಕೋ” ಎಂದು ನೇಮರಾಜನು ಕಟ್ಟುತ್ತರ ಕೊಟ್ಟಾಗಲೇ “ಸ್ವಾಮೀ! ತಮ್ಮ ಪಾದದಾಣೆ ತಮ್ಮ ಅಪ್ಪಣೆ ಮಾರುವವನಲ್ಲ” ಎಂದು ಕೈ ಜೋಡಿಸಿಕೊಂಡು ನಿಂತನು. +ಉಪನಯನ ಪ್ರಸ್ತ ಸಾಂಗ ವಾಗಿ ನಡೆಯುವ ವರೆಗೂ ವೇದವ್ಯಾಸ ಉಪಾಧ್ಯಗೆ ಅತ್ತಿತ್ತ ಕುಣಿಸಿ ಮತ್ತೆ ತನ್ನನ್ನು ಕಂಡರೆ ವಾಗ್ದತ್ತಮಾಡಿದ ವಿತ್ತವನ್ನೀಯುವದಾಗಿ ಸಾವಕಾರನು ಅಸರಾಜಿತಸೆಟ್ಟಿಗೆ ಮಾತು ಕೊಟ್ಟು ಬಿಡಾರಕ್ಕೆ ಕಳುಹಿಸಿದನು. +ತನ್ನ ಬಯಕೆ ಕೈಗೂಡಿಸುವನೆಂಬ ಸಂತೋಷದಿಂದ ಅಪರಾಜಿತಸೆಟ್ಟಿಯು ವಾಯು ವೇಗದಿಂದ ಎಂಬಂತೆ ಲವಕಾಲದಲ್ಲಿ ಬಿಡಾರಕ್ಕೆ ತಲಪಿ, ಸೌಖ್ಯವಾಗಿ ನಿದ್ರೆ ಗೈದ, ಒಳ್ಳೆ ಒಳ್ಳೆ ಕನಸುಗಳನ್ನು ಕಂಡನು. +ಮರುದಿವಸ ಮುಂಜಾನೆ ಎದ್ದು, ವೇದವ್ಯಾಸ ಉಪಾಧ್ಯನು ದೊಡ್ಡ ದೊಡ್ಡ ಜಮಖಾನುಗಳು, ಲೋಡು, ತಿವಾಸಿ, ಲೇಪು, ಚಾಪೆ ಇತ್ಯಾದಿ ಆಸನೋಪಕರಣಗಳನ್ನು ಯಾರ್ಯಾರಿಂದಯರವಿಗೆ ತಂದು ಅಂಜನೇಯ ದೇವಸ್ಥಾನದ ಪೌಳಿಯಲ್ಲಿ ನುಣ್ಣಗಾಗಿ ಹಾಸಿ, ಅಲ್ಲಿ ಒಂದು ನುಸಿಯಾದರೂ ಸುಳಿಯದಂತೆ ಜಾಗ್ರತೆ ತೆಗೆದುಕೊಳ್ಳುವದಕ್ಕೋಸ್ಕರ ತಮ್ಮ ರಾಘವೇಂದ್ರ ಉಪಾಧ್ಯನನ್ನು ನಿಲ್ಲಸಿಬಿಟ್ಟು, ಮನೆಗೆ ಹೋಗಿ ಸ್ನಾನ ಜನ ಪೂಜೆ ಭೋಜನ ಸಹಿತ ತೀರಿಸಿ, ಬೇಗಬಂದು ದೇವಸ್ತ್ಥಾನದ ಬಳಿಯ ಸಭಾಸದರ ನಿರೀಕ್ಷಣೆ ಮೇಲೆ ಕುಳಿತುಕೊಂಡನು. + ಸ್ವಲ್ಪದೂರವಿರುವ ಒಂದು ಆತ್ವತ್ವ ಕಟ್ಟೆಯಲ್ಲಿ ಅಪರಾಜಿತ ಸೆಟ್ಟಿಯು ಅರೆಮನಸ್ಸಿನಿಂದ ಕೂತುಕೊಂಡಿರುವಾಗ ಆಗಿಂದಾಗ್ಗೆ ವೇದವ್ಯಾಸನು ಒಂದು ಸಣ್ಣಸ್ವರದಿಂದ ಕೇಳುವ ಪ್ರಶ್ನೆಗಳಿಗೆ ನಿದ್ರಾವಸ್ಥೆಯ ಲ್ಲಿದ್ದವನಂತೆ ಉತ್ತರಗಳನ್ನು ಕೊಡುತ್ತಿದ್ದನು. + ಅಂದಿನ ಸಭೆಯ ಪರಿಣಾಮ ಹ್ಯಾಗಾಗುತ್ತದೊ ನೋಡದನಕ ಮುಂದೆ ಮಾಡತಕ್ಕ ವೈನಗಳನ್ನು ಯೋಚಿಸಲಿಕ್ಕೆ ಸಂದರ್ಭವಿಲ್ಲವೆಂದು ಅವನು ಅತ್ತಿತ್ತ ನೋಡುತ್ತಿರುವಾಗ ಕೆಲವು ಬ್ರಾಹ್ಮಣರು ಬರುವವರಾದರು. + ಪ್ರಮುಖರ್ಯಾರೂ ಇನ್ನೂ ಬಂದಿಲ್ಲ ಬಂದು ಕೊಳ್ಳಲಿ. + ಆ ಮೇಲೆ ಪೌಳಿಯಲ್ಲಿ ಸೇರಿಕೋಬಹುದೆಂದು ಅವರೆಲ್ಲರೂ ಅಲ್ಲಲ್ಲಿ ಸಣ್ಣ ಸಣ್ಣ ಗುಂಪುಗಳಾಗಿ ನಿಂತು ಕೊಂಡ ಸಮಯವನ್ನು ಸಾಧಿಸಿ ವೆಂಕಟ ಪತಿ ಆಚಾರ್ಯನಿಂದ ಮುಂದಾಗಿ ಬೋಧನೆ ಹೊಂದಿರುತ್ತಿದ್ದ ಅಂಜನೇಯಾ ಲಯದ ಅರ್ಚಕನ ಅತ್ತೆ ಸೂರ್ವಸುಮಂಗಲೆ ಗಂಗಾಬಾಯಿಯು ಬಾಗಲಲ್ಲಿ ನಿಂತು ಆಚೆ ಈಚೆ ಹಣಕಿನೋಡಿ, ಎದುರಿನಲ್ಲಿ ನಿಂತಿರುವ ವೇದವ್ಯಾಸ ಉಪಾಧ್ಯನನ್ನು ಕರದು-“ಹೌದೋ ವೇದವ್ಯಾಸ; + ಇಂದೇನು ವಿಶೇಷವಪ್ಪಾ? ದ್ವಿಜರ ಸಂದಣಿಯು ಬರುವದು ತೋರುತ್ತದೆ” ಎಂದು ಕೇಳಿದಳು. + ವಾಯುವಿನ ಕೂಡೆಯಾದರೂ ಜಗಳವಾಡಲಿಕ್ಕೆ ಹಿಂಜರಿಯದ ಈ ವಿಧವೆಯು ಎಲ್ಲಿಂದ ಬಂದು ಬಾಗಲಲ್ಲಿ ಠಿಂತು ಕೊಂಡಳೆಂದು ಮನಸ್ಸಿನಲ್ಲಿ ಸಂಕೋಚ ತಾಳಿದೆ ವೇದವ್ಯಾಸನು-“ಅಮ್ಮಾ ವಿಶೇಷವೇನು!ಒಂದು ಸಭೆ ಕೂಡುವ ದಕ್ಕೆ ಸಂಕಲ್ಪಿಸಿಯದೆ. +ಆದಪ್ರಯುಕ್ತ ಒಬ್ಬೊಬ್ಬರೇ ಈ ಠಾವಿಗೆ ಬರುತ್ತಲಿ ದ್ದಾರೆ” ಎಂದು ಉತ್ತರಕೊಟ್ಟು. +“ಹಾಗೊ!ನಿನ್ನ ತಾಯಿಯ ಸಪಿಂಡೀ ಕರಣಕ್ಕೆ ಇವರಿಗೆಲ್ಲಾ ಹೇಳಿಕೆ ಮಾಡಿಸಿದ್ದಿಯೋ! +ಏನೋ ನೋಡಿಬಿಡುನ ದಕ್ಕೆ ನಾನು ಹೊರಗೆ ಬಂದೆ” ಎಂದು ಆ ಜಗಳಗಂಟಿ ಹೆಂಗಸು ಒದರಿದ್ದು ಕೇಳಿದನು. +ವೇದವ್ಯಾಸನು ಸಿಟ್ಟಿ ನಿಂದಲೂ ಭಯದಿಂದಲೂ ನಡುಗಿ, ಸಿಟ್ಟು ಏನೂ ತಡಿಯಲಾರದೆ–“ಮುದಿಗೂಗೆ! +ಬಾಯಿಗೆ ಬಂದಂತೆ ಬೊಗಳುವಿಯಾ?” ಎಂದು ಅವಳನ್ನು ಗದರಿಸಿದನು. +ಸರಿ ಪಟಾರೆ ಪೆಟ್ಟಿಗೆಗೆ ಒಂದೇ ಸರ್ತಿ ಬೆಂಕಿಕೊಟ್ಟಂತಾಯಿತು. +ಗಂಗಾಬಾಯಿಯು ಹೆಚ್ಚುಕಡಿಮೆ ಒಂದು ತಾಸಿನವರೆಗೆ ಹೀನವಾದ ಬೈಗಳಿಂದ ಹಿಂದುಮುಂದು ನೋಡದೆ ವೇದ ವ್ಯಾಸನು ಉಸುರೆತ್ತದ ಹಾಗೆ ಮಾಡಿಬಿಟ್ಟಳು. +ಅಷ್ಟರಲ್ಲಿ ಅಲ್ಲಿ ನೆರೆದಿರುವ ಸಮೂಹವೂ ದಾರಿಗರೂ ಬಾಗಿಲ ಎದುರು ವೇದವ್ಯಾಸನ ಬೆನ್ನುಕಡೆಯಲ್ಲಿ ಗುಂಪು ಕಟ್ಟಿದ್ದರು. +ಉಪಾಧ್ಯನ ಹಮ್ಮು ಇಳಿದುಹೋಯಿತು. +ಅಲ್ಲಿಂದ ಅವನು ತಪ್ಪಿಸಿಕೊಂಡು, ಪಲಾಯನ ಮಾಡು ವದಕ್ಕೆ ನೋಡುವಷ್ಟರೊಳಗೆ ಅಣ್ಣಗೆ ನಾಮೂಷಿ ಮಾಡಿದ ವಿಧವೆಯ ಮೇಲೆ ಕೋಪವನ್ನು ತಾಳಿದ ರಾಘವೇಂದ್ರ ಉಪಾಧ್ಯನು ಔಡುಗಳನ್ನು ಕಚ್ಚಿಕೊಂಡು, ಗುಂಪಿನೊಳಗೆ ನುಗ್ಗಿ ಗಂಗಾಬಾಯಿಯ ಸಮ್ಮುಖದಲ್ಲಿ ನಿಂತು–“ಹೇವವಿಬ್ಲದ ದಿಂಡೆ!ನಿನ್ನ ನಾಲಿಗೆಗೆ ಸಲಿಗೆ ಹೆಚ್ಚಾಯಿತು! +ಗರ ಗಸದಿಂದ ಸೀಳಿಬಿಡುತ್ತೇನೆ” ಎಂದು ಅರ್ಭಟ ಮಾಡಿದನು. +ಅವಳಿಗೆ ಮತ್ತಷ್ಟು ರೇಗಿತು. +ಅಣ್ಣ ತಮ್ಮಂದಿರಿಬ್ಬರನ್ನೂ ಕಂಡಾಬಟ್ಟೆ ಬೈಯುತ್ತಾ, ಯಾರಿಗೂ ಕಾಣದಂತ ಕಂಕುಳಲ್ಲಿ ಇಟ್ಟುಕೊಂಡಿದ್ದ ಜಗಳಗಾತಿಯರ ಮುದ್ದು ಆಯುಧವನ್ನು ಬೀರುತ್ತಾ, ಮುಂದು ಮುಂದೆ ಬಂದಳು. +ಇಂಥ ಕಟ್ಟು ಮುಟ್ಟಿನಲ್ಲಿ ಗುಂಪುಕೂಡಿ ನಿಂತ ಜನರು ದಿಕ್ಕಾಪಾಲಾಗಿ ಓಡಿದರು ಉಪಾಧ್ಯಾಯ ರೀರ್ವರೂ ಹ್ಯಾಗೂ ಗುಂಪಿನ ಎಡೆಯಿಂದ ತಪ್ಪಿಸಿಕೊಂಡು, ಉಸುರುಕಟ್ಟಿ ಓಡಿದರು ಅವಳು ತಮಗೆ ಬೆರಸಿಕೊಂಡು ಬರುತ್ತಾಳೊ ಎಂಬ ಭಯದಿಂದ ಅವರು ಹಿಂದೆ ನೋಡುತ್ತಾ ಓಡಿ ಓಡಿ ಬೇಗ ಮನೆಯ ಒಳಗೆ ಹೊಕ್ಕು, ಬಾಗಲು ಮುಚ್ಚಿ ಕೀಲುಹಾಕಿ ಹರಿನಾಮ ಸ್ಮರಣೆ ಮಾಡಿದರು. +ದೂರವಿರುವ ಕಟ್ಚೆಯಲ್ಲಿ ಕೂತುಕೊಂಡಿದ್ದ ಅಪರಾಜಿತಸೆಟ್ಟಿಗೂ ಉಪಾಧ್ಯರ ಸಂತಾಪ ನೋಡಿ ದಿಗಿಲುಹತ್ತಿದರೂ ನೇಮರಾಜಸೆಟ್ಟಿಯು ಸೂಚಿಸಿದ ಮಾರ್ಗವನ್ನು ಅನುಸರಿಸಲಿಕ್ಕೆ ದೈವವಶಾತ್‌ ಗಂಗಾಬಾಯಿಯು ಅಮಂಗಲ ಆಯು ಧಪಾಣಿಯಾಗಿ ಸಾರಥ್ಯ ಮಾಡಿದ ಹಾಗಾಯಿತು. +ಇನ್ನು ದೊಡ್ಡದಲ್ಲವೆಂದು ಅತ್ಯಾನಂದಪಟ್ಟನು. +ಸಭೆಕೂಡಲಿಕ್ಕೆ ಹೊರಟ ದೊಡ್ಡ ದೊಡ್ಡವರೂ ಸಾಧಾರಣಮಟ್ಟಿನ ವರೂ ಭೋಜನ ತೀರಿಸಿಕೊಂಡು, ಮೆಲ್ಲಮೆಲ್ಲನೆ ಬರುತ್ತಾ, ದಾರಿಯಲ್ಲಿ ಗಂಗಾಬಾಯಿಗೂ ಉಪಾಧ್ಯರಿಬ್ಬರಿಗೂ ಆದ ಕಲಹದ ಸಮಾಚಾರವನ್ನು ಕೇಳಿ, ಮರ್ಯಾದೆ ಉಳಿಸಿಕೊಳ್ಳಬಬೇಕಾದರೆ ತಂತಮ್ಮ ಮನೆಗಳಿಗೆ ಮರಳುವದೇ ಉತ್ತಮ ಉಪಾಯವೆಂದು ಹಿಂತಿರುಗಿ ಚೆನ್ನಾಗಿ ನಕ್ಕರು. +ಈ ಒಸಗೆಯು ಕ್ಷಣದಲ್ಲಿ ಊರಲ್ಲಿ ಸರ್ವತ್ರ ತುಂಬಿ ಕೇಳಿ, ಕೇಳಿದವರಿಗೆ ಬಹು ವಿನೋದಕರವಾಯಿತು. +ವರ್ಷಕ್ಕೆ ಒಮ್ಮೆಯಾದರೂ ನಗಲೊಲ್ಲದವರು ಅಂದು ಗಹಗಹಿಸಿದರು. +ಮಠಕ್ಕೆ ಅದು ತಿಪ್ಪಾಶಾಸ್ತ್ರಿಯಿಂದ ಗೊತ್ತಾಯಿತು. +ಚಂಚಲನೇತ್ರರು ಅವರ ಜೀವಕಾಲದಲ್ಲಿ ಅಂದಿನಷ್ಟು ನಗಲಿಲ್ಲ. +ವಾಗ್ದೇವಿಯ ಉಲ್ಲಾಸಕ್ಕೆ ಪರಿಮಿತಿಯೇ ಇಲ್ಲ. +ಅವಳ ತಂದೆತಾಯಿಗಳೂ ಗಂಡನೂರಾತ್ರಿ ನಿದ್ರೆಬೀಳುವವರೆಗೂ ನಕ್ಕರು. +ವೆಂಕಟಪತಿ ಆಚಾರ್ಯನ ಸಾಮರ್ಥ್ಯಕ್ಕೆ ಶ್ರೀಪಾದಂಗಳವರು ಪೂರ್ಣವಾಗಿ ಮೆಚ್ಚಿದರು. +ಅಂದಿನ ಸಾಯಂಕಾಲ ತನಕ ಅವನು ಮಠದಲ್ಲಿ ಕಾಲಿಡಲಿಲ್ಲ. +ರಾತ್ರೆ ಪೂಜೆಕಾಲದಲ್ಲಿ ನಸುನಗುತ್ತಾ, ಧಣಿಗಳ ಸಮ್ಮುಖಕ್ಕೆ ಬಂದು ಪ್ರಣಾಮ ಮಾಡಿದನು. +ಅವನ ಮುಖವನ್ನು ನೋಡಿ ಚಂಚಲನೇತ್ರರು ಸಂತುಷ್ಟರಾದರು. +ಗಂಗಾಬಾಯಿ ಹೆಸರು ಹೋದಳು. +ಮಠದ ವೈರಿಗಳು ಮೃತನಪ್ರಾಯವಾದರು. +ಅಪರಾಜಿತ ಸೆಟ್ಟಿಯು ಸಾಯಂಕಾಲದಲ್ಲಿ ವೇದವ್ಯಾಸೆನ ಮನೆಗೆ ಬಂದು ಅವನಿಗೆ ಸಂಭವಿಸಿದ ಮಾನಭಂಗವನ್ನು ಕುರಿತು ನೊಂದವನಂತೆ ತೋರಿಸಿಕೊಂಡನು. +ತನ್ನ ಪ್ರಾಣವು ಆಗಲೇ ಹೊರಟು ಹೋದರೆ ಅತಿ ಉತ್ತಮವಾಗುತ್ತಿತ್ತೆಂದು ವೇದವ್ಯಾಸನು ಆ ಪರಮಸ್ನೇಹಿತನ ಕೂಡೆ ಹೇಳಿ ಬಹಳವಾಗಿ ಕಣ್ಣೀರು ಸುರಿಸಿದನು. +ಬೆಂಬಲಕ್ಕೆ ತಾನಿರುವ ಪರಿಯಂತ ಹೆದರಬೇಡವೆಂದು ಅಸರಾಜಿತನು ಧೈರ್ಯಹೇಳಿ, ಅವನ ತಮ್ಮನನ್ನು ಕರೆದು–“ಇಗೋ ನಾಚಬೇಡ, ಆ ಮುದಕಿಯೂ ಅವಳ ಅಳಿಯನೂ ನಿಮ್ಮಿಬ್ಬರ ಮೇಲೆ ನಡೆಸಿದ ಅನ್ಯಾಯವನ್ನು ಕುರಿತು ಒಂದು ಫಿರ್ಯಾದು ಬರೆಸಿಕೊಡುತ್ತೇನೆ. +ಅದನ್ನು ಕೊತ್ವಾಲರ ಮುಂದಿ ದಾಖಲ್‌ ಮಾಡಿಬಿಡು. +ಆ ಮೇಲೆ ತಮಾಷೆ ನೋಡಬಹುದಷ್ಟೆ?” ಅಂದಾಗ ವೇದವ್ಯಾಸನಿಗೆ ಆಲೋಚನೆ ಉಚಿತವಾಗಿ ತೋರಿ “ಶಹಭಾಷ್‌!ಶಹಭಾಷ್‌!” ಎಂದು ಪ್ರಿಯ ಮಿತ್ರನನ್ನು ಬಿಗಿದಪ್ಪಿದನು. +ಮರುದಿನ ಪ್ರಾತಃಕಾಲದಲ್ಲಿ ಸೆಟ್ಟಿಯು ರಾಘವೇಂದ್ರಾಚಾರ್ಯನಿಗೆ ತಾನೇ ಒಕ್ಕಣೆ ಹೇಳಿ, ಒಂದು ದೊಡ್ಡ ಆನಾದನೆ ಪತ್ರ ಬರಸಿ ಪೇಷ್ಕಾರ ತಿಮ್ಮಯ್ಯನ ಮುಂದೆ ದಾಖಲ್‌ ಮಾಡಿಸಿದನು ಅದರಿಂದ ಕಾಣುವ ಅಪರಾಧ ನಡೆಸಲಿಕ್ಕೆ ಚಂಚಲನೇತ್ರರು ಮದ್ದತ್ತು ಮಾಡಿದವರೆಂದು ಬರೆದಿತ್ತು. +ಈ ಪ್ರಕರಣದ ವಿಮರ್ಶೆಯನ್ನು ತಾನು ಮರು ದಿವಸವೇ ಮಾಡುವೆನೆಂದು ಪೇಷ್ಕಾರನು ಪ್ರತಿವಾದಿಗಳಿಗೆ ನಿರೂಪ ಗಳನ್ನು ಕ್ಷಿಪ್ರ ಬರೆಸಿ, ಸಹಿಮಾಡಿ, ದಫೇದಾರ ಗಣಪನ ಪರಿಮುಖ ತಲಪಿ ಸಿದನು. +ಮುನ್ನಿನ ದಿನ ಆದ ಅವಮರ್ಯಾದೆಯನ್ನು ಮರೆತುಬಿಟ್ಟ ವೇದ ವ್ಯಾಸ ಉಪಾಧ್ಯನು ಪೂರ್ವವತ್‌ ಧೈರ್ಯತಾಳಿದನು. +ಪಟ್ಟಣದಲ್ಲಿ ಗಲಗಲ ಹುಟ್ಟಿತು. +ಚಂಚಲನೇತ್ರರಿಗೆ ಕಚೇರಿಯಿಂದ ನಿರೂಪ ಬಂದಾಗ–ಇದೆಂಥಾ ಕಾಟ! +ಈ ವೈರಿಯ ದೆಸೆಯಿಂದ ಅರೆಘಳಿಗೆಯಾದರೂ ಕರಕರೆ ತಪ್ಪುವುದಿಲ್ಲವೆಂದು ವೃಥೆ ಪಡುವುದನ್ನು ನೋಡಿ–ವೆಂಕಟಪತಿಯು, ಪರ್ವಾ ಇಲ್ಲ. +ತಾನು ಅದರ ವೃವಸ್ಥೆ ಮಾಡುವುದಾಗಿ ಧೈರ್ಯಹೇಳಿ, ಆಂಜನೇಯಾಲ ಯಕ್ಷೆ ತೆರಳಿದನು. +ಗಂಗಾಬಾಯಿಯೂ ಅವಳ ಅಳಿಯನೂ ತಮಗೆ ಬಂದ ನಿರೂಪಗಳನ್ನು ಆಚಾರ್ಯಗೆ ತೋರಿಸಿ, ಕಚೇರಿಬಾಗಿಲು ಕಾಯುವ ಸಂಕಷ್ಟ ಬಂದೊದಗಿತೆಂದರು. +ಭಯಪಡಬೇಡಿರೆಂದು ಅವರಿಗೆ ಸಮಾಧಾನ ಹೇಳ್ಕಿ, ವೇಷ್ಯಾರನ ಮನೆಗೆ ಬಂದನು. +ಉಪ್ಪರಿಗೆಯ ಮೇಲೆ ಇಬ್ಬರೂ ಅಂತರಂಗ ಮಾತಾಡಲಿಕ್ಕೆ ಕೂತರು. +ಪೇಷ್ಟ್ರಾರ–“ಆಚಾರ್ಯರೇ!ಯಾಕೆ ದಯಮಾಡಿಸೋಣಾಯತೋ ತಿಳಿಯದು.? +ವೆಂಕಟಪತಿ-“ಶ್ರೀಪಾದಂಗಳವರಿಗೆ ಒಂದು ನಿರೂಪ ಬಂದಿದೆ. +ಪೇಷ್ಕಾರ–“ಏನು ಮಾಡಲಿ? +ಕಾಯಿದೆ ತಪ್ಪಿ ನಡೆಯಬಹುದೇ?” +ವೆಂಕಟಪತಿ–“ಮುಖ್ಯ ಸತ್ಕಾಸತ್ಯ ವಿಚಾರಮಾಡಬೇಕು, ಮಠದ ಮೇಲೆ ಅಭಿಮಾನ ನಿಡಬೇಕು. +ಪೋಕರಿಗಳ ಪಂಥ ಮೇಲಾದರೆ ಸಾಧುಸಜ್ಜ ನರು ರಾಜ್ಯದಲ್ಲಿ ಬದುಕಿಕೊಂಡಿರುವುದು ಪ್ರಯಾಸವೇ. +ಹೆಚ್ಚಿಗೆ ಅರಿಕೆ ಮಾಡಿಕೊಳ್ಳಲಕ್ಕೆ ಶಕ್ತನಲ್ಲ.” +ಪೇಷ್ಕಾರ–ನನ್ನಿಂದ ತಮಗೇನಾಗಬೇಕು?” +ವೆಂಕಟಪತಿ- -“ಶ್ರೀಪಾದಂಗಳವರಾಗಲೀ ಆ ಹೆಂಗಸಾಗಲೀ ಕಚೇರಿಗೆ ಬರಬೇಕೆಂಬ ಒತ್ತಾಯವಿರಬಾರದು.” +ಪೇಷ್ಕಾರ–“ನಾನು ವಕೀಲಿ ಮಾಡಿದೆನೆಂಬ ಅಪವಾವ ಬಂದರೋ?” +ವೆಂಕಟಪತಿ–“ಹೆಂಡತಿಗೆ ಹೊಡೆಯುವುದಕ್ಕೆ ನೆವನ ಹುಡುಕುವವ ನಿಗೆ ಮೊಸರಲ್ಲಿ ಕಲ್ಲು ಬಂತೆಂಬ ಗಾದೆಯದೆ.? +ಪೇಷ್ಕಾರ–“ನಾನು ಒಂದುವೇಳೆ ನಿಮ್ಮ ಅಪೇಕ್ಷೆಯಂತೆ ನಡ ಕೊಂಡರೆ ಕಾರಭಾರಿಗಳು ನನ್ನ ಮೇಲೆ ಜರಿದುಬಿದ್ದರೋ?? +ವೆಂಕಟಪತಿ–“ಛೋಟಾ ಕಿತಾಬಿನ ಪ್ರಕರಣಗಳಷ್ಟೇ. +ತಮ್ಮ ಅಧಿ ಕಾರದೊಳಗಿರೋದು ಕಾರ್ಬಾರಿ. +ತಮ್ಮ ಸ್ವತಂತ್ರದ ಸಣ್ಣ ಸಣ್ಣದಾವೆಗಳಲ್ಲಿ ಪ್ರವೇಶಿಸುವದುಂಟೀ? +ಸುಮ್ಮಗೆ ಬರೇ ನೆವನಗಳನ್ನು ತಾವು ಹೇಳುವುದಾ ದರೆ ನಾನು ವೃರ್ಥ ತಮ್ಮ ಸಮಯ ಹಾಳುಮಾಡುವದ್ಯಾಕೆ? +ಅಪ್ಪಣೆ ಯಾಗಲಿ ಹೋಗುತ್ತೇನೆ. +ಪ್ರೀತಿ ಇರಲಿ. +ದೇವರು ಮಾಡಿದ್ದು ಆಗುತ್ತದೆ.” +ಪೇಷ್ಕಾರ–“ಹಾಗೆ ಸಿಟ್ಟು ಮಾಡಬಾರದು; +ಈಗಿನ ದರಬಾರೂ ಈಗಿನ ಕಾನೂನು ಬಹು ನಾಜೂಕಾಗಿವೆ. +ಎಷ್ಟು ಜಾಗ್ರತೆ ಮಾಡಿದರೂ ಸಾಕಾಗುವದಿಲ್ಲ. +ರಾಜರ ಅವಕರಣಕ್ಕೆ ಒಳಗಾದರೆ ಅನ್ನಕ್ಕೆ ಮೋಸಬಾರದೇ?” +ವೆಂಕಟಪತಿ–“ಇಷ್ಟು ಸಣ್ಣ ವಿಷಯದಲ್ಲಿ ಅಷ್ಟು ದೊಡ್ಡ ಯೋಚನೆ ಅಗತ್ಯವೇನು? +ತಮಗೆ ಒಂದು ಮಾತಿನವಾಶಿ ಬರುವ ಹಾಗಿನ ಕೃತ್ಯ ನಮ್ಮ ಉದ್ದಿಶ್ಯಮಾಡುವುದು ಯೋಗ್ಯವಲ್ಲ. +ನಾಳೆಗೆ ನಿಶ್ಚಯಿಸಿದ ಪ್ರಕರಣವನ್ಕು ಸ್ವಲ್ಪ ಮುಂದರಿಸಿ ಇಡಲಿಕ್ಕೆ ಅಪ್ಪಣೆಮಾಡಿಟ್ಟರೆ ನಾವು ರಾಜಾಸ್ಥಾನಕ್ಕೆ ಹೋಗಿ ಕಿರೇ ದಿವಾನರಿಂದ ನಮ್ಮ ಅಪೇಕ್ಷೆಯನ್ನು ಪೂರೈಸಿಕೊಳ್ಳುವ ಪ್ರಯತ್ನ ನಡಿಸುತ್ತೇನೆ. +ಇಷ್ಟರಲ್ಲಿ ತನ್ನ ಸಂಭಾಷಣೆಯನ್ನು ನಿಲ್ಲಿಸಿಬಿಟ್ಟು, ವೆಂಕಟಪತಿಆಚಾರ್ಯನು ಎದ್ದು, ಬಲಕೈಯ ಎರಡು ಬೆರಳುಗಳನ್ನು ಎತ್ತಿ ಸಂಜ್ಞೆ ತೋರಿಸಿದಲ್ಲಿ ಪೇಷ್ಕಾರನು ತುಟಿಗಳನ್ನು ಅಮರಿಸಿ, ತಲೆಯನ್ನು ಅಲುಗಾಡಿಸು ವುದರ ದ್ವಾರ ಸಾಲದೆಂಬ ಭಾವವನ್ನು ತೋರಿಸಿದನು. +ಮತ್ತೆಷ್ಟು ಬೇಕೆಂದು ತಿಳಿಯುವದಕ್ಟೋಸ್ಟರ ಆಚಾರ್ಯನು ಕೈಮುಷ್ಟಿ ಆಡಿಸುವುದನ್ನು ನೋಡಿ, ಪೇಷ್ಕಾರನು ತನ್ನ ಐದು ಬೆರಳುಗಳನ್ನು ಬಿಡಿಸಿ ತೋರಿಸಿದನು. +ಆಗ ಆಚಾರ್ಯನು ಮೂರು ಬೆರಳುಗಳನ್ನು ಎತ್ತಿತೋರಿಸಿ-“ಇಷ್ಟವಿದ್ದರೆ ಹೇಳಿ, ಇಲ್ಲವಾದರೆ ನಡೆಯುತ್ತೇನೆ” ಎಂದನು. +ಪೇಷ್ಕಾರಗೆ ಆಶೆ ಬಿಡವಲ್ಲದು. +ಮೂರು ಬೆರಳುಗಳನ್ನೆತ್ತಿ ನಾಲ್ಕನೇ ಬೆರಳಿನ ನಡುವಿಗೆ ಇನ್ನೊಂದು ಕೆಯ ತರ್ಜನಿ ಬೆರಳನ್ನು ಅಡ್ಡಹಿಡಿದು ಮೂರುವರೆ ಎಂಬ ಸಂಕೇತವನ್ನು ತೋರಿಸಿದನು. +ಆಗೈ ಒಪ್ಪಿಗೆ ಸಿಕ್ಕಿತು. +“ಮುನ್ನೂರ ಐವತ್ತು, ಮತ್ತೆ ಮೂರು ಸಾವಿರದ ಐನೂರೆಂದು ಜಗಳ ಮಾಡುವ ಹಾಗಾಗಬಾರದು; +ತಿಳಿದಿರಬೇಕು ಎಂದು ವೆಂಕಟಪತಿ ಆಚಾರ್ಯನು ಸಣ್ಣ ಸ್ಪರದಿಂದ ಪೇಷ್ಕಾರನ ಕಿವಿಯಲ್ಲಿ ಹೇಳಿ, ಹೊರಟನು. +ಚಂಚಲನೇತ್ರರು ತನ್ನ ಪಾರುಪತ್ಯಗಾರನ ಚಾತುರ್ಯಕ್ಕೆ ಮರುಳಾದರು. +ಮರುದಿನ ಮಧ್ಯಾಹ್ನ ರಾಘವೇಂದ್ರಉಪಾಧ್ಯನು ಪೇಷ್ಕಾರನ ಮುಂದೆ ನಿಂತಾಗ ಅವನ ವಾಙ್ಮೂಲವನ್ನು ಗುಮಾಸ್ತನು ಬರಕೊಂಡನು. +ಅವನ ಹೇಳಿಕೆಯಿಂದ ಗಂಗಾಬಾಯಿಯ ಅಳಿಯನ ಮೇಲೆ ಯಾವುದೊಂದು ಅಪರಾಧ ಸ್ಥಾಪನೆಯಾಗುವ ಸಂಭವ ತೋರಿಬಾರಧೆ, ಅವನನ್ನು ವಿಮೋಚನೆ ಮಾಡೋಣಾಯಿತು. +ಗಂಗಾಬಾಯಿಗೆ ಕಚೇರಿಗೆ ಬರಲಿಕ್ಕೆ ಒತ್ತಾಯಪಡಿಸ ಬೇಕಾದರೆ ಅವಳು ಅಪರಾಧಿ ನಿಜವೆಂಬುದರ ತಾರ್ಕಣೆಗಾಗಿ ಸಾಕ್ಷವನ್ನು ಮುಂದಾಗಿ ತರಬೇಕಾದ್ದಲ್ಲದೆ, ಚಂಚಲನೇತ್ರರು ಮಠದಿಂದ ಆ ದಿವಸ ಹೊರಗೆ ಹೊಡಲಿಲ್ಲವಾಗಿ ವಾದಿಯೇ ಒಪ್ಪುವುದರಿಂದ ಅವರನ್ನು ಕುರಿತು ಸಾಕ್ಷ ಮುಂದಾಗಿ ಕೊಟ್ಟ ವಿನಾ ಅವರ ಮೇಲೆ ಯಾವದೊಂದು ದೋಷಾ ರೋಷಣೆಗೆ ಸಂದರ್ಭವಾಗದೆಂದು ಪೇಷ್ಕಾರನು ವಿಧಿಸಿದನು. +ವಾದಿಯು ಸಾಕ್ಷಿಗಾರರನ್ನು ತರುವುದಕ್ಕೆ ಒಂದು ದಿನಸದ ವ್ಯವಧಾನ ಪಡಕೊಂಡು ಕಛೇರಿಯಿಂದ ಹೊರಟು ಬರುವಾಗ ದಾರಿಯಲ್ಲಿ ಕಾದಿರುವ ಅಪರಾಜಿತ ಸೆಟ್ಟಿಯು ಕಚೇರಿಯಲ್ಲಿ ಅಂದು ನಡೆದ ವೃತ್ತಾಂತವನ್ನು ವಾದಿಯ ಮುಖೇನ ತಿಳಿದು, ವಾದಿಯ ವಾಗ್ಮೂಲ ಅಷ್ಟು ಪರಿಷ್ಠಾರವಾಗಿಲ್ಲವೆಂದು ದುಮ್ಮಾನ ಪಡುವವನಂತೆ ಮುಖವಿಕಾರ ಮಾಡಿದನು. +“ಆದ್ದಾಯಿತಲ್ಲಾ, ಸಾಕ್ಷಿಗಾರರನ್ನು ಎಲ್ಲಿಂದ ತರೋಣ? +ನಮ್ಮ ಮಾತು ಯಾರು ಕೇಳುವ ಹಾಗಿದೆ?” ಎಂದು ವೇದವ್ಯಾಸನು ನಿಟ್ಟುಸಿರು ಬಿಟ್ಟನು. +ಕೈಸನ್ನೆಯಿಂದ ಅವನನ್ನು ಮನೆಗೆ ಹೋಗಹೇಳಿ, ಅಪರಾಜಿತನು ಥಟ್ಟನೆ ನೇಮರಾಜನನ್ನು ಕಂಡು ಅಂತರಂಗದಲ್ಲಿ ಅವನ ಕೂಡೆ ಮಾತಾಡಿ, ತಿರುಗಿ ಬಂದು, ವೇದವ್ಯಾಸಗೆ ಸಾಕ್ಷಿಗಾರರನ್ನು ಒದಗಿಸಿಕೊಳ್ಳಲಿಕ್ಕೆ ತಾನು ಮಾಡಿ ಬಂದ ಪ್ರಯತ್ನವನ್ನು ವರ್ಣಿಸಿದನು. +ವೇದವ್ಯಾಸಗೆ ತಲೆಯೇರಿತು. +ಇಷ್ಟು ಪ್ರಿಯಕರವಾದ ಮಿತ್ರನು ತನಗೆ ಶ್ರೀವ್ಯಾಸ ರಘುಪತಿಯ ದಯದಿಂದ ದೊರಕಿದನೆಂದು ತನ್ನ ಅನುಜಗೆ ಹೇಳಿದನು. +ಸತ್ಯವೆಂದು ರಾಘವೇಂದ್ರ ಉಪಾಧ್ಯನು ಚಿಟ್ಟಿಲಿ ಯಂತೆ ಮುಖವನ್ನು ಮುದುರಿಸಿಕೊಂಡು ಆನೆಯಂತೆ ತಲೆದೂಗಿದನು. +ಮಾರನೆ ದಿನ ಕಚೇರಿಗೆ ಹಾಜರಾಗುವುದಕ್ಕೆ ಒಂದು ತಾಸಿನಷ್ಟು ವ್ಯವಧಾನ ಇರುವಾಗ್ಗೆ ಅಪರಾಜಿತನು ವೇದವ್ಯಾಸನನ್ನು ನೇಮರಾಜನಲ್ಲಿಗೆ ಕಳುಹಿಸಿದನು. +ನೇಮರಾಜನು ತನ್ನ ಚಾಕರರಲ್ಲಿ ನಾಲ್ವರನ್ನು ಕರೆದು, ಹಾರುವನ ಸಂಗಡ ಹೋಗಲಾಜ್ಞಾಪಿಸಿದನು. +ಅವರನ್ನು ಕರಕೊಂಡು, ಅವರ ಸಂಗಡ ಒಂದು ಮಾತಾದರೂ ಆಡದೆ, ವೇದವ್ಯಾಸನು ಕಚೇರಿಗೆ ತಲಪಿದನು. +ಸಾಕ್ಷಿಗಾರರನ್ನು ನೋಡುವದಕ್ಕೆ ಪೇಷ್ಕಾರನು ಅಪೇಕ್ಷಿಸು ತ್ತಲೇ, ಆ ನಾಲ್ವರನ್ನು ಅವನ ಮುಂದೆ ನಿಲ್ಲಿಸೋಣಾಯಿತು. +ಅವರಲ್ಲಿ ಒಬ್ಬನನ್ನು ತನ್ನ ಸಮಕ್ಷಮದಲ್ಲಿ ನಿಲ್ಲಿಸಿ ಬೇರೆ ಮೂವರನ್ನು ಸಾಕ್ಷಿಗಾರ ರನ್ನು ಕೂಡ್ರಿಸುವ ಕೋಣೆಗೆ ಒಯ್ಯುವದಕ್ಕೆ ಪೇಷ್ಕಾರನ ಅನ್ಸಣೆಯಾದಂತೆ ದಫೇದಾರನು ನಡಕೊಂಡನು. +ಈ ಫಿರ್ಯಾದು ಕುರಿತು ನೀನು ಏನು ಬಲ್ಲಿ?