diff --git "a/Data Collected/Kannada/MIT Manipal/Kannada-Scrapped-dta/\340\262\257\340\262\225\340\263\215\340\262\267\340\263\213\340\262\252\340\262\276\340\262\270\340\262\225\340\262\260\340\263\201.txt" "b/Data Collected/Kannada/MIT Manipal/Kannada-Scrapped-dta/\340\262\257\340\262\225\340\263\215\340\262\267\340\263\213\340\262\252\340\262\276\340\262\270\340\262\225\340\262\260\340\263\201.txt" new file mode 100644 index 0000000000000000000000000000000000000000..6eacfe7744362fb45b70f459bdc27122a991fe95 --- /dev/null +++ "b/Data Collected/Kannada/MIT Manipal/Kannada-Scrapped-dta/\340\262\257\340\262\225\340\263\215\340\262\267\340\263\213\340\262\252\340\262\276\340\262\270\340\262\225\340\262\260\340\263\201.txt" @@ -0,0 +1,1254 @@ +ಅರುಳು ಬೆಳಗುವ ಕಲಾವಿದರತ್ತ ಅಕ್ಷರದ ಬೆಳಕು! +ಕಾಲ ಬದಲಾದಂತೆ ಪರಂಪರೆಯನ್ನು, ಸಂಸ್ಕೃತಿಯನ್ನು ಉಳಿಸುವ ವಿಧಾನವೂ ಬದಲಾಗಿದೆ. +ಮೌಖಿಕ ರೂಪದಲ್ಲಿದ್ದ ಕಲೆ ಸಂಸ್ಕೃತಿ, ಆಧುನಿಕವಾದ ಈ ಕಾಲದಲ್ಲಿ ಹೊಸ ತಂತ್ರಜ್ಞಾನವನ್ನು ಬಳಸಿಕೊಂಡು ಅಕ್ಷರರೂಪದಲ್ಲಿ, ಧ್ವನಿರೂಪದಲ್ಲಿ, ದೃಶ್ಯರೂಪದಲ್ಲಿ ದಾಖಲುಗೊಂಡು ಪರಂಪರೆಯ ಹೊಸವಾಹಿನಿಗಳಾಗಿ ಸಾಗುತ್ತಿವೆ. +ಇಂಥ ಸಂದರ್ಭದಲ್ಲಿ, ಕರೆನಾಡು - ಮಲೆನಾಡುಗಳ ಇರುಳುಗಳನ್ನು ಬೆಳಗಿಸುತ್ತಾ ಯಕ್ಷಗಾನ ಕಲೆಯನ್ನು ಜೀವಂತವಾಗಿರಿಸಿರುವ ಕಲಾವಿದರ ವಿವರಗಳನ್ನು ಅಕ್ಷರರೂಪದಲ್ಲಿ ದಾಖಲಿಸುವುದು ಅಗತ್ಯವಲ್ಲವೆ? +ಎಂಬ ಯೋಚನೆ ಯಕ್ಷಗಾನ ಬಯಲಾಟ ಅಕಾಡೆಮಿಗೆ ಬಂದದ್ದೇ ಈ ನಿಟ್ಟಿನಲ್ಲಿ ಕಾರ್ಯನಿರ್ವಹಣೆಗೆ ದಾರಿಯಾಯಿತು. +ಅದರ ಫಲವಾಗಿ ಈ ಸಂಪುಟ ನಿಮ್ಮ ಕೈಯಲ್ಲಿದೆ. +ಎರಡನೆಯ ಸಂಪುಟ ಈಗ ಮುದ್ರಣ ಹಂತದಲ್ಲಿದೆ. +ಎಲ್ಲ ಕಲಾವಿದರಂತೆ ಮೇಳದ ಚೌಕಿಯಲ್ಲಿದ್ದು, ಮುಂದೆ ರಾಜಕೀಯ ಕ್ಷೇತ್ರ ಸೇರಿ,ಯಕ್ಷಗಾನ ಬಯಲಾಟಕ್ಕೆ ಒಂದು ಪ್ರತ್ಯೇಕ ಅಕಾಡೆಮಿ ಬೇಕು ಎಂದು ಕನಸು ಕಾಣುತ್ತಿದ್ದ ನನ್ನ ಹೆಸರು ಕೂಡ ಈ ಸಂಪುಟದಲ್ಲಿ ಉಲ್ಲೇಖವಾಗಿರುವುದು ನನಗೆ ಹೆಮ್ಮೆಯೆನಿಸಿದೆ. +ನನ್ನದೇನು, ಈ ನಾಡಿನ ಸಾವಿರಾರು ಕಲಾವಿದರ ಮತ್ತು ಕಲಾರಸಿಕರ ಹಾರೈಕೆಯ ಫಲವಾಗಿ, ಘನ ಸರಕಾರ ಯಕ್ಷಗಾನದ ಪರಂಪರೆಗೆ ಸಂಬಂಧಿಸಿದ ವಿವಿಧ ಪ್ರಕಾರಗಳನ್ನು ಸೇರಿಸಿ "ಯಕ್ಷಗಾನ ಬಯಲಾಟ ಅಕಾಡೆಮಿ'ಯನ್ನು ಘೋಷಿಸಿದ ದಿನ ಯಕ್ಷ ಪ್ರಪಂಚದ ಎಲ್ಲರೂ ಪುಳಕಿತರಾದರು. +ಮುಂದೆ, ಅಕಾಡೆಮಿಗೆ ಅಧ್ಯಕ್ಷರು, ಸದಸ್ಯರು ನೇಮಕವಾಗಿ ವಿಧ್ಯುಕ್ತವಾಗಿ ಚಟುವಟಿಕೆಗಳು ಆರಂಭವಾಗಿಯೇ ಬಿಟ್ಟಿತು. +ನಾವು ಕಾರ್ಯೋನ್ಮುಖರಾದಾಗ, ಜಾನಪದ ಅಕಾಡೆಮಿಯ ಜೊತೆಗಿದ್ದ ಯಕ್ಷಗಾನ ಕಲೆಗೆ ಪ್ರತ್ಯೇಕ ಸ್ವರೂಪದ ಸಾಂಸ್ಥಿಕ ಆಯಾಮ, ಕಾರ್ಯ ವೈಖರಿ ಇರಬೇಕಾದ ಅಗತ್ಯ ಕಂಡುಬಂತು. +ಅಸಾಮಾನ್ಯರು ಪೋಷಿಸಿಕೊಂಡು ಬಂದ ಈ ರಂಗವೃತ್ತಿ, “ರಂಗಭೂಮಿ'ಯಾಗಿ, ವ್ಯಾಪಕವಾದ ಹರವನ್ನು ಹೊಂದಿದ್ದು, ಅದಕ್ಕೆ ತಕ್ಕಂತೆ ಕಾರ್ಯಸೂಚಿಯನ್ನು ಹಾಕಿಕೊಳ್ಳುವುದು ಅನಿವಾರ್ಯವೆನಿಸಿತು. +ಅದಕ್ಕಾಗಿ ಸದಸ್ಯರ ಸಹಮತದೊಂದಿಗೆ ಕರ್ನಾಟಕದ ಕರಾವಳಿಯಿಂದ ತೊಡಗಿ ಬೇರೆ ಬೇರೆ ಜಿಲ್ಲೆಗಳಲ್ಲಿ ಚಟುವಟಿಕೆಯನ್ನು ವಿಸ್ತರಿಸಬೇಕಾದ ಅಗತ್ಯ ಉಂಟಾಯಿತು. +ಸರಕಾರದ ಅನುದಾನದ ಹೆಚ್ಚಳ, ಸದಸ್ಯರ ಉತ್ಸಹ ಜೊತೆ ಸೇರಿ, ಪ್ರದರ್ಶನಗಳು, ಶಿಬಿರಗಳು,ಅಭ್ಯಾಸ ವರ್ಗಗಳು ಏರ್ಪಾಟಾಗತೊಡಗಿದವು. +ಹಿಂದೆ ಅಕಾಡೆಮಿ ವತಿಯಿಂದ ವರ್ಷಕ್ಕೆ ಮೂರು ಮಂದಿಗೆ ಇದ್ದ ಅಕಾಡೆಮಿ ಪ್ರಶಸ್ತಿಯನ್ನು ಹತ್ತು ಮಂದಿಗೆ ಹೆಚ್ಚಿಸುವುದಕ್ಕೆ ಮತ್ತು ಯಕ್ಷಗಾನದ ಸೀಮಾ ಪುರುಷನೆಂಬ ಕೀರ್ತಿಗೆ ಪಾತ್ರನಾದ ಪಾರ್ತಿ ಸುಬ್ಬನ ಹೆಸರಿನಲ್ಲಿ ಒಂದು ಲಕ್ಷ ರೂಪಾಯಿಗಳ ಪ್ರಶಸ್ತಿಯನ್ನು ಪ್ರಕಟಿಸುವಂತೆ ಸರಕಾರವನ್ನು ಕೇಳಿಕೊಳ್ಳಲಾಯಿತು. +ಈ ಹೊಸ ಯೋಜನೆಗೆ ಒಪ್ಪಿಗೆ ದೊರೆತು ಅಕಾಡೆಮಿಯ ಎರಡು ವರ್ಷಗಳ ಪ್ರಶಸ್ತಿಯನ್ನು ಇಪ್ಪತ್ತು ಮಂದಿಗೆ ಹಾಗೂ ಪಾರ್ತಿಸುಬ್ಬ ಪ್ರಶಸ್ತಿಯನ್ನು ಇಬ್ಬರಿಗೆ ಪ್ರದಾನ ಮಾಡಿದವು. +ಯಕ್ಷಗಾನ ರಂಗದಲ್ಲಿ ಕಲಾವಿದರ ಕ್ಷೇಮಕ್ಕಾಗಿ ಕಲೆಯ ಪ್ರಗತಿಗಾಗಿ ಎಲ್ಲಲ್ಲಿ ಕಾರ್ಯಕ್ರಮಗಳು ನಡೆಯುತ್ತಿವೆಯೋ ಅಲ್ಲೆಲ್ಲ ಅಕಾಡೆಮಿಯ ಸಹಾಯ ಹಸ್ತ ಚಾಚಲ್ಪಡುತ್ತಿದೆ. +"ಶಿಕ್ಷಣದಲ್ಲಿ ಯಕ್ಷಗಾನ - ಯಕ್ಷಗಾನ ಶಿಕ್ಷಣ' ಕುರಿತ ರಾಜ್ಯಮಟ್ಟದ ಸಮ್ಮೇಳನವು ಸುಳ್ಯದಲ್ಲಿ ನಡೆಯಿತು. +ಯಕ್ಷ ಶಿಕ್ಷಣಕ್ಕೆ ಬೇಕಾದ ಚೌಕಟ್ಟನ್ನು ನಿರ್ಧರಿಸಲಾಯಿತು. +ಶಿವಮೊಗ್ಗದಲ್ಲಿ ಎಲ್ಲಾ ಕಲಾ ಪ್ರಕಾರದ ಪ್ರದರ್ಶನ,ಯಕ್ಷರಂಗ ದರ್ಶನ ಕಾರ್ಯಕ್ರಮ. + ಕಿನ್ನಿಗೋಳಿಯಲ್ಲಿ ಯಕ್ಷಗಾನ ಆಂಗಿಕ ಅಭಿನಯದ ಬಗ್ಗೆ ಪ್ರದರ್ಶನ ಹಾಗೂ ಪ್ರಾತ್ಯಕ್ತಿಕೆ. +ಉಜಿರೆಯಲ್ಲಿ ಏಳು ದಿನಗಳ "ಯುವ ವೃತ್ತಿಪರ ಯಕ್ಷಗಾನ ಕಲಾವಿದರ ಪುನಶ್ಚೇತನ ಶಿಬಿರ'. +ಮಂಗಳೂರಿನಲ್ಲಿ “ಸರಣಿ ಯಕ್ಷಗಾನ ತಾಳಮದ್ದಳೆ' ಕಾರ್ಯಕ್ರಮ. +ಬೆಂಗಳೂರಿನಲ್ಲಿ ಯಕ್ಷಗಾನ ಮುಖವರ್ಣಿಕೆ ಕಾರ್ಯಾಗಾರ ಪ್ರಾತ್ಯಕ್ಷಿಕೆ. +ರಾಮನಗರ ಜಿಲ್ಲೆಯ ಜಾನಪದ ಲೋಕದಲ್ಲಿ ಮೂಡಲಪಾಯ ಯಕ್ಷಗಾನದ ಪ್ರಾತ್ಯಕ್ಷಿಕೆ ಮತ್ತು ದಾಖಲಾತಿ. + ಅರಳುಗುಪ್ಲೆಯಲ್ಲಿ ಮೂಡಲಪಾಯ ದೊಡ್ಡಾಟ ಯಕ್ಷಗಾನ ಸಮ್ಮೇಳನ-ವಿಚಾರಸಂಕಿರಣ ಕಾರ್ಯಕ್ರಮ. + ಕಾರ್ಕಳದಲ್ಲಿ “ಎರಡು ದಿನಗಳ ಯಕ್ಷಗಾನ ಪ್ರಾತ್ಯಕ್ಷಿಕೆ ಮತ್ತು ಹಿರಿಯ ವಿದ್ವಾಂಸರು/ತಜ್ಞರಿಂದ ಯಕ್ಷಗಾನ ವಿಚಾರ ಗೋಷ್ಠಿ'. + ಮುಂಬೈನಲ್ಲಿ ಯಕ್ಷಗಾನೋತ್ಸವ, ಕಾಸರಗೋಡಿನಲ್ಲಿ “ಯಕ್ಷಪನರ್ನವ',ಮಂಗಳೂರಿನಲ್ಲಿ “ವಿದ್ಯಾರ್ಥಿ ಯಕ್ಷಗಾನ ಸಂಭ್ರಮ'. +ಬೆಂಗಳೂರಿನಲ್ಲಿ "ಯಕ್ಷಗಾನದಲ್ಲಿ ಅಭಿನಯ ಹಾಗೂ ಪ್ರಯೋಗ'. + ಉಜಿರೆಯಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗಡೆಯವರ ಅನುಗ್ರಹದೊಂದಿಗೆ ತೆಂಕು-ಬಡಗುತಿಟ್ಟಿನ ಕಲಾವಿದರನ್ನು ಕಲೆ ಹಾಕಿ ಒಂದು ವಾರದ ಪುನಶ್ಚೇತನ ಶಿಬಿರವನ್ನು ಏರ್ಪಡಿಸಿದ್ದಾಯಿತು. +ಉಡುಪಿಯಲ್ಲಿ ಪ್ರಸಂಗ ರಚನಾ ಕಮ್ಮಟವನ್ನು ಏರ್ಪಡಿಸಿ ಅನೇಕ ಕವಿಗಳ ಛಂದಸ್ಸಿನ ವಿದ್ವಾಂಸರ ಸಹಯೋಗವನ್ನು ಏರ್ಪಡಿಸಿದ್ದಾಯಿತು. +ಅಂದು ಮಂಡಿಸಲ್ಪಟ್ಟ ಪ್ರಬಂಧಗಳು ಮುದ್ರಣ ಯೋಗ್ಯವಾಗಿರುವುದು ವಿಶೇಷ ಸಂಗತಿಯಾಗಿದ್ದು, ಅವುಗಳನ್ನು ಸಂಕಲನ ರೂಪದಲ್ಲಿ ದಾಖಲೆಗೊಳಿಸುವ ಚಿಂತನೆಯು ಅಕಾಡೆಮಿಯಲ್ಲಿ ನಡೆದಿದೆ. +ಈ ಮಧ್ಯೆ ಶೇಣಿಯವರ "ಶೇಣಿ ಭಾರತ'ವನ್ನು ಪುನರ್‌ ಮುದ್ರಣಕ್ಕೆ ಅಣಿಗೊಳಿಸುವ ಯೋಜನೆಯು ಸಿದ್ಧವಾಗಿದೆ. +ಯಕ್ಷಗಾನದ ಉಭಯ ತಿಟ್ಟುಗಳ ಕಲಾವಿದರ ದಾಖಲೀಕರಣದ ಯೋಜನೆ ಹಿಂದೆಯೇ ಅನುಮೋದನೆ ಪಡೆದಿತ್ತು. +ಈಗ ಅದು ಈ ಪುಸ್ತಕದ ರೂಪದಲ್ಲಿ ಕಾರ್ಯರೂಪಕ್ಕೆ ಬರುತ್ತಿದೆ. +ಮೊದಲನೆ ಯೋಜನೆಯಡಿ ಎರಡು ಸಂಪುಟಗಳನ್ನು ಹೊರತರಲಾಗುತ್ತಿದ್ದು ಒಟ್ಟು ಆರು ನೂರು ಕಲಾವಿದರ ವಿವರಗಳು ಇವುಗಳಲ್ಲಿ ದಾಖಲಾಗಿವೆ. +ಇವುಗಳಲ್ಲಿ ಪರಿಗಣಿಸಲಾಗಿರುವ ಹೆಚ್ಚಿನ ಕಲಾವಿದರು ಈಗಲೂ ಕಲಾ ವ್ಯವಸಾಯ ಮಾಡುತ್ತಿರುವವರು. +ಕೆಲವರು ನಿವೃತ್ತರಾಗಿದ್ದರೆ, ಇನ್ನು ಕೆಲವರು ಹವ್ಯಾಸಿ ರಂಗದಲ್ಲಿ ಪ್ರವೃತ್ತರಾಗಿರುವವರು. +ಒಂದು ಸಂಪುಟದಲ್ಲಿ ಪ್ರತೀ ತಿಟ್ಟಿನ ಒಟ್ಟು ಮುನ್ನೂರು ಕಲಾವಿದರ ಸಂಕ್ಷಿಪ್ತ ಪರಿಚಯವಿದೆ. +ಈ ಸಂಪುಟಗಳು ಕನಿಷ್ಠ ಹತ್ತು ವರ್ಷ ಮೇಳದ ತಿರುಗಾಟವನ್ನು ಹೊಂದಿರುವ ಕಲಾವಿದರ ವಿವರಗಳನ್ನಷ್ಟೇ ಒಳಗೊಂಡಿದೆ. +ಆದಾಗ್ಯೂ ಈ ಸಂಪುಟಗಳು ಸಮಗ್ರವಾಗಿವೆಯೆಂದು ಹೇಳುವ ಧೈರ್ಯ ನಮಗಿಲ್ಲ. +ವಿಸ್ತಾರವಾದ ಭೌಗೋಳಿಕ ಪರಿಸರದಲ್ಲಿ ಹರಡಿಕೊಂಡಿರುವ ಈ ಕಲೆಯಲ್ಲಿ ನಿಡುಗಾಲ ದುಡಿದ ಕೆಲವು ಕಲಾವಿದರಾದರೂ ನಮ್ಮ ಪರಿಗಣನೆಯಿಂದ ಹೊರಗುಳಿದಿರಬಹುದು. +ಕೆಲವರು ಪ್ರಸಿದ್ಧಿಯ ಬೆಳಕಿನ ಮರೆಯಲ್ಲಿರಬಹುದು. +ಇನ್ನೂ ಕೆಲವರು ದೂರದ ಊರುಗಳಲ್ಲಿರಬಹುದು. +ಹಾಗಾಗಿ ಹೆಸರು ಬಿಟ್ಟುಹೋಗಿರುವುದು ಉದ್ದೇಶ ಪೂರ್ವಕವಲ್ಲ. +ತಾಂತ್ರಿಕ ಕಾರಣದಿಂದಾದ ಪ್ರಮಾದವೆಂದು ತಿಳಿಯಬೇಕೆಂದು ಕೋರಿಕೆ. +ಮುಂದಿನ ಸಂಪುಟಗಳಲ್ಲಿ ಅಂಥವರ ವಿವರಗಳು ಬರುವಂತೆ ನೋಡಿಕೊಳ್ಳುತ್ತೇವೆ ಎಂದಷ್ಟೇ ಇಲ್ಲಿ ಹೇಳಬಹುದು. +ಈ ಕೃತಿ ಮೈದಳೆಯುವಲ್ಲಿ ಮಾರ್ಗದರ್ಶಕರಾಗಿ ಸಹಕರಿಸಿದ ಈ ಸಂಗ್ರಹದ ಕನಸನ್ನು ಹೊತ್ತು ಗ್ರಂಥ ಹೊರಬರುವಲ್ಲಿ ಮಾರ್ಗದರ್ಶಕರಾಗಿ ಸಹಕರಿಸಿದ ಅಕಾಡೆಮಿಯ ಸದಸ್ಯರಾದ ಮುರಳಿ ಕಡೆಕಾರ್‌ಮತ್ತು ಡಾ.ಸುಂದರ್‌ ಕೇನಾಜೆಯವರ ಹೆಸರುಗಳನ್ನು ನಾನಿಲ್ಲಿ ಉಲ್ಲೇಖಿಸಲೇಬೇಕು ಹಾಗೂ ಅಭಿನಂದಿಸಲೇಬೇಕು. +ಈ ಕಾರ್ಯದಲ್ಲಿ ಸಂಗ್ರಹಕಾರರಾಗಿ ಶ್ರಮಿಸಿದ ಕಲಾವಿದರೂ, ಯಕ್ಷಗಾನದ ಕುರಿತು ಆಳವಾದ ಅಸ್ಥೆಯುಳ್ಳವರೂ ಆದ ಡಾ.ದಿನಕರ ಎಸ್‌.ಪಚ್ಚನಾಡಿ ಮತ್ತು ಪ್ರಸಾದ ಕುಮಾರ್‌ ಮೊಗೆಬೆಟ್ಟು ಅಭಿನಂದನೆಗೆ ಅರ್ಹರಾಗಿದ್ದಾರೆ. +ಈ ಪುಸ್ತಕ ಹೊರಬರಲು ಸಹಕರಿಸಿದ ಅಕಾಡೆಮಿಯ ರಿಜಿಸ್ಟಾರ್‌ ಪದ್ಮಜ ಕುಮಾರಿ ಎನ್‌.ಅವರಿಗೂ, ಅಕಾಡೆಮಿಯ ಸಿಬ್ಬಂದಿಯವರಿಗೂ ಅಭಿನಂದನೆಗಳು. +ಕಲೆಗೆ ಮತ್ತು ಕಲಾವಿದರಿಗೆ ಸಂಬಂಧಿಸಿದ ದಾಖಲಾತಿ ಕೆಲಸಗಳನ್ನು ಮುಂದುವರಿಸುವ ಹೆಬ್ಬಯಕೆ ಅಕಾಡೆಮಿಗಿದೆ. +ಸಹೃದಯರಾದ ನಿಮ್ಮ ಸಲಹೆ - ಸಹಕಾರ ನಮ್ಮ ಮಾರ್ಗವನ್ನು ಇನ್ನಷ್ಟು ಸ್ಪಷ್ಟವಾಗಿರಸುತ್ತದೆಂಬ ವಿಶ್ವಾಸ. +(ಕುಂಬಳೆ ಸುಂದರ ರಾವ್‌)ಅಧ್ಯಕ್ಷರು ಕರ್ಣಾಟಕ ಯಕ್ಷಗಾನ ಬಯಲಾಟ ಅಕಾಡೆಮಿ, ಬೆಂಗಳೂರು. +ನಾಲ್ಕು ದಶಕಗಳಿಗೂ ಮಿಕ್ಕಿ ಮೇಳತಿರುಗಾಟವನ್ನು ಮಾಡಿದ್ದು, ಹಾಸ್ಯದ ಮೂಲಕ ಜನಮನವನ್ನು ರಂಜಿಸಿದ ಹಿರಿಯ ಹಾಸ್ಯಗಾರ ಶ್ರೀಮಿಜಾರು ಅಣ್ಣಪ್ಪರವರು ಪ್ರಸ್ತುತ ನಿವೃತ್ತಕಲಾವಿದರಾಗಿದ್ದು ವಿಶೇಷ ಆಹ್ಲಾನದ ಮೇರೆಗೆ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಾ ಇದ್ದಾರೆ. +ಕೊರಗ ಗೌಡ ಹಾಗೂ ಪಾರ್ವತಿ ದಂಪತಿಯ ಸುಪುತ್ರರಾಗಿ 1924ನೇ ಇಸವಿಯಲ್ಲಿ ಮಿಜಾರಿನ ಕಿಂಡೇಲು ಎಂಬಲ್ಲಿ ಅಣ್ಣಪ್ಪರು ಜನಿಸಿದರು. +ಬಾಲ್ಯದಿಂದಲೇ ಯಕ್ಷಗಾನ ಕಲೆಯ ಬಗ್ಗೆ ಆಸಕ್ತರಾಗಿದ್ದ ಇವರು ಮೂಡಬಿದ್ರೆ ಸಣ್ಣಪ್ಪ ರಾಯರಲ್ಲಿ ನಾಟ್ಯ ಮತ್ತು ಅರ್ಥಗಾರಿಕೆಯ ಅಭ್ಯಾಸವನ್ನು ಮಾಡಿದರು. +ಪಾತ್ರಗಳ ಸ್ವಭಾವ, ನುಡಿಗಟ್ಟುಗಳ ಬಗ್ಗೆ ಅಧ್ಯಯನ ಮಾಡಿರುವ ಇವರು ನಿಷ್ಠೆ ಇದ್ದು ಬೆಳೆದು ಬಂದ ಸಾಧಕರಾಗಿದ್ದಾರೆ. +ಇದಿರು ಪಾತ್ರವು ಒಳ್ಳೆಯದಾದರೆ ತನ್ನ ಪಾತ್ರ ಒಳ್ಳೆಯದಾಗುತ್ತದೆ ಎಂಬ ದೃಷ್ಠಿ ಧೋರಣೆವುಳ್ಳ ಇವರು ಇದಿರು ಪಾತ್ರದ ಕಲಾವಿದರೊಂದಿಗೆ ನಿರ್ವಣೆಯ ಬಗ್ಗೆ ಚರ್ಚಿಸುತ್ತಾರೆ. +ಕೂಡ್ಲು - 1 ವರ್ಷ, ಕಟೀಲು - 2 ವರ್ಷ,ಕರ್ನಾಟಕ - 35 ವರ್ಷ, ಮಂಗಳಾದೇವಿ - 2ವರ್ಷ ಹೀಗೆ ತಿರುಗಾಟವನ್ನು ಮಾಡಿರುವ ಇವರು ಪಯ್ಯಜೈದ, ಲಿಂಗಪ್ಪ ಆಚಾರಿ, ಮಂಥರೆ, ಗುಹ,ಕಾಶೀಮಾಣಿ ಮುಂತಾದ ಪಾತ್ರಗಳನ್ನು ಮಾಡಿದ್ದಾರೆ. +ಸೌಮ್ಯ ಸ್ವಭಾವದ ಗಂಭೀರ ಹಾಸ್ಯದಲ್ಲಿ ತನ್ನದೇ ಆದ ಶೈಲಿಯನ್ನು ಮೆರೆಸಿದ್ದಾರೆ. +ತುಳು ಭಾಷೆಯ ಪ್ರಸಂಗಗಳಲ್ಲಿ ಪಾತ್ರಕ್ಕೆ ತಕ್ಕಂತೆ ಮಾತನಾಡುವ ಇವರು ತಮಿಳುನಾಡಿನ ಐತಿಹಾಸಿಕ ಕಥೆಗಳ ಜ್ಞಾನವವಂತರಾಗಿದ್ದಾರೆ. + ಶ್ರಮಜೀವಿಯಾಗಿರುವ ಇವರು ಕೃಷಿಕೆಲಸದಲ್ಲಿಯೂ ಪಳಗಿದವರಾಗಿದ್ದಾರೆ. +ಶ್ರೀಮತಿ ಹೊನ್ನಮ್ಮ ಎಂಬವರನ್ನು ವರಿಸಿ ಈರ್ವರು ಸುಪುತ್ರರು ಹಾಗೂ ಈರ್ವರು ಹೆಣ್ಣು ಮಕ್ಕಳನ್ನು ಪಡೆದಿದ್ದಾರೆ. +ಕರ್ನಾಟಕ ರಾಜ್ಯ ಪ್ರಶಸ್ತಿ, ತುಳು ಸಾಹಿತ್ಯಅಕಾಡೆಮಿ ಪ್ರಶಸ್ತಿ ಮೊದಲಾದ ಹಲವು ಪ್ರಶಸ್ತಿಗಳಿಗೆ ಅರ್ಹರಾಗಿರುವ ಇವರು ದುಬಾಯಿ, ಬೆಹರನ್‌,ಮುಂಬಯಿ ಮುಂತಾದೆಡೆಯಲ್ಲಿ ಅಭಿಮಾನಿಗಳಿಂದ ಗೌರವಕ್ಕೆ ಒಳಗಾಗಿದ್ದಾರೆ. +ಹಾಸ್ಯ ಕಲಾವಿದರಲ್ಲಿ ಆಗ್ರಮನ್ನಣೆಗೆ ಏರಿರುವ ಇವರ ಸಾಧನೆಯ ವರ್ಚಸ್ಸು ಸಾರ್ವತ್ರಿಕವಾದ ಪ್ರಶಂಸೆಗೆ ಒಳಗಾಗಿದೆ. +ತುಳು ಪ್ರಸಂಗಗಳ ಪಾತ್ರ ನಿರ್ವಹಣೆಯಲ್ಲಿ ತನ್ನದೇ ಸ್ವಂತಿಕೆಯನ್ನು ಮೆರೆಸಿ ಜನಮನ್ನಣೆಯನ್ನು ಪಡೆದಿರುವ ಶ್ರೀ ಸರಪಾಡಿ ಅಶೋಕ ಶೆಟ್ಟರು ಪ್ರಸ್ತುತ ಹೇಳಿಕೆಯ ಮೇರೆಗೆ ಅತಿಥಿ ಕಲಾವಿದರಾಗಿ ಭಾಗವಹಿಸುತ್ತಾ ಇದ್ದಾರೆ. +ನಾರಾಯಣ ಶೆಟ್ಟಿ ಮತ್ತು ಸಂಕಮ್ಮ ದಂಪತಿಯ ಸುಪುತ್ರರಾಗಿ ಜನಿಸಿದ ಅಶೋಕ ಶೆಟ್ಟರು 6/4/1961 ರವರ್ಷ ಅಜಿಲ ಮೊಗರು ಎಂಬಲ್ಲಿ ಜನಿಸಿದರು. +9ನೇ ತರಗತಿಯ ತನಕ ವಿದ್ಯಾಭ್ಯಾಸವನ್ನು ಪಡೆದಿರುವ ಇವರು ಕೃಷಿಕ ಮನೆತನದವರಾಗಿದ್ದಾರೆ. +ಯಕ್ಷಗಾನದ ಪರಿಸರದಲ್ಲಿ ಬೆಳೆದಿರುವ ಇವರು ಯಕ್ಷಗಾನ ಕಲೆಯ ಬಗ್ಗೆ ಪ್ರಭಾವಿತರಾಗಿ ಪಡ್ರೆ ಚಂದುರವರಲ್ಲಿ ನಾಟ್ಯಾಭ್ಯಾಸವನ್ನು ಮಾಡಿದರು. +16ನೇ ವರ್ಷದಿಂದಲೇ ಯಕ್ಷಗಾನ ಕಲಾಸೇವೆಯನ್ನು ಪ್ರಾರಂಭಿಸಿದ ಇವರು ರಾಜವೇಷ, ನಾಟಕೀಯವೇಷ, ಮತ್ತು ಪುಂಡು ವೇಷಗಳನ್ನು ಮಾಡುತ್ತಿದ್ದಾರೆ. +ಆರಂಭದಲ್ಲಿ ಸ್ತ್ರೀ ವೇಷಗಳನ್ನು ಮಾಡಿದ ಅನುಭವ ಕೂಡಾ ಇವರಿಗಿದೆ. +ಕಟೀಲು ಮೇಳ-3 ವರ್ಷ, ಅಳದಂಗಡಿ ಮೇಳ-1 ವರ್ಷ, ಬಪ್ಪನಾಡು ಮೇಳ-2 ವರ್ಷ,ಎಡನೀರು ಮೇಳ-1 ವರ್ಷ, ಬೆಳ್ಮಣ್‌ ಮೇಳ-1 ವರ್ಷ, ಕದ್ರಿ ಮೇಳ-2 ವರ್ಷ. +ಕುಂಬ್ಳೆ ಮೇಳ- 1ವರ್ಷ, ಕದ್ರಿ ಮೇಳ-7 ವರ್ಷ, ಕಾಂತಾವರ ಮೇಳ-2 ವರ್ಷ, ಮಂಗಳಾದೇವಿ ಮೇಳ-8 ವರ್ಷ,ಕರ್ನಾಟಕ ಮೇಳ-1 ವರ್ಷ, ಪುತ್ತೂರು ಮೇಳ-1ವರ್ಷ, ಕದ್ರಿ ಮೇಳ (ಸ್ವಂತ ಮೇಳವಾಗಿ)-1 ವರ್ಷ,ಚೀರುಂಭ ಭಗವತಿ ಮೇಳ- 2 ವರ್ಷ, ಶ್ರೀಕೊಲ್ಲಂಗಾನ ಮೇಳ-1 ವರ್ಷ ಹೀಗೆ ತಿರುಗಾಟದ ಹಿನ್ನೆಲೆ ಇದೆ. +ಸುಯೋಧನ, ದೇವೇಂದ್ರ, ಕೌಂಹಾಸುರ,ಶಿಶುಪಾಲ, ರಕ್ತಬೀಜ, ಕಂ ಸ, ಹಿರಣ್ಯಾಕ್ಷ, ದಕ್ಷ,ಭೀಮ,ಅರ್ಜುನ, ಪೆರುಮಳ, ಕೋಟಿ-ಚೆನ್ನಯ, ಚಂದುಗಿಡಿ,ದೇವು ಪೂಂಜ,ದುಗ್ಗಣ್ಣ ಕೊಂಡೆ ಮೊದಲಾದ ಪಾತ್ರಗಳನ್ನು ಮಾಡಿದ್ದಾರೆ. +ಇಷ್ಟಲ್ಲದೆ ಸರಪಾಡಿದಸರ್ಪೆ, ಸತ್ಯ ದೈವ ಚಾಮುಂಡಿ, ವಿಜಯ ಪುಷ್ಪ ಮೊದಲಾದ ಪ್ರಸಂಗಗಳನ್ನು ರಚಿಸಿರುವರು. +ಅಲ್ಲಿ ಪಾದೆ, ಮುಣಿನಾಲ್ಕೂರು ಕಲ್ಲಡ್ಕ ಮೊದಲಾದೆಡೆ ಶಾಲೆಗಳಲ್ಲಿ ತರಬೇತಿ ನೀಡಿರುವ ಇವರು ಶ್ರೀಮತಿ ಮೀನಾ ಎಂಬವರನ್ನು ವರಿಸಿದ್ದಾರೆ. +ವಿಕ್ರಮ್‌ ಶೆಟ್ಟಿ (ಐಬಿ.ಬಿಎಂ), ರಮ್ಯ ಶೆಟ್ಟಿ (9ನೇತರಗತಿ) ಎಂಬ ಇಬ್ಬರು ಮಕ್ಕಳಿದ್ದಾರೆ. +ಮುಂಬಯಿ,ಚೆನ್ನೈ, ಅಹಮದಾಬಾದ್‌, ದೆಹಲಿ ಮೊದಲಾದ ನಗರಗಳು ಸೇರಿದಂತೆ ನಾಡಿನ ಪರಿಸರದಲ್ಲಿ 54ಸಂಮಾನಗಳು ಇವರ ಪ್ರತಿಭೆಗೆ ಸಂದಿವೆ. +ಕಳೆದ ೧೬ ವರ್ಷಗಳಿಂದ ಕಟೀಲು ಮೇಳದಲ್ಲಿ ತಿರುಗಾಟವನ್ನು ನಡೆಸುತ್ತಿರುವ ಶ್ರೀ ಅಪ್ಪ ಕುಂಞಮಣಿಯಾಣಿಯವರು ಅರ್ಜುನ, ದೇವೇಂದ್ರ,ಶತ್ರುಘ್ನ, ದಕ್ಷ,ವಿಶ್ವಾಮಿತ್ರ, ಮುಂತಾದ ಪಾತ್ರಗಳನ್ನು ನಿರ್ವಹಿಸುತ್ತಾ ಇದ್ದಾರೆ. +೧೯೫೯ ರಲ್ಲಿ ಅಚ್ಯುತ ಮಣಿಯಾಣಿ ಮತ್ತು ಪಾಚಮ್ಮ ದಂಪತಿಯ ಸುಪುತ್ರರಾಗಿ ಮಿಂಚಿಪದವು ಎಂಬಲ್ಲಿ ಮಣಿಯಾಣಿಯವರು ಹುಟ್ಟಿದರು. +೧೦ನೇ ತರಗತಿಯ ತನಕ ವಿದ್ಯಾಭ್ಯಾಸ ಪೂರೈಸಿರುವ ಇವರು ಬಾಲ್ಯದಿಂದಲೇ ಯಕ್ಷಗಾನ ಕಲೆಗೆ ಆಕರ್ಷಿತರಾಗಿದ್ದರು. +ಮನೆಯ ಪರಿಸರದಲ್ಲಿ ಸಂತ್ತವುುತ್ತ ಯಕ್ಷಗಾನದ' ಪ್ರಬಾವ ನಿಚ್ಚಳವಾಗಿದ್ದುದರಿಂದ ತಾನೂ ಯಕ್ಷಗಾನವನ್ನು ಕಲಿಯಲೇಬೇಕೆಂಬ ಹಂಬಲದಿಂದ ತೆಂಕುತಿಟ್ಟಿನ ಅಗ್ರಮಾನ್ಯ ಕಲಾವಿದ ಕೆ.ಗೋವಿಂದ ಭಟ್‌ ಇವರ ಮಾರ್ಗದರ್ಶನವನ್ನು ಪಡೆದು ನಾಟ್ಯಾಭ್ಯಾಸ ಮಾಡಿದರು. +೧೮ನೇ ವರ್ಷದಿಂದಲೇ ಯಕ್ಷಗಾನದ ರಂಗಪ್ರವೇಶ ಮಾಡಿದ ಇವರು ಆರಂಭದಲ್ಲಿ ಹವ್ಯಾಸಿಯಾಗಿ ಪಾತ್ರ ನಿರ್ವಹಣೆಯನ್ನು ಮಾಡಿದ್ದರು. +ಮುಂದೆ ಧರ್ಮಸ್ಥಳ ಮೇಳ - ೧ ವರ್ಷ, ಪುತ್ತೂರುಮೇಳ - ೧ ವರ್ಷ, ಕದ್ರಿ ಮೇಳ - ೩ ವರ್ಷ,ಹೀಗೆ ೫ ವರ್ಷಗಳವರೆಗೆ ಬೇರೇ ಮೇಳಗಳಲ್ಲಿ ತಿರುಗಾಟ ಪೂರೈಸಿ, ಕಟೀಲು ಮೇಳಕ್ಕೆ ಸೇರಿದರು. +ಶ್ರೀಮತಿ ಪದ್ಮಾವತಿ ಎಂಬವರನ್ನು ವರಿಸಿರುವ ಅಪ್ಪ ಕುಂಞ ಮಣಿಯಾಣಿಯವರಿಗೆ ಈರ್ವರು ಸುಪುತ್ರರು. +ಹಿರಿಯ ಮಗ ನಿತಿನ್‌ ಕುಮಾರ್‌ ವೆಲ್ಡಿಂಗ್‌ ಉದ್ಯೋಗಿಯಾಗಿದ್ದಾರೆ. +ಕಿರಿಯ ಮಗ ಯೋಗೀಶ್‌ ವಿದ್ಯಾರ್ಥಿಯಾಗಿದ್ದು ಪದವಿಪೂರ್ವ ವಿದ್ಯಾರ್ಹತೆಯ ಪ್ರಥಮ ವರ್ಷದ ವಿದ್ಯಾರ್ಥಿಯಾಗಿದ್ದಾರೆ. +ಬೇಸಿಗೆಯಲ್ಲಿ ತಿರುಗಾಟವನ್ನು ಮಾಡುವ ಅಪ್ಪ ಕುಂಞ ಮಣಿಯಾಣಿಯವರು ಮಳೆಗಾಲದಲ್ಲಿ ಕೃಷಿಕರಾಗಿ ಶ್ರಮಿಸುತ್ತಾರೆ. +ಮಣಿಯಾಣಿಯವರ ಮಾತುಗಾರಿಕೆಯಲ್ಲಿ ತಾಳಮದ್ದಳೆಯ ಪ್ರಭಾವ ಕಂಡುಬರುತ್ತದೆ. +ತರ್ಕ,ವಿತರ್ಕಗಳಿಗೆ ಸ್ಪಂದಿಸುವ ಮನೋಭಾವನೆ ಇವರದ್ದಾಗಿದೆ. +ಪುರಾಣ ಜ್ಞಾನದಲ್ಲಿ ಪ್ರವೀಣರಾಗಿರುವ ಇವರ ಮಾತು ಮತ್ತು ನಾಟ್ಯದ ಶೈಲಿ ಪೀಠಿಕೆ ವೇಷಗಳ ಸ್ವಭಾವಕ್ಕೆ ಪೂರಕವಾಗಿದೆ. +ತನ್ನ ಅನುಬವವನ್ನ್ನು ಇತರರೊಂದಿಗೆ ವಿನಿಯೋಗಿಸುವ ಗುಣ ಧರ್ಮದವರಾದ ಇವರು ಹವ್ಯಾಸಿ ಕಲಾವಿದರಿಗೆ ಮಾರ್ಗದರ್ಶನವನ್ನು ಕೂಡಾ ಮಾಡಿದ್ದಾರೆ. +ಕನ್ನಡ ಮತ್ತು ತುಳು ಭಾಷೆಯ ಪ್ರದರ್ಶನಗಳಲ್ಲಿ ಮುಖ್ಯ ಸ್ತ್ರೀ ಪಾತ್ರವನ್ನು ನಿರ್ವಹಿಸುತ್ತಿರುವ ಶ್ರೀ ಅಂಬಾಪ್ರಸಾದ್‌ ಪಾತಾಳ ಇವರು ಪ್ರಸ್ತುತ ಹೊಸನಗರ ಶ್ರೀ ರಾಮಚಂದ್ರ ಕೃಪಾಪೋಷಿತ ಯಕ್ಷಗಾನ ಮಂಡಳಿಯಲ್ಲಿ ತಿರುಗಾಟವನ್ನು ನಡೆಸುತ್ತಾ ಇದ್ದಾರೆ. +ಪಾತಾಳ ವೆಂಕಟರಮಣ ಭಟ್‌ ಮತ್ತು ಪರಮೇಶ್ವರಿ ಅಮ್ಮ ದಂಪತಿಯ ಸುಪುತ್ರರಾಗಿ 22-2-1963 ರಂದು ಪಾತಾಳ ಮನೆಯಲ್ಲಿ ಜನಿಸಿದರು. +9ನೇ ತರಗತಿಯವರೆಗೆ ಶಾಲೆಗೆ ಹೋಗಿರುವ ಇವರು ತಂದೆಯವರ ಆದರ್ಶವನ್ನು ಅನುಸರಿಸಿದರು. +ಉತ್ತಮ ಸ್ತ್ರೀ ಪಾತ್ರಧಾರಿಯಾಗಿ ಹೆಸರು ಮಾಡಿರುವ ತಂದೆಯ ಅನುಭವದ ಬೋಧನೆಯೊಂದಿಗೆ ಕೆ.ಗೋವಿಂದ ಭಟ್ಟರಿಂದ ನಾಟ್ಯಾಭ್ಯಾಸವನ್ನು ಮಾಡಿನೆಡ್ಡೆ ನರಸಿಂಹ ಭಟ್ಟರಿಂದ ರಂಗದಲ್ಲಿ ಕುಣಿಯುವ ರೀತಿ ನೀತಿಗಳ ಕ್ರಮವನ್ನರಿತರು. +ಧರ್ಮಸ್ಥಳ ಮೇಳ - 1 ವರ್ಷ, ಸುಂಕದಕಟ್ಟೆ ಮೇಳ - 4 ವರ್ಷ, ಪುತ್ತೂರು ಮೇಳ - 1ವರ್ಷ, ಕದ್ರಿ ಮೇಳ - 8 ವರ್ಷ, ಕಾಟಿಪಳ್ಳ ಮೇಳ-. +1 ವರ್ಷ, ಕರ್ನಾಟಕ ಮೇಳ - 3 ವರ್ಷ,ಸುರತ್ಕಲ್‌ ಮೇಳ - 1 ವರ್ಷ, ಮಂಗಳಾದೇವಿ ಮೇಳ - 7 ವರ್ಷ. +ಮಧೂರು ಮೇಳ - 3ವರ್ಷ, ಬಡಗಿನ ಶಿರಸಿ ಮೇಳ - 2 ವರ್ಷ,ಎಡನೀರು ಮೇಳ - 1 ವರ್ಷ, ಹಕೂಸನಗರ ಮೇಳ-4 ವರ್ಷ ಹೀಗೆ ಮೇಳ ತಿರುಗಾಟವನ್ನು ಮಾಡಿದ್ದಾರೆ. +ಅಂಬಾ ಪ್ರಸಾದರು ಸ್ತ್ರ್ತೀ ಪಾತ್ರಗಳಲ್ಲದೆ ವಿಷ್ಣು,ಕೃಷ್ಣ, ದ್ರೋಣ, ಈಶ್ವರ ಮೊದಲಾದ ಪಾತ್ರಗಳನ್ನು ನಿರ್ವಹಿಸುತ್ತಾರೆ. +ದಮಯಂತಿ, ಶ್ರೀದೇವಿ,ದಾಕ್ಷಾಯಿನಿ, ಶಶಿಪ್ರಭೆ, ಭ್ರಮರಕುಂತಳೆ, ಪ್ರಮೀಳೆ ಇತ್ಯಾದಿ ಪಾತ್ರಗಳನ್ನು ಮಾಡಿರುವ ಇವರಿಗೆ “ಗೆಜ್ಜಿದ ಪೂಜೆ” ಎಂಬ ತುಳು ಪ್ರಸಂಗದ ತುಳಸಿಯ ಪಾತ್ರವು ಹೆಚ್ಚಿನ ಕೀರ್ತಿಯನ್ನು ತಂದುಕೊಟ್ಟಿದೆ. +ಶ್ರೀಮತಿ ಜಯಂತಿ ಎಂಬವರನ್ನು ವರಿಸಿರುವ ಅಂಬಾ ಪ್ರಸಾದರು ವೆಂಕಟೇಶ್ವರ ಪ್ರಣವ ಪ್ರಸನ್ನ,ಕುಮಾರಿ ಪೌಷ, ತಿರುಮಲ ಪ್ರದೀಪ, ಪೂರ್ಣಶ್ರೀ ಎಂಬ ನಾಲ್ವರು ಮಕ್ಕಳನ್ನು ಪಡೆದಿದ್ದಾರೆ. +ಬೇಸಗೆ ಮತ್ತು ಮಳೆಗಾಲದ ಪ್ರದರ್ಶನಗಳಲ್ಲಿ ಭಾಗವಹಿಸುತ್ತಿರುವ ಇವರು ಹವ್ಯಾಸಿ ಕಲಾವಿದರಿಗೆ ತರಬೇತಿಯನ್ನು ನೀಡಿದ್ದಾರೆ. +ಮೂಡಬಿದ್ರೆ, ವರ್ಕಾಡಿ,ಅಡೂರು, ಕದ್ರಿ ಮುಂತಾದೆಡೆಯಲ್ಲಿ ಇವರ ಪ್ರತಿಭೆಗೆ ಫಲವಾಗಿ ಸಂಮಾನಗಳು ನಡೆದಿವೆ. +ಪುಂಡು ವೇಷದ ಮೂಲಕ ಪ್ರಸಿದ್ಧಿಗೆ ಬಂದಿರುವ ವೇಣೂರು ಅಶೋಕ ಆಚಾರ್ಯರು ಪ್ರಸ್ತುತ ಕಟೀಲು ಮೇಳದ ಕಲಾವಿದರಾಗಿ ತಿರುಗಾಟವನ್ನು ನಡೆಸುತ್ತಾ ಇದ್ದಾರೆ. +ವಾಸುದೇವ ಆಚಾರ್ಯ ಮತ್ತು ಕಲ್ಯಾಣಿ ದಂಪತಿಯ ಸುಪುತ್ರರಾಗಿ ವೇಣೂರಿನಲ್ಲಿ 2-8-1970ರಂದು ಜನಿಸಿದರು. +7ನೇ ತರಗತಿಯ ತನಕ -ವಿದ್ಯಾಭ್ಯಾಸವನ್ನು ಪಡೆದಿರುವ ಇವರು ತಂದೆತಾಯಿಯವರ ಆಸಕ್ತಿ ಮತ್ತು ಪ್ರೇರಣೆಯ ಮೇರೆಗೆ ಯಕ್ಷಗಾನದ ಅಭ್ಯಾಸವನ್ನು ಮಾಡಿದರು. +ಧರ್ಮಸ್ಥಳದ ಲಲಿತಕಲಾ ಕೇಂದ್ರವನ್ನು ಸೇರಿದ ಇವರು ಕೆ.ಗೋವಿಂದ ಭಟ್‌ ಮತ್ತು ಕರ್ಗಲ್ಲು ವಿಶ್ವೇಶ್ವರ ಭಟ್ಟರಿಂದ ನಾಟ್ಯಾಭ್ಯಾಸವನ್ನು ಮಾಡಿ ಚಿಕ್ಕಪ್ಪನಾದ ವೇಣೂರು ಸುಂದರ ಆಚಾರ್ಯರ ಪ್ರೋತ್ಸಾಹದೊಂದಿಗೆ ಮೇಳ ತಿರುಗಾಟವನ್ನು ಆರಂಬಿಸಿದರು. +ಧರ್ಮಸ್ಥಳ ಮೇಳ - 5 ವರ್ಷ, ಕದ್ರಿ ಮೇಳ- 2 ವರ್ಷ, ಕುಂಬ್ಳೆ ಮೇಳ - 2 ವರ್ಷ, ಬಪ್ಪನಾಡು ಮೇಳ- 2ವರ್ಷ, ಸುರತ್ಕಲ್‌ ಮೇಳ - 8 ವರ್ಷ,ಕರ್ನಾಟಕ ಮೇಳ - 3 ವರ್ಷ ಹಾಗೂ ಕಟೀಲುಮೇಳ - 7 ವರ್ಷ ಹೀಗೆ ಒಟ್ಟು 29 ವರ್ಷಗಳ ತಿರುಗಾಟವನ್ನು ನಡೆಸಿರುವರು. +ವಾಮನ, ವಿಷ್ಣು, ಕೃಷ್ಣ ಬಭ್ರುವಾಹನ, ಬ್ರಹ್ಮಚಂಡ-ಮುಂಡರು, ರಾಮ, ಸುಪಾರ್ಶ್ವಕ, ಅಭಿಮನ್ಯು,ಪರಶುರಾಮ ಮುಂತಾದ ಪಾತ್ರಗಳನ್ನು ನಿರ್ವಹಿಸಿದ್ದಾರೆ. +ವೇಣೂರು ಮೂಡಬಿದ್ರೆ, ಕೊಡ್ಯಡ್ಕ ಮೊದಲಾದೆಡೆಂದುಲ್ಲಿ ಯಕ್ಷಗಾನದ ಬಗ್ಗೆ ತರಬೇತಿಯನ್ನು ನೀಡಿರುವ ಇವರು ಇಲ್ಲೆಲ್ಲಾ ಶಿಷ್ಯಂದಿರ ಸಂಮಾನದಿಂದ ಗೌರವಿಸಲ್ಪಟ್ಟಿದ್ದಾರೆ. +ಶ್ರೀ ಮಂಗಳಾದೇವಿ ಮೇಳದಲ್ಲಿ ತಿರುಗಾಟವನ್ನು ಮಾಡುತ್ತಿರುವ ಶ್ರೀ ಆನಂದಪಡ್ರೆಯವರು ಚೆಂಡೆ-ಮದ್ದಳೆಯ ಬಾರಿಸುವಿಕೆಯಲ್ಲಿ ಸಾಧನೆಯನ್ನು ಮಾಡಿ, ಕಲಾವಿದರಿಗೆ ತಕ್ಕಂತೆ ಸ್ಪಂದಿಸಿ ಪ್ರಭಾವ ಬೀರಿದ ಯುವ ಕಲಾವಿದರಾಗಿದ್ದಾರೆ. +1976ನೇ ವರ್ಷ ಜನವರಿ 26ರಂದು ಕೃಷ್ಣನಾಯಕ್‌ ಮತ್ತು ಸರಸ್ವತಿ ದಂಪತಿಯ ಸುಪುತ್ರರಾಗಿ ಪಡೆಯಲ್ಲಿ ಹುಟ್ಟಿದರು. +ಪದವಿಪೂರ್ವ ಹಂತದವರೆಗೆ ವಿದ್ಯಾಭ್ಯಾಸವನ್ನು ಮಾಡಿರುವ ಪಡ್ರೆ ಆನಂದರು ಯಕ್ಷಗಾನ ಪರಿಸರದಲ್ಲಿ ಹುಟ್ಟಿ ಬೆಳೆದವರಾಗಿದ್ದುದರಿಂದ ಕಲಾ ಪ್ರಭಾವಕ್ಕೆ ಒಳಗಾದರು. +ಮನೆತನದಲ್ಲಿ ಕಲಾಸೇವೆ ಮಾಡುತ್ತಾ ಬೆಳೆದಿದ್ದ ಅಜ್ಜ ಕುಂಇಪ್ಪ ನಾಯ್ಕ ಹಾಗೂ ಮಾವ ಪಡ್ರೆ ಶ್ರೀಧರ ಇವರ ಕಲಾಜೀವನದಂತೆ ತಾನು ಕೂಡಾವೃತ್ತಿ ಜೀವನಕ್ಕೆ ಕಲೆಯನ್ನೇ ಆಶ್ರಯಿಸಬೇಕೆಂದು ಭಾವಿಸಿದರು. +ತೆಂಕುತಿಟ್ಟಿನಲ್ಲಿ ಹೆಸರುವಾಸಿಯಾಗಿರುವ ಹಿರಿಯ ಮಧ್ದೆಗಾರ ಶ್ರೀ ಪುಂಡಿಕಾಯಿ ಕೃಷ್ಣ ಭಟ್‌ ಇವರಲ್ಲಿ ಚೆಂಡೆ ಮದ್ದಳೆಯ ಅಭ್ಯಾಸವನ್ನು ಮಾಡಿದ ಪಡ್ರೆ ಆನಂದರು ಶ್ರೀ ಕರ್ನಾಟಕ ಮೇಳದಲ್ಲಿ ಒಂದುವರ್ಷ, ಶ್ರಿ ಎಡನೀರು ಮೇಳದಲ್ಲಿ 3 ವರ್ಷಗಳ ತಿರುಗಾಟವನ್ನು ಮಾಡಿದ್ದಾರೆ. +ಈಗಿರುವ ಶ್ರೀಮಂಗಳಾದೇವಿ ಮೇಳದಲ್ಲಿ 9 ವರ್ಷಗಳ ತಿರುಗಾಟವನ್ನು ಪೂರೈಸಿದ್ದಾರೆ. +ಮಳೆಗಾಲದಲ್ಲಿ ಕೃಷಿ ಜೀವನವನ್ನು ಅವಲಂಬಿಸಿರುವ ಇವರು ಶ್ರೀಮತಿ ನಳಿನಿ ಎಂಬವರನ್ನು ವರಿಸಿ ದೀಪಕ್‌ ಎಂಬ ಕುಮಾರನೋರ್ವನನ್ನು ಪಡೆದಿದ್ದಾರೆ. +ಅವಕಾಶವಾದಿಯಾಗದೆ ಸಿಕ್ಕಿದ ಅವಕಾಶದಲ್ಲಿ ತನ್ನ ಪ್ರತಿಭೆಯನ್ನು ತೋರುತ್ತಾ 13 ವರ್ಷಗಳ ಕಲಾಜೀವನವನ್ನು ಮಾಡಿದ ಇವರಿಗೆ ಶ್ರೀ ಕಿಶನ್‌ಹೆಗ್ಗಡೆ ಇವರ ಯಜಮಾನಿಕೆಯ ಮಂಗಳಾದೇವಿಮೇಳವು ಪ್ರತಿಭೆಯ ಬೆಳವಣಿಗೆಗೆ ಒಳ್ಳೆಯ ಅವಕಾಶವನ್ನು ಮಾಡಿಕೊಟ್ಟಿತು. +ಪ್ರಸ್ತುತ ಮಂಗಳಾದೇವಿ ಮೇಳದ ಪ್ರಧಾನ ಭಾಗವತರಾಗಿರುವ ಶ್ರೀ ರವಿಚಂದ್ರ ಕನ್ನಡಿಕಟ್ಟೆಯವರ ಸುಶ್ರಾವ್ಯ ಹಾಡಿಗೆ ನುಡಿತ-ಬಡಿತಗಳ ಮಧುರತೆಯಿಂದ ಕೈಚಳಕವನ್ನು ತೋರುತ್ತಾ ಬೆಳೆಯುತ್ತಿದ್ದಾರೆ. +ರಾಜವೇಷ ಮತ್ತು ನಾಟಕೀಯ ವೇಷಗಳಲ್ಲಿ ಪ್ರೌಢಿಮೆಯನ್ನು ತೋರುತ್ತಿರುವ ಶ್ರೀ ಉಮೇಶ ಶೆಟ್ಟಿ ಉಬ್ಬರಡ್ಕರವರು, ಧರ್ಮಸ್ಥಳ ಮೇಳದ ಹಿರಿಯ ಕಲಾವಿದರಲ್ಲಿ ಓರ್ವರಾಗಿದ್ದಾರೆ. +ಯು. ಕಿಟ್ಟಣ್ಣ ಶೆಟ್ಟಿ ಮತ್ತು ಯಮುನಾ ದಂಪತಿಯ ಸುಪುತ್ರರಾಗಿರುವ ಇವರು ಪ್ರಾಥಮಿಕ ಹಂತದ ಶಾಲಾ ವಿದ್ಯಾಭ್ಯಾಸವನ್ನು ಪೂರೈಸಿರುವರು. +ತೆಂಕುತಿಟ್ಟಿನ ಮೇರು ಕಲಾವಿದ ಅಳಿಕೆ ರಾಮಯ್ಯ ರೈ ಸಂಬಧದಲ್ಲಿ ಮಾವ ಆಗಿದ್ದು ಅವರ ಪ್ರೇರಣೆಯಿಂದ ಯಕ್ಷಗಾನ ಕಲೆಯತ್ತ ಆಕರ್ಷಿತರಾದ ಉಮೇಶ ಶೆಟ್ಟರು ಪಡ್ರೆ ಚಂದುರವರಲ್ಲಿ ನಾಟ್ಯಾಭ್ಯಾಸವನ್ನು ಮಾಡಿದ್ದಾರೆ. +"ಯಕ್ಷಗಾನದಲ್ಲಿ ಗುರುತಿಸಲ್ಪಟ್ಟಿರುವ ಅಳಿಕೆ ಮೋನಪ್ಪ ಶೆಟ್ಟರು ಕೂಡಾ ಇವರ ಅಜ್ಜ ಆಗಿದ್ದು ಅವರ ಆದರ್ಶವು ಕೂಡಾ ಇವರಲ್ಲಿ ಮೈಗೂಡಿದೆ. +ಅರ್ಜುನ, ದೇವೇಂದ್ರ, ಕಂಸ, ತ್ರಿಶಂಕು,ದ್ರೋಣ, ಮಾಗಧ, ತಾಮ್ರದ್ವಜ, ಇಂದ್ರಜಿತು ಮೊದಲಾದ ಪಾತ್ರಗಳನ್ನು ನಿರ್ವಹಿಸುತ್ತಿರುವ ಇವರು ೧೯೭೨ರಿಂದ ಧರ್ಮಸ್ಥಳ ಮೇಳವನ್ನು ಸೇರಿದರು. +ಆಮೇಲೆ ಅದೇ ಮೇಳದಲ್ಲಿ ನಿರಂತರವಾಗಿ ಕಲಾ ಸೇವೆಯನ್ನು ಮಾಡುತ್ತಾ ಪಸ್ತುತ ೩೮ನೇ ವರ್ಷದ ಕಲಾ ಸೇವೆಯನ್ನು ಪೂರೈಸಿದ್ದಾರೆ. +ಪುಂಡು ವೇಷದಲ್ಲೂ ಪ್ರವೀಣರಾಗಿರುವ ಇವರು ಚಂಡ-ಮುಂಡರು ಬಬ್ರುವಾಹನ, ಇತ್ಯಾದಿ ಪಾತ್ರಗಳನ್ನು ನಿರ್ವಹಿಸಿದ್ದಾರೆ." +ಶ್ರೀಮತಿ ಉಷಾ ಎಂಬವರನ್ನು ವರಿಸಿರುವ ಇವರು, ಇಬ್ಬರು ಮಕ್ಕಳನ್ನು ಪಡೆದಿದ್ದಾರೆ. +ಕಿರಿಯವರಾದ ಆದರ್ಶ್‌ ಸಿ.ಎ. ಪದವಿಯ ಅಧ್ಯಯನವನ್ನು ಮಾಡುತ್ತಿದ್ದಾರೆ. +ನೆಡ್ಡೆ ಪ್ರಾಥಮಿಕ ಶಾಲೆ, ಅಳಿಕೆ ಲೋಕ ಸೇವಾವೃಂದ ಶಾಲೆಗಳಲ್ಲಿ ಯಕ್ಷಗಾನದ ತರಬೇತಿಯನ್ನು ಮಾಡುತ್ತಿರುವ ಉಬರಡ್ಕ ಉಮೇಶ ಶೆಟ್ಟರು ಮಳೆಗಾಲದಲ್ಲೂ ಬೇಡಿಕೆಯ ಕಲಾವಿದರಾಗಿದ್ದು ಪಾತ್ರನಿರ್ವಹಣೆಯಲ್ಲಿ ಯಶಸ್ಸನ್ನ್ನು ಸಂಪಾದಿಸಿಕೊಂಡಿದ್ದಾರೆ. +ಇವರ ಕಲಾ ಸಾಧನೆಗೆ ದೆಹಲಿಯಲ್ಲಿ ಮಾಜಿ ರಾಷ್ಟ್ರಪತಿ ಶಂಕರ್‌ ದಯಾಳ್‌ಶರ್ಮ ಅವರ ಅಧಿಕಾರಾವಧಿಯಲ್ಲಿ, ಸಹಕಲಾವಿದರೊಂದಿಗೆ ಪುರಸ್ಕಾರಕ್ಕೆ ಒಳಗಾಗಿದ್ದರು. +ಧರ್ಮಸ್ಥಳ ಹೆಗ್ಗಡೆಯವರ ಪಟ್ಟಾಭಿಷೇಕದ ವರ್ಧಂತಿ ಉತ್ಸವದ ಪ್ರಶಸ್ತಿ , ಸುಳ್ಯದಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಸಂಮಾನ, ಎಡನೀರುಮಠದ ಸಂಮಾನ, ಬೆಹರನ್‌ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಇತ್ಯಾದಿಗಳೊಂದಿಗೆ ಗೌರವಿಸಲ್ಪಟ್ಟು ದೇಶ-ವಿದೇಶಗಳಲ್ಲಿ ಗುರುತಿಸಲ್ಪಟ್ಟಿದ್ದಾರೆ. +ಪುಂಡುವೇಷ, ರಾಜವೇಷ, ನಾಟಕೀಯ ವೇಷ,ಬಣ್ಣದ ವೇಷ, ಮುಖ್ಯ ಪೋಷಕ ಪಾತ್ರಗಳು ಹೀಗೆ ಎಲ್ಲಾ ರೀತಿಯ ಪಾತ್ರಗಳನ್ನು ಮಾಡುತ್ತಾ ಬೆಳೆದುಬಂದವರು ಶ್ರೀ ಎಚ್‌.ಉಮಾಮಹೇಶ್ವರ ಶರ್ಮ. +ಪ್ರಸ್ತುತ ಕಟೀಲು ಮೇಳದ ಕಲಾವಿದರಾಗಿ ಕಲಾಸೇವೆಯನ್ನು ಮಾಡುತ್ತಿದ್ದಾರೆ. +ಎಚ್‌.ಗಣಪತಿ ಭಟ್‌ ಮತ್ತು ಎಚ್‌.