From a95f206a31d6a8f170f89d83c0106e8bd1b6c845 Mon Sep 17 00:00:00 2001 From: Narendra VG Date: Mon, 17 Apr 2023 15:32:48 +0530 Subject: [PATCH] Upload New File --- ...5\340\262\225\340\262\260\340\263\215.txt" | 1751 +++++++++++++++++ 1 file changed, 1751 insertions(+) create mode 100644 "Data Collected/Kannada/MIT Manipal/Kannada-Scrapped-dta/\340\262\241\340\262\276.\340\262\205\340\262\202\340\262\254\340\263\207\340\262\241\340\263\215\340\262\225\340\262\260\340\263\215.txt" diff --git "a/Data Collected/Kannada/MIT Manipal/Kannada-Scrapped-dta/\340\262\241\340\262\276.\340\262\205\340\262\202\340\262\254\340\263\207\340\262\241\340\263\215\340\262\225\340\262\260\340\263\215.txt" "b/Data Collected/Kannada/MIT Manipal/Kannada-Scrapped-dta/\340\262\241\340\262\276.\340\262\205\340\262\202\340\262\254\340\263\207\340\262\241\340\263\215\340\262\225\340\262\260\340\263\215.txt" new file mode 100644 index 0000000..9181f13 --- /dev/null +++ "b/Data Collected/Kannada/MIT Manipal/Kannada-Scrapped-dta/\340\262\241\340\262\276.\340\262\205\340\262\202\340\262\254\340\263\207\340\262\241\340\263\215\340\262\225\340\262\260\340\263\215.txt" @@ -0,0 +1,1751 @@ +ಆಧುನಿಕ ಕನ್ನಡ ಸಾಹಿತ್ಯದ ಅತ್ಯುನ್ನತ ಸಾಹಿತ್ಯಕ ಸಾಧನೆಯ ಪ್ರತೀಕವಾಗಿರುವ ರಾಷ್ಟ್ರಕವಿ ಡಾ.ಕುಪ್ಪಳಿ ವೆಂಕಟಪ್ಪ ಪುಟ್ಟಪ್ಪ ಅವರ ಹೆಸರಿನಲ್ಲಿ ಸ್ಥಾಪಿತವಾಗಿರುವ ಕುವೆಂಪು ಭಾಷಾ ಭಾರತಿ ಪ್ರಾಧಿಕಾರವು ಸಾಹಿತ್ಯಕ,ಸಾಂಸ್ಕೃತಿಕ, ವೈಜ್ಞಾನಿಕ ಮತ್ತು ತಾಂತ್ರಿಕ ಮಹತ್ವದ ಗ್ರಂಥಗಳನ್ನು ಹೊರತರುವ ದಿಕ್ಕಿನಲ್ಲಿ ಹೊಸ ದಾಖಲೆಯನ್ನು ಸ್ಥಾಪಿಸುತ್ತ ಮುನ್ನಡೆಯುತ್ತಿರುವುದು ಅತ್ಯಂತ ಸಂತಸದ ಸಂಗತಿಯಾಗಿದೆ. +ವಿವಿಧ ವಿದೇಶೀ ಮತ್ತು ಭಾರತೀಯ ಭಾಷೆ-ಸಾಹಿತ್ಯಗಳ ಅತ್ಯುತ್ತಮ ಕೃತಿಗಳನ್ನು ಕನ್ನಡ ಭಾಷೆಯಲ್ಲಿ ಹಾಗೂ ಕನ್ನಡದ ಶ್ರೇಷ್ಠ ಕೃತಿಗಳನ್ನು ಇತರ ಭಾಷೆಗಳಲ್ಲಿ ಹೊರತರುತ್ತಿರುವ ನಮ್ಮ ಕುವೆಂಪು ಭಾಷಾ ಭಾರತಿ ಪ್ರಾಧಿಕಾರವು ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಲೇಖಕರ ಹಾಗೂ ಕನ್ನಡದ ಇತರ ಪ್ರತಿಷ್ಠಿತ ಲೇಖಕರ ಅತ್ಯುತ್ತಮ ಪ್ರಾತಿನಿಧಿಕ ರಚನೆಗಳ ಸಂಚಯಗಳನ್ನು ಹೊರತರುತ್ತಿರುವುದು ಅಭಿನಂದನೀಯ ಮತ್ತು ಅನುಕರಣ ಯೋಗ್ಯ. +ನರಸಿಂಹಾಚಾರ್‌ ಮತ್ತು ಜಿ.ಎಸ್‌.ಶಿವರುದ್ರಪ್ಪ ಅವರ ಸಂಚಯಗಳನ್ನು ಈಗಾಗಲೇ ಪ್ರಕಟಿಸಿರುವ ಕುವೆಂಪು ಭಾಷಾ ಭಾರತಿ ಪ್ರಾಧಿಕಾರವು ಇನ್ನಿತರ ಜ್ಞಾನಪೀಠ ಪ್ರಶಸ್ತಿ ಹಾಗೂ ಸರಸ್ವತೀ ಸಮ್ಮಾನ ಪ್ರಶಸ್ತಿ ಪುರಸ್ಕೃತರ ಸಂಚಯಗಳನ್ನೂ ಸಿದ್ಧಪಡಿಸುತ್ತಿರುವುದು ನನ್ನಲ್ಲಿ ಅಭಿಮಾನ ಮತ್ತು ಹೆಮ್ಮೆ ಮೂಡಿಸಿದೆ. +ಇವುಗಳೆಲ್ಲದರ ಹಿಂದಿ ಮತ್ತು ಇಂಗ್ಲಿಷ್‌ ಆವೃತ್ತಿಗಳು ಪ್ರಕಟವಾದಾಗ ಕನ್ನಡದ ಹಿರಿಮೆ ಮತ್ತು ಗರಿಮೆ ಸಾರಸ್ವತ ಲೋಕದಲ್ಲಿ ಮತ್ತಷ್ಟು ಪ್ರಜ್ವಲಿಸಲಿದೆ. +ಜ್ಞಾನ, ವಿಜ್ಞಾನ ಹಾಗೂ ತಂತ್ರಜ್ಞಾನ ಕ್ಷೇತ್ರಗಳಿಗೂ ಕೊಡುಗೆಯಾಗಬಲ್ಲ ಮಹತ್ವದ ಮೌಲಿಕ ಕೃತಿಗಳನ್ನು ಕುವೆಂಪು ಭಾಷಾ ಭಾರತಿ ಪ್ರಾಧಿಕಾರವು ಮತ್ತಷ್ಟು ಹೊರತರಲಿ ಎಂಬುದೇ ನಮ್ಮ ಸರ್ಕಾರದ ಸದಾಶಯ. +ಭಾರತದ ಸಂವಿಧಾನ ಶಿಲ್ಪಿ ಭಾರತ ರತ್ನ ಡಾ.ಬಿ.ಆರ್‌.ಅಂಬೇಡ್ಕರ್‌ ಅವರ ಎಲ್ಲಾ ಬರೆಹಗಳು ಮತ್ತು ಭಾಷಣಗಳನ್ನು ಕನ್ನಡ ಭಾಷೆಗೆ ಅನುವಾದಿಸಿ ಪ್ರಕಟಿಸುವ ಯೋಜನೆಯನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿದ ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಹಾಗೂ ಭಾಷಾಂತರದ ಹೊಣೆ ಹೊತ್ತು ಅನುವಾದದ ಕಾರ್ಯವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ ಎಲ್ಲಾ ಸದಸ್ಯರಿಗೂ ನನ್ನ ಅಕ್ಕರೆಯ ಅಭಿನಂದನೆಗಳು ಹಾಗೂ ಆತ್ಮೀಯ ವಂದನೆಗಳು. +ನಮ್ಮ ಸುತ್ತಣ ಸಮಾಜದಲ್ಲಿ ಇರುವ ಅಸಮಾನತೆಗಳಿಗೆ ಕಾರಣಗಳೇನೇ ಇರಲಿ, ಆ ಅಸಮಾನತೆಯು ಬೆಳೆಯುವ ಮಕ್ಕಳ ದೈಹಿಕ ಮತ್ತು ಮಾನಸಿಕ ವಿಕಾಸಕ್ಕೆ ಅಡ್ಡಿಗಳನ್ನು ಉಂಟು ಮಾಡಬಾರದು. +ಇಂತಹ ಅಡ್ಡಿಗಳು ಇರದಂತೆ ನೋಡಿಕೊಳ್ಳಲು ಸರ್ಕಾರಗಳು ತಕ್ಕ ಯೋಜನೆಗಳನ್ನು ರೂಪಿಸಿಕೊಂಡು ಜಾರಿಗೆ ಕೊಡುತ್ತಿವೆ. +ಕರ್ನಾಟಕ ಸರಕಾರವೂ ಕೂಡ ತನ್ನ ಸಮಾಜ ಕಲ್ಯಾಣ ಇಲಾಖೆಯ ಮೂಲಕ ಈ ನಿಟ್ಟಿನಲ್ಲಿ ಹಲವು ಯೋಜನೆಗಳನ್ನು ಅನುಷ್ಠಾನಗೊಳಿಸಿದೆ. +ನಾಡಿನ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮಕ್ಕಳು ಓದನ್ನು ಮುಂದುವರಿಸಲು ಅನುಕೂಲವಾಗುವಂತೆ ವಿದ್ಯಾರ್ಥಿ ನಿಲಯಗಳನ್ನು ನಡೆಸುತ್ತಿದೆ. +ಲಕ್ಷಾಂತರ ಮಕ್ಕಳು ಈ ವಿದ್ಯಾರ್ ಥಿನಿಲಯಗಳಲ್ಲಿದ್ದುಕೊಂಡು ತಮ್ಮ ಶಿಕ್ಷಣವನ್ನು ಮುಂದುವರೆಸುತ್ತಿದ್ದಾರೆ. +ಅವರ ಭೌತಿಕ ಅಗತ್ಯಗಳಿಗೆ ಬೇಕಾದ ಎಲ್ಲ ಸೌಲಭ್ಯಗಳು ಅಲ್ಲಿ ದೊರಕುವಂತೆ ನೋಡಿಕೊಳ್ಳಲಾಗಿದೆ. +ಇವೆಲ್ಲದರ ಜೊತೆಗೆ ಆ ವಿದ್ಯಾರ್ಥಿಗಳಿಗೆ ಬೌದ್ಧಿಕ ಬೆಳವಣಿಗೆಗೆ ಬೇಕಾದ ಅವಕಾಶಗಳನ್ನು ಕಲ್ಪಿಸುವುದು ಕೂಡ ಇಲಾಖೆಯ ಹೊಣೆಯಾಗಿದೆ. +ಈ ನಿಟ್ಟಿನಲ್ಲಿ ಇಪ್ಪತ್ತನೆಯ ಶತಮಾನದ ಧೀಮಂತ ಚಿಂತಕರಾಗಿ ಎಲ್ಲ ಬಗೆಯ ಅಸಮಾನತೆಗಳ ವಿರುದ್ಧ ನಿರಂತರ ಹೋರಾಟ ಮಾಡಿದ ಬಾಬಾ ಸಾಹೇಬ್‌ ಡಾ.ಬಿ.ಆರ್‌.ಅಂಬೇಡ್ಕರ್‌ ಅವರ ವಿಚಾರಗಳ ಪರಿಚಯ ಮಾಡಿಕೊಡುವುದು ಅಗತ್ಯವೆನಿಸಿ ಇಲಾಖೆ ಒಂದು ಯೋಜನೆಯನ್ನು ರೂಪಿಸಿತು. +ಅಂಬೇಡ್ಕರ್‌ ಅವರ ಎಲ್ಲ ಬರೆಹಗಳು ಮತ್ತು ಭಾಷಣಗಳು ಕನ್ನಡ ಅನುವಾದದ ಸಂಪುಟಗಳನ್ನು ಈ ವಿದ್ಯಾರ್ಥಿನಿಲಯಗಳಿಗೆ ಒದಗಿಸುವುದೇ ಈ ಯೋಜನೆ. +ರಾಜ್ಯದ ಮಾನ್ಯ ಮುಖ್ಯಮಂತ್ರಿಗಳು ೨ಂ೧೫-೧೬ನೇ ಸಾಲಿನ ವರ್ಷದ ತಮ್ಮ ಆಯವ್ಯಯವನ್ನು ಮಂಡನೆ ಮಾಡುವಾಗ ಈ ಯೋಜನೆಯನ್ನು ಘೋಷಿಸಿದರು. +ಅದರಂತೆ ಈ ಸಂಪುಟಗಳನ್ನು ಅಚ್ಚುಮಾಡಿ ವಿದ್ಯಾರ್ಥಿ ನಿಲಯಗಳಿಗೆ ಒದಗಿಸುವ ಹೊಣೆಯನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ವಹಿಸಲಾಯಿತು. +ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಈ ಸಂಪುಟಗಳನ್ನು ಅನುವಾದಿಸಿ ಪ್ರಕಟಿಸುವ ಕೆಲಸವನ್ನು ಕುವೆಂಪು ಭಾಷಾ ಭಾರತಿ ಪ್ರಾಧಿಕಾರಕ್ಕೆ ವಹಿಸಿತು. +ಈಗ ಈ ಸಂಪುಟಗಳನ್ನು ಸಿದ್ಧಗೊಳಿಸಿ ಪ್ರಾಧಿಕಾರವು ತನ್ನ ಹೊಣೆಯನ್ನು ಯಶಸ್ವಿಯಾಗಿ ಪೂರೈಸಿದೆ. +ಈ ಯೋಜನೆಗೆ ಚಾಲನೆಯನ್ನು ನೀಡಿದ ರಾಜ್ಯದ ಸನ್ಮಾನ್ಯ ಮುಖ್ಯಮಂತ್ರಿಗಳಿಗೆ, ಕಾರ್ಯರೂಪಕ್ಕೆ ತಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮಾನ್ಯ ಸಚಿವರಿಗೆ ಮತ್ತು ಕುವೆಂಪು ಭಾಷಾ ಭಾರತಿ ಪ್ರಾಧಿಕಾರಕ್ಕೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. +ರಾಷ್ಟ್ರಕವಿ ಶ್ರೀ ಕುವೆಂಪು ಅವರ ಹೆಸರಿನಲ್ಲಿ ಕರ್ನಾಟಕ ಸರ್ಕಾರ ಸ್ಥಾಪಿಸಿರುವ ಕುವೆಂಪು ಭಾಷಾ ಭಾರತಿ ಪ್ರಾಧಿಕಾರ, ವಿಜ್ಞಾನದ ತಂತ್ರಜ್ಞಾನ ಮತ್ತು ಸಾಹಿತ್ಯ ವಿಷಯಗಳಿಗೆ ಸಂಬಂಧಿಸಿದಂತೆ ನೂರಾರು ಮಹತ್ವದ ಮೌಲಿಕ ಹಾಗೂ ಅನುವಾದಿತ ಗ್ರಂಥಗಳನ್ನು ಹೊರತಂದಿರುವುದು ತುಂಬ ಶ್ಲಾಘನೀಯ ವಿಚಾರವಾಗಿದೆ. +ಕನ್ನಡಿಗರಿಗೆ ಭಾರತೀಯ ಸಾಹಿತ್ಯದ ಮತ್ತು ವಿಶ್ವ ಸಾಹಿತ್ಯದ ಮಹತ್ವದ ಕೃತಿಗಳನ್ನು ಪರಿಚಯಿಸಿಕೊಡುವ ಕಾರ್ಯಗಳ ಜೊತೆಗೆ ರಾಷ್ಟ್ರೀಯ ಪ್ರಶಸ್ತಿ-ಪುರಸ್ಕಾರಗಳನ್ನು ಗಳಿಸಿರುವ ನಮ್ಮ ಲೇಖಕರ ಪ್ರಾತಿನಿಧಿಕ ಸಂಕಲನಗಳನ್ನು ಹೊರತಂದು ಅವುಗಳನ್ನು ಬೇರೆ ಭಾಷೆಗಳಲ್ಲಿ ಪ್ರಕಟಿಸುತ್ತಿರುವುದು ತುಂಬ ಮಹತ್ವದ ಕಾರ್ಯವಾಗಿದೆ. +ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮಹತ್ವಾಕಾಂಕ್ಷೆಯ ಯೋಜನೆಗಳಲ್ಲಿ ಭಾರತರತ್ನ ಬಾಬಾ ಸಾಹೇಬ್‌ಡಾ.ಬಿ.ಆರ್‌.ಅಂಬೇಡ್ಕರ್‌ ಅವರ ಬರೆಹ ಮತ್ತು ಭಾಷಣಗಳನ್ನು ಕನ್ನಡದಲ್ಲಿ ಅನುವಾದಿಸಿ ಪ್ರಕಟಿಸುವುದು ಒಂದಾಗಿದೆ. +ಈ ಯೋಜನೆಯನ್ನು ನಿರ್ವಹಿಸಲು ಸಲಹಾ ಸಮಿತಿಯೊಂದನ್ನು ರೂಪಿಸಲಾಗಿದೆ. +ಈ ಸಮಿತಿಯ ನೇತೃತ್ವದಲ್ಲಿ ಅನುವಾದಿತ ಕೃತಿಗಳನ್ನು ಹೊರತಂದಿರುವ ಕುವೆಂಪು ಭಾಷಾ ಭಾರತಿ ಪ್ರಾಧಿಕಾರವನ್ನು ಇಲಾಖೆಯ ಪರವಾಗಿ ಅಭಿನಂದಿಸುತ್ತೇನೆ. +ಪ್ರಕಟವಾದ ಎಲ್ಲ ಸಂಪುಟಗಳು ಜನಮನ್ನಣೆ ಗಳಿಸಿವೆ. +ಅವುಗಳನ್ನು ಮರುಮದ್ರಿಸಿ ಓದುಗರಿಗೆ ಒದಗಿಸಲು ನಮ್ಮ ಇಲಾಖೆಯು ಮುಂದಾಗಿದೆ ಮತ್ತು ಈ ಹೊಣೆಯನ್ನು ಕುವೆಂಪು ಭಾಷಾ ಭಾರತಿ ಪ್ರಾಧಿಕಾರಕ್ಕೆ ನೀಡಿದೆ. +ಪ್ರಾಧಿಕಾರವು ಈಗ ಈ ಸಂಪುಟಗಳನ್ನು ಓದಗರ ಮುಂದೆ ಇರಿಸಿದೆ. +ಇದಕ್ಕಾಗಿ ಸಂಬಂಧಿಸಿದ ಎಲ್ಲರನ್ನೂ ಇಲಾಖೆಯ ಪರವಾಗಿ ಅಭಿನಂದಿಸುತ್ತೇನೆ. +ರಾಷ್ಟ್ರಕವಿ ಶ್ರೀ ಕುವೆಂಪು ಅವರ ಹೆಸರಿನಲ್ಲಿ ಸ್ಥಾಪಿತವಾಗಿರುವ ಕುವೆಂಪು ಭಾಷಾ ಭಾರತಿ ಪ್ರಾಧಿಕಾರ,ಕುವೆಂಪು ಅವರ ಆಶಯದಂತೆ ಸಾಹಿತ್ಯ, ಸಂಸ್ಕೃತಿ ಮತ್ತು ಜ್ಞಾನ-ವಿಜ್ಞಾನ ಕ್ಷೇತ್ರಗಳಿಗೆ ಮಹತ್ವದ ಕೊಡುಗೆ ಯಾಗಬಲ್ಲಂಥ ಗ್ರಂಥಗಳನ್ನು ಹೊರ ತರುತ್ತಿರುವುದು ತುಂಬ ಮಹತ್ವದ ಸಂಗತಿಯೇ ಆಗಿದೆ. +ಇತರ ಯಾವ ಭಾಷೆಗಳಲ್ಲೂ ಇನ್ನೂ ಹೊರಬರದೇ ಇರುವ ವಿಲ್‌ ಡ್ಯೂರಾಂಟ್‌ ಅವರ "ನಾಗರಿಕತೆಯ ಕಥೆ', ಜೆ. ಡಿ. ಬರ್ನಾಲ್‌ ಅವರ“ಇತಿಹಾಸದಲ್ಲಿ ವಿಜ್ಞಾನ'ದಂಥ ಮಹತ್ವದ ಸಂಪುಟಗಳನ್ನೂ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಮಹತ್ವದ ರಚನೆಗಳನ್ನುಒಳಗೊಂಡ ಸಂಚಯಗಳನ್ನೂ ಹೊರತರುತ್ತಿರುವುದೂ, ನಾಡಿನ ಇತರ ಪ್ರತಿಷ್ಠಿತ ಸಂಸ್ಥೆಗಳೊಂದಿಗೆ ಸಂಬಂಧವನ್ನು ಏರ್ಪಡಿಸಿಕೊಂಡು ಮಹತ್ವದ ಕೃತಿಗಳನ್ನು ಬೆಳಕಿಗೆ ತರುತ್ತಿರುವುದೂ ಕರ್ನಾಟಕ ಸರ್ಕಾರಕ್ಕೆ ಮಾತ್ರವಲ್ಲದೆ,ಕನ್ನಡ ಜನತೆಗೆ ಹೆಮ್ಮೆಯನ್ನು ತರುವಂಥ ಸಂಗತಿಯಾಗಿರುತ್ತದೆ. +ಇದುವರೆಗೆ ಪ್ರಕಟವಾಗಿರುವ ಡಾ.ಬಿ.ಆರ್‌.ಅಂಬೇಡ್ಕರ್‌ ಅವರ ಬರೆಹ ಮತ್ತು ಭಾಷಣಗಳನ್ನು ಕನ್ನಡಕ್ಕೆ ಅನುವಾದಿಸುವ ಯೋಜನೆಯನ್ನು ಕೈಗೊಂಡು, ಅವುಗಳನ್ನು ಹೊರತರುತ್ತಿರುವುದು ಹಾಗೂ ಇದುವರೆಗೆ ಪ್ರಕಟವಾಗದಿರುವ ಅಂಬೇಡ್ಕರ್‌ ಅವರ ಚಿಂತನೆಗಳನ್ನೊಳಗೊಂಡ ಇತರ ಸಂಪುಟಗಳನ್ನು ಹೊರತರುವ ಕಾರ್ಯವನ್ನು ಹಮ್ಮಿಕೊಂಡಿರುವುದು ವಿಶೇಷವಾಗಿ ಸ್ತುತ್ಯರ್ಹವಾದ ಕಾರ್ಯವಾಗಿದೆ. +ಇಪ್ಪತ್ತೆರಡು ಸಂಪುಟಗಳಲ್ಲಿ ಹಲವು ಈಗಾಗಲೇ ಹೊರಬಂದಿದ್ದು ಕನ್ನಡ ಓದುಗರ ಮೆಚ್ಚುಗೆಗೆ ಪಾತ್ರವಾಗಿವೆ. +ಕರ್ನಾಟಕ ಸರ್ಕಾರವು ಈ ಸಂಪುಟಗಳನ್ನು ಮರು ಮುದ್ರಿಸುವ ಯೋಜನೆಗೆ ಅಗತ್ಯವಾದ ಅನುದಾನವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮೂಲಕ ಕುವೆಂಪು ಭಾಷಾ ಭಾರತಿ ಪ್ರಾಧಿಕಾರಕ್ಕೆ ಒದಗಿಸಿದೆ. +ಈಗ ಈ ಎಲ್ಲ ಸಂಪುಟಗಳು ಹೊಸ ಮೆರುಗಿನೊಂದಿಗೆ ಪ್ರಕಟಗೊಳ್ಳುತ್ತಿರುವುದು ಸಂತಸದ ಸಂಗತಿಯಾಗಿದೆ. +ಒಟ್ಟಿನಲ್ಲಿ ಸಾಹಿತ್ಯ-ಸಂಸ್ಕೃತಿ-ವಿಜ್ಞಾನ ತಂತ್ರಜ್ಞಾನಗಳ ಬೆಳವಣಿಗೆಯೊಂದಿಗೆ ಆದರ್ಶ ರೀತಿಯಲ್ಲಿ ಪ್ರಾಧಿಕಾರ ಹೆಜ್ಜೆ ಹಾಕುತ್ತಾ ಮುನ್ನಡೆಯಲೆಂದೂ, ಹೊಸ-ಹೊಸ ವಿಕ್ರಮಗಳನ್ನು ಸ್ಥಾಪಿಸಲೆಂದೂ ಹಾರೈಸುತ್ತೇನೆ. +ಕರ್ನಾಟಕ ಸರ್ಕಾರ ಕುವೆಂಪು ಭಾಷಾ ಭಾರತಿ ಪ್ರಾಧಿಕಾರವನ್ನು ಸ್ಥಾಪಿಸಿ ಸಾಹಿತ್ಯಿಕ-ಸಾಂಸ್ಕೃತಿಕ ಚಟುವಟಿಕೆಗಳಿಗೆ ಹೊಸ ಆಯಾಮಗಳನ್ನು ನೀಡಿದೆ. +ಕನ್ನಡದೊಡನೆ ಭಾರತೀಯ ಹಾಗೂ ವಿದೇಶೀಯ ಭಾಷೆಗಳ ನಡುವಣ ಸಂಬಂಧಗಳನ್ನು ಬೆಳೆಸಿಕೊಂಡು ಬರುವುದು. + ಆ ಭಾಷೆಗಳ ಶ್ರೇಷ್ಠ ಕೃತಿಗಳನ್ನು ಕನ್ನಡಕ್ಕೆ ತರುವುದರ ಮೂಲಕ ಕನ್ನಡ ಸಾಹಿತ್ಯವನ್ನು ಸಂವೃದ್ಧಿಗೊಳಿಸುವುದು; + ಕನ್ನಡ ಸಾಹಿತ್ಯದ ಶ್ರೇಷ್ಠ ಕೃತಿಗಳನ್ನು ಇತರ ಭಾಷೆಗಳಿಗೆ ಕೊಂಡೊಯ್ಯುವುದು; + ಮಾನವಿಕ, ವೈಜ್ಞಾನಿಕ ಮತ್ತು ತಾಂತ್ರಿಕ ಕ್ಷೇತ್ರಗಳಲ್ಲಿ ಕನ್ನಡದ ಬಳಕೆಗೆ ಪ್ರೋತ್ಸಾಹ ನೀಡುವಂಥ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು . + ಸೂಕ್ತ ಪ್ರಕಟಣೆಗಳನ್ನು ಹೊರತರುವುದು ಈ ಪ್ರಾಧಿಕಾರದ ಮುಖ್ಯ ಧ್ಯೇಯೋದ್ದೇಶವಾಗಿರುತ್ತದೆ. +ಇದಕ್ಕೆ ಪೂರಕವಾಗಿ ಮತ್ತು ಪೋಷಕವಾಗಿ ರಾಷ್ಟೀಯ ಪ್ರಾದೇಶಿಕ ವಿಜಾರಗೋಷ್ಠಿಗಳನ್ನು ಏರ್ಪಡಿಸುವುದು ಈ ಧ್ಯೇಯಗಳ ಅಂಗವೇ ಆಗಿದೆ. +ಇಂತಹ ಕಾರ್ಯಕ್ರಮಗಳನ್ನುಯೋಜಿಸುತ್ತಿರುವ ಹಾಗೂ ವಿಶ್ವವಿದ್ಯಾಲಯಗಳ ಮಾನ್ಯತೆಯನ್ನು ಪಡೆದುಕೊಂಡು ಈ ಶೈಕ್ಷಣಿಕ ಕಾರ್ಯಕ್ರಮಗಳನ್ನು ಮುಂದುವರಿಸಿಕೊಂಡು ಹೋಗುತ್ತಿರುವ ವಿಚಾರ ನನಗೆ ವೈಯಕ್ತಿಕವಾಗಿಯೂ ತುಂಬ ಸಂತೋಷವನ್ನುಂಟುಮಾಡಿದೆ. +ಈ ಕೆಲವೇ ವರ್ಷಗಳಲ್ಲಿ ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಹೊರತಂದಿರುವ ಪ್ರಕಟಣೆಗಳು ತುಂಬ ಮಹತ್ವದವೇ ಆಗಿವೆ. +ವಿಲ್‌ ಡ್ಕೂರಾಂಟ್‌ ಅವರ "ನಾಗರಿಕತೆಯ ಇತಿಹಾಸ', ಜೆ. ಡಿ. ಬರ್ನಾಲ್‌ ಅವರ `ವಿಜ್ಞಾನದಇತಿಹಾಸ' ಸಂಪುಟಗಳು ಯಾವುದೇ ಭಾಷೆಗೆ ಗೌರವ ಪ್ರಾಯವಾದ ಕೃತಿಗಳೇ ಆಗುತ್ತವೆ. +ಅಂಥ ಸಾಹಸವನ್ನುಭಾರತೀಯ ಭಾಷೆಗಳಲ್ಲಿ ಮೊದಲ ಬಾರಿಗೆ ಆಗು ಮಾಡುತ್ತಿರುವುದು ವಿಶೇಷವಾಗಿ ಅಭಿನಂದನೀಯವಾದ ಕಾರ್ಯವಾಗಿದೆ. +ಭಾರತರತ್ನ ಡಾ.ಬಿ.ಆರ್‌.ಅಂಬೇಡ್ಕರ್‌ ಅವರ ಅನುವಾದಿತ ಕೃತಿಗಳ ಪರಿಷ್ಕರಣ ಯೋಜನೆ ಮತ್ತು ಅವರ ಇತರ ಸಂಪುಟಗಳ ಹೊಸ ಅನುವಾದದ ಪ್ರಕಟಣೆ ಯೋಜನೆ, ಕೃಷ್ಣಾ ಐತೀರ್ಪಿನ ಕನ್ನಡ ಅನುವಾದ ಯೋಜನೆ ಮುಂತಾದವು - ಹೊಸ ವಿಕ್ರಮವನ್ನು ಸ್ಥಾಪಿಸಲಿವೆ. +ಪ್ರಾಧಿಕಾರವು ಪ್ರಕಟಿಸಿದ್ದ “ಡಾ.ಅಂಬೇಡ್ಕರ್‌ ಅವರ ಬರೆಹಗಳು ಮತ್ತು ಭಾಷಣಗಳು" ಮಾಲಿಕೆಯ ಹಲವು ಸಂಪುಟಗಳು ಈಗ ಮರಳಿ ಮುದ್ರಿತವಾಗುತ್ತಿವೆ. +ಈ ಸಂಪುಟಗಳು ಓದುಗರಿಗೆ ಸದಾಕಾಲವು ದೊರೆಯುತ್ತಿರಬೇಕೆಂಬುದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಗುರಿಯಾಗಿದೆ. +ಅದಕ್ಕಾಗಿ ಅಗತ್ಯವಾದ ಅನುದಾನವನ್ನು ಇಲಾಖೆಯು ಪ್ರಾಧಿಕಾರಕ್ಕೆ ನೀಡಿದೆ. +ಈ ಸಂಪುಟಗಳನ್ನು ಸಿದ್ಧಪಡಿಸಲು ನೆರವಾದ ಸಲಹಾ ಸಮಿತಿಯ ಸದಸ್ಯರಿಗೆ, ಅನುವಾದಕರಿಗೆ ಮತ್ತು ಪ್ರಾಧಿಕಾರಕ್ಕೆ ನನ್ನ ಅಭಿನಂದನೆಗಳು ಸಲ್ಲುತ್ತವೆ. +ಮುಂದೆಯೂ ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಇಂಥ ವಿಶಿಷ್ಟ ಕಾರ್ಯಕ್ರಮಗಳನ್ನು, ಮಹತ್ವದ ಪ್ರಕಟಣೆಗಳನ್ನು ಹೊರತರುವ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಿಕೊಂಡು ಬರಲಿ, ಕನ್ನಡ ನಾಡಿನ ಮೆಚ್ಚಿನ ಸಾಹಿತ್ಯಕ-ಸಾಂಸ್ಕೃತಿಕ ಸಂಸ್ಥೆಯಾಗಿ ಬೆಳೆಯಲಿ ಎಂದು ಹಾರೈಸುತ್ತೇನೆ. +ಪರಿಷ್ಕತ ಮುದ್ರಣಕ್ಕೆ ಮುನ್ನುಡಿ ಡಾ.ಬಾಬಾ ಸಾಹೇಬ್‌ ಅಂಬೇಡ್ಕರ್‌ (೧೮೯೧ ರಿಂದ ೧೯೫೬) ತಮ್ಮ ಕಾಲಮಾನವನ್ನು ಮೆಟ್ಟಿನಿಂತು ಗೋಪುರೋಪಮವಾಗಿ ಬೆಳೆದುನಿಂತ ಮಹಾ ಮಾನವರಲ್ಲಿ ಒಬ್ಬರು. +ರಾಷ್ಟೀಯತಾವಾದಿಯಾಗಿ, ಕಾನೂನು ತಜ್ಞರಾಗಿ,ರಾಜಕೀಯ ನೇತಾರರಾಗಿ, ಕ್ರಿಯಾಶೀಲ ಸಾಮಾಜಿಕ ಕಾರ್ಯಕರ್ತರಾಗಿ, ಶ್ರೇಷ್ಠ ಇತಿಹಾಸಕಾರರಾಗಿ,ಮಹಾದಾರ್ಶನಿಕರಾಗಿ, ಅಪ್ರತಿಮ ಚಿಂತಕರಾಗಿ, ಮಾನವ ಶಾಸ್ತ್ರಜ್ಞರಾಗಿ, ಖ್ಯಾತ ಅರ್ಥಶಾಸ್ತ್ರಜ್ಯರಾಗಿ, ಸಮೃದ್ಧ ಬರಹಗಾರರಾಗಿ, ಕ್ರಾಂತಿಕಾರಿಯಾಗಿ, ಅಸಾಮಾನ್ಯ ವಾಕ್ಟಟುವಾಗಿ, ಬೌದ್ಧ ಧರ್ಮದ ಪುನರುಜ್ಜೀವಕರಾಗಿ, ಭಾರತೀಯ ಸಂವಿಧಾನದ ಪ್ರಮುಖ ಶಿಲ್ಪಿಯಾಗಿ ಅವರು ಮಾಡಿರುವ ಮಹತ್ತರ ಸಾಧನೆಗಳನ್ನು ಗಮನಿಸಿದರೆ, ಒಬ್ಬ ವ್ಯಕ್ತಿ ಒಂದು ಜೀವಮಾನದಲ್ಲಿ ಇಷ್ಟೆಲ್ಲ ಸಾಧನೆಗಳನ್ನು ಮಾಡಲು ಸಾಧ್ಯವೇ ಎಂದು ಬೆರಗಾಗಿ ನಿಲ್ಲುವಂತೆ ಆಗುತ್ತದೆ. +ಆಧುನಿಕ ಅರ್ಥದಲ್ಲಿ ಅವರನ್ನು "ಪವಾಡ ಪುರುಷ"ರೆಂದೇ ಹೆಸರಿಸಬೇಕಾಗುತ್ತದೆ. +ಸಾಮಾಜಿಕ ಭೇದಭಾವಕ್ಕೊಳಗಾಗಿ ನರಳುತ್ತಿದ್ದ ಬಡ ಕುಟುಂಬದಲ್ಲಿ ಹುಟ್ಟಿದ ಅವರು ತಮ್ಮ ಇಡೀ ಜೀವಮಾನವನ್ನು ಈ ಸಾಮಾಜಿಕ ಭೇದಭಾವಕ್ಕೆ ಸಮಾಜದ ಎಲ್ಲ ಪಿಡುಗುಗಳಿಗೂ ಕಾರಣವಾಗಿರುವ ಜಾತಿ ಪದ್ಧತಿಯ ವಿರುದ್ಧವಾಗಿ ಹೋರಾಡುವುದಕ್ಕೆ ಮೀಸಲಾಗಿ ಇಡಬೇಕಾಯಿತು. +ತಮ್ಮ ಈ ಅವಿರತ ಹೋರಾಟದಿಂದ,ಈ ಹಿಂದಿನ ಸಮಾಜ ಸುಧಾರಕರು ಯಾರೂ ಸಾಧಿಸದಿದ್ದಂಥ ಮಹಾಕ್ರಾಂತಿಯನ್ನು ಎಸಗಿ ಹೊಸ ಇತಿಹಾಸವನ್ನೇ ಸೃಷ್ಟಿಸಿದರು. +ಸಾಮಾಜಿಕ-ಆರ್ಥಿಕ ಸಂಕಷ್ಟಗಳನ್ನು ಮೀರಿ ನಿಂತು ಅನೇಕ ಪ್ರಥಮಗಳನ್ನೂ ಅವರು ಸಾಧಿಸಿದರು. +ಕಾಲೇಜು ಶಿಕ್ಷಣವನ್ನು ಪಡೆದ ದಲಿತರಲ್ಲಿಯೂ ಮೊದಲಿಗರಾಗಿದ್ದವರಲ್ಲಿ ಅವರು ಪ್ರಮುಖರಾದರು. +ನ್ಯಾಯಶಾಸ್ತ್ರ ಅರ್ಥಶಾಸ್ತ್ರ ರಾಜ್ಯಶಾಸ್ತ್ರ ಸಂಬಂಧವಾದ ತಮ್ಮ ಅಧ್ಯಯನ ಮತ್ತು ಸಂಶೋಧನೆಗಳಿಂದಾಗಿ ಕೊಲಂಬಿಯಾದಂಥ ವಿಶ್ವವಿದ್ಯಾನಿಲಯದಿಂದ, ಲಂಡನ್ನಿನ ಅರ್ಥಶಾಸ್ತ್ರ ಶಾಲೆಯಿಂದ ಡಾಕ್ಟೊರೇಟ್‌ ಪದವಿಗಳನ್ನು ಪಡೆದ ಮಹಾಮೇಧಾವಿಗಳಲ್ಲೂ ಅವರೊಬ್ಬರಾದರು. +ಹೀಗೆ ಶ್ರೇಷ್ಠ ವಿದ್ವಾಂಸರಾಗಿ ಭಾರತಕ್ಕೆ ಹಿಂದಿರುಗಿ ಬಂದ ಅವರು ಸಮಾಜದ ಕೆಳವರ್ಗಗಳ ಸಾಮಾಜಿಕ ಸ್ವಾತಂತ್ರ್ಯಕ್ಕಾಗಿ, ರಾಜಕೀಯ ಹಕ್ಕುಗಳಿಗಾಗಿ ಅಹರ್ನಿಶಿ ದುಡಿದರು. +ಬರೆಹಗಳ-ಭಾಷಣಗಳ ಮೂಲಕ, ವೈಚಾರಿಕ ಚರ್ಚೆ-ಸಂವಾದಗಳ ಮೂಲಕ ಸಾಮಾಜಿಕ-ರಾಜಕೀಯ ಜಾಗೃತಿಯನ್ನೇ ಮೂಡಿಸಿದರು. +"ಆಧುನಿಕ ಬೋಧಿಸತ್ವ"ರೆಂಬ ಕೀರ್ತಿಗೂ ಪಾತ್ರರಾದರು. +ಸಮಾಜದ ಎಲ್ಲ ವರ್ಗಗಳಲ್ಲಿ, ವಿವಿಧ ಧರ್ಮಗಳಲ್ಲಿ ಪ್ರತ್ಯಕ್ಷವಾಗಿ, ಪ್ರಚ್ಛನವಾಗಿ ಬೇರು ಬಿಟ್ಟಿದ್ದ ಸಾಮಾಜಿಕ ಕೆಡುಕುಗಳ ವಿರುದ್ಧ ದನಿಯೆತ್ತಿದ ಹಿರಿಮೆಯೂ ಅವರದಾಗಿದೆ. +ಅಂತಿಮವಾಗಿ ದೇಶ ವಿಭಜನೆಯ ಅನಿವಾರ್ಯತೆಯನ್ನು ಒಪ್ಪಿದರಾದರೂ,ಅದರ ಭಯಾನಕ ಪರಿಣಾಮಗಳ ವಿರುದ್ಧ ಎಚ್ಚರಿಕೆಯ ಗಂಟೆಯನ್ನೂ ಅವರು ಮೊದಲೇ ಮೊಳಗಿಸಿದ್ದರೆಂಬುದು ಗಮನಾರ್ಹವಾದ ಸಂಗತಿ. +ಸಾಳುಂಕೆ ಅವರಿಂದ ಹಿಡಿದು ಕು.ಮಾಯಾವತಿಯವರ ವರೆಗೆ ಅನೇಕ ಸಮಾಜ ಚಿಂತಕರು ಮತ್ತು ರಾಜಕೀಯ ನೇತಾರರ ಮೇಲೆ ಅಚ್ಚಳಿಯದ ಪ್ರಭಾವವನ್ನು ಬೀರಿದ್ದಾರೆ. +ಸಾಧನೆಗಳನ್ನು ಕುರಿತಂತೆ ವಿವಿಧ ಭಾಷೆಗಳಲ್ಲಿನ ಹಿರಿ-ಕಿರಿಯ ಲೇಖಕರುಗಳು ಹತ್ತಾರು ಜೀವನ-ಚರಿತ್ರೆಗಳನ್ನು ರಚಿಸಿರುವುದು ಆಶ್ಚರ್ಯದ ಸಂಗತಿಯೇನೂ ಅಲ್ಲ. +ದೆಹಲಿಯೂ ಸೇರಿದಂತೆ ನಾಡಿನ ಅನೇಕ ಕಡೆಗಳಲ್ಲಿ ಅವರ ಸ್ಮಾರಕಗಳು ನಿರ್ಮಾಣಗೊಂಡಿವೆ. +ಹೈದರಾಬಾದಿನಲ್ಲಿ "ಡಾ.ಬಾಬಾ ಸಾಹೇಬ್‌ ಅಂಬೇಡ್ಕರ್‌ ಮುಕ್ತ ವಿಶ್ವವಿದ್ಯಾನಿಲಯ',ಮುಜಪ್ಪರ್‌ಪುರದಲ್ಲಿನ “ಬಿ. ಆರ್‌. ಅಂಬೇಡ್ಕರ್‌ ಬಿಹಾರ್‌ ವಿಶ್ವವಿದ್ಯಾನಿಲಯ'ಗಳು ಸ್ಥಾಪನೆಗೊಂಡಿರುವುದಲ್ಲದೆ,ನಾಗಪುರದಲ್ಲಿನ ಅಂತರ-ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೂ ಅಂಬೇಡ್ಕರ್‌ ಅವರ ಹೆಸರನ್ನಿಡಲಾಗಿದೆ. +ಸಂಸತ್‌ಭವನದಲ್ಲಿಯೂ ಅವರ ಭಾವಚಿತ್ರವನ್ನು ಅನಾವರಣಗೊಳಿಸಲಾಗಿದೆ. +ಅವರ ಹುಟ್ಟುಹಬ್ಬವನ್ನು ಏಪ್ರಿಲ್‌ ೧೪ ಮತ್ತು ಪರಿನಿರ್ವಾಣ ದಿನವನ್ನು ಡಿಸೆಂಬರ್‌ ೬ ನಾಡಿನಾದ್ಯಂತ ಆಚರಿಸಲಾಗುತ್ತಿದೆ. +ಅವರ ಬಹುಮುಖೀ ಸಾಧನೆಯನ್ನು ಗುರುತಿಸಿ, ಮರಣೋತ್ತರವಾಗಿ ೧೯೯ಂರಲ್ಲಿ ಅವರಿಗೆ "ಭಾರತ ರತ್ನ' ಪ್ರಶಸ್ತಿಯನ್ನೂ ನೀಡಲಾಗಿದೆ. +ಅಂಬೇಡ್ಕರ್‌ ಅವರು ತಮ್ಮ ಅನುಯಾಯಿಗಳಿಗೆ "ಶಿಕ್ಷಣ ,ಸಂಘಟನೆ ,ಹೋರಾಟ "ಎಂಬ ತತ್ವಗಳನ್ನು ನಾಡಿಗೆ ನೀಡಿದ್ದಾರೆ. +ಮಹಾಮಾನವರೇ ಆಗಿದ್ದ ಅಂಬೇಡ್ಕರ್‌ ಸಮೃದ್ಧವಾಗಿ ಬರೆವಣಿಗೆಯನ್ನೂ ಮಾಡಿದ್ದಾರೆ-ಸಂಸತ್ತಿನ ಒಳಗೆ,ಹೊರಗೆ ಹಾಗೂ ಪತ್ರಿಕೋದ್ಯಮದ ಮೂಲಕ. +ಇವೆಲ್ಲ ಐತಿಹಾಸಿಕ ಪ್ರಾಮುಖ್ಯದ ಬರೆವಣಿಗೆಗಳೇ ಆಗಿವೆ. +ಇವುಗಳ ಐತಿಹಾಸಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಮಹತ್ವವನ್ನು ಗುರುತಿಸಿದ ಮುಂಬಯಿ ಸರ್ಕಾರ ಡಾ.ಅಂಬೇಡ್ಕರ್‌ ಅವರ ಸಮಗ್ರ ಬರೆಹಗಳು ಮತ್ತು ಭಾಷಣಗಳನ್ನು ಹದಿನಾಲ್ಕು ಸಂಪುಟಗಳಲ್ಲಿ ಹೊರತಂದಿತು. +ಅನಂತರದಲ್ಲಿ ಹದಿನೈದನೆಯ ಇನ್ನೊಂದು ಸಂಪುಟವನ್ನೂ ಹೊರತರಲಾಗಿದೆ. +ಈ ಸಂಪುಟಗಳನ್ನು ಕನ್ನಡದಲ್ಲಿಯೂ ಹೊರತರಬೇಕೆಂದು, ಆ ಮೂಲಕ ಡಾ.ಅಂಬೇಡ್ಕರ್‌ ಅವರ ವಿಚಾರ ಧಾರೆಯನ್ನು ಕನ್ನಡಿಗರಿಗೂ ಅವರದೇ ಭಾಷೆಯಲ್ಲಿ ಮುಟ್ಟಿಸಬೇಕೆಂದು ಸಂಕಲ್ಪಿಸಿದ ಕರ್ನಾಟಕ ಸರ್ಕಾರ, ಕರ್ನಾಟಕ ವಿಶ್ವ ವಿದ್ಯಾನಿಲಯದ ರಾಜ್ಯಶಾಸ್ತ್ರ ಪ್ರಾಧ್ಯಾಪಕರಾಗಿದ್ದ ಡಾ.ಎ.ಎಂ.ರಾಜಶೇಖರಯ್ಯನವರ ಅಧ್ಯಕ್ಷತೆಯಲ್ಲಿ ಅನುವಾದ ಸಂಪಾದನ ಸಮಿತಿಯೊಂದನ್ನುನೇಮಿಸಿ, ಕನ್ನಡ ಆವೃತ್ತಿಯನ್ನು ಹೊರತಂದಿತು. + ಡಾ.ಅಂಬೇಡ್ಕರ್‌ ಅವರ ವಿಚಾರ ಧಾರೆಯನ್ನು ಕನ್ನಡಕ್ಕೆ ಅಳವಡಿಸುವ ಮಹಾಸಾಹಸದ ಕಾರ್ಯವನ್ನು ಆ ಸಮಿತಿ ನಿರ್ವಹಿಸಿತು. +ನಾಡಿನ ಹಲವಾರು ಗಣ್ಯ ವಿದ್ವಾಂಸರು ಆ ಮಹಾಕಾರ್ಯದಲ್ಲಿ ಸಹಕರಿಸಿದರು. +ಅಂಬೇಡ್ಕರ್‌ ಅವರ ಇಂಗ್ಲಿಷ್‌ ಅತ್ಯಂತ ವಿದ್ವತ್‌ಪೂರ್ಣವೂ, ವಿಶಿಷ್ಟವೂ ಆಗಿದ್ದು, ಅನೇಕ ಬಗೆಯ ಸವಾಲುಗಳನ್ನು ಒಡ್ಡುವಂಥದಾಗಿದ್ದುದರಿಂದ, ಕನ್ನಡ ಅನುವಾದದಲ್ಲಿ ಕೆಲವೊಂದುಅರೆಕೊರೆಗಳು ಉಳಿದುಕೊಂಡು ಬಿಟ್ಟುದು ಸಹಜವೇ ಆಗಿತ್ತು. +ತಜ್ಞ ವಿದ್ವಾಂಸರು ಇಂಥ ಅರೆಕೊರೆಗಳತ್ತ ಬೆಟ್ಟುಮಾಡಿ ತೋರಿಸಿದ್ದೂ ಉಂಟು. +ಈ ಆವೃತ್ತಿಯ ಪ್ರತಿಗಳೂ ಮುಗಿದು ಹೋಗಿ, ಅಂಬೇಡ್ಕರ್‌ ಅವರ ಕೃತಿಗಳಿಗೆ ಇದ್ದ ಬೇಡಿಕೆಯನ್ನು ಗಮನಿಸಿ, ಇದರ ಪರಿಷ್ಕೃತ ಆವೃತ್ತಿಯೊಂದನ್ನು ಹೊರತರುವ ಯೋಜನೆಯನ್ನು ಕರ್ನಾಟಕ ಸರ್ಕಾರ ಹಮ್ಮಿಕೊಂಡಿತು. +ಈ ಹೊತ್ತಿಗೆ "ಕುವೆಂಪು ಭಾಷಾ ಭಾರತಿ'ಯ ಅಂಗವಾಗಿ ಕರ್ನಾಟಕ ಅನುವಾದ ಸಾಹಿತ್ಯ ಅಕಾಡೆಮಿ ಅಸ್ತಿತ್ವಕ್ಕೆ ಬಂದಿದ್ದುದರಿಂದ ಈ ಹೊಣೆಯನ್ನು ಸದರಿ ಅಕಾಡೆಮಿಗೆ ವಹಿಸಬೇಕೆಂದು ತೀರ್ಮಾನಿಸಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಈ ಸಂಬಂಧವಾಗಿ ಮಂಜೂರು ಮಾಡಲಾಗಿದ್ದ ೯೫ ಲಕ್ಷರೂಪಾಯಿಗಳ ಸಹಾಯ ಧನವನ್ನೂ, ಕಾರ್ಯ ನಿರ್ವಹಣೆಯ ಹೊಣೆಯನ್ನೂ ಅನುವಾದ ಸಾಹಿತ್ಯ ಅಕಾಡೆಮಿಗೆ ವರ್ಗಾಯಿಸಲಾಯಿತು. +ಈ ಸಂಬಂಧವಾಗಿ ಅನುವಾದ ಸಂಪಾದನ ಸಮಿತಿಯನ್ನು ನೇಮಿಸಲಾಯಿತು. +ಅನುವಾದ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿದ್ದ ಡಾ.ಪ್ರಧಾನ್‌ ಗುರುದತ್ತ ಅವರ ಅಧ್ಯಕ್ಷತೆಯಲ್ಲಿ ರಚಿಸಲಾದ ಈ ಸಮಿತಿಯಲ್ಲಿ ಈ ಕೆಳಕಂಡ ಮಹನೀಯರನ್ನು ಸದಸ್ಯರನ್ನಾಗಿ ನಾಮಕರಣ ಮಾಡಲಾಯಿತು. + ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಂಬೇಡ್ಕರ್‌ ಅವರ ಬರೆಹಗಳು ಮತ್ತು ಭಾಷಣಗಳ ಮೂಲಪ್ರತಿಗಳು ಹಾಗೂ ಅನುವಾದದ ಎಲ್ಲ ಸಂಪುಟಗಳು ನಮ್ಮಲ್ಲಿಯಾಗಲೀ, ಹೊರಗಾಗಲೀ ಲಭ್ಯವಿಲ್ಲದೆ ಇದ್ದುದರಿಂದ, ಅನಿವಾರ್ಯವಾದ ವಿಳಂಬಕ್ಕೆ ಎಡೆದೊರೆಯಿತು. +ಕೊನೆಗೆ ಸಂಪಾದನ ಸಮಿತಿಯ ಮಾನ್ಶ್ಯ ಸದಸ್ಯರುಗಳು ತಮ್ಮ ಮಿತ್ರರುಗಳ ಖಾಸಗಿ ಸಂಗ್ರಹಗಳಿಂದ ಈ ಸಂಪುಟಗಳನ್ನು ಒದಗಿಸಿಕೊಡುವ ಕೃಪೆಯನ್ನು ತೋರಿದರು. +ಅವರ ಈ ಕೃಪೆಗಾಗಿ ಸಮಿತಿ ಕೃತಜ್ಞವಾಗಿದೆ. +ಮುಂದೆ ಸಂಪುಟದ ಪರಿಷ್ಕರಣ ಕಾರ್ಯದ ಸ್ವರೂಪದ ಬಗ್ಗೆಯೂ ವ್ಯಾಪಕವಾದ ಚರ್ಚೆಯನ್ನು ನಡೆಸಲಾಯಿತು. +ಖ್ಯಾತ ವಿದ್ವಾಂಸರುಗಳೇ ಈ ಅನುವಾದ ಕಾರ್ಯದಲ್ಲಿ ಭಾಗಿಯಾಗಿರುವುದನ್ನು ಗಮನಿಸಿ,ಎದ್ದು ಕಾಣುವಂಥ ಲೋಪ ದೋಷಗಳು ಇರುವಲ್ಲಿ ಮಾತ್ರವೇ ಅವುಗಳನ್ನು ಸರಿಪಡಿಸುವ, ಓರೆಕೋರೆಗಳನ್ನು ತಿದ್ದುವ ಕೆಲಸ ಮಾಡಬೇಕೆಂದೂ ನಿರ್ಧರಿಸಲಾಯಿತು . +ಈ ಕಾರ್ಯಕ್ಕೆ ಹಲವು ವಿದ್ವಾಂಸರ ಸೇವೆಯನ್ನು ಬಳಸಿಕೊಳ್ಳಬಹುದೆಂದೂ ನಿರ್ಧರಿಸಲಾಯಿತು. +೨೨-೧೨-೨ಂಂ೮ರ ನಡೆವಳಿಯಲ್ಲಿ ಸೂಚಿಸಲಾಗಿದ್ದ ವಿದ್ವಾಂಸರುಗಳು ಕಾರಣಾಂತರಗಳಿಂದ ಪರಿಷ್ಕರಣ ಕಾರ್ಯದಲ್ಲಿ ಭಾಗವಹಿಸಲು ಸಾಧ್ಯವಾಗುವುದಿಲ್ಲವೆಂದು ತಿಳಿಸಿದ ಹಿನ್ನೆಲೆಯಲ್ಲಿ, ಇನ್ನೊಂದು ಪಟ್ಟಿಯನ್ನು ತಯಾರಿಸಿ, ಅವರುಗಳ ಸೇವೆಯನ್ನು ಬಳಸಿಕೊಳ್ಳಬಹುದೆಂದು ಸೂಚಿಸಲಾಯಿತು. +ವೇಣುಗೋಪಾಲ್‌, ಪ್ರಾಚಾರ್ಯರು, ಮಹಾರಾಣಿ ವಿಜ್ಞಾನ ಕಾಲೇಜು, ಮೈಸೂರು. + ಶ್ರೀ ಕೇಶವ ಮಳಗಿ, ಬೆಂಗಳೂರು, ಶ್ರೀ ಜೆ. ಎನ್‌. ಶಾಮರಾವ್‌, ಬೆಂಗಳೂರು ಈ ವಿದ್ವಾಂಸರುಗಳಲ್ಲಿ ಕೆಲವರ ಸೇವೆಯನ್ನು ಬಳಸಿಕೊಂಡು ಮೊದಲ ಸಂಪುಟವನ್ನು ಸಾಧ್ಯವಿದ್ದಷ್ಟು ಮಟ್ಟಿಗೆ ಪರಿಷ್ಕರಿಸಲಾಗಿದೆ. +ಅವರ ಈ ಸಹಾಯ-ಸಹಕಾರಕ್ಕಾಗಿ ನಾವು ಕೃತಜ್ಞರಾಗಿದ್ದೇವೆ. +ಹೀಗೆ ಪರಿಷ್ಕೃತವಾದ ಪಠ್ಯದ ಪ್ರಕಟಣೆಗೆ ಅನುವಾದ ಸಂಪಾದನ ಸಮಿತಿಯ ಒಪ್ಪಿಗೆಯನ್ನೂ ಪಡೆದುಕೊಳ್ಳಲಾಗಿದೆ. +ಅಂತೆಯೇ, ಇದುವರೆಗೆ ಅನುವಾದವಾಗದೆ ಇದ್ದ ೧೫ನೆಯ ಸಂಪುಟದ ಅನುವಾದ ಕಾರ್ಯವನ್ನು ಕೈಗೆತ್ತಿಕೊಂಡಿದ್ದು ಅದು.ಮುಕ್ತಾಯದ ಹಂತಕ್ಕೆ ಬಂದಿದೆ. +ಅದನ್ನು ಹಾಗೂ ೨ ರಿಂದ ೭ ರವರೆಗಿನ ಸಂಪುಟಗಳನ್ನು ಇದೇ ಡಿಸೆಂಬರ್‌ ೬ರ ಹೊತ್ತಿಗೆ ಹೊರತರಬೇಕೆಂದು ನಿರ್ಧರಿಸಲಾಗಿದೆ. +ಹೊಸ ಆಕಾರದಲ್ಲಿ ಸುಂದರವಾಗಿ ಹೊರತರಬೇಕೆಂಬ ಸಮಿತಿಯ ನಿರ್ಧಾರದ ಮೇರೆಗೆ ಈ ಸಂಪುಟವನ್ನು ಹೊರತರಲಾಗುತ್ತಿದೆ. +ಕನ್ನಡ ಓದುಗರಿಗೆ ಈ ಸಂಪುಟವು ಇಷ್ಟವಾಗುತ್ತದೆಂದು ನಂಬಿದ್ದೇನೆ. +ಇದಕ್ಕೆ ನೆರವಾಗಿರುವ ಹಾಗೂ ಸಲಹೆ-ಸೂಚನೆಗಳನ್ನು ನೀಡಿರುವ ಅನುವಾದ ಸಂಪಾದನ ಸಮಿತಿಯ ಸದಸ್ಯರಿಗೆ, ವಿಶೇಷವಾಗಿ ಕನ್ನಡ ಮತ್ತು ಸಂಸ್ಕೃತಿ ಹಾಗೂ ವಾರ್ತಾ ಇಲಾಖೆಯ ಮಾನ್ಯ ಕಾರ್ಯದರ್ಶಿಗಳಿಗೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರಿಗೆ ನಾವು ಕೃತಜ್ಞರಾಗಿದ್ದೇವೆ. +ಕರಡು ಪರಿಶೀಲನೆಯ ಕಾರ್ಯದಲ್ಲಿ ನೆರವಾಗಿರುವ ಶ್ರೀ ಸಿ.ಕಾರ್ತಿಕ್‌ ಅವರಿಗೆ ಹಾಗೂ ಸುಂದರವಾದ ಮುಖಪುಟವನ್ನು ರಚಿಸಿಕೊಟ್ಟಿರುವ ಶ್ರೀ ವಿಶ್ವನಾಥ್‌ ಶೆಟ್ಟಿಗಾರ್‌ ಅವರಿಗೆ ನಮ್ಮ ವಂದನೆಗಳು ಸಲ್ಲುತ್ತವೆ. +ಪ್ರಾಧಿಕಾರದ ಸ್ವರೂಪವನ್ನು ನೀಡಲಾಗಿರುವ ಕುವೆಂಪು ಭಾಷಾ ಭಾರತಿಯಲ್ಲಿ ಅನುವಾದ ಸಾಹಿತ್ಯ ಅಕಾಡೆಮಿಯನ್ನು ವಿಲೀನಗೊಳಿಸಲಾಗಿರುವುದರಿಂದ, ಈ ಸಂಪುಟ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮತ್ತು ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಸಂಯುಕ್ತ ಪ್ರಕಟಣೆಯಾಗಿ ಹೊರಬರುತ್ತಿದೆ. +ಕುವೆಂಪು ಭಾಷಾ ಭಾರತಿಯ ಉದ್ಭಾಟನೆ ಸಂದರ್ಭದಲ್ಲಿ, ಅದರ ಮೊದಲ ಪ್ರಕಟಣೆಗಳಲ್ಲಿ ಒಂದಾಗಿ ಈ ಸಂಪುಟ ಹೊರಬರುತ್ತಿರುವುದುಹಾಗೂ ಕನ್ನಡ ನಾಡು-ನುಡಿಗಳ ಸರ್ವತೋಮುಖ ಪ್ರತಿಗೆ ಕಟಿಬದ್ಧರಾಗಿರುವ, ಕರ್ನಾಟಕ ಸಂಸ್ಕೃತಿಯ ಪ್ರತೀಕವೇ ಆಗಿರುವ ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬಿ. ಎಸ್‌. ಯಡಿಯೂರಪ್ಪನವರು ಇದನ್ನು ಬಿಡುಗಡೆಮಾಡುತ್ತಿರುವುದು ವಿಶೇಷ ಸಂತೋಷದ ಸಂಗತಿಯಾಗಿದೆ. +ಅವರಿಗೆ ನಮ್ಮ ಹೃತ್ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸಲು ಬಯಸುತ್ತೇವೆ. +ಪ್ರಾಧಿಕಾರದ ಕೆಲಸ-ಕಾರ್ಯಗಳಲ್ಲಿ ಹಾಗೂ ಪ್ರಕಟಣೆಯ ವಿಚಾರದಲ್ಲಿ ಹೃತ್ಪೂರ್ವಕವಾಗಿ ತಮ್ಮನ್ನು ತೊಡಗಿಸಿಕೊಂಡಿರುವ ಪ್ರಾಧಿಕಾರದ ರಿಜಿಸ್ಟಾರ್‌ ಖಿ.ನಾರಾಯಣಸ್ವಾಮಿ ಮತ್ತು ಇತರ ಸಿಬ್ಬಂದಿ ವರ್ಗದವರಿಗೂ ಹಾಗೂ ಸುಂದರವಾಗಿ ಮುದ್ರಿಸುವಲ್ಲಿ ಸಹಕರಿಸಿರುವ ಮೆ।ಮಯೂರ ಪ್ರಿಂಟ್‌ ಆಡ್ಸ್‌ನಶ್ರೀ ಬಿ.ಎಲ್‌.ಶ್ರೀನಿವಾಸ ಮತ್ತು ಅವರ ಸಿಬ್ಬಂದಿ ವರ್ಗದವರಿಗೆ- ವಿಶೇಷವಾಗಿ, ಈ ಪ್ರತಿಷ್ಠಿತ ಪ್ರಕಟಣೆಯ ವಿಷಯದಲ್ಲಿ ತೀವ್ರವಾದ ಆಸಕ್ತಿ ವಹಿಸಿ, ಅಂದ-ಚೆಂದ ಹಾಗೂ ನಿರ್ದುಷ್ಟತೆಗಳನ್ನು ಹೆಚ್ಚಿಸುವುದಕ್ಕೆ ಕಾರಣರಾಗಿರುವ ಶ್ರೀ ಎನ್‌.ವಿ.ವೇಣುಕುಮಾರ್‌ ಮತ್ತು ಶ್ರೀಮತಿ ಪದ್ಮ ವೇಣುಕುಮಾರ್‌ ಅವರಿಗೆ - ನಮ್ಮ ವಂದನೆಗಳು. +ಪ್ರಧಾನ್‌ ಗುರುದತ್ತಅಧ್ಯಕ್ಷಸಂಪಾದನ ಸಮಿತಿ ಎರಡನೇ ಮುದ್ರಣಕ್ಕೆ ಮುನ್ನುಡಿ“ಡಾ.ಬಾಬಾ ಸಾಹೇಬ್‌ ಅಂಬೇಡ್ಕರ್‌ ಅವರ ಸಮಗ್ರ ಬರೆಹಗಳು ಮತ್ತು ಭಾಷಣಗಳು" ಮಾಲೆಯ ಅಂಗವಾಗಿ ಹೊಸ ಸ್ವರೂಪದಲ್ಲಿ ಹೊರತರಲಾದ ಸಂಪುಟ-೧ರ ಪರಿಷ್ಕೃತ ಆವೃತ್ತಿ ಓದುಗರ ಮೆಚ್ಚುಗೆಗೆ ಪಾತ್ರವಾಗಿದ್ದು. +ಕೆಲವೇ ತಿಂಗಳುಗಳ ಅವಧಿಯಲ್ಲಿ ಅದರ ೩.ಂಂಂ ಪ್ರತಿಗಳೂ ಮಾರಾಟವಾಗಿ ಬಿಟ್ಟದ್ದು ಸಂಪಾದನ ಸಮಿತಿಗೆ ತುಂಬ ಸಂತೋಷವನ್ನು ತಂದಿದೆ. +ಹೀಗಾಗಿ, ಆ ಸಂಪುಟವನ್ನು ಮರು-ಮುದಿಸಲಾಗಿದೆ. +ಇದೇ ರೀತಿಯಲ್ಲಿ ಮತ್ತು ಸ್ಟರೂಪದಲ್ಲಿ ಉಳಿದ ಸಂಪುಟಗಳನ್ನು ಹೊರತರಲು ಕ್ರಮಕೈಗೊಂಡಿದ್ದು,ಸದ್ಯದಲ್ಲಿಯೇ ೨ (ಎರಡು ಭಾಗಗಳಲ್ಲಿ), ೩ ಮತ್ತು ೪ನೆಯ ಸಂಪುಟಗಳು ಹೊರಬರಲಿವೆ. +ಇವುಗಳ ಜೊತೆಗೆ ಇದುವರೆಗೆ ಅನುವಾದಗೊಳ್ಳದೇ ಇದ್ದ ೧೫ ರಿಂದ ೨೧ರವರೆಗಿನ ಸಂಪುಟಗಳನ್ನು ಅನುವಾದಿಸಿ, ಪರಿಷ್ಕರಿಸಿ,ಹೊರತರಲು ಕ್ರಮಕೈಗೊಳ್ಳಲಾಗಿದೆ ಎಂಬುದನ್ನೂ, ಇದರ ಅಂಗವಾಗಿ ೧೫ನೆಯ ಸಂಪುಟವನ್ನೂ ಸದ್ಯದಲ್ಲಿಯೇ ಬಿಡುಗಡೆ ಮಾಡಲಾಗುತ್ತದೆ ಎಂಬ ವಿಚಾರವನ್ನು ಓದಗರ ಗಮನಕ್ಕೆ ತರಲು ಸಂತೋಷಿಸುತ್ತೇವೆ. +ಈ ಎಲ್ಲಸಂಪುಟಗಳೂ ಹೊರಬಂದಾಗ ನಾಡಿನ ರಾಜಕೀಯ ಮತ್ತು ಸಾಮಾಜಿಕ ಚಿಂತನೆಗಳಿಗೆ ಡಾ.ಅಂಬೇಡ್ಕರ್‌ ಅವರು ನೀಡಿದ ಕೊಡುಗೆ ಎಷ್ಟು ಮಹತ್ವದ್ದು ಎಂಬುದು ಓದುಗರಿಗೆ ಅರಿವಾಗದೆ ಇರದು. +ಜೊತೆಗೆ, ಕನ್ನಡ ಈ ವಿಕ್ರಮವನ್ನು ಪರಿಪೂರ್ಣವಾಗಿ ಸಾಧಿಸಿದ ಮೊದಲ ಭಾರತೀಯ ಭಾಷೆ ಎಂಬ ಗೌರವಕ್ಕೂ ಪಾತ್ರವಾಗಲಿದೆ. +ಇದು ಕನ್ನಡದ ಓದುಗರಿಗೆ, ಅಂಬೇಡ್ಕರ್‌ ಸಾಹಿತ್ಯಪ್ತಿಯರಿಗೆ ಇಷ್ಟವಾಗುತ್ತದೆಂದು ನಂಬಿದ್ದೇವೆ. +ಕನ್ನಡ ಭವನ ಪ್ರಧಾನ್‌ ಗುರುದತ್ತ ಜೆ.ಸಿ.ರಸ್ತೆ ಅಧ್ಯಕ್ಷ ಬೆಂಗಳೂರು ಸಂಪಾದನ ಸಮಿತಿ ೩ಂ-೩-೨ಂ೧ಂಮೂರನೇ ಮುದ್ರಣಕ್ಕೆ ಮುನ್ನುಡಿ “ಡಾ.ಬಾಬಾ ಸಾಹೇಬ್‌ ಅಂಬೇಡ್ಕರ್‌ ಅವರ ಸಮಗ್ರ ಬರೆಹಗಳು ಮತ್ತು ಭಾಷಣಗಳು" ಮಾಲೆಯ ಹಲವು ಹೊತ್ತಗೆಗಳು ಅಚ್ಚಾಗಿ ಕನ್ನಡ ಓದುಗರ ಕೈಸೇರಿವೆ. +ಪ್ರತಿಗಳು ಮುಗಿದಿರುವ ಹಿನ್ನೆಲೆಯಲ್ಲಿ ಮರು ಮುದ್ರಣ ಕೈಗೊಳ್ಳುವ ಯೋಜನೆಗೆ ಕರ್ನಾಟಕ ಸರ್ಕಾರ ಅನುದಾನ ಮತ್ತು ಅನುಮತಿ ನೀಡಿದೆ. +ಕುವೆಂಪು ಭಾಷಾ ಭಾರತಿ ಪ್ರಾಧಿಕಾರವು ಈ ಹೊಸ ಆವೃತ್ತಿಯಲ್ಲಿ ಸಂಪುಟಗಳ ಅಳವಡಿಕೆ ಮತ್ತು ಹೊದಿಕೆಯ ವಿನ್ಯಾಸದಲ್ಲಿ ಕೊಂಚ ಬದಲಾವಣೆ ಮಾಡಿದೆ. +ಈ ಸಂಪುಟಗಳು ಓದುಗರಿಗೆ ಆಪ್ತವಾಗುತ್ತವೆಂಬ ನಂಬಿಕೆ ನಮ್ಮದು. +ಈ ಕಾರ್ಯದಲ್ಲಿ ನೆರವಾದ ಎಲ್ಲರಿಗೂ ಪ್ರಾಧಿಕಾರದ ಪರವಾಗಿ ವಂದನೆಗಳನ್ನು ಸಲ್ಲಿಸುತ್ತೇವೆ. +ನಾಲ್ಕನೇ ಮುದ್ರಣಕ್ಕೆ ಮುನ್ನುಡಿ ಕರ್ನಾಟಕ ಸರ್ಕಾರವು ಭಾರತರತ್ನ ಬಾಬಾ ಸಾಹೇಬ್‌ ಡಾ.ಬಿ.ಆರ್‌.ಅಂಬೇಡ್ಕರ್‌ ಅವರ ಸಮಗ್ರ ಬರೆಹಗಳು ಮತ್ತು ಭಾಷಣಗಳನ್ನು ಕನ್ನಡದಲ್ಲಿ ಪ್ರಕಟಿಸಲು ಯೋಜಿಸಿ ಅದನ್ನು ಯಶಸ್ವಿಯಾಗಿ ಪೂರೈಸಿದೆ. +ಹಲವು ಸಂಪುಟಗಳಲ್ಲಿ ಪ್ರಕಟಗೊಂಡಿರುವ ಅಂಬೇಡ್ಕರ್‌ ಅವರ ಬರೆಹಗಳ ಕನ್ನಡ ಅನುವಾದ ಪರಿಷ್ಠರಣಗೊಂಡು ಮತ್ತೆ ಮತ್ತೆ ಅಚ್ಚಾಗುತ್ತಿವೆ. +ಇದೀಗ ಎಲ್ಲ ಸಂಪುಟಗಳು ಒಮ್ಮೆಗೆ ಮತ್ತೊಮ್ಮೆ ಅಚ್ಚಾಗಿ ಪ್ರಕಟಗೊಳ್ಳುತ್ತಿವೆ. +ಈವರೆಗೆ ಕನ್ನಡದಲ್ಲಿ ದೊರಕದೇ ಇದ್ದ ಅಂಬೇಡ್ಕರ್‌ ಅವರ ಮರಾಠಿ ಬರೆಹಗಳು ಮತ್ತು ಭಾಷಣಗಳು ಈಗ ಮೊದಲ ಬಾರಿಗೆ ಅಚ್ಚಾಗುತ್ತಿವೆ. +ಒಟ್ಟು ಇಪ್ಪತ್ತೆರಡು ಸಂಪುಟಗಳನ್ನು ಈಗ ವಿಷಯ ಸೂಚಿಯೊಂದಿಗೆ ಪ್ರಕಟಿಸಲಾಗುತ್ತಿದೆ. +ಹಿಂದಿನ ಮುದ್ರಣಗಳಲ್ಲಿ ವಿಷಯ ಸೂಚಿಗಳು ಇಲ್ಲದಿದ್ದುದರಿಂದ ಸಂಪುಟಗಳನ್ನು ಓದುವವರಿಗೆ ಅಗತ್ಯ ವಿಷಯಗಳನ್ನುಗುರುತಿಸಲು ಕಷ್ಟವಾಗುತ್ತಿದ್ದುದನ್ನು ಗಮನಿಸಿ ಈ ಕ್ರಮ ಕೈಗೊಳ್ಳಲಾಗಿದೆ. +ಅಲ್ಲದೆ ಎಲ್ಲ ಸಂಪುಟಗಳ ವಿಷಯಸೂಚಿಗಳಸಂಕಲನವೂ ಈಗ ಹೊರಬಂದಿದೆ. +ಇದರಿಂದ ಯಾವ ಸಂಪುಟದಲ್ಲಿ ಯಾವ ವಿಷಯದ ಬಗೆಗೆ ಮಾಹಿತಿ ಇದೆ ಎಂಬುದನ್ನು ಗುರುತಿಸಿಕೊಳ್ಳುವುದು ಓದುಗರಿಗೆ ಸುಲಭವಾಗಲಿದೆ. +ಹಿಂದೆ ಪ್ರಕಟಗೊಂಡಿದ್ದ ಸಂಪುಟಗಳಲ್ಲಿ ಅಲ್ಲಲ್ಲಿ ಉಳಿದಿದ್ದ ಅಚ್ಚಿನ ತಪ್ಪುಗಳನ್ನು ತಿದ್ದಿ ಸರಿಪಡಿಸಲು ಕ್ರಮ ವಹಿಸಲಾಗಿದೆ. +ಈ ಸಂಪುಟಗಳನ್ನು ಅಚ್ಚು ಮಾಡಲು ಕರ್ನಾಟಕ ಸರ್ಕಾರವು ಎಶೇಷ ಅನುದಾನವನ್ನು ಒದಗಿಸಿದೆ. +ಅಚ್ಚಾದ ಸಂಪುಟಗಳು ರಾಜ್ಯದ ಎಲ್ಲೆಡೆ ಇರುವ ಸಮಾಜ ಕಲ್ಯಾಣ ಇಲಾಖೆಯ ವ್ಯಾಪ್ತಿಯ ಪರಿಶಿಷ್ಟ ಜಾತಿಮತ್ತು ಪರಿಶಿಷ್ಟ ಜನಾಂಗಗಳ ವಿದ್ಯಾರ್ಥಿನಿಲಯಗಳಿಗೆ ಉಚಿತವಾಗಿ ದೊರಕಬೇಕೆಂಬುದು ಸರ್ಕಾರದ ಸದಾಶಯ. +ಇದರಿಂದ ಡಾ.ಅಂಬೇಡ್ಕರ್‌ ಅವರ ಚಿಂತನೆಗಳು ಮುಂದಿನ ತಲೆಮಾರಿಗೂ ಹರಿಯುವ ಅವಕಾಶ ಸೃಷ್ಟಿಯಾಗಿದೆ. +ಕುವೆಂಪು ಭಾಷಾ ಭಾರತಿಗೆ ಇಂತಹ ಅಪೂರ್ವ ಹೊಣೆಯನ್ನು ನೀಡಿದ ಕರ್ನಾಟಕ ಸರ್ಕಾರಕ್ಕೆ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ನಮ್ಮ ಕೃತಜ್ಞತೆಗಳು ಸಲ್ಲುತ್ತವೆ. +ಈ ಸಂಪುಟಗಳ ಸಿದ್ಧತೆಗೆ ನಿಯುಕ್ತಿಗೊಂಡಿರುವ ಸಂಪಾದಕ ಮಂಡಲಿಯ ಸದಸ್ಯರಾದ ಡಾ.ದೇವನೂರ ಮಹಾದೇವ, ಡಾ.ಸಿದ್ಧಲಿಂಗಯ್ಯ ಮತ್ತು ಕನ್ನಡ ಮತ್ತುಸಂಸ್ಕೃತಿ ಇಲಾಖೆಯ ನಿರ್ದೇಶಕರಾದ ಶ್ರೀ ಕೆ.ಎ.ದಯಾನಂದ ಅವರು ತಮ್ಮ ಸಕಾಲಿಕ ಸೂಕ್ತ ಸಲಹೆಗಳ ಮೂಲಕ ನಮ್ಮ ಕೆಲಸ ಹೆಚ್ಚು ಪರಿಪೂರ್ಣವಾಗುವಂತೆ ಮಾಡಿದ್ದಾರೆ. +ಸಂಪಾದಕೀಯ ಸ್ವಾತಂತ್ರ ಪೂರ್ವ ಭಾರತದ ರಾಜಕೀಯ ಕ್ಷಿತಿಜದಲ್ಲಿ ಅನೇಕ ಉದ್ದಾಮ ವ್ಯಕ್ತಿಗಳು, ಪ್ರತಿಭಾನ್ವಿತ ಮುಖಂಡರು,ರಾಜಕಾರಣಿಗಳು, ಮುತ್ಸದ್ದಿಗಳು ಮತ್ತು ದೇಶಪ್ರೇಮಿಗಳು ಕಾಣಿಸಿಕೊಂಡು ದೇಶದ ವಿಮೋಚನೆಗಾಗಿ ತಮ್ಮ ಸರ್ವಸ್ವವನ್ನು ತ್ಯಾಗ ಮಾಡಿ ಚಿರಸ್ಮರಣೇಯರಾಗಿದ್ದಾರೆ. + ಡಾ.ಭೀಮರಾವ್‌ ರಾಮಜಿ ಅಂಬೇಡ್ಕರ್‌ ಅವರು ದೇಶದ ಇಂತಹ ನಾಯಕರಲ್ಲಿ ಒಬ್ಬರಾಗಿದ್ದರು. +ಅವರು ಭಾರತದ ದೀನ ದಲಿತರ ವಿಮೋಚನೆಗಾಗಿ ತಾವು ನಡೆಸಿದ ಹೋರಾಟವನ್ನು ದೇಶದ ಸ್ವಾತಂತ್ರ್ಯ ಹೋರಾಟದ ಅಂಗವಾಗಿಯೇ ಸಂಘಟಿಸಿ ಅಸ್ಪಶ್ಯತಾ ನಿವಾರಣೆ ಮತ್ತು ಎಲ್ಲಾ ದುರ್ಬಲ ವರ್ಗಗಳ ವಿಮೋಚನೆಯಾಗದ ಹೊರತು ದೇಶದ ಸ್ವಾತಂತ್ರ ಅರ್ಥರಹಿತ ಎಂಬ ಮೂಲ ತತ್ವವನ್ನು ಪ್ರತಿಪಾದಿಸಿದ ಏಕೈಕ ನಾಯಕರಾಗಿದ್ದರು. +ಅವರು ಕೇವಲ ಅಸ್ಪಶ್ಯರ ನಾಯಕರಾಗಿರದೆ ಇಡೀ ಮಾನವ ಕುಲದ ಹಕ್ಕುಗಳು, ಸ್ವಾತಂತ್ರ, ಸಮಾನತೆ ಮತ್ತು ಭ್ರಾತೃತ್ವದ ಸ್ಥಾಪನೆಗಾಗಿ ಹೋರಾಡಿದ ಮಹಾನುಭಾವರಾಗಿದ್ದರು. +ಅವರು ತಮ್ಮ ಇಡೀ ಜೀವನವನ್ನು ಈ ಗುರಿ ಸಾಧನೆಗಾಗಿ ಮುಡಿಪಾಗಿಟ್ಟರು. +ಅವರು ಜಾತ್ಯತೀತ, ಸಮಾಜವಾದಿ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಚಲ ವಿಶ್ವಾಸ ಹೊಂದಿದ್ದರು. +ಅವರು ಮಾನವೀಯತೆಯ ಸಾಕಾರ ಮೂರ್ತಿಗಳಾಗಿದ್ದು, ದೀನ ದಲಿತರ ನೋವಿಗೆ ಸದಾ ಸ್ಪಂದಿಸುತ್ತಿದ್ದ ಮಹಾಪುರುಷರಾಗಿದ್ದರು. +ಡಾ.ಬಿ.ಆರ್‌.