From bcc6ac5dcc8da436b162cfa8892eb394ca9fe8a1 Mon Sep 17 00:00:00 2001 From: Narendra VG Date: Mon, 17 Apr 2023 15:29:32 +0530 Subject: [PATCH] Upload New File --- ...4\340\262\243\340\263\215\340\262\243.txt" | 1565 +++++++++++++++++ 1 file changed, 1565 insertions(+) create mode 100644 "Data Collected/Kannada/MIT Manipal/Kannada-Scrapped-dta/Book1-\340\262\257\340\262\225\340\263\215\340\262\267_\340\262\262\340\263\213\340\262\225\340\262\246_\340\262\256\340\262\276\340\262\270\340\262\246_\340\262\254\340\262\243\340\263\215\340\262\243.txt" diff --git "a/Data Collected/Kannada/MIT Manipal/Kannada-Scrapped-dta/Book1-\340\262\257\340\262\225\340\263\215\340\262\267_\340\262\262\340\263\213\340\262\225\340\262\246_\340\262\256\340\262\276\340\262\270\340\262\246_\340\262\254\340\262\243\340\263\215\340\262\243.txt" "b/Data Collected/Kannada/MIT Manipal/Kannada-Scrapped-dta/Book1-\340\262\257\340\262\225\340\263\215\340\262\267_\340\262\262\340\263\213\340\262\225\340\262\246_\340\262\256\340\262\276\340\262\270\340\262\246_\340\262\254\340\262\243\340\263\215\340\262\243.txt" new file mode 100644 index 0000000..03f9b10 --- /dev/null +++ "b/Data Collected/Kannada/MIT Manipal/Kannada-Scrapped-dta/Book1-\340\262\257\340\262\225\340\263\215\340\262\267_\340\262\262\340\263\213\340\262\225\340\262\246_\340\262\256\340\262\276\340\262\270\340\262\246_\340\262\254\340\262\243\340\263\215\340\262\243.txt" @@ -0,0 +1,1565 @@ +ಕರ್ನಾಟಕದ ಕನ್ನಡದ ಹಿರಿಮೆಯ ಕಲೆ, ಶ್ರೀಮಂತ ಕಲೆ ಯಕ್ಷಗಾನ. +ಈ ಕಲೆಯು ಸರಸ್ವತಿಯ `ಮಕುಟ ಮಣಿಯಂತೆ ಯಕ್ಷಗಾನ ಬೆಳಗುತ್ತಾ ಪ್ರವರ್ಧಮಾನ ಸ್ಥಿತಿಗೆ ತಲುಪಿದೆ. +ದೇಶ ವಿದೇಶಗಳಲ್ಲೂ ಹೆಸರು ವಾಸಿಯಾಗಿರುವುದು ನಮಗೆಲ್ಲಾ ಹೆಮ್ಮೆಯ ವಿಷಯವಾಗಿದೆ. +ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿಯ ಯೋಜನೆಗಳಲ್ಲಿ ಪುಸ್ತಕ ಬಹುಮಾನ ಮತ್ತು ಪುಸ್ತಕ ಪ್ರಕಟಣೆಗಳು ಅತಿ ಮುಖ್ಯವಾದವುಗಳು. +ಅತ್ತ ಕರಾವಳಿ ಕರ್ನಾಟಕದ ಜನಪ್ರಿಯವಾದ ಯಕ್ಷಗಾನ (ಪಡವಲಪಾಯ)ದಲ್ಲಿ ವಿಪುಲವಾದ ಸಾಹಿತ್ಯ ಪ್ರಸಂಗಗಳಿದ್ದರೂ, ಅದೆಷ್ಟೋ ಪ್ರಸಂಗಗಳು ಹಸ್ತ ಸಪ್ರತಿಯಲ್ಲಿಯೇ ಉಳಿದಿರುವುದು ಗಮನಾರ್ಹ. +ಹೀಗೆ ಅಪ್ರಕಟಿತವಾದ ಯಕ್ಷಗಾನ ಪ್ರಸಂಗಗಳಲ್ಲಿ ರಂಗಭೂಮಿಯಲ್ಲಿ ಪ್ರದರ್ಶನಗೊಂಡು ಜನಪ್ರಿಯವಾದವುಗಳೂ ಇವೆ. +ಅಂಥವರ ಕೃತಿಗಳನ್ನು ಪ್ರಕಟಸುವ ಮೂಲಕ ಅವೆಲ್ಲ ಕೃತಿ ರೂಪದಲ್ಲಿ ನಮ್ಮ ಮುಂದೆ ನೆನಪಿನಲ್ಲಿ ಉಳಿಯಬೇಕೆಂಬ ಕಾಳಜಿ ಅಕಾಡೆಮಿಯದ್ದು. +ಇದರ ಜತೆಯಲ್ಲೇ ರಂಗದಲ್ಲಿ ಜನಪ್ರಿಯವಾಗಿರುವ ಇತ್ತೀಚಿನ ಕವಿಗಳ ಪ್ರಸಂಗಗಳನ್ನೂ ಪ್ರಕಟಿಸುವ ಹಂಬಲ "ನಮ್ಮದು. +ಅತ್ತ ಪಡುವಲಪಾಯದ ಯಕ್ಷಗಾನದಂತೆ 'ಇತ್ತ ಮೂಲಡಪಾಯದ ಬಯಲೌಟ ಪ್ರಕಾರಗಳ(ದೊಡ್ಡಾಟ, ಸಣ್ಣಾಟ, ಕೃಷ್ಣಪಾರಿಜಾತ ಸೂತ್ರದ ಗೊಂಬೆಯಾಟಇತ್ಯಾದಿ) ಪ್ರಸಂಗಗಳಲ್ಲಿ ಅನೇಕ ಹಸ್ತ ಪ್ರತಿಯಲ್ಲೇ ಉಳಿದಿರುವುದು ಚಿಂತನೀಯ. +ಇಂತಹ ಪ್ರಸಂಗಗಳಲ್ಲಿ ಕೆಲವನ್ನಾದರೂ ವಿದ್ವಾಂಸರಿಂದ ಪರಿಶೀಲಿಸಿ ಪ್ರಕಟಿಸುವ ಯೋಜನೆ ಕಾರ್ಯಗತವಾಗುತ್ತಿರುವುದು ನನಗೆ ಸಂತೋಷವನ್ನು ತಂದಿದೆ. +ಯಕ್ಷಲೋಕದಲ್ಲೇ ಅತ್ಯುತ್ತಮ ಸಾಧನೆ ಮಾಡಿರುವ ಬಡಗುತಿಟ್ಟು ಬಣ್ಣದ ಕಲಾವಿದೆರೆಂದೇ ಪ್ರಸಿದ್ಧರಾದ ಸಕಟ್ಟು ಲಕ್ಷ್ಮೀ ನಾರಯಣಯ್ಯರವರ ಆತ್ಮಕಥೆ ಹಾಗೂ ಇವರ ಬಗ್ಗೆ ಹಲವು ಲೇಖಕರು ಬರೆದಿರುವ ಲೇಖನಗಳನ್ನು ಅಕಾಡೆಮಿಯು ಪುಸ್ತಕ ರೂಪ ದಲ್ಲಿ ಇದೀಗ ಪ್ರಕಟಿಸುತ್ತಿದೆ. +ಈ ಪುಸ್ತಕವನ್ನು ಪರಿಶೀಲಿಸಿದ ಶ್ರೀ ರಾಘವೇಂದ್ರ ಹೆರಳೆ ಅವರಿಗೆ ಕೃತಜ್ಞಕೆಯನ್ನು ಸಲ್ಲಿಸುತ್ತೇನೆ. + ನಮ್ಮ ಅಕಾಡೆಮಿಯು ಮುಂದೆ ಮಾಡಲೇಬೇಕಾದ ಸಾಧನೆ ಬಹಳಷ್ಟಿದೆ. +ಯಥಾ ಸಾಧ್ಯವಾಗಲು ಕಾಲಕಾಲಕ್ಕೆ ಈ ಕೆಲಸ ಸಾಗುತ್ತ ಬಂದಿದೆ; ಮುಂದೆಯೂ ಸಾಗಲಿದೆ. +ಈ ಮೂಲಕ ಕಲೆ ಉಳಿದು ಬೆಳಗಬೇಕಾಗಿದೆ. +ಎಲ್ಲ ಕನ್ನಡಿಗರ ಬೆಂಬಲದಿಂದ ಇದು ಸಾಧ್ಯವಾಗಲೆಂದು ಆಶಿಸುತ್ತೇನೆ. +ಕರ್ನಾಟಕ ಯಕ್ಷಗಾನ ಕಲೆಯು ಹಿರಿಯ ಶ್ರೀಮಂತ ಕಲೆಯಾಗಿದೆ. +ಈ ಕಲೆಯು ಬೆಳೆಯುತ್ತಾ ಬೆಳಗುತ್ತಾ ಪ್ರವರ್ಧನ ಸ್ಥಿತಿಗೆ ತಲುಪಿದೆ. + ಈ ಕಲೆಯು ದೇಶ ವಿದೇಶಗಳಲ್ಲಿ ಬೆಳೆಯುತ್ತಾ ಬಂದು ನಾಡಿಗೆ ಕೀರ್ತಿ ತಂದಿದೆ. +ನಾಡಿನ ಸಾಂಸ್ಕೃತಿಕ ಅಸ್ತಿತ್ವ ಮತ್ತು ಅನನ್ಯತೆಯನ್ನು ಉಳಿಸಬೇಕಾದುದು ನಾಡಿಗರ ಕರ್ತವ್ಯ. +ಜಾಗತೀಕರಣದ ಈ ಸಂದರ್ಭದಲ್ಲಿ ಆಧುನಿಕತೆಯ ಆಕರ್ಷಣೆಯಿಂದ ನಮ್ಮ ಸಾಂಸ್ಕೃತಿಕ ಅಸ್ವಿತ್ತಕ್ಕೆ ಅಪಾಯವಿದೆಯೆಂಬುದು ನಮ್ಮಅನುಭವಕ್ಕೆ ಬರುವ ವಿಚಾರ. +ಜನಪದದಲ್ಲಿ ಹುಟ್ಟಿಕೊಂಡ ನಮ್ಮ ರಂಗಕಲೆಗಳು ನಾಡಿನ ಸಂಸ್ಕೃತಿಕ ಜೀವಾಳವಾಗಿದೆ. +ಬದುಕಿನ ಮೌಲ್ಯಗಳನ್ನು ಒಳಗೊಂಡಿರುವ ಸಂಸ್ಕೃತಿಯ ಕುರುಹುಗಳು ನಮ್ಮ ರಂಗ ಕಲೆಗಳಲ್ಲಿವೆ. +ಜನರಿಂದ ಜನರಿಗೋಸ್ಟರವೇ ಹುಟ್ಟಿಕೊಂಡ ರಂಗಕಲೆಗಳು ಕೇವಲ ಕಲೆಯಾಗಿರದೆ, ಜ್ಞಾನ-ವಿಜ್ಞಾನ ಪರಂಪರೆಯಾಗಿದೆ. +ಈ ಸೃಜನಶೀಲ ಪರಂಪರೆಗೆ ಬಣ್ಣಗಳು ಹಲವು. +ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡಮಿ ಸಾಂಸ್ಕ್ರತಿಕ ಅಸ್ತಿತ್ವ ಮತ್ತು ಅನನ್ಯತೆಯನ್ನು ಕಾಯ್ದುಕೊಂಡು ಬಂದಿರುವ ರಂಗಕಲೆಯನ್ನು ಮತ್ತು ಕಲಾವಿದರನ್ನು ಗೌರವಿಸುತ್ತಾ ಬಂದಿದೆ. +ಯಕ್ಷಗಾನ ಮತ್ತು ಬಯಲಾಟಗಳ ವೈವಿಧ್ಯಮಯ ಕಲಾಪ್ರಕಾರಗಳನ್ನು ನಾಡಿನಾದ್ಯಂತ ದೇಶದಾದ್ಯಂತ ಹರಡಿದೆ. +ಪ್ರತಿ ಜಿಲ್ಲೆಗಳಲ್ಲಿಯೂ ಜಿಲ್ಲಾ ರಂಗಸಂಭ್ರಮವನ್ನು ನಡೆಸಿ ಪ್ರತೀ ಕಲಾಪ್ರಕಾರಕ್ಕೂ ಸಮಾನ ಗೌರವ ನೀಡಿದೆ. +ಮಾತ್ರವಲ್ಲ,ಯಕ್ಷಗಾನೋತ್ಸವ,ಬಯಲಾಟೋತ್ಸವ, ಬೊಂಬೆಯಾಟೋತ್ಸವ ಮಾಡುತ್ತಾ ಬಂದಿದೆ. +ಸಕ್ಕಟ್ಟು ಲಕ್ಷೀನಾರಾಯಣಯ್ಯರವರು ಯಕ್ಷಗಾನದ ಬಡಗುತಿಟ್ಟಿನಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಬಣ್ಣದ ಕಲಾವಿದರು. +ಇವರ ಆತ್ಮಕಥೆ ಹಾಗೂ ಹಲವು ಲೇಖನಗಳನ್ನು ಅಕಾಡೆಮಿಯು ಪುಸ್ತಕ ರೂಪದಲ್ಲಿ ಇದೀಗ ಪ್ರಕಟಿಸುತ್ತಿದೆ. +ಯಕ್ಷಗಾನದಲ್ಲಿ ಬಣ್ಣದ ಕಲಾವಿದರು ಪ್ರಸಿದ್ಧರು. +ಅವರ ಬಣ್ಣಗಾರಿಕೆಯಲ್ಲಿ ಒಳ್ಳೆಯ ರೂಪದಲ್ಲಿ ಅತ್ಯುತ್ತಮವಾದ ಯಕ್ಷಗಾನ ಹೊರಚಿಮ್ಮಲು ಇಂತಹ ಪುಸ್ತಕ ಮುಂದಿನ ಜನರಿಗೆ ಸಹಕಾರಿಯಾಗುತ್ತದೆ. +ಯಕ್ಷಗಾನ ನಮ್ಮ ರಾಜ್ಯದ ಒಂದು ಪರಿಪೂರ್ಣ ಜಾನಪದ ಸಂಪತ್ತು. +ಇದನ್ನು ಉಳಿಸಿಕೊಳ್ಳುವುದು ಹಾಗೂ ಬೆಳೆಸಿಕೊಳ್ಳುವುದು ನಮ್ಮ ಆದ್ಯ ಕರ್ತವ್ಯ. +ಅದರೊಂದಿಗೆ ಕಲೆಯಲ್ಲಿ ಮಾಡಿದ ಮೇರು ಕಲಾವಿದರ ಸಾಧನೆಯನ್ನು ಪುಸ್ತಕ ರೂಪದಲ್ಲಿ ದಾಖಲಿಸುವುದು ಕೂಡಾ ಅಷ್ಟೇ ಮುಖ್ಯವಾದುದು. +ಹಾಗೆ ದಾಖಲಿಸುವುದರಿಂದ ಆ ಕಲೆಯಲ್ಲಿ ದುಡಿಯುವವರಿಗೆ ಅದು ಸ್ಪೂರ್ತಿಯನ್ನು ನೀಡುವ ದಾರಿದೀಪವಾಗುವುದು ಮಾತ್ರವಲ್ಲ ಮುಂದಿನ ಪೀಳೀಗೆಯವರಿಗೆ ಅಂಥವರ ಸಾಧನೆಯನ್ನು ತಿಳಿಯಲು ಸಹಾಯಕವಾಗುತ್ತದೆ. +ಆ ನಿಟ್ಟಿನಲ್ಲಿ ಬಡಗುತಿಟ್ಟಿನ ಯಕ್ಷಗಾನದಲ್ಲಿ ಮೂವತ್ತಕ್ಕೂ ಹೆಚ್ಚು ವರ್ಷ ಬಣ್ಣದ ವೇಷಧಾರಿಯಾಗಿ ಮೆರೆದ ಸಕ್ಕಟ್ಟು ಲಕ್ಷೀ ನಾರಾಯಣರಾಯರ ಕುರಿತಾಗಿ ಒಂದು ಕೃತಿಯನ್ನು ಹೊರತರಬೇಕಂದು ಅವರ ಅಭಿಮಾನಿಗಳು ಬಯಸಿದರು. +ಅದರಂತೆ "ಯಕ್ಷಲೋಕದ ಮಾಸ ಬಣ್ಣ' ಎಂಬ ಹೆಸರಿನಿಂದ ಈ ಕೃತಿ ಇಂದು ಹೊರಬರುತ್ತಿದೆ. +ಕೃತಿಯಲ್ಲಿ ಲಕ್ಷಿ ನಾರಾಯಣರಾಯರ ಆತ್ಮವೃತ್ತಾಂತ ಸೇರಿಸುವುದು ಸೂಕ್ತವೆಂದು ಕಂಡುಬಂತು. +ಅದನ್ನು ಅವರ ಅಭಿಮಾನಿಯಾದ ನಾನು ಅವರು ಹೇಳಿದಂತೆ ಒಕ್ಕಣಿಸಬೇಕೆಂದು ಬಯಸಿದರು. +ಅವರ ಮನೆಯಿಂದ ಸಾಧಾರಣ ೨೫ ಕಿ. ಮೀ. ದೂರದಲ್ಲಿದ್ದ ನಾನು ಅವರ ವಿನಯಪೂರ್ವಕವಾದ ಕೋರಿಕೆಯನ್ನು ನಿರಾಕರಿಸಲಾರದೆ ಒಪ್ಪಿಕೊಂಡುದು ಆಯಿತು. +ಹತ್ತಾರು ಬಾರಿ ಅವರಲ್ಲಿಗೆ ಹೋಗಿ ಅವರ ಜೀವನ ವೃತ್ತಾಂತವನ್ನೂ, ಕಲೆಯಲ್ಲಿ ಆವರ ಸಾಧನೆಯನ್ನೂ ಅವರು ತಿಳಿಸಿದಂತೆ ಒಕ್ಕಣಿಸಿದ್ದೇನೆ. +ಅದರೊಂದಿಗೆ ಅವರ ವೃತ್ತಿ ಜೀವನಕ್ಕೆ ಸಂಬಂಧಿಸಿ ಅವರ ಒಡನಾಡಿಗಳ ಅಭಿಪ್ರಾಯವನ್ನು ಸೇರಿಸಿದ್ದೇನೆ . +ಅವರ ಅಭಿಮಾನಿಗಳ ಲೇಖನಗಳನ್ನು ಕೃತಿ ಒಳಗೊಂಡಿದೆ. +ಮೇಲಾಗಿ ಅವರ ಮೊಮ್ಮಗ ರಾಜಶೇಖರ ಅವರು ತಮ್ಮ ಅಜ್ಜನೊಡನೆ ನಡೆಸಿದ ಸರಸ ಸಂಭಾಷಣೆಯನ್ನೂ, ಪ್ರಶ್ನೋತ್ತರಗಳನ್ನೂ ಸೇರಿಸಲಾಗಿದೆ. +ಪೂರಕವಾಗಿ ಅವರ ಸಾಧನೆಯನ್ನು ಪ್ರತಿಬಿಂಬಿಸುವ ಛಾಯಾಚಿತ್ರಗಳನ್ನೂ ಕೃತಿ ಒಳಗೊಂಡಿದೆ. +ನಮ್ಮ ಕೋರಿಕೆಯಂತೆ ಲೇಖನಗಳನ್ನು ಕಳುಹಿಸಿದ ಅವರ ಒಡನಾಡಿಗಳಿಗೆ,ಅಭಿಮಾನಿಗಳೀಗೆ ಹಾಗೂ ಮೊಮ್ಮಗ ರಾಜಶೇಖರರಿಗೆ ನನ್ನ ಅನಂತ ವಂದನೆಗಳು. +ಛಾಯಾ ಚಿತ್ರಗಳನ್ನು ನೀಡಿ ಸಹಕರಿಸಿದ ಮಿತ್ರರಿಗೆ ಕೃತಜ್ಞತೆಗಳು. +ಕೃತಿಯನ್ನು ಅಂದವಾಗಿ ಮುದ್ರಿಸಿದ ಎಂ.ಎಸ್‌.ಗ್ರಾಫಿಕ್ಸ್‌ ನ ಮಾಲೀಕರಿಗೂ ಅವರ ಸಿಬ್ಬಂದಿ ವರ್ಗದವರಿಗೆ ಹೃತ್ಪೂರ್ವಕ ನಮನಗಳು. +ಎಲ್ಲಕ್ಕೂ ಮೇಲಾಗಿ ಕೃತಿಯ ಪ್ರಕಟಣೆಗೆ ಮುಂದಾದ ಕರ್ನಾಟಕ ಯಕ್ಷಗಾನ ಬಯಲಾಟ ಸಮಿತಿಯವರಿಗೆ ತುಂಬು ಹೃದಯದ ಅಭಿನಂದನೆಗಳು. +ಕಲಾಭಿಮಾನಿಗಳು ಆತ್ಮ ಸಂತೋಷದಿಂದ ಈ ಕೃತಿಯನ್ನು ಕೊಂಡು ಓದಿ ಕೃತಿಯ ಪ್ರಯೋಜನವನ್ನು ಹೊಂದಿದಲ್ಲಿ ನಮ್ಮ ಶ್ರಮ ಸಾರ್ಥಕ. + ಬಾಲ್ಯ ಮತ್ತು ವಿದ್ಯಾಭ್ಯಾಸ:ಉಡುಪಿ ತಾಲ್ಲೂಕಿನ ಶಿರಿಯಾರ ಗ್ರಾಮದ ಸಕ್ಕಟ್ಟಿನಲ್ಲಿ ತಾರೀಖು ೧೫.೬.೧೯೨೫ರಲ್ಲಿ ನನ್ನ ಜನನವಾಯಿತು. +ಈ ನನ್ನ ಊರು ಸುತ್ತಲೂ ಹೊಳೆಯಿಂದ ಆವರಿಸಲ್ಪಟ್ಟ ಒಂದು ಚಿಕ್ಕ ದ್ವೀಪ ದಂತೆ ಕಾಣುತ್ತದೆ. +ಊರಿನಒಂದು ದಿಕ್ಕಿನಲ್ಲಿ ನದಿಯು ಎರಡು ಶಾಖೆಗಳಾಗಿ ಹರಿದು ಊರನ್ನು, ಸುತ್ತುವರಿದು ಇನ್ನೊಂದು ಕಡೆಯಲ್ಲಿ ಸಂಗಮಿಸುತ್ತದೆ. +ಸಂಗಮಿಸುವ ಸ್ಥಳದಲ್ಲಿ ಬಲವಾದ ಕಟ್ಟು ಹಾಕಿ ನೆರೆಯ ಊರುಗಳಿಗೆ ಸಂಪರ್ಕ ಕಲ್ಪಿಸಲಾಗಿದೆ. +ಹೀಗೆ ನದಿಯ ಶಾಖೆಗಳಿಗೆ ಹಾಕಿದ ಕಟ್ಟಿನಿಂದಾಗಿ ಸಕ್ಕಟ್ಟು ಎಂಬ ಹೆಸರಾಯಿತೆಂದೂ ಇಲ್ಲಿಯ ಹಿರಿಯರು ಊರಿನ ಹೆಸರಿನ ಬಗ್ಗೆ ವ್ಯಾಖ್ಯಾನ ನೀಡುತ್ತಾರೆ. +ದೇವಾಲಯ ಮತ್ತು ವಿದ್ಯಾಲಯ ಊರಿನ ಎರಡು ಕಣ್ಣುಗಳಿದ್ದಂತೆ. +ನಮ್ಮಊರಿನಲ್ಲಿ ಶಾಲೆ ಇದ್ದಿಲ್ಲ. +ಅದರ ಬದಲಿಗೆ ಎರಡು ಪುರಾತನ ದೇವಾಲಯಗಳು ತಲೆಯೆತ್ತಿ ನಿಂತಿವೆ. +ಇಲ್ಲಿಗೆ ಒಂದು ಮೈಲಿ ದೂರವಿರುವ ಎತ್ತಿನಹಟ್ಟಿಯ ಶಾಲೆಯಲ್ಲೇ ನಮ್ಮೂರಿನ ವಿದ್ಯಾರ್ಥಿಗಳ ವಿದ್ಯಾಭ್ಯಾಸ ನಡೆಯಬೇಕು. +ದೇವಾಲಯಗಳಲ್ಲಿ ಜಾಡು ವಿಷ್ಣುಮೂರ್ತಿ ದೇವಸ್ಥಾನ ಹಾಗೂ ಇನ್ನೊಂದು ಗಣಪತಿ ದೇವಸ್ಥಾನ. +ನನ್ನ ಎಳವೆಯಲ್ಲಿ ಕಂಡಂತೆ ಎರಡು ದೇವಾಲಯಗಳೂ ಜೀರ್ಣಾವಸ್ಥೆಯಲ್ಲಿದ್ದವು. +'ವಿಷ್ಣುಮೂರ್ತಿ ದೇವಾಲಯದಲ್ಲಿ ಹೆಬ್ಬಾಗಿಲು ತೀರ್ಥಮಂಟಪ, ಬ್ರಹ್ಮರಥಗಳಿದ್ದು ಸಕಲ ರೀತಿಯ ವ್ಯವಸ್ಥೆಯುಳ್ಳ ಆಗಮೋಕ್ತಪೂಜೆ ನಡೆಯುತ್ತಿತ್ತಂತೆ. +ಈಗ ಬರೇ ಪೂಜೆ ಮಾತ್ರ ನಡೆಯುತ್ತಿದೆ. +ಇದರಲ್ಲಿರುವ ಕರಿಶಿಲೆಯ ಮೂರ್ತಿ ಬಹಳ ಸುಂದರವಾಗಿದ್ದು, ಹಿಂದೆ ಉಡುಪಿಯ ಮಧ್ದರು ಒಂದು ಲಕ್ಷ ರೂಪಾಯಿಗೆ ಕೇಳಿದ್ದರಂತೆ. +ಆದರೆ ಊರವರು ಕೊಡದೆ ಉಳಿಸಿಕೊಂಡಿದ್ದರು. +ಗಣಪತಿ ದೇವಸ್ಥಾನವು ನಮ್ಮ ಮನೆಗೆ ಅತೀ ಹತ್ತಿರದಲ್ಲಿದೆ. +ಅದರ ಗರ್ಭಗುಡಿ ಸಹ ಬಿದ್ದುಹೋಗಿತ್ತು. +ನಾನು ಹಾಗೂ ನನ್ನ ತಮ್ಮಂದಿರು ಸೇರಿ ಕಲ್ಲುಕಂಬ ನಿಲ್ಲಿಸಿ, ಮಣ್ಣಿನ ಗೋಡೆ ಹಾಕಿ ಹಂಚಿನ ಮಾಡು ಮಾಡಿ ದುರಸ್ತಿಗೊಳಿಸಿದೆವು. +೮ -೧ಂ 'ವರ್ಷಗಳ ಹಿಂದೆ ಊರವರ ಸಹಕಾರದಿಂದ ನಮ್ಮ ಕೌಟುಂಬಿಕರು ಶಿಲಾಮಯ ದೇವಸ್ಥಾನ ನಿರ್ಮಿಸಿ ಪುನಃ ಪ್ರತಿಷ್ಠೆ ಮಾಡಿದರು. +ನಮ್ಮ ಊರಿನಲ್ಲಿ ಇಬ್ಬರು ಪ್ರತಿಭಾವಂತ ಕಲಾವಿದರು ಯಕ್ಷಗಾನ ರಂಗದಲ್ಲಿ ಮೆರೆದು ಊರಿಗೆ ಕೀರ್ತಿಯನ್ನು ತಂದಿದ್ದರು. +ಅವರಲ್ಲಿ ಒಬ್ಬರು ಗಣಪತಿ ಪ್ರಭುಗಳು, ಇನ್ನೊಬ್ಬರು ಸುಬ್ಬಣ್ಣಯ್ಯನವರು. +ಗಣಪತಿ ಪ್ರಭುಗಳು ಆ ಕಾಲದಮುಖ್ಯ (೨ನೇ) ವೇಷಧಾರಿಗಳು. +ಶ್ಯಂಗಾರ ರಸದ ಕೀಚಕ, ಅಂಗಾರ ಪರ್ಣಭಕ್ತಿ ರಸದ ಸುಧನ್ವ, ಅತಿಕಾಯದಂತಹ ಪಾತ್ರಗಳಲ್ಲಿ ಅವರಿಗೆ ಸರಿಗಟ್ಟುವವರು ಆ ಕಾಲದಲ್ಲಿ ಇದ್ದಿಲ್ಲ. +ಸುಬ್ಬಣ್ಣಯ್ಯನವರು ನರ್ತನದಲ್ಲಿ ನಿಸ್ಸೀಮರು. +ಇನ್ನೋರ್ವ ನಾಟ್ಯ ಪ್ರವೀಣರಾದ ಪಾಂಡೇಶ್ವರ ಪುಟ್ಟಯ್ಯ ಮತ್ತು ಇವರ ಕೃಷ್ಣಾರ್ಜುನ ಜೋಡಿ ಆ ಕಾಲದಲ್ಲಿ ಮನೆಮಾತಾಗಿತ್ತು . +ಅಂತಹ ನೃತ್ಯಪಟು ಸುಬ್ಬಣಯ್ಯನವರೇ ನನ್ನ ತಂದೆಯವರು ಎಂದು ಹೇಳಲು ನನಗೆ ತುಂಬಾ ಸಂತೋಷವೆನಿಸುತ್ತದೆ. +ಸುಬ್ಬಣಯ್ಯನವರು ತುಂಬು ಸಂಸಾರವಂದಿಗರು. +ಅವರಿಗೆ ಮೊದಲ ಮಡದಿಯಲ್ಲಿ ಸಣ್ಣಮ್ಮ ಅಕ್ಕಯ್ಯ, ಬೀಚಮ್ಮ ಎಂಬ ಮೂವರು ಹೆಣ್ಣುಮಕ್ಕಳು ಹಾಗೂ ಗೋಪಾಲಯ್ಯ ಎಂಬ ಓರ್ವ ಗಂಡು ಮಗನೂ ಜನಿಸಿದರು. +ಹೆಂಡತಿ ಸಣ್ಣ ಪ್ರಾಯದಲ್ಲೇ ಅಕಾಲ ಮರಣಕ್ಕೆ ತುತ್ತಾದರು. +ಮಕ್ಕಳ ಪಾಲನೆನೋಡಿಕೊಳ್ಳುವುದು ತುಂಬಾ ಕಷ್ಟದ ಕೆಲಸವಾಯಿತು. +ಹಿರಿಯರ ಸಲಹೆಯಂತೆ ಮರು ಮದುವೆಯಾಗುವುದು ಅನಿವಾರ್ಯವಾಯಿತು. +ಬಳಿಕ ರಾಜಮ್ಮ ಎಂಬ ಕನ್ಯೆಯನ್ನು ಮದುವೆಯಾಗಿ ಅವಳಲ್ಲಿ ರತ್ನಕ್ಕ, ನಾನು ಹಾಗೂ ಶ್ರೀನಿವಾಸ ಮತ್ತು ಸೀತಾರಾಮರೆಂಬ ನಾಲ್ಕು ಮಂದಿ ಮಕ್ಕಳು. +ಮಡದಿ ಮಕ್ಕಳೊಂದಿಗೆ ಇದ್ದುದರಲ್ಲಿಯೇ ತೃಪ್ತಿಹೊಂದಿ ಸಂಸಾರ ನಿರ್ವಹಣೆ ಮಾಡಿದರು. +ನನ್ನ ಏಳನೇ ವಯಸ್ಸಿನಲ್ಲಿ ನನ್ನನ್ನು ಎತ್ತಿನಹಟ್ಟಿಯ ಪ್ರಾಥಮಿಕ ಶಾಲೆಗೆ ತಂದೆಯವರು ಸೇರಿಸಿದರು. +ಗುರುಗಳು ಕೃಷ್ಣಪ್ಪ ಮಾಸ್ತರರು. +ತುಂಬಾ ಶಿಸ್ತಿನ ಉಪಾಧ್ಯಾಯರು. +ಕನ್ನಡ ಪಾಠಗಳೊಂದಿಗೆ ಗಣಿತ, ಚರಿತ್ರೆ, ಭೂಗೋಳ ಪಾಠ ಬೋಧನೆ ಮಾಡುತ್ತಿದ್ದರು. +ಇವರ ಪಾಠ ತುಂಬಾ ಪರಿಣಾಮಕಾರಿಯಾಗಿತ್ತು. +ತಿರುಕನ ಕನಸು,ಪುಣ್ಯಕೋಟಿಯ ಕಥೆ, ನಳಚರಿತ್ರೆಯ ಪದ್ಯಗಳನ್ನು ಸೊಗಸಾಗಿ ಹಾಡಿ ಮನಮುಟ್ಟುವಂತೆ ವಿವರಿಸುತ್ತಿದ್ದರು. +ರಾಮಾಯಣ,ಭಾರತ, ಭಾಗವತದ ಕಥೆಗಳನ್ನು ಸಂದರ್ಭಾನುಸಾರ ಸೊಗಸಾಗಿ ಬಣ್ಣಿಸುತ್ತಿದ್ದರು. +ಹೀಗಾಗಿ ನಮಗೆ ಬಾಲ್ಯದಲ್ಲೇ ಪುರಾಣದ ಜ್ಞಾನ ಉಂಟಾಯಿತು. +ಶಾಲೆಯಲ್ಲಿ ಯಕ್ಷಗಾನ ಕಲಾವಿದರಾದ ಶಿರಿಯಾರ ಮಂಜುನಾಯ್ಕ, ಬಣ್ಣದ ಗುಂಡ, ಶಿರಿಮಠ ಪಂಜು ನನ್ನ ಸಹಪಾಠಿಗಳಾಗಿದ್ದರು. +ನನ್ನ ವಿದ್ಯಾಭ್ಯಾಸವನ್ನು ೩ನೇ ತರಗತಿಗೆ ಮೊಟಕುಗೊಳಿಸಬೇಕಾಯಿತು. +ಕಾರಣ ನನ್ನ ತಂದೆ ಸುಬ್ಬಣ್ಣಯ್ಯನವರು ತಮ್ಮ ೫೫ನೇ ಪ್ರಾಯದಲ್ಲಿ ಆಕಸ್ಮಿಕ ನಿಧನ ಹೊಂದಿದರು. +ಸಂಸಾರದ ಆಧಾರಸ್ತಂಭವಾಗಿದ್ದ ಅವರ ನಿಧನ ನಮ್ಮನ್ನು ಅಧೀರರನ್ನಾಗಿ ಮಾಡಿತು. +ಪತಿಯನ್ನು ಕಳೆದುಕೊಂಡು ಕಂಗೆಟ್ಟ ತಾಯಿಗೆ ಆಧಾರವಾಗಿ ನಾನು ಮನೆಯಲ್ಲೇ ಉಳಿಯಬೇಕಾಯಿತು. +ಸಾಗುವಳಿ, ಸಂಸಾರ ನಿರ್ವಹಣೆಯಲ್ಲಿ ತಾಯಿಗೆ ಸಹಾಯಕನಾಗಿ ದುಡಿಯಲು ಪ್ರಾರಂಭಿಸಿದೆ. +ಒಂದು ದಿನ ಯಕ್ಷಗಾನ ಕಲಾವಿದ ಬೇಳೂರು ಶೀನನವರು ನಮ್ಮ ಮನೆಗೆ ಬಂದರು. +ಅವರು ಆ ಕಾಲದ ಪ್ರಸಿದ್ಧ ಸ್ತ್ರೀ ವೇಷಧಾರಿಯಾಗಿದ್ದರು. +ಖ್ಯಾತ ಸ್ತ್ರೀ ವೇಷಧಾರಿಯಾದ ಕೊಕ್ಕರ್ಣಿನರಸಿಂಹ ಕಾಮತರಿಗೆ ಸಮದಂಡಿಯೆನಿಸಿದ ಕಲಾವಿದರು. + ಅವರು ನನ್ನ ತಾಯಿಯೊಡನೆ ಹೂವಿನ ಕೋಲು ತಿರುಗಾಟಕ್ಕೆ ಕಳುಹಿಸಿ ಕೊಡುವಂತೆ ಕೇಳಿಕೊಂಡರು . + ಅವರು ನನ್ನ ತಂದೆಯ ಶಿಷ್ಯರಾಗಿದ್ದು,ನಮ್ಮ ಶ್ರೇಯೋಭಿವೃದ್ಧಿ ಬಯಸುವವರಾಗಿದ್ದರಿಂದ ನನ್ನ ತಾಯಿಗೆ ಅವರೊಡನೆ ಕಳುಹಿಸುವ ಮನಸ್ಸಾದರೂ ಚಿಕ್ಕವನೆಂಬ ಆಳುಕು. +ಆದರೂ ಒಲ್ಲದ ಮನಸ್ಸಿನಿಂದ ಕಳುಹಿಸಿಕೊಟ್ಟರು. +೨-೩ ವರ್ಷಗಳು ಅವರೊಡನೆ ನನ್ನ ಹೂವಿನ ಕೋಲು ತಿರುಗಾಟ ಸಾಂಗವಾಗಿ ಸಾಗಿತ್ತು. +ಇದು ನಮಗೆ ಆರ್ಥಿಕವಾಗಿ ಸಹಾಯ ಒದಗಿಸಿತ್ತು. +ಅಲ್ಲದೆ, ನನಗೆ ಪುರಾಣ ಹಾಗೂ ಪ್ರಸಂಗದ ಕುರಿತು ಪ್ರಾಥಮಿಕ ಅರಿವು ಉಂಟಾಯಿತು. +ಶ್ರುತಿಬದ್ಧವಾಗಿ ಮಾತಾಡುವ ಅಭ್ಯಾಸ ಸಿಕ್ಕಿದಂತಾಯಿತು. +ಅದರೊಂದಿಗೆ ಅಲ್ಲಿಯವರೆಗಿದ್ದ ಸಭಾಕಂಪನವು ದೂರವಾಯಿತು. + ಮುಂದೆ ನಾನು ಕಲಾವಿದನಾಗಿ ಮೇಳದ ತಿರುಗಾಟ ಆರಂಭಿಸಿದ ಮೇಲೆ ನನ್ನ ಮಕ್ಕಳಾದ ಜಯರಾಮ, ರಮೇಶರಿಗೆ ಅರ್ಥದಲ್ಲಿ ತರಬೇತಿ ನೀಡಿ ಅವರೊಂದಿಗೆ ನಾಲ್ಕಾರು ವರ್ಷ ಹೂವಿನಕೋಲು ತಿರುಗಾಟ ಸ್ವತಂತ್ರವಾಗಿ ಮಾಡಿದ್ದುಂಟು. +ಮೇಳದ ತಿರುಗಾಟವಿಲ್ಲದ ಕಾಲದಲ್ಲಿ ನವರಾತ್ರಿಯ ಈ ಹೂವಿನಕೋಲು ತಿರುಗಾಟ ಕಲಾವಿದರಿಗೆ ಆರ್ಥಿಕವಾಗಿ ಬಲ ನೀಡುತ್ತದೆ. +ಈಗೀಗ ಇದರಿಂದ ಬರುವ ವರಮಾನ ಕಡಿಮೆಯಾಗಿ, ಕರೆದು ಮಾಡಿಸುವ ಕಲಾಭಿಮಾನಿಗಳೂ ಕಡಿಮೆಯಾಗಿ ಹೂವಿನ ಕೋಲು ತಿರುಗಾಟ ನಿಂತಂತಾಗಿದೆ. +ಆದರೆ, ಗುಂಡ್ಮಿಯಲ್ಲಿರುವ ಹಂಗಾರ ಕಟ್ಟೆ ಯಕ್ಷಗಾನ ಕೇಂದ್ರದವರು ಇತ್ತೀಚೆಗೆ ಪ್ರತಿವರ್ಷ ಹೂವಿನಕೋಲಿನ ಸ್ಪರ್ಧೆಯನ್ನಿಟ್ಟು ಗೆದ್ದವರಿಗೆ ಬಹುಮಾನವನ್ನಿತ್ತು ಹೂವಿನಕೋಲು ಕಾರ್ಯಕ್ರಮಕ್ಕೆ ಪ್ರೋತ್ಸಾಹ ನೀಡುತ್ತಿದ್ದಾರೆ. +ಒಂದು ದಿನ ತಮ್ಮ ತಂದೆಯ ಶಿಷ್ಕರಾಗಿದ್ದ ಜಂಬೂರು ಶ್ರೀನಿವಾಸ ಭಾಗವತರು ನಮ್ಮ ಮನೆಗೆ ಬಂದರು. +ಇವರು ಆ ಸಮಯಕ್ಕೆ ಸಂಗೀತಗಾರರಾಗಿ ಮೇಳದಲ್ಲಿ ತಿರುಗಾಟ ಮಾಡುತ್ತಿದ್ದರು. +ಅವರು ನನ್ನ ತಾಯಿಯೊಡನೆ "ನಿಮ್ಮ ಮಗನಿಗೆ ಯಕ್ಷಗಾನ ಕಲಾವಿದನಾಗುವ ಅರ್ಹತೆಯಿದೆ. +ಹಾಗೆ ಕಲಾವಿದನಾಗ ಬೇಕಾದರೆ ಮುಖ್ಯವಾಗಿ ತಾಳದ ಪರಿಜ್ಞಾನ ಅಗತ್ಯ. +ಆದ್ದರಿಂದ ಅವನನ್ನು ಕೆಲವು ದಿನಗಳ ಮಟ್ಟಿಗೆ ನಮ್ಮ ಮನೆಗೆ ಕಳುಹಿಸಿಕೊಡಿ. +ನಾನು ತಾಳಗಳ ಬಗ್ಗೆ ತಿಳಿ ಹೇಳುತ್ತೇನೆ”ಎಂದರು. +ತಾಯಿಯವರಿಗೆ ಅದು ಸರಿ ಎಂದು ಕಂಡಿತು. +ಅವರು ಕಳುಹಿಸಿಕೊಡಲು ಒಪ್ಪಿದರು. +ಜಂಬೂರಿಗೆ ನಮ್ಮಲ್ಲಿಂದ ಸಾಧಾರಣ ೩ ಮೈಲಿ ದಾರಿ ಪ್ರತಿದಿನ ಬೆಳಿಗ್ಗೆ ಗಂಜಿ ಊಟ ವಾಡಿ ಶ್ರೀನಿವಾಸ ಭಾಗವತರಲ್ಲಿಗೆ ಹೋಗುತ್ತಿದ್ದೆ. +ಮಧ್ಯಾಹ್ನ ಅವರ ಮನೆಯಲ್ಲೇ ಊಟ. +ಬೆಳಗ್ಗೆಯಿಂದ ಸಂಜೆಯವರೆಗೂ ತಾಳಭ್ಯಾಸ, ರಾತ್ರಿ ಹೊತ್ತಿಗೆ ಮನೆ ಸೇರುತ್ತಿದ್ದೆ . +ಹೀಗೆ ೨ಂ-೨೫ ದಿನ ತಾಳಭ್ಯಾಸ ನಡೆಯಿತು. +ಆ ಹೊತ್ತಿಗೆ ಯಕ್ಷಗಾನದಲ್ಲಿ ಉಪಯೋಗಿಸುವ ಎಲ್ಲಾ ತಾಳಗಳ ದಸ್ತು,ಮುಕ್ತಾಯಗಳ ಪ್ರಾಥಮಿಕ ಜ್ಞಾನ ಪಡೆದಂಂತಾಯ್ತು. +ಅಷ್ಟು ಹೊತ್ತಿಗೆ ಗುರುಗಳಾದ ಶ್ರೀನಿವಾಸ ಭಾಗವತರಿಗೆ ಮೇಳಕ್ಕೆ ಹೋಗುವ ಸಮಯ ಹತ್ತಿರಬಂತು. +ಹೀಗಾಗಿ ಅಷ್ಟಕ್ಕೆ ನನ್ನ ತಾಳಭ್ಯಾಸ ತರಗತಿ ಮುಗಿದು ನಾನು ಮನೆಸೇರಿದೆ. +ನನ್ನ ಈ ತಾಳಭ್ಯಾಸ ಸಮಯದಲ್ಲಿ ಎತ್ತಿನ ಹಟ್ಟಿ ಚರಡಪ್ಪಯ್ಯ ಎನ್ನುವವರು ಅವರಲ್ಲಿ ಸಂಗೀತ ಅಭ್ಯಾಸ ಮಾಡುತ್ತಿದ್ದರು. +ಮುಂಡೆ ಅವರು ಸೌಕೂರೇ ಮೊದಲಾದ ಹಲವು ಮೇಳಗಳಲ್ಲಿ ಸಂಗೀತಗಾರರಾಗಿ ದುಡಿದು ನಿವೃತ್ತರಾದರು. +ಜಂಬೂರು ಶ್ರೀನಿವಾಸ ಭಾಗವತರು ಆ ವರ್ಷ ಮೇಳಕ್ಕೆ ಹೋಗುವ ಮೊದಲು ನಮ್ಮ ಮನೆಗೆ ಬಂದು ತಾಯಿಯೊಡನೆ "ನಿಮ್ಮ ಹುಡುಗನನ್ನು ಈವರ್ಷ ಮೇಳಕ್ಕೆ ಸೇರಿಸುವೆ. +ನೀವು ಒಪ್ಪಿದರೆ ನಾನು ಹೋಗುವ ಅಮೃತೇಶ್ವರಿ ಮೇಳಕ್ಕೆ ಕರೆದುಕೊಂಡು ಹೋಗುತ್ತೇನೆ. +ಆತನಿಗೆ ನನ್ನಿಂದ ಸಾಧ್ಯವಾದಷ್ಟು ತರಬೇತಿ ನೀಡಿ ಉತ್ತಮ ಕಲಾವಿದನನ್ನಾಗಿ ರೂಪಿಸಿ ಗುರುಗಳ ಋಣ ತೀರಿಸುತ್ತೇನೆ” ಎಂದರು. +ತಾಯಿಯವರು ಇದು ಸರಿಯಾದ ತೀರ್ಮಾನವೆಂದು ಮನಗಂಡು ಕಳುಹಿಸಿಕೊಡಲು ಒಪ್ಪಿಗೆ ನೀಡಿದರು. +ಹೀಗಾಗಿ ನಾನು ಪ್ರಥಮವಾಗಿ ಕಲಾವಿದನಾಗಿ ಅಮೃತೇಶ್ವರಿ ಮೇಳಕ್ಕೆ ಸೇರಿದೆ. +ಹಲವಾರು ಕನಸುಗಳನ್ನು ಹೊತ್ತು ಮೇಳ ಸೇರಿದ್ದೆ. +ತಂದೆಯವರ ಕುರಿತಾದ ಹಲವಾರು ಪ್ರಶಂಸೆಯ ಮಾತುಗಳನ್ನು ಕೇಳಿದ್ದೆ. +ಅವರ ೪-೬ ವೇಷಗಳನ್ನುನೋಡಿದ್ದೆನಾದರೂ ಆ ಕುರಿತು ವಿಮರ್ಶಿಸುವ ಪ್ರಾಯ ನನ್ನದಲ್ಲ. +ಅವರ ಮಟ್ಟಕ್ಕೇರಲು ಸಾಧ್ಯವಾಗದೆ ಹೋದರೂ ಅವರ ಹೆಸರಿಗೆ ಕಳಂಕ ತರುವ ಮಟ್ಟದ ವೇಷಧಾರಿ ನಾನಾಗಬಾರದೆನ್ನುವ ಆಸೆ. +ಆ ವರ್ಷ ನಾನು ಸೇರಿದ ಅಮೃತೇಶ್ವರಿ ಮೇಳದಲ್ಲಿ ಭಾಗವತರಾಗಿ ಹೆರಂಜೆ ಶಿವರಾಮಯ್ಯ,ಸಂಗೀತಗಾರರಾಗಿ ಜಂಬೂರು ಶ್ರೀನಿವಾಸಯ್ಯ, ೨ನೇ ವೇಷಧಾರಿಯಾಗಿ ಹಾರಾಡಿಅಣ್ಣಯ್ಯ, ಪಾಂಡೇಶ್ವರ ಸದಾಶಿವಯ್ಯ, ಗುಂಡ್ಮಿ ಶೀನ, ಗುಂಡ್ಮಿ ಬಸವ, ಹಾರಾಡಿಬಾಬು ಗಾಣಿಗ ಇತರ ವೇಷಧಾರಿಗಳಾಗಿದ್ದ ನೆನಪು. +ಆ ವರ್ಷ ನಾನು ಕೋಡಂಗಿ ವೇಷ ಮಾಡಿ ಕಿರಾತರ ಪಡೆಗೆ ಹೋಗುತ್ತಿದ್ದೆ. +ಮಂಡಿ ತಿರುಗುವುದು,ಕುಮ್ಚಟ್ಟು ಹಾಕುವುದು ನನಗೆ ತಿಳಿದಿರುವ ಕಸರತ್ತುಗಳು. +ರಾತ್ರಿ ಸಮಯ ಸಿಕ್ಕಿದಾಗ ಹಿರಿಯ ಕಲಾವಿದರು ಕಳಚಿಟ್ಟ ಕೇದಿಗೆ ಮುಂದೆಲೆ, ಮುಂಡಾಸುಗಳ ಜರಿ ಬಿಚ್ಚಿ ಸುತ್ತಿ ಕೊಡುತ್ತಿದ್ದೆ. +ಇದು ಮುಂದೆ ವೇಷ ಮಾಡುವಾಗ ಉಪಯೋಗಕ್ಕೆ ಬರುತ್ತದೆಂದು ಕಲಾವಿದರ ಹಿತನುಡಿ. +ಹಗಲು ಹೊತ್ತಿನಲ್ಲಿ ಅಡ್ಡ ಪೆಟ್ಟಿಗೆಯವನೊಂದಿಗೆ ಪಡಿ ಸಾಮಾನು ತರಲು ಹೋಗುವುದು, ಆಟ ಆಡಿಸುವವರ ಮನೆಬಿಡಾರದಿಂದ ದೂರದಲ್ಲಿದ್ದರೆ ಗಣಪತಿ ಪೂಜೆ ಸಾಮಾನುಗಳಾದ ಹೂ ಹಣ್ಣುಕಾಯಿ, ದೀಪದೆಣ್ಣೆ ಮುಂತಾದ ಸಾಮಾನುಗಳನ್ನು ತರುವಲ್ಲಿ ಸಹಾಯ ಮಾಡುವುದು ನನ್ನ ಕರ್ತವ್ಯವಾಗಿತ್ತು. +ಉಳಿದಂತೆ ಹಗಲು ಹೊತ್ತಿನಲ್ಲಿ ಹಿರಿಯ ಕಲಾವಿದರ ಮಾರ್ಗದರ್ಶನದಲ್ಲಿ ಹೆಜ್ಜೆಗಾರಿಕೆ ಅಭ್ಯಾಸ ನನ್ನನ್ನು ಮೇಳಕ್ಕೆ ಕರೆದುಕೊಂಡು ಹೋದ ಶ್ರೀನಿವಾಸಯ್ಯನವರ ಮಾರ್ಗದರ್ಶನ ಇದ್ದೇ ಇತ್ತು. +ಈ ತಿರುಗಾಟದ ಇನ್ನೊಂದು ದೊಡ್ಡ ಅನುಭವ ಎಂದರೆ ಆಗಿನ ಕಾಲದ ಕಲಾವಿದರ ಕಷ್ಟದ ಜೀವನಾನುಭವ. +ಆಗಿನ ಕಾಲದಲ್ಲಿ ಈಗಿನಂತೆ ಯಾವ ಮೇಳಕ್ಕೂ ತಿರುಗಾಟ ಪೂರ್ತಿ ಹರಕೆ ಬಯಲಾಟ ಸಿಗುತ್ತಿರಲಿಲ್ಲ. +ಹೆಚ್ಚಿನ ಆಟ ಶ್ರೀಮಂತರ ಹಾಗೂ ಕಲಾಭಿಮಾನಿಗಳ ಉದಾರತೆಯಿಂದ ನಡೆಯಬೇಕಾಗಿತ್ತು . +ಅವರು ಕೊಟ್ಟದ್ದರಲ್ಲೇ ತೃಪ್ತಿಪಡಬೇಕಾಗಿತ್ತು. +ಕೆಲವು ದಿನ ಆಟವಿಲ್ಲದೆ ಮಲಗಬೇಕಾಗಿತ್ತು. +ಆಟ ಆಗುವ ಸ್ಥಳಕ್ಕೆ ೬-೮ ಮೈಲಿ ಕಾಲ್ನಡಿಗೆಯಿಂದಲೇ ಹೋಗಬೇಕು. +ಮೇಳದ ಸಾಮಾನು ತಲೆ ಹೊರೆಯಲ್ಲೇ ಸಾಗಬೇಕು. +ಕೆಲವೊಮ್ಮೆ ಅತಿದೂರದಲ್ಲಿ ಆಟವಾದರೆ ಅಲ್ಲಿಗೆ ಹೋಗಿ ತಲುಪುವುದರೊಳಗೆ ಸಂಜೆ ಆಗುತ್ತಿತ್ತು . +ಆ ಮೇಲೆ ಊಟ ತಯಾರಿಸಿ ಉಣ್ಣುವಷ್ಟರಲ್ಲೇ ಕತ್ತಲಾಗಿ ವೇಷ ಹಾಕಲು ಚೌಕಿ ಸೇರಬೇಕಾಗಿತ್ತು. +ಹೀಗಾಗಿ ಹಗಲಿನಲ್ಲಿ ನಿದ್ದೆ ಇಲ್ಲ, ವಿಶ್ರಾಂತಿ ಇಲ್ಲ. +ಮೇಳದಲ್ಲಿ ಕಲಾವಿದರ ಸಂಖ್ಯೆಯಲ್ಲಿ ಮಿತಿ ಇರುವುದರಿಂದ ಮುಖ್ಯ ವೇಷಧಾರಿಗಳು ೩-೪ ವೇಷ ಮಾಡಬೇಕಿತ್ತು. +ಇಷ್ಟು ಮಾಡಿಯೂ ತಿರುಗಾಟ ಮುಗಿದು ಮನೆಗೆ ಹೊರಡುವಾಗ ಸರಿಯಾದ ಲೆಕ್ಕಾಚಾರ ಮಾಡುವುದೂ ಅಪರೂಪ. +ಈ ತಿರುಗಾಟದಲ್ಲಿ ನಡೆದ ಒಂದೆರಡುವಿಶೇಷ ಘಟನೆಗಳ ಕುರಿತು ಪ್ರಸ್ತಾಪಿಸುತ್ತೇನೆ. +ನಮ್ಮ ಮೇಳವು ಧರ್ಮಸ್ಥಳಕ್ಕೆ ಹೋಗಿ ಸೇವೆ ಆಟ ಪೂರೈಸಿ ಮರಳಿಬರುವಾಗ ನೀರೆ ಬೈಲೂರಿನಲ್ಲಿ ಆಟ ಈ ದಿನ ಅನುಕೂಲವಿಲ್ಲ, ಮರುದಿನ ಆಟಮಾಡಿಸೋಣ ಎಂದು ತಿಳಿಸಿ ಬಿಡಾರದ ವ್ಯವಸ್ಥೆ ಮಾಡಿ ಪಡಿ ಸಾಮಾನುಕೊಟ್ಟು ಕಳುಹಿಸಿದರು. +ಆಗ ನಾನು, ನನ್ನ ಭಾವ ಸದಾಶಿವಯ್ಯ, ನನ್ನ ಅಕ್ಕನ ಮಗ ಗಿರಿಯಣ್ಣ ಸ್ನಾನ ಮಾಡಲು ನದಿ ಕಡೆ ಹೊರಟೆವು. +ದಾರಿಯಲ್ಲಿ ಒಂದುಮಾವಿನ ಮರದಲ್ಲಿ ಹಣ್ಣುಗಳು ಇರುವುದನ್ನು ಕಂಡು ಗಿರಿಯಣ್ಣನು ಅದನ್ನು ಬೀಳಿಸಲು ಹೊರಟ, ನನ್ನಲ್ಲಿರುವ ಸೋಟೆಯನ್ನು ಕಸಿದುಕೊಂಡು ಮರಕ್ಕೆ ಎಸೆದ. +ಅದು ಮರದಲ್ಲೇ ಸಿಕ್ಕಿಹಾಕಿಕೊಂಡಿತು. +ಸೋಟೆಯ ವಿಚಾರವಾಗಿ ನಮ್ಮೊಳಗೆ ಜಗಳವಾಗಿ ಹೊಡೆದಾಟ ಆರಂಭವಾಯಿತು. +ಇಬ್ಬರು ಹಾಕಿಕೊಂಡಿದ್ದ ಅಂಗಿ ಚೂರು ಚೂರಾಯಿತು. +ತಪ್ಪಿಸಲು ಬಂದ ಸದಾಶಿವಯ್ಯನವರಿಗೆ ಏಟುಬಿತ್ತು. +ವಿಚಾರ ತಿಳಿದ ಹಿರಿಯ ಕಲಾವಿದರು ನಮ್ಮಿಬ್ಬರನ್ನು ಎಳೆದುಕೊಂಡುಹೋಗಿ ಬಿಡಾರದಲ್ಲಿ ಕಂಬಕ್ಕೆ ಕಟ್ಟಿಹಾಕಿದರು. +ಅವರೆಲ್ಲಾ ಊಟಕ್ಕೆ ಹೋದಾಗ ಹೇಗೋ ಏನೋ ಕಷ್ಟ ಪಟ್ಟು ಗಿರಿಯಣ್ಣ ಬಿಡಿಸಿಕೊಂಡು ಮೇಳದಿಂದಲೇ ಪರಾರಿಯಾದ. +ಎಲ್ಲರ ಊಟವಾದ ಮೇಲೆ ನನ್ನನ್ನು ಬಿಡಿಸಿ ಊಟಕ್ಕೆ ಕಳಿಸಿ,ಗಿರಿಯಣ್ಣನಿಗಾಗಿ ಹುಡುಕಿದರು. +ಆತ ಪತ್ತೆಯಾಗಲೇ ಇಲ್ಲ. +ಆತ ಆಗ ೧೮ ದಿನಗಳ ಸೌಕೂರು ಮೇಳದವರು ನಿಟ್ಟೆಯಲ್ಲಿ ಆಡುತ್ತಿದ್ದ ಮಹಾಭಾರತದ ಆಟಕ್ಕೆ ಹೋಗಿ ಅಲ್ಲಿ ಮೇಳಕ್ಕೆ ಸೇರಿಕೊಂಡ. +ವಿಚಾರ ಆಮೇಲೆ ತಿಳಿಯಿತು. +ಅಂತೂ ಮಕ್ಕಳಾಟಿಕೆಯಿಂದ ಮೇಳಕ್ಕೆ ಒಬ್ಬ ಕಲಾವಿದ ತಪ್ಪಿದಂತಾಯಿತು. +ವೀರಭದ್ರ ಚೌಕಿಗೆ ಬಂದ ಅದೇ ದಿನ ರಾತ್ರಿ ಇನ್ನೊಂದು ಆಕಸ್ಮಿಕ ಘಟನೆ ನಡೆದುಹೋಯ್ತು. +ಆ ದಿನ ಆಟವಿಲ್ಲದುದರಿಂದ ನಾವೆಲ್ಲ ರಾತ್ರಿ ಊಟ ಪೂರೈಸಿ ಮಲಗಲು ಸಿದ್ಧತೆ ಮಾಡುತ್ತಿದ್ದೆವು. +ಮೇಳದ ಭಾಗವತರಾದ ಶಿವರಾಮಯ್ಯನವರು ತಮ್ಮ ಪರಿಚಯದವರ ಮನೆಗೆ ಹೋಗಿ ಊಟ ಪೂರೈಸಿಕೊಂಡು ಬಿಡಾರಕ್ಕೆ ಬಂದರು. +ವೀಳ್ಯ ಹಾಕುತ್ತಾ ಕಲಾವಿದರೊಡನೆ ಮಾತಾಡುತ್ತಾ ಇದ್ದವರು ಎಂಜಲನ್ನು ಉಗುಳಲು ಹೊರನಡೆದರು. +ಸ್ವಲ್ಪ ಹೊತ್ತಿನಲ್ಲೆ ಚೀರುತ್ತಾ ಕೂಗುವುದು ಕೇಳಿಬಂತು. +ನಾವೆಲ್ಲಾ ದೀಪ, ಲಾಟನು ಹಿಡಿದುಕೊಂಡು ಬಂದು ನೋಡುವಾಗ ಶಿವರಾಮಯ್ಯನವರು ಆಳವಾದ ಕಣಿವೆಯಲ್ಲಿ ಮೇಲೆ ಬರಲು ಸಾಧ್ಯವಾಗದೆ ಕೂಗುತ್ತಾ ಇದ್ದರು. +ಕೂಗಾಟದ ಸದ್ದಿಗೆ ಆಸುಪಾಸಿನವರೂ ಬಂದು ಸೇರಿದರು. +ಆ ಮೇಲೆ ಹಗ್ಗಕ್ಕೆ ತೊಟ್ಟಿಲು ಕಟ್ಟಿ ಕೆಳಗಿಳಿದು ಕಷ್ಟದಿಂದ ಭಾಗವತರನ್ನು ಮೇಲೆತ್ತಲಾಯಿತು. +ಮೈ ಕೈ ಜಜ್ಜಿ ತುಂಬಾ ನೊಂದಿದ್ದರು. +ಪುಣ್ಯವಶಾತ್‌ ಮೂಳೇಮುರಿತ ಆಗಿರಲಿಲ್ಲ. +ತುಂಬಾ ಹೆದರಿದ್ದರಿಂದ ಕೆಂಪು ಹಾನ ಮಾಡಿ ಸುಳಿದು ಚೆಲ್ಲಲಾಯಿತು. +ಕೋಳಿ ಕಡಿದು ಬಲಿಕೊಡಲಾಯಿತು. +ತುರ್ತು ಔಷಧೋಪಚಾರ ಮಾಡಿ ಮಲಗಿಸಿದರು. +ಮರುದಿನ ಸ್ವಲ್ಪ ಗುಣಮುಖರಾದಂತೆ ಕಂಡುಬಂದರು. +ಪದ್ಯ ಹೇಳುವ ಸ್ಥಿತಿಯಲ್ಲಿಲ್ಲ. +ಚೌಕಿಗೆ ಬಂದು ಮಲಗಿಬಿಟ್ಟರು. +ಕಲಾವಿದರು ವೇಷದ ತಯಾರಿಯಲ್ಲಿರುವ ಚೌಕಿಯಲ್ಲಿ ಮತ್ತೊಮ್ಮೆ ಚಿರಾಟ ಕೇಳಿಬಂತು. +ನಾವೆಲ್ಲ ಆಶ್ಚರ್ಯಚಕಿತರಾಗಿ ಆಚೆ ಈಚೆ ನೋಡುವಾಗ ವೇಷ ಮಾಡಿಕೊಳ್ಳುತ್ತಿದ್ದ ನೆಲ್ಲಿಗದ್ದೆ ಶೀನ ಎಂಬ ಕಲಾವಿದನ ಮೈ ಮೇಲೆ ದೈವದ ಆವೇಶವಾಗಿತ್ತು. +ಮೈಕೈ ಕುಣಿಸುತ್ತಾ, ಚೇರುತ್ತಾ ಗಣಪತಿ ಪೆಟ್ಟಿಗೆ ಬಳಿಗೆ ಓಡಿದ, ಅಲ್ಲಿರುವ ಹೂವನ್ನು ಕೈಗೆ ತೆಗೆದುಕೊಳ್ಳುತ್ತಾ “ನಾನು ಅಮೃತೇಶ್ವರಿಯ ವೀರಭದ್ರ ಮೇಳದಲ್ಲಿ ಅಶುದ್ಧವಾಗಿದೆ, ಆ ಕಾರಣಕ್ಕಾಗಿ ನಾನೇ ಭಾಗವತರನ್ನು ಕಂದಕಕ್ಕೆ ದೂಡಿದ್ದೇನೆ. +ನಾಳೆಯೇ ಅಮೃತೇಶ್ವರಿಗೆ ಯಾರಾದರೂ ಹೋಗಿ ಮೂಲ ಪ್ರಸಾದ ತಂದು ಶುದ್ಧಮಾಡಿಕೊಳ್ಳಬೇಕು” ಎಂದು ಹೇಳುತ್ತಾ ಭಾಗವತರ ಮುಖಕ್ಕೆ ನೀರು ಚೆಲ್ಲಿ ಅಲ್ಲಿರುವ ಕುಂಕುಮವನ್ನು ಹಣೆಗೆ ಹಚ್ಚಿ, "ಇನ್ನು ಪದ್ಯ ಹೇಳಲು ರಂಗಸ್ಕಳಕ್ ಕೆಹೋಗಬಹುದು” ಎಂದು ಹೇಳುತ್ತಾ ದೈವ ಮೈಬಿಟ್ಟಿತು. +ಸಾಧ್ಯವಿಲ್ಲವೆಂದು ಹೇಳಿದ ಭಾಗವತರು ಎಂದಿನಂತೆ ಪದ್ಯ ಹೇಳಿ ಆಟ ಪೂರೈಸಿದರು. +ವೀರಭದ್ರ ಹೇಳಿದಂತೆ ಪ್ರಸಾದ ತಂದು ಶುದ್ಧ ಮಾಡಿಕೊಂಡು ತಿರುಗಾಟ ಮುಂದುವರಿಸಿದೆವು. +ಸ್ವಲ್ಪ ದಿನದಲ್ಲೇ ಅಸೌಖ್ಯದಿಂದ ಮೇಳದ ಸಂಗೀತಗಾರರಾಗಿದ್ದ ಜಂಬೂರು ಶ್ರೀನಿವಾಸ ಭಾಗವತರು ಮನೆಗೆ ತೆರಳಿದರು. +ತಿಂಗಳು ಕಳೆದರೂ ಮರಳಿಬರಲಿಲ್ಲ. +ಒಂದು ದಿನ ಕಲಾವಿದರೊಬ್ಬರು ದುಃಖದ ವಾರ್ತೆ ಒಂದನ್ನು ತಂದರು. +ಶ್ರೀನಿವಾಸ ಭಾಗವತರು ಯಾವುದೇ ಔಷಧಿಯಿಂದಲೂ ಗುಣಮುಖರಾಗದೆ ನಿಧನರಾಗಿದ್ದರು. +ನನಗೆ ತಾಳಭ್ಯಾಸ ಮಾಡಿಸಿದ, ಮೇಳಕ್ಕೆಸೇರಿಸಿದ,ಸರ್ವವಿಧದಲ್ಲೂ ಮಾರ್ಗದರ್ಶಕರಾಗಿದ್ದ,ನಮ್ಮ ಸಂಸಾರದ ಹಿತಚಿಂತಕರಾಗಿದ್ದ ಭಾಗವತರನ್ನು ಕಳೆದುಕೊಂಡು ಅನಾಥನಂತಾದೆ. +ಆ ವರ್ಷದಮೇಳದ ತಿರುಗಾಟ ಮುಗಿಸಿ ಮನೆಗೆ ಹೊರಡುವಾಗ ಮೇಳದ ಯಜಮಾನರು ಸಂಬಳವಾಗಿ ಏನನ್ನೂ ಕೊಡಲಿಲ್ಲ. +ಕೇಳುವ ಶ್ರೀನಿವಾಸಯ್ಯ ಕಾಣದ ಊರಿಗೆತೆರಳಿದ್ದರು. +ಬೇರೆ ಕಲಾವಿದರಲ್ಲಿ ಕೇಳಿದಾಗ ಪ್ರಥಮ ವರ್ಷ ಸಂಬಳ ಕೊಡುವಕ್ರಮ ಕೆಲವು ಮೇಳದಲ್ಲಿ ಇಲ್ಲವೆಂದು ತಿಳಿಯಿತು. +ಹಾಗಾಗಿ ಬರಿಗೈಯಿಂದ ಮನೆಗೆ ಮರಳಿದೆ. +ತಿರುಗಾಟದ ಅವಧಿಯಲ್ಲಿ ಖರ್ಚಿಗೆ ತಾಯಿಯಿಂದ ಅಲ್ಪಸ್ವಲ್ಪ ಹಣ ತೆಗೆದುಕೊಳ್ಳುತ್ತಿದ್ದೆ. +ಮಧ್ಯೆ ಮಧ್ಯೆ ಭಾವ ಸದಾಶಿವಯ್ಯನವರು ಕೇಳಿದಾಗ ಕೊಡುತ್ತಿದ್ದರು. +ಹೀಗೆ ಆ ವರ್ಷದ ತಿರುಗಾಟ ನಿಜವಾದ ಅರ್ಥದಲ್ಲಿ ದೇವರ ಸೇವೆಯಾಗಿಯೇ ಮುಗಿಯಿತು. +ಮುಂದಿನ ವರ್ಷ ಅಮೃತೇಶ್ವರಿ ಮೇಳಕ್ಕೆ ಹೋಗಿ ಸೇರಿದೆ. +ಹಾಗೆ ಸೇರುವಲ್ಲಿ ದೂರದ ಆಸೆಯೊಂದು ಕಾರಣವಾಗಿತ್ತು . +ಈ ತಿರುಗಾಟದಲ್ಲಿ ಹಿಂದಿನ ವರ್ಷಕೊಡದೆ ಬಾಕಿ ಇರುವ ಹಣ ಸೇರಿಸಿ ಕೊಟ್ಟಾರೆಂಬ ಭಾವನೆ. +ಆ ವರ್ಷಮೇಳದಲ್ಲಿ ಕೋಟ ಶ್ರೀನಿವಾಸನಾಯ್ಕರು ಭಾಗವತರಾಗಿಯೂ, ಮಾರ್ವಿರಾಮಕೃಷ್ಣಯ್ಯ ೨ನೇ ವೇಷಧಾರಿಯಾಗಿಯೂ, ಸಾಲಿಗ್ರಾಮ ಮಂಜುನಾಥಯ್ಯ ಹಾಸ್ಯಗಾರರಾಗಿಯೂ, ಬ್ರಹ್ಮಾವರ ಶ್ರೀನಿವಾಸನಾಯ್ಕರು ಮುಖ್ಯ ವೇಷಧಾರಿಯೂ ಇದ್ದರು. +ನಾನು ಬಾಲಗೋಪಾಲ, ೩ನೇ ಸ್ತೀ ವೇಷ ಹಾಗೂ ಪ್ರಸಂಗದಲ್ಲಿ ಬರುವ ಚಿಕ್ಕಪುಟ್ಟ ವೇಷಗಳನ್ನು ಮಾಡುತ್ತಿದ್ದೆ. +ನಮ್ಮ ಮೇಳದ ಆಟ ಗಂಗೊಳ್ಳಿಯಲ್ಲಿದ್ದ ದಿನ ನಾನು ಇತರ ಕೆಲವು ಕಲಾವಿದರೊಂದಿಗೆ ಕೋಟೇಶ್ವರ ಜಾತ್ರೆಗೆ ಬಂದಿದ್ದೆ. +ಅಲ್ಲಿಗೆ ಘಟ್ಟದ ಮೇಲಿನ ಚಿಕ್ಕ ಹೊನ್ನೆಸರ ಮೇಳದ ಯಜಮಾನರೂ, ಭಾಗವತರೂ ಆದ ತಿಮ್ಮಪ್ಪಯ್ಯ, ೨ನೇ ವೇಷಧಾರಿಯಾದ ರಾಮ ಚಂದ್ರಯ್ಯ, ಪುರುಷ ವೇಷಧಾರಿಯಾದ ಕಾನ್ಗೋಡು ಮಂಜಪ್ಪಯ್ಯ ಚಿಕ್ಕಹೊನ್ನೆಸರದ ಗಣಪತಿ ಭಟ್ಟರು ಮೊದಲಾದವರು ಬಂದಿದ್ದರು. +ಅವರೊಟ್ಟಿಗೆ ಆಗಿನ ಪ್ರಸಿದ್ಧ ವೇಷಧಾರಿಯಾಗಿದ್ದ ಕೋಟೇಶ್ವರದ ಕೋಟಿ ಮಾಣಿಯವರೂ ಇದ್ದರು. +ಇವರು ನನ್ನ ತಂದೆಯ ಶಿಷ್ಯರೂ ಹಾಗೂ ಉತ್ಕಟ ಅಭಿಮಾನಿಯೂ ಆಗಿದ್ದರು. +ಅವರು ನನ್ನನ್ನು ಬಳಿಗೆ ಕರೆದು ಚಿಕ್ಕಹೊನ್ನೆಸರ ಮೇಳಕ್ಕೆ ತನ್ನೊಟ್ಟಿಗೆ ಬರುವಂತೆ ಆಹ್ವಾನಿಸಿದರು. +ಹಾಗೆ ಬಂದಲ್ಲಿ ಅಮೃತೇಶ್ವರಿ ಮೇಳದವರು ನಿಶ್ಚಯಮಾಡಿದ ಸಂಬಳಕ್ಕಿಂತ ೨೫ ರೂ.ಹೆಚ್ಚಿಗೆ ಕೊಡುವುದಾಗಿ ಆಸೆಯನ್ನು ತೋರಿಸಿದರು. +ಅಲ್ಲದೆ, ಅಲ್ಲಿ ಅವರು ನನಗೆ ಮಾರ್ಗದರ್ಶಕರಾಗಿ ತಂದೆಯಂತೆ ಉತ್ತಮ ವೇಷಧಾರಿಯನ್ನಾಗಿ ಮಾಡುವೆನೆಂಬ ಭರವಸೆಯನ್ನು ನೀಡಿದರು. +ಅವರ ಸೂಚನೆಗೆ ಒಪ್ಪಿ ೨೫ ರೂಪಾಯಿ ಮುಂಗಡ ಹಣ ತೆಗೆದುಕೊಂಡು ಆ ದಿನ ಗಂಗೊಳ್ಳಿಗೆ ಹೋಗಿ ನನ್ನ ಪಾಲಿನ ವೇಷ ಮಾಡಿ ರಾತ್ರೋರಾತ್ರಿ ಮೇಳಬಿಟ್ಟು ಕೋಟೇಶ್ವರಕ್ಕೆ ಬಂದು ಅವರನ್ನು ಕೂಡಿಕೊಂಡೆ. +ಘಟ್ಟದ ಮೇಲೆ ಚಳಿ ವಿಪರೀತ ಇರುವುದರಿಂದ ಮೇಳ ಏಳಲೂ ಇನ್ನೂ ಒಂದು ತಿಂಗಳು ತಡವಿತ್ತು. +ಆದ್ದರಿಂದ ಮೇಳದ ಯಜಮಾನರು ನನ್ನನ್ನು ಸಾಗರದ ಕೃಷ್ಣಭವನದಲ್ಲಿ ಬಿಟ್ಟು ಊಟ, ವಸತಿಗೆ ವ್ಯವಸ್ಥೆ ಮಾಡಿದರು. +ಅಲ್ಲಿ ಆ ವರ್ಷ ಸುಸೂತ್ರವಾಗಿ ಆ ತಿರುಗಾಟವನ್ನು ಪೂರೈಸಿ ಮನೆಗೆ ಬಂದೆ. +ಮುಂದಿನ ವರ್ಷದ ತಿರುಗಾಟಕ್ಕೆ ಸೌಕೂರು ಮೇಳಕ್ಕೆ ಸೇರಿದೆ. +ಆಗ ಆಮೇಳದ ಯಜಮಾನರು ಸೌಕೂರು ಅಂತಯ್ಯ ಶೆಟ್ಟರಾಗಿದ್ದರು. +ಶ್ರೀಯುತರು ತುಂಬಾ ಪ್ರಭಾವಶಾಲಿ ವ್ಯಕ್ತಿಗಳಾಗಿದ್ದು, ಬಹಳ ಶಿಸ್ತಿನಿಂದ ಮೇಳ ನಡೆಸುತ್ತಿದ್ದರು. +ಅಲ್ಲಿ ಒಂದು ತಿರುಗಾಟವನ್ನು ವ್ಯವಸ್ಥಿತ ರೀತಿಯಲ್ಲಿ ಪೂರೈಸಿ ಮನೆಗೆ ಮರಳಿದೆ. +ಮುಂದಿನ ವರ್ಷ ಆ ಕಾಲದಲ್ಲಿ ಪ್ರಸಿದ್ಧ ಮೇಳವೆನಿಸಿಕೊಂಡಿದ್ದ ಮಂದರ್ತಿ ಮೇಳಕ್ಕೆ ಸೇರಬೇಕೆಂದು ಮನಸ್ಸಿನಲ್ಲಿಯೇ ನಿಶ್ಚಯ ಮಾಡಿಕೊಂಡಿದ್ದೆ. +ಮೇಳ ಆರಂಭಕ್ಕೆ ಸ್ವಲ್ಪ ದಿನ ಇರುವಾಗ ನನ್ನ ತಾಯಿಯವರು ಮುಂದಿನ ತಿರುಗಾಟಕ್ಕೆ ಹೋಗುವಾಗ ತಮ್ಮನಾದ ಸೀತಾರಾಮನನ್ನು ಕರೆದುಕೊಂಡು ಹೋಗುವಂತೆ ಸೂಚಿಸಿದರು. +ಅದಕ್ಕೆ ನಾನು “ಈಗ ಯಾರೂ ಪ್ರಥಮ ವರ್ಷಸಂಬಳ ಕೊಡುವುದಿಲ್ಲ. +ಹಾಗೆ ಕರೆದುಕೊಂಡು ಹೋದರೆ ನಾನೇ ಖರ್ಚಿಗೆ ಕೊಡಬೇಕಾಗುತ್ತದೆ. +ಆದ್ದರಿಂದ, ಈ ವರ್ಷ ಬೇಡ” ಎಂದು ತಿಳಿಸಿದೆ. +ನನ್ನ ಮಾತು ತಾಯಿಯವರಿಗೆ ಸಮಾಧಾನ ತಂದಂತೆ ಕಾಣಲಿಲ್ಲ. +ಅವರ ಮನಸ್ಸನ್ನು ನೋಯಿಸಬಾರದೆಂದು ತಮ್ಮನನ್ನು ಕರೆದುಕೊಂಡು ಮಂದರ್ತಿ ಮೇಳಕ್ಕೆ ಸೇರಿದೆ. +ಮಂದರ್ತಿ ಮೇಳದಲ್ಲಿ ಆಗ ಒಂದು ವಿಶಿಷ್ಟ ಪದ್ಧತಿಯಿತ್ತು . +ದೇವರ ಸೇವೆಯ ಬಳಿಕ ಕಟ್ಟುಕಟ್ಟಲೆಯ ೫ ಆಟಗಳು ಮುಗಿದ ಬಳಿಕ ಮೇಳಕ್ಕೆ ಬೇಕಾದ ಕಲಾವಿದರನ್ನು ಆಯ್ದು ಅವರನ್ನು ಸಂಬಳದ ಹೊಂದಾಣಿಕೆಯಾದಲ್ಲಿ ಸೇರಿಸಿಕೊಂಡು ತಿರುಗಾಟ ಆರಂಭಿಸುತ್ತಿದ್ದರು. +ಆ ವರ್ಷ ನಾನು ಹಾಗೂ ಇನ್ನಿತರ ಕೆಲವು ಕಲಾವಿದರು ಆಯ್ಕೆಯಾಗಿಲ್ಲ. +ಅಥವಾ ಸಂಬಳದ ಹೊಂದಾಣಿಕೆಯಾಗಿಲ್ಲ. +ಆದ್ದರಿಂದ ನಾನು, ಮದ್ದಳೆಗಾರರಾದ ಬೇಳಂಜೆ ತಿಮ್ಮಪ್ಪನಾಯ್ಕ ಗೋರ್ಪಾಡಿ ವಿಠಲ ಪಾಟೀಲರು, ಶಿರಿಯಾರ ಗುಂಡ, ಎತ್ತಿನಹಟ್ಟ ತೇಜಪ್ಪ ಶೆಟ್ಟಿ ಮುಂತಾದವರು ಹೊರಟು ಮಾರಣಕಟ್ಟೆ ಮೇಳ ಸೇರಿದೆವು. +ಅಲ್ಲಿ ಆಗ ಮಜ್ಜಿಗೆ ಬೈಲು ಚಂದಯ್ಯ ಶೆಟ್ಟರ ಯಜಮಾನಿಕೆ. +ಅವರೇ ೨ನೇವೇಷಧಾರಿಗಳಾಗಿದ್ದರು. +ನಾನು ಮುಖ್ಯ ಬಣ್ಣದ ವೇಷಕ್ಕೆ ನಿಶ್ಚಯವಾಗಿದ್ದೆ. +ಆದರೆ ದೇವರ ಸೇವೆಯ ದಿನ ಬೇಲ್ತೂರು ರಾಮ ಬಳೆಗಾರರೂ ಬಂದಿದ್ದರು. +ಅವರು ನನಗಿಂತ ಹಿರಿಯ ಕಲಾವಿದರಾಗಿದ್ದರು. +ಹಾಗಾಗಿ ನಾನು ಅವರಿಗೆ ಮುಖ್ಯ ಬಣ್ಣದ ಜಾಗ ಬಿಟ್ಟುಕೊಟ್ಟು ಒತ್ತು ಬಣ್ಣ ಮಾಡುವೆನೆಂದು ಒಪ್ಪಿಗೆಯಿತ್ತೆ. +ತಿರುಗಾಟ ಆರಂಭವಾಯಿತು. +ನನ್ನೊಂದಿಗೆ ತಮ್ಮ ಸೀತಾರಾಮನನ್ನು ಕರೆದುಕೊಂಡು ಹೋದೆ. +ಅದೇ ವರ್ಷದ ತಿರುಗಾಟದಲ್ಲಿ ಒಂದು ಮೇಳಾಂತರ ಪ್ರಸಂಗ ನಡೆದುಹೋಯಿತು, ನಮ್ಮ ಮೇಳದ ಆಟ ಕಿರಿ ಮಂಜೇಶ್ವರದಲ್ಲಿ. +ನಮ್ಮ ಕಲಾವಿದರಿಗೆ ಮುಖಕ್ಕೆ ಹಚ್ಚುವ ಬಣ್ಣ (ಸಪೇತು) ಹೆಚ್ಚಾಗಿ ಬಸ್ರೂರಿನಿಂದ ತರುವ ಕ್ರಮ. +ಆ ದಿನ ನಾಲ್ಕಾರು ಮಂದಿ ಕಲಾವಿದರು ನನ್ನಲ್ಲಿ ಬಣ್ಣ ತರಲು ಹಣ ಕೊಟ್ಟು,ಹೋಗಿ ಬರಲು ಬಾಡಿಗೆ ಸೈಕಲ್‌ ತೆಗೆಸಿಕೊಟ್ಟು ಬಸ್ರೂರಿಗೆ ಹೋಗಿ ಬರುವಂತೆ ತಿಳಿಸಿದರು. +ಆ ಸಮಯ ನಾನು ಹೊಸತಾಗಿ ಸೈಕಲ್ಲು ಕಲಿತವನಾದುದರಿಂದ ಒಳ್ಳೆಯ ಉಮೇದಿನಲ್ಲೇ ಹೊರಟೆ. +ಆದರೆ ಬಸ್ರೂರಿಗೆ ಬಂದು ತಲುಪುವಷ್ಟರಲ್ಲಿ ಸೈಕಲ್ಲು ಕೆಟ್ಟು ಹೋಯಿತು. +ದುರಸ್ತಿಗೆ ಕೊಟ್ಟಾಗ ೨-೩ ಗಂಟೆ ಬಳಿಕ ಕೊಡುವುದಾಗಿ ತಿಳಿಸಿದರು. +ಅದೇ ದಿನ ಬಸ್ರೂರಿನಲ್ಲಿ ಸೌಕೂರು ಮೇಳದಆಟವಿತ್ತು . +ಹೊರಡುವುದು ತಡವಿರುವುದರಿಂದ ಮೇಳದ ಬಿಡಾರಕ್ಕೆ ಹೋದೆ. +ಅಲ್ಲಿಯೇ ಊಟ ತೀರಿಸಿದೆ. +ಆಗ ಸೌಕೂರು ಮೇಳದಲ್ಲಿ ಹಾರಾಡಿ ಮಂಜುನಾಥಗಾಣಿಗ, ಬಣ್ಣದ ಸಂಜೀವ, ಶಿರಿಯಾರ ಮಂಜುನಾಯ್ಕ ಮುಂತಾದವರಿದ್ದರು. +ಕೋಡಿ ಶೀನನವರು ತಿರುಗಾಟದ ಯಜಮಾನರಾಗಿದ್ದರು. +ಅವರು ನನ್ನನ್ನು ಸೌಕೂರು ಮೇಳಕ್ಕೆ ಬರುವಂತೆ ಆಹ್ವಾನಿಸಿದರು. +ಮಾರಣಕಟ್ಟೆ ಮೇಳದಲ್ಲಿ ನಿಶ್ಚಯಿಸಿದ ಸಂಬಳಕ್ಕಿಂತ ೬ಂ ರೂ.ಹೆಚ್ಚಿಗೆ ಕೊಡುವುದಾಗಿ ಆಸೆ ತೋರಿಸಿದರು. +“ಅಡ್ವಾನ್ಸ್‌' ಆಗಿ ಅಲ್ಲಿಯೇ ಹಣ ಕೊಟ್ಟರು. +ಮರುದಿನ ಖಂಡಿತ ಬರುವೆನೆಂದು ಭರವಸೆಯಿತ್ತು ದುರಸ್ತಿಯಾದ ಸೈಕಲ್ಲನ್ನೇರಿ ಕಿರು ಮಂಜೇಶ್ವರಕ್ಕೆ ಹೊರಟೆ. +ಆ ದಿನ ಪಾಲಿಗೆ ಬಂದ ವೇಷಮಾಡಿ ಬಟ್ಟೆ ಸಾಮಾನು ತೆಗೆದುಕೊಂಡು ಯಾರಿಗೂ ಹೇಳದೆ ತಮ್ಮನೊಂದಿಗೆ ಮೇಳದಿಂದ ಹೊರಡುವುದೆಂದು ನಿಶ್ಚಯಿಸಿದ್ದೆ. +ಆದರೆ ಪ್ರಯಾಣದಿಂದ ಆಯಾಸಗೊಂಡ ನನಗೆ ದೀರ್ಥನಿದ್ದೆ ಆವರಿಸಿ, ಸಮಯಕ್ಕೆ ಸರಿಯಾಗಿ ವೇಷ ತಯಾರಿಗೆ ಏಳಲು ಸಾಧ್ಯವಾಗಲಿಲ್ಲ. +ಯಜಮಾನರು ಕೂಡ “ತುಂಬ ದಣಿದಿರಬೇಕು, ಏಳಿಸುವುದು ಬೇಡ” ಎಂದು ನನಗೆ ಹಾಕಿದ ವೇಷವನ್ನು ಬೇರೆಯವರಿಂದ ಮಾಡಿಸಿದರು. +ಹೀಗಾಗಿ ಆ ದಿನ ಬೆಳಿಗ್ಗಿನ ಜಾವ ಹೊರಡಲು ಸಾಧ್ಯವಾಗಲಿಲ್ಲ. +ಮರುದಿನ ಆಟ ಕಂಬದಕೋಣೆಯಲ್ಲಿ. +ಆ ದಿನ ಬಿಡಾರಕ್ಕೆ ಹೋಗಿ ಮಧ್ಯಾಹ್ನ ಉಳಿದ ಕಲಾವಿದರಿಗಿಂತ ಮೊದಲೇ ಊಟ ತೀರಿಸಿ, ಬಟ್ಟೆಗಂಟಿನೊಂದಿಗೆ ತಮ್ಮನನ್ನು “ನೀನು ಮುಂದೆ ಹೋಗಿ ನಾಗೂರಿನ ಹೋಟೆಲ್‌ನಲ್ಲಿಕುಳಿತಿರು, ನಾನು ಹಿಂದಿನಿಂದ ಬಂದು ನಿನ್ನನ್ನು ಸೇರಿಕೊಳ್ಳುವೆ” ಎಂದು ತಿಳಿಸಿ ಕಳುಹಿಸಿದೆ. +ಆದರೆ ಎಲ್ಲರ ಕಣ್ಣು ತಪ್ಪಿಸಿ ಹೊರಡುವುದು ತಡವಾಯಿತು. +ಆದರೂ ಸಂಜೆಯೊಳಗೆ ಎಲ್ಲರೂ ನಿದ್ರಿಸಿದ ಸಮಯ ಸಾಧಿಸಿ ಹೊರಟು ನಾಗೂರಿನಲ್ಲಿ ತಮ್ಮನನ್ನು ಕೂಡಿಕೊಂಡು ಹೊರಡುವಾಗಲೇ ಕತ್ತಲಾಗಿತ್ತು. +ಹಾಗಾಗಿ ಕುಂದಾಪುರ ಸೇರುವಾಗ ಮಧ್ಯರಾತ್ರಿಯಾಗಿತ್ತು. +ಆ ದಿನ ಸೌಕೂರು ಮೇಳದ ಆಟ ಕಂದಾವರದಲ್ಲಿ. +ಅಲ್ಲಿಗೆ ತಲುಪುವುದು ಕಷ್ಟವಾಗಿ ತೋರಿದ್ದರಿಂದಆ ದಿನ ರಾತ್ರಿ ದೇವಸ್ಥಾನವೊಂದರಲ್ಲಿ ಮಲಗಿ ಬೆಳಗ್ಗೆ ಬೇಗನೆ ಎದ್ದು ಸೌಕೂರುಮೇಳದ ಬಿಡಾರ ಸೇರಿಕೊಂಡೆವು. +ಆ ವರ್ಷದ ತಿರುಗಾಟ ಸುಸೂತ್ರವಾಗಿ ಆ ಮೇಳದಲ್ಲಿ ಸಾಗಿತು. +ಒಂದೆರಡು ವರ್ಷದ ತಿರುಗಾಟ ಕೂಡಾ ಅಲ್ಲೇ ನಡೆಯಿತು. +ಆ ಹೊತ್ತಿಗೆ ನನ್ನ ತಮ್ಮ ಸೀತಾರಾಮ ಬಬ್ರುವಾಹನ ಮುಂತಾದ ಪುಂಡುವೇಷ,ಪ್ರಮೀಳೆ, ಪದ್ಮಗಂಧಿನಿ ಮುಂತಾದ ಕಸೆವೇಷಗಳನ್ನು ಮಾಡುವಷ್ಟರ ಮಟ್ಟಿಗೆ ತಯಾರಾಗಿದ್ದ. +೩ನೇ ವರ್ಷದ ತಿರುಗಾಟದಲ್ಲಿರುವಾಗ ನಡೆದ ಒಂದು ಘಟನೆಯನ್ನು ತಿಳಿಸ ಬಯಸುತ್ತೇನೆ. +ಒಂದು ದಿನ ಪುಂಡರೀಕ ಚರಿತ್ರೆ ಪ್ರಸಂಗ ನಿಶ್ಚಯವಾಗಿತ್ತು. +ನನ್ನ ತಮ್ಮ ಅದರಲ್ಲಿ ಪುಂಡರೀಕನ ಪಾತ್ರ ಮಾಡುತ್ತಿದ್ದ . +ಉಡುಪಿ ಬಸವನವರ ಚಂದ್ರ. +ಹಾರಾಡಿ ಬಸವನವರ ತಾರೆ. +ಮಂಜುನಾಥ ಗಾಣಿಗರ ಬೃಹಸ್ಪತಿ. +ನನಗೆ ಒಂದು ಗಂಧರ್ವನ ವೇಷ ಹಾಕಿದ್ದರು. +ಆತನು ಚಂದ್ರವಲ್ಲಿಗೆ ಬೃಹಸ್ಪತಿಯ ಪರವಾಗಿ ಹೋಗಿ ತಾರೆಯನ್ನು ಬಿಟ್ಟು ಕೊಡುವಂತೆ ಸಂಧಾನ ಮಾಡುವ ಸನ್ನಿವೇಶ. +ಗಂಧರ್ವ ಸಂಧಾನ ನಡೆಯದೆ ವಾಪಾಸು ಮರಳುತ್ತಾನೆ. +ಇದು ಪ್ರಸಂಗದ ಸನ್ನಿವೇಶ. +ಆದರೆ ಆ ದಿನ ಸಂಧಾನಕ್ಕೆ ಹೋದಾಗ ಚಂದ್ರ, ತಾರೆ ವೇಷಮಾಡಿದವರು ಅತಿರೇಕಕ್ಕೆ ಮುಂದಾದರು. +ನನ್ನ ಮುಂಡಾಸು ಕಳಚಿ, ಗಡ್ಡಮೀಸೆಯನ್ನು ಕಿತ್ತು ತೆಗೆದು ಅವಮಾನ ಮಾಡಿ ಕಳಿಸಿದರು. +ಪ್ರಸಂಗದಲ್ಲಿ ಇಲ್ಲದಿರುವ ಸನ್ನಿವೇಶ ಮಾಡಿ ನನ್ನನ್ನು ಬೇಕಂತಲೇ ಅವಮಾನಿಸಿದರೆಂದುನನಗೆ ಸಿಟ್ಟು ಬಂದು, ಮರುದಿನ ನಾನು ಮೇಳದಿಂದ ಹೊರಟೆ. +ಆಗ ಪಂಚಾಯಿತಿಕೆ ಮೇಳದ ಯಜಮಾನರಲ್ಲಿ ಹೋಗುವ ಸಂಭವ ತಿಳಿದು ಊರವರು ಹಾಗೂ ಹಿರಿಯ ಕಲಾವಿದರು ನನ್ನನ್ನು ಸಮಾಧಾನಪಡಿಸಿ ಮೇಳದಲ್ಲೇ ಉಳಿಸಿಕೊಂಡರು. +ಅಂತೂ ಆ ವರ್ಷ ತಿರುಗಾಟ ಸುಸೂತ್ರವಾಗಿ ಅಲ್ಲಿಯೇ ಪೂರೈಸಿದೆ. +ಮುಂದಿನ ತಿರುಗಾಟ ಪುನಃ ಅಮೃತೇಶ್ವರಿಯಲ್ಲೇ ಮಾಡುವುದೆಂದು ನಿಶ್ಚಯಿಸಿದೆ. +ಆ ಸಮಯಕ್ಕೆ ನನ್ನ ತಮ್ಮ ಸೀತಾರಾಮ ಖಾಸಗಿಯಾಗಿ ೮ನೇತರಗತಿಯಲ್ಲಿ ತೇರ್ಗಡೆ ಹೊಂದಿ ಶಿಕ್ಷಕರ ತರಬೇತಿಗೆ ಹೋಗುವ ತಯಾರಿಯಲ್ಲಿದ್ದುದರಿಂದ ಆತನು ಮೇಳದ ತಿರುಗಾಟ ನಿಲ್ಲಿಸಿದ. +ಮುಂದೆ ತರಬೇತಿ ಪೂರೈಸಿ ಶಿಕ್ಷಕ ವೃತ್ತಿಗೆ ಸೇರಿದ. +ಆದರೂ ಯಕ್ಷಗಾನದ ಗೀಳು ಆತನನ್ನು ಬಿಡಲಿಲ್ಲ. +ಆಗಾಗ ಕರೆದಲ್ಲಿ ಹವ್ಯಾಸಿ ಕಲಾವಿದನಾಗಿ ವೇಷ ಹಾಕುತ್ತಿದ್ದ. +ಆತನು ಮೇಳದಲ್ಲಿರುವಾಗ ನಾನು ತಾಳಗಳನ್ನು ನಿಖರವಾಗಿ ಕಲಿಸಿದ್ದೆ. +ಅದನ್ನು ವೃದ್ಧಿಪಡಿಸಿಕೊಂಡು ಭಾಗವತಿಕೆ ಮಾಡಲು, ಚಂಡೆ, ಮದ್ದಳೆ ಬಾರಿಸುವುದರಲ್ಲಿಯೂ ಪ್ರಾವಿಣ್ಯ ಪಡೆದಿದ್ದ. +ಮುಂದೆ ಈತನು ನಿವೃತ್ತಿಯಾದ ಮೇಲೆ ಯಕ್ಷಗಾನ ತರಬೇತಿಯ ತರಗತಿಗಳನ್ನು ತೆರೆದು ಆಸಕ್ತರಿಗೆ ಹಿಮ್ಮೇಳ,ಮುಮ್ಮೇಳದಲ್ಲಿ ತರಬೇತಿ ನೀಡುತ್ತಿದ್ದ. +ಆತನಿಂದ ತರಬೇತಿ ಪಡೆದವರಲ್ಲಿ ಅನೇಕರು ವೃತ್ತಿ ಕಲಾವಿದರಾಗಿಯೂ ಸೇವೆ ಸಲ್ಲಿಸಿದರು. +ಹೀಗೆ ಆತನು ಶಿಕ್ಷಕನಾಗಿ,ಯಕ್ಷಗಾನ ವೇಷಧಾರಿಯಾಗಿ, ಯಕ್ಷಗಾನ ಕಲಿಸುವ ಶಿಕ್ಷಕನಾಗಿ ದುಡಿದು ಇತ್ತೀಚೆಗಷ್ಟೇ ನಿಧನನಾದ. +ನಾನು ನಿಶ್ಚಯಿಸಿದಂತೆ ಅಮೃತೇಶ್ವರಿ ಮೇಳಕ್ಕೆ ಸೇರಿಕೊಂಡೆ. +ಮೇಳದ ಯಜಮಾನರು ಬಲರಾಮ ಹಂದೆಯವರು. +ತಿರುಗಾಟದ ಯಜಮಾನರು ಹಾರಾಡಿ ಕುಷ್ಟಗಾಣಿಗರು. +ಒಂದು ಜೋಡಾಟದ ಮರುದಿನ ಆಟ ಆಡಿಸುವವರು ದ್ರೌಪದಿ ಪ್ರತಾಪ ಮಾಡಬೇಕೆಂದು ನಿಶ್ಚಯಮಾಡಿದ್ದರು. +ನಾನು ಧರ್ಮರಾಯನ ವೇಷದ ತಯಾರಿಯಲ್ಲಿದ್ದೆ. +ಆದರೆ ಅರ್ಜುನನ ಪಾತ್ರ ಮಾಡುವ ಕುಪ್ಪ ಗಾಣಿಗರು ತುಂಬಾ ಕೆಲಸವಿರುವ ಅರ್ಜುನನ ವೇಷ ಮಾಡಲು ಸಿದ್ಧರಿಲ್ಲದ ಕಾರಣ ಪ್ರಸಂಗ ಬದಲಾಯಿಸಿ, ಹಿಡಿಂಬಾ ವಿವಾಹವೆಂದುನಿಶ್ಚಯಿಸಿದರು. +ನಾನು ಧರ್ಮರಾಯನನ್ನು ಬದಲಿಸಿ, ಹಿಡಿಂಬಾಸುರನ ವೇಷ ಮಾಡಬೇಕೆಂದು ತಾಕೀತು ಮಾಡಿದರು. +ಕೊನೆಯ ಗಳಿಗೆಯಲ್ಲಿ ಆದ ಬದಲಾವಣೆಯಿಂದ ಅತೃಪ್ತಿಗೊಂಡ ನಾನು “ನಾನು ವೇಷ ಮಾಡುವುದಿಲ್ಲ. +ಈದಿನ ನನ್ನದು ರಜೆ” ಎಂದು ಮಲಗಿಬಿಟ್ಟೆ. + ಆ ವೇಷವನ್ನು ಮುಖ್ಯ ಬಣ್ಣದವರಾದ ನೆಲ್ಲಿಗದ್ದೆ ಅನಂತನವರು ಮಾಡಿ ಪ್ರಸಂಗ ಮುಗಿಸಿದರು. +ತಿರುಗಾಟವೇನೋ ಸುಸೂತ್ರವಾಗಿ ಮುಗಿಯಿತು. +ಆದರೆ ಲೆಕ್ಕಾಚಾರವಾದಾಗ ನನಗೆ ೩ಂಂ ರೂ.ಬರುವುದಿತ್ತು . +ಅದನ್ನು ಹಿಂದಿನಿಂದ ಬಲರಾಮ ಹಂದೆಯವರು ಕೊಡುತ್ತಾರಾಗಿ ಹೇಳಿ ಮನೆಗೆ ಕಳಿಸಿದರು. +ಮಳೆಗಾಲದಲ್ಲಿ ಆ ಹಣಕ್ಕಾಗಿ ಹಂದೆಯವರ ಮನೆಗೆ ತಿರುಗಿ ಸುಸ್ತಾದೆ. +ಕೊನೆಗೂ ಹಣ ಬರಲೇ ಇಲ್ಲ. +ವರ್ಷವಿಡೀ ಮಾಡಿದಪರಿಶ್ರಮಕ್ಕೆ ಪ್ರತಿಫಲ ಸೊನ್ನೆಯೆಂದಾಯಿತು. +ಮನಸ್ಸಿಗೆ ಬೇಸರವಾಗಿ ಇನ್ನು ಮುಂದೆ ಯಾವ ಮೇಳಕ್ಕೂ ಹೋಗಲಾರೆನೆಂದು ದೃಢನಿಶ್ಚಯ ಮಾಡಿ ಮನೆಯಲ್ಲೇ ಕುಳಿತೆ. +ಬೇಸಾಯವೇ ನಮ್ಮ ಜೀವನಕ್ಕೆ ಆಧಾರವೆಂದು ತಿಳಿದು ಅದರಲ್ಲಿಯೇ ಮುತುವರ್ಜಿ ವಹಿಸಿದೆ. +ಆ ವರ್ಷ ಮಂದರ್ತಿಯಲ್ಲಿ ಮೇಳ ವಹಿಸಿಕೊಳ್ಳುವ ವಿಚಾರದಲ್ಲಿ ತೀವ್ರ ಹೊಯ್ದಾಟ ನಡೆದು ಮೇಳ ಏಳಬೇಕಾದ ಸಮಯಕ್ಕೆ ಏಳಲಿಲ್ಲ. +ಅಂತೂ ಕೊನೆಗೆ ಮೇಳ ನಿಲ್ಲಿಸಬಾರದೆಂದು ಸ್ಥಳ ವಂದಿಗರು ತೀರ್ಮಾನ ಮಾಡಿ ದೇವಸ್ಥಾನದ ವತಿಯಿಂದಲೇ ಮೇಳ ಹೊರಡುವುದಾಗಿ, ತಿರುಗಾಟದ ಯಜಮಾನರಾಗಿ ಹಾರಾಡಿ ರಾಮಗಾಣಿಗರು ನಿಶ್ಚಯಿಸಲ್ಪಟ್ಟರು. +ಆಗಲೇ ಒಂದು ತಿಂಗಳು ಕಳೆದುಹೋಗಿತ್ತು. +ಹೆಚ್ಚಿನ ಕಲಾವಿದರು ಬೇರೆ ಬೇರೆ ಮೇಳಕ್ಕೆ ಸೇರ್ಪಡೆಯಾಗಿದ್ದರು. +ಅವರಲ್ಲಿ ಬಹಳ ವರ್ಷಗಳಿಂದ ಆ ಮೇಳದಲ್ಲೇ ಬಣ್ಣದ ವೇಷಧಾರಿಯಾಗಿದ್ದ ಕೊಳ್ಳೆಬೈಲು ಕುಷ್ಟನವರು ಅಮೃತೇಶ್ವರಿ ಮೇಳಕ್ಕೆ ಸೇರಿದ್ದರು. +ಹೀಗಾಗಿ ಮೇಳಕ್ಕೆ ಕಲಾವಿದರನ್ನು ಹುಡುಕುವ ಕೆಲಸ ಹಾರಾಡಿ ರಾಮಗಾಣಿಗರದಾಯಿತು. +ಒಂದು ದಿನ ರಾಮಗಾಣಿಗರು ದೇವಸ್ಥಾನದ ಮೊಕ್ತೇಸರರ ಮಗನೊಂದಿಗೆ ನಮ್ಮ ಮನೆಗೆ ಬಂದು ಮೇಳಕ್ಕೆ ಬರುವಂತೆ ಆಹ್ವಾನಿಸಿದರು. +ಮಾತ್ರವಲ್ಲ,ಮುಖ್ಯ ಬಣ್ಣಕ್ಕೆ ಬರಬೇಕೆಂದು ತಿಳಿಸಿದರು. +ರಾಮಗಾಣಿಗರಂತಹ ಶ್ರೇಷ್ಠಕಲಾವಿದರ ಮೇಳದಲ್ಲಿ ಮುಖ್ಯ ಬಣ್ಣ ಮಾಡುವ ಧೈರ್ಯ ನನಗಿಲ್ಲವೆಂದು ಸಹಜವಾಗಿ ಕೇಳಿಕೊಂಡೆ. +ಆದರೆ ಅವರು ಧೈರ್ಯ ತುಂಬಿ ಮುಖ್ಯ ಬಣ್ಣಕ್ಕೆನಿಶ್ಚಯಿಸಿ, ಅಡ್ಜಾನ್ಸ್‌ ಕೊಟ್ಟು ತೆರಳಿದರು. +ಮೇಳ ಬೇಡವೆಂದಿದ್ದ ನನಗೆ ಮುಖ್ಯ ಬಣ್ಣದ ಸ್ಥಾನ ಸಿಕ್ಕಿದ್ದು ದೇವಿಯ ಅನುಗ್ರಹವೆಂದು ಭಾವಿಸಿ ತಿರುಗಾಟಕ್ಕೆ ಸೇರಿಕೊಂಡೆ. +ಹಿರಿಯ ಕಲಾವಿದರ ಸಹಕಾರ ಕೊಳ್ಳೆಬೈಲು ಕುಷ್ಟಗಾಣಿಗರ ಸಹಕಾರ ಹಿಂದೆ ನಾನು ಬೇರೆ ಬೇರೆ ಮೇಳಗಳಲ್ಲಿ ತಿರುಗಾಟ ಮಾಡುವಾಗ ಬೇಲ್ತೂರು ರಾಮ, ಬಣ್ಣದ ಸಂಜೀವ, ನೆಲ್ಲಿಗದ್ದೆ ಅನಂತನವರ ವೇಷ ನೋಡಿ, ಅವರಿಗೆ ಒತ್ತು ಬಣ್ಣ ಮಾಡಿ ಆ ವಿಭಾಗದಲ್ಲಿ ಸಾಧಾರಣ ಅನುಭವ ಪಡೆದಿದ್ದೆ. +ಎಲ್ಲಕ್ಕಿಂತಲೂ ಹೆಚ್ಚಾಗಿ ಬಣ್ಣದ ಕುಷ್ಟನವರ ಮಾರ್ಗದರ್ಶನ ಮುಖ್ಯವಾದುದು. +ಶ್ರೀಯುತರು ಆ ಕಾಲದ ಪ್ರಸಿದ್ಧ ಬಣ್ಣದ ವೇಷಧಾರಿಯಾಗಿದ್ದು, ನನ್ನ ತಂದೆಯ ಸಮಕಾಲೀನರಾಗಿದ್ದರು. +ಒಂದೆರಡು ವರ್ಷ ತೆಂಕಿನ ಮೇಳದಲ್ಲಿ ತಿರುಗಾಟಮಾಡಿ ಅದರಲ್ಲಿ ಹೆಚ್ಚಿನ ಅನುಭವ ಹೊಂದಿದ್ದರು. +ನನ್ನ ತಂದೆಯ ಮೇಲಿನ ಅಭಿಮಾನದಿಂದಲೋ ಏನೋ, ನನಗೆ ಬಣ್ಣದ ವೇಷದ ತಯಾರಿಯಲ್ಲಿ, ರಂಗಸ್ಥಳದ ನಡೆಯುವಲ್ಲಿ ಉಪಯುಕ್ತ ಸಲಹೆಯನ್ನು ನೀಡಿದ್ದರು. +ಗಂಡುಬಣ್ವ, ಹೆಣ್ಣು ಬಣ್ಣ, ರಾಜ ಬಣ್ಣ, ಕಾಟು ಬಣ್ಣ ಇವುಗಳ ವ್ಯತ್ಯಾಸ, ನಡೆಯ ವೈವಿಧ್ಯ ಇವುಗಳ ಕುರಿತು ಸ್ಪಷ್ಟ ತಿಳುವಳಿಕೆ ನೀಡಿದ್ದರು. +ತನ್ನ ಅನುಭವವನ್ನು ಯಾರಿಗೂ ಹೇಳದ ಅವರು ನನಗೆ ಹೇಳಿದ್ದರು. +ಬಣ್ಣದ ವೇಷದಲ್ಲಿ ನಾನು ಪಡೆದ ಖ್ಯಾತಿಗೆ ಅವರೇ ಮೂಲ ಕಾರಣವೆಂದರೆ ಅದು ಅತಿಶಯೋಕ್ತಿಯ ಮಾತಾಗಲಾರದು. +ಅವರು ಮಾಡುತ್ತಿರುವುದು ದಾನವರ ವೇಷವಾದರೂ ಅವರಲ್ಲಿ ಹುದುಗಿರುವುದು ಮಾನವೀಯ ಹೃದಯ. +ಹಾರಾಡಿ ರಾಮಗಾಣಿಗರ ಸಹಕಾರ:ಹಾರಾಡಿ ರಾಮಗಾಣಿಗರು ಮುಖ್ಯ ಬಣ್ಣದ ಸ್ಥಾನವನ್ನು ಕೊಟ್ಟು ಮೇಳಕ್ಕೆ ಕರೆದುಕೊಂಡು ಹೋದರು. +ಆದರೆ ಮೊದ ಮೊದಲು ವೇಷ ಮಾಡುವಾಗ ತುಂಬಾ ಭಯವೇ ಆಗಿತ್ತು . +ಕಾರಣ ನಾನು ಚೌಕಿಯಲ್ಲಿ ಅವರಿಗೆ ಎದುರಾಗಿಯೇ ಕುಳಿತು ವೇಷ ಮಾಡಬೇಕಿತ್ತು. +ಅವರು ವೇಷ ಮಾಡಿಕೊಳ್ಳುವಾಗ, ರಂಗದಲ್ಲಿ ಅಭಿನಯಿಸುವಾಗ ಅವರ ಮುಖ ನೋಡಿದರೆ ಯಾರಿಗೂ ಭಯ ಉಂಟಾಗುತ್ತಿತ್ತು. +ಆ ಭಯ ನನ್ನನ್ನೂ ಬಿಡಲಿಲ್ಲ. +ಇದನ್ನು ಅರಿತ ಹಾರಾಡಿಯವರು ಸ್ವತಃ ನನಗೇ ಧೃೆರ್ಯ ತುಂಬುತ್ತಿದ್ದರು. +ಮುಖವರ್ಣಿಕೆಯಲ್ಲಿ ವ್ಯತ್ಯಾಸ ಕಂಡುಬಂದರೆ, ಅವರೇ ಸೂಚನೆ ಕೊಟ್ಟು ಸರಿಪಡಿಸುತ್ತಿದ್ದರು. +ರಂಗಸ್ಥಳದಲ್ಲಿ ಅವರ ಎದುರಿನ ವೇಷ ಮಾಡುವಾಗ ಧೈರ್ಯಗುಂದದಂತೆ ಸೂಚನೆ ಕೊಟ್ಟು ಸರಿಪಡಿಸುತ್ತಿದ್ದರು. +ಒಮ್ಮೆ ಜೋಡಾಟದ ಮರುದಿನ ಹಿಡಿಂಬಾ-ವಿವಾಹ, ಗಿರಿಜಾ ಕಲ್ಯಾಣ ಪ್ರಸಂಗ ನಿಶ್ಚಯವಾಗಿತ್ತು . +ಅದರಲ್ಲಿ ರಾಮಗಾಣಿಗರು ಮೊದಲು ಭೀಮನಪಾತ್ರ ನಿರ್ವಹಿಸಿ ಬಳಿಕ ಮೈಬಿಟ್ಟ ಈಶ್ವರ ಮಾಡಬೇಕಿತ್ತು . +ನಾನು ಹಿಡಿಂಬಾಸುರ ಹಾಗೂ ತಾರಕಾಸುರನ ಪಾತ್ರ ನಿರ್ವಹಿಸಬೇಕಿತ್ತು. +ಆದರೆ ೨ನೇ ಪ್ರಸಂಗ ತಾರಕಾಸುರನ ಪ್ರವೇಶದಿಂದಲೇ ಆರಂಭವಾಗಬೇಕಾದ್ದರಿಂದ ನನಗೆ ವೇಷಮಾಡಲು ಹೆಚ್ಚು ಸಮಯದ ಅವಕಾಶವಿಲ್ಲ. +ನನ್ನ ಅಸಹಾಯಕತೆಯನ್ನು ರಾಮಗಾಣಿಗರಲ್ಲಿ ಹೇಳಿಕೊಂಡಾಗ ಅವರು ಪಾರ್ಟಿನ ತಾರಕಾಸುರ ಮಾಡುವಂತೆ ಸೂಚಿಸಿದರು. +ನನಗೆ ತುಂಬಾ ಭಯವಾಯ್ತು. + ಕಾರಣ ಆ ಸಮಯ ಸಮರ್ಥವಾಗಿ ಪಾರ್ಟಿನ ವೇಷ ಮಾಡುವವರು ರಾಮಗಾಣಿಗರೊಬ್ಬರೇ. +ಅವರ ಎದುರಿನಲ್ಲಿಯೇ ಆವರೆಗೆ ನಾನು ಮಾಡದ ಪಾರ್ಟಿನ ವೇಷ ಹೇಗೆ ನಿರ್ವಹಿಸಲಿ ಎಂಬುದೇ ನನ್ನ ಚಿಂತೆಗೆ ಕಾರಣವಾಗಿತ್ತು. +ಕೊನೆಗೆ ನಿರ್ವಾಹವಿಲ್ಲದೆ ಒಪ್ಪಿದೆ. +ಆದರೆ ಆಗಮೇಳದಲ್ಲಿ ರಾಮಗಾಣಿಗರಲ್ಲಿ ಮಾತ್ರ ಒಂದು ಪಾರ್ಟಿನ ವೇಷದ ಸಾಮಾನು ಇರುವುದು. +ಅವರು ಅದನ್ನೇ ನನಗೆ ಕೊಡಬೇಕಾಗಿತ್ತು. +ಸಾಮಾನ್ಯವಾಗಿ ತಮ್ಮ ಸಾಮಾನನ್ನು ಅವರು ಯಾರಿಗೂ ಕೊಡುತ್ತಿರಲಿಲ್ಲ. +ಬೇರೆಯವರಿಗೆ ಕೇಳುವ ಧೈರ್ಯವೂ ಇಲ್ಲ. +ಆಗ ಅವರಾಗಿಯೇ ತನ್ನ ಸಂಪೂರ್ಣ ವೇಷದ ಸಾಮಾನು ಕೊಟ್ಟು “ಇದರ ಮರ್ಯಾದೆ ಉಳಿಸಿ” ಎಂದು ಹೇಳಿ, ನನ್ನ ವೇಷರಂಗದಲ್ಲಿರುವಾಗ ಮರೆಯಲ್ಲೇ ನಿಂತು ನೋಡಿ, ಚೌಕಿಗೆ ಬಂದಾಗ ಭೇಷ್‌ಎಂದು ಹೊಗಳಿ ತಮ್ಮ ಮೆಚ್ಚಿಗೆ ಸೂಚಿಸಿದರು. +ಅವರ ಹೊಗಳಿಕೆ ನನ್ನ ಮುಂದಿನ ಕಲಾಜೀವನಕ್ಕೆ ಸಾಕಷ್ಟು ಸಹಾಯವಾಯಿತು. +ಬಾಬಣ್ಣ ಶ್ಯಾನಭಾಗರು ಹಾರಾಡಿ ರಾಮಗಾಣಿಗರ ಯಕ್ಷಗಾನ ಗುರುಗಳು. +ಅವರ ಬಗ್ಗೆ ರಾಮಗಾಣಿಗರಿಗೆ ತುಂಬಾ ಅಭಿಮಾನ. +ಅವರು ವೃದ್ಧಾಪ್ಯದಿಂದ ಮೇಳದಿಂದ ನಿವೃತ್ತಿ ಹೊಂದಿದ್ದರೂ ಆರ್ಥಿಕ ದುರ್ಬಲತೆಯಿಂದ ಬಳಲುತ್ತಿದ್ದ ಅವರು ಕರೆದಲ್ಲಿ ಹೋಗಿ ವೇಷ ಮಾಡುತ್ತಿದ್ದರು. +ರಾಮಗಾಣಿಗರೂ ಕೂಡ ತಮ್ಮ ಗುರುಗಳಿಗೆ ಸಹಾಯವಾಗಲೆಂದು ಅವಕಾಶ ಕಲ್ಪಿಸಿ ಕೊಡುತ್ತಿದ್ದರು. +ಅಂತಹ ಸಂದರ್ಭಗಳಲ್ಲಿ ಶ್ಯಾನುಭಾಗರು ದಶರಥ, ವಾಲಿ ಮುಂತಾದ ಪಾತ್ರಗಳನ್ನುಮಾಡುತ್ತಿದ್ದರು. +ಒಮ್ಮೆ ಅವರು ಬರುವರೆಂಬ ಕಾರಣಕ್ಕೆ ಪಟ್ಟಾಭಿಷೇಕ ನಿಶ್ಚಯವಾಗಿತ್ತು ಆದರೆ ಅನಿವಾರ್ಯ ಕಾರಣಗಳಿಂದ ಬರಲಾಗಲಿಲ್ಲ. +ಆಗ ದಶರಥನ ಪಾತ್ರ ಮಾಡಲು ಬೇರೆ ಯಾರಿಗೂ ಸಾಧ್ಯವಿಲ್ಲ ಎಂದು ಹೇಳಿ ನನ್ನಿಂದ ಮಾಡಿಸಿದರು. +ಎದುರಾಗಿ ಅವರು ರಾಮನ ಪಾತ್ರದಲ್ಲಿದ್ದು ನನ್ನ ಪಾತ್ರದ ಯಶಸ್ಸಿಗೆ ಕಾರಣರಾದರು. +ಹೀಗೆ ಅನೇಕ ಬಾರಿ ನನಗೆ ರಂಗಸ್ಥಳದಲ್ಲೇ ಮಾರ್ಗದರ್ಶನ ದೊರೆಯುತ್ತಿತ್ತು. +ನಾನು ಬಣ್ಣದ ವೇಷ ಮಾಡುತ್ತಿರುವುದಾದರೂ ೨ನೇ ವೇಷ, ಪುರುಷ ವೇಷದ ಸಾಲಿನ ವೇಷ ಮಾಡಬೇಕೆಂಬ ಆಸೆ ಮನಸ್ಸಿನಲ್ಲಿತ್ತು. +ಇದನ್ನು ಅರಿತ ರಾಮಗಾಣಿಗರು ಸಂದರ್ಭಾನುಸಾರ ನನಗೆ ಅಂತಹ ವೇಷಗಳನ್ನು ಹಾಕಿ ಸಹಕರಿಸುತ್ತಿದ್ದರು. +ಹಂಸ ಧ್ವಜ, ಮಯೂರ ಧ್ವಜ, ಕರ್ಣರ್ಜುನ ಕಾಳಗದ ಶಲ್ಯ ,ವೀರಮಣಿ ಕಾಳಗದ ಹನುಮಂತ ಮೊದಲಾದ ವೇಷಗಳನ್ನು ಮಾಡಲು ನನಗೆ ಅವಕಾಶ ಮಾಡಿಕೊಡುತ್ತಿದ್ದರು. +ಹೀಗೆ ಹಲವು ರೀತಿಯಲ್ಲಿ ನನ್ನ ಆಸೆಗೆ,ನನ್ನ ಉತ್ಕರ್ಷಕ್ಕೆ ಅವರು ಪೂರಕರಾಗಿದ್ದರು. +ವೀರಭದ್ರ ನಾಯಕರ ಒಡನಾಟ ಮಂದಾರ್ತಿ ಮೇಳದಲ್ಲಿರುವಾಗ ಕೆಲವು ವರ್ಷ ವೀರಭದ್ರ ನಾಯ್ಕರ ಒಡನಾಟ ಆಗಿತ್ತು. + ಶ್ರೀಯುತರು ಆಟ-ಕೂಟ ಎರಡಕ್ಕೂ ಸಲ್ಲುವ ವೇಷಧಾರಿ. +ಅವರು ಮೇಳದಲ್ಲಿ ಇರುವಾಗ ಹೆಚ್ಚಾಗಿ ವಾಲಿ- ಸುಗ್ರೀವ ಕಾಳಗ, ಅತಿಕಾಯ ಕಾಳಗ,ಮೈರಾವಣ ಕಾಳಗ ನಡೆಯುತ್ತಿತ್ತು. +ಅವರ ವಾಲಿ, ಅಶಿಕಾಯ, ಮೈರಾವಣವಾದರೆ ನನ್ನದು ಸುಗ್ರೀವ, ರಾವಣನ ಪಾತ್ರ ಹೀಗೆ ನನಗೂ ಅವರಿಗೂ ಜೋಡಿವೇಷಗಳು. +ಒಳ್ಳೆಯ ಮಾತುಗಾರರಾದ ಅವರ ಎದುರಿಗೆ ವಾದ ಮಾಡಬೇಕಾದರೆ ಸಾಕಷ್ಟು ತಯಾರಿ ಬೇಕಾಗುತ್ತಿತ್ತು. +ಹಾಗೆ ತಯಾರಿ ಮಾಡಿಕೊಂಡಾಗಲೂ ಅವರ ಸಹಕಾರವಿಲ್ಲದಿದ್ದರೆ ಪಾತ್ರ ಬಿದ್ದುಹೋಗುತ್ತದೆ. +ವೀರಭದ್ರ ನಾಯಕರು ತನ್ನ ಪಾತ್ರವನ್ನು ಚೆಂದಗೊಳಿಸುವುದರೊಂದಿಗೆ ನನ್ನ ಪಾತ್ರ ನಿರ್ವಹಣೆಯಲ್ಲೂ ಸಹಕಾರ ನೀಡಿ ಮೇಲಿನ ನನ್ನ ಪಾತ್ರವನ್ನು ಯಶಸ್ವಿಗೊಳಿಸಿದವರು. +ಬಡಗುತಿಟ್ಟಿನಲ್ಲಿ ಬೇಡರ ಕಣ್ಣಪ್ಪ ಮೊದಲಾಗಿ ಆಡಿದವರು ವೀರಭದ್ರ ನಾಯ್ಕರು. +ಅದರಲ್ಲಿ ಅವರ ದಿಣ್ಣ (ಕಣ್ಣಪ್ಪ)ಬಹಳ ಪ್ರಸಿದ್ಧ. +ಅದರಲ್ಲಿ ಬರುವ ಕೈಲಾಸಶಾಸ್ತ್ರಿ ಪಾತ್ರವನ್ನು ಹೆಚ್ಚಾಗಿ ನನಗೆ ಹಾಕುತ್ತಿದ್ದರು. +ಬಣ್ಣದ ವೇಷಧಾರಿಯಾದ ನಾನು ಹಾಸ್ಯ ಪಾತ್ರ ಮಾಡುವ ಅವಕಾಶವೇ ಇರುತ್ತಿರಲಿಲ್ಲ. +ಆದರೆ ವೀರಭದ್ರನಾಯ್ಕರು ನನ್ನಿಂದ ಆ ಪಾತ್ರ ಮಾಡಿಸಿ, ಹಾಸ್ಯ ಪಾತ್ರದಲ್ಲೂ ನಾನು ಮಿಂಚುವಂತೆ ಮಾಡಿದರು. +ಯಕ್ಷಗಾನ ಜೀವನದಲ್ಲಿ ಅವರ ಸಹಕಾರವನ್ನೂ ನಾನು ಮರೆಯುವಂತಹದ್ದಲ್ಲ. +ಆಕಸ್ಮಿಕವಾಗಿ ಒದಗಿದ ಅವಕಾಶ :ಮಂದರ್ತಿ ಮೇಳದಲ್ಲಿರುವಾಗ ಒಮ್ಮೆ ನಮ್ಮ ಮೇಳದ ಆಟ ಕುಕ್ಕೆಹಳ್ಳಿಯಲ್ಲಿ. +ಅದು ಆಗ ನಮ್ಮ ಮೇಳದ ಯಜಮಾನರಾದ ಭೋಜ ಹೆಗ್ಡೆಯವರ ಹೆಂಡತಿ ಮನೆ ಊರು. +ಆಟ ಆಡಿಸುವವರು ಆ ದಿನ ರುಕ್ಮಾಂಗದ ಚರಿತ್ರೆ ಸಂಪೂರ್ಣ ಆಡಬೇಕೆಂದು ಹೇಳಿದ್ದರು. +ಹಾಗೆ ನಿಶ್ಚಯವಾಗಿ ಆಟ ಆರಂಭವಾಯಿತು. +ಆಗ ೨ನೇ ವೇಷಧಾರಿಯಾಗಿದ್ದ ಉಡುಪಿ ಬಸವನವರು ಆರಂಭದ ರುಕ್ಮಾಂಗದ ಮಾತ್ರ ನಾನು ಮಾಡುತ್ತೇನೆ. +ಆದರೆ ವ್ರತಧಾರಿ ರುಕ್ಮಾಂಗದ ಮಾತ್ರ ನಾನುಮಾಡಲಾರೆ, ನನ್ನ ಗುರುಗಳಾದ ಗಣಪತಿ ಪ್ರಭುಗಳ ಗೌರವಾರ್ಥವಾಗಿ ಅದುನನ್ನ ವ್ರತ ಎಂದು ಪಟ್ಟುಹಿಡಿದು ಕುಳಿತರು. +ಆಗ ಆ ಪಾತ್ರ ಮಾಡಲು ಮೇಳದಲ್ಲಿ ಯಾರೂ ಸಿದ್ಧರಿಲ್ಲ. +ಮಾಡದೆ ಪ್ರಸಂಗ ಮೊಟಕುಗೊಳಿಸಿದರೆ ಮೊದಲು ಒಪ್ಪಿಕೊಂಡ ಯಜಮಾನರಿಗೆ ಅಗೌರವ. +ಕೊನೆಗೆ ದೇವರ ಮೇಲೆ ಭಾರ ಹಾಕಿ ನಾನೇ ಮಾಡಿದೆ. +ಪಾತ್ರ ಯಶಸ್ವಿಯಾಯಿತು. +ಪರಿಣಾಮವಾಗಿ ಅದು ಯಶಸ್ವಿ ಪ್ರಸಂಗವೆನಿಸಿ ಆ ವರ್ಷ ತುಂಬಾ ಕಡೆ ಪ್ರದರ್ಶನವಾಯಿತು. +ನಾನು ಖಾಯಂ ವ್ರತಧಾರಿ ರುಕ್ಮಾಂಗದನಾಗ ಬೇಕಾಯಿತು. +ಈ ಪಾತ್ರವನ್ನು ಹಾರಾಡಿ ರಾಮಗಾಣಿಗರು ಕೂಡಾ ಮಾಡುತ್ತಿರಲಿಲ್ಲ. +ನಾನು ಮದ್ದಳೆಗಾರನಾದುದು ಒಂದು ವರ್ಷ ಮಂದರ್ತಿ ಮೇಳದಲ್ಲಿ . +ಹಿರಿಯಡ್ಕ ಗೋಪಾಲರಾಯರು ಮುಖ್ಯ ಮದ್ದಳೆಗಾರರಾಗಿ, ಬೈಕಾಡಿ ಆನಂದರಾಯರು ಒತ್ತು ಮದ್ದಳೆಗಾರರಾಗಿ ಇದ್ದರು. +ಆನಂದರಾಯರು ಅಸೌಖ್ಯದಲ್ಲಿ ಬಿದ್ದು ಒಂದು ತಿಂಗಳು ಮನೆಯಲ್ಲೇ ಉಳಿಯಬೇಕಾಯಿತು. +ಅದರಿಂದಾಗಿ ಗೋಪಾಲರಾಯರೊಬ್ಬರೇ ಇಡೀ ರಾತ್ರಿಮದ್ದಳೆ ಬಾರಿಸುವ ಅನಿವಾರ್ಯತೆ ಉಂಟಾಯಿತು. +ಆಗ ಗೋಪಾಲರಾಯರು ಹಂಗಾಮಿಯಾಗಿ ಯಾರನ್ನಾದರೂ ಹಾಕಿಕೊಳ್ಳಿ. +ಒಬ್ಬನಿಂದಲೇ ಸಾಧ್ಯವಾಗಲಾರದೆಂದು ಯಜಮಾನರಾದ ರಾಮಗಾಣಿಗರಲ್ಲಿ ಹೇಳಿದರು. +ಗಾಣಿಗರು ಬಹಳ ಕಡೆ ವಿಚಾರಿಸಿದರೂ ಯಾರೂ ಆ ಸಮಯಕ್ಕೆ ಲಭ್ಯರಾಗಿಲ್ಲ. +ಇನ್ನೇನು ಮಾಡಲಿ ಎಂದು ಗಾಣಿಗರು ಹಿರಿಯಡಕದವರಲ್ಲಿ ಕೇಳಿದಾಗ ಅವರು “ಬಣ್ಣದವರುಮನಸ್ಸು ಮಾಡಿದರೆ ಆಗಬಹುದು, ಅವರು ಚೆನ್ನಾಗಿ ಮದ್ದಳೆ ಬಾರಿಸಬಲ್ಲರು”ಎಂದು ತಿಳಿಸಿದರು. +ರಾಮಗಾಣಿಗರು ತಾನು ಮಾಡಿದ ಪ್ರಯತ್ನವೆಲ್ಲಾ ವ್ಯರ್ಥವಾಯಿತು. +ದಯವಿಟ್ಟು ನೀವು ಸಹಕರಿಸಬೇಕೆಂದು ಕೇಳಿಕೊಂಡಾಗ ಏನೂ ಹೇಳಲು ದಾರಿ ತೋರದೆ “ನೀವು ಅಷ್ಟೊಂದು ಹೇಳುವುದಾದರೆ ಒಡ್ಡೋಲಗದವರೆಗೆ ಮದ್ದಳೆ ಬಾರಿಸುತ್ತೇನೆ. +ಆದರೆ ನಾನು ಮಾಡುವ ವೇಷಕ್ಕೆ ಸಮಯಾವಕಾಶ ನೀಡಬೇಕು” ಎಂದು ಹೇಳಿದೆ. +ಅದಕ್ಕೆ ರಾಮಗಾಣಿಗರು ಒಪ್ಪಿ ನನ್ನ ವೇಷಕ್ಕೆ ಅನುಕೂಲವಾಗುವಂತೆ ಪ್ರಸಂಗ ನಿಶ್ಚಯ ಮಾಡತೊಡಗಿದರು. +ಹೇಳಿದಂತೆ ಆನಂದರಾಯರು ವಾಪಾಸು ಬರುವವರೆಗೆ ನಾನು ಒತ್ತು ಮದ್ದಳೆಗಾರನಾದೆ. +ಈ ಮಧ್ಯೆ ಇನ್ನೊಂದು ಫಟನೆ ನಡೆದುಹೋಯಿತು. +ನಮ್ಮ ಮೇಳದ ಆಟ ಕೆರಾಡಿ ಬಳಿಯ ಕುಳ್ಳಂಬಳ್ಳಿ ಎಂಬಲ್ಲಿ ಇದ್ದ ದಿನ ಗೋಪಾಲರಾಯರಿಗೆ ಮನೆಯಲ್ಲಿ ತುರ್ತಾಗಿ ಕೆಲಸವಿದ್ದುದರಿಂದ ಹೋಗಲೇಬೇಕಾಯಿತು. +ವಿಷಯ ತಿಳಿದ ರಾಮಗಾಣಿಗರು ರಾತ್ರಿ ಎಷ್ಟುಹೊತ್ತಾದರೂ ಆಟಕ್ಕೆ ಬಾರದಿರಬೇಡಿ ಎಂದು ಹೇಳಿ ಕಳುಹಿಸಿಕೊಟ್ಟರು. +ಗೋಪಾಲರಾಯರು