From c16d4c7aa59c4eca7a055c6e32d2a1a0f216ce5d Mon Sep 17 00:00:00 2001 From: Narendra VG Date: Mon, 17 Apr 2023 15:47:39 +0530 Subject: [PATCH] Upload New File --- ...6\340\262\256\340\263\200\340\262\267.txt" | 376 ++++++++++++++++++ 1 file changed, 376 insertions(+) create mode 100644 "Data Collected/Kannada/MIT Manipal/Kannada-Scrapped-dta/\340\262\206\340\262\256\340\263\200\340\262\267.txt" diff --git "a/Data Collected/Kannada/MIT Manipal/Kannada-Scrapped-dta/\340\262\206\340\262\256\340\263\200\340\262\267.txt" "b/Data Collected/Kannada/MIT Manipal/Kannada-Scrapped-dta/\340\262\206\340\262\256\340\263\200\340\262\267.txt" new file mode 100644 index 0000000..03056a9 --- /dev/null +++ "b/Data Collected/Kannada/MIT Manipal/Kannada-Scrapped-dta/\340\262\206\340\262\256\340\263\200\340\262\267.txt" @@ -0,0 +1,376 @@ +ರಮಾ ಕುರ್ಚಿಯನ್ನೊರಗಿ ಕುಳಿತಿದ್ದಳು. +ದುಃಖವೇ ಮೂರ್ತಿವೆತ್ತಂತೆ ಕುಳಿತಿದ್ದ ಅವಳ ಹೃದಯದಲ್ಲಿ ಭೀಕರ ಕೋಲಾಹಲ ನಡೆದಿತ್ತು. +ಕಣ್ಣುಗಳು ಆಳಕ್ಕಿಳಿದಿದ್ದವು. +ದೇಹದ ಅಣು ಅಣುವೂ ನೋವಿನಿಂದ ಮಿಡಿಯುತ್ತಿತ್ತು. +“ತಾನೇಕೆ ದುಡುಕಿಬಿಟ್ಟೆ? +ತಾನು ಮಾಡಿದ್ದು ಎಂಥಾ ಘೋರ!ಅಸಹ್ಯ ಬೀಸಿ ಬಂದ ಗಾಳಿಗೆ ಕಿಟಕಿ ಬಾಗಿಲುಗಳಿಗೆ ಹಾಕಿದ್ದ ಪರದೆಗಳು ಪಟ ಪಟನೆ ಬಡಿದವು. +ಹೊರಗಡೆ ಬಾಗಿಲು ತಟ್ಟಿದ ಶಬ್ದವಾಯಿತು. +“ರಮಾ…” ಸದಾನಂದ ಕರೆಯುತ್ತಿದ್ದ. +ದೇಹದಲ್ಲಿ ತಣ್ಣನೆಯ ರಕ್ತ ಹರಿದಂತಾಯಿತು. +ಅವಳ ತುಟಿಗಳು ಕೈಗಳು ಕಾಲುಗಳು ದೇಹವಿಡೀ ಮಂಜಿನ ಗಡ್ಡೆಯಂತಾಯಿತು. +“ರಮಾ ಬಾಗಿಲು ತೆಗಿ” ಪುನಃ ತಟ್ಟಿದ. +ಯಾರಿಂದಲೋ ತಳ್ಳಲ್ಪಟ್ಟವಳಂತೆ ಮುಂದೆ ನಡೆದಳು. +ನಡುಗುತ್ತಿದ್ದ ಕೈಗಳು ಬೋಲ್ಟನ್ನು ತೆಗೆದವು. +“ಅದೆಷ್ಟು ಹೊತ್ತು ಮಾಡುತ್ತೀಯಾ!ನಿನ್ನನ್ನು ನೋಡಲು ಎಷ್ಟು ಕಾತುರ ಗೊತ್ತೆ. . ಈ ನಿನ್ನ…”ಮಾತು ನಿಲ್ಲಿಸಿ ಅವಳ ಮುಖ ನೋಡಿದ. +ಅವನ ಮುಖದ ಮೇಲಿನ ಹೊನಗೆ ಮುದುಡಿತು. +ಹತ್ತಿರ ಬಂದ “ಯಾಕೆ ಹೀಗೆ?ಹುಷಾರಿಲ್ಲವಾ…?” ಅವನ ಕೈಗಳು ಅವಳ ಕುತ್ತಿಗೆ… ಮುಖ ಹಣೆಯನ್ನು ಸವರಿದವು. +ಹಣೆ ಮಂಜಿನಷ್ಟು ತಣ್ಣಗಿತ್ತು. +“ಜ್ವರ ಇಲ್ಲ… ಏನೂ ಇಲ್ಲ… ಆದರೂ ಮುಖವೇಕೆ ಬಾಡಿದೆ? +ನನ್ನ ಮೇಲೆ ಕೋಪವೇ?” ಅವನ ಮಾತು ಮುಗಿಯುವ ಮುನ್ನ ರಮಾ ಅವನ ಕೈಗಳನ್ನು ಕಿತ್ತುಹಾಕಿ. +“ನಂಗೇನೂ ಆಗಿಲ್ಲ…” ಅಂದು ಅವನನ್ನು ತಳ್ಳಿಕೊಂಡು ಬಾಗಿಲು ದಾಟಿದ ಹೆಂಡತಿಯನ್ನೇ ನೋಡಿದ. +ರಮಾ ಎಂದಿನಂತಿಲ್ಲ. +ನಾನು ಬಂದರೆ ನಗುತ್ತಾ ಓಡಿ ಬಂದು ಕೊರಳಿಗೆ ಜೋತುಬಿದ್ದ, ಅನುರಾಗದ ಜೇನು ಸುರಿಸುವ ರಮಾ ಎಷ್ಟು ಒರಟಾಗಿ ಕೈ ಕೊಸರಿಕೊಂಡು ಹೋದಳಲ್ಲ! +ಅಡಿಗೆಯ ಮನೆಯಿಂದ ಪಾತ್ರೆಗಳ ಸದ್ದು ಕೇಳಿಸಿತು. +ಸ್ವಲ್ಪ ಹೊತ್ತು ಮಂಕನಂತೆ ಕುಳಿತಿದ್ದ ಸದಾನಂದ ಬಟ್ಟೆ ಬದಲಿಸಿ ಅಡಿಗೆ ಮನೆಗೆ ಬಂದ… +ಊಟಕ್ಕೆ ತಟ್ಟೆಯಿಟ್ಟು ಲೋಟಗಳಿಗೆ ನೀರು ಬಗ್ಗಿಸುತ್ತಿದ್ದಳು. +ಚಪಾತಿ ಪಲ್ಯ ತುಂಬಿದ್ದ ಒಂದೇ ತಟ್ಟೆಯನ್ನು ಪ್ರಶ್ನಾರ್ಥಕವಾಗಿ ನೋಡಿದ. +ಅವಳು ನೀರು ತುಂಬುತ್ತಿದ್ದ ಲೋಟವನ್ನೇ ನೋಡುತ್ತಿದ್ದಳು. +“ನೀನು ಊಟ ಮಾಡಲ್ವಾ?” ಸದಾನಂದ ಕೇಳಿದ. +“ನಂಗೆ ಹಸಿವಿಲ್ಲ” ಎಂದಳು ಮೊಟುಕಾಗಿಯೆ. +“ನೀನೂ ಕುಳಿತುಕೋ ರಮಾ ಒಟ್ಟಿಗೆ ಊಟ ಮಾಡೋಣ. ” +“ಬೇಡ ”“ನಾನೇ ಮಾಡಿಸುತ್ತೇನೆ ಸರೀನಾ?”ರಮಾ ಮುಖ ಬೇರೆ ಕಡೆ ತಿರುಗಿಸಿದಳು. +ಕೆಂಪು ಬಳೆಗಳು ತುಂಬಿದ ಅವಳ ದುಂಡು ಕೈಯನ್ನು ಹಿಡಿದು ಹತ್ತಿರಕ್ಕೆ ಎಳೆದುಕೊಂಡ. +ಬಿಳುಪೇರಿದ ಮುಖ ಹೆದರಿಕೆಯಿಂದ ತುಂಬಿದ್ದ ಕಣ್ಣುಗಳು ಬೆವರು ಹನಿಗಳು ಮೂಡಿದ ಹಣೆ ನವಿರಾಗಿ ಕಂಪಿಸುತ್ತಿದ್ದ ರಮಾಳನ್ನು ಕಂಡು ಸದಾನಂದನಿಗೆ ಗಾಬರಿಯಾಯಿತು. +“ಯಾಕೆ?ಏನಾಗಿದೆ ಇವತ್ತು?” ಗಂಡನ ಆತಂಕ ತುಂಬಿದ ಮುಖ ಕಂಡು ರಮಾಳ ಗಂಟಲು ಕಟ್ಟಿ ಬಂದಿತು. +ಎದುರಿಗೆ ನಿಂತಿದ್ದ ಅವನನ್ನು ಬಳ್ಳಿಯಂತೆ ಸುತ್ತಿಕೊಳ್ಳಬೇಕು ಎದೆಗೊರಗಿ ಮನದಣಿಯೇ ಅಳಬೇಕು ತುಂಬಾ ಅಳಬೇಕು ಪಾಪವೆಲ್ಲಾ ಕೊಚ್ಚಿಕೊಂಡು ಹೋಗುವ ಹಾಗೆ…“ +ರಮಾ ಇಲ್ಲಿ ನೋಡು ಯಾಕೆ ಹೀಗಾಡ್ತಿ? +ನನ್ನ ಮೇಲೆ ಕೋಪಾನ? +ಊರಿಂದ ಏನಾದ್ರೂ ಕಹಿ ಸುದ್ದಿ ಬಂದಿದೆಯಾ? +ಅಳು ಯಾಕೆ?