ಅಂಬೇಡ್ಕರ್‌ ಅವರು ಕೇವಲ ರಾಜಕೀಯ ಮುಖಂಡರಾಗಿರದೇ, ಆಧುನಿಕ ಭಾರತದ ನಿರ್ಮಾಪಕರೂ ಆಗಿದ್ದರೆಂದರೆ ಅತಿಶಯೋಕ್ತಿಯಾಗಲಾರದು. +ಅವರು ಒಬ್ಬ ಘನ ವಿದ್ವಾಂಸರೂ, ವಿಚಾರವೇತ್ತರೂ,ಪ್ರೌಢ ಲೇಖಕರೂ, ಕಾನೂನು ಪಂಡಿತರೂ ಹಾಗೂ ಸಂವಿಧಾನ ತಜ್ಞರೂ ಆಗಿದ್ದರಲ್ಲದೆ ಗಣ್ಯ ಸಮಾಜಶಾಸ್ತ್ರಜ್ವರೂ,ಖ್ಯಾತ ಸಂಶೋಧಕರೂ ಆಗಿದ್ದರು. +ಜಾತಿ ಪದ್ಧತಿ, ಅಸ್ಪಶ್ಯತೆ, ಬಡತನ, ಮುಂತಾದ ಸಾಮಾಜಿಕ - ಆರ್ಥಿಕ ಸಮಸ್ಯೆಗಳ ಆಳವಾದ ಅಧ್ಯಯನ ಮಾಡಿ ಇವುಗಳ ಉಗಮ, ಬೆಳವಣಿಗೆ ಮತ್ತು ವಸ್ತುಸ್ಥಿತಿಯ ಬಗ್ಗೆ ವಿಶಿಷ್ಟಸಿದ್ಧಾಂತಗಳನ್ನು ತಮ್ಮದೆ ಆದ ರೀತಿಯಲ್ಲಿ ಪ್ರಸ್ತುತಪಡಿಸಿದರಲ್ಲದೆ ಇವುಗಳ ನಿವಾರಣೆಯ ವಿಧಾನಗಳನ್ನುನಿರೂಪಿಸಿದರು. +ಅದೃಷ್ಟವಶಾತ್‌ ಅವರು ತಮ್ಮ ಅಮೂಲ್ಯವಾದ ವಿಚಾರಗಳನ್ನು ತಮ್ಮ ಅನೇಕ ಸಂಶೋಧನಾತ್ಮಕ ಗ್ರಂಥಗಳು, ಲೇಖನಗಳು ಮತ್ತು ವಿದ್ವತ್ಪೂರ್ಣ ಭಾಷಣಗಳಲ್ಲಿ ವ್ಯಕ್ತಪಡಿಸಿದ್ದಾರೆ. +ಅವರ ಜೀವಿತ ಕಾಲದಲ್ಲಿಯೇ ಸುಮಾರು ಹದಿಮೂರು ಗ್ರಂಥಗಳು ಇಂಗ್ಲಿಷಿನಲ್ಲಿ ಪ್ರಕಟವಾಗಿದ್ದು ಇವುಗಳಲ್ಲಿ ಜಾತಿ ನಿರ್ಮೂಲನೆ; +ಶೂದ್ರರುಯಾರು?; ಅಸ್ಪೃಶ್ಯರು ಯಾರು - ಅವರು ಹೇಗೆ ಮತ್ತು ಏಕೆ ಅಸ್ಪೃಶ್ಯರಾದರು?; ರೂಪಾಯಿಯ ಸಮಸ್ಯೆ;ಪಾಕಿಸ್ತಾನ ಅಥವಾ ಭಾರತದ ವಿಭಜನೆ ಪ್ರಮುಖವಾಗಿವೆ. +ಬುದ್ಧ ಮತ್ತು ಅವರ ಧಮ್ಮ ಇದು ಅವರ ಮರಣೋತ್ತರ ಪ್ರಕಟಣೆ. +ಇವುಗಳೂ ಅಲ್ಲದೇ ಅವರ ಅಪ್ರಕಟಿತ ಬರೆಹಗಳು ಅಸಂಖ್ಯಾತ. +ಅವರ ಮರಣಾನಂತರ ಇವು ಆಸ್ತಿ ವಿವಾದದಲ್ಲಿ ಸಿಲುಕಿಕೊಂಡಿದ್ದರಿಂದ ಇತ್ತೀಚಿನವರೆಗೆ ಅವುಗಳ ಪ್ರಕಟಣೆ ಸಾಧ್ಯವಾಗಿರಲಿಲ್ಲ. +ಹೀಗಾಗಿ ಅವುಗಳ ಅಧ್ಯಯನ ಸಾಧ್ಯವಿರಲಿಲ್ಲ. + ಆದರೆ ಮಹಾರಾಷ್ಟ್ರ ಸರ್ಕಾರದ ಸತತ ಪ್ರಯತ್ನ, ಪರಿಶ್ರಮದಿಂದಾಗಿ ಮತ್ತು ಡಾ.ಬಿ.ಆರ್‌.ಅಂಬೇಡ್ಕರ್‌ ಅವರ ಕುಟುಂಬದ ಸದಸ್ಯರ ಸಹಕಾರ, ಸಮ್ಮತಿಯಿಂದಾಗಿ ಈಗ ಇವುಗಳ ಪ್ರಕಟಣೆಯೂ ಸಾಧ್ಯವಾಗಿದೆ. + ಡಾ.ಅಂಬೇಡ್ಕರ್‌ ಅವರು ಹೆಚ್ಚಾಗಿ ಇಂಗ್ಲಿಷ್‌ ಭಾಷೆಯಲ್ಲಿಯೇ ಬರೆದಿದ್ದಾರೆ. +ಅವರ ಬರವಣಿಗೆಯ ಕೆಲ ಭಾಗಗಳು, ಅದರಲ್ಲಿಯೂ ಅವರು ತಾವೇ ಆರಂಭಿಸಿ, ನಡೆಸಿಕೊಂಡು ಬಂದ ಪಾಕ್ಚಿಕಗಳಾದ ಸಮತಾ, ಜನತಾ ಮತ್ತು ಬಹಿಷ್ಕೃತ ಭಾರತ ಇವುಗಳಲ್ಲಿ ಮರಾಠಿಯಲ್ಲಿಯೇ ಅಗ್ರ ಲೇಖನಗಳಾಗಿ ಬಂದಿವೆ. +ಅವರು ಮಾಡಿದ ಅನೇಕ ಸಾರ್ವಜನಿಕ ಭಾಷಣಗಳೂ ಮರಾಠಿ ಭಾಷೆಯಲ್ಲಿಯೇ ಇವೆ. +ಡಾ.ಅಂಬೇಡ್ಕರ್‌ ಅವರು ತಮ್ಮ ಕೆಲವು ವಿದ್ವತ್ಪೂರ್ಣ ಪ್ರಬಂಧಗಳನ್ನು ತಾವು ಅಮೆರಿಕದಲ್ಲಿ ವಿದ್ಯಾರ್ಥಿಯಾಗಿದ್ದಾಗಲೇ ಸಿದ್ಧಪಡಿಸಿ ೧೯೧೮ರಿಂದಲೇ ಪ್ರಕಟಿಸಿದರು. +ನಂತರ ೧೯೨೩ ರಿಂದ ೧೯೫೫ರವರೆಗೆ ಅವರ ಇತರ ಗ್ರಂಥಗಳು ಪ್ರಕಟವಾದವು. +ಇವೂ ಅಲ್ಲದೆ ತಮ್ಮ ಸಾರ್ವಜನಿಕ ಜೀವನದ ಸುಮಾರು ಮೂರು ದಶಕಗಳ ಅವಧಿಯಲ್ಲಿ ಅವರು ಅನೇಕ ಸಮಿತಿಗಳು, ಆಯೋಗಗಳು ಮತ್ತು ದುಂಡು ಮೇಜಿನ ಪರಿಷತ್ತುಗಳಿಗೆ ಸಲ್ಲಿಸಿದ ಮನವಿಗಳು, ವಿಜ್ಞಾಪನಾ ಪತ್ರಗಳು, ಮಾಡಿದ ಭಾಷಣಗಳು, ಅವರ ರಾಜಕೀಯ ಮತ್ತು ಸಂವಿಧಾನದ ವಿಚಾರಗಳು ಮಹತ್ವದವುಗಳಾಗಿವೆ. +ಅವರು ಮುಂಬಯಿ ಪ್ರಾಂತ್ಯ ಮತ್ತು ಕೇಂದ್ರಶಾಸನ ಸಭೆಗಳಲ್ಲಿ,ನಂತರ ಸಂವಿಧಾನ ಸಭೆಯ ಸದಸ್ಯರಾಗಿ, ಕರಡು ಸಮಿತಿಯ ಅಧ್ಯಕ್ಷರಾಗಿ ಸಿದ್ಧಪಡಿಸಿ, ಮಂಡಿಸಿದ ಕರಡು ಸಂವಿಧಾನ ಮತ್ತು ಅದರ ಮೇಲೆ ನಡೆದ ಚರ್ಚೆಗೆ ಅವರು ನೀಡಿದ ಉತ್ತರ, ಸಮಾಧಾನ, ವಿವರಣೆಗಳು ಮತ್ತು ಸ್ವತಂತ್ರ ಭಾರತದ ಪ್ರಥಮ ಕಾನೂನು ಮಂತ್ರಿಯಾಗಿ ಅವರು ವ್ಯಕ್ತಪಡಿಸಿದ ವಿಚಾರಗಳು, ಮಂಡಿಸಿದ ಮಸೂದೆಗಳು ಮುಂತಾದವು ಒಬ್ಬ ಮೇಧಾವಿ ಹಾಗೂ ಮುತ್ನದ್ದಿ ವ್ಯಕ್ತಪಡಿಸಿದ ಅಮೂಲ್ಯ ವಿಚಾರಗಳಾಗಿದ್ದು ಇಂದಿಗೂ ಸಂವಿಧಾನದ ಪ್ರಸ್ತಾಪ ಬಂದಾಗಲೆಲ್ಲಾ ಅವರು ಅಂದು ನೀಡಿದ ವಿವರಣೆಗಳೇ ಕೊನೆಯ ಮಾತೆಂದು ಪರಿಗಣಿಸಲಾಗಿದೆ. +ಆದ್ದರಿಂದ ಡಾ.ಅಂಬೇಡ್ಕರ್‌ ಅವರ ವಿಚಾರಗಳು ಅಂದೂ ಅಲ್ಲದೆ ಇಂದೂ ಪ್ರಸ್ತುತವಾಗಿದ್ದು ಅವುಗಳ ಅಧ್ಯಯನ ಮತ್ತು ಪರಿಚಯ ಅನಿವಾರ್ಯ. +ಆದರೆ ಕಾಲಕ್ರಮೇಣ ಅವರ ಪ್ರಕಟಿತ ಕೃತಿಗಳು ಲಭ್ಯವಾಗುತ್ತಿಲ್ಲ ಮತ್ತು ಅವು ಮುಂದೆ ದೊರೆಯುವ ಸಾಧ್ಯತೆಯೂ ಇಲ್ಲದಾಗಿದೆ. +ಅವುಗಳೆಲ್ಲವೂ ಸಂಪೂರ್ಣವಾಗಿ ಅಳಿದು ಹೋಗುವ ಅಪಾಯವೂ ಇದೆ. +ಇದನ್ನರಿತ ಮಹಾರಾಷ್ಟ್ರ ಸರ್ಕಾರದವರು ಡಾ.ಅಂಬೇಡ್ಕರ್‌ ಅವರ ಇಂಗ್ಲಿಷಿನಲ್ಲಿರುವ ಎಲ್ಲಾ ಪ್ರಕಟಿತ ಮತ್ತು ಅಪ್ರಕಟಿತ ಕೃತಿಗಳನ್ನು ಸಂಗ್ರಹಿಸಿ, ಮುದ್ರಿಸಿ, ಪ್ರಕಟಿಸುವ ಅತ್ಯಂತ ಅವಶ್ಯ ಮತ್ತು ಉಪಯುಕ್ತ ಯೋಜನೆಯನ್ನು ಹಾಕಿಕೊಂಡಿದ್ದು. +ಈ ಯೋಜನೆಯ ರೂಪುರೇಷೆಗಳನ್ನು ಸಿದ್ಧಪಡಿಸಿ ಕಾರ್ಯಗತಗೊಳಿಸಲು ರಾಜ್ಯದ ಶಿಕ್ಷಣ ಸಚಿವರ ಅಧ್ಯಕ್ಷತೆಯಲ್ಲಿ ಡಾ.ಅಂಬೇಡ್ಕರ್‌ ಅವರ ಒಡನಾಡಿಗಳು, ತಜ್ಞರು ಮತ್ತು ಮುಖಂಡರುಗಳಿಂದ ಕೂಡಿದ ಡಾ.ಬಾಬಾ ಸಾಹೇಬ್‌ಅಂಬೇಡ್ಕರ್‌ ಅವರ ಮೂಲ ವಿಷಯಗಳ ಪ್ರಕಟನಾ ಸಮಿತಿ, ಮಹಾರಾಷ್ಟ್ರ ಸರ್ಕಾರ ಎಂಬ ಸಮಿತಿಯನ್ನುರಚಿಸಿ, ಅದು ಕಾರ್ಯತತ್ಪರವಾಯಿತು. +ಈ ಸಮಿತಿಯನ್ನು ೧೯೭೬ರಲ್ಲಿ ಅಂದಿನ ಮುಖ್ಯಮಂತ್ರಿ ಶ್ರೀ ಶರದ್‌ಪವಾರ್‌ ಅವರ ನೇತೃತ್ವದಲ್ಲಿ ರಚಿಸಲಾಯಿತು. +ಈ ಸಮಿತಿಯ ಯಶಸ್ಸಿಗೆ ಇದರ ವಿಶೇಷ ಅಧಿಕಾರಿ ಶ್ರೀ ವಸಂತಮೂನ್‌ ಅವರ ಪರಿಶ್ರಮ ಮುಖ್ಯ ಕಾರಣ. +ಈ ಸಮಿತಿಯು ಡಾ.ಅಂಬೇಡ್ಕರ್‌ ಅವರ ಎಲ್ಲಾ ಬರೆಹಗಳನ್ನೂ ಸಂಗ್ರಹಿಸಿ ಒಟ್ಟು ಹನ್ನೊಂದು ಬೃಹತ್‌ ಸಂಪುಟಗಳಲ್ಲಿ “ಡಾ.ಬಾಬಾಸಾಹೇಬ್‌ ಅಂಬೇಡ್ಕರ್‌ ಅವರ - ಬರೆಹಗಳುಮತ್ತು ಭಾಷಣಗಳು” ಎಂಬ ಶೀರ್ಷಿಕೆಯಲ್ಲಿ ಪ್ರಕಟಿಸುವ ಯೋಜನೆ ಹಾಕಿಕೊಂಡು, ಇದುವರೆಗೆ ಒಟ್ಟು ಎಂಟು ಸಂಪುಟಗಳನ್ನು ಪ್ರಕಟಿಸಿದೆ. +ಇನ್ನೂ ಮೂರು ಸಂಪುಟಗಳು ಬರಬೇಕಾಗಿವೆ. +ಇದುವರೆಗೆ ಪ್ರಕಟಿತವಾದ ಎಂಟು ಸಂಪುಟಗಳಲ್ಲಿ ಬಹಳಷ್ಟು ಅವರ ಪ್ರಕಟಿತ ಮತ್ತು ಅಪ್ರಕಟಿತ ಬರೆಹಗಳು ಸೇರಿವೆ. +೧೯೭೯ ರಲ್ಲಿ ಬಿಡುಗಡೆಯಾದ ಒಂದನೆಯ ಸಂಪುಟದಲ್ಲಿ ಜಾತಿ ನಿರ್ಮೂಲನೆ; +ಭಾಷಾವಾರು ಪ್ರಾಂತ್ಯಗಳು; ರಾನಡೆ, ಗಾಂಧಿ, ಜಿನ್ನಾ; +ರಾಜ್ಯಗಳು ಮತ್ತು ಅಲ್ಪಸಂಖ್ಯಾತರು, ಸಂಯುಕ್ತ ರಾಜ್ಯವೇ ಅಥವಾ ಸ್ವಾತಂತ್ರ್ಯವೇ ಮುಂತಾದ ಪರಿಚಿತ ಮತ್ತು ಪ್ರಕಟಿತಕೃತಿಗಳು ಸೇರಿವೆ. +ಎರಡನೆಯ ಸಂಪುಟ (೧೯೮೨)ರಲ್ಲಿ ಮುಂಬಯಿ ಶಾಸಕಾಂಗದಲ್ಲಿ ಮತ್ತು ದುಂಡುಮೇಜಿನ ಪರಿಷತ್ತುಗಳಲ್ಲಿ ಅವರು ಮಾಡಿದ ಭಾಷಣಗಳೂ ಅಲ್ಲದೆ ಸೈಮನ್‌ ಆಯೋಗಕ್ಕೆ ಅವರು ನೀಡಿದ ಹೇಳಿಕೆಗಳೂ ಮನವಿಗಳೂ ಸೇರಿವೆ. +ಮೂರನೆಯ ಸಂಪುಟ (೧೯೮೭) ದಲ್ಲಿ ಅವರ ಅಪ್ರಕಟಿತ ಕೃತಿಗಳಾದ ಹಿಂದೂ ಧರ್ಮದರ್ಶನ; +ಪ್ರಾಚೀನ ಭಾರತದಲ್ಲಿ ಕ್ರಾಂತಿ ಮತ್ತು ಪ್ರತಿಕ್ರಾಂತಿ; +ಭಾರತ ಮತ್ತು ಸಮತಾವಾದದ ಪೂರ್ವಭಾವಿ ಅವಶ್ಯಕತೆಗಳು; +ಬುದ್ಧ ಅಥವಾ ಕಾರ್ಲ್‌ಮಾಕ್ಟ್‌ ಮುಂತಾದವು ಸೇರಿವೆ. +೧೯೮೭ರಲ್ಲಿಯೇ ಪ್ರಕಟವಾದ ನಾಲ್ಕನೆಯ ಸಂಪುಟ ಮಹಾರಾಷ್ಟ್ರದಲ್ಲಿ ವಿವಾದದ ಅಲೆಯನ್ನೇ ಎಬ್ಬಿಸಿತು. +ಇದರಲ್ಲಿ ಅವರ ಇನ್ನೊಂದು ಅಪ್ರಕಟಿತ ಬರೆಹ ಮಾಲೆ "ಹಿಂದೂ ಧರ್ಮದ ಸಂದಿಗ್ಧಗಳು" ಪ್ರಕಟವಾಗಿದ್ದೇ ಆಂದೋಲನಕ್ಕೆ ಪ್ರಚೋದನೆಯಾಯಿತು. +ಇದರಿಂದಾಗಿ ಮಹಾರಾಷ್ಟ್ರ ಸರ್ಕಾರ ಈ ಸಂಪುಟದ ಮಾರಾಟವನ್ನು ಕೆಲಕಾಲ ತಡೆಹಿಡಿಯಬೇಕಾಯಿತು. +ನಂತರ ಆದ ಒಪ್ಪಂದದಿಂದ ಪುನಃ ಇದರ ಮಾರಾಟ ಮುಂದುವರಿಯಿತು. +೧೯೮೯ರಲ್ಲಿ ಪ್ರಕಟವಾದ ಐದನೆಯ ಸಂಪುಟವು ಸಂಪೂರ್ಣವಾಗಿ ಅಪ್ರಕಟಿತ ಬರೆಹಗಳಿಂದ ಕೂಡಿದ್ದು ಇದರಲ್ಲಿ ಅಸ್ಪೃಶ್ಯರು ಮತ್ತು ಅಸ್ಪಶ್ಯತೆಯ ಬಗ್ಗೆ ಅವರ ಸಾಮಾಜಿಕ, ರಾಜಕೀಯ, ಧಾರ್ಮಿಕ ವಿಶ್ಲೇಷಣೆಯ ಲೇಖನಗಳಿವೆ. +ಆದೇ ವರ್ಷ ಪ್ರಕಟವಾದ ಆರನೆಯ ಸಂಪುಟದಲ್ಲಿ ಸೇರಿರುವ ಎಲ್ಲಾ ಲೇಖನಗಳೂ ಅರ್ಥಶಾಸ್ತ್ರ ಸಂಬಂಧವಾಗಿದ್ದು ರೂಪಾಯಿಯ ಸಮಸ್ಯೆ ಇದರಲ್ಲಿ ಸೇರಿದೆ. +೧೯೯ಂರಲ್ಲಿ ಪ್ರಕಟವಾಗಿರುವ ಏಳನೆಯ ಸಂಪುಟದಲ್ಲಿ ಶೂದ್ರರು ಯಾರು?; +ಅಸ್ಪಶ್ಯರು ಯಾರು - ಅವರು ಹೇಗೆ ಮತ್ತು ಏಕೆ ಅಸ್ಪೃಶ್ಯರಾದರು ಎಂಬ ಅವರ ಈ ಎರಡು ಸಂಶೋಧನಾತ್ಮಕ ಮತ್ತುಅತಿ ಮಹತ್ವದ ಗ್ರಂಥಗಳನ್ನು ಪುನರ್‌ ಮುದಿಸಲಾಗಿದೆ. +ಇದೇ ವರ್ಷ ಪ್ರಕಟಿಸಲಾಗಿರುವ ಎಂಟನೆಯ ಸಂಪುಟದಲ್ಲಿ ಡಾ.ಅಂಬೇಡ್ಕರ್‌ ಅವರ ಅತ್ಯಂತ ವಿವಾದಾತ್ಮಕ, ಆದರೆ ಅಷ್ಟೇ ವಿದ್ವತ್‌ಪೂರ್ಣ ಹಾಗೂ ವಾಸ್ತವಿಕತೆಯಿಂದ ಪ್ರೇರಿತವಾದ ಅವರ ಗ್ರಂಥ 'ಪಾಕಿಸ್ತಾನ ಅಥವಾ ಭಾರತದ ವಿಭಜನೆ'ಯ ಪುನರ್ಮುದ್ರಣವಾಗಿದೆ. +ಇದು ಅವರ ಮೇರು ಕೃತಿ. +ಮುಂಬರುವ ಮೂರು ಸಂಪುಟಗಳಲ್ಲಿ ಗವರ್ನರ್‌ ಜನರಲ್‌ ಪರಿಷತ್ತು ಸಂವಿಧಾನ ಸಭೆ ಮತ್ತು ಸಂಸತ್ತಿನಲ್ಲಿ ಡಾ.ಅಂಬೇಡ್ಕರ್‌ ಅವರು ಭಾಗವಹಿಸಿರುವುದು (೧೯೪೨-೧೯೫೬), ಕಾಂಗ್ರೆಸ್‌ ಮತ್ತು ಮಿಸ್ಟರ್‌ಗಾಂಧಿ ಅಸ್ಪೃಶ್ಯರಿಗೆ ಮಾಡಿದುದು ಏನು? +ಹಾಗೂ ಮಿಸ್ಟರ್‌ ಗಾಂಧಿ ಹಾಗೂ ಅಸ್ಪಶ್ಯರ ವಿಮೋಚನೆ ; +ಮುಂಬಯಿಯ ಪೀಪಲ್ಸ್‌ ಎಜ್ಯುಕೇಷನ್‌ ಸೊಸೈಟಿ ನೀಡಿರುವ ಇನ್ನೂ ಕೆಲವು ಅಪ್ರಕಟಿತ ಬರೆಹಗಳು; + ಮತ್ತುಇತರ ಸಂಮ್ಮಿಶ್ರ ಬರೆಹಗಳು ಪ್ರಕಟವಾಗಲಿವೆ. +ಇಂತಹ ಸ್ತುತ್ಯ ಉಪಕ್ರಮಕ್ಕಾಗಿ ಮಹಾರಾಷ್ಟ್ರ ಸರ್ಕಾರ ಅಭಿನಂದನಾರ್ಹ. +ಅಲ್ಲದೇ, ಪ್ರತಿ ಸಂಪುಟ ಸರಾಸರಿ ಐದುನೂರು ಪುಟಗಳಿಗಿಂತ ಹೆಚ್ಚಿದ್ದಾಗ್ಯೂ, ಪ್ರತಿಯೊಂದರ ಬೆಲೆ ಕೇವಲ ನಲವತ್ತು ರೂಪಾಯಿಗಳಿರುವುದು (ಮೊದಲನೆಯ ಸಂಪುಟದ ಬೆಲೆ ಕೇವಲ ಹತ್ತು ರೂಪಾಯಿ) ಅತ್ಯಂತ ಸ್ವಾಗತಾರ್ಹ ಸಂಗತಿಯಾಗಿದೆ. + ಡಾ.ಅಂಬೇಡ್ಕರ್‌ ಅವರ ಈ ಅಮೂಲ್ಯ ಸಮಗ್ರ ವೈಚಾರಿಕ ಸಾಹಿತ್ಯವನ್ನುಒಂದೆಡೆ ಸಂಗ್ರಹಿಸಿ, ಓದುಗರಿಗೆ ಅತ್ಯಂತ ಕಡಿಮೆ ಬೆಲೆಯಲ್ಲಿ ದೊರಕುವಂತೆ ಮಾಡುವ ಮೂಲಕ ಮಹಾರಾಷ್ಟ್ರಸರ್ಕಾರವು ವೈಚಾರಿಕ ಸಾಹಿತ್ಯಕ್ಕೆ ಹಾಗೂ ಡಾ.ಬಾಬಾಸಾಹೇಬ್‌ ಅಂಬೇಡ್ಕರ್‌ ಅವರ ವಿಚಾರಗಳನ್ನು ಇಂದಿನ ಹಾಗೂ ಮುಂದಿನ ಹೀಳಿಗೆಗಳಿಗೆ ನೀಡುವ ಮೂಲಕ ಮಹತ್ತರವಾದ ಸೇವೆ ಸಲ್ಲಿಸಿದೆ. + ಡಾ.ಬಾಬಾಸಾಹೇಬ್‌ ಅಂಬೇಡ್ಕರ್‌ ಅವರ ಈ ಸಮಗ್ರ ಸಾಹಿತ್ಯ ಇಂಗ್ಲಿಷ್‌ ಭಾಷೆಯಲ್ಲಿ ಪ್ರಕಟವಾಗಿರುವುದರಿಂದ ಈ ಭಾಷೆಯನ್ನು ಚೆನ್ನಾಗಿ ಬಲ್ಲವರು ಮಾತ್ರ ಇದರ ಉಪಯೋಗ ಹೊಂದಬಹುದಾಗಿದೆ. +ಅದರಿಂದ ಈ ಭಾಷೆಯಲ್ಲಿ ಪರಿಶ್ರಮವಿಲ್ಲದ ಇತರ ಭಾಷಿಕರಿಗೆ ಡಾ.ಅಂಬೇಡ್ಕರ್‌ ಅವರ ಉಪಯುಕ್ತ ಸಾಮಾಜಿಕ,ಆರ್ಥಿಕ, ರಾಜಕೀಯ ವಿಚಾರಗಳು ಲಭ್ಯವಿಲ್ಲ. +ಇದು ಒಂದು ದೊಡ್ಡ ಕೊರತೆ. +ಇದನ್ನು ನಿವಾರಿಸುವ ಏಕೈಕ ಮಾರ್ಗವೆಂದರೆ ಅವರ ಎಲ್ಲಾ ಬರಹಗಳನ್ನು ಭಾರತದ ವಿವಿಧ ಪ್ರಾದೇಶಿಕ ಭಾಷೆಗಳಲ್ಲಿ ಅನುವಾದಿಸಿ ಪ್ರಕಟಿಸುವುದು. +ಈ ಕೆಲಸ ಎಲ್ಲಾ ಭಾಷೆಗಳಲ್ಲಿ ತುರ್ತಾಗಿ ಆಗಬೇಕಾಗಿದೆ. +ಈ ಆವಶ್ಯಕತೆಯನ್ನು ಮೊದಲು ಮನಗಂಡ ಕರ್ನಾಟಕ ರಾಜ್ಯ ಸರ್ಕಾರ ೧೯೮೮ರ ಜೂನ್‌ ತಿಂಗಳಲ್ಲಿ ಡಾ.ಅಂಬೇಡ್ಕರ್‌ ಅವರ ಕೃತಿಗಳನ್ನು ಕನ್ನಡಕ್ಕೆ ಭಾಷಾಂತರಿಸಲು ಮಹತ್ವದ ನಿರ್ಣಯ ತೆಗೆದುಕೊಂಡು ಈ ಕೆಳಕಂಡವರನ್ನೊಳಗೊಂಡ ಸಂಪಾದಕ ಸಮಿತಿಯನ್ನು ನೇಮಿಸಿ ಆದೇಶ ಹೊರಡಿಸಿತು. +೧.ಡಾ.ಎ.ಎಂ.ರಾಜಶೇಖರಯ್ಯ - ಸಂಪಾದಕರು ೨. ಡಾ.ಸಿದ್ಧಲಿಂಗಯ್ಯ - ಸದಸ್ಯರು ೩. ಶ್ರೀ ದೇವನೂರ ಮಹಾದೇವ - ಸದಸ್ಯರು ೪. ನಿರ್ದೇಶಕರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು. +ಸಮಿತಿಯ ಪ್ರಥಮ ಸಭೆ ೩ಂ-೮-೧೯೮೮ ರಂದು ಬೆಂಗಳೂರಿನಲ್ಲಿ ಸೇರಿ ಡಾ.ಅಂಬೇಡ್ಕರ್‌ ಅವರ ಪ್ರಕಟಿತ ಮತ್ತು ಸುಪರಿಚಿತವಾದ ಹದಿನಾಲ್ಕು ಬಿಡಿ ಕೃತಿಗಳನ್ನು ಮಾತ್ರ ಭಾಷಾಂತರ ಮಾಡದೆ ಮತ್ತು ಅವುಗಳಲ್ಲಿ ಕೆಲವು ಲಭ್ಯವಿಲ್ಲದಿರುವ ಕಾರಣದಿಂದಲೂ, ಮಹಾರಾಷ್ಟ್ರ ಸರ್ಕಾರದ ಯೋಜನೆಯಂತೆ ಪ್ರಕಟಿತವಾಗುತ್ತಿರುವ ಎಲ್ಲಾ ಸಂಪುಟಗಳನ್ನು ಮಹಾರಾಷ್ಟ್ರ ಸರ್ಕಾರದ ಅನುಮತಿ ಪಡೆದುಕೊಂಡು ಕನ್ನಡಕ್ಕೆ ಭಾಷಾಂತರಿಸಬೇಕೆಂದು ನಿರ್ಣಯ ತೆಗೆದುಕೊಂಡಿತು. +ಈ ಪ್ರಕಾರ ಮಹಾರಾಷ್ಟ್ರ ಸರ್ಕಾರದ ಅನುಮತಿ ಕೋರಿ ಪತ್ರ ಬರೆಯಲಾಯಿತು. +ಮಹಾರಾಷ್ಟ್ರ ಸರ್ಕಾರದವರು ತಮ್ಮ ದಿನಾಂಕ:೨೨೪೫-೮೯ರ ಪತ್ರದಲ್ಲಿ ತಮ್ಮ ಅನುಮತಿ ನೀಡಿ, ಕರ್ನಾಟಕ ಸರ್ಕಾರಕ್ಕೆ ತಿಳಿಸಿದರು. +ಅನಂತರ ಭಾಷಾಂತರ ಕಾರ್ಯವನ್ನು ವ್ಯವಸ್ಥಿತವಾಗಿ ಕೈಗೆತ್ತಿಕೊಳ್ಳಲಾಯಿತು. +ನಮ್ಮ ಸಂಪಾದಕ ಸಮಿತಿಯು ಭಾಷಾಂತರ ಕಾರ್ಯಕ್ಕಾಗಿ ನಾಡಿನ ಗಣ್ಯ ವಿದ್ವಾಂಸರನ್ನು ಗುರುತಿಸಿ ಅವರ ಸಮ್ಮತಿ, ಸಹಕಾರ ಕೋರಿತು. +ಅವರ ಒಪ್ಪಿಗೆ ಪಡೆದ ನಂತರ ಪ್ರತಿಯೊಬ್ಬರಿಗೂ ಮೂಲ ಕೃತಿಯ ಸುಮಾರು ಒಂದು ನೂರು ಪುಟಗಳನ್ನು ವಹಿಸಲಾಯಿತು. +ಡಾ.ಅಂಬೇಡ್ಕರ್‌ ಅವರ ಬರೆಹಗಳ ಭಾಷೆ ಮತ್ತುವಿಚಾರಗಳು ಅತ್ಯಂತ ಕಷ್ಣ ಹಾಗೂ ಗಹನವಾದುವುಗಳಾಗಿರುವುದರಿಂದ ಅವುಗಳ ಭಾಷಾಂತರ ಸುಲಭ ಸಾಧ್ಯವಲ್ಲ. +ಭಾಷಾಂತರ ಮಾಡುವ ಮೊದಲು ಅದರ ಆಳವಾದ ಅಧ್ಯಯನ ಮತ್ತು ಮನನ ಅವಶ್ಯ. +ಆದ್ದರಿಂದ ಭಾಷಾಂತರಕಾರರಿಗೆ ಹೆಚ್ಚು ಅವಧಿ ಬೇಕಾಯಿತು. +ಕೆಲವರು ಭಾಷಾಂತರ ಮಾಡಿ ಕಳುಹಿಸಿದ ನಂತರ ಭಾಷೆ,ಶೈಲಿ, ಪರಿಭಾಷಾ ಪದಗಳು ಮುಂತಾದವುಗಳ ಪರಿಶೀಲನೆ ಅಗತ್ಯವೆನಿಸಿತು. +ಈ ಕಾರ್ಯದಲ್ಲಿ ಭಾಷಾ ತಜ್ಞರ ನೆರವು ಪಡೆಯಬೇಕೆಂದು ಸಂಪಾದಕ ಸಮಿತಿ ತೀರ್ಮಾನಿಸಿ ಕೆಳಕಂಡ ಮಹನೀಯರನ್ನು ಆಹ್ವಾನಿಸಲಾಯಿತು. +೧) ಡಾ.ಆರ್‌.ಸಿ.ಹಿರೇಮಠ, ಮಾಜಿ ಕುಲಪತಿಗಳು, ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ; +೨) ಡಾ.ದೇ.ಜವರೇಗೌಡ, ಮಾಜಿ ಕುಲಪತಿಗಳು, ಮೈಸೂರು ವಿಶ್ವವಿದ್ಯಾನಿಲಯ ಮೈಸೂರು, ಮತ್ತು +೩) ಶ್ರೀ ವೈ.ಎಂ.ಸಿ.ಶರ್ಮ, ಅಂದಿನ ಅಧ್ಯಕ್ಷರು ಕರ್ನಾಟಕ ರಾಜ್ಯಭಾಷಾ ಆಯೋಗ, ಬೆಂಗಳೂರು; +ಈಗ ಅವರ ಸ್ಥಾನದಲ್ಲಿ ಇಂದಿನ ಅಧ್ಯಕ್ಷ ಶ್ರೀ ಕಂಠಿರಾವ್‌ ಇವರು ಅನುವಾದಿತ ಭಾಗಗಳ ಪರಿಶೀಲನೆ ಮಾಡುವಾಗ ವಿವಿಧ ಭಾಷಾಂತರಕಾರರು ಪ್ರತ್ಯೇಕವಾಗಿ ಅನುವಾದ ಮಾಡಿದ ಭಾಗಗಳಲ್ಲಿ ಪದ ಬಳಕೆ, ಭಾಷೆ,ಶೈಲಿ ಮುಂತಾದವುಗಳಲ್ಲಿ ಸಾಧ್ಯವಾದಷ್ಟು ಏಕರೂಪತೆ ತರುವ ಕಾರ್ಯ ಭಾಷಾಂತರ ಮಾಡುವುದಕ್ಕಿಂತಲೂ ಹೆಚ್ಚು ಕಠಿಣ ಮತ್ತು ಪ್ರಯಾಸಕರ. +ರಾಜ್ಯದ ವಿವಿಧ ಭಾಗಗಳ ಅನುವಾದಕರು ತಮ್ಮ ತಮ್ಮ ಪ್ರಾದೇಶಿಕ ಭಾಷೆ, ಶೈಲಿಯನ್ನನು ಸರಿಸುವುದು ಸಹಜ. +ಆದಷ್ಟು ಈ ಪ್ರಾದೇಶಿಕ ವೈವಿಧ್ಯವನ್ನು ಉಳಿಸಿಕೊಂಡು ಬರಲಾಗಿದೆ. +ಹಿರಿಯ ತಜ್ಞರು ತಮ್ಮ ಅಮೂಲ್ಯ ಸಮಯವನ್ನು ಈ ಕಾರ್ಯಕ್ಕಾಗಿ ವಿನಿಯೋಗಿಸಿ ಹೆಚ್ಚು ಶ್ರಮವಹಿಸಿ ಭಾಷಾಂತರದ ಮಟ್ಟವನ್ನು ಸುಧಾರಿಸುವ ಪ್ರಯತ್ನ ಮಾಡಿದ್ದಾರೆ. +ಇವರ ಸಹಕಾರವಿಲ್ಲದೆ ಈ ಕಾರ್ಯ ಸುಗಮವಾಗುತ್ತಿರಲಿಲ್ಲ. +ಇವರು ಮೇ ತಿಂಗಳ ಕೊನೆಯ ವಾರದಲ್ಲಿ ಮೈಸೂರಿನ ಆಡಳಿತ ತರಬೇತಿ ಸಂಸ್ಥೆಯಲ್ಲಿ ಏರ್ಪಡಿಸಲಾಗಿದ್ದ ಮೂರು ದಿನಗಳ ಭಾಷಾಂತರ ಕಮ್ಮಟದಲ್ಲಿ ಭಾಗವಹಿಸಿ ಮಾರ್ಗದರ್ಶನ ಮಾಡಿದರು. +ಈ ತಜ್ಞರಿಗೆ ಸಂಪಾದಕ ಸಮಿತಿ ಅತ್ಯಂತ ಯಣಿಯಾಗಿದೆ. +ಸಂಪಾದಕ ಸಮಿತಿಯು ಈಗಾಗಲೇ ಮೊದಲನೆಯ ಐದು ಸಂಪುಟಗಳ ಭಾಷಾಂತರ ಕಾರ್ಯವನ್ನು ವಿವಿಧ ವಿದ್ವಾಂಸರಿಗೆ ವಹಿಸಿದೆ. +ಇನ್ನುಳಿದ ಮೂರು ಸಂಪುಟಗಳ ಭಾಷಾಂತರದ ಕಾರ್ಯವನ್ನು ಇಷ್ಟರಲ್ಲಿಯೇ ಕೈಗೆತ್ತಿಕೊಳ್ಳಲಾಗುವುದು. +ಡಾ.ಅಂಬೇಡ್ಕರ್‌ ಅವರ ಜನ್ಮ ಶತಮಾನೋತ್ಸವ ವರ್ಷವಾದ ೧೯೯ಂ-೯೧ರ ಅವಧಿಯಲ್ಲಿ ಸಾಧ್ಯವಾದಷ್ಟು ಸಂಪುಟಗಳನ್ನು ಕನ್ನಡ ಅನುವಾದ ಮಾಡಿಸಿ ಪ್ರಕಟಿಸುವ ಕಾರ್ಯವನ್ನು ಹಮ್ಮಿಕೊಂಡಿದ್ದು ಸಂಪಾದಕ ಸಮಿತಿ ಈ ದಿಶೆಯಲ್ಲಿ ಕಾರ್ಯಪ್ರವೃತ್ತವಾಗಿದೆ. +ಕೊನೆಯಲ್ಲಿ, ಈ ಒಂದನೆಯ ಸಂಪುಟದಲ್ಲಿ ಪ್ರಕಟವಾಗುತ್ತಿರುವ ಕೃತಿಗಳು ಮತ್ತು ಲೇಖನಗಳನ್ನು ಕುರಿತು ಒಂದು ಮಾತು. +ಈಗಾಗಲೇ ಹೇಳಿರುವಂತೆ ಇದರಲ್ಲಿ ಸೇರಿರುವ ಎಲ್ಲಾ ಕೃತಿಗಳೂ ಮೊದಲೇ ಪ್ರಕಟವಾಗಿದ್ದವು. +ಇವುಗಳಲ್ಲಿ ಕೆಲವು ಈಗ ಲಭ್ಯವಿಲ್ಲ. +ಆದಾಗ್ಯೂ ಅವುಗಳನ್ನು ಸಂಗ್ರಹಿಸಿ ಮೂಲ ಸಂಪುಟದಲ್ಲಿ ಪ್ರಕಟಿಸಲಾಗಿದೆ. +ಈ ಪ್ರತಿಯೊಂದು ಕೃತಿಯ ಸಂಕ್ಷಿಪ್ತ ಪರಿಚಯವನ್ನು ಮೂಲ ಸಂಪುಟದ ಪೀಠಿಕೆಯ ಅನುವಾದದಲ್ಲಿ ಕೊಡಲಾಗಿದೆಯಾದ್ದರಿಂದ ಅವುಗಳನ್ನು ಇಲ್ಲಿ ಪುನಃ ಪ್ರಸ್ತಾಪಿಸುವ ಅವಶ್ಯಕತೆಯಿಲ್ಲ. +ಈ ಸಂಪುಟದಲ್ಲಿ ಸೇರಿರುವ ಕೃತಿಗಳು ಡಾ.ಅಂಬೇಡ್ಕರ್‌ ಅವರು ತಮ್ಮ ವಿದ್ಯಾರ್ಥಿ ದೆಸೆಯಲ್ಲಿ ಮತ್ತು ಭಾರತದ ಸಾರ್ವಜನಿಕ ಜೀವನದಲ್ಲಿ ಕಾಲಿರಿಸಿದ ನಂತರ ಬರೆದವುಗಳಾಗಿವೆ. +ಈ ಕೃತಿಗಳಲ್ಲಿ ಪ್ರಸ್ತಾಪಿಸಲಾಗಿರುವ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಸಮಸ್ಯೆಗಳು ಅಂದಿನ ಹಿನ್ನೆಲೆಯಲ್ಲಿವೆಯಾದರೂ ಆ ಸಮಸ್ಯೆಗಳು ಮತ್ತು ಅವುಗಳಿಗೆ ಡಾ.ಅಂಬೇಡ್ಕರ್‌ಅವರು ನೀಡಿರುವ ಪರಿಹಾರಗಳು ಇಂದೂ ಸಹ ಅತ್ಯಂತ ಪ್ರಸ್ತುತವಾಗಿವೆ. +ಇಂದೂ ಸಹ ನಾವು ಈ ಸಮಸ್ಯೆಗಳನ್ನು ಎದುರಿಸುತ್ತಿದ್ದು ಅವುಗಳ ಪರಿಹಾರಗಳಿಗಾಗಿ ಈಗಲೂ ದಾರಿ ಹುಡುಕುತ್ತಿದ್ದೇವೆ. +ಅವರು ಅಂದು ನುಡಿದ ಭವಿಷ್ಯವಾಣಿ ಇಂದು ನಿಜವಾಗುತ್ತಿದೆ. +ಉದಾಹರಣೆಗಾಗಿ,ಭಾಷಾವಾರು ಪ್ರಾಂತ್ಯಗಳ ರಚನೆಯಿಂದ ಉದ್ಭವಿಸುವ ದುಷ್ಪರಿಣಾಮಗಳ ಬಗೆಗೆ ಅವರ ಭವಿಷ್ಯವಾಣಿ ಇಂದು ಸಂಭವಿಸಿದೆ. +ಆದ್ದರಿಂದ ನಾವು ಡಾ.ಅಂಬೇಡ್ಕರ್‌ಅವರ ವಿಚಾರಗಳನ್ನು ಕಡೆಗಣಿಸದೆ, ಅವುಗಳನ್ನು ಗಂಭೀರವಾಗಿ ಪರಿಶೀಲಿಸಿ ಅವರ ಸೂಚನೆ ಸಲಹೆಗಳನ್ನುಕಾರ್ಯಗತಗೊಳಿಸುವ ಕಾರ್ಯ ಕೈಗೊಳ್ಳಬೇಕಾಗಿದೆ. +ಈ ಹಿನ್ನೆಲೆಯಲ್ಲಿ ಈ ಸಂಪುಟದ ಪ್ರಕಟಣೆ ಸೂಕ್ತವೂ ಆಗಿರುವುದಲ್ಲದೆ ಉಪಯುಕ್ತವೂ ಆಗುವುದೆಂದು ಆಶಿಸಲಾಗಿದೆ. +ಡಾ.ಅಂಬೇಡ್ಕರ್‌ ಅವರ ಜನ್ಮ ಶತಮಾನೋತ್ಸವದ ಅಂಗವಾಗಿ ಅವರ ಬರೆಹಗಳು ಮತ್ತು ಭಾಷಣಗಳ ಕನ್ನಡ ಅನುವಾದದ ಈ ಮೊದಲನೆಯ ಸಂಪುಟವನ್ನುಅತ್ಯಂತ ಹರ್ಷದಿಂದ ಪ್ರಕಟಿಸುತ್ತಿದ್ದೇವೆ. +ಡಾ.ಅಂಬೇಡ್ಕರ್‌ ಅವರ ಬರವಣಿಗೆಗಳಲ್ಲಿ ಮತ್ತು ಭಾಷಣಗಳಲ್ಲಿ ಅಭಿವ್ಯಕ್ರಗೊಂಡಿರುವ ವಿಚಾರಗಳು ಭಾರತದ ಸಾಮಾಜಿಕ ವಿಚಾರದ ಇತಿಹಾಸ ಮತ್ತು ಬೆಳವಣಿಗೆಯನ್ನು ನಿರೂಪಿಸುವಲ್ಲಿ ಅತ್ಯಂತ ಮಹತ್ವದ್ದಾಗಿವೆ. +ಕಾಲ ಕ್ರಮೇಣ ಅವರ ಅನೇಕ ಪ್ರಕಟಣೆಗಳು ದೊರೆಯುತ್ತಿಲ್ಲ. +ಕೆಲವು ಪ್ರಕಟಣೆಗಳ ಅಧಿಕೃತ ಕೃತಿಗೂ ಕೂಡ ದೊರೆಯದಾಗಿವೆ. +ಇದೂ ಅಲ್ಲದೆ, ಕಾಲ ಗತಿಸಿದಂತೆ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಸಂಗತಿಗಳ ಬಗ್ಗೆ ಅವರ ವಿಚಾರಗಳು ನಿಜವಾಗುತ್ತಿವೆ. +ಇಂದು ಸಾಮಾಜಿಕ ಉದ್ವೇಗ ಮತ್ತು ಜಾತಿ ಸಂಘರ್ಷ ಹೆಚ್ಚುತ್ತಲೇ ಇವೆ. +ಆದ್ದರಿಂದ ಡಾ.ಅಂಬೇಡ್ಕರ್‌ ಅವರ ವಿಚಾರಗಳು ಇಂದು ಹೆಚ್ಚು ಪ್ರಸ್ತುತವೆನಿಸಿವೆ. +ವಿವಿಧ ಸಾಮಾಜಿಕ- ಆರ್ಥಿಕ ಸಮಸ್ಯೆಗಳಿಗೆ ಅವರು ನೀಡಿದ, ಸೂಚಿಸಿದ ಪರಿಹಾರಗಳು ಮತ್ತು ವಿಧಾನಗಳನ್ನು ಸರಿಯಾಗಿ ಅರಿತುಕೊಂಡು ಪಾಲಿಸಿದ್ದೇ ಆದರೆ ಸದ್ಯದ ಕ್ಷೋಭೆಯಿಂದ ಪಾರಾಗಬಹುದಲ್ಲದೆ, ಅವು ಮುಂದೆಯೂ ಸಹಮಾರ್ಗದರ್ಶಿಗಳಾಗಬಲ್ಲವು. +ಆದ್ದರಿಂದ ಮಹಾರಾಷ್ಟ್ರ ಸರ್ಕಾರದವರು ಡಾ.ಅಂಬೇಡ್ಕರ್‌ ಅವರ ಲಭ್ಯವಿರುವ ಎಲ್ಲ ಬರೆಹಗಳನ್ನೂ ಸಂಗ್ರಹಿಸಿ, ಸೂಕ್ತ ರೀತಿಯಲ್ಲಿ ಸಂಪಾದಿಸಿ ಪ್ರಕಟಿಸುವುದಕ್ಕಾಗಿ ಒಂದು ಸಲಹಾ ಸಮಿತಿಯನ್ನು ನೇಮಿಸಿದುದು ಅತ್ಯಂತ ಸೂಕ್ತವಾದ ಹೆಜ್ಜೆಯಾಗಿದೆ. +ಘನ ವಿದ್ವಾಂಸ ಡಾ.ಅಂಬೇಡ್ಕರ್‌ ಅವರ ಎಲ್ಲ ಬರವಣಿಗೆಗಳನ್ನೂ ಮತ್ತು ಭಾಷಣಗಳನ್ನೂ ಸಂಗ್ರಹಿಸುವ ಕಾರ್ಯವನ್ನು ಈಗ ಕೈಗೊಳ್ಳಲಾಗಿದೆ. +ಈ ಸಂಪುಟದಲ್ಲಿ ಭಾರತದಲ್ಲಿ ಜಾತಿಗಳು, ಜಾತಿ ನಿರ್ಮೂಲನೆ, ನ್ಯಾಯಮೂರ್ತಿ ರಾನಡೆಯವರನ್ನು ಕುರಿತ ಭಾಷಣ, ಸಂಯುಕ್ತ ರಾಜ್ಯ ಹಾಗೂ ಸ್ವಾತಂತ್ರ್ಯ ಇತ್ಯಾದಿ ಪ್ರಕಟಣೆಗಳೂ ಅಲ್ಲದೇ, ಸುಲಭವಾಗಿ ಸಿಗದೇ ಇರುವ ಅವರ ಕೆಲವು ಲೇಖನಗಳಾದ ಭಾರತದಲ್ಲಿ ಚಿಕ್ಕ ಹಿಡುವಳಿಗಳು, ರಸೆಲ್ಲರ ಪುಸ್ತಕದ ವಿಮರ್ಶೆ ಮುಂತಾದ ಲೇಖನಗಳನ್ನೂ ಸೇರಿಸಲಾಗಿದೆ. +ಭಾರತದಲ್ಲಿ ಜಾತಿಗಳು :ಡಾ.ಅಂಬೇಡ್ಕರ್‌ ಅವರು ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ತಮ್ಮ ಡಾಕ್ಟರೇಟ್‌ ಪದವಿಗಾಗಿ ಅಧ್ಯಯನ ಮಾಡುತ್ತಿದ್ದಾಗ ಈ ಪ್ರಬಂಧವನ್ನು ಡಾ.ಗೋಲ್ಡನ್‌ ವೀರುರ್‌ ಅವರ ಮಾನವಶಾಸ್ತ್ರದ ಪ್ರೌಢ ವಿದ್ಯಾರ್ಥಿವರ್ಗದಲ್ಲಿ ಮಂಡಿಸಿದರು. +ಜಾತಿ ಪದ್ಧತಿಯ ವಿಷಯವನ್ನು ಅವರು ಸ್ಟಾಭಾವಿಕವಾಗಿಯೇ ಮಾನವಶಾಸ್ತ್ರದ ದೃಷ್ಟಿಕೋನದಿಂದ ಪರಿಶೀಲಿಸಿದ್ದಾರೆ. +ಭಾರತದ ಜನಸಂಖ್ಯೆ ಆರ್ಯರು, ದ್ರಾವಿಡರು, ಮಂಗೋಲರು ಮತ್ತು ಸಿಧಿಯನ್ನರ ಮಿಶ್ರಣವಾಗಿದೆ. +ಕುಲ ಸಂಬಂಧದಲ್ಲಿ ಎಲ್ಲರೂ ವಿಜಾತೀಯರಿದ್ದು ಕಲಬೆರಕೆಯವರಾಗಿದ್ದಾರೆ. +ಅವರ (ಡಾ.ಅಂಬೇಡ್ಕರ್‌ ಅವರ) ಪ್ರಕಾರ ಭಾರತ ಭೂಖಂಡದ ಒಂದು ಕಡೆಯಿಂದ ಇನ್ನೊಂದು ಕಡೆಯವರೆಗಿನ ಜನರು ಸಾಂಸ್ಕೃತಿಕ ಏಕತೆಯಿಂದ ಒಂದುಗೂಡಿದ್ದಾರೆ. +ಜಾತಿಯ ಬಗ್ಗೆ ಇರುವ ವಿವಿಧ ಅಧಿಕೃತ ಸಿದ್ಧಾಂತಗಳನ್ನು ಪರಿಶೀಲಿಸಿದ ನಂತರ, ಜಾತಿ ಸಮೂಹಗಳ ರಜನೆಗೆ ಭಿನ್ನ ಗೋತ್ರ ವಿವಾಹ ಪದ್ಧತಿಯ ಮೇಲೆ ಸ್ವಗೋತ್ರವಿವಾಹ ಪದ್ಧತಿಯ ಮೇಲುಗೈ ಆದುದೇ ಕಾರಣವೆಂದು ಡಾ.ಅಂಬೇಡ್ಕರ್‌ ಅವರು ವಿಶ್ಲೇಷಿಸಿದ್ದಾರೆ. +ಸ್ವಗೋತ್ರವಿವಾಹದ ಬಗ್ಗೆ ಹೇಳುತ್ತಾ ಅವರು “ತಿ' ಪದ್ಧತಿ, ಕಡ್ಡಾಯ ವಿಧವಾ ಪದ್ಧತಿ ಮತ್ತು ಬಾಲ್ಯ ವಿವಾಹಗಳು ಈಸ್ವಗೋತ್ರ ವಿವಾಹ ಪದ್ಧತಿಯ ಪರಿಣಾಮಗಳಾಗಿವೆ. +ಡಾ. ಅಂಬೇಡ್ಕರ್‌ ಅವರ ಅಭಿಪ್ರಾಯದಲ್ಲಿ ಸಮಾಜದಲ್ಲಿ 2011 ಗುಂಪುಗಳ ರಚನೆ ಒಂದು ಸ್ವಾಭಾವಿಕ ಪಕ್ರಿಯೆಯಾಗಿದ್ದು ಈ ಗುಂಪುಗಳು ಬಹಿಷ್ಕಾರ ಮತ್ತು ಅನುಕರಣೆಯ ಮೂಲಕ ಕ್ರಮೇಣ ಜಾತಿಗಳಾಗಿ ಪರಿವರ್ತಿತಗೊಂಡಿವೆ. +ಜಾತಿ ನಿರ್ಮೂಲನೆ ಅವರ ಈ ಸುಪ್ರಸಿದ್ಧ ಭಾಷಣವು ಮಹಾತ್ಮ ಗಾ೦ಂಧಿಯಂತವರ ಗಮನವನ್ನೂ ಸೆಳೆಯಿತು. +ಸವರ್ಣ ಹಿಂದೂ ಸುಧಾರಕರು ಪ್ರಜ್ಞಾವಂತ ಬುದ್ಧಿಜೀವಿಗಳಾಗಿದ್ದು ಅವರು ಕಡ್ಡಾಯ ವಿಧವಾ ಪದ್ಧತಿ, ಬಾಲ್ಯ ವಿವಾಹ ಮುಂತಾದ ಪಿಡುಗಗಳ ನಿವಾರಣೆಗೆ ತಮ್ಮ ಕಾರ್ಯಕ್ಷೇತ್ರವನ್ನು ಸೀಮಿತಗೊಳಿಸಿದ್ದರು. +ಆದರೆ ಅವರು ಜಾತಿಗಳ ನಿರ್ಮೂಲನೆಗಾಗಿ ಚಳುವಳಿಯ ಅವಶ್ಯಕತೆಯನ್ನು ಅರಿಯಲಿಲ್ಲ ಮತ್ತು ಜಾತಿಯ ವಿರುದ್ಧ ಚಳುವಳಿ ಮಾಡುವ ಧೈರ್ಯವೂ ಅವರಿಗಿರಲಿಲ್ಲವೆಂಬುದು ಡಾ.ಅಂಬೇಡ್ಕರ್‌ ಅವರ ಅನಿಸಿಕೆಯಾಗಿತ್ತು. +ಅವರ ಪ್ರಕಾರ ಭಾರತದಲ್ಲಿ ರಾಜಕೀಯ ಕ್ರಾಂತಿಗೆ ಮೊದಲು ಸಂತರುಗಳ ನಾಯಕತ್ವದಲ್ಲಿ ಸಾಮಾಜಿಕ ಮತ್ತು ಧಾರ್ಮಿಕ ಸುಧಾರಣೆಗಳು ಸಂಭವಿಸಿದವು. +ಆದರೆ ಬ್ರಿಟಿಷರ ಆಳ್ವಿಕೆಯಲ್ಲಿ ರಾಜಕೀಯ ಸ್ಥಾತಂತ್ರ್ಯ ಪ್ರಶ್ನೆ ಸಾಮಾಜಿಕ ಸುಧಾರಣೆಯ ಮೇಲೆ ಆದ್ಯತೆ ಪಡೆದು ಸಾಮಾಜಿಕ ಸುಧಾರಣೆಯ ಬಗ್ಗೆ ಅಲಕ್ಷ್ಯ ಮುಂದುವರಿಯಿತು. +ಸಮಾಜವಾದಿಗಳ ವಿಷಯದಲ್ಲಿ ಮಾತಾನಾಡುತ್ತಾ ಸಮಾಜವಾದಿಗಳು ಕ್ರಾಂತಿಗೆ ಮುಂಚೆ ಅಥವಾ ಕ್ರಾಂತಿಯ ನಂತರವಾದರೂ ಈ ಜಾತಿ ಪೆಡಂಭೂತದ ವಿರುದ್ಧ ಹೋರಾಡಜೇಕಾಗುತ್ತದೆ ಎಂದು ಅವರು ಹೇಳಿದ್ದರು. +ಜಾತಿಯು ಶ್ರಮ ಅಥವಾ ದುಡಿಮೆಯ ವಿಭಜನೆಯನ್ನು ಆದರಿಸಿಲ್ಲ ಎಂಬುದು ಅವರ ದೃಢ ಅಭಿಪ್ರಾಯವಾಗಿತ್ತು. +ಅದು ಶ್ರಮಿಕರ ಅಥವಾ ಕಾರ್ಮಿಕರ ವಿಭಜನೆಯಾಗಿದೆ. +ಒಂದು ಆರ್ಥಿಕ ವ್ಯವಸ್ಥೆಯ ರೂಪದಲ್ಲಿಯೂ ಕೂಡಜಾತಿ ಒಂದು ಉಪದ್ರವಿ ವ್ಯವಸ್ಥೆಯಾಗಿದೆ. +ಸಾಮಾಜಿಕ ಒಕ್ಕಟ್ಟಿಗೆ ಹಾಗೂ ಐಕಮತ್ಯಕ್ಕೆ ಅಡ್ಡಿಯಾಗಿರುವ ಜಾತಿ ನಿರ್ಮೂಲನಕ್ಕೆ ಮತ್ತು ಸ್ವಾತಂತ್ರ್ಯ, ಸಮಾನತೆ ಹಾಗೂ ಭ್ರಾತೃತ್ವದ ಆದರ್ಶಗಳ ಆಧಾರದ ಮೇಲೆ ಮತ್ತು ಪ್ರಜಾಪ್ರಭುತ್ವ ತತ್ವಗಳಿಗನುಗುಣವಾದ ಹೊಸ ಸಮಾಜ ವ್ಯವಸ್ಥೆಯ ನಿರ್ಮಾಣಕ್ಕೆ ಅವರು ಕರೆಕೊಟ್ಟರು. +ಅವರು ಈ ಸಮಸ್ಯೆಯ ಪರಿಹಾರಗಳಲ್ಲಿ ಒಂದಾದ ಅಂತರ್ಜಾತೀಯ ವಿವಾಹವನ್ನು ಪ್ರತಿಪಾದಿಸಿದರು. +ಶಾಸ್ತ್ರಗಳಲ್ಲಿರುವ ನಂಬುಗೆಯೇ ಜಾತಿಗಳನ್ನು ಉಳಿಸಿಕೊಂಡು ಹೋಗಿರುವುದಕ್ಕೆ ಮೂಲ ಕಾರಣವಾಗಿವೆ ಎಂದು ಅವರು ಒತ್ತಿಹೇಳಿದರು. +ಆದ್ದರಿಂದ “ಪ್ರತಿಯೊಬ್ಬ ಸ್ತ್ರೀ ಪುರುಷನನ್ನು ಶಾಸ್ತ್ರಗಳ ಗುಲಾಮಗಿರಿಯಿಂದ ಮುಕ್ತಗೊಳಿಸಿ,ಶಾಸ್ತಾಧಾರಿತ ವಿನಾಶಕಾರಿ ಭಾವನೆಗಳನ್ನು ಅವರ ಮನಸ್ಸುಗಳಿಂದ ತೆಗೆದುಹಾಕಿ ಅವರ ಮನಸ್ಸುಗಳನ್ನು ಶುದ್ಧಗೊಳಿಸಿದಾಗ ಅವನಾಗಲೀ ಅವಳಾಗಲೀ ಸಹಪಂಕ್ತಿ ಭೋಜನ ಮತ್ತು ಅಂತರ್ಜಾತಿ ವಿವಾಹಕ್ಕೆ ಮುಂದಾಗುತ್ತಾರೆ”ಎಂದು ಅವರು ಹೇಳಿದ್ದಾರೆ. +ಅವರ ಪ್ರಕಾರ, ಸಮಾಜವು ವೈಚಾರಿಕತೆ ಆಧಾರ ಹೊಂದಿರಬೇಕೇ ಹೊರತು,ಜಾತಿ ಪದ್ಧತಿಯ ಕ್ರೂರ ಪರಂಪರೆಗಳನ್ನಲ್ಲ. +ಭಾಷಾವಾರು ಪ್ರಾಂತ್ಯ ಮಹಾರಾಷ್ಟ್ರ ಸಂಪುಟದ ಎರಡನೆಯ ಭಾಗದಲ್ಲಿ ರಾಜ್ಯಗಳ ಮೇಲೆ ಡಾ.ಅಂಬೇಡ್ಕರ್‌ ಅವರ ಪ್ರಧಾನ ಬರೆಹಗಳು ಸೇರಿವೆ. +ಭಾಷಾವಾರು ಪ್ರಾಂತ್ಯ ಮಹಾರಾಷ್ಟ್ರ ಭಾಷಾವಾರು ಪ್ರಾಂತ್ಯಗಳ ನಿರ್ಮಾಣದ ಬಗ್ಗೆ ಅವರ ಪ್ರಥಮ ಹೇಳಿಕೆಯಾಗಿದೆ. +ಅದು ೧೯೪೮ರಲ್ಲಿ ಅವರು ಭಾಷಾವಾರು ಪ್ರಾಂತ್ಯಗಳ ಆಯೋಗಕ್ಕೆ ಸಲ್ಲಿಸಿದ ಮನವಿಪತ್ರ. +ತಮ್ಮ ತಮ್ಮ ಜನಾಂಗ, ಭಾಷೆ ಮತ್ತು ಸಾಹಿತ್ಯಗಳ ಬಗ್ಗೆ ಇರುವ ಹೆಮ್ಮೆ ಮತ್ತು ಅಭಿಮಾನಗಳಿಂದ ಪ್ರತ್ಯೊಕ ರಾಷ್ಟ್ರಭಾವನೆಗಳ ಬೆಳವಣಿಗೆಯ ಅಪಾಯ ಭಾಷಾವಾರು ಪ್ರಾಂತ್ಯಗಳ ರಚನೆಯಲ್ಲಿ ಅಡಕವಾಗಿದ್ದು ಅವು ಭಾರತದ ಏಕತೆಗೆ ಮಾರಕವಾಗುವ ಸಂಭವವನ್ನು ಮನಗಂಡಿದ್ದರೂ ಕೂಡ, ಭಾಷೆಯ ಆಧಾರದ ಮೇಲೆ ಪ್ರಾಂತ್ಯಗಳ ಪುನರ್ರಚನೆಯಲ್ಲಿರುವ ಕೆಲವು ರಾಜಕೀಯ ಅನುಕೂಲಗಳನ್ನು ಡಾ.ಅಂಬೇಡ್ಕರ್‌ ಅವರು ಕಂಡುಕೊಂಡಿದ್ದರು. +ರಾಜ್ಯದ ಅಧಿಕೃತ ಭಾಷೆ ಕೇಂದ್ರ ಸರಕಾರದ ಅಧಿಕೃತ ಭಾಷೆಯಾಗಿರಬೇಕೆಂಬ ಒಂದು ಷರತ್ತಿನೊಂದಿಗೆ ಒಂದೇ ಜನಾಂಗದಿಂದ ಕೂಡಿದ ಭಾಷಾವಾರು ಪ್ರಾಂತ್ಯ ಪ್ರಜಾಪ್ರಭುತ್ವದ ಕಾರ್ಯಾಚರಣೆಗೆ ಭಿನ್ನ ಜನಾಂಗಗಳಿಂದ ಕೂಡಿದ ಅಥವಾ ಕಲಬೆರಕೆಯ ಪ್ರಾಂತ್ಯಕ್ಕಿಂತ ಹೆಚ್ಹು ಸಮಂಜಸವೆನಿಸುವುದು. +ಭಾರತದಲ್ಲಿ ಹೊಸ ಸಂವಿಧಾನಜಾರಿಗೆ ಬರುತ್ತಿರುವುದರಿಂದ ಈಗಾಗಲೇ ಆರು ಭಾಷಾವಾರು ಪ್ರಾಂತ್ಯಗಳು ಅಸ್ತಿತ್ವದಲ್ಲಿದ್ದು , ಮುಂಬಯಿ,ಮದ್ರಾಸ್‌ ಮತ್ತು ಮಧ್ಯಪ್ರಾಂತ್ಯಗಳನ್ನು ಭಾಷಾವಾರು ಆಧಾರದ ಮೇಲೆ ಪುನರ್ಫಟಸುವ ಪ್ರಶ್ನೆಯನ್ನು ಮುಂದೂಡಲು ಬರುವುದಿಲ್ಲ. +ಮುಂದುವರಿದು, ಡಾ.ಅಂಬೇಡ್ಕರ್‌ ಅವರು ಒಂದೇ ಶಾಸಕಾಂಗ ಮತ್ತು ಒಂದೇ ಕಾರ್ಯಾಂಗವನ್ನುಹೊಂದಿದ ಹಾಗೂ ಮಧ್ಯಪ್ರಾಂತ್ಯ ಮತ್ತು ಬಿಹಾರದ ಮರಾಠಿ ಮಾತನಾಡುವ ಜಿಲ್ಲೆಗಳನ್ನು ಮತ್ತು ಮುಂಬಯಿ ನಗರವನ್ನು ರಾಜಧಾನಿಯಾಗಿ ಹೊಂದಿರುವ ಏಕಭಾಷಾ ಮಹಾರಾಷ್ಟ್ರ ಪ್ರಾಂತ್ಯದ ರಚನೆಯನ್ನು ಪತಿಪಾದಿಸಿದ್ದಾರೆ. +ಮುಂಬಯಿ ನಗರವನ್ನು ಮಹಾರಾಷ್ಟ್ರದಿಂದ ಬೇರ್ಪಡಿಸಿ ಅದನ್ನು ಒಂದು ಪ್ರತ್ಯೇಕ ಪ್ರಾಂತ್ಯವನ್ನಾಗಿ ರಚಿಸಬೇಕೆಂಬ ವಾದವನ್ನು ಡಾ.ಅಂಬೇಡ್ಕರ್‌ ಅವರು ಐತಿಹಾಸಿಕ, ಭೌಗೋಳಿಕ, ಜನಾಂಗೀಯ, ವಾಣಿಜ್ಯ, ಆರ್ಥಿಕ ಮತ್ತು ಇತರ ಅಂಶಗಳು ಹಾಗೂ ಸಾಧಾರಣವಾದ ದಾಖಲೆಗಳ ಪ್ರಮಾಣದೊಂದಿಗೆ ಬಲವಾಗಿ ಅಲ್ಲಗಳೆದಿದ್ದಾರೆ. +ಮುಂಬಯಿಯ ಸಮಸ್ಯೆಯನ್ನು ಪಂಚಾಯತಿಯ ಮೂಲಕ ತೀರ್ಮಾನ ಮಾಡಬೇಕೆಂಬ ಸೂಚನೆಯನ್ನುತಿರಸ್ಕರಿಸುತ್ತ, ಮಹಾರಾಷ್ಟ್ರ ಮತ್ತು ಮುಂಬಯಿ ಪರಸ್ಪರಾವಲಂಬಿಯಾಗಿವೆಯಲ್ಲದೆ ಅವು ನಿಜವಾಗಿಯೂ ಒಂದಕ್ಕೊಂದು ಪೂರಕವಾಗಿದ್ದು ಸಮಗ್ರವಾಗಿವೆ. +ನಿರ್ಬಂಧ ಮತ್ತು ಸಮದಂಡಿಗಳ ಅವಶ್ಯಕತೆ"ಟೈಮ್ಸ್‌ ಆಫ್‌ ಇಂಡಿಯಾ"ದಲ್ಲಿ ಪ್ರಕಟವಾದ ಈ ಲೇಖನದಲ್ಲಿ ಡಾ.ಅಂಬೇಡ್ಕರ್‌ ಅವರು ಭಾಷಾವಾರು ರಾಜ್ಯಗಳ ಪರಿಕಲ್ಪನೆಯ ಇತಿಹಾಸ ಮತ್ತು ಬೆಳವಣಿಗೆಯನ್ನು ವಿವರಿಸುತ್ತಾ ಅವುಗಳ ಕೋಮುವಾರು ರಚನೆ ಮತ್ತು ಸುಸಂಗತೆಯನ್ನು ಪರಿಶೀಲಿಸಿದ್ದಾರೆ. +ಅವರ ಪ್ರಕಾರ ಹೈದರಾಬಾದ್‌ ಸಂಸ್ಥಾನದ ತೆಲುಗು ಭಾಷಾಭಾಗಗಳನ್ನು ಹೊರತುಪಡಿಸಿದ ಆಂಧ್ರ ರಾಜ್ಯ ಸುಸಂಗತವಾಗಲಾರದು. +ಜಾತಿ ಸಂಘಟನೆಯ ದೃಷ್ಟಿಯಿಂದ ಭಾಷಾವಾರು ಕ್ಷೇತ್ರಗಳಾದ ಪೆಪ್ಸು, ಆಂಧ್ರ ಮತ್ತು ಮಹಾರಾಷ್ಟ್ರಗಳಲ್ಲಿ ಒಂದು ಅಥವಾ ಎರಡು ಬಹುಸಂಖ್ಯಾತಪ್ರಬಲ ಜಾತಿಗಳು ಮತ್ತು ಈ ಬಹುಸಂಖ್ಯಾತ ಪ್ರಬಲ ಜಾತಿಗಳನ್ನು ಅವಲಂಬಿಸಿದಂತಹ ಮತ್ತು ಅವುಗಳಿಗೆ ಅಧೀನವಾದಂತಹ ಕೆಲವೇ ಅಲ್ಪಸಂಖ್ಯಾತ ಜಾತಿಗಳಿರುತ್ತವೆ. +ಒಂದು ಬೃಹತ್‌ ರಾಜ್ಯದಲ್ಲಿ ಒಂದೇ ಭಾಷೆಯನ್ನಾಡುವ ಎಲ್ಲಾ ಜನರನ್ನು ಒಂದುಗೂಡಿಸುವುದರ ಸೂಕ್ತತೆಯನ್ನು ಅವರು ಪ್ರಶ್ನಿಸುತ್ತಾರೆ. +ಇಂತಹ ಒಂದು ಗೂಡಿಸುವಿಕೆ ಅಥವಾ ಕ್ರೋಢೀಕರಣದಿಂದುಂಟಾಗುವ ಪ್ರತ್ಯೊಕತೆಯ ಪ್ರಜ್ಞೆ ರಾಜ್ಯ ರಾಜ್ಯದ ನಡುವೆ ದ್ವೇಷೋದ್ರೇಕಗಳಿಗೆಡೆಯಾಗಬಹುದು. +ಆದಾಗ್ಯೂ ಭಾಷಾವಾರು ಪ್ರಾಂತ್ಯಗಳ ರಚನೆಗೆ ಆಧಾರವಿರುವುದರಿಂದ ಅವರು ಜಾತಿ ಆಧಾರಿತ ಬಹುಮತವು ಭಾಷಾವಾರು ರಾಜ್ಯಗಳ ಅಡಿಯಲ್ಲಿ ತನ್ನ ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳದಂತೆ ನೋಡಿಕೊಳ್ಳಲು ಅವಶ್ಯಕವಾದ ನಿರ್ಬಂಧ ಮತ್ತು ಸಮದಂಡಿಗಳಿರಬೇಕೆಂದು ಅವರು ವಾದಿಸಿದ್ದಾರೆ. +ಭಾಷಾವಾರು ರಾಜ್ಯಗಳನ್ನು ಕುರಿತ ವಿಚಾರಗಳು "ಭಾಷಾವಾರು ರಾಜ್ಯಗಳನ್ನು ಕುರಿತ ವಿಚಾರಗಳು" ಭಾಷಾವಾರು ರಾಜ್ಯಗಳ ರಚನೆಯ ವಿಷಯವಾಗಿ ಅವರ ಅಂತಿಮ ಹೇಳಿಕೆಯಾಗಿದ್ದು. +ಅದು ರಾಜ್ಯ ಪುನರ್ವಿಂಗಡಣಾ ಆಯೋಗದ ವರದಿಯ ವಿಮರ್ಶೆಯಾಗಿತ್ತು ಅವರ ಪ್ರಕಾರ ಈ ಆಯೋಗವು ಉತ್ತರ ಪ್ರದೇಶ (ಯು.ಪಿ) ಮತ್ತು ಬಿಹಾರಗಳನ್ನು ಇದ್ದಂತೆಯೇ ಇಟ್ಟು ರಾಜ್ಯಗಳ ನಡುವೆ ಅಸಮಾನತೆಯನ್ನು ನಿರ್ಮಿಸಿದೆಯೇ ಅಲ್ಲದೆ ಇವುಗಳ ಜೊತೆಯಲ್ಲಿ ಮಧ್ಯಪ್ರದೇಶ ಮತ್ತು ರಾಜಾಸ್ಥಾನಗಳಂತಹ ಬೃಹತ್‌ ರಾಜ್ಯಗಳನ್ನು ಹೊಸದಾಗಿ ನಿರ್ಮಿಸಿದೆ. +ಇದರಿಂದಾಗಿ ಕ್ರೋಢೀಕೃತ ಹಿಂದಿ ಮಾತನಾಡುವ ಉತ್ತರ ಮತ್ತು ಅದರ ವಿರುದ್ಧ ಪ್ರತೇಕಿತ ದಕ್ಷಿಣ ಭಾಗಗಳ ನಡುವೆ ಹೊಸ ರಾಜಕೀಯ ಸಮಸ್ಯೆಯೂ ಸೃಷ್ಟಿಯಾಗಿದೆ. +ಈ ಎರಡೂ ವಿಭಾಗಗಳ ನಡುವಣ ವ್ಯಾಪಕವಾದ ಸಾಂಸ್ಕೃತಿಕ ಭಿನ್ನತೆಗಳನ್ನು ಗಮನಿಸಿದಾಗ ಮತ್ತು ದಕ್ಷಿಣದ ಮುಖಂಡರು ವ್ಯಕ್ತಪಡಿಸುತ್ತಿರುವ ದಕ್ಷಿಣದ ಮೇಲೆ ಉತ್ತರ ಭಾರತದ ಆಧಿಪತ್ಯದ ಭೀತಿಯಿಂದಾಗಿ ಡಾ.ಅಂಬೇಡ್ಕರ್‌ ಅವರು ಕಾಲಕ್ರಮೇಣ ಇದು ಈ ಎರಡೂ ಪ್ರಾದೇಶಿಕ ವಿಭಾಗಗಳ ನಡುವೆ ಸಂಭವಿಸಬಹುದಾದ ಸಂಘರ್ಷದ ಬಗ್ಗೆ ಭವಿಷ್ಯ ನುಡಿದಿದ್ದಾರೆ. +ಆಯೋಗವು “ಒಂದು ಭಾಷೆ ಒಂದು ರಾಜ್ಯ”ತತ್ವದ ಬದಲು "ಒಂದು ರಾಜ್ಯ ಒಂದು ಭಾಷೆ "ತತ್ವವನ್ನು ಅನುಸರಿಸಬೇಕಾಗಿತ್ತೆಂದು ಅವರ ಅಭಿಪ್ರಾಯ. +ಅವರು ಬಹು ಭಾಷಾ ರಾಜ್ಯಗಳ ಬದಲು ಏಕ-ಭಾಷಾ ರಾಜ್ಯಗಳ ನಿರ್ಮಾಣವನ್ನು ಪ್ರತಿಪಾದಿಸಿದರು. +ಏಕೆಂದರೆ ಅವರ ಅಭಿಪ್ರಾಯದಲ್ಲಿ ಏಕಭಾಷಾ ರಾಜ್ಯಗಳಲ್ಲಿ ಪ್ರಜಾಪ್ರಭುತ್ವವಾದಿ ಮತ್ತು ಭದ್ರ ರಾಜ್ಯದ ಬುನಾದಿಯಾಗಿರುವ ಸಮ-ಭಾವನೆಯನ್ನು ವೃದ್ಧಿಗೊಳಿಸುತ್ತದೆ. +ಆದರೆ ಎರಡು ವಿಭಿನ್ನ ಭಾಷಾ ಗುಂಪುಗಳನ್ನು ಬಲವಂತವಾಗಿ ಒಂದೇ ಕಡೆ ಕೂಡಿಸುವುದರಿ೦ಂದ ಬಹು-ಭಾಷಾ ರಾಜ್ಯಗಳಲ್ಲಿ ಪ್ರಜಾಪ್ರಭುತ್ವಕ್ಕೆ ಅಸಮಂಜಸವೆನಿಸಿದ ನಾಯಕತ್ವದ ಮತ್ತು ಆಡಳಿತದಲ್ಲಿ ತಾರತಮ್ಯದಿಂದ ಉಂಟಾಗುವ ಆಂತರಿಕ ಜಗಳಗಳು ಸಂಭವಿಸುತ್ತವೆ. +ಆದರೆ ಏಕಭಾಷಾ ರಾಜ್ಯಗಳನ್ನು ಅವರು ಒಂದು ಷರತ್ತಿನ ಮೇಲೆ ಅನುಮೋದಿಸುತ್ತಾರೆ. +ಅದೇನೆಂದರೆ, ಅಂತಹ ರಾಜ್ಯಗಳ ಅಧಿಕೃತ ಭಾಷೆ ಹಿಂದಿಯೇ ಆಗಿರಬೇಕು ಮತ್ತು ಭಾರತ ಅದಕ್ಕೆ ಸಜ್ಜಾಗುವವರೆಗೆ ಇಂಗ್ಲಿಷ್‌ ಭಾಷೆಯೇ ಮುಂದುವರಿಯಬೇಕು. +ಆದರೆ ಪ್ರಾದೇಶಿಕ ಭಾಷೆಗೆ ಅಧಿಕೃತ ಭಾಷೆಯ ಸ್ಥಾನವನ್ನು ನೀಡಿದರೆ, ಏಕ ಭಾಷಾರಾಜ್ಯ ಸ್ವತಂತ್ರ ರಾಷ್ಟ್ರೀಯತೆಯನ್ನು ಬೆಳಸಿಕೊಳ್ಳುವ ಅಪಾಯವನ್ನು ಅವರು ಮುಂಗಂಡಿದ್ದಾರೆ. +ಕೇಂದ್ರ ಶಾಸಕಾಂಗದಲ್ಲಿ ರಾಜ್ಯಗಳಿಗೆ ಅವುಗಳ ಪ್ರದೇಶ ಮತ್ತು ಜನಸಂಖ್ಯೆ ಏನೇ ಇದ್ದರೂ ಅವುಗಳಿಗೆ ಸಮಾನ ಪ್ರಾತಿನಿಧ್ಯವಿಲ್ಲದೇ ಇರುವ ಕಾರಣ ಉತ್ತರ ಭಾರತದ ದೊಡ್ಡ ರಾಜ್ಯಗಳು ಮತ್ತು ದಕ್ಷಿಣ ಭಾರತದ ಸಣ್ಣ ರಾಜ್ಯಗಳ ನಡುವೆ ಇರುವ ಅಸಮಾನತೆ ತೀವ್ರಗೊಳ್ಳುವುದನ್ನು ನಿವಾರಿಸಲು ಡಾ.ಅಂಬೇಡ್ಕರ್‌ ಅವರು ದೊಡ್ಡರಾಜ್ಯಗಳನ್ನು ವಿಭಜಿಸಿ ಎರಡು ಕೋಟಿ ಜನಸಂಖ್ಯೆಗಿಂತಲೂ ಹೆಚ್ಚಿರದಂತಹ ಸಣ್ಣ ರಾಜ್ಯಗಳನ್ನಾಗಿ ಘಟಿಸಬೇಕೆಂಬತಮ್ಮ ಪರಿಹಾರವನ್ನು ಸೂಚಿಸಿದ್ದಾರೆ. +ತಾತ್ಕಾಲಿಕವಾಗಿ ಬಿಹಾರ ಮತ್ತು ಮಧ್ಯ ಪ್ರದೇಶ ರಾಜ್ಯಗಳನ್ನು ತಲಾ ಎರಡು ರಾಜ್ಯಗಳನ್ನಾಗಿ ಮತ್ತು ಸಂಯುಕ್ತ ಪ್ರಾಂತ್ಯವನ್ನು ಮೂರು ರಾಜ್ಯಗಳನ್ನಾಗಿ ವಿಭಜಿಸಬೇಕೆಂದು ಅವರುಸೂಚಿಸಿದ್ದಾರೆ. + ಹೀಗೆ ಘಟಿಸಲಾದ ಪ್ರತಿಯೊಂದು ರಾಜ್ಯವೂ ಏಕ-ಭಾಷಾ ರಾಜ್ಯವಾಗುವುದರಿಂದ ಈ ವಿಭಜನೆ ಭಾಷಾವಾರು ರಾಜ್ಯದ ಪರಿಕಲ್ಪನೆಗೆ ವ್ಯತಿರಕ್ತವಾಗುವುದಿಲ್ಲ. +ಮಹಾರಾಷ್ಟ್ರದ ಬಗ್ಗೆ ಅವರು ಪ್ರಾಚೀನಕಾಲದಲ್ಲಿದ್ದಂತೆ ಪಶ್ಚಿಮ, ಮಧ್ಯ ಮತ್ತು ಪೂರ್ವ ಮಹಾರಾಷ್ಟ್ರ ಎಂಬ ಮೂರು ರಾಜ್ಯಗಳನ್ನಾಗಿ ವಿಭಜಿಸಿ . +ಮುಂಬಯಿ ನಗರವನ್ನು ಮಹಾರಾಷ್ಟದ ಪ್ರತ್ಯೇಕ ನಗರ-ರಾಜ್ಯವನ್ನಾಗಿ ಘಟಿಸಬೇಕೆಂದು ಸೂಚಿಸಿದ್ದಾರೆ. +ಅವರ ಅಭಿಪ್ರಾಯದಲ್ಲಿ ಇಂತಹ ಸಣ್ಣ ರಾಜ್ಯಗಳು ವಿವಿಧ ಪ್ರದೇಶಗಳ ಅವಶ್ಯಕತೆಗಳು ಮತ್ತು ದಕ್ಷ ಆಡಳಿತವನ್ನು ಒದಗಿಸಬಲ್ಲವು. +ಇದರಿಂದ ಅವರ ಮನೋಭಾವನೆಗಳೂ ಮತ್ತು ಆಕಾಂಕ್ಷೆಗಳು ಈಡೇರುತ್ತವೆ. +ಸಣ್ಣ ರಾಜ್ಯದಲ್ಲಿ ಬಹು ಸಂಖ್ಯಾತರು ಮತ್ತು ಅಲ್ಪಸಂಖ್ಯಾತರ ನಡುವಣ ಪ್ರಮಾಣ ಕಡಿಮೆಯಾಗುತ್ತದೆ. +ಭಾರತದಲ್ಲಿ ಬಹುಮತ ರಾಜಕೀಯ ಬಹುಮತವಾಗಿರದೇ, ಜಾತೀಯ ಬಹುಮತವಾಗಿರುವುದರಿಂದ ಅದನ್ನು ಬದಲಾಯಿಸುವುದು ಸಾಧ್ಯವಿಲ್ಲ. +ಅಲ್ಪಮತೀಯರ ಮೇಲೆ ಬಹುಮತೀಯರ ದಬ್ಬಾಳಿಕೆಯ ಅಪಾಯವೂ ಇದರಿಂದ ಕಡಿಮೆಯಾಗುತ್ತದೆ. +ಇಂತಹ ದಬ್ಬಾಳಿಕೆಯಿಂದ ಅಲ್ಪಮತೀಯರಿಗೆ ಇನ್ನೂ ಹೆಚ್ಚಿನ ರಕ್ಷಣೆ ಒದಗಿಸಲು ಎಷ್ಟು ಮಂದಿ ಪ್ರತಿನಿಧಿಗಳಿರುವರೋ ಅಷ್ಟು ಮತಗಳನ್ನು ಪ್ರತಿ ಮತದಾರನು ಆ ಎಲ್ಲಾ ಮತಗಳನ್ನು ಒಬ್ಬ ಅಭ್ಯರ್ಥಿ ಅಥವಾ ಕೆಲವು ಅಭ್ಯರ್ಥಿಗಳಿಗೆ ಕೂಡಬಹುದಾದ, ಎಂದರೆ ಒಟ್ಟುಗೂಡುವ ಅಭಿಮತ ಪದ್ಧತಿಯುಳ್ಳ ಬಹುಸದಸ್ಯ ಮತಕ್ಷೇತ್ರಗಳನ್ನು ರಚಿಸಲು ಸಾಧ್ಯವಾಗುವಂತೆ ಸಂವಿಧಾನಕ್ಕೆ ತಿದ್ದುಪಡಿತರಬೇಕೆಂದು ಡಾ.ಅಂಬೇಡ್ಕರ್‌ ಅವರು ಸೂಚಿಸಿದ್ದಾರೆ. +ಉತ್ತರ ಮತ್ತು ದಕ್ಷಿಣ ಭಾರತದ ನಡುವೆ ಉದ್ವೇಗ, ಬಿಕ್ಕಟ್ಟು ಮತ್ತು ರಾಜಕೀಯ ಧ್ರುವೀಕರಣವನ್ನು ತಗ್ಗಿಸಲು ಭಾರತದಲ್ಲಿ ಎರಡನೆಯ ರಾಜಧಾನಿಯನ್ನು ರಚಿಸಿ ಅದನ್ನು ದಕ್ಷಿಣ ಭಾರತದಲ್ಲಿ ಅದರಲ್ಲಿಯೂ ಹೈದರಾಬಾದ್‌ ನಗರದಲ್ಲಿ ಸ್ಥಾಪಿಸುವುದು ಹೆಚ್ಚು ಸೂಕ್ತ ಎಂದು ಡಾ.ಅಂಬೇಡ್ಕರ್‌ ಅವರು ಪ್ರತಿಪಾದಿಸಿದ್ದಾರೆ. +ರಾನಡೆ, ಗಾಂಧಿ ಮತ್ತು ಜಿನ್ನಾ ಭಾರತದ ಅತ್ಯಂತ ಪ್ರಮುಖ ರಾಜಕೀಯ ಮತ್ತು ಸಾಮಜಿಕ ಚಿಂತಕರಲ್ಹೊಬ್ಬರಾದ ಜಸ್ಟಿಸ್‌ ರಾನಡೆಯವರ ೧ಂ೧ನೆಯ ಹುಟ್ಟು ಹಬ್ಬವನ್ನಾಚರಿಸಿದ ಸಂದರ್ಭದಲ್ಲಿ ಡಾ.ಅಂಬೇಡ್ಕರ್‌ ಅವರು ಈ ಮಹತ್ವದ ಭಾಷಣ ನೀಡಿದರು. +ತಮ್ಮ ಭಾಷಣದ ಆರಂಭದಲ್ಲಿ ಡಾ.ಅಂಬೇಡ್ಕರ್‌ ಅವರು ಇತಿಹಾಸದ ನಿರ್ಮಾಣದಲ್ಲಿ ಮಾನವನ ಪಾತ್ರವನ್ನು ಪರಿಶೀಲಿಸುತ್ತಾರೆ. +ಅವರ ಪ್ರಕಾರ, ಇತಿಹಾಸವನ್ನು ಭೂಗೋಳ ಮತ್ತು ಭೌತಶಾಸ್ತ್ರಗಳು ನಿರ್ಮಿಸುತ್ತವೆ ಎಂಬ ಬರ್ಕರ ವಾದ ಮತ್ತು ಅದು ಆರ್ಥಿಕ ಅಂಶಗಳ ಪರಿಣಾಮವಾಗಿದೆ ಎಂಬ ಮಾರ್ಕ್ಗರ ವಾದ, ಈಎರಡೂ ಸಂಪೂರ್ಣ ಸತ್ಯಗಳಲ್ಲ. +ಈ ತರ್ಕಗಳಲ್ಲಿ ಮಾನವನಿಗೆ ಯಾವ ಸ್ಥಾನವೂ ಇರುವುದಿಲ್ಲ. +ಆದರೆ ಇತಿಹಾಸದ ನಿರ್ಮಾಣದಲ್ಲಿ ಮಾನವನು ಒಂದು ಪ್ರಮುಖ ಅಂಶವಾಗಿದ್ದು ಕೇವಲ ಪರಿಸರದ ಅಂಶಗಳು ಇತಿಹಾಸವನ್ನು ನಿರ್ಮಿಸಲಾರವು ಎಂದು ಡಾ.ಅಂಬೇಡ್ಕರ್‌ ಅವರ ಸ್ಪಷ್ಟ ನಿಲುವಾಗಿದೆ. +ಮುಂದುವರಿದು, ಡಾ.ಅಂಬೇಡ್ಕರ್‌ ಅವರು ನಾಯಕ ಪೂಜೆಯ ಮಹಾ ಪ್ರವಾದಿ ಕಾರ್ಲೈಲನು ಇತರ ರಾಜಕೀಯ ಚಿಂತಕರು ಪ್ರತಿಪಾದಿಸಿದ ಮಹಾಪುರುಷನ ಲಕ್ಷಣಗಳನ್ನು ಚರ್ಚಿಸಿದ್ದಾರೆ. +ಸಂಪೂರ್ಣ ಚರ್ಚೆಯನಂತರ,ಒಬ್ಬ ವ್ಯಕ್ತಿ ಮಹಾಪುರುಷನೆನಿಸಿಕೊಳ್ಳಬೇಕಾದರೆ ಶ್ರದ್ಧೆ ಮತ್ತು ಬುದ್ಧಿಮತ್ತೆಯ ಸಮ್ಮಿಳನ ಅಗತ್ಯವೆಂದು ಅವರು ಹೇಳುತ್ತಾರೆ. +ಆದರೆ ಈ ಅರ್ಹತೆಗಳೇ ಸಾಕಾಗುವುದಿಲ್ಲ. +ಈ ಎರಡೂ ಗುಣಗಳನ್ನು ಹೊಂದಿದ ವ್ಯಕ್ತಿ ಸಾಮಾಜಿಕ ಧ್ಯೇಯದ ಚಾಲಕ ಶಕ್ತಿಯಿಂದ ಪ್ರೇರಿತನಾಗಿರಬೇಕಲ್ಲದೆ ಅವನು ಸಮಾಜದ ಹೊಲಸನ್ನು ತೊಳೆಯುವಂತಹ ಭಂಗಿಯಾಗಿರಬೇಕು. +ಡಾ.ಅಂಬೇಡ್ಕರ್‌ ಅವರ ಪ್ರಕಾರ ರಾನಡೆಯವರು ಯಾವುದೇ ಪ್ರಮಾಣದಿಂದಲಾದರೂ ಮಹಾಪುರುಷರಾಗಿದ್ದರು. +ಸಾಮಾಜಿಕ ಪ್ರಜಾಸತ್ತೆಯನ್ನು ನಿರ್ಮಿಸಲು ಅವರು ಹಿಂದೂ ಸಮಾಜವನ್ನು ಚೇತನಗೊಳಿಸ ಬಯಸಿದ್ದರು. +ಸಾಮಾಜಿಕ ಮತ್ತು ಧಾರ್ಮಿಕ ಆಚರಣೆಗಳು, ಅವೆಷ್ಟೇ ಅನೈತಿಕವಾಗಿದ್ದರೂಕೂಡ, ಅವು ಅತ್ಯಂತ ಶೇಷ್ಠ ಎಂದು ಪರಿಗಣಿಸುತ್ತಿದ್ದಂತಹ ಕಾಲದಲ್ಲಿ ರಾನಡೆಯವರು ಜೀವಿಸಿದ್ದರು. +ಯಾವ ಆಚರಣೆಗಳನ್ನು ರಾನಡೆಯವರು ಹಿಂದೂ ಸಮಾಜದ ಅಪಮಾನ ಮತ್ತು ಅನ್ಯಾಯಗಳೆಂದು ಪರಿಗಣಿಸಿದ್ದರೋ,ಜನರು ಅವುಗಳನ್ನೇ ತಮ್ಮ ಧರ್ಮದ ಅತ್ಯಂತ ಪವಿತ್ರ ಆಚರಣೆಗಳೆಂದು ಭಾವಿಸಿದ್ದರು. +ರಾನಡೆಯವರು ರೋಗಗಸ್ತ ಮತ್ತು ಮರಣಾವಸ್ಥೆಯಲ್ಲಿದ್ದಂತಹ ಹಿಂದೂ ಸಮಾಜದ ಪ್ರಜ್ಞೆ ಅಥವಾ ಸದಸದ್ವಿವೇಕವನ್ನುಚೇತನಗೊಳಿಸಬಯಸಿದ್ದರು. +ರಾನಡೆಯವರು ಸುಭದ್ರ ರಾಜಕೀಯಕ್ಕೆ ಅನಿವಾರ್ಯವಾದ ನಿಜವಾದ ಸಾಮಾಜಿಕ ಪ್ರಜಾಸತ್ತೆಯ ನಿರ್ಮಾಣದ ಗುರಿ ಹೊಂದಿದ್ದರು. +ಹಳೆಯ ವ್ಯವಸ್ಥೆಯನ್ನು ಪರಿಶುದ್ಧಗೊಳಿಸಿ ಹಿಂದೂ ಸಮಾಜದ ನೈತಿಕ ಮಟ್ಟವನ್ನು ಸುಧಾರಿಸುವುದು ರಾನಡೆಯವರ ಧ್ಯೇಯವಾಗಿತ್ತೆಂಬುದನ್ನು ಡಾ.