From aa2d84ef207a839845a235620f19c98c5517f06d Mon Sep 17 00:00:00 2001 From: Narendra VG Date: Mon, 26 Sep 2022 05:19:18 +0530 Subject: [PATCH] Upload New File --- ...5\340\263\215\340\262\267\340\262\243.txt" | 523 ++++++++++++++++++ 1 file changed, 523 insertions(+) create mode 100644 "Data Collected/Kannada/MIT Manipal/\340\262\225\340\262\260\340\263\215\340\262\250\340\262\276\340\262\237\340\262\225\340\262\246\340\262\262\340\263\215\340\262\262\340\262\277_\340\262\266\340\262\277\340\262\225\340\263\215\340\262\267\340\262\243.txt" diff --git "a/Data Collected/Kannada/MIT Manipal/\340\262\225\340\262\260\340\263\215\340\262\250\340\262\276\340\262\237\340\262\225\340\262\246\340\262\262\340\263\215\340\262\262\340\262\277_\340\262\266\340\262\277\340\262\225\340\263\215\340\262\267\340\262\243.txt" "b/Data Collected/Kannada/MIT Manipal/\340\262\225\340\262\260\340\263\215\340\262\250\340\262\276\340\262\237\340\262\225\340\262\246\340\262\262\340\263\215\340\262\262\340\262\277_\340\262\266\340\262\277\340\262\225\340\263\215\340\262\267\340\262\243.txt" new file mode 100644 index 0000000..e051f06 --- /dev/null +++ "b/Data Collected/Kannada/MIT Manipal/\340\262\225\340\262\260\340\263\215\340\262\250\340\262\276\340\262\237\340\262\225\340\262\246\340\262\262\340\263\215\340\262\262\340\262\277_\340\262\266\340\262\277\340\262\225\340\263\215\340\262\267\340\262\243.txt" @@ -0,0 +1,523 @@ +ಕರ್ನಾಟಕದಲ್ಲಿ ಶಿಕ್ಷಣ : ಭಾರತದ ಸಂವಿಧಾನದ ಪ್ರಕಾರ ಶಿಕ್ಷಣ ಮುಖ್ಯವಾಗಿ ರಾಜ್ಯ ಸರ್ಕಾರಗಳಿಗೆ ಸೇರಿದ ವಿಷಯ . +ವಿವಿಧ ರಾಜ್ಯಗಳಲ್ಲಿಯ ಉಚ್ಚ ಶಿಕ್ಷಣ ಮತ್ತು ಸಂಶೋಧನೆಗಳ ಮಟ್ಟವನ್ನು ನಿರ್ಧರಿಸುವುದೂ ಅವನ್ನು ಕ್ರೋಡೀಕರಿಸುವುದೂ ಕೇಂದ್ರ ಸರ್ಕಾರದ ಹೊಣೆ . +೧೯ನೇಯ ಶತಮಾನದಲ್ಲಿ ಇಂಗ್ಲೆಂಡಿನ ಶಿಕ್ಷಣ ವ್ಯವಸ್ಥೆಯ ಮಾದರಿಯಲ್ಲಿ ಭಾರತದಲ್ಲಿ ಸ್ಥಾಪಿತವಾದ ವ್ಯವಸ್ಥೆಯನ್ನೇ ಕರ್ಣಾಟಕದಲ್ಲೂ ಕಾಣಬಹುದಾದರೂ ಇದರಲ್ಲಿ ಕರ್ಣಾಟಕಕ್ಕೆ ವಿಶಿಷ್ಟವಾದ ಕೆಲವು ಲಕ್ಷಣಗಳನ್ನು ಕಾಣಬಹುದಾಗಿದೆ . +ಸುಮಾರು ಎರಡು ಸಾವಿರ ವರ್ಷಗಳಿಂದ ಕರ್ಣಾಟಕದಲ್ಲಿ ಬೆಳೆದು ಬಂದ ಶಿಕ್ಷಣಾಪರಂಪರೆಯೊಂದು ಇದಕ್ಕೆ ದತ್ತವಾಗಿದೆ . +ಇಂದಿಗೂ ಅಲ್ಲಲ್ಲಿ ಉಳಿದಿರುವ ಹಳೆಯ ಪದ್ಧತಿಯ ಕೆಲವು ಅಂಶಗಳಿಂದ ಕರ್ಣಾಟಕದ ಪ್ರಾಚೀನ ಮತ್ತು ಮಧ್ಯಯುಗಗಳ ಶಿಕ್ಷಣ ಇತಿಹಾಸವನ್ನು ಸ್ಥೂಲವಾಗಿ ರೂಪಿಸಬಹುದಾಗಿದೆ . +ಪ್ರಾಚೀನ ಕಾಲ, ಮಧ್ಯಯುಗ ಮತ್ತು ಆಧುನಿಕ ಯುಗಗಳಲ್ಲಿ ಕರ್ಣಾಟಕದಲ್ಲಿ ಶಿಕ್ಷಣ ಪದ್ಧತಿ ರೂಪುಗೊಂಡ ಬಗೆಯನ್ನೂ ಕರ್ನಾಟಕಕ್ಕೆ ಸಂಬಂಧಿಸಿದಂತೆ ಶಿಕ್ಷಣದ ಮುಖ್ಯ ಅಂಕಿಅಂಶಗಳನ್ನೂ ಪ್ರಕೃತ ಲೇಖನದಲ್ಲಿ ಕೊಡಲಾಗಿದೆ . +ಕರ್ನಾಟಕದ ಜನಜೀವನ ಹಲವು ಕ್ಷೇತ್ರಗಳಲ್ಲಿ ವಿಶಿಷ್ಟವಾದದ್ದಾದರೂ ಅದರ ಶಿಕ್ಷಣಪದ್ಧತಿ ಅಖಂಡ ಭಾರತದ ಶಿಕ್ಷಣ ಪ್ರವಾಹದೊಡನೆ ಬೆಳೆದು ಬಂದದೇ ಆಗಿದೆ . +ಪ್ರ.ಶ.ಪೂ .೩ನೇಯ ಶತಮಾನಕ್ಕೆ ಹಿಂದೆ ಇಲ್ಲಿಯ ಶಿಕ್ಷಣ ಹೇಗಿತ್ತೆಂಬುದನ್ನು ಊಹಿಸುವುದು ಕಷ್ಟ . +ಪ್ರ.ಶ.ಪೂ .೨ನೇಯ ಶತಮಾನದಿಂದ ಈಚಿನ ಕಾಲದಲ್ಲಿ ದೊರೆತಿರುವ ಹಲವು ಆಧಾರಗಳನ್ನು ಅನುಸರಿಸಿ ಕರ್ನಾಟಕದಲ್ಲಿ ಶಿಕ್ಷಣ ಹೇಗಿತ್ತು , ಹೇಗೆ ಬೆಳೆದು ಬಂತು ಎಂಬುದನ್ನು ವಿವರಿಸಲು ಇಲ್ಲಿ ಯತ್ನಿಸಿದೆ . +ಕರ್ನಾಟಕದ ರಾಜಕೀಯ ಇತಿಹಾಸ ಸಾತವಾಹನ ಅರಸರ ಕಾಲದಿಂದ ಆರಂಭವಾಗುವುದಾದರೂ ಅದಕ್ಕೂ ಹಿಂದಿನ ಕಾಲದಲ್ಲೂ ಇಲ್ಲಿ ವಿಶಿಷ್ಟವಾದ ಶಿಕ್ಷಣ ಪದ್ಧತಿಯೊಂದು ಬೆಳೆದಿತ್ತೆಂದು ಭಾವಿಸಬಹುದಾಗಿದೆ . +ಚಂದ್ರಗುಪ್ತಮೌರ್ಯ ತನ್ನ ಗುರು ಭದ್ರಬಾಹುವಿನೊಂದಿಗೆ ಕ್ರಿ.ಪೂ .೪ನೇಯ ಶತಮಾನದಲ್ಲಿ ಕರ್ನಾಟಕಕ್ಕೆ ಆಗಮಿಸಿದನೆಂದೂ ಅವರೊಂದಿಗೆ ಇಲ್ಲಿಗೆ ಜೈನಧರ್ಮವೂ ಜೈನ ಸಂಸ್ಕೃತಿ ಸಂಪ್ರದಾಯಗಳೂ ಆಗಮಿಸಿದುವೆಂದೂ ಹೇಳಲಾಗಿದೆ . +ಆ ಧರ್ಮದ ತತ್ತ್ವಪ್ರಚಾರಕ್ಕಾಗಿ ಜೈನಬಸದಿಗಳು ಅಸ್ತಿತ್ವಕ್ಕೆ ಬಂದುವು . +ಅಂದಿಗಾಗಲೆ ಕರ್ನಾಟಕದಲ್ಲಿ ಅನುಷ್ಠಾನದಲ್ಲಿದ್ದಿರಬಹುದಾದ ಹಿಂದೂ (ವೈದಿಕ ) ವ್ರತಾಚಾರಗಳ ಮೇಲೆ ಅವು ನೂತನ ಪ್ರಭಾವ ಬೀರಿದುವು . +ಮೋಕ್ಷಸಾಧನೆಗೆ ಭಕ್ತಿ , ನಂಬಿಕೆ , ಆರಾಧನೆಗಳ ಜೊತೆಗೆ ಸುಜ್ಞಾನದ ಆವಶ್ಯಕತೆಯನ್ನು ಎತ್ತಿ ಹಿಡಿದು ಅದರ ಸಾಧನೆಗೆ ಶಿಕ್ಷಣದ ಅನಿವಾರ್ಯತೆಯ ಕಡೆ ಗಮನ ಕೊಡುವಂತಾಯಿತು . +ಧಾರ್ಮಿಕ ಮತ್ತು ಮತೀಯ ಕೇಂದ್ರಗಳಲ್ಲಿ ಶಿಕ್ಷಣ ಸೇವಾಕಾರ್ಯಕ್ಕೆ ಈ ಮೂಲಕ ಒಂದು ಮತೀಯ ಅನುಮೋದನೆ ದೊರಕಿತು . +ಆದರೆ ಶಿಕ್ಷಣ ಕೇವಲ ವೈಯಕ್ತಿಕ ಕಾರ್ಯವಾಗಿತ್ತೇ ಹೊರತು ಅದರ ವಿಶಿಷ್ಟ ಹೊಣೆಗಾರಿಕೆಯ ನಿರ್ವಹಣೆಗೆ ಸಂಘಟಿತ ಸಂಸ್ಥೆಗಳ ಸ್ಥಾಪನೆಯಾಗಲಿಲ್ಲ . +ಅನಂತರ ಚಂದ್ರಗುಪ್ತ ಮೌರ್ಯನ ಮೊಮ್ಮಗನಾದ ಅಶೋಕ ಬೌದ್ಧಧರ್ಮವನ್ನವಲಂಬಿಸಿ ಕರ್ನಾಟಕದಲ್ಲಿ ಅದರ ಪ್ರಚಾರಕ್ಕಾಗಿ ಶಾಸನಗಳನ್ನು ಸ್ಥಾಪಿಸಿದನಷ್ಟೆ . +ಬ್ರಾಹ್ಮೀ ಲಿಪಿಯಲ್ಲಿ ಬರೆದ ಪ್ರಾಕೃತ ಭಾಷೆಯ ಈ ಶಾಸನಗಳು ರಾಯಚೂರು ಜಿಲ್ಲೆಯ ಕೊಪ್ಪಳ , ಮಸ್ಕಿ , ಬ್ರಹ್ಮಗಿರಿ , ಸಿದ್ದಾಪುರ ಮುಂತಾದೆಡೆ ದೊರಕಿವೆ . +ಆಗ ಪ್ರಚಾರದಲ್ಲಿದ್ದ ಸಂಸ್ಕೃತದ ಬದಲು ದೇಶೀಯ ಭಾಷೆಯ ಪ್ರಚಾರಕ್ಕೆ ಇವು ನಾಂದಿಯಾದುವು . +ಜೊತೆಗೆ ಅವುಗಳನ್ನು ಅರಿಯಬೇಕಾದರೆ ಸಾಮಾನ್ಯ ಶಿಕ್ಷಣದ ಅಗತ್ಯವೂ ಕಂಡುಬಂದು ಅದರ ಪ್ರಚಾರಕ್ಕೆ ನಿರ್ದಿಷ್ಟ ಸಂಸ್ಥೆಗಳು ಅಗತ್ಯವೆನಿಸಿದುವು . +ಅಂದಿಗಾಗಲೆ ಬೌದ್ಧಧರ್ಮ ದಕ್ಷಿಣದಲ್ಲಿ ಪ್ರಚಾರದಲ್ಲಿತ್ತು . +ಅದರ ಪ್ರಚಾರಕ್ಕಾಗಿ ಏರ್ಪಟ್ಟಿದ್ದ ಬೌದ್ಧಭಿಕ್ಷುಗಳ ಶಿಕ್ಷಣಕ್ಕಾಗಿ ಉತ್ತರದಲ್ಲಿ ಮಠಗಳು ಸಂಘಟಿತಸಂಸ್ಥೆಗಳು ರೂಪದಲ್ಲಿ ಆರಂಭವಾಗಿದ್ದುವು . +ವೈದಿಕ ಧರ್ಮ ಶಿಕ್ಷಣದಲ್ಲಿ ಈ ಬಗೆಯ ಸಂಘಟನೆ ಇರಲಿಲ್ಲ . +ಅದು ವೈಯಕ್ತಿಕವಾಗಿ ಗುರುಕುಲ, ಆಶ್ರಮ ಮುಂತಾದೆಡೆಗಳಲ್ಲಿ ನಡೆಯುತ್ತಿತ್ತು . +ಆದರೆ ಬೌದ್ಧರು ಶಿಕ್ಷಣ ಕೇವಲ ಕೆಲವರ ಸೊತ್ತಲ್ಲವೆಂಬ ತತ್ತ್ವವನ್ನು ಎತ್ತಿ ಹಿಡಿದು, ಬಡವರು ಬಲ್ಲಿದರು, ಹೆಂಗಸರು, ಗಂಡಸರು, ಉತ್ತಮರು, ಅಧಮರು ಎಲ್ಲರಿಗೂ ಅದು ಸಮಾನವೆಂದು ಶಿಕ್ಷಣದಲ್ಲಿ ಲೋಕಸತ್ತೆಯನ್ನು ತಂದರು . +ಅದಕ್ಕಾಗಿ ವಿಹಾರಗಳನ್ನೂ ಮಠಗಳನ್ನೂ ಸ್ಥಾಪಿಸಿದರು . +ಅಲ್ಲಿ ಧಾರ್ಮಿಕ ಶಿಕ್ಷಣದಂತೆ ಲೌಕಿಕ ಶಿಕ್ಷಣವನ್ನೂ ನೀಡುತ್ತಿದ್ದರು . +ಅವು ಆ ರೀತಿಯಲ್ಲಿ ಕೆಲಸ ಮಾಡುತ್ತಿರುವುದು ಅಲ್ಲಲ್ಲಿ ಇಂದಿಗೂ ಉಳಿದುಕೊಂಡು ಬಂದಿದೆ . +ಪ್ರ.ಶ.೧ನೆಯ ಶತಮಾನದ ವೇಳೆಗೆ ದೇಶಾದ್ಯಂತ ಅಲ್ಲಲ್ಲಿ ಅವು ಆರಂಭವಾಗಿದ್ದುವು . +ವಿದ್ಯಾದಾನ ಮಹಾ ಪುಣ್ಯಕಾರ್ಯವೆಂಬ ದೃಷ್ಟಿ ಬೆಳೆದು ಬಂದಿತ್ತು . +ರಾಜರೂ ಧನಿಕರೂ ವಿಹಾರಗಳನ್ನು ಸ್ಥಾಪಿಸಿ ಅವಕ್ಕೆ ದತ್ತಿ ಕೊಡುವ ಪದ್ಧತಿ ಆರಂಭವಾಗಿತ್ತು . +ಕ್ರಿ.ಶ.೩ನೆಯ ಶತಮಾನದ ಬನವಾಸಿಯ ಒಂದು ಶಾಸನದಂತೆ ಶಿವಸ್ಕಂದ ನಾಗಶ್ರೀ ಎಂಬ ಚುಟು ರಾಜಕುಮಾರಿ ವಿದ್ಯಾದಾನಕ್ಕಾಗಿ ಒಂದು ಬೌದ್ಧ ವಿಹಾರವನ್ನು ನಿರ್ಮಿಸಿದ್ದಳು . +ಇದೇ ನಮಗೆ ದೊರಕುವ ಬೌದ್ಧವಿಹಾರದ ಮೊಟ್ಟ ಮೊದಲ ಪರಿಚಯ . +ಅಂದಿಗಾಗಲೆ ದೇಶದಲ್ಲಿ ಬೆಳೆಯುತ್ತಿದ್ದ ವಿಹಾರಗಳ ಸಂಖ್ಯೆ ೭ನ ೆಯ ಶತಮಾನದ ಎರಡನೆಯ ಪುಲಕೇಶಿಯ ಆಳ್ವಿಕೆಯ ಹೊತ್ತಿಗೆ ನೂರಕ್ಕೆ ಏರಿತ್ತು . +ಅಲ್ಲಿ ನೂರಾರು ಯತಿಗಳು ಇದ್ದರೆಂಬುದು ಯುವಾನ್ ಚಾಂಗನ ವರದಿಯಿಂದ ತಿಳಿದುಬರುತ್ತದೆ . +ಜನಸಾಮಾನ್ಯರು ಪಾಂಡಿತ್ಯಪ್ರಿಯರೆಂಬುದನ್ನೂ ಅದೇ ವರದಿ ಸೂಚಿಸುತ್ತದೆ . +ಇವೆರಡರ ಆಧಾರದ ಮೇಲೆ, ವಿಹಾರಗಳು ಸಂನ್ಯಾಸಿಗಳಿಗೆ ಧಾರ್ಮಿಕ ಶಿಕ್ಷಣವೀಯುವುದರ ಜೊತೆಗೆ ಮಠಗಳೂ ಜನರಿಗೆ ಪ್ರಾಥಮಿಕ ಮತ್ತು ಉನ್ನತ ಲೌಕಿಕ ಶಿಕ್ಷಣವನ್ನು ದೊರಕಿಸುತ್ತಿದ್ದುವು ಎಂದು ತಿಳಿಯಬಹುದು . +ಏಳು ವರ್ಷ ವಯಸ್ಸಿನ ಮಕ್ಕಳು ಅಲ್ಲಿಗೆ ಸೇರುತ್ತಿದ್ದರು . +ಅಲ್ಲಿ ಅಕ್ಷರಾಭ್ಯಾಸ ನಡೆದು ವ್ಯಾಕರಣ , ಕುಶಲವೃತ್ತಿ , ಯಂತ್ರೋಪಕರಣ ಕಲೆ , ಜ್ಯೋತಿಷ್ಯ , ವೈದ್ಯಶಾಸ್ತ್ರ , ಮಂತ್ರಪ್ರಯೋಗ , ತರ್ಕಶಾಸ್ತ್ರ , ಆತ್ಮವಿಜ್ಞಾನ ಇವನ್ನು ಬೋಧಿಸುತ್ತಿದ್ದರು . +ಉನ್ನತ ಶಿಕ್ಷಣ ಪಡೆಯತಕ್ಕವರು ೨೦ , ೨೨ , ೨೪ನೇಯ ವರ್ಷಗಳ ತನಕ ಶಿಕ್ಷಣ ಪಡೆಯುತ್ತಿದ್ದರು . +ಮೌರ್ಯರ ಕಾಲದಿಂದ ರಾಷ್ಟ್ರಕೂಟರ ಕಾಲದವರೆಗೆ ಎಂದರೆ ೮ - ೯ನೆಯ ಶತಮಾನಗಳ ತನಕ ವೈದಿಕ ಮತ್ತು ಜೈನ ಶಿಕ್ಷಣಗಳೊಡನೆ ಬೌದ್ಧ ಶಿಕ್ಷಣವೂ ಪ್ರಚಾರದಲ್ಲಿತ್ತು . +ಬಾದಾಮಿ ಚಳುಕ್ಯರ ಆಳ್ವಿಕೆಯ ಕೊನೆಯ ವೇಳೆಗೆ ಬೌದ್ಧ ಶಿಕ್ಷಣ ವ್ಯವಸ್ಥೆ ಅವನತಿಗಿಳಿಯುತ್ತ ಬಂದಂತೆ ಕಾಣುತ್ತದೆ . +ಕರ್ನಾಟಕದಲ್ಲಿ ಅಸ್ತಿತ್ವಕ್ಕೆ ಬಂದ ಕೊನೆಯ ಬೌದ್ಧವಿಹಾರಗಳಲ್ಲಿ ೧೦೯೫ರ ಸುಮಾರಿನಲ್ಲಿ ಸಂಗಮದ ಶೆಟ್ಟಿ ಧಾರವಾಡ ಜಿಲ್ಲೆಯ ಡಂಬಳದಲ್ಲಿ (ಧರ್ಮವೊಳಲ್ ) ಕಟ್ಟಿಸಿದ್ದೂ ಒಂದೆಂದು ಹೇಳುತ್ತಾರೆ . +ಶಿವಮೊಗ್ಗ ಜಿಲ್ಲೆಯ ಬಳ್ಳಿಗಾಮೆಯಲ್ಲಿ ೧೨ನ ೆಯ ಶತಮಾನದವರೆಗೂ ಬೌದ್ಧಧರ್ಮವನ್ನು ಅಧ್ಯಯನ ವಿಷಯವನ್ನಾಗಿ ಮಾಡಿಕೊಳ್ಳಲಾಗಿತ್ತು . +ಪ್ರಾಚೀನ ಭಾರತದ ಶಿಕ್ಷಣಕ್ಕೆ ಸಂಬಂಧಿಸಿದಂತೆ ದೊರೆತಿರುವ ಸಾಕ್ಷ್ಯಾಧಾರಗಳೆಲ್ಲ ಬಹುಮಟ್ಟಿಗೆ ಉನ್ನತ ಶಿಕ್ಷಣಕ್ಕೆ ಸಂಬಂಧಿಸಿದವು . +ಪ್ರಾಥಮಿಕ ಶಿಕ್ಷಣಕ್ಕಿದ್ದ ಸೌಲಭ್ಯಗಳನ್ನು ಈಚೆಗೆ ಇಲ್ಲಿಯ ದೇಶೀಯ ಶಿಕ್ಷಣಪದ್ಧತಿಯಲ್ಲಿದ್ದ ವ್ಯವಸ್ಥೆಯ ಆಧಾರದ ಮೇಲೆ ಊಹಿಸಿಕೊಳ್ಳಬೇಕಾಗಿದೆ . +ರಾಜಮಹಾರಾಜರೂ ಇತರ ಧನಿಕರೂ ತಮ್ಮ ಮಕ್ಕಳ ಶಿಕ್ಷಣಕ್ಕಾಗಿ ಪಂಡಿತರನ್ನು ನೇಮಿಸಿಕೊಳ್ಳುತ್ತಿದ್ದರೆನ್ನಬಹುದು ; ಅಂತೆಯೆ ಕೆಲವು ವರ್ಣೀಯರಿಗೆ ಮತೀಯವಾದ ಸೌಲಭ್ಯಗಳು ಇದ್ದಿರಬಹುದು . +ಮಿಕ್ಕ ಬಹುತೇಕ ಮಂದಿಗೆ ಪ್ರಾಥಮಿಕ ಶಿಕ್ಷಣದ ಸೌಲಭ್ಯ ಬಹುಶಃ ಇದ್ದಿರಲಾರದು . +ಊರಿನ ದೇವಾಲಯದಲ್ಲಿ ,ಚಾವಡಿಯಲ್ಲಿ ,ಧನಿಕರ ಪಡಸಾಲೆಗಳಲ್ಲಿ ಮಕ್ಕಳಿಗಾಗಿ ಅಕ್ಷರಾಭ್ಯಾಸದ ತರಗತಿಗಳು ನಡೆಯುತ್ತಿದ್ದಿರಬಹುದು . +ಕ್ರಿ.ಶ .