diff --git "a/Data Collected/Kannada/MIT Manipal/\340\262\207\340\262\202\340\262\246\340\262\277\340\262\260\340\262\276_\340\262\206\340\262\265\340\262\276\340\262\270\340\263\215_\340\262\257\340\263\213\340\262\234\340\262\250\340\263\206.txt" "b/Data Collected/Kannada/MIT Manipal/\340\262\207\340\262\202\340\262\246\340\262\277\340\262\260\340\262\276_\340\262\206\340\262\265\340\262\276\340\262\270\340\263\215_\340\262\257\340\263\213\340\262\234\340\262\250\340\263\206.txt" new file mode 100644 index 0000000000000000000000000000000000000000..1a4f67f3c112a51b27018ecaee1c722f36825013 --- /dev/null +++ "b/Data Collected/Kannada/MIT Manipal/\340\262\207\340\262\202\340\262\246\340\262\277\340\262\260\340\262\276_\340\262\206\340\262\265\340\262\276\340\262\270\340\263\215_\340\262\257\340\263\213\340\262\234\340\262\250\340\263\206.txt" @@ -0,0 +1,60 @@ +ಇಂದಿರಾ ಆವಾಸ್ (ಎಂದರೆ ವಸತಿ ಎಂದರ್ಥ) ಯೋಜನೆಯು ಭಾರತದ ಗ್ರಾಮೀಣ ಪ್ರದೇಶದ ಬಡಜನರಿಗಾಗಿ ವಸತಿ ಕಲ್ಪಸಿವ ಉದ್ದೇಶದಿಂದ ರೂಪುಗೊಂಡ ಸಮಾಜ ಕಲ್ಯಾಣ ಯೋಜನೆಯಾಗಿದೆ . +ಈ ಯೋಜನೆಯನ್ನು ಸಂಷಿಪ್ತವಾಗಿ ಐ.