ಅಂಬೇಡ್ಕರ್‌ ಅವರು ತೋರಿಸಿಕೊಟ್ಟಿದ್ದಾರೆ. +ತಮ್ಮ ಭಾಷಣವನ್ನು ಮುಗಿಸುತ್ತಾ ಡಾ.ಅಂಬೇಡ್ಕರ್‌ ಅವರು ಜನತೆಯನ್ನು ದಬ್ಬಾಳಿಕೆಯ ವಿರುದ್ಧಎಚ್ಚರಿಸಿದ್ದಾರೆ: +“ನಿರಂಕುಶಾಡಳಿತ ಚುನಾಯಿತವಾದ ಮಾತ್ರಕ್ಕೆ ನಿರಂಕುಶಾಧಿಕಾರವಾಗದಿರಲಾರದು. +ನಿರಂಕುಶ ಪ್ರಭುವು ನಮ್ಮವನೇ ಆದ ಮಾತ್ರಕ್ಕೆ ಅವನ ನಿರಂಕುಶಾಡಳಿತ ಮಾನ್ಯವಾಗಲಾರದು. . . +ನಿರಂಕುಶಾಡಳಿತವನ್ನು ಕಿತ್ತೊಗೆಯುವ ಅಥವಾ ಕೆಳಗಿಳಿಸುವ ಸಾಧ್ಯತೆಯಿಂದ ಅದನ್ನು ಎದುರಿಸುವುದೇ ಮತ್ತು ಇನ್ನೊಂದು ವಿರೋಧಿ ಪಕ್ಷ ಅದರ ಸ್ಥಾನವನ್ನು ಆಕ್ರಮಿಸುವುದೇ ನಿರಂಕುಶಾಡಳಿತದ ವಿರುದ್ಧ ಇರುವ ನಿಜವಾದ ರಕ್ಷಣೆ.” +ಸೌಥ್‌ಬರೋ ಸವಿತಿಗೆ ನೀಡಿದ ಸಾಕ್ಷ್ಯ ಡಾ.ಅಂಬೇಡ್ಕರ್‌ ಅವರು ಸೌಥ್‌ಬರೋ ಸವಿತಿಗೆ ನೀಡಿದ ಸಾಕ್ಷ್ಯ ಅವರ ರಾಜಕೀಯ ಬರವಣಿಗೆಯ ಪ್ರಥಮ ಪ್ರಬಂಧವಾಗಿತ್ತು. +ಈ ಸಾಕ್ಷ್ಯ ರೈಟ್‌ ಆನರಬಲ್‌ ಲಾರ್ಡ್‌ ಸೌಥ್‌ಬರೋ ಅವರ ಅಧ್ಯಕ್ಷತೆಯ ಚುನಾವಣಾ ಹಕ್ಕಿನ ಸಮಿತಿಗೆ ಸಲ್ಲಿಸಿದ ಲಿಖಿತ ಹೇಳಿಕೆಯಾಗಿದ್ದು ಅದರ ಜೊತೆಯಲ್ಲಿ ೨೭ ಜನವರಿ, ೧೯೧೯ರಂದು ನೀಡಿದ ಮೌಖಿಕ ಹೇಳಿಕೆಯೂ ಸೇರಿದೆ. +ಅಭಿಪ್ರಾಯಗಳ ಪ್ರಾತಿನಿಧ್ಯ ಮತ್ತು ವ್ಯಕ್ತಿ ಪ್ರಾತಿನಿಧ್ಯವನ್ನು ನೀಡಲಾರದ ಯಾವುದೇ ಚುನಾವಣಾ ಪದ್ಧತಿಯ ಜನಪ್ರಿಯ ಸರಕಾರವನ್ನು ಸ್ಥಾಪಿಸಲಾರದೆಂದು ಸೈದ್ಧಾಂತಿಕವಾಗಿ ತರ್ಕ ಮಾಡಿದ ನಂತರ ಅವರು ಜಾತಿ ಮತ್ತು ಧಾರ್ಮಿಕ ಸಮೂಹಗಳಿಂದ ಕೂಡಿದ ಭಾರತೀಯ ಸಮಾಜದಲ್ಲಿ ಈ ಎರಡೂ ಅಂಶಗಳು ಎಷ್ಟು ಪ್ರಸ್ತುತ ಎಂಬುದನ್ನು ತೋರಿಸಿಕೊಟ್ಟಿದ್ದಾರೆ. +ಪ್ರತಿಯೊಂದು ಜಾತಿ ಸಮೂಹವೂ ತಾನು ಹೊಂದಿರುವ ಸಂಪರ್ಕ,ಭಾಗವಹಿಸುವ ಅವಕಾಶ ಮತ್ತು ಆಂತರಿಕ ಸಂಬಂಧಗಳ ಆಧಾರದ ಮೇಲೆ ತನ್ನದೇ ಆದ ಸಮಾನ ಮನಸ್ಕತೆಯನ್ನು ಬೆಳೆಸಿಕೊಳ್ಳುತ್ತದೆ. +ಈ ಆಂತರಿಕ ಸಂಬಂಧವು ಧಾರ್ಮಿಕ ಸಮೂಹಗಳಾದ ಹಿಂದೂ, ಮುಸಲ್ಮಾನ, ಪಾರ್ಸಿ ಇತ್ಯಾದಿಗಳಲ್ಲಿಗಿಂತ ಹೆಚ್ಚಾಗಿ ಸ್ಪಶ್ಯರು ಮತ್ತು ಅಸ್ಪೃಶ್ಯರ ನಡುವೆ ಇರದೇ ಇರುವುದು ಹೆಚ್ಚು ಎದ್ದು ಕಾಣುತ್ತದೆ. +ಈ ಸಮೂಹಗಳು ಧಾರ್ಮಿಕವಲ್ಲದ ಎಂದರೆ ಲೌಕಿಕ ವಿಷಯಗಳಲ್ಲಿ ಒಂದೇ ರೀತಿಯ ಭೌತಿಕ ಆಸಕ್ತಿಗಳನ್ನು ಹೊಂದಿರುತ್ತದೆ. +ಇಂತಹ ಸಮೂಹಗಳಲ್ಲಿ ಭೂಒಡೆಯರು, ಕಾರ್ಮಿಕರು ಮತ್ತು ಬಂಡವಾಳ ಶಾಹಿಗಳು ಇರುತ್ತಾರೆ. +ಹಿಂದೂಗಳು ಅಸ್ಪಶ್ಯರನ್ನು ಯಾವುದೇ ರೀತಿಯ ಸಾಮಾಜಿಕ ಪಾಲ್ಗೊಳ್ಳುವಿಕೆಯಿಂದ ದೂರವಿಟ್ಟಿರುತ್ತಾರೆ. +ಅವರು ಸಾಮಾಜಿಕ - ಧಾರ್ಮಿಕ ನಿಷೇಧಗಳ ಮೂಲಕ ಗುಲಾಮರ ಸ್ಥಿತಿಗೆ ಇಳಿದಿದ್ದಾರೆ. +ಸಾರ್ವತ್ರಿಕವಾಗಿ ಮನ್ನಿಸಲಾದ ನಾಗರಿಕರ ಹಕ್ಕುಗಳನ್ನೂ ಸಹ ಅವರಿಗೆ ನಿರಾಕರಿಸಲಾಗಿದೆ. +ಅವರ ಹಿತಾಸಕ್ತಿಗಳು ವಿಶೇಷವಾದ ಅವರವೇ ಹಿತಾಸಕ್ತಿಗಳಾಗಿದ್ದು ಅವುಗಳನ್ನು ಇತರ ಯಾರೂ ನಿಜವಾದ ರೀತಿಯಲ್ಲಿ ವ್ಯಕ್ತಪಡಿಸಲಾರರು. +ಜನಸಂಖ್ಯೆಯ ಆಧಾರದ ಮೇಲೆ ಡಾ.ಅಂಬೇಡ್ಕರ್‌ ಅವರು ಮುಂಬಯಿ ಪ್ರಾಂತ್ಯದ ಅಸ್ಪಶ್ಯರಿಗೆ ಮುಂಬಯಿ ವಿಧಾನ ಪರಿಷತ್ತಿನಲ್ಲಿ ಎಂಟು ಅಥವಾ ಒಂಬತ್ತು ಪ್ರತಿನಿಧಿಗಳಿರಬೇಕೆಂದು ಒತ್ತಾಯಪಡಿಸಿದರು. +ಇದಕ್ಕಾಗಿ ಸಾಕಷ್ಟು ಚುನಾಯಕರು ಲಭ್ಯವಾಗುವುದಕ್ಕಾಗಿ ಮತದಾನದ ಹಕ್ಕಿಗಾಗಿ ಇರುವ ಅರ್ಹತೆಗಳನ್ನು ಆದಷ್ಟು ಕಡಿಮೆ ಮಟ್ಟಕ್ಕಿಳಿಸಬೇಕೆಂದು ಅವರು ವಾದಿಸಿದರು. +ವಿವಿಧ ಸಂಘ ಸಂಸ್ಥೆಗಳು ಸೂಚಿಸಿದ ಎಲ್ಲಾ ಯೋಜನೆಗಳನ್ನು ವಿಮರ್ಶಿಸಿ, ಮುಸಲ್ಮಾನರಿಗೆ ಮಾತ್ರ ಕೋಮುವಾರು ಪ್ರಾತಿನಿಧ್ಯ ನೀಡಿ, ಅಸ್ಪೃಶ್ಯರನ್ನು ಸಾಮಾನ್ಯ ಚುನಾಯಕರಿಂದ ಆಯ್ಕೆಯಾಗುವಂತೆ ಮಾಡಿದ ಕಾಂಗೆಸ್‌ ಪಕ್ಷದ ನೀತಿಯನ್ನು ಅವರು ಕಟುವಾಗಿ ಟೀಕಿಸುತ್ತಾ ಇದು ರಾಜಕೀಯ ತೀವ್ರ ಸುಧಾರಣಾವಾದಿಗಳೂ ಮತ್ತು ಸಾಮಾಜಿಕ ಯಥಾಸ್ಥಿತಿವಾದಿಗಳೂ ಆಗಿದ್ದ ಕಾಂಗ್ರೆಸ್‌ ಮುಂಖಡರ ವಿಶಿಷ್ಟ ಆದರ್ಶವಾಗಿದೆ ಎಂದಿದ್ದಾರೆ. +ಸೌಮ್ಯವಾದಿಗಳು ಸೂಚಿಸಿದ ಬಹು ಸದಸ್ಯ ಮತಕ್ಷೇತ್ರಗಳಲ್ಲಿ ಕೇವಲ ಒಂದು ಅಥವಾ ಎರಡು ಸ್ಥಾನಗಳನ್ನು ಅಸ್ಪಶ್ಯರಿಗಾಗಿ ಕಾಯ್ದಿರಿಸುವಿಕೆಯನ್ನು ಅವರು ಒಪ್ಪವುದಿಲ್ಲ. +ಇದರಿಂದ ಅವರಿಗೆ ಪರಿಣಾಮಕಾರಿ ಪ್ರಾತಿನಿಧ್ಯ ದೊರೆಯುವುದಿಲ್ಲ. +ದಲಿತ ವರ್ಗ ಮಂಡಲಿಯು ಸೂಚಿಸಿದ ಪರಿಷತ್ತಿನ ಚುನಾಯಿತ ಸದಸ್ಯರಿಂದ ನಾಮಕರಣ ಪದ್ಧತಿಯನ್ನು ಇತರರು ಅಸ್ಪೃಶ್ಯರ ಒಳಿತು ಯಾವುದು ಎಂಬುದನ್ನು ವಿಧಿಸಿದಂತಾಗುತ್ತದೆ ಎಂಬ ಕಾರಣದಿಂದ ಅವರು ತಿರಸ್ಕರಿಸಿದ್ದಾರೆ. +ಇದರಿಂದ ಅಸ್ಪಶ್ಯರು ತಮ್ಮ ಒಳಿತನ್ನು ತಾವೇ ನಿರ್ಧರಿಸುವ ಹಕ್ಕನ್ನು ಕಳೆದುಕೊಂಡಂತಾಗುತ್ತದೆ. +ಅವರ ಅಭಿಪ್ರಾಯದಲ್ಲಿ ಅತ್ಯಂತ ಹಿಂದುಳಿದ ಮತ್ತು ತುಳಿತಕ್ಕೊಳಪಟ್ಟ ಜನಾಂಗಕ್ಕೆ ಕಾಯ್ದಿಟ್ಟ ಸ್ಥಳಗಳ ಮೂಲಕ ಕೋಮುವಾರು ಪ್ರಾತಿನಿಧ್ಯ ಕೊಡುವುದರಿಂದ ಸಾಮಾಜಿಕ ವಿಭಜನೆಗಳು ಶಾಶ್ವತವಾಗಿ ಉಳಿಯುವುದಿಲ್ಲ. +ಆದರೆ ಸಂಬಂಧ, ಸಹಕಾರ ಮತ್ತು ಪುನರ್‌ - ಸಾಮಾಜೀಕರಣದ ಅವಕಾಶಗಳ ಮುಖಾಂತರ ಜಡವಾಗಿರುವ ಗೊಡ್ಡು ಮನೋಭಾವಗಳ ನಿವಾರಣೆಗೆ ಸತ್ವಶಾಲಿ ಸಾಧನವಾಗುವುದು. +ಇದೂ ಅಲ್ಲದೆ ಈ ಬೇಡಿಕೆಯು ಅಸ್ಪೃಶ್ಯರೂ ಕೂಡ ಪ್ರಧಾನ ಹಿಂದೂ ಕೋಮುಗಳು ಬ್ರಿಟಿಷ್‌ ಆಡಳಿತ ಶಾಹಿಯಿಂದ ಬೇಡುತ್ತಿರುವ ಸ್ವಯಂ ನಿರ್ಣಯಾಧಿಕಾರದ ಬೇಡಿಕೆಯೇ ಆಗಿದೆ. +ಸಂಯುಕ್ತ ರಾಜ್ಯವೋ ಅಥವಾ ಸ್ಥಾತಂತ್ರ ಚೋಡಾ ಅಂಬೇಡ್ಕರ್‌ ಅವರು “ಸಂಯುಕ್ತ ರಾಜ್ಯವೋ ಅಥವಾ ಸ್ವಾತಂತ್ರ ಹೋ? ಮತ್ತು “ಕೋಮುವಾರು ಬಿಕ್ಕಟ್ಟು - ಅದರ ಪರಿಹಾರದ ಒಂದು ಮಾರ್ಗ” ಎಂಬ ಎರಡು ಭಾಷಣಗಳನ್ನು ಕ್ರಮವಾಗಿ ಪುಣೆಯ ಗೋಖಲೆ ಅರ್ಥಶಾಸ್ತ್ರ ಸಂಸ್ಥೆಯಲ್ಲಿ ಜನವರಿ ೨೯, ೧೯೩೯ ರಂದು ಮತ್ತು ಮುಂಬಯಿಯಲ್ಲಿ ಜರುಗಿದ ಅಖಿಲ ಭಾರತ ಪರಿಶಿಷ್ಟ ಜಾತಿಗಳ ಸಂಯುಕ್ತ ಸಂಘದ ಸಮ್ಮೇಳನದಲ್ಲಿ ಮೇ ೬,೧೯೪೫ ರಂದು ಮಾಡಿದವುಗಳಾಗಿವೆ. +ಇವು ಸಮಯೋಚಿತ ಲಘು ಲೇಖನದ ರೂಪದಲ್ಲಿವೆ. +೧೯೩೯ರಲ್ಲಿ ಭಾರತದ ಎಲ್ಲಾ ಪ್ರಧಾನ ರಾಜಕೀಯ ಪಕ್ಷಗಳು ಭಾರತ ಸರಕಾರದ ಕಾಯ್ದೆ. +೧೯೩೫ ರಲ್ಲಿ ಪ್ರಾಂತೀಯ ಸ್ವಾಯತ್ತತೆಯನ್ನು ಒಪ್ಪಿಕೊಂಡಿದ್ದವಲ್ಲದೇ, ಕೆಲವು ಪಕ್ಷಗಳು ಅದನ್ನು ಕಾರ್ಯಗತ ಮಾಡುತ್ತಲೂ ಇದ್ದವು. +ಕೇಂದ್ರದಲ್ಲಿ ಸಂಯುಕ್ತ ರಾಜ್ಯ ವ್ಯವಸ್ಥೆಯನ್ನು ಒಪ್ಪಿಕೊಳ್ಳುವ ಪ್ರಶ್ನೆ ಭಾರತದ ರಾಜಕೀಯ ಕ್ಷಿತಿಜದಲ್ಲಿ ಆಗಗೋಚರವಾಗುತ್ತಿತ್ತು. +ಅಲ್ಲಿಯವರೆಗೂ ಈ ವಿಷಯದ ಬಗ್ಗೆ ಸಾರ್ವಜನಿಕವಾಗಿ ಯಾವ ಅಭಿಪ್ರಾಯವನ್ನೂ ವ್ಯಕ್ತಪಡಿಸದಿದ್ದ ಡಾ.ಅಂಬೇಡ್ಕರ್‌ ಅವರು ಪಂಡಿತರಿಂದ ಕೂಡಿದ ಗೋಖಲೆ ಅರ್ಥಶಾಸ್ತ್ರ ಸಂಸ್ಥೆಯಲ್ಲಿ ಈ ವಿಷಯದ ಮೇಲೆ ತಮ್ಮ ವಿಚಾರಗಳನ್ನು ವ್ಯಕ್ತಪಡಿಸುವ ಅವಕಾಶವನ್ನು ಉಪಯೋಗಿಸಿಕೊಂಡರು. +ಅವರು ತಮ್ಮ ಭಾಷಣದಲ್ಲಿ ಸಂಯುಕ್ತ ರಾಜ್ಯ ಯೋಜನೆಯ ಸಂಕ್ಷಿಪ್ತ ರೂಪು ರೇಷೆಗಳನ್ನು ಕೊಡುತ್ತಾ ಬೇರೆ ಕಡೆ ಆಸ್ತಿತ್ರದಲ್ಲಿರುವ ವಿವಿಧ ಪ್ರಜಾಸತ್ತಾತ್ಮಕ ಸಂಯುಕ್ತ ರಾಜ್ಯಗಳ ಲಕ್ಷಣಗಳ ಆಧಾರದ ಮೇಲೆ ಸಾಮಾನ್ಯವಾಗಿಮಾನ್ಯ ಮಾಡಲಾದ ಪ್ರಮಾಣಗಳನ್ನು ಪರಿಶೀಲಿಸಿದ್ದಾರೆ. +ಈ ಯೋಜನೆಯಲ್ಲಿ ಕೇಂದ್ರಕ್ಕೆ ಸೀಮಿತವಾದ ಜವಾಬ್ದಾರಿಯನ್ನು ಕೊಡಲಾಗಿದೆ ಎಂಬ ಅಂಶ ಈ ವಿಶ್ಲೇಷಣೆಯಿಂದ ವ್ಯಕ್ತವಾಗುತ್ತದೆ. +ಅದು ಕ್ರಮೇಣ ಬ್ರಿಟಿಷ್‌ಚಕ್ರಾಧಿಪತ್ಯದಲ್ಲಿ ಒಂದು ಸ್ವತಂತ್ರ ಒಳರಾಷ್ಟದ ಸ್ಥಾನವನ್ನು ಪಡೆಯುವ ಅಂಂತಸ್ಸತ್ವವನ್ನು ಹೊಂದಿದೆ. +ಈ ಸಂಯುಕ್ತ ರಾಜ್ಯ ವ್ಯವಸ್ಥೆಯಲ್ಲಿ ಪ್ರಾಂತ್ಯಗಳು ಮತ್ತು ಸಂಸ್ಥಾನಗಳೆಂಬ ಎರಡು ವಿಧದ ಘಟಕ ರಾಜ್ಯಗಳಿದ್ದು ಇವೆರಡರ ಸ್ಥಾನದಲ್ಲಿ ಅಸಮಾನತೆ ಇದೆ. +ಸಂಯುಕ್ತ ರಾಜ್ಯವು ಸ್ವಾಯತ್ತ ಪ್ರಾಂತ್ಯಗಳ ಸಹಜ ಪರಿಣಾಮ. +ಪ್ರಾಂತ್ಯಗಳು ಸಂಯುಕ್ತ ರಾಜ್ಯವನ್ನು ಸಹಜವಾಗಿಯೇ ಸೇರಿಕೊಳ್ಳುತ್ತವೆ. +ಆದರೆ ರಾಜರುಗಳ ಸಂಸ್ಥಾನಗಳು ತಾವು ಬ್ರಿಟಿಷ್‌ ಪ್ರಭುತ್ವದೊಡನೆ ಹೊಂದಿರುವ ಪರಂಪರಾನುಗತವಾದ ಒಪ್ಪಂದಗಳಲ್ಲಿ ಮತ್ತು ಅವು ಸಹಿಮಾಡಲಿರುವ ಸೇರ್ಪಡೆಯ ದಸ್ತಾವೇಜುಗಳಲ್ಲಿ ಅಡಗಿರುವ ಕರಾರುಗಳನ್ನು ಅವಲಂಬಿಸಿದೆ. +ಕೇವಲ ಪ್ರಾಂತ್ಯಗಳ ಸೇರ್ಪಡೆಯಲ್ಲದೇ, ಸಂಸ್ಥಾನಗಳ ಸೇರ್ಪಡೆಯೂ ಈ ಸಂಯುಕ್ತ ರಾಜ್ಯ ರಚನೆಯ ಪೂರ್ವಭಾವಿ ಕರಾರು ಆಗಿದೆ. +ಸಂಯುಕ್ತ ರಾಜ್ಯದ ಎರಡೂ ಸದನಗಳಲ್ಲಿ ಪ್ರಾಂತ್ಯಗಳ ಪ್ರಾತಿನಿಧ್ಯ ಚುನಾವಣೆಯ ಮೂಲಕವಾಗಿದ್ದರೆ,ಸಂಸ್ಥಾನಗಳ ಪ್ರತಿನಿಧಿಗಳು ತಮ್ಮ ರಾಜ್ಯಗಳ ನಿರಂಕುಶ ಆಳರಸರಿಂದ ನಾಮಕರಣಗೊಂಂಡವರಾಗಿದ್ದು ಅವರು ಅರಸರಿಗೆ ತಮ್ಮ ನಿಷ್ಠೆಯನ್ನು ಹೊಂದಿದವರಾಗಿರುತ್ತಾರೆ. +ಈ ಪ್ರತಿನಿಧಿಗಳು ಯಾವಾಗಲೂ ತಮ್ಮ ಅರಸರ ಮೇಲೆ ಪರಮಾಧಿಕಾರ ಹೊಂದಿರುವ ಬ್ರಿಟಿಷ್‌ ಆಡಳಿತ ಶಾಹಿಯ ಇಚ್ಛೆಯಂತೆ ನಡೆಯುವವರಾಗಿರುತ್ತಾರೆ. +ಈ ಸಂಯುಕ್ತ ರಾಜ್ಯ ವ್ಯವಸ್ಥೆಯಲ್ಲಿ ಭಾರತೀಯ ಸಂಸ್ಥಾನವನ್ನು ವಿದೇಶೀ ರಾಜ್ಯಗಳ ರೀತಿಯಲ್ಲಿ ಪರಿಗಣಿಸಲಾಗಿರುವುದರಿಂದ ಅಖಿಲ ಭಾರತ ಏಕೀಕೃತ ರಾಷ್ಟ್ರೀಯತೆಯನ್ನು ವೃದ್ಧಿಗೊಳಿಸುವ ಬದಲು ಪ್ರತ್ಯೇಕತೆಯ ಭಾವನೆಗಳಿಗೆ ಪ್ರೋತ್ಸಾಹ ನೀಡಿದಂತಾಗುತ್ತದೆ. +ರಾಜರ ಪ್ರತಿನಿಧಿಗಳು ಪ್ರಾಂತ್ಯಗಳ ಮೇಲಣ ವಿಷಯಗಳ ಚರ್ಚೆಯಲ್ಲಿ ಭಾಗವಹಿಸಿ ಮತದಾನ ಕೂಡ ಮಾಡಬಹುದಾದರೂ ಸಂಯುಕ್ತ ಸರಕಾರದ ಶಾಸಕಾಂಗವು ಯಾವುದೇ ಸಂಸ್ಥಾನದ ರಾಜನ ನಡವಳಿಕೆ ಮತ್ತು ಆಡಳಿತವನ್ನು ಚರ್ಚೆ ಮಾಡಲು ಅವಕಾಶವಿಲ್ಲ. +ಈ ಯೋಜನೆ ಪ್ರಾತಿನಿಧ್ಯ ವಿಷಯದಂತೆ ಕರ ಹೇರುವಿಕೆ, ಆಡಳಿತ, ಕಾನೂನುಗಳನ್ನು ಮಾಡುವುದು ಇತ್ಯಾದಿ ವಿಷಯಗಳಲ್ಲಿ ರಾಜರ ಪರವಾಗಿಯೇ ಇದೆ. +ಹೀಗಾಗಿ ರಾಜರು ಬ್ರಿಟಿಷ್‌ ಭಾರತದ ಭವಿಷ್ಯದ ನಿರ್ಣಾಯಕರಾಗುತ್ತಾರೆ. +ಇವೂ ಅಲ್ಲದೇ ಇನ್ನೂ ಅನೇಕ ಕಾರಣಗಳಿಂದಾಗಿ ಡಾ.ಅಂಬೇಡ್ಕರ್‌ ಅವರು ೧೯೩೫ರ ಭಾರತ ಸರಕಾರದ ಕಾನೂನಿನಲ್ಲಿ ನಿರೂಪಿಸಲಾಗಿರುವ ಸಂಯುಕ್ತ ರಾಜ್ಯ ವ್ಯವಸ್ಥೆಯನ್ನು ತಿರಸ್ಕರಿಸುತ್ತಾರೆ. +ಸಂಸ್ಥಾನಗಳ ಸಮಸ್ಯೆಯನ್ನು ರಾಜಕೀಯ ಪ್ರಶ್ನೆಯನ್ನಾಗಿ ಪರಿಗಣಿಸದೇ ಒಂದು ಆಡಳಿತಾತ್ಮಕ ಪ್ರಶ್ನೆ ಎಂದು ಪರಿಗಣಿಸಬೇಕೆಂಬ ಪರಿಹಾರವನ್ನು ಅವರು ಸೂಚಿಸಿದ್ದಾರೆ. +ಈ ಪ್ರಶ್ನೆಯನ್ನು ಕಾನೂನಿನನ್ಹಯ ಬಗೆಹರಿಸಬೇಕೆಂದರೆ ಭೂಸ್ವಾಧೀನ ಕಾನೂನಿನ ಪ್ರಕಾರ ರಾಜರುಗಳ ಭೂಪ್ರದೇಶಗಳನ್ನು ಸ್ವಾಧೀನಪಡಿಸಿಕೊಂಡು ಅವರಿಗೆ ಪಿಂಚಣಿ ನೀಡಬೇಕು. +ಭೂಸ್ವಾಧೀನ ಕಾನೂನಿನಲ್ಲಿ ರಾಜಕೀಯ ಉದ್ದೇಶ್ಯಗಳಿಗಾಗಿ ಖಾಸಗಿ ಹಕ್ಕುಗಳನ್ನು ಮತ್ತು ಆಸ್ತಿಗಳನ್ನು ಸ್ವಾಧೀನಪಡಿಸಿಕೊಳ್ಳಲು ಅವಕಾಶವಿದೆ. +ಡಾ.ಅಂಬೇಡ್ಕರ್‌ ಅವರ ಪ್ರಕಾರ ರಾಜರುಗಳು ಸಂಯುಕ್ತ ರಾಜ್ಯದಲ್ಲಿ ಸೇರ್ಪಡೆಯಾಗುವುದರಿಂದ ಹಿಂದೂ ಶಕ್ತಿ ವೃದ್ಧಿಯಾಗುವುದೆಂದು ತಿಳಿದಿರುವ ರಾಜರುಗಳು ಮತ್ತು ಹಿಂದೂ ಮಹಾಸಭಾದವರನ್ನು ಬಿಟ್ಟರೆ ಇತರ ಯಾವ ಪ್ರಧಾನ ರಾಜಕೀಯ ಪಕ್ಷದವರೂ ಈ ಸಂಯುಕ್ತ ರಾಜ್ಯ ಯೋಜನೆಯ ಬಗೆಗೆ ಸಂತುಷ್ಟರಾಗಿಲ್ಲ. +ಈ ಯೋಜನೆಯಲ್ಲಿ ಪರಿಗಣಿಸದೇ ಇರುವ ಬಡವ ಮತ್ತು ಯಾವುದೇ ಸ್ವತಂತ್ರ ವ್ಯಕ್ತಿಯ ವಿಚಾರಗಳು ಒಂದೇಆಗಿವೆ ಎಂದು ಡಾ.ಅಂಬೇಡ್ಕರ್‌ ಅವರು ಅಭಿಪ್ರಾಯ ಪಟ್ಟಿದ್ದಾರೆ. +ಈ ಸಂಯುಕ್ತ ರಾಜ್ಯ ಯೋಜನೆ ಜಾರಿಗೊಂಡಿದ್ದೇ ಆದರೆ ರಾಜರ ನಿರಂಕುಶಾಡಳಿತ ಸ್ವತಂತ್ರ ವ್ಯಕ್ತಿಯ ಸ್ವಾತಂತ್ರ್ಯಕ್ಕೆ ವಿಪತ್ಕಾರಿಯಾಗುವುದಲ್ಲದೇ ಸಂವಿಧಾನದ ಮೂಲಕ ಹಳೆಯ ಮೌಲ್ಯಗಳ ಪುನರ್ಮೌಲೀಕರಣ ಮಾಡಿ ಪಟ್ಟಭದ್ರರ ಹಕ್ಕುಗಳ ವಿನಾಶ ಮಾಡಬಯಸುವ ಬಡನಾಗರಿಕನಿಗೆ ಆತಂಕವನ್ನೊಡ್ಡುತ್ತದೆ. +ಕೋಮುವಾರು ಬಿಕ್ಕಟ್ಟು ಮತ್ತು ಅದರ ಪರಿಹಾರದ ಒಂದು ಮಾರ್ಗ “ಕೋಮುವಾರು ಬಿಕ್ಕಟ್ಟು ಮತ್ತು ಅದರ ಪರಿಹಾರದ ಒಂದು ಮಾರ್ಗ” ಈ ಸಂಪುಟದಲ್ಲಿ ಸೇರಿರುವ ಅವರ ಇನ್ನೊಂದು ಲಘು ಲೇಖನವಾಗಿದೆ. +ಇದು ಭಾರತದ ಭಾವೀ ಸಂವಿಧಾನ ಕುರಿತು ಪರಿಶಿಷ್ಟ ಜಾತಿಗಳಪರವಾಗಿ ಸಲ್ಲಿಸಲಾದ ರಚನಾತ್ಮಕ ಸೂಚನೆಗಳನ್ನು ಮಾಡುವ ಉದ್ದೇಶ್ಯ ಹೊಂದಿದೆ ಎಂದು ಹೇಳಲಾಗಿದೆ. +ಈ ಯೋಜನೆಯು ಕೋಮುವಾರು ಬಿಕ್ಕಟ್ಟು ಪರಿಹಾರ ಕಂಡುಹಿಡಿಯುವ ಸಾಧ್ಯತೆಯನ್ನು ಕುರಿತು ಡಾ.ಅಂಬೇಡ್ಕರ್‌ ಅವರ ಸಮಕಾಲೀನರು ೧೯೪೫ರ ಐತಿಹಾಸಿಕ ವರ್ಷದಲ್ಲಿ ಸೂಚಿಸಿದ ಅನೇಕ ಯೋಜನೆಗಳಲ್ಲಿ ಒಂದಾಗಿದೆ. +ಇದಕ್ಕೂ ಮುಂಚೆ ೧೯೪೧ ರಲ್ಲಿ ಡಾ.ಅಂಬೇಡ್ಕರ್‌ ಅವರು ಸ್ವಯಂ ನಿರ್ಣಯ ತತ್ವದ ಆಧಾರದ ಮೇಲೆ ಮತ್ತು ಒಂದು ಐತಿಹಾಸಿಕ ಅವಶ್ಯಕತೆಯ ದೃಷಿಯಿಂದ ಪಾಕಿಸ್ತಾನದ ನಿರ್ಮಾಣವನ್ನು ಪ್ರತಿಪಾದಿಸಿದ್ದರು. + ಅವರ ಅಭಿಪ್ರಾಯದಲ್ಲಿ ಈ ಸದ್ಯದ ಲಘು ಲೇಖನವು ಏಕೀಕೃತ ಭಾರತದ ನಿರ್ಮಾಣಕ್ಕಾಗಿ ಒಂದು ಪರ್ಯಾಯ ಕ ಯೋಜನೆಯಾಗಿದೆ. + ಇದರಲ್ಲಿ ಅವಶ್ಯಕವಾದ ನಿಯಂತ್ರಣಗಳು ಮತ್ತು ಸಮತೋಲನಗಳೊಂದಿಗೆ ಎಲ್ಲಾ ಅಲ್ಪಸಂಖ್ಯಾತರ ಹಿತಾಸಕ್ತಿಗಳನ್ನು ಸಂರಕ್ಷಿಸಲಾಗುವುದು. +ಕೋಮುವಾರು ಸಮಸ್ಯೆಯನ್ನು ಬಗೆಹರಿಸದೇ ಸಂವಿಧಾನ ಸಭೆಯ ರಚನೆಯನ್ನು ಅವರು ಸಂಪೂರ್ಣವಾಗಿ ವಿರೋಧಿಸುತ್ತಾರೆ. +ಇದೂ ಅಲ್ಲದೇ, ಭಾರತ ಸರಕಾರ ಕಾಯ್ದೆ, ೧೯೩೫ ರಲ್ಲಿ ಭಾರತಕ್ಕೆ ಅಗತ್ಯವಿರುವ ಸಂವಿಧಾನಾತ್ಮಕ ಧ್ಯೇಯಗಳು ಮತ್ತು ಸಂವಿಧಾನದ ರೂಪು ರೇಷೆಗಳು ಲಭ್ಯವಿದೆ. +ಈ ಕಾಯ್ದೆಯಲ್ಲಿ ಭಾರತದ ಸ್ವತಂತ್ರ ಒಳರಾಷ್ಟ್ರದ ಸ್ಥಾನಕ್ಕೆ ವ್ಯತಿರಿಕ್ತವೆನಿಸುವ ಅಂಶಗಳನ್ನು ಕೈಬಿಡುವುದು ಮಾತ್ರ ಈಗ ಮಾಡಬೇಕಾದ ಕೆಲಸ. +ಸಂವಿಧಾನ ಸಭೆ ಇರಲೇಬೇಕೆಂದರೆ ಕೋಮುವಾರು ಪ್ರಶ್ನೆ ಅದರಲ್ಲಿ ಸೇರಿರಬಾರದೆಂದು ಡಾ.ಅಂಬೇಡ್ಕರ್‌ ಅವರು ಹೇಳುತ್ತಾರೆ. +ಭಾರತದಲ್ಲಿ ಬಹುಮತವು ಪರಿವರ್ತನಗೊಳ್ಳುವಂತಹ ರಾಜಕೀಯ ಬಹುಮತವಾಗಿರದೇ ಕೋಮುಬಹುಮತವಾಗಿರುವುದರಿಂದ ಇಲ್ಲಿ ಬಹುಮತದ ಆಳ್ವಿಕೆ ಸೈದ್ಧಾಂತಿಕವಾಗಿ ಅಸ್ವೀಕಾರ ಮತ್ತು ಆಚರಣೆಯಲ್ಲಿ ಅಸಮರ್ಥನೀಯವಾಗಿದೆ. + ಬಹುಮತವಿರುವ ಕೋಮು ಸಂಬಂಧ ಬಹುಮತದಿಂದ ತೃಪ್ತಿಹೊಂದಬೇಕು. +ಬಹುಮತವೂ ಕೂಡ ಚಿಕ್ಕ ಅಲ್ಪಸಂಖ್ಯಾತ ಗುಂಪಿನೊಡನೆ ಜೊತೆಯಾಗಿ ತನ್ನ ಆಳ್ವಿಕೆಯನ್ನು ಸ್ಥಾಪಿಸಿಕೊಳ್ಳಲು ಸಂಪೂರ್ಣ ಬಹುಮತ ಹೊಂದುವಂತಿರಬಾರದು. +ಇದೇ ರೀತಿ ಒಂದು ದೊಡ್ಡ ಅಲ್ಪಸಂಖ್ಯಾತ ಗುಂಪು ಇದೇರೀತಿ ಜೊತೆಯಾಗಿ ಇಂತಹ ಬಹುಮತ ಸ್ಥಾಪಿಸಿಕೊಳ್ಳದಂತಿರಬೇಕು. +ಏನೇ ಆಗಲಿ, ಎಲ್ಲಾ ಅಲ್ಪ ಸಂಖ್ಯಾತರ ಸಂಯೋಜನೆ ಶಾಸಕಾಂಗದಲ್ಲಿ ಸಂಪೂರ್ಣ ಬಹುಮತ ಹೊಂದಿರಬೇಕು. +ಈ ಸಿದ್ಧಾಂತಗಳ ಪ್ರಕಾರ ಕೇಂದ್ರ ಮತ್ತು ಪ್ರಾಂತೀಯ ಶಾಸಕಾಂಗಗಳಲ್ಲಿ ಕೋಮುವಾರು ಸ್ಥಾನ ಯಾವ ರೀತಿ ಬಿಂಬಿತವಾಗುವುದೆಂದು ಡಾ.ಅಂಬೇಡ್ಕರ್‌ ಅವರು ವಿಶದವಾಗಿ ವಿವರಿಸಿದ್ದಾರೆ. +ಡಾ.ಅಂಬೇಡ್ಕರ್‌ ಅವರ ಸೂಚನೆ ಪ್ರಮುಖವಾಗಿ ಏಕೀಕೃತ ಭಾರತದ ನಿರ್ಮಾಣಕ್ಕಾಗಿಯೇ ಇದೆ. +ಆದರೆ ಭಾರತದ ವಿಭಜನೆ ಸಂಭವಿಸಿದ ಪಕ್ಷದಲ್ಲಿ ಪಾಕಿಸ್ತಾನದ ಮುಸಲ್ಮಾನರು ತಮ್ಮ ದೇಶದ ಮುಸಲ್ಮಾನೇತರರಿಗೆ ಈ ಸಿದ್ಧಾಂತದ ಪ್ರಯೋಜನವನ್ನು ನಿರಾಕರಿಸಬಾರದೆಂಬುದು ಅವರ ನಿರೀಕ್ಷೆಯಾಗಿದೆ. +ಭಾರತದಲ್ಲಿ ಅಸಹಾಯಕರ ಅಲ್ಪಸಂಖ್ಯಾತರಾಗುವ ತಮ್ಮ ಮತಬಾಂಧವರ ಹಿತಾಸಕ್ತಿಗಳು ಈ ಸಿದ್ಧಾಂತಗಳ ಮೂಲಕ ಸಂರಕ್ಷಿತವಾಗುತ್ತವೆ. +ಡಾ. ಅಂಬೇಡ್ಕರ್‌ ಅವರ ಅಭಿಪ್ರಾಯದಲ್ಲಿ ರಾಜಕೀಯದಲ್ಲಿ ಬಹುಮತದ ಆಳ್ವಿಕೆಯ ತತ್ವವನ್ನು ಕೈ ಬಿಡುವುದರಿಂದಜೀವನದ ಇತರ ಕ್ಷೇತ್ರಗಳಾದ ಸಾಮಾಜಿಕ ಮತ್ತು ಆರ್ಥಿಕ ಕ್ಷೇತ್ರಗಳಲ್ಲಿ ಹಿಂದೂಗಳಿಗೆ ಧಕ್ಕೆ ಉಂಟಾಗುವುದಿಲ್ಲ. +ರಾಜ್ಯಗಳು ಮತ್ತು ಅಲ್ಪಸಂಖ್ಯಾತರು ರಾಜ್ಯಗಳು ಮತ್ತು ಅಲ್ಪಸಂಖ್ಯಾತರು, ಇದು ಅಲ್ಪಸಂಖ್ಯಾತರು ಅದರಲ್ಲಿಯೂ ವಿಶೇಷವಾಗಿ ಪರಿಶಿಷ್ಟ ಜಾತಿಗಳಿಗಾಗಿ ಸಂರಕ್ಷಣೆಗಳನ್ನು ಕುರಿತು ಡಾ.ಅಂಬೇಡ್ಕರ್‌ ಅವರು ಅಖಿಲ ಭಾರತ ಪರಿಶಿಷ್ಟ ಜಾತಿಗಳ ಮಹಾಸಂಘದ ಪರವಾಗಿ ೧೯೪೬ ರಲ್ಲಿ ಘಟನಾ ಸಭೆಗೆ ಸಲ್ಲಿಸಿದ ವಿಜ್ಞಾಪನಾಪತ್ರ ಇದು ಸಂವಿಧಾನದ ಕರಡು ವಿಧಿಗಳ ರೂಪದಲ್ಲಿದ್ದು ವಿವರಣಾತ್ಮಕ ಟಿಪ್ಪಣಿ ಮತ್ತು ಅಂಕಿ ಸಂಖ್ಯೆಗಳಿಂದ ಕೂಡಿದೆ. +ಈ ವಿಜ್ಞಾಪನಾ ಪತ್ರದಲ್ಲಿ ನಾಗರಿಕ ಮೂಲಭೂತ ಹಕ್ಕುಗಳು, ಶಾಸಕಾಂಗಗಳು, ಸ್ಥಳೀಯ ಸಂಸ್ಥೆಗಳು,ಕಾರ್ಯಾಂಗ ಮತ್ತು ಸೇವಾವರ್ಗದಲ್ಲಿ ಅಲ್ಪಸಂಖ್ಯಾತರು ಮತ್ತು ಪರಿಶಿಷ್ಟ ಜಾತಿಗಳವರ ಪ್ರಾತಿನಿಧ್ಯದ ಸಂರಕ್ಷಣೆಗಳನ್ನುಅಳವಡಿಸಲಾಗಿದೆ. +ಪರಿಶಿಷ್ಟ ಜಾತಿಗಳವರ ಶಿಕ್ಷಣ ಮತ್ತು ಪ್ರತ್ಯೇಕ ಗ್ರಾಮಗಳಲ್ಲಿ ಅವರ ವಸತಿಯ ಬಗ್ಗೆಯೂ ಇದರಲ್ಲಿ ಸೂಚನೆಗಳಿವೆ. +ಮೊಟ್ಟಮೊದಲನೆಯ ವಿಧಿಯಲ್ಲಿ ಸಂಯುಕ್ತ ಸಂಘ ರಾಜ್ಯಕ್ಕೆ ಪ್ರವೇಶದ ನಂತರ ಉಪಾಧಿತ ಮತ್ತು ಅನುಪಾಧಿತ ರಾಜ್ಯಗಳೆಂದು ವರ್ಗೀಕರಿಸಲಾಗುವ ಭಾರತದ ರಾಜ್ಯಗಳ ಪ್ರವೇಶದ ಪ್ರಸ್ತಾಪವಿದೆ. +ಉಪಾಧಿತ ರಾಜ್ಯವು ಸಂಘದ ಸಂವಿಧಾನದಲ್ಲಡಗಿರುವ ತತ್ವಗಳ ಪ್ರಕಾರ ಆಂತರಿಕ ಸರಕಾರ ರಚಿಸಲು ಬದ್ಧವಾಗಿದೆ. +ಅನುಪಾಧಿತ ರಾಜ್ಯಗಳ ಪ್ರದೇಶಗಳನ್ನು ಸಂಯುಕ್ತ ರಾಜ್ಯದ ಪ್ರದೇಶಗಳೆಂದು ಪರಿಗಣಿಸಲಾಗುವುದು. +ಈ ಮನವಿಯಲ್ಲಿ ಪರಿಶಿಷ್ಟ ಜಾತಿಗಳವರ ಹಕ್ಕುಗಳನ್ನು ಮತ್ತು ವಿಶೇಷ ಸೌಲಭ್ಯಗಳನ್ನು ನಿಯುಕ್ತಗೊಳಿಸಲಾಗಿದೆಯೇ ಅಲ್ಲದೇ ಅವುಗಳ ಅತಿ ಪ್ರಮಾಣವಾದಾಗ ಅದಕ್ಕೆ ಪರಿಹಾರವನ್ನು ಸೂಚಿಸಲಾಗಿದೆ. +ಈ ಸಂದರ್ಭದಲ್ಲಿ ಮನವಿಯ ಕರ್ತೃ (ಡಾ.ಅಂಬೇಡ್ಕರ್‌ ಅವರು) ತಾವು ೧೯೩೧ ರಲ್ಲಿ ದುಂಡುಮೇಜು ಪರಿಷತ್ತಿನ ಅಲ್ಪಸಂಖ್ಯಾತರ ಉಪಸಮಿತಿಗೆ ಸಲ್ಲಿಸಿದ ಮನವಿಯಿಂದ ಬಹುಭಾಗಗಳನ್ನು ಉಲ್ಲೇಖಿಸಿದ್ದಾರೆ. +ಇವುಗಳು ಅಮೆರಿಕ ಸಂಯುಕ್ತ ಸಂಸ್ಥಾನದ ನೀಗ್ರೋಗಳ ವಿಮೋಚನೆಯ ನಂತರ ಅವರಹಿತ ರಕ್ಷಣೆಗಾಗಿ ಮಾಡಿದ ಕಾನೂನುಗಳು, ತಿದ್ದುಪಡಿಗಳು ಮತ್ತು ಬರ್ಮಾ ಬಹಿಷ್ಕಾರ-ವಿರೋಧಿ ಶಾಸನಗಳನ್ನಾಧರಿಸಿದೆ. + ಈ ಮನವಿಯ ಒಂದು ವೈಶಿಷ್ಟ್ಯವೆಂದರೆ ಸಂಯುಕ್ತ ರಾಜ್ಯದ ಮತ್ತು ಪ್ರಾಂತ್ಯಗಳ ಶಾಸಕಾಂಗದ ಇಡೀ ಸದನದಿಂದ ಪ್ರಧಾನ ಮಂತ್ರಿಯ ಚುನಾವಣೆ. + ಮಂತ್ರಿ ಮಂಡಳದಲ್ಲಿ ವಿವಿಧ ಅಲ್ಪಸಂಖ್ಯಾತರಪ್ರತಿನಿಧಿಗಳ ಆಯ್ಕೆ ಸದನದ ಆಯಾ ಅಲ್ಪಸಂಖ್ಯಾತರ ಪ್ರತಿನಿಧಿಗಳಿಂದ ಮತ್ತು ಕಾರ್ಯಾಂಗದ ಅಲ್ಪಸಂಖ್ಯಾತರ ಪ್ರತಿನಿಧಿಗಳನ್ನು ಇಡೀ ಸದನದಲ್ಲಿಯೇ ಚುನಾಯಿಸುವುದು. +ನಾಗರಿಕರ ಮೂಲಭೂತ ಹಕ್ಕುಗಳ ಅತಿಕ್ರಮಣದ ವಿರುದ್ಧ, ಆರ್ಥಿಕ ಶೋಷಣೆಯಿಂದ, ಅಭಾವದಿಂದ ಮತ್ತು ಭಯದಿಂದ ಮಿಮುಕ್ತಿಗಾಗಿ ಪರಿಹಾರಗಳನ್ನೊದಗಿಸಿರುವುದು ಈ ಮನವಿಯ ಇನ್ನೊಂದು ವೈಶಿಷ್ಟ್ಯ. +ಇದನ್ನು ಸಂವಿಧಾನಾತ್ಮಕವಾಗಿ ಸಂವಿಧಾನ ಜಾರಿಗೆ ಬಂದ ಹತ್ತು ವರ್ಷಗಳ ಅವಧಿಯಲ್ಲಿ ದೇಶದ ಆರ್ಥಿಕ ರಚನೆಯನ್ನು ಬದಲಾಯಿಸುವ ಮೂಲಕ ಸಾಧಿಸಲಾಗುವುದು. +ಸಂಕ್ಷಿಪ್ತದಲ್ಲಿ, ರಾಜ್ಯ ಸಮಾಜವಾದವನ್ನು ಸ್ವೀಕರಿಸುವುದರ ಮೂಲಕ, ಎಲ್ಲಾ ಮೂಲ ಕೈಗಾರಿಕೆಗಳು ಮತ್ತು ವಿಮೆ ಇವುಗಳ ರಾಜ್ಯಸ್ವಾಮ್ಯ ಮತ್ತುಆಡಳಿತಕ್ಕೊಳಪಡಿಸಲಾಗುವುದು. +ಮೂಲ ಕೈಗಾರಿಕೆ ಎಂದು ಪರಿಗಣಿಸಲಾದ ಒಕ್ಕಲುತನವನ್ನು ಸಾಮೂಹಿಕಪದ್ಧತಿಯ ಮೇಲೆ ರಚಿಸಬೇಕು. +ರಾಷ್ಟೀಕೃತ ಕೈಗಾರಿಕೆಗಳು ಮತ್ತು ಭೂಮಿಯ ಮಾಲಿಕರಿಗೆ ಸಾಲಪತ್ರಗಳ ರೂಪದಲ್ಲಿ ಪರಿಹಾರ ನೀಡಬೇಕು. +ಸಾಲಪತ್ರಗಳನ್ನು ಪಡೆದಿರುವವರು ಕಾನೂನಿನನ್ವಯ ನಿಗದಿತವಾದ ದರದಂತೆ ಬಡ್ಡಿಯನ್ನು ಪಡೆಯಲು ಅರ್ಹರಾಗಿರುತ್ತಾರೆ. +ಭಾರತದಲ್ಲಿ ಸಣ್ಣ ಹಿಡುವಳಿಗಳು ಡಾ.ಅಂಬೇಡ್ಕರ್‌ ಅವರು ತಮ್ಮ ಪಿಎಚ್‌. ಡಿ. ಪದವಿಯ ಅಧ್ಯಯನಕ್ಕೆ ಆಯ್ದುಕೊಂಡ ವಿಷಯ ಅರ್ಥಶಾಸ್ತ್ರಕ್ಕೆ ಸಂಬಂಧಿಸಿದ್ದಾಗಿತ್ತು. +ಈ ಲೇಖನವು ದೇಶದ ಕೃಷಿ ಅರ್ಥನೀತಿಯ ಸಮಸ್ಯೆಗಳ ಮೇಲೆ ಅವರು ಬರೆದ ಅನೇಕ ಲೇಖನಗಳಲ್ಲಿ ಒಂದಾಗಿದೆ. +ಕೃಷಿ ಉತ್ಪಾದನೆಯ ಸಂಬಂಧವಾದ ಕೃಷಿ ಅರ್ಥನೀತಿಯ ಹಲವು ಸಮಸ್ಯೆಗಳಲ್ಲಿ ಡಾ.ಅಂಬೇಡ್ಕರ್‌ ಅವರು ಕೃಷ್ಟಿ ಉತ್ಪಾದಕತೆಯ ಮೇಲೆ ಪ್ರಭಾವ ಬೀರುವ ಹಿಡುವಳಿಗಳ ಗಾತ್ರದ ವಿಷಯವನ್ನು ಆಯ್ದುಕೊಂಡರು. + ಡಾ.ಅಂಬೇಡ್ಕರ್‌ ಅವರು ತಮ್ಮ ಲೇಖನದಲ್ಲಿ ಭಾರತದ ಭೂ ಹಿಡುವಳಿಗಳು ಗಾತ್ರದಲ್ಲಿ ಚಿಕ್ಕವಾಗಿರುವುದೂ ಅಲ್ಲದೇ ಅವು ಚದುರಿಹೋಗಿವೆ ಎಂದು ಹೇಳುತ್ತಾ ಅವರು ಯಾವುದನ್ನು ಒಂದು ಉದ್ದಿಮೆ ಎಂದು ಕರೆದಿದ್ದಾರೋ ಆ ಭಾರತೀಯ ಕೃಷಿ ಉದ್ದಿಮೆಯ ಈ ಲಕ್ಷಣ ಕೃಷಿ ಕ್ಷೇತ್ರದಲ್ಲಿ ಆಂತಕಕ್ಕೆ ಕಾರಣವಾಗಿದೆ ಎಂದಿದ್ದಾರೆ. +ಈಹಿಡುವಳಿಗಳ ಸಮಸ್ಯೆ ಎರಡು ವಿಧಗಳಾದುವು - ೧) ಈ ಹಿಡುವಳಿಗಳನ್ನು ಹೇಗೆ ಒಟ್ಟುಗೂಡಿಸುವುದು ಮತ್ತು ೨) ಒಟ್ಟುಗೂಡಿಸಿದ ನಂತರ ಅವುಗಳನ್ನು ಯಾವ ರೀತಿ ಶಾಶ್ವತಗೊಳಿಸಬೇಕು. +ಭಾರತದಲ್ಲಿ ಮರಣ ಹೊಂದಿದವರ ವಾರಸುದಾರರು ಒಟ್ಟು ಹಿಡುವಳಿಗಳನ್ನು ತಮ್ಮೊಳಗೇ ಹಂಚಿಕೊಳ್ಳುವುದರ ಬದಲು ಪ್ರತಿಯೊಂದು ಸರ್ವೆ ನಂಬರಿನಲ್ಲಿ ಪಾಲು ಪಡೆಯ ಬಯಸುತ್ತಾರೆ. +ಇದು ಒಕ್ಕಲುತನದಲ್ಲಿ ಅದಕ್ಷತೆಗೆಡೆ ಮಾಡಿದೆಯಲ್ಲದೇ, ಅನೇಕ ಸಮಸ್ಯೆಗಳಿಗೆ ಕಾರಣವಾಗಿದೆ. +ಡಾ.ಅಂಬೇಡ್ಕರ್‌ ಅವರು ಭೂಮಿಯನ್ನು ಒಟ್ಟುಗೂಡಿಸುವ ವಿಧಾನಗಳನ್ನು ಪರಿಶೀಲಿಸಿದ್ದಾರೆ . + ಉದಾಹರಣೆಗೆ ಭೂಪಟ್ಟಯ ಪುನರ್‌ನಿರ್ಮಾಣ, ಛಿದ್ರವಾದ ಭೂಮಿಯ ಹಕ್ಕನ್ನು ಸಂಲಗ್ನಹಿಡುವಳಿದಾರನಿಗೇ ಮಾರುವಂತೆ ನಿರ್ಬಂಧ ಹಾಕುವುದು ಮತ್ತು ಇತರರಿಗೆ ಅವಕಾಶ ಕೊಡುವ ಮೊದಲೇ ತಾನು ಭೂಮಿಯನ್ನು ಕೊಂಡುಕೊಳ್ಳುವ ಹಕ್ಕು. +ಈ ಸಂದರ್ಭದಲ್ಲಿ ಡಾ.ಅಂಬೇಡ್ಕರ್‌ ಅವರು ಬರೋಡಾ ಸಮಿತಿಯ ವರದಿ ಮತ್ತು ಪ್ರೊಫೆಸರ್‌ ಜೇವನ್ಸ್‌ ಹಾಗೂ ಮಿಸ್ಟರ್‌ ಕೀಟಿಂಗ್‌ ಅವರ ಸೂಚನೆಗಳನ್ನು ಪರಿಶೀಲಿಸಿದ್ದಾರೆ. +ಭೂ ಕ್ರೋಢೀಕರಣದ ಮೂಲಕ ಚದುರಿರುವ ಹಿಡುವಳಿಗಳ ಅನಿಷ್ಟವನ್ನು ನಿವಾರಿಸಬಹುದು. +ಆದರೆ ಕ್ರೋಢೀಕೃತ ಹಿಡುವಳಿಗಳು ಆರ್ಥಿಕವಾಗಿ ಲಾಭದಾಯಕವಾಗದ ಹೊರತು ಸಣ್ಣ ಹಿಡುವಳಿಗಳ ಅನಿಷ್ಟಕಾರಕ ಪರಿಣಾಮಗಳ ನಿವಾರಣೆಯಾಗುವುದಿಲ್ಲ ಎಂದು ಹೇಳಿದ್ದಾರೆ. +ಲಾಭದಾಯಕ ಹಿಡುವಳಿಗಳ ನಿಯಮಗಳನ್ನು ಚರ್ಚಿಸುತ್ತಾ ಡಾ.ಅಂಬೇಡ್ಕರ್‌ ಅವರು ಹೀಗೆ ಹೇಳುತ್ತಾರೆ: +"ಕೇವಲ ಭೂಮಿಯ ಗಾತ್ರ ಆರ್ಥಿಕ ಮೂಲಾರ್ಥ ರಹಿತವೆನಿಸುವುದು. . . ಉತ್ಪಾದನೆಯ ಇತರ ಅಂಶಗಳ ಸರಿಯಾದ ಅಥವಾ ತಪ್ಪು ಪ್ರಮಾಣ ಭೂಮಿ ಲಾಭದಾಯಕವೋ ಅಥವಾ ಅಲ್ಲವೋ ಎಂಬುದನ್ನು ನಿರ್ಣಯಿಸುತ್ತವೆ." +ಆದ್ದರಿಂದ ಹಿಡುವಳಿಯಲ್ಲಿರುವ ಚಿಕ್ಕ ಜಮೀನೂ ಹಾಗೆಯೇ ದೊಡ್ಡ ಜಮೀನೂ ಲಾಭದಾಯಕವಾಗಬಹುದು. +ಅಂಕಿ ಅಂಶಗಳ ಸುದೀರ್ಥ ಪರಿಶೀಲನೆಯ ನಂತರ ಅವರು: “ಪ್ರಸ್ತುತ ಹಿಡುವಳಿಗಳು ಲಾಭದಾಯಕವಾಗಿಲ್ಲ. +ಎಂದರೆ ಅವು ಚಿಕ್ಕ ಗಾತ್ರದವು ಎಂಬ ಕಾರಣಕ್ಕಾಗಿ ಅಲ್ಲ. + ಆದರೆ ಉತ್ಪಾದನೆಯ ಇತರ ಅಂಶಗಳ ಅಭಾವದಿಂದಾಗಿಅವು ಅತಿ ದೊಡ್ಡ ಗಾತ್ರದವುಗಳೆನಿಸಿವೆ ಎಂಬ ಕಾರಣಕ್ಕಾಗಿ” ಎಂಬ ನಿರ್ಣಯಕ್ಕೆ ಬಂದಿದ್ದಾರೆ. +ಆದ್ದರಿಂದ ಹಿಡುವಳಿಯ ಗಾತ್ರವನ್ನು ವಿಸ್ತರಿಸುವ ಬದಲು ಬಂಡವಾಳ ಮತ್ತು ಮೂಲಸರಕು ಸಾಧನಗಳ ಹೆಚ್ಚಳವಾಗಬೇಕೆಂದು ಅವರು ಸಲಹೆ ಮಾಡಿದ್ದಾರೆ. + ಡಾ.ಅಂಬೇಡ್ಕರ್‌ ಅವರ ಪ್ರಕಾರ ಚಿಕ್ಕ ಹಿಡುವಳಿಗಳ ಕೆಡುಕು ಭಾರತದ ಸಾಮಾಜಿಕ, ಅರ್ಥ ನೀತಿಯಲ್ಲಿರುವ ಅವ್ಯವಸ್ಥೆಯ ಪರಿಣಾಮವಾಗಿದೆ. +ಅವಶ್ಯಕತೆಗಿಂತ ಹೆಚ್ಚಿನ ಮತ್ತು ಕೆಲಸವಿಲ್ಲದ ಜನಸಂಖ್ಯೆಯ ಬಹುಭಾಗಜನರು ಒಕ್ಕಲುತನದ ಮೇಲೆ ಹೆಚ್ಚಿನ ಒತ್ತಡ ಹೇರಿದ್ದಾರೆ. +ಒಕ್ಕಲುತನದ ದೋಷಗಳಿಗೆ ಪರಿಹಾರಗಳನ್ನು ವಿಶ್ಲೇಷಿಸುವ ಪ್ರಯತ್ನ ಮಾಡಿ ಅವರು ಭಾರತದ ಔದ್ಯೋಗೀಕರಣವೇ ಭಾರತದ ಕೃಷಿ ಸಮಸ್ಯೆಗಳಿಗೆ ಅತ್ಯಂತ ಯೋಗ್ಯ ಎಂದು ಸಲಹೆ ಮಾಡಿದ್ದಾರೆ. +ಮಿಸ್ಟರ್‌ ರಸೆಲ್‌ ಮತ್ತು ಸಮಾಜದ ಪುನರ್‌ರಚನೆ ಮಿಸ್ಟರ್‌ ಬರ್‌ಟ್ರಾಂಡ್‌ ರಸೆಲ್‌ರ “ಸಮಾಜದ ಪುನರ್‌ರಚನೆಯ ಸೂತ್ರಗಳು” ಎಂಬ ಗ್ರಂಥದ ವಿಮರ್ಶೆ ಮಾಡುತ್ತಾ ಡಾ.ಅಂಬೇಡ್ಕರ್‌ ಅವರು ಆಸ್ತಿ ಮತ್ತು ಅದರಿಂದ ಮಾನವ ಸ್ವಭಾವದ ಮೇಲೆ ಆಗುವುವೆಂದು ಭಾವಿಸಲಾದ ಅಂಶಗಳನ್ನು ಮಾತ್ರ ವಿಶ್ಲೇಷಿಸಿದ್ದಾರೆ. +ಯುದ್ಧದ ತತ್ಹವನ್ನು ಕುರಿತ ಮಿಸ್ಟರ್‌ ರಸೆಲ್‌ರ ವಿಚಾರಗಳ ಮೇಲೆ ವ್ಯಾಖ್ಯ ಮಾಡುತ್ತಾ ಡಾ.ಅಂಬೇಡ್ಕರ್‌ ಅವರು ಮಿಸ್ಟರ್‌ ರಸೆಲ್‌ರು ಯುದ್ಧವಿರೋಧಿಯಾಗಿದ್ದರೂ ಅವರು ನಿಷ್ಕ್ರಿಯೆಯ ಪರವಾಗಿಲ್ಲವೆಂದು ಅಭಿಪ್ರಾಯಪಡುತ್ತಾರೆ. +ನಿಷ್ಠಿಯೆ ಸಾವಿಗೆ ಇನ್ನೊಂದು ಹೆಸರು. +ಕ್ರಿಯೆ ಬೆಳವಣಿಗೆಗೆ ಮಾರ್ಗ. +ಏನನ್ನಾದರೂ ಸಾಧಿಸಬೇಕಾದರೆ ಬಲಪ್ರಯೋಗ ಅವಶ್ಯ. +ಆದರೆ ಇಷ್ಟೇ ನಾವು ಅದನ್ನು ರಚನಾತ್ಮಕವಾಗಿ ಒಂದು ಶಕ್ತಿಯನ್ನಾಗಿ ಉಪಯೋಗಿಸಬೇಕೇ ಹೊರತು ವಿನಾಶಕಾರೀ ಹಿಂಸೆಯನ್ನಾಗಿ ಅಲ್ಲ ಎಂಬುದು ಅವರ ಸಲಹೆ. +ಡಾ.ಅಂಬೇಡ್ಕರ್‌ ಅವರ ಪ್ರಕಾರ ಶಾಂತಿವಾದಿ ಮಿಸ್ಟರ್‌ ರಸೆಲ್‌ರ ಪ್ರಕಾರ ಯುದ್ಧವೂಸಹ ವ್ಯಕ್ತಿಯ ಬೆಳವಣಿಗೆಯ ಸಾಧನವಾಗಿದ್ದು, ಅದು ಸಾವು ಮತ್ತು ವಿನಾಶಕ್ಕೆಡೆ ಮಾಡುವುದರಿ೦ಂದ ಮಾತ್ರ ಅವರು ಅದನ್ನು ಖಂಡಿಸುತ್ತಾರೆ. +ಆದ್ದರಿಂದ ರಸೆಲ್‌ರು ಸೌಮ್ಯಸ್ವರೂಪದ ಯುದ್ಧವನ್ನೂ ಸ್ವಾಗತಿಸುವರೆಂದು ಅವರ ಅನಿಸಿಕೆ. +ಮುಂದುವರಿದು, ಮಿಸ್ಟರ್‌ ರಸೆಲ್‌ರು ಪ್ರತಿಪಾದಿಸಿದ ಆಸ್ತಿಯ ಪರಿಣಾಮಗಳನ್ನು ಡಾ.ಅಂಬೇಡ್ಕರ್‌ ಅವರು ಚರ್ಚಿಸಿದ್ದಾರೆ. +ಆಸ್ತಿಯ ಮಾನಸಿಕ ಪರಿಣಾಮಗಳನ್ನು ಕುರಿತು ರಸೆಲ್‌ರ ವಾದದ ವಿಷಯದಲ್ಲಿ ಕೆಲವು ತಪ್ಪು ಗ್ರಹಿಕೆಗಳಿವೆ. +ಮಿಸ್ಟರ್‌ ರಸೆಲ್‌ರು ಅರ್ಥೈಸಿದ "ಹಣದ ವ್ಯಾಮೋಹ"ದ ಹೇಳಿಕೆಯನ್ನು ಟೀಕಿಸುತ್ತಾ ಡಾ.ಅಂಬೇಡ್ಕರ್‌ ಅವರು “ಇಲ್ಲದವರ' ಮತ್ತು “ಉಳ್ಳವರ' ದೃಷ್ಟಿಕೋನದಲ್ಲಿ ನಿಜವಾದ ಭಿನ್ನಾಭಿಪ್ರಾಯವಿದೆ ಎಂದು ಹೇಳುತ್ತಾರೆ. +ಆದ್ದರಿಂದ ಹಣದ ಬಗ್ಗೆ ಅವರ ಮನೋಭಾವನೆಯಲ್ಲಿಯೂ ವ್ಯತ್ಯಾಸವಿದೆ. +ತಪ್ಪು ಅಭಿಪ್ರಾಯಕ್ಕೆಡೆ ಮಾಡಿರುವ ಹಣದ ವ್ಯಾಮೋಹದ ಉದ್ದೇಶದ ಪರಿಶೀಲನೆಯಲ್ಲಿ ಮಿಸ್ಟರ್‌ ರಸೆಲ್‌ರು ವಿಫಲರಾಗಿದ್ದಾರೆ ಎಂದು ಡಾ.ಅಂಬೇಡ್ಕರ್‌ ಅವರು ಅಭಿಪ್ರಾಯಪಟ್ಟಿದ್ದಾರೆ. +ಈ ಸಿದ್ಧಾಂತವು ನಮ್ಮ ಜೀವನದಲ್ಲಿ ಉತ್ಪಾದನೆಯ ದೃಷ್ಟಿಯಿಂದ ಅಭದ್ರವಾಗಿದೆ ಎಂದು ಅವರ ಅನಿಸಿಕೆ. +ಮುಂದುವರಿದು ಅವರು ನಮ್ಮ ಜೀವನದ ಅನುಭೋಗದ ದೃಷ್ಟಿಯಿಂದಲೂ ಈ ವಾದ ಸುಸಮ್ಮತವಾಗಿಲ್ಲವೆಂದು ಅವರು ಸಾಬೀತು ಮಾಡಿ ತೋರಿಸಿದ್ದಾರೆ. +ಈ ಹಂತದಲ್ಲಿ ವಿದ್ವಾಂಸರಾದ ಡಾಕ್ಟರರು, ಇಚ್ಛೆಗಳು ಮತ್ತು ಸುಖಾನುಭವಗಳ ಮನೋವೈಜ್ಞಾನಿಕ ವಿಶ್ಲೇಷಣೆ ಮಾಡಿದ್ದಾರೆ. +ಈ ಸ್ವಾರಸ್ಯಕರವಾದ ಚರ್ಚೆಯನ್ನು ಓದುಗರ ಹೆಚ್ಚು ಸಮಯವನ್ನು ತೆಗೆದುಕೊಳ್ಳದೇ ಅವರೇ ಮೂಲ ಕೃತಿಯನ್ನು ಓದಿ ಆನಂದಪಡಲೆಂದು ಇಲ್ಲಿಗೇ ಕೈಬಿಡುತ್ತೇವೆ. +ಈ ಸಂಪುಟದಲ್ಲಿ ವಿದ್ವಾಂಸರಾದ ಡಾ.ಅಂಬೇಡ್ಕರ್‌ ಅವರು ಮಂಡಿಸಿರುವ ಆಳವಾದ ಎಲ್ಲಾ ವಾದಗಳನ್ನು ಸಂಪೂರ್ಣವಾಗಿ ಮಂಡಿಸಿದ್ದೇವೆಂದು ಸಂಪಾದಕರು ಭಾವಿಸಿಲ್ಲ. +ಸಂಪಾದಕ ಮಂಡಳಿಯ ಸದಸ್ಯರು ಮಹಾರಾಷ್ಟ್ರ ರಾಜ್ಯದ ಮುಖ್ಯಮಂತ್ರಿ ಸನ್ಮಾನ್ಯ ಶ್ರೀ ಶರದ್‌ ಪವಾರ್‌ಮತ್ತು ಸನ್ಮಾನ್ಯ ಶಿಕ್ಷಣ ಸಚಿವ ಶ್ರೀ ಸದಾನಂದ ವರ್ದೆ ಅವರಿಗೆ ಈ ಸಂಪುಟವನ್ನು ಹೊರತರುವಲ್ಲಿ ಅವರ ಅಮೂಲ್ಯ ಸಹಾಯ, ಮಾರ್ಗದರ್ಶನ ಮತ್ತು ಸಹಾಕಾರಕ್ಕಾಗಿ ಚಿರಯಣಿಗಳಾಗಿದ್ದಾರೆ. +ಈ ಗ್ರಂಥವನ್ನು ಅತ್ಯಲ್ಪಸಮಯದಲ್ಲಿ ಹೊರತರಲು ಸಹಾಯ ಮಾಡಿದ ಸರಕಾರಿ ಮುದ್ರಣ ಇಲಾಖೆಯ ನಿರ್ದೇಶಕರಾದ ಶ್ರೀ ಸಪ್ರೆಮತ್ತು ಅವರ ಸಿಬ್ಬಂದಿ ವರ್ಗದವರಿಗೆ ನಾವು ಹಣಿಯಾಗಿದ್ದೇವೆ. +ಭಾರತದಲ್ಲಿ ಜಾತಿಗಳು ಮಾನವನ ನಾಗರಿಕತೆಯ ಒಟ್ಟು ಮೊತ್ತವನ್ನು ಗ್ರಹಿಸಲು ಭೌತಿಕ ವಸ್ತುಗಳನ್ನು ಸ್ಥಳೀಯ, ರಾಷ್ಟೀಯ ಮತ್ತು ಅಂತರರಾಷ್ಟೀಯವಾಗಿ ಅರ್ಥ ವಿವರಣೆಗಳಿಗೆ ಬಳಸಿಕೊಂಡಿರುವುದನ್ನು ನಮ್ಮಲ್ಲಿ ಹೆಚ್ಚಿನ ಮಂದಿ ಗಮನಿಸಿದ್ದೇವೆಂದು ಧೈರ್ಯದಿಂದ ಹೇಳಬಲ್ಲೆ. +ಮಾನವ ನಿರ್ಮಿತ ಸಾಮಾಜಿಕ ಏರ್ಪಾಡುಗಳನ್ನು ಈ ತರಹದ ವಿಶ್ಲೇಷಣೆಗೆ ಉಪಯೋಗಿಸಲು ಸಾಧ್ಯವೆಂಬ ವಿಚಾರವನ್ನು ಸ್ವೀಕರಿಸುವವರು ಇಲ್ಲವೆಂದೇ ಹೇಳಬಹುದು. +ಮನುಕುಲದ ಸಾಮಾಜಿಕ ಏರ್ಪಾಡುಗಳನ್ನು ಈ ನಿಟ್ಟಿನಲ್ಲಿ ಮುಂದಿಡುವುದು ಒಂದುವಿಚಿತ್ರ ಆಲೋಜನೆ; + ಕೆಲವರು ಇದನ್ನು ಕ್ರೂರಾತಿಕ್ರೂರ ಪರಿಕಲ್ಪನೆಯೆಂದು ಕರೆಯಬಹುದು. +ಆದರೆ ಮನುಕುಲಶಾಸ್ತ್ರದ ವಿದ್ಯಾರ್ಥಿಗಳಾದ ನೀವು ಈ ವಿಧಾನದ ಆವಿಷ್ಕಾರದ ಬಗ್ಗೆ ಕಠಿಣ ನಿಲುವನ್ನು ತಳೆಯಲಾರಿರಿ. +ಯಾಕೆಂದರೆ ಅದು ಕಠಿಣಕರವಾದುದಲ್ಲ, ಮತ್ತು ನಿಮಗಂತೂ ಅದು ಕಷ್ಟಕರವಾಗಿ ಗೋಚರಿಸದು. +ಪಾಂಪೇಯಿಯ ಭಗ್ನಾವಶೇಷ ತರಹದ ಕೆಲವು ಚಾರಿತ್ರಿಕ ಸ್ಥಳವನ್ನು ನೀವೆಲ್ಲ ಸಂದರ್ಶಿಸಿರಬೇಕೆಂದು ಮತ್ತು ಮಾರ್ಗದರ್ಶಿಯ ನುಣುಪು ನಾಲಗೆಯಿಂದ ಪ್ರವಹಿಸಿದ ರೀತಿಯಲ್ಲಿ ಆ ಅವಶೇಷಗಳ ಇತಿಹಾಸವನ್ನುಕೇಳಿರಬೇಕೆಂದು ನನ್ನ ನಂಬಿಕೆ. +ಮನುಕುಲಶಾಸ್ತ್ರದ ವಿದ್ಯಾರ್ಥಿಯೂ ಒಂದರ್ಥದಲ್ಲಿ ಮಾರ್ಗದರ್ಶಿ ಇದ್ದಂತೆ. +ತನ್ನ ಮೂಲ ಸ್ವರೂಪದಂತೆ (ಬಹುಶಃ ಇನ್ನೂ ಹೆಚ್ಚು ಹೊಣೆಗಾರಿಕೆಯಿಂದ ಮತ್ತು ಸ್ವಯಂಕಲಿಕೆಯ ಆಸಕ್ತಿಯಿಂದ) ಆತ ಸಾಮಾಜಿಕ ಏರ್ಪಾಡುಗಳನ್ನು ಮಾನವಸಾಧ್ಯ ವಸ್ತು ನಿಷ್ಠತೆಯಿಂದ ಗ್ರಹಿಸಲು ಮತ್ತು ಅದರ ಉಗಮ ಹಾಗೂ ಕಾರ್ಯವಿಧಾನಗಳನ್ನು ಪರಿಶೀಲಿಸಲು ಎತ್ತಿಕೊಳ್ಳುತ್ತಾನೆ. +ಆದಿಮ ಮತ್ತು ಆಧುನಿಕ ಸಮಾಜ ಮುಖಾಮುಖಿಯಾಗುವ ಸಂಬಂಧದ ಈ ವಿಚಾರ ಸಂಕಿರಣದ ಬಹುತೇಕ ನಮ್ಮ ಸಂಗಾತಿ ವಿದ್ಯಾರ್ಥಿಗಳು ತಮ್ಮ ಆಸಕ್ತಿಯ ಕ್ಷೇತ್ರವಾದ, ಪ್ರಾಚೀನ ಅಥವಾ ಇಂದಿನ,ವಿವಿಧ ವ್ಯವಸ್ಥೆಗಳ ಬಗ್ಗೆ ಸ್ವಚ್ಛವಾದ ವ್ಯಾಖ್ಯಾನವನ್ನು ಕೊಡುವ ಮೂಲಕ ಈ ದಿಶೆಯಲ್ಲಿ ಯಶಸ್ವಿಯಾಗಿದ್ದಾರೆ. +"ಭಾರತದಲ್ಲಿ ಜಾತಿಗಳು : ಅವುಗಳ ರಚನಾಕ್ರಮ, ಹುಟ್ಟು ಮತ್ತು ಬೆಳವಣಿಗೆ" ಎನ್ನುವ ಪ್ರಬಂಧವನ್ನು ಈ ಸಂಜೆ ನಿಮ್ಮ ಮುಂದಿಟ್ಟು ಕೈಲಾದ ಮಟ್ಟಿಗೆ ರಂಜಿಸುವ ಸರದಿ ಇದೀಗ ನನ್ನದು. +ನಾನೀಗ ನಿರ್ವಹಿಸಬೇಕಿರುವ ವಿಷಯದ ಸಂಕೀರ್ಣತೆಯ ಬಗ್ಗೆ ನಿಮಗೆ ನೆನಪಿಸಬೇಕಾದ ಅಗತ್ಯವಿಲ್ಲ. +ಜಾತಿಯ ನಿಗೂಢತೆಯ ಸಿಕ್ಕುಗಳನ್ನು ಬಿಡಿಸಲು ನನಗಿಂತಲೂ ಸೂಕ್ಷ್ಮ ಮನಸ್ಸುಗಳನ್ನು, ಸಮರ್ಥಲೇಖನಿಗಳನ್ನು ಕರೆತರಲಾಗಿತ್ತು. +ಆದರೆ ದುರದೃಷ್ಟವಶಾತ್‌ ಅದು ಇನ್ನೂ "ವ್ಯಾಖ್ಯಾನಿಸದ" ಸಾಮ್ರಾಜ್ಯದಲ್ಲಿದೆ,"ಅರ್ಥವಾಗದ" ಸಾಮ್ರಾಜ್ಯ ಎನ್ನುವುದನ್ನು ಮತ್ತೆ ಹೇಳಬೇಕಿಲ್ಲ. +ಜಾತಿಯಂಥ ಒಂದು ಮುದಿ ಪದ್ಧತಿಯ ಸಂಕೀರ್ಣ ತೊಡಕುಗಳ ಬಗ್ಗೆ ನಾನು ಸಾಕಷ್ಟು ಎಚ್ಚರದಿಂದಿದ್ದೇನೆ. +ಆದರೆ ಅದನ್ನು ತಿಳಿದುಕೊಳ್ಳಲ ಸಾಧ್ಯವಾದ ಲೋಕಕ್ಕೆ ದಾಟಸುವಷ್ಟು ನಿರಾಶಾವಾದಿ ನಾನಲ್ಲ. +ಯಾಕೆಂದರೆ ಅದನ್ನು ಅರ್ಥ ಮಾಡಿಕೊಳ್ಳಬಹುದೆಂದು ನಾನು ನಂಬುತ್ತೇನೆ. +ಸೈದ್ಧಾಂತಿಕವಾಗಿಯೂ, ಪ್ರಾಯೋಗಿಕವಾಗಿಯೂ ಜಾತಿ ಸಮಸ್ಯೆಯು ಅಗಾಧವಾದುದು. +ಡಾ.ಬಾಬಾಸಾಹೇಬ್‌ ಅಂಬೇಡ್ಕರ್‌ ಅವರ ಬರೆಹಗಳು-ಭಾಷಣಗಳು: ವಸ್ತುಶಃ ಅದು ಭಯಾನಕ ಪರಿಣಾಮಗಳ ಬಗ್ಗೆ ಮುಂದಾಗಿ ಎಚ್ಚರಿಕೆ ಕೊಡುವ ಒಂದು ವ್ಯವಸ್ಥೆಯಾಗಿದೆ. +ಅದು ಸ್ಥಳೀಯ ಸಮಸ್ಯೆಯಾದರೂ ವ್ಯಾಪಕವಾದ ಕೇಡು ಮಾಡುವ ಸಾಮರ್ಥ್ಯವನ್ನು ಹೊಂದಿದೆ. +ಯಾಕೆಂದರೆ ಭಾರತದಲ್ಲಿ ಜಾತಿ ಇರುವವರೆಗೂ ಹಿಂದೂಗಳು ಅಂತರ್ಜಾತೀಯ ವಿವಾಹವಾಗಲಾರರು ಅಥವಾ ಹೊರಗಿನವರೊಂದಿಗೆ ಸಾಮಾಜಿಕ ಸಂಬಂಧ ಮಾಡಲಾರರು; +ಹಿಂದೂಗಳು ಪ್ರಪಂಚದ ಬೇರೆ ಭಾಗಗಳಿಗೆ ವಲಸೆ ಹೋದರೆ ಭಾರತದ ಜಾತಿಯು ಒಂದು ಜಾಗತಿಕ ಸಮಸ್ಯೆಯಾಗಿ ಪರಿಣಮಿಸುತ್ತದೆ. +ವಾಸ್ತವದಲ್ಲಿ, ಜಾತಿಯ ಹುಟ್ಟಿನ ಬಗ್ಗೆ ಅದೊಂದು ಪ್ರೀತಿಯ ಕೆಲಸವೆಂದು ತಿಳಿದು ಬಗೆದು ನೋಡಲು ಪ್ರಯತ್ನಿಸಿದ ಬಹುಮಂದಿ ವಿದ್ವಾಂಸರನ್ನು ಅದು ತುಚ್ಚೀಕರಿಸಿದೆ. +ಪರಿಸ್ಥಿತಿಯು ಹೀಗಿರುವುದರಿಂದ,ನಾನು ಈ ಸಮಸ್ಯೆಯನ್ನು ಸಮಗ್ರವಾಗಿ ಪರಿಶೀಲಿಸಲಾರೆ. +ಹಾಗೆ ಮಾಡುವುದಕ್ಕೆ ಹೊರಟರೆ ಕಾಲ,ಸ್ಥಳಾವಕಾಶ ಮತ್ತು ಪ್ರತಿಭೆ ಇವೆಲ್ಲಾ ನನ್ನನ್ನು ನಿಷ್ಠಲಗೊಳಿಸುತ್ತವೆಂಬ ಆತಂಕ ನನಗಿದೆ. +ಅದುದರಿಂದ ನನ್ನ ವಿವರಣೆಯನ್ನು ಸಮಸ್ಯೆಯ ಒಂದು ವಲಯವಾದ ಜಾತಿ ವ್ಯವಸ್ಥೆಯ ಉಗಮ, ಕಾರ್ಯವಿಧಾನ ಮತ್ತು ಹರಹು ಇದಷ್ಟಕ್ಕೇ ಸೀಮಿತಗೊಳಿಸುತ್ತೇನೆ. +ಈ ಪ್ರಬಂಧದಲ್ಲಿ ಯಾವುದಾದರೂ ಒಂದು ಅಂಶವನ್ನು ಸ್ಪಷ್ಟೀಕರಿಸಬೇಕಾದರೆ ಅಥವಾ ಪುಷ್ಟೀಕರಿಸಬೇಕಾದರೆ ಮಾತ್ರ ಹೊರಗಿನ ಸಂಗತಿಗಳನ್ನುಕುರಿತು ಪ್ರಸ್ತಾಪಿಸುತ್ತೇನೆಯೇ ಹೊರತು ಉಳಿದಂತೆ ಈ ನಿಯಮವನ್ನು ನಾನು ಕಟ್ಟುನಿಟ್ಟಾಗಿ ಪಾಲಿಸುತ್ತೇನೆ. +ವಿಷಯದೊಂದಿಗೆ ಮುಂದಕ್ಕೆ ಸಾಗೋಣ. +ಪ್ರಸಿದ್ಧ ಮಾನವ ಕುಲ ಶಾಸ್ತ್ರಜ್ಯರ ಪ್ರಕಾರ ಭಾರತದ ಜನತೆ ಆರ್ಯ, ಡ್ರಾವಿಡ, ಮಂಗೋಲ ಮತ್ತು ಸಿಥಿಯನ್ನರ ಸಂಮಿಶ್ರಣವಾಗಿದೆ. +ಈ ಜನಾಂಗದವರೆಲ್ಲ ಬುಡಗಟ್ಟು ಸ್ಥಿತಿಯಲ್ಲಿದ್ದಾಗಲೇ ತಮ್ಮೆಲ್ಲ ವೈವಿಧ್ಯಮಯ ಸಂಸ್ಕೃತಿಗಳೊಂದಿಗೆ ಹಲವು ಶತಮಾನಗಳ ಹಿಂದೆ ಭಾರತಕ್ಕೆ ನಾನಾ ದಿಕ್ಕುಗಳಿಂದ ಬಂದರು. +ಮುಂಚಿನಿಂದ ಇಲ್ಲಿದ್ದ ಜನರೊಂದಿಗೆ ಹೋರಾಡುತ್ತ ಅವರನ್ನು ತಳ್ಳಿಕೊಂಡು ಭಾರತ ದೇಶದೊಳಕ್ಕೆ ಪ್ರವೇಶಿಸಿದರು. + ನಂತರದ ದಿನ ಅವರು ಸೌಹಾರ್ದಯುತ ನೆರೆಹೊರೆಯವರಂತೆ ಶಾಶ್ವತವಾಗಿ ನೆಲಸಿದರು. +ನಿರಂತರ ಸಂಪರ್ಕದಿಂದಲೂ ಪರಸ್ಪರ ವ್ಯವಹಾರ ಸಂಬಂಧದಿಂದಲೂ ಅವರು ತಮ್ಮ ಸಂಸ್ಕೃತಿಗಳ ಅನನ್ಯತೆಯಿಂದ ಕಳಚಿಕೊಂಡು ಸಮಾನ ಸಂಸ್ಕೃತಿಯೊಂದನ್ನು ರೂಪಿಸಿಕೊಂಡರು. +ಆದರೆ ಭಾರತದ ಜನಸಮುದಾಯ ಇಂತಹ ವಿವಿಧ ಕುಲಗಳ ಪರಿಪೂರ್ಣ ಮಿಶ್ರಣವಲ್ಲವೆಂಬುದನ್ನು ಒಪ್ಪಬಹುದು. +ಭಾರತದ ಪೂರ್ವದವನಿಗೂ, ಪಶ್ಚಿಮದವನಿಗೂ ಮತ್ತು ದಕ್ಷಿಣದವನಿಗೂ, ಉತ್ತರದವನಿಗೂ ದೈಹಿಕ ಲಕ್ಷಣ ಹಾಗೂ ಮೈ ಬಣ್ಣದಲ್ಲಿ ಎದ್ದುಕಾಣುವ ವೈದೃಶ್ಯಗಳಿವೆ ಎಂಬುದು ಭಾರತದ ಪ್ರವಾಸಿಗೆ ಕಾಣಿಸುತ್ತದೆ. +ನಿರೀಕ್ಷೆಗೆ ಅನುಗುಣವಾಗಿ ಸಮುದಾಯವೊಂದರ ಏಕಸ್ವರೂಪಕ್ಕೆ ಸಂಮಿಶ್ರಣಗೊಳ್ಳುವಿಕೆಯೊಂದೇ ಅಳತೆಗೋಲು ಆಗಲಾರದು. +ಜನಾಂಗೀಯವಾಗಿ ಎಲ್ಲರೂ ವಿಭಿನ್ನ ಸ್ವರೂಪಕ್ಕೆ ಸೇರಿದವರು. +ಸಮಾನತೆಯ ಮಾಪನವೆಂದರೆ ಸಾಂಸ್ಕೃತಿಕ ಒಗ್ಗಟ್ಟು. +ಇದನ್ನು ಒಪ್ಪಿಕೊಂಡಲ್ಲಿ,ಸಾಂಸ್ಕೃತಿಕ ಅಖಂಡತೆಯ ವಿಚಾರದಲ್ಲಿ ಭಾರತ ದ್ವೀಪಕಲ್ಪವನ್ನು ಮೀರಿಸುವ ಮತ್ತೊಂದು ದೇಶವಿಲ್ಲವೆಂದು ಹೇಳುವ ಧೈರ್ಯವನ್ನು ಮಾಡುತ್ತೇನೆ. +ಭಾರತದಲ್ಲಿರುವುದು ಭೌಗೋಳಿಕವಾದ ಏಕರೂಪತೆ ಮಾತ್ರವಲ್ಲ. +ಇದೆಲ್ಲಕ್ಕೂ ಮೀರಿ, ಆಳವೂ ಮೂಲಭೂತವೂ ಆದ ಒಂದು ಒಗ್ಗಟ್ಟಿದೆ. +ಅದೆಂದರೆ ದೇಶವನ್ನು ಒಂದು ತುದಿಯಿಂದ ಇನ್ನೊಂದು ತುದಿಯವರೆಗೆ ಆಚ್ಛಾದಿಸಿರುವ ಸಾಂಸ್ಕೃತಿಕ ಅಖಂಡತೆ. +ಆದರೆ ಈ ಏಕ ರೂಪತೆಯಿಂದಾಗಿಯೇ ಜಾತಿ ಎಂಬುದು ವಿವರಿಸಲು ತುಂಬ ಕ್ಲಿಷ್ಟವಾದ ಒಂದು ಸಮಸ್ಯೆಯಾಗಿರುವುದು. +ಹಿಂದೂ ಸಮಾಜವೆಂಬುದು ಕೇವಲ ಪರಸ್ಪರ ಪ್ರತ್ಯೇಕವಾಗಿರುವ ಘಟಕಗಳ ಒಂದು ಒಕ್ಕೂಟವಾಗಿದ್ದಲ್ಲಿ ಈ ವಿಷಯ ಸರಳವಾಗಿರುತ್ತಿತ್ತು . +ಆದರೆ ಜಾತಿಯೆಂಬುದು ಆಗಲೇ ಸಮರೂಪ ಧಾರಣೆ ಮಾಡಿರುವ ಘಟಕಗಳ ವಿಂಗಡಣೆಯಾಗಿದೆ. +ಜಾತಿ ಮೂಲದ ಕುರಿತ ವಿವರಣೆಯೆಂಬುದು ಈ ವಿಂಗಡಣೆಯ ಪಕ್ರಿಯೆಯ ವಿವರಣೆಯೂ ಆಗಿದೆ. +ನಮ್ಮ ಈ ಅಧ್ಯಯನ ಕ್ಷೇತ್ರದ ಪರಿಶೀಲನೆಗೆ ತೊಡಗುವ ಮೊದಲು ಜಾತಿಯ ಸ್ವರೂಪದ ಕುರಿತು ನಾವು ತಿಳಿದುಕೊಳ್ಳುವುದು ಒಳ್ಳೆಯದು. +ಆದುದರಿಂದ ನಾನು ಜಾತಿಯ ಕೆಲವು ಅತ್ಯುತ್ತಮ ಅಭ್ಯಾಸಿಗಳ ಮಾತುಗಳನ್ನು ಇಲ್ಲಿ ನಿರೂಪಿಸುತ್ತೇನೆ: +(೧) ಸೆನಾರ್ಟ್‌ ಎಂಬೊಬ್ಬ ಫ್ರೆಂಚ್‌ ಅಧಿಕಾರಿಯು ಮಾಡಿದ ಜಾತಿಯ ವ್ಯಾಖ್ಯಾನದ ಪ್ರಕಾರ,“ಅದು ಒಂದು ಒಟ್ಟಾಗಿ ಹೆಣೆದ ಸಂಸ್ಥೆ. +ಸೈದ್ಧಾಂತಿಕವಾಗಿ ಯಾವುದೇ ಕಾರಣಕ್ಕೂ ಕಠಿಣವಾದ ಅನುವಂಶೀಯತೆಯನ್ನು ಪಡೆದಿರುವಂಥದ್ದು: +ಸಮಗ್ರ ಅಧಿಕಾರ ಹೊಂದಿರುವ ಒಬ್ಬ ಮುಖ್ಯಸ್ಥ ಮತ್ತು ಮಂಡಳಿಯನ್ನು ಹೊಂದಿರುವ ಸಾಂಪ್ರದಾಯಿಕವಾದ ಮತ್ತು ಪ್ರತ್ಯೇಕವಾದ ಸಂಘಟನೆಯಾಗಿದ್ದು ಹಬ್ಬಹರಿದಿನಗಳಲ್ಲಿ ಒಟ್ಟಿಗೆ ಸೇರುವ, ಒಂದೇ ಬಗೆಯ ಕುಲಕಸುಬಿಗೆ ಸಂಬಂಧಿಸಿದ, ಅದೂ ಮದುವೆ,ಆಹಾರ ಮತ್ತು ಆಚರಣೆಗೆ ಸಂಬಂಧಿಸಿದ ನಿಷೇಧಗಳನ್ನು ಒಳಗೊಂಡಂಥ, ಮತ್ತು ಒಂದು ಕಾರ್ಯಪ್ರದೇಶದೊಳಗೆ ಇರುವ ಜನರ ಮೇಲೆ ದಂಡ ಅಥವಾ ಬಹಿಷ್ಕಾರ ಹಾಕುವ ಪರಮಾಧಿಕಾರವುಳ್ಳ ಒಂದು ವ್ಯವಸ್ಥೆ”. +(೨) ನೆಸ್‌ಫೀಲ್ದರ ಪ್ರಕಾರ ಜಾತಿ ಎಂದರೆ, “ಸಮಾಜದ ಒಂದು ಗುಂಪು. +ಇದು ಯಾವುದೇ ಇನ್ನೊಂದು ಗುಂಪಿನೊಂದಿಗೆ ಯಾವುದೇ ಸಂಬಂಧವನ್ನು ನಿರಾಕರಿಸುತ್ತದೆ. +ತಮ್ಮದೇ ಆದ ಒಂದು ಸಮಾಜಕ್ಕೆ ಸೇರಿದ ವ್ಯಕ್ತಿಗಳ ಹೊರತಾಗಿ ಬೇರೆಯವರೊಂದಿಗೆ ಮದುವೆಯಾಗುವಂತಿಲ್ಲ, ತಿನ್ನುವಂತಿಲ್ಲ,ಕುಡಿಯುವಂತಿಲ್ಲ.” +(೩) ಸರ್‌.