ಮನೆಯ ಕೆಲಸ ಪೂರೈಸಿ ಆಟಕ್ಕೆ ಬರಲು ಹೊರಟರಾದರೂ ಕುಳ್ಳಂಬಳ್ಳಿಗೆ ತಲುಪುವಾಗ ರಾತ್ರಿಯಾಗಿತ್ತು. +ಮುಂದೆ ದಾರಿ ಕಾಣದೆ ಒಂದು ಮನೆಯಲ್ಲಿ ಉಳಿದರು. +ನಸುಕಿಗೆ ಎದ್ದು ನೋಡುವಾಗ ರಂಗಸ್ಥಳ ತೋರಿದರೂ ಬರಲು ಮಧ್ಯೆ ಇರುವ ಆಳವಾದ ಕಣಿವೆ ಅವರಿಗೆ ದೊಡ್ಡ ತಡೆಯಾಗಿತ್ತು. +ರಂಗಸ್ಥಳಕ್ಕೆ ತುಂಬಾ ಸುತ್ತುವರಿದು ಬರಬೇಕಾಗಿತ್ತು. +ಹೀಗೆ ಆ ದಿನ ಅವರ ರಜೆಯಾಯ್ತು. +ಇಡೀ ರಾತ್ರಿ ನಾನು ಮದ್ದಳೆ ಬಾರಿಸಬೇಕಾಗಿ ಬಂತು. +ಹೀಗೆ ವೇಷಧಾರಿಯಾದ ನಾನು ಒಂದು ತಿಂಗಳ ಮಟ್ಟಿಗೆ ಮದ್ದಳೆಗಾರನೂಆದೆ. +ವೇಷ ನೋಡಿ ಹೆದರಿದ ತಾಯಿ : ಹಾರಾಡಿ ರಾಮಗಾಣಿಗರ ಹಿರಣ್ಯಕಶಿಪು ತುಂಬಾ ಪ್ರಸಿದ್ಧಿಗೆ ಬಂದಿತ್ತು. +ತಿರುಗಾಟದ ಹೆಚ್ಚಿನ ದಿನ ಬೆಳಗಿನ ಜಾವಕ್ಕೆ ಪ್ರಹ್ಲಾದ ಚರಿತ್ರೆ ಪ್ರದರ್ಶನವಾಗುತ್ತಿತ್ತು. +ಅದರಲ್ಲಿ ನಾನು ಉಗ್ರ ನರಸಿಂಹನ ವೇಷ ಮಾಡುತ್ತಿದ್ದೆ. +ಒಂದು ದಿನ ಮಂದರ್ ತಿಮೇಳದ ಆಟ ನಮ್ಮ ಊರಿನ ಹತ್ತಿರವಿತ್ತು. +ಅಂದಿನ ಆಟಕ್ಕೆ ನನ್ನ ತಾಯಿ ನನ್ನ ಊರಿನವರೊಂದಿಗೆ ಆಟ ನೋಡಲು ಬಂದಿದ್ದರು. +ಆ ದಿನ ಪ್ರಹ್ಲಾದ ಚರಿತ್ರೆ. +ನರಸಿಂಹನ ವೇಷದಲ್ಲಿ ನಾನು ರಂಗಕ್ಕೆ ಪ್ರವೇಶಿಸಿ,ಹಿರಣ್ಯಕಶಿಪುವನ್ನು ಕೊಲ್ಲುವಾಗ ಆವೇಶ ಬಂದವನಂತೆ ವರ್ತಿಸುತ್ತಿದ್ದೆ. +ವೇಷವನ್ನು ಕೂಡ ತುಂಬಾ ಭೀಕರವಾಗಿಯೇ ಮಾಡಿಕೊಳ್ಳುತ್ತಿದ್ದೆ. +ಹಿರಣ್ಯಕಶಿಪುವಿನ ಉದರವನ್ನು ಬಗೆದು ಕರುಳು ತೆಗೆಯುವ ದೃಶ್ಯವನ್ನು ನೋಡಿ ನನ್ನ ತಾಯಿ ತುಂಬಾ ಹೆದರಿದರು. +ಆಮೇಲೆ ಪ್ರಜ್ಞಾಹೀನ ಸ್ಥಿತಿಯಲ್ಲಿರುವ ನನ್ನನ್ನುಹೊರೆಯಾಳುಗಳು ಹೊತ್ತುಕೊಂಡು ಹೋಗಿ ಚೌಕಿಯಲ್ಲಿ ನೀರುಹಾಕೆ, ಬಟ್ಟೆ ಹಾಗೂ ಆಭರಣಗಳನ್ನು ತೆಗೆದು ಗಾಳಿ ಹಾಕುವಾಗಲಂತೂ ಹೆದರಿಕೆಯಿಂದ ನೋಡಲಾಗದೆ ಭಯದಿಂದಲೇ ಮನೆ ಸೇರಿದರು. +ಇದೆಲ್ಲಾ ಆ ಸನ್ನಿವೇಶದ ಉಗ್ರತೆಯನ್ನು ತೋರಿಸಲಿಕ್ಕಾಗಿ ನಾವು ಮಾಡುವ ಅಭಿನಯವಾಗಿತ್ತು. +ಆದರೆ ನೋಡಿದವರಿಗೆ ಉಗ್ರ ನರಸಿಂಹನೇ ಮೈಮೇಲೆ ಆಕರ್ಷಣೆಯಾಗಿದೆ ಎಂಬ ಭಾವನೆ ಬರುತ್ತಿತ್ತು. +ನಿಜ ಸಂಗತಿ ತಿಳಿಯದ ತಾಯಿ ಕೂಡಾ ಆ ದಿನ ನನಗೆ ನರಸಿಂಹನ ಆಕರ್ಷಣೆಯಾಗಿದೆ ಎಂದು ತಿಳಿದು ಭಯಗೊಂಡಿದ್ದರು. +ಆಟ ಮುಗಿದ ಮೇಲೆ ವೇಷ ತೆಗೆದು ನಾನು ಮನೆಗೆ ಬರುವಾಗ ಅಮ್ಮ ಭಯದಲ್ಲೇ ನಡುಗುತ್ತಿದ್ದರು. +ನನ್ನನ್ನು ಕಂಡ ಕೂಡಲೇ ಓಡಿ ಬಂದು ನನ್ನನ್ನು ಅಪ್ಪಿಕೊಂಡು “ನಿನಗೇನು ಆಗಿಲ್ಲವಲ್ಲ ಕಂದಾ” ಎಂದು ಸಮಾಧಾನದ ನಿಟ್ಟುಸಿರುಬಿಟ್ಟರು. +ತಾಯಿಯ ಅಂದಿನ ಆ ಹೆದರಿದ ಮುಖ ಈಗಲೂ ಕೆಲವೊಮ್ಮೆ ಕಣ್ಣೆದುರುಬಂದಂತಾಗುತ್ತದೆ. +ಒಂದು ವರ್ಷ ನಾನು ಸೌಕೂರು ಮೇಳಕ್ಕೆ ಸೇರಿ ತಿರುಗಾಟ ಮಾಡುತ್ತಿದ್ದಾಗ ಶಿವರಾತ್ರಿಯ ಹಬ್ಬದವರೆಗೆ ಹಾಗೂ ಹೀಗೂ ತಿರುಗಾಟ ನಡೆದು ಹಬ್ಬದ ನಿಮಿತ್ತ ಮೇಳದ ಖಾಯಂ ರಜೆಯಲ್ಲಿ ಮನೆ ಸೇರಿದೆವು. +ಸಾಮಾನ್ಯವಾಗಿ ಹೆಚ್ಚಿನ ಮೇಳದವರು ಆ ಕಾಲದಲ್ಲಿ ಶಿವರಾತ್ರಿ ಹಬ್ಬಕ್ಕೆ ಆರು ದಿನ ರಜೆ ಕೊಡುವ ವಾಡಿಕೆ ಇದ್ದಿತು. +ಹಾಗೆ ಮನೆಗೆ ಹೋದ ಕಲಾವಿದರು ಹಬ್ಬ ಮುಗಿದರೂ ಮೇಳಕ್ಕೆ ಹಾಜರಾಗಲಿಲ್ಲ. +ಕಾರಣ ಹೆಚ್ಚಿನ ಕಲಾವಿದರಿಗೆ ಸಂಬಳ ಸರಿಯಾಗಿ ಬಟವಾಡೆಯಾಗಿರಲಿಲ್ಲ. +ಕಾದು ಕಾದು ಬೇಸತ್ತ ಕಲಾವಿದರು ಖರ್ಚಿಗೆ ಹಣವಿಲ್ಲದೆ ಮನೆಯಲ್ಲೇ ಉಳಿದರು. +ಹೀಗಾಗಿ ಮೇಳ ಅರ್ಧ ತಿರುಗಾಟಕ್ಕೆ ನಿಂತುಹೋಯಿತು. +ಎಲ್ಲರಂತೆ ನಾನು ಮನೆಯಲ್ಲೇ ಉಳಿದೆ. +ಅತ್ತ ತೆಂಕಿನ ಕಾಂಚನ ಮೇಳ ನಮ್ಮತ್ತ ತಿರುಗಾಟಕ್ಕೆ ಬಂದಿತ್ತು. +ಆ ಮೇಳದ ಕಥೆಯು ಇನ್ನೊಂದು ತೆರನಾಗಿತ್ತು. + ಅದು ಡೇರೆ ಮೇಳವಾಗಿದ್ದು,ಕಲೆಕ್ಷನ್‌ ಇಲ್ಲದೆ ಅದರ ಕಲಾವಿದರೆಲ್ಲಾ ಮನೆ ಸೇರಿ ಮೇಳ ಸ್ಥಗಿತಗೊಂಡಿತ್ತು. +ಆಗ ಅದರಲ್ಲಿ ಭಾಗವತ ಕೊಕ್ಕಡ ಸುಬ್ರಾಯ ಆಚಾರ್ಯರೂ ವೇಷಧಾರಿಗಳಾಗಿ ಮರವಂತೆ ವಿಶ್ವೇಶ್ವರ ಅವಭ್ರತರು, ಪಾತಾಳ ವೆಂಕಟ್ರಮಣ ಭಟ್ಟರು, ಕ್ರಿಶ್ಚನ್‌ಬಾಬು ಮುಂತಾದವರಿದ್ದರು. +ಇಲ್ಲಿ ಸೌಕೂರು ಮೇಳ ನಿಂತಿರುವ ವಿಚಾರ ತಿಳಿದು ಎಶ್ವೇಶ್ವರ ಅವಭ್ರತರು ಸೌಕೂರು ಅಂತಯ್ಯ ಶೆಟನ್ನು ಭೇಟಿಯಾಗಿ ನಿಂತಿರುವ ಸೌಕೂರು ಮೇಳವನ್ನು ಪುನಃ ಏಳಿಸಿ ತಿರುಗಾಟ ಮಾಡುವೆನೆಂಬುದಾಗಿ ಹೇಳಿ ಅಂತಯ್ಯ ಶೆಟನ್ನು ಒಪ್ಪಿಸಿದರು. +ಹಾಗೆ ಅವರೆಲ್ಲಾ ಸೇರಿ ಮೇಳ ತಿರುಗಾಟ ಆರಂಭಿಸಿತು. +ನಾನೂ ಮೇಳಕ್ಕೆ ಸೇರಿ ಆ ವರ್ಷ ತಿರುಗಾಟ ಪೂರೈಸಿದೆ. +ಮರುವರ್ಷ ಅವಭ್ರತರ ಯಜಮಾನಿಕೆಯಲ್ಲಿ ಸೌಕೂರು ಮೇಳವು ಡೇರೆಮೇಳವಾಗಿ ಪರಿವರ್ತನೆಗೊಂಡು ಹಿಂದಿನ ಕಲಾವಿದರೊಡನೆ ಕೆಲವು ಹೊಸಕಲಾವಿದರ ಸೇರ್ಪಡೆಯಾಗಿ ತಿರುಗಾಟ ಆರಂಭಿಸಿತು. +ಆ ವರ್ಷವೂ ಕೂಡಾ ನಾನು ಸೌಕೂರು ಮೇಳಕ್ಕೆ ಬಣ್ಣದ ವೇಷಧಾರಿಯಾಗಿ ಸೇರ್ಪಡೆಗೊಂಡೆ. +ಮೇಳ ತಿರುಗಾಟ ಮಾಡುತ್ತಾ ಘಟ್ಟಕ್ಕೆ ತೆರಳಿತು. +ನಮ್ಮ ಮೇಳದ ಆಟ ರಿಪ್ಪನ್‌ಪೇಟೆಯಲ್ಲಿ ಇದ್ದ ದಿನ ಒಂದು ಅಪೂರ್ವ ಘಟನೆ ನಡೆಯಿತು. +ಆ ದಿನ ಇರಾ ಸೋಮನಾಥೇಶ್ವರ ಮೇಳದ ಆಟ ಹುಂಬುಚದಲ್ಲಿತ್ತು. +ಯಜಮಾನರು ಕಲ್ಲಾಡಿ ಕೊರಗ ಶೆಟ್ಟರು. +ಅವರಲ್ಲಿ ಆ ವರ್ಷ ಮೇಳಕ್ಕೆ ಬರುತ್ತೇನೆಂಬುದಾಗಿ ಹೇಳಿ ಕ್ರಿಶ್ಚಿಯನ್‌ ಬಾಬು ಎಂಬ ಕಲಾವಿದ ಅಡ್ವಾನ್ಸ್‌ ತೆಗೆದುಕೊಂಡು ಬಂದಿದ್ದ. +ಆದರೆ ಹೇಳಿದಂತೆ ಅವರ ಮೇಳಕ್ಕೆ ಹೋಗದೆ ನಮ್ಮ ಸೌಕೂರು ಮೇಳಕ್ಕೆ ಬಂದು ಸೇರಿದ್ದ. +ಹೀಗೆ ಆಡಿದಂತೆ ನಡೆದುಕೊಳ್ಳದೆ ನಮ್ಮ ಮೇಳದಲ್ಲಿದ್ದ ಬಾಬುವನ್ನು ಕರೆದುಕೊಂಡು ಬರಲು ಆ ದಿನ ಮಧ್ಯಾಹ್ನ ಕೊರಗ ಶೆಟ್ರು ಇಬ್ಬರನ್ನು ಕಳುಹಿಸಿಕೊಟ್ಟಿದ್ದರು. +ಆದರೆ ಅವರಿಗೆ ಏನೇನೋ ಸಬೂಬು ಹೇಳಿ ತಾನು ಬರಲಾರೆನೆಂದು ಅವರಲ್ಲಿ ತಿಳಿಸಿ ವಾಪಾಸು ಕಳಿಸಿದ. +ಕೊರಗ ಶೆಟ್ರು ತುಂಬಾ ಹಠವಾದಿ. +ಏನಾದರೂ ಉಪದ್ರವ ಕೊಟ್ಟಾರೆಂಬ ಅನುಮಾನದಿಂದ ಅವಭ್ರತರು ಪೋಲಿಸ್‌ ಸ್ಟೇಷನ್ನಿಗೆ ಹೋಗಿ ವಿಷಯ ತಿಳಿಸಿ ರಾತ್ರೆ ತಮ್ಮ ಮೇಳಕ್ಕೆ ರಕ್ಷಣೆ ಕೊಡಬೇಕೆಂದು ಕೇಳಿಕೊಂಡರು. +ಅಂತೆಯೇ ಆ ದಿನ ರಾತ್ರಿ ಆಟ ನಡೆಯುವಲ್ಲಿಗೆ ಇಬ್ಬರು ಪೋಲೀಸರನ್ನು ಕಳುಹಿಸಿಕೊಟ್ಟರು. +ಅವಭ್ರತರ ಊಹೆಯಂತೆ ಕೊರಗ ಶೆಟ್ಟರು ಕಲಾವಿದ ಬಾಬುವನ್ನು ವೇಷ ಮುಗಿದೊಡನೆ ಕಾರಿನಲ್ಲಿ ಹಾಕಿಕೊಂಡು ಕರೆದು ತರಲು ಕಾರಿನಲ್ಲಿ ನಾಲ್ಕುಮಂದಿ ದಾಂಢಿಗರನ್ನು ಕಳುಹಿಸಿಕೊಟ್ಟರು. +ಅವರು ಬಾಬುವಿನ ವೇಷ ಮುಗಿಯುವವರೆಗೆ ಕಾದು ಕುಳಿತು ವೇಷ ಮುಗಿದೊಡನೆ ಮೂತ್ರ ವಿಸರ್ಜನೆಗೆ ಕುಳಿತವನನ್ನು ಬಲಾತ್ಕಾರದಿಂದ ಕಾರಿಗೆ ಹಾಕಿಕೊಂಡು ಹೊರಡಲು ಸಿದ್ಧರಾದರು. +ಇದನ್ನು ಕಂಡು ಒಬ್ಬ ಹೊರೆಯಾಳು ಅವಚಭ್ರತರಿಗೆ ವಿಷಯ ಮುಟ್ಟಸಿ, ಅವರಿಂದ ಪೋಲೀಸರಿಗೆ ತಿಳಿದು ಅವರು ಬಂದು ಕಾರನ್ನು ಅಡ್ಡ ಹಾಕಿ ನಿಲ್ಲಿಸಿ ಕಲಾವಿದನನ್ನು ಚೌಕಿಗೆ ಕಳುಹಿಸಿ ಬಂದಿರುವ ನಾಲ್ಕು ಮಂದಿಯನ್ನು ಕಾರು ಸಮೇತ ಸ್ಟೇಷನ್ನಿಗೆ ಕೊಂಡುಹೋದರು. +ರಾತ್ರಿ ಸ್ಟೇಷನ್ನಿನಲ್ಲಿಯೇ ಅವರಿಗೆ ಉಪಚಾರ ಮಾಡಿದರು. +ಆಮೇಲೆ ವಿಷಯ ಕೊರಗ ಶೆಟ್ಟಗೆ ತಿಳಿದು ರಾಜಿ ಪಂಚಾಯಿತಿಯಂತೆ ಮುಂದೆ ತೀರ್ಮಾನಗೊಂಡಿತು. +ಸ್ಟೇಷನ್‌ ಸೇರಿದ ನಾಲ್ಕು ಮಂದಿಯನ್ನು ಬಿಡಿಸಿಕೊಂಡು ಹೋದರು. +ಆದರೆ, ಕ್ರಿಶ್ಚಿಯನ್‌ ಬಾಬು ನಮ್ಮ ಮೇಳದಲ್ಲೇ ಉಳಿದು ತಿರುಗಾಟ ಮುಂದುವರಿಸಿದ. +ಆ ವರ್ಷ ನಾವು ಹೆಚ್ಚಾಗಿ ಕುಮಾರ ವಿಜಯ, ನರಕಾಸುರವಥೆ, ಶ್ರೀಕೃಷ್ಣಪಾರಿಜಾತ, ಕೃಷ್ಣಲೀಲ-ಕಂಸವಥೆ, ಎಶ್ವಾಮಿತ್ರ ಮೇನಕೆ, ಭಸ್ಮಾಸುರ-ಮೋಹಿನಿ,ಅಹಲ್ಯಾ ಶಾಪ ಮುಂತಾದ ಪ್ರಸಂಗಗಳನ್ನು ಆಡುತ್ತಿದ್ದೆವು. +ಅದರಲ್ಲಿ ಬರುವ ರಕ್ಕಸ ಪಾತ್ರಗಳನ್ನು ನಾನು ಮಾಡುತ್ತಿದ್ದೆ. +ಕೆಲವೊಮ್ಮೆ ರಾಜವೇಷ (ಕಿರೀಟವೇಷ) ಮಾಡುವ ಸಂದರ್ಭವು ಬರುತ್ತಿತ್ತು . +ನಮ್ಮ ಮೇಳ ಬೆಳೆ ಬೇಳೂರು ಎಂಬಲ್ಲಿ ಆಟ ನಡೆಯುವಾಗ ಒಂದು ವಿಶೇಷ ಘಟನೆ ನಡೆದುಹೋಯಿತು. +ಅಲ್ಲಿ ನಾವು ಆ ದಿನ ಡೇರೆ ಹಾಕಿ ಅಬ್ಬರದ ಪ್ರಚಾರ ಮಾಡಿದ್ದೆವು. +ನಮ್ಮ ಮಾಸ್ಟರ್‌ ಪೀಸ್‌ ಪ್ರಸಂಗವನ್ನೇ ಇಟ್ಟಿದ್ದರು. +ಮೇಲಾಗಿ ಅಲ್ಲಿಯೇ ಹತ್ತಿರದಲ್ಲಿ ಊರಿನ ಸಂಜೀವ ಶೆಟ್ರು ಎಂಬವರು ಶೇರೆಗಾರರಾಗಿದ್ದು, ತುಂಬಾ ಪ್ರಭಾವಿ ವ್ಯಕ್ತಿಯಾಗಿದ್ದರು. +ನಮಗೆ ಅವರ ಪ್ರೋತ್ಸಾಹ ತುಂಬಾ ಇತ್ತು . +ಇದನ್ನೆಲ್ಲಾ ಗಮನಿಸಿದ ಆ ಊರಿನ ಕೆಲವು ಮಂದಿ ಅವಭ್ರತರಲ್ಲಿಗೆ ಬಂದು ತಮ್ಮ ಊರಿನ ದೇವಸ್ಥಾನಕ್ಕೆ ಕಲೆಕ್ಷನ್‌ ಆದ ಹಣದ ಕಾಲಾಂಶ ಕೊಡಬೇಕೆಂಬ ಬೇಡಿಕೆಮುಂದಿಟ್ಟರು. +ಅವಭ್ರತರು ಅದಕ್ಕೆ ಒಪ್ಪಲಿಲ್ಲ. +ಆಗ ಕೋಪಗೊಂಡ ಅವರು ನಾವು ಆಟ ಮಾಡಲು ಬಿಡುವುದಿಲ್ಲ ಎಂದರೆ, ಅವಭ್ರತರು ನಾನು ಆಟ ಆಡಿಯೇ ಶುದ್ಧ ಎಂದು ಹೇಳಿದರು. +ಹೀಗೆ ಎರಡೂ ಕಡೆಯವರ ಪ್ರತಿಷ್ಠೆಯ ಕಣವಾಯಿತು ಅಂದಿನ ಆಟ. +ಕೂಡಲೇ ಊರಿನವರು ಶಿವಮೊಗ್ಗಕ್ಕೆ ಹೋಗಿ ಊರಿನಲ್ಲಿ ಭೀಕರ ಸಾಂಕ್ರಾಮಿಕ ಖಾಯಿಲೆ ಇದೆ. +ಆಟಕ್ಕೆ ಅನುಮತಿ ಕೊಡಬಾರದು. +ಈ ಹಿಂದೆ ಕೊಟ್ಟದ್ದೇ ಇದ್ದರೆ ರದ್ದುಪಡಿಸಬೇಕೆಂದು ಸ್ಟೇಷನ್ನಿನಲ್ಲಿ ದೂರಿತ್ತರು. +ವಿಷಯತಿಳಿದ ಅವಭ್ರತರು ಅದೆಲ್ಲಾ ಕಟ್ಟು ಕಥೆ, ಆಟ ನಿಲ್ಲಿಸುವ ಸಲುವಾಗಿ ಹೆಣೆದ ಸುಳ್ಳಿದ ಕಂತೆಯೆಂದು ಸ್ಟೇಷನ್ನಿನವರಿಗೆ ತಿಳಿಸಿದರು. +ಸತ್ಯಾಂಶ ತಿಳಿದ ಪೋಲಿಸ್‌ ಇನ್ಸ್‌ಪೆಕ್ಟರ್‌ ಖುದ್ದಾಗಿ ಆಟಕ್ಕೆ ಬಂದು ಅವಭ್ರತರೊಡನೆ ಮಾತಾಡುತ್ತಾ ಚೌಕಿಯಲ್ಲಿ ಕುಳಿತುಬಿಟ್ಟರು. +ಟಿಕೇಟು ತೆಗೆದುಕೊಂಡ ಜನರು ಒಳಗೆ ಬರುತ್ತಿದ್ದರು. +ಹೊರಗಿನಿಂದ ಆಟ ನಿಲ್ಲಿಸಬೇಕೆಂದಿದ್ದವರು ಆತಂಕಗೊಂಡವರಂತೆ ಅಲೆದಾಡುತ್ತಿದ್ದರು. +ಡೇರೆ ಭರ್ತಿಯಾಗುತ್ತಾ ಬಂತು. +ಇನ್ಸ್‌ಪೆಕ್ಟರರು ಹೊರಗೆ ಬರುತ್ತಿಲ್ಲ. +ಆಟ ನಿಲ್ಲಿಸಬೇಕೆಂದಿದ್ದವರು ಹೊರಗೆ ಗುಲ್ಲೆಬ್ಬಿಸುತ್ತಿದ್ದರು. +ಸಾಕಷ್ಟು ಕಲೆಕ್ಷನ್‌ ಆದ ಬಳಿಕ ಇನ್ಸ್‌ಪೆಕ್ಟರರು ಹೊರಗೆ ಬಂದು ಊರಿನವರ ಸಮಾಧಾನಕ್ಕಾಗಿ ಆಟನಿಲ್ಲಿಸಿ, ನೀವು ಹತ್ತಿರದಲ್ಲಿ ಬಯಲಾಟ ಆಡಬಹುದು ಎಂದು ಹೇಳಿ ತೆರಳಿದರು. +ಅದರಂತೆ ಅನತಿ ದೂರದಲ್ಲಿ ಬಯಲಾಟವಾಡಿ ಆಡಿದ ಮಾತನ್ನು ಎರಡು ಕಡೆಯವರು ಉಳಿಸಿಕೊಂಡರು. +ಮೇಳಕ್ಕೆ ಆಗಬಹುದಾದ ಕಲೆಕ್ಷನ್‌ ಆಗಿತ್ತು. +ಆಟ ನಡೆದಿತ್ತು. +ಊರವರ ಮಾತಿನಂತೆ ಡೇರೆ ಆಟ ನಿಂತಿತ್ತು. +ಅಂದಿನ ಆಟವೇನೋ ಆಗಿತ್ತು. + ಆದರೆ ಮುಂದಿನ ತಿರುಗಾಟ ಯಶಸ್ವಿಯಾಗಲಿಲ್ಲ. +ಮೇಳಕ್ಕೆ ಕಲೆಕ್ಷನ್‌ ಕಡಿಮೆಯಾಗಿ ಕಲಾವಿದರಿಗೆ ಸಂಬಳ ಸರಿಯಾಗಿ ಬಟವಾಡೆಯಾಗದೆ ಕೊನೆಗೆ ದೇವರ ಸೇವೆಯೂ ಆಗದೆ ಮೇಳ ನಿಂತುಹೋಯಿತು. +ಅನಂತರದ ಒಂದು ವರ್ಷ ಮಂದೆರ್ತಿ ಮೇಳದಲ್ಲಿ ತಿರುಗಾಟ ಮಾಡಿ. +ಇನ್ನು ಮೇಳದ ತಿರುಗಾಟ ಸಾಕೆಂದು ಎಲ್ಲಿಗೂ ಹೋಗದೆ ಮನೆಯಲ್ಲೇ ಉಳಿದೆ. +ಆ ಸಮಯ ಒಂದು ದಿನ ನಾವುಂದ ಮಹಾಬಲಗಾಣಿಗರು ಮನೆಗೆ ಬಂದರು. +ಆ ವರ್ಷ ಪೆರ್ಡೂರಿನಲ್ಲಿ ಗ್ರಾಮ ಲೆಕ್ಕಿಗರಾದ ಕರುಣಾಕರ ಶೆಟ್ರು ಪ್ರಸಿ ದ್ದ ಕಲಾವಿದರನ್ನು ಸಂಘಟಿಸಿ ಪೆರ್ಡೂರು ಮೇಳವನ್ನು ಡೇರೆ ಮೇಳವಾಗಿ ಪರಿವರ್ತಿಸಿ ತಿರುಗಾಟ ಆರಂಭಿಸುತ್ತಾರೆಂದೂ ನನ್ನನ್ನು ಮುಖ್ಯ ಬಣ್ಣದ ವೇಷಕ್ಕೆ ಬರುವಂತೆ ತಿಳಿಸಿರುವುದಾಗಿ ಹೇಳಿದರು. +ಸಂಬಳ ಹೊಂದಾಣಿಕೆಯಾಗಿ ಮೇಳಕ್ಕೆ ಸೇರ್ಪಡೆಯಾದೆ. +ಆ ವರ್ಷ ಮೇಳಕ್ಕೆ ಭಾಗವತರಾಗಿ ಪೊಲ್ಯ ಲಕ್ಷ್ಮೀ ನಾರಾಯಣಶೆಟ್ರು, ಮದ್ದಳೆಗೆ ಶಂಕರ ಭಾಗವತರು ನೇಮಕವಾದರು. +ಕಲಾವಿದರಾಗಿ ವಾಸುದೇವಸಾಮಗ, ಕ್ರಿಶ್ಚಿಯನ್‌ ಬಾಬು, ಆರ್ಲೋಡು ಮೋಹನದಾಸ ಶೆಣೈ ಮುಂತಾದವರಿದ್ದರು. +ಹೊಸದಾಗಿ ನಾಗೇಶ ಗಾಣಿಗರು ಸೇರಿದ್ದರಿಂದ ಹೆಚ್ಚಾಗಿ ಅವರು ಬಣ್ಣದ ವೇಷ ಮಾಡಿ ನಾನು ಕಿರೀಟದ ವೇಷ ಮಾಡಬೇಕಾಯಿತು. +ಆ ವರ್ಷವೂ ಕೂಡ ತಿರುಗಾಟವೇನೋ ಆಯಿತು. +ಆದರೆ ಯಶಸ್ಸು ಕಾಣಲಿಲ್ಲ. +ಕ್ಯಾಂಪಿಗೆ ಸಮಯಕ್ಕೆ ಸರಿಯಾಗಿ ಮುಟ್ಟಲಾಗದೆ, ಸರಿಯಾದ ಪ್ರಚಾರವಿಲ್ಲದೆ ಕಲೆಕ್ಷನ್‌ ಕಡಿಮೆಯಾಗಿ ಆರ್ಥಿಕವಾಗಿ ಮೇಳವು ಸೋಲುವಂತಾಯಿತು. +ಕೊನೆಗೆ ಲಾರಿ ಬಾಡಿಗೆ ಕೊಡಲು ಹಣವಿಲ್ಲದೆ, ಲಾರಿ ಮಾಲಿಕರಿಗೆ ಮೇಳದ ಸಾಮಾನು ಅಡವಿಡುವ ಪರಿಸ್ಥಿತಿ ಬಂದೊದಗಿತು. +ಹೀಗೆ ಅರ್ಧ ತಿರುಗಾಟದಲ್ಲೇ ಮೇಳ ನಿಂತು, ಕಲಾವಿದರು ಬರಿಗೈಯಲ್ಲಿ ಮನೆ ಸೇರುವಂತಾಯಿತು. +ಅವಭ್ರತರ ಯಜಮಾನಿಕೆಯ ಮೇಳಕ್ಕೆ ಬಂದ ದುಸ್ಥಿತಿಯೇ ವಿ.ಎ.ರುಣಾಕರ ಶೆಟ್ರ ಮೇಳಕ್ಕೂ ಬಂದೊದಗಿದ್ದು ಕಾಕತಾಳೀಯವೇ ಎನ್ನದೆ ವಿಧಿಯಿಲ್ಲ. +ಮತ್ತೆ ಮೇಳದ ಮೇಲೆ ಜಿಗುಪ್ಸೆ ಮನೆಯಲ್ಲೇ ಉಳಿದೆ, ಆದರೆ ನಾನು ಬಿಡಬೇಕೆಂದಿದ್ದರೂ ಕಲೆ ನನ್ನನ್ನು ಬಿಡಲಾಗದು ಎಂಬ ಪರಿಸ್ಥಿತಿ ಬಂದೊದಗಿತು. +ಆ ವರ್ಷ ಪಳ್ಳಿ ಸೋಮನಾಥ ಹೆಗ್ಡೆಯವರು ಹೊಸತಾಗಿ ಡೇರೆ ಮೇಳ ಏಳಿಸುವ ತಯಾರಿಯಲ್ಲಿದ್ದರು. +ನನ್ನನ್ನು ಬಣ್ಣದ ವೇಷಕ್ಕೆ ಆಹ್ವಾನಿಸಿದರು. +ಘಟಾನುಘಟಿ ವೇಷಧಾರಿಗಳು, ಆರ್ಥಿಕವಾಗಿ ಸಮರ್ಥರಿರುವ ಯಜಮಾನರು,ಹೀಗಾಗಿ ಧೈರ್ಯದಿಂದ ಮೇಳಕ್ಕೆ ಸೇರಿದೆ. +ಶಂಕರನಾರಾಯಣ ಸಾಮಗರು ಮಹಾಬಲ ಹೆಗಡೆ, ಶಂಭು ಹೆಗಡೆ, ಗಜಾನನ ಹೆಗಡೆ, ವೀರಭದ್ರನಾಯ್ಕರು ಮೊದಲಾದ ವೇಷಧಾರಿಗಳಿದ್ದರು. +ಆ ವರ್ಷ ಭೀಷ್ಮ-ಭೀಷ್ಮ-ಭೀಷ್ಮ ಪ್ರಚಂಡ ಯಶಸ್ವಿ ಪ್ರಸಂಗವಾಗಿತ್ತು . +ಅದಲ್ಲದೆ ಚಂದ್ರಹಾಸ ಚರಿತ್ರೆ ಸತಿ ಸುಶೀಲೆ, ಚತುರ್ಜನ್ಮಮೋಕ್ತ, ಹರಿಶ್ಚಂದ್ರ ಚರಿತ್ರೆ ಹೆಚ್ಚಾಗಿ ಆಡುತ್ತಿದ್ದರು. +ನಾನು ತಮಾಲಕೇತು,ಕಾಲನೇಮಿ ಮೊದಲಾದ ಬಣ್ಣದ ವೇಷಗಳನ್ನು ಮಾಡುತ್ತಿದ್ದೆ. +ಮುಂದಿನ ವರ್ಷದೇವರ ಹೆಗಡೆ, ಕುಮುಟಾ ಗೋವಿಂದನಾಂನ್ಕ್‌ ಮೊದಲಾದವರ ಸೇರ್ಪಡೆಯಾಯಿತು. +ಆ ವರ್ಷ ವಸಂತ ಸೇನೆ ಪ್ರಸಂಗ ನೂರಕ್ಕೆ ಹೆಚ್ಚು ಪ್ರಯೋಗವಾದವು. +ಸಂಪೂರ್ಣ ಘಟೋತ್ಕಚ ಇನ್ನೊಂದು ಯಶಸ್ವಿ ಪ್ರಯೋಗ. +ಅದರಲ್ಲಿ ಮೊದಲಿನ ಭಾಗದಲ್ಲಿ ದೇವರ ಹೆಗಡೆಯವರ ಪಾರ್ಟಿನ ವೇಷ ಉತ್ತರಾರ್ಧದಲ್ಲಿ ಅಂದರೆ, ಘಟೋತ್ಕಜ ಕಾಳಗದಲ್ಲಿ ನನ್ನ ಬಣ್ಣದ ವೇಷ ಇರುತ್ತಿತ್ತು. +ಮರುವರ್ಷವೂ ಕೂಡಾ ಅದೇ ಮೇಳದಲ್ಲಿ ತಿರುಗಾಟ ಮುಂದುವರಿಯಿತು. +ಅದರ ಮುಂದಿನ ವರ್ಷ ಸೋಮನಾಥಹೆಗ್ಡೆಯವರು ಹಾಗೂ ಎಮ್‌.ಎಮ್‌.ಹೆಗ್ಡೆಯವರು ಒಟ್ಟಾಗಿ ಮಂದರ್ತಿ ಮೇಳವನ್ನು ಏಲಂನಲ್ಲಿ ವಹಿಸಿಕೊಂಡರು. + ಎಮ್‌. ಎಮ್‌. ಹೆಗ್ಡೆಯವರು ತಿರುಗಾಟದ ಯಜಮಾನರಾಗಿ ನೇಮಕಗೊಂಡರು. +ನಾನು ಮಂದರ್ತಿ ಮೇಳಕ್ಕೆ ಸೇರಿದೆ. +ಭಾಗವತರಾಗಿ ರಾಮಚಂದ್ರ ನಾವುಡರು,ಕಲಾವಿದರಾಗಿ ಉಡುಪಿ ಬಸವ, ಮಾರ್ಗೋಳಿ ಗೋವಿಂದ ಶೇರೆಗಾರರು ಮೊದಲಾದ ಪ್ರಸಿದ್ಧ ವೇಷಧಾರಿಗಳು ಸೇರ್ಪಡೆ ಗೊಂಡರು. +ಆ ಸಮಯಕ್ಕೆ ಶೇಷಗಿರಿ ಕಿಣಿಯವರು, ಹಿರಿಯಡ್ಕದವರು, ಜನಿವಾರಕಟ್ಟೆಯವರು, ಹಾರಾಡರಾಮ ಗಾಣಿಗರು ನಿವೃತ್ತಿ ಹೊಂದಿದ್ದರು. +ಅಂತೂ ಪುನಃ ಮಂದರ್ತಿ ಮೇಳವೇ ನನಗೆ ಸಿಕ್ಕಂತಾಯಿತು. +ಮಂದರ್ತಿ ಮೇಳದ ಆ ವರ್ಷದ ತಿರುಗಾಟದ ಸಮಯ ದೇವಸ್ಥಾನದಲ್ಲಿ ಆಡಳಿತ ಮಂಡಲಿಗೆ ಮಂದರ್ತಿಯ ಧನಂಜಯ ಶೆಟ್ರು ಹಾಗೂ ಶಿರಿಯಾರ ವಕೀಲ ಮುದ್ದಣ್ಣ ಶೆಟ್ರು ಮೊಕ್ತೇಸರರಾಗಿ ಸೇರ್ಪಡೆಯಾಗಿದ್ದರು. +ಮೇಳದ ಉಸ್ತುವಾರಿಯನ್ನು ಮುದ್ದಣ್ಣ ಶೆಟ್ರು ವಹಿಸಿಕೊಂಡರು. +ಮುಂದಿನ ತಿರುಗಾಟಕ್ಕಾಗಿ ದೇವಸ್ಥಾನದ ವತಿಯಿಂದ ಮುಂಗಡ ವಿತರಿಸಿದ್ದರು. +ಅವರಲ್ಲಿ ನಾನು ಒಬ್ಬನಾಗಿದ್ದೆ. +ನನಗೆ ೩000 ಸಂದಾಯವಾಗಿತ್ತು. +ಆದರೆ ಮುಂದೆ ಮೊಕ್ತೇಸರಿಕೆ ವಿಚಾರದಲ್ಲಿ ತಕರಾರು ಎದ್ದು ವ್ಯಾಜ್ಯ ನ್ಯಾಯಾಲಯದ ಕಟ್ಟೆ ಏರಿತು. +ವಿಚಾರಣೆಗಾಗಿ ನ್ಯಾಯಾಲಯಕ್ಕೆ ಅಲೆಯಬೇಕಾಗಿ ಬಂತು. +ಅದೇ ಸಮಯಕ್ಕೆ ನಾನು ತೀವ್ರಹೃದಯಾಘಾತಕ್ಕೆ ಒಳಗಾಗಿ ಮಣಿಪಾಲ ಆಸ್ಪತ್ರೆಗೆ ಸೇರಿದೆ. +ಚೇತರಿಸಿಕೊಂಡು ಮನೆ ಸೇರಿದೆನಾದರೂ ಮೇಳದ ತಿರುಗಾಟಕ್ಕೆ ವಿದಾಯ ಹೇಳಲೇಬೇಕಾಯಿತು. +ತೆಗೆದುಕೊಂಡ ಮುಂಗಡ ಹಣ ವಾಪಸು ದೇವಸ್ಥಾನಕ್ಕೆ ತಲುಪಿಸಿದೆ. +ಅಂತೂನನ್ನ ಮೇಳದ ತಿರುಗಾಟ ಅಲ್ಲಿಗೆ ಕೊನೆಗೊಂಡಿತು. +ಬಡಗುತಿಟ್ಟಿನ ಯಕ್ಷಗಾನಕ್ಕೆ ಡಾ।ಶಿವರಾಮ ಕಾರಂತರ ಕೊಡುಗೆ ಅನನ್ಯವಾದುದು. +ಯಕ್ಷಗಾನ ಎಂಬುದು ಅನಕ್ಷರಸ್ಥರ ಹಾಗೂ ಸಾಮಾನ್ಯ ಜನರು ಭಾಗವಹಿಸುವ, ನೋಡುವ ಕಲೆ ಎಂಬುದಾಗಿತ್ತು. +ಯಕ್ಷಗಾನ ಬಯಲಾಟ ನೋಡಿದರೆ ಸಂಪ್ರದಾಯಸ್ಥ ಬ್ರಾಹ್ಮಣರು ಸ್ನಾನ ಮಾಡಿ ಬಟ್ಟೆ ಬದಲಿಸಬೇಕಾಗಿತ್ತು. +ಯಕ್ಷಗಾನ ಪ್ರದರ್ಶನ ಕೂಡ ತುಂಬಾ ಅಶ್ಲೀಲ, ಅಸಂಬದ್ಧ ಸನ್ನಿವೇಶಗಳಿಂದ ಕೂಡಿತ್ತು . +ಅಂತಹ ಕಾಲಘಟ್ಟದಲ್ಲಿ ಯಕ್ಷಗಾನದ ನಿಜವಾದ ಸತ್ವವನ್ನು ದೇಶ-ವಿದೇಶಕ್ಕೆ ತೋರಿಸಿಕೊಟ್ಟವರು ಡಾ| ಕಾರಂತರು. +ಯಕ್ಷಗಾನ ಬಯಲಾಟವೆಂಬ ಬೃಹತ್‌ ಗ್ರಂಥವನ್ನು ಪ್ರಕಟಿಸಿ, ಯಕ್ಷಗಾನದ ಹಿರಿಮೆಯನ್ನು ಸಾರಿದರು. +ಅವರಆ ಕೃತಿಗೆ ಸ್ವೀಡಿಶ್‌ ಜಾನಪದ ಅಕಾಡೆಮಿ ಪ್ರಶಸ್ತಿಯನ್ನಿತ್ತು ಗೌರವಿಸಿತು. +ಬಳಿಕ ಕಾರಂತರು ಯಕ್ಷಗಾನದ ಪುನರುಜ್ಜೀವನಕ್ಕೆ ಬ್ರಹ್ಮಾವರದಲ್ಲಿ ಒಂದು ಬೃಹತ್‌ಗೋಷ್ಠಿಯನ್ನು ಹಮ್ಮಿಕೊಂಡರು. +ಆ ಗೋಷ್ಠಿಗೆ ಬಡಗು, ತೆಂಕು, ಬಡಾಬಡಗು ೩ ತಿಟ್ಟಿನ ಪ್ರಸಿದ್ದ ಭಾಗವತರನ್ನು, ಚಂಡೆ, ಮದ್ದಳೆ ವಾದಕರನ್ನು, ವೇಷಧಾರಿಗಳನ್ನು ಆಹ್ವಾನಿಸಿದ್ದರು. +ಆದರೆ ತೆಂಕು ತಿಟ್ಟಿನ ಯಾವುದೇ ಕಲಾವಿದರು ಅದರಲ್ಲಿ ಭಾಗವಹಿಸಲಿಲ್ಲ. +ಕಾರಣ ತೆಂಕು ತಿಟ್ಟಿನವರಿಗೆ ಕಾರಂತರ ಕುರಿತಾಗಿ ಉತ್ತಮ ಅಭಿಪ್ರಾಯವಿದ್ದಿರಲಿಲ್ಲ. +ಹಾಗಾಗಿ ಆ ಗೋಷ್ಠಿಯಲ್ಲಿ ತೆಂಕು ತಿಟ್ಟಿನ ಬಗ್ಗೆ ಯಾವುದೇ ಕಾರ್ಯಕ್ರಮ ನಡೆಸಲಾಗಲಿಲ್ಲ. +ಅಂದಿನ ೩ ದಿನದ ಗೋಷ್ಠಿಯಲ್ಲಿ ಬಡಗುತಿಟ್ಟಿನ ಬಗ್ಗೆ ವಿಚಾರ ಸಂಕೀರಣ, ಪ್ರಾತ್ಯಕ್ತಿಕೆ ನಡೆಯಿತು. +ಪ್ರಸಂಗಗಳ ಬಗ್ಗೆ ಮಾತುಗಾರಿಕೆ,ಹಾಡುಗಾರಿಕೆ, ನರ್ತನ, ವೇಷ-ಭೂಷಣಗಳ ಬಗ್ಗೆ ಸುದೀರ್ಫ ಚರ್ಚೆ ನಡೆಯಿತು. +ಸಂಗೀತ ವಿದ್ವಾಂಸರಿಂದ ಯಕ್ಷಗಾನದಲ್ಲಿ ಹಾಡಬಹುದಾದ ರಾಗಗಳ ನಿರ್ಣಯವಾಯಿತು. +ಅಂದಿನ ಗೋಷ್ಠಿಯಲ್ಲಿ ಉತ್ತರ ಕನ್ನಡದ ಶಿವರಾಮ ಹೆಗಡೆ,ಮಹಾಬಲ ಹೆಗಡೆ, ದೇವರ ಹೆಗಡೆ, ನಾರಾಯಣ ಹೆಗಡೆ ಮುಂತಾದ ವೇಷಧಾರಿಗಳೂ, ನಿಟ್ಟರು ನಾರಾಯಣ ಭಾಗವತರೂ ಭಾಗವಹಿಸಿದ್ದರು. +ಬಡಗುತಿಟ್ಟಿನ ಭಾಗವತರಾದ ನಾರಾಣಪ್ಪ ಉಪ್ಪೂರರು, ದಾಸದ್ವಯರು ಹಾಗೂ ವೇಷಧಾರಿಗಳಾದ ಹಾರಾಡಿ ರಾಮಗಾಣಿಗರು, ಕುಷ್ಟಗಾಣಿಗರು, ನಾರಾಯಣ ಗಾಣಿಗರು, ವೀರಭದ್ರ ನಾಯ್ಕರು ಮುಂತಾದ ವೇಷಧಾರಿಗಳು ಭಾಗವಹಿಸಿದ್ದರು. +ಬಣ್ಣದ ವೇಷಧಾರಿಗಳಾಗಿ ನಾನು ಮತ್ತು ಬೇಲ್ತೂರು ರಾಮಬಳೆಗಾರರು ಭಾಗವಹಿಸಿದ್ದೆವು. +ಗೋಷ್ಠಿಯ ಖರ್ಚಿಗೆ ಸರಕಾರದ ಅನುದಾನ ದೊರೆತಿರಲಿಲ್ಲ. +ಅದರ ಸಂಪೂರ್ಣ ಖರ್ಚು ವೆಚ್ಚವನ್ನು ಯಕ್ಷಗಾನ ಕಲಾಭಿಮಾನಿಗಳಾದ ಪ್ರೊಫೆಸರ್‌ ಬಿ. ವಿ. ಆಚಾರ್ಯರು ನಿರ್ವಹಿಸಿದ್ದರು. +ಗೋಷ್ಠಿಯಲ್ಲಿ ಪ್ರಾಶ್ಯಕ್ಷಿಕೆಯಾಗಿ ವಿದ್ಯುನ್ಛತಿಕಲ್ಯಾಣ ಪ್ರಸಂಗದ ಪ್ರದರ್ಶನ ನಡೆಯಿತು. +ಅದರಲ್ಲಿ ಹಾರಾಡಿ ರಾಮಗಾಣಿಗರು ಸುಲೋಚನನಾಗಿ, ವೀರಭದ್ರನಾಯ್ಕರು ಕುಶ ಭೂಪತಿಯಾಗಿ,ನಾರಾಯಣ ಗಾಣಿಗರು ವಿದ್ಯುನ್ನತಿಯಾಗಿ, ನಾನು ಕಾಲಜಂಘನಾಗಿ,ರಾಮಬಳೆಗಾರರು ವೃತ್ತಜ್ವಾಲೆಯಾಗಿ ಭಾಗವಹಿಸಿದೆವು. +ಇದೊಂದು ಅಪೂರ್ವ ಪ್ರದರ್ಶನವಾಗಿತ್ತು. +ಪ್ರಸಂಗದ ಪ್ರದರ್ಶನದ ಬಳಿಕ ಅದರ ಪಾತ್ರ ನಿರ್ವಹಣೆಬಗ್ಗೆ. +ಹಾಡುಗಾರಿಕೆ ಬಗ್ಗೆ ಸುದೀರ್ಫ ಚರ್ಚೆ ನಡೆಯಿತು. +ಅಂದಿನ ಗೋಷ್ಠಿಹಾಗೂ ವಿಚಾರ ಸಂಕಿರಣ ಬಡಗುತಿಟ್ಟಿನ ಯಕ್ಷಗಾನದ ಸಮಗ್ರ ಸುಧಾರಣೆಗೆ ನಾಂದಿಯಾಯಿತು. +ಈ ಗೋಷ್ಠಿಯು ಕ್ರಿಶ.೧೯೫೩ರಲ್ಲಿ ನಡೆಯಿತು. +ಯಕ್ಷಗಾನದ ಬಗ್ಗೆ ನಡೆದ ಈ ವಿಚಾರಗೋಷ್ಠಿಯು ವಿವಿಧ ವಿಭಾಗಗಳಲ್ಲಿ ಮಾಡಬಹುದಾದ ಸುಧಾರಣೆಗಳ ಬಗ್ಗೆ ವಿಸ್ಕ್ತತ ವಿಚಾರಗಳನ್ನು ಹೊರಗೆಡಹಿತು. +ವೃತ್ತಿ ಮೇಳಗಳಲ್ಲಿರುವ ಕಲಾವಿದರು ಇದನ್ನು ಕಾರ್ಯಗತಗೊಳಿಸ ಬೇಕೆಂಬುದು ಡಾ| ಕಾರಂತರ ಮನದಿಚ್ಚಿಯಾಗಿತ್ತು . +ಅದು ಎಷ್ಟರಮಟ್ಟಿಗೆ ಯಶಸ್ವಿಯಾಯಿತೆಂದು ಹೇಳಲಾಗದು. +ಆ ಬಳಿಕ ಡಾ|ಕಾರಂತರು ಯಕ್ಷಗಾನದ ಪಾರಮ್ಯವನ್ನು ನಮ್ಮ ರಾಜ್ಯದ ವಿವಿಧೆಡೆಗಳಿಗೆ ಪರಿಚಯಿಸುವ ಬಗ್ಗೆ ಒಂದು ಸಮರ್ಥ ತಂಡವನ್ನು ಕಟ್ಟುವಲ್ಲಿ ಮುಂದಾದರು. +ಆಗ ಅವರಿಗೆ ಎದುರಾದ ಸಮಸ್ಯೆಯೆಂದರೆ ಭಾಷೆಯದು. +ಕನ್ನಡವನ್ನುಳಿದು ಇತರ ಭಾಷೆಯ ಜನರಿಗೆ ಅದನ್ನು ತಿಳಿಸುವಲ್ಲಿ ಭಾಷೆ ತೊಡಕಾಗುತ್ತದೆ. +ಆ ಕಾರಣಕ್ಕಾಗಿ ಭಾಷೆ ರಹಿತವಾದ ತಂಡ ಕಟ್ಟಲು ನಿರ್ಧರಿಸಿದರು. +ಭಾಷೆ ಮಾಡಬೇಕಾದ ಕೆಲಸವನ್ನು ಅಭಿನಯ ಮಾಡಬೇಕಾಗಿತ್ತು. +ಆದುದರಿಂದ ಇಲ್ಲಿ ಅಭಿನಯಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡಬೇಕಾಯಿತು. +ತಂಡದಲ್ಲಿರುವ ಕಲಾವಿದರಿಗೆ ೩ ತಿಂಗಳ ಕಾಲ ತರಬೇತಿ ನೀಡಲು ಆರಂಭಿಸಿದರು. +ತರಬೇತಿ ತರಗತಿಯು ೧೯೬೧ರ ಮಳೆಗಾಲದಲ್ಲಿ ಆರಂಭವಾಯಿತು. +ನಾರಾಯಣಪ್ಪ ಉಪ್ಪೂರರು ಹಾಗೂ ರಾಮಚಂದ್ರ ನಾವಡರು ,ಭಾಗವತರಾಗಿ ಹಿರಿಯಡ್ಕಗೋಪಾಲರಾಯರು ಹಾಗೂ ನಾರಾಯಣ ಹೆಗಡೆ ಮದ್ದಳೆಗಾರರಾಗಿ ನೇಮಕಗೊಂಡರು. +ಚಂಡೆಗೆ ಬ್ರಹ್ಮಾವರ ಅನಂತ, ನಿಧಾನ ಪದ್ಯಗಳಿಗೆ ಸಂಗೀತ ವಿದ್ವಾಂಸರಾದ ಶ್ರೀನಿವಾಸ ಉಡುಪರು, ಪಿಟೀಲು ವಾದಕರಾಗಿ, ವೀರರಸದ ಪದ್ಯಗಳಿಗೆ ಸ್ಯಾಕ್ಸೋಫೋನ್‌ ವಾದಕರಾಗಿ ಪುತ್ತೂರಿನ ವೆಂಕಟಪ್ಪ ಡೋಗ್ರರನ್ನು ನಿಯೋಜಿಸಲಾಯಿತು. +ಆ ವರ್ಷ ಭೀಷ್ಮ ವಿಜಯ ಮತ್ತು ಅಭಿಮನ್ಯು ಕಾಳಗ ಪ್ರಸಂಗಗಳನ್ನು ಆರಿಸಿಕೊಂಡಿದ್ದರು. +ಕೆರೆಮನೆ ಮಹಾಬಲ ಹೆಗಡೆ, ವಂಡಾರು ಬಸವ ನಾಯಕರು ಮುಖ್ಯ ವೇಷಧಾರಿಗಳಾಗಿದ್ದರು. +ನಾನು ಅಭಿಮನ್ಯು ಕಾಳಗದಲ್ಲಿ ಸಂಶಪ್ತಕರ ಪಾತ್ರ ನಿರ್ವಹಿಸುತ್ತಿದ್ದೆ. +ಕಾರಂತರ ೨ನೇ ತಂಡದಲ್ಲಿ ಕಾರಣಾಂತರದಿಂದ ನಾನು ಭಾಗವಹಿಸಲಿಲ್ಲ. +ಅದರಲ್ಲಿ ಬಣ್ಣದ ವೇಷಕ್ಕೆ ಮೊದಲು ಸಂಜೀವಯ್ಯರನ್ನು ನೇಮಕ ಮಾಡಿಕೊಂಡರೂ ಅವರು ಕಾರಂತರ ತರಬೇತಿಗೆ ಸರಿಯಾಗಿ ಸ್ಪಂದಿಸಲು ಸಾಧ್ಯವಾಗದ ಕಾರಣ ಪೇತ್ರಿ ಮಾಧು ನಾಯ್ಕರನ್ನು ನೇಮಕ ಮಾಡಿಕೊಂಡರು. +೩ನೇ ತಂಡಕ್ಕೆ ನಾನು ಪುನಃ ಸೇರ್ಪಡೆಯಾದೆ. +ಕಾರಂತರ ಬ್ಯಾಲೆ ತಿರುಗಾಟವು ಬೊಂಬಾಯಿ, ಬೆಂಗಳೂರು, ಮೂಡಬಿದ್ರೆ, ಕಾರ್ಕಳ ಮೊದಲಾದೆಡೆ ನಡೆಯಿತು. +ಅನಂತರದ ದಿನಗಳಲ್ಲಿ ಅಯೋಧ್ಯೆ, ರಾಜಸ್ಥಾನ, ಬಿಹಾರ, ಒರಿಸ್ಸಾ, ಮಧ್ಯಪ್ರದೇಶ,ಗುಜರಾತ್‌, ತಮಿಳುನಾಡು, ಅಸ್ಸಾಂ, ಮಣಿಪುರ ಹೀಗೆ ಭಾರತದ ಪ್ರತಿರಾಜ್ಯಗಳಲ್ಲೂ ಸಂಚರಿಸಿ ಯಕ್ಷಗಾನದ ದುಂದುಭಿ ಬಾರಿಸಿತು. +ಪ್ರದರ್ಶಿಸಿದೆಲ್ಲೆಡೆ ಉತ್ತಮ ಪ್ರತಿಕ್ರಿಯೆ ದೊರೆಯಿತು. +೧೯೫೯ರ ಗಣರಾಜ್ಯೋತ್ಸವ ಆ ವರ್ಷದ ಗಣರಾಜ್ಯೋತ್ಸವವು ಡೆಲ್ಲಿಯಲ್ಲಿ ಸಡಗರ ಸಂಭ್ರಮದಿಂದ ಆಚರಿಸುವ ಸಿದ್ಧತೆ ನಡೆದಿತ್ತು. +ಅದಕ್ಕೆ ನಮ್ಮ ದೇಶದ ವಿವಿಧ ಜಾನಪದ ತಂಡಗಳನ್ನು ಆಹ್ವಾನಿಸಿದ್ದರು. +ಅವುಗಳಲ್ಲಿ ಕರಾವಳಿ ಕರ್ನಾಟಕದಲ್ಲಿನ ಯಕ್ಷಗಾನ ತಂಡವೂ ಸೇರಿತ್ತು. +ಒಂದು ಅತ್ಯುತ್ತಮ ತಂಡದೊಡನೆ ಬರುವಂತೆ ಕೆ.ಎಸ್‌.ಉಪಾಧ್ಯಾಯರನ್ನು ಕೇಳಿಕೊಂಡಿದ್ದರು. +ಅವರು ಕಲಾವಿದರನ್ನುಆಯ್ಕೆಮಾಡಿ ಕರೆತರುವ ಜವಾಬ್ದಾರಿಯನ್ನು ಶ್ರೀಧರ ಹಂದೆ ಮತ್ತು ವಾಸುದೇವ ಹಂದೆಯವರಿಗೆ ವಹಿಸಿದ್ದರು. +ಅದರಂತೆ ಅಮೃತೇಶ್ವರಿ ಮೇಳದ ಕಲಾವಿದರ ತಂಡವನ್ನು ಕೊಂಡು ಹೋಗುವುದೆಂದು ತೀರ್ಮಾನವಾಯಿತು. +ಅಲ್ಲಿಯ ಪ್ರದರ್ಶನಕ್ಕೆ ಅಭಿಮನ್ಯು ಕಾಳಗವನ್ನು ಆಯ್ಕೆ ಮಾಡಿಕೊಂಡಿದ್ದರು. +ಅದರಲ್ಲಿ ಬಣ್ಣದ ವೇಷ (ರಾಕ್ಷಸ ವೇಷ) ಮಾಡಲು ಆಗ ಸಮರ್ಥ ಕಲಾವಿದರು ಇರಲಿಲ್ಲ. +ಅದೇ ವರ್ಷ ಮಂದರ್ತಿ ಮೇಳದಲ್ಲಿ ನಾನು ಮತ್ತು ಬಣ್ಣದ ಸಂಜೀವನವರು ಇದ್ದೆವು. +ಹಾಗಾಗಿ ನಮ್ಮಲ್ಲಿ ಒಬ್ಬರನ್ನು ಬರುವಂತೆ ವಕೀಲ ಎಮ್‌.ಎಮ್‌.ಹೆಗ್ಡೆಯವರ ಮೂಲಕ ಕೇಳಿಕೊಂಡರು. +ಅಂತೆಯೇ ಎಮ್‌.ಎಮ್‌.ಹೆಗ್ಡೆಯವರು ನನ್ನನ್ನು ಕುಂದಾಪುರಕ್ಕೆ ಕರೆಸಿಕೊಂಡು ಬರುವಂತೆ ಕೇಳಿಕೊಂಡರು. +ಆಗ ಮಂದರ್ತಿ ಮೇಳದ ಯಜಮಾನಿಕೆ ಮಂದರ್ತಿಯ ರಾಜೀವ ಹೆಗ್ಡೆಯವರದಾಗಿತ್ತು. +ಆ ಕಾರಣದಿಂದ ನಾನು ಆ ಸಮಯದಲ್ಲಿ ಆಗುವ ರಜೆಯನ್ನು ಮಂದಾರ್ತಿ ಮೇಳದವರು ಮನ್ನಾ ಮಾಡುವುದಾದರೆ ಬರುವೆನಾಗಿ ತಿಳಿಸಿದೆ. +ಅದಕ್ಕೆ ಎಮ್‌.ಎಮ್‌.ಹೆಗ್ಡೆಯವರು ರಾಜೀವ ಹೆಗ್ಡೆಯವರಿಗೆ ಹೇಳಿ ರಜೆ ಕೊಡಿಸುವ ವಾಗ್ದಾನವಿತ್ತರು. +ಅಂತೆಯೇ ನಾನು ಡೆಲ್ಲಿಗೆ ಹೊರಟ ಅಮೃತೇಶ್ವರಿ ಮೇಳದ ಕಲಾತಂಡದೊಂದಿಗೆ ಹೊರಡಲು ಸಿದ್ಧನಾದೆ. +ನಾಲ್ಕು ದಿನಗಳ ರೈಲ್ವೆ ಪ್ರಯಾಣದಲ್ಲಿ ಡೆಲ್ಲಿಗೆ ತಲುಪಿದೆವು. +ಆಗ ತುಂಬಾ ಚಳಿಯ ಕಾಲ . +ರೈಲ್ವೆ ಪ್ರಯಾಣದ ವೇಳೆ ಚಳಿಯಿಂದ ತುಂಬಾ ನಡುಗುವಂತಾಯಿತು. +ಡೆಲ್ಲಿ ತಲುಪಿದರೆ, ಆಗ ಅಲ್ಲಿಯೂ ತುಂಬಾ ಚಳಿ. +ಡೆಲ್ಲಿಯಲ್ಲಿ ಬೇರೆ ಬೇರೆ ಕಲಾ ತಂಡಗಳಿಗೆ ವಾಸ್ತವ್ಯ ಹೂಡಲು ಬೇರೆ ಬೇರೆ ಡೇರೆ ವ್ಯವಸ್ಥೆ. +ಆದರೆ ಎಲ್ಲಾ ತಂಡದ ೮ಂಂ ಜನ ಕಲಾವಿದರಿಗೆ ಒಂದೇ ಹೋಟೆಲಿನಲ್ಲಿ ಊಟದ ವ್ಯವಸ್ಥೆ. +ನಾವು ರಾಜ್ಯೋತ್ಸವ ದಿನಕ್ಕೆ ೬-೮ ದಿನ ಮೊದಲೇ ಅಲ್ಲಿಗೆ ತಲುಪಿದ್ದೆವು. +ಹೀಗಾಗಿ ಡೆಲ್ಲಿಯ ಪ್ರೇಕ್ಷಣೀಯ ಸ್ಥಳಗಳನ್ನು ನೋಡುವ ಅವಕಾಶ ದೊರೆಯಿತು. +ತಾಜ್‌ಮಹಲ್‌, ಕುತುಬ್‌ ಮಿನಾರ್‌, ರಾಜ್‌ಘಾಟ್‌, ಪಾರ್ಲಿಮೆಂಟರಿ ಭವನ,ರಾಷ್ಟಪತಿ ಭವನ ಮುಂತಾದ ಸ್ಥಳಗಳನ್ನು ನೋಡಿ ಆನಂದ ಪಟ್ಟೆವು. +ಜನವರಿ೨೬ರಂದು ಗಣರಾಜ್ಯೊತ್ಸವಕ್ಕೆ ಸಿದ್ಧರಾದೆವು. +ಆ ದಿನ ಬೆಳಗ್ಗೆ ೬ ಗಂಟೆಯೊಳಗೆ ಎಲ್ಲರೂ ವೇಷ ಧರಿಸಿ 'ಪೆರೇಡಿಗೆ' ಸಿದ್ಧರಾದೆವು. +ನಮ್ಮ ವಾಸ್ತವ್ಯ ಸ್ಥಳದಿಂದ ಲಾರಿ ಮೂಲಕ ಕೆಂಪು ಕೋಟೆಯನ್ನು ಸೇರಿದೆವು. +ಕೆಂಪು ಕೋಟೆಯ ವೈಭವವನ್ನು ನೋಡಿ ಆನಂದಪಟ್ಟೆವು. +ಸೇನೆಯ ವಿವಿಧ ತುಕಡಿಗಳು ಕುದುರೆ, ಒಂಟೆ, ಆನೆ ಮೊದಲಾದವುಗಳೊಂದಿಗೆ ಜಾನಪದ ಕಲಾತಂಡಗಳು . +ಪೆರೇಡಿನಲ್ಲಿ ಭಾಗವಹಿಸಿ ಧನ್ಯರಾದೆವು. +ಆದರೆ ಉರಿ ಬಿಸಿಲಿನಲ್ಲಿ ಭಾರವಾದ ಕಿರೀಟ ಹೊತ್ತು ಪೆರೇಡಿನಲ್ಲಿ ಸಂಚರಿಸುವಾಗ ತುಂಬಾ ದಣಿದೆ. +ಹಸಿವು ಬಾಯಾರಿಕೆ ಬೇರೆ, ಆದರೂ ಆ ಸಂಭ್ರಮದಲ್ಲಿ ಭಾಗವಹಿಸಿದೆನೆಂಬ ಧನ್ಯತೆ ನನ್ನದಾಗಿತ್ತು. +ಡೆಲ್ಲಿಯಲ್ಲಿರುವ ಸಮಯ ಆಗಿನ ಪ್ರಧಾನ ಮಂತ್ರಿಗಳಾದ ಜವಾಹರಲಾಲ್‌ ನೆಹರೂರವರ ಜೊತೆ ಒಂದು ಭಾವಚಿತ್ರ ತೆಗೆಸಿಕೊಂಡೆವು. +ಅಲ್ಲಿಯ ಕಾರ್ಯಕ್ರಮಗಳು ಮುಗಿದ ನಂತರ ಊರಿಗೆ ಮರಳಿದೆವು. +ಊರಿಗೆ ಬಂದು ಮೇಳಕ್ಕೆ ಸೇರ್ಪಡೆಯಾದೆ. +ತಿರುಗಾಟದ ಕೊನೆಯಲ್ಲಿ ನನ್ನ ಒಂದು ತಿಂಗಳ ಡೆಲ್ಲಿ ಕಾರ್ಯಕ್ರಮದ ಅವಧಿಯ ಗೈರು ಹಾಜರಿಯನ್ನು ರಜೆಯೆಂದು ಪರಿಗಣಿಸಿ ಆ ಬಾಬ್ತು ಹಣ ಕಳೆದುಕೊಂಡು ಉಳಿದ ಹಣವನ್ನು ಮಾತ್ರ ಕೊಟ್ಟರು. +ವಿಚಾರವನ್ನು ಎಂ.ಎಂ.ಹೆಗ್ಡೆಯವರೊಂದಿಗೆ ಪ್ರಸ್ತಾಪಿಸಿದಾಗ ರಾಜೀವ ಹೆಗ್ಡೆಯವರಿಂದ ಕೊಡಿಸುತ್ತೇನಾಗಿ ಹೇಳಿದರೂ ಅವರಿಂದ ಕೊಡಿಸಲಾಗಲಿಲ್ಲ. +ಕೊನೆಗೆ ನಮ್ಮನ್ನು ಕರೆದುಕೊಂಡು ಹೋದ ಕೆ.ಎಸ್‌.ಉಪಾಧ್ಯರಲ್ಲಿ ಹೋಗಿ ಕೇಳಿದೆ. +ಅದಕ್ಕೆ ಅವರು ಡೆಲ್ಲಿ ಕಾರ್ಯಕ್ರಮದ ಬಾಬ್ತು ಸಂಪೂರ್ಣ ಹಣವನ್ನು ಅಮೃತೇಶ್ವರಿ ಮೇಳದ ಯಜಮಾನರಿಗೆ ಕೊಟ್ಟಿರುವುದಾಗಿ ತಿಳಿಸಿದರು. +ಅವರು ಯಾವುದೇ ರೀತಿಯಲ್ಲಿ ಸ್ಪಂದಿಸಲಿಲ್ಲ. +ಕೊನೆಗೆ ಕೆ.