ಲಕ್ಷ್ಮೀ ಅಮ್ಮ ದಂಪತಿಯ ಸುಪುತ್ರರಾಗಿ 1968 ರ ಎಪ್ರಿಲ್‌ 2ರಂದು ಕಾಸರಗೋಡಿನಲ್ಲಿ ಜನಿಸಿದರು. +9ನೇ ತರಗತಿಯ ತನಕ ಶಾಲಾ ವಿದ್ಯಾಭ್ಯಾಸವನ್ನು ಮಾಡಿರುವ ಇವರು 19ನೇ ವಯಸ್ಸಿನಿಂದ ಯಕ್ಷಗಾನ ಕಲೆಗೆ ಆಕರ್ಷಿತರಾಗಿ ರಂಗಪ್ರವೇಶ ಮಾಡಿದರು. +ವಿಶ್ವೇಶ್ವರ ಭಟ್‌ ಮತ್ತು ಕೆ. ಗೋವಿಂದ ಭಟ್‌ ಇವರ ಮಾರ್ಗದರ್ಶನದೊಂದಿಗೆ ಧರ್ಮಸ್ಥಳದ ಲಲಿತಾ ಕಲಾ ಕೇಂದ್ರದಲ್ಲಿ ನಾಟ್ಯಾಭ್ಯಾಸವನ್ನು ಮಾಡಿದರು. +ಮುಂದೆ ಮಧ್ದೆಗಾರ ನೆಡ್ಲೆ ನರಸಿಂಹ ಭಟ್ಟರಿಂದ ರಂಗದ ಅನುಭವವನ್ನು ಪಡೆದರು. +ಮೇಳ ತಿರುಗಾಟವನ್ನು ಆರಂಭಿಸಿದ ಇವರು ಮೊದಲಾಗಿ ಸುಂಕದ ಕಟ್ಟೆಯ ಶ್ರೀ ಅಂಬಿಕಾ ಅನ್ನಪೂರ್ಣೇಶ್ವರಿ ಮೇಳದಲ್ಲಿ 8 ವರ್ಷಗಳ ತಿರುಗಾಟವನ್ನು ನಡೆಸಿದ ಮೇಲೆ ಕಟೀಲು ಶ್ರೀದುರ್ಗಾಪರಮೇಶ್ವರಿ ಮೇಳವನ್ನು ಸೇರಿ 16 ವರ್ಷಗಳ ತಿರುಗಾಟವನ್ನು ಪೂರೈಸಿದ್ದಾರೆ. +ಮಳೆಗಾಲದಲ್ಲಿ ಕೃಷಿಕರಾಗಿ ಶ್ರಮಿಸುವ ಇವರು ಈಗಾಗಲೇ ಬ್ರಹ್ಮ ಮಧು-ಕೈಟಭ, ದೇವೇಂದ್ರ,ಅರ್ಜುನ, ಮಹಿಷಾಸುರ, ರಕ್ತಬೀಜ, ವಿಷ್ಣು, ರಾಮ,ಹನುಮಂತ, ವಿಶ್ವಾಮಿತ್ರ, ವಾಲ್ಮೀಕಿ ಮುಂತಾದ ವಿಭಿನ್ನ ರೀತಿಯ ಪಾತ್ರಗಳನ್ನು ನಿರ್ವಹಿಸುತ್ತಿದ್ದಾರೆ. +ಸ್ತ್ರೀ ವೇಷದಲ್ಲೂ ಪ್ರೌಢಿಮೆಯನ್ನು ಸಾಧಿಸಿರುವ ಇವರು ಶ್ರೀದೇವಿ, ಭ್ರಮರಕುಂತಳೆ ಇತ್ಯಾದಿ ಪಾತ್ರಗಳನ್ನು ಮಾಡಿದ್ದಾರೆ. +ಮುಖ್ಯವಾಗಿ ಸೌಮ್ಯ ಸ್ವಭಾವದ ಗುಣಧರ್ಮವನ್ನು ಹೊಂದಿರುವ ಇವರು ಎಲ್ಲಾ ಪಾತ್ರಗಳ ನಡೆ ನುಡಿಗಳ ಬಗೆಗೆ ಅನುಭವವನ್ನು ಸಂಪಾದಿಸಿರುವುದರಿ೦ದ ವಿಭಿನ್ನ ಪಾತ್ರಗಳ ನಿರ್ವಹಣೆಯಲ್ಲಿ ಕಂಡುಬರುತ್ತಾರೆ. +ಕುಬಣೂರು ಶ್ರೀಧರರಾವ್‌, ಮೋಹನಶೆಟ್ಟಿಗಾರ್‌, ಮಂಜೇಶ್ವರ ಜನಾರ್ಧನ ಜೋಗಿ,ಕುಮಾರಪಡ್ರೆ, ವಿಷ್ಣು ಶರ್ಮ ವಾಟೆಪಡ್ಪು, ಸುಬ್ರಾಯ ಹೊಳ್ಳ, ತೋಡಿಕಾನ ವಿಶ್ವನಾಥ ಗೌಡ ಮೊದಲದವರ ಒಡನಾಟದಲ್ಲಿ ತಿರುಗಾಟವನ್ನು ಮಾಡುತ್ತಿರುವ ಎಚ್‌.ಉಮಾಮಹೇಶ್ವರ ಶರ್ಮ ಪೌರಾಣಿಕ ಪ್ರಸಂಗದ ಪಾತ್ರಗಳ ನಿರ್ವಹಣೆಯಲ್ಲಿ ಹೆಚ್ಚಿನ ಸಾಧನೆಯನ್ನು ತೋರಬೇಕೆಂಬ ಹಂಬಲ ವ್ಯಕ್ತ ಪಡಿಸುತ್ತಾರೆ. +ಪರಂಪರೆಯ ಚೌಕಟ್ಟಿನಲ್ಲಿ ಬಣ್ಣ, ನಾಟ್ಯ ಮತ್ತು ಮಾತಿನ ಶೈಲಿಯನ್ನು ಹೊಂದಿರುವ ಐತಪ್ಪ ಗೌಡರು ಕಟೀಲು ಮೇಳದ ಬಣ್ಣದ ವೇಷಧಾರಿಯಾಗಿ ಮನ್ನಣೆಯನ್ನು ಪಡೆದಿದಾರೆ. +ಶೇಷಪ್ಪ ಗೌಡ ಮತ್ತು ಲಿಂಗಮ್ಮ ದಂಪತಿಯ ಸುಪುತ್ರರಾಗಿ ಉಬರಡ್ಕದಲ್ಲಿ ಜನಿಸಿದ ಐತಪ್ಪ ಗೌಡರು ೬೨ ವರ್ಷಗಳ ಹಿರಿತನಕ್ಕೆ ಬೆಳೆದು ನಿಂತಿದ್ದಾರೆ. +ಕೀರ್ತಿ ಶೇಷರಾದ ಮಿತ್ತಡ್ಕ ರಾಮ ಕೃಷ್ಣ ಕಮ್ಮಿಯವರ ಪ್ರೇರಣೆಯಿಂದ, ಅವರಲ್ಲೇ ನಾಟ್ಯಾಭ್ಯಾಸವನ್ನು ಮಾಡಿಸ್ವೀ ವೇಷ , ಪುಂಡುವೇಷ, ಕಿರೀಟ ವೇಷಗಳನ್ನು ಹಂತ ಹಂತವಾಗಿ ಮಾಡುತ್ತಾ ಬಂದಿರುವರು. +ಇತ್ತೀಚಿನ ಹಲವು ವರ್ಷಗಳಿಂದ ಬಣ್ಣದ ವೇಷಧರಿಯಾಗಿ ಪಾತ್ರ ನಿರ್ವಹಣೆ ಮಾಡುತ್ತಿದ್ದಾರೆ. +ಧರ್ಮಸ್ಥಳ ಮೇಳ ೨ ವರ್ಷ, ಬಳ್ಳಂಬೆಟ್ಟು ಮೇಳ ೬ ವರ್ಷ, ವೇಣೂರು ದೇಲಂಪುರಿ ಮೇಳ೨ ವರ್ಷ, ಮಡಿಕೇರಿ ಚೌಡೇಶ್ವರಿ ಮೇಳ ೧ವರ್ಷ, ಕಟೀಲು ಮೇಳ ೨೭ ವರ್ಷ, ಒಟ್ಟು 40ವರ್ಷಗಳ ತಿರುಗಾಟವನ್ನು ಮಾಡಿರುವ ಐತಪ್ಪಗೌಡರು ರಾವಣ ಶುಂಭ, ಪುರುಷಾ ಮೃಗ, ಮತ್ಸ್ಯ ಮುಂತಾದ ಪಾತ್ರಗಳನನ್ನು ಉತ್ತಮವಾಗಿ ನಿರ್ವಹಿಸುತ್ತಾರೆ. +ಭೀಮ, ಶೂರ್ಪನಖಿ, ತಾಟಕಿ ಇತ್ಯಾದಿ ವಿಭಿನ್ನ ಮಾದರಿಯ ಪಾತ್ರಗಳನ್ನು ಶಕ್ತವಾಗಿ ನಿರ್ವಹಿಸುವ ಇವರು ಎಳೆಯ ಪ್ರಾಯದಲ್ಲಿ ಅಭಿಮನ್ಯು, ಬಬ್ರುವಾಹನ ಮೊದಲಾದ ಪುಂಡು ವೇಷದ ಮುಖ್ಯ ಪಾತ್ರಗಳನ್ನು ಕೂಡಾ ನಿರ್ವಹಿಸಿದ್ದಾರೆ. +ಶೈಕ್ಷಣಿಕವಾಗಿ ಪ್ರಾಥಮಿಕ ವಿದ್ಯಾಭ್ಯಾಸವನ್ನು ಪಡೆದಿರುವ ಐತಪ್ಪ ಗೌಡರು ಅಕ್ಕಯ್ಯ ಎಂಬವರನ್ನು ವರಿಸಿ ತಿರುಮಲೇಶ್ವರಿ, ಸುಶೀಲಾ, ದಿನೇಶ ಎಂಬ ಮೂವರು ಮಕ್ಕಳನ್ನು ಪಡೆದಿದ್ದಾರೆ. +ಕಿರಿಯ ಸುಪುತ್ರರಾದ ದಿನೇಶರು ಚಾಲಕ ವೃತ್ತಿಯನ್ನು ಮಾಡುತ್ತಿದ್ದಾರೆ. +ಹವ್ಯಾಸಿ ಭಾಗವತರಾಗಿ ಕಲಾ ಸೇವೆ ಮಾಡಿದ್ದ ಕೃಷ್ಣಪ್ಪ ಗೌಡ ಇವರ ಮಾವ ಆಗಿದ್ದು ಅವರ ಆದರ್ಶವನ್ನು ಕೂಡ ಇವರು ಅನುಸರಿಸಿದ್ದಾರೆ. +ಮಳೆಗಾಲದಲ್ಲಿ ಕೃಷಿಗಾರರಾಗಿ ಶ್ರಮಿಸುವ ಇವರು ಬಾಲ್ಯದ 15ನೇ ವರ್ಷದಿಂದಲೇ ಪಾತ್ರನಿರ್ವಹಣೆಯನ್ನು ಮಾಡುತ್ತಾ ಬೆಳೆದು ಬಂದಿದ್ದಾರೆ. +ಹವ್ಯಾಸಿ ಕಲಾವಿದರಿಗೆ ತರಬೇತಿಯನ್ನು ನೀಡಿರುವ ಐತಪ್ಪ ಗೌಡರು ಮಿತ್ತಡ್ಯ, ರೆಂಜಾಳ ಮೊದಲಾದೆಡೆಯಲ್ಲಿ ಅಭಿಮಾನಿಗಳಿಂದ ಸಂಮಾನಿತರಾಗಿದ್ದಾರೆ. +ಹವ್ಯಾಸಿ ಬಳಗ ಕದ್ರಿಯು ತನ್ನ ದಶಮಾನ ಸಂಮಾನ ಶತಕದ ಆಯ್ಕೆಯಲ್ಲಿ ಇವರನ್ನು ಗುರುತಿಸಿ ಸಂಮಾನಿಸಿದೆ. +ತುಳು ಹಾಗೂ ಪೌರಾಣಿಕ ಪ್ರಸಂಗಗಳ ಪ್ರದರ್ಶನಗಳಲ್ಲಿ ಭಾಗವತಿಕೆಯನ್ನು ಮಾಡುತ್ತಾ ಬೆಳೆದು ಬಂದ ಶ್ರೀ ಕರುಣಾಕರ ಶೆಟ್ಟಿಗಾರ್‌ ಕಾಶೀಪಟ್ಣ ಸುಂಕದಕಟ್ಟೆ ಮೇಳದ ಪ್ರಧಾನ ಭಾಗವತರಾಗಿ ಕಲಾಸೇವೆಯನ್ನು ಮಾಡುತ್ತಾ ಇದ್ದಾರೆ. +ಗಂಗಯ್ಯ ಶೆಟ್ಟಿಗಾರ್ ಮತ್ತು ರುಕ್ಕಿಣಿ ಶೆಟ್ಟಿಗಾರ್ತಿಎಂಬವರ ಮಗನಾಗಿ ಸಿದ್ಧಕಟ್ಟೆಯಲ್ಲಿ ಹುಟ್ಟಿದ ಇವರಿಗೀಗ 38 ವರ್ಷ. + 10ನೇ ತರಗತಿಯ ತನಕ ವಿದ್ಯಾಭ್ಯಾಸವನ್ನು ಪಡೆದಿರುವ ಕರುಣಾಕರ ಶೆಟ್ಟಿಗಾರರು 16ನೇ ವರ್ಷದಿಂದ ರಂಗ ಪ್ರವೇಶ ಮಾಡಿ ಹಾಡಿದ್ದಾರೆ. +ಬಾಲ್ಯದಲ್ಲಿ ಕರ್ನಾಟಕ ಮೇಳದಲ್ಲಿ ತಿರುಗಾಟವನ್ನು ಮಾಡಿದ್ದ ದಿನೇಶ್‌ ಅಮ್ಮಣ್ಣಾಯರ ಭಾಗವತಿಕೆಯನ್ನು ಕೇಳಿ ತಾನು ಭಾಗವತನಾಗಬೇಕೆಂಬ ಕನಸನ್ನು ಕಂಡರು. +ಶಾಲೆಯಲ್ಲಿ ಅಧ್ಯಾಪಕರಿಂದಲೂ ಪೂರಕ ಪ್ರೋತ್ಸಾಹ ದೊರೆಯಿತು. +ತತ್ಪರಿಣಾಮವಾಗಿ ಲೀಲಾವತಿ ಬೈಪಾಡಿತ್ತಾಯರಿಂದ ಭಾಗವತಿಕೆಯ ಅಭ್ಯಾಸವನ್ನು ಮಾಡಿದರು. +ಮಾತ್ರವಲ್ಲದೆ ಇದೇ ಸಮಯದಲ್ಲಿ `“ಹರಿನಾರಾಯಣ ಬೈಪಾಡಿತ್ತಾಯರಿಂದಲೂ ಹೆಚ್ಚಿನ ಅನುಭವವನ್ನು ಸಂಪಾದಿಸಿದ್ದಾರೆ. +ಅರುವ ಮೇಳ - 1ವರ್ಷ, ಬಪನಾಡು ಮೇಳ - 3 ವರ್ಷ, ಕದ್ರಿ ಮೇಳ - 3 ವರ್ಷ,ಕರ್ನಾಟಕ ಮೇಳ - 5 ವರ್ಷ, ಮಂಗಳಾದೇವಿ ಮೇಳ - 1 ವರ್ಷ, ಸುಂಕದಕಟ್ಟೆ ಮೇಳ - 10ವರ್ಷ ಹೀಗೆ ತಿರುಗಾಟದ ಹಿನ್ನೆಲೆ ಇದೆ. +ಕರುಣಾಕರ ಶೆಟ್ಟಿಗಾರರು ಅವಕಾಶವಾದಿಯಯಾಗಿ ಬೆಳೆಯದೆ ಮೇಳದ ಕಲಾ ಸೇವೆಯಲ್ಲೇ ಸಂತೃಪ್ಪರಾಗಿ ತಿರುಗಾಟವನ್ನು ಮುನ್ನಡೆಸುತ್ತಾ ಇದ್ದಾರೆ. +ಶ್ರೀಮತಿ ಪುಷ್ಪಾವತಿ ಎಂಬವರನ್ನು ವರಿಸಿದ ಇವರು ಯತೀಶ್‌ ಎಂಬ ಸುಪುತ್ರನನ್ನು ಪಡೆದಿದ್ದಾರೆ. +ಕಟೀಲು ಮೇಳದ ಮಧ್ದೆಗಾರ ಮಿಜಾರು ಮೋಹನ ಶೆಟ್ಟಿಗಾರ್‌. +ಹಾಸ್ಯಗಾರ ಮಿಜಾರು ತಿಮ್ಮಪ್ಪ ಮೊದಲಾದವರು ಇವರ ಸಂಬಂಧಿಕರಾಗಿದ್ದು ಕಲಾಬೆಳವಣಿಗೆಗೆ ಪ್ರೋತ್ಸಾಹ ನೀಡಿದ್ದಾರೆ. +ಕರುಣಾಕರ ಶೆಟ್ಟಿಗಾರರು ಆರಂಭದಲ್ಲಿ ಪೂರಕಪಾತ್ರದ ಪುಂಡು ವೇಷಗಳನ್ನು ಕೂಡಾ ಮಾಡುತ್ತಿದ್ದರು. +ಹೀಗಾಗಿ ಪಾತ್ರಕ್ಕೆ ತಕ್ಕಂತೆ ಹಾಡುವ ಅನುಭವವನ್ನು ಮೈಗೂಡಿಸುತ್ತಾ ಬೆಳೆದಿದ್ದಾರೆ. +ರಾಜವೇಷ, ಪುಂಡುವೇಷ, ನಾಟಕೀಯ,ಸ್ತ್ರೀವೇಷ ಮತ್ತು ಹಾಸ್ಯ ಹೀಗೆ ಎಲ್ಲಾ ವಿಧದ ಪಾತ್ರಗಳನ್ನು ನಿರ್ವಹಿಸುತ್ತಾ ಬೆಳೆದಿರುವ ಶ್ರೀ ಪಡೆಕುಮಾರ ಇವರು ಪ್ರಸ್ತುತ ಕಟೀಲು ಮೇಳದ ಕಲಾವಿದರಾಗಿ ತಿರುಗಾಟವನ್ನು ನಡೆಸುತ್ತಾ ಇದ್ದಾರೆ. +ಪಡ್ರೆ ಚಂದು ಮತ್ತು ಭಾಗೀರಥಿ ದಂಪತಿಯ ಸುಪುತ್ರರಾಗಿ 1961ನೇ ವರ್ಷ ಬಂಟ್ವಾಳದಲ್ಲಿ ಹುಟ್ಟಿದರು. +ತಂದೆ ತೆಂಕುತಿಟ್ಟಿನ ಕೀರ್ತಿಶೇಷ ಕಲಾವಿದರಾಗಿದ್ದು ಅವರ ಆದರ್ಶವನ್ನು ಮೈಗೂಡಿಸಿದ್ದ ಕುಮಾರ ಪಡ್ರೆಯವರು ತಂದೆಯ ಕುಣಿತವನ್ನು ನೋಡಿ ಅಭ್ಯಾಸ ಮಾಡುತ್ತಾ ಪಾತ್ರ ನಿರ್ವಹಣೆ ಮಾಡಲು ಕಲಿತರು. +ಪ್ರಾಥಮಿಕ ಹಂತದ ವಿದ್ಯಾಭ್ಯಾಸವನ್ನು ಪಡೆದಿರುವ ಇವರು ಹತ್ತನೇ ವರುಷದಿಂದಲೇ ನಟಿಸಲಾರಂಭಿಸಿ: ಮೊದಲಿಗೆ ಕುಂಡಾವು ಮೇಳದಲ್ಲಿ 2 ವರ್ಷಗಳ ತಿರುಗಾಟವನ್ನು ಪೂರೈಸಿದರು. +ಅನಂತರ ಕಟೀಲು ಮೇಳವನ್ನು ಸೇರಿದವರು ಈಗಾಗಲೇ 45 ವರ್ಷಗಳ ತಿರುಗಾಟವನ್ನು ಪೂರೈಸಿದ್ದಾರೆ. +ದೇವೇಂದ್ರ, ಅರ್ಜುನ, ಮಧು-ಕೈಟಭ, ವರಹ,ಚಂಡ-ಮುಂಡರು, ವಿಷ್ಣು ಕೃಷ್ಣ, ನಕ್ಷತ್ರಕ, ದಾರುಕ,ಲಕ್ಷ್ಮೀ, ಸೀತೆ ಮುಂತಾದ ಪಾತ್ರಗಳನ್ನು ನಿರ್ವಹಿಸುತ್ತಾ ಬಂದಿದ್ದಾರೆ. +ಮೇಳದ ಪ್ರಬಂಧಕರಾಗಿಯೂ ಕಾರ್ಯನಿರ್ವಹಿಸಿರುವ ಅನುಭವಿ ಕಲಾವಿದರಾಗಿರುವ ಇವರು ಮಳೆಗಾಲದಲ್ಲಿ ಯಕ್ಷಗಾನದ ಭೂಷಣಗಳ ತಯಾರಿ ಕೆಲಸದಲ್ಲಿ ಪ್ರವೃತ್ತರಾಗುತ್ತಾರೆ. +ಶ್ರೀಮತಿ ಸರಸ್ವತಿ ಎಂಬವರನ್ನು ವರಿಸಿ ಲಾವಣ್ಯ,ವಿನುತ ಯೋಗೀಶ ಎಂಬ ಮೂವರು ಮಕ್ಕಳನ್ನು ಪಡೆದಿದ್ದಾರೆ. +ಕಿನ್ನಿಗೋಳಿ, ಪಚ್ಚನಾಡಿ ಮುಂತಾದಡೆಯಲ್ಲಿ ಅಭಿಮಾನಿಗಳಿಂದ ಸಂಮಾನವನ್ನು ಪಡೆದಿರುವರು. +ಪುಂಡುವೇಷದ ಮೂಲಕವೇ ಗುರುತಿಸಲ್ಪಟ್ಟು ಜನ ಮನ್ನಣೆಗೆ ಕಾರಣರಾಗಿರುವ ಮಾಡವು ಕೊರಗಪ್ಪನವರು ಕಟೀಲು ಮೇಳದ ಕಲಾವಿದರಾಗಿ ತಿರುಗಾಟವನ್ನು ನಡೆಸುತ್ತಾ ಇದ್ದಾರೆ. +26-12-1955ರಲ್ಲಿ ಮಹಾಬಲ ರೈ ಮತ್ತು ಕಮಲ ರೈ ದಂಪತಿಯ ಸುಪುತ್ರರಾಗಿ ಮಾಡವು ಎಂಬಲ್ಲಿ ಜನಿಸಿದರು. +7ನೇ ತರಗತಿಯ ತನಕ ವಿದ್ಯಾಭ್ಯಾಸವನ್ನು ಪಡೆದಿರುವ ಇವರು ಸ್ವಂತಾಸಕ್ತಿಯ ಮೇರೆಗೆ 17ನೇ ವಯಸ್ಸಿನಿಂದಲೇ ಪಾತ್ರ ನಿರ್ವಹಣೆ ಮಾಡಲು ಆರಂಬಿಸಿದರು. +ಯಕ್ಷಗಾನದ ಕೀರ್ತಿಶೇಷ ಕಲಾವಿದ ಪಡ್ರೆ ಚಂದುರವರಿಂದ ನಾಟ್ಯಾಭ್ಯಾಸವನ್ನು ಮಾಡಿರುವ ಕೊರಗಪ್ಪರು ಕರ್ನಾಟಕ ಮೇಳ - 5 ವರ್ಷ,ಬಪ್ಪನಾಡು ಮೇಳ - 2 ವರ್ಷ, ಕದ್ರಿ ಮೇಳ - 2ವರ್ಷ, ಪುತ್ತೂರು ಮೇಳ - 1 ವರ್ಷ ಹಾಗೂ ಕಟೀಲು ಮೇಳದಲ್ಲಿ 17 ವರ್ಷಗಳ ತಿರುಗಾಟವನ್ನು ಪೂರೈಸಿದ್ದಾರೆ. +ಅಭಿಮನ್ಯು, ಬಭ್ರುವಾಹನ, ಲಕ್ಷ್ಮಣ, ಚಂಡ-ಮುಂಡರು, ಕುಶ-ಲವರು, ಕೃಷ್ಣ, ಪ್ರಹ್ಲಾದ, ಹುಂಡ-ಪುಂಡರು ಮುಂತಾದ ಪಾತ್ರಗಳನ್ನು ಉತ್ತಮವಾಗಿ ನಿರ್ವಹಿಸಿರುವರು. +ಅನಿವಾರ್ಯ ಸಂದರ್ಭಗಳಲ್ಲಿ ಹಾಸ್ಯ ಪಾತ್ರಗಳನ್ನು ಕೂಡಾ ಚೆನ್ನಾಗಿ ಮಾಡಬಲ್ಲವರಾಗಿದ್ದಾರೆ. +ಶ್ರೀಮತಿ ಹೇಮಾವತಿ ಎಂಬವರನ್ನು ವರಿಸಿರುವ ಇವರು ಭಾನು ಪ್ರಕಾಶ್‌ ರೈ ಎಂಬ ಸುಪುತ್ರನ್ನೋರ್ವನನ್ನು ಪಡೆದು ಸಂತೃಪ್ತ ಜೀವನವನ್ನು ನಡೆಸುತ್ತಿದ್ದಾರೆ. +ಅಭಿನಯ ವಿಶಾರದ, ರಂಗಸ್ಥಳದ ರಾಜಮೊದಲಾದ ಬಿರುದುಗಳಿಂದ ತೆಂಕುತಿಟ್ಟಿನ ಪ್ರತಿನಾಯಕ ಪಾತ್ರದಾರಿಯಾಗಿ ತುಳು ಮತ್ತು ಕನ್ನಡಭಾಷೆಯ ಪ್ರದರ್ಶನಗಳಲ್ಲಿ ಕಂಡುಬರುವವರು ಅರುವ ಕೊರಗಪ್ಪ ಶೆಟ್ಟಿ, ಕಳೆದ 11 ವರ್ಷಗಳಿಂದ ಮಂಗಳಾದೇವಿ ಮೇಳದ ಕಲಾವಿದರಾಗಿ ಕಲಾಜೀವನವನ್ನು ನಡೆಸುತ್ತಾ ಇದ್ದಾರೆ. +ದಿನಾಂಕ 24-11-1940ರಲ್ಲಿ ಸುಬ್ಬಯ್ಯ ಶೆಟ್ಟಿ ಮತ್ತು ಕಾಂತಕ್ಕ ಶೆಟ್ಟಿ ದಂಪತಿಯ ಸುಪುತ್ರರಾಗಿ ಅರುವದಲ್ಲಿ ಹುಟ್ಟಿದ ಕೊರಗಪ್ಪ ಶೆಟ್ಟರು ಪ್ರಾಥಮಿಕ ಹಂತದವರೆಗೆ ಶಾಲೆಗೆ ಹೋಗಿರುವರು ಬಾಲ್ಯದಲ್ಲೇ ಯಕ್ಷಗಾನದತ್ತ ಆಕರ್ಷಿತರಾದ ಇವರು ಅಧ್ಯಾಪಕರಾಗಿದ್ದ ವೆಂಕಟರಮಣ ಭಟ್‌, ಕೃಷ್ಣರಾಜಅಜಿಲ, ಮುತ್ತಯ್ಯ ಹೆಗಡೆ ಮೊದಲಾದವರ ಪ್ರೋತ್ಸಾಹದೊಂದಿಗೆ ಪಡ್ರೆ ಚಂದುರವರಲ್ಲಿ ನಾಟ್ಯಾಭ್ಯಾಸವನ್ನು ಮಾಡಿ ಯಕ್ಷಗಾನ ರಂಗಕ್ಕೆ ಪ್ರವೇಶಿಸಿದರು. +ಬಾಲಗೋಪಾಲ ವೇಷದಿಂದ ಎದುರು ವೇಷದವರೆಗೆ ಹಂತ ಹಂತವಾಗಿ ಬೆಳೆಯುತ್ತಾ ಬಂದ ಕೊರಗಪ್ಪ ಶೆಟ್ಟರು 55 ವರ್ಷಗಳ ಮೇಳ ತಿರುಗಾಟವನ್ನು ನಡೆಸಿದ್ದಾರೆ. +ಕಟೀಲು ಮೇಳ -3 ವರ್ಷ, ಶ್ರೀ ಕುತ್ಕಾಳ ಮೇಳ - 2 ವರ್ಷ,ಕುಂಡಾವು ಮೇಳ - 7 ವರ್ಷ, ಕರ್ನಾಟಕ ಮೇಳ- 31 ವರ್ಷ, ಎಡನೀರು ಮೇಳ - 1 ವರ್ಷ ಹೀಗೆ ಮೇಳಗಳಲ್ಲಿ ತಿರುಗಾಟವನ್ನು ಮಾಡುತ್ತಾ ಪ್ರಸಿದ್ಧಿಗೆ ಏರಿದವರು. +ಪ್ರಸ್ತುತ ಮಂಗಳಾದೇವಿ ಮೇಳದ ನೂತನ ಪ್ರಸಂಂಗಳಲ್ಲಿ ಪಾತ್ರವನ್ನು ವೈಭವೀಕರಿಸುತ್ತಿದ್ದಾರೆ. +ಕಂಸ, ಕೌರವ, ಕರ್ಣ, ಇಂದ್ರಜಿತು ಇತ್ಯಾದಿ ಖಳನಾಯಕ ಪಾತ್ರಗಳನ್ನು ಮಾಡುವ ಇವರು ವಿಷ್ಣು,ಬಬ್ರುವಾಹನ, ಸುಧನ್ವ, ದ್ರೋಣ, ಕೃಷ್ಣ, ವಿಶ್ವಾಮಿತ್ರ,ರೂಕ್ಷ ಮೊದಲಾದ ಭಿನ್ನ ಸ್ವಭಾವದ ಪಾತ್ರಗಳನ್ನು ಕೂಡ ಉತ್ತಮವಾಗಿ ನಿರ್ವಹಿಸುತ್ತಾರೆ. +ಕರ್ನಾಟಕ ಮೇಳದಲ್ಲಿ ತಿರುಗಾಟವನ್ನು ನಡೆಸುತ್ತಾ ಇದ್ದಾಗ ಪ್ರತಿನಾಯಕ ಪಾತ್ರಗಳಿಗೆ ತನ್ನದೇ ಆದ ಶೈಲಿಯನ್ನು ತೋರಿದ ಇವರು ಅದ್ವಿತೀಯ ಸ್ಥಾನಕ್ಕೇರಿದರು. +ಪಾತ್ರದ ಸ್ವಭಾವವನ್ನು ಅರಿತು ಅದಕ್ಕೆ ತಕ್ಕಂತೆ ನಟಿಸುವುದರಿಂದಲೇ ಇವರ ಕೋಟಿ,ಬೀರಣ್ಣೆ, ದೇವುಪೂಂಜ, ಕಾಂತುಪೂಂಜ ಮೊದಲಾದ ಪಾತ್ರಗಳೆಲ್ಲಾವೂ ಜನಮಾನಸಕ್ಕೆ ಮುಟ್ಟಿದೆ. +ಅಕ್ಷಯಾಂಬರ ವಿಲಾಸ ಪ್ರಸಂಗದಲ್ಲಿ ಇವರು ಮಾಡುವ ದುಶ್ಯಾಸನನ ಪಾತ್ರ ಸರ್ವರಿಂದಲೂ ಮುಕ್ತ ಪ್ರಶಂಸೆಗೆ ಒಳಗಾಗಿದೆ. +ಮಳೆಗಾಲದಲ್ಲಿ ಕೃಷಿಯ ಬಗ್ಗೆ ಶ್ರಮಿಸುವ ಮನೋಧರ್ಮವುಳ್ಳ ಇವರು ಶ್ರೀ ಮಹಾಲಕ್ಷ್ಮೀ ಎಂಬವರನ್ನು ವರಿಸಿ ವತ್ಸಲ, ದೇವಿಪ್ರಸಾದ್‌(ಸಿವಿಲ್‌ಕಂಟ್ರಾಕ್ಟರ್‌) ಎಂಬ ಇಬ್ಬರು ಮಕ್ಕಳನ್ನು ಪಡೆದಿದ್ದಾರೆ. +ಬೇಸಿಗೆ ಮತ್ತು ಮಳೆಗಾಲದ ಪ್ರದರ್ಶನಗಳಲ್ಲಿ ಬೇಡಿಕೆಯ ಕಲಾವಿದರಾಗಿರುವ ಇವರ ಸಾಧನೆಗೆ ಪ್ರತಿಫಲವಾಗಿ ರಾಜ್ಯ ಪ್ರಶಸ್ತಿ ಸಹಿತ 300ಕ್ಕೂ ಮಿಕ್ಕಿ ಸಂಮಾನಗಳು ಸಂದಿವೆ. +ಎಡನೀರು ಪ್ರಶಸ್ತಿ, ಕೀಲಾರು ಗೋಪಾಲಕೃಷ್ಣ ಪ್ರಶಸ್ತಿ ಪಟ್ಟಾಜೆ ಪ್ರಶಸ್ತಿ, ಉಡುಪಿ ಕಲಾರಂಗದ ಪ್ರಶಸ್ತಿ ಮುಂತಾದುವುಗಳನ್ನು ಉಲ್ಲೇಖಿಸಬಹುದು. +ಮಸ್ಕತ್‌, ದುಬಾಯಿ, ಬೆಹರಿನ್ ಮೊದಲಾದ ಕಡೆಗಳಲ್ಲೂ ಅಭಿಮಾನಿಗಳ ಸಂಘಟನೆಯಲ್ಲಿ ಸಂಮಾನಗಳು ಸಂದಿವೆ. +ಶ್ರೀ ಕಟೀಲು ಮೇಳದ ಒಂದನೇ ಪುಂಡುವೇಷಧಾರಿಯಾಗಿ ತಿರುಗಾಟವನ್ನು ಮಾಡುವ ಎ .ಕೃಷ್ಣ ಮೂಲ್ಯ ಕೈರಂಗಳ ಅವರು ವಿಷ್ಣು,ಕೃಷ್ಣ,ರಾಮ ಮೊದಲಾದ ಪಾತ್ರಗಳನ್ನು ಸ್ವಭಾವಕ್ಕೆ ಅನುಗುಣವಾಗಿ ಚಿತ್ರಿಸುವ ಮನೋಧರ್ಮವನ್ನು ಹೊಂದಿದ್ದಾರೆ. +13-2-1954ರಲ್ಲಿ ಮಾರು ಮೂಲ್ಯ ಮತ್ತು ಅಕ್ಕು ಮೂಲೈದಿ ದಂಪತಿಯ ಸುಪುತ್ರರಾಗಿ ಕೈರಂಗಳದ ಆನೆಗುಂಡಿಯಲ್ಲಿ ಕೃಷ್ಣ ಮೂಲ್ಕ್ಯರು ಜನಿಸಿದರು. +ಪ್ರಾಥಮಿಕ ಹಂತದವರೆಗೆ ಶಾಲಾವಿದ್ಯಾಭ್ಯಾಸವನ್ನು ಪಡೆದಿರುವ ಇವರು ಆನೆಗುಂಡಿ ಗಣಪಶಿ ಭಟ್ಟರ ಒತ್ತಡದ ಮೇರೆಗೆ ಹೊಸಶಿತ್ಣು ಮಹಾಲಿಂಗ ಭಟ್ಟರಲ್ಲಿ ನಾಟ್ಯಾಭ್ಯಾಸ ಮಾಡಿದರು. +26ನೇ ವರ್ಷದಿಂದ ಯಕ್ಷಗಾನಕ್ಕೆ ಸೇರಿದ ಇವರು ಕಟೀಲು ಮೇಳವೊಂದರಲ್ಲೇ ತಿರುಗಾಟವನ್ನು ಮಾಡಿದ ಕಲಾವಿದರಾಗಿದ್ದಾರೆ. +ಪ್ರಸ್ತುತ 30ನೇವರ್ಷದ ತಿರುಗಾಟವನ್ನು ಪೂರೈಸಿದ್ದಾರೆ. +ಒಂದನೇ ಪುಂಡುವೇಷದ ಪಾತ್ರಗಳಲ್ಲದೆ ಭೀಷ್ಮ ಜಾಬಾಲಿ,ತಾಮ್ರಧ್ವಜ ಇತ್ಯಾದಿ ಪಾತ್ರಗಳನ್ನು ಇವರು ನಿರ್ವಹಿಸಿದ್ದಾರೆ. +ಇವರ ದೇವೇಂದ್ರ, ಅರ್ಜುನ,ಪರಂಪರೆಯ ಧರ್ಮರಾಯ ಮೊದಲಾದ ಪಾತ್ರಗಳು ಕೂಡಾ ಉತ್ತಮ ನಿರ್ವಹಣೆಯ ಪಾತ್ರಗಳೆಂದೆನಿಸಿವೆ. +ಪುಂಡುವೇಷ ಮತ್ತು ರಾಜವೇಷವನ್ನು ನಿರ್ವಹಿಸುವ ಸಮರ್ಥ ಕಲಾವಿದನೆಂದು ಗುರುತಿಸಲ್ಪಟ್ಟ ಇವರು ಅನಿವಾರ್ಯ ಸಂದರ್ಭಗಳಲ್ಲಿ ಬಾಹುಕ, ವಿಜಯ ಮೊದಲಾದ ಹಾಸ್ಯ ಪಾತ್ರಗಳನ್ನು ನಿರ್ವಹಿಸಿದ್ದಾರೆ. +ಶ್ರೀಮತಿ ಲೀಲಾವತಿ ಎಂಬವರನ್ನು ವರಿಸಿರುವ ಕೃಷ್ಣ ಮೂಲ್ಯರು ಕಿರಣ್‌ರಾಜ್‌, ಕಿಶನ್‌ರಾಜ್‌,ದೇವಿಕಲಾ ಎಂಬ ಮೂವರು ಮಕ್ಕಳನ್ನು ಪಡೆದಿದ್ದಾರೆ. +ಇವರ ಸಹೋದರರು ಯಕ್ಷಗಾನ ಪ್ರಿಯರು. +ಅಣ್ಣ ನಾರಾಯಣ ಹವ್ಯಾಸಿ ಕಲಾವಿದರಾಗಿದ್ದು ಕಿರೀಟ ಕಟ್ಟುವ ರಾಜವೇಷದ ಪಾತ್ರಗಳನ್ನು ನಿರ್ವಹಿಸುತ್ತಾರೆ. +ಶಾಲೆ, ಕಾಲೇಜು ಮತ್ತು ಸಂಘ ಸಂಸ್ಥೆಗಳ ಪ್ರದರ್ಶನಗಳಿಗೆ ನಿರ್ದೇಶನ ಮಾಡಿರುವ ಕೃಷ್ಣಮೂಲ್ಯರ ಸಾಧನೆಗೆ ತಕ್ಕಂತೆ ಸಸಿಹಿತ್ಸು, ಕಣ್ಣೂರು,ಕೊಡಕಲ್ಲು, ಕೈರಂಗಳ ಮುಂತಾದ ಕಡೆಗಳಲ್ಲಿ ಅಭಿಮಾನಿಗಳಿಂದ ಸಂಮಾನಗಳು ಸಂದಿವೆ. +ಬಣ್ಣದ ವೇಷಗಳಲ್ಲಿ ಶಿಸ್ತು ಬದ್ಧವಾದ ನಟನೆಯೊಂದಿಗೆ, ಪರಂಪರೆಯ ಶೈಲಿಯನ್ನು ತೋರಿ ಪ್ರೇಕ್ಷಕರ ಮನ್ನಣೆಯನ್ನು ಪಡೆದಿದ್ದ ಪಕಳ ಕುಂಜಕೃಷ್ಣ ನಾಯ್ಕರು ಧರ್ಮಸ್ಥಳ ಮೇಳದಲ್ಲಿ ತಿರುಗಾಟವನ್ನು ನಡೆಸಿ ನಿವೃತ್ತರಾಗಿದ್ದಾರೆ. +ದಿನಾಂಕ 1-1-1935ರಲ್ಲಿ ಚೋಮ ನಾಯ್ಕ ಮತ್ತು ಕಾವೇರಿ ದಂಪತಿಯ ಸುಪುತ್ರರಾಗಿ ಬಂಟ್ವಾಳ ತಾಲೂಕಿನ ಪಕಳ ಕುಂಜದಲ್ಲಿ ಜನಿಸಿದರು. +ಎಳವೆಯಲ್ಲಿಯೇ ಯಕ್ಷಗಾನದ ಪ್ರದರ್ಶನಗಳನ್ನು ನೋಡಿ ತಾನೂ ಕೂಡಾ ಪಾತ್ರ ನಿರ್ವಹಣೆ ಮಾಡಬೇಕೆಂಬ ಹಂಬಲದಿಂದ ಚಂದಗಿರಿ ಅಂಬು ಅವರ ಒಡನಾಟದಲ್ಲಿ ಬೆಳೆದು ಬಂದರು. +ಶ್ರೀ ಧರ್ಮಸ್ಥಳ ಮೇಳದಲ್ಲಿ ಸುದೀರ್ಫವಾದ ತಿರುಗಾಟವನ್ನು ಮಾಡಿರುವ ಇವರು ರಾವಣ,ಮೈರಾವಣ, ಮಹಿಷಾಸುರ, ಕುಂಭ ಕರ್ಣ,ಖರಾಸುರ ಮೊದಲಾದ ಬಣ್ಣದ ವೇಷಗಳಿಂದ ಪ್ರಸಿದ್ಧರಾಗಿದ್ದಾರೆ. +ಇವರು ಧರ್ಮಸ್ಥಳ ಮೇಳದ ತಿರುಗಾಟವನ್ನು ನಿಲ್ಲಿಸಿದ ಮೇಲೆ ಹೇಳಿಕೆಯ ಮೇರೆಗೆ ಹಲವಾರು ಹವ್ಯಾಸಿ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಾ ಇದ್ದರು. +ಪ್ರಸಂಗ ಮತ್ತು ಪಾತ್ರಗಳ ಬಗ್ಗೆ ಆಸಕ್ತರಿಗೆ ಮಾರ್ಗದರ್ಶನವನ್ನು ಮಾಡುತ್ತಿದ್ದ ಇವರು ಕಳೆದ ನಾಲ್ಕಾರು ವರ್ಷಗಳಿಂದ ಅನಾರೋಗ್ಯದ ನಿಮಿತ್ತ ಮನೆಯಲ್ಲಿಯೇ ಇದ್ದಾರೆ. +ಇವರ ಸಾಧನೆಗೆ ಪ್ರತಿಫಲವಾಗಿ ಹವ್ಯಾಸಿ ಬಳಗ ಕದ್ರಿಯ ದಶಮಾನ ಸಂಮಾನವಲ್ಲದೇ ಹಲವಾರು ಸಂಘ ಸಂಸ್ಥೆಗಳ ಗೌರವ ಪುರಸ್ಕಾರಗಳು ಮತ್ತು ಸಹಾಯ ಧನವೂ ದೊರೆತಿದೆ. +15 +ರಂಗತಂತ್ರ ಹಾಗೂ ಹಾಡುವಿಕೆಯಿಂದ ಪ್ರದರ್ಶನವನ್ನು ರಸವತ್ತಾಗಿಸಿ ಪ್ರೇಕ್ಷಕರ ಮೆಚ್ಚುಗೆಗೆ ಕಾರಣರಾಗಿರುವ ಪರಂಪರಾಗತ ಭಾಗವತ ಗಣಪತಿಶಾಸ್ತ್ರಿ ಕುರಿಯ ಇವರು ಕಟೀಲು ಮೇಳದ ಮುಖ್ಯ ಭಾಗವತರಾಗಿ ತಿರುಗಾಟವನ್ನು ನಡೆಸುತ್ತಾ ಇದ್ದಾರೆ. +12-8-1952ರಲ್ಲಿ ಕುರಿಯ ರಾಮ ಶಾಸ್ತ್ರಿ ಮತ್ತು ಗಂಗಮ್ಮ ದಂಪತಿಯ ಸುಪುತ್ರರಾಗಿ ಕುರಿಯ ಮನೆಯಲ್ಲಿ ಹುಟ್ಟಿದರು. +ಬಿ.ಎ.ಪದವೀದರರಾಗಿರುವ ಇವರು ಮನೆತನದ ಹಿನ್ನೆಲೆಯಿಂದ ಎಳವೆಯಿಂದಲೇ ಪ್ರಭಾವಿತರಾಗಿದ್ದರು. +ತಂದೆ, ಅಜ್ಜ, ದೊಡ್ಡ ತಂದೆ ಕುರಿಯ ವಿಠಲ ಶಾಸ್ತ್ರಿ ಹೀಗೆ ಮನೆತನದವರು ಭಾಗವತಿಕೆ ಅಥವಾ ವೇಷಗಾರಿಕೆ ಇತ್ಯಾದಿ ಹಿನ್ನೆಲೆಯಿಂದ ಕೀರ್ತಿಶೇಷರಾಗಿದ್ದಾರೆ. +ಹೀಗಾಗಿ ರಕ್ತಗತವಾಗಿ ಬಂದ ಪ್ರತಿಭೆಯಿಂದ 14ನೇ ವಯಸ್ಸಿನಿಂದಲೇ ನಾಟ್ಯಾಭ್ಯಾಸ ಮಾಡಿ ಹವ್ಯಾಸಿ ವೇಷಧಾರಿಯಾಗಿದ್ದರು. +ಕುರಿಯ ವಿಠಲ ಶಾಸ್ತಿಗಳೇ ಇವರಿಗೆ ನಾಟ್ಯಾಭ್ಯಾಸ ಮಾಡಿಸಿದ್ದರು. +ಆ ಮೇಲೆ ಬಾಲ್ಯದಿಂದಲೇ ಹಾಡುತ್ತಿದ್ದ ಇವರಿಗೆ ಬಾಯಾರು ಸುಬ್ರಾಯ ಭಟ್ಟರು ಶೃತಿಗೆ ಹಾಡುವುದನ್ನು ಕಲಿಸಿದ್ದರು. +ಮುಂದೆ ನೆಡ್ಡೆ ನರಸಿಂಹ ಭಟ್‌, ಚೆಪ್ಪಾರು ಕೃಷ್ಣಯ್ಯ ಬಲ್ಲಾಳ್‌ ಮುಂತಾದವರಿಂದ ಹೆಚ್ಚಿನ ರಂಗಾನುಭವವನ್ನು ಪಡೆದಿದ್ದಾರೆ. +ಉತ್ತಮ ಉದ್ಯೋಗದ ಅವಕಾಶವನ್ನು ತೊರೆದು ಕಟೀಲು ಮೇಳವೊಂದರಲ್ಲೇ 33 ವರ್ಷಗಳ ತಿರುಗಾಟವನ್ನು ನಡೆಸಿರುವ ಇವರು ಮಹಿಷಾಸುರ,ಮೈರಾವಣ, ವೀರಭದ್ರ, ಕಂಸ, ಕಾರ್ತವೀರ್ಯ,ಪರಶುರಾಮ ಮುಂತಾದ ವೇಷಗಳನ್ನು ನಿರ್ವಹಿಸಿದ್ದಾರೆ. +ಬಾಲ್ಯದಲ್ಲೇ ನೀಲೇಶ್ವರದ ಕಲೋತ್ಸವದಲ್ಲಿ ಭಾಗವಹಿಸಿ ಕಂಸನ ಪಾತ್ರ ಮಾಡಿ ಜಿಲ್ಲಾ ಮಟ್ಟದ ವೈಯಕ್ತಿಕ ಬಹುಮಾನವನ್ನು ಪಡೆದವರು ಇವರಾಗಿದ್ದಾರೆ. +ದಶಾವತಾರ, ದುಶ್ಯಾಸನ ವಧೆ, ಕಿರಾತಾರ್ಜುನ,ದೇವಿ ಮಹಾತ್ಮೆ ಮುಂತಾದ ಹಲವಾರು ಪ್ರಸಂಗಗಳನ್ನು ತನ್ನದೇ ಆದ ವರ್ಚಸ್ಸಿನಿಂದ ಆಡಿ ತೋರಿಸಿ ಯೋಗ್ಯತೆಯನ್ನು ಮೆರಿಸಿದ್ದಾರೆ. +ಕಲಾವಿದರನ್ನು ಚೆನ್ನಾಗಿ ಕುಣಿಸಿ ಅವರ ಸತ್ವ ಪ್ರದರ್ಶನವನ್ನು ಮಾಡಬಲ್ಲ ಚಾಕಚಕ್ಯತೆ ಕೂಡಾ ಇವರಲ್ಲಿದೆ. +ಕೃಷಿಕ ಮನೆತನಕ್ಕೆ ಸೇರಿದ ಇವರು ಶ್ಯಾಮಲ ಎಂಬವರನ್ನು ವರಿಸಿದ್ದಾರೆ. +ಇವರ ಕಲಾ ಸಾಧನೆಗೆ ಗೌರವವಾಗಿ ಕಟೀಲು ಬ್ರಾಮರಿ ಯಕ್ಷಗಾನದ ಸಂವಾನ, ಮಚ್ಚಾರು ಅಭಿಮಾನಿಗಳ ಸಂಮಾನಗಳಲ್ಲದೆ ಮೈಲೊಟ್ಟು, ಕೈಕಂಬ, ಬಾಯಾರು ಮೊದಲಾದೆಡೆಯಲ್ಲಿ ಕಲಾಭಿಮಾನಿಗಳಿಂದ ಗೌರವ ಪುರಸ್ಕಾರಗಳು ಸಂದಿವೆ. +ಸುಶ್ರಾವ್ಯ ಭಾಗವತಿಕೆಯು ಮುಖೇನ ತೆಂಕುತಿಟ್ಟಿನ ಪ್ರಸಿದ್ಧ ಕಲಾವಿದರಾಗಿ ಜನಮನ್ನಣೆಯನ್ನು ಪಡೆದಿರುವ ಪದ್ಯಾಣ ಗಣಪತಿ ಭಟ್ಟರು ಪ್ರಸ್ತುತ ಶ್ರೀ ಹೊಸನಗರ ರಾಮಚಂದ್ರಾಮರ ಮೇಳದ ಮುಖ್ಯ ಭಾಗವತರಾಗಿ ತಿರುಗಾಟವನ್ನು ನಡೆಸುತ್ತಾ ಇದ್ದಾರೆ. +ಪದ್ಯಾಣ ತಿರುಮಲೇಶ್ವರ ಭಟ್‌ ಮತ್ತು ಪಿ.ಸಾವಿತ್ರಿ ಅಮ್ಮ ದಂಪತಿಯ ಸುಪುತ್ರರಾಗಿ ದಿನಾಂಕ 21-5-1955ರಂದು ಪೈವಳಿಕೆಯ ಕುಂಡೇರಿ ಎಂಬಲ್ಲಿ ಹುಟ್ಟಿದರು. +ತಂದೆ ಹಿಮ್ಮೇಳ ವಾದಕರು, ಅಜ್ಜ ಪುಟ್ಟು ನಾರಾಯಣರು ಭಾಗವತರಾಗಿದ್ದರು. +ಹೀಗಾಗಿ ಮನೆತನದ ಹಿನ್ನಲೆ ಪದ್ಯಾಣ ಗಣಪತಿ ಭಟ್ಟರಿಗಿದ್ದು ರಕ್ತಗತವಾದ ಪ್ರತಿಭೆಯಿಂದ ಕಲಾ ಸಾಧನೆಯನ್ನು ತೋರಿ ಮೆರೆದಿದ್ದಾರೆ. +ಮನೆತನದ ಮಾರ್ಗದರ್ಶನ ಹಾಗೂ ವರಾಂಬಾಡಿ ನಾರಾಂತುಣ ಬಾಗವತರ್‌ ನಿರ್ದೇಶನದಿಂದ ಭಾಗವತರಾಗಿ ಬೆಳೆದ ಇವರು ಚೆಂಡೆ ಮದ್ದಳೆಗಳ ನುಡಿತ-ಬಡಿತಗಳಲ್ಲೂ ಪ್ರವೀಣರಾಗಿದ್ದಾರೆ. +ಪ್ರಾಥಮಿಕ ವಿದ್ಯಾಭ್ಯಾಸವನ್ನು ಪಡೆದಿದ್ದು 15ನೇ ವರ್ಷದಿಂದಲೇ ರಂಗ ಪ್ರವೇಶ ಮಾಡಿದ ಇವರ ಅನುಭವ - ಸಾಧನೆ ಹಿರಿದಾದುದು. +ಆರಂಭದಲ್ಲಿ ಚೌಡೇಶ್ಟರಿ, ಕುಂಡಾವು, ಸುರತ್ಕಲ್‌ಮೇಳಗಳಲ್ಲಿ 2 ವರ್ಷಗಳ ತನಕ ಹೇಳಿಕೆಯ ಮೇರೆಗೆ ಭಾಗವಹಿಸುತ್ತಿದ್ದ ಇವರು. +ಮುಂದೆ ಕುಂಡಾವು ಮೇಳದಲ್ಲಿ 1 ವರ್ಷದ ತಿರುಗಾಟವನ್ನು ಮಾಡಿ ಸುರತ್ಕಲ್‌ ಮೇಳವನ್ನು ಸೇರಿದರು. +ಅಲ್ಲಿ 26ವರ್ಷಗಳ ತಿರುಗಾಟವನ್ನು ಮಾಡಿ ಕೀರ್ತಿಸಂಪನ್ನರಾದರು. +ಅನಂತರ ಮಂಗಳಾದೇವಿ ಮೇಳ- 2 ವರ್ಷ, ಕರ್ನಾಟಕ ಮೇಳ - 1 ವರ್ಷ,ಎಡನೀರು ಮೇಳ - 3 ವರ್ಷ,ಹೊಸನಗರ ಮೇಳ - 4 ವರ್ಷ ಹೀಗೆ ತಿರುಗಾಟವನ್ನು ನಡೆಸಿದ್ದಾರೆ. +ಹಲವಾರು ಮಂದಿ ಶಿಷ್ಯರನ್ನು ಹೊಂದಿರುವ ಇವರು ತುಳು ಮತ್ತು ಕನ್ನಡ ಭಾಷೆಯ ಪ್ರಸಂಗಗಳನ್ನು ಸಮರ್ಥವಾಗಿ ಪ್ರದರ್ಶನಕ್ಕೊಳಪಡಿಸಬಲ್ಲ ಭಾಗವತರಾಗಿದ್ದಾರೆ. +ಸಂಗೀತದ ಬಗ್ಗೆ ಜ್ಞಾನವುಳ್ಳ ಗಣಪತಿ ಭಟ್ಟರು ಯಕ್ಷಗಾನದ ಪದ್ಯಗಳಿಗೆ ಹೊಸರಾಗ ಸಂಯೋಜನೆಯನ್ನು ಮಾಡಿದ್ದಾರೆ. +ಹಲವಾರು ಹೊಸರಾಗಗಳಿಂದ ಜೈತನ್ನಯ ಪೂರ್ಣವಾಗಿ ಹಾಡಿ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. +ಕೃಷಿಕ ಮನೆತಕ್ಕೆ ಸೇರಿರುವ ಇವರು ಶ್ರೀಮತಿ ಶೀಲಾ ಜಿ.ಭಟ್‌ ಎಂಬವರನ್ನು ವರಿಸಿ ಸ್ವಸ್ತಿಕ್‌ಪದ್ಯಾಣ (ಬ್ಯಾಂಕ್‌ ಉದ್ಯೋಗಿ) ಮತ್ತು ಕಾರ್ಶಿಕ್‌ಪದ್ಯಾಣ ಎಂಬ ಇಬ್ಬರು ಮಕ್ಕಳನ್ನು ಪಡೆದಿದ್ದಾರೆ. +ಸಾಧನೆಯ ಫಲವಾಗಿ ದೆಹಲಿ, ಮುಂಬಯಿ,ಬೆಂಗಳೂರು, ಕುವೈಟ್‌, ಮಸ್ಕತ್‌ ಮೊದಲಾದೆಡೆಯಲ್ಲಿ ಸಂಮಾನಕೊಳಗಾಗಿದ್ದಾರೆ. +ಕೀಲಾರು ಪ್ರಶಸ್ತಿ, ಪಟ್ಟಾಜೆ ಪ್ರಶಸ್ತಿ, ದ.ಕ.ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಮೊದಲಾದ ಹಲವು ಪ್ರಶಸ್ತಿಗಳು ಇವರಿಗೆ ಸಲ್ಲಲ್ಪಟ್ಟಿವೆ. +ಬೆಂಡೆ-ಮದ್ದಳೆಯ ಬಡಿತ-ನುಡಿತಗಳಲ್ಲಿ ತೀವ್ರಗತಿಯ ಕೈಚಳಕವನ್ನು ತೋರುವ ಶ್ರೀ ಅಡೂರುಗಣೇಶ ರಾವ್‌ರವರು ತೆಂಕುತಿಟ್ಟಿನ ಕ್ಷೇತ್ರದಲ್ಲಿ ಗುರುತಿಸಲ್ಪಡುವ ಪ್ರತಿಭಾನ್ವಿತ ಕಲಾವಿದರಾಗಿದ್ದು,ಪ್ರಸ್ತುತ ಧರ್ಮಸ್ಥಳ ಮೇಳದಲ್ಲಿ ತಿರುಗಾಟವನ್ನು ನಡೆಸುತ್ತಿರುವರು. +೧೯೬೮ ನೇ ವರ್ಷದಲ್ಲಿ ಮಾರ್ಚ್‌ ತಿಂಗಳ೨೩ ನೇ ದಿನಾಂಕದಂದು ಕೆ.ಕೃಷ್ಣರಾವ್‌ ಮತ್ತು ಪಾರ್ವತಿ ದಂಪತಿಯ ಸುಪುತ್ರರಾಗಿ ಮಂಗಳೂರಿನಲ್ಲಿ ಹುಟ್ಟಿದರು. +ಇವರ ತಂದೆ, ಅಜ್ಜಂದಿರು ಮದ್ದಳೆಗಾರರಾಗಿ ಪ್ರಭಾವಿತರಾಗಿದ್ದುದರಿಂದ, ಆಪ್ರಭಾವದ ಗುಣ ವಂಶ ಪಾರಂಪರ್ಯವಾಗಿ ಇವರಿಗೂ ಬಂದಿದೆ. +ತಂದೆಯವರಿಂದ ಮೊದಲ ಪಾಠ ಅನಂತರ ದಿ| ನೆಡ್ಡೆ ನರಸಿಂಹ ಭಟ್ಟರಿಂದ ಹೆಚ್ಚಿನ ಅಧ್ಯಯನವನ್ನು ಮಾಡಿರುವ ಗಣೇಶ್‌ ರಾವ್‌ ಚೆಂಡೆ ಮತ್ತು ಮದ್ದಳೆಗಳ ಬಾರಿಸುವಿಕೆಯೊಂದಿಗೆ ಭಾಗವತಿಕೆಯನ್ನು ಕೂಡಾ ಮಾಡಬಲ್ಲವರಾಗಿದ್ದಾರೆ. +ಶೈಕ್ಷಣಿಕವಾಗಿ ಪ್ರಾಥಮಿಕ ಹಂತದ ವಿದ್ಯಾಭ್ಯಾಸವನ್ನು ಪೂರೈಸಿರುವ ಇವರು ಬಾಲ್ಯದಿಂದಲೇ ಯಕ್ಷಗಾನ ಕಲೆಯತ್ತ ಗಮನ ಹರಿಸುತ ಬೆಳೆದರು. +ತಂದೆ ಕೃಷ್ಣ ರಾವ್‌ಇವರಿಗೆ ಇವರಿಗೆ 13ನೇ ವಯಸ್ಸಿನಲ್ಲೇ ಹಿಮ್ಮೇಳದ ಪಾಠಾಭ್ಯಾಸವನ್ನು ಮಾಡಿದ್ದರು. +ಮುಂದೆ ಮೇಳ ತಿರುಗಾಟಕ್ಕೆ ಸೇರಿದ ಇವರು ಸುರತ್ಕಲ್‌ ಮೇಳ -1 ವರ್ಷ, ಕಟೀಲು ಮೇಳ - 9 ವರ್ಷ, ಪುತ್ತೂರುಮೇಳ -6 ವರ್ಷ, ಕದ್ರಿ ಮೇಳ - 1 ವರ್ಷ,ಧರ್ಮಸ್ಥಳ ಮೇಳ - 14 ವರ್ಷ ಹೀಗೆ 5 ಮೇಳಗಳಲ್ಲಿ 30 ವರ್ಷಗಳ ತಿರುಗಾಟವನ್ನು ಪೂರೈಸಿದ್ದಾರೆ. +ಶ್ರೀಮತಿ ಶೀಲಾ ಎಂಬವರನ್ನು ವರಿಸಿರುವ ಇವರು ಅನುಶ್ರೀ ಮತ್ತು ಅನಿರುದ್ಧ ಎಂಬ ಹೆಸರಿನ ಇಬ್ಬರು ಎಳೆಯ ಮಕ್ಕಳೊಂದಿಗೆ ಸಂಸಾರ ಜೀವನವನ್ನು ನಡೆಸುತ್ತಿದ್ದಾರೆ. +ಮಳೆಗಾಲದಲ್ಲಿ ಜೀವನೋಪಾಂದುಕ್ಕಾಗಿ ಕೃಷಿಗಾರಿಕೆಯನ್ನು ಅವಲಂಬಿಸಿರುವ ಇವರು ಬೇಡಿಕೆಯ ಕಲಾವಿದರಾಗಿದ್ದು ಮಳೆಗಾಲದ ಹಲವಾರು ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದಾರೆ. +ಆರಂಭದ ಹಂತದಲ್ಲಿ ವೇಷಗಾರಿಕೆಯ ಬಗ್ಗೆ ಆಸಕ್ತಿ ಇದ್ದ ಇವರು ಕಿರೀಟ ವೇಷ, ಪುಂಡು ವೇಷ,ಮತ್ತು ಬಣ್ಣದ ವೇಷಗಳನ್ನು ಮಾಡಿದ್ದಾರೆ. +ರಂಗಮಾಹಿತಿ ಮತ್ತು ಪಾತ್ರಗಳ ಸ್ವಭಾವದ ಬಗ್ಗೆ ಜ್ಞಾನವುಳ್ಳ ಇವರಿಗೆ ನಾಡಿನ ಹಲವು ಸಂಮಾನಗಳು ಸಂದಿವೆ. +ಕುವೈಟ್‌, ದಕ್ಷಿಣ ಕನ್ನಡ ಬಂಟರ ಸಂಘ ಮತ್ತು ಮಸ್ಕತ್‌ ಕನ್ನಡ ಸಂಘ ಈ ಸಂಸ್ಥೆಗಳು ಇವರನ್ನು ಸಂಮಾನಿಸಿವೆ. +ಬೆಂಗಳೂರು ಮುಂಬಯಿಯ ಮೊದಲಾದ ನಗರಗಳು ಸೇರಿದಂತೆ ದೇಶ ವಿದೇಶಗಳ ಹಲವು ಕಾರ್ಯಕ್ರಮಗಳಲ್ಲಿ ಬಾಗವಹಿಸಿ ಕೀರ್ತಿವಂತರಾಗಿದ್ದಾರೆ. +ಪ್ರಸ್ತುತ ಮಂಗಳಾದೇವಿ ಮೇಳದಲ್ಲಿ ತಿರುಗಾಟವನ್ನು ಮಾಡುತ್ತಿರುವ ಶ್ರೀ ಗಣೇಶ್‌ ಕುಂದರ್‌ಕೊಳಂಬೆಯವರು ರಾಜ ವೇಷ, ಪುಂಡು ವೇಷ ಮತ್ತು ನಾಟಕೀಯ ವೇಷಗಳನ್ನು ಸಮರ್ಥವಾಗಿ ನಿರ್ವಹಿಸಿ ಜನಮನ್ನಣೆಗೆ ಕಾರಣರಾಗಿದ್ದಾರೆ. +ನಾರಾಯಣ ಬಿ.ಮತ್ತು ಲೀಲಾ ದಂಪತಿಯ ಸುಪುತ್ರರಾಗಿ 1967ನೇ ವರ್ಷದಲ್ಲಿ ಬಜ್ಪೆಯ ಕೊಳಂಬೆಯಲ್ಲಿ ಹುಟ್ಟಿದರು. +ಶೈಕ್ಷಣಿಕವಾಗಿ 7ನೇತರಗತಿಯ ವಿದ್ಯಾಭ್ಯಾಸವನ್ನು ಪಡೆದಿರುವ ಇವರು ಯಕ್ಷಗಾನದ ಕಲಾ ಪ್ರಭಾವಕ್ಕೆ ಒಳಗಾಗಿ ಶಕ್ತಿನಗರ ಕೇಶವರಿಂದ ಆರಂಭ ಹಂತದ ನಾಟ್ಯಾಭ್ಯಾಸವನ್ನು ನಡೆಸಿದರು. +ಆಮೇಲೆ ಮೇಳ ತಿರುಗಾಟದಲ್ಲಿ ಸಂದರ್ಭಕ್ಕೆ ತಕ್ಕಂತೆ ಹೆಚ್ಚಿನ ಅನುಭವವನ್ನು ಸಂಪಾದಿಸುತ್ತಾ ಬೆಳೆದು ಬಂದರು. +ತಳಕಲ ಮೇಳ - 3 ವರ್ಷ, ಸುಂಕದಕಟ್ಟೆಮೇಳ - 14 ವರ್ಷ, ಮಂಗಳಾದೇವಿ ಮೇಳ - 3ವರ್ಷ ಹೀಗೆ 3 ಮೇಳಗಳ ತಿರುಗಾಟದ ಅನುಭವವಿರುವ ಇವರಿಗೆ ಪೌರಾಣಿಕ ಹಾಗೂ ತುಳುಪ್ರಸಂಗಗಳ ಪಾತ್ರಗಳನ್ನು ನಿರ್ವಹಿಸುವಲ್ಲಿ ಹೆಚ್ಚಿನ ಪ್ರಭುತ್ವವಿದೆ. +ಪರಶುರಾಮ, ಕೋಟಿ-ಚೆನ್ನಯ, ಹಿರಣ್ಯ ಕಶ್ಯಪ,ಹಿರಣ್ಯಾಕ್ಷ, ವಾವರ, ಕಾರ್ತವಿರ್ಯ, ದಾರಿಕಾಸುರ,ಬಬ್ಬು,ಶುಂಭ, ಭೀಮ ಮೊದಲಾದ ಪಾತ್ರಗಳನ್ನು ನಿರ್ವಹಿಸುತ್ತಾ ಬಂದಿದ್ದಾರೆ. +ಖಳ ಪಾತ್ರಗಳು ಹಾಗೂ ಪ್ರತಿನಾಯಕ ಪಾತ್ರಗಳನ್ನು ನಿರ್ವಹಿಸುವಲ್ಲಿ ಇವರ ಸ್ವಾಭಾವಿಕ ಗುಣ ಧರ್ಮವನ್ನು ಕಾಣಬಹುದಾಗಿದೆ. +ಶ್ರೀಮತಿ ಲೀಲಾ ಎಂಬವರನ್ನು ವರಿಸಿರುವ ಇವರಿಗೆ ಚರಣ್‌ರಾಜ್‌(ಉದ್ಯೋಗಿ), ಮನೋಜ್‌(10ನೇ ತರಗತಿ) ಎಂಬ ಇಬ್ಬರು ಮಕ್ಕಳಿದ್ದಾರೆ. +ಇವರ ಸಾಧನೆಗೆ ಪ್ರತಿಫಲವಾಗಿ ಉಡುಪಿ - ಉದ್ಯಾವರ,ಕರಂಬಾರು, ಹೊಸಂಗಡಿ ಮೊದಲಾದೆಡೆಯಲ್ಲಿ ಸಂಮಾನಗಳು ಸಂದಿವೆ. +ಶ್ರೀದೇವಿ ಪಾತ್ರದ ಮುಖೇನ ಜನಮನ್ನಣೆಗೆ ಕಾರಣರಾಗಿರುವ ಶ್ರೀ ಟಿ.ಕೆ.ಗಣೇಶ್‌ ಭಟ್‌ ಹಳುವಳ್ಳಿಯವರು ಕಲಾಗಾರಿಕೆಯ ಬಗ್ಗೆ ನಿಷ್ಠೆಯುಳ್ಳ ಕಲಾವಿದರಾಗಿದ್ದು ಪ್ರಸ್ತುತ ಕಟೀಲು ಮೇಳದ ಹಿರಿಯ ಕಲಾವಿದರಾಗಿ ತಿರುಗಾಟವನ್ನು ನಡೆಸುತ್ತಾ ಇದ್ದಾರೆ. +ಕೃಷ್ಣಯ್ಯ ಮತ್ತು ಗಂಗಮ್ಮ ದಂಪತಿಯ ಸುಪುತ್ರರಾಗಿ ದಿನಾಂಕ 21-2-1956ರಂದು ಹಳುವಳ್ಳಿಯಲ್ಲಿ ಹುಟ್ಟಿದರು. +10ನೇಯವರೆಗೆ ವಿದ್ಯಾಭ್ಯಾಸವನ್ನು ಮಾಡಿರುವ ಇವರು ಯಕ್ಷಗಾನಕಲೆಯ ಮೇಲೆ ಪ್ರಭಾವಿತರಾಗಿ ರಂಗ ಪ್ರವೇಶ ಮಾಡಿದರು. +20ನೇ ವಯಸ್ಸಿನಿಂದಲೇ ಬಣ್ಣ ಹಚ್ಚಲು ಆರಂಭಿಸಿದ ಹಳುವಳ್ಳಿಯವರ ತೆಂಕುತಿಟ್ಟಿನ ನಾಟ್ಯಕ್ಕೆ ಗುರು ಪಡ್ರೆ ಚಂದು ಮತ್ತು ಕೆ.ಗೋವಿಂದ ಭಟ್‌. + ಎಂ.ಜಿ.ವಿಶ್ವನಾಥ ಜೋಯಿಸರು ಬಡಗು ತಿಟ್ಟಿನ ಗುರುವಾಗಿದ್ದಾರೆ. +ಆರಂಭದಲ್ಲಿ ಧರ್ಮಸ್ಥಳ ಮೇಳದಲ್ಲಿ 1 ವರ್ಷ ಅನಂತರ ಸುಂಕದಕಟ್ಟೆ ಮೇಳದಲ್ಲಿ 20ವರ್ಷ ತಿರುಗಾಟ ನಡೆಸಿದ ಮೇಲೆ ಕಟೀಲು ಮೇಳವನ್ನು ಸೇರಿದವರು ಈಗಾಗಲೇ 15 ವರ್ಷಗಳ ತಿರುಗಾಟವನ್ನು ಪೂರೈಸಿದ್ದಾರೆ. +ಸ್ತ್ರೀ, ಪುಂಡು, ರಾಜ, ಬಣ್ಣ ಮತ್ತು ಪೋಷಕ ಪಾತ್ರಗಳು ಸೇರಿದಂತೆ ಎಲ್ಲಾ ವಿಧದ ಪಾತ್ರಗಳನ್ನು ತೆಂಕು ಮತ್ತು ಬಡಗು ತಿಟ್ಟುಗಳೆರಡರಲ್ಲಿ ನಿರ್ವಹಿಸಿದ ಅನುಭವವನ್ನು ಹೊಂದಿದ್ದಾರೆ. +ದಾಕ್ಷಾಯಿಣಿ, ಅಂಬೆ,ಕಯಾದು, ಪುಲ್ಬಪರ್ಗಡ್ತಿ, ಕಿನ್ನಿದಾರು, ವಿಷ್ಣು,ಸಂಜಯ, ಶುಂಭ, ತಾಟಕಿ, ಮುಂತಾದ ಪಾತ್ರಗಳನ್ನು ಮಾಡಿದ್ದಾರೆ. +ಮಳೆಗಾಲದಲ್ಲಿ ಕೃಷಿಕರಾಗಿ ಶ್ರಮಿಸುವ ಹಳುವಳ್ಳಿಯುವರು ಶ್ರೀಮತಿ ಸೀತಾಲಕ್ಷ್ಮೀ ಎಂಬವರನ್ನು ವರಿಸಿ, ಶಶಿಧರ (ಪಿ.ಯು.ಸಿ. )ಶಾಂಭವಿ (10ನೇ ತರಗತಿ) ಎಂಬ ಇಬ್ಬರು ಮಕ್ಕಳನ್ನು ಪಡೆದಿದ್ದಾರೆ. +ಕಲಶ, ಕೊಲಂಬೆ,ಕೌಡೂರು, ಪುತ್ತೂರು ಮುಂತಾದ ಕಡೆಗಳಲ್ಲಿ ಇವರ ಅಭಿಮಾನಿ ಬಳಗವು ಸಂಮಾನಿಸಿ ಗೌರವಿಸಿದೆ. +ರಾಜವೇಷ, ನಾಟಕೀಯ ವೇಷ ಮತ್ತು ಬಣ್ಣದ ವೇಷಗಳನ್ನು ಮಾಡಿ ಜನಮನ್ನಣೆಗೆ ಒಳಗಾಗಿರುವ ಶ್ರೀ ಗಂಗಯ್ಯ ಶೆಟ್ಟಿ ಗೇರುಕಟ್ಟೆಯವರು ಕಟೀಲು ಮೇಳದ ಹಿರಿಯ ಕಲಾವಿದರಾಗಿದ್ದಾರೆ. +ಅಮ್ಮು ಶೆಟ್ಟಿ ಮತ್ತು ಕಮಲ ಶೆಡ್ತಿ ದಂಪತಿಯ ಸುಪುತ್ರರಾಗಿ ಗೇರುಕಟ್ಟೆಯಲ್ಲಿ ಜನಿಸಿದ ಇವರಿಗೆ ಈಗಾಗಲೇ 56 ವರ್ಷಗಳು ಆಗಿವೆ. +9ನೇ ತರಗತಿಯ ವಿದ್ಯಾಭ್ಯಾಸವನ್ನು ಪಡೆದಿರುವ ಗಂಗಯ್ಯ ಶೆಟ್ಟರು ಯಕ್ಷಗಾನದ ಪ್ರಭಾವಕ್ಕೆ ಒಳಗಾಗಿ 16ನೇ ವಯಸ್ಸಿನಿಂದ ಕಲಾಸೇವೆಯನ್ನು ಆರಂಭಿಸಿದ್ದಾರೆ. +ಪಡ್ರೆ ಚಂದು ಅವರಿಂದ ನಾಟ್ಯಾಭ್ಯಾಸವನ್ನು ಮಾಡಿ ರಂಗ ಪ್ರವೇಶ ಮಾಡಿದ ಇವರು ಕಟೀಲುಮೇಳವೊಂದರಲ್ಲೇ 40 ವರ್ಷಗಳ ತಿರುಗಾಟವನ್ನು ಪೂರೈಸಿ ಹಿರಿಮೆಗೆ ಪಾತ್ರರಾಗಿದ್ದಾರೆ. +ರಾವಣ,ಕುಂಭಕರ್ಣ, ಹಿರಣ್ಯಾಕ್ಷ, ನರಕಾಸುರ, ಮೈರಾವಣ,ಮಧು-ಕೈಟಭ, ಕೌಂಡ್ಲಿಕ ಮೊದಲಾದ ಪಾತ್ರಗಳನ್ನು ಮಾಡಿದ್ದಾರೆ. +ಬಣ್ಣಗಾರಿಕೆಯಲ್ಲಿ ರುದ್ರ ರಮಣೀಯತೆಯನ್ನು ಚಿತ್ರಿಸಬಲ್ಲ ಇವರು ಪೌರಾಣಿಕ ಪ್ರಸಂಗಗಳ ಅನುಭವಿ ಕಲಾವಿದರಾಗಿದ್ದಾರೆ. +ದೇವಿ ಮಹಾತ್ಮೆಯ ಮಹಿಷಾಸುರ ಮತ್ತು ದುಶ್ಯಾಸನ ವಧೆಯ ರುದ್ರಭೀಮ ಇವರಿಗೆ ಹೆಚ್ಚಿನ ಕೀರ್ತಿ ಮತ್ತು ಮನ್ನಣೆಯನ್ನು ತಂದುಕೊಟ್ಟಿದೆ. +ಹಿಂದೆ ಕಟೀಲುಕ್ಷೇತ್ರ ಮಹಾತ್ಮೆಯ ವಜ್ರದುಂಬಿಯಾಗಿ ಘೋರರೂಪದ ಪಾತ್ರ ನಿರ್ವಹಣೆಯನ್ನು ಮಾಡಿ ಜನಾಕರ್ಷಣೆಗೆ ಒಳಗಾಗಿದ್ದರು. +ಮೇಳದ ಪ್ರಬಂದಕರಾಗಿಯೂ ಕಾರ್ಯ ನಿರ್ವಹಿಸುತ್ತಿರುವ ಇವರು ಹವ್ಯಾಸಿ ಕಲಾವಿದರಿಗೆ ತರಬೇತಿಯನ್ನು ನೀಡಿ ಪ್ರೋತ್ಸಾಹಿಸಿದ್ದಾರೆ. +ಶ್ರೀಮತಿ ಕಮಲ ಎಂಬವರನ್ನು ವರಿಸಿರುವ ಗಂಗಯ್ಯ ಶೆಟ್ಟರು ಶಶಿಕಾಂತ, ಮುಖೇಶ್‌, ಶ್ರೀನಿಧಿ ಎಂಬ ಮೂವರು ಮಕ್ಕಳನ್ನು ಪಡೆದಿದ್ದಾರೆ. +ಪರಂಪರೆಯ ಶೈಲಿಯನ್ನು ಅನುಸರಿಸಿ ಕಲಾಸೇವೆಯನ್ನು ಮಾಡಿರುವ ಇವರ ಸಾಧನೆಯನ್ನುಗುರುತಿಸಿ ಕಲಾಭಿಮಾನಿಗಳು ಕಟೀಲು, ಕೈಕಂಬ,ಟೌನ್‌ಹಾಲ್‌( ಶ್ರೀಕೃಷ್ಣ ಯಕ್ಷಸಭಾದ ಸಂಮಾನ),ಬೆಳ್ತಂಗಡಿ ಮುಂತಾದೆಡೆಯಲ್ಲಿ ಸಂವರಾನಿಸಿ ಗೌರವಿಸಿದ್ದಾರೆ. +ಪುಂಡು ವೇಷ ಮತ್ತು ರಾಜ ವೇಷಗಳನ್ನು ಮಾಡುವ ಶ್ರೀ ನಾವೂರು ಗಂಗಾಧರ ಶೆಟ್ಟರು ಪೀಠಿಕೆ ವೇಷ ಮತ್ತು ನಾಯಕ ಪಾತ್ರಗಳನ್ನು ನಿರ್ವಹಿಸುವಲ್ಲಿ ಯಶೋವಂತರು. +ಪ್ರಸ್ತುತ ಮಂಗಳಾದೇವಿ ಮೇಳದ ಕಲಾವಿದರಾಗಿ ತಿರುಗಾಟವನ್ನು ನಡೆಸುತ್ತಾ ಇದ್ದಾರೆ. +ಕೃಷ್ಣ ಶೆಟ್ಟಿ ಮತ್ತು ಲಕ್ಷ್ಮೀ ದಂಪತಿಯ ಸುಪುತ್ರರಾಗಿ 1975ನೇ ವರ್ಷದಲ್ಲಿ ನಿಂರ್ದಿಮನೆಯಲ್ಲಿ ಹುಟ್ಟಿದರು. +7ನೇ ತರಗತಿಯ ತನಕ ವಿದ್ಯಾಭ್ಯಾಸವನ್ನು ಮಾಡಿ ಯಕ್ಷಗಾನ ಕಲೆಯತ್ತ ಆಕರ್ಷಿತರಾದರು. +ಇವರ ಸಹೋದರ ಬೆಳ್ಳಾರೆ ವಿಶ್ವನಾಥ ರೈಯವರು ಯಕ್ಷಗಾನ ಕಲಾವಿದರಾಗಿದ್ದುದರಿಂದ ಹೆಚ್ಚಿನ ಪ್ರೋತ್ಸಾಹ ಕೂಡಾ ದೊರೆಯಿತು. +ಶ್ರೀ ಧರ್ಮಸ್ಥಳ ಕ್ಷೇತ್ರದ ಲಲಿತ ಕಲಾ ಕೇಂದ್ರದಲ್ಲಿ ಕೆ.ಗೋವಿಂದ ಭಟ್ಟರಿಂದ ನಾಟ್ಯಾಭ್ಯಾಸವನ್ನು ಪೂರೈಸಿದ ಇವರು ಕದ್ರಿ ಮೇಳ - 3 ವರ್ಷ,ಬಪ್ಪನಾಡು ಮೇಳ - 3 ವರ್ಷ, ಅರುವ ಮೇಳ -2 ವರ್ಷ, ಕರ್ನಾಟಕ ಮೇಳ - 3 ವರ್ಷ, ಕುಂಜಾರುಮೇಳ - । ವರ್ಷ, ಮಂಗಳಾದೇವಿ ಮೇಳ - 4ವರ್ಷ ಹೀಗೆ ಹಲವು ಮೇಳಗಳಲ್ಲಿ ತಿರುಗಾಟವನ್ನು ಪೂರೈಸುತ್ತಾ ಬಂದಿದ್ದಾರೆ. +ಅಭಿಮನ್ಯು, ಕುಶ, ಲವ, ಬಭ್ರುವಾಹನ, ಕೃಷ್ಣ,ವಿಷ್ಣು, ದೇವೇಂದ್ರ, ಅರ್ಜುನ, ಬುದ್ಧಿವಂಶ,ಪೆರುಮಳ, ದೇವುಪೂಂಜ ಮೊದಲಾಗಿ ತುಳು ಕನ್ನಡಭಾಷೆಯ ಪ್ರಸಂಗಗಳಲ್ಲಿ ಹೆಚ್ಚಿನ ಪಾತ್ರಗಳನ್ನು ನಿರ್ವಹಿಸಿದ್ದಾರೆ. +ಶ್ರೀಮತಿ ಯಶೋಧ ಎಂಬವರನ್ನು ವರಿಸಿ ಸುಜಿತ್‌ (9ನೇ ತರಗತಿ), ಶ್ರೀರಕ್ಷಾ (7ನೇ ತರಗತಿ)ಎಂಬ ಮಕ್ಕಳನ್ನು ಪಡೆದಿದ್ದಾರೆ. +ಸಾಧನೆಯ ಮೇರೆಗೆ ಒಡಿಯೂರು, ಬಂಟ್ವಾಳ, ನಾವೂರು, ಬೆಳುವಾಯಿ ಮೊದಲಾದಡೆ ಅಭಿಮಾನಿಗಳಿಂದ ಸಂಮಾನಿತರಾಗಿದ್ದಾರೆ. +ಸ್ತ್ರೀ ವೇಷ, ಪುಂಡುವೇಷ, ರಾಜವೇಷ ಮತ್ತು ಹೆಣ್ಣು ಬಣ್ಣದ ಪಾತ್ರಗಳ ನಿರ್ವಹಣೆಯನ್ನು ಮಾಡುತ್ತಾ ಬೆಳೆದಿರುವ ಶ್ರೀ ಪುತ್ತೂರು ಗಂಗಾಧರರು ಧರ್ಮಸ್ಥಳ ಮೇಳದ ಸ್ತ್ರೀ ಪಾತ್ರಧಾರಿಯಾಗಿ ತಿರುಗಾಟವನ್ನು ನಡೆಸುತ್ತಾ ಇದ್ದಾರೆ. +ಕೆ.ನಾರಾಯಣಮಯ್ಯ ಮತ್ತು ಲಕ್ಷ್ಮೀ ದಂಪತಿಯ ಸುಪುತ್ರರಾಗಿ ದಿನಾಂಕ 22-8-1964ರಂದು ಸೇಡಿಯಾಪು ಮನೆಯಲ್ಲಿ ಹುಟ್ಟಿದರು. +7ನೇ ತರಗತಿಯವರೆಗೆ ವಿದ್ಯಾಭ್ಯಾಸವನ್ನು ಪಡೆದಿರುವ ಇವರು ಕೆ.ಗೋವಿಂದ ಭಟ್‌ ಮತ್ತು ಕರ್ಗಲ್ಲು ವಿಶ್ವೇಶ್ವರ ಭಟ್ಟರವರಿಂದ ನಾಟ್ಯಾಭ್ಯಾಸವನ್ನು ಮಾಡಿದರು. +ಹದಿನೆಂಟನೇ ವಯಸ್ಸಿನಿಂದ ಮೇಳ ತಿರುಗಾಟವನ್ನು ಆರಂಭಿಸಿದ ಪುತ್ತೂರು ಗಂಗಾಧರರು ಧರ್ಮಸ್ಥಳ ಮೇಳವೊಂದರಲ್ಲೇ 29 ವರ್ಷಗಳ ತಿರುಗಾಟವನ್ನು ಪೂರೈಸಿದ್ದಾರೆ. +ಮಾಲಿನಿ,ಚಿತ್ರಾಂಗದೆ, ಮೋಹಿನಿ, ದಾಕ್ಷಾಯಿಣಿ, ಪ್ರಮೀಳೆ,ಶ್ರೀದೇವಿ, ಸೀತೆ, ದೇವೇಂದ್ರ, ದುಶ್ಯಾಸನ,ಶೂರ್ಪನಖಾ, ಲಂಕಿನಿ ಮುಂತಾದ ಪಾತ್ರಗಳನ್ನು ನಿರ್ವಹಿಸಿದ್ದಾರೆ. +ಹಾಸ್ಯದ ಸ್ತ್ರೀ ಪಾತ್ರಗಳನ್ನು ಕೂಡಾ ಚೆನ್ನಾಗಿ ನಿರ್ವಹಿಸುವ ಪ್ರೌಢಿಮೆ ಇವರಲ್ಲಿದೆ. +ಮಳೆಗಾಲದಲ್ಲಿ ನಿಡ್ದೆ ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿಯಲ್ಲಿ ತಿರುಗಾಟವನ್ನು ಮಾಡುವ ಇವರಿಗೆ ದೆಹಲಿ, ಕೋಟ, ಮೈಸೂರು, `ಹೈದರಾಬಾದ್‌, ಮದ್ರಾಸ್‌ ಮೊದಲಾಡೆಡೆಯಲ್ಲಿ ಗೌರವ ಪುರಸ್ಕಾರಗಳು ಸಂದಿವೆ. +ಹವ್ಯಾಸಿ ಕಲಾವಿದರಿಗೆ ಮಾರ್ಗದರ್ಶನ ಮಾಡಿರುವ ಇವರು ಶ್ರೀಮತಿ ಬಿ.ಕುಶಾಲಾಕ್ಷಿ ಎಂಬವರನ್ನು ವರಿಸಿ ಜ್ಞಾನೇಶ ಎಂಬ ಸುಪುತ್ರನನ್ನು ಪಡೆದಿದ್ದಾರೆ. +ಉತ್ತಮ ಶೈಲಿಯ ನಾಟ್ಯ ಮತ್ತು ಮಾತಿನ ಪ್ರಬುದ್ಧತೆಯಿ೦ಂದ ತೆಂಕುತಿಟ್ಟಿನ ಅಗ್ರ ಮಾನ್ಯ ಕಲಾವಿದರಾಗಿ ಸತ್ಕೀರ್ತಿಯನ್ನು ಸಂಪಾದಿಸಿರುವ ಶ್ರೀಕೆ.ಗೋವಿಂದ ಭಟ್‌ ಸೂರಿಕುಮೇರಿ ಇವರು ಧರ್ಮಸ್ಥಳ ಮೇಳದ ಹಿರಿಯ ಕಲಾವಿದರಾಗಿ ತಿರುಗಾಟವನ್ನು ನಡೆಸುತ್ತಾ ಇದ್ದಾರೆ. +ಕಿನಿಲ ಶಂಕರ ನಾರಾಯಣ ಜಟ್ಟ ಮತ್ತು ಕುಕ್ಕೆಮನೆ ಲಕ್ಷ್ಮೀ ಅಮ್ಮ ದಂಪತಿಯ ಸುಪುತ್ರರಾಗಿ ಕುಕ್ಕೆಮನೆಯಲ್ಲಿ ಜನಿಸಿದರು. +ಇವರ ಹುಟ್ಟಿದ ದಿನಾಂಕ22-3-1940 ಹೊಸಹಿತ್ತು ಮಹಾಲಿಂಗ ಭಟ್ಟ ಮತ್ತು ಕುರಿಯ ವಿಠಲಶಾಸ್ತಿ ಇವರ ಪ್ರೇರಣೆಯ ಮೇರೆಗೆವು 11ನೇ ವಯಸ್ಸಿನಲ್ಲೇ ಯಕ್ಷಗಾನದ ರಂಗ ಪ್ರವೇಶ ಮಾಡಿದರು. +ಗೋವಿಂದ ಭಟ್ಟರ ಮೊದಲ ಗುರು ಕುರಿಯ ವಿಠಲಶಾಸ್ತ್ರೀಯವರೇ ಆಗಿದ್ದಾರೆ. +ಅನಂತರ ಪರಮಶಿವನ್‌ ಅವರಲ್ಲಿ ಭರತನಾಟ್ಯವನ್ನು ಅಭ್ಯಾಸ ಮಾಡಿರುವರು. +ಮಾಧವ ಮೆನನ್‌, ರಾಜನ್‌ ಅಯ್ಯರ್‌ ಅವರೆಲ್ಲ ಇವರ ಗುರುಗಳಾಗಿದ್ದಾರೆ. +ಧರ್ಮಸ್ಥಳ ಮೇಳ - 1 ವರ್ಷ, ಮೂಲ್ಕಿಮೇಳ - 1 ವರ್ಷ, ಕೂಡ್ಲು ಮೇಳ - 2 ವರ್ಷ,ಇರಾಮೇಳ - 2 ವರ್ಷ, ಸುರತ್ಕಲ್‌ ಮೇಳ - 1 ವರ್ಷ, ಹಳೇ ಸುರತ್ಕಲ್‌ ಮೇಳ - 1 ವರ್ಷ ಅನಂತರ ಧರ್ಮಸ್ಥಳ ಮೇಳ - 41 ವರ್ಷ ಹೀಗೆ ಸುದೀರ್ಫ್ಥವಾದ ತಿರುಗಾಟದ ಹಿನ್ನೆಲೆಯನ್ನು ಹೊಂದಿದ್ದಾರೆ. +ಸ್ತ್ರೀ ವೇಷ, ಪುಂಡುವೇಷ, ಪೋಷಕ ವೇಷ ಮತ್ತು ರಾಜ ವೇಷದಲ್ಲಿ ಪ್ರೌಡಿಮೆಯನ್ನು ಸಾಧಿಸಿರುವ ಇವರು ಕೃಷ್ಣ, ರಾಮ, ಸುಧನ್ವ, ಜಮದಗ್ನಾ, ಶ್ರೀದೇವಿ,ಪರಶುರಾಮ, ವಿಶ್ವಾಮಿತ್ರ, ಸುಯೋಧನ, ಮಾಗಧ,ಶಿಶುಪಾಲ, ರಕ್ತಬೀಜ ಮುಂತಾದ ಪಾತ್ರಗಳನ್ನು ನಿರ್ವಹಿಸುತ್ತಾ ಇದ್ದಾರೆ. +ತೀಕ್ಷಣವಾದ ಮಾತು,ಖಚಿತ ಲಯ, ನಿರ್ದಿಷ್ಟವಾದ ಧೋರಣೆ,ಉತ್ತಮವಾದ ಕುಣಿತ ಇವೆಲ್ಲಾ ಇವರ ಪಾತ್ರ ನಿರ್ವಹಣೆಯಲ್ಲಿ ಕಂಡು ಬರುವ ಲಕ್ಷಣಗಳಾಗಿವೆ. +ಶ್ರೀಮತಿ ಸಾವಿತ್ರಿ ಎಂಬವರನ್ನು ವರಿಸಿರುವ ಇವರು ಪ್ರಸನ್ನ ಕುಮಾರ (ಕೃಷಿ, ಶ್ಯಾಮ ಪ್ರಸಾದ(ಪೌರೋಹಿತ್ಯ), ಸೂರ್ಯ ಪ್ರಸಾದ (ನ್ಯಾಯವಾದಿ)ಎಂಬ ಮೂವರು ಮಕ್ಕಳನ್ನು ಪಡೆದಿದ್ದಾರೆ. +ಆಟ-ಕೂಟಗಳೆರಡರಲ್ಲೂ ಪ್ರಸಿದ್ಧರಾಗಿರುವ ಇವರು ನಾಟ್ಯ ಗುರುಗಳಾಗಿ 700ಕ್ಕೂ ಮಿಕ್ಕಿದ ಶಿಷ್ಯರನ್ನು ಹೊಂದಿದ್ದಾರೆ. +ಇವರ ಸಾಧನೆಗೆ ಗೌರವ ರೂಪವಾಗಿ ರಾಜ್ಯೋತ್ಸವ ಪ್ರಶಸ್ತಿ, ಕಲ್ಲುಗುಂಡಿ ಶ್ರೇಣಿಪ್ರಶಸ್ತಿ, ಕಲ್ಲಾಡಿ ಕೊರಗ ಶೆಟ್ಟ, ವಿಠಲ ಶೆಟ್ಟಿ ಪ್ರತಿಷ್ಠಾನಪ್ರಶಸ್ತಿ, ಧರ್ಮಸ್ಥಳ ಸಂಮಾನ, ಅಬುದಾಭಿ, ದುಬ್ಳಾ,ಬೆಹರನ್‌ ಸಂಮಾನಗಳಲ್ಲದೆ ಕದ್ರಿ, ಮುಂಬೈ,ಬೆಂಗಳೂರು ಮುಂತಾದೆಡೆಯಲ್ಲಿ ಹಲವಾರು ಸಂಮಾನ ಗೌರವಗಳು ಸಂದಿವೆ. +ಪುಂಡುವೇಷಕ್ಕೆ ಹೆಸರುವಾಸಿಯಾಗಿರುವ ಗುಂಡಿಮಜಲು ಗೋಪಾಲಕೃಷ್ಣ ಭಟ್ಟರು ಇತ್ತೀಚೆಗೆ ರಾಜವೇಷ ಮತ್ತು ನಾಟಕೀಯ ವೇಷಗಳನ್ನು ಕೂಡಾ ಸಮರ್ಥವಾಗಿ ನಿರ್ವಹಿಸಿ ಜನ ಮನ್ನಣೆಗೆ ಪಾತ್ರರಾಗಿದ್ದಾರೆ. +ಸುಬ್ರಾಯ ಭಟ್‌ ಮತ್ತು ವೆಂಕಟೇಶ್ವರಿ ದಂಪತಿಯ ಸುಪುತ್ರರಾಗಿ 1959 ರ ವರ್ಷ ಗುಂಡಿಮಜಲಿನಲ್ಲಿ ಹುಟ್ಟಿದರು. +ಪ್ರಾಥಮಿಕ ಹಂತದ ವಿದ್ಯಾಭ್ಯಾಸವನ್ನು ಪಡೆದಿರುವ ಇವರು ಯಕ್ಷಗಾನದ ಪರಿಸರದಲ್ಲಿ ಕಲಾಕರ್ಷಿತರಾಗಿ ಪಡ್ರೆ ಚಂದು ಅವರಿಂದ ನಾಟ್ಯಾಭ್ಯಾಸವನ್ನು ಮಾಡಿದರು. +15ನೇ ವರ್ಷದಿಂದ ಯಕ್ಷಗಾನದ ರಂಗ ಪ್ರವೇಶ ಮಾಡಿದ ಗೋಪಾಲ ಕೃಷ್ಣ ಭಟ್ಟರು ಕಟೀಲು ಮೇಳವೊಂದರಲ್ಲೇ 25 ವರ್ಷಗಳ ತಿರುಗಾಟವನ್ನು ಮಾಡಿದ್ದಾರೆ. +ಆಮೇಲೆ ಅನಿವಾರ್ಯ ಕಾರಣದಿಂದ ಮೇಳ ತಿರುಗಾಟವನ್ನು ನಿಲ್ಲಿಸಿದ ಇವರು ಹವ್ಯಾಸಿ ಮತ್ತು ಮೇಳದ ಕಲಾವಿದರ ಕೂಡುವಿಕೆಯಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಾ ಕಲಾಸೇವೆಯನ್ನು ಮಾಡುತ್ತಾ ಇದ್ದಾರೆ. +ಇವರ ರಕ್ತರಾತ್ರಿಯ ಅಶ್ವತ್ಥಾಮ ಪಾತ್ರ ಉತ್ತಮ ಅಭಿವ್ಯಕ್ತಿಯ ಪಾತ್ರವಾಗಿದ್ದು ಕೀರ್ತಿಯನ್ನು ತಂದುಕೊಟ್ಟಿದೆ. +ಅಭಿಮನ್ಯು, ಬಬ್ರುವಾಹನ, ವಿಷ್ಣು,ಬ್ರಹ್ಮ ಇಂದ್ರಜಿತು, ಹಿರಣ್ಯಾಕ್ಷ, ಅರ್ಜುನ, ಚಂಡ-ಮಂಡರು, ಅಯ್ಯಪ್ಪ ಮೊದಲಾದ ಹಲವು ಪಾತ್ರಗಳಲ್ಲಿ ತಮ್ಮ ಅಭಿನಯವನ್ನು ಮೆರೆಸಿದ್ದಾರೆ. +ಕೃಷಿಗಾರಿಕೆಯಲ್ಲೂ ಅನುಭವಿಯಾಗಿರುವ ಇವರು ಶ್ರೀಮತಿ ಲತಾ ಅವರನ್ನು ವರಿಸಿ ಸುಜೇತ್‌ಕುಮಾರ್‌ ಎಂಬ ಸುಪುತ್ರನನ್ನು ಪಡೆದಿದ್ದಾರೆ. +ಇವರ ಸಾಧನೆಗೆ ಪ್ರತಿಫಲವಾಗಿ ಅರಸಿನಮಕ್ಕಿ,ಕಾಸರಗೋಡು, ಮಂಗಳೂರು ಮುಂತಾದ ಕಡೆಗಳಲ್ಲಿ ಸಂಮಾನಗಳು ಸಂದಿವೆ. +ಶ್ರೀ ಧರ್ಮಸ್ಥಳ ಮೇಳದ ಕಲಾವಿದರಾಗಿರುವ ಶ್ರೀ ಕೆ.ನಿಡ್ಜೆ ಗೋವಿಂದ ಭಟ್ಟರು ರಾಜವೇಷ ಮತ್ತು ನಾಟಕೀಯ ವೇಷಗಳಲ್ಲಿ ಪ್ರೌಢಿಮೆಯನ್ನು ಸಾಧಿಸಿಜನ ಮನ್ನಣೆಯನ್ನು ಪಡೆದಿದ್ದಾರೆ. +ಈಶ್ವರ ಭಟ್‌ ಮತ್ತು ಶಂಕರಿಯಮ್ಮ ದಂಪತಿಯ ಸುಪುತ್ರರಾಗಿ ದಿನಾಂಕ 2-10-1958ರಂದು ಮಂಜೇಶ್ವರದ ಕೊಳಚಪ್ಪು ಎಂಬಲ್ಲಿ ಜನಿಸಿದರು. +7ನೇ ತರಗತಿಯ ತನಕ ವಿದ್ಯಾಭ್ಯಾಸವನ್ನು ಪಡೆದಿರುವ ಇವರು ಯಕ್ಷಗಾನ ಕಲೆಗೆ ಮಾರು ಹೋಗಿ ಮಾವನಾದ ದಿ।ಕುರಿಯ ವಿಠಲ ಶಾಸ್ತ್ರಿ ಮತ್ತು ದಿ| ಪಡ್ರೆ ಚಂದುರವರಲ್ಲಿ ನಾಟ್ಯಾಭ್ಯಾಸವನ್ನು ಮಾಡಿದರು. +13ನೇ ವರ್ಷದಿಂದಲೇ ರಂಗ ಪ್ರವೇಶ ಮಾಡಿದ ಇವರು ವೇಣೂರು ಮೇಳ - 1 ವರ್ಷ, ಧರ್ಮಸ್ಥಳ ಮೇಳ - 2 ವರ್ಷ, ಕರ್ನಾಟಕ ಮೇಳ - 5ವರ್ಷ, ಶ್ರೀ ಗೀತಾಂಬಿಕ ಯಕ್ಷಗಾನ ಮಂಡಳಿ ಮುಂಬಯಿ - 1 ವರ್ಷ, ಪುತ್ತೂರು ಮೇಳ -ವರ್ಷ, ಬಪ್ಪನಾಡು ಮೇಳ - 2 ವರ್ಷ ಹಾಗೂ ಮತ್ತೆ ಧರ್ಮಸ್ಥಳ ಮೇಳದಲ್ಲಿ 24 ವರ್ಷಗಳ ತಿರುಗಾಟವನ್ನು ಮಾಡಿರುವರು. +ಕರ್ಣ, ಅರ್ಜುನ, ಕೌರವ, ಭೀಮ, ರಾವಣ,ಚಂದಗೋಪ, ಹರಣ್ಯಾಕ್ಸ, ಕಾರ್ತವೀರ್ಯ,ಇಂದ್ರಜಿತು ಮುಂತಾದ ಪಾತ್ರಗಳನ್ನು ನಿರ್ವಹಿಸಿದ್ದಾರೆ. +ಉತ್ತಮವಾದ ನಟನಾ ಶೈಲಿ ಮತ್ತು ಮಾತಿನ ಸ್ವರಭಾರದಿಂದ ಗತ್ತುಗಾರಿಕೆಯ ಪಾತ್ರವನ್ನು ನಿರ್ವಹಿಸುವ ಗೋವಿಂದ ಭಟ್ಟರು ರಂಜನೀಯವಾದ ಪಾತ್ರಗಳನ್ನು ಕೂಡ ಜನರ ಮನ ಮೆಚ್ಚುವಂತೆ ಸರಳ ಶೈಲಿಯಲ್ಲಿ ನಿರ್ವಹಿಸುವ ಪ್ರತಿಭಾವಂತರಾಗಿದ್ದಾರೆ. +ಯಕ್ಷಗಾನ ಕಲೆಯನ್ನು ಅದರ ವ್ಯಾಪ್ತಿಯ ಮೇರೆಗೆ ಮೀರಿಸಿ ಬೆಳೆಸಬೇಕೆಂಬ ಆಶಯದಿಂದ ನಿಡ್ಲೆ ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿಯನ್ನು ಸ್ಥಾಪಿಸಿರುವ ಇವರು ಕಳೆದ 25 ವರ್ಷಗಳಿಂದ ಮಳೆಗಾಲದ ತಿರುಗಾಟವನ್ನು ಆರಂಭಿಸಿ ದಕ್ಷಿಣಭಾರತದಾದ್ಯಂತ ಪ್ರದರ್ಶನವನ್ನು ನೀಡಿದ್ದಾರೆ. +ಇವರ ಯಕ್ಷಗಾನದ ಕಲಾ ಸಾಧನೆಗೆ ಪ್ರತಿಫಲವಾಗಿ ದೆಹಲಿ, ಕೊಯಮುತ್ತೂರು, ಚೆನ್ನೈ,ವಿಜಯವಾಡ, ವಿಶಾಖಪಟ್ಟಣ, ಹೊಸಪೇಟೆ,ಕುಂದಾಪುರ ಮೊದಲಾದೆಡೆಯಲ್ಲಿ ಸಂಮಾನಗಳು ಸಂದಿವೆ. +ತನ್ನ ಮಂಡಳಿಯ ಮುಖೇನ ಜೊತೆಗಿದ್ದ ಕಲಾವಿದರಿಗೂ ಗೌರವ ಪುರಸ್ಕಾರಗಳು ದೊರೆಯುವಂತೆ ಮಾಡಿದ ಗುಣಧರ್ಮ ಇವರದ್ದಾಗಿದೆ. +ಶ್ರೀಮತಿ ವಸಂತಿ ಎಂಬವರನ್ನು ವರಿಸಿರುವ ಇವರು ಈಶ್ವರಚಂದ್ರ (ಪಿ.ಯು.ಸಿ. ), ಕುಮಾರಿ ವಿದ್ಯಾ ಶಂಕರಿ (10ನೇ ತರಗತಿ) ಎಂಬ ಇಬ್ಬರು ಮಕ್ಕಳನ್ನು ಪಡೆದಿದ್ದಾರೆ. +ಸ್ತ್ರೀ ವೇಷದ ಮುಖೇನ ಜನ ಮನ್ನಣೆಯನ್ನು ಪಡೆದಿರುವ ಶ್ರೀ ಗೋಪಾಲ ಭಟ್ಟ ಕೋಳ್ಕೂರರು ಪ್ರಸ್ತುತ ಬಜ್ಪೆ ಸುಂಕದಕಟ್ಟೆಯ ಶ್ರೀ ಅನ್ನ ಪೂರ್ಣೇಶ್ವರಿ ಮೇಳದಲ್ಲಿ ತಿರುಗಾಟವನ್ನು ನಡೆಸುತ್ತಾ ಇದ್ದಾರೆ. +ಶಂಕರ ನಾರಾಯಣ ಭಟ್‌ ಮತ್ತು ಶಾರದಮ್ಮ ದಂಪತಿಯ ಸುಪುತ್ರರಾಗಿ ದಿನಾ೦ಕ 16-11-1963ರಂದು ಕೋಳ್ಕೂರಿನಲ್ಲಿ ಜನಿಸಿದರು. +10ನೇಯ ತನಕ ವಿದ್ಯಾಭ್ಯಾಸವನ್ನು ಪಡೆದಿರುವ ಇವರು ಚಿಕ್ಕಪ್ಪ ಹೊಸಹಿತ್ಸು ಮಹಾಲಿಂಗ ಭಟ್ಟರ ಪ್ರೇರಣೆಯ ಮೇರೆಗೆ ಅವರಲ್ಲೇ ನಾಟ್ಯಾಭ್ಯಾಸ ಮಾಡಿ ಯಕ್ಷಗಾನ ಕಲೆಯ ಅಭಿರುಚಿಯನ್ನು ಬೆಳೆಸಿದರು. +16 ನೇ ವಯಸ್ಸಿನಿಂದಲೇ ರಂಗ ಪ್ರವೇಶ ಮಾಡಿದ ಇವರು ಅಳದಂಗಡಿ ಮೇಳ - 4 ವರ್ಷ,ಪುತ್ತೂರು ಮೇಳ - 3 ವರ್ಷ, ತಳಕಲ ಮೇಳ -4 ವರ್ಷ, ಸುರತ್ಕಲ್‌ ಮೇಳ - 1 ವರ್ಷ ಅನಂತರ ಹವ್ಯಾಸಿ ಕಲಾವಿದರಾಗಿ 4 ವರ್ಷಗಳನ್ನು ಪೂರೈಸಿ ಈ ಬಾರಿಗೆ ಸುಂಕದಕಟ್ಟೆಂಯ ಮೇಳದಲ್ಲಿ ತಿರುಗಾಟವನ್ನು ನಡೆಸಿದ್ದಾರೆ. +ದಮಯಂತಿ, ಚಿತ್ರಾಂಗದೆ, ಸೀತೆ, ಶ್ರೀ ದೇವಿ,ಪ್ರಮೀಳೆ, ಶಶಿಪ್ರಭೆ, ಕಮಲಗಂಧಿನಿ, ದ್ರೌಪದಿ ಮೊದಲಾದ ಸ್ತೀ ಪಾತ್ರಗಳನ್ನು ನಿರ್ವಹಿಸುವ ಇವರು ಬ್ರಹ್ಮ, ವಿಷ್ಣು, ಈಶ್ವರ ಮೊದಲಾದ ಮುಖ್ಯ ಪುರುಷಪೋಷಕ ಪಾತ್ರಗಳನ್ನು ಕೂಡ ನಿರ್ವಹಿಸುತ್ತಾರೆ. +ತುಳು ಪ್ರಸಂಗದ ಪಾತ್ರಗಳನ್ನು ಕೂಡ ಉತ್ತಮವಾಗಿ ನಿರ್ವಹಿಸುತ್ತಾರೆ. +ಶ್ರೀಮತಿ ದೇವಕಿ ಅಮ್ಮ ಎಂಬವರನ್ನು ವರಿಸಿ ಅರುಣ ಭಟ್‌ (ಅಧ್ಯಾಪಕ), ಕಿರಣ್‌ ಕುಮಾರ್‌(ತಾಂತ್ರಿಕ ತರಬೇತಿ ಅಧ್ಯಯನ) ಎಂಬ ಇಬ್ಬರು ಮಕ್ಕಳನ್ನು ಪಡೆದಿದ್ದಾರೆ. +ಪುಂಡು ವೇಷ, ರಾಜ ವೇಷ, ಬಣ್ಣದ ವೇಷ,ಸ್ತ್ರೀವೇಷ ಹಾಸ್ಯ ಪಾತ್ರಗಳನ್ನು ಮಾಡುತ್ತಾ ಬೆಳೆದಿರುವ ಬೆಳ್ಳಾರೆ ಗೋಪಾಲಕೃಷ್ಣರು ಪ್ರಸ್ತುತ ಕಟೀಲುಮೇಳದಲ್ಲಿ ತಿರುಗಾಟವನ್ನು ನಡೆಸುತ್ತಾ ಇದ್ದಾರೆ. +ಸುಬ್ಬಣ್ಣ ರೈ ಮತ್ತು ಭಾಗೀರಥಿ ದಂಪತಿಯ ಸುಪುತ್ರರಾಗಿ ಕಳಂಜದಲ್ಲಿ ಹುಟ್ಟಿರುವ ಇವರಿಗೆ 36 ವರ್ಷಗಳು ಆಗಿವೆ. +ಇವರ ತಂದೆ ಬಣ್ಣದ ವೇಷಧಾರಿ ಆಗಿದ್ದುದರಿಂದ ಪ್ರೇರಣೆ ಮತ್ತು ಉತ್ತೇಜನದಿಂದ ಗೋಪಾಲಕೃಷ್ಣರಿಗೆ ನಾಟ್ಯಾಭ್ಯಾಸವನ್ನು ಮಾಡಿಸಿದರು. +ಇವರ ಬಾವ ರಘುನಾಥ ರೈ ಯವರು ಕೂಡಾ ಹಾಸ್ಯಗಾರರಾಗಿ ಪಾತ್ರ ನಿರ್ವಹಣೆ ಮಾಡುತ್ತಾರೆ. +ಹೀಗೆ ಸಂಬಂಧಿಕ ನೆಲೆಯಿಂದ ಇವರ ಕಲಾಜೀವನವು ಬೆಳೆದು ಬಂದಿದೆ. +ರಘುನಾಥ ಶೆಟ್ಟಿ ಬಾಯಾರು ಅವರಿಂದ ಹೆಚ್ಚಿನ ಮಾರ್ಗದರ್ಶನ ಪಡೆದಿರುವ ಬೆಳ್ಳಾರೆ ಗೋಪಾಲಕೃಷ್ಣರು ಕರ್ನಾಟಕ ಮೇಳ - 9 ರ್ಷ,ಸುರತ್ಕಲ್‌ ಮೇಳ - 1 ವರ್ಷ, ಎಡನೀರು ಮೇಳ-.3 ವರ್ಷ, ಕಟೀಲು ಮೇಳ - 4 ವರ್ಷ ಹೀಗೆ ತಿರುಗಾಟವನ್ನು ನಡೆಸಿದ್ದಾರೆ. +ಯಕ್ಷ, ವರುಣ, ಚಂಡ, ಮುಂಡ,ಮಹಿಷಾಸುರ, ಶುಂಭ, ಕಮಲಗಂಧಿನಿ, ಭ್ರಮರಕುಂತಳೆ ಮೊದಲಾದ ಪಾತ್ರಗಳನ್ನು ಮಾಡಿರುವ ಇವರು ಶ್ರೀಮತಿ ವಾರಿಜ ಎಂಬವರನ್ನು ವರಿಸಿದ್ದಾರೆ. +ಪುಂಡು ವೇಷದ ಮುಖೇನ ತನ್ನ ಪ್ರತಿಭೆಯನ್ನು ತೋರುತ್ತಾ ಜನಮನ್ನಣೆಯನ್ನು ಪಡೆದಿರುವ ಶ್ರೀಚಂದ್ರಶೇಖರರು ಪ್ರಸ್ತುತ ಧರ್ಮಸ್ಥಳ ಮೇಳದ ಕಲಾವಿದರಾಗಿ ತಿರುಗಾಟವನ್ನು ನಡೆಸುತ್ತಾ ಇದ್ದಾರೆ. +ಗುರುವಪ್ಪ ಪೂಜಾರಿ ಮತ್ತು ಲೀಲಮ್ಮ ದಂಪತಿಯ ಸುಪುತ್ರರಾಗಿ 18-9-1974ರಂದು ಧರ್ಮಸ್ಥಳದಲ್ಲಿ ಹುಟ್ಟಿದರು. +ಪ್ರಾಥಮಿಕ ವಿದ್ಯಾಭ್ಯಾಸವನ್ನು ಪಡೆದಿರುವ ಇವರು ಯಕ್ಷಗಾನಕಲೆಯ ಮೇಲೆ ಪ್ರಭಾವಿತರಾಗಿ ಕೋಳ್ಯೂರು ಶ್ರೀರಾಮಚಂದ್ರ ರಾವ್‌ರವರಲ್ಲಿ ನಾಟ್ಯಾಭ್ಯಾಸವನ್ನು ಮಾಡಿದರು. +15ನೇ ವರ್ಷದಿಂದಲೇ ರಂಗ ಪ್ರವೇಶ ಮಾಡಿದ ಇವರು ಬಪ್ಪನಾಡು ಮೇಳ - 1 ವರ್ಷ, ಕರ್ನಾಟಕಮೇಳ -.11 ವರ್ಷ, ಸಾಲಿಗ್ರಾಮ ಮೇಳ - 1ವರ್ಷ, ಪುತ್ತೂರು ಮೇಳ - 1 ವರ್ಷ, ಎಡನೀರುಮೇಳ - 4 ವರ್ಷ ಹಾಗು ಧರ್ಮಸ್ಥಳ ಮೇಳ -2 ವರ್ಷ ಹೀಗೆ ತಿರುಗಾಟವನ್ನು ಮಾಡಿರುವರು. +ಮಳೆಗಾಲದಲ್ಲಿ ಕಲಾವಿದ ಶ್ರೀಧರ ಭಂಡಾರಿಯವರ ತಿರುಗಾಟದ ತಂಡದಲ್ಲಿ ಪಾತ್ರ ನಿರ್ವಹಣೆಯನ್ನು ಮಾಡಿರುವ ಇವರುದೆಹಲಿ ಮುಂಬಯಿ, ಬೆಹರನ್‌ಮೊದಲಾದೆಡೆ ಹೇಳಿಕೆಯ ಮೇರೆಗೆ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಪಾತ್ರ ನಿರ್ವಹಣೆ ಮಾಡಿದ್ದಾರೆ. +ಅಭಿಮನ್ಯು, ಬಭ್ರುವಾಹನ, ಭ್ರಮರಕುಂತಳೆ,ಸೀತೆ, ಅರ್ಜುನ, ದೇವೇಂದ್ರ, ಖರಾಸುರ ಮುಂತಾದ ಪಾತ್ರಗಳನ್ನು ನಿರ್ವಹಿಸಿದ್ದಾರೆ. +ಪುಂಡು ವೇಷದಂತೆ,ರಾಜವೇಷದಲ್ಲೂ ಶೈಲಿಗೆ ಚ್ಯುತಿ ಬಾರದಂತೆ ಪಾತ್ರ ನಿರ್ವಹಣೆ ಮಾಡುವ ಯುವ ಕಲಾವಿದ ಇವರಾಗಿದ್ದಾರೆ. +ಇವರ ಪ್ರತಿಭೆಗೆ ಪುರಸ್ಕಾರವಾಗಿ ಬೆಹರನ್‌,ದೆಹಲಿ, ತೋಡಾರು, ಕಾಶಿಪಟ್ಟ ಮೊದಲಾದೆಡೆಯಲ್ಲಿ ಗೌರವಿಸಲ್ಪಟ್ಟಿದ್ದಾರೆ. +ಚೆಂಡೆ ಮದ್ದಳೆಯ ನುಡಿತ-ಬಡಿತಗಳಲ್ಲಿ ಪ್ರತಿಭೆಯನ್ನು ತೋರುವ ಶ್ರೀ ಚಂದ್ರ ಶೇಖರ ಕೊಂಕಣಾಜೆಯವರು ಕಟೀಲು ಮೇಳದ ತಿರುಗಾಟವನ್ನು ಮಾಡಿ ಅನುಭವವನ್ನುಸಂಪಾದಿಸಿರುವರು. + ಎಲ್‌. ಸುಬ್ರಾಯ ಬಟ್‌ ಮತ್ತು ದುರ್ಗಾಪರಮೇಶ್ವರಿ ಅಮ್ಮ ದಂಪತಿಯ ಸುಪುತ್ರರಾಗಿ 18-4-1975ರಂದು ವೇಣೂರಿನಲ್ಲಿ ಹುಟ್ಟಿರುವರು. + ಪದವಿಪೂರ್ವ ಹಂತದ ವಿದ್ಯಾಭ್ಯಾಸವನ್ನು ಪಡೆದಿರುವ ಇವರು ದೊಡ್ಡಪ್ಪ ದಿ।ವಿಟ್ಲ ಗೋಪಾಲಕೃಷ್ಣ ಜೋಷಿಯವರ ಆದರ್ಶದ ಮೇರೆಗ ಬಾಲ್ಯದಿಂದಲೇ ಯಕ್ಷಗಾನ ಕಲೆಯ ಮೇಲೆ ಪ್ರಭಾವಿತರಾಗಿದ್ದರು. +17ನೇ ವರ್ಷದಿಂದ ಯಕ್ಷಗಾನ ಕಲಾಸೇವೆಯಲ್ಲಿ ತೊಡಗಿರುವ ಇವರು ಸಬ್ಬನಕೋಡಿ ರಾಂ ಭಟ್ಟರಲ್ಲಿ ನಾಟ್ಯಾಬ್ಯ್ಯಾಸ ಮುತ್ತು ಹರಿನಾರಾಯಣ ಬೈಪಾಡಿತ್ತಾಯರಲ್ಲಿ ಚೆಂಡೆ ಮದ್ದಳೆಯ ಪಾಠಾಭ್ಯಾಸವನ್ನು ಮಾಡಿರುವರು. +ಆರಂಭದಲ್ಲಿ ಅರ್ಜುನ, ಶತ್ರುಘ್ನ, ಮುರಾಸುರ,ಶಿಶುಪಾಲ, ಬಲರಾಮ, ಚಿತ್ರಾಂಗದೆ, ಸುಭದ್ರೆ ಮೊದಲಾದ ಪಾತ್ರಗಳನ್ನು ಹವ್ಯಾಸಿ ಕಲಾವಿದರ ಜೊತೆಗೆ ನಿರ್ವಹಿಸಿದ್ದಾರೆ. +ಅನಂತರ ಚೆಂಡೆಮದ್ದಳೆಯ ನುಡಿತ ಬಡಿತಗಳಲ್ಲಿ ಪಳಗಿ ಕಟೀಲು ಮೇಳದ ಮುಖಾಂತರ 12ವರ್ಷ ತಿರುಗಾಟವನ್ನು ಮಾಡಿದ್ದಾರೆ. +ಪ್ರಸ್ತುತ ವರ್ಷದಲ್ಲಿ ಮೇಳ ತಿರುಗಾಟವನ್ನು ನಿಲ್ಲಿಸಿ ಹವ್ಯಾಸಿ ಕಲಾಕಾರ್ಯಕ್ರಮಗಳಲ್ಲಿ ಹೇಳಿಕೆಯ ಮೇರೆಗೆ ಭಾಗವಹಿಸುತ್ತಿದ್ದಾರೆ. +ಶ್ರೀಮತಿ ಸರೋಜ ಎಂಬವರನ್ನು ಇತ್ತೀಚೆಗೆ ವರಿಸಿರುವ ಇವರು ಕೃಷಿ ಕಾರ್ಯದಲ್ಲಿ ಆಸಕ್ತರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. +ಹವ್ಯಾಸಿ ಕಲಾವಿದರಿಗೆ ಯಕ್ಷಗಾನದ ಪಾಠಾಭ್ಯಾಸ ಮಾಡಿರುವ ಇವರಿಗೆ ಕಾಶಿಪಟ್ನ ಮತ್ತು ಕೇಳ ದೇವಸ್ಥಾನದಲ್ಲಿ ಗೌರವ ಪುರಸ್ಕಾರಗಳು ಸಂದಿವೆ. +ಪ್ರಸ್ತುತ ಕಟೀಲು ಮೇಳದಲ್ಲಿ ತಿರುಗಾಟವನ್ನು ಮಾಡುತ್ತಿರುವ ಶ್ರೀ ಚಂದ್ರಶೇಖರ ಬನಾರಿಯವರು ಪುಂಡು, ರಾಜ ಹಾಗೂ ಬಣ್ಣದ ವೇಷಗಳ ನಿರ್ವಹಣೆಯನ್ನು ಮಾಡಬಲ್ಲವರಾಗಿದ್ದಾರೆ. +ದಿನಾಂಕ 4-6-1982ರಲ್ಲಿ ನಾರಾಯಣ ಗೌಡ ಮತ್ತು ರಾಮಕ್ಕ ದಂಪತಿಯ ಸುಪುತ್ರರಾಗಿ ಬನಾರಿ ಮನೆಯಲ್ಲಿ ಹುಟ್ಟಿದರು. +7ನೇ ತರಗತಿಯ ತನಕ ವಿದ್ಯಭ್ಯಾಸವನ್ನು ಪಡೆದಿರುವ ಇವರು ಮನೆಯ ಸುತ್ತಲಿನ ಯಕ್ಷಗಾನ ಪರಿಸರದಲ್ಲಿ ಬೆಳೆದು ಪ್ರಭಾವಿತರಾಗಿದ್ದರು. +11ನೇ ವರ್ಷದಿಂದಲೇ ರಂಗ ಪ್ರವೇಶ ಮಾಡಿದ ಇವರು ದಿವಾಣ ಶಿವಶಂಕರ ಭಟ್‌ ಮತ್ತು ದಿ|ಪರಮೇಶ್ವರ ಆಚಾರ್‌ ಕೊಕ್ಕಡ ಇವರಿಂದ ಯಕ್ಷಗಾನ ಕಲೆಯ ಬಗ್ಗೆ ಅಭ್ಯಾಸವನ್ನು ಮಾಡಿದ್ದಾರೆ. +ಮಂಗಳಾದೇವಿ ಮೇಳದಲ್ಲಿ 2 ವರ್ಷಗಳ ತಿರುಗಾಟವನ್ನು ಮಾಡಿರುವ ಇವರು ಕಟೀಲು ಮೇಳದಲ್ಲಿ ಒಟ್ಟಾಗಿ 10 ವರ್ಷಗಳ ತಿರುಗಾಟವನ್ನು ಪೂರೈಸಿದ್ದಾರೆ. +ಪುಷ್ಕಳ, ದಮನ, ದೇವೇಂದ್ರ, ನಿಶುಂಭ,ತಾರಕಾಸುರ, ವೀರಭದ್ರ, ಭೀಮ, ಜರೆ, ಶೂರ್ಪನಖಾ ಮೊದಲಾದ ಪಾತ್ರಗಳನ್ನು ನಿರ್ವಹಿಸುತ್ತಾ ಪ್ರಯತ್ನಶೀಲರಾಗಿ ಬೆಳೆಯುತ್ತಾ ಇದ್ದಾರೆ. +ಶಾಲಾ ಕಾಲೇಜುಗಳಲ್ಲಿ ನಾಟ್ಯ ತರಬೇತಿಯನ್ನು ಮಾಡಿರುವ ಚಂದ್ರಶೇಖರ ಬನಾರಿಯವರನ್ನು ಕಣಿಯೂರು ಕಸಬ ಶಾಲೆ ಮತ್ತು ಅಂಡಡ್ಕ ಇಲಂತಿಲ ಶಾಲೆಂಕುವರು ಗೌರವಪೂರ್ವಕವಾಗಿ ಸಂವರಾನಿಸಿದ್ದಾರೆ. +ಕಲಾ ಸಾಧನೆಯಲ್ಲಿ ಬೆಳೆಯಬೇಕೆಂಬ ಹಂಬಲ ವ್ಯಕ್ತಪಡಿಸುವ ಇವರು ಬೆಳೆಯುವ ಯುವ ಕಲಾವಿದರಾಗಿದ್ದಾರೆ. +31 +ನಾಯಕ, ಪ್ರತಿನಾಯಕ ಮತ್ತು ಪೋಷಕ,ಪ್ರೌಢ ಪಾತ್ರಗಳಲೆಲ್ಲಾ ಪಾತ್ರಕ್ಕೆ ತಕ್ಕಂತೆ ನಿರ್ವಹಣೆಯನ್ನು ತೋರಿ ಪ್ರಸಿದ್ಧರಾಗಿರುವ ಚಿದಂಬರ ಬಾಬುರವರು ಸುಂಕದಕಟ್ಟೆ ಮೇಳದ ಹಿರಿಯ ಕಲಾವಿದರಾಗಿ ತಿರುಗಾಟವನ್ನು ನಡೆಸುತ್ತಾ ಇದ್ದಾರೆ. +24-3-1961ರಲ್ಲಿ ನಾಗೇಶ್‌ ರಾವ್‌ ಮತ್ತು ರತ್ನ ಅಮ್ಮ ದಂಪತಿಯ ಸುಪುತ್ರರಾಗಿ ಹಿತ್ತಲಸರ ಎಂಬಲ್ಲಿ ಹುಟ್ಟಿದರು. +ಪ್ರಾಥಮಿಕ ಹಂತದ ವಿದ್ಯಾಭ್ಯಾಸವನ್ನು ಪಡೆದಿರುವ ಇವರು ಯಕ್ಷಗಾನದ ಪ್ರಭಾವಕ್ಕೆ ಒಳಗಾಗಿ ಶ್ರೀ ಕ್ಷೇತ್ರ ಧರ್ಮಸ್ಥಳದ ಲಲಿತಾ ಕಲಾ ಕೇಂದದಲ್ಲಿ ಕೆ. ಗೋವಿಂದ ಭಟ್ಟರಿಂದ ನಾಟ್ಯಾಭ್ಯಾಸವನ್ನು ಪೂರೈಸಿದರು. +ರಾಜ, ನಾಟಕೀಯ, ಬಣ್ಣ ಮತ್ತು ಹಾಸ್ಯ ಪಾತ್ರಗಳು ಸೇರಿದಂತೆ ಹೆಚ್ಚಿನ ಎಲ್ಲಾ ಪಾತ್ರಗಳನ್ನು ನಿರ್ವಹಿಸಲು ಅರ್ಹರಾದ ಇವರು ಸುಂಕದಕಟ್ಟೆ ಮೇಳವೊಂದರಲ್ಲೇ 29 ವರ್ಷಗಳ ತಿರುಗಾಟವನ್ನು ಮಾಡಿರುವ ಅನುಭವಿ ಕಲಾವಿದರಾಗಿದ್ದಾರೆ. +ಮಹಿಷಾಸುರ, ಭೀಮ, ಕಾರ್ತವೀರ್ಯ,ಅತಿಕಾಯ, ಸುಂದರ ರಾವಣ, ಕೇಳು ಪಂಡಿತ,ಭಸ್ಮಾಸುರ, ಅರ್ಜುನ, ತಾಮ್ರಧ್ವಜ ಮುಂತಾದ ಪಾತ್ರಗಳನ್ನು ನಿರ್ವಹಿಸುತ್ತಾ ಇದ್ದಾರೆ. +ಪ್ರಸಂಗ ಮಾಹಿಶಿ ಮತ್ತು ಮೇಳ ನಿರ್ವಹಣೆಯ ಬಗ್ಗೆ ಅನುಭವವುಳ್ಳ ಚಿದಂಬರ ಬಾಬುರವರು ನಾಟಕ ರಂಗದಲ್ಲೂ ಪಾತ್ರಾಭಿನಯ ಮಾಡಿದ್ದಾರೆ. +ತಬ್ಲಾವಾದನದಲ್ಲೂ ಆಸಕ್ತಿ ಬೆಳೆಸಿದವರಾಗಿದ್ದಾರೆ. +ಮಳೆಗಾಲದಲ್ಲಿ ಕೃಷಿ ಕಾರ್ಯವನ್ನು ಮಾಡುವ ಇವರು ಶ್ರೀಮತಿ ಪಾರ್ವತಿ ಎಂಬವರನ್ನು ವರಿಸಿ ಕಾರ್ತಿಕ್‌ (1 ಪಿ.ಯು.ಸಿ)), ಕೌಶಿಕ್‌ (8ನೇ ತರಗತಿ)ಎಂಬ ಇಬ್ಬರು ಮಕ್ಕಳನ್ನು ಪಡೆದಿದ್ದಾರೆ. +ಬೋಂದೇಲ್‌, ಕಿನ್ನಿಕಟ್ಟೆ, ಪುತ್ತೂರು ಮೊದಲಾದೆಡೆಯಲ್ಲಿ ಸಾಧನೆಗೆ ಪ್ರತಿಫಲವಾಗಿ ಕಲಾಭಿಮಾನಿಗಳಿಂದ ಸಂಮಾನಗೊಂಡಿರುವರು. +ಪರಿಸರದಲ್ಲಿ ನಡೆಯುತ್ತಿರುವ ಯಕ್ಷಗಾನದ ಆಟ-ಕೂಟಗಳನ್ನು ನೋಡುತ್ತಾ ಎಳೆವೆಯಲ್ಲಿಯೇ ಪ್ರಭಾವಿತರಾದ ಆರ್‌ ಜನ್ಮಪ್ಪ ಶೆಟ್ಟಿಯವರು ಪ್ರಸಿದ್ಧ ಕಲಾವಿದರಾಗಿ ಕೀರ್ತಿವಂತರಾಗಿದ್ದಾರೆ. +ಯಕ್ಷಗಾನದ ಬಯಲಾಟ ಮತ್ತು ತಾಳಮದ್ದಳೆಗಳಲ್ಲಿ ಬಹುಬೇಡಿಕೆಯ ಕಲಾವಿದರಾಗಿರುವ ಚೆನ್ನಪ್ಪ ಶೆಟ್ಟರ ಸಾಧನೆ ಪರಿಶ್ರಮ ಪೂರ್ಣವಾಗಿದ್ದು ಫಲಪ್ರದವಾಗಿದೆ. +ಬಂಟ್ವಾಳ ತಾಲ್ಲೂಕಿನ ವಾಮದ ಪದವಿನ ಬಳಿಯಲ್ಲಿರುವ ಮಾವಿನಕಟ್ಟೆಯಲ್ಲಿ ವಾಸಿಸುತ್ತಿರುವ ಚೆನ್ನಪ್ಪ ಶೆಟ್ಟರ ಮನೆಯ ಹೆಸರು ಕಲಾಚೇತನ. +ಇವರ ಹುಟ್ಟೂರು ರಾಯಿ. +ಹುಟ್ಟಿದ ದಿನಾಂಕ 8-5-1952. +ವಾಸುಶೆಟ್ಟಿ, ಲಿಂಗಮ್ಮ ದಂಪತಿಯ ಸುಪುತ್ರರಾಗಿರುವ ಇವರು ಮೂರನೆಯ ಮಗನಾಗಿದ್ದು ಓರ್ವಾಕೆ ಸಹೋದರಿ ಹಾಗೂ ಈರ್ವರು ಸಹೋದರರೊಂದಿಗೆ ಬಾಳುತ್ತಿದ್ದಾರೆ. +ಶ್ರೀಮತಿ ಹೇಮಲತಾ ಎಂಬವರನ್ನು ಪಾಣಿಗ್ರಹಣ ಮಾಡಿರುವ ಚೆನ್ನಪ್ಪ ಶೆಟ್ಟರು ಭರತ್‌ಕುಮಾರ್‌ (ಕಂಪ್ಯೂಟರ್‌ ಉದ್ಯೋಗಿ) ಭುವನ್‌ಕುಮಾರ್‌(ಎನಿಮೇಷನ್‌ ಉದ್ಯೋಗಿ) ಭೂಷಣ್‌ಕುಮಾರ್‌ (ಎನಿಮೇಷನ್‌ ಉದ್ಯೋಗಿ) ಎಂಬ ನಾಮಧೇಯವುಳ್ಳ ಮೂವರು ಸುಪುತ್ರರನ್ನು ಪಡೆದಿದ್ದಾರೆ. + ಕೆ.ವಾಸುಶೆಟ್ಟಿ, ಯಂ.ರಮೇಶ್‌ ಭಟ್‌ ಇವರ ಪ್ರೇರಣೆಯಂತೆ ದಿ.ಕುರಿಯ ವಿಠಲ ಶಾಸ್ತ್ರೀ ಮತ್ತು ದಿ.ಪಡ್ರೆ ಚಂದು ಇವರೀರ್ವರ ಗುರುತ್ವದಲ್ಲಿ ಧರ್ಮಸ್ಥಳ ಲಲಿತಕಲಾ ಕೇಂದ್ರದಲ್ಲಿ ತೆಂಕುತಿಟ್ಟಿನ ನಾಟ್ಯಾಭ್ಯಾಸವನ್ನು ಮಾಡಿ ಮೇಳ ತಿರುಗಾಟವನ್ನು ಆರಂಭಿಸಿದರು. +ಮುಂದೆ ಬೇಡಿಕೆಯ ಮೇರೆಗೆ ಬಡಗುತಿಟ್ಟಿನ ಮೇಳ ತಿರುಗಾಟವನ್ನು ಮಾಡಿದಾಗ ಹೆರಂಜಾಲು ವೆಂಕಟರಮಣ ಎಂಬವರಲ್ಲಿ ಬಡಗುತಿಟ್ಟಿನ ನಾಟ್ಯಾಭ್ಯಾಸವನ್ನು ಮಾಡಿದರು. +ಪ್ರಸ್ತುತ ಶ್ರೀ ಹೊಸನಗರ ಮೇಳದಲ್ಲಿ 39ನೇವರ್ಷದ ತಿರುಗಾಟವನ್ನು ಪೂರೈಸುತ್ತಿರುವ ಸಿದ್ಧಕಟ್ಟೆಯವರು ಶ್ರೀ ಕಟೀಲು ಮೇಳ -5ವರ್ಷ, ಶ್ರೀಧರ್ಮಸ್ಥಳ ಮೇಳ -2ವರ್ಷ, ಶ್ರೀ ಕದ್ರಿ ಮೇಳ -9ವರ್ಷ ಬಪ್ಪನಾಡು ಮೇಳ -2ವರ್ಷ, ಶ್ರೀ ಮಧೂರುಮೇಳ -1ವರ್ಷ, ಶ್ರೀ ಕುಂಬ್ಳೆ ಮೇಳ-1ವರ್ಷ, ಶ್ರೀಪೆರ್ಡೂರು ಮೇಳ-1ವರ್ಷ, ಶ್ರೀ ಸಾಲಿಗ್ರಾಮ ಮೇಳ-4ವರ್ಷ, ಶ್ರೀ ಎಡನೀರು ಮೇಳ-1ವರ್ಷ, ಶ್ರೀಹೊಸನಗರ ಮೇಳ-1ವರ್ಷ ಹೀಗೆ ತಿರುಗಾಟದ ಹಿನ್ನಲೆಯನ್ನು ಹೊಂದಿದ್ದಾರೆ. +ಕಾರ್ಕಳದ ಭುವನೇಂದ್ರ ಕಾಲೇಜು ಮತ್ತು ಬಂಟ್ವಾಳದ ವೆಂಕಟರಮಣ ಕಾಲೇಜುಗಳಲ್ಲಿ ಯಕ್ಷಗಾನದ ತರಬೇತಿಯನ್ನು ನೀಡಿರುವ ಇವರು ಅಭ್ಯಾಸಿ ಕಲಾವಿದರಿಗೆ ಪ್ರಸಂಗದ ನಡೆ, ಪಾತ್ರದ ನಡೆ ಮತ್ತು ಅರ್ಥದ ಮಾಹಿತಿಯನ್ನು ನೀಡುವಲ್ಲಿ ಸಮರ್ಥರೆನಿಸಿದ್ದಾರೆ. +ಕೇವಲ ಐದನೆಯ ಇಯತ್ತೆಯಲ್ಲಿ ಶಾಲಾವಿದ್ಯಾಭ್ಯಾಸವು ನಿಂತು ಹೋದರೂ ಸ್ವಂತ ಪರಿಶ್ರಮದ ಮೂಲಕ ಅಧ್ಯಾಯನ ನಡೆಸಿ, ಇವರು ಸಂಪಾದಿಸಿರುವ ವಿದ್ವತ್‌ ಸಮಷ್ಠಿ ಗುರುತರವಾಗಿದೆ. +ಇವರ ಸಾಧನೆಗೆ ಪ್ರತಿಫಲವಾಗಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ. +ಯಕ್ಷಮಿತ್ರರು ದುಬ್ಯಾ, ದುಬ್ಯಾ ಬಂಟರಸಂಘ, ಮುಂಬಯಿ ಬಂಟರ ಸಂಘ, ಕಲಾಭಿಮಾನಿ ಬಳಗ ಕುಂದಾಪುರ ಹೀಗೆ ಹಲವೆಡೆಯಲ್ಲಿ ಸಂಘ-ಸಂಸ್ಥೆಗಳಿಂದ ಸಂಮಾನಿತರಾಗಿದ್ದಾರೆ. +ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿಯ ಮುಖ್ಯ ಸ್ತ್ರೀಪಾತ್ರದಾರಿಂತರಾಗಿ ಕಲಾಸೇವೆಯನ್ನು ಮಾಡುತ್ತಿರುವ ಕೆದಿಲ ಜಯರಾಮ ಭಟ್ಟರು ತುಳು ಮತ್ತು ಕನ್ನಡ ಪ್ರದರ್ಶನಗಳಿಗೆ ಬೇಡಿಕೆಯ ಕಲಾವಿದರಾಗಿದ್ದಾರೆ. +ದಿನಾಂಕ 4-4-1964ರಲ್ಲಿ ಶಂಕರ ನಾರಾಯಣಭಟ್‌ ಮತ್ತು ಲಕ್ಷ್ಮೀ ಅಮ್ಮ ದಂಪತಿಗೆ ಸುಪುತ್ರರಾಗಿ ಜನಿಸಿದ ಇವರ ಹುಟ್ಟೂರು ಪುತ್ತೂರು. +ಹತ್ತನೆಯ ತರಗತಿಯ ವರೆಗೆ ಶಾಲೆಗೆ ಹೋಗಿರುವ ಇವರು ಪರಿಸರದ ಆಟ ಕೂಟಗಳಿಂದ ಪ್ರಭಾವಿತರಾಗಿದ್ದರು. +ಕರ್ಗಲ್ಲು ವಿಶ್ವೇಶ್ವರ್‌ ಭಟ್‌, ಕೆ.