ಎಚ್‌.ರಿಸ್ಲೆಯವರ ಪ್ರಕಾರ, “ಜಾತಿಯನ್ನು ಸಮಾನ ಹೆಸರುಗಳಿರುವ ಕುಟುಂಬಗಳ ಸಮೂಹ ಅಥವಾ ಹಲವು ಕುಟುಂಬಗಳಿರುವ ಒಕ್ಕೂಟವೆಂದು ವ್ಯಾಖ್ಯಾನಿಸಬಹುದು. +ಈ ಸಮಾನ ಹೆಸರುಗಳು ಸಾಮಾನ್ಯವಾಗಿ ಕುಲಕಸುಬನ್ನು ಸೂಚಿಸುತ್ತವೆ. +ಈ ಹೆಸರುಗಳು ಮಾನವ ಅಥವಾ ದೈವಿಕ ಪುರುಷನಾದ ಪೌರಾಣಿಕ ಪೂರ್ವಜರಿಂದ ಬಂದಿರುವುದಾಗಿ ಹೇಳಿಕೊಳ್ಳುತ್ತಾರೆ. +ಈ ಬಗ್ಗೆ ಅಭಿಪ್ರಾಯಕೊಡಬಲ್ಲ ಅರ್ಹತೆಯಿರುವವರು ಕೂಡ ಈ ಹೆಸರುಗಳನ್ನು ಒಂದು ಏಕರೂಪ ಸಮಾಜಕ್ಕೆ ಸೇರಿದ್ದೆಂದು ಗ್ರಹಿಸುತ್ತಾರೆ.” +(೪) ಡಾ.ಕೇತ್ಕರ್‌ ಅವರು ಜಾತಿಯನ್ನು ವಿವರಿಸಿರುವುದು ಹೀಗೆ, “ಅದು ಎರಡು ಲಕ್ಷಣಗಳನ್ನು ಪಡೆದಿರುವ ಒಂದು ಸಾಮಾಜಿಕ ಗುಂಪು : +೧ ಸದಸ್ಯತ್ವವು ಸದಸ್ಯರಿಂದ ಹುಟ್ಟಿದವರಿಗಷ್ಟೇ ಸೀಮಿತವಾಗಿದ್ದು,ಹಾಗೆ ಹುಟ್ಟಿದವರನ್ನೆಲ್ಲ ಒಳಗೊಂಡಿರುತ್ತದೆ. + ಸದಸ್ಯರು ತಮ್ಮ ಗುಂಪಿನಿಂದ ಹೊರಗಿನವರನ್ನುಮದುವೆಯಾಗುವುದನ್ನು ಉಲ್ಲಂಘಿಸಲಸಾಧ್ಯವಾದ ಸಾಮಾಜಿಕ ಕಟ್ಟಳೆಯಿಂದ ನಿಷೇಧಿಸಲಾಗಿದೆ.” + ಈ ವ್ಯಾಖ್ಯಾನಗಳನ್ನು ಸಮೀಕ್ಷಿಸುವುದು ನಮ್ಮ ಉದ್ದೇಶಕ್ಕೆ ಮಹತ್ವದ್ದಾಗಿದೆ. +ಒಂದೊಂದಾಗಿ ತೆಗೆದುಕೊಂಡಾಗ ಮೂವರು ಲೇಖಕರ ವ್ಯಾಖ್ಯಾನಗಳು ಒಂದೋ ಹೆಚ್ಚು ಇಲ್ಲವೆ ಕಡಿಮೆ ಅಂಶಗಳನ್ನೊಳಗೊಂಡಿವೆಯೆಂಬುದನ್ನು ನೋಡಬಹುದಾಗಿದೆ. +ಯಾವೊಂದು ವಿವರಣೆಯೂ ಪರಿಪೂರ್ಣಅಥವಾ ಸಮರ್ಪಕವಾಗಿಲ್ಲ, ಮತ್ತು ವ್ಯಾಖ್ಯಾನಕಾರರೆಲ್ಲ ಜಾತಿ ವ್ಯವಸ್ಥೆಯ ಕಾರ್ಯವಿಧಾನದ ಕೇಂದ್ರಬಿಂದುವನ್ನು ಡಾ.ಬಾಬಾಸಾಹೇಬ್‌ ಅಂಬೇಡ್ಕರ್‌ ಅವರ ಬರೆಹಗಳು-ಭಾಷಣಗಳು ಗುರುತಿಸುವಲ್ಲಿ ವಿಫಲರಾಗಿದ್ದಾರೆ. +ಜಾತಿಯ ವ್ಯವಸ್ಥೆಯನ್ನು ಅಖಂಡವಾಗಿ ನೋಡದೆ, ಮತ್ತು ಜಾತಿಗಳನ್ನು ಇದರೊಳಗಿನ ಒಂದು ಗುಂಪಾಗಿ ಗಮನಿಸದೆ, ಜಾತಿಯನ್ನು ಒಂದು ಪ್ರತ್ಯೇಕ ಘಟಕವೆಂದು ವ್ಯಾಖ್ಯಾನಿಸಲು ಪ್ರಯತ್ನಿಸಿದ್ದು ಅವರು ಮಾಡಿದ ತಪ್ಪು ಆದರೂ ಒಟ್ಟಾರೆ ತೆಗೆದುಕೊಂಡಾಗ ಅವರೆಲ್ಲರೂ ಪರಸ್ಪರಪೂರಕವಾಗಿಯೇ ಇದ್ದಾರೆ. +ಒಬ್ಬೊಬ್ಬರೂ ಇನ್ನೊಬ್ಬರು ಬಿಟ್ಟಿರುವುದನ್ನು ಒತ್ತಿ ಹೇಳಿದ್ದಾರೆ. +ಆದ್ದರಿಂದ ನಾನು ಮೇಲಿನ ವ್ಯಾಖ್ಯಾನಗಳಲ್ಲಿ ಜಾತಿಯ ವೈಶಿಷ್ಟ್ಯಗಳೆಂದು ಪರಿಗಣಿತವಾಗಿರುವ, ಎಲ್ಲಾ ಜಾತಿಗಳಿಗೂ ಸಮಾನವಾಗಿರುವ, ಅಂಶಗಳನ್ನಷ್ಟು ಮಾತ್ರ ತೆಗೆದುಕೊಂಡು ಹಾಗೆಯೇ ಮೌಲ್ಯಮಾಪನ ಮಾಡುತ್ತೇನೆ. +ಮೊದಲು ಸೆನರ್ಟ್‌ ಅವರಿಂದ ಆರಂಭಿಸುತ್ತೇನೆ. +ಅವರು ಜಾತಿಯ ಒಂದು ಮುಖ್ಯ ಲಕ್ಷಣವೆಂದು"ಮಾಲಿನ್ಯದ ಪರಿಕಲ್ಪನೆ"ಯತ್ತ ಗಮನ ಸೆಳೆಯುತ್ತಾರೆ. +ಯಾವುದೇ ರೀತಿಯಲ್ಲೂ ಇದು ಜಾತಿಯ ವೈಶಿಷ್ಟ್ಯವಲ್ಲವೆಂದು ಈ ಅಂಶದ ಬಗ್ಗೆ ನಾನು ಧಾರಾಳವಾಗಿ ಹೇಳಬಹುದು. +ಸಾಮಾನ್ಯವಾಗಿ ಇದು ಪುರೋಹಿತಶಾಹಿ ವಿಧಿವಿಧಾನಗಳಲ್ಲಿ ಹುಟ್ಟಿಕೊಳ್ಳುತ್ತದೆ. +ಅಲ್ಲದೆ ನಿರ್ದಿಷ್ಟವಾದ ವಿಚಾರವೊಂದಕ್ಕೆ ಸಂಬಂಧಿಸಿದಂತೆ ಪಾವಿತ್ರ್ಯದ ಬಗೆಗಿನ ಸಾಮಾನ್ಯ ನಂಬಿಕೆಯ ಭಾಗ ಇದು. +ಆದ ಕಾರಣ ಜಾತಿಯೊಡನಿರುವ ಇಂತಹ ಸಂಬಂಧವನ್ನು ಜಾತಿಯ ಕಾರ್ಯವಿಧಾನವನ್ನು ಘಾಸಿಗೊಳಿಸದೇ ಪೂರ್ಣವಾಗಿ ನಿರಾಕರಿಸಬಹುದು. +"ಮಾಲಿನ್ಯದ ಪರಿಕಲ್ಪನೆ"ಯನ್ನು ಜಾತಿಪದ್ಧತಿಗೆ ಜೋಡಿಸಲಾಗಿದೆ. + ಯಾಕೆಂದರೆ ಈಪದ್ಧತಿಯಲ್ಲಿ ಉನ್ನತ ಸ್ಥಾನವನ್ನು ಅಲಂಕರಿಸಿ ಅದರ ಫಲವನ್ನು ಉಣ್ಣುವ ಜಾತಿಯೆಂಬುದು ಪೌರೋಹಿತ್ಯ ನಡೆಸುವ ಜಾತಿ . + ಪುರೋಹಿತ ಮತ್ತು ಪಾವಿತ್ರ್ಯ ಹಳೆಯ ಒಡನಾಡಿಗಳೆಂದು ನಮಗೆ ಗೊತ್ತಿದೆ. +ಆದ್ದರಿಂದ ಜಾತಿಗೆ ಧಾರ್ಮಿಕ ಸ್ಪರ್ಶವಿದ್ದಲ್ಲಿ ಮಾತ್ರ "ಮಾಲಿನ್ಯದ ಪರಿಕಲ್ಪನೆ"ಯು ಜಾತಿಯ ಒಂದು ಲಕ್ಷಣವಾಗಿರುತ್ತದೆ ಎಂಬ ತೀರ್ಮಾನಕ್ಕೆ ನಾವು ಬರಬಹುದು. +ಜಾತಿಯ ಹೊರಗಿನವರೊಂದಿಗೆ ಕುಳಿತು ಊಟ ಮಾಡದಿರುವಿಕೆಯನ್ನು ಜಾತಿಯ ವಿಶೇಷಗಳಲ್ಹೊಂದೆಂದು ನೆಸ್‌ಫೀಲ್ಡರು ತಮ್ಮದೇ ಆದ ಧಾಟಿಯಲ್ಲಿ ವಿವೇಚಿಸಿದ್ದಾರೆ. +ಅವರ ವಿವರಣೆಯಲ್ಲಿ ಹೊಸ ಅಂಶವಿದ್ದರೂ ನೆಸ್‌ಫೀಲ್ದರು ಪರಿಣಾಮವನ್ನೇ ಕಾರಣವೆಂದು ತಪ್ಪಾಗಿ ತಿಳಿದರೆಂದು ನಾವು ಹೇಳಬೇಕಾಗುತ್ತದೆ. +ತನಗೆ ತಾನೆ ಸುತ್ತಲೂ ಬೇಲಿ ಹಾಕಿಕೊಂಡಿರುವುದರಿಂದ ಜಾತಿಯು ಸಹಜವಾಗಿಯೇ ಆಹಾರ ಸ್ವೀಕಾರದಂತಹ ಸಾಮಾಜಿಕ ಒಳಗೊಳ್ಳುವಿಕೆಯನ್ನು ತನ್ನೊಳಗಿನ ಸದಸ್ಯರಿಗಷ್ಟೇ ಸೀಮಿತಗೊಳಿಸುತ್ತದೆ. +ಅದರಿಂದಾಗಿ ಹೀಗೆ ಹೊರಗಿನವರೊಂದಿಗೆ ಊಟ ಮಾಡದಿರುವುದು ನಿಜಕ್ಕೂ ನಿಷೇಧದಂಥ ಕಾರಣದಿಂದ ಆದುದಲ್ಲ; + ಪ್ರತ್ಯೇಕತೆಯೆಂಬುದು ಜಾತಿಯ ಒಂದು ಸ್ವಾಭಾವಿಕ ಲಕ್ಷಣವೇ ಆಗಿದೆ. +ಈ ಊಟ ಮಾಡದಿರುವಿಕೆಯು ಮೂಲತಃ ಜಾತಿ ಹೊಂದಿರುವ ಪ್ರತ್ಯೇಕತಾ ಮನೋಭಾವನೆಯಿಂದ ಬಂದದ್ದು,ನಂತರ ನಿಷೇಧದ ಗುಣವುಳ್ಳ ಒಂದು ಧಾರ್ಮಿಕ ನಿರ್ಬಂಧದ ಸ್ಟರೂಪವನ್ನು ಪಡೆದುಕೊಂಡಿತು. +ಆದರೆ ಇದನ್ನು ತರುವಾಯದ ಒಂದು ಬೆಳವಣಿಗೆಯೆಂದು ತಿಳಿಯಬಹುದು. +ಸರ್‌ ಎಚ್‌.ರಿಸ್ಲೆಯವರು ವಿಶೇಷ ಗಮನಿಸುವಿಕೆಗೆ ಅರ್ಹವಾದ ಯಾವ ಹೊಸ ಸಂಗತಿಯನ್ನೂ ಹೇಳಿಲ್ಲ. +ಈಗ ನಾವು ಡಾ.ಕೇತ್ಕರ್‌ ಅವರ ವ್ಯಾಖ್ಯಾನಕ್ಕೆ ಬರೋಣ. +ಅವರು ಈ ವಿಷಯವನ್ನು ಸ್ಪಷ್ಟಗೊಳಿಸುವಲ್ಲಿಹೆಚ್ಚಿನ ಕೃಷಿ ಮಾಡಿದ್ದಾರೆ. +ಕೇತ್ಯರ್‌ ಅವರು ದೇಶೀಯರೂ ಆಗಿರುವುದಲ್ಲದೆ ಜಾತಿಯನ್ನು ಕುರಿತ ತಮ್ಮ ಅಧ್ಯಯನದಲ್ಲಿ ಅವರು ವಿಮರ್ಶಾತ್ಮಕವಾದ ಸೂಕ್ಷ ತೆಯನ್ನೂ, ತೆರೆದ ಮನಸ್ಸನ್ನೂ ಹೊಂದಿದ್ದಾರೆ. +ಅವರ ವ್ಯಾಖ್ಯಾನವು ಗಂಭೀರ ಪರಿಶೀಲನೆಗೆ ಅರ್ಹವಾದದ್ದು ಏಕೆಂದರೆ ಅವರು ಜಾತಿ ಎನ್ನುವುದನ್ನು ಜಾತಿಪದ್ಧತಿಯ ಹಿನ್ನೆಲೆಯಲ್ಲೇ ವ್ಯಾಖ್ಯಾನಿಸಿದ್ದಾರೆ. +ಜಾತಿ ವ್ಯವಸ್ಥೆಯೊಳಗೆ ಜಾತಿಯ ಅಸ್ತಿತ್ವಕ್ಕಾಗಿ ತೀರ ಅನಿವಾರ್ಯವಾದಂಥ ಜಾತಿ ಗುಣಲಕ್ಷಣಗಳನ್ನು ಕುರಿತು ಮಾತ್ರ ಅವರು ತಮ್ಮ ಗಮನವನ್ನು ಕೇಂದ್ರಿಕರಿಸಿದ್ದಾರೆ. +ಉಳಿದವುಗಳನ್ನೆಲ್ಲ ಪ್ರಾಥಮಿಕವಲ್ಲದ ಸ್ವರೂಪದವುಗಳು ಅಥವಾ ಉಪ ಉತ್ಪನ್ನ ಗುಣದವುಗಳೆಂದು ವರ್ಗೀಕರಿಸಿ ಹೊರಗಿಟ್ಟಿರುವುದು ಸಮಂಜಸವಾಗಿದೆ. +ಆದರೂ ಅವರ ಈ ವ್ಯಾಖ್ಯಾನದ ಬಗ್ಗೆ ಒಂದು ಮಾತನ್ನು ಹೇಳಬಹುದೇನೆಂದರೆ ಅದರಲ್ಲಿ ಕಿಂಚಿತ್ತಾದ ವೈಚಾರಿಕ ಗೊಂದಲವಿದೆ. +ಅದನ್ನು ಬಿಟ್ಟರೆ ಅವರ ಈ ನಿರೂಪಣೆಯು ಸ್ವಚ್ಛ ಹಾಗೂ ಸ್ಫುಟ. +ಅಂತರ್ಜಾತೀಯ ವಿವಾಹ ನಿಷೇಧ ಮತ್ತು ಸ್ವಕುಲಜರಿಗೇ ಸದಸ್ಯತ್ವ ಎಂಬೆರಡು ಜಾತಿ ಲಕ್ಷಣಗಳನ್ನು ಕುರಿತು ಅವರು ಪ್ರಸ್ತಾಪಿಸುತ್ತಾರೆ. +ಆದರೆ ಈ ಲಕ್ಷಣಗಳು,ಡಾ.ಕೇತ್ಕರ್‌ ಅವರು ಭಾವಿಸುವಂತೆ ಎರಡು ಪ್ರತ್ಯೇಕ ಸಂಗತಿಗಳಲ್ಲವೆಂದೂ, ಇವು ಒಂದೇ ಒಂದು ಸಂಗತಿಯ ಎರಡು ಪ್ರತ್ಯೇಕ ಅಂಶಗಳಷ್ಟೇ ಎಂಬುದನ್ನು ನಿವೇದಿಸ ಬಯಸುತ್ತೇನೆ. +ಅಂತರ್ಜಾತೀಯ ವಿವಾಹವನ್ನು ನೀವು ನಿಷೇಧಿಸಿದಿರೆಂದರೆ ಅದರ ಪರಿಣಾಮವಾಗಿ ನೀವು ಗುಂಪಿನಲ್ಲಿರುವವರಿಗಷ್ಟೇ ಸದಸ್ಯತ್ವವನ್ನು ಮಿತಿಗೊಳಿಸಿದಂತಾಗುತ್ತದೆ. +ಹೀಗಾಗಿ ಇವೆರಡೂ ಒಂದೇ ನಾಣ್ಯದ ಎರಡು ಮುಖಗಳು. +ಜಾತಿಯನ್ನು ಸರಿಯಾದ ರೀತಿ ಅರ್ಥ ಮಾಡಿಕೊಂಡಾಗ ಸ್ವಕುಲದಲ್ಲಿನ ಮದುವೆ, ಅಥವಾ ಅಂತರ್ಜಾತೀಯ ವಿವಾಹದ ನಿಷೇಧ, ಅದರ ಏಕೈಕ ಸಾರವೆಂದು ಕರೆಯಬಹುದು. +ಆದರೆ ಅಮೂರ್ತವಾದ ಮಾನವ ಕುಲಶಾಸ್ತ್ರದ ಆಧಾರದಿಂದ ಕೆಲವರು ಇದನ್ನು ನಿರಾಕರಿಸಬಹುದು. +ಏಕೆಂದರೆ ಜಾತಿಯ ಸಮಸ್ಯೆ ಹುಟ್ಟಲು ಅವಕಾಶ ಕೊಡದಂತಹ ಸ್ಪಜಾತಿ ವಿವಾಹವಿರುವ ಗುಂಪುಗಳೂ ಇವೆ. +ಸಾಮಾನ್ಯ ರೀತಿಯಲ್ಲಿ ಇದು ಸರಿಯಿರಬಹುದು. +ಸಾಂಸ್ಕೃತಿಕವಾಗಿ ಭಿನ್ನವಾದ ಗುಣಲಕ್ಷಣಗಳಿರುವ, ಹೆಚ್ಚು ಕಡಿಮೆ ಬೇರೆ ಬೇರೆಯಾದ ಸ್ಥಳಗಳಲ್ಲಿ ವಾಸಿಸುತ್ತಿರುವ ಮತ್ತು ಪರಸ್ಪರ ವ್ಯವಹಾರದ ಅಗತ್ಯವಿಲ್ಲದಿರುವ ಸ್ವಜಾತಿ ವಿವಾಹ ನಡೆಸುವ ಸಮಾಜಗಳು ಇವೆ ಎನ್ನುವುದು ವಾಸ್ತವ. +ಈ ಹೇಳಿಕೆಯನ್ನು ಪುಷ್ಟೀಕರಿಸಲು ಸಂಯುಕ್ತ ಸಂಸ್ಥಾನಗಳಲ್ಲಿರುವ ನೀಗ್ರೋಗಳು, ಬಿಳಿಯರು ಮತ್ತು ಅಮೆರಿಕನ್‌ ಇಂಡಿಯನ್ಸ್‌ ಎಂಬ ಹೆಸರಿನಿಂದ ಕರೆಯಲಾಗುವ ವಿವಿಧ ಬುಡಗಟ್ಟು ಗುಂಪುಗಳನ್ನು ಹೆಚ್ಚು ಕಡಿಮೆ ಸೂಕ್ತವಾದ ದೃಷ್ಟಾಂತವಾಗಿ ಹೆಸರಿಸಬಹುದು. +ಆದರೆ ಭಾರತದಲ್ಲಿನ ಪರಿಸ್ಥಿತಿಯೇ ಬೇರೆ. +ಆದ್ದರಿಂದ ನಾವು ವಿಷಯಗಳನ್ನು ಗೊಂದಲಮಯವಾಗಿಸಬಾರದು. +ಆಗಲೇ ಹೇಳಿರುವಂತೆ ಭಾರತದ ಜನರು ಒಟ್ಟಾರೆಯಾಗಿ ಒಂದೇ ಬಗೆಯವರು. +ಖಚಿತ ವಲಯಗಳನ್ನು ಹೊಂದಿಕೊಂಡಿರುವ ಭಾರತದ ವಿವಿಧ ಜನಾಂಗಗಳು ಬಹುಮಟ್ಟಿಗೆ ಒಬ್ಬರೊಡನೊಬ್ಬರು ಮಿಳಿತವಾಗಿದ್ದಾರೆ. +ಸಾಂಸ್ಕೃತಿಕ ಏಕತೆಯನ್ನೂ ಪಡೆದಿದ್ದಾರೆ. +ಇದೊಂದೇ ಏಕರೂಪ ಜನಸಮುದಾಯದ ಅಳತೆಗೋಲು. +ಈ ತರಹದ ಸಮರೂಪತೆಯ ಆಧಾರದ ಮೇಲೆ ಹೇಳುವುದಿದ್ದರೆ,ಸ್ವಜಾತಿ ವಿವಾಹದ ಸಮಾಜಗಳಲ್ಲಿ ಅಥವಾ ಹತ್ತಿರದ ರಕ್ತ ಸಂಬಂಧ ಮಾತ್ರದಿಂದ ರಚಿತವಾದ ಸಾಂಸ್ಕೃತಿಕ ಅಥವಾ ಬುಡಕಟ್ಟು ಗುಂಪುಗಳ ಸಂದರ್ಭದಲ್ಲಿ ಕಾಣದಿರುವ ಗುಣಲಕ್ಷಣಗಳು ಜಾತಿಯನ್ನು ಒಂದು ಹೊಸ ಸ್ವರೂಪದ ಸಮಸ್ಯೆಯನ್ನಾಗಿಸುತ್ತವೆ. +ಭಾರತದಲ್ಲಿ ಜಾತಿಯೆಂದರೆ ಸ್ವಜಾತಿ ಮದುವೆಯ ಆಚರಣೆಯೊಂದಿಗೆ, ಅಂತರ್ಜಾತಿ ವಿವಾಹವನ್ನು ನಿಷೇಧಿಸುತ್ತಾ, ಒಂದು ಗುಂಪು ಇನ್ನೊಂದರೊಡನೆ ಸಮ್ಮಿಳಿತವಾಗದಂತೆ ತಡೆಯುವ ಮೂಲಕ ಒಟ್ಟು ಜನಸಂಖ್ಯೆಯನ್ನು ಸ್ಥಿರ ಮತ್ತು ನಿರ್ದಿಷ್ಟ ಘಟಕಗಳ ನಡುವೆ ಕೃತಕವಾಗಿ ಕತ್ತರಿಸಿ ಹಂಚುವ ಪ್ರಕ್ರಿಯೆ. +ಹೀಗಾಗಿ ಸ್ವಜಾತಿ ವಿವಾಹವು ಜಾತಿಗೇ ವಿಶಿಷ್ಟವಾದ ಏಕೈಕ ಗುಣವೆಂದು ತೀರ್ಮಾನಿಸುವುದು ಅನಿವಾರ್ಯ. +ಸ್ವಜಾತಿ ವಿವಾಹವನ್ನು ಹೇಗೆ ಕಾಪಾಡಲಾಗಿದೆಯೆಂಬುದನ್ನು ತೋರಿಸುವುದರಲ್ಲಿ ನಾವು ಯಶಸ್ವಿಯಾದರೆ ಅಲ್ಲಿಗೆ ಜಾತಿಯ ಉತ್ಪತ್ತಿ ಮತ್ತು ರಚನಾಕ್ರಮವನ್ನು ವಾಸ್ತವವಾಗಿ ಸಾಧಿಸಿದಂತೆಯೇ. +ಜಾತಿ ವ್ಯವಸ್ಥೆಯ ರಹಸ್ಯ ಸ್ಫೋಟಕ್ಕೆ ಸ್ವಜಾತಿ ವಿವಾಹವನ್ನು ಒಂದು ಕೀಲಿಕೈಯೆಂದು ನಾನು ಪರಿಗಣಿಸುವುದೇಕೆಂದು ನಿರೀಕ್ಷಿಸುವುದು ನಿಮಗೆ ಅಷ್ಟು ಸುಲಭವಾಗದಿರಬಹುದು. +ನಿಮ್ಮ ಕಲ್ಪನೆಯನ್ನು ತುಂಬ ದಣಿಸದೆ ನನ್ನ ಕಾರಣಗಳನ್ನು ಮೊದಲು ತಿಳಿಸತೊಡಗುತ್ತೇನೆ. +ಭಾರತದ ಸಮಾಜಕ್ಕಿಂತ ಮಿಗಿಲಾಗಿ ಇಂದಿನ ಯಾವ ನಾಗರಿಕ ಸಮಾಜವೂ ಪ್ರಾಚೀನ ಕಾಲದ ಅವಶೇಷಗಳನ್ನು ತೋರ್ಪಡಿಸದೆಂದು ಈ ಸಂದರ್ಭದಲ್ಲಿ ಒತ್ತು ಕೊಟ್ಟು ಹೇಳುವುದು ವಿಷಯಕ್ಕೆ ಹೊರತಾಗಲಾರದು. +ಭಾರತದ ಧರ್ಮವು ಮೂಲಭೂತವಾಗಿ ಪುರಾತನವಾದದ್ದು. +ಕಾಲ ಮತ್ತು ನಾಗರಿಕತೆಯಲ್ಲಿ ಪ್ರಗತಿಯಾಗಿದ್ದೂ ಅದರ ಪ್ರಾಚೀನ ನಿಯಮಗಳು ತನ್ನೆಲ್ಲ ಆದಿಸ್ಥಿತಿಯ ಬಲದೊಂದಿಗೆ ಇಂದಿಗೂ ಜಾರಿಯಲ್ಲಿವೆ. +ನಾನು ನಿಮ್ಮ ಗಮನ ಸೆಳೆಯಬೇಕೆಂದಿರುವುದು ಈ ಪುರಾತನ ಪಳೆಯುಳಿಕೆಗಳಲ್ಲಿ ಒಂದಾದ ಭಿನ್ನಗೋತ್ರ ವಿವಾಹ ಪದ್ಧತಿ ಕುರಿತು. +ಪ್ರಾಚೀನ ಜಗತ್ತಿನಲ್ಲಿ ಭಿನ್ನಗೋತ್ರ ವಿವಾಹ ಚಾಲ್ತಿಯಿದ್ದುದು ಯಾವುದೇ ವಿವರಣೆ ಬಯಸದಷ್ಟು ಚೆನ್ನಾಗಿ ಗೊತ್ತಿರುವ ಸಂಗತಿಯಾಗಿದೆ. +ಆದರೂ ಚರಿತ್ರೆಯ ಬೆಳವಣಿಗೆಯೊಂದಿಗೆ ಭಿನ್ನಗೋತ್ರ ವಿವಾಹವು ತನ್ನ ಪ್ರಭಾವವನ್ನು ಕಳೆದುಕೊಂಡಿದೆ. +ತೀರ ಹತ್ತಿರದ ರಕ್ತ ಸಂಬಂಧಿಗಳನ್ನು ಬಿಟ್ಟರೆ ಸಾಮಾನ್ಯವಾಗಿ ವಿವಾಹ ಕ್ಷೇತ್ರವನ್ನು ತಡೆಹಿಡಿಯುವ ಸಾಮಾಜಿಕ ನಿರ್ಬಂಧಗಳಿಲ್ಲ. +ಆದರೆ ಭಾರತೀಯರ ವಿಚಾರದಲ್ಲಿ ಭಿನ್ನಗೋತ್ರ ವಿವಾಹ ನಿಯಮವು ಇಂದಿಗೂ ಸ್ಪಷ್ಟವಾದ ಕಟ್ಟಳೆಯಾಗಿದೆ. +ಈಗ ಕುಲಗಳಿಲ್ಲದಿದ್ದರೂ ಭಾರತೀಯ ಸಮಾಜವು ಇನ್ನೂ ಕುಲ ವ್ಯವಸ್ಥೆಯ ಛಾಯೆಯನ್ನು ಹೊಂದಿದೆ. +ಭಿನ್ನಗೋತ್ರ ವಿವಾಹ ಕಟ್ಟಳೆಯ ಸುತ್ತ ಕೇಂದ್ರೀಕೃತವಾಗಿರುವ ಮದುವೆಯ ನಿಯಮದಲ್ಲಿ ಇದನ್ನು ಸುಲಭವಾಗಿ ಗಮನಿಸಬಹುದು. +ಏಕೆಂದರೆ ಸಪಿಂಡರು (ರಕ್ತಸಂಬಂಧಿಗಳು) ಮದುವೆಯಾಗಬಾರದೆಂದು ಮಾತ್ರವಲ್ಲ, ಸಗೋತ್ರರ (ಒಂದೇ ವರ್ಗದ) ನಡುವಣ ಮದುವೆಯೊಂದನ್ನು ಕೂಡ ದೈವದ್ರೋಹವೆಂದು ಪರಿಗಣಿಸಲಾಗಿದೆ. +ಆದುದರಿಂದ, ಸ್ಟಗೋತ್ರ ವಿವಾಹವು ಭಾರತೀಯರಿಗೆ ಹೊರಗಿನದೆಂಬ ಸಂಗತಿಗಿಂತ ಪ್ರಮುಖವಾಗಿ ನೀವು ನೆನಪಿಡಬೇಕಾದ್ದು ಬೇರಾವುದೂ ಇಲ್ಲ. +ಭಾರತದ ಬೇರೆ ಬೇರೆ ಗೋತ್ರಗಳು ಭಿನ್ನಗೋತ್ರ ವಿವಾಹಪದ್ದತಿಯನ್ನು ಅನುಸರಿಸುವವೇ ಆಗಿವೆ; +ಕುಲ ದೇವತಾರಾಧನಾ ಪದ್ಧತಿಯ ಇತರ ಗುಂಪುಗಳೂ ಹೀಗೆಯೇ ಇವೆ. +ಭಾರತೀಯರಲ್ಲಿ ಭಿನ್ನಗೋತ್ರ ವಿವಾಹವೆಂಬುದು ಯಾರೂ ಉಲ್ಲಂಘಿಸಲು ಧೈರ್ಯತೋರದ ಒಂದು ನಂಬಿಕೆಯೆಂದು ಹೇಳುವುದರಲ್ಲಿ ಯಾವ ಉತ್ಪ್ರೇಕ್ಷೆಯೂ ಇಲ್ಲ. +ಹೀಗಾಗಿ ಜಾತಿಗಳೊಳಗೆ ಸ್ವಜಾತಿ ವಿವಾಹವು ಇದ್ದರೂ ಕೂಡ ಭಿನ್ನಗೋತ್ರ ವಿವಾಹವನ್ನು ಕಟ್ಟುನಿಟ್ಟಾಗಿ ಪರಿಪಾಲಿಸಲಾಗುತ್ತಿದೆ. +ಭಿನ್ನಗೋತ್ರ ವಿವಾಹದ ಕಟ್ಟಳೆಯನ್ನು ಮೀರಿದವರಿಗೆ ಸ್ಟಜಾತಿ ವಿವಾಹದ ನಿಯಮವನ್ನು ಮುರಿದವರಿಗಿಂಥ ಕಠಿಣತರವಾದ ದಂಡವನ್ನು ವಿಧಿಸಲಾಗುವುದು. +ಅಂತರ್ಜಾತಿ ವಿವಾಹಪದ್ಧತಿ ಇದ್ದಲ್ಲಿ ಜಾತಿ ಇರಲುಸಾಧ್ಯವಿಲ್ಲ ಎನ್ನುವುದನ್ನು ನೀವು ನೋಡಬಹುದು. +ನಿಜಕ್ಕೂ ಅಂತರ್ಜಾತಿ ವಿವಾಹವೆಂದರೆ ಜಾತಿಗಳ ಬೆಸುಗೆ ಎಂದರ್ಥ. +ಆದರೆ ನಮ್ಮಲ್ಲಿ ಜಾತಿಗಳಿವೆ. +ಭಾರತಕ್ಕೆ ಸಂಬಂಧಿಸಿದಂತೆ, ಜಾತಿಗಳ ಸೃಷ್ಟಿಯೆಂದರೆ ಅಂತರ್ಜಾತಿ ವಿವಾಹದ ಮೇಲೆ ಸ್ವಜಾತಿ ವಿವಾಹದ ಮೇಲ್ತರದ ಪ್ರಾಬಲ್ಯ ಎಂಬುದು ಅಂತಿಮ ವಿಶ್ಲೇಷಣೆಯಾಗಿದೆ. +ಹಾಗಿದ್ದೂ ಮೂಲದಲ್ಲಿ ಅಂರ್ತಜಾತಿ ವಿವಾಹ ಪದ್ಧತಿ ಇರುವ ಜನಸಮುದಾಯಗಳ ಸಂದರ್ಭ ಸ್ವಜಾತಿ ಮದುವೆ (ಅದು ಮತ್ತೆ ಜಾತಿ ಸೃಷ್ಟಿಗೆ ಸಮನಾಗಿರುತ್ತದೆ) ವಿಷಯವನ್ನು ನಿರ್ವಹಿಸುವುದು ಒಂದು ಗಂಭೀರ ಸಮಸ್ಯೆಯೇ ಆಗಿದೆ. +ಅಂತರ್ಜಾತಿ ವಿವಾಹಪದ್ಧತಿಯ ವಿರುದ್ದವಾಗಿ ಸ್ವಜಾತಿ ವಿವಾಹಪದ್ಧತಿಯ ಜಾತಿ ಸಂರಕ್ಷಣೆಗಾಗಿ ಬಳಸುವ ವಿಧಾನಗಳ ಪರಿಶೀಲನೆಯಲ್ಲಿಯೇ ನಾವು ನಮ್ಮ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿರೀಕ್ಷೆಯಿಟ್ಟು ಕೊಳ್ಳಬಹುದು. +ಈ ರೀತಿಯಲ್ಲಿ ಅಂತರ್ಜಾತಿ ವಿವಾಹದ ಮೇಲೆ ಸ್ವಜಾತಿ ವಿವಾಹದ ಮೇಲ್ತರದ ಪ್ರಾಬಲ್ಯವೆಂದರೆ ಅದು ಜಾತಿಯ ಸೃಷ್ಟಿ ಎಂದರ್ಥ. +ಆದರೆ ಇದು ಅಷ್ಟು ಸುಲಭದ ವ್ಯವಹಾರವಲ್ಲ. +ಈಗ ಉದಾಹರಣೆಯಾಗಿ,ತನ್ನನ್ನೇ ತಾನು ಜಾತಿಯನ್ನಾಗಿಸಲು ಇಚ್ಛಿಸುವ ಒಂದು ಕಾಲ್ಪನಿಕ ಗುಂಪನ್ನು ತೆಗೆದುಕೊಂಡು ಅದು ಸ್ವಜಾತಿ ವಿವಾಹ ಪದ್ಧತಿಯನ್ನು ಜಾರಿಗೆ ತರಲು ಯಾವ ವಿಧಾನಗಳನ್ನು ಅನುಸರಿಸಬೇಕಾದೀತೆಂಬುದನ್ನು ವಿಶ್ಲೇಷಿಸೋಣ. +ಒಂದು ಗುಂಪು ತನ್ನ ಜಾತಿಯಲ್ಲೇ ಮದುವೆ ಮಾಡಿಕೊಳ್ಳಲು ನಿರ್ಧರಿಸಿದಾಗ, ಅದರಲ್ಲಿಯೂ ವೈವಾಹಿಕ ಸಂಬಂಧಗಳು ಭಿನ್ನ ಸಮುದಾಯಗಳೊಂದಿಗೆ ನಡೆಯಲೇಬೇಕೆಂಬ ಕಟ್ಟಳೆ ಈ ಹಿಂದೆ ಇದ್ದಾಗಲಂತೂ, ಹೊರಗಿನ ಗುಂಪುಗಳೊಂದಿಗೆ ಅಂತರ್ಜಾತೀಯ ಮದುವೆ ಮಾಡಿಕೊಳ್ಳುವುದರ ವಿರುದ್ಧ ಕೇವಲ ಒಂದು ಔಪಚಾರಿಕ ನಿಷೇಧ ಮಾತ್ರ ಪ್ರಯೋಜನಕಾರಿಯಾಗುವುದಿಲ್ಲ. +ಅದೂ ಅಲ್ಲದೆ, ಪರಸ್ಪರ ನಿಕಟ ಸಂಪರ್ಕದಲ್ಲಿರುವ ಎಲ್ಲ ಗುಂಪುಗಳಲ್ಲೂ ಚೆನ್ನಾಗಿ ಬೆರೆಯುವಿಕೆ ಹಾಗೂ ಸಂಕರಗೊಳ್ಳುವಿಕೆಯಿಂದಾಗಿ ಏಕರೂಪ ಹೊಂದಿದ ಸಮಾಜವಾಗಿ ಬಲಗೊಳ್ಳುವ ಪ್ರವೃತ್ತಿಯೊಂದು ಇದ್ದೇ ಇರುತ್ತದೆ. +ಜಾತಿ ರಚನೆಯಲ್ಲಿರುವ ಆಸಕ್ತಿಯಿಂದ ಈ ಬಗೆಯ ಪ್ರವೃತ್ತಿಯನ್ನು ಬಲವಾಗಿ ನಿಷ್ಠಲಗೊಳಿಸಬೇಕಾದರೆ ವರ್ತುಲದ ಹೊರಗೆ ಒಂದು ಗೆರೆಯೆಳೆದು ಅದರಾಚೆಗೆ ಜನರು ಮದುವೆ ಮಾಡಕೂಡದೆಂದು ಹದ್ಬುಬಸ್ತಿನಲ್ಲಿಡುವುದು ಅನಿವಾರ್ಯವಾಗುತ್ತದೆ. +ಅಷ್ಟಾದರೂ, ಹೊರಗಿನವರೊಂದಿಗೆ ಮದುವೆಗಳನ್ನು ತಡೆಹಿಡಿಯುವ ಈ ನಿರ್ಬಂಧವು ತನ್ನೊಳಗಿನಿಂದಲೇ ಸಮಸ್ಯೆಗಳನ್ನು ಹುಟ್ಟಿಸುತ್ತದೆ . +ಅವುಗಳಿಗೆ ಪರಿಹಾರ ಅಷ್ಟು ಸುಲಭವಾಗಿರುವುದಿಲ್ಲ. +ಸ್ಥೂಲವಾಗಿ ಹೇಳುವುದಾದರೆ, ಸಾಮಾನ್ಯವಾಗಿ ಒಂದು ಗುಂಪಿನಲ್ಲಿ ಹೆಂಗಸರೂ ಗಂಡಸರೂ ಹೆಚ್ಚುಕಡಿಮೆ ಸಮನಾದ ಸಂಖ್ಯೆಯನ್ನು ಹೊಂದಿರುತ್ತಾರೆ. +ಮತ್ತು ಸಮ ವಯಸ್ಕರಲ್ಲಿ ಸಮಾನತೆಯೊಂದು ಇದ್ದೇ ಇರುತ್ತದೆ. +ಆದರೂ ವಾಸ್ತವ ಸಮಾಜಗಳಲ್ಲಿ ಯಾವಾಗಲೂ ಈ ಸಮಾನತೆಯು ಪರಿಗಣನೆಗೆ ಬರುವುದೇ ಇಲ್ಲ. +ಅದೇ ಕಾಲದಲ್ಲಿ ತಾನೊಂದು ಜಾತಿಯಾಗಲು ಬಯಸುವ ಗುಂಪಿಗೆ ಲಿಂಗಗಳ ನಡುವೆ ಸಮಾನ ಸಂಖ್ಯೆಯನ್ನು ಕಾಪಾಡುವುದು ಅಂತಿಮ ಗುರಿಯಾಗಿರುತ್ತದೆ. +ಯಾಕೆಂದರೆ ಅದಿಲ್ಲದೆ ಸ್ವಜಾತಿ ವಿವಾಹ ಅಸ್ತಿತ್ವದಲ್ಲಿರುವುದು ಹಿಂದಿನಂತೆ ಸಾಧ್ಯವಾಗುವುದಿಲ್ಲ. +ಬೇರೆ ಮಾತುಗಳಲ್ಲಿ ಹೇಳುವುದಾದರೆ ಸ್ವಜಾತಿ ವಿವಾಹ ಪದ್ಧತಿಯನ್ನು ಸಂರಕ್ಷಿಸಬೇಕಾದಲ್ಲಿ ತಮ್ಮೊಳಗಿನವರೊಂದಿಗೆ ಲೈಂಗಿಕ ಸಂಪರ್ಕದ ಹಕ್ಕನ್ನು ಕಲ್ಪಿಸಿಕೊಡಬೇಕು. +ಇದಕ್ಕೆ ಸಮ್ಮತಿಸದ ಗುಂಪಿನ ಸದಸ್ಯರನ್ನು ತಮಗಿಷ್ಟ ಬಂದ ರೀತಿಯಲ್ಲಿತಾವು ಬದುಕುವಂತೆ ಪರಿಧಿಯಿಂದಾಚೆಗೆ ಅಟ್ಟಿಬಿಡಲಾಗುವುದು. +ಆದರೆ ಲೈಂಗಿಕ ಹಕ್ಕುಗಳನ್ನು ತಮ್ಮೊಳಗೇ ದೊರಕಿಸುವುದಕ್ಕಾಗಿ ತಾನೊಂದು ಜಾತಿಯಾಗಿ ಉಳಿಯಬೇಕೆಂದು ಬಯಸುವ ಗುಂಪಿನೊಳಗೆ ಮದುವೆಯಾಗಬಲ್ಲ ಘಟಕಗಳಲ್ಲಿ ಸ್ತ್ರೀಯರ ಮತ್ತು ಪುರುಷರ ಸಂಖ್ಯೆಯಲ್ಲಿ ಸಮಾನತೆಯನ್ನು ಉಳಿಸಿಕೊಂಡುಬರುವುದು ತೀರಾ ಅಗತ್ಯ . +ಅಂತಹದೊಂದು ಸಮಾನತೆಯ ಸಂರಕ್ಷಣೆಯಿಂದಲೇ ಗುಂಪಿನ ಅವಶ್ಯಕತೆಯಾದ ಸ್ವಜಾತಿ ವಿವಾಹ ಪದ್ಭತಿಯನ್ನು ಸುಭದ್ರವಾಗಿಡುವುದು ಸಾಧ್ಯ. + ಮತ್ತು ಇದರಲ್ಲಿ ತುಂಬ ಅಸಮತೆ ಇದ್ದಲ್ಲಿ ಅದು ಗುಂಪನ್ನು ಮುರಿಯುವುದು ನಿಶ್ಚಿತ. +ಹೀಗಾಗಿ ಜಾತಿ ಸಮಸ್ಯೆಯು ಅಂತಿಮವಾಗಿ ಮದುವೆಗೆ ಪ್ರಾಪ್ತ ವಯಸ್ಕರಾದ ಸ್ತೀ ಮತ್ತುಪುರುಷರ ನಡುವಣ ಸಂಖ್ಯೆಯ ಅಸಮತೆಗಳನ್ನು ಸರಿಪಡಿಸುವ ಒಂದು ಅಂಶವಾಗಿ ಮಾರ್ಪಡುತ್ತದೆ. +ನಿಸರ್ಗದ ಆಗುಹೋಗುಗಳಿಗೆ ಬಿಟ್ಟಾಗಲೂ ಸಂಖ್ಯೆಯ ಅನುರೂಪತೆ ಕಾಣುವುದು ಗಂಡ ಮತ್ತು ಹೆಂಡತಿ ಒಟ್ಟಿಗೆ ಸತ್ತಾಗ ಮಾತ್ರ. +ಆದರೆ ಇದೊಂದು ಅಪರೂಪದ ಸಂಗತಿ. +ಹೆಂಡತಿಗಿಂತ ಮುಂಚೆಯೇ ಗಂಡ ಸತ್ತು ಒಬ್ಬ ಹೆಚ್ಚುವರಿ ಹೆಣ್ಣನ್ನು ಉಳಿಸಿಹೋಗಬಹುದು; +ಅಂಥ ಪ್ರಸಂಗದಲ್ಲಿ ಗಂಡನಿಲ್ಲದ ಆಕೆಯನ್ನು ಹರಣ ಮಾಡಬೇಕಾಗುತ್ತದೆ. + ಹಾಗೆ ಮಾಡದಿದ್ದರೆ ಆಕೆ ಅಂತರ್ಜಾತೀಯ ವಿವಾಹದ ಮೂಲಕ ಆ ಗುಂಪಿನ ಸ್ಟಜಾತಿ ವಿವಾಹ ಪದ್ಧತಿಯನ್ನು ಮುರಿಯುತ್ತಾಳೆ. +ಇದೇ ರೀತಿಯಲ್ಲಿ ಹೆಂಡತಿ ಸತ್ತು ಗಂಡಉಳಿದು ಹೆಚ್ಚುವರಿ ಮನುಷ್ಯನಾಗಲೂಬಹುದು; + ಆಗ ಆ ಗುಂಪು ಅವನ ಮಡದಿಯ ದಾರುಣ ಸಾವಿಗೆ ಕನಿಕರಿಸಲೂಬಹುದು. +ಆದರೆ ಅವನನ್ನೂ ನಿವಾರಿಸಲೇಬೇಕು. + ಇಲ್ಲವಾದರೆ ಅವನೂ ಗುಂಪಿನ ಹೊರಗಿನಿಂದ ಮದುವೆಯಾಗಿ ಸ್ವಜಾತಿ ವಿವಾಹ ನಿಯಮವನ್ನು ನುಚ್ಚು ನೂರುಗೊಳಿಸುತ್ತಾನೆ. +ಹೀಗೆ ಹೆಚ್ಚುವರಿಯಾದ ಹೆಣ್ಣು ಮತ್ತು ಹೆಚ್ಚುವರಿಯಾದ ಗಂಡು ಜಾತಿಗೆ ಕಂಟಕವಾಗುತ್ತಾರೆ. +ಹಾಗಾಗದಂತೆ ನೋಡಿಕೊಳ್ಳಬೇಕು. +ಅದೇ ಗುಂಪಿನ ನಿಗದಿತ ವಲಯದೊಳಗೇ ಸರಿಯಾದ ಸಂಗಾತಿಗಳನ್ನು ಹುಡುಕದಿದ್ದರೆ ಅವರ ಪಾಡಿಗೇ ಅವರನ್ನು ಬಿಟ್ಟಲ್ಲಿ ಅವರು ಯಾರನ್ನೂ ಹುಡುಕಲಾರರು. +ಇದನ್ನು ನಿಯಂತಿಸದಿದ್ದಲ್ಲಿ ನಿಯಮಬಾಹಿರವಾಗಿ ಜತೆಗಿರುವ ಜೋಡಿಗಳಾಗಿ ಪರಿವರ್ತಿತವಾಗಬಹುದು. + ಅವರು ಎಲ್ಲೆ ಮೀರುವ,ಹೊರಗಡೆ ಮದುವೆಯಾಗುವ, ಮತ್ತು ಜಾತಿಗೆ ಹೊರತಾದ ಸಂತಾನ ಕೊಡುವ ಸಂಭವವಿದೆ. +ಮೇಲೆ ಹೇಳಿದ ಹೆಚ್ಚುವರಿ ಗಂಡು ಮತ್ತು ಹೆಚ್ಚುವರಿ ಹೆಣ್ಣು ವಿಚಾರದ ಕುರಿತು ನಮ್ಮ ಕಾಲ್ಪನಿಕ ಗುಂಪು ಏನು ಮಾಡಬಹುದೆಂಬುದನ್ನೀಗ ನೋಡೋಣ. +ಮೊದಲು ಹೆಚ್ಚುವರಿ ಹೆಣ್ಣಿನ ವಿಷಯವನ್ನು ಪರಿಶೀಲಿಸೋಣ. +ಜಾತಿಯ ಸ್ವಜಾತಿ ವಿವಾಹ ಪದ್ಧತಿಯನ್ನು ಕಾಪಾಡುವ ಸಲುವಾಗಿ ಎರಡು ರೀತಿಯಲ್ಲಿ ಆಕೆಯ ವಿಷಯವನ್ನು ಇತ್ಯರ್ಥ ಮಾಡಬಹುದಾಗಿದೆ. +ಪ್ರಥಮ : ಅವಳ ಮೃತ ಗಂಡನ ಚಿತೆಯಲ್ಲೇ ಅವಳನ್ನೂ ಸುಟ್ಟು ಅವಳನ್ನು ನಿವಾರಿಸಬಹುದು. +ಆದರೆ ಲಿಂಗ ಅಸಮಾನತೆಯ ಸಮಸ್ಯೆಯನ್ನು ನಿವಾರಿಸುವಲ್ಲಿ ಇದೊಂದು ಅಪ್ರಾಯೋಗಿಕ ವಿಧಾನವಾದೀತು. +ಕೆಲವು ಕಡೆಗಳಲ್ಲಿ ಇದು ಸರಿಹೋಗಬಹುದು. +ಅದರಿಂದಾಗಿ ಪ್ರತಿಯೊಬ್ಬ ಹೆಚ್ಚುವರಿ ಸ್ತ್ರೀಯನ್ನೂ ಹೀಗೆ ನಿವಾರಿಸಲಾಗದು; + ಇದು ಸುಲಭ ಪರಿಹಾರವಾದರೂ ಕಷ್ಟಸಾಧ್ಯವಾಗಿದೆ. +ಈ ರೀತಿಯಲ್ಲಿ ಹೆಚ್ಚುವರಿ ಸ್ತ್ರೀಯನ್ನು (ವಿಧವೆಯನ್ನು) ನಿವಾರಿಸದಿದ್ದಲ್ಲಿ ಆಕೆ ಗುಂಪಿನಲ್ಲೇ ಉಳಿಯುತ್ತಾಳೆ. +ಆದರೆ ಅವಳ ಇರುವಿಕೆಯಲ್ಲೇ ಎರಡು ಅಪಾಯಗಳಿವೆ. +ಆಕೆ ಜಾತಿಯ ಹೊರಗೆ ಮದುವೆಯಾಗಿ ಸ್ವಜಾತಿ ಮದುವೆ ಪದ್ಧತಿಯನ್ನು ಉಲ್ಲಂಘಿಸಬಹುದು. + ಇಲ್ಲವೆ ಆಕೆ ಜಾತಿಯೊಳಗೇ ಮದುವೆಯಾಗಲೂ ಬಹುದು . + ಅದರಿಂದ ಜಾತಿಯೊಳಗೆ ಸಮರ್ಥ ವಧುವಿಗೆ ಮೀಸಲಿದ್ದ ಗಂಡೊಬ್ಬನ ವಿವಾಹದ ಅವಕಾಶಕ್ಕೆ ಲಗ್ಗೆ ಹಾಕಬಹುದು. +ಆದುದರಿಂದ,ಯಾವುದೇ ರೀತಿಯಲ್ಲೂ ಆಕೆಯೊಂದು ಪಿಡುಗು; +ಆಕೆಯನ್ನು ಸತ್ತ ಗಂಡನೊಂದಿಗೆ ದಹಿಸಲಾಗದಿದ್ದರೆ ಈ ಸಮಸ್ಯೆಯ ಪರಿಹಾರಕ್ಕಾಗಿ ಬೇರಿನ್ನೇನಾದರೂ ಮಾಡಲೇಬೇಕು. +ಎರಡನೆಯ ಪರಿಹಾರೋಪಾಯವೆಂದರೆ ಅವಳಿಗೆ ಜೀವನ ಪರ್ಯಂತ ವೈಧವ್ಯವನ್ನು ವಿಧಿಸುವುದು. +ವಸ್ತುನಿಷ್ಠ ಪರಿಣಾಮದ ದೃಷ್ಟಿಯಿಂದಲಂತೂ ವೈಧವ್ಯವನ್ನು ಹೇರುವುದಕ್ಕಿಂತ ಸುಡುವುದೇ ಉತ್ತಮ ಪರಿಹಾರ. +ವಿಧವೆಯನ್ನು ಸುಡುವುದರಿಂದ ಒಬ್ಬ ಹೆಚ್ಚುವರಿ ಹೆಣ್ಣಿಗೆ ಸಂಭವಿಸಬಹುದಾದ ಎಲ್ಲ ಮೂರು ಕೇಡುಗಳನ್ನು ನಿವಾರಿಸಿದಂತೆ ಆಗುತ್ತದೆ. +ಸತ್ತು ಇಲ್ಲವಾಗುವುದರ ಮೂಲಕ ಆಕೆ ಜಾತಿಯ ಒಳಗಾಗಲೀ ಹೊರಗಾಗಲಿ ಮದುವೆಯಾಗುವ ಸಮಸ್ಯೆಯಿರುವುದಿಲ್ಲ. +ಆದರೆ ಹೀಗೆ ಸುಡುವುದಕ್ಕಿಂತಲೂ ಕಡ್ಡಾಯದ ವೈಧವ್ಯ ಉತ್ತಮವೇಕೆಂದರೆ ಅದು ಹೆಚ್ಚು ಪ್ರಾಯೋಗಿಕವಾಗಿದೆ. +ತೌಲನಿಕವಾಗಿಯೂ ಇದು ಜಾತಿ ಮಾನವೀಯವಾಗಿರುವುದಲ್ಲದೆ ದಹನದಂತೆ ಇದೂ ಪುನರ್ವಿವಾಹದ ಕೇಡಿನಿಂದ ಕಾಪಾಡುತ್ತದೆ; +ಆದರೆ ಗುಂಪಿನ ನೈತಿಕತೆಯನ್ನು ರಕ್ಷಿಸುವಲ್ಲಿ ಇದು ಸೋಲುತ್ತದೆ. +ಕಡ್ಡಾಯ ವೈಧವ್ಯದಲ್ಲಿ ಸ್ತ್ರೀ ಇರುತ್ತಾಳೆಂಬುದರಲ್ಲಿ ಸಂಶಯವಿಲ್ಲ; +ವಿಧಿಬದ್ಧ ಪತ್ನಿಗಿರುವ ಸಹಜ ಹಕ್ಕುಗಳಿಂದ ಆಕೆಯನ್ನು ಭವಿಷ್ಯ ಜೀವನದಲ್ಲಿ ವಂಚಿತಗೊಳಿಸುವುದರಿಂದಾಗಿ ಅನೈತಿಕ ನಡತೆಗೆ ಆಕರ್ಷಣೆ ಹೆಚ್ಚಾಗುತ್ತದೆ. +ಆದರೆ ಇದು ಯಾವುದೇ ರೀತಿಯಲ್ಲೂ ಒಂದು ದುಸ್ತರವಾದ ಕಷ್ಟವಲ್ಲ. +ಇನ್ನು ಆಕೆಯನ್ನು ಆಕರ್ಷಣೀಯವಲ್ಲದ ದುಸ್ಥಿತಿಗೂ ಕೆಳಗಿಳಿಸಬಹುದು. +ತನ್ನನ್ನು ಒಂದು ಜಾತಿಗೆ ಒಳಪಡಿಸುವ ಇಚ್ಛೆಯ ಗುಂಪಿನಲ್ಲಿ ಹೆಚ್ಚುವರಿ ಹೆಣ್ಣಿನದ್ದಕ್ಕಿಂತ ಹೆಚ್ಚುವರಿ ಗಂಡಸಿನ (ವಿಧುರನ) ಸಮಸ್ಯೆ ಇನ್ನೂ ಗಂಭೀರವಾದುದು ಮತ್ತು ಸಮಸ್ಯಾತ್ಮಕವಾದುದಾಗಿದೆ. +ಅನಾದಿ ಕಾಲದಿಂದಲೂ ಹೆಣ್ಣಿಗೆ ಹೋಲಿಸಿದಾಗ ಗಂಡು ಮೇಲುಗೈ ಪಡೆದಿದ್ದಾನೆ. +ಎಲ್ಲ ಗುಂಪಿನಲ್ಲೂ ಆತಪ್ರಧಾನ ವ್ಯಕ್ತಿ, ಎರಡು ಲಿಂಗಗಳಲ್ಲಿ ಆತನಿಗೇ ಅಧಿಕತರವಾದ ಪ್ರತಿಷ್ಠೆಯಿದೆ. +ಸ್ತ್ರೀ ಯ ಮೇಲಿನ ಅವನ ಈ ಸಾಂಪ್ರದಾಯಿಕವಾದ ಶ್ರೇಷ್ಠತೆಯಿಂದಾಗಿ ಆತನ ಅಪೇಕ್ಷೆಗಳನ್ನು ಯಾವಾಗಲೂ ಪರಿಶೀಲಿಸಲಾಗುತ್ತಿದೆ. +ಇನ್ನೊಂದು ಕಡೆ ಧಾರ್ಮಿಕ, ಸಾಮಾಜಿಕ ಅಥವಾ ಆರ್ಥಿಕ ಎಲ್ಲ ಬಗೆಯ ಪಕ್ಷಪಾತ ಕಟ್ಟಳೆಗಳಿಗೂ ಸ್ತ್ರೀ ಸುಲಭವಾಗಿ ಬಲಿಯಾಗುತ್ತಾಳೆ. +ಆದರೆ ಗಂಡಸು ತಾನೇ ಕಟ್ಟಳೆಗಳನ್ನು ಮಾಡುವ ವ್ಯಕ್ತಿಯಾಗಿ ಅನೇಕ ಬಾರಿ ಅವುಗಳಿಗೆ ಅತೀತನಾಗಿದ್ದಾನೆ. +ಪರಿಸ್ಥಿತಿ ಹೀಗಿರುವುದರಿಂದಾಗಿ, ಒಂದು ಜಾತಿಯಲ್ಲಿ ಹೆಚ್ಚುವರಿ ಹೆಣ್ಣಿಗೆ ನೀವು ತೋರುವಂತಹ ವರ್ತನೆಯನ್ನು ಗಂಡಿಗೂ ತೋರಲಾರಿರಿ. +ವಿಧುರನನ್ನು ಆತನ ಸತ್ತ ಹೆಂಡತಿಯೊಂದಿಗೆ ಸುಡುವುದು ಎರಡು ರೀತಿಗಳಲ್ಲಿ ಕಷ್ಟಸಾಧ್ಯವಾದುದು. +ಎಲ್ಲಕ್ಕಿಂತಲೂ ಮೊದಲನೆಯದೆಂದರೆ ಆತ ಗಂಡಸು ಎಂಬುದೊಂದೇ ಸರಳ ಕಾರಣಕ್ಕಾಗಿ ಆತನನ್ನು ಚಿತೆಯೇರಿಸಲು ಸಾಧ್ಯವಾಗುವುದಿಲ್ಲ. +ಎರಡನೆಯದಾಗಿ, ಹಾಗೆ ಮಾಡಿದರೂ ಆ ಜಾತಿಗೆ ಒಬ್ಬ ಬಲಿಷ್ಠ ವ್ಯಕ್ತಿ ನಷ್ಟವಾಗುತ್ತಾನೆ. +ಆದುದರಿಂದ ಅವನನ್ನು ಪ್ರಶಸ್ತವಾಗಿಯೇ ನಿವಾರಿಸಿಕೊಳ್ಳಲು ಇನ್ನೆರಡು ಪರಿಹಾರಗಳುಳಿಯುತ್ತವೆ. +ಪ್ರಶಸ್ತವಾಗಿಯೇ ಎಂದು ನಾನು ಹೇಳುತ್ತಿರುವುದು ಏಕೆಂದರೆ ಆತ ಗುಂಪಿಗೊಂದುಆಸ್ತಿ. +ಆತ ಗುಂಪಿಗೆ ಮುಖ್ಯನಾದುದರಿಂದಲೂ, ಸ್ವಜಾತಿ ವಿವಾಹ ಪದ್ಧತಿ ಇನ್ನೂ ಮುಖ್ಯವಾಗಿರುವುದರಿಂದಲೂ, ಈ ಸಮಸ್ಯೆಯ ಪರಿಹಾರ ಎರಡು ಗುರಿಗಳಿಗೂ ಸಲ್ಲುವಂತಿರಬೇಕು. +ಇಂಥ ಪರಿಸ್ಥಿತಿಗಳಲ್ಲಿ,ನಾನು ತಿಳಿದಂತೆ, ವಿಧವೆಗೆ ಇರುವ ರೀತಿಯಲ್ಲಿ ಆಜೀವ ಪರ್ಯಂತ ವಿಧುರನಾಗಿರುವಂತೆ ಆತನನ್ನು ಬಲಾತ್ಕರಿಸಬಹುದು ಅಥವಾ ಪ್ರೇರೇಪಿಸಲೂಬಹುದು. +ಒಟ್ಟಾರೆ, ಈ ಪರಿಹಾರ ಅಷ್ಟೇನೂ ಕಷ್ಟವಲ್ಲ. +ಏಕೆಂದರೆ ಯಾವುದೇ ಒತ್ತಾಯಗಳಿಲ್ಲದೆಯೂ ಕೆಲವರು ಸ್ವ ಇಚ್ಛೆಯಿಂದಲೇ ಬಹ್ಮಚರ್ಯವನ್ನು ಆನಂದಿಸಬಲ್ಲರು; +ಅಥವಾ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಅವರು ತಾವಾಗಿಯೇ ಜಗತ್ತನ್ನೂ, ಅದರ ಸಂತೋಷವನ್ನೂ ತ್ಯಜಿಸಬಲ್ಲರು. +ಆದರೆ ಮನುಷ್ಯ ಸ್ವಭಾವದಿಂದಾಗಿ ಈ ಪರಿಹಾರವನ್ನು ನಿರೀಕ್ಷಿಸುವುದು ಕಷ್ಟ ಸಾಧ್ಯವೇಸರಿ. +ವ್ಯತಿರಿಕ್ತವಾಗಿ, ಹೆಚ್ಚುವರಿ ಮನುಷ್ಯ ಗುಂಪಿನಲ್ಲೇ ಉಳಿದು ಸಾಮೂಹಿಕ ಚಟುವಟಕೆಗಳಲ್ಲಿ ಸಕ್ರಿಯವಾಗಿ ಪಾಲುಗೊಳ್ಳುವುದಾದರೆ ಆತ ಗುಂಪಿನ ನೀತಿಗಳಿಗೆ ಅಪಾಯವಾಗುತ್ತಾನೆ. +ಭಿನ್ನ ದೃಷ್ಟಿಕೋನದಿಂದನೋಡಿದ್ದಾದರೆ, ಬ್ರಹ್ಮಚರ್ಯ ಅದು ಯಶಸ್ವಿಯಾಗುವೆಡೆಗಳಲ್ಲಿ ಸುಲಭವೇ ಆದರೂ, ಜಾತಿಯ ಭೌತಿಕ ಭವಿಷ್ಯಕ್ಕೆ ಅದು ಅನುಕೂಲಕರವಾದುದಲ್ಲ. +ಆತ ನಿಷ್ಠುರ ಬ್ರಹ್ಮಚರ್ಯವನ್ನು ಪಾಲಿಸಿ ಪ್ರಪಂಚವನ್ನು ತ್ಯಜಿಸಿದಲ್ಲಿ ಜಾತಿಪದ್ಧತಿ ಅಥವಾ ಜಾತಿಗಳ, ನೀತಿಗಳ ಸಂರಕ್ಷಣೆಗೆ ಅಡ್ಡಿಯಾಗಲಾರ; +ಒಂದು ವೇಳೆ ಆತ ಜಾತ್ಯತೀತ ವ್ಯಕ್ತಿಯಾಗಿ ಉಳಿದದ್ದೇ ಆದರೆ, ಆಗ ಆತ ಒಂದು ಹಿಡುಗಾಗುತ್ತಾನೆ. +ಆದರೆ ತನ್ನ ಜಾತಿಯ ಲೌಕಿಕ ಸಂರಕ್ಷಣೆಯ ದೃಷ್ಟಿಯಿಂದ ಆತ ಎಲ್ಲವನ್ನೂ ತ್ಯಜಿಸಿದ ವ್ಯಕ್ತಿಯಾಗಿ ಪರಿವರ್ತನೆಗೊಂಡಲ್ಲಿ ಆತ ಹೆಚ್ಚು ಕಡಿಮೆ ಸುಡಲ್ಪಟ್ಟ ವ್ಯಕ್ತಿಯೇ. +ಒಂದು ಜಾತಿ ಕಠಿಣವಾದ ಸಮುದಾಯ ವ್ಯವಸ್ಥೆ ಸಾಧ್ಯವಾಗುವಂತೆ ದೊಡ್ಡದಾಗಿರುವ ಒಂದು ಸಂಖ್ಯಾಬಲವನ್ನೂ ಉಳಿಸಿಕೊಂಡಿರಬೇಕಾಗುತ್ತದೆ. +ಆದರೆ ಈ ಸಂಖ್ಯಾ ಬಲವನ್ನುನಿರೀಕ್ಷಿಸುತ್ತಾ ಬ್ರಹ್ಮಚರ್ಯವನ್ನು ಸಾರುವುದು, ಕ್ಷಯರೋಗವನ್ನು ರಕ್ತಸ್ರಾವದಿಂದ ಗುಣಪಡಿಸಿದಂತಾಗುತ್ತದೆ. +ಆದುದರಿಂದ, ಒಂದು ಗುಂಪಿನಲ್ಲಿ ಹೆಚ್ಚುವರಿ ಗಂಡಸಿನ ಮೇಲೆ ಬ್ರಹ್ಮಚರ್ಯವನ್ನು ಹೇರುವಿಕೆ ತಾಕ್ವಿಕವಾಗಿಯೂ, ಪ್ರಾಯೋಗಿಕವಾಗಿಯೂ ವಿಫಲಗೊಳ್ಳುತ್ತದೆ. +ಬದಲಿಗೆ ಅವನನ್ನು ಒಬ್ಬ ಗೃಹಸ್ಥ ನನ್ನಾಗಿ ಇಡುವುದು ಜಾತಿಯ ಹಿತದೃಷ್ಟಿಯಿಂದಲೇ. +ಆದರೆ ಜಾತಿಯೊಳಗೆ ಒಬ್ಬ ಹೆಂಡತಿಯನ್ನು ಅವನಿಗೆ ಒದಗಿಸುವುದೇ ಸಮಸ್ಯೆಯಾಗಿದೆ. +ಹೊರನೋಟಕ್ಕೆ ಇದು ಅಸಾಧ್ಯ. +ಏಕೆಂದರೆ ಒಂದು ಜಾತಿಯಲ್ಲಿರ ಬೇಕಾದ ಪ್ರಮಾಣವೆಂದರೆ ಒಂದು ಗಂಡಿಗೆ ಒಂದು ಹೆಣ್ಣು. +ಎರಡು ಬಾರಿ ಮದುವೆ ಆಗುವ ಅವಕಾಶವನ್ನು ಯಾರೂ ಹೊಂದಲಾಗದು. +ಬಿಗಿಯಾಗಿ ತಾನೇ ಬೇಲಿ ಹಾಕಿರುವ ಒಂದು ಜಾತಿಯೊಳಗೆ ಮದುವಣಿಗರ ಬಳಿಗೆ ಹೋಗುವ ಮದುವಣಗಿತ್ತಿಯರು ಯಾವಾಗಲೂ, ಸಂಖ್ಯೆ ಆಧಾರಿತವಾಗಿ, ತಕ್ಕಷ್ಟೇ ಇರುತ್ತಾರೆ. +ಇಂಥ ಸಂದರ್ಭಗಳಲ್ಲಿ ಹೆಚ್ಚುವರಿ ಗಂಡಸಿಗೆ, ಆತನನ್ನು ಒಂದು ಗುಂಪಿಗೇ ಕಟ್ಟಹಾಕುವ ಸಲುವಾಗಿ, ಮದುವೆಯಾಗಬಲ್ಲ ಹಂತವನ್ನು ಇನ್ನೂ ತಲುಪಿರದ ವಧುವನ್ನು ಹೆಂಡತಿಯಾಗಿ ತುಂಬಿಸಬಹುದು. +ಹೆಚ್ಚುವರಿ ಗಂಡಸಿನ ವಿಚಾರದಲ್ಲಿ ನಿಶ್ಚಯವಾಗಿಯೂ ಇದು ಅತ್ಯುತ್ತಮವಾದ ಸಾಧ್ಯತೆ. +ಇದರಿಂದ ಆತನನ್ನು ಜಾತಿಯಲ್ಲೇ ಉಳಿಸಿದಂತಾಗುತ್ತದೆ. +ಜಾತಿಯಿಂದ ನಿರಂತರವಾಗಿ ಹೊರಗೆ ಹರಿಯುವ ಸಂಖ್ಯಾಬಲವನ್ನು ಈ ವಿಧಾನದಿಂದ ಸಂರಕ್ಷಿಸಿದಂತಾಗುವುದಲ್ಲದೆ ಸ್ವಜಾತಿ ಪದ್ಧತಿ ಮತ್ತು ನೀತಿಗಳನ್ನೂ ಕಾಪಾಡಿದಂತಾಗುತ್ತದೆ. +ಸ್ತ್ರೀ ಪುರುಷರ ನಡುವೆ ಇರುವ ಸಾಂಖ್ಯಿಕ ತಾರತಮ್ಯವನ್ನು ನಾಲ್ಕು ರೀತಿಗಳಿಂದ ಹೇಗೆ ಅನುಕೂಲಕರವಾಗಿ ಪಾಲಿಸಲಾಗುತ್ತಿದೆಯೆಂಬುದನ್ನು ಈಗ ನೋಡಬಹುದು : +(೧) ತನ್ನ ಸತ್ತಗಂಡನೊಂದಿಗೆ ವಿಧವೆಯನ್ನು ಸುಡುವುದು. +(೨) ಕಡ್ಡಾಯ ವೈಧವ್ಯ - ಸತಿ ಪದ್ಧತಿಗಿಂತ ಸೌಮ್ಯರೂಪ. +(೩) ವಿಧುರನ ಮೇಲೆ ಬ್ರಹ್ಮಚರ್ಯವನ್ನು ಹೇರುವುದು. +ಮತ್ತು (೪) ಅಪ್ರಾಪ್ತ ವಯಸ್ಕಳೊಂದಿಗೆ ಅವನ ವಿವಾಹ. +ನಾನು ಮೇಲೆ ಹೇಳಿದಂತೆ, ಸಾಮಾಜಿಕ ವಿಧಾನಗಳಾಗಿ ಆಚರಣೆಯಲ್ಲಿದ್ದರೂ ವಿಧವೆಯನ್ನು ಸುಡುವುದು ಮತ್ತು ವಿಧುರನಿಗೆ ಬ್ರಹ್ಮಚರ್ಯ ಹೇರುವುದು ಇವು ಗುಂಪಿನ ಸ್ವಜಾತಿ ವಿವಾಹ ಪದ್ಧತಿ ಪರಿಪಾಲನೆಗೆ ನೇರವಾದ ಸೇವೆಯನ್ನು ಸಲ್ಲಿಸುತ್ತವೆ ಎಂಬುದು ಸಂದೇಹ. +ಆದರೆ ವಿಧಾನಗಳನ್ನು ಕಡ್ಡಾಯಗೊಳಿಸಿದಾಗ ಅಂತಿಮ ಗುರಿ ತಲುಪಲು ಶಕ್ತವಾಗುತ್ತವೆ. +ಹಾಗಾದರೆ ಈ ವಿಧಾನಗಳು ಸೃಷ್ಟಿಸುವ ಗುರಿಯಾದರೂ ಯಾವುದು? +ಅವು ಸ್ವಜಾತಿ ಮದುವೆ ಪದ್ಧತಿಯನ್ನು ಸೃಷ್ಟಿಸುತ್ತವೆ ಮತ್ತು ಮುಂದುವರಿಸುತ್ತವೆ. +ಜಾತಿ ಕುರಿತ ವಿವಿಧ ವ್ಯಾಖ್ಯೆಗಳಿಗೆ ಮಾಡಿದ ನಮ್ಮ ವಿಶ್ಲೇಷಣೆಯಂತೆ ಜಾತಿ ಮತ್ತು ಸ್ಟಜಾತಿ ವಿವಾಹ ಪದ್ಧತಿ ವಿಭಿನ್ನವಾಗಿವೆ. +ಈ ವಿಧಾನಗಳ ಅಸ್ತಿತ್ವವು ಜಾತಿಗೆ ಸರಿಸಮಾನವಾಗಿದೆ. +ಮತ್ತು ಜಾತಿ ಈ ವಿಧಾನಗಳನ್ನು ಒಳಗೊಂಡಿದೆ. +ನನ್ನ ಅಭಿಪ್ರಾಯದ ಪ್ರಕಾರ, ಜಾತಿಗಳ ಒಂದು ವ್ಯವಸ್ಥೆಯಲ್ಲಿ ಇದು ಜಾತಿಯೊಂದರ ಸಾಮಾನ್ಯ ಕ್ರಿಯಾವಿಧಾನ. +ಈಗ ನಾವು ಹೆಜ್ಜು ಸಮಾನವಾಗಿ ಕಾಣುವ ಅಂಶಗಳಿಂದ ಹೊರಳಿ ಜಾತಿ ಮತ್ತು ಅದರ ಕಾರ್ಯವಿಧಾನಗಳ ಕಡೆ ನೋಡೋಣ. +ಭಾರತದಲ್ಲಿ ಜಾತಿ ಅತ್ಯಂತ ಪ್ರಾಚೀನ ಏರ್ಪಾಡು ಆಗಿತ್ತು . +ಜಾತಿ ಎನ್ನುವುದು ನಿಜವಾದರೂ ಜಾತಿ ವ್ಯವಸ್ಥೆಯ ಇತಿಹಾಸವನ್ನು ಅನಾವರಣಗೊಳಿಸಲು ಹೊರಡುವವರಹಾದಿಯಲ್ಲಿ ಅನೇಕಾನೇಕ ಹಳ್ಳತಗ್ಗುಗಳಿವೆಯೆಂಬುದನ್ನು ನಾನು ಬೇರೆ ಹೇಳಬೇಕಾಗಿಲ್ಲ. +ಅದರಲ್ಲಿಯೂ ವಿಶೇಷವಾಗಿ, ವಿಶ್ವಾಸಾರ್ಹವಾದ ಅಥವಾ ಲಿಖಿತ ದಾಖಲೆಗಳು ಲಭ್ಯವಿಲ್ಲದಾಗ ಅಥವಾ ಇಲ್ಲಿನ ಹಿಂದೂಗಳ ತರಹದ ಜನ ಜಗತ್ತೊಂದು ಭ್ರಮೆಯೆಂದು ಭಾವಿಸಿ ಅಂತೆಯೇ ಚರಿತ್ರೆಯನ್ನು ದಾಖಲಿಸುವುದು ಒಂದು ಅವಿವೇಕದ ಕೆಲಸ ಎಂದು ಬಗೆದಿದ್ದಾಗ ಇದು ಅತ್ಯಂತ ನಿಜವೆನ್ನಿಸಿದೆ. +ಆದರೆ ಜಾತಿ ಬಹುಕಾಲದಿಂದ ಜೀವಂತವಾಗಿದೆ; +ಅಂತೆಯೇ ರೀತಿ ರಿವಾಜುಗಳು ಮತ್ತು ನೀತಿ ನಡವಳಿಕೆಗಳು ಅನೇಕ ವೇಳೆ ಈ ದಾಖಲಿಸದ ಇತಿಹಾಸವನ್ನು ತೆರೆದಿಡುವ ಪಳೆಯುಳಿಕೆಗಳಾಗಿರುತ್ತವೆ. +ಇದು ನಿಜವಾದರೆ, ಹೆಚ್ಚುವರಿ ಗಂಡಸು ಮತ್ತು ಹೆಚ್ಚುವರಿ ಹೆಂಗಸಿನ ಸಮಸ್ಯೆಗಳನ್ನು ಎದುರಿಸಲು ಹಿಂದೂಗಳು ಕಂಡುಕೊಂಡ ಪರಿಹಾರವನ್ನು ನಾವು ಪರಿಶೀಲಿಸಿದರೆ ಅಲ್ಲಿಗೆ ನಮ್ಮ ಪ್ರಯತ್ನಕ್ಕೆ ಸಾಕಷ್ಟು ಪ್ರತಿಫಲ ಸಿಕ್ಕಿದಂತಾಗುತ್ತದೆ. +ಹಿಂದೂ ಸಮಾಜವು ತನ್ನ ನಡವಳಿಕೆಯಲ್ಲಿ ಸಂಕೀರ್ಣವೆನಿಸಿದರೂ ಮೇಲುನೋಟಕ್ಕೇ ಮೂರು ಅತಿರೇಕದ ಸಂಪ್ರದಾಯಗಳು ಎದ್ದು ಕಾಣಿಸುತ್ತವೆ. +ಅವುಗಳೆಂದರೆ :(೧) ಸತಿ ಪದ್ಧತಿ ಅಥವಾ ಮೃತ ಗಂಡನ ಚಿತೆಯಲ್ಲೇ ಜೀವಂತವಾಗಿ ಪತ್ನಿಯನ್ನು ಸುಡುವುದು. +(೨) ವಿಧವೆಗೆ ಮದುವೆಯಾಗಲು ಬಿಡದಂತೆ ವೈಧವ್ಯವನ್ನು ಹೇರುವುದು. +(೩) ಹೆಣ್ಣುಮಕ್ಕಳ ಬಾಲ್ಯವಿವಾಹ. +ಇದರೊಂದಿಗೆ, ವಿಧುರನು ಸನ್ಕಾಸ (ಪರಿತ್ಯಜನೆ) ಕೈಗೊಳ್ಳಬೇಕೆಂಬ ಒಂದು ಬಲವಾದ ಒತ್ತಾಸೆಯನ್ನು ಪ್ರತಿಪಾದಿಸುವುದುಂಟು; +ಆದರೆ ಇದು ಕೇವಲ ಮಾನಸಿಕ ಪ್ರವೃತ್ತಿಗೆ ಸಂಬಂಧಿಸಿದುದಾಗಿದೆ. +ನಾನು ತಿಳಿದ ಮಟ್ಟಿಗೆ, ಈ ಸಂಪ್ರದಾಯಗಳ ಹುಟ್ಟಿಗೆ ಯಾವ ವೈಜ್ಞಾನಿಕ ವಿವರಣೆಯೂ ಇಂದಿನ ತನಕ ಸಾಧ್ಯವಾಗಿಲ್ಲ. +ಈ ಸಂಪ್ರದಾಯಗಳನ್ನು ಗೌರವಿಸಿದ್ದೇಕೆಂದು ತಿಳಿಸಲು ನಮಗೆ ಸಮೃದ್ಧ ಸಿದ್ಧಾಂತಗಳಿದ್ದರೂ ಅವುಗಳ ಉಗಮ ಮತ್ತು ಅಸ್ತಿತ್ವದ ಕುರಿತಾಗಿ ಹೇಳಲು ಏನೂ ಇಲ್ಲ. +ಗಂಡ ಹೆಂಡತಿಯರ “ದೇಹ ಮತ್ತು ಆತ್ಮಗಳ ಪರಿಪೂರ್ಣ ಮಿಲನದ ಸಾಕ್ಷ್ಯ”ವೆಂದು "ತಿ' ಪದ್ಧತಿಯನ್ನು ಪುರಸ್ಕರಿಸಲಾಗಿದೆ; +ಅದು “ಸಮಾಧಿಯ ಆಚೆಗೂ ಇರುವ ಭಕ್ತಿ”, ಯಾಕೆಂದರೆ ಪತ್ನಿತ್ವದ ಆದರ್ಶವನ್ನು ಇದು ಆವಿರ್ಭವಿಸಿದೆ. +ಉಮೆ ಹೇಳುವ ಈ ಮಾತುಗಳಲ್ಲಿ ಇದು ಚೆನ್ನಾಗಿ ಒಡಮೂಡಿದೆ: + “ತನ್ನ ಈಶ್ವರನಿಗೆ ನಿಷ್ಠಳಾಗಿರುವುದು ಹೆಣ್ಣಿನ ಗೌರವ, ಅದು ಅವಳ ಅನಂತ ಸ್ವರ್ಗ.” + ಆಕೆ ಅತ್ಯಂತ ಹೃದಯ ಸ್ಪರ್ಶಿಯಾದ ಮಾನವೀಯ ದನಿಯಿಂದ ಕೂಗಿ ಹೇಳುತ್ತಾಳೆ: + “ಓ ಮಹೇಶ್ವರ ನೀನು ನನ್ನಿಂದ ತೃಪ್ತಿ ಪಡೆಯದಿದ್ದಲ್ಲಿ ನಾನು ಸ್ವರ್ಗವನ್ನು ಕೂಡ ಆಸೆ ಪಡುವುದಿಲ್ಲ”. +ಕಡ್ಡಾಯ ವೈಧವ್ಯವನ್ನು ಗೌರವಿಸಿದ್ದೇಕೆಂಬುದು ನನಗೆ ಗೊತ್ತಿಲ್ಲ; +ಅದಕ್ಕೆ ಬದ್ಧರಾದವರು ಅನೇಕ ಜನರಿದ್ದರೂ ಅದನ್ನು ಹಾಡಿ ಹೊಗಳಿದ ಒಬ್ಬನನ್ನಾದರೂ ನಾನು ಭೇಟಿಯಾಗಿಲ್ಲ. +ಡಾ.