ಆ೦?” ಹೇಳುತ್ತಾ ಅವನ ಕೈಗಳು ಅವಳನ್ನು ಹಗುರವಾಗಿ ಬಳಸಿದವು. +“ಐದಾರು ವರ್ಷಗಳಿಂದ ಎಂದೂ ಹುಬ್ಬು ಗಂಟಿಕ್ಕದ ರಮಾ ಅಲ್ಲವೇ ಅಲ್ಲ. +ಇವತ್ತು ಈ ಆಳು ಈ ಮೌನ ಇದೆಲ್ಲಾ ಏನು? +ನಂಗೆ ತುಂಬಾ ಬೇಸರವಾಗತ್ತೆ ರಮಾ…” ಹೇಳುತ್ತಿದ್ದಂತೆಯೇ ಅವನ ಧ್ವನಿ ಭಾರವಾಯಿತು. +ಕೈಗಳು ಅವಳನ್ನು ಇನ್ನೂ ಹತ್ತಿರವಿದ್ದ ಗಂಡನನ್ನೇ ನೋಡಿದಳು ರಮಾ, ತನ್ನ ವರ್ತನೆಯಿಂದ ಅವರಿಗೆ ಬೇಸರವಾಗುತ್ತಿದೆಯೆಂದು ತನಗೆ ತಿಳಿಯದೇ? +ಮಗುವಿನಂತೆ ಮುಗ್ಧವಾಗಿ ಕೇಳುತ್ತಿದ್ದ ಗಂಡನನ್ನು ಕಂಡು ಅವಳ ಎದೆ ತುಂಬಿ ಬಂದಿತು. +ಎಲ್ಲವನ್ನೂ ಹೇಳಿಬಿಡಲೇ?ತಾನಾಗಿ ಹೇಳದಿದ್ದರೆ ಅದು ಮುಂದೆಂದೂ ಗಂಡನಿಗೆ ಗೊತ್ತಾಗುವುದಿಲ್ಲ. +ಹೇಳದೆ ಪಾಪದ ಹೊರ ಹೊತ್ತು ಬಾಳುವುದೇ? +ಮಗುವಿನ ಮನಸ್ಸಿನ ಅತಿ ಸೂಕ್ಷ್ಮ ಹೃದಯದ ಗಂಡನಿಗೆ ಮೋಸ ಮಾಡಲೇ? +ಹೇಳಿದರೆ ಅವರ ಮೃದು, ದುರ್ಬಲ ಹೃದಯ ಈ ಭಾರಿ ಹೊಡೆತವನ್ನು ಸಹಿಸೀತೇ? +ಎಂದೂ ಕಲ್ಪನೆಯನ್ನು ಮಾಡದ ಘಟನೆಯನ್ನು ಹೇಳಿದರೆ ಹೇಗೆ ಎದುರಿಸುತ್ತಾರೆ? +ಒಂದು ವೇಳೆ… ತನ್ನನ್ನು ತಿರಸ್ಕರಿಸಿ ಹೊರಗೆ ತಳ್ಳಿದರೆ? +ಅವರಿಂದ ದೂರವಿರಲು ತನ್ನಿಂದ ಸಾಧ್ಯವೇ? +ಹೇಳದಿರುವುದೇ ಮೇಲು… +ಆದರೆ ಕ್ಷಣ ಕ್ಷಣಕ್ಕೂ ಗಳಿಗೆ ಗಳಿಗೆಗೂ ದಿನದಿನಕ್ಕೂ ಹೊಟ್ಟೆಯಲ್ಲಿ ಬೆಳೆಯುತ್ತಿರುವ ಈ ಪಾಪದ ಹೊರೆ! +ಮೈಮೇಲೆ ಹಿಮಸುರಿದಂತಾಯಿತು. +ಹೊಟ್ಟೆಯಲ್ಲಿ ಏನೋ ಮಿಸುಕಾಡಿದಂತೆ… +ಕೈಕಾಲು ಬಡಿದು ಜೋರಾಗಿ ಅಳಲು ಪ್ರಾರಂಭಿಸಿದಂತಾಗಿ ಅವಳು ಬೆಚ್ಚಿ ಹಿಂದೆ ಸರಿದಳು. +ಅವಳ ಎರಡೂ ಕೈಗಳು ಕೆಳಹೊಟ್ಟೆಯನ್ನು ಬಲವಾಗಿ ಹಿಡಿದುಕೊಂಡವು. +“ಯಾಕೆ ರಮಾ?ಹೊಟ್ಟೆ ನೋಯುತ್ತಾ?”ಆತಂಕದಿಂದ ಕೇಳುತ್ತಿದ್ದ ಗಂಡನ ಮೇಲೆ ಅವಳಿಗೆ ವಿನಾಕಾರಣ ಕೋಪ ಬಂದಿತು. +“ಏನಾದ್ರೂ ಆಗಲಿ ಬಿಡಿ… ಯಾಕೆ ಕೊರಗ್ತೀರಿ. . ಸತ್ತು ಹೋದ್ರೆ ನಿಮಗೆ ಒಳ್ಳೆಯದು.” ಕಹಿಯಾಗಿ ನುಡಿದು ಗಂಡನಿಂದ ಬಲವಂತವಾಗಿ ಬಿಡಿಸಿಕೊಂಡು ಅಡಿಗೆ ಮನೆಯಿಂದ ಹೊರಗೆ ಬಂದಳು. +ಸದಾನಂದನಿಗೆ ನಿಜಕ್ಕೂ ಬೇಸರವಾಯಿತು. +ತಾನೆಷ್ಟು ಕಳಕಳಿಯಿಂದ ಕೇಳಿದರೂ ಹೇಳದೆ ವಿಚಿತ್ರ ರೀತಿಯಲ್ಲಿ ವರ್ತಿಸುತ್ತಿದ್ದಾಳೆ. +ಎಂದೂ ಜೋರಾಗಿ ಕೂಗಿ ಮಾತನಾಡಿದವಳಲ್ಲ. +ಎಷ್ಟೋ ಕಹಿ ಸಂದರ್ಭಗಳು ಬಂದರೂ ಎಂದೂ ತನ್ನ ಮನೊವೇದನೆಯನ್ನು ತೋರಿಸಿಕೊಂಡವಳಲ್ಲ. +ಏನು ಕಾರಣವಿರಬಹುದು? +ಕೇವಲ ಹೊಟ್ಟೆ ನೋವಿಗೆ ಇಷ್ಟು ಸಂಕಟವೇ? +ಒಂದೇ ದಿನದಲ್ಲಿ ತಿಂಗಳುಗಟ್ಟಲೆ ಖಾಯಿಲೆ ಬಿದ್ದವಳಂತೆ ಬಳಲಿದ್ದಳು. +ಮುಖ ರಸ ಹಿಂಡಿದ ಕಬ್ಬಿನಂತಾಗಿತ್ತು. +ಇಷ್ಟು ವರ್ಷಗಳ ದಾಂಪತ್ಯದಲ್ಲಿ ಅವಳಿಗೆ ಒಂದು ಬಾರಿಯೂ ಬರಡು ಜೀವನದ ವ್ಯಥೆ ಇರಲಿಲ್ಲ. +ತನಗೆ ಮಕ್ಕಳಾಗದ ಕೊರಗು ಭಾದಿಸುತ್ತಿದ್ದರೂ ಎಂದೂ ತೋರಿಸಿಕೊಂಡವಳಲ್ಲ ನಗುನಗುತ್ತಾ ಓಡಾಡುತ್ತಿದ್ದಳು. +“ನೀವೇ ನನ್ನ ಮಗು ಅಂದ್ಕೋಳ್ತೀನಿ. +ಬೇರೆ ಮಕ್ಕಳು ಯಾಕೆ?” ಎಂದವಳು ಮುದ್ದಿನಿಂದ ಎದೆಗೊರಗಿಸಿಕೊಂಡರೆ ದಿನದ ದಣಿವೆಲ್ಲಾ ದಾರಿ ಹೋಗುತ್ತಿತ್ತು. +ಅವಳ ಪ್ರೀತಿಯ ನುಡಿಗಳಲ್ಲಿ ಕರಗಿಹೋಗುತ್ತಿದ್ದ ಅವಳ ಒಳವಿನಲ್ಲಿ ಪರಿಪೂರ್ಣತೆ ಕಂಡಿದ್ದ. +ಲೇಡಿ ಡಾಕ್ಟರ್ ಜೋಶಿಯವರ ಬಳಿಗೆ ಕರೆದುಕೊಂಡು ಹೋಗಿ ತೋರಿಸಿಕೊಂಡು ಬಂದ ದಿನದಿಂದಲೂ ಅನ್ಯಮನಸ್ಕಳಾಗುತ್ತಾ ಬಂದಿದ್ದು ಗಮನಕ್ಕೆ ಬಂದಿದ್ದರೂ ಕಾಣದವನಂತಿದ್ದ. +ಕ್ರಮೇಣ ಅವನ ನಡೆ, ನುಡಿ, ಮಾತು, ಕೆಲಸ ಎಲ್ಲದರಲ್ಲೂ ನಿರಾಸಕ್ತಿ. +ಒಮ್ಮೊಮ್ಮೆ ವಿನಾಕಾರಣ ಬೆಚ್ಚಿ ಬೀಳುತ್ತಿದ್ದಳು. +ಹೆದರಿಕೆಯಿಂದಾ ಬಲವಾಗಿ ತಬ್ಬಿಹಿಡಿಯುವಾಗ ಸೂಕ್ಷ್ಮವಾಗಿ ನಡುಗುತ್ತಿದ್ದಳು. +ಕಾರಣ ಕೇಳಬೇಕು ಎನ್ನುವಾಗಲೇ ಈ ವಿಪರೀತ ವರ್ತನೆ! +ಇದ್ದಕ್ಕಿದ್ದಂತೆ ಏನೋ ನೆನಪಾದವನಂತೆ ಸದಾನಂದ ಎದ್ದು ರೂಮಿಗೆ ಬಂದ. +ರಮಾ ಬೋರಲಾಗಿ ಮಲಗಿದ್ದಳು. +ಅವಳ ನೀಳ ಕೂದಲು ಅರ್ಧ ಬೆನ್ನಿನವರೆಗೆ ಹರಿದು ಬಂದು ಹೊರಳಿ ಮಂಚದ ಮೇಲಿಂದ ಕೆಳಗೆ ಜೋತಾಡುತ್ತಿತ್ತು. +ಬಿಕ್ಕಳಿಕೆಯೊಂದಿಗೆ ಮೆಲ್ಲನೆ ಅಳುವಿನ ಸ್ವರ ಕೇಳಿ ಬರುತ್ತಿತ್ತು. +ಸದಾನಂದನಿಗೆ ಇನ್ನು ತಡೆಯದಾಯಿತು. +“ರಮಾ-ಇಲ್ಲಿ ನೋಡು ಏನಾಗ್ತಿದೇಂತ ಬಾಯಿಬಿಟ್ಟು ಹೇಳು ಈ ತರಹ ಅತ್ತು ಸುಮ್ಮನೆ ನನ್ನನ್ನು ಕೊಲ್ಲಬೇಡ. +ಈಚೀಚೆಗೆ ಡಾಕ್ಟರ್ ರವರ ಬಳಿಗೆ ಹೋಗಿ ಬಂದರೂ ಏನನ್ನು ಹೇಳುತ್ತಿಲ್ಲ… ನೆನ್ನೆ ಏನು ಹೇಳಿದರು? +ಹೇಳು ರಮಾ…”ಅವಳ ಭುಜ ಹಿಡಿದು ತನ್ನತ್ತ ತಿರುಗಿಸಿಕೊಂಡ ಅವಳ ಎದೆಯಲ್ಲಿ ಯಾರೋ ಚೂರಿ ಹಾಕಿ ಇರಿದಂತಾಯಿತು. +ಸದಾನಂದನನ್ನೇ ಕಣ್ಣರಳಿಸಿ ನೋಡಿದಳು. +ತನ್ನ ಖಾಯಿಲೆ ಡಾಕ್ಟರ್ ಕೊಟ್ಟ ಸಲಹೆ. . +ಟ್ರೇಟ್ಮೆಂಟ್ ಅದರ ಪ್ರಭಾವ ಈ ನೋವು ಎಲ್ಲವನ್ನು ಹೇಳಿಬಿಡಲೇ? +ಹೇಳಿದರೆ ಅವರ ಪ್ರತಿಕ್ರಿಯೆ ಹೇಗಿರಬಹುದು? +ಅಸಹ್ಯಕರ ಘಟನೆಯನ್ನು ಕೇಳಿದರೆ ಅವರು ಬದುಕಿ ಉಳಿಯುವುದೇ ಇಲ್ಲ. +ಆ ವ್ಯಥೆಯ ಕಿಚ್ಚಿನಲ್ಲಿ ಅವರು ಬಹಳ ದಿನ ಉಳಿಯಲಾರದು. +ಊಹುಂ ಹೇಳಲಾರೆ ಖಂಡಿತ ಸಾಧ್ಯವಿಲ್ಲ. +ಅವರು ಸಂತೋಷವಾಗಿರಬೇಕು. +ಹಾಲಿನಂಥ ಮನಸ್ಸಿಗೆ ವಿಷಹಿಂಡಲಾರೆ. +ತಾನೇ ಬೇಕೆಂದು ಬಯಸಿ ಕುಡಿದ ವಿಷವನ್ನು ತಾನೆ ಜೀರ್ಣಿಸಿಕೋಬೇಕು ತನ್ನೊಂದಿಗೇ ಈ ಬೆಂಕಿ ಸುಟ್ಟುಹೋಗಬೇಕು. +ರಮಾಳ ಕೋಮಲ ಹೃದಯ ತತ್ತರಿಸಿತು. +ಸಿಡಿಯುತ್ತಿದ್ದ ತಲೆಯನ್ನು ಬಲವಾಗಿ ಒತ್ತಿ ಹಿಡಿದುಕೊಂಡಳು. +ತನ್ನಲ್ಲೇ ಪ್ರೀತಿ, ವಿಶ್ವಾಸ, ಆಸೆ, ಆಕಾಂಕ್ಷೆಗಳನ್ನಿಟ್ಟುಕೊಂಡಿದ್ದ ಗಂಡನತ್ತ ಪುನಃ ನೋಡಿದಳು. +“ಮಕ್ಕಳಿಲ್ಲದಿದ್ದರೆ ಏನಂತೆ? +ನೀನೇ ನನ್ನ ಮಗು ಅಂದುಕೊಳ್ಳುತ್ತೇನೆ” ಎಂದು ಹೇಳುತ್ತಿದ್ದ . +ತಾನು ಆಮಿಷಕ್ಕೆ ಬಲಿಯಾಗಿ ಮಗುವಿಗಾಗಿ ಮಾಡಿದ್ದಾದರೂ ಎಂಥಾದು!…ಆ ದಿನ…! +ಅವರಿಬ್ಬರನ್ನೂ ಕೂಲಂಕುಷವಾಗಿ ಪರೀಕ್ಷೆ ಮಾಡಿ ನೋಡಿ ದಿನ ಡಾ.ಜೋಶಿಯವರು ರಮಾಳೊಬ್ಬಳನ್ನೇ ಏಕಾಂತದಲ್ಲಿ ಕರೆದು,“ನಿನಗೆ ಮಕ್ಕಳೂಂದ್ರೆ ತುಂಬಾ ಇಷ್ಟವೇನಮ್ಮಾ?” ಎಂದು ಕೇಳಿದರು. +ರಮಾಳಿಗೆ ನಗು ಬಂದಿತು. +“ಇದೇನ್ ಡಾಕ್ಟ್ರೆ ಹೀಗೆ ಕೇಳುತ್ತೀರಿ? +ಇದಕ್ಕಾಗಿಯೇ ಏನೆಲ್ಲಾ ಹರಕೆ ಹೊತ್ತು ಸಾಧ್ಯವಾಗದೆ ನಿಮ್ಮ ಬಳಿಗೆ ಓಡಿ ಬಂದಿದ್ದೇವೆ” ರಮಾ ಹೇಳಿದಳು. +“ಸತ್ಯ ಹೇಳಿದರೆ ಸಹಿಸಿಕೊಳ್ಳುವ ಶಕ್ತಿಯಿದೆಯೇನು?” +“ಹಾಗಂದ್ರೆ!” ರಮಾ ಗಾಬರಿಯಿಂದ ಎದ್ದು ನಿಂತಳು. +“ಹೆದರೊಬೇಡಿ. ಕೂತ್ಕೊಳ್ಳಿ” ಡಾಕ್ಟರ್ ಪ್ರಾರಂಭಿಸಿದರು. +ಒಂದು ವಾರದಿಂದಲೂ ನಡೆಸಿದ ನನ್ನ ಎಲ್ಲಾ ಪರೀಕ್ಷೆಗಳಲ್ಲಿ ನಿಮ್ಮ ಯಜಮಾನರಲ್ಲಿ ದೋಷವಿದೆ. +ಅದರಿಂದ ನಿಮಗೆ ಮಕ್ಕಳಾಗುವ ಸಾಧ್ಯತೆಯಲ್ಲ, ಸಾಧ್ಯವೇ ಇಲ್ಲ…” ಆಕೆ ಹೇಳುತ್ತಿದ್ದರು. +ರಮಾ ಕುಸಿದು ಕುಳಿತಳು. +“ನಿಮಗೆ ಯಾವುದೇ ಒಂದು ದೋಷವೂ ಇಲ್ಲ” +“ಡಾಕ್ಟರ್… ಅದನ್ನು ಸರಿಪಡಿಸಲು ಸಾಧ್ಯವಿಲ್ಲವಾ? ”…. ಚೇತನವನ್ನೆಲ್ಲ ಒಟ್ಟುಗೂಡಿಸಿ ಕೇಳಿದರು. +ಅವಳ ಸ್ವರ ನಡುಗುತ್ತಿತ್ತು ಹೃದಯ ಜೋರಾಗಿ ತುಡಿಯುತ್ತಿತ್ತು. +“ಊಹುಂ ಸಾಧ್ಯವಿಲ್ಲ. +ಹಾಗಿದ್ದರೆ ನಿನಗೆ ಹೇಳದೆಯೇ ನಾನು ಸರಿಮಾಡಿ ಬಿಡುತ್ತಿದ್ದೆ. +ನಾವೆಷ್ಟು ಓದಿದರೂ ಪ್ರಕೃತಿಗೆ ಸವಾಲು ಹಾಕಲು ಸಾಧ್ಯವೇ? +ಅವರು ನತದೃಷ್ಟರೆಂದೇ ಹೇಳಬೇಕು.” +ಆಕೆಯ ಕರುಣೆಯ ನುಡಿಗಳು ಅವಳೆದೆಯನ್ನು ಅಲಗಿನಂತೆ ಇರಿದವು. +ಯಾರಿಗೂ ಎಂದೂ ಕೇಡು ಬಯಸದ ಜೇನಂಥ ಹೃದಯದ ಹೂ ಮನಸ್ಸಿನ ತನ್ನ ಸದಾನಂದನಿಗೆ ಪ್ರಕೃತಿ ಈ ರೀತಿ ಸೇಡು ತೀರಿಸಿಕೊಳ್ಳಬೇಕೆ? +ಅವರಿಗೆ ತಿಳಿದರೆ ದುಃಖದಿಂದ ಅವಳ ಎದೆ ಬಿರಿಯಿತು. +“ಡಾಕ್ಟರ್… ಅವರಿಗೆ ಮಕ್ಕಳೊಂದ್ರೆ ತುಂಬಾ ಇಷ್ಟ… ಏಕೆ ಹೀಗಾಗುತ್ತೆ? +ಹೀಗೇಕಾಯ್ತು ಡಾಕ್ಟರ್” ಮೇಜಿನ ಮೇಲೆ ತಲೆಯಿಟ್ಟು ಬಿಕ್ಕಿ ಬಿಕ್ಕಿ ಅಳತೊಡಗಿದಳು. +ಡಾಕ್ಟರಿಗೆ ಏನೂ ಹೇಳಲು ತೋಚಲಿಲ್ಲ. +ದುಃಖನೋವು ನಿರಾಶೆಯಿಂದ ಹಿಡಿಯಾಗಿ ಅಳುತ್ತ ಕುಳಿತಿದ್ದ ರಮಾಳನ್ನು ಕಂಡು ಪಿಚ್ಚೆನಿಸಿತು. +ಅದೇ ಜಾಗದಲ್ಲಿ ರಮಾಳಂತೆಯೇ ಅಸಹಾಯಕರಾಗಿ ಕುಳಿತು ಅತ್ತು ಹೋದವರೆಷ್ಟೋ ಕಿಲಕಿಲ ನಗುವ ಹಸು ಕಂದನೊಂದಿಗೆ ತೃಪ್ತಿಯಿಂದ ಬಂದು ತೋರಿಸಿದವರೆಷ್ಟೋ. +ತಟ್ಟನೆ ಯೋಚನೆಯೊಂದು ಅವರ ಮನಸ್ಸಿಗೆ ಹೊಳೆಯಿತು. +ಅದಕ್ಕೆ ಈಕೆ ಒಪ್ಪಿಯಾಳೆ?ಆದರೂ ಅವರು,“ನೀವು ಧೈರ್ಯ ಮಾಡಿದರೆ ಅದೃಷ್ಟವಿದ್ದರೆ ಯಾಕಾಗಬಾರದು? . . ಪರೀಕ್ಷಕರಂತೆ ಅವಳತ್ತ ನೋಡುತ್ತಾ ಕೇಳಿದರು. +“ಏನಂದಿರಿ?” ಚಕಿತಳಾಗಿ ಕೇಳಿದಳು. +ಅವಳ ನೀರು ತುಂಬಿದ ಕಣ್ಣುಗಳಲ್ಲಿ ಆಸೆಯ ಬೆಳಕು ಮಿಂಚಿತು. +ಹೇಳಲೋ ಬೇಡವೋ ಎನ್ನುವಂತೆ ಅವಳ ಮುಖವನ್ನೇ ನೋಡುತ್ತಾ ಆಕೆ ಹೇಳ ತೊಡಗಿದರು… +“ಈ ಪ್ರಯೋಗವನ್ನು ನಾನು ಕೆಲವರಿಗೆ ಅವರೊಪ್ಪಿಗೆಯಿಂದಲೇ ಮಾಡಿದ್ದೇನೆ ಜಯಶಾಲಿಯೂ ಆಗಿದ್ದೇನೆ. +ಆದರೆ ಅದು ಬೇರೊಬ್ಬ ವ್ಯಕ್ತಿಯ ಮೇಲೆ ಅವಲಂಭಿಸಿರುತ್ತದೆ. +ಕೆಲವರಿಗೆ ಸಾಧ್ಯವಾಗುವುದಿಲ್ಲ. +ಮಕ್ಕಳ ಹುಚ್ಚು ಹೆಚ್ಚಾಗಿ ಧೈರ್ಯದಿಂದ ಬಂದು ಹೋದವರೂ ಇದ್ದಾರೆ. +ಅವರೀಗ ಎಲ್ಲರಂತೆ ಹಾಯಾಗಿ ತೃಪ್ತಿಯಿಂದ.” +“ಅದೇನು ಪ್ರಯೋಗ ಡಾಕ್ಟರ್” ಅವರ ವಾಗ್ಜರಿಯನ್ನು ಕಡಿದು ಆತುರದಿಂದ ಕೇಳಿದಳು ರಮಾ. +ಒಂದು ಕ್ಷಣ ತಡೆದರು ಜೋಶಿಯವರು,“ಕೃತಕ ವೀರ್ಯಧಾರಣೆ ಅಂತಾ ಕೇಳಿದ್ದೀರಾ? +ಬೇರೆ ಪುರುಷರ ವೀರ್ಯವನ್ನು ಗರ್ಭಕೋಶಕ್ಕೆ ಸೇರಿಸುತ್ತೇವೆ”ಹಾವು ತುಳಿದವರಂತೆ ಮೆಟ್ಟಿ ಬಿದ್ದಳು. +ಹಸು ಪ್ರಾಣಿಗಳಿಗೆ ಈ ರೀತಿ ಗರ್ಭಧಾರಣೆ ಮಾಡಿಸುತ್ತಾರೆಂದು ಮನೆಯಲ್ಲಿ ಕೇಳಿದ ನೆನಪು… ಅಂತಹುದರಲ್ಲಿ ಮನುಷ್ಯರಲ್ಲೂ ಉಂಟೇ? +ಹೇಸಿಗೆಯನ್ನು ಮೈಮೇಲೆ ಚೆಲ್ಲಿದಂತಾಯಿತು. +“ಎಂಥಾ ಅಸಹ್ಯ ಬೀಭತ್ಯ!!”ಒಂದು ನಿಮಿಷವೂ ಅಲ್ಲಿ ನಿಲ್ಲಲಾಗಲಿಲ್ಲ ಅವಳಿಗೆ. +“ಅಳುತ್ತಾ ಕೂತರೆ ನಿವಾರಣೆ ಆಗುವುದಿಲ್ಲ. +ನೀವೇ ಅಧೈರ್ಯ ಪಟ್ಟರೆ ಹೇಗೆ? +ನಿಮ್ಮವರಷ್ಟು ಅಸಹಾಯಕರು ಯೋಚಿಸಿ.” +“ಡಾಕ್ಟರ್… ಅವರಿಗೆ ಅಸಹಾಯಕರು ಎನ್ನಬೇಡಿ, ಕರುಣೆಯ ನುಡಿಗಳೂ ಬೇಡ. +ಅವರಿಗೆ ಈ ವಿಷಯ ತಿಳಿಸದಿದ್ದರೆ ಸಾಕು. +ಹಾಗಂತ ನನಗೆ ಮಾತುಕೊಡಿ. +ಅವರು ತುಂಬಾ ಮೃದು. +ಈ ಕಠೋರ ಸತ್ಯ ಅವರ ಕಿವಿಯಲ್ಲಿ ಬಿದ್ದರೆ ನನ್ನ ಸೌಭಾಗ್ಯ ಸಮಾಪ್ತಿಯಾಗುತ್ತದೆ.”ಅವಳ ಸ್ವರ ಉದ್ವೇಗದಿಂದ ಏರಿತು. +“ನಾನು ಹೇಳಿದ್ದು ಕೇಳಿ ಎಲ್ಲಾ ಸರಿಯಾಗುತ್ತೆ” ಅವಳತ್ತ ತೀಕ್ಷ್ಣವಾಗಿ ನೋಡಿದ ರಮಾ. +“ಈ ಪ್ರಯೋಗವನ್ನು ಬೇರೆಯವರಿಗೇ ಇಡಿ. +ನಾನಿನ್ನು ಬರುತ್ತೇನೆ ಡಾಕ್ಟರ್ ನಮಸ್ಕಾರ”ಬಿರುಗಾಳಿಯಂತೆ ಎದ್ದು ಹೋದ ಅವಳ ದಿಕ್ಕನ್ನೆ ಅದೆಷ್ಟೋ ಹೊತ್ತು ನೋಡುತ್ತಾ ಕುಳಿತಿದ್ದರು. +ಮನಗೆ ಬಂದ ರಮಾ,“ನೋಡಿ ನಮಗೆ ಮಕ್ಕಳು ಆದರೆ ಆಗಲಿ ಬಿಟ್ಟರೆ ಬಿಡಲಿ… +ಅದೃಷ್ಟವಿದ್ದಂತಾಗುತ್ತದೆ ನೀವು ಮಾತ್ರ ಕೊರಗು ಹಚ್ಚಿಕೊಳ್ಳಬೇಡಿ. +ನಿಜಕ್ಕೂ ನಂಗೆ ಆ ಬಗ್ಗೆ ಒಂದಿಷ್ಟು ಯೋಚನೆಯಿಲ್ಲ. +ಮಕ್ಕಳಾದ್ರೆ ಎಲ್ಲಾದಕ್ಕೂ ಅಡ್ಡಿ ಆತಂಕ ಏನಂತೀರಾ?” ರಸಿಕತೆಯ ಮುಖವಾಡ ಧರಿಸಿ ತುಟಿಗಳಿಗೆ ತುಟಿ ನಗೆ ಲೇಪಿಸಿ, ಗಂಡನ ಕುತ್ತಿಗೆಯನ್ನು ತನ್ನ ತೋಳುಗಳಿಂದ ಬಳಸಿದಳು. +“ಡಾಕ್ಟರ್ ಭರವಸೆ ಕೊಟ್ಟಿದ್ದಾರಲ್ಲ ರಮಾ… ನಿಧಾನವಾಗಿಯಾದರೂ ಆಗುತ್ತೆ ಅಲ್ಲವ?”ಮುಗ್ಧವಾಗಿ ಕೇಳುತ್ತಿದ್ದ ಗಂಡನ ಮುಖ ನೋಡಿ, ಅವಳ ಕೊರಳು ತುಂಬಿ ಬಂತು. +“ನೀವೇ ನನ್ನ ಮಗು ಎಂದು ತಿಳಿದುಕೊಳ್ಳುತ್ತೇನೆ… ಬೇರೆ ಮಕ್ಕಳು ಯಾಕೆ? +ಅವುಗಳಿದ್ದರೆ ನಿಮ್ಮ ಪ್ರೀತಿ ಹಂಚಿ ಹೋಗುತ್ತೆ. +ಅದು ನಂಗಿಷ್ಟವಿಲ್ಲ… ಅದು ನಂಗೆ ಮಾತ್ರ ಬೇಕು…”ಅವನೆದೆಯಲ್ಲಿ ಮುಖ ಹುದುಗಿಸಿ ಹೇಳಿದಳು. +ಸದಾನಂದ ನಕ್ಕುಬಿಟ್ಟ. +“ಸ್ವಾರ್ಥಿ ನೀನು…”ಅವನ ಅಪ್ಪುಗೆಯಲ್ಲಿ ಮುಖ ಶಾಂತವಾಗಿದ್ದರೂ ಅವಳೆದೆಯಲ್ಲಿ ಜ್ವಾಲಾಮುಖಿ ಎದ್ದಿತ್ತು. +“ಆಂಟೀ ಆಂಟೀ” ಪಟಪಟನೆ ಪುಟ್ಟ ಕೈಗಳಿಂದ ಬಾಗಿಲು ಬಡಿಯುವ ಶಬ್ಧ…ಜೊತೆಗೆ ಕೀರಲು ಧ್ವನಿ. +“ಶೋಭಾ ಬಂದಿದ್ದಾಳೇಂತ ಕಾಣುತ್ತೆ…” ಎಂದ ಸದಾನಂದ. +“ಹೌದು…” ಎಂದಳು. +ಒಂದು ದಿನ ಶೋಭಾ ಬರದಿದ್ದರೆ ಅವಳ ಪುಟ್ಟ ಹೆಜ್ಜೆಗಳು ಮನೆಯ ತುಂಬಾ ಓಡಾಡದಿದ್ದರೆ ಏನನ್ನೋ ಕಳೆದುಕೊಂಡವರಂತೆ ಆಚೀಚೆ ಕಾಲುಸುಟ್ಟ ಬೆಕ್ಕಿನಂತೆ ಒಳಗೂ ಹೊರಗೂ ಓಡಾಡುತ್ತಿದ್ದ ರಮಾಳ ನಿರಾಸಕ್ತಿ ಕಂಡು ಸದಾನಂದನಿಗೆ ಆಶ್ಚರ್ಯ. +“ಆಂಟೀ… ಬಾಗ್ಲು… ಆಂಟೀ…”ರಮಾ ಕುಳಿತೇ ಇದ್ದಳು. +“ಆಂಟೀ…”ಸದಾನಂದ ರಮಾಳನ್ನು ಬಾಗಿಲ ಬಳಿ ತಳ್ಳಿದ. +ರಮಾ ನಿಧಾನವಾಗಿ ಬಾಗಿಲು ತೆರೆದಳು. +ನೆರಿಗೆ ತುಂಬಿದ ಅಚ್ಚ ಬಿಳಿಯ ಫ್ರಾಕು. . +ಗಾಳಿಗೆ ಹಾರಾಡುತ್ತಿದ್ದ ಗುಂಗುರು ಕೂದಲು, ಪುಟ್ಟ ಬಾಯಿ, ಅರಳಿದ ಕಣ್ಣುಗಳು, ಹೊಸಬಳನ್ನು ನೋಡಿದಂತೆ ನೋಡಿದಳು ರಮಾ. +ಶೋಭಾಳನ್ನು ಜೊತೆಯಲ್ಲಿ ಕೈಹಿಡಿದು ಕರೆದುಕೊಂಡು ಹೋದರೆ. +“ನಿಮ್ಮ ಮಗೂನಾ?ತುಂಬಾ ಚೆನ್ನಾಗಿದೆ. +ಎಲ್ಲಾ ನಿಮ್ಮವರ ತರಹ ಇದ್ದಾಳೆ…” ಎಂದಾಗ ಅವಳ ಮನಸ್ಸು ಸಂತಸದಿಂದ ಬೀಗುತ್ತಿತ್ತು. +ಅವಳಿಗೆ ಅವಳು ಬೇರೆಯವರ ಮಗು ಎಂಬುದು ಮರೆತುಹೋಗುತ್ತಿತ್ತು. +ಸಾಯಂಕಾಲ ವಾಕಿಂಗ್ ಹೊರಟರೆ ಶೋಭಾ ಬೇಕು. +ಸಮಾರಂಭಗಳಿಗೆ ಹೊರಟರೆ ಶೋಭಾ ಇರಬೇಕು. +ನಂಟರಿಷ್ಟರ ಮನೆಗೆ ಹೊರಟರೂ ಶೋಭಾ ಜೊತೆಗಿರಬೇಕು. +“ಆ ಮಗು ಅಪ್ಪಿ ತಪ್ಪಿ ನಿಮ್ಮ ಹೊಟ್ಟೆಯಲ್ಲಿ ಹುಟ್ಟಿದೆ, ಅದು ರಮಾಳಿಗೆ ಹುಟ್ಟಬೇಕಿತ್ತು” ಎಂದು ಯಾರಾದರೂ ಹೇಳಿದರೆ ಶೋಭಾಳ ತಾಯಿ ನಕ್ಕು ಒಳಗೆ ಹೋಗುತ್ತಿದ್ದರು. +“ಆಂಟೀ ಮನೆಗೆ ಹೋಗಲ್ವಾ ಈವತ್ತು? +ಹೋಗು ಕಾಯ್ತಾ ಇದ್ದಾರೆ…” ಎಂದು ಎಷ್ಟೋ ಬಾರಿ ಮಲಗಿದ ಮಗಳನ್ನು ಏಳಿಸಿ ಕಳುಹಿಸುತ್ತಿದ್ದರು. +ಅವರ ನಿರೀಕ್ಷೆಯಂತೆ ರಮಾ ಬಾಗಿಲ ಬಳಿ ನಿಂತು ಶೋಭಾಳಿಗಾಗಿ ಕಾಯುತ್ತಿರುತ್ತಿದ್ದಳು. +ಅರೆನಿದ್ದೆಯಿಂದ ಕಣ್ಣು ತಿಕ್ಕಿಕೊಳ್ಳುತ್ತಾ ಬಂದ ಶೋಭಾಳ ಮುಖ ತೊಳೆದು… ಪೌಡರ್ ಹಾಕಿ, ಮುದ್ದುಗರೆಯುತ್ತಾ ತಿಂಡಿ ತಿನ್ನಿಸಿ ತಾನೂ ಅವಳ ಜೊತೆಯಲ್ಲಿ ತಿಂದರೆ ಮಾತ್ರ ರಮಾಳಿಗೆ ಸಮಾಧಾನ… ತೃಪ್ತಿ. +“ಇದು ಏನು ಆಂಟೀ ಇದು ಯಾಕೆ?