ಎಂಬ ಪ್ರಶ್ನೆಗೆ ಮೊದ ಲನೇ ಸಾಕ್ಷಿಗಾರನು–“ನಾನೇನೂ ಅರಿಯೆ ಬುದ್ಧಿ; +ನಾಲ್ಕು ರೂಪಾಯಿ ಈಸುಕೊಂಡು, ಬಂದು ಸುಳ್ಳು ಸಾಕ್ಷಿ ಹೇಳೆಂದು ವೇದವ್ಯಾಸ ಉಪಾಧ್ಯನು ದುರ್ಭೋಧನೆ ಕೊಡುತ್ತಾ, ನನಗೆ ಇಲ್ಲಿ ವರೆಗೆ ಎಳಕೊಂಡು ಬಂದದ್ದೊಂದು ಸಂಗತಿ ಅಲ್ಲದೆ ಇನ್ನೇನೂ ನಾನು ತಿಳಿದವನಲ್ಲ” ಎಂದು ಅವನು ಪ್ರತ್ಯುತ್ತರ ಕೊಟ್ಟನು. +ಪೇಷ್ಕಾರನು ನೆಗಾಡಿ, ಆ ಸಾಕ್ಷಿಗಾರನಿಗೆ ಹೋಗಬಿಟ್ಟನು. +ಉಳಿದ ಮೂವರಲ್ಲಿ ಒಬ್ಬೊಬ್ಬನನ್ನೇ ಕೇಳಿದಾಗ ಅವರು ಹಾಗೆಯೇ ಹೇಳಿದರು. +ವಿಮರ್ಶೆ ಅಂತ್ಯವಾಯಿತು. +ಮಾರನೇ ದಿವಸ ತೀರ್ಪು ಕೇಳುವುದಕ್ಕೆ ಬರಬೇಕೆಂದಾಜ್ಞೆ ಯಾಯಿತು. +ಉಪಾಧ್ಯರಿಬ್ಬರು ಕಪ್ಪು ಮೋರೆಗಳನ್ನು ಯಾರು ಕಾಣದ ಹಾಗೆ ಬೀದಿಗೆ ಇಳಿದರು. +ಅಸರಾಜಿತನನ್ನು ನೋಡಿ–“ಎಂಧಾ ಸಾಕ್ಷಿಗಾರರನ್ನು ಮಾಡಿಕೊಟ್ಟ, ಪ್ರಿಯರೇ?” ಎಂದು ವೇದವ್ಯಾಸನು ಹೀಯಾಳಿಸಿದನು. +“ಕಾಸು ಬಿಚ್ಚಲಿಕ್ಕೆ ಆಶೆಯಾಗುವ ನಿನ್ನಂಧಾ ಕೃಪಣಗೆ ಪಂಥವ್ಯಾಕೆ? +ನಿನ್ನ ಸಹಾಯಕ್ಕೆ ಬಂದ ದೆಸೆಯಿಂದ ನನಗೂ ಅವಮಾನವಾಯಿತು. +ನೀನು ಹೊಳೆಗೆ ಹಾರು” ಎಂದು ಸೆಟ್ಟಯು ನಡೆದುಬಿಟ್ಟನು. +ಮತ್ತು ಶೀಘ್ರ ನೇಮರಾಜನನ್ನು ಕಂಡು –“ವೇದ ವ್ಯಾಸಗೆ ಮಂಗಳಪದವಾಯಿತು. +ವಾಗ್ದತ್ತಮಾಡಿದ ಹಣ ಈಗಲೇ ಕೊಡು; +ತೀರ್ಪು ನಾಳೆ ಕೊಡಲ್ಪಡುವದು” ಎಂದು ಹೇಳಿಕೊಂಡನು. +ನೇಮ ರಾಜನು ಪ್ರಕರಣ ಪೂರ್ಣವಾಗಿ ತೀರಿದ ಬಳಿಕ ಹಣ ಕೊಡುವದಕ್ಕೆ ಅಡ್ಡಿ ಇಲ್ಲವೆಂದನು. +ಅದಕ್ಕೆ ಅಪರಾಜಿತನು ಒಪ್ಪದೆ ಕೂಡಲೇ ವಾಗ್ದಾನ ಪೂರೈಸದಿದ್ದರೆ ಹಣಕಟ್ಟಿದ ಪ್ರಕರಣಕ್ಕೆ ಪುನರ್ಜೀವ ಮಾಡುವ ಯುಕ್ತಿ ಹುಡುಕುವೆನೆಂದು ಖತಿಗೊಂಡನು. +“ಒಳ್ಳೇದು, ಸೀದಾ ಊರಿಗೆ ನಡಿ. +ಇನ್ನೇನೂ ಕಿತಾಪತಿ ಮಾಡಿದರೆ ಯಲುವಿನ ಚಕಣಾಚೂರು ಮಾಡಿಸು ವೆನು” ಎಂದು ಗದರಿಸಿ, ನೇಮರಾಜನು ವಾಗ್ದತ್ತಮಾಡಿದಷ್ಟು ದ್ರವ್ಯವನ್ನು ಕೊಟ್ಟು, ಅಸರಾಜಿತನನ್ನು ಅಟ್ಚಿದನು. +ಮುಂದಿನ ಸ್ಥಿತಿ ಹ್ಯಾಗಾದೀ ತೆಂಬ ಹೆದರಿಕೆಯಿಂದ ಉಪಾಧ್ಯಾಯರೀರ್ವರ ಎದೆ ಹಾರಲಿಕ್ಕೆ ತೊಡಗಿತು. +ಅವರಿಗೆ ಆ ರಾತ್ರಿ ಕಣ್ಣಿಗೆ ನಿದ್ರೆ ಹತ್ತಲಿಲ್ಲ. +ಅದೇ ರಾತ್ರಿಯಲ್ಲಿ ವೆಂಕಟಪತಿ ಆಚಾರ್ಯನು ಪೇಷ್ಕಾರನ ಮನೆಗೆ ಹೋಗಿ. +ಅವನ ಭೇಟಿ ಮಾಡಿದನು. +ಅವರಲ್ಲಿ ಸಂಭಾಷಣೆ ಆರಂಭ ವಾಯಿತು. +ಪೇಷ್ಕಾರ– “ಆಚಾರ್ಯರೇ!ತಮಗೆ ಕೊಟ್ಟಭಾಷೆ ಸಲ್ಲಿಸಿಸೆನಲ್ಲಾ ತಂದಿದ್ದೀರೋ.” +ವೆಂಕಟಪತಿ–“ಕೊಡದಿದ್ರೆ ನಾಳೆ ನೀವು ತೀರ್ಪು ಕೊಡೋಣಾಗಲಿ ಕ್ಕಿಲ್ಲವಷ್ಟೇ. +ಮತ್ತೊಂದು ಸಣ್ಣ ಪ್ರಸ್ತಾಪವಿದೆ.” +ಪೇಷ್ಕಾರ -“‌ಅದು ಯಾವದಪ್ಪಾ?” +ವೆಂಕಟಪತಿ–“ಲಂಚದ ಆಶೆ ಶೋರಿಸಿ ಸುಳ್ಳು ಸಾಕ್ಷಿ ಕೊಡಲಿಕ್ಕೆ ಪ್ರಯತ್ನಮಾಡಿದ ತಪ್ಪು ವೇದವ್ಯಾಸನ ಮೇಲೆ ಆರೋಪಣೆ ಮಾಡುವುದಕ್ಕೆ ಅವನ ತಮ್ಮನ ಕಡೆ ಸಾಕ್ಷಿಗಾರರಿಂದಲೇ ಇಂಬು ಸಿಕ್ಕಿದ ಹಾಗಾಯಿತು. +ಆ ದೋಷಕ್ಕೆ ವಾದಿಯು ಸಹಕಾರಿಯಾಗುತ್ತಾನಷ್ಪೆ. +ಆತಾಪಿವಾತಾಪಿಗಳಂತಿ ರುವ ಇವರಿಬ್ಬರು ದುರುಳರನ್ನು ಕೊಂಚಕಾಲಕ್ಕಾದರೂ ಜ್ಞಾನಮಂಟಪ ದಲ್ಲಿ ಕೂಡ್ರಿಸಿದರೆ ತಮ್ಮ ಉಪಕಾರ ಶ್ರೀಪಾದಂಗಳವರು ಮರೆಯರು.” +ಪೇಷ್ಕಾರ–“ಒಂದೇ ಚಪ್ರದಲ್ಲಿ ಏಕಕಾಲದಲ್ಲಿ ಎರಡು ಮದುವೆ ಗಳನ್ನು ಮಾಡಿಬಿಟ್ಟರೆ ಊಟದ ಖರ್ಚು ಅರೆವಾಸಿ ಉಳಿದ ಹಾಗೆ ಆಗುತ್ತದೆ. +ತಮ್ಮ ಆಲೋಚನೆ ಚಲೋದು.? +ವೆಂಕಟಪತಿ–“ಎರಡು ಮದುವೆಗಳನ್ನು ಒಬ್ಬನೇ ಪುರೋಹಿತನು ಮಾಡಿಸುವುದಾದರೆ ಒಂದೇ ಸೌಮ್ಯ ಕೊಡಕೂಡದು, ಹೆಚ್ಚು ಕೊಡಬೇಕು. +ನಾನು ಚೆನ್ನಾಗಿ ಬಲ್ಲೆ. ಇಕ್ಕೊಳ್ಳಿ. ”ಹೀಗೆಂದು ವೆಂಕಟಪತಿ ಆಚಾರ್ಯನು ಒಂದು ಥೈಲಿ ತುಂಬಾ ರುಪೈಗಳನ್ನು ಪೇಷ್ಕಾರನ ಕಣ್ಣುಗಳ ಮುಂದೆ ಮಡಗಿದೊಡನೆ ಐನೂರು ರುಪೈ ಬುಟ್ಟಿಗೆ ಉಂಟೆಂಬ ಸಂತೋಷದಿಂದ ಅವನು ಹಾಸ್ಯವದನಯುಕ್ತನಾಗಿ ಹಣದಚೀಲ ಮನೆಯೊಳಗೆ ಇಟ್ಟುಬಿಟ್ಟು-“ಯಾರೆಲೆ ಜವಾನ!ಬೆಳ್ಳಿಯ ದೊಡ್ಡ ಹರಿವಾಣದಲ್ಲಿ ತಾಂಬೂಲ ತೆಗೆದುಕೊಂಡು ಬಾ” ಎಂದು ಕೂಗಿದನು. +ಪೇದೆ ಶಿವಾಚಾರದ ಬಸವಪ್ಪನು ಸಣ್ಣ ಹರಿವಾಣದಲ್ಲಿ ವೀಳ್ಯೆದೆಲೆಯನ್ನಿಟ್ಟು -“ಮತ್ತೆ ದೊಡ್ಡ ಶಿವಾಣ ಕಾಣದೆ ಹೋಯಿತು. +ಸಣ್ಣ ಶಿವಾಣದಿಂದ ಸುಧಾರಿಸಿಬಿಟ್ಟ ಶರಣು” ಅಂದನು. +ವೆಂಕಟಪತಿ ಆಚಾರ್ಯಗೆ ಇರುವೆ ಕಚ್ಚಿದಂತಾಯಿತು. +“ಆಹಾ!ಹರಿವಾಣವೆಂಬ ಸರಸಪದ ನಾಲಿಗೆಗೆ ಬಾರದ ಇಂಥಾ ಪಾಷಾಂಡಿಯು ತಮ್ಮ ನೌಕರಿಯಲ್ಲಿ ಹ್ಯಾಗೆ ಸೇರಿಬಿಟ್ಟನೋ!ತಿಳಿಯದು” ಎಂದು ಪೇಷ್ಕಾರಗೆ ವಾಗ್ದಂಡನೆ ರೂಪವಾಗಿ ಹೀನಿಸಿದ ಆಚಾರ್ಯಗೆ ತಾನು ಹರಿಹರಪರಾಯಣನೆ:ದು ಪೇಷ್ಠಾರನು ಉತ್ತರಕೊಟ್ಟನು. +ಮುಂಜಾನೆ ಉಪಾಧ್ಯರಿಬ್ಬರೂ ಎದ್ದು ಹರಿಸ್ಮರಣೆ ಮಾಡುತ್ತಾ ಇದ್ದು ನಿತ್ಯಾನ್ಹೀಕವನ್ನು ತೀರಿಸಿ ಊಟದ ಸಮಯಕ್ಕೆ ಹ್ಯಾಗೂ ಎಲೆಯ ಮೇಲೆ ಕೂತೆದ್ದು ಕಚೇರಿ ಬಾಗಲು ಕಾಯುವದಕ್ಕೋಸ್ಟರ ಹೊರಟರು. +ದಾರಿಯಲ್ಲಿ ದಫೆದಾರ ಗಣಪನು ಸಿಕ್ಕಿದನು–“ಅಯ್ಯಾ! +ಗಣಪ ದಫೆದಾರ! +ನಮ್ಮ ಅವಸ್ಥೆ ಇಂದ್ಹ್ಯಾಗಾಗುತ್ತೆ ಹೇಳು, ಮಹಾರಾಯ!” ಎಂದು ವೇದವ್ಯಾಸನು ಕೇಳಿದನು. +“ಸ್ವಾಮೀ!ನಾಂ ಹ್ಯಾಂಗೆಳೋದು! +ನಿಮ್ಮ ಕೈಯಲ್ಲಿ ಹಣ ಕಾಸಿಲ್ಲಾ!ನಿಮ್ಮ ದೊಡ್ಡ ದೊಡ್ಡ ನಾಮಕ್ಕೆ ಯಾರು ಬಿಸಾತುಮಾಡುತ್ತಾರೆ? +ಇರ್ವೆಗೆ ಕಬ್ಬಿಣದ ಕೆಲ್ಸ ಯಾಕೆ? +ನಮ್ಮ ಸ್ವರೂಪತಕ್ಕ ನಾನಿರಬೇಕು. +ಸುಮ್ಮಗೆ ಹಾರಿದರೆ ಸೊಂಟಾನೂ ಕಾಲೂನೂ ಮುರ್ಕೋಳ್ಳೆಕೆ ಆದೀತು. +ಜಪೆದಾರ್ರೆ ಜಪೆದಾರ್ರೆ ಅಂದಿಯಾರು ನನಗೆ ಕರದಿ? +ಇದು ಹ್ಯಾಂಗಾದೀತು? +ಅದು ಹ್ಯಾಂಗಾದೀತು? +ಅಂದು ಕಾಟಿಕೇಳೊದುಂಟು. +ನನ್ನ ಮಾತು ಈಗ ಯಾರು ಕೇಳುತ್ತಾರೆ? +ಆದರೂನೂ ಹಾಂಗೇ ಹೇಳಿಬಿಟ್ಟರೆ ನಮ್ಮ ಆಬ್ರುವೇ ಹೋದಿತಲ್ಲಾ! +ಅದಕ್ಕಾಗಿ ನಾನಿದ್ದೇನೆ ಹೆದ್ರಬೇಡಾ ಅಂದು ಕಾಟಿ ನಾನು ಧೈರ್ಯ ಹೇಳೋದುಂಟು. +ಹಾಂಗೆ ಹೇಳಿದ್ರೆ ಎಲೆ ಅಡಿಕೆ ತಿಂನಂತೆ ಆದರೂ ಬಗೆ ಆಗ್ತೆತೆ. +ಹಾಗಂದಿ ನಿಮಗೆ ಬಿರಾಮರಿಗೂ ಠಕ್ಕು ಹಾಕಕ್ಕೆ ನನ್ನಿಂದೆಡೀದು” ಎಂದು ದಫೇದಾರನ ಪ್ರತ್ಯುತ್ತರವಾಯಿತು. +ವೇದವ್ಯಾಸ ಉಪಾಧ್ಯನು ಹಣೆಯನ್ನು ಕೈಯಿಂದ ಬಡಕೊಂಡು ಪತಿವ್ರತೆಯಾದ ತನ್ನ ಹೆಂಡ್ತಿಯ ಮಾತು ಕೇಳಿರುತ್ತಿದ್ದ ಪಕ್ಷದಲ್ಲಿ ಇಂಧಾ ದುರವಸ್ಥೆ ಪ್ರಾಪ್ತಿ ಯಾಗುತ್ತಿದ್ದಿಲ್ಲವೆಂದು ಈಗ ‘ಅವನ ಮನಸಿಗೆ ಖಚಿತವಾಯಿತು.” +“ವಿಪ್ರಾಃ ಪಶ್ಚಿಮ ಬುದ್ಧಯಃ”ಎಂದಿನಂತೆ ಪೇಷ್ಕಾರನ ಸವಾರಿಯು ಬಂತು. +ದಫೇದಾರನು ಕಕ್ಷಿ ಗಾರರಿಗೆ ಕರೆದು ಎದುರು ನಿಲ್ಲಿಸಿದನು. +ತೀರ್ಪು ನುಡಿಯಲಿಕ್ಕೆ ಪ್ರಾರಂಭವಾಯಿತು. +“ಪ್ರತಿವಾದಿ ಮೇಲೆ ನಿರ್ನಿಮಿತ್ತರಾಗಿ ದೋಷಾರೋಪಣೆ – 130 –ಮಾಡೋಣಾದ್ದು ವಾದಿಯ ದ್ವೇಷಸಾಧನೆಯ ಉಪಾಯವೆಂದು ಕಾಣುವದು. +ವಾದಿಯ ಅಣ್ಣ ವೇದವ್ಯಾಸನ ನಡತೆಯು ಅತಿ ನೀಚತರದ್ದು; +ಲಭ್ಯದ ಆಶೆಯನ್ನು ತೋರಿಸಿ ಸತ್ಯವಾದಿಗಳಾದ ಸಾಕ್ಷಿಗಾರರಿಂದ ಸುಳ್ಳು, ಹೇಳಿಸ ಲಿಕ್ಕೆ ಪ್ರಯತ್ನಿಸಿದ ವಿದ್ಯಮಾನ ನೋಡಿದರೆ ಅವನು ದೊಡ್ಡ ದ್ರೋಹಿಯೆಂದು ತಿಳಿಯಬೇಕು. +ಸೂರ್ಯನಾರಾಯಣನ ಬ್ರಹ್ಮ ಪ್ರತಿಷ್ಠೆಗೆ ವಿಡ್ಡೂರ ತರ ಬೇಕೆಂಬ ದುರಾಲೋಚನೆಯಿಂದ ಅಣ್ಣ ತಮ್ಮಂದಿರಿಬ್ಲರೂ ನಿರಪರಾಧಿಗಳ ಮೇಲೆ ಸುಳ್ಳು ಫಿರ್ಯಾದು ಮಾಡಿದ ವಿದ್ಯಮಾನವು ಅವರ ನಡತೆಯಿಂದಲೇ ಸ್ಪಷ್ಟವಾಗುವದರಿಂದ ಅವರ ಕೃತ್ಯಕ್ಕೆ ಸರಿಯಾದ ಶಿಕ್ಷೆಯನ್ನು ಕೊಡದೆ ಹೋದರೆ ಇನ್ನು ಮುಂದೆ ಅವರು ಸೊಕ್ಕಿ ಇಲ್ಲದ ಅನಾಹುತ ಮಾಡುವರು. +ಆದ ಪ್ರಯುಕ್ತ ಅವರು ೧೦ ರೂಪಾಯಿ ಅಪರಾಧ ಕೊಡಬೇಕು. +ಮತ್ತು ಮೂರು ತಿಂಗಳ ವರೇಗೆ ತಂಟೆ ಷರಾರತ್‌ ಮಾಡಲಾರೆವೆಂದು ಜಾಮೀನು ಕೊಡಬೇಕು. +ಹಾಗೆ ಕೊಡದೆ ಹೋದರೆ ಸೆರೆಮನೆಯಲ್ಲಿರಬೇಕಾಗುವುದು ” ಈ ವಕ್ಕಣೆಯುಳ್ಳ ತೀರ್ಪನ್ನು ಪೇಷ್ಕಾರನು ಓದಿ ಹೇದಾಕ್ಷಣ ಉಪಾಧ್ಯರ ಮುಖಗಳು ನಿಸ್ತೇಜವಾದವು. +ಸಾಲ ಕಡಮಾಡಿ ಅಪರಾಧದ ಹಣವನ್ನು ಸತ್ಪರ ತೆತ್ತರು. +ಜಾಮೀನು ನಿಲ್ಲಲಿಕ್ಕೆ ಯಾರೂ ಸಮ್ಮತಿಸಲಿಲ್ಲ. +ಅವರು ಮೂರು ದಿವಸಗಳಷ್ಟು ವ್ಯವಧಾನಕ್ಕೆ ಅಪ್ಸಣೆಯಾಗಲಪೇಕ್ಷಿಸಲು ಅದುವರೆಗೆ ನಜರು ಬಂದಿಯಲ್ಲಿರಬೇಕೇ ಹೊರ್ತು ಬೇರೇನೂ ಉಪಾಯವಿಲ್ಲವೆಂಬ ಅಪ್ಪಣೆಯಾಯಿತು. +ಅಂದು ಉಭಯತರು ನಜರ ಬಂದಿಯಲ್ಲಿ ಕಾಲ ಕಳೆದರು. +ಮರುದಿವಸವೂ ಹಾಗೆಯೇ ಇರಬೇಕಾಯಿತು. +ಮೂರನೇ ದಿವಸ ಪರವೂರ ಲ್ಲಿರುವ ಅವರ ಸೋದರಮಾವ ನರಸಿಂಹಭಟ್ಟನು ಜಾಮೀನು ನಿಂತು ಅಳಿಯಂದಿರನ್ನು ವಿಮೋಚನೆ ಪಡಿಸಿ ಇನ್ನು ಮುಂದೆ ಆದರೂ ದೊಡ್ಡವರ ಕೂಡೆ ದ್ವೇಷ ಕಟ್ಟಿಕೊಳ್ಳದಿದ್ದರೆ ಸೆರೆಮನೆಗೆ ಹೋಗದೆ ಸುಖವಾಗಿರಬಹುದೆಂದನು. +ಉಪಾಧ್ಯರಿಬ್ಬರೂ ನಜರಬಂದಿಯಲ್ಲಿರುವ ಕಾಲದಲ್ಲಿ ಸೊರ್ಯನಾರಾ ಯಣನ ಉಪನಯನಕ್ಕೆ ಇಟ್ಟ ಮುಹೂರ್ತದಲ್ಲಿ ದೊಡ್ಡ ಸಂಭ್ರಮದಿಂದ ಆ ಶುಭಕಾರ್ಯವು ನಿರ್ವಹಿಸಲ್ಪಟ್ಟಿತು. +ಸಾವಿರಾರು ದ್ವಿಜರು ಮೃಷ್ಟಾಂನ ಉಂಡು ದಣಿದರು. +ಕೈ ತುಂಬಾ ದಕ್ಷಿಣೆಯು ಅವರಿಗೆ ಸಿಕ್ಕಿತು. +ಆಬಾಚಾರ್ಯನ ಆಹ್ಲಾದವು ಮೇರೆವಕಿಯಿತು. +ವಾಗ್ದೇವಿಯ ಹರುಷ ಭರ್ತದ ನೀರಿನೋಪಾದಿಯಲ್ಲಿ ಉಕ್ಕೇರಿತು. +ಚಂಚಲನೇತ್ರರ ಮಂದಸ್ಮಿತವದನ ಆನಂದ ಭಾಷ್ಪಗಳಿಂದ ತೋದು ಹೋಯಿತು. +ವಾಗ್ದೇವಿಯ ತಂದೆತಾಯಿ ಗಳು ಆ ಕಾಲದಲ್ಲಿ ಕೊಂಚ ಜಾಡ್ಯದಲ್ಲಿರುವ ದೆಸೆಯಿಂದೆ ಒದುರು ಬರಲಿಕ್ಕೆ ಉಚಿತವಲ್ಲದ ಸ್ಥಿತಿಯಲ್ಲಿದ್ದರೂ ಮೊನ್ಮುಗನ ಉಪನಯನವು ನಿರ್ವಿಘ್ನವಾಗಿ ಆಯಿತೆಂಬ ಸಂತೋಷ ಸುಖವನ್ನು ಅನುಭವಿಸಿದರು. +ಪುರವಾಸಿಗಳಾಗಲೀ ಪರಊರಿನವರಾಗಲೀ ಅಂದಿದ ಪ್ರಸ್ತವು ಬೇಗನೆ ಮರವೆಗೆ ಬಾರದ ಹಾಗೆ ಉಂಡುತಿಂದು ಸುಖಿಯಾಗಿ ಸೂರ್ಯನಾರಾಯಣನು ದೀರ್ಥ್ಫಾಯುವಾ ಗಿಯೂ ತಂದೆ ತಾಯಿಗಳಿಗೆ ಸುಪ್ರೀತನಾಗಿಯೂ ಸದಾಚಾರಪ್ರಿಯನಾ ಗಿಯೂ ಸುಜನಪ್ರೇಮಿಯಾಗಿಯೂ ಅನನ್ಯಭಾನದಿಂದ ಭಗವಂತನನ್ನು ಧ್ಯಾನಿಸಿ ಅವನ ಅನುಗ್ರಹಕ್ಕೆ ಯೋಗ್ಯನಾದ ಸುಪುತ್ರನಾಗಿಯೂ ಶೋಭಿಸಲೆಂದು ಆಶೀರ್ವದಿಸಿದರು. +ಪೇಷ್ಕಾರನಿಗೂ ಅವನ ಕಚೇರಿಯ ಒಳ ಉದ್ಯೋಗಸ್ಥರಿಗೂ ವೆಂಕಟ ಪತಿ ಆಚಾರ್ಯನು ಮರೆಯಲಿಲ್ಲ. +ಅವರಿಗೆಲ್ಲಾ ತಾರತಮ್ಯಾನುಸಾರವಾದ ಉಡುಗೊರೆಗಳನ್ನು ಕೊಟ್ಟು ಮನ್ಸಿಸುವುದರಲ್ಲಿ ಏನೂ ವ್ಯತ್ಯಾಸ ಬರಲಿಲ್ಲ. +ಈ ಉಪನಯನದ ಕಾಲವು ಕುಮುದಪುರ ವಾಸಿಗಳಲ್ಲಿ ಉಪಾಧ್ಯಾಯರಿಬ್ಬರ ಹೊರತು ಮಿಕ್ಕ ಸರ್ವರಿಗೂ ಇಷ್ಟತರವಾಯಿತು. +ಸ್ವಜಾತಿ ಪರಜಾತಿಯವರು ಯಥೋಚಿತ ಉಪಚಾರಗಳಿಂದ ಸಂತುಷ್ಟರಾಗಿ ವಟುವಿನ ಅಭ್ಯುದಯವನ್ನು ಬಯಸುವವರಾದರು. +ಮಠದ ಮೇಲೆ ವೈರಭಾವ ತಾಳಿದ ಅಸರಾಜಿತಸೆಟ್ಟಿಯೂ ಅಸಃತುಷ್ಟನಾಗಲಿಲ್ಲವಷ್ಟೆ. +ಬುಟ್ಟಿಗೆ ಒಂದು ಸಾವಿರ ರುಪಾಯಿಗಳನ್ನು ಪ್ರಯಾಸವಿಲ್ಲದೆ ಸಂಪಾದಿಸಿದ ದೆಸೆಯಿಂದ ಅವನ ಮನಸ್ಸೂ ಮಠದ ಕಡೆಗೆ ಆಕರ್ಷಿಸಲ್ಪಟ್ಟಿತು. +ವೇದವ್ಯಾಸ ಉಪಾಧ್ಯಗೂ ರಾಘವೇಂದ್ರ ಉಪಾಧ್ಯಗೂ ಮಾತ್ರ ಶೋಕಾಸ್ಪದವಾಯಿತು. +ಗಂಗಾಬಾಯಿ ಯಿಂದ ಮಾನಭಂಗವಾದ್ದು ಬೇರೆ, ಅವಳ ಮೇಲೆ ಮಾಡಿದ ದಾವೆಯಲ್ಲಿ ನಜರಬಂದಿಯಲ್ಲಿದ್ದುದು ಬೇರೆ. +ಇವೆರಡು ಕಾರಣಗಳಿಂದ ಮನಸ್ಸಿಗೆ ಹತ್ತಿದ ವ್ಯಾಕುಲ ಸ್ಮರಿಸಕೂಡದೆಯೂ, ಕಾಕಪೋಕರು ಅವರನ್ನು ಬಹಿರಂಗವಾಗಿ ಗೇಲಿ ಮಾಡುವುದಕ್ಕೆ ತೊಡಗಿದ್ದಲ್ಲದೆ ಸಂಭಾವಿತರೂ ಅವರ ನೆಂಟರಿಷ್ಟರೂ ಅವರ ತಿಷ್ಟತಿಯೇ ಬಿಟ್ಟು ಬಿಟ್ಟ ದೆಸೆಯಿಂದ ತಮ್ಮಷ್ಟು ಪಾಪಿಗಳು ಇನ್ಯಾರಿಲ್ಲವೆಂಬ ವೈರಾಗ್ಯತಾಳಿ ಸಹೋದರರಿಬ್ಬರೂ ಮಡದಿಯರನ್ನು ಕರೆದುಕೊಂಡು ಮಹಾಯಾತ್ರೆಗೆ ಹೋದರು. +ಈ ವಾರ್ತೆಯು ಚಂಚಲನೇತ್ರರ ಕಿವಿಗೆ ಬೀಳುತ್ತಲೇ ತನ್ನ ಮನಸ್ತಾಪದಿಂದ ಅವರಿಗೆ ಉಛಾಟನವಾಯಿ ತೆಂಬ ಹಮ್ಮು ತಲೆಗಡರಿತು. +ವಾಗ್ದೇವಿಯು ಪ್ರತಿನಿತ್ಯ ತನ್ನ ಮೋಹ ನಡತೆಯಿಂದ ಚಂಚಲನೇತ್ರ ರನ್ನು ಮಂಕುಗೊಳಿಸಿ ಅವರಲ್ಲಿ ವ್ಯಾಮೋಹವನ್ನು ಹೆಚ್ಚಿಸಿ ತನ್ನ ಕೈಲಾಗು ವಷ್ಟರ ಮಟ್ಟಿಗೆ ಸನ್ಯಾಸಿಯ ದ್ರವ್ಯವನ್ನು ವ್ರಯಮಾಡಿಸುವದರಲ್ಲಿ ಲೇಶವಾದರೂ ಅಂಜಲಿಲ್ಲ ಇನ್ನೆಂಥಾ ದುರ್ದಶೆಯು ಆ ಯತಿಗೆ ಹಿಡಿಯಿತೋ ದೇವರೇ ಬಲ್ಲ! +ಹಾವಾಡಿಗನಿಂದ ತಡೆ ಕಟ್ಟಲ್ಪಟ್ಟ ಸರ್ಪವು ಮೈಮರತು ಕೊಂಡಿರುವಂತೆ ಯತಿಯ ಮೈಚರ್ಮವನ್ನೇ ವಾಗ್ದೇವಿಯು ಸುಲಿದರೂ ಆ ಪ್ರಾಣಿಗೆ ನೋಯದೆ ಹೋಯಿತು. +ಹಾಗೂ ಪ್ರಾಯವು ಹೆಚ್ಚಾಗಿ ದೌರ್ಬಲವು ಏರುತ್ತಾ ಬರುವ ಸಂಧಿಯಲ್ಲಿ ವೆಂಕಟಪತಿ ಆಚಾರ್ಯನು ಎಷ್ಟು ಬುದ್ಧಿವಂತಿಗೆ ನಡಿಸಿನರೂ ವಾಗ್ದೇವಿಯ ಮಾತೇ ಭಗವದ್ವಾಕ್ಯವಾಗಿ ಚಂಚಲನೇತ್ರರ ಮನಸ್ಸಿಗೆ ತೋರುವದಾಯಿತು. +ಅವಳ ಅನುಮತಿ ಇಲ್ಲದೆ ಪಾರುಪತ್ಯಗಾರನಿಂದ ಒಂದು ಕಡ್ಡಿಯನ್ನಾದರೂ ಇಲ್ಲಿಂದ ಎತ್ತಿ ಅಲ್ಲಿ ಇಡುವದಕ್ಕೆ ಆಗದೆ ಹೋಯಿತು. +“ಇದೇನಪ್ಪಾ!ಕಾಲದ ಮಹಿಮೆ” ಯೆಂದು ವೆಂಕಟಪತಿ ಆಚಾರ್ಯನು ಬೆರಗಾದರೂ ತನಗೆ ಉಪ್ಪನ್ನ ಕೊಟ್ಟು ಸಾಕುವ ಯತಿಯನ್ನು ಪ್ರಾಣದಾಶೆಯಾದರೂ ಬಿಟ್ಟು ಸೇವನೆ ಮಾಡದಿರಕೂಡದೆಂದು ದೃಢಭಾವದಿಂದ ಯಜಮಾನನ್ನು ಕೊಂಚವಾದರೂ ಬಿಟ್ಟು ಹಾಕಲಿಲ್ಲ. +ವಾಗ್ದೇವಿಯ ಮಗನು ದೇಹಪುಷ್ಟಿ ಹೊಂದಿ ವಿದ್ಯಾಭ್ಯಾಸದಲ್ಲಿ ಕೊಂಚ ವಾದರೂ ಮೈಗಳ್ಳತನ ಮಾಡದೆ ಶಾಲಾ ಉಪಾಧ್ಯಾಯನ ಸಿಟ್ಟಿಗೆ ಒಳಗಾ ಗದೆ ಸುಬುದ್ಧಿಯಿಂದ ನಡಕೊಳ್ಳುವದರಿಂದ ತನ್ನ ಭಾಗ್ಯಕ್ಕೆ ಕಡಿಮೆ ಇಲ್ಲ ವೆಂದು ಅವಳು ಸುಖಿಯಾಗಿರುವಾಗ ಅವಳ ತಂದೆತಾಯಿಗಳಿಗುಂಟಾದ ಆಪತ್ತಿನ ದೆಸೆಯಿಂದ ಅವಳು ಹೆಚ್ಚು ದಣಿಯಬೇಕಾಯಿತು. +ಯತಿಯ ದಯದಿಂದ ದ್ರವ್ಯಾನುಕೂಲ ಯಥೇಚ್ಛ ಇರುವ ವೇಳೆ ಅವರಿಗುಂಟಾದ ಅಸ್ವಸ್ಥ ನಿವಾರಣೆಗೋಸ್ಕರ ದೊಡ್ಡ ದೊಡ್ಡ ಪಂಡಿತರಿಂದ ಚಿಕಿತ್ಸೆ ಮಾಡಿಸುವದರಲ್ಲಿ ಏನೂ ಸಾವಕಾಶವಾಗಲಿಲ್ಲ ಪರಂತು ವೈದ್ಯರು ಎಷ್ಟು ಶ್ರಮಪಟ್ಟರೂ ಅವರ ಪ್ರಯತ್ನಗಳು ಸಫಲನಾಗುವ ಹೋಲ್ಪೆತೋರದೆ ವಾಗ್ದೇವಿಯು ಚಿಂತೆ ತಾಳುವದಾಯಿತು. +ಬಹುಕಾಲ ಬಡತನದ ಕಡು ಕಷ್ಟಗಳನ್ನನುಭವಿಸಿದರೂ ದೈವವಶಾತ್‌ ಚಂಚಲನೇತ್ರರ ಪೂರ್ಣಕೃಪೆಯು ಅವಳ ಮೇಲೆ ಉದಯವಾದಂದಿನಿಂದ ಸುಖಸಂತೋಷ ಪ್ರಾಪ್ತವಾಯಿತು. +ಅದನ್ನು ಯಥೇಷ್ಟ ಅನುಭವಿಸಲಿಕ್ಕೆ ಅವಳ ಹೆತ್ತವರಿಗೆ ಪುಣ್ಯವಿಲ್ಲ. +ಅವರು ದೀರ್ಘಕಾಲ ಬದುಕಿರುವ ಪರಿತೋಷವನ್ನು ಪಡಿಯುವ ರುಣವು ಅವಳಿಗಿಲ್ಲವೆಂಬಂತಾಯಿತು. +ಯಾಕಂದರೆ ದಿನಹೋಗುತ್ತಾ ಅವಳ ಮಾತಾಪಿತೃಗಳ ದೇಹಸ್ಸಿತಿಯು ಭಯಂಕರವಾಯಿತು. +ಯಾರಾದರೂ ಅಸ್ವಸ್ಥ ತೂಡಗಿದರೆ ದೈವ ದೇವರ ಉಪಹತಿ ಅಥವಾ ಛಿದ್ರದೋಷ ಇತ್ಯಾದಿ ಬಾಧೆಗಳವೆಯೋ ಎಂದು ನಿಷ್ಕರ್ಷ ಮಾಡುವದಕ್ಕೆ ಜೋಯಿಸನನ್ನು ಕರದು ಪ್ರಶ್ನೆ ನೋಡುವ ಪದ್ಧತಿಯು ಹೆಡ್ಡರಲ್ಲಿ ಬಹಿರಂಗ ವಾಗಿಯೂ ಬುದ್ಧಿವಂತರಲ್ಲಿ ಗುಪ್ತವಾಗಿಯೂ ನಡಿಯುವದುಂಟು. +ವಾಗ್ದೇವಿ ಗನಕಾ ದ್ವಿತೀಯ ವರಾಹಮಿಹಿರಾಚಾರ್ಯನೆಂಬಂತೆ ತೋರಿಸಿಕೊಳ್ಳುವ ತಿಪ್ಪಾಶಾಸ್ತ್ರಿಯ ಸಾಮೀಪ್ಯವೇ ದೊರಕಿರುವಾಗ್ಗೆ ಇನ್ನೊಬ್ಬ ಜೋಯಿಸಗೆ ಹುಡುಕಬೇಕೇ? +ತಿಪ್ಪಾಶಾಸ್ತ್ರಿಯು ರಾಶಿ ಇಟ್ಟು ಸೂಕ್ಷ್ಮವಾಗಿ ನೋಡಿ “ವೇದವ್ಯಾಸ ಉಪಾಧ್ಯನು ಮಾಟಮಾಡಿಸಿದ ದೆಸೆಯಿಂದ ಇಂಥಾ ಕಷ್ಟ ಬರಲಿಕ್ಕೆ ಕಾರಣವಾಯಿತು. +ಅದರ ಬಿಸಾತೇನು!ಒಂದು ಬಲಿತೆಗೆದು ಬಿಟ್ಟರೆ ಆ ಮಾಟಗೀಟ ಎಲ್ಯದೆ?ನೋಡು” ಎಂದು ಪೌರುಷ ಮಾತಾಡಿದನು. +ಪಂಚಾಂಗದ ಹಾಳೆಗಳನ್ನು ಆಚೆಗೀಜೆಗೆ ಮಗಚಿ ರೋಗಿಗಳ ಚಂದ್ರತಾರಾ ಬಲ ನೋಡಿದನು. +ಮರುದಿನ ರಾತ್ರೆ ಬಲಿತೆಗೆಯುವದಕ್ಕೆ ಕಾಲನಿಶ್ಚಯಿಸಿ ಮಾಟದೇವತೆಯ ಉಚ್ಛಾಟಣೆಯ ಉದ್ದಿಶ್ಯ ಒಂದು ಸಣ್ಣಹೋಮವಿಧಿಯನ್ನು ಸಹ ಸಾಂಗವಾಗಿ ನಡಿಸುವ ಅವಶ್ಯತೋರಿದ ಕಾರಣ ಅದಕ್ಕೆ ಬೇಕಾಗುವ ಸಾಮಗ್ರಿಗಳನ್ನು ಸಿದ್ಧಪಡಿಸಿಡುವದಕ್ಕೆ ಸುಮಾರು ನೂರು ರೂಪಾಯಿ ವರೆಗೆ ವೆಚ್ಚ ತಗಲುವ ಹಾಗಿನ ಒಂದು ಪಟ್ಟಿಯನ್ನು ಬರಸಿಕೊಟ್ಟನು. +ನೇಮಿಸಿದ ರಾತ್ರೆ ಭಾರಿ ಅಟ್ಟಹಾಸದಿಂದ ಹೋಮವನ್ನು ಮಾಡಿ ಬಲಿತೆಗೆದನು. +ಅವನು ತೊಡಗಿದ ವಿಧಿಯು ಅಂತ್ಯವಾಗಬೇಕಾದರೆ ಭಾಗೀರಥಿಗೆ ಪ್ರಾಣಾಂತಿಕವಾಯಿತು. +ಅವಳ ಬಾಯಿಗೆ ವಾಗ್ದೇವಿಯು ಬೇಗನೇ ಇಷ್ಟು ನೀರು ಬಿಟ್ಟಳು. +ಆಗ್ಗೆನೇ ರೋಗಿಯೊಬ್ಬಳು ಫೈಸಲಾದಳು. +ಮಾತೃವಿಯೋಗದ ಸಂತಾಪವೂ ತಿಪ್ಪಾಶಾಸ್ತ್ರಿಯ ವ್ಯಾಜ್ಯವೂ ವಾಗ್ದೇವಿಯ ಸಹನಶಕ್ತಿಗೆ ಮೀರಿದವು. +ಇವೆರಡನ್ನು ಅಂದು ಕಂಡವರ ಹೃದಯವು ನಿಜವಾಗಿ ಕರಗಿತು. +ತಿಪ್ಪಾಶಾಸ್ತ್ರಿಯ ಮುಖವನ್ನು ನೋಡಲಿಕ್ಕೆ ಅವಳಿಗೆ ಮನಸು ಬರಲಿಲ್ಲ. +ಅವನಿಗೂ ಕೊಂಚ ನಾಚಿಕೆ ಆದಿಯಲ್ಲಾದರೂ ಕೊನೆಗೆ ಧೈರ್ಯ ಬಂದು ಅನ್ನ ಹೋಗಿ ಗಂಜಿಯಾದ ಮೇಲೆ ತನ್ನನ್ನು ಕರೆದರೆ ಯತ್ನವ್ಯಾವದೂ ನಡೆಯುವ ಹಾಗಿಲ್ಲವಾದರೂ ಕೈಲಾಗುವ ಪ್ರಯತ್ನ ಮಾಡಿದೆನೆಂದು ಡಬ್ಬು ಹಾರಿಸಿಬಿಟ್ಟು ರೋದನ ಮಾಡುವ ವಾಗ್ದೇವಿಯ ಕಣ್ಣೆದುರಿನಿಂದ ಹ್ಯಾಗೂ ತಪ್ಪಿಸಿಕೊಂಡನು. +ಸಾವಿನ ಮನೆಯಲ್ಲಿ ಅಳಾಟಿ ಕಟ್ಲೆಪ್ರಕಾರ ಇತ್ತು ನೆರೆಕರೆಯವರನೇ ಕರು ವಾಗ್ದೇವಿಗೆ ಬಂದ ಕಷ್ಟ ನೋಡಿ ಬಹು ಪಶ್ಚಾತ್ತಾಪ ಪಟ್ಟು ಅವಳಿಗೆ ಹಲವು ತರದಲ್ಲಿ ಸಮಾಧಾನ ಪಡಿಸಿ “ಪ್ರಪಂಚದಲ್ಲಿ ಯಮಬಾಥೆ ಯಾರಿಗೂ ಬಿಡವಲ್ಲದು. +ಶೋಕ ಮಾಡಿ ದೇಹದಂಡಿಸಬೇಡ” ಎಂದು ಕೆಲವು ವೃದ್ಧ ಸ್ತ್ರೀಪುರುಷರು ದುಃಖಶಾಂತಿ ಯತ್ನಿಸಿದರು. +ಕಡೆಗೆ ಚಂಚಲನೇತ್ರರಿಂದ ಕಳುಹಿಸಲ್ಪಟ್ಟ ವೆಂಕಟಪತಿ ಆಚಾರ್ಯನು ವಾಗ್ದೇವಿಗೆ ಅತಿ ನಯನುಡಿಯಿಂದ ಸಂಕ್ಷೇಪವಾಗಿ ಜ್ಞಾನವನ್ನು ಹೇಳಿ ಅವಳಲ್ಲಿ ವಿವೇಕ ಹುಟ್ಟುವಂತೆ ಪ್ರಯತ್ನ ಮಾಡಿ ಜಯಿಸಿದನು. +ಪತ್ನಿಯ ಮರಣವು ಕಠಿಣ ಅಸ್ಪಸ್ಥದಲ್ಲಿರುವ ತಮ್ಮಣ್ಣಭಟ್ಟಗೂ ಕಣ್ಣುಕತ್ತಲೆ ಬರಮಾಡಿತು. +ಆ ಮುದುಕನು ಮರುಗುವದು ನೋಡಿದರೆ ಎಂಥವನ ಎದೆಯು ಉರಿಯದಿರದು! +ವೆಂಕಟಪತಿ ಆಚಾ ರ್ಯನೂ ಮಾನುಷಕ ದೇಹದ ಕ್ಷಣಿಕ ಅವಧಿಯ ಕುರಿತು ಚುಟುಕಾದ ಉಪನ್ಯಾಸದ ದ್ವಾರಾ ಅವನಿಗೂ ಅವನ ಪರಿಮುಖ ವಾಗ್ದೇವಿಗೂ ಸಮಾಧಾನವಾಗುವಂತೆ ವರ್ತಿಸಿದನು. +ಹೆಚ್ಚು ರಾತ್ರೆಯಾಗಗೊಡದೆ ಭಾಗೀರಥಿಯ ದೇಹವನ್ನು ಸ್ಮಶಾನಕ್ಕೆ ವೈದು ಅಗ್ನಿಗೆ ವಪ್ಪಿಸಿ ತೀರಿದ ಮೇಲೆ ಉತ್ತರಕ್ರಿಯೆ ಗಳನ್ನು ಉತ್ತರಾಧಿಕಾರಿಗಳು ನಡಿಸಿದರು. +ಹನ್ನೆರಡನೇ ದಿನದ ಪ್ರಸ್ತದೂಟ ವಾಗುವ ಸಮಯದಲ್ಲಿ ಬೀದಿಯಲ್ಲಿ ವಾದ್ಯಘೋಷದಿಂದ ಸಣ್ಣದೊಂದು ಗುಂಪು ಹೋಗುವದು ಕಂಡು ಅದೇನೆಂದು ಯಾರೋ ವಿಚಾರಿಸಿದರು. +ವಾರಣಾಸಿಗೆ ಹೋದ ವೇದವ್ಯಾಸ ಉಪಾಧ್ಯನು ಯಾತ್ರೆಯನ್ನು ತೀರಿಸಿ ಕೊಂಡು ಮರಳಿ ಬರುವನೆಂದು ತಿಳಿದು ಬಂತು. +ಈ ವಾರ್ತೆಯು ವಾಗ್ದೇವಿಯ ಕಿವಿಗೆ ಕಠೋರವಾಗಿ ಕೇಳಿತು. +ಅಲ್ಲಿಯೇ ಅವನಿಗೆ ಮುಕ್ತಿ ದೊರಕಲಿಲ್ಲವೇ ಎಂದು ಆಬಾಚಾರ್ಯನು ಹೇಳಿದ ಮಾತು ಅಲ್ಲಿ ಊಟಕ್ಕೆ ಕೂತವ ರಲ್ಲಿ ಒಬ್ಬನ ಕಿವಿಗೆ ಬಿದ್ದು ಕ್ರಮೇಣ ಅದು ವೇದವ್ಯಾಸ ಉಪಾಧ್ಯ ಕಿವಿಗೆ ಮುಚ್ಚಿತು. +ತಾಯಿಗೆ ಹ್ಯಾಗೂ ಮುಕ್ತಿ ಕೊಟ್ಟಿಳಲ್ಲಾ. +ತಂದೆಯೊಬ್ಬನು ಶೀಘ್ರ ಪ್ರಯಾಣಕ್ಕೆ ಅನುನಾಗಿರುವನು. +ಗಂಡನೊಬ್ಬನಲ್ಲನೇ ಉಳಿದವರು? +ಅವನು ಬೇಗನೇ, ವೈಕುಂಠಯಾತ್ರಿಗೆ ಹೋದರೆ ಕುಂಕುಮದ ಖರ್ಚೆ ಉಳಿದೀತು. +ಆದರೂ ದೇಹಾಲಂಕಾರಕ್ಕೆ ತುಸಾ ಅಂತರಾಯ ಬಂದೋದೀತು. +ಅದೊಂದು ದೊಡ್ಡ ಕೊರತೆಯನ್ನ ಕೂಡದು. +ಹೀಗೆಂದು ವೇದವ್ಯಾಸ ಉಪಾ ಧ್ಯನ ಬಾಯಿಯಿಂದ ಹೊರಟ ದುರುಕ್ತಿಗಳನ್ನು ಕೇಳಿದ ಇನ್ನೊಬ್ಬನು ಆ ಪೂರ್ವೋತ್ತರವನ್ನು ವಿಳಂಬ ಮಾಡದೆ ಅಬಾಚಾರ್ಯಗೆ ತಿಳಿಸಿದನು. +ಅವನು ತಂತಿಟಪ್ಪಾಲಿನಕಿಂತಲೂ ಹೆಚ್ಚು ವೇಗದಿಂದ ಅದನ್ನು ಪತ್ನಿಯ ಕಿವಿಗೆ ಹಾಕಿಬಿಟ್ಟನು. +ಬಹಳ ದಿವಸಗಳು ಹೋಗಲಿಲ್ಲ. +ವೇದವ್ಯಾಸನಾಡಿದ ಮಾತುಗಳು ಚಂಚಲನೇತ್ರರಿಗೆ ಶ್ರುತವಾದವು. +“ಇದೇನು ವಿಚಿತ್ರ? +ಆ ದುರುಳನು ಸಾರ ಮೇಯನಂತೆ ಬಗಳುವಾಗ ಅವನ ಹಲ್ಲು ಮುರಿಯುವವರ್ಯಾರಿಲ್ಲದೆ ಹೋಯಿತೇ? +ಕಲಿಯುಗ ಮೀರಿತು” ಎಂದು ಕ್ರೋಧದಿಂದ ಅವರು ಆಡಿದ ನುಡಿಯನ್ನು ಸಮೀಪವಿರುತ್ತಿದ್ದ ವೆಂಕಟಪತಿ ಆಚಾರ್ಯನು ಕೇಳಿ, “ಪರಾಕೆ!ನಾಯಿ ನಮ್ಮ ಕಾಲಿಗೆ ಕಚ್ಚಿದರೆ ನಾಯಿಯ ಕಾಲಿಗೆ ನಾವು ಕಚ್ಚಬಹುದೇ? +ಆ ಮರುಳನಿಗೆ ಬುದ್ಧಿಯು ತನ್ನಷ್ಟಕ್ಕೆ ಬಾರದೆ ಹೋಗದು. +ಹಿಂದೆ ಕಲಿತ ಬುದ್ಧಿಯು ಈಗ ಮರವೆಗೆ ಬಂದಿದೆ. +ಮುಂದೆ ಹ್ಯಾಗಾಗುತ್ತದೊ ನೋಡಲಿ ಕ್ಳುಂಟು? +ಎಂದು ಸಮಜಾಯಿಸಿ ಹೇಳಿದನು. +ಚಂಚಲನೇತ್ರರಿಗೆ ಆ ಪ್ರತಿ ವಚನವು ಸಮ್ಮತವಾಯಿತು. +ಆದರೂ ವೇದವ್ಯಾಸನ ಮೇಲಿನ ದ್ವೇಷವು ಮತ್ತಷ್ಟು ಹೆಚ್ಚಿತು. +ಮತ್ತು ಮುಯ್ಯಿಗೆ ಮುಯ್ಯಿ ತೀರಿಸುವ ಸಂದರ್ಭ ಬೇಗ ಒದಗಿದರೆ ಆಗಬಹುದೆಂಬ ಆಕೆಯು ಅವರಲ್ಲಿ ಹುಟ್ಟಿತು. +ಒಂದಾನೊಂದು ದಿನ ವಾಗ್ದೇವಿಯು ಅಂಜನೇಯಾಲಯದ ಸಮೀಪವಿರುವ ಕೆರೆಯ ಬಳಿಗೆ ಹೋದಳು. +ಅಲ್ಲಿ ವೇದವ್ಯಾಸ ಉಪಾಧ್ಯನ ಹೆಂಡತಿ ಸುಶೀಲಾಬಾಯಿಯು ಬಂದಿದ್ದಳು. +ಅವಳು ಸ್ಥಾನ ಮಾಡಿಕೊಂಡು ಒಂದು ಕಡೆಯಲ್ಲಿ ನಿಂತಿರುವಾಗ ವಾಗ್ದೇವಿಯು ಸ್ನಾನಕ್ಕೆ ಕೆರೆಗೆ ಇಳಿದಳು. +ಆಕಸ್ಮಾತ್ತಾಗಿ ಸುಶೀಲಾಬಾಯಿಯ ಮೈಮೇಲೆ ನೀರು ಸಿಡೀತು. +ಅವಳಿಗೆ ಕೊಂಚ ಸಿಟ್ಟು ಬಂದರೂ ಅವಳು ಅದನ್ನು ನುಂಗಿ ಬಿಟ್ಟು ಪುನಃ ಕೆರೆಗೆ ಇಳಿದು ಸ್ಪಾನಮಾಡುವದನ್ನು ನೋಡಿ ವಾಗ್ದೇವಿಯು ರೋಷವನ್ನುತಾಳಿ, “ಓಹೋ! +ಇವಳ ಶುದ್ಧ ಮುದ್ರಿಕೆ ಭಾರಿ. +ಮೈಮೇಲೆ ರವಷ್ಟು ನೀರು ಸಿಡಿದರೆ ಇಷ್ಟು ಡಂಭಾಚಾರ ಮಾಡಬೇಕೇ”ಎಂದು ಜರೆದಳು. +ಮತ್ತೇನು!ಅವರಲ್ಲಿ ಸಂವಾದಕ್ಕೆ ಆಸ್ಪದವಾಯಿತು. +ಸುಶೀಲಾಬಾಯಿ–“ಅವ್ವಾ!ಸಿಟ್ಟು ಮಾಡಿಕೋಬ್ಯಾಡ. +ನನ್ನ ಶುದ್ಧ ಮುದ್ರಿಕೆ ಹಾಗಿರಲಿ. +ನಾನು ಎಷ್ಟಾ ವರ್ತಿ ಸಾನ ಮಾಡಿದಾಗ್ಯೂ ನಿನಗೆ ಬಂದ ಕಷ್ಟವೇನು? +ನನ್ನ ಡಂಭಾಚಾರದಿಂದ ನಿನಗೇನು ನಷ್ಟ?” +ವಾಗ್ದೇವಿ– “ಸಾಕು ಸಾಕು! +ನಿನ್ಫ ಸ್ವರೂಪವೆಲ್ಲ ಗೊತ್ತಿದ್ದದ್ದೇ, ಬಹಳ ಹಾರ್ಯಾಡ ಬೇಡ.” +ಸುಶೀಲಾಬಾಯಿ–“ನನ್ನ ಸ್ವರೂಪವೊ ನಿನ್ನ ಸ್ಪರೂಪವೂ ಎಲ್ಲರಿಗೆ ಗೊತ್ತಿದೆ. +ಹಾರ್ಯಾಡುವುದು ನಾನೋ ನೀನೊ? +ಗ್ರಹಿಸದೆ ಮಾತಾಡಬೇಡ.” +ವಾಗ್ದೇವಿ-“ಸೆರೆಮನೆಯಲ್ಲಿ ಕೂತ ಗಂಡನ ಹೆಂಡತಿ ನೀನೇ ಅಲ್ಲವೋ! +ಬಹಳ ದೊಡ್ಡವಳು.” +ಸುಶೀಲಾಬಾಯಿ–“ಅವ್ವಾ ನಾನು ನಿನ್ನಷ್ಟು ದೊಡ್ಡವಳಾದರೆ ನನ್ನ ಗಂಡ ಕಾರಾಗೃಹದಲ್ಲಿ ಕೂತುಕೊಳ್ಳುತಿದ್ದನೇ? +ನಿನ್ನ ಪ್ರತಾಪ ಮೆರೆಯುವಾಗ ನನ್ನ ಗಂಡನ ಪಾಡೇನು? +ದೊಡ್ಡ ಪ್ರಭುವಾದರೂ ಸೆರೆಮನೆಯಲ್ಲಿ ಕೊಳೆಯಬೇಕು.? +ವಾಗ್ದೇವಿ–“ಅಧಿಕಾರಸ್ತರಿಗೆ ನೀನು ಕಂಡು ಹೇಳಿಕೊಂಡಿದ್ದರೆ ನಿನ್ನ ಗಂಡನ ಬಿಡುಗಡೆಯಾಗುತಿತ್ತು.” +ಸುಶೀಲಾಬಾಯಿ—“ನೀನು ಮುಂದಾಗಿ ಕಂಡು ಹೇಳಿಕೊಂಡ ಅಧಿಕಾರಸ್ಥರು ನನ್ನ ಗಣ್ಯಮಾಡುವರೇನು? +ಅವ್ವಾ!ಯಾಕೆ ಇಂಥಾ ಕುತ್ಸಿತ ಮಾತುಗಳನ್ನಾಡಿ ನರಕಕ್ಕೆ ಭಾಜನಳಾಗುತ್ತಿ. +ನಾನು ಪತಿವ್ರತೆ; ಪರಪುರುಷನನ್ನು ಇದುವರೆಗೆ ಕಣ್ಣೆತ್ತಿ ನೋಡಿದವಳಲ್ಲ.” +ವಾಗ್ದೇವಿ– “ನಾನು ಮುಂದಾಗಿ ಅಧಿಕಾರಸ್ಥರನ್ನು ಹೋಗಿ ಕಂಡದ್ದು ನೀನ್ಯಾವಾಗ ನೋಡಿದೆ? +ಬಾಯಿಗೆ ಬಂದ ಹಾಗೆ ಬಗಳಿದರೆ ನಿನಗ್ಯಾರು ಕೇಳುವವರಿಲ್ಲವೆಂದು ತಿಳಿದುಕೊಂಡೆಯಾ? +ನೀನು ದೊಡ್ಡ ಪತಿವ್ರತೆ!” +ಸುಶೀಲಾಬಾಯಿ–“ನೀನು ಮುಂದಾಗಿ ಅಧಿಕಾರಸ್ಥರನ್ನು ಕಂಡಿಲ್ಲವಾದರೆ ಅವರನ್ನು ನಾನು ಕಂಡರೆ ನನ್ನ ಗಂಡಗೆ ಬಿಡುಗಡೆಯಾಗುತ್ತಿತ್ತೇಂದು ಹೇಗೆ ಬಗುಳಿದಿ? +ನನಗೆ ಕೇಳುವವರು ನನ್ನ ಪತಿಗಳೇ! +ನಿನ್ನಂಧಾ ನಾಯಿ ನನಗೆ ಕೇಳುವದುಂಟೇ? +ನಾನು ದೊಡ್ಡ ಪತಿವ್ರತೆಯೆಂದು ಇನ್ನೊಮ್ಮೆ ಹೇಳು. +ನಿನ್ನಂತೆ ಹಗಲು ಗಂಡನ ಹೆಂಡತಿಯೆಂದು ತಿಳಕೊಂಡಿಯಾ?” +ವಾಗ್ದೇವಿ–“ನಿನ್ನ ನಾಲಿಗೆ ಬಹಳ ಮುಂದರಿಸುತ್ತೆ? +ಅದರಹೊಂದು ತುಂಡು ತೋರಿಸದಿದ್ದರೆ ನಿನ್ನ ಮಾತುಗಳು ಗಗನಕ್ಕೆ ಹತ್ತುವುವು.” +ಸುತೀಲಾಬಾಯಿ— “ನನ್ನ ನಾಲಿಗೆಯ ತುಂಡು ತೆಗೆಯುವುದಕ್ಕಿಂತಲೂ ನಿನ್ನ ನಾಲಿಗೆ ಶೀಳದರೆ ಅತಿ ಉತ್ತಮವಿತ್ತು.” +ವಾಗ್ದೇವಿ–“ನೀನೊಬ್ಬ ಹಗಲು ಗಂಡನ ಮಾಡಿಕೊಳ್ಳಬಾರದೇ? +ನನ್ನ ಮೇಲೆ ಯಾಕೆ ಹೊಟ್ಟಿ ಕಿಚ್ಚು ಪಡುತ್ತೀ.” +ಸುಶೀಲಾಬಾಯಿ–“ನನಗೆ ಹಗಲು ಗಂಡ ಬೇಕೇ! +ಯತಿದ್ರವ್ಯದ ಮೇಲೆ ಆಶೆ ಉಳ್ಳವರಿಗೆ ಬೇಕು.” +ವಾಗ್ದೇವಿ–“ನಿನಗೆ ಯತಿದ್ರವ್ಯ ಸಿಕ್ಕುವುದಿದ್ದರೆ ನೀನು ಏನೇನು ಕಾರ್ಬಾರು ಮಾಡುತಿದ್ದಿ. +ನಿನಗೆ ಅದು ಸಿಕ್ಕುವುದುಂಟೇ?” +ಸುಶೀಲಾಬಾಯಿ–“ಅವ್ವಾ!ಆ ದ್ರವ್ಯ ನಿನಗೇ ಇರಲಿ. +ನನ್ನ ನಾಯಿಗೂ ಅಂಥಾ ದ್ರವ್ಯಬೇಡಾ.’ +ವಾಗ್ದೇವಿ–“ಲಜ್ಜಾಭಂಡಳಾದ ನಿನ್ನ ಕೂಡೆ ಮಾತಾಡುವುದರಿಂದ ಏನು ಪುರುಷಾರ್ಥ? +ಹೊಟ್ಟೆಗೆ ಪೂರ್ತಿ ಅನ್ನ ಬೀಳದಿದ್ದರೂ ನಿನ್ನ ಅಟ್ಟ ಹಾಸಕ್ಕೆ ಏನು ಕಡಿಮೆಯಿಲ್ಲ.” +ಸುಶೀಲಾಬಾಯಿ—“ನಾನೇಕೆ ಲಜ್ಜಾ ಭಂಡಳು! +ದಾರಿಗೆ ಹುಡುಗರು ನಿನ್ನ ಗಂಡನ ಎದುರು ಕವನ ಕಟ್ಟ ನಿನ್ನನ್ನು ಜರದು ಹಾಡುವಾಗ್ಯೆ ಸುಟ್ಟ ಮುಖವನ್ನು ತಕ್ಕೊಂಡು ಹಿಂದಿರುಗಿ ಮನೆಗೆ ಓಡಿದವಳು ನೀನಲ್ಲವೇ ಲಜ್ಜಾ ಭಂಡಳು!ನಾನೇ? +ನನಗೆ ಹೊಟ್ಟೆಗೆ ಅನ್ನಬೀಳದಿದ್ದರೆ ನಾನು ನಿನ್ನ ಮನೆಗೆ ಎಂದಾದರೂ ಬೇಡಲಿಕ್ಕೆ ಬಂದಿರುವೆನೇನು? +ತಾನೊಂದು ದೊಡ್ಡ ನಾಮದಾರ್ತಿಯಾಗಿದ್ದೇನೆಂದು ಏಗ್ಗುವಿಯಾ? +ಸುಡು ನಿನ್ನ ಬಾಳುವೆ! +ವೇಶ್ಯಾ ಸ್ತ್ರೀಯರಲ್ಲಿಯೂ ನಿನ್ಫಷ್ಟು ಕೀಳು ಹೆಂಗಸು ಸಿಕ್ಕಲಿಕ್ಕಿಲ್ಲ: ಥೂ!ನಿನ್ನ ಮುಖಕ್ಕೆ.” +ಸುಶೀಲಾಬಾಯಿಯು ಜರದು ಆಡಿದೆ ಮಾತುಗಳ ಕಾಠಿಣ್ಯವನ್ನು ತಡೆದುಕೊಳ್ಳಲಿಕ್ಟಾಗದೆ ವಾಗ್ದೇವಿಗೆ ಸಿಟ್ಟು ಬಂತು. +ಅವಳು ಸುಶೀಲಾಬಾಯಿಗೆ ಹೊಡೆಯಲಿಕ್ಕೆ ಕೈಯೆತ್ತಿ ಮುಂದೆ ಹೋಗುವಷ್ಟರಲ್ಲಿ ಕೆರೆಯ ಆಚೆ ಧಡದಲ್ಲಿ ಇದ್ದ ಗಂಗಾಬಾಯಿಯು ತ್ವರೆಯಾಗಿ ಬಂದು ಅವರಲ್ಲಿ ಹೊಡೆ ದಾಟಿ ನಡೆಯದ ಹಾಗೆ ಮಧ್ಯಸ್ಥಿಕೆ ಮಾಡಿದಳು. +ಸುಶೀಲಾಬಾಯಿಗ ಸಾಧಾರಣ ಸಿಟ್ಟು ಬಂದಿರಲಿಲ್ಲ. +ನಿನ್ನ ಅಹಂಕಾರವನ್ನು ದೇವರು ಬೇಗ ಮುರಿಯುವನೆಂದು ಶಪಿಸಿ ಕೋಪದಿಂದ ನಡುಗುತ್ತಾ ಅವಳು ಮನೆಗೆ ಹೋಗಿ ಕೆರೆ ಧಡದಲ್ಲಿ ನಡೆದ ವಿದ್ಯಮಾನವನ್ನೆಲ್ಲಾ ಗಂಡಗೆ ತಿಳಿಸಿದಳು. +ವೇದವ್ಯಾಸ ಉಪಾಧ್ಯನು ವ್ಯಸನ ಪಟ್ಟನು. +ಅವನಿಗೆ ದೊಡ್ಡ ಕೋಪ ಬಂದರೂ ಅದನ್ನು ಅವನು ನುಂಗಿಕೊಳ್ಳ ಬೇಕಾಯಿತು. +ಯಾಕೆಂದರೆ ಬಡವರ ಸಿಟ್ಟು ದವಡೆಗೆ ಕೇಡೆಂಬ ಸಾಮತಿಯು ಅವನ ನೆನಪಿಗೆ ಬಂತು. +ಅದಲ್ಲದೆ ಅಪರಾಜಿತ ಸೆಟ್ಟಿಯು ಮಾಡಿದ ಮೋಸದಲ್ಲಿ ಸಿಕ್ಕಿಬಿದ್ದು ಪೇಷ್ಕಾರನಿಂದ ಅವಮಾನ ಹೊಂದಿದ್ದು ಸಹ ಅವನಿಗೆ ಮರೆತಿರಲಿಲ್ಲ. +“ಅಗಲವಾದ್ದು ಹರಿಯುವುದು ಉದ್ದವಾದ್ದು ಮುರಿಯುವುದು” ಎಂಬ ಅನುಭವಸಿದ್ಧವಾದ ವಚನವಿದೆ. +ನಿರ್ನಿಮಿತ್ತವಾಗಿ ತನ್ನ ಹೆಂಡತಿಯನ್ನು ಕೆಣಕಿದ ವಾಗ್ದೇವಿಯು ಒಂದಲ್ಲ ಒಂದು ದಿನ ಅವಳ ಕರ್ಮದ ಫಲವನ್ನುಣ್ಣದೆ ಇರಲಾರಳೆಂದು ಸುಮ್ಮಗಾದನು. +ವಾಗ್ದೇವಿಯು ಮಠಕ್ಕೆ ಬಂದು ತನಗೂ ಸುಶೀಲೆಗೂ ನಡೆದ ಝಟಾ ಪಟಯ ಚರಿತ್ರೆಯನ್ನು ಚಂಚಲನೇತ್ರರಿಗೆ ಅರುಹಿದಳು. +ಅವರು ಅವಳ ಮುಖದಾಕ್ಷಿಣ್ಯಕ್ಕಾಗಿ ಸಿಟ್ಟು ಬಂದವರಂತೆ ಮುಖಛಾಯೆ ಬದಲಾಯಿಸಿಕೊಂಡಾಗ್ಯೂ ಸುಶೀಲಾಬಾಯಿಯ ತಪ್ಪೇನೂ ಅವರಿಗೆ ಕಂಡು ಬಾರದೆ ವಾಗ್ದೇವಿಗೆ ದುರಹಂಕಾರ ಬಂತೆಂದು ಪಶ್ಚಾತ್ತಾಪಪಟ್ಟರು. +ಈ ಜಗಳದ ವಾರ್ತೆಯೂ ಊರಲ್ಲಿ ಸರ್ವತ್ರ ತುಂಬಿತು. +ಅದರ ಪೂರ್ವಾಪರವನ್ನು ಕೇಳಿದರೆಲ್ಲರೂ ವಾಗ್ದೇವಿಯೇ ತಪ್ಪುಗಾರಳೆಂದು ನಿಶ್ಚಯಿಸಿದರು. +ಮಗನ ಉಪನಯನವಾದಂದಿಥಿಂದ ವಾಗ್ದೇವಿಯ ಚರ್ಯಗಳೆಲ್ಲಾ ವಿಪರೀತವಾಗಿ ವೆಂಕಟಪತಿ ಆಚಾರ್ಯನ ಮನಸ್ಸಿಗೂ ತೋರಿದವು. +ಆದರೆ ಅವಳ ಕೂಡೆ ಆ ಕುರಿತು ಪ್ರಸ್ತಾಪ ಮಾಡಿದರೆ ಏನೂ ಪ್ರಯೋಜನವಿಲ್ಲನೆಂದು ಮೌನವಾದನು. +ಮಠದಲ್ಲಿರುವ ಸರ್ವರಿಗೂ ವಾಗ್ದೇವಿಯ ಈಗಿನ ಗುಣಗಳು ನಿಷ್ಟುರವಾಗಿ ತೋರಿದವು. +ಅಸ್ವಸ್ಥದಲ್ಲಿದ್ದು ಚಾಪೆಯಿಂದ ಏಳಕೂಡದೆ ತಮ್ಮಣ್ಣ ಭಟ್ಟನು ತನ್ನ ಮಗಳ ದುರ್ಗುಣಗಳು ಹೆಚ್ಚುವದು ನೋಡಿ ವ್ಯಾಕುಲಪಟ್ಟನು. +ಈ ಕಾಲದಲ್ಲಿ ತಾನು ಬುದ್ಧಿ ಹೇಳಿದಕೆ ಅವಳಿಗೆ ಅದು ನಾಟದೆಂಬ ಸಂದೇಹದಿಂದ ಏನೂ ತಿಳಿಯದವನಂತೆ ಇದ್ದುಕೊಳ್ಳುವದೇ ಅವನಿಗೆ ಲೇಸಾಗಿ ತೋಚಿತು. +ಆಬಾಚಾರ್ಯನು ಹೊಟ್ಟ ಬಾಕನಾದ ದೆಸೆಯಿಂದ ಅನ್ನದ ಒಂದು ಗೊಡವೆಯಲ್ಲದೆ ಬೇರೆ ಯಾವ ಚಿಂತೆಯಾಗಲೀ ವಿಚಾರವಾಗಲೀ ಅವನ ಮನಸ್ಸಿಗೆ ಹೋಗುತ್ತಿದ್ದಿಲ್ಲ. +ಭಾಗೀರಥಿಯು ತೀರಿಹೋದ ತರುವಾಯ ಇವನು ಗ್ರಹಕೃತ್ಯದಲ್ಲಿ ನಡಿಯಸಬೇಕಾದ ಅದಾಯವೆಚ್ಚಗಳಿಗೆ ಕೊಂಚ ತಾತ್ಪರ್ಯ ಕೊಡುವ ಉದ್ಯೋಗವನ್ನು ಪತ್ನಿಯಿಂದ ಪಡೆದಿದ್ದನು. +ಮನೆಯ ವೈವಾಟು ಸಣ್ಣದೆನ್ನ ಕೂಡದು. +ಇತ್ತಲಾಗೆ ತಮ್ಮಣ್ಣ ಭಟ್ಟಗೂ ಜರೆಯೂ ರುಜೆಯೂ ಕೂಡಿಬಂದುದರಿಂದೆ ಮನೆಯ ಯಜಮಾನಿಕೆ ಪೂರ್ಣವಾಗಿ ಆಬಾಚಾರ್ಯಗೆ ಸಿಕ್ಕಿದಂತಾಯಿತು. +ವಾಗ್ದೇವಿಯು ಅವನನ್ನು ಮುಂಚಿನಷ್ಟು ಲಕ್ಷಮಾಡುತ್ತಿದ್ದಿಲ್ಲವಾದರೂ ತನ್ನ ಅಭಿಮಾನಕ್ಕೆ ತಂತು ಮಾತ್ರ ಕುಂದು ಇರುವದಾಗಿ ಅವನು ತಿಳಿಯಲೇ ಇಲ್ಲ. +ಒಳ್ಳೆ ಒಳ್ಳೆ ವೈದ್ಯರನ್ನು ಕರೆಸಿ, ಚಂಚಲನೇತ್ರರು ತಮ್ಮಣ್ಣ ಭಟ್ಟಗೆ ಚಿಕಿತ್ಸೆ ಮಾಡಿಸುವುದರಲ್ಲಿ ತಾತ್ಸಾರ ಮಾಡಲಿಲ್ಲ. +ಆದರೆ ವೈದ್ಯರ ಔಷಧ ಪ್ರಯೋಗ ಸಫಲವಾಗಲಿಲ್ಲ. +ಭಾಗೀರಥಿಯು ಕಾಲವಾದ ಒಂದೇ ವರ್ಷದಲ್ಲಿ ಒಂದು ದಿನ ಫಕ್ಕನೆ ಅವನಿಗೆ ಕಫವೇರಿ ಪ್ರಾಣಹೋಯಿತು. +ವೇದವ್ಯಾಸ ಉಪಾಧ್ಯನ ಕೃತಿಮದ ದೆಸೆಯಿಂದ ಹೀಗಾಯಿತೆಂದು ತಿಪ್ಪಾಶಾಸ್ತ್ರಿಯು ಹೆಣದ ಪರೀಕ್ಷೆಯ ಮೇಲೆ ಹೇಳಿ ಬಿಟ್ಟನು. +ವಾಗ್ದೇವಿಯು ಆ ಮಾತು ಕಿವಿಗೆ ಹಾಕಿಕೊಳ್ಳಲೇ ಇಲ್ಲ. +ತಕ್ಕ ಕಾಲದಲ್ಲಿ ಕೃತ್ರಿಮ ನಿವಾರಣೆಯ ಉಪಾಯ ಮಾಡದೆಹೋದರೆ ಮುಂದೆ ಇತರರಿಗೂ ಪೇಚಾಟವಿರಲಿಕ್ಕೆ ಸಾಕೆಂದು ಜೋಯಿಸನು ಮೊದಲು ಒಂದೆ ರಡು ಸರ್ತಿ ಹೇಳಿದಾಗ್ಗೆ –“ನಿನ್ನ ಜೋತಿಷ್ಯಕ್ಕೆ ತುದಿಬುಡವಿಲ್ಲ” ಎಂದು ವಾಗ್ದೇವಿಯು ಅವನಿಗೆ ಹೇಳಿರುತಿದ್ದಳು. +ಪರಂತು ಅವನು ಸಿಟ್ಟುಮಾಡಿ ಕೊಳ್ಳದೆ ಯಾವಾಗಲೂ ಆ ಪ್ರಸ್ತಾಸ ಕೊಂಚ ಕೊಂಚ ಮಾಡುವದಿತ್ತು. +ಏನು ಮಾಡೋಣ!ಅವನ ಮಾತು ಎಡೆಯಲ್ಲಿ ಹೋಯಿತು. +ತಮ್ಮಣ್ಣ ಭಟ್ಟನ ಉತ್ತರಕ್ರಿಯಾದಿಗಳು ಸರಿಯಾಗಿ ನಡೆದುವು. +ಹೆತ್ತವರು ಒಂದು ವರ್ಷದೊಳಗಾಗಿ ಸತ್ತುಹೋದರೆಂಬ ವ್ಯಥೆಯಿಂದ ವಾಗ್ದೇವಿಯು ಬಚ್ಚಿ ಬಂದಳು. +ಕ್ರಮೇಣ ಆ ದುಃಖವನ್ನು ಮರೆತು ದೇಹದಲ್ಲಿ ಮತ್ತಷ್ಟು ತೋರನಾಗಿ ಒಬ್ಬನ ಲಕ್ಷವಿಲ್ಲದೆ ಚಂಚಲನೇತ್ರರ ಖಜಾನೆಯ ಬೀಗದ ಕೈ ಗಳನ್ನು ಕೈವಶಮಾಡಿಕೊಂಡು ಅಹಂಕಾರ ಭರಿತಳಾದಳು. +ವೆಂಕಟಪತಿ ಅಚಾರ್ಯನು ವಾಗ್ದೇವಿಯ ಪ್ರತಾಪವನ್ನು ನೋಡಿ ಇನ್ನು ಮುಂದೆ ತಾನು ಕೊಂಚ ದೂರವಿರುವುದು ಒಳ್ಳೇದೆಂದು ಮಠಕ್ಕೆ ಅಪರೂಪವಾಗಿ ಬರಲಾರಂಭಿಸಿದನು. +ಚಂಚಲನೇತ್ರರಿಗೆ ಅದು ಹಿತವಾಗದಿದ್ದರೂ ವಾಗ್ದೇವಿಯ ದೆಸೆಯಿಂದ ಹಾಗಾಗುವದು ಸೋಜಿಗವಾಗಿ ತೋರಲಿಲ್ಲ. +ತಾನು ಮಾಡಿದ ಹುಚ್ಚುತನದ ಫಲವನ್ನು ಎರಡು ಕ್ಸೆಗಳಿಂದಲೂ ತಿನ್ನುವ ದಾಯಿತೆಂದು ಅವರು ಒಂದು ದಿನ ಅಂತರಂಗದಲ್ಲಿ ವೆಂಕಟಪತಿ ಆಚಾರ್ಯನ ಕೂಡೆ ಹೇಳಿ ಕಣ್ಣೀರಿಟ್ಟರು. +ಬುದ್ದಿ ಶೂನ್ಯತೆಯಿಂದ ತಪೋಬಲವನ್ನೂ ಆಶ್ರಮದ ಘನತೆಯನ್ನೂ ಹಾಳುಮಾಡಿಕೊಂಡ ತನ್ನ ಧನಿಯ ದುಸ್ಥಿತಿ ಯನ್ನು ನೋಡಿ ವೆಂಕಟಪತಿಗೆ ಬಹಳ ದುಃಖವಾಯಿತು. +ತಾನು ಬಹುತರ ಮೊದಲು ಹೇಳಿದ ಬುದ್ಧಿ ಮಾತುಗಳನ್ನು ತಿರಸ್ಕರಿಸಿ ಈಗ ವ್ಯಾಕುಲಪಡುವದಾಯಿತು. +ಸಾಂಪ್ರತ ಅದಕ್ಕೆ ಏನೂ ನಿವೃತ್ತಿ ಇಲ್ಲವಷ್ಟೇ. +ವಾಗ್ದೇವಿಯನ್ನು ಬಿಡಲಿಕ್ಕೆ ಸರ್ವಧಾ ಸಂದರ್ಭವಾಗಲಾರದು. +ಅವಳಿಗೆ ಕೊಟ್ಟ ಭಾಷೆಯನ್ನು ಸಲ್ಲಿಸಲೇಬೇಕೆಂದು ವೆಂಕಟಪತಿಯು ಕೊಟ್ಟ ಉತ್ತರವು ಯತಿಯ ಶೋಕವನ್ನು ಮತ್ತಷ್ಟು ಹೆಚ್ಚಿಸಿಬಿಟ್ಟಿತು. +ಚಂಚಲನೇತ್ರರ ಆರೋಗ್ಯಸ್ಥಿತಿಯು ದಿನವಹಿ ಕೆಡುತ್ತಾ ಬಂದು ಮೈಯಲ್ಲಿ ಶಕ್ತಿಯು ಕುಂದಿತು. +ಒಮ್ಮಿಂದೊಮ್ಮೆ ಅವರ ಖಜಾನೆಯಿಂದ ಸಣ್ಣ ಸಣ್ಣ ಕಳವುಗಳು ಆಗುವುದಕ್ಕೆ ತೊಡಗಿದವು. +ತಪ್ಪತಸ್ಥರನ್ಯಾರೆಂದು ತಿಳಿಯದೆ ಹೋಯಿತು. +ಒಳಗಿನ ಕಳ್ಳ ನಲ್ಲದೆ ಹೊರಗಿ ನವನಲ್ಲವೆಂದು ಅವರ ಮನಸ್ಸಿಗೆ ತೋಚಿತು. +ಮಠದ ಸೇವಕರನೇಕರ ಮೇಲೆ ಅನುಮಾನ ಉಂಟಾದರೂ ಬೇರೆ ಬೇರೆ ಕಾರಣಗಳಿಂದ ಅದು ನಿವೃತ್ತಿಯಾಯಿತು. +ಕೊನೆಗೆ ಕೆಪ್ಪಮಾಣಿಯ ಮೇಲೆ ಸಂಶಯಬಿತ್ತು. +ಕ್ರಮೇಣ ಕಳ್ಳ ಸಿಕ್ಕಿಬೀಳದೆ ಇರಲಾರನೆಂದು ಯತಿಗಳಿಗೆ ಗೊತ್ತಿತ್ತು. +ಕೆಪ್ಪಮಾಣಿಯು ವಾಗ್ದೇವಿಯ ವಿಶ್ವಾಸಿಯಾಗಿರುವುದರಿಂದ ಅವಳಿಗೆ ಮಾತ್ರ ಅವನ ಮೇಲೆ ಸಂದೇಹವಿರಲಿಲ್ಲ. +ಶ್ರೀಪಾದಂಗಳು ಅವನ ಮೇಲೆ ಸಂಶಯಪಟ್ಟು ಅವನನ್ನು ದೂರಪಡಿಸುವ ಆಲೋಚನೆಯಲ್ಲಿದ್ದರು. +ಆದರೆ ನಿಷ್ಕಾರಣವಾಗಿ ಬಡವನೊಬ್ಬನ ಅನ್ನವನ್ನು ತೆಗೆಯುವುದು ಅನ್ಯಾಯ. +ಚೆನ್ನಾಗಿ ಪರೀಕ್ಷೆಮಾಡಿ ನೋಡುವ ಮುಂಚೆ ಗಡಿಬಿಡಿ ಮಾಡಬಾರದೆಂದು ವಾಗ್ದೇವಿಯು ಪಟ್ಟ ಅಭಿಪ್ರಾಯವನ್ನು ಅವರು ಸಹಾ ಒಪ್ಪಬೇಕಾಯಿತು. +ಕಳವುಗಳು ನಿಲ್ಲಲಿಲ್ಲ. +ಒಂದಾದರೂ ತುಬ್ಬು ಆಗಲಿಲ್ಲ. +ತಿಪ್ಪಾಶಾಸ್ತ್ರಿಯ ಕೂಡೆ ಪ್ರಶ್ನೆ ಕೇಳಿದಾಗ ಅವನು ಕವಡೆಗಳನ್ನು ಅತ್ತಿತ್ತ ಹೊರಳಿಸಿ ವೇದ ವ್ಯಾಸ ಉಪಾಧ್ಯನು ಒಂದು ಮಂತ್ರದೇವತೆಯನ್ನು ಮಠಕ್ಕೆ ಕಳುಹಿಸಿರುವುದರಿಂದ ದಿಗ್ಬಂಧನೆಯಾದಂತಾಗಿ ಕಳವುಗಳು ನಡಿಯುವ ಹಾಗಿನ ದೊಂದು ಭ್ರಮೆಯು ತಲೆದೋರಿಯದಲ್ಲದೆ, ನಿಜವಾಗಿ ಸ್ವತ್ತುಗಳ್ಳಾವದೂ ಚೋರರ ಕೈವಶವಾಗಲಲ್ಲವೆಂದು ಹೇಳಿದನು. +ಚಂಚಲನೇತ್ರರು ಅರನಗೆ ನಕ್ಕು ಮಾತಾಡದೆ ಹೋದರು. +ವಾಗ್ದೇವಿಯು ಅವನ ಪ್ರಶ್ನೆ ಹಾಳಾಗಲೆಂದು ಬೆನ್ನುಹಾಕಿ ನಡೆದಳು. +ತಾಯಿಯ ಪ್ರಾಣೂತ್ಕ್ರಮಣ ಕಾಲದಲ್ಲಿ ಅವನು ಯೆಂಗಿ ಹಾಕಿ ತನಗೆ ನಷ್ಟ ಮಾಡಿದನೆಂಬ ಸಿಟ್ಟನ್ನು ವಾಗ್ದೇವಿಯು ಬಿಟ್ಟರಲಿಲ್ಲ. +ಹಳೆಗೆಳೆಯನಾದ ಅವನನ್ಸು ಅಟ್ಟುವದಾಗಲೀ ಜರಿಯುವದಾಗಲೀ ಸಲ್ಲನೆಂದು ಬಾಯಿ ಮುಚ್ಚಿಕೊಂಡಿರಬೇಕಾಯಿತು. +ವಾಗ್ದೇವಿಯ ಬಿಡಾರದಲ್ಲಿಯೂ ಅಪರೂಪವಾಗಿ ಕಳವುಗಳು ನಡೆದವು. +ಆವಾಗ ಅವಳಿಗೂ ಕೊಂಚ ಆಶ್ಚರ್ಯವೂ ರವಷ್ಟು ಹೆದರಿಕೆಯೂ ಆಗಿ ಏನೂ ನಿವೃತ್ತಿಮಾರ್ಗ ಕಾಣದೆ ತರಹರಿಸಿದಳು. +ಒಂದು ದಿನ ಬೆಳಿಗ್ಗೆ ನೋಡುವಾಗ್ಗೆ ವಾಗ್ದೇವಿಯ ಕೋಣೆಯಲ್ಲಿದ್ದ ಪೆಟ್ಟಿಗೆಯ ಬೀಗವನ್ನು ಮುರಿದು ಅದರ ಒಳಗಿರುವ ಚಿನ್ನದ ಆಭರಣಗಳನ್ನು ಎತ್ತಿಹಾಕಿದುದು ಕಂಡುಬಂತು. +ಅವಳು ಆಗ ಪಟ್ಟ ವ್ಯಥೆಯು ಹೇಳತುದಿಯಿಲ್ಲ. +ಅದರ ಮೂರನೆ ಏನ ಚಂಚಲನೇತ್ರರ ಖಜಾನೆಯಿಂದ ಹೆಚ್ಚು ಮೌಲ್ಯದ ನಾಣ್ಯಗಳ ಸರಗಳೆರಡು ಮೂರು ಕಾಣದೆ ಹೋದುವು. +ಹಣದ ಚೀಲಗಳು ಕೆಲವು ಇಟ್ಟಲ್ಲಿ ಇರಲಿಲ್ಲ. +ಇನ್ನು ಮೌನ ತಾಳಿದರೆ ಸರ್ವಸ್ಪವೂ ಅತಂತ್ರವಾಗುವುದೆಂಬ ಭಯದಿಂದ ಚಂಚಲನೇತ್ರರು ಕೊತ್ವಾಲ ಚಾವಡಿಗೆ ವರ್ತಮಾನ ಕೊಟ್ಟರು. +ಕೊತ್ವಾಲ ಭೀಮಾಜಿಯು ದಫೆದಾರ ಯಾಗಪ್ಪನ ಒಟ್ಬಿ ನಲ್ಲಿ ತಡ ಮಾಡದೆ ಮಠಕ್ಕೆ ಬಂದು ಸನ್ಯಾಸಿಗಳ ದರ್ಶನವನ್ನು ಮಾಡಿ ಅವರ ಮತ್ತು ವಾಗ್ದೇವಿಯ ಹೇಳಿಕೆಗಳನ್ನು ಬರಕೊಂಡನು. +ಮಠದ ಸೇವಕರನೈಲ್ಲಾ ಕರೆಸಿ ಕೆಲವರಿಗೆ ಹೊಡೆದು ಕೆಲವರಿಗೆ ಬಡೆದು ವಿಶಿಷ್ಟ ಜನರಿಗೆ ಕಂಡಾ -ಪಟ್ಟೆ ಬಯ್ಯುತ್ತಾ ಕೋಳಗಳನ್ನು ತರಿಸಿ ಹಲವು ಬಡ ಚಾಕರರಿಗೆ ಹಾಕಿಸಿ ಅಬ್ಬರಿಸಿದರೂ ಪತ್ತೆದೊರೆಯದೆ ಹೋಯಿತು. +ವಾಗ್ದೇವಿಯ ವ್ಯಸನ ನೋಡಲಾರದೆ ಭೀಮಾಜಿಯು–“ಅವ್ವಾ!