ಗೋವಿಂದ ಭಟ್‌ಇವರುಗಳ ಮಾರ್ಗದರ್ಶನದಲ್ಲಿ ನಾಟ್ಯಭ್ಯಾಸವನ್ನು ಪೂರೈಸಿ ರಂಗಪ್ರವೇಶ ಮಾಡಿದರು. +22ನೇ ವರ್ಷದಿಂದ ಯಕ್ಷಗಾನದ ಪಾತ್ರವನ್ನು ನಿರ್ವಹಿಸಲು ಆರಂಭಿಸಿದ ಇವರು ಅರುವ ಮೇಳ-1 ವರ್ಷ,ಬಪ್ಪನಾಡು ಮೇಳ-1 ವರ್ಷ, ಕರ್ನಾಟಕ ಮೇಳ-1 ವರ್ಷ, ಮಂದಾರ್ತಿ ಮೇಳ-2 ವರ್ಷ, ಪೆರ್ಡೂರುಮೇಳ - 3ವರ್ಷ, ಸಾಲಿಗ್ರಾಮ ಮೇಳ - 4ವರ್ಷ, ಮಧೂರು ಮೇಳ - 2ವರ್ಷ, ಕದ್ರಿ ಮೇಳ- 1ವರ್ಷ, ಸುರತ್ಕಲ್‌ ಮೇಳ - 1ವರ್ಷ,ಮಂಗಳಾದೇವಿ ಮೇಳ - 1ವರ್ಷ,ಧರ್ಮಸ್ಥಳಮೇಳ - 5ವರ್ಷ ಹೀಗೆ ತೆಂಕು-ಬಡಗು ಮೇಳಗಳಲ್ಲಿ ತಿರುಗಾಟ ಮಾಡಿದ ಅನುಭವ ಜಯರಾಮ ಭಟ್ಟರಿಗೆ ಇದೆ. +ಶ್ರೀಮತಿ ವಾಣೀ ಎಂಬವರನ್ನು ವರಿಸಿ“ಕ್ಷಮಿತ್‌” ಎಂಬ ಸುಕುಮಾರನೋರ್ವನನ್ನು ಪಡೆದಿರುವ ಇವರು ಮೋಹಿನಿ,ಅಂಬೆ, ಚಿಂತ್ರಾಗದೆ,ಪ್ರಭಾವತಿ ಮೊದಲಾದ ಪಾತ್ರಗಳನ್ನು ಉತ್ತಮವಾಗಿ ನಿರ್ವಹಿಸುತ್ತಾರೆ. +ಸೀತೆ, ಶ್ರೀದೇವಿ, ದ್ರೌಪದಿ, ಸುಭದ್ರೆ ಮೊದಲಾದ ಮುಖ್ಯ ಪಾತ್ರಗಳನ್ನೆಲ್ಲಾ ಮಾಡಿರುವ ಜಯರಾಮ ಭಟ್ಟರು ರಾಮ, ಕೃಷ್ಣ ಅರ್ಜುನ,ದೇವೇಂದ್ರ ಮೊದಲಾದ ಪಾತ್ರಗಳನ್ನು ಅನಿವಾರ್ಯ ಸಂದರ್ಭಗಳಲ್ಲಿ ನಿರ್ವಹಿಸಿದ್ದಾರೆ. +ಯಕ್ಷಗಾನ ಕಲಾವಿದ ಪೆರುವೋಡಿ ನಾರಾಯಣ ಭಟ್ಟರ ಸಂಬಂಧಿಕರಾಗಿರುವ ಇವರು ದರ್ಮಸ್ಥಳ ಮೇಳದ ಹಿರಿಯ ಕಲಾವಿದರುಗಳ ಒಡನಾಟದಲ್ಲಿ ತಿರುಗಾಟವನ್ನು ಮಾಡುತ್ತಾ ಪೌರಾಣಿಕ ಪ್ರಸಂಗದ ಸ್ತ್ರೀ ಪಾತ್ರಗಳ ಬಗ್ಗೆ ಹಾಗೂ ನಿರ್ವಹಣೆಯ ಶೈಲಿಯಲ್ಲಿ ಬದ್ಧತೆಯನ್ನು ತೋರುತ್ತಾ ಇದ್ದಾರೆ. +ಆಟ ಕೂಟಗಳೆರಡರಲ್ಲೂ ಪ್ರೌಢಿಮೆಯನ್ನು ಸಾಧಿಸುತ್ತಾ ಬೆಳೆಯುತ್ತಿರುವ ಜಯಪ್ರಕಾಶ್‌ ಶೆಟ್ಟಿ ಪೆರ್ಮುದೆಯವರು ಪ್ರಸ್ತುತ ಶ್ರೀ ಹೊಸನಗರ ಮೇಳದ ಕಲಾವಿದರಾಗಿ ತಿರುಗಾಟವನ್ನು ನಡೆಸುತ್ತಾ ಇದ್ದಾರೆ. +ದಿನಾಂಕ 26-4-1975ರಲ್ಲಿ ಬಾಲಕೃಷ್ಣ ಶೆಟ್ಟಿ ಮತ್ತು ಲೀಲಾವತಿ ದಂಪತಿಯ ಸುಪುತ್ರರಾಗಿ ಕುಡಾಲ್‌ಗುತ್ತು ಮನೆಯಲ್ಲಿ ಜನಿಸಿದರು. +10ನೇ ತರಗತಿಯ ತನಕ ವಿದ್ಯಾಭ್ಯಾಸವನ್ನು ಪಡೆದಿರುವ ಇವರು ಮನೆತನದ ಹಿನ್ನೆಲೆಯಿಂದ ಬಾಲ್ಯದಲ್ಲೇ ಯಕ್ಷಗಾನದತ್ತ ಪ್ರಭಾವಿತರಾಗಿದ್ದರು. +ಇವರ ತಂದೆ ಅರ್ಥಧಾರಿ, ಕೀರ್ತಿಶೇಷ ಕಲಾವಿದ ಗುಂಪೆ ರಾಮಯ್ಯ ರೈ ಅಜ್ಜ , ಹಿರಿಯ ಕಲಾವಿದರಾಗಿರುವ ಪೆರುವಾಯಿ ನಾರಾಯಣ ಶೆಟ್ಟಿ ಮಾವ. +ಇವರೆಲ್ಲರ ಆದರ್ಶವನ್ನು ಅನುಸರಿಸಿರುವ ಜಯಪ್ರಕಾಶರು ಶ್ರೀ ಕೋಳ್ಕೂರು ರಾಮಚಂದ್ರ ರಾವ್‌ಅವರಲ್ಲಿ ನಾಟ್ಯಾಬ್ಯಾಸವನ್ನು ಮಾಡಿರುವರು. +ಅನಂತರ ತಿರುಗಾಟದ ಸಂದರ್ಭದಲ್ಲಿ ಮವನಿಂದ ಹೆಚ್ಚಿನ ಅನುಭವವನ್ನು ಗಳಿಸಿರುವರು. +16ನೇ ವರ್ಷದಿಂದಲೇ ಯಕ್ಷಗಾನದ ಪಾತ್ರ ನಿರ್ವಹಣೆ ಮಾಡುತ್ತಾ ಬೆಳೆದಿರುವ ಇವರುಕಟೀಲು ಮೇಳ - 16 ವರ್ಷ ಹಾಗೂ ಹೊಸನಗರ ಮೇಳದಲ್ಲಿ - 3 ವರ್ಷಗಳ ವರ್ಷಗಳ ತಿರುಗಾಟವನ್ನು ಪೂರೈಸಿರುವರು. +ರಾಜವೇಷ, ಪುಂಡುವೇಷ ಮತ್ತು ನಾಟಕೀಯ ವೇಷಗಳಲ್ಲಿ ಹಿಡಿತವನ್ನು ಸಾಧಿಸಿರುವ ಇವರು ಜಾಬಾಲಿ, ಕೃಷ್ಣ, ವಿಷ್ಣು ಅರ್ಜುನ, ತಾಮ್ರದ್ದಜ,ಕಂಸ, ರಕ್ತಬೀಜ, ಅತಿಕಾಯ ಮುಂತಾದ ಪಾತ್ರಗಳನ್ನು ಉತ್ತಮವಾದ ಮಾತಿನ ಮುಖೇನ ನಿರ್ವಹಿಸುತ್ತಾ ಇದ್ದಾರೆ. +ಶ್ರೀಮತಿ ಪ್ರಭಾಲತಾ ಎಂಬವರನ್ನು ವರಿಸಿರುವ ಇವರು ಪಲ್ಲವಿ ಮತ್ತು ಪವಿತ್ರ ಎಂಬ ಇಬ್ಬರು ಮಕ್ಕಳನ್ನು ಪಡೆದಿದ್ದಾರೆ. +ಮದ್ಗಳೆಗಾರರಾಗಿ ಮತ್ತು ಭಾಗವತರಾಗಿ ಜನಮನ್ನಣೆಯನ್ನು ಪಡೆದಿರುವ ಪದ್ಯಾಣ ಜಯರಾಮ ಭಟ್ಟರು ಪ್ರಸ್ತುತ ಶ್ರೀ ಹೊಸನಗರ ಮೇಳದ ಹಿಮ್ಮೇಳ ವಾದಕರಾಗಿ ತಿರುಗಾಟವನ್ನು ನಡೆಸುತ್ತಾ ಇದ್ದಾರೆ. +ಪದ್ಯಾಣ ತಿರುಮಲೇಶ್ವರ ಭಟ್‌ ಮತ್ತು ಡಿ.ಸಾವಿತ್ರಿ ಅಮ್ಮ ದಂಪತಿಯ ಸುಪುತ್ರರಾಗಿ ದಿನಾಂಕ19-11-1957ರಂದು ಕಲ್ಮಡ್ಕದಲ್ಲಿ ಹುಟ್ಟಿದರು. +ತಂದೆ ಹಿಮ್ಮೇಳ ವಾದಕರು, ಅಜ್ಜ ಪುಟ್ಟು ನಾರಾಯಣಭಾಗವತರು, ಹಿರಿಯ ಸಹೋದರ ಪದ್ಯಾಣ ಗಣಪತಿಭಟ್‌ ಭಾಗವತರು ಹೀಗೆ ಮನೆತನದ ಹಿನ್ನೆಲೆಯಿಂದ ರಕ್ತಗತವಾಗಿ ಬಂದ ಪ್ರತಿಭೆಯನ್ನು ವಿಸ್ತರಿಸಿ ಕೀರ್ತಿಸಂಪನ್ನರಾಗಿದ್ದಾರೆ. +ಬಿ.ಕಾಂ.ಪದವೀಧರರಾಗಿರುವ ಇವರು 18ನೇ ವರ್ಷದಿಂದಲೇ ಯಕ್ಷಗಾನದ ಹವ್ಯಾಸಿ ಕಲಾವಿದರಾಗಿ ಕಲಾಸೇವೆಯನ್ನು ಆರಂಭಿಸಿದವರು ಮುಂದೆ ಮೇಳ ತಿರುಗಾಟವನ್ನು ನಡೆಸಿದರು. +ಶ್ರೀ ಕೇಶವಾನ ಮದಭಾರತೀ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ರೂಪುಗೊಂಡ ಪ್ರತಿಭೆ ಇವರದ್ದಾಗಿದೆ. +ಹವ್ಯಾಸಿ ಕಲಾವಿದರಾಗಿದ್ದಾಗಲೇ ಮನ್ನಣೆಯನ್ನು ಪಡೆದು ಹೇಳಿಕೆಯ ಮೇರೆಗೆ ಮೇಳ ಹಾಗೂ ಹವ್ಯಾಸಿ ಸಂಘಟನೆಯ ಹಲವಾರು ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದರು. +ಮಂಗಳಾದೇವಿ ಮೇಳ - 2 ವರ್ಷ, ಕರ್ನಾಟಕಮೇಳ - 1 ವರ್ಷ, ಕದ್ರಿ ಮೇಳ - 2 ವರ್ಷ,ಕುಂಟಾರು ಮೇಳ - 2 ವರ್ಷ, ಎಡನೀರು ಮೇಳ- 2 ವರ್ಷ ಹಾಗೂ ಹೊಸನಗರ ಮೇಳ - 4ವರ್ಷ ಹೀಗೆ 13 ವರ್ಷಗಳ ತಿರುಗಾಟವನ್ನು ಮಾಡಿದ್ದಾರೆ. +ಆರಂಭದಲ್ಲಿ ವೇಷಗಾರಿಕೆಯಲ್ಲಿಯೂ ಆಸಕ್ತಿಯನ್ನು ಹೊಂದಿದ್ದ ಜಯರಾಮ ಭಟ್ಟರು ಸುಧನ್ವ, ಬಭ್ರುವಾಹನ, ಕೃಷ್ಣ, ವಿಷ್ಣು ಮುಂತಾದ ಪಾತ್ರಗಳನ್ನು ಮಾಡಿದ್ದಾರೆ. +ಸಂಗೀತದ ಜ್ಞಾನ ಸಂಪನ್ನರಾಗಿರುವ ಇವರು ಯಕ್ಷಗಾನ ಹಿಮ್ಮೇಳದ ಎಲ್ಲಾ ಬಗೆಗಳಲ್ಲಿ ಅನುಭವಿಯಾಗಿದ್ದಾರೆ. +ಕೃಷಿಕ ಮನೆತನಕ್ಕೆ ಸೇರಿದ ಜಯರಾಮ ಭಟ್ಟರು ಮಳೆಗಾಲದ ಕಾರ್ಯಕ್ರಮಗಳಲ್ಲೂ ಭಾಗವಹಿಸುತ್ತಾರೆ. +ಶ್ರೀಮತಿ ಸುಮಂಗಳ ಎಂಬವರನ್ನು ವರಿಸಿರುವರುವ `ಇವರಿಗೆ ಸುಜಯ್‌ ( ಬಿ.ಬಿ.ಎಂ. ) ಎಂಬ ಸುಪುತ್ರನೋರ್ವರಿದ್ದಾರೆ. +ದೆಹಲಿ, ಪದ್ಯಾಣ,ಬೆಮಗಳೂರು, ಕಲ್ಮಡ್ಕ, ಎಡನೀರು, ಉಡುಪಿ ಮುಂತಾದೆಡೆಯಲ್ಲಿ ಗೌರವ ಸಂಮಾನಗಳಿಗೆ ಭಾಜನರಾಗಿದ್ದಾರೆ. +ಹಾಸ್ಯ ಪಾತ್ರಗಳ ಮೂಲಕ ಪ್ರೇಕ್ಟಕರನ್ನು ರಂಜಿಸಿ ಪ್ರಸಿದ್ಧರಾಗಿರುವ ಬಂಟ್ವಾಳ ಜಯರಾಮ ಆಚಾರ್ಯರು ಪ್ರಸ್ತುತ ಹೊಸನಗರ ಮೇಳದಲ್ಲಿ ತಿರುಗಾಟವನ್ನು ನಡೆಸುತ್ತಾ ಇದ್ದಾರೆ. +ಬಂಟ್ವಾಳ ಗಣಪತಿ ಆಚಾರ್ಯ ಮತ್ತು ಭವಾನಿ ದಂಪತಿಯ ಸುಪುತ್ರರಾಗಿ ದಿನಾಂಕ 10-12-1957ರಂದು ಬಂಟ್ವಾಳದಲ್ಲಿ ಹುಟ್ಟಿರುವ ಜಯರಾಮ ಆಚಾರ್ಯರರು 7ನೇ ತರಗತಿಯವರೆಗೆ ವಿದ್ಯಾಭ್ಯಾಸವನ್ನು ಪಡೆದಿರುವರು. +ತಂದೆ ಹಾಸ್ಯಪಾತ್ರಧಾರಿಯಾಗಿ ಮೇಳ ತಿರುಗಾಟವನ್ನು ಮಾಡಿದ ಅನುಭವಿ ಕಲಾವಿದರಾಗಿದ್ದುದರಿಂದ ಜಯರಾಮ ಆಚಾರ್ಯರ ಆಸಕ್ತಿ ಕೂಡ ಹಾಸ್ಯ ಪಾತ್ರಗಳತ್ತವೇ ಬೆಳೆಯಿತು. +ಪಡ್ರೆ ಚಂದು ಮತ್ತು ನೆಲ್ಲಿಕಟ್ಟೆ ನಾರಾಯಣ ಹಾಸ್ಯಗಾರರಿಂದ ನಾಟ್ಯಾನುಬವ ಮತ್ತು ರಂಗಾನುಭವವನ್ನು ಸಂಪಾದಿಸಿದ ಇವರು ಅಮ್ಟಾಡಿ ಮೇಳ - 1 ವರ್ಷ, ಸ್ವರ್ಣಾಡು ಮೇಳ - 1ವರ್ಷ, ಸುಂಕದಕಟ್ಟೆ ಮೇಳ - 1 ವರ್ಷ, ಕಟೀಲುಮೇಳ - 7 ವರ್ಷ, ಪುತ್ತೂರು ಮೇಳ - 5ವರ್ಷ, ಕದ್ರಿ ಮೇಳ - 15 ವರ್ಷ, ಕುಂಬ್ಳೆ ಮೇಳ- 1 ವರ್ಷ, ಸುರತ್ಕಲ್‌ ಮೇಳ - 2 ವರ್ಷ,ಎಡನೀರು ಮೇಳ - 2 ವರ್ಷ ಹಾಗೂ ಹೊಸನಗರಮೇಳ - 4 ವರ್ಷ ಹೀಗೆ ತಿರುಗಾಟವನ್ನು ನಡೆಸಿದ್ದಾರೆ. +ದಾರುಕ, ವಿಜಯ, ಬಾಹುಕ, ಮೂಕಾಸುರ ಮೊದಲಾದ ಎಲ್ಲಾ ವಿಧದ ಹಾಸ್ಯ ಪಾತ್ರಗಳನ್ನು ನಿರ್ವಹಿಸಿದ್ದಾರೆ. +ನಾಟಕ ಕಲೆಯಲ್ಲೂ ಆಸಕ್ತಿಯನ್ನು ಬೆಳೆಸಿದ ಇವರು ಆ ಕ್ಷೇತ್ರದಲ್ಲೂ ಮನ್ನಣೆಯನ್ನು ಪಡೆದಿದ್ದಾರೆ. +ಚೆಂಡೆ - ಮದ್ದಳೆಗಳ ಬಾರಿಸುವಿಕೆಯಲ್ಲಿ ಅಭಿರುಚಿವುಳ್ಳವರಾಗಿದ್ದಾರೆ. +ವಿಶೇಷ ಆಕರ್ಷಣೆಯಾಗಿ ಕಂಸ, ಭಸ್ಮಾಸುರ, ಮಹಿಷಾಸುರ, ಶೂರ್ಪನಖಾ,ಕೃಷ್ಣ,ಜಮದಗ್ನಿ ಮುಂತಾದ ಪಾತ್ರಗಳನ್ನು ನಿರ್ವಹಿಸಿದ್ದಾರೆ. +ಶ್ರೀಮತಿ ಶ್ಯಾಮಲ ಎಂಬವರನ್ನು ವರಿಸಿ ವರ್ಷ(6ನೇ ತರಗತಿ), ವರುಣ್‌ (5ನೇ ತರಗತಿ) ಎಂಬ ಇಬ್ಬರು ಮಕ್ಕಳನ್ನು ಪಡೆದಿದ್ದಾರೆ. +ತುಳು ಮತ್ತು ಕನ್ನಡ ಪ್ರಸಂಗಗಳ ಹಾಸ್ಯ ಪಾತ್ರಗಳಲ್ಲಿ ಚೌಕಟ್ಟನ್ನು ಮೀರದೆ ಕಲಾಗಾರಿಕೆಯನ್ನು ಮೆರೆಸಿರುವ ಇವರ ಸಾಧನೆಗೆ ಗೌರವ ರೂಪವಾಗಿ ಬಂಟ್ವಾಳ ಕನ್ನಡ ಸಾಹಿತ್ಯ ಸಮ್ಮೇಳನ ಪ್ರಶಸ್ತಿ ದೊರೆತಿದೆ. +ಬಂಟ್ವಾಳ,ಮ೦ಗಳೂರು, ಕಲ್ಮಡ್ಕ ಮುಂತಾದೆಡೆಯಲ್ಲಿ ಹಲವು ಸಂಮಾನಗಳನ್ನು ಪಡೆದಿರುವ ಇವರಿಗೆ “ತೆಲಿಕೆದ ರಾಜ” ಎಂಬ ಬಿರುದು ಕೂಡಾ ಲಭಿಸಿದೆ. +37 +ನಾಟಕೀಯ ವೇಷದ ಗತ್ತುಗಾರಿಕೆಯಲ್ಲಿ ತನ್ನತನವನ್ನು ಮೆರೆಸಿ ಪ್ರಸಿದ್ದಿಗೆ ಏರಿದ ಹಿರಿಯ ಕಲಾವಿದರಾದ ಶ್ರೀ ಮಂಜೇಶ್ವರ ಜನಾರ್ದನ ಜೋಗಿಯವರು ಕಟೀಲು ಮೇಳದ ಕಲಾವಿದರಾಗಿ ತಿರುಗಾಟವನ್ನು ನಡೆಸುತ್ತಾ ಇದ್ದಾರೆ. +ಐತಪ್ಪ ಜೋಗಿ ಮತ್ತು ಕಲ್ಯಾಣಿ ದಂಪತಿಯ ಸುಪುತ್ರರಾಗಿ 1939ನೇ ವರ್ಷ ಮಂಜೇಶ್ವರದಲ್ಲಿ ಜನಿಸಿದರು. +8ನೇ ತರಗತಿಯ, ವಿದ್ಯಾಭ್ಯಾಸ ಪಡೆದಿರುವ ಇವರಿಗೆ ಬಾಲ್ಯದಲ್ಲೇ ಯಕ್ಷಗಾನದ ಆಸಕ್ತಿ ಇತ್ತು. + ಆಮೇಲೆ ಹಿರಿಯ ಕಲಾವಿದ ಶೀನಪ್ಪ ಭಂಡಾರಿಯವರ ಪ್ರೇರಣೆ ಒದಗಿ ಬಂದ ಕಾರಣ ಅವರಿಂದಲೇ ನಾಟ್ಯಾಭ್ಯಾಸವನ್ನು ಮಾಡಿ ಕಲಾಸೇವೆಗೆ ಮುಂದಾದರು. +17ನೇ ವರ್ಷದಿಂದಲೇ ಮುಖಕ್ಕೆ ಬಣ್ಣ ಹಚ್ಚಲು ಆರಂಭಿಸಿದ ಇವರು ಸುಬ್ರಹ್ಮಣ್ಯ ಮೇಳ - 12ವರ್ಷ, ವೇಣೂರು ಮೇಳ - 6 ವರ್ಷ, ಕೂಡ್ಲುಮೇಳ - 3 ವರ್ಷ, ಸುರತ್ಕಲ್‌ ಮೇಳ - 1 ವರ್ಷ,ಸುಂಕದಕಟ್ಟೆ ಮೇಳ - 9 ವರ್ಷ, ಕಟೀಲು ಮೇಳ- 22 ವರ್ಷ ಹೀಗೆ ಒಟ್ಟಾಗಿ 5 ದಶಕಗಳಿಗೂ ಮಿಕ್ಕಿದ ಸೇವೆಯನ್ನು ಪೂರೈಸಿದ್ದಾರೆ. +ಅರುಣಾಸುರ, ಹಿರಣ್ಯಕಶ್ಯಪ, ಕಂಸ,ದಾರಿಕಾಸುರ, ಸುಂದರ ರಾವಣ ಇತ್ಯಾದಿ ನಾಟಕೀಯ ವೇಷಗಳು ಇವರ ಗತ್ತುಗಾರಿಕೆಯ ಪಾತ್ರಗಳಾಗಿ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿವೆ. +ಉಳಿದಂತೆ ವೀರವರ್ಮ, ತಾಮ್ರದ್ದಜ, ಇಂದ್ರಜಿತು, ರಕ್ತಬೀಜ,ಅತಿಕಾಯ, ಮಧು ಮುಂತಾದ ಪಾತ್ರಗಳನ್ನು ಉತ್ತಮವಾಗಿ ನಿರ್ವಹಿಸುತ್ತಾ ಬಂದಿದ್ದಾರೆ. +ಶ್ರೀಮತಿ ವಾರಿಜ ಎಂಬವರನ್ನು ವರಿಸಿರುವ ಇವರು ಮೋಹಿನಿ (ಅಧ್ಯಾಪಕಿ), ಪುಷ್ಪ, ಶೋಭಾ(ಅಧ್ಯಾಪಕಿ), ಬಬಿತಾ (ಇನ್ಶೂರೆನ್ಸ್‌ ಏಜೆಂಟ್‌) ಎಂಬ ನಾಲ್ವರು ಮಕ್ಕಳನ್ನು ಪಡೆದಿದ್ದಾರೆ. +ಇವರ ಸಾಧನೆಗೆ ಪ್ರತಿಫಲವಾಗಿ ಕಟೀಲು ಅಸ್ರಣ್ಣ ಸಂಸ್ಮರಣಾ ಸಂಮಾನ, ಕದ್ರಿ ಹವ್ಯಾಸಿ ಬಳಗದ 'ದಶಮಾನ ಸಂಮಾನಗಳಲ್ಲದೆ ಮಂಜೇಶ್ವರ,ಗಂಜಿಮಠ, ನಿಡ್ಡೋಡಿ, ಕೋಡಿಕಲ್‌, ಪುತ್ತೂರು ಮೊದಲಾದೆಡೆಯಲ್ಲಿ ಸಂಮಾನಗಳು ಸಂದಿವೆ. +ಸ್ರ್ತೀ ಪಾತ್ರಗಳ ಮುಖೇನ ಜನ ಮನ್ನಣೆಯನ್ನು ಪಡೆದಿರುವ ಉದ್ಯಾವರದ ಶ್ರೀ ಜಯ ಕುಮಾರರು ತೆಂಕು ಮತ್ತು ಬಡಗು ತಿಟ್ಟುಗಳೆರಡರಲ್ಲೂ ಪ್ರತಿಭೆಯನ್ನು ಮೆರೆಸಿದ ಪಾತ್ರಧಾರಿಯಾಗಿದ್ದಾರೆ. +ಪ್ರಸ್ತುತ ಶ್ರೀ ಮಾರಣ ಕಟ್ಟೆ ಮೇಳದ ಸ್ತ್ರೀ ಪಾತ್ರಧಾರಿಯಾಗಿ ತಿರುಗಾಟವನ್ನು ನಡೆಸುತ್ತಾ ಇದ್ದಾರೆ. +ಯಕ್ಷಗಾನದ ಹೆಸರುವಾಸಿ ಕಲಾವಿದರಾಗಿ ಕೀರ್ತಿ ಶೇಷರಾಗಿರುವ ಬಸವ ಗಾಣಿಗ ಮತ್ತು ಲಕ್ಷ್ಮಿ ದಂಪತಿಯ ಸುಪುತ್ರರಾಗಿ 5-3-1952ರಲ್ಲಿ ಹಾರಾಡಿ ಎಂಬಲ್ಲಿ ಹುಟ್ಟಿದರು. +ಇವರ ಅಜ್ಜ ಹಾರಾಡಿ ಕುಷ್ಟಗಾಣಿಗರು ಇವರ ತಂದೆಯಂತೆಯೇ ಉತ್ತಮ ಕಲಾವಿದರಾಗಿದ್ದರು. +ಹೀಗಾಗಿ ಜಯ ಕುಮಾರರು ತಂದೆ ಅಜ್ಜಂದಿರ ಆದರ್ಶದಲ್ಲೇ ಮುನ್ನಡೆದು ಕೀರ್ತಿ ಸಂಪನ್ನರಾಗಿದ್ದಾರೆ. +ವೀರಭದ್ರ ನಾಯ್ಕ್‌ರವರಲ್ಲಿ ಬಡಗು ತಿಟ್ಟಿನ ನಾಟ್ಯಾಭ್ಯಾಸವನ್ನು ಮಾಡಿ ಅನಂತರ ಕುರಿಯ ವಿಠಲ ಶಾಸ್ತ್ರಿ ಮತ್ತು ಪಡ್ರೆ ಚಂದು ರವರಲ್ಲಿ ತೆಂಕುತಿಟ್ಟಿನ ನಾಟ್ಯಾಭ್ಯಾಸವನ್ನು ಮಾಡಿ ಮೇಳದ ತಿರುಗಾಟವನ್ನು ಆರಂಭಿಸಿದರು. +ಶೈಕ್ಷಣಿಕವಾಗಿ ಪ್ರಾಥಮಿಕ ಹಂತದ ವಿದ್ಯಾಭ್ಯಾಸವನ್ನು ಪಡೆದಿದ್ದರೂ ಭಾವ ಪೂರ್ಣವಾದ ಮಾತಿನಿಂದ ಪ್ರೌಢಿಮೆಯನ್ನು ತೋರಿದ್ದಾರೆ. +19ನೇ ವರ್ಷದಿಂದಲೇ ತಿರುಗಾಟವನ್ನು ಆರಂಭಿಸಿದ ಜಯಕುಮಾರರು ಸುರತ್ಕಲ್‌ ಮೇಳ- 2 ವರ್ಷ, ಧರ್ಮಸ್ಥಳ ಮೇಳ - 29 ವರ್ಷ,ಸಾಲಿಗ್ರಾಮ ಮೇಳ - 2 ವರ್ಷ, ಕದ್ರಿ ಮೇಳ - 1ವರ್ಷ, ಸುಂಕದಕಟ್ಟೆ ಮೇಳ - 1 ವರ್ಷ, ಸೌಕೂರುಮೇಳ - 1 ವರ್ಷ, ಎಡನೀರು ಮೇಳ -2ವರ್ಷ, ಬಪ್ಪನಾಡು ಮೇಳ - 1 ವರ್ಷ, ಮಾರಣಕಟ್ಟೆಮೇಳ - 1 ವರ್ಷ ಹೀಗೆ ಹಲವು ಮೇಳಗಳಲ್ಲಿ ತಿರುಗಾಟ ಮಾಡಿರುವ ಅನುಭವವಿದೆ. +ಶ್ರೀದೇವಿ, ದಾಕ್ಷಾಯಿಣಿ, ಅಂಬು ಬಳ್ಳಾಲ್ತಿ,ಸುಭದ್ರೆ, ಅಂಬೆ, ವಿಷ್ಣು, ಕೃಷ್ಣ ಮುಂತಾದ ಪಾತ್ರಗಳನ್ನು ಮಾಡಿರುವ ಇವರು ಶ್ರೀಮತಿ ವಾರಿಜಾ ಎಂಬವರನ್ನು ವರಿಸಿ ಪೂರ್ಣರಾಜ್‌ ಮತ್ತು ಪೂಜಾ ಎಂಬ ಇಬ್ಬರು ಮಕ್ಕಳನ್ನು ಪಡೆದಿದ್ದಾರೆ. +ಇವರ ಸಾಧನೆಗೆ ತಕ್ಕಂತೆ ಉದ್ಯಾವರ, ಮಂಚಕಲ್ಲು, ಮಣಿಪಾಲ ಮೊದಲಾದೆಡೆಯಲ್ಲಿ ಸಂಮಾನಗಳು ಸಂದಿವೆ. +ಜನಾರ್ದನ ಎನ್‌.ಕಾರ್ವಿಅಜ್ಞಮ್ಯನ ಮನೆ (ಪ್ರಣಾಮ್‌)ಉಪ್ಪುಂದ ಗ್ರಾಮ ಮತ್ತು ಅಂಚೆ ಕುಂದಾಪುರ ತಾಲೂಕು ಉಡುಪಿ . +ಶ್ರೀ ಕಟೀಲು ಮೇಳದಲ್ಲಿ ತಿರುಗಾಟವನ್ನು ಮಾಡುತ್ತಿರುವ ಶ್ರೀ ಜನಾರ್ದನ ಎನ್‌.ಕಾರ್ವಿಯವರು ಪುಂಡು ವೇಷಗಳ ಪಾತ್ರ ನಿರ್ವಹಣೆಯಲ್ಲಿ ಪ್ರೌಢಿಮೆಯನ್ನು ಸಾಧಿಸಿರುವ ಯುವ ಕಲಾವಿದರಾಗಿದ್ದಾರೆ. +ನಾರಾಯಣ ಕಾರ್ವಿ ಮತ್ತು ಕಮಲಾವತಿ ದಂಪತಿಯ ಸುಪುತ್ರರಾಗಿ 27-10-1979ರಂದು ಉಪ್ಪುಂದದಲ್ಲಿ ಜನಿಸಿದರು. +8ನೇ ತರಗತಿಯ ವಿದ್ಯಾಭ್ಯಾಸವನ್ನು ಪಡೆದಿರುವ ಇವರು ಯಕ್ಷಗಾನ ಕಲೆಯ ಮೇಲೆ ಆಕರ್ಷಿತರಾಗಿ ಶ್ರೀ ಕ್ಷೇತ್ರ ಧರ್ಮಸ್ಥಳದ ಲಲಿತ ಕಲಾಕೇಂದ್ರದಲ್ಲಿ ಕೋಳ್ಕೂರು ರಾಮಚಂದ್ರರಾವ್‌ ಅವರ ನೇತೃತ್ವದಲ್ಲಿ ನಾಟ್ಯಾಭ್ಯಾಸ ಮಾಡಿದರು. +14ನೇ ವರ್ಷದಲ್ಲೇ ರಂಗ ಪ್ರವೇಶ ಮಾಡಿದ ಇವರು ಕಟೀಲು ಮೇಳದಲ್ಲಿ 14 ವರ್ಷಗಳ ತಿರುಗಾಟವನ್ನು ಪೂರೈಸಿದ್ದಾರೆ. +ಚಂಡ-ಮುಂಡರು,ಚಂಡ-ಪ್ರಚಂಡರು, ಶ್ರೀಕೃಷ್ಣ, ಭಾರ್ಗವ, ಅಭಿಮನ್ಯು,ವಿದ್ಯುನ್ಮಾಲಿ, ದೇವೇಂದ್ರ ಚತುರ್ಬಾಹು ಮೊದಲಾದ ಪಾತ್ರಗಳನ್ನು ನಿರ್ವಹಿಸಿದ್ದಾರೆ. +ದಶಾವತಾರ ಪ್ರಸಂಗದ ಮತ್ಸ್ಯ, ವರಾಹ,ಜಾಂಬವತಿ ಕಲ್ಮಾಣದ ಸಿಂಹ ಮುಂತಾದ ಬಣ್ಣದ ವೇಷದ ವಿಭಾಗಕ್ಕೆ ಸೇರಿದ ಪಾತ್ರಗಳನ್ನು ರಂಗ ತುಂಬುವಂತೆ ತೀವ್ರಗತಿಯ ಕುಣಿತದಲ್ಲಿ ಅಭಿನಯಿಸುವ ಚಾಕಚಕ್ಯತೆಯನ್ನು ಇವರಲ್ಲಿ ಕಾಣಬಹುದಾಗಿದೆ. +ಇಷ್ಟಲ್ಲದೆ ಪುಂಡು ವೇಷಗಳ ಜೊತೆಗೆ ರಾಜವೇಷದ ಪಾತ್ರಗಳನ್ನು ನಿರ್ವಹಿಸುತ್ತಾ ಕಲಾಸೇವೆಯನ್ನು ಮಾಡುತ್ತಾ ಇದ್ದಾರೆ. +ಜಯಾನಂದ ಸಂಪಾಜೆ ಸುಳ್ಳಕ್ಕೋಡಿ ಮನೆ, ಸಂಪಾಜೆ ಅಂಚೆ ಮತ್ತು ಗ್ರಾಮ,ಸುಳ್ಳ ತಾಲೂಕು. +ರಾಜವೇಷ, ನಾಟಕೀಯ ವೇಷ ಮತ್ತು ಪುಂಡು ವೇಷಗಳ ಮುಖೇನ ಕಲಾಸೇವೆಯನ್ನು ಮಾಡುತ್ತಾ ಬೆಳೆದಿರುವ ಶ್ರೀ ಜಯಾನಂದ ಸಂಪಾಜೆಯವರು ಪ್ರಸ್ತುತ ಹೊಸನಗರ ಮೇಳದ ಕಲಾವಿದರಾಗಿ ತಿರುಗಾಟವನ್ನು ನಡೆಸುತ್ತಾ ಇದ್ದಾರೆ. +ದಿನಾಂಕ 1-6-1972ರಲ್ಲಿ ತಿಮ್ಮಯ್ಯ ಗೌಡ ಮತ್ತು ಎಸ್‌.ಲಕ್ಷ್ಮೀ ದಂಪತಿಯ ಸುಪುತ್ರರಾಗಿ ಸುಳ್ಕಕೋಡಿ ಮನೆಯಲ್ಲಿ ಜನಿಸಿದರು. +ಪದವಿಪೂರ್ವ ಹಂತದ ವಿದ್ಯಾಭ್ಯಾಸವನ್ನು ಪಡೆದಿರುವ ಇವರು ಬಾಲ್ಯದಿಂದಲೇ ಯಕ್ಷಗಾನ ಕಲೆಯತ್ತ ಆಕರ್ಷಿತರಾಗಿದ್ದರು. +ಅಜ್ಜ ಕೇದಗಡಿ ಗುಡ್ಡಪ್ಪ ಗೌಡರ ಆದರ್ಶ ಇವರ ಕಲಾಜೀವನದ ಬೆಳವಣಿಗೆಗೆ ಉತ್ತೇಜನವನ್ನು ನೀಡಿದೆ. +ಆರಸಿನ ಮಕ್ಕಿಯ ಪರಮೇಶ್ವರ ಆಚಾರ್ಯರಿಂದ ನಾಟ್ಯಾಭ್ಯಾಸವನ್ನು ಮಾಡಿರುವ ಜಯಾನಂದರು 20ನೇ ವರ್ಷದಲ್ಲಿ ರಂಗಪ್ರವೇಶ ಮಾಡಿದರು. +ಕಟೀಲುಮೇಳ - 9 ವರ್ಷ, ಕುಂಜಾರು ಮೇಳ - 1ವರ್ಷ, ಹೊಸನಗರ ಮೇಳ - 2 ವರ್ಷ, ಹೀಗೆ ಮೇಳಗಳ 12 ವರ್ಷಗಳ ತಿರುಗಾಟವನ್ನು ಪೂರೈಸಿದ್ದಾರೆ. +ದೇವೇಂದ್ರ, ಅರ್ಜುನ, ಹಿರಣ್ಯಾಕ್ಷ, ಇಂದ್ರಜಿತು,ಅರುಣಾಸುರ, ಅವೀಕ್ಷಿತ, ದೇವವೃತ, ಮಧು, ಕೈಟಭ ಮೊದಲಾದ ಪಾತ್ರಗಳನ್ನು ಉತ್ತಮವಾದ ಮಾತಿನ ಮುಖೇನ ನಿರ್ವಹಿಸುತ್ತಾರೆ. +ಮಳೆಗಾಲದಲ್ಲಿ ಕೃಷಿಯ ಬಗ್ಗೆ ಆಸಕ್ತರಾಗಿ ಶ್ರಮಿಸುತ್ತಿರುವ ಇವರು ಶ್ರೀಮತಿ ವಿಜಯಾ ಎಸ್‌.ಜೆ. ಎಂಬವರನ್ನು ವರಿಸಿ ಭ್ರಾಮರಿ ಮತ್ತು ನೈಯತ್ಯ ಎಂಬ ಇಬ್ಬರು ಮಕ್ಕಳನ್ನು ಪಡೆದಿದ್ದಾರೆ. +ರಾಜವೇಷ, ಸ್ತ್ರೀವೇಷ, ಪುಂಡು ವೇಷ ಮತ್ತು ನಾಟಕೀಯು ವೇಷಗಳ ಮುಖೇನ ಪ್ರೌಢಿಮೆಯನ್ನು ಸಾಧಿಸಿರುವ ಶ್ರೀ ಪೆರ್ಲ ಜಗನ್ನಾಥ ಶೆಟ್ಟರು ಹೊಸನಗರದ ಶ್ರೀರಾಮಚಂದ್ರಾಪುರ ಮೇಳದಲ್ಲಿ ತಿರುಗಾಟವನ್ನು ನಡೆಸುತ್ತಾ ಇದ್ದಾರೆ. +ದಿನಾಂಕ 25-10-1966 ರಲ್ಲಿ ಮಂಜಪ್ಪಶೆಟ್ಟಿ ಮತ್ತು ಕಮಲ ಶೆಡ್ತಿ ದಂಪತಿಯ ಸುಪುತ್ರರಾಗಿ ಕಾಸರಗೋಡು ಜಿಲ್ಲೆಯ ಪೆರ್ಲದ ಕಾಟುಕುಕ್ಕೆ ಎಂಬಲ್ಲಿ ಜನಿಸಿದರು. +8ನೇ ತರಗತಿಯ ವಿದ್ಯಾಭ್ಯಾಸವನ್ನು ಪಡೆದಿರುವ ಇವರು ಯಕ್ಷಗಾನ ಕಲೆಯತ್ತ ಆಕರ್ಷಿತರಾಗಿ ಕಾಟುಕುಕ್ಕೆ ಕುಂಞ ರಾಮ ಮಣಿಯಾಣಿಯವರಿಂದ ಮೊದಲ ಹಂತದ ನಾಟ್ಯಾಭ್ಯಾಸವನ್ನು ಪೂರೈಸಿದರು. +ಮುಂದೆ ಶ್ರೀ ಕ್ಷೇತ್ರ ಧರ್ಮಸ್ಥಳದ ಲಲಿತಕಲಾ ಕೇಂದ್ರದಲ್ಲಿ ಕರ್ಗಲ್ಲು ವಿಶ್ವೇಶ್ವರ ಭಟ್ಟರಿಂದ ಹೆಚ್ಚಿನ ಅಧ್ಯಯನವನ್ನು ಮಾಡಿರುವರು. +ಕದ್ರಿ ಮೇಳ - 7 ವರ್ಷ, ಸುರತ್ಕಲ್‌ ಮೇಳ-13 ವರ್ಷ, ಗಣೇಶಪುರ ಮೇಳ - 1 ವರ್ಷ,ಕುಂಟಾರು ಮೇಳ - 5 ವರ್ಷ, ಎಡನೀರು ಮೇಳ- 1 ವರ್ಷ ಅನಂತರ ಹೊಸನಗರ ಮೇಳದಲ್ಲಿ 4ವರ್ಷಗಳ ತಿರುಗಾಟವನ್ನು ಪೂರೈಸಿರುವರು. +ಪುಂಡುವೇಷ, ಸ್ತ್ರೀವೇಷ, ರಾಜವೇಷ,ನಾಟಕೀಯವೇಷ, ಪೋಷಕ ಪಾತ್ರಗಳು ಸೆರಿದಂತೆ ಎಲ್ಲಾ ರೀತಿಯ ವೇಷಗಳನ್ನು ಮಾಡಲು ಅರ್ಹರಾಗಿರುವ ಇವರು ವಿಷ್ಣು, ಕೃಷ್ಣ ಈಶ್ವರ, ರಾಮ,ಮಯೂರ ಧ್ವಜ, ಅರ್ಜುನ, ದೇವೇಂದ್ರ, ಸುಭದ್ರೆ,ಶ್ರೀದೇವಿ, ಚಂದ್ರಮತಿ, ಸುರ್ದಶನ ಕುಶಲವರು,ಚಂಡ-ಮುಂಡರು ಮುಂತಾದ ಪಾತ್ರಗಳನ್ನು ನಿರ್ವಹಿಸಿದ್ದಾರೆ. +ದಿ।ಬೆಟ್ಟಂಪಾಡಿ ಬಾಳಪ್ಪ ಶೆಟ್ಟರ ದೂರ ಸಂಬಂಧಿಯಾಗಿರುವ ಇವರು ಶ್ರೀಮತಿ ಮೋಹಿನಿ ಶೆಡ್ತಿ ಎಂಬವರನ್ನು ವರಿಸಿ ಧನ್ಯಶ್ರೀ, ರಮ್ಯಶ್ರೀ,ರೂಪಿತ್‌ ಎಂಬ ಮೂವರು ಮಕ್ಕಳನ್ನು ಪಡೆದಿದ್ದಾರೆ. +ಇವರ ಸಾಧನೆಗೆ ಪ್ರತಿಫಲವಾಗಿ ಪುತ್ತೂರಿನಲ್ಲಿ ಅಭಿಮಾನಿಗಳಿಂದ ಸಂಮಾನವಾಗಿದೆ. +ಸ್ತ್ರೀ ವೇಷ, ಪುಂಡುವೇಷ, ರಾಜ ವೇಷ ಮತ್ತು ನಾಟಕೀಯ ವೇಷಗಳನ್ನು ಮಾಡುತ್ತಾ ಬೆಳೆದುಬಂದಿರುವ ಬೋಳಂತೂರು ಜಯರಾಮ ಶೆಟ್ಟರು ಕಟೀಲು ಮೇಳದ ಕಲಾವಿದರಾಗಿ ತಿರುಗಾಟವನ್ನು ನಡೆಸುತ್ತಾ ಇದ್ದಾರೆ. +ದಿನಾಂಕ 24-10-1982ರಲ್ಲಿ ಶ್ರೀನಿವಾಸ್‌ ಶೆಟ್ಟಿ ಮತ್ತು ವಾರಿಜ ಶೆಟ್ಟ ದಂಪತಿಯ ಸುಪುತ್ರರಾಗಿ ಬಂಟ್ವಾಳ ತಾಲೂಕಿನ ಪೈಲ ಎಂಬಲ್ಲಿ ಹುಟ್ಟಿದರು. +7ನೇ ತರಗತಿಯ ತನಕ ವಿದ್ಯಾಭ್ಯಾಸವನ್ನು ಪಡೆದಿರುವ ಇವರು 15ನೇ ವರ್ಷದಿಂದ ಯಕ್ಷಗಾನದ ಪಾತ್ರ ನಿರ್ವಹಣೆ ಮಾಡಲು ಕಲಿತರು. +ಕೋಳ್ಕೂರು ರಾಮಚಂದ್ರ ರಾವ್‌ ಅವರಿಂದ ನಾಟ್ಯಾಭ್ಯಾಸವನ್ನು ಮಾಡಿದ ಇವರು ಬಾಲ್ಯದಿಂದಲೇ ಯಕ್ಷಗಾನವನ್ನು ನೋಡುತ್ತಾ ಕಲೆಯ ಬಗ್ಗೆ ಬೆಳೆಯುವ ಆಸೆಯನ್ನು ಕಟ್ಟಿಕೊಂಡಿದ್ದರು. +ಹಾಗಾಗಿ ಪ್ರಸಂಗದ ಅನುಭವ, ವಿಭಿನ್ನ ಪಾತ್ರಗಳನ್ನು ನಿರ್ವಹಿಸುವ ಶೈಲಿ ಮುಂತಾದುವುಗಳನ್ನು ಬೇಗನೆ ಮನದಟ್ಟು ಮಾಡುವ ಪ್ರತಿಭೆ ಇವರಲ್ಲಿ ಮೈಗೂಡಿದೆ. +ಯಕ್ಷಗಾನದ ವೇಷಧಾರಿ ಬೋಳಂತೂರು ವಿಠಲ ಅವರ ಬಾವನಾಗಿರುವ ಜಯರಾಮ ಶೆಟ್ಟರು ಕಟೀಲು ಮೇಳವೊಂದರಲ್ಲೆ 14 ವರ್ಷಗಳ ತಿರುಗಾಟವನ್ನು ಪೂರೈಸಿದ್ದಾರೆ. +ಬ್ರಹ್ಮ ಚಂಡ -ಮುಂಡರು, ವಿಷ್ಣು, ರಾಮ, ಮೋಹಿನಿ, ಮಾಲಿನಿ,ಯಶೋಮತಿ, ನಂದಿನಿ, ಮಧು - ಕೈಟಪ,ದೇವೇಂದ್ರ, ಅರ್ಜುನ ಇತ್ಯಾದಿ ಪಾತ್ರಗಳನ್ನು ನಿರ್ವಹಿಸುತ್ತಾ ಇದ್ದಾರೆ. +ಹಾಸ್ಯ ಪಾತ್ರ, ರಾಜ ವೇಷ ಮತ್ತು ಮುಖ್ಯ ಪೋಷಕ ಪಾತ್ರಗಳ ಮುಖೇನ ಕಲಾ ಸೇವೆಯನ್ನು ಮಾಡುತ್ತಾ ಬೆಳೆದು ಬಂದಿರುವ ಶ್ರೀ ಬಜಾಲ್‌ಜನಾರ್ದನ ಇವರು ಸುಂಕದಕಟ್ಟೆ ಮೇಳದ ಕಲಾವಿದರಾಗಿ ತಿರುಗಾಟವನ್ನು ನಡೆಸುತ್ತಾ ಇದ್ದಾರೆ. +ತಿಮ್ಮಪ್ಪ ಕುಲಾಲ್‌ ಮತ್ತು ಯಮುನಾ ದಂಪತಿಯ ಸುಪುತ್ರರಾಗಿ ಬಜಾಲ್‌ ಎಂಬಲ್ಲಿ ಹುಟ್ಟಿದ ಜನಾರ್ದನರಿಗೆ ಈಗಾಗಲೇ 60 ವರ್ಷಗಳಾಗಿವೆ. +ಪ್ರಾಥಮಿಕ ಹಂತದ ವಿದ್ಯಾಭ್ಯಾಸವನ್ನು ಪಡೆದಿರುವ ಇವರು ಬೋಳಾರ ನಾರಾಯಣ ಶೆಟ್ಟಿಯವರ ಪ್ರೇರಣೆಯ ಮೇರೆಗೆ ಅವರಿಂದಲೇ ನಾಟ್ಯಾಭ್ಯಾಸ ಮಾಡಿ ರಂಗ ಪ್ರವೇಶ ಮಾಡಿದರು. +18ನೇ ವರ್ಷದಿಂದಲೇ ಮುಖಕ್ಕೆ ಬಣ್ಣ ಹಚ್ಚಲು ಆರಂಭಿಸಿದ ಇವರು ಕರ್ನಾಟಕ ಮೇಳ - 8 ವರ್ಷ,ಕದ್ರಿ ಮೇಳ - 10 ವರ್ಷ, ಬಪ್ಪನಾಡು ಮೇಳ - 2ವರ್ಷ, ಧರ್ಮಸ್ಥಳ ಮೇಳ - 1 ವರ್ಷ,ಮಂಗಳಾದೇವಿ ಮೇಳ - 1 ವರ್ಷ, ಸುಂಕದಕಟ್ಟೆಮೇಳ - 20 ವರ್ಷ ಹೀಗೆ ಒಟ್ಟು 42 ವರ್ಷಗಳ ತಿರುಗಾಟವನ್ನು ಮಾಡಿದ ಅನುಭವವನ್ನು ಹೊಂದಿದ್ದಾರೆ. +ದಾರುಕ, ಬಾಹುಕ, ಮಕರಂದ, ಉಸ್ಮಾನ್‌,ವಿಜಯ, ದೇವೇಂದ್ರ, ಅರ್ಜುನ, ಪಾಂಡ್ಕರಾಜ, ಬ್ರಹ್ಮಅಕ್ರೂರ, ಧರ್ಮರಾಯ, ಪೆರುಮಳ, ಕಾಂತಣ್ಣ ಅತಿಕಾರಿ ಮೊದಲಾದ ತುಳು ಕನ್ನಡ ಪ್ರಸಂಗಗಳ ಪಾತ್ರಗಳನ್ನು ನಿರ್ವಹಿಸಿದ್ದಾರೆ. +ಹಿರಿಯ ಯಕ್ಷಗಾನ ಕಲಾವಿದ ಬಾಬು ಕುಡ್ತಡ್ಕ ಇವರ ಚಿಕ್ಕ ತಾಯಿಯ ಮಗನಾಗಿರುವ ಜನಾರ್ದನರು ಶ್ರೀಮತಿ ವಸಂತಿ ಎಂಬವರನ್ನು ವರಿಸಿ ರೂಪಾ,ಶರ್ಮಿಳಾ, ರಶೀಶ್‌, ಮಮತಾ, ಶಿವಪಸಾದ್‌, ಅನಿತಾ ಎಂಬ ಮಕ್ಕಳನ್ನು ಪಡೆದಿದ್ದಾರೆ. +ಮಂಜೇಶ್ವರ,ಮುಳ್ಳೇರಿಯಾ, ಮುಂಬಯಿ ಮುಂತಾದೆಡೆಯಲ್ಲಿ ಇವರಿಗೆ ಸಂಮಾನಗಳು ಸಂದಿವೆ. +ಪ್ರಸಂಗ ರಚನೆ, ವೇಷಗಾರಿಕೆ, ಅರ್ಥಗಾರಿಕೆ,ಮತ್ತು ಬರಹಗಾರಿಕೆಯಲ್ಲಿ ಪ್ರೌಢಿಮೆಯನ್ನು ಸಾಧಿಸಿ ಕಲಾವಿದನೂ, ಸಾಧಕನೂ ಆಗಿರುವ ಶ್ರೀ ತಾರನಾಥವರ್ಕಾಡಿಯವರು ಪ್ರಸ್ತುತ ಧರ್ಮಸ್ಥಳ ಮೇಳದ ಕಲಾವಿದರಾಗಿ ತಿರುಗಾಟವನ್ನು ನಡೆಸುತ್ತಾ ಇದ್ದಾರೆ. +ಪಂಡಿತ್‌ ವರ್ಕಾಡಿ ಅಪ್ಪಯ್ಯ ಬಲ್ದಾಳ ಹಾಗೂ ಕಮಲಾಕ್ಷಿ ದಂಪತಿಯ ಸುಪುತ್ರರಾಗಿ 1-6-1963ರಂದು ಕಾಸರಗೋಡು ಜಿಲ್ಲೆಯ ವರ್ಕಾಡಿಯಲ್ಲಿ ಜನಿಸಿದರು. +ಯಕ್ಷಗಾನದತ್ತ ಬಾಲ್ಯದಲ್ಲೇ ಆಕರ್ಷಿತರಾಗಿ ಕೆ.ಗೋವಿಂದ ಭಟ್‌ ಮತ್ತು ಕರ್ಗಲ್ಲು ವಿಶ್ವೇಶ್ವರ ಭಟ್ಟರಲ್ಲಿ ನಾಟ್ಯಾಭ್ಯಾಸವನ್ನು ಮಾಡಿದರು. +ಮುಂದೆ ದೇರಾಜೆ ಸೀತಾರಾಮಯ್ಯ ಅವರಿಂದ ಸಾಹಿತ್ಯ ಸಾಧನೆಯ ಪ್ರಭಾವಕ್ಕೆ ಒಳಗಾದ ಇವರು ಡಾ| ಎನ್‌.ನಾರಾಯಣ ಶೆಟ್ಟಿಯವರಲ್ಲಿ ಪ್ರಸಂಗ ರಚನೆಯ ಅಧ್ಯಯನ, ಕೊರ್ಗಿ ವೆಂಕಟೇಶ ಉಪಾಧ್ಯಾಯರಲ್ಲಿ ಸಾಹಿತ್ಯದ ಬಗ್ಗೆ ಅಧ್ಯಯನ ಮಾಡಿರುವರು. +ಕಲಾವಿದರಾದ ಮೇಲೆ ಸ್ವಂತ ಪರಿಶ್ರಮದಿಂದಲೇ ಕನ್ನಡ ಎಂ.ಎ.ಪದವಿಯನ್ನು ಪಡೆದಿರುವ ಇವರು 17ನೇ ವಯಸ್ಸಿನಿಂದಲೇ ರಂಗ ಪ್ರವೇಶ ಮಾಡಿದ್ದಾರೆ. +ಸುಂಕದಕಟ್ಟೆ ಮೇಳ - 2 ವರ್ಷ,ಕದ್ರಿ ಮೇಳ - 1 ವರ್ಷ, ನಂದಾವರ ಮೇಳ - 1ವರ್ಷ, ಅರುವ ಮೇಳ - 1 ವರ್ಷ, ಬಪ್ಪನಾಡುಮೇಳ - 2 ವರ್ಷ, ಧರ್ಮಸ್ಥಳ ಮೇಳ - 23ವರ್ಷ ಹೀಗೆ ತಿರುಗಾಟದ ಅನುಭವವನ್ನುಹೊಂದಿದ್ದಾರೆ. +ಸೌಮ್ಯ ಸ್ವಭಾವಕ್ಕೊಳಗಾಗುವ ವೇಷಗಳ ಚಿತ್ರಣವನ್ನು ಚೆನ್ನಾಗಿ ಮಾಡಬಲ್ಲ ಇವರು ಕೃಷ್ಣ,ವಿಷ್ಣು, ರಾಮ, ಲಕ್ಷ್ಮಣ, ಹರಿಶ್ಚಂದ್ರ, ಭ್ರಮರ ಕುಂತಳೆ ಮುಂತಾದ ಪಾತ್ರಗಳನ್ನು ನಿರ್ವಹಿಸಿದ್ದಾರೆ. +ತಾಳಮದ್ದಳೆಯಲ್ಲೂ ಅರ್ಥ ವಾದಿಯಾಗಿ ಪಾತ್ರ ನಿರ್ವಹಣೆ ಮಾಡುವ ಇವರು ಪಾಡ್ದನ ಮತ್ತು ಪೌರಾಣಿಕ ಕಥೆಗಳಿಗೆ ಸಂಬಂಧಿಸಿದ ಹಲವು ಪ್ರಸಂಗಗಳನ್ನು ರಚಿಸಿದ್ದಾರೆ. +ಧರ್ಮಸ್ಥಳದ ಲಲಿತಾಕಲಾ ಕೇಂದ್ರದಲ್ಲಿ ನಾಲ್ಕು ವರ್ಷಗಳ ತನಕ ನಾಟ್ಯಗುರುವಾಗಿ ಕಾರ್ಯ ನಿರ್ವಹಿಸಿದ್ದಾರೆ. +ಬ್ರಹ್ಮ ಬೈದೆರ್‌, ಅಗೋಳಿ ಮಂಜಣೆ, ವಿಶ್ವಕರ್ಮ ಮಹಾತ್ಮೆ ಒಡಿಯೂರು ಕ್ಷೇತ್ರ ಮಹಾತ್ಮೆ ಮುಂತಾದ ಪ್ರಸಂಗಗಳು ಇವರಿಂದ ರಚಿಸಲ್ಪಟ್ಟಿವೆ. +ಪುರಾಣದ ಬಾಲಕರು, ಒಂದೊಂದು ನದಿಗೂ ಒಂದೊಂದು ಕಥೆಗಳು ಇವರ ಧಾರಾವಾಯಿ ಲೇಖನಗಳಾಗಿದ್ದು, ಉದಯವಾಣಿ ದಿನ ಪತ್ರಿಕೆಯ ಮನ್ನಣೆಗೊಳಗಾಗಿದೆ. +ಪುರಾಣದ ಬಾಲಕರು ಕೃತಿರೂಪದಲ್ಲಿ ಪ್ರಕಟವಾಗಿದೆ. +ಡಾ.ನಾರಾಯಣಶೆಟ್ಟಿಯವರ ಜೀವನ ಸಾಧನೆಗೆ ಸಂಬಂಧ ಪಟ್ಟು ಅಭಿನವ ನಾಗವರ್ಮ ಎಂಬ ಕೃತಿಯನ್ನು ರಚಿಸಿದ್ದಾರೆ. +ಇಷ್ಟಲ್ಲದೆ ಇವರ ಕೆಲವು ಪ್ರಸಂಗಗಳು ಕೂಡಾ ಪ್ರಕಟವಾಗಿವೆ. +ಶ್ರಮವಂತರಾದ ಇವರ ಸಾಧನೆಗೆ ಪ್ರತಿಫಲವಾಗಿ ಹಲವೆಡೆಯಲ್ಲಿ ಸಂಮಾನ ಪುರಸ್ಕಾರಗಳು ಸಂದಿವೆ. +ವೈದ್ಯರಾಗಿರುವ ಡಾ। ಪ್ರೇಮಲತಾ ಎಂಬವರನ್ನು ವರಿಸಿ ಆಜ್ಞಾ ಸೋಹಂ ಎಂಬ ಸುಪುತ್ರಿಯನ್ನು ಪಡೆದಿದ್ದಾರೆ. +ಹಾಸ್ಕ ಪಾತ್ರಗಳ ಮುಖೇನ ಪ್ರಭಾವಿತರಾಗಿ ಪ್ರಸಿದ್ಧಿಗೆ ಬಂದಿರುವ ಶ್ರೀ ಮಿಜಾರು ಶಿಮ್ಮಪ್ಪರು ಪ್ರಸ್ತುತ ಸುಂಕದಕಟ್ಟೆ ಮೇಳದ ಕಲಾವಿದರಾಗಿ ತಿರುಗಾಟವನ್ನು ನಡೆಸುತ್ತಾ ಇದ್ದಾರೆ. +ಹೊನ್ನಯ್ಯ ಶೆಟ್ಟಿಗಾರ್‌ ಮತ್ತು ಸೀತಮ್ಮ ದಂಪತಿಯ ಸುಪುತ್ರರಾಗಿ ಮಿಜಾರಿನಲ್ಲಿ ಹುಟ್ಟಿದ ತಿಮ್ಮಪ್ಪರವರಿಗೆ 45 ವರ್ಷಗಳಾಗಿವೆ. +10ನೇ ತರಗತಿಯ ತನಕ ವಿದ್ಯಾಭ್ಯಾಸವನ್ನು ಪಡೆದಿರುವ ಇವರು ಮಾವನಾದ ಶ್ರೀ ಹರೀಶ ಶೆಟ್ಟಿ ಮುಚ್ಚೂರು ಇವರ ಪ್ರೇರಣೆಯ ಮೇರೆಗೆ ಇವರಲ್ಲೇ ನಾಟ್ಯಾಭ್ಯಾಸವನ್ನು ಮಾಡಿ ರಂಗ ಪ್ರವೇಶ ಮಾಡಿದರು. +ಮುಂದೆ ಕರ್ನಾಟಕ ಮೇಳದಲ್ಲಿ ಮಿಜಾರು ಅಣ್ಣಪ್ಪರವರ ಜೊತೆಗೆ ತಿರುಗಾಟವನ್ನು ನಡೆಸಿದ್ದರಿಂದ ಅವರ ಅನುಭವವನ್ನು ಸಂಪಾದಿಸಿ ಹೆಚ್ಚಿನ ಪ್ರೌಢಿಮೆಯನ್ನು ಸಾಧಿಸಿದರು. +18ನೇ ವರ್ಷದಿಂದಲೇ ಯಕ್ಷಗಾನ ಕಲಾಸೇವೆಯನ್ನು ಆರಂಭಿಸಿದ ಇವರು ಪುತ್ತೂರು ಮೇಳ - 3 ವರ್ಷ, ಅರುವ ಮೇಳ - 2 ವರ್ಷ,ಬಪ್ಪನಾಡು ಮೇಳ - 2 ವರ್ಷ, ಕರ್ನಾಟಕ ಮೇಳ-15 ವರ್ಷ, ಕುಂಟಾರು ಮೇಳ - 2 ವರ್ಷ,ಎಡನೀರು ಮೇಳ - 2 ವರ್ಷ, ಕಟೀಲು ಮೇಳ -2 ವರ್ಷ ಹಾಗೂ ಸುಂಕದಕಟ್ಟೆ ಮೇಳ - 2 ವರ್ಷ ಹೀಗೆ ತುಳು-ಪೌರಾಣಿಕ ಪ್ರಸಂಗಗಳನ್ನು ಪ್ರದರ್ಶಿಸುವ ಮೇಳಗಳಲ್ಲಿ ತಿರುಗಾಟವನ್ನು ನಡೆಸಿರುವರು. +ದಾರುಕ, ವಿಜಯ, ಉಸ್ಮಾನ್‌, ಪಯ್ಯಬೈದ,ನಾರದ, ಈಶ್ವರ, ಬ್ರಹ್ಮ ಲಿಂಗಪ್ಪ ಆಚಾರಿ ಮುಂತಾದ ಹಾಸ್ಯ ಪಾತ್ರಗಳನ್ನು ನಿರ್ವಹಿಸುತ್ತಾ ಇದ್ದಾರೆ. +ಶ್ರೀಮತಿ ಜಯಶ್ರೀ ಎಂಬವರನ್ನು ವರಿಸಿರುವ ಇವರ ಕಲಾ ಸಾಧನೆಗೆ ಫಲಶ್ರುತಿಯಾಗಿ ಮಿಜಾರು ಸರಪಾಡಿ ಮುಂತಾದೆಡೆಯಲ್ಲಿ ಹತ್ತು ಹಲವು ಸಂಮಾನಗಳು ಸಂದಿವೆ. +ತನ್ನದೇ ಆದ ಪಾತ್ರ ಚಿತ್ರಣ ಮತ್ತು ಪಾತ್ರಕ್ಕೊಪ್ಪುವ ಶೈಲಿಯಿಂದ ನಟಿಸಿ ಜನಮನ್ನಣೆಯನ್ನು ಪಡೆದು ಕೀರ್ತಿಸಂಪನ್ನರಾಗಿರುವ ಶ್ರೀ ಜಪ್ಪು ದಯಾನಂದ ಶೆಟ್ಟರು ಪ್ರಸ್ತುತ ಶ್ರೀ ಭಗವತಿಮೇಳದ ಹಿರಿಯ ಕಲಾವಿದರಾಗಿ ತಿರುಗಾಟವನ್ನು ನಡೆಸುತ್ತಾ ಇದ್ದಾರೆ. +ದೇವಪ್ಪ ಶೆಟ್ಟಿ ಮತ್ತು ಲಕ್ಷ್ಮೀ ಶೆಡ್ತಿ ದಂಪತಿಯ ಸುಪುತ್ರರಾಗಿ 1950ರ ವರ್ಷ ಬೆಳ್ತಂಗಡಿಯ ಸವಣಾಲು ಎಂಬಲ್ಲಿ ಹುಟ್ಟಿದರು. +ಶೈಕ್ಷಣಿಕವಾಗಿ ಪ್ರಾಥಮಿಕ ವಿದ್ಯಾಭ್ಯಾಸವನ್ನು ಪಡೆದಿರುವ ಇವರು ಯಕ್ಷಗಾನ ಕಲೆಯ ಪ್ರಭಾವಕ್ಕೆ ಒಳಗಾಗಿ ಕೆ.ಗೋವಿಂದ ಭಟ್ಟರಲ್ಲಿ ನಾಟ್ಯಾಭ್ಯಾಸವನ್ನು ಮಾಡಿಕೊಂಡರು. +12ನೇ ವಯಸ್ಸಿನಿಂದಲೇ ಯಕ್ಷಗಾನದ ಪಾತ್ರನಿರ್ವಹಣೆ ಮಾಡುತ್ತಾ ಬೆಳೆದು ಬಂದರು. +ವೇಣೂರು ದೇಲಂಪುರಿ ಮೇಳ - 2 ವರ್ಷ,ಕುಂಡಾವು ಮೇಳ - 2 ವರ್ಷ, ಕರ್ನಾಟಕ ಮೇಳ-36 ವರ್ಷ ಹಾಗೂ ಭಗವತಿ ಮೇಳ - 7ವರ್ಷ ಒಟ್ಟು 47 ವರ್ಷಗಳ ತಿರುಗಾಟದ ಅನುಭವವನ್ನು ಹೊಂದಿದ್ದಾರೆ. +ಪುಂಡು, ರಾಜ, ಬಣ್ಣ, ಸ್ತ್ರೀ, ಹಾಸ್ಯ ಹೀಗೆ ಯಕ್ಷಗಾನದ ಎಲ್ಲಾ ವಿಧದ ಪಾತ್ರಗಳನ್ನು ನಿರ್ವಹಿಸಿ ಯಶೋವಂತರಾಗಿರುವ ಶ್ರೀ ಜಪ್ಪು ದಯಾನಂದ ಶೆಟ್ಟರಿಗೆ ಕರ್ನಾಟಕ ಮೇಳದ ದೀರ್ಫ ತಿರುಗಾಟವೇ ಜನಮನ್ನಣೆ ಮತ್ತು ಪ್ರಸಿದ್ಧಿಗೆ ಕಾರಣವಾಗಿತ್ತು. +ಕೋಟಿಚೆನ್ನಯದ ಚೆನ್ನಯ ಪಾತ್ರ ಸದಾ ಸ್ಮರಣೀಯ. +ಅತಿಕಾರಿ, ದೇವುಪೂಂಜ, ಕಾಂಶಬಾರೆ, ಬೂದಬಾರೆ ಇತ್ಯಾದಿ ಪಾತ್ರಗಳನ್ನು ಕೂಡಾ ಉಲ್ಲೇಖಿಸಬಹುದು. +ಶ್ರೀಮತಿ ಲೀಲಾ ಶೆಡ್ತಿ ಎಂಬವರನ್ನು ವರಿಸಿ ಶರ್ಮಿಳಾ, ಕುಶಲಾ, ಆಶಾ, ಸಂತೋಷ್‌ ಸಂದೀಪ್‌ಎಂಬ ಐವರು ಮಕ್ಕಳನ್ನು ಪಡೆದಿದ್ದಾರೆ. +ಇವರಸಾದನೆಗೆ ಪ್ರತಿಪಲವಾಗಿ ಮುಂಬಯಿ,ಜಪ್ಪಿನಮೊಗರು, ಕಾವೂರು ಮುಂತಾದ ಹಲವೆಡೆಯಲ್ಲಿ ಅಭಿಮಾನಿಗಳಿಂದ ಸಂಮಾನಗಳು ಸಂದಿವೆ. +ತುಳು ಭಾಷಾ ಪ್ರಸಂಗದ ಕಥಾ ನಾಯಕ ಪಾತ್ರಗಳಿಗೆ ತನ್ನದೇ ಆದ ಶೈಲಿಯಿಂದ ಜೀವಕಳೆಯನ್ನು ಭರಿಸಿ ಜನ ಮನ್ನಣೆಯನ್ನು ಪಡೆದು ಕೀರ್ತಿವಂತರಾದ ಶ್ರೀ ಕೆ.ಎಚ್‌.ದಾಸಪ್ಪ ರೈಯವರು ಪ್ರಸ್ತುತ ಮೇಳದ ನಿವೃತ್ತ ಕಲಾವಿದರಾಗಿದ್ದು ಕಲಾಭಿಮಾನಿಗಳ ಹೇಳಿಕೆಯ ಮೇರೆಗೆ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಾ ಇದ್ದಾರೆ. +10-5-1950ರಲ್ಲಿ ಬೈಂಕಿ ರೈ ಮತ್ತು ಕುಂಞಕ್ಕೆ ದಂಪತಿಯ ಸುಪುತ್ರರಾಗಿ ಈಶ್ವರ ಮಂಗಳದ ಕುತ್ಯಾಳ ಹೊಸಮನೆಯಲ್ಲಿ ಇವರು ಜನಿಸಿದರು. +ಪ್ರಾಥಮಿಕ ಹಂತದ ವಿದ್ಯಾಭ್ಯಾಸವನ್ನು ಪಡೆದ ಇವರು 16ನೇವಯಸ್ಸಿನಿಂದ ಯಕ್ಷಗಾನದ ಕ್ಷೇತ್ರವನ್ನು ಪ್ರವೇಶಿಸಿಕಲಾ ಸೇವೆಯನ್ನು ಆರಂಭಿಸಿದ್ದಾರೆ. +ಕೆ.ಎಸ್‌.ಬಾಬು ರೈ ಎಂಬವರ ಪ್ರೇರೆಣೆಯ ಮೇರೆಗೆ ಅವರಲ್ಲೇ ನಾಟ್ಯಾಭ್ಯಾಸವನ್ನು ಮಾಡಿದ ದಾಸಪ್ಪ ರೈ ಯವರು ಕರ್ನಾಟಕ ಮೇಳ - 18ವರ್ಷ, ಕದ್ರಿ ಮೇಳ - 8 ವರ್ಷ, ಕಣಿಪುರ ಕುಂಬ್ಳೆ(ಸ್ವಂತ ಮೇಳ) ಮೇಳ - 6 ವರ್ಷ, ಮಂಗಳಾದೇವಿಮೇಳ - 10 ವರ್ಷ ಹೀಗೆ 2008ರ ತನಕ ಮೇಳದ ತಿರುಗಾಟವನ್ನು ನಡೆಸಿದವರು ಅನಂತರ ಹೇಳಿಕೆಯ ಮೇರೆಗೆ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಾ ಇದ್ದಾರೆ. +ಮೇಳದಲ್ಲಿ ಮ್ಯಾನೇಜರ್‌ ಆಗಿ,ಯಜಮಾನರಾಗಿ ಕಾರ್ಯಕ್ರಮದ ಸಂಘಟಕರಾಗಿ ವಿವಿಧ ಮುಖಗಳಿಂದ ಅನುಭವವನ್ನು ಸಂಪಾದಿಸಿರುವ ಇವರು ಬಣ್ಣ, ರಾಜ ಮತ್ತು ನಾಟಕೀಯ ವೇಷಗಳನ್ನು ಮಾಡಿದವರಾಗಿದ್ದಾರೆ. +ಕೋಟಿ, ದೇವುಪೂಂಜ,ಕಾಂತಾಬಾರೆ, ಮಹಿಷಾಸುರ, ಭೀಮ, ರಾವಣ ಮುಂತಾದ ಪಾತ್ರಗಳನ್ನು ನಿರ್ವಹಿಸಿದ್ದಾರೆ. +ಇವರ ಕೋಟಿ ಪಾತ್ರವು ಪ್ರೇಕ್ಷಕರ ಪ್ರಭಾವಕ್ಕೊಳಗಾದ ಪಾತ್ರವಾಗಿದೆ. +ಆ ಪಾತ್ರದ ಕೊನೆಯ ಹಂತದ ಮಾತುಗಳು ವಿಷಾದ ಪೂರ್ಣವಾಗಿವೆ. +ಶ್ರೀಮತಿ ಚಿತ್ರಾವತಿ ಎಂಬವರನ್ನು ವರಿಸಿರುವ ಇವರು ದಿ।ಸಂಧ್ಯಾ (ದೈಹಿಕ ಶಿಕ್ಷಕಿ) ಮತ್ತು ದೇವಿಪ್ರಸಾದ್‌ ರೈ (ಉದಯ ಟಿ.ವಿ. ರಿಪೋರ್ಟರ್‌)ಎಂಬ ಇಬ್ಬರು ಮಕ್ಕಳನ್ನು ಪಡೆದಿದ್ದಾರೆ. +ಇವರ ಕಲಾ ಸಾಧನೆಗೆ ಪ್ರತಿಫಲವಾಗಿ ಜಿಲ್ಲಾರಾಜ್ಯೋತ್ಸವ ಪ್ರಶಸ್ತಿ, ತುಳು ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ದೆಹಲಿ ತುಳುನಾಡ ಪ್ರಶಸ್ತಿ ಮುಂತಾದ 50ಕ್ಕೂ ಮಿಕ್ಕಿದ ಗೌರವ ಸಂಮಾನಗಳು ದೊರೆತಿವೆ. +ಚೆನ್ನೈ,ಬೆಂಗಳೂರು, ಕಥರ್‌, ಮುಂಬಯಿ, ಬೆಹರನ್‌,ಇಲೆಲ್ಲಾ ಅಭಿಮಾನಿಗಳಿಂದ ಸಂಮಾನಿಸಲ್ಪಟ್ಟಿದ್ದಾರೆ. +ಸಂಗೀತಮಯವಾದ ಭಾಗವತಿಕೆಯ ಮುಖೇನ ರಸಿಕರ ಮನವನ್ನು ಮೆಚ್ಚಿಸಿ ಕೀರ್ತಿಸಂಪನ್ನರಾಗಿರುವ ಶ್ರೀ ದಿನೇಶ ಅಮ್ಮಣ್ಣಾಯರು ಪ್ರಸ್ತುತ ಶ್ರೀ ಎಡನೀರು ಯುಕ್ಚಗಾನ ಮಂಡಳಿಂತು ಕಲಾವಿದರಾಗಿ ತಿರುಗಾಟವನ್ನು ಮಾಡುತಿದ್ದಾರೆ. +7-11-1959ರಲ್ಲಿ ನಾರಾಯಣ ಅಮ್ಮಣ್ಣಾಯ ಮತ್ತು ಕಾವೇರಿ ಅಮ್ಮ ದಂಪತಿಯ ಸುಪುತ್ರರಾಗಿ ಇವರು ಜನಿಸಿದರು. +ಹತ್ತನೆಯ ತರಗತಿಯ ತನಕ ವಿದ್ಯಾಭ್ಯಾಸವನ್ನು ಪಡೆದಿರುವ ಇವರು ವಿದ್ವತ್ತಿನ ಮನೆತನದಲ್ಲೇ ಹುಟ್ಟಿದವರಾಗಿದ್ದಾರೆ. +ಇವರ ತಂದೆ ಮೃದಂಗ ವಾದಕರು, ಚಿಕ್ಕಪ್ಪ ಅರ್ಥಧಾರಿ ಮತ್ತು ಭಾಗವತರು. +ಹಿರಿಯ ಸಹೋದರಿ ರಾಜೀವಿ ಎಂಬವರು ಸಂಗೀತಗಾರರಾಗಿದ್ದಾರೆ. +ಹಾಗಾಗಿ ಇವರಲ್ಲೂ ಕಲಾಪ್ರತಿಭೆ ಜಿಗುರಿತು. +ದಾಮೋದರ ಮಂಡೆಚ್ಚರಿಂದ ಭಾಗವತಿಕೆಯ ಅಭ್ಯಾಸ. + ಹರಿನಾರಾಯಣ ಬೈಪಾಡಿತ್ತಾಯರಿಂದ ಮೃದಂಗದ ಅಭ್ಯಾಸ ಮಾಡಿರುವ ಇವರು ಸಹೋದರಿಯಿಂದ ಸಂಗೀತದ ಅಭ್ಯಾಸವನ್ನುಮಾಡಿದ್ದಾರೆ. +ಚಿಕ್ಕಪ್ಪ ವಿಷ್ಣು ಅಮ್ಮಣ್ಣಯರ ಪ್ರೋತ್ಸಾಹದೊಂದಿಗೆ ಉತ್ತೇಜಿತರಾದ ಅಮ್ಮಣ್ಣಾಯರು ಯಕ್ಷಗಾನದ ಕಲಾಸಾಧನೆಯಲ್ಲಿ ಪ್ರೌಢಿಮೆಯನ್ನು ಸಾಧಿಸಿ, ಬೆಳೆಯುತ್ತಾ ಬಂದರು. +ಪುತ್ತೂರು ಮೇಳ-1ವರ್ಷ, ಕರ್ನಾಟಕ ಮೇಳ-21 ವರ್ಷ, ಕದ್ರಿ ಮೇಳ-2ವರ್ಷ, ಕುಂಟರು ಮೇಳ-2ವರ್ಷ, ಎಡನೀರು ಮೇಳ-5ವರ್ಷ ಹೀಗೆ ಮೇಳ ತಿರುಗಾಟದ ಹಿನ್ನೆಲೆ ಇದೆ. +ಕರ್ನಾಟಕ ಮೇಳದಿಂದ ವರ್ಚಸ್ಸನ್ನು ಮೆರೆಸುತ್ತಾ ಬಂದ ಅಮ್ಮಣ್ಣಾಯರು ಈವರೆಗೂ ತಮ್ಮ ವರ್ಚಸ್ಸನ್ನು ಉಳಿಸಿ ಬೇಡಿಕೆಯ ಕಲಾವಿದರಾಗಿದ್ದಾರೆ. +ತುಳು ಮತ್ತು ಕನ್ನಡ ಪ್ರಸಂಗಗಳನ್ನು ಸಮರ್ಥವಾಗಿ ಆಡಿಸಬಲ್ಲ ಇವರು ರಾಗಸಂಯೋಜನೆಯಲ್ಲಿ ಪಳಗಿದವರಾಗಿದ್ದಾರೆ. +ಕಂಠ ಮಾಧುರ್ಯದಿಂದ ಪ್ರೇಕ್ಷಕರ ಮನವನ್ನು ತಣಿಸುವ ಪ್ರೌಡ” ಬಾಗವರು ಅಮ್ಮಣ್ಣಾಯರಾಗಿದ್ದಾರೆ. +ಕೃಷಿಕರಾಗಿರುವ ಇವರು ಶ್ರೀಮತಿ ಸುಧಾ ಎಂಬವರನ್ನು ವರಿಸಿ ಅಕ್ಷತಾ ಮತ್ತು ಅಮಿತಾ ಎಂಬ ಇಬ್ಬರು ಮಕ್ಕಳನ್ನು ಪಡೆದಿದ್ದಾರೆ. +ಬಾಗವತಿಕೆಯು ಇವರ ಕಲಾಸಾಧದನೆಗೆ ಪ್ರತಿಫಲವಾಗಿ 40 ಕ್ಕೂ ಮಿಕ್ಕಿ ಸಂಮ್ಮಾನಗಳು ಸಂದಿವೆ. +ಮುಂಬಯಿ, ಬೆಂಗಳೂರು, ಮಂಗಳೂರು ಸೇರಿದಂತೆ ಎಡನೀರು, ಉಡುಪಿ ಮೊದಲಾದೆಡೆಯಲ್ಲಿ ಅಭಿಮಾನಿಗಳಿಂದ ಗೌರವ ಪುರಸ್ಕಾರಕ್ಕೆ ಒಳಗಾಗಿದ್ದಾರೆ. +ಯಕ್ಷರಸರಾಗ ಚಕ್ರವರ್ಶಿ, ಗಾನಕೋಗಿಲೆ,ಯಕ್ಷ್ಟಕೋಗಿಲೆ, ಮಧುರಗಾನದ ಐಸಿರಿ, ಯಕ್ಷಸಂಗೀತ ಕಲಾ ಕೌಸ್ತುಭ ಮುಂತಾದ ಬಿರುದುಗಳಿಂದ ಜನಮನ್ನಣೆಗೆ ಒಳಗಾಗಿರುವ ದಿನೇಶ ಅಮ್ಮಣ್ಣಾಯರ ಸಾಧನೆ ಔಚಿತ್ಯಪೂರ್ಣವಾಗಿದೆ. +ದಿನೇಶ ಶೆಟ್ಟಿ ಕಾವಳಕಟ್ಟೆ -ಪುಂಡು ವೇಷ, ರಾಜ ವೇಷಗಳನ್ನು ಮಾಡುತ್ತಾ ಉತ್ತಮವಾದ ಮಾತಿನ ಮುಖೇನ ಆಟ-ಕೂಟಗಳ ಪಾತ್ರಧಾರಿಯಾಗಿ ಬೆಳೆಯುತ್ತಿರುವ ದಿನೇಶ್‌ಶೆಟ್ಟಿ ಕಾವಲಕಟ್ಟೆಯವರು ಕಟೀಲು ಮೇಳದ ಕಲಾವಿದರಾಗಿ ತಿರುಗಾಟವನ್ನು ನಡೆಸುತ್ತಾ ಇದ್ದಾರೆ. +ಮಹಾಬಲ ಶೆಟ್ಟಿ ಮತ್ತು ಸುಂದರಿಶೆಡ್ತಿ ದಂಪತಿಯ ಸುಪುತ್ರರಾಗಿ 2/0/1977ರಂದು ಕಾವಲಕಟ್ಟೆಯಲ್ಲಿ ಜನಿಸಿದರು. +ಪ್ರಥಮ ಪದವಿಪೂರ್ವ ಹಂತದ ವಿದ್ಯಾಭ್ಯಾಸವನ್ನು ಪಡೆದಿರುವ ಇವರು ಯಕ್ಷಗಾನದ ಪ್ರದರ್ಶನಗಳನ್ನು ಕಂಡು ತಾನೂ ಕೂಡಾ ಅಂತಹ ಪ್ರತಿಭೆಯನ್ನು ಬೆಳೆಸಿಕೊಳ್ಳಬೇಕು ಎಂಬ ಉದ್ದೇಶದಿಂದ ಕಲಾಭ್ಯಾಸವನ್ನು ಮಾಡಿದ್ದಾರೆ. +ಕೋಳ್ಕೂರು ರಾಮಚಂದ್ರ ರಾವ್‌ ಅವರಿಂದ ನಾಟ್ಯಾಭ್ಯಾಸವನ್ನು ಮಾಡಿರುವ ಇವರು ಕಟೀಲು ಮೇಳವೊಂದರಲ್ಲೇ 14 ವರ್ಷಗಳ ತಿರುಗಾಟವನ್ನು ಪೂರೈಸಿದ್ದಾರೆ. +ಪುಂಡು ವೇಷ, ರಾಜ ವೇಷ ಮತ್ತು ಇತರ ಮುಖ್ಯ ಪಾತ್ರಗಳನ್ನು ಮಾಡುವ ಇವರು ಸುಧನ್ವ, ವಿಷ್ಣು, ಬ್ರಹ್ಮ ತರಣಿ ಸೇನ, ಸುಗ್ರೀವ,ಪರಶುರಾಮ, ಜಾಬಾಲಿ, ಈಶ್ವರ, ಕೃಷ್ಣ, ಜಮದಗ್ನಿ, `ಅರ್ಜುನ, ದೇವೇಂದ್ರ ಇತ್ಯಾದಿ ಪಾತ್ರಗಳನ್ನು ನಿರ್ವಹಿಸುತ್ತಾ ಇದ್ದಾರೆ. +19ನೇ ವಯಸ್ಸಿನಿಂದಲೇ ಕಲಾಸೇವೆಯನ್ನು ಮಾಡುತ್ತಾ ಬಂದಿರುವ ಇವರು ತಾಳಮದ್ದಳೆಯಲ್ಲೂ ತಮ್ಮ ಪ್ರತಿಭೆಯನ್ನು ತೋರುತ್ತಾ ಕೀರ್ತಿವಂತರಾಗಿದ್ದಾರೆ. +ಹವ್ಯಾಸಿ ಕಲಾವಿದರಿಗೆ ನಾಟ್ಯ ತರಬೇತಿ ಮತ್ತು ಪ್ರದರ್ಶನಕ್ಕೆ ಮಾರ್ಗದರ್ಶನವನ್ನು ನೀಡುತ್ತಾ ಇರುವ ದಿನೇಶ ಶೆಟ್ಟರು ಶ್ರೀಮತಿ ನಿರ್ಮಲಶೆಡ್ತಿ ಎಂಬವರನ್ನು ವರಿಸಿ ನಿಧಿಶಾ ಮತ್ತು ಸಮೀಕ್ಷಾ ಎಂಬ ಇಬ್ಬರು ಪುತ್ರಿಯರನ್ನು ಪಡೆದಿದ್ದಾರೆ. +ಕೃಷಿಯ ಕಾರ್ಯದೊಂದಿಗೆ ಕಲಾಸಾಧಕರಾಗಿರುವ ಇವರಿಗೆ ರಾಯಿ, ಕೈಲ,ಕುಂಜತ್ತ ಬೈಲು, ಬಂಟ್ಜಾಳ ಮೊದಲಾದ ಕಡೆಗಳಲ್ಲಿ ಗೌರವ ಪುರಸ್ಕಾರಗಳು ಸಲ್ಪಲ್ಪಟ್ಟಿವೆ. +ರಾಜವೇಷ ಮತ್ತು ಮುಖ್ಯ ಪೋಷಕ ಪಾತ್ರಗಳನ್ನು ನಿರ್ವಹಿಸುತ್ತಿರುವ ಶ್ರೀ ದಿನಕರ ಆರ್‌.ಗೋಖಲೆಯವರು ಪ್ರಸ್ತುತ ಕಟೀಲು ಮೇಳದಲ್ಲಿ ತಿರುಗಾಟವನ್ನು ನಡೆಸುತ್ತಾ ಇದ್ದಾರೆ. +ರಂಗನಾಥ ಗೋಖಲೆ ಮತ್ತು ಕಾಮಾಕ್ಷಿ ಯಾನೆ ಪಾರ್ವತಿ ದಂಪತಿಯ ಸುಪುತ್ರರಾಗಿ 22-12-.1957ರಂದು ಹತ್ಯಡ್ಕ ಗ್ರಾಮದಲ್ಲಿ ಹುಟ್ಟಿದರು. +ಬಾಲ್ಯದಲ್ಲೇ ಯಕ್ಷಗಾನ ಕಲೆಯ ಬಗ್ಗೆ ಆಸಕ್ತಿಯನ್ನು ಹೊಂದಿದ ಇವರು ಹವ್ಯಾಸಿ ವೇಷಧಾರಿ ಮತ್ತು ಅರ್ಥಧಾರಿಯಾಗಿ ಕಲಾಸೇವೆ ಮಾಡುತ್ತಾ ಬಂದಿದ್ದರು. +ಬಿ. ಕಾಂ ಪದವೀಧರರಾಗಿ ಉದ್ಯೋಗ ನಿರತರಾಗಿದ್ದವರು ಅನಿವಾರ್ಯ ಕಾರಣದಿಂದ ಮೇಳ ತಿರುಗಾಟವನ್ನು ನಡೆಸಿದ್ದಾರೆ. +ದೇವೇಂದ್ರ, ಅರ್ಜುನ, ವಾಲ್ಮೀಕಿ, ವಸಿಷ್ಠ,ಧರ್ಮರಾಯ, ಸಂಜಯ ಮುಂತಾದ ಪಾತ್ರಗಳನ್ನು ನಿರ್ವಹಿಸುವ ಇವರು ಸೌಮ್ಯ ಸ್ವಭಾವದ ಪಾತ್ರಗಳನ್ನು ಚಿತ್ರಿಸ ಬಲ್ಲವರಾಗಿದ್ದಾರೆ. +ಪಕೃತಿ,ಪಥ್ವಿ,ಪರ್ಣಶಾ ( ಬಿ. ಸಿ. ಎ. ), ಪರ್ಜನ್ಯ (8ನೇ ತರಗತಿ)ಎಂಬ ನಾಲ್ವರು ಮಕ್ಕಳನ್ನು ಪಡೆದಿದ್ದಾರೆ. +ಮಳೆಗಾಲದಲ್ಲಿ ಕೃಷಿಕರಾಗಿ ಶ್ರಮಿಸುವ ಇವರ ಕಲಾಸೇವೆಗೆ ಗೌರವ ಪುರಸ್ಕಾರವಾಗಿ ಅರಸಿನ ಮಕ್ಕಿಯ ಅಭಿಮಾನಿ ಬಳಗದಿಂದ ಸಂಮಾನವಾಗಿದೆ. +ದಿವಾಕರ ರೈ ಸಂಪಾಜೆಲ-ಪುಂಡು ವೇಷದ ತೀವ್ರ ಗತಿಯ ನಾಟ್ಯಪ್ರದರ್ಶನವನ್ನು ತೋರುತ್ತಾ ದಿಗಿಣ ವೀರನಾಗಿ ಜನಮನ್ನಣೆಗೆ ಪಾತ್ರರಾಗಿರುವ ಶ್ರೀ ದಿವಾಕರ ರೈಸಂಪಾಜೆ ಯವರು ಹೊಸನಗರ ಮೇಳದ ಕಲಾವಿದರಾಗಿ ತಿರುಗಾಟವನ್ನು ನಡೆಸುತ್ತಾ ಇದ್ದಾರೆ. +ಕೆ.ವಾಸು ರೈ ಮತ್ತು ಇಂದಿರಾವತಿ ದಂಪತಿಯ ಸುಪುತ್ರರಾಗಿ 15-4-1977ರಂದು ಕಲ್ಲುಗುಂಡಿಯಲ್ಲಿ ಜನಿಸಿದರು. +7ನೇ ತರಗತಿಯ ವಿದ್ಯಾಭ್ಯಾಸವನ್ನು ಪಡೆದಿರುವ ಇವರು ಬಾಲ್ಯದಲ್ಲೇ ಯಕ್ಷಗಾನ ಕಲೆಗೆ ಆಕರ್ಷಿತರಾಗಿದ್ದರು. +ಅರಸಿನ ಮಕ್ಕಿಯ ಪರಮೇಶ್ವರ ಆಚಾರ್ಯ ಅವರಲ್ಲಿ ಮೊದಲ ಹಂತದ ನಾಟ್ಯಾಭ್ಯಾಸವನ್ನು ಮಾಡಿ, ಆ ಮೇಲೆ ಧರ್ಮಸ್ಥಳ ಶ್ರೀ ಕ್ಷೇತ್ರದ ಲಲಿತ ಕಲಾಕೇಂದ್ರವನ್ನು ಸೇರಿದರು. +ಕೋಳ್ಕೂರು ರಾಮ ಚಂದ್ರ ರಾವ್‌ ಅವರಿಂದ ಹೆಚ್ಚಿನ ನಾಟ್ಯಾಭ್ಯಾಸ ಹಾಗೂ ರಂಗದ ಅನುಭವವನ್ನು ಸಂಪಾದಿಸಿ ತಿರುಗಾಟವನ್ನು ಆರಂಭಿಸಿದರು. +13ನೇ ವಯಸ್ಸಿನಿಂದ ರಂಗಪ್ರವೇಶ ಮಾಡಿದ ದಿವಾಕರ ರೈಯವರು ಧರ್ಮಸ್ಥಳ ಮೇಳ - 12ವರ್ಷ, ಕುಂಟಾರು ಮೇಳ - 2 ವರ್ಷ, ಎಡನೀರುಮೇಳ - 2 ವರ್ಷ ಹಾಗೂ ಹೊಸನಗರ ಮೇಳ-4 ವರ್ಷ ಹೀಗೆ ಒಟ್ಟು 20 ವರ್ಷಗಳ ಮೇಳ ತಿರುಗಾಟವನ್ನು ಪೂರೈಸಿದ್ದಾರೆ. +ಹೊಸನಗರ ಮೇಳವನ್ನು ಸೇರಿದ ಮೇಲೆ ಹೆಚ್ಚು ವಿಜೃಂಭಿಸಿದ ಇವರು ಪುಂಡುವೇಷ, ರಾಜವೇಷ, ನಾಟಕೀಯ ವೇಷಗಳನ್ನು ನಿರ್ವಹಿಸುತ್ತಾರೆ. +ಹೂಹೂಗಂಧರ್ವ, ಬಭ್ರುವಾಹನ, ಕುಶ, ಸುದರ್ಶನ,ದುಶ್ಯಾಸನ, ಶಿಶುಪಾಲ, ಹಿರಣ್ಯಾಕ್ಷ, ಕೌಂಡ್ಲಿಕ,ಚಂಡ-ಮುಂಡ, ಶ್ರೀನಿವಾಸ ಮೊದಲಾದ ಪಾತ್ರಗಳನ್ನು ಮಾಡಿದ್ದಾರೆ. +ಅಭಿಮನ್ಯು ಮತ್ತು ಅಶ್ವತ್ಥಾಮ ಪಾತ್ರಗಳು ಇವರಿಗೆ ಹೆಚ್ಚಿನ ಕೀರ್ತಿಯನ್ನು ತಂದು ಕೊಟ್ಟ ಪಾತ್ರಗಳಾಗಿವೆ. +ದಿನೇಶ ರೈ ಕಡಬ-ಹಾಸ್ಯ ಹಾಗೂ ಇನ್ನಿತರ ಪಾತ್ರಗಳನ್ನು ನಿರ್ವಹಿಸುತ್ತಾ ಬೆಳೆದು ಬಂದವರು ಶ್ರೀ ಕಡಬ ದಿನೇಶ ರೈ. +ಮಂಗಳಾದೇವಿ ಮೇಳದಲ್ಲಿ ಪ್ರಸ್ತುತ ತಿರುಗಾಟವನ್ನು ನಡೆಸುತ್ತಾ ಇದ್ದಾರೆ. +ವರದ ರೈ ಮತ್ತು ವಾರಿಜ ರೈ ಎಂಬವರ ಸುಪುತ್ರರಾಗಿರುವ ಇವರು ದಿ.1-6-1983ರಂದು ಕಡಬದಲ್ಲಿ ಹುಟ್ಟಿದರು. +8ನೇ ತರಗತಿಯ ತನಕ ಶಾಲೆಗೆ ಹೋಗಿರುವ ದಿನೇಶ ರೈಯವರು ಪರಿಸರದಲ್ಲಿ ನಡೆಯುತ್ತಿದ್ದ ಯಕ್ಬಗಾನದ ಪ್ರಭಾವದಿಂದ ಆಕರ್ಷಿತರಾದರು. +ಮಾವ ಸೌತೆಗದ್ದೆ ಧರ್ಣಪ್ಪ ಶೆಟ್ಟರಿಂದ ಪ್ರೇರಣೆಗೆ ಒಳಪಟ್ಟು ಧರ್ಮಸ್ಥಳ ಮೇಳದ ಕಲಾವಿದರಾಗಿರುವ ತಾರನಾಥ ವರ್ಕಾಡಿಯವರಲ್ಲಿ ನಾಟ್ಯಾಭ್ಯಾಸವನ್ನು ಮಾಡಿರಂಗವನ್ನು ಪ್ರವೇಶಿಸಿದರು. +15ನೇ ವರ್ಷದಿಂದಲೇ ಯಕ್ಷಗಾನ ರಂಗಕ್ಕೆ ಪ್ರವೇಶಿಸಿದ ಇವರು ಧರ್ಮಸ್ಥಳ ಮೇಳ-1ವರ್ಷ,ಕಾಟಿಪಳ್ಳ ಮೇಳ 1ವರ್ಷ, ಕಟೀಲು ಮೇಳ 3 ವರ್ಷ,ಪುತ್ತೂರು ಮೇಳ 1ವರ್ಷ, ಕುಂಟಾರು ಮೇಳ 2ವರ್ಷ, ಕದ್ರಿ ಮೇಳ 1ವರ್ಷ ಹೀಗೆ ತಿರುಗಾಟವನ್ನು ಮಾಡಿರುವರು. +ಆಮೇಲೆ ಮಂಗಳಾದೇವಿ ಮೇಳವನ್ನು ಸೇರಿದವರು ಈಗಾಗಲೇ 3ನೇ ವರ್ಷದ ತಿರುಗಾಟವನ್ನು ಪೂರೈಸಿದ್ದಾರೆ. +ಕಡಬ ದಿನೇಶ ರೈಯವರು ತುಳು ಪ್ರಸಂಗದ ಹಾಸ್ಯ ಪಾತ್ರಗಳನ್ನು ಆಧುನಿಕ ಕಾಲದ ರಂಜನೆಗೆ ತಕ್ಕಂತೆ ನಿರ್ವಹಿಸುತ್ತಾರೆ. +ನಾರದ, ಪಯ್ಯಬೇದ,ಜೋಯಿಸ (ಕೋಟಿ ಚೆನ್ನಯ), ಆಚಾರಿ ಲಿಂಗಪ್ಪ(ದೇವು ಪೂಂಜ), ದಾರುಕ, ವಿಜಯ, ಮಕರಂದ ಹೀಗೆ ಹಲವು ಹಾಸ್ಯದ ಪಾತ್ರಗಳನ್ನು ತುಳು-ಕನ್ನಡಪ್ರಸಂಗಗಳಲ್ಲಿ ನಿರ್ವಹಿಸಿದ್ದಾರೆ. +ಸಂದರ್ಭಕ್ಕೆ ಅನುಗುಣವಾಗಿ ಪುಂಡುವೇಷ, ರಾಜವೇಷ,ನಾಟಕೀಯ ವೇಷಗಳನ್ನು ಕೂಡಾ ಮಾಡುತ್ತಾರೆ. +ಮಳೆಗಾಲದಲ್ಲಿ ಕೃಷಿಜೀವನದ ಬಗ್ಗೆ ಆಸಕ್ತಿವುಳ್ಳ ಇವರು ಬೆಳೆಂಯುವ ಯುವಕಲಾವಿದರಾಗಿ ಗುರುತಿಸಲ್ಪಟ್ಟಿದ್ದಾರೆ. +ನೂತನ ಪ್ರಸಂಗಗಳ ಹಾಸ್ಯಪಾತ್ರಗಳಲ್ಲಿ ನಟಿಸುತ್ತಾ ಜನರ ಮನಸ್ಸನ್ನು ರಂಜಿಸಿದ್ದಾರೆ. +ಮಂಗಳೂರು ತಾಲೂಕು ಮನೆತನದಿಂದ ಬಂದ ಪರಂಪರೆಯ ಶೈಲಿಯನ್ನು ಉಳಿಸಿ ಬೆಳೆಸಿ ಬಂದಿರುವುದರ ಜೊತೆಗೆ ತೆಂಕುತಿಟ್ಟಿನಲ್ಲೇ ಅಗ್ರ ಪಂಕ್ತಿಯ ಮನ್ನಣೆಯನ್ನು ಪಡೆದ ಶ್ರೀ ಬಲಿಪ ನಾರಾಯಣ ಭಾಗವತರು ಕಟೀಲು ಮೇಳದ ಮುಖ್ಯ ಭಾಗವತರಾಗಿ ತಿರುಗಾಟವನ್ನು ನಡೆಸಿ ನಿವೃತ್ತರಾಗಿದ್ದಾರೆ. +ಕಾಸರಗೋಡು ಜಿಲ್ಲೆಯ ಪಡ್ರೆ ಗ್ರಾಮದಲ್ಲಿ 19-03-1938ರಂದು ಬಲಿಪ ಮಾಧವ ಭಟ್ಟ ಮತ್ತು ಸರಸ್ವತಿ ದಂಪತಿಯ ಸುಪುತ್ರರಾಗಿ ನಾರಾಯಣ ಬಾಗವತರು ಜನಿಸಿದರು. +ಮನೆತನದ ಹಿನ್ನೆಲೆಯಿಂದಾಗಿ ಪರಂಪರೆಯ ಮಟ್ಟಿನಲ್ಲಿ ಹಾಡುವ ರೀತಿ ಇವರಲ್ಲಿ ರಕ್ತಗತವಾಗಿತ್ತು. +ಬಾಲ್ಯದಲ್ಲೇ ಯಕ್ಷಗಾನದತ್ತ ಆಸಕ್ತರಾಗಿದ್ದ ಇವರು ಅಜ್ಜ ದಿ.ಬಲಿಪನಾರಾಯಣ ಭಾಗವತ ಮತ್ತು ತಂದೆಯವರಿಂದ ಯಕ್ಷಗಾನದ ಭಾಗವತಿಕೆಯನ್ನು ಅಭ್ಯಾಸ ಮಾಡಿ ತಿರುಗಾಟವನ್ನು ನಡೆಸಿದ್ದಾರೆ. +ಕೂಡ್ಲು ಮೇಳ - 7 ವರ್ಷ, ಕುಂಡಾವು ಮೇಳ-4 ವರ್ಷ, ಮೂಲ್ಕಿ ಮೇಳ - 1 ವರ್ಷ, ರೆಂಜಾಳಮೇಳ - 4 ವರ್ಷ ಹಾಗೂ ಕಟೀಲು ಮೇಳ 33ವರ್ಷ ಹೀಗೆ ತಿರುಗಾಟವನ್ನು ನಡೆಸಿದ್ದಾರೆ. +ಅಜ್ಜನಂತೆಂತೆನೇ ಪ್ರಸಂಗ ರಚನೆಂರುಲ್ಲಿ ಪ್ರವೀಣರಾಗಿರುವ ಇವರು 30ಕ್ಕೂ ಹೆಚ್ಚಿನ ಪ್ರಸಂಗಗಳನ್ನು ರಚಿಸಿದ್ದಾರೆ. +ರಕ್ತರಾತ್ರಿ , ಶಿವಪ್ರಭಾಪರಿಣಯ, ಕಾಳಿಂದಿ ವಿವಾಹ, ಮತ್ಸಾವತಾರ -ಕೇತಕಿಶಾಪ, ನವಗ್ರಹ ಮಹಾತ್ಮೆ ಮೊದಲಾದ ಪ್ರಸಂಗಗಳನ್ನು ಉಲ್ಲೇಖಿಸ ಬಹುದಾಗಿದೆ. +ಪ್ರದರ್ಶನದ ನಿರ್ದೇಶಕರಾಗಿ, ದಿಗ್ಬರ್ಶಕರಾಗಿ ಸಮರ್ಥ ನಿರ್ವಹಣೆಯನ್ನು ತೋರಿರುವ ಇವರು 50ಕ್ಕೂ ಮಿಕ್ಕಿದ ವೀಡಿಯೋ ಮತ್ತು ಆಡಿಯೋಗಳಲ್ಲಿ ಭಾಗವತರಾಗಿ ಹಾಡಿದ್ದಾರೆ. +ಪ್ರಸಂಗಕ್ಕೆ ತಕ್ಕಂತೆ ಕಲಾವಿದರಿಗೆ ನಿರ್ದೇಶನವನ್ನು ಮಾಡಬಲ್ಲ ಇವರು ಅಬ್ಬರದ ಕಂಠದ್ದನಿಯಿಂದ ಹಾಡಬಲ್ಲವರಾಗಿದ್ದಾಗರೆ. +ಕೃಷ್ಣಾರ್ಜುನ, ಕರ್ಣಾರ್ಜುನ, ದುಶ್ಯಾಸನ ವಧೆ ಮುಂತಾದ ಪ್ರಸಂಗಗಳನ್ನು ಉತ್ತಮವಾಗಿ, ಆಡಿಸಿ ಪ್ರಸಿದ್ದರಾಗಿದ್ದಾರೆ. +ಶ್ರೀಮತಿ ಜಯಲಕ್ಷ್ಮೀ ಎಂಬವರನ್ನು ವರಿಸಿ ಮಾಧವ, ಶಿವಶಂಕರ, ಶಶಿಧರ, ಪ್ರಸಾದ ಎಂಬ ನಾಲ್ವರು ಮಕ್ಕಳನ್ನು ಪಡೆದಿದ್ದಾರೆ. +ಇವರಲ್ಲಿ ಎರಡನೆಯ ಮತ್ತು ನಾಲ್ಕನೆಯ ಸುಪುತ್ರರು ಉತ್ತಮ ಭಾಗವತರಾಗಿದ್ದು ತಂದೆಯವರ ಕೀರ್ತಿಯನ್ನು ಹೆಚ್ಚಿಸಿದ್ದಾರೆ. +ಯಕ್ಷಕಲಾ ದ್ರುಮ, ಭಾಗವತ ಭೂಷಣ,ಭಾಗವತ ಕುಲತಿಲಕ, ಯಕ್ಷ ಕಲಾ ಬ್ರಹ್ಮ ಮುಂತಾದ ಬಿರುದುಗಳಿಂದ ಕೀರ್ತಿವಂತರಾಗಿರುವ ಬಲಿಪ ನಾರಾಯಣ ಭಾಗವತರಿಗೆ ಕರ್ನಾಟಕ ಜಾನಪದ ಪರಿಷತ್‌ ದೊಡ್ಡಮನೆ ಲಿಂಗೇ ಗೌಡ ಪ್ರಶಸ್ತಿ, ಶೇಣಿದತ್ತಿನಿಧಿ ಪ್ರಶಸ್ತಿ, ಶಿವರಾಮ ಕಾರಂತ ದೀಪ ಪ್ರಶಸ್ತಿ,ಅಗರಿ ಪ್ರಶಸ್ತಿ ಮುಂತಾದ ಪ್ರಶಸ್ತಿಗಳಲ್ಲದೆ ನೂರಾರು ಸಂಮಾನ - ಗೌರವ ಪುರಸ್ಕಾರಗಳು ಸಂದಿವೆ. +ಹಾಸ್ಯ ಪಾತ್ರಗಳ ಮೂಲಕ ನಟನಾಭಿವ್ಯಕ್ತಿಂಯನ್ನು ತೋರಿಸಿ ಸತ್ಕೀರ್ತಿಗೆ ಪಾತ್ರರಾಗಿರುವ ನೆಲ್ಲಿಕಟ್ಟೆ ನಾರಾಯಣ ಹಾಸ್ಯಗಾರರು ಮೇಳದ ನಿವೃತ್ತ ಕಲಾವಿದರಾಗಿದ್ದು, ಹೇಳಿಕೆಯ ಮೇರೆಗೆ ಭಾಗವಹಿಸುತ್ತಿದ್ದಾರೆ. +ಕಾಸರಗೋಡು ಜಿಲ್ಲೆಯ ನೆಲ್ಲಿಕಟ್ಟೆಯಲ್ಲಿ ಶ್ರೀ ಕೃಷ್ಣ ಹಾಗೂ ಶ್ರೀಮತಿ ಮಾನು ದಂಪತಿಯ ಮಗನಾಗಿ ದಿನಾಂಕ 24.08.1938ರಂದು ನಾರಾಯಣ ಹಾಸ್ಯಗಾರರು ಜನಿಸಿದರು. +ಬಾಲ್ಯದಲೇ ಯಕ್ಷಗಾನ ಕಲೆಗೆ ಮಾರುಹೋದ ಇವರು ಕೂಡ್ಲು, ಮುಲ್ಕಿ,ಇರಾ, ಸುಬ್ರಹ್ಮಣ್ಯ, ಸುಂಕದಕಟ್ಟೆ, ಬಪ್ಪನಾಡು, ಮಲ್ಲ ಮತ್ತು ಕಟೀಲು ಮೇಳಗಳಲ್ಲಿ ತಿರುಗಾಟವನ್ನು ನಡೆಸಿರುವರು. +ಹಾಸ್ಯಗಾರ ಕುಂಞಂಬು ಮತ್ತು ಬಣ್ಣದ ಕುಟ್ಯಪ್ಪರವರ ರಕ್ತ ಸಂಬಂಧಿಯಾದ ನೆಲ್ಲಿಕಟ್ಟೆಯವರು ಪೆರುವೊಡಿ ನಾರಾಯಣ ಭಟ್‌, ಕುರಿಯ ವಿಠಲಶಾಸ್ತ್ರಿ, ವೇಣೂರು ವೆಂಕಟರಮಣ ಭಟ್‌ಮೊದಲಾದವರ ಮಾರ್ಗದರ್ಶನದಲ್ಲಿ ಪ್ರಬುದ್ಧರಾಗಿ ಪೌರಾಣಿಕ ಪ್ರಸಂಗಗಳ ಅನುಭವವನ್ನು ಸಂಪಾದಿಸಿದರು. +ಮಾಲಿನಿದೂತ, ದಾರುಕ, ದೇವದೂತ, ಬಾಹುಕ,ನಕ್ಷತ್ರಿಕೆ ಮೊದಲಾದ ಹಾಸ್ಯ ಪಾತ್ರಗಳಲ್ಲಿ ವಿಜೃಂಭಿಸಿರುವ ಇವರು ಮಾತುಗಾರರಾಗಿದ್ದು ತಾಳಮದ್ದಳೆಯ ಅರ್ಥದಾರಿಯಾಗಿಯೂ ಮನ್ನಣೆಯನ್ನು ಪಡೆದಿದ್ದಾರೆ. +ಹಾಸ್ಯ ಪಾತ್ರಗಳಲ್ಲದೆ ಬ್ರಹ್ಮ ನಾರದ,ಸುಬುದ್ಧಿ, ರೇವತರಾಜ ಮುಂತಾದ ಪೋಷಕ ಪಾತ್ರಗಳನ್ನು ಕೂಡಾ ನಿರ್ವಹಿಸುತ್ತಿದ್ದಾರೆ. +ಹವ್ಯಾಸಿ ಕಲಾ ಕಾರ್ಯಕ್ರಗಳು ಸೇರಿದಂತೆ,ಬಪ್ಪನಾಡು ಮೇಳದ ಪೌರಾಣಿಕ ಪ್ರದರ್ಶನಗಳಿಗೆ ಹೇಳಿಕೆಯ ಮೇರೆಗೆ ಭಾಗವಹಿಸುವ ಇವರು ಶ್ರೀಮತಿ ಕಲ್ಯಾಣಿ ಎಂಬವರನ್ನು ವರಿಸಿದ್ದು. +ಓರ್ವಳು ಸುಪುತ್ರಿಯನ್ನು ಪಡೆದಿರುವರು. +ಇವರ ಸಾಧನೆಗೆ ಪ್ರತಿಫಲವಾಗಿ ಬೋಳೂರು ದೋಗ್ರ ಪೂಜಾರಿ ಪ್ರಶಸ್ತಿ ಸೇರಿದಂತೆ, ಕದ್ರಿ ಶಕ್ತಿನಗರ, ಕಾಟಿಪಳ್ಳ,ಕುಳಾಯಿ ಮೊದಲಾದೆಡೆಯಲ್ಲಿ ಸಂಮಾನಗಳು ಸಂದಿವೆ. +ಚೆಂತನಾತ್ಮಕ ಮಾತುಗಾರಿಕೆಯಿಂದ ತನ್ನದೇ ಆದ ಶೈಲಿಯನ್ನು ಪ್ರಸ್ತುತ ಪಡಿಸುತ್ತಾ ಜನಮನ್ನಣೆಗೆ ಒಳಗಾಗಿರುವ ಕೊಳ್ತಿಗೆ ನಾರಯಣ ಗೌಡರು ಪ್ರಸ್ತುತ ಮಂಗಳಾದೇವಿ ಮೇಳದ ಹಿರಿಯ ಕಲಾವಿದರಾಗಿ ಕಲಾಸೇವೆಯನ್ನು ಮಾಡುತ್ತಿದ್ದಾರೆ. +ತಿಮ್ಮಪ್ಪ ಗೌಡ ಮತ್ತು ಕಮಲ ದಂಪತಿಯ ಸುಪುತ್ರರಾಗಿ ದಿ.18/7/1950 ರಂದು ಕೊಳ್ಳಿಗೆಯಲ್ಲಿ ನಾರಾಯಣ ಗೌಡರು ಜನಿಸಿದರು. +ಮನೆಯಲ್ಲಿ ವರ್ಷಂಪ್ರತಿ ನವರಾತ್ರಿ ಉತ್ಸವದ ನಿಮಿತ್ತ ನಡೆಯುತ್ತಿದ್ದ ತಾಳಮದ್ದಳೆಯ ಕಾರ್ಯಕ್ರಮಗಳಿಂದ ಇವರು ಪ್ರಭಾವಿತರಾಗಿ ಯಕ್ಷಗಾನ ಕಲೆಯನ್ನು ಅಭ್ಯಾಸಿಸುವ ಬಗ್ಗೆ ಆಸಕ್ತಿಯನ್ನು ತಾಳಿದರು. +ಬೆಳ್ಳಾರೆ ವಿಶ್ವನಾಥ ರೈಮತ್ತು ಶಂಕರ ನಾರಾಯಣ ಸಾಮಗರಿಂದ ಯಕ್ಷಗಾನದ ಬಗ್ಗೆ ಮಾರ್ಗದರ್ಶನವನ್ನು ಪಡೆದು ತಿರುಗಾಟವನ್ನುಆರಂಭಿಸಿದರು. +ಆದಿ ಸುಬ್ರಹ್ಮಣ್ಯ ಮೇಳ- 3 ವರ್ಷ, ಅಂಮ್ಚಾಡಿಮೇಳ - 2 ವರ್ಷ, ಕೊಲ್ಲೂರು ಮೇಳ - 2 ವರ್ಷ,ಪುತ್ತೂರು ಮೇಳ - 2 ವರ್ಷ, ಬಪ್ಪನಾಡು ಮೇಳ-2 ವರ್ಷ, ಕರ್ನಾಟಕ ಮೇಳ -18 ವರ್ಷ,ಮಂಗಳಾದೇವಿ ಮೇಳ - 7 ವರ್ಷ, ಹೀಗೆ ತಿರುಗಾಟವನ್ನು ನಡೆಸಿದ್ದಾರೆ. +ತಾಳಮದ್ದಳೆಯ ಅರ್ಥಧಾರಿ, ಧಾರ್ಮಿಕ ಉಪನ್ಯಾಸಕ, ಕಾರ್ಯಕ್ರಮದ ಸಂಘಟಕರಾಗಿ ಗುರುತಿಸಲ್ಪಟ್ಟಿರುವ ಕೊಳ್ಳಿಗೆ ನಾರಾಯಣ ಗೌಡರುಪುಂಡು ವೇಷ, ರಾಜ ವೇಷ, ನಾಟಕೀಯ ವೇಷಗಳಲ್ಲಿ ಪ್ರವೀಣರಾಗಿದ್ದಾರೆ. +ಮಾರ್ತಾಂಡ ತೇಜ, ಪರಶುರಾಮ,ಕಂಸ, ಮಾಗಧ, ದಾರಿಕಾಸುರ ಮೊದಲಾದ ಪೌರಾಣಿಕ ಪಾತ್ರಗಳನ್ನು ನಿರ್ವಹಿಸುತ್ತಾರೆ. +ದುಗ್ಗಣಕೊಂಡೆ,ಬುದ್ಧಿವಂತ ಮೊದಲಾದ ತುಳು ಪ್ರಸಂಗದ ಪಾತ್ರಗಳನ್ನು ನಿರ್ವಹಿಸಿರುವ ಇವರಿಗೆ ಬ್ರಹ್ಮ ಬಲಾಂಡಿದ ಬಲಾಂಡಿಯಪಾತ್ರವು ಹೆಚ್ಚಿನ ಕೀರ್ತಿಯನ್ನು ತಂದು ಕೊಟ್ಟಿದೆ. +ಶ್ರೀಮತಿ ದೇವಕಿ ಎಂಬವರನ್ನು ವರಿಸಿರುವ ಇವರಿಗೆ ಜಗದೀಪ್‌ (ವಿದ್ಯುತ್‌ ಸಂಸ್ಥೆಯಲ್ಲಿ ಅಧಿಕಾರಿ)ಜಯದೀಪ್‌ (ಬೆಂಗಳೂರಿನಲ್ಲಿ ಉದ್ಯೋಗಿ) ದೀಪ್ತಿ(ಡಿಪ್ಲೊಮೊ ಪದವೀಧರೆ) ಎಂಬ ಮೂರು ಮಂದಿ ಮಕ್ಕಳಿದ್ದಾರೆ. ದ.ಕ.ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಮುಂಬಯಿ ಅಭಿಮಾನ ಬಳಗದ ಸಂಮಾನ, ಬೆಂಗಳೂರು ದಾಸರಹಳ್ಳಿಯ ಸಂಮಾನ ಮುಂತಾದ ಗೌರವಗಳು ಇವರ ಸಾಧನೆಗೆ ಸಂದಿವೆ. +ಯಕ್ಷಗಾನ “ಹಾಸ್ಯ ವಿಶಾರದ”, "ವಿದೂಷಕ ಶಿಖಾಮಣಿ" ಮೊದಲಾದ ಬಿರುದುಗಳಿಗೆ ಪಾತ್ರರಾಗಿರುವ ಪೆರುವಡಿ ನಾರಾಯಣ ಭಟ್ಟರು ತೆಂಕು ತಿಟ್ಟಿನ ಅಗ್ರಪಂಕ್ತಿಯ ಕಲಾವಿದರಾಗಿ ಜನಮನ್ನಣೆಯನ್ನು ಪಡೆದು ಕೀರ್ತಿವಂತರಾಗಿದ್ದಾರೆ. +ಭೀಮ ಭಟ್ಟ ಹಾಗೂ ಗುಣವತಿ ದಂಪತಿಯ ಸುಪುತ್ರರಾಗಿ ದಿನಾ೦ಕ 28-5-1927ರಲ್ಲಿ ಕರೋಪಾಡಿ ಗ್ರಾಮದ ಪದ್ಯಾಣ ಎಂಬಲ್ಲಿ ನಾರಾಯಣ ಭಟ್ಟರು ಜನಿಸಿದರು. +ಪ್ರಾಥಮಿಕ ಹಂತದ ವಿದ್ಯಾಭ್ಯಾಸವನ್ನು ಪಡೆದಿರುವ ಇವರು ಮನೆತನದ ಪ್ರಭಾವದಿಂದ ಯಕ್ಷಗಾನದ ಮೇಲೆ ಆಕರ್ಷಿತರಾಗಿ ಪಾತ್ರ ನಿರ್ವಹಣೆ ಮಾಡಲು ಮುಂದಾದರು. +ಸಂಬಂಧಿಕರಾಗಿದ್ದ ಸಂಕಯ್ಯ ಭಾಗವತ, ಈಶ್ವರ ಹಾಸ್ಯಗಾರ, ವರಾಂಬಾಡಿ ಬಾಗವತರು,ಪುಟ್ಟು ನಾರಾಯಣ ಭಾಗವತರು ಇವರೆಲ್ಲರ ಕಲಾಸೇವೆಯ ಆದರ್ಶದಿಂದ ಸ್ಪೂರ್ತಿವಂತರಾಗಿ ದಿ।ಕುರಿಯ ವಿಠಲ ಶಾಸ್ತ್ರಿಯವರ ಮಾರ್ಗದರ್ಶನವನ್ನು ಪಡೆದರು. +ಕನ್ಯಾನ ಕೇಶವ, ಶೀನಪ್ಪ ಭಂಡಾರಿ, ಅಗರಿ ಶ್ರೀನಿವಾಸ ಬಾಗವತ ಮೊದಲಾದವರ ಮಾರ್ಗದರ್ಶನದಲ್ಲಿ ನಾರಾಯಣ ಭಟ್ಟರು ಬೆಳೆದು ಪಾತ್ರ ನಿರ್ವಹಣೆಯಲ್ಲಿ ಪ್ರಬುದ್ಧರಾದರು. +ಧರ್ಮಸ್ಥಳ -.6 ವರ್ಷ, ಮೂಲ್ಕಿ - 12ವರ್ಷ, ಸುರತ್ಕಲ್‌ - 6 ವರ್ಷ, ಕುತ್ಯಾಳ - 6ವರ್ಷ, ಅಮೃತೇಶ್ವರಿ (ಬಡಗು) 2 ವರ್ಷ, ಕದ್ರಿಮೇಳ - 2 ವರ್ಷ, ಅರುವ ಮೇಳ - 2 ವರ್ಷ,ಬಪ್ಪನಾಡು ಮೇಳ - 3 ವರ್ಷ, ನಂದಾವರ - 1ವರ್ಷ ಹೀಗೆ ಮೇಳ ತಿರುಗಾಟವನ್ನು ಮಾಡಿದ ಇವರು ಕಳೆದ 15-17 ವರ್ಷಗಳಿಂದ ಹವ್ಯಾಸಿ ಕಲಾವಿದರ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಾ ಪಾತ್ರ ನಿರ್ವಹಣೆ ಮಾಡುತ್ತಿದ್ದಾರೆ. + ಪಾಪಣ್ಣ, ಬಾಹುಕ, ವಿಭಾಕರ ಮುಂತಾದ ಪಾತ್ರಗಳಲ್ಲಿ ಪೆರುವಡಿಯವರು ಪ್ರತಿಭಾ ವಿಳಾಸವನ್ನು ಮೆರೆಸಿದ್ದಾರೆ. +ಕನ್ನಡ ಹಾಗೂ ತುಳು ಬಾಷೆಯ ಪ್ರಸಂಗಗಳ ಹಾಸ್ಯ ಪಾತ್ರಗಳಲ್ಲಿ ಸಮಾನ ಪ್ರೌಢಿಮೆಯನ್ನು ತೋರಿರುವ ಇವರು ನಾರದ,ದೂರ್ವಾಸ, ಬ್ರಹ್ಮ ಇತ್ಯಾದಿ ಪಾತ್ರಗಳನ್ನು ಕೂಡಾ ಉತ್ತಮವಾಗಿ ನಿರ್ವಹಿಸುತ್ತಿದ್ದರು. +ಸಾವಿತ್ರಿ ಎಂಬವರನ್ನು ವರಿಸಿರುವ ಇವರು ಕೃಷ್ಣಾಕುಮಾರಿ, ಸುಗುಣ ಕುಮಾರಿ (ಡ್ರಾಯಿಂಗ್‌ಟೀಚರ್‌), ಮಹಾಲಕ್ಷ್ಮೀ (ಆಪೀಸರ್‌ ಉದ್ಯೋಗಿ)ಎಂಬ ಮೂವರು ಮಕ್ಕಳನ್ನು ಪಡೆದಿದ್ದಾರೆ. +ನಾಡಿನ ವಿವಿಧ ಕಡೆಗಳಲ್ಲಿ ಕಲಾ ಸೇವೆಯನ್ನು ಮಾಡಿರುವ ಇವರಿಗೆ ಕೇರಳ, ಮಹಾರಾಷ್ಟ್ರ ಆಗ್ರಾ,ಅಹ್ಮದಾಬಾದ್‌, ದೆಹಲಿ ಮೊದಲಾದ ಕಡೆಗಳಲ್ಲಿ ಸಂಮಾನಗಳು ಸಂದಿವೆ. +ರಾಜ್ಯೋತ್ಸವ ಜಿಲ್ಲಾ ಪ್ರಶಸ್ಥಿ ಉಡುಪಿ ಕಲಾರಂಗದ ಪ್ರಶಸ್ತಿ, ಕೋಡಪದವು ಕರ್ಗಲ್ಲು ಸುಬ್ಬಣ್ಣ ಪ್ರಶಸ್ತಿ, ಮೊದಲಾದ ಪ್ರಶಸ್ತಿಗಳಿಗೆ ಭಾಜನರಾಗಿರುವರು. +ನಾಟಕೀಯ ಮತ್ತು ರಾಜವೇಷಗಳಲ್ಲಿ ಅದ್ವಿತೀಯವಾದ ಪ್ರತಿಭೆಯನ್ನು ಮೆರೆಸಿರುವ ಶ್ರೀಕೆ.ಪಿ.ಪೆರುವಾಯಿ ನಾರಾಯಣ ಶೆಟ್ಟರು ಕಟೀಲು ಮೇಳದ ಹಿರಿಯ ಕಲಾವಿದರಾಗಿ ತಿರುಗಾಟವನ್ನು ನಡೆಸುತ್ತಾ ಇದ್ದಾರೆ. +ಮದನಪ್ಪ ಶೆಟ್ಟಿ ಮತ್ತು ಅಬ್ಬಕ್ಕ ದಂಪತಿಯ ಸುಪುತ್ರರಾಗಿ ಪೆರುವಾಯಿಯಲ್ಲಿ ಜನಿಸಿರುವ ನಾರಾಯಣ ಶೆಟ್ಟರಿಗೆ 7ಂ ವರ್ಷಗಳು ಸಂದಿವೆ. +ಪ್ರಾಥಮಿಕ ಹಂತದ ವಿದ್ಯಾಭ್ಯಾಸವನ್ನು ಪಡೆದಿರುವ ಇವರು, ಯಕ್ಷಗಾನದ ಪ್ರದರ್ಶನಗಳನ್ನು ನೋಡಿ ಆಕರ್ಷಣೆಗೆ ಒಳಗಾಗಿ ಅಧ್ಯಯನಾಸಕ್ತರಾದರು. +ಐತಪ್ಪ ಶೆಟ್ಟಿ ಪೈವಳಿಕೆ ಇವರಿಂದ ನಾಟ್ಯಾಭ್ಯಾಸವನ್ನು ಮಾಡಿರುವ ಪೆರುವಾಯಿ ನಾರಾಯಣ ಶೆಟ್ಟರು 12ನೇ ವರ್ಷದಿಂದಲೇ ರಂಗಪ್ರವೇಶ ಮಾಡಿದ್ದಾರೆ. +ಕುಂಡಾವು ಮೇಳ -1 ವರ್ಷ, ಧರ್ಮಸ್ಥಳ ಮೇಳ - 1 ವರ್ಷ, ಕರ್ನಾಟಕ ಮೇಳ - 2 ವರ್ಷ , ಕಲಾವಿಹಾರ ಮೇಳ - 4ವರ್ಷ , ಕಟೀಲು ಮೇಳ -39 ವರ್ಷ ಹೀಗೆ ಮೇಳ ತಿರುಗಾಟದ ಅನುಭವವನ್ನು ಹೊಂದಿದ್ದಾರೆ. +ರಕ್ತಬೀಜ, ಹಿರಣ್ಯಕಶ್ಯಪ, ಕಂಸ, ಸುಂದರ ರಾವಣ, ಯಖತುಪರ್ಣ ,ಹನುಮಂತ , ಜಾಬಾಲಿ ,ಅರುಣಾಸುರ ಮುಂತಾದ ಪಾತ್ರಗಳಿಂದ ಕೀರ್ತಿವಂತರಾಗಿರುವ ಇವರು ತುಳುಪ್ರಸಂಗದ ಪಾತ್ರಗಳಾದ ಕೋಟಿ, ದೇವು ಪೂಂಜ ಮುಂತಾದ ಪಾತ್ರಗಳನ್ನು ನಿರ್ವಹಿಸುತ್ತಾರೆ. +ಆಟ -ಕೂಟಗಳಲ್ಲಿ ಪ್ರತಿಭೆಯನ್ನು ಮೆರೆಸಿರುವ ಇವರು ತರ್ಕದ ಮುಖೇನ ವಾಗ್‌ ವೈಖರಿಯನ್ನು ಮೆರೆಸಿದ್ದಾರೆ. +ಕಿರಿಯ ಕಲಾವಿದರಿಗೆ ರಂಗಮಾಹಿತಿ ಮತ್ತು ಪಾತ್ರಗಳ ಅರ್ಥದ ಮಾಹಿತಿಯನ್ನು ನೀಡಿ ಉತ್ತೇಜಿಸುವ ಗುಣಧರ್ಮ ಇವರಲ್ಲಿದೆ. +ಕೃಷಿಕರಾಗಿಯೂ ಅನುಭವವನ್ನು ಪಡೆದಿರುವ ಇವರು ಶ್ರೀಮತಿ ಚಂದ್ರಾವತಿ ಎಂಬುವರನ್ನು ವರಿಸಿ,ಬಾಲಕೃಷ್ಣ, ರೇಖಾ , ರವಿರಾಜ , ರತ್ನರಾಜ ,ಸಹನಾ ಎಂಬ ಮಕ್ಕಳನ್ನು ಪಡೆದಿದ್ದಾರೆ. +ಇವರ ಕಲಾ ಸಾಧನೆಗೆ ಪ್ರತಿಫಲವಾಗಿ ಮುಂಬಯಿ, ಮಂಗಳೂರು, ಬಂಟ್ವಾಳ ಮೊದಲಾದೆಡೆಯಲ್ಲಿ ಸಂಮಾನಗಳು ಸಂದಿವೆ. +ಶ್ರೀಕೃಷ್ಣ ಯಕ್ಷಸಭಾ ,ಮಂಗಳೂರು ಹವ್ಯಾಸಿ ಬಳಗ ಕದ್ರಿ ಮೊದಲಾದ ಸಂಸ್ಥೆಗಳು ಇವರನ್ನು ಗೌರವಿಸಿವೆ. +ಸ್ತ್ರೀ ವೇಷ, ಪುಂಡುವೇಷ ಮತ್ತು ರಾಜವೇಷಗಳನ್ನು ಮಾಡುತ್ತಾ ಬಂದಿರುವ ಶ್ರೀನಾರಾಯಣ ಕುಲಾಲರು ಪ್ರಸ್ತುತ ಕಟೀಲು ಮೇಳದಲ್ಲಿ ತಿರುಗಾಟವನ್ನು ನಡೆಸುತ್ತಾ ಇದ್ದಾರೆ. +1-12-1976ರಲ್ಲಿ ಲೋಕಯ್ಯ ಮೂಲ್ಯ ಮತ್ತು ಗಿರಿಜಾ ದಂಪತಿಯ ಸುಪುತ್ರರಾಗಿ ತುಂಬೆ ದಲೆಕ್ಕಿಮನೆಯಲ್ಲಿ ಹುಟ್ಟಿದ ಇವರು ಹತ್ತನೇ ತರಗತಿಯತ ನಕ ಶಾಲಾ ವಿದ್ಯಾಭ್ಯಾಸವನ್ನು ಪಡೆದಿದ್ದಾರೆ. +ಮುಂದೆ ಯಕ್ಷಗಾನದ ಮೇಲೆ ಆಕರ್ಷಿತರಾದರು. +ಶ್ರೀ ಕ್ಷೇತ್ರ ಧರ್ಮಸ್ಥಳದ ಲಲಿತಕಲಾ ಕೇಂದ್ರವನ್ನು ಸೇರಿದ ಇವರು ಕೋಳ್ಯೂರು ರಾಮಚಂದ್ರ ರಾವ್‌ ಅವರಿಂದ ನಾಟ್ಯಾಭ್ಯಾಸ ಮಾಡಿದರು. +ಆಮೇಲೆ ಬಪ್ಪನಾಡು ಮೇಳದಲ್ಲಿ 1ವರ್ಷದ ತಿರುಗಾಟವನ್ನು ಪೂರೈಸಿ ಕಟೀಲು ಮೇಳವನನ್ನು ಸೇರಿದರು. +13 ವರ್ಷಗಳ ತಿರುಗಾಟವನ್ನು ಕಟೀಲು ಮೇಳದಲ್ಲೇ ನಡೆಸಿರುವ ಇವರು ಪ್ರಸ್ತುತ ಕಿರೀಟ ವೇಷದ ಕಲಾವಿದರಾಗಿದ್ದಾರೆ. +ಪುಂಡುವೇಷ, ರಾಜವೇಷ, ಸ್ರೀವೇಷಗಳನ್ನು ಮಾಡಿರುವ ಇವರು ದೇವೇಂದ್ರ ಅರ್ಜುನ, ಮಾಲಿನಿ,ಯಶೋಮತಿ ಮೊದಲಾದ ಪಾತ್ರಗಳನ್ನು ನಿರ್ವಹಿಸುತ್ತಾ ಬಂದಿದ್ದಾರೆ. +ಸೌಮ್ಯ ಸ್ವಭಾವದ ಪಾತ್ರಗಳನ್ನು ಚೆನ್ನಾಗಿ ನಿರ್ವಹಿಸುವ ಗುಣಧರ್ಮ ನಾರಾಯಣ ಕುಲಾಲರಲ್ಲಿದೆ. +ಮಳೆಗಾಲದಲ್ಲಿ ಕೃಷಿಗಾರಿಕೆಯ ಬಗ್ಗೆ ಆಸಕ್ತಿಯನ್ನು ಹೊಂದಿರುವ ನಾರಾಯಣ ಕುಲಾಲರು ಶ್ರೀಮತಿ ಹೇಮಾವತಿ ಎಂಬವರನ್ನು ವರಿಸಿದ್ದಾರೆ. +ಬಣ್ಣದ ವೇಷಧಾರಿಯಾಗಿ ಜನಮನ್ನಣೆಗೆ ಪಾತ್ರರಾಗಿರುವ ಶ್ರೀ ನಾರಾಯಣ ಪಾಟಾಳಿಯವರು ಪ್ರಸ್ಮುತ ಧರ್ಮಸ್ಥಳ ಮೇಳದಲ್ಲಿ ಬಣ್ಣದ ವೇಷಧಾರಿಯಾಗಿ ತಿರುಗಾಟವನ್ನು ನಡೆಸುತ್ತಾ ಇದ್ದಾರೆ. +ಸುಬ್ಬ ಪಾಟಾಳಿ ಮತ್ತು ಸೀತು ದಂಪತಿಯ ಸುಪುತ್ರರಾಗಿ 12-3-1970ರಂದು ಕೇರಳದ ಕಾಸರಗೋಡಿನ ಪಂಜಿಕಲ್ಲು ಎಂಬಲ್ಲಿ ಜನಿಸಿದರು. +ಈಶ್ವರ ಮಂಗಳ ಶಾಲೆಯ ಹೈಸ್ಕೂಲ್‌ಮುಖ್ಯೋಪಾಧ್ಯಾಯರಾಗಿದ್ದ ಹವ್ಯಾಸಿ ವೇಷಧಾರಿಕೆ. + ಸಿ.