… ಎನ್ನುತ್ತಾ ಕೈಕಾಲುಗಳಿಗೆ ಸುತ್ತಿಕೊಳ್ಳುತ್ತಾ ಹಿಂದೆ ಮುಂದೆ ತಿರುಗುವ ಶೋಭಾ “ಯಾಕೆ?ಏನು?” ಗಳಿಗೆ ತಾಳ್ಮೆಯಿಂದ ಉತ್ತರ ಕೊಡುತ್ತಾ ಕೆಲಸ ಮಾಡುತ್ತಿದ್ದರೆ ಇಡೀ ದಿನ ಉರುಳುತ್ತಿದ್ದುದೇ ತಿಳಿಯುತ್ತಿರಲಿಲ್ಲ. +“ಶೋಭಾನ ಗಲಾಟೆಯಲ್ಲಿ ಈ ಸದಾನಂದನ್ನ ಮರೆತುಬಿಟ್ಟಿರಪ್ಪ ಎನ್ನುತ್ತಿದ್ದ ಗಂಡನಿಗೆ ಸಿಗುತ್ತಿದ್ದುದು ಒಂದು ಹೂ ನಗೆ ಮಾತ್ರ. +“ರಮಾ ಏ ರಮಾ ಏನು ಯೋಚಿಸುತ್ತಿದ್ದೀಯಾ?” ಸದಾನಂದನ ಕರೆಗೆ ಬೆಚ್ಚಿಬಿದ್ದು ತಿರುಗಿ ನೋಡಿದಳು. +ಪ್ರಶ್ನೆ ಅವಳ ಕಣ್ಣುಗಳಲ್ಲಿ ಕುಣಿಯಿತು. +“ಏನು ಯೋಚನೆ ಮಾಡ್ತಾ ಇದ್ದೀಯಾ?” ಪುನಃ ಕೇಳಿದ. +“ಏನಿಲ್ಲ…” ಎಂದಳು ತೇಲಿಸುತ್ತಾ, ಶೋಭಾ ಆಗಲೇ ಸದಾನಂದನ ತೊಡೆ ಏರಿ ಕುಳಿತಿದ್ದಳು. +ಬಹಳ ಉತ್ಸಾಹದಿಂದ ಮಾತನಾಡುತ್ತಿದ್ದಳು. +“ಹೌದು ಅಂಕಲ್ ಅಜೀಹಾಗೇ ಇದೆ” ಕಣ್ಣರಳಿಸಿ ಪುಟ್ಟ ತುಟಿಗಳನ್ನು ತಿರುಗಿಸಿ ಹೇಳುತ್ತಿದ್ದಳು. +ಸದಾನಂದ ನಗುತ್ತಿದ್ದ. +“ಏನಂತೆ ಅವಳದು…” ರಮಾ ಹತ್ತಿರ ಬಂದು ಬಿಟ್ಟಿದೆ. +“ಅದೇ ಆಂಟೀ ರಾತ್ರಿ ನಮ್ಮನೆಗೆ ಒಂದು ಅಜ್ಜಿ ಬಂದು ಬಿಟ್ಟಿದೆ. +ನಮ್ಮ ಪಾಪಚ್ಚಿ ತರಾನೆ. +ಅದಕ್ಕೆ ಬಾಯಲ್ಲಿ ಒಂದೂ ಹಲ್ಲೂ ಇಲ್ಲ. +ತಲೇಲಿ ಒಂದು ಕೂದ್ಲೂ ಇಲ್ಲಾ, ಗೊತ್ತಾ? +ಅಜ್ಜಿ ಮಾತ್ರ ಫ್ರಾಕು ಹಾಕಲ್ಲ… ಯಾಕೆ ಆಂಟೀ?”ಉತ್ತರಕ್ಕಾಗಿ ರಮಾಳತ್ತ ತಿರುಗಿದಳು ಶೋಭಾ. +“ಅಜ್ಜೀನಾ ಕೇಳಬೇಕಿತ್ತು” ನಗುವಡಗಿಸಿ ಕೇಳಿದಳು ರಮಾ. +“ಕೇಳ್ದೆ ಆಂಟಿ ಅಜ್ಜಿ ಬೈದು ಬಿಡ್ತು… ಪಪ್ಪಾನ ಹತ್ತಿರ ಹೋಗಿ ಚಾಡಿ ಬೇರೆ ಹೇಳುತ್ತೆ ಗೊತ್ತಾ?” ಮುಖ ದುಮ್ಮಿಸಿಕೊಂಡು ದೂರು ಹೇಳುತ್ತಿದ್ದ ಶೋಭಾಳನ್ನು ಕಂಡು ರಮಾಳಿಗೆ ಮುದ್ದು ಉಕ್ಕಿ ಬಂತು. +ಪ್ರೀತಿಯಿಂದ ಗಂಡನ ಬಳಿಯಿಂದ ತನ್ನ ಬಳಿಗೆ ಎಳೆದುಕೊಂಡು,“ನನ್ನ ಜಾಣ ಮಗಳು” ಎನ್ನುತ್ತಾ ಅವಳ ದುಂಡು ಕೆನ್ನೆಗಳಿಗೆ ಮುತ್ತಿಟ್ಟಳು. +“ಇಲ್ಲಾ ಆಂಟಿ ಅಜ್ಜಿ ಹೇಳುತ್ತೆ… ನಾನು ಅಮ್ಮನ ಮಗಳಂತೆ. +ನಿಮ್ಮ ಮಗಳು ಅಲ್ಲಾಂತೆ…”ರಮಾಳ ಮುಖ ಪೆಚ್ಚಾಯಿತು. +“ಯಾವಾಗ ಹೇಳಿದ್ದು?” ಸದಾನಂದ ಕೇಳಿದ. +“ಬೆಳಿಗ್ಗೆ ಅಮ್ಮ ನಂಗೆ ಹೋಗು ಅಂದ್ರೆ… ಅಜ್ಜಿ ಬೇಡಾಂತ ಹೇಳುತ್ತೆ… +ನಾನು ಓಡಿ ಬಂದುಬಿಟ್ಟೆ ಕೆಟ್ಟ ಅಜ್ಜಿ ಅಲ್ವಾ ಆಂಟೀ…?”ರಮಾಳಿಗೆ ಏನೂ ಹೇಳಲು ಉಸಿರಿಲ್ಲದಂತಾಗಿತ್ತು. +“ಶೋಭಾ ಏ ಶೋಭಾ. . ” ಹೊರಗಡೆಯಿಂದ ಬಂದ ಅಜ್ಜಿಯ ಕರೆಗೆ ಛಂಗನೆ ನೆಗೆದ ಶೋಭಾ,“ಬಂದೆ” ಎನ್ನುತ್ತಾ ಓಡಿದಳು. +ಬರಿದಾದ ತನ್ನ ಮಡಿಲನ್ನು ನೋಡಿಕೊಂಡ ಹೆಂಡತಿಯ ಮುಖ ನೋಡಿದ. +ಅವನ ನೋಟವನ್ನು ಎದುರಿಸಿದ ರಮಾ ನೋವಿನ ನಗೆ ನಕ್ಕಳು ನೂರು ಮಾತುಗಳಲ್ಲಿ ಹೇಳದ ಅವಳ ಮಾತುಗಳನ್ನು ನೀರು ತುಂಬಿದ ಕಣ್ಣುಗಳಲ್ಲಿ ಓದಿದ ಸದಾನಂದನ ಕಣ್ಣುಗಳಲ್ಲೂ ತೆಳ್ಳನೆಯ ನೀರಿನ ಪರೆಯಿತ್ತು. +ದಿನವಿಡಿ ಶೋಭಾ ಕಾಣದಿದ್ದಾಗ ಮನಸ್ಸು ತಡೆಯದ ರಮಾ ಅವರ ಮನೆಗೆ ಹೊರಟಳು. +ಹಾಲಿನಲ್ಲಿದ್ದ ಸೋಫಾದ ಮೇಲೆ ಶೋಭಾ ಬೋರಲಾಗಿ ಮಲಗಿದ್ದಳು. +ಅವಳ ಪಕ್ಕದಲ್ಲಿ ತೆರೆದು ಬಿದ್ದಿದ್ದ ಬಣ್ಣ ಬಣ್ಣದ ಚಿತ್ರಗಳು ತುಂಬಿದ್ದ ಪುಟ್ಟ ಪುಸ್ತಕ, ಪ್ಲೇಟು, ಮುರಿದು ಬಿದ್ದಿದ್ದ ಬಳಪ, ಕೆದರಿದ ಕೂದಲು… ದಣಿದ ಮುಖ ಸೋಫಾದಿಂದ ಕೆಳಗೆ ಜೋತಾಡುತ್ತಿದ್ದ ಪುಟ್ಟ ಕೈ…ವಾತ್ಸಲ್ಯ ಮಾರ್ದವತೆಯಿಂದ ಅವಳ ಹೃದಯ ತುಂಬಿ ಬಂದಿತು. +ಹತ್ತಿರ ಹೋದಳು. +ಹಣೆಗೆ ಕವಿದಿದ್ದ ಕೂದಲನ್ನು ಸರಿಸಿ, ಮೃದುವಾಗಿ ಹೂಮುತ್ತನ್ನಿಟ್ಟಳು. +ಪಕ್ಕದ ರೂಮಿನಿಂದ ಮಗುವಿನ ಅಳು ಧ್ವನಿಯೊಂದಿಗೆ ಮಾತು ಕೇಳಿಬರುತ್ತಿತ್ತು. +“ಅದೆಷ್ಟು ಅಳುತ್ತೆ ನೋಡಮ್ಮ ಈ ಮಕ್ಕಳು ಬೇಡಾ ಏನೂ ಬೇಡಾ ಬೆಳಗಿನಿಂದ ಒಂದೇ ಸಮನೆ ಹಾಲು ಕುಡಿತಾ ಇದೆ. +ನಾನೇನು ಇರ್‍ಬೇಕೋ. . ಸಾಯ್ಬೇಕೋ?”… ಶೋಭಾಳ ತಾಯಿಯ ರೋಸಿ ಹೋದ ಧ್ವನಿ. +“ಮಕ್ಕಳಿಗೆ ಹಾಲು ಕುಡಿಸಿದ್ರೆ ಸಾಯ್ತರೇನು? +ನೀವೆಲ್ಲಾ ಹಾಲು ಕುಡಿದೇ ಅಲ್ವಾ ಬೆಳದದ್ದು…” ಅಜ್ಜಿಯ ಸ್ವರ. +“ನೀನೇನೇ ಹೇಳಮ್ಮ, ಈ ಜಂಜಾಟ ಸಾಕಾಗಿ ಹೋಗಿದೆ. +ಎದುರು ಮನೆ ರಮಾ ತರಹಾ ಇರಬಾರದಿತ್ತೆ, ಅನ್ನಿಸುತ್ತೆ ಎಷ್ಟು ಶಾಂತ, ಸಂಸಾರ ಅವರದು…” +“ಬಿಡ್ತು ಅನ್ನು ನಿಂಗೇನಾದ್ರು ತಲೆ ಕೆಟ್ಟಿದೆಯಾ?” ಅರ್ಧದಲ್ಲೇ ಕಡಿದು ಸಿಡುಕಿದ ಆಕೆ,“ಹೆಣ್ಣು ತಾಯಿಯಾದ್ರೇನೇ ಮೋಕ್ಷ ಕಣೆ ಸ್ವರ್ಗದ ಬಾಗಿಲು ತೆರೆಯುತ್ತೆ ಅಂತಾರೆ, ಮುತ್ತುಗದ ಹೂ ಪೂಜೆಗುಂಟಾ? +ನಂಗೆ ಆಕೆ ಶೋಭಾನ್ನ ಮುಟ್ಟೋದು ಹಿಡಿಸೋಲ್ಲ… +ಬಂಜೆ ಮುಟ್ಟಿದರೆ ಮಕ್ಕಳು ಸೊರಗಿ ಕಡ್ಡಿಯಂತಾಗುತ್ತವೆ. +“ಅಮ್ಮ ಹಾಗೆಲ್ಲಾ ಮಾತಾಡ್ಬೇಡಾ ಆಕೆಗೆ ಶೋಭಾಂದ್ರೆ ಪ್ರಾಣ…” +“ಇಷ್ಟು ವರ್ಷ ಮಕ್ಕಳಾಗದಿದ್ದ ಮೇಲೆ ಆತ ಬೇರೆ ಮದ್ವೇನಾದ್ರೂ ಮಾಡ್ಕೊಬಹುದಿತ್ತು.”