ನನ್ನ ಜೀವವೊಂದಿದ್ದರೆ ನಿಮ್ಮ ಮ್ಹಾಲು ವಿಶಿಷ್ಟ ತರಿಸಿಕೊಡುವೆನು. +ಹೆದರಬೇಡಿರಿ” ಎಂದು ಅವನು ಧೈರ್ಯ ಹೇಳಿದಾಗ ಲಾವಣ್ಯ ಪುರುಷನಾದ ಆ ನಡುಪ್ರಾಯದ ಕೊತ್ವಾಲನ ಮೇಲೆ ಅವಳಿಗೆ ಬಹು ಪ್ರೀತಿಯಾಯಿತು. +ಅವನನ್ನು ಗಪ್ಪನೆ ಹೋಗಬಿಡದೆ ಪರಿಷ್ಕಾರವಾದ ಫಲಾಹಾರವನ್ನೂ ಬಿಸಿ ಬಿಸಿ ಬೂನಿನ ನೀರನ್ನೂ ಕೊಟ್ಟು ಸಂತೃಪ್ತಿ ಪಡಿಸಿದ ಬಳಿಕ ಕೊಂಚ ಸಮಯ ತನ್ನ ಸುಖ ದುಃಖಗಳನ್ನೂ ವೇದವ್ಯಾಸನು ತನಗೆ ಕೊಡುವ ಉಪಟಳೆಯ ಬಗೆಯನ್ನೂ ವಿವರಿಸಿ ಅವನ ಮನಸ್ಸನ್ನು ತನ್ನ ಕಡೆಗೆ ತಿರುಗಿಸಿಕೊಂಡಳು. +“ಇಗೋ!ಮಠದಲ್ಲಿ ಏನೂ ಕಡಿಮೆ ಇಲ್ಲಾ. +ಸಹಾಯಹೀನರಾದ ನಮ್ಮನ್ನು ಬಿಟ್ಟುಹಾಕದೆ ನಡಿಸಿದರೆ ನಿಮ್ಮ ಮನಸ್ಸಿಗೆ ಸರಿಯಾಗಿ ನಾವು ನಡೆದುಕೊಳ್ಳುವುದೇ ಸರಿ” ಎಂದು ಮಧುರೋಕ್ತಿಗಳಿಂದ ಕೊತ್ವಾಲನನ್ನು ಪೂರ್ಣವಾಗಿ ಕೈವಶ ಮಾಡಿ ಕೊಂಡಳು. +ವಾಗ್ದೇವಿಯ ಪ್ರಸನ್ನತೆಯನ್ನು ಹೊಂದದೆ ಬದುಕಿ ಪುರುಷಾರ್ಥ ವಿಲ್ಲವೆಂದೆಣಿಸಿದ ಭೀಮಾಜಿಯು ದಫೆದಾರನನ್ನು ಕರೆದು ತನ್ನ ಜವಾನರೊ ಳಗೆ ಕಳ್ಳನನ್ನು ಹಿಡಿಯುವ ಸಮರ್ಧನ್ಯಾರೆಂದು ಕೇಳಿದನು. +ಯಾಗಪ್ಪಾ–“ ಬುದ್ಧಿ!ಬುದ್ಧಿ!ಬುದ್ಧಿ!ಯಾಕುಬಖಾನ ಒಬ್ಬನೇ ಸೈ; +ಬಾಕಿ ಎಲ್ಲಾ ನನ್ನ ಮಕ್ಕಳು ಉಂಬೋಕೆ ಆದಾವು. +ನಾನು ದಿನಾಲು ತಲೆ ಬಡಕೊಂಡಿ ಮಾಡಿಕೊಂಡಿ ಆ ತುರ್ಕರ ಪೋರನಿಗೆ ಹುಸಾರಮಾಡಿಯೇನೆ? +ಅವಾಂ ಹಡ್ಕೆಬುದ್ಧಿಗಿನ್ನೂ ಇಳೀಲಿಲ್ಲ. +ಲುಚ್ಚಾಗಿರಿ ಮಾಡಿದರೆ ಕೊಂದು ಬಿಟ್ಟೆನಂದಿ. +ಅವನಿಗೆ ಚಂದಾಗಿ ಬುದ್ಧಿ ಹೇಳಿಯೇನಪ್ಸಾ. +ಇನ್ನುಮೇಗೆ ಅವನ ಕಾರ್ಬಾರು ಎರ್ತೆತೊ ಏನೋ ಸದಾಸಿವ ಬಲ್ಲಾ.” +ಭೀಮಾಜಿ–“ನಿನ್ನ ಅಧಿಕಪ್ರಸಂಗ ಹಾಗಿರಲಿ; +ಹರತರದೂದಮಾಡಿ ಮಾಲು ತಲಾಸ ಮಾಡಿದರೆ ಅವನಿಗೆ ದಫೇದಾರಿ ಕೊಡಿಸಿಬಿಡುತ್ತೇನೆ. +ಅವನಿಗೆ ಇತ್ತ ಬೇಗ ಕಳುಹಿಸು.” +ಯಾಗಪ್ಪಾ–“ಸಮ ಆಯಿತು, ಅವನ ಶಿಫಾರತಿಗೆ ಹೋಗಿ ನನ್ನ ಅನ್ನದ ಮಡೆ ಅಟ್ಟಕ್ಕೆ ಹತ್ತೆಕೆ ಆಯಿತು. +ಬುದ್ಧಿ!ಅವನಿಗೆ ಜಪೆದಾರಿ ಕೊಟ್ಟರೆ ನಾನು ಯಾರ ಕಾಲು ಗುದ್ದೆಕೆ ಹೋಗಲೀ! +ನನ್ನ ದೊರೆ ಆ ಪೋರನ ಹೆಸರು ನಾನ್ಯಾಕೆ ಹೇಳಬೇಕಾಯಿತು? +ನಂಗೆ ಹಿಡಿದ ಗಿರಬದಾರಿ ಅಂತೇನೆ.” +ಭೀಮಾಜಿ—“ಎಷ್ಟು ಉದ್ದ ಮಾತಾಡ್ತಿ. +ನಿನ್ನ ಕೆಲಸ ಯಾರು ತೆಗೆ ಯುತ್ತಾರೆ? +ನಿನಗೆ ನಾರ್ನಪರ್ವರ್ಶಿಆದ ಮೇಲೆ ನಿನ್ನ ಕೆಲಸ ಅವನಿಗೆ ಕೊಡುವಾ. +ಈಗಲೇ ಕೊಡಲಿಕ್ಕೆ ಯಾರಿಗಾದರೂ ಹುಚ್ಚದೆಯೇ? +ಹೆದರ ಬೇಡ.” +ಯಾಗವ್ಪಾ–“ಬುದ್ಧಿ, ತಮ್ಮ ವಾದವೇ ಗತಿ. +ಖಾವಂದರು ಈವರೇಗೆ ನನ್ನ ಮೇಗೆ ದಯ ಇಟ್ಟು ಕಾಟ ನಡೆಸಿಕೊಂಡಿರಿ. +ಇನ್ನುವಾ ಏನು ಬಾಳಾ ವರ್ಸ ಬದಕೆಕಿಲ್ಲ. +ಮುಕ್ಷ ಮಕ್ಕಳುಮರಿಯಿದ್ದವ ಬಿಟ್ಟು ಹಾಕೆಕಾಗದು ಅಂದಿ. +ಪಾದಕ್ಗೆ ಬಿದ್ದುಕೊಂಬ್ತೇನೆ ನನ್ನ ಧನಿ ರಾಮಧನಿ.? +ಕಚೇರಿಗೆ ಹೋಗಿ ಯಾಕುಬಖಾನನಿಗೆ ಅನುಜ್ಞೆಗಳನ್ನು ಕೊಡುವದು ವಾಡಿಕೆಯಾದ ನಡವಳ್ತೆಯ ಕ್ರಮವಾಗಿದ್ದರೂ ವಾಗ್ದೇವಿಯ ಸಾಮಾಪ್ಯವು ಬಿಟ್ಟು ಹೋಗುವುದೆಂಬ ಹೆದರಿಕೆಯಿಂದ ಅವನನ್ನು ಮಠಕ್ಕೆ ಕಳುಹಿಸಿ ಕೊಡೆಂದು ಕೊತ್ವಾಲನು ದಫೇದಾರಗೆ ಅಪ್ಪಣೆಕೊಟ್ಟನು. +ಯಾಗಪ್ಪನು ಬೇಗ ಯಾಕುಬಖಾನನನ್ನು ಕರಕೊಂಡು ಮಠಕ್ಕೆ ಬಂದನು. +ಕೊತ್ವಾಲನು ಆ ಯಾಕುಬಖಾನನನ್ನು ಸಮಾಪಕ್ಕೆ ಕರೆದು, ಅವನು ಮಾಡತಕ್ಕ ಕೆಲಸದ ಸ್ಥಿತಿಯನ್ನು ಅಂತರಂಗದಲ್ಲಿ ತಿಳಿಸಿದನು. +ಖಾವಂದರಲ್ಲಪ್ಪಣೆಯಾದರೆ ಈ ಕ್ಷಣ ಹೋಗಿ ಕೆಲಸವೆಲ್ಲಾ ಜಯಿಸಿಕೊಂಡು ಬಂದು ಸಾಹೇಬರ ಪಾದಗಳಿಗೆ ಅರಿಕೆ ಮಾಡಿಕೊಳ್ಳುವೆನು ಎಂದು ಅವನು ಅದಬ್ಬಿನಿಂದ ಸಲಾಂಮಾಡಿ, ನಿಂತುಕೊಂಡನು. +ಸಾವಕಾಶ ಮಾಡದೆ ನಡಿ ಎಂದು ಭೀಮಾಜಿಯು ಯಾಕುಬಖಾನನನ್ನು ಕಳುಹಿಸಿ ಒಣಹರಟಿ ಮಾತಾಡುವ ಯಾಗಪ್ಪಗೆ ಏನೋ ಬಿಟ್ಟಿಹೇಳಿ ಅಟ್ಟಿದನು. +ಒಂದೆರಡು ಘಳಿಗೆ ವಾಗ್ದೇವಿಯ ಕೂಡ ಸಂಭಾಷಣೆ ಮಾಡುತ್ತಾ ಊಟದ ಸಮಯವಾಯಿತೆಂದು ಮನೆಗೆ ಹೋಗ ಹೊರಟಾಗ ಅವಳು–“ತಮ್ಮ ಮರುಭೇಟಿ ನನಗೆ ಇನ್ಫಾವಾಗ ಸಿಕ್ಕುವದೆಂದು ಅಪ್ಪಣೆಯಾಗಲಿ?” ಎಂದಳು. +‘ರೋಗಿ ಬಯಸಿದ್ದು ಹಾಲೋಗರ ವೈದ್ಯ ಹೇಳಿದ್ದು ಹಾಲೋಗರ’ ಎಂಬಂತಾಯಿತು. +ವಾಗ್ದೇವಿಯು ನಿರಾಯಾಸವಾಗಿ ಭೀಮಾಜಿಗೆ ಸುಪ್ರ ಸನ್ನಳಾಗುವ ಶುಭ ಸೂಚಕಮಾತು ಅವಳ ಬಾಯಿಯಿಂದಲೇ ಹೊರಟ ಮೇಲೆ ಅವನು ಪುಣ್ಯವಂತನೆನ್ಸಬೇಕು. +ಅವನೂ ಹಾಗೆಯೇ ತಿಳಕೊಂಡನು. +ಕಳವಿನ ಪ್ರಕರಣ ಮುಗಿಯುವ ತನಕ ಆಗಾಗ್ಗೆ ಬರುವೆನೆಂನು ಅವನು ಮಾತು ಕೊಟ್ಟನು, ಆ ವಿಚಾರ ಹಾಗಿರಲಿ — “ನಾನು ಕಾರ್ಯಜಾಣೆಯಲ್ಲ. +ತಮ್ಮಂಥಾ ಪ್ರಭುಗಳ ಸಂದರ್ಶನವು ಇಷ್ಟು ಸುಲಭವಾಗಿ ಇಂದು ದೊರಕಿದ್ದು ನನ್ನ ಪೂರ್ವ ಪುಣ್ಯ; +ಸಮಯೋಚಿತ ನೋಡಿ ನನ್ನನ್ನು ವಿಚಾರಿಸಿ ಕೊಂಡರೆ ಕೃತ್ಯಳಾಗುವೆನು” ಎಂದು ಸವಿಯಾದ ಮಾತುಗಳಿಂದ ಕೊತ್ವಾಲನನ್ನು ವಾಗ್ದೇವಿಯು ಮಂಕುಗೊಳಿಸಿ ಬೆಳ್ಳಿಯದೊಂದು ಹರಿವಾಣ ಉಚಿತಕೊಟ್ಟು ಕಳುಹಿಸಿದಳು. +ಭೀಮಾಜಿಯ ಆನಂದಕ್ಕೆ ಹದ ಮೀರಿತು. +ತಾನು ನಡೆಯುವುದು ಕಾಲಿನಿಂದಲೋ ತಲೆಯಿಂದಲೋ ಎಂಬದು ತಿಳಿಯದೆ ವಾಗ್ದೇವಿಯ ಸುಂದರ ಪ್ರತಿಮೆಯನ್ನು ತನ್ನ ಹೃದಯದಲ್ಲಿ ನೆಲೆಗೊಳಿಸಿ ನಷ್ಟದ್ರವ್ಯವನ್ನು ಅವಳಿಗೆ ಸಿಕ್ಕುವಂತೆ ಪ್ರಯತ್ನಮಾಡಿ ಅವಳ ಕೃತಜ್ಞತೆಯನ್ನು ಪಡೆಯಬೇಕೆಂಬ ಆತುರದಿಂದ ಹಲವು ಮನೋ ಜಯ ಯೋಚನೆಗಳನ್ನು ಮಾಡುತ್ತಾ ಮನೆಗೆ ಬಂದನು. +ಯಾಕೂಬಖಾನನು ಕೊತ್ವಾಲನ ಅಪ್ಪಣೆಗನುಗುಣವಾಗಿ ಮಠದಿಂದ ಹೊರಟ ಮೇಲೆ ಯಾಗಪ್ಪನು ಅವನನ್ನು ದಾರಿಯಲ್ಲಿ ತಡದು–ದೊಡ್ಡ ಹಲಸಿನಕಾಯಿ ಸಿಕ್ಕಿಯದೆ, ತನಗೂ ನಾಲ್ಕು ಸೋಳೆ ಕೊಡೆಂದು ಕೇಳಿದನು. +ಯಾಕುಬಖಾನನು ನಕ್ಕು ಆಗಬಹುದೆಂದು ನಡೆದನು. +ಯಾಕುಬಖಾನನು ಕೊತ್ವಾಲನ ಜವಾನರಲ್ಲಿ ಒಳ್ಳೇ ಮತಿಮಂತನು. +ಮತ್ತು ಹೆಚ್ಚು ಮಾತುಗಳಿಂದ ಸಮಯ ಕಳಿಯುವ ಯೌವನಸ್ಥನಲ್ಲ. +ಅವನು ಮಠದಲ್ಲಿರುವ ನೌಕಕರರನ್ನೆಲ್ಲಾ ಪ್ರತ್ಯೇಕವಾಗಿ ಕಂಡು ತನಗೆ ಸಿಕ್ಕಬಹುದಾದ ಅನುಭವವನ್ನು ಅವರಿಂದ ಪಡಕೊಂಡು ಅದನ್ನೆಲ್ಲಾ ಮಥಿಸಿ ನೋಡಿದನು. +ಕೆಪ್ಪಮಾಣಿಯ ಮೇಲೆ ಅವನಿಗೂ ಅನುಮಾನವಾಯಿತು. +ಆದರೆ ಏಕಾಯೇಕಿ ಮುಂದರಿಸಿ ದರೆ ಕೆಲಸ ಕೈಗೂಡದೆಂದು ಅನುಮಾನದಿಂದ ನಿಧಾನವಾಗಿ ಆಲೋಚನೆ ಮಾಡಿದನು. +ಅ ದಿನ ಇಡೀ ಅವನು ಸಿಕ್ಕುವಷ್ಟು ವರ್ತಮಾನವನ್ನು ಸಂಗ್ರಹಿಸಿ ರಾತ್ರೆ ಕಾಲದಲ್ಲಿ ಬಾನಾಬುಡಾನಗಿರಿಯಿಂದ ಪದಗಳನ್ನು ಹೇಳುತ್ತಾ ಬೇಡಲಿಕ್ಕೆ ಬರುವ ಫಕೀರನಂತೆ ವೇಷಹಾಕಿ ಚಂಚಲನೇತ್ರರ ಮಠದ ಎದುರು ಭಾಗದಲ್ಲಿರುವ ಅಂಗಡಿಯ ಕೆಳಗೆ ಮಲಗಿಕೊಂಡಿದ್ದನು. +ಆದರೆ ನಿದ್ರೆ ಮಾಡಿರಲಿಲ್ಲ. +ಬೀದಿಯಲ್ಲಿ ಜನರ ಸಂಚಾರ ಕಡಿಮೆಯಾಗುತ್ತಲೇ ಕೆಪ್ಪಮಾಣಿಯು ಮಠದಿಂದ ಬೀದಿಗಿಳಿದು ತಲೆಯನ್ನು ಬಗ್ಗಿಸಿಕೊಂಡು ತ್ವರೆಯಾಗಿ ಹೋಗುವದು ಯಾಕುಬಖಾನನ ಕಣ್ಣಿಗೆಬಿತ್ತು. +ಹೆಚ್ಚುಕಡಿಮೆ ಹತ್ತುಮಾರು ದೂರದಿಂದ ಅವನು ಕೆಪ್ಪಮಾಣಿಯನ್ನು ಹಿಂಬಾಲಿಸಿದನು. +ಮಾಣಿಯು ಹಿಂದೆಮುಂದೆ ನೋಡದೆ ಉಕ್ಕಡದ ಸಮಿತಾಪವಿರುವ ಜಾನಕಿ ಎಂಬ ವೇಶ್ಯಾ ಸ್ತ್ರೀಯ ಮನೆಯ ಉಪ್ಪರಿಗೆಯನ್ನೇರಿದನು. +ಯಾಕುಬಖಾನನು ಅದೇ ಮನೆಯ ಕೆಳಗೆ ಇರುವ ಒಂದು ಸಣ್ಣ ಗುಡಿಸಲಿನಲ್ಲಿ ಅವಿತುಕೊಂಡನು. +ಮಧ್ಯರಾತ್ರಿ ಸರಿಯಂತರ ಜಾನಕಿಯೂ ಕೆಪ್ಪಮಾಣಿಯೂ ಮಾತನಾಡುತ್ತ ನೆಗಾಡುತ್ತಾ ಹಾಡುತ್ತಾ ಇರುವ ಗೌಜಿಯು ಯಾಕುಬಖಾನನ ಕಿವಿಗೆ ಬೀಳುತ್ತಿತ್ತು. +ಇವನು ಕೆಪ್ಪನೆಂಬ ಮಾತು ಬರೇಸುಳ್ಳು. +ಪಕ್ಕಾಕಳ್ಳ ನೇಸರಿ ಎಂದು ಯಾಕುಬಖಾನನು ಚೆನ್ನಾಗಿ ಕಿವಿಗೊಟ್ಟು ಅವರ ಸಂಭಾಷಣೆಯನ್ನು ಕೇಳುವದರಲ್ಲಿ ಬಿದ್ದನು. +ಅವರು ಒಮ್ಮೆ ಘಟ್ಟಿಯಾಗಿಯೂ ಇನ್ನೊಮ್ಮೆ ಮೆಲ್ಲಗೂ ಮಾತನಾಡುತ್ತಿದ್ದರು. +ಬೆಳಗಿನ ಜಾವದಲ್ಲಿ ಉಭಯತ್ರರೂ ಕೆಳಗಿಳಿದು ಬೀದಿಗೆ ಇಳಿಯುವ ಮೆಟ್ಟಿಲುಗಳ ಬಳಿಯೆ ನಿಂತುಕೊಂಡು ಸ್ವಲ್ಪಹೊತ್ತು ಪುನಃ ಮಾತಾಡಿದರು. +ನಾಡದು ಬರುವೆನೆಂದು ಕೆಪ್ಪಮಾಣಿಯು ಬೀದಿಗಿಳಿಯುತ್ತಲೇ—“ನಾಳೆಸವಾರಿ ಹಾಗಾದರೆ ಯಾವಲ್ಲಿಗೆ?” ಎಂದು ಅವಳು ಕೇಳಿದಳು. +ಅವಳಿಗೆ ಪ್ರತ್ಯುತ್ತರ ನೊಡದೆ ಮುಂದರಿಸಿ ಹೋದನು. +ಯಾಕುಬಖಾನನು ಮೆಲ್ಲಗೆ ಹೊರಟು ಅವನನ್ನು ದೂರದಿಂದ ಹಿಂಬಾಲಿಸಿದನು. +ಕೆಪ್ಪ ಮಾಣಿಯು ಮಠಕ್ಕೆ ಹೊಕ್ಕನಂತರ ಯಾಕುಬಖಾನನು ತನ್ನ ಮನೆಗೆ ಮರಳಿದನು. +ಮರುದಿನ ರಾತ್ರಿ ಯಾಕುಬಖಾನನು ಅದೇ ವೇಷಮಾಡಿ ಅದೇ ಅಂಗಡಿಯಲ್ಲಿ ಬಿದ್ದುಕೊಂಡಿರುವಾಗ ಮುಂಚಿನ ರಾತ್ರೆಯಂತೆ ಮಠದಿಂದ ಬೀದಿಗಿಳಿದು ಜೋರಾಗಿ ನಡಿಯುವ ಕೆಪ್ಪಮಾಣಿಯನ್ನು ಕಂಡು ಯಾಕುಬನು ಜಾಗ್ರತೆಯಿಂದ ಅವನ ಹಿಂದೆಯೇ ಹೋದನು. +ಕೆಪ್ಪಮಾಣಿಯು ಅ ರಾತ್ರೆ ಪೇಟಿಯ ತುದಿಯಲ್ಲಿ ಸುಂದರಿಯೆಂಬ ವೇಶ್ಯೆಯ ಮನೆಯ ಒಳಹೊಕ್ಕನು. +ಯಾಕುಬನು ಹೊರಗೆ ಬೀದಿಯಲ್ಲಿ ನಿಂತುಕೊಳ್ಳದೆ ಆ ಮನೆಯ ಬದಿಯಲ್ಲಿರುವ ತಿಟ್ಟೆಯಲ್ಲಿ ಕೂತುಕೊಂಡನು. +ಆ ಸ್ಥಳದಿಂದ ಮನೆಯ ಒಳಗೆ ಕೆಪ್ಪ ಮಾಣಿಯೂ ಸುಂದರಿಯೂ ಆಡುವ ಮಾತುಗಳು ಖಾನನ ಕವಿಗೆ ಸರಿಯಾಗಿ ಕೇಳುತ್ತಿದ್ದುವು. +ಉಸುರು ಅತ್ತಿತ್ತ ಹಂದಿಸದೆ ಯಾಕುಬನು ಕೂತನು. +“ಊಚು ಆಭರಣಗಳೆಲ್ಲಾ ಜಾನಕಿಗೆ; +ನಖಾರೆ ನಗಗಳೆಲ್ಲಾ ನನಗೆ ತಂದು ಕೊಟ್ಟಿದ್ದೀರಿ. +ನಾನೇನು ಅಷ್ಟು ಕುರೂಪಿ? +ಅವಳು ಬಹುರೂಪವಂತೆಯೋ? +ಅವಳಿಗೆ ಒಳ್ಳೆ ಒಳ್ಳೆ ಸರಗಳು ಕೊಟ್ಟಿದ್ದೀರಂತೆ. +ನಾನು ಮಾಡಿದ ತಪ್ಪೇನು? +ನನ್ನ ಮೇಲೆ ಅಷ್ಟು ಬೇಸರವೇಕೆ?” ಎಂದು ಅವಳು ಜರಿಯುವದು ಯಾಕುಬಖಾನನ ಕಿವಿಗೆ ಬಿತ್ತು. +ಗುಟ್ಟು ಈಗ ಸಿಕ್ಕಿತು. +ಇನ್ನು ಕಾಲಹರಣಮಾಡಿದರೆ ಕಾರ್ಯಹಾನಿಯಾಗುನದೇ ಸರಿ ಎಂದು ಯಾಕುಬಖಾನನು ಕೂಡಲೇ ಅಲ್ಲಿಂದ ಹೊರಟು ನೆಟ್ಟಗೆ ತನ್ನ ಮನೆಗೆ ಬಂದನು. +ಮರುದಿವಸ ಪ್ರಾತಃ ಕಾಲದಲ್ಲಿ ಕೊತ್ವಾಲನನ್ನು ಕಂಡು ಸಲಾಂ ಹೊಡೆದು ಕೈತಟ್ಟಿ ನಿಂತು ಕೊಂಡನು. +ಕೊತ್ವಾಲನು ಅವನನ್ನು ಏಕಾಂತ ಸ್ಥಳಕ್ಕೆ ಕರದು ಅವನು ಕೊಟ್ಟ ವರ್ತಮಾನವನೈಲ್ಲಾ ಕೇಳಿ–“ವ್ಹಾವ್ಚಾ, ಬರಾಬರ್‌, ಶಾಣಾ ಹೆ ಠೇಕೊ, ಅಬೀಚ್‌ ಆತಾಹುಂ?(ವ್ಟಾವ್ಟಾ, ಬರಾಬರಿ ನೀನು ಬದ್ಧಿ ವಂತನಾಗಿದ್ದಿ.ತಡಿ ಈಗಲೇ ಬರುವೆನು) ಎಂದು ಒಳಗೆ ಹೋಗಿ ವಸ್ತ್ರ ಧರಿಸಿ ಕೊಂಡು ಬೇರೆ ಕೆಲವು ಜವಾನರನ್ನು ಸಂಗಡ ಕರಕೊಂಡು ಕೆಲವರನ್ನು ಸುಂದರಿಯ ಮನೆಗೆ ಸುತ್ತುಹಾಕಲಿಕ್ಕೆ ಹೇಳಿ ಪ್ರಥಮತಃ ಜಾನಕಿಯ ಮನೆಯನ್ನು ಶೋಧನೆ ಮಾಡಿಸಿ ನೋಡಿದ್ದಲ್ಲಿ ಮಠದಿಂದ ಕಳವಾದ ಹಲವು ಆಭರಣಗಳು ಸಿಕ್ಕಿದವು. +ಬಳಿಕ ಸುಂದರಿಯ ಮನೆಯ ಶೋಧವಾಯಿತು. +ಅಲ್ಲಿಯೂ ಮಠದ ಒಡವೆಗಳೂ ವಾಗ್ದೇವಿಯ ಆಭರಣಗಳೂ ಸಿಕ್ಕಿದವು. +ಅವುಗಳನ್ನೆಲ್ಲಾ ಸ್ವಾಧೀನಮಾಡಿಕೊಂಡು ಕೊತ್ವಾಲನು ಪಟ್ಟಿಬರಕೊಂಡನು. +ಭೀಮಾಜಿಯ ಸಂತೋಷವು ಸಮುದ್ರದಂತೆ ಉಕ್ಕಿತು. +ಅವನು ಚಮತ್ಕಾರದಿಂದ ತಾವು ಹಿಡಿದು ಪ್ರಕರಣ ತಲಾಷು ಮಾಡಿದ್ದಕ್ಕಾಗಿ ಮೇಲು ಉದ್ಯೋಗಸ್ಥರ ಶ್ಲಾಘನೆಗೆ ಹ್ಯಾಗೂ ಯೋಗೃನಾದನಷ್ಟೇ ಅಲ್ಲ, ವಾಗ್ದೇವಿಯ ಮತ್ತು ಚಂಚಲನೇತ್ರರ ಕೃತಜ್ಞತೆಗೂ ಭಾಗಿಯಾದನು. +ಶೋಧನೆಯಲ್ಲಿ ಸಿಕ್ಕಿದ ಆಭರಣಗಳನ್ನು ಮಠಕ್ಕೆ ತಂದು ಅವುಗಳು ಚಂಚಲನೇತ್ರರದೆಂಬು ದಕ್ಕೆ ಸಾಕ್ಷವನ್ನು ದೊರಕಿಸಿಕೊಂಡು ಮೊಕದ್ದಮೆಯನ್ನು ಅಪರಾಧಿಯ ಸಹಿತ ಫೌಜಿದಾರಿ ಕಾರಭಾರಿಯ ಕಚೇರಿಗೆ ಕಳುಹಿಸಿಕೊಟ್ಟನು. +ಅಂದಿನ ಕೆಲಸವೆಲ್ಲಾ ಕ್ಷಿಪ್ರ ತೀರಿಸಿಬಿಟ್ಟು ಸಾಯಂಕಾಲ ಮಠಕ್ಕೆ ಬಂದು ಚಂಚಲ ನೇತ್ರರಿಗೆ ಪ್ರಣಿಸಾತ ಮಾಡಿದನು. +ಯತಿಗಳು ಅವನಿಗೆ ಬೇಕಷ್ಟು ಹೊಗಳಿದರು. +ಆಗ ಡೊಳ್ಳು ಬೆಳೆಸಿಕೊಂಡು ಸಮಿಪದಲ್ಲಿದ್ದ ಕೆಲವು ಆಚಾರ್ಯರು “ಓಹೋ ಹೋ ಇವರೇ ಸ್ವಾಮೀ!ದೊಡ್ಡಪ್ರಾಜ್ಞರು! +ಪ್ರಚಂಡತಸ್ಕರ ಸಿಕ್ಷರು; + ಸಜ್ಜನರಕ್ಷಕಶ್ರೇಷ್ಠರು; +ಕುಶಾಗ್ರ ಬುದ್ಧಿಯುಳ್ಳವರು. +ನಿಷ್ಠಾವಂತರು,ಪರಾಪೇಕ್ಸೆ ಇಲ್ಲದವರು. +ಸಾಕ್ಷಾತ್‌ ಯಮನಂತೆ ಅಪರಾಧಿಗಳನ್ನು ದಂಡಿಸುವವರು. +ದೈವಬ್ರಾಹ್ಮಣರ ಮೇಲೆ ಪೂರ್ಣ ವಿಶ್ವಾಸ ಉಳ್ಳವರು. +ದೈವನಿರ್ಮಿತ ಸಕಲ ಚರಾಚರವನ್ಮುಗಳಲ್ಲಿಯೂ ಅಂತಃಕರಣ ಶುದ್ಧವಾಗಿರುವವರು” ಎಂದು ಶುಷ್ಥೂಪಚಾರ ಮಾಡಿದರು. +ಸ್ವಾಮಿಗಳ ಅಪ್ಪಣೆ ಪಡಕೊಂಡು ಭೀಮಾಜಿಯು ಹೊರಡುವಾಗ ಆಬಾಚಾರ್ಯನು ಅವನನ್ನು ಅಡ್ಡತಡದು ಬಿಡಾರಕ್ಕೆ ಕರತಂದನು. +ಅವನ ಆಗಮನವನ್ನು ಕಾಯುತ್ತಾ ಇದ್ದ ವಾಗ್ದೇವಿಯು ಪ್ರಥಮತಃ ಬೇಕಾದ ಫಲಾಹಾರ ಸಾಹಿತ್ಯಗಳಿಂದ ಅವನ ದಣುವನ್ನು ಪರಿಹರಿಸಿ, ತಾಂಬೂಲಾದಿ ಉಪಚಾರಗಳನ್ನು ಮಾಡಿದ ಮೇಲೆ-“ಕಳ್ಳನನ್ನು ಲವಮಾತ್ರದಲ್ಲಿ ಹಿಡಿದು ಬಿಟ್ಟಿರೇ!” ಎಂದು ಸಾನುರಾಗದಿಂದ ಕೇಳಿದಳು. +ವಾಗ್ದೇವಿ–“ಈ ಪ್ರಕರಣವನ್ನು ತಾವು ತೀರಿಸುವದು ಯಾವಾಗ?” +ಭೀಮಾಜಿ–“ಇನ್ನು ಅದರಲ್ಲಿ ನಾನು ಮಾಡತಕ್ಕದ್ದೇನಿಲ್ಲ. +ಅಪರಾಧಿಗಳಿಗೆ ಶಿಕ್ಷೆ ಕೊಡುವ ಅಧಿಕಾರಿ ಬೇರೆ. +ವಾಗ್ದೇವಿ–“ಅವರ್ಯಾರು ಮತ್ತೆ?” +ಭೀಮಾಜಿ–“ಪೌಜದಾರಿ ಅದಾಲತ್‌ ಕಾರಭಾರಿ ಶಾಬಯ್ಯನವರು. +ಪ್ರಕರಣವು ಬಡಾತಿ ತಾಬಿಗೆ ಸೇರುವದರಿಂದ ಅದನ್ನು ಆ ಉದ್ಯೋಗಸ್ತರ ಕಚೇರಿಗೆ ಕಳುಹಿಸಬೇಕಾಯಿತು.? +ವಾಗ್ದೇವಿ–“ರಾಯರೇ!ಆ ಉದ್ಯೋಗಸ್ತರ ಮರ್ಜಿ ಇನ್ಯಾವ ರೀತಿ ಅದೆಯೋ?” +ಫೀಮಾಜಿ–“ದೊಡ್ಡ ಉದ್ಯೋಗಸ್ತರಲ್ಲವೇ? +ಅವರ ಹುದ್ದೆಗೆ ಸರಿ ಯಾದ ಭರಂ ಅವರಲ್ಲಿ ಇಲ್ಲದೆ ಹೋದರೆ ಅವರಿಗೆ ಯಾರು ಗುಮಾನಮಾಡ್ಯಾರು? +ಮರ್ಜಿ ಸ್ವಲ್ಪ ಕಠಿಣನಾದರೂ ಮನಸ್ಸು ಒಳ್ಳೇದು. +ಸಜ್ಜನರಿಗೆ ಪರಿಪಾಲನೆ ಮಾಡುವವರೇ ಸೈ” +ವಾಗ್ದೇವಿ–“ತಮ್ಮ ಮಾತು ಕೇಳುವಾಗ ಹೆದರಿಕೆಯಾಗುತ್ತೆ. +ಸಾಮಾನ್ಯ ಜನರು ಅವರ ಭೇಟಿಮಾಡಿ ಸಂಕಷ್ಟಗಳನ್ನು ಹೇಳಿಕೊಳ್ಳಲಿಕ್ಕೆ ಸಂದರ್ಭವನಿಲ್ಲವೇನು?” +ಭೀಮಾಜಿ–“ಎಲ್ಲರಿಗೂ ಅಲ್ಲಿ ಆಶ್ರಯ ಸಿಕ್ಕುವ ಹಾಗಿಲ್ಲ. +ಮನ ಮಾನೆ ಜನರು ಅವರ ಆಶ್ರಯಪಡಿಯುವದಕ್ಕೆ ಪಾತ್ರರಲ್ಲ. +ವಾಗ್ದೇವಿ–“ತಮಗೂ ಅವರಿಗೂ ಪರಸ್ಪರ ಪ್ರೀತಿಯುಂಟೇನು?? +ಭೀಮಾಜಿ–“ಅವರು ದೊಡ್ಡ ಉದ್ಯೋಗಸ್ತರು. +ಆದರೂ ನನ್ನ ಮೇಲೆ ಅವರಿಗೆ ಕೊಂಚ ಪ್ರೀತಿಯೂ ಚಂದಾಗಿ ವಿಶ್ವಾಸವೂ ಅದೆ.” +ವಾಗ್ದೇವಿ–“ಹಾಗಾದರೆ ನನಗೇನು ಭಯ? +ತಾವು ಹ್ಯಾಗೂ ಅನಾಥೆಯಾದ ನನ್ನನ್ನು ಬಿಟ್ಟುಬಿಡುವವರಲ್ಲವಷ್ಟೆ. +ಆ ಕುರಿತು ತಮ್ಮ ವಾಗ್ದಾನ ನನಗೆ ಮೊದಲೇ ಸಿಕ್ಕಿಯದೆ. +ಆ ದೊಡ್ಡ ಅಧಿಕಾರಸ್ತರ ದರ್ಶನವು ನನಗೆ ದೊರೆಯುವ ಹಾಗೆ ತಾವು ಮಾಡಬೇಕು. +ಭೀಮಾಜಿ–“ಅಯ್ಯೊ, ಅದೆಲ್ಲಾ ನನ್ನಿಂದ ಸಾಧ್ಯವಾಗುವದೇ? +ನಿನ್ನ ಕೆಲಸ ನೋಡಿಕೊಂಡಿರುವದು ಬಿಟ್ಟು ಇಂಥಾ ಹಾಳುಹರಟೆಯಲ್ಲ ಪ್ರವೇಶಿಸುತ್ತೀಯಾ?ಎಂದು ಅವರೆಲ್ಲಾದರೂ ಸಿಟ್ಟುಮಾಡಿದರೆ ನನ್ನ ಮುಖಕ್ಕೆ ಮಂಗಳಾರತಿ ಆದಂತಾಗುವದು. +ನಾನು ಸ್ವತಃ ಮಾಡತಕ್ಕದ್ದೇನಾದರೂ ಇದ್ದರೆ ನಿಮ್ಮ ವಾತ್ಸಲ್ಯ ಸರ್ವಥಾ ಬಿಡುವವನಲ್ಲ. +ಇನ್ನೇನು ಹೇಳಲಿ?” +ವಾಗ್ದೇವಿ–“ತಾವು ನನ್ನಕೂಡೆ ಯಾಕೆ ಠಕ್ಕು ಮಾಡುತ್ತೀರಿ? +ತಮ್ಮ ಬುದ್ಧಿ ವಂತಿಗೆಗೆ ಮೆಚ್ಚಿದೆ. +ಹನುಮಂತನ ಆಶ್ರಯಿಸಿದವಗೆ ರಾಮದೇವರ ದರ್ಶನಕ್ಕೆ ಅಡ್ಡಿ ಯಾಗುವದೇ? +ಭೀಮಾಜಿ-“ಸರಿ ಸರಿ!ನಾನು ಒಬ್ಬ ಹನುಮಂತನೇ? +ಒಳ್ಳೇ ಉಪಮೆ!” +ವಾಗ್ದೇವಿ–“ರೂಪಿನಲ್ಲಿ ಹಾಗಲ್ಲವಾದರೂ ಸಾಮರ್ಥ್ಯದಲ್ಲಿ ತಮ್ಮನ್ನ ಹನುಮಂತಗೆ ನಾನು ಹೋಲಿಸುವದು ಅನ್ಯಾಯವಲ್ಲ. +ಪ್ರಧಾನ ಉಪಮೆ ಸರಿಯಾದ್ದೇ.” +ಭೀಮಾಜಿ– “ನನ್ನ ರೂಪವೂ ಸಾಮರ್ಥ್ಯವೂ ಹಾಗಿರಲಿ; +ನಮ್ಮ ನಮ್ಮ ಮಾರ್ಗಬಿಟ್ಟು ಹೋಗುವದು ನಮ್ಮ ಗೌರವಕ್ಕೆ ಹಾನಿಕರದ್ದು.? +ವಾಗ್ದೇವಿ–“ನಿಜವಾಗಿ ತಮಗೆ ನನ್ನ ಮೇಲೆ ವಾತ್ಸಲ್ಯ ಉಂಟಾದರೆ ತಮ್ಮ ಬಾಯಿಯಿಂದ ಇಂಥಾ ಅಪಧೈರ್ಯಪಡಿಸುವ ಮಾತು ಬರುತ್ತಿದ್ದಿಲ್ಲ. +ನನ್ನಿಂದ ಬಂದ ಅಪರಾಧವೇನು? +ತಮ್ಮ ಮನಸ್ಸಿನಲ್ಲಿ ವಿಕಲ್ಪಹುಟ್ಟಿಯದೆ. +ನನ್ನ ಚಾಡಿ ಯಾರಾದರೂ ಹೇಳಿ ನನ್ನ ಮೇಲೆ ತಾವು ವಿಮುಖರಾಗುವಂತೆ ಮಾಡಿರಬೇಕು.” +ಭೀಮಾಜಿ–“ಅವ್ವಾ!