ಎಸ್‌.ಉಪಾದ್ಯಾಯರು ಮಂಗಳೂರಿಗೆ ೩-೪ ಬಾರಿ ಅಲೆದು ೩ಂಂ ರೂ.ಕೊಟ್ಟರು. +ಅಷ್ಟರಿಂದಲೇ ತೃಪ್ತಿಪಟ್ಟು ಮನೆ ಸೇರಿದೆ. +ಗಣರಾಜ್ಯೋತ್ಸವದ ಸಂಭ್ರಮ ಸಮಾರಂಭದಲ್ಲಿ ಭಾಗವಹಿಸಿದೆನೆಂಬ ಹೆಗ್ಗಳಿಕೆಯೊಂದನ್ನು ಬಿಟ್ಟರೆ, ಅದರಿಂದ ಆರ್ಥಿಕವಾಗಿ ಲಾಭ ಪಡೆದಿಲ್ಲ. +ಬದಲಾಗಿ ನಷ್ಟವನ್ನೇ ಅನುಭವಿಸುವಂತಾಯಿತು. +ವಿಶ್ವ ಸಮ್ಮೇಳನ :ನಾನು ಸಾಲಿಗ್ರಾಮ ಮೇಳದಲ್ಲಿರುವಾಗ ವಿಶ್ವ ಸಮ್ಮೇಳನಕ್ಕೆ ಒಂದು ಯಕ್ಷಗಾನ ತಂಡ ತರುವಂತೆ ಪ್ರಸಂಗ ಕರ್ತೃರಾದ ಸೀತಾನದಿ ಗಣಪಯ್ಯ ಶೆಟ್ಟಲ್ಲಿ ಕೇಳಿಕೊಂಡಿದ್ದರು. +ಆ ತಂಡಕ್ಕೆ ನನ್ನನ್ನು ಹಾಗೂ ಗುರು ವೀರಭದ್ರ ನಾಯ್ಕರನ್ನು ಹಾಗೂ ಇನ್ನಿತರ ಕೆಲವು ಕಲಾವಿದರನ್ನು ಆಯ್ಕೆ ಮಾಡಿದರು. +ಅಂತೆಯೇ ನಮ್ಮ ತಂಡ ಡೆಲ್ಲಿಗೆ ಹೋಗಿ ಯಕ್ಷಗಾನ ಪ್ರದರ್ಶನ ನೀಡಿದೆವು. +ನಮ್ಮ ಯಕ್ಷಗಾನಕ್ಕೆ ಅಲ್ಲಿ ತುಂಬಾ ಮನ್ನಣೆ ದೊರಕಿತು. +ಸಮ್ಮೇಳನದ ಬಳಿಕ ಟಿ.ಎ.ಪೈಯವರ ಸೂಚನೆಯಂತೆ ಆಗಿನ ಪ್ರಧಾನಮಂತ್ರಿಗಳಾದ ಇಂದಿರಾಗಾಂಧಿಯವರ ಮನೆಯಲ್ಲಿ ಒಂದು ವಿಶೇಷ ಪ್ರದರ್ಶನವನ್ನು ನೀಡಿದೆವು. +ಅಲ್ಲಿ ಅತಿ ಗಣ್ಯರಾದ ೧ಂಂ ಮಂದಿ ಪ್ರೇಕ್ಷಕರು ನಮ್ಮ ಆಟವನ್ನು ನೋಡಿ ತುಂಬಾ ಸಂತೋಷಪಟ್ಟರು. +ಇಂದಿರಾಗಾಂಧಿಯವರು ನಮ್ಮನ್ನು ಅತ್ಯಾದರದಿಂದ ಸತ್ಕರಿಸಿ ಗೌರವಿಸಿದರು. +ನಾವು ಇಂದ್ರ ಪ್ರಸ್ಥದಲ್ಲಿರುವಾಗ ಒಂದು ಹೋಟೆಲಿನಲ್ಲಿ ಉಳಿದುಕೊಂಡಿದ್ದೆವು. +ಒಂದು ದಿನ ಆಗಿನ ನಮ್ಮ ಸಂಸದರಾದ ರಂಗನಾಥ ಶೆಣೈ ಅವರು ನಮ್ಮತಂಡದವರನ್ನು ತಮ್ಮ ಮನೆಗೆ ಸೀತಾನದಿ ಗಣಪಯ್ಯ ಶೆಟ್ಟ ಮೂಲಕ ಆಮಂತ್ರಿಸಿದ್ದರು. +ಅವರು ವೀರಭದ್ರ ನಾಯ್ಕರಲ್ಲಿ ತಂಡವನ್ನು ಕೊಂಡುಹೋಗುವಂತೆ ತಿಳಿಸಿದ್ದರು. +ಆದರೆ ಮರವೆಯಿಂದಾಗಿ ವೀರಭದ್ರನಾಯ್ಕರು ನಮಗ್ಕಾರಿಗೂ ತಿಳಿಸಿರಲಿಲ್ಲ. +ನಾವೆಲ್ಲರೂ ಎಂದಿನಂತೆ ಹೋಟೆಲ್‌ನಲ್ಲಿ ಊಟ ಮಾಡುತ್ತಿರುವಾಗ ರಂಗನಾಥ ಶೆಣೈ ಅವರು ಬಂದು ತಮ್ಮ ಮನೆಯಲ್ಲಿಯೇ ಇಡೀ ತಂಡಕ್ಕೆ ಊಟ ಸಿದ್ಧವಾಗಿದೆ, ನೀವು ಬಾರದೆ ನನ್ನನ್ನು ಅವಮಾನಿಸಿದ್ದೀರಿ ಎಂದು ನೊಂದು ನುಡಿದರು. +ಅವರ ಮನಸ್ಸನ್ನು ನೋಯಿಸಲು ಒಪ್ಪದೆ ಅರ್ಧಊಟ ಮಾಡಿದ ನಾವು ಮಧ್ಯದಲ್ಲೇ ಊಟ ನಿಲ್ಲಿಸಿ ಅವರ ಮನೆಗೆ ತೆರಳಿ ಊಟದ ಶಾಸ್ತ್ರ ಪೂರೈಸಿದೆವು. +ವಿದೇಶ ಪ್ರಯಾಣ ಅಮೆರಿಕಾ ಪ್ರವಾಸ: ಮಾರ್ಥಾ ಆಷನ್‌ ಎಂಬ ಅಮೆರಿಕಾದ ಓರ್ವ ಮಹಿಳೆ ಯಕ್ಷಗಾನ ಕಲಿಯಬೇಕೆಂಬ ಆಸೆಯಿಂದ ಡಾ| ಕಾರಂತರ ಬಳಿ ಬಂದಳು. +ಅವರು ಹಿರಿಯಡ್ಕ ಗೋಪಾಲರಾಯರ ಮೂಲಕ ಅವಳಿಗೆ ಯಕ್ಷಗಾನದ ಎಲ್ಲಾ ವಿಭಾಗಗಳ ಅಭ್ಯಾಸ ಮಾಡಲು ಅನುಕೂಲ ಮಾಡಿಕೊಟ್ಟರು. +ಅವಳು ಯಕ್ಷಗಾನದಲ್ಲಿ ಪರಿಣಿತಿಯನ್ನು ಹೊಂದಿ ಡಾಕ್ಟರೇಟ್‌ ಪಡೆದಳು. +ಅನಂತರ ಅವಳು ಡಾ|ಕಾರಂತರಲ್ಲಿ ಬಂದು ಯಕ್ಷಗಾನ ತಂಡವನ್ನು ಅಮೆರಿಕಾಕ್ಕೆ ಕರೆತಂದು ಪ್ರದರ್ಶನದ ಮೂಲಕ ತನ್ನ ದೇಶದವರಿಗೆ ಈ ಅಮೂಲ್ಯ ಕಲೆಯ ಪರಿಚಯ ಮಾಡಿಕೊಡಬೇಕೆಂದು ಕೇಳಿಕೊಂಡಳು. +ಆಗ ಕಾರಂತರು ತಮ್ಮ ಯಕ್ಷಗಾನ ಬ್ಯಾಲೆ ಕೊಂಡು ಹೋಗುವಂತೆ ಹೇಳಿದರು. +ಆದರೆ ಮಾರ್ಥಾಳು ಯಕ್ಷಗಾನ ಬ್ಯಾಲೆಯಲ್ಲಿ ಮಾತಿನಿಂದ ಕೂಡಿರದ ಯಕ್ಷಗಾನದ ಸಂಪೂರ್ಣಸೊಗಸು ದೊರೆಯಲಾರದೆಂದು ತಿಳಿದಿದ್ದಳು. +ಹಾಗಾಗಿ ಆಕೆ ತನ್ನ ಗುರುಗಳಾದ ಗೋಪಾಲರಾಯರಲ್ಲಿ ತನ್ನ ಆಸೆಯನ್ನು ತೋಡಿಕೊಂಡಳು. +ಗೋಪಾಲರಾಯರು ಪ್ರೊಫೆಸರ್‌ ಬಿ ವಿ.ಆಚಾರ್ಯರ ನೇತೃತ್ವದಲ್ಲಿ ಒಂದು ತಂಡ ಕಳುಹಿಸಲು ನಿಶ್ಚಯಿಸಿ ಹಂದಾಡಿ ದೇವಸ್ಥಾನದಲ್ಲಿ ೩ ತಿಂಗಳ ಕಾಲ ತರಬೇತಿ ನೀಡಿ ಅಮೆರಿಕಾ ಪ್ರವಾಸಕ್ಕೆ ಅಣಿಗೊಳಿಸಿದರು. +ಆ ತಂಡದಲ್ಲಿ ಭಾಗವತರಾಗಿ ಜಾನುವಾರುಕಟ್ಟೆ ಗೋಪಾಲ ಕಮ್ತಿಯವರು, ಮದ್ದಳೆಗೆ ಹಿರಿಯಡ್ಕ ಗೋಪಾಲರಾಯರು, ಚಂಡೆಗೆ ಬ್ರಹ್ಮಾವರ ಅನಂತ ಹಾಗೂ ಕಲಾವಿದರಾಗಿ ನಾನು, ಹಾರಾಡಿ ಸರ್ವೋತ್ತಮ, ದಯಾನಂದ ನಾಗೂರು, ಬೇಲ್ತೂರು ರಮೇಶ ಮೊದಲಾದ ೧೪ ಜನರು ಇದ್ದೆವು. +೧೯೭೮ರಲ್ಲಿ ನಮ್ಮ ಯಕ್ಷಗಾನ ತಂಡ ಅಮೆರಿಕಾಕ್ಕೆ ಹೊರಡಲು ಸಿದ್ಧವಾಯಿತು. +ನಮ್ಮ ಮನೆಯವರಿಗೆ ನಾನು ವಿದೇಶಕ್ಕೆ ಹೋಗುವ ಕುರಿತು ತುಂಬಾ ಭಯವಾಯಿತು. +ಇದನ್ನರಿತ ಮಾರ್ತಾ, ಬಿ.ವಿ.ಆಚಾರ್ಯ, ಗೋಪಾಲರಾಯರು ನಮ್ಮ ಮನೆಗೆ ಬಂದು ನನ್ನ ಹೆಂಡತಿ ಮಕ್ಕಳಿಗೆ ಧೈರ್ಯ ಹೇಳಿ ಒಪ್ಪಿಸಿದರು. +ಅಮೆರಿಕಾಕ್ಕೆ ತೆರಳಿದ ನಮ್ಮ ತಂಡ ನ್ಯೂಯಾರ್ಕಿನ ಕಾರ್ನೆಂಗಿ ಎಂಬ ಹಾಲಿನಲ್ಲಿ ಪ್ರದರ್ಶನ ನೀಡಿತು. +ಅದು ಅತಿ ದೊಡ್ಡದಾದ ೫000 ಜನರು ಕುಳಿತುಕೊಂಡು ನೋಡಬಹುದಾದ ಶ್ರೇಷ್ಠ ಗುಣಮಟ್ಟದ ಸಭಾಂಗಣವಾಗಿತ್ತು. +ಮಾರ್ತಾರವರು ಮೊದಲೇ ಈ ಹಾಲನ್ನು ಬುಕ್‌ ಮಾಡಿದ್ದರು. +ಅಲ್ಲಿ ನಮ್ಮ ಪ್ರದರ್ಶನ ನಡೆಯಿತು. +ಅಲ್ಲಿಯ ಪ್ರದರ್ಶನದ ಬಳಿಕ ಒಸ್‌ವೆಗೊ, ಒಂಟಾರಿಯೋದ ಹ್ಯಾಮಿಲ್ಬನ್‌,ಅಟ್ಲಾಂಟ, ರೋಡ್‌ ಐಲ್ಯಾಂಡ್‌, ಕನೆಕ್ಟಿಕಟ್‌ನ ಮಿಡೆಲ್‌ ಟೌನ್‌, ಇಲಿನಾಯ್ಸನ ಜ್ಯಾಕ್ಷನ್‌ವಿಲೆ, ಮಿಷಿಗನ್‌ನ ಆನ್‌ ಆರ್ಬರ್‌, ಬಿಹಾಯೋದ ಆಬರ್ಲಿನ್‌,ಕ್ಯಾಲಿಫೋರ್ನಿಯಾದ ಪಸಡೇನಾ, ಲಾಸ್‌ ಎಂಜಲೀಸ್‌, ಜಕ್ಷಂಡ ಮೊದಲಾದ ಕಡೆಗಳಲ್ಲಿ ನಮ್ಮ ಪ್ರದರ್ಶನ ಯಶಸ್ವಿಯಾಗಿ ಜರುಗಿತು. +ಒಟ್ಟಿಗೆ ೨೭ ಕಡೆಗಳಲ್ಲಿ ಪ್ರದರ್ಶನ ನಡೆದವು. +ಅಮೇರಿಕಾದಲ್ಲಿ ಪ್ರದರ್ಶಿಸುವ ಸಲುವಾಗಿ ೩ ಕಥಾನಕಗಳನ್ನು ಆರಿಸಿಕೊಂಡಿದ್ದರು. +ಲವಕುಶ ಕಾಳಗ, ಅಭಿಮನ್ಯು ಕಾಳಗ ಪ್ರಸಂಗಗಳು. +ಇವುಗಳ ವೀಡಿಯೋ ಚಿತ್ರೀಕರಣವು ಅಮೆರಿಕಾದಲ್ಲಿ ನಡೆಯಿತು. +ಆಟದ ಒಂದು ತುಣುಕು ಟಿ.ವಿ.ಯಲ್ಲೂ ಪ್ರಸಾರಗೊಂಡಿತ್ತು . +ಶ್ರುತಿಗೆ ಹಾರ್ಕೋನಿಯಂ ಬದಲು ಪುಂಗಿಯನ್ನು ಬಳಸಿಕೊಂಡದ್ದು ಈ ತಿರುಗಾಟದ ವಿಶೇಷ. +ಹೆಚ್ಚಿನ ಕಡೆಗಳಲ್ಲಿ ಪ್ರದರ್ಶನದ ಜೊತೆಗೆ ಪ್ರಾತ್ಯಕ್ತಿಕೆ, ಉಪನ್ಯಾಸಗಳು ಇರುತ್ತಿದ್ದವು. +ಅಮೆರಿಕಾದ ಪ್ರವಾಸದ ವೇಳೆ ನಮ್ಮ ತಂಡವನ್ನು ಬಹಳ ಆದರದಿಂದ ಜನ ನಡೆಸಿಕೊಂಡರು. +ಹೋಟೆಲು ಸೌಕರ್ಯ ಸಿಗದ ಕಡೆಗಳಲ್ಲಿ ತಂಡದ ಜನರನ್ನು ೪-೫ ಜನರ ಗುಂಪಾಗಿ ವಿಂಗಡಿಸಿ ಒಬ್ಬೊಬ್ಬ ಮಹನೀಯರ ಮನೆಗಳಲ್ಲಿ ಉಳಿಯಲು ವ್ಯವಸ್ಥೆ ಮಾಡಿದರು. +ಅಮೆರಿಕಾ ರಂಗಾಸಕ್ತರಿಗೆ ಜಾನುವಾರುಕಟ್ಟೆ ಗೋಪಾಲಕಾಮತರ ಪದ್ಯ ತುಂಬಾ ಇಷ್ಟವಾಯಿತು. +ಅವರ ಪದ್ಯ ಅಲ್ಲಿನ ಬಾನುಲಿಯಲ್ಲಿಯೂ ಪ್ರಸಾರಗೊಂಡಿತು. +ಅಲ್ಲಿನ ಜನರಿಗೆ ತುಂಬಾ ಇಷ್ಟವಾದುದು ಯಕ್ಷಗಾನದ ವೇಷಗಳ ವೈಭವ. +ಅದರಲ್ಲೂ ಬಣ್ಣದ ವೇಷದ ಬಗೆಗೆ ಅವರಿಗೆ ತುಂಬಾ ಖುಷಿ. +ಅಭಿಮನ್ಯು ಕಾಳಗದ ಕೋಟೆ ಯುದ್ಧ ಅವರಿಗೆ ವಿಶೇಷವಾಗಿ ಕಾಣಿಸಿದೆ. +ರಂಗಮಂದಿರಗಳಲ್ಲಿ ಕೋಟಿ ಯುದ್ಧದೊಂದಿ ಬಳಕೆಗೆ ವಿಶೇಷ ಪರವಾನಿಗೆಯನ್ನು ಪಡೆದುಕೊಂಡಿದ್ದೆವು. +ಅಮೆರಿಕಾದ ಪ್ರವಾಸ ಮುಗಿಸಿ ಜರ್ಮನಿಗೆ ಬಂದೆವು. +ಸುರೇಶ ಅವಸ್ಥಿ ಅವರ ಸಹಾಯದಿಂದ ಜರ್ಮನಿಯ ಬಾನ್‌ನಲ್ಲೂ, ಹ್ಯಾಂಬರ್ಗಿನಲ್ಲೂ ಅಲ್ಲಿನ ಸರಕಾರದ ಆತಿಥ್ಯದಲ್ಲಿ ಎರಡು ಆಟಗಳು ಹಾಗೂ ಎರಡು ಪ್ರಾತ್ಯಕ್ಷಿಕೆಗಳು ಜರುಗಿದವು. +ಹಾಂಕಾಂಗ್‌ ಪ್ರವಾಸ: ೧೯೮೫ರಲ್ಲಿ ಹಾಂಗ್‌ಕಾಂಗ್‌ನಲ್ಲಿ ನಡೆಯಲಿರುವ ಉತ್ಸವಕ್ಕೆ ಡಾ| ಶಿವರಾಮ ಕಾರಂತರಿಗೆ ಒಂದು ಯಕ್ಷಗಾನ ತಂಡ ತರುವಂತೆ ಆಹ್ವಾನ ಬಂತು. +ಅವರು ಮಾತಿನಿಂದ ಕೂಡಿದ ಯಕ್ಷಗಾನ ತರುವಂತೆ ಕೇಳಿದ್ದರು. +ಆದರೆ ಕಾರಂತರು ಅವರ ಕೇಳಿಕೆಗೆ ಒಪ್ಪದೆ ನಿರಾಕರಿಸಿದರು. +ಆದರೆ ಕು.ಶಿ.ಹರಿದಾಸ ಭಟ್ಟರು, ಪ್ರಭಾಕರ್‌ ಪೈ ಮುಂತಾದವರು ಕಾರಂತರ ಮನವೊಲಿಸಿ ೧೭ ಮಂದಿಯ ತಂಡವೊಂದನ್ನು ಆಯ್ಕೆ ಮಾಡಿ ಅವರಿಗೆ ಒಂದು ತಿಂಗಳ ತರಬೇತಿ ನೀಡಿ, ಹಾಂಗ್‌ಕಾಂಗ್‌ ಪ್ರವಾಸಕ್ಕೆ ಸಿದ್ಧರಾದರು. +ಭಾಗವತರಾಗಿ ಮರಿಯಪ್ಪ ಆಚಾರ್‌, ಮದ್ದಳೆಗಾರರಾಗಿ ಶ್ರೀನಿವಾಸ ಆಚಾರ್ಯ, ಚಂಡೆಗೆ ಕೆಮ್ಮಣ್ಣು ಆನಂದ, ವೇಷಧಾರಿಗಳಾಗಿ ನಾನು, ಮೊಳಹಳ್ಳಿ ಹೆರಿಯ, ಪೇತ್ರಿ ಮಾಧುನಾಯ್ಕ, ನಾವುಂದ ಮಹಾಬಲ, ಕೋಟ ವೈಕುಂಠ, ರಾಮನ್ಯಾರಿ, ಕುಂಜಾಲುರಾಮಕೃಷ್ಣ, ದಯಾನಂದ ನಾಗೂರು, ಐರೋಡಿ ಗೋವಿಂದಪ್ಪ, ಬೇಲ್ತೂರುರಮೇಶ, ಹಾರಾಡಿ ಸರ್ವೋತ್ತಮ ಮುಂತಾದ ಕಲಾವಿದರು ಇದ್ದರು. +ಹಂದಾಡಿ ಸುಬ್ಬಣ್ಣ ಭಟ್ಟರು ಮೇಳದ ಉಸ್ತುವಾರಿ ವಹಿಸಿದ್ದರು, ಹಾಂಗ್‌ಕಾಂಗ್‌ನಲ್ಲಿ ನಮ್ಮ ತಂಡದ ಪ್ರದರ್ಶನಗಳು ತುಂಬಾ ಜನಮೆಚ್ಚುಗೆ ಗಳಿಸಿತು. +ಜಪಾನ್‌ ಪ್ರವಾಸ: ಒಮ್ಮೆ ನಮ್ಮ ಯಕ್ಷಗಾನ ತಂಡವು ಜಪಾನ್ ಪ್ರವಾಸವನ್ನು ಕೈಗೊಂಡಿತು. +ಅಲ್ಲಿಯ ಯುನಿಕೇಶಿ ಎಂಬಾಕೆ ಅಲ್ಲಿ ನಡೆಯುವ ಜಾನಪದ ಸಮ್ಮೇಳನಕ್ಕೆ ನಮ್ಮ ತಂಡವನ್ನು ಆಹ್ವಾನಿಸಿದ್ದಳು. + ಕು.ಶಿ.ಹರಿದಾಸ ಭಟ್ಟರ ನೇತೃತ್ವದಲ್ಲಿ ಕಾರಂತರ ನಿರ್ದೇಶನದ ತಂಡವು ಅಲ್ಲಿಗೆ ತೆರಳಿತ್ತು . + ತಂಡದಲ್ಲಿ ಭಾಗವತರಾಗಿ ನೀಲಾವರ ರಾಮಕೃಷ್ಣಯ್ಯ,ಮದ್ದಳೆಗಾರರಾಗಿ ಮಹಾಬಲ ಕಾರಂತರು, ಚಂಡೆಗೆ ಗಜಾನನ ಭಂಡಾರಿ ಹಾಗೂ ವೇಷಧಾರಿಗಳಾದ ನಾವುಂದ ಮಹಾಬಲ, ಭಾಸ್ಕರ ಜೋಶಿ, ಪೇತ್ರಿಮಾಧು ನಾಯ್ಕ,ಹೆರಂಜಾಲು ವೆಂಕಟ್ರಮಣ, ಭಾಸ್ಕರ ಜೋಶಿ, ಪೇತ್ರಿ ಮಾಧುನಾಯ್ಕ, ಬೇಲ್ತೂರು ರಮೇಶ, ದಯಾನಂದ ನಾಗೂರು ಮೊದಲಾದವರೊಂದಿಗೆ ನಾನು ಕೂಡ ತೆರಳಿದ್ದೆ. +ಅಲ್ಲಿ ಸಮ್ಮೇಳನದಲ್ಲಿ ಭಾಗವಹಿಸಿದ ನಮ್ಮ ತಂಡಕ್ಕೆ ಪ್ರಥಮ ಸ್ಥಾನ ದೊರೆತಾಗ ಭಾಗವಹಿಸಿದ ನಮಗೆಲ್ಲಾ ಅತೀವ ಆನಂದವಾಯಿತು. +ಇದಲ್ಲದೆ, ಬೇರೆ ಬೇರೆ ವರ್ಷಗಳಲ್ಲಿ ನಮ್ಮ ತಂಡ ಪ್ರವಾಸ ಮಾಡಿ ಬ್ರಿಟನ್‌,ಜರ್ಮನಿ, ಸ್ಪೈನ್‌, ರಷ್ಯಾ ಮುಂತಾದ ದೇಶಗಳಲ್ಲೂ ಪ್ರದರ್ಶನ ನೀಡಿ ಹೋದಲ್ಲೆಲ್ಲಾ ಜನರ ಪ್ರೋತ್ಸಾಹ ಹಾಗೂ ಮೆಚ್ಚುಗೆ ಪಡೆಯಿತು. +ಒಮ್ಮೆ ನಮ್ಮ ತಂಡಕ್ಕೆ ರಷ್ಯಾದಲ್ಲಿರುವ ಅಲ್ಲಿನ ಸಿಟಿಯ ಪ್ರೇಕ್ಷಣೀಯ ಸ್ಥಳನೋಡಿ ಬರಲು ಕು. ಶಿ. ಹರಿದಾಸ ಭಟ್ಟರು ತಿಳಿಸಿದರು. +ಹಾಗೆ ನಮ್ಮ ತಂಡದ ಹೆಚ್ಚಿನ ಕಲಾವಿದರು ತೆರಳಿದ್ದವು. +ಅಲ್ಲಿ ವಿಶೇಷ ಚಳಿ ಇದ್ದುದರಿಂದ ಬೂಟ್ಸ್‌,ಸ್ವೆಟರ್‌, ಕೋಟು, ಪ್ಯಾಂಟ್‌ ಧರಿಸಿದ್ದೆವು. +ನಮ್ಮೆಲ್ಲರದ್ದು ಸಮವಸ್ತ್ರವಾಗಿತ್ತು . +ಕೇವಲ ಮುಖ ನೋಡಿದರೆ ಮಾತ್ರ ನಮ್ಮ ಪರಿಚಯವಾಗುತ್ತಿತ್ತು. +ಹಾಗೆ ಸಿಟಿಯಲ್ಲಿ ತಿರುಗಾಡುವಾಗ ನಾನು ತಂಡದಿಂದ ಬೇರಾದೆ. +ಕಾಣದ ಊರು ಪರಿಚಯದವರಿಲ್ಲ. +ಬೇರೆಯವರಲ್ಲಿ ಕೇಳುವ ಎಂದರೆ ಭಾಷೆ ತಿಳಿದಿಲ್ಲ. +ನನಗೆ ಕಣ್ಣು ಕಟ್ಟಿ ಬಿಟ್ಟಂತೆ ಆಯ್ತು . +ಹೆದರಿಕೆಯಿಂದ ಏನು ಮಾಡುವುದೆಂದು ತಿಳಿಯದೆ ಒಂದು ಕಡೆಯಲ್ಲಿ ಸುಮ್ಮನೆ ನಿಂತುಕೊಂಡೆ. +ಅಷ್ಟು ಹೊತ್ತಿಗೆ ಪುಣ್ಯವಶಾತ್‌ ಕು.ಶಿ.ಹರಿದಾಸ ಭಟ್ಟರು ವಿದೇಶಿ ಮಹಿಳೆಯೊಂದಿಗೆ ಕಾಣಲು ಸಿಕ್ಕಿದರು. +ದೇವರನ್ನು ಕಂಡಷ್ಟು ಸಂತೋಷವಾಯಿತು. +ಅವರಿಗೆ ನನ್ನ ಪರಿಸ್ಥಿತಿಯನ್ನು ವಿವರಿಸಿ ತಂಡಕ್ಕೆ ಸೇರಿಕೊಂಡೆ. +ಅವರೊಂದಿಗೆ ಮಾರ್ಕೆಟಿಗೆ ಹೋಗಿ ಒಂದು ಆಕರ್ಷಕವಾದ ಗೊಂಬೆಯನ್ನು ಕೊಂಡುಕೊಂಡೆ. +ವಿದೇಶಗಳಲ್ಲಿ ನಾವು ಪ್ರದರ್ಶನ ನೀಡಿದಾಗ ಅಲ್ಲಿಯ ಪ್ರೇಕ್ಷಕರು ಕೊನೆಯತನಕ ಕುತೂಹಲಿಗರಾಗಿ ವೀಕ್ಷಿಸಿ, ಪ್ರದರ್ಶನ ಮುಗಿದ ಬಳಿಕ ಪ್ರದರ್ಶನಕ್ಕೆ ಸಂಬಂಧಿಸಿದಂತೆ ತಮ್ಮ ಸಂಶಯವನ್ನು ಕೇಳುತ್ತಿದ್ದರು. +ಒಮ್ಮೆ ಓರ್ವ ಪ್ರೇಕ್ಷಕನು ಮೊಣಕಾಲಿನಲ್ಲಿ ತಿರುಗುವ ಮಂಡ್ರಿಯ ಬಗ್ಗೆ ವಿವರ ಕೇಳಿದನು. +ಅದಕ್ಕೆ ಡಾ|ಕಾರಂತರು “ಸಿಟ್ಟು ಬಂದಾಗ ನಾವು ಕೈ ಕಾಲುಗಳನ್ನು ಚಲಿಸುವುದು,ಕಣ್ಣುಗುಡ್ಡೆಯನ್ನು ದೊಡ್ಡದಾಗಿ ಮಾಡಿ ನೋಡುವುದು, ಇರುವ ಹಾಗೆ ಸಿಟ್ಟಿನ ಭಾವನೆ ತೋರಿಸಲು ಮಂಡ್ರಿ, ಕುಮ್ಚಟ್ಟು ಇರುತ್ತವೆ” ಎಂಬುದಾಗಿ ವಿವರಿಸಿ ಅವನಿಗೆ ಅದರ ಕುರಿತಾದ ವಿವರವನ್ನು ನೀಡಿ ಮನದಟ್ಟು ಮಾಡಿದರು. +ಹೀಗೆ ಹಲವಾರು ವಿಚಾರಗಳ ಬಗೆಗೆ ಕೇಳಿ ತಿಳಿಯುವ ವಿಮರ್ಶಾತ್ಮಕ ಗುಣ ಅವರಲ್ಲಿರುತ್ತಿತ್ತು. +ಹೀಗಾಗಿ ಭಾಷೆ ತಿಳಿಯದ ಆ ಊರಿನಲ್ಲಿ ನಾವು ಏನು ಮಾಡಿದರೂ ನಡೆಯುತ್ತದೆ. +ಏನು ಹೇಳಿದರೂ ತಿಳಿಯುವುದಿಲ್ಲ ಎನ್ನುವಂತಿಲ್ಲ. +ಪ್ರತಿಯೊಂದು ವಿಚಾರದಲ್ಲೂ ಜಾಗರೂಕರಾಗಿರ ಬೇಕಿತ್ತು. +ಕನಸಿನ ರಕ್ಕಸ: ನಾವು ವಿದೇಶದಲ್ಲಿ ಯಕ್ಷಗಾನ ಪ್ರದರ್ಶನ ನೀಡುವಾಗ ಅದು ಮುಗಿದ ಬಳಿಕ ಪ್ರಜ್ಞಾವಂತ ಪ್ರೇಕ್ಷಕರು ಯಕ್ಷಗಾನದ ಬಗ್ಗೆ ತಿಳಿಯಲು ಚೌಕಿಗೆ ಬರುವ ವಿಚಾರ ಈ ಹಿಂದೆ ತಿಳಿಸಿದ್ದೇನೆ. +ಹೀಗೆ ಬರುವವರಲ್ಲಿ ಹೆಚ್ಚಿನವರು ನನ್ನನ್ನು ಸಂಪರ್ಕಿಸಿ ನನ್ನ ರಾಕ್ಷಸ ವೇಷದ ಬಗ್ಗೆ ಕೇಳುವರು. +ನಾನು ಧರಿಸುವ ವೇಷದ ಸಾಮಾನುಗಳ ಬಗ್ಗೆ ಹಾಗೂ ನಾನು ಬರೆಯುತ್ತಿರುವ ಮುಖವರ್ಣಿಕೆಯ ಬಗ್ಗೆ, ಅವರಿಗೆ ಹೆಚ್ಚಿನ ಆಸಕ್ತಿ . +ಚಿಟ್ಟೆಯ ಬಗ್ಗೆ, ಚಿಟ್ಟೆ ಇಡಲು ಉಪಯೋಗಿಸುವ ಅಕ್ಕಿಯ ಹಿಟ್ಟಿನ ಬಗ್ಗೆ. +ರಂಗ ಪ್ರವೇಶ ಮಾಡುವಾಗ ಹಾಕುವ ಕೂಗಿನ ಬಗ್ಗೆ ಅವರ ಪ್ರಶ್ನೆಗಳ ಸುರಿಮಳೆ. +ರಂಗದಲ್ಲಿ ದಣಿದ ನನಗೆ ಅವರ ಪ್ರಶ್ನೆಗಳಿಗೆ ಉತ್ತರಿಸುವುದು ಕೆಲವೊಮ್ಮೆ ತುಂಬಾ ಕಷ್ಟವಾಗುತ್ತಿತ್ತು. +ಕಾರಣ ಅವರ ಭಾಷೆ ನನಗೆ ತಿಳಿಯುವುದಿಲ್ಲ. +ನನ್ನ ಭಾಷೆ ಅವರಿಗೆ ತಿಳಿಯುವುದಿಲ್ಲ. +ಆದರೂ ಅವರ ಸಮಾಧಾನಕ್ಕೆ ಸಾಧ್ಯವಾದ ರೀತಿಯಲ್ಲಿ ಉತ್ತರಿಸುತ್ತಿದ್ದೆ. +ಒಂದು ದಿನ ಪ್ರದರ್ಶನ ಮುಗಿಸಿ ಊಟ ತೀರಿಸಿ ಮಲಗಿದ ನನಗೊಂದು ಭಯಂಕರ ಸ್ವಪ್ನ ಬಿತ್ತು. +ಅದರಲ್ಲಿ ನಾನು ರಕ್ಕಸನ ವೇಷ ಧರಿಸಿ ರಂಗಕ್ಕೆ ಪ್ರವೇಶಿಸಿದ ಕೂಡಲೇ ಕೆಲವಾರು ಪ್ರೇಕ್ಷಕರು ನನ್ನ ವೇಷ ನೋಡಿ ಹೆದರಿಕೂಗಿಕೊಳ್ಳುತ್ತಿದ್ದರು. +ಇನ್ನು ಕೆಲವರು ರಂಗಸ್ಥಳಕ್ಕೆ ಏನೇನೋ ಬಿಸಾಡುತ್ತಿದ್ದರು. +ಇನ್ನು ಕೆಲವರಂತೂ ಕಲ್ಲು ಹಿಡಿದುಕೊಂಡು ನನ್ನನ್ನು ಅಟ್ಟಿಸಿಕೊಂಡು ಬರುತ್ತಿದ್ದರು. +“ನಾನು ರಕ್ಕಸನಲ್ಲ, ರಕ್ಕಸನವೇಷ'” ಎಂದು ನಾನು ಎಷ್ಟೊಂದು ಹೇಳಿಕೊಂಡರೂ ಅವರು ಕಲ್ಲು ಎಸೆಯುವುದನ್ನು ನಿಲ್ಲಿಸಲೇ ಇಲ್ಲ. +ಆಗ ನಾನು ಹೆದರಿಕೊಂಡೇ ಕೂಗಿದೆ. +ಕೂಗಿನ ಬರಕ್ಕೆ ಎಚ್ಚರಾಯಿತು. +ಸ್ಪಪ್ನವೆಂದು ತಿಳಿದು ಕೂಗಿದ ಬಗ್ಗೆ ನಾಚಿಕೆಯೂ ಆಯಿತು. +ಇದರಿಂದ ನಮ್ಮ ಮನಸ್ಸಿನ ಸುಪ್ತ ಯೋಚನೆಗಳೇ ಕನಸಿನಲ್ಲಿ ಕಾಡುತ್ತವೆ ಎಂದು ತಿಳಿಯುವಂತಾಯಿತು. +ಯಕ್ಷಗಾನಕ್ಕೆ ಸಂಬಂಧಿಸಿದ ಇತರ ಕಸುಬುಗಳು ನವರಾತ್ರಿಯ ಹತ್ತು ದಿನಗಳಲ್ಲಿ ಯಕ್ಷಗಾನ ವೇಷಧಾರಿಗಳು ಮಾಡುವ ಹೂವಿನ ಕೋಲು ತಿರುಗಾಟದ ಕುರಿತು ಈಗಾಗಲೇ ತಿಳಿಸಿದ್ದೇನೆ. +ಇದಲ್ಲದೆ,ಮಳೆಗಾಲದಲ್ಲಿ ಕಲಾವಿದರು ಹಣ ಸಂಪಾದನೆಗಾಗಿ ಮಾಡುವ ಇನ್ನೆರಡು ವೃತ್ತಿಯೆಂದರೆ, ಚಿಕ್ಕಮೇಳ, ಅಡಿಕೆ ಸಂಭಾವನೆ. +ಚಿಕ್ಕಮೇಳ: ಹೆಸರೇ ಸೂಚಿಸುವಂತೆ ಇದೊಂದು ಚಿಕ್ಕ ಯಕ್ಷಗಾನ ತಂಡ. +ಇದರಲ್ಲಿ ಭಾಗವತರು ಮದ್ದಳೆಗಾರರು, ಶ್ರುತಿ ಹಿಡಿಯುವವರು ಮತ್ತು ಒಬ್ಬಪುರುಷ ವೇಷ, ಇನ್ನೊಬ್ಬ ಸ್ತ್ರೀ ವೇಷ ಮಾಡುವವರು . +ಹೀಗೆ ಒಟ್ಟಿಗೆ ೫ ಜನರಿರುವ ಒಂದು ತಂಡ. +ಹೆಚ್ಚಾಗಿ ಈ ತಂಡದವರು ಮಳೆಗಾಲದಲ್ಲಿ ಘಟ್ಟದ ತಿರುಗಾಟ ಮಾಡುತ್ತಾರೆ. +ಒಂದು ವರ್ಷ ನಾನು ಉಳ್ತೂರು ಗಣಪತಿ ಎನ್ನುವ ವೇಷಧಾರಿಯೊಂದಿಗೆ ಮದ್ದಳೆಗಾರನಾಗಿ ತಂಡದೊಂದಿಗೆ ಹೋಗಿದ್ದೆ. +ಸಾಗರದಿಂದಶಿರ್ಸಿ ಸಿದ್ಧಾಪುರದವರೆಗೆ ತಿರುಗಾಟವಾಗಿತ್ತು . +ಈ ತಿರುಗಾಟದಿಂದ ಉತ್ತಮ ವರಮಾನ ಬಂದಿತ್ತು . +ಇಂತಹ ತಿರುಗಾಟದಲ್ಲಿ ಹೆಚ್ಚಾಗಿ ಒಂದು ಸ್ತ್ರೀ ವೇಷ,ಒಂದು ಪುರುಷ ವೇಷ ಧರಿಸಿ ಅದಕ್ಕೆ ಸೂಕ್ತವಾದ ಕಥಾಭಾಗಗಳನ್ನು ಆಯ್ದುಕೊಂಡು ಅಭಿನಯಿಸುವುದು. +ಬೀಮ-ದ್ರೌಪದಿ ಸಂವಾದ, ಕೃಷ್ಣ-ರುಕ್ಮಿಣಿ ಸಂವಾದ, ರಾವಣ-ಸೀತೆ ಸಂವಾದ ಮುಂತಾದ ಕಥಾಭಾಗಗಳು ನಡೆಯುತ್ತಿದ್ದುವು. +ಇದು ರಾತ್ರಿ ಹೊತ್ತಿನಲ್ಲಿ ನಡೆಯುವುದು. +ಒಂದೊಂದು ಮನೆಯಲ್ಲಿ ೧೫-೩ಂ ನಿಮಿಷದ ಕಾರ್ಯಕ್ರಮ ನಡೆಯುತ್ತದೆ. +ಕೆಲವು ಕಲಾಭಿಮಾನಿ ಶ್ರೀಮಂತರು ೧-೨ ಗಂಟೆ ಕಾರ್ಯಕ್ರಮವನ್ನು ಮಾಡಿಸಿ ಅವರ ಮನೆಯಲ್ಲೇ ಊಟ, ವಸತಿ ಅನುಕೂಲ ಮಾಡಿಸಿಕೊಡುವುದೂ ಇದೆ. +ಅಡಕೆ ಸಂಭಾವನೆ: ಇದು ಘಟ್ಟದ ಮೇಲೆ ನಡೆಯುವ ಕಾರ್ಯಕ್ರಮ. +ಇದರಲ್ಲಿ ಭಾಗವತರು, ಮದ್ದಳೆಗಾರರು, ಶ್ರುತಿ ಹಿಡಿಯುವವರು ಮೂರು ಜನಮಾತ್ರ ಇರುವ ತಂಡ. +ಇದು ಹೆಚ್ಚಾಗಿ ಪ್ರಸಿದ್ಧ ಭಾಗವತರು ನಡೆಸಿಕೊಡುವ ಕಾರ್ಯಕ್ರಮ. +ಅವರ ಅಭಿಮಾನಿಗಳು ತಮ್ಮ ಮನೆಯಲ್ಲಿ ಭಾಗವತರಿಂದ ಒಂದೆರಡು ಪ್ರಸಂಗಗಳಿಂದ ಆಯ್ದ ಪದ್ಯಗಳನ್ನು ಹೇಳಿಸಿಕೊಳ್ಳುತ್ತಿದ್ದರು. +ಅವರಿಗೆ ಅಡಕೆಯನ್ನು ಸಂಭಾವನೆಯಾಗಿ ಕೊಡುತ್ತಿದ್ದರು. +ಎಲ್ಲಾ ತಿರುಗಾಟ ಮುಗಿದ ಬಳಿಕ ಸಂಗ್ರಹವಾದ ಅಡಕೆಯನ್ನು ಮಾರಿ ತಂಡದವರು ಹಂಚಿಕೊಳ್ಳುತ್ತಿದ್ದರು. +ನಾನು ಉಳ್ತೂರು ಗಣಪತಿ ನಾಯ್ಕರೊಂದಿಗೆ ಮದ್ದಳೆಗಾರನಾಗಿ ಒಂದೆರಡು ತಿರುಗಾಟ ಮಾಡಿದೆ. +ಇದರಿಂದಲೂ ಉತ್ತಮ ವರಮಾನ ಬರುತ್ತಿತ್ತು. +ಸಾಂಸಾರಿಕ ಜೀವನ :ನನ್ನ ಚಿಕ್ಕ ತಂದೆಯವರು ನನಗಾಗಿ ವಧು ಅನ್ವೇಷಣೆಗೆ ಹೊರಟರು. +ಖ್ಕಾತ ಬಣ್ಣದ ವೇಷಧಾರಿಗಳಾದ ಬೆಳ್ಕಳದ ರಾಮಕೃಷ್ಟಯ್ಯ ನವರ ಮೊಮ್ಮಗಳು ಹಾಗೂ ಬೆಳ್ಕಳೆ ಸುಬ್ಬಣ್ಣಯ್ಯನವರ ಸೊಸೆ ಹಾಗೂ ಕೊಡಂಗಾಳ ಹರಿದಾಸಯ್ಯನವರ ಮಗಳಾದ ಲಲಿತಾ ಎಂಬ ಕನ್ಶೆಯನ್ನು ನಿಶ್ಚಯಿಸಿ ಮದುವೆಯನ್ನು ಉಡುಪಿ ಸಮೀಪದ ಪುತ್ತೂರಿನಲ್ಲಿ ನಡೆಸಿದರು. +ಆ ಕಾಲದಲ್ಲಿ ಮದುವೆಯನ್ನು ಅತೀ ಸಂಕ್ಷೇಪದಲ್ಲಿ ನಡೆಸಬೇಕಾಗಿತ್ತು. +ಅದು ರೇಷನ್‌ ಕಾಲವಾಗಿತ್ತು. +೧೫ ಜನಕ್ಕಿಂತ ಹೆಚ್ಚು ಮಂದಿ ಮದುವೆಗೆ ಸೇರುವಂತಿಲ್ಲ. +ಹಾಗೆ ಸೇರಿದಲ್ಲಿ ಜುಲ್ಮಾನೆ ಮತ್ತು ಶಿಕ್ಷೆ ವಿಧಿಸುತ್ತಿದ್ದರು. +ಹಾಗಾಗಿ ಅತಿ ಸರಳವಾಗಿ ಮದುವೆ ಕಾರ್ಯ ಸಾಂಗವಾಗಿ ನೆರವೇರಿತು. +ನನ್ನ ಅಕ್ಕನ ಮದುವೆ ಹಿಂದೆಯೇ ಕೊಡವೂರಿನ ಶ್ರೀಧರ ಮಾಸ್ತರರೊಂದಿಗೆ ನಡೆದಿತ್ತು. +ನನ್ನ ಮದುವೆಯಾದ ಬಳಿಕ ನನ್ನ ತಮ್ಮಂದಿರಿಗೆ ಯೋಗ್ಯ ಕನ್ನೆಯರನ್ನು ನಿಶ್ಚಯಮಾಡಿ ಮದುವೆ ಮಾಡಿಸಿದೆ. + ಸಂಸಾರ ಯಾವುದೇ ಭಿನ್ನಾಭಿಪ್ರಾಯಕ್ಕೆ ಎಡೆಯಿಲ್ಲದೆ ಅನ್ಯೋನ್ಯತೆಯಿಂದ ಸಾಗಿತ್ತು. +ತಂದೆಯ ಹಿರಿಯ ಹೆಂಡತಿಯ ಮಕ್ಕಳು ಹಾಗೂ ನಾವು ಚೆನ್ನಾಗಿ ಇರುವಾಗಲೇ ಆಸ್ತಿಯನ್ನು ವಿಭಾಗ ಮಾಡಿಕೊಳ್ಳುವುದು ಒಳ್ಳೆಯದೆಂಬ ಅಭಿಪ್ರಾಯಕ್ಕೆ ಬಂದವು. +ನಮ್ಮ ಚಿಕ್ಕಪ್ಪನಿಗೆ ಮಕ್ಕಳಿಲ್ಲದ ಕಾರಣ ಅವಕ ಹಕ್ಕಿನ ಆಸ್ತಿಯನ್ನು ನಮ್ಮೊಳಗೇ ಹಂಚಿಕೊಂಡವು. +ಆಸ್ತಿ ಸಂಬಂಧವಾಗಿ ನಮ್ಮೊಳಗೆ ಯಾವುದೇ ತಕರಾರು ಬರದೆ ಪಾಲಾದ ಬಳಿಕ ನನ್ನ ಪಾಲಿನ ಆಸ್ತಿಯಲ್ಲಿ ಹೆಚ್ಚಿನ ಭಾಗ ಡಿಕ್ಲೇರೇಷನ್‌ ಕಾಯಿದೆಯಲ್ಲಿ ಒಕ್ಕಲುಗಳ ಪಾಲಾಯಿತು. +ಉಳಿದ ಆಸ್ತಿಯನ್ನು ಮಾರಿ ಮಕ್ಕಳ ಮದುವೆ ಮಾಡಿದೆ. +ಈ ಮಧ್ಯೆ ನನ್ನ ವಾಸ್ತವ್ಯವನ್ನು ಸೌಕೂರಿಗೆ ವರ್ಗಾಯಿಸಿದೆ. + ಈಗಲೂ ನಾನು ಸೌಕೂರಿನ ನನ್ನ ಮನೆಯಲ್ಲಿ ನನ್ನ ಹಿರಿಯ ಮಗನೊಂದಿಗೆ ವಾಸಿಸುತ್ತಿದ್ದೇನೆ. +ನನಗೆ ಮಂಜುನಾಥ, ಜಯರಾಮ, ರಮೇಶ, ರಾಘವೇಂದ್ರ ಎಂಬ ನಾಲ್ಕು ಮಂದಿ ಗಂಡು ಮಕ್ಕಳು. +ಭಾಗೀರಥಿ, ಜಾನಕಿ, ಶಾರದೆ, ಶ್ಯಾಮಲ, ಶಕುಂತಲ ಎಂಬ ಐದು ಹೆಣ್ಣು ಮಕ್ಕಳೂ ಜನಿಸಿದರು. +ಅವರೆಲ್ಲರೂ ಈಗ ಸಂಸಾರವೊಂದಿಗರಾಗಿ ಸಂತೃಪ್ತ ಜೀವನ ಸಾಗಿಸುತ್ತಿದ್ದಾರೆ. +ನನ್ನ ಮಗನಾದ ರಾಘವೇಂದ್ರನು ಮದ್ದಳೆಗಾರನಾಗಿ ಕೆಲವು ಮೇಳಗಳಲ್ಲಿ ಕೆಲಸ ಮಾಡಿ ಈಗ ಮನೆಯಲ್ಲೇ ಇದ್ದಾನಾದರೂ ಕರೆದಲ್ಲಿ ಅತಿಥಿ ಕಲಾವಿದನಾಗಿ ಹೋಗಿ ಬರುತ್ತಾನೆ. +ಮೊಮ್ಮಗಳಾದ ಉಜ್ವಲಳಿಗೆ ಯಕ್ಷಗಾನದಲ್ಲಿ ವಿಶೇಷ ಆಸಕ್ತಿ ಇದ್ದು, ಆಕೆಯು ತನ್ನ ವಿದ್ಯಾರ್ಥಿ ಜೀವನದಲ್ಲಿ ಹವ್ಯಾಸಿ ಕಲಾವಿದಳಾಗಿ ಯಕ್ಷಗಾನದಲ್ಲಿ ಭಾಗವಹಿಸುತ್ತಿದ್ದಾಳೆ. +೧೯೮೬ರಲ್ಲಿ ಅಕಾಡೆಮಿಯ ಅಧ್ಯಕ್ಷರಾದ ಶ್ರೀ ನಾಗೇಗೌಡರಿಂದ ದಾವಣಗೆರೆಯಲ್ಲಿ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಪ್ರಶಸ್ತಿ ಪ್ರದಾನ. +ಬೆಂಗಳೂರಿನ ರಂಗಸ್ಥಳ ಮಿತ್ರರು, ಮಂಗಳೂರಿನ ಶ್ರೀ ಕೃಷ್ಣಯಕ್ಟಸಧಢಾದವರು, ಕುಂದಾಪುರ ಭಂಡಾರ್‌ ಕಾರ್ಸ್‌ ಕಾಲೇಜಿನವರು,ಅಂಬಲಪಾಡಿ ಸಂಘದವರು, ಇನ್ನಿತರ ಅನೇಕ ಸಂಘದವರು ಸನ್ಮಾನಿಸಿ ಗೌರವಿಸಿದ್ದಾರೆ. +ಶ್ರೀ ರಾಮವಿಠಲ ಪ್ರಶಸ್ತಿ, ನಿಟ್ಟುರು ಬೋಜ ಸುವರ್ಣ ಪ್ರಶಸ್ತಿ,ಹಾರಾಡಿ ರಾಮಗಾರಾಡಿ ಪ್ರಶಸ್ತಿ, ಕಾರ್ಕಡ ಶ್ರೀನಿವಾಸ ಉಡುಪ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ. +ಇತ್ತೀಚೆಗೆ ಕುಂದಾಪುರ ಯಕ್ಷಮಿತ್ರ ಬಳಗದವರು ಸನ್ಮಾನಿಸಿ ಗೌರವಿಸಿದ್ದಾರೆ. +ಮಂದರ್ತಿಯಲ್ಲಿ ರಾಮಗಾಣಿಗರ ನೆನಪಿಗಾಗಿ ಕೊಡುವ ಹಾರಾಡಿ ರಾಮ ಪ್ರಶಸ್ತಿಯೂ ದೊರೆತಿದೆ. +ಉಪಸಂಹಾರ ಇದುವರೆಗೆ ನನ್ನ ಸಂಕ್ಷಿಪ್ತ ಜೀವನ ವೃತ್ತಾಂತವನ್ನು ಯಕ್ಷಗಾನ ತಿರುಗಾಟದ ಅನುಭವಗಳನ್ನು ತಿಳಿಸಿರುತ್ತೇನೆ. +ಇದು ಸಂಪೂರ್ಣವಾದುದಲ್ಲ. +೮೪ ವರ್ಷಗಳ ಇಳಿವಯಸ್ಸಿನಲ್ಲಿ, ನೆನಪಿನ ಶಕ್ತಿ ಕುಗ್ಗಿರುವ ಹಂತದಲ್ಲಿ ಹಾಗೆ ನೆನಪಿಸಿ ಬರೆಯಲು ಸಾಧ್ಯವೂ ಇಲ್ಲ. +ಮೊದಲೇ ಈ ಕೆಲಸಕ್ಕೆ ತೊಡಗಿದ್ದರೆ ಸಾಧ್ಯವಿತ್ತೋ ಏನೋ. +ಆದರೆ ಸಾಮಾನ್ಯ ಕಲಾವಿದನಾದ ನನ್ನ ಜೀವನ ವೃತ್ತಾಂತ ಓದುಗರ ಮುಂದಿಡುವ ಬಯಕೆ ನನಗಿರಲಿಲ್ಲ. +ಆದರೆ ಇತ್ತೀಚಿನ ದಿನಗಳಲ್ಲಿ ಕೆಲವು ಮಂದಿ ಯಕ್ಷಗಾನ ಕಲಾವಿದರ ಜೀವನ ವೃತ್ತಾಂತ ಪ್ರಕಟವಾದಾಗ, ನಾನೂ ಬರೆಯಬಹುದಿತ್ತೇನೋಎನ್ನುವ ಒಂದು ಕಿರು ಆಸೆ ಬಂದಿದ್ದರೂ, ಅದನ್ನು ಬರೆದು ಪ್ರಕಟಿಸುವಷ್ಟು ಆರ್ಥಿಕ ಭದ್ರತೆ ನನಗಿಲ್ಲ. +ಹಾಗಾಗಿ ಆ ಯೋಚನೆಯನ್ನೇ ಬಿಟ್ಟಿದ್ದೆ. +ಆದರೆ ನನ್ನ ಕೆಲವು ಅಭಿಮಾನಿ ಮಿತ್ರರು ಈ ಕುರಿತು ನನ್ನನ್ನು ಒತ್ತಾಯಿಸುತ್ತಲೇ ಇದ್ದರು. +ಅದೇ ಸಂದರ್ಭಕ್ಕೆ ಯಕ್ಷಗಾನ ಅಕಾಡೆಮಿಯವರು ಪ್ರಕಟಿಸುವ ಸಂಕೇತ ನೀಡಿದರು. +ಆ ಬಳಿಕವೇ ಈ ಕಾಯಕಕ್ಕೆ ಕೈಯಿಕ್ಕಿದೆ. +ಆದರೆ ನಾನು ಓರ್ವಯಕ್ಷಗಾನ ವೇಷಧಾರಿಯೇ ಹೊರತು ಲೇಖಕನಲ್ಲ. +ಬರವಣಿಗೆಯ ಕಲೆ ನನಗೆ ಸಿದ್ಧಿಸಿಲ್ಲ. +ಅಂತಹ ಸಂದರ್ಭದಲ್ಲಿ ಖ್ಯಾತ ಪ್ರಸಂಗ ಕರ್ತೃರಾದ ಹಾಗೂ ನನ್ನ ಅಭಿಮಾನಿ ಮಿತ್ರರೂ ಆದ ಕಂದಾವರ ರಘುರಾಮ ಶೆಟ್ಟಿಯವರು ನನ್ನ ಸಹಾಯಕ್ಕೆ ಒದಗಿದರು. +ನನ್ನ ನಿವಾಸದಿಂದ ೧೫-೨ಂ ಕಿ.ಮೀ. ದೂರದಲ್ಲಿರುವ ಅವರು,ಆರೆಂಟು ಬಾರಿ ನನ್ನಲ್ಲಿಗೆ ಬಂದು, ನಾನು ಹೇಳಿದ ನನ್ನ ಅನುಭವದ ತುಣುಕುಗಳನ್ನು ಕೇಳಿ ತಿಳಿದು ಬರೆವಣಿಗೆಗೆ ಇಳಿಸಿದ್ದಾರೆ. +ಅವರ ಉಪಕಾರಕ್ಕೆ ನಾನೆಷ್ಟು ಕೃತಜ್ಞತೆ ಸಲ್ಲಿಸಿದರೂ ಕಡಿಮೆಯೇ ಸರಿ. +ನನ್ನ ಮಕ್ಕಳು ಹಾಗೂ ಮೊಮ್ಮಕ್ವಳು ನನ್ನ ಈ ಕಾರ್ಯದಲ್ಲಿ ತುಂಬಾ ಸಹಕರಿಸಿದ್ದಾರೆ. +ಕೆಲವು ಅಭಿಮಾನಿ ಮಿತ್ರರು ನನ್ನ ಕುರಿತಾಗಿ ಲೇಖನ ಸಿದ್ಧಪಡಿಸಿ ಕಳುಹಿಸಿದ್ದಾರೆ. +ಇವರೆಲ್ಲರಿಗೆ ನನ್ನ ಕೃತಜ್ಞತೆ ಸಲ್ಲಿಸುವುದರೊಂದಿಗೆ ಶ್ರೀ ದೇವರು ಅವರಿಗೆ ಆಯುರಾರೋಗ್ಯವನ್ನು ಅನುಗ್ರಹಿಸಲೆಂದು ಹಾರೈಸುತ್ತೇನೆ. +ನನ್ನ ಒಡನಾಡಿ ಸಕ್ಕಟ್ಟು:ನನ್ನ ಯಕ್ಷಗಾನ ಜೊತೆಗಾರರಲ್ಲಿ ಅಚ್ಚುಮೆಚ್ಚಿನವರಲ್ಲಿ ಸಕ್ಕಟ್ಟು ಲಕ್ಷ್ಮೀನಾರಾಯಣಯ್ಯನವರು ಒಬ್ಬರು. +ನಾ ಕಂಡ ಪೈಕಿ ಯಕ್ಷಗಾನದ ಬಣ್ಣಗಾರಿಕೆಯಲ್ಲಿ ಒಬ್ಬ ಸಮರ್ಥ ಸಜ್ಜನಿಕೆಯ ವ್ಯಕ್ತಿ. +ಅವರೊಂದಿಗೆ ನಾನು ಮಂದಾರ್ತಿ, ಅಮೃತೇಶ್ವರಿ ಮೇಳಗಳಲ್ಲಿ ಒಟ್ಟಿಗೆ ತಿರುಗಾಟದಲ್ಲಿ ಇದ್ದವನು. +ಅವರಲ್ಲಿನ ಅಗಮ್ಯ ಪ್ರತಿಭೆ ಎಂದರೆ ಶ್ರುತಿ ಜ್ಞಾನ. +ಯಾಕೆಂದರೆ ಅವರು ರಂಗಸ್ಥಳದಲ್ಲಿ ಬಂದು, ತನ್ನ ಕಸುಬುದಾರಿಕೆಯನ್ನು ಜವಾಬ್ದಾರಿಯುತವಾಗಿ ನಿರ್ವಹಿಸುತ್ತಿದ್ದರು ಎಂಬುದಕ್ಕೆ ಅವರ ಮಾತಿನ ಶ್ರುತಿಯ ದಾಟಿ ಸಾಕ್ಷಿ. +ನಮ್ಮ ಮದ್ದಳೆಯ ಶ್ರುತಿ ಮಾಡಲು ಹಾರ್ಮೋನಿಯಂನ ಅಗತ್ಯವಿರುತ್ತಿರಲಿಲ್ಲ. +ಸಕ್ಕಟ್ಟುರವರು ನನಗೆ ಸಹಕಾರಿಯಾಗಿ ಮದ್ದಳೆಯನ್ನು ಬಾರಿಸುತ್ತಿದ್ದರು. +ಆ ಕಾಲದಲ್ಲಿ ಯಾರೂ ಮಾಡಲು ಒಪ್ಪದ ಶಂಭಾಸುರ, ಮೈರಾವಣ,ಕುಂಬಾಂಡ ಮುಂತಾದ ಕಷ್ಟಕರ ಪಾತ್ರವನ್ನು ಇಷ್ಟಪಟ್ಟು ಮಾಡಿ ರಂಗದಲ್ಲಿ ಸೈ ಎನ್ನಿಸಿಕೊಳ್ಳುತ್ತಿದ್ದರು. +ಸಕ್ಕಟ್ಟು ಅವರ ಆಳ್ತನ ಅಬ್ಬರದ ಸ್ವರ, ಬಣ್ಣಕ್ಕೆ ಸರಿ ಹೊಂದುವ ಮುಖ,ಮಾತುಗಾರಿಕೆಗಳಿಂದಾಗಿ ಬಣ್ಣದ ಲೋಕದಲ್ಲಿ ಸಮರ್ಥರಾಗಿ ಮೆರೆಯಲು ಅನುಕೂಲವಾಯಿತು. +ಬಣ್ಣದ ವೇಷ ಅಲ್ಲದೆ ಉಳಿದ ವೇಷವನ್ನು ಆಯಾ ರಸಕ್ಕೆ ಹೊಂದಿಕೊಂಡು ಪಾತ್ರದ ಪೋಷಣೆ ಮಾಡುವುದು ಅವರ ರಸಾತ್ಮಕತೆಗೆ ಹಿಡಿದ ಕನ್ನಡಿಯಾಗಿದೆ. +ಇವರು ರಾಮಗಾಣಿಗರಂತಹ ಮಹಾನ್‌ ಕಲಾವಿದರ ಗರಡಿಯಲ್ಲಿ ಪಳಗಿದ್ದುದುದಲ್ಲದೆ ತನ್ನದೇ ಆದ ಛಾಪನ್ನು ಯಕ್ಷಗಾನಕ್ಕೆ ಒದಗಿಸುವುದರಲ್ಲಿ ಸಮರ್ಥರು. +ತೆಂಕು, ಬಡಗು, ಬಡಬಡಗು ಸ್ಪರ್ಧೆಯಲ್ಲಿ ಇವರ ಸಾಲ್ವ (ಭೀಷ್ಮ ವಿಜಯ)ತುಂಬಾ ಪ್ರಸಿದ್ಧಿ ಪಡೆದಿತ್ತು. +ವಿದೇಶ ಪ್ರಯಾಣದಲ್ಲಿ ಅದರಲ್ಲಿಯೂ ನ್ಯೂಯಾರ್ಕ್‌ನ ಕಾರ್ನಂಗಿ ಹಾಲನ್ನು ಎರಡು ವರ್ಷ ಮೊದಲು ಬುಕ್‌ ಮಾಡಿ ೧೯೭೬ರಲ್ಲಿ ವೃತ್ತಿಪರ ಮೇಳದ ಪ್ರಸಿದ್ಧ ಕಲಾವಿದರನ್ನು ಆಯ್ಕೆ ಮಾಡಿ ಅಮೆರಿಕಾದ ಕನ್ಯೆ ಮಾರ್ಥಾ ಮತ್ತು ನಾನು ಅಲ್ಲಿ ಪ್ರದರ್ಶನ ಕೊಟ್ಟಾಗ ಅವರ ಬಣ್ಣದ ವೇಷವನ್ನು ಕಂಡ ವಿದೇಶಿ ಪ್ರೇಕ್ಷಕರು ಅವರನ್ನು ಮುಟ್ಟಿ ನೋಡಿ ಚೌಕಿಯಲ್ಲಿ ಅವರೊಂದಿಗೆ ಸಂವಾದ ನಡೆಸುತ್ತಿದ್ದರು. +ನನ್ನ ಸ್ನೇಹಿತ ಸಕ್ಕಟ್ಟು ಲಕ್ಷ್ಮೀನಾರಾಯಣಯ್ಯ ಯಕ್ಷಗಾನದ ಸರ್ವಸಮರ್ಥ ಸಂಪನ್ಮೂಲ ವ್ಯಕ್ತಿ ಎನ್ನುವುದರಲ್ಲಿ ಎರಡು ಮಾತಿಲ್ಲ. +ಇವರ ಮಾರ್ಗದರ್ಶನ ಮುಂದಿನ ಪೀಳಿಗೆಗೆ ಆದರ್ಶಪ್ರಾಯವಾಗಲಿ. +ಯಕ್ಷಗಾನ ಕಲಾವಿದರ ಕುರಿತು ಏನಾದರೂ ಹೇಳಬೇಕೆಂದರೆ ಬಹಳ ಕಷ್ಟವಾಗುತ್ತದೆ. +ಏಕೆಂದರೆ ಹೊಸತನ್ನೇನಾದರೂ ಹೇಳಲು ಶಬ್ದವೇ ಸಿಕ್ಕುವುದಿಲ್ಲ. +ಎಲ್ಲವೂ ಸವಕಲು ನಾಣ್ಯಗಳಾಗಿವೆ. +ಹಿಂದಿನ ಹೆಚ್ಚಿನ ಕಲಾವಿದರು ಸಾಧನೆಯಿಂದ-ಅವರ ಭಾಷೆಯಲ್ಲಿಯೇ ಹೇಳುವುದಾದರೆ “ಚರಿಗೆ ಕೂಳು' ತಿಂದು ಈ ಕಲೆಯನ್ನು ಮೈಗೂಡಿಸಿಕೊಂಡವರು. +ಹಿಂದಿನ ಕೆಲವು ಚಾಲ್ತಿ ಪ್ರಸಂಗಗಳನ್ನು ಆಡಿವೇಷಗಳು ಹೀಗೆ ಇರಬೇಕು, ಇಂತದ್ದೇ ಆಡಬೇಕು ಎಂಬಿತ್ಯಾದಿ ವಿಚಾರಗಳು ರೂಢಿಯಾಗಿಬಿಟ್ಟತ್ತು. +ಅಂತಹ ವೇಷಗಳಲ್ಲಿ ಬಣ್ಣದ ವೇಷವೂ ಒಂದು. +ಇಂತಹಬಣ್ಣದ ವೇಷಧಾರಿಗಳಲ್ಲಿ ಅತ್ಯುತ್ತಮ ಎನ್ನಿಸಿಕೊಂಡವರು ಸಕ್ಕಟ್ಟುಲಕ್ಷ್ಮೀನಾರಾಯಣಯ್ಯ . +ಸಹಕಲಾವಿದರೆಲ್ಲ ಇವರನ್ನು “ಬಣ್ಣದಯ್ಯ” ಎಂದು ಕರೆಯುತ್ತಿದ್ದುದ್ದೇ ಹೆಚ್ಚು. +ಇವರ ವಂಶವೇ ಯಕ್ಷಗಾನಕ್ಕೆ ತಮ್ಮನ್ನು ಅರ್ಪಿಸಿಕೊಂಡ ಕುಟುಂಬ. +ಇವರ ತಂದೆ ಸಕ್ಕಟ್ಟು ಸುಬ್ಬಣ್ಣಯ್ಯ ಪ್ರಸಿದ್ಧ ಪುರುಷ ವೇಷಧರಿಗಳುಹಾಗೂ ಉತ್ತಮ ಚಂಡೆ ವಾದಕರೂ ಹೌದು. +ಆ ಕಾಲದಲ್ಲಿ ಮೇಳಗಳಲ್ಲಿ ಚಂಡೆವಾದನಕ್ಕೆ ಪ್ರತ್ಯೇಕ ಜನವಿರಲಿಲ್ಲ. +ವೇಷಧಾರಿಗಳೇ ಬಿಡುವಿದ್ದಾಗ ಆ ಕೆಲಸಮಾಡಬೇಕಿತ್ತು. + ಹೀಗಾಗಿ ಕೆಲವು ಕಲಾವಿದರಿಗೆ ಸುಬ್ಬಣ್ಣಯ್ಯನಿಂದ ಚಂಡೆ ತರಬೇತಿ ಸಿಕ್ಕಿತ್ತು. +ಚಂಡೆ ಕಿಟ್ಟು ಅಂತಹ ಒಬ್ಬ ಕಲಾವಿದ. +ಸುಬ್ಬಣ್ಣಯ್ಯನ ಭಾವಪಾಂಡೇಶ್ವರ ಪುಟ್ಟಯ್ಯನವರು ಈ ಭಾವ-ನೆಂಟನ ಕೆಲವು ಜೋಡಿ ವೇಷಗಳು ಪ್ರಸಿದ್ಧವಾಗಿದ್ದುವಂತೆ. +ಸುಬ್ಬಣ್ಣಯ್ಯನ ಮಕ್ಕಳಲ್ಲಿ ಹಿರಿಯರಾದವರು ಲಕ್ಷ್ಮೀನಾರಾಯಣರಾಯರು. +ಕಿರಿಯವರು ಸೀತಾರಾಮರಾಯರು. +ಇವರು ಒಳ್ಳೆಯ ಸ್ತ್ರೀ ವೇಷಧಾರಿ. +ಆದರೆ ಕೆಲವು ವರ್ಷ ಮೇಳದ ತಿರುಗಾಟ ಮಾಡಿ ನಂತರ ಶಿಕ್ಷಕ ತರಬೇತಿ ಪಡೆದು ಶಿಕ್ಷಕರಾದರು. +ಆಗ ಕೆಲವು ಹವ್ಯಾಸಿ ಸಂಘಗಳಲ್ಲಿ ಇವರು ಯಕ್ಷಗಾನ ಹೇಳಿಕೊಡುತ್ತಿದ್ದರು. +ಮೊಟ್ಟಮೊದಲಿಗೆ ಡೆಲ್ಲಿಯಲ್ಲಿ ಕಾರಂತರಭಾಷಣಕ್ಕೆ ಪ್ರಾತ್ಯಕ್ಷಿಕೆಯನ್ನು ನಡೆಸಿದ ಕೀರ್ತಿ ಇವರದು. +ಸಕ್ಕಟ್ಟು ಲಕ್ಷ್ಮೀನಾರಾಯಣಯ್ಯನ ಮಕ್ಕಳಲ್ಲಿ ಒಬ್ಬಿಬ್ಬರು ಕಲಾವಿದರಾಗಿ ಮೇಳಗಳಲ್ಲಿ ದುಡಿಯುತ್ತಿದ್ದಾರೆ. +ಲಕ್ಷ್ಮೀನಾರಾಯಣಯ್ಯ ಬಣ್ಣದಯ್ಯನಾಗಿ ಪ್ರಸಿದ್ಧಿಗೆ ಬರುತ್ತಿರುವ ಕಾಲವು ಒಂದು ರೀತಿಯ ಸಂಧಿಕಾಲ. +ಪ್ರಸಿದ್ಧ ಬಣ್ಣದ ವೇಷಧಾರಿಗಳಾಗಿದ್ದ ಬಂಡಾರಿ ಜಿಅ ನಂತಯ್ಯ,ಬೆಳ್ಳಳೆ ರಾಮಕೃಷ್ಣಯ್ಯ ಮತ್ತು ಮುಖ್ಯ ಪ್ರಾಣ, ಮುಂತಾದವರು ತಿರುಗಾಟ ಕೊನೆಗೊಳಿಸಿದರು. +ಕೊಳ್ಳೆಬೈಲು ಕುಷ್ಟ,ಬಣ್ಣದ ಸಂಜೀವಯ್ಯ,ಉಳ್ತೂರು ಮಹಾಲಿಂಗ, ನೆಲ್ಲಗದ್ದೆ ಅನಂತಯ್ಯ ಮೊದಲಾದವರು ನಿವೃತ್ತಿಯ ಅಂಚಿನಲ್ಲಿದ್ದರು. +ಹಾಗಾಗಿ ಸಾಧ್ಯವಾದ ಮಟ್ಟಿಗೆ ಬಣ್ಣದ ವೇಷ ಬಾರದ ಪ್ರಸಂಗಗಳನ್ನು ಅಡಿ ಸುಧಾರಣೆ ಮಾಡುವ ಪ್ರಯತ್ನವನ್ನು ಯಜಮಾನರು ಮಾಡುತ್ತಿದ್ದರು. +ಆದರೆ ಹಾರಾಡಿ ರಾಮಗಾಣಿಗರು ತಾನಿರುವ ಮೇಳದಲ್ಲಿ ಬಣ್ಣದ ವೇಷ ಇರಬೇಕೆಂಬ ಯೋಚನೆ ಮಾಡಿದರು. +ಅದಕ್ಕೆ ಕಾರಣವೂ ಇಲ್ಲದಿಲ್ಲ. +ಹಿಡಿಂಬಾ ವಿವಾಹದಂತಹ ಪ್ರಸಂಗಗಳನ್ನು ಆಡಬೇಕಾದರೆ ಬಣ್ಣದ ವೇಷ ಇಲ್ಲದಿದ್ದರೆ ಹ್ಯಾಗೆ? +ಸಕ್ಕಟ್ಟು ಲಕ್ಷ್ಮೀನಾರಾಯಣಯ್ಯ ಆ ಜಾಗವನ್ನು ಸಮರ್ಥವಾಗಿ ನಿರ್ವಹಿಸಬಲ್ಲರೆಂಬುದನ್ನು ಅರಿತ ರಾಮಗಾಣಿಗರು ಅವರನ್ನು ಪ್ರೋತ್ಸಾಹಿಸಿ ಬಣ್ಣದಯ್ಯನ ಯೋಗ್ಯತೆ ಪ್ರಕಾಶಿಸುವಂತೆ ಮಾಡಿದರು. +ಅತ್ತ ವೀರಭದ್ರ ನಾಯ್ಕರುಬೇಲ್ತೂರು ರಾಮ ಬಳೆಗಾರರನ್ನು ಬಣ್ಣದ ವೇಷಧಾರಿಯನ್ನಾಗಿ ರೂಪುಗೊಳಿಸುತ್ತಿದ್ದರು. +ಆದರೆ ಸಕ್ಕಟ್ಟು ಅವರಿಗೆ ಸರಿಕಟ್ಟುವವರಿಲ್ಲದಾಯಿತು. +ಪ್ರಸಿದ್ಧಿಗೆ ಬಂದ ನಂತರ ಸ್ವಾಭಾವಿಕವಾಗಿ ಎಲ್ಲರೂ ಸಕ್ಕಟ್ಟು ಅವರನ್ನೇಕಾಯಸ್ಸು ಮಾಡುತ್ತಿದ್ದರು. +ಶಿವರಾಮ ಕಾರಂತರೂ ತಮ್ಮ ಕಲಾ ತಂಡಕ್ಕೆ ಇವರನ್ನುಸೇರಿಸಿಕೊಂಡು ಇವರ ಪ್ರಕಾಶ ಹೆಚ್ಚಿಸಿದರು. +ಇವರ ಪ್ರತಿಭೆ ಬೆಳಕಿಗೆ ಬಂದದ್ದು ಆ ದಿನಗಳಲ್ಲಿ. +ಕಾರಂತರ ತಂಡದ ಎರಡು ತಿರುಗಾಟದಲ್ಲಿ ನಾನು ಇದ್ದೆನಾದ್ದರಿಂದ ಬಣ್ಣದಯ್ಯನ ಪೂರ್ಣ ಪರಿಚಯ ನನಗೂ ಆಯಿತು. +ಮುಂದೆ ಅವರು ಡಾ.