diff --git "a/Data Collected/Kannada/MIT Manipal/\340\262\252\340\263\215\340\262\260\340\262\276\340\262\245\340\262\256\340\262\277\340\262\225_\340\262\266\340\262\277\340\262\225\340\263\215\340\262\267\340\262\243.txt" "b/Data Collected/Kannada/MIT Manipal/\340\262\252\340\263\215\340\262\260\340\262\276\340\262\245\340\262\256\340\262\277\340\262\225_\340\262\266\340\262\277\340\262\225\340\263\215\340\262\267\340\262\243.txt" new file mode 100644 index 0000000000000000000000000000000000000000..da7bcf96ef45326be61adc4ea527c7aa5245381c --- /dev/null +++ "b/Data Collected/Kannada/MIT Manipal/\340\262\252\340\263\215\340\262\260\340\262\276\340\262\245\340\262\256\340\262\277\340\262\225_\340\262\266\340\262\277\340\262\225\340\263\215\340\262\267\340\262\243.txt" @@ -0,0 +1,77 @@ +ಪ್ರಾಥಮಿಕ ಶಿಕ್ಷಣವು ಸಾಂಪ್ರದಾಯಿಕ ಶಿಕ್ಷಣದ ಮೊದಲ ಹಂತ . +ಶಾಲಾ ಶಿಕ್ಷಣವನ್ನು ಎಲ್ಲ ದೇಶಗಳಲ್ಲೂ ಸಾಮಾನ್ಯವಾಗಿ ಪ್ರಾಥಮಿಕ ಮತ್ತು ಪ್ರೌಢ ಎಂದು ಎರಡು ಹಂತಗಳಾಗಿ ಏರ್ಪಡಿಸುತ್ತಾರೆ . +ಕೆಲವು ದೇಶಗಳಲ್ಲಿ ಇವೆರಡರ ನಡುವೆ ಮಾಧ್ಯಮಿಕ ಎಂಬ ಮತ್ತೊಂದು ಹಂತವೂ ಏರ್ಪಟ್ಟಿದೆ . +ಪಾಶ್ಚಾತ್ಯ ದೇಶಗಳಲ್ಲಿ ಪ್ರಾಥಮಿಕ ಶಿಕ್ಷಣ 5-7 ವರ್ಷಕ್ಕೆ ಪ್ರಾಂಭವಾಗುತ್ತದೆ . +ಏಷ್ಯದ ರಾಷ್ಟ್ರಗಳಲ್ಲೂ ಇದೇ ಪ್ರವೃತ್ತಿ ಕಂಡುಬರುತ್ತದೆ . +ಭಾರತದ ವಿವಿಧ ಪ್ರಾಂತ್ಯಗಳಲ್ಲಿ ಸಾಮಾನ್ಯವಾಗಿ ಈ ಶಿಕ್ಷಣ ಪ್ರಾರಂಭವಾಗುವುದು 6 ವರ್ಷಕ್ಕೆ 5 ವರ್ಷ 9 ತಿಂಗಳಿನ ಮಕ್ಕಳು ಬೌದ್ಧಿಕವಾಗಿ ಮಾನಸಿಕವಾಗಿ ಮೊದಲ ತರಗತಿಗೆ ಸೇರಲು ಅರ್ಹರಾಗಿರುತ್ತಾರೆಂದು ಹಿಲ್‍ಡ್ರೆಸ್ ಎಂಬ ಶಿಕ್ಷಣತಜ್ಞನ ಅಭಿಪ್ರಾಯ . +ಆ ವಯಸ್ಸಿಗೆ ಬರುವವರೆಗೆ ಮಕ್ಕಳು ಮನೆಯಲ್ಲೊ ನರ್ಸರಿ ಶಾಲೆಯಲ್ಲೊ ಪೂರ್ವಭಾವಿ ಶಿಕ್ಷಣ ಪಡೆಯಬೇಕಾಗಿರುತ್ತದೆ . +ಇಂಗ್ಲೆಂಡ್ ಅಮೆರಿಕ ಮೊದಲಾದ ಪಾಶ್ಚಾತ್ಯದೇಶಗಳಲ್ಲಿ ಪ್ರೈಮರಿ ಶಿಕ್ಷಣದ ಅವಧಿ 6 ವರ್ಷ ಭಾರತದ ಅನೇಕ ಪ್ರಾಂತ್ಯಗಳಲ್ಲಿ 5 ವರ್ಷ ಅವಧಿಯ ಪ್ರಾಥಮಿಕ ಶಿಕ್ಷಣವೂ ಅನಂತರ ಮೂರು ವರ್ಷದ ಮಾಧ್ಯಮಿಕ ಶಿಕ್ಷಣವೂ ಜಾರಿಯಲ್ಲಿದೆ . +ಕರ್ನಾಟಕದಲ್ಲಿ ಹಾಲಿ ಇರುವಂತೆ ಪ್ರಾಥಮಿಕ ಶಿಕ್ಷಣ 7 ವರ್ಷ ಅವಧಿಯ ಒಂದು ಅಖಂಡ ಹಂತ . +ಈ ಶಿಕ್ಷಣ 6ರಿಂದ 12 ವರ್ಷದ ತನಕ ಇರತಕ್ಕದ್ದೆಂದು ಸೂಚಿಸಿದೆ . +ವರ್ಧಾ ಶಿಕ್ಷಣ ಯೋಜನೆಯಲ್ಲಿ ಮೂಲ ಶಿಕ್ಷಣದ ಅವಧಿಯನ್ನು 7 ವರ್ಷವೆಂದು ನಿಗದಿಮಾಡಿದೆ . +ವಿದ್ಯಾಭ್ಯಾಸದ ವಿಶಾಲ ಧ್ಯೇಯವೇ ಈ ಶಿಕ್ಷಣಕ್ಕೂ ಅನ್ವಯಿಸುತ್ತದೆ . +ಓದುವುದು,ಬರೆಯುವುದು,ಗಣಿಸುವುದು _ ಇವನ್ನು ಕಲಿಯುವುದರ ಜೊತೆಗೆ ಸಮಾಜ ಜೀವನವನ್ನು ಉತ್ತಮಗೊಳಿಸಲು ಜನಾಂಗದ ಸಂಸ್ಕøತಿಯನ್ನು ಪರಿಷ್ಕರಿಸಿ , ಪುಷ್ಟಿಗೊಳಿಸಿ ಮುಂದುವರಿಸಲು