diff --git "a/Data Collected/Kannada/MIT Manipal/\340\262\225\340\263\207\340\262\202\340\262\246\340\263\215\340\262\260_\340\262\262\340\263\213\340\262\225_\340\262\270\340\263\207\340\262\265\340\262\276_\340\262\206\340\262\257\340\263\213\340\262\227.txt" "b/Data Collected/Kannada/MIT Manipal/\340\262\225\340\263\207\340\262\202\340\262\246\340\263\215\340\262\260_\340\262\262\340\263\213\340\262\225_\340\262\270\340\263\207\340\262\265\340\262\276_\340\262\206\340\262\257\340\263\213\340\262\227.txt" new file mode 100644 index 0000000000000000000000000000000000000000..b58fa7ef58098c55d65f9cda71b015e161e075f7 --- /dev/null +++ "b/Data Collected/Kannada/MIT Manipal/\340\262\225\340\263\207\340\262\202\340\262\246\340\263\215\340\262\260_\340\262\262\340\263\213\340\262\225_\340\262\270\340\263\207\340\262\265\340\262\276_\340\262\206\340\262\257\340\263\213\340\262\227.txt" @@ -0,0 +1,24 @@ +ಇದು ಭಾರತದ ಒಂದು ಕೇಂದ್ರೀಯ ಸಂಸ್ಥೆಯಾಗಿದ್ದು ಸಾರ್ವಜನಿಕ ಸೇವೆಗೆ ರಾಷ್ಟ್ರ ಮಟ್ಟದಲ್ಲಿ ಪರೀಕ್ಷೆಗಳನ್ನು ನಡೆಸಿ ಲೋಕ ಸೇವಾ ಅಧಿಕಾರಿಗಳನ್ನು ಆಯ್ಕೆ ಮಾಡುವ ಕಾರ್ಯದಲ್ಲಿ ತೊಡಗುವ ಅಧಿಕಾರವನ್ನು ಹೊಂದಿದೆ . +ಭಾರತೀಯ ನಾಗರೀಕ ಸೇವಾ ಪರೀಕ್ಷೆ , ಇಂಜಿನಿಯರಿಂಗ್ ಸೇವಾ ಪರೀಕ್ಷೆ , ಕಂಬೈನ್ಡ್ ಡಿಫೆನ್ಸ್ ಸೇವಗಳ ಪರೀಕ್ಷೆ , ರಾಷ್ಟ್ರೀಯ ಸೇನಾ ಅಕಾಡೆಮಿ ಪರೀಕ್ಷೆ , ಜಲ ಸೇನಾ ಅಕಾಡೆಮಿ ಪರೀಕ್ಷೆ , ಭಾರತೀಯ ಅರಣ್ಯ ಸೇವೆ ಪರೀಕ್ಷೆ , ಭಾರತೀಯ ಅರ್ಥ ಸೇವೆ ಪರೀಕ್ಷೆ , ಭಾರತೀಯ ಸಂಖ್ಯಾ ಸೇವೆ ಪರೀಕ್ಷೆ , ಸಂಯೋಜಿತ ಭೂಗರ್ಭವಿಜ್ಞಾನ ಹಾಗು ಭೂಗರ್ಭ ತಜ್ಞರ ಪರೀಕ್ಷೆ ಹಾಗು ಕೇಂದ್ರೀಯ ಸಶಸ್ತ್ರ ಪೊಲೀಸ್ ಪಡೆ ಪರೀಕ್ಷೆಗಳನ್ನು ಕೇಂದ್ರ ಲೋಕ ಸೇವಾ ಆಯೋಗವು ಕಾಲ ಕಾಲಕ್ಕೆ ತಕ್ಕಂತೆ ನಡೆಸಿ ಅಭ್ಯರ್ಥಿಗಳನ್ನು ಆಯ್ಕೆ ಮಾಡುತ್ತದೆ . +ಪರೀಕ್ಷೆಗಳು ಅಭ್ಯರ್ಥಿಯ ಮಾನಸಿಕ ಸಾಮರ್ಥ್ಯ , ಭೌದ್ದಿಕ ಸಾಮರ್ಥ್ಯಗಳನ್ನು ಅಳೆಯುವ ಬಹು ಮುಖ್ಯ ಸಾಧನಗಳಾಗಿರುತ್ತವೆ . +ಸೇನೆ , ಹಾಗು ಪೊಲೀಸ್ ಸೇವೆಗಳಂತಹ ಸೇವೆಗಳಿಗಾಗಿ ಅಭ್ಯರ್ಥಿಗಳು ಹಾಜರಾದರೆ ಅಂತಹ ಅಭ್ಯರ್ಥಿಗಳಿಗೆ ಮಾನಸಿಕ ಹಾಗು ಭೌದ್ಧಿಕ ಸಾಮರ್ಥ್ಯದ ಜೊತೆಗೆ ದೈಹಿಕ ಸಾಮರ್ಥ್ಯವನ್ನೂ ಪರೀಕ್ಷಿಸಲಾಗುತ್ತದೆ . +ದೇಶದಾದ್ಯಂತ ನಾಗರೀಕ ಸೇವೆಗಳಿಗೆ ಪರೀಕ್ಷೆಗಳನ್ನು ನಡೆಸಿ ಯೋಗ್ಯ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ವಿಚಾರ ಸಂವಿಧಾನದಲ್ಲೇ ಪ್ರಸ್ತಾಪವಾಗಿದೆ . +ಸಂವಿಧಾನದ ಹದಿನಾಲ್ಕನೇ ವಿಭಾಗದ ಆರ್ಟಿಕಲ್ ೩೧೫ ರಿಂದ ೩೨೩ ರವರೆವಿಗೆ ' ಕೇಂದ್ರ ಹಾಗು ರಾಜ್ಯಗಳಡಿಯ ಸೇವೆಗಳು ' ಎಂಬ ತಲೆಬರಹದಡಿಯಲ್ಲಿ ನಾಗರೀಕ ಹುದ್ದೆಗಳಿಗೆ ಕೇಂದ್ರ ಹಾಗು ರಾಜ್ಯಸರ್ಕಾರಗಳು ವ್ಯವಸ್ಥಿತ ಆಯೋಗವನ್ನು ಹೊಂದಬೇಕೆನ್ನುವುದು ನಮೂದಾಗಿದೆ . +ಇದುವರೆವಿಗೂ ನಡೆದಿರುವ ಕೇಂದ್ರೀಯ ಲೋಕ ಸೇವಾ ಆಯೋಗದ ಪರೀಕ್ಷೆಗಳಲ್ಲಿ ಸಫಲತಾ ಪ್ರಮಾಣ ೦.೧ % ದಿಂದ ೦.೩ % ಇದೆ . +ಆಯೋಗವು ಒಬ್ಬ ಮುಖ್ಯಸ್ಥರನ್ನು (ಛೇರ್ಮನ್ ) ಹಾಗು ಹತ್ತು ಜನ ಸದಸ್ಯರನ್ನು ಹೊಂದಿರುತ್ತದೆ . +ಸದರಿ ಆಯೋಗದ ಮುಖ್ಯಸ್ಥರ ಹಾಗು ಸದಸ್ಯರುಗಳ ವಾಯಿದೆ ಹಾಗು ಇತರ ವಿಚಾರಗಳು ' ಕೇಂದ್ರ ಲೋಕ ಸೇವಾ ಆಯೋಗ (ಸದಸ್ಯರುಗಳು ) ಕಾಯ್ದೆ , ೧೯೬೯ ' ರಿಂದ ತಿಳಿದು ಬರುತ್ತದೆ . +ಹತ್ತು ಸದಸ್ಯರನ್ನು ಸೇರಿ ಮುಖ್ಯಸ್ಥರನ್ನು ನೇರವಾಗಿ ಭಾರತದ ರಾಷ್ಟ್ರಪತಿಗಳು ನೇಮಕ ಮಾಡುತ್ತಾರೆ . +ಕನಿಷ್ಠ ಅರ್ಧದಷ್ಟು ಸಂಖ್ಯೆ ಸದಸ್ಯರಾದರೂ ನಾಗರೀಕ ಸೇವೆಗಳಲ್ಲಿ ಹತ್ತು