ಪಾಟಾಳಿ ಪಡುಮಲೆಯವರು ಇವರಿಗೆ ಪ್ರೇರಕರಾಗಿ ಯಕ್ಷಗಾನ ಕಲೆಯ ಅಭ್ಯಾಸ ಮಾಡಲು ಪೂರಕರಾದರು. +ಹೀಗಾಗಿ ನಾರಾಯಣ ಪಾಟಾಳಿಯವರು ವೇಷಧಾರಿಯಾಗಿ ರಂಗಪ್ರವೇಶ ಮಾಡಿದರು. +1990-1991ನೇ ವರ್ಷದಲ್ಲಿ ದರ್ಮಸ್ಥಳದ ಲಲಿತಕಲಾ ಕೇಂದ್ರವನ್ನು ಸೇರಿದ ಇವರು ಕೋಳ್ಕೂರು ರಾಮಚಂದರಾವ್‌ರವರಲ್ಲಿ ಹೆಚ್ಚಿನ ನಾಟ್ಯಾಭ್ಯಾಸವನ್ನು ಮಾಡಿದರು. +ಕೀರ್ತಿ ಶೇಷ ಕಲಾವಿದ, ಬಣ್ಣದ ಮಾಲಿಂಗ ಇವರ ಮಾವನಾಗಿದ್ದು ಅವರಆದರ್ಶವನ್ನು ಕೂಡಾ ಮೈಗೂಡಿಸಿಕೊಂಡು ಬಣ್ಣದ ವೇಷಗಳಲ್ಲಿ ಪ್ರೌಢಿಮೆಯನ್ನು ಸಾಧಿಸುತ್ತಾ ಬೆಳೆದುಬಂದರು. +ಕಟೀಲು ಮೇಳ - 5 ವರ್ಷ ಹಾಗೂ ಧರ್ಮಸ್ಥಳ ಮೇಳದಲ್ಲಿ 13 ವರ್ಷಗಳ ತಿರುಗಾಟವನ್ನು ಮಾಡಿರುವ ಇವರು ಶುಂಭ, ಮಹಿಷಾಸುರ, ರಾವಣ,ಮಹಿರಾವಣ ಮೊದಲಾದ ಬಣ್ಣದ ವೇಷಗಳನ್ನು ಮಾಡಿರುವರಲ್ಲದೆ, ರಾಜವೇಷದ ಕೆಲವು ರಾಕ್ಷಸ ಪಾತ್ರಗಳನ್ನು ನಿರ್ವಹಿಸಿದ್ದಾರೆ. +ಶ್ರೀಮತಿ ಸರೋಜಿನಿ ಎಂಬವರನ್ನು ವರಿಸಿರುವ ಇವರು ಶರತ್‌ ಮತ್ತು ಶರಣ್ಯ ಎಂಬ ಇಬ್ಬರು ಮಕ್ಕಳನ್ನು ಪಡೆದಿದ್ದಾರೆ. +ಶ್ರೀ ವುಂಂಗಳಾದೇವಿ ಮೇಳದಲ್ಲಿತಿರುಗಾಟವನ್ನು ಮಾಡುತ್ತಿರುವ ಶ್ರೀ ಅರುವ ನಾರಾಯಣ ಶೆಟ್ಟಿಯವರು ಉತ್ತಮ ವೇಷಧಾರಿಯಾಗಿ ಮನ್ನಣೆಯನ್ನು ಪಡೆದಿದ್ದಾರೆ. +ದಿನಾಂಕ 12-6-1954ರಲ್ಲಿ ಮುತ್ತಣ್ಣ ಶೆಟ್ಟಿ ಮತ್ತು ಚೆಲುವಮ್ಮ ದಂಪತಿಯ ಸುಪುತ್ರರಾಗಿ ಅರುವ ಅಳದಂಗಡಿಯಲ್ಲಿ ಹುಟ್ಟಿದರು. +10ನೇ ತರಗತಿಯ ತನಕ ವಿದ್ಯಾಭ್ಯಾಸವನ್ನು ಪಡೆದಿರುವ ಇವರು 14ನೇ ವರ್ಷದಿಂದ ಯಕ್ಷಗಾನದ ಪಾತ್ರ ನಿರ್ವಹಣೆಯನ್ನು ಮಾಡಲು ಆರಂಭಿಸಿದರು. +ಹಿರಿಯ ಸಹೋದರನಾದ ಅರುವ ಕೊರಗಪ್ಪ ಶೆಟ್ಟಿಯವರಿಂದ ಪ್ರೇರಣೆ ಮತ್ತು ಆರಂಭದ ನಾಟ್ಯಾಭ್ಯಾಸವನ್ನು ಮಾಡಿ, ಕೆ.ಗೋವಿಂದ ಭಟ್ಟರಿಂದ ಇನ್ನೂ ಹೆಚ್ಚಿನ ನಾಟ್ಯಾಭ್ಯಾಸವನ್ನು ಕಲಿತು ತಿರುಗಾಟವನ್ನು ಆರಂಭಿಸಿದರು. +ಕರ್ನಾಟಕ ಮೇಳ - 10 ವರ್ಷ, ಕಟೀಲುಮೇಳ - 10 ವರ್ಷ, ಕದ್ರಿ ಮೇಳ - 8 ವರ್ಷ,ಅರುವ ಮೇಳ - 10 ವರ್ಷ, ರಾಘವೇಂದ್ರಮೇಳ - 2 ವರ್ಷ, ಸುಬ್ರಹ್ಮಣ್ಮ ಮೇಳ - 2 ವರ್ಷ ಹಾಗೂ ಮಂಗಳಾದೇವಿ ಮೇಳದಲ್ಲಿ 2ವರ್ಷಗಳ ತಿರುಗಾಟವನ್ನು ನಡೆಸಿದ್ದಾರೆ. +ರಾಮ, ಕೃಷ್ಣ ಹರಿಶ್ಚಂದ್ರ, ಈಶ್ಟರ, ಕೋಟಿ,ಪೆರುಮಳ ಮುಂತಾದ ಹಲವಾರು ಪಾತ್ರಗಳನ್ನು ಉತ್ತಮವಾಗಿ ನಿರ್ವಹಿಸಿದ್ದಾರೆ. +ಸ್ತ್ರೀ ಪಾತ್ರಗಳನ್ನುಮಾಡಿದ ಅನುಭವ ಕೂಡ ಇವರಿಗಿದೆ. +ಮಾತಿನಲ್ಲೂ ಪ್ರೌಢಿಮೆಯನ್ನು ಸಾಧಿಸಿದ್ದಾರೆ. +ಶ್ರೀಮತಿ ವಾರಿಜ ಎಂಬವರನ್ನು ವರಿಸಿರುವ ನಾರಾಯಣ ಶೆಟ್ಟರು ವಜ್ರೇಶ್ವರಿ (ಅಧ್ಯಾಪಕಿ),ದುರ್ಗಾಪ್ರಸಾದ್‌ (ಖಾಸಗಿ ಉದ್ಯೋಗಿ), ರಾಜೇಶ್ವರಿ(ಅಧ್ಯಾಪಕಿ) ಎಂಬ ಮೂವರು ಮಕ್ಕಳನ್ನು ಪಡೆದಿದ್ದಾರೆ. +ಸ್ತ್ರೀ ಪಾತ್ರದ ಮುಖೇನ ಕಲಾ ಸೇವೆಯನ್ನು ಮಾಡುತ್ತಿರುವ ಶ್ರೀ ನಾರಾಯಣ ಸುವರ್ಣರು ಪ್ರಸ್ತುತ ಕಟೀಲು ಮೇಳದಲ್ಲಿ ತಿರುಗಾಟವನ್ನು ನಡೆಸುತ್ತಾ ಇದ್ದಾರೆ. +ಉಮಣ ಪೂಜಾರಿ ಮತ್ತು ಸುಂದರಿ ದಂಪತಿಯ ಸುಪುತ್ರರಾಗಿ ಪಾಪೆಮಜಲು ಮನೆಯಲ್ಲಿ ದಿನಾಂಕ 17-1-1968ರಂದು ಜನಿಸಿದರು. +9ನೇ ವಯಸ್ಸಿನಿಂದ ಯಕ್ಷಗಾನದ ಪಾತ್ರ ನಿರ್ವಹಣೆಯನ್ನು ಮಾಡುತ್ತಾ ಬೆಳೆದರು. +ಅರ್ಥಧಾರಿ ಮತ್ತು ವೇಷಧಾರಿಯಾಗಿದ್ದ ಚಿಕ್ಕಪ್ಪ ಪಕೀರಪ್ಪ ಪೂಜಾರಿ ಮತ್ತು ದೊಡ್ಡಪ್ಪ ದಿ ಬೈಂಕಿ ಪೂಜಾರಿಯವರು ಬಾಲ್ಯದಿ೦ದಲೇ ಇವರಿಗೆ ಪ್ರೇರಣೆಯನ್ನು ನೀಡಿದ್ದರೆ,ಭಾಗವತರಾದ ಪಾದೆ ಕರಿಯ ನಾರಾಯಣ ಭಟ್ಟರು ಕೂಡಾ ಉತ್ತೇಜನ ನೀಡಿದವರಾಗಿದ್ದಾರೆ. +ಶ್ರೀ ಕ್ಷೇತ್ರ ಧರ್ಮಸ್ಥಳದ ಲಲಿತ ಕಲಾ ಕೇಂದ್ರದಲ್ಲಿ ಕೆ.ಗೋವಿಂದ ಭಟ್‌ ಮತ್ತು ಕರ್ಗಲ್ಲು ವಿಶ್ವೇಶ್ವರ ಭಟ್ಟರಿ೦ದ ನಾಟ್ಯಾಭ್ಯಾಸವನ್ನು ಮಾಡಿದ ಇವರು ಕುಂಬ್ಳೆ ಮೇಳ - 2 ವರ್ಷ, ಕದ್ರಿ ಮೇಳ - 2ವರ್ಷ, ಬಪ್ಪನಾಡು ಮೇಳ - 1 ವರ್ಷ, ಮಧೂರುಮೇಳ - 1 ವರ್ಷ, ಹಾಗೂ ಕಟೀಲು ಮೇಳದಲ್ಲಿ-15 ವರ್ಷಗಳ ತಿರುಗಾಟವನ್ನು ಪೂರೈಸಿದ್ದಾರೆ. +ಇವರು ಮಾಲಿನಿ, ಶ್ರೀದೇವಿ, ಮೋಹಿನಿ,ಮಂಡೋದರಿ, ಸೀತೆ, ಶಚಿ, ರೇಣುಕ ಮೊದಲಾದ ಪಾತ್ರಗಳನ್ನು ನಿರ್ವಹಿಸುತ್ತಿರುವ ಇವರು ಶ್ರೀಮತಿ ಚಂದ್ರಾವತಿ ಎಂಬವರನ್ನು ವರಿಸಿರುವರು. +ಚೆಂಡೆ - ಮದ್ದಳೆಯ ನುಡಿತ ಬಡಿತಗಳಲ್ಲಿ ತೀವ್ರಗತಿಯ ಕೈಚಳಕವನ್ನು ತೋರುತ್ತಾ ಕಲಾಸಾಧಕನಾಗಿ ಜನ ಮನ್ನಣೆಯನ್ನು ಪಡೆದಿರುವ ಪದ್ಮನಾಭ ಉಪಾಧ್ಯಾಯರು ಶ್ರೀ ಹೊಸನಗರ ಮೇಳದ ಹಿಮ್ಮೇಳ ವಾದಕರಾಗಿ ತಿರುಗಾಟವನ್ನು ನಡೆಸುತ್ತಿದ್ದಾರೆ. +ಶ್ರೀನಿವಾಸ ಉಪಾಧ್ಯ ಮತ್ತು ಸುನಂದ ಉಪಾಧ್ಯ ದಂಪತಿಯ ಸುಪುತ್ರರಾಗಿ 15-1-1968ರಂದು ಉಡುಪಿಯಲ್ಲಿ ಜನಿಸಿದರು. +10ನೇ ತರಗತಿಯ ತನಕ ವಿದ್ಯಾಭ್ಯಾಸವನ್ನು ಪಡೆದಿರುವ ಇವರು ಬಾಲ್ಯದಲ್ಲೇ ಯಕ್ಷಗಾನದತ್ತ ಆಕರ್ಷಿತರಾಗಿದ್ದರು. +ಕೀರ್ತಿಶೇಷ ಚೆಪ್ಪಾರು ಕೃಷ್ಣಯ್ಯ ಬಲ್ಲಾಳರ ಚೆಂಡೆಯ ಕೈಚಳಾದ ವರ್ಚಸ್ಸು ಇವರಲ್ಲಿ ಹೆಚ್ಚಿನ ಉತ್ತೇಜನವನ್ನು ಮೂಡಿಸಿತ್ತು. +ನಿಡ್ಜೆ ನರಸಿಂಹ ಭಟ್‌, ದಿವಾಣ ಭೀಮ ಭಟ್‌,ಮಾಂಬಾಡಿ ಸುಬ್ರಹ್ಮಣ್ಯ ಭಟ್‌, ಮೋಹನ ಬೈಪಾಡಿತ್ತಾಂದು, ಗೋಪಾಲಕೃಷ್ಣ ಕುರುಪ್‌ಮೊದಲಾದವರ ಗುರುತನದಲ್ಲಿ ಚೆಂಡೆ, ಮದ್ದಲೆಮತ್ತು ಭಾಗವತಿಕೆಯ ಬಗ್ಗೆ ಜ್ಞಾನ ಸಂಪಾದನೆ ಮಾಡಿರುವರು. +ಚುರುಕಿನ ಪ್ರತಿಭಾವಂತರಾಗಿರುವ ಪದ್ಮನಾಭ ಉಪಾಧ್ಯಾಯರು ಮೇಳ ತಿರುಗಾಟದ ಮುಖೇನ ಸಾಧಕರಾಗಿ ಬೆಳೆದುಬಂದರು. +ಬಪ್ಪನಾಡು ಮೇಳ - 1 ವರ್ಷ, ನೇತ್ರಾವತಿ ಯಕ್ಷಗಾನ ಮಂಡಳಿ - 1 ವರ್ಷ, ಅರುವ ಮೇಳ-1 ವರ್ಷ, ಕುಂಬ್ಳೆ ಮೇಳ - 1 ವರ್ಷ, ಪುತ್ತೂರುಮೇಳ - 1 ವರ್ಷ, ಕಾ೦ತಾವರಮೇಳ - 2 ವರ್ಷ,ಕದ್ರಿ ಮೇಳ - 5 ವರ್ಷ, ಮಂಗಳಾದೇವಿ ಮೇಳ-3 ವರ್ಷ, ಗಣೇಶ ಪುರ ಮೇಳ - 1 ವರ್ಷ,ಕಟೀಲು ಮೇಳ - 2 ವರ್ಷ, ಎಡನೀರು ಮೇಳ -2 ವರ್ಷ, ಧರ್ಮಸ್ಥಳ ಮೇಳ - 3 ವರ್ಷ,ಹೊಸನಗರ ಮೇಳ -1 ವರ್ಷ ಹೀಗೆ ತಿರುಗಾಟದ ಹಿನ್ನೆಲೆಯನ್ನು ಹೊಂದಿದ್ದಾರೆ. +ಹಿಮ್ಮೇಳ ವಾದಕರಾಗಿರುವ ಜೊತೆಗೆ ಸಂಗೀತ ,ಜ್ಞಾನ, ರಂಗಮಾಹಿತಿ, ಪ್ರಸಂಗಮಾಹಿತಿ ಇತ್ಯಾದಿಗಳ ಬಗ್ಗೆಯೂ ಹೆಚ್ಚಿನ ಅಧ್ಯಯನವನ್ನು ಮಾಡಿದ್ದಾರೆ. +ಗುರುಗಳಾಗಿ ನೂರಾರು ಮಂದಿ ಶಿಷ್ಯರನ್ನು ಹೊಂದಿರುವ ಇವರು ಹಲವಡೆಯಲ್ಲಿ ತರಬೇತಿಯನ್ನು ನೀಡಿದ್ದಾರೆ. +ಚೆಂಡೆಯನ್ನು ಶ್ರುತಿಮಾಡಲು ಅನುಕೂಲವಾಗುವಂತೆ, ಹಗ್ಗದ ಬಿಗಿಹಿಡಿಯಲು ಹೊಸ ವಿಧಾನವನ್ನು ಇವರು ಕಂಡುಹಿಡಿದಿದ್ದಾರೆ. +ಶ್ರೀಮತಿ ಪ್ರೀತಿ ಉಪಾಧ್ಯರನ್ನು ವರಿಸಿ ಪ್ರತೀಕ್‌ಉಪಾಧ್ಯ ಎಂಬ ಸುಪುತ್ರನನ್ನು ಪಡೆದಿರುವ ಪದ್ಮನಾಭ ಉಪಾಧ್ಯಾಯರು ಜನ ಮೆಚ್ಚುಗೆಯಿಂದ ಕೀರ್ತಿಯನ್ನು ಸಂಪಾದಿಸಿದ ಸಾಧಕರಾಗಿದ್ದಾರೆ. +ಹಾಸ್ಯದ ನಟನೆಯಿಂದ ಮನವನ್ನು ರಂಜಿಸುವ ಶ್ರೀ ಎಸ್‌.ಪದ್ಮನಾಭ ಶೆಟ್ಟಿಗಾರ್‌ ಓರ್ವ ಉತ್ತಮ ಹಾಸ್ಯಗಾರರಾಗಿ ತೆಂಕುತಿಟ್ಟಿನ ಕ್ಷೇತ್ರದಲ್ಲಿ ಪ್ರಭಾವ ಬೀರಿದ್ದಾರೆ. +ಪ್ರಸ್ತುತ ಕಟೀಲು ಮೇಳದ ಹಾಸ್ಯಗಾರರಾಗಿ ತಿರುಗಾಟವನ್ನು ನಡೆಸುತ್ತಾ ಇದ್ದಾರೆ. +ರಾಮಣ್ಣ ಶೆಟ್ಟಿಗಾರ್‌ ಮತು ಗಿರಿಜಾ ಶೆಟಿಗಾರ್ತಿ ದಂಪತಿಯ ಸುಪುತ್ರರಾಗಿ ಸಿದ್ಧಕಟ್ಟೆಯ ಸಂಘಬೆಟ್ಟಿನಲ್ಲಿ ಜನಿಸಿದ ಇವರಿಗೀಗ 56 ವರ್ಷ. +7ನೇ ತರಗತಿಯ ತನಕ ಶಾಲೆಗೆ ಹೋಗಿರುವ ಇವರನ್ನು ಯಕ್ಷಗಾನ ಕಲೆಯು ತನ್ನೆಡೆಗೆ ಆಕರ್ಷಿಸಿತು. +ಪರಿಸರದಲ್ಲಿ ನಡೆಯುತ್ತಿದ್ದ ಯಕ್ಷಗಾನದ ಪ್ರದರ್ಶನಗಳಲ್ಲಿ ಹಾಸ್ಯಪಾತ್ರಗಳನ್ನು ನೋಡುತ್ತಾ ತಾನು ಕೂಡಾ ಹಾಸ್ಯಪಾತ್ರಧಾರಿಯಾಗಿ ಬೆಳೆಯಬೇಕೆಂದು ಬಯಸಿದರು. +ತುಳು ಭಾಷೆಯ ಪ್ರದರ್ಶನಗಳಲ್ಲಿ ಪ್ರಭಾವಿತರಾಗಿ ಬೆಳೆದು ಕೀರ್ತಿ ಶೇಷರಾಗಿರುವ ಕಲಾವಿದ ಕೊರಗದಾಸ್‌ ಇವರಲ್ಲಿ ನಾಟ್ಯವನ್ನು ಅಭ್ಯಾಸ ಮಾಡಿ ರಂಗಪ್ರವೇಶ ಮಾಡಿದರು. +22ನೇ ವರ್ಷದಿಂದಲೇ ಯಕ್ಷಗಾನದ ಕಲಾಜೀವನಕ್ಕೆ ಪ್ರವೇಶಿಸಿದ ಪದ್ಮನಾಭ ಶೆಟ್ಟಿಗಾರರು ಕುಂಡಾವು ಮೇಳ - 1 ವರ್ಷ, ಸುಬ್ರಹ್ಮಣ್ಯ ಮೇಳ- 1 ವರ್ಷ, ಕೊಲ್ಲೂರು ಮೇಳ - 1 ವರ್ಷ,ಸುಂಕದಕಟ್ಟೆ ಮೇಳ - 9 ವರ್ಷ, ಸುರತ್ಕಲ್‌ ಮೇಳ-6 ವರ್ಷ, ಹಾಗೂ ಕಟೀಲು ಮೇಳ - 14ವರ್ಷ ಹೀಗೆ ಒಟ್ಟು 32 ವರ್ಷಗಳ ತಿರುಗಾಟವನ್ನುವರಾಡಿದ್ದಾರೆ. +ಈ ಮಧ್ಯೆ ಹವ್ಯಾಸಿಕಲಾವಿದರಾಗಿಯೂ ಕಲಾ ಸೇವೆಯನ್ನು ನಡೆಸಿದ್ದಾರೆ. +ಶ್ರೀಮತಿ ಪದ್ಮಾವತಿ ಎಂಬವರನ್ನು ವರಿಸಿರುವ ಇವರು ಪುರುಷೋತ್ತಮ ಶೆಟ್ಟಿಗಾರ್‌ (ಉದ್ಯೋಗಿ),ಜೀವನ್‌ದಾಸ್‌ (ವಿದ್ಯುತ್‌ ಕುಶಲ ಕರ್ಮಿ) ಎಂಬ ಇಬ್ಬರು ಮಕ್ಕಳನ್ನು ಪಡೆದಿದ್ದಾರೆ. +ಮೂಕಾಸುರ, ವಿಜಯ, ದಾರುಕ, ಬಾಹುಕ,ಪಾಪಣ್ಣ ಮುಂತಾದ ಪಾತ್ರಗಳಲ್ಲಿ ಉತ್ತಮ ಹಾಸ್ಯದ ನಟನೆಯನ್ನು ತೋರುವ ಇವರು ದೇವಿ ಮಹಾತ್ಮೆಯ ಬ್ರಹ್ಮ ಸುಗ್ರೀವ ಮೊದಲಾದ ಪಾತ್ರಗಳನ್ನು ಚೆನ್ನಾಗಿ ನಿರ್ವಹಿಸುತ್ತಾರೆ. +ನಂದಿಶೆಟ್ಟಿ, ಸುಬುದ್ಧಿ ಮೊದಲಾದ ಗೌರವ ಹಾಸ್ಯದ ಪಾತ್ರಗಳಲ್ಲಿ ನಟಿಸುವಲ್ಲಿಯೂ ಪ್ರಬುದ್ಧ ನಿರ್ವಹಣೆಯನ್ನು ತೋರುತ್ತಾರೆ. +ಕನ್ನಡ ಮತ್ತು ತುಳು ಭಾಷೆಯ ಹೆಚ್ಚಿನ ಪ್ರಸಂಗಗಳಲ್ಲಿ ಪಾತ್ರ ನಿರ್ವಹಣೆಗೆ ತಕ್ಕಂತೆ ಪ್ರಬುದ್ಧತೆಯನ್ನು ಸಾಧಿಸಿದ್ದಾರೆ. +ಮದ್ದಳೆಯ ನುಡಿತ ಬಡಿತಗಳನ್ನು ಹಿಡಿತವನ್ನು ಸಾಧಿಸಿ ಪ್ರೌಢಿಮೆಯನ್ನು ಮೆರೆಸಿರುವ ಶ್ರೀ ಎಂ.ಪ್ರಭಾಕರ ಗೋರೆಯವರು ಪ್ರಸ್ತುತ ಎಡನೀರು ಯಕ್ಷಗಾನ ಮಂಡಳಿಯಲ್ಲಿ ಕಲಾ ಸೇವೆಯನ್ನು ಮಾಡುತ್ತಿದ್ದಾರೆ. +4-11-1959ರಲ್ಲಿ ಶಂಕರಭಟ್‌ ಗೋರೆ ಮತ್ತು ಉಮಾ ಗೋರೆ ದಂಪತಿಂಯ ಸುಪುತ್ರರಾಗಿ ಜನಿಸಿದರು. +ಪದವಿ ಪೂರ್ವ ಹಂತದವರೆಗೆ ಶೈಕ್ಷಣಿಕವಾಗಿ ವಿದ್ಯಾಭ್ಯಾಸವನ್ನು ಪಡೆದಿರುವ ಇವರು ಕಲೆಯ ಮೇಲಿನ ಅಭಿರುಚಿಯಿಂದಾಗಿ ಕಲಾಸಾಧಕರಾಗಿ ಬೆಳೆದು ಬಂದರು. +ಬೆಳ್ತಂಗಡಿ ತಾಲೂಕು ಲೈಲ ಗ್ರಾಮದ ಅಗರಿ ಕೃಷ್ಣಭಾಗವತರು ಇವರ ಅಜ್ಜರಾಗಿದ್ದು ಅವರ ಪ್ರೋತ್ಸಾಹವು ಇವರಿಗೆ ದೊರೆತ ಕಾರಣ ಕಲಾ ಸಾಧಕರಾಗಲು ಹಂಬಲಿಸಿದರು. +ಮುಂದೆ ನಾರಾಯಣ ಬೀಡೆ ಎಂಬವರಿಂದ ಮೃದಂಗದ ನುಡಿತ-ಬಡಿತಗಳನ್ನು ಅಭ್ಯಾಸ ಮಾಡಿದ ಇವರು ಜಿ ಆರ್‌ ಭಟ್‌ ಹೊನ್ನಾವರ ಅವರಿಂದ ತಬ್ಲಾವಾದನದ ಅಭ್ಯಾಸವನ್ನು ಮಾಡಿರುವರು. +ತಬ್ಲಾ-ಉತ್ತರಾದಿ ಸಿನಿಂಕುರ್‌ ಪರೀಕ್ಷೆಂರುಲ್ಲಿ ಉತ್ತೀರ್ಣರಾಗಿರುವ ಇವರು ಕಲಾವ್ಯವಸ್ಯಾಯಕ್ಕಾಗಿ ಯಕ್ಷಗಾನ ಕ್ಷೇತ್ರವನ್ನು ಆಯ್ದುಕೊಂಡರು. +ಕೀರ್ತಿಶೇಷ ಭಾಗವತರಾಗಿರುವ ದಿ.ದಾಮೋದರ ಮಂಡೆಚ್ಚರ ಅಸಕ್ತಿಂಯ ಮೇರೆಗೆ ಕರ್ನಾಟಕ ಮೇಳವನ್ನು ಸೇರಿದ ಪ್ರಭಾಕರ ಗೋರೆಯವರು 28ವರ್ಷಗಳ ತನಕ ಅದೇ ಮೇಳದಲ್ಲಿ ತಿರುಗಾಟವನ್ನುಮಾಡಿ ಕೀರ್ತಿವಂತರಾದರು. +ಮುಂದೆ ಮಂಗಳದೇವಿ ಮೇಳದಲ್ಲಿ 5ವರ್ಷಗಳ ತಿರುಗಾಟವನ್ನು ನಡೆಸಿದ ಇವರು ಎಡನೀರು ಮೇಳವನ್ನು ಸೇರಿದರು. +ಈಗಾಗಲೆ 5ವರ್ಷಗಳ ತಿರುಗಾಟವನ್ನು ಎಡನೀರು ಮೇಳದಲ್ಲಿ ಪೊರೈಸಿದ್ದಾರೆ. +ಶ್ರೀಮತಿ ಪ್ರತಿಭಾ ಗೋರೆ ಇವರ ಪತ್ನಿ, ನಾಗಾರಾಜ(ಪುರೋಹಿತರು), ಪುಷ್ಪರಾಜ ಗೋರೆ(ಮೆಕೋಟ್ರಾನಿಕ್ಸ್‌ ಇಂಜಿನಿಯರಿಂಗ್‌ ಡಿಪ್ಲೋಮೊ)ಎಂಬ ಈರ್ವರು ಮಕ್ಕಳಿದ್ದಾರೆ. +ಇವರ ಕಲಾಸಾಧನೆಯನ್ನು ಗುರುತಿಸಿರುವ ಎಡನೀರು ಮಠ ಹಾಗೂ ಕಾರ್ಕಳ ಬಜಗೋಳಿಯ ಅಭಿಮಾನಿಗಳು ಗೌರವಿಸಿ ಸಂಮಾನಿಸಿದ್ದಾರೆ. +ಪುಂಡು ವೇಷ, ರಾಜವೇಷ, ನಾಟಾಕೀಯ ವೇಷ ಬಣ್ಣದ ವೇಷ ಮತ್ತು ಹಾಸ್ಯ ವೇಷಗಳು ಸೇರಿದಂತೆ ಎಲ್ಲಾ ಬಗೆಯ ಪುರುಷ ಪಾತ್ರಗಳನ್ನು ನಿರ್ವಹಿಸುತ್ತಾ ಮನ್ನಣೆಯನ್ನು ಪಡೆದಿರುವ ಶ್ರೀಪ್ರಜ್ವಲ್‌ ಕುಮಾರ್‌ ಶೆಟ್ಟಿ ಇವರು ಹೊಸನಗರ ಮೇಳದ ಕಲಾವಿದರಾಗಿ ತಿರುಗಾಟವನ್ನು ಮಾಡುತ್ತಾ ಇದ್ದಾರೆ. +ದಿನಾಂಕ 14-8-1985ರಲ್ಲಿ ಬೇಬಿ ಶೆಟ್ಟಿ ಮತ್ತು ಸಂಪಾವತಿ ಶೆಡ್ತಿಯ ಸುಪುತ್ರರಾಗಿ ಮೂಡಿಗೆರೆಯಲ್ಲಿ ಹುಟ್ಟಿದರು. + ಇವರು ಪ್ರಾಥಮಿಕ ಹಂತದ ವಿದ್ಯಾಭ್ಯಾಸವನ್ನು ಪಡೆದಿದ್ದಾರೆ. +ಬಾಲ್ಯದಿಂದಲೇ ಯಕ್ಷಗಾನ ಕಲೆಯ ಮೇಲೆ ಆಕರ್ಷಿತರಾದ ಇವರಿಗೆ ಬಂಧುಗಳ ಕಲಾಸಾಧನೆಯು ಬೆಳವಣಿಗೆಗೆ ಉತ್ತೇಜನವನ್ನು ನೀಡಿತ್ತು. +ಹಿರಿಯ ಕಲಾವಿದರಾದ ಅರುವ ಕೊರಗಪ್ಪಶೆಟ್ಟಿ ಹಾಗೂ ಗೆರುಕಟ್ಟೆ ಗಂಗಯ್ಯ ಶೆಟ್ಟಿಯವರು ಮಾವ ಹಾಗೂ ದೊಡ್ಡಪ್ಪರಾಗಿದ್ದಾರೆ. +ಇನ್ನೋರ್ವ ಕಲಾವಿದ ಕಾವಳಕಟ್ಟೆ ದಿನೇಶ್‌ ಶೆಟ್ಟಿ ಬಾವನಾಗಿದ್ದಾರೆ. +ಹೀಗಾಗಿ ತಾನೂ ಕಲಾ ಸಾಧಕನಾಗಬೇಕೆಂಬ ಹಂಬಲದಿಂದ ತಾರನಾಥ ವರ್ಕಾಡಿ ಹಾಗೂ ದಿವಾಣ ಶಿವಶಂಕರ ಭಟ್ಟರಲ್ಲಿ ನಾಟ್ಯಾಭ್ಯಾಸವನ್ನು ಮಾಡಿ ಪ್ರವೀಣರಾದರು. +11ನೇ ವರ್ಷದಿ೦ದಲೇ ಮುಖಕ್ಕೆ ಬಣ್ಣ ಹಚ್ಚಲಾರಂಭಿಸಿದ ಇವರು ಧರ್ಮಸ್ಥಳ ಮೇಳ -4 ವರ್ಷ, ಕಟೀಲು ಮೇಳ - 1 ವರ್ಷ, ಕುಂಟಾರುಮೇಳ - 2 ವರ್ಷ, ಎಡನೀರು ಮೇಳ 2ವರ್ಷ ಹಾಗೂ ಹೊಸನಗರ ಮೇಳದಲ್ಲಿ 4 ವರ್ಷಗಳ ತಿರುಗಾಟವನ್ನು ಪೂರೈಸಿದ್ದಾರೆ. +ಶುಂಭ, ಸಾಲ್ವ, ರಾವಣ, ಭೀಮ, ದುಶ್ಯಾಸನ,ಬೇಹಿನಚರ, ಕೇಳುಪಂಡಿತ, ದೇವೇಂದ್ರ, ಅರ್ಜುನ,ವಿದ್ಯುನ್ಮಾಲಿ ಮೊದಲಾದ ಪಾತ್ರಗಳನ್ನು ನಿರ್ವಹಿಸಿರುವ ಇವರು ಪ್ರತ್ಯುತ್ತನ್ನವಾದ ಮಾತುಗಳನ್ನಾಡಿ ಪ್ರೇಕ್ಷಕರ ಮೆಚ್ಚುಗೆಗೆ ಕಾರಣರಾಗಿದ್ದಾರೆ. +ಬಲಿಪ ಮನೆತನದ ಶೈಲಿ ಮತ್ತು ಸಂಪ್ರದಾಯವನ್ನು ವಿಸ್ತರಿಸಿ ಮೆರೆಸುತ್ತಿರುವ ಶ್ರೀ ಬಲಿಪ ಪ್ರಸಾದ ಭಟ್‌ಇವರು ಪ್ರಸ್ತುತ ಕಟೀಲು ಮೇಳದಲ್ಲಿ ಭಾಗವತರಾಗಿ ತಿರುಗಾಟವನ್ನು ನಡೆಸುತ್ತಾ ಇದ್ದಾರೆ. +ನಾಡಿನಾದ್ಯಂತ ಪ್ರಸಿದ್ಧರಾಗಿರುವ ಬಲಿಪನಾರಾಯಣ ಭಾಗವತ ಮತ್ತು ಜಯಲಕ್ಷ್ಮೀ ದಂಪತಿಯ ಸುಪುತ್ರರಾಗಿ ದಿನಾಂಕ 14-4-1976ರಂದು ಮಾರೂರಿನ ನೂಯಿ ಮನೆಯಲ್ಲಿ ಹುಟ್ಟಿದರು. +ತಂದೆ, ಅಜ್ಜ,ಮುತ್ತಜ್ಜ ಹೀಗೆ ಮನೆತನದ ಹಿರಿಯರೆಲ್ಲ ಯಕ್ಷಗಾನದ ಸಾಧಕರಾಗಿದ್ದುದರಿಂದ ವಂಶ ಪಾರಂಪರ್ಯದ ಕಲಾಪ್ರತಿಭೆ ಇವರಿಗೂ ಬಂದಿದೆ. +ತಂದೆಯವರೇ ಗುರುಗಳಾಗಿದ್ದ ಅವರ ಪ್ರೇರಣೆ ಮತ್ತು ಮಾರ್ಗದರ್ಶನದಲ್ಲಿ ಪ್ರಸಂಗದ ಅನುಭವವನ್ನು ಸಂಪಾದಿಸಿರುವರು. +ಕಟೀಲು ಮೇಳವೊಂದರಲ್ಲೇ ಹದಿನೇಳು ವರ್ಷಗಳ ತಿರುಗಾಟವನ್ನು ನಡೆಸಿರುವ ಬಲಿಪ ಪ್ರಸಾದ ಭಾಗವತರು 10ನೇ ತರಗತಿಯವರೆಗೆ ವಿದ್ಯಾಭ್ಯಾಸವನ್ನು ಪಡೆದಿರುವರು. +ಶ್ರೀಮತಿ ದುರ್ಗಾದೇವಿ ಎಂಬವರನ್ನು ವರಿಸಿ ಅಪರ್ಣ(7ನೇ ತರಗತಿ) ಎಂಬ ಸುಪುತ್ರಿಯನ್ನು ಪಡೆದಿರುವ ಇವರ ಕಲಾ ಸೇವೆಯು 16ನೇ ವಯಸ್ಸಿನಿಂದಲೇ ಆರಂಭವಾಗಿದೆ. +ಸ್ತ್ರೀ ಪಾತ್ರದ ಮುಖೇನ ತೆಂಕುತಿಟ್ಟಿನ ಯಕ್ಷಗಾನದಲ್ಲಿ ವಿಶಿಷ್ಟ ಶೈಲಿಯನ್ನು ಮೆರೆಸಿದ ಕಡಂದೇಲು ಪುರುಷೋತ್ತಮ ಭಟ್ಟರು ಉತ್ತಮ ಕಲಾಸಾಧಕರಾಗಿ ಜನ ಮನ್ನಣೆಗೆ ಪಾತ್ರರಾಗಿದ್ದಾರೆ. +ಇವರು ಶ್ರೀದೇವಿ, ಕೈಕೇಯಿ ಮೊದಲಾದ ಪಾತ್ರಗಳು ಅನುಪಮ ಮಾದರಿಯ ಪಾತ್ರಗಳಾಗಿ ಪ್ರಶಂಸೆಗೆ ಪಾತ್ರವಾಗಿವೆ. +ವೆಂಕಟರಮಣ ಭಟ್‌ ಹಾಗೂ ಭಾಗೀರಥಿ ದಂಪತಿಯ ಸುಪುತ್ರರಾಗಿ ಪುತ್ತೂರು ತಾಲೂಕಿನ ಪಾಳಾಜೆ ಗ್ರಾಮದ ಕಡಂದೇಲು ಎಂಬಲ್ಲಿ ಹುಟ್ಟಿದರು. +ಇವರ ಹುಟ್ಟಿದ ದಿನಾಂಕ 19-10-1917 ಪ್ರಾಥಮಿಕ ಹಂತದ ಶಾಲಾ ವಿದ್ಯಾಭ್ಯಾಸವನ್ನು ಪೂರೈಸಿದ ಇವರು ಸಂಸ್ಕೃತ ಹಾಗೂ ವೇದಪಾಠದ ಅಭ್ಯಾಸದೊಂದಿಗೆ ಬಾಲ್ಯದಲ್ಲೇ ಸಾಹಿತ್ಯದಲ್ಲಿ ಪ್ರೌಡಿಮೆಯನ್ನು ಸಾಧಿಸಿದರು. +ಕಾವು ಶೀನಪಯ್ಯನವರ ಪ್ರೇರಣೆಯಿಂದ ಮತ್ತು ಕಲಾವಿದ ಗಣಪತಿ ಭಟ್‌ ಎಂಬವರ ಮಾರ್ಗದರ್ಶನದಲ್ಲಿ ಯಕ್ಷಗಾನ ಕಲಾವಿದರಾಗಿ ಪುರುಷೋತ್ತಮ ಭಟ್ಟರು ಬೆಳೆದರು. +ಬಾಲ್ಯದಲ್ಲೇ ಯಕ್ಷಗಾನ ಕಲೆಯತ್ತ ಆಕರ್ಷಿತರಾದ ಇವರು ಮೂಲ್ಕಿ ಮೇಳ - 1 ವರ್ಷ,ಕೊರೊಕ್ಕೋಡು ಮೇಳ - 1 ವರ್ಷ, ಕೂಡ್ಲು ಮೇಳ-1 ವರ್ಷ, ಕಟೀಲು ಮೇಳ 18 ವರ್ಷ, ಇರಾಮೇಳ-6 ವರ್ಷ ಹೀಗೆ ಮೇಳ ತಿರುಗಾಟವನ್ನು ಮಾಡಿ ನಿವೃತ್ತರಾಗಿದ್ದಾರೆ. +ಅಂಬೆ, ಚಿತ್ರಾಂಗದೆ, ದಮಯಂತಿ,ಶಕುಂತಲೆ ಮೊದಲಾದ ಪಾತ್ರಗಳನ್ನು ಮಾಡಿರುವ ಇವರು ಕಟೀಲು ಮೇಳದಲ್ಲಿ ಶ್ರೀದೇವಿಯ ಪಾತ್ರವನ್ನು ಮಾಡುವುದರ ಮುಖೇನ ಹೆಚ್ಚಿನ ಜನಮನ್ನಣೆಗೆ ಕಾರಣರಾದರು. +ವಿಮರ್ಶಾತ್ಮಕ ನೆಲೆಯಿಂದ ಪಾತ್ರ ನಿರ್ವಹಣೆಯನ್ನು ಮಾಡುತ್ತಿದ್ದ ಪುರುಷೊತ್ತಮ ಭಟ್ಟರು ಆರಾಧನೆಯ ಮನಸ್ಸಿನಿಂದ ಕಲಾಸೇವೆಯನ್ನು ಮಾಡಿದ್ದರು. +ವೃದ್ಧಾಪ್ಯದ ಹಂತದಲ್ಲೂ ಯಕ್ಷಗಾನದ ಆಟ ಹಾಗೂ ಕೂಟಗಳನ್ನು ನೋಡುವ ಹವ್ಯಾಸ ಇವರಲ್ಲಿದೆ. +ಪ್ರಸಂಗ ಜ್ಞಾನ, ಪುರಾಣ ಜ್ಞಾನಮತ್ತು ರಂಗತಂತ್ರದ ಅನುಭವವನ್ನು ಪಡೆದಿರುವ ಇವರು ಸಮರ್ಥ ಮಾರ್ಗದರ್ಶಕರಾಗಿದ್ದಾರೆ. +ಕುಮದಾ ಎಂಬವರನ್ನು ವರಿಸಿರುವ ಇವರು ಶ್ರೀಪತಿ, ಮಾಲತಿ, ಶ್ರೀಹರಿ (ಬ್ಯಾಂಕ್‌ ಉದ್ಯೋಗಿ),ವೆಂಕಟರಮಣ ಭಟ್‌ (ಅಮೇರಿಕಾದಲ್ಲಿ ಉದ್ಯೋಗಿ),ಶ್ರೀಪಾದ ಭಟ್‌ (ಗೋವದಲ್ಲಿ ಪ್ರೋಫೆಸರ್‌) ಎಂಬ ಐವರು ಮಕ್ಕಳನ್ನು ಪಡೆದಿದ್ದಾರೆ. +ತೆಂಕುತಿಟ್ಟಿನ ಸ್ತ್ರೀ ಪಾತ್ರಧಾರಿ ಎಂದೆನಿಸಿರುವ ಇವರ ಸಾಧನೆಗೆ ಪ್ರತಿಫಲವಾಗಿ 45ಕ್ಕೂ ಮಿಕ್ಕಿಸಂಮಾನಗಳು ಸಂದಿವೆ. +ದೆಹಲಿ, ಉಡುಪಿ ಕಲಾರಂಗ, ಕೋಡಪದವು, ಕಟೀಲು ಮುಂತಾದ ಕಡೆಗಳಿಂದ ಪ್ರಶಸ್ತಿಗಳು ಸಂದಿವೆ. +ಶ್ರೀ ಕೃಷ್ಣ ಯಕ್ಷಸಭಾ, ಹವ್ಯಾಸ ಬಳಗ ಕದ್ರಿ ಇತ್ಯಾದಿ ಸಂಸ್ಥೆಗಳು ಇವರನ್ನು ಸಂಮಾನಿಸಿವೆ. +ತುಳು ಮತ್ತು ಕನ್ನಡ ಭಾಷೆಯ ಪ್ರಸಂಗಗಳಲ್ಲಿ ಸ್ತ್ರೀ ಪಾತ್ರಗಳನ್ನು ಉತ್ತಮವಾಗಿ ನಿರ್ವಹಿಸುವುದರ ಮೂಲಕ ಖ್ಯಾತವಾಗಿರುವ ಶ್ರೀಪುಂಡರೀಕಾಕ್ಷ ಉಪಾಧ್ಯಾಯರು ಕಟೀಲು ಮೇಳದ ಹಿರಿಯ ಕಲಾವಿದರಾಗಿ ತಿರುಗಾಟವನ್ನು ನಡೆಸುತ್ತಾ ಇದ್ದಾರೆ. +ಕೃಷ್ಣ ಉಪಾಧ್ಯಾಯ ಮತ್ತು ಭಾರತಿ ದಂಪತಿಯ ಪುತ್ರರಾಗಿ 08/02/1942ರಲ್ಲಿ ಕಾಸರಗೋಡಿನ ವೈನಾಡಿನಲ್ಲಿ ಇವರು ಜನಿಸಿದರು. +ಕಾಂತಪ್ಪ ಮಾಸ್ಟರ್‌ ಮತ್ತು ಜಿ.ಜಯಂತಕುಮಾರ್‌ ತೋನ್ಸೆ ಇವರ ಪ್ರೇರಣೆ ಮತ್ತು ಪ್ರೋತ್ಸಾಹದಿಂದ ಇವರಲ್ಲೇ ನಾಟ್ಯಾಭ್ಯಾಸ ರಂಗದ ಅನುಭವವನ್ನು ಸಂಪಾದಿಸಿದ ಪುಂಡರೀಕಾಕ್ಷ ಉಪಾಧ್ಯಾಯರು ತೆಂಕು ಮತ್ತು ಬಡಗು ತಿಟ್ಟಿನ ತಿರುಗಾಟವನ್ನು ಮಾಡಿದ ಕಲಾವಿದರಾಗಿದ್ದಾರೆ. +ಸಾಲಿಗ್ರಾಮ-3 ವರ್ಷ, ಇಡಗುಂಜಿಮೇಳ-3 ವರ್ಷ, ಕರ್ನಾಟಕ ಮೇಳ-13 ವರ್ಷ,ಕಟೀಲು ಮೇಳ-21 ವರ್ಷ ಹೀಗೆ ತಿರುಗಾಟದ ಹಿನ್ನೆಲೆಯನ್ನು ಹೊಂದಿದ್ದಾರೆ. +ಕರ್ನಾಟಕ ಮೇಳದಲ್ಲಿ ತುಳು ಪ್ರಸಂಗಗಳಲ್ಲಿ ನಾಯಕಿ ಪಾತ್ರಗಳನ್ನು ಮಾಡಿ ಮನ್ನಣೆಗೆ ಒಳಗಾಗಿದ್ದ ಇವರು ಕಟೀಲು ಮೇಳದಲ್ಲಿ ದೇವಿಮಹಾತ್ಮೆಯ ಶ್ರೀ ದೇವಿಯಾಗಿ ಪಾತ್ರ ನಿರ್ವಹಣೆಮಾಡಿದಾಗ ಪ್ರೇಕ್ಷಕರು ಭಕ್ತಿ ಭಾವುಕರಾಗಿ ನೋಡುವಂತೆ ಅಭಿನಯವನ್ನು ತೋರಿಸುವ ಚಾಕಚಕ್ಕತೆ ಇವರಲ್ಲಿದೆ. +ಶ್ರೀಮತಿ ಶಶಿಕಲಾ ಎಂಬವರನ್ನು ವರಿಸಿರುವ ಇವರು ಉದಯ ಕುಮಾರ್‌ (ಪೈಂಟರ್‌),ವಿಜಯ ಕುಮಾರ್‌ (ಆಫೀಸ್‌ ಉದ್ಯೋಗಿ) ಮತ್ತು ರೇಖಾ ಎಂಬ ಮೂವರು ಮಕ್ಕಳನ್ನು ಪಡೆದಿದ್ದಾರೆ. +ರಂಗ ಮಾಹಿತಿ, ಪಾತ್ರದ ಮಾಹಿತಿಯನ್ನು ಹಲವು ಮಂದಿ ಸಹ ಕಲಾವಿದರಿಗೆ ನೀಡಿ ಪ್ರದರ್ಶನ ಯಶಸ್ಸಿಗೆ ಕಾರಣರಾಗಿರುವರು. +ಇವರು ಕಲಾಪ್ರತಿಭೆಗೆ ಪೂರಕವಾಗಿ ಇರಾ, ಕಲ್ಲಾಡಿ ಪ್ರತಿಷ್ಠಾನ, ಮುದ್ರಾಡಿ,ಮಂಗಳೂರು ಕೃಷ್ಣ ಸಭಾ, ಉಡುಪಿ ಕೃಷ್ಣ ಮಠ,ಮುಂಬಯಿ, ಬೆಂಗಳೂರು ಮುಂತಾದೆಡೆಯಲ್ಲಿ ಸಂಮಾನ ಪುರಸ್ಕಾರಗಳು ಸಂದಿವೆ. +ಶ್ರೀ ಕಟೀಲು ಮೇಳದ ಮುಖ್ಯ ಭಾಗವತರಾಗಿ ತಿರುಗಟವನ್ನು ಮಾಡುತ್ತಿರುವ ಶ್ರೀ ಬೊಟ್ಟಿಗೆರೆ ಪುರುಷೋತ್ತಮ ಪೂಂಜರು ಯಕ್ಷಗಾನದ ಸರ್ವಾಂಗಗಳ ಜ್ಞಾನ ಸಂಪನ್ನರಾಗಿರುವ ಕಲಾವಿದರಾಗಿದ್ದಾರೆ. +21-6-1957 ರಲ್ಲಿ ತ್ಯಾಂಪಣ್ಣ ಪೂಂಜ ಮತ್ತು ಜಲಜಾ ದಂಪತಿಯ ಸುಪುತ್ರರಾಗಿ ಇವರು ಮುಂಜನಾಡಿಯಲ್ಲಿ ಹುಟ್ಟಿದ್ದಾರೆ. +ಬಿ.ಎಸ್ಸಿ ಪದವೀಧರರಾಗಿರುವ ಇವರು ಯಕ್ಚಗಾನ ಕಲಾಪ್ರಿಯರಾಗಿದ್ದು ಶಾಲಾ ಅಧ್ಯಾಪಕರ ಪ್ರೋತ್ಸಾಹದ ಮೇರೆಗೆ ಆರನೇ ತರಗತಿಯಿಂದಲೇ ವೇಷ ಹಾಕುತ್ತಾ ಬೆಳೆದು ಬಂದರು. +ಆರಂಭದಲ್ಲಿ ಉಪ್ಪಳ ಭಗವತಿ ಮೇಳದಲ್ಲಿ ಒಂದು ವರ್ಷ ವೇಷಧಾರಿಯಾಗಿ ಕಲಾಸೇವೆ ಮಾಡಿದರು. +ಇವರು ಉದ್ಯೋಗದ ನಿಮಿತ್ತ ಮುಂಬಯಿಗೆ ಹೋದವರು 3ವರ್ಷಗಳ ತನಕ ವೇಷಧಾರಿಯಾಗಿ ಪಾತ್ರ ನಿರ್ವಹಣೆ ಮಾಡಿದ್ದಾರೆ. +ಆಮೇಲೆ ಭಾಗವತಿಕೆಯ ಬಗ್ಗೆ ಆಸಕ್ತರಾದ ಇವರು ಮುಂಬಯಿಯಲ್ಲಿ 4ವರ್ಷಗಳ ತನಕ ಭಾಗವತಿಕೆಯನ್ನು ಮಾಡಿದ್ದರು. +ಅನಂತರ ಊರಿಗೆ ಮರಳಿದವರು ಪುತ್ತೂರು ಮೇಳ-2ವರ್ಷ, ಕರ್ನಾಟಕ ಮೇಳ-5ವರ್ಷ, ಮತ್ತು ಕಟೀಲು ಮೇಳದಲ್ಲಿ 19ವರ್ಷಗಳ ಸುಧಿರ್ಘ ಕಲಾಸೇವೆಯನ್ನು ಮಾಡುತ್ತಾ ಭಾಗವತರೆನಿಸಿದರು. +ಹಿಮ್ಮೇಳ ಮುಮ್ಮೇಳಗಳ ತರಬೇತಿಯನ್ನು ನೀಡುತ್ತಿರುವ ಇವರು ಉತ್ತಮ ನಿರ್ದೇಶಕರಾಗಿರುವರು. +ಇಷ್ಟಲ್ಲದೆ ತುಳು ಮತ್ತು ಕನ್ನಡ ಭಾಷೆಯ ಪ್ರಸಂಗ ಕರ್ತರಾಗಿರುವ ಇವರು ಉಭಯಕುಲ ಬಿಲ್ಲೋಜ, ನಳಿನಾಕ್ಷನಂದನೆ,ಮಾನಿಷಾದ, ಕ್ಹಾತ್ರಮೇಧ, ರಾಜಾದ್ರುಪದ, ಕುಡಿಯನಕೊಂಬಿರೆಳ್‌, ಕುಡಿಯನ ಕಣ್ಣ್‌, ಮೊದಲಾದ ಹಲವಾರು ಪ್ರಸಂಗಗಳನ್ನು ಬರೆದಿದ್ದಾರೆ. +ರಾಜವೇಷ, ಬಣ್ಣದ ವೇಷ, ಪುಂಡು ವೇಷ, ಸ್ತ್ರೀವೇಷಗಳನ್ನು ಮಾಡಿರುವ ಇವರು ಅತಿಕಾಯ,ರಾಮ, ಲಕ್ಷ್ಮಣ ಇತ್ಯಾದಿ ಪಾತ್ರಗಳನ್ನು ಚೆನ್ನಾಗಿ ನಿರ್ವಹಿಸುತ್ತಾರೆ. +ಸಾಹಿತ್ಯ, ಸಂಗೀತ, ಕ್ರೀಡೆಗಳ ಆಸಕ್ತಿ ಇರುವ ಇವರು ಶ್ರೀಮತಿ ಶೋಭ ಎಂಬವರನ್ನು ವರಿಸಿ ಜೀವಿತೇಶ, ಪರೀಕ್ಷಿತ ಎಂಬ ಇಬ್ಬರು ಮಕ್ಕಳನ್ನು ಪಡೆದಿದ್ದಾರೆ. + ಹಲವು ಮಂದಿ ಶಿಷ್ಯರನ್ನು ಹೊಂದಿರುವ ಇವರಿಗೆ ಮುಂಬಯಿ, ಮಂಗಳೂರು, ಕಲಾಗಂಗೋತ್ರಿ ಉಚ್ಚಿಲ ಇಲ್ಲೆಲಾ ಗೌರವ ಸಂಮಾನಗಳು ಸಂದಿವೆ. +ಮುಂಬಯಿ ಅಭಿಮಾನಿ ಬಳಗದಿಂದ ನಿಧಿ ಸಮರ್ಪಣೆಯಾಗಿದೆ. +ದುಬಾಯಿ ಯಕ್ಷಮಿತ್ರರಿಂದ ಕೂಡಾ ಸಂಮಾನವಾಗಿದೆ. +ಚೆಂಡೆ-ಮದ್ದಳೆ ನುಡಿತ-ಬಡಿತಗಳಲ್ಲಿ ಸಾಧನೆಯನ್ನು ಮಾಡಿ ಬೆಳೆದಿರುವ ಶ್ರೀ ಬಾಲಕೃಷ್ಣ ಕಾಟುಕುಕ್ಕೆಯವರು ಪ್ರಸ್ತುತ ಕೊಲ್ಲಂಗಾನ ಮೇಳದ ಕಲಾವಿದರಾಗಿ ಕಲಾಸೇವೆ ಮಾಡುತ್ತಿದ್ದಾರೆ. +ಈಶ್ವರ ನಾಯ್ಕ್‌ ಮತ್ತು ದೇವಕಿ ದಂಪತಿಯ ಸುಪುತ್ರರಾಗಿ ಕಾಟುಕುಕ್ಕೆಯಲ್ಲಿ ಜನಿಸಿದ ಬಾಲಕೃಷ್ಣರಿಗೆ 43 ವರ್ಷಗಳು ಆಗಿವೆ. +9ನೇ ತರಗತಿಯ ವಿದ್ಯಾಭ್ಯಾಸವನ್ನು ಪಡೆದಿರುವ ಇವರು 15ನೇ ವರ್ಷದಿಂದಲೇ ಯಕ್ಷಗಾನದ ಅಭಿರುಚಿಯನ್ನು ಬೆಳೆಸಿಕೊಂಡಿದ್ದಾರೆ. +ಇವರ ಕಲಾ ಜೀವನದ ಬೆಳವಣಿಗೆಗೆ ಬಣ್ಣದ ವೇಷಧಾರಿ ಕುಂಞ ರಾಮಮಣಿಯಾಣಿಯವರ ಪ್ರೋತ್ಸಾಹ ಮತ್ತು ಉತ್ತೇಜನವು ದೊರೆತಿತ್ತು. +ಕಟೀಲು ಮೇಳದಲ್ಲಿ ತಿರುಗಾಟವನ್ನು ಮಾಡಿದ್ದ ಕೊರಗಪ್ಪ ನಾಯ್ಕರು ಇವರ ಗುರುಗಳಾಗಿದ್ದಾರೆ. +ಸುಬ್ರಹ್ಮಣ್ಯ ಮೇಳ - 2 ವರ್ಷ, ಪುತ್ತೂರು ಮೇಳ- 2 ವರ್ಷ, ಬಪ್ಪನಾಡು ಮೇಳ - 3 ವರ್ಷ,ನೆಟ್ಟಣಿಗೆ ಮೇಳ - 1 ವರ್ಷ, ಮಂಗಳೂರು ಮಹಾಲಿಂಗೇಶ್ವರ ಮೇಳ - 1 ವರ್ಷ, ಅರುವ ಅಳದಂಗಡಿ ಮೇಳ - 1 ವರ್ಷ, ಕದ್ರಿ ಮೇಳ - 2ವರ್ಷ, ಕೊಲ್ಲಂಗಾನ ಮೇಳ - 12 ವರ್ಷ. +ಹೀಗೆ ತಿರುಗಾಟದ ಅನುಭವವನ್ನು ಹೊಂದಿದ್ದಾರೆ. +ಇತ್ತೀಚೆಗೆ ಕೊಲ್ಲಂಗಾನ ಮೇಳದಲ್ಲಿ ಹಿಮ್ಮೇಳ ವಾದಕರಾಗಿ ಮತ್ತು ಮೇಳದ ಸಂಚಾಲಕರಾಗಿ ಕಾರ್ಯನಿರ್ವಹಣೆ ಮಾಡುತ್ತಿದ್ದಾರೆ. +ಶ್ರೀಮತಿ ಸರಸ್ವತಿ ಎಂಬವರನ್ನು ವರಿಸಿರುವ ಇವರಿಗೆ ಉಡುಪಿ ಕಾಸರಗೋಡು ಮೊದಲಾದೆಡೆಯಲ್ಲಿ ಸಂಮಾನ ಗೌರವ ಪುರಸ್ಕಾರಗಳು ಸಂದಿವೆ. +ಕಲಾಸೇವೆಯಲ್ಲಿ ತಿರುಗಾಟವನ್ನು ನಡೆಸುತಿರುವ ಶ್ರೀಬಾಬು ಕುಲಾಲರು ಕಟೀಲು ಮೇಳದ ಹಿರಿಯ ಕಲಾವಿದರಾಗಿ ಜನ ಮನ್ನಣೆಗೆ ಒಳಗಾಗಿದ್ದಾರೆ. +ವೆಂಕಟ ಕುಲಾಲ್‌ ಮತ್ತು ಶೂರು ಕುಲಾಲ್‌ದಂ ಪತಿಯ ಸುಪುತ್ರರಾಗಿರುವ ಇವರು ಗಾವಳಿಮನೆಯಲ್ಲಿ ಹುಟ್ಟಿರುವರು. +58 ವರ್ಷಗಳ ವಯೋಮಾನರಾಗಿರುವ ಬಾಬು ಕುಲಾಲರು ಪ್ರಾಥಮಿಕ ಹಂತದ ವಿದ್ಯಾಭ್ಯಾಸವನ್ನು ಪಡೆದಿದ್ದಾರೆ. +ಬಾಲ್ಯದಿಂದಲೇ ಯಕ್ಷಗಾನದ ಆಕರ್ಷಣೆಗೆ ಒಳಗಾಗಿದ್ದ ಇವರು ತೆಂಕು ಮತ್ತು ಬಡಗು ತಿಟ್ಟುಗಳ ತಿರುಗಾಟವನ್ನು ನಡೆಸಿರುವ ಕಲಾವಿದರಾಗಿದ್ದಾರೆ. +ನಾರಾಯಣ ಉಪ್ಪೂರು (ಬಡಗು) ಬಲಿಪನಾರಾಯಣ ಭಾಗವತರು (ತೆಂಕು) ಇವರಿಂದ ರಂಗಾನುಭವವನ್ನು ಪಡೆದಿರುವ ಶ್ರೀಯುತರು ಅಮೃತೇಶ್ವರಿ ಮೇಳ-7 ವರ್ಷ, ಮಂದರ್ತಿ ಮೇಳ-2 ವರ್ಷ, ಸಾಲಿಗ್ರಾಮ ಮೇಳ-1 ವರ್ಷ, ಸೌಕೂರುಮೇಳ - 3 ವರ್ಷ, ಮಾರಣ ಕಟ್ಟೆ ಮೇಳ - 3ವರ್ಷ, ಕಮಲಶಿಲೆ ಮೇಳ - 3 ವರ್ಷ, ಹಾಲಾಡಿಮೇಳ - 3 ವರ್ಷ, ಕಟೀಲು ಮೇಳ - 28 ವರ್ಷ ಹೀಗೆ ಮೇಳ ತಿರುಗಾಟವನ್ನು ನಡೆಸಿದ್ದಾರೆ. +ಸ್ತ್ರೀ ವೇಷವನ್ನು ಮಾಡುವ ಇವರು ಪುಂಡುವೇಷ, ರಾಜ ವೇಷ ಮತ್ತು ಪೋಷಕ ಪಾತ್ರಗಳನ್ನು ನಿರ್ವಹಿಸಿದ್ದಾರೆ. +ಮಾಲಿನಿ, ದೇವಿ, ದಮಯಂತಿ,ಸುದೇಷ್ಟೆ, ಸುಭದ್ರೆ, ಪಾರ್ವತಿ, ಈಶ್ವರ, ಬ್ರಹ್ಮ ಕೃಷ್ಣ,ಧರ್ಮರಾಯ, ದೇವೇಂದ್ರ, ಅರ್ಜುನ ಮುಂತಾದ ಪಾತ್ರಗಳನ್ನು ನಿರ್ವಹಿಸುತ್ತಾರೆ. +ಕೃಷಿಕರಾಗಿರುವ ಇವರು ಲಕ್ಷ್ಮೀಎಂಬವರನ್ನು ವರಿಸಿ ಸುಶೀಲ, ಚಂದ್ರ, ರಾಘವೇಂದ್ರ ಎಂಬ ಮೂವರು ಮಕ್ಕಳನ್ನು ಪಡೆದಿದ್ದಾರೆ. +ಕಟೀಲು ಮೇಳದ ಪ್ರದರ್ಶನದ ನಿಮಿತ್ತ ಕಿನ್ನಿಗೋಳಿಯಲ್ಲಿ ಸಂಮಾನಕ್ಕೆ ಒಳಗಾಗಿರುವ ಬಾಬುಕುಲಾಲರು ಹಲವು ಮಂದಿ ಕಲಾಸಕ್ತರಿಗೆ ರಂಗಮಾಹಿತಿ, ಮಾರ್ಗದರ್ಶನ ನೀಡಿ ಪಾತ್ರ ನಿರ್ವಹಣೆ ಮಾಡುವಂತೆ ಪ್ರೇರಕರಾಗಿದ್ದಾರೆ. +ಪುಂಡು ವೇಷ ಮತ್ತು ರಾಜ ವೇಷಗಳ ಪೋಷಕ ಪಾತ್ರಗಳನ್ನು ಮಾಡುತ್ತಾ ಕಲಾ ಸೇವೆಯನ್ನು ನಡೆಸುತ್ತಿರುವ ಶ್ರೀ ಬಾಲಕೃಷ್ಣ ಶೆಟ್ಟಿ ತಾರಿಯಡ್ಕ ಇವರು ಕಟೀಲು ಮೇಳದಲ್ಲಿ ತಿರುಗಾಟವನ್ನು ನಡೆಸುತ್ತಾ ಇದ್ದಾರೆ. +ಕೊರಗಪ್ಪ ಶೆಟ್ಟಿ ಮುತ್ತಕ್ಕ ದಂಪತಿಯ ಸುಪುತ್ರರಾಗಿ ದಿನಾಂಕ 1-9-1963ರಂದು ತಾರಿಯಡ್ಕ ಮನೆಯಲ್ಲಿ ಹುಟ್ಟಿದರು. +ಪ್ರಾಥಮಿಕ ಹಂತದ ವಿದ್ಯಾಬ್ಯಾಸವನನ್ನು ಪಡೆದಿರುವ ಇವರು ಸ್ವಂತಾಸಕ್ತಿಯಿಂದ ಯಕ್ಷಗಾನ ಕ್ಷೇತ್ರವನ್ನು ಪ್ರವೇಶಿಸಿ ಪಾತ್ರ ನಿರ್ವಹಣೆಯನ್ನು ಮಾಡುತ್ತಾ ಇದ್ದಾರೆ. + ಕೆ.ಗೋವಿಂದ ಭಟ್‌ ಮತ್ತು ಕರ್ಗಲ್ಲು ವಿಶ್ವೇಶ್ವರ ಭಟ್ಟರಿಂದ ನಾಟ್ಯಾಭ್ಯಾಸವನ್ನು ಮಾಡಿರುವ ಇವರು ಕಟೀಲು ಮೇಳವೊಂದರಲ್ಲೇ 27 ವರ್ಷಗಳ ತಿರುಗಾಟವನ್ನು ಪೂರೈಸಿದ್ದಾರೆ. +ದುರ್ಗಾಸುರ, ಶಂಭಾಸುರ, ಈಶ್ವರ ಮೊದಲಾದ ಪಾತ್ರಗಳನ್ನು ಮಾಡುವ ಇವರು ಅನಿವಾರ್ಯ ಕಾರಣಗಳಲ್ಲಿ ಹೊಗಳಿಕೆ ಹಾಸ್ಯದ ಪಾತ್ರವನ್ನು ಕೂಡಾ ನಿರ್ವಹಿಸುತ್ತಾರೆ. +ಶ್ರೀಮತಿ ಪ್ರೇಮಲತಾ ಎಂಬವರನ್ನು ವರಿಸಿರುವ ಇವರು ಮನಿಶಾ (10ನೇ ತರಗತಿ), ಯತೀನ್‌ಕುಮಾರ್‌ (8ನೇ ತರಗತಿ) ಎಂಬ ಇಬ್ಬರು ಮಕ್ಕಳನ್ನು ಪಡೆದಿದ್ದಾರೆ. +ವೇಷದಾರಿಯಾಗಿ, ಸಂಘಟಕರಾಗಿ,ಪ್ರಸಂಗಕರ್ತರಾಗಿ ವಿಜೃಂಭಿಸಿ ಜನಮನ್ನಣೆಗೆ ಪಾತ್ರರಾದ ಶ್ರೀ ಬಿ.