ದ ಆರಂಭದ ಹೊತ್ತಿಗೆ ಬೌದ್ಧಧರ್ಮದ ಪ್ರಚಾರದ ಫಲವಾಗಿ ಕನ್ನಡ ಅಕ್ಷರಾಭ್ಯಾಸಕ್ಕೆ ಪ್ರೋತ್ಸಾಹ ಬಂದಿರಬೇಕು . +ಅದನ್ನು ಬಾಲಶಿಕ್ಷೆ , ಕನ್ನಡ ಶಿಕ್ಷೆ ಎನ್ನುತ್ತಿದ್ದರು . +ಊರಿನಲ್ಲಿ ಪುರಾಣ ಮಾಡುತ್ತಿದ್ದ ಭಟ್ಟರು ಅನೇಕ ವೇಳೆ ಆ ಕಾರ್ಯಕ್ಕೆ ನೇಮಕವಾಗುತ್ತಿದ್ದರು . +ಅದಕ್ಕಾಗಿ ಅವರಿಗೆ ಧನ ,ಧಾನ್ಯ ,ಭೂಮಿ ಅಥವಾ ಇತರ ರೂಪದ ಸಂಭಾವನೆ ದೊರಕುತ್ತಿದ್ದುವೆಂಬುದು ಅನೇಕ ಶಾಸನಗಳಿಂದ ಗೊತ್ತಾಗುತ್ತದೆ . +ಅವರನ್ನು ಪಂಡಿತರೆಂದೂ ಕರೆಯುತ್ತಿದ್ದರು . +ನರಸಿಂಹರಾಜಪುರದ ಪಂಡಿತರೊಬ್ಬರಿಗೆ ೧೨ ಗದ್ಯಾಣಗಳೂ ತಾಳಗುದದ ಪಂಡಿತರಿಗೆ , ೭ ಗದ್ಯಾಣಗಳೂ ಸಿಕ್ಕುತ್ತಿದ್ದುವೆಂದು ಶಾಸನದಲ್ಲಿ ಉಲ್ಲೇಖಗಳಿವೆ . +ಉಚ್ಚಶಿಕ್ಷಣಕ್ಕಾಗಿ ಏರ್ಪಟ್ಟಿದ್ದ ಅಗ್ರಹಾರ ಬ್ರಹ್ಮಪುರಿಗಳಲ್ಲೂ ಪ್ರಾಥಮಿಕಶಿಕ್ಷಣಕ್ಕೆ ಅವಕಾಶವಿತ್ತು . +ಅಲ್ಲಿ ಉಚ್ಚಶಿಕ್ಷಣದ ಪಂಡಿತರಿಗೆ ಹೆಚ್ಚು ಸಂಭಾವನೆಯೂ ಪ್ರಾಥಮಿಕ ಶಿಕ್ಷಣದ ಪಂಡಿತರಿಗೆ ಕಡಿಮೆ ಸಂಭಾವನೆಯೂ ಬರುತ್ತಿದ್ದುವೆಂದು ರಾಯಲ್ ಏಷ್ಯಾಟಿಕ್ ಸೊಸೈಟಿಯ ಮುಂಬಯಿ ಶಾಖೆಯ ಪತ್ರಿಕೆಯ ೯ ನೇಯ ಸಂಪುಟದಲ್ಲಿ ಹೇಳಲಾಗಿದೆ . +ಅಲ್ಲಿ ಕಲಿಸುತ್ತಿದ್ದುದು ಮುಖ್ಯವಾಗಿ ಅಕ್ಷರಾಭ್ಯಾಸ ,ಕಾಗುಣಿತ , ಕನ್ನಡ ಭಾಷೆಯ ಓದು , ಬರೆಹ , ಹ್ಯುಯೆನ್ ತ್ಸಾಂಗನ ಕಾಲಕ್ಕೆ ಆಗಲೆ ಕನ್ನಡದಲ್ಲಿ ಕಾವ್ಯಗಳೂ ಬಂದಿರಬೇಕು . +ಅವನ್ನು ಓದಿ ಅರ್ಥಮಾಡಿಕೊಡುವ ಕಾರ್ಯ ಪ್ರಾಥಮಿಕ ತರಗತಿಯ ಅಂತಿಮ ಘಟ್ಟದ ವೇಳೆಗೆ ನಡೆಯುತ್ತಿದ್ದಿರಬೇಕು . +ಅಲ್ಲಿಯ ಬೋಧನ ಕ್ರಮ ಇತ್ತೀಚಿನ ವರೆಗೂ ಹಳ್ಳಿಯ ಕೂಲಿಮಠಗಳಲ್ಲಿ ಇದ್ದಂತೆಯೇ ಇದ್ದಿರಬಹುದು . +ಮಕ್ಕಳು ಬೆರಳಿನಿಂದ ಮರಳಿನ ಮೇಲೆ ಅಕ್ಷರ ಬರೆದು ಅದನ್ನು ಗಟ್ಟಿಯಾಗಿ ಪಠಿಸುತ್ತ ಕಲಿಯುತ್ತಿದ್ದರು . +ಮಗ್ಗಿಯನ್ನು ಸಾಮೂಹಿಕವಾಗಿ ಹೇಳಿಕೊಂಡು ಅಭ್ಯಸಿಸುತ್ತಿದ್ದರು . +ಪಾಠವನ್ನು ಅಧ್ಯಾಪಕರು ಹೇಳಿಕೊಡುವಾಗ ಮಕ್ಕಳು ಅದರಂತೆ ಉಚ್ಚರಿಸುತ್ತಿದ್ದರು . +ಮಾರನೆಯ ದಿನ ಅದನ್ನು ಮನೆಯಲ್ಲಿ ಓದಿಕೊಂಡು ಬಂದು ಉಪಾಧ್ಯಾಯರ ಮುಂದೆ ಒಪ್ಪಿಸುತ್ತಿದ್ದರು . +ಶಾಲೆ ಎಂಬ ಪದವನ್ನು ಪ್ರಾಥಮಿಕ ಮತ್ತು ಉನ್ನತಶಿಕ್ಷಣ ಸಂಸ್ಥೆಗಳೆರಡಕ್ಕೂ ಬಳಸುತ್ತಿದ್ದುದು ಕಂಡುಬರುತ್ತದೆ . +ಘಟಿಕಗಳು, ಅಗ್ರಹಾರಗಳು, ಬ್ರಹ್ಮಪುರಿಗಳು, ಮಠಗಳು ಮತ್ತು ದೇಗುಲದ ವಿದ್ಯಾಲಯಗಳು ಉನ್ನತಶಿಕ್ಷಣವೀಯುತ್ತಿದ್ದ ಇತರ ಸಂಸ್ಥೆಗಳಾಗಿದ್ದುವು . +ಕರ್ಣಾಟಕದ ಬೇರೆಬೇರೆ ಭಾಗಗಳಲ್ಲಿ ಇವು ಬೇರೆಬೇರೆ ಕಾಲಗಳಲ್ಲಿ ಆರಂಭವಾಗಿ ಬೇರೆಬೇರೆ ಕಾಲಾವಧಿಯ ವರೆಗೆ ಅಸ್ತಿತ್ವದಲ್ಲಿದ್ದ ಸಂಗತಿ ತಿಳಿದುಬರುತ್ತದೆ . +ಅವೆಲ್ಲ ಬಹುಮಟ್ಟಿಗೆ ಖಾಸಗಿ ಸಂಸ್ಥೆಗಳಾಗಿದ್ದು, ಆಳರಸರಿಂದಲೂ ದಾನಿಗಳಿಂದಲೂ ದೊರೆಯುತ್ತಿದ್ದ ದತ್ತಿ, ಪುದುವಟ್ಟು, ಕೊಡುಗೆ ಇತ್ಯಾದಿಗಳ ಬೆಂಬಲದಿಂದ ನಡೆದುಕೊಂಡು ಬರುತ್ತಿದ್ದುವು . +ಪ್ರ.ಶ.೪೦೦ ರಿಂದ ೧೨೦೦ರ ತನಕ ಇಡೀ ಭರತಖಂಡದಲ್ಲೆ ಬೌದ್ಧಮಠಗಳೂ ಹಿಂದೂ ದೇವಾಲಯಗಳೂ ಎಲ್ಲೆಲ್ಲೂ ಆರಂಭವಾಗುತ್ತಿದ್ದವು . +೫೦೦ ರಿಂದ ಅವುಗಳಲ್ಲಿ ಶೈಕ್ಷಣಿಕ ಕಾರ್ಯಕ್ರಮ ದಿನಚರಿಯಾಗುತ್ತ ಬಂತು . +ಆದರೆ ಹಿಂದೂ ದೇವಾಲಯಗಳಲ್ಲಿ ಉನ್ನತ ಶಿಕ್ಷಣದ ವ್ಯವಸ್ಥೆಯ ಬಗ್ಗೆ ಸಾಕ್ಷ್ಯ ದೊರೆತಿರುವುದು ೧೦ನೇಯ ಶತಮಾನದ ಸುಮಾರಿನದು . +ಬಹುಶಃ ಅದಕ್ಕೂ ಹಿಂದೆ ಅವು ಆ ಕಾರ್ಯ ಮಾಡುತ್ತಿದ್ದಿರಬಹುದು . +ಅವುಗಳಲ್ಲಿ ಕೆಲವನ್ನು ನಿದರ್ಶನಗಳಾಗಿ ಆಯ್ದುಕೊಂಡು ಪರಿಶೀಲಿಸುವುದರಿಂದ ಅವು ನೀಡುತ್ತಿದ್ದ ಶಿಕ್ಷಣದ ಸ್ವರೂಪವನ್ನು ಪರಿಚಯ ಮಾಡಿಕೊಳ್ಳಬಹುದು . +೧ .ಘಟಿಕಗಳು : ಇವು ಸಂಖ್ಯೆಯಲ್ಲಿ ವಿರಳವಾಗಿದ್ದರೂ ಕದಂಬರ ಕಾಲದಿಂದಲೂ ಇವುಗಳ ಉಲ್ಲೇಖವುಂಟು . +ಕದಂಬವಂಶದ ಮೂಲಪುರಷನಾದ ಮಯೂರಶರ್ಮ ಕಂಚಿಯ ಒಂದು ಘಟಿಕದಲ್ಲಿ ಶಿಕ್ಷಣ ಪಡೆಯಲು ಯತ್ನಿಸಿದ್ದ . +ಕಂಚಿಯ ಘಟಿಕ ಉತ್ತರದಲ್ಲಿ ಈ ಕಾಲದಲ್ಲಿ ಅಸ್ತಿತ್ವದಲ್ಲಿದ್ದ ನಲಂದ ವಿಶ್ವವಿದ್ಯಾಲಯದಂತಿದ್ದಿರಬಹುದು . +ಅದು ದೇಶದ ಶಿಕ್ಷಣ ವ್ಯವಸ್ಥೆಯಲ್ಲಿ ಅಗ್ರಸ್ಥಾನ ಪಡೆದಿತ್ತು . +ಮಹಾಜನರೆಂಬ ಸಂರಕ್ಷಕರ ಮಂಡಲಿ ಅದರ ಕಾರ್ಯನಿರ್ವಹಿಸುತ್ತಿತ್ತು . +ಸಾಮಾನ್ಯವಾಗಿ ಅವನ್ನು ದೇವಸ್ಥಾನಗಳಲ್ಲಿ ನಡೆಸುತ್ತಿದ್ದರು . +ಕರ್ಣಾಟಕದ ಘಟಿಕಗಳಲ್ಲಿ ಪ್ರಸಿದ್ಧವಾದದ್ದು ಗುಲ್ಬರ್ಗಾದ ಬಳಿಯ ನಾಗೈಯಲ್ಲಿತ್ತು . +ಅಲ್ಲಿ ಒಂದು ಆವರಣದಲ್ಲಿ ೨೫೭ ವಿದ್ಯಾರ್ಥಿಗಳೂ ಮತ್ತೊಂದರಲ್ಲಿ ೪೦೦ ವಿದ್ಯಾರ್ಥಿಗಳೂ ಇದ್ದರು . +ಅಲ್ಲಿ ವೇಳಾನಿಗದಿಕಾರರೂ ಕಾವಲುಗಾರರೂ ಇದ್ದರು . +೨೦೦ ಮಂದಿ ವೇದಗಳನ್ನೂ ೫೨ ಮಂದಿ ಶಾಸ್ತ್ರಗಳನ್ನೂ ಅಧ್ಯಯನ ಮಾಡುತ್ತಿದ್ದರು . +ವೇದಪಾಠಕ್ಕೆ ಮೂವರೂ ಶಾಸ್ತ್ರಪಾಠಕ್ಕೆ ಮೂವರೂ ಪಂಡಿತರಿದ್ದರು . +ಅವರು ಭಟ್ಟದರ್ಶನ , ನ್ಯಾಸ (ವ್ಯಾಕರಣ ) ಮತ್ತು ಪ್ರಭಾಕರಗಳನ್ನು ಬೋಧಿಸುತ್ತಿದ್ದರು . +ಅಲ್ಲಿ ಒಂದು ದೊಡ್ಡ ಗ್ರಂಥಾಲಯವೂ ಅದನ್ನು ನೋಡಿಕೊಳ್ಳಲು ಆರು ಜನ ಅಧಿಕಾರಿಗಳೂ (ಸರಸ್ವತಿ ಭಂಡಾರಿ) ಇದ್ದರು . +ಆ ಘಟಿಕಕ್ಕೆ ಸಂಬಂಧಿಸಿದ ದೇವಾಲಯವೊಂದನ್ನು ನೋಡಿ ಕೊಳ್ಳುವುದಕ್ಕೂ ಅಧ್ಯಾಪಕರ ಮತ್ತು ಇತರರ ರಕ್ಷಣೆಗೂ ಪ್ರತ್ಯೇಕ ಪ್ರತ್ಯೇಕವಾಗಿ ಭೂ ಕೊಡುಗೆಯಿತ್ತು . +ಹೀಗೆಯೆ ಇತರ ಕಡೆಗಳಲ್ಲೂ ಘಟಿಕಗಳಿದ್ದುವು . +ಅವುಗಳಲ್ಲಿ ಕಡಿಯೂರ್,ಕುಕ್ಕೂರ್, ಹೆಂಜೇರು (ತುಮಕೂರು ಜಿಲ್ಲೆ ) ಮೊರಿಗೆರೆ , ರಾಯಬಾಗ್ - ಇವು ಮುಖ್ಯವಾದವು . +ಘಟಿಕದಲ್ಲಿ ಶಿಕ್ಷಣವನ್ನು ಮುಗಿಸಿದವರಿಗೆ ಘಟಿಕ ಸಾಹಸ ಎಂಬ ಪದವಿ ಸಿಗುತ್ತಿತ್ತು . +ಇದನ್ನು ಘನವಿದ್ವಾಂಸರಿಗೆ ಒಂದು ಗೌರವ ಪದವಿಯಾಗಿಯೂ ಕೊಡಲಾಗುತ್ತಿತ್ತು . +ಕರ್ನಾಟಕದ ಅಗ್ರಹಾರಗಳಲ್ಲಿ ಶಿವಮೊಗ್ಗದ ತಾಳಗುಂದದ ಅಗ್ರಹಾರ ಅತ್ಯಂತ ಪ್ರಾಚೀನವಾದ್ದು . +ಇದನ್ನು ಮಯೂರಶರ್ಮನ ಪುರ್ವಿಕನಾದ ಮುಕ್ಕಣ್ಣ ಕದಂಬ ಸ್ಥಾಪಿಸಿದ . +ಅವನು ಉತ್ತರದ ಅಹಿಚ್ಫತ್ರ ಎಂಬ ಸ್ಥಳದಿಂದ ೩೨ ಬ್ರಾಹ್ಮಣ ಕುಟುಂಬಗಳನ್ನು ಕರೆತಂದು ಅಲ್ಲಿ ನೆಲೆಸುವಂತೆ ಮಾಡಿದ . +ಅವರು ವೇದ, ವೇದಾಂಗ, ಉಪಾಂಗ, ಮೀಮಾಂಸೆ, ತರ್ಕಪದ್ಧತಿ , ಸ್ಮೃತಿ , ಪುರಾಣ , ನಾಟಕ ಇತ್ಯಾದಿಗಳಲ್ಲಿ ಪರಿಣತರಾಗಿದ್ದರು (೧೦೯೧ರ ಶಾಸನ ) . +ಮೊದಲ ಕದಂಬರು ತಾಳಗುಂದದ ಸ್ಥಾಪನೆಗೆ ಹೆಸರಾಗಿದ್ದಂತೆ ಬಾದಾಮಿ ಚಳುಕ್ಯರು ಬಾದಾಮಿಯ ಅಗ್ರಹಾರಗಳನ್ನು ಸ್ಥಾಪಿಸಿದರು . +೬೯೯ರ ಒಂದು ಶಾಸನದಂತೆ ವಾತಾಪಿ ಅಥವಾ ಬಾದಾಮಿಯನ್ನು ಒಂದು ಅಧಿಷ್ಠಾನವೆಂದು ಹೆಸರಿಸಿದ್ದರೂ ಅದರ ವರ್ಣನೆಯಿಂದ ಅದೊಂದು ಅಗ್ರಹಾರವಾಗಿತ್ತೆಂಬುದು ಶ್ರುತಪಟ್ಟಿದೆ . +ಅಲ್ಲಿ ಚತುರ್ದಶಶಾಸ್ತ್ರ ವಿದ್ಯೆಗಳಲ್ಲಿ ಪರಿಣತರಿದ್ದರು ; ೨,೦೦೦ ಮಂದಿ ವಿದ್ವಾಂಸರಿದ್ದರು . +ಅದು ಧಾರ್ಮಿಕ ಹಾಗೂ ವೈದಿಕ ಶಿಕ್ಷಣದ ಕೇಂದ್ರವಾಗಿತ್ತೆಂದು ಅದರ ಹೆಸರು ಸೂಚಿಸುವುದಾದರೂ ಅಲ್ಲಿ ಲೌಕಿಕ ವಿದ್ಯೆಗೂ ಪ್ರಾಶಸ್ತ್ಯವಿತ್ತು . +ಚಳುಕ್ಯರ ಮತ್ತೊಂದು ಅಗ್ರಹಾರ ಐಹೊಳೆಯಲ್ಲಿತ್ತು . +ಸೋಮಯಾಜಿ ಎಂಬುವನು ಐಹೊಳೆಯ ( ಆರ್ಯಪುರ ) ೫೦೦ ಮಂದಿ ಚತುರ್ವೇದಿಗಳ ತಂಡಕ್ಕೆ ದತ್ತಿ ನೀಡಿರುವುದು ೮ - ೯ನೆಯ ಶತಮಾನದ ಶಾಸನವೊಂದರಲ್ಲಿ ಉಲ್ಲೇಖವಾಗಿದೆ . +ಆ ಅಗ್ರಹಾರ ಅನಂತರವೂ ೨ - ೩ ಶತಮಾನಗಳ ತನಕ ಪ್ರಸಿದ್ಧಿ ಉಳಿಸಿಕೊಂಡುಬಂತೆಂದು ೧೧೯೧ರ ಶಾಸನದಿಂದ ತಿಳಿಯಬರುತ್ತದೆ . +ರಾಷ್ಟ್ರಕೂಟರ ಕಾಲದಲ್ಲಿ ಬಿಜಾಪುರ ಜಿಲ್ಲೆಯ ಸಾಲೊಟಗಿ ಪ್ರಮುಖ ಅಗ್ರಹಾರವೆನಿಸಿತ್ತು . +ಇದನ್ನು ಕೆಲವು ಇತಿಹಾಸಕಾರರು ದೇಗುಲ ವಿದ್ಯಾಲಯ (ಟೆಂಪಲ್ ಕಾಲೇಜ್) ಎಂದೂ ಪರಿಗಣಿಸುತ್ತಾರೆ . +ಇದರ ಹಿಂದಿನ ಹೆಸರು “ ಪಾವಿಟ್ಟಿಗೆ ” ಇದರೊಡನೆ “ ಶಾಲೆ ” ಸೇರಿ ಅನಂತರ ಅವೆರಡರ ಹ್ರಸ್ವರೂಪವಾಗಿ “ ಸಾಲೊಟಿಗೆ ” ಪ್ರಚಾರಕ್ಕೆ ಬಂತು . +೩ನೇಯ ಕೃಷ್ಣರಾಜನ ಮುಖ್ಯಮಂತ್ರಿ ನಾರಾಯಣ ಅಲ್ಲಿ ೯೪೫ರಲ ್ಲಿ ಭವ್ಯ ಮಂದಿರವೊಂದನ್ನು ಕಟ್ಟಿಸಿದ . +ಅಲ್ಲಿ ವಿವಿಧಭಾಗಗಳಿಂದ ಆಗಮಿಸಿದ್ದ ವಿದ್ವಾಂಸರಿದ್ದರು . +ಅವರ ರಕ್ಷಣೆಗಾಗಿ ಸಾಕಷ್ಟು ಭೂಮಿಕಾಣಿಗಳನ್ನು ಒದಗಿಸಲಾಗಿತ್ತು . +ಅವರ ವಾಸಕ್ಕೆ ಗೃಹವನ್ನೂ ಅಗ್ರಹಾರದ ಕಾರ್ಯಕ್ರಮಗಳ ನಿರ್ವಹಣೆಗಾಗಿ ಭೂಮಿಯನ್ನೂ ಕೊಡುಗೆಯಾಗಿ ಅಲ್ಲಿನ ಅಧಿಕಾರಿಗಳು ಕೊಟ್ಟರು . +ಈ ದಾನಗಳ ಮೇಲೆ ತೆರಿಗೆ ಎತ್ತುತ್ತಿರಲಿಲ್ಲ . +ಗ್ರಾಮಸ್ಥರು ವಿದ್ವಾಂಸರಿಗೆ ಮದುವೆ , ಮುಂಜಿ , ಚೌಲ ಮುಂತಾದ ದಿನಗಳಲ್ಲಿ ಕಾಣಿಕೆ ಕೊಟ್ಟು ಗೌರವಿಸುತ್ತಿದ್ದರು . +ಕಲ್ಯಾಣಿ ಚಾಳುಕ್ಯರ ಕಾಲದಲ್ಲಿ ಗದಗಿನ ಬಳಿಯ ಉಮ್ಮಜಿಗೆಯಲ್ಲಿ ಒಂದು ಉನ್ನತ ಶಿಕ್ಷಣಕೇಂದ್ರವನ್ನು ಸ್ಥಾಪಿಸಲಾಗಿತ್ತು . +ಅಲ್ಲಿ ಒಂದು ಮಹಾವಿದ್ಯಾಲಯವೂ ಛಾತ್ರಾಲಯವೂ ಇದ್ದುವು . +ಅಲ್ಲಿಯ ಅಧ್ಯಾಪಕರಿಗೆ ವಾಸದ ಮನೆಯನ್ನೂ ಜೀವನೋಪಾಯಕ್ಕೆ ಭೂಮಿಯ ಕೊಡುಗೆಯನ್ನೂ ನೀಡಲಾಗಿತ್ತು . +ಅಲ್ಲಿ ಶಿಕ್ಷಣ ನೀಡುತ್ತಿದ್ದವರು ಅಕ್ಕರಿಗರು (ಅಕ್ಷರ ಬೋಧಕ ) . +ಇವರು ಗಣಿತ , ಖಗೋಳವಿಜ್ಞಾನ , ಛಂದಸ್ಸು , ವ್ಯಾಕರಣ , ಕಾವ್ಯಶಾಸ್ತ್ರ ಮುಂತಾದವುಗಳ ರಚಕರೂ ಬೋಧಕರೂ ಆಗಿದ್ದರು . +ಇವರಿಗೆ ಬೇಕಾದ ಹಾಗೆ ಭೂಮಿಯನ್ನು ದಾನವಾಗಿ ಕೊಡಲಾಗಿತ್ತು . +ಅದರಿಂದ ಬಂದ ಆದಾಯದಲ್ಲಿ ತಾವು ಜೀವಿಸುವುದಲ್ಲದೆ ತಮ್ಮ ಶಿಷ್ಯರಿಗೆ ದಿನಕ್ಕೆ ಒಂದು ಊಟವನ್ನೂ ವರ್ಷಕ್ಕೊಮ್ಮೆ ಬಟ್ಟೆಯನ್ನೂ ಒದಗಿಸಬೇಕಾಗಿತ್ತು . +ಮೇಲಿನ ಅಗ್ರಹಾರಗಳ ಜೊತೆಗೆ ಇನ್ನೂ ಅನೇಕ ಅಗ್ರಹಾರಗಳು ಕರ್ನಾಟಕದ ಬೇರೆಬೇರೆ ಭಾಗಗಳಲ್ಲಿದ್ದುದು ತಿಳಿದು ಬಂದಿದೆ . +ಕದಂಬರಾಜ್ಯದ ಅರಸನಾದ ಶಿವಚಿತ್ತನ ರಾಣಿ ಕಮಲಾದೇವಿ ಬೆಳಗಾಂವಿ ಜಿಲ್ಲೆಯ ಡಿಗಾಂವಿಯಲ್ಲಿ ಒಂದು ಅಗ್ರಹಾರವನ್ನು ಸ್ಥಾಪಿಸಿದ್ದಳು . +ಅದಕ್ಕಾಗಿ ಭಾರತದ ಬೇರೆಬೇರೆ ಭಾಗಗಳಿಂದ ವಿದ್ವಾಂಸರನ್ನು ಕರೆಸಿ ಅವರ ಸಂರಕ್ಷಣೆಗಾಗಿ ದತ್ತಿಯನ್ನು ಹಾಕಿಸಿಕೊಟ್ಟಳು . +ಅಲ್ಲಿ ವೇದ , ವೇದಾಂಗ , ನ್ಯಾಯ , ಮೀಮಾಂಸೆ , ಸಾಂಖ್ಯ , ಯೋಗ , ವೇದಾಂತ , ಸ್ಮೃತಿ , ಇತಿಹಾಸ , ಪುರಾಣ , ಖಗೋಳಶಾಸ್ತ್ರ - ಇವುಗಳ ಬೋಧನೆಗೆ ಅವಕಾಶ ಕಲ್ಪಿಸಲಾಗಿತ್ತು . +ಆಯಾ ಅಧ್ಯಾಪಕರ ವಿಷಯಪಾಂಡಿತ್ಯಕ್ಕೂ ಕಾರ್ಯಮಹತ್ತ್ವಕ್ಕೂ ಅನುಗುಣವಾಗಿ ದಾನಗಳನ್ನು ನೀಡಲಾಗಿತ್ತು . +ಹೀಗೆಯೆ ಕರ್ನಾಟಕದ ಇತರೆಡೆಗಳಲ್ಲೂ ಅಗ್ರಹಾರಗಳು ಸ್ಥಾಪನೆಯಾಗಿದ್ದುವು . +ಅಗ್ರಹಾರಗಳಂತೆ ಬ್ರಹ್ಮಪುರಿಗಳೂ ಕರ್ನಾಟಕದಲ್ಲಿ ಪ್ರಾಚೀನ ಕಾಲ ದಿಂದಲೂ ಅಸ್ತಿತ್ವದಲ್ಲಿದ್ದ ಉನ್ನತ ಶಿಕ್ಷಣ ಸಂಸ್ಥೆಗಳು . +ಅಗ್ರಹಾರ ಶಿಕ್ಷಣಕ್ಕಾಗಿ ಏರ್ಪಟ್ಟ ವಿಶಿಷ್ಟ ಗ್ರಾಮವಾಗಿದ್ದರೆ ಬ್ರಹ್ಮಪುರಿ ನಗರದ ಒಂದು ಭಾಗ ಮಾತ್ರವಾಗಿತ್ತು . +ಬೆಳಗಾಂವಿಯಲ್ಲಿ ಬನವಾಸಿಯ ಪ್ರಾಂತ್ಯಾಧಿಕಾರಿಯಾದ ಕೇಶವದೇವ ಬ್ರಹ್ಮಪುರಿಯೊಂದನ್ನು ಸ್ಥಾಪಿಸಿದ್ದ . +ಅಲ್ಲಿ ೩೮ ಮಂದಿ ಕೀರ್ತಿವೆತ್ತ ವಿದ್ವಾಂಸರಿದ್ದರು . +ಅವರು ಪುರಾಣ , ಸ್ಮೃತಿ , ಭಾಷ್ಯ , ಕಾವ್ಯ , ನಾಟಕ ಇತ್ಯಾದಿ ಜ್ಞಾನಕ್ಷೇತ್ರಗಳಲ್ಲಿ ಪಂಡಿತರೆನಿಸಿದ್ದು ಆಯಾ ಜ್ಞಾನವನ್ನು ಬೋಧಿಸುತ್ತಿದ್ದರು . +ಆ ನಗರದ ದಕ್ಷಿಣದ ಫಲವತ್ತಾದ ನೆಲವನ್ನು