ಕೇತ್ಕರ್‌ ಅವರು ಬಾಲ್ಯವಿವಾಹದ ಗೌರವಾರ್ಥವಾಗಿರುವ ಸ್ತೋತ್ರವನ್ನು ಮುಂದೆ ಈ ರೀತಿ ವರದಿ ಮಾಡಿದ್ದಾರೆ. +“ಆಕೆ ಅಥವಾ ಆತ ತಾನು ಲಗ್ನವಾದವನೊಂದಿಗಲ್ಲದೆ ಇತರ ಪುರುಷ ಅಥವಾ ಸ್ತ್ರೀಯೊಂದಿಗೆ ಅನುರಾಗವನ್ನು ಹೊಂದಬಾರದು. +ಅಂಥ ಪರಿಶುದ್ಧತೆ ವಿವಾಹೋತ್ತರದಲ್ಲಿ ಅಲ್ಲದೆ ವಿವಾಹಪೂರ್ವದಲ್ಲೂ ಕಡ್ಡಾಯವಾಗಿರುತ್ತದೆ; +ಏಕೆಂದರೆ ಅದೊಂದೇ ಆದರ್ಶ ಶೀಲವಂತಿಕೆ. +ತಾನು ಮದುವೆಯಾಗಲಿರುವ ಗಂಡಸಿನ ಹೊರತು ಬೇರೆ ಪುರುಷನಲ್ಲಿ ಪ್ರೀತಿ ಪಡುವ ಯಾವ ಕನ್ಯೆಯನ್ನೂ ಪರಿಶುದ್ಧಳೆಂದು ಪರಿಗಣಿಸಲಾಗುವುದಿಲ್ಲ. +ತಾನು ಯಾರನ್ನು ಮದುವೆಯಾಗಲಿದ್ದೇನೆಂಬುದು ಆಕೆಗೆ ಗೊತ್ತಿಲ್ಲವಾದ್ದರಿಂದ ಮದುವೆಗೆ ಮೊದಲು ಆಕೆಯಾವ ವ್ಯಕ್ತಿಯಲ್ಲೂ ಅನುರಕ್ತಳಾಗಕೂಡದು. +ಹಾಗೆ ಮಾಡಿದ್ದೇ ಆದರೆ ಅದೊಂದು ಪಾಪ. +ಆದುದರಿಂದ ಕನ್ಯೆಯು ಲೈಂಗಿಕ ಪ್ರಜ್ಞೆ ಜಾಗೃತಗೊಳ್ಳುವ ಮೊದಲೇ ತಾನು ಯಾರನ್ನು ಪ್ರೀತಿಸಬೇಕೆಂಬುದನ್ನು ತಿಳಿಯುವುದು ಒಳ್ಳೆಯದು” ಅದಕ್ಕೆಂದೇ ಬಾಲ್ಯವಿವಾಹ. +ಈ ವಾಗಾಡಂಬರದ ಮತ್ತು ಚಮತ್ಕಾರದ ತರ್ಕಸರಣಿಯು ಈ ಸಂಪ್ರದಾಯಗಳನ್ನು ಗೌರವಿಸಿದ್ದೇಕೆಂಬುದನ್ನು ಸೂಚಿಸುತ್ತವೆಯಾದರೂ ಅವನ್ನು ಪರಿಪಾಲಿಸುತ್ತಿರುವುದೇಕೆಂಬುದನ್ನು ಮಾತ್ರ ಹೇಳುವುದಿಲ್ಲ. +ಪಾಲಿಸಲ್ಪಟ್ಟಿರುವುದರಿಂದಲೇ ಅವುಗಳು ಗೌರವಿಸಲ್ಪಟ್ಟಿವೆ ಎಂಬುದು ನನ್ನ ಸ್ವಂತ ವ್ಯಾಖ್ಯಾನವಾಗಿದೆ. +೧೮ನೆಯ ಶತಮಾನದ ವ್ಯಕ್ತಿಸ್ವಾತಂತ್ಯ ಪ್ರಜ್ಞೆಯ ಉದಯದ ಬಗೆಗೆ ಸ್ವಲ್ಪ ಪರಿಚಯ ಇರುವ ಯಾರೇ ಆದರೂ ನನ್ನ ಹೇಳಿಕೆಯನ್ನು ಪರಿಗಣಿಸುತ್ತಾರೆ. +ಎಲ್ಲ ಕಾಲದಲ್ಲಿಯೂ ಬದಲಾವಣೆಯೇ ಅತ್ಯಂತ ಮುಖ್ಯವಾದದ್ದು; +ಅದು ಘಟಿಸಿ ಅದೆಷ್ಟೋ ಕಾಲಾನಂತರ ಅದಕ್ಕೊಂದು ಸಮರ್ಥನೆ ಕೊಡಲುಮತ್ತು ನೈತಿಕ ಬೆಂಬಲ ನೀಡಲು ಅದರ ಸುತ್ತ ಸಿದ್ಧಾಂತಗಳು ಹುಟ್ಟಕೊಳ್ಳುತ್ತವೆ. +ಈ ಸಂಪ್ರದಾಯಗಳನ್ನು ಉಜ್ವಲವಾಗಿಸುವ ವಾಸ್ತವಾಂಶವೇ ಆ ವೈಭವೀಕರಣ. +ಅವುಗಳ ಉಳಿವಿಗೋಸ್ಕರವಾಗಿ ಈ ವೈಭವೀಕರಣ ಅನಿವಾರ್ಯವಾಗಿತ್ತೆಂಬುದನ್ನು ಇದು ಸಾಬೀತುಪಡಿಸುತ್ತದೆಂದು ನಾನು ಒತ್ತಿ ಹೇಳುತ್ತೇನೆ. +ಇಂತಹ ಸಂಪ್ರದಾಯಗಳು ಮೊಳಕೆಯೊಡೆದದ್ದೇಕೆಂಬ ಪ್ರಶ್ನೆಗೆ ನನ್ನ ಉತ್ತರವೇನೆಂದರೆ ಜಾತಿಯ ರಚನೆಗಾಗಿ ಅವುಗಳ ಅಗತ್ಯವಿತ್ತು. +ಅವುಗಳ ಗೌರವಾರ್ಥಕವಾಗಿ ಸಿದ್ಧಾಂತಗಳು ಹುಟ್ಟಿಕೊಂಡಿರುವುದೂ ಅವುಗಳನ್ನುಜನಪ್ರಿಯಗೊಳಿಸಲು ಅಥವಾ ಕಹಿ ಮಾತ್ರೆಗೆ ಸಿಹಿಲೇಪ ಬಳಿಯಲೆಂದೇ ಎಂದು ನಾವು ಹೇಳಬಹುದು,ಏಕೆಂದರೆ ನಯನಾಜೂಕಿನದಲ್ಲದ ಅಂದಿನ ಜನಸಮುದಾಯದ ನೈತಿಕಪ್ರಜ್ಞೆಗೆ ಅವು ಅಸಹ್ಯಕರವೂ ತಲ್ಲಣಕಾರಿಯೂ ಆಗಿದ್ದಿರಬೇಕು. +ಈ ಸಂಪ್ರದಾಯಗಳನ್ನು ಆದರ್ಶವೆಂದು ಪ್ರತಿನಿಧಿಸಲಾಗಿದ್ದರೂ ಅವುಗಳು ಸಾಮಾಜಿಕ ವಿಧಿವಿಧಾನಗಳ ಸ್ವರೂಪದಲ್ಲಿದ್ದವು. +ಆದರೆ ಇದು ನಮ್ಮನ್ನು ಅವುಗಳಿಂದ ಪ್ರವಹಿಸುವ ಫಲಿತಾಂಶಗಳನ್ನು ಅರ್ಥ ಮಾಡಿಕೊಳ್ಳದಂತೆ ಕುರುಡಾಗಿಸಬಾರದು. +ವಿಧಾನಗಳ ಆದರ್ಶೀಕರಣವು ಅಗತ್ಯವೆಂದೂ ಮತ್ತು ಪ್ರಾಯಶಃ ಈ ನಿರ್ದಿಷ್ಟ ವಿಚಾರದಲ್ಲಿ ಅವನ್ನು ಇನ್ನೂ ಹೆಚ್ಚು ಪರಿಣಾಮಕಾರಿಯಾಗುವಂತೆ ಉದ್ದೀಪನಗೊಳಿಸಿರಬಹುದೆಂದೂ ಯಾರು ಬೇಕಾದರೂ ಧಾರಾಳವಾಗಿ ಹೇಳಬಹುದು. +ವಿಧಾನವನ್ನೇ ಗುರಿಯೆಂದು ಹೇಳುವುದರಿಂದ ಅದು ಅದರ ನಿಜ ಸ್ವರೂಪವನ್ನು ಮರೆಮಾಚುವುದರ ಹೊರತು ಬೇರೆ ತೊಂದರೆಯೇನೂ ಇಲ್ಲ; +ವಿಧಾನದ ನಿಜ ಸ್ವಭಾವವನ್ನೇನೂ ಇದರಿಂದ ಕಿತ್ತು ಹಾಕಲಾಗುವುದಿಲ್ಲ. +ವಿಧಾನವನ್ನೇ ಗುರಿಯೆಂದು ಕರೆಯುವಂತೆ ಎಲ್ಲ ಬೆಕ್ಕುಗಳೂ ನಾಯಿಗಳೇ ಎಂದು ನೀವು ಒಂದು ಕಾನೂನನ್ನು ಬೇಕಿದ್ದರೆ ಹೊರಡಿಸಬಹುದು. +ಇದರಿಂದ ಬೆಕ್ಕುಗಳನ್ನು ನಾಯಿಗಳನ್ನಾಗಿಸದಂತೆ, ವಿಧಾನಗಳ ಸ್ವಭಾವವನ್ನೇನೂ ನೀವು ಮಾರ್ಪಡಿಸಲಾರಿರಿ. +ಇದರ ಪರಿಣಾಮವಾಗಿ ಸತಿ, ಒತ್ತಾಯದ ವೈಧವ್ಯ ಮತ್ತು ಹೆಣ್ಣುಮಕ್ಕಳ ಬಾಲ್ಯವಿವಾಹ. + ಇವುಗಳು ಒಂದು ಜಾತಿಯಲ್ಲಿ ಅದರ ಹೆಚ್ಚುವರಿ ಗಂಡಸು ಹಾಗೂ ಹೆಚ್ಚುವರಿ ಹೆಂಗಸರ ಸಮಸ್ಯೆಯನ್ನು ಪರಿಹರಿಸಲೂ ಮತ್ತು ಸ್ವಜಾತಿವಿವಾಹ ಪದ್ಧತಿಯನ್ನು ಪಾಲಿಸಲೂ ಮುಖ್ಯವಾಗಿ ಹುಟ್ಟಿಕೊಂಡ ಸಂಪ್ರದಾಯಗಳೆಂದು ನಾನು ಭಾವಿಸಿರುವುದು ಸಮರ್ಥನೀಯವಾಗಿದೆ. +ಈ ಸಂಪ್ರದಾಯಗಳ ಹೊರತು ಕಟ್ಟುನಿಟ್ಟಾದ ಸ್ವಜಾತಿ ವಿವಾಹ ಪದ್ಧತಿಯನ್ನು ಕಾಪಾಡಲು ಆಗದು; +ಸ್ವಜಾತಿ ವಿವಾಹಪದ್ಧತಿಯಿರದ ಜಾತಿಯೊಂದು ಅಪ್ಪಟ ನಕಲಿ. +ಭಾರತದಲ್ಲಿ ಜಾತಿಯ ಸೃಷ್ಟಿ ಮತ್ತು ಸಂರಕ್ಷಣೆಯ ವಿಧಾನವನ್ನು ವಿವರಿಸಿದ ಮೇಲೆ ಸಹಜವಾಗಿಯೇ ಹುಟ್ಟಿಕೊಳ್ಳುವ ಮುಂದಿನ ಪ್ರಶ್ನೆಯೆಂದರೆ ಅದರ ಮೂಲದ ಕುರಿತಾದದ್ದು. +ಹುಟ್ಟನ ಬಗೆಗಿನ ಪ್ರಶ್ನೆಯಾವಾಗಲೂ ನೋವನ್ನುಂಟು ಮಾಡುವಂತಹದ್ದು, ದುರ್ದೈವವೆಂದರೆ ಜಾತಿಯ ಅಧ್ಯಯನದಲ್ಲಿ ಅದನ್ನು ಕಡೆಗಣಿಸಲಾಗಿದೆ. +ಕೆಲವರು ಅದನ್ನು ಕಂಡೂ ಕಾಣದಂತೆ ಇದ್ದರೆ ಇನ್ನು ಕೆಲವರು ನುಸುಳಿಕೊಂಡಿದ್ದಾರೆ. +ಜಾತಿಯ ಉಗಮ ಎಂಬುದೊಂದುಂಟೇ ಎಂದು ಮತ್ತೆ ಕೆಲವರು ಕಕ್ಕಾಬಿಕ್ಕಿಯಾಗಿದ್ದಾರಲ್ಲದೆ. +“ನಾವು "ಹುಟ್ಟು' ಎಂಬ ಶಬ್ದದ ಮೋಹವನ್ನು ನಿಯಂತ್ರಿಸಕೊಳ್ಳಲು ಆಗದಿದ್ದಲ್ಲಿ "ಜಾತಿಯ ಹುಟ್ಟುಗಳು' ಎಂಬ ಬಹುವಚನ ರೂಪವನ್ನು ಉಪಯೋಗಿಸುವುದೇ ಕ್ಷೇಮ” ಎಂದೂ ಸೂಚಿಸಿದ್ದಾರೆ. +ನನ್ನ ಬಗ್ಗೆ ಹೇಳುವುದಾದರೆ,ಭಾರತದಲ್ಲಿ ಜಾತಿಯ ಉಗಮದ ವಿಚಾರದಲ್ಲಿ ನಾನು ತಬ್ಬಿಬ್ಬಾಗುವುದಿಲ್ಲ. +ನಾನು ಮೊದಲೇ ಸಾಬೀತುಪಡಿಸಿರುವಂತೆ ಜಾತಿಯ ಏಕೈಕ ಲಕ್ಷಣ ಸ್ವಜಾತಿ ವಿವಾಹ ಪದ್ಧತಿ. +ಜಾತಿಯ ಹುಟ್ಟು ಎಂದು ನಾನು ಹೇಳುವಾಗ ಸ್ಪಜಾತಿ ವಿವಾಹ ಪದ್ಧತಿಗಾಗಿ ಕಾರ್ಯವಿಧಾನದ ಉಗಮ ಎಂದೇ ನನ್ನ ಅರ್ಥ. +ಒಂದು ಸಮಾಜದಲ್ಲಿನ ವ್ಯಕ್ತಿಗಳು ತಮ್ಮನ್ನು ತಾವು ತುಚ್ಛೀಕರಿಸಿಕೊಳ್ಳುವ ಕಲ್ಪನೆಯನ್ನು ಎಷ್ಟುದೊಡ್ಡದಾಗಿ ಜನಪ್ರಿಯಗೊಳಿಸಲಾಗಿದೆಯೆಂದರೆ -ಅಶ್ಲೀಲಗೊಳಿಸಲಾಗಿದೆ ಎಂದೂ ಹೇಳುವವನಿದ್ದೆ. +ರಾಜಕೀಯ ಪ್ರವಚನಗಳಲ್ಲಿ ಅದೊಂದು ಬೃಹತ್ತಾದ ನಯವಂಚನೆಯೇ ಆಗಿದೆ. +ವ್ಯಕ್ತಿಗಳ ಒಟ್ಟು ಮೊತ್ತ ಸಮಾಜವಾಗುತ್ತದೆಂದು ಹೇಳುವುದು ಅಸಮರ್ಪಕವಾಗಿದೆ. +ಸಮಾಜವು ಯಾವಾಗಲೂ ವರ್ಗಗಳಿಂದ ಕೂಡಿದ್ದಾಗಿದೆ. +ವರ್ಗವೈಷಮ್ಯ ಸಿದ್ಧಾಂತವನ್ನು ದೃಢವಾಗಿ ಹೇಳುವುದು ಉತ್ಪ್ರೇಕ್ಷೆಯಾಗಬಹುದು. + ಆದರೆಒಂದು ಸಮಾಜದಲ್ಲಿ ಖಚಿತವಾದ ವರ್ಗಗಳ ಅಸ್ತಿತ್ವ ಮಾತ್ರ ಸತ್ಯವಾದುದು. +ಅವುಗಳ ಮೂಲ ಬೇರೆ ಬೇರೆ ಆಗಿರಬಹುದು. +ಅವು ಆರ್ಥಿಕ ಅಥವಾ ಬೌದ್ಧಿಕ ಅಥವಾ ಸಾಮಾಜಿಕವಾಗಿರಬಹುದು. + ಆದರೆ ಒಂದು ಸಮಾಜದಲ್ಲಿ ಒಬ್ಬ ವ್ಯಕ್ತಿ ಯಾವಾಗಲೂ ಒಂದು ವರ್ಗದ ಸದಸ್ಯ. +ಇದು ವಿಶ್ವ ವ್ಯಾಪಕವಾದ ಸಂಗತಿ. +ಆರಂಭದ ಹಿಂದೂ ಸಮಾಜ ಕೂಡ ಈ ನಿಯಮಕ್ಕೊಂದು ಅಪವಾದವಾಗಿರಲಾರದು. +ವಾಸ್ತವವಾಗಿ ಹಿಂದೂ ಸಮಾಜವು ಸಮಯಕ್ಕೆ ಅತೀತವಾಗಿ ಇರಲಿಲ್ಲವೆಂಬ ಸಂಗತಿಯೂ ನಮಗೆ ಗೊತ್ತಿದೆ. +ಈ ಸರಳೀಕರಣವನ್ನು ನಾವು ನೆನಪಿನಲ್ಲಿಟ್ಟರೆ ಜಾತಿಯ ಉಗಮ ಕುರಿತ ನಮ್ಮ ಅಧ್ಯಯನವು ಬಹುವಾಗಿ ಸುಲಭವಾಗುತ್ತದೆ. +ಯಾಕೆಂದರೆ ತನ್ನನ್ನು ತಾನು ಜಾತಿಯಾಗಿಸಿಕೊಂಡ ವರ್ಗ ಮೊದಲು ಯಾವುದಿತ್ತು ಎಂಬುದನ್ನಷ್ಟೇ ಈಗ ನಾವು ನಿರ್ಧರಿಸಬೇಕಾಗಿದೆ. +ಹಾಗೆ ಹೇಳುವುದಾದರೆ ವರ್ಗ ಮತ್ತು ಜಾತಿಗಳು ನಮ್ಮ ಪಕ್ಕದ ಬಾಗಿಲಿನ ನೆರೆಹೊರೆಗಳು. +ಇವೆರಡನ್ನು ಬೇರೆಯಾಗಿಸಿರುವುದು ಒಂದು ಗೇಣು ಮಾತ್ರ; +ಜಾತಿಯೆಂಬುದು ಸುತ್ತಲೂ ಗೋಡೆ ನಿರ್ಮಿಸಿಕೊಂಡಿರುವ ಒಂದು ವರ್ಗ. +ಜಾತಿಯ ಹುಟ್ಟನ್ನು ಕುರಿತ ಅಧ್ಯಯನವು ತನ್ನ ಸುತ್ತ ಈ "ಗೋಡೆ' ಎಬ್ಬಿಸಿದ ವರ್ಗ ಯಾವುದು ಎಂಬ ಪ್ರಶ್ನೆಗೆ ಉತ್ತರವನ್ನು ಒದಗಿಸಬೇಕು. +ಪ್ರಶ್ನೆಯು ತೀರ ಅನ್ವೇಷಣಾ ಶೀಲವೆನಿಸಬಹುದು, ಆದರೆ ಅದು ಪಸ್ತುತವಾಗಿದೆ. +ಇಡೀ ಭಾರತದ ಜಾತಿಗಳ ಜನನ ಮತ್ತು ಎಕಾಸದ ರಹಸ್ಯವನ್ನು ವಶಪಡಿಸಲು ಈ ಪ್ರಶ್ನೆಗೆ ಸಿಗುವ ಉತ್ತರ ಸಹಾಯಕವಾಗುತ್ತದೆ. +ದುರದೃಷ್ಟವೆಂದರೆ ಈ ಪ್ರಶ್ನೆಗೆ ನೇರವಾದ ಉತ್ತರ ನನ್ನ ಅಳವಿನಲ್ಲಿಲ್ಲ. +ನಾನೇನಿದ್ದರೂ ಇದಕ್ಕೆ ಪರೋಕ್ಷವಾಗಿ ಉತ್ತರಿಸಬಲ್ಲೆನಪ್ಪೆ. +ಹಿಂದೂ ಸಮಾಜದಲ್ಲಿ ಈಗ ಉಲ್ಲೇಖಿಸಿರುವ ಸಂಪ್ರದಾಯಗಳು ರೂಢಿಯಲ್ಲಿದ್ದವೆಂದು ನಾನು ಈ ಮೇಲೆ ಹೇಳಿದ್ದೇನೆ. +ಅವುಗಳ ಅಸ್ತಿತ್ವದ ವ್ಯಾಪಕತೆಯನ್ನು ಸಿದ್ಧಪಡಿಸುವ ಸಲುವಾಗಿ ಈ ಹೇಳಿಕೆಯನ್ನು ಪುರಾವೆಗಳ ಸಹಿತ ಪುಷ್ಟೀಕರಿಸಬೇಕಾಗಿದೆ. +ಈಗ ಹೇಳಿರುವ ಸಂಪ್ರದಾಯಗಳು ಕಟ್ಟುನಿಟ್ಟಾಗಿ ಒಂದು ಜಾತಿಯಲ್ಲಿ ಅಂದರೆ ಬ್ರಾಹ್ಮಣರಲ್ಲಿ ಮಾತ್ರ ದೊರೆಯುತ್ತವೆ. +ಹಿಂದೂ ಸಮಾಜದ ಸಾಮಾಜಿಕ ಶ್ರೇಣಿಯಲ್ಲಿ ಅವರು ಅತ್ಯುನ್ನತ ಸ್ಥಾನವನ್ನು ಆಕ್ರಮಿಸಿದ್ದಾರೆ. +ಬ್ರಾಹ್ಮಣೇತರ ಜಾತಿಗಳಲ್ಲಿ ಅವುಗಳ ಅಸ್ತಿತ್ವವು ಉಪ ಉತ್ಪನ್ನದ ರೂಪದಲ್ಲಿದ್ದು ಅದರ ಆಚರಣೆಯು ಕಟ್ಟುನಿಟ್ಟಾಗಿಯೂ ಇಲ್ಲ. +ಪೂರ್ಣವಾಗಿಯೂ ಇಲ್ಲ. +ಪ್ರಮುಖವಾದ ಈ ಸಂಗತಿಯು ಬಹು ಮುಖ್ಯವೆನಿಸುವ ಅವಲೋಕನಕ್ಕೆ ಬುನಾದಿಯಾಗಿ ನೆರವಾಗಲಿದೆ. +ಬ್ರಾಹ್ಮಣೇತರ ಜಾತಿಗಳಲ್ಲಿ ಈ ಸಂಪ್ರದಾಯಗಳಿರುವುದು ನಿಷ್ಠನ್ನವೆಂಬುದಾದರೆ ಯಾವ ವರ್ಗವು ಜಾತಿವ್ಯವಸ್ಥೆಯ ತಂದೆ ಎನ್ನುವುದನ್ನು ಸಾಬೀತು ಪಡಿಸಲು ವಾದ ಮಾಡುವ ಅಗತ್ಯವೇ ಇಲ್ಲ. +ಬ್ರಾಹ್ಮಣ ವರ್ಗ ಏಕೆ ತನ್ನನ್ನು ಒಂದು ಜಾತಿಯಾಗಿಬೇಲಿ ಹಾಕಿಕೊಂಡಿತು ಎಂಬುದು ಬೇರೆಯೇ ಪ್ರಶ್ನೆ. +ಅದನ್ನು ಇನ್ನೊಂದು ಸಂದರ್ಭದ ವಿಶ್ಲೇಷಣೆಗೆ ಬಿಡಬಹುದು. +ಆದರೆ ಈ ಸಂಪ್ರದಾಯಗಳ ಕಟ್ಟುನಿಟ್ಟಿನ ಪಾಲನೆಯಿಂದ, ಮತ್ತು ಎಲ್ಲ ಪ್ರಾಚೀನ ನಾಗರಿಕತೆಗಳಲ್ಲೂ ಪುರೋಹಿತ ವರ್ಗ ಸಾಮಾಜಿಕ ಶ್ರೇಷ್ಠತೆಯನ್ನು ಸೊಕ್ಕಿನಿಂದ ಪ್ರತಿಪಾದಿಸಿರುವುದರಿಂದ,ಅವರೇ ಈ “ಅನೈಸರ್ಗಿಕ ಏರ್ಪಾಡಿಗೆ" ಜನ್ಮದಾತರು ಮತ್ತು ಅದನ್ನು ಅನೈಸರ್ಗಿಕ ಮಾರ್ಗಗಳಿಂದ ಸ್ಥಾಪಿಸಿ ಪರಿಪಾಲಿಸಿದವರು ಎಂಬುದು ಅರಿವಾಗುತ್ತದೆ. +ಈಗ ನಾನು ಪ್ರಬಂಧದ ಮೂರನೆಯ ಭಾಗಕ್ಕೆ ಬರುತ್ತೇನೆ. +ಇದು ಭಾರತದ ಉದ್ದಗಲಗಳಲ್ಲಿ ಜಾತಿಪದ್ಧತಿಯ ಬೆಳವಣಿಗೆ ಮತ್ತು ಪ್ರಸಾರದ ಪ್ರಶ್ನೆಯನ್ನು ಕುರಿತಾದದ್ದು. +ನಾನು ಉತ್ತರಿಸಬೇಕಾದ ಪ್ರಶ್ನೆಯಿದು : ದೇಶದ ಉಳಿದ ಬ್ರಾಹ್ಮಣೇತರರಲ್ಲಿ ಜಾತಿಯೆಂಬ ವ್ಯವಸ್ಥೆ ಹೇಗೆ ಪಸರಿಸಿತು? +ಭಾರತದಾದ್ಯಂತ ಜಾತಿಗಳು ದಾಂಗುಡಿಯಿಟ್ಟ ಪ್ರಶ್ನೆಯು ಅದರ ಉಗಮದ ಪ್ರಶ್ನೆಗಿಂತ ನಿಕೃಷ್ಟ ಗತಿಯನ್ನು ಅನುಭವಿಸಿದೆ. +ನನಗೆ ಕಾಣುವಂತೆ ಅದಕ್ಕೆ ಮುಖ್ಯ ಕಾರಣವೆಂದರೆ ಪ್ರಸಾರದ ಮತ್ತು ಉಗಮದ ಎರಡು ಪ್ರಶ್ನೆಗಳನ್ನು ಪ್ರತ್ಯೇಕಿಸದಿರುವುದು. +ಜಾತಿಪದ್ಧತಿಯು ದೈವ ನಿಯಾಮಕವಾದ ಒಂದು ನ್ಯಾಯ ನಿಬಂಧನೆಯಾಗಿ ಭಾರತದ ಮುಗ್ಧ ಜನರ ಮೇಲೆ ಹೇರಲ್ಪಟ್ಟದೆಯೆಂದೋ ಅಥವಾ ಭಾರತೀಯರಿಗೆ ವಿಶಿಷ್ಟವಾದ ಸಾಮಾಜಿಕ ಬೆಳವಣಿಗೆಯ ಯಾವುದೋ ಒಂದು ಕಾನೂನಿನಂತೆ ಇದು ಹುಟ್ಟಕೊಂಡಿದೆಯೆಂದೋ ವಿದ್ವಾಂಸರಲ್ಲಿ ರೂಢಿಯಲ್ಲಿರುವ ನಂಬಿಕೆ ಈ ಸ್ಥಿತಿಗೆ ಕಾರಣ. +ನಾನು ಮೊದಲು ಭಾರತದ ಕಾನೂನು ಕಟ್ಟಳೆಗಳನ್ನು ಕೊಟ್ಟವನ ವಿಚಾರ ಪರಿಶೀಲಿಸಲು ಉದ್ದೇಶಿಸಿದ್ದೇನೆ. +ಪ್ರತಿಯೊಂದು ರಾಷ್ಟ್ರವೂ ತನ್ನ ನ್ಯಾಯ ನಿಬಂಧನಕಾರರನ್ನು ಪಡೆದಿರುತ್ತದೆ. + ಆತ ಆದೇಶದ ಸಂಕಷ್ಟದ ಕಾಲದಲ್ಲಿ ಅವತಾರವಾಗಿ ಉದ್ಭವಿಸುತ್ತಾನೆ. + ಪಾಪಪೂರಿತ ಮಾನವ ಸಮುದಾಯವನ್ನು ಸರಿಮಾರ್ಗದಲ್ಲಿ ಕರೆದೊಯ್ಯುತ್ತಾನೆ. + ಅವರಿಗೆ ನ್ಯಾಯ ಮತ್ತು ನೈತಿಕತೆಯ ಕಾನೂನುಗಳನ್ನು ಕೊಡುತ್ತಾನೆ. +ಭಾರತದ ಕಾನೂನು ಜನಕನಾದ ಮನು, ಆ ವ್ಯಕ್ತಿ ಬದುಕಿದ್ದು ನಿಜವೇ ಆದರೆ, ನಿಶ್ಚಯವಾಗಿಯೂ ಆತ ಒಬ್ಬ ನಿರ್ಲಜ್ಜ ವ್ಯಕ್ತಿಯೇ ಸರಿ. +ಜಾತಿಯ ಕಾನೂನುಗಳನ್ನು ಕೊಟ್ಟವನು ಆತನೇ ಎಂಬ ಕಥೆಯನ್ನು ಪುರಸ್ಕರಿಸುವುದಾದರೆ ಮನು ಒಬ್ಬ ಹುಚ್ಚು ಸಾಹಸದ ವ್ಯಕ್ತಿಯೇ ಇರಬೇಕು. +ಆತನ ಕಾನೂನಿನ ಹಂಚಿಕೆಯನ್ನು ಒಪ್ಪಿಕೊಂಡ ಜನರ ಮಾನವೀಯತೆಯು ಇಂದು ನಮಗೆ ಪರಿಚಿತವಿರುವ ಮಾನವೀಯತೆಗಿಂತ ತೀರಭಿನ್ನವಾದುದು ಆಗಿದ್ದಿರಬೇಕು. +ಜಾತಿಯ ಕಾನೂನು ಕೊಡಲ್ರಟ್ಟತ್ತು ಎಂಬುದನ್ನು ಊಹಿಸಿಕೊಳ್ಳಲು ಸಾಧ್ಯವಾಗದು. +ಮನು ಕೂಡ ತನ್ನ ಕಾನೂನನ್ನು ಮೀರಿ ಬದುಕಿರಲಾರನೆಂದು ಹೇಳುವುದು ಉತ್ಪ್ರೇಕ್ಷೆಯಾಗಲಾರದು; +ಒಬ್ಬ ಮಾನವನ ಲೇಖನಿಯಿಂದಾಗಿ ಒಂದು ವರ್ಗವನ್ನು ಅಧೋಗತಿಗೆ ಇಳಿಸುವ ಹಾಗೂ ಇನ್ನೊಂದು ವರ್ಗವನ್ನು ಶಿಖರ ಸ್ಥಿತಿಗೇರಿಸುವ ವರ್ಗ ಯಾವುದಿದ್ದೀತು? +ಆತ ಎಲ್ಲ ಜನರನ್ನೂ ತನ್ನ ಸ್ವಾಧೀನಪಡಿಸಿಕೊಂಡ ಒಬ್ಬ ಪ್ರಜಾಪೀಡಕನಾಗಿರಬೇಕು. + ಇಲ್ಲವಾದರೆ ಈ ರೀತಿಯ ಅನ್ಯಾಯದ ವಿಧಾನದಲ್ಲಿ ತನ್ನ ಪೋಷಕತನವನ್ನು ನಿರ್ವಹಿಸಲು ಆತನನ್ನು ಬಿಡಲಾಯಿತೆಂಬುದನ್ನು ಊಹಿಸಿಕೊಳ್ಳಲೂ ಸಾಧ್ಯವಿಲ್ಲ. +ಆತ ನೀಡಿದ ಏರ್ಪಾಡುಗಳತ್ತ ಸುಮ್ಮನೆ ಕಣ್ಣಾಡಿಸಿದರೂ ಸಾಕು ಈ ಅನ್ಯಾಯ ಎದ್ದು ಕಾಣುತ್ತದೆ. +ಮನುವಿನ ವಿಚಾರದಲ್ಲಿ ನಾನು ಕಠೋರವಾಗಿರುವಂತೆ ತೋರಬಹುದು. + ಆದರೆ ನನ್ನ ಶಕ್ತಿ ಆತನ ಪ್ರೇತಾತ್ಮವನ್ನು ಕೊಲ್ಲುವಷ್ಟು ಸಶಕ್ತವಾಗಿಲ್ಲವೆಂಬುದು ನನಗೆ ಖಚಿತವಿದೆ. +ಆತ ಶರೀರ ರಹಿತ ಅಮೂರ್ತ ವ್ಯಕ್ತಿಯಂತೆ ಇಂದೂ ಜೀವಿಸಿದ್ದು ಕಾಡುತ್ತಿದ್ದಾನೆ. + ಮತ್ತು ಆತ ಇನ್ನೂ ದಿರ್ಫಕಾಲ ಬದುಕಿರ ಬಲ್ಲನೆಂಬ ಭಯ ಕೂಡ ನನಗಿದೆ. +ನಿಮ್ಮ ಮನಸ್ಸಿಗೆ ನಾಟುವಂತೆ ಹೇಳಬೇಕಾದ ಒಂದು ವಿಷಯವೆಂದರೆ ಜಾತಿಯ ಕಟ್ಟಳೆಗಳನ್ನು ಮನು ಕೊಡಲಿಲ್ಲ. +ಆತ ಹಾಗೆ ಮಾಡುವುದು ಸಾಧ್ಯವೂ ಇಲ್ಲ. +ಮನುವಿಗಿಂತ ತುಂಬ ಹಿಂದಿನಿಂದಲೂ ಜಾತಿ ಇತ್ತು. +ಆತ ಅದನ್ನು ಎತ್ತಿ ಹಿಡಿದಿದ್ದಾನೆ, ಅದನ್ನು ಸೈದ್ಧಾಂತಿಕಗೊಳಿಸಿದ್ದಾನೆ. +ಆದರೆ ನಿಶ್ಚಯವಾಗಿಯೂ ಹಿಂದೂ ಸಮಾಜದ ಇಂದಿನ ವ್ಯವಸ್ಥೆಯನ್ನು ಆತಕಟ್ಟಳೆ ಗೊಳಿಸಿದವನಲ್ಲ ಮತ್ತು ಹಾಗೆ ಮಾಡಲು ಸಾಧ್ಯವೂ ಇರಲಿಲ್ಲ. +ಅಸ್ತಿತ್ವದಲ್ಲಿದ್ದ ಜಾತಿಯ ಕಟ್ಟಳೆಗಳನ್ನು ಕೋಢೀಕರಿಸುವುದರೊಂದಿಗೆ ಮತ್ತು ಜಾತಿ ಧರ್ಮವನ್ನು ಬೋಧಿಸುವುದರೊಂದಿಗೆ ಆತನ ಕೆಲಸ ಮುಗಿಯಿತು. +ಜಾತಿವ್ಯವಸ್ಥೆಯ ಪ್ರಸಾರ ಮತ್ತು ಬೆಳವಣಿಗೆಯು ಅತಿ ಬೃಹತ್ತಾದುದು; +ಅದನ್ನು ಸಾಧಿಸಬೇಕಾದರೆ ಒಬ್ಬ ವ್ಯಕ್ತಿ ಅಥವಾ ಒಂದು ವರ್ಗದ ಶಕ್ತಿ ಅಥವಾ ಕಪಟತನ ಇರಬೇಕು. +ಇದಕ್ಕೆ ಸಮಾನವಾದ ವಾದವೆಂದರೆ ಬ್ರಾಹ್ಮಣರು ಜಾತಿಯನ್ನು ಸೃಷ್ಟಿ ಮಾಡಿದರೆಂಬ ಸಿದ್ಧಾಂತ. +ಮನುವಿನ ವೈಚಾರಿಕತೆ ತಪ್ಪು ಆಲೋಚನೆಯದ್ದು,ಅಸೂಯೆಯದ್ದು ಹಾಗೂ ದುರುದ್ದೇಶಪೂರಿತವಾದದ್ದು ಎನ್ನುವುದನ್ನು ಬಿಟ್ಟರೆ ಆಗಲೇ ನಾನು ಮನುವಿನ ಬಗ್ಗೆ ಏನನ್ನು ಹೇಳಿದ್ದೇನೊ ಅದಕ್ಕಿಂತ ಹೆಚ್ಚಾಗಿ ಹೇಳಬೇಕಾಗಿಲ್ಲ. +ಈ ಬ್ರಾಹ್ಮಣರು ಅನೇಕ ಸಂಗತಿಗಳಲ್ಲಿ ಅಪರಾಧಿಗಳಾಗಿರಬಹುದು. + ಇದು ನಿಜವೂ ಹೌದೆಂದು ನಾನು ಧೈರ್ಯವಾಗಿ ಹೇಳಬಲ್ಲೆ. + ಆದರೆ ಜಾತಿಪದ್ಧತಿಯನ್ನು ಬ್ರಾಹ್ಮಣೇತರರ ಮೇಲೆ ಹೇರುವ ಕೆಲಸ ಅವರ ಸಾಮರ್ಥ್ಯಕ್ಕೆ ಮೀರಿದ್ದು. +ಜಾತಿಯ ಪ್ರಕ್ರಿಯೆಗೆ ಬ್ರಾಹ್ಮಣರು ತಮ್ಮ ನಯವಾದ ಸಿದ್ಧಾಂತದ ಮೂಲಕ ಸಹಾಯ ಮಾಡಿರಬಹುದು. +ಆದರೆ ಅವರು ನಿಶ್ಚಯವಾಗಿಯೂ ಅವರ ಸ್ವಂತ ನೆಲೆಯ ಆಚೆಗೆ ತಮ್ಮ ಯೋಜನೆಯನ್ನು ದಾಟಿಸಿರಲಾರರು. +ತಮ್ಮ ಸ್ವಂತ ಮಾದರಿಗಳಿಗೆ ಅನುಗುಣವಾಗಿ ಸಮಾಜವನ್ನು ರೂಪಿಸುವುದು! +ಎಷ್ಟೊಂದು ಅದ್ಭುತ!ಎಷ್ಟು ಕಠಿಣ! +ಅದರ ಮುಂದುವರಿಸುವಿಕೆಯನ್ನು ಯಾರಾದರೂ ವೈಭವೀಕರಿಸಬಹುದಷ್ಟೇ, ಆದರೆ ಅದನ್ನು ದೀರ್ಫ್ಥವಾಗಿ ಚಾಚುವುದು ನಿಜಕ್ಕೂ ಸಾಧ್ಯವಿಲ್ಲ. +ನನ್ನ ಆಕ್ರಮಣ ಶೀಲತೆಯ ಭಾವಾವೇಶ ಅನಗತ್ಯವೆಂದು ತೋರಬಹುದು. +ಆದರೆ ಇದು ಅಪಸ್ತುತವಾದುದಲ್ಲವೆಂದು ನಾನು ನಿಮಗೆ ಭರವಸೆ ಕೊಡಬಲ್ಲೆ. +ಹಿಂದೂ ಸಮಾಜದಲ್ಲಿ ಜಾತಿವ್ಯವಸ್ಥೆಯು ಶಾಸ್ತ್ರಸಮ್ಮತಿಯಿಂದ ಪ್ರಜ್ಮಾಪೂರ್ವಕವಾಗಿ ಸೃಷ್ಟಿಯಾಗಿದೆಯೆಂದು ಸಂಪ್ರದಾಯ ನಿಷ್ಠರಾದ ಹಿಂದೂಗಳ ಮನಸ್ಸಿನಲ್ಲಿ ಬಲವಾದ ಒಂದು ನಂಬಿಕೆಯಿದೆ. +ಈ ನಂಬಿಕೆ ಇರುವುದಷ್ಟೇ ಅಲ್ಲ, ಶಾಸ್ತ್ರಗಳು ತಪ್ಪಾಗಿರಲು ಸಾಧ್ಯವಿಲ್ಲದ್ದರಿಂದ ಜಾತಿ ಪದ್ಧತಿ ಒಳ್ಳೆಯದೇ ಹೊರತು ಮತ್ತೇನೂ ಅಲ್ಲವೆಂಬ ಆಧಾರಗಳನ್ನಿತ್ತು ಈ ನಂಬಿಕೆಯನ್ನು ಸಮರ್ಥಿಸಲಾಗುತ್ತಿದೆ. +ಈ ಧೋರಣೆಯ ಪ್ರತಿಕೂಲ ವಿಚಾರ ಕುರಿತು ನಾನು ಸಾಕಷ್ಟು ವಾದಿಸಿರುವುದು ಇಲ್ಲಿ ನೀಡಲಾದ ಧಾರ್ಮಿಕ ಪರವಾನಿಗೆಯನ್ನು ವೈಜ್ಞಾನಿಕ ಪಾತಳಿಯ ವಾದದ ಮೂಲಕ ಮಣ್ಣು ಪಾಲಾಗಿಸಲಾಗಿದೆ ಎಂಬುದಾಗಲೀ ಅಥವಾ ಅದರ ವಿರುದ್ಧವಾಗಿ ಬೋಧಿಸುತ್ತಿರುವ ಸುಧಾರಣಾವಾದಿಗಳಿಗೆ ನೆರವಾಗಲಿ ಎಂಬುದಾಗಲೀ ಅಲ್ಲ. +ಉಪದೇಶವು ಜಾತಿವ್ಯವಸ್ಥೆಯನ್ನು ನಿರ್ಮಿಸಲಿಲ್ಲ; +ಉಪದೇಶದಿಂದ ಜಾತಿವ್ಯವಸ್ಥೆಯನ್ನು ನಿರ್ನಾಮ ಮಾಡುವುದೂ ಸಾಧ್ಯವಿಲ್ಲ. +ಧಾರ್ಮಿಕ ಶಾಸನವನ್ನು ಒಂದು ವೈಜ್ಞಾನಿಕ ವಿವರಣೆಯ ಸ್ಥಾನಕ್ಕೇರಿಸಿಸ್ತುತಿಸುವ ಧೋರಣೆಯು ಎಷ್ಟು ಕೃತಕವಾದದ್ದೆಂಬುದನ್ನು ತೋರಿಸುವುದು ನನ್ನ ಗುರಿ. +ಹೀಗೆ ಭಾರತದಲ್ಲಿ ಜಾತಿಗಳ ಪ್ರಸಾರದ ಒಗಟನ್ನು ಬಿಡಿಸುವುದರಲ್ಲಿ ಶ್ರೇಷ್ಠವ್ಯಕ್ತಿ ವಾದವು ತುಂಬದೂರದವರೆಗೆ ನಮ್ಮ ನೆರವಿಗೆ ಒದಗಿ ಬರಲಾರದು. +ಬಹುಶಃ ನಾಯಕೋಪಾಸನೆ ಹೆಚ್ಚು ಬಳಕೆಯಿರದ ಪಾಶ್ಚಾತ್ಯ ವಿದ್ವಾಂಸರು ಬೇರೆ ಬೇರೆ ಅರ್ಥ ವಿವರಣೆ ಕೊಡಲೆತ್ನಿಸಿದ್ದಾರೆ. +ಅವರ ಪ್ರಕಾರ, ಭಾರತದಲ್ಲಿ ವಿವಿಧ ಜಾತಿಗಳು "ರೂಪಿತ'ವಾಗಿರುವ ಕೇಂದ್ರ ಬಿಂದುಗಳೆಂದರೆ : ೧. ಸುಬು; ೨. ಬುಡಕಟ್ಟುವ್ಯವಸ್ಥೆಯ ಪಳೆಯುಳಿಕೆಗಳು, ೩. ಹೊಸ ನಂಬಿಕೆಯ ಉದಯ, ೪. ಅಂತರ್ಜಾತೀಯ ಸಂತಾನ, ಮತ್ತು ೫. ವಲಸೆ. +ಈ ಕೇಂದ್ರಬಿಂದುಗಳು ಬೇರೆ ಸಮಾಜಗಳಲ್ಲಿ ಇರಲಿಲ್ಲವೆ ಮತ್ತು ಇವು ಭಾರತಕ್ಕೆ ಮಾತ್ರ ವಿಶಿಷ್ಟವಾದವುಗಳೆ ಎಂಬ ಪ್ರಶ್ನೆಯನ್ನು ಕೇಳಬಹುದು. +ಇವು ಭಾರತಕ್ಕಷ್ಟೇ ವಿಶಿಷ್ಟವಾಗಿರದಿದ್ದರೆ ಮತ್ತು ಜಗತ್ತಿಗೇ ಸಮಾನವಾಗಿದ್ದರೆ. +ಈ ಪ್ರಪಂಚದ ಇತರ ಭಾಗಗಳಲ್ಲಿ ಅವುಗಳು ಜಾತಿಯಾಗಿ "ರೂಪಿತ'ಗೊಳ್ಳಲಿಲ್ಲವೇಕೆ? +ವೇದಗಳ ನಾಡಾದ ಭಾರತಕ್ಕಿಂತಲೂ ಆ ಭಾಗಗಳು ಇನ್ನೂ ಪವಿತ್ರತಮವಾಗಿದ್ದುವೆಂದೇ, ಅಥವಾ ಪ್ರಾಧ್ಯಾಪಕರು ತಪ್ಪು ತಿಳಿದಿರಬಹುದೇ? +ಈ ಉತ್ತರಾರ್ಧವೇ ನಿಜವಿರಬೇಕೆನಿಸುತ್ತದೆ. +ಮೇಲೆ ಹೇಳಿದ ಕೇಂದ್ರಬಿಂದುಗಳಲ್ಲಿ ಒಂದಲ್ಲೋಂದನ್ನು ಆಧರಿಸಿ ರಚಿಸಿದ ತಮ್ಮ ತಮ್ಮ ಸಿದ್ಧಾಂತಗಳಿಗೆ ಅನೇಕ ಲೇಖಕರು ಅತ್ಯುನ್ನತ ತಾತ್ವಿಕ ಮೌಲ್ಯವನ್ನು ಪ್ರತಿಪಾದಿಸಲು ಪ್ರಯತ್ನಿಸಿದ್ದಾರೆ. +ಸೂಕ್ಷ್ಮ ಪರೀಕ್ಷೆಯಿಂದ ನೋಡಿದಾಗ ಆ ಪ್ರಯತ್ನಗಳೆಲ್ಲಾ ಖಾಲಿ ಸ್ಥಳವನ್ನು ತುಂಬುವ ನಿರೂಪಣಾ ಚಿತ್ರಗಳಿಗಿಂತ ಹೆಚ್ಚಲ್ಲವೆಂದು ಹೇಳಲು ವಿಷಾದವಾಗುತ್ತದೆ; +ಮ್ಯಾಥ್ಯೂ ಆರ್ನಾಲ್ದರು ಹೇಳುವಂತೆ, “ತನ್ನೊಳಗೆ ಭವ್ಯತೆಯೇ ಇರದ ಭವ್ಯವಾದ ಹೆಸರು” ಅಷ್ಟೆ ಸರ್‌ ಡೆನ್‌ಜಿಲ್‌ ಇಬ್ಬೆಟ್ಟಿನ್‌, ಶ್ರೀ ನೆಸ್‌ಫೀಲ್ಡ್‌, ಶ್ರೀ ಸೆನರ್ಟ್‌ ಹಾಗೂ ಸರ್‌ಎಚ್‌.ರಿಸ್ಲೆ ಇವರುಗಳು ಜಾತಿಯನ್ನು ಕುರಿತು ಪ್ರತಿಪಾದಿಸಿರುವ ವಿವಿಧ ಸಿದ್ಧಾಂತಗಳೂ ಹಾಗೇ ಇವೆ. +ಅವುಗಳನ್ನು ಒಟ್ಟಾಗಿ ವಿಮರ್ಶಿಸುವುದಾದರೆ ಅವೆಲ್ಲ ತರ್ಕಶಾಸ್ತ್ರದಲ್ಲಿ ಹೇಳುವ "ಸಾಧಿಸಬೇಕಾದ ವಿಷಯವನ್ನೇ ಫಲಿತಾಂಶ ಎಂದಿಟ್ಟುಕೊಳ್ಳುವಂತೆ" ಮಾರುವೇಷದ ರೂಪಗಳು, "ಭಾರತದಲ್ಲಿ ಇಡೀ ಜಾತಿ ವ್ಯವಸ್ಥೆ ರಚನೆಯಾಗಿರುವುದು ಅದು ನಿರ್ವಹಿಸುವ ಕಾರ್ಯದ ಮೇಲೆ ಮತ್ತು ಕಾರ್ಯದ ಮೇಲೆ ಮಾತ್ರ" ಎಂದು ನೆಸ್‌ಫೀಲ್ದರು ಹೇಳುತ್ತಾರೆ. +ಮೇಲಿನ ಈ ಹೇಳಿಕೆಯನ್ನು ಕೊಡುವುದರ ಮೂಲಕ ಅವರು ನಮ್ಮ ಆಲೋಚನೆಯನ್ನು ಅಷ್ಟೇನೂ ಹೆಚ್ಚು ದೂರ ಕೊಂಡೊಯ್ಯುವುದಿಲ್ಲವೆಂದು ಸರಿಯಾಗಿ ನೆನಪಿಸಬೇಕಾಗುತ್ತದೆ; +ಭಾರತದಲ್ಲಿ ಜಾತಿಗಳು ಕ್ರಿಯಾತ್ಮಕ ಅಥವಾ ವೃತ್ತಿಪರವೆಂದೇ ಹೇಳಿದಂತಾಗುವ ಅವರ ಈ ಹೇಳಿಕೆ ತುಂಬಸಪ್ಪೆಯಾದ ಸಂಶೋಧನೆ; +ವೃತ್ತಿಪರ ಗುಂಪು ವೃತ್ತಿಪರ ಜಾತಿಯಾದದ್ದು ಏಕೆ ಎಂಬುದಕ್ಕೆ ನೆಸ್‌ಫೀಲ್ದರಿಂದ ಇನ್ನೂ ಅರಿಯಬೇಕಾಗಿದೆ. +ನೆಸ್‌ಫೀಲ್ದರ ಹೇಳಿಕೆ ಒಂದು ನಮೂನೆಯದ್ದು ಮಾತ್ರ ಎಂಬುದು ನಿಜ ಸ್ಥಿತಿಯಲ್ಲದಿರುತ್ತಿದ್ದರೆ ನಾನು ತುಂಬ ಉಲ್ಲಾಸದಿಂದ ಇತರ ಮಾನವ ಕುಲಶಾಸ್ತ್ರಜ್ಞರ ಸಿದ್ಧಾಂತಗಳನ್ನು ಆಶ್ರಯಿಸುವ ಪ್ರಯತ್ನಕ್ಕೆ ತೊಡಗುತ್ತಿದ್ದೆ. +ವಿಘಟನೆಗೊಳ್ಳುತ್ತಾ ಹೋಗುವ ನಿಯಮಕ್ಕೆ ಬದ್ಧವಾಗಿರುವ ಜಾತಿ ವ್ಯವಸ್ಥೆಯು ಒಂದು ಸ್ವಾಭಾವಿಕ ಘಟನೆಯೆಂದು ಹರ್ಬರ್ಟ್‌ ಸ್ಪೆನ್ಸರ್‌ ಅವರು ತಮ್ಮ ವಿಕಾಸ ನಿಯಮದಲ್ಲಿ ವಿವರಿಸಿರುವುದನ್ನು ಅಥವಾ ಸಂಪ್ರದಾಯ ಶರಣ ಧರ್ಮಪ್ರಚಾರಕನೊಬ್ಬನ ವಾಕ್ಷರಣಿಯ ರೀತಿಯಲ್ಲಿ, “ಪರಸ್ಪರ ಅವಲಂಬಿತ ಭಾಗಗಳುಳ್ಳ ಒಂದು ಜೀವರಚನೆಯೊಳಗೆ ರಾಚನಿಕ ವ್ಯತ್ಕಾಸಗಳಂತೆ” ಎನ್ನುವುದನ್ನು - ಅಥವಾ ಜನಾಂಗ ಶಾಸ್ತ್ರದ ನಿಯಮಗಳ ಅಡಿಯಲ್ಲಿ ಜಾತಿಪದ್ಧತಿಯ ಪರಿಶೀಲನೆಯ ಪ್ರಯತ್ನ ನಡೆಸಿರುವುದನ್ನು- ಈ ರೀತಿ ತರ್ಕದೋಷದ ವಿಚಾರವನ್ನು ಅಸಹಾಯಕ ಮತ್ತು ವಿನಯಶೀಲ ಜನರ ಮೇಲೆ ಹೇರುತ್ತಿರುವುದರ ವಿರುದ್ಧ ಟೀಕಿಸುವುದನ್ನು ಮುಂದುವರಿಸುತ್ತಾ ಈಗ ನಾನು ನಿಮ್ಮ ಮುಂದೆ ಈ ವಿಷಯದ ಕುರಿತ ನನ್ನ ಸ್ವಂತ ದೃಷ್ಟಿಕೋನವನ್ನು ಮಂಡಿಸುತ್ತೇನೆ. +ಹಿಂದೂ ಸಮಾಜವು ಇತರ ಸಮಾಜಗಳ ರೀತಿಯಲ್ಲಿಯೇ ವರ್ಗಗಳಿಂದ ಕೂಡಿದ್ದಾಗಿತ್ತು ಎಂಬುದನ್ನು ಪ್ರಾರಂಭದಲ್ಲೇ ನೆನಪಿಗೆ ತಂದುಕೊಳ್ಳುವುದು ಒಳ್ಳೆಯದು. +ನಮಗೆ ತಿಳಿದು ಬಂದಿರುವ ಪ್ರಾರಂಭದ ವರ್ಗಗಳು: +1.ಬ್ರಾಹ್ಮಣರು ಅಥವಾ ಪುರೋಹಿತ ವರ್ಗ. +2.ಕ್ಷತ್ರಿಯರು ಅಥವಾ ಸೈನಿಕ ವರ್ಗ +3.ವೈಶ್ಯರು ಅಥವಾ ವರ್ತಕ ವರ್ಗ, ಮತ್ತು +4.ಶೂದ್ರರು ಅಥವಾ ಕುಶಲಕರ್ಮಿಗಳು ಹಾಗೂ ದಾಸ್ಯವೃತ್ತಿಯವರು. +ಇದು ಮೂಲಭೂತವಾಗಿ ಒಂದು ವರ್ಗ ವ್ಯವಸ್ಥೆಯಾಗಿತ್ತು. +ಅಂತೆಯೇ ಈ ವರ್ಗದಲ್ಲಿರುವ ವ್ಯಕ್ತಿಗಳು ಅರ್ಹತೆಗನು ಸಾರವಾಗಿ ತಮ್ಮ ವರ್ಗವನ್ನು ಬದಲಾಯಿಸಲು ಮತ್ತು ವರ್ಗಗಳು ಸಿಬ್ಬಂದಿಗಳನ್ನುಬದಲಾಯಿಸಿಕೊಳ್ಳಲು ಅವಕಾಶವಿತ್ತು ಎಂಬ ಅಂಶಕ್ಕೆ ನಿರ್ದಿಷ್ಟವಾದ ಗಮನವನ್ನು ಹರಿಸಬೇಕು. +ಹಿಂದೂಗಳ ಇತಿಹಾಸದ ಯಾವುದೋ ಒಂದು ಹಂತದಲ್ಲಿ ಪುರೋಹಿತವರ್ಗ ಸಾಮಾಜಿಕವಾಗಿ ಉಳಿದ ಜನರಿಂದ ತಾನಾಗಿ ಬೇರ್ಪಟ್ಟಿತು ಮತ್ತು ತನ್ನ ಬಾಗಿಲು ಮುಚ್ಚುವ ವರ್ತನೆಯಿಂದಾಗಿ ತಾನೇ ಒಂದು ಜಾತಿಯಾಗಿ ಪರಿವರ್ತನೆಗೊಂಡಿತು. +ಸಾಮಾಜಿಕ ಶ್ರಮ ವಿಭಜನೆಯ ಕಟ್ಟಳೆಗೆ ಒಳಪಟ್ಟು ಉಳಿದ ವರ್ಗಗಳು ತಾರತಮ್ಯಗಳಿಗೆ ಒಳಗಾದವು. + ಕೆಲವು ದೊಡ್ಡ ಗುಂಪುಗಳಾದರೆ ಉಳಿದವುಗಳು ಸಣ್ಣ ಪುಟ್ಟ ಗುಂಪುಗಳಾದುವು. +ವೈಶ್ಯಮತ್ತು ಶೂದ್ರ ವರ್ಗಗಳು ಮೂಲ ಜೀವದ್ರವ್ಯವಾಗಿದ್ದು ಇಂದಿನ ಅಸಂಖ್ಯಾತ ಜಾತಿಗಳಿಗೆ ಆಕರವಾದವು. +ಸೈನಿಕ ವೃತ್ತಿಯು ಅಷ್ಟು ಸುಲಭವಾಗಿ ತನ್ನನ್ನು ತಾನು ಅತಿ ಚಿಕ್ಕದಾಗಿ ಉಪವಿಭಜನೆಗೊಳ್ಳಲು ಅವಕಾಶಕೊಡುವುದಿಲ್ಲವಾದ್ದರಿಂದ ಕ್ಷತ್ರಿಯ ವರ್ಗವು ಸೈನಿಕರು ಮತ್ತು ಆಡಳಿತಗಾರರು ಎಂದು ವ್ಯತ್ಯಾಸಗೊಂಡಿರಬಹುದು. +ಒಂದು ಸಮಾಜದ ಈ ಉಪವಿಭಜನೆಯು ತೀರ ಸ್ವಾಭಾವಿಕವಾದುದು. +ಈ ಉಪವಿಭಜನೆಗಳ ಅನೈಸರ್ಗಿಕ ಸಂಗತಿಯೆಂದರೆ ಅವು ವರ್ಗವ್ಯವಸ್ಥೆಯ ಮುಕ್ತದ್ವಾರ ಲಕ್ಷಣವನ್ನು ಕಳೆದುಕೊಂಡಿರುವುದು . + ತನ್ನ ಸುತ್ತ ಬೇಲಿ ಕಟ್ಟಿಕೊಂಡ ಘಟಕಗಳಾಗಿ ಅಂದರೆ ಜಾತಿಗಳಾಗಿ ಬದಲಾಗಿರುವುದು. +ಈಗ ಪ್ರಶ್ನೆಏನೆಂದರೆ : ಅವರನ್ನು ತಮ್ಮ ಬಾಗಿಲುಗಳನ್ನು ಮುಚ್ಚುವಂತೆ ಮತ್ತು ಸ್ವಜಾತಿ ವಿವಾಹ ಪದ್ಧತಿಯವರಾಗುವಂತೆ ಒತ್ತಾಯಿಸಲಾಯಿತೆ? +ಅಥವಾ ಅವರೇ ಸ್ವ ಇಚ್ಛೆಯಿಂದ ಬಾಗಿಲುಗಳನ್ನು ಮುಚ್ಚಿದರೋ? +ಇದಕ್ಕೆ ಎರಡು ವಿಧವಾದ ಉತ್ತರವಿದೆಯೆಂದು ನಾನು ನಿವೇದಿಸುತ್ತೇನೆ. +ಕೆಲವರು ಬಾಗಿಲುಗಳನ್ನು ಮುಚ್ಚಿದರು, ಉಳಿದವರು ತಮ್ಮ ಪಾಲಿಗೆ ಬಾಗಿಲುಗಳನ್ನು ಮುಚ್ಚಲಾಗಿದೆಯೆಂದು ಕಂಡುಕೊಂಡರು. +ಒಂದು ಮನ:ಶಾಸ್ತ್ರೀಯವಾದ ವಿವರಣೆಯಾಗಿದ್ದರೆ ಇನ್ನೊಂದು ಯಾಂತ್ರಿಕವಾದುದು. +ಆದರೆ ಇವೆರಡೂ ಪರಸ್ಪರ ಪೂರಕವಾಗಿವೆ ಮತ್ತು ಜಾತಿವ್ಯವಸ್ಥೆಯ ಸಂಗತಿಯನ್ನು ಅದರ ಸಮಗ್ರತೆಯಲ್ಲಿ ವಿವರಿಸಲು ಇವೆರಡೂ ಅಗತ್ಯ. +ನಾನು ಮೊದಲು ಮನಃಶಾಸ್ತ್ರೀಯ ವ್ಯಾಖ್ಯಾನಗಳನ್ನು ತೆಗೆದುಕೊಳ್ಳುತ್ತೇನೆ. +ಈ ಸಂಬಂಧವಾಗಿ ಉತ್ತರಿಸಬೇಕಾದ ಪ್ರಶ್ನೆ ಇದು. + ಈ ಕೈಗಾರಿಕಾ, ಧಾರ್ಮಿಕ ಅಥವಾ ಬೇರೆಯೇ ಆದ ಉಪವಿಭಾಗಗಳು ಅಥವಾ ವರ್ಗಗಳು ತಮ್ಮ ಬಾಗಿಲುಗಳನ್ನು ತಾವೇ ಮುಚ್ಚಿದ್ದು ಅಥವಾ ಸ್ಪಜಾತಿ ಮದುವೆಯ ಘಟಕಗಳಾದದ್ದು ಯಾಕೆ? +ಯಾಕೆಂದರೆ ಬ್ರಾಹ್ಮಣರು ಹಾಗಿದ್ದರು ಎಂಬುದೇ ನನ್ನ ಉತ್ತರ. +ಸ್ವಜಾತಿ ವಿವಾಹಪದ್ಧತಿ ಅಥವಾ ಬಾಗಿಲು ಮುಚ್ಚಿದ ವ್ಯವಸ್ಥೆಯು ಹಿಂದೂ ಸಮಾಜದಲ್ಲಿ ಒಂದು ಶೈಲಿಯಾಗಿತ್ತು . + ಅದು ಬ್ರಾಹ್ಮಣ ಜಾತಿಯಿಂದ ಹುಟ್ಟಿದ ರೂಢಿಯಾಗಿದ್ದುದರಿಂದಾಗಿ ಅದನ್ನು ಎಲ್ಲ ಬ್ರಾಹ್ಮಣೇತರ ಉಪವಿಭಾಗ ಅಥವಾ ವರ್ಗಗಳವರೂ ಹೃದಯ ಪೂರ್ವಕವಾಗಿ ಅನುಕರಿಸಿದರು; + ಮುಂದೆ ಅವರುಗಳೇ ಸ್ವಜಾತಿ ಮದುವೆ ಪದ್ಧತಿ ಪಾಲಿಸುವ ಜಾತಿಗಳಾದರು. +ಈ ಎಲ್ಲ ಉಪವಿಭಜನೆಗಳನ್ನೂ "ಅನುಕರಣೆಯ ಅಂಟುಜಾಡ್ಯ"ಬೆನ್ನು ಹತ್ತಿ ತಾರತಮ್ಯದ ಮುನ್ನಡೆಯೊಂದಿಗೆ ಅವುಗಳು ಜಾತಿಗಳಾಗುವಂತೆ ಮಾಡಿತು. +ಅನುಕರಣೆಯ ಪ್ರವೃತ್ತಿ ಜನಮನದಲ್ಲಿ ಆಳವಾಗಿ ಬೇರೂರಿದೆ; +ಭಾರತದಲ್ಲಿ ನಾನಾ ಜಾತಿಗಳು ರಚಿತವಾಗಲು ಈ ಅನುಕರಣೆಯ ಒಲವು ಕಾರಣವೆಂಬುದನ್ನು ಅಸಮರ್ಪಕ ವಿವರಣೆಯೆಂದು ಗಹಿಸಬಾರದು. +ಅನುಕರಣಾ ಜಾಳಿ ಎಷ್ಟು ಆಳವಾಗಿ ಬೇರೂರಿದೆಯೆಂದರೆ ವಾಲ್ಟರ್‌ ಬೇಗ್‌ಹಾಟ್‌ ಹೀಗೆ ವಾದಿಸಿದ್ದಾರೆ, "ಅನುಕರಣೆಯು ಅಪ್ರೇರಿತವೆಂದು ಅಥವಾ ಪ್ರಜ್ಞಾಪೂರ್ವಕವಾದುದೆಂದು ನಾವು ಆಲೋಚಿಸಕೂಡದು. +ಇದಕ್ಕೆ ತದ್ವಿರುದ್ಧವಾಗಿ ಮನಸ್ಸಿನ ಅಜ್ಞಾತ ಭಾಗಗಳಲ್ಲಿ ಅದು ತನ್ನ ಸ್ಥಳವನ್ನು ಪಡೆದಿದೆ. +ಅದರ ಭಾವನೆಗಳು,ಪ್ರಜ್ಞಾಪೂರ್ವಕವಾಗಿ ಮೂಡುವುದಕ್ಕಿಂತ ದೂರದಲ್ಲಿದ್ದು, ಇವೆಯೆಂಬುದೇ ಅರಿವಿಗೆ ಬರಲಾರದು; +ಅವು ಬರುವುದರ ಸುಳಿವೂ ತಿಳಿಯುವುದಿಲ್ಲ. +ಅವು ಬಂದಾಗಲೂ ಗೊತ್ತಾಗುವುದಿಲ್ಲ. +ನಮ್ಮ ಸ್ವಾಭಾವದಲ್ಲಿರುವ ಅನುಕರಣಾ ಪ್ರವೃತ್ತಿಯ ಮುಖ್ಯವಾದ ನೆಲೆಯೆಂದರೆ ನಮ್ಮ ನಂಬಿಕೆ. +ಇದನ್ನು ನಂಬು ಅಥವಾ ಅದನ್ನು ನಂಬಬಾರದು ಎಂದು ನಮ್ಮನ್ನು ಮೊದಲೇ ನಿಯಂತ್ರಿಸುವ ಕಾರಣಗಳೆಂದರೆ ನಮ್ಮ ಸ್ವಭಾವದಲ್ಲಿರುವ ತೀರ ಅಜ್ಞಾತ ನೆಲೆಗಳು. +ಆದರೆ ವಿಚಾರ ಮಾಡದೆಯೇ ಸುಮ್ಮನೆ ನಂಬಿಬಿಡುವ ಅನುಕರಣ ಶೀಲ ಪ್ರವೃತ್ತಿಯ ವಿಚಾರದಲ್ಲಿ ಯಾವ ಅನುಮಾನವೂ ಇಲ್ಲ." + ಗೇಬ್ರಿಯಲ್‌ ಟರ್ಡೆ ಅವರು ಈ ಅನುಕರಣಾ ಪ್ರವೃತ್ತಿಯನ್ನು ವೈಜ್ಞಾನಿಕವಾಗಿ ಆಭ್ಯಸಿಸಿದ್ದಾರೆ. +ಅವರು ಮೂರು ಅನುಕರಣೆಯ ನಿಯಮಗಳನ್ನು ಪ್ರತಿಪಾದಿಸಿದ್ದಾರೆ. +ಈ ಮೂರು ನಿಯಮಗಳಲ್ಲಿ ಒಂದೆಂದರೆ, ಅನುಕರಣೆಯೆಂಬುದು ಮೇಲಿನಿಂದ ಕೆಳಕ್ಕೆ ಹರಿಯುತ್ತದೆ ಎನ್ನುವುದು. +ಅವರ ಮಾತುಗಳನ್ನೇ ಉದಾಹರಿಸುವುದಾದರೆ, “ಅವಕಾಶ ಕೊಟ್ಟಲ್ಲಿ, ಉತ್ತಮ ವರ್ಗ ಯಾವಾಗಲೂ ಮತ್ತು ಎಲ್ಲೆಡೆಗಳಲ್ಲೂ ತನ್ನ ಮುಂದಾಳುಗಳು, ರಾಜರು ಅಥವಾ ಸಾರ್ವಭೌಮರನ್ನುಅನುಕರಿಸುತ್ತದೆ; + ಅದರಂತೆ ಅವಕಾಶ ದೊರೆತಾಗ ಜನತೆ ತನ್ನ ಶ್ರೀಮಂತ ವರ್ಗಗಳನ್ನು ಅನುಕರಿಸುತ್ತದೆ.” + ಟರ್ಡೆ ಅವರು ಹೇಳುವ ಅನುಕರಣೆಯ ನಿಯಮಗಳಲ್ಲಿ ಇನ್ನೊಂದೆಂದರೆ, ಅನುಕರಣೆಯ ವ್ಯಾಪ್ತಿ ಅಥವಾ ತೀವ್ರತೆಯು ದೂರದ ಅಂತರವನ್ನು ಅವಲಂಬಿಸಿ ವ್ಯತ್ಯಾಸಗೊಳ್ಳುತ್ತದೆ. +ಅವರ ಮಾತುಗಳಲ್ಲೇಹೇಳುವುದಾದರೆ, “ಸಮೀಪವಿರುವ ವಸ್ತುಗಳಲ್ಲಿ ಅತ್ಯಂತ ಶ್ರೇಷ್ಠವಾದುದನ್ನು ಅತ್ಯಧಿಕವಾಗಿ ಅನುಕರಣೆ ಮಾಡಲಾಗುತ್ತದೆ. +ಶ್ರೇಷ್ಠ ಮಾದರಿಯು ದೂರವಿದ್ದಷ್ಟೂ ಪ್ರಭಾವ ಕಡಿಮೆಯಾಗುತ್ತಾ ಹೋಗುತ್ತದೆ. +ಇಲ್ಲಿ ದೂರವೆಂಬುದನ್ನು ಅದರ ಸಾಮಾಜಿಕ ಅರ್ಥದಲ್ಲಿ ಗ್ರಹಿಸಲಾಗಿದೆ. +ಈ ದೃಷ್ಟಿಕೋನದಿಂದ ಒಬ್ಬ ಪರಿಸರದಿಂದ ಅದೆಷ್ಟೋ ದೂರವಿದ್ದರೂ ಕೂಡ ಅವನೊಂದಿಗೆ ನಾವು ದಿನನಿತ್ಯದ ಸಂಪರ್ಕ ಮತ್ತು ಸಂಬಂಧವನ್ನು ಹೊಂದಿದ್ದರೆ ಆತನನ್ನು ಅನುಕರಿಸುವ ನಮ್ಮ ಅಪೇಕ್ಷೆಯನ್ನು ತೃಪ್ತಿಗೊಳಿಸುವ ಎಲ್ಲ ಅನುಕೂಲವೂ ನಮಗಿರುತ್ತದೆ. +ಹತ್ತಿರದವರನ್ನು, ಅತ್ಯಂತ ಕಡಿಮೆ ದೂರದಲ್ಲಿರುವವರನ್ನು, ನಿಧಾನವಾಗಿ ಮತ್ತು ನಿರಂತರವಾಗಿ ಅನುಕರಿಸುವ ಈ ನಿಯಮವು ಉನ್ನತ ಸಾಮಾಜಿಕ ಸ್ತರಗಳವರು ಹಾಕಿರುವ ಮೇಲ್ಪಂಕ್ತಿ ಬುನಾದಿಯ ಮೇಲೆಯೇ ನಿಂತಿದೆ.” +ಕೆಲವು ಜಾತಿಗಳು ಅನುಕರಣೆಯಿಂದ ಹುಟ್ಟಿಕೊಂಡಿವೆಯೆಂಬ ನನ್ನ ಈ ವಾದದ ಸಮರ್ಥನೆಗೆ ಬೇರೆ ಪುರಾವೆಗಳ ಅಗತ್ಯವಿಲ್ಲವಾದರೂ ಅತ್ಯುತ್ತಮ ಮಾರ್ಗವೆಂದರೆ ಹಿಂದೂ ಸಮಾಜದಲ್ಲಿ ಅನುಕರಣೆಯಿಂದಾದ ಜಾತಿಗಳ ರಚನೆಗೆ ಜೀವಂತ ಸ್ಥಿತಿಗತಿಗಳು ಇದ್ದುವೆ ಇಲ್ಲವೆ ಎಂಬುದನ್ನು ಕಂಡುಕೊಳ್ಳುವುದೇ ಆಗಿದೆಯೆಂದು ನನಗೆ ತೋರುತ್ತದೆ. +ಈ ಪ್ರಾಮಾಣಿತ ಆಧಾರದ ಪ್ರಕಾರ ಅನುಕರಣೆಗೆ ಇರುವ ಪರಿಸ್ಥಿತಿಗಳು : + (೧) ಅನುಕರಣೆಗಿರುವ ಮೂಲ ಆಕರವು ಗುಂಪಿನಲ್ಲಿ ಪ್ರತಿಷ್ಠಿತವೆನಿಸಿರಬೇಕು,ಮತ್ತು + (೨) ಒಂದು ಗುಂಪಿನ ಸದಸ್ಯರೊಳಗೆ ಅನೇಕ ಮತ್ತು ದಿನನಿತ್ಯದ ಸಂಬಂಧಗಳು ಇರಲೇಬೇಕು. +ಈ ಪರಿಸ್ಥಿತಿ ಭಾರತದಲ್ಲಿ ಇತ್ತೆ ಎಂಬುದನ್ನು ಸಂದೇಹಿಸಲು ಸ್ವಲ್ಪವೂ ಕಾರಣವಿಲ್ಲ. +ಬ್ರಾಹ್ಮಣನು ಅರೆದೇವತೆ ಹಾಗೂ ಬಹುಮಟ್ಟಗೆ ದೈವಾಂಶ ಸಂಭೂತ. +ಆತ ಒಂದು ಮಾದರಿಯನ್ನು ತಯಾರಿಸಿ ಉಳಿದವುಗಳನ್ನು ಅದರ ಪಡಿಯಚ್ಚಿನಂತೆ ರೂಪಿಸುತ್ತಾನೆ. +ಆತನ ಪ್ರತಿಷ್ಠೆ ಪ್ರಶ್ನಾಶೀತವಾದುದು. +ಆತ ಪರಮ ಸುಖದ ಮತ್ತು ಉತ್ತಮವಾದುದರ ಉಗಮಸ್ಥಾನ. +ಶಾಸ್ತ್ರಗಳಿಂದ ದೈವಮೂರ್ತಿಯೆಂದು ಪುರಸ್ಕೃತನಾದ ಮತ್ತು ಪುರೋಹಿತರಿಂದ ತುಂಬಿ ಹೋದ ಜನ ಸಮುದಾಯದಿಂದ ಪೂಜಿತನಾದ ಆತ ತನ್ನ ಘನ ವ್ಯಕ್ತಿತ್ವವನ್ನು ಉಳಿದ ಯಃಕಶ್ಚಿತ್‌ ಮಾನವ ಸಮುದಾಯದ ಮೇಲೆ ಹರಿಸದೆ ಬಿಡುತ್ತಾನೆಯೇ? +ಅಷ್ಟೇ ಏಕೆ, ಈ ಕಥೆ ನಿಜವೇ ಆದರೆ, ಆತನೇ ಸೃಷ್ಟಿಯ ತುತ್ತತುದಿಯೆಂದೂ ನಂಬಲಾಗಿದೆ. +ಅಂಥಜೀವಿಯೊಂದು ಕೇವಲ ಅನುಕರಣೆಗಿಂತ ಹೆಚ್ಚಿನದಕ್ಕೆ ಯೋಗ್ಯತೆ ಪಡೆದಿದ್ದರೂ, ಕನಿಷ್ಟ ಅನುಕರಣ ಯೋಗ್ಯವಂತೂ ಹೌದು. +ಆತ ಸ್ವಜಾತಿ ವಿವಾಹ ಪದ್ಧತಿಯ ಪರಿಧಿಯೊಳಗೆ ವಾಸಿಸಿದರೆ ಉಳಿದವರೂ ಕೂಡ ಆತನ ಮಾದರಿಯನ್ನು ಅನುಕರಿಸಬೇಡವೆ? +ದುರ್ಬಲ ಮಾನವ ಕುಲವೇ! +ಇಂಥದೊಂದು ವಿಚಾರ ತುಂಬಿಕೊಂಡ ಮಹತ್ವದ ತತ್ವಜ್ಞಾನಿಯಾಗಲಿ, ಸಾಧಾರಣ ಮನೆಗೆಲಸದವಳಾಗಲಿ ಅದಕ್ಕೆ ಬಲಿಪಶುವಾಗುತ್ತಾರೆ. +ಅದು ಬೇರೆ ರೀತಿ ಇರಲು ಸಾಧ್ಯವೇ ಇಲ್ಲ. +ಅನುಕರಣೆ ಸುಲಭ, ಆವಿಷ್ಯಾರರಷ್ಟ ಜಾತಿಗಳು ರೂಪುಗೊಳ್ಳುವುದರಲ್ಲಿ ಅನುಕರಣೆಯ ಪಾತ್ರವನ್ನು ದೃಷ್ಟಾಂತ ಸಹಿತ ಪ್ರತಿಪಾದಿಸಲು ಇನ್ನೂ ಒಂದು ಮಾರ್ಗವಿದೆ. +ಅದಕ್ಕೆ ಬ್ರಾಹ್ಮಣೇತರ ವರ್ಗಗಳ ಧೋರಣೆಯನ್ನು ಅರ್ಥ ಮಾಡಿಕೊಳ್ಳಬೇಕು. +ಇತಿಹಾಸದ ಬೆಳವಣಿಗೆಯಲ್ಲಿ ಸಂಪ್ರದಾಯಗಳು ಹಿಂದೂ ಬುದ್ಧಿಯಲ್ಲಿ ಗಟ್ಟಿಯಾಗಿ ಕುಳಿತುಬಿಟ್ಟವು. +ಮತ್ತು ಇಂದಿಗೂ ಅವು ಕೆರೆಯ ನೀರಿನ ಮೇಲೆ ಕಳೆಗಿಡ ತೇಲುತ್ತಿರುವಂತೆ ಯಾವ ಸಹಾಯವೂ ಇಲ್ಲದೆ ಅಲ್ಲಿಯೇ ನೇತಾಡುತ್ತಿವೆ. +ಅವಕ್ಕೆ ಯಾವ ಆಸರೆಯೂ ಬೇಕಾಗಿಲ್ಲ, ನಂಬಿಕೆಯೇ ಸಾಕು. +ಆದರೆ ಒಂದು ರೀತಿಯಲ್ಲಿ ಮಾತ್ರ, ಅದೊಂದೇ ರೀತಿ ಮಾತ್ರ, ಹಿಂದೂ ಸಮಾಜದಲ್ಲಿ ಜಾತಿಯ ಪ್ರತಿಷ್ಠೆಯು ಸತಿ,ಒತ್ತಾಯದ ವೈಧವ್ಯ ಮತ್ತು ಹೆಣ್ಣುಮಕ್ಕಳ ಬಾಲ್ಯವಿವಾಹ ಈ ಪದ್ಧತಿಗಳ ಆಚರಣೆಯೊಂದಿಗೆ ನೇರವಾಗಿ ಬದಲಾಗುತ್ತದೆ. +ಆದರೆ ಈ ಸಂಪ್ರದಾಯಗಳ ಆಚರಣೆ ಕೂಡ ನೇರವಾಗಿ ಜಾತಿಯನ್ನು ಬೇರ್ಪಡಿಸುವ ಅಂತರಕ್ಕೆ (ನಾನು ಟರ್ಡೆಯವರ ಅರ್ಥದಲ್ಲಿ ಈ ಶಬ್ದವನ್ನು ಬಳಸುತ್ತಿದ್ದೇನೆ) ಅನುಗುಣವಾಗಿ ವ್ಯತ್ಯಾಸಗೊಳ್ಳುತ್ತದೆ. +ಬ್ರಾಹ್ಮಣರಿಗೆ ಸಮೀಪವಿರುವ ಜಾತಿಗಳು ಮೂರೂ ಸಂಪ್ರದಾಯಗಳನ್ನು ಅನುಕರಿಸಿವೆ ಮತ್ತು ಅವುಗಳ ಕಟ್ಟುನಿಟ್ಟಾದ ಆಚರಣೆಗೆ ಒತ್ತಾಯಿಸಿವೆ. +ಕಡಿಮೆ ಅಂತರದಲ್ಲಿರುವ ಜಾತಿಗಳು ಕಡ್ಡಾಯ ವೈಧವ್ಯ ಮತ್ತು ಬಾಲ್ಯ ವಿವಾಹವನ್ನು ಅನುಕರಿಸಿವೆ. +ಉಳಿದವರು ಇನ್ನೂ ಸ್ವಲ್ಪ ದೂರದಲ್ಲಿರುವವರು,ಬಾಲ್ಯವಿವಾಹವನ್ನಷ್ಟೇ ಅನುಕರಿಸಿದ್ದಾರೆ. +ಅದಕ್ಕೂ ಹೆಚ್ಚು ದೂರದಲ್ಲಿ ಇರುವವರು ಜಾತಿ ನಿಯಮದ ನಂಬಿಕೆಯನ್ನಷ್ಟೇ ಅನುಕರಿಸಿದ್ದಾರೆ. +ಈ ಅಪೂರ್ಣ ಅನುಕರಣೆಗೆ, ಭಾಗಶಃ ಟರ್ಡೆಯವರು ಹೇಳುವಂತೆ +“ಅಂತರ'ವೂ, ಭಾಗಶಃ ಈ ಸಂಪ್ರದಾಯಗಳ ಅನಾಗರಿಕ ಲಕ್ಷಣವೂ ಕಾರಣವಾಗಿವೆಯೆಂದು ನಾನು ಧೈರ್ಯವಾಗಿ ಹೇಳಬಲ್ಲೆ. +ಈ ಸಂಗತಿಯು ಟರ್ಡೆಯವರು ಹೇಳುವ ನಿಯಮಕ್ಕೆ ಸಂಪೂರ್ಣವಾಗಿ ಅನ್ವಯವಾಗುವ ನಿದರ್ಶನವಾಗಿದೆ. +ಭಾರತದಲ್ಲಿ ಜಾತಿ ರಚನೆಯು ಮೇಲುವರ್ಗದವರನ್ನು ಕೆಳವರ್ಗದವರು ಅನುಕರಿಸುವ ಪ್ರಕ್ರಿಯೆಯೇ ಆಗಿದೆಯೆಂಬುದರಲ್ಲಿ ಸಂಶಯ ಉಳಿಯುವುದಿಲ್ಲ. +ಈ ಹಂತದಲ್ಲಿ ನಾನು ಹಿಂದಿನ ತೀರ್ಮಾನವೊಂದನ್ನು ಬೆಂಬಲಿಸುವ ಸಲುವಾಗಿ ಅತ್ತ ಹೊರಳುತ್ತೇನೆ. +ನಿಮಗೆ ನನ್ನ ಹಿಂದಿನ ತೀರ್ಮಾನವು ತೀರ ದುಡುಕಿನದೆಂದೂ ಅಥವಾ ಆಧಾರರಹಿತವೆಂದೂ ತೋರಿರಬಹುದು. +ಇಲ್ಲಿ ಪ್ರಶ್ನಿಸಲಾಗುತ್ತಿರುವ ಮೂರು ಸಂಪ್ರದಾಯಗಳ ಸಹಾಯದಿಂದ ಬ್ರಾಹ್ಮಣ ವರ್ಗವು ಮೊದಲು ಜಾತಿಯ ರಚನೆಯನ್ನು ನಿರ್ಮಿಸಿತೆಂದು ನಾನು ಹೇಳಿದ್ದೇನೆ. +ಆ ತೀರ್ಮಾನಕ್ಕೆ ನನ್ನ ತರ್ಕ ಯಾವುದೆಂದರೆ ಉಳಿದ ವರ್ಗಗಳಲ್ಲಿ ಅವುಗಳ ಅಸ್ತಿತ್ವ ನಿಷ್ಪನ್ನವಾದುದೆಂದು. +ಅಂತೆಯೇ ಬ್ರಾಹ್ಮಣೇತರ ಜಾತಿಗಳಲ್ಲಿ ಈ ಸಂಪ್ರದಾಯಗಳು ಅನುಕರಣೆಗೆ ಪಾತ್ರವಾಗಿರುವ ಬಗ್ಗೆ ನಾನು ಹೇಳಿದ್ದೇನೆಂದರೆ ಅನುಕರಣೆಯು ಒಂದು ವಿಧಾನ ಅಥವಾ ಆದರ್ಶವೆಂದು. +ಅನುಕರಿಸುವವರಿಗೆ ಅದರ ಅರಿವೇ ಇರುವುದಿಲ್ಲವಾದರೂ ಅವು ಅನುಕರಣೆಯ ಹಂತದ ಉಪ ಉತ್ಪನ್ನವಾಗಿ ಅವರಲ್ಲಿ ರೂಢಿಯಲ್ಲಿವೆ. +ಹೀಗೆ ಅವು ಇನ್ನೊಂದರಿಂದ ಉತ್ಪತ್ತಿಯಾದುದು ಎಂದಾದರೆ,ಅವರಿಗೆ ಮಾದರಿಯಾಗಿ ನಿಲ್ಲುವಷ್ಟು ಉನ್ನತವಾದ ಮೂಲ ಜಾತಿಯೊಂದು ಇದ್ದಿರಲೇಬೇಕು. +ಆದರೆ ಅರ್ಚಕರೇ ಆಳುವ ಸಮಾಜದಲ್ಲಿ ದೇವರ ಸೇವಕನ ಹೊರತು ಬೇರೆ ಯಾರು ತಾನೇ ಮಾದರಿಯಾಗಿರಲು ಸಾಧ್ಯವಿದೆ? +ತಮ್ಮ ಕದಗಳನ್ನು ಮುಚ್ಚುವಷ್ಟು ದುರ್ಬಲರಾದವರ ಕಥೆ ಇಲ್ಲಿಗೆ ಮುಗಿಯುತ್ತದೆ. +ತಮಗೆ ಒಳಗೆ ಬಿಡದಂತೆ ಬಾಗಿಲು ಹಾಕಿಕೊಂಡ ಕಾರಣದಿಂದ ಹೊರಗೆ ಉಳಿದೇ ಇತರರೂ ಹೇಗೆ ಕದಮುಚ್ಚಿಕೊಂಡರೆಂಬುದನ್ನು ಈಗ ನಾವು ನೋಡೋಣ. +ಇದನ್ನು ನಾನು ಜಾತಿ ರಚನೆಯ ಒಂದು ಯಾಂತ್ರಿಕ ಪ್ರಕ್ರಿಯೆಯೆನ್ನುತ್ತೇನೆ. +ಅದು ಯಾಂತ್ರಿಕವಾದುದು, ಏಕೆಂದರೆ ಅದು ಅನಿವಾರ್ಯವಾಗಿತ್ತು . +ವಿಷಯವನ್ನು ವಿವರಿಸುವುದರಲ್ಲಿ ಈ ಧಾಟಿಯ ವಿಶ್ಲೇಷಣೆ ಹಾಗೂ ಮಾನಸಿಕ ವಿವರಣೆ ನನಗಿಂತ ಹಿಂದಿನವರ ಹಿಡಿತದಿಂದ ಜಾರಿಹೋಗಿದೆ. +ಅದಕ್ಕೆ ಕಾರಣವೆಂದರೆ ಅವರು ಜಾತಿಯನ್ನು ಜಾತಿ ವ್ಯವಸ್ಥೆಯೊಳಗಿನದ್ದೇ ಆಗಿರುವ ಒಂದು ಘಟಕವೆಂದು ಗ್ರಹಿಸದೆ ಅದು ತನಗೆ ತಾನೆ ಅನನ್ಯವಾಗಿ ಇರುವ ಘಟಕವೆಂದು ಭಾವಿಸಿದ್ದು. +ಈ ಬಗೆಯ ಅಜಾಗರೂಕತೆ ಅಥವಾ ದೃಷ್ಟಿ ದೋಷದ ಪರಿಣಾಮವಾಗಿ ಜಾತಿ ವಿಷಯವನ್ನು ಸಮಂಜಸವಾಗಿ ಅರ್ಥೈಸಲೂ ಮತ್ತು ಆ ಮೂಲಕ ಜಾತಿಯನ್ನು ಸರಿಯಾಗಿ ವಿವರಿಸಲೂ ಅಡ್ಡಿಯಾಗಿ ಪರಿಣಮಿಸಿದೆ. +ಈಗ ನನ್ನದೇ ವಿವರಣೆಯನ್ನು ಕೊಡತೊಡಗುತ್ತೇನೆ. +ಇದರ ಸಂಬಂಧದಲ್ಲಿ ನನ್ನ ಒಂದು ಹೇಳಿಕೆಯನ್ನು ನಿರಂತರವಾಗಿ ನೆನಪಿಡಬೇಕೆಂದು ಆಗ್ರಹಪಡಿಸುತ್ತೇನೆ. +ಅದೆಂದರೆ ಏಕಾಂಗಿ ಜಾತಿ ಎಂಬುದು ಅವಾಸ್ತವ. +ಜಾತಿಗಳು ಯಾವಾಗಲೂ ಹೆಚ್ಚಿನ ಸಂಖ್ಯೆಯಲ್ಲೇ ಬದುಕಿರುತ್ತವೆ. +ಒಂದು ಜಾತಿ ಎಂಬುದು ಇಲ್ಲ, ಯಾವಾಗಲೂ ಜಾತಿಗಳು ಇರುತ್ತವೆ. +ನನ್ನ ಅರ್ಥವೇನೆಂಬುದಕ್ಕೆ ಉದಾಹರಣೆ ನೀಡುತ್ತೇನೆ. +ತಮ್ಮನ್ನೇ ಒಂದು ಜಾತಿಯಾಗಿಸಿಕೊಂಡ ಬ್ರಾಹ್ಮಣರು ತನ್ಮೂಲಕ ಬ್ರಾಹ್ಮಣೇತರ ಜಾತಿಗಳನ್ನು ಸೃಷ್ಟಿ ಮಾಡಿದರು; +ಅಥವಾ ಇದನ್ನು ನನ್ನದೇ ಆದ ವಿಧಾನದಲ್ಲಿ ವ್ಯಕ್ತಪಡಿಸುವುದಾದರೆ, ಬ್ರಾಹ್ಮಣರು ತಾವು ಒಳಗೆ ಸೇರಿ ಬಾಗಿಲು ಮುಚ್ಚಿಕೊಳ್ಳುವುದರ ಮೂಲಕ ಉಳಿದವರನ್ನು ಹೊರಕ್ಕೆ ದಬ್ಬಿದರು. +ಇನ್ನೊಂದು ದೃಷ್ಟಾಂತದೊಂದಿಗೆ ನನ್ನ ಅಭಿಪ್ರಾಯವನ್ನು ಸ್ಪಷ್ಟ ಪಡಿಸುತ್ತೇನೆ. +ಭಾರತ ದೇಶವನ್ನು ಅದರ ವಿವಿಧ ಸಮುದಾಯಗಳೊಂದಿಗೆ ಒಟ್ಟಿಗೆ ನೋಡೋಣ. +ಇಲ್ಲಿನ ಬೇರೆಬೇರೆ ಸಮುದಾಯಗಳು ವಿವಿಧ ಕೋಮುಗಳಿಗೆ ನಿಷ್ಠೆಯನ್ನು ಹೊಂದಿವೆ. +ಅವುಗಳೆಂದರೆ ಹಿಂದೂಗಳು, ಮಹಮ್ಮದೀಯರು,ಯಹೂದ್ಯರು, ಕ್ರಿಶ್ಚಿಯನ್ನರು ಮತ್ತು ಪಾರಸಿಗಳು, ಇವರಲ್ಲಿ ಹಿಂದೂಗಳನ್ನು ಬಿಟ್ಟರೆ ಉಳಿದವರು ಅವರವರೊಳಗೆ ಜಾತಿಯಿಲ್ಲದ ಕೋಮುಗಳು. +ಆದರೆ ಪರಸ್ಪರವಾಗಿ ಮಾತ್ರ ಅವರೆಲ್ಲಾ ಜಾತಿಗಳೇ. +ಮತ್ತೆ, ಮೇಲೆ ಹೆಸರಿಸಿದ ಐವರಲ್ಲಿ ಮೊದಲನೆಯ ನಾಲ್ಕು ಕೋಮುಗಳವರು ತಾವೇ ಬಾಗಿಲು ಹಾಕಿಕೊಂಡಲ್ಲಿ,ಪಾರಸಿಗಳು ನೇರವಾಗಿ ಹೊರಗುಳಿಯುತ್ತಾರೆ. +ಹಾಗೂ ಪರ್ಯಾಯವಾಗಿ ಅವರು ಸಹ ತಮ್ಮೊಳಗೇ ಸೇರುತ್ತಾರೆ. +ಸಾಂಕೇತಿಕವಾಗಿ ಹೇಳುವುದಿದ್ದರೆ, "ಎ' ಗುಂಪು ಸ್ವಜಾತಿ ಮದುವೆಯನ್ನು ಮಾತ್ರ ಮಾಡಿಕೊಳ್ಳಲು ಬಯಸಿದರೆ ಪರಿಸ್ಥಿತಿಯ ಒತ್ತಡದಿಂದಾಗಿ “ಬಿ' ಗುಂಪು ಕೂಡ ಹಾಗೇ ಆಗಬೇಕಾಗುತ್ತದೆ. +ಈಗ ಇದೇ ತರ್ಕವನ್ನು ಹಿಂದೂ ಸಮಾಜಕ್ಕೂ ಅನ್ವಯಿಸಿರಿ ಮತ್ತು ಅದರಲ್ಲಿ ಅಂತರ್ಗತವಾಗಿರುವ ತನಗೆ ತಾನೇ ಇಮ್ಮಡಿಯಾಗುವ ಗುಣದೊಂದಿಗೆ ಜಾತಿ ವಿಭಜಿಸುತ್ತಾ ಹೋಗುವ ಲಕ್ಷಣದ ಕುರಿತ ಇನ್ನೊಂದು ವಿವರಣೆಯೂ ನಿಮ್ಮ ಮುಂದಿರುತ್ತದೆ. +ಜಾತಿಯ ನೈತಿಕ, ಧಾರ್ಮಿಕ, ಸಾಮಾಜಿಕ ಸಂಹಿತೆಯನ್ನು ಗಂಭೀರವಾಗಿ ವಿರೋಧಿಸುವ ಯಾವುದೇ ಹೊಸ ಬದಲಾವಣೆಯನ್ನು ಜಾತಿಯು ಸಹಿಸಲಾರದು; +ಒಂದು ಜಾತಿಯಲ್ಲಿ ತನಗೆ ಮಣಿಯದಿರುವ ಸದಸ್ಯರನ್ನು ಜಾತಿಯಿಂದ ಹೊರಗೆ ಹಾಕುವ ಅಪಾಯವಿದೆ. +ಅಂಥವರಿಗೆ ಬೇರೆ ಜಾತಿಗಳವರು ತಮ್ಮೊಳಗೆ ಸೇರಿಸಿಕೊಳ್ಳುವ ಅಥವಾ ಬರಮಾಡಿಕೊಳ್ಳುವ ಪರ್ಯಾಯ ವ್ಯವಸ್ಥೆಯಿಲ್ಲದೆ ಅವರ ಪಾಡಿಗೆ ಅವರನ್ನು ಬಿಟ್ಟು ಬಿಡಲಾಗುವುದು. +ಜಾತಿಯ ಕಟ್ಟುಪಾಡುಗಳು ಎಷ್ಟು ಕಠೋರವಾಗಿವೆಯೆಂದರೆ ಅಪರಾಧಗಳ ಸ್ವರೂಪದಲ್ಲಿರುವ ವ್ಯತ್ಯಾಸಗಳನ್ನು ಸಹ ಗುರುತಿಸಲಾಗುವುದಿಲ್ಲ. +ಬದಲಾವಣೆ ಎಂಬುದು ಯಾವುದೇ ಸ್ವರೂಪದ್ದಾಗಿರಬಹುದು. +ಆದರೆ ಅವೆಲ್ಲವೂ ಒಂದೇ ಬಗೆಯ ದಂಡಕ್ಕೆ ಗುರಿಯಾಗುತ್ತವೆ. +ಹೊಸ ಬಗೆಯ ಜಾತಿಗೆ ಅಹಿತಕರವಾದ ಆಲೋಚನೆ ಮಾಡುವ, ಗೌರವದಿಂದ ಗುರು (ಪ್ರವಾದಿ) ಎಂದು ಕರೆಯಲ್ಪಡುವಾತನೂ, ಅನೈತಿಕ ಪ್ರೇಮದಲ್ಲಿ ತಪ್ಪಿತಸ್ಥರಾದವರೂ ಒಂದೇ ವಿಧಿಗೆ ಗುರಿಯಾಗುತ್ತಾರೆ. +ಮೊದಲನೆಯಾತ ಹೊಸ ಧಾರ್ಮಿಕ ಪಂಗಡವನ್ನು ಸೃಷ್ಟಿ ಮಾಡಿದರೆ,ಎರಡನೆಯವರು ಮಿಶ್ರಜಾತಿಯೊಂದರ ನಿರ್ಮಾತೃಗಳಾಗುತ್ತಾರೆ. +ಜಾತಿಯ ಸಂಹಿತೆಯನ್ನು ಉಲ್ಲಂಘಿಸುವ ಧೈರ್ಯಶಾಲಿ ತಪ್ಪಿತಸ್ಥನಿಗೆ ಜಾತಿಗಳು ದಯೆ ತೋರುವುದಿಲ್ಲ. +ಅವನಿಗೆ ದಂಡನೆಯೆಂದರೆ ಬಹಿಷ್ಕಾರ ಹಾಕುವುದು. +ಇದರ ಫಲಿತಾಂಶವೆಂದರೆ ಇನ್ನೊಂದು ಹೊಸ ಜಾತಿ. +ಬಹಿಷ್ಕತರಾದವರು ತಾವೇ ಒಂದು ಜಾತಿಯಾಗಲು ಪ್ರೇರೇಪಿಸಿದ್ದು ಹಿಂದೂ ಮನೋಧರ್ಮ ಇಚ್ಛಿಸುವ ವಿಶಿಷ್ಠತೆ ಅಲ್ಲ. +ಅದು ಅದಕ್ಕಿಂತಲೂ ದೂರವೇ ಇದೆ. +ಇದಕ್ಕೆ ತದ್ವಿರುದ್ಧವಾಗಿ, ಬಹಿಷ್ಕರಿಸಲ್ಪಟ್ಟವರು ತಮ್ಮನ್ನು ಒಳಕ್ಕೆ ಬರಮಾಡಿಕೊಳ್ಳುವುದಕ್ಕೆ ಸಿದ್ಧವಿರುವ ಯಾವುದೇ (ಸಾಧ್ಯವಾದರೆ ಮೇಲುಮಟ್ಟದ) ಜಾತಿಯ ವಿನೀತ ಸದಸ್ಯರಾಗಿರಲು ಇಷ್ಟಪಡುತ್ತಾರೆ. +ಆದರೆ ಜಾತಿಗಳು ಬೇಲಿ ಹಾಕಿಕೊಂಡ ಘಟಕಗಳು. +ಆ ಜಾತಿಗಳ ತೀರ ಪ್ರಜ್ಞಾಪೂರ್ವಕವಾದ ಒಳ ಸಂಜೇಬಹಿಷ್ಕತರನ್ನು ಪ್ರತ್ಯೇಕವಾದ ಒಂದು ಜಾತಿಯಾಗುವಂತೆ ಒತ್ತಾಯಿಸುವುದು. +ಈ ಹಠಮಾರಿತನದ ಪರಿಸ್ಥಿತಿಯ ಹಿಂದಿನ ತರ್ಕವು ನಿರ್ದಯವಾದುದು, ಈ ಒತ್ತಡಕ್ಕೆ ಮಣಿದು ತಾವೂ ಕೂಡ ತಮ್ಮ ಸುತ್ತಲೂ ಆವರಣಕಟ್ಟಕೊಂಡಿರುವುದು ಕೆಲವು ದುರದೃಷ್ಟದ ಗುಂಪುಗಳ ಗಮನಕ್ಕೆ ಬರುತ್ತದೆ. +ಯಾಕೆಂದರೆ ಇತರರೂ ತಾವು ಬೇಲಿ ಕಟ್ಟಕೊಳ್ಳುವುದರ ಮೂಲಕ ಇವರನ್ನು ಹೊರಗಟ್ಟಿದ್ದರು. +ಇದರ ಪರಿಣಾಮ ಹೊಸಗುಂಪುಗಳು ಜಾತಿಕಟ್ಟಳೆಗೆ ವಿರುದ್ಧವಾದ ಯಾವುದೇ ಭಾವದಿಂದ ರಚಿತವಾಗಿದ್ದು ಯಾಂತ್ರಿಕನಿಯಮಕೃನುಗುಣವಾಗಿ ಜಾತಿಗಳನ್ನು ಕಂಗೆಡಿಸುವಷ್ಟು ಸಂಖ್ಯೆಯಲ್ಲಿ ವೃದ್ಧಿಸುತ್ತವೆ. +ಭಾರತದ ಜಾತಿರಚನೆಪ್ರಕ್ರಿಯೆಯಲ್ಲಿ ಎರಡನೆಯ ಕಥೆಯನ್ನು ಹೀಗೆ ಹೇಳಲಾಗಿದೆ. +ಈಗ ನನ್ನ ಪ್ರಬಂಧದ ಮುಖ್ಯಾಂಶಗಳನ್ನು ಕೋಢೀಕರಿಸಿ ಹೇಳಬೇಕಿದೆ. +ಜಾತಿಯ ಅಭ್ಯಾಸಿಗಳಿಂದ ನಾನಾ ತಪ್ಪುಗಳಾಗಿವೆಯೆಂಬುದು ನನ್ನ ಅಭಿಪ್ರಾಯ. +ಅವರ ಅನ್ವೇಷಣೆಯನ್ನು ಈ ತಪ್ಪುಗಳು ದಾರಿತಪ್ಪಿಸಿವೆ. +ಜಾತಿಯ ಅಧ್ಯಯನ ನಿರತರಾದ ಯೂರೋಪಿನ ಅಭ್ಯಾಸಿಗಳು ಅನಗತ್ಯವಾಗಿ ಜಾತಿ ವ್ಯವಸ್ಥೆಯಲ್ಲಿ ವರ್ಣದ ಪಾತ್ರವನ್ನು ಒತ್ತು ಕೊಟ್ಟು ಹೇಳಿದ್ದಾರೆ. +ಸ್ಪತಃ ತಾವೇ ವರ್ಣದ ಪೂರ್ವಾಗ್ರಹಗಳಿಗೆ ಒಳಗಾದ ಅವರು ತುಂಬ ಸುಲಭವಾಗಿ ಜಾತಿ ಸಮಸ್ಯೆಗೆ ಅದೇ ಪ್ರಧಾನವಾದ ಅಂಶವೆಂದು ಊಹಿಸಿದರು. +ಆದರೆ ಯಾವುದೂ ಸತ್ಯದಿಂದ ದೂರ ಉಳಿಯಲಾರದು, ಮತ್ತು ಡಾ.