From b8f6752bb661d7511bd6c6d2c74418ed75fc8cfd Mon Sep 17 00:00:00 2001 From: Narendra VG Date: Mon, 26 Sep 2022 05:27:48 +0530 Subject: [PATCH] Upload New File --- ...62\206\340\262\257\340\263\213\340\262\227.txt" | 14 ++++++++++++++ 1 file changed, 14 insertions(+) create mode 100644 "Data Collected/Kannada/MIT Manipal/\340\262\270\340\263\210\340\262\256\340\262\250\340\263\215_\340\262\206\340\262\257\340\263\213\340\262\227.txt" diff --git "a/Data Collected/Kannada/MIT Manipal/\340\262\270\340\263\210\340\262\256\340\262\250\340\263\215_\340\262\206\340\262\257\340\263\213\340\262\227.txt" "b/Data Collected/Kannada/MIT Manipal/\340\262\270\340\263\210\340\262\256\340\262\250\340\263\215_\340\262\206\340\262\257\340\263\213\340\262\227.txt" new file mode 100644 index 0000000..1337b5a --- /dev/null +++ "b/Data Collected/Kannada/MIT Manipal/\340\262\270\340\263\210\340\262\256\340\262\250\340\263\215_\340\262\206\340\262\257\340\263\213\340\262\227.txt" @@ -0,0 +1,14 @@ +ಸೈಮನ್ ಆಯೋಗವು ಭಾರತದಲ್ಲಿ ಸ್ಥಾಪಿಸಲಾಗುವ ಸಂವಿಧಾನದ ರಚನೆಯ ಬಗ್ಗೆ ಚರ್ಚೆ ನಡೆಸಲು ಬಂದ ಏಳು ಬ್ರಿಟಿಷ್ ಸಂಸತ್ಸದಸ್ಯರ ತಂಡ . +ತಂಡದ ಅಧ್ಯಕ್ಷತೆ ವಹಿಸಿದ್ದ ಸರ್ ಜಾನ್ ಸೈಮನ್ ಅವರ ಹೆಸರಿನಲ್ಲಿ ಈ ಆಯೋಗ ಜನಪ್ರಿಯವಾಯಿತು . +ಕಾಕತಾಳೀಯ ವಾಗಿ ಆಯೋಗದ ಒಬ್ಬ ಸದಸ್ಯ ಕ್ಲೆಮೆಂಟ್ ಆಟ್ಲೀ ಬ್ರಿಟಿಷ್ ಸರಕಾರದಿಂದ ಭಾರತ ಮತ್ತು ಪಾಕಿಸ್ತಾನಗಳು ಸ್ವಾತಂತ್ರ್ಯ ಪಡೆಯುವಾಗ ಬ್ರಿಟನ್ನಿನ ಪ್ರಧಾನ ಮಂತ್ರಿಯಾಗಿದ್ದನು . +ಆದರೆ ಈ ಆಯೋಗದಲ್ಲಿ ಒಬ್ಬ ಭಾರತೀಯನೂ ಇಲ್ಲದಿದ್ದದ್ದನ್ನು ಕಂಡು ಕೆಂಡಾಮಂಡಲರಾದರು ಭಾರತೀಯರು . +ಈ ಕಾರಣದಿಂದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಈ ಆಯೋಗವನ್ನು ಬಹಿಷ್ಕರಿಸಲು ನಿರ್ಧರಿಸಿತು . +ಮುಸ್ಲಿಂ ಲೀಗ್ ಪಕ್ಷದ ಒಂದು ಬಣ ಮೊಹಮ್ಮದ್ ಅಲಿ ಜಿನ್ನಾ ನೇತೃತ್ವದಲ್ಲಿ ಬಹಿಷ್ಕಾರಕ್ಕೆ ಬೆಂಬಲ ಸೂಚಿಸಿತು . +ಫೆಬ್ರವರಿ ೩ ,೧೯೨೮ರ ಂದು ಮುಂಬಯಿಗೆ ಬಂದಿಳಿದ ಆಯೋಗ ಪ್ರದರ್ಶನಕಾರರ ಧಿಕ್ಕಾರದ ಘೋಷಣೆಗಳನ್ನು ಎದುರಿಸಬೇಕಾಯಿತು . +ಇಡೀ ದೇಶ ಹರತಾಳದಲ್ಲಿರುವಂತೆ ಕಂಡು ಬಂದಿತು . +ಆಯೋಗವು ತನ್ನ ೧೭ ಸಂಪುಟಗಳ ವರದಿಯನ್ನು ೧೯೩೦ರಲ್ಲಿ ಪ್ರಕಾಶಿಸಿತು . +ಪ್ರಾದೇಶಿಕ ಪ್ರತಿನಿಧಿತ್ವ ಮತ್ತು ಹಿಂದೂ - ಮುಸ್ಲಿಮರಿಗೆ ಪ್ರತ್ಯೇಕ ಕೋಮು ಆಧರಿತ ಚುನಾವಣೆ ಪ್ರಕ್ರಿಯೆಗಳನ್ನು ಶಿಫಾರಸು ಮಾಡಿತು . +ಸೈಮನ್ ಆಯೋಗ ಪರಿಣಾಮವಾಗಿ ೧೯೩೫ರ ಭಾರತ ಸರಕಾರ ಕಾಯ್ದೆ ಹೊರಬಂದು , ೧೯೩೭ರಲ್ಲಿ ನಡೆದ ಪ್ರಾಂತೀಯ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷ ಬಹುತೇಕ ಎಲ್ಲ ಪ್ರಾಂತ್ಯಗಳಲ್ಲಿ ಬಹುಮತದಿಂದ ಆಯ್ಕೆಯಾಗಿತು . +ನಂತರ ಸ್ವತಂತ್ರ ಭಾರತದ ಸಂವಿಧಾನದ ಮೇಲೆಯೂ ಈ ಆಯೋಗದ ಪ್ರಭಾವವಿದ್ದಿತು . +ಸೈಮನ್ ಆಯೋಗದ ಬಹಿಷ್ಕಾರ. +ಸೈಮನ್ ಆಯೋಗ. -- GitLab