ಏ.ವೈ ಎನ್ನಲಾಗುತ್ತದೆ . +ಇದು ಗ್ರಾಮೀಣಾಭಿವೃಧಿ ಖಾತೆಗೆ ಸೇರಿದೆ.ಬಡತನವನ್ನುಗ್ರಾಮೀಣ ಹಾಗೂ ನಗರ ಬದತನಗಳೆಂದು ವಿಂಗಡಿಸಲಾಗುತ್ತದೆ. +ಪ್ರತ್ಯೇಕವಾಗಿ ನಗರ ಹಾಗೂ ಗ್ರಾಮೀಣ ಬಡತನಗಳಿಗಾಗಿ ವಿವಿಧ ಯೋಜನೆಗಳನ್ನು ಕ್ರಮಾನುಸಾರವಾಗಿ ರೂಪಿಸಲಾಗುತ್ತದೆ . +ಅದರಂತೆ ಐ.ಏ.ವೈ .ಗ್ರಾಮೀಣ ಪ್ರದೇಶದ ಜನರಿಗಾಗಿ ರೂಪುಗೊಂಡಿದೆ . +ಇದನ್ನು ರಾಜೀವ್ ಗಾಂಧಿಯವರು ಪ್ರಧಾನಿಯಾಗಿದ್ದ ಸಮಯದಲ್ಲಿ ಜಾರಿಗೊಳಿಸಿದರು. +ಇದರ ಮೂಲ ಉದ್ದೇಶ ಹಳ್ಳಿಗಳಲ್ಲಿ ಬಡಜನರಿಗೆ ಅಂದರೆ ಬಡತನ ರೇಖೆಗಿಂತ ಕೆಳಗಿನ ಜನರಿಗೆ ಮನೆಗಳನ್ನು ದರ ರಹಿತವಾಗಿ ಕಟ್ಟಿಸಿಕೊಡುವುದು. +ಈ ಯೋಜನೆಯಡಿಯಲ್ಲಿ ೭೦,೦೦೦ (ಸಮತಟ್ಟಾದ ಪ್ರದೇಶದಲ್ಲಿ ) ದಿಂದ ೭೫,೦೦೦ ದವರೆಗೂ( ಗುಡ್ಡಗಾಡಿನ ಪ್ರದೇಶದಲ್ಲಿ ) ಹಣಕಾಸಿನ ನೆರವನ್ನು ನೀಡಲಾಗುತ್ತದೆ . +ಐ.ಏ.ವೈ ಮನೆಗಳನ್ನು ಮನೆಯ ಹೆಂಗಸರ ಅಥವಾ ಗಂಡ - ಹೆಂಡತಿಯ ಹೆಸರಿನಲ್ಲಿ ಜಂಟಿಯಾಗಿ ನೀಡಲಾಗುತ್ತದೆ . +ಇದರಿಂದ ಪಡೆಯುವ ಹಣವನ್ನು ಮನೆಯನ್ನು ಕಟ್ಟಲು ಮಾತ್ರ ಬಳಸಬೇಕು . +ಇದು ಯಾವುದೇ ತರಹದ ಗುತ್ತಿಗೆದಾರಿಕೆಯನ್ನು ವಿರೋಧಿಸುತ್ತದೆ . +ಪ್ರತಿ ಐ.ಏ .ವೈ ಮನೆಗಾಗಿ ಸ್ವಚ್ಛ ಶೌಚಾಲಯ ಕಟ್ಟಿಸಲು ಹಾಗೂ ಹೊಗೆರಹಿತ ಚಿಮಿನಿಯನ್ನು ಅಳವಡಿಸಲು ಹೆಚ್ಚುವರಿ ಹಣವನ್ನು ರಾಜೀವ್ ಗಾಂಧಿ ಗ್ರಾಮೀಣ ವಿದ್ಯತೀಕರಣ ಯೋಜನೆಯಿಂದ ನೀಡಲಾಗುತ್ತದೆ . +ಈ ಯೋಜನೆಯು ೧೯೮೫ರಿಂದ ಜಾರಿಯಲ್ಲಿದೆ . +ಇದು ಮನೆ ಕಟ್ಟಲು ಸಬ್ಸಿಡಿ ಹಾಗೂ ಹಣಕಾಸಿನ ನೆರವನ್ನು ನೀಡುತ್ತಿದೆ . +ದೇಶದಲ್ಲಿ ಸಾರ್ವಜನಿಕ ವಸತಿಯನ್ನು ಕಲ್ಪಿಸುವ ಕಾರ್ಯಕ್ರಮಗಳು ನಿರಾಶಿತರನ್ನು ಸಂತೈಸಲು ಸ್ವಾತಂತ್ರ್ಯ ಸಿಕ್ಕಿದಾಗಿನಿಂದಲೇ ಆರಂಭಗೊಂಡವು . +ಅಂತಹ ಕಾರ್ಯಕ್ರಮಗಳಲ್ಲೊಂದಾದ ಇಂದಿರಾ ಆವಾಜ್ ಯೋಜನೆಯನ್ನು ೧೯೮೫ರಲ್ಲಿ ರಾಜೀವ್ ಗಾಂಧಿಯವರು ಭಾರತದ ಪ್ರಧಾನ ಮಂತ್ರಿಯಾಗಿದ್ದ ಸಂದರ್ಭದಲ್ಲಿ ಜಾರಿಗೊಳಿಸಲಾಯಿತು . +ಐ.ಏ.ವೈ ಯೋಜನೆಯು ೧೯೮೫ರಲ್ಲಿ ಗ್ರಾಮೀಣಭೂರಹಿತ ಉದ್ಯೋಗ ಖಾತ್ರಿ ಯೋಜನೆಯ ಭಾಗವಾಗಿ ಪ್ರಾರಂಭವಾಯಿತು . +ನಂತರ ೧೯೮೯ರಲ್ಲಿ ಇದನ್ನು ಜವಹಾರ್ ರೋಜಗಾರ್ ಯೋಜನೆಯಲ್ಲಿ ಸೇರಿಸಲಾಯಿತು. +ಇದು ೧೯೯೬ರಿಂದ ಒಂದು ಪ್ರತ್ಯೇಕ ಯೋಜನೆಯಾಯಿತು. +೧೯೯೫ - ೯೬ರಲ್ಲಿ ಇದನ್ನು ವಿಧವೆಯರಿಗಾಗಿ ಹಾಗೂ ಹಳ್ಳಿಯಲ್ಲಿ ವಾಸಿಸಲು ಬಯಸುವ ನಿವೃತ್ತಿ ಹೊಂದಿದ ಸೈನಿಕರಿಗಾಗಿ , ಪ್ಯಾರಾಮಿಲಿಟರಿಯ ಸದಸ್ಯರಿಗಾಗಿ ವಿಸ್ತರಿಸಲಾಯಿತು . +ಭಾರತವು ಐತಿಹಾಸಿಕವಾಗಿ ಒಂದು ಜನನಿಬಿಡ ಹಾಗೂ ಬಡ ರಾಷ್ಟ್ರ.ಸ್ವತಂತ್ರ ದೊರೆತಾಗಿನಿಂದ ಬಡಜನರಿಗೆ ಹಾಗೂ ನಿರಾಶಿತರಿಗೆ ( ಎಂದರೆ ಪರ ರಾಷ್ಟ್ರದಿಂದ ನಮ್ಮ ದೇಶಕ್ಕೆ ವಲಸೆ ಬಂದವರು.) ವಸತಿ ಕಲ್ಪಿಸುವುದು ಇಲ್ಲಿನ ಸರ್ಕಾರದ ಪ್ರಮುಖ ಉದ್ದೇಶವಾಗಿದ್ದು ಸಮಾಜ ಕಲ್ಯಾಣ ಕಾರ್ಯಕ್ರಮಗಳ ಮೂಲಕ ಇದನ್ನು ಯಶಸ್ವಿಯಾಗಿ ಕಾರ್ಯರೂಪಕ್ಕೆ ತರುತ್ತಿದೆ. +೧೯೫೦ರಿಂದ ವಸತಿ ನೀಡುವ ಕಾರ್ಯಕ್ರಮಗಳನ್ನು ಜಾರಿಗೊಳಿಸಿದೆ . +ಆದರೆ , ೧೯೮೩ರಿಂದ ಮಾತ್ರ ಗ್ರಾಮೀಣ ಭೂರಹಿತ ಉದ್ಯೋಗ ಖಾತ್ರಿ ಯೋಜನೆಯಡಿ ಸರ್ಕಾರ ಪರಿಶಿಷ್ಟ ಜಾತಿ ಹಾಗೂ ಪಂಗಡಗಳಿಗಾಗಿ ,ಮುಕ್ತ ಜೀತದಾಳಿಗಳಿಗಾಗಿ ವಸತಿ ಯೋಜನೆಗಳನ್ನು ರೂಪಿಸಲು ಪ್ರಾರಂಭಿಸಿದೆ. +ಇದರಿಂದ ೧೯೮೫-೮೬ರ ಆರ್ಥಿಕ ಅವಧಿಯಲ್ಲಿ ಇಂದಿರಾ ಆವಾಜ್ ಯೋಜನೆ ಜಾರಿಯಾಯಿತು . +ಈ ಯೋಜನೆಯ ಪ್ರಮುಖ ಉದ್ದೇಶ ಆರ್ಥಿಕವಾಗಿ ಬಲಹೀನರಾಗಿರುವ ಗ್ರಾಮೀಣ ಪ್ರದೇಶದಲ್ಲಿನ ಬಡತನ ರೇಖೆಗಿಂತ ಕೆಳಗಿರುವ (ಬಿ.ಪಿ.ಎಲ್ ) ಬಡವರಿಗೆ ವಸತಿ ಕಲ್ಪಸುವುದಾಗಿದೆ . +ಏಕೆಂದರೆ,ವಸತಿಯು ಮನುಷ್ಯನ ಮೂಲಭೂತ ಅವಶ್ಯಕಗಳಲ್ಲಿ ಒಂದಾಗಿದೆ. +ಇದರಿಂದ ಬಡಜನರು ಸಮಾಜದಲ್ಲಿ ಗೌರವಾನ್ವಿತವಾಗಿ ಬದುಕಲು ನೆರವಾಗುವಂತೆ ಉತ್ತಮ ಗುಣಮಟ್ಟದ ಮನೆಗಳನ್ನು ದರ ರಹಿತವಾಗಿ ಕಟ್ಟುವುದು ಇದರ ಮೂಲ ಉದ್ದೇಶವಾಗಿದೆ . +೨೦೧೭ರ ಒಳಗಾಗಿ ಭಾರತದ ಹಳ್ಳಿಗಳಲ್ಲಿ ಗುಡಿಸಲುಗಳನ್ನು ನಿರ್ಮೂಲನೆ ಮಾಡುವುದು ಈ ಯೋಜನೆಯ ಮತ್ತೊಂದು ಉದ್ದೇಶವಾಗಿದೆ . +ಇಂದಿರಾ ಆವಾಜ್ ಯೋಜನೆಯಡಿ ಮನೆಯ ಸೌಲಭ್ಯ ಪಡೆಯಲು ಅವರು ಪರಿಶಿಷ್ಟ ಜಾತಿ ಹಾಗೂ ಪಂಗಡ,ಜನಾಂಗ ಕ್ಕೆ ಸೇರಿರಬೇಕು ಅಥವಾ ಜೀತದಾಳು ಪದ್ಧತಿಯಿಂದ ಮುಕ್ತರಾದವರಾಗಿರಬೇಕು. +ಈ ಯೋಜನೆಯಲ್ಲಿ ಸೌಲಭ್ಯಪಡೆಯಲು ಅನಾಥರಗೂ, ವಿಧವೆಯರಿಗೂ ಸಹ ಅವಕಾಶಗಳಿವೆ. +ಹಳ್ಳಿಗಳಲ್ಲಿ ವಾಸಿಸಲು ಬಯಸುವ ನಿವೃತ್ತ ಪ್ಯಾರಾಮಿಲಿಟರಿಯ ರಕ್ಷಣಾ ಸಿಬ್ಬಂದಿ ಗಳಿಗೆ , ಸೈನ್ಯದಲ್ಲಿ ಸೇವೆ ಸಲ್ಲಿಸಿರುವ ಮಾಜಿ ಸೈನಿಕರಿಗೆ ಹಾಗೂ ಬಡತನ ರೇಖೆಗಿಂತ ಕೆಳಗಿರುವ ಬಡವರು ಈ ಯೋಜನೆಯ ಸೌಲಭ್ಯಪಡೆಯಲು ಅರ್ಹರಾಗಿದಾರೆ . +ಐ.ಏ.ವೈ.ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಯೋಜನೆ . +ಆದರೆ ಇದನ್ನು ಕಾರ್ಯರೂಪಕ್ಕೆ ತರುವ ಹೊಣೆಗಾರಿಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳೆರಡಕ್ಕೂ ಸೇರಿದೆ. +ಇದರ ವೆಚ್ಚವನ್ನು ಭರಿಸುವಾಗ ಶೇಕಡ ೭೫ರಷ್ಟು ಕೇಂದ್ರ ಸರ್ಕಾರ ಹಾಗೂ ೨೫ರಷ್ಟು ರಾಜ್ಯ ಸರ್ಕಾರ ಭರಿಸಬೇಕು . +ಆದರೆ ಕೇಂದ್ರಾಡಳಿತ ಪ್ರದೇಶಗಳ ವೆಚ್ಚವನ್ನು ಸಂಪೂರ್ಣವಾಗಿ ಕೇಂದ್ರ ಸರ್ಕಾರವೇ ಭರಿಸುತ್ತದೆ . +ಉತ್ತರ -ಪೂರ್ವ ರಾಜ್ಯಗಳಾದ ಅಸ್ಸಾಂ , ಮಣಿಪುರ್ ಗಳಿಗೆ ಈ ನಿಯಮ ಅನ್ವಯಿಸುವುದಿಲ್ಲ . +ಕೇಂದ್ರದಿಂದ ಹಣವನ್ನು ರಾಜ್ಯಗಳ ಗ್ರಾಮೀಣ ವಸತಿ ಕೊರತೆಯ ಮತ್ತು ಬಡತನದ ಅನುಪಾತದ ಆಧಾರದ ಮೇರಿಗೆ ನೀಡಲಾಗುವುದು. +ವಸತಿ ಕೊರತೆಯನ್ನು ಭಾರತದ ರಿಜಿಸ್ಟ್ರಾರ್ ಜನರಲ್ ಜನಗಣತಿಯಲ್ಲಿ ನೀಡಿರುವ ಅಂಕಿಅಂಶದ ಆಧಾರದ ಮೇರಿಗೆ ಗಣನೆಗೆ ತೆಗೆದುಕೊಳ್ಳಲಾಗುವುದು. +ಇದರ ಅನುಸಾರ ಕೇಂದ್ರವು ರಾಜ್ಯಗಳಿಗೆ ಐ .ಏ.ವೈ.ಗಾಗಿ ಹಣವನ್ನು ನೀಡುತ್ತದೆ . +ಈ ಯೋಜನೆಗಾಗಿಯೆ ಪ್ರತ್ಯೇಕವಾಗಿ ಬ್ಯಾಂಕ್ ಖಾತೆಯನ್ನು ತೆರೆಯಬೇಕು ಈ ಯೋಜನೆಯಡಿ ಜಮವಾದ ಹಣವು ಈ ಖಾತೆಯಲ್ಲಿ ಸೇರಿರುತ್ತದೆ . +ಈ ಹಣವನ್ನು ನಗದು ರೂಪದಲ್ಲಿ ಯಾರಿಗೂ ನೀಡಲಾಗುವುದಿಲ್ಲ . +ಇದಕ್ಕಾಗಿ ವಿಷೇಶವಾಗಿ ಸರ್ಕಾರದ ಅನುಮತಿಯನ್ನು ಪಡೆಯಬೇಕು. +ಇಲ್ಲವೆ ಸಾಮಾನ್ಯವಾಗಿ ಈ ಹಣವು ಬ್ಯಾಂಕ್ ಖಾತೆಯಲ್ಲಿಯೇ ಜಮವಾಗುವುದು ನಿಯಮ. +ಕೆಲವೊಮ್ಮೆ ಅಂಚೆಯ ಖಾತೆಯಲ್ಲಿಯೂ ಕೂಡ ಇಂದಿರಾ ಆವಾಸ್ ಯೋಜನೆಯ ಹಣವು ಜಮವಾಗುತ್ತದೆ . +೨೦೧೧ರ ಮುಂಗಡ ಪತ್ರದ (ಬಜೆಟ್ ) ಪ್ರಕಾರ ಇಂದಿರಾ ಆವಾಜ್ ಯೋಜನೆಗಾಗಿ ೧೦೦ಶತಕೋಟಿಯನ್ನು , ಬಡತನ ರೇಖೆಗಿಂತ ಕಡಿಮೆ ಇರುವ ಕಡುಬಡವರಿಗಾಗಿ ವಸತಿಯನ್ನು ಕಲ್ಪಸುವ ಉದ್ದೇಶದಿಂದ ವಿನಿಯೋಗಿಸಲಾಗಿದೆ. +ಇಲ್ಲಿ ಎಡ ಪಂಥೀಯ ಉಗ್ರಗಾಮಿ ಜಿಲ್ಲೆಗಳಿಗೆ ವಿಶೇಷ ಗಮನವನ್ನು ನೀಡಲಾಗಿದೆ . +ಇಂದಿರಾ ಅವಾಜ್ ಯೋಜನೆಯನ್ನು ಜಾರಿಗೊಳಿಸಿದರಿಂದಾಗಿ ಆದ ಪ್ರಮುಖ ಬೆಳವಣಿಗೆಗಳೆಂದರೆ ; +೧೯೮೫ರಿಂದ ೨೫.೨ದಶಲಕ್ಷ ಮನೆಗಳನ್ನು ಈ ಯೋಜನೆಯಡಿ ನಿರ್ಮಿಸಲಾಗುತ್ತಿದೆ. +ಭಾರತ ನಿರ್ಮಾಣ ಯೋಜನೆ ಹಂತ ೧ ರಲ್ಲಿ ೬ಲಲಕ್ಷ ಮನೆಗಳನ್ನು ಗುರಿಯಲಲ್ಲಿಟ್ಟುಕೊಳ್ಳಲಾಯಿತು ಆದರೆ ವಾಸ್ತವವಾಗಿ ೭.೧ದಶಲಕ ್ಷಮನೆಗಳನ್ನು ನಿರ್ಮಿಸಲಾಯಿತು. +ಇದು ಯೋಜನೆಯು ಯಶಸ್ವಿಯಾಗಿದೆ ಎನ್ನಲು ಸಾಕ್ಷಿಯಾಗಿದೆ. +ಮತ್ತು ಭಾರತ ನಿರ್ಮಾಣ ಹಂತ ೨ಯೋಜನೆ ಯಲ್ಲಿ ಹಲವಾರು ಮನೆಗಳನ್ನು ನಿರ್ಮಿಸಲು ಹಾಗೂ ನವೀಕರಿಸಲು ಯೋಜನೆಯನ್ನು ರೂಪುಗೊಳಿಸಲಾಗಿದೆ . +ಅಧಿಕೃತವಾಗಿ ೨೦೦೧ರ ಅಂಕಿಅಂಶಗಳ ಪ್ರಕಾರ ಗ್ರಾಮೀಣ ವಸತಿಯ ಕೊರತೆಯು೧೪ , ೮೨೫ ದಶಲಕ್ಷ ಮನೆಗಳು +ಕಳೆದ ೫ ವರ್ಷಗಳ ಮನೆಗಳ ಕೊರತೆಯನ್ನು ಈ ಕೆಳಕಂಡಂತೆ ನೀಡಲಾಗಿದೆ ೨೦೦೫ -೦೬ರಲ್ಲಿ ೧೫,೫೧,೯೨೩ಇದ್ದು ೨೦೦೬ - ೦೭ರಲ್ಲಿ೧೪ , ೯೮ , ೩೬೭ಇರುತ್ತದೆ . +ಇಂದಿರಾ ಆವಾಜ್ ಯೋಜನೆಗೆ ಹೊಸ ಹೆಸರನ್ನು ನೀಡುವ ಬಗ್ಗೆ ಚರ್ಚೆಗಳು ನೆಡೆದು ಅದನ್ನು ರಾಷ್ಟೀಯ ಗ್ರಾಮೀಣ ಆವಾಜ್ ಮಿಷನ್ ಎಂದು ಕರೆಯಬೇಕೆಂಬ ಧ್ವನಿ ಕೇಳಿಬರುತ್ತಿದ್ದು ಅದು ಕಾಂಗ್ರಸ್ ನಲ್ಲಿ ಕೋಲಾಹಲ ಮೂಡಿಸುವ ಸಾಧ್ಯತೆಗಳಿವೆ ಏಕೆಂದರೆ ಅದು ಕಾಂಗ್ರಸ್ ನಾಯಕಿ ಇಂದಿರಾ ಗಾಂಧಿಯವರ ಹೆಸರಾಗಿರುವುದು ಪ್ರಮುಖ ಕಾರಣವಾಗಿದೆ ಹೆಸರಿನ ಬದಲಾವಣೆಗೆ ಪ್ರಮುಖ ಕಾರಣಗಳೆಂದರೆ ಯೋಜನೆಯು ಕಡಿಮೆ ಸಮಯವನ್ನು ಸೂಚಿಸುತ್ತದೆ ಆದರೆ ಮಿಷನ್ ಎಂಬುದು ಬಹುಕಾಲವನ್ನು ಸೂಚಿಚುತ್ತದೆ . +ಇಂದಿರಾ ಆವಾಜ್ ಯೋಜನೆಯು ಒಂದು ಸಮಾಜ ಕಲ್ಯಾಣ ಯೋಜನೆಯಾಗಿದೆ . +ಮನುಷ್ಯನ ಅತ್ಯಾವಶ್ಯಕಗಳಲ್ಲೊಂದಾದ ವಸತಿಯನ್ನು ಕಲ್ಪಸಿ ಕೊಡುವುದು ಈ ಯೋಜನೆಯ ಪ್ರಮುಖ ಉದ್ದೇಶವಾಗಿದೆ ೧೯೮೫ ರಿಂದ ೨೦೧೫ರವರೆಗೂ ಫಲಾನುಕಾರಿ , ಯಶಸ್ವಿ ಯೋಜನೆಯಾಗಿದೆ . +ಸಾಮಾಜಿಕ ಅಥವಾ ಆರ್ಥಿಕ ದೌರ್ಬಲ್ಯರಿಗೆ (ವಿಧವೆ , ಅಂಗವಿಕಲರಿಗೆ ) , ಬಡತನ ರೇಖೆಗಿಂತ ಕೆಳಗಿದ್ದರಿಗೆ ಅವಶ್ಯವಾದ , ಮಾನವನ ಮೂಲಭೂತ ಅವಶ್ಯವಾದ ವಸತಿಯನ್ನು ಕಲ್ಪಿಸುವ ಉದ್ದೇಶದ ಬಹುಪಾಲು ಯಶಸ್ಸನ್ನು ಯೋಜನೆಗಳಿಸಿಕೊಂಡಿದೆ. +ಈ ಮಧ್ಯದಲ್ಲಿ 'ರಾಷ್ಡೀಯ ಗ್ರಾಮೀಣ ಆವಾಜ್ ಯೋಜನೆ 'ಯಂದು ಹೆಸರನ್ನು ಬದಲಿಸಿಕೊಂಡಿದ್ದರೂ ಸಹ ಒಟ್ಟು ೨೦೧೬ ವೇಳೆಗೆ ೧೬ದಶಲಕ್ಷದಷ್ಟು ಮನೆಗಳನ್ನು ಕಟ್ಟುವ ಗುರಿಯನ್ನು ಹೊಂದಿದೆ. +ಇದು ಸರ್ಕಾರ ತೆಗೆದುಕೊಂಡ ಬಡತನ ನಿರ್ಮೂಲನೆಯ ಹಾಗೂ ಉದ್ಯೋಗ ಕಲ್ಪಿಸುವ ಕಾರ್ಯಕ್ರಮಗಳಲೊಂದಾಗಿದೆ ಸರ್ಕಾರವು ಮನೆಗಳನ್ನು ಕಟ್ಟುವ ಮೂಲಕ ಹಳ್ಳಿಯ ಜನರಿಗೆ ಉದ್ಯೋಗ ಅವಕಾಶಗಳನ್ನು ನೀಡುತ್ತದೆ... ಈ ರೀತಿಯಾಗಿ ಇಂದಿರಾ ಆವಾಜ್ ಯೋಜನೆಯು ಭಾರತದ ಏಳಿಗೆಯಲ್ಲಿ ಪ್ರಮುಖ ಪಾತ್ರವಹಿಸಿದೆ . +ಇಂತಹ ಯೋಜನೆಗಳಿಂದ ಭಾರತವು ಪ್ರಗತಿಶೀಲ ರಾಷ್ಡ್ರವಾಗುವುದರಲ್ಲಿ ಸಂದೇಹವಿಲ್ಲ .