ಕೇತ್ಕರ್‌ ಅವರು ಸರಿಯಾಗಿಯೇ ಹೇಳಿದ್ದಾರೆ,“ಆರ್ಯವೆನ್ನುವ ಅಥವಾ ದ್ರಾವಿಡವೆನ್ನುವ ಯಾವುದೇ ಜನಾಂಗಕ್ಕೆ ಸೇರಿದವರಾಗಲೀ, ಎಲ್ಲ ರಾಜರೂ ಆರ್ಯರೇ ಆಗಿದ್ದರು. +ವಿದೇಶಿ ವಿದ್ವಾಂಸರು ಬಂದು ವ್ಯತ್ಯಾಸದ ಗೆರೆಯನ್ನು ಎಳೆಯುವವರೆಗೂ ಒಂದು ಬುಡಕಟ್ಟು ಅಥವಾ ಒಂದು ಕುಟುಂಬ ಜನಾಂಗಿಕವಾಗಿ ಆರ್ಯವೋ ಅಥವಾ ದ್ರಾವಿಡವೋ ಎಂಬ ಪ್ರಶ್ನೆ ಭಾರತದ ಜನರನ್ನು ಎಂದೂ ಕಾಡಲಿಲ್ಲ. +ಚರ್ಮದ ಬಣ್ಣ ಒಂದು ಮುಖ್ಯ ವಿಷಯವೆಂಬುದು ಎಂದೋ ಅಪ್ಪಸ್ತುತವಾಗಿತ್ತು” ಅಲ್ಲದೆ, ಅವರು ಉಲ್ಲೇಖಗಳನ್ನು ಮೂಲ ವಿವರಣೆಗಳೆಂದು ತಪ್ಪಾಗಿ ಗ್ರಹಿಸಿದ್ದಾರೆ. +ಕುಲಕಸುಬಿನ, ಧಾರ್ಮಿಕ ಮೊದಲಾದ ಜಾತಿಗಳಿವೆಯೆಂಬುದು ನಿಜ. +ಆದರೆ ಅದನ್ನು ಹೇಳಿದ ಮಾತ್ರಕ್ಕೆ ಯಾವುದೇ ರೀತಿಯಿಂದ ಅದೇ ಜಾತಿಯ ಉಗಮದ ವಿವರಣೆಯಾಗುವುದಿಲ್ಲ. +ಈ ಕುಲಕಸುಬಿನ ಗುಂಪುಗಳು ಯಾಕೆ ಜಾತಿಗಳೆಂಬುದನ್ನು ನಾವಿನ್ನೂ ಕಂಡುಕೊಳ್ಳಬೇಕಾಗಿದೆ. +ಆದರೆ ಈ ಪ್ರಶ್ನೆಯನ್ನು ಯಾವಾಗಲೂ ಕೇಳಿಯೇ ಇಲ್ಲ. +ಕಡೆಯದಾಗಿ, ಅವರು ಜಾತಿಯನ್ನು, ಅದನ್ನು ಒಂದು ಉಸಿರು ಸೃಷ್ಟಿಮಾಡಿತೋ ಎಂಬಂತೆ, ತುಂಬ ಲಘುವಾಗಿ ಪರಿಗಣಿಸಿದ್ದಾರೆ. +ಇದಕ್ಕೆ ತದ್ವಿರುದ್ಧವಾಗಿ, ಆಗಲೇ ನಾನು ವಿವರಿಸಿರುವಂತೆ, ಜಾತಿಯ ಸಮಸ್ಯೆಯು ಅದು ಒಳಗೊಂಡಿರುವ ಭಯಾನಕವಾದ ಸಂಕಷ್ಟಗಳ ಕಾರಣದಿಂದ ಸಹಿಸಲಸಾಧ್ಯವಾದುದಾಗಿದೆ. +ನಂಬಿಕೆಯ ಮೇಲೆ ಜಾತಿ ನಿಂತಿರುವುದೆಂಬುದು ನಿಜ. +ಆದರೆ ನಂಬಿಕೆಯು ಒಂದು ಸಾಮಾಜಿಕ ಏರ್ಪಾಡಿನ ಬುನಾದಿಯಾಗುವುದಕ್ಕಿಂತಲೂ ಮುಂಚೆ ಸ್ವತಃ ಆ ಏರ್ಪಾಡೇ ಶಾಶ್ವತವಾಗಿರುವ ಮತ್ತು ಬಲಯುತವಾಗಿರುವ ಇಚ್ಛೆಯನ್ನು ಹೊಂದಿರುತ್ತದೆ. +ಜಾತಿ ಸಮಸ್ಯೆಯನ್ನುಕುರಿತ ನನ್ನ ಅಧ್ಯಯನದಲ್ಲಿ ನಾಲ್ಕು ಅಂಶಗಳಿವೆ : (೧) ಹಿಂದೂ ಜನಸಮುದಾಯ ಒಂದು ಸಂಕೀರ್ಣರಚನೆಯಾಗಿದ್ದರೂ ಅದರಲ್ಲೊಂದು ಆಳವಾದ ಸಾಂಸ್ಕೃತಿಕ ಏಕತೆಯಿದೆ; +(೨) ವ್ಯಾಪಕವಾದ ಸಾಂಸ್ಕೃತಿಕಘಟಕದ ಪ್ರತಿಯೊಂದು ಭಾಗವನ್ನೂ ಜಾತಿಯು ಹೆಣೆದು ಕಟ್ಟದೆ; +(೩) ಪ್ರಾರಂಭದಲ್ಲಿದ್ದುದು ಒಂದೇಜಾತಿ, ಮತ್ತು (೪) ಅನುಕರಣೆಯಿಂದಲೂ, ಬಹಿಷ್ಕಾರದ ಕಾರಣದಿಂದಲೂ ವರ್ಗಗಳೇ ಜಾತಿಗಳಾಗಿ ಪರಿವರ್ತನೆಗೊಂಡಿವೆ. +ಇಂದು ಭಾರತದಲ್ಲಿ ಜಾತಿ ಸಮಸ್ಯೆಗೆ ವಿಚಿತ್ರವಾದ ಹಿತಾಸಕ್ತಿಗಳು ತಳಕು ಹಾಕಿಕೊಂಡಿವೆ; +ಈ ಅಸಹಜ ಸಾಮಾಜಿಕ ಏರ್ಪಾಡನ್ನು ತೊಡೆದು ಹಾಕಲು ನಿರಂತರವಾದ ಪ್ರಯತ್ನಗಳನ್ನೂ ಮಾಡಲಾಗಿದೆ. +ಆದರೆ ಸುಧಾರಣೆಯ ಅಂಥ ಪ್ರಯತ್ನಗಳು ಸಹ ಜಾತಿಯ ಮೂಲವು ಒಂದು ಪರಮೋಚ್ಚ ಅಧಿಕಾರದ ಪ್ರಜ್ಞಾಪೂರ್ವಕ ಆದೇಶದಿಂದಾದುದೇ ಅಥವಾ ಮಾನವ ಸಮಾಜದ ಜೀವನದಲ್ಲಿ ವಿಚಿತ್ರವಾದ ಸನ್ನಿವೇಶಗಳಲ್ಲಾದ ಅಪ್ರಜ್ಞಾಪೂರ್ವಕವಾದ ಬೆಳವಣಿಗೆಯೆ ಎಂಬ ಜಾತಿಯ ಉಗಮದ ಬಗೆಗಿನ ಗಂಭೀರ ಭಿನ್ನಾಭಿಪ್ರಾಯವನ್ನು ಹುಟ್ಟುಹಾಕಿವೆ. +ಈ ಎರಡನೆಯ ಅಭಿಪ್ರಾಯವನ್ನು ಹೊಂದಿರುವವರು ಈ ಪ್ರಬಂಧದಲ್ಲಿ ತಳೆದಿರುವ ದೃಷ್ಟಿಕೋನದಿಂದ ಆಲೋಚನೆಗೆ ಸ್ವಲ್ಪ ಗ್ರಾಸವನ್ನು ಪಡೆಯುವರೆಂದು ನಾನು ಭಾವಿಸುತ್ತೇನೆ. +ಪ್ರಾಯೋಗಿಕ ಮಹತ್ವದ ಹೊರತಾಗಿಯೂ ಜಾತಿ ಎಂಬ ವಿಷಯವು ಪೂರ್ಣ ತನ್ಮ್ನಯಗೊಳಿಸುವ ಸಮಸ್ಯೆಯಾಗಿದ್ದು ಅದರ ತಾತ್ವಿಕ ತಳಹದಿಯ ವಿಚಾರವಾಗಿ ನನ್ನಲ್ಲಿ ಮೂಡಿದ ಆಸಕ್ತಿಯು ನಿಮ್ಮ ಮುಂದೆ ಕೆಲವು ತೀರ್ಮಾನಗಳನ್ನು ಮಂಡಿಸಲು ಪ್ರಚೋದಿಸಿದೆ. +ಅವು ಸುಭದ್ರವೂ, ಚೆನ್ನಾಗಿ ಬೆಂಬಲಿಸಲಾದ ತಳಹದಿಯ ಮೇಲೆ ನಿಂತಿರುವಂತಹುದೂ ಆಗಿವೆ. +ಹಾಗಿದ್ದೂ, ಅವು ಒಂದು ವಿಷಯದ ಮೇಲಿನ ಸಂವಾದದ ಚಾಲನೆಗೆ ಬೇಕಾದ ಕೊಡುಗೆಗಿಂತ ಹೆಚ್ಚಿನದೆಂದೂ ಅಥವಾ ಅವೇ ಅಂತಿಮವಾದದ್ದೆಂದೂ ತಿಳಿಯುವ ಧಾರ್ಷ್ವ್ವ ನನಗಿಲ್ಲ. +ವಾಹನವನ್ನು ತಪ್ಪು ಸಾಲಿನಲ್ಲಿ ನಿಲ್ಲಿಸಿರುವಂತೆಯೂ ನನಗೆ ತೋರುತ್ತದೆ. +ಆದರೆ ಈ ಪ್ರಬಂಧದ ಪ್ರಧಾನ ಆಶಯವೆಂದರೆ ಸಂಶೋಧನೆಯ ಉಪಯುಕ್ತ ಸತ್ಯದ ಬಳಿಗೆ ಕರೆದೊಯ್ಯುವ ಸರಿಯಾದ ದಾರಿಯೆಂದು ನಾನು ಯಾವುದನ್ನು ತಿಳಿದಿದ್ದೇನೆಯೊ ಅದನ್ನು ಸೂಚಿಸುವುದು. +ನಾವು ವಿಷಯವನ್ನು ಪೂರ್ವಾಗ್ರಹದಿಂದ ಸಮೀಪಿಸದಂತೆ ಎಚ್ಚರ ವಹಿಸಬೇಕು. +ವಿಜ್ಞಾನದ ಜಗತ್ತಿನಿಂದ ಭಾವುಕತೆಯನ್ನು ಹೊರಹಾಕಬೇಕು. +ವಸ್ತು ನಿಷ್ಠವಾದ ದೃಷ್ಟಿಕೋನದಿಂದ ಸಂಗತಿಗಳನ್ನು ತೂಗಿ ನೋಡಬೇಕು. +ನನ್ನ ಈ ಸಿದ್ಧಾಂತವನ್ನು ಗುಣಾತ್ಮಕವಾಗಿ ನಾಶಪಡಿಸಿದಾಗಲೂ, ಒಂದು ವಿಷಯದಲ್ಲಿರುವ ವೈಚಾರಿಕ ಭಿನ್ನಾಭಿಪ್ರಾಯದಂತೆ, ನಾನು ಅಷ್ಟೇ ಸಂತೋಷ ಪಡುತ್ತೇನೆ; +ಇದು ಅನೇಕ ವಿದ್ವತ್ಪೂರ್ಣ ವ್ಯಾಖ್ಯಾನಗಳ ಹೊರತಾಗಿಯೂ ವಿವಾದಾಸ್ಪದವಾಗಿ ನಿರಂತರ ಉಳಿಯಲೂ ಬಹುದು. +ಕಡೆಯದಾಗಿ ಒಂದು ಮಾತು. +ಜಾತಿಯ ಒಂದು ಸಿದ್ಧಾಂತವನ್ನು ಪ್ರತಿಪಾದಿಸಲು ನಾನು ಮಹತ್ವಾಕಾಂಕ್ಷಿಯಾಗಿದ್ದರೂ ನನ್ನ ಸಿದ್ಧಾಂತವು ಅತಾರ್ಕಿಕವಾದುದೆಂದು ತೋರಿಸಿಕೊಟ್ಟರೆ ಅದನ್ನು ತೊರೆದುಬಿಡಲು ನಾನು ಸಿದ್ದನಿದ್ದೇನೆ. +ಮಹಾತ್ಮಾ ಗಾಂಧಿಯವರಿಗೆ ಪ್ರತ್ಯುತ್ತರ ಸಹಿತವಾಗಿ ಬಿ.ಆರ್‌.ಅಂಬೇಡ್ಕರ್‌ಎಂ .ಎ.ಪಿಎಚ್‌.ಡಿ.(ಲಂಡನ್‌), ಎಲ್‌.ಕೊಲಂಬಿಯ, ಡಿ.ಎಸ್‌ಸಿ ಡಿ.ಲಿಟ್‌.(ಉಸ್ಮಾನಿಯಾ), ಬಾರ್‌-ಅಟ್‌-ಲಾ. +“ಸತ್ಯವನ್ನು ಸತ್ಯವೆಂದೂ, ಅಸತ್ಯವನ್ನು ಅಸತ್ಯವೆಂದೂ ಅರಿತುಕೋ? +-ಬುದ್ದ ವಿಚಾರ ಮಾಡಲೊಲ್ಲದವನು ಮತಾಂಧವಿಚಾರ ಮಾಡಲರಿಯದವನು ಮೂರ್ಯವಿಚಾರ ಮಾಡಲಂಜುವವನು ಗುಲಾಮ-ಎಚ್‌.ಡ್ರಮಂಡ್ +ಲಾಹೋರದ ಜಾತ್‌-ಪತ್‌-ತೋಡಕ್‌ ಮಂಡಲಕ್ಕಾಗಿ ನಾನು ಸಿದ್ಧಪಡಿಸಿದ್ದ ಭಾಷಣಕ್ಕೆ ಹಿಂದೂ ಜನ ಸಮುದಾಯದಿಂದ ವಿಸ್ಮಯಕರವಾದ ಆತ್ಮೀಯ ಸ್ವಾಗತ ದೊರೆಯಿತು. +ಅದರ ಇಂಗ್ಲಿಷ್‌ ಆವೃತ್ತಿಯ ಸಾವಿರದೈನೂರು ಪ್ರತಿಗಳು ಪ್ರಕಟವಾದ ಎರಡು ತಿಂಗಳಲ್ಲಿಯೇ ಮಾರಾಟವಾಗಿ ಹೋದವು. +ಗುಜರಾತಿ ಹಾಗೂ ತಮಿಳು ಭಾಷಾಂತರಗಳು ಹೊರಬಂದಿವೆ. +ಮರಾಠಿ, ಹಿಂದಿ, ಪಂಜಾಬಿ ಮತ್ತು ಮಲೆಯಾಳಂ ಭಾಷಾಂತರಗಳು ಸಿದ್ಧವಾಗುತ್ತಿವೆ. +ಇಂಗ್ಲಿಷ್‌ ಆವೃತ್ತಿಯ ಬೇಡಿಕೆ ಇನ್ನೂ ತಗ್ಗದೆ ಮುಂದುವರಿಯುತ್ತಿದೆ. +ಈ ಬೇಡಿಕೆಯ ಪೂರೈಕೆಗಾಗಿ ಎರಡನೇ ಆವೃತ್ತಿಯನ್ನು ಪ್ರಕಟಿಸುವುದು ಅಗತ್ಯವಾಯಿತು. +ಇದನ್ನೊಂದು ನೇರವಾದ ನಿರೂಪಣಾ ಕ್ರಮದಲ್ಲಿ ಅಳವಡಿಸಬೇಕೆಂದು ಕೆಲವರು ಹೇಳಿದರು. +ಇತಿಹಾಸ ಹಾಗೂ ಅಭಿವ್ಯಕ್ತಿಗಳ ಪರಿಣಾಮದ ದೃಷ್ಟಿಯಿಂದ ಇದನ್ನು ಮೂಲದಲ್ಲಿ ಇದ್ದ ಭಾಷಣ ರೂಪದಲ್ಲಿಯೇಉಳಿಸಿಕೊಂಡಿದ್ದೇನೆ. +ಈ ಆವೃತ್ತಿಯಲ್ಲಿ ಎರಡು ಪರಿಶಿಷ್ಟಗಳನ್ನು ಸೇರಿಸಿದ್ದೇನೆ. +ಪರಿಶಿಷ್ಟ 1ರಲ್ಲಿ ನನ್ನ ಭಾಷಣದ ವಿಮರ್ಶೆಯಾಗಿ ಹರಿಜನದಲ್ಲಿ ಬಂದ ಶ್ರೀ ಗಾಂಧಿಯವರ ಎರಡು ಲೇಖನಗಳು ಹಾಗೂ ಜಾತ್‌-ಪತ್‌-ತೋಡಕ್‌ ಮಂಡಲದ ಸದಸ್ಯರಾದ ಶ್ರೀ ಸಂತರಾಮರಿಗೆ ಅವರು ಬರೆದ ಪತ್ರಗಳಿವೆ. +ಪರಿಶಿಷ್ಟ 1ರಲ್ಲಿ ಕೊಡಲಾದ ಶ್ರೀ ಗಾಂಧಿಯವರು ಬರೆದಿರುವ ಲೇಖನಕ್ಕೆ ಉತ್ತರವಾಗಿ ನಾನು ಬರೆದಿರುವ ಪ್ರತ್ಯುತ್ತರ ಪರಿಶಿಷ್ಟ 11ರಲ್ಲಿದೆ. +ಶ್ರೀ ಗಾಂಧಿಯವರರೊಬ್ಬರೇ ಅಲ್ಲದೆ ಇನ್ನೂ ಹಲವರು ನನ್ನ ಅಭಿಪ್ರಾಯವನ್ನು ಕಟುವಾಗಿ ಟೀಕಿಸಿದ್ದಾರೆ. +ಇಂತಹ ಪ್ರತಿಕೂಲದ ವಿಮರ್ಶೆಗಳನ್ನು ಗಮನಿಸಿದಾಗ ಶ್ರೀ ಗಾಂಧಿಯವರಿಗೆ ಮಾತ್ರ ಪ್ರತ್ಯುತ್ತರಿಸುವುದು ಉಚಿತ ಎಂದು ನಿರ್ಧರಿಸಿದ್ದೇನೆ. +ಉತ್ತರವನ್ನು ಪಡೆಯಲೇಬೇಕೆಂಬಷ್ಟು ಘನವಾದ ಮಾತನ್ನು ಅವರು ಆಡಿದ್ದಾರೆ ಎಂಬುದು ಇದಕ್ಕೆ ಕಾರಣವಲ್ಲ. +ಆದರೆ ಅನೇಕ ಹಿಂದೂಗಳಿಗೆ ಆತನ ಮಾತು ದೇವವಾಣಿಯೆನಿಸಿದೆ. +ಆತ ಹೇಳಿಬಿಟ್ಟರೆ ಆ ಮಾತು ಅಲ್ಲಿಗೆ ಮುಗಿದುಹೋಯಿತು. + ಮುಂದೆ ಯಾವ ನಾಯಿ ಕೂಡ ಬೊಗಳಬೇಕಾಗಿಲ್ಲ ಎಂದು ಆ ಜನ ಭಾವಿಸುತ್ತಾರೆ. +ಆದರೆ ಧರ್ಮಾಧಿಕಾರಿಯನ್ನು ಎದುರಿಸಿ ಆತನೂ ಕೂಡ ದೋಷರಹಿತನಲ್ಲ ಎಂದು ವಾದಿಸಿ, ಸಾಧಿಸುವ ಬಂಡಾಯಗಾರರಿಗೆ ಜಗತ್ತು ತುಂಬ ಖಣಿಯಾಗಿದೆ. +ಪ್ರತಿಯೊಂದು ಪ್ರಗತಿಶೀಲ ಸಮಾಜ ತನ್ನ ಕ್ರಾಂತಿಕಾರರಿಗೆ ಕೊಡಬೇಕಾದ ಗೌರವದ ಬಗ್ಗೆ ನಾನು ಚಿಂತಿಸುತ್ತಿಲ್ಲ. +ಆದರೆ ತಾವು ಭಾರತದಲ್ಲಿನ ರೋಗಿಗಳೆಂದೂ, ತಮ್ಮ ವ್ಯಾಧಿ ಇತರ ಭಾರತೀಯರ ಆರೋಗ್ಯ ಮತ್ತು ನೆಮ್ಮದಿಗೆ ಅಪಾಯ ಉಂಟುಮಾಡುತ್ತಿದೆಯೆಂದೂ ಹಿಂದೂಗಳು ಅರಿತುಕೊಂಡರೆ ಸಾಕು; +ಅದು ನನಗೆ ತೃಪ್ತಿ . +ಈ ಪ್ರಬಂಧದ ಎರಡನೆಯ ಆವೃತ್ತಿ ೧೯೩೭ರಲ್ಲಿ ಪ್ರಕಟಗೊಂಡಿತು, ಮತ್ತು ಕೆಲವೇ ಸಮಯದಲ್ಲಿ ಮುಗಿದುಹೋಯಿತು. +ಹೊಸ ಆವೃತ್ತಿಯ ಬಗ್ಗೆ ಬೇಡಿಕೆಯಿತ್ತು ಇಂಡಿಯನ್‌ ಲ್ವಂಟಕ್ಟರಿ ಜರ್ನಲ್‌ ನಲ್ಲಿ ೧೯೧೭ರಲ್ಲಿ ಪ್ರಕಟಗೊಂಡ ' ಭಾರತದಲ್ಲಿ ಜಾತಿಗಳು, ಅವುಗಳ ಉಗಮ ಮತ್ತು ಕಾರ್ಯವಿಧಾನ '- ಎನ್ನುವ ಪ್ರಬಂಧದ ಜೊತೆ ಇದನ್ನು ಸಂಯೋಜಿಸಿ ಹೊರತರುವ ಉದ್ದೇಶ ನನ್ನದಿತ್ತು . +ಆದರೆ ಸಮಯಾವಕಾಶದ ಕೊರತೆಯಿಂದಲೂ,ಪ್ರಬಂಧಕ್ಕೆ ಜನರಿಂದ ಒತ್ತಾಯಪೂರ್ವಕ ಬೇಡಿಕೆಯಿದ್ದುದರಿಂದಲೂ, ನಾನು ಇದನ್ನು ಎರಡನೆಯ ಆವೃತ್ತಿಯ ಪುನರ್ಮುದ್ರಣವಾಗಿಸುವುದಕ್ಕಪ್ಟೇ ಸಂತುಷ್ಟನಾಗಿದ್ದೇನೆ. +ಈ ಪ್ರಬಂಧ ಜನಪ್ರಿಯವಾಗಿರುವುದಕ್ಕೆ ಸಂತಸವಾಗುತ್ತಿದೆ. + ಹಾಗೂ ಅದು ತನ್ನ ಉದ್ದೇಶಿತ ಗುರಿಸಾಕಾರಗೊಳ್ಳಲು ನೆರವಾಗಬಹುದೆಂಬ ನಂಬಿಕೆ ನನ್ನದು. +೧೯೩೫ ಡಿಸೆಂಬರ್‌ ೧೨ ರಂದು ಜಾತ್‌-ಪತ್‌-ತೋಡಕ್‌ ಮಂಡಲದ ಕಾರ್ಯದರ್ಶಿಗಳಾಗಿದ್ದ ಶ್ರೀ ಸಂತರಾಮರಿಂದ ಈ ಕೆಳಗಿನಂತೆ ಕಾಗದ ಬಂದಿತು : +ಪ್ರಿಯ ಡಾಕ್ಟರ್‌ ಸಾಹೇಬ್‌,ನಿಮ್ಮ ಡಿಸೆಂಬರ್‌ ೫ನೆಯ ದಿನಾಂಕದ ಕಾಗದಕ್ಕೆ ತುಂಬ ಕೃತಜ್ಞನಾಗಿದ್ದೇನೆ. +ನಿಮ್ಮ ಅನುಮತಿಯನ್ನು ಕೇಳದೆ ಅದನ್ನು ಪತ್ರಿಕೆಗಳಿಗೆ ಬಿಡುಗಡೆ ಮಾಡಿಬಿಟ್ಟಿದ್ದೇನೆ. +ಅದಕ್ಕಾಗಿ ನನ್ನನ್ನು ನೀವು ಕ್ಷಮಿಸಬೇಕು. +ಹಾಗೆ ಪ್ರಕಟಣೆಗೆ ಕೊಡುವುದರಿಂದ ಅಪಾಯವೇನೂ ಇಲ್ಲವೆಂದು ನನಗೆ ತೋರಿತು. +ನೀವೊಬ್ಬ ಮಹಾನ್‌ಚಿಂತಕರು, ಜಾತಿಯ ಸಮಸ್ಯೆಯನ್ನು ನಿಮ್ಮಷ್ಟು ಆಳವಾಗಿ ಅಭ್ಯಾಸ ಮಾಡಿದವರು ಇನ್ನೊಬ್ಬರಿಲ್ಲವೆಂದು ನನ್ನ ನಿಶ್ಚಿತವಾದ ಅಭಿಪ್ರಾಯವಾಗಿದೆ. +ನಿಮ್ಮ ವಿಚಾರಗಳಿಂದ ನಾನು ಹಾಗೂ ನಮ್ಮ ಮಂಡಲ ತುಂಬ ಲಾಭ ಪಡೆದಿದ್ದೇವೆ. +ಅನೇಕ ಸಲ ಕ್ರಾಂತಿಯಲ್ಲಿ ಅದನ್ನು ವಿವರಿಸಿ ಬೋಧಿಸಿದ್ದೇನೆ. + ಮತ್ತು ಅನೇಕ ಸಮ್ಮೇಳನಗಳಲ್ಲಿ ಅದರ ಕುರಿತು ಭಾಷಣ ಮಾಡಿದ್ದೇನೆ. +ಈಗ ನಿಮ್ಮ ಹೊಸ ಸೂತ್ರದ ಅರ್ಥವನ್ನು ತಿಳಿದುಕೊಳ್ಳಲು ನಾನು ತುಂಬ ಕಾತರದಿಂದಿದ್ದೇನೆ. +“ಜಾತಿಗೆ ಆಧಾರವಾದ ಧಾರ್ಮಿಕ ಕಲ್ಪನೆಗಳನ್ನು ನಿರ್ಮೂಲಗೊಳಿಸಿದಾಗ ಮಾತ್ರ ಜಾತಿಯನ್ನು ಮುರಿದುಹಾಕಲು ಸಾಧ್ಯ”ಎಂದು ನೀವು ಹೇಳಿದ್ದೀರಿ. +ನಿಮಗೆ ಸಾಧ್ಯವಾದಷ್ಟು ಶೀಘ್ರವಾಗಿ ಈ ಸೂತ್ರವನ್ನು ವಿಸ್ತಾರವಾಗಿ ವಿವರಿಸಿ. +ಹಾಗೆ ನೀವು ಮಾಡಿದರೆ ಅದನ್ನು ಎತ್ತಿಕೊಂಡು ಸಭಾ ವೇದಿಕೆಗಳಿಂದಲೂ, ಪತ್ರಿಕೆಗಳಲ್ಲಿಯೂ ಅದರ ಮಹತ್ವವನ್ನು ಬಿಂಬಿಸಲು ನಮಗೆ ಅನುಕೂಲವಾಗುವುದು. +ಸದ್ಯಕ್ಕೆ ನನಗೆ ಅದು ಪೂರ್ತಿಯಾಗಿ ಮನನವಾಗಿಲ್ಲ. +ನಮ್ಮ ವಾರ್ಷಿಕ ಸಮ್ಮೇಳನಕ್ಕೆ ನೀವೇ ಅಧ್ಯಕ್ಷರಾಗಬೇಕೆಂದು ನಮ್ಮ ಕಾರ್ಯಕಾರಿ ಸಮಿತಿ ಒತ್ತಾಯ ಮಾಡುತ್ತಿದೆ. +ನಿಮ್ಮ ಅನುಕೂಲತೆಗೆ ತಕ್ಕಂತೆ ಕಾರ್ಯಕ್ರಮದ ದಿನಾಂಕಗಳನ್ನು ನಾವು ಬದಲಾಯಿಸಬಲ್ಲೆವು. +ಪಂಜಾಬದ ಸ್ವತಂತ್ರ ಹರಿಜನರು ನಿಮ್ಮನ್ನು ಕಂಡು ಅವರ ಯೋಜನೆಗಳ ವಿಷಯದಲ್ಲಿ ನಿಮ್ಮೊಡನೆ ಚರ್ಚಿಸಲು ತುಂಬ ಕಾತರರಾಗಿದ್ದಾರೆ. +ಆದುದರಿಂದ ನೀವು ನಮ್ಮ ಕೋರಿಕೆಯನ್ನು ಪರಿಗಣಿಸಿ ಸಮ್ಮೇಳನಾಧ್ಯಕ್ಷರಾಗಿ ಲಾಹೋರಕ್ಕೆ ಬಂದರೆ ಒಂದೇ ಏಟಿಗೆ ಎರಡು ಕಾರ್ಯಗಳೂ ಕೈಗೂಡುವವು. +ಬೇರೆ ಬೇರೆ ಅಭಿಪ್ರಾಯಗಳುಳ್ಳ ಹರಿಜನ ನಾಯಕರನ್ನು ನಾವು ಆಮಂತ್ರಿಸುವೆವು. +ನಿಮ್ಮ ವಿಚಾರಗಳನ್ನುಅವರಿಗೆ ವಿವರಿಸುವ ಸಂದರ್ಭ ನಿಮಗೆ ಒದಗುವುದು. +ನಮ್ಮ ಸಹಾಯಕ ಕಾರ್ಯದರ್ಶಿ ಶ್ರೀ ಇಂದ್ರಸಿಂಗ್‌ ಅವರು ಮಂಡಲದ ಪರವಾಗಿ ಕ್ರಿಸ್‌ಮಸ್‌ ಸಮಯದಲ್ಲಿ ನಿಮ್ಮನ್ನು ಮುಂಬಯಿಯಲ್ಲೇ ಕಂಡು, ನಿಮಗೆ ವಸ್ತುಸ್ಥಿತಿಯನ್ನೆಲ್ಲ ವಿವರಿಸಿ ನಮ್ಮ ಬಿನ್ನಹವನ್ನು ನೀವು ಒಪ್ಪಿಕೊಳ್ಳಲು ಮನವೊಲಿಸುವುದಕ್ಕಾಗಿ ಬರುವರು. +ಈ ಜಾತ್‌-ಪತ್‌-ತೋಡಕ್‌ ಮಂಡಲವೆಂಬುದು ಸವರ್ಣ ಹಿಂದೂ ಸಮಾಜ ಸುಧಾರಕರ ಸಂಸ್ಥೆಯೆಂದೂ, ಹಿಂದೂಗಳಲ್ಲಿ ಜಾತಿಪದ್ಧತಿಯನ್ನು ನಿರ್ಮೂಲಗೊಳಿಸುವುದು ಅದರ ಏಕಮೇವ ಗುರಿಯೆಂದೂ ನನಗೆ ತಿಳಿಸಲಾಗಿತ್ತು . +ಸವರ್ಣೀಯ ಹಿಂದೂಗಳು ನಡೆಸುವ ಯಾವ ಚಳುವಳಿಯಲ್ಲಿಯೇ ಆಗಲಿ ನಾನು ಪಾಲುಗೊಳ್ಳಲು ಬಯಸುವುದಿಲ್ಲ. +ಇದು ನನ್ನದೊಂದು ನಿಯಮ ಎನ್ನಬಹುದು. +ಸಮಾಜ ಸುಧಾರಣೆಯ ವಿಷಯವಾಗಿ ಅವರ ಹಾಗೂ ನನ್ನ ದೃಷ್ಟಿಕೋನಗಳು ಸಂಪೂರ್ಣ ಭಿನ್ನವಾಗಿರುವುದರಿಂದಅವರ ಜೊತೆಗೆ ಹೆಜ್ಜೆಯಿಡುವುದು ನನಗೆ ಸಾಧ್ಯವಿಲ್ಲದಾಗಿದೆ. +ನಿಜಕ್ಕೂ, ಅಭಿಪ್ರಾಯ ಭೇದಗಳ ಮೂಲಕ ಅವರ ಸಹವಾಸ ಕೂಡ ನನಗೆ ಹಿತಕರವೆನಿಸುವುದಿಲ್ಲ. +ಈ ಕಾರಣದಿಂದ ಮಂಡಲದವರು ಮೊದಲ ಸಲ ನನ್ನ ಬಳಿಗೆ ಬಂದಾಗ ನಾನು ಅಧ್ಯಕ್ಷನಾಗಲು ಒಲ್ಲೆನೆಂದು ತಿಳಿಸಿಬಿಟ್ಟೆ ಆದರೆ ಮಂಡಲದವರು ಬಿಡಲಿಲ್ಲ; +ತಮ್ಮ ಸದಸ್ಯರಲ್ಹೊಬ್ಬರನ್ನು ಮುಂಬಯಿಗೆ ಕಳುಹಿಸಿ, ತಮ್ಮ ನಿವೇದನೆಯನ್ನು ಪರಿಗಣಿಸುವಂತೆ ನನ್ನನ್ನು ಒತ್ತಾಯಿಸಿದರು. +ಕೊನೆಗೆ ನಾನು ಒಪ್ಪಿಕೊಂಡೆ. +ಮಂಡಲದ ಪ್ರಮುಖ ಕಾರ್ಯಸ್ಥಳವಾದ ಲಾಹೋರದಲ್ಲಿ ವಾರ್ಷಿಕ ಸಮ್ಮೇಳನ ಈಸ್ಟರ್‌ ಹಬ್ಬದಂದು ನಡೆಯುವುದಿತ್ತು . +ಆದರೆ ಅನಂತರ ೧೯೩೬ರ ಮೇ ತಿಂಗಳ ಮಧ್ಯಕ್ಕೆ ಅದನ್ನು ಮುಂದೂಡಲಾಯಿತು. +ಮಂಡಲದ ಸ್ಥಾಗತ ಸಮಿತಿ ಈಗ ಸಮ್ಮೇಳನವನ್ನು ನಡೆಸದಿರಲು ನಿರ್ಧರಿಸಿದೆ. +ನನ್ನ ಅಧ್ಯಕ್ಷೀಯ ಭಾಷಣ ಮುದ್ರಣವಾದ ಎಷ್ಟೋ ದಿನಗಳ ನಂತರ ಸಮ್ಮೇಳನ ರದ್ದುಪಡಿಸುವಿಕೆಯ ನೋಟೀಸು ಬಂದಿತು. +ಭಾಷಣದ ಪ್ರತಿಗಳು ಈಗ ನನ್ನಲ್ಲಿ ಉಳಿದುಕೊಂಡಿವೆ. +ಅಧ್ಯಕ್ಷ ಪೀಠದಿಂದ ಭಾಷಣ ಮಾಡುವ ಸಂದರ್ಭ ನನಗೆ ತಪ್ಪಿ ಹೋದುದರಿಂದ ಜಾತಿಪದ್ಧತಿಯ ಸಮಸ್ಯೆಗಳನ್ನುಕುರಿತ ನನ್ನ ಅಭಿಪ್ರಾಯಗಳನ್ನು ತಿಳಿದುಕೊಳ್ಳುವ ಅವಕಾಶ ಸಾರ್ವಜನಿಕರಿಗೆ ದೊರೆಯಲಿಲ್ಲ. +ಜನಸಾಮಾನ್ಯರಿಗೆನನ್ನ ಅಭಿಪ್ರಾಯಗಳನ್ನು ತಿಳಿಸಲೆಂದೂ, ನನ್ನಲ್ಲಿ ಉಳಿದುಕೊಂಡ ಮುದ್ರಿತ ಪ್ರತಿಗಳನ್ನು ಹಂಚಿಬಿಡಬೇಕೆಂದೂ ನಾನು ಅವುಗಳನ್ನು ಈಗ ಮಾರುಕಟ್ಟೆಗೆ ಬಿಟ್ಟಿದ್ದೇನೆ. +ಲಗತ್ತಿಸಿರುವ ಪುಟಗಳು ನನ್ನ ಭಾಷಣದ ಪೂರ್ಣಪಾಠವನ್ನು ಒಳಗೊಂಡಿವೆ. +ಸಮ್ಮೇಳನದ ಅಧ್ಯಕ್ಷತೆ ನನಗೆ ದಕ್ಕದಂತೆ ಆದುದೇಕೆಂದು ತಿಳಿಯಲು ಸಾರ್ವಜನಿಕರು ಕುತೂಹಲಪಡಬಹುದು. +ಮೊದಲನೆಯದಾಗಿ ಭಾಷಣದ ಮುದ್ರಣದ ವಿಷಯಕ್ಕೆ ವಿವಾದ ಎದ್ದಿತು. +ಅದು ಮುಂಬಯಿಯಲ್ಲಿಯೇ ಅಚ್ಚಾಗಬೇಕೆಂದು ನಾನು ಬಯಸಿದೆ. +ಮಿತವ್ಯಯದ ದೃಷ್ಟಿಯಿಂದ ಅದನ್ನು ಲಾಹೋರದಲ್ಲಿ ಮುದ್ರಿಸುವುದು ವಿಹಿತವೆಂದು ಮಂಡಲ ಹೇಳಿತು. +ನಾನು ಅದಕ್ಕೊಪ್ಪದೆ ಮುಂಬಯಿಯಲ್ಲಿಯೇ ಮುದ್ರಣವಾಗಬೇಕೆಂದು ಆಗ್ರಹಿಸಿದೆ. +ನನ್ನ ಸೂಚನೆಗೆ ಒಪ್ಪದ ಮಂಡಲದ ಅನೇಕ ಸದಸ್ಯರ ಅಂಕಿತವನ್ನೊಳಗೊಂಡ ಒಂದು ಕಾಗದ ಬಂದಿತು. +ಅದರಲ್ಲಿಯ ಕೆಲಭಾಗಗಳನ್ನು ಈ ಕೆಳಗೆ ಉದ್ಧರಿಸಲಾಗಿದೆ : +ಸನ್ಮಾನ್ಯ ಡಾಕ್ಟರ್‌ಜೀ,ಈ ತಿಂಗಳ ೨೪ರಂದು ನೀವು ಶ್ರೀ ಸಂತರಾಮರಿಗೆ ಬರೆದ ಕಾಗದವನ್ನು ನಮಗೆ ತೋರಿಸಲಾಗಿದೆ. +ಅದನ್ನು ಓದಿ ನಮಗೆ ಸ್ಟಲ್ಪ ನಿರಾಶೆಯ ಆಯಿತು. +ಇಲ್ಲಿ ಉದ್ಭವಿಸಿರುವ ಪರಿಸ್ಥಿತಿಯ ಪೂರ್ಣ ಕಲ್ಪನೆ ಬಹುಶಃ ನಿಮಗೆ ಆಗಿರಲಾರದು. +ನಾವು ನಿಮ್ಮನ್ನು ಈ ರಾಜ್ಯಕ್ಕೆ ಬರಮಾಡಿಕೊಳ್ಳುವುದನ್ನು ಪಂಜಾಬದ ಸಮಸ್ತ ಹಿಂದೂಗಳು ವಿರೋಧಿಸಿದ್ದಾರೆ. +ಜಾತ್‌-ಪತ್‌-ತೋಡಕ್‌ ಮಂಡಲವು ಅತ್ಯಂತ ಕಟುವಾದ ವಿಮರ್ಶೆಗೆ ಈಡಾಗಿದೆ. +ಹಾಗೂ ಎಲ್ಲಾ ಕಡೆಯಿಂದ ಹೀನಾಮಾನವಾದ ಧಿಕ್ಕಾರವನ್ನ ಪಡೆದುಕೊಂಡಿದೆ. +ಭಾಯಿ ಪರಮಾನಂದ, ಎಂ. ಎಲ್‌. ಎ. (ಮಾಜಿ ಅಧ್ಯಕ್ಷ, ಹಿಂದೂ ಮಹಾಸಭಾ), ಮಹಾತ್ಮಾ ಹಂಸರಾಜ,ಡಾ.ಗೋಕುಲಚಂದ್‌ ನಾರಂಗ್‌ (ಸ್ವಾಯತ್ತ ಸಂಸ್ಥಾಡಳಿತದ ಮಂತ್ರಿಗಳು), ರಾಜಾ ನರೇಂದ್ರನಾಥ್‌. ಎಂ. ಎಲ್‌. ಸಿ. , ಮುಂತಾಗಿ ಎಲ್ಲ ಹಿಂದೂ ಮುಖಂಡರು ಮಂಡಲದ ಈ ಕ್ರಮ ತಮಗೆ ಸಮ್ಮತವಿಲ್ಲವೆಂದು ಸಾರಿದ್ದಾರೆ. +ಇಷ್ಟೆಲ್ಲಾ ವಿರೋಧವಿದ್ದರೂ ಶ್ರೀ ಸಂತರಾಮರ ಮುಖಂಡತ್ವದಲ್ಲಿ ಮಂಡಲದ ಕಾರ್ಯಕರ್ತರು ತಮ್ಮ ಸಂಕಲ್ಪವನ್ನು ಬಿಟ್ಟುಕೊಡದೆ ನೀವು ಅಧ್ಯಕ್ಷರಾಗಲೇಬೇಕೆಂದು ಹಟಹಿಡಿದಿದ್ದಾರೆ. +ಮಂಡಲದ ಹೆಸರಿಗೆ ಕಳಂಕ ತಗಲಿದೆ. +ಪರಿಸ್ಥಿತಿ ಹೀಗಿರುವುದರಿಂದ ಮಂಡಲಕ್ಕೆ ಸಹಕಾರ ನೀಡುವುದು ತಮ್ಮ ಕರ್ತವ್ಯ ಒಂದೆಡೆ ಹಿಂದೂಗಳು ನಮ್ಮನ್ನು ಇಷ್ಟೊಂದು ಸಂಕಷ್ಟಕ್ಕೆ ಗುರಿಪಡಿಸುತ್ತಿದ್ದಾರೆ; +ಇನ್ನೊಂದೆಡೆ ನೀವು ಕೂಡ ನಿಮ್ಮ ನಿಲುವಿಗೇ ಅಂಟಿಕೊಂಡು ನಮ್ಮ ಕಷ್ಟಗಳನ್ನು ಇನ್ನಷ್ಟು ಹೆಚ್ಚಿಸುವಿರಾದರೆ ಅದರಂತಹ ದುರ್ದೈವ ಇನ್ನೊಂದಿರಲಾರದು. +ನೀವು ಈ ವಿಷಯವನ್ನು ಚೆನ್ನಾಗಿ ಪರಿಶೀಲಿಸಿ, ನಮಗೆಲ್ಲರಿಗೂ ಲೇಸಾಗುವಂತೆ ಮಾಡುವಿರೆಂದು ಹಾರೈಸುತ್ತೇವೆ. +ಈ ಪತ್ರ ನನ್ನನ್ನು ದಿಗಿಲುಗೊಳಿಸಿತು. +ಭಾಷಣವನ್ನು ಮುದ್ರಿಸುವ ವಿಷಯದಲ್ಲಿ ಉಂಟಾಗುವ ಕೇವಲ ಕೆಲವು ರೂಪಾಯಿಗಳಿಗಾಗಿ ಮಂಡಲವು ನನ್ನ ಮನಸ್ಸನ್ನು ಏಕೆ ನೋಯಿಸಬೇಕೋ ನನಗೆ ತಿಳಿಯದಾಯಿತು. +ಎರಡನೆಯದಾಗಿ, ನಾನು ಅಧ್ಯಕ್ಷನಾಗಿ ಆಯ್ಕೆಗೊಂಡಿರುವೆನೆಂಬುದನ್ನು ಪ್ರತಿಭಟಿಸಿ ಸರ್‌ ಗೋಕುಲಚಂದ್‌ ನಾರಂಗ್‌ರಂತಹ ಗೃಹಸ್ಥರು ನಿಜವಾಗಿಯೂ ರಾಜೀನಾಮೆ ನೀಡಿದರು ಎಂಬುದನ್ನುನಾನು ನಂಬಲಾರೆ. +ಏಕೆಂದರೆ ಸರ್‌ ಗೋಕುಲಚಂದ್‌ ಅವರು ಸ್ವತಃ ಬರೆದ ಈ ಕೆಳಗಿನ ಕಾಗದ ಅದಾಗಲೇ ನನ್ನ ಕೈಸೇರಿತ್ತು. +ಪ್ರಿಯ ಡಾಕ್ಟರ್‌ ಅಂಬೇಡ್ಕರ್‌,ಈಸ್ಟರ್‌ ಹಬ್ಬದ ಹೊತ್ತಿಗೆ ಲಾಹೋರದಲ್ಲಿ ನಡೆಯುವ ಮುಂದಿನ ವಾರ್ಷಿಕ ಸಮ್ಮೇಳನಕ್ಕೆ ನೀವು ಅಧ್ಯಕ್ಷರಾಗಲು ಒಪ್ಪಿರುವಿರೆಂದು ಜಾತ್‌-ಪತ್‌-ತೋಡಕ್‌ ಮಂಡಲದ ಕಾರ್ಯಕರ್ತರಿಂದ ತಿಳಿದು ನನಗೆ ಸಂತಸವಾಗಿದೆ. +ಲಾಹೋರದಲ್ಲಿ ನೀವು ನನ್ನ ಮನೆಯಲ್ಲಿಯೇ ಉಳಿದುಕೊಂಡರೆ ನನಗೆ ತುಂಬಸಂತೋಷವಾಗುವುದು. +ಭೇಟಿಯಾದಾಗ ಹೆಚ್ಚಿನ ವಿಷಯ, ನಿಮ್ಮ ನಂಬಿಕೆಯ,ಜಿ. ಸಿ. ನಾರಂಗ್‌ ವಸ್ತುಸ್ಥಿತಿ ಏನೇ ಇದ್ದಿರಲಿ, ನಾನು ಒತ್ತಾಯಕ್ಕೆ ಮಣಿಯಲಿಲ್ಲ. +ಆದರೆ ಭಾಷಣದ ಮುದ್ರಣ ಮುಂಬಯಿಯಲ್ಲಿಯೇ ಆಗಬೇಕೆಂಬ ನನ್ನ ದೃಢವಾದ ನಿಲುಮೆಯನ್ನು ಅರಿತಾಗ ನನ್ನ ಸೂಚನೆಯನ್ನು ಒಪ್ಪುವುದಕ್ಕೆ ಬದಲಾಗಿ ಮಂಡಲದವರು ಈ ವಿಷಯವನ್ನು ಮುಖತಃ ಮಾತಾಡಿ ಮುಗಿಸಲು ಶ್ರೀಹರ ಭಗವಾನರನ್ನು ಮುಂಬಯಿಗೆ ಕಳಿಸುತ್ತಿರುವುದಾಗಿ ನನಗೊಂದು ತಂತಿ ಕಳಿಸಿದರು. +ಶ್ರೀ ಹರಭಗವಾನರು ಏಪ್ರಿಲ್‌ ೯ರಂದು ಮುಂಬಯಿಗೆ ಬಂದರು. +ಅವರನ್ನು ಕಂಡು ಮಾತನಾಡಿದಾಗ ಅವರಿಗೆ ಈ ವಿಷಯದಲ್ಲಿ ಏನೂ ಹೇಳುವುದಿರಲಿಲ್ಲವೆಂದು ತೋರಿತು. +ಭಾಷಣದ ಮುದ್ರಣ ಮುಂಬಯಿಯಲ್ಲೋ ಲಾಹೋರದಲ್ಹ್ಲೋ ಎಂಬ ವಿಚಾರ ತಮಗೆ ತಿಳಿದೇ ಇಲ್ಲವೇನೊ ಎಂಬಂತೆ ಅವರು ಅದರ ಬಗ್ಗೆ ಚಕಾರವೆತ್ತಲಿಲ್ಲ. +ತನ್ನಭಾಷಣದಲ್ಲಿ ಏನೇನಿದೆಯೆಂಬುದನ್ನು ತಿಳಿದುಕೊಳ್ಳಲು ಅವರು ಕಾತರರಾಗಿದ್ದರು. +ಭಾಷಣದ ಮುದ್ರಣ ಲಾಹೋರದಲ್ಲಿಯೇ ಆಗಬೇಕೆಂದು ಒತ್ತಾಯ ಮಾಡುವಲ್ಲಿ ಮಂಡಲಕ್ಕೆ ಇದ್ದ ಮೂಲ ಉದ್ದೇಶ ನನಗೆ ಈಗ ಸ್ಪಷ್ಟವಾಗಿ ಮನವರಿಕೆಯಾಯಿತು. +ಹಣವನ್ನು ಉಳಿಸುವುದಕ್ಕೆ ಅಲ್ಲ, ನನ್ನ ಭಾಷಣದ ಒಡಲಲ್ಲಿರುವುದನ್ನು ಮುಂಚಿತವಾಗಿ ತಿಳಿದುಕೊಳ್ಳುವುದೇ ಅವರಿಗೆ ಮುಖ್ಯವಾಗಿ ಬೇಕಾಗಿದ್ದುದು. +ನಾನು ಈ ಗೃಹಸ್ಥರಿಗೆ ಒಂದು ಪ್ರತಿಯನ್ನು ಕೊಟ್ಟೆನು. +ಅದರಲ್ಲಿಯ ಕೆಲಭಾಗಗಳು ಅವರಿಗೆ ರುಚಿಸಲಿಲ್ಲ. +ಅವರು ಲಾಹೋರಿಗೆ ಹಿಂತಿರುಗಿದರು. +ಲಾಹೋರಿನಿಂದ ಅವರು ಈ ಕೆಳಗಿನ ಕಾಗದವನ್ನು ಬರೆದರು. +ಲಾಹೋರ್‌, ತಾ.ಎಪ್ರಿಲ್‌ ೧೪, ೧೯೩೬ಪ್ರಿಯ ಡಾಕ್ಟರ್‌ ಸಾಹೇಬ್‌,ದಿನಾಂಕ ೧೨ರಂದು ನಾನು ಮುಂಬಯಿಯಿಂದ ಇಲ್ಲಿಗೆ ಮರಳಿ ಬಂದೆ. +ಪ್ರವಾಸದಲ್ಲಿ ಐದಾರು ರಾತ್ರಿ ಸತತವಾಗಿ ನಿದ್ದೆಯಿಲ್ಲದೆ ಕಳೆದುದರಿಂದ ನನಗೆ ಆರೋಗ್ಯ ಸರಿಯಿಲ್ಲ. +ನಾನು ಇಲ್ಲಿಗೆ ಬಂದ ಮೇಲೆ ನೀವು ಅಮೃತಸರಕ್ಕೆ ಹೋಗಿದ್ದಿರೆಂದು ಕೇಳಿ ತಿಳಿದೆ. +ನಾನು ತಿರುಗಾಡುವಷ್ಟು ಹುಷಾರಾಗಿದ್ದಿದ್ದರೆ ಅಲ್ಲಿಗೇ ಬಂದು ನಿಮ್ಮನ್ನು ಕಾಣುತ್ತಿದ್ದೆ. +ನಿಮ್ಮ ಭಾಷಣವನ್ನು ಭಾಷಾಂತರಿಸಲೆಂದು ನಾನು ಶ್ರೀ ಸಂತರಾಮರಿಗೆ ಒಪ್ಪಿಸಿದ್ದೇನೆ. +ಅವರಿಗೆ ಅದು ತುಂಬಾ ಮೆಚ್ಚುಗೆಯಾಗಿದೆ. +ಆದರೆ ೨೫ನೆಯ ದಿನಾಂಕದೊಳಗಾಗಿ ಮುದ್ರಣಕ್ಕೆ ಭಾಷಾಂತರ ಸಿದ್ಧವಾದೀತೆಂದು ಅವರು ಭರವಸೆ ನೀಡಲಾರರು. +ಏನೇ ಆಗಲಿ, ಅದಕ್ಕೆ ಸಾಕಷ್ಟು ವ್ಯಾಪಕವಾದ ಪ್ರಚಾರ ದೊರೆತು ಹಿಂದೂಗಳನ್ನು ಕುಂಭಕರ್ಣ ನಿದ್ರೆಯಿಂದ ಹೊಡೆದೆಬ್ಬಿಸುವುದೆಂದು ನಾವು ನಂಬಿದ್ದೇವೆ. +ಮುಂಬಯಿಯಲ್ಲಿ ನಿಮಗೆ ನಾನು ಎತ್ತಿತೋರಿಸಿದ ಭಾಗವನ್ನು ನಮ್ಮ ಕೆಲವರು ಮಿತ್ರರೂ ಓದಿಕೊಂಚ ಅಳುಕಿದರು. +ಸಮ್ಮೇಳನವು ಯಾವುದೇ ಅಹಿತಕರ ಘಟನೆಯಿಲ್ಲದೆ ಸಮಾಪ್ತವಾಗಬೇಕೆಂದು ಬಯಸುವ ನಾವೆಲ್ಲರೂ ಬೇಡುವುದೇನೆಂದರೆ ಕನಿಷ್ಠ ಪಕ್ಷ “ವೇದ” ಎಂಬ ಪದನಾಮವನ್ನಾದರೂ ಪ್ರಸಕ್ತ ಸಮಯ ಅಲ್ಲಿಂದ ತೆಗೆದು ಹಾಕಬೇಕು. +ಇದನ್ನು ನಿಮ್ಮ ಸದ್ವಿವೇಕಕ್ಕೆ ಬಿಡುತ್ತೇನೆ. +“ಭಾಷಣದಲ್ಲಿ ವ್ಯಕ್ತವಾದ ಅಭಿಪ್ರಾಯಗಳು ನಿಮ್ಮ ವೈಯಕ್ತಿಕ ಅಭಿಪ್ರಾಯಗಳೇ ಆಗಿದ್ದು ಮಂಡಲ ಅವುಗಳಿಗೆ ಹೊಣೆಯಲ್ಲ” ಎಂಬ ಮಾತನ್ನು ಭಾಷಣದ ಕೊನೆಯಲ್ಲಿ ನೀವು ಸ್ಪಷ್ಟಪಡಿಸುವಿರೆಂದು ನಂಬಿದ್ದೇನೆ. +ನನ್ನ ಈ ಹೇಳಿಕೆಯನ್ನು ಪರಿಗಣಿಸುವಿರೆಂದು ಹಾರೈಸುತ್ತೇನೆ. +ನಮಗೆ ಈ ಭಾಷಣದ 1000 ಪ್ರತಿಗಳನ್ನು ಒದಗಿಸಿ. +ಅದಕ್ಕೆ ನಾವು ದುಡ್ಡು ಕೊಡುವೆವು. +ಈ ಮಾತನ್ನು ನಿಮಗೆ ಈ ದಿನವೇ ತಂತಿಯ ಮೂಲಕ ಕಳಿಸಿದ್ದೇನೆ. +ಈ ಕಾಗದದ ಜೊತೆಗೆ ಒಂದು ನೂರು ರೂಪಾಯಿಗಳ ಚೆಕ್‌ ಇಡಲಾಗಿದೆ. +ಅದು ಮುಟ್ಟದ ಬಗ್ಗೆ ದಯವಿಟ್ಟು ಸ್ವೀಕೃತಿಯ ಕಾಗದವನ್ನು ಕಳಿಸಿ. +ನಿಮ್ಮ ಒಟ್ಟು ಬಿಲ್ಲುಗಳನ್ನು ಸಮಯಾನುಸಾರ ರವಾನಿಸಿ. +ಸ್ವಾಗತ ಸಮಿತಿಯ ಸಭೆಯನ್ನು ಕರೆದಿದ್ದೇನೆ. +ಸಭೆಯ ನಿರ್ಣಯವನ್ನು ಕೊಡಲೇ ನಿಮಗೆ ತಿಳಿಸುವೆನು. +ಭಾಷಣದ ತಯಾರಿಗಾಗಿ ನೀವು ಬಳಸಿದ ಅಪಾರ ಶ್ರಮಕ್ಕಾಗಿ ಹಾಗೂ ನನ್ನ ಮೇಲೆ ತೋರಿದ ಕೃಪೆಗಾಗಿ ನನ್ನ ಹೃತ್ಪೂರ್ವಕ ಧನ್ಯವಾದಗಳನ್ನು ಸ್ವೀಕರಿಸಿ. +ನಿಜವಾಗಿಯೂ ನೀವು ನಮ್ಮನ್ನು ದೊಡ್ಡ ಕೃತಜ್ಞತೆಯ ಯಣದಲ್ಲಿರಿಸಿದ್ದೀರಿ. +ಭಾಷಣ ಮುದ್ರಿತವಾದೊಡನೆ ಪ್ಯಾನೆಂಜರ್‌ ಗಾಡಿಯ ಮೂಲಕ ಪ್ರತಿಗಳನ್ನು ಕಳಿಸಿಕೊಡಿ. +ಅದರಿಂದ ಪ್ರಕಟಣೆಗಾಗಿ ನಾವು ಪತ್ರಿಕೆಗಳಿಗೆ ಕೊಡಲು ಅನುಕೂಲವಾಗುವುದು. +ನಿಮ್ಮ ನಂಬಿಕೆಯ,ಹರ ಭಗವಾನ್‌ಈ ಮಾತಿನ ಮೇರೆಗೆ ನಾನು ಒಂದು ಸಾವಿರ ಪ್ರತಿಗಳನ್ನು ಅಚ್ಚು ಮಾಡಲು ಮುದ್ರಕನ ಕೈಗೆ ನನ್ನ ಕೈ ಬರಹದ ಪ್ರತಿಯನ್ನು ಒಪ್ಪಿಸಿದೆನು. +ಮುಂದೆ ಎಂಟು ದಿನಗಳ ನಂತರ ಶ್ರೀ ಹರಭಗವಾನರಿಂದ ಈ ಕೆಳಗಿನಂತೆ ನನಗೆ ಇನ್ನೊಂದು ಕಾಗದ ಬಂದಿತು. +ಲಾಹೋರ್‌, ೨೨.೪.೧೯೩೬ ಪ್ರಿಯ ಡಾ.ಅಂಬೇಡ್ಕರ್‌,ನಿಮ್ಮ ತಂತಿ ಹಾಗೂ ಕಾಗದ ಎರಡೂ ತಲುಪಿದವು. +ಅದಕ್ಕಾಗಿ ದಯವಿಟ್ಟು ನಮ್ಮ ಧನ್ಯವಾದವನ್ನು ಸ್ವೀಕರಿಸಿ. +ನಿಮ್ಮ ಅಪೇಕ್ಷೆಗೆ ಅನುಗುಣವಾಗಿ ಸಮ್ಮೇಳನವನ್ನು ಇನ್ನೊಂದು ಸಲ ಮುಂದೂಡಿದ್ದೇವೆ. +ಆದರೆ ಪಂಜಾಬದಲ್ಲಿ ಹವಾಮಾನ ದಿನದಿನಕ್ಕೆ ಬಿಸಿಯೇರುತ್ತಿರುವುದರಿಂದ ೨೫ ಅಥವಾ ೨೬ನೆಯ ದಿನಾಂಕದಂದು ಸಮ್ಮೇಳನ ನೆರವೇರಿಸಿದ್ದರೆ ಒಳ್ಳೆಯದಾಗುತ್ತಿತ್ತೆಂದು ಅನ್ನಿಸುತ್ತದೆ. +ಮೇ ತಿಂಗಳ ಮಧ್ಯಕ್ಕೆ ತುಂಬ ಬಿಸಿಲುಹಾಗೂ ಸೆಕೆ; +ಹಗಲು ಹೊತ್ತಿನ ಅಧಿವೇಶನಗಳು ಸುಖಕರ ಅಥವಾ ಹಿತಕರವೆನಿಸಲಿಕ್ಕಿಲ್ಲ. +ಏನೇ ಇರಲಿ,ಮೇ ಮಧ್ಯದಲ್ಲಯೇ ಸಭೆ ನಡೆಯುವುದಾದರೆ ನಮ್ಮಿಂದ ಸಾಧ್ಯವಾದಷ್ಟು ಮಟ್ಟಿಗೆ ಸಭೆ ಸುಖಕರವಾಗುವಂತೆ ನೋಡಿಕೊಳ್ಳುವೆವು. +ಆದರೆ ಒಂದು ಸಂಗತಿಯನ್ನು ನಿಮ್ಮ ಉದಾರ ಗಮನಕ್ಕೆ ನಾವು ತರಲೇಬೇಕಾಗಿದೆ. +ಧರ್ಮಾಂತರದ ವಿಷಯವಾಗಿ ನೀವು ನಿಮ್ಮ ದೃಢಸಂಕಲ್ಪವನ್ನು ವ್ಯಕ್ತಪಡಿಸಿದ್ದೀರಿ. +ಆ ಅಂಶವನ್ನು ಕುರಿತು ನಮ್ಮ ಜನರಲ್ಲಿ ಕೆಲವರು ಆತಂಕಪಟ್ಟರೆಂದು ನಾನು ನಿಮಗೆ ತಿಳಿಸಿದ್ದೆನಷ್ಟೆ . +ಆಗ ಇದು ಮಂಡಲದ ವ್ಯಾಪ್ತಿಗೆ ಒಳಪಟ್ಟವಿಷಯವಲ್ಲವೆಂದೂ, ಅಂತಹ ಯಾವ ಮಾತನ್ನಾದರೂ ನಮ್ಮ ವೇದಿಕೆಯ ಮೇಲೆ ನಿಂತು ಆಡುವುದಿಲ್ಲವೆಂದೂ ನೀವು ನನಗೆ ಹೇಳಿದ್ದಿರಿ. +ಅದೇ ಕಾಲಕ್ಕೆ ಎಂದರೆ ನಿಮ್ಮ ಭಾಷಣದ ಹಸ್ತಪ್ರತಿಯನ್ನು ನನ್ನ ಕೈಗಿತ್ತಾಗ,ಅದಷ್ಟೇ ನಿಮ್ಮ ಭಾಷಣದ ಮುಖ್ಯ ಭಾಗವೆಂದೂ, ಸಮಾರೋಪ ಭಾಗದ ಎರಡು ಅಥವಾ ಮೂರು ಪರಿಚ್ಛೇದಗಳನ್ನು ಮಾತ್ರ ಅದಕ್ಕೆ ನೀವು ಜೋಡಿಸುವವರಿದ್ದೀರೆಂದೂ ನನಗೆ ಭರವಸೆ ಕೊಟ್ಟರಿ. +ನಿಮ್ಮ ಭಾಷಣದ ಮುಂದಿನ ಭಾಗ ನಮ್ಮ ಕೈಸೇರಿದಾಗ ನಮಗೆ ವಿಸ್ಮಯವಾಯಿತು. +ಇಷ್ಟು ದೀರ್ಫವಾದರೆ ಈ ಭಾಷಣವನ್ನು ಒದಿ ಮುಗಿಸುವವರು ಎಷ್ಟು ಮಂದಿ? +ಇದರ ಜೊತೆಗೆ ಒಂದು ಸಲವಲ್ಲದೆ ಅನೇಕ ಸಲ ಈ ಭಾಷಣದಲ್ಲಿ “ಹಿಂದೂ ಸಮುದಾಯವನ್ನು ತೊರೆದು ಹೋಗುತ್ತೇನೆ”ಎಂದೂ, “ಹಿಂದೂವಾಗಿ ನಾನು ಮಾಡುತ್ತಿರುವ ಕೊನೆಯ ಭಾಷಣವಿದು” ಎಂದೂ ಹೇಳಿದ್ದೀರಿ. +ವೇದಗಳ ಮತ್ತು ಹಿಂದೂಗಳ ಇತರ ಧಾರ್ಮಿಕ ಗ್ರಂಥಗಳ ನೀತಿ ಹಾಗೂ ಯುಕ್ತಾಯುಕ್ತ ಪರಿಜ್ಞಾನವನ್ನು ಅನಗತ್ಯವಾಗಿ ಟೀಕಿಸಿದ್ದೀರಿ. +ಹಿಂದೂ ಧರ್ಮದ ತಾಂತ್ರಿಕ ವಿಷಯವನ್ನು ವಿವರವಾಗಿ ವಿವೇಚಿಸಿರುವಿರಿ. +ಇದು ನೀವು ಪ್ರತಿಪಾದಿಸುವ ವಿಷಯಕ್ಕೆ ಏನೇನೂ ಸಂಬಂಧವಿಲ್ಲ. +ಹೀಗಾಗಿ ಭಾಷಣದ ಕೆಲವು ಭಾಗಗಳು ಅಸಂಬದ್ಧವೂ, ಅನವಶ್ಯಕವೂ ಆಗಿವೆ. +ನೀವು ಮೊದಲು ನನ್ನ ಕೈಗಿತ್ತ ಹಸ್ತಪ್ರತಿಯಲ್ಲಿ ಎಷ್ಟಿತ್ತೊ ಅಷ್ಟಕ್ಕೇ ನಿಮ್ಮ ಭಾಷಣವನ್ನು ಮುಗಿಸಿದ್ದರೆ ಚೆನ್ನಾಗಿತ್ತು. +ಇನ್ನಷ್ಟು ಬೆಳೆಸುವುದು ಅಗಶ್ಯವಾಗಿದ್ದರೆ, ಬ್ರಾಹ್ಮಣತ್ವ ಮುಂತಾದುವುಗಳನ್ನು ಕುರಿತು ಬರೆದ ಮಾತುಗಳು ಮಾತ್ರ ಸಾಕಾಗಿತ್ತು . +ನಿಮ್ಮ ಭಾಷಣದ ಅಂತಿಮ ಭಾಗವು ಹಿಂದೂ ಧರ್ಮದ ಸಂಪೂರ್ಣನಿರ್ಮೂಲನೆಯನ್ನು ಕುರಿತಾಗಿದೆ; +ಹಿಂದೂಗಳಿಗೆ ಪವಿತ್ರವಾದ ಗ್ರಂಥಗಳ ನೀತಿಯನ್ನೇ ಅದು ಪಶ್ನಿಸುತ್ತದೆ. +ಹಾಗೂ ನೀವು ಹಿಂದೂ ಸಮುದಾಯವನ್ನು ತೊರೆದು ಹೋಗುವಿರೆಂಬ ಸೂಚನೆಯನ್ನು ಒಳಗೊಂಡಿದೆ. +ಇದು ಸುಸಂಬದ್ಧವೆಂದು ನನಗೆ ತೋರುವುದಿಲ್ಲ. +ಆದುದರಿಂದ ಸಮ್ಮೇಳನಕ್ಕೆ ಹೊಣೆಗಾರರಾದ ಸಮಸ್ತ ಜನತೆಯ ಪರವಾಗಿ ನಿಮಗೆ ಅತ್ಯಂತ ನಮ್ರವಾಗಿ ಪ್ರಾರ್ಥಿಸುವುದೇನೆಂದರೆ ಮೇಲೆ ಸೂಚಿಸಿದ ಅಕ್ಷೇಪಾರ್ಹ ಭಾಗವನ್ನು ದಯವಿಟ್ಟು ತೆಗೆದುಹಾಕಬೇಕು. +ನನ್ನ ಕೈಗೆ ಕೊಟ್ಟ ಹಸ್ತಪ್ರತಿಯಲ್ಲಿದ್ದಷ್ಟಕ್ಕೇ ಅದನ್ನು ಮುಕ್ತಾಯಗೊಳಿಸಬೇಕು. +ಅಥವಾ ಬ್ರಾಹ್ಮಣತ್ವದ ಬಗೆಗೆ ಒಂದೆರಡು ವಾಕ್ಯವೃಂದಗಳನ್ನು ಸೇರಿಸಬಹುದು. +ಅನಗತ್ಯವಾಗಿ ತೀವ್ರ ಭಾವನೆಗಳನ್ನು ಕೆರಳಿಸುವಂತಹ ಚುಚ್ಚುನುಡಿಯ ಭಾಷಣವನ್ನು ಮಾಡುವ ವಿವೇಕವನ್ನು ಸಂದೇಹಿಸುತ್ತೇವೆ. +ನಮ್ಮಲ್ಲಿ ಅನೇಕರು ನಿಮ್ಮ ಭಾವನೆಗಳಿಗೆ ಸಹಾನುಭೂತಿಯುಳ್ಳವರಾಗಿದ್ದೇವೆ. +ಹಿಂದೂ ಧರ್ಮದ ಜಾತಿಪದ್ಧತಿಯ ನಾಶಕ್ಕೆ ನಿಮ್ಮ ಮುಂದಾಳ್ತನದಲ್ಲಿ ದುಡಿಯಲು ಬಯಸುತ್ತೇವೆ. +ನಿಮ್ಮ ಪಂಥಕ್ಕೆ ಬೇಕಾದ ಜನವನ್ನು ಕಲೆಹಾಕುವುದಕ್ಕೆ ನೀವು ನಿಶ್ಚಯಿಸಿದ್ದರೆ, ಪಂಜಾಬದಿಂದ ನಿಮ್ಮ ಸುಧಾರಕ ಸೈನ್ಯಕ್ಕೆ ಬಹುಸಂಖ್ಯೆಯ ಜನಬರುತ್ತಾರೆ ಎಂದು ನಾನು ಭರವಸೆ ಕೊಡಬಲ್ಲೆ. +ಜಾತಿಪದ್ಧತಿಯ ವಿಷಯವನ್ನು ನೀವು ಕೂಲಂಕಷವಾಗಿ ಅಭ್ಯಾಸ ಮಾಡಿದವರಾದುದರಿಂದ ಈ ಪದ್ಧತಿಯಲ್ಲಿರುವ ಅನಿಷ್ಟಗಳನ್ನು ನಿವಾರಿಸಲು ನೀವು ಮುಂದಾಳಾಗಿ ಬಂದು ನಮಗೆ ನೆರವಾಗುವಿರೆಂದು ನಾವು ಭಾವಿಸಿದ್ದೆವು. +ಈ ಮಹಾ ಪ್ರಯತ್ನದಲ್ಲಿ ನೀವು ಕೇಂದ್ರವಾಗಿ ನಿಂತು ಕ್ರಾಂತಿಯನ್ನು ಆರಂಭಿಸುವಿರೆಂದೂ ಆಶಿಸಿದ್ದೆವು. +ಆದರೆ ನಾವು ಹೊರಡಿಸಿದಂತಹ ಹೇಳಿಕೆ ಪುನರುಕ್ತಿಗೊಂಡಾಗ ಶಕ್ತಿ ಕಳೆದುಕೊಂಡು ಹಳಸಲು ಪದವಾಗಿಬಿಡುವುದು. +ಪರಿಸ್ಥಿತಿ ಹೀಗಿರುವಾಗ ನೀವು ಸಮಗ್ರವಾಗಿ ಈ ವಿಷಯವನ್ನು ಪುನಃಆಲೋಚಿಸಬೇಕೆಂದು ಪ್ರಾರ್ಥಿಸುತ್ತೇನೆ. +ಬಂಧು ಬಾಂಧವರನ್ನೂ ಧಾರ್ಮಿಕ ಕಲ್ಪನೆಗಳನ್ನೂ ತೊರೆಯಬೇಕಾಗಿ ಬಂದರೂ ಕೂಡ ಜಾತಿಪದ್ಧತಿಯ ನಿರ್ಮೂಲನೆಯ ಗುರಿಯತ್ತ ಪ್ರಾಂಜಲಮನಸ್ಕರಾಗಿ ಹಿಂದೂಗಳು ದುಡಿಯಲು ಸಿದ್ಧರಿರುವುದಾದರೆ ನೀವು ಮುಂಚೂಣಿಯಲ್ಲಿ ನಿಲ್ಲುವುದಾಗಿ ಹೇಳುವುದರ ಮೂಲಕ ನಿಮ್ಮಭಾಷಣ ಹೆಚ್ಚು ಪರಿಣಾಮಕಾರಿಯಾಗುವಂತೆ ಮಾಡಬೇಕೆಂದು ಬಿನ್ನವಿಸುತ್ತೇನೆ. +ಹೀಗೆ ನೀವು ಮಾಡಿದ್ದಾದರೆ ಈ ಪ್ರಯತ್ನದಲ್ಲಿ ನಿಮಗೆ ಪಂಜಾಬದಿಂದ ಬಹು ಸುಲಭವಾಗಿ ಅನುಕೂಲ ಪ್ರತಿಕ್ರಿಯೆ ದೊರೆಯುವುದೆಂದು ನನಗೆ ಭರವಸೆ ಇದೆ. +ಈಗಾಗಲೇ ನಾವು ತುಂಬ ಖರ್ಚಿಗೆ ಒಳಗಾಗಿದ್ದೇವೆ; +ಅನಿಶ್ಚಿತ ಪರಿಸ್ಥಿತಿಯಲ್ಲಿ ಬಳಲುತ್ತಿದ್ದೇವೆ. +ಈ ಸಂದರ್ಭದಲ್ಲಿ ನೀವು ನಮಗೆ ನೆರವಾದರೆ ನಿಮ್ಮ ಉಪಕಾರವನ್ನು ನೆನಸುತ್ತೇನೆ. +ನಾನು ಈ ಮೊದಲು ಸೂಚಿಸಿದಂತೆ ನಿಮ್ಮ ಭಾಷಣವನ್ನು ಮಿತಗೊಳಿಸಿ ನಮ್ಮನ್ನು ಅನುಗ್ರಹಿಸುವುದಾಗಿ ಮರುಟಪಾಲಿನಿಂದ ದಯವಿಟ್ಟು ತಿಳಿಸಿ. +ಇದಕ್ಕೆ ವ್ಯತಿರಿಕ್ತವಾಗಿ, ನೀವು ನಿಮ್ಮ ಭಾಷಣವನ್ನು ಯಾವ ಬದಲಾವಣೆಯೂ ಇಲ್ಲದೆ ಇದ್ದಂತೆಯೆ ಅಚ್ಚು ಮಾಡಬೇಕೆಂದು ಹಟಹಿಡಿದ ಪಕ್ಷದಲ್ಲಿ ನಮಗೆ ಸಮ್ಮೇಳನವನ್ನು ನಡೆಸುವುದು ಸಾಧ್ಯವಾಗಲಿಕ್ಕಿಲ್ಲ. +ಅಥವಾ ಸಮುಚಿತವಾಗಲಿಕ್ಕಿಲ್ಲ; +ಆದುದರಿಂದ ಅದನ್ನು ಅನಿಶ್ಚಿತ ಅವಧಿಯವರೆಗೆ ಮುಂದೂಡುವುದೇ ಲೇಸಾಗಬಹುದು. +ಹಾಗೆ ಮಾಡಿದರೆ ಜನತೆಯ ವಿಶ್ವಾಸವನ್ನು ನಾವು ಕಳೆದುಕೊಳ್ಳುತ್ತೇವೆ. +ಪುನಃ ಪುನಃ ಮುಂದೂಡುತ್ತಾ ಹೋದರೆ ಇದಕ್ಕಿಂತ ಬೇರೆಯಾದ ಕೆಟ್ಟ ಪರಿಣಾಮವಿಲ್ಲ. +ಇದೇನೆ ಇರಲಿ,ಜಾತಿ ಪದ್ಧತಿಯನ್ನು ಕುರಿತು ಈಗಾಗಲೇ ರಚಿತವಾದ ಎಲ್ಲ ಗ್ರಂಥಗಳಿಗಿಂತಲೂ ಉತ್ತಮವಾಗಿ, ಮುಂದಿನವರಿಗೆ ಒಂದು ಬೆಲೆಯುಳ್ಳ ಪೂವಾರ್ಜಿತ ಆಸ್ತಿಯೆನಿಸುವಂತಹ ಅಪೂರ್ವ ವಿವೇಚನೆಯನ್ನು ಬರೆದು ನೀವು ನಮ್ಮ ಹೃದಯದಲ್ದೊಂದು ಸ್ಥಾನವನ್ನು ಪಡೆದುಕೊಂಡಿದ್ದೀರಿ. +ಅದರ ತಯಾರಿಗಾಗಿ ನೀವು ಪಟ್ಟ ಶ್ರಮವನ್ನು ನೆನೆದು ನಾವು ಎಂದೆಂದೂ ನಿಮಗೆ ಖುಣಿಯಾಗಿರುವೆವು. +ನಿಮ್ಮ ಸೌಜನ್ಯತೆಗೆ ಧನ್ಯವಾದಗಳು. +ನಿಮಗೆ ಶುಭವನ್ನು ಹಾರೈಸುತ್ತೇವೆ. +ನಿಮ್ಮ ನಂಬುಗೆಯ,ಹರಭಗವಾನ್‌ಈ ಪತ್ರಕ್ಕೆ ನಾನು ಕೆಳಗಿನಂತೆ ಉತ್ತರ ಬರೆದೆನು :೨೭ ಏಪ್ರಿಲ್‌ ೧೯೩೬ಪ್ರಿಯ ಶ್ರೀ ಹರಭಗವಾನ್‌,ನಿಮ್ಮ ಏಪ್ರಿಲ್‌ ೨೨ರ ಕಾಗದ ತಲುಪಿತು. +ನನ್ನ ಭಾಷಣವನ್ನು ಈಗಿರುವಂತೆ ಮುದ್ರಿಸಲು ನಾನು ಆಗ್ರಹ ಮಾಡಿದರೆ ಜಾತ್‌-ಪತ್‌-ತೋಡಕ್‌ ಮಂಡಲದ ಸ್ವಾಗತ ಸಮಿತಿ ಸಮ್ಮೇಳನವನ್ನು ಅನಿಶ್ಚಿತ ಅವಧಿಗೆ ಮುಂದೂಡಲು ಬಯಸುವುದೆಂಬುದನ್ನು ತಿಳಿದು ನನಗೆ ವಿಷಾದವಾಗುತ್ತದೆ. +ಇದಕ್ಕೆ ಉತ್ತರವಾಗಿ ನಾನು ಹೇಳಬಯಸುವುದೇನೆಂದರೆ, ತಮ್ಮ ಅನುಕೂಲಕ್ಕೆ ತಕ್ಕಂತೆ ನನ್ನ ಭಾಷಣವನ್ನು ಕತ್ತರಿಸಬೇಕೆಂದು ಮಂಡಲದವರು ಆಗ್ರಹಪಡಿಸುವುದಾದರೆ ಸಮ್ಮೇಳನವನ್ನು ಪೂರ್ತಿಯಾಗಿ ರದ್ದುಪಡಿಸುವುದೇ ನನಗೆ ಹೆಚ್ಚು ಇಷ್ಟ ಮುಂದೂಡು ಎಂಬ ಸಂದಿಗ್ಧಪದದ ಬಳಕೆ ನನಗೆ ಸೇರದು. +ನನ್ನ ನಿರ್ಧಾರ ನಿಮಗೆ ಸರಿಬರಲಿಕ್ಕಿಲ್ಲ. +ಸಮ್ಮೇಳನಾಧ್ಯಕ್ಷತೆಯ ಗೌರವಕ್ಕಾಗಿ ಅಧ್ಯಕ್ಷ ಭಾಷಣ ಸಿದ್ಧಪಡಿಸುವಲ್ಲಿ ಪ್ರತಿಯೊಬ್ಬ ಅಧ್ಯಕ್ಷನಿಗಿರುವ ಸ್ವಾತಂತ್ರ್ಯವನ್ನು ನಾನು ಬಿಟ್ಟುಕೊಡಲಾರೆ. +ಸಮ್ಮೇಳನಾಧ್ಯಕ್ಷನಿಗೆ ಭಾಷಣವನ್ನು ತಯಾರಿಸುವಲ್ಲಿ ಸಂಪೂರ್ಣ ಸ್ವಾತಂತ್ರ್ಯವಿರುತ್ತದೆ. +ಆತ ಸಮ್ಮೇಳನಕ್ಕೆ ಮಾರ್ಗದರ್ಶನ ಮಾಡುವ ಹೊಣೆ ಹೊತ್ತಿರುತ್ತಾನೆ. +ಯಾವುದು ಯೋಗ್ಯ ಹಾಗೂ ಸಮುಚಿತವೆಂಬುದನ್ನು ತಿಳಿದು ನಿರ್ವಹಿಸುವ ಕರ್ತವ್ಯವನ್ನು ಮಂಡಲದ ಮೆಚ್ಚುಗೆಗಾಗಿ ನಾನು ಬಿಟ್ಟುಕೊಡಲಾರೆ. +ಇದು ತತ್ವದ ಪ್ರಶ್ನೆಯಾಗಿದೆ. +ಆದುದರಿಂದ ಇದರಲ್ಲಿ ಚೌಕಾಸಿ ಮಾಡಿ ರಾಜಿಮಾಡಿಕೊಳ್ಳಲು ನಾನು ಸಿದ್ಧನಿಲ್ಲ. +ಸ್ವಾಗತ ಸಮಿತಿಯ ನಿರ್ಣಯ ಸರಿಯೊ ಅಲ್ಲವೊ ಎಂಬ ವಿವಾದಕ್ಕೆ ನಾನು ಇಳಿಯುತ್ತಲೇ ಇರಲಿಲ್ಲ. +ಆದರೆ ನನ್ನ ಮೇಲೆ ತಪ್ಪು ಹೊರಿಸುವಂತೆ ತೋರುವ ಕೆಲವು ಕಾರಣಗಳನ್ನು ನೀವು ಒಡ್ಡಿರುವುದರಿಂದ ಅವುಗಳಿಗೆ ನಾನು ಉತ್ತರ ಕೊಡಲೇಬೇಕಾಗಿದೆ. +ಮೊದಲನೆಯದಾಗಿ, ಸಮಿತಿಯವರ ಆಕ್ಷೇಪಕ್ಕೆ ಗುರಿಯಾದ ಭಾಷಣದಲ್ಲಿಯ ಅಭಿಪ್ರಾಯಗಳು ಮಂಡಲಕ್ಕೆ ಅನಿರೀಕ್ಷಿತವಾಗಿದ್ದುವೆಂಬ ವಿಚಾರವನ್ನು ನಾನು ಮೊದಲು ಖಂಡಿಸಬೇಕಾಗಿದೆ. +ಶ್ರೀ ಸಂತರಾಮರ ಒಂದು ಪತ್ರಕ್ಕೆ ಉತ್ತರ ಕೊಡುತ್ತಾ, “ಜಾತಿಪದ್ಧತಿಯನ್ನು ನಿರ್ನಾಮಗೊಳಿಸುವ ನಿಜವಾದ ವಿಧಾನ ಯಾವುದು? +ಅಂತರ್ಜಾತೀಯ ಭೋಜನ ಹಾಗೂ ಅಂತರ್ಜಾತೀಯ ವಿವಾಹ ಇವುಗಳನ್ನು ನಡೆಸುವುದು ಅಲ್ಲ. +ಜಾತಿಗೆ ಆಧಾರಭೂತವಾದ ಧಾರ್ಮಿಕ ಕಲ್ಪನೆಯನ್ನು ನಾಶಮಾಡುವುದೇ ಸರಿಯಾದ ಮಾರ್ಗ” ಎಂದು ನಾನು ತಿಳಿಸಿದ್ದೆನು. +ಶ್ರೀ ಸಂತರಾಮರು ಇದನ್ನು ದೃಢಪಡಿಸುವರೆಂದು ನಾನು ನಂಬುತ್ತೇನೆ. +ಇದು ಹೊಸ ವಿಚಾರವೆಂದು