ಅವರ ವಸತಿಗೂ ಜೀವನೋಪಾಯಕ್ಕೂ ಕೇಶವದೇವ ದಾನವಾಗಿ ಕೊಟ್ಟಿದ್ದ . +ಅಲ್ಲಿ ಒಂದು ಸುಂದರವಾದ ದೇಗುಲ ಕಟ್ಟಿಸಿ ಅದರ ಮುಂದೆ ವೀರಕೇಶವಪುರ ಎಂಬ ನಗರವನ್ನು ನಿರ್ಮಿಸಿದ್ದ . +ಅನೇಕ ವಸತಿಗಳನ್ನು ಕಟ್ಟಿಸಿ ಅವುಗಳನ್ನು ಪೀಠೋಪಕರಣಾದಿಗಳಿಂದ ಸಜ್ಜುಗೊಳಿಸಿ ಶೈಕ್ಷಣಿಕ ಕಾರ್ಯಕ್ರಮಗಳಿಗೆ ಅನುಕೂಲ ಮಾಡಿಕೊಟ್ಟಿದ್ದ . +ಅಧ್ಯಾಪಕರ ವಸತಿಗೃಹಗಳನ್ನು ಕಟ್ಟಿಸಿ ವಾಸಕ್ಕೆ ಸಜ್ಜುಗೊಳಿಸಿ (ಫರ್ನಿಷ್ಡ್‌ ) ಕೊಡಲಾಗಿತ್ತು . +ಬ್ರಹ್ಮಪುರಿಗಳು ಸೂಡಿ , ಅರಸೀಬೀದಿ ( ವಿಕ್ರಮಪುರ ), ತಲಕಾಡು ಮುಂತಾದ ಕರ್ಣಾಟಕದ ಇತರ ಕೆಲವು ನಗರಗಳಲ್ಲೂ ಇದ್ದುವು . +ಅಗ್ರಹಾರಗಳೂ ಬ್ರಹ್ಮಪುರಿಗಳೂ ಕರ್ನಾಟಕದ ವಿಶಿಷ್ಟ ಉನ್ನತ ಶಿಕ್ಷಣಕೇಂದ್ರಗಳೆನಿಸಿದ್ದರೂ ಇವು ಆ ಕಾಲದಲ್ಲಿ ಉತ್ತರ ಭಾರತದಲ್ಲಿ ಪ್ರಚಾರದಲ್ಲಿದ್ದ ಟೋಲ್ ಎಂಬ ಶಿಕ್ಷಣ ಸಂಸ್ಥೆಗಳನ್ನು ಹೋಲುತ್ತಿದ್ದುವು . +ಇವನ್ನೇ ಕೆಲವರು ದೇವಾಲಯದ ವಿದ್ಯಾಲಯಗಳೆಂದು ಕರೆದಿರುವರು . +ದೇವಾಲಯ ವಿದ್ಯಾಲಯ ಗಳಲ್ಲಿ ಕೆಲವು ಪ್ರಾಥಮಿಕ ಶಿಕ್ಷಣವನ್ನು ಬೋಧಿಸುತ್ತಿದ್ದರೂ ಮತೆ ಕೆಲವು ಉನ್ನತಶಿಕ್ಷಣಕ್ಕೂ ಅವಕಾಶ ಕಲ್ಪಿಸಿದ್ದುವು . +ಹರಿಹರದ ಹರಿಹರೇಶ್ವರ ದೇವಾಲಯವೂ ತಾಳಗುಂದದ ಪ್ರಣವೇಶ್ವರದೇವಾಲಯವೂ ಅಂಥ ಉನ್ನತ ಶಿಕ್ಷಣ ಕೇಂದ್ರಗಳಾಗಿ ಕೆಲಸ ಮಾಡುತ್ತಿದ್ದುವು . +ಹರಿಹರೇಶ್ವರ ದೇವಾಲಯದ ಶಿಕ್ಷಣ ಕೇಂದ್ರದಲ್ಲಿ ಋಗ್ವೇದ ,ಯಜುರ್ವೇದ, ವ್ಯಾಕರಣ, ಮೀಮಾಂಸೆ ಇತ್ಯಾದಿ ವಿಷಯಗಳ ಬೋಧನೆಗೆ ಪಡಿತರಿದ್ದುದಲ್ಲದೆ ಪ್ರಾಥಮಿಕ ಶಿಕ್ಷಣದ ಅಧ್ಯಾಪಕರೂ ಇದ್ದರು . +ತಾಳಗುಂದದ ಪ್ರಣವೇಶ್ವರ ದೇವಾಲಯದ ಕೇಂದ್ರದಲ್ಲಿ ಋಗ್ವೇದ, ಯಜುರ್ವೇದ, ಸಾಮವೇದ, ಪದಪಾಠ, ಕಲ್ಪ, ವ್ಯಾಕರಣ, ನ್ಯಾಸ, ಪ್ರಭಾಕರ, ಕಲ್ಪಾವತಾರ ಮತ್ತು ವೇದಾಂತಗಳನ್ನು ಹೇಳಿಕೊಡುತ್ತಿದ್ದರಲ್ಲದೆ ಪ್ರಾಥಮಿಕ ಶಿಕ್ಷಣಕ್ಕೂ ವ್ಯವಸ್ಥೆಗೊಳಿಸಲಾಗಿತ್ತು . +ಒಬ್ಬೊಬ್ಬ ಪಂಡಿತರೂ ಎಂಟು ಮಂದಿ ವಿದ್ಯಾರ್ಥಿಗಳಿಗೆ ಪಾಠ ಹೇಳುತ್ತಿದ್ದರೆಂದೂ ದೇವಸ್ಥಾನದ ಆದಾಯದಿಂದ ೪೮ ವಿದ್ಯಾರ್ಥಿಗಳಿಗೂ ಪಂಡಿತರಿಗೂ ಊಟವಸತಿಗಳನ್ನು ಏರ್ಪಡಿಸಲಾಗಿತ್ತೆಂದೂ ತಿಳಿದುಬರುತ್ತದೆ . +ಹತ್ತನೆಯ ಶತಮಾನದ ವೇಳೆಗೆ ಕರ್ನಾಟಕದ ಅನೇಕ ಊರುಗಳಲ್ಲಿ ಧಾರ್ಮಿಕ ಮಠಗಳು ಆರಂಭವಾಗಿದ್ದುವು . +ದೇವಸ್ಥಾನಗಳಿಗೆ ಮಠ ಅಥವಾ ಆಶ್ರಮಗಳನ್ನು ಸೇರಿಸುವುದೂ ಆರಂಭವಾಗಿ ದೇವಸ್ಥಾನಗಳಂತೆ ಮಠಗಳೂ ಮಕ್ಕಳ ಮತ್ತು ದೊಡ್ಡವರ ಶಿಕ್ಷಣ , ಬೋಧನೆ , ಧರ್ಮಪ್ರಚಾರ ಇತ್ಯಾದಿ ಕಾರ್ಯಗಳನ್ನು ನಡೆಸಲಾರಂಭಿಸಿದುವು . +ಅವುಗಳಲ್ಲಿದ್ದ ಮಠಾಧಿಪತಿಗಳು ಮೊದಮೊದಲು ಆಯಾ ಮತಗಳ ಅನುಯಾಯಿಗಳಿಗಾಗಿ ಹಾಗೂ ಮಠಿಗಳಾಗತಕ್ಕವರಿಗಾಗಿ ಧಾರ್ಮಿಕ ಶಿಕ್ಷಣವೀಯುವ ಯತ್ನದ ಪೂರ್ವಭಾವಿ ಯಾಗಿ ಪ್ರಾಥಮಿಕ ಶಿಕ್ಷಣವನ್ನೂ ನೀಡಬೇಕಾಗಿತ್ತು . +ಕೆಲವು ಕಡೆ ಅದಕ್ಕಾಗಿ ಮಠಾಧಿಪತಿಗಳ ಜೊತೆಗೆ ಪ್ರತ್ಯೇಕ “ಅಯ್ಯ ” ಗಳೂ ಇರುತ್ತಿದ್ದರು . +ಇಂಥ ಮಠಗಳಲ್ಲಿ ಪ್ರಾಥಮಿಕ ಶಿಕ್ಷಣದಂತೆ ಉನ್ನತಶಿಕ್ಷಣಕ್ಕೂ ಅವಕಾಶವಿರುತ್ತಿತ್ತು . +ಮತೀಯ ಮಠಗಳು ಕ್ರಮೇಣ ಊರುರುಗಳಲ್ಲೂ ಆರಂಭವಾದುವು . +ಮೊದ ಮೊದಲು ಅವು ಧಾರ್ಮಿಕ ಸಂಸ್ಥೆಗಳಾಗಿದ್ದರೂ ಶಿಕ್ಷಣ ಕಾರ್ಯವನ್ನೂ ತಮ್ಮ ಪ್ರಧಾನ ಕರ್ತವ್ಯಗಳಲ್ಲೊಂದಾಗಿ ಮಾಡಿಕೊಂಡುವು . +ಅಂಥ ಮಠಗಳಲ್ಲಿ ಕೋಡಿಮಠ ಮತ್ತು ನಾಗೈಮಠಗಳನ್ನು ಉಲ್ಲೇಖಿಸಬಹುದು . +ಆಗ ಆರಂಭವಾಗಿದ್ದ ( ೧೧೬೨ರ ಶಾಸನ ) ಕೋಡಿಮಠ ಬಳ್ಳಿಗಾಮೆಯ ಕೇದಾರೇಶ್ವರ ದೇವಾಲಯಕ್ಕೆ ಸೇರಿದಂತಿತ್ತು . +ಅಲ್ಲಿ ಎಲ್ಲ ರೀತಿಯ ಜ್ಞಾನಬೋಧನೆಗೂ ಅವಕಾಶವಿದ್ದುದಲ್ಲದೆ ಬಡವ ಬಲ್ಲಿದರಿಗೂ ಸಬಲ ಅಬಲರಿಗೂ ಕುರುಡ ಮೂಗರಿಗೂ ವಿದ್ಯಾಭ್ಯಾಸಕ್ಕೆ ಅವಕಾಶವಿತ್ತು . +ಅವರ ಅಶನ , ವಸನ , ವಸತಿ - ಇತ್ಯಾದಿಗಳಿಗೂ ಸೌಲಭ್ಯ ಕಲ್ಪಿಸಲಾಗಿತ್ತು ; ಎಲ್ಲ ಮತೀಯರೂ ಎಲ್ಲ ದೇಶೀಯರೂ ನಿರ್ಭಯವಾಗಿ ಅಧ್ಯಯನ ಮಾಡುವ ಸನ್ನಿವೇಶ ಅಲ್ಲಿತ್ತು . +ಜೊತೆಗೆ ಅದಕ್ಕೆ ಸೇರಿದಂತೆ ಒಂದು ವೈದ್ಯಾಲಯವೂ ಛಾತ್ರಾಲಯವೂ ಇದ್ದುವು . +ಈ ಪೀಠದ ಅಧ್ಯಕ್ಷತೆಯನ್ನು ಪ್ರಸಿದ್ಧ ಪಂಡಿತರು ವಹಿಸಿದ್ದರು . +ಅವರಲ್ಲೊಬ್ಬರಾದ ವಾಮಶಕ್ತಿಯೆಂಬುವನು ವ್ಯಾಕರಣ , ವೇದಾಂತ , ನಾಟಕ , ಕಾವ್ಯರಚನೆ , ಸಿದ್ದಾಂತ , ಶಿವಪದ ಇತ್ಯಾದಿ ಜ್ಞಾನಕ್ಷೇತ್ರಗಳಲ್ಲಿ ದೊಡ್ಡ ಪಂಡಿತನೆನಿಸಿದ್ದ . +ಆತ ಶಿಷ್ಯರೊಡನೆ ತಳೆದಿದ್ದ ಬಾಂಧವ್ಯವನ್ನು ಕುರಿತ ಶಾಸನವೊಂದು “ ತನ್ನ ಶಿಷ್ಯರೆಲ್ಲರ ಭಾವನೆಗಳೂ ಬಯಕೆಗಳೂ ಕೇಂದ್ರೀಕರಿಸಿರುವ ಏಕೈಕ ವ್ಯಕ್ತಿಯಾಗಿದ್ದ ವಾಮಶಕ್ತಿ ” ಎಂದು ಉಲ್ಲೇಖಿಸಿದೆ . +ನಾಗೈನಲ್ಲಿದ್ದ ಮಧುಸೂದನ ದೇವಾಲಯಕ್ಕೆ ಸೇರಿದ ಇನ್ನೊಂದು ಮಠವನ್ನು ಮೂರಂತ್ತಸಿನ ಭವ್ಯಮಂದಿರದಲ್ಲಿ ಸ್ಥಾಪಿಸಲಾಗಿತ್ತು . +ಅಲ್ಲಿ ಉನ್ನತ ಶಿಕ್ಷಣದಲ್ಲೆ ಬೇರೆ ಬೇರೆ ಅಂತಸ್ತಿನ ಸ್ನಾತಕ ಮತ್ತು ಸ್ನಾತಕೋತ್ತರ ಶಿಕ್ಷಣಗಳ ವ್ಯವಸ್ಥೆಯಿತ್ತು . +ವಟುಗಳಂತೆ ವಿರಕ್ತರೂ ಅಲ್ಲಿ ಅಧ್ಯಯನ ಮಾಡುತ್ತಿದ್ದರು . +ಅಲ್ಲಿ ಅವರೆಲ್ಲಿರಗೂ ಅಶನ , ವಸನ , ವಸತಿ ಇತ್ಯಾದಿ ಸೌಲಭ್ಯಗಳನ್ನು ಏರ್ಪಡಿಸಲಾಗಿತ್ತು . +ಮಠದ ಆವರಣಕ್ಕೆ ಸೇರಿದಂತೆ ನೃತ್ಯಾಲಯವೂ ಇತ್ತು . +ಮಠಕ್ಕೆ ಎತ್ತರವಾದ ಮುಖಮಂಟಪಗಳೂ ದ್ವಾರ ಹಜಾರಗಳೂ ವಠಾರದ ಗೋಡೆಗಳೂ ಇದ್ದುವು . +ಅಲ್ಲಿಯ ಕಾರ್ಯಕರ್ತರ ಮಂಡಲಿಯಲ್ಲಿ ಮೂವರು ಅಧ್ಯಾಪಕರೂ ಒಬ್ಬ ಪುರಾಣ ಭಟ್ಟನೂ ಕಾಲೇಜಿನ ಕಟ್ಟಡಾದಿಗಳ ಮೇಲ್ವಿಚಾರಣೆ ನೋಡಿಕೊಳ್ಳಲು ನಾಲ್ಕು ಜನ ಶಿಲ್ಪಿಗಳೂ ಇದ್ದುದಲ್ಲದೆ ಆ ಮಠದ ಕಾರ್ಯನಿರ್ವಹಣೆಯ ವೆಚ್ಚಕ್ಕಾಗಿ ಬಿಟ್ಟಿದ್ದ ದತ್ತಿಯ ಭೂಮಿಯ ವ್ಯವಸಾಯವನ್ನು ನೋಡಿಕೊಳ್ಳಲು ಒಬ್ಬ ವ್ಯವಸ್ಥಾಪಕನೂ ಮೂವರು ಘಟಿಯಾರರೂ (ಆಳುಗಳೂ ) ಇದ್ದರು . +ಉನ್ನತ ಶಿಕ್ಷಣಕ್ಕಾಗಿ ಏರ್ಪಟ್ಟಿದ್ದ ವಿವಿಧ ವಿದ್ಯಾಸಂಸ್ಥೆಗಳನ್ನು ಕುರಿತ ಮೇಲಿನ ವಿವರಣೆಯಿಂದ ಕೆಲವು ಸರ್ವಸಾಮಾನ್ಯ ವಿಷಯಗಳು ಎದ್ದು ಕಾಣುತ್ತವೆ . +ಶಿಕ್ಷಣ ಪ್ರಾಥಮಿಕ ಅಂತಸ್ತಿನಂತೆಯೆ ವಿಕೇಂದ್ರೀಕರಣವಾಗಿದ್ದರೂ ಒಂದೊಂದಕ್ಕೂ ಪ್ರತ್ಯೇಕ ಆಡಳಿತ ವ್ಯವಸ್ಥೆಯಿತ್ತು . +ಕಾರ್ಯನಿರ್ವಹಣೆಗೂ ಅಧ್ಯಾಪಕರ ಸಂಭಾವನೆಗೂ ಅಗತ್ಯವೆನಿಸುವಷ್ಟು ಉತ್ಪತ್ತಿಯಿಂದ ಬೂಕೊಡುಗೆಯಿದ್ದು ಅವು ಸ್ವಯಂಪೂರ್ಣವೂ ಸ್ವತಂತ್ರವೂ ಆಗಿದ್ದುವು . +ವಿದ್ಯಾಲಯಕ್ಕೆ ಸೇರಿದ ಭೂಮಿಯನ್ನು ನೋಡಿಕೊಳ್ಳುವುದಕ್ಕೂ ಕಟ್ಟಡಗಳ ದುರಸ್ತಿಗೂ ಕಾವಲು ಕಾಯುವುದಕ್ಕೂ ತಕ್ಕ ಏರ್ಪಾಡುಗಳಿದ್ದುವು . +ಸಾಮಾನ್ಯವಾಗಿ ಅವೆಲ್ಲ ವಸತಿ ವಿದ್ಯಾಲಯಗಳಂತಿದ್ದುವು . +ವಿದ್ಯಾರ್ಥಿಗಳ ಅಧ್ಯಯನವನ್ನು ನೋಡಿಕೊಳ್ಳುವ ಮೇಲ್ವಿಚಾರಕರೂ ಇರುತ್ತಿದ್ದರು . +ಉಪಾಧ್ಯಾಯವರ್ಗದಲ್ಲಿ ತಮ್ಮ ತಮ್ಮ ವಿಷಯದಲ್ಲಿ ಉನ್ನತಮಟ್ಟದ ಪಾಂಡಿತ್ಯ ಪಡೆದವರನ್ನು ಮಾತ್ರ ಸೇರಿಸಿಕೊಳ್ಳುವ ವ್ಯವಸ್ಥೆಯಿತ್ತು . +ವಿದ್ಯಾರ್ಥಿಗಳನ್ನು ಸೇರಿಸಿಕೊಳ್ಳುವ ಮುನ್ನ ಒಂದು ಪ್ರವೇಶಪರೀಕ್ಷೆ ಮಾಡಿ ಸೂಕ್ತರಾದವರನ್ನು , ಅವಕಾಶವಿರುವಷ್ಟು ಸಂಖ್ಯೆಯಲ್ಲಿ ಮಾತ್ರ , ಆಯ್ದುಕೊಳ್ಳಲಾಗುತ್ತಿತ್ತು . +ಮೇಲೆ ಸೂಚಿಸಿದ ವಿದ್ಯಾಲಯಗಳಲ್ಲಿ ಪಠ್ಯವಿಷಯಗಳಲ್ಲಿ ಸಾಮಾನ್ಯವಾಗಿ ವ್ಯಾಕರಣ , ವೇದ , ಆಗಮ , ಪುರಾಣ , ಕಾವ್ಯ , ನಾಟಕ ಇವನ್ನು ಗೊತ್ತುಮಾಡುತ್ತಿದ್ದರು . +ವ್ಯಾಕರಣಕ್ಕೆ ಪಾಣಿನಿಯಂಥ ಅಧಿಕೃತ ಗ್ರಂಥಗಳು ಪಠ್ಯಪುಸ್ತಕಗಳಾಗಿರುತ್ತಿದ್ದುವು . +ಬೇರೆ ಬೇರೆ ವಿದ್ಯಾಲಯಗಳಲ್ಲಿ ಬೇರೆ ಬೇರೆ ವಿಷಯಗಳ ಅಧ್ಯಯನಕ್ಕೆ ಅವಕಾಶ ಕಲ್ಪಿಸಿತ್ತು . +ಕೋಡಿಮಠದಲ್ಲಿ ಭಾರತೀಯ ಷಡ್ದರ್ಶನಗಳೂ ಬೌದ್ಧತತ್ತ್ವಶಾಸ್ತ್ರಗಳೂ , ಲಕುಲರ ಯೋಗಸೂತ್ರಗಳೂ ಒಂದು ವರ್ಗದ ವಿಶಿಷ್ಟ ಅಧ್ಯಯನ ವಿಷಯಗಳಾಗಿದ್ದುವು . +ಶಿವಮೊಗ್ಗ ಜಿಲ್ಲೆಯ ಕುಪ್ಪತ್ತೂರ ಮಠದಲ್ಲಿ ವಾತ್ಸಾಯನನ ಕಾಮಸೂತ್ರ ಅಧ್ಯಯನದ ವಿಶೇಷ ವಿಷಯವಾಗಿತ್ತು . +ಅರಸೀಕೆರೆಯಲ್ಲಿ ಭಾಷಾಶಾಸ್ತ್ರದ ಅಧ್ಯಯನಕ್ಕೆ ಪ್ರಾಶಸ್ತ್ಯವಿತ್ತು . +ನಾಗೈಯಲ್ಲಿ ಮನುಧರ್ಮಶಾಸ್ತ್ರ , ಶುಕ್ರಶಾಸ್ತ್ರ ಮತ್ತು ವ್ಯಾಸರ ಗ್ರಂಥಗಳ ಅಧ್ಯಯನ ಪ್ರಧಾನವಾಗಿತ್ತು . +ಉಮ್ಮಚಿಗಿಯಲ್ಲಿ ವ್ಯಾಕರಣಶಾಸ್ತ್ರ , ಛಂದಸ್ಸು , ಗ್ರಂಥರಚನೆ ಇತ್ಯಾದಿಗಳಿಗೆ ಪ್ರಾಶಸ್ತ್ಯವಿತ್ತು . +ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳು ಕಠಿಣವೆನಿಸುವ ಶಿಸ್ತಿನ ಜೀವನ ನಡೆಸಬೇಕಾಗಿತ್ತು . +ಅವರು ಬ್ರಹ್ಮಚಾರಿಗಳಾಗಿರಬೇಕೆಂದೂ ಶ್ರದ್ಧೆಯಿಂದ ಕಷ್ಟಪಟ್ಟು ಅಭ್ಯಾಸಮಾಡಬೇಕೆಂದೂ ಎಲ್ಲ ಸಂಸ್ಥೆಗಳೂ ಸಾಮಾನ್ಯವಾಗಿ ನಿಬಂಧನೆ ಮಾಡಿದ್ದುವು . +ಆ ನಿಯಮಗಳನ್ನು ಉಲ್ಲಂಘಿಸಿದವರನ್ನು ಸಂಸ್ಥೆಯಿಂದ ಹೊರಹಾಕುವುದು ರೂಢಿಯಲ್ಲಿತ್ತು . +ಉಮ್ಮಚಿಗಿ ಅಗ್ರಹಾರದಲ್ಲಿ ಬೈಗುಳ, ಗಲಭೆ, ಹೊಡೆದಾಟ, ವ್ಯಭಿಚಾರ, ಇತ್ಯಾದಿ ದುರ್ನಡತೆಗಳಿಗಾಗಿ ವಿದ್ಯಾರ್ಥಿಗಳಿಗೆ ದಂಡ ವಿಧಿಸಲಾಗುತ್ತಿತ್ತು . +ವಿದ್ಯಾರ್ಥಿಗಳಲ್ಲೂ ಅಧ್ಯಾಪಕರಲ್ಲೂ ಕೆಲವರು ನೈಷ್ಠಿಕ (ಆಜೀವ ) ಬ್ರಹ್ಮಚಾರಿಗಳಿದ್ದರು . +ಶಿಸ್ತಿನ ನಿಯಮಗಳು ವಿದ್ಯಾರ್ಥಿಗಳಂತೆ ಅಧ್ಯಾಪಕರಿಗೂ ಅನ್ವಯಿಸುತ್ತಿದ್ದುವು . +ಅವರು ಸಿಬ್ಬಂದಿವರ್ಗದವರೇ ಆಗಿರಲಿ , ಸಂನ್ಯಾಸಿಗಳೇ ಆಗಿರಲಿ , ಮಠದಲ್ಲಿದ್ದಷ್ಟು ಕಾಲ ಕಠಿಣವಾದ ಬ್ರಹ್ಮಚರ್ಯವನ್ನು ಪಾಲಿಸಬೇಕಾಗಿತ್ತು . +ಹಾಗೆ ಪಾಲಿಸದಿದ್ದವರನ್ನು ಗ್ರಾಮಸ್ಥರೂ ರಾಜ್ಯದ ಅರಸರೂ ಸಮಾಲೋಚನೆ ನಡೆಸಿ ಮಠದಿಂದ ಹೊರದೂಡುತ್ತಿದ್ದರು . +ಜನಸಾಮಾನ್ಯರಲ್ಲಿ ಹೆಣ್ಣುಮಕ್ಕಳಿಗೆ ಶಿಕ್ಷಣಕ್ಕಾಗಿ ಈ ಕಾಲದಲ್ಲಿ ಯಾವ ಸೌಲಭ್ಯವಿತ್ತೆಂಬುದು ಗೊತ್ತಾಗಿಲ್ಲ . +ಆದರೆ ಅರಸುಮನೆತನದ ಹೆಣ್ಣುಮಕ್ಕಳಿಗೂ ಶ್ರೀಮಂತ ಕುಟುಂಬಗಳಿಗೂ ನಿರ್ದಿಷ್ಟ ಶಿಕ್ಷಣವ್ಯವಸ್ಥೆಯೇನೋ ಇತ್ತು . +ಅವರಿಗೆ ಅಕ್ಷರ ವಿದ್ಯೆಯ ಜೊತೆಗೆ ಸಂಗೀತ , ನೃತ್ಯ , ಆಡಳಿತಜ್ಞಾನ ಇತ್ಯಾದಿ ಶಿಕ್ಷಣವನ್ನು ದೊರಕಿಸಲಾಗುತ್ತಿತ್ತು . +ಅದಕ್ಕಾಗಿ ಸಂಭಾವನೆಯ ಮೇಲೆ ಅಥವಾ ಇನ್ನಿತರ ಕೊಡುಗೆಯ ಮೂಲಕ ಅಧ್ಯಾಪಕರನ್ನು ನೇಮಿಸಲಾಗುತ್ತಿತ್ತು . +ಬಾದಾಮಿ ಚಳುಕ್ಯರ ಚಂದ್ರಾದಿತ್ಯನ ರಾಣಿ ವಿಜಯಭಟ್ಟಾರಿಕೆ ಸ್ವತಃ ಕವಯಿತ್ರಿಯಾಗಿದ್ದು ರಾಜ್ಯದ ಆಡಳಿತವನ್ನೂ ನೋಡಿಕೊಳ್ಳುತ್ತಿದ್ದಂತೆ ಕಾಣುತ್ತದೆ . +ಅವಳು ತನ್ನ ಹೆಸರಿನಲ್ಲಿ ದತ್ತಿಯೊಂದನ್ನು ನೀಡಿದ್ದಳು . +ರಾಷ್ಟ್ರಕೂಟರ ಕಾಲದಲ್ಲಿ ನಾಗರಖಂಡದ ನಾಳ್ಗಾವುಂಡ ತನ್ನ ಅರಸನಿಗಾಗಿ ಹೋರಾಡಿ ಮಡಿದಾಗ ಅವನ ಮಡದಿ ಜಕ್ಕಿಯಬ್ಬೆ ಪ್ರಾಂತಾಧಿಕಾರ ವಹಿಸಿಕೊಂಡು ನಿರ್ವಹಿಸಿದು ದಾಗಿಯೂ ಅನಂತರ ಆ ಕಾರ್ಯವನ್ನು ತನ್ನ ಮಗಳಿಗೆ ವಹಿಸಿದುದಾಗಿಯೂ ಐತಿಹ್ಯವುಂಟು . +ಎಂದರೆ ರಾಜಕುಮಾರಿಯವರಿಗೆ ಪೂರ್ವಭಾವಿಯಾಗಿ ಅಗತ್ಯಶಿಕ್ಷಣ ಪಡೆಯುವ ವ್ಯವಸ್ಥೆ ಇದ್ದಿರಬೇಕು . +ಕಲ್ಯಾಣದ ಚಾಳುಕ್ಯರ ಕಾಲದಲ್ಲಿ ಕಿಸುಕಾಡಿನ ಸತ್ಯಾಶ್ರಯನ ಮಗಳಾದ ಅಕ್ಕಾದೇವಿ ಪ್ರಾಂತಾಧಿಕಾರಿಣಿಯಾಗಿ ಅಧಿಕಾರ ನಡೆಸಿದಳು . +ಹಾಗೆಯೆ , ಕಳಚುರ್ಯ ಸೋವಿದೇವನ ರಾಣಿ ಸೋವಲಾದೇವಿ ವಿದ್ವಜ್ಜನರ ಸಭೆಯಲ್ಲಿ ನೃತ್ಯಕಲಾಪ್ರದರ್ಶನವಿತ್ತು ಮೆಚ್ಚುಗೆ ಪಡೆದಿದ್ದಳೆಂದು ತಿಳಿದುಬರುತ್ತದೆ . +ಚೋಳಮಹಾರಾಜನ ರಾಣಿಯಾದ ಲಕ್ಷ್ಮಾದೇವಿ ರಾಜ್ಯಾಡಳಿತದಲ್ಲಿ ಪತಿಗೆ ಸರಿಸಮವಾಗಿ ನೆರವಾಗುವಷ್ಟು ವಿದ್ಯಾವಂತೆಯೆನಿಸಿದ್ದಳು . +ಅವಳು ಕಾವ್ಯ , ಚಿತ್ರಕಲೆ , ಸಂಗೀತ , ನೃತ್ಯ ಮುಂತಾದವುಗಳಲ್ಲೂ ಪಾಂಡಿತ್ಯ ಪಡೆದಿದ್ದಳು . +ಆ ಕಾಲದಲ್ಲಿ ಶಿಲಾಶಾಸನಗಳನ್ನು ಬರೆಯುತ್ತಿದ್ದ ಮಹಿಳೆಯರೂ ಇದ್ದರೆಂಬ ಅಂಶ ಇತ್ತೀಚೆಗೆ ತಿಳಿದುಬಂದಿದೆ . +ಮಹಿಳಾಶಿಕ್ಷಣ ಬಹುಮಟ್ಟಿಗೆ ಅವರವರ ಮನೆಗಳಲ್ಲೇ ನಡೆಯುತ್ತಿದ್ದಿರಬೇಕು . +ಆಗ ಶಿಲ್ಪಕಲೆ ಎಂಥ ಉತ್ತಮ ಮಟ್ಟವನ್ನು ಮುಟ್ಟಿತ್ತೆಂಬುದನ್ನು ಇಂದಿಗೂ ಉಳಿದುಕೊಂಡು ಬಂದಿರುವ ಆ ಕಾಲದ ಕೆಲವು ದೇವಾಲಯಗಳು ಸಾರಿ ಹೇಳುತ್ತವೆ . +ಕದಂಬರು , ಗಂಗರು , ರಾಷ್ಟ್ರಕೂಟರು ಮತ್ತು ಚಾಲುಕ್ಯರು ಅನೇಕ ಸುಂದರ ದೇವಾಲಯ ಗಳನ್ನು ನಿರ್ಮಿಸಿದರು . +ಶಿಲ್ಪವಿದ್ಯೆಯನ್ನು ತಂದೆಯಿಂದ ಮಗ ಮನೆಯಲ್ಲಿ ಅಥವಾ ಅವನೊಡನೆ ಕೆಲಸಮಾಡುವಾಗ ಕಾರ್ಯಕ್ಷೇತ್ರದಲ್ಲಿ ಕಲಿಯುತ್ತಿದ್ದ . +ಇತರರೂ ಉಮೇದುದಾರ ರಾಗಿ ಗುರುವಿನೊಡನೆ ಕೆಲಸ ಮಾಡುತ್ತ ಕಲಿತುಕೊಳ್ಳುತ್ತಿದ್ದರು . +ಬೌದ್ಧವಿಹಾರಗಳೂ ಮಠಗಳೂ ಕಲೆ ಮತ್ತು ಹಸ್ತ ಕೌಶಲಗಳನ್ನು ಬೋಧಿಸುತ್ತಿದ್ದುವೆಂಬ ಅಂಶ ತಿಳಿದುಬರುತ್ತದೆ . +ಹ್ಯುಯೆನ್ ತ್ಸಾಂಗ್ ಹೇಳುವಂತೆ ಅಲ್ಲಿ ಬೋಧಿಸುತ್ತಿದ್ದ ಐದು ವಿಜ್ಞಾನಗಳಲ್ಲಿ ತಾಂತ್ರಿಕ ಶಿಕ್ಷಣವೂ ಸೇರಿತ್ತು . +ಹನ್ನೊಂದು ಹನ್ನೆರಡನೆಯ ಶತಮಾನಗಳಲ್ಲಿ ಆರಂಭವಾದ ವೀರಶೈವ ಧರ್ಮದ ಪ್ರಚಾರ ಶಿಕ್ಷಣದಲ್ಲಿ ಮಹತ್ತರ ಪ್ರಗತಿ ಸಾಧಿಸಲು ಪ್ರಚೋದನೆಯಾಯಿತು . +ಧರ್ಮಪ್ರಚಾರದ ಅಂಗವಾಗಿ ಜನತೆಯ ನೈತಿಕ ಜೀವನವನ್ನು ಉತ್ತಮಪಡಿಸುವಲ್ಲಿ ಶಿಕ್ಷಣವನ್ನು ಪರಿಣಾಮಕಾರಿಯಾದ ಉಪಕರಣವಾಗಿ ಮಾಡಿಕೊಳ್ಳಲಾಯಿತು . +ದೇಶಾದ್ಯಂತ ಅದಕ್ಕಾಗಿ ಮಠಗಳನ್ನು ಸ್ಥಾಪಿಸಿ , ಅಲ್ಲಿಯ ಗುರುಗಳಿಗೆ ಪ್ರಧಾನ ಸ್ಥಾನವಿತ್ತು . +ಜನತೆಯಲ್ಲಿ ಶಿಕ್ಷಣ ಪ್ರಚಾರಕ್ಕೆ ಅವಕಾಶ ಕಲ್ಪಿಸಿಕೊಳ್ಳಲಾಯಿತು . +ಅಕ್ಷರವಿದ್ಯೆ ಲೆಕ್ಕಾಚಾರಗಳನ್ನು ಮಕ್ಕಳಿಗೂ ದೊಡ್ಡವರಿಗೂ ಹೇಳಿಕೊಡುವ ವಿಶಿಷ್ಟಕಾರ್ಯ ನಿರ್ವಹಿಸುತ್ತಿದ್ದ ಮಠಗಳೂ ಅಸ್ತಿತ್ವಕ್ಕೆ ಬಂದುವು . +ಅಲ್ಲಿ ನೂಲುವುದು , ನೇಯುವುದು ವೈದ್ಯ , ವ್ಯವಸಾಯ ಇತ್ಯಾದಿ ವೃತ್ತಿಶಾಸ್ತ್ರಗಳನ್ನೂ ಬೋಧಿಸುತ್ತಿದ್ದರು . +ಅದರ ಫಲವಾಗಿ ವೃತ್ತಿಶಿಕ್ಷಣಕ್ಕೆ ನೂತನ ಆಧ್ಯಾತ್ಮಿಕ ಗೌರವ ದೊರಕಿತು . +ಮುಂದೆ ಈ ಮಠಗಳು ಊರೂರುಗಳಲ್ಲೂ ಅಸ್ತಿತ್ವಕ್ಕೆ ಬಂದು ಪ್ರಾಥಮಿಕ ಶಾಲೆಗಳ (ಓದುಮಠ ) ಉಗಮಕ್ಕೆ ಕಾರಣವಾದುವು . +ವೀರಶೈವ ಮಠಗಳು ನೂತನವಾಗಿ ಧರ್ಮಪ್ರಚಾರ ಮಾಡಲು ಯತ್ನಿಸಿದಾಗ ಜನತೆ ಅದರ ಪ್ರಸಾದ ಪಡೆಯಬೇಕಾದರೆ ಅಗತ್ಯವಾಗಿ ಪ್ರಾಥಮಿಕ ಶಿಕ್ಷಣವನ್ನಾದರೂ ಕಲಿಯಬೇಕಾಯಿತು . +ಅದಕ್ಕಾಗಿ ಮಠಗಳನ್ನೂ ಅಲ್ಲಿ ಬೋಧಿಸಲು ಅಗತ್ಯ ವ್ಯವಸ್ಥೆಯನ್ನೂ ಕೈಗೊಳ್ಳಲಾಯಿತು . +ಕಲ್ಯಾಣದ ಅನುಭವಮಂಟಪ ಒಂದು ದೃಷ್ಟಿಯಿಂದ ಮಠದಲ್ಲಿ ಗುರುಗಳಾಗತಕ್ಕವರಿಗೆ ತರಬೇತಿ ನೀಡುವ ಕೇಂದ್ರವಾಗಿಯೂ ಕೆಲಸ ಮಾಡಿತೆನ್ನಬಹುದು . +ಅಲ್ಲಿ ನುರಿತ ಸಹಸ್ರಾರು ಪರಿವ್ರಾಜಕ ಜಂಗಮರು ಚಲವಿದ್ಯಾಲಯಗಳಂತೆ ನಾಡಿನ ಎಲ್ಲ ಕಡೆಯೂ ಸಂಚರಿಸುತ್ತ ಜನತೆಯ (ಸಾಮಾಜಿಕ ) ಶಿಕ್ಷಣವನ್ನು ಬಹುಯಶಸ್ವಿಯಾಗಿ ನಿರ್ವಹಿಸುತ್ತಿದ್ದರು . +ಧರ್ಮಪ್ರಚಾರಕ್ಕಾಗಿ ಬಳಸಲಾಗುತ್ತಿದ್ದ ಆಡುಮಾತಿನ ಕನ್ನಡ ವಚನಗಳ ಕಂಠಪಾಠ ಶಾಲೆಗಳಲ್ಲೂ ಜನಸಾಮಾನ್ಯದಲ್ಲೂ ಪ್ರಚಾರಕ್ಕೆ ಬರಹತ್ತಿತು . +ಕುರಿತೋದದೆಯುಂ ಕಾವ್ಯ ಪ್ರಯೋಗ ಪರಿಣತಮತಿಗಳೆಂದು ಅಭಿವರ್ಣಿತರಾದ ಕರ್ನಾಟಕದ ಜನರಲ್ಲಿ ಶಿಕ್ಷಣದ ಬಗ್ಗೆ ಆದಿಕಾಲದಿಂದಲೂ ಪಕ್ಷಪಾತವುಂಟು . +ಮಾತು ಮತ್ತು ಸಾಹಿತ್ಯ ದೇವರು ಕೊಟ್ಟ ವರಗಳೆಂದೂ ಸಾಹಿತ್ಯ ದೈವಾಂಶಸಂಭೂತವೆಂದೂ ಇಲ್ಲಿಯವರ ನಂಬಿಕೆ . +ದೇವತೆಗಳು ಜ್ಞಾನಿಗಳನ್ನು ಪ್ರೀತಿಸುವರೆಂಬ ನಂಬಿಕೆಯೂ ಉಂಟು . +ಮಾನವರಲ್ಲಿ ಜ್ಞಾನಿಗಳೇ ಶ್ರೇಷ್ಠರೆಂದೂ ಅಂಥ ಜ್ಞಾನ ಕೇವಲ ಬುದ್ಧಿವಂತಿಕೆಯಿಂದಾಗಲಿ , ಕಂಠಪಾಠದಿಂದಾಗಲಿ ಸಿದ್ಧಿಸುವಂಥದಲ್ಲವೆಂದೂ ಅರ್ಥಜ್ಞಾನ ಮತ್ತು ವಿವೇಚನೆಯಿಂದ ಲಭಿಸುವುದೆಂದೂ , ಕಲಿವಿಗೆ ಅಧಿದೇವತೆಯಾದ ಸರಸ್ವತಿ ಅಂಥ ಜ್ಞಾನಿಗಳಿಗೆ ಮಾತ್ರ ಒಲಿಯುವಳೆಂದೂ ನಂಬಿಕೆಯುಂಟು . +ಇವೆಲ್ಲ ಕಾರಣಗಳಿಂದ ವ್ಯಕ್ತಿಗೆ ಉನ್ನತ ಶಿಕ್ಷಣ ಮುಗಿದ ಮೇಲೆ ಮುಂದುವರಿದ ( ಫರ್ದರ್ ಎಜುಕೇಷನ್ ) ಶಿಕ್ಷಣ ಅಗತ್ಯವೆಂಬುದನ್ನು ಅರಿತುಕೊಂಡು ಕಾವ್ಯ , ನಾಟಕ , ವೇದ , ಆಗಮ , ಪುರಾಣ ಇತ್ಯಾದಿಗಳನ್ನು ಅಭ್ಯಾಸ ಮಾಡುವುದು ಜನತೆಯ ಹಾಗೂ ಸುಶಿಕ್ಷಿತರ ಜೀವನದಲ್ಲಿ ದಿನಚರಿಯಾಗಿತ್ತು . +ಇಂದಿಗೂ ಇದು ಕಂಡುಬರುತ್ತದೆ . +ಧಾರ್ಮಿಕ ಆಚರಣೆಗಳೂ ವ್ಯಕ್ತಿಗೆ ಒಂದು ರೀತಿಯ ಮುಂದುವರಿದ ಶಿಕ್ಷಣ ಕಾರ್ಯಕ್ರಮವೆಂದೇ ಭಾವಿಸಬಹುದು . +ಇದರಿಂದ ವಿದ್ಯಾವಂತರು ಮತ್ತೆ ನಿರಕ್ಷರತೆಗೆ ಜಾರುವುದು ತಪ್ಪುತ್ತಿತ್ತು . +ಪಂಚಮಹಾಯಜ್ಞದಲ್ಲಿ ಪ್ರತಿ ಕುಟುಂಬಿಯೂ ನಿತ್ಯವೂ ಸ್ವಾಧ್ಯಾಯಕ್ಕಾಗಿ ಸ್ವಲ್ಪ ಕಾಲ ಮೀಸಲಿಡಬೇಕೆಂಬ ವಿಧಿಯುಂಟು . +ತಾನು ವಿದ್ಯಾರ್ಥಿದೆಶೆಯಲ್ಲಿ ಕಲಿತ ಪವಿತ್ರ ಜ್ಞಾನವನ್ನು ಸ್ಮರಿಸಕೊಳ್ಳುವುದು ಸ್ವಾಧ್ಯಾಯದ ಉದ್ದೇಶ . +ನಿಜವಾದ ಜ್ಞಾನಿಗಳಿಗೆ ಸಮಾಜದಲ್ಲಿ ಉತ್ತಮಸ್ಥಾನವನ್ನು ನೀಡುವ ಪದ್ಧತಿಯಿಂದ ವಿದ್ಯಾರ್ಜನೆಯನ್ನು ನಿರಂತರವೂ ಮುಂದುವರಿಸುವ ಕಾರ್ಯಕ್ಕೆ ಸಾಮಾಜಿಕ ಗೌರವ ಸಂದಿದೆ . +ಬೃಹದಾರಣ್ಯಕ ಉಪನಿಷತ್ತು ಹೇಳುವಂತೆ ಮಕ್ಕಳನ್ನು ಪಡೆಯುವುದರಿಂದಲೇ ತಂದೆಯ ಕರ್ತವ್ಯ ಮುಗಿಯುವುದಿಲ್ಲ ; ಅವರಿಗೆ ತಕ್ಕ ಶಿಕ್ಷಣವೀಯುವುದೂ ಅವನ ಕರ್ತವ್ಯ . +ಮಧ್ವಾಚಾರ್ಯರೂ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ . +ತಾನು ಎಷ್ಟೇ ಬಡತನದಲ್ಲಿದ್ದರೂ ಮಕ್ಕಳಿಗೆ ಹೇಗಾದರೂ ಮಾಡಿ ಪ್ರಾಥಮಿಕ ಶಿಕ್ಷಣವನ್ನಾದರೂ ಕೊಡುವುದು ತಂದೆಯ ಕರ್ತವ್ಯವಾಗಿತ್ತು . +ಶಿಕ್ಷಣವನ್ನು ವಿವಿಧ ರೀತಿಯಲ್ಲಿ ಸಮಾಜ ಪ್ರೋತ್ಸಾಹಿಸುತ್ತಿತ್ತು . +ಧಾರ್ಮಿಕ ಸಂಘ ಸಂಸ್ಥೆಗಳು ಜನತೆಯ ಶಿಕ್ಷಣ ಕಾರ್ಯಗಳಲ್ಲಿ ಪಾತ್ರವಹಿಸುವ ಏರ್ಪಾಡು ಮಾಡಲಾಗಿತ್ತು . +ದಾನಗಳಲ್ಲೆಲ್ಲ ವಿದ್ಯಾದಾನ ಶ್ರೇಷ್ಠವೆಂಬ ಭಾವನೆಯನ್ನು ಎತ್ತಿಹಿಡಿದಿದುದ್ದರಿಂದ ಅದಕ್ಕಾಗಿ ದಾನದತ್ತಿಗಳನ್ನು ಸಂಗ್ರಹಿಸಲು ಧಾರ್ಮಿಕ ವಾತಾವರಣ ಅನುಕೂಲ ಕಲ್ಪಿಸಿತು . +ಧನಿಕರೂ ಮಾಂಡಲಿಕರೂ ರಾಜಮಹಾರಾಜರೂ ಶಿಕ್ಷಣಕ್ಕಾಗಿ ಕೊಟ್ಟಿರುವ ದಾನದ ಬಗ್ಗೆ ಬೇಕಾದ ಹಾಗೆ ಶಾಸನ ಸಾಕ್ಷ್ಯಗಳು ದೊರೆತಿವೆ . +ರಾಷ್ಟ್ರಕೂಟ ದೊರೆಯಾದ ಮುಮ್ಮಡಿ ಕೃಷ್ಣನ ಸಚಿವ ನಾರಾಯಣ ೯೪೫ರಲ ್ಲಿ ಸಾಲೊಟಗಿಯಲ್ಲಿ ಒಂದು ಮಹಾ ವಿದ್ಯಾಲಯ (ಕಾಲೇಜು) ಕಟ್ಟಿಸಿದ . +ಅದನ್ನು ನಡೆಸಿಕೊಂಡು ಬರುವ ಖರ್ಚಿಗಾಗಿ ಸ್ಥಳೀಯ ಧನಿಕರೊಬ್ಬರು ೨೦೦ ನಿವರ್ತನ ಭೂಮಿಯನ್ನು ದತ್ತಿಯಾಗಿ ಬಿಟ್ಟರು . +ಬಿಜಾಪುರ ಜಿಲ್ಲೆಯ ಮೇತುಂಗಿಯಲ್ಲಿ ೧೨೯೦ರಲ್ಲಿ ಹೊಯ್ಸಳ ಅರಸನ ಮಂತ್ರಿಯಾದ ಪೆರುಮಾಳ ಒಂದು ಮಹಾವಿದ್ಯಾಲಯವನ್ನು ಸ್ಥಾಪಿಸಿ ಅಲ್ಲಿ ವೇದ , ಶಾಸ್ತ್ರ ಕನ್ನಡ , ಮರಾಠಿ ಮತ್ತು ಸಂಸ್ಕೃತಗಳ ಅಧ್ಯಯನಕ್ಕೆ ಅವಕಾಶ ಕಲ್ಪಿಸಿದ . +ಬೆಳಗಾಂವಿ ಜಿಲ್ಲೆಯ ಸೊರತೂರಿನಲ್ಲಿ ಶಿಕ್ಷಣಪ್ರಸಾರಕ್ಕಾಗಿ ಒಬ್ಬ ಪ್ರಾಂತಾಧಿಕಾರಿ ೫೦ ಎಕರೆ ಭೂಮಿಯ ಕೊಡುಗೆಯಿತ್ತಿದ್ದ . +ಧಾರವಾಡ ಜಿಲ್ಲೆಯ ಹಡಲೆ ಗ್ರಾಮವಾಸಿಯೊಬ್ಬ ೧,೦೮೪ ವಿದ್ಯಾರ್ಥಿಗಳಿಗೆ ಊಟ ಮತ್ತು ಬಟ್ಟೆ ಒದಗಿಸಲು ೩೦ ಎಕರೆ ಭೂಮಿಯನ್ನು ಕೊಟ್ಟ . +ಅದೇ ಜಿಲ್ಲೆಯ ಡಂಬಳದಲ್ಲಿ ಹನ್ನೆರಡನೆಯ ಶತಮಾನದಲ್ಲಿದ್ದ ಒಂದು ಶ್ರೀಮಂತ ವೃತ್ತಿ ಸಂಘ ತನ್ನ ಸಿಬ್ಬಂದಿಯವರಿಗಾಗಿ ಒಂದು ಶಿಕ್ಷಣ ಸಂಸ್ಥೆಯನ್ನು ನಡೆಸಿಕೊಂಡು ಬರುತ್ತಿತ್ತು . +ಮುದ್ರಣ ಇಲ್ಲಿದಿದ್ದ ಪ್ರಾಚೀನಕಾಲದಲ್ಲಿ ಗ್ರಂಥಗಳನ್ನು ಕೈಯಲ್ಲಿ ಬರೆದುಕೊಳ್ಳಬೇಕಾಗಿತ್ತು . +ವಿದ್ಯಾಕೇಂದ್ರಗಳಲ್ಲಿ ಹಾಗೆ ಬರೆದ ಗ್ರಂಥಗಳ ಸಂಗ್ರಹಣೆ ಅಗತ್ಯವೆಂಬುದನ್ನು ಅರಿತ ಸಮಾಜ ಗ್ರಂಥದಾನ ಒಂದು ಪವಿತ್ರಕಾರ್ಯವೆಂದು ಪರಿಗಣಿಸಿತ್ತು . +ಯೋಗ್ಯರು ಗ್ರಂಥದಾನ ಮಾಡುವ ಅಗತ್ಯವನ್ನು ನಂದಿಪುರಾಣದಲ್ಲಿ ಉಲ್ಲೇಖಿಸಲಾಗಿದೆ . +ಪುರಾಣಗಳನ್ನು ದಾನ ಮಾಡುವಾಗ ಒಂದೊಂದು ಪುರಾಣದ ಗ್ರಂಥ ದಾನಕ್ಕೂ ಬೇರೆ ಬೇರೆ ಪ್ರಮಾಣದಲ್ಲಿ ಪುಣ್ಯ ದೊರೆಯಬಹುದೆಂಬ ಉಲ್ಲೇಖವೂ ಉಂಟು . +ಇದರ ಫಲವಾಗಿ ಧನಿಕರೂ ಇತರರೂ ಗ್ರಂಥಗಳನ್ನು ಬರೆಯಿಸಿ ಅಥವಾ ತಾವೇ ಬರೆದು ವಿದ್ಯಾಕೇಂದ್ರಗಳಿಗೆ ದಾನವಾಗಿ ಅರ್ಪಿಸುತ್ತಿದ್ದರು . +ಹಬ್ಬ ಹುಣ್ಣಿಮೆಗಳಲ್ಲೂ ಇತರ ಶುಭಕಾರ್ಯಗಳಲ್ಲೂ ವಿದ್ಯಾರ್ಥಿಗಳನ್ನೂ ಅಧ್ಯಾಪಕ ರನ್ನೂ ಆಹ್ವಾನಿಸುವ ಪದ್ಧತಿ ಕರ್ನಾಟಕದ ಎಲ್ಲ ಭಾಗಗಳಲ್ಲೂ ಇತ್ತು . +ಸಾಲೊಟಗಿಯ ಮಹಾಜನರಲ್ಲಿ ಈ ಪದ್ಧತಿಯಿತ್ತೆಂಬುದು ಶಾಸನವೊಂದರಿಂದ ತಿಳಿದು ಬರುತ್ತದೆ . +ಹಾಗೆಯೆ ಬಡವಿದ್ಯಾರ್ಥಿಗಳಿಗೆ ಊಟಕ್ಕಾಗಿ ಸತ್ರಗಳನ್ನು ಏರ್ಪಡಿಸುತ್ತಿದ್ದರು . +ಆ ಬಗ್ಗೆಯೂ ಯಥೇಚ್ಛ ವಾಗಿ ಸಾಕ್ಷ್ಯಗಳು ದೊರೆತಿವೆ . +ಕೊಳಗಳ್ಳಿ , ಮನಗೋಳಿ , ನೀಲಗುಂದ , ನೇಸರ್ಗೆ , ಬಾಗೇವಾಡಿ , ಬೆಳಗಾಂವಿ , ಡಂಬಳ , ಗದಗ , ಬೇಹಟ್ಟಿ ಇತ್ಯಾದಿ ಸ್ಥಳಗಳ ವಿದ್ಯಾರ್ಥಿ ಛಾತ್ರಾಲಯಗಳು ಪ್ರಸಿದ್ಧಿ ಪಡೆದಿದ್ದುವು . +ಊರಿನ ಧನಿಕರಿಂದ ಮಾತ್ರ ವ್ಯವಸ್ಥೆ ಏರ್ಪಡುತ್ತಿತ್ತು . +ಮಿಕ್ಕವರು ವಿದ್ಯಾರ್ಥಿಗಳಿಗೆ ವಾರ , ಭಿಕ್ಷಾನ್ನ ಇತ್ಯಾದಿಗಳನ್ನು ಒದಗಿಸುವುದರ ಮೂಲಕ ಮಕ್ಕಳ ಶಿಕ್ಷಣವನ್ನು ಪ್ರೋತ್ಸಾಹಿಸುತ್ತಿದ್ದರು . +ವ್ಯಕ್ತಿ , ಸಮಾಜ , ಸಂಘ , ಸಂಸ್ಥೆಗಳಂತೆ ರಾಷ್ಟ್ರವೂ (ಸರ್ಕಾರ) ವಿದ್ಯೆಗೆ ಪ್ರೋತ್ಸಾಹ ನೀಡುತ್ತಿತ್ತು . +ವಿದ್ವಜ್ಜನರಿಗೆ ರಾಜನ ಆಸ್ಥಾನದಲ್ಲಿ ಪುರಸ್ಕಾರವಿತ್ತು . +ಅವರಿಗೆ ವಿವಿಧ ರೀತಿಯ ಕೊಡುಗೆ , ಸಂಭಾವನೆ , ದಕ್ಷಿಣೆ ಇತ್ಯಾದಿಗಳು ದೊರಕುತ್ತಿದ್ದುವು . +ಕೌಟಿಲ್ಯ ತನ್ನ ಅರ್ಥಶಾಸ್ತ್ರದಲ್ಲಿ ಸೂಚಿಸಿರುವ , ಶೈಕ್ಷಣಿಕ ಆಶ್ರಮಗಳಿಗಾಗಿ ಬ್ರಾಹ್ಮಣರಿಗೆ ನಿವೇಶನಗಳನ್ನು ನೀಡಬೇಕೆಂಬ ಸಲಹೆಗೆ ರಾಜರಲ್ಲಿ ಮನ್ನಣೆಯಿತ್ತು . +ವಿದ್ಯಾಶ್ರಯ ರಾಜರ ಕರ್ತವ್ಯಗಳಲ್ಲೊಂದೆಂಬ ಸ್ಮೃತಿವಚನದ ಬಗ್ಗೆಯೂ ಮನ್ನಣೆಯಿತ್ತು . +ಕರ್ನಾಟಕ ಇತಿಹಾಸದ ಪ್ರಥಮ ಅರಸರಾದ ಸಾತವಾಹನರೇ ಈ ಬಗ್ಗೆ ಮುಂದಿನ ರಾಜಪೀಳಿಗೆಗೆ ತಮ್ಮ ವಿದ್ಯಾಪ್ರೋತ್ಸಾಹದಿಂದ ಮೇಲ್ಪಂಕ್ತಿಯಾದರು . +ರಾಜರು ವಿದ್ವಜ್ಜನರಿಗೂ ವಿದ್ಯಾಸಂಸ್ಥೆಗಳಿಗೂ ಧನ , ಕನಕ , ಭೂಮಿ , ಇತ್ಯಾದಿ ಸಹಾಯ ನೀಡಿರುವ ಅಂಶ ಪ್ರಾಚೀನ ಕರ್ನಾಟಕದ ಇತಿಹಾಸದಲ್ಲಿ ಧಾರಾಳವಾಗಿ ವ್ಯಕ್ತಪಟ್ಟಿದೆ . +ರಾಷ್ಟ್ರಕೂಟ ಅರಸನಾದ ನಾಲ್ವಡಿ ಗೋವಿಂದ ೯೧೮ರಲ್ಲಿ ರಾಜ್ಯಾರೋಹಣ ಮಾಡಿದಾಗ ೬೦೦ ಹಳ್ಳಿಗಳನ್ನು ಬ್ರಾಹ್ಮಣರಿಗೆ ದಾನವಾಗಿ ಕೊಟ್ಟ . +ಹನ್ನೊಂದನೆಯ ಶತಮಾನದ ರಾಜೇಂದ್ರ ಕುಲೋತ್ತುಂಗ ಚೋಳ ತನ್ನ ರಾಜ್ಯದ ಅಧ್ಯಾಪಕರಿಗೆಲ್ಲ ತೆರಿಗೆಯಿಂದ (ಮನೆಗಂದಾಯ) ವಿನಾಯಿತಿ ನೀಡಿದ್ದ . +ವಿದ್ಯಾರ್ಥಿಗಳಿಗೂ ರಾಜ್ಯ ಸರ್ಕಾರ ಕೆಲವು ವಿನಾಯಿತಿಗಳನ್ನು ನೀಡುತ್ತಿತ್ತು . +ಅವರು ನೇರವಾದ ಯಾವ ತೆರಿಗೆಯನ್ನೂ ಕೊಡಬೇಕಾಗಿರಲಿಲ್ಲ . +ಹೊಳೆ ದಾಟುವಾಗ ದೋಣಿಗೆ ಪ್ರಯಾಣದ ತೆರ ಕೊಡಬೇಕಾಗಿರಲಿಲ್ಲ . +ಅಭ್ಯಾಸಿಗಳಿಗೂ ವಿದ್ಯಾರ್ಥಿಗಳಿಗೂ ೫೦ ವರ್ಷ ವಯಸ್ಸಿನವರೆಗೂ ಇಂಥ ವಿನಾಯಿತಿ ಇರುತ್ತಿತ್ತು . +ರಾಜ್ಯಗಳು ಸಾರ್ವಜನಿಕ ಶಿಕ್ಷಣವನ್ನು ನೇರ ಹೊಣೆಗಾರಿಕೆಗೆ ತೆಗೆದುಕೊಂಡಿರದಿದ್ದರೂ ಆ ಕಾಲದಲ್ಲಿ ಪ್ರಪಂಚದ ಇತರ ರಾಷ್ಟ್ರಗಳಿಗಿಂತ ಇಲ್ಲಿಯ ಸರ್ಕಾರಗಳು ವಿದ್ಯೆಗೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದ್ದುದು ತೌಲನಿಕ ಇತಿಹಾಸದ ಅಧ್ಯಯನದಿಂದ ವ್ಯಕ್ತಪಡುತ್ತದೆ . +ಅದರ ಫಲವಾಗಿ ಅನೇಕ ಶಾಸ್ತ್ರಗಳೂ ವಿಜ್ಞಾನಗಳೂ ಇಲ್ಲಿ ಅಭಿವೃದ್ಧಿ ಹೊಂದಿದುವು . +ಲಲಿತಕಲೆಗಳಿಗೆ ರಾಜರು ನೀಡುತ್ತಿದ್ದ ಆಶ್ರಯವನ್ನು ಇಂದಿಗೂ ಅನೇಕ ದೇವಾಲಯಗಳ ಶಿಲ್ಪ ವೈಭವ ಸಾರಿ ಹೇಳುತ್ತದೆ . +ಪ್ರಾಚೀನ ಕರ್ನಾಟಕದಲ್ಲಿ ಶಿಕ್ಷಣದ ಗುರಿ ಮತ್ತು ದೃಷ್ಟಿ : ಗುಣಶೀಲ ನಿರೂಪಣೆ , ವ್ಯಕ್ತಿತ್ವ ವಿಕಾಸ , ಪ್ರಾಚೀನ ಸಂಸ್ಕೃತಿ ರಕ್ಷಣೆ , ಧಾರ್ಮಿಕ - ಇವು ಶಿಕ್ಷಣದ ಪ್ರಧಾನ ಕರ್ತವ್ಯ ನಿರ್ವಹಣೆಗಾಗಿ ಕಿರಿಯ ಪೀಳಿಗೆಗೆ ಶಿಕ್ಷಣ ನೀಡಿಕೆ - ಇವು ಶಿಕ್ಷಣದ ಪ್ರಧಾನ ಗುರಿಗಳಲ್ಲಿ ಸೇರಿದ್ದುವು . +ಇದು ಬಹುಮಟ್ಟಿಗೆ ಭಾರತೀಯ ಶಿಕ್ಷಣದ ಗುರಿಯೇ ಆಗಿತ್ತು . +ಅದಕ್ಕಾಗಿ ಇಲ್ಲಿ ರೂಪುಗೊಂಡಿದ್ದ ಶಿಕ್ಷಣಪದ್ಧತಿ ಆ ಗುರಿಗಳನ್ನು ಪರಿಣಾಮಕಾರಿಯಾಗಿ ಸಾಧಿಸುತ್ತಿದ್ದ ಬಗ್ಗೆ ಭಾರತದ ಈ ಭಾಗದಲ್ಲಿ ಸಂಚರಿಸಿದ ಯುವಾನ್ ಚಾಂಗ್ ಮುಂತಾದ ಯಾತ್ರಿಕರು ಉಲ್ಲೇಖಿಸಿದ್ದಾರೆ . +ಹಿಂದಿನ ಯುಗಗಳಲ್ಲಿದ್ದ ಅಗ್ರಹಾರ, ಘಟಿಕ , ಬ್ರಹ್ಮಪುರಿ , ಮಠ ಇವೆಲ್ಲ ತಮ್ಮ ಶಿಕ್ಷಣಸೇವೆಯನ್ನು ಹೊಯ್ಸಳರ ಕಾಲದಲ್ಲೂ ಮುಂದುವರಿಸಿ ಕೊಂಡೇ ಬಂದುವು . +ಅರಸೀಕರೆ (ಸರ್ವಜ್ಞಪುರ) ಬನವಾಸಿಯ ನಾಗರುಖಂಡ , ಶಿವಮೊಗ್ಗ ಜಿಲ್ಲೆಯ ಕೆಲ್ಲಾಂಗ್ರೆ ಈ ಅಗ್ರಹಾರಗಳು ಉಚ್ಛ್ರಾಯಸ್ಥಿತಿಯಲ್ಲಿದ್ದುವು . +ನೊಣಂಬೇಶ್ವರ ದೇವಾಲಯದ ಶಿಕ್ಷಣ ಕೇಂದ್ರ ಪ್ರಸಿದ್ಧ ಘಟಿಕಾ ಸ್ಥಾನವೆಂಬ ಖ್ಯಾತಿ ಗಳಿಸಿತ್ತು . +ಬೌದ್ಧವಿಹಾರ ಗಳಂತೆ ಕೆಲವು ಬ್ರಹ್ಮಪುರಿಗಳೂ ಈ ಕಾಲದಲ್ಲಿ ಉಚ್ಚಶಿಕ್ಷಣ ನೀಡುತ್ತಿದ್ದುವು . +೧೧೫೮ರ ಸುಮಾರಿನಲ್ಲಿ ಅಸ್ತಿತ್ವದಲ್ಲಿದ್ದ ತಾಳಗುಂದದ ದೇವಾಲಯಕ್ಕೆ ಸೇರಿದ ಚಿಕ್ಕ ಸಂಸ್ಕೃತ ಕಾಲೇಜು ಉಚ್ಚಶಿಕ್ಷಣದ ನವಲತ್ತು ವಿದ್ಯಾರ್ಥಿಗಳಿಗೆ ಆಶ್ರಯ ಸ್ಥಾನವಾಗಿತ್ತು . +ಬನವಾಸಿಯ ರಾಜಧಾನಿಯಾದ ಬಳ್ಳಿಗಾವೆಯಲ್ಲಿ ಮೂರು ಬ್ರಹ್ಮಪುರಗಳೂ ಏಳು ಬ್ರಹ್ಮಪುರಿಗಳೂ ,ಶಿವ ,ಬುದ್ಧ , ಜಿನ, ಬ್ರಹ್ಮ, ವಿಷ್ಣು ಇವರಿಗೆ ಏರ್ಪಡಿಸಿದ್ದ ಐದು ಮಠಗಳೂ ಜೈನಬಸದಿಗಳೂ ಬೌದ್ಧವಿಹಾರಗಳೂ ಹಿಂದೂ ದೇವಾಲಯಗಳೂ ಇದ್ದು ಸರ್ವಧರ್ಮಗಳ ಶಿಕ್ಷಣಕ್ಕೂ ಅದು ಕೇಂದ್ರವೆನಿಸಿತ್ತು . +ಅಂದಿಗೆ ಜೈನ ಶಿಕ್ಷಣಸಂಸ್ಥೆಗಳ ಪ್ರಭಾವ ಕಳೆಗುಂದುತ್ತ ಬಂದಿದ್ದರೂ ಅವು ಹೊಯ್ಸಳರ ಆಳ್ವಿಕೆಯ ಕೊನೆಯ ದಿನಗಳವರೆಗೂ ಕರ್ನಾಟಕದಲ್ಲಿ ಮುಂದುವರಿದು ಕೊಂಡು ಬಂದುವು . +ಹೊಯ್ಸಳದೊರೆಗಳು ಹಿಂದೂ ಮತ್ತು ಜೈನ ಮಠಗಳೆರಡಕ್ಕೂ ಸಮಾನ ಉತ್ತೇಜನವೀಯುತ್ತ ಬಂದರು . +ಎಲ್ಲ ಮಠಗಳೂ ಎಲ್ಲ ಮತದವರಿಗೂ ಉಚ್ಚ ಶಿಕ್ಷಣವೀಯುತ್ತಿದ್ದುದು ಒಂದು ವಿಶಿಷ್ಟ ಅಂಶ . +ಹೊಯ್ಸಳದೊರೆಗಳೂ , ಅವರ ರಾಜ್ಯದ ವರ್ತಕರೂ ಶ್ರೀಮಂತರೂ ಮಠಗಳಿಗೂ ಇತರ ಶಿಕ್ಷಣಸಂಸ್ಥೆಗಳಿಗೂ ದತ್ತಿಗಳನ್ನು ಕೊಡುತ್ತಿದ್ದರು . +ಅಲ್ಲದೆ ಚಾಳುಕ್ಯ ಮತ್ತು ಕಳಚುರ್ಯ ಅರಸರೂ ನೆರೆಹೊರೆಯ ರಾಜ್ಯಗಳ ಶ್ರೀಮಂತರೂ ಅವಕ್ಕೆ ದತ್ತಿ, ಉಂಬಳಿ, ಕೊಡುಗೆ ಇತ್ಯಾದಿಗಳನ್ನು ನೀಡುತ್ತಿದ್ದರು . +ಪ್ರತಿ ಹಳ್ಳಿಯೂ ಪ್ರಾಥಮಿಕ ಶಿಕ್ಷಣದ ಮಹತ್ತ್ವವನ್ನು ಕಂಡುಕೊಂಡು ಮಕ್ಕಳಿಗೆ ಪಾಠ ಹೇಳಲು ಸಾರ್ವಜನಿಕ ವ್ಯವಸ್ಥೆಯನ್ನು ಮಾಡಿಕೊಳ್ಳುವುದು ಆರಂಭವಾಯಿತು . +ಅದಕ್ಕಾಗಿ ಸಂಭಾವನೆಯ ಮೇಲೆ ಅಧ್ಯಾಪಕರನ್ನು ಊರವರು ನೇಮಕ ಮಾಡಿಕೊಳ್ಳುತ್ತಿದ್ದರು . +ಆ ಕಾಲದಲ್ಲಿ ಅನೇಕ ಮಹಿಳೆಯರು ಸಾಹಿತ್ಯ ಮತ್ತು ಲಲಿತಕಲೆಗಳಲ್ಲಿ ಪ್ರಾವೀಣ್ಯ ಪಡೆದಿದ್ದರು . +ಕಂತಿ, ಮಹಾದೇವಿಯಕ್ಕ ಮುಂತಾದವರು ಕವಯಿತ್ರಿಯರು, ತತ್ತ್ವಜ್ಞಾನಿಗಳು . +ಆದರೆ ಜನಸಾಮಾನ್ಯರಲ್ಲಿ ಮಹಿಳೆಯರಿಗೆ ಪ್ರತ್ಯೇಕ ಪ್ರಾಥಮಿಕ ಅಥವಾ ಉನ್ನತ ಶಿಕ್ಷಣ ವ್ಯವಸ್ಥೆಯಿದ್ದಂತೆ ತೋರುವುದಿಲ್ಲ . +ದೇವಸ್ಥಾನ, ಮಠಗಳು, ಜಾತ್ರೆ, ಉತ್ಸವ ಮುಂತಾದವುಗಳಲ್ಲಿ ಏರ್ಪಡಿಸುತ್ತಿದ್ದ ಪುರಾಣಶ್ರವಣ ಹರಿಕಥೆ , ಶಿವಕಥೆ , ಧಾರ್ಮಿಕ ಪ್ರವಚನ , ನಾಟಕಪ್ರದರ್ಶನ ಇತ್ಯಾದಿಗಳ ಮೂಲಕವೇನೋ ಅವರಿಗೆ ಒಂದು ರೀತಿಯ ಶಿಕ್ಷಣ ದೊರಕುತ್ತಿತ್ತು . +ಹೊಯ್ಸಳರ ಕಾಲದಲ್ಲಿ ಯುದ್ಧಗಳು ಆಗಾಗ ನಡೆಯುತ್ತಿದ್ದುದರಿಂದ ಸೈನ್ಯಾಚರಣೆಗೆ ಸಂಬಂಧಿಸಿದ ಉದ್ಯೋಗಗಳ ಶಿಕ್ಷಣಕ್ಕೆ ಪ್ರಚೋದನೆ ದೊರಕಿತ್ತೆಂದು ಹೇಳಬಹುದು . +ಸೈನಿಕ ಶಿಕ್ಷಣದಂತೆ ಯುದ್ಧೊಪಕರಣಗಳಿಗೆ ಬೇಕಾದ ಲೋಹದ ಕೆಲಸ , ಬಡಗಿ ಕೆಲಸ , ಕಮ್ಮಾರರ ಕೆಲಸ ಇತ್ಯಾದಿಗಳಲ್ಲಿ ಶಿಕ್ಷಣವೀಯಲು ಕಸಬುದಾರರ ಮನೆಯೇ ತಾಂತ್ರಿಕ ಶಿಕ್ಷಣ ಶಾಲೆಯಾಗಿ ಕೆಲಸಮಾಡುತ್ತಿತ್ತು . +ಅನೇಕ ವೃತ್ತಿಗಳು ವಂಶಪಾರಂಪರ್ಯವಾಗಿ ಬಂದ ಕುಟುಂಬದ ಕಸಬುಗಳಾಗಿದ್ದರೂ ಅವರು ರೂಪಿಸಿದ ಸಾಮಗ್ರಿಗಳನ್ನು ಸಂಗ್ರಹಿಸಿ ವ್ಯಾಪಾರ ಮಾಡುವ ಸಂಸ್ಥೆಗಳು ಅಸ್ತಿತ್ವದಲ್ಲಿದ್ದು ಅಲ್ಲಿಯ ಸಿಬ್ಬಂದಿಯವರಿಗೆ ವಿವಿಧ ವೃತ್ತಿಗಳಲ್ಲಿ ಶಿಕ್ಷಣವೀಯಲು ಆ ಸಂಸ್ಥೆಗಳೇ ವ್ಯವಸ್ಥೆ ಗೊಳಿಸುತ್ತಿದ್ದುವು . +ಇಂಥ ಸಂಸ್ಥೆಗಳಲ್ಲಿ ವೀರ ಪಂಚಾಲದ ಉದಾಹರಣೆ ಕೊಡಬಹುದು . +ಅಭ್ಯಾಸಿಗಳು ತಾವು ಕಸಬನ್ನು ಕಲಿಯುವಾಗಲೂ ಹಣ ಗಳಿಸುತ್ತಿದ್ದರು . +ಹೀಗೆ ಕಸಬುಗಳು ವ್ಯಕ್ತಿಯಿಂದ ವ್ಯಕ್ತಿಗೆ ಹಸ್ತಗತವಾಗುತ್ತಿದ್ದುದರ ಜೊತೆಗೆ ವ್ಯಾಪಾರ ಸಂಸ್ಥೆಗಳೂ ಆ ಕಾರ್ಯದಲ್ಲಿ ಮುಖ್ಯ ಪಾತ್ರ ವಹಿಸುತ್ತಿದ್ದುವು . +ಆ ಕಾಲದಲ್ಲಿ ರೂಪುಗೊಂಡಿರುವ ಪ್ರಸಿದ್ಧ ದೇವಾಲಯಗಳನ್ನು ನೋಡಿದರೆ ಶಿಲ್ಪಕಲೆಗೂ ನಕಾಸೆ ರಚಿಸುವ ಕಲೆಗೂ ವ್ಯಾಪಕರೀತಿಯ ಶಿಕ್ಷಣವಿದ್ದಿರ ಬೇಕೆಂಬುದು ವ್ಯಕ್ತವಾಗುತ್ತದೆ . +ಆ ಶಿಕ್ಷಣಕ್ಕೆ ಸಂಬಂಧಿಸಿದಂತೆ ಪುರಾಣ, ಗಣಿತ, ಚಿತ್ರಕಲೆ ಇವುಗಳ ಶಿಕ್ಷಣಕ್ಕೂ ಅವಕಾಶ ಮಾಡಿದ್ದಿರಬೇಕು . +ವಾಸ್ತುಶಿಲ್ಪ, ಶಿಲ್ಪಶಾಸ್ತ್ರ, ಪ್ರತಿಮಾಶಿಲ್ಪ, ವರ್ಣಚಿತ್ರ ಇತ್ಯಾದಿ ವಿದ್ಯೆಗಳಲ್ಲಿ ಪ್ರಸಿದ್ಧಿ ಪಡೆದಿದ್ದ ಕುಟುಂಬಗಳು ಇದ್ದುವೆಂಬ ಅಂಶ ತಿಳಿದುಬಂದಿದೆ . +ಸಂಗೀತ, ನೃತ್ಯ ಇತ್ಯಾದಿ ಲಲಿತಕಲೆಗಳ ಶಿಕ್ಷಣ ಸಾಮಾನ್ಯವಾಗಿ ರಾಜಮನೆತನಗಳಿಗೂ ಧನಿಕವರ್ಗದವರಿಗೂ ಸೀಮಿತವಾಗಿದ್ದರೂ ಅವನ್ನು ಕಲಿಸತಕ್ಕವರು ಸಾಮಾನ್ಯ ಜನರೇ ಆಗಿದ್ದು ಆ ಕಲೆಯ ಶಿಕ್ಷಣ ಆ ಕುಟುಂಬಕ್ಕೆ ವಂಶಪಾರಂಪರ್ಯವಾಗಿ ಬಂದುದಾಗಿತ್ತು . +ಆಯುರ್ವೇದ, ಗಣಿತಶಾಸ್ತ್ರ , ಪಶುವೈದ್ಯ , ಇತ್ಯಾದಿ ಶಾಸ್ತ್ರಗಳ ಶಿಕ್ಷಣವೂ ಕೆಲಕೆಲವು ಕುಟುಂಬಗಳಲ್ಲಿ ವಂಶಪಾರಂಪರ್ಯವಾಗಿ ನಡೆದು ಬರುತ್ತಿತ್ತು . +ಹೊಯ್ಸಳ ದೊರೆಗಳು ಪಶುವೈದ್ಯ ಶಾಸ್ತ್ರವನ್ನು ಅಭಿವೃದ್ಧಿಪಡಿಸಲು ತುಂಬ ಆಸಕ್ತಿ ತೋರುತ್ತಿದ್ದರು . +ಆನೆಗಳ ವಿಷಯಕ್ಕೆ ಸಂಬಂಧಿಸಿದ ವ್ಯಾಸಂಗದಲ್ಲೂ ಅವರಿಗೆ ಅಷ್ಟೇ ಆಸಕ್ತಿಯಿತ್ತು . +೧ನೇಯ ಶತಮಾನಾದ ಅನಂತರದ ಧಾರ್ಮಿಕ ಪುನರುಜ್ಜೀವನದ ಪರಿಣಾಮವೆಂದರೆ ಸಂಸ್ಕೃತಾಧ್ಯಯನಕ್ಕೆ ಲಭಿಸಿದ ಪ್ರಾಶಸ್ತ್ಯ . +ದೇಶೀಯ ಭಾಷೆಯ ಪ್ರಚಾರಕರೆಂದು ಪ್ರಸಿದ್ಧರಾಗಿದ್ದ ಜೈನ ಬೌದ್ಧರೂ ಸಂಸ್ಕೃತವನ್ನೇ ವಿಶೇಷವಾಗಿ ಬಳಸಲಾರಂಭಿಸಿದರು . +೪ನೇಯ ಶತಮಾನದಿಂದ ಪ್ರಾಕೃತದಲ್ಲಿ ಬರೆದ ಶಾಸನಗಳಾಗಲಿ ಇತರ ಲೇಖನಗಳಾಗಲಿ ದೊರೆತಿಲ್ಲ . +ಅಂಥ ಕಾಲದಲ್ಲಿ ಸಾತವಾಹನ ಅರಸರು ಪ್ರಾಕೃತಕ್ಕೆ ಪ್ರಾಶಸ್ತ್ಯವಿತ್ತು ಎಲ್ಲ ಕಾರ್ಯಗಳಿಗೂ ಅದನ್ನು ಬಳಸಲಾರಂಭಿಸಿದ್ದರು . +ಜನರು ಮನೆಯಲ್ಲೂ ಅದನ್ನೇ ಆಡಬೇಕೆಂದು ಉತ್ತರದ ಕೆಲವು ರಾಜರು ಶಾಸನ ಮಾಡಿದ್ದರು . +ಆದರೆ ಅವರ ಅನಂತರದ ರಾಜರು ತಮ್ಮ ಅಂತಃಪುರದಲ್ಲಿ ಮೊದಲುಗೊಂಡು ಎಲ್ಲೆಲ್ಲೂ ಸಂಸ್ಕೃತವನ್ನೇ ಆಡಬೇಕೆಂದು ಗೊತ್ತುಮಾಡಿದರು . +ಅದರ ಪ್ರಭಾವ ದಕ್ಷಿಣದ ಕರ್ನಾಟಕದ ಮೇಲೂ ಬಿದ್ದಿತ್ತು . +ಪ್ರಾಥಮಿಕ ಶಾಲೆಗಳಲ್ಲೂ ಸಂಸ್ಕೃತ ವ್ಯಾಕರಣವನ್ನು ಬೋಧಿಸುವುದು ಆರಂಭವಾಯಿತು . +ಪ್ರಾಕೃತಕ್ಕಾಗಲಿ ಜನರ ಆಡುನುಡಿಗಾಗಲಿ ಪುರಸ್ಕಾರವಿಲ್ಲವಾಯಿತು . +ಇದರ ಪರಿಣಾಮವಾಗಿ ಜನಸಾಮಾನ್ಯರಲ್ಲಿ ಜ್ಞಾನ ಮತ್ತು ಸಂಸ್ಕೃತಿ ಪ್ರಚಾರಕ್ಕೆ ಅಡ್ಡಿಯೊದಗಿತು . +ಕನ್ನಡ ಭಾಷೆಯ ಬೆಳೆವಣಿಗೆಗೆ ಇದರಿಂದ ಅವಕಾಶವಿಲ್ಲದಂತಾಗಿರಬೇಕು . +ಸಾತವಾಹನರ ಅನಂತರ ಬಂದ ಚಾಳುಕ್ಯಾದಿ ರಾಜಮನೆತನಗಳು ಕನ್ನಡಕ್ಕೆ ಪ್ರೋತ್ಸಾಹ ನೀಡತೊಡಗಿದುವು . +ಅನಂತರ ಕನ್ನಡ ಅಕ್ಷರಾಭ್ಯಾಸ , ಓದು , ಬರಹ -ಇವು ಪ್ರಾಥಮಿಕ ಶಾಲೆಯಲ್ಲಿ ಮುಖ್ಯ ಕಲಾಪಗಳಾಗತೊಡಗಿದುವು . +ಕ್ಷತ್ರಿಯರೂ ವೈಶ್ಯರೂ ಇತರರೂ ತಮ್ಮ ಉದ್ಯೋಗ ನಿರ್ವಹಣೆಗೆ ಜನಸಾಮಾನ್ಯರೊಂದಿಗೆ ಆಡುಭಾಷೆಯ ಮೂಲಕವೇ ಸಂಪರ್ಕ ಪಡೆಯಬೇಕಾಗಿದ್ದುದರಿಂದ ಅವರು ಕನ್ನಡವನ್ನೂ ಕಲಿಯುವುದು ಅಗತ್ಯವಾಗುತ್ತ ಬಂತು . +ಜನಸಾಮಾನ್ಯರ ಪ್ರಾಥಮಿಕ ಶಾಲೆಗಳಲ್ಲಿ ಅಂಕಗಣಿತ, ಲೆಕ್ಕಾಚಾರ ಇವನ್ನೆಲ್ಲ ಕನ್ನಡದಲ್ಲೇ ಬೋಧಿಸುತ್ತಿದ್ದರು . +ಕ್ರಮಕ್ರಮವಾಗಿ ಸಂಸ್ಕೃತಕ್ಕಿದ್ದ ಆದ್ಯತೆ ಕಡಿಮೆಯಾಗಿ ಆ ಸ್ಥಾನ ಕನ್ನಡಕ್ಕೆ ಬಂತು . +ನರಸೀಪುರದಲ್ಲಿದ್ದ ಉನ್ನತ ಶಿಕ್ಷಣಕೇಂದ್ರದಲ್ಲಿಯ ವಿದ್ಯಾರ್ಥಿಗಳಿಗೆ ಅವರ ಮಾತೃಭಾಷೆಯಲ್ಲೆ ಬೋಧಿಸುವುದು ಆರಂಭವಾಯಿತು . +ಸಾಮಾನ್ಯ ಜನರಲ್ಲಿ ಕನ್ನಡವೇ ಎಲ್ಲ ಕಾರ್ಯಗಳಿಗೂ ಬಳಕೆಯ ಭಾಷೆಯಾಗುತ್ತ ಬಂತು . +ಅವರಿಗೆ ಶಿಕ್ಷಣ ದೊರೆಯುತ್ತಿದ್ದುದು ಕನ್ನಡದಲ್ಲೆ . +ಆದರೆ ಅಲ್ಲಲ್ಲಿದ್ದ ಕೆಲವು ಪಾಠಶಾಲೆಗಳಲ್ಲಿ ಸಂಸ್ಕೃತವನ್ನು ಅಧ್ಯಯನ ಮಾಡುತ್ತಿದ್ದರು . +ಉನ್ನತ ಶಿಕ್ಷಣ ಸಂಸ್ಥೆಗಳಲ್ಲಂತೂ ಮಧ್ಯಯುಗದ ಆರಂಭ ಕಾಲದವರೆಗೂ ಕನ್ನಡ ಅಧ್ಯಯನವಿಷಯವಾಗಿದ್ದರೂ ಶಿಕ್ಷಣ ಮಾಧ್ಯಮವಾಗಿ ಅಷ್ಟಾಗಿ ಪ್ರಚಾರಕ್ಕೆ ಬಂದಿರಲಿಲ್ಲ . +ಹೊಯ್ಸಳರ ಆಳ್ವಿಕೆಯ ಕೊನೆಗಾಲದೊಡನೆ ಸಂಭವಿಸಿದ ಮುಸಲ್ಮಾನರ ಆಕ್ರಮಣದ ಫಲವಾಗಿ ಹಿಂದಿನಿಂದಲೂ ನಡೆದುಕೊಂಡು ಬರುತ್ತಿದ್ದ ಶಿಕ್ಷಣಪ್ರಗತಿಗೆ ಅಡ್ಡಿಯೊದಗಿತು . +ಆಗ ಅಸ್ತವ್ಯಸ್ತವಾದ ಕರ್ನಾಟಕದ ಶಿಕ್ಷಣವ್ಯವಸ್ಥೆ ಒಂದು ಸಂದಿಗ್ಧ ಸ್ಥಿತಿ ಮುಟ್ಟಿತು . +ಹದಿನಾಲ್ಕನೆಯ ಶತಮಾನದಲ್ಲಿ ನಡೆದ ಅವರ ದಾಳಿಯ ಮುನ್ನಡೆಯ ಪ್ರವಾಹ ದಕ್ಷಿಣದಲ್ಲಿ ರಾಮೇಶ್ವರದ ವರೆಗೂ ಸಾಗಿ ಜನಜೀವನ ಕ್ಷೋಭೆಗೀಡಾಗಿ ಶಿಕ್ಷಣವೂ ಬಲವಾದ ಪೆಟ್ಟು ತಿಂದಿತು . +ಸಾಮಾನ್ಯಜನತೆಯ ಶಿಕ್ಷಣ ಹಾಗಿರಲಿ , ರಾಜಕುಮಾರರ ಶಿಕ್ಷಣವೂ ದುವರ್ಯ್‌ವಸ್ಥೆಗೀಡಾಯಿತು . +ಅದು ತನಕ ಒಂದೂವರೆ ಸಹಸ್ರವರ್ಷಗಳ ಹಿಂದೆಯೇ ಜೈನ ಮತ್ತು ಬೌದ್ಧ ಶಿಕ್ಷಣ ಪದ್ಧತಿಗಳು ಕರ್ನಾಟಕದ ಮೇಲೆ ದಾಳಿಮಾಡಿದ್ದರೂ ಇಲ್ಲಿಯ ಪದ್ಧತಿಗೆ ಅವು ಪರಕೀಯವೆನಿಸಿಕೊಂಡು ಉಳಿಯದೆ ಅದನ್ನು ಪರಿಪುಷ್ಟಿ ಗೊಳಿಸಿದುವು ; ಅಷ್ಟೇ ಅಲ್ಲ , ಕರ್ನಾಟಕ ಜನತೆಗೆ ಅವು ಆದರಣೀಯವೆನಿಸಿ ಇಲ್ಲಿಯ ಜನಜೀವನವನ್ನು ರಸಾವಿಷ್ಟಗೊಳಿಸಿ ಜೀವನದ ಮೌಲ್ಯದಲ್ಲಿ ಹೊಸ ದಿಗಂತವನ್ನು ಕಂಡುಕೊಳ್ಳುವಂಥ ಅಮೃತ ಪರಿಣಾಮವನ್ನೂ ಬೀರಿದುವು . +ಮುಸ್ಲಿಮರ ದಾಳಿ ಇಲ್ಲಿಯವರ ಜೀವನವನ್ನು ಪರಿಪೋಷಿಸುವುದು ಹಾಗಿರಲಿ , ಇಲ್ಲಿಯ ಜನತೆಗೂ ಧರ್ಮ ಸಂಸ್ಕೃತಿಗಳಿಗೂ ನಿರ್ದಿಷ್ಟವಾಗಿ ವಿಪತ್ಕಾರಿಯಾಗಿ ಪರಿಣಮಿಸಿತು . +ಹಿಂದೂ ರಾಜ್ಯಗಳ ಪತನದಿಂದ ಶಿಕ್ಷಣ ಸಂಸ್ಥೆಗಳಿಗೆ ಪ್ರೋತ್ಸಾಹ ಇಲ್ಲವಾಯಿತು . +ಮುಸಲ್ಮಾನರ ದಾಳಿಗೆ ಸಿಕ್ಕಿಯೂ ಇವು ಹಾಳಾದುವು . +ತಮ್ಮ ಪರಂಪರೆಗೇ ವಿನಾಶವೊದಗೀತೆಂಬ ಭೀತಿ ಜನ ಜೀವನದಲ್ಲಿ ಆವರಿಸಿ , ಕನ್ನಡಿಗರ ಶಕ್ತಿಯನ್ನು ಸಂಘಟಿಸಿ ತಮ್ಮ ಸಂಸ್ಕೃತಿ ಸಂಪ್ರದಾಯಗಳನ್ನು ರಕ್ಷಿಸಬಲ್ಲ ಪ್ರಬಲರಾಷ್ಟ್ರವೊಂದರ ನಿರ್ಮಾಣಕ್ಕೆ ಪ್ರೇರಣೆಯಾಯಿತು . +ಅದರ ಫಲವಾಗಿ ವಿಜಯನಗರ ಸಾಮ್ರಾಜ್ಯ ಅಸ್ತಿತ್ವಕ್ಕೆ ಬಂತು ; ಕರ್ನಾಟಕಕ್ಕೆ ಶಾಂತಿನೆಮ್ಮದಿಗಳನ್ನು ಒದಗಿಸಿ ಕೊಟ್ಟಿತು . +ರಾಜರು, ಮಾಂಡಲಿಕರು, ಮತ್ತಿತರ ವರಿಷ್ಠ ಮನೆತನಗಳಲ್ಲಿ ಶಿಕ್ಷಣದ ಪ್ರಾಮುಖ್ಯದ ಅರಿವುಂಟಾಗಿ ರಾಜಕೀಯ ದೃಷ್ಠಿಯಿಂದ ಅಗತ್ಯ ವ್ಯವಸ್ಥೆಗಳು ಅನುಷ್ಠಾನಕ್ಕೆ ಬಂದುವು . +ಆ ರಾಜ್ಯದ ಮೂಲ ಪುರುಷರಾದ ಬುಕ್ಕ ಹರಿಹರರೇ ಪ್ರಸಿದ್ಧ ವಿದ್ವಾಂಸರೆನಿಸಿದ್ದ ವಿದ್ಯಾರಣ್ಯರ ಶಿಷ್ಯರಾಗಿದ್ದರು . +ಹರಿಹರ ಸ್ವತಃ ಪಂಡಿತಶ್ರೇಷ್ಠ ,“ ಕರ್ನಾಟಕದ ವಿದ್ಯಾವಿಲಾಸ ” ನೆಂಬ ಕೀರ್ತಿಗೆ ಪಾತ್ರ . +ವಿಜಯನಗರ ವಿದ್ಯಾಪ್ರೇಮ ಕರ್ನಾಟಕದ ಇತರ ರಾಜಮನೆತನ ಗಳಲ್ಲೂ ಪ್ರತಿಬಿಂಬಿಸಿತು . +ರಾಜಕುಮಾರರಿಗೆ ಉಚಿತವಾದ ಶಾಸ್ತ್ರ ಶಿಕ್ಷಣ, ದೈಹಿಕ ಶಿಕ್ಷಣ, ರಾಜನೀತಿ, ಯುದ್ಧ ಕೌಶಲ ಇತ್ಯಾದಿ ವಿದ್ಯೆಗಳನ್ನೆಲ್ಲ ರಾಣಿ ಚೆನ್ನಮ್ಮಾಜಿ ತನ್ನ ದತ್ತಪುತ್ರ ಬಸವಪ್ಪನಿಗೆ ಕಲಿಸಿದ್ದಳು . +ಪ್ರಾಥಮಿಕ ಶಿಕ್ಷಣದಲ್ಲಿ ಲಿಪಿಗ್ರಹಣ, ಪದವಾಕ್ಯ ಪ್ರಮಾಣ, ಪುರಾಣಶ್ರವಣ, ಚರಿತ್ರೆಗಳೇ ಮುಂತಾದವು, ಭೂಗೋಳಗಳ ಅಧ್ಯಯನ, ಅಂಗಸಾಧನೆ, ಸಂಗೀತ ಇವೆಲ್ಲವನ್ನೂ ಕಲಿಸಲಾಗುತ್ತಿತ್ತು . +ಆ ವೇಳೆಗೆ ಕರ್ನಾಟಕದ ಊರೂರುಗಳಲ್ಲೂ ವೀರಶೈವಮತದ ಪುನರುಜ್ಜೀವನದ ಫಲವಾಗಿ ರೂಪುಗೊಂಡಿದ್ದ ಮಠಗಳು ಕ್ರಮ ಕ್ರಮವಾಗಿ ಧಾರ್ಮಿಕ ಶಿಕ್ಷಣದ ಜೊತೆಗೆ ಮೇಲೆ ಸೂಚಿಸಿದ ಲೌಕಿಕ ಶಿಕ್ಷಣಕ್ಕೂ ಅವಕಾಶ ಮಾಡಿಕೊಟ್ಟವು . +ಶಿಕ್ಷಣಕ್ಕೆ ದೊರೆತ ಪ್ರಾಮುಖ್ಯವನ್ನರಿತ ಜನಸಾಮಾನ್ಯರು ತಮ್ಮ ಮಕ್ಕಳ ಶಿಕ್ಷಣಕ್ಕಾಗಿ ವಿಶಿಷ್ಟ ವ್ಯವಸ್ಥೆ ಮಾಡಲು ತೊಡಗಿದ್ದರು . +ಅದನ್ನೇ ವಿಶಿಷ್ಟ ಉದ್ಯೋಗವನ್ನಾಗಿ ಅನುಸರಿಸುವ ಅಯ್ಯಗಳು ಕಾಣಿಸಿಕೊಳ್ಳಹತ್ತಿದರು . +ಕನಕದಾಸರು ತಮ್ಮ ಮೋಹನ ತರಂಗಿಣಿಯಲ್ಲಿ ಸೂಚಿಸಿರುವಂತೆ ಕಸೆ ಅಂಗಿ ತೊಟ್ಟು ಕೈಯಲ್ಲಿ ಬೆತ್ತ ಹಿಡಿದು ಚೌಪದಿ ರಚನೆಯಲ್ಲಿ ನಿಪುಣರೆನಿಸಿದ್ದ ಅಂದಿನ ಉಪಾಧ್ಯಾಯರ ವ್ಯಕ್ತಿ ಚಿತ್ರ ಇಂದಿಗೂ ನೆನಪಾಗಿ ಉಳಿದಿದೆ . +ಮರಳಿನ ಮೇಲೆ ತಿದ್ದಿ ಅಕ್ಷರಾಭ್ಯಾಸ ಮಾಡಿಸುವ ಪದ್ಧತಿಯೇ ಮುಂದುವರಿಯು ತ್ತಿತ್ತು . +ಸಂಖ್ಯಾಪಠನ, ಮಗ್ಗಿ , ಪುರ್ಣಾಂಕಗಳಿಂದ ಭಿನ್ನಾಂಕಗಳನ್ನು ಗುಣಿಸುವುದು , ನಾಣ್ಯ , ಅಳತೆ , ತೂಕ , ಇವುಗಳನ್ನೊಳಗೊಂಡ ಲೆಕ್ಕ ಮಾಡುವುದು ಇವೆಲ್ಲ ಅಲ್ಲಿಯ ಪಠ್ಯ ಕ್ರಮದಲ್ಲಿ ಸೇರಿದ್ದುವು . +ಅಂದಿಗಾಗಲೆ ಕನ್ನಡದಲ್ಲಿ ಗ್ರಂಥಗಳ ರಚನೆಯಾಗಿದ್ದು ಪುರಾಣ ವಾಚನವೂ ನಡೆಯುತ್ತಿತ್ತು . +೧೭ನೇಯ ಶತಮಾನದಲ್ಲಿ ಭಾರತಪ್ರವಾಸ ಮಾಡಿದ ಪಿರಾರ್ದ್‌ ದೆಲವಲ್ ಇಲ್ಲಿಯ ಬೋಧನಕ್ರಮವನ್ನು ವಿವರಿಸುತ್ತ , ಬುದ್ಧಿವಂತನಾದ ವಿದ್ಯಾರ್ಥಿ ಒಂದು ಪಾಠವನ್ನು ಪಠಿಸುತ್ತಿದ್ದ ; ಮಿಕ್ಕವರು ಅದನ್ನು ಪುನರಾವರ್ತಿಸುತ್ತಿದ್ದರು . +ಕಾಗದ , ಮಸಿ ಇವಾವುವೂ ವ್ಯರ್ಥವಾಗದೆ ಸರಾಗವಾಗಿ ವಿದ್ಯಾರ್ಥಿಗಳು ಪಾಠ ಕಲಿಯುತ್ತಿದ್ದ ಈ ಕ್ರಮ ತುಂಬ ಪರಿಣಾಮಕಾರಿಯೂ ಸರಳವೂ ಆದದ್ದು ಎಂದು ಹೊಗಳಿದ್ದಾನೆ . +ಮಾನಿಟರ್ ಪದ್ಧತಿಯ ಈ ಬೋಧನಕ್ರಮದ ಉಲ್ಲೇಖ ಮೊಟ್ಟಮೊದಲು ಇವನ ವರದಿಯಲ್ಲಿ ಕಾಣಿಸಿಕೊಂಡಿದೆ . +ಪ್ರಾಥಮಿಕ ಶಿಕ್ಷಣ ೫ - ೬ ವರ್ಷಗಳದಾಗಿದ್ದು ಮೇಲಿನ ತರಗತಿಯಲ್ಲಿ ಸಂಕಲನ , ವ್ಯವಕಲನ , ಗುಣಾಕಾರ , ಭಾಗಾಕಾರ , ಸರಳಬಡ್ಡಿ , ತ್ರೈರಾಶಿ - ಈ ಲೆಕ್ಕಗಳನ್ನು ಕಲಿಸುತ್ತಿದ್ದರು . +ಅಲ್ಲಿಯ ಶಿಕ್ಷಣಕ್ಕೆ ಕಳಸವಿಟ್ಟಂತೆ ಜೈಮಿನಿಭಾರತ , ವಿದುರನೀತಿ , ಸೋಮೇಶ್ವರ ಶತಕ , ಅಮರಕೋಶ , ಪಂಚತಂತ್ರ ಇತ್ಯಾದಿಗಳನ್ನು ಓದಿಸಲಾಗುತ್ತಿತ್ತು . +ಪ್ರಾಚೀನ ಕಾಲದ ಉನ್ನತ ಶಿಕ್ಷಣ ಸಂಸ್ಥೆಗಳು ಮಧ್ಯಯುಗಗಳಲ್ಲೂ ಮುಂದುವರಿದುಕೊಂಡು ಬಂದುವು . +ಆದರೆ ವಿಜಯನಗರದ ಪತನಾನಂತರ ಕೆಲವು ಅಗ್ರಹಾರಗಳು ನಿಂತುಹೋದುವು . +ಮತ್ತೆ ಕೆಲವು ಕೇವಲ ಊಟದ ಸತ್ರಗಳಾಗಿ ಪರಿಣಮಿಸಿದುವು . +ಆಗಲೂ ಕೆಲವು ಹೊಸ ಅಗ್ರಹಾರಗಳು ಆರಂಭವಾದುದೇನೋ ನಿಜ . +ದಳವಾಯಿ ದೇವರಾಯನ ರಾಮಚಂದ್ರಪುರದ ಅಗ್ರಹಾರ ಇದಕ್ಕೆ ಉದಾಹರಣೆ . +೧೭೪೮ರಲ್ಲಿ ದೇವರಾಯ ಅಲ್ಲಿ ಅಗತ್ಯವಾದ ಮನೆಮಠಗಳನ್ನು ಕಟ್ಟಿಸಿ ಸಜ್ಜುಗೊಳಿಸಿ ೧೨೦ ಮಂದಿ ವೇದಾಂಗಶಾಸ್ತ್ರಗಳಲ್ಲಿ ಪಂಡಿತರೆನಿಸಿದ ಬ್ರಾಹ್ಮಣರನ್ನು ನೆಲೆಗೊಳಿಸಿದ . +ಇಂಥ ಸದುದ್ದೇಶದಿಂದ ಸ್ಥಾಪನೆಯಾದ ಈ ಅಗ್ರಹಾರ ೧೮೦೭ರಲ್ಲಿ ಎಳಂದೂರನ್ನು ಪೂರ್ಣಯ್ಯ ನವರಿಗೆ ಜಹಗೀರು ಕೊಟ್ಟಾಗ ಅಂತ್ಯಗೊಂಡಿತು . +ಹಿಂದಿನ ಮಠಗಳು ವಿದ್ಯಾಭ್ಯಾಸವನ್ನು ನಿರ್ಲಕ್ಷಿಸುತ್ತ ಬಂದು ಅವು ಕೇವಲ ಮತೀಯಕೇಂದ್ರಗಳಾದುವು . +ಅಲ್ಲಿಯ ಗುರುಗಳನೇಕರು ಜನತೆಯ ವಿದ್ಯಾಭ್ಯಾಸದ ಕಡೆ ಗಮನವೀಯದೆ ತಮ್ಮ ಅನುಯಾಯಿಗಳ ಮೇಲೆ ಧಾರ್ಮಿಕ ಒಡೆತನ ಸಾಧಿಸುವುದರಲ್ಲಿ ಮಾತ್ರ ನಿರತರಾದರು . +ಪಠ್ಯವಿಷಯ ಮತ್ತು ಅಧ್ಯಯನ ವಿಧಾನ : ಅಂದಿನ ರಾಜಾಸ್ತಾನದಲ್ಲಿ ಯಾವ ಯಾವ ಅಂಶಗಳಿಗೆ ಪ್ರಾಶಸ್ತ್ಯವಿತ್ತೊ ಆ ವಿಷಯಗಳನ್ನು ಕೆಲವು ಉನ್ನತ ಶಿಕ್ಷಣ ಕೇಂದ್ರಗಳು ಬೋಧಿಸುತ್ತಿದ್ದುವು . +ಅಂಥ ವಿಷಯಗಳಲ್ಲಿ ಕಾವ್ಯ, ಗಾಯನ,ಪುರಾಣ ,ಜ್ಯೋತಿಷ ,ಯುದ್ಧಕಲೆ -ಇವುಗಳ ಶಿಕ್ಷಣಕ್ಕೆ ಪ್ರಾಧಾನ್ಯ ಬರಹತ್ತಿತ್ತು . +ಸೋಮೇಶ್ವರ ಶತಕದಲ್ಲಿ ಹೇಳುವಂತೆ ಆ ವಿಷಯಗಳನ್ನು ಬಲ್ಲವರಿಂದ ,ಶಾಸ್ತ್ರಗಳಿಂದ ,ಇತರ ಕೃತಿಗಳಿಂದ ,ತನ್ನ ಬೌದ್ಧಿಕ ಯತ್ನದಿಂದ ಅಥವಾ ಸಜ್ಜನರ ಸಂಗದಿಂದ ಕಲಿಯುವುದು ರೂಢಿಯಲ್ಲಿತ್ತೆಂದು ಊಹಿಸ ಬಹುದು . +ಅಧ್ಯಯನಾನಂತರ ಪರೀಕ್ಷೆಯೊಂದು ಇರದಿದ್ದರೂ ಸರ್ಕಾರದ ಅಂಗೀಕಾರ ಪ್ರೋತ್ಸಾಹಗಳು ಬೇಕಾಗಿದ್ದರೆ ಸಾರ್ವಜನಿಕ ಪರೀಕ್ಷೆಯೊಂದಕ್ಕೆ ಸಿದ್ಧರಾಗಬೇಕಾಗಿತ್ತು . +೧೪೪೭ರಲ್ಲಿ ಭಾಷ್ಯಭೂಷಣ ಎಂಬ ಗ್ರಂಥರಚನಕಾರನಾದ ಆದಿತ್ಯಾಚಾರ್ಯ ಅಂಥ ಒಂದು ಪರೀಕ್ಷೆಯಲ್ಲಿ ಉತ್ತೀರ್ಣನಾಗಿ ನಲ್ಲಂಗಿ ಎಂಬ ಗ್ರಾಮವನ್ನು ದತ್ತಿಯಾಗಿ ಪಡೆದ ಪ್ರಸಂಗದ ಉಲ್ಲೇಖವುಂಟು . +ತನ್ನಿಂದ ಬಹುಮಾನವನ್ನಪೇಕ್ಷಿಸುತ್ತಿದ್ದವರನ್ನು ಕೃಷ್ಣದೇವರಾಯ ಸ್ವತಃ ಪರೀಕ್ಷಿಸುತ್ತಿದ್ದನಂತೆ . +ಗುರುಶಿಷ್ಯ ಸಂಬಂಧ : ಪ್ರಾಚೀನ ಕಾಲದಿಂದಲೂ ಬಂದ ಗುರುಗಳ ಉನ್ನತ ಸ್ಥಾನ ಮುಂದುವರಿದುಕೊಂಡು ಬಂತು . +ಸರ್ವಜ್ಞ ಹೇಳುವಂತೆ “ ಗುರುವಿನ ಬಳಿ ಅವನ ಎತ್ತಾಗಿ, ತೊತ್ತಾಗಿ, ಅವನ ಹಿತ್ತಲಿನ ಗಿಡವಾಗಿ, ಅವನ ಕಾಲಿನ ಒತ್ತಾಗಿ ಇರುವುದು ಶಿಷ್ಯರಿಗೆ ಅಗತ್ಯವಾಗಿತ್ತು . +ಕನಕದಾಸ ಹೇಳುವಂತೆ ಗುರುವಿನ ಗುಲಾಮನಾಗುವ ವರೆಗೆ ಮುಕುತಿ ದೊರೆಯುವುದು ದುರ್ಲಭವೆಂಬ ನಂಬಿಕೆಯಿತ್ತು . +ಆದರೆ ಅಂಥ ಪುಜ್ಯತೆಯನ್ನು ಪಡೆದುಕೊಳ್ಳಬೇಕಾದರೆ ಗುರು ತನ್ನ ನೆಲೆಯನ್ನು ಅರಿತುಕೊಂಡಿರುವುದೂ ಪಾಂಡಿತ್ಯ ಘನತೆ ಗಾಂಭೀರ್ಯಾದಿ ಉನ್ನತ ಆದರ್ಶಗಳನ್ನು ತಳೆದಿರುವುದೂ ಅಗತ್ಯವಾಗಿತ್ತು . +ಅಲ್ಲದೆ, ಅಂಥ ವಿದ್ವಾಂಸರು ವಿದ್ಯೆಯನ್ನು ಇತರರಿಗೆ ಕಲಿಸುವುದು ಕರ್ತವ್ಯವಾಗಿತ್ತು ” . +ಪ್ರ.ಶ .೧೪ನೇಯ ಶತಮಾನದ ಮೊದಲ ದಶಕಗಳಲ್ಲಿ ಮುಸ್ಲಿಂ ಶಿಕ್ಷಣ ಸಂಸ್ಥೆಗಳು ಉತ್ತರ ಕರ್ಣಾಟಕದ ಬೇರೆ ಬೇರೆ ಭಾಗಗಳಲ್ಲಿ ಅಸ್ತಿತ್ವಕ್ಕೆ ಬಂದುವು . +ಅವುಗಳೆಲ್ಲ ಬಹುಮಟ್ಟಿಗೆ ಮಸೀದಿಗಳ ಅಂಗವಾಗಿ ಏರ್ಪಟ್ಟಿದ್ದುವು . +೧೩೪೩ರಲ್ಲಿ ಅಲ್ಲಿ ಪ್ರವಾಸಮಾಡಿದ ಇಬ್ನ್‌ ಬತೂತ ವಿವರಿಸಿರುವಂತೆ ಮಸೀದಿಗಳ ನಿಧಿಯಿಂದ ವಿದ್ಯಾರ್ಥಿವೇತನಗಳನ್ನು ಪಡೆದು ಮುಸ್ಲಿಂ ಧರ್ಮಶಾಸ್ತ್ರಗಳನ್ನು ಅಭ್ಯಾಸ ಮಾಡುತ್ತಿದ್ದರು . +ಹೊನ್ನಾವರ ಪ್ರದೇಶದಲ್ಲಿ ಮುಸ್ಲಿಂ ಹೆಣ್ಣು ಮಕ್ಕಳಿಗಾಗಿಯೆ ಅನೇಕ ಶಾಲೆಗಳು ಆರಂಭವಾಗಿದ್ದುವು . +ಅಲ್ಲಿ ವಿದ್ಯಾರ್ಥಿನಿಯರು ಬಹು ಆಸಕ್ತಿಯಿಂದ ಖುರಾನನ್ನು ಪಠಣ ಮಾಡುತ್ತಿದ್ದರು . +ಬಹಮನಿ ಅರಸ ಎರಡನೆಯ ಮಹಮ್ಮದ್ ತನ್ನ ಮುಸ್ಲಿಂ ಪ್ರಜೆಗಳಿಗೆ ಉತ್ತಮ ಶಿಕ್ಷಣ ಸೌಲಭ್ಯವನ್ನು ಒದಗಿಸಿದ್ದ . +ಸ್ವತಃ ಆತ ಒಳ್ಳೆಯ ವಿದ್ಯಾವಂತನಾಗಿದ್ದು ೧೩೭೮ರಲ್ಲಿ ಉನ್ನತ ಶಿಕ್ಷಣಕ್ಕಾಗಿ ಮದ್ರಸಾಗಳೆಂಬ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ ಅಲ್ಲಿ ಅನಾಥವಿದ್ಯಾರ್ಥಿಗಳ ಊಟ ವಸತಿಗಳೂ ಉಚಿತ ಶಿಕ್ಷಣಕ್ಕೂ ವ್ಯವಸ್ಥೆಗೊಳಿಸಿದ್ದ . +ಗುಲ್ಬರ್ಗಾ, ಬಿದರೆ ಮುಂತಾದೆಡೆ ಗಳಲ್ಲಿ ಆರಂಭವಾದ ಮದ್ರಸಾಗಳು ಬಹು ಪ್ರಸಿದ್ಧವಾಗಿದ್ದುವು . +ಅಲ್ಲದೆ ಆತ ಕೆಲವು ಸೈನಿಕ ಶಾಲೆಗಳನ್ನೂ ಸ್ಥಾಪಿಸಿದ್ದ . +ಅನಂತರ ಹದಿನೈದನೆಯ ಶತಮಾನದ ಕೊನೆಯಲ್ಲಿ ಅಲ್ಲಿಯ ರಾಜರ ಬಳಿ ಮಂತ್ರಿಯಾಗಿದ್ದ ಮಹಮೂದ್ ಗಾವಾನ್ ಮುಸಲ್ಮಾನರಿಗೆ ಉನ್ನತ ಶಿಕ್ಷಣಸೌಲಭ್ಯವನ್ನು ವಿಸ್ತರಿಸಿದ . +೧೪೭೨ರಲ್ಲಿ ಆತ ತನ್ನ ಸ್ವಂತ ಹಣದಿಂದ ಬಿದರೆಯಲ್ಲಿ ಮಹಾ ವಿದ್ಯಾಲಯವೊಂದನ್ನು ಕಟ್ಟಿಸಿದ . +ಇಸ್ಲಾಂದೇಶಗಳಲ್ಲಿ ಆ ಕಾಲದಲ್ಲಿದ್ದ ವಿದ್ಯಾಮಂದಿರ ಗಳ ಮಾದರಿಯಲ್ಲೆ ರಚನೆಯಾಗಿದ್ದ ಈ ವಿದ್ಯಾಲಯದಲ್ಲಿ ಆತ ದಕ್ಷರಾದ ವಿಜ್ಞಾನಿಗಳನ್ನೂ ಇತರ ಪಂಡಿತರನ್ನೂ ನೇಮಿಸಿದ್ದ . +ಜೊತೆಗೆ ಅಲ್ಲಿ ಅವನೂ ಪ್ರಾಧ್ಯಾಪಕನಾಗಿ ಕೆಲಸ ಮಾಡುತ್ತಿದ್ದ . +ಅಲ್ಲಿಯ ಪುಸ್ತಕ ಭಂಡಾರದಲ್ಲಿ ಸುಮಾರು ಮೂರು ಸಾವಿರ ಗ್ರಂಥಗಳಿದ್ದುವು . +ಬಹಮನಿ ಅರಸರ ಅನಂತರ ಅಧಿಕಾರಕ್ಕೆ ಬಂದ ಆದಿಲ್ಷಾಹಿ ಅರಸರು ಬಿಜಾಪುರ ವನ್ನು ರಾಜಧಾನಿಯನ್ನಾಗಿ ಮಾಡಿಕೊಂಡರು . +ಅವರು ಸಾರ್ವತ್ರಿಕ ಪ್ರಾಥಮಿಕ ಶಿಕ್ಷಣಕ್ಕೂ ತಾಂತ್ರಿಕ ಶಿಕ್ಷಣಕ್ಕೂ ಉತ್ತೇಜನ ಕೊಟ್ಟರು . +ಅವರು ಅರಬೀ ಮತ್ತು ಪರ್ಷಿಯನ್ ಭಾಷೆಗಳ ಪುರೋಭಿವೃದ್ಧಿಗೆ ನೆರವು ನೀಡಿದರು . +ಅವರ ಕಾಲದಲ್ಲಿ ವಾಸ್ತುಶಿಲ್ಪ ಮತ್ತು ವಿಜ್ಞಾನ ವಿದ್ಯೆಗಳಲ್ಲಿ ಪರಿಣತರಾದವರು ದೇಶದಲ್ಲಿ ಹೇರಳವಾಗಿದ್ದರು . +ಕರ್ಣಾಟಕಕ್ಕೆ ಆದಿಲ್ಷಾಹಿಗಳು ಹೊರಗಿನವರಾದರೂ ಇಲ್ಲಿಯ ಮುಸಲ್ಮಾನರ ಕಲ್ಯಾಣಕ್ಕಾಗಿ ಎಲ್ಲ ರೀತಿಯ ಶಿಕ್ಷಣಕ್ಕೂ ಪ್ರೋತ್ಸಾಹ ನೀಡುತ್ತಿದ್ದರು . +ಮುಸಲ್ಮಾನ್ ಪ್ರಜೆಗಳ ಪ್ರಾಥಮಿಕ ಶಿಕ್ಷಣಕ್ಕಾಗಿ ಮಕ್ತಾಬ್ ಎಂಬ ಸಂಸ್ಥೆಗಳನ್ನು ಆರಂಭಿಸಿದ್ದರು . +ಅವು ಆ ಕಾಲದಲ್ಲಿ ಉತ್ತರಭಾರತ ದಲ್ಲಿ ಪ್ರಚಾರದಲ್ಲಿದ್ದ ಸಂಸ್ಥೆಗಳ ಮಾದರಿಯಲ್ಲೆ ಇದ್ದು ಉರ್ದು ಭಾಷೆಯ ಅಕ್ಷರಾಭ್ಯಾಸ , ಓದುಗಾರಿಕೆ , ಬರೆವಣಿಗೆ ಇತ್ಯಾದಿಗಳನ್ನು ಕಲಿಸುತ್ತಿದ್ದುವು . +ಮೈಸೂರಿನ ಒಡೆಯರು ಕಲೆ , ವಿಜ್ಞಾನ , ಶಾಸ್ತ್ರ ಇತ್ಯಾದಿಗಳ ಪುರೋಭಿವೃದ್ಧಿಗೆ ಆಶ್ರಯವಿತ್ತಿದ್ದುದು ಕರ್ನಾಟಕದ ಇತಿಹಾಸದಲ್ಲಿ ಪ್ರಧಾನವಾಗಿ ಎದ್ದು ಕಾಣುತ್ತದೆ . +ರಾಜ್ಯದ ಅಧಿಕಾರ ಹೈದರ್ ಅಲಿ ಟಿಪ್ಪು ಸುಲ್ತಾನರ ಕೈಸೇರಿದಾಗ ಹಿಂದೂ ಶಿಕ್ಷಣಕ್ಕೆ ಅಷ್ಟಾಗಿ ಪ್ರೋತ್ಸಾಹವಿರಲಿಲ್ಲ . +ಟಿಪ್ಪುಸುಲ್ತಾನ ವಿದ್ಯಾಪ್ರೇಮಿಯಾಗಿದ್ದರೂ ಮುಖ್ಯವಾಗಿ ಮುಸ್ಲಿಂ ಶಿಕ್ಷಣದ ಕಡೆ ಗಮನ ಕೊಟ್ಟಿದ್ದ . +ಅನಂತರ ಸುಮಾರು ಐದು ಶತಮಾನಗಳ ತನಕ ಎಂದರೆ ಬ್ರಿಟಿಷರು ತಮ್ಮ ಶಿಕ್ಷಣ ಪದ್ಧತಿಯನ್ನು ಆರಂಭಿಸುವ ತನಕ ದಕ್ಷಿಣ ಭಾರತದಲ್ಲಿ ಮುಸಲ್ಮಾನರ ಆಡಳಿತ ಕರ್ನಾಟಕದ ಬೇರೆ ಬೇರೆ ಭಾಗಗಳಲ್ಲಿ ಅಸ್ತಿತ್ವದಲ್ಲಿದ್ದರೂ ಆ ಆಳರಸರು ದೇಶೀಯ ಶಿಕ್ಷಣಪದ್ಧತಿಗೆ ಪ್ರೋತ್ಸಾಹವನ್ನಾಗಲಿ ಕೊಡುಗೆಯನ್ನಾಗಲಿ ನೀಡಲಿಲ್ಲ . +ಮುಸಲ್ಮಾನರ ಅಥವಾ ಆ ಮತವನ್ನು ಅನುಸರಿಸಿದವರ ಶಿಕ್ಷಣಕ್ಕಾಗಿ ಮಕ್ತಾಬ್ಗಳನ್ನೂ ಮದ್ರಸಾಗಳನ್ನೂ ಆರಂಭಿಸಿದರೂ ಹಿಂದೂಗಳ ಶಿಕ್ಷಣದ ಬಗ್ಗೆ ಆಸಕ್ತಿ ವಹಿಸಲಿಲ್ಲ . +ಹಿಂದೆಲ್ಲ ರಾಜರೂ ಮಾಂಡಲಿಕರೂ ಹಿಂದೂ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ನೀಡುತ್ತಿದ್ದ ಆಶ್ರಯ ಇಲ್ಲವಾಯಿತು . +ಅವರ ಆಕ್ರಮಣದ ದಾಳಿಯ ಕಾಲದಲ್ಲಿ ಅನೇಕ ದೇವಾಲಯಗಳೂ ಅವುಗಳಲ್ಲಿದ್ದ ಶಿಕ್ಷಣಕೇಂದ್ರಗಳೂ ಗ್ರಂಥಭಂಡಾರಗಳೂ ನಾಶವಾದುವು . +ಅಲ್ಲಿದ್ದ ಅಧ್ಯಾಪಕರೂ ವಿದ್ಯಾರ್ಥಿಗಳೂ ಅವನ್ನು ಬಿಟ್ಟುಹೋಗಬೇಕಾಯಿತು . +ಹಿಂದೂ ಶಿಕ್ಷಣವನ್ನು ಪಡೆದವರಿಗೆ ರಾಜ್ಯದಲ್ಲಿ ಉದ್ಯೋಗವಾಗಲಿ ಪ್ರೋತ್ಸಾಹವಾಗಲಿ ದೊರಕುವಂತಿರಲಿಲ್ಲ . +ಇವೆಲ್ಲದರ ಫಲವಾಗಿ ಅಕ್ಷರಸ್ಥರ ಸಂಖ್ಯೆ ಕುಗ್ಗುತ್ತ ಬಂತು . +ಉನ್ನತ ಶಿಕ್ಷಣ ಪಡೆದವರ ಸಂಖ್ಯೆಯೂ ತೀರ ಕಡಿಮೆಯಾಯಿತು . +೧೮ನೇಯ ಶತಮಾನದ ಕೊನೆಯ ವೇಳೆಗೆ ಅಕ್ಷರಸ್ಥರ ಸಂಖ್ಯೆ ಶೇ .೧೫ಕ ್ಕಿಂತ ಕಡಿಮೆಯಿತ್ತೆಂದೂ ೧೨ನೇಯ ಶತಮಾನದಲ್ಲಿ ಆ ಸಂಖ್ಯೆ ಶೇ.೩೦ಕ್ಕಿಂತ ಹೆಚ್ಚಾಗಿತ್ತೆಂದೂ ಊಹಿಸಲಾಗಿದೆ . +ಮುಸಲ್ಮಾನರ ದಾಳಿಯಿಂದ ವಿಪತ್ತಿಗೀಡಾದ ಮೇಲೆ ಕರ್ನಾಟಕದಲ್ಲಿ ಅನಾದಿ ಕಾಲ ದಿಂದಲೂ ಬೆಳೆದುಕೊಂಡು ಬಂದಿದ್ದ ಶಿಕ್ಷಣ ಸಂಪ್ರದಾಯ ಮುಂದೆ ಚೇತರಿಸಿಕೊಳ್ಳಲಿಲ್ಲ . +ಅಲ್ಲೊಂದು ಇಲ್ಲೊಂದು ಮಠ,ಅಗ್ರಹಾರ , ಬ್ರಹ್ಮಪುರಿಗಳು ಉಳಿದುಕೊಂಡಿದ್ದರೂ ಮುಸಲ್ಮಾನ್ ರಾಜರು ಪ್ರೋತ್ಸಾಹ ನೀಡದಿದ್ದುದರ ಫಲವಾಗಿ ಅವು ಕ್ರಮಕ್ರಮವಾಗಿ ಕಾರ್ಯವಿಮುಖವಾದುವು . +ಮುಂದೆ ೧೯ನೇಯ ಶತಮಾನದಲ್ಲಿ ಇಂಗ್ಲಿಷರು ಆರಂಭಿಸಿದ ಶಿಕ್ಷಣ ಪದ್ಧತಿಯ ಮೇಲೆ ಅವು ತಮ್ಮ ಪ್ರಭಾವ ಬೀರದಾದುವು . +ಆಧುನಿಕ ಯುಗ ಆರಂಭವಾಗುವ ಎಂದರೆ ೧೯ನೇಯ ಶತಮಾನದ ಆದಿಯವರೆಗೆ ಪಾಶ್ಚಾತ್ಯ ದೇಶಗಳಿಂದ ಮತಪ್ರಚಾರಕ್ಕಾಗಿ ಬಂದ ಪಾದ್ರಿಗಳು ಅದರ ಅಂಗವಾಗಿ ಅಥವಾ ಕ್ರೈಸ್ತ ಸಂನ್ಯಾಸಿಗಳಿಗಾಗಿ ಶಿಕ್ಷಣ ಸಂಸ್ಥೆಗಳನ್ನು ತಮ್ಮ ದೇಶಗಳಲ್ಲಿದ್ದ ಮಾದರಿಯಲ್ಲಿ ಆರಂಭಿಸಿದರು . +ಗೋವ, ಮದ್ರಾಸು , ಕಲ್ಕತ್ತ ಮುಂತಾದೆಡೆ ಅಂಥ ಸಂಸ್ಥೆಗಳು ೧೭ನೇಯ ಶತಮಾನದ ಕೊನೆಯ ಹೊತ್ತಿಗೆ ಆರಂಭವಾದರೂ ಕರ್ನಾಟಕದಲ್ಲಿ ಅವು ಹತ್ತೊಂಬತ್ತನೆಯ ಶತಮಾನದ ಮೊದಲನೆಯ ದಶಕದ ಅನಂತರವೇ ಆರಂಭವಾದದ್ದು . +ಅಂಥ ಶಾಲೆಗಳು ೧೯೧೨ ರಲ್ಲಿ ಬಳ್ಳಾರಿಯಲ್ಲೂ ಅನಂತರ ಇತರೆಡೆಗಳಲ್ಲೂ ಆರಂಭವಾದುವು . +ಪೋರ್ಚುಗೀಸ್, ಫ್ರೆಂಚ್ ಮತ್ತು ಡೇನಿಷ್ ಕ್ರೈಸ್ತಪಾದ್ರಿಗಳು ಅಲ್ಲಲ್ಲಿ ತೆರೆದ ಶಿಕ್ಷಣ ಸಂಸ್ಥೆಗಳ ಮೂಲಕ ಯೂರೋಪಿನ ಕ್ರೈಸ್ತ ಶಿಕ್ಷಣ ಪದ್ಧತಿ ಭಾರತಕ್ಕೂ ಆ ಮೂಲಕ ಕರ್ನಾಟಕಕ್ಕೂ ಆಗಮಿಸಿತು . +ಕ್ರೈಸ್ತಮತೀಯ ಕೇಂದ್ರಗಳಿಗೆ ಸಂಬಂಧಿಸಿದಂತೆ ಪ್ರಾಥಮಿಕ ಶಾಲೆಗಳೂ ವ್ಯವಸಾಯ ಮತ್ತು ಕೈಗಾರಿಕಾ ಶಿಕ್ಷಣಕೇಂದ್ರಗಳೂ ಕೆಲವು ಉನ್ನತ ಶಿಕ್ಷಣಸಂಸ್ಥೆಗಳೂ ಕ್ರೈಸ್ತಪಾದ್ರಿಗಳ ತರಬೇತಿಗಾಗಿ ಸೆಮಿನರಿಗಳೂ ಸ್ಥಾಪಿತವಾದುವು . +ಬ್ರಿಟಿಷರ ಈಸ್ಟ್‌ ಇಂಡಿಯಾ ಕಂಪೆನಿಯ ಅಧಿಕಾರ ಕರ್ನಾಟಕಕ್ಕೆ ವ್ಯಾಪಿಸಿದಂತೆ ಕ್ರೈಸ್ತ ಶಿಕ್ಷಣ ಪದ್ಧತಿಯ ವ್ಯಾಪ್ತಿ ಹೆಚ್ಚಲಾರಂಭಿಸಿತು . +ಧರ್ಮಾರ್ಥ ಶಿಕ್ಷಣಸಂಸ್ಥೆಗಳ ಕಟ್ಟಡ , ಸಿಬ್ಬಂದಿ ಮುಂತಾದ ವೆಚ್ಚಗಳಿಗಾಗಿ ಆ ಶಾಲೆಗಳಿಗೆ ಅಷ್ಟಿಷ್ಟು ಧನ ಸಹಾಯವನ್ನು ಕಂಪೆನಿಯ ಸರ್ಕಾರ ಒದಗಿಸುತ್ತಿತ್ತು . +೧೯ನೇಯ ಶತಮಾನದ ೩ -೪ನೆಯ ದಶಕದ ಹೊತ್ತಿಗೆ ಅಮೆರಿಕದ ಕೆಲವು ಕ್ರೈಸ್ತ ಮತೀಯ ಸಂಸ್ಥೆಗಳೂ ತಮ್ಮ ಶೈಕ್ಷಣಿಕ ಚಟುವಟಿಕೆಗಳನ್ನು ಆರಂಭಿಸಿದುವು . +ಹತ್ತೊಂಬತ್ತನೆಯ ಶತಮಾನದ ೪, ೫ , ೬ನೇಯ ದಶಕಗಳನ್ನು ಮಿಷನರಿ ಶಾಲೆಗಳ ಕಾಲವೆಂದು ಹೇಳುವುದುಂಟು . +ಅಂದಿಗಾಗಲೆ ಮುಸ್ಲಿಮರ ದಾಳಿಯಿಂದಲೂ ಸ್ಥಳೀಯ ರಾಜಮಹಾರಾಜರ ಮತ್ತು ಶ್ರೀಮಂತ ದಾನಿಗಳ ಪ್ರೋತ್ಸಾಹದ ಅಭಾವದಿಂದಲೂ ದೇಶೀಯ ಶಿಕ್ಷಣ ಪದ್ಧತಿ ಕ್ಷೀಣಿಸಿತು . +ನೂತನ ಶಿಕ್ಷಣ ಪದ್ಧತಿ ಬಹುಬೇಗ ದೇಶಾದ್ಯಂತ ವ್ಯಾಪಿಸಹತ್ತಿತು . +ಆಗತಾನೆ ಭದ್ರವಾಗುತ್ತಿದ್ದ ಇಂಗ್ಲಿಷರ ರಾಜಕೀಯ ಬೆಂಬಲವೂ ಅದಕ್ಕೆ ದೊರೆತದ್ದರಿಂದ ಇಲ್ಲಿನವರೆಗೆ ಆ ಪದ್ಧತಿ ಆಕರ್ಷಣೀಯವಾಗಿಯೂ ಪರಿಣಮಿಸಿತು . +ಬ್ರಿಟಿಷರ ಕಾಲದಲ್ಲಿ ಹಲವು ಆಡಳಿತ ವ್ಯವಸ್ಥೆಗಳ ನಡುವೆ ಹಂಚಿಹೋದ ಕರ್ನಾಟಕದಲ್ಲಿ ಸಮಗ್ರವಾದ ಶಿಕ್ಷಣವ್ಯವಸ್ಥೆ ರೂಪುಗೊಂಡದ್ದು ಏಕೀಕರಣದ ಅನಂತರವೇ . +ಅದಕ್ಕೆ ಮುಂಚೆ ಇದರ ವಿವಿಧ ಭಾಗಗಳಲ್ಲಿ ಆಯಾ ಆಡಳಿತ ವ್ಯವಸ್ಥೆಗಳ ಶಿಕ್ಷಣ ಪದ್ಧತಿಗಳೇ ಬಹುತೇಕ ಜಾರಿಯಲ್ಲಿದ್ದುವು . +ಮೈಸೂರು ಸಂಸ್ಥಾನ ಭಾಗದಲ್ಲಿ ಆಧುನಿಕ ಪದ್ಧತಿಯ ಶಿಕ್ಷಣ ಪ್ರಾರಂಭವಾದುದು ಹತ್ತೊಂಬತ್ತನೆಯ ಶತಮಾನದ ಆದಿಯಿಂದ . +ಅದಕ್ಕೆ ಹಿಂದೆ ದೇವಾಲಯಗಳಲ್ಲಿ ವೇದಪಾಠ ಶಾಲೆಗಳೂ , ಮಸೀದಿಗಳಲ್ಲಿ ಕೊರಾನ್ ಶಾಲೆಗಳೂ ಗ್ರಾಮಾಂತರಗಳಲ್ಲಿ ಓದುಬರಹ ಲೆಕ್ಕಾಚಾರದ ಲೌಕಿಕ ಶಿಕ್ಷಣದ ಕೂಲಿ ಮಠಗಳೂ ಶಿಕ್ಷಣ ಸಂಸ್ಥೆಗಳಾಗಿದ್ದುವು . +ಆಧುನಿಕ ಶಿಕ್ಷಣಾಶಾಲೆಗಳು ಸ್ಥಾಪಿತವಾದಂತೆ ಈ ಮೂರು ಬಗೆಯ ಶಾಲೆಗಳು ಕಡಿಮೆಯಾಗುತ್ತ ಬಂದುವು . +ಭಾರತೀಯರು ಇಂಗ್ಲಿಷ್ ಭಾಷೆಯಲ್ಲಿ ಶಿಕ್ಷಣ ಪಡೆಯುವುದು ಅವರ ಪರೋಭಿವೃದ್ಧಗೆ ಅವಶ್ಯವೆಂಬುದಾಗಿ ಭಾರತದಲ್ಲಿ ಪ್ರತಿಪಾದಿಸಿದವರೆಂದರೆ ಮಕಾಲೆ ಮತ್ತು ರಾಜಾರಾಮ ಮೋಹನರಾಯ . +೧೮೪೦ - ೧೮೫೦ರ ಕಾಲದಲ್ಲಿ ಮೈಸೂರು ಸಂಸ್ಥಾನದ ಕೆಲವು ಕಡೆಗಳಲ್ಲಿ ಕ್ರೈಸ್ತ ಪಾದ್ರಿಗಳೂ ಬೆಂಗಳೂರಿನಲ್ಲಿ ಸರ್ಕಾರವೂ ಮೈಸೂರು ನಗರದಲ್ಲಿ ಮಹಾರಾಜರೂ ಇಂಗ್ಲಿಷ್ ಶಾಲೆಗಳನ್ನು ತೆರೆದರು . +ಭಾರತ ಸರ್ಕಾರಕ್ಕೆ ೧೮೫೪ ರಲ್ಲಿ ಬ್ರಿಟಿಷ್ ಸರ್ಕಾರ ಕಳಿಸಿದ ವೂಡ್ರ ಪತ್ರದ (ವೂಡ್ಸ್‌ ಡೆಸ್ಪ್ಯಾಚ್ ) ಅಂಗವಾಗಿ ಶಿಕ್ಷಣ ವ್ಯವಸ್ಥೆ ರಚಿತವಾಯಿತು . +ಭಾರತ ಸರ್ಕಾರ ನಾಲ್ಕು ವಿಭಾಗೀಯ ಇಂಗ್ಲಿಷ್ ಶಾಲೆಗಳನ್ನು ಎಂಬತ್ತು ತಾಲ್ಲೂಕು ದೇಶ ಭಾಷಾ ಶಾಲೆಗಳನ್ನೂ ಇವುಗಳ ವೆಚ್ಚಕ್ಕಾಗಿ ೧,೨೫,೦೦೦ ರೂಪಾಯಿಗಳನ್ನೂ ಮಂಜೂರು ಮಾಡಿತು . +ಜೂನ್ ೧೮೫೭ ರಲ್ಲಿ ವಿದ್ಯಾಇಲಾಖೆಯನ್ನು ಸ್ಥಾಪಿಸಿ , ಶಿಕ್ಷಣದ ಜವಾಬ್ದಾರಿಯನ್ನು ಬ್ರಿಟಿಷ್ ಕಮಿಷನ್ ತಾನೇ ವಹಿಸಿಕೊಂಡಿತು . +ಕಡಿಮೆ ಬೆಲೆಯಲ್ಲಿ ಪಠ್ಯಪುಸ್ತಕಗಳನ್ನು ಮುದ್ರಿಸಲು ೧೮೫೮ರಲ ್ಲಿ ಸರ್ಕಾರಿ ಮುದ್ರಣಾಲಯ ಸ್ಥಾಪಿತವಾಯಿತು . +ಉತ್ತಮ ಕೂಲಿ ಮಠಗಳ ಶಿಕ್ಷಕರಿಗೆ ಸಂಭಾವನೆ ಕೊಡುವುದು ಜಾರಿಗೆ ಬಂತು . +ನಾರ್ಮಲ್ ಶಾಲೆಯೂ ಎಂಜಿನಿಯರಿಂಗ್ ಮತ್ತು ಸರ್ವೆ ತರಗತಿಗಳೂ ಪ್ರಾರಂಭವಾದುವು . +೧೮೬೪ರಿಂದ ಮುಂದೆ , ೯ರ ೂ.ಗಳಿಗೆ ಮೇಲ್ಪಟ್ಟ ವೇತನದ ಸರ್ಕಾರೀ ಕೆಲಸಗಳಿಗೆ ನೇಮಕವಾಗುವವರು ಮಾತೃಭಾಷೆಯಲ್ಲಿ ಓದುಬರಹ ಕಲಿತಿರಬೇಕೆಂಬ ಸರ್ಕಾರಿ ಆಜ್ಞೆ ಹೊರಟಿತು . +ಗ್ರಾಮಾಂತರ ಶಿಕ್ಷಣಪ್ರಸಾರಕ್ಕಾಗಿ ವಿದ್ಯಾಭ್ಯಾಸ ಇಲಾಖೆಯ ಡೈರಕ್ಟರ್ ಲೂಯಿರೈಸ್ ಹೋಬಳಿ ಶಾಲೆಗಳ ಯೋಜನೆ ತಯಾರಿಸಿದ . +೧೮೭೫ ರಲ್ಲಿ ಇನ್ನೂ ಮೂರು ನಾರ್ಮಲ್ ಶಾಲೆಗಳು , ಎಂಜಿನಿಯರಿಂಗ್ ಶಾಲೆ , ಬೆಂಗಳೂರು ಸೆಂಟ್ರಲ್ ಕಾಲೇಜ್ ಸ್ಥಾಪಿತವಾದುವು . +ಮೂರು ವಿಭಾಗಗಳ ಪ್ರೌಢಶಾಲೆಗಳು ಕೊಲಿಜಿಯೇಟ್ ಮಟ್ಟಕ್ಕೆ ಏರಿದುವು . +ರೂ.೨೦ಕ್ಕೆ ಮೇಲ್ಪಟ್ಟ ವೇತನದ ನೌಕರಿಗಳಿಗಾಗಿ ಸಾಮಾನ್ಯ ಪರೀಕ್ಷೆ (ಜನರಲ್ ಟೆಸ್ಟ್‌ ) ಪ್ರಾರಂಭವಾಯಿತು . +ವೈದ್ಯಕೀಯ ಶಾಲೆ ಮತ್ತು ಸಸ್ಯಶಾಸ್ತ್ರೀಯ (ಬೊಟಾನಿಕಲ್ ) ಶಾಲೆ ಸ್ಥಾಪಿತವಾದುವು (೧೮೮೦ ) . +ಸಂಸ್ಥಾನದ ಆಡಳಿತವನ್ನು ಬ್ರಿಟಿಷ್ ಕಮಿಷನರಿಂದ ಮಹಾರಾಜರಿಗೆ ವರ್ಗ ಮಾಡಿದಾಗ (೧೮೮೧ ), ನಗರ ಮತ್ತು ಗ್ರಾಮಾಂತರ ಪ್ರದೇಶಗಳೆರಡರಲ್ಲಿಯೂ ಆಧುನಿಕ ಶಿಕ್ಷಣದ ತಳಹದಿ ರೂಪುಗೊಂಡಿತ್ತು . +ಮಹಾರಾಜರ ಸರ್ಕಾರದ ಉದಾರನೀತಿ ಮತ್ತು ಪ್ರಗತಿಪ್ರಿಯತೆಯ ಫಲವಾಗಿ ಶಾಲೆಗಳ ಮತ್ತು ಮಕ್ಕಳ ಸಂಖ್ಯೆಗಳು ಒಂದೇ ಸಮನೆ ಏರುತ್ತ ಬಂದುವು . +ದಿವಾನ್ ಎಂ .ವಿಶ್ವೇಶ್ವರಯ್ಯನವರ ಕಾಲದಲ್ಲಿ ಏರ್ಪಡಿಸಲಾದ ಆರ್ಥಿಕ ಸಮ್ಮೇಳನದ ಫಲವಾಗಿ ಜನಜಾಗೃತಿಯುಂಟಾಯಿತು . +ಗ್ರಾಮಾಂತರ ಸಹಾಯಧನ ಶಾಲೆಗಳ ಯೋಜನೆ (೧೯೧೪ ) ಆಚರಣೆಗೆ ಬಂತು . +ಕೆಲವು ಚುನಾಯಿತ ಪ್ರದೇಶಗಳಲ್ಲಿ ಒತ್ತಾಯ ಶಿಕ್ಷಣ ಜಾರಿಗೆ ಬಂತು . +ವಾಣಿಜ್ಯಶಿಕ್ಷಣಶಾಲೆ ಮತ್ತು ವ್ಯವಸಾಯ ಶಿಕ್ಷಣಶಾಲೆ ಪ್ರಾರಂಭವಾದುವು . +ಗ್ರಾಮಾಂತರ ಸಂಚಾರಿ ಪುಸ್ತಕಭಂಡಾರಯೋಜನೆ ಪ್ರಾಯೋಗಿಕವಾಗಿ ಆಚರಣೆಗೆ ಬಂತು . +ಮೈಸೂರು ವಿಶ್ವವಿದ್ಯಾನಿಲಯ ಸ್ಥಾಪಿತವಾದದ್ದು ೧೯೧೬ರಲ್ಲಿ. +ಗ್ರಾಮಾಂತರ ಶಾಲೆಗಳ ಪರಿಸ್ಥಿತಿಯನ್ನು ಉತ್ತಮಪಡಿಸಲು ವಿದ್ಯಾಭ್ಯಾಸದ ಇನ್ಸ್‌ಪೆಕ್ಟರ್ ಜನರಲ್ ಸಿ.ಆರ್.ರೆಡ್ಡಿಯವರು ಒಂದು ಶಿಕ್ಷಣ ಲಿಖಿತವನ್ನು (ಮೆಮೊರಾಂಡಂ ಆಫ್ ಎಜ್ಯುಕೇಷನ್ ) ೧೯೨೧ರಲ್ಲಿ ತಯಾರಿಸಿದರು . +ಅದನ್ನು ಸರ್ಕಾರ ಅಂಗೀಕರಿಸಿತು . +ಶಿಕ್ಷಣ ತೆರಿಗೆಯನ್ನು ವಿಧಿಸಿ , ಅದರಿಂದ ಬಂದ ಹಣದಿಂದ ಹೊಸ ಹೊಸ ಶಾಲೆಗಳನ್ನು ತೆರೆಯಲಾಯಿತು . +೧೯೨೨ ರಲ್ಲಿ ಸಂಸ್ಥಾನದಲ್ಲಿ ಶಿಕ್ಷಣ ಸಮೀಕ್ಷೆ ನಡೆಸಿ ಉತ್ತಮ ಅನುದಾನ ಶಾಲೆಗಳನ್ನು ಸರ್ಕಾರಿ ಶಾಲೆಗಳನ್ನಾಗಿ ಪರಿವರ್ತಿಸಲಾಯಿತು . +ಅನಂತರ ೧೯೨೭ - ೨೮ರಲ್ಲಿ ಮತ್ತೊಂದು ಸಮೀಕ್ಷೆ ನಡೆಸಿ ವಿದ್ಯಾಪ್ರಗತಿಯನ್ನು ಪರಿಶೀಲಿಸಿ , ಕೇಂದ್ರೀಯ ಶಾಲಾ ಯೋಜನೆಯನ್ನು ಆಚರಣೆಗೆ ತರಲಾಯಿತು . +೧೯೩೦ರಲ್ಲಿ ಪ್ರಾಥಮಿಕ ಶಾಲೆಗಳ ಆಡಳಿತವನ್ನು ಸ್ಥಳೀಯ ಸಂಸ್ಥೆಗಳು ವಹಿಸಿಕೊಂಡುವು . +ಈ ಕಾಲದಲ್ಲಿ ಪ್ರೌಢ (ಸೆಕಂಡರಿ) ಶಿಕ್ಷಣವೂ ಪ್ರಗತಿ ಹೊಂದಿತು . +ಪೌರಸಭಾ ಪ್ರೌಢಶಾಲೆಗಳೂ ಪ್ರಾರಂಭವಾದುವು . +ಮಾಧ್ಯಮಿಕ ಮತ್ತು ಪ್ರೌಢಶಾಲೆಗಳ ಹೊಸ ವ್ಯಾಸಂಗಕ್ರಮವನ್ನು ರೂಪಿಸಿದಾಗ ಅದರಲ್ಲಿ ಮರಗೆಲಸ ಮೊದಲಾದ ೨೩ ಕಸಬು ಕಲೆಗಳೂ ಔದ್ಯೋಗಿಕ ಪಾಠ ವಿಷಯಗಳೂ ಸೇರಿದುವು . +೧೯೩೭ರಲ್ಲಿ ಪ್ರೌಢಶಾಲೆಗಳ ವ್ಯಾಸಂಗಕ್ರಮದಲ್ಲಿ ಮತ್ತೆ ಬದಲಾವಣೆಗಳಾದುವು . +ಕನ್ನಡ ಮಾಧ್ಯಮವೂ ಜಾರಿಗೆ ಬಂತು . +ವಿಶ್ವವಿದ್ಯಾನಿಲಯ ಇಂಟರ್ಮೀಡಿಯೇಟ್ ಪರೀಕ್ಷೆಯ ಜಾರಿ , ಕನ್ನಡದ ಎಂ.