ಬಾಬು ಕುಡ್ತಡ್ಕ ಅವರು ಮೇಳ ತಿರುಗಾಟದಿಂದ ನಿವೃತ್ತ ಕಲಾವಿದರಾಗಿದ್ದಾರೆ. +ಶ್ರೀ ಕಿಂಞಣ್ಣ ಮೂಲ್ಯ ಹಾಗೂ ಶ್ರೀಮತಿ ಕಾವೇರಿ ದಂಪತಿಯ ಪ್ರಥಮ ಪುತ್ರರಾಗಿ ದಿನಾಂಕ 13/05/1944 ರಂದು ಬಜಾಲಿನಲ್ಲಿ ಜನಿಸಿದ ಬಾಬು ಕುಡ್ತಡ್ಕರು ಪ್ರಾಥಮಿಕ ಹಂತದ ವಿದ್ಯಾಭ್ಯಾಸವನ್ನು ಪಡೆದಿದ್ದಾರೆ. +ಯಕ್ಷಗಾನದ ನಾಟ್ಯಾಭ್ಯಾಸವನ್ನು ತಿಮ್ಮಪ್ಪ ಬೆಳ್ಚಾಡರಿಂದ ಅಭ್ಯಾಸ ಮಾಡಿದ ಇವರು,ಯಕ್ಷನಾಟ್ಯಾಚಾರ್ಯ ಕಾವು ಕಣ್ಣನವರ ಶಿಷ್ಯ ವೃತ್ತಿಯಲ್ಲಿ ಪ್ರತಿಭಾನ್ವಿತರಾಗಿ ಬೆಳೆದರು. +ಅಧ್ಯಯನ ಶೀಲರಾಗಿರುವ ಇವರು ವೈದ್ಯ ಬಿ.ದಾಸಪ್ಪನವರಲ್ಲಿ ಅರ್ಥಗಾರಿಕೆಯ ಬಗ್ಗೆ ಮಾರ್ಗದರ್ಶನವನ್ನು ಪಡೆದಿದ್ದರು. +ಮೇಳ ತಿರುಗಾಟದ ಸಂದರ್ಭದಲ್ಲಿ ಡಾ।ಶೇಣಿ ಗೋಪಾಲ ಕೃಷ್ಣ ಭಟ್ಟರಿಂದ ಹೆಚ್ಚಿನ ಪ್ರೋತ್ಸಾಕ್ಕೊಳಗಾಗಿ ಪ್ರಸಿದ್ಧಿಗೇರಿದರು. +ಕೂಡ್ಲುಮೇಳ-1ವರ್ಷ, ಕುಂಬ್ಳೈಮೇಳ-1ವರ್ಷ,ಸುರತ್ಕಲ್‌ಮೇಳ-23ವರ್ಷ, ಸುಂಕದಕಟ್ಟೆಮೇಳ-1ವರ್ಷ, ಕೊಲ್ಲೂರುವೇಳ-1ವರ್ಷ,ರಾಘವೇಂದ್ರಮೇಳ ಕಾಸರಗೋಡು-1ವರ್ಷ,ಕರ್ನಾಟಕಮೇಳ-1ವರ್ಷ, ಇರಾಮೇಳ-1ವರ್ಷ,ಕದ್ರಿಮೇಳ-2ವರ್ಷ, ಸುಂಕದಕಟ್ಟೆ ಮೇಳ-1ವರ್ಷಹೀಗೆ ಮೇಳದಲ್ಲಿ ತಿರುಗಾಟವನ್ನು ಮಾಡಿದ್ದಾರೆ. +ಅನಿವಾರ್ಯ ಕಾರಣದಿಂದ ಮೇಳ ತಿರುಗಾಟವನ್ನು ನಿಲ್ಲಿಸಿದ ಇವರು ಸ್ವಂತ ಮೇಳವಾಗಿ ಶ್ರೀ ಗುರುರಾಘವೇಂದ್ರ ಕೃಪಾಪೋಷಿತ ಯಕ್ಷಗಾನ ಕಲಾಮಂಡಳಿಯನ್ನು ಸ್ಥಾಪಿಸಿ ಹತ್ತು ವರ್ಷಗಳ ಪರ್ಯಂತರ ನಡೆಸಿಕೊಂಡು ಬಂದರು. +ಇಷ್ಟಲ್ಲದೆ ಜನತಾ ಯಕ್ಷಗಾನ ಮಂಡಳಿಯನ್ನು ಮಂಗಳೂರು ವಿಠೋಭ ದೇವಸ್ಥಾನದ ಆಶ್ರಯದಲ್ಲಿ ನಡೆಸಿಕೊಂಡು ಬಂದು ಸೀಮಿತ ಅವಧಿಯ ಪ್ರದರ್ಶನಗಳನ್ನು ಆರಂಭಿಸಿ ಹಗಲಿನಲ್ಲೂ ನಡೆಸಿದರು. +ಭಕ್ತಮುಚುಕುಂದ, ಶ್ರೀ ಕಾಳಿಕಾ ಮಹಾತ್ಮೆ ಮೊದಲಾದ 17 ಪ್ರಸಂಗಗಳನ್ನು ರಚಿಸಿದ್ದಾರೆ. +ನತದೃಷ್ಟದುರ್ಯೋಧನ, ರಾಮಾಯಣ ಶತಕ ಎಂಬ ಎರಡು ಭಾಮಿನಿ ಕಾವ್ಯ ಖಂಡಗಳನ್ನು ರಚಿಸಿದ್ದಾರೆ. +ಕಂಸ, ಮಾಗಧ, ಜಲಂಧರ, ರಾವಣ,ದಾರಿಕಾಸುರ, ಒರಣ್ಯಾಕ್ಷ, ಮುಂತಾದ ಪಾತ್ರಗಳನ್ನು ಉತ್ತಮವಾಗಿ ನಿರ್ವಹಿಸಿ ಮನ್ನಣೆಗೆ ಒಳಗಾಗಿರುವ ಶ್ರಿಯುತರ ಶನೈಶ್ಚರನ ಪಾತ್ರದಲ್ಲಿ ಹೆಚ್ಚು ವಿಜೃಂಭಿಸಿ ಸ್ವಂತಿಕೆಯನ್ನು ಮೆರೆದಿದ್ದಾರೆ. +ಕಾಂತಾಬಾರೆ, ಕೋಟಿ ಮೊದಲಾದ ತುಳು ಪ್ರಸಂಗಗಳಲ್ಲೂ ಹಿರಿಮೆಯನ್ನು ಸಾಧಿಸಿದ್ದಾರೆ. +ಯಶೋವಂತಿ ಎಂಬವರನ್ನು ವರಿಸಿ ಪಸಾದ್‌(ಪ್ರಬಂಧಕ ಹುದ್ದೆ), ರಾಘವೇಂದ್ರ (ಸೇನಾವಿಭಾಗದಹುದ್ದೆ) ಪ್ರತಿಭಾ (ಲೇಖಕಿ, ಪತ್ರಕರ್ತ ಹುದ್ದೆ) ಎಂಬ ಮೂವರು ಮಕ್ಕಳನ್ನು ಪಡೆದಿದ್ದಾರೆ. +ಇವರ ಸಾಧನೆಗೆ ಪ್ರತಿಫಲವಾಗಿ ದೋಗ್ರ ಪೂಜಾರಿ ಪ್ರಶಸ್ತಿ, ಪಟ್ಟಾಜೆಪ್ರಶಸ್ತಿ ಮೊದಲಾದುವುಗಳಲ್ಲದೆ 30 ಕ್ಕೂ ಮಿಕ್ಕಿ ಸಂಮಾನಗಳು ಸಂದಿವೆ. +ಹಾಸ್ಯ ಪಾತ್ರಗಳ ಮೂಲಕ ಜನಮನವನ್ನು ರಂಜಿಸಿ ಮನ್ನಣೆಗೆ ಪಾತ್ರರಾಗಿರುವ ಶ್ರೀ ಮವ್ವಾರು ಬಾಲಕೃಷ್ಣ ಮಣಿಯಾಣಿ ಇವರು ಪ್ರಸ್ತುತ ಶ್ರೀಎಡನೀರು ಯಕ್ಷಗಾನ ಮಂಡಳಿಯಲ್ಲಿ ಪಾತ್ರನಿರ್ವಹಣೆ ಮಾಡುತ್ತಿದ್ದಾರೆ. +ಕುಂಞರಾಮ ಮಣೆಯಣಿ ಮತ್ತು ನಾರಾಯಾಣಿ ದಂಪತಿಂಕು ಸುಪುತ್ರರಾಗಿ ನೀರ್ಬಾಲಿನಲ್ಲಿ ಹುಟ್ಟಿದ ಮಣಿಯಾಣಿಯವರಿಗೆ 46ವರ್ಷಗಳಾಗಿವೆ. +7ನೇ ತರಗತಿಯ ತನಕ ಶಾಲಾ ವಿದ್ಯಾಭ್ಯಾಸವನ್ನು ಪಡೆದಿರುವ ಇವರು ಬಾಲ್ಯದಲ್ಲೇ ಯಕ್ಷಗಾನದತ್ತ ಆಕರ್ಷಿತರಾಗಿದ್ದರು. +ಕಟೀಲು ಮೇಳದಲ್ಲಿ ತಿರುಗಾಟವನ್ನು ಮಾಡಿದ್ದ ಅಪ್ಪಯ್ಯ ಮಣಿಯಾಣೆ ಇವರ ದೊಡ್ಡತಂದೆಂತರಾಗಿದ್ದು ಅವರ ಪ್ರೇರಣೆ ಮತ್ತು ಪ್ರೋತ್ಸಾಹದಿ೦ದ ಮೂಲ ಪಾಠವನ್ನು ಅಭ್ಯಾಸ ಮಾಡಿದ್ದರು. +ಆಮೇಲೆ ಧರ್ಮಸ್ಥಳದ ಲಲಿತಾಕಲಾಕೇಂದ್ರವನ್ನು ಸೇರಿದವರು ಕೆ.ಗೋವಿಂದ ಭಟ್ಟರಲ್ಲಿ ಹೆಚ್ಚಿನ ನಾಟ್ಯಾಭ್ಯಾಸ, ರಂಗಮಾಹಿತಿಯನ್ನು ತಿಳಿದುಕೊಂಡರು. +12ನೇ ವಯಸ್ಸಿನಿಂದಲೇ ರಂಗ ಪ್ರವೇಶಮಾಡಿದ ಇವರು ಕಟೀಲು ಮೇಳ-3 ವರ್ಷ, ಆದಿಸುಬ್ರಹ್ಮಣ್ಯ ಮೇಳ-4 ವರ್ಷ, ಪುತ್ತೂರು ಮೇಳ-3ವರ್ಷ, ಕಾಂತಾವರ ಮೇಳ-3 ವರ್ಷ, ಕದ್ರಿ ಮೇಳ-8 ವರ್ಷ, ಮಂಗಳಾದೇವಿ ಮೇಳ-7 ವರ್ಷ,ಮಧೂರು ಮೇಳ-1 ವರ್ಷ, ಎಡನೀರು ಮೇಳ-5ವರ್ಷ ಹೀಗೆ 34 ವರ್ಷಗಳ ತಿರುಗಾಟವನ್ನು ಮಾಡಿರುವರು. +ಮಕರಂದ, ದಾರುಕ, ಪಯ್ಯ, ಮಂಧರೆ,ಕಾಶೀಮಾಣಿ, ಅಬ್ಬು, ಶೇಕು, ಬ್ರಹ್ಮ ಮಾಲಿನಿ,ಶ್ರೀದೇವಿ ಮೊದಲಾದ ಪಾತ್ರಗಳನ್ನು ಮಾಡಿದ್ದಾರೆ. +ಹಾಸ್ಯ ಪಾತ್ರಗಳೊಂದಿಗೆ ಸ್ತ್ರೀ ವೇಷ, ಪುಂಡುವೇಷ ಮತ್ತು ರಾಜ ವೇಷಗಳನ್ನು ಮಾಡಿದ ಅನುಭವ ಇವರಿಗಿದೆ. +ಶ್ರೀಮತಿ ಎಂಬವರನ್ನು ವರಿಸಿರುವ ಇವರು ದಿನೇಶ್‌, ಅಭಿಷೇಕ್‌ ಎಂಬ ಇಬ್ಬರು ಮಕ್ಕಳನ್ನು ಪಡೆದಿದ್ದಾರೆ. +ಚೆಂಡೆ-ಮದ್ದಳೆಗಳ ಬಾರಿಸುವಿಕೆಯಲ್ಲಿ ಆಸಕ್ತರಾಗಿರುವ ಇವರ ಸಾಧನೆಯನ್ನು ಗುರುತಿಸಿ ಕಾಸರಗೋಡು ಮಾರ್ಪನಡ್ಕದ ಅಭಿಮಾನಿಗಳು ಸಂಮಾನಿಸಿದ್ದಾರೆ. +ಇಷ್ಟಲ್ಲದೆ ಕದ್ರಿ ಮೇಳದ ಸಂಮಾನ ಕೂಡ ಇವರಿಗೆ ದೊರಕಿದೆ. +ಪುಂಡು ವೇಷ ಮತ್ತು ರಾಜವೇಷದ ಮುಖೇನ ಜನಮನ್ನಣೆ ಪಡೆದು, ತುಳು ಪ್ರಸಂಗದ ಖಳನಾಯಕನಾಗಿ , ಮೇಳದ ಯಜಮಾನರಾಗಿ ಕೀರ್ತಿವಂತರಾಗಿರುವ ಶ್ರೀ ಡಿ.ಮನೋಹರಕುಮಾರ್‌ ಇವರು ಪ್ರಸ್ತುತ ಮಂಗಳಾದೇವಿ ಮೇಳದ ಕಲಾವಿದರಾಗಿ ತಿರುಗಾಟವನ್ನು ಮಾಡುತ್ತಾ ಇದ್ದಾರೆ. +ವೇಲಾಯುಧ ಮತ್ತು ತಂಗ ದಂಪತಿಯ ಸುಪುತ್ರರಾಗಿ, 17-11-1959 ರಂದು ತ್ರಿಶೂರಿನ ಅಂಬಾಟ್‌ ಪರಂನಲ್ಲಿ ಮನೋಹರ ಕುಮಾರರು ಜನಿಸಿದರು. +ಪ್ರಾಥಮಿಕ ಹಂತದ ವಿದ್ಯಾಭ್ಯಾಸವನ್ನು ಪಡೆದಿರುವ ಇವರು ತಂದೆಯ ಉದ್ಯೋಗ ನಿಮಿತ್ತ ಬಾಲ್ಯದಲ್ಲೇ ಧರ್ಮಸ್ಥಳಕ್ಕೆ ಬಂದಿದ್ದರು. +ಧರ್ಮಸ್ಥಳದ ಲಲಿತ ಕಲಾ ಕೇಂದ್ರದಲ್ಲಿ ಯಕ್ಷಗಾನ ತರಬೇತಿಯು ನಡೆಯುತ್ತಿದ್ದುದ್ದನ್ನು ಕಂಡ ಮನೋಹರ ಕುವತಾರರು ತಾನು ಕೂಡಾ ಕಲಾಸಾಧಕನಾಗಿ ಬೆಳೆಯಬೇಕೆಂದು ಹಂಬಲಿಸಿದರು. +ಮುಂದೆ ಪಡ್ರೆ ಚಂದು ಅವರಿಂದ ನಾಟ್ಯಾಭ್ಯಾಸವನ್ನು ಮಾಡಿದರು. +ಹೆಚ್ಚಿನ ಅನುಭವಕ್ಕಾಗಿ ಮಾಣಂಗಾಯಿಕೃಷ್ಣ ಭಟ್ಟರಲ್ಲೂ ಕೂಡಾ ಇವರು ಅಭ್ಯಾಸ ಮಾಡಿದ್ದಾರೆ. +ಅಂಮ್ಚಾಡಿ ಮೇಳ - 1 ವರ್ಷ, ಸುರತ್ಕಲ್‌ಮೇಳ - 4 ವರ್ಷ , ಗೀತಾಂಬಿಕ ಮಂಡಳಿ - 1ವರ್ಷ , ಕದ್ರಿ ಮೇಳ (ಕಲಾವಿದನಾಗಿ) - 5 ವರ್ಷ. +ಕಾಂತಾವರ ಮೇಳ - 1 ವರ್ಷ , ಕುಂಬ್ಳೆ ಮೇಳ- 1 ವರ್ಷ , ನಂದಾವರ ಮೇಳ - 1 ವರ್ಷ ,ಮಧೂರು ಮೇಳ (ಸಹಯಜಮಾನಿಕೆ) -2 ವರ್ಷ,ಕದ್ರಿ ಮೇಳ (ಸ್ವಂತ ಯಜಮಾನಿಕೆ) - 13 ವರ್ಷ,ಮಂಗಳಾದೇವಿ ಮೇಳ - 2 ಮತ್ತು 4 ವರ್ಷ,ಎಡನೀರು ಮೇಳ - 1 ವರ್ಷ ಹೀಗೆ ತಿರುಗಾಟದ ಹಿನ್ನೆಲೆ ಇವರಿಗಿದೆ. +ವಾವರ, ಭಸ್ಮಾಸುರ , ಅಭಿಮನ್ಯು , ಕೌರವ,ಕಂಸ, ಚಂದುಗಿಡಿ ಪಾತ್ರಗಳು ಇವರಿಗೆ ಹೆಚ್ಚಿನ ಕೀರ್ತಿಯನ್ನು ತಂದಿತ್ತಿವೆ. + ಇವರೇ ರಚಿಸಿರುವ ಗೆಜ್ಜೆದ ಪೂಜೆ ಪ್ರಸಂಗದ ನಾಗನ ಪಾತ್ರವನ್ನು ನಿರ್ವಹಿಸಿ, ಅಪ್ಪತಿವು ನಿರ್ವಹಣೆಯ ಖಳನಾಯಕನಾಗಿ ವಿಜೃಂಭಿಸಿ ಪ್ರೇಕ್ಷಕರನ್ನು ಬೆರಗುಗೊಳಿಸಿದ್ದಾರೆ. +ಮೇಳದ ಯಜಮಾನಿಕೆಯಲ್ಲಿ ಕಲಾವಿದರ ಬೆಳವಣಿಗೆಗೆ ಮಹತ್ವವನ್ನು ನೀಡಿರುವ ಇವರು,ಹಲವು ಮಂದಿ ಕಲಾವಿದರಿಗೆ ಸಂಮಾನ ಮಾಡಿ ಬಂಗಾರದ ಉಂಗುರವನ್ನು ನೀಡಿ ದಾಖಲೆ ನಿರ್ಮಿಸಿದ್ದಾರೆ. +ಕಲಾವಿದರ ಶ್ರೇಯೋಭಿವೃದ್ಧಿಗಾಗಿ ಸಂಸ್ಥೆಯ ಸ್ಥಾಪನೆ ಮಾಡಿದ್ದಾರೆ. +ವಿನೂತನ ಪ್ರದರ್ಶನಕ್ಕಾಗಿ ವರ್ಷಂಪ್ರತಿ ಹೊಸ ಪ್ರಸಂಗಗಳನ್ನು ರಚಿಸುತ್ತಿದ್ದರು. +ಶ್ರೀಮತಿ ಸರಸ್ವತಿ ಎಂಬವರನ್ನು ವರಿಸಿರುವ ಇವರು ತೇಜಾಕ್ಷಿ, ತೇಜಸ್,ಮಹೇಶ್‌ , ಕೃಪಾ ,ಮನೀಶ್‌ ಎಂಬ ಮಕ್ಕಳನ್ನು ಪಡೆದಿದ್ದಾರೆ. +ಮುಂಬಯಿ , ಮಸ್ಕತ್‌, ಬೆಂಗಳೂರು ಸೇರಿದಂತೆ ನಾಡಿನಾದ್ಯಂತ 200ಕ್ಕೂ ಮಿಕ್ಕಿ ಸಂಮಾನಗಳು ಇವರಿಗೆ ಸಂದಿವೆ. +ಆರಂಭದಲ್ಲಿ ಪುಂಡುವೇಷ, ಸ್ತ್ರೀ ವೇಷ, ಕಿರೀಟವೇಷ ಮತ್ತು ಬಣ್ಣದ ವೇಷಗಳನ್ನು ಮಾಡುತ್ತಾ ಬೆಳೆದು ಹಾಸ್ಯ ಪಾತ್ರದ ಮುಖೇನ ಗಟ್ಟಿಯಾದ ನೆಲೆಗಟ್ಟನ್ನು ಕಂಡ ಮಹೇಶ ಮಣಿಯಾಣಿಯವರು ಧರ್ಮಸ್ಥಳ ಮೇಳದ ಹಾಸ್ಯಗಾರರಾಗಿ ಜನ ಮನ್ನಣೆಯನ್ನು ಪಡೆದಿದ್ದಾರೆ. +ಅಪ್ಪಯ್ಯ ಮಣಿಯಾಣಿ ಮತ್ತು ಲೀಲಾವತಿ ದಂಪತಿಯ ಸುಪುತ್ರರಾಗಿ 14-9-1974ರಂದು ಉಬರಡ್ಕದಲ್ಲಿ ಜನಿಸಿದರು. +7ನೇ ತರಗತಿಯ ತನಕ ವಿದ್ಯಾಬ್ಯಾಸವನ್ನು ಪಡೆದಿರುವ ಇವರು ಬಾಲ್ಯದಿಂದಲೇ ಯಕ್ಷಗಾನ ಕಲೆಯತ್ತ ಆಕರ್ಷಿತರಾಗಿದ್ದು ಧರ್ಮಸ್ಥಳ ಮೇಳದ ಕಲಾವಿದ ಉಬರಡ್ಕ ಉಮೇಶ ಶೆಟ್ಟಿಯವರ ಪ್ರೇರಣೆಯ ಮೇರೆಗೆ ರಂಗ ಪ್ರವೇಶ ಮಾಡಿದರು. +ಕರ್ಗಲ್ಲು ವಿಶ್ವೇಶ್ವರ ಬಟ್ಟರಿಂದ ನಾಟ್ಯಾಭ್ಯಾಸವನ್ನು ಮಾಡಿದ ಇವರು 14ನೇ ವಯಸ್ಸಿನಿ೦ದಲೇ ಮುಖಕ್ಕೆ ಬಣ್ಣ ಹಚ್ಚಲು ಪ್ರಾರಂಭಿಸಿದರು. +ಆರಂಭದಲ್ಲಿ ಬಪ್ಪನಾಡು ಮೇಳ- 1 ವರ್ಷ, ಅನಂತರ ಕಟೀಲು ಮೇಳಕ್ಕೆ ಸೇರಿದವರು 12 ವರ್ಷಗಳ ತಿರುಗಾಟವನ್ನು ಪೂರೈಸಿ, ಧರ್ಮಸ್ಥಳ ಮೇಳಕ್ಕೆ ಸೇರಿದವರು ಈಗಾಗಲೇ 8 ವರ್ಷಗಳ ತಿರುಗಾಟವನ್ನು ನಡೆಸಿದ್ದಾರೆ. +ಬಾಹುಕ, ಮಕರಂದ, ದಾರುಕ, ವಿಜಯ,ನಾರದ, ಹಾಸ್ಯದ ಸ್ತ್ರೀ ಪಾತ್ರಗಳು ಮತ್ತು ಪೋಷಕಪಾತ್ರಗಳನ್ನು ಮಾಡುತ್ತಾ ಇದ್ದಾರೆ. +ಅನಿವಾರ್ಯಕ್ಕೆ ಪುಂಡುವೇಷವನ್ನು ಮಾಡುವ ಇವರು ಚಂಡ-ಮುಂಡರು, ಷಣ್ಮುಖ ಮೊದಲಾದ ಪಾತ್ರಗಳನ್ನು ನಿರ್ವಹಿಸಿದ್ದಾರೆ. +ಶ್ರೀಮತಿ ಮೀನಾಕ್ಷಿ ಎಂಬವರನ್ನು ವರಿಸಿ ಕು|ಮನೀಷ್‌ ಎಂಬ ಸುಪುತ್ರನನ್ನು ಪಡೆದಿರುವ ಇವರನ್ನು ದುಗ್ಗಲಡ್ಕದ ಅಭಿಮಾನಿ ಬಳಗವು ಸಂಮಾನಿಸಿದೆ. +ಬಣ್ಣದ ವೇಷಗಳನ್ನು ಮಾಡುವುದರ ಮೂಲಕ ಜನರ ಮನ್ನಣೆಗೆ ಪಾತ್ರರಾಗಿರುವ ಶ್ರೀನಗ್ರಿ ಮಹಾಬಲ ರೈ ಯವರು ಕಟೀಲು ಮೇಳದ ಕಲಾವಿದರಾಗಿದ್ದಾರೆ. +ನಾರಾಯಣ ರೈ ಮತ್ತು ರಾಜೀವಿ ದಂಪತಿಯ ಸುಪುತ್ರರಾಗಿ 24/1/1958 ರಂದು ನಗ್ರಿ ಹೊಸಮನೆಯಲ್ಲಿ ಹುಟ್ಟಿರುವ ಇವರು ಪ್ರಾಥಮಿಕ ಹಂತದ ವಿದ್ಯಾಭ್ಯಾಸವನ್ನು ಪಡೆದಿರುವರು. +ಯಕ್ಷಗಾನದ ಪರಿಸರದಲ್ಲಿ ಹುಟ್ಟಿರುವ ಇವರು ಕಲಾಕರ್ಷಣೆಗೆ ಒಳಗಾಗಿ 13ನೇ ವಯಸ್ಸಿನಿಂದಲೇ ರಂಗಪ್ರವೇಶ ಮಾಡಿದ್ದಾರೆ. +ಶೀನಪ್ಪ ಬಂಡಾರಿಯವರಲ್ಲಿ ನಾಟ್ಯಾಭ್ಯಾಸವನ್ನು ಮಾಡಿರುವ ಮಹಾಬಲ ರೈಯವರು ಗೇರುಕಟ್ಟೆ ಗಂಗಯ್ಯ ಶೆಟ್ಟಿಯವರಿಂದ ,ಬಣ್ಣದ ವೇಷಗಳ ಬಗ್ಗೆ ಮಾಹಿತಿಯನ್ನು ಪಡೆದಿರುವರು. +ಮೊದಲಿಗೆ ಆದಿ ಸುಬ್ರಹ್ಮಣ್ಯ ಮೇಳದಲ್ಲಿ 15 ವರ್ಷಗಳ ತಿರುಗಾಟವನ್ನು ಮಾಡಿರುವ ಇವರು, ಧರ್ಮಸ್ಥಳ ಮೇಳದಲ್ಲಿ 1ವರ್ಷದ ತಿರುಗಾಟವನ್ನು ಮಾಡಿ ಅನಂತರ ಕಟೀಲು ಮೇಳವನ್ನು ಸೇರಿದವರು ಈಗಾಗಲೇ 22 ವರ್ಷಗಳ ತಿರುಗಾಟವನ್ನು ಪೂರೈಸಿದ್ದಾರೆ. +ಪುಂಡು ವೇಷ, ರಾಜವೇಷ, ಬಣ್ಣದ ವೇಷಗಳನ್ನು ಮಾಡಿ ಅನುಭವ ಇರುವ ಇವರು ರಾವಣ, ಕುಂಬಕರ್ಣ, ಭೀಮ, ತಾಟಕಿ,ಶೂರ್ಪನಖಾ, ಲಂಕಿಣಿ, ಮತ್ಬ ವರಾಹ, ದೇವೇಂದ್ರ,ಅರ್ಜುನ, ಚಂಡ-ಮುಂಡರು, ಚೆನ್ನಯ, ದೇವುಪೂಂಜ ಮೊದಲಾದ ಪಾತ್ರಗಳನ್ನು ನಿರ್ವಹಿಸಿದ್ದಾರೆ. +ಕಟೀಲು ಮೇಳದಲ್ಲಿ ದೇವಿಮಹಾತ್ಮೆಯ ಮಹಿಷಾಸುರನಾಗಿ ಪಾತ್ರನಿರ್ವಹಣೆಯನ್ನು ಮಾಡುತ್ತಾ ಪ್ರಸಿದ್ಧಿಯನ್ನು ಪಡೆದಿದ್ದಾರೆ. +ಶೀನಪ್ಪ ಭಂಡಾರಿ ಮಾವ, ಅಳಿಕೆ ರಾಮಯ್ಯರೈ ಚಿಕ್ಕಪ್ಪ ಅಳಿಕೆ ಮೋನಪ್ಪ ಶೆಟ್ಟಿ ಅಜ್ಜ ಹೀಗೆ ಹಿರಿತನದಲ್ಲಿ ಯಕ್ಷಗಾನದ ಮನೆತನಕ್ಕೆ ಸೇರಿದ ಇವರು,ಯಕ್ಷಗಾನ ಕಲೆಯ ಬಗ್ಗೆ ಅಭಿಮಾನವುಳ್ಳವರಾಗಿದ್ದಾರೆ. +ಮಳೆಗಾಲದಲ್ಲಿ ಶ್ರೀಧರ ಭಂಡಾರಿಯವರ ತಿರುಗಾಟದ ಮಂಡಳಿಯಲ್ಲಿ ಪಾತ್ರನಿರ್ವಹಣೆ ಮಾಡುವ ಇವರು ಶ್ರೀಮತಿ ಸುಗುಣಾ ಎಂ.ರೈ ಎಂಬವರನ್ನು ವರಿಸಿಶ್ರೀಕಾಂತ್‌ ರೈ, ಯಶೋದಾ, ಕಿರಣ್‌ ರೈ ಎಂಬ ಮೂವರು ಮಕ್ಕಳನ್ನು ಪಡೆದಿದ್ದಾರೆ. +ಇವರ ಕಲಾಸಾಧನೆಯನ್ನು ಗುರುತಿಸಿದ ಕಲಾಭಿಮಾನಿಗಳು ಸಜಿಪಮೂಡ, ಕಣ್ಣೂರು,ಮೂಡಬಿದಿರೆ, ಬೆಂಗಳೂರು ಮುಂತಾದೆಡೆಯಲ್ಲಿ ಸಂಮಾನಿಸಿ ಗೌರವಿಸಿದ್ದಾರೆ. +ಮದ್ದಳೆಗಾರರಾಗಿ, ಮೇಳದ ಪ್ರಬಂಧಕರಾಗಿ,ಯಜಮಾನರಾಗಿ ಮನ್ನಣೆಯನ್ನು ಪಡೆದಿರುವ ಪಟ್ಟಗುತ್ತು ಮಹಾಬಲ ಶೆಟ್ಟಿಯವರು ಮೇಳದ ನಿವೃತ್ತರಾದ ಕಲಾವಿದರಾಗಿದ್ದಾರೆ. +ಬಂಟ್ವಾಳದ ಕರೋಪಾಡಿ ಗ್ರಾಮದಲ್ಲಿ ಪಟ್ಟಗುತ್ತು ದುಗ್ಗಪ್ಪ ಶೆಟ್ಟಿ ಹಾಗೂ ಪದ್ಮಾವತಿ ದಂಪತಿಯ ಸುಪುತ್ರರಾಗಿ 1943ನೇ ಇಸವಿಯಲ್ಲಿ ಜನಿಸಿದರು. +ಎಳವೆಯಿಂದಲೇ ಯಕ್ಷಗಾನ ಕಲೆಯ ಬಗೆ ಆಸಕ್ತಿಯನ್ನು ತಾಳಿದ್ದ ಇವರು, ಮಾಂಬಾಡಿ ನಾರಾಯಣ ಭಾಗವತರಿಂದ ಭಾಗವತಿಕೆ ಮತ್ತು ಚೆಂಡೆ- ಮದ್ದಳೆಯ ಅಭ್ಯಾಸ ಮಾಡಿದ್ದಾರೆ. +ಕುಂಡಾವು ಹಾಗೂ ಸುಂಕದಕಟ್ಟೆ ಮೇಳಗಳಲ್ಲಿ ತಿರುಗಾಟವನ್ನು ನಡೆಸಿರುವ ಮಹಾಬಲ ಶೆಟ್ಟಿಯವರು ಸುಂಕದಕಟ್ಟೆ ಮೇಳದಲ್ಲಿ ಪ್ರಬಂಧಕರಾಗಿಯೂ ಕಾರ್ಯ ನಿರ್ವಹಣೆ ಮಾಡಿದ್ದಾರೆ. +1987ರಿಂದ ನಾಲ್ಕು ವರ್ಷಗಳ ತನಕ ಮಲ್ಲ ಶ್ರೀ ದುರ್ಗಾಪರಮೇಶ್ವರಿ ಮೇಳವನ್ನು ಸ್ವಂತಮೇಳವಾಗಿ ನಡೆಸಿದ್ದಾರೆ. +ಪ್ರಸ್ತುತ ಒಗೆನಾಡಿನಲ್ಲಿ ಶ್ರೀ ಸುಬ್ರಹ್ಮಣ್ಯೇಶ್ವರ ಯಕ್ಷಗಾನ ಕಲಾಸಂಘವನ್ನು ಸ್ಥಾಪಿಸಿ, ಕಲಾಕಾರ್ಯಕ್ರಮಗಳನ್ನು ನಡೆಸುತ್ತಾ ಇದ್ದಾರೆ. +ವರ್ಷಂಪ್ರತಿ ಶ್ರಾವಣ ಮಾಸದಲ್ಲಿ ಒಂದು ತಿಂಗಳ ಶನಕತಾಳ ಮದ್ದಳೆಯ ಕಾರ್ಯಕ್ರಮಗಳನ್ನು ನಡೆಸಿ ನಾಡಿನಬೇರೆ ಬೇರೆ ತಂಡಗಳಿಗೆ ಮತ್ತು ಕಲಾವಿದರಿಗೆ ಅವಕಾಶವನ್ನು ನೀಡುತ್ತಾರೆ. +ಯಕ್ಷಗಾನ ಕಲೆಯ ಬಗ್ಗೆ ಕಾಳಜಿವುಳ್ಳ ಇವರು ಶ್ರೀಮತಿ ಲಲಿತ ಎಂಬವರನ್ನು ವರಿಸಿ ಈರ್ವರು ಸುಪುತ್ರರನ್ನು ಹಾಗೂ ಓರ್ವಾಕೆ ಸುಪುತ್ರಿಯನ್ನು ಪಡೆದಿದ್ದಾರೆ. +ಇವರ ಕಿರಿಯ ಸುಪುತ್ರ ಪಟ್ಟ ಸತೀಶ ಶೆಟ್ಟಿಯವರು ಕಟೀಲು ಮೇಳದ ಭಾಗವತರಾಗಿಯುವ ಪ್ರತಿಭೆಯನ್ನು ಮೆರೆಸಿದ್ದಾರೆ. +ಹಲವಾರು ಕಾರ್ಯಕ್ರಮಗಳಲ್ಲಿ ಕ್ರಿಯಾಶೀಲರಾಗಿ ಸೇವೆ ಸಲ್ಲಿಸಿರುವ ಇವರಿಗೆ ಒಡಿಯೂರು, ವಗೆನಾಡು,ನೆಲ್ಯಾಡಿ ಮೊದಲಾದೆಡೆಯಲ್ಲಿ ಸಂಮಾನಗಳು ಸಂದಿವೆ. +ಕದ್ರಿ ಹವ್ಯಾಸಿ ಬಳಗದ ದಶಮಾನ ಸಯಾನ ಶತಕದ ಸಂಮಾನ ಕೂಡ ಇವರಿಗೆ ಲಭಿಸಿದೆ. +ತೀವ್ರಗತಿಯ ನಾಟ್ಯ ಶೈಲಿಯಿಂದ ಪ್ರಸಿದ್ಧರಾಗಿ ಮೆರೆದಿರುವ ಹೊಸಹಿತ್ಲು ಮಹಾಲಿಂಗ ಭಟ್ಟರು ತೆಂಕುತಿಟ್ಟಿನಲ್ಲಿ ಗುರುತಿಸಲ್ಪಟ್ಟ ಅಗ್ರ ಪಂಕ್ತಿಯ ಕಲಾವಿದರಾಗಿದ್ದಾರೆ. +ಕಮ್ಮಟ ತರಬೇತಿ ಮೊದಲಾದ ಪ್ರಕ್ರಿಯೆಗಳಲ್ಲೂ ಪಳಗಿದ ಪ್ರತಿಭೆ ಇವರದಾಗಿದೆ. +ದಿನಾಂಕ 1-5-1936 ರಲ್ಲಿ ಗಣಪತಿ ಭಟ್‌ಹಾಗೂ ವೆಂಕಮ್ಮ ದಂಪತಿಯ ಸುಪುತ್ರರಾಗಿ ಮೀಂಜಗ್ರಾಮದ ಹೊಸಹಿತ್ತು ಎಂಬಲ್ಲಿ ಮಹಾಲಿಂಗ ಭಟ್ಟರು ಜನಿಸಿದರು. +ಬಾಲ್ಯದಿಂದಲೇ ಕಲಾಸಕ್ತರಾಗಿ ದಿ|ಕುರಿಯ ವಿಠಲ ಶಾಸ್ತ್ರಿಯವರಿಂದ ಯಕ್ಷಗಾನ ಕಲೆಯ ಅಭ್ಯಾಸವನ್ನು ಮಾಡಿ ಮುಂದೆ ಕೋಳ್ಯೂರು ರಾಮಚಂದ್ರ ರಾವ್‌ ಇವರೊಂದಿಗೆ ಅನುಭವನ್ನು ಪಡೆದು ಮೇಳ ತಿರುಗಾಟವನ್ನು ಪೂರೈಸಿದ್ದಾರೆ. +ಧರ್ಮಸ್ಥಳ ಮೇಳ- 15 ವರ್ಷ, ಕಟೀಲುಮೇಳ- 1 ವರ್ಷ, ಸುರತ್ಕಲ್‌ ಮೇಳ- 2 ವರ್ಷ,ಕೂಡ್ಲು ಮೇಳ- 2 ವರ್ಷ, ಬಪ್ಪನಾಡು ಮೇಳ- 1ವರ್ಷ, ಮೂಲ್ಕಿ ಮೇಳ- 2 ವರ್ಷ, ಪುತ್ತೂರುಮೇಳ- 2 ವರ್ಷ, ಅರುವ ಮೇಳ- 1 ವರ್ಷ,ಹೀಗೆ ಮೇಳಗಳ ತಿರುಗಾಟವನ್ನು ಮಾಡಿದ್ದಾರೆ. +ಆಮೇಲೆ ಅನಿವಾರ್ಯ ತಿರುಗಾಟವನ್ನು ನಿಲ್ಲಿಸಿದವರು ಹೇಳಿಕೆಯ ಮೇರೆಗೆ ಹಲವು ಸಂಘ ಸಂಸ್ಥೆಗಳ ಕಾರ್ಯಕ್ರಮಗಳಲ್ಲಿ ಬಾಗವಹಿಸುತ್ತಾ ಪಾತ್ರ ನಿರ್ವಹಣೆ ಮಾಡಿದ್ದಾರೆ. +ಕಮ್ಮಟ, ನಾಟ್ಯ ತರಬೇಶಿಯ ಶೀಬಿರಗಳಲ್ಲಿ ಸಂಪನ್ಮೂಲ ವ್ಯಕ್ತಿಯರಾಗಿ ಭಾಗವಹಿಸಿರುವ ಇವರು ಉತ್ತಮ ಕಲಾ ಸಾಧಕರಾಗಿ ಗೌರವ ಮನ್ನಣೆಗೆ ಪಾತ್ರರಾಗಿದ್ದಾರೆ. +ಆರಂಭದಲ್ಲಿ ಅಭಿಮನ್ಯು, ಬಭ್ರುವಾಹನ, ಕೃಷ್ಣಪರಶುರಾಮ ಮೊದಲಾದ ಪುಂಡುವೇಷಗಳಲ್ಲಿ ಉತ್ತಮವಾಗಿ ನಟಿಸುತ್ತಿದ್ದ. +ಇವರು ಮುಂದಕ್ಕೆ ದೇವೇಂದ್ರ, ಅರ್ಜುನ, ಇಂದ್ರಜಿತು, ಮಕರಾಕ್ಷ ಇತ್ಯಾದಿ ಪಾತ್ರಗಳನ್ನು ನಿರ್ವಹಿಸುತ್ತಾ ಗಂಡುಗಾರಿಕೆ ಬಿರುಸಾದ ಶೈಲಿಯನ್ನು ಪ್ರಸ್ತುತ ಪಡಿಸಿ ಪ್ರಸಿದ್ದೀಗೇರಿದರು. +ಪರಂಪರೆಯ ನಾಟ್ಯ ಶೈಲಿಯ ಹಿನ್ನೆಲೆಯಲ್ಲಿ ಇವರಿಗೆ ಹೆಚ್ಚಿನ ಗೌರವ ಒದಗಿ ಬಂದಿದೆ. +ಶ್ರೀಮತಿ ಲಕ್ಷ್ಮೀ ಎಂಬವರನ್ನು ವರಿಸಿ ಈರ್ವರು ಮಕ್ಕಳನ್ನು ಪಡೆದಿರುವ ಹೊಸಹಿತ್ಲು ಮಹಾಲಿಂಗ ಭಟ್ಟರು ಯಕ್ಷಗಾನದಲ್ಲಿ ಕಂಡು ಬರುವ ಪ್ರತಿನಾಯಕ ಪಾತ್ರಗಳಿಗೆ ತನ್ನದೇ ಆದ ಸ್ವಂತಿಕೆಯ ಶೈಲಿಯಿಂದ ಜೀವ ಸತ್ವವನ್ನು ತುಂಬಿದ್ದಾರೆ. +ಮೈ ರೋಮಾಂಚನಗೊಳಿಸುವ ಪಾತ್ರ ನಿರ್ವಹಣೆ ಇವರದ್ದಾಗಿತ್ತು. +ಮಹಾಲಿಂಗ ಭಟ್ಟರ ಸಾಧನೆಯನ್ನು ಗುರುತಿಸಿ ಹಲವಾರು ಸಂಘ ಸಂಸ್ಥೆಗಳು ಗೌರವಿಸಿವೆ ಶ್ರೇಣಿದತ್ತಿ ಪ್ರಶಸ್ತಿ, ಜಾನಪದ ಅಕಾಡೆಮಿ ಪ್ರಶಸ್ತಿ ಕಾಸರಗೋಡು,ಕುರಿಯ ವಿಠಲಶಾಸ್ತ್ರಿ ಪ್ರಶಸ್ತಿ, ಅಗರಿ ಪ್ರಶಸ್ತಿ, ಹವ್ಯಾಸಿ ಬಳಗ ಕದ್ರಿಯ ದಶಮಾನ ಸಂಮಾನ ಶತಕದ ಸಂಮಾನ ಇತ್ಯಾದಿಗಳು ಪ್ರಮುಖವಾಗಿವೆ. +ಶೃಂಗಾರ ಸ್ತ್ರೀ ಪಾತ್ರಕ್ಕೆ ತಕ್ಕಂತೆ ರೂಪದ ಸೌಂದರ್ಯ ಮತ್ತು ನಾಟ್ಯದ ಶೈಲಿಯನ್ನು ಹೊಂದಿರುವ ಶ್ರೀ ಕನ್ನಡಿಕಟ್ಟೆ ಮುರಳೀಧರ ಶೆಟ್ಟಿಗಾರರು ಪ್ರಸ್ತುತ ಸುಂಕದಕಟ್ಟೆ ಶ್ರೀ ಅಂಬಿಕಾ ಅನ್ನಪೂರ್ಣೇಶ್ವರಿ ಮೇಳದಲ್ಲಿ ತಿರುಗಾಟವನ್ನು ನಡೆಸುತ್ತಿದ್ದಾರೆ. +ಪುರುಷೋತ್ತಮ ಶೆಟ್ಟಿಗಾರ್‌ ಮತ್ತು ಲಲಿತಶೆಟ್ಟಿಗಾರ್ವಿ ಎಂಬವರ ಸುಪುತ್ರನಾಗಿ, ಕೇರಳದ ಕುರುಡಪದವಿನಲ್ಲಿ ದಿನಾಂಖ 22-1-1981ರಲ್ಲಿ ಜನಿಸಿದರು. +8ನೇ ಇಯತ್ತೆಯ ತನಕ ಶಾಲಾ ವಿದ್ಯಾಭ್ಯಾಸವನ್ನು ಪಡೆದಿರುವ ಇವರು ಬಾಲ್ಯದಲ್ಲೇ ಯಕ್ಷಗಾನದ ಪ್ರಭಾವಕ್ಕೆ ಒಳಗಾದರು. +ಪುಂಡುವೇಷಧಾರಿ ಧರ್ಮೇಂದ್ರ ಅಜಾರಿ ಎಂಬವರಲ್ಲಿ ನಾಟ್ಯಾಭ್ಯಾಸವನ್ನು ಮಾಡಿ ವೇಷ ಹಾಕಲು ಪ್ರಾರಂಭಿಸಿದರು. +ಕಟೀಲು ಮೇಳ - 4 ವರ್ಷ, ಮಂಗಳಾದೇವಿ ಮೇಳ - 1 ವರ್ಷ, ಹೊಸನಗರ ಮೇಳ - 1ವರ್ಷ ಹೀಗೆ 3ಮೇಳಗಳಲ್ಲಿ 6 ವರ್ಷಗಳ ತಿರುಗಾಟವನ್ನು ಮಾಡಿದ ಮೇಲೆ ಈಗ ಸುಂಕದಕಟ್ಟೆಯ ಮೇಳದಲ್ಲಿ 5 ನೇ ವರ್ಷದ ತಿರುಗಾಟವನ್ನು ನಡೆಸುತ್ತಾ ಇದ್ದಾರೆ. +ಮಾಲಿನಿ, ಶ್ರೀದೇವಿ, ಪ್ರಭಾವತಿ, ರತಿ,ಮೋಹಿನಿ, ಲಕ್ಷ್ಮೀ, ಶಾರದೆ, ದಮಯಂತಿ, ಸೀತೆ,ಮುಂತಾದ ಪಾತ್ರಗಳನ್ನು ನಿರ್ವಹಿಸಿದ್ದಾರೆ. +ರುಕ್ಕಾಂಗ,ಶುಭಾ೦ಂಗ, ವಿಷ್ಟು, ಈಶ್ವರ ಮೊದಲಾದ ಪುಂಡು ಮತ್ತು ಪೋಷಕ ಪುರುಷ ಪಾತ್ರಗಳನ್ನು ಕೂಡಾ ನಿರ್ವಹಿಸಿದ್ದಾರೆ. +ಇಷ್ಟಲ್ಲದೆ ಪ್ರಮೀಳೆ, ಮೀನಾಕ್ಷಿ ಮೊದಲಾದ ಕಸೆಯು ಸ್ತೀ ಪಾತ್ರಗಳಲ್ಲಿ ಪ್ರವೀಣತೆಯನ್ನು ತೋರಿದ್ದಾರೆ. +ಇತ್ತೀಚೆಗೆ ವಿವಾಹವಾಗಿದ್ದು, ಶ್ರೀಮತಿ ಮಾಲತಿ ಎಂಬವರನ್ನು ವರಿಸಿದ್ದಾರೆ. +ಇವರ ಸಂಬಂಧಿಕರಾಗಿರುವ ಸಿದ್ಧಕಟ್ಟಿ ಪದ್ಮನಾಭ ಶೆಟ್ಟಿಗಾರರು ಉತ್ತಮ ಹಾಸ್ಯಗಾರರಾಗಿದ್ದು ಕಟೀಲು ಮೇಳದಲ್ಲಿ ತಿರುಗಾಟವನ್ನು ನಡೆಸುತ್ತ ಇದ್ದಾರೆ. +ಪೌರಾಣಿಕ ಪಾತ್ರಗಳ ನಿರ್ವಹಣೆಯಲ್ಲಿ ಹೆಚ್ಚಿನ ಆಸಕ್ತಿಯನ್ನು ತೋರುವ ಇವರು ತುಳು ಪ್ರಸಂಗದ ಪಾತ್ರಗಳನ್ನು ಕೂಡ ಉತ್ತಮವಾಗಿ ನಿರ್ವಹಿಸುತ್ತಾ,ಪ್ರೌಢಿಮೆಯನ್ನು ಸಾಧಿಸುತ್ತಾ ಬೆಳೆಯುತ್ತಿದ್ದಾರೆ. +ಚೆಂಡೆ ಮದ್ದಳೆಯ ಕೈಚಳಕದಲ್ಲಿ ಉತ್ತಮವಾದ ಪ್ರತಿಭೆಯನ್ನು ತೋರಿ ಪ್ರಸಿದ್ಧರಾಗಿರುವ ಶ್ರೀ ಮೋಹನಶೆಟ್ಟಿಗಾರ್‌ ಮಿಜಾರು ಇವರು ಕಟೀಲು ಮೇಳದ ಕಲಾವಿದರಾಗಿ ತಿರುಗಾಟವನ್ನು ನಡೆಸುತ್ತಾ ಇದ್ದಾರೆ. +ನಾರಾಯಣ ಶೆಟ್ಟಿಗಾರ್‌ ಮತ್ತು ಗೌರಮ್ಮ ದಂಪತಿಯ ಸುಪುತ್ರರಾಗಿ ಮಿಜಾರು ಎಂಬಲ್ಲಿ ಹುಟ್ಟಿದ್ದಾರೆ. +54 ವರ್ಷಗಳ ವಯೋಮಾನವಂತರಾಗಿರುವ ಇವರು ಬಾಲ್ಯದಲ್ಲಿ ಹುಟ್ಟೂರಿನ ಯಕ್ಷಗಾನ ಸಂಘದಿಂದ ಪ್ರಭಾವಿತರಾಗಿದ್ದರು. +ಮೋಹನ ಶೆಟ್ಟಿಗಾರರ ತಂದೆ ಸುರತ್ಕಲ್‌ಮೇಳದಲ್ಲಿ ವೇಷದಾರಿರಯಾಗಿ ತಿರುಗಾಟ ಮಾಡಿದ್ದಾರೆ. +ಅಜ್ಜ ಬಾಬು ಶೆಟ್ಟಿಗಾರ್‌ ಚೆಂಡೆಮದ್ದಳೆಯ ವಾದಕರಾಗಿದ್ದರು. +ಈ ಎಲ್ಲ ಕಾರಣದಿಂದ ಪ್ರತಿಭಾವಂತರಾದ ಮೋಹನ್‌ ಶೆಟ್ಟಿಗಾರರು ಗುರುಪುರ ಅಣ್ಣಿ ಭಟ್ಟರಲ್ಲಿ ಚೆಂಡೆ ಮದ್ದಳೆಯ ನುಡಿತ ಬಡಿತಗಳನ್ನು ಅಭ್ಯಾಸಿಸಿದರು. +ಅನಂತರ ಮೇಳ ತಿರುಗಾಟದಲ್ಲಿ ನೆಡ್ಡೆ ನರಸಿಂಹ ಭಟ್ಟರಿಂದ ಹೆಚ್ಚಿನ ಅನುಭವವನ್ನು ಸಂಪಾದಿಸಿದರು. +15ನೇ ವರ್ಷದಿಂದಲೇ ಕಲಾಸೇವೆಯನ್ನು ಆರಂಭಿಸಿದ ಇವರು ಆರ೦ಭಕ್ಕೆ ಕಟೀಲು ಮೇಳದಲ್ಲಿ 1 ವರ್ಷದ ತಿರುಗಾಟವನ್ನು ಪೂರೈಸಿ ಕರ್ನಾಟಕ ಮೇಳದಲ್ಲಿ 9 ವರ್ಷಗಳ ತಿರುಗಾಟವನ್ನು ನಡೆಸಿರುವರು. +ಆ ಬಳಿಕ ಕಟೀಲು ಮೇಳವನ್ನು ಮತ್ತೆ ಸೇರಿದವರು ಈವರೆಗೆ 17 ವರ್ಷಗಳ ತಿರುಗಾಟವನ್ನು ಪೂರೈಸಿದ್ದಾರೆ. +ಶ್ರೀಮತಿ ಮೀನಾಕ್ಷಿ ಎಂಬವರನ್ನು ವರಿಸಿ ಜಗದೀಶ (ಮೋಟಾರು ವೈಡಿಂಗ್‌ ಉದ್ಯೋಗಿ),ದೇವಿದಾಸ್‌ (ಬಡಗಿ), ಲಾವಣ್ಯ (8ನೇ ತರಗತಿ)ಎಂಬ ಮೂವರು ಮಕ್ಕಳನ್ನು ಪಡೆದಿದ್ದಾರೆ. +ಸಾತ್ವಿಕ ಗುಣಧರ್ಮದ ಇವರ ಸಾಧನೆಗೆ ಫಲವಾಗಿ ಹವ್ಯಾಸಿ ಬಳಗ ಕದ್ರಿಯ ದಶಮಾನ ಸಂವತಾನವು ಸಂದಿರುವುದಲ್ಲದೆ ಪೊಳಲಿ,ಕೋಡಿಕಲ್‌, ಮುಂತಾದೆಡೆಯಲ್ಲಿ ಅಭಿಮಾನಿಗಳಿಂದ ಗೌರವ ಪುರಸ್ಕಾರಗಳು ಸಂದಿವೆ. +ಪುಂಡು ವೇಷದ ಮುಖೇನ ಜನಮನ್ನಣೆಯನ್ನು ಪಡೆದಿರುವ ಶ್ರೀ ಮೋಹನಕುಮಾರ್‌ ಅಮ್ಮುಂಜೆ ಇವರು ಕಟೀಲು ಮೇಳದ ಕಲಾವಿದರಾಗಿ ತಿರುಗಾಟವನ್ನು ನಡೆಸುತ್ತಿದ್ದಾರೆ. +ವೆಂಕಪ್ಪ ಬೆಳ್ಡಡ ಮತ್ತು ಸುಶಿಲ ಬೆಳ್ಚಡ್ತಿ ದಂಪತಿಯ ಸುಪುತ್ರರಾಗಿ 04/07/1974 ರಂದು ಅಮ್ಮುಂಜೆಯಲ್ಲಿ ಜನಿಸಿದರು. +10ನೇ ತರಗತಿಯ ವಿದ್ಯಾಭ್ಯಾಸವನ್ನು ಪಡೆದಿರುವ ಇವರು 16ನೇ ವರ್ಷದಿಂದ ಯಕ್ಷಗಾನದ ರಂಗ ಪ್ರವೇಶ ಮಾಡಿದ್ದಾರೆ. +ಕೆನರಾ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾಗಿರುವ ಶ್ರೀ ಶಂಕರ ಶೆಟ್ಟಿ ಅವರಿಂದ ಯಕ್ಷಗಾನದ ಬಗ್ಗೆ ಮೊದಲ ಅನುಭವವನ್ನು ಸಂಪಾದಿಸಿದ ಇವರು ಪಡ್ರೆ ಚಂದು ಮತ್ತು ಕೋಳ್ಯೂರು ರಾಮಚಂದ್ರ ರಾವ್‌ (ಧರ್ಮಸ್ಥಳ ಲಲಿತ ಕಲಾಕೇಂದ್ರ ಅವರಿಂದ ಹೆಚ್ಚಿನ ನಾಟ್ಯಾಭ್ಯಾಸವನ್ನು ಮಾಡಿರುವರು. +ಕಟೀಲು ಮೇಳವೊಂದರಲ್ಲೇ 19ವರ್ಷಗಳ ತಿರುಗಾಟವನ್ನು ಪೂರೈಸಿರುವ ಇವರು ಅಭಿಮನ್ಯು, ಬಭ್ರುವಾಹನ, ಚಂಡ-ಮುಂಡರು, ವಿಷ್ಣು,ಬ್ರಹ್ಮ ಈಶ್ವರ, ಲವ, ಕುಶ, ಮನ್ಮಥ, ವಿದ್ಯುನ್ಮಾಲಿ,ಶಿಶುಪಾಲ ಮೊದಲಾದ ಪಾತ್ರಗಳನ್ನು ನಿರ್ವಹಿಸಿದ್ದಾರೆ. +ಶ್ರೀಮತಿ ಶಶಿಕಲಾ ಎಂಬವರನ್ನು ವರಿಸಿರುವ ಇವರಿಗೆ ವೈಶಾಖ್‌, ವೈಷ್ಣವಿ ಎಂಬ ಇಬ್ಬರು ಮಕ್ಕಳಿದ್ದಾರೆ. +ಇವರ ಸಾಧನೆಗೆ ಪ್ರತಿಫಲವಾಗಿ ಕಲಾಯಿ (ಅಮ್ಮುಂಜೆ), ಪೊಳಲಿ, ಹೊಸಪೇಟೆ,ಕಂ೦ದಾಪುರ, ವೈ್ಯಸೂರು, ಕಟೀಲು ಮೊದಲಾದೆಡೆಯಲ್ಲಿ ಸಂಮಾನ - ಗೌರವ ಪುರಸ್ಕಾರಗಳು ಸಂದಿವೆ. +ನಾಟಕೀಯ ವೇಷಗಳ ಮುಖೇನ ಗುರುತಿಸಲ್ಪಟ್ಟಿರುವ ಶ್ರೀ ಮಹಾಬಲ ಶೆಟ್ಟಿ,ಮಂಗಲ್ಪಾಡಿಯವರು ಕೀರ್ತಿ ಮತ್ತು ಜನಮನ್ನಣೆಗೆ ಸಂದ ಹಿರಿಯ ಕಲಾವಿದರು. +ಪ್ರಸ್ತುತ ಸುಂಕದ ಕಟ್ಟೆ ಮೇಳದಲ್ಲಿ ತಿರುಗಾಟವನ್ನು ನಡೆಸುತ್ತಾ ಇದ್ದಾರೆ. +ವೇಷಧಾರಿಯಾಗಿದ್ದ ಕೀರ್ತಿಶೇಷ ತ್ಯಾಂಪಣ್ಣ ಶೆಟ್ಟಿ ಮತ್ತು ಅಂತಕ್ಕೆ ದಂಪತಿಯ ಸುಪುತ್ರರಾಗಿ 1947ನೇ ವರ್ಷ ಮಂಗಲ್ಪಾಡಿಯಲ್ಲಿ ಜನಿಸಿದರು. +8ನೇ ತರಗತಿಯ ತನಕ ವಿದ್ಯಾಭ್ಯಾಸವನ್ನು ಪಡೆದಿರುವ ಇವರು ಶಾಲಾ ಜೀವನದಲ್ಲಿ ಶಾಲಾ ಅಧ್ಯಾಪಕರ ಪ್ರೇರಣೆಯ ಮೇರೆಗೆ ಮುಖಕ್ಕೆ ಬಣ್ಣ ಹಚ್ಚಲು ಆರಂಭಿಸಿದರು. +ಶ್ರೀ ಕೃಷ್ಣ ಮಾಸ್ತರ್‌ ಉಪ್ಪಳ ಅವರಿಂದ ನಾಟ್ಯಾಭ್ಯಾಸವನ್ನು ಮಾಡಿರುವ ಮಹಾಬಲ ಶೆಟ್ಟರು ಉಪ್ಪಳದ ಭಗವತಿ ಮೇಳದಲ್ಲಿ ನಾಲ್ಕಾರು ವರ್ಷಗಳ ತಿರುಗಾಟವನ್ನು ಮಾಡಿ ಮಧೂರು, ಮಲ್ಲ,ಬೆಳ್ಮಣ್‌ಮತ್ತು ಕಟೀಲು ಮೇಳದಲ್ಲಿ ಒಂದೊಂದು ವರ್ಷಗಳ ತಿರುಗಾಟವನ್ನು ಮಾಡಿರುವರು. +ಅನಂತರ ಸುಂಕದಕಟ್ಟೆ ಮೇಳವನ್ನು ಸೇರಿದವರು ಈಗಾಗಲೇ16 ವರ್ಷಗಳ ತಿರುಗಾಟವನ್ನು ಪೂರೈಸಿದ್ದಾರೆ. +ಕಂಸ, ಹರಣ್ಯಾಕ್ಟ,ಸುಂದರರಾವಣ,ಹಿರಣ್ಯಕಶ್ಯಪ, ಮಾಗಧ, ಬಪ್ಪಬ್ಕಾರಿ, ದಾರಿಕಾಸುರ,ದುಗ್ಗಣ್ಣ ಕೊಂಡೆ, ಕೋಟ, ಚೆನ್ನಯ, ಚಂದುಗಿಡಿ ಮುಂತಾದ ಪಾತ್ರಗಳನ್ನು ನಿರ್ವಹಿಸಿದ್ದಾರೆ. +ಮಳೆಗಾಲದಲ್ಲಿ ಕೃಷಿಕರಾಗಿ ಶ್ರಮಿಸುವ ಇವರು ಹವ್ಯಾಸಿ ಕಲಾವಿದರಿಗೆ ತರಬೇತಿ ಮತ್ತು ಮಾರ್ಗದರ್ಶನವನ್ನು ಮಾಡಿದ್ದಾರೆ. +ಇವರ ಸಾಧನೆಗೆ ಪ್ರತಿಯಾಗಿ ಮಂಗಲ್ಪಾಡಿ, ಶಂಭೂರು, ಮುಡಿಮಾರು ಮುಂತಾದೆಡೆಯಲ್ಲಿ ಸಂಮಾನಕ್ಕೆ ಒಳಗಾಗಿದ್ದಾರೆ. +ಶ್ರೀಮತಿ ದೇವಕಿ ಎಂಬವರನ್ನು ವರಿಸಿರುವ ಇವರಿಗೆ ಪೂರ್ಣಿಮಾ (ಬಿ.ಕಾಂ.) ಜಗನಿವಾಸ(10ನೇ ತರಗತಿ) ಎಂಬ ಇಬ್ಬರು ಮಕ್ಕಳಿದ್ದಾರೆ. +ಪ್ರತಿಭೆ ಮತ್ತು ಅಬ್ಬರದ ಸ್ವರಮಾಧುರ್ಯದಿಂದ ತೆಂಕುತಿಟ್ಟಿನ ಪ್ರಸಿದ್ದ ಭಾಗವತರಾಗಿ ಜನಮನ್ನಣೆಯನ್ನು ಪಡೆದಿರುವ ಶ್ರೀ ಪುತ್ತಿಗೆ ರಘರಾಮಹೊಳ್ಳರು ಪ್ರಸ್ತುತ ಧರ್ಮಸ್ಥಳ ಮೇಳದ ಮುಖ್ಯಭಾಗವತರಾಗಿ ತಿರುಗಾಟವನ್ನು ನಡೆಸುತ್ತಾ ಇದ್ದಾರೆ. +ಪುತ್ತಿಗೆ ರಾಮಕೃಷ್ಣ ಜೋಯಿಸ ಮತ್ತು ಲಕ್ಷ್ಮೀ ಅಮ್ಮ ದಂಪತಿಯ ಸುಪುತ್ರರಾಗಿ ದಿ 5-5-1955 ರಂದು ಕಾಸರಗೋಡಿನ ಬೋವಿಕಾನದಲ್ಲಿ ಜನಿಸಿದರು. +ಇವರ ಮನೆತನವು ಯಕ್ಷಗಾನದ ಮನೆತನವಾಗಿರುವುದರಿಂದ ಯಕ್ಷಗಾನದ ಕಲಾಪ್ರತಿಭೆಯು ಇವರಿಗೆ ರಕ್ತಗತವಾಗಿ ಬಂದಿದೆ. +ತಂದೆಯವರು ಶ್ರೇಷ್ಠಭಾಗವತರಾಗಿ ಕೀರ್ತಿಸಂಪನ್ನರಾಗಿದ್ದರು. +ಚಿಕ್ಕ ತಂದೆ ಬಿ.ವಿ.ಹೊಳ್ಳ ಅರ್ಥಧಾರಿ ಮತ್ತು ಪ್ರಸಂಗ ಕರ್ತರು. + ಬಿ.ಕಾಂ. ಪದವೀಧರರಾಗಿರುವ ಹೊಳ್ಳರು ತಂದೆಯವರು ಮಾರ್ಗದರ್ಶನದೊಂದಿಗೆ ಹಾಡಲು ಆರಂಭಿಸಿದರು. +ಆಮೇಲೆ ಚೆಂಡೆ-ಮದ್ದಲೆಯ ನುಡಿತ-ಬಡಿತಗಳಿಗಾಗಿ ದಿ| ಕಿಟ್ಟಣ ಭಾಗವತ ಮತ್ತುದಿ। ಕುದ್ರೆಕೂಡ್ಲು ರಾಂ ಭಟ್‌ರವರಲ್ಲಿ ಅಭ್ಯಾಸ ಮಾಡಿದ್ದಾರೆ. + ಮೇಳದ ತಿರುಗಾಟದಲ್ಲಿದ್ದಾಗ ಕಡತೋಕ ಭಾಗವತರಿಂದ ಪ್ರಭಾವಿತರಾಗಿದ್ದರು. +ಆರಂಭಕ್ಕೆ ಧರ್ಮಸ್ಥಳ ಮೇಳದಲ್ಲಿ 1 ವರ್ಷದ ತಿರುಗಾಟವನ್ನು ಮಾಡಿ ಅನಂತರ ಕದ್ರಿಮೇಳದಲ್ಲಿ 6 ವರ್ಷಗಳ ತಿರುಗಾಟವನ್ನು ನಡೆಸಿ ಮತ್ತೆ ಧರ್ಮಸ್ಥಳ ಮೇಳವನ್ನು ಸೇರಿದವರು 2 ದಶಕಕ್ಕೂ ಮಿಕ್ಕಿದ ತಿರುಗಾಟವನ್ನು ಪೂರೈಸಿದ್ದಾರೆ. +ರಂಗದ ಒಟ್ಟು ಪ್ರದರ್ಶನವು ಚೆಂದವಾಗಬೇಕು ಎಂಬ ಆಶಯವುಳ್ಳ ಇವರು ಕಲಾವಿದರಿಗೆ, ಸನ್ನಿವೇಶಕ್ಕೆ ತಕ್ಕಂತೆ ಮಾಹಿತಿ ನೀಡುವಲ್ಲಿ ಮಾರ್ಗದರ್ಶಕರಾಗಿದ್ದಾರೆ. +ಇಷ್ಟಲ್ಲದೆ ಸನ್ನಿವೇಶಕ್ಕೆ ಪೂರಕವಾಗಿ ರಸಪೂರಣವಾಗಿ ಹಾಡಬಲ್ಲರು. +ಗದಾಯುದ್ಧ, ಕರ್ಣಾರ್ಜುನ, ದುಶ್ಯಾಸನ ವಧೆ ಮುಂತಾದ ಪ್ರಸಂಗಗಳು ಇವರಹಾಡಿಂದ, ರಂಗತಂತ್ರದಿಂದ ರಂಜನೀಂತು ಪ್ರದರ್ಶನವಾಗಿ ಜನಮನಕ್ಕೆ ಮುಟ್ಟಿದೆ. +ಕಲಾವಿದರ ಸಾಮರ್ಥ್ಯವನ್ನು ಅರ್ಥವಿಸಿಕೊಂಡು ಕುಣಿಸಬಲ್ಲಯೋಗ್ಯತೆ ಇವರಲ್ಲಿದೆ. +ದೆಹಲಿ, ಮುಂಬಯಿ, ಬೆಂಗಳೂರು,ಜಪಾನ್‌ಗಳು ಸೇರಿದಂತೆ ದೇಶವಿದೇಶಗಳ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ ಹೆಗ್ಗಳಿಕೆ ಇವರದ್ದಾಗಿದೆ. +ಮಾಜಿ ರಾಷ್ಟ್ರಪತಿ ಶಂಕರದಯಾಳರಿಂದ ಗೌರವ, ದೆಹಲಿಯ ಕನ್ನಡ ಸಂಘದ ಸಂಮಾನಗಳಲ್ಲದೆ, ಮಂಗಳೂರು,ಎಡನೀರು, ಬಂಟ್ವಾಳ ಮುಂತಾದೆಡೆ ಅಭಿಮಾನಿಗಳಿಂದ ಸಂಮಾನಿಸಲ್ಪಟ್ಟಿರುವರು. +ಶ್ರೀಮತಿ ವಾಣೀ ಎಂಬವರನ್ನು ವರಿಸಿ ಶ್ರೀಲಕ್ಷ್ಮೀ, ಶ್ರೀವಿದ್ಯಾ ಎಂಬ ಇಬ್ಬರು ಮಕ್ಕಳನ್ನು ಪಡೆದಿರುವರು. +ಅಪಾರ ಅಭಿಮಾನಿಗಳಿಂದ ಗೌರವಕ್ಕೊಳಗಾದ ಕೀರ್ತಿ ಇವರದ್ದಾಗಿದೆ. +ಪುಂಡು, ಸ್ತ್ರೀ, ನಾಟಕೀಯ, ರಾಜವೇಷಗಳ ಮುಖೇನ ಪ್ರಸಿದ್ಧಿಗೆ ಬಂದಿರುವ ಬಾಯಾರು ರಘುನಾಥ ಶೆಟ್ಟಿಯವರು ಸುಂಕದಕಟ್ಟೆ ಮೇಳದ ಕಲಾವಿದರಾಗಿ ತಿರುಗಾಟವನ್ನು ನಡೆಸುತ್ತಾ ಇದ್ದಾರೆ. +ಐತಪ್ಪ ಶೆಟ್ಟಿ ಪೈವಳಿಕೆ ಮತ್ತು ಕಲ್ಯಾಣಿ ಶೆಡ್ತಿ ದಂಪತಿಯ ಸುಪುತ್ರರಾಗಿ 18-6-1950ರಂದು ಬಾಯಾರಿನಲ್ಲಿ ಹುಟ್ಟಿದರು. +ಪ್ರಾಥಮಿಕ ಹಂತದ ವಿದ್ಯಾಬ್ಯಾಸವನ್ನು ಪಡೆದಿರುವ ಇವರಿಗೆ ವೇಷಧಾರಿಯಾಗಲು ತಂಡೆಯ ಪ್ರೇರಣೆ ಒದಗಿತ್ತು. +ಪ್ರಸಿದ್ಧ ಸ್ತ್ರೀ ಪಾತ್ರಧಾರಿಯಾಗಿ ಮನ್ನಣೆಯನ್ನು ಪಡೆದಿದ್ದ ಐತಪ್ಪ ಶೆಟ್ಟರು ಇವರಿಗೆ ನಾಟ್ಯಾಭ್ಯಾಸವನ್ನು ಮಾಡಿ ರಂಗಾನುಭವವನ್ನು ನೀಡಿದ್ದರು. +16ನೇ ವಯಸ್ಸಿನಿಂದ ಪಾತ್ರ ನಿರ್ವಹಣೆಯನ್ನು ಮಾಡಲಾರಂಭಿಸಿದ ಇವರು ಕರ್ನಾಟಕ ಮೇಳದಲ್ಲಿ 37 ವರ್ಷಗಳ ತಿರುಗಾಟವನ್ನು ಮಾಡಿದ ಮೇಲೆ ಸುಂಕದಕಟ್ಟೆ ಮೇಳವನ್ನು ಸೇರಿ ಇದೀಗ 8 ವರ್ಷಗಳ ತಿರುಗಾಟವನ್ನು ಪೂರೈಸಿದ್ದಾರೆ. +ಕೌರವ, ಅರ್ಜುನ,ರಕ್ತಬೀಜ, ಪ್ರಮೀಳೆ, ಸೀತೆ, ರಾಮ, ಬಭ್ರುವಾಹನ,ಸುಧನ್ವ, ಕೋಟಿ, ಕಾಂತಾಬಾರೆ, ದೇವುಪೂಂಜ ಮೊದಲಾದ ಪಾತ್ರಗಳನ್ನು ನಿರ್ವಹಿಸಿದ್ದಾರೆ. +ಬಾಯಾರು ರಮೇಶ ಶೆಟ್ಟಿ, ಬಾಯಾರು ಮೋಹನ ಶೆಟ್ಟಿ ಮೊದಲಾದವರು ಸೇರಿದಂತೆ ಇವರ ಐವರು ಸಹೋದರರು ಕೂಡ ಕಲಾವಿದರಾಗಿದ್ದಾರೆ. +ಮಳೆಗಾಲದಲ್ಲಿ ಯಕ್ಷಗಾನ ಭೂಷಣಗಳ ತಯಾರಿ ಕೆಲಸವನ್ನು ಮಾಡುವ ಇವರು ಶ್ರೀಮತಿ ಪುಷ್ಪಾವತಿ ಎಂಬವರನ್ನು ವರಿಸಿ ಹೇಮಲತಾ (ಕಂಪ್ಯೂಟರ್‌ಪದವಿ ಅಧ್ಯಯನ), ಸುಮಲತಾ (ಪಿ.