ಹೇಳಿ ಶ್ರೀ ಸಂತರಾಮರು ಆ ಮಾತನ್ನು ವಿವರಿಸಿ ಹೇಳಲು ಕೇಳಿಕೊಂಡರು. +ಅವರ ಕೋರಿಕೆಗೆ ಒಪ್ಪಿ, ಒಂದು ವಾಕ್ಕದಲ್ಲಿ ಹಿಂದೆ ಹೇಳಿದ ಮಾತನ್ನು ಈ ಭಾಷಣದಲ್ಲಿ ವಿಸ್ತಾರವಾಗಿ ಪ್ರತಿಪಾದಿಸಬೇಕೆಂದು ನಾನು ಅಂದುಕೊಂಡೆನು. +ಹೀಗಿರುವುದರಿಂದ ನನ್ನ ಅಭಿಪ್ರಾಯಗಳು ನಿಮಗೆ ಅನಿರೀಕ್ಷಿತವೆಂದು ಹೇಗೆ ಹೇಳುತ್ತೀರಿ? +ನಿಮಗಲ್ಲದಿದ್ದರೆ ನಿಮ್ಮ ಮಂಡಲದ ಮುಖ್ಯ ಚೇತನವಾದ ಹಾಗೂ ಮುಂದಾಳುವಾದ ಶ್ರೀ ಸಂತರಾಮರಿಗಂತೂ ಅವು ಹೊಸ ಅಭಿಪ್ರಾಯಗಳಲ್ಲ. +ನಾನು ಹೇಳುವ ಇನ್ನೊಂದು ಹೆಚ್ಚಿನ ಮಾತಿದೆ, ಭಾಷಣದ ಈ ಭಾಗವನ್ನು ಬರೆಯುವುದು ಯುಕ್ತ ಎಂದೆನಿಸಿದ್ದರಿಂದ ಮಾತ್ರ ನಾನು ಬರೆಯಲಿಲ್ಲ; +ನನ್ನ ವಾದವನ್ನು ಪೂರ್ಣಗೊಳಿಸುವುದು ಅತ್ಯವಶ್ಯವೆಂದು ನನಗೆ ತೋರಿತು, ಆದುದರಿಂದ ಬರೆದೆ. +ನಿಮ್ಮ ಸಮಿತಿಯ ಆಕ್ಷೇಪಕ್ಕೆ ಗುರಿಯಾದ ನನ್ನ ಭಾಷಣದ ಭಾಗವನ್ನು “ಅಸಂಬದ್ಧ ಹಾಗೂ ಅನವಶ್ಯಕ' ವೆಂದು ನೀವು ಆರೋಪಿಸಿರುವುದನ್ನು ಕಂಡು ನಾನು ಚಕಿತನಾದೆ. +ನಾನೊಬ್ಬ ವಕೀಲನಾದುದರಿಂದ ಕಾನೂನು ಸಂಬದ್ಧತೆಯನಿಯಮಗಳೇನೆಂದು ನಿಮ್ಮ ಸಮಿತಿಯ ಸದಸ್ಯರಷ್ಟೇ ಚೆನ್ನಾಗಿ ನಾನೂ ಬಲ್ಲೆನು. +ನಿಮ್ಮ ಆಕ್ಷೇಪಕ್ಕೆ ಈಡಾದ ಈ ಭಾಗ ಸಂಪೂರ್ಣ ಸುಸಂಬದ್ಧವಷ್ಟೆ ಅಲ್ಲದೆ ಮಹತ್ವದ್ದೂ ಆಗಿದೆಯೆಂದು ನಾನು ಒತ್ತಿ ಹೇಳುತ್ತೇನೆ. +ಜಾತಿಪದ್ಧತಿಯ ನಾಶಕ್ಕೆ ಕೈಕೊಳ್ಳಬೇಕಾದ ಉಪಾಯ ವಿಧಾನಗಳನ್ನು ನಾನು ಚರ್ಚಿಸಿರುವುದು ಇದೇ ಭಾಗದಲ್ಲಿ. +ಜಾತಿ ನಿರ್ಮೂಲನಕ್ಕೆ ಯಾವುದು ಸರ್ವೋತ್ಕಷ್ಟ ಉಪಾಯವೆಂದು ನಾನು ತೀರ್ಮಾನಿಸಿರುವೆನೊ ಅದು ಬೆರಗುಗೊಳಿಸುವಂಥದ್ದೂ, ಭಯಾನಕವಾದುದೂ, ನೋಯಿಸುವಂಥದೂ ಆಗಿರಬಹುದು. +ನನ್ನ ವಿಶ್ಲೇಷಣೆ ತಪ್ಪಾಗಿದೆಯೆಂದು ಹೇಳಲು ನಿಮಗೆ ಹಕ್ಕಿದೆ. +ಆದರೆ ಜಾತಿಯ ಸಮಸ್ಯೆಯನ್ನು ಕುರಿತ ಭಾಷಣದಲ್ಲಿ, ಜಾತಿ ನಿರ್ಮೂಲನೆಗೆ ನನ್ನ ಸಲಹೆಗಳೇನೆಂದು ಚರ್ಚಿಸಲು ನನಗೆ ಅವಕಾಶವಿಲ್ಲವೆಂದುನೀವು ಹೇಳಲಾರಿರಿ. +ಭಾಷಣ ದೀರ್ಫ್ಥವಾಯಿತೆಂಬುದು ನಿಮ್ಮ ಇನ್ನೊಂದು ಆಕ್ಷೇಪ. +ಈ ತಪ್ಪು ನನ್ನಿಂದಾಗಿದೆಯೆಂದು ಭಾಷಣದಲ್ಲಿಯೇ ನಾನು ಒಪ್ಪಿಕೊಂಡು ಬಿಟ್ಟದ್ದೇನೆ. +ಆದರೆ ಇದಕ್ಕೆ ನಿಜವಾಗಿಯೂ ಹೊಣೆ ಯಾರು? +ಈ ವ್ಯವಹಾರದಲ್ಲಿ ನೀವು ತಡವಾಗಿ ಸೇರಿಕೊಂಡಿರಿ ಎಂದು ಅನ್ನಿಸುತ್ತದೆ. +ಮೊದಲಿನಿಂದಲೂ ಇದ್ದವರಾಗಿದ್ದರೆನಿಮಗೆ ಇದರ ಇತಿಹಾಸ ತಿಳಿಯುತ್ತಿತ್ತು . +ವಿಸ್ತಾರವಾದೊಂದು ಉಪನ್ಯಾಸವನ್ನು ಸಿದ್ಧಪಡಿಸುವಷ್ಟು ಸಮಯವಾಗಲಿ ಉತ್ಸಾಹವಾಗಲಿ ನನಗೆ ಇರಲಿಲ್ಲ; +ಆದುದರಿಂದ ನನಗೆ ಅನುಕೂಲವಾಗುವಂತೆ ಒಂದು ಚಿಕ್ಕ ಉಪನ್ಯಾಸವನ್ನು ಮಾತ್ರ ಬರೆಯಬೇಕೆಂದು ಯೋಚಿಸಿದ್ದೆ. +ಆದರೆ ಈ ವಿಷಯವನ್ನು ಸಮಗ್ರವಾಗಿ ವಿವೇಚಿಸಿ ನಿರೂಪಿಸಬೇಕೆಂದು ನನಗೆ ಕೇಳಿದ್ದು ನಿಮ್ಮ ಮಂಡಲ. +ಜಾತಿಪದ್ಧತಿಯ ವಿಷಯವಾಗಿ ಪ್ರಶ್ನೆಗಳ ಯಾದಿಯನ್ನು ಕಳಿಸಿದ್ದು ನಿಮ್ಮ ಮಂಡಲವೇ. +ಇವು ಮಂಡಲದವರ ಹಾಗೂ ಅದರ ವಿರೋಧಿಗಳ ನಡುವಿನ ವಿವಾದದಲ್ಲಿ ಪುನಃ ಪುನಃ ಏಳುವ ಪ್ರಶ್ನೆಗಳಾಗಿದ್ದು, ಇವುಗಳಿಗೆ ತೃಪ್ತಿಕರವಾಗಿ ಉತ್ತರ ಕೊಡಲು ಮಂಡಲಕ್ಕೆ ಕಷ್ಟವಾಗಿರುವುದರಿಂದ ನನ್ನ ಉಪನ್ಯಾಸದಲ್ಲಿ ಈ ಪ್ರಶ್ನೆಗಳಿಗೆಲ್ಲ ಸಮರ್ಪಕವಾದ ಉತ್ತರಗಳನ್ನು ಅಳವಡಿಸಬೇಕೆಂದು ಕೇಳಿದ್ದೂ ನಿಮ್ಮ ಮಂಡಲವೇ. +ಮಂಡಲದ ಈ ಬಯಕೆಯನ್ನು ಈಡೇರಿಸುವ ಪ್ರಯತ್ನದಲ್ಲಿ ನನ್ನ ಉಪನ್ಯಾಸ ಇಷ್ಟೊಂದು ದೀರ್ಘವಾಗಬೇಕಾಯಿತು. +ಈ ಹಿನ್ನೆಲೆಯನ್ನು ಗಮನಿಸಿದಾಗ ಉಪನ್ಯಾಸವು ದೀರ್ಘವಾದುದಕ್ಕೆ ನಾನು ಹೊಣೆಗಾರನಲ್ಲವೆಂಬುದನ್ನು ನೀವು ಒಪ್ಪುವುದು ನಿಶ್ಚಿತ. +ಹಿಂದೂ ಧರ್ಮ ನಾಶವಾಗಬೇಕೆಂದು ನಾನು ಹೇಳಿದರೆ ನಿಮ್ಮ ಮಂಡಲ ಹೀಗೆ ಮೆಟ್ಟಿಬಿದ್ದೀತೆಂದು ನಾನು ನಿರೀಕ್ಷಿಸಿರಲಿಲ್ಲ. +ಶಬ್ದಗಳಿಗೆ ಹೆದರುವವರು ಮೂರ್ಖರು ಮಾತ್ರ ಎಂದು ನನ್ನ ಭಾವನೆಯಾಗಿತ್ತು. +ಆದರೆ ಜನರ ಮನಸ್ಸಿನಲ್ಲಿ ತಪ್ಪು ಕಲ್ಪನೆಯಾಗಬಾರದೆಂದು ನಾನು ಧರ್ಮವೆಂದರೇನೆಂದೂ ಧರ್ಮನಾಶವೆಂದರೇನೆಂದೂ ಸ್ಪಷ್ಟಗೊಳಿಸಲು ತುಂಬಾ ಪ್ರಯತ್ನಪಟ್ಟಿದ್ದೇನೆ. +ನನ್ನ ಉಪನ್ಯಾಸವನ್ನು ಓದಿದ ಬಳಿಕ ಯಾರಿಗೂ ನನ್ನ ಬಗೆಗೆ ತಪ್ಪು ಕಲ್ಪನೆ ಉಂಟಾಗಲಾರದು. +ಸಂಪೂರ್ಣವಾದ ವಿವರಣೆಯೊಡನೆ ಬಂದಿದ್ದರೂ "ಧರ್ಮನಾಶ' ಶಬ್ದಗಳನ್ನು ಕಂಡು ನಿಮ್ಮ ಮಂಡಲ ಗಾಬರಿಗೊಂಡಿತೆಂದರೆ ನಿಮ್ಮ ಮಂಡಲದ ಬಗೆಗೆ ನನಗೆ ಅಷ್ಟೊಂದು ಗೌರವ ಭಾವನೆ ಉಂಟಾಗಲಿಲ್ಲ. +ಸುಧಾರಕನೆಂದು ಸ್ಥಾನ ಪಡೆದು ಆಸ್ಥಾನದಲ್ಲಿ ನಿಂತು ಮಾಡಬೇಕಾದ ಕರ್ತವ್ಯಗಳನ್ನು ನೆರವೇರಿಸುವುದು ಹಾಗಿರಲಿ, ಹಾಗೆ ಆ ಹೊಣೆಗಾರಿಕೆಯನ್ನು ಕಂಡುಕೊಳ್ಳುವುದಕ್ಕೂ ಹಿಂಜರಿಯುವ ಮನುಷ್ಯ ಎಂತಹ ಸುಧಾರಕ? +ಅಂಥವನ ಬಗೆಗೆ ಗೌರವವಾಗಲಿ,ಆಸಕ್ತಿಯಾಗಲಿ ಹುಟ್ಟಲಾರದು. +ನನ್ನ ಉಪನ್ಯಾಸಕ್ಕೆ ಇತಿಮಿತಿಗಳಿರಬೇಕೆಂಬ ಕರಾರಿಗೆ ನಾನೆಂದೂ ಬದ್ಧನಾಗಿದ್ದಿಲ್ಲ. +ಉಪನ್ಯಾಸದಲ್ಲಿ ಏನೇನು ಇರಬೇಕು ಅಥವಾ ಇರಬಾರದು ಎಂಬುದನ್ನೂ ಮಂಡಲ ನನ್ನೊಡನೆ ಚರ್ಚಿಸಿಲ್ಲ. +ಆಯ್ದುಕೊಂಡ ವಿಷಯದಲ್ಲಿ ನನ್ನ ಅಭಿಪ್ರಾಯಗಳನ್ನು ನನ್ನ ರೀತಿಯಲ್ಲಿ ಮಂಡಿಸಲು ನನಗೆ ಸಂಪೂರ್ಣ ಸ್ವಾತಂತ್ರ್ಯವುಂಟೆಂದೇನಾನು ನಂಬಿದ್ದೆ. +ಏಪ್ರಿಲ್‌ ೯ರಂದು ನೀವು ಮುಂಬಯಿಗೆ ಬರುವವರೆಗೆ ನನ್ನ ಉಪನ್ಯಾಸವೆಂತಹುದೆಂಬುದು ಮಂಡಲಕ್ಕೆ ತಿಳಿದಿರಲಿಲ್ಲ. +ಕೆಳಜಾತಿಯ ಜನರು ಧರ್ಮಾಂತರಗೊಳ್ಳಬೇಕೆಂಬ ನನ್ನ ಅಭಿಪ್ರಾಯಗಳನ್ನು ಪ್ರಚಾರ ಮಾಡುವುದಕ್ಕೆ ನಿಮ್ಮ ವೇದಿಕೆಯನ್ನು ಬಳಸಿಕೊಳ್ಳುವ ಬಯಕೆ ನನಗಿಲ್ಲವೆಂದು ನಿಮಗೆ ಮುಖತಃ ನೀವು ಮುಂಬಯಿಗೆ ಬಂದಾಗ ನಾನೇ ಹೇಳಿದ್ದೆ ನನ್ನ ಉಪನ್ಯಾಸದಲ್ಲಿ ಆ ವಚನವನ್ನು ಪ್ರಯತ್ನ ಪೂರ್ವಕವಾಗಿನಾನು ಪಾಲಿಸಿದ್ದೇನೆ. +“ನಾನು ಇಲ್ಲಿ ಇರುವುದಿಲ್ಲವೆಂದು ವ್ಯಸನಪಡುತ್ತೇನೆ. . . . . ” ಎಂಬಂತಹ ನೇರವಲ್ಲದ ಸೂಚನಾತ್ಮಕ ಮಾತುಗಳಲ್ಲದೆ ಆ ವಿಷಯವಾಗಿ ಉಪನ್ಯಾಸದಲ್ಲಿ ನಾನು ಏನನ್ನೂ ಹೇಳಿಲ್ಲ. +ನನ್ನ ಇಂತಹ ಒಂದು ಅನುಷಂಗಿಕವಾದ ವಾಕ್ಯಕ್ಕೂ ನೀವು ಆಕ್ಷೇಪಿಸುವುದನ್ನು ನೋಡಿದರೆ ನಾನು ನಿಮಗೆ ಈ ರೀತಿ ಪ್ರಶ್ನೆ ಕೇಳಲೇಬೇಕಾಗುತ್ತದೆ. +ನಿಮ್ಮ ಸಮ್ಮೇಳನಕ್ಕೆ ಅಧ್ಯಕ್ಷನಾಗಲು ಒಪ್ಪಿಕೊಂಡಾಕ್ಷಣ, "ಹೀನಜಾತಿಯವರು ಧರ್ಮಾಂತರ ಮಾಡಬೇಕೆಂಬ' ನನ್ನ ಅಭಿಪ್ರಾಯಗಳನ್ನು ತಡೆಹಿಡಿಯಲು ಅಥವಾ ಬಿಟ್ಟುಕೊಡಲು ನಾನು ಒಪ್ಪಿಕೊಂಡೆನೆಂದು ತಿಳಿದಿರಾ? +ಹಾಗೆ ನೀವು ತಿಳಿದುಕೊಂಡಿದ್ದರೆ ನಿಮ್ಮ ತಪ್ಪಿಗೆ ನಾನು ಯಾವ ರೀತಿಯಿಂದಲೂ ಹೊಣೆಗಾರನಲ್ಲ. +ನನಗೆ ಅಧ್ಯಕ್ಷ ಪದವಿಯ ಗೌರವವನ್ನು ಕೊಟ್ಟದ್ದಕ್ಕೆ ಪ್ರತಿಯಾಗಿ ನಾನು ಮತಾಂತರದಲ್ಲಿ ನನನ್ನ ಶ್ರದ್ಧೆಯನ್ನು ತೊರೆದುಬಿಡಬೇಕೆಂದು ನೀವು ಸ್ಟಲ್ಪ ಸೂಚನೆ ಕೊಟ್ಟಿದ್ದರೂ ಸಾಕಾಗಿತ್ತು. +ನೀವು ಕೊಡುವ ಗೌರವಕ್ಕಿಂತ ನನ್ನ ಶ್ರದ್ಧೆ ನನಗೆ ಹೆಚ್ಚಿನದೆಂದು ನಾನು ನಿಮಗೆ ನೀಃಸಂದಿಗ್ಗವಾದ ಶಬ್ದಗಳಲ್ಲಿ ತಿಳಿಸಿಬಿಡುತ್ತಿದ್ದೆ. +೧೪ನೆಯ ದಿನಾಂಕದ ನಿಮ್ಮ ಕಾಗದದ ತರುವಾಯ ಬಂದ ಈ ನಿಮ್ಮ ಇನ್ನೊಂದು ಕಾಗದ ನನಗೆ ವಿಸ್ಮರು ಉಂಟುಮಾಡಿದೆ. +ಆ ಎರಡು ಪತ್ರಗಳನ್ನು ಯಾರೇ ಓದಿದರೂ ಅವರಿಗೆ ಇದೇ ಭಾವನೆಯುಂಟಾಗುವುದು. +ಸ್ವಾಗತ ಸಮಿತಿ ಒಮ್ಮಿಂದೊಮ್ಮೆಲೆ ಹೀಗೆ ಯಾಕೆ ಎದುರು ಬಿದ್ದಿತೋ ನನಗೆ ತಿಳಿಯದಾಗಿದೆ. +೧೪ನೆಯ ದಿನಾಂಕ ನೀವು ಪತ್ರ ಬರೆದಾಗ ಸಮಿತಿಯ ಮುಂದೆ ಇದ್ದ ನನ್ನ ಉಪನ್ಯಾಸದ ಹಸ್ತಪ್ರತಿಗೂ, ಸಮಿತಿಯು ವಿರುದ್ಧಾಭಿಪ್ರಾಯವನ್ನು ತಾಳುವುದಕ್ಕೆ ಕಾರಣವೆಂದು ಹೇಳಲಾದ ಮುದ್ರಿತಪ್ರತಿಗೂ ವಸ್ತುತಃ ಏನೇನೂ ವ್ಯತ್ಯಾಸವಿಲ್ಲ. +ಮೊದಲ ಪ್ರತಿಯಲ್ಲಿ ಇಲ್ಲದ ಒಂದಾದರೂ ಹೊಸ ವಿಚಾರವನ್ನು ಅಂತಿಮ ಪ್ರತಿಯಲ್ಲಿ ನೀವು ಎತ್ತಿ ತೋರಲಾರಿರಿ. +ಎರಡರಲ್ಲಿಯೂ ಅವೇ ವಿಚಾರಗಳಿವೆ. +ಅಂತಿಮ ಪ್ರತಿಯಲ್ಲಿ ಆ ವಿಚಾರಗಳನ್ನು ಹೆಚ್ಚು ವಿವರವಾಗಿ ನಿರೂಪಿಸಲಾಗಿದೆ, ಇಷ್ಟೇ ವ್ಯತ್ಯಾಸ. +ಭಾಷಣದಲ್ಲಿ ಆಕ್ಷೇಪಾರ್ಹವಾದುದು ಏನಾದರೂ ಇದ್ದಿದ್ದರೆ ೧೪ನೆಯ ದಿನಾಂಕದ ನಿಮ್ಮ ಪತ್ರದಲ್ಲಿಯೇ ನೀವು ಅದನ್ನು ಹೇಳಬಹುದಾಗಿತ್ತು. +ನೀವು ಹೇಳಲಿಲ್ಲ. +ಅದಕ್ಕೆ ಪ್ರತಿಯಾಗಿ ನೀವು ಒಂದು ಸಾವಿರ ಪ್ರತಿಗಳನ್ನು ಅಚ್ಚುಹಾಕಿಸಿಬಿಡಿ ಎಂದು ತಿಳಿಸಿದಿರಿ. +ನೀವು ಸೂಚಿಸಿದ ಶಾಬ್ದಿಕ ಬದಲಾವಣೆಗಳನ್ನು ಸ್ವೀಕರಿಸುವ ಇಲ್ಲವೆ ಬಿಡುವ ಸ್ವಾತಂತ್ರ್ಯವನ್ನೂ ನನಗೆ ವಹಿಸಿದಿರಿ. +ಆ ಮೇರೆಗೆ ನಾನು ಒಂದು ಸಾವಿರ ಪ್ರತಿಗಳನ್ನು ಮುದ್ರಿಸಿತರಿಸಿದೆ, ಈಗ ಅವು ನನ್ನಲ್ಲೇ ಉಳಿದಿವೆ. +ಆದಾದ ಎಂಟು ದಿನಗಳ ನಂತರ ನೀವು ಇನ್ನೊಂದು ಕಾಗದ ಬರೆದು, ನೀವು ನನ್ನ ಉಪನ್ಯಾಸವನ್ನು ಆಕ್ಷೇಪಿಸುವುದಾಗಿಯೂ ಅದನ್ನು ತಿದ್ದಿ ಕೊಡದಿದ್ದರೆ ಸಮ್ಮೇಳನವನ್ನು ರದ್ದುಗೊಳಿಸುವುದಾಗಿಯೂ ತಿಳಿಸಿರುತ್ತೀರಿ. +ಉಪನ್ಯಾಸದಲ್ಲಿ ಯಾವ ಬದಲಾವಣೆ ಮಾಡುವುದೂ ಸಾಧ್ಯವಿಲ್ಲವೆಂದು ನಿಮಗೆ ತಿಳಿದಿರಬೇಕಾಗಿತ್ತು “ಒಂದು ಅಲ್ಪವಿರಾಮದ ಚಿಹ್ನೆಯನ್ನು ಕೂಡ ಬದಲಾಯಿಸಲಾರೆ. +ಈ ಭಾಷಣವನ್ನು ಪುನರ್‌ಪರಿಶೀಲಿಸಲು ಅವಕಾಶವೀಯಲಾರೆ. +ನಾನು ಬರೆದುಕೊಟ್ಟಂತೆ ಅದನ್ನು ನೀವು ಸುಮ್ಮನೆ ಸ್ವೀಕರಿಸತಕ್ಕದ್ದು? +ಎಂದು ಮುಂಬಯಿಯಲ್ಲಿ ನಿಮಗೆ ನಾನು ಹೇಳಿದ್ದೆ. +ಈ ಉಪನ್ಯಾಸದಲ್ಲಿ ವ್ಯಕ್ತವಾದ ಅಭಿಪ್ರಾಯಗಳಿಗೆಲ್ಲ ನಾನೇ ಪೂರ್ಣ ಹೊಣೆಗಾರನಾಗಿದ್ದೇನೆ. +ಅವು ಸಮ್ಮೇಳನಕ್ಕೆ ಒಪ್ಪಿಗೆಯಾಗದೇ ಹೋದ ಪಕ್ಷದಲ್ಲಿ, ಸಮ್ಮೇಳನವು ಆ ಅಭಿಪ್ರಾಯಗಳನ್ನು ಖಂಡಿಸುವ ಗೊತ್ತುವಳಿಯೊಂದನ್ನು ಅಂಗೀಕರಿಸಿದರೂ ಸರಿ; ನನ್ನ ಆಕ್ಷೇಪವಿಲ್ಲ. +ಈ ಮಾತನ್ನು ನಾನು ನಿಮಗೆ ತಿಳಿಸಿದ್ದೆ. +ನನ್ನ ಅಭಿಪ್ರಾಯಗಳಿಂದ ನಿಮ್ಮಮಂಡಲಕ್ಕೆ ಯಾವುದೇ ತೊಂದರೆಯಾಗಬಾರದೆಂದೂ, ನಿಮ್ಮ ಸಮ್ಮೇಳನದ ಜೊತೆಗೆ ನನಗೆ ತೀರ ನಿಕಟವಾದ ಸಂಬಂಧ ಬೇಡವೆಂದೂ, ತುಂಬ ಕಾಳಜಿಪೂರ್ವಕವಾಗಿ ವಿಚಾರಿಸಿ ನಾನು ಹೀಗೂ ತಿಳಿಸಿದ್ದೆ. +“ಈ ಉಪನ್ಯಾಸವನ್ನು ಸಮ್ಮೇಳನಾಧ್ಯಕ್ಷರ ಭಾಷಣವೆಂದು ಗ್ರಹಿಸದೆ, ಸಮ್ಮೇಳನದ ಉದ್ಭಾಟನಾ ಭಾಷಣವೆಂದೇ ಇಟ್ಟುಕೊಳ್ಳಿ. +ಅಧ್ಯಕ್ಷರಾಗಲು ಮಂಡಲ ಇನ್ನು ಯಾರನ್ನಾದರೂ ಕರೆ ತರಲಿ”. +ಹೀಗೆಲ್ಲ ಇರುವಾಗ ೧೪ನೆಯ ದಿನಾಂಕದಂದು ನಿರ್ಣಯ ಕೈಕೊಳ್ಳುವುದಕ್ಕೆ ನಿಮ್ಮ ಸಮಿತಿಗೆ ಇದ್ದಷ್ಟು ಅನುಕೂಲ ಇನ್ನಾರಿಗೂ ಇದ್ದಿರಲಾರದು. +ನಿಮ್ಮ ಸಮಿತಿ ಹಾಗೆ ನಿರ್ಣಯ ಕೈಕೊಳ್ಳಲಿಲ್ಲ. +ಅಷ್ಟರಲ್ಲಿ ಮುದ್ರಣಕ್ಕೆ ವೆಚ್ಚ ಮಾಡಬೇಕಾಯಿತು. +ನಿಮ್ಮ ಸಮಿತಿ ಸ್ವಲ್ಪ ದೃಢವಾಗಿ ಇದ್ದಿದ್ದರೆ ಅದನ್ನು ಉಳಿಸಬಹುದಾಗಿತ್ತು. +ನನ್ನ ಉಪನ್ಯಾಸದಲ್ಲಿ ವ್ಯಕ್ತವಾದ ಅಭಿಪ್ರಾಯಗಳಿಗೂ ನಿಮ್ಮ ಸಮಿತಿಯ ನಿರ್ಣಯಕ್ಕೂ ಏನೂ ಸಂಬಂಧವಿಲ್ಲವೆಂದು ನನಗೆ ಖಾತ್ರಿಯಾಗಿದೆ. +ಅಮೃತಸರದ ಸಿಕ್ಟ್‌ ಪ್ರಚಾರ ಸಮ್ಮೇಳನದಲ್ಲಿ ಭಾಗವಹಿಸಿದೆನೆಂಬುದೇ ನಿಮ್ಮ ಸಮಿತಿಯ ನಿರ್ಣಯಕ್ಕೆ ಬಹುಮಟ್ಟಿಗೆ ಕಾರಣವೆಂದು ತಿಳಿಯಲು ನನಗೆ ಆಧಾರಗಳಿವೆ. +ಹಾಗಲ್ಲವಾದರೆ ೧೪ನೆಯ ದಿನಾಂಕ ಒಪ್ಪಿದ ಸಮಿತಿ ೨೪ರಂದು ಒಮ್ಮಿಂದೊಮ್ಮೆಲೇ ವಿರುದ್ಧಾಭಿಪ್ರಾಯಕ್ಕೆ ಬಂದದ್ದೇಕೆ? +ಇದಕ್ಕೆ ತೃಪ್ತಿಕರವಾದ ಬೇರೆ ಯಾವ ವಿವರಣೆಯೂ ಸಾಧ್ಯವಿಲ್ಲ. +ಈ ವಾದವನ್ನು ಇನ್ನು ನಾನು ಬೆಳಸಲಿಚ್ಛಿಸುವುದಿಲ್ಲ. +ನನ್ನ ಅಧ್ಯಕ್ಷತೆಯಲ್ಲಿ ನಡೆಯಬೇಕಾಗಿದ್ದ ಸಮ್ಮೇಳನ ರದ್ದಾಗಿದೆಯೆಂದು ಕೂಡಲೆ ಪ್ರಕಟಿಸಲು ನಿಮಗೆ ನಾನು ಬಿನ್ನವಿಸಲೇ ಬೇಕಾಗಿದೆ. +ಇಡಿಯ ವ್ಯವಹಾರ ಹದಗೆಟ್ಟುಹೋಗಿದೆ. +ಈಗ ನೀವು ನನ್ನ ಉಪನ್ಯಾಸವನ್ನು ಇದ್ದಕ್ಕಿದ್ದಂತೆಯೇ ಒಪ್ಪಿಕೊಂಡರೂ ಕೂಡ,ನಾನು ಅಧ್ಯಕ್ಷನಾಗಲು ಒಪ್ಪಲಾರೆನು. +ಉಪನ್ಯಾಸ ರಚನೆಗೆ ನಾನು ಮಾಡಿದ ಪರಿಶ್ರಮವನ್ನು ತಾವು ಮೆಚ್ಚಿದ್ದಕ್ಕಾಗಿ ನನ್ನ ಅಭಿನಂದನೆಗಳು. +ಆ ಶ್ರಮದಿಂದ ಇತರರಿಗೆ ಲಾಭವಾಗಲಿ ಬಿಡಲಿ, ನನಗಂತೂ ಲಾಭವಾಗಿದೆ. +ಇಂತಹ ಶ್ರಮವನ್ನು ವಹಿಸುವಷ್ಟು ಶಕ್ತಿ ನನ್ನ ಆರೋಗ್ಯಕ್ಕೆ ಇಲ್ಲದ ಸಮಯದಲ್ಲಿ ಅದನ್ನು ನಿರ್ವಹಿಸುವ ಪ್ರಸಂಗ ಒದಗಿತಲ್ಲ ಎಂಬುದಷ್ಟೆ ನನ್ನ ವ್ಯಥೆ. +ನಿಮ್ಮ ನಂಬುಗೆಯ ಬಿ.ಆರ್‌.ಅಂಬೇಡ್ಕರ್‌ಮಂಡಲ ನನ್ನ ಅಧ್ಯಕ್ಷತೆಯನ್ನು ಏಕೆ ರದ್ದುಗೊಳಿಸಿತು ಎಂಬುದು ಈ ಪತ್ರ ವ್ಯವಹಾರದಿಂದ ಸ್ಪಷ್ಟವಾಗುತ್ತದೆ. +ತಪ್ಪು ಯಾರದೆಂಬುದನ್ನು ಓದುಗರು ತಾವೇ ನಿರ್ಣಯಿಸುವರು. +ಸಮ್ಮೇಳನಾಧ್ಯಕ್ಷನ ಅಭಿಪ್ರಾಯಗಳು ತಮಗೆ ಒಪ್ಪಿಗೆಯಾಗಲಿಲ್ಲವೆಂದು ಸ್ವಾಗತ ಸಮಿತಿಯವರು ಸಮ್ಮೇಳನವನ್ನೇ ರದ್ದುಗೊಳಿಸಿದ ಪ್ರಸಂಗ ಇದೇ ಮೊದಲನೆಯದೆಂದು ನಾನು ಭಾವಿಸುತ್ತೇನೆ. +ಅದು ಹೌದೊ ಅಲ್ಲವೊ ಏನೇ ಇರಲಿ,ಸವರ್ಣ ಹಿಂದೂಗಳ ಸಮ್ಮೇಳನಕ್ಕೆ ಅಧ್ಯಕ್ಷನಾಗಲು ನನಗೆ ವಿನಂತಿ ಬಂದುದು ನನ್ನ ಜೀವಮಾನದಲ್ಲಿ ಇದೇ ಮೊದಲನೆಯ ಸಲ. +ಅದು ಹೀಗೆ ವಿರಸದಲ್ಲಿ ಮುಕ್ತಾಯವಾದುದಕ್ಕಾಗಿ ನಾನು ವಿಷಾದಿಸುತ್ತೇನೆ. +ಆದರೆ, ಒಂದು ಕಡೆ ಸುಧಾರಕರಾದ ಸವರ್ಣ ಹಿಂದೂಗಳಿದ್ದಾರೆ, ಅವರಿಗೆ ತಮ್ಮ ಕರ್ಮಠ ಹಿಂದೂ ಬಾಂಧವರ ಸಂಬಂಧವನ್ನು ಕಳೆದುಕೊಳ್ಳಲು ಮನಸ್ಸಿಲ್ಲ. +ಇನ್ನೊಂದೆಡೆಗೆ ಸ್ವಾಭಿಮಾನದ ಅಸ್ಸಶ್ಯರಿದ್ದಾರೆ. +ಸುಧಾರಣೆಯಾಗಲೇಬೇಕೆಂದು ಹಟ ಹಿಡಿಯುವುದಲ್ಲದೆ ಬೇರೆ ಮಾರ್ಗ ಅವರಿಗಿಲ್ಲ. +ಈ ಎರಡು ಬಣಗಳ ನಡುವೆ ವಿರಸವಲ್ಲದೆ ಇನ್ನೇನನ್ನು ನಿರೀಕ್ಷಿಸಲಾದೀತು? +ಬಿ. ಆರ್‌. ಅಂಬೇಡ್ಕರ್‌ ರಾಜ್ಯಗೃಹ, ದಾದರ್‌, ಮುಂಬಯಿ೧೫ ಮೇ.೧೯೩೬ ಸಿದ್ಧಪಡಿಸಿದ ಭಾಷಣ ಡಾ. ಬಿ. ಆರ್‌. ಅಂಬೇಡ್ಕರ್‌ಜಾತ್‌-ಪತ್‌-ತೋಡಕ್‌ ಮಂಡಲ, ಲಾಹೋರ್‌ ಅವರ1936ರ ವಾರ್ಷಿಕ ಅಧಿವೇಶನಕ್ಕೆ ಈ ಭಾಷಣ ರಚಿತವಾಯಿತು . +ಆದರೆ ಭಾಷಣದಲ್ಲಿ ವ್ಯಕ್ತವಾದ ಅಭಿಪ್ರಾಯಗಳು ಸ್ವಾಗತ ಸಮಿತಿಗೆ ಸಹನೀಯವೆನಿಸದ ಕಾರಣ ಸಮ್ಮೇಳನವೇ ರದ್ದುಗೊಂಡು ವೇದಿಕೆಯಿಂದ ಓದಲಿಲ್ಲ. +1936ರ ಜಾತ್‌-ಪತ್‌-ತೋಡಕ್‌ ಮಂಡಲ, ಲಾಹೋರ್‌ಇದರ ವಾರ್ಷಿಕ ಸಮ್ಮೇಳನಕ್ಕೆ ಡಾ.ಬಿ. ಆರ್‌. ಅಂಬೇಡ್ಕರ್‌ ಸಿದ್ಧಪಡಿಸಿದ ಲಿಖಿತ ಭಾಷಣ. +ಮಿತ್ರರೆ,ಈ ಸಮ್ಮೇಳನದ ಅಧ್ಯಕ್ಷ ಪದವಿಯನ್ನು ನನಗೆ ದಯಪಾಲಿಸಿರುವ ಜಾತ್‌-ಪತ್‌-ತೋಡಕ್‌ ಮಂಡಲದ ಸದಸ್ಯರಿಗಾಗಿ ನಾನು ನಿಜವಾಗಿಯೂ ವಿಷಾದಿಸುತ್ತೇನೆ. +ನನ್ನನ್ನು ಈ ಸ್ಥಾನಕ್ಕೆ ಆಯ್ಕೆ ಮಾಡಿದ್ದರಿಂದ ಅವರು ಅನೇಕ ಪ್ರಶ್ನೆಗಳಿಗೆ ಗುರಿಯಾಗುವರೆಂದು ನಾನು ಬಲ್ಲೆ. +ಲಾಹೋರದಲ್ಲಿ ನಡೆಯುವ ಸಮಾರಂಭಕ್ಕೆ ಅಧ್ಯಕ್ಷನಾಗಲು ಮುಂಬಯಿಯಿಂದ ಒಬ್ಬ ಮನುಷ್ಟನನ್ನು ಕರೆತರುವಂತಹ ಅಗತ್ಯವೇನಿತ್ತು ಎಂಬ ಪಶ್ನೆಗಳಿಗೆ ಅವರು ವಿವರಣೆ ನೀಡಬೇಕಾಗುತ್ತದೆ. +ನನಗಿಂತ ಉತ್ತಮರಾದವರನ್ನು ಈ ಪದವಿಗೆ ಆಯ್ಕೆ ಮಾಡುವುದು ಮಂಡಲಕ್ಕೆ ಅಷ್ಟೇನೂ ಕಷ್ಟವಾಗುತ್ತಿರಲಿಲ್ಲ. +ನಾನೆಂತಹವನೆಂದು ನೋಡಿ. +ಹಿಂದೂಗಳನ್ನು ಟೀಕಿಸಿದವನು ನಾನು. +ಅವರಿಗೆಲ್ಲ ಗೌರವಾಸ್ಪದರೆನಿಸಿದ ಮಹಾತ್ಮರ ಅಧಿಕಾರವನ್ನೇ ಪ್ರಶ್ನಿಸಿದವನು ನಾನು. +ಹಿಂದೂಗಳು ನನ್ನನ್ನು ದ್ವೇಷಿಸುತ್ತಾರೆ. +ಅವರ ದೃಷ್ಟಿಯಿಂದ ನಂದನದಲ್ಲಿ ಹೊಕ್ಕ ದುಷ್ಟ ಸರ್ಪ ನಾನು. +ಈ ಗೌರವ ಸ್ಥಾನವನ್ನು ಅಲಂಕರಿಸುವುದಕ್ಕೆ ನನ್ನನ್ನು ಏಕೆ ಆರಿಸಲಾಯಿತೆಂದು ರಾಜಕೀಯ ಒಲವಿನ ಹಿಂದೂಗಳು ಮಂಡಲವನ್ನು ನಿಶ್ಚಿತವಾಗಿ ಪ್ರಶ್ನಿಸುವರು. +ಇದೊಂದು ಮಹಾ ಸಾಹಸದ ಕೆಲಸ. +ಇದು ತಮಗೊಂದುಅಪಮಾನವೆಂದು ರಾಜಕೀಯ ಹಿಂದೂಗಳು ಭಾವಿಸಿದರೆ ನನಗೆ ಆಶ್ಚರ್ಯವಾಗದು. +ಸಾಧಾರಣ ಧಾರ್ಮಿಕ ಭಾವನೆಯ ಹಿಂದೂಗಳಿಗೂ ಕೂಡ ನನ್ನ ಆಯ್ಕೆ ಮೆಚ್ಚಿಗೆಯಾಗಲಾರದೆಂದು ನನಗೆ ಖಾತ್ರಿಯಾಗಿದೆ. +ಅಧ್ಯಕ್ಷನ ಆಯ್ಕೆಯಲ್ಲಿ ಮಂಡಲವು ಶಾಸ್ತ್ರದ ಆದೇಶವನ್ನೇಕೆ ಪಾಲಿಸಲಿಲ್ಲವೆಂಬುದಕ್ಕೆ ವಿವರಣೆ ಕೊಡಬೇಕಾದೀತು. +ಶಾಸ್ತ್ರಗಳ ಮೇರೆಗೆ ಇತರ ಮೂರು ವರ್ಣಗಳಿಗೆ ಬ್ರಾಹ್ಮಣನೇ ಗುರುವಾಗಿರತಕ್ಕದ್ದು. +“ವರ್ಣಾನಾಂಬ್ರಾಹ್ಮನೋ ಗುರುಃ' ಎಂದು ಶಾಸ್ತ್ರಗಳಲ್ಲಿ ವಿಧಿಸಲಾಗಿದೆ. +ಯಾರಿಂದ ಉಪದೇಶ ಪಡೆಯಬೇಕು ಮತ್ತು ಯಾರಿಂದ ಉಪದೇಶ ಪಡೆಯಬಾರದು ಎಂಬುದು ಮಂಡಲಕ್ಕೆ ಗೊತ್ತಿದೆ. +ಬಲ್ಲವನಾಗಿದ್ದಾನೆಂಬ ಕಾರಣದಿಂದ ಯಾವನೋ ಒಬ್ಬನನ್ನು ಗುರುವಾಗಿ ಆಯ್ಕೆ ಮಾಡಲು ಶಾಸ್ತ್ರಗಳು ಹಿಂದೂವಿಗೆ ಅಧಿಕಾರ ಕೊಟ್ಟಿಲ್ಲ. +ಹಿಂದೂ ರಾಜ್ಯಸ್ಥಾಪನೆಗೆ ಪ್ರೇರಕನಾದನೆಂದು ಭಾವಿಸಲಾದ ರಾಮದಾಸನೆಂಬ ಒಬ್ಬ ಬ್ರಾಹ್ಮಣ ಇದನ್ನು ಸ್ಪಷ್ಟವಾಗಿ ತಿಳಿಸಿದ್ದಾನೆ. +ದಾಸಬೋಧವೆಂಬ ಆತನ ಮರಾಠಿ ಪದ್ಯಕೃತಿ ಸಾಮಾಜಿಕ, ಧಾರ್ಮಿಕ, ರಾಜಕೀಯ ವಿಷಯಗಳನ್ನು ಅಳವಡಿಸಿಕೊಂಡಿದೆ. +ಅದರಲ್ಲಿ ಒಂದು ಕಡೆ ರಾಮದಾಸ ಹಿಂದೂಗಳನ್ನು ಹೀಗೆ ಕೇಳುತ್ತಾನೆ. +“ಪಂಡಿತನಾದಾಕ್ಷಣಕ್ಕೆ ಒಬ್ಬ ಅಂತ್ಯಜನನ್ನು ಗುರುವೆಂದು ಒಪ್ಪಿಕೊಳ್ಳಹುದೆ?” ಅದಕ್ಕೆ ಅವನ ಉತ್ತರ,"ಸರ್ವಥಾ ಕೂಡದು' ಎಂದು. +ಹೀಗೆ ತನಗೆ ಬರಬಹುದಾದ ಪ್ರಶ್ನೆಗಳಿಗೆಲ್ಲ ಏನೆಂದು ಉತ್ತರ ಕೊಡಬೇಕೋ ಅದು ಮಂಡಲಕ್ಕೆ ಸೇರಿದ ವಿಷಯ. +ಅಧ್ಯಕ್ಷನ ಆಯ್ಕೆಗಾಗಿ ಮುಂಬಯಿಯವರೆಗೆ ಪ್ರವಾಸ ಮಾಡಿ,ಹಿಂದೂಗಳಿಗೆ ಇಷ್ಟೊಂದು ಅಪ್ರಿಯನಾದ ಮನುಷ್ಯನನ್ನು ಗೊತ್ತುಮಾಡಿಕೊಂಡು, ಸವರ್ಣ ಹಿಂದೂಗಳ ಸಭೆಯನ್ನು ಉದ್ದೇಶಿಸಿ ಮಾತನಾಡಲು ಅಂತ್ಯಜನೂ, ಅಸ್ಪಶ್ಯನೂ ಆದವನೊಬ್ಬನನ್ನು ಕರೆದು ತರುವ ಹೀನಸ್ಥಿತಿಗೆ ತಾನೇಕೆ ಇಳಿದು ಬಂದಿತೋ ಏನೋ ಇದರ ಕಾರಣವನ್ನು ಮಂಡಲವೇ ಸರಿಯಾಗಿಬಲ್ಲದು. +ನನ್ನ ಮಟ್ಟಗೆ ಹೇಳುವುದಾದರೆ ಈ ಆಮಂತ್ರಣವನ್ನು ನಾನು ನನ್ನ ಇಷ್ಟಕ್ಕೆ ವಿರುದ್ಧವಾಗಿ ಮತ್ತುನನ್ನ ಸಂಗಾತಿಗಳಾದ ಅಸ್ಪಶ್ಯರ ಇಷ್ಟಕ್ಕೆ ಕೂಡ ವಿರುದ್ಧವಾಗಿ ಒಪ್ಪಿಕೊಂಡಿದ್ದೇನೆ. +ಹಿಂದೂಗಳಿಗೆ ನನ್ನನ್ನು ಕಂಡರಾಗುವುದಿಲ್ಲವೆಂದು ನಾನು ಬಲ್ಲೆ. +ಅವರಿಗೆ ನಾನು ಆದರಣೀಯ ವ್ಯಕ್ತಿಯಲ್ಲ. +ಇದನ್ನೆಲ್ಲ ತಿಳಿದವನಾದ್ದರಿಂದ ಪ್ರಯತ್ನಪೂರ್ವಕವಾಗಿ ನಾನು ಅವರಿಂದ ದೂರವೇ ಉಳಿದಿದ್ದೇನೆ. +ಅವರ ಮೇಲೆ ನನ್ನ ಅಭಿಪ್ರಾಯಗಳನ್ನುಹೇರಲು ಪ್ರಯತ್ನಿಸಿಲ್ಲ. +ನನ್ನ ಅಭಿಪ್ರಾಯಗಳನ್ನು ಮಂಂಡಿಸುವುದಾದರೆ ನನ್ನದೇ ಆದ ಬೇರೆ ವೇದಿಕೆಗಳನ್ನು ನಾನು ಬಳಸಿಕೊಂಡಿದ್ದೇನೆ. +ಇದು ಸಾಕಷ್ಟು ಹೊಟ್ಟೆಯುರಿಯನ್ನೂ, ಮನೋಕ್ಷೋಭೆಯನ್ನೂ ಕೆರಳಿಸಿದೆ. +ತಮ್ಮ ಕಿವಿಯಳವಿಯಲ್ಲೇ ನಾನು ಮಾಡುತ್ತಾ ಬಂದಿರುವುದನ್ನು ತಮ್ಮ ಕಣ್ಣೆದುರಿಗೇ ಮಾಡುವುದಕ್ಕಾಗಿ ಹಿಂದೂಗಳ ವೇದಿಕೆಯನ್ನೇರಲು ನಾನು ಬಯಸುವುದಿಲ್ಲ. +ನಾನು ಇಲ್ಲಿಗೆ ಬಂದಿರುವುದು ನಿಮ್ಮ ಆಯ್ಕೆಯಿಂದಲೇ ಹೊರತು ನನ್ನ ಇಚ್ಛೆಯಿಂದಲ್ಲ. +ಸಾಮಾಜಿಕ ಸುಧಾರಣೆಗೆ ನೀವು ಹೆಗಲು ಕೊಟ್ಟದ್ದೀರಿ. +ಆ ಸುಧಾರಣೆಯ ವಿಷಯ ನನ್ನ ಮನಸ್ಸಿಗೆ ಯಾವಾಗಲೂ ಪ್ರಿಯವಾದದ್ದು. +ಆದುದರಿಂದ ಇಂತಹಒಂದು ಸುಧಾರಕ ಕಾರ್ಯಕ್ಕೆ ಒಲಿದು, ಅದರಲ್ಲಿಯೂ ವಿಶೇಷವಾಗಿ ನಾನು ನೆರವಾಗಬಲ್ಲೆನೆಂದು ನೀವು ಭಾವಿಸಿರುವಾಗ, ಈ ಸುಸಂಧಿಯನ್ನು ಕಳೆದುಕೊಳ್ಳಬಾರದೆಂದು ನಾನು ನಿಮ್ಮ ಆಮಂತ್ರಣಕ್ಕೆ ಒಪ್ಪಿಕೊಂಡು ಬಂದೆ. +ನೀವು ಪರಿಹರಿಸಲೆಂದು ಎತ್ತಿಕೊಂಡ ಸಮಸ್ಯೆಗೆ ಈ ದಿನ ನಾನಾಡುವ ಮಾತು ಎಷ್ಟರ ಮಟ್ಟಿಗೆ ಸಹಾಯಕವಾದೀತೆಂಬುದನ್ನು ನಿರ್ಧರಿಸಲು ನಿಮಗೆ ಬಿಡುತ್ತೇನೆ. +ಆ ಸಮಸ್ಯೆಯನ್ನು ಕುರಿತ ನನ್ನಅಭಿಪ್ರಾಯಗಳನ್ನು ನಿಮ್ಮೆದುರಿಗೆ ಇಡುವುದಷ್ಟೆ ನನ್ನ ಕೆಲಸ. +ಸಮಾಜ ಸುಧಾರಣೆಯ ಹಾದಿ, ಮೋಕ್ಷದ ಹಾದಿಯಂತೆ, ವಿಶೇಷತಃ ಭಾರತದಲ್ಲಿ ಅಡೆತಡೆಗಳಿಂದ ತುಂಬಿದೆ. +ಸಮಾಜ ಸುಧಾರಣೆಗೆ ಭಾರತದಲ್ಲಿ ಕೆಲವೇ ಮಿತ್ರರು, ಆದರೆ ಅನೇಕ ಟೀಕಾಕಾರರು ಇದ್ದಾರೆ. +ಇಂತಹ ಟೀಕಾಕಾರರಲ್ಲಿ ಎರಡು ವರ್ಗಗಳಿವೆ. +ಮೊದಲನೆಯದು ರಾಜಕೀಯ ಸುಧಾರಕರ ವರ್ಗ,ಎರಡನೆಯದು ಸಮಾಜವಾದಿಗಳ ವರ್ಗ. +ಸಾಮಾಜಿಕ ಕಾರ್ಯದಕ್ಷತೆಯಿಲ್ಲದೆ ಯಾವ ಇತರ ಕಾರ್ಯಕ್ಷೇತ್ರದಲ್ಲೂ ಪ್ರಗತಿ ಸಾಧ್ಯವಿಲ್ಲ. +ಅನಿಷ್ಟ ಪದ್ಧತಿಗಳ ಪರಿಣಾಮವಾಗಿ ಹಿಂದೂ ಸಮಾಜ ಪ್ರಗತಿಯ ಪರಿಸ್ಥಿತಿಯಲ್ಲಿಲ್ಲ. +ಆದುದರಿಂದ ಈ ಅನಿಷ್ಟಗಳನ್ನು ನಿರ್ಮೂಲಗೊಳಿಸಲು ಅವಿರತ ಪ್ರಯತ್ನ ಮಾಡುವುದು ಅವಶ್ಯವಾಗಿದೆ. +ಈ ಮಾತಿನ ಸತ್ಯತೆಯನ್ನು ಅರಿತುಕೊಂಡದ್ದರಿಂದಲೇ ರಾಷ್ಟ್ರೀಯ ಕಾಂಗ್ರೆಸ್ಸಿನೊಡನೆ ಸಾಮಾಜಿಕ ಪರಿಷತ್ತಿನ ಸ್ಥಾಪನೆಯೂ ಆಯಿತು. +ದೇಶದೊಳಗಿನ ರಾಜಕೀಯ ಸಂಘಟನೆಯ ದೋಷಗಳನ್ನು, ದೌರ್ಬಲ್ಯಗಳನ್ನು ವ್ಯಾಖ್ಯಾನಿಸುವುದರಲ್ಲಿ ಕಾಂಗ್ರೆಸ್ಸು ತೊಡಗಿತು; +ಹಿಂದೂ ಸಮಾಜದ ಸಾಮಾಜಿಕ ಸಂಘಟನೆಯ ದೋಷಗಳನ್ನು ನಿವಾರಿಸುವ ಕಾರ್ಯದಲ್ಲಿ ಸಾಮಾಜಿಕ ಪರಿಷತ್ತು ನಿರತವಾಯಿತು. +ಕೆಲ ಕಾಲದವರೆಗೆ ಈ ಎರಡೂ ಸಂಸ್ಥೆಗಳು ಒಂದೇಸಂಸ್ಥೆಯ ಎರಡು ವಿಭಾಗಗಳಂತೆ ಕೆಲಸ ಮಾಡುತ್ತಿದ್ದವು. +ಒಂದೇ ಮಂಟಪದಲ್ಲಿ ಅವೆರಡೂ ತಮ್ಮ ವಾರ್ಷಿಕ ಅಧಿವೇಶನಗಳನ್ನು ನಡೆಸುತ್ತಿದ್ದವು. +ಆದರೆ ಬಲು ಬೇಗನೆ ಅವೆರಡೂ ಬಲಿತು ಭಿನ್ನ ಭಿನ್ನಪಕ್ಷಗಳಾದವು. +ಒಂದು ರಾಜಕೀಯ ಸುಧಾರಣಾ ಪಕ್ಷವಾಯಿತು. +ಇನ್ನೊಂದು ಸಾಮಾಜಿಕ ಸುಧಾರಣಾ ಪಕ್ಷವಾಯಿತು. +ಇವೆರಡರ ನಡುವೆ ಉಗ್ರವಾದ ಪೈಪೋಟಿಯೂ ನಡೆಯಿತು. +ರಾಜಕೀಯ ಸುಧಾರಣಾ ಪಕ್ಷವು ರಾಷ್ಟೀಯ ಕಾಂಗ್ರೆಸ್ಸನ್ನು ಬೆಂಬಲಿಸಿತು. +ಸಮಾಜ ಸುಧಾರಣಾ ಪಕ್ಷವು ಸಾಮಾಜಿಕ ಸಮ್ಮೇಳನದ ಬೆನ್ನು ತಟ್ಟಿತು. +ಹೀಗೆ ಈ ಎರಡು ಪಕ್ಷಗಳು ಪರಸ್ಪರ ಶತ್ರುಗಳಾದವು. +ರಾಜಕೀಯ ಸುಧಾರಣೆ ಮೊದಲೋ,ಸಮಾಜ ಸುಧಾರಣೆ ಮೊದಲೋ ಎಂಬುದು ಅವರ ಜಗಳಕ್ಕೆ ಮೂಲ ವಿಷಯ. +ಒಂದು ದಶಕದವರೆಗೆ ಉಭಯ ಪಕ್ಷಗಳ ಬಲ ಸಮಸಮವಾಗಿಯೇ ಇತ್ತು. + ಹೋರಾಟ ನಡೆಯುತ್ತಲೇ ಇದ್ದವು. +ಗೆಲವು ಯಾರಿಗೂ ಸಿಕ್ಕಲಿಲ್ಲ. +ಆದರೆ ಸಾಮಾಜಿಕ ಸಮ್ಮೇಳನದ ಭವಿಷ್ಯ ಉಜ್ವಲವಾಗಿಲ್ಲವೆಂದು ಸ್ಪಷ್ಟವಾಗಿತ್ತು. +ಸುಶಿಕ್ಷಿತ ಹಿಂದೂಗಳಲ್ಲಿ ಬಹುಸಂಖ್ಯಾತರು ರಾಜಕೀಯ ಪ್ರಗತಿಗೆ ಅನುಕೂಲವಾಗಿದ್ದು ಸಾಮಾಜಿಕ ಸುಧಾರಣೆಯ ಬಗೆಗೆ ಆಸಕ್ತಿ ತೋರುತ್ತಾ ಇಲ್ಲವೆಂದೂ, ಕಾಂಗ್ರೆಸ್ಸಿಗೆ ಹಾಜರಾಗುವ ಜನರ ಸಂಖ್ಯೆ ತುಂಬ ದೊಡ್ಡದಾಗಿದ್ದು ಹಾಜರಾಗದಿದ್ದರೂ ಅದಕ್ಕೆ ಸಹಾನುಭೂತಿಯುಳ್ಳವರ ಸಂಖ್ಯೆ ಇದಕ್ಕಿಂತ ದೊಡ್ಡದೆಂದೂ,ಸಾಮಾಜಿಕ ಸಮ್ಮೇಳನಕ್ಕೆ ಹಾಜರಾಗುವವರ ಸಂಖ್ಯೆ ತೀರ ಸಣ್ಣದೆಂದೂ ಸಾಮಾಜಿಕ ಪರಿಷತ್ತಿನ ಅಧಿವೇಶನಾಧ್ಯಕ್ಷರು ಗೋಗರೆಯುತ್ತಿದ್ದರು. +ಈ ಉಪೇಕ್ಷೆ ಹಾಗೂ ಬೆಂಬಲಿಗರ ಸಂಖ್ಯೆಯಲ್ಲುಂಟಾದ ಈ ಹಾನಿ ಆ ಕಾಲದಲ್ಲಿ ರಾಜಕಾರಣಿಗಳ ಪ್ರತ್ಯಕ್ಷ ಶತ್ರುತ್ವವನ್ನೇ ಬರಮಾಡಿಕೊಂಡಿತು. +ಈ ವರೆಗೆ ಕಾಂಗ್ರೆಸ್ಸು ತನ್ನ ಅಧಿವೇಶನ ಮಂಟಪವನ್ನು ಸಾಮಾಜಿಕ ಸಮ್ಮೇಳನದ ಅಧಿವೇಶನಕ್ಕೆ ಕೊಡುತ್ತಿತ್ತು. +ದಿವಂಗತ ತಿಲಕರ ಮುಂದಾಳ್ತನದಲ್ಲಿ ಈ ಸೌಜನ್ಯವೂ ಲುಪ್ತವಾಯಿತು. +ಇಷ್ಟೇ ಅಲ್ಲ, ಸಾಮಾಜಿಕ ಪರಿಷತ್ತಿನವರು ತಮ್ಮದೇಆದ ಒಂದು ಮಂಟಪವನ್ನು ನಿರ್ಮಿಸುವೆವೆಂದಾಗ ಅದನ್ನು ಸುಟ್ಟು ಬೂದಿ ಮಾಡುವೆವೆಂಬ ಬೆದರಿಕೆಕೂಡ ವ್ಯಕ್ತವಾಯಿತು. +ಶತ್ರುತ್ವದ ಕಾವು ಆ ಮಟ್ಟಕ್ಕೆ ಏರಿತು. +ಹೀಗೆ ಕಾಲಗತಿಯಲ್ಲೇ ರಾಜಕೀಯ ಸುಧಾರಣಾ ಪಕ್ಷ ಮೇಲ್ಸೈಯಾಗಿ ನಿಂತಿತು. +ಸಾಮಾಜಿಕ ಪರಿಷತ್ತು ಕಣ್ಮರೆಯಾಗಿ ಮರೆತುಹೋಯಿತು. +೧೮೯೨ರಲ್ಲಿ ಶ್ರೀ ಡಬ್ಲ್ಯೂಸಿ.ಬ್ಯಾನರ್ಜಿಯವರ ಅಧ್ಯಕ್ಷತೆಯಲ್ಲಿ ನಡೆದ ಅಲಹಾಬಾದ್‌ ಕಾಂಗ್ರೆಸ್ಸ್‌ ಅಧಿವೇಶನದಲ್ಲಿ ಅವರು ಮಾಡಿದ ಭಾಷಣವು ಸಾಮಾಜಿಕ ಸಮ್ಮೇಳನದ ಸ್ಥಶಾನ ಯಾತ್ರೆಯಲ್ಲಿ ಮಾಡಿದ ಚರಮ ಭಾಷಣದಂತೆ ಇತ್ತು. +ಅದು ಕಾಂಗ್ರೆಸ್ಸ್‌ ಧೋರಣೆಯ ಅನನ್ಯ ಧಾಟಿಯಾದುದರಿಂದ ಅದರೊಳಗಿನ ಕೆಲಭಾಗವನ್ನು ಇಲ್ಲಿ ಉದ್ಧರಿಸಲು ಬಯಸುತ್ತೇನೆ. +ಶ್ರೀ ಬ್ಯಾನರ್ಜಿಯವರು ಹೀಗೆ ನುಡಿದರು,“ನಮ್ಮ ಸಮಾಜಪದ್ಧತಿಯನ್ನು ಸುಧಾರಿಸುವವರೆಗೆ ನಾವು ರಾಜಕೀಯ ಸುಧಾರಣೆಗೆ ತಕ್ಕವರಾಗುವುದಿಲ್ಲವಂತೆ. +ಹೀಗೆ ವಾದಿಸುವವರನ್ನು ಕಂಡರೆ ನನಗೆ ಆಗುವುದಿಲ್ಲ. +ಇವೆರಡು ಸುಧಾರಣೆಗಳ ನಡುವೆ ಯಾವ ಸಂಬಂಧವೂ ನನಗೆ ಕಾಣದು. + ನಮ್ಮ ವಿಧವೆಯವರು ಪುನರ್ವಿವಾಹವಾಗಿಲ್ಲ . + ನಮ್ಮಲ್ಲಿ ಬಾಲ್ಯವಿವಾಹ ಜಾರಿಯಲ್ಲಿದೆ ಎಂದ ಮಾತ್ರಕ್ಕೆ ನಾವು ರಾಜಕೀಯ ಸುಧಾರಣೆಗೆ ತಕ್ಕವರಲ್ಲವೇನು? +ಯಾಕೆ ತಕ್ಕವರಲ್ಲ? +ನಮ್ಮ ಪತ್ನಿಯರೂ ಪುತ್ರಿಯರೂ ನಮ್ಮೊಡನೆ ಗಾಡಿಗಳಲ್ಲಿ ಸವಾರಿ ಮಾಡುತ್ತಾ ನಮ್ಮ ಮಿತ್ರರ ಭೇಟಿಗೆ ಹೋಗುವುದಿಲ್ಲವೆಂದೇ? +ನಮ್ಮ ಪುತ್ರಿಯರನ್ನು ಆಕ್ಸ್‌ಫರ್ಡ್‌, ಕೇಂಬ್ರಿಡ್ಜ್‌ಗಳಿಗೆ ಕಳಿಸುವುದಿಲ್ಲವೆಂದೇ?” (ಹರ್ಷೊದ್ಗಾರಗಳು). +ರಾಜಕೀಯ ಸುಧಾರಣೆಯ ನಿಲುವನ್ನು ಶ್ರೀ ಬ್ಯಾನರ್ಜಿಯವರ ಮಾತಿನಲ್ಲೇ ಹೇಳಿದ್ದೇನೆ. +ಉಭಯಪಕ್ಷಗಳ ಹೋರಾಟದಲ್ಲಿ ಕಾಂಗ್ರೆಸಿಗೇ ಗೆಲುವಾಯಿತೆಂದು ಹಿಗ್ಗಿದವರು ಹಲವಾರು ಜನ. +ಆದರೆ ಸಮಾಜ ಸುಧಾರಣೆಯ ಮಹತ್ವವನ್ನು ಅರಿತವರು ಪ್ರಶ್ನೆಯೆತ್ತಬಹುದು, ಶ್ರೀ ಬ್ಯಾನರ್ಜಿಯವರಂಥವರ ವಾದವೆ ಅಂತಿಮವಾದುದೆ? +ಗೆಲುವು ನ್ಯಾಯವಾದ ಪಕ್ಷಕ್ಕೇ ಹೋಯಿತೆಂದು ಅದು ಸಿದ್ಧಪಡಿಸುವುದೇ? +ರಾಜಕೀಯ ಸುಧಾರಣೆಗೆ ಸಮಾಜ ಸುಧಾರಣೆ ಏನೂ ಸಂಬಂಧವಿಲ್ಲದ್ದೆಂದು ಅದು ಸಮರ್ಪಕವಾಗಿ ಸಿದ್ಧಮಾಡುವುದೆ? +ಈ ಸಮಸ್ಯೆಯ ಇನ್ನೊಂದು ಮಗ್ಗುಲನ್ನು ನಿಮಗೆ ನಾನು ತೋರಿಸುವೆನು. +ಆಗ ವಿಷಯವನ್ನು ಅರಿತುಕೊಳ್ಳಲು ನಿಮಗೆ ಅನುಕೂಲವಾದೀತು. +ವಾಸ್ತವಿಕ ಘಟನೆಗಳ ನಿರೂಪಣೆಗಾಗಿ ನಾನು ಅಸ್ಪಶ್ಯರ ಅನುಭವಗಳನ್ನು ಆದರಿಸುತ್ತೇನೆ. +ಮರಾಠಾ ದೇಶದಲ್ಲಿ ಪೇಶ್ವೆಗಳು ಆಳುತ್ತಿದ್ದ ಕಾಲದಲ್ಲಿ ಹಿಂದೂವೊಬ್ಬನು ಸಾರ್ವಜನಿಕ ರಸ್ತೆಯಲ್ಲಿ ಬರುತ್ತಿದ್ದರೆ ಅಸ್ಪಶ್ಯನು ಆ ಹಾದಿಯಲ್ಲಿ ಕಾಲಿಡಕೂಡದು. +ಇವನ ಹೊಲೆ ನೆರಳು ಬಿದ್ದರೆ ಆ ಹಿಂದೂವಿಗೆ ಮೈಲಿಗೆಯಾಗುತ್ತಿತ್ತು ಅಸ್ಪಶ್ಯನಾದವನು ತನ್ನ ಮುಂಗೈಯ ಮೇಲಾಗಲಿ, ಕೊರಳಲ್ಲಾಗಲಿ ಒಂದು ಕರಿಯ ದಾರವನ್ನು ಕಟ್ಟಿಕೊಳ್ಳಲೇಬೇಕಾಗಿತ್ತು. +ಹಿಂದೂಗಳು ಅರಿಯದೆ ಅಸ್ಪಶ್ಯನನ್ನು ಮುಟ್ಟ ಮೈಲಿಗೆಗೆ ಗುರಿಯಾಗಬಾರದೆಂದು ಹೀಗೆ ವಿಧಿಸಲಾಗಿತ್ತು . +ಪೇಶ್ವೆಗಳ ರಾಜಧಾನಿಯಾದ ಪುಣೆಯಲ್ಲಿ ಅಸ್ಪಶ್ಯನು ತನ್ನ ಸೊಂಟಕ್ಕೊಂದು ಕಸಪೊರಕೆಯನ್ನು ಕಟ್ಟಕೊಂಡು ಹೊರಬೀಳಬೇಕಾಗಿತ್ತು. +ತಾನು ನಡೆದು ಹೋದಂತೆಲ್ಲ ಹಿಂದಿನಿಂದ ಈ ಪೊರಕೆಯಿಂದ ಗುಡಿಸುತ್ತ ಅವನು ಹೋಗಬೇಕು. +ಇಲ್ಲದೆ ಹೋದರೆ ಆತನು ಮೆಟ್ಟಿಹೋದ ಹೊಲೆಧೂಳು ಯಾರಾದರೊಬ್ಬ ಹಿಂದೂವಿನ ಪಾದಗಳಿಗೆ ಮೈಲಿಗೆ ತಗುಲಿಸಲಿಕ್ಕಿಲ್ಲವೆ? +ಅದೇ ಪುಣೆಯಲ್ಲಿಅಸ್ಪಶ್ಯನು ಎಲ್ಲಿಗೇ ಹೋಗಲಿ ತನ್ನ ಕೊರಳಿಗೊಂದು ಮಣ್ಣಿನ ಮಡಕೆಯನ್ನು ಕಟ್ಟಿಕೊಂಡಿರಬೇಕು. +ಉಗುಳುವುದಾದರೆ ಆ ಮಡಿಕೆಯಲ್ಲಿಯೇ ಅವನು ಉಗುಳಿಕೊಳ್ಳಬೇಕು. +ಹೀಗೆ ಮಾಡದೆ ಬೀದಿಯಲ್ಲಿ ಆತನು ಉಗುಳಿಬಿಟ್ಟರೆ ಆ ಉಗುಳು ಬಿದ್ದು ಆ ಪವಿತ್ರವಾದ ನೆಲದ ಮೇಲೆ, ಪಾಪ, ಯಾವನಾದರೂ ಹಿಂದೂ ಅರಿಯದೆ ಹೆಜ್ಜೆಯಿಟ್ಟು ಮಲಿನಗೊಂಡಾನು. +ಈ ಹಳೆಯ ಸಂಗತಿ ಹೋಗಲಿ, ತೀರ ಈಚೆಗಿನ ವಸ್ತುಸ್ಥಿತಿಯನ್ನು ಹೇಳುತ್ತೇನೆ. +ಈಗ ಮಧ್ಯಭಾರತದಲ್ಲಿರುವ ಬಲಾಯಿ ಎಂಬ ಅಸ್ಪಶ್ಯರ ಮೇಲೆ ನಡೆಸಿದ ಕ್ರೂರ ದಬ್ಬಾಳಿಕೆಯನ್ನು ಹೇಳಿದರೆ ಸಾಕು. +೧೯೨೮ ಜನವರಿ ೪ನೆಯ ದಿನಾಂಕದ ಟೈಮ್ಸ್‌ ಆಫ್‌ಇಂಡಿಯಾದಲ್ಲಿ ಇದರ ವರದಿ ಪ್ರಕಟವಾಗಿದೆ. +ಆ ಪತ್ರಿಕೆಯ ವರದಿಗಾರನು ದಾಖಲಿಸಿರುವಂತೆ ಇಂದೂರು ಸಂಸ್ಥಾನದ ಇಂದೂರು ಜಿಲ್ಲೆಯ, ಕನರಿಯ, ಬಿಜೋಲಿ-ಹಫ್ಟಿ, ಬಿಜಚೋಲಿ-ಮರ್ದಾನಾ ಮತ್ತು ಆಜಿಲ್ಲೆಯ ಇತರ ೧೫ ಹಳ್ಳಿಗಳ ಪಟೇಲ, ಪಟವಾರಿಗಳನ್ನೊಳಗೊಂಡ ಕಲೋತ, ರಾಜಪುತ್ರ, ಮತ್ತು ಬ್ರಾಹ್ಮಣರೆಂಬ ಉಚ್ಚಜಾತಿಯ ಹಿಂದೂಗಳು ತಂತಮ್ಮ ಹಳ್ಳಿಯ ಬಲಾಯಿಗಳಿಗೆ ಸಾರಿದ್ದೇನೆಂದರೆ ನೀವು ನಮ್ಮಲ್ಲಿ ಇರುವುದಾದರೆ ಈ ಕೆಳಗಿನ ವಿಧಿಗಳನ್ನು ಪಾಲಿಸತಕ್ಕದ್ದು :೧.ಬಲಾಯಿಗಳು ಚಿನ್ನದ ಜರಿಯುಳ್ಳ ಪಗಡಿ ಧರಿಸಕೂಡದು. + ೨.ಬಣ್ಣದ ಅಥವಾ ಅಲಂಕಾರದ ಅಂಚಿನ ಧೋತ್ರಗಳನ್ನು ಉಡಕೂಡದು. + ೩.ಹಿಂದೂವೊಬ್ಬನು ಸತ್ತರೆ ಆತನ (ಆಕೆಯ) ಸಂಬಂಧಿಕರು ಎಷ್ಟೇ ದೂರದಲ್ಲಿ ವಾಸವಿದ್ದರೂ ಅವರಿಗೆ ಬಲಾಯಿಗಳು ಹೋಗಿ ಸುದ್ದಿ ಮುಟ್ಟಿಸತಕ್ಕದ್ದು. + ೪.ಹಿಂದೂಗಳ ಎಲ್ಲಾ ಮದುವೆಗಳಲ್ಲಿ ಬಲಾಯಿಗಳು ಮೆರವಣಿಗೆಯ ಮುಂದೆ ಹಾಗೂ ಮದುವೆಯ ಸಮಯದಲ್ಲಿ ಕೂಡ ವಾದ್ಯಗಳನ್ನು ನುಡಿಸತಕ್ಕದ್ದು. + ೫. ಬಲಾಯಿ ಹೆಂಗಸರು ಚಿನ್ನದ ಅಥವಾ ಬೆಳ್ಳಿಯ ಆಭರಣಗಳನ್ನು ಧರಿಸಕೂಡದು. +ಅಲಂಕಾರದ ಕುಪ್ಪಸಗಳನ್ನಾಗಲೀ ಮೇಲುಡುಪನ್ನಾಗಲೀ ಧರಿಸತಕ್ಕದ್ದಲ್ಲ. +೬.ಹಿಂದೂ ಸ್ತೀಯರಿಗೆಲ್ಲ ಬಲಾಯಿ ಹೆಂಗಸರು ಸೂಲಗಿತ್ತಿ ಸೇವೆ ಸಲ್ಲಿಸಬೇಕು. +೭.ಬಲಾಯಿಗಳು ಪ್ರತಿಫಲವನ್ನು ಬೇಡದೆ ಸೇವೆ ಸಲ್ಲಿಸತಕ್ಕದ್ದು. +ಮತ್ತು ಹಿಂದೂಗಳು ಏನು ಕೊಟ್ಟರೂ ಸ್ವೀಕರಿಸತಕ್ಕದ್ದು. +೮. ಈ ಕರಾರುಗಳಿಗೆ ಒಪ್ಪುವುದಿಲ್ಲವಾದರೆ ಬಲಾಯಿಗಳು ಹಳ್ಳಿಯನ್ನು ಬಿಟ್ಟು ಹೊರಟುಹೋಗಬೇಕು. +ಬಲಾಯಿಗಳು ಈ ಕರಾರುಗಳಿಗೆ ಒಪ್ಪಲಿಲ್ಲ. +ಹಿಂದೂಗಳು ಅವರನ್ನು ಎದುರಿಸಿ ನಿಂತರು. +ಬಲಾಯಿಗಳಿಗೆ ಹಳ್ಳಿಯ ಬಾವಿಗಳಿಂದ ನೀರು ತರಗೊಡಲಿಲ್ಲ, ಅವರ ದನಗಳನ್ನು ಮೇಯಗೊಡಲಿಲ್ಲ. +ಹಿಂದೂಗಳ ಹೊಲಗಳಲ್ಲಿ ದಾಟಿ ಹೋಗದಂತೆ ಬಲಾಯಿಗಳಿಗೆ ನಿರ್ಬಂಧಪಡಿಸಲಾಯಿತು. +ಸುತ್ತಲೂ ಹಿಂದೂಗಳ ಹೊಲಗಳಿದ್ದರೆ ನಡುವಿದ್ದ ತನ್ನ ಹೊಲಕ್ಕೆ ಬಲಾಯಿ ಜಾತಿಯವನು ಹೋಗುವಂತಿಲ್ಲ. +ಹಿಂದೂಗಳು ತಮ್ಮ ದನಗಳನ್ನು ತಂದು ಬಲಾಯಿಗಳ ಹೊಲಗಳನ್ನೆಲ್ಲ ಮೇಯಿಸಿಬಿಟ್ಟರು. +ಈ ಅನ್ಯಾಯವನ್ನು ಪ್ರತಿಭಟಿಸಿ ಬಲಾಯಿಗಳು ದರ್ಬಾರಕ್ಕೆ ಅರ್ಜಿ ಸಲ್ಲಿಸಿದರು. +ಆದರೆ ಸಕಾಲಿಕವಾದ ಪರಿಹಾರ ದೊರೆಯಲಿಲ್ಲ. +ಹಿಂದೂಗಳ ದಬ್ಬಾಳಿಕೆ ಮುಂದುವರಿಯಿತು. +ಇದರಿಂದ ಬೇಸತ್ತುಹೋದ ನೂರಾರು ಬಲಾಯಿ ಕುಟುಂಬಗಳು ತಲೆತಲಾಂತರವಾಗಿ ತಮ್ಮ ಹಿರಿಯರು ವಾಸ ಮಾಡುತ್ತ ಬಂದಿದ್ದ ತಮ್ಮ ಮನೆಗಳನ್ನು ತೊರೆದು,ಹೆಂಡಿರು ಮಕ್ಕಳನ್ನು ಕಟ್ಟಕೊಂಡು, ಭೂಪಾಲ್‌, ಗ್ವಾಲಿಯರ್‌ ಮುಂತಾದ ಅನ್ಯರಾಜ್ಯಗಳಲ್ಲಿಯ ಧಾರ,ದೇವಾಸ, ಬಗಲಿ ಹಳ್ಳಿಗಳಿಗೆ ಗುಳೆಯೆತ್ತಿ ಹೋದರು. +ಅವರು ಹುಡಿಕಿಕೊಂಡು ಹೋದ ಈ ಹೊಸನೆಲೆಗಳಲ್ಲಿ ಅವರ ಗತಿ ಏನಾಯಿತೆಂಬುದು ಸದ್ಯಕ್ಕೆ ಅಪ್ರಸ್ತುತ. +ಗುಜರಾತ್‌ ರಾಜ್ಯದ ಕವಿಠಾ ಗ್ರಾಮದಲ್ಲಿ ಹೋದ ವರ್ಷವೆ ಒಂದು ಘಟನೆ ನಡೆಯಿತು. +ಆ ಊರಲ್ಲೊಂದು ಸರಕಾರಿ ಶಾಲೆಯಿತ್ತು ಸರ್ವರಿಗೂ ಸಮಾನಾವಕಾಶವುಳ್ಳ ಈ ಶಾಲೆಗೆ ನಮ್ಮ ಮಕ್ಕಳನ್ನು ಸೇರಿಸಿಕೊಳ್ಳಬೇಕೆಂದು ಹಟ ಹಿಡಿಯಕೂಡದು ಎಂಬುದಾಗಿ ಆ ಹಳ್ಳಿಯ ಹಿಂದೂಗಳು ಆಸ್ಲಶ್ಯರಿಗೆ ಆಜ್ಞಾಪಿಸಿದರು. +ತಮಗಿರುವ ಹಕ್ಕನ್ನು ಹಿಂದೂಗಳ ಆಪೇಕ್ಷೆಗೆ ಎರುದ್ಧವಾಗಿ ಚಲಾಯಿಸುವ ಧೈರ್ಯ ಮಾಡಿದುದಕ್ಕಾಗಿ ಕವಿಠಾ ಗ್ರಾಮದ ಅಸ್ಪಶ್ಯರು ಎಂತಹ ಕಷ್ಟಗಳಿಗೆ ಗುರಿಯಾದರೆಂಬುದು ಸರ್ವವಿದಿತವಾಗಿರುವುದರಿಂದ ಅದನ್ನು ವಿವರಿಸಬೇಕಾಗಿಲ್ಲ. +ಗುಜರಾತ್‌ನ ಅಹಮ್ಮದಾಬಾದ್‌ ಜಿಲ್ಲೆಯ ಹಳ್ಳಿಯಾದ ಜನುವಿನಲ್ಲಿ ಇನ್ನೊಂದು ಪ್ರಕರಣ ಜರುಗಿತು. +೧೯೩೫ನೆಯ ನವೆಂಬರ್‌ ತಿಂಗಳಲ್ಲಿ ಅನುಕೂಲಸ್ಥರಾದ ಅಸ್ಪಶ್ಯ ಸ್ತ್ರೀಯರು ಕೆಲವರು ತಾಮ್ರ, ಹಿತ್ತಾಳೆ ಮೊದಲಾದ ಲೋಹದ ಕೊಡಗಳಲ್ಲಿ ನೀರು ತರುವುದಕ್ಕೆ ಆರಂಭಿಸಿದರು. +ಇದು ತಮ್ಮ ಪ್ರತಿಷ್ಠೆಗೊಂದು ಅವಮಾನವೆಂದು ಹಿಂದೂಗಳು ಭಾವಿಸಿದರು. +ಆ ಅಸ್ಪೃಶ್ಯ ಸ್ತ್ರೀಯರ ಉದ್ಧಟತನಕ್ಕೆ ಶಾಸ್ತಿ ಮಾಡಲೆಂದು ಅವರನ್ನು ಹಿಡಿದುಬಡಿದರು. +ತೀರ ಇತ್ತೀಚಿನ ಪ್ರಸಂಗವೊಂದು ಜಯಪುರ ಸಂಸ್ಥಾನದ ಚಕ್ಹಾರಾ ಗ್ರಾಮದಿಂದ ವರದಿಯಾಗಿದೆ. +ಪತ್ರಿಕೆಗಳಲ್ಲಿ ಪ್ರಕಟವಾದ ವರದಿಗಳಿಂದ ತಿಳಿದುಬರುವುದು ಇಷ್ಟು- ಚಕ್ಹಾರಾದ ಅಸ್ಪಸ್ಯನೊಬ್ಬನು ತೀರ್ಥಯಾತ್ರೆ ಮುಗಿಸಿಕೊಂಡು ಬಂದು ಪುಣ್ಯಯಾತ್ರೆಯ ಅಂಗವಾಗಿ ಹಳ್ಳಿಯಲ್ಲಿಯ ತನ್ನ ಅಸ್ಪಶ್ಯ ಬಂಧುಗಳಿಗೆ ಔತಣಕೂಟವನ್ನು ಏರ್ಪಡಿಸಿದನು. +ತನ್ನ ಅತಿಥಿಗಳಿಗೆ ಸಮೃದ್ಧ ಭೋಜನ ಮಾಡಿಸಬೇಕೆಂದು ಆತ ಬಡಿಸಿದ ಊಟದಲ್ಲಿ ತುಪ್ಪವನ್ನು ಸೇರಿಸಿದ್ದನು. +ಅಸ್ಪಶ್ಯರೆಲ್ಲ ಈ ಕೂಟದಲ್ಲೆ ಊಟ ಮಾಡುತ್ತಿರುವಾಗ ನೂರಾರು ಹಿಂದೂಗಳು ಕೋಲು ಬಡಿಗೆಗಳನ್ನು ಹಿಡಿದು ಅಲ್ಲಿಗೆ ನುಗ್ಗಿ, ಆಹಾರವನ್ನೆಲ್ಲ ಜಿಲ್ಲಾಪಿಲ್ಲಿಮಾಡಿ, ಊಟಕ್ಕೆ ಕುಳಿತವರನ್ನು ಚೆನ್ನಾಗಿ ಥಳಿಸಿದರು. +ಜೀವವುಳಿದರೆ ಸಾಕೆಂದು ಅತಿಥಿಗಳು ಊಟ ಬಿಟ್ಟುಓಡಿ ಹೋದರು. +ಅರಕ್ಷಿತ ಅಸ್ಪಶ್ಯರ ಮೇಲೆ ಈ ಮಾರಕ ದಾಳಿಯನ್ನು ಏಕೆ ಮಾಡಲಾಯಿತು? +ಹಿಂದೂಗಳು ಕೊಟ್ಟ ಕಾರಣ ಇದು - ಅಸ್ಪಶ್ಯ ಗೃಹಸ್ಥನು ತುಪ್ಪದೂಟ ಬಡಿಸುವ ಧಾರ್ಷ್ವ್ವವನ್ನು ತೋರಿಸಿದ್ದನು ಮತ್ತುಅಸ್ಪಶ್ಯ ಅತಿಥಿಗಳು ಅದನ್ನು ಉಣ್ಣುವ ಮೂರ್ಖತನ ಮಾಡಿದ್ದರು. +ತುಪ್ಪವನ್ನು ಸೇವಿಸುವುದು ಉನ್ನತವಾದ ಸಾಮಾಜಿಕ ದರ್ಜೆಯ ಚಿಹ್ನೆಯೆಂದು ಯಾರೂ ಭಾವಿಸಲಾರರು. +ಆದರೆ ಚಕ್ಚಾರಾ ಹಿಂದೂಗಳ ವಿಚಾರ ಸರಣಿ ಬೇರೆಯಾಗಿತ್ತು. +ಊಟಕ್ಕೆ ತುಪ್ಪ ಬಡಿಸಿಕೊಂಡು ಅಸ್ಪಶ್ಯರು ತಮಗೆ ಅಪಮಾನ ಮಾಡಿದರು ಎಂದು ಅವರು ಭಾವಿಸಿದರು. +ಹಿಂದೂಗಳು ತುಪ್ಪ ತಿನ್ನುವುದು ಸಹಜವಾದುದು. +ತಮಗೆ ಅದು ಸಲ್ಲದೆಂದು ಅಸ್ಪಶ್ಯರು ತಿಳಿಯಬೇಡವೆ? +ಅಸ್ಪಶ್ಯನಾದವನು ತುಪ್ಪವನ್ನು ಕೊಂಡು ತರಬಲ್ಲವನಾಗಿದ್ದರೂ ಕೂಡ ಅವನು ತಿನ್ನಕೂಡದು, ತಿಂದರೆ ಹಿಂದೂಗಳಿಗೆ ಉದ್ಭಟತನ ತೋರಿದಂತೆಯೆ! +ಇದು ಈ ಘಟನೆಯ ಅಂತರಾರ್ಥ. +ಇದು ೧೯೩೬ರ ಏಪ್ರಿಲ್‌ ಒಂದನೆಯ ದಿನಾಂಕ ಅಥವಾ ಅದರ ಸಮೀಪದ ದಿನ ನಡೆದ ಘಟನೆ. +ಹೀಗೆ ವಾಸ್ತವ ಘಟನೆಗಳನ್ನು ತಿಳಿಸಿದ ಬಳಿಕ ಈಗ ಸಮಾಜ ಸುಧಾರಣೆಯ ವಿಷಯಕ್ಕೆ ಮತ್ತೆ ಬರುತ್ತೇನೆ. +ಬ್ಯಾನರ್ಜಿಯವರನ್ನು ಸಾಧ್ಯವಿದ್ದ ಮಟ್ಟಗೆ ಅನುಕರಿಸಿ, ರಾಜಕೀಯ ಪ್ರವೃತ್ತಿಯ ಹಿಂದೂಗಳನ್ನು ನಾನು ಹೀಗೆ ಪ್ರಶ್ನಿಸುತ್ತೇನೆ, “ನಿಮ್ಮ ದೇಶ ಬಾಂಧವರೇ ಆದ ಅಸ್ಪಶ್ಯರ ದೊಡ್ಡ ವರ್ಗದವರಿಗೆ ಸಾರ್ವಜನಿಕ ಶಾಲೆಯಲ್ಲಿ ಪ್ರವೇಶವನ್ನು ನಿರಾಕರಿಸುತ್ತಿರುವ ನೀವು ರಾಜಕೀಯ ಪ್ರಭುತ್ವಕ್ಕೆ ತಕ್ಕವರಾಗಿದ್ದೀರಾ? +ಸಾರ್ವಜನಿಕ ಬಾವಿಗಳಿಂದ ನೀರು ತರಲಿಕ್ಕೆ ಕೂಡ ಅವರಿಗೆ ಅವಕಾಶ ಕೊಡದೆ ನೀವು ರಾಜಕೀಯ ಅಧಿಕಾರಕ್ಕೆ ತಕ್ಕವರಾಗಿದ್ದೀರಾ? +ಸಾರ್ವಜನಿಕ ರಸ್ತೆಗಳನ್ನು ಬಳಸಲೂ ಅವರಿಗೆ ಅಡ್ಡಿ ಮಾಡುವ ನೀವು ರಾಜಕೀಯ ಅಧಿಕಾರಕ್ಕೆ ತಕ್ಕವರಾಗಿದ್ದೀರಾ? +ತಮಗೆ ಇಷ್ಟವಾದ ವೇಷಭೂಷಣಗಳನ್ನು ತೊಡಲು ಅವರಿಗೆ ಆಸ್ಪದಕೊಡದ ನೀವು ರಾಜಕೀಯ ಅಧಿಕಾರಕ್ಕೆ ತಕ್ಕವರಾಗಿದ್ದೀರಾ? +ತಮಗೆ ಬೇಕೆನಿಸಿದ್ದನ್ನು ತಿಂದುಂಬುವುದಕ್ಕೆ ಆ ಜನರಿಗೆ ಸ್ಥಾತಂತ್ರವೀಯದ ನೀವು ರಾಜಕೀಯ ಅಧಿಕಾರಕ್ಕೆ ಯೋಗ್ಯರಾಗಿದ್ದೀರಾ?” +ಹನುಮನ ಬಾಲದಂತೆ ಇಂತಹ ಪ್ರಶ್ನೆಗಳ ಸಾಲನ್ನು ನಾನು ಇನ್ನೂ ಬೆಳೆಸಬಹುದು. +ಆದರೆ ಇಷ್ಟು ಸಾಕು. +ಈ ಪ್ರಶ್ನೆಗಳಿಗೆ ಶ್ರೀ ಬ್ಯಾನರ್ಜಿ ಏನೆಂದು ಉತ್ತರಿಸುತ್ತಿದ್ದರೋ ನಾನರಿಯೆ. +ವಿಚಾರವಂತರಾರೂ ಈ ಪ್ರಶ್ನೆಗಳಿಗೆ ಹೌದೆಂದು ಉತ್ತರ ಕೊಡುವ ಧೈರ್ಯ ಮಾಡಲಾರರೆಂದು ನನಗನ್ನಿಸುತ್ತದೆ. +ಒಂದು ದೇಶವನ್ನು ಆಳಲು ಇನ್ನೊಂದು ದೇಶಕ್ಕೆ ಅಧಿಕಾರವಿಲ್ಲ ಎಂಬ ಮಿಲ್‌ ಸಾಹೇಬರ ಸೂತ್ರವನ್ನು ಪಡಿಸುತ್ತಿರುವ ಪ್ರತಿಯೊಬ್ಬ ಕಾಂಗ್ರೆಸ್ಸ್‌ ಸದಸ್ಯನು ಒಂದು ವರ್ಗವನ್ನು ಆಳಲು ಇನ್ನೊಂದು ವರ್ಗಕ್ಕೆ ಅಧಿಕಾರವಿಲ್ಲಎಂದು ಒಪ್ಪಲೇಬೇಕು. +ಹಾಗಾದರೆ ಸಾಮಾಜಿಕ ಸುಧಾರಣಾ ಪಕ್ಷವು ನಾಶವಾಗಿ ಹೋದುದೇಕೆ? +ಈ ಸುಧಾರಕರು ಎಂತಹ ಸಾಮಾಜಿಕ ಸುಧಾರಣೆಗಾಗಿ ಚಳುವಳಿ ಮಾಡುತ್ತಿದ್ದರೆಂಬುದನ್ನು ಮೊದಲು ಅರಿತುಕೊಂಡರೆ ಇದಕ್ಕೆ ಉತ್ತರ ದೊರೆಯುವುದು. +ಈ ಸಮಯದಲ್ಲೇ ಸಮಾಜ ಅರಿತುಕೊಂಡರೆ ಅದಕ್ಕೂ ಉತ್ತರ ದೊರೆಯುವುದು. +ಈಗ ಸಮಾಜ ಸುಧಾರಣೆಯ ಎರಡು ವರ್ಗಗಳಲ್ಲಿಯ ವ್ಯತ್ಯಾಸವನ್ನು ನಾವು ಸ್ಪಷ್ಟವಾಗಿ ತಿಳಿಯಬೇಕು. +ಹಿಂದೂ ಕುಟುಂಬದ ಸುಧಾರಣೆಗೆ ಸೀಮಿತವಾದ ಸಮಾಜ ಸುಧಾರಣೆ ಒಂದು ವರ್ಗದ್ದು. +ಸಮಗ್ರ ಹಿಂದೂ ಸಮಾಜದ ಎಫಟನೆ ಹಾಗೂ ಪುನರ್‌ವ್ಯವಸ್ಥೆಯನ್ನು ಗುರಿಯಾಗಿಟ್ಟುಕೊಂಡ ಸಮಾಜ ಸುಧಾರಣೆ ಇನ್ನೊಂದು ವರ್ಗದ್ದು. +ವಿಧವಾ ಪುನರ್ವಿವಾಹದ ಪ್ರತಿಪಾದನೆ, ಬಾಲ್ಯವಿವಾಹದ ವಿರೋಧ ಮುಂತಾದವು ಮೊದಲನೆಯ ವರ್ಗದ ವಿಷಯಗಳು. +ಜಾತಿಪದ್ಧತಿಯ ನಿರ್ಮೂಲನೆ ಎರಡನೆಯ ವರ್ಗದ ವಿಷಯ. +ಸಾಮಾಜಿಕ ಪರಿಷತ್ತು ಸವರ್ಣ ಹಿಂದೂ ಕುಟುಂಬದ ಸುಧಾರಣೆಯೊಂದನ್ನೇ ಮುಖ್ಯವಾಗಿ ಯೋಚಿಸುತ್ತಿತ್ತು . +ಅದರ ಸದಸ್ಯರು ಹೆಚ್ಚಾಗಿ ಉಚ್ಚ ಜಾತಿಯ ಹಿಂದೂಗಳೇ ಆಗಿದ್ದರು. +ಜಾತಿ ನಿರ್ಮೂಲನೆಯ ಅಗತ್ಯ ಅವರಿಗೆ ತಿಳಿದಿರಲಿಲ್ಲ. +ಅಥವಾ ಅದರ ಬಗೆಗೆ ಚಳವಳಿ ನಡೆಸುವ ಧೈರ್ಯ ಅವರಿಗಿರಲಿಲ್ಲ. +ಒತ್ತಾಯದ ವೈಧ್ಯವ್ಯ ಪದ್ಧತಿ, ಬಾಲ್ಯವಿವಾಹ ಮೊದಲಾದ ಅನಿಷ್ಟಗಳ ಪರಿಣಾಮಗಳನ್ನು ಅವರು ಸ್ವತಃ ಅನುಭವಿಸುತ್ತಿದ್ದರು. +ಆದುದರಿಂದ ಆ ಪಿಡುಗುಗಳ ಪರಿಣಾಮದಿಂದ ಅವರು ಬೇಸತ್ತುದು ಸಹಜವೆ. +ಸಮಗ್ರ ಹಿಂದೂ ಸಮಾಜದ ಸುಧಾರಣೆಗೆ ಅವರು ಹೊರಡಲಿಲ್ಲ. +ಜಾತಿ ಪದ್ಧತಿಯ ನಾಶಕ್ಕೆ ಅವರು ಪ್ರಯತ್ನಿಸಲಿಲ್ಲ. +ಅದರ ಬಗೆಗೆ ವಿಚಾರ ಕೂಡ ಮಾಡಲಿಲ್ಲ. +ಹೀಗಾಗಿ ಸಾಮಾಜಿಕ ಸುಧಾರಣಾ ಪಕ್ಷ ಸೋತುಹೋಯಿತು. +ಈ ವಾದವೇನೇ ಇದ್ದರೂ, ರಾಜಕೀಯ ಸುಧಾರಣೆ ಮೇಲ್ಸೈಯಾಯಿತೆಂಬುದನ್ನು ನಾವು ಅಲ್ಲಗಳೆಯುವಂತಿಲ್ಲ. +ಆದರೆ ಅದರ ಗೆಲುವು ಎಷ್ಟು ಸೀಮಿತವಾದುದೆಂದು ಈ ವಾದ ತಿಳಿಸುತ್ತದೆ. +“ಕುಟುಂಬ ಸುಧಾರಣೆ' ಎನ್ನುವ ಸಂಕುಚಿತ ಅರ್ಥದಲ್ಲಿ ಈ ಸುಧಾರಣೆಯನ್ನು ಗ್ರಹಿಸುವುದಾದರೆ ರಾಜಕೀಯ ಸುಧಾರಣೆಗೆ ಮುನ್ನ ಅದೇನೂ ನಡೆಯಬೇಕಾಗಿಲ್ಲವೆನ್ನಬಹುದು. +ಆದರೆ ಸಮಗ್ರ ಸಮಾಜದ ಪುನರ್ನಿರ್ಮಾಣ ಎಂಂದರ್ಥದಲ್ಲಿ ಸಮಾಜ ಸುಧಾರಣೆಯನ್ನು ಗ್ರಹಿಸಿದರೆ ರಾಜಕೀಯ ಸುಧಾರಣೆಗೆ ಆದ್ಯತೆ ದೊರೆಯಲಾರದು. +ರಾಜಕೀಯ ಸಂವಿಧಾನಗಳನ್ನು ರೂಪಿಸುವವರು ಸಾಮಾಜಿಕ ಶಕ್ತಿಗಳನ್ನು ಗಮನಿಸಲೇಬೇಕು. +ಈ ಅಂಶವನ್ನು ಹೇಳಿದವರು ಬೇರಾರೂ ಅಲ್ಲ, ಕಾರ್ಲ್‌ಮಾರ್ಕ್ಟನ ಸಹೋದ್ಯೋಗಿಯೂ ಮಿತ್ರನೂ ಆಗಿದ್ದ ಫರ್ಡಿನಾಂಡ್‌ ಲಾಸಲ್‌. +ಪರ್ಶಿಯಾದ ಒಂದು ಸಭೆಯಲ್ಲಿ ಮಾತಾಡುತ್ತಾ ಲಾಸಲ್‌ ಹೀಗೆಂದರು,“ಸಂವಿಧಾನಾತ್ಮಕ ಪ್ರಶ್ನೆಗಳು ಮುಖ್ಯವಾಗಿ ಹಕ್ಕಿನ ಪ್ರಶ್ನೆಗಳಾಗಿರದೆ ಶಕ್ತಿಯ ಪಶ್ನೆಗಳಾಗಿರುತ್ತವೆ. +ಪ್ರತ್ಯಕ್ಷವಾದ ಶಕ್ತಿಯಿದ್ದರೆ ಮಾತ್ರ ದೇಶದ ಸಂವಿಧಾನ ಬದುಕಬಲ್ಲದು. +ಆದುದರಿಂದ ಒಂದು ಸಮಾಜದಲ್ಲಿಇರುವ ಶಕ್ತಿಗಳನ್ನು ಸಮರ್ಪಕವಾಗಿ ವ್ಯಕ್ತಪಡಿಸಿದಲ್ಲಿ ಮಾತ್ರ ರಾಜಕೀಯ ಸಂವಿಧಾನಕ್ಕೆ ಮೌಲ್ಯ ಮತ್ತು ಸ್ಥಿರತೆ ಇರುತ್ತದೆ.” +ಈ ಮಾತನ್ನು ಅರಿಯಲು ನಾವು ಪರ್ಶಿಯಾಕ್ಕೆ ಹೋಗಬೇಕಿಲ್ಲ. +ನಮ್ಮ ದೇಶದಲ್ಲಿಯೇ ಅದಕ್ಕೆ ಪುರಾವೆಯಿದೆ. +ಬೇರೆ ಬೇರೆ ವರ್ಗಗಳಿಗೆ ಹಾಗೂ ಜಾತಿಗಳಿಗೆ ಇಂತಿಷ್ಟು ಎಂದು ನಿಗದಿಪಡಿಸಿ ರಾಜಕೀಯ ಅಧಿಕಾರ ಕೊಟ್ಟ ಜಾತಿವಾರು ತೀರ್ಪಿನ ಅರ್ಥವೇನು? +ರಾಜಕೀಯ ಸಂವಿಧಾನ ಸಾಮಾಜಿಕ ಸ್ವರೂಪವನ್ನು ಗಮನಿಸಲೇಬೇಕು. +ಇದು ಆ ಐತೀರ್ಪಿನ ಅರ್ಥವೆಂದು ನಾನು ಭಾವಿಸಿದ್ದೇನೆ. +ಭಾರತದಲ್ಲಿ ಸಾಮಾಜಿಕ ಸಮಸ್ಯೆಗೂ ರಾಜಕೀಯ ಸಮಸ್ಯೆಗೂ ಏನೂ ಸಂಬಂಧವಿಲ್ಲವೆಂದು ವಾದಿಸುತ್ತಿದ್ದ ರಾಜಕಾರಣಿಗಳು ದೇಶದ ಸಂವಿಧಾನವನ್ನು ನಿರ್ಮಿಸುವಾಗ ಸಾಮಾಜಿಕ ಸಮಸ್ಯೆಯನ್ನು ಪರಿಗಣಿಸಲೇ ಬೇಕಾಯಿತು. +ಸಮಾಜ ಸುಧಾರಣೆಯನ್ನು ಎಷ್ಟೋ ಕಾಲದಿಂದ ಉಪೇಕ್ಷೆಗೆ ಗುರಿ ಮಾಡಲಾಗಿತ್ತುಆ ಅನ್ಯಾಯಕ್ಕೆ ಪ್ರಾಯಶ್ಚಿತ್ರರೂಪವಾಗಿಯೆ ಜಾತಿವಾರು ಐತೀರ್ಪು ಬಂದಿತೆನ್ನಬಹುದು. +ಸಮಾಜ ಸುಧಾರಣಾ ಪಕ್ಷಕ್ಕೆ ಇದೊಂದು ಗೆಲುವು. +ಆದರೆ ಈ ಅಭಿಪ್ರಾಯವನ್ನು ಅನೇಕರು ಒಪ್ಪುವುದಿಲ್ಲವೆಂದು ನಾನು ಬಲ್ಲೆ. +ಜಾತಿವಾರು ಐತೀರ್ಪು ಅಸ್ವಾಭಾವಿಕವೆಂದೂ, ಅಲ್ಪಸಂಖ್ಯಾತ ವರ್ಗಗಳೊಡನೆ ಸರಕಾರ ದುಷ್ಟಒಪ್ಪಂದ ಮಾಡಿಕೊಂಡು ಇದನ್ನು ನಿರ್ಮಿಸಿದೆಯೆಂದೂ ಪ್ರಚಲಿತ ಅಭಿಪ್ರಾಯವಾಗಿದೆ. +ನನ್ನ ವಾದಕ್ಕೆ ಈ ಐತೀರ್ಪನ್ನು ನಾನು ಆಧರಿಸುವುದಿಲ್ಲ. +ಐರ್ಲೆಂಡ್‌ನತ್ತ ಸ್ವಲ್ಪ ದೃಷ್ಟಿ ಹೊರಳಿಸೋಣ. +ಐರ್ಲೆಂಡಿನ ಹೋಂರೂಲ್‌ ಇತಿಹಾಸ ಏನು ತಿಳಿಸುತ್ತದೆ? +ದಕ್ಷಿಣ ಐರ್ಲೆಂಡಿನ ಪ್ರತಿನಿಧಿಯಾದ ರೆಡ್ಮಂಡ್‌ ಅವರು ಸಮಗ್ರ ಐರ್ಲೆಂಡಿಗೆ ಅನ್ವಯಿಸುವ ಹೋಂರೂಲ್‌ ಸಂವಿಧಾನದಲ್ಲಿ ಅಲ್‌ಸ್ಟರ್‌ ಪ್ರದೇಶವನ್ನು ಅಳವಡಿಸಬೇಕೆಂದು ಎರಡೂ ಪ್ರದೇಶಗಳಲ್ಲಿ ಸಂಧಾನ ನಡೆಸುತ್ತಾ ಇದ್ದ ಅಲ್‌ಸ್ಟರ್‌ ಪ್ರತಿನಿಧಿಗಳಿಗೆ ಹೀಗೆನುಡಿದರು. +“ ನಿಮಗೆ ಯಾವ ರಾಜಕೀಯ ರಕ್ಷಣೆ ಬೇಕಾದರೂ ಕೇಳಿ ಕೊಡುವೆವು.” + ಅದಕ್ಕೆ ಅಲ್‌ಸ್ಟರ್‌ವರು ಕೊಟ್ಟ ಉತ್ತರವೇನು ಗೊತ್ತೆ? +“ನಿಮ್ಮ ರಕ್ಷಣೆ ಹಾಳಾಗಲಿ, ಯಾವುದೇ ರೀತಿಯಾದ ನಿಮ್ಮ ಆಳ್ವಿಕೆಗೆ ಒಳಪಡಲು ನಾವು ಬಯಸುವುದಿಲ್ಲ”. +ಅಲ್‌ಸ್ಟರ್‌ನವರಂತೆ ಭಾರತದಲ್ಲಿಯ ಅನೇಕ ಅಲ್ಪಸಂಖ್ಯಾತ ವರ್ಗಗಳೂ ನಿಲುವು ತಾಳಿದ್ದರೆ ಬಹುಸಂಖ್ಯಾತರ ರಾಜಕೀಯ ಆಕಾಂಕ್ಷೆಗಳ ಗತಿ ಏನಾಗುತ್ತಿತ್ತು . +ಅಲ್ಪಸಂಖ್ಯಾತರನ್ನು ದೂರುವ ಜನರು ಇದನ್ನು ಆಲೋಚಿಸಬೇಕು. +ಅದು ಹೋಗಲಿ, ಅಲ್‌ಸ್ಟರ್‌ ಈ ನಿಲುವೇಕೆ ತಾಳಿತು? +ಇದು ಮುಖ್ಯ ಪ್ರಶ್ನೆ. +ಆಲ್‌ಸ್ಟರ್‌ ಮತ್ತು ದಕ್ಷಿಣ ಐರ್ಲೆಂಡ್‌ಗಳ ನಡುವೆ ಒಂದು ಸಾಮಾಜಿಕ ಸಮಸ್ಯೆಯಿತ್ತು. +ಕ್ಯಾಥೋಲಿಕ್‌ ಮತ್ತು ಪ್ರೊಟೆಸ್ಟಂಟ್‌ ಪಂಗಡಗಳ ಸಮಸ್ಯೆ, ಅಂದರೆ ಒಂದರ್ಥದಲ್ಲಿ ಜಾತಿಯದೇ ಸಮಸ್ಯೆ. +ಇದು ಉದ್ಭವವಾಗಿ ಕ್ಯಾಥೋಲಿಕ್‌ ಹಾಗೂ ಪ್ರೋಟೆಸ್ಟಂಟ್‌ ಈ ಎರಡು ಜಾತಿಗಳ ಸಮಸ್ಯೆ ರಾಜಕೀಯ ಪರಿಹಾರಕ್ಕೆ ಅಡ್ಡಿಯಾಯಿತು. +ಇದನ್ನು ಅಲ್ಲಗಳೆಯುವವರೂ ಇದ್ದಾರೆ. +ಅಲ್ಲಿ ಕೂಡ ಸಾಮ್ರಾಜ್ಯವಾದಿಗಳ ಕೈವಾಡವಿತ್ತೆಂದು ಹೇಳುವುದುಂಟು. +ಆದರೆ ನನ್ನ ಪುರಾವೆಗಳಿನ್ನೂ ಮುಗಿದಿಲ್ಲ. +ರೋಮ್‌ನ ಇತಿಹಾಸವನ್ನುನೋಡೋಣ. +ಇಲ್ಲಿ ಯಾವುದೊ ಒಂದು ದುಷ್ಟ ಶಕ್ತಿಯ ಕೈವಾಡವಿದ್ದಿತೆಂದು ಯಾರೂ ಹೇಳಲಾರರು. +ರೋಮ್‌ನ ರಿಪಜ್ಲಿಕ್‌ ಸಂವಿಧಾನದಲ್ಲಿ ಜಾತಿವಾರು ಐತೀರ್ಪನ್ನು ಹೋಲುವ ಅಂಶಗಳಿದ್ದವು. +ರೋಮ್‌ ಚರಿತ್ರೆಯನ್ನು ಅಭ್ಯಾಸ ಮಾಡಿದವರಿಗೆ ಇದು ತಿಳಿಯುವುದು. +ರೋಮ್‌ನಲ್ಲಿ ಅರಸೊತ್ತಿಗೆಯನ್ನು ರದ್ದುಪಡಿಸಿದ ಮೇಲೆ ಕಾನ್ಸೂ ತಲರು ಹಾಗೂ ಧರ್ಮಾಧ್ಯಕ್ಷ ಇವರಿಬ್ಬರಲ್ಲಿ ರಾಜಾಧಿಕಾರವು ಹಂಚಿಹೋಯಿತು. +ಧರ್ಮಾಧ್ಯಕ್ಷರು ರಾಜನ ಧರ್ಮಾಧಿಕಾರಕ್ಕೆ ಬಾಧ್ಯಸ್ಥರಾದರು, ಕಾನ್ಸ್ಯೂಲರು ಇತರ ಆಡಳಿತಗಳ ಸೂತ್ರ ವಹಿಸಿದರು. +ಅಧಿಕಾರ ನಡೆಸುವವರು ಇಬ್ಬರು ಕಾನ್ಸ್ಯೂಲರು. +ಅವರಲ್ಲಿ ಒಬ್ಬ ಪ್ಯಾಟ್ರಶಿಯನ್‌ ಮತ್ತೊಬ್ಬ ಫ್ಲೆಬಿಯನ್‌ ಆಗಿರಬೇಕೆಂದು ರಿಪಬ್ಲಿಕ್‌ ಸಂವಿಧಾನ ವಿಧಿಸಿತು. +ಅದೇ ಮೇರೆಗೆ, ಧರ್ಮಾಧಿಕಾರಿಯ ಕೈಕೆಳಗಿರುವ ಅರ್ಧದಷ್ಟು ಜನ ಫ್ಲೆಬಿಯನ್ನರೂ, ಇನ್ನರ್ಧದಷ್ಟು ಪ್ಯಾಟ್ರಶಿಯನ್ನರೂ ಇರಬೇಕೆಂದು ವಿಧಿಸಲಾಗಿತ್ತು. +ಜಾತಿವಾರು ಐತೀರ್ಪನ್ನು ಬಹುಮಟ್ಟಿಗೆ ಹೋಲುವ ಈ ಬಗೆಯ ವಿಧಿಗಳನ್ನು ರೋಮ್‌ನ ರಿಪಬ್ಲಿಕ್‌ನ ಸಂವಿಧಾನದಲ್ಲಿ ಯಾಕೆ ಅಳವಡಿಸಲಾಗಿತ್ತು? +ಪ್ಯಾಟ್ರಶಿಯನ್ನರೂ ಹಾಗೂ ಫ್ಲೆಬಿಯನ್ನರು ಎರಡು ಪ್ರತ್ಯೇಕಜಾತಿಗಳವರಾಗಿದ್ದುದರಿಂದ ಈ ಎರಡು ವರ್ಗಗಳ ನಡುವಿನ ಸಾಮಾಜಿಕ ಭೇದವನ್ನು ಸಂವಿಧಾನ ಪರಿಗಣಿಸಬೇಕಾಯಿತು. +ಇದಲ್ಲದೆ ಬೇರೆ ಯಾವ ವಿವರಣೆಯೂ ಸಾಧ್ಯವಿಲ್ಲ. +ಒಟ್ಟಿನಲ್ಲಿಹೇಳುವುದಾದರೆ, ರಾಜಕೀಯ ಸುಧಾರಕರು ಎತ್ತ ನೋಡಿದರೂ ಕೂಡ, ಸಂವಿಧಾನವನ್ನು ರಚಿಸುವಾಗ ಸಾಮಾಜಿಕ ಸ್ಥಿತಿಯಿಂದ ಉದ್ಭವವಾಗಿರುವ ಸಮಸ್ಯೆಯನ್ನು ಕಡೆಗಣಿಸಲಾಗದು ಎಂಬುದು ತಿಳಿಯುತ್ತದೆ. +ಸಾಮಾಜಿಕ ಹಾಗೂ ಧಾರ್ಮಿಕ ಸಮಸ್ಯೆಗಳು ರಾಜಕೀಯ ಸಂವಿಧಾನದ ಮೇಲೆ ಪ್ರಭಾವ ಬೀರುತ್ತದೆ ಎಂಬುದಕ್ಕೆ ನಾನು ಆಯ್ದುಕೊಂಡ ಉದಾಹರಣೆಗಳು ತೀರಾ ನಿರ್ದಿಷ್ಟ ಸ್ವರೂಪದವುಗಳೆಂದು ತೋರಬಹುದು. +ಇರಬಹುದು, ಆದರೆ ಈ ಪ್ರಭಾವ ಅಥವಾ ಪರಸ್ಪರ ಸಂಬಂಧ ಸೀಮಿತವೆಂದು ತಿಳಿಯಬಾರದು. +ತದ್ವಿರುದ್ಧವಾಗಿ ರಾಜಕೀಯ ಕ್ರಾಂತಿಗಳು ನಡೆದಿದ್ದುವೆಂದು ಇತಿಹಾಸ ದೃಢೀಕರಿಸುತ್ತದೆ. +ಲೂಥರ್‌ ಆರಂಭಿಸಿದ ಧಾರ್ಮಿಕ ಸುಧಾರಣಾ ಪಂಥವು ಯೂರೋಪಿಯನ್ನರ ರಾಜಕೀಯ ವಿಮೋಚನೆಯ ಮುನ್ಸೂಚಿಯಾಯಿತು. +ಇಂಗ್ಲೆಂಡಿನಲ್ಲಿ ಪ್ಯುರಿಟನ್‌ ಪಂಥವೇ ರಾಜಕೀಯ ಸ್ವಾಂತತ್ತ್ಯಕ್ಕೆ ಅಡಿಗಲ್ಲನ್ನಿಟ್ಟಿತು. +ಅಮೇರಿಕಾದ ಸ್ವಾತಂತ್ರ್ಯಯುದ್ಧವನ್ನು ಗೆದ್ದದ್ದೂ ಪ್ಯುರಿಟನ್‌ ಪಂಥವೇ. +ಪ್ಯುರಿಟ್‌ ಪಂಥವೆಂಬುದು ಧಾರ್ಮಿಕ ಆಂದೋಲನವಾಗಿತ್ತು. +ಮುಸ್ಲಿಂ ಸಾಮ್ರಾಜ್ಯದ ಕಥೆಯೂ ಇದೇ. +ಅರಬರು ಒಂದು ರಾಜಕೀಯ ಶಕ್ತಿಯಾಗುವುದಕ್ಕೆ ಮೊದಲು ಪೈಗಂಬರ ಮಹಮ್ಮದರಿಂದ ಆರಂಭವಾದ ಒಂದು ಸಮಗ್ರ ಧಾರ್ಮಿಕ ಕ್ರಾಂತಿಯಲ್ಲಿ ಅವರು ಹಾಯ್ದುಬಂದಿದ್ದರು. +ಭಾರತೀಯ ಇತಿಹಾಸವು ಕೂಡ ಇದೇ ನಿರ್ಣಯವನ್ನು ಬೆಂಬಲಿಸುತ್ತದೆ. +ಚಂದ್ರಗುಪ್ತನು ನಡೆಸಿದ ರಾಜಕೀಯ ಕ್ರಾಂತಿಗೆ ಮುನ್ನ ಬುದ್ಧನಿಂದ ಧಾರ್ಮಿಕವಾಗಿ ಹಾಗೂ ಸಾಮಾಜಿಕ ಕ್ರಾಂತಿಯೊಂದು ನಡೆದುಹೋಗಿತ್ತು. + ಮಹಾರಾಷ್ಟದ ಸಾಧುಸಂತರು ಸಾಧಿಸಿದ ಧಾರ್ಮಿಕ ಸಾಮಾಜಿಕ ಸುಧಾರಣೆಯತರು ವಾಯವೇ ಶಿವಾಜಿಯ ರಾಜಕೀಯ ಕಾಂತಿ ಉದ್ಭವಿಸಿತು. +ಸಿಕ್ಚರ ರಾಜಕೀಯ ಕ್ರಾಂತಿಗೆ ಪೂರ್ವಭಾವಿಯಾಗಿ ಗುರುನಾನಕರ ನೇತೃತ್ವದಲ್ಲಿ ಧಾರ್ಮಿಕ, ಸಾಮಾಜಿಕ ಕ್ರಾಂತಿ ನಡೆದಿತ್ತು. +ಇನ್ನುಉದಾಹರಣೆಗಳನ್ನು ಬೆಳೆಸುತ್ತಾ ಹೋಗುವ ಅಗತ್ಯವಿಲ್ಲ. +ಒಂದು ಜನಾಂಗದ ರಾಜಕೀಯ ವಿಕಾಸ ಸಾಧ್ಯವಾಗಬೇಕಾದರೆ ಅದಕ್ಕೆ ಮುನ್ನ ಆ ಜನರ ಮನಸ್ಸು ಹಾಗೂ ಆತ್ಮಗಳು ದಾಸ್ಯದಿಂದ ಬಿಡುಗಡೆ ಹೊಂದಲೇಬೇಕು. +ಇದನ್ನು ಈ ಮೇಲಿನ ನಿದರ್ಶನಗಳು ಸಾಬೀತುಗೊಳಿಸುತ್ತವೆ. +ಈಗ ನಾನು ಸಮಾಜವಾದಿಗಳ ವಿಷಯಕ್ಕೆ ಬರುತ್ತೇನೆ. +ಸಾಮಾಜಿಕ ವ್ಯವಸ್ಥೆಯಿಂದ ಉತ್ಪನ್ನವಾದ ಸಮಸ್ಯೆಯನ್ನು ಸಮಾಜವಾದಿಗಳು ಉಪೇಕ್ವಿಸಬಲ್ಲರೆ? +ಭಾರತೀಯ ಸಮಾಜವಾದಿಗಳು ಯೂರೋಪ್‌ನಲ್ಲಿಯ ತಮ್ಮ ವೈಚಾರಿಕ ಬಾಂಧವರನ್ನು ಅನುಕರಿಸುತ್ತಾರೆ. +ಭಾರತದಲ್ಲಿರುವ ವಸ್ತುಸ್ಥಿತಿಯನ್ನು ಅರಿತುಕೊಳ್ಳದೆ,ಇತಿಹಾಸವನ್ನು ಆರ್ಥಿಕ ದೃಷ್ಟಿಯಿಂದಲೇ ಅರ್ಥೈಸಲು ಹೆಣಗುತ್ತಾರೆ. +ಮನುಷ್ಯ ಆರ್ಥಿಕ ಜೀವಿ, ಅವನ ಆಶೋತ್ತರಗಳು ಕೆಲಸಕಾರ್ಯಗಳೂ ಆರ್ಥಿಕ ವಾಸ್ತವವನ್ನು ಅವಲಂಬಿಸಿರುತ್ತದೆ. +ಶಕ್ತಿಯ ಏಕಮೇವ ಮೂಲವೆಂದರೆ ಆಸ್ತಿ, ಇದು ಅವರ ವಾದ. +ಆದುದರಿಂದ ಅವರು ಹೇಳುವುದೇನೆಂದರೆ ರಾಜಕೀಯ ಹಾಗೂ ಸಾಮಾಜಿಕ ಸುಧಾರಣೆಗಳು ಅದ್ಭುತವಾದ ಭ್ರಾಂತಿಗಳು. +ಇತರ ಯಾವುದೇ ಸುಧಾರಣೆಗೆ ಮುನ್ನ ಆಸ್ತಿಯನ್ನು ಸರ್ವರಲ್ಲಿ ಸಮಾನವಾಗಿ ಹಂಚಿ ಆರ್ಥಿಕ ಸುಧಾರಣೆ ಮಾಡುವುದು ಅತ್ಯವಶ್ಯ ಸಮಾಜವಾದಿಗಳ ಈ ವಾದದ ಪ್ರತಿಯೊಂದು ಅಂಶವನ್ನೂ ಅದರ ಆಧಾರವನ್ನೂ ಪ್ರಶ್ನಿಸಬೇಕಾಗುತ್ತದೆ. +ಮನುಷ್ಯನ ಚಟುವಟಿಕೆಗಳಿಗೆಲ್ಲ ಆರ್ಥಿಕ ಉದ್ದೇಶವೊಂದೇ ಪ್ರೇರಕವೆಂಬುದನ್ನು ನಾವು ಅಂಗೀಕರಿಸಲಾಗುವುದಿಲ್ಲ. +ಆರ್ಥಿಕ ಶಕ್ತಿಯೊಂದೇ ಶಕ್ತಿ, ಬೇರಾವುದೂ ಶಕ್ತಿಯಲ್ಲ ಎಂಬುದನ್ನು ಮಾನವ ಸಮಾಜದ ಅಭ್ಯಾಸ ಎಂದೂ ಒಪ್ಪಿಕೊಳ್ಳಲಾರದು. +ಮನುಷ್ಯನಿಗಿರುವ ಸಾಮಾಜಿಕ ದರ್ಜೆ ಅಥವಾ ಸ್ಥಾನವೇ ಎಷ್ಟೋ ಸಲ ಶಕ್ತಿಯ ಹಾಗೂ ಅಧಿಕಾರದ ಮೂಲವಾಗಿರುತ್ತದೆ. +ಜನಸಾಮಾನ್ಯರ ಮೇಲೆ ಅನೇಕ ಮಹಾತ್ಮರು ಪ್ರಭಾವ ಬೀರಿದ್ದು ಹೀಗೆಯೇ. +ಭಾರತದಲ್ಲಿನ ಲಕ್ಷಾಧೀಶರು ಎಂದೋ ನಿಧನರಾದ ಸಾಧು ಫಕೀರರಿಗೆ ವಿಧೇಯರಾಗುವುದೇಕೆ? +ತಮ್ಮ ಸರ್ವಸ್ಪವಾದ ಒಡವೆ ವಸ್ತುಗಳನ್ನು ಮಾರಿ ವಾರಣಾಸಿಗೋ, ಮಕ್ಕಾಯಾತ್ರೆಗೋ ಲಕ್ಷ ಲಕ್ಷ ಸಂಖ್ಯೆಯ ಬಡವರು ಹೋಗುತ್ತಾರಲ್ಲ, ಅದೇಕೆ? +ಧರ್ಮವೆಂಬುದು ಶಕ್ತಿಮೂಲವೆಂದು ಭಾರತದಲ್ಲಿ ಇತಿಹಾಸ ನಿದರ್ಶಿಸುತ್ತದೆ. +ಯಾವ ನ್ಯಾಯಾಧೀಶನಿಗಿಂತಲೂ ಹೆಚ್ಚಿನ ಅಧಿಕಾರವನ್ನು ಧರ್ಮಗುರು ಜನಸಾಮಾನ್ಯರ ಮೇಲೆ ಚಲಾಯಿಸುತ್ತಾನೆ. +ಮುಷ್ಕರಗಳು, ಚುನಾವಣೆಗಳಂತಹ ವಿಷಯಗಳೂ ಕೂಡ ಧಾರ್ಮಿಕ ಅಂಶಗಳಾಗಿ ಪರಿವರ್ತನೆ ಹೊಂದುತ್ತವೆ. +ಧರ್ಮದ ಅಥವಾ ಮತೀಯ ಅಂಶವೇ ಮೇಲ್ಸೈಯಾಗುತ್ತದೆ. +ಮನುಷ್ಯನ ಮೇಲೆ ಧರ್ಮಪ್ರಭಾವವನ್ನು ತಿಳಿಯಲು ಇನ್ನೊಂದು ನಿದರ್ಶನವಾಗಿ ರೋಮ್‌ನ ಫ್ಲೆಬಿಯನ್ನರ ಪ್ರಕರಣವನ್ನೇ ನೋಡಬಹುದು. +ರೋಮ್‌ ರಿಪಬ್ಲಿಕ್‌ನ ಅತ್ಯುನ್ನತ ಅಧಿಕಾರದಲ್ಲಿ ತಮಗೆ ಪಾಲು ಬೇಕೆಂದು ಹೋರಾಡಿ ಫ್ಲೆಬಿಯನ್ನರು ತಮ್ಮ ಸಂಘವಾದ ಕಮಿಟಯಾ ಸೆಂಚುರಿಯಟಾದಿಂದ ಪ್ರತ್ಯೇಕವಾಗಿ ನಿರ್ಮಿಸಲ್ಪಟ್ಟ ಮತದಾರ ಕ್ಷೇತ್ರದಿಂದ ಒಬ್ಬ ಫ್ಲೆಬಿಯನ್‌ ಕಾನ್ಸ್ಯೂಲ್‌ನನ್ನು ನಿಯಮಿಸುವುದರಲ್ಲಿ ಜಯಶಾಲಿಯಾಗಿದ್ದರು. +ಅವರಿಗೆ ತಮ್ಮವನೇ ಒಬ್ಬ ಕಾನ್ಸ್ಯೂಲ್‌ನಾಗುವುದು ಬೇಕಾಗಿತ್ತು. +ಏಕೆಂದರೆ ಪ್ಯಾಟ್ರಶಿಯನ್‌ ಕಾನ್ಸ್ಯೂಲ್‌ಗಳು ಆಡಳಿತದಲ್ಲಿ ಫ್ಲೆಬಿಯನ್ನರಿಗೆ ಭೇದಭಾವ ತೋರುತ್ತಾರೆಂದು ಅವರಿಗೆ ಅನ್ನಿಸಿತ್ತು. +ಅವರು ಗಳಿಸಿದ್ದು ದೊಡ್ಡ ವಿಜಯ, ಯಾಕೆಂದರೆ ರೋಮ್‌ನ ರಿಪಬ್ಲಿಕ್‌ನ ಸಂವಿಧಾನದ ಮೇರೆಗೆ ಒಬ್ಬ ಕಾನ್ಸ್ಯೂಲ್‌ ಮಾಡಿದ್ದನ್ನು ನಿರಾಕರಿಸುವುದಕ್ಕೆ ಇನ್ನೊಬ್ಬ ಕಾನ್ಸ್ಯೂಲ್‌ನಿಗೆ ಅಧಿಕಾರವಿತ್ತು ಆದರೆ ವಸ್ತುತಃ ಇದರಿಂದ ಫ್ಲೆಬಿಯನ್ನರಿಗೆ ಲಾಭವಾಯಿತೆ?ಎಂದೂ ಆಗಲಿಲ್ಲ. +ಪ್ಯಾಟ್ರಶಿಯನ್‌ ಕಾನ್ಸ್ಯೂಲ್‌ನನ್ನು ಕ್ರ +ಬಿಟ್ಟು ಸ್ವತಂತ್ರವಾಗಿ ವರ್ತಿಸಬಲ್ಲಂಥ ಬಲಿಷ್ಠ ಫ್ಲೆಬಿಯನ್‌ ಕಾನ್ಸ್ಯೂಲ್‌ ಆ ಜನಕ್ಕೆ ಎಂದೂ ದೊರೆಯಲಿಲ್ಲ. +ಪ್ರತ್ಯೇಕವಾದ ಮತದಾರ ಕ್ಷೇತ್ರವಿದ್ದುದರಿಂದ ತಮ್ಮವನೇ ಆದೊಬ್ಬ ಬಲಿಷ್ಠ ಕಾನ್ಸ್ಯೂಲ್‌ನನ್ನು ಅವರು ಆಯ್ಕೆ ಮಾಡಬಹುದಾಗಿತ್ತು. +ಆದರೆ ಹಾಗೆ ಮಾಡಲು ಅವರಿಗೆ ಏಕೆ ಸಾಧ್ಯವಾಗಲಿಲ್ಲ? +ಮನುಷ್ಯರ ಮನಸ್ಸಿನ ಮೇಲೆ ಧರ್ಮವು ಸ್ಥಾಪಿಸಿಕೊಂಡು ಬಂದಿರುವ ಪ್ರಭುತ್ವವೆಂಥದೆಂಬುದನ್ನು ಈ ಪ್ರಶ್ನೆಯ ಉತ್ತರ ಪ್ರಕಟಿಸುತ್ತದೆ. +ಡೆಲ್ಜಿಯ ದೈವವಾಣಿ ಯಾರನ್ನು ದೇವಿಗೆ ಸಮ್ಮತವೆಂದು ಸಾರುತ್ತಿತ್ತೊ ಅಂತಹವರು ಮಾತ್ರ ಅಧಿಕಾರಿಯಾಗಿ ಆಡಳಿತವನ್ನು ಕೈಕೊಳ್ಳಬಹುದಿತ್ತಲ್ಲದೆ, ಬೇರೆ ಯಾರಿಗೂ ಹಾಗೆ ಮಾಡಲು ಸಾಧ್ಯವಿರಲಿಲ್ಲ. +ಇದು ಸಮಸ್ತ ರೋಮ್‌ನ ಜನತೆಯಲ್ಲಿ ರೂಢಿಯಲ್ಲಿದ್ದ ನಂಬಿಕೆ. +ಡೆಲ್ಫಿ ದೇವಸ್ಥಾನದ ಸೂತಧಾರಿಗಳಾಗಿದ್ದವರೆಲ್ಲ ಪ್ಯಾಟ್ರಶಿಯನ್ನರೇ ಆಗಿದ್ದರು. +ಡೆಲ್ಫಿ ಹೀಗಿದ್ದುದರಿಂದ ಫ್ಲೆಬಿಯನ್ನರು ಬಲಿಷ್ಠನಾದೊಬ್ಬ ತಮ್ಮವನನ್ನು ಕಾನ್ಸ್ಯೂಲ್‌ನೆಂದು ಆಯ್ಕೆ ಮಾಡಿದಾಗಲೆಲ್ಲ ಅವನು ಪ್ಯಾಟ್ರಶಿಯನ್ನರಿಗೆ ವಿರೋಧಿಯೆಂದು ತಿಳಿದು ದೇವಿಗೆ ಈತನು ಸಮೃತನಾಗಲಿಲ್ಲವೆಂದು ದೇವವಾಣಿ ಸಾರುತ್ತಿತ್ತು .\ +ಈ ಕಾರಣದಿಂದ ಫ್ಲೆಬಿಯನ್ನರಿಗೆತನ್ನ ಹಕ್ಕನ್ನು ಚಲಾಯಿಸಲಾಗಲೇ ಇಲ್ಲ. +ಆದರೆ ಇದರಲ್ಲಿ ಗಮನಿಸಬೇಕಾದ ಒಂದಂಶವೆಂದರೆ ಫ್ಲೆಬಿಯನ್ನರು ಈ ಮೋಸಕ್ಕೆ ಒಳಗಾಗಲು ಸಮ್ಮತಿಸುತ್ತಲೇ ಬಂದರೆಂಬುದು. +ಪ್ಯಾಟ್ರಶಿಯನ್ನರಂತೆ ಫ್ಲೆಬಿಯನ್ನರು ಕೂಡದೇವವಾಣಿಯ ಅಧಿಕಾರಕ್ಕೆ ತೆಪ್ಪಗೆ ತಲೆ ಬಾಗುತ್ತಿದ್ದರು. +ಜನತೆ ಆಯ್ಕೆ ಮಾಡಿದರೆ ಸಾಲದು, ದೇವತೆ ಒಪ್ಪುವುದು ಅದಕ್ಕಿಂತ ಮುಖ್ಯವೆಂದು ಅವರು ನಂಬಿದ್ದರು. +ಈ ನಂಬಿಕೆಯನ್ನು ಅಲ್ಲಗಳೆದು ಆಯ್ಕೆಯೇ ಮುಖ್ಯವೆಂದು ಒತ್ತಾಯ ಮಾಡಿದ್ದರೆ ತಾವು ಗಳಿಸಿದ್ದೆ ರಾಜಕೀಯ ಹಕ್ಕಿನಿಂದ ಅವರು ಸಂಪೂರ್ಣ ಲಾಭ ಪಡೆಯಬಹುದಾಗಿತ್ತು. +ಆದರೆ ಅವರು ಹಾಗೆ ಮಾಡಲಿಲ್ಲ. +ಆದರೆ ಅವರು ತಮಗೆ ಅಷ್ಟು ಒಪ್ಪಿಗೆಯಲ್ಲದವನಾದರೂ ದೇವಿಗೆ ಸಮ್ಮತನಾದ ಎಂದರೆ ಪ್ಯಾಟ್ರಶಿಯನ್ನರಿಗೆ ಅನುಕೂಲಕರನಾದ ಇನ್ನೊಬ್ಬನನ್ನು ಆಯ್ಕೆ ಮಾಡಲು ಒಪ್ಪುತ್ತಿದ್ದರು. +ಯಾವ ರಾಜಕೀಯ ಹಕ್ಕಿಗಾಗಿ ನಿಖರವಾಗಿ ಹೋರಾಡಿಜಯ ಪಡೆದಿದ್ದರೋ ಅದನ್ನು ಕೂಡ ಪರಿತ್ಯಜಿಸಲು ಅವರು ಸಿದ್ಧರಾದರು, ಆದರೆ ತಮ್ಮ ಧರ್ಮವನ್ನು ಮಾತ್ರ ಬಿಡಲೊಪ್ಪಲಿಲ್ಲ. +ಈ ನಿದರ್ಶನ ಏನು ಹೇಳುತ್ತದೆ? +ಧರ್ಮವು ಧನಕ್ಕಿಂತ ಹೆಚ್ಚಲ್ಲದಿದ್ದರೂ ಸಹಧನದಷ್ಟೇ ಶಕ್ತಿಯ ಮೂಲವಾಗಿರಬಹುದು. +ಆದರೆ ಪ್ರಸಕ್ತ ಸಂದರ್ಭದ ಯುರೋಪಿಗೆ ಅನ್ವಯವಾಗುವ ಶಕ್ತಿಮೂಲದ ಸತ್ಯ ಇಂದಿನ ಭಾರತಕ್ಕೂ ಅನ್ವಯಿಸುತ್ತದೆ ಎಂದಾಗಲೀ ಅಥವಾ ಇಂದಿನ ಯೂರೋಪಿಗೂ ಅನ್ವಯಿಸುತ್ತದೆ ಎಂದಾಗಲೀ ಭಾವಿಸಿದರೆ ಅದು ಸಮಾಜವಾದಿಗಳ ತಪ್ಪು ಕಲ್ಪನೆಯೇ ಸರಿ. +ಒಬ್ಬ ಮನುಷ್ಯನಿಗೆ ಇನ್ನೊಬ್ಬನ ಸ್ವಾತಂತ್ರ್ಯವನ್ನು ನಿಯಂತ್ರಿಸುವ ಶಕ್ತಿ ಅಥವಾ ಅಧಿಕಾರ ಒದಗುವುದು ಧರ್ಮದಿಂದ,ಸಾಮಾಜಿಕ ಸ್ಥಾನಮಾನದಿಂದ ಹಾಗೂ ಆಸ್ತಿಯಿಂದ. +ಈ ಮೂರರಲ್ಲಿ ಒಂದು ಕಾಲದಲ್ಲಿ ಒಂದು ಪ್ರಧಾನವಾಗಿದ್ದರೆ, ಇನ್ನೊಂದು ಕಾಲದಲ್ಲಿ ಇನ್ನೊಂದು ಪ್ರಧಾನವಾಗುತ್ತದೆ ಅಷ್ಟೇ ವ್ಯತ್ಯಾಸ. +ಸ್ವಾತಂತ್ರ್ಯವೇ ಆದರ್ಶವಾಗಿದ್ದ ಪಕ್ಷದಲ್ಲಿ ಒಬ್ಬನು ಇನ್ನೊಬ್ಬನ ಮೇಲೆ ಅಧಿಕಾರ ನಡೆಸಲು ಆಸ್ಪದವಿಲ್ಲದಂತೆ ಮಾಡುವುದೇ ಸ್ವಾತಂತ್ರ್ಯವೆಂದು ಅರ್ಥವಿರುವುದಾದರೆ, ಆರ್ಥಿಕ ಸುಧಾರಣೆಯೊಂದೇ ನಾವು ಸಾಧಿಸಬೇಕಾದ ಗುರಿಯೆಂದು ಹೇಳಲಾಗದು. +ಯಾವುದೇ ನಿರ್ದಿಷ್ಟ ಕಾಲದಲ್ಲಿ ಅಥವಾ ನಿರ್ದಿಷ್ಟ ಸಮಾಜದಲ್ಲಿ ಶಕ್ತಿಯ ಅಥವಾ ಅಧಿಕಾರದ ಮೂಲವು ಸಾಮಾಜಿಕ ಮತ್ತು ಧಾರ್ಮಿಕವಾಗಿದ್ದರೆ, ಆಗ ಅಂಥ ಪ್ರಸಕ್ತಿಯಲ್ಲಿ ಅಗತ್ಯನಡೆಯಬೇಕಾದುದು ಸಾಮಾಜಿಕ ಹಾಗೂ ಧಾರ್ಮಿಕ ಸುಧಾರಣೆಯೆಂದು ನಾವು ಒಪ್ಪಿಕೊಳ್ಳಬೇಕಾಗುತ್ತದೆ. +ಭಾರತೀಯ ಸಮಾಜವಾದಿಗಳು ಇತಿಹಾಸವನ್ನು ಆರ್ಥಿಕ ದೃಷ್ಟಿಯಿಂದಲೇ ವಿವರಿಸುತ್ತಾರೆ. +ಇದಕ್ಕೆ ಪ್ರತಿಯಾಗಿಯೂ ವಾದಿಸಬಹುದು. +ಆಸ್ತಿ ಸರ್ವರಿಗೂ ಸಮಪಾಲಾಗಿರುವಂತೆ ಮಾಡುವುದು ನಿಜವಾದ ಏಕೈಕ ಸುಧಾರಣೆಯೆಂದು, ಉಳಿದವುಕ್ಕಿಂತಲೂ ಮುಂಚೆ ಇದನ್ನು ಸಾಧಿಸಲೇಬೇಕೆಂದು ಹೇಳುವ ಸಮಾಜವಾದಿಗಳ ವಾದಕ್ಕೆ ಇತಿಹಾಸದ ಆರ್ಥಿಕ ವಿವರಣೆ ಅವಶ್ಯಕವಾಗಿಲ್ಲ. +ಆದರೆ ಸಮಾಜವಾದಿಗಳಿಗೆ ನಾನು ಹೀಗೆ ಕೇಳಬಯಸುತ್ತೇನೆ : +ಸಾಮಾಜಿಕ ವ್ಯವಸ್ಥೆಯಲ್ಲಿ ಸುಧಾರಣೆ ಮಾಡದೆ ನೀವು ಆರ್ಥಿಕ ಸುಧಾರಣೆಯನ್ನು ಸಾಧಿಸಬಲ್ಲಿರಾ? +ಭಾರತೀಯ ಸಮಾಜವಾದಿಗಳಿಗೆ ಈ ಪ್ರಶ್ಯೆ ಹೊಳೆದಂತೆ ತೋರುವುದಿಲ್ಲ. +ಅವರಿಗೆ ಅನ್ಯಾಯ ಬಗೆಯುವ ಮನಸ್ಸು ನನಗಿಲ್ಲ. +ಕೆಲದಿನಗಳ ಹಿಂದೆ ನನ್ನ ಮಿತ್ರನೊಬ್ಬನಿಗೆ ಪ್ರಮುಖ ಸಮಾಜವಾದಿಯೊಬ್ಬನು ಬರೆದ ಪತ್ರದಿಂದ ಒಂದೆರಡು ವಾಕ್ಯಗಳನ್ನು ಇಲ್ಲಿ ಉದ್ದರಿಸುತ್ತಿದ್ದೇನೆ. +“ಒಂದು ವರ್ಗದವರು ಇನ್ನೊಂದು ವರ್ಗದವರನ್ನು ದಬ್ಬಾಳಿಕೆಯಿಂದ ನಡೆಸಿಕೊಳ್ಳುತ್ತಿರುವುದು ಸಂಪೂರ್ಣವಾಗಿ ನಿರ್ನಾಮವಾಗುವವರೆಗೆ ಭಾರತದಲ್ಲಿ ನಾವು ಸ್ವತಂತ್ರ ಸಮಾಜವನ್ನು ನಿರ್ಮಿಸಲಾರೆವು. +ಸಮಾಜವಾದಿ ಆದರ್ಶವನ್ನು ನಾನು ನಂಬಿದವನು, ಆದುದರಿಂದ ಸಮನಾಗಿ ನಡೆಸಿಕೊಳ್ಳಬೇಕೆಂಬ ತತ್ವದಲ್ಲಿಯೂ ನನಗೆ ನಂಬಿಕೆಯಿದೆ. +ಇತರ ಅನೇಕ ಸಮಸ್ಯೆಗಳಂತೆ ಈ ಸಮಸ್ಯೆಗೆ ಕೂಡ ಸಮಾಜವಾದವೊಂದೇ ಪರಿಹಾರವನ್ನು ಒದಗಿಸಬಲ್ಲದೆಂದು ನಾನು ಭಾವಿಸುತ್ತೇನೆ”. +ಈಗ ಇನ್ನೊಂದು ಪ್ರಶ್ನೆಯನ್ನು ನಾನು ಕೇಳಬಯಸುತ್ತೇನೆ. +ವಿವಿಧ ವರ್ಗಗಳನ್ನು ಸಮನಾಗಿ ನಡೆಸಿಕೊಳ್ಳುವ ತತ್ವದಲ್ಲಿ ನನಗೆ ನಂಬಿಕೆಯಿದೆ ಎಂದು ಹೇಳಿದರೆ ಸಮಾಜವಾದದ ರಹಸ್ಯವೆ ಅವರಿಗೆ ಅರ್ಥವಾಗಿಲ್ಲ ಎಂಬುದು ಸ್ಪಷ್ಟ ಸಮಾಜವಾದವೆಂಬುದು ಎಲ್ಲಿಯೋ ದೂರದಲ್ಲಿರುವ ಒಂದು ಆದರ್ಶ ಮಾತ್ರವಾಗಿರದೆ ಅದೊಂದು ಕೃತಿಗೆ ಇಳಿಸಬಲ್ಲ ಕಾರ್ಯಕ್ರಮ. +ಸಮಾಜವಾದ ಕೇವಲ ಆದರ್ಶವಾಗಿರದೆ ಅನುಷ್ಠಾನಕ್ಕೆ ತರುವ ಕಾರ್ಯಕ್ರಮವಾಗಿರುವುದಾದರೆ ಸಮಾಜವಾದಿಗೆ ಸಮಾನತೆಯಲ್ಲಿ ನಂಬುಗೆಯಿರುವುದೇ ಇಲ್ಲವೇ ಎಂಬುದು ಪ್ರಶ್ನೆಯಾಗುವುದಿಲ್ಲ. +ತತ್ವವೆಂದೂ ಸಂಪ್ರದಾಯವೆಂದೂ ಒಂದು ವರ್ಗ ಇನ್ನೊಂದನ್ನು ದಬ್ಬಾಳಿಕೆಯಿಂದ ಕೆಳಮೆಟ್ಟುವುದಕ್ಕೆ, ಈ ಅನ್ಯಾಯ ಮುಂದುವರಿಯುವುದಕ್ಕೆ ಹೀಗೆಯೇ ಅವಕಾಶವಿರಬೇಕೆ? +ಇದನ್ನು ಸಮಾಜವಾದಿ ಸರಿಯೆಂದು ಒಪ್ಪಿಕೊಳ್ಳುತ್ತಾನೆಯೇ? +ನನ್ನ ವಾದವನ್ನು ವಿವರಿಸುವುದಕ್ಕಾಗಿ ಈಗ ಸಮಾಜವಾದದ ಮುಖ್ಯ ಘಟಕಾಂಶಗಳನ್ನು ವಿಶ್ಲೇಷಿಸಬೇಕಾಗಿದೆ. +ಒಂದು ಕ್ರಾಂತಿಯಾಗಿ ಅಧಿಕಾರ ಸೂತ್ರವನ್ನೆಲ್ಲ ತಮ್ಮ ಕೈಗೆ ವಶಪಡಿಸಿಕೊಳ್ಳದೆ ಸಮಾಜವಾದಿಗಳು ತಮ್ಮ ಆರ್ಥಿಕ ಸುಧಾರಣೆಯನ್ನು ಸಾಧಿಸಲಾರರು. +ಈ ಅಧಿಕಾರವನ್ನು ಕೂಡ ದಲಿತವರ್ಗ ಅಥವಾ ಶ್ರಮಜೀವಿ ವರ್ಗವೇ ವಶಪಡಿಸಿಕೊಳ್ಳಬೇಕು. +ಈಗ ನಾನು ಕೇಳುವ ಮೊದಲನೆಯ ಪ್ರಶ್ನೆ ಇದು. +ಭಾರತದಲ್ಲಿಯ ಶ್ರಮಜೀವಿಗಳೆಲ್ಲರೂ ಈ ಕ್ರಾಂತಿಗಾಗಿ ಒಗ್ಗೂಡುವರೆ? +ಇಂತಹ ಒಂದು ಮಹಾಕಾರ್ಯಕ್ಕೆ ಇರುವ ಪ್ರೇರಣೆ ಯಾವುದು? +ತನ್ನೊಡನೆ ಇಂತಹದೊಂದು ಕಾರ್ಯಕ್ಕೆ ಮುಂದೆ ಬಂದವರಲ್ಲಿ ಸಮಾನತೆ, ಭ್ರಾತೃತ್ವಭಾವ ಮತ್ತು ಎಲ್ಲಕ್ಕೂ ಪ್ರಧಾನವಾಗಿ ನ್ಯಾಯಬುದ್ಧಿ ನಿಶ್ಚಿತವಾಗಿ ಉಂಟುಎಂದು ನಂಬಿಕೆಯಾದಾಗಲೇ ಮನುಷ್ಯನು ಕಾರ್ಯಕ್ಕೆ ತೊಡಗುತ್ತಾನೆ. +ಕ್ರಾಂತಿ ಸಫಲವಾದ ಮೇಲೆ ನಮ್ಮೆಲ್ಲರನ್ನು ಸಮನಾಗಿ ನಡೆಸಿಕೊಳ್ಳುವರೆಂದು ಜಾತಿಮತಗಳ ಭೇದಭಾವ ಇರುವುದಿಲ್ಲವೆಂದು ಭರವಸೆಯಿಲ್ಲದೆ ಹೋದರೆ ಜನರು ಕ್ರಾಂತಿ ಕಾರ್ಯಕ್ಕೆ ಸೇರಲಾರರು. +ಕ್ರಾಂತಿಯ ಮುಂದಾಳಾದ ಸಮಾಜವಾದಿ ತನಗೆ ಜಾತಿಭೇದದಲ್ಲಿ ನಂಬಿಕೆಯಿಲ್ಲ ಎಂದು ಆಶ್ವಾಸನೆ ಕೊಟ್ಟರೆ ಸಾಲದು. +ಈ ಆಶ್ವಾಸನೆ ಇನ್ನೂ ಆಳದಸ್ತರವಾದ ಅಡಿಗಟ್ಟನಿಂದ ಎಂದರೆ ಕ್ರಾಂತಿಕಾರ್ಯಕ್ಕೆ ಹೊರಟ ಎಲ್ಲರ ಅಂತಃಕರಣದಿಂದ ಬರಬೇಕು. +ತಾವೆಲ್ಲ ಸಮಾನರು, ಸೋದರರು ಎಂಬ ಭಾವನೆ ಅವರಲ್ಲಿ ದೃಢವಾಗಿ ನೆಲಸಿರಬೇಕು. +ಭಾರತದ ಶ್ರಮಜೀವಿ ವರ್ಗ ಬಡತನದಲ್ಲಿದೆ ನಿಜ. +ಆದರೆ ತಮ್ಮ ಸಮಾಜದಲ್ಲಿ ಶ್ರೀಮಂತ-ದರಿದ್ರ ಎಂಬ ಭೇದವಲ್ಲದೆ ಬೇರಾವ ಭೇದಗಳೂ ಇಲ್ಲವೆಂದು ಅದು ಒಪ್ಪುವುದೆ? +ಜಾತಿಜಾತಿಗಳ ಭೇದವನ್ನಾಗಲಿ, ಉಚ್ಚ-ನೀಚ ಭೇದವನ್ನಾಗಲಿ ತಾವು ಪರಿಗಣಿಸುವುದಿಲ್ಲವೆಂದು ಭಾರತದ ಬಡಜನರು ಹೇಳಬಲ್ಲರೆ? +ಇಂತಹ ತಾರತಮ್ಯಗಳನ್ನು ಅವರು ಪರಿಗಣಿಸುತ್ತಲೇ ಇದ್ದಾರೆಂಬುದು ವಸ್ತುಸ್ಥಿತಿ. +ಹೀಗಿರುವಾಗ ಇಂತಹ ಜನರು ಶ್ರೀಮಂತ ವಿರುದ್ಧವಾದ ದಂಗೆಯಲ್ಲಿ ಒಗ್ಗೂಡುವರೆಂಬ ನಂಬುಗೆಯೆಲ್ಲಿ? +ಶ್ರಮಜೀವಿಗಳೆಲ್ಲ ಒಗ್ಗೂಡದೆ ಹೋದ ಪಕ್ಷದಲ್ಲಿ ಕ್ರಾಂತಿ ನಡೆಯಿತೆಂದೂ ಸಮಾಜವಾದಿಗಳಿಗೆ ಅಧಿಕಾರ ದೊರೆಯಿತೆಂದೂ ತರ್ಕಕ್ಕಾಗಿ ಭಾವಿಸೋಣ. +ಹಾಗಾದಾಗ ಭಾರತದಲ್ಲಿರುವ ವಿಶಿಷ್ಟ ಸಾಮಾಜಿಕ ಪರಿಸ್ಥಿತಿಯಿಂದಲೆ ಉದ್ದವದಾದ ಸಮಸ್ಯೆಗಳನ್ನು ಸಮಾಜವಾದಿಗಳು ಬಿಡಿಸಬೇಕಾಗುವುದು. +ಉಚ್ಚ-ನೀಚ, ಸ್ಪರ್ಶ-ಅಸ್ಪರ್ಶ ಮೊದಲಾದ ಭೇದಗಳನ್ನು ಪಾಲಿಸುತ್ತಾ ಬಂದಿರುವ ಜನರ ಸಮಸ್ಯೆಗಳನ್ನು ಬಗೆಹರಿಸದೆ ಸಮಾಜವಾದ ಭಾರತದಲ್ಲಿಒಂದು ಸೆಕೆಂಡಿನಷ್ಟು ಕಾಲ ಆಡಳಿತ ನಡೆಸಲಾರದು. +ಬಣ್ಣದ ಮಾತಾಡುವುದರಲ್ಲಿಯೇ ತೃಪ್ತಿ ಪಡದೆ,ಸಮಾಜವಾದ ವಸ್ತುತಃ ಕಾರ್ಯರೂಪದಲ್ಲಿ ಬರಬೇಕೆಂದು ಸಮಾಜವಾದಿಗಳು ಬಯಸುವುದಾದರೆ ಸಮಾಜಸುಧಾರಣೆಯ ಸಮಸ್ಯೆ ಮೂಲಭೂತವಾದುದೆಂದೂ, ಸಾಮಾಜಿಕ ವ್ಯವಸ್ಥೆಯನ್ನು ಸುಧಾರಿಸದೆ ಕ್ರಾಂತಿ ಸಾಧ್ಯವಾಗದು ಎಂದೂ ತಿಳಿಯಬೇಕು. +ಕ್ರಾಂತಿಗೆ ಯಶಸ್ಸು ಸಿಗದಿದ್ದರೂ ಜಾತಿಯ ಸಮಸ್ಯೆಯನ್ನುಸಮಾಜವಾದಿ ಬಿಡಿಸಲೇಬೇಕಾಗುತ್ತದೆ. +ಹಾಗಾದರೆ ಒಟ್ಟು ಅಂತರಾರ್ಥವೇನು? +ನೀವು ಯಾವ ಹಾದಿಗಾದರೂ ಹೋಗಿ ಜಾತಿಯೆಂಬ ರಾಕ್ಷಸ ನಿಮ್ಮನ್ನು ಅಡ್ಡಗಟ್ಟುತ್ತಾನೆ. +ಈ ರಾಕ್ಷಸನನ್ನು ಸಂಹರಿಸದ ಹೊರತು ನಿಮಗೆ ರಾಜಕೀಯ ಸುಧಾರಣೆಯಿಲ್ಲ, ಆರ್ಥಿಕ ಸುಧಾರಣೆಯೂ ಇಲ್ಲ. +ಈಗಿನ ಕಾಲದಲ್ಲೂ ಕೂಡ ಜಾತಿಪದ್ಧತಿಯನ್ನು ಸಮರ್ಥಿಸುವವರು ಇರುವುದು ಬೇಸರದ ಸಂಗತಿ. +ಅವರು ಕೊಡುವ ಸಮರ್ಥನೆಗಳು ಹಲವಾರು. +ಜಾತಿಪದ್ಧತಿಯೆಂಬುದು ಶ್ರಮ ವಿಭಜನೆಯ ಪದ್ಧತಿಗೆ ಇನ್ನೊಂದು ಹೆಸರೆಂದೂ, ಶ್ರಮ ವಿಭಾಗವು ಪ್ರತಿಯೊಂದು ಸುಧಾರಿತ ಸಮಾಜದ ಅವಶ್ಯ ಲಕ್ಷಣವಾಗಿರುವಾಗ ಜಾತಿಪದ್ಧತಿಯಿದ್ದರೇನೂ ದೋಷವಿಲ್ಲವೆಂದೂ ಕೆಲವರು ವಾದಿಸುತ್ತಾರೆ. +ಈ ವಾದಕ್ಕೆ ಪ್ರತಿಕೂಲವಾದ ಮೊದಲನೆಯ ಮಾತೆಂದರ- ಜಾತಿಪದ್ಧತಿ ಕೇವಲ ಶ್ರಮ ವಿಭಜನೆಯಾಗಿರದೆ ಶ್ರಮ ಜೀವಿಗಳ ವಿಭಾಗವೂ ಆಗಿದೆ. +ಸುಧಾರಿತ ಸಮಾಜಕ್ಕೆ ಶ್ರಮವಿಭಜನೆ ಅವಶ್ಯಕವೆಂಬುದು ನಿರ್ವಿವಾದ. +ಆದರೆ ಶ್ರಮವಿಭಜನೆಯಲ್ಲಿ ವಿವಿಧ ಶ್ರಮಿಕವರ್ಗಗಳು ಒಂದನ್ನೊಂದು ಸೇರದಂತೆ ಪ್ರತ್ಯೇಕವಾಗಿ ವಿಭಜನೆಗೊಂಡಿರುವುದು ಯಾವ ಸುಧಾರಿತ ಸಮಾಜದಲ್ಲಿಯೂ ಕಾಣದು. +ಜಾತಿಪದ್ಧತಿ ಶ್ರಮಿಕರ ವಿಭಾಗ ಮಾತ್ರವಲ್ಲ. +ಅದರಲ್ಲಿ ವಿಭಾಗಗೊಂಡ ವರ್ಗಗಳು ಮೇಲುವರ್ಗ, ಕೆಳವರ್ಗ, ಅದಕ್ಕೂ ಕೆಳಗಿನ ವರ್ಗ ಹೀಗೆ ಒಂದು ನೀಜೋಚ್ಛಶ್ರೇಣಿಯನ್ನುಹೊಂದಿದೆ. +ಇಂತಹ ಉಚ್ಚ-ನೀಚ ವರ್ಗೀಕರಣ ಬೇರೆ ಯಾವ ದೇಶದಲ್ಲಿಯೂ ಶ್ರಮವಿಭಾಗದ ಅಂಗವಾಗಿಲ್ಲ. +ಇನ್ನೂ ಒಂದು ಮಾತಿದೆ. +ಈ ಶ್ರಮವಿಭಜನೆ ಸಹಜವಾದುದಲ್ಲ. +ವ್ಯಕ್ತಿಗಳ ಸಾಮರ್ಥ್ಯ ಅಥವಾ ಯೋಗ್ಯತೆಯನ್ನುಅದು ಆಧರಿಸಿಲ್ಲ. +ವ್ಯಕ್ತಿಯು ತನ್ನ ಯೋಗ್ಯತೆಗೆ ತಕ್ಕ ಕೆಲಸವನ್ನು ಆಯ್ದುಕೊಂಡು ಸರ್ವಾಂಗೀಣವಾಗಿ ಅಭಿವೃದ್ಧಿ ಹೊಂದಲು ಅವಕಾಶವೊದಗಿಸಿದರೆ ಮಾತ್ರ ಸಮಾಜದ ಕಾರ್ಯದಕ್ಷತೆ ಸಾಧ್ಯವಾಗುತ್ತದೆ. +ಜಾತಿಪದ್ಧತಿಯಲ್ಲಿ ಈ ತತ್ವ ಇಲ್ಲವಾಗಿದೆ. +ವ್ಯಕ್ತಿಯ ಅಭಿರುಚಿ ಸಾಮರ್ಥ್ಯಗಳನ್ನು ಗಮನಿಸುವ ಬದಲಾಗಿ ಆತನ ತಂದೆತಾಯಿಗಳ ಸಾಮಾಜಿಕ ಸ್ಥಾನಮಾನಕ್ಕೆ ಅನುಸಾರವಾಗಿ ಅವನಿಗೆ ಇಂತಹ ಕೆಲಸ ಎಂದು ನಿಗದಿಪಡಿಸಲಾಗುತ್ತದೆ. +ಜಾತಿಪದ್ಧತಿಯಿಂದಾದ ಈ ವೃತ್ತಿ ವಿಭಜನೆ ಅಥವಾ ಕೆಲಸಗಳ ನೇಮಕವು ಖಂಡಿತವಾಗಿ ಜಾತಿ ವಿನಾಶಕಾರಿಯಾಗಿದೆ. +ಉದ್ಯಮ ಎಂದೂ ನಿಂತ ನೀರಲ್ಲ. +ಅದರಲ್ಲಿ ತೀವ್ರವಾದ ಹಾಗೂ ಆಕಸ್ಮಿಕವಾದ ಬದಲಾವಣೆಗಳಾಗುತ್ತಲೇ ಇರುತ್ತವೆ. +ಹೀಗೆ ಬದಲಾವಣೆಗಳಾಗುತ್ತಿರುವಾಗ ವ್ಯಕ್ತಿಗೆ ತನ್ನ ವೃತ್ತಿಯನ್ನುಬ ಬದಲಾಯಿಸುವ ಸ್ವಾತಂತ್ರ್ಯ ಅನಿವಾರ್ಯವಾಗುತ್ತದೆ. +ಬದಲಾಗುವ ಪರಿಸ್ಥಿತಿಗೆ ಹೊಂದಿಕೊಳ್ಳುವ ಸ್ವಾತಂತ್ರ್ಯವಿಲ್ಲದಿದ್ದರೆ ಅವನಿಗೆ ಜೀವನೋಪಾಯವೇ ಅಸಾಧ್ಯವಾಗುವುದು. +ಜಾತಿಪದ್ಧತಿಯಲ್ಲಿ ಇಂತಹ ಸ್ವಾತಂತ್ರ್ಯವಿಲ್ಲ. +ತನ್ನ ಜಾತಿಗೆ ಹೊಸದಾದ ವೃತ್ತಿಯನ್ನು ಕೈಗೊಳ್ಳುವ ಬದಲಾಗಿ ಉಪವಾಸ ಬೀಳುವುದೇ ಹಿಂದೂವಿನ ಗತಿಯಾಗಿದ್ದರೆ ಅದಕ್ಕೆ ಮೂಲಕಾರಣ ಜಾತಿಯೇ ಆಗಿದೆ. +ವೃತ್ತಿಗಳನ್ನು ವ್ಯಕ್ತಿಗಳಿಗೆ ಅವರ ಸಾಮರ್ಥ್ಯಕ್ಕನುಸಾರವಾಗಿ ಹೊಂದಿಸುವುದಕ್ಕೆ ಜಾತಿ ಆಸ್ಪದ ಕೊಡುವುದಿಲ್ಲ. +ದೇಶದಲ್ಲಿ ನಾವು ಕಾಣುವ ನಿರುದ್ಯೋಗಕ್ಕೆ ಬಹುಮಟ್ಟಿಗೆ ಜಾತಿಯೇ ಕಾರಣವಾಗಿದೆ. +ಇದಲ್ಲದೆ ಇನ್ನೂ ಒಂದು ದೋಷವಿದೆ. +ಜಾತಿಯಿಂದ ಉಂಟಾದ ಶ್ರಮವಿಭಾಗ ಶ್ರಮಿಕರ ಆಯ್ಕೆಯಿಂದ ಆದುದಲ್ಲ. +ವೈಯಕ್ತಿಕ ಭಾವನೆಗಾಗಲೀ ಅಥವಾ ವೈಯಕ್ತಿಕವಾಗಿ ಈ ಕೆಲಸಕ್ಕೆ ಯಾರು ಹೆಚ್ಚು ಯೋಗ್ಯರೆಂಬ ವಿವೇಚನೆಗಾಗಲೀ ಅಲ್ಲಿ ಆಸ್ಪದವೇ ಇಲ್ಲ. +ಪೂರ್ವಕರ್ಮದ ಫಲವೆಂಬ ತತ್ವವೇ ಮುಖ್ಯ ಆಧಾರವಾಗುತ್ತದೆ. +ಸಾಮಾಜಿಕ ಕಾರ್ಯ ಸಾಮರ್ಥ್ಯದ ದೃಷ್ಟಿಯಿಂದ ನೋಡಿದಾಗ ಔದ್ಯಮಿಕ ಪದ್ಧತಿಯ ಅತ್ಯಂತ ಭೀಕರ ಅನಿಷ್ಟ ಯಾವುದು? +ಬಡತನವಲ್ಲ, ಬಡತನದಿಂದ ಉಂಟಾದ ದುಃಖ ಪರಂಪರೆಯೂ ಅಲ್ಲ; +ಆದರೆ ಕೆಲಸ ಮಾಡುತ್ತಿರುವ ಇಷ್ಟೊಂದು ಜನರಿಗೆ ತಾವು ಮಾಡುವ ಕೆಲಸ ಯಾವ ಮನಃಸಂತೋಷವನ್ನೂ ಒದಗಿಸುತ್ತಿಲ್ಲವೆಂಬುದು ಸತ್ಯ . +ವಸ್ತುಸ್ಥಿತಿಯ ಈ ಅನಿಷ್ಟ ಇಂತಹ ಕೆಲಸ ಅಥವಾ ವೃತ್ತಿಗಳು ಕೆಲಸಗಾರರಲ್ಲಿ ಉಪೇಕ್ಷೆಯನ್ನೂ, ದ್ವೇಷವನ್ನೂ, ಹೊಣೆಯಿಂದ ತಪ್ಪಿಸಿಕೊಳ್ಳುವ ಮನೋವೃತ್ತಿಯನ್ನೂ ಕೆರಳಿಸುತ್ತವೆ. +ಭಾರತದಲ್ಲಿ ಹಿಂದೂಗಳು ಹೀನವೆಂದು ಪರಿಗಣಿಸುವ ಅನೇಕ ವೃತ್ತಿಗಳಿವೆ. +ಅವು ಹೀನವೆಂಬ ಭಾವನೆಯಿರುವುದರಿಂದ ಅವುಗಳಲ್ಲಿ ತೊಡಗಿರುವ ಕೆಲಸಗಾರರು ಕೂಡ ತಮ್ಮ ಕೆಲಸವನ್ನು ಹೀನವೆಂದು ಕಾಣುತ್ತಾರೆ. +ಈ ವೃತ್ತಿಗಳಿಂದ ತಪ್ಪಿಸಿಕೊಳ್ಳುವ ಬಯಕೆ ಅವರಿಗೆ ಸತತವಾಗಿರುತ್ತದೆ. +ಅವುಗಳಲ್ಲಿ ತೊಡಗಿರುವ ಇತರರಲ್ಲಿಯೂ ಅದನ್ನು ಅವರು ಪ್ರೇರೇಷಿಸುತ್ತಾರೆ. +ಹಿಂದೂ ಧರ್ಮ ಈ ವೃತ್ತಿಗಳಿಗೆ ಆರೋಪಿಸಿದ ತಿರಸ್ಕಾರ ಹಾಗೂ ಕಳಂಕ ಇದಕ್ಕೆ ಕಾರಣವಾಗಿದೆ. +ತಮ್ಮ ಕೆಲಸದಲ್ಲಿ ಜನರಿಗೆ ಮನಸ್ಸೇ ಇಲ್ಲದಿರುವ ಪದ್ಧತಿಯಿದ್ದರೆ ಕಾರ್ಯ ಸಮರ್ಪಕವಾದೀತೆ? +ಮನುಷ್ಯನ ಸ್ವಾಭಾವಿಕ ಅಭಿರುಚಿ ಹಾಗೂ ಸಾಮರ್ಥ್ಯಗಳನ್ನು ಕಡೆಗಣಿಸಿ. +ಸಮಾಜದ ಸಾಂಪ್ರದಾಯಿಕ ನಿಯಮಗಳಿಗೇ ಅಂಟಿಕೊಳ್ಳುವುದು ಜಾತಿಯ ಕಾರ್ಯವಾಗಿದೆ. +ಹೀಗಿರುವುದರಿಂದ ಆರ್ಥಿಕ ವ್ಯವಸ್ಥೆಯ ದೃಷ್ಟಿಯಿಂದ ಜಾತಿಪದ್ಧತಿ ಅಪಾಯಕರ ಪದ್ಧತಿಯಾಗಿದೆ. +ಜಾತಿಪದ್ಧತಿಯ ಸಮರ್ಥನೆಗಾಗಿ ಕೆಲವರು ವಂಶಶುದ್ಧಿಯ ತತ್ವವನ್ನು ಬಳಸಿಕೊಂಡಿದ್ದಾರೆ. +ಒಂದು ಜನಾಂಗದ ಅಥವಾ ವಂಶದ ಶುದ್ಧತೆಯನ್ನು ಕಾಪಾಡುವುದೇ ಜಾತಿಯ ಉದ್ದೇಶವೆಂದು ವಾದಿಸಲಾಗುತ್ತದೆ. +ವಂಶಶಾಸ್ತ್ರಜ್ಞರ ಮೇರೆಗೆ ಜಗತ್ತಿನಲ್ಲಿ ಈಗ ಎಲ್ಲಿಯೂ ಶುದ್ಧವಂಶವೆಂಬುದು ಉಳಿದಿಲ್ಲ. +ಎಲ್ಲ ಕಡೆಯೂ ವಂಶಗಳು ಸಂಕರವಾಗಿ ಹೋಗಿವೆ. +ಭಾರತದಲ್ಲಿ ಈ ಸಂಕರ ವಿಶೇಷವಾಗಿ ನಡೆದಿದೆ. +"ಒಂದೂ ಜನತೆಯಲ್ಲಿಪರಕೀಯ ಅಂಶಗಳು' ಎಂಬ ತಮ್ಮ ಲೇಖನದಲ್ಲಿ ಶ್ರೀ ಡಿ.ಆರ್‌.ಛಂಡಾರ್‌ಕರ್‌ ಅವರು ಹೀಗೆ ಹೇಳಿದ್ದಾರೆ,“ಪರಕೀಯ ಅಂಶ ಬೆರೆಯದಂತಹ ಒಂದು ವರ್ಗವಾಗಲಿ, ಜಾತಿಯಾಗಲಿ ಭಾರತದಲ್ಲಿ ಉಳಿದಿಲ್ಲ. +ರಜಪೂತ, ಮರಾಠ ಮೊದಲಾದ ಕ್ಷತ್ರಿಯ ವರ್ಗಗಳಲ್ಲಿ ಮಾತ್ರವಲ್ಲ ತಾವು ಸಂಪೂರ್ಣ ಶುದ್ಧರೆಂದು ಭ್ರಮಿಸಿಕೊಂಡಿರುವ ಬ್ರಾಹ್ಮಣರಲ್ಲೂ ಕೂಡ ಪರಕೀಯ ರಕ್ತಸಂಕರವಾಗಿದೆ”. +ವಂಶ ಸಂಕರವನ್ನು ತಡೆಯುವ ಅಥವಾ ರಕ್ತಶುದ್ಧಿಯನ್ನು ರಕ್ಷಿಸಿಕೊಳ್ಳುವ ಮಾರ್ಗವಾಗಿಯೇ ಜಾತಿಪದ್ಧತಿ ಬೆಳೆಯಿತೆಂದು ಹೇಳಲಾಗದು. +ವಾಸ್ತವವಾಗಿ ನೋಡಿದರೆ ಭಾರತದ ವಿವಿಧ ಜನಾಂಗಗಳಲ್ಲಿ ಪರಸ್ಪರ ರಕ್ತಸಂಬಂಧ ಹಾಗೂ ಸಂಸ್ಕೃತಿ ಸಮನ್ವಯ ನಡೆದುಹೋಗಿ ಎಷ್ಟೋ ಕಾಲದ ನಂತರ ಜಾತಿಪದ್ಧತಿ ಹುಟ್ಟಿಕೊಂಡಿತು. +ಜಾತಿಭೇದಗಳನ್ನುಜನಾಂಗ ಭೇದಗಳೆಂದು ಭ್ರಮಿಸಿ ಹಾಗೆ ನಡೆದುಕೊಳ್ಳುವುದೆಂದರೆ ವಸ್ತುಸ್ಥಿತಿಯ ವಿಪರ್ಯಾಸ. +ಪಂಜಾಬ್‌ಬ್ರಾಹ್ಮಣನಿಗೂ ಮದ್ರಾಸಿ ಬ್ರಾಹ್ಮಣನಿಗೂ ನಡುವೆ ಯಾವ ವಂಶ ಸಂಬಂಧವಿದೆ? +ಬಂಗಾಳದ ಅಸ್ಪ ಶ್ಯನಿಗೆ ಮದ್ರಾಸಿ ಅಸ್ಪಶ್ಯನೊಡನೆ ಯಾವ ವಂಶೀಯ ಸಂಬಂಧವಿದೆ? +ಪಂಜಾಬದ ಬ್ರಾಹ್ಮಣನಿಗೂ ಪಂಜಾಬದ ಚಮ್ಮಾರನಿಗೂ ಯಾವ ವಂಶೀಯ ಭೇದವಿದೆ? +ಮದ್ರಾಸಿ ಬ್ರಾಹ್ಮಣನಿಗೂ ಮದ್ರಾಸಿ ಚಂಡಾಲನಿಗೂಯಾವ ವಂಶಭೇದವಿದೆ? +ಪಂಜಾಬದ ಬ್ರಾಹ್ಮಣ ಹಾಗೂ ಚಮ್ಮಾರ ಇಬ್ಬರೂ ಒಂದೇ ವಂಶಕ್ಕೆ ಸೇರಿದವರು. +ಇದೇ ಮಾತು ಮದ್ರಾಸಿಗಳಿಗೂ ಅನ್ವಯಿಸುತ್ತದೆ. +ಜಾತಿಪದ್ಧತಿ ವಂಶಭೇದವನ್ನು ಗುರುತಿಸುವುದಿಲ್ಲ. +ಒಂದೇ ವಂಶದವರಲ್ಲಿ ಸಾಮಾಜಿಕ ಭೇದಗಳನ್ನು ಮಾತ್ರ ಜಾತಿಪದ್ಧತಿ ಉಂಟುಮಾಡಿದೆ. +ಒಂದು ವೇಳೆ ಜಾತಿಭೇದ ವಂಶಭೇದವೆಂದೇ ಇದ್ದಿತೆಂದು ಭಾವಿಸೋಣ. +ಹಾಗಿದ್ದಾಗ ಅಂತರ್ಜಾತೀಯ ವಿವಾಹಗಳ ಮೂಲಕವಂಶಗಳು ಸಂಕರವಾದರೆ ತಪ್ಪೇನಾಯಿತು? +ಮನುಷ್ಯರಿಗೂ ಇತರ ಪ್ರಾಣಿಗಳಿಗೂ ಇರುವ ಅಂತರ ತುಂಬ ದೊಡ್ಡದು. +ಆದುದರಿಂದ ವಿಜ್ಞಾನಿಗಳು ಮನುಷ್ಯರನ್ನು ಹಾಗೂ ಪ್ರಾಣಿಗಳನ್ನು ಎರಡು ಪ್ರತ್ಯೇಕ ವರ್ಗಗಳಾಗಿ ವಿಂಗಡಿಸಿದ್ದಾರೆ. +ಜನಾಂಗಭೇದವು ಜೀವಿಗಳ ವರ್ಗಭೇದವೆಂದು ವಿಜ್ಞಾನಿಗಳು ಒಪ್ಪುವುದಿಲ್ಲ. +ವಿವಿಧ ಜನಾಂಗಗಳು ಒಂದೇ ವರ್ಗದ ವಿವಿಧ ಶಾಖೆಗಳು ಮಾತ್ರ. +ಹೀಗಿರುವುದರಿಂದ ಈ ವಿವಿಧ ಜನಾಂಗಗಳು ರಕ್ತಸಂಬಂಧ ಮಾಡಿದ್ದಲ್ಲಿ ಹುಟ್ಟುವ ಜೀವಿಗಳು ವಂಶಾಭಿವೃದ್ಧಿಗೆ ಸಮರ್ಥವಾಗಿ ಇರುವುವಲ್ಲದೆ ನಪುಂಸಕವಾಗಲಾರವು. +ಜಾತಿಪದ್ಧತಿಯನ್ನು ಸಮರ್ಥಿಸುವುದಕ್ಕಾಗಿ ವಂಶಪರಂಪರೆ, ಉತ್ತಮ ಸಂತಾನಮುಂತಾಗಿ ಹೇರಳವಾದ ಹುಚ್ಚು ಮಾತುಗಳನ್ನು ಆಡಲಾಗುತ್ತಿದೆ. +ಜಾತಿಪದ್ಧತಿ ಉತ್ತಮ ಸಂತಾನ ತತ್ಹಕ್ಕೆಬದ್ಧವಾಗಿಯೇ ಇದ್ದ ಪಕ್ಷದಲ್ಲಿ ಅದನ್ನು ಯಾರೂ ವಿರೋಧಿಸಲಾರರು. +ಆದರೆ ಜಾತಿಪದ್ಧತಿ ಉತ್ತಮಗಂಡು ಹಾಗೂ ಉತ್ತಮ ಹೆಣ್ಣುಗಳ ದಾಂಪತ್ಯಕ್ಕೆ ಸಹಾಯಕವಾಗಿದೆಯೆ? +ಜಾತಿಪದ್ಧತಿ ನಿಷೇಧಾತ್ಮಕವಾಗಿದೆ. +ಅಂತರ್ಜಾತಿಯ ದಾಂಪತ್ಯವನ್ನು ಅದು ಪ್ರತಿಬಂಧಿಸುತ್ತದೆ. +ಜಾತಿಯೆಂಬುದು ಉತ್ತಮ ಸಂತಾನ ದೃಷ್ಟಿಯಿಂದಹುಟ್ಟದ್ದಲ್ಲ. +ಜಾತಿ ಜನಾಂಗವೆಂದಾದರೆ, ಉಪಜಾತಿಗಳು ಜನಾಂಗಭೇದಗಳಾಗವು; + ಏಕೆಂದರೆ ಒಂದೇಜನಾಂಗದ ಉಪಭೇದಗಳಾದುದರಿಂದ ಅದು ಅದೇ ಜನಾಂಗಕ್ಕೆ ಸೇರಿರುತ್ತದೆ. +ಹೀಗಿರುವುದರಿಂದ ಅಂತರ್ಜಾತೀಯ ವಿವಾಹಕ್ಕೆ ಹಾಗೂ ಅಂತರ್ಜಾತೀಯ ಭೋಜನಕ್ಕೆ ಪ್ರತಿಬಂಧವೇಕೆ? +ಜನಾಂಗದ ಅಥವಾ ವಂಶದ ಶುದ್ಧಿಯನ್ನು ಕಾಪಾಡುವುದು ಇದರ ಉದ್ದೇಶವಲ್ಲ ಎಂದಾಯಿತು. +ಜಾತಿ ಉಪಜಾತಿಗಳ ಸಹಭೋಜನವನ್ನು ಪ್ರತಿಬಂಧಿಸುವ ಉದ್ದೇಶವೇನು? +ಸಹಭೋಜನದಿಂದ ವಂಶ ಹಾಳಾಗಲಾರದು,ಉತ್ತಮವೂ ಆಗಲಾರದು. +ಇದನ್ನೆಲ್ಲ ನೋಡಿದಾಗ ಜಾತಿಭೇದ ವೈಜ್ಞಾನಿಕವಲ್ಲವೆಂದು ಸಿದ್ಧವಾಗುತ್ತದೆ. +ಉತ್ತಮ ಸಂತಾನ ತತ್ವವನ್ನು ಬಳಸಿಕೊಂಡು ಜಾತಿಯನ್ನು ಸಮರ್ಥಿಸುವುದೆಂದರೆ ಅವೈಜ್ಞಾನಿಕ ವಿಷಯಕ್ಕೆ ವೈಜ್ಞಾನಿಕ ಸಮರ್ಥನೆಯನ್ನು ನೀಡಿದಂತೆಯೇ ಸರಿ. +ವಂಶದಲ್ಲಿ ಪಿತ್ರಾರ್ಜಿತ ಅಂಶ ಯಾವ ನಿಯಮಗಳನ್ನುಅನುಸರಿಸುತ್ತದೆಂಬುದು ನಿಖರವಾಗಿ ನಮಗೆ ಇನ್ನೂ ತಿಳಿದಿಲ್ಲ . +ಆದುದರಿಂದ ಉತ್ತಮ ಸಂತಾನದ ಯೋಜನೆ ವ್ಯವಹಾರ ಯೋಗ್ಯವೆಂದು ಹೇಳಲಾಗದು. +"ಮಂಡಲ್ಲನ ಆನುವಂಶಿಕಾ ತತ್ವಗಳು' ಎಂಬ ಗ್ರಂಥವನ್ನು ಕುರಿತು ಬೇಟ್ನನ್‌ ಹೀಗೆನ್ನುತ್ತಾರೆ, “ಉಚ್ಚ ತರಗತಿಯ ಮಾನಸಿಕ ಗುಣಗಳು ಅನುವಂಶಿಕವಾಗಿ ಬಂದರೆ ಅವು ಯಾವುದೇ ಒಂದು ನಿಯಮಕ್ಕೆ,ಅರ್ಥಕ್ಕೆ, ಕ್ರಮಕ್ಕೆ ಒಳಪಟ್ಟು ಬರುತ್ತವೆ ಎಂದು ತೋರುವುದಿಲ್ಲ. +ದೈಹಿಕ ವೈಶಿಷ್ಟ್ಯಗಳೂ ಮಾನಸಿಕ ಗುಣಗಳೂ ಅನೇಕ ಘಟಕಗಳ ಯೋಗಾಯೋಗದಿಂದ ಉತ್ಪನ್ನವಾಗುವುದೇ ಹೊರತಾಗಿ, ಒಂದುನಿರ್ದಿಷ್ಟ ಸಂತಾನ ಮೂಲದಿಂದಲೇ ಆದುವೆಂದು ಹೇಳಲಾಗದು”. +ಜಾತಿಪದ್ಧತಿ ಉತ್ತಮ ಸಂತಾನಶಾಸ್ತ್ರದೃಷ್ಟಿಯಿಂದ ನಿರ್ಮಿತವಾಯಿತೆಂದು ಹೇಳಿದರೆ ಇಂದಿನ ವಿಜ್ಞಾನಿಗಳಿಗೆ ಕೂಡ ಇಲ್ಲದ ಜ್ಞಾನವನ್ನು ಈಗಿನ ಹಿಂದೂಗಳ ಪೂರ್ವಜರು ಪಡೆದಿದ್ದರೆಂದು ಹೇಳಿದಂತಾಗುತ್ತದೆ. +ಹಣ್ಣುಗಳನ್ನು ನೋಡಿ ಮರದಬೆಲೆ ಕಟ್ಟಬೇಕು. +ಸಂತಾನಶಾಸ್ತ್ರಕ್ಕನುಸಾರವಾಗಿ ಜಾತಿಪದ್ಧತಿ ಇರುವುದಾಗಿದ್ದರೆ ಅದು ಎಂತಹ ಉತ್ಕೃಷ್ಟಜನಾಂಗವನ್ನು ಹುಟ್ಟಿಸಬೇಕಾಗಿತ್ತು? +ವಾಸ್ತವಿಕವಾಗಿ ನೋಡಿದರೆ ಹಿಂದೂಗಳು ಸಿ೩. ವರ್ಗಕ್ಕೆ ಸೇರಿದ ಜನರು. +ಮೈಕಟ್ಟಿನಲ್ಲಿ ದುರ್ಬಲರಾದ ಮತ್ತು ದೈಹಿಕವಾಗಿ ತ್ರಾಣವಿಲ್ಲದ ಕುಬ್ಬರ ವರ್ಗಕ್ಕೆ ಇವರು ಸೇರಿದ್ದಾರೆ. +ನೂರಕ್ಕೆ ತೊಂಬತ್ತರಷ್ಟು ಮಂದಿ ಸೈನಿಕ ಸೇವೆಗೆ ಅನರ್ಹರಾದ ಜನರ ರಾಷ್ಟ್ರ ನಮ್ಮದು. +ಹೀಗಾದರೆ ಉತ್ತಮ ಸಂತಾನ ತತ್ವ ಎಲ್ಲಿ ಬಂದಿತು? +ಸ್ವಾರ್ಥಿಗಳೂ ದುರಹಂಕಾರಿಗಳೂ ಆದ ಕೆಲವರು ಹಿಂದೂಗಳು ತಮ್ಮ ಸಾಮಾಜಿಕ ಸ್ಥಾನಬಲದಿಂದ ಈ ಜಾತಿಭೇದಗಳನ್ನು ನಿರ್ಮಿಸಿ ದುರ್ಬಲ ವರ್ಗಗಳ ಮೇಲೆ ಅವುಗಳನ್ನು ಒತ್ತಾಯದಿಂದ ಹೇರಿದರು. +ಜಾತಿಯಿಂದ ಆರ್ಥಿಕ ಕಾರ್ಯಸಾಮರ್ಥ್ಯ ಉತ್ತಮವಾಗುವುದಿಲ್ಲ. +ಜಾತಿ ಜನಾಂಗವನ್ನು ಉತ್ತಮಗೊಳಿಸಿಲ್ಲ, ಉತ್ತಮಗೊಳಿಸಲು ಅದಕ್ಕೆ ಸಾಧ್ಯವೂ ಇಲ್ಲ. +ಆದರೆ ಅದು ಒಂದನ್ನು ಮಾತ್ರ ಸಾಧಿಸಿದೆ. +ಜಾತಿಯು ಹಿಂದೂಗಳನ್ನು ಪ್ರತ್ಯೇಕ ಗುಂಪುಗಳಾಗಿ ವಿಂಗಡಿಸಿ ನೀತಿಗೆಡಿಸಿದೆ. +"ಹಿಂದೂ ಸಮಾಜ'ವೆಂಬುದು ಮಿಥ್ಯ ಪದ. +ಇದು ಎಲ್ಲಕ್ಕಿಂತ ಮುಂಚೆ ಒಪ್ಪಿಕೊಳ್ಳಬೇಕಾದ ಮಾತು. +ಹಿಂದೂ ಎಂಬ ಈ ಹೆಸರೇ ವಿದೇಶೀಯವಾಗಿದೆ. +ಹೊರಗಿನಿಂದ ಬಂದ ಮಹಮ್ಮದೀಯರು ತಮ್ಮಿಂದ ಬೇರೆಯಾದ ಇಲ್ಲಿಯ ನಿವಾಸಿಗಳನ್ನು ಈ ಹೆಸರಿನಿಂದ ಗುರುತಿಸಿದರು. +ಮಹಮ್ಮದೀಯದಾಳಿಗಳಿಗೆ ಮುಂಚಿನ ಯಾವ ಸಂಸ್ಕೃತ ಗಂಥದಲ್ಲಿಯೂ ಈ ಪದದ ಉಲ್ಲೇಖವಿಲ್ಲ. +ಎಲ್ಲ ಜನರಿಗೂ ಸಾಮಾನ್ಯವಾದೊಂದು ಹೆಸರಿನ ಅಗತ್ಯವಿದೆಯೆಂದು ಹಿಂದೂಗಳಿಗೆ ಅನ್ನಿಸಲಿಲ್ಲ. +ಏಕೆಂದರೆ ಒಂದುಸುಸಂಘಟಿತ ಸಮುದಾಯದ ಕಲ್ಪನೆಯೇ ಅವರಿಗೆ ಇರಲಿಲ್ಲ. +ಹಿಂದೂ ಸಮಾಜ ಎಂಬುದು ಅಸ್ತಿತ್ವದಲ್ಲಿಲ್ಲ. +ಅದು ಅನೇಕ ಜಾತಿಗಳ ಒಂದು ಸಮೂಹ. + -- GitLab