ಸಹಾಯವಾಗಿರಬೇಕು . +ಈ ಶಿಕ್ಷಣ ಮುಗಿದ ಅನಂತರ ಅನೇಕ ಮಂದಿ ಪಾಠಶಾಲೆಯನ್ನು ಬಿಡುವರಾದ್ದರಿಂದ ಇದು ಒಂದು ರೀತಿಯಲ್ಲಿ ಸ್ವಯಂಪೂರ್ಣವಾಗಿರಬೇಕು ಮತ್ತು ಮುಂದಿನ ಹಂತದ ಶಿಕ್ಷಣಕ್ಕೆ ವಿದ್ಯಾರ್ಥಿಗಳನ್ನು ಒಯ್ಯುವಂತೆಯೂ ಇರಬೇಕು . +ಆದ್ದರಿಂದ ಎಲ್ಲರಿಗೂ ಅಗತ್ಯವಾದ ಭಾಷೆ ,ಗಣಿತ ,ಭೂ ವಿವರಣೆ ,ಪ್ರಜಾಧರ್ಮ ,ಆರೋಗ್ಯ ಕೈಕೆಲಸಗಳು ,ಚಿತ್ರಕಲೆ ,ವಿಜ್ಞಾನ ಮುಂತಾದ ವಿಷಯಗಳಲ್ಲಿ ಶಿಕ್ಷಣ ಕೊಡುವುದು ಆವಶ್ಯಕ . +ಈ ಹಂತದಲ್ಲಿ ವೃತ್ತಿಶಿಕ್ಷಣಕ್ಕೆ ಸ್ಥಾನವಿಲ್ಲ . +ಮಕ್ಕಳು ಮೊದಲು ಮಾತೃಭಾಷೆಯನ್ನು ಕಲಿಯಬೇಕು . +ಶಿಕ್ಷಣ ಮಾಧ್ಯಮವು ಅದೇ ಆಗಿರಬೇಕು . +11 ವರ್ಷ ವಯಸ್ಸಿನತನಕವೂ ಅವರ ಮೇಲೆ ಪರಭಾಷೆಯ ಹೊರೆ ಹೊರಿಸಬಾರದು . +ಇದರ ಅನ್ವಯ ಭಾರತದಲ್ಲಿ ಸಾಮಾನ್ಯವಾಗಿ 5ನೇಯ ತರಗತಿಯಲ್ಲಿ ಇಂಗ್ಲಿಷಿನ ಅಭ್ಯಾಸವನ್ನೂ ಇತರ ದೇಶಗಳಲ್ಲಿ ಬೇರೊಂದು ಪರಭಾಷೆಯ ಅಭ್ಯಾಸವನ್ನೂ ಪ್ರಾರಂಭಿಸುತ್ತಾರೆ . +ಸ್ವಾತಂತ್ರ್ಯಾನಂತರ ಭಾರತದಲ್ಲಿ ಗಾಂಧಿಯವರ ಮೂಲಶಿಕ್ಷಣವನ್ನೂ ರಾಷ್ಟ್ರೀಯ ಶಿಕ್ಷಣ ಪದ್ಧತಿಯನ್ನೂ ಮಾದರಿಯಾಗಿ ಅಂಗೀಕರಿಸಲಾಯಿತು . +ಪ್ರಾಂತ್ಯಗಳು ಮೊದಲ ಹಂತದಲ್ಲಿ ಈಗ ಮೂಲಶಿಕ್ಷಣವನ್ನೇ ಜಾರಿಗೆ ತಂದಿವೆ . +ಇತರ ಕೆಲವು ಪ್ರಾಂತ್ಯಗಳಲ್ಲಿ ಮೂಲಶಿಕ್ಷಣ ಮಾದರಿಯ ಪಾಠಶಾಲೆಗಳು ಸ್ಥಾಪಿಸಲ್ಪಟ್ಟಿವೆ . +ಪ್ರಾಥಮಿಕ ಶಿಕ್ಷಣದ ಹೊಣೆ ಆಯಾ ಸರ್ಕಾರದ ಹೊಣೆ ಎಂಬ ತತ್ವವನ್ನು ಎಲ್ಲ ರಾಷ್ಟ್ರಗಳೂ ಒಪ್ಪಿಕೊಂಡಿವೆ . +ಮುಂದುವರೆದ ಎಲ್ಲ ಪಾಶ್ಚಾತ್ಯ ಪೌರಸ್ತ್ಯ ರಾಷ್ಟ್ರಗಳಲ್ಲೂ ಅದು ಉಚಿತವೂ ಕಡ್ಡಾಯವೂ ಆಗಿದೆ . +ಭಾರತದಲ್ಲಿ ಉಚಿತ ಕಡ್ಡಾಯ ಶಿಕ್ಷಣ 1961-62ರ ಸಾಲಿನಿಂದ ಎಲ್ಲ ಪ್ರಾಂತ್ಯಗಳಲ್ಲೂ ಜಾರಿಗೆ ಬಂದಿದೆ . +ಒಟ್ಟಾರೆ ಶಿಕ್ಷಣ ಪ್ರಾಂತೀಯ ಸರ್ಕಾರಗಳ ವ್ಯಾಪ್ತಿಗೆ ಒಳಪಟ್ಟ ವಿಷಯವಾಗಿರುವುದರಿಂದ ಪ್ರಾಥಮಿಕ ಶಿಕ್ಷಣದ ಜವಾಬ್ದಾರಿಯನ್ನೂ ಅವೇ ವಹಿಸಿಕೊಂಡಿವೆ . +ಖಾಸಗಿ ಸಂಸ್ಥೆಗಳು ನಡೆಸುವ ಶಾಲೆಗಳು ಸರ್ಕಾರದ ಮಾನ್ಯತೆ ಪಡೆದಿರಬೇಕೆಂದು ನಿಯಮವಿದೆ . +ಶಾಲಾದಿನದ ವೇಳೆಯ ಬಗ್ಗೆ ಹೆಚ್ಚಿನ ವೈವಿಧ್ಯ ಉಂಟು . +ದಿನಕ್ಕೆ 5 ಗಂಟೆ ಕೆಲಸ ಎಂಬುದನ್ನು ಬಹಳ ರಾಷ್ಟ್ರಗಳು ಒಪ್ಪಿವೆ . +ಪಾಠಶಾಲೆಗೆ ಸರ್ಕಾರದ ಮಾನ್ಯತೆ ದೊರೆಯಲು ವರ್ಷದಲ್ಲಿ ಶಾಲೆ ಕೆಲಸಮಾಡಬೇಕಾದ ದಿನಗಳ ಕನಿಷ್ಠಸಂಖ್ಯೆಯನ್ನು ಪ್ರತಿ ಸರ್ಕಾರ ನಿಗದಿಮಾಡುತ್ತದೆ . +ಕರ್ನಾಟಕದಲ್ಲಿ ಪ್ರತಿದಿನ 5 ಗಂಟೆಯಂತೆ ವರ್ಷಕ್ಕೆ 220 ದಿನ ಕೆಲಸಮಾಡಬೇಕೆಂದು ನಿಯಮವಿದೆ . +ಕೆಳ ತರಗತಿಗಳಲ್ಲಿ 30 -35 ಮಕ್ಕಳೂ ಮೇಲಿನ ತರಗತಿಗಳಲ್ಲಿ 40 - 45 ಮಕ್ಕಳೂ ಇದ್ದು ಒಟ್ಟಿನಲ್ಲಿ ಶಿಕ್ಷಕ ಬೋಧಕ ಪ್ರಮಾಣ 1:40 ಇರಬಹುದು . +ಗಾತ್ರವೊಂದೇ ತರಗತಿಯ ದಕ್ಷತೆಗೆ ಆಧಾರ ಎನ್ನಲು ಹೆಚ್ಚು ಪ್ರಮಾಣಗಳಿಲ್ಲ . +ಈ ಹಂತದಲ್ಲಿ ಶಿಕ್ಷಕರು ಹೆಂಗಸರಾಗಿರುವುದು ಉತ್ತಮ . +ಅವರು ಸ್ವಭಾವತಃ ಹೆಚ್ಚು ತಾಳ್ಮೆಯುಳ್ಳವರು . +ಮಕ್ಕಳಿಗೆ ಮಾತೃಸ್ಥಾನದಲ್ಲಿರುವವರು . +ಪಾಶ್ಚತ್ಯ ರಾಷ್ಟ್ರಗಳಲ್ಲಿ ಸ್ತ್ರೀ ಶಿಕ್ಷಕರೇ ಹೆಚ್ಚು . +ಈ ಧೋರಣೆ ಭಾರತದಲ್ಲಿ ಈಗ ಹೆಚ್ಚು ಹೆಚ್ಚಾಗಿ ಕಂಡುಬರುತ್ತದೆ . +ಇತ್ತೀಚಿನವರೆಗೂ ಭಾರತದಲ್ಲಿ ಪ್ರಾಥಮಿಕ ಶಾಲೆಯ ಉಪಾಧ್ಯಾಯ ವೃತ್ತಿಗೆ ವಿಧಿಸಲಾಗಿದ್ದ ಕನಿಷ್ಠ ಅರ್ಹತೆ ಸಾಮಾನ್ಯವಾಗಿ 7ನೇಯ ತರಗತಿ ಪರೀಕ್ಷೆಯೇ ಆಗಿತ್ತು . +ಈಗ ಅನೇಕ ಪ್ರಾಂತ್ಯಗಳು ಎಸ್.ಎಸ್.ಎಲ್.ಸಿ.ಯನ್ನೇ ಕನಿಷ್ಠ ಅರ್ಹತೆಯಾಗಿ ಪರಿಗಣಿಸಿವೆ . +ಜೊತೆಗೆ ವೃತ್ತಿಶಿಕ್ಷಣವೂ ಮುಖ್ಯವಾಗಿ ಇರಬೇಕಾದರ್ಹತೆ . +ಪಾಶ್ಚಾತ್ಯ ದೇಶಗಳಲ್ಲಿ ಪದವೀಧರರಂಥ ಹೆಚ್ಚು ಅರ್ಹತೆಯುಳ್ಳವರೂ ಪ್ರಾಥಮಿಕ ಶಾಲೆಗಳಲ್ಲಿ ಉಪಾಧ್ಯಾಯರಾಗಿರುವುದುಂಟು . +ಪ್ರಜೆಗಳ ಪ್ರಬುದ್ಧ ಬುದ್ಧಿಬಾಹುಗಳೇ ದೇಶದ ಸಂಪತ್ತು . +ಮಕ್ಕಳ ಪ್ರಚ್ಚನ್ನ ಶಕ್ತಿಸಾಮಥ್ರ್ಯಗಳು ವ್ಯರ್ಥವಾಗದೆ ಪ್ರಕಾಶಕ್ಕೆ ಬರಬೇಕಾದರೆ ಕಡ್ಡಾಯ ಶಿಕ್ಷಣ ಅಗತ್ಯ ಪ್ರಜಾಪ್ರಭುತ್ವವನ್ನು ಒಪ್ಪಿರುವ ದೇಶಗಳಲ್ಲಂತೂ ಇದು ಅತ್ಯಗತ್ಯ . +ಇದನ್ನರಿತ ಪಾಶ್ಚಾತ್ಯ ರಾಷ್ಟ್ರಗಳು ಇಪ್ಪತ್ತನೆಯ ಶತಮಾನದ ಆದಿಯಿಂದಲೂ ತಂತಮ್ಮ ದೇಶಗಳಲ್ಲಿ ಕಡ್ಡಾಯ ಶಿಕ್ಷಣವನ್ನು ಜಾರಿಗೆ ತಂದವು . +ಭಾರತದಲ್ಲಿ ಕಡ್ಡಾಯ ಶಿಕ್ಷಣವು 1911ರಿಂದ ಪ್ರಾರಂಭವಾಯಿತು . +ಅಂದಿನಿಂದ 1961ರ ತನಕ ದೇಶದ ವಿವಿಧ ಪ್ರಾಂತ್ಯಗಳಲ್ಲಿ ಆದರೆ ಪ್ರಗತಿ ಬೇರೆ ಬೇರೆಯಾಗಿತ್ತು . +1961ರಿಂದ ರಾಜ್ಯಾಂಗದ 45ನೇಯ ವಿಧಿಯಂತೆ ಎಲ್ಲ ಪ್ರಾಂತ್ಯಗಳೂ ಕಡ್ಡಾಯ ಶಿಕ್ಷಣದ ಕಾನೂನನ್ನು ಜಾರಿಗೆ ತಂದಿವೆ . +ಈ ಮಕ್ಕಳು ಸರ್ಕಾರ ನಿರ್ಧರಿಸುವ ಗರಿಷ್ಠ ವಯೋಪರಿಮಿತಿಯವರೆಗೂ ಅಥವಾ ಕನಿಷ್ಠ ತರಗತಿಯವರೆಗೂ ತಮ್ಮ ವ್ಯಾಸಂಗವನ್ನು ಮುಂದುವರಿಸಲೇಬೇಕು . +ಪಾಠಶಾಲೆಯ ವೇಳೆಯಲ್ಲಿ ಯಾರೂ ಮಕ್ಕಳನ್ನು ದುಡಿಮೆಗೆ ಹಚ್ಚಲಾಗದು . +ಪಾಶ್ಚಾತ್ಯ ದೇಶಗಳಲ್ಲಿ ಕಡ್ಡಾಯ ಶಿಕ್ಷಣದ ಅವಧಿ ಸಾಮಾನ್ಯವಾಗಿ 5-6 ವರ್ಷದಿಂದ 14-15 ವರ್ಷದ ತನಕವೂ ಇದ್ದು ಪ್ರೌಢ ಶಿಕ್ಷಣಕ್ಕೂ ಅನ್ವಯಿಸುತ್ತದೆ . +ಭಾರತದಲ್ಲಿ ಈ ಅವಧಿ 6ನೇಯ ವಯಸ್ಸಿನಿಂದ 5 ವರ್ಷ ಅವಧಿಯದಾಗಿದ್ದು ಪ್ರಾಥಮಿಕ ಹಂತಕ್ಕೆ ಮಾತ್ರ ಅನ್ವಯಿಸುತ್ತದೆ . +ಈ ಅವಧಿ 6ರಿಂದ 14 ವಯಸ್ಸಿನತನಕ 8 ವರ್ಷದ್ದಾಗಿರಬೇಕೆಂದು ತಜ್ಞರ ಮತ . +ಕಡ್ಡಾಯ ಹಾಜರಿ ಯೋಜನೆ ಎಂಬುದು ಮೇಲಿನ ಯೋಜನೆಯ ಮಾರ್ಪಟ್ಟ ಒಂದು ವ್ಯವಸ್ಥೆ . +ಇದರ ಪ್ರಕಾರ ಎಲ್ಲ ಮಕ್ಕಳನ್ನೂ ಪಾಠಶಾಲೆಗೆ ಸೇರಿಸಬೇಕೆಂಬ ಒತ್ತಾಯವಿಲ್ಲ . +ಆದರೆ ಪಾಠಶಾಲೆಗೆ ದಾಖಲಾದ ಮಕ್ಕಳು ಸರ್ಕಾರ ನಿಗದಿ ಮಾಡಿರುವ ಅವಧಿಯವರೆಗೂ ಶಾಲೆಯನ್ನು ಬಿಡುವಂತಿಲ್ಲ . +ಶಿಕ್ಷಣದಲ್ಲಿ ಅಪವ್ಯಯವನ್ನು ತಪ್ಪಿಸುವುದು ಬಹುಮುಖ್ಯ . +ಲಿನ್‍ಲಿತ್‍ಗೊ ಸಮಿತಿಯೂ ಹಾರ್ಟಾಗ್ ಸಮಿತಿಯೂ ಈ ರೀತಿ ಅಭಿಪ್ರಾಯಪಟ್ಟಿವೆ . +ಪ್ರಪಂಚದ ಎಲ್ಲ ದೇಶಗಳಲ್ಲೂ ಒಬ್ಬನೇ ಒಬ್ಬ ಶಿಕ್ಷಕನಿರುವ ಹಲವು ಪ್ರಾಥಮಿಕ ಶಾಲೆಗಳಿವೆ . +ಅನೇಕ ಪಾಠಶಾಲೆಗಳಲ್ಲಿ ಒಂದಕ್ಕಿಂತ ಹಚ್ಚು ತರಗತಿಗಳಿದ್ದರೂ ಮಕ್ಕಳ ಒಟ್ಟು ಸಂಖ್ಯೆ ಕಡಿಮೆಯಾಗಿರುವುದರಿಂದ ಹೆಚ್ಚುಮಂದಿ ಶಿಕ್ಷಕರನ್ನು ನಿಯಮಿಸುವುದು ಸಾಧ್ಯವಾಗುವುದಿಲ್ಲ . +ಆದ್ದರಿಂದ ಇರುವ ಒಬ್ಬ ಶಿಕ್ಷಕನೇ ಒಂದಕ್ಕಿಂತ ಹೆಚ್ಚು ತರಗತಿಗಳಿಗೆ ಏಕಕಾಲದಲ್ಲಿ ಬೋಧಿಸಬೇಕಾಗುತ್ತದೆ . +ಭಾರತದಲ್ಲಿ ಈಗ ಸುಮಾರು ಶೇಕಡಾ 40ರಷ್ಟು ಏಕಶಿಕ್ಷಕ ಪ್ರೈಮರಿ ಪಾಠಶಾಲೆಗಳಿವೆ . +ಪಾಶ್ಚಾತ್ಯ ರಾಷ್ಟ್ರಗಳಲ್ಲೂ ಇಂಥ ಶಾಲೆಗಳು ಬಹುಸಂಖ್ಯೆಯಲ್ಲಿವೆ . +ಸಾರ್ವತ್ರಿಕ ಕಡ್ಡಾಯ ಪ್ರಾಥಮಿಕ ಶಿಕ್ಷಣಯೋಜನೆಯ ಅನ್ವಯ ಮತ್ತು ವಿಸ್ತರಣಗಳ ಪರಿಣಾಮವಾಗಿ ಎಲ್ಲ ದೇಶಗಳಲ್ಲೂ ಈ ಬಗೆಯ ಶಾಲೆಗಳು ಅಪೇಕ್ಷಣೀಯವಲ್ಲದಿದ್ದರೂ ಅನಿವಾರ್ಯವಾಗಿವೆ . +ಏಕಶಿಕ್ಷಕ ಪಾಠಶಾಲೆಗಳು ಸುಗಮವಾಗಿ ಕೆಲಸಮಾಡಲು +(1)ಮಕ್ಕಳ ಒಟ್ಟು ಸಂಖ್ಯೆ 40ಕ್ಕೆ ಮೀರಬಾರದು. +(2) ನಾಲ್ಕಕ್ಕಿಂತಲೂ ಹೆಚ್ಚು ತರಗತಿಗಳಿರಬಾರದು. +(3) ಶಿಕ್ಷಕರ ಅರ್ಹತೆ ಎಸ್.ಎಸ್.ಎಲ್.ಸಿ .ಗೆ ಕಡಿಮೆ ಇರಬಾರದು . +(4) ಶಿಕ್ಷಕರಿಗೂ ಶಾಲಾತನಿಖಾಧಿಕಾರಿಗಳಿಗೂ ಏಕಶಿಕ್ಷಕ ಪಾಠಶಾಲೆಗಳ ಸಂವಿಧಾನ ವ್ಯವಸ್ಥೆ ಆಡಳಿತ ಮತ್ತು ಬಹುತರಗತಿಗಳ ಬೋಧನೆ - ಇವುಗಳಲ್ಲಿ ತರಬೇತು ಮಾರ್ಗದರ್ಶನ ಕೊಡಬೇಕು, +(5) ಪಾಠಶಾಲೆಯಲ್ಲಿ ಅತ್ಯಗತ್ಯವಾದ ಪಾಠೋಪಕರಣಗಳಾದರೂ ಇರಬೇಕು, +(6) ಶಾಲಾಕಟ್ಟಡ ಸಾಕಷ್ಟು ವಿಶಾಲವಾಗಿರಬೇಕು , +(7) ಮಕ್ಕಳನ್ನು ಸಕಾಲಕ್ಕೆ ಪಾಠಶಾಲೆಗೆ ಸೇರಿಸಬೇಕು , +(8) ವಿಷಯ ಬೋಧನೆ ಕೈಕಸುಬು ಮತ್ತು ವ್ಯಾಯಾಮ ಇವುಗಳಿಗೆ ಮಕ್ಕಳನ್ನು ಅವರವರ ಬುದ್ಧಿಶಕ್ತಿಯ ಮಟ್ಟ ,ಸಾಮಥ್ರ್ಯ ಮತ್ತು ವಯಸ್ಸಿಗೆ ಅನುಗುಣವಾಗಿ ಉಪಾಧ್ಯಾಯರು ವರ್ಗೀಕರಿಸಬೇಕು . +( 9 ) ಉಪಾಧ್ಯಾಯರು ವೇಳಾ ಪತ್ರಿಕೆಯನ್ನು ಬಹುತರಗತಿಯ ಶಿಕ್ಷಣಕ್ಕೆ ಅನುಕೂಲಿಸುವಂತೆ ತಯಾರಿಸಬೇಕು , +( 10 ) ಶಿಕ್ಷಣ ಕಾರ್ಯದಲ್ಲಿ ಉಪಾಧ್ಯಾಯರು ವಿದ್ಯಾರ್ಥಿ ಮುಖಂಡರ ನೆರವನ್ನು ಪಡೆಯಬಹುದು , + ( 11 ) ಪ್ರತಿ ತರಗತಿಯೂ ಸರದಿ ಪ್ರಕಾರ ಒಂದೇ ಹೊತ್ತು ಕೆಲಸ ಮಾಡುವುದು ಅಗತ್ಯ .