ಹಾಗೆ ಯಾಕೆ ಹೇಳುತ್ತೀರಿ? +ನಾನು ನಿಜವಾಗಿ ನಿಮ್ಮ ಹಿತಚಿಂತಕ. +ನಿಮ್ಮ ಚಾಡಿ ನನಗೆ ಯಾರೂ ಹೇಳಲಿಲ್ಲ. +ನೀವು ನನ್ನ ಮೇಲೆ ವ್ಯರ್ಥ ಅನುಮಾನ ಸಟ್ಟಿರುವಿರಿ. +ನನಗೆ ನಿಮ್ಮ ಮೇಲೆ ವಿಕಲ್ಪವೇನೂ ಹುಟ್ಟಲಿಲ್ಲ.” +ವಾಗ್ದೇವಿ– “ತಮ್ಮ ಮರೆಹೊಕ್ಕ ನಾನು ಇನ್ನೊಬ್ಬನ ಆಶ್ರಯ ಅಪೇಕ್ಷಿಸಲಾರೆ. +ತಾವು ನನ್ನನ್ನು ಕೊಂದರೂ ಸರಿ, ತಮ್ಮ ಸಂಶ್ರಯ ಬಿಟ್ಟಿರಲಾರೆ. +ತಮ್ಮ ಸ್ನೇಹಿತರೆಂತ ತಾವೇ ಒಪ್ಪಿಕೊಳ್ಳುವ ಶಾಬಯ್ಯನವರ ಭೇಟ ನನಗೆ ದೊರಕುವ ಹಾಗೆ ಇನ್ಯಾರು ನನ್ನ ಮೇಲೆ ಅನುಗ್ರಹವಿಡಬೇಕು? +ದೇವರಂತೆ ತಮ್ಮನ್ನು ನಂಬಿದ ನನ್ನನ್ನು ನಡುದಾರಿಯಲ್ಲಿ ಕೈಬಿಡುವಿರೇನು??” +ಭೀಮಾಜಿ–“ಈಗಲೇ ಅವರ ಭೇಟ ಮಾಡತಕ್ಕ ಅಗತ್ಯವೇನು? +ಕಳವಿನ ಸೊತ್ತುಗಳು ಸಿಕ್ಕಿಯವೆ. +ಪ್ರಕರಣ ಒಳ್ಳೇ ಘಟ್ಟಿ ಉಂಟು. +ಅದು ತೀರುವ ಮೊದಲು ಅವರ ಭೇಟಿಗೆ ಹೋಗಿ ಅವರಿಗೆ ಕೋಪ ಎಬ್ಬಿಸಿದರೆ ಯದ್ವಾತದ್ವ ಆಗಿ ಹೋಗುವದು.?” +ವಾಗ್ದೇವಿ–“ಇನ್ನೂ ನಿಮ್ಮ ತಸಕು ಬಿಡುವದಿಲ್ಲವಷ್ಟೆ? +ಹಾಲೆಂದು ವಿಷವನ್ನು ಕೊಟ್ಟಿರೂ ಕುಡಿಯುವಷ್ಟು ವಿಶ್ವಾಸ ತಮ್ಮ ವೇಲೆ ನಾನು ಇಟ್ಟಿ ರುವೆನು. +ಆದರೂ ನನ್ನ ಕಡೆಗೆ ಮನಃಶುದ್ಧಿಯುಳ್ಳವರಾಗಿ ತೋರುವುದಿಲ್ಲ.” +ಭೀಮಾಜಿ–“ನಿರಪರಾಧಿಯಾದ ನನ್ನನ್ನು ವ್ಯರ್ಥ ದೂರುವಿರೆ? +ನನ್ನ ಗ್ರಹಗತಿಯಿಂದ ನಿಮಗೆ ನನ್ನ ಮೇಲೆ ಸಂದೇಹ ಹುಟ್ಟಿಯದೆ. +ಈ ಕುರಿತು ನಾನು ಬಹಳ ಆಶ್ಚರ್ಯವೂ ಪಶ್ಚಾತ್ತಾಸವೂ ಪಡುತ್ತೇನೆ.?” +ವಾಗ್ಧೇವಿ–“ಆ ಪ್ರಸ್ತಾಪ ಬಿಟ್ಟುಬಿಡುವಾ. +ನಾನು ಅಭಾಗ್ಯಳು. +ಅಲ್ಲದಿದ್ದರೆ ಅಷ್ಟು ದೊಡ್ಡ ಅಧಿಕಾರಸ್ಥರು ತಮ್ಮ ಸ್ನೇಹಿತರಾದಾಗ್ಲೂ ಅವರ ಭೇಟಿ ತಮ್ಮ ಪರಿಮುಖ ನನಗೆ ದೊರಕುವದು ದುರ್ಲಭವಾಗದು. +ತಾವು ಈ ವರೆಗೆ ನನ್ನ ಮೇಲೆ ಇಟ್ಟ ಅನುಗ್ರಹವನ್ನು ನಾನು ದೇಹಾಂತ್ಯದ ಪರಿಯಂತರ ಮರೆಯುವವಳಲ್ಲ. +ತಮ್ಮ ಮೇಲೆ ನಾನು ಇಟ್ಟಷ್ಟು ವಿಶ್ವಾಸ ನಾನು ಇನ್ನೊಂದು ಪ್ರಾಣಿಯ ಮೇಲೆ ಇಡುವ ಹಾಗೂ ಇಲ್ಲ. +ಸಣ್ಣದೊಂದು ಅರಿಕೆಯದೆ, ಅದನ್ನಾದರೂ ಸಲ್ಲಿಸಿದರೆ ಕೃತಕೃತ್ಯಳಾಗುವೆನು.” +ಭೀಮಾಜಿ–ನನ್ನಿಂದಾಗುವ ಯಾವ ಕೆಲಸಕ್ಕೂ ಅಡ್ಡಿ ಹೇಳುವವನಲ್ಲ. +ನಿಮ್ಮ ಮೇಲೆ ನನಗೆ ಅಂತರ್ಯ ಶುದ್ಧವಾಗಿಯೇ ಇದೆ.?” +ವಾಗ್ದೇವಿ–“ತಮ್ಮಿಂದ ಆಗದ ಕೆಲಸ ಹೇಳುವಷ್ಟು ಬುದ್ಧಿ ಹೀನತೆ ನನ್ನಲ್ಲಿ ಇಲ್ಲ. +ನಾನು ಹೆಣ್ಣು ಹೆಂಗಸು ಖರೆ. +ನಾಳೆ ಸಾಯಂಕಾಲ ತಾವು ನನ್ನ ಮೇಲೆ ಪೂರ್ಣ ದಯವಿಟ್ಟು ನನ್ನಲ್ಲಿ ಒಂದು ಸಣ್ಣ ಭೋಜನ ಮಾಡಿ. +ನನಗೆ ಪರಮ ಪ್ರೇಮಿಗಳೆಂಬದಕ್ಕೆ ತಾರ್ಕಣೆ ಕೊಡಬೇಕು.” +ಭೀಮಾಜಿ–“ಅವ್ವಾ!ನೀವು ಯಾಕೆ ಅಷ್ಟು ಶ್ರಮ ತಕ್ಕೊಳ್ಳಬೇಕು? +ನನಗೆ ಅಂಥಾ ಉಪಚಾರವ್ಯಾಕೆ? +ನಾನು ನಿಮ್ಮ ಮೇಲೆ ತುಂಬಾ ಸ್ನೇಹ ಭಾವವುಳ್ಳವನಾಗಿರುತ್ತಾ, ನನಗೆ. +ಊಟಪಾಠವೆಂಬ ಆಡಂಬರವೇನು ಅಗತ್ಯ?” +ವಾಗ್ದೇವಿ–“ಅದು ದ್ವಯಾರ್ಥದ ಮಾತು. +ಮುಖ್ಯ ತಮ್ಮ ಮಾತಿನ ಅನ್ವಯವು ಔತಣಕ್ಕೆ ಬರಲೊಳ್ಗೆನೆಂಬುದೋ?ಖಂಡಿತ ಹೇಳಿಬಿಡಿ.” +ಭೀಮಾಜಿ– “ಅಮ್ಮಾ!ನೀವು ಯಾಕೆ ಅವಸರ ಪಡುತ್ತೀರಿ? +ನಾಳೆಯೇ ಔತಣನಾಗಬೇಕೇನು? +ಇನ್ನೊಂದು ದಿವಸ ನೋಡಬಹುದು. +ಸುಮ್ಮನೆ ಹಠ ಹಿಡಿಯಬೇಡಿ. +ನಾನು ಹೋಗುತ್ತೇನೆ. +ವಾಗ್ದೇವಿಯು ಭೀಮಾಜಿಯ ಮುಖವನ್ನು ನೋಡಿ ಅತ್ತಳು. +ಕೊತ್ವಾಲನು ನಿಜವಾಗಿ ತನ್ನ ಮೇಲೆ ಸಿಟ್ಟನಲ್ಲಿರುವನೆಂಬ ಭಯವು ಅವಳಿಗೆ ಹಿಡಿಯಿತು. +ಅದರ ಕಾರಣವೇನೆಂದು ತಿಳಿಯದೆ ಅವಳಿಗೆ ಮತ್ತಷ್ಟು ಕರಕರೆ ಯಾಯಿತು. +ಅತ್ತಲು ಭೀಮಾಜಿಯೂ ಸ್ವಲ್ಪ ಬೆರಗಾದನು. +ಔತಣ ಇನ್ನೊಂದು ದಿನವಾಗಬಹುದೆಂದು ಸಹಜವಾಗಿ ಹೇಳಿದ ಮಾತಿಗೆ ಅವಳು ಯಾಕೆ ಶಂಕಿತಳಾದಳೆಂದು ಗೊತ್ತಾಗಲಿಲ್ಲ. +ಅವಳು ಸಮಜಾಯಿಶಿ ಮಾಡದೆ, ಅಲ್ಲಿಂದ ಹೊರಡುವುದಕ್ಕೆ ಮನಸ್ಸಿಲ್ಲದೆ, –“ಅಮ್ಮಾ!ಯಾಕೆ ಪಶ್ಚಾತ್ತಾಪ ಪಡುತ್ತೀರಿ? +ಔತಣಕ್ಕೆ ನಾಳೆಯೇ ಬರಬೇಕೆಂಬ ಛಲ ನಿಮಗಿ ದ್ದರೆ ನಾನು ಅಗತ್ಯವಾಗಿ ನೀವು ಹೇಳುವಷ್ಟು ಹೊತ್ತಿಗೆ ಬರುವೆನು. +ಅನುಮಾನ ಪಡಬೇಡಿ. +ನನ್ನ ಮನಸ್ಸಿನ ಸ್ಥಿತಿಯು ನಿಮಗೆ ಚಂದಾಗಿ ಗೊತ್ತಿರುತಿದ್ದರೆ ನನ್ನ ಅಂತರಂಗ ಶುದ್ಧಿಯನ್ನು ಕುರಿತು ನಿಮಗೆ ಸಂದೇಹ ಹುಟ್ಟುತ್ತಿದ್ದಿಲ್ಲ?ಎಂದು ಭೀಮಾಜಿಯು ವಾಗ್ದೇವಿಯನ್ನು ಒಡಂಬಡಿಸಿ, ಮನೆಗೆ ಹೊಂಟನು. +ವಾಗ್ದೇವಿಗೆ ಬಹು ಆನಂದವಾಯಿತು. +ಮುಂದೆ ಭೀಮಾಜಿಯಿಂದ ಅವಳಿಗೆ ಅನೇಕ ಕಾರ್ಯಗಳು ಕೈಗೂಡುವುದಕ್ಕಿರುವುದರಿಂದ ಅವನನ್ನು ಪೂರ್ಣವಾಗಿ ತನ್ನ ವಶಮಾಡಿಕೊಳ್ಳುವ ಅವಶ್ಯವಿತ್ತು. +ಮರುದಿವಸ ಅಪರೂಪ ಪಾಕಗಳಿಂದ ಔತಣ ಸಿದ್ಧವಾಯಿತು. +ಸಾಯಂಕಾಲವಾಗಬೇಕಾದರೆ ಆಬಾಚಾರ್ಯನು ಕೊತ್ವಾಲನ ಮನೆಯ ಹೊರಗೆ ಅಲೆದಾಡುತ್ತಾ ಇದ್ದು, ಭೀಮಾಜಿಯು ಮನೆಗೆ ಬಂದ ಕೂಡಲೇ ಅವನನ್ನು ಕರಕೊಂಡು ಬಂದನು. +ವಾಗ್ದೇವಿಯ ಹಲವು ಸನ್ಮಾನಗಳಿಂದ ಅವನು ಸೋತು ಹೋದನು. +ಭೋಜನವಂತೂ ಅತಿ ಚಲೋದಾಯಿತು. +ಭೀಮಾಜಿಯು ಆ ಪರಿಯಂತ ಅಂಥಾ ಅಪೂರ್ವ ಊಟ ಉಂಡಿರಲಿಲ್ಲ. +ಭೋಜನೋಪರಿ ತಾಂಬೂಲಾದಿ ಸತ್ಕಾರಗಳು ಆದವು ಹಲವು ಮಾತ್ಯಾಕೆ? +ಸರ್ವೋಪಚಾರಗಳು ಪರಿಪೂರ್ಣ ವಾಗಿ ಹೊಂದಿದ ಅವನ ಮನಸ್ಸಿಗೆ ಪರಮೋಲ್ಲಾಸವೂ ಹೊಟ್ಟೆಗೆ ಸಂಪೂರ್ಣವಾದ ತೃಪ್ತಿಯೂ ಹುಟ್ಟಿದವು. +ಬಳಿಕ ಅವನು ವಾಗ್ದೇವಿಯ ಹಿತಚಿಂತಕನಾಗುವದೇನು ಆಶ್ಚರ್ಯ! +ಅವಳು ಅನುರಕ್ತಿಯಿಂದ ಮಾಡಿಸಿದೆ ಔತಣ ವನ್ನು ಭೀಮಾಜಿಯು ಮರೆಯುವ ಸ್ವಭಾವದವನೇ? +ಛೇ ಛೇ ಎಂಥಾ ಮಾತು! +ಇಂಥಾ ನಾರಿಮಣಿಯ ಒಲುಮೆಯನ್ನು ಎಲ್ಲರೂ ಬಯಸಕೂಡದು. +ಪುಣ್ಯವಂತರೇ ಅದನ್ನು ಘಳಿಸಿಕೊಳ್ಳುವದಕ್ಕೆ ಕೋರಬಹುದು. +ಈ ಸೌಭಾಗ್ಯವತಿ ತನ್ನ ಮೇಲೆ ಇಟ್ಟ ದೃಢ ವಿಶ್ವಾಸಕ್ಕೆ ದೇಹಾಂತ್ಯದವರೆಗೂ ಘಾತ ಬರಬಾರದು. +ಈ ಮೋಹನಾಂಗಿಯ ಸ್ನೇಹವನ್ನು ಬೆಳಸಿದ ನಿಮಿತ್ತ ತನ್ನ ಮೇಲೆ ಎಂಥಾ ಕಷ್ಟಗಳೂ ಅಪವಾದಗಳೂ ಬರಲಿ ಅವುಗಳನ್ನು ಲಕ್ಷ್ಯಕ್ಕೆ ತಾರದೆ ಜೀವದಾಶೆಯನ್ನು ತಾನೆ ಬಿಟ್ಟು ಅವಳ ಬಯಕೆಗಳನ್ನು ಪೂರೈಸದೆ ಇರಲಾರೆನೆಂದು ಭೀಮಾಜಿಯು ಪ್ರಮಾಣ ವಾಕ್ಯದಂತೆ ಅವಳಿಗೆ ಭಾಷೆಯನ್ನು ಕೊಟ್ಟು ಸ್ವಗೃಹಾಭಿಮುಖನಾದನು. +ಹೆಚ್ಚಿನ ಪ್ರಸ್ತಾಸ ಆ ದಿನ ರಾತ್ರಿ ಅವನಾಗಲೀ ಅವಳಾಗಲೀ ಮಾಡಲಿಲ್ಲ. +ಮರುದಿವಸ ಬರುವೆನೆಂನು ವಾಗ್ದತ್ತ ಕೊಡುವುದಕ್ಕೆ ಮೊದಲು ಅವನು ಹೊರಡಲಿಲ್ಲ. +ಮರುದಿವಸ ಸಾಯಂಕಾಲ ಭೀಮಾಜಿಯು ತನ್ನ ಆಗಮನವನ್ನು ಹಾರೈಸಿಕೊಂಡಿರುವ ವಾಗ್ದೇವಿಯನ್ನು ನೋಡಿ, ಉಭಯತ್ರರೂ ಪರಸ್ಪರ ಮಿತ್ರಭಾವದ ಹರುಷವನ್ನು ತುಂಬಾ ಅನುಭವಿಸಿದರು. +ಶಾಬಯ್ಯನ ಭೇಟಿ ಮಾಡಿಸಬೇಕಾಗಿ ವಾಗ್ದೇವಿಯು ಹೇಳಿಕೊಂಡ ವಿಷಯವು ಇತ್ಯರ್ಥವಾಗದೆ ಉಳಿದಿತ್ತು. +ಆ ಪ್ರಸ್ತಾಪ ಅವಳಾಗಿ ಎತ್ತಿದರೆ ಅದರ ವ್ಯವಸ್ಥೆ ಆಗಲೇ ಮಾಡಿಬಿಡುವುದಕ್ಕೆ ಭೀಮಾಜಿಗೆ ಆತುರವಿತ್ತು. +ಅವನ ಬಾಯಿಂದಲೇ ಆ ಪ್ರಮೇಯ ಹೊರಡದೆ ತಾನಾಗಿ ಚರ್ಚೆ ಮಾಡಬಾರದೆಂಬ ಹಟದಿಂದ ವಾಗ್ದೇವಿಯು ಸುಮ್ಮನಿದ್ದಳು. +ಅನೇಕ ತರದ ಸೋಸುಗಾರಿಕೆಯ ಮಾತು ಮುಗಿದೆ ಮೇಲೆ ಭೀಮಾಜಿಯು ತಾನಾಗಿಯೇ ಆ ಪ್ರಸ್ತಾಸ ಎತ್ತಿದನು. +ಆ ದೊಡ್ಡ ಅಧಿಕಾರಿಯ ದರ್ಶನವನ್ನು ಮಾಡಿದರೆ ಇನ್ನು ಮುಂದೆ ಬರಲಿಕ್ಕಿರುವ ಭಯವನ್ನು ನಿವಾರಣೆ ಮಾಡಿಕೊಳ್ಳುವ ಉಪಾಯ ಮುಂಚೆಯೇ ಮಾಡಿದ ಹಾಗೆ ಆಗುವದೆಂದು ಅವಳ ಮನಸ್ಸಿನ ಭಾವವಾಗಿತ್ತು. +ಯಾವುದಕ್ಕೂ ಮುಂದಾಗಿ ಅವನನ್ನು ಮಾತಾಡಿಸಿ ನೋಡುವೆನೆಂದು ಕೊತ್ವಾಲನು ವಾಗ್ದೇವಿಯ ಮನೆಯಿಂದ ಮರಳಿದನು. +ಮಾರನೆ ದಿನ ಭೀಮಾಜಿಯು ಶಾಬಯ್ಯನನ್ನು ಕಂಡನು. +ಇವರಲ್ಲಿ ಅತ್ಯಂತ ಮೈತ್ರ್ಯವಿತ್ತು. +ಒಬ್ಬನ ಮಾತು ಇನ್ನೊಬ್ಬನು ತೆಗೆದು ಹಾಕಲಾರನು. +ಕೊತ್ವಾಲನು ಭೇಟಿಗೆ ಬಂದಿರುವ ಹದನವನ್ನು ಜವಾನನು ತಿಳಿಸಿದಾಕ್ಷಣ ಶಾಬಯ್ಯನು ಭೀಮಾಜಿಗೆ ಸಾದರದಿಂದ ದರ್ಶನ ಕೊಟ್ಟು ಶಾನೆ ಹೊತ್ತು ಸಂಭಾಷಣೆ ಮಾಡಿದನು. +ವಿವಿಧ ವಿಷಯಗಳಲ್ಲಿ ಮಾತನಾಡಿ ತೀರಿದ ಮೇಲೆ ಭೀಮಾಜಿಯು ಬೇರೆ ಯಾರಿಗೂ ಕೇಳದಂತೆ ಅಂತರಂಗದಲ್ಲಿ ವಾಗ್ದೇವಿಯ ಪ್ರಸ್ತಾಪ ಮಾಡಿ ಹೊರಟನು. +ಅಸ್ತಮಾನಕ್ಕೆ ಭೀಮಾಜಿಯು ತನ್ನ ಪುನರಾಗಮನ ನಿರೀಕ್ಷಣೆಯಲ್ಲಿರುವ ವಾಗ್ದೇವಿಯನ್ನು ಕಂಡು, ಶಾಬಯ್ಯನ ಭೇಟಿ ದೊರಕುವ ಉಪಾಯ ಮಾಡಿ ಬಂದಿರುವೆನೆಂದು ಹೇಳಿದನು. +ವಾಗ್ದೀವಿಗಾದ ಉಲ್ಲಾಸವನ್ನು ವರ್ಣಿಸಲಿಕ್ಕೆ ಕವಿಗೂ ಅಸಾಧ್ಯ. +ಭೀಮಾಜಿಗೆ ಅವಳು ಹೊಗಳಿದ ಬಗೆಯು ಸಂಪೂರ್ಣವಾಗಿ ಮನಃಪೂರ್ತಿಯಾದ ಕೃತಜ್ಞತೆಯ ದೃಷ್ಟಾಂತನೆನ್ನಲೇಬೇಕು. +ಆಪತ್ಯಾಲಕ್ಕೆ ಪ್ರಾಣವನ್ನು ಉಳಿಸಲಿಕ್ಕೆ ಮತ್ತೊಬ್ಬ ವೀರ ಹುಟ್ಟಿಲಿಲ್ಲವೆಂದು ವಾಗ್ದೇವಿಯು ಭೀಮಾಜಿಯನ್ನು ಅಡಿಗಡಿಗೆ ಶ್ಲಾಘನೆ ಮಾಡುತ್ತಾ–“ಪರಮ ಪ್ರೀಯನೇ!ನಿನ್ನ ಮುಖದ ಕಾಂತಿಯಿಂದ ಪೌರ್ಣಮಿ ಚಂದ್ರನ ಶೀತಳ ಕಿರಣಗಳು ಸಿಗ್ಗಾಗುತ್ತವೆ. +ನಿನ್ನ ಬಡದಾಸಿಯಾದ ವಾಗ್ದೇವಿಯನ್ನು ಬಿಟ್ಟುಹಾಕಬೇಡವೆಂದು ರಮ್ಯವಾದ ನುಡಿಯಿಂದ ಅವನನ್ನು ಬೇಡಿಕೂಳ್ಳುವ ಅಂದವನ್ನೂ ಅವಳ ಉತ್ಕೃಷ್ಟವಾದ ಮೈ ಸೊಬಗನ್ನೂ ನೋಡಿ ಭೀಮಾಜಿಗೆ ರೋಮಾಂಚವಾಯಿತು. +ತನ್ನ ಪೂರ್ವಪುಣ್ಯ ದೊಡ್ಡದು ಅಲ್ಲದಿದ್ದರೆ ಇಂಧಾ ಭಾಗ್ಯಲಕ್ಷ್ಮಿಯ ಅಕ್ಕರೆಯು ತನಗೆ ದೊರಕುವದಿತ್ತೇ ಎಂದು ಅವನು ಆನಂದಭಾಷ್ಪಗಳನ್ನು ಸುರಿಸಿದನು. +ಶಾಬಯ್ಯನ ಭೇಟಿ ಮಾಡುವ ರೀತಿ ಯಾವದೆಂದು ವಾಗ್ದೇವಿಯು ಭೀಮಾಜಿಯನ್ನು ಕೇಳಿದಳು. +ನವದರ್ಶನವಾಗುವ ಸಮಯ ಕಣ್ಮನಗಳಿಗೆ ಸಂತೃಪ್ತಿಯಾಗುವ ಹಾಗಿನ ಕಾಣಿಕೆಗಳನ್ನು ಆ ದೊಡ್ಡ ಉದ್ಯೋಗಸ್ತನಿಗೆ ಇತ್ತು, ಅವನ ಅನುಗ್ರಹವನ್ನು ಅಪೇಕ್ಷಿಸುವದು ಕರ್ತವ್ಯವೆಂದು ಭೀಮಾ ಜಿಯು ಹೇಳಿದ ಮಾತು ವಾಗ್ದೇವಿಯ ಮನಸ್ಸಿಗೆ ಬಂತು. +ಕಣ್ಣಿಗೆ ರಂಜಕವಾದ ಹಣ್ಣು ಹಂಪಲುಗಳೂ ಅಪೂರ್ವ ವಸ್ತುಗಳೂ ಚಿತ್ರವಿಚಿತ್ರ ಒಡನೆಗಳೂ ಸಿಕ್ಕುವದು ಪ್ರಯಾಸವಲ್ಲ. +ಮನೋರಂಜಕವಾದ ಸಾಮಗ್ರಿ ಯಾವದೆಂದು ಏನೂ ಅರಿಯದವಳಂತೆ ವಾಗ್ದೇವಿಯು ಕೇಳುತ್ತಲೇ ಭೀಮಾಜಿಯು ಅವಳು ನಿರೀಕ್ಷಿಸಿದ ಉತ್ತರವನ್ನು ಕೊಟ್ಟನು. +ಇದ್ಯಾವ ದೊಡ್ಡಿತು? +ಸಕಲ ಪದಾರ್ಥಗಳನ್ನು ಯಥೋಚಿತವಾಗಿ ಒದಗಿಸಿಟ್ಟುಕೊಂಡು ತಮ್ಮ ಆಗಮನವನ್ನು ಹಾರೈಸುತ್ತಾ ಇದ್ದುಕೋಥೇನೆ ಎಂದು ವಾಗ್ದೇವಿಯು ಹೇಳಿದಳು. +ಹಾಗಾಗಲಿ ನಾಳೆ ಸಾಯಂಕಾಲಕ್ಕೆ ಬರುವೆನೆಂದು ಭೀಮಾಜಿಯು ನಡೆದನು. +ಭೀಮಾಜಿಯು ಮರುದಿನ ನಾಯಂಕಾಲಕ್ಕೆ ವಾಗ್ದೇವಿಯನ್ನು ಕಂಡು ಹೊರಡಲಿಕ್ಕೆ ಸನ್ನದ್ಧಳಾಗೆಂದು ಹೇಳಿದನು. +ಅರೆಗಳಿಗೆಯಷ್ಟು ಅವಕಾಶದಲ್ಲಿ ವಾಗ್ದೇವಿಯು ಮನೋಹರವಾದ ವಸ್ತ್ರಾಭರಣಗಳನ್ನು ಧರಿಸಿ ಬೇಕಾದ ಒಡವೆ ವಸ್ತುಗಳನ್ನು ಇಡಿಸಿಕೊಂಡು, ಭೀಮಾಜಿಯ ಸಂಗಡ ಶಾಬಯ್ಯನ ಗೃಹಾಭಿಮುಖವಾದಳು. +ಜವಾನನ ಪರಿಮುಖ ಶಾಬಯ್ಯಗೆ ವರ್ದಿ ಸಿಕ್ಚುತ್ತಲೇ ಉಪ್ಪರಿಗೆಗೆ ಬರುವದಕ್ಕೆ ಹೇಳಿಕಳುಹಿಸಿದನು. +ಮುಂದಿನಿಂದ ಭೀಮಾಜಿಯೂ ಹಿಂದಿನಿಂದ ವಾಗ್ದೇವಿಯೂ ಉಪ್ಪರಿಗೆ ಹತ್ತಿದರು. +ಕೊತ್ವಾಲಗೆ ಕೂರೆಂದು ಆಸನವನ್ನು ತೋರಿಸಿ, ಶಾಬಯ್ಯನು ವಾಗ್ದೇವಿಯ ಮುಖ ಪ್ರೇಕ್ಷ ಣದಿಂದಲೇ- ಇವಳೇನು ಅಪ್ಸರಸ್ತ್ರೀಯಂತೆ ಕಣ್ಣಿಗೆ ತೋರುತ್ತಾಳೆ! +ಇಂಥಾ ದಿವ್ಯರೂಪವುಳ್ಳ ಶ್ರ್ರೀರತ್ನವೂ ಈ ನಗರದಲ್ಲಿ ಉಂಟೆಂದು ತಾನು ಮೊದಲೇ ತಿಳಿಯಲಿಲ್ಲ ಎಂದು ಬೆರಗಾದನೆನ್ನಬಹುದು. +ಅವಳ ಉಪಮೆ ರಹಿತವಾದ ಮೈಬಣ್ಣವನ್ನು ಅಂಗೋಪಾಂಗಗಳ ಸೂಬಗನ್ನು ನೋಡಿ, ಅವನು ಸ್ತಂಭೀ ಭೂತನಾದನು. +“ಅವ್ವಾ!ಕೂರಿ” ಎಂದು ಆ ದೊಡ್ಡ ಅಧಿಕಾರಿಯು ತನ್ನ ಕೈಯಿಂದ ಆಸನವನ್ನು ಕೊಟ್ಟು ನಿಂತುಕೊಂಡಿರುವಾಗ- “ದೊಡ್ಡರಾಯರೇ!ನಾನು ತಮ್ಮ ಸಮ್ಮುಖದಲ್ಲಿ ಕುಳಿತುಕೊಂಡಿರುವ ಯೋಗ್ಯತೆಯುವಳ್ಳಳಲ್ಲ. +ನಿಂತು ಕೊಂಡಿರಲಿಕ್ಕೆ ಅಪ್ಪಣೆಯಾಗಬೇಕು” ಎಂದಳು. +ಅವಳು ಕೂತು ಕೊಳ್ಳುವದಿಲ್ಲವಾದರೆ ತಾವೂವೇ ನಿಂತುಕೊಂಡಿರಬೇಕಾಗುವದೆಂದು ಶಾಬಯ್ಯನು ಹೇಳಿದರೂ ಅವಳು ಕೇಳದೆ ಹೋದಳು. +“ಇನ್ನೇನು ಮಾಡಲಿ!ನಿಮ್ಮ ಕ್ಳೆ ಹಿಡಿದು ಒತ್ತಾಯದಿಂದ ನಾನೇ ಕೂರಿಸಲೇ” ಎಂದು ಶಾಬಯ್ಯನು ಅರೆ ನಗೆಯಿಂದ ಆವಳ ಮುಖವನ್ನೇ ನೋಡಿದನು. +“ತನುಮನಧನಗಳಿಂದಲೂ ತಮ್ಮ ಸನ್ನಿಧಿಯ ಮರೆಹೋದ ನನ್ನನ್ನು ಹ್ಯಾಗೆ ನಿನಿಯೋಗ ಮಾಡಿದರೂ ಹೆಕ್ಕಳಪಡುವೆನು” ಎಂದು ಅವಳು ನಸುನಗೆಯಿಂದ ಉತ್ತರಕೊಟ್ಟಳು. +ಶಾಬಯ್ಯನು ಅವಳ ಸೂಚನೆಯನ್ನು ಅನುಸರಿಸುವದರಲ್ಲಿ ಛಾನಸ ಮಾಡಲಿಲ್ಲ. +ಅವಳ ಎರಡು ಕೈಗಳನ್ನು ತನ್ನ ಉಭಯ ಹಸ್ತಗಳಿಂದ ಹಿಡಿದು ಅವಳನ್ನು ಕೂರಿಸಿ ತಾನೂ ಅವಳ ಮುಂಭಾಗದಲ್ಲಿ ಕೂತುಕೊಂಡು, ಬಂದ ಕಾರಣವೇನೆಂದು ವಿಚಾರಿಸಿದನು. +ವಾಗ್ದೇವಿಯು ತನ್ನ ಸುಖದುಃಖವನ್ನೆಲ್ಲಾ ಸಂಕ್ಷೇವಾಗಿ ಅರುಹಿದಳು. +ವೇದವ್ಯಾಸ ಉಪಾಧ್ಯನು ಕೊಡುವ ಉಪಹತಿಯ ಮತ್ತು ಕೆಪ್ಪ ಮಾಣಿಯು ಮಾಡಿದ ಲೂಟಿಯ ವೃತ್ತಾಂತವನ್ನು ಲೋಪವಿಲ್ಲದೆ ತಿಳಿಸಿದಳು. +ಮುಖ್ಯತಃ ತನ್ನನ್ನು ಕಾಪಾಡುವವರು ಬೇರೆ ಯಾರೂ ಇಲ್ಲ. +ತನ್ನನ್ನು ಕನಿಕರದಿಂದ ನಡಿಸಿಕೊಂಡು ಹೋಗದಿದ್ದರೆ ತಾನು ಆ ಊರನ್ನೇಬಿಟ್ಟು ದೂರ ಪ್ರಾಂತ್ಯದಲ್ಲಿ ಅಪ್ರಖ್ಯಾತ ರೀತಿಯಲ್ಲಿ ವಾಸಿಸಿಕೊಂಡಿದ್ದು ಶ್ವಾನದಂತೆ ಪ್ರಾಣಬಿಡುವದಲ್ಲದೆ ಬೇರೊಂದು ಮಾರ್ಗ ತೋಚೊವದಿಲ್ಲನೆಂದು ದೀನ ಭಾವದಿಂದ ಹೇಳಿಕೊಂಡಳು. +ಶಾಬಯ್ಯಗೆ ಬಹಳ ಪಶ್ಚಾತ್ತಾಪವಾಯಿತು. +ತಾನು ಅಧಿಕಾರ ಮಾಡಿಕೊಂಡು ಆ ಊರಲ್ಲಿ ವಾಸಿವಾಗಿರುವ ಪರಿಯಂತರ ಏನೂ ಭಯಪಡಬಾರದು; +ತನ್ನ ಪೂರ್ಣವಾದ ಸಹಾಯವು ಸಾರ್ವದಾ ದೊರಿಯುವದೆಂದು ಅಭಯನನ್ನು ಕೊಟ್ಟು ಚಿನ್ನದ ಹರಿವಾಣದಲ್ಲಿ ತಾಂಬೂ ಲವನ್ಶಿಟ್ಟು, ಅದನ್ನು ಸ್ವೀಕರಿಸಬೇಕೆಂದು ಅಪೇಕ್ಷಿಸಿದನು. +ವಾಗ್ದೇವಿಯು ಸಂತೋಷದಿಂದ ತಾಂಬೂಲವನ್ನು ತಕ್ಕೊಂಡು, ಪುನಃ ಅವನ ಸಂದರ್ಶನ ಸುಖ ಎಂದು ತಾನು ಪಡೆಯಲೆಂದು ಪ್ರಶ್ನೆಮಾಡಿದಳು. +ತಾನು ಮನೆಯಲ್ಲಿರುವ ಯಾವ ಸಮಯದಲ್ಲಿಯಾದರೂ ಬಂದು ಕಾಣಬಹುದು; +ಆಗಾಗ್ಗೆ ಕಂಡರೆ ತಾನು ತುಂಬಾ ಸಂತೋಷಿತನಾಗುವೆನೆಂದು ಶಾಬಯ್ಯನು ಹೇಳಿ, ಕಣ್ಣೆತ್ತಿ ನೋಡುವ ಸಮಯದಲ್ಲಿ ಭೀಮಾಜಿಯು ಕೆಳಗಿನಿಂದ ಒಬ್ಬ ಜನಾನನ ಸಮೇತ ಬಂದು ವಾಗ್ದೇವಿಯು ತಂದಿಟ್ಟ ನಜರಕಾಣಿಕೆಯನ್ನು ಶಾಬಯ್ಯನ ಅನುಮತಿಯಿಂದ ಮನೆಯ ಒಳಗೆ ಇಡಿಸಿದನು. +ಶಾಬಯ್ಯನಿಗೆ ಊಟದ ಹೊತ್ತಾದುದರಿಂದ ಅವನು ಅಡಿಗೆ ಮನೆಗೆ ಹೋದನು. +ಭೀಮಾಜಿಯೂ ವಾಗ್ದೇವಿಯೂ ಅನುಮತಿ ಪಡಕೊಂಡು ಬೀದಿಗೆ ಇಳಿದರು. +ವಾಗ್ದೇವಿಯು ಭೀಮಾಜಿಯಿಂದ ತನಗಾದ ಈ ಉಪಕೃತಿ ಎಂದೆಂದಿಗೂ ಮರೆಯೆನೆಂದು ಆ ತನ್ನ ಪ್ರಾಣಸ್ನೇಹಿತನನ್ನು ಬೇಕು ಬೇಕಾದ ಹಾಗೆ ಹೊಗಳಿ, ಮಧು ರೋಕ್ತಿಗಳಿಂದ, ಉಬ್ಬೇರಿಸಿ ಬೇಗ ಊಟಮಾಡಿ ಮಲಗೆಂದು ವಿನೋದಕರವಾಗಿ ಮಾತಾಡುತ್ತಾ ಅವನನ್ನು ಮನೆಗೆ ಹೋಗಗೊಟ್ಟಳು. +ಅಂದಿನಿಂದ ವಾಗ್ದೇವಿಯು ನಿಶ್ಚಿಂತಳಾಗಿ ತನ್ನ ಮುಂದಿನ ಯತ್ನವು ಸಫಲವಾಗುವದೆಂಬ ಕೋರಿಕೆಯನ್ನುಳ್ಳವಳಾದಳು. +ವಾಗ್ದೇವಿಗೆ ಭೀಮಾಜಿಯ ಅನುಗ್ರಹದಿಂದ ಶಾಬಯ್ಯನ ಕಟಾಕ್ಷವು ಪರಿಪೂರ್ಣವಾಗಿ ದೊರಕಿತು. +ಅವಳು ಮನಸ್ಸಿನಲ್ಲಿ ಮಾಡಿಕೊಂಡ ಪ್ರಧಾನವಾದ ಸಂಕಲ್ಪಸಿದ್ಧಿಗೆ ಆ ಇಬ್ಬರು ಅಧಿಕಾರಸ್ತರ ಕೃಪೆಯೇ ಮುಖ್ಯವಾದದ್ಹೆಂದು ಮುಂದಿನ ಚರಿತ್ರೆಯಿಂದ ವಾಚಕರಿಗೆ ತಿಳಿಯುವದು. +ಕೆಪ್ಪಮಾಣಿಯು ಮಾಡಿದ ಹಲವು ಕಳವುಗಳನ್ನು ಕುರಿತು ಅವನ ಮೇಲೆ ಆದ ಪ್ರಕರಣ ಇತ್ಯರ್ಥವಾಗುವದಕ್ಕೋಸ್ಕರ ವಾಗ್ದೇವಿಗೆ ಯಾರ ಸಹಾಯವೂ ಅವಶ್ಯ ವಿರಲಿಲ್ಲ. +ಅದಕ್ಕೋಸ್ಟರ ಅವಳು ಯಾರಿಗೂ ದಮ್ಮಯ್ಯ ಹಾಕಲಿಕ್ಕೆ ಹೋಗಲೂ ಇಲ್ಲ. +ಆ ಒಂದು ನೆವದಿಂದ ಅವಳಿಗೆ ಅನಾಯಾಸವಾಗಿ ಪಟ್ಟಣದ ಪ್ರಮುಖ ಅಧಿಕಾರಸ್ಥರ ಪರಿಚಿತಯುಂಟಾಯಿತು. +ಕೆಪ್ಪಮಾಣಿಯನ್ನು ಶಾಬಯ್ಯನ ಮುಂದಿ ಕೊತ್ವಾಲನ ಅಪಾದನೆ ಪತ್ರ ಸಹಿತ ಕಳುಹಿ ಸೋಣಾದಲ್ಲಿ ಅವನು ತಾನು ಕೆವುಡನೆಂಬ ಸಾಧನೆ ಮಾಡುವುದಕ್ಕೆ ಹೊರಟನು. +ಎಷ್ಟು ಗಟ್ಟಿಯಾಗಿ ಮಾತನಾಡಿದರೂ ಕಿವಿಕೇಳದವನಂತೆ ನಿಂತು ಕೊಂಡನು. +ಅವನು ನಿಜವಾಗಿ ಕಿವುಡನಲ್ಲವೆಂಬ ವಿಷಯದಲ್ಲಿ ಜಾನಕಿ ಮತ್ತು ಸುಂದರಿ ಇವರ ಸಾಕ್ಷವೂ ಯಾಕೂಬಖಾನನ ಪ್ರಮಾಣವೂ ಎಥೇಷ್ಟವಾದರೂ ಬುದ್ಧಿಶಾಲಿಯಾದ ಕಾರಭಾರಿಯು ನಿಜವಾದ ಕಿವುಡನಿಗೆ ಕೇಳ ವಲ್ಲದ ಸಣ್ಣ ಸ್ವರದಿಂದ ಜವಾನನೊಬ್ಬನನ್ನು ಕರೆದು ಅಪರಾಧಿಗೆ ಮೊಟ್ಟ ಮೊದಲು ಹನ್ನೆರಡು ಛಡಿಹೊಡೆ ಎಂದು ಹೇಳಿದನು. +“ದಮ್ಮಯ್ಯಾ ಬುದ್ಧೀ!ಅದೊಂದೂ ಬೇಡ, ನನಗೆ ಕಿವಿ ಚೆನ್ನಾಗಿ ಕೇಳುತ್ತದೆ; +ಇದುವರೆಗೆ ನಾನು ಮಾಡಿದ ಕಪಟ ಕ್ಷಮಿಸಬೇಕು” ಎಂದು ಅಪರಾಧಿಯು ಬೇಡಿಕೊಂಡನು. +ಶಾಬಯ್ಯನು ತನ್ನ ವೈನವು ಸಫಲವಾಯಿತೆಂದು ಹಿಗ್ಗಿದನು. +ತರಲ್ಪಟ್ಟ ಸಾಕ್ಸವನ್ನೆಲ್ಲಾ ಬರಕೊಂಡಾದ ಮೇಲೆ ಅಪರಾಧಿಯು ಒಪ್ಪಿದ ಪ್ರಯುಕ್ತ ಮೊಕದ್ದಮೆಯು ಸುಲಭವಾಗಿ ಫೈಸಲಾಗುವ ಅನುಕೂಲವಾಯಿತೆಂದು ಕಾರಭಾರಿಯು ಸಂತೋಷಪಟ್ಟು, ಅಪರಾಧಿಯ ಮೇಲೆ ಕೊಂಚ ದಯವಿಟ್ಟು ಐದು ಸಂವತ್ಸರಗಳ ಪರಿಯಂತರ ಕೈದು ಶಿಕ್ಷೆಯನ್ನು ವಿಧಿಸಿದನು. +ಆಭರಣಗಳನ್ನು ಆವಾವ ಮಾಲಿಕರಿಗೆ ತಿರುಗಿ ಕೊಡತಕ್ಕದ್ದೆಂದು ಅಪ್ಪಣೆಯಾಯಿತು. +ಈ ವಾರ್ತೆಯು ಚಂಚಲನೇತ್ರರ ಮತ್ತು ವಾಗ್ದೇವಿಯ ಕಿವಿಗೆ ಬೀಳುತ್ತಲೇ ಅವರಿಬ್ಬರು ತುಂಬಾ ಹರುಷ ಪಟ್ಟರು. +ಚಂಜಲನೇತ್ರರು ಕೊತ್ವಾಲನನ್ನು ಮಠಕ್ಕೆ ಕರೆಸಿ, ಅತಿಶಯವಾದ ಬಹುಮಾನ ಮಾಡಿದರು. +ಕಾರಭಾರಿಗೆ ಕೊತ್ವಾಲನ ಪರಿಮುಖ ಊಚು ಉಡುಗೊರೆಗಳನ್ನು ಕಳುಹಿಸಿದರು. +ಯಾಕುಬಖಾನಗೆ ಒಂದು ಒಳ್ಳೇ ಜರಿಯ ಪಗಡಿಯನ್ನು ಕಟ್ಟಿಸಿ, ಸೊಂಟಕ್ಕೆ ಜೋಡು ಎಳೆ ಬೆಳ್ಳಿಯ ನೇವಳ, ಕೈಗೆ ಚಿನ್ನದ ಬಾಜಿಬಂದ್‌ ಹಾಕಿಸಿಬಿಟ್ಟು, ನಗದಿಯಿಂದ ನೂರು ರೂಪಾಯಿಗಳನ್ನು ಕೊಟ್ಟರು. +ಯಾಕುಬಖಾನನು ಚಂಚಲನೇತ್ರರ ಔದಾರ್ಯವನ್ನು ಹೊಗಳುತ್ತಾ, ಅವರಿಂದ ತನಗೆ ಸಿಕ್ಕಿದ ಇನಾಮನ್ನು ವಾಗ್ದೇವಿಗೆ ತೋರಿಸಿದನು. +ಅವಳು ತನ್ನ ಕೈಯಿಂದ ಅವನಿಗೆ ಐವತ್ತು ರೂಪಾಯಿ ಕೊಟ್ಟು ಮನ್ನಿಸಿದಳು. +“ಅವ್ವಾ!ನಿಮ್ಮ ಸೇವೆಯನ್ನು ಯಾವಾಗ ಅಪ್ಪಣೆಯಾಯಿತೋ ಆವಾಗ ಜೀವದಾಶೆಯನ್ನಾದರೂ ಬಿಟ್ಟು, ಮಾಡುವುದಕ್ಕೆ ಉದ್ಯುಕ್ತನಾಗುವೆನು. +ಅವಶ್ಯ ಕಂಡಾಗ ನನ್ನನ್ನು ಕರೆಸಿ ಅಜ್ಞೆಯಾಗಬೇಕು?ಎಂದು ಯಾಕುಬಖಾನನು ಸವಿಯಾದ ಮಾತುಗಳಿಂದ ತನ್ನ ಕೃತಜ್ಞತೆಯನ್ನು ನಿವೇದಿಸಿದನು. +ದಫೆದಾರ ಯಾಗಸಪ್ಪನ ನೆನಪು ಯಾರಿಗೂ ಬರಲಿಲ್ಲ. +ಶ್ರೀಪಾದಂಗಳಾಗಲೀ ವಾಗ್ದೇವಿಯಾಗಲೀ ತನನ್ನು ಮರಿಯಲಿಕ್ಕಿಲ್ಲವೆಂಬ ಅವನ ನಂಬಿಕೆಯು ವ್ಯರ್ಥವಾಯಿತು. +ಅವರು ತನ್ನನ್ನು ಕರಸಿ ಏನಾದರೂ ಕೊಡದಿದ್ದರೇನಾಯಿತು? +ತಾನೇ ಹೋಗಿ ಅವರನ್ನು ಕಂಡುಬಿಟ್ಟರೆ ಹ್ಯಾಗಾಗುತ್ತದೆಂದು ನೋಡುವದಕ್ಕೆ ಅವನು ಒಂದು ದಿನ ಚಂಚಲನೇತ್ರರ ಭೇಟಿಯನ್ನು ಮಾಡಿದನು. +ಅವರು ಅವನಿಗೆ ಒಂದು ರೂಪಾಯಿ ಮೌಲ್ಯದ ಎಲವಸ್ತ್ರವನ್ನು ಕೊಟ್ಟು ಸುದಾರಿಸಿಬಿಟ್ಟರು. +“ಶ್ರೀಪಾದಂಗಳು ಎಟ್ಟು ಕೊಟ್ಟರೂ ಬಿರ್ಮಸ್ಪ ಬರ್ಕತ ಆಗೆಕ್ಕಿಲ್ಲ, ಇನೊಂದು ಎಲವಸ್ತ್ರ ಅಂದ್ರೆ ಉಡಗೆರೆ; +ಅದು ತಕ್ಕೊಂಬುದು ನ್ಯಾಯ ಅಂದಿ, ಧರ್ಮಸಾಸ್ತ್ರದಾಗೆ ಉಂಟು, ಆದುರ್ನೂ ವಾಗ್ದೇವಿಗೆ ಒಂದು ಗಾಯ ಕಂಡು ಕಾಟಿ ಹೋಗಿಬಿಡುತ್ತೇನೆ.” ಹೀಗೆಂದು ಅವನು ಅವ ಇದ್ದಲ್ಲಿಗೆ ಹೋದನು. +ಅವಳು ನಗೆಮುಖದಿಂದ ಅವನನ್ನು ಕೂಡ್ರಿಸಿ, ಹೊಟ್ಟ ತುಂಬಾ ಅನ್ನ ಹಾಕಿಸಿ ತಣಿಸಿದ್ದಲ್ಲದೆ, ಕುಪ್ಪಸದ ಕಣಸಹಿತ ಒಂದು ಶೀರೆ, ಒಂದು ಜೋಡು ವೇಷ್ಟಿ, ನಗದಿಯಿಂದ ನಾಲ್ಕು ರೂಪಾಯಿ ಕೈಗೆ ಹಾಕಿದಳು. +“ಏ ನನ್ನವ್ವಾ!ನಿಮಗೆ ದೇವರು ವಜ್ರಾಯ್ಸ ಕೊಡ್ಲಿ ನಿಮ್ಮ ಕಾಲಿಗೆ ಬಲಕೊಡ್ಲಿ; +ನನ್ನ ಹೆಂಡತಿ ಉಡೋಕೆ ಶೀರೆ ಇಲ್ಲದೆ ದಿನಕೆ ಮೂರು ಗಾಯ ನಿಮ್ಮ ಮುಖ ಸುಡೋಕೆ? +ಅಂದಿ ನಂಗೆ ಬೈತಾಳೆ. +ಅವಳಿಗೆ ಒಂದು ಶೀರೆಯಾಯಿತು. +ಖಣ ಅವಳ ಅಪ್ಪನ ಕಾಲಕ್ಕೆ ನೋಡಿಯಾಳೋ! +ಅದೂನೂ ಅವಳ ಎದೆಗೆ ಹಾಕ್ತೇನೆ; +ವೇಷ್ಟಿ ನಂಗೆ ಉಡೇಕೆ ಆಯಿತು. +ಅಮ್ಮಾ!ಇನ್ನು ಹೋಗಿ ಬರ್ತೇನೆ” ಎಂದು ಯಾಗಪ್ಪನು ತೃಪ್ತನಾಗಿ ಹೊರಟನು. +“ಯಾಕುಬಖಾನನ ಹೆಸರು ಹೇಳೇಕೆ ನಾನು; + ಇನಾಮು ಹೊಡಕೊಳ್ಳೇಕೆ ಅವಾ ನನಗೆ ಒಂದು ಕಾಸಾದರೂ ಆ ತುರ್ಕ ಕೊಟ್ಟು ಸಲಾಂ ಮಾಡಿದನೇ, ಇಲ್ಲ; + ಕೊತ್ವಾಲನಾದರೂ ಹೇಳಿ ಕೊಡಿಸಿದನೇ, ಇಲ್ಲ. +ಕೊತ್ವಾ ಲನ ತಲೆ ನಾಕುಟ್ಟ” ಎಂದು ತನ್ನಷ್ಟಕ್ಕೆ ಮಾತಾಡಿಕೊಳ್ಳುತ್ತಾ ಯಾಗಪ್ಪನು ಹೋಗುವ ಕಾಲದಲ್ಲಿ ಎದುರಿನಿಂದ ಬರುವ ಯಾಕುಬಖಾನನು ಸಿಕ್ಕಿ ಕಿಸ್ಕನೆ ನಕ್ಕನು. +“ಹೌದೇನೋ ಪೋರಾ, ನಿನ್ನ ಹೆಸರು ಖಾವಂದರಿಗೆ ನಾ ಹೇಳಿದ ಮೇಗಷ್ಟೇ ನೀನು ಇಟ್ಟು ಕಾರಬಾರ ಮಾಡೋಕೆ ಆದಿ; +ಇಬ್ಲದೆಹೋಗಿದ್ರೆ ನಿನಗೆ ನಾಯಿನೂ ಮೂಸಕೆ ಇತ್ತೇ? +‘ನಾಕು ಮದ್ವೆಗೆ ಸಾಕು? +ಅಟ್ಟು ಹಣಾನೂ ಅರವೆನೂ ನಿಂಗೆ ಸಿಕ್ಕಿದಾಗೂನು ಜಪೆದಾರರ ನೆನಪು ನಿಂಗೆ ಬಂತೆನೋ ಪರ್ದೇಸಿ ತಡಿ! +ನಿಂಗೆ ನಾ ಮಾಡೋ ಬಗೆ ಬೇರೆ ಐತೆ. +ಬಾಯಿಂದ ಪೌರಸ ಆಡ್ತೇನೆ ಅಂದಿ, ಮಾಡಿಕೊಂಡಿದ್ದೀಯಾ ಅಲ್ಲ, ಅಲ್ಲ. +ವಳ್ತು ಮಾಡೆಕೆ ಕಷ್ಟ ಹಡ್ಕಿ ಮಾಡೆಕೆ ಎಟ್ಟು ಹೊತ್ತು ಬೇಕು ನೋಡುವ” ಎಂದು ದಫೆದಾರನು ಹೊಟ್ಟಿ ಕಿಚ್ಚು ತಡೆಯಲಾರದೆ ಆಡಿದ ಪರಾಕ್ರಮಕ್ಕೆ ಯಾಕುಬ ಖಾನನು ಒಂದು ಸಾಸಿವೆ ಕಾಳಿನಷ್ಟು ಗಣ್ಯಮಾಡತಕ್ಕ ಅಗತ್ಯವಿರಲಿಲ್ಲ. +ಆದರೂ ತನ್ನ ಮೇಲ ಉದ್ಯೋಗಸ್ತನೂ ವಯೋವ್ಚದ್ಧನೂ ಆದ ಅವನ ನರೆ ಗಡ್ಡಕ್ಕಾದರೂ ಮರ್ಯಾದೆ ಕೊಡಬೇಕೆಂಬ ಗ್ರಹಿಕೆಯಿಂದ ಎರಡು ರುಪಾಯಿಗಳನ್ನು ಅಂಗಿ ಕಿಸೆಯಿಂದ ತೆಗೆದು– “ಇಕೊಳ್ಳಿ, ಯಾಗಪ್ಪಣ್ಣಾ! +ಸ್ವಲ್ಪ ಆಯಿತೆಂದು ಮನಸ್ಸಿನಾಗೆ ಖವುಟು ಇಟ್ಟುಕೋಬ್ಯಾಡಿ. +ಮುಂದೆ ನಿಮ್ಮ ಸೇವೆ ನಾನು ಮಾಡುವವನೇ ಎಂದನು. +ದಫೆದಾರಗೆ ಕಾನ ಖುಶಿಯೂ ದಿಲ ಖುಶಿಯೂ ಆಯಿತು. +ನಾ ಬೇಗ ನಾರ್ನಪರ್ವಸಿ ತಕ್ಕೊಂಡ ಕಾಟಿ ನನ್ನ ಬೆಳ್ಳಿ ಬಿಲ್ಲೆ ನಿನ್ನ ಎಡೆಗೆ ಹಾಕ್ತೇನೆ” ಎಂದು ದಫೆದಾರನು ಯಾಕುಬ ಖಾನಗೆ ಉಪಕಾರ ಸ್ಮರಣೆರೂಪವಾಗಿ ಆಶೆ ಹುಟ್ಟಿಸಿದನು. +ಹಾಗೆಯೇ ಅವರಿಬ್ಬರೂ ತಂತಮ್ಮ ದಾರಿ ಹಿಡಿದರು. +ತಿಪ್ಪಾಶಾಸ್ತ್ರಿಗೂ ವಾಗ್ದೇವಿಗೂ ದಿನೇ ದಿನೇ ಆಪ್ತಭಾವ ಕಡಿಮೆಯಾಗುತ್ತಾ ಬಂತು. +ಶಾಸ್ತ್ರಿಗೆ ಅವಳ ಮೇಲಿನ ಮೋಹವೂ ಕೊಂಚವಾದರೂ ಕಮ್ಮಿಯಾಗಲಿಲ್ಲ. +ಅವಳು ಅವನ ಮೇಲೆ ರವಷ್ಟಾದರೂ ವಿಶ್ವಾಸವಿಡಲಿಕ್ಕೆ ಮನಸ್ಸಿಲ್ಲದವಳಾದುದರಿಂದ ಅವನ ವ್ಯಸನವು ಅನುದಿನವೂ ಏರುತ್ತಾ ಬರುವದಾಯಿತು. +ಗೃಹಕೃತ್ಯ ಸರಿಯಾಗಿ ನಡೆಯುವಂತೆ ತಾತ್ಪರ್ಯಕೊಟ್ಟು ನೋಡುವದಕ್ಕೆ ಜನ ಬಲವು ಕಡಿಮೆಯಾಗಿ ವಾಗ್ದೇವಿಯು ಯೋಚನೆ ಗೈಯುತ್ತಿರುವನೇಳೆ ಭೀಮನ ಹಳ್ಳಿಯಲ್ಲಿ ವಾಸವಾಗಿರುತ್ತಿದ್ದ ಅವಳ ಚಿಕ್ಕ ತಾಯಿ ನೇತ್ರಾವತಿಯ ಮಗಳು ಶೃಂಗಾರಿಗೂ ಅವಳ ಪತಿಗೂ ವಿರೋಧ ಹುಟ್ಟಿ ಪತಿ ಪತ್ನಿ ಪ್ರತ್ಯೇಕನಾದ ದೆಸೆಯಿಂದ ಆ ಸ್ತ್ರೀಯು ಜೀವನೋಪಾಯವಿಲ್ಲದೆ ಕಷ್ಟಪಡುವ ಕಾಲ ಬಂತು. +ಇದು ತನ್ನ ಉದ್ದೇಶಕ್ಕೆ ಉಪಯುಕ್ತವಾದ್ದೆಂದು ವಾಗ್ದೇವಿಯು ನೆನಸಿ ಶೃಂಗಾರಿಯನ್ನು ಕರೆಕಳುಹಿಸಿ ತನ್ನಲ್ಲಿದ್ದು ಕೊಳ್ಳೆಂದು ಪ್ರೀತಿಯಿಂದ ಹೇಳಿದಳು ಅವಳಿಗೆ ಆ ಅಭಿಮಂತ್ರಣವು ಅತಿ ಹಿತಕರವಾಗಿ ಕಂಡು ಬಂದು ಅದನ್ನು ಉಲ್ಲಾಸದಿಂದ ಅಂಗೀಕರಿಸಿದಳು. +ಶೃಂಗಾರಿ ಎಂಬ ಹೆಸರು ಅವಳಿಗೆ ಛಂದಾಗಿ ಒಪ್ಪುವಂಥಾದ್ದೆಂದು ಅವಳ ಆವಭಾವ ರೂಪ ಲಾವಣ್ಯವನ್ನು ನೋಡಿದವರು ಹೇಳದಿರರು. +ಅವಳ ಸೌಂದರ್ಯವನ್ನು ಎಷ್ಟು ಸಮಯ ಪರಿಯಂತ್ರವೂ ವರ್ಣಿಸಬಹುದು. +ವಾಗ್ದೇವಿಯ ದ್ವಿತೀಯ ಸ್ಥಾನವನ್ನು ಹೊಂದಲಿಕ್ಕೆ ಶೃಂಗಾರಿಯೇ ಅರ್ಹಳೆನ್ಸಬೇಕು. +ಎಷ್ಟು ಪೇಚಾಡಿದರೂ ಗಂಡನು ಪುನರಪಿ ಮನೆಯೊಳಗೆ ತನ್ನನ್ನು ಪ್ರವೇಶಿಸಬಿಡೆನೆಂದು ಅವಳಿಗೆ ಖಂಡಿತವಾಗಿ ಗೊತ್ತಿರುವದರಿಂದ ಅವನ ಹಂಬಲನ್ನು ಬಿಟ್ಟು ಅಕ್ಕ ವಾಗ್ದೇವಿಯ ಸೇವೆಯಲ್ಲಿ ಮನಃಪೂರ್ತಿಯಾಗಿ ಅಮರಿಕೊಂಡಳು. +ತಿಪ್ಪಾಶಾಸ್ತ್ರಿಗೆ ವಾಗ್ದೇವಿಯ ಹೃದಯಮಂದಿರದಲ್ಲಿ ಮೊದಲು ದತ್ತ ಮಾಡಿರುತ್ತಿದ್ದ ಅಂತಸ್ಸು ತಪ್ಪಿಹೋದಂದಿನಿಂದ ಅವನು ನೀರಿನಿಂದ ಎತ್ತಿ ಮೇಲಕ್ಕೆ ಹಾಕಲ್ಪಟ್ಟ ಮತ್ಸ್ಯದಂತೆ ಕಳವಳಗೊಳ್ಳುತಿದ್ದನು. +ಆ ಕುಯುಕ್ತಿಗಾರ ಶಾಸ್ತ್ರಿಯು ಮೆಲ್ಲಮೆಲ್ಲಗೆ ಶೃಂಗಾರಿಯ ಮಮತೆಯನ್ನು ಪ್ರಾಪ್ತಿಸಿಕೊಳ್ಳಲಿಕ್ಕೆ ಪ್ರಯತ್ನಿಸಿದನು. +ಸಾಧನೆ ಮಾಡಿದವ ಸಬಳ ನುಂಗ್ಯಾನೆಂಬ ಸಾಮತಿಯಂತೆ ಬಹುಸೂಕ್ಷ್ಮ ಉಪಾಯಗಳಿಂದ ವರ್ತಿಸಿದ ತಿಪ್ಪಾಶಾಸ್ತ್ರಿಯು ಹೆಚ್ಚು ವಿಳಂಬವಿಲ್ಲದೆ ಶೃಂಗಾರಿಯ ಹೃದಯದಲ್ಲಿ ತನ್ನ ಕಾಮಿತಕ್ಕೆ ಇಂಬು ದೊರಕಿಸಿಕೊಂಡನು. +ವಾಗ್ದೇವಿಯು ಇದು ಚೆನ್ನಾಗಿ ತಿಳಿಯದೇ ಅವರಿಬ್ಬರ ಸ್ನೇಹಲತೆಯನ್ನು ಏರಬಿಟ್ಟಳಲ್ಲದೆ ಮುರಿಯಲಿಕ್ಕೆ ಸರ್ವಥಾ ನೋಡಲಿಲ್ಲ: +ಹೀಗಾದುದರಿಂದ ತಿಪ್ಪಾಶಾಸ್ತ್ರಿಗೆ ವಾಗ್ದೇವಿಯ ಮೇಲೆ ಅಭಿಮಾನ ಉಳಿಯಿತು. +ಅವನನ್ನು ಪೂರ್ಣವಾಗಿ ತಿರಸ್ಕಾರ ಮಾಡಿಬಿಟ್ಟರೆ ಕ್ರಮೇಣ ಅವನ ಶತ್ರುತ್ವದಿಂದ ದೊಡ್ಡ ಬಾಧಕ ಬರುವದೆಂಬ ಭಯವು ನಿವಾರಣೆಯಾದ ಹಾಗಾಯಿತು. +ಒಟ್ಟಾರೆ ಇದೊಂದು ದೊಡ್ಡ ಅಡಚಣಿಯಿಂದ ವಾಗ್ದೇವಿಯು ಪಾರಾದ್ದು ಅವಳ ಪುಣ್ಯವೆನ್ನಬೇಕು. +ಸೂರ್ಯನಾರಾಯಣನು ದಿನಾಗಲೂ ವಿದ್ಯಾಭ್ಯಾಸದಲ್ಲಿ ಪೂರ್ಣ ಮನಸ್ಸಿಟ್ಟು ಸುಜ್ವನೆನಿಸಿಕೊಳ್ಳುವವನಾದನು. +ಅನನ ಮುಖದ ವರ್ಚಸ್ಸು ಬಾಲಾರ್ಕನಂತೆ ಶೋಭಿಸುವದಾಯಿತು. +ದ್ವಾದಶ ವರ್ಷಗಳು ಮಾತ್ರ ತುಂಬಿರುವುದಾದರೂ ನೋಡುವಿಕೆಗೆ ಹದಿನಾರು ವರ್ಷ ಪ್ರಾಯವಂತನಂತೆ ಕಾಣುವನು. +ಯತಿಯು ಕೊಟ್ಟ ಭಾಷೆಯ ನೆನಪು ಹುಟ್ಟಿಸಿ ಅವನಿಂದ ಅದನ್ನು ಶೀಘ್ರ ನೆರವೇರಿಸಿಕೊಳ್ಳುವದಕ್ಕೆ ಪ್ರಶಸ್ತವಾದ ಸಮಯವು ಬಂದಿ ರುವುದೆಂದು ವಾಗ್ದೇವಿಗೆ ತೋರಿತು. +ತನ್ನ ಮಗನಿಗೆ ಆಶ್ರಮವಾಗುತ್ತಲೇ ಶತ್ರುಗಳು ಎಡೆಬಿಡದೆ ನಾನಾ ಉಪದ್ರ ಕೊಡದಿರಲಾರರೆಂದು ವಾಗ್ದೇವಿಗೆ ಚೆನ್ನಾಗಿ ಗೊತ್ತಿತ್ತು. +ಆದರೆ ಅದು ತನ್ನ ಕೋರಿಕೆಯು ಈಡೇರುವದಕ್ಕೆ ಒಂದು ಅಭ್ಯಂತರವಾಗಿರಕೂಡದೆಂದು ಅವಳು ನಿರ್ಧಾರ ಮಾಡಿರುತ್ತಿದ್ದಳು. +ಮುಖ್ಯದೈವತವಾದ ಹರಿಯಾಗಲೀ ಹರನಾಗಲೀ ಒಲಿದರೆ ಕ್ಷುದ್ರ ದೇವತೆ ಗಳನ್ನು ಗಣ್ಯ ಮಾಡುವ ಅಗತ್ಯವದೆಯೇ. +ಪುರದಲ್ಲಿ ಅತ್ಯಧಿಕ ಅಧಿಕಾರ ವುಳ್ಳ ಕೊತ್ವಾಲನೂ ಪೌಜದಾರಿ ಕಾರಭಾರಿಯೂ ವಾಗ್ದೇವಿಯ ಮೇಲೆ ಸಂಪೂರ್ಣ ಮಮತೆಯಿಂದ ಅವಳ ನಿರಂತರ ಶುಭಚಿಂತಕರಾಗಿ ವಜ್ರಾವರ ಣದಂತೆ ಸಹಾಯಕರಾಗಿರುವ ಸುಸಮಯದಲ್ಲಿ ವೇದವ್ಯಾಸ ಉಪಾಧ್ಯ ನಂತಿರ್ಪ ಬಣಗು ಪ್ರಾಣಿಗಳಿಗೆ ಅವಳು ಹೆದರುವದುಂಟೇ? +ಯತಿಯ ಮನಸ್ಸುಹ್ಯಾಗದೆಂಬದೊಂದೇ ಯೋಚನೆಯು ಅವಳಿಗೆ ಕಾಡುತ್ತಿತ್ತು. +ಪಟ್ಟದ ದೇವರ ಮುಂದೆ ಪ್ರಮಾಣ ಮಾಡಿಕೊಟ್ಟ ಭಾಷೆಯು ನೆರವೇರುವ ಮೊದಲೇ ಯತಿಯು ಗತನಾದರೆ ನೀರಿನಲ್ಲಿ ಹೋಮ ಇಟ್ಟ ಹಾಗೆ ಆಗುವದೇ ಸರಿ. +ಈಗಲೇ ಆ ಪ್ರಸ್ತಾಪವನ್ನು ಯತಿಯ ಕೂಡೆ ನಡೆಸಿ ವಾಂಛಿತವನ್ನು ಪಡೆಯದಿದ್ದರೆ ಮುಂದಿನ ಆಶೆಯು ನಿರರ್ಥಕವಾಗುವ ದೆಂಬ ಅನುಮಾನವು ಅವಳ ಮನಸ್ಸಿನಲ್ಲಿ ಗಲಿಬಿಲಿ ಮಾಡತೊಡಗಿತು. +ಯತಿಯ ಪ್ರಾಣೋತ್ಠ್ರಮಣ ಕಾಲದ ವರೇಗೆ ತಾಳ್ಮೆಯಿಂದಿರುವದು ಲೇಸಲ್ಲ. +ಒಂದು ವೇಳೆ ಅಂಥಾ ಸಂದುಕಟ್ಟಿನಲ್ಲಿ ತನ್ನ ಮಗನಿಗೆ ಆಶ್ರಮಕೊಟ್ಟರೂ ವೈರಿಗಳು ಆ ಮಾತೇ ಸುಳ್ಳೆಂದು ವಾದಿಸಿ ತನ್ನನ್ನೂ ಮಗನನ್ನೂ ಮೂಲೆಗೆ ಸೇರಿಸಿ ಬಿಟ್ಟರೆ ಜನ್ಮವೇ ವ್ಯರ್ಧವಾಗುವದು. +ಶೀಘ್ರ ಆಶ್ರಮಕೊಡಿಸಿಯೇ ಸಿದ್ಧವೆಂದು ವಾಗ್ದೇವಿಯು ದೃಢಮನಸ್ಸಿನಿಂದ ಸುಲಭವಾದ ಉಪಾಯ ನಡೆಯಲಿಕ್ಕೆ ಅನುಕೊಲ ನೀರಿಕ್ಷಣೆಯಲ್ಲಿರುತಿದ್ದಳು. +ಒಂದು ದಿನ ಭಿಕ್ಷೆಯಾದ ಕೊಂಚ ಹೊತ್ತಿನಲ್ಲಿ ಚಂಚಲನೇತ್ರರು ಫಕ್ಕನೆ ಮೂರ್ಛೆಹೊಂದಿದರು. +ವಿಳಂಬ ಮಾಡದೆ ವಾಗ್ದೇವಿಯು ಘನವೈದ್ಯರನ್ನು ಕರತರಿಸಿ ಬೇಕಾದ ಚಿಕಿತ್ಸೆಯನ್ನು ಮಾಡಿದುದರಿಂದ ಯತಿಯ ಜೀವವು ಉಳಿಯಿತು. +ವೈದ್ಯರ ಅನುಜ್ಞೆಗಳಂತೆಯೇ ವಾಗ್ದೇವಿಯು ಚಂಚಲನೇತ್ರರನ್ನು ಒಂದೆರಡು ವಾರಗಳ ಪರಿಯಂತರ ಪಧ್ಯದಲ್ಲಿಟ್ಟು ಬಹುಜಾಗ್ರತೆ ತಕ್ಕೊಂಡಳು. +ಗಂಡಾಂತರದ ಅವಧಿಯು ದಾಟಿತೆಂದು ವೈದ್ಯರು ಖಚಿತಪಟ್ಟ ತರುವಾಯ ಯತಿಯು ನಿತ್ಯಕರ್ಮಗಳನ್ನಾಗಲೀ ಬೇರೆ ಯಾವ ಕಾರ್ಯಗಳನ್ನೂಗಲೀ ಮುಂಚಿನಂತೆ ನಡಿಸಿಲಿಕ್ಕೆ ಯಾರೊಬ್ಬರೂ ತಡೆಯಲಿಲ್ಲ. +ಪ್ರಾಯಶಃ ಚಂಚಲನೇತ್ರರ ಆರೋಗ್ಯಸ್ಥಿತಿಯು ಭಯರಹಿತವೆಂದು ತೋರಿದರೂ ಪ್ರಾಯಸಲುವ ದೆಸೆಯಿಂದ ಮೃತ್ಯು ಹೆಡತಲೆಯಲ್ಲಿರುವದಾಗಿ ಭಾವಿಸಬೇಕಾಯಿತು. +ಅನ್ಯರ ಪರಿಮುಖ ಈ ಪ್ರಸ್ತಾಸ ಯತಿಯ ಕೂಡೆ ಮಾಡುವದು ಪರಿಷ್ಕಾರವಲ್ಲ. +ಬಹುಶಃ ವೆಂಕಟಪತಿ ಆಚಾರ್ಯನಿಂದ ಮಾತಾಡಿಸಿ ನೋಡಬಹುದೆಂದರೆ ಅವನು ಅನಾರೋಗ್ಯಸ್ಥಿತಿಯಲ್ಲಿರುವ ನೆವದಿಂದ ಮಠಕ್ಕೆ ಬರುವದೇ ಹೆಚ್ಚು ಅಪರೂಪವಾಗಿದೆ. +ತಾನೇ ಮಾತಾಡಿ ನೋಡುವದೇ ಅತಿ ಉತ್ತಮವೆಂದು ವಾಗ್ದೇವಿಯು ನಿಶ್ಚಯ ಮಾಡಿ ಯಥೋಚಿತ ಸಮಯವನ್ನು ಹಾರಯಿಸಿ “ಪರಾಕೆ, ನನ್ನದೊಂದು ಅರಿಕೆ ಅದೆ. +ನಡಿಸುವದಾದರೆ ಹೇಳುತಿದ್ದೆ” ಎಂದು ವಾಗ್ದೇವಿಯು ವಿನಯಪೂರ್ವಕವಾಗಿ ಬಿನ್ನವಿಸಿದಳು. +“ಏನು?ಹೇಳು?ಎಂದು ಚಂಚಲನೇತ್ರರ ಅಪ್ಪಣೆಯಾಯಿತು. +ವಾಗ್ದೇವಿ–“ಸೂರ್ಯನಾರಾಯಣನು ವಿದ್ಯೆಯಲ್ಲಿಯೂ ಬುದ್ಧಿಯಲ್ಲಿಯೂ ನಿರಾಕ್ಷೇಪಕರ ಹುಡುಗನೆಂದು ಕಾಣುತ್ತದೆ. +ಶ್ರೀಪಾದಂಗಳ ಅಭಿಪ್ರಾಯ ಹ್ಯಾಗದೊ ತಿಳಿಯದು. +ಚಂಚಲ—“ನಮ್ಮಿಬ್ಬರ ಅಭಿಪ್ರಾಯವು ಒಂದೇ! +ನಾವು ವಿಮತವಾಗುವದು ಹ್ಯಾಗೆ?” +ವಾಗ್ದೇವಿ–“ಹಾಗಾದರೆ ಶ್ರೀಪಾದಂಗಳವರು ನನ್ನ ಮೇಲೆ ಕೃಪೆ ಇಟ್ಟು ಮಠಕ್ಕೆ ಕರಸಿಕೊಂಡ ದಿನ ಕೊಟ್ಟ ಭಾಷೆಯನ್ನು ನೆನಸಿಗೆ ತರಲೇ?” +ಚಂಚಲ–“ ಆ ಭಾಷೆ ಯಾವುದು? +ವಾಗ್ದೇವಿ–“ಅಷ್ಟು ಬೇಗ ಅದು ಮರವೆಗೆ ಬಂದದ್ದು ಬಹು ಚೋದ್ಯವೇ. +ಅಗಲಿ, ಹೇಳಿ ಬಿಡುತ್ತೇನೆ. +ನನ್ನಲ್ಲಿ ಹುಟ್ಟಿದ ಮಗನಿಗೆ ಆಶ್ರಮ ಕೊಡುವದಾಗಿ ಫಟ್ಟದ ದೇವರ ಮುಂದೆ ಪ್ರಮಾಣ ಮಾಡಿಕೊಟ್ಟ ಭಾಷೆ. +ಈಗಲಾದರೂ ನೆನಫಿಗೆ ಬಂತೇ? +ಚಂಚಲ–“ಹೌದು. ಆ ಭಾಷೆ ಸಲಿಸುವ ಸಂದರ್ಭ ಈಗ ಒದಗಿರುವದಧೇನು?” +ವಾಗ್ದೇವಿ — “ಒದಗಿಲ್ಲವಾದರೆ ಒದಗುವ ಕಾಲವು ಯಾವದೆಂದು ಅಪ್ಪಣೆಯಾದರೆ ನಿಶ್ಚಿಂತಳಾಗಿರಬಹುದು.? +ಚಂಚಲ–“ನಮ್ಮ ದೇಹ ಪ್ರಕೃತಿಯು ಬಲಹೀನವಾದ್ದಲ್ಲಾ. +ಈಗ ನಮ್ಮ ದೇಹದಲ್ಲಿ ಏನೂ ಆಯಾಸವಿಲ್ಲ. +ಅಷ್ಟು ಬೇಗ ಶಿಷ್ಯನನ್ನು ಮಾಡಿ ಕೊಳ್ಳುವದ್ಯಾಕೆ? +ಪ್ರಾಣಸಂದೇಹದ ಚಿನ್ಹೆ ತೋರಿದಾಗ ಅನ್ಯನೊಬ್ಬಗೆ ಆಶ್ರಮ ನಾವು ಕೊಡುವ ಹಾಗುಂಟೇನು? +ನೀನು ಇಷ್ಟು ಅವಸರ ಮಾಡುವುದು ನಮಗೆ ಸರಿ ತೋರುವದಿಲ್ಲ” +ವಾಗ್ದೇವಿ – “ಕ್ಷಣಭಂಗುರವಾದ ನರದೇಹಸ್ಥಿತಿಯನ್ನು ನೆಚ್ಚಬಹುದೇ? +ತಮಗೆ ದೇವರು ದೀರ್ಫಾಯುಷ್ಯ ಕೊಡಲೆಂದು ನನ್ನ ಪ್ರಾರ್ಥನೆ. +ಆದರೆ ‘ಶುಭಸ್ಯಶೀಘ್ರಂ, ಅಶುಭಸ್ಯ ಕಾಲಹರಣಂ’ ಎಂಬ ವಚನವಿದೆ. +ಹೆಚ್ಚಿಗೆ ಅರಿಕೆ ಮಾಡಲಿಕ್ಕೆ ಶಕ್ತಳಲ್ಲ. +ಸರ್ವಜ್ಞಗಾದ ತಮಗೆ ಅನ್ಯರು ಆಲೋಚನೆ ಹೇಳಬೇಕೆ? +ನಾನು ಒಬ್ಬಳು ಹೆಣ್ಣು ಹೆಂಗಸು.? +ಚಂಚಲ — “ಕ್ರಮೇಣ ನೋಡೋಣ. +ಹುಡುಗನಿಗೂ ಕೊಂಚ ಪ್ರಾಯ ತುಂಬಲಿ. +ಈಗ ಅನಪತ್ಯವೇನು?” +ವಾಗ್ದೇವಿ–“ಕೆಟ್ಟದೆಣಿಸಿದ ಮೇಲೆ ಒಳ್ಳೇ ದೆಣಿಸಬೇಕೆಂಬದೊಂದು ಮಾತು ರೂಢಿಯಲ್ಲಿದೆ ಪರಾಕೆ! +ಒಬ್ಬ ಸನ್ಯಾಸಿಯು ಫಕ್ಕನೆ ಗತನಾದರೆ ಅವನಿಗೋಸ್ಕರ ದ್ವಂದ್ವಮಠದಧಿಪತಿಗಳು ಆಶ್ರಮವನ್ನು ಕೊಡಬೇಕಷ್ಟೇ! +ಗತವಾದ ಸನ್ಯಾಸಿಯು ಆರಿಸಿಟ್ಟವನಿಗೇನೇ ಅಂಥಾ ಸಂಧಿಯಲ್ಲಿ ಆಶ್ರಮವಾದೀತೆಂದು ನಿರೀಕ್ಷಿಸಬಹುದೇ? +ಯಾರೊಬ್ಬರ ಕೇಡುಬಯಸದೆ ನಾನು ಹೇಳುವ ಈ ಮಾತು ಶ್ರೀಪಾದಂಗಳ ಮನಸ್ಸಿಗೆ ಅಯುಕ್ತವೆಂತ ತೋಚದೆಂದು ನನ್ನ ಅಭಿಪ್ರಾಯ.” +ಚಂಚಲ– “ಹಾಗಾದರೆ ನೀನು ಕೇವಲ ಹಿತಚಿಂತಕಳೇ ಸರಿ. +ಏನೋ ಸ್ವಲ್ಪ ಅನಾರೋಗ್ಯಸ್ಟಿತಿ ಒಂದು ದಿನ ಕಂಡುಬಿಟ್ಟು ನೀನು ವಿಳಂಬವಿಲ್ಲದೆ ನಿನ್ನ ಮಗನಿಗೆ ಆಶ್ರಮಕೊಡಬೇಕೆಂದು ಹಟಹಿಡಿಯುವದು ನೋಡುವಾಗ ನಮ್ಮ ಪ್ರಾಣ ಎಂದು ಹೋದೀತೆಂಬ ನಿರೀಕ್ಷೆಯು ನಿನ್ನಲ್ಲಿ ಕುಣಿದಾಡುತ್ತದೆಂದು ನಾವು ಭಾವಿಸಬೇಕಾಗುತ್ತದೆ. +ಅವರವರ ಪ್ರಯೋಜನ ಅವರವರು ನೋಡುವದು ಸೋಜಿಗವಲ್ಲ.” +ವಾಗ್ದೇವಿ–“ಸ್ವಾಮೀ!ಇಂಧಾ ನಂಜಿನ ಮತ್ತು ರಾಗಛಾಯದ ಮಾತುಗಳ್ಯಾಕೆ? +ಕೊಟ್ಟಮಾತು ನಡಿಸಲಿಕ್ಕೆ ಆಗುವದಿಲ್ಲವೆಂದು ಖಂಡ ತುಂಡವಾಗಿ ಆಡಿಬಿಟ್ಟರೆ ನಾನೇನು ಮಾಡುವ ಹಾಗುಂಟು.” +ಚಂಚಲ–“ನೀನು ನಮ್ಮ ಮಠಕ್ಕೆ ಬಂದಂದಿನಿಂದ ಇದುವರೆಗೂ ಏನೊಂದು ಕಲಹಮಾಡದೆ ಈ ದಿನವೇ ಸಣ್ಣದೊಂದು ಜಗಳದ ಬೀಜವನ್ನು ಬಿತ್ತಲಿಕ್ಕೆ ನೋಡುವದಾಗಿ ನಮ್ಮ ಮನಸ್ಸಿಗೆ ಕಾಣುತ್ತೆ. +ಹೀಗೆ ಮಾಡಲಿಕ್ಕೆ ನೀನು ಆಸೆಪಡುವದು ನಿನ್ನ ಸ್ವಬುದ್ಧಿಯಿಂದಲೋ ಬೇರೆಯವರ ದುರಾಲೋಚನೆಯಿಂದಲೋ ಎಂಬುದು ತಿಳಿಯದೆ ನಾವು ಮನಸ್ಸಿನಲ್ಲಿ ಕೊಂಚ ಸಂದೇಹಪಡಬೇಕಾಗುತ್ತದೆ. +ಅದಂತಿರಲಿ ಕೃತಾಕೃತ ಪಾಪಗಳಿಗೆ ಅವರವರೇ ಹೊಣೆಯಾಗುವದು ಸಹಜ. +ನಾನೀಗ ಈ ಪ್ರಸಂಗದಲ್ಲಿ ಬೇರೇನೂ ಹೇಳತಕ್ಕದ್ದಿಲ್ಲ.” +ವಾಗ್ದೇವಿ–“ಪರಾಕೆ!ಈಗ ತಾವು ಹೇಳತಕ್ಕದ್ದೇನಿಲ್ಲವೆಂಬ ಅನುಮಾನ ಚಂದಾಗಿ ಇದ್ದ ಕಾರಣದಿಂದಲೇ ಈ ಪ್ರಸ್ತಾಸ ನಾನೆತ್ತಿದೆ! +ನನ್ನ ನವ ಯೌವನವನ್ನು ತಮ್ಮ ವ್ಯಾಮೋಹಕ್ಕೆ ಬಲಿ ಅರ್ಪಿಸಿಸುವುದಕ್ಕೆ ಮಾತ್ರ ತಾವು ನನ್ನನ್ನು ಕರೆಸಿಕೊಂಡಿರೆಂದು ನನಗೆ ಪೂರ್ಣವಾಗಿ ಗೊತ್ತಿದ್ದೇ ತಮ್ಮಿಂದ ಪ್ರಮಾಣ ಪೂರ್ವಕವಾದ ವರವನ್ನು ಅಪೇಕ್ಷಿಸಿದೆ ಮತ್ತು ಆ ವರವು ಸಿಕ್ಕುವ ಪರಿಯಂತರ ತಮ್ಮ ಅಪೇಕ್ಷೆಯನ್ನು ಸಲ್ಲಿಸುವುದಕ್ಕೆ ಕಟ್ಟು ನಿಟ್ಟಾಗಿ ನಿರಾಕರಿಸಿದೆ. +ಆದರೂ ನಾನು ಸೋಥೋದೆನಷ್ಟೆ!ಪರವಾ ಇಲ್ಲ. +ತಾವು ನಿತ್ಯ ಪೂಜಿಸುವ ಪಟ್ಟದ ದೇವರ ಮೇಲೆ ತಮಗೆಷ್ಟು ಭಕ್ತಿಯಿದೆ ಎಂಬುದು ಮಿತಿಕಟ್ಟಲಿಕ್ಕೆ ತಮ್ಮ ಈಗಿನ ಮಾತಿನಿಂದ ಅನುಕೂಲವಿದೆ. +ಅತಿಶಯೋಕ್ತಿಯಿಂದ ಏನು ಪುರುಷಾರ್ಥ ಸ್ವಾಮೀ! +ತಮ್ಮ ವಾಗ್ದಾನದ ಮೌಲ್ಯ ತಿಳಿದ ಹಾಗಾಯಿತು. +ಸಾಕು ತಮಗೂ ನನಗೂ ಪ್ರಾಯ ವೃದ್ಧಿ ಯಾಗುತ್ತಾ ಒಬ್ಬರ ಸಾಮೀಪ್ಯ ಇನ್ನೊಬ್ಬರಿಗೆ ಅಗತ್ಯವಿಲ್ಲದ ಸಮಯವು ಬರಲಿಕ್ಕಾಯಿತು. +ನಮ್ಮ ನಮ್ಮ ಹಾದಿ ನಾವು ನಾನು ನೋಡುವುದಕ್ಕೆ ಇದೇ ಸಮಯವೆನ್ನಬಹುದು. +ಇಂದಿನವರೆಗೆ ತನ್ಮು ಮಠದ ದ್ರವ್ಯದಿಂದ ಮೃಷ್ಟಾನ್ನ ಭೋಜನವೂ ಸಂಪತ್ತೂ ದನಲತ್ತೂ ತಮ್ಮ ವಿತ್ತಾಪಹಾರವೂ ನನಗೆ ನಿರಾಯಾಸವಾಗಿ ದೊರಕಿತು. +‘ನಾಯಿ ಹಸಿದಿತ್ತು ಅಂಬಲಿ ಹಳಸಿತ್ತು’ ಎಂಬ ಗಾದೆಯಂತೆ ನಮ್ಮಿಬ್ಬರ ಅವಸ್ಥೆಯಾಗಿತ್ತು. +ನನ್ನ ರೂಪ ಲಾವಣ್ಯಕ್ಕೂ ಪ್ರಾಯಕ್ಕೂ ತಕ್ಕವನಾದ ವರನು ನನಗೆ ದೊರಕದೆ ಯಾರ ಬಯಕೆಗೂ ಒಳಪಡುವ ಅವಶ್ಯಕತೆಯುಳ್ಳ ಪ್ರಾಣಿಯಾಗಿದ್ದೆ. +ಸನ್ಯಾಸದ ಪಾಶಬದ್ಧರಾಗಿ ಮದುವೆ ಆಗಕೂಡದೆ ಇಂದ್ರಿಯದ ಮನದ ಶಕ್ತಿಶೂನ್ಯರಾಗಿ ತಾವು ಇರುತಿದ್ದಿರಿ. +ಹೀಗಾಗಿ ನಮ್ಮಿಬ್ಬರಿಗೆ ಸಂಘಟನ ಸುಲಭವಾಯಿತು. +ತಾವು ಕೊಟ್ಟ ಭಾಷೆಯ ಮೇಲೆ ನಾನು ವಿಶ್ವಾಸವಿಟ್ಟದ್ದೊಂದು ತಪ್ಪು. +ಅದರ ಫಲ ಉಣ್ಣತಕ್ಕವಳು ನಾನೇ! +ಇನ್ನು ಅಪ್ಪಣೆಯಾಗಲಿ; +ಹೋಗಿ ಬರುತ್ತೇನೆ.? +ಚಂಚಲ–“ಯಾವಲ್ಲಿಗೆ ಹೋಗುತ್ತೀ? +ಏನು ಹುಚ್ಚು ಹರಕೋಥಿ! +ನಿನಗೆ ದೈವ ಸೋಕಿತೇನು? +ವಿವೇಕದಿಂದ ಇದುವರೆಗೆ ಇದ್ದವಳು ಈಗ ಒಮ್ಮೆಯೇ ಕರ್ಕಶಳಾದೆಯಾ? +ನಿನಗೆ ಕೊಟ್ಟ ಭಾಷೆ ಮರತವರು ಯಾರು? +ಭಲ ಯಾರಿಗೂ ಕ್ಷೇಮಕರವಲ್ಲ. +ಅವಸರವ್ಯಾಕೆ?ನೀನು ಕಠಿಣ ಮಾತುಗಳಾಡಿದಿ ಎಂದು ನಾವು ಆಗ್ರಹ ಪಡುವುದಿಲ್ಲ. +ನಿನ್ನನ್ನು ಹಳಸಿ ಹೋದ ಅಂಬಲಿಗೂ ನಮ್ಮನ್ನು ನಾಯಿಗೂ ಹೋಲಿಸಿದರೂ ಚಿಂತಿಲ್ಲ. +ಸಿಟ್ಟಿನ ಸಮಯದಲ್ಲಿ ಬಾಯಿಯಿಂದ ಯದ್ವಾತದ್ವಾ ಮಾತುಗಳು ಹೊರಡುವುದು ಲೋಕದಲ್ಲಿ ರೂಢಿಯಿದೆ. +ವಾಗ್ದೇವಿ– “ನಾನು ಕೊಟ್ಟ ಉಪಮೆಯು ಸರಿಯಾದ್ದೆ. +ಮಾತು ಬಲ್ಲವಗೆ ಜಗಳವಿಲ್ಲ, ಊಟ ಬಲ್ಲವಗೆ ರೋಗವಿಲ್ಲವೆಂಬ ಸಾಮತಿಗೆ ಸರಿಯಾಗಿ ತಮ್ಮ ವಹಿವಾಟು ನಡಿಯುತ್ತದೆ. +ನಾನನಕಾ ಅನಾಥೆ. +ದೇವರೇ ನನ್ನನ್ನು ರಕ್ಷಣೆ ಮಾಡಬೇಕು. +ನಾವು ಪರಸ್ಪರ ಮುಖಾವಲೋಕನ ಮಾಡಿಕೊಳ್ಳುವ ಕಡೆ ಕಾಲವು ಇದೇ. +ಇನ್ನೊಮ್ಮೆ ಅಪ್ಪಣೆ ಬೇಡುತ್ತೇನೆ. +ಬಡವಳ ಮೇಲೆ ಪ್ರೀತಿ ಇರಲಿ.” +ಹೀಗೆಂದು ಸಟ್ಟನೆ ವಾಗ್ದೇವಿಯು ಬೆನ್ನು ಹಾಕಿ ಹೊರಡುವ ವೇಳೆಯಲ್ಲಿ ಚಂಚಲನೇತ್ರರು ಅವಳ ಮುಖವನ್ನು ನೋಡಿದರೆ ಅವಳು ಸಿಟ್ಟು ತಡೆಯಲಾರದೆ ಗಡಗಡನೆ ನಡುಗುತ್ತಾ ಕರಾಳವದನಳಾಗಿರುವದನ್ನು ಕಂಡು ನಿಜವಾಗಿ ಹೆದರಿ ಅಧೋಮುಖರಾದರು. +ವಾಗ್ದೇವಿಯು ಹಿಂದೆ ನೋಡದೆ ಅತಿ ವೇಗದಿಂದ ಬಿಡಾರಕ್ಕೆ ಬಂದು ಗಂಡನನ್ನು ಕರೆದು ಏನೋ ಅಂತರಂಗ ಸಂಭಾಷಣೆಯ ಮೂಲಕ ಅನುಜ್ಞೆಗಳನ್ನು ಕೊಟ್ಟು ನಿತ್ಯ ಉಪಯೋಗಕ್ಕೆ ಬೇಕಾದ ಅಡಿಗೆ ಪಾತ್ರಾದಿ ಸಾಹಿತ್ಯಗಳನ್ನು ಹೊರೆ ಕಟ್ಟಸಿ ತತ್ಕಾಲ ವೆಚ್ಚಕ್ಕೆ ಬೇಕಾಗುವಷ್ಟು ಹಣಕಾಸು ಚಿನ್ನಚಿಗುರು ಇತ್ಯಾದಿ ಕಟ್ಟಿಕೊಂಡು ಶೃಂಗಾರಿಯ ಸಮೇತ ಬಂಡಿ ಏರಿ ನಡೆದುಬಿಟ್ಟಳು. +ಮುಂಚಿತವಾಗಿಯೇ ಮತ್ತೊಂದು ಬಿಡಾರ ಹುಡುಕಲಿಕ್ಕೆ ಕಳುಹಿಸಲ್ಪಟ್ಟ ವಿಶ್ವಾಸಿ ಸೇವಕನು ನೇಮರಾಜನ ಭಂಡಸಾಲೆಯ ಸಮೀಪ ಅವನಿಗಿರುವ ಅನೇಕ ಕಟ್ಟೋಣಗಳಲ್ಲಿ ಒಂದನ್ನು ಬಾಡಿಗೆ ನಿಶ್ಚಯಿಸಿಟ್ಟಿರುತ್ತಿದ್ದನು. +ಅದರಲ್ಲಿ ಅವಳು ನಿರಾತಂಕವಾಗಿ ಪ್ರವೇಶಿಸಿ ಸೂರ್ಯನಾರಾಯನನ್ನು ಕೂಡಾ ಶಾಲೆಯಿಂದ ಅಲ್ಲಿಗೆ ಬರುವ ಹಾಗೆ ಹೇಳಿಕಳುಹಿಸಿದಳು. +ಮಾತೆ ಯಾಜ್ಞೆಯಂತೆ ಪುತ್ರನು ಪ್ರವರ್ತಿಸಿದನು. +ತಾಯಿಯು ಬೇರೆ ಬಿಡಾರ ಮಾಡಿಕೊಂಡಿರುವ ಕಾರಣವೇನೆಂದು ತಿಳಿಯದೆ ಅವನು ಕೊಂಚ ಬೆರಗಾದನು. +ಆದರೆ ಆ ವಿಷಯದಲ್ಲಿ ಅವ್ವನ ಕೂಡೆ ಪ್ರಸ್ತಾಪಿಸಲಿಕೆ ಅಂಜಿ ಮೌನವಾದನು. +ಅಬಾಚಾರ್ಯನು ಮಠದಲ್ಲಿಯೇ ಇದ್ದು ಅಲ್ಲಿಯೇ ಭೋಜನ ತೀರಿಸಿಕೊಂಡು ದಿನಕೊಮ್ಮೆಯಾಗಲೀ ಹೆಚ್ಚು ಸಲವಾಗಲೀ ಪತ್ನಿಯ ಬಿಡಾರಕ್ಕೆ ಬಂದು ಲವಕಾಲ ಅಂತರಂಗ ಮಾತಾಡಿ ಬಿಟ್ಟು ಹಿಂತಿರುಗಿ ಹೋಗುವನು. +ಶೃಂಗಾರಿಗೂ ಅಕ್ಕನು ಮಠವನ್ಶು ಬಿಟ್ಟು ಪ್ರತ್ಯೇಕ ವಾಸಮಾಡಿಕೊಂಡಿರುವ ಗುಟ್ಟು ತಿಳಿಯಬೇಕೆಂಬ ಕುತೂಹಲವಿದ್ದರೂ ಅವಳ ಕೂಡೆ ಪ್ರಸ್ತಾಸ ಮಾಡಲಿಕ್ಕೆ ಧೈರ್ಯವಿರಲಿಲ್ಲ. +ಮಠದಿಂದ ಹೊರಟು ಬೇರೆ ಠಾವಿನಲ್ಲಿ ಉಳಕೊಂಡ ಸಂಬಂಧ ಜೀವನ ನಡಿಸಿಕೊಳ್ಳಲಿಕ್ಕೆ ಸಾಲ ಕಡ ಮಾಡುವ ಅವಶ್ಯತೆಯಿಲ್ಲದಿದ್ದರೂ ಕೈಯಲಿ ಕಾಸೊಂದೂ ಇಲ್ಲದವಳಂತೆ ಅವಳು ದಿನ ದಿನದ ಸಾಹಿತ್ಯಗಳನ್ನು ನೇಮರಾಜನ ಅಂಗಡಿಯಿಂದ ಬೇಕಾದ ಹಾಗೆ ಕಡವಾಗಿ ತರಿಸಿಕೊಂಡು ನಿಶ್ಚಿಂತಳಂತೆ ತೋರಿಸಿಕೊಂಡು ಕಾಲಹರಣ ಮಾಡುವವಳಾದಳು. +ಒಂದೆರಡು ದಿನಗಳ ತರುವಾಯ ಆ ಬಿಡಾರವು ಬಹು ಒಳ್ಳೆಯದೆಂಬ ಹಾಗೆ ಶೃಂಗಾರಿಯ ಮನಸಿಗೆ ತೋಚಿ ಅಲ್ಲಿಯೇ ಉಳಕೊಳ್ಳುವದು ಬಹು ಸೌಖ್ಯವೆಂತ ಅವಳು ತಿಳಕೊಂಡಳು. +ವಾಗ್ದೇವಿಯು ಚಂಚಲನೇತ್ರರ ಸಂಗಡ ಜಗಳ ಮಾಡಿ ಬೇರೆ ಬಿಡಾರ ಮಾಡಿಕೊಂಡಿರುವ ಸುದ್ದಿಯು ಕುಮುದಪುರದಲ್ಲಿ ಹಬ್ಬಿ ಬಹು ಜನರಿಗೆ ವಿಸ್ಮಯವನ್ನುಂಟು ಮಾಡಿತು. +ಭೀಮಾಜಿಗೆ ಈ ವರ್ತಮಾನವು ಆರಂಭದಲ್ಲಿ ಸಟೆಯಾಗಿ ಕಂಡರೂ ವಿಚಾರಿಸಿ ತಿಳಿಕೊಂಡಾಗ ಅದರ ನಿಜತ್ವದ ಕುರಿತು ಸಂದೇಹ ಬರಲಿಲ್ಲ. +ಅವನು ಸಾಯಂಕಾಲ ಸಮಯದಲ್ಲಿ ವಾಗ್ದೇವಿಯನ್ನು ಅವಳ ಬಿಡಾರದಲ್ಲಿ ಕಂಡು ಜಗಳದ ಮೂಲವನ್ನು ಕೇಳಿ ತಿಳಿದ ಮೇಲೆ ಅವಳ ಉದ್ದೇಶ ನೆರವೇರುವದಕ್ಕೆ ತನ್ನ ಪೂರ್ಣ ಸಹಾಯ ಉಂಟೆಂದು ಅವಳ ಮನಸಿಗೆ ದೃಢಪಡಿಸಿ ಶಾಬಯ್ಯಗೆ ಈ ವಿಶೇಷ ವರ್ತಮಾನವನನ್ನು ತಿಳಿಸಿದನು. +ವಾಗ್ದೇವಿಯ ಮೇಲೆ ಅತಿಶಯ ಅನುರಕ್ತಿ ಇರುವ ಈ ದೊಡ್ಡ ಉದ್ಯೋಗಸ್ಥನು ಅವಳನ್ನು ಕಾಣಲಿಕ್ಕೆ ಅಪೇಕ್ಷೆಯುಳ್ಳನಾಗಿರುವನೆಂದು ಭೀಮಾಜಿಯ ಪರಿಮುಖ ತಿಳಿಸುತ್ತಲೇ ಅವಳು ಪ್ರೀತಿಯ ವಸ್ತುಗಳನ್ನು ಹಿಡಿಸಿಕೊಂಡು ಕತ್ತಲೆಯ ಸಮಯದಲ್ಲಿ ಅವನನ್ನು ಕಂಡು ಕಣ್ಣೀರಿಟ್ಟು ಸಕಲ ವೃತ್ತಾಂತವನ್ನು ಆರುಹಿದಳು. +ಶಾಬಯ್ಯನು ರೇಗಿದನು. +“ಹೆದರಬೇಡ; ಸರ್ವ ಅಭ್ಯಂತರಗಳನ್ನು ನಿವಾರಣೆ ಮಾಡಿ ಕೊಡುವೆನು” ಎಂದು ಆವಳಿಗೆ ಪೂರ್ಣವಾಗಿ ನಂಬಿಕೆ ಕೊಟ್ಟು ಮನೆಗೆ ಮರಳಿ ಹೋಗಿಬಿಟ್ಟನು. +ವಾಗ್ದೇವಿಯ ಖತಚಿಂತಕರಲ್ಲಿ ಪ್ರಥಮಸ್ಥಾನವನ್ನು ಹೊಂದಿದ ಬಾಲಮುಕುಂದಾಚಾರ್ಯನು ಕೆಲವು ವರ್ಷಗಳಿಂದ ಅಪಸ್ಮಾರ ವ್ಯಾಧಿ ಪೀಡಿತನಾದ ದೆಸೆಯಿಂದ ಅವನನ್ನು ನೋಡಲಿಕ್ಕೆ ವಾಗ್ದೇವಿಗೆ ಸಂದರ್ಭವಾಗದೆ ಅವರೊಳಗಿನ ಮಿತ್ರತ್ವವು ಅಂತ್ಯವಾದಂತಾಯಿತು. +ಭೀಮಾಚಾರ್ಯನು ವೃದ್ಧಾಪ್ಯದಿಂದ ಮನೆ ಬಿಟ್ಟು ಹೊರಡುವ ಮನಸಿಲ್ಲದವನಾಗಿರುವ ಪ್ರಯುಕ್ತ ಅವನೊಬ್ಬನಿಂದಲೇ ಕಾರ್ಯ ಸಾಧನೆಯಾಗುವ ಆಶೆಯು ವ್ಯರ್ಥವಾದುದರಿಂದಲೂ ಅವನ ಒತ್ತಾಸೆಯನ್ನು ವಾಗ್ದೇವಿಯು ಅಪೇಕ್ಷಿಸಲಿಲ್ಲ. +ಕಾರಭಾರಿಯ ಮತ್ತು ಕೊತ್ವಾಲನ ಪರಿ ಪೂರ್ಣವಾದ ದಯವು ದೊರಕಿರುವ ಅವಳಿಗೆ ಇನೊಬ್ಬನ ಸಾಹಾಯದ ಅಗತ್ಯವೇನದೆ? +ಅಮೃತವೇ ಕೈವಶವಾದ ಮೇಲೆ ಕಲಗಚ್ಚು ಯಾರಿಗೂ ಪ್ರಿಯಕರವಾಗುವದುಂಟೇ? +ವಾಗ್ದೇವಿಯು ಮಠದಿಂದ ಹೊರಟುಹೋದ ಸಮಾಚಾರ ತಿಳಿಯಲಾಗಿ ಚಂಚಲನೇತ್ರರು ಬಹಳ ಖಿನ್ನರಾಗಿ ಅಶ್ರುಜಲವನ್ನು ಧಾರಾಳವಾಗಿ ಸುರಿಸಿದರು. +ತಾನು ಮೊದಲೇ ಜನರ ಅಪಹಾಸ್ಯಕ್ಕೆ ಗುರಿಯಾಗಿರುವಾಗಲೇ ಇದೊಂದು ನವೀನವಾದ ಪರಿಹಾಸ್ಯಕ್ಕೆ ಆಸ್ಪದ ಕೊಟ್ಟೆನೆಂಬ ಚಿಂತೆಯಿಂದ ಇರುವಾಗ ಎದುರಿಗೆ ಕಾಣಸಿಕ್ಕಿದ ತಿಪ್ಪಾಶಾಸ್ತ್ರಿಯನ್ನು ಸಮಾಪಕ್ಕೆ ಕರೆದು ಸಂಧಾನೋಪಾಯವನ್ನು ವರ್ತಿಸಿ ಬಾರೆಂದು ಆಜ್ಞಾಪಿಸೆ ಆಗಬಹುದು ಅವನು ವಾಗ್ದೇವಿಯ ಬಿಡಾರಕ್ಕೆ ಹೋದನು. +ಅವಳ ಕೂಡೆ ತಾನು ಬಂದಿ ರುವ ಕಾರ್ಯದ ಸ್ವಭಾವವನ್ನು ತಿಳಿಸಿದನು. +ಅವಳು ಅದಕ್ಕೆ ಕಿವಿ ಕೊಡಲೇ ಇಲ್ಲ. +ಹೀಗಾಗಿ ಅವನು ಮೆಲ್ಲಗೆ ಅಲ್ಲಿಂದ ಎದ್ದು ಶೃಂಗಾರಿಯ ಕೂಡೆ ಕೊಂಚ ಸಮಯ ಸಂಭಾಷಣೆ ಮಾಡಿ ಮಠಕ್ಕೆ ಬಂದು ತಾನು ಹೋದ ಕೆಲಸ ಕೈಗೂಡಲಿಲ್ಲವೆಂದು ಯತಿಗಳಿಗೆ ಅರಿಕೆಮಾಡಿಕೊಳ್ಳುವದಕ್ಕೆ ನಾಚಿದನು. +ಆಬಾಚಾರ್ಯನ ಮುಖಾಂತರ ಸಂಧಾನ ನಡೆಸಿ ನೋಡೆಂದು ಯತಿಗಳು ತಿಪ್ಪಾಶಾಸ್ತ್ರಿಗೆ ಹೇಳಿದರು. +ತಿಪ್ಪಶಾಸ್ತ್ರಿಯು ಕೇಳಿದಾಗ ಆಬಾಚಾ ರ್ಯನು ಒಲ್ಲೆನೆಂದನು. +ವೆಂಕಟಪತಿ ಆಚಾರ್ಯನ ಅನಾರೋಗ್ಯವು ನಿತ್ಯವೂ ಹೆಚ್ಚುತ್ತಿರುವದೆಂಬ ನೆವನದಿಂದ ಮನೆಬಿಟ್ಟು ಹೊರಡುತ್ತಿದ್ದಿಲ್ಲ. +ಅವನ ತಮ್ಮ ಶ್ರೀಧರಾಚಾರ್ಯನು ಪಾರುಪತ್ಯವನ್ನು ನಡೆಸಿಕೊಂಡು ಬರುವನಾದರೂ ಅವನ ಮೇಲೆ ಚಂಚಲನೇತ್ರರಿಗೆ ಹೆಚ್ಚು ಪ್ರೀತಿಯಾಗಲೀ ವಿಶ್ವಾಸವಾಗಲೀ ಇರಲಿಲ್ಲ. +ವೆಂಕಟಪತಿ ಆಚಾರ್ಯನನ್ನು ಕರೆಕಳುಹಿಸದೆ ನಿರ್ವಾಹವಿಲ್ಲವೆಂದು ಕಂಡು ಬಂದುದರಿಂದ ಅವನನ್ನು ಕರೆಯುವದಕ್ಕೆ ಜನ ಬಿಡೋಣಾಯಿತು. +ಅವನು ತಡೆಯದೆ ಬಂದು ಅಪ್ಪಣೆಯಾದ ಕಾರಣವೇನೆಂದು ಏನೂ ತಿಳಿಯದಂತೆ ವಿಚಾರಿಸಲು ವಾಗ್ದೇವಿಗೂ ತನಗೂ ನಡೆದ ವಾಚಾಟ ಮತ್ತು ಅವಳು ಕೂಡಲೇ ಮಠವನ್ನು ಬಿಟ್ಟುಹೋದ ಹದನವನ್ನು ಅವನಿಗೆ ಆದ್ಯಂತ ತಿಳಿಸಿ ಮಗುವಿನೋಷಾದಿ ಅಳಲಿಕ್ಕೆ ತೊಡಗಿದರು. +ವೆಂಕಟಪತಿಗೆ ಬಹಳ ಕರಕರೆಯಾಯಿತು. +ಪರಂತು ತನ್ನ ಧಣಿಯು ವಾಗ್ದೇವಿಗೆ ಕೊಟ್ಟ ಭಾಷೆಯಂತೆ ನಡೆಯುವದಕ್ಕೆ ಇದೇ ಸಕಾಲವಾಗಿರುತ್ತೆ. +ಅವಳ ಅಪೇಕ್ಷೆಯನ್ನು ಪೂರೈಸಲಕ್ಕೆ ಅನಾವಶ್ಯಕ ಅಡ್ಡಿ ಹೇಳಿದ್ದು ನ್ಯಾಯವೆಂತ ತಾನು ತಿಳಕೊಳ್ಳುವದಿಲ್ಲವಾಗಿ ಅವನು ಖಂಡಿತವಾಗಿ ಹೇಳಿದನು. +ಚಂಚಲ–“ಈಗಲೇ ಆಶ್ರಮ ಕೊಡಬೇಕೆಂದು ನಿನ್ನದೂ ತಾತ್ಪರ್ಯವೇನಪ್ಪಾ! +ಅಷ್ಟು ಅವಸರವ್ಯಾತಕ್ಕೋ ತಿಳಿಯದು.” +ವೆಂಕಟಪತಿ–“ಸನ್ನಿಧಿಯ ಅಭಿಪ್ರಾಯ ಹ್ಯಾಗೋ ತಿಡಿಯದು.” +ಚಂಚಲ–“ನಮಗೆ ಅಂತ್ಯಕಾಲ ಸಮಾಪಿಸುವಾಗ ಅಶ್ರಮ ಕೊಟ್ಟು ಬಿಡೋಣ. +ಈಗಲೇ ಏನು ಅಗತ್ಯ?” +ವೆಂಕಟಪತಿ –ಅಂಥಾ ಕಾಲದ ಬರುವಿಕೆಯು ಬಹಳ ಮುಂದಿರಲಿ. +ಆವಾಗ ತಮ್ಮ ಸಂಕಲ್ಪ ತೀರಿಸುವುದಕ್ಕೆ ಸಾಕಷ್ಟು ಸಮಯ ದೊರಕುವದೆಂಬ ನಿಶ್ಚಯ ಹ್ಯಾಗೆ? ದೊರಕುವದೆನ್ನುವಾ. +ಆಗ್ಗೆ ಸೂರ್ಯನಾರಾಯಣನ ಪ್ರಾಯವು ಬಾಲಸನ್ಯಾಸ ಪಡೆಯುವದಕ್ಕೆ ಅಧಿಕವಾಗಿರದೆ? +ಆಶ್ರಮ ಕೊಡತಕ್ಕ ಪ್ರಾಯವು ಈಗಲೇ ಒದಗಿರುತ್ತದೆ. +ಪರಾಕೆ!ತಾವು ವಾಗ್ದೇವಿಗೆ ಕೊಟ್ಟ ಉತ್ತರವು ಸಂದೇಹಕರವಾಗಿ ತೋರುವ ಕಾರಣದಿಂದಲೇ ಅವಳು ತಮ್ಮನ್ನಗಲಿ ಹೋಗಬೇಕಾಯಿತು. +ನಾಲಿಗೆ ಮೀರಿದ ಬಳಿಕ ಅನ್ಯಥಾ ವರ್ತಿಸುವದು ಇಹಪರದಲ್ಲಿಯೂ ದೋಷಕರವಾದದ್ದು ಅಪಕೀರ್ತಿ ಬರುವ ಹಾಗಿರುವ ಈ ಆಶಾಭಂಗವು ವಾಗ್ದೇವಿಗೆ ಸನ್ನಿಧಿಯಿಂದ ಆಗಕೂಡದೆಂದು ನನ್ನ ವಿಜ್ಜಾಪನೆ.” +ಚಂಚಲ– “ವೆಂಕಟಪತಿಯೇ!ನಿನ್ನ ಮಾತು ನ್ಯಾಯವಾದದ್ದೆ. +ಲೋಕಾಪವಾದಕ್ಕೆ ಹೆದರಬೇಕಾಗುತ್ತದಷ್ಟೇ. +ಅದನ್ನು ಗಣ್ಯಮಾಡದೆ ಆಶ್ರಮ ಒಂದು ವೇಳೆ ಕೊಟ್ಟುಬಿಡೋಣವೆಂದರೆ ಉಳಕಿ ಮಠದವರು ಒಗ್ಗಟ್ಟಾಗಿ ಕೀಟಕ ಜನರ ಮಾತು ಕೇಳಿ ನಮ್ಮ ಮೇಲೆ ಸೊಂಟಕಟ್ಟಿದರೆ ಮಾಡತಕ್ಕದ್ದೇನು?” +ವೆಂಕಟಪತಿ– “ಸನ್ನಿಧಿಯ ಅಪ್ಪಣೆಯಾದರೆ ಖಡಾಖಡಿಯಾಗಿ ಒಂದು ಮಾತು ಹೇಳಿಬಿಡುತ್ತೇನೆ. +ಆಕಾಶವೇ ಜರಿದು ಬಿದ್ದರೂ ಪಟ್ಟದ ದೇವರ ಮುಂದೆ ಪ್ರಮಾಣಮಾಡಿಕೊಟ್ಟ ವಾಗ್ದತ್ತ ಹುಸಿಯಾಗಕೂಡದು. +ಏನು ಬಂದರೂ ಬರಲಿ, ದೇವರು ಸುಧಾರಿಸುವನು. +ಮಠದಲ್ಲಿ ಚಿಕ್ಕಾಸೂ ಉಳಿಯಡೆ ಖರ್ಚಾದರೂ ಸರಿ. +ವಾಗ್ದೇವಿಗೆ ಕೊಟ್ಟ ಭಾಷೆಯನ್ನು ಸಲ್ಲಿಸಲೇ ಬೇಕು. +ಇದು ನನ್ನ ಮತ. +ತಮ್ಮ ಅನುಮತಿಯನ್ನು ಮುಂದಾಗಿ ಕೇಳಿಕೊಂಡು ನಾನು ಅವಳನ್ನು ಮನೆಯಿಂದ ಹೊರಡಿಸಿ ತಂದು ತಮ್ಮ ಪಾದಕ್ಕೆ ಅರ್ಪಿಸಿದೆ. +ತತ್ಪೂರ್ವದಲ್ಲಿ ನಾನು ಮಾಡಿದ ಪ್ರಸಂಗವು ಸನ್ನಿಧಿಗೆ ಹಿತವಾಗಿ ತೋರಲಿಲ್ಲ. +ಹಿಂದೆ ಮಾಡಬೇಕಾಗಿರುತ್ತಿದ್ದ ಜಾಗ್ರತೆ ಈಗ ಮಾಡಲಿಕ್ಕೆ ನೋಡುವದು ಅನುಚಿತ. +ಲೋಕಾಪವಾದಕ್ಕೆ ಆಸ್ಪದ ಕೊಡುವದಕ್ಕೆ ಇನ್ನೇನುಬೇಕು? +ವಾಗ್ದೇವಿಯನ್ನು ಮೋಸಗೊಳಿಸಿದರೆ ಶ್ರೀಪಾದಂಗಳವರಿಗೆ ಬರುವ ದೋಷದ ಅರೆವಾಸಿಗೆ ನಾನು ಸಹಾ ಬಾಧ್ಯನಾಗುತ್ತೇನೆ. +ಹ್ಯಾಗೆಂದು ನಾನು ವಿವರಿಸಿ ಹೇಳತಕ್ಕ ಅಗತ್ಯವೇನದೆ? +ಸನ್ನಿಧಿಗೆ ಪೂರ್ಣ ಪರಾಂಬರಿಕೆ ಇರುವ ಪ್ರಸ್ತಾಪವನ್ನು ಪುನಃ ಎತ್ತಬೇಕೇನು?” + ವೆಂಕಟಪತಿ ಆಚಾರ್ಯನು ಆಡಿದ ಮಾತುಗಳು ಚಂಚಲನೇತ್ರರಿಗೆ ಸಾಣೆಗೆ ಮಸಗಿದ ಬಾಣಗಳಂತೆ ಮನೋವೇದನೆ ಉಂಟು ಮಾಡಿದವು . + “ವಾಗ್ದೇವಿಯನ್ನು ತಾತ್ಸಾರ ಮಾಡಿ ಬಿಟ್ಟರೆ ಅವಳಿಗೆ ಕ್ರೋಧ ಹುಟ್ಟಿ ರಾಜದ್ವಾರದವರೆಗೆ ಮುಂದರಿಸಲಿಕ್ಕೆ ಅವಳು ಉದ್ಯುಕ್ತಳಾದರೆ ಮಠದ ಗತಿ ಹ್ಯಾಗಾಗುವದೆಂದು ಬುದ್ಧಿಯುಳ್ಳವರು ಗ್ರಹಿಸಿಕೊಳ್ಳ ಬಹುದು. +ಸೂರ್ಯನಾರಾಯಣರಿಗೆ ಆಶ್ರಮ ಕೊಟ್ಟರೆ ಶತ್ರುಗಳ ಉಪಟಳದ ದೆಸೆಯಿಂದ ಹಣ ವೆಚ್ಚವಾಗುವ ಸಂಭವ ಒದಗಲಿಕ್ಕಿಲ್ಲವೆನ್ನಕೂಡದು. +ಹಾಗೆಯೇ ವಾಗ್ದೇವಿಯ ಸಿಟ್ಟಿನಿಂದ ದ್ರವ್ಯನಷ್ಟವಾಗಲಾರದೆನ್ನಬಹುದೇ? +ಉಭಯ ಸಂಕಟ ಬಂದೊದಗಿದಾಗ್ಗೆ ಕಡಿಮೆ ನಷ್ಟ ಮತ್ತು ಕಡಿಮೆ ಕಷ್ಟವುಳ್ಳ ಮಾರ್ಗವನ್ನು ಹಿಡಿಯಬೇಕು. +ಗುರುಗಳ ಫನತೆಗೆ ಯೋಗ್ಯವಲ್ಲದ ರೀತಿಯಲ್ಲಿ ಎಷ್ಟು ಸಣ್ಣ ಕಾರ್ಯವನ್ನಾಗಲೀ ಮಾಡಕೂಡದು” ಹೀಗೆ ನ್ಯಾಯವಾದ ತರ್ಕದಿಂದ ವೆಂಕಟಪತಿ ಆಚಾರ್ಯನು ಚಂಚಲನೇ ತ್ರರ ಮನಸ್ಸಿಗೆ ಮುಸುಕಿದ ಮೊಬ್ಬನ್ನು ಓಡಿಸಿ ಅವರಿಗೆ ನಾಚಿಕೆಯುಂಟಾಗುವಂತೆ ಮಾಡಿದನು. +“ನಿನ್ನ ಬುದ್ದಿಗೆ ತೋಚುವಂತೆ ವರ್ತಿಸಪ್ಪಾ! +ವೆಂಕಟಪತಿ, ನನ್ನಮೇಲೆ ಮತ್ತೆ ಮಾತಿನವಾಸಿ ಇಡಬೇಡ” ಎಂದು ಚಂಚಲನೇತ್ರರು ನಿಟ್ಟುಸಿರುಬಿಟ್ಟು ಖಂಡಿತವಾದ ಉತ್ತರ ಕೊಟ್ಟರು. +ಆವಾಗಲೇ ವೆಂಕಟಪತಿ ಲಚಾರ್ಯನು ಅಂತರಂಗದಲ್ಲಿ ರವಷ್ಟು ಮಾತಾಡಿ ವಾಗ್ದೇವಿಯ ಬಿಡಾರಕ್ಕೆ ತಾನೊಬ್ಬನೇ ಹೊರಟುಹೋದನು ದೂರದಿಂದ ವೆಂಕಟಪತಿಯನ್ನು ನೋಡುತ್ತಿದ್ದ ವಾಗ್ದೇವಿಯು ಇಷ್ಟುಹೊತ್ತು ತನ್ನ ಎಡ ಕಣ್ಣು ಹಾರುತ್ತಾ ಇದ್ದ ಶುಭಶಕುನವು ಈಡೇರುವದೆಂಬ ಹರುಷದಿಂದ ಆಚಾರ್ಯನನ್ನು ಅತಿಶಯವಾದ ಉಪಚಾರಗಳಿಂದ ಎದುರು ಗೊಂಡು ಆಸನದಲ್ಲಿ ಕುಳ್ಳಿರಿಸಿ ತನ್ನ ಪೂರ್ವ ಸ್ಪಿತಿಯು ನೆನನಿಗೆ ಬರುವ ಕಾಲ ಒದಗಿದಾಗ ಮರೆಯದೆ ವಿದುರನ ಮನೆಗೆ ಶ್ರೀಕೃಷ್ಣಸ್ವಾಮಿಯು ಬಂದ ಹಾಗೆ ಸವಾರಿ ಚಿತ್ತೈಸಿದ್ದು ತನ್ನ ಪೂರ್ವ ಪುಣ್ಯವೆಂದಳು. +ವೆಂಕಟಪತಿಯು ನಸುನಗುತ್ತಾ–“ಯಾಕವ್ಟಾ!ಮಠದಿಂದ ಹೊರಟುಬಂದಿ?” ಎಂದು ಕೇಳಿದನು. +“ಏನೂ ಗೊತ್ತಿಲ್ಲವವರಂತೆ ಪ್ರಶ್ನೆಮಾಡುತ್ತೀರಾ?” ಎಂದು ವಾಗ್ದೇವಿಯು ಪುನಃ ಪ್ರಶ್ನೆಮಾಡಿದಳು. +“ಗತಗೋಷ್ಟಿಹಾಗಿರಲಿ ಈಗಲೇಹೊರಡು. +ಮಠಕ್ಕೆ ಮರಳಿ ಬಾ; +ನಿನ್ನವಾಂಛಿತ ದೊರೆಯಲಿಕ್ಕೆ ಸರ್ವಧಾ ಅಡ್ಡಿಯುಂಟಾಗದು?