ಮುಂದೆ ಕೇಳಿಸಿಕೊಳ್ಳುವ ಶಕ್ತಿ ರಮಾಳಿಗಿರಲಿಲ್ಲ. +ಹುಚ್ಚು ಹಿಡಿದವಳಂತೆ ಓಡಿಬಂದಳು. +ಮನೆಗೆ ಬಂದು ಎಷ್ಟೋ ಹೊತ್ತಿನ ತನಕ ಅವಳೆದೆ ನಡುಗುತ್ತಿತ್ತು. +ನಿಲ್ಲಲು ಶಕ್ತಿಯಿಲ್ಲದವಳಂತೆ ಕುಸಿದು ಕುಳಿತಳು… +ಎಂಥಾ ಮಾತುಗಳು!ತನ್ನಿಂದ ಚೇತರಿಸಿಕೊಳ್ಳಲು ಸಾಧ್ಯವೇ? +ಎಂದೂ ಯಾರೂ ಅವಳನ್ನು ಇಷ್ಟು ಕಟುವಾಗಿ ನಿಂದಿಸಿರಲಿಲ್ಲ. +ನಿಂದಿಸುವ ಜನಗಳಿಗೆ ಕೋಮಲ ಹೃದಯಗಳ ತುಡಿತ ಹೇಗೆ ಅರ್ಥವಾಗಬೇಕು? +ಹೌದು ಆಕೆ ಹೇಳಿದುದು ನಿಜ ತಾನು ಬಂಜೆ ತಾಯಿಯಾಗಲಾರೆ ತಾಯ್ತನದ ಸುಖ ತನಗಿಲ್ಲ ಆದರೆ ಇದಕ್ಕೆ ಹೊಣೆ ಯಾರು? +ಯಾವ ಕುಂದೂ ಇಲ್ಲದ ತಾನು ಎಂದಿಗೂ ತಾಯಿಯಾಗಲಾರೆ. +ಇದರಲ್ಲಿ ತನ್ನ ತಪ್ಪೇನಾದರೂ ಇದೆಯೇ? +ಮಕ್ಕಳಾಗದಿದ್ದರೆ ಗಂಡಿಗೆ ಮತ್ತೆ ಮತ್ತೆ ಮದುವೆ ಮಾಡಲು ಹಾತೊರೆಯುತ್ತಾರೆ ಈ ಜನ, ಆದರೆ ಹೆಣ್ಣಿಗಾದರೆ? +ಇಷ್ಟಕ್ಕೆ ಹೆಣ್ತನದ ಬೆಲೆ ಕಟ್ಟಬೇಕೆ? +ಒಂದು ಜೀವದ ಬೆಲೆ ಇಷ್ಟೇನಾ? +ಹೀಗೆ ಬಿಟ್ಟರೆ ತನ್ನ ಸದಾನಂದನಿಗೂ ಮತ್ತೊಂದು ಮದುವೆ ಮಾಡಿಸಿಯೇ ಬಿಡುತ್ತಾರೆ. +ಯೋಚನೆಯಿಂದಲೇ ಅವಳ ಹೃದಯ ಚಲನೆ ನಿಂತಂತಾಯಿತು. +“ನೀವು ಧೈರ್ಯ ಮಾಡಿದರೆ ಮಕ್ಕಳಾಗಬಹುದು.” ಡಾಕ್ಟರರ ನುಡಿಗಳು. +ಥೂ ಅಸಹ್ಯ, ಹಸಿವೂಂತ ಹೊಲಸು ತಿನ್ನಬಹುದೇ? +ಊಹೂಂ ಸಾಧ್ಯವಿಲ್ಲದ ಮಾತು. +ಈ ಯೋಚನೆಯಾದರೂ ತನಗೆ ಯಾಕೆ ಬಂತು? +ಅವರಿಗೆ ಅನ್ಯಾಯ ಮಾಡಿದರೆ ಹೇಗೇ? +ತನ್ನ ಪತಿ ತನ್ನವನೇ ಆಗಿರುವಾಗ ಉಳಿದವರ ಮಾತುಗಳಿಗೆ ತಾನೇಕೆ ಇಷ್ಟು ಬೆಲೆ ಕೊಡಬೇಕು? +ಯಾವ ಸ್ವರ್ಗವೂ ಬೇಡಾ ತಾನೂ ಪ್ರೀತಿಸುವ ಅವರು ಜೊತೆಗಿದ್ದರೆ ಸಾಕು ಎಲ್ಲರನ್ನೂ ಎದುರಿಸಬಲ್ಲೆ. +ಬೀದಿಯರ, ನೆರೆಯವರ ಕಿರುನೋಟ, ಪಿಸು ಮಾತುಗಳ ಮುಖ ಪರಿಚಯವಿದ್ದರೂ ಅಷ್ಟು ಮನಸ್ಸಿಗೆ ತಾಕುತ್ತಿರಲಿಲ್ಲ. +ಅದೇ ಜನಗಳು ಅದೇ ಮುಖಗಳು ಆದರೂ ಈಗ ಏಕೆ ಅಷ್ಟು ಹೆದರಿಕೆ ಹುಟ್ಟಿಸುತ್ತಿವೆ. +ಈಗ ಉಂಟಾಗಿರುವ ದೊಡ್ಡ ಕೊರಕಲಿನ ಭಯ ಕೊರತೆಯೇ ಎದ್ದು ಕಾಣುತ್ತಿರುವುದರಿಂದಲೇ? +ಸತ್ಯ ತಿಳಿದು ಮಾನಸಿಕವಾಗಿ ಬಳಲಿ, ಬಹಳ ಸೂಕ್ಷ್ಮವಾಗುತ್ತಿದ್ದೇನೆಯೇ, ಇದೆಲ್ಲಾ ತಾಯ್ತನದ ಹಂಬಲವೇ? +ಕೈ ತುಂಬಾ ತುಂಬಿ ಕುಲುಕುಲು ನಗುವ ಹವಳದ ತುಟಿಗಳ ಕಂದನನ್ನು ಹಿಡಿದು ಹೆಮ್ಮೆಯಿಂದ ಬೀಗಿ ಇವರೆಲ್ಲರ ಮುಂದೆ ತಲೆ ಎತ್ತಿ ನಡೆಯುವಂತಾದರೆ? +ಮನೆಯ ತುಂಬಾ ಕೇಕೆ ಹಾಕುತ್ತಾ ಹರಿದಾಡುವ ಮುದ್ದು ಮಗು ಬಂದರೆ ತನ್ನ ಸದಾನಂದನಿಗೂ ಬೇರೆ ಮದುವೆ ಮಾಡಿಸುವ ಧೈರ್ಯವಿರುವುದಿಲ್ಲ ತಾನು ತನ್ನ ಸದಾನಂದ… +ಅವನಂತೆಯೇ ಇರುವ ಮಗು ಮಾತು ಮಾತಿಗೂ ನಗುವ ಅಳುವ ಕೈಕಾಲಿಗೆ ಸುತ್ತುವ ತನ್ನ ಮಗು. +ತೆರೆದ ಬಾಗಿಲು ಕತ್ತಲು ಮನೆ ಶಿಲಾ ಪ್ರತಿಮೆಯಂತೆ ಕುಳಿತ ಹೆಂಡತಿಯನ್ನು ಕಂಡು ಮನೆಗೆ ಬಂದ ಸದಾನಂದನಿಗೆ ಗಾಬರಿಯಾಯಿತು. +“ರಮಾ” ಹತ್ತಿರ ಬಂದು ಭುಜಹಿಡಿದು ಅಲುಗಿಸಿದ. +ಬೆಚ್ಚಿ ಬಿದ್ದು ನೋಡಿದಳು. +ಕತ್ತಲೆ ರೂಮು ಎದುರು ನಿಂತಿದ್ದ ಗಂಡ; +ಒಂದು ಕ್ಷಣ ಏನೂ ತಿಳಿಯದೆ ಕಣ್ಣು ಪಿಳುಕಿಸಿದಳು. +ಹೌದು ಏನಾಯ್ತು? +ಇದ್ದಕ್ಕಿದ್ದ ಹಾಗೆ ಏನಾಯ್ತು? +ಈ ದಿನ ಶೋಭಾ ಬಂದಿರಲಿಲ್ಲ. +ನಂತರ ಆ ಮನೆ, ಮಾತುಗಳು ಕೃತಿಯಂತೆ ಇರಿದ ನುಡಿಗಳು ಗಂಟಲುಬ್ಬಿ ಬಂದಿತು. +ಹತ್ತಿರ ಕುಳಿತಿದ್ದ ಗಂಡನ ಬೊಗಸೆಯಲ್ಲಿ ಮುಖವಿಟ್ಟು ಬಿಕ್ಕಿದಳು. +“ಏನಾಯ್ತು ಹೇಳು ರಮಾ. . ” ಆತಂಕದಿಂದ ಕೇಳಿದ. +“ನಾನೊಂದು ಮಾತು ಕೇಳಲಾ…” ಕಣ್ಣೀರು ತುಂಬಿದ ಮುಖ ಮೇಲೆತ್ತಿ ಗಂಡನ ಮುಖ ನೋಡುತ್ತಾ ಕೇಳಿದಳು. +“ಒಂದೇಕೆ?ನೂರು ಮಾತು ಕೇಳು… ಆದರೆ ಈ ಕತ್ತಲಲ್ಲಿ ಯಾಕೆ? +ತಾಳು ದೀಪ ಹಾಕ್ತೇನೆ…” ಮೇಲೇಳಲು ಯತ್ನಿಸಿದ ಗಂಡನನ್ನು ಕೂಡಿಸಿದ ರಮಾ, “ದೀಪ ಬೇಡಾ ನಂಗೆ ಉತ್ತರ ಬೇಕು…” ಮೊಂಡು ಮಗುವಿನ ಧ್ವನಿಯಲ್ಲಿ ಕೇಳಿದಳು. +“ಅದೇನು ಹೇಳು…” ಎನ್ನುತ್ತಾ ಅವಳ ಪಕ್ಕಕ್ಕೆ ಸರಿದು ಕುಳಿತ ಸದಾನಂದ. +ನಂಗೆ ಮಕ್ಕಳಾಗದಿದ್ದರೆ ನೀವು ಬೇರೆ ಮದ್ವೆ ಮಾಡಿಕೊಳ್ತಿರೇನು?…” +ಕತ್ತಲಿನಲ್ಲಿಯೇ ಗಂಡನ ಮುಖದ ಭಾವನೆಗಳನ್ನು ಓದಲು ಯತ್ನಿಸಿದಳು. +ಸದಾನಂದನಿಗೆ ಕುಚೋದ್ಯ ಮಾಡಬೇಕೆನಿಸಿತು. +“ಹೌದು… ನನ್ನ ಆಫೀಸಿನಲ್ಲಿ ಕೆಲಸ ಮಾಡುವ ಹುಡುಗಿಯಿದ್ದಾಳೆ… ಮಕ್ಕಳೂ ಇದ್ದಾರೆ. +ಆದರೆ ಗಂಡ ಇಲ್ಲ. +ಮುಂದೆ ಮಕ್ಕಳಾಗುವ ತೊಂದರೆ ತಪ್ಪುತ್ತೆ. +ಆಗಲಾ?”