ವರ್ಷಗಳಷ್ಟಾದರೂ ಅನುಭವ ರಾಜ್ಯ ಅಥವಾ ಕೇಂದ್ರ ಸ್ವಾಮ್ಯದಲ್ಲಿ ಹೊಂದಿರುವರಾಗಿರಬೇಕು . +ಆಯೋಗವು ಕಾರ್ಯದರ್ಶಿಗಳನ್ನು ಹೊಂದಿದ್ದು ಮುಖ್ಯ ಕಾರ್ಯದರ್ಶಿಯಾಗಿ ಒಬ್ಬರು ನೇಮಕಗೊಳ್ಳುತ್ತಾರೆ ಹಾಗು ಅವರಿಗೆ ಇಬ್ಬರು ಹೆಚ್ಚುವರಿ ಕಾರ್ಯದರ್ಶಿಗಳನ್ನು ನೇಮಿಸಲಾಗುತ್ತದೆ . +ಇದರ ಜೊತೆಗೆ ಜಂಟಿ ಕಾರ್ಯದರ್ಶಿಗಳು , ಉಪ ಕಾರ್ಯದರ್ಶಿಗಳು ಹಾಗು ಇತರ ಸಿಬ್ಬಂದಿ ವರ್ಗವು ಇರುತ್ತದೆ . +ಯೋಗದ ಎಲ್ಲಾ ಸದಸ್ಯರು ಆರು ವರ್ಷಗಳ ಅಧಿಕಾರ ವಾಯಿದೆ ಹೊಂದಿರುತ್ತಾರೆ ಅಥವಾ ಆ ಸದಸ್ಯರಿಗೆ ೬೫ ವರ್ಷ ತುಂಬುವವರೆಗೆ ಅಧಿಕಾರ ವಾಯೆಯಿದೆ ಹೊಂದಿರುತ್ತಾರೆ . +ಇವೆರಡರಲ್ಲಿ ಯಾವುದು ಮೊದಲಾಗುತ್ತದೋ ಅಂತೆಯೇ ಸದಸ್ಯರ ವಾಯಿದೆ ಪೂರ್ಣವಾಗುತ್ತದೆ . +ಆಯೋಗದ ಯಾವುದೇ ಸದಸ್ಯನು ಕೂಡ ತನ್ನ ಇಚ್ಛೆಯಂತೆ ರಾಜೀನಾಮೆಯನ್ನು ನೇರವಾಗಿ ರಾಷ್ಟ್ರಪತಿಗಳಿಗೆ ಸಲ್ಲಿಸಬಹುದು . +ರಾಷ್ಟ್ರಪತಿಗಳು ಕೂಡ ಯಾವುದೇ ಸದಸ್ಯನನ್ನು ಈ ಕೆಳಕಂಡ ಕಾರಣಗಳನ್ನು ನೀಡಿ ಸೇವೆಯಿಂದ ವಜಾಗೊಳಿಸಬಹುದು +ಸದರಿ ಸದಸ್ಯನ ಯಾವುದಾದರೂ ದುರ್ನಡತೆ ಸುಪ್ರೀಂ ಕೋರ್ಟ್ ನಲ್ಲಿ ಮಾನ್ಯವಾದಾಗ +ಆಯೋಗದ ಯಾವುದೇ ನೀತಿ ನಿಯಮಗಳಿಗೆ ಭಂಗವುಂಟು ಮಾಡಿದ್ದು ಸಾಬೀತಾದಾಗ . +ಆಯೋಗದಲ್ಲಿ ಸದಸ್ಯನಾಗಿದ್ದ ಕಾಲದಲ್ಲಿಯೇ ಇನ್ನಿತರ ಹಣಗಳಿಸುವ ಯಾವುದೇ ಉದ್ಯೋಗದಲ್ಲಿ ತೊಡಗಿಕೊಂಡಾಗ . +ರಾಷ್ಟ್ರಪತಿಗಳ ದೃಷ್ಟಿಯಲ್ಲಿ ಸದಸ್ಯ ದೈಹಿಕ ಅಥವಾ ಮಾನಸಿಕ ಸ್ತೀಮಿತತೆ ಕಳೆದುಕೊಂಡು ತನ್ನ ಕಾರ್ಯವನ್ನು ನಿಭಾಯಿಸಲು ಅಸಮರ್ಥನಾದಾಗ. +ಕೇಂದ್ರ ಲೋಕ ಸೇವಾ ಆಯೋಗ ಕೇಂದ್ರದಲ್ಲಿ ಸ್ವತಂತ್ರ್ಯವಾಗಿ ಕಾರ್ಯ ನಿರ್ವಹಿಸುವ ಒಂದು ಅಂಗಸಂಸ್ಥೆಯಾಗಿದ್ದು ದೇಶದ ಉನ್ನತ ನ್ಯಾಯಾಂಗ ಹಾಗು ಚುನಾವಣಾ ಆಯೋಗದ ಮಾದರಿಯಲ್ಲಿಯೇ ಕಾರ್ಯ ನಿರ್ವಹಿಸುತ್ತದೆ . +ಭಾರತೀಯ ನಾಗರಿಕ ಸೇವೆಗಳುಕೇಂದ್ರ ಲೋಕ ಸೇವಾ ಆಯೋಗ ಇಂಗ್ಲೀಷ್ ವಿಕಿ ಆವೃತ್ತಿ +ಕೇಂದ್ರ ಲೋಕ ಸೇವಾ ಆಯೋಗದ ಹಾಲಿ ಮುಖ್ಯಸ್ಥರು ಹಾಗು ಸದಸ್ಯರ ವಿವರಗಳು.