ಮಾರ್ಥಾ ಅ್ಯಶ್ಜನರ ತಂಡದಲ್ಲೂ, ಮಂಗಳೂರಿನ ಕೆ.ಎಸ್‌.ಉಪಾಧ್ಯಾಯರ ತಂಡದಲ್ಲೂ ಇದ್ದು ಹಲವಾರು ಬಾರಿ ಹಲವಾರು ದೇಶಗಳನ್ನು ಕಂಡು ಬಂದರು. +ಮುಖ್ಯವಾಗಿ ಅಮೆರಿಕಾ, ಕೆನಡಾ, ಜಪಾನ್‌, ಕೊರಿಯಾ, ಹಾಂಕಾಂಗ್‌,ಸ್ವಿಡ್ಚರ್‌ಲ್ಯಾಂಡ್‌, ಜರ್ಮನಿ ಇವರು ಸಂದರ್ಶಿಸಿದ ದೇಶಗಳು. +ಇವರು ಒಬ್ಬಸಂಘ ಜೀವಿ. +ಎಲ್ಲರೊಂದಿಗೆ ಸ್ನೇಹಭಾವದಿಂದಿದ್ದು, ರಂಗಸ್ಥಳದಲ್ಲಾಗಲೀ,ಅನ್ಯತ್ರವಾಗಲೀ, ಎಲ್ಲರನ್ನೂ ಸುಧಾರಿಸಿಕೊಂಡು ಹೋಗುವ ಮನೋಭಾವ ಅವರದ್ದು. +ಲಕ್ಷ್ಮೀನಾರಾಯಣಯ್ಯರ ಎತ್ತರದ ನಿಲುವು, ವಿಶಾಲ ಮುಖ, ಶ್ರುತಿ ಬದ್ಧವಾದ ದೊಡ್ಡಸ್ವರ ರಾಕ್ಷಸ ವೇಷಕ್ಕೆ ಅನುಕೂಲವಾಗಿಯೇ ಇತ್ತು . +ಅವರು ಬರೆಯುತ್ತಿದ್ದ 'ಸುಳಿ'ಗಳು ಸ್ಪಷ್ಟವಾಗಿದ್ದವು. +ವಿದೇಶಗಳಲ್ಲಿ ಪ್ರತಿಯೊಬ್ಬರೂ ಚೌಕಿ ಮನೆಗೆ ಬಂದು 'ಡೆಮನ್‌' (1617300) ಎಲ್ಲಿ ಎಂದು ವಿಚಾರಿಸುವವರೇ. +ಇದರಿಂದ ನಮ್ಮಲ್ಲಿನ ಯಕ್ಷಗಾನ ಸಂಯೋಜಕರು ಒಂದು ಪಾಠ ಕಲಿಯಬಹುದು. +ಏನೆಂದರೆ ನಾವಿಲ್ಲಿ ಬಣ್ಣದ ವೇಷ, ಯುದ್ಧ ಮತ್ತು ಪ್ರಯಾಣಗಳ ಕುಣಿತಗಳು ಅನಾವಶ್ಯವೆಂದು ಭಾವಿಸುವುದುಂಟು. +ಹಾಗಾಗಿ ಆ ಭಾಗಗಳನ್ನು ಬಿಡುತ್ತೇವೆ. +ಹಾಗೆ ಮಾಡುವುದರಿಂದ ಯಕ್ಷಗಾನದ ಕೆಲವು ಆಕರ್ಷಣೆಗಳನ್ನು ನಾವು ಕಡಿಮೆಮಾಡುತ್ತೇವೆ. +ಈ ಇಳಿವಯಸ್ಸಿನಲ್ಲಿ ಕೂಡಾ ಲಕ್ಷ್ಮೀನಾರಾಯಣಯ್ಯ ಯಾರೇ ವಿದ್ಯಾಕಾಂಕ್ಷಿಗಳಾಗಿ ಬಂದರೂ ಅವರಿಗೆ ಹೇಳಿಕೊಡುತ್ತಾರೆ. +ಹಲವು ಕಮ್ಮಟಗಳಲ್ಲಿ ಭಾಗವಹಿಸಿ ತನ್ನ ಅನುಭವವನ್ನು ಧಾರೆಯೆರೆದಿದ್ದಾರೆ. +ಇವರ ಶಿಷ್ಯರಲ್ಲಿ ಪೇತ್ರಿ ಮಾಧವ ನಾಯ್ಕರು ಒಬ್ಬರು. +ಅವರೂ ಈಗ ನಿವೃತ್ತರಾಗಿದ್ದಾರೆ. +ಎಳ್ಳಂಪಳ್ಳಿ ಜಗನ್ನಾಥ ಆಚಾರ್‌ ಮತ್ತು ಗುಡ್ಡೆ ಅಂಗಡಿ ನಾಗೇಶ್‌ ಗಾಣಿಗರು ಬಣ್ಣದವರೆಂದು ಹೆಸರು ಮಾಡಿದ್ದಲ್ಲದೆ ಹಲವರು ಈ ಸ್ಥಾನ ತುಂಬಲು ಪ್ರಯತ್ನ ಮಾಡುತ್ತಿರುವುದು ಸಂತೋಷದ ವಿಚಾರ. +ಈಗಲೂ ಲಕ್ಷ್ಮೀನಾರಾಯಣಯ್ಯ ಹೇಳಿಕೊಡುವಷ್ಟು ಗಟ್ಟಿಮುಟ್ಟಾಗಿದ್ದಾರೆ. +ಅವರ ಆರೋಗ್ಯ ಇನ್ನೂ ಸುಧಾರಿಸಿ ಹಲವಾರು ಮಕ್ಕಳಿಗೆ ಅವರು ಹೇಳಿಕೊಡುವಂತಾಗಲಿ ಎಂದು ಹಾರೈಸುತ್ತೇನೆ. +ಬಡಗುತಿಟ್ಟನ ಹಿರಿಯ ಬಣ್ಣದ ವೇಷಧಾರಿ ಶ್ರೀ ಸಕ್ಕಟ್ಟು ಲಕ್ಷ್ಮೀನಾರಾಯಣಯ್ಯನವರು ಓರ್ವ ವಿಶಿಷ್ಟ ಯೋಗ್ಯತೆಯ ಕಲಾವಿದ. +ಬಡಗು ಯಕ್ಷಗಾನ ಆಟಗಳಲ್ಲಿ ಮರೆಯಾಗುತ್ತಿದ್ದ ಬಣ್ಣದ ವೇಷಗಳ ವಿಭಾಗದಲ್ಲಿ ಪರಿಣತಿಯುಳ್ಳ ಕೆಲವೇ ಕಲಾವಿದರಲ್ಲಿ ಒಬ್ಬರು. +ಹೆಚ್ಚು ಶ್ರಮ,ಪರಿಶ್ರಮಗಳನ್ನು ಅಪೇಕ್ಷಿಸುವ ಈ ವಿಭಾಗವನ್ನು ಶ್ರದ್ಧೆಯಿಂದ ಕಲಿತು ಮನೆತನದ ಹಿರಿಯರ ಕಲಾ ಪರಂಪರೆಯನ್ನು ಮೈಗೂಡಿಸಿಕೊಂಡ ಕಲಾವಿದರು. +ತನ್ನ ಕಲಾಜೀವನದಲ್ಲಿ ನಿಷ್ಠಾವಂತ ಕಸುಬುದಾರರಾಗಿ, ಸಂಭಾವನೆಗೆ ಹೊಂದಿಕೊಂಡು, ಸಹಕಲಾವಿದರೊಂದಿಗೆ ಬೆರೆತು ಉತ್ತಮ ವೃತ್ತಿನಿರತರೆನಿಸಿ ಬಾಳಿದವರು. +ಆರು ದಶಕಗಳ ಸುದೀರ್ಥ ಕಲಾ ಪ್ರವೃತ್ತಿಯಲ್ಲಿ ಬಹುಭಾಗವನ್ನು ಬಣ್ಣದ ವೇಷಗಳ ನಿರ್ವಹಣೆಯಲ್ಲಿ ಬಳಸಿದವರು . +ಬಣ್ಣದ ವೇಷ(ರಾಕ್ಷಸಾದಿಪಾತ್ರಗಳು)ಗಳಿಗೆ ಸಂಬಂಧಿಸಿದ ವಿಶಿಷ್ಟ ಮುಖವರ್ಣಿಕೆ, ಪ್ರವೇಶ ಕ್ರಮ, ರಂಗದನಡೆಗಳಲ್ಲಿ ತೇರೆನಿಸಿದ ಲಕ್ಷ್ಮೀನಾರಾಯಣಯ್ಯ, ಈಗಲೂ ತಮ್ಮ ಅನುಭವಗಳನ್ನು ಪ್ರೀತಿಪೂರ್ವಕ ಹಂಚಿಕೊಳ್ಳಲು ಸಿದ್ಧರು. +ಡಾ|ಕಾರಂತರ ಯಕ್ಷಗಾನ ತಂಡದ ಪ್ರವಾಸಗಳ ಮೂಲಕ, ದೇಶದ ಮತ್ತು ವಿದೇಶಗಳ ಕಲಾ ರಸಿಕರಿಗೆ ಯಕ್ಷಗಾನದ ರಾಕ್ಷಸರನ್ನು ಪರಿಚಯಿಸಿ,ನವಿರೇಳಿಸಿದ ಸಕ್ಕಟ್ಟು ಪ್ರಸಿದ್ಧಿ, ಪ್ರಖ್ಯಾತಿ, ಗೌರವಗಳನ್ನು ಪಡೆದರು. +ಸಹೃದಯಿ ಮಿತ್ರನಾಗಿ, ಒಳ್ಳೆಯ ಸಂಸಾರಿಯಾಗಿ ಬಂಧು-ಮಿತ್ರರೊಂದಿಗೆಕೂಡಿ ಬಾಳುವ, ಕಲಾಭಿಮಾನಿಗಳೊಂದಿಗೆ ಬೆರೆತು ಸಂತೋಷಿಸುವ ಸಕ್ಕಟ್ಟು ಸರಳ ಸ್ನೇಹ ಜೀವಿ. +ಬಡಗಿನ ಈ ದೊಡ್ಡ ರಾಕ್ಚಸ ಕಲಾವಿದನಿಗೆ ಆಯುರಾರೋಗ್ಯ, ನೆಮ್ಮದಿಗಳು ಕೂಡಿ ಬರಲಿ, ಬಹುಕಾಲ ಇವರಿಂದ ಕಿರಿಯ ಕಲಾಸಕ್ತರಿಗೆ ಮಾರ್ಗದರ್ಶನ ದೊರೆತು ಇವರ ಸಾಧನೆ ಮುಂದುವರಿಯಲಿ ಎಂದು ಹಾರೈಕೆ. +ಶ್ರೀಯುತ ಸಕ್ಕಟ್ಟು ಲಕ್ಷ್ಮೀನಾರಾಯಣಯ್ಯನವರು ಶುದ್ಧ ಬ್ರಾಹ್ಮಣರಾಗಿ ಜನಿಸಿ ತಮ್ಮ ಬಾಲ್ಯದಿಂದಲೇ ಯಕ್ಷಗಾನಕ್ಕೆ ಧುಮುಕಿ “ಸಕ್ಕಟ್ಟು ಬಣ್ಣ” ಎಂಬ ವಾಡಿಕೆಯ ಬಿರುದು ಇವರ ಪಾಲಿಗೊದಗಿದೆ. +ಹಿಂದಿನ ತಲೆಮಾರಿನ ಬಣ್ಣದ ವೇಷಧಾರಿಗಳು ಬಣ್ಣದ ವೇಷಕ್ಕೊಂದು ಸಂಪ್ರದಾಯ ಶೈಲಿ ಇದೆ ಎಂದು ತೋರಿಸಿ ಪ್ರೇಕ್ಷಕರ ಮನಕ್ಕೆ ಭೀತಿಯ ವಾತಾವರಣ ನಿರ್ಮಿಸಿ ಆಕರ್ಷಿಸಿಕೊಂಡಂತೆ ಇವರು ಸಹ ಯಕ್ಷಗಾನದ ಪ್ರಖ್ಯಾತ ಬಣ್ಣದ ವೇಷಧಾರಿಗಳಾಗಿ ತನ್ನ ಯೌವನದಿಂದ ವೃದ್ಧಾಪ್ಯದವರೆಗೂ ದುಡಿದು ತನ್ನ ಊರಿನಲ್ಲಿರುವ ತನ್ನ ಪಿತ್ರಾರ್ಜಿತ ಭೂಮಿಯನ್ನೆಲ್ಲ ಡಿಕ್ಲರೇಶನ್‌ ಕಾನೂನಿನಡಿಯಲ್ಲಿ ಕಳೆದುಕೊಂಡು ತನ್ನ ಸಂಸಾರದೊಂದಿಗೆ ಸೌಕೂರಿಗೆ ಬಂದು ಬೇರೆಯವರ ಚಿಕ್ಕ ಮನೆಯಲ್ಲಿ ತನ್ನ ಚೊಕ್ಕ ಸಂಸಾರದೊಂದಿಗೆ ಅತಿ ಬಡವರಾಗಿ ಜೀವನ ಸಾಗಿಸಿಕೊಂಡು ಯಕ್ಷಗಾನ ಮೇಳದಲ್ಲಿ ದುಡಿಯುತ್ತಿರುವ ಇವರ ಅನುಭವ ಯಕ್ಷಗಾನದ ಮುಖ್ಯ ವೇಷವಾದ ಎರಡನೇ ವೇಷಧಾರಿಯಪ್ಪೇ ಅನುಭವಯುಕ್ತ. +ಬಣ್ಣದ ವೇಷಧಾರಿಗೂ ಬೇಕಾದ ಕಾಲ ಹಿಂದಿನದ್ದು. +ಅಂತೆಯೇ ಬಣ್ಣದ ವೇಷಕ್ಕೆ ವಿಶಿಷ್ಟವಾದ ಮುಖವರ್ಣಿಕೆ ಇದೆ. +ಅದಕ್ಕೆ ಬಣ್ಣದ ಚಿಟ್ಟೆ ಇಡುವುದೆಂದೇ ವಾಡಿಕೆ ಮಾತಿದೆ. +ಅದಕ್ಕೆ ಹಿಂದಿನ ದಿನ ಅರೆದ ಅಕ್ಕಿ ಹಿಟ್ಟು ಸುಣ್ಣ ಮಿಶ್ರಣದಿಂದ ಮುಖದಲ್ಲಿ ಮುಳ್ಳಿನ ಸಾಲಿನಂತೆ ಚುಟ್ಟ ಇಟ್ಟು ವೇಷ ಮಾಡುವುದಕ್ಕೆ ಸಾಮಾನ್ಯ ಎರಡು ಮೂರು ತಾಸುಗಳ ಕಾಲ ಶ್ರಮದಿಂದ ವೇಷ ಮಾಡಬೇಕಾಗುತ್ತದೆ. +ಇವರು ಸಾಮಾನ್ಯ ಹತ್ತು ಹನ್ನೆರಡು ವಿಧವಾದ ಚಿತ್ರಣಗಳನ್ನು ಮುಖದಲ್ಲಿ ಮುಳ್ಳಿನ ಸಾಲಿನಂತೆ ಚುಟ್ಟಿ ಇಟ್ಟು ವೇಷ ಮಾಡುವುದಕ್ಕೆ ಸಾಮಾನ್ಯ ಎರಡು ಮೂರು ತಾಸುಗಳ ಕಾಲ ಶ್ರಮದಿಂದ ವೇಷ ಮಾಡಬೇಕಾಗುತ್ತದೆ. +ಇವರು ಸಾಮಾನ್ಯ ಹತ್ತುಹನ್ನೆರಡು ವಿಧವಾದ ಚಿತ್ರಣಗಳನ್ನು ಮುಖದಲ್ಲಿ ಚಿತ್ರಿಸಬಲ್ಲರು. +ಯಾವ ವೇಷ, ಯಾವ ರೀತಿ ಎಂಬ ಸಂಪ್ರದಾಯದಂತೆ ರಾಜ ಬಣ್ಣ, ಕಾಟು ಬಣ್ಣ,ಹೆಣ್ಣು ಬಣ್ಣ ಎಂಬ ವಿಭಾಗಗಳಂತೆ ಯಾವುದಕ್ಕೆ ಯಾವುದೆಂದು ಕ್ರಮವನ್ನರಿತು ಸಂಪ್ರದಾಯಕ್ಕೆ ಚ್ಯುತಿ ಬಾರದಂತೆ ಇವರು ಮಾಡುವ ವೇಷದಲ್ಲಿ ನಾನು ಮೆಚ್ಚಿಕೊಂಡಂತೆ ರಾಜ ಬಣ್ಣದ ವೇಷಗಳು ಜನಪ್ರಿಯವಾಗಿದೆ. +ಅದರಲ್ಲೇ ಪ್ರಖ್ಯಾತಿ ಪಡೆದ ಮೈರಾವಣ ಕಾಳಗದ ಮೈರಾವಣ, ವಿದ್ಯುನ್ಠತಿ ಕಲ್ಯಾಣದ ಕಾಲ ಜಂಘಾಸುರ ಹಾಗೂ ಘಟೋತ್ಕಚ, ಸಾಲ್ವ, ರುದ್ರಭೀಮ ಇಂತಹ ಗಂಡು ಬಣ್ಣದಲ್ಲಿ ಇವರು ಎತ್ತಿದ ಕೈ ಎನ್ನಲೇಬೇಕು. +ಹಿಂದಿನ ಸಂಪ್ರದಾಯದಂತೆ ಮುಖ್ಯ ಬಣ್ಣದ ವೇಷದಾರಿಗೆ ಒತ್ತು ಬಣ್ಣದ ವೇಷ ಮಾಡಿ ಸಾಮಾನ್ಯ ಕೆಲವಷ್ಟು ಹೆಣ್ಣು ಬಣ್ಣವನ್ನು ಮಾಡಿ ಆ ಕಾಲಕ್ಕೆ ಸರಿಯಾಗಿ ಮುಖ್ಯ ಸ್ಥಾನ ಪಡೆಯುವುದು . +ಸಂಪ್ರದಾಯಕ್ಕೆ ಹೊಂದಿ ಸಾಕಷ್ಟು ಅನುಭವವನ್ನು ಪಡೆದು ಸ್ಥಾನ ಗಿಟ್ಟಿಸಿಕೊಳ್ಳಬೇಕು. +ಬಣ್ಣದ ವೇಷ, ರಂಗ ಪ್ರವೇಶಕ್ಕೆ ಸಂಪ್ರದಾಯ ಒಡ್ಡೋಲಗ ಆಗಲೇಬೇಕು. +ಆಗ ಬಣ್ಣದ ಚೌಕಿ ಮನೆಯಲ್ಲಿ ಪ್ರಥಮ ಕೂಗು ಹಾಕುವಾಗಲೇ ಒಂದು ರೀತಿ ಭೀತಿಯ ವಾತಾವರಣ ಸೃಷ್ಟಿಯಾಗುತ್ತದೆ. +ಇಂತಹ ಭಯಾನಕ ಇವರಲ್ಲಿದೆ ಎಂಬುದನ್ನು ನಾನು ತಿಳಿದುಕೊಂಡವ. + ನಾನು ಇವರಿದ್ದ ಮೇಳದಲ್ಲಿ ಜೊತೆಯಾಗಿ ಇಲ್ಲದಿದ್ದರೂ ಇವರ ಬಣ್ಣದ ವೇಷಕ್ಕೆ ಭಾಗವತಿಕೆ ಮಾಡಿದ ಅನುಭವ ನನಗಿದೆ. +ಮುಖ್ಯವಾಗಿ ಹೇಳುವುದೆಂದರೆ, ಇವರು ಮಂದಾರ್ತಿ ಮೇಳದಲ್ಲಿ ಬಣ್ಣದ ವೇಷಧಾರಿಯಾಗಿದ್ದಾಗ ನಾನು ಕಮಲಶಿಲೆ ಮೇಳದಲ್ಲಿದ್ದವ. +ಕೊನೆಯ ಸೇವೆ ಆಟಕ್ಕೆ ಮಂದಾರ್ತಿಗೆ ಹೋದ ನಾನು, ಇವರ ವೇಷ ನೋಡಬೇಕೆನಿಸಿ ಬಣ್ಣದ ಪ್ರಸಂಗವಾದರೆ ಸೇವೆಗೆ ಉಳಿದುಕೊಳ್ಳುವ ಯೋಚನೆ ಮಾಡಿ ರಾತ್ರಿ ಚೌಕಿಗೆ ಹೋದಾಗ ಆ ದಿನ ಸೇವೆಯಾಟಕ್ಕೆ ನಿರ್ಣಯವಾದಂತೆ ವಿದ್ಯುನ್ನತಿ ಕಲ್ಯಾಣ ಪ್ರಸಂಗವೆಂದು ಗೊತ್ತಾಯ್ತು. +ಆಗ ನಾನು ದೂರ ನಿಂತಿದ್ದನ್ನು ಕಂಡ ಲಕ್ಷ್ಮೀನಾರಾಯಣಯ್ಯ ಹತ್ತಿರ ಕರೆದು, ನೀವು ಇವತ್ತೊಂದು ಸೇವೆ ಮಾಡಿ ನನ್ನ ಕಾಲ ಜಂಘನ ವೇಷಕ್ಕೆ ಪದ್ಯ ಹೇಳಿ” ಎಂದು ಹೇಳಿದಾಗ ನನಗೆ ತುಂಬ ಸಂತೋಷವಾಯ್ತು. +ಯಾಕೆಂದರೆ ಆ ಪ್ರಸಂಗದಲ್ಲಿ ಪದ್ಯ ಹೇಳುವುದು ನನಗೆ ಇಷ್ಟ ಅಲ್ಲದೆ, ಇವರ ಭಯಾನಕ ಬಣ್ಣದ ವೇಷವು ನನಗೆ ಇಷ್ಟ. +ಹಾಗಾಗಿ ಸೇವೆಗೆ ಅವಕಾಶ ಸಿಕ್ಕಿದ್ದಕ್ಕೆ ಸಂತೋಷಗೊಂಡು ಭಾಗವತಿಕೆ ಮಾಡಿದ್ದೇನೆ. +ಸಂಪೂರ್ಣ ಒಡ್ಡೋಲಕ್ಕೆ ಸಾಮಾನ್ಯ ೪೫ ನಿಮಿಷ ಬೇಕಾಗುತ್ತದೆ. +ಸಂಪ್ರದಾಯ ಒಡ್ಡೋಲಗದಂತೆ ಬಣ್ಣದ ವೇಷ ರಂಗ ಸ್ಥಳ ಪ್ರವೇಶ ಮಾಡಿದಾಗ ಇದು ನಿಜವಾದ ರಕ್ಕಸನೇ ಇರಬಹುದೆಂಬ ವಾತಾವರಣ ಪ್ರೇಕ್ಷಕರಲ್ಲಿ ಮೂಡಿಸಬಲ್ಲ ಇವರು ಬಣ್ಣದ ಮುಖವರ್ಣಿಕೆಯಲ್ಲಿ ಯಾವ ಜಾತಿಯ ಬಣ್ಣಕ್ಕೆ ಯಾವರೀತಿಯ ಚಿತ್ರಣ ಮಾಡಬೇಕೆಂಬ ಸಂಪೂರ್ಣ ಸಂಪ್ರದಾಯ ಬಲ್ಲವರು. +ಇವರಿಂದ ಮುಂದಿನ ಯುವ ಪೀಳಿಗೆಯ ಕಲಾವಿದರು ಇವರಂತೆ ಪ್ರಖ್ಯಾತ ವೇಷಧಾರಿಗಳಾಗಿ ಪ್ರದರ್ಶನಕ್ಕೆ ಬಂದರೆ ಈ ಅಪೂರ್ವ ಕಲೆ ಉಳಿದೀತು. +ಅವಸಾನದ ಮುನ್ನವೇ ಕಾರ್ಯೋನ್ಮುಖರಾಗೋಣವೆ? +ನನ್ನ ಬಾಲ್ಯದಲ್ಲಿ ಬಯಲಾಟದ ಮೇಳಗಳಲ್ಲಿ 'ಬಣ್ಣದ ವೇಷ'ಗಳನ್ನು ಕಾಣುವುದೇ ಕಣ್ಣಿಗೆ ಒಂದು ಹಬ್ಬ . +ಯಕ್ಷಗಾನ ಬಣ್ಣದ ಲೋಕದಲ್ಲಿ ವಿಲಕ್ಷಣವಾಗಿ ಗೋಚರಿಸುವ ಬಣ್ಣದ ವೇಷಗಳು ಗ್ರಾಮೀಣ ಜನಪದ ಯಕ್ಷ ಪ್ರೇಕ್ಷಕ ವಲಯಕ್ಕಂತೂ ಅತ್ಯಂತ ಪ್ರೀತಿಪಾತ್ರ. +ಪೂರ್ವ ಯಕ್ಷಗಾನ ಕಾಲದಲ್ಲಿ “ಪೂರ್ವ ರಂಗ' ಮುಗಿಯುವಾಗಲೇ ರಾತ್ರಿ ಹನ್ನೊಂದಾಗುತ್ತಿತ್ತು. +ಆಮೇಲೆ ಉತ್ತರ ರಂಗ, ಪೌರಾಣಿಕ ಕಥಾನಕಗಳ ದೃಶ್ಯಕಾವ್ಯದರಸ ರಂಜಿತ ಯಕ್ಷರಾತ್ರಿ. +ಈ ಸಮಯದಲ್ಲಿ ಎಳೆಯವರಾದ ನಮ್ಮನ್ನು ನಿದ್ರಾಂಗನೆ ಸಮ್ಮೋಹನಾಸ್ತದಿಂದ ಬೀಳಿಸುವ ಕಾಲ. +ನನ್ನನ್ನು ಆಟಕ್ಕೆ ಕರೆದೊಯ್ದ ಅಜ್ಜಿಯಲ್ಲಿ ಮರೆಯದೆ ಹೇಳುತ್ತಿದ್ದೆ. +ರಾಕ್ಷಸವೇಷ ಬಂದಾಗ ಮರೆಯದೆ ಎಬ್ಬಿಸಿ. +ನನ್ನ ಮನಸ್ಸಿನ ರಂಗ ಸ್ಥಳದಲ್ಲಿ ಇಂದಿಗೂ 'ಬಣ್ಣದ ವೇಷ'ವಾಗಿ ಬಣ್ಣ-ಬಣ್ಣದ ನೆನಪಿನ ಗೆಜ್ಜೆ ಕಟ್ಟಿ ಕುಣಿಯುವ ಮೇರು ಕಲಾವಿದರು ಶ್ರೀ ಸಕ್ಕಟ್ಟು ಲಕ್ಷ್ಮೀನಾರಾಯಣಯ್ಯನವರು. +ಬಡಗಿನ ಬಣ್ಣದ ಲೋಕದಲ್ಲಿ ಬೆಡಗಿನಿಂದ ಮೆರೆದ ಸಂಪನ್ನ ಕಲಾವಂತಿಕೆಯವರು. +ಸಕ್ಕಟ್ಟು ಅವರ ಒಟ್ಟು ಆಕೃತಿಯೇ 'ಬಣ್ಣದ ವೇಷಕ್ಕೆ ಮಾಡಿಸಿಟ್ಟಂತೆ. +ನೀಳವಾದ ಶರೀರ, ಅಗಲವಾದ ಹಣೆ, ಆಜಾನುಬಾಹು, ಉರಿ ಚೆಲ್ಲುವ ಅರಳು ಕಂಗಳು,ಸಿಂಹ ಘರ್ಜನೆಯಂತಹ ಸ್ಟರಭಾರ, ರಾಕ್ಷಸ ಪಾತ್ರವನ್ನು ಮೆರೆಸಿಬಿಟ್ಟವು. +'ಭೀಷ್ಮ ವಿಜಯ' ಪ್ರಸಂಗದಲ್ಲಿ ಬರುವಂತಹ ಸಾಲ್ವನ ಪಾತ್ರ "ಬಣ್ಣದವೇಷ'. +ಆ ಕಾಲದಲ್ಲಿ ರಂಗ ಮಂಚವೇರಿದ್ದರು. +ಕೆಂಪು, ಬಿಳಿ, ಕಪ್ಪು ರೇಖಾ ವಿನ್ಯಾಸದ ಮಧ್ಯೆ ಹಿಟ್ಟಿನ ಚುಟ್ಟಿಗಳನ್ನಿಟ್ಟು, ತಟ್ಟಿ ಕಿರೀಟವನ್ನು ಕಟ್ಟಿ ಸಕ್ಕಟ್ಟು ಭಯಾನಕ ವೇಷದಿಂದ ಕಂಗೊಳಿಸುತ್ತಿದ್ದರು. +ಅಂಬೆಯನ್ನು ಕಂಡ ಸಾಲ್ವನಿಗೆ “ಪರಮ ಸುಂದರಿ ಪೇಳ್ನಿನ್ಶಾರೆ. . ' ಎಂಬ ಪದ್ಯವಿದೆ. +ಆ ಪದ್ಯಕ್ಕೆ ರಾಕ್ಷಸ ವೇಷಧಾರಿ ಲಕ್ಷ್ಮೀನಾರಾಯಣಯ್ಯನವರು ಅಭಿನಯಿಸಿದ ಬಗೆಯಂತೂ ಇಂದಿಗೂ ಸ್ಮರಣೀಯ ರಂಗ ಸಂಗತಿ. +ಭಯ ಹುಟ್ಟಿಸುವ ಮುಖ ಮಂಡಲದಲ್ಲಿ ಸ್ಪಷ್ಟವಾದ ಶೃಂಗಾರ ರಸಾಭಿ ವ್ಯಕ್ತಿಯನ್ನು ಕಟ್ಟಿಕೊಟ್ಟ ಸಕ್ಕಟ್ಟು ಯಾವುದೇ ಪಾತ್ರಗಳ ಬಿಟ್ಟು ಭಾವ-ಸ್ವಭಾವಗಳ ಜನಕನೆನ್ನಿಸಿಕೊಳ್ಳುವವನು ಕಲಾವಿದನೇ ಎಂಬುದನ್ನು ತಮ್ಮ ವೇಷಗಳಿಂದ ತೋರಿಸಿಕೊಟ್ಟರು. +ಕಣ್ಣುಗಳ ಚಲನೆ, ಹಸ್ತ ಎನ್ಯಾಸ, ರಂಗ ನಡೆ,ಅಭಿನಯ ವೈವಿಧ್ಯ ಆ ಪಾತ್ರದಲ್ಲಿ ಮನ ಮುಟ್ಟುವಂತೆ ನಿರೂಪಿಸಿದರು. +ಪರಿ ರಸರೋಮಾಂಚಿತವಾದದ್ದು. +ಬಣ್ಣದ ವೇಷಗಳಿಂದಲೂ ರಸ ವೈವಿಧ್ಯಗಳನ್ನು ಸ್ಫುಟವಾಗಿ ದರ್ಶಿಸಬಹುದು ಎಂಬುದಕ್ಕೆ ಇವರು ಜ್ವಲಂತ ನಿದರ್ಶನವಾಗಿ ಕಂಡರು. +ಸಕ್ಕಟ್ಟು ಅವರು ನಿರ್ವಹಿಸಿದ ಸಮಸಪ್ತಕ, ಸೈಂಧವ, ಘಟೋತ್ಕಚ, ರುದ್ರಭೀಮ,ವೀರಭದ್ರ, ಘೋರರೂಪಿ, ರಾವಣ, ಮಹಿರಾವಣ, ಬಕಾಸುರ, ಕಿಮ್ಮೀರ,ಹಿಡಿಂಬಾಸುರ, ಘೋರಭೀಷಣ ಮೊದಲಾದ ಬಣ್ಣದ ಭೂಮಿಕೆಗಳು ಇಂದಿಗೂ ರಂಗರಸಿಕರ ಮನೋಭೂಮಿಕೆಯಲ್ಲಿ ಜೀವಂತವಾಗಿ ಉಳಿದು ಕೊಂಡಿದಿದ್ದರೆ ಅದಕ್ಕೆ ಸಕ್ಕಟ್ಟು ಅವರ ಮೇರು ಪ್ರತಿಭಾ ಪಾರಮ್ಯವೇ ಪ್ರಮುಖ ಕಾರಣ. +'ಬಾಣಾಸುರ ಕಾಳಗ'ದ ಕುಂಭಾಂಡ ಎನ್ನುವ ರಾಕ್ಷಸ ಮಂತ್ರಿ ಪಾತ್ರವನ್ನು ಹಸಕ್ಕಟ್ಟು ಅವರು ಅದ್ಭುತವಾಗಿ ನಿರೂಪಿಸುತ್ತಿದ್ದರು. +ವೀರಭದ್ರ ನಾಯಕರ ಬಾಣಾಸುರ,ಸಕ್ಕಟ್ಟು ಅವರ ಕುಂಭಾಂಡ ಅಪಾರ ಪ್ರೇಕ್ಷಕರನ್ನು ರಂಜಿಸಿತ್ತು. +ಶ್ರೀಯುತರು ರಾಕ್ಷಸ ಪಾತ್ರಗಳನ್ನು ಮಾತ್ರವಲ್ಲದೇ, ರಾಜವೇಷಗಳನ್ನು ಸಮರ್ಥವಾಗಿ ನಿರ್ವಹಿಸುತ್ತಿದ್ದರು. +ಸುಧನ್ವ ಕಾಳಗದ ಹಂಸಧ್ವಜ, ರತಿ ಕಲ್ಯಾಣದ ಕಮಲಭೂಪ ಪಾತ್ರಗಳನ್ನು ನಿರ್ವಹಿಸಿ ಪಾತ್ರಕ್ಕೆ ನ್ಯಾಯ ಕಲ್ಪಿಸಿದವರು. +ಜೋಡಾಟಗಳಲ್ಲೂ ಸಕ್ಕಟ್ಟು ಅವರು ಚಾಣಾಕ್ಷ ಪ್ರತಿಭೆ. +ಅವರ ರಂಗತಂತ್ರ ಎದುರಾಳಿಗೆ ಭಯ ಹುಟ್ಟಿಸುತ್ತಿತ್ತು . +ಡೇರೆ ಮೇಳಗಳ ಉದಯದಿಂದಾಗಿ “ಬಣ್ಣದವೇಷ'ಗಳು ಬಣ್ಣ ಕುಂದಿದವು ಎನ್ನಬಹುದಾಗಿದೆ. +ಅಲ್ಲದೆ, ಕಂಪನಿ ನಾಟಕಗಳ ಪ್ರಭಾವವು ಬಣ್ಣದ ವೇಷಗಳ ಕಣ್ಮರೆಗೆ ಕಾರಣವಾಯಿತು. +ಬಣ್ಣದ ವೇಷದಸಾಲಿನ ಪಾತ್ರಗಳು ಮೇಳದ ಪ್ರಧಾನ ಕಲಾವಿದರ ಧಾರಣೆಯಲ್ಲಿ ಶೃಂಗಾರಪೂರ್ಣ ಪಾರ್ಟುವೇಷಗಳಾಗಿ ರಂಗವೇರಿರುವುದರಿಂದ ಇಂತಹಭೂಮಿಕೆಗಳು ಗತಿ-ಗೋತ್ರವಿಲ್ಲದೆ ನೇಪಥ್ಯಕ್ಕೆ ಸಂದುಹೋದವು. +ಆ ಮಟ್ಟಿಗೆ ತೆಂಕುತಿಟ್ಟಿನಲ್ಲಿ ಈಗಲೂ ಬಣ್ಣದ ವೇಷ ಪರಂಪರೆಗೆ ಜೀವಂತಿಕೆ ಇರುವುದನ್ನುಕಾಣಬಹುದಾಗಿದೆ. +ಬಡಗಿನಲ್ಲಿ ಮಹಾಭಾರತ ಪ್ರಧಾನ ಕಥಾನಕಗಳನ್ನೇ ಹೆಚ್ಚು ಆಡುವುದರಿಂದ ಬಣ್ಣದ ವೇಷ ಸ್ವಲ್ಪ ಮಟ್ಟಿಗೆ ಬಣ್ಣ ಗುಂದುವಿಕೆಯನ್ನು ಯಕ್ಷಲೋಕದ ಕಂಡಿತೆನ್ನಬಹುದಾಗಿದೆ. +ಸಕ್ಕಟ್ಟು ಅವರು ಅಸಾಧಾರಣ ಪ್ರತಿಭೆಯಾಗಿದ್ದರು. +ಆದರೆ ಸಮರ್ಥ ನಿರ್ದೇಶಕರೊಬ್ಬರ ಕೊರತೆಯನ್ನು ಅವರು ರಂಗ ಜೀವನದಲ್ಲಿ ಕಂಡರೋ ಏನೋ, ಇನ್ನೂ ಉತ್ತರೋತ್ತರಕ್ಕೆ, ಎತ್ತರೆತ್ತರಕ್ಕೆ ಬೆಳೆದು ಬೆಳಗಬಹುದಾದ ಮಹಾನ್‌ ರಾಕ್ಷಸ ಪ್ರತಿಭೆ ಬೇಗನೆ ರಂಗ ನಿವೃತ್ತಿ ಕಂಡದ್ದು, ಒಂದರ್ಥದಲ್ಲಿ ಬಡಗಿಗೆ ನಷ್ಟವೇ ಹೌದು. +ಮಗು ಮನಸ್ಸಿನ ಯಕ್ಷರಾಕ್ಷಸ ನಟ ಸಾಮ್ರಾಟ ಸಕ್ಕಟ್ಟು ಅವರ ಬದುಕು ನೂರಾಗಲಿ. +ಕಲಾಮಾತೆಯ ಪೂರ್ಣಾನುಗ್ರಹವಿರಲಿ. + `ಸಕ್ಕಟ್ಟು' ಎಂಬ ಪುಟ್ಟ ಹಳ್ಳಿಯನ್ನು ಯಕ್ಷಗಾನ ಬಣ್ಣದ ಲೋಕದಲ್ಲಿ ಮೆರೆಸಿದ ಅಗ್ರಮಾನ್ಯ ಕಲಾವಿದ ಲಕ್ಷ್ಮೀನಾರಾಯಣಯ್ಯನವರು. +ವರ್ತಮಾನದ ನಾಲ್ಕು ಕಂಬಗಳ ರಂಗಸ್ಥಳದಲ್ಲಿ ಲಂಕಾ ಪಟ್ಟಣವನ್ನೋ,ಶೋಣಿತಾಪುರವನ್ನೋ ಅಥವಾ ಗೊಂಡಾರಣ್ಯವನ್ನೋ ಜೀವಂತ ಕಲ್ಪನೆಯಲ್ಲಿ ಸೃಜಿಸಿ, ರಾಜ, ಕಾಟು ವರ್ಣವೈಭವದಿಂದ ಉತ್ಕೃಷ್ಟ ಕಲಾ ಶ್ರೀಮಂತಿಕೆಯನ್ನು ಸಾಕ್ಷತ್ಕರಿಸುವ ಮೇರು ಸಕ್ಕಟ್ಟು ಅವರು 'ಬಣ್ಣದ ವೇಷಕ್ಕಿರುವ ಪರ್ಯಾಯ ಪದವೆಂದರೆ ನಿಜಕ್ಕೂ ಅತಿಶಯದ ಮಾತಲ್ಲ. +ಯಕ್ಷ ರಾಕ್ಷಸ ಭೂಮಿಗೆ ಹೇಳಿ ಮಾಡಿಸಿದಂತಿರುವ ಅವರ ಎತ್ತರದ ಆಳಂಗ, ಗಂಭೀರ ಸ್ವರಭಾರ, ಸಾಂಪ್ರದಾಯಕ ಶೈಲಿಕೃತರಂಗ ವ್ಯವಹಾರ ಕಲಾರಸಿಕ ಬಾಂಧವರಲ್ಲಿ ಹುಟ್ಟುಹಾಕುವ ಅತ್ಯಾನಂದಕರ ರಸದೊಸರು 'ಬಣ್ಣ'ನಗೆನಿಲುಕುವಂತಹುದಲ್ಲ. +'ಇತ್ತಲಾ ಲಂಕಾಪಟ್ಟಣದಲ್ಲಿ ರಾವಣೇಶ್ವರ ಒಡ್ಡೋಲಗ ಕೊಟ್ಟಪರಿಯದೆಂತೆನೆ. . ” ಎಂಬ ಭಾಗವತರ ತಾರಕ ಸ್ವರದ ಅಬ್ಬರಕ್ಕೆ ಪೂರಕ-ಪ್ರೇರಕವಾಗಿ “ಕಾಕು' ಹೊಡೆದು ಸಕ್ಕಟ್ಟು ಅವರು ರಾಕ್ಷಸ ರಾಜನಾಗಿ ಒಡ್ಡೋಲಗದಲ್ಲಿ ವಿರಾಜಮಾನರಾದರೆ, ರಂಗಸ್ಥಳದ ಇದಿರು, ಮುದ್ದೆಯಾಗಿ ನಿದ್ದೆಗೆ ಜಾರಿದವರೂ ಎದ್ದು ಕಣ್ಣರಳಿಸಿ, ನೀಳಕಂಠರಾಗಿ ನೋಡುವುದೋ, ಅಥವಾ ಬಣ್ಣ ಭಯಂಕರ ತೆಗೆಬಿದ್ದೆದ್ದು ದೂರ ಓಡುವುದೋ ಯಕ್ಷಲೋಕದಲ್ಲಿ ಸಾಮಾನ್ಯ. +ಅದೇ ಸಕ್ಕಟ್ಟುರವರ ಉತ್ಕೃಷ್ಟ ಪ್ರತಿಭಾ ವಿಲಾಸದ ಉಜ್ವಲ ಪುರಾವೆಯೆಂದೇ ಹೇಳಬಹುದೇನೋ. +ಪರಿಶುದ್ಧ ಪರಂಪರೆಯ ಬಣ್ಣದ ವೇಷದ ಏಕೈಕ ತೋರು ಬೆರಳು ಸಕ್ಕಟ್ಟು ಲಕ್ಷ್ಮೀನಾರಾಯಣಯ್ಯರವರು ಉಡುಪಿ ತಾಲೂಕಿನ ಶಿರಿಯಾರ ಸಮೀಪದಕಟ್ಟು ಎಂಬಲ್ಲಿ ೧೯೨೫ರಲ್ಲಿ ಬ್ರಾಹ್ಮಣ ಕುಟುಂಬದಲ್ಲಿ ಹುಟ್ಟಿದರು. +ತಂದೆಕಟ್ಟು ಸುಬ್ಬಣ್ಣಯ್ಯ, ತಾಯಿ ರಾಜಮ್ಮ ಬಾಲ್ಯದಲ್ಲಿಯೇ ಯಕ್ಷಗಾನವೆಂದರೆ ಅನ್ಯಾದೃಶ ಆಸಕ್ತಿ ಆನಂದ. +ಅಕ್ಷರ ವಿದ್ಯೆಯೂ ಮುಂದುವರಿಯದೆ ಆಗಲೇ ಗೋವಿಂದ. +ತೀರ್ಥರೂಪರಾದ ಸುಬ್ಬಣ್ಣಯ್ಯನವರಲ್ಲಿ ಯಕ್ಷ ವಿದ್ಯೆಯನ್ನು ಆರ್ಜಿಸಿಕೊಂಡು ಕಲಾ ಸಾಕ್ಷಾರಿಕರಾಗಿ, ಶ್ರೀನಿವಾಸ ಭಾಗವತರಿಂದ ತಾಳದೀಕ್ಷೆ ಪಡೆದು ಬಡಗುತಿಟ್ಟನ ಸುದೀರ್ಫ ಪರಂಪರೆಯ ಗಜಮೇಳವಾದ ಅಮತೇಶ್ವರಿಗೆ ಹೆಜ್ಜೆ. +ಅಲ್ಲಿಂದಲೇ ಅನುಕರಣವಾಯಿತು ಸಕ್ಕಟ್ಟು ಅವರ “ಬಣ್ಣ'ದ ಗೆಜ್ಜೆ. +ಪಾಂಡೇಶ್ವರ ಸದಾಶಿವಯ್ಯ ಹಾಗೂ ಕೊಳ್ಕೆಬೈಲು ಕುಷ್ಟ ಅವರಿಂದ ಮುಖ ವರ್ಣಿಕೆಯ ವರ್ಣ ವಿಧಾನದ ಸಿದ್ಧಿ . +ಮಂದಾರ್ತಿ ಮೇಳದಲ್ಲಿಯೇ ಸುಮಾರು ೩೯ ವರ್ಷಗಳ ದೀರ್ಘಕಾಲೀನ ರಂಗಕೃಷಿಯಲ್ಲಿ ಯಕ್ಷಗಾನ ಪ್ರಪಂಚದಲ್ಲಿ ಪ್ರಸಿದ್ಧಿ . +ಅಮೃತೇಶ್ವರಿ, ಸೌಕೂರು, ಸಾಲಿಗ್ರಾಮ ಮೇಳಗಳಲ್ಲೂ ಸಾರ್ಥಕ ಕಲಾ ತಿರುಗಾಟ. +ಡಾ. ಕೋಟ ಶಿವರಾಮ ಕಾರಂತರ 'ಯಕ್ಷರಂಗ'ದ ಮೂಲಕ ಭಾರತದಾದ್ಯಂತವಲ್ಲದೆ, ವಿದೇಶ ರಂಗಮಂಚದಲ್ಲೂ ಯಕ್ಷ ರಾಕ್ಷಸನಾಗಿ ಆರ್ಭಟ. +೧೯೮೬ರ ಕರ್ನಾಟಕ ಜಾನಪದ ಯಕ್ಷಗಾನ ಅಕಾಡೆಮಿ ಪ್ರಶಸ್ತಿ ೧೯೯ ೩ರಲ್ಲಿ ಮುಂಬಯಿ ಪದವೀಧರ ಯಕ್ಷಗಾನ ಪ್ರಶಸ್ತಿ . +ಉಡುಪಿ ಯಕ್ಷಗಾನ ಕಲಾರಂಗದ ಡಾ.ಬಿ.ಬಿ.ಶೆಟ್ಟಿ ಪ್ರಶಸ್ತಿ. + ಮಂದಾರ್ತಿ ಕ್ಷೇತ್ರದಿಂದ ಸುಯೋಗ್ಯ ಕಲಾವಿದರಿಗೆ ನೀಡುವ "ಹಾರಾಡಿ ರಾಮಗಾಣಿಗ ಪ್ರಶಸ್ತಿ'. + ಸಕ್ಕಟ್ಟು ಅವರ ದೈತ್ಯ ಪ್ರತಿಭೆಗೆ ಸಂದ ಮೇರು ಗೌರವವಾಗಿ ಗುರುತಿಸಲ್ಪಡುತ್ತವೆ. +ವಿಶಾಲವಾದ ಲಲಾಟ, ಹೊಳೆಯುವ ಕಂಗಳ ನೋಟ, ಕಂಠೀರವದ ಕಂಠರವದ ಆರ್ಭಟ, ಸಕ್ಕಟ್ಟು ರಂಗದಲ್ಲಿರುವಷ್ಟು ಹೊತ್ತೂ ಕಳೆಗಟ್ಟುವ ಯಕ್ಷಗಾನದ ರಸಪೂರ್ಣ ಆಟ. +ಭಾರತದ ಅಂದಿನ ಪ್ರಧಾನಮಂತ್ರಿ ಜವಾಹರಲಾಲ್‌ ನೆಹರು ಹಾಗೂ ರಾಷ್ಟ್ರಪತಿ ರಾಜೇಂದ್ರ ಪ್ರಸಾದರಿಂದಲೂ ವಿಶೇಷ ಗೌರವವನ್ನು ಪಡೆದ ಲಕ್ಷ್ಮೀನಾರಾಯಣಯ್ಯರವರು “ಬಣ್ಣಕ್ಕೊಬ್ಬನೇ ಸಕ್ಕಟ್ಟು' ಎಂಬ ಕವಿವಾಣಿಗೆ ಸಮುಚಿತವಾಗಿ ಸಲ್ಲುವ, ಸಮುಜ್ಜಲ' ಪ್ರತಿಭಾ ಸಂಪನ್ನತೆಯ ಸಾಂಪ್ರದಾಯಿಕ ಸತ್ವ ತತ್ವಗಳನ್ನು ಗಂಭೀರವಾಗಿ ಹೀರಿಕೊಂಡ ಸಶಕ್ತ ಕಲಾಭಿನೇತ್ರ. +ಸಕ್ಕಟ್ಟು ಅವರು ಅಕ್ಕಿ ಹಿಟ್ಟಿನ ಮುಳ್ಳುಗಳನ್ನು 'ಚುಟ್ಟಿ'ಯಾಗಿ ಮುಖಮಂಡಲದಲ್ಲಿ ಇಟ್ಟು, ತಟ್ಟೆ ಕಟ್ಟಿ ರಂಗಮಂಚವೇರಿದರೆಂದರೆ ಒಮ್ಮೆಗೆ ಉಸಿರು ನಿಂತ ಅನುಭವ. +ಅವರ ಆಕರ್ಷಕ, ಭಯಂಕರ ವೇಷ, ಸಾಹಿತ್ಯ ಪೂರ್ಣ ವಾಗ್ವಿಲಾಸ, ಪಾರಂಪರಿಕ ನೃತ್ಯಾಭಿನಯ ವಿನ್ಯಾಸ. . . ಎಂಥವರನ್ನೂ ರಸಪರಿವಶರನ್ನಾಗಿಸದೇ ಬಿಡಲಾರದು. +ರಾವಣ, ಘಟೋತ್ಕಚ, ಶೂರ್ಪನಖಾ, ಪೂತನಿ, ಹಿಡಿಂಬಾಸುರ, ಬಕಾಸುರ,ಕಿಮ್ಮೀರ, ರುದ್ರಭೀಮ, ಶೂರ ಪದ್ಮಾಸುರ. . . ಮೊದಲಾದ ಯಕ್ಷರಾಕ್ಷಸ ಭೂಮಿಕೆಗಳನ್ನು ಸಚೇತನ ರಂಗಶಿಲ್ಪಗಳಾಗಿ ಕಡೆದು ನಿಲ್ಲಿಸಿದ ಸಕ್ಕಟ್ಟು ಅವರಇಂತಹ ಕಲಾ ವಿಗ್ರಹಗಳು ಯಾವತ್ತೂ ಮುಕ್ಕಾಗಲಾರವು. +ಕಾಲನ ಕುದುರೆಯ ನಾಗಾಲೋಟದಲ್ಲಿ ಈಗಿನ 'ಆಟ'ದಲ್ಲಿ ರಾಕ್ಷಸ ಪಾತ್ರಗಳು ಲುಪ್ತ ಪ್ರಾಯವಾಗಿವೆ. +"ಬಣ್ಣದ ವೇಷ'ಗಳು ಸಂಪೂರ್ಣ ಬಣ್ಣಗುಂದಿವೆ. +ಸಕ್ಕಟ್ಟು ಅವರು ಅಂದು ನಿರ್ಮಿಸಿದ ಬಣ್ಣದ ಲೋಕದ ಗುಂಗು ನೆನಪಿನ ರಂಗವಲ್ಲಿಯಾಗಿ,ಕಲಾಭಿಮಾನಿಗಳ ಹೃದಯ ರಂಗಸ್ಥಳದ ಅಂಗಣದಲ್ಲಿ ಶೃಂಗಾರ ಪೂರ್ಣರಂಗು ಪಡೆದಿದೆ. +ಬಣ್ಣದ ವೇಷ,ಬಣ್ಣದ ವೇಷಧಾರಿ, ಬಣ್ಣದ ಬದುಕು. . . ಯಾರ ಕಣ್ಣಿಗೂ ಬೀಳದ ವಿಚಿತ್ರ ಸ್ಥಿತಿ ಪ್ರಾಪ್ತವಾಗಿದೆ. +ಸರಕಾರಿ ನೆಲೆಯ ರಾಷ್ಟ್ರ ರಾಜ್ಯ ಪ್ರಶಸ್ತಿಯ ಸ್ಪರ್ಧಾಕಣದಲ್ಲಿ, ಯಕ್ಷರಾಕ್ಷಸ ರಾಜನಾಗಿ ದೇವಲೋಕವನ್ನೂ ಸೂರೆಗೊಂಡ ಸಕ್ಕಟ್ಟು ಇನ್ನೂ ಇನ್ನೂ'ಎಜೇತ'ರಾಗುವ ಕಾಲ ಬಂದಿಲ್ಲ. +ಅಪಾರ ಜನಮಾನಸದಲ್ಲಿ ಚಿರಸ್ಥಾಯಿಯಾಗಿನಿಂತ ಮೇರುನಟನಿಗೆ ಹಾರ, ತುರಾಯಿಯ ಹಂಗಿಲ್ಲ. +ಗುಣಿಸು ಗುರುತಿನ ಎದೆ ಕವಚ, ಬಿಳಿ ಬಣ್ಣದ ಭುಜಕೀರ್ತಿ ಮಾತಿಗೊಮ್ಮೆ ಹೆಜ್ಜೆ ಮುಂದಿಡುವುದು ಸಂಪ್ರದಾಯ ಎಂದು ತಿಳಿದವರಿದ್ದಾರೆ. +ಅದರಿಂದಲೇ ವಿಶ್ವ ವಿಖ್ಯಾತಿಯನ್ನು ಪಡೆದವರಿದ್ದಾರೆ. +ಆದರೆ ತನ್ನ ಹದಿಮೂರನೇ ವರ್ಷದಿಂದಲೇ ಯಕ್ಷಗಾನಕ್ಕಾಗಿ ತನ್ನ ಬದುಕನ್ನೇ ಮೀಸಲಿಟ್ಟು ಯಕ್ಷಗಾನದ ಸರ್ವಾಂಗೀಣ ಸಂಪ್ರದಾಯಕ್ಕೆ ಕಾರಣೀಭೂತವಾಗಿರುವ ಬಣ್ಣದ ವೇಷದ ಖ್ಯಾತಿಯ ಶ್ರೀಸಕ್ಕಟ್ಟು ಲಕ್ಷ್ಮೀನಾರಾಯಣಯ್ಯನವರನ್ನು ಈ ಅಘೋಷಿತ ಸಂಪ್ರದಾಯವಾದಿಗಳು ನೆನಪಿಸದಿರುವುದೇ ದುಃಖದ ಸಂಗತಿ. +ನಾನು ಹುಟ್ಟುವಾಗಲೇ ೩೨ ವರ್ಷ ದಾಟದ್ದ ಶ್ರೀ ಸಕ್ಕಟ್ಟು ಲಕ್ಷ್ಮೀನಾರಾಯಣಯ್ಯರವರ ಬಗ್ಗೆ ನಾನು ಹೆಚ್ಚಿಗೆ ಬರೆಯುವುದೇ ಸ್ಪಷ್ಟ ಲೇಖನವಾಗಲಾರದು. +ಆದರೂ ಚಿಕ್ಕವನಿದ್ದಾಗ ಇವರ ವೇಷಕ್ಕೆ ಹೆದರಿ ರಂಗಸ್ಥಳಕ್ಕೆ ತಾಗಿ ಕುಳಿತ ನಾನು ಹಿಂದೋಡಿದ ಆ ನೆನಪುಗಳು ಮಾಸಲಾರದು. +ಮುಖಕ್ಕೆ ಚಿಟ್ಟೆ ಇಡುವ ಆ ಸನ್ನಿವೇಶವನ್ನು ಮರೆಯಲ್ಲಿ ನಿಂತು ನೋಡಿದ್ದು ಈಗ ನಗಿತರಿಸುತ್ತದೆ. +ಆ ಪ್ರಾಯದಲ್ಲಿ “ಆಟಕ್ಕೆ ಹೋಪುದೇ ಗಮ್ಮೃತ್ತಿಗೆ” ಅದೇ ಈ ಕಲೆಯ ಬಗ್ಗೆ ಆಸಕ್ತಿ ಮೂಡಿದ ನಂತರ ಇವರ ಬಣ್ಣದ ವೇಷಕ್ಗಾಗಿ ಆಟಕ್ಕೆ ಹೋದದ್ದೇ ಹೆಚ್ಚು. +ಇವರ ಒಡ್ಡೋಲಗದ ಪರಿ, ಬೇಟೆಯ ಅಬ್ಬರ, ಯುದ್ಧಕುಣಿತದ ಚಂದ- ಹೀಗೆ ಭಿನ್ನ ಭಿನ್ನ ವಿಷಯಗಳನ್ನು ಕಲಿಯಬೇಕಾದ ವಿಚಾರ. +ಮುಂದೆ ಮೇಳದ ಶ್ರೀಧರ ಹಂದೆಯವರು ಸಾಲಿಗ್ರಾಮ ಮೇಳ ಪ್ರಾರಂಭಿಸಿದಾಗ, ಅದೊಂದು ಬಡಗು ತಿಟ್ಟಿನ ಪ್ರಥಮ ಡೇರೆ ಮೇಳವಾಗಿತ್ತು. +ಎಲ್ಲರೂ ಸ್ಟಾರ್‌ ಕಲಾವಿದರೇ, ಕೆರೆಮನೆ ಸಹೋದರರು, ಶಿರಿಯಾರ ಮಂಜುನಾಯಕ ಹಿರಿಯರಾದ ವೀರಭದ್ರನಾಯಕ, ಹಾರಾಡಿ ಮಹಾಬಲ ಇವರೆಲ್ಲರ ಸಮಾನ ಬೇಡಿಕೆಯ ವೇಷಧಾರಿಯಾಗಿ ಹೆಸರು ಪಡೆದವರು ಶ್ರೀ ಸಕ್ಕಟ್ಟು ಲಕ್ಷಿ ನಾರಾಯಣಯ್ಯರವರು. +ಯಕ್ಷಗಾನ ಬಣ್ಣದ ವೇಷಕ್ಕೆ ಪ್ರಾಮುಖ್ಯತೆಯನ್ನು ತಂದು ಕೊಟ್ಟವರು ಶ್ರೀಯುತರು. +ಅಂತೆಯೇ ಅಪರೂಪಕ್ಕೆ ಅವರು ನಿರ್ವಹಿಸುತ್ತಿದ್ದ ಕಿರೀಟ ವೇಷಕ್ಕೂ ಪ್ರಾಮುಖ್ಯತೆ ಇತ್ತು. +ಇಂದು ಈ ಬಣ್ಣದ ವೇಷ ಕಣ್ಮರೆಯಾಗುತ್ತಿರುವ ಕಾಲ, ಮೂರು ಗಂಟೆ ಕುಳಿತು ಹತ್ತು ನಿಮಿಷ ರಂಗಸ್ಥಳದಲ್ಲಿರಲು ಯಾರೂ ತಯಾರಿಲ್ಲ. +ಆದರೂ ಇಂತಹ ಒಂದು ಪಾತ್ರದ ಚಿತ್ರಣ ತಿಳಿದಿರಬೇಕಾದ್ದು ನಮ್ಮೆಲ್ಲರ ಆದ್ಯ ಕರ್ತವ್ಯ. +ಇವರ ಈ ಎಶೇಷತೆಯನ್ನು ಕಾಪಾಡಬೇಕಾದ್ದು ಅಷ್ಟೇ ಮುಖ್ಯ. +೮೪ ವರ್ಷ ಪ್ರಾಯದ ಶ್ರೀ ಸಕ್ಕಟ್ಟು ಲಕ್ಷ್ಮೀನಾರಾಯಣಯ್ಯರವರು ನೂರ್ಕಾಲ ನಮ್ಮೊಡನಿರಲಿ ಎಂಬುದೇ ನಮ್ಮ ಹಾರೈಕೆ. +ಬಡಗುತಿಟ್ಟಿನ ಬಣ್ಣದ ವೇಷದ ಸಾರ್ವಭೌಮ ಸಕ್ಕಟ್ಟು ಬಡಗುತಿಟ್ಟಿನ ಯಕ್ಷಗಾನದಲ್ಲಿ ಹಲವು ವೈವಿಧ್ಯಮಯ ವೇಷಗಳಿದ್ದು ಅವುಗಳಲ್ಲಿ ಬಣ್ಣದ ವೇಷವೂ ಒಂದು. +ಇದು ಅಪೂರ್ವವೂ, ವಿಶಿಷ್ಟವೂ ಆದ ಕಲಾವಿಭಾಗ. +ಯಕ್ಷಗಾನದಲ್ಲಿ ಸಂಪೂರ್ಣ ವ್ಯಕ್ತಿಯ ಕುರುಹನ್ನು ಮರೆಸುವ ವಿಶೇಷತೆ ಈ ವೇಷಕ್ಕಿದೆ. +ಈ ವಿಭಾಗದಲ್ಲಿ ೫ಂ ವರ್ಷಗಳಿಗಿಂತಲೂ ಹೆಚ್ಚು ಕಾಲ ತನ್ನನ್ನು ತೊಡಗಿಸಿಕೊಂಡು ಬಡಗುತಿಟ್ಟಿನ ಬೇರೆ ಬೇರೆ ಮೇಳಗಳಲ್ಲಿ ಮುಖ್ಯ ಬಣ್ಣದ ವೇಷಧಾರಿಯಾಗಿದ್ದು,ಈ ಕಲೆಯನ್ನು ಶ್ರೀಮಂತಗೊಳಿಸಿದವರು ಶ್ರೀಯುತ ಸಕ್ಕಟ್ಟು ಲಕ್ಷ್ಮೀ ನಾರಾಯಣಯ್ಯನವರು. +ಮಾರ್ಚ್‌ ೨೬, ೧೯೨೬ರಂದು ಖ್ಯಾತ ಯಕ್ಷಗಾನ ಪುರುಷ ವೇಷಧಾರಿ ದಿ.ಸಕ್ಕಟ್ಟು ಸುಬ್ಬಣ್ಣಯ್ಯ, ದಿ.ರಾಜಮ್ಮನವರ ಪ್ರಥಮ ಪುತ್ರರಾಗಿ ಜನಿಸಿದರು. +ಇವರು ತನ್ನ ೭ನೇ ವಯಸ್ಸಿನಲ್ಲಿ ತಂದೆಯನ್ನು ಕಳೆದುಕೊಂಡು ಬಹಳ ಕಷ್ಟದ ಜೀವನ ಅನುಭವಿಸಿದರು. +ನೀಲಾವರದಲ್ಲಿ ತಮ್ಮ ಅತ್ತೆಯ ಮನೆಯಲ್ಲಿದ್ದು ೫ನೇ ತರಗತಿಯ ತನಕ ವಿದ್ಯಾಭ್ಯಾಸ ಮಾಡಿ ತನ್ನ ೧೩ನೇ ವಯಸ್ಸಿನಲ್ಲಿ ಎತ್ತಿನ ಹಟ್ಟಿ ಚರಡಪ್ಪಯ್ಯನವರ ಮುಖಾಂತರ ಶ್ರೀಅಮೃತೇಶ್ವರಿ ಮೇಳಕ್ಕೆ ಕೋಡಂಗಿಯ ವೇಷಕ್ಕೆ ಸೇರಿ ಮರು ವರುಷ ಅಲ್ಲಿಯೇ ಬಾಲಗೋಪಾಲರ ವೇಷಧಾರಿಯಾಗಿ, ನಂತರ ಚಿಕ್ಕ ಹೊನ್ನೇಸರದ ಮೇಳದಲ್ಲಿ ೩ನೇ ವೇಷಧಾರಿಯಾಗಿ, “ಪ್ರಸಿದ್ಧ ಸ್ತ್ರೀ ವೇಷಧಾರಿ'' ಕೊಳ್ಕೇಬೈಲು ಸೀನನವರ ಮುಖಾಂತರ ಶ್ರೀ ಮಂದಾರ್ತಿ ಮೇಕಕ್ಕೆ ಕೆಂಪು ಮುಂಡಾಸಿನ ವೇಷಕ್ಕೆ ಸೇರಿ ಮತ್ತೆ ಕಪ್ಪು ಮುಂಡಾಸು ಹಾಗೂ ಒತ್ತು ಬಣ್ಣದ ವೇಷಧಾರಿಯಾಗಿ ಅನುಭವವನ್ನು ವಿಸ್ತರಿಸಿಕೊಂಡು ಕಾರಣಾಂತರದಿಂದ ಮಂದಾರ್ತಿ ಮೇಳದ ತಿರುಗಾಟ ಒಂದು ತಿಂಗಳು ತಡವಾಗಿ ಪ್ರಾರಂಭವಾದ್ದರಿಂದ ಮಂದಾರ್ತಿ ಮೇಳದ ಬಣ್ಣದ ವೇಷಧಾರಿಯಾಗಿದ್ದ ಕೊಳ್ಕೇಬೈಲು ಕುಷ್ಟ ಗಾಣಿಗರು ಅಮೃತೇಶ್ವರಿ ಮೇಳಕ್ಕೆ ಸೇರಿದ್ದರಿಂದ ಬಣ್ಣದ ವೇಷಕ್ಕೆ ಕಲಾವಿದರು ಇಲ್ಲದ ಕಾರಣ ರಾಷ್ಟ್ರ ಪ್ರಶಸ್ತಿ ವಿಜೇತ ದಿ.