ಎಂದು ವೆಂಕಟಪತಿ ಆಚಾರ್ಯನು ಹೇಳಿದನು. +ವಾಗ್ದೇವಿಯು ಪ್ರತಿವಾದಿಸದೆ ಹೊರಡಲಿಕ್ಕೆ ಅನುವಾದಳು. +ಶೃಂಗಾರಿಯು ಕೂಡಲೇ ಹೊರಡುವ ಮನಸ್ಸಿಲ್ಲದೆ ಸಂದು ಮೂಲೆಯಲ್ಲಿ ನಿಂತು ನೇಮರಾಜನ ಭಂಡಸಾಲೆಯಲ್ಲಿ ಅವನ ಬೈಟಕಿನ ಕಡೆಗೆ ಹಿಣಕಿ ನೋಡುತ್ತ ಕೊಂಚ ಸಾವಕಾಶ ಮಾಡುವ ಬಗೆಯನ್ನು ಕಂಡ ವಾಗ್ದೇವಿಯು ರವಷ್ಟು ಹೆದರಿಸಿದ ಹಾಗೆ ಮಾಡಿದಳು. +ಅವಳು ಒಡನೆ ಹೊರಟಳು. +ವೆಂಕಟಪತಿಯು ಭಂಡಿಯಲ್ಲಿ ಅವರಿಬ್ಬರನ್ನು ಕೂಡ್ರಿಸಿ ತಾನು ಪಾದಚಾರಿಯಾಗಿ ಮಠಕ್ಕೆ ಬಂದು ವಾಗ್ದೇವಿಯನ್ನು ಚಂಚಲನೇತ್ರರ ಸಮ್ಮುಖಕ್ಕೆ ಕರತಂದು ಅವರೊಳಗೆ ಪೂರ್ಣ ವಿವೇಕ ಉಂಟಾಗುವಂತೆ ಮಾಡಿ ಮರುದಿನ ಬರುವೆನೆಂದು ಮನೆಗೆ ಹೋದನು. +ಮರುದಿವಸ ವೆಂಕಟಪತಿ ಆಚಾರ್ಯನು ಮಠಕ್ಕೆ ಬಂದು ತಿಪ್ಪಾ ಶಾಸ್ತ್ರಿ ಮತ್ತು ಅವನಿಗಿಂತಲೂ ಜ್ಯೋತಿಷ್ಯದಲ್ಲಿ ಹೆಚ್ಚು ಪಾರಂಗತರಾದವರನ್ನು ಕರೆಸಿ ಅವರ ತರ್ಕದಿಂದ ನಿರ್ಣಯಿಸಿದ ಮುಹೂರ್ತವನ್ನು ಒಪ್ಪಿ ಕೊಂಡು ಆ ಮುಹೂರ್ತಕ್ಕೆ ಮಠದ ಪದ್ಧತಿಗನುಸಾರವಾಗಿ ಸೂರ್ಯ ನಾರಾಯಣನಿಗೆ ಆಶ್ರಮ ಕೊಡುವದಕ್ಕೋಸ್ಕ್ಯರ ಬೇಕಾದ ಸನ್ನಾಹಗಳು ಸರಿಯಾಗಿ ಆಗುವ ವಿಷಯದಲ್ಲಿ ಮುಂಜಾಗ್ರತೆಯನ್ನು ತಕ್ಕೊಂಡನು. +ವಾಗ್ದೇವಿಯು ಈ ವದಂತಿಯನ್ನು ಕೇಳಿ ಆನಂದದಲ್ಲಿ ಮುಳುಗಿದಳು. +ಭೀಮಾಜಿಯು ಅವಳನ್ನು ಕಂಡು ಅವಳ ಮನಸ್ಸಿಗೆ ಸರಿಯಾಗಿ ಯತಿಗಳು ನಡಕೊಳ್ಳಲಿಕ್ಕೆ ಒಡಂಬಟ್ಟರೆಂಬ ಸಂಹರ್ಷ ತಡೆಯದೆ ಹೋದನು. +ಆ ಶುಭ ವಾರ್ತೆಯು ಶಾಬಯ್ಯಗೆ ತಿಳಿದಾಗ ಆ ದೊಡ್ಡ ಉದ್ಯೋಗಸ್ತನು ಹರ್ಷಿತನಾದನು. +ಆಶ್ರಮ ಕೊಡುವದಕ್ಕೆ ನೇಮಿಸಿದ ದಿನದ ಎರಡು ಮೂರು ದಿನಗಳ ಮುಂಚೆಯೇ ವಾಗ್ದೇವಿಯು ಪ್ರೀತಿಕರವಾದ ವಸ್ತುಗಳನ್ನು ಹಿಡಿಸಿಕೊಂಡು ಶಾಬಯ್ಯನೆ ಮನೆಗೆ ಹೋಗಿ ಅವನನ್ನು ಕಂಡು ಹೆಚ್ಚು ಹೊತ್ತು ಆಹ್ಲಾದಕರವಾಗಿ ಸಂಭಾಷಣೆ ಮಾಡುತ್ತಾ ಮುಂದೆ ಬರಬಹುದಾದ ಸಂಕಷ್ಟ ನಿವಾರಣೆಯಾಗುವ ಪ್ರಮೇಯದಲ್ಲಿ ಸಂಪೂರ್ಣವಾದ ಸಹಾಯ ಮಾಡುವೆನೆಂಬ ವಾಗ್ದಾನವನ್ನು ಸುಲಭವಾಗಿ ಅವನಿಂದ ಪಡಕೊಂಡು ಮನೆಗೆ ಬಂದಳು. +ಮಠದ ಸಂಪ್ರದಾಯಕ್ಕನುಗುಣವಾಗಿ ಶಿಷ್ಯವರ್ಗಕ್ಕೂ ಬೇರೆ ಪ್ರಮುಖ ಗ್ರಹಸ್ತರಿಗೂ ಅಭಿಮಂತ್ರಣ ಕೊಡೋಣಾಯಿತು. +ಇಟ್ಟ ಲಗ್ನಕ್ಕೆ ಕೆಲವು ದಿವಸಗಳ ಮೊದಲು ಸೂರ್ಯನಾರಾಯಣನಿಗೆ ಚೈತನ್ಯಸ್ತರು ತಮ್ಮ ತಮ್ಮ ಮನೆಗಳಿಗೆ ಕರಸಿ ದೊಡ್ಡ ಔತಣ ಉಡುಗೊರೆ ಉಪಚಾರಾದಿಗಳಿಂದ ಸತ್ಯರಿಸಿ ಮಠದ ಕೃಷಾವಲೋಕನಕ್ಕೆ ಪಾತ್ರರಾದರು. +ವೆಂಕಟಪತಿ ಆಚಾರ್ಯನು ತನ್ನ ಮುಂದಿನ ಧನಿಯನ್ನು ಮನೆಗೆ ಭಾರಿ ಗದ್ದಲದಿಂದ ಕರಿಸಿಕೊಂಡು, ಉತ್ಕೃಷ್ಟವಾದ ಔತಣವನ್ನು ಮಾಡಿಸಿ ಹೆಚ್ಚು ಮೌಲ್ಯದ ಉಚಿತಗಳನ್ನು ಕೊಟ್ಟು ಚಂಚಲನೇತ್ರರ ಅನುಗ್ರಹಕ್ಕೆ ಆರ್ಹನಾದನು. +ಕುಮುದಪುರದ ನಿವಾಸಿಕರಲ್ಲಿ ಅನ್ಯಮತದ ಶಿಷ್ಯರಾದ ಭೂಸುರರೂ ಶಕ್ತ್ಯಾ ನುಸಾರವಾಗಿ ಸೂರ್ಯನಾರಾಯಣನನ್ನು ಔತಣೋಪಚಾರಗಳಿಂದ ಸಂತುಷ್ಟಿಪಡಿಸಿ ಯತಿಗಳ ಶ್ಲಾಘನೆಗೆ ಯೋಗ್ಯರಾದರು. +ಒಬ್ಬನಿಂದಲೇ ಪೂರೈಸದ ಸಂದಿನಲ್ಲಿ ಕೆಲವರು ಒಟ್ಟು ಕೂಡಿ ದೇವಸ್ತಾನ ಮುಂತಾದ ತಾವಿನಲ್ಲಿ ಅವನಿಗೆ ಭೋಜನಾದಿ ಸತ್ಯಾರಗಳಿಂದ ಸಂತೃಪ್ತಿಪಡಿಸಿ ಚಂಚಲನೇತ್ರರಿಗೂ ವಾಗ್ದೇವಿಗೂ ಪ್ರೇಮಪಾತ್ರರಾದರು. +ಸದ್ಗುಣಭರಿತನಾದ ಸೂರ್ಯ ನಾರಾಯಣನು ಪುರವಾಸಿ ಸಕಲರಿಗೂ ಪ್ರೇಮಿಯಾಗಿರುವ ಕಾರಣ ಆನು ಕೂಲವಿರುವಷ್ಟರ ಮಟ್ಟಿಗೆ ಒಬ್ಬನಾದರೂ ತನ್ನ ಕಡೆಯಿಂದ ಅವನಿಗೆ ಸಾಭಿ ಮಾನವಾಗುವದರಲ್ಲಿ ಕಡಿಮೆ ಆಸಕ್ತಿಯುಳ್ಳವನೆಂಬ ಅಪವಾದಕ್ಕೆ ಬೀಳಲಿಲ್ಲ. +ಆಶ್ರಮ ಹೊಂದುವ ತನಕ ಈ ಒಳ್ಳೇಹುಡುಗನು ಪಟ್ಟಣದಲ್ಲಿ ತುಂಬಾ ಸಂತೋಷದಿಂದ ಆದರಣೆಯನ್ನು ಹೆಚ್ಚು ಕಡಿಮೆ ಸರ್ವರಿಂದಲೂ ಪಡಕೊಂಡು ಮರಾಧಿಪತಿಯಾಗಲಿಕ್ಕೆ ತಕ್ಕ ಪುರುಷನೆಂದು ಬಹುಜನರಿಂದ ಹೇಳಿಸಿಕೊಂಡು ನಿಶ್ಚೈಸಲ್ಪಟ್ಟ ಲಗ್ನದಲ್ಲಿ ಸನ್ಯಾಸವನ್ನು ಹೊಂದುವ ನಿರೀಕ್ಷೆ ಯಲ್ಲಿ ಸುಖವಾಗಿ ಕಾಲವನ್ನು ಕಳೆದನು. +ವಾಗ್ದೇವಿಯ ಪರಿಮುಖ ಮಠದ ದ್ರವ್ಯದ ಮೇಲೆ ವಾತ್ಸಲ್ಯ ಇಟ್ಟಿರುತ್ತಿದ್ದ ಭೀಮಾಜಿಯೂ ಶಾಬಯ್ಯನೂ ಈ ವೇಳೆ ತಮ್ಮ ಕರ್ತವ್ಯವನ್ನು ಮರೆತಿರಲಿಲ್ಲ. +ತಿಪ್ಪಾಶಾಸ್ತ್ರಿಯ ಮನೆಯಲ್ಲಿ ಅವರಿಬ್ಬರ ಕಡೆಯಿಂದಲೂ ಬೇರೆ ಬೇರೆ ದಿವಸಗಳಲ್ಲಿ ಯಥೋಚಿತವಾಗಿ ಸೂರ್ಯನಾರಾಯಣನಿಗೆ ಔತಣಗಳಾದುವು. +ಅವರ ಪದವಿಗೆ ಯೋಗ್ಯವಾದ ಉಚಿತಗಳನ್ನು ಕೊಡುವದರ ಮೂಲಕ ಅವರೀರ್ವರೂ ವಾಗ್ದೇವಿಯ ಪ್ರೇಮಕ್ಕೆ ಭಾಗಿಗಳಾದರು. +ನೇಮ ರಾಜಸೆಟ್ಟಿಯು ಹೆಸರುಹೋದ ಸಾವಕಾರನಾಗಿ ಕುಮುದಪುರದಲ್ಲಿ ಆಢ್ಯ ಮನುಷ್ಯನಾಗಿ ಕೊಂಚ ಕೃಪಣತ್ವ ಉಳ್ಳವನಾದರೂ ತಾನು ಮಾಡಬೇಕಾದ ಉಪಚಾರವನ್ನು ಮರೆಯದೆ ಅಂಜನೇಯ ದೇವಸ್ಥಾನದಲ್ಲಿ ಊಟದ ರುಚಿ ಚೆನ್ನಾಗಿ ಬಲ್ಲವರು ಹೊಗಳುವಂತೆ ಔತಣವನ್ನು ಮಾಡಿಸಿ ಸೂರ್ಯನಾರಾಯಣನನ್ನು ದಣಿಸಿದನು. +ಆ ಕಾಲದಲ್ಲಿ ಆ ದೊಡ್ಡ ವರ್ತಕನು ಧಾರಾಳವಾಗಿ ಕೊಟ್ಟ ಉತ್ಕೃಷ್ಟವಾದ ಉಡುಗೊರೆಯನ್ನು ಕುರಿತು ಪುರನಿವಾಸಿಗಳು ಆಗಾಗ್ಗೆ ಶ್ಲಾಘನೀಯವಾಗಿ ಮಾತಾಡುತ್ತಿರುವವರಾದರು. +ವಾಗ್ದೇವಿಯು ಇಂಥಾ ಶುಭ ಸಮಯದಲ್ಲಿ ಹೆಚ್ಚಳಪಡಬೇಕಲ್ಲವೇ?ಹೌದು; +ಅವಳು ಪರಿಪೂರ್ಣವಾಗಿ ಆನಂದನ ಸಾಗರದಲ್ಲಿ ಮುಳುಗಿದಳು. +ಕುಮದಪುರಮಠದ ಸಂಸ್ಥಾನವು ಸಣ್ಣದಾದ್ದಲ್ಲ. +ಹೆಸರುಹೋದ ಪುರವೇಸರಿ. +ಅದರ ಆಧಿಪತ್ಯವು ತನ್ನ ಕುಮಾರನಿಗೆ ದೊರೆಯುವ ಸಂಭವ ಒದಗಿರುವ ಕಾಲದಲ್ಲಿ ಸಂತೋಷಪಡುವದು ಅಸಹಜವಾದ್ದಲ್ಲ. +ಚಂಚಲನೇತ್ರರು ಪ್ರಥಮತಃ ಈ ಪ್ರಮೇಯ ನಿರ್ಲಕ್ಷ ಮಾಡಿಬಿಟ್ಟರೂ ವೆಂಕಟಪತಿ ಆಚಾರ್ಯನು ಅವರಲ್ಲಿ ವಿವೇಕ ಹುಟ್ಟುವಂತೆ ಮಾಡಿದ ಬಳಿಕ ಅವರ ಮನೋಭಾವವು ಪೂರ್ಣವಾಗಿ ಮಾರ್ಪಾಟಾಯಿತು. +ವಾಗ್ದೇವಿಯಲ್ಲಿ ತನಗೆ ಹುಟ್ಟಿದ ಮಗನನ್ನು ಪಟ್ಟಕ್ಕೆ ನೇಮಿಸುವದು ಧರ್ಮವೆಂದು ಸಮ್ಮತಿಪಟ್ಟು ಈ ಶುಭಕಾರ್ಯವು ಚಂದವಾಗಿ ನೆರವೇರುವದಕ್ಕೆ ಅವಶ್ಯವೆಂದು ತೋರಿದ ಎಲ್ಲಾ ಸಾಧನೆಗಳನ್ನು ಹಣದ ಮುಖನೋಡದೆ ಒದಗಿಸಿಕೊಳ್ಳುವದರಲ್ಲಿ ಸ್ವತಃ ಹೆಚ್ಚು ಪ್ರಯಾಸಪಟ್ಟರು. +ಸೂರ್ಯನಾರಾಯಣನಿಗೆ ಚಂಚಲನೇತ್ರರು ಸನ್ಯಾಸವನ್ನು ಕೊಟ್ಟು ತನ್ನ ಉತ್ತರಾಧಿಕಾರಿಯಾಗಿ ನೇಮಿಸುವರೆಂಬ ಜನ್ಯವು ದಶದಿಕ್ಟುಗಳಲ್ಲಿಯೂ ತುಂಬಿತು. +ವೇದವ್ಯಾಸ ಉಪಾಧ್ಯನ ಕಿವಿಗೂ ಅದು ಬೀಳದೆ ಹೋಗುವದುಂಟೇ!। +ವಾಗ್ದೇವಿಯು ತನ್ನ ಪತ್ನಿಯನ್ನು ಜರದು ಮಾತಾಡಿದ ಸಿಟ್ಟು ಅವನ ಒಡಲನ್ನು ಬಿಟ್ಟು ಹೋಗಿರಲಿಲ್ಲ. +ಹಾಗೂ ಪೇಷ್ಕಾರನು ತನ್ನನ್ನೂ ತನ್ನ ಅನುಜನನ್ನೂ ಸೆರೆಮನೆಯಲ್ಲಿ ಇರಿಸಲಿಕ್ಕೆ ವಾಗ್ದೇವಿಯೇ ಮೂಲ ಪುರುಷಳೆಂಬ ನೆನಪು ಚಂದಾಗಿ ಇತ್ತು. +ಒಮ್ಮೆ ಸೂರ್ಯನಾರಾಯಣನಿಗೆ ಆಶ್ರಮವಾದರೆ ವಾಗ್ದೇವಿಯ ದರ್ಪವನ್ನು ತಗ್ಗಿಸುವದು ಸುಲಭವಾದ ಕೆಲಸವಲ್ಲವೆಂದು ಅವನಿಗೆ ಪೂರ್ಣವಾಗಿ ಗೊತ್ತಿತ್ತು. +ಪರಂತು ವಿಘ್ನವನ್ನು ಒಡ್ಡುವ ಉಪಾಯ ನಡಸುವ ಬಗೆ ತಿಳಿಯದೆ ಇದ್ದರೂ ನಿರುದ್ಯೋಗಿಯಾಗಿರಲಿಕ್ಕೆ ಅವನಿಗೆ ಮನಸ್ಸು ಬರಲಿಲ್ಲ. +ಕುಮುದಪುರದ ಗೃಹಸ್ಥರಲ್ಲಿ ಒಬ್ಬನ ಮನೆಯಾದರೂ ಬಿಡದೆ ನಡದಾಡಿದರೂ ಅವನ ಮಾತಿಗೆ ಯಾರೂ ಕಿವಿ ಕೊಡಲಿಲ್ಲ. +ಬಾಲಮುಕುಂದಾಚಾರ್ಯನು ಕೇವಲ ರೋಗಿಯಾಗಿ ಮೃತಾ ಸನದಲ್ಲಿ ಇದ್ದವನ ಅವಸ್ಥೆಯುಳ್ಳವನಾದ ಪ್ರಯುಕ್ತ ವಾಗ್ದೇವಿಯ ಬಲ ಮುರಿದಂತಾಯಿತು. +ಬೆಂಬಲಕ್ಕೆ ಸಾಮಾನ್ಯ ಬುದ್ದಿಯುಳ್ಳವನೊಬ್ಬನು ದೊರಕಿದರೆ ತನ್ನ ಶತ್ರುಗಳನ್ನು ಸದೆಬಡಿಯುವೆನೆಂಬ ಧೈರ್ಯದಿಂದ ಪುರುಷನನ್ನು ಹುಡುಕುವದರಲ್ಲಿ ಬಿದ್ದನು. +ಆಗ ಅದೇ ಪಟ್ಟಣದ ಉಪಗ್ರಾಮವಾದ ಕಂಬನಿಹಳ್ಳಿಯಲ್ಲಿ ರಾಮ ದಾಸ ರಾಯನೆಂಬ ಹೆಸರಿನ ಯೌವನಸ್ಥನು ಚನ್ನಾಗಿ ಕಲಿತು ಬುದ್ಧಿವಂತನಾಗಿ ವಕೀಲಿ ಉದ್ಯೋಗವನ್ನು ನಡೆಸಲಿಕ್ಕೆ ಯೋಗ್ಯನೆಂದು ಸರ್ಕಾರದಿಂದ ಅಧಿಕಾರಪತ್ರ ಹೊಂದಿ ಒಂದು ದೊಡ್ಡ ಪ್ರಕರಣ ಸಿಕ್ಕಿದರೆ ಒಂದೇ ಸಾರಿ ಹಣವನ್ನು ಪೆಟ್ಟಿಗೆಯಲ್ಲಿ ತುಂಬಿಸಿಬಿಡುವದಕ್ಕೆ ಅತ್ಯಾಶೆಯಿಂದ ಕಾದು ಕೊಂಡಿದ್ದನು. +ಈ ಹೊಸವಕೀಲಗೆ ವೇದವ್ಯಾಸ ಉಪಾಧ್ಯನು ಗಂಟು ಬಿದ್ದನು. +ಆದರೆ ಅವನ ಕೈಯಲ್ಲಿ ಕಾಸೊಂದು ಇಲ್ಲವಷ್ಟೇ. +ಇದ್ದರೂ ಸರ್ವಥಾ ಬಿಡುವವನಲ್ಲ. +ಮೊತ್ತಮೊದಲು ಹಿಡಿಯುವ ಮೊಕದ್ದಮೆಯಲ್ಲಿ ಧರ್ಮಕ್ಕೆ ವ್ಯವಹರಿಸಿ ಹೆಸರು ಪಡೆಯುವದು ಉತ್ತಮವಾದ ವಶೀಕರಣವೆಂದು ವೇದವ್ಯಾಸ ಉಪಾಧ್ಯನು ರಾಮದಾಸಗೆ ಬುದ್ಧಿ ಉಪದೇಶಕೊಟ್ಟರೂ ಬೋಣಿಯಾಗದೆ ಕಡಕೊಡುವದು ಹ್ಯಾಗೆಂದು ಅಂಗಡಿಗಾರರು ಹೇಳುವ ರೀತಿಯಲ್ಲಿ ಹೊಸವಕೀಲನು ಗುಣುಗುಟ್ಟಲೆಸಗಿದನು. +ಲಾಭದ ಮೇಲೆ ದೃಷ್ಟಿ ಇಟ್ಟು ಹಟಮಾಡಿದರೆ ತಾನು ಬೇರೆ ಯಾರಿಗಾದರೂ ಹುಡುಕಿ ತೆಗೆಯುವದೇ ಸರಿ ಕೀರ್ತಿಯನ್ನೂ ಹಣವನ್ನೂ ಸಮುಚ್ಚಯವಾಗಿಯೂ ಪ್ರತ್ಯೇಕವಾಗಿಯೂ ಸಂಪಾದಿಸಲಿಕ್ಕೆ ಆತುರವುಳ್ಳವನು ತಾಳ್ಮೆಯಿಂದ ಉದ್ಯೋಗವನ್ನು ನಿರ್ವಹಿಸಿದರೆ ಮುಂದೆ ಒಂದೇ ಸರ್ತಿ ಹಣದ ರಾಶಿಯೇ ಸಿಕ್ಕುವ ಸಂಭವವಿದೆ. +ಅವಸರ ಮಾಡಿ ವೃದ್ಧಿಯನ್ನು ಹಾಳುಮಾಡಿಕೊಳ್ಳಬೇಡವೆಂದು ವೇದವ್ಯಾಸನು ಹೇಳಿದ ಜ್ಞಾನವು ಕೊನೆಗೆ ರಾಮದಾಸಗೆ ಸಮ್ಮತವಾಯಿತು. +“ಹಾಗಾದರೆ ನಿನ್ಶ ಬುದ್ಧಿವಂತಿಗೆಯ ಪರೀಕ್ಷೆ ಈಗಲೇ ನೋಡಬೇಕು” ಎಂದು ವೇದವ್ಯಾಸನು ಹೇಳಿದನು. +ಹೊಸವಕೀಲನು ದೊಡ್ಡ ದೊಡ್ಡ ಕಾನೂನಿನ ಪುಸ್ತಕಗಳನ್ನು ಅತ್ತಿತ್ತ ಮಗುಚಿ ತಾವು ಕಾಗದ ಖರ್ಚು ಮಾಡಿ ಒಂದು ಮನವಿಯ ಮಸೂದೆಯನ್ನು ಸಮನಿಸಿ ವೇದವ್ಯಾಸಗೆ ಓದಿ ಹೇಳಿದನು. +ಉಪಾಧ್ಯನು ಅದರ ಒಕ್ಳಣೆಯ ಚಾತುರ್ಯಕ್ಕೆ ಮೆಚ್ಚಿಹೋದನು. +ಅದರ ನಕಲು ಮಾಡುವದಕ್ಕೆ ಹತ್ತು ಹಾಳೆ ದಪ್ಪವಾದ ಕಾಗದ ತಾರೆಂದು ವಕೀಲನು ಹೇಳಲು “ಪೆಟ್ಟಿಗೆಯಲ್ಲಿ ಒಂದಾಣೆ ದುಡ್ಡು ಇದ್ದರೆ ಕೊಡು; +ನನ್ನ ಕೈಯಲ್ಲಿ ಕಾಸೊಂದು ಇಲ್ಲ” ಎಂದು ವೇದವ್ಯಾಸನು ನಗುತ್ತಾ ನುಡಿದನು. +“ಆಹಾ!ಎಷ್ಟು ಔದಾರ್ಯ ಗುಣಭರಿತ ಕಕ್ಷಿಗಾರನು ನನಗೆ ದೊರಕಿದನಪ್ಪಾ?ಎಂದು ರಾಮದಾಸನು ಒಂದಾಣೆ ದುಡ್ಡು ಪೆಟ್ಟಿಗೆಯಿಂದ ತೆಗೆದುಕೊಟ್ಟನು. +ಅದನ್ನು ಸೊಂಟಕ್ಕೆ ಸಿಕ್ಕಿಸಿ ವೇದವ್ಯಾಸನು ಸಮೀಪವಿರುವ ನಾಲ್ಕೈದು ಅಂಗಡಿಗಳಿಗೆ ಹೋಗಿ ಐದಾರು ಹಾಳೆ ಕಾಗದ ಬೇಡಿ ತಂದು ವಕೀಲಗೆ ಕೊಟ್ಟನು. +ವಕೀಲನು ತನ್ನ ಗುಮಾಸ್ತನಿಂದ ಮನವಿಯ ನಕಲು ಬರಿಸಿ ಅವನಿಗೇನಾದರೂ ಶುಲ್ಕ ಕೊಡೆಂದು ವೇದವ್ಯಾಸಗೆ ಅಪೇಕ್ಷಿಸಿದನು. +ಧನಿಗೆ ಶುಲ್ಕ ಕೊಟ್ಟರಷ್ಟೇ ಗುಮಾಸ್ತನಿಗೆ ಕೋಡೋದು. +ನಿಮ್ಮಿಬ್ಬರಿಗೂ ಒಂದೇ ಸರ್ತಿ ಕೈತುಂಬಾ ಕೊಡಿಸೋಣ ಎಂದು ಸಮಜಾಯಿಸಿ ಮಾತು ಹೇಳಿ ಕೂತುಕೊಂಡನು. +ಮನವಿಯನ್ನು ವೇದವ್ಯಾಸ ಉಪಾಧ್ಯನು ವಕೀಲನ ಅನುಜ್ಞೆಗಳಂತೆ ಪೇಷ್ಕಾರ ತಿಮ್ಮೈಯನ ಮುಂದೆ ದಾಖಲುಮಾಡಿದನು. +ಪೇಷ್ಕಾರನು ಅದನ್ನು ನೋಡಿ–“ಇದು ಛೋಟಾ ಕಿತಾಬಿನ ಪ್ರಕರಣವಲ್ಲ. +ಕಾರ್ಬಾರಿಗಳ ಕಚೇರಿಗೆ ಕೊಂಡುಹೋಗು” ಎಂದು ತಿರುಗಿ ಕೊಟ್ಟನು. +ಅದರ ಬುಡದಲ್ಲಿ ಹಾಗೆಯೇ ಬರಕೊಡಬೇಕೆಂದು ವೇದವ್ಯಾಸ ಉಪಾಧ್ಯನು ಅಪೇಕ್ಷಿಸಿದನು. +ಪೇಷ್ಕಾರನು ಅವನ ಅಪೇಕ್ಷೆಯಂತೆ ನಡೆಸಿದನು. +ಶಾಬಯ್ಯನ ಮುಂದೆ ಅದು ಹೋದಾಗ ಅವನು ಅದನ್ನು ಓದಿನೋಡಿ ಎದ್ರಿಗಳಿಗೆ ವಿದಿತಪತ್ರ ಕೊಡಬೇಕಾಗಿ ತನ್ನ ಕರಣೀಕರಿಗೆ ಅಜ್ಞೆಮಾಡಿದನು. +ಚಂಚಲನೇತ್ರರಿಗೆ ಮತ್ತು ಅವರ ಪಾರುಪತ್ಯಗಾರಗೆ ವಿದಿತ ಪತ್ರಗಳು ಮುಟ್ಟಿದುವು. +ಇದನ್ನು ತಿಳಿದ ವಾಗ್ದೇವಿಯು ಭೀಮಾಜಿಯನ್ನು ಅಂತರಂಗದಿಂದ ಕರಸಿ ತಿಳಿಸಿದಾಗ “ಬರಕೈಯಿಂದ ಮೊಳ ಹಾಕುವ ಸಮಯ ಇದಲ್ಲವೆಂದು ಅನೇಕರು ಹೇಳಲಿಕ್ಕೆ ಸಾಕು. +ಪರಂತು ಅಂಥಾ ಮಾತುಗಳಿಗೆ ಕಿವಿಗೊಟ್ಟು ಕುಣಿದಾಡಿದರೆ ಕಾರ್ಯ ಹಾನಿಯೂ ಕಾರ್ಬಾರಿಯ ಅವಕರಣವೂ ಉಂಟಾಗುವದು. +ಶಾಬಯ್ಯನು ಸಂಭಾವಿತನೂ ನಿಶ್ಚಲ ಪ್ರಾಮಾಣಿಕತೆಯುಳ್ಳವನೂ ಆಗಿರುವದರಿಂದೆ ದ್ರವ್ಯ ದಾಶೆಯನ್ನು ತೋರಿಸಿ ಅವನ ಮನಸ್ಸುಂಟುಮಾಡಿಕೊಳ್ಳ ಬಹುದೆಂಬ ಭ್ರಮೆಯನ್ನು ಬಿಟ್ಟುಬಿಡಬೇಕು. +ದೀನಭಾವದಿಂದ ಅವನ ಮರೆ ಹೊಕ್ಕವರಿಗೆ ಅವನು ಸರ್ವಧಾ ಬಿಟ್ಟು ಹಾಕುವದಿಲ್ಲ. +ಸಾರ್ವಜನಿಕ ಉಪಯೋಗದ ಸದ್ಧರ್ಮವನ್ನು ಮಾಡಿಸಿ ಪುಣ್ಯಸಂಗ್ರಹ ಮಾಡಬೇಕೆಂಬ ಆತುರದಿಂದ ಈ ಪಟ್ಟಣದಲ್ಲಿ ಕೆಲವು ಪ್ರಮುಖ ಗೃಹಸ್ತರು ಒಗ್ಗಟ್ಟಾಗಿ ವಿದ್ಯಾಶಾಲೆಗಳನ್ನು ಛತ್ರಗಳನ್ನು ದೇವಾಲಯಗಳನ್ನು ಕಟ್ಟಸಿ ಬಡವರ ಉಪಪಕಾರಿಗಳಾಗಿ ಮೆರಿಯಬೇಕೆಂಬ ಅಶೆವುವಳ್ಳವರಾಗಿರುತ್ತಾರೆ. +ಪ್ರಕೃತ ದೊಡ್ಡದೊಂದು ವಿದ್ಯಾಶಾಲೆಯನ್ನು ಕಟ್ಟಿಸಲಿಕೆ ಅವರು ಉದ್ಯುಕ್ತರಾಗಿರುವರು. +ಇಂಥಾ ಸತ್ಕಾರ್ಯಕ್ಕೆ ಸಹಾಯಾರ್ಥವಾಗಿ ಮಠದಿಂದ ಆಶ್ರಮ ಕೊಡುವ ಸಮಯ ದ್ರವ್ಯದಾನವನ್ನು ಮಾಡಿದರೆ ಕಾರ್ಭಾರಿಗೆ ಆ ವಾರ್ತೆಯು ಸಿಕ್ಕಿ ಸಂತೋಷಪಟ್ಟು ಮಠದ ಮೇಲೆ ಮತ್ತಷ್ಟು ಅಭಿಮಾನವಿಡುವನೆಂದು ನನಗೆ ತೋರುತ್ತದೆ.” ಹೀಗೆಂದು ಕೊತ್ವಾಲನು ಕೊಟ್ಟ ಸೂಚನೆಯನ್ನನುಸರಿಸಿ ಚಂಚಲನೇತ್ರರು ವೆಂಕಟಪತಿ ಆಚಾರ್ಯನನ್ನು ಕರೆಸಿ ಆಲೋಚನೆ ಮಾಡಿದರು. +ಭೀಮಾಜಿಯು ಹೇಳಿದ ಬುದ್ಧಿಯಂತೆ ನಡಕೊಳ್ಳುವದು ಉತ್ತಮವೆಂದು ಆಚಾರ್ಯನೆಂದನು ಯತಿಗಳು ಹಾಗಾಗಲೆಂದರು. +ಅದರ ಮರುದಿವಸ ಭೀಮಾಜಿಯ ಪರಿಮುಖ ಆ ಪುಣ್ಯ ಸಂಗ್ರಹಸಂಘದ ಬಕ್ಷಿ ಚಲುವೈಯನನ್ನು ಮಠಕ್ಕೆ ಕರೆಸಿ ಲಕ್ಷ ರೂಪಾಯಿಯ ಪವನುಗಳನ್ನು ಗಂಟುಕಟ್ಟಿ ಅವನ ವಶಕೊಟ್ಟಲ್ಲಿ ಅವನು ಅದನ್ನು ಮಠದ ಕಡೆಯಿಂದ ಗುಪ್ತ ದ್ರವ್ಯದಾನವಾಗಿ ಲೆಕ್ಕಕ್ಕೆ ಬರಕೊಂಡನು ವೇದವ್ಯಾಸ ಉಪಾಧ್ಯನ ಮನವಿಯ ಅನುಸಂಧಾನಕ್ಕೆ ನಿಶ್ಚೈಸಿದ ದಿವಸ ಅವನ ಕಡೆಯಿಂದ ಬಂದ ವಕೀಲ ರಾಮದಾಸನ ಚರ್ಚೆಗಳನ್ನು ಕೇಳುತ್ತಿರುವಾಗಲೇ ಕಾರಭಾರಿಗಳಿಗೆ ಸಿಟ್ಟೇರಿತು. +“ಸಾಕು, ನಿನ್ನ ಪಂಚಾಂಗ ಕಟ್ಟು; +ಅನಾವಶ್ಯಕವಾಗಿ ಫಸಾದಖೋರನಾದ ಈ ದಿಂಡ ಹಾರುವನನ್ನು ಉಬ್ಬೇರಿಸಿ ಹಣ ಸುಲಿಯುವದಕ್ಕೆ ನೋಡುತ್ತಿಯಾ? +ನೀನಿನ್ನೂ ಹೊಸ ವಕೀಲ. +ಕಣ್ಣುಗಳು ತೆರೆಯದ ಬೆಕ್ಕಿನ ಮರಿಯಂತೆ ಇರುವಿ. +ಆದರೂ ದುಸ್ವಾಭಾವ ಬಿಡವಲ್ಲೆ. +ಈ ತಂಟಲಮಾರಿ ಬ್ರಾಹ್ಮಣನು ಮೊದಲೊಮ್ಮೆ ನಜರಬಂದಿಯಲ್ಲಿ ಇರಿಸಲ್ಪಟ್ಟ ಹದನವನ್ನು ನೀನು ತಿಳಿಯಲಿಲ್ಲವೇ? +ಅವನ ಸಂಗಡ ನೀನೂ ಕೂಡಿ ಫಸಾದಖೋರನೆನ್ಸಿಸಿಕೊಳ್ಳುವ ಮನಸ್ಸುಳ್ಳವನಾದರೆ ಅನ್ನ ಬೆಲ್ಲವಾದೀತು ನೋಡಿಕೋ” ಎಂದು ಶಾಬಯ್ಯನು ರಾಮ ದಾಸಗೆ ಚನ್ನಾಗಿ ಗದರಿಸಿಬಿಟ್ಟನು. +ರಾಮದಾಸರಾಯನು ಎಳ್ಳಿನಷ್ಟು ಹೆದರಲಿಲ್ಲ. +ವಕೀಲನಾಗಿ ಕಕ್ಷಿಗಾರನ ಕಡೆಯಿಂದ ವ್ಯವಹರಿಸುವದು ನ್ಯಾಯವಾದ ಮಾರ್ಗವಾಗಿರುತ್ತದೆ ಅವನು ಫಸಾದಖೋರನಾದರೆ ತಾನು ಅವನಂತೆ ದುರ್ನಾಮವನ್ನು ಪಡೆಯತಕ್ಕವನಲ್ಲ. +ಕಾನೂನಿಗೆ ಸರಿಯಾಗಿ ವ್ಯವಹರಿಸುವ ತನಕ ತನ್ನ ಮೇಲೆ ಯಾರೊಬ್ಬರೂ ದೋಷ ಆರೋಪಿಸಕೂಡದು ಎಂದು ಗಟ್ಟಿಯಾಗಿ ರಾಮದಾಸನು ಉತ್ತರಕೊಟ್ಟನು. +ಇವನು ಹಾಗೆಲ್ಲಾ ಭಯಪಡುವವನಲ್ಲ. +ಇವನನ್ನು ಉಪಾಯದಿಂದ ನೆಲಕ್ಕೆ ಬಡಿಯುವ ಕಾಲ ಮುಂದೆ ಉಂಟು, ಈಗಲೇ ರೌದ್ರಾವತಾರತಾಳಿದರೆ ಕಾರ್ಯ ಹಾಳಾದೀತೆಂದು ಶಾಬಯ್ಯನು ತನ್ನ ಸಿಟ್ಟು ತಾನೇ ನುಂಗಿಕೊಂಡನು. +“ಒಳ್ಳೆದು ನಿನಗೆ ರವಷ್ಟು ಬುದ್ಧಿ ಬರಲೆಂದು ಮಾತಾಡಿದೆ ನಿನಗೆ ಹಿತವಾಗಲಿಲ್ಲವೇ! ಹೋಗಲಿ. +ನೀನು ಹೇಳುವದೇನುಂಟೋ ಅದೆಲ್ಲಾ ಅಧಿಕಪ್ರಸಂಗವಿಲ್ಲದೆ ಒದರಿಬಿಡು” ಎಂದು ಕಾರ್ಭಾರಿಯ ಅಪ್ಪಣೆಯಾಯಿತು. +ರಾಮದಾಸನು ಹಿಗ್ಗಿ ನಸುನಗೆಯಿಂದ ಒಂದು ತಾಸಿನ ಪರಿಯಂತರ ದೊಡ್ಡ ಸ್ವರದಿಂದ ಶಬ್ದಮಂಜರಿಯೊಳಗಿನ ಮುಕ್ಕಾಲುವಾಸಿ ದೊಡ್ಡ ದೊಡ್ಡ ಮಾತುಗಳನ್ನುವಯೋಗಿಸಿ ಕೇಳುವ ಜನರು ಶಹಬಾಸು!ಧೀರನೇ ಸರಿ! +ವಕೀಲನು ಹೀಗೆ ಬುದ್ಧಿಶಾಲಿಯೂ ವಾಗ್ಜಾಲಿಯೂ ಆಗಿರಬೇಕು ಎಂದು ಹೊಗಳುವಂತೆ ಭಾಷಣಮಾಡಿದನು. +ವೇದವ್ಯಾಸನು ನಗಲಿಕ್ಕೆ ತೆರೆದಬಾಯಿಯನ್ನು ಮುಚ್ಚಲಿಕ್ಕೆ ಮರೆತುಬಿಟ್ಟು ಪ್ರಾಣವಾಯು ತೊಲಗುವ ಸಂಭವದಲ್ಲಿದ್ದವನಂತೆ ಕಾಣುತ್ತಿದ್ದನು. +ಕಾರ್ಭಾರಿಯು ಮಧ್ಯೆ ಮಧ್ಯೆ ಮಾಡುವ ಕಕ್ಷಿಯನ್ನು ಲಕ್ಷ್ಮಮಾಡದೆ ವಕೀಲನು ಕಾನೂನಿನ ಪುಸ್ತಕ ಗಳ ಕಾಗದಗಳನ್ನು ಸಾವಿರಾರು ಸಲ ಮಗುಚುತ್ತಾ ಸಮರ್ಪಕವಾದ ಉತ್ತರಗಳಿಂದ ಬಾಯಿ ಮಚ್ಚಿಸಿಬಿಟ್ಟನು. +ಇಂಥಾ ಲಕ್ಷೋಪಿ ವಕೀಲರನ್ನು ಕಕ್ಷದಲ್ಲಿ ಔತಿಕೊಳ್ಳುವ ಸಾಮರ್ಥ್ಯವುಳ್ಳ ಶಾಬಯ್ಯನು ಕೊಂಚ ಸಮಯ ವಕೀಲನ ಭಾಷಣಕ್ಕೆ ಮೆಚ್ಚಿಹೋದವನಂತೆ ಮುಗುಳು ನಗೆಯಂದ ಅವನ ಕಕ್ಷಿಗಾರನ ಪಕ್ಷಕ್ಕೆ ಹಿತವಾದ ಮಾತುಗಳನ್ನಾಡುತ್ತಾ ಅವನಿಗೆ ಧೈರ್ಯ ಉಂಟಾಗುವಂತೆ ಮಾಡಿ ಕೊನೆಯ ಮನನಿಯು ರೂಷ್ಟ್ರಕರವಾದ ಪ್ರಯುಕ ಅದನ್ನು ತಳ್ಳಿಹಾಕಿಯದೆಂದು ತೀರ್ಪುಕೊಟ್ಟದ್ದಲ್ಲದೆ ಸೂರ್ಯ ನಾರಾಯಣನಿಗೆ ಆಶ್ರಮವಾಗುವ ಕಾಲದಲ್ಲಿ ದೊಡ್ಡ ಕಲಹ ನಡೆಯುವ ಸಂಭವವಿರದೆನ್ನಕೂಡದಾದ ಕಾರಣ ಮುಂದಾಗಿ ಯಾರಿಗೂ ತಿಳಿಯದ ಹಾಗೆ ಗುಪ್ತಚರರನ್ನಿಟ್ಟು ವರ್ತಮಾನವನ್ನು ಸಂಗ್ರಹಿಸಿ ವಿಘ್ನನಿವಾರಣೆಯ ಸಾರಣೆ ಮಾಡುವ ಜಾಗ್ರತ ತಕ್ಕೊಳ್ಳಬೇಕೆಂದು ಕೊತ್ವಾಲಗೆ ಅಪ್ಪಣೆ ಮಾಡಿದನು. +ರಾಮದಾಸರಾಯಗೆ ಸಿಟ್ಟುಬಂದು ಇಡೀ ಬೀಹವು ನಡುಗಲಾರಂಭಿ ಸಿತು. +ಆ ಪರಿಯಂತರ ವೇದವ್ಯಾಸ ಉಪಾಧ್ಯನು ತೆರೆದುಕೊಂಡೇ ಇದ್ದ ಬಾಯಿಯನ್ನು ಮುಚ್ಚಿ ಸಮೀಪಕ್ಕೆ ಬಂದು, ಮನವಿಯು ಹ್ಯಾಗೆ ತೀರಿತಂದು ವಿಚಾರಿಸಿದಾಗ, “ನಿನ್ನವ್ವನ ಶ್ರಾದವಾಯಿತು” ಎಂದು ವಕೀಲನ ಉತ್ತರ ವಾಯಿತು. +“ನನ್ನವ್ವನ ಶ್ರಾದ್ಧ ಮೊದಲೇ ಆಗಿಯದೆ; +ಜೀವನದಲ್ಲಿರುವ ನಿಮ್ಮಪ್ಪನ ಶ್ರಾದ್ಧವಾಗುವದು ಉಳದದೆ” ಎಂದು ಉಪಾಧ್ಯನು ಸಿಟ್ಟಿನಿಂದ ಪ್ರತ್ಯುತ್ತರ ಕೊಟ್ಟನು. +ಇಬ್ಬರಿಗೂ ಝಟಾವಟಾ ಹಿಡಿಯಿತು. +ಅಷ್ಟರಲ್ಲಿ ಸಮೀಪ ಇದ್ದ ಗೃಹಸರು ಉಭಯರನ್ನೂ ಸಮಾಧಾನಮಾಡಿ ಅವರಲ್ಲಿ ವಿವೇಕವಾಗುವಂತೆ ಪ್ರಯತ್ನ ಮಾಡಿದರು. +ಕೊಂಚ ಸಮಯದಲ್ಲಿ ಇಬ್ಬರ ಸಿಟ್ಟೂ ತಣಿಮ ಮುಂದೇನು ಉಪಾಯವೆಂದು ತಿಳಿಯದೆ ಕಚೇರಿಯಿಂದ ಇಳಿದು ತಮ್ಮ ತಮ್ಮ ಮೀಶೆಗಳನ್ನು ತಿಕ್ಕಿಕೊಂಡು ಬಿಡಾರಸೇರಿಕೊಂಡರು. +ರಾತ್ರೆ ಭೋಜನವಾದ ತರುವಾಯ ಬರಬೇಕೆಂದು ವಕೀಲನಿಂದ ಅಪೇಕ್ಷಿಸಲ್ಪಟ್ಟ ವೇದವ್ಯಾಸ ಉಪಾಧ್ಯನು ರಾಮದಾಸರಾಯನ ಮನೆಯಲ್ಲಿ ಕಾದುಕೊಂಡಿರುವಾಗ ವಕೀಲನು ಊಟವಾದ ಮೇಲೆ ಹೊರಗೆ ಬಂದು ಅಂತ ರಂಗದಲ್ಲಿ ಉಪಾಧ್ಯನ ಕೂಡೆ ಕೊಂಚ ಸಮಯ ಮಾತಾಡಿದನು. +ಹಾಗೆಯೇ ಸರಿ!ಬೇರೆ ಏನೂ ಮಾಡಲಿಕ್ಕೆ ಈಗ ಸಮಯ ಸಾಲದು, ಅಪ್ಪಣೆಯಾದಂತೆ ವರ್ತಿಸಿ ಅರಿಕೆ ಮಾಡುವೆನೆಂದು ವಕೀಲನ ಮನೆಯಿಂದ ಹೊರಟುಬಂದನು. +ಪತ್ನಿಯು ಹಿಂದೆ ಅವರಾಜಿತ ಸೆಟ್ಟಿಯಿಂದ ಬಂದ ಬವಣೆಯನ್ನು ನೆನಪಿಗೆ ತಂದು ಈಗ ಅನಕ ಅಧಿಕ ಜಾಗ್ರತೆಯಿಂದಿರುವದು ಅವಶ್ಯವೆಂದು ಪತಿಗೆ ಬುದ್ಧಿಮಾರ್ಗ ಹೇಳಿದಳು. +“ನಾನು ಹಾಗೇನೂ ಕುರುಬನೇ? +ಒಮ್ಮೆ ಸಿಕ್ಕಿ ಬಿದ್ದೆ, ಮತ್ತೆ ಹಾಗೆ ಸಿಕ್ಕಿಬೀಳಲಾರೆ” ಎಂದು ಹೆಂಡತಿಗೆ ಧೈರ್ಯಹೇಳಿ ಮನಸ್ಸಿನಲ್ಲಿಯೇ ಯೋಚನೆ ಗೈಯುವದರಲ್ಲಿ ಬಿದ್ದು ಇಡೀ ರಾತ್ರೆ ನಿದ್ದೆ ಹೋಗದೆ ತಲೆ ವೇದನೆಯಿಂದ ಪ್ರಾತಃಕಾಲದಲ್ಲಿ ಎದ್ದು ಮುಖ ಮಜ್ಜನವಾದ ಬಳಿಕ ಹೊರಟನು.