ಎ., ಗಣಿತದ ಎಂ.ಎ., ಎಂ.ಎಸ್ಸಿ .ಮತ್ತು ಬಿ.ಟಿ .ಪರೀಕ್ಷೆಗಳ ಆರಂಭ - ಇವು ಆ ಕಾಲದ ಬೆಳವಣಿಗೆಗಳು . +ಮಹಾರಾಜರ ರಜತೋತ್ಸವದ ಸ್ಮಾರಕವಾಗಿ ( ೧೯೨೭ ) ಒಂದು ತಾಂತ್ರಿಕ ಶಿಕ್ಷಣ ಶಾಲೆ ಸ್ಥಾಪಿತವಾಯಿತು . +ಪ್ರಾಥಮಿಕ ಶಿಕ್ಷಣ ನಿರೀಕ್ಷಿಸಿದಷ್ಟು ಪ್ರಗತಿ ಪಡೆಯದಿದ್ದುದರಿಂದ ಅದರ ಆಡಳಿತವನ್ನು ಸರ್ಕಾರವೇ ಮತ್ತೆ ವಹಿಸಿಕೊಳ್ಳಬೇಕಾಯಿತು . +ಅನೇಕ ಹೊಸ ಶಾಲೆಗಳು ಸ್ಥಾಪಿತವಾದುವು . +ಸ್ವಲ್ಪಮಟ್ಟಿನ ಒತ್ತಾಯ ಶಿಕ್ಷಣವೂ ಆಚರಣೆಗೆ ಬಂತು . +ಅನೇಕ ಗ್ರಾಮಾಂತರ ಪ್ರಾಥಮಿಕ ಶಾಲೆಗಳಲ್ಲಿ ಮಾಧ್ಯಮಿಕ ತರಗತಿಗಳ ಆರಂಭ,ಪೌರಸಭಾ ಮತ್ತು ಜಿಲ್ಲಾ ಬೋರ್ಡ್ ಪ್ರೌಢಶಾಲೆಗಳ ಸ್ಥಾಪನೆ - ಇವುಗಳಿಂದ ಶಿಕ್ಷಣ ಹೆಚ್ಚು ವ್ಯಾಪಕವಾಯಿತಾದರೂ ೧೯೪೭ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಬಂದು , ಪಂಚವಾರ್ಷಿಕ ಯೋಜನೆ ರೂಪುಗೊಂಡ ಮೇಲೆಯೇ ಪ್ರಗತಿಯ ವೇಗ ಹೆಚ್ಚಿದ್ದು . +ಬೇಸಿಕ್ ಶಿಕ್ಷಣ ಪದ್ಧತಿ ಜಾರಿಗೆ ಬಂತು . +ಶಿಕ್ಷಣ ಪುನರ್ವ್ಯವಸ್ಥೆಯ ಬಗ್ಗೆ ಸಲಹೆ ನೀಡಲು ಸಿ.ಆರ್.ರೆಡ್ಡಿಯವರು ೧೯೪೮ರಲ ್ಲಿ ನೇಮಕವಾದರು . +ಅನಂತರ ೧೯೫೨ರಲ್ಲಿ ಶಿಕ್ಷಣ ಸುಧಾರಣಾಸಮಿತಿಯೊಂದನ್ನು ರಚಿಸಲಾಯಿತು . +ಇದರ ಶಿಫಾರಸುಗಳನ್ನು ಜಾರಿಗೆ ಕೊಡುವುದರೊಳಗಾಗಿ ೧೯೫೬ರಲ್ಲಿ ರಾಜ್ಯಗಳ ಪುನರ್ವಿಂಗಡಣೆ ನಡೆದು , ಮುಂಬಯಿ , ಮದ್ರಾಸು , ಹೈದರಾಬಾದು ಕನ್ನಡ ಪ್ರದೇಶಗಳೂ ಕೊಡಗೂ ಅಂದಿನ ಮೈಸೂರು ರಾಜ್ಯದೊಡನೆ ಸೇರಿ ಹೊಸ ಮೈಸೂರು ರಾಜ್ಯವಾಯಿತು . +ಏಕೀಕೃತ ಕರ್ನಾಟಕದಲ್ಲಿ ಐದು ವಿವಿಧ ಶಿಕ್ಷಣ ಪದ್ಧತಿಗಳನ್ನು ಒಂದು ರೂಪಕ್ಕೆ ತರುವ ಬೃಹತ್ ಸಮಸ್ಯೆ ತಲೆದೋರಿತು . +ಇದಕ್ಕಾಗಿ ಸರ್ಕಾರ ಶಿಕ್ಷಣ ಸಂಯೋಜನ ಸಲಹಾ ಸಮಿತಿಯನ್ನು ರಚಿಸಿತು . +ಪ್ರಾಥಮಿಕ ಶಿಕ್ಷಣ ೭ ವರ್ಷಕಾಲ , ಪ್ರೌಢಶಿಕ್ಷಣ ೪ ವರ್ಷಕಾಲ ಎಂಬುದು ಇತ್ಯರ್ಥವಾಯಿತು . +ಹೊಸ ತರಗತಿಗಳ ವಿಂಗಡಣೆಯೂ ಹೊಸ ವ್ಯಾಸಂಗಕ್ರಮಗಳೂ ೧೯೫೯ - ೬೦ರಿಂದ ಮೊದಲಾಗಿ ೧೯೬೪ - ೬೫ಕ್ಕೆ ಪೂರ್ಣವಾಗಿ ಆಚರಣೆಗೆ ಬಂದುವು . +ಇದಕ್ಕೆ ಹೊಂದುವಂತೆ ವಿಶ್ವವಿದ್ಯಾನಿಲಯಗಳು ಮೂರು ವರ್ಷದ ಪುನರ್ರಚಿತ ಪದವಿ ಶಿಕ್ಷಣವನ್ನು ಮುಂದಾಗಿ ಆಚರಣೆಗೆ ತಂದುವು . +ಭಾರತದ ಎಲ್ಲಡೆಗಳಂತೆ ಕರ್ನಾಟಕ ರಾಜ್ಯದಲ್ಲಿಯೂ ಶಿಕ್ಷಣ ಸಮೀಕ್ಷೆ ನಡೆಸಿ (೧೯೫೭ - ೮೮ ), ಶಿಕ್ಷಣ ಸೌಕರ್ಯಗಳಿಲ್ಲದ ಪ್ರದೇಶಗಳಿಗೆ ಹೊಸ ಶಾಲೆಗಳನ್ನು ಯೋಜಿಸಲಾಯಿತು . +ಕಡ್ಡಾಯ ಶಿಕ್ಷಣಕ್ಕೆ ಸ್ಪಷ್ಟರೂಪಕೊಟ್ಟು, ೧೯೬೧ - ೬೨ ರಿಂದ ರಾಜ್ಯದಾದ್ಯಂತ ಆಚರಣೆಗೆ ತರಲಾಗಿದೆ . +ಪ್ರತಿವರ್ಷ ಶಾಲಾ ಮಕ್ಕಳ ಗಣತಿ ನಡೆಸಿ ಹೆಚ್ಚು ಹೆಚ್ಚು ದಾಖಲೆ ಮಾಡುತ್ತಿರಲಾಗಿದೆ . +ಉಚಿತ ಪುಸ್ತಕ ಮತ್ತು ಬಟ್ಟೆಗಳ ರೂಪದಲ್ಲಿ ವಿದ್ಯಾರ್ಥಿವೇತನಗಳು, ಕೇರ್ ಸಂಸ್ಥೆಯ ಸಹಾಯದಿಂದ ಮಧ್ಯಾಹ್ನದ ಉಪಾಹಾರ ಮೊದಲಾದ ಪ್ರೋತ್ಸಾಹಗಳಿಂದ ಹಾಜರಿಯನ್ನು ಉತ್ತಮಪಡಿಸುತ್ತಿರಲಾಗಿದೆ . +ಶಾಲಾಭಿವೃದ್ಧಿ ಸಮಿತಿಗಳ ಮೂಲಕ ಪ್ರಜೆಗಳೇ ತಮ್ಮ ತಮ್ಮ ಪ್ರದೇಶಗಳ ಶಾಲೆಗಳಿಗೆ ಬೇಕಾದ ಅನುಕೂಲಗಳನ್ನು ಒದಗಿಸಿಕೊಳ್ಳುವಂತಾಗಿದೆ . +ಶಾಲಾಕಟ್ಟಡಗಳನ್ನು ಕಟ್ಟಿಸಿ ಕೊಡುವ ಹೊಣೆಯನ್ನು ಇಂದಿನಂತೆ ಈಗಲೂ ಗ್ರಾಮದವರಿಗೇ ವಹಿಸಲಾಗಿದೆ . +ಗ್ರಾಮಾಂತರ ಶಾಲೆಗಳ ಶಿಕ್ಷಕಿಯರಿಗಾಗಿ ವಸತಿಗೃಹಗಳನ್ನು ಕಟ್ಟಿಸುವ ಯೋಜನೆ ಕೈಗೊಳ್ಳಲಾಗಿದೆ . +ಹೆಚ್ಚು ಹೆಚ್ಚು ಸಂಖ್ಯೆಯಲ್ಲಿ ಅಧ್ಯಾಪಕ ಶಿಕ್ಷಣ ಸಂಸ್ಥೆಗಳನ್ನು ತೆರೆಯುತ್ತಿರಲಾಗಿದೆ . +ಆಡಳಿತವನ್ನು ಪುನಃ ಸ್ಥಳೀಯ ಸಂಸ್ಥೆಗಳಿಗೆ ವಹಿಸಿ ಕೊಡುವ ಯತ್ನ ನಡೆಯುತ್ತಿದೆ . +ಪ್ರೌಢಶಿಕ್ಷಣವೂ ತೀವ್ರಗತಿಯಲ್ಲಿ ವಿಸ್ತರಿಸುತ್ತಿದೆ . +ಖಾಸಗಿಯವರೂ ಸ್ಥಳೀಯ ಸಂಸ್ಥೆಗಳೂ ಹೊಸ ಪ್ರೌಢಶಾಲೆಗಳನ್ನು ತೆರೆಯಲು ಉದಾರ ಪ್ರೋತ್ಸಾಹ ಮತ್ತು ಸಹಾಯ ಧನಗಳನ್ನು ಸರ್ಕಾರ ನೀಡುತ್ತಿದೆ . +ರೂ ೨,೪೦೦ಕ ್ಕೆ ಹೆಚ್ಚಿಲ್ಲದ ವಾರ್ಷಿಕ ವರಮಾನವುಳ್ಳವರ ಮಕ್ಕಳಿಗೆ ಪಾಠದ ಶುಲ್ಕದ ವಿನಾಯಿತಿಯುಂಟು . +ಜೊತೆಗೆ ವಿದ್ಯಾರ್ಥಿ ವೇತನಗಳು ದೊರೆಯುತ್ತಿವೆ . +ಮಕ್ಕಳಿಗೆ ಕಡಿಮೆ ಬೆಲೆಯಲ್ಲಿ ಉತ್ತಮ ಪಠ್ಯಪುಸ್ತಕಗಳನ್ನೊದಗಿಸುವುದಕ್ಕಾಗಿ ಪ್ರಾಥಮಿಕ ಪಠ್ಯಪುಸ್ತಕಗಳ ಮಟ್ಟಿಗೆ ಪೂರ್ಣ ರಾಷ್ಟ್ರೀಕರಣವನ್ನು ಕೈಗೊಳ್ಳಲಾಗಿದೆ . +ಪಠ್ಯಪುಸ್ತಕಗಳ ಮುದ್ರಣಕ್ಕಾಗಿಯೇ ಮೈಸೂರು ನಗರದಲ್ಲಿ ಒಂದು ಸರ್ಕಾರಿ ಮುದ್ರಣಾಲಯವನ್ನು ಸ್ಥಾಪಿಸಲಾಗಿದೆ . +ಪಠ್ಯಪುಸ್ತಕಗಳ ದಾಸ್ತಾನು ಮತ್ತು ಹಂಚಿಕೆಗಳಿಗಾಗಿ ರಾಜ್ಯದಲ್ಲಿ ಹತ್ತು ಕೇಂದ್ರಗಳನ್ನು ಸ್ಥಾಪಿಸುವ ಪ್ರಯತ್ನ ನಡೆದಿದೆ . +ಶಿಕ್ಷಕರ ಸಂಬಳಗಳನ್ನು ೧೯೫೭ರಲ್ಲಿ ಮತ್ತು ೧೯೬೧ರಲ್ಲಿ ಪುನರ್ವಿಮರ್ಶಿಸಲಾಯಿತು . +ಖಾಸಗಿ ಶಾಲೆಗಳ ಶಿಕ್ಷಕರ ಸಂಬಳವನ್ನು ಸರ್ಕಾರಿ ಶಾಲೆಗಳವರ ಮಟ್ಟಕ್ಕೆ ಏರಿಸಲಾಯಿತು . +ಅವರಿಗಾಗಿ ನಿವೃತ್ತಿವೇತನ , ಭವಿಷ್ಯನಿಧಿ , ಜೀವವಿಮೆ - ಈ ತ್ರಿವಿಧ ಸೌಲಭ್ಯ ಯೋಜನೆಯನ್ನು ರಚಿಸಲಾಗಿದೆ . +ಶಿಕ್ಷಕರ ವೃತ್ತಿಮಟ್ಟವನ್ನು ಹೆಚ್ಚಿಸಲು ಸಮಾಲೋಚನ ಗೋಷ್ಠಿಗಳನ್ನು ಏರ್ಪಡಿಸಲಾಗುತ್ತಿದೆ . +ಶಾಲಾ ತನಿಖೆಯನ್ನು ಉತ್ತಮ ರೀತಿಯಲ್ಲಿ ನಡೆಸಲು ವಿಷಯ ಪರೀಕ್ಷಕರು ನೇಮಕವಾಗಿದ್ದಾರೆ . +ಶಿಕ್ಷಣದ ಗುಣಮಟ್ಟವನ್ನು ಉತ್ತುಮಪಡಿಸಲು ಹೊಸ ಹೊಸ ಸಂಸ್ಥೆಗಳನ್ನು ಕಟ್ಟುತ್ತಿರ ಲಾಗಿದೆ . +೧೯೫೮ರಲ್ಲಿ ಶಿಕ್ಷಣ ಸಂಶೋಧನಾಲಯವೂ ಶೈಕ್ಷಣಿಕ ವೃತ್ತೀಯ ಮಾರ್ಗದರ್ಶ ನಾಲಯವೂ ೧೯೫೯ರಲ ್ಲಿ ರಾಜ್ಯದ ಶೈಕ್ಷಣಿಕ ಪುಸ್ತಕ ಭಂಡಾರವೂ ಸ್ಥಾಪಿತವಾದುವು . +ಪ್ರಾಥಮಿಕ ಶಿಕ್ಷಣ ಸಂಶೋಧನೆ ಮತ್ತು ಶಿಕ್ಷಕ ಶಿಕ್ಷಣಗಳಿಗಾಗಿ ೧೯೬೪ರಲ್ಲಿ ರಾಜ್ಯದ ಶೈಕ್ಷಣಿಕ ಕೇಂದ್ರ ಸರ್ಕಾರದ ನೆರವಿನಿಂದ ಪ್ರಾರಂಭವಾಯಿತು . +ಜನರಲ್ಲಿ ವಾಚನಾಭಿರುಚಿ ಮತ್ತು ತಿಳಿವಳಿಕೆ ಹೆಚ್ಚಿಸಲು ರಾಜ್ಯದಲ್ಲಿ ಪುಸ್ತಕಭಂಡಾರ ಕಾಯಿದೆ ಜಾರಿಗೆ ಬಂದಿದೆ . +ವಿಶ್ವವಿದ್ಯಾನಿಲಯ ಕ್ಷೇತ್ರದಲ್ಲಿಯೂ ಮಹತ್ತರ ಬದಲಾವಣೆಗಳಾಗಿವೆ . +ಮೈಸೂರು ಮತ್ತು ಕರ್ನಾಟಕ ವಿಶ್ವವಿದ್ಯಾನಿಲಯಗಳು ಸಂಶೋಧನೆಗೆ ಸಂಪೂರ್ಣ ಗಮನ ಕೊಡಲು ಸಾಧ್ಯವಾಗುವಂತೆ ಅವುಗಳ ಅಧೀನದಲ್ಲಿದ್ದ ಬಹುತೇಕ ಕಾಲೇಜುಗಳ ಆಡಳಿತವನ್ನು ಸರ್ಕಾರ ತಾನೇ ವಹಿಸಿಕೊಂಡಿತು . +ಅದಕ್ಕಾಗಿ ಒಬ್ಬ ಕಾಲೇಜು ಶಿಕ್ಷಣಾಧಿಕಾರಿಯನ್ನು ನೇಮಿಸಿತು . +೧೯೬೪ರಲ್ಲಿ ಬೆಂಗಳೂರು ವಿಶ್ವವಿದ್ಯಾಲಯವೂ ೧೯೬೫ರಲ್ಲಿ ಹೆಬ್ಬಾಳದಲ್ಲಿ ವ್ಯವಸಾಯ ವಿಶ್ವವಿದ್ಯಾಲಯವೂ ಆರಂಭವಾದುವು . +ತಾಂತ್ರಿಕ ಶಿಕ್ಷಣ ಸಂಸ್ಥೆಗಳ ಆಡಳಿತವನ್ನು ನೋಡಿಕೊಳ್ಳಲು ಪ್ರತ್ಯೇಕ ಅಧಿಕಾರಿಯನ್ನು ನೇಮಿಸಿ , ಎಲ್ಲ ಜಿಲ್ಲೆಗಳಲ್ಲೂ ತಾಂತ್ರಿಕ ಶಿಕ್ಷಣ ಸೌಕರ್ಯಗಳನ್ನು ವಿಸ್ತರಿಸಲಾಗುತ್ತಿದೆ . +ಶಿಕ್ಷಣ ಹೀಗೆ ವಿಸ್ತಾರದಲ್ಲಿಯೂ ಗುಣದಲ್ಲಿಯೂ ತೀವ್ರಪ್ರಗತಿ ಸಾಧಿಸುತ್ತಿದೆ . +ಕರ್ನಾಟಕದಲ್ಲಿ (2011) 20 ವಿಶ್ವವಿದ್ಯಾನಿಲಯಗಳೂ 152 ಎಂಜನಿಯರಿಂಗ್ ಸಂಸ್ಥೆಗಳೂ ,114 ವೈದ್ಯಕೀಯ ಕಾಲೇಜುಗಳೂ 248 ತಾಂತ್ರಿಕ (ಪಾಲಿಟೆಕ್ನಿಕ್) ಶಾಲೆಗಳೂ 103 , ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರಗಳೂ ಇವೆ . +ಕರ್ನಾಟಕದ ಪ್ರಥಮ ವಿಶ್ವವಿದ್ಯಾನಿಲಯ ಮೈಸೂರಿನಲ್ಲಿ 1916ರಲ್ಲಿ ಪ್ರಾರಂಭವಾಗಿ ಮೈಸೂರು ವಿಶ್ವವಿದ್ಯಾನಿಲಯವೆಂದು ಪ್ರಸಿದ್ಧಿ ಪಡೆಯುವುದರೊಂದಿಗೆ 5 ನಕ್ಷತ್ರ (ಸ್ಟಾರ್) ಸ್ಥಾನಮಾನವನ್ನು ವಿಶ್ವವಿದ್ಯಾನಿಲಯ ಅನುದಾನ ಆಯೋಗದ ರಾಷ್ಟ್ರೀಯ ಯೋಗ್ಯತಾ ನಿರ್ಣಯ ಸಮಿತಿ (ನ್ಯಾಕ್ ) ಯಿಂದ ಪಡೆದಿದೆ . +ಅದರಂತೆಯೇ ಬೆಂಗಳೂರು (1964) ಗುಲ್ಬರ್ಗಾ (1980) ವಿಶ್ವವಿದ್ಯಾನಿಲಯಗಳೂ ಈ ಗೌರವಕ್ಕೆ ಪಾತ್ರವಾಗಿವೆ . +ಮುಂದೆ ಕರ್ನಾಟಕ ವಿಶ್ವವಿದ್ಯಾನಿಲಯ (1949) , ಮಂಗಳೂರು ವಿಶ್ವವಿದ್ಯಾಲಯ (1980) , ಕುವೆಂಪು ವಿಶ್ವವಿದ್ಯಾಲಯ (1987) ಪ್ರಾರಂಭವಾದವು . +ಬೆಂಗಳೂರಿನ ಕೃಷಿ ವಿಜ್ಞಾನ ವಿಶ್ವವಿದ್ಯಾಲಯ (1965) ಧಾರವಾಡದ ಕೃಷಿ ವಿಜ್ಞಾನ ವಿಶ್ವವಿದ್ಯಾಲಯ (1986) ರಲ್ಲಿ ಪ್ರಾರಂಭವಾದವು . +ಹಂಪೆಯ ಕನ್ನಡ ವಿಶ್ವವಿದ್ಯಾಲಯ 1991 ರಿಂದ ಕಾರ್ಯಾರಂಭ ಮಾಡಿದೆ . +ಬೆಂಗಳೂರಿನಲ್ಲಿ ಭಾರತ ಸಂಖ್ಯಾಶಾಸ್ತ್ರ ಸಂಸ್ಥೆ (1978) ಭಾರತ ವಿಜ್ಞಾನ ಸಂಸ್ಥೆ (1911) ಭಾರತ ಆಡಳಿತನಿರ್ವಹಣಾ ಸಂಸ್ಥೆ (1972) ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯ (1987) ಸಾಮಾಜಿಕ ಮತ್ತು ಆರ್ಥಿಕ ಪರಿವರ್ತನೆ ಸಂಸ್ಥೆ (1972) ಕೆಲಸ ಮಾಡುತ್ತಿವೆ . +ಬೆಂಗಳೂರಿನಲ್ಲಿ ಖಾಸಗಿಯಾದ ಅಜೀಂ ಪ್ರೇಮ್ಜಿ ವಿಶ್ವವಿದ್ಯಾನಿಲಯ , ಅಲಿಯನ್ಸ್‌ ವಿಶ್ವವಿದ್ಯಾಲಯಗಳೂ ಇವೆ . +ಪಶುಸಂಗೋಪನಾ ಮತ್ತು ಮತ್ಸೋದ್ಯಮದ ತರಬೇತಿ ಕೇಂದ್ರಗಳೂ ಇವೆ . +ವೈದ್ಯ ಮತ್ತು ದಂತ ಕಾಲೇಜುಗಳನ್ನೊಳಗೊಂಡ ವೈದ್ಯಕೀಯ ವಿಶ್ವವಿದ್ಯಾನಿಲಯ ಆಯುರ್ವೇದ , ಪ್ರಕೃತಿ ಹಾಗೂ ಹೋಮಿಯೋಪತಿ ಕಾಲೇಜುಗಳ ಶಿಕ್ಷಣ ಸಂಸ್ಥೆಗಳೂ ಕರ್ನಾಟಕದಲ್ಲಿ ಪ್ರಗತಿ ಪಥದತ್ತ ನಡೆದಿವೆ . +ಬಿ.ಎಡ್., ಎಂ.ಎಡ್ .ಶಿಕ್ಷಣ ಹಾಗೂ ವಿವಿಧ ಬಗೆಯ ಆಧುನಿಕ ಶಿಕ್ಷಣ ಕರ್ನಾಟಕದ ಜನತೆಗೆ ದೊರಕುತ್ತಿದೆ . +ಸರಾಸರಿ ಆಧುನಿಕ ಶಿಕ್ಷಣ ಕರ್ನಾಟಕದ ಜನತೆಗೆ ದೊರಕುತ್ತಿದೆ . +ಸರಾಸರಿ 378 (ಮಾರ್ಚ್ 2011) ಮಂದಿ ವಿದ್ಯಾರ್ಥಿಗಳನ್ನು ಸರ್ಕಾರಿ ಕಾಲೇಜುಗಳಲ್ಲಿ ಸೇರಿಸಿಕೊಳ್ಳಲಾಗಿತ್ತು . +ಸರ್ಕಾರದಿಂದ ಅರೆ ಅನುದಾನಿತ ಕಾಲೇಜುಗಳೂ ಸೇರಿದಂತೆ ಬೆಂಗಳೂರಿನ 61 ಕಾಲೇಜುಗಳಲ್ಲಿ 60,000 ಮಂದಿ ವಿದ್ಯಾರ್ಥಿಗಳನ್ನು ಸೇರಿಸಿಕೊಂಡಿದ್ದವು . +ವಾಕ್ಶ್ರವಣ ಸಂಸ್ಥೆ , ಕೇಂದ್ರ ಆಹಾರ ಸಂಸ್ಕರಣ ಸಂಸ್ಥೆ ಮುಂತಾದವೂ ತಮ್ಮ ಕಾರ್ಯಕ್ಷೇತ್ರದಲ್ಲಿ ಹೆಸರು ಗಳಿಸಿವೆ . +ಇವಲ್ಲದೆ 4597 ಪೂರ್ವ ಪ್ರಾಥಮಿಕ ಶಾಲೆಗಳೂ 23690 ಪ್ರಾಥಮಿಕ ಶಾಲೆಗಳೂ , 24142 ಎಲಿಮೆಂಟರಿ ಶಾಲೆಗಳೂ , 8216 , ಪ್ರೌಢಶಾಲೆಗಳೂ , 1497 ಪಿ.ಯು.ಸಿ .( ಸೀನಿಯರ್ ಸೆಕೆಂಡರಿ ಶಾಲೆಗಳೂ ) ಇವೆ . +ಕರ್ನಾಟಕದಲ್ಲಿ ಮೊದಲಿನಿಂದಲೂ ರಾಜಾಶ್ರಯ ಹಾಗೂ ಧನಿಕರ ದಾನಿಗಳ ಉದಾರತನದಿಂದಾಗಿ ವಿದ್ಯಾಶಾಲೆಗಳು ನಡೆದುಬಂದು ಇಂದು ಎಲ್ಲಾ ರಾಷ್ಟ್ರಗಳ , ದೃಷ್ಟಿಯನ್ನೂ ತನ್ನತ್ತ ಕರ್ನಾಟಕ ಸೆಳೆಯುವಂತಹ ಪ್ರಗತಿಯನ್ನು ಶಿಕ್ಷಣ ಕ್ಷೇತ್ರದಲ್ಲಿ ತೋರಿದೆ. -- GitLab