ಹಾರಾಡಿ ರಾಮ ಗಾಣಿಗರು ಬಣ್ಣದ ವೇಷ ಮಾಡಬೇಕೆಂದು ಒತ್ತಾಯಿಸಿದ್ದರಿಂದ ಬಣ್ಣ ವೇಷ ಮಾಡಲು ಧೈರ್ಯ ಇಲ್ಲದಿದ್ದರೂ ಒಪ್ಪಿಕೊಂಡರಂತೆ. +ಆವಾಗ ರಾಮ ಗಾಣಿಗರು ಉತ್ತಮ ಮಾರ್ಗದರ್ಶನ ನೀಡಿ ಬಣ್ಣದ ವೇಷವಲ್ಲದೇ ಇತರ ವೇಷಗಳನ್ನು ತಮ್ಮೆದುರಿನಲ್ಲಿ ಇವರಿಂದ ಮಾಡಿಸಿ ಸ್ವತಃ ತಾವು ನೋಡಿ ಕಿಣಿಯವರು, ಖ್ಯಾತ ಮದ್ದಲೆಗಾರರಾದ ಹಿರಿಯಡ್ಕ ಗೋಪಾಲರಾಯರು ಚಂಡೆವಾದಕರಾದ ಬ್ರಹ್ಮಾವರದ ಕಿಟ್ಟುರವರು ಬಹಳ ಪ್ರೋತ್ಸಾಹ ನೀಡಿದ್ದರಿಂದ ತಾನಿಷ್ಟು ಪ್ರಸಿದ್ಧನಾಗಲು ಕಾರಣವೆನ್ನುವುದಾಗಿ ಕೃತಜ್ಞತೆಯಿಂದ ಸ್ಮರಿಸುತ್ತಾರೆ. +ಭಾಗವತ ರಾಮಾಯಣ, ಮಹಾಭಾರತ ಹಾಗೂ ಇನ್ನಿತರ ಪೌರಾಣಿಕ ಪ್ರಸಂಗಗಳಲ್ಲಿ ಬರುವ ಎಲ್ಲಾ ಬಣ್ಣದ ವೇಷಗಳನ್ನು ಸಮರ್ಥವಾಗಿ ನಿರ್ವಹಿಸಿದ ಖ್ಯಾತಿ ಇವರದ್ದು. +ಕನಕಾಂಗಿ ಕಲ್ಯಾಣದ ಫಟೋತ್ಕಚ, ವಿದ್ಯುನ್ನತಿ ಕಲ್ಯಾಣದ ಕಾಲಜಂಘಾಸುರ, ಪಂಚವಟಿ ಸೀತಾ ಅಪಾಹಾರದ ರಾವಣ ಹಾಗೂ ಶೂರ್ಪನಖಿ, ರತ್ನಾವತಿ ಕಲ್ಯಾಣದ ವಿದ್ಯುಲ್ಲೋಚನ, ಗಿರಿಜಾಕಲ್ಯಾಣದ ತಾರಕಾಸುರ, ಹಿಡಿಂಬಾ ವಿವಾಹದ ಹಿಡಿಂಬಾಸುರ, ಶ್ವೇತ ಕುಮಾರ ಚರಿತ್ರೆಯ ದುರ್ಜಯಾ ಸುರ, ಭೀಷ್ಯೋತ್ಪತ್ತಿಯ ತಮಾಲಕೇತು ಮುಂತಾದವುಗಳು ಇವರ ಪ್ರಸಿದ್ಧ ಬಣ್ಣದ ವೇಷಗಳು, ಅವು ಇನ್ನೂ ಜನಮಾನಸದಲ್ಲಿವೆ. +ಕೇವಲ ಬಣ್ಣದ ವೇಷವಲ್ಲದೆ ಭಕ್ತಿ ರಸ ಪ್ರಧಾನವಾದ ರುಕ್ಮಾಂಗದ ಚರಿತ್ರೆಯ ವೃತದರುಕ್ಮಾಂಗದ, ಸುಧನ್ವಕಾಳಗದ ಹಂಸ ದ್ವಜ, ತಾಮ್ರ ಧ್ವಜ ಕಾಳಗದ ಮಯೂರಧ್ವಜ ಇವರ ಬಹಳ ಪ್ರಸಿದ್ಧ ಪಾತ್ರಗಳು. +ಇನ್ನು ಕರ್ಣಾರ್ಜುನ ಕಾಳಗದ ಶಲ್ಯ ಹಾಗೂ ಕೌರವ ಇತ್ಯಾದಿ ಪಾತ್ರಗಳು ಬಹಳ ಜನಪ್ರಿಯವಾದವುಗಳು. +ಬಣ್ಣದ ವೇಷಧಾರಿಗಳೆಲ್ಲ ಮಾತು ಬರದವರು ಎಂಬ ಅಪವಾದವಿದ್ದರೂ ಇವರು ಅದಕ್ಕೆ ಹೊರತಾದವರು ಎನ್ನುವುದನ್ನು ತಮ್ಮ ಮಾತಿನಿಂದ ಬಣ್ಣದ ವೇಷ ಹಾಗೂ ಇತರ ವೇಷಗಳಿಂದ ಅದನ್ನು ಶ್ರುತಗೊಳಿಸಿದ್ದಾರೆ. +ಜೆಂಬೂರು ಶ್ರೀನಿವಾಸ ಭಾಗವತರು ಎತ್ತಿನಹಟ್ಟಿ ಚರಡಪ್ಪಯ್ಯ, ಹೆರಂಜೆ ಶಿವರಾಮಯ್ಯ ಮುಂತಾದವರಿಂದ ತಾಳ ಅಭ್ಯಾಸ ಹಾಗೂ ರಂಗ ನಡೆಯನ್ನು ಕಲಿತು ಪಾಂಡೇಶ್ವರ ಸದಾಶಿವಯ್ಯನವರಿಂದ ನೃತ್ಯವನ್ನು, ಕೊಳ್ಕೇಬೈಲು ಕುಷ್ಟ ಗಾಣಿಗರಿಂದ, ಬೆಳ್ಕಳೆ ಸುಬ್ಬಣ್ಣಯ್ಯನವರಿಂದ ಬಣ್ಣದ ವೇಷದ ಮುಖವರ್ಣಿಕೆ ಚಿಟ್ಟೆ ಇಡುವ ಕ್ರಮ ಹಾಗೂ ರಂಗ ನಡೆಗಳನ್ನು ಕಲಿತವರು . +ತನ್ನ ಗುರುಗಳೆಲ್ಲರಿಂದ ಕಲಿತ ವಿದ್ಯೆ ಹಿರಿಯರೆಲ್ಲರ ಒಡನಾಟದಿಂದ ಗಳಿಸಿದ ಅನುಭವ ತನ್ನ ಓದಿನೊಂದಿಗೆ ವಿಸ್ತರಿಸಿಕೊಂಡ ಜ್ಞಾನದಿಂದ ಬಡಗುತಿಟ್ಟಿನಲ್ಲಿ ಸಮರ್ಥ ೨ನೇ ವೇಷಧಾರಿಯಾಗುವಎಲ್ಲಾ ಅರ್ಹತೆ ಇವರಲ್ಲಿದ್ದರೂ, ಶ್ರೀ ರಾಮ ಗಾಣಿಗರ ಒತ್ತಾಯಕ್ಕೆ ಮಣಿದು ಬಣ್ಣದ ವೇಷದ ವಿಭಾಗದ ಭಾಗ್ಯ. +ಇವರಿಗೆ ಸಂಧ ಗೌರವ ಪ್ರಶಸ್ತಿ ಹಾಗೂ ರಾಜ್ಯ ಅಕಾಡೆಮಿ ಪ್ರಶಸ್ತಿ, ಕೇಂದ್ರ ಸರಕಾರದ ಮಾಶಾಸನ, ರಾಜ್ಯ ಸರಕಾರದ ಮಾಶಾಸನ, ಬೊಂಬಾಯಿ ಮೊಹೊತ್ತೋಭಾರ್‌, ಯಕ್ಷಗಾನ ಸಂಘದ ಪ್ರಶಸ್ತಿ, ಶ್ರೀ ಕ್ಷೇತ್ರ ಮಂದಾರ್ತಿ ವತಿಯಿಂದ ನೀಡುವ ಹಾರಾಡಿ ರಾಮ ಗಾಣಿಗ ಪ್ರಶಸ್ತಿ, ಅಂಬಲಪಾಡಿ ಲಕ್ಷ್ಮೀ ಜನಾರ್ದನ ಯಕ್ಷಗಾನ ಮಂಡಳಿಯಿಂದ ಸನ್ಮಾನ, ಬೆಂಗಳೂರು ರಂಗಸ್ಥಳ ವಿಭಾಗದ ಸನ್ಮಾನ, ಉಡುಪಿ ವಿಶ್ವೇಶ್ವರ ತೀರ್ಥ ಸ್ವಾಮೀಜಿಯವರಿಂದ ಪ್ರಶಸ್ತಿ ಗಳಲ್ಲದೆ ಇನ್ನು ಹಲವಾರು ಸಂಘಸಂಸ್ಥೆಗಳು ಇವರನ್ನು ಸನ್ಮಾನಿಸಿವೆ. +ಶ್ರೀಮತಿ ಮಾರ್ಥಾ ಆಸ್ಟ್‌ನ್‌ರ ಹಾಗೂದಿ। ಪ್ರೊ ಬಿ. ವಿ. ಆಚಾರ್ಯ, ಎಚ್‌.ಸುಬ್ಬಣ್ಣ ಭಟ್‌ ಇವರ ಯಕ್ಷಗಾನ ತಂಡದೊಂದಿಗೆ ಅಮೆರಿಕಾದ ಬಹುಭಾಗಗಳಲ್ಲಿ ದಿ। ಕೆ.ಎಸ್‌.ಉಪಾಧ್ಯಾಯರ ಶ್ರೀ ಗಣೇಶ ಯಕ್ಷಗಾನ ಮಂಡಳಿ ಮಂಗಳೂರು ಈ ತಂಡದಲ್ಲಿ ಜಿನೀವ, ಹಾಂಕೊಂಗ್‌ಮುಂತಾದ ದೇಶಗಳಲ್ಲಿಯೂ ದಿ॥ಡಾ. ಕೆ. ಶಿವರಾಮ ಕಾರಂತರ ನಿರ್ದೇಶನದ ಉಡುಪಿ ಯಕ್ಷರಂಗ ತಂಡದಿಂದ ಜಪಾನ್‌, ಹಾಂಕಾಂಗ್‌, ಇಟೆಲಿ ಮುಂತಾದ ದೇಶಗಳಲ್ಲಿಯೂ ಭಾರತದ ಬಹುಭಾಗದಲ್ಲಿಯೂ ಬಣ್ಣದ ವೇಷವನ್ನು ಸಮರ್ಥವಾಗಿ ಪ್ರದರ್ಶಿಸಿ ಪರಿಚಯಿಸಿದ ಹೆಗ್ಗಳಿಕೆ ಇವರದು. +ಮಂದಾರ್ತಿಮೇಳ ಒಂದರಲ್ಲೇ ೩೭ ವರ್ಷ ತಿರುಗಾಟ ಮಾಡಿದ ಇವರು ಸೌಕೂರು,ವಾರಣಕಟ್ಟೆ, ಪೆರ್ಡೂರು, ಕೊಡವೂರು, ಸಾಲಿಗ್ರಾಮ,ಶಿವರಾಮ ಕಾರಂತರ ನೃತ್ಯ ನಾಟಕ ತಂಡ ಹಾಗೂ ಉಡುಪಿ ಯಕ್ಷರಂಗ ದಿ। ಕೆ. ಎಸ್‌. ಉಪಾಧ್ಯಾಯರ ಮಂಗಳೂರು ಗಣೇಶ ಯಕ್ಷಗಾನ ಮಂಡಳಿ ಶ್ರೀ ಮಾರ್ಥಾ ಆಷ್ಟನ್‌ ದಿ। ಪ್ರೊ. ಬಿ. ವಿ. ಆಚಾರ್ಯ ಸುಬ್ಬಣ್ಣ ಭಟ್ಟರು ಒಗ್ಗೂಡಿ ರಚಿಸಿದ ಯಕ್ಚಗಾನ ತಂಡ ಇವುಗಳೆಲ್ಲದರಲ್ಲಿ ಒಟ್ಟು ೬ಂ ವರ್ಷಕ್ಕೂ ಹೆಚ್ಚಿಗೆ ಮೇಳದ ತಿರುಗಾಟ ಮಾಡಿದವರು. +ಬಡಗುತಿಟ್ಟಿನ ಬಣ್ಣದ ವೇಷಗಳನ್ನು ದೇಶ ವಿದೇಶಗಳಲ್ಲಿ ಸಮರ್ಥ ರೀತಿಯಲ್ಲಿ ಪಾತ್ರ ಮುಖಾಂತರ ಪರಿಚಯಿಸಿದ್ದಾರೆ. +ಅನೇಕ ಯಕ್ಷಗಾನ ಪ್ರಾತ್ಯಕ್ಟಿಕೆಗಳಲ್ಲಿ ಭಾಗವಹಿಸಿ ಬಣ್ಣದ ವೇಷದ ಬಗ್ಗೆ ಮಾಹಿತಿ ನೀಡಿದ್ದಾರೆ. +ಇವರಿಂದ ಬಣ್ಣದ ವೇಷದ ಕುರಿತು ಅನುಭವ ಪಡೆದವರಲ್ಲಿ ಶ್ರೀಚೇರ್ಕಾಡಿ ಮಾಧವ ನಾಯ್ಕರು ಹಾಗೂ ಈ ಲೇಖಕ ಮತ್ತು ನಾಡ ನಾಗೇಶ ಗಾಣಿಗರು ಮುಖ್ಯರಾದವರು. +೮೫ರ ಇಳಿ ವಯಸ್ಸಿನಲ್ಲಿಯೂ ಬಣ್ಣದ ವೇಷದ ಬಗ್ಗೆ ಯಾವ ವಿಚಾರ ಕೇಳಿದರೂ ನಿರರ್ಗಳವಾಗಿ ಉತ್ತರಿಸಿ ಮಾಹಿತಿ ನೀಡುತ್ತಾರೆ. +ಇಂತಹ ಅಪೂರ್ವ ಸಂಪತ್ತು ಬಡಗುತಿಟ್ಟಿನಲ್ಲಿ ಇನ್ನೊಂದಿಲ್ಲ. +“ಸಕ್ಕಟ್ಟಿನವರಿಗೆ ಸಕ್ಕಟ್ಟೇ ಉದಾಹರಣೆ'. +ತಮ್ಮ ತಂದೆಯವರ ಬಗ್ಗೆ ಇವರ ಮಕ್ಕಳು, ಮೊಮ್ಮಕ್ಕಳು,ಬಂಧುಗಳು ಸೇರಿ ಅವರ ಹೆಸರಿನಲ್ಲಿ ಪ್ರತಿಷ್ಠಾನ ಒಂದನ್ನು ಸ್ಥಾಪಿಸಲಿದ್ದು,ಹಿರಿಯ ಕಲಾವಿದರೊಬ್ಬರನ್ನು ಸನ್ಮಾನಿಸುವ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. +ಅದರ ಉದ್ಭಾಟನೆ ಇದೇ ೧೨.0೮.೨ಂ೧ಂರ ಅಪರಾಹ್ನ ೩ ಘಂಟೆಗೆ ಸೌಕೂರುಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನಡೆಯಲಿದ್ದು, ಅಂದು ಜಾನಪದ ಶ್ರೀ ಹಿರಿಯಡ್ಕ ಗೋಪಾಲರಾಯರನ್ನು ಸನ್ಮಾನಿಸಲಿದ್ದು, ನಂತರ ಪ್ರಸಿದ್ಧ ಕಲಾವಿದರಿಂದ ಯಕ್ಟಗಾನ ಪ್ರದರ್ಶನ ನಡೆಯಲಿದೆ. +ಹಾಗಾಗಿ ಈ ಲೇಖನ ಸಂದರ್ಭೋಚಿತ ಬಣ್ಣದ ವೇಷದ ವಿಭಾಗದ ಮುತ್ತಜ್ಜರಾದ ಶ್ರೀ ಸಕ್ಕಟ್ಟುಲಕ್ಷ್ಮೀನಾರಾಯಣಯ್ಯನವರ ಶಿಷ್ಯರಾದ ನಮ್ಮನ್ನೆಲ್ಲ ತಮ್ಮ ಜೀವನದ ೧ಂಂವರ್ಷ ದಾಟಿಯೂ ಮಾರ್ಗದರ್ಶನ ನೀಡಿ ಹರಸುವಂತಾಗಲಿ ಎಂದು ಕಲಾಮಾತೆಯನ್ನು ಹಾಗೂ ವಿಫ್ಲೇಶ್ವರನಲ್ಲಿ ಪ್ರಾರ್ಥಿಸೋಣ. +ಬಹಳ ಹಿಂದೆ ನಮ್ಮ ಉಡುಪಿ ಜಿಲ್ಲೆಯಲ್ಲಿ ಮಂದರ್ತಿ, ಮಾರಣಕಟ್ಟೆ,ಸೌಕೂರು ಹಾಗೂ ಕೋಟ ಅಮೃತೇಶ್ವರಿ ಮೇಳಗಳು ಬಯಲಾಟ ಮೇಳವಾಗಿ ಯಕ್ಷಗಾನ ಪ್ರದರ್ಶನ ಮಾಡುತ್ತಿದ್ದವು. +ಪ್ರತಿ ವರುಷ ನವೆಂಬರ್‌ ತಿಂಗಳಿಂದ ಮೇ ತಿಂಗಳ ತನಕ ಸುಮಾರು ೧೮ಂ ಇಡೀ ರಾತ್ರಿ ಪ್ರದರ್ಶನಗಳನ್ನು ಅವು ನೀಡುತ್ತಿದ್ದವು. +ಪ್ರತಿ ಮೇಳಗಳಲ್ಲಿ ಖಾಯಂ ಆಗಿ ಅಂದಿನ ಪ್ರಸಿದ್ಧ ಕಲಾವಿದರು ಕೆಲವರು ಕಲಾ ಸೇವೆ ಮಾಡುತ್ತಿದ್ದರು. +ಹಾರಾಡಿ ರಾಮ ಗಾಣಿಗರು, ಕುಷ್ಟಗಾಣಿಗರು, ನಾರಾಯಣ ಗಾಣಿಗರು ಮಂದರ್ತಿ ಮೇಳದಲ್ಲೂ, ವೀರಭದ್ರನ್ಯಾಕರು, ಮಾರ್ಗೋಳಿ ಗೋವಿಂದ ಮುಂತಾದವರು ಮಾರಣಕಟ್ಟೆಯಲ್ಲೂ,ಗಣಪತಿ ಪ್ರಭುಗಳು, ಕೊಕ್ಕರ್ಣೆ ನರಸಿಂಹ ಮೊದಲಾದವರು ಸೌಕೂರು ಮೇಳದಲ್ಲೂ ಬಹಳ ವರುಷಗಳು ಬೇರೆ ಮೇಳಕ್ಕೆ ಹೋಗದೆ ಸತತವಾಗಿ ಒಂದೊಂದೇ ಮೇಳದಲ್ಲಿ ಸೇವೆ ಮಾಡುತ್ತಿದ್ದರು ಎನ್ನುವುದು ಗಮನಾರ್ಹ. +ಉಳಿದಂತೆ ಪೋಷಕ ಕಲಾವಿದರು ಮೇಳದ ಯಜಮಾನನ ಒಪ್ಪಿಗೆ ಪಡೆದೇ ಬೇರೆ ಮೇಳಗಳಿಗೆ ಹೋಗುತ್ತಿದ್ದರು. +ಮೇ ತಿಂಗಳಲ್ಲಿ ಪ್ರದರ್ಶನ ಮುಗಿಸಿದ ನಂತರ “ಮುಂದಿನ ವರುಷ ಯಾವ ಯಾವ ಮೇಳಕ್ಕೆ ಯಾರ್ಯಾರು ಕಲಾವಿದರು' ಎನ್ನುವ ವಿಷಯವಾಗಿಯೇ ಅಭಿಮಾನಿಗಳು ಚರ್ಚಿಸುವುದರಲ್ಲೇ ಕುತೂಹಲಿಗಳಾಗಿರುತ್ತಿದ್ದರು. +ಮುಖ್ಯವಾಗಿ ಸಾಲಿನ ವೇಷಗಳ ಮತ್ತು ವೇಷಧಾರಿಗಳ ಬಗೆಗೆ ಚಿಂತನ ನಡೆಯುತ್ತಿತ್ತು. +ಭಾಗವತರು, ಹಿಮ್ಮೇಳ, ೨ನೇ ವೇಷ, ಪುರುಷ ವೇಷ, ಸ್ತ್ರೀ ವೇಷ, ಮೂರನೆಯವೇಷ, ಹಾಸ್ಯ ಹಾಗೂ ಬಣ್ಣದ ವೇಷ ಇತ್ಯಾದಿಗಳ ಬಗೆಗೆ ಅಭಿಮಾನಿಗಳುಆಸಕ್ತಿ ತಳೆಯುತ್ತಿದ್ದರು. +ಪ್ರತಿ ಮೇಳದಲ್ಲಿ ಈ ಸ್ಥಾನದ ವೇಷಧಾರಿಗಳಾರೆಂಬುದನ್ನು ತಿಳಿದು ಆ ವರುಷ ಯಾವ ಮೇಳ ಉತ್ತಮವಾದುದು!ಎನ್ನುವ ತೀರ್ಮಾನವೂ ಅಭಿಮಾನಿಗಳಲ್ಲಿ ಆಗುತ್ತಿತ್ತು . +ಯಾವ ಪ್ರಸಂಗವೇ ಇರಲಿ, ಅದರಲ್ಲಿನ ಪಾತ್ರಗಳನ್ನು ಈ ಕಲಾವಿದರಲ್ಲಿ ಯಾರ್ಯಾರು ನಿರ್ವಹಿಸಬೇಕು!ಎನ್ನುವ ಪಟ್ಟ ಮಾಡುವ ಕ್ರಮ ಮೊದಲು ಇರಲಿಲ್ಲ. +ಅಲಿಖಿತವಾದ ನಿಯಮದಂತೆ ಪ್ರಸಂಗ ನಿಶ್ಚಯವಾದೊಡನೆ ತನ್ನ ಪಾತ್ರ ಯಾವುದು ಎನ್ನುವುದನ್ನು ಆಯಾಯ ಸಾಲಿನ ವೇಷಧಾರಿಗಳು ತಾವೇ ನಿಶ್ಚಯಿಸಿ ಅದಕ್ಕಾಗಿ ಸಿದ್ಧರಾಗುವ ರೂಢಿ ಹಿಂದಿನದು. +ಉದಾಹರಣೆಗೆ ಸುಧನ್ವ ಕಾಳಗ ಪ್ರಸಂಗ, ನಿಶ್ಚಯಿಸಲ್ಪಟ್ಟರೆ ಅದರಲ್ಲಿ ಪುರುಷವೇಷಧಾರಿ ಸುಧನ್ವನಾಗಿಯೂ, ಎರಡನೆಯ ವೇಷಧಾರಿ ಅರ್ಜುನನಾಗಿಯೂ,ಮೂರನೆಯ ವೇಷದವರು ಕೃಷ್ಣನಾಗಿ, ಸ್ತ್ರೀ ವೇಷದವರು ಪ್ರಭಾವತಿಯಾಗಿಯೂ,ಮುಂಡಾಸಿನ ವೇಷಧಾರಿಗಳು ಪ್ರದ್ಯುಮ್ನ ವ್ಯಷಕೇತುವಾಗಿಯೂ ತಾವೇ ತಯಾರಾಗುತ್ತಿದ್ದರು. +ಆ ಪ್ರಸಂಗದಲ್ಲಿ ಬಣ್ಣದ ವೇಷಧಾರಿ ಹಂಸದ್ವಜನಾಗಿ ಅಂದು ತನ್ನ ಸೇವೆ ಸಲ್ಲಿಸಬೇಕು. +ಇದು ಬಹಳ ಹಿಂದಿನಿಂದ ನಡೆದುಕೊಂಡು ಬಂದ ರೂಢಿ. +ಎಲ್ಲ ಪಾತ್ರಧಾರಿಗಳು ಬಣ್ಣವನ್ನು ತಮ್ಮ ತಮ್ಮ ಪಾತ್ರಕ್ಕನುಗುಣವಾಗಿ ಹಚ್ಚಿಕೊಂಡೇ ಬರುತ್ತಾರೆ ನಿಜ. +ಆದರೆ, ಅವರನ್ನೆಲ್ಲ ಬಣ್ಣದ ವೇಷಧಾರಿ ಎನ್ನುವುದಿಲ್ಲ. +ಬದಲು ರಕ್ಕಸ ಪಾತ್ರಗಳನ್ನು ನಿರ್ವಹಿಸುವವರಿಗೆ ಮಾತ್ರ ಬಣ್ಣದವೇಷಧಾರಿ ಎನ್ನುವುದು ಕ್ರಮ: ಏಕೆ ಹೀಗೆ? +ಸರಿಯಾದ ಸಂಶೋಧನೆ ಈ ವರೆಗೆ ನಡೆದಂತಿಲ್ಲ. +ಬಹುಶಃ ಬಿಳಿ, ಕಪ್ಪು, ಕೆಂಪು, ಹಸಿರು, ಹಳದಿ ಇತ್ಯಾದಿ ಎಲ್ಲ ಬಣ್ಣಗಳ ಸಂಯೋಜನೆಯೊಂದಿಗೆ ರಕ್ಕಸ ಪಾತ್ರಗಳ ಮುಖವರ್ಣಿಕೆ ಆಗುತ್ತಿದ್ದುದರಿಂದ ಆ ವೇಷಧಾರಿಗಳಿಗೆ ಬಣ್ಣದ ವೇಷದವರು ಎಂದಿರಬಹುದು? +ಏನೇ ಇರಲಿ, ಬಣ್ಣದ ಮನೆಯಲ್ಲಿ ಅಂದರೆ ಚೌಕಿಯಲ್ಲಿ ಈ ಸಾಲಿನವರಿಗೆ ತಮ್ಮ ನಿಶ್ಚಿತ ಸ್ಥಾನದಲ್ಲೇ ಕುಳಿತು ವೇಷ ಮಾಡಿಕೊಳ್ಳುವ ನಿಯಮವೂ ಹಿಂದೆ ಇದ್ದಿತ್ತು. +ಗಣಪತಿ ದೇವರ ಬಲಭಾಗದಲ್ಲಿ ಕ್ರಮವಾಗಿ ಎರಡನೆಯ ವೇಷ,ಪುರುಷವೇಷ ಸ್ತ್ರೀವೇಷ, ಮೂರನೆಯ ವೇಷ, ಬಾಲಗೋಪಾಲ ಹೀಗೆ ಕುಳಿತಿದ್ದರೆ,ದೇವರ ಎಡಭಾಗದ ಮೊದಲ ಸ್ಥಾನ ಬಣ್ಣದ ವೇಷದವರಿಗೆ ಮೀಸಲು, ನಂತರ ಒತ್ತು ಬಣ್ಣ, ಮುಂಡಾಸಿನ ವೇಷಧಾರಿಗಳು, ಸಖಿ ಸ್ತ್ರೀವೇಷ, ನಂತರ ಬಾಲಗೋಪಾಲ-ಕೋಡಂಗಿ ಮಕ್ಕಳು ಕುಳಿತುಕೊಳ್ಳಬೇಕು. +ನಂತರ ಗಣಪತಿ ದೇವರ ನೇರ ಇದಿರುಗಡೆ, ಈ ಅಕ್ಕಪಕ್ಕದ ಸಾಲುಗಳ ಕೊನೆಯಲ್ಲಿ ಅಡ್ಡಲಾಗಿ ಹಾಸ್ಯಗಾರರು ಕುಳಿತುಕೊಳ್ಳಬೇಕು. +ಇಡೀ ರಾತ್ರಿ ನಾರದ, ಹಾಸ್ಯಗಾರ, ಬಾಗಿಲಭಟ,ಕಿರಾತನ ದೂತ ಇತ್ಯಾದಿ ಹಲವು ಪಾತ್ರಗಳನ್ನು ನಿರ್ವಹಿಸಿ ಆಗಾಗ ರಂಗಸ್ಥಳಕ್ಕೆ ಹೋಗಿ ಬರಬೇಕಾದುದರಿಂದಲೇ ಇರಬೇಕು. +ಹಾಸ್ಯಗಾರರಿಗೆ ರಂಗಸ್ಥಳದ ಅತಿ ಸಮೀಪವಾದ ಈ ಸ್ಥಾನ ಕೊಟ್ಟಿರಬಹುದು. +ಹಿಂದೆ ಬಣ್ಣದವರ ಸ್ಥಾನ-ಮಾನ ಹೇಗಿತ್ತು ಎನ್ನುವುದಕ್ಕೆ ಆ ವೇಷಧಾರಿಗೆ ಚೌಕಿಯಲ್ಲಿ ನೀಡಿದ ಸ್ಥಾನವೇ ಸಾಕ್ಷಿ. +ಮೇಳದ ಪ್ರಮುಖ ವೇಷಧಾರಿಗೆ (೨ನೇವೇಷಕ್ಕೆ) ಇದಿರಾಗಿ ಎಡಸಾಲಿನ ಪ್ರಥಮ ಸ್ಥಾನ ಬಣ್ಣದ ಪಾತ್ರಧಾರಿಗೇ ಮೀಸಲಾಗಿರುತ್ತಿತ್ತು . +ಮೇಳದಲ್ಲಿ ಎರಡನೇ ವೇಷಧಾರಿಯ ಯೋಗ್ಯತೆ, ಆವಶ್ಯಕತೆ ಬಣ್ಣದ ವೇಷಧಾರಿಗೂ ಇದ್ದಿತ್ತು ಎನ್ನುವುದನ್ನು ಬೇರೆ ಹೇಳಬೇಕಿಲ್ಲ. +ರಕ್ಕಸ ಪಾತ್ರಗಳಿಲ್ಲದ ಪ್ರಸಂಗಗಳಲ್ಲಿ ಹಂಸದ್ವಜ, ರುದ್ರಭೀಮ, ಶಲ್ಯ, ಮಯೂರ ಧ್ವಜ ಮುಂತಾದ ಗಂಭೀರ ಪಾತ್ರಗಳನ್ನೂ ನಿರ್ವಹಿಸುವ ಯೋಗ್ಯತೆ ಉಳ್ಳವರಾಗಿರಬೇಕು ಬಣ್ಣದವರು. +ಕೇವಲ ರಕ್ಕಸ ಪಾತ್ರಗಳನ್ನು ಅದ್ಭುತ ಮುಖವರ್ಣಿಕೆಗಳಿಂದಲೋ, ಗಂಭೀರ ಕಂಠ ತ್ರಾಣ ತೋರಿಸಿಯೋ, ರೌದ್ರ-ಭಯಾನಕ ರಸಗಳನ್ನು ಅಭಿವ್ಯಕ್ತಿಸಿಯೋ ರಂಗದಲ್ಲಿ ಮಿಂಚಿದರೆ ಸಾಲದು,ಬದಲು ಸೌಮ್ಯ, ಗಂಭೀರ ಪಾತ್ರ ಚಿತ್ರಣವನ್ನು ಮಾಡುವವರೇ ನಿಜವಾದ ಬಣ್ಣದ ವೇಷಧಾರಿ ಎನ್ನಿಸಿಕೊಳ್ಳುತ್ತಾನೆ. +ಬಂಡಾರೋಣಿ ಅನಂತ, ಕೊಳಕೆಬೈಲು ಸಂಜೀವ, ಬಣ್ಣದ ಕುಷ್ಟ ಉಳ್ತೂರು ಮಾಲಿಂಗ, ಬೆಲ್ತೂರು ರಾಮ ಮುಂತಾದ ಬಣ್ಣದ ಪಾತ್ರಧಾರಿಗಳು ಒಂದೊಂದುಬಗೆಯಲ್ಲಿ ಹೆಸರು ಮಾಡಿದವರೇ. +ಬಂಡಾರ ಓಣಿ ಅನಂತರು ದೃಷ್ಟಿ ಕಳಕೊಂಡ ಕಾರಣ ಕನ್ನಡಕ ಏರಿಸಿಯೇ ಅದರ ಮೇಲೆ ಚುಟ್ಟಿ ಇಡುತ್ತಿದ್ದರು. +ಕೊಳ್ಳೆಬೈಲವರ ರೇಖೆ-ಚುಟ್ಟಿಗಳು ಬಹಳ ಓರಣವಾಗಿರುತ್ತಿದ್ದರೆ ರಕ್ಕಸ ಪಾತ್ರಕ್ಕೆ ಸರಿಯಾದ ಸ್ವರ ಗಾಂಭೀರ್ಯದಿಂದ ವಂಚಿತರಾಗಿದ್ದರು. +ಬಣ್ಣದ ಕುಷ್ಟನವರು ಹೆಣ್ಣುಬಣ್ಣಕ್ಕೆ ಹೆಸರು ಮಾಡಿದ್ದರು. +ಉಳ್ತೂರು ಮಾಲಿಂಗನವರು ಕೇವಲ ರಕ್ಕಸ ಪಾತ್ರಕ್ಕೇ ಮೀಸಲಾಗಿದ್ದರು. +ಬೆಲ್ತೂರು ರಾಮನವರು ರಂಗಚಲನೆಯಲ್ಲಿ ರೌದ್ರ-ಭಯಾನಕ ರಸ ಪ್ರತಿಪಾದನೆ ಮಾಡುವುದರಲ್ಲಿ ತಮ್ಮ ಲಯಜ್ಞಾನದ ಕೊರತೆಯನ್ನು ತೋರಗೊಡರು. +ಇವರ್ಯಾರಲ್ಲೂ ರಕ್ಕಸ ಪಾತ್ರಗಳಲ್ಲದೆ ಬೇರೆ ಪಾತ್ರ ಬಹಳ ಸಮರ್ಪಕವಾಗಿ ಆಗುತ್ತಿರಲಿಲ್ಲ ಎನ್ನುವುದು ನಾನು ಕಂಡುಕೊಂಡ ವಿಷಯ. +ಆದರೆ ಸಕ್ಕಟ್ಟು ಲಕ್ಷ್ಮೀನಾರಣಯ್ಯನವರು ಎರಡಕ್ಕೂ ಸೈ ಎನಿಸಿಕೊಂಡವರು. +ರಕ್ಕಸ ಪಾತ್ರಗಳಿಗೆ ಆವಶ್ಯವೆನಿಸಿದ ಆಳಂಗ, ಕಂಠತ್ರಾಣ, ಶ್ರುತಿ-ಲಯಸಿದ್ಧಿ,ರಂಗಪ್ರವೇಶ, ಒಡ್ಡೋಲಗ, ಅರ್ಥಗಾರಿಕೆ ಇತ್ಯಾದಿ ದೈವದತ್ತವಾಗಿ ಅವರಿಗೆ ಬಂದಂತಿದೆ. +ಸೌಮ್ಯ ರಾಜ ಪಾತ್ರಗಳನ್ನು ಹಿತಮಿತವಾಗಿ ಮಾಡುವ ಸಾಮರ್ಥ್ಯ ಅವರಿಗಿದೆ. +ಹಂತಹಂತವಾಗಿ ಹಿರಿಯರ ಮಾರ್ಗದರ್ಶನ, ತರಬೇತಿ ಪಡೆದ ಸಕ್ಕಟ್ಟು ಲಕ್ಷ್ಮೀನಾರಣಯ್ಯನವರು ಕಾಟು ಬಣ್ಣ ಮಾತ್ರವಲ್ಲ, ರಾಜ ಬಣ್ಣವನ್ನೂ ಗಂಭೀರವಾಗಿ ಮಾಡಬಲ್ಲವರು. +ಡಾ।ಕಾರಂತರಂತಹವರೂ ಮೆಚ್ಚಿದ, ದೇಶ-ಎದೇಶಗಳಲ್ಲೂ ತಮ್ಮ ಪ್ರತಿಭೆ ತೋರಿಸಿದ ನಿಜ ಅರ್ಥದ ಬಣ್ಣದವರು ಶ್ರೀಯುತರು. +ಶುದ್ಧ ಮುಖವರ್ಣಿಕೆ, ಪಾತ್ರೋಚಿತವಾದ ಸುಳಿಗಳನ್ನು ಮುಖದ ಮೇಲೆ ಬರೆದುಕೊಳ್ಳುವ ಕೌಶಲ್ಯ, ಪ್ರಸಂಗ ಜ್ಞಾನ, ತೂಕದ ಹೆಜ್ಜೆಗಾರಿಕೆ ಇತ್ಯಾದಿ . +ಬಣ್ಣದ ವೇಷಧಾರಿಗಳಿಗೆ ಅತಿ ಅಗತ್ಯವಾದ, ಕೌಶಲಗಳನ್ನು ಹೊಂದಿದ ಇವರಂತಹ ಬಣ್ಣದ ವೇಷದವರು ಇಂದಿಲ್ಲ. +ಯಾವ ಪ್ರಸಂಗಕ್ಕೂ ಬಣ್ಣದ ವೇಷದ ಅಗತ್ಯವೇ ಇಲ್ಲವಾಗಿರುವುದು ಯಕ್ಷಗಾನ ರಂಗದ ಈಗಿನ ಧುರಂತ. +ಈ ಎಲ್ಲ ಹಿರಿಮೆಗಳನ್ನು ನೋಡಿಯೇ ಸಾಲಿಗ್ರಾಮ ಮಕ್ಕಳ ಮೇಳದ ಸಂಸ್ಥಾಪಕರಲ್ಲಿ ಒಬ್ಬರಾದ ಕಾರ್ಕಡ ಶ್ರೀನಿವಾಸ ಉಡುಪ ಪ್ರಶಸ್ತಿ-ಸಂಮಾನ ಈಗಾಗಲೇ ಅವರಿಗೆ ದೊರೆತಿದೆ ಎನ್ನುವುದನ್ನು ನೆನಪಿಸುತ್ತಿದ್ದೇನೆ. +ಯಕ್ಷಗಾನ ರಂಗಭೂಮಿ ಕರಾವಳಿ, ಮಲೆನಾಡಿನ ಜನರ ರಾತ್ರಿಗಳನ್ನು ಬೆಳಕಾಗಿಸಿದ, ದಣಿದ ಮನಗಳಿಗೆ ಉಲ್ಲಾಸದ ಸುಧೆಯನ್ನು ನೀಡುವ ರಸವದ್‌ಸ್ವರೂಪ, ಸಂಸ್ಕೃತಿ, ಧರ್ಮಶ್ರದ್ಧೆ, ನೀತಿಬೋಧೆ ಮತ್ತು ಮನೋರಂಜನೆಯನ್ನುಏಕಕಾಲದಲ್ಲಿ ಅನೇಕ ಬಗೆಯಲ್ಲಿ ಉಣಬಡಿಸುವ ಜ್ಞಾನದ ಆರಂಭಕ್ಕೆ ತಳಪಾಯ ಹಾಕಿದ ಸರ್ವಸುಂದರ ಅದ್ಭುತ ಕಲೆ,ಮನಸ್ಸಿಗೆ ಮುದನೀಡುವ ರಸಾಸ್ವಾದ. +ಮನೋರಂಜನೆ, ನೃತ್ಯ ಪ್ರಧಾನ ಯಾವುದರ ಕೊರತೆಯನ್ನು ನೀಗಿಸುವ ಭಾಗವತಿಕೆ, ರಾಗ, ತಾಳ, ಭಾವ ಪ್ರಧಾನವಾದುದು. +ಪ್ರೇಕ್ಷಕ ವರ್ಗ ಪಾತ್ರಧಾರಿಗಳ ನಿರರ್ಗಳ ವಿದ್ವತ್‌ಪೂರ್ಣ ಮಾತುಗಾರಿಕೆಯನ್ನು ಆಲಿಸಿ ಮರುಳಾದರೆ, ಇನ್ನು ಕೆಲವರು ನವರಸ ಪ್ರಧಾನ ಅಭಿನಯಕ್ಕೆ ಮರುಳಾಗುತ್ತಾರೆ. +ಮತ್ತೆ ಕೆಲವರು ಭಾಗವತಿಕೆಯೇ ಇಡೀ ಪ್ರಸಂಗದ ಯಶಸ್ಸಿಗೆ ಮೂಲ ಕಾರಣವೆಂದರೆ, ಮತ್ತದೇ ಪ್ರೇಕ್ಷಕರ ಕುತೂಹಲದ ಕದ ತಟ್ಟುವ ಪರಿ ಬೇರೆಯೇ ಆಗಿರುತ್ತದೆ. +ಆತನ ಕಣ್ಣುನೇಪಥ್ಯದ ಕಡೆಗಿದ್ದು ಮುಂದಿನ ಪಾತ್ರ ಯಾವುದು? +ಯಾವಾಗ ಬಂದೀತು? +ವೇಷಭೂಷಣ ಪರಿ ಎಂತು? +ರಾಕ್ಷಸ ಪಾತ್ರವೇ? +ಹನುಮಂತನೇ? +ಸ್ತ್ರೀ ವೇಷವೇ? +ಎಂಬಿತ್ಯಾದಿ ಆಲೋಚನಾ ಲಹರಿಯನ್ನೇ ಹರಿಸುತ್ತಾನೆ. +ಯಕ್ಷಲೋಕದಲ್ಲಿ ರಾಜವೇಷ, ರಾಕ್ಷಸ ವೇಷ, ಸ್ತ್ರೀ ವೇಷ, ಹಾಸ್ಯವೇಷ ಎಂಬ ಬಣ್ಣ ಬಣ್ಣದ ವೇಷಗಳಿವೆ. +ಈ ಎಲ್ಲಾ ವೇಷಗಳಿಗಿಂತ ವಿಭಿನ್ನ, ವಿಶಿಷ್ಟ. ವಿಲಕ್ಷಣವಾದ ವೇಷ ವರ್ಗವಿದೆ. +ಅದುವೇ ಬಣ್ಣದ ವೇಷ. +ಇಲ್ಲಿ ವೇಷಗಳಿಗೆ ಬಣ್ಣಗಾರಿಕೆಯೇ ಜೀವಾಳ. +ಕಲಾವಿದರ ಕಲ್ಪನೆಗಳಿಂದ ನಂದಿ, ವಾಲಿ, ನರಸಿಂಹ, ಭಸ್ಮಾಸುರನನ್ನು ನಿರ್ಮಿಸುವ ಯಕ್ಷಗಾನದ ಪ್ರಸಾಧನ ಕಲಾವಿದರು ಯಾವಾಗಲೂ ನೇಪಥೃದಲ್ಲೇ ಉಳಿದಿರುತ್ತಾರೆ. +ಇಂತಹ ಅನರ್ಘ್ಯ ಜ್ಞಾನ ಭಂಡಾರವಾಗಿರುವ ಈ ಯಕ್ಷಗಾನ ಕಲೆಯಲ್ಲಿ ನನ್ನಜ್ಜನ ಪ್ರತಿಭೆಯ ಸಾಕ್ಷಾತ್ಕಾರವಾದುದ್ದು ಮಹತ್‌ಪೂರ್ಣವೇ ಸರಿ. +ಸೃಜನಶೀಲಕಲೆಯಾದ ಯಕ್ಷಗಾನಕ್ಕೆ ಸಾಹಿತಿ, ಕವಿ, ವಿದ್ವಾಂಸ ಹಾಗೂ ಪ್ರಯೋಗಾತ್ಮಕ ವ್ಯಕ್ತಿ ಕೋಟ ಶಿವರಾಮ ಕಾರಂತರು ಮತ್ತಷ್ಟು ಶ್ರೀಮಂತಗೊಳಿಸಿದರು. +ಐತಿಹಾಸಿಕ ಸೌಕೂರು ಮೇಳದಲ್ಲಿ ಸಕ್ಕಟ್ಟು ಸುಬ್ಬಣ್ಣಂರ್ಯು,ಲಕ್ಷ್ಮೀನಾರಾಯಣಯ್ಯ ರಾಘವೇಂದ್ರ ಈ ಮುರೂ ತಲೆಮಾರು ತನ್ನ ಸೇವೆಯನ್ನು ನೀಡಿದೆ. +ಹಾಗೂ ನನ್ನ ಅಜ್ಜ ಕಲಾ ಬದುಕಿನ ಬಹುಪಾಲು ಮಂದರ್ತಿ ಮೇಳದಲ್ಲಿ ಕಲಾಸೇವೆಗೈದರು. +ನಾನು ಸಣ್ಣವನಿರುವಾಗ ಯಕ್ಷಗಾನವನ್ನು ರಾತ್ರಿಯಿಡೀ ಎವೆಯಿಕ್ಕದೆ ನೋಡುತ್ತಿದ್ದೆ. +ಅದೆಂದರೆ ಏನೋ ಒಂದು ತರನಾದ ಉಲ್ಲಾಸ. +ಆ ಚಂಡೆಮದ್ದಳೆ, ಭಾಗವತಿಕೆ, ರಂಗಸ್ಥಳ ಚೌಕಿ, ಈಗಲೂ ಕಣ್ಣ ಮುಂದೆ ಬಂದು ನಿಲ್ಲುತ್ತದೆ. +ಆದರೆ ಅಜ್ಜನ ವೇಷ ಎಲ್ಲೋ ಕನಸಿನಲ್ಲಿ ಕಂಡ ನೆನಪು. +ಯಾಕೆಂದರೆ ನಮಗೆ ಬುದ್ಧಿ ಬರುವಾಗ ಅನಾರೋಗ್ಯದಿಂದ ನಾಟ್ಯ ಕಲೆಗೆ ವಿದಾಯ ಹೇಳಿದ್ದರು. +ಆದಾಗ್ಯೂ ಅಜ್ಜನ ಪಾತ್ರದಲ್ಲಿನ ತನ್ಮಯತೆ, ನಿರ್ವಹಣೆಗಳನ್ನು ಅಭಿಮಾನಿಗಳ ಬಂಧು-ಬಳಗದವರ ಮಾತುಗಳಲ್ಲಿ ಸಿಡಿ-ಕ್ಯಾಸೆಟುಗಳಲ್ಲಿ, ಪತ್ರಿಕೆ-ಪುಸ್ತಕಗಳಲ್ಲಿ ಕಣ್ಣಿಗೆ ಕಟ್ಟುವಂತೆ ಕಾಣುವ ಕೇಳುವ ಯೋಗ ಮಾತ್ರ ನಮ್ಮ ಪಾಲಿಗೆ. +ಒಂದು ದಿನ ಲೇಖನ ಓದುತ್ತಿದ್ದಾಗ ಅದರಲ್ಲಿ ಹೀಗಿತ್ತು: "ಅಂದು ಕುಂದಾಪುರ ತಾಲ್ಲೂಕಿನ ಹಳ್ಳಿಯ ಬಯಲು ಗದ್ದೆಯಲ್ಲಿ ಯಕ್ಷಗಾನವೊಂದು ನಡೆಯುತ್ತಿತ್ತು. +ಭಕ್ತ ಪ್ರಹ್ಲಾದ ಪ್ರಸಂಗ ಕೊನೆಯ ಸನ್ನಿವೇಶವೊಂದರಲ್ಲಿ ಹಿರಣ್ಯ ಕಶಿಪುವಿನ ಎದೆಯ ಮೇಲೆ ಕುಳಿತು ಉಗ್ರ ನರಸಿಂಹ ಆತನ ಎದೆಯನ್ನು ತನ್ನ ನಖಗಳಿಂದ ಸೀಳುತ್ತಿದ್ದಾನೆ. +ನರಸಿಂಹ ಪಾತ್ರಧಾರಿ ತಾದಾತ್ಮತೆಯ ಪರಾಕಾಷ್ಠೆಗೇರಿ ಯಕ್ಷಗಾನ ಎಂಬುದನ್ನು ಮರೆತು ಆವೇಶದಿಂದ ಬಗೆಯುತ್ತಿದ್ದಾನೆ. +ನೆರೆದ ಪ್ರೇಕ್ಟಕರಿಗೆ ಭಯ, ಗಾಬರಿ, ಆತಂಕ. +ಹೆಂಗಸರು ಮಕ್ಕಳೆಲ್ಲಾ ಹೆದರಿ ಚೀರಿದರು. +ಕೊನೆಗೆ ಆಟ ಆಡಿಸಿದವರೇ ಬಂದು ನರಸಿಂಹನನ್ನು ಚೌಕಿಗೆ ಕಳುಹಿಸಬೇಕಾಯಿತು. +ಅಂದಿನ ಆಟದಲ್ಲಿ ನರಸಿಂಹನ ಪಾತ್ರದಲ್ಲಿದ್ದವರು ಬೇರಾರೂಅಲ್ಲ, ಬಣ್ಣದ ಬೆಡಗಿನ ಲೋಕದ ಜೀವಂತ ದಂತಕತೆಯೆನಿಸಿದ ಶ್ರೀ ಸಕ್ಕಟ್ಟುಲಕ್ಷ್ಮೀನಾರಾಯಣಯ್ಯನವರು." +ಒಂದು ದೇಶ ಅಭಿವೃದ್ಧಿ ಹೊಂದಿದೆ ಎಂದರೆ ಅಲ್ಲಿನ ಕುಟುಂಬಗಳು ಅಭಿವೃದ್ಧಿ ಹೊಂದಿದೆ ಎಂಬುದನ್ನು ಮಾರ್ಮಿಕವಾಗಿ ಹೇಳಬಹುದು. +ಅಂತೆಯೇನಾನು ನನ್ನ ಅಜ್ಜನ ಗೃಹಾಡಳಿತದ ವೈಖರಿಯನ್ನು ಕಂಡು ಅದನ್ನು ದೇಶದ ಆಡಳಿತಕ್ಕೆ ಸಮೀಕರಿಸುತ್ತೇನೆ. +ನಮ್ಮ ಮನೆಯಲ್ಲಿ ಅಜ್ಜನೇ ಅಧ್ಯಕ್ಷ. +ನಾಮ ಮಾತ್ರವಲ್ಲ, ಮನೆಯ ಸಂಪೂರ್ಣಅಧಿಕಾರ ಜವಾಬ್ದಾರಿ ಅವರದ್ದೇ. +ಅಪ್ಪ ಚಿಕ್ಕಪ್ಪ ಸಲಹೆಗಾರರಾದರೆ ಅಜ್ಜಿ ಮತ್ತು ತಾಯಿ ಗೃಹಮಂತ್ರಿಣಿಯರು. +ಚಿಕ್ಕಮ್ಮ ಅಣ್ಣ, ತಂಗಿ ನಾವೆಲ್ಲಾ ಸರ್ವ ಸದಸ್ಯವರ್ಗ. +ನಮ್ಮೆಲ್ಲರ ಸಂಸ್ಕೃತಿ, ಸಂಪ್ರದಾಯ, ಕಟ್ಟುಪಾಡುಗಳಿಗೆ ಅಜ್ಜನೇ ಸಂವಿಧಾನ. +ಇದು ನಮ್ಮ ಮನೆಯ ಆಡಳಿತ ಮಂಡಳಿ. +ನಮ್ಮ ಅಜ್ಜ ಎಳೆಯ ವಯಸ್ಸಿನಲ್ಲಿಯೇ ತಂದೆಯವರ ವಿಯೋಗದಿಂದ ಮನೆಯ ಜವಾಬ್ದಾರಿ ಹೆಗಲೇರಿದ್ದರಿಂದ ಸಂಸಾರವನ್ನು ಮುನ್ನಡೆಸುವ ಕಸುವನ್ನು ಅರಿತಿದ್ದರು. +ಇತ್ತ ಯಕ್ಷಗಾನದಲ್ಲಿ ತಮ್ಮನ್ನು ತೊಡಗಿಸಿಕೊಂಡು ಅತ್ತ ಅಕ್ಕ-ತಮ್ಮಂದಿರ ಮದುವೆಯನ್ನು ಪೂರೈಸಿ ಕೃಷಿ ವ್ಯವಹಾರ ನೋಡಿಕೊಳ್ಳುತ್ತಾ ೫ಂ ವರ್ಷದಿಂದೀಚೆಗೆ ಸೌಕೂರಿಗೆ ಬಂದು ನೆಲೆಸಿದರು. +ಸಕ್ಕಟ್ಟು ಮೂಲ ಮನೆಯ ಹೊಣೆಯನ್ನು ತಮ್ಮಂದಿರಾದ ಶ್ರೀನಿವಾಸ,ಸೀತಾರಾಮರಿಗೆ ಬಿಟ್ಟುಕೊಟ್ಟರು. +ಬ್ರಿಟಿಷರು ಹೊಸದಾಗಿ ಅಮೆರಿಕಾ ದೇಶವನ್ನು ಕಟ್ಟಿದಂತೆ ಸೌಕೂರಿನಲ್ಲಿತನ್ನದೇ ಆದ ಮನೆಯನ್ನು ಕಟ್ಟಿ ಧರ್ಮಪತ್ನಿ ಹಾಗೂ ೯ ಜನ ಮಕ್ಕಳೊಂದಿಗೆ ಹೊಸ ಜೀವನ ಆರಂಭಿಸಿದರು. +೪ ಜನ ಗಂಡು ಮಕ್ಕಳು, ೫ ಜನ ಹೆಣ್ಣುಮಕ್ಕಳ ಮದುವೆಯನ್ನು ನಿರ್ವಿಘ್ನವಾಗಿ ಪೂರೈಸಿದರು. +ಗೆಲುವನ್ನೇ ಕಂಡರಿಯದ ಕುದುರೆ ತನ್ನ ಸವಾರನು ಕೊಡುವ ನೋವಿನಿಂದ ತನಗೆ ಅರಿವಿಲ್ಲದಂತೆ ಗೆಲುವು ಸಾಧಿಸುವಂತೆ ನನ್ನಜ್ಜ ದೇವರು ನೀಡಿದ ಕಷ್ಟಕಾರ್ಪಣ್ಯಗಳನ್ನು ಸಕಾರಾತ್ಮಕವಾಗಿಸಿಕೊಂಡು ಸದಾಶಯದ ಜೀವನ ಸಾಗಿಸುತ್ತಿದ್ದಾರೆ. +ತನ್ನ ದೇಶ-ವಿದೇಶ ತಿರುಗಾಟದಲ್ಲಿ ಪ್ರತಿ ದೇಶಕ್ಕೆ ಹೋದಾಗಲೂ ಪತ್ರಮುಖೇನ ಪತ್ನಿ ಪುತ್ರರ ಸಮಾಚಾರವನ್ನು ವಿಚಾರಿಸುತ್ತಿದ್ದರು ಎಂಬುದಕ್ಕೆ ಅವರು ೧೯೮೨ರಲ್ಲಿ ಯುಗೋಸ್ಲಾವಿಯಾದಿಂದ ಬರೆದ ಪತ್ರ ಸಾಕ್ಷಿ ಸ್ವರೂಪವಾಗಿದೆ. +ಅಜ್ಜ ಎಂದಿಗೂ ಸುಮ್ಮನೇ ಕುಳಿತವರೇ ಅಲ್ಲ. +ಯಾವಾಗಲೂ ಹೊಸದನ್ನು ಕಂಡುಕೊಳ್ಳುವ ಸೃಜನಾತ್ಮಕ ಜೀವಿ. +ಮನೆಯಲ್ಲಿ ಗುಡಿಕೈಗಾರಿಕೆ, ಹೊಲದಲ್ಲಿ ವ್ಯವಸಾಯ ಹೀಗೆ ನಿರಂತರ ಕಾರ್ಯಗಾಮಿಯಾಗಿದ್ದರು. +ಬೇಸಾಯದಲ್ಲಿಮೆಣಸು, ಉದ್ದು, ಬದನೆ, ಭತ್ತ ಮುಂತಾದ ಫಸಲುಗಳನ್ನು ಬೆಳೆಸುತ್ತಿದ್ದರು. +ಯಾವುದೇ ಕೆಲಸದ ವಿಚಾರದಲ್ಲಿ ಅಜ್ಜ ಹಾಗೆ ಮಾಡಿ, ಹೀಗೆ ಮಾಡಿ ಎಂದು ಹೇಳಿದವರೇ ಅಲ್ಲ. +ಅವರ ಕಾರ್ಯತತ್ಪರತೆ ಕಂಡು ನಾವೇ ಅಜ್ಜನೊಂದಿಗೆ ಕೆಲಸ ಕಾರ್ಯಗಳಲ್ಲಿ ಕೈಜೋಡಿಸುತ್ತಿದ್ದೆವು. +ಅಜ್ಜನ ಗರಡಿಯಲ್ಲಿ ಪಳಗಿದ ನಾವು ಎಲ್ಲಿ ಬೇಕಾದರೂ ಹೋಗಿ ಬದುಕುವ ಆತ್ಮಸ್ಥೈರ್ಯವನ್ನು ಇಂದು ಹೊಂದಿದವರಾಗಿದ್ದೇವೆ. +ಅಜ್ಜನದು ಆದರ್ಶ, ಆಕರ್ಷಕ ವ್ಯಕ್ತಿತ್ವ್ವ ಅಡಿಯಿಂದ ಮುಡಿಯವರೆಗೂ ಎಲ್ಲಾ ಜೀವನಾಧಾರ ಕೆಲಸಗಳನ್ನು ಅರಿತ ಯೋಗ್ಯತಾ ಸಂಪನ್ನರಾಗಿದ್ದರು. +ಬುಟ್ಟಿ ಹೆಣೆಯುವುದು, ಮಂಡೆ ಹಾಳೆ ಮಾಡುವಂತಹ ಅನೇಕ ಗುಡಿ ಕೈಗಾರಿಕೆ ಅರಿತವರು. +ಅಜ್ಜನ ಪಾಕಶಾಸ್ತ್ರ ಪ್ರಾವೀಣ್ಯತೆಯನ್ನು ಎಂದಿಗೂ ಮರೆಯುವಂತಿಲ್ಲ. +ಒಂದು ದಿನ ಮನೆಯವರೆಲ್ಲರೂ ಮದುವೆಗೆಂದು ಹೋದಾಗ ನಮಗೆ ವಲಲ ವೃತ್ತಿ ಗೊತ್ತಿಲ್ಲವಾದ್ದರಿಂದ ಅಜ್ಜನೇ ಅತಿ ಬೇಗನೆ ಅನ್ನ, ಚಟ್ನಿ, ಸಾಂಬಾರು ಮಾಡಿ ಬಡಿಸಿದರು. +ಅದರ ಕೈ ರುಚಿಯನ್ನು ನಾವ್ಯಾರೂ ಮರೆತಿಲ್ಲ. +ಅಮ್ಮನಿಗೆ ನಾವೆಲ್ಲ ಅಜ್ಜ ಮಾಡಿದಂತೆ ಮಾಡು ಎಂದು ಆಗಾಗ ಹೇಳುವುದುಂಟು. +ಅಜ್ಜ ಜವಾನನಿಂದ ದಿವಾನರವರೆಗೆ ಜೀವನದ ಎಲ್ಲಾ ಮಜಲುಗಳನ್ನು ಅರಿತವರು. +ನಮಗೆ ಶಾಲೆಗಳಲ್ಲಿ ಕಲಿತಕ್ಕಿಂತ ಹೆಚ್ಚಾಗಿ ಸಂಕಲನ, ವ್ಯವಕಲನ, ಉಕ್ತಲೇಖನ,ಗುಣಾಕಾರ, ಭಾಗಾಕಾರಗಳನ್ನು ಹೇಳಿಕೊಡುತ್ತಿದ್ದರು. +ಒಮ್ಮೊಮ್ಮೆ ನಮಗೆ ಕ್ಷೌರಿಕನಾಗಿಯೂ ತಮ್ಮ ಕೈಚಳಕವನ್ನು ತೋರಿಸುತ್ತಿದ್ದರು. +ಹಬ್ಬಹರಿದಿನಗಳು ಬಂತೆಂದರೆ ಅಜ್ಜನದೇ ವಿಶೇಷ ಪೂಜೆ. +ಸವಿಯಾದ ತೀರ್ಥ, ಪಂಚಕಜ್ಜಾಯ ಆಶೀರ್ವಾದಾಮೃತ ಪಡೆಯುತ್ತಿದ್ದವು. +ಅಷ್ಟೇ ಯಾಕೆ ಮನೋರಂಜನೆಗಾಗಿ ಯಕ್ಷಗಾನದ ಸಂಪ್ರದಾಯಬದ್ಧ ಭಾಗವತಿಕೆ, ಮದ್ದಳೆಯ ಕೈಚಳಕವನ್ನು ತೋರಿಸಿದರೆ, ಇತ್ತ ಪಗಡೆಯಾಟ, ಚನ್ನೆಮಣೆ ಆಡುತ್ತಿದ್ದೆವು. +ನಮ್ಮಮ್ಮ (ಗೀತಾ) ಹಾರ್ಮೋನಿಯಂ ಸಹಾಯದಿಂದ ಶಾಸ್ತ್ರೀಯ ಸಂಗೀತದ ಸುಧೆಯನ್ನು ಹರಿಸಿದರೆ, ಚಿಕ್ಕಪ್ಪನ ಭಾಗವತಿಕೆ ಮದ್ದಳೆ, ತಂಗಿಯ ಕುಣಿತ,ತಂದೆ ಮಂಜುನಾಥಯ್ಯನವರ ಸಾತು ಮನೆಯಲ್ಲಿ ಸಂತೋಷದ ಹೊನಲು ಹರಿಯುತ್ತಿತ್ತು. +ನಮ್ಮ ಮನೆಯಲ್ಲಿ ಅಜ್ಜನ ಮಾತೇ ವೇದವಾಕ್ಯ ಯಾರೂ ಮೀರುವಂತಿರಲಿಲ್ಲ,ಮೀರುತ್ತಿರಲಿಲ್ಲ. +ಆದರೆ ನಮ್ಮ ಸ್ವಾತಂತ್ರ್ಯಕ್ಕೆ ಧಕ್ಕೆ ಇಲ್ಲ. +ಅವರ ಕಾಳಜಿ, ಹೊಣೆಗಾರಿಕೆ ನಮ್ಮ ಮೇಲೆ ಸದಾ ಇತ್ತು. +ಅಜ್ಜ ನಕ್ಕಾಗ ಇಡೀ ಮನೆ ನಗುತ್ತಿತ್ತು. +ಅಜ್ಜ ಬೇಸರಗೊಂಡಾಗ ಇಡೀ ಮನೆಯೇ ಮೌನ ರಾಗ. +ಯಾರೋ ತಪ್ಪು ಮಾಡಿ ಅಜ್ಜ ಅಬ್ಬರದಿಂದ ಬೈದರೂ ತದನಂತರ ಮಗು, "ನಾನು ನಿಮ್ಮ ಒಳ್ಳೆಯದಕ್ಕೇ ಹೇಳುವುದು” ಎಂದು ಬೆನ್ನು ಸವರುತ್ತಾ ಸಮಾಧಾನಿಸುತ್ತಿದ್ದರು. +ಅಜ್ಜನಿಗೆ ಮೊಮ್ಮಕ್ಕಳು ಎಂದರೆ ಪಂಚಪ್ರಾಣ. +ನಮಗೆಲ್ಲಾ ರಾಮಾಯಣ, ಮಹಾಭಾರತ,ಭಾಗವತ, ಜನಪದದ ಕಥೆಗಳನ್ನು, ಗೀತೆಗಳನ್ನು ಮಕ್ಕಳಲ್ಲಿ ಮಕ್ಕಳಾಗಿ ಹೇಳುತ್ತಿದ್ದರು. +ಅದರ ನೆನಪು ಇನ್ನೂ ಮಾಸಿಲ್ಲ. +ಈಗಲೂ ಅಜ್ಜ ನನ್ನ ಚಿಕ್ಕಪ್ಪನ ಮಗು ಸಿಂಚನಾಳನ್ನು ಮುದ್ದಿಸುವುದನ್ನು ಕಂಡರೆ ಅಜ್ಜನ ಹೃದಯಸ್ಪರ್ಶಿ ಪ್ರೀತಿ ಎಂಥವರನ್ನು ಬೆರಗುಗೊಳಿಸುತ್ತದೆ. +ಅಜ್ಜನ ಅಣತಿಯಂತೆಯೇ ಮನೆ, ಮನೆಯಲ್ಲಿನವ್ಯವಹಾರ ಸದಸ್ಯರ ಜೀವನ ನಡೆಯುತ್ತಿದೆ. +ಯಾರಾದರೂ ಹೊರಗಡೆ ಹೋಗುವುದಿದ್ದರೆ ಅಜ್ಜನ ಅನುಮತಿ ಕೇಳುವುದು ವಾಡಿಕೆಯಾಗಿತ್ತು. +ಯಾಕೆಂದರೆ ಮನೆಯಲ್ಲಿ ಯಾರೂ ಇಲ್ಲದಿರುವಾಗ ಅಜ್ಜನ ವದನದಲ್ಲಿ ಬೇಸರದ ಛಾಯೆ ಮೂಡುತ್ತಿತ್ತು. +ಅವರ ಪ್ರತಿ ಕಾರ್ಯದಲ್ಲೂ ಬೆನ್ನೆಲುಬಾಗಿ ನಿಲ್ಲುತ್ತಿದ್ದವರು ಪತ್ನಿಯವರಾದ ಲಕ್ಷ್ಮೀ (ಅಜ್ಜಿ). +ಅಜ್ಜ ಯಕ್ಷಗಾನ ನಿಮಿತ್ತ ಊರೂರು ಪರದೇಶ ಸುತ್ತಾಡುತ್ತಿರುವಾಗ ಸಂಪೂರ್ಣ ಮನೆಯ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದವರು ಮಾನ್ಯ ಪೂಜ್ಯ ಅಜ್ಜಿಶ್ರೀಯವರೇ. +ನಮ್ಮ ಅಜ್ಜ ನೆರೆಹೊರೆಯವರೊಂದಿಗೆ ಸ್ನೇಹಜೀವಿಯಾಗಿದ್ದರು. +ಮನೆಯಲ್ಲಿ ತಾವೇ ಚರ್ಮ ವಾದ್ಯವಾದ ಮದ್ದಳೆಯನ್ನು ತಯಾರಿಸುತ್ತಿದ್ದರು. +ಅವುಗಳನ್ನು ಅಕ್ಕಪಕ್ಕದ ವಿದ್ವನ್ಮಣಿಗಳು ವೀಳ್ಯ ಸವಿಯುತ್ತಾ ಹಿಡಿದು ಬಾರಿಸುತ್ತಿದ್ದರು. +ಕೆಲವೊಮ್ಮೆ ಊರಿನ ಆಸಕ್ತ ಅಭಿಮಾನಿಗಳ ಹಾಡಿಗೆ ಅವರ ಮದ್ದಳೆ ಬಾರಿಸುವ ಕಾರ್ಯಕ್ರಮ ರಾತ್ರಿ ೧ಂ ಗಂಟೆಯ ತನಕವೂ ಸಾಗುತ್ತಿತ್ತು . +ಊರಿನವರ ಸಹಕಾರ ಎಲ್ಲಾ ಸಂದರ್ಭಗಳಲ್ಲಿಯ ನಮ್ಮ ಮನೆಗೆ ಇದ್ದೇ ಇರುತ್ತಿತ್ತು. +ಮದುವೆ ಮುಂಜಿ ಮುಂತಾದ ಶುಭ ಸಮಾರಂಭಗಳಲ್ಲಿ ಊರ ಜನರು ಮೊದಲೇ ಬಂದು ಚಪ್ಪರ ಹಾಕುವುದರಿಂದ ಪ್ರಾರಂಭವಾಗಿ ಎಲ್ಲಾ ಕೆಲಸಕಾರ್ಯಗಳನ್ನು ಮುತುವರ್ಜಿ ವಹಿಸಿ ಮಾಡುತ್ತಿದ್ದರು. +ಅಂದ ಹಾಗೆ ಅಜ್ಜನದು ಸಿಂಹ ರಾಶಿ. +ಕಾಡಿನಲ್ಲಿ ಸಿಂಹ ರಾಜನಾದರೆ, ನಮ್ಮ ಮನೆಯಲ್ಲಿ ಅಜ್ಜನೇ ರಾಜ. +ಅವರ ಆಡಳಿತದಲ್ಲಿ ಎಲ್ಲಿಯೂ ಅಪಸ್ವರದ ಛಾಯೆ ಕಂಡದ್ದಿಲ್ಲ. +ಅಜ್ಜನ ಬಣ್ಣದ ಬದುಕು ಬಣ್ಣ ಬಣ್ಣದ ಅನುಭವವನ್ನು ತಂದಿದೆ. +ಹಾಗೆಯೇ ನಮ್ಮಲ್ಲಿ ಅವರ ಕಲೆಯ ಬದುಕು ರಕ್ತಗತವಾಗಿ ಬೆರೆತಿದೆ ಎನ್ನುವುದಕ್ಕೆ ಅನೇಕ ನಿದರ್ಶನಗಳಿವೆ. +ಅಜ್ಜನ ರಕ್ತವನ್ನೇ ಹಂಚಿಕೊಂಡು ಬೆಳೆದ ತಮ್ಮ ಸೀತಾರಾಮಯ್ಯ ಯಕ್ಷಗಾನದಲ್ಲಿ ಪುಂಡುವೇಷ, ಸ್ತ್ರೀವೇಷ ಮುಂತಾದ ಅನೇಕ ವೇಷಗಳನ್ನು ಹಾಕಿ ಶಾಲಾಶಿಕ್ಷಕರಾಗಿ ಅಲ್ಲದೆ,ಯಕ್ಷಗಾನ ಗುರುವಾಗಿಯೂ ಪ್ರತಿಭೆಯನ್ನು ತೋರ್ಪಡಿಸಿ ಕಾಲವಶರಾದರು. +ಇತ್ತ ಚಿಕ್ಕಪ್ಪನವರಾದ ರಾಘವೇಂದ್ರ ಯಕ್ಷಗಾನ ಕಲಿತು ವ್ಯವಸಾಯ ಮೇಳಗಳಲ್ಲಿ ತೊಡಗಿಸಿಕೊಂಡರೆ ಇನ್ನೋರ್ವ ಜಯರಾಮ ಚಿಕ್ಕಪ್ಪ ಉಡುಪಿಯ ಹವ್ಯಾಸಿ ಯಕ್ಷಗಾನ ಕಲಾವಿದರಾಗಿ ತನ್ನದೇ ಛಾಪನ್ನು ಮೂಡಿಸಿದ್ದಾರೆ. +ಅಲ್ಲದೆ ರಾಮಕೃಷ್ಣ ವಾಸುದೇವನವರು ಹವ್ಯಾಸಿಯಾಗಿಯೇ ತನ್ನ ಯಕ್ಷಗಾನ ಪ್ರತಿಭೆಯನ್ನು ತೋರ್ಪಡಿಸುತ್ತಿದ್ದಾರೆ. +ಅಜ್ಜನನ್ನು ಆವರಿಸಿದ್ದ ಈ ಕಲಾದೇವತೆ ನಮ್ಮ ಮನೆಯ ಹೆಂಗಳೆಯರನ್ನೂ ಕೂಡ ಬಿಟ್ಟಿಲ್ಲ. +ನನ್ನ ತಂಗಿ ಉಜ್ವಲಕುಮಾರಿ ಡಾ| ವೈ.