“ಹಾಸ್ಯ ಸಾಕು…” ಅಸಹನೆಯಿಂದ ನುಡಿದಳು. +“ಮತ್ತೇನು ಬೇಕು. . ” ತುಂಟ ನಗೆ ಅವನ ಕಣ್ಣುಗಳಲ್ಲಿ ಕುಣಿಯಿತು. +“ನನ್ನಾಣೆ… ಮಾಡಿ ಹೇಳಿ ಮದ್ದೆ ಆಗ್ತಿರಾ?” ಅವನ ಕೈಗಳೆರಡನ್ನು ಬಿಗಿಯಾಗಿ ಹಿಡಿದು ಕೇಳಿದ ಸ್ವರ ನಡುಗುತ್ತಿತ್ತು. +ಸದಾನಂದನ ಮುಖ ಗಂಭೀರವಾಯಿತು. +ಎರಡೂ ಕೈಗಳಿಂದ ಅವಳ ಮುಖವನ್ನು ಹಿಡಿದು ತನ್ನತ್ತ ತಿರುಗಿಸಿಕೊಂಡ. +“ಈ ಯೋಚನೆ ಯಾಕೆ ಬಂತು ನಿನಗೆ? +ನನ್ನ ರಮಾಳಿಂದ ನನಗೆ ಪ್ರೀತಿ… ತೃಪ್ತಿ ಪೂರ್ಣತೆ ಎಲ್ಲಾ ಸಿಕ್ಕಿದೆ ಬೇರೆ ಯಾರಿಂದ ಏನನ್ನು ನಾನು ಬಯಸುವುದಿಲ್ಲ.” +“ಆದರೆ, ಮಕ್ಕಳು ಸಿಕ್ಕಿಲ್ಲ” ನಕ್ಕು ಹೇಳಿದಳು ರಮಾ. +ಆ ನಗುವಿನ ಹಿಂದಿದ್ದ ನೋವು ಅವನ ಹೃದಯ ಹಿಂಡಿದಂತಾಯಿತು. +“ಅನಾವಶ್ಯಕ ಮಾತು ಬೇಡಾ ಏಳು ಹೊರಗಡೆ ಹೋಗಿ ಊಟ ಮಾಡಿ ಬರೋಣ. . ” +ಮಾತನ್ನು ಬೇರೆ ಕಡೆಗೆ ತಿರುಗಿಸಿದ ಸದಾನಂದ ಎದ್ದು ದೀಪ ಹಾಕಿದ. +ಝಗ್ಗನೆ ಬೆಳಗಿದ ದೀಪದ ಪ್ರಖರತೆ ಕಣ್ಣು ಕುಕ್ಕಿದಂತಾದರೂ ಕಣ್ಣು ಹೊಸಕಿಕೊಂಡು ಗಂಡನನ್ನು ನೋಡಿದಳು. +ಎಷ್ಟು ಆಕರ್ಷಕ!ಎಷ್ಟು ಮನಮೋಹಕವಾಗಿದ್ದಾನೆ!! +ಚಿನ್ನದ ಹೂವಿಗೆ ಪರಿಮಳವೂ ಇದ್ದಿದ್ದರೆ? +ಎಂಥಾ ನಿಪ್ರಯೋಜಕತೆ! +“ಹೋಗೋಣವಾ…?” ಹತ್ತಿರ ಬಂದು ಸದಾನಂದ ಕೇಳಿದ. +“ಊಹುಂ…”“ಏಳು ಪ್ಲೀಸ್…”ಸದಾನಂದ ಪ್ರೀತಿ, ಪ್ರೇಮ, ಕಕ್ಕುಲತೆ, ತನ್ನ ಮುಖದ ಮೇಲೆ ಒಂದು ಗೆರೆ ಬದಲಾವಣೆಯಾದರೂ ಕಂಡು ಹಿಡಿದು ಬಿಡುವ ಚಾಣಾಕ್ಷತೆ ಎಲ್ಲವೂ ತುಂಬಿದ್ದರೂ, ಈಚೀಚೆಗೆ ಅರ್ಧ ಕೊಡ ತುಂಬಿದಂತೆ ಏನೇನೋ ಶಬ್ದಗಳು ಅಲೆಗಳ ಏರಿಳಿತಳು. +ಏನೋ ಒಂದು ಬಗೆಯ ಶೂನ್ಯತೆ ಅಪೂರ್ಣತೆ ಸದಾನಂದನ ಭರವಸೆ ನೀಡುವ ಅಪ್ಪುಗೆ ಸಮಾಧಾನ ತಂದರೂ ಒಂದು ಕ್ಷಣ ಅಷ್ಟೇ… +ಎಲ್ಲವೂ ಅವನೊಂದಿಗೆ ಮಾಯ… +ಎಲ್ಲದರಲ್ಲೂ ನಿರಾಸಕ್ತಿ ಈಗಲ್ಲದಿದ್ದರೂ ಮುಂದಾದರೂ ಹೂಗೊಂಚಲು ತನಗೆ ಸಿಗಬಹುದೆಂಬ ಭರವಸೆ. +ಈಗ ಪೂರ್ತಿ ಮಾಯ ಎಲ್ಲವೂ ಗಗನ ಕುಸುಮ. +ಬೇರೆ ಗಿಡಗಳಲ್ಲಿನ ಸುಂದರ ಹೂಗಳನ್ನು ನೋಡಿಯೇ ಆನಂದಿಸಬೇಕು. +ತನ್ನ ಮನೆಯಂಗಳದಲ್ಲಿ ಹೂಗಿಡಗಳು ಬೆಳೆಯಲು ಸಾಧ್ಯವೇ ಇಲ್ಲ… +ಬರೀ ಎಲೆ ಮುಳ್ಳುಗಳು ತುಂಬಿದ ಕುರುಚುಲು ಗಿಡಗಳ ಗುಂಪು ಎಲ್ಲದರಲ್ಲೂ ಎಂಥದ್ದೋ ಅತೃಪ್ತಿ, ಅಸಮಾಧಾನ, ಅಸಹನೆ. +ದಿನ ಕಳೆದಂತೆ ಎದುರಿಸಬಲ್ಲೆ ಮಕ್ಕಳಾಗದಿದ್ದರೇನಾಯಿತು? +ಅವಳ ನಿರ್ಧಾರದ ಗೋಡೆ ನಿಧಾನವಾಗಿ ಬಿರುಕು ಬಿಡಲು ಪ್ರಾರಂಭವಾಗಿತ್ತು. +ಯಾವುದಾದರೂ ಸಣ್ಣಪುಟ್ಟ ಸಮಾರಂಭಗಳಾದರೂ ಅಲಂಕರಿಸಿಕೊಂಡು ನಗುತ್ತಾ ಹೋಗಿ ಬರುತ್ತಿದ್ದ ರಮಾ ಜನಗಳ ಗುಂಪಿನಿಂದಲೇ ದೂರವಿರತೊಡಗಿದಳು. +“ಎಷ್ಟು ಮಕ್ಕಳು?”“ಯಾರಿಗಾದರೂ ಕೇಳಿದರೆ, ನಿಮಗೆ ಮನೆಯೆಷ್ಟು. . ಹೊಲವೆಷ್ಟು ಅಂತ ಕೇಳುವಾಗ ಹೆಣ್ಣಿಗೆ ಕೇಳೋದು ಮಕ್ಕಳೆಷ್ಟು ಎಂದೇ ಅಲ್ವೇ?” +“ಇನ್ನೂ ಚಿಕ್ಕ ವಯಸ್ಸು ಮುಂದೆ ಮಕ್ಕಳಾಗಬಹುದು ಬಿಡಿ” +“ಗಂಡ ಹೆಂಡತಿ ಅದೆಷ್ಟು ಸುಂದರವಾಗಿದ್ದಾರೆ ಮಕ್ಕಳಾದ್ರಂತೂ ಚಿನ್ನದ ಗೊಂಬೆಗಳೇ ಆಗುತ್ತವೆ…” +ಇನ್ನು ಏನೇನೋ ಮಾತುಗಳು ಕುತೂಹಲದ ನೋಟಗಳು ರಮಾ ಬೆವತು ನೀರಾಗುತ್ತಿದ್ದಳು, ಆಗೆಲ್ಲಾ “ನಾನು ಬಂಜೆಯಲ್ಲ ನಂಗೂ ಮಕ್ಕಳಾಗುತ್ತವೆ. +ನಾನು ತಾಯಿಯಾಗುತ್ತೇನೆ” ಎಂದೆಲ್ಲಾ ಹೇಳಲು ಅವಳ ನಾಲಿಗೆ ತವಕಿಸಿದರೂ ಸ್ವರ ಹೊರಡುತ್ತಿರಲಿಲ್ಲ. +ಇವರೆಲ್ಲರಿಂದ ತಪ್ಪಿಸಿಕೊಂಡು ದೂರ ಓಡಬೇಕು. +ಆಕಾಶದ ಎತ್ತರಕ್ಕೂ ನಿಂತ ತನ್ನ ಸದಾನಂದನ ತೋಳುಗಳಲ್ಲಿ ಹುದುಗಿಹೋಗಬೇಕು. +ಆದರೆ?ಅವನ ತೋಳುಗಳು ಕತ್ತರಿಸಿ ಬಿದ್ದಿವೆಯಲ್ಲ! +ಎಂತಹ ಅಸಹಾಯಕತೆ. +ನಿರ್ಧಾರದ ಗೋಡೆ ಬಿರುಕು ಬಿಟ್ಟು ಚೂರು ಚೂರಾಗಿ ಕುಸಿಯತೊಡಗಿತ್ತು. +ಹೌದು ತನ್ನಲ್ಲಿ ಯಾವ ಕುಂದೂ ಇಲ್ಲ ತನಗೆ ಮಕ್ಕಳಾಗುತ್ತವೆ. + ಇದೇ ಮಾತುಗಳನ್ನು ಬೇರೆ ಯಾರೋ ಒತ್ತಿ ಒತ್ತಿ ಹೇಳಿದರಲ್ಲ? +ಡಾಕ್ಟರ್ ಜೋಶಿಯವರ ಮುಖ ತೇಲಿ ಬಂದಿತು. +ಅವಳ ಕಣ್ಣುಗಳು ಮಿಂಚಿದವು, ಯಾವುದೋ ನಿರ್ಧಾರ ಅವಳ ಮುಖದಲ್ಲಿ ಮೂಡಿತು. +ಅದೇ ಬಿಗುವಿನಲ್ಲಿ ದಡದಡನೆ ಒಳಗೆ ಬಂದಳು. +ಕೈಗೆ ಸಿಕ್ಕ ಸೀರೆಯನ್ನು ಸುತ್ತಿಕೊಂಡಳು. +ಪರ್ಸು ಕೈಗೆ ತೆಗೆದುಕೊಂಡು ಬಾಗಿಲಿಗೆ ಬೀಗ ಸಿಕ್ಕಿಸಿ ಹೊರಗೆ ಹೊರಟಿದ್ದು ಡಾ.ಜೋಶಿಯವರ ನರ್ಸಿಂಗ್ ಹೋಮಿಗೆ. +ಕೊನೆಗೊಂದು ದಿನ, ಡಾಕ್ಟರ್ ಜೋಶಿಯವರು,“ಅಂತೂ ಪ್ರಯೋಗದಲ್ಲಿ ಜಯಶಾಲಿಯಾದೆವು. +ಪ್ರತಿ ತಿಂಗಳು ಬಂದು ಚೆಕಪ್ ಮಾಡಿಸಿಕೊಂಡು ಹೋಗ್ತಾ ಇರಿ… +ಈ ಮಾತ್ರೆಗಳನ್ನು ವೇಳೆಗೆ ಸರಿಯಾಗಿ ತೆಗೆದುಕೊಳ್ಳಿ…” ಅತ್ಯಂತ ಉತ್ಸಾಹದಿಂದ ಹೇಳಿದಾಗ, ತಾನು ಗರ್ಭಿಣಿಯಾಗಿದ್ದೇನೆಂದು ತಿಳಿದೊಡನೆ ರಮಾಳಿಗೆ ಹುಚ್ಚು ಹಿಡಿದಂತಾಯಿತು. +ದುಃಖದ ಆವೇಗ ಆವೇಶದಲ್ಲಿ ಓಡಿಬಂದುದಾಗಿತ್ತು. +ಮಡಿಲಲ್ಲಿ ಆಡುವ ಮಗುವಿನ ಹೂ ನಗುವಿಗಾಗಿ ಹಾವು ನುಂಗಿಯಾಗಿತ್ತು. +ಈಗ ಸಹಿಸಿಕೊಳ್ಳಬೇಕು. +ಅದು ನಂಜು ಉಗಳಿದಾಗಲೆಲ್ಲಾ ಜೀರ್ಣಿಸಿಕೊಳ್ಳಬೇಕು. +ಆ ಶಕ್ತಿ ಇದೆಯೇ? +ದಿನ ಕಳೆದಂತೆ ಮನೋವ್ಯಥೆಯೊಂದಿಗೆ ದುಗುಡ ಆತಂಕ ಹೆಚ್ಚಾಯಿತು. + ಗಂಡನ ಪ್ರೀತಿಯ ತೋಳುಗಳಲ್ಲಿ ಹಾವು ಸುತ್ತಿದವಳಂತೆ ಚಡಪಡಿಸುತ್ತಿದ್ದಳು. +ಅವನ ನೆರಳು ಹತ್ತಿರ ಬಂದರೆ ಮೆಟ್ಟಿ ಬೀಳುತ್ತಿದ್ದಳು. +ಎಷ್ಟೋ ಬಾರಿ ಕನಸುಗಳಲ್ಲಿ ಚೀರಿ ಏಳುತ್ತಿದ್ದಳು. +ಮೈಯೆಲ್ಲಾ ಬೆವರಿ, ಹೆದರಿ ನಡುಗುತ್ತಿದ್ದ ತನ್ನನ್ನು ಸಂತೈಸಲು ಗಂಡ ಹತ್ತಿರ ಬಂದರೆ “ನನ್ನನ್ನು ಮುಟ್ಟಬೇಡಿ ಈ ಮಗು ನಿಮ್ಮದಲ್ಲ” ಎಂದು ಹುಚ್ಚಿಯಂತೆ ಕೂಗಿ ಹೇಳಬೇಕೆನಿಸುತ್ತಿತ್ತು. +ಗಂಡನ ಪ್ರೀತಿ, ಆತಂಕ ಹೆಚ್ಚಿ ತನ್ನ ಹತ್ತಿರ ಬಂದಂತೆಲ್ಲಾ ಅವನಿಂದ ದೂರವಿರಲು ಪ್ರಯತ್ನಿಸುತ್ತಿದ್ದಳು. +ಮಗು ಯಾರದ್ದಿರಬಹುದು? +ಯಾವ ಜಾತಿಯವನದ್ದೋ? +ಯಾವುದೋ ಮಗುವಿನ ಮುಖ ಅಸ್ಪಷ್ಟವಾಗಿ ತೇಲಿ ಬರುತ್ತಿದ್ದರೆ ಭೀತಿಯಿಂದ ಬಲವಾಗಿ ಕಣ್ಣು ಮುಚ್ಚಿಕೊಂಡುಬಿಡುತ್ತಿದ್ದಳು. +“ಮಗು ಯಾರದು? +ಬೇರೆ ತರಹಾ ಇದೆಯಲ್ಲ ರಮಾ?” ಎಂದು ತನ್ನ ಗಂಡ ಕೇಳಿದರೆ? +“ಮಗು ಗಂಡನ ತರಹವೂ ಇಲ್ಲ, ತಾಯಿಯ ಹಾಗೂ ಇಲ್ಲ. +ಬೇರೇನೆ ಇದೆ” ಎಂದು ಬೀದಿಯವರೆಲ್ಲಾ ಬಂದು ನೋಡಿದರೆ? +ರಮಾ ಉಬ್ಬೆಗೆ ಹಾಕಿದವಳಂತೆ ಬಂದಳು. +ಮಾತ್ರೆಗಳನ್ನು ಕಿಟಕಿಯಿಂದಾಚೆ ದೂರ ಕಣ್ಣಿಗೆ ಕಾಣಿಸದ ಹಾಗೆ ಬೀಸಿ ಎಸೆದಳು. +ತನ್ನ ಮೇಲೆ, ತನ್ನನ್ನು ಪ್ರೀತಿಸುವ ಸದಾನಂದನ ಮೇಲೆ ಈ ಜನಗಳ ಮೇಲೆ ರೋಷ ಉಕ್ಕಿತು ಜಿಗುಪ್ಸೆಯಿಂದ ಯಾರಿಗೂ ಕಾಣದ ಹಾಗೆ ತನ್ನನ್ನೇ ದಂಡಿಸಿಕೊಳ್ಳುತ್ತಿದ್ದಳು. +ಆದರೂ ಅವಳ ಹೃದಯದಲ್ಲಿ ಹೊತ್ತಿದ್ದ ಕಿಚ್ಚು ಆರಲಿಲ್ಲ. +ಬೆಂಕಿ ತಣ್ಣಗಾಗಲಿಲ್ಲ ಪಾಪಕ್ಕೆ ಪ್ರಾಯಶ್ಚಿತ್ತವಾಗಬೇಕು… +ಕಹಿ ಸತ್ಯ ಹೇಳಲೇಬೇಕು ಬೇರು ಸಮೇತ ಕಿತ್ತೆಸೆಯಬೇಕು. +ಈಗ ಅದೊಂದೇ ಮಾರ್ಗವಿರುವುದು. +ಆದರೆ ಹೇಳುವುದಾದರೂ ಹೇಗೆ? +ಉನ್ಮಾದಿನಿಯಂತೆ ತನ್ನತ್ತ ನೋಡುತ್ತಾ, ತಲೆ ಗಟ್ಟಿಯಾಗಿ ಹಿಡಿದು ಕುಳಿತ ರಮಾಳ ಮುಖ ನೋಡಿ ಸದಾನಂದನಿಗೆ ಹೆದರಿಕೆಯಾಯಿತು. +“ರಮಾ…” ಹಿಂಜರಿಯುತ್ತಲೇ ಹತ್ತಿರ ಕುಳಿತ. +ಅವನ ಕೈಗಳು ಅವಳ ಸೆರಗನ್ನು ಸರಿಪಡಿಸಿದವು. +ಹತ್ತಿರ ಬಂದ ಗಂಡನನ್ನು ಬಲುವಾಗಿ ಅಪ್ಪಿ ಹಿಡಿದುಕೊಂಡಳು. +“ಯಾಕೆ?ಏನಾಗ್ತಿದೆ ಹೇಳು ರಮಾ…“ಅವನ ತೋಳುಗಳಲ್ಲಿದ್ದ ಮುಖ ಮೇಲೆತ್ತಿ ನೋಡಿದ ರಮಾ. +“ನಾನು ನನ್ನ ಹೊಟ್ಟೆಯಲ್ಲಿ…” ತಡವರಿಸಿದಳು. +“ಏನಾಗ್ತಿದೆ ಹೇಳು” ಅವಳನ್ನು ಇನ್ನು ಹತ್ತಿರಕ್ಕೆಳೆದುಕೊಂಡ. +“ಮಗು ಇದೆ ಬೆಳಿತಾ ಇದೆ…” ಪ್ರಯಾಸದಿಂದ ನುಡಿದಳು. +ಆನಂದದಿಂದ ಸದಾನಂದನ ಮುಖ ಹುಚ್ಚು ಹುಚ್ಚಾಯಿತು. +“ಓಹ್!ಎಷ್ಟು ಕೆಟ್ಟ ಹುಡುಗಿ ನೀನು? +ಈ ಸುದ್ದಿ ತಿಳಿಸಲು ಅದೆಷ್ಟು ಹೆದರಿಸಿಬಿಟ್ಟೆ?” +“ಆದರೆ ನಂಗೆ ಈ ಮಗೂ ಬೇಡಾ…”ಅವನ ತೋಳುಗಳು ಕತ್ತರಿಸಿ ಹಾಕಿದಂತೆ ಕೆಳಗೆ ಬಿದ್ದವು… +ದಿಗ್ಭ್ರಾಂತನಾಗಿ ರಮಾಳತ್ತ ನೋಡಿದ. +ಈ ಸುದಿನಕ್ಕಾಗಿ ತಾವಿಬ್ಬರೂ ಎಷ್ಟು ದಿನಗಳಿಂದ ಕಾಯುತ್ತಿದ್ದೆವು. +ಮೊದಲಿನಿಂದಲೂ ಆಗಾಗ್ಗೆ ರಮಾ ನೀವೇ ಮಗ ನಂಗೆ ಮಗು ಬೇಡ” ಎನ್ನುತ್ತಿದ್ದುದು ಕೇವಲ ತನ್ನನ್ನು ಸಮಾಧಾನ ಪಡಿಸಲು ಆಡುವ ನಾಟಕ ಎಂದುಕೊಂಡಿದ್ದ. +ನಿಜವಾಗಿಯೂ ರಮಾಳಿಗೆ ಮಗು ಬೇಕಿರಲಿಲ್ಲವೇ? +ಅವಳಿಗೆ ಹುಚ್ಚು ಹಿಡಿದಿಲ್ಲವಷ್ಟೇ? +ಹಾಸ್ಯ ಮಾಡುತ್ತಿರುವಳೇ? +“ನೀನು ಹೇಳ್ತಾ ಇರೋದು ಏನೂಂತಾ ತಿಳಿದಿದೆಯಾ?” ಚೇತರಿಸಿಕೊಂಡು ಕೇಳಿದ. +ಅವನ ಧ್ವನಿ ಉದ್ವೇಗದಿಂದ ನಡುಗುತ್ತಿತ್ತು. +“ನಿಜಕ್ಕೂ ನಂಗೆ ಮಗೂ ಬೇಡಾ ತೆಗೆಸಿ ಹಾಕಿಬಿಡಿ, ಇಲ್ಲದಿದ್ದರೆ ನಾನು ಸತ್ತೇ ಹೋಗುತ್ತೇನೆ.”ದುಃಖದ ಆವೇಗದಲ್ಲಿ ಗಡಬಡಿಸತೊಡಗಿದಳು. +ಸದಾನಂದ ನಿಸ್ತೇಜನಾದ. +“ನಂಗೆ ನೀವು ಬೇಕು ಬೇರೆ ಏನೂ ಬೇಡ, ಈಗಲೇ ಡಾಕ್ಟರ್ ಬಳಿಗೆ ಹೋಗೋಣ ಈ ಮಗು ಬೇಡಾ. +ಇಲ್ಲದಿದ್ದರೆ ನಾನು ವಿಷ ಕುಡಿದು ಬಿಡ್ತೀನಿ…”ಸದಾನಂದ ಏನೂ ಉತ್ತರ ಹೇಳದೆ ಹೊರ ಬಂದು ಎರಡು ಕೈಗಳಲ್ಲಿ ತಲೆ ಇಟ್ಟುಕೊಂಡು ಕುಳಿತ. +ತನಗೆ ತನ್ನ ಪ್ರೀತಿಯ ಹೆಂಡತಿ ಬೇಕು. +ಅವಳ ನಿರ್ಧಾರ ಒಪ್ಪಿಕೊಳ್ಳಲೇ ಬೇಕಾಗಿತ್ತು. …. +ಆದರೆ ಕಬ್ಬಿಣದ ತೆರೆ ಸತ್ಯಾಂಶವನ್ನು ದೂರ ಮಾಡಿರುವುದನ್ನು ಮನಗಾಣದಾದ. -- GitLab