ಚಂದ್ರಶೇಖರ ಶೆಟ್ಟಿ (ಪ್ರಸಂಗ ಕರ್ತ) ಕಲಾವಿದ ಕರ್ಗೆ ಶ್ರೀಧರ ಇವರು ಕಂಡ್ದೂರಿನ ಕನ್ನಿಕಾ ಪರಮೇಶ್ವರಿ ಬಾಲಕಿಯರ ಯಕ್ಷಗಾನ ಮಂಡಳಿಯಲ್ಲಿ ಸೇರಿ ನಾನಾ ಕಡೆ ವೇಷ ಧರಿಸಿ ಅಭಿನಯಿಸಿ ಅಜ್ಜನ ಪ್ರತಿಭೆಯ ಒಂದು ಕಿರಣವಾಗಿ ಹೊರಹೊಮ್ಮುತ್ತಿದ್ದಾಳೆ. +ಹೀಗೆ ಯೋಚಿಸಿದಾಗ ನನ್ನ ಮೇಲೆಯೂ ಕೂಡ ಅಜ್ಜನ ಪ್ರಭಾವಬೀರಿರಬೇಕಲ್ಲವೇ? +ನಿಜ ಆಗಾಗ ನನ್ನಲ್ಲಿಯೂ ಅಜ್ಜನ ಪ್ರತಿಭಾ ಕಿರಣಗಳು ಸೋಂಕಿ ಬೆಳಕುಂಟು ಮಾಡಿದ್ದುಂಟು. +ನಮ್ಮ ಮನೆಯ ಚಾವಡಿಯಲ್ಲಿ ಯಕ್ಷಗಾನ ನಡೆಯುತ್ತಿದ್ದಾಗ ಅದನ್ನು ಕೇಳಿಸಿಕೊಂಡು ನಾನು ಕೂಡ ಅಭಿನಯಿಸುತ್ತಿದ್ದೆ. +ಅಜ್ಜ ಮರೆಯಲ್ಲಿ ನಿಂತು ಅದನ್ನು ಕಂಡು ನನ್ನ ಬಗ್ಗೆ ಹಿತಮಾತುಗಳನ್ನಾಡಿದಾಗ ನನಗೆ ಅತೀವ ಸಂತೋಷ. +ನಾನು ಕೊಲ್ಲೂರು ಕಾಲೇಜಿನಲ್ಲಿ ಓದುತ್ತಿದ್ದಾಗ ಮಂಗಳೂರು ಆಕಾಶವಾಣಿ ಕಾರ್ಯಕ್ರಮ ಪಂಚವಟಿ ಪ್ರಸಂಗ ಅದರಲ್ಲಿ ನಾನೇ ರಾಮ, ತಂಗಿಯದ್ದು ಸೀತೆಯ ಪಾತ್ರ, ಭಾಗವತಿಕೆ ಪ್ರಾಂಶುಪಾಲರಾದ ಅರುಣ್‌ ಪ್ರಕಾಶ್‌ ಶೆಟ್ಟಿ ಮದ್ದಳೆ ಚಿಕ್ಕಪ್ಪನವರದ್ದೇ (ರಾಘವೇಂದ್ರ). +ಈ ಕಾರ್ಯಕ್ರಮದ ಪ್ರಸಾರವನ್ನು ಕೇಳಿದ ಅಜ್ಜನವರು ತಲೆದೂಗಿ ಭೇಷ್‌ ಭೇಷ್‌ ಎಂದರು. +ಅಜ್ಜನ ಅಭಿಮಾನಿ ಬಳಗದಿಂದ ಸಲ್ಲುತ್ತಿದ್ದ ಸನ್ಮಾನ ಪ್ರಶಸ್ತಿಗಳನ್ನು ಕಂಡು“ಅಜ್ಜ ನಾವು ನಿಮ್ಮಷ್ಟು ಎತ್ತರಕ್ಕೆ ಬೆಳೆಯಲು ಸಾಧ್ಯವೇ?ಎಂದು ಕೇಳುತ್ತಿದ್ದೆ. +ಆಗ ಅವರು “ಮಗು ತನ್ನನ್ನು ತಾನು ಹೀನನೆಂದು ತಿಳಿದುಕೊಳ್ಳುವವನಿಗೆ ಉತ್ತಮ ಪ್ರಕಾರದ ಐಶ್ವರ್ಯ ಪ್ರಾಪ್ತಿಯಾಗಲಾರದು” ಎಂಬ ಮಹಾಭಾರತದ ಉಕ್ತಿಯಿಂದ ನಮ್ಮನ್ನು ಹುರಿದುಂಬಿಸುತ್ತಿದ್ದರು. +ನಂತರ ನಾನು ಬೆಂಗಳೂರಿನ ಶಿಕ್ಷಕ ತರಬೇತಿ ಕಾಲೇಜಿನಲ್ಲಿ ಕಲಿಯುತ್ತಿದ್ದಾಗ ರಾಷ್ಟ್ರೀಯ ಸೇವಾ ಯೋಜನೆಯ ಶಿಬಿರ ಕೊಡಿಗೆಹಳ್ಳಿ (ಹಾಸ್ಯನಟ ಕರಿಬಸವಯ್ಯನವರ ಊರು) ಏರ್ಪಾಡಾಗಿತ್ತು. +ಅಲ್ಲಿ ನನ್ನ ಯಕ್ಷಗಾನೀಯ ನಾಟಕ, ಅಭಿನಯ ನೃತ್ಯ ಕಂಡು ಕೇಳಿ ಹರ್ಷಗೊಂಡ ಜನರು, ಸ್ನೇಹಜೀವಿ. . . ಮಿತ್ರ ಮಂಡಳಿ "ನವೀನ ಚಾಣಾಕ್ಷ' ಎನ್ನುವ ಬಿರುದು ನೀಡಿ ಸನ್ಮಾನಿಸಿತು. +ಆಗ ನೆನಪಿಗೆ ಬಂದದ್ದು ಅಜ್ಜನ ಆ ಮಹಾಭಾರತದ ಉಕ್ತಿ. +ಕಾಲೇಜಿನ ಉಪನ್ಯಾಸಕರು ನಿನ್ನ ಪ್ರತಿಭೆಗೆ ಮೂಲ ಯಾರೆಂದು ಕೇಳಿದಾಗ ನಾನು ಅಜ್ಜನ ಸಾಧನೆಯ ವಿವರ ತಿಳಿಸಿದೆ. +ಅಜ್ಜ ನಮಗೆ ಜೀವನ ಅನುಭವಗಳನ್ನು ಉತ್ತೇಜನಕಾರಿ ಮಾತನ್ನು ಹೇಳುವುದುಂಟು. +ಧನವಿಲ್ಲದಿದ್ದರೂ ಆರೋಗ್ಯ ವಿದ್ಯೆ ಸಜ್ಜನರ ಸಂಘ ಮತ್ತು ಸ್ವಾಧೀನತೆಗಳೇ ಮನುಷ್ಯನ ಮಹಾನ್‌ ಐಶ್ಚರ್ಯ-ಎಂಬ ಮಹಾನ್‌ ಪಂಡಿತರ ಮಾತುಗಳನ್ನು ಪ್ರಾಸಂಗಿಕವಾಗಿ ತನ್ನ ಅನುಭವದ ಅಮೃತವನ್ನು ಪ್ರಾಸಬದ್ಧವಾಗಿ ಕಥೆ, ಪದ್ಯ ರೂಪದಲ್ಲಿಹೇಳಿ ಮನಗಾಣಿಸುತ್ತಿದ್ದರು. +ಅಲ್ಲದೆ, ಮನುಷ್ಯ ಎಷ್ಟು ವರ್ಷ ಬದುಕುತ್ತಾನೆ ಎಂಬುದು ಮುಖ್ಯವಲ್ಲ, ಬದುಕಿದ್ದಷ್ಟು ವರ್ಷ ಏನು ಮಾಡಿದ್ದಾನೆ ಎಂಬುದು ಮುಖ್ಯ. +ಇಲ್ಲಿ “ಈಸಬೇಕು, ಇದ್ದು ಜೈಸಬೇಕು” ಎಂದು ಸಾರಿ ಸಾರಿ ಹೇಳುತ್ತಿದ್ದರು. +ನಮ್ಮಲ್ಲಿ ಅಜ್ಜ ಎಂದರೆ ಯಕ್ಷಗಾನ, ಯಕ್ಷಗಾನ ಎಂದರೆ ಅಜ್ಜ ಎನ್ನುವಷ್ಟರ ಮಟ್ಟಿಗೆ ಬೆರೆತಿದ್ದಾರೆ ಹಾಗೂ ಬೇರೂರಿದ್ದಾರೆ. +ಬಾಲ್ಯದಲ್ಲಂತೂ ಹರಸಾಹಸಪಟ್ಟು ಅಪ್ಪಣೆ ಪಡೆದು ಯಕ್ಷಗಾನ ನೋಡಲು ಹೋಗುತ್ತಿದ್ದೆವು. +ಸೌಕೂರಿನ ಮೇಳದಲ್ಲಿ ಕೋಡಿವಿಶ್ವನಾಥ, ಭಾಗವತರಾದ ರಾಘವೇಂದ್ರ ಮಯ್ಯರು, ಸುಬ್ರಹ್ಮಣ್ಯ ನಾವಡರ ಪಕ್ಕದಲ್ಲಿ ಕೂತು ತಾಳಗಳನ್ನು ಬಾರಿಸುತ್ತಿದ್ದ ನೆನಪುಗಳು ಹಾಗೂ ಚಂಡೆ ಶಿವಾನಂದರ ಸಹಾಯದಿಂದ ಪುಕ್ಸಟ್ಟೆ ಆಟವನ್ನು ಬೆಳಗಾಗುವ ತನಕ ರಂಗಸ್ಥಳದ ಮುಂದೆ ಕುಳಿತು ಎವೆಯಿಕ್ಕದೆ ನೋಡಿ ಮರುದಿನ ಶಾಲೆಯಲ್ಲಿ ತೂಕಡಿಸಿ ತೂಕಡಿಸಿ ಪಾಠ ಕೇಳಿ ಗುರುಗಳ ಹತ್ತಿರ ಬೈಸಿಕೊಳ್ಳುತ್ತಿದ್ದುದ್ದೂ ಉಂಟು. +ಆಟದ ಸಮಯದಲ್ಲಿ ಗೆಳೆಯರೊಂದಿಗೆ ಮೈದಾನದಲ್ಲಿ ಸೇರಿ ಯಕ್ಷಗಾನದ ಅಳಿದುಳಿದ ವೇಷಭೂಷಣಗಳನ್ನು ಧರಿಸಿ ಪೈಂಟ್‌ ಡಬ್ಬವನ್ನು ಚಂಡೆಯನ್ನಾಗಿಸಿ,ಶಾಲೆಯಲ್ಲಿದ್ದ ಕೊಡಪಾನವನ್ನು ಮದ್ದಳೆಯಾಗಿಸಿ ಚೌಕಾಕಾರದ ರಂಗಸ್ಥಳ ನಿರ್ಮಿಸಿ ಹಾರುವುದು, ನೆಗೆಯುವುದನ್ನು ಕಂಡು ಗುರುಗಳು ಮುಸಿ ಮುಸಿನಕ್ಕಿದ್ದೂ ಉಂಟು. +ಸಹಕಲಾವಿದರೊಂದಿಗೆ ಅಜ್ಜ: +ಗೆಳೆತನವೇ ಇಹಲೋಕಕ್ಕಿರುವ ಅಮೃತ |ಅದನುಳಿದೇನಿಹುದು ಜೀವನ್ಮತ ॥ +ಎಂಬ ಚೆನ್ನವೀರ ಕಣವಿಯವರ ಸ್ನೇಹತ್ವದ ಬಗೆಗಿನ ಗಹನವಾದ ಉಕ್ತಿಯನ್ನು ಎಲ್ಲೂ ಯಾರೂ ಮರೆಯುವಂತಿಲ್ಲ. +ಕಲಿಕೆ ಗುರು ಮುಖೇನ ಮಾತ್ರವಲ್ಲ,ಅದು ಬಹುಮುಖೇನ. +ಇದರಲ್ಲಿ ಸ್ನೇಹಿತರ ಪಾತ್ರವಂತೂ ಅಗಣಿತ. +ಈ ಯಕ್ಷಗಾನ ಎಂದರೆ ಬರೀ ಕಲೆಯಲ್ಲ, ಜೀವನದ ಸರ್ವ ಪಾಠವನ್ನು ಕಲಿಸುವ ಒಂದು ಜ್ಞಾನಾಭಿವೃದ್ಧಿಯ ಕ್ಷೇತ್ರ ಎಂದರೆ ತಪ್ಪಲ್ಲ. +ಇಂತಹ ಯಕ್ಷಗಾನದಲ್ಲಿ ಘಟಾನುಘಟಿ ಕಲಾವಿದರ ಒಡನಾಟವೇ ಹೆಚ್ಚು ಹಾಗೆಯೇ ಅನುಭವವೂಕೂಡ ಹೆಚ್ಚೇ. +ಈಗ ಅಜ್ಜನ ಅನ್ಯೋನ್ಯ ಒಡನಾಡಿಗಳು ಬೆರಳೆಣಿಕೆಯಷ್ಟು ಜನ ಮಾತ್ರಇದ್ದಾರೆ. +ಅವರಲ್ಲಿ ವಿಚಾರಿಸಿದಾಗ, ಅವರು ಬಣ್ಣದ ವೇಷದ ಸವ್ಯಸಾಚಿ. +ಆಕಾಲದಿಂದಲೂ ರಾಜವೇಷ ಮಾಡಿ ಸೈ ಎನಿಸಿಕೊಂಡವರು ಯಾವ ಪಾತ್ರವನ್ನು ನೀಡಿದರೂ ಎಳ್ಳಷ್ಟೂ ಚ್ಯುತಿ ಬಾರದಂತೆ ನಿರ್ವಹಿಸುವ ಕಲಾವಿದ ಎಂಬಿತ್ಯಾದಿ ಮಾತುಗಳು ಕೇಳಿ ಬರುತ್ತಿದ್ದವು. +ಒಂದು ದಿನ ಅಜ್ಜನ ಬಗ್ಗೆ ತಿಳಿದುಕೊಳ್ಳಲು ಅವರ ಕುಣಿತಕ್ಕೆ ಮೃದಂಗ ನುಡಿಸುತ್ತಿದ್ದ ಹಿರಿಯ ಕಲಾವಿದ ಹಿರಿಯಡ್ಕ ಗೋಪಾಲರಾಯರನ್ನು ಭೇಟಿಯಾಗಿ ಅನೇಕಾನೇಕ ಪ್ರಶ್ನಾಸ್ತ್ರಗಳನ್ನು ಬಿಟ್ಟು ವಿಚಾರಿಸಿದ್ದೆ. +ಆ ಸನ್ನಿವೇಶಹೀಗಿತ್ತು:ಗೋಪಾಲರಾಯರ ಮನೆಯನ್ನು ಕೇಳಿಕೊಂಡು ನಾನು ಮತ್ತು ಮಾವ ಮಾಧವನವರೊಂದಿಗೆ ಹೋದಾಗ, ಅವರು ಸಂಜೆಯ ವಾಕಿಂಗ್‌ ಹೋಗಿದ್ದರು. +ಅವರ ಮಗ-ಸೊಸೆ ನಮ್ಮನ್ನು ಬರಮಾಡಿಕೊಂಡರು. +ಅಂತೂ ೧ಂ ನಿಮಿಷಗಳನಂತರ ವಯೋವೃದ್ಧರಾದ ಜ್ಞಾನಿ ನಮ್ಮೆದುರಿಗೆ ಪ್ರತ್ಯಕ್ಷರಾದರು. +ಆಗ ಅವರ ಕಾಲಿಗೆ ಎರಗಿ ನನ್ನ ಪರಿಚಯ ಮಾಡಿಕೊಂಡೆ. +ಆಗ ಅವರು “ಓಹೋ ನಮ್ಮ ಸಕ್ಕಟ್ಟುರವರ ಮೊಮ್ಮಗನೇ, ಸಂತೋಷ, ಹೇಗಿದ್ದಾರೆ ಅಜ್ಜ” ಎಂದು ಕುಶಲೋಪರಿ ಎಚಾರಿಸಿದರು. +ನಂತರ ಇಷ್ಟು ದೂರ ಬಂದ ಕಾರಣವೇನು ಎಂದು ವಿಚಾರಿಸಿದರು. +ಆಗ ನಾನು ಅಜ್ಜನ ಒಡನಾಟದ ಬಗ್ಗೆ ನೀವೇನು ಹೇಳಬಯಸುತ್ತೀರಿ? +ಎಂದಾಗ ನನಗೆ ಹೆಚ್ಚಿನ ವಿಷಯ ನೆನಪಿಲ್ಲ, ನೀನು ನೆನಪಿಸಿದಷ್ಟು ಹೇಳುತ್ತೇನೆ ಎಂದರು. +ನನ್ನ ಪ್ರಶ್ನೆಗಳ ಸುರಿಮಳೆ ಆರಂಭವಾಯಿತು. +ನಾನು :ನೀವು ಮತ್ತು ನನ್ನಜ್ಜನ ಸ್ನೇಹ ಎಲ್ಲಿ?ಹೇಗಾಯ್ತು? +ಮೊದಲಿಗೆ ಮಂದರ್ತಿ ಮೇಳದಲ್ಲಿ ಒಟ್ಟಿಗೆ ಇದ್ದಾಗ ಸ್ನೇಹತ್ವ ಬೆಳೆಯಿತು. +ಮೊದಮೊದಲು ಅಷ್ಟೊಂದು ಪರಿಚಯ ಇಲ್ಲವಾದರೂ ನಂತರದ ದಿನಗಳಲ್ಲಿ ಅತ್ಯಂತ ಆತ್ಮೀಯರೇ ಆದೆವು. +ಅಜ್ಜನ ಬಗ್ಗೆ ನಿಮ್ಮ ಮತ್ತು ಇತರ ಸಹಕಲಾವಿದರ ಅಭಿಪ್ರಾಯಹೇಗಿತ್ತು? +ಸಕ್ಕಟ್ಟುರವರು ಶಿಸ್ತುಬದ್ಧ ವ್ಯಕ್ತಿ, ಯಾರನ್ನು ಆಡಿಕೊಳ್ಳುವ ಕೆಟ್ಟ ವ್ಯಕ್ತಿತ್ವ ಅವರಲ್ಲಿ ಇರಲಿಲ್ಲ. +ಎಲ್ಲರಲ್ಲಿಯೂ ಅವರ ಬಗ್ಗೆ ಗೌರವ ಅಭಿಮಾನವಿತ್ತು. +ಅಜ್ಜ ಮತ್ತು ನಿಮ್ಮ ನಡುವೆ ವೃತ್ತಿಯಲ್ಲಿ ಸಹಕಾರ ಹೇಗಿತ್ತು? +ಈಗಿನಂತೆ ಇಬ್ಬರೂ ಮದ್ದಳೆಗಾರರಿರಲಿಲ್ಲ. +ಒಬ್ಬನೇ ಬೆಳಗಿನ ತನಕ ಬಾರಿಸಬೇಕಾಗಿತ್ತು. +ಆಗ ಒಡ್ಡೋಲಗದ ತನಕ ಸಕ್ಕಟ್ಟುರವರು ಮದ್ದಳೆ ಬಾರಿಸಿ ನಂತರ ಅವರ ಪಾಲಿನವೇಷ ಮಾಡುತ್ತಿದ್ದರು. +ಅಷ್ಟೇ ಏಕೆ, ನನ್ನ ಅನುಪಸ್ಥಿತಿಯಲ್ಲಿ ಅವರೇ ಮದ್ದಳೆ ಬಾರಿಸುತ್ತಿದ್ದರು. +ಅವರ ಸ್ನೇಹ ಸಹಕಾರವನ್ನು ಎಂದೂ ಮರೆಯುವಂತಿಲ್ಲ. + ನಮ್ಮ ಅಜ್ಜನ ಗುಣಾವಗುಣಗಳನ್ನು ಹೇಳುತ್ತೀರಾ? +ಮನುಷ್ಯ ಎಂದಾಗ ಬರೀ ಒಳ್ಳೆಯ ಗುಣಗಳಿಂದ ಕೂಡಿರುತ್ತಾನೆ ಎಂದರೆ ಅತಿಶಯೋಕ್ತಿ ಆಗುತ್ತದೆ. +ಅವರದು ಶಿಸ್ತುಬದ್ಧ ಜೀವನ ಕೊಟ್ಟ ಕೆಲಸವನ್ನು ಯಾವುದೇ ಚ್ಯುತಿಬಾರದಂತೆ ಪೂರೈಸುತ್ತಿದ್ದರು. +ಅವರ ಅವಗುಣ ಎಂದರೆ,ಬಹುಬೇಗ ಸಿಟ್ಟಾಗುತ್ತಿದ್ದರು. +ಆದರೆ ಅದರಿಂದ ಇನ್ನೊಬ್ಬರಿಗೆ ಎಂದಿಗೂ ತೊಂದರೆ ಆಗುತ್ತಿರಲಿಲ್ಲ. +ಇನ್ನೂ ಹೆಚ್ಚಿಗೆ ಹೇಳುತ್ತಾ ಹೋದರೆ ಸ್ನೇಹಿತನನ್ನು ಹೊಗಳಿದಂತಾಗುತ್ತದೆ. +ನಾನು :ಗೋಪಾಲರಾಯರೇ, ನಿಮಗೆ ಹಲವು ಮಹಾನ್‌ ಕಲಾವಿದರ ಒಡನಾಟವಿದೆ. +ಆದರೆ ಆ ಎಲ್ಲಾ ಕಲಾವಿದರಿಗಿಂತ ಹೆಚ್ಚಿನ ಎಶೇಷತೆ ಏನಾದರೂ ಅಜ್ಜನಲ್ಲಿ ಕಂಡಿರಾ? +ಹೌದು, ನಿಜವಾಗಿಯೂ. + ಅದೇನು?ವಿವರವಾಗಿ ಹೇಳುವಿರಾ? +ಸಕ್ಕಟ್ಟಿನವರಲ್ಲಿದ್ದ ಶ್ರುತಿ ಜ್ಞಾನ ಅಪಾರ. +ಯಾಕೆಂದರೆ, ಅವರು ಮಾತನಾಡುವಾಗ ಅದೇ ಧಾಟಿಯಲ್ಲಿ ನಾನು ಮದ್ದಳೆಯ ಶ್ರುತಿ ಮಾಡಿಕೊಳ್ಳುತ್ತಿದ್ದೆ. +ಶ್ರುತಿಯ ಬಗೆಗಿನ ಏಕಾಗ್ರತೆ ಅದೊಂದು ದೊಡ್ಡ ವಿಶೇಷತೆ. +ಅವರ ಸ್ವರಭಾರ, ಆಳ್ತನಪಾತ್ರ ನಿರ್ವಹಣೆಯನ್ನು ಎಂದಿಗೂ ಮರೆಯುವಂತಿಲ್ಲ. +ವಿದೇಶದಲ್ಲಿ ಅಜ್ಜನ ಪ್ರತಿಭೆಯ ಅನಾವರಣ ಹೇಗಿತ್ತು. +ನ್ಯೂಯಾರ್ಕ್‌ನಲ್ಲಿ ನಾನು ಮತ್ತು ಮಾರ್ಥಾ (ಅಮೆರಿಕಾಕನ್ಯ) ಯಕ್ಷಗಾನ ಕಾರ್ಯಕ್ರಮಕ್ಕಾಗಿ ಕಾರ್ನಂಗಿ ಹಾಲನ್ನು ಎರಡು ವರ್ಷ ಮೊದಲೇ ಬುಕ್‌ ಮಾಡಬೇಕಾಗಿತ್ತು. +೫0000 ಜನ ತುಂಬುವ ದೊಡ್ಡ ಸಭಾಂಗಣದಲ್ಲಿ ಕಾರ್ಯಕ್ರಮ ಮಾಡಿದಾಗ ಪ್ರೇಕ್ಷಕ ವರ್ಗದವರ ಗಮನ ಸೆಳೆದದ್ದು,ರಾಕ್ಷಸ ವೇಷ. +ಅದರ ಪಾತ್ರಧಾರಿ ಸಕ್ಕಟ್ಟುರವರೇ ಆಗಿದ್ದರು. +ವಿದೇಶಗಳಲ್ಲಿ ಅವರ ರಾಕ್ಷಸ ವೇಷಕ್ಕೆ ಒಳ್ಳೆಯ ಮಾನ್ಯತೆ ಸಿಕ್ಕಿದೆ. +ಅಜ್ಜ ಮತ್ತು ನಿಮ್ಮ ನಡುವೆ ಏನಾದರೂ ವಿರಸ ಪ್ರಸಂಗ ಇತ್ತೇ? +ಅಂತಹ ವಿರಸ, ವೈಮನಸ್ಸು ಬಂದ ನೆನಪೇ ಇಲ್ಲ. +ನಾನು :ಎದೇಶಗಳಲ್ಲಿನ ಪ್ರೇಕ್ಷಕ ವರ್ಗ ರಾಕ್ಷಸ ವೇಷದಿಂದ ಆಕರ್ಷಿತರಾಗಿದ್ದರು. +ಅದರಲ್ಲಿ ಅಜ್ಜನ ಶ್ರಮ. . . ಏನಾದರೂ ಇದೆಯೇ? +ನಿಜವಾಗಿಯೂ ಇದೆ. +ಆಯಾ ಬಣ್ಣಕ್ಕೆ ಅಂದರೆ ಕಾಟು,ಹೆಣ್ಣು ರಾಜ ಬಣ್ಣಕ್ಕೆ ಸರಿಯಾದ ಚೆಟ್ಟೆಯನ್ನು ಇಡುವ ಪರಿಶ್ರಮ ಹಾಗೂ ಪಾತ್ರಕ್ಕೆ ಜೀವ ತುಂಬಿದ ರಸಾಭಿನಯ ಅದು ವಿದೇಶಿಯರನ್ನು ಸೆಳೆದಿತ್ತು. +ಅವರು ಚೌಕಿಗೆ ಬಂದು ಎಲ್ಲಿ ಎಂದು ಆಗಾಗ ಕೇಳುತ್ತಿದ್ದುದು ಈಗಲೂ ಕಿವಿಯಲ್ಲಿ ಜಿನುಗುತ್ತಿದೆ. +ನಿಮ್ಮ "ಮದ್ದಳೆಯ ಮಾಯಾಲೋಕ' ಪುಸ್ತಕದಲ್ಲಿ ಬಣ್ಣಕ್ಕೆ ಕುಷ್ಟಗಾಣಿಗರೇ ಸಮರ್ಥರು ಅವರ ಮುಂದೆ ಯಾರೂ ಇಲ್ಲ ಎಂದಿದ್ದೀರಿ, ಆಗ ನಮ್ಮ ಅಜ್ಜನ ನೆನಪು ಬರಲಿಲ್ಲವೇ ಅಥವಾ ಅಂತಹ ವ್ಯಕ್ತಿತ್ವ ಅಜ್ಜನಲ್ಲಿ ಇರಲಿಲ್ಲವೇ? +ಅಂದರೆ ಕುಷ್ಟಗಾಣಿಗರು ತೆಂಕು-ಬಡಗಿನ ಬಣ್ಣದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡ ಸಮರ್ಥ ವೇಷಧಾರಿ. +ಅವರುನಿಮ್ಮಜ್ಜನ ಗುರುಗಳು. +ಗುರು ಸಮರ್ಥ, ಅಂದ ಮೇಲೆ ಶಿಷ್ಯ ಅಸಮರ್ಥ ಎಂದರೆ ತಪ್ಪಾದೀತು ಅಲ್ಲವೇ? +ನಾನು : ಯಕ್ಷಗಾನದ ಬಗ್ಗೆ ನಿಮ್ಮ ಅಭಿಪ್ರಾಯವೇನು? +ಯಕ್ಷಗಾನ ಒಂದು ಗಂಡು ಕಲೆ. +ಹಿಂದೆ ಯಕ್ಷಗಾನವನ್ನು ಜಾನಪದಕ್ಕೆ ಸೇರಿಸಿದ್ದರು. +ಯಾಕೆಂದರೆ ಸರ್ಕಾರದ ಮಾನ್ಯತೆಗಾಗಿ. +ಆದರೆ ಅದು ಶಾಸ್ತ್ರೀಯವಾದ ನೆಲೆಗಟ್ಟನ್ನು ಹೊಂದಿದ ಕಲೆ. +ಕಾಲಕಾಲಕ್ಕೆ ತಕ್ಕಂತೆ ಬದಲಾವಣೆ ಒಳ್ಳೆಯದಾದರೂ ಹಿಂದಿನ ನೆಲೆಗಟ್ಟನ್ನು ಬಿಡದೆ ಯಕ್ಷಗಾನದ ಶೈಲಿ ತಪ್ಪಬಾರದು. +ಹಿಂದಿನವರು ಬೆಳೆಸಿದ ಕಲೆಯನ್ನು ಪೋಷಿಸಬೇಕೇ ವಿನಃ ಹಾಳುಗೆಡವಬಾರದು. +ಹೀಗೆ ನಾನಾ ವಿಚಾರಗಳನ್ನು ಅವರಿಂದ ಕೇಳಿ ಪಡೆದು ಧನ್ಯವಾದಗಳನ್ನು ಅರ್ಪಿಸಿ ಬೀಳ್ಕೊಂಡು ವಿಚಾರಗಳನ್ನು ಮೆಲುಕು ಹಾಕುತ್ತಾ ಮನೆಯ ಹಾದಿಹಿಡಿದೆವು. +ಅಜ್ಜನ ಬಗೆಗಿನ ಇನ್ನೂ ನಾನಾ ರೀತಿಯ ಅಭಿಪ್ರಾಯಗಳನ್ನು ವಿವರಗಳನ್ನು ಅವರ ಲೇಖನಗಳಲ್ಲಿ ನೋಡಿ ತಿಳಿದುಕೊಳ್ಳಬಹುದು. +ನಮ್ಮಲ್ಲಿ ಸಂಪತ್ತು ಇದ್ದಾಗ ಅದು ಸದ್ವಿನಿಯೋಗ ಮಾಡಿಕೊಳ್ಳಬೇಕು. +ಇಲ್ಲದಿದ್ದರೆ,ಅದು ನಿರರ್ಥಕವಾಗುತ್ತದೆ. +“ದೇಶ ಸುತ್ತು ಇಲ್ಲ ಕೋಶ ಓದು” ಎಂಬ ಮಾತು ಎಷ್ಟು ಸತ್ಯವೋ ಹಾಗೆಯೇ. +ದೇಶ-ಕೋಶ ಎರಡನ್ನೂ ಕಂಡ ವ್ಯಕ್ತಿಯ ವಿಷಯ ಸಂಪತ್ತನ್ನು ತಿಳಿಯುವುದರಿಂದ ಜ್ಞಾನಾಭಿವೃದ್ಧಿ ಆಗುತ್ತದೆ ಎಂಬುದೂ ಸತ್ಯ. +ಆ ವಿಷಯದಲ್ಲಿ ನಾನು ಅದೃಷ್ಟವಂತ. +ಯಾಕೆಂದರೆ ನನ್ನ ಮನಸ್ಸಿನಲ್ಲಿ ಬಂದ ಎಚಾರಗಳ ಬಗ್ಗೆ ತಾತನ ಹತ್ತಿರ ಪ್ರಶ್ನೆಗಳ ಮೇಲೆ ಪ್ರಶ್ನೆಗಳನ್ನು ಕೇಳಿ ಉತ್ತರ ಪಡೆಯುತ್ತಿದ್ದೆ. +ಕೇವಲ ಯಕ್ಷಗಾನ ಮಾತ್ರವಲ್ಲದೆ, ಸಾಮಾಜಿಕ, ಸಾಂಸಾರಿಕ,ದೇಶ-ವಿದೇಶಗಳ ಅನುಭವವನ್ನು ಕೇಳುತ್ತಿದ್ದೆ. +ನನ್ನಷ್ಟು ಅಜ್ಜನಿಗೆ ಪ್ರಶ್ನೆ ಕೇಳಿದವರು ಬೇರೆ ಯಾರು ಇಲ್ಲವೇನೋ ಅನಿಸುತ್ತದೆ. +ಹೆಚ್ಚಿನ ದಿನ ಮಧ್ಯಾಹ್ನ ಚಾ ಕುಡಿಯುವಾಗ, ಮನೆಯ ಸದಸ್ಯರೆಲ್ಲರೂ ಒಟ್ಟಾದಾಗ, ರಾತ್ರಿ ಮಲಗಿದಾಗ ರಾಮಾಯಣ, ಮಹಾಭಾರತ, ಜೀವನ ಸಂದೇಶ,ಅನುಭವಗಳನ್ನು ಸಣ್ಣವನಿಂದ ಕೇಳುತ್ತಲೇ ಬಂದಿದ್ದೇನೆ. +ಕೆಲವೊಮ್ಮೆ ಏನಾದರೂ ಆಲೋಚನೆ ಮಾಡಿದಾಗ ಅಜ್ಜನ ಮಾತು ಕೇಳದಿದ್ದರೆ ಸಮಾಧಾನವೇ ಇಲ್ಲ. +ಕೆಲವು ಬಾರಿ ಅಜ್ಜ “ನೀನೊಬ್ಬ ಶುದ್ಧ ತಲೆಹರಟೆ” ಎಂದು ಪ್ರೀತಿಯಿಂದ ಹೇಳಿದರೂ ನನ್ನ ಅನುಮಾನಗಳಿಗೆ ತಕ್ಕ ಉತ್ತರ ನೀಡುತ್ತಿದ್ದರು. +ಅಜ್ಜನ ಬಣ್ಣದ ಜೀವನ ಮತ್ತು ಬಣ್ಣ ರಹಿತ ಜೀವನದ ಬಗೆಗಿನ ಬಿಚ್ಚು ಮಾತು . +ನಾನು : ಅಜ್ಜ, ಶಾಲೆಯನ್ನು ಬಿಟ್ಟು ಯಕ್ಷಗಾನಕ್ಕೆ ಪಾದಾರ್ಪಣೆ ಮಾಡಲು ಕಾರಣವೇನು? +ಅಜ್ಜ : ನೋಡು, ಯಕ್ಷಗಾನವನ್ನೇ ಆಯ್ಕೆ ಮಾಡಲು ನಾನಾ ಕಾರಣಗಳಿವೆ. +ಮೊದಲನೆಯದಾಗಿ ಯಕ್ಷಗಾನ ನನಗೆ ರಕ್ತಗತವಾಗಿ ಬಂದಿದ್ದು. +ನನ್ನ ತಂದೆಯವರಾದ ಸುಬ್ಬಣ್ಣಯ್ಯ ಸೌಕೂರು ಮೇಳದ ಪ್ರಸಿದ್ಧ ಪುರುಷ ವೇಷಧಾರಿಯಾಗಿದ್ದರು. +ನಾನು ಶಾಲೆ ಸೇರಿ ೪ನೇ ತರಗತಿಯ ಮೆಟ್ಟಿಲೇರುವಾಗಲೇ ತಂದೆಯವರು ಕಾಲವಶರಾದರು. +ಮತ್ತೆ ನನ್ನ ಔಪಚಾರಿಕ ಶಾಲಾಜೀವನ ಮುಂದುವರಿಯಲು ಉತ್ತೇಜನವೇ ಇಲ್ಲದಂತಾಯಿತು. +ನಂತರ ಮನೆಯ ಸರ್ವಜವಾಬ್ದಾರಿ ನನ್ನ ಹೆಗಲೇರಿತು. +ಬೇಸಾಯದಲ್ಲಿ ಜೀವನ ಕಳೆಯುತ್ತಿರುವಾಗ ತಾಯಿಯವರ ಒತ್ತಾಸೆಯ ಮೇರೆಗೆ ಜಂಬೂರು ಶ್ರೀನಿವಾಸ ಭಾಗವತರಿಂದ ಯಕ್ಷಗಾನದ ಹೆಜ್ಜೆ ಕಲಿತು ಜೀವನೋಪಾಯವಾಗಿ ಮಾಡಿಕೊಂಡೆ. +“ರೋಗಿಬಯಸಿದ್ದು ಹಾಲು ಅನ್ನ, ವೈದ್ಯ ಹೇಳಿದ್ದೂ ಹಾಲು ಅನ್ನ” ಎಂಬಂತೆ ನನ್ನತಾಯಿ ಮಹಾ ಕಲೆಯ ತಿಲಕವಿಟ್ಟು ನಾಟ್ಯದ ಮನೆಗೆ ಅಟ್ಟಿದ್ದಳು. +ನಾನು :ಯಕ್ಷಗಾನಕ್ಕೆ ಸೇರಿದ್ದರಿಂದ ನಿಮ್ಮ ಔಪಚಾರಿಕ ಶಿಕ್ಷಣಕ್ಕೆ ಧಕ್ಕೆಯಾಗಲಿಲ್ಲವೆ? +ಅಜ್ಜ : ನಿಜವಾಗಿಯೂ ಇಲ್ಲ. +ಯಾಕೆಂದರೆ ಶಾಲೆಯಲ್ಲಿ ನಾವು ಪುಸ್ತಕದಲ್ಲಿ ಓದುತ್ತೇವೆ. +ಆದರೆ ಯಕ್ಷಗಾನದಲ್ಲಿ ಪ್ರಯೋಗಾತ್ಮಕವಾಗಿ ಕಲಿಯುತ್ತೇವೆ. +ಹಿರಿಯರು ಕಿರಿಯರು ಸಮಾಜದೊಂದಿಗಿನ ಒಡನಾಟ, ರಾಮಾಯಣ, ಮಹಾಭಾರತ,ಪುರಾಣ ಕಥೆ ಕಾವ್ಯಗಳಲ್ಲಿನ ಜೀವನ ಮೌಲ್ಯ, ಆದರ್ಶಗಳು ಇವೆಲ್ಲವುಗಳನ್ನು ಕಲಿಯುತ್ತೇವೆ. +ಆದ್ದರಿಂದ “ಯಕ್ಷಗಾನ ಪ್ರಯೋಗಾತ್ಮಕ ಶಾಲೆ" ಹಾಗಾಗಿ. +ಇದು ನನ್ನ ಶಾಲಾ ಜೀವನಕ್ಕೆ ಅಡ್ಡಿ ಅನ್ನಿಸಲಿಲ್ಲ. +ನಾನು : ಅಂತಹ ತ್ರಿವೇಣಿ ಸಂಗಮದಂತಿರುವ ಸಕ್ಕಟ್ಟು ಬಿಟ್ಟು ಬರಲು ಕಾರಣವೇನು? +ಅಜ್ಜ: ಹೊಟ್ಟೆಪಾಡು. +ಯಾಕೆಂದರೆ, ತಮ್ಮಂದಿರು ದೊಡ್ಡವರಾದರು. +ಅವರಿಗೆ ತಂದೆ ಸ್ಥಾನದಲ್ಲಿ ನಿಂತು ಮದುವೆ ಮಾಡಿಸಿದೆ. +ಸಂಸಾರ ದೊಡ್ಡದಾಯಿತು. +ಆದಾಯ ಕಡಿಮೆಯಾಯಿತು. +ಅದಕ್ಕೆ ಮುಂದಾಲೋಚನೆಯಿಂದ ಮೂಲ ಮನೆಯ ಸರ್ವ ಜವಾಬ್ದಾರಿಯನ್ನು ಇಬ್ಬರು ತಮ್ಮಂದಿರ ಹೆಗಲೇರಿಸಿ ಸೌಖ್ಯದಿಂದ ಇರಲೆಂದು ದೇವತಾಕಾರ್ಯಕ್ಕೆ ಸೌಕೂರಿಗೆ ಬಂದು ಜೀವನ ಸಾಗಿಸಬೇಕಾಯಿತು. +ಸ್ವಲ್ಪ ಕಾಲದ ನಂತರ ಆ ಕೆಲಸವೂ ಇಲ್ಲವಾಗಿ ಕಷ್ಟಗಳ ಮಹಾಪೂರವೇ ಎದುರಾಯಿತು. +ಅತ್ತ ಯಕ್ಷಗಾನದಲ್ಲಿ ಕರೆ ಇಲ್ಲ, ಇತ್ತ ದೇವ ಕಾರ್ಯವಿಲ್ಲ. +ಒಟ್ಟಿನಲ್ಲಿ ಕಷ್ಟದ ಸಾಣೆ ಏಟು ತಿನ್ನದ ಹೊರತು ಯಶಸ್ಸು ಎಂಬ ಮೂರ್ತಿಯನ್ನು ಕಾಣಲು ಸಾಧ್ಯವಿಲ್ಲ ಮಗು. +ಈಗ ಜೀವನದಲ್ಲಿ ಯಶಸ್ವಿ ಜೀವನವನ್ನು ಈಸೌಖ್ಯಾಪುರದಲ್ಲಿ (ಸೌಕೂರು) ನಡೆಸುತ್ತಿದ್ದೇನೆ. +ನಾನು : ಅಜ್ಜಿಯ (ಲಕ್ಷ್ಮೀ) ಸಹಕಾರ ಹೇಗಿತ್ತು? +ಅಜ್ಜ : ನಿಜವಾಗಿಯೂ ಲಲಿತ (ಲಕ್ಷ್ಮೀ) ನನ್ನ ಅರ್ಧಾಂಗಿ ಮಾತ್ರವಲ್ಲ, ಆಕೆ ನನ್ನ ಸರ್ವಸ್ವ . +ನನ್ನ ಪ್ರತೀ ಕೆಲಸಕ್ಕೂ, ಏಳ್ಗೆಗೂ ಆಕೆಯದ್ದೇ ಸಿಂಹಪಾಲು,ಸಹಕಾರ. +೯ ಜನ ಮಕ್ಕಳನ್ನು, ಇತ್ತ ಸಂಸಾರವನ್ನು ನೋಡಿಕೊಂಡು ನನ್ನ ದೇಶ ವಿದೇಶ ತಿರುಗಾಟದಲ್ಲಿ ಬೇಸರ ಮಾಡಿಕೊಳ್ಳದೆ ಸಂತೋಷದಿಂದ ಕಳಿಸಿಕೊಡುತ್ತಿದ್ದಳು. +ಮನೆಯ ಗೃಹಲಕ್ಷ್ಮಿಯಾಗಿ ನನ್ನ ಕಷ್ಟದಲ್ಲಿ ಜೊತೆಯಾಗಿ ಹೆಜ್ಜೆ ಹಾಕಿದವಳು. +ಸುಖದಲ್ಲಿ ಆಕೆಯೊಂದಿಗೆ ಕಳೆದ ಕಾಲ ಅತೀ ಕಡಿಮೆ ಎನಿಸುತ್ತದೆ. +ಆಕೆಯ ವಿಯೋಗ ನನ್ನನ್ನು ಬರಿದಾಗಿಸಿದೆ. +ನಾನು :ಅಜ್ಜ, ನಿಮ್ಮ ಜೀವನ ಮತ್ತು ಯಕ್ಷಗಾನದಲ್ಲಿ ಸಾಧನೆ ಮಾಡಲು ಪ್ರೇರಕ ಶಕ್ತಿಗಳು ಯಾರು?ಹೇಗೆ? ಹೇಳಿ. +ಅಜ್ಜ : ನನ್ನ ಸಾಧನೆ ಏನೂ ಇಲ್ಲ. +ಕರ್ತವ್ಯಕ್ಕೆ ಚ್ಯುತಿಬಾರದಂತೆ ಪಾತ್ರನಿರ್ವಹಿಸುತ್ತೇನೆ. +ಮೊದಲ ಭದ್ರ ಬುನಾದಿ ಹೆತ್ತ ತಾಯಿಯ ಪ್ರೇರಣೆ ಮತ್ತು ಧರ್ಮಪಶ್ಚಿಯ ಸಹಕಾರ . +ಗುರುಗಳಾದ ಜಂಬೂರು ಶ್ರೀನಿವಾಸ ಭಾಗವತರಿಂದತಾಳ ಕಲಿಕೆ. + ನಮ್ಮವರೇ ಆದ ಪಾಂಡೇಶ್ವರ ಸದಾಶಿವಯ್ಯನವರಿಂದ ಕುಣಿತ. + ಬೇಳೂರು ಶೀನನವರಿಂದ ಅರ್ಥಗಾರಿಕೆ, ನಮ್ಮೂರಿನವರಾದ ಕುಷ್ಟನವರಿಂದಬಣ್ಣದ ಮುಖವರ್ಣಿಕೆ. + ಹೀಗೆ ಸರ್ವರಿಂದ ಸರ್ವರೀತಿಯ ವಿದ್ಯೆಗಳನ್ನು ಕಲಿತು ಯಕ್ಷಪರ್ವತ ಏರಲು ಸಾಧ್ಯವಾಯಿತು. +ಜೊತೆಗೆ ರಾಮಗಾಣಿಗರಂತಹ ಹಿರಿಯ ಕಲಾವಿದರ ಗರಡಿಯಲ್ಲಿ ಪಳಗಿದ್ದು ನನ್ನ ವರ್ಚಸ್ಸು ಹೆಚ್ಚಾಗಲು ಒಂದು ವರದಾನವಾಯಿತು. +ನಾನು :ಯಕ್ಷಗಾನದಲ್ಲಿ ಬಣ್ಣದ ಪಾತ್ರವನ್ನೇ ಏಕೆ ಆಯ್ದುಕೊಂಡಿರಿ,ಬೇರಾವ ವೇಷ ಮಾಡುವ ಹಂಬಲ ಇರಲಿಲ್ಲವೇ? +ಅಜ್ಜ : ನಿಜವಾಗಿಯೂ ಎರಡನೇ ವೇಷಧಾರಿ ಆಗಬೇಕೆಂದು ಹಂಬಲ ಇತ್ತಾದರೂ ಆಗಿನ ಕಾಲದ ಬಡಗಿನ ಪ್ರಸಿದ್ಧ ವೇಷಧಾರಿ ಹಾರಾಡಿ ರಾಮಗಾಣಿಗರು. +ನನ್ನ ಆಳ್ತನ, ಕಂಠ, ನಿಲುವು, ನೋಡಿ “ಸಕ್ಕಟ್ಟುರವರೇ ನೀವೇ ಬಣ್ಣದ ವೇಷಮಾಡಬೇಕು ನೀವೇ ಅದಕ್ಕೆ ಸೂಕ್ತ ವ್ಯಕ್ತಿ” ಎಂದು ನನ್ನ ೨೧ನೇ ವಯಸ್ಸಿಗೆ,ಬಣ್ಣದ ವೇಷದ ದೊಡ್ಡ ಪಟ್ಟವನ್ನು ಕಟ್ಟಿದರು. +ಆ ಹಿರಿಯರ ಮಾತಿಗೊಪ್ಪಿ ಬಣ್ಣದ ವೇಷ ಮಾಡಿದರೂ, ಎರಡನೇ ವೇಷದ ಸಾಲಿನ ಅನೇಕ ಪಾತ್ರಗಳನ್ನು ಕೊಟ್ಟು ನನ್ನ ಜೊತೆ ವಾಗ್ದಾದಕ್ಕೆ ಇಳಿಯುತ್ತಿದ್ದರು. +ಎಲ್ಲಾ ರೀತಿಯಿಂದಲೂ ಸಮರ್ಥನಾಗುವಂತೆ ಮಾಡುತ್ತಿದ್ದರು. +ಬಣ್ಣದ ವೇಷಕ್ಕೆ, ಬಣ್ಣಗಾರಿಕೆಗೆ ಕುಷ್ಟಗಾಣಿಗರ ಸಲಹೆ ಸಹಕಾರ ಸಿಕ್ಕಿದ್ದರಿಂದ ಅದೇ ಗಟ್ಟಿಯಾಯಿತು. +ನಾನು : ಅಜ್ಜ, ನೀವು ಕೇವಲ ಮುಮ್ಮೇಳವನ್ನು ಮಾತ್ರ ಅರಿತವರೇ ಅಥವಾ ಹಿಮ್ಮೇಳದಲ್ಲಿಯೂ ನಿಮ್ಮ ಸಾಧನೆ ಇದೆಯೇ? +ಅಜ್ಜ : ಖಂಡಿತವಾಗಿಯೂ, ಒಂದು ಕ್ಷೇತ್ರದಲ್ಲಿ ಕಾಲಿರಿಸಿದ ಮೇಲೆ ಅಲ್ಲಿ ಒಂದನ್ನು ಮಾತ್ರ ಕಲಿತರೆ ನಾವು ಸಂಪನ್ಮೂಲ ವ್ಯಕ್ತಿ ಆಗಲಾರೆವು. +ಆ ರಂಗದ ಎಲ್ಲಾ ಮಜಲುಗಳನ್ನು ತಿಳಿದಿರಬೇಕು. +ನಾನು ಹಿಮ್ಮೇಳದಲ್ಲಿ ತಕ್ಕಮಟ್ಟಿಗೆ ಭಾಗವತಿಕೆಯನ್ನು ತಿಳಿದಿದ್ದೆ. +ಆದರೆ ಮದ್ದಳೆಗಾರಿಕೆಯಲ್ಲಿ ನಾನೇ ಸ್ವತಃ ಮದ್ದಳೆ ತಯಾಶಿಸಿ ಬಾರಿಸುವ ಕೌಶಲ್ಯವನ್ನು ಕರಗತ ಮಾಡಿಕೊಂಡಿದ್ದೇನೆ. +ಕೆಲವು ಬಾರಿ ಮೇಳದಲ್ಲಿ ನಾನೊಬ್ಬನೇ ಬೆಳಗಿನ ತನಕ ಮದ್ದಳೆ ಬಾರಿಸಿದ್ದೂ ಉಂಟು. +ನಾನು : ಅಜ್ಜ, ನೀವು ಆಗಿನ ಕಾಲದ ದೀವಟಿಗೆ ಬೆಳಕಿನ ರಂಗಸ್ಥಳದಿಂದ ಇಂದಿನ ಝಗಮಗ ಹೊಳೆಯುವ ರಂಗುರಂಗಿನ ರಂಗಮಂಟಪದಲ್ಲಿ ಮೆರೆದ ಅನುಭವವಿದೆ. +ಇವೆರಡರ ಅನುಭವ ಹೇಳುವಿರಾ? +ಅಜ್ಜ : ಇದ್ದೇ ಇದೆ, ನಮ್ಮ ಹಿಂದಿನ ಕಾಲದಲ್ಲಿ ಇಷ್ಟೊಂದು ಮುಂದುವರಿದಿರಲಿಲ್ಲ. +ರಂಗದಲ್ಲಿ ದೀವಟಿಕೆ ಬೆಳಕಿನ ಆಟದ ಅನುಭವವೇ ಬೇರೆ. +ಏಕೆಂದರೆ ಆ ಮಂದ ಬೆಳಕಿನಲ್ಲಿ ಒಂದು ತೆರನಾದ ಏಕಾಗ್ರತೆ ಇದ್ದು,ರಾಮಾಯಣ ಮಹಾಭಾರತ ಕಲ್ಪನೆಯ ಲೋಕಕ್ಕೆ ಹೋಗಬಹುದು . +ಭಾಗವತರು ಪದ್ಯ ಹೇಳಿದ್ದು, ನಾವು ಮಾತಾಡಿದ್ದು, ಸಭೆಯಲ್ಲಿನ ಜನರಿಗೆ ಕೇಳಿಸಬೇಕಿತ್ತು. +ಆ ದೀವಟಿಕೆ ಬೆಳಕಿನಲ್ಲಿ ಬಣ್ಣದ ವೇಷ ಬಂದಾಗ ಜನರು ಭಯದಿಂದ ಕಂಗಾಲಾಗುತ್ತಿದ್ದರು. +ಇಂದು ಮೈಕಾಸುರ, ವಿದ್ಯುತ್‌ ದೀಪಗಳು, ಆಧುನಿಕತೆಯನ್ನು ಒಳಗೊಂಡ ರಂಗಸ್ಥಳದಲ್ಲಿ ಕಸುಬು ಮಾಡುವುದೂ ಕೂಡ ಒಂದು ವಿಶಿಷ್ಟಅನುಭವ . +ಯಕ್ಷಗಾನದಲ್ಲಿ ಆಧುನಿಕತೆಯ ಅಳವಡಿಕೆ ಸಂತಸ ತಂದಿದೆ. +ಆದರೆ ನಾವು ಬೆಳೆದು ಬಂದ ಹಾದಿಯನ್ನು ಮರೆಯುವಂತಿಲ್ಲ. +ನಾನು :ಅಜ್ಜ, ಯಕ್ಷಗಾನದಲ್ಲಿ ನಿಮ್ಮ ಸಹಕಲಾವಿದರು ನಿಮಗೆ ಪೂರಕವಾಗಿದ್ದರೇ ಹೇಗೆ? +ಅಜ್ಜ :ನಿಜವಾಗಿಯೂ, ಜೀವನದಲ್ಲಿ ಎಲ್ಲಾ ನಾನೇ ಕಲಿತುಕೊಂಡಿದ್ದು ಎಂದರೆ ಮೂರ್ಖಯತನವಾದೀತು. +ಕೆಲವೊಂದು ಗುರು ಮುಖೇನ, ಸಹಚರರಿಂದ,ಸಮಾಜದಿಂದ, ಅನುಭವದಿಂದ ಹೀಗೆ ಕಲಿಯಬೇಕಾಗುತ್ತದೆ. +ಆದರೆ ಇಲ್ಲಿ ಸಹಚರರಿಂದ ಕಲಿತದ್ದು ಅಪಾರ. +ಆ ಕಾಲದಲ್ಲಿ ನಾನಿದ್ದ ಮೇಳಗಳಲ್ಲಿ ಮಹಾನ್‌ಕಲಾವಿದರಾದ ಪಾಂಡೇಶ್ವರ ಸದಾಶಿವಯ್ಯ, ಬೆಳ್ಕಳೆ ರಾಮಕೃಷ್ಣಯ್ಯ, ಶೇಷಗಿರಿ,ಜಾನುವಾರಕಟ್ಟೆ ಗೋಪಾಲರಾಯದರು, ಹಾರಾಡಿ ರಾಮಗಾಣಿಗರು,ವೀರಭದ್ರನಾಯ್ಕರು, ಕುಷ್ಟಗಾಣಿಗರು, ಕೊಳ್ಕಬೈಲು ಕುಷ್ಟ ಶೀನ ಹೀಗೆ ಅನೇಕಾನೇಕ ಕಲಾವಿದರ ದಂಡೇ ಇತ್ತು . +ಅಲ್ಲದೆ, ಇತ್ತೀಚಿನ ಕಲಾವಿದರ ಜೊತೆಗೂ ಕೆಲಕಾಲದ ಒಡನಾಟವಿತ್ತು. +ಒಟ್ಟಿನಲ್ಲಿ ಹಳೆಯ ಹೊಸಬರ ಒಡನಾಟ ನನ್ನ ವೃತ್ತಿರಂಗ ಬಲಗೊಳ್ಳಲು ಕಾರಣವಾಯಿತು. +ನಾನು : ಅಜ್ಜ, ನಿಮ್ಮ ಜೊತೆ ಸೀತಾರಾಮ ಅಜ್ಜನವರ ಸಹಕಾರ ಹೇಗಿತ್ತು? +ಅವರ ಸಾಧನೆ ಏನು? +ಅಜ್ಜ: ಅದೊಂದು ಮುಗಿದ ಪರ್ವ ಮಾರಾಯ, ಅಮ್ಮನ ಒತ್ತಾಸೆಯಂತೆ ತಮ್ಮನಾದ ಸೀತಾರಾಮನಿಗೆ ಹೆಜ್ಜೆ ಹೇಳಿಕೊಟ್ಟು ಯಕ್ಷಗಾನಕ್ಕೆ ಕರೆದುಕೊಂಡುಹೋದೆ. +ಮೊದಲು ಬಾಲಗೋಪಾಲ ಮಾಡಿ ನಂತರ ಬಬ್ರುವಾಹನದಂಥವೇಷ ಮಾಡಿ, ಮುಖ್ಯ ಸ್ತ್ರೀವೇಷ ಮಾಡಿ ಎಲ್ಲರಿಂದಲೂ ಮೆಚ್ಚುಗೆ ಪಡೆದಿದ್ದ. +ಅಲ್ಲದೆ, ನನ್ನ ಹೆಜ್ಜೆ ಮೇರೆ ಹೆಜ್ಜೆ ಇಟ್ಟು ನಡೆಯುತ್ತಿದ್ದ. +ಈ ನಡುವ ಎಂಟನೇ ತರಗತಿ ಪರೀಕ್ಷೆಯಲ್ಲಿ ಉತ್ತೀರ್ಣನಾಗಿ ಶಿಕ್ಷಕ ತರಬೇತಿಗೆ ಹೋಗಿ ಶಿಕ್ಷಕನಾದ. +ಆದರೆ, ಯಕ್ಷಗಾನವನ್ನು ಬಿಡಲೇ ಇಲ್ಲ. +ಹವ್ಯಾಸಿಯಾಗಿ ಹೋದ ಕಡೆಯಲ್ಲೆಲ್ಲಾ ಯಕ್ಷಗಾನ ಹೇಳಿಕೊಡುವ ಶಿಕ್ಷಕನಾಗಿಯೂ ದುಡಿದಿದ್ದಾನೆ. +ಆತನೂ ಸಮರ್ಥವೇಷಧಾರಿ ಹಾಗೂ ಪರಿಶ್ರಮ ಜೀವಿ. +ನನ್ನ ಸಣ್ಣ ತಮ್ಮನ ಅಗಲಿಕೆ ಬೇಸರ ತಂದಿದೆ. +ನಾನು : ನೆನಪು ಮಾಡಿ ಬೇಸರ ತಂದಿದ್ದಕ್ಕೆ ಕ್ಷಮಿಸು ಅಜ್ಜ. +ಅಜ್ಜ : ಇರಲಿ ಬಿಡು ಮಗು, ನೀನೂ ಕೂಡ ಅವನ ಬಗ್ಗೆ ತಿಳಿದಂತೆ ಆಯ್ತಲ್ಲ. +ನಾನು : ಚೌಕಿಯಲ್ಲಿ ನಿಮ್ಮ ಬಣ್ಣಗಾರಿಕೆಯ ತಯಾರಿ ಹೇಗಿತ್ತು? +ಅಜ್ಜ : ಎಲ್ಲವನ್ನೂ ಬಿಡಿಸಿ ಹೇಳಲು ಸಾಧ್ಯವಿಲ್ಲ ನಾನು ; +ಅಜ್ಜ ದಯವಿಟ್ಟು ಹೇಳಿ . +ಅಜ್ಜ : ನಯವಾಗಿ ಅರೆದ ಅಕ್ಕಿ ಹಿಟ್ಟು, ಸುಣ್ಣ, ಅರದಾಳ, ಇಂಗಳೇಕೆ,ಎಣ್ಣೆಮಸಿ, ಕುಂಕುಮ, ಹತ್ತಿ ಇತ್ಯಾದಿ ಸಾಧನಗಳಿಂದ ತಯಾರಿಸಲಾಗುವ ರಾಕ್ಷಸ ವೇಷಗಳ ಮುಖವರ್ಣಿಕೆ ಒಂದು ಬಗೆಯ ಅದ್ಭುತವೆಂದೇ ಹೇಳಬಹುದು. +ಈ ಮುಖವರ್ಣಿಕೆಯ ಕ್ರಮವನ್ನು ಚುಟ್ಟಿ ಬರೆಯುವುದು (ಇರಿಸುವುದು)ಎನ್ನುತ್ತಾರೆ. +ಅಕ್ಕಿ ಹಿಟ್ಟನ್ನು ನಯವಾಗಿ ಅರೆದು ಅದಕ್ಕೆ ಸುಣ್ಣ ಬೆರೆಸಿ ತೆಂಗಿನಗರಿಯ ಕಡ್ಡಿಯ ಸಹಾಯದಿಂದ ಗರಗಸದ ಬಾಯಿಯ ಆಕಾರದಲ್ಲಿ ಮುಖಕ್ಕೆಅಂಟಿಸಿಕೊಳ್ಳುವುದು. +ಈ ಚುಟ್ಟಿಯನ್ನು ಇರಿಸಲು ನಾಲ್ಕೈದು ಗಂಟೆಗಳ ಪರಿಶ್ರಮಬೇಕಾಗುತ್ತದೆ. +ಆಯಾ ವೇಷಕ್ಕೆ ತಕ್ಕಂತೆ ಮುಖವರ್ಣಿಕೆ ಹಿರಿದಾದ ವೃತ್ತಾಕಾರವಾದ ಕಿರೀಟವನ್ನು ಒಳಗೊಂಡಿರುತ್ತದೆ. +ಯಕ್ಷಗಾನ ಪರಿಭಾಷೆಯಲ್ಲಿ ಇದನ್ನು ಕೇಸರಿತಟ್ಟಿ ಎನ್ನುತ್ತಾರೆ. +ಕಿವಿಯ ಜಾಗದಲ್ಲಿ ವೃತ್ತಾಕಾರದ ದೊಡ್ಡ ಗಾತ್ರವುಳ್ಳ ಕರ್ಣಪತ್ರಗಳನ್ನುಅಳವಡಿಸಿಕೊಳ್ಳುವುದು. +ನಾನು : ರಂಗಸ್ಥಳದಲ್ಲಿ ನಿಮ್ಮ ಪಾತ್ರ ನಿರ್ವಹಣೆ ಹೇಗಿರುತ್ತಿತ್ತು ? +ಅಜ್ಜ : ಗಂಟೆಗಟ್ಟಲೆ ವೇಷ ಮಾಡಿಕೊಂಡು ನಮ್ಮ ಪ್ರವೇಶ ಮೂರು ಕೂಗಿನೊಂದಿಗೆ ತುಂಬಾ ಗೌಜು ಗದ್ದಲ ಅಬ್ಬರದಿಂದ ರಂಗ ಪ್ರವೇಶ ಆಗುತ್ತಿತ್ತು. +ರಂಗಸ್ಥಳದ ಎದುರುಗಡೆಯಿಂದಲೂ ಕೆಲವು ಪಾತ್ರಗಳಿಗೆ ರಂಗದ ಹಿಂದಿನಿಂದಲೂ ಬಂದು ವೀಕ್ಷಕರಲ್ಲಿ ಕುತೂಹಲ ಕೆರಳಿಸುವ ಪರಿವಿಧಾನವೂ ಇತ್ತು. +ರಂಗದಲ್ಲಿ ತೆರೆಹಿಡಿದು ನಿತ್ಯವಿಧಿಯನ್ನು ಪೂರೈಸುವ ವಿಧಾನವನ್ನು ತೆರೆಯ ಮರೆಯಲ್ಲಿ ಅಭಿನಯಿಸಿ ತೋರಿಸಲಾಗುತ್ತಿತ್ತು. +ರಾಜಬಣ್ಣದ ಪಾತ್ರಗಳಾದರೆ,ಕನ್ನಡಿ ನೋಡುತ್ತಾ ದಂತದಾವನ, ಸ್ನಾನ, ಭಸ್ಮಧಾರಣೆ (ಶಿವಭಕ್ತ ಪಾತ್ರಗಳಾದರೆ)ಶಿವಪೂಜಾ ವಿಧಾನ ಮುಂತಾದವು. +ಹೆಣ್ಣು ಬಣ್ಣ ತಲೆಬಾಚುವುದು, ಹೇನುಹೆಕ್ಕುವುದು, ಜಡೆ ಹೆಣೆಯುವುದು, ಹೂ ಮುಡಿಯುವುದು ಇತ್ಯಾದಿಗಳನ್ನು ಅಭಿನಯದ ಮೂಲಕ ವ್ಯಕ್ತಪಡಿಸುವುದಾಗಿತ್ತು. +ನಾನು : ಈ ಮುಖವರ್ಣಿಕೆಯಲ್ಲಿ ಇಂತಹ ವೇಷಕ್ಕೆ ಹೀಗೆ ಎಂದು ಏನಾದರೂ ವಿಂಗಡಣೆ ಇದೆಯೇ? +ಅಜ್ಜ : ಹಿಂದೆ ೧ಂ-೧೫ ರೀತಿಯ ಮುಖವರ್ಣಿಕೆ ಪ್ರಭೇದಗಳಿದ್ದರೂ ಈಗ ಕಂಡುಬರುವ ಬಣ್ಣದ ವೇಷಗಳಲ್ಲಿ ಸ್ಕೂಲವಾಗಿ (೧) ರಾಜಬಣ್ಣ, (೨)ಕಾಟುಬಣ್ಣ, (೩) ಹೆಣ್ಣು ಬಣ್ಣಗಳೆಂದು ಮೂರು ವಿಧಗಳಾಗಿ ವಿಂಗಡಿಸಲಾಗಿದೆ. +ರಾಜಬಣ್ಣ : ಎಂದರೆ, ಸರಿಯಾದ ಹಿನ್ನೆಲೆ. +ಪ್ರತಿಷ್ಠೆಗಳಿದ್ದು ರಾಜ್ಯಗಳನ್ನು ಆಳುತ್ತಿದ್ದ ರಾವಣ, ಮೈರಾವಣ, ತಾರಕಾಸುರ, ನರಕಾಸುರ, ಶೂರಪದ್ಮಾಸುರ,ಶುಂಭ, ಬಾಣಾಸುರ, ಹಿರಣ್ಯಕಶಿಪು ಮುಂತಾದ ಪಾತ್ರಗಳು. +ಕಾಟುಬಣ್ಣ : ಎಂದರೆ, ಅಷ್ಟೊಂದು ಸಂಸ್ಕಾರವಿಲ್ಲದ ಹೆಚ್ಚಾಗಿ ಕಾಡುಮೇಡುಗಳಲ್ಲಿ ಅಲೆದಾಡುವ ಹಿಡಿಂಬ, ಕಿಮ್ಮೀರ, ಬಕಾಸುರನಂತಹ ರಾಕ್ಷಸವೇಷದ ಪಾತ್ರಗಳು. +ಹೆಣ್ಣುಬಣ್ಣ : ಶೂರ್ಪನಖಿ, ಪೂತನಿ, ವಕ್ರತುಂಡಿ, ಅಜಮುಖಿ, ವೃತ್ತಜ್ಜಾಲೆ,ತಾಟಕಿ ಇತ್ಯಾದಿ ಪಾತ್ರಗಳು. +ರಾಕ್ಷಸ ಪಾತ್ರದ ಹೆಣ್ಣುಬಣ್ಣಗಳು ಬಣ್ಣದ ಗಂಡು ವೇಷಗಳಿಗೆ ಸಂವಾದಿಯಾಗಿಯೇ ರೂಪುಗೊಂಡಿವೆ. +ನೀಳವಾದ ಕಿರೀಟ ಆ ಪಾತ್ರವನ್ನು ಏಗ್ಗಿಸುವಲ್ಲಿ ಸಹಕರಿಸುತ್ತದೆ. +ಈ ರಕ್ಕಸಿಯರ ಮುಖದ ತಳಪಾಯದ ಬಣ್ಣಕಪ್ಪಾಗಿದ್ದು, ಕೆಂಪು, ಬಿಳಿ, ಹಳದಿ ಬಣ್ಣಗಳಿಂದ ರಾಕ್ಷಸೀ ಕಳೆಯನ್ನು ಹೆಚ್ಚಿಸಲಾಗುತ್ತದೆ. +ನಾನು : ಅಜ್ಜ ನಿಮಗೆ ತಿಳಿದಂತೆ ಈ ತೆಂಕು-ಬಡಗಿನ ತಿಟ್ಟುಗಳಲ್ಲಿ ಮುಖವರ್ಣಿಕೆ ಮತ್ತು ವೇಷಭೂಷಣಗಳಲ್ಲಿ ಏನಾದರೂ ವ್ಯತ್ಯಾಸ ಕಂಡಿದ್ದೀರಾ? +ಅಜ್ಜ : ಬಣ್ಣದ ವೇಷದ ಕಲ್ಪನೆ ತೆಂಕು ಮತ್ತು ಬಡಗು ತಿಟ್ಟುಗಳಲ್ಲಿ ಹೆಚ್ಚು ಕಡಿಮೆ ಒಂದೇ ಆಗಿದ್ದರೂ ಮುಖವರ್ಣಿಕೆಯಲ್ಲಿ ಕಿರೀಟ ಮತ್ತು ವೇಷಭೂಷಣಗಳಲ್ಲಿ ಸ್ಪಷ್ಟ ವ್ಯತ್ಯಾಸ ಇದ್ದೇ ಇದೆ. +ಚುಟ್ಟಿಯ ಬಳಕೆ ಎರಡೂ ತಿಟ್ಟುಗಳಲ್ಲಿ ಇದೆ. +ಹಾಗೂ ಶಿವುಗಳಿಗೆ ಬಳಸುವ ಸಾಮಗ್ರಿಗಳಲ್ಲಿಯೂ ಏಕತೆ ಇದೆ. +ಆದರೆ ತೆಂಕು ತಿಟ್ಟಿನಲ್ಲಿ ಭೀಮ, ರುದ್ರಭೀಮ, ವಾಲಿ ಪಾತ್ರಗಳಿಗೆ ಚುಟ್ಟಿ ಇಟ್ಟರೆ ಬಡಗಿನಲ್ಲಿ ಇರಿಸುವುದಿಲ್ಲ. +ಬಡಗಿನ ಕೇಸರಿತಟ್ಟಿ ತೆಂಕುತಿಟ್ಟಿನವರಷ್ಟು ದೊಡ್ಡದಿರುವುದಿಲ್ಲ. +ವೇಷಗಾರಿಕೆಯಲ್ಲಿ ಕಪ್ಪು, ಹಸಿರು ಬಣ್ಣ ಬಳಸಲಾಗುತ್ತದೆ. +ಸಾಮಾನ್ಯವಾಗಿ ವೇಷಧಾರಿಗಳು ಕಪ್ಪು, ಕೆಂಪು, ಹಸಿರು, ಹಳದಿ, ಬಿಳಿ ಬಣ್ಣದ ಬಟ್ಟೆಗಳನ್ನು ಉಪಯೋಗಿಸುತ್ತಾರೆ. +ಕಿರೀಟಗಳಲ್ಲಿ ಮುಂಡಾಸು, ಪಗಡಿ,ಕೋಲುಕಿರೀಟ, ರಾಜಕಿರೀಟ, ಕೇಸರಿತಟ್ಟಿ (ತಟ್ಟೆ ಕಿರೀಟ) ಭೀಮನಮುಡಿ,ಹನುಮಂತನ ಕಿರೀಟ, ರಾಕ್ಷಸಿ (ಹೆಣ್ಣುಬಣ್ಣ) ಕಿರೀಟ, ಸ್ತ್ರೀವೇಷದ ಕಿರೀಟ,ಕಿರಾತವೇಷದ ಓಲೆ ಕಿರೀಟ ಇತ್ಯಾದಿಗಳನ್ನು ಬಳಸಲಾಗುತ್ತದೆ. +ಯಕ್ಷಗಾನದ ಎಲ್ಲಾ ತಿಟ್ಟುಗಳಲ್ಲಿ ವೇಷಭೂಷಣ ಒಂದೇ ಮೂಲವಾದರೂ ಸಾಕಷ್ಟು ವ್ಯತ್ಯಾಸಗಳಿವೆ. +ನಾನು : ಅದು ಹೇಗೆ, ಬಿಡಿಸಿ, ಹೇಳಿ ಅಜ್ಜ? +ಅಜ್ಜ : ಬಡಗಿನ ವೇಷಗಳಲ್ಲಿ ಉಡುವ ಬಟ್ಟೆ ಚೌಕುಳದಿಂದ ಕೂಡಿದ್ದು ನೃತ್ಯಕ್ಕೆ ಹೊಂದಿಕೆಯಾಗುವಂತಹ ಭೂಷಣಗಳು . +ಹಳದಿ, ಬಿಳಿ ಬಣ್ಣಗಳ ಬೇಗಡೆಗಳನ್ನು ಬಳಸುತ್ತಾರೆ. + ಪಗಡಿಗಳನ್ನು ಅಟ್ಟೆಗಳಿಂದ ಕಟ್ಟಿ ಜರಿಲಾಡಿಯನ್ನು ಕ್ರಮಬದ್ಧವಾಗಿ ಸುತ್ತುತ್ತಾರೆ. + ತಲೆಯ ಮುಂಭಾಗದಿಂದ ಇಳಿಬಿಡಲು ತ್ರಿಕೋನಾಕಾರದ ಶಲ್ಯ ಇರುತ್ತದೆ. +ತೆಂಕಿನ ಸಂಪ್ರದಾಯದ ವೇಷಭೂಷಣ ಇದೇ ತೆರನಾದರೂ ಇತ್ತೀಚೆಗೆ ಮರದಿಂದ ತಯಾರಿಸಿದ ಸಿದ್ಧ ಪಗಡಿ, ಮಣಿಸಾಮಾನುಗಳ ಬಳಕೆ ಇದೆ. +ತೆಂಕಿನ ವೇಷಗಳ ಪಗಡಿ ಕಿರೀಟ, ಕೇಸರಿತಟ್ಟೆ,ಮುಡಿಗಳು ಆಕರ್ಷಕವಾಗಿದೆ. +ಆದರೆ ಬೆನ್ನಿನ ಮೇಲಿನ ಶಲ್ಲೆ ತೀರಾ ಚಿಕ್ಕದಾಗಿದ್ದು ಅದು ಕೇವಲ ತಲೆಯ ಹಿಂಭಾಗವನ್ನು ಮುಚ್ಚುವ ಸಾಧನವಾಗಿದೆ. +ಹೀಗೆ ಹೇಳುತ್ತಾ ಹೋದರೆ ದಿನಗಳೇ ಸಾಲದು. +ನಾನು : ಅಜ್ಜ ಅಟ್ಟಳಿಗೆ ಆಟ ಹೇಗಿರುತ್ತಿತ್ತು? +ಅದರಲ್ಲಿ ನಿಮ್ಮ ಪಾತ್ರ ನಿರ್ವಹಣೆ ಹೇಗೆ? +ಅಜ್ಜ : ಅಟ್ಟಳಿಗೆ ರಂಗಸ್ಥಳದಲ್ಲಿ ಮಾಮೂಲು ನೆಲದಲ್ಲಿ ೧ಂ ಅಡಿ ಚೌಕದ ರಂಗಸ್ಥಳ ಅದರ ಹಿಂದುಗಡೆ ಕಂಬಗಳನ್ನು ಆಧರಿಸಿ ಸುಮಾರು ೧೨ ಅಡಿಚೌಕ ೧ಂ ಅಡಿ ಎತ್ತರದ ಅಟ್ಟಣಿಕೆ ರಂಗಸ್ಥಳ. + ಪ್ರತಿ ಬದಿಗೂ ೩ ಕಂಬಗಳನ್ನುನಿಲ್ಲಿಸಿ, ೧ಂ ಅಡಿ ಎತ್ತರದಲ್ಲಿ ಹಲಗೆಗಳನ್ನು ಹಾಸಿ ಹುರಿಹಗ್ಗದಿಂದ ಬಿಗಿಯುತ್ತಾರೆ. +ಕೆಳಗಿನ ರಂಗಸ್ಥಳ ಮತ್ತು ಅಟ್ಟಣಿಗೆಯ ರಂಗಸ್ಥಳಗಳನ್ನು ಬಾಳೇಮರ, ಮಾವಿನತೋರಣಗಳಿಂದ ಸಿಂಗರಿಸಿ, ಅಟ್ಟಳಿಗೆಯ ಮೇಲಿನ ಭಾಗವನ್ನು ತೆಂಗಿನಸೋಗಿನಿಂದ (ಚಪ್ಪರದ ರೀತಿ) ಮುಚ್ಚಿ ಹಿಂದುಗಡೆ ಒಂದು ಏಣಿಯನ್ನು ಹಾಕಿರುತ್ತಾರೆ. +ಕೆಳರಂಗಸ್ಥಳದಲ್ಲಿ ಒತ್ತು ಭಾಗವತರು, ಮದ್ದಳೆಗಾರರು ಇದ್ದರೆ, ಅಟ್ಟಳಿಗೆಯಲ್ಲಿ ಭಾಗವತರು ಮದ್ದಳೆಗಾರರು ಇರುತ್ತಿದ್ದರು. +ಶೃತಿಗಾಗಿ ಎರಡು ಕಡೆ ಪುಂಗಿ ಇರುತ್ತಿತ್ತು. +ಹಾರ್ಮೋನಿಯಂ ಬಂದ ಮೇಲೆ ಆಧುನಿಕತೆಯ ಬಳಕೆಯಾಗುತ್ತಿದೆ. +ಹಿಂದೆ ತಿರುಗಾಟ ಮುಗಿಯುವುದರೊಳಗೆ ೨-೩ ಅಟ್ಟಳಿಗೆ ಆಟಗಳು ಸಿಗುತ್ತಿದ್ದವು. +ಗಿರಿಜಾ ಕಲ್ಯಾಣ (ದಕ್ಷಯಜ್ಞ )ಮತ್ತು ಐರಾವತ ಕಾಳಗ(ಗಜನೋಂಪಿ) ಪ್ರಸಂಗಗಳೇ ಹೆಚ್ಚಾಗಿ ಆಗುತ್ತಿದ್ದವು. +ನಾನು : ದಕ್ಷಯಜ್ಞ ಪ್ರಸಂಗವನ್ನು ಅಟ್ಟಳಿಗೆ ರಂಗದಲ್ಲಿ ಹೇಗೆ ಆಡಿಸುತ್ತಿದ್ದೀರಿ? +ಅದರಲ್ಲಿ ನಿಮ್ಮ ಪಾತ್ರ ನಿರ್ವಹಣೆ ಹೇಗೆ? +ಅಜ್ಜ : ದಕ್ಷಯಜ್ಞ ಪ್ರಸಂಗ ಆಡಿಸುವಾಗ ಕೆಳರಂಗಸ್ಥಳದಲ್ಲಿ ಸಂಗೀತಗಾರ,ಒತ್ತುವುದ್ದಳೆಗಾರರಿದ್ದು, ದೇವೇಂದ್ರನ ಒಡ್ಡೋಲಗವಾಗಿರುತ್ತದೆ. +ಅನಂತರ ಶಿವನನೇತೃತ್ವದಲ್ಲಿ ಸತ್ರ ನಡೆಯುವಲ್ಲಿಗೆಂದು ಇಂದ್ರಾದಿ ದೇವತೆಗಳು ಅಟ್ಟಳಿಗೆ ಏರುತ್ತಾರೆ. +ಅಟ್ಟಳಿಗೆಯಲ್ಲಿ ಭಾಗವತರು-ಮದ್ದಳೆಗಾರರು ಇರುತ್ತಾರೆ. +ಕಸೆಸೀರೆ ಕಟ್ಟಿದ ತೆರೆಯನ್ನು ಸರಿಸಿದಾಗ ಶಿವ ಪ್ರತ್ಯಕ್ಷ. +ಕೆಳರಂಗಸ್ಥಳದಲ್ಲಿ ದಕ್ಷ ಪ್ರವೇಶಿಸಿ ರಥಏರಿ ನಿಂತು ಅಲ್ಲಿಂದಲೇ ಶಿವನನ್ನು ಜರಿದು ನಿರ್ಗಮಿಸುತ್ತಾನೆ. +ಕೆಳರಂಗದಲ್ಲಿ ದಾಕ್ಷಾಯಿಣಿ ಬ್ರಾಹ್ಮಣರನ್ನು ಮಾತನಾಡಿಸುತ್ತಾಳೆ. +ಬ್ರಾಹ್ಮಣರಿಂದ ದಕ್ಷಯಜ್ಞ ಮಾಡುತ್ತಿದ್ದ ವಾರ್ತೆ ಕೇಳಿ ಸತಿದೇವಿ ಅಟ್ಟಳಿಗೆ ಏರುತ್ತಾಳೆ. +ಅಲ್ಲಿ ಶಿವ-ಸತಿಸಂವಾದ, ಅವನಿಂದ ಅಗಲಿ ಸತಿ ಅಟ್ಟಳಿಗೆ ಇಳಿಯುತ್ತಾಳೆ. +ಕೆಳರಂಗದಲ್ಲಿ ದಕ್ಷಯಾಗ (ನಿರೀಶ್ವರಯಾಗ) ಅಲ್ಲಿಗೆ ದಕ್ಷಾಯಿಣಿಯ ಪ್ರವೇಶ,ಆತ್ಮಾರ್ಪಣೆ, ಪ್ರಮಥರ ಕೋಲಾಹಲ ನಾರದ ಅಟ್ಟಳಿಗೆಯೇರಿ ಶಿವನಿಗೆ ಸುದ್ದಿಮುಟ್ಟಿಸುತ್ತಾನೆ. +ಶಿವ ಸಿಟ್ಟಿನಿಂದ ಜಟೆ ಹರಿದು ಕೆಳಗೆ ಎಸೆದಾಗ ಕೆಳರಂಗಸ್ಥಳದಲ್ಲಿ ಅದ್ಭುತಕಾಯ ಕಿರೀಟಧಾರಿ ವೀರಭದ್ರ ಎಣ್ಣೆಬತ್ತಿಯ ದೊಂದಿಯನ್ನು ಉರಿಸುತ್ತಾ ಅಬ್ಬರದ ಪ್ರವೇಶ. +ರಂಗಸ್ಥಳದ ತುದಿಗೆ ಬಂದು ಮೇಲಿರುವಅಪ್ಪ(ಶಿವ)ನಿಗೆ ಕೈಮುಗಿದು ಅಪ್ಪಣೆ ಪಡೆದು ದಕ್ಷನ ತಲೆ ಕಡಿದು ಅಗ್ನಿಗೆ ಹಾಕುತ್ತಾನೆ. +ನಂತರ ದೇವಾನುದೇವತೆಗಳ ಪ್ರಾರ್ಥನೆಗೆ ಓಗೊಟ್ಟ ಶಿವ ಅಟ್ಟಳಿಗೆಯಿಂದ ಇಳಿದು ದಕ್ಷನಿಗೆ ಆಡಿನ ಮುಖ ಜೋಡಿಸುವ (ಮೇಳದಲ್ಲಿರುಕುದುರೆ ಮುಖವಾಡ ಹಾಕುತ್ತಿದ್ದರು) ಪ್ರಸಂಗ. +ಈ ವೀರಭದ್ರನ ಪಾತ್ರವನ್ನು ನಾನೇ ಮಾಡುತ್ತಿದ್ದೆ. +ಆಟಾಡಿಸುವವರು ನನ್ನಪಾತ್ರಕ್ಕೆ ೨ ವಾರೆ (೩೬ ಇಂಚಿಗೆ- ೧ ವಾರೆ) ಪಟ್ಟಿ (ಕೆಂಪು) ಕೊಡುತ್ತಿದ್ದರು. +ಹಾಗೂ ಸಪೇತ, ವರನಪಗಡೆ ಹೀಗೆ ನಮ್ಮ ಪಟ್ಟಿ ಇರುತ್ತಿತ್ತು. +ಹಾಗೆಯೇ ಐರಾವತ ಪ್ರಸಂಗದಲ್ಲಿಯೂ ಅಟ್ಟಳಿಕೆಯಲ್ಲಿ ವಜ್ರಕಂಬ ಇರುತ್ತಿತ್ತು. +ಐರಾವತ ಮಾಡುವವರಿಗೆ ೨೫ ರೂಪಾಯಿ ೨ ವಾರೆ ಬಟ್ಟೆ ಕೊಡುತ್ತಿದ್ದರು. +ಅದನ್ನು ಎರಡು ದರಲೇಗೂಡಿನಿಂದ ತಲೆ ದೇಹವನ್ನು ಮಾಡಿ ಅದಕ್ಕೆ ಸೊಂಡಿಲು,ಬಾಲ ಮಾಡಿ ತೊಡಿಸುತ್ತಿದ್ದರು. +ಅರ್ಜುನ ಬಾಣ ಬಿಟ್ಟಾಗ ಆ ಮಂದ ಬೆಳಕಿನಲ್ಲಿ ಕಪ್ಪು ನಲಿಗೆ ಕಟ್ಟಿ ಮೇಲುಗಡೆಯಿಂದ ಎಳೆಯುತ್ತಿದ್ದರು. +ಐರಾವತ ಇಬ್ಬರು ಒತ್ತಾಗಿ ಕಟ್ಟಿದ ದರಲೆಗೂಡುಗಳನ್ನು ತಲೆಯಲ್ಲಿ ಹೊತ್ತುಮೇಲಿನಿಂದ ಕೆಳಗೆ ಬರುವಾಗ ಆನೆಯ ಕಿವಿ ಹಿಡಿದು ಹಾದಿ ತೋರಿಸುತ್ತಾ(ಪ್ರತ್ಯೇಕ ಒಬ್ಬರು)ದೊಂದಿಗಳೊಂದಿಗೆ ಆನೆಯ ದಿಬ್ಬಣ ಅಟ್ಟಳಿಗೆಯಿಂದ ಇಳಿಯುತ್ತದೆ. +ದಿಬ್ಬಣದಲ್ಲಿರುವ ದೇವತೆಗಳು ತೆಂಗಿನ ಸಸಿ, ಬಾಳೆ ಗಿಡ,ಪಾರಿಜಾತವೆಂಬ ಒಂದು ಗೆಲ್ಲು ಇತ್ಯಾದಿ ಗಳೊಂದಿಗೆ ಏಣಿ ಇಳಿದು ಬರುತ್ತಾರೆ. +ಆನೆ ಸಭೆಗೆ ಒಂದು ಪ್ರದಕ್ಷಿಣೆ ಬರುತ್ತದೆ. +ಆ ಬಳಿಕ ಕಳರಂಗಸ್ಥಳದಲ್ಲಿ ಆನೆಗೆ ಪ್ರೇಕ್ಷಕರು ಹಣ್ಣುಕಾಯಿ, ಆರತಿಸೇವೆ ಮಾಡಿಸುತ್ತಾರೆ. +ನಾನು : ಅಜ್ಜ, ಆರು ತಿಂಗಳು ಯಕ್ಷಗಾನ ಅಂತ ಕಳೆದರೆ ಇನ್ನುಳಿದ ಆರುತಿಂಗಳು ಹೇಗೆ ಕಳೆಯುತ್ತಿದ್ದಿರಿ? +ನಿಮ್ಮ ಕಾರುಬಾರು ಏನಿರುತ್ತಿತ್ತು? +ಅಜ್ಜ : ಹೊಟ್ಟೆಪಾಡಿಗೆ ನಾನಾ ಮಾರ್ಗ ಇರುತ್ತದೆ. +ಕಸುಬು ಗೊತ್ತಿದ್ದವ ಎಲ್ಲಿಯೂ ಹೇಗೂ ಬದುಕುತ್ತಾನೆ. +ಮನೆಯಲ್ಲಿ ಬೇಸಾಯದ ಹೂಟಿ, ನೆಟ್ಟಿಆದ ಮೇಲೆ ಯಕ್ಷಗಾನದ ಮದ್ದಳೆಯ ಕಳಸಿಗೆ ಮಾಡಿ ಚರ್ಮವನ್ನು ತಂದುಮುಚ್ಚಿಗೆ ಮಾಡಿ, ಕರ್ಣಹಾಕಿ ಬೇರೆ ಬೇರೆ ರೀತಿಯ ಮದ್ದಳೆ ಮಾಡುತ್ತಿದ್ದೆ. +ಪಂಚಮ, ಇಳಿ-ಏರು ಹೀಗೆ ವಿವಿಧ ಮದ್ದಳೆ ಮಾಡಿ ಮಾರುವುದರೊಂದಿಗೆ ಶ್ರಾವಣ ಮಾಸದಲ್ಲಿ ಹೂವಿನಕೋಲು ಮತ್ತು ಅಡಿಕೆ ಸಂಭಾವನೆ ಅಂತ ಮಾಡುತ್ತಿದ್ದೆ. +ನಾನು : ಅಜ್ಜ ಅಂತೂ ಮಳೆಗಾಲದಲ್ಲಿಯೂ ನಿವಗೆ ಬಿಡಿವಿರದ ವಾತಾವರಣ ಅಲ್ವ? +ಈ ಹೂವಿನ ಕೋಲು ಎಂದರೇನು? +ಇದರ ವಿಶೇಷತೆ ಏನು? ಹೇಳಿಅಜ್ಜ. +ಅಜ್ಜ : ನೀನೆ ನೋಡಿರುವಂತೆ ರಾಘವೇಂದ್ರ,ಗುಡ್ರಿ ಗಣೇಶ್‌, ಇಬ್ಬರು ಹುಡುಗರನ್ನು ಸೇರಿಸಿಕೊಂಡು ಮಾಡುವ ರೀತಿ ಬಿಡಿಸಿ ಹೇಳಬೇಕೆಂದರೆ: +ಶ್ರಾವಣ ಮಾಸದಲ್ಲಿ ಇದನ್ನು ಬಾಲಕರು ಶ್ರೀಮಂತರ ಮನೆಯ ಚಾವಡಿಯಲ್ಲಿ ಮುಖಾಮುಖಿಯಾಗಿ ಹೂವಿನ ಕೋಲು ಹಿಡಿದು ಕುಳಿತುಕೊಳ್ಳುತ್ತಾರೆ. +ಮೊದಲಿಗೆ ಮಹಾನವಮಿ, ಚೌಪದಿಯ ಒಂದೆರಡು ಪದಗಳನ್ನು ಆರಂಭದಲ್ಲಿ ಬಾಲಕರು ಹಾಡುತ್ತಾರೆ. +ನಂತರ ಭಾಗವತರು ಯಾವುದಾದರೂ ಯಕ್ಷಗಾನ ಪ್ರಸಂಗದ ಮುಖ್ಯ ಪದ್ಯಗಳನ್ನು ಹಾಡುತ್ತಾರೆ. +(ಉದಾ: ಕರ್ಣಾರ್ಜುನರ ಯುದ್ಧಇತ್ಯಾದಿ) ಬಾಲಕರು ಆ ಪದ್ಯಕ್ಕೆ ಅರ್ಥ ಹೇಳುವುದರ ಮೂಲಕ ಕಥಾಭಾಗವನ್ನು ಮುಂದುವರಿಸುತ್ತಾರೆ. +ಹೂವಿನ ಕೋಲನ್ನು ಬೆಂಡು ವಂತ್ತು ಬೇಗಡೆಯಿಂದ ತಯಾರಿಸುವುದು . +ಇದರಲ್ಲಿ ಬಣ್ಣಬಣ್ಣದ ಬೇಗಡೆಯ ರಚನೆಗಳು ಜೋಲಾಡುವಂತೆ ಇರುತ್ತದೆ. +ಹೂವಿನಕೋಲು ಹಿಡಿದು ಕುಳಿತುಕೊಳ್ಳುವ ಇಬ್ಬರು ಬಾಲಕರು ಬಿಳಿ ಚಡ್ಡಿ, ಬಿಳಿ ಅಂಗಿ ತಲೆಗೆ ಬಿಳಿ ಬಣ್ಣದ ಟೊಪ್ಪಿ ಧರಿಸಿರಬೇಕು. +ಆಗ ಆ ಚಂದವೇ ಬೇರೆ ಭಾಗವತರು ಯಕ್ಷಗಾನದ ಸಾಂಪ್ರದಾಯಿಕ ವೇಷಭೂಷಣಗಳನ್ನು ತೊಟ್ಟರುತ್ತಾರೆ. +ಇದು ಮಳೆಗಾಲದಲ್ಲಿ ಕಲಾವಿದರಿಗೆ ಆರ್ಥಿಕ ಭದ್ರತೆಯನ್ನು ಹಾಗೂ ಯಕ್ಷಗಾನ ತರಬೇತಿಯನ್ನು ಪಡೆಯಲು ಸಾಧ್ಯ ಹಾಗೂ ಜನರಿಗೆ ಮಹಾಕಾವ್ಯದ ಅರಿವನ್ನು ಶ್ರಾವಣಮಾಸದ ಪುಣ್ಯಕಾಲವನ್ನು ಸ್ಮರಿಸಲು, ಅರಿಯಲು ಸಾಧ್ಯ. +ನವರಾತ್ರಿಯ ಸಮಯ ೧ಂ ದಿನಗಳು ದೇವಿಯ ಪೂಜೆ ಪುನಸ್ಕಾರಗಳು ನಡೆಯುವ ಅಮೃತಕಾಲ . +ಅಂತಹ ಕಾಲದಲ್ಲಿ ಅವಿರತ ೧ಂ ದಿನಗಳಲ್ಲಿ ಊರಲ್ಲಿ ಅಥವಾ ಪರ ಊರಿನಲ್ಲಿ ನಡೆಯುವ ಯಕ್ಷಗಾನ ಒಂದು ಭಾಗ. +ನಾನು : ಅಜ್ಜ, ಯಕ್ಷಗಾನದಲ್ಲಿ ಇನ್ನೂ ಹೆಚ್ಚಿನ ವೈಎಧ್ಯತೆ ಇದೆಯೇ? +ಅಜ್ಜ : ಹೌದು, ಜಡೆ ಹೆಣೆಯುವುದು ಒಂದು ರೀತಿಯ ಮನೋರಂಜನೆಕೊಡುತ್ತದೆ. +ಅಷ್ಟೇ ಪರಿಶ್ರಮವಿದೆ. +ನಾನು : ಅಜ್ಜ, ಈ ಜಡೆ ಹೆಣೆಯುವುದು ಯಕ್ಷಗಾನದ ಯಾವ ಸಮಯದಲ್ಲಿ? +ಯಾವ ಕಲಾವಿದರ ಪಾಲಿವ ವೇಷ. +ಅದು ಯಾವ ರೀತಿ ಬಿಡಿಸಿ ಹೇಳಿ? +ಅಜ್ಜ : ಪ್ರಸಂಗ ಮುಗಿದ ಮೇಲೆ ಆಟ ಆಡಿಸುವವರ ಒತ್ತಾಯದ ಮೇರೆಗೆ ಬೆಳಗಿನ ಜಾವದಲ್ಲಿ ನಡೆಯುತ್ತದೆ. +ಜಡೆ ನೇಯುವುದಕ್ಕೆ ರಂಗಸ್ಥಳದ ಮೇಲೆ ಮಧ್ಯದಲ್ಲಿ ಅಡ್ಡಲಾಗಿ ದೊಡ್ಡ ಕಂಬ ಹಾಕಿ ೬ ಎಳೆಯ ಹುರಿಹಗ್ಗ ನೇತು ಹಾಕಿರುತ್ತಾರೆ. +ಇಂಥವರೇ ಈ ಕೆಲಸ ಮಾಡಬೇಕೆಂಬ ನಿಯಮವಿಲ್ಲ. +ಗೊತ್ತಿರುವ ಯಾರಾದರೂ ೩ ಜನ ಎಂಟಂಕಿಯ ಆಕಾರದಲ್ಲಿ ತಿರುಗಬೇಕು. +ಸ್ವಲ್ಪ ವ್ಯತ್ಯಾಸವಾದರೂ ಇಡೀ ಕೆಲಸ ವ್ಯರ್ಥ, ಜೊತೆಗೆ ಪ್ರೇಕ್ಷಕರು ಹಾಸ್ಯಮಾಡಿಬಿಡುತ್ತಾರೆ. +ಭಾಗವತರು “ವಾರಿಜಗಂಧಿನಿ” ಕೀರಭಾಷಿಣಿ ಮುದ್ದು ನೀರೆ ನೀ ಬಾಗಿಲತೆರೆಯೇ. . . ಎಂದು ತೆಂಕಿನ ಕೃಷ್ಣ ಪಾರಿಜಾತ ಪ್ರಸಂಗದ ಪದ್ಯವನ್ನು ಆಯ್ಕೆಮಾಡಿ ಹೇಳುತ್ತಾರೆ. +ಜಡೆ ನೇಯುವುದು ಮತ್ತು ಬಿಡಿಸುವುದು ಒಂದು ಬಗೆಯ ಮೋಜನ್ನು ತರುತ್ತದೆ. +ಕೊನೆಗೆ ಮುಗಿದ ನಂತರ ಜನರ ಚಪ್ಪಾಳೆಯ ಅಭಿನಂದನೆ ದೊರೆಯುತ್ತದೆ. +ನಾನು : ಅಜ್ಜ ಯಕ್ಷಗಾನದಲ್ಲಿ ಇಷ್ಟೆಲ್ಲಾ ಮನೋರಂಜನೆ ನೃತ್ಯ ವೈಭವ,ವೈವಿಧ್ಯತೆ ಇದೆಯೇ? +ದೊಡ್ಡ ಮೇಧಾವಿ, ಸಾಹಿತಿ ಶಿವರಾಮ ಕಾರಂತರನ್ನು ತಾವು ಆಕರ್ಷಿಸಿದ ಬಗೆ ಹೇಗೆ? +ಅವರ ಪ್ರಯೋಗಾತ್ಮಕ, ವಿಮರ್ಶಾತ್ಮಕ ಯಕ್ಷಗಾನಕ್ಕೆ ಹೇಗೆ ಸಹಕಾರಿಯಾದಿರಿ? +ಅಜ್ಜ : ಒಳ್ಳೆಯ ಪ್ರಶ್ನೆ ಕೇಳಿದೆ ಮಗು, ನಿಜವಾಗಿಯೂ ಕಾರಂತರು ಸೃಜನಾತ್ಮಕವ್ಯಕ್ತಿ. +ನಾನಾ ರಾಜ್ಯದ ಕಲೆಗಳಾದ ಕಥಕ್ಕಳಿ, ಮಣಿಪುರಿ, ಭರತನಾಟ್ಯ, ಒಡಿಸ್ಸಿ ಹೀಗೆ ಹಲವು ಕಲೆಗಳನ್ನು ಒಂದೆಡೆ ಸೇರಿಸಿ 'ಬ್ಯಾಲೆ'ಯಾಗಿ ಮಾಡಿ ಪ್ರಯೋಗಿಸಿ ಯಶಸ್ಸು ಕಂಡವರು. +ಯಕ್ಷಗಾನದ ಭಾಗವತಿಕೆಗೆ ಸ್ಕಾಕ್ಸೋಪೋನ್‌, ಪಿಟೀಲು ಮುಂತಾದ ವಾದ್ಯಗಳನ್ನು ಯಶಸ್ವಿಯಾಗಿ ಅಳವಡಿಸಿದರು. +ಅಲ್ಲದೇ ನೃತ್ಯದಲ್ಲಿ ಸಂಪ್ರದಾಯಕ್ಕೆ ಚ್ಯುತಿ ಬಾರದಂತೆ ದೇಹದ ಭಂಗಿ, ಮುಖಭಾವ, ಕೈಮುದೆ,ನವರಸಕ್ಕೆ ತಕ್ಕಂತೆ ಅಭಿವ್ಯಕ್ತಿಗೆ ಪ್ರಾಶಸ್ತ್ಯ ನೀಡಿ ಕಲಾವಿದರನ್ನು ಸಜ್ಜುಗೊಳಿಸುತ್ತಿದ್ದರು. +ಯಕ್ಷಕಲೆಯನ್ನು ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೂ ಅಲ್ಲದೆ ಇಟಲಿ,ಅಮೇರಿಕಾ, ಹಾಂಕಾಂಗ್‌, ಸಿಂಗಾಪುರ, ರಷ್ಯಾ, ಬ್ಯಾಂಕಾಕ್‌ ಹೀಗೆ ಅನೇಕ ಕಡೆ ತೋರ್ಪಡಿಸಿದರು. +ಅವರನ್ನು ನಾನು ಆಕರ್ಷಿಸಿದ್ದೇನೂ ಇಲ್ಲ. +ನನ್ನಲ್ಲಿನ ಆಳ್ತನ, ವೇಷಕ್ಕೆ ತಕ್ಕಂತೆ ಭಾಷೆ, ಪಾತ್ರದಲ್ಲಿ ತನ್ಮಯತೆ ಪಾತ್ರನಿರ್ವಹಣೆ ನೋಡಿ ಶಭಾಷ್‌ಗಿರಿ ಕೊಟ್ಟಿದ್ದೂ ಇದೆ. +ಅವರ ಯೋಜನೆ, ಯೋಚನೆ, ಮನಸ್ಥಿತಿ ನನಗೆ ಹಿಡಿಸುತ್ತಿತ್ತು . +ನಮ್ಮೊಳಗೆ ಹೊಂದಾಣಿಕೆಯೂ ಇತ್ತು . +ಎಲ್ಲರಿಗೂ ಬೈದು ಪರಿಶ್ರಮದಿಂದ ಹಾಗೆ ಮಾಡಿ ಹೀಗೆ ಮಾಡಿ ಎಂದು ಹೇಳುತ್ತಿದ್ದರೆ ನನ್ನ ವಿಷಯಕ್ಕೆ ಅಷ್ಟೊಂದಾಗಿ ಹೇಳುತ್ತಿರಲಿಲ್ಲ. +ನೀವು ಮಾಡಿದ್ದು ಸರಿ ಮಾರಾಯರೇ ಅಂದರೆ ಅವರ ಆಲೋಚನೆಗೆ ಅನುಗುಣವಾಗಿ ನನ್ನ ಪಾತ್ರ ನಿರ್ವಹಣೆ ಇರುತ್ತಿತ್ತು. +ಹಾಗೆ ಅವರು ಗೌರವದಿಂದಲೆ ನನ್ನನ್ನು ಕಾಣುತ್ತಿದ್ದರು. +ನಾನು : ಅಜ್ಜ, ಕಾರಂತರ ತಂಡ ಅಲ್ಲದೆ, ನೀವು ಯಾವ ಯಾವ ತಂಡದೊಂದಿಗೆ ವಿದೇಶಕ್ಕೆ ಹೋಗಿದ್ದೀರಿ? +ಅಜ್ಜ : ಮಾರ್ತಾ ಆಶ್ಚನ್‌, ಕೆ. ಎಸ್‌. ಉಪಾಧ್ಯಾಯರ ತಂಡ ಹೀಗೆ ಮೂರು ತಂಡದವರೊಂದಿಗೆ ವಿವಿಧ ದೇಶಗಳಲ್ಲಿ ಯಕ್ಷಗಾನ ಪ್ರದರ್ಶನ ನೀಡಿದ್ದೇವೆ. +ನಾನು : ನಿಮ್ಮ ವಿದೇಶ ಪ್ರಯಾಣದಲ್ಲಿ ವಿದೇಶಿಯರ ಒಲವು ಹೇಗಿತ್ತು? +ಅವರು ನಿಮ್ಮಲ್ಲಿನ ತಂಡದವರ ನಟನೆ, ಅಭಿನಯ ಮುಂತಾದವುಗಳನ್ನು ಕೂಲಂಕುಷವಾಗಿ ಗಮನಿಸುತ್ತಾರೆಯೇ? +ಅಂತಹ ಘಟನೆ ನಡೆದಿತ್ತೇ? +ಅಜ್ಜ : ವಿದೇಶಿಯರ ಒಲವು ನಮ್ಮೆಲ್ಲರ ಎಣಿಕೆಗೆ ಮೀರಿಯೇ ಇತ್ತು. +ಭಾರತದ ಕಲೆಯಲ್ಲಿ ಏನೋ ಒಂದು ರೀತಿಯ ವಿಶೇಷತೆ, ವಿವಿಧತೆ ಇರುತ್ತದೆ ಎನ್ನುತ್ತಾರೆ. +ಅವರು ನಮ್ಮನ್ನು ಎಷ್ಟು ಸೂಕ್ಷ್ಮವಾಗಿ ವೀಕ್ಷಿಸುತ್ತಿದ್ದರು ಎಂದರೆ ನಮ್ಮ ತಂಡದ ವ್ಯಕ್ತಿಯೊಬ್ಬ ಹೆಜ್ಜೆಯಲ್ಲಿ ಕೊಂಚ ತಪ್ಪಿದ್ದಕ್ಕೆ ಜಪಾನಿಗ “ಇದು ಯಾವ ತಾಳ' ಇದರ ಅರ್ಥವೇನು ಎಂದು ಕೇಳಿದ. +ರಾಗ, ತಾಳ, ಶ್ರುತಿ, ಜ್ಞಾನ ಅವರಿಗೂ ಇದೆ ಎಂಬುದಕ್ಕೆ ಇದೇ ಸಾಕ್ಷಿ. +ಹಾಗೆಯೇ ನಮ್ಮಲ್ಲಿ ಗಿರಕಿ ಹಾಕುವುದು, ನೆಗೆಯುವುದು ಇವನ್ನೆಲ್ಲಾ ಕಂಡ ವಿದೇಶಿಯರು "ಇದೆಲ್ಲಾ ಏನು? +ಇದು ಭಾವಾಭಿವೃಕ್ತಿಗೆ ಹೇಗೆ ಸಹಕಾರಿಯಾಗುತ್ತದೆ"ಎಂದು ಕೇಳಿದಾಗ ಕಾರಂತರಿಂದ ಬಂದ ಉತ್ತರ ಬಲು ಸೊಗಸಾಗಿತ್ತು. +“ಒಬ್ಬ ವ್ಯಕ್ತಿ ಅತೀ ಸಂತೋಷ ಆದಾಗ, ಹಾಗೆಯೇ ಅತೀ ಸಿಟ್ಟು ಬಂದಾಗ ಆತ ಏನುಮಾಡುತ್ತಾನೆ ಎಂದು ಆತನ ಅರಿವಿಗೆ ಬರುವುದಿಲ್ಲ. +ಆಗ ಆತ ಹಾರುವುದು,ನೆಗೆಯುವುದನ್ನು,ಗಿರಕಿ ಹೊಡೆಯುವುದು ಮಾಡಿದರೆ ತಪ್ಪಲ್ಲ. +ಅದೂ ಒಂದು ಭಾವಾಭಿವ್ಯಕ್ತಿಯೇ ಎಂದಾಗ, ವಿದೇಶಿಯರು Very good ಈ ಕಲೆಯಲ್ಲಿಎಲ್ಲಾ ರೀತಿಯ ರಸಭಾವಗಳು ಒಳಗೊಂಡಿವೆ ಎಂದು ಒಪ್ಪಿಕೊಂಡರು. +ನಾನು : ವಿದೇಶದಲ್ಲಿ ಇರುವಾಗ ಮನೆಯ ಜವಾಬ್ದಾರಿಯನ್ನು ಹೇಗೆ ನಿರ್ವಹಿಸುತ್ತಿದ್ದೀರಿ? +ಅಜ್ಜ: ಮೊದಮೊದಲು ಅದೊಂದು ಸಮಸ್ಯೆ ಅಂದುಕೊಂಡಿದ್ದೆ. +ಆದರೆ ಆ ಸಮಸ್ಯೆ ಸುಳ್ಳಾಗಿಸಿದವರು ಪತ್ನಿ ಲಕ್ಷ್ಮೀ. +೯ಜನ ಮಕ್ಕಳನ್ನು, ದೇವತಾ ಕಾರ್ಯವನ್ನು ನಡೆಸಿಕೊಂಡು ಹೋಗುತ್ತಿದ್ದಳು. +ನಾನು ಆಗಾಗ ಪತ್ರದ ಮುಖೇನ ಸಂಪರ್ಕಿಸಿ ವಿಚಾರ ಮಾಡುತ್ತಿದ್ದೆ. +ಹಾಗೂ ತಮ್ಮಂದಿರ ಮೇಲೂ ಜವಾಬ್ದಾರಿಯನ್ನು ಹಂಚಿಹೋಗಿದ್ದೆ. +ನಾನು : ಅಜ್ಜ,ನಿಮ್ಮ ವೇಷ ನೋಡಿದ ವಿದೇಶಿಯರು ಯಾವ ರೀತಿ ಪ್ರತಿಕ್ರಯಿಸುತ್ತಿದ್ದರು? +ಹಾಗೆಯೇ ನಿಮ್ಮಲ್ಲಿನ ಭಾಷಾ ತೊಡಕು ಸಮಸ್ಯೆಯಾಗಿ ಪರಿಣಮಿಸಿತ್ತೇ? +ಅಜ್ಜ : ಭಾಷೆ ಸಮಸ್ಯೆಯಿದ್ದರೂ ತಮ್ಮ ತಂಡದ ಮುಖ್ಯಸ್ಥರಿಂದ ನಿವಾರಣೆ ಆಗುತ್ತಿತ್ತು. +ಅವರು ನಮ್ಮ ಮತ್ತು ವಿದೇಶಿಗರ ನಡುವಿನ ಸೇತುವೆಯಾಗಿದ್ದರು. +ಯಕ್ಷಗಾನ ಪ್ರದರ್ಶನ ಮುಗಿದ ನಂತರ ವಿದೇಶಿಗರ ದಂಡು ಚೌಕಿಗೆ ಬಂದು “Demon ಎಲ್ಲಿ Where is Demon? ಎಂದು ಕೇಳುತ್ತಿದ್ದರು. +ಮತ್ತು ನನ್ನನ್ನು ಮುಟ್ಟಿ ನೋಡಿ ಪರೀಕ್ಷಿಸಿ, ಇವರೇ ಆ ವೇಷ ಮಾಡಿದವರು ಎಂದು ನಿರ್ಧರಿಸುತ್ತಿದ್ದರು. +ಯಾಕೆಂದರೆ ನನ್ನ ವೇಷ ಅಷ್ಟು ಭಯಂಕರವಾಗಿ ಕಾಣುತ್ತಿತ್ತು. +ಹಾಗೆಯೇ ಇದು ಮುಖವಾಡವೇ? +ಅಥವಾ ಮುಖದಲ್ಲಿ ಈರೀತಿ ಬಿಡಿಸಿಕೊಂಡಿರುವುದೇ ಎನ್ನುವಂತಹ ಕುತೂಹಲಕಾರಿ ಪ್ರಶ್ನೆಗಳನ್ನು ಕೇಳುತ್ತಿದ್ದರು. +ಹಾಗಾಗಿ ನಾನು ಮತ್ತು ನಮ್ಮ ತಂಡ ಅಮೇರಿಕಾದಲ್ಲಿ ಕೆಲದಿನಗಳ ಕಾಲ ತರಬೇತಿ ಕಾರ್ಯಕ್ರಮವನ್ನೂ ಕೂಡ ಮಾಡಿದ್ದೆವು. +ಯಕ್ಷಗಾನದ ಬಗೆಗೆ ಅವರಿಗೆ ಎಷ್ಟೊಂದು ಒಲವಿತ್ತು ಎಂಬುದನ್ನು ಇದರಿಂದಲೇ ತಿಳಿಯಬಹುದು. +ನಾನು : ಅಜ್ಜ, ದೇಶ ವಿದೇಶ ಪ್ರಯಾಣದಿಂದ ನಿಮ್ಮ ಆರ್ಥಿಕತೆಯಲ್ಲಿ ಸುಧಾರಣೆ ಕಂಡಿತ್ತೇ? +ಅಜ್ಜ : ಏನೋ ಸಂಬಳ ನಿಶ್ಚಯಿಸಿದ್ದರು, ಅದಕ್ಕೆ ಚ್ಯುತಿ ಇಲ್ಲ. +ಅದಕ್ಕಿಂತ ಹೆಚ್ಚಿನ ಯಾವ ರೀತಿಯ ವೇತನ ಇರುತ್ತಿರಲಿಲ್ಲ. +ಸಂಬಳದಲ್ಲಿ ಸ್ವಲ್ಪ ಹೆಚ್ಚಳವೇ ಬಿಟ್ಟರೆ ವಿದೇಶಕ್ಕೆ ಹೋದ ಕಾರಣದಿಂದ ಬೇರೆ ಯಾವ ಆರ್ಥಿಕ ಸುಧಾರಣೆ ಏನೂ ಇಲ್ಲ. +ನಾನು : ಪ್ರಥಮ ಪ್ರಧಾನಿ ನೆಹರು, ಬಾಬು ರಾಜೇಂದ್ರ ಪ್ರಸಾದ್‌ ಹಾಗೂ ಇಂದಿರಾಗಾಂಧಿ ಹೀಗೆ ಗಣ್ಯಾತಿಗಣ್ಯರ ನಿವಾಸದಲ್ಲಿ ಯಕ್ಷಗಾನ ಪ್ರದರ್ಶನಗೈದು ಭಾವಚಿತ್ರ ತೆಗೆಸಿಕೊಂಡಿದ್ದೀರಿ, ಆಗ ನಿಮ್ಮ ಭಾವನೆ ಯಾವ ರೀತಿಯಲ್ಲಿತ್ತು. +ಅಜ್ಜ : ಕಲಿತ ಕಲೆಗೆ ಸಾರ್ಥಕ ಭಾವನೆ ನನ್ನಲ್ಲಿ ಮೂಡಿತ್ತು. +ಯಾಕೆಂದ್ರೆ ದೇಶದ ಉನ್ನತ ಹುದ್ದೆಯಲ್ಲಿರುವ ವ್ಯಕ್ತಿಗಳು ನಮ್ಮ ಈ ಕಲೆ, ಕಲಾವಿದರ ಪ್ರಯತ್ನಕೆ ಪ್ರೋತ್ಸಾಹ ಸಂತಸ ತಂದಿದೆ. +ಇದರಿಂದ ಯಕ್ಷಗಾನ ಕಲೆ ಎಂತವರ ಆಸಕ್ತಿಯನ್ನು ಒಮ್ಮೆ ಆಕರ್ಷಿಸದೆ ಇರದು ಎಂಬುದು ದೇಶ ವಿದೇಶದಲ್ಲಿನ ಪ್ರೋತ್ಸಾಹವೇ ಜ್ವಲಂತ ಸಾಕ್ಷಿ. +ನಾನು : ಇಂದಿನ ಯಕ್ಷಗಾನದ ಬಗ್ಗೆ ನಿಮ್ಮ ನಿಲುವೇನು? +ಯುವ ಕಲಾವಿದರಿಗೆ ನಿಮ್ಮ ಕಿವಿ ಮಾತೇನು? +ಅಜ್ಜ : ಕಾಲಕ್ಕೆ ತಕ್ಕಂತೆ ಕೋಲ ಕಟ್ಟಬೇಕು. +ಆದರೆ ನಮ್ಮ ಹಳೆಯ ಸಂಪ್ರದಾಯ ಮರೆಯದೆ ಹೊಸತನ್ನು ತರಬೇಕು. +ಏಕೆಂದರೆ ನಶಿಸಿಹೋದ ಡೈನೋಸರ್‌ನಂತಹ ಪ್ರಾಣಿ ಸಂಕುಲದಂತೆ ಬಣ್ಣದ ವೇಷದಂಥ ಒಂದು ವರ್ಗದ ವೇಷವೆ ಕಣ್ಮರೆಯಾದರೆ ಸಹಿಸಲಾಗದು. +ಹಾಗಾಗಿ ಯಕ್ಷಗಾನವನ್ನು ಮೊದಲು ಕಲೆಯನ್ನಾಗಿ ಕಾಣಬೇಕು. +ಅಂದ ಮಾತ್ರಕ್ಕೆ ಹೊಸದನ್ನು ಸೇರಿಸಿಕೊಳ್ಳಬಾರದು ಎಂದೇನಿಲ್ಲ, ಒಳ್ಳೆಯದನ್ನು ಅಗತ್ಯವಾಗಿ ತೆಗೆದುಕೊಂಡು ಜನರ ಮನೋಭಾವಕ್ಕೆ ಧಕ್ಕೆ ಬಾರದಂತೆ ಒಗ್ಗಿಸಬೇಕು. +ಯಕ್ಷಗಾನ ಸಿನಿಮೀಯ ಯಕ್ಷಗಾನ ಆಗಬಾರದು. +ಸಿನಿಮಾ ಯಕ್ಷಗಾನೀಯ ಆಗುವ ಸೃಜನಾತ್ಮಕತೆ ನಮ್ಮಲ್ಲಿದ್ದರೆ ಎಷ್ಟು ಚೆಂದ ಅಲ್ವಾ? +ಯಕ್ಷಗಾನಕ್ಕೆ ತನ್ನದೇ ಆದ ಘನಸ್ಥಿಕೆ ಇದೆ. +ಅದನ್ನು ಉಳಿಸಿಕೊಂಡು ಬೆಳೆಸಿಕೊಂಡು ಹೋಗಬೇಕು. +ಯಕ್ಷಗಾನ ಕಲೆಯಲ್ಲಿ ರಾಕ್ಷಸದಂತಹ ಪಾತ್ರವರ್ಗವೇ ಇಲ್ಲವಾದರೆ ಅದನ್ನು ಪುನಃ ಬಳಕೆಗೆ ತರುವುದು ಕಷ್ಟವಾಗುತ್ತದೆ. +ಇಲ್ಲವೆಂದರೆ ಯಕ್ಷಗಾನ ಮೊದಲು ಹೇಗಿತ್ತು ಎನ್ನುವುದೇ ಮರೆತು ಹೋಗುತ್ತದೆ. +ಇದನ್ನು ಯುವ ಕಲಾವಿದರು ಅರಿತುಕೊಳ್ಳಬೇಕು. +ಯಕ್ಷಗಾನ ಕೇವಲ ಒಬ್ಬರ ಸ್ವತ್ತಲ್ಲ. +ಅದನ್ನು ಬರೀ ವ್ಯಾಪಾರಿ ದೃಷ್ಟಿಯಿಂದ ನೋಡದೆ, ಕಲೆಯನ್ನು ಉಳಿಸಿ ಬೆಳೆಸುವ, ಹಳೆಯದನ್ನು ಮರೆಯದೆ, ಹೊಸತನ್ನು ಬಿಡದೆ ವಿಚಾರವಂತರಾಗಿ ವರ್ತಿಸಬೇಕು. +ಯಕ್ಷಗಾನ ಎನ್ನುವುದು ಒಂದು ಶ್ರೀಮಂತ ಕಲೆ. +ಸರ್ವಸಂಪನ್ನ ಕಲಾ ಪರಿಪೂರ್ಣ ರಸದೌತಣ. +ಬಹುಶಃ ಇಷ್ಟು ಸುಂದರವಾಗಿರುವ ಕಲೆ ಪ್ರಪಂಚದಲ್ಲೇ ವಿರಳ. +ಇದನ್ನೇ ತಮ್ಮ ಉಸಿರೆಂದು ಭಾವಿಸಿ ಇದರಲ್ಲಿ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡು ಜನಮನದಲ್ಲಿ ಸ್ಥಿರವಾದ ಸ್ಥಾನಮಾನ ಸಂಪಾದಿಸಿದ ಅಜ್ಜನ ಸಾಧನೆ ಅವಿಸ್ಮರಣೀಯ. +ನಮ್ಮ ವಂಶವೇ ಯಕ್ಷಗಾನ ಹಾಗೂ ನಾನಾ ಕಲೆಯಲ್ಲಿ ಅರ್ಪಿಸಿಕೊಂಡಿದೆ ಎಂದರೆ ತಪ್ಪಾಗಲಾರದು. +ಯಾಕೆಂದರೆ ನಮ್ಮವರೇ ಆದ ಪಾಂಡೇಶ್ವರ ಪುಟ್ಟಯ್ಯ,ಸದಾಶಿವಯ್ಯ, ವೆಂಕಟ್ರಾಯ್‌, ಬೆಳ್ಕಳೆ ರಾಮಕೃಷ್ಣಯ್ಯ ಸುಬ್ಬಣ್ಣಯ್ಯ, ಜಂಬೂರು ರಾಮಚಂದ್ರ ಶಾನುಭೋಗ ಶ್ರೀನಿವಾಸ ಭಾಗವತರು, ಹೆರೆಂಜೆ ಶಿವರಾಮಯ್ಯ,ನೀಲಾವರ ರಾಮಕೃಷ್ಣಯ್ಯ, ಲಕ್ಷ್ಮೀನಾರಾಯಣಯ್ಯ, ಇಪ್ಟೇ ಯಾಕೆ ತೆಂಕಿನಲ್ಲಿ ದೇವಾನಂದ, ರಾಕ್ಷಸ ವೇಷದಲ್ಲಿ ಮೆರೆಯುವ ಜಗದಾಬಿ ಪಡುಬಿದ್ರೆ ಅಲ್ಲದೆ,ಸಂಗೀತ ಕ್ಷೇತ್ರದ ಗಾನಕೋಗಿಲೆ ಪಿ.ಕಾಳಿಂಗರಾವ್‌ ಹೇಳ ಹೊರಟರೆ ದಿನಗಳೇ ಸಾಲದು. +ಗ್ರಂಥಾಲಯಕ್ಕೆ ಹೋಗಿ ಆಗಾಗ ಪುಸ್ತಕ ತಿರುವಿ ಹಾಕುವುದು ನನ್ನ ಅಭ್ಯಾಸ. +ಅದರಲ್ಲೂ ಯಕ್ಷಗಾನದ ಪುಸ್ತಕ ಕಂಡರೆ ಪ್ರತಿ ಪುಟವನ್ನು ಎವೆಯಿಕ್ಕದೆ ನೋಡುತ್ತಿದ್ದೆ. +ಹೀಗೆ ನೋಡುವಾಗ ಅಜ್ಜನ ಹೆಸರು ಫೋಟೋ ಇದ್ದಾಗ ನನ್ನ ಬಳಿ ಇರುವ ಸ್ನೇಹಿತರಿಗೆ ತೋರಿಸಿ ಸಂತಸ ಪಡುತ್ತಿದ್ದೆ. +ಹಾಗೆಯೇ ಕೆಲವೊಮ್ಮೆ ಯೋಚಿಸುತ್ತಿದ್ದೆ. +ಇಷ್ಟೊಂದು ಸಾಧನೆಗೈದ ಅಜ್ಜನ ಬಗ್ಗೆ ಪುಸ್ತಕ ಬರೆಯಬೇಕು. +ಹಾಗೆ ಅದಕ್ಕೆಲ್ಲಾ ಕಾಲ ಕೂಡಿ ಬರಬೇಕು ಎಂದಿರುವಾಗ ಹೀಗೆ ರವೀಂದ್ರ ಕಲಾ ಕ್ಷೇತ್ರಕ್ಕೆ ಯಾವಾಗಲೂ ಯಕ್ಷಗಾನ, ನಾಟಕ, ಸಂಗೀತ. . . ಮುಂತಾದ ಕಾರ್ಯಕ್ರಮಕ್ಕೆ ಹೋಗುತ್ತಿದ್ದೆ. +ಒಂದು ದಿನ ರವೀಂದ್ರ ಕಲಾಕ್ಷೇತ್ರದ ಸೂಚನಾ ಫಲಕದಲ್ಲಿ ಅಜ್ಜನ ಫೋಟೋ ರಾರಾಜಿಸುತ್ತಿದ್ದುದನ್ನು ಕಂಡು ತಕ್ಷಣ ಅದರ ವಿಚಾರಣೆಗೆ ಮುಂದಾದೆ. +ಆಗ ಆ ಫೋಟೋ ಸಂಗ್ರಹ ನಮ್ಮೂರವರಾದ ಶ್ರೀನಿವಾಸ ಸಾಸ್ತಾನ ರವರದ್ದು ಎಂದು ತಿಳಿಯಿತು. +ಅವರ ನಿವಾಸಕ್ಕೆ ಭೇಟಿ ನೀಡಿ, ನನಗೂ ಅಜ್ಜನ ಫೋಟೋ ಕೊಡುತ್ತೀರಾ ಎಂದಾಗ ಫೋಟೋ ಕೊಟ್ಟ ಅವರು ನಿಮ್ಮಜ್ಜನ ಬಗ್ಗೆ ಪುಸ್ತಕ ಯಾಕೆ ಮಾಡಬಾರದು ಎಂದಾಕ್ಷಣ ಸಂತಸದಿಂದ ಅದಕ್ಕೆ ಏನೇನು ಮಾಡಬೇಕೆಂದು ಕೇಳಿದೆ. +ಆಗ ಅವರು ನಿಮ್ಮಜ್ಜನ ಬಗ್ಗೆ ಎಲ್ಲ Documents ತನ್ನಿ, ನಾನು ಅಕಾಡೆಮಿಯ ಸಭೆಯಲ್ಲಿ ಪ್ರಸ್ತಾಪಿಸುತ್ತೇನೆ ಎಂದರು. +ಆಗ ನಾನು ತಡ ಮಾಡದೆ ಅದೇ ದಿನ ಸಂಜೆ ಊರಿಗೆ ಬಂದು ಅಜ್ಜನ ಬಗ್ಗೆ ಬರೆಯಬಲ್ಲ ಸಮರ್ಥರು ಯಾರು ಎಂದು ಯೋಚಿಸಿದಾಗ ನಮ್ಮೂರಿನವರೇ ಆದ, ಅಜ್ಜನ ಅಭಿಮಾನಿಗಳು ಆದ ಪ್ರಸಂಗಕರ್ತರು ನಿವೃತ್ತ ಶಿಕ್ಷಕರಾದ ಕಂದಾವರ ರಘುರಾಮ ಶೆಟ್ಟರೇ ಸರಿ ಎಂದು, ಅವರ ಬಳಿ ಎಲ್ಲಾ ವಿಷಯ ವಿಚಾರ ಪ್ರಸ್ತಾಪಿಸಿದಾಗ ಅವರು ತಮ್ಮ ಅನಾರೋಗ್ಯದಲ್ಲೂ ಸಂತೋಷದಿಂದ ಒಪ್ಪಿಕೊಂಡರು. +ನಮ್ಮ ಮನೆಗೆ ಬಂದು ಅಜ್ಜನ ಅನುಭವವನ್ನು ಕೇಳಿಕೊಂಡು, ಬಾಲ್ಯದಿಂದ ಇಲ್ಲಿಯವರೆಗಿನ ಅಜ್ಜನ ನೆನಪುಗಳನ್ನು ಕಲೆ ಹಾಕಿ ಈ ಒಂದು ಪುಸ್ತಕ ರಚನೆಗೆ ತನ್ನ ಕೈಚಳಕವನ್ನು ತೋರಿಸಿದ್ದಾರೆ. +ಅಲ್ಲದೇ ಅಜ್ಜನ ಬಗ್ಗೆ ಇನ್ನಿತರರ ಅಭಿಪ್ರಾಯದ ಲೇಖನಗಳನ್ನು ಸಂಗ್ರಹಿಸಿ ಈ ಪುಸ್ತಕಕ್ಕೆ ಸೇರ್ಪಡಿಸಲು ಮಾರ್ಗದರ್ಶನ ನೀಡಿದರು. +ಹಾಗೆಯೇ ಸಾಧ್ಯವಾದಷ್ಟು ಲೇಖನಗಳನ್ನು ಸಂಗ್ರಹಿಸಿದೆವು. +ಭಾವಚಿತ್ರ ಸಂಗ್ರಹಣೆ ಮತ್ತು ಬರೆವಣಿಗೆಯಲ್ಲಿ ಸುದರ್ಶನ ಉರಾಳ, ಸತೀಶ್‌ಕುಣಿಗಲ್‌, ಪಿ. ಕರುಣಾಕರ್‌ ಹೆಬ್ಬಾರ್‌ ಮತ್ತು ಬನ್ನಂಜೆ ಸಂಜೀವ ಸುವರ್ಣ,ಮಾಲಿನಿ ಮಲ್ಯ ಶಶಿಕಿರಣ್‌ ಉರಾಳ್‌, ಲೋಕೇಶ್‌, ಅರುಣ್‌. . . ಹೀಗೆ ಅನೇಕರು ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಸಹಕರಿಸಿದ್ದಾರೆ. +ಹಾಗೆಯೇ ಮುಖ್ಯವಾಗಿ ಪಿ.ಕಿಶನ್‌ ಕುಮಾರ್‌ ಹೆಗಡೆ ಹಾಗೂ ಯಕ್ಷಗಾನ ಅಕಾಡೆಮಿಯ ಸರ್ವಸಹಕಾರವನ್ನು ಸ್ಮರಿಸುತ್ತಾ ಎಲ್ಲರಿಗೂ ಅಹಂಭೋ ಅಭಿವಾದಯೇ. +ಬಡಗುತಿಟ್ಟನ "ಬಣ್ಣದ ವೇಷ" ಕ್ಕೆ ಪರ್ಯಾಯ ಪದ ಸಕ್ಕಟ್ಟು ಲಕ್ಷ್ಮೀ ನಾರಾಯಣಯ್ಯ . +ಪರಂಪರೆಯ ಬಲಿಷ್ಠ ಚೌಕಟ್ಟಿನಲ್ಲಿ ದೈತ್ಯ ಪ್ರತಿಭೆಯನ್ನು ಪ್ರದರ್ಶಿಸಿ ಅಪಾರ ಪ್ರೇಕ್ಷಕರ ಮನಸೂರೆಗೊಂಡು ಬರ್ಣನ ಭಯಂಕರನಾಗಿ ಮೆರೆದ ಹಿರಿಯ ಕಲಾವಿದರು ಸಕ್ಕಟ್ಟು ಲಕ್ಷ್ಮೀನಾರಾಯಣಯ್ಯ ಅವರು. +ಯಕ್ಷಗಾನ ನಮ್ಮ ರಾಜ್ಯದ ಒಂದು ಪರಿಪೂರ್ಣ ಜಾನಪದ ಸಂಪತ್ತು. +ಇದನ್ನುಉಳಿಸಿಕೊಳ್ಳುವುದು ಹಾಗೂ ಬೆಳಸಿಕೊಳ್ಳುವುದು ನಮ್ಮ ಆದ್ಯ ಕರ್ತವ್ಯ. +ಅದರೊಂದಿಗೆ ಈ ಕಲೆಯಲ್ಲಿ ಸೇವೆ ಮಾಡಿದ ಮೇರು ಕಲಾವಿದರ ಸಾಧನೆಯನ್ನು ಪುಸ್ತಕ ರೂಪದಲ್ಲಿ ದಾಖಲಿಸುವುದು ಕೂಡಾ ಅಷ್ಟೇ ಮುಖ್ಯವಾದುದು. +ಹಾಗೆ ದಾಖಲಿಸುವುದರಿಂದ ಆ ಕಲೆಯಲ್ಲಿ ದುಡಿಯುವವರಿಗೆ ಅದು ಸ್ಪೂರ್ತಿಯನ್ನು ನಿಡುವ ದಾರಿದೀಪವಾಗುವುದು ಮಾತ್ರವಲ್ಲ, ಮುಂದಿನ ಪೀಳಿಗೆಯವರಿಗೆ ಅಂಥವರ ಸಾಧನೆಯನ್ನು ತಿಳಿಯಲು ಸಹಾಯಕವಾಗುತ್ತದೆ. +ಆ ನಿಟ್ಟಿನಲ್ಲಿ ಬಡಗುತಿಟ್ಟನ ಯಕ್ಷಗಾನದಲ್ಲಿ ಮೂವತ್ತಕ್ಕೂ ಹೆಚ್ಚು ವರ್ಷ ಬಣ್ಣದ ವೇಷಧಾರಿಯಾಗಿ ಮರೆದ ಸಕ್ಕಟ್ಟು ಲಕ್ಷಿ ನಾರಾಯಣರಾಯರ ಕುರಿತಾಗಿ ಒಂದು ಕೃತಿಯನ್ನು ಹೊರತಬೇಕೆಂದು ಅವರ ಅಭಿಮಾನಿಗಳು ಬಯಸಿದರು. +ಅದರಂತೆ 'ಯಕ್ಷಲೋಕದ ಮಾಸದಬಣ್ಣ' ಎಂಬ ಹೆಸರಿನಿಂದ ಈ ಕೃತಿ ಇಂದು ಹೊರಬರುತ್ತಿದೆ. +ಯಕ್ಷರೋಕದಲ್ಲೇ ಅತ್ಯುತ್ತಮ ಸಾಧನೆ ಮಾಡಿರುವ ಬಡಗುತಿಟ್ಟು ಬಣ್ಣದ ಕಲಾವಿದರೆಂದೇ ಪ್ರಸಿದ್ಧರಾದ ಸಕ್ಕಟ್ಟು ಲಕ್ಷೀ ನಾರಯಣಯ್ಯರವರ ಆತ್ಮಕಥೆ ಹಾಗೂ ಇವರ ಬಗ್ಗೆ ಹಲವು ಲೇಖಕರು ಬರೆದಿರುವ ಲೇಖನಗಳನ್ನು ಅಕಾಡೆಮಿಯು ಪುಸ್ತಕ ರೂಪದಲ್ಲಿ ಇದೀಗ ಪ್ರಕಟಿಸುತ್ತಿದೆ. +ಅವರ'ಬಣ್ಣಗಾರಿಕೆಯಲ್ಲಿ ಬಳ್ಳೆಯ ರೂಪದಲ್ಲಿ ಅತ್ಯುತ್ತಮವಾದ ಯಕ್ಷಗಾನ ಹೊರಚಿಮ್ಮಲು ಇಂತಹ ಪುಸ್ತಕ ಮುಂದಿನ ಜನರಿಗೆ ಸಹಕಾರಿಯಾಗುತ್ತದೆ. +ಕರ್ನಾಟಕ ಯಕ್ಷಗಾನ ಅಕಾಡೆಮಿ ಕನ್ನಡ ಭವನ, ಜೆ. ರಸ್ತೆ ಜೆಂಗಳೂರು. -- GitLab