ಯು.ಸಿ. )ಎಂಬ ಇಬ್ಬರು ಮಕ್ಕಳನ್ನು ಪಡೆದಿದ್ದಾರೆ. +ಇವರ ಸಾಧನೆಗೆ ಪ್ರತಿಫಲವಾಗಿ ಬಾಯಾರು,ಮುಂಬಯಿ, ಕೋಡಿಕಲ್‌, ಉಡುಪಿ, ದೇರಳಕಟ್ಟೆ ಮುಂತಾದೆಡೆಯಲ್ಲಿ ಸ೦ಮಾನಗಳು ಸಂದಿವೆ. + ಪಾತ್ರಗಳ ಮುಖೇನ ಪ್ರಸಿದ್ಧರಾಗಿರುವ ರಮೇಶ ಭಟ್ಟರು ಶ್ರೀ ಕಟೀಲು ಮೇಳದ ಕಲಾವಿದರಾಗಿ ಮನ್ನಣೆಯನು ಪಡೆದಿದ್ದಾರೆ. +17.11.1967ರಂದು ನಾರಾಯಣ ಭಟ್‌ಮತ್ತು ಪಾರ್ವತಿ ಅಮ್ಮ ದಂಪತಿಯ ಸುಪುತ್ರರಾಗಿ ಸರವು ಎಂಬಲ್ಲಿ ಜನಿಸಿದರು. +10ನೇ ತರಗತಿಯ ತನಕ ವಿದ್ಯಾಭ್ಯಾಸವನ್ನು ಪಡೆದಿರುವ ಇವರು ಯಕ್ಷಗಾನದ ಪರಿಸರದಲ್ಲಿ ಹುಟ್ಟಿ ಬೆಳೆದಿರುವುದರಿಂದ ಕಲಾಕರ್ಷಣೆಗೆ ಒಳಗಾದರು. +ಯಕ್ಷಗಾನದ ನಾಟ್ಯಾಭ್ಯಾಸವನ್ನು ಮಾಡುವ ಉದ್ದೇಶದಿಂದ ಧರ್ಮಸ್ಥಳದ ಲಲಿತಾ ಕಲಾಕೇಂದ್ರವನ್ನು ಸೇರಿದ ಇವರು, ಗೋವಿ೦ದ ಭಟ್‌ಸೂರಿಕುಮೇರಿ ಮತ್ತು ಕರ್ಗಲ್ಲು ವಿಶ್ವೇಶ್ವರ ಭಟ್ಟರಿಂದ ಅನುಭವವನ್ನು ಪಡೆದರು. +18ನೇ ವರ್ಷದಿಂದ ಕಲಾಸೇವೆಯನ್ನು ಆರಂಭಿಸಿದ ಇವರು ಮೊದಲ ವರ್ಷ ಕುಂಬ್ಳೆ ಮೇಳದಲ್ಲಿ ತಿರುಗಾಟವನ್ನು ಮಾಡಿ ಕಟೀಲು ಮೇಳವನ್ನು ಸೇರಿದರು. +ಈಗಾಗಲೇ 23 ವರ್ಷಗಳ ತಿರುಗಾಟವನ್ನು ಪೂರೈಸಿದ್ದಾರೆ. +ಯಶೋಮತಿ, ನಂದಿನಿ, ಚಿತ್ರಾಂಗದೆ, ಶಶಿಪ್ರಭೆ,ಪ್ರಮೀಳೆ, ಮುಂತಾದ ಸ್ತ್ರೀಪಾತ್ರಗಳನ್ನು ಮಾಡುವ ಇವರು ರಾಮ, ಕೃಷ್ಣ, ಅರ್ಜುನ, ದೇವೇಂದ,ನಿಶುಂಭ ಇತ್ಯಾದಿ ಪಾತ್ರಗಳನ್ನು ಅವಶ್ಯಕತೆಗೆ ಅನುಗುಣವಾಗಿ ಮಾಡಿದ್ದಾರೆ. +ಕಟೀಲು ಮೇಳದಲ್ಲಿ ಶ್ರೀದೇವಿಯ ಪಾತ್ರವನ್ನು ಮಾಡುತ್ತಿರುವ, ಇವರಿಗೆ ಆ ಪಾತ್ರವು ಹೆಚ್ಚಿನ ಪ್ರಸಿದ್ಧಿಯನ್ನು ತಂದು ಕೊಟ್ಟಿದೆ. +ಸ್ತ್ರೀ ವೇಷ,ರಾಜವೇಷ, ಪುಂಡುವೇಷ ಮುತ್ತು ಬಣ್ಣದ ವೇಷಗಳನ್ನು ಮಾಡಿದ ಅನುಭವ ಇವರಿಗಿದೆ. +ಶ್ರೀಮತಿ ಗೀತಾ ಎಂಬವರನ್ನು ವರಿಸಿರುವ ರಮೇಶಭಟ್ಟರು ಶ್ರೀರಾಮ ಎಂಬ ಸುಪುತ್ರನನ್ನು ಪಡೆದಿದ್ದಾರೆ. +ತಾಳಮದ್ದಳೆಯ ಅರ್ಥಧಾರಿಯಾಗಿ,ಯಕ್ಷಗಾನ ಪೂರ್ವರಂಗ ವಿಬಾಗದ ಸಂಗೀತಗಾರರಾಗಿ ಅನುಭವಗಳನನ್ನು ಗಳಿಸಿಕೊಂಡಿದ್ದಾರೆ. +87 +ಭಾಗವತಿಕೆಯ ಮೂಲಕ ಜನ ಮನ್ನಣೆಯನ್ನು ಪಡೆಯುತ್ತಾ ಕೀರ್ತಿ ಸಂಪನ್ನರಾಗಿ ಬೆಳೆಯುತ್ತಿರುವ ಶ್ರೀ ರವಿಚಂದ್ರ ಕನ್ನಡಿ ಕಟ್ಟೆಯವರು ಪ್ರಸ್ತುತ ಮಂಗಳಾದೇವಿ ಮೇಳದ ಮುಖ್ಯ ಭಾಗವತರಾಗಿ ತಿರುಗಾಟವನ್ನು ನಡೆಸುತ್ತಾ ಇದ್ದಾರೆ. +ಧರ್ಮಣ ಸಾಲ್ಯಾನ್‌ ಮತ್ತು ಸುಶೀಲ ದಂಪತಿಯ ಸುಪುತ್ರರಾಗಿ ದಿನಾಂಕ 4-10-1980ರಂದು ಸುಧರ್ಮ ನಿಲಯದಲ್ಲಿ ಹುಟ್ಟಿದರು. +10ನೇ ಯ ತನಕ ಶಾಲಾ ವಿದ್ಯಾಭ್ಯಾಸವನ್ನು ಪಡೆದಿರುವ ಇವರು ಹದಿನಾರನೇ ವರ್ಷದಿಂದ ಯಕ್ಷಗಾನ ಕಲಾ ಪ್ರವೇಶ ಮಾಡಿದರು. +ಪಡಂಗಡಿ ಶಾಲೆಯ ಅಧ್ಯಾಪಕರಾದ ಶ್ರೀ ಅನಂತ ಪದ್ಮನಾಭಹೊಳ್ಳ ಮತ್ತು ಕಲಾವಿದ ಶ್ರೀ ಸದಾಶಿವ ಕುಲಾಲ್‌ಅವರ ಪ್ರೇರಣೆ ಹಾಗೂ ಪ್ರೋತ್ಸಾಹದ ಮೇರೆಗೆಶ್ರೀ ಪದ್ಯಾಣ ಗಣಪತಿ ಭಟ್‌ ಮತ್ತು ಸಬ್ಬಣಕೋಡಿಕೃಷ್ಣ ಭಟ್‌ ಅವರಿಂದ ಕ್ರಮವಾಗಿ ಭಾಗವತಿಕೆ ಹಾಗೂ ನಾಟ್ಯಾಭ್ಯಾಸವನ್ನು ಮಾಡಿರುವರು. +ಸುರತ್ಕಲ್‌ ಮೇಳ - 2 ವರ್ಷ,ಕರ್ನಾಟಕಮೇಳ - 1 ವರ್ಷ ಮತ್ತು ಮಂಗಳಾದೇವಿ ಮೇಳದಲ್ಲಿ 11 ವರ್ಷಗಳ ತಿರುಗಾಟವನ್ನು ಪೂರೈಸಿರುವರ ವಿಚMದ್ರರು ಆರಂಭದಲ್ಲಿ ಹವ್ಯಾಸಿಯಾಗಿ ರಾಮ,ಹನುಮಂತ, ಪ್ರಭಾವತಿ, ರಂಭೆ, ಕುಶ ಮೊದಲಾದ ಪಾತ್ರಗಳನ್ನು ನಿರ್ವಹಿಸಿದ್ದಾರೆ. +ಇವರು ಮೊದಮೊದಲಿಗೆ ಮೇಳದಲ್ಲೂ ಸ್ತೀ ಪಾತ್ರ ಹಾಗೂ ಪುಂಡು ವೇಷಗಳನ್ನು ಮಾಡಿದ್ದಾರೆ. +ಪದ್ಯಾಣಗಣಪತಿ ಭಟ್ಟರ ಶೈಲಿಯ ಅನುಸರಣೆಯಲ್ಲಿ ಬೆಳೆದಿರುವ ಇವರು ಆಟ ಕೂಟಗಳೆರಡರಲ್ಲೂ ಪ್ರೌಢಿಮೆಯನ್ನು ಸಾಧಿಸುತ್ತಾ ಬೆಳೆಯುತ್ತಿದ್ದಾರೆ. +ಮಳೆಗಾಲದಲ್ಲಿ ಕೃಷಿಕರಾಗಿ ಶ್ರಮಿಸುವ ಇವರು ಶ್ರೀಮತಿ ಶುಭಲತಾ ಎಂಬವರನ್ನು ವರಿಸಿರುವರು. +ಇವರ ಯುವಪ್ರತಿಬೆಗೆ ಪುರಸ್ಕಾರವಾಗಿ ಗುರುವಾಯನಕೆರೆ, ಕನ್ನಡಿಕಟ್ಟೆ, ಬೆಳ್ತಂಗಡಿ ಮೊದಲಾದೆಡೆಯಲ್ಲಿ ಗೌರವ ಸಂಮಾನಗಳು ಸಂದಿವೆ. +ಸ್ರ್ತೀ ಪಾತ್ರಗಳಲ್ಲಿ ವರ್ಚಸ್ಸನ್ನು ಮೆರೆಸಿ, ಪ್ರತಿಭಾ ವಿಳಾಸದಿಂದ ಸರಿಸಾಟಿಯಿಲ್ಲದ ಕಲಾಸಾಧಕನಾಗಿ ಮಂಗಳೂರು ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್‌ಪದವಿಗೆ ಅರ್ಹರಾದ ಶ್ರೀ ಕೋಳ್ಯೂರು ರಾಮಚಂದ್ರರಾವ್‌ ಮೇಳದ ನಿವೃತ್ತಕಲಾವಿದರಾಗಿದ್ದು, ಹೇಳಿಕೆಯ ಮೇರೆಗೆ ಕಲಾಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಾ ಇದ್ದಾರೆ. +ಕಾಸರಗೋಡು ಜಿಲ್ಲೆಯ ಕೋಳ್ಯೂರಿನಲ್ಲಿ ನಾರಾಯಣ ಭಟ್ಟ ಹಾಗೂ ರಾಧಮ್ಮ ದಂಪತಿಯ ಪುತ್ರರಾಗಿ ದಿನಾಂಕ 9-11-1932 ರಲ್ಲಿ ಜನಿಸಿದರು. +ಬಾಲ್ಯದಲ್ಲೇ ಯಕ್ಷಗಾನದ ಬಗ್ಗೆ ಆಕರ್ಷಿತರಾದ ಇವರು ಕುರಿಯ ವಿಠಲ ಶಾಸ್ತ್ರಿಯವರಲ್ಲಿ ಯಕ್ಷಗಾನವನ್ನು ಅಭ್ಯಾಸ ಮಾಡಿ ಸ್ರ್ತೀ ವೇಷ ಹಾಗೂ ಪುಂಡು ವೇಷಗಳಲ್ಲಿ ಪ್ರೌಢಿಮೆಯನ್ನು ಸಾಧಿಸಿದರು. +ಕಟೀಲು, ಸುರತ್ಕಲ್‌, ಧರ್ಮಸ್ಥಳ, ಕೂಡ್ಲು, ಬಪ್ಪನಾಡು,ಕರ್ನಾಟಕ ಮೇಳಗಳು ಸೇರಿದಂತೆ 44 ವರ್ಷಗಳ ತಿರುಗಾಟವನ್ನು ಪೂರೈಸಿದ್ದಾರೆ. +ಸುಭದ್ರೆ, ಅಂಬೆ, ಕಿನ್ನಿದಾರು, ಬೊಮ್ಮಕ್ಕೆ , ಸಿರಿ,ಪ್ರಮೀಳೆ , ಚಿತ್ರಾಂಗದೆ ಮುಂತಾದ ಪಾತ್ರಗಳು ರಾಮುಚಂದ್ರರಾಂತುರಿಗೆ ಅಚ್ಚುಮೆಚ್ಚಿನಪಾತ್ರಗಳಾಗಿದ್ದವು. +ಈ ಪಾತ್ರಗಳಿಂದಲೇ ಕೀರ್ತಿಯ ಶಿಖರವನ್ನು ಹತ್ತುತ ಜನ ಮಾತಾದರು. +ತುಳುಮತ್ತು ಕನ್ನಡ ಭಾಷೆಯ ವಿಭಿನ್ನ ಪಾತ್ರಗಳಲ್ಲಿ ತನ್ನದೇ ಆದ ಸ್ವಂತಿಕೆಯನ್ನು ಮೆರೆಸಿದ್ದಾರೆ. +ಅಕ್ಷಯಾಂಬರ ವಿಳಾಸದ ದ್ರೌಪದಿಂರರಾಗಿ, ದಕ್ಷಂತುಜ್ಯದ ದಾಕ್ಷಾಯಿಣಿಯಾಗಿ ಜನಮಾನಸದಲ್ಲಿ ಅಚ್ಚಳಿಯದ ಮುದ್ರೆಯನ್ನೊತ್ತಿದ್ದಾರೆ. +ಧರ್ಮಸ್ಥಳದ ಯಕ್ಷಗಾನ ಕಲಾಕೇಂದ್ರವೂ ಸೇರಿದಂತೆ ಹಲವಾರು ವರುಷಗಳಿಂದ ಹಲವೆಡೆಯಲ್ಲಿ ಯಕ್ಷಗಾನದ ತರಬೇತಿಯನ್ನು ನೀಡುತ್ತಾ ಇದ್ದಾರೆ. +ಇಳಿವಯಸ್ಸಿನಲ್ಲು ಶ್ರದ್ಧೆಯಿಂದ ಕಲಾಸೇವೆಯನ್ನು ಮಾಡುವ ಇವರ ನೂರಾರು ಶಿಷ್ಕರು ರಂಗದಲ್ಲಿ ಉತ್ತಮ ಕಲಾವಿದರಾಗಿ ಮೆರೆಯುತ್ತಾ ಇದ್ದಾರೆ. +ಪ್ರಾತ್ಯಕ್ಷಿಕೆ, ಕಮ್ಮಟಗಳ ಸಂಪನ್ಮೂಲ ವ್ಯಕ್ತಿಯಾಗಿ ಪರಂಪರೆಯ ಬಗ್ಗೆ ನಿಖರವಾಗಿ ಹೇಳಬಲ್ಲ ಅಧೀಕೃತವ್ಯಕ್ತಿಯಾಗಿ, ಶಕ್ತ ಪ್ರತಿಭೆಯ ಅನುಪಮ ಸಾಧಕರಾಗಿ ಬೆಳೆದು ಬಂದಿರುವ ಇವರ ಸಾದನೆ ಅದ್ವೀತಿಯವಾಗಿದೆ. + 3 ವರ್ಷಗಳ ಅವಧಿಗೆ ತುಳು ಅಕಾಡಮಿಯ ಸದಸ್ಯರಾಗಿ ಸೇವೆ ಸಲ್ಲಿಸಿರುವ ಇವರು,ಬೆಹರಿನ್‌, ದೆಹಲಿ, ಮುಂಬಯಿ, ಬೆಂಗಳೂರು ಮುಂತಾದೆಡೆಯಲ್ಲಿ ಗೌರವಕ್ಕೆ ಒಳಗಾಗಿದ್ದಾರೆ. +ಬೆಂಗಳೂರು ಭಾರ್ಗವ ಪ್ರಶಸ್ತಿ, ತುಳು ಜಾನಪದ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ 2001ರಲ್ಲಿ ಡಾಕ್ಟರೇಟ್‌ ಪದವಿದೊರೆತಿದೆ. +ಸ್ರ್ತೀ ಪಾತ್ರಗಳನ್ನು ಮಾಡಿ ಉತ್ತಮಿಕೆಯನ್ನು ಮೆರೆದುದಲ್ಲದೆ ರಾಜವೇಷ ಮತ್ತು ನಾಟಕೀಯ ವೇಷಗಳ ಪಾತ್ರಗಳಲ್ಲಿ ತನ್ನದೇ ಆದ ವರ್ಚಸ್ಸನ್ನು ತೋರುತ್ತಾ ಕಲಾ ಸೇವೆಯನ್ನು ಮಾಡುತ್ತಿರುವ ಶ್ರೀರಾಮಕೃಷ್ಣ ಭಟ್ಟರು ಕಟೀಲು ಮೇಳದ ಹಿರಿಯ ಕಲಾವಿದರಾಗಿ ತಿರುಗಾಟವನ್ನು ನಡೆಸುತ್ತಾ ಇದ್ದಾರೆ. +19-5-1944 ರಲ್ಲಿ ವೆಂಕಟರಮಣಯ್ಯ ಮತ್ತು ಯಮುನಮ್ಮ ದಂಪತಿಯ ಸುಪುತ್ರರಾಗಿ ರೆಂಜಾಳದಲ್ಲಿ ಇವರು ಜನಿಸಿದರು. +9ನೇ ತರಗತಿಯ ತನಕ ವಿದ್ಯಾಭ್ಯಾಸವನ್ನು ಪಡೆದಿರುವ ಶ್ರೀಯುತರು 21 ನೇ ವರ್ಷದಿ0ದ ರಂಗಪ್ರವೇಶ ಮಾಡಿದರು. +ಕುದ್ಕಾಡಿ ವಿಶ್ವನಾಥ ರೈಂತುವರಿಂದ ಭರತನಾಟ್ಯವನ್ನು ಅಭ್ಯಾಸ ಮಾಡಿರುವ ಇವರು,ಅಗರಿ ಶ್ರೀನಿವಾಸ ಭಾಗವತರ ಉತ್ತೇಜನದೊಂದಿಗೆ,ಅಡ್ಕಸ್ಥಳ ನಾರಾಯಣ ಶೆಟ್ಟಿ, ಕುಡಾಣಗೋಪಾಲಕೃಷ್ಣ ಭಟ್‌, ಕೊಕ್ಕಡ ಈಶ್ವರ ಭಟ್‌ ಇವರು ಮೂವರ ಪಾತ್ರ ನಿರ್ವಹಣೆಯನ್ನು ನೋಡಿ ಬೆಳೆಯುತ್ತಾ ಕಲಾಸಾಧಕರಾದರು. +ಕೂಡ್ಲು , ಮಡಿಕೇರಿ ಮೇಳಗಳಲ್ಲಿ ಆರಂಭದ ತಿರುಗಾಟವನ್ನು ಮಡಿರುವ ಇವರು ಮು0ದೆ ಕಟೀಲು ಮೇಳವನ್ನು ಸೇರಿದವರು ಮೂರು ದಶಕಕ್ಕೂ ಮಿಕ್ಕಿದ ಕಲಾಸೇವೆಯನ್ನು ಮಾಡಿದ್ದಾರೆ. +ಶ್ರೀದೇವಿ, ಮೋಹಿನಿ, ಚಿತ್ರಾಂಗದೆ ಮು0ತಾದ ಸ್ತ್ರೀ ಪಾತ್ರಗಳನ್ನು ಉತ್ತಮವಾಗಿ ನಿರ್ವಹಿಸಿ ಕೀರ್ತಿಯನ್ನು ಪಡೆದಿರುವ ಇವರು ಇತ್ತೀಚಿನ ವರ್ಷಗಳಿ0ದ ಅರ್ಜುನ, ಕಾರ್ತವೀರ್ಯ, ಹಿರಣ್ಯಾಕ್ಷ,ಮಧು-ಕೈ ಭಟರು ಮು0ತಾದ ಪಾತ್ರಗಳನ್ನು ನಿರ್ವಹಿಸುತ್ತಾ ಇದ್ದಾರೆ. +ಪೀಠಿಕೆ ರಾಜವೇಷದಲ್ಲಿ ಪರಂಪರೆಯ ಶೈಲಿಗೆ ಅನುಗುಣವಾಗಿ ಪಾತ್ರವನ್ನು ಚಿತ್ರಿಸುವ ಇವರು,ಹಲವು ಮಂದಿಗಳಿಗೆ ಮಾರ್ಗದರ್ಶನವನ್ನು ಮಾಡಿದ್ದಾರೆ. +ಪುರಾಣ ಜ್ಞಾನ , ಪ್ರಸಂಗ ಜ್ಞಾನದಲ್ಲಿ ಪಳಗಿದ್ದು ರ0ಗಮಾಹಿತಿಯ ಬಗ್ಗೆ ನಿಖರವಾಗಿ ಸಲಹೆ ನೀಡಬಲ್ಲ ಹಿರಿಮೆಯ ಕಲಾವಿದರು ಇವರಾಗಿದ್ದಾರೆ. +ಕಮ್ಮಟ, ಪ್ರಾತ್ಯಕ್ತಿಕೆಗಳಲ್ಲೂ ಭಾಗವಹಿಸಿದ್ದಾರೆ. +ಕೃಷಿಕರಾಗಿ ಶ್ರಮಿಸಿ, ಅನುಭವಿಯಾಗಿರುವ ಇವರು ಇಂದಿರಾ ಎ0ಬವರನ್ನು ವರಿಸಿದ್ದಾರೆ. +ಹವ್ಯಾಸಿ ಬಳಗ ಕದ್ರಿಯ ದಶಮಾನ ಸ0ಮಾನವು ಸೇರಿದ0ತೆ ಕಟೀಲು ಮೊದಲಾದೆಡೆ ಸಂಮಾನ ಪುರಸ್ಕಾರಕ್ಕೆ ಒಳಗಾಗಿ ಕಲಾಭಿಮಾನಿಗಳಿಂದ ಗೌರವಿಸಲ್ಪಟ್ಟಿದ್ದಾರೆ. +` +ಚೆಂಡೆ ಮದ್ದಳೆಯ ನುಡಿತ ಬಡಿತಗಳಲ್ಲಿ ಸಾಧನೆಯನ್ನು ಮಾಡಿ ಜನಮನ್ನಣೆಯನ್ನು ಪಡೆದಿರುವ ಶ್ರೀ ರಾಮಕೃಷ್ಣ ಶೆಟ್ಟಿಗಾರರು ಪ್ರಸ್ತುತ ಕಟೀಲು ಮೇಳದಲ್ಲಿ ತಿರುಗಾಟವನ್ನು ನಡೆಸುತ್ತಾ ಇದ್ದಾರೆ. +ಹೊನ್ನಯ್ಯ ಶೆಟ್ಟಿಗಾರ್‌ ಮತ್ತು ರಾಧಾದಂಪತಿಯ ಸುಪುತ್ರರಾಗಿ ನಾಪಾಡಿ ಮನೆಯಲ್ಲಿ 1947ನೇ ವರ್ಷ ಜನಿಸಿದರು. +ಪ್ರಾಥಮಿಕ ಹಂತದ ವಿದ್ಯಾಭ್ಯಾಸವನ್ನು ಪಡೆದಿರುವ ಇವರು ಅಪ್ಪಯ್ಯ ಮಾಸ್ಟರು ಗುರುಪುರ ಎಂಬವರಲ್ಲಿ ಚೆಂಡೆ ಮದ್ದಳೆಯ ನುಡಿತ ಬಡಿತಗಳ ಬಗ್ಗೆ ಅಭ್ಯಾಸವನ್ನು ಮಾಡಿ ಕಲಾಸೇವೆಯನ್ನು ಆರಂಭಿಸಿದರು. +ಕೂಡ್ಲು ಮೇಳ - 1ವರ್ಷ, ಮಂಗಳಾದೇವಿಮೇಳ - 1 ವರ್ಷ, ಕದ್ರಿ ಮೇಳ - 1 ವರ್ಷ,ಉಳ್ಳಾಲ ಭಗವತಿ ಮೇಳ - 1 ವರ್ಷ. +ಕಟೀಲುಮೇಳ - 23 ವರ್ಷ ಹೀಗೆ ಮೇಳಗಳ ತಿರುಗಾಟದ ಹಿನ್ನೆಲೆ ಇದೆ. +ಕಲಾವಿದರ ಮನೋಧರ್ಮಕ್ಕೆ ತಕ್ಕಂತೆ ಚೆಂಡೆ-ಮದ್ದಳೆಯನ್ನು ನುಡಿಸಬಲ್ಲರು. +ಇಷ್ಟಲ್ಲದೆ ಪೂರ್ವರಂಗದ ಹಾಡುಗಳನ್ನು ಹಾಡುವ ಕ್ರಮಗಳನ್ನು ಕೂಡಾ ತಿಳಿದಿದ್ದಾರೆ. +ಶ್ರೀಮತಿ ಯಮುನಾ ಎಂಬವರನ್ನು ವರಿಸಿರುವ ಇವರು ಶ್ರೀ ಗಣೇಶ್‌, ಶ್ರೀ ಲಕ್ಷ್ಮೀಶ, ವಿಶಾಲಾಕ್ಷಿ,ಸೀತಾಲಕ್ಷ್ಮಿ ಎಂಬ ನಾಲ್ಡರು ಮಕ್ಕಳನ್ನು ಪಡೆದಿದ್ದಾರೆ. +ಸ್ವರ ಮಧುರತೆಯ ಉತ್ತಮ ಕಂಠದಿಂದ ಜನಮನ್ನಣೆಯನ್ನು ಪಡೆದಿರುವ ಶ್ರೀ ರಾಮಕೃಷ್ಣ ಮಯ್ಯರವರು ಧರ್ಮಸ್ಥಳ ಮೇಳದ 2ನೇ ಭಾಗವತರಾಗಿ ತಿರುಗಾಟವನ್ನು ನಡೆಸುತ್ತಾ ಇದ್ದಾರೆ. +ಸಿರಿಬಾಗಿಲು ವೆಂಕಪ್ಪಯ್ಯ ಮತ್ತು ಪಾರ್ವತಿ ಅಮ್ಮ ದಂಪತಿಯ ಸುಪುತ್ರರಾಗಿ ದಿನಾಂಕ 25-10-1967ರಂದು ಸಿರಿಬಾಗಿಲಿನಲ್ಲಿ ಹುಟ್ಟಿದರು. +ಪದವಿಪೂರ್ವ ಹಂತದ ವಿದ್ಯಾಭ್ಯಾಸವನ್ನು ಪೂರೈಸಿರುವ ಇವರು ಮನೆತನದ ಹಿನ್ನೆಲೆಯಿಂದ ಪ್ರತಿಭಾ ಸಂಪನ್ನರಾಗಿದ್ದರು. +ತಂದೆಯ ಅಜ್ಜ ಬನ್ನೂರು ವೆಂಕಪ್ಪಯ್ಯ,ತಾಯಿಯ ತಂದೆ ಪುತ್ತಿಗೆ ರಾಮಕೃಷ್ಣ ಜೋಯಿಸ(ಭಾಗವತರು), ಸೋದರ ಮಾವ ಪುತ್ತಿಗೆ ರಘುರಾಮ ಹೊಳ್ಳ ಇವರೆಲ್ಲರು ಯಕ್ಷಗಾನದ ಕಲಾಸಾಧಕರಾಗಿದ್ದು ಅವರ ಆದರ್ಶ ಮತ್ತು ಪ್ರೇರಣೆಯೊಂದಿಗೆ ಕಲಾಭಿರುಚಿಯನ್ನು ಬೆಳೆಸಿಕೊಂಡ ರಾಮಕೃಷ್ಣಮಯ್ಯರು ಮಾಂಬಾಡಿ ಸುಬ್ರಹ್ಮಣ್ಯ ಭಟ್ಟರಲ್ಲಿ ಭಾಗವತಿಕೆಯ ಅಭ್ಯಾಸ ಮಾಡಿರುವರು. +ಆರಂಭದಲ್ಲಿ ಕಟೀಲು ಮೇಳ - 3 ವರ್ಷ,ಬಪ್ಪನಾಡು ಮೇಳ - 1 ವರ್ಷ, ಅನಂತರ ಧರ್ಮಸ್ಥಳಮೇಳವನ್ನು ಸೇರಿದವರು ಈಗಾಗಲೇ 21 ವರ್ಷಗಳ ತಿರುಗಾಟವನ್ನು ಪೂರೈಸಿರುವರು. +ಮಳೆಗಾಲದಲ್ಲಿ ನಿಡ್ಲೆ ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿಯ ಭಾಗವತರಾಗಿ ಕಳೆದ 23 ವರ್ಷಗಳಿಂದ ತಿರುಗಾಟವನ್ನು ನಡೆಸುತ್ತಿರುವರು. +ಯಕ್ಷಗಾನದ ನಾಟ್ಯಾಭ್ಯಾಸವನ್ನು ಮಾಡಿರುವ ಇವರು ಪರಶುರಾಮ, ರುಕ್ಮಿಣಿ ಮೊದಲಾದ ಪುಂಡು ಹಾಗೂ ಸ್ತ್ರ ವೇಷಗಳನ್ನು ಮಾಡಿರುವರು. +ನಾಟ್ಯ ಮತ್ತು ಪಾತ್ರಚಿತ್ರಣದ ಬಗ್ಗೆ ಅನುಭವವಿರುವುದರಿಂದ ರಂಗದಲ್ಲಿ ಪಾತ್ರಕ್ಕೆ ತಕ್ಕಂತೆ ಹಾಡಬಲ್ಲವರು ಇವರಾಗಿದ್ದಾರೆ. +ಕೃಷಿಕ ಮನೆತನಕ್ಕೆ ಸೇರಿರುವ ಇವರು ಶ್ರೀಮತಿಶೀಲ ಎಂಬವರನ್ನು ವರಿಸಿ ಕುಮಾರಿ ಅನುಶ್ರೀ ಮತ್ತು ಕುಮಾರ ಅನಿರುದ್ಧ ಎಂಬ ಇಬ್ಬರು ಸುಪುತ್ರರನ್ನು ಪಡೆದಿದ್ದಾರೆ. +ಇವರ ಸಾಧನೆಗೆ ಪ್ರತಿಯಾಗಿ ಹೈದರಬಾದ್‌, ಕುಂದಾಪುರ, ಮೈಸೂರು, ಬೆಳಿಗಿರಿ,ರಂಗನಬೆಟ್ಟ, ಕೊಯಮುತ್ತೂರು, ಚಾಮರಾಜ ನಗರ ಮೊದಲಾದೆಡೆಯಲ್ಲಿ ಸಂಮಾನಗಳು ಸಂದಿವೆ. +ರಾಮ ಕುಲಾಲ್‌, ದಾಸನಡ್ಕ “ಶಂಕ ಕೆರೆ ಮನೆ”ಧರ್ಮತಡ್ಕ ಆಂಚೆ, ವಯಾ ಮಂಗಲ್ಪಾಡಿ ಕಾಸರಗೋಡು ತಾಲೂಕು ಜಿಲ್ಲೆ ರಾಜವೇಷ ಮತ್ತು ಬಣ್ಣದ ವೇಷಗಳ ಮುಖೇನ ಮನ್ನಣೆಗೆ ಪಾತ್ರರಾಗಿರುವ ಶ್ರೀ ರಾಮ ಕುಲಾಲ್‌ದಾಸನಡ್ಕ ಇವರು ಪ್ರಸ್ತುತ ಕಟೀಲು ಮೇಳದ ಬಣ್ಣದ ವೇಷಧಾರಿಯಾಗಿ ತಿರುಗಾಟವನ್ನು ನಡೆಸುತ್ತಾ ಇದ್ದಾರೆ. +ಕುಂಜ ಮೂಲ್ಯ ಮತ್ತು ಅಪ್ಪು ಹಂಗ್ಲು ದಂಪತಿಯ ಸುಪುತ್ರರಾಗಿ 1942ನೇ ವರ್ಷ ಧರ್ಮತಡ್ಕದಲ್ಲಿ ಜನಿಸಿದರು. +7ನೇ ತರಗತಿಯ ತನಕ ವಿದ್ಯಾಭ್ಯಾಸವನ್ನು ಪಡೆದಿರುವ ಇವರು ಯಕ್ಷಗಾನದ ಪ್ರಭಾವಕ್ಕೆ ಒಳಗಾಗಿ ಕಿರೀಟ ವೇಷಧಾರಿಯಾಗಿದ್ದ ಮಧೂರು ತಿಮ್ಮಪ್ಪರವರಲ್ಲಿ ನಾಟ್ಯಾಭ್ಯಾಸವನ್ನು ಮಾಡಿದರು. +18ನೇ ವರ್ಷದಿಂದಲೇ ತಿರುಗಾಟವನ್ನು ಆರಂಭಿಸಿದ ಇವರು ಕಟೀಲು, ಧರ್ಮಸ್ಥಳ,ಚೌಡೇಶ್ವರಿ, ಕೊಲ್ಲೂರು, ಉಪ್ಪಳ, ಸ್ವರ್ಣಾಡು ಮೇಳಗಳು ಸೇರಿದಂತೆ ಒಟ್ಟು 43 ವರ್ಷಗಳ ತಿರುಗಾಟವನ್ನು ಮಾಡಿರುವರು. +ಶುಂಭ, ರಾವಣ, ನರಕಾಸುರ, ಮೈರಾವಣ,ಭೀಮ, ಶೂರ್ಪನಖಾ, ತಾಟಕಿ ಮೊದಲಾದ ಬಣ್ಣದ ವೇಷದ ಪಾತ್ರಗಳನ್ನು ಈವಾಗ ನಿರ್ವಹಿಸುತ್ತಾ ಇದ್ದಾರೆ. +ಹಿಂದೆ ಕೌರವ, ದೇವೇಂದ್ರ, ಅರ್ಜುನ,ಶಿಶುಪಾಲ ಮೊದಲಾದ ರಾಜವೇಷದ ಪಾತ್ರಗಳನ್ನು ಕೂಡಾ ನಿರ್ವಹಿಸಿದ್ದಾರೆ. +ಹಳೆಯ ಶೈಲಿಯ ಬಗ್ಗೆ ಕಾಳಜಿವುಳ್ಳ ಮನೋಧರ್ಮ ಇವರದ್ದಾಗಿದೆ. +ಶ್ರೀಮತಿ ಲಕ್ಷ್ಮೀ ಎಂಬವರನ್ನು ವರಿಸಿರುವ ಇವರು ರುಕ್ಮಿಣಿ, ಮೋಹನ್‌, ಮತ್ತು ಚಂದ್ರಶೇಖರ ಬಿಎಸ್ಸಿಬಿಎಡ್‌ (ಅಧ್ಯಾಪಕರು) ಎಂಬ ಮೂವರು ಮಕ್ಕಳನ್ನು ಪಡೆದಿದ್ದಾರೆ. +ರಾಮ ಕುಲಾಲರ ಕಲಾ ಸಾಧನೆಗೆ ಪೂರಕವಾಗಿ ಪುತ್ತಿಗೆ ಮತ್ತು ಮಂಜೇಶ್ವರದ ಹೊಸಬೆಟ್ಟಿನಲ್ಲಿ ಕುಲಾಲಸಂಘದ ವತಿಯಿಂದ ಸಂಮಾನಗಳು ಸಂದಿವೆ. +ಚೆಂಡೆ ಮದ್ದಳೆಯ ಬಾರಿಸುವಿಕೆಯಲ್ಲಿ ನುರಿತರಾಗಿ ಕಲಾಸೇವೆಯನ್ನು ಮಾಡುತ್ತಾ ಜನಮನ್ನಣೆಗೆ ಒಳಗಾಗಿರುವ ಶ್ರಿ ರಾಘವ ಜೋಡುಕಲ್ಲು ಇವರು ಕಟೀಲು ಮೇಳದ ಹಿರಿಯ ಕಲಾವಿದರಾಗಿ ತಿರುಗಾಟವನ್ನು ನಡೆಸುತ್ತಾ ಇದ್ದಾರೆ. +ಅಪ್ಪಯ್ಯ ಪುರುಷ ಹಾಗೂ ಮುತ್ತು ದಂಪತಿಯ ಸುಪುತ್ರರಾಗಿ ಜೋಡುಕಲ್ಲಿನಲ್ಲಿ ಹುಟ್ಟಿದ ರಾಘವರಿಗೆ 67 ವರ್ಷಗಳಾಗಿವೆ. +ಪ್ರಾಥಮಿಕ ವಿದ್ಯಾಭ್ಯಾಸವನ್ನು ಪಡೆದಿರುವ ಇವರು ಕುದ್ರೆಕೂಡ್ಲು ರಾಂಭಟ್‌, ಕೃಷ್ಣಯ್ಯ ಬಲ್ಲಾಳ್‌ ಮತ್ತು ದಿವಾಣ ಭೀಮ ಭಟ್‌ ಇವರುಗಳ ಮಾರ್ಗದರ್ಶನದಲ್ಲಿ ಬೆಳೆದು ಬಂದವರಾಗಿದ್ದಾರೆ. +ಸುಂಕದಕಟ್ಟೆ ಮೇಳ - 3 ವರ್ಷ, ಕೊಲ್ದೂರುಮೇಳ - 3 ವರ್ಷ, ಧರ್ಮಸ್ಥಳ ಮೇಳ - 1ವರ್ಷ, ಉಪ್ಪಳ ಭಗವತಿ ಮೇಳ - 3 ವರ್ಷ,ಸುಬ್ರಹ್ಮಣ್ಯ ಮೇಳ - 1 ವರ್ಷ, ಕಟೀಲು ಮೇಳ -30 ವರ್ಷ ಹೀಗೆ ಸುದೀರ್ಥವಾದ ತಿರುಗಾಟದ ಅನುಭವವನ್ನು ಹೊಂದಿದ್ದಾರೆ. +ಅರ್ಥಧಾರಿ ಕೃಷ್ಣ ಪುರುಷ ಎಂಬವರ ಸಂಬಂಧಿಯಾಗಿರುವ ಇವರು ಹಲವಾರು ಹವ್ಯಾಸಿ ಕಲಾವಿದರಿಗೆ ಹಿಮ್ಮೇಳದ ಬಗ್ಗೆ ಮಾರ್ಗದರ್ಶನವನ್ನು ಮಾಡಿರುವರು. +ಶ್ರೀಮತಿ ದೇವಕಿ ಎಂಬವರನ್ನು ವರಿಸಿರುವ ಇವರಿಗೆ ಯಶೋದಾ, ಅನುಷಾ, ಪ್ರೇಮ,ಕನ್ಯಾಕುಮಾರಿ, ಗಿರೀಶ್‌, ಗಣೇಶ್‌ ಎಂಬ ಆರು ಮಂದಿ ಮಕ್ಕಳನ್ನು ಪಡೆದಿರುವರು. +ಇವರ ಕಲಾಸಾಧನೆಯ ಹಿರಿಮೆಗೆ ಫಲಶ್ರುತಿಯಾಗಿ ಕಿನ್ನಿಗೋಳಿ, ಹೊಸಂಗಡಿ, ಉಪ್ಪಳ, ಕೊಲಂಬೆ ಮುಂತಾದ ಕಡೆಗಳಲ್ಲಿ ಸ೦ಮಾನಗಳು ಸಂದಿವೆ. +ಹವ್ಯಾಸಿ ಬಳಗ ಕದ್ರಿಯ ದಶಮಾನ ಸಂಮಾನಕ್ಕೂ ಇವರು ಭಾಜನರಾಗಿದ್ದಾರೆ. +ಬಣ್ಣ ರಾಜ, ಪುಂಡು ವೇಷಗಳನ್ನು ಮಾಡುತ್ತಾ ಜನ ಮನ್ನಣೆಯನ್ನು ಪಡೆದಿರುವ ಶ್ರೀ ರಾಜಾರಾಮ್‌ಕುಲಾಲರು ಸುಂಕದಕಟ್ಟೆ ಮೇಳದ ಕಲಾವಿದರಾಗಿ ತಿರುಗಾಟವನ್ನು ನಡೆಸುತ್ತಾ ಇದ್ದಾರೆ. +ಲಿಂಗಪ್ಪ ಕುಲಾಲ್‌ ಮತ್ತು ಚೆನ್ನಕ್ಕ ದಂಪತಿಯ ಸುಪುತ್ರರಾಗಿ ಬಂದಾರು ಎಂಬಲ್ಲಿ ಹುಟ್ಟಿದರು. +40ವರ್ಷಗಳ ಮಯೋಮಾನಕ್ಕೆ ಅರ್ಹರಾದ ಇವರು ಕೀರ್ತಿಶೇಷ ಬಣ್ಣದ ವರಾಲಿಂಗರವರಲ್ಲಿ ನಾಟ್ಯಾಭ್ಯಾಸವನ್ನು ಮಾಡಿದ್ದಾರೆ. +ಸ್ವಂತ ಆಸಕ್ತಿಯ ಮೇರೆಗೆ ಮೇಳ ತಿರುಗಾಟ ಮಾಡುವ ಉದ್ದೇಶದಿಂದ ಮೊದಲಾಗಿ ಕಟೀಲು ಮೇಳವನ್ನು ಸೇರಿ 3 ವರ್ಷಗಳ ತಿರುಗಾಟವನ್ನು ಪೂರೈಸಿದರು. +ಅನಂತರ ಬಪ್ಪನಾಡು ಮೇಳದಲ್ಲಿ ಎರಡು ವರುಷಗಳ ತಿರುಗಾಟವನ್ನು ಪೂರೈಸಿ ಸುಂಕದಕಟ್ಟೆಯ ಮೇಳವನ್ನು ಸೇರಿದವರು 15ವರ್ಷಗಳ ತಿರುಗಾಟವನ್ನು ಪೂರೈಸಿದ್ದಾರೆ. +ಶುಂಭ, ರಾವಣ, ಕುಂಭ ಕರ್ಣ, ಬೀಮ,ವರಾಹ, ದಾರಿಕಾಸುರ, ಶಿಶುಪಾಲ, ಕೇಮರ ಬಲ್ಲಾಳ,ಮತ್ಸ್ಯ.,ಶೂರ್ಪನಖಾ, ತಾಟಕಿ, ಕಾಂತಾಬಾರೆ ಮೊದಲಾದ ಪಾತ್ರಗಳನ್ನು ನಿರ್ವಹಿಸಿದ್ದಾರೆ. +ಪ್ರಾಥಮಿಕ ಹಂತದ ವಿದ್ಯಾಭ್ಯಾಸವನ್ನು ಪಡೆದಿರುವ ಇವರು ಶ್ರೀಮತಿ ಯಮುನಾ ಎಂಬವರನ್ನು ವರಿಸಿ ಅಕ್ಷತಾ, ಪ್ರಸಾದ್‌, ಜಿತೇಶ್‌ಎಂಬ ಮಕ್ಕಳನ್ನು ಪಡೆದಿರುವರು. +ರಾಜಾರಾಮರ ಸಾಧನೆಯನ್ನು ಗುರುತಿಸಿ ಬಂದಾರು ಗ್ರಾಮದ ಕಲಾಭಿಮಾನಿಗಳು ಗೌರವದಿಂದ ಸಂಮಾನಿಸಿದ್ದಾರೆ. +ಪುಂಡು ವೇಷ ಮತ್ತು ಸ್ತ್ರೀ ವೇಷ, ರಾಜವೇಷ, ನಾಟಕೀಂತು ವೇಷಗಳನ್ನು ಮಾಡಿ ಕೀರ್ತಿಸಂಪನ್ನರಾಗಿರುವ ಶ್ರೀ ಲಕ್ಷ್ಮಣ ಗೌಡ ಬೆಳಾಲು ಇವರು ಧರ್ಮಸ್ಥಳ ಮೇಳದ ಕಲಾವಿದರಾಗಿ ತಿರುಗಾಟವನ್ನು ನಡೆಸುತ್ತಾ ಇದ್ದಾರೆ. +ದಿನಾಂಕ 1-1-1956ರಲ್ಲಿ ಚೀಂಕ್ರ ಗೌಡ ಮತ್ತು ಲಕ್ಷ್ಮೀ ದಂಪತಿಯ ಸುಪುತ್ರರಾಗಿ ಬೆಳಾಲಿನಲ್ಲಿ ಹುಟ್ಟಿದರು. +7ನೇ ತರಗತಿಯ ಶಾಲಾ ವಿದ್ಯಾಭ್ಯಾಸವನ್ನು ಪಡೆದಿರುವ ಇವರು ಸ್ವಂತ ಆಸಕ್ತಿಯ ಮೇರೆಗೆ ಯಕ್ಷಗಾನ ಕ್ಷೇತ್ರವನ್ನು ಪ್ರವೇಶಿಸಿದ್ದಾರೆ. +ಪಡ್ರೆ ಚಂದು ಮತ್ತು ಕೋಳ್ಕೂರು ರಾಮಚಂದ್ರರಾವ್‌ ಅವರಲ್ಲಿ ನಾಟ್ಯಾಭ್ಯಾಸವನ್ನು ಮಾಡಿ 1975ನೇ ವರ್ಷದಿಂದ ತಿರುಗಾಟವನ್ನು ಆರಂಭಿಸಿದರು. +ಕಟೀಲು ಮೇಳ - 6 ವರ್ಷ, ಪುತ್ತೂರು ಮೇಳ -7 ವರ್ಷ, ಸುಂಕದಕಟ್ಟೆ ಮೇಳ - 6 ವರ್ಷ, ಕದ್ರಿಮೇಳ - 2 ವರ್ಷ, ಕುಂಟಾರು ಮೇಳ - 3ವರ್ಷ, ಎಡನೀರು ಮೇಳ - 3 ವರ್ಷ ಹಾಗೂ ಧರ್ಮಸ್ಥಳ ಮೇಳ - 3 ವರ್ಷ ಹೀಗೆ ತಿರುಗಾಟವನ್ನು ನಡೆಸಿರುವರು. +ತುಳು ಹಾಗೂ ಕನ್ನಡ ಭಾಷೆಯಲ್ಲಿ ಪ್ರೌಢಿಮೆಯನ್ನು ಸಾಧಿಸಿರುವ ಇವರು ದೇವಿ,ಮಾಲಿನಿ, ಮೋಹಿನಿ, ದ್ರೌಪದಿ, ಭ್ರಮರಕುಂತಳೆ,ಪ್ರಮೀಳೆ, ವಿಷ್ಣು, ಅರ್ಜುನ, ಧರ್ಮರಾಯ ಮುಂತಾದ ಪಾತ್ರಗಳನ್ನು ನಿರ್ವಹಿಸಿದ್ದಾರೆ. +ಮಳೆಗಾಲದಲ್ಲಿ ಕೃಷಿಕರಾಗಿ ಶ್ರಮಿಸುವ ಇವರು ಶ್ರೀಮತಿ ಶಾರದಾ ಎಂಬವರನ್ನು ವರಿಸಿ, ಮಹೇಶ್‌(ಅಧ್ಯಾಪಕ) ಪ್ರವೀಣ್‌ (ಡಿಪ್ಲೊಮಾ ವಿದ್ಯಾರ್ಥಿ)ಸುಮನಾ (ಬಿ.ಎಸ್ಸಿ), ಶಶಿಕಲಾ (10ನೇ ತರಗತಿ)ಎಂಬ ನಾಲ್ಕು ಮಕ್ಕಳನ್ನು ಪಡೆದಿದ್ದಾರೆ. +ಇವರ ಸಾಧನೆಯನ್ನು ಗಮನಿಸಿ ಬೆಳಾಲಿನ ಸುಬ್ರಹ್ಮಣ್ಯ ಯಕ್ಷಗಾನ ಸಂಘವು ಗೌರವಿಸಿ ಸಂಮಾನಿಸಿದೆ. +ಸ್ತ್ರೀ ಪಾತ್ರಧಾರಿಯಾಗಿ ಕಲಾಸೇವೆಯನ್ನು ಮಾಡುತ್ತಿರುವ ಶ್ರೀ ಲಕ್ಷ್ಮಣ ಕಲ್ಲುಗುಡ್ಡೆಯವರು ಕಟೀಲು ಮೇಳದ ಕಲಾವಿದರಾಗಿ ತಿರುಗಾಟವನ್ನು ನಡೆಸುತ್ತಾ ಇದ್ದಾರೆ. +ದಿನಾಂಕ 20-6-1962ರಲ್ಲಿ ಸುಬ್ಬಣ್ಣ ಮತ್ತು ಶಿವಮ್ಮ ದಂಪತಿಯ ಸುಪುತ್ರರಾಗಿ ಕಲ್ಲುಗುಡ್ಡೆಯಲ್ಲಿ ಜನಿಸಿದರು. +7ನೇ ತರಗತಿಯ ವಿದ್ಯಾಭ್ಯಾಸವನ್ನು ಪಡೆದಿರುವ ಇವರು ಕಾಡುಮನೆ ರಾಮಣ್ಣ ಗೌಡ ಎಂಬವರ ಪ್ರೇರಣೆ ಮೇರೆಗೆ ಹವ್ಯಾಸಿ ಕಲಾವಿದರಾಗಿ ಬೆಳೆದು ಅನಂತರ ಮೇಳದ ತಿರುಗಾಟವನ್ನು ಆರಂಭಿಸಿದರು. +ಕಿರೀಟ ವೇಷಧಾರಿಯಾಗಿ ಮನ್ನಣೆ ಪಡೆದಿದ್ದ ತಣಿಯಪ್ಪ ಎಂಬವರ ಮೊಮ್ಮಗನಾಗಿರುವ ಇವರು 1985ರಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಲಲಿತಕಲಾಕೇಂದ್ರವನ್ನು ಸೇರಿ ಕೆ.ಗೋವಿಂದ ಭಟ್‌ ಮತ್ತು ಕರ್ಗಲು ವಿಶ್ವೇಶ್ವರಭಟ್ಟರಲ್ಲಿ ನಾಟ್ಯಾಭ್ಯಾಸವನ್ನು ಮಾಡಿದರು. +ಕಟೀಲು ಮೇಳವೊಂದರಲ್ಲೇ 18 ವರ್ಷಗಳ ತಿರುಗಾಟವನ್ನು ಪೂರೈಸಿರುವ ಇವರು ಮಾಲಿನಿ,ಶ್ರೀದೇವಿ, ಧರ್ಮರಾಯ, ವಿಷ್ಣು, ಕೃಷ್ಣ, ಶಲ್ಯ, ನಾರದ ಮೊದಲಾದ ಪಾತ್ರಗಳನ್ನು ನಿರ್ವಹಿಸಿದ್ದಾರೆ. +ನೂಜಿ ಬಾಳ್ತಿಲ ಕಾಲೇಜಿನ ವಿದ್ಯಾರ್ಥಿಗಳಿಗೆ ತರಬೇತಿಯನ್ನು ನೀಡಿರುವ ಇವರು ಶ್ರೀಮತಿ ಚಂದ್ರಾವತಿ ಎಂಬವರನ್ನು ವರಿಸಿ, ರೂಪಶ್ರೀ(ದ್ವಿತೀಯ ಪಿ.ಯು.ಸಿ.) ಮತ್ತು ಚೇತನ್‌ ಕುಮಾರ್‌(10ನೇ ತರಗತಿ) ಎಂಬ ಇಬ್ಬರು ಮಕ್ಕಳನ್ನು ಪಡೆದಿರುವರು. +ಚೆಂಡೆ-ಮದ್ದಳೆಯ ನುಡಿತ-ಬಡಿತಗಳಲ್ಲಿಕೈಚಳಕವನ್ನು ತೋರಿ ಪ್ರಸಿದ್ಧಿಗೇರಿರುವ ಕಲಾ ಸಾಧಕ ಶ್ರೀ ಲಕ್ಷ್ಮೀಶ ಅಮ್ಮಣ್ಣಯರು ಪ್ರಸ್ತುತ ಹೇಳಿಕೆಯ ಮೇರೆಗೆ ಕಲಾ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದಾರೆ. +ವಿಷ್ಣು ಅಮ್ಮಣ್ಣಾಯ ಮತ್ತು ಲಕ್ಷ್ಮೀ ಅಮ್ಮ ದಂಪತಿಯ ಸುಪುತ್ರರಾಗಿ ಲಕ್ಷ್ಮೀಶ ಅಮ್ಮಣ್ಣಾಯರು ಜನಿಸಿದರು. +ವಿದ್ಯಾಭ್ಯಾಸವನ್ನು ಪಡೆದಿರುವ ಇವರು ಬಾಲ್ಯದಿಂದಲೇ ಯಕ್ಷಗಾನ ಕಲೆಯತ್ತ ಆಕರ್ಷಿತರಾಗಿದ್ದರು. +ತಂದೆಯಯವರು ಉತ್ತಮ ಭಾಗವತರಾಗಿ,ಚೆಂಡೆ ಮದ್ದಳೆಯ ವಾಕದರಾಗಿ ಕಲಾ ಸೇವೆಯನ್ನು ಮಾಡಿರುವವರಲ್ಲದೆ ಅರ್ಥಧಾರಿಯಾಗಿಯೂ ಮನ್ನಣೆಯನ್ನು ಪಡೆದಿದ್ದರು. +ಸಹೋದರ ಮೋಹನ ಅಮ್ಮಣ್ಣಾಯರು ಚಿತ್ರಕಲಾವಿದ ಮತ್ತು ಮೃದಂಗ ವಿದ್ವಾನ್‌ ಆಗಿದ್ದಾರೆ. +ಇನ್ನೋರ್ವ ಸಹೋದರ ರಘುರಾಂ ಸಂಗೀತ ಹಾಡುಗಾರರಾಗಿರುವುದರೊಂದಿಗೆ ವಯೋಲಿನ್‌ ವಿದ್ವಾನ್‌ ಆಗಿದ್ದಾರೆ. +ಇದೇ ಹಿನ್ನೆಲೆ ಸಹೋದರಿಯಾದ ರಾಧಿಕಾ ಅವರಿಗೂ ಇದೆ. +ಚಿಕ್ಕ ತಂದೆಯ ಸುಪುತ್ರರಾಗಿರುವ ದಿನೇಶ ಅಮ್ಮಣ್ಣಯರು ಪ್ರಸಿದ್ಧ ಭಾಗವತರಾಗಿದ್ದಾರೆ. +ಇಂತಹ ಹಿನ್ನೆಲೆವುಳ್ಳ ಮನೆತನದಲ್ಲಿ ಹುಟ್ಟಿದ ಲಕ್ಷ್ಮೀಶ ಅಮ್ಮಣ್ಣಯರು ಯಕ್ಷಗಾನ ಕಲೆಯಲ್ಲಿ ಪಳಗಿ ಬೆಳೆದು ನಿಂತರು. +ಮುಂಡ್ರುಪ್ಪಾಡಿ ಶ್ರೀಧರರಾವ್‌ ಇವರಿಂದ ಹಿಮ್ಮೇಳ ವಾದನದ ಅಭ್ಯಾಸವನ್ನು ಮಾಡಿದ ಇವರು ಧರ್ಮಸ್ಥಳ ಮೇಳದಲ್ಲಿ ಮೊದಲ 3 ವರ್ಷದ ತಿರುಗಾಟವನ್ನು ಪೂರೈಸಿದರು. +ಆ ಮೇಲೆ ಪುತ್ತೂರುಮೇಳ 1ವರ್ಷ, ಅರುವ ಮೇಳ 1ವರ್ಷ, ಬಪ್ಪನಾಡು ಮೇಳ -2ವರ್ಷ, ಕುಂಬ್ಳೈಮೇಳ-5ವರ್ಷ, ಕರ್ನಾಟಕ ಮೇಳ-1 ವರ್ಷ, ಕದ್ರಿಮೇಳ 7 ವರ್ಷ,ಮಂಗಳಾದೇವಿ ಮೇಳ 2 ವರ್ಷ ಹೀಗೆ ತಿರುಗಾಟವನ್ನು ಮಾಡಿರುವರು. +ನಾಟ್ಯವನ್ನು ಅಭ್ಯಾಸ ಮಾಡಿರುವ ಇವರು ಅಭಿಮನ್ಯು, ವರುಣ, ಮಾರುತ,ಮೊದಲಾದ ಪಾತ್ರಗಳನ್ನು ಮಾಡಿರುವರು. +ಶ್ರೀಮತಿ ಗೀತಾ ಎಂಬವರನ್ನು ವರಿಸಿರುವ,ಲಕ್ಷ್ಮೀಶ ಅಮ್ಮಣ್ಣಾಂತುರು ವಿಭಾರಾಣಿ,ಗುರುಮೂರ್ತಿ, ಶುಭಾ ಎಂಬ ಮೂವರು ಮಕ್ಕಳನ್ನು ಪಡೆದಿದ್ದಾರೆ. +ಹವ್ಯಾಸಿ ಕಲಾವಿದರಿಗೆ ಹಿಮ್ಮೇಳದ ಬಗ್ಗೆ ತರಬೇತಿ ನೀಡಿರುವ ಇವರಿಗೆ ಎಡನೀರು,ವುಂಗಳೂರು ಮೂದಲಾದೆಡೆಯಲ್ಲಿ ಸಂಮಾನಗಳಾಗಿವೆ. +ರಾಜವೇಷ ಮತ್ತು ಬಣ್ಣದ ವೇಷಗಳಲ್ಲಿ ಪ್ರೌಢಿಮೆಯನ್ನು ಸಾಧಿಸಿ ಕೀರ್ತಿವಂತರಾಗಿರುವ ಶ್ರೀಲಕ್ಷ್ಮಣ ಕೋಟ್ಯಾನ್‌ ಇವರು ಕಟೀಲು ಮೇಳದ ಮುಖ್ಯ ವೇಷಧಾರಿಯಾಗಿ ತಿರುಗಾಟವನ್ನು ನಡೆಸುತ್ತಾ ಇದ್ದಾರೆ. +ಚಿನ್ನಯ ಪೂಜಾರಿ ಮತ್ತು ಮುತ್ತು ಪೂಜಾರ್ತಿ ದಂಪತಿಯ ಸುಪುತ್ರರಾಗಿ 1953ನೇ ವರ್ಷದಲ್ಲಿ ಮೂಡುಪೆರಾರದಲ್ಲಿ ಜನಿಸಿದರು. +ಪ್ರಾಥಮಿಕ ಹಂತದ ವಿದ್ಯಾಬ್ಯಾಸವ ನನ್ನು ಪಡೆದಿರುವ ಇವರು ಬಾಲ್ಯದಿಂದಲೇ ಯಕ್ಷಗಾನದತ್ತ ಆಕರ್ಷಿತರಾಗಿದ್ದರು. +ಕೀರ್ತಿಶೇಷ ಕಲಾವಿದರಾಗಿರುವ ಕ್ರಿಶನ್‌ ಬಾಬು ಇವರಲ್ಲಿ ನಾಟ್ಯಾಭ್ಯಾಸವನ್ನು ಮಾಡಿರುವ ಇವರು 6 ವರ್ಷಗಳ ತನಕ ಮುಂಬಯಿಯ ಶ್ರೀಗುರು ನಾರಾಯಣ ಯಕ್ಷಗಾನ ಮಂಡಳಿಯಲ್ಲಿ ಕಲಾಸೇವೆಯನ್ನು ಮಾಡಿದ್ದರು. +ಈಗಾಗಲೇ ಕಟೀಲು ಮೇಳದಲ್ಲಿ 22 ವರ್ಷಗಳ ತಿರುಗಾಟವನ್ನು ಪೂರೈಸಿರುವ ಲಕ್ಷ್ಮಣರು ಸುಂಕದಕಟ್ಟೆ, ತಲಕಳ ಮತ್ತು ಅಡ್ಯಾರು ಮೇಳಗಳಲ್ಲಿ ಒಂದೊಂದು ವರ್ಷಗಳ ತಿರುಗಾಟವನ್ನು ಪೂರೈಸಿರುವರು. +ಮಹಿಷಾಸುರ, ಶುಂಭ, ಭೀಮ, ಶೂರ್ಪನಖಾ,ಕುಂಭಕರ್ಣ, ಮಧೂ-ಕೈಟಭ, ಅರುಣಾಸುರ,ಸುಬಾಹು-ಮಾರೀಚ, ಹನೂಮಂತ ಮುಂತಾದ ಪಾತ್ರಗಳನ್ನು ಉತ್ತಮವಾಗಿ ನಿರ್ವಹಿಸುತ್ತಾ ಇರುವ ಇವರು ಯಕ್ಷಗಾನ ಕಲಾಸಾಧನೆಯಲ್ಲಿ ತನ್ನದೇ ಆದ ವರ್ಚಸ್ಸನ್ನು ತೋರುತ್ತಾ ಇದ್ದಾರೆ. +ಶ್ರೀಮತಿ ಚಂದ್ರಾವತಿ ಎಂಬವರನ್ನು ವರಿಸಿರುವ ಲಕ್ಷ್ಮಣ ಕೋಟ್ಯಾನರು ಕುಮಾರಿ ಮಂಜುಳಾ(ಎಂ.ಎಸ್‌.ಸಿ) ಎಂಬ ಸುಪುತ್ರಿಯನ್ನು ಪಡೆದಿದ್ದಾರೆ. +ಕಿನ್ನಿಗೋಳಿಯ ಕಲಾಭಿಮಾನಿಗಳು ಇವರ ಕಲಾಸಾದನೆಯನ್ನು ಗುರುತಿಸಿ ಸಂಮಾನಿಸಿದ್ದಾರೆ. +ಯಕ್ಷಗಾನದ ಭಾಗವತರಾಗಿ 24 ವರ್ಷಗಳ ವೃತ್ತಿಯ ಅನುಭವವನ್ನ್ನು ಪಡೆದು ಕೀರ್ತಿವಂತರಾಗಿರುವ ಶ್ರೀಮತಿ ಲೀಲಾವತಿ ಬೈಪಾಡಿತ್ತಾಯರ ಕಲಾ ಸೇವೆ ಅಪೂರ್ವವೆನಿಸಿದೆ. +ಮಂಡರೀಕಾಕ್ಷ ಹೆಬ್ಬಾರ್‌ ಮತ್ತು ಮಹಾಲಕ್ಷ್ಮೀ ಅಮ್ಮ ದಂಪತಿಯ ಸುಪುತ್ರರಾಗಿ ದಿ.23-5-1947ರಂದು ಕಾಸರಗೋಡಿನ ಮಧೂರು ಎಂಬಲ್ಲಿ ಜನಿಸಿದರು. +ಹಿಂದಿ ವಿಶಾರದ ಪದವಿಯನ್ನು ಪಡೆದಿರುವ ಇವರು ಮಧೂರು ಪದ್ಮನಾಭ ಸರಳಾಯರಲ್ಲಿ ಸಂಗೀತಾಭ್ಯಾಸ ಮಾಡಿದ್ದರು. +ಆಮೇಲೆ ವಿವಾಹದ ನಂತರ ಪತಿ ಮಧ್ದೆಗಾರ ಕೆ.ಹರಿನಾರಾಯಣ ಬೈಪಾಡಿತ್ತಾಯ ರಿಂದ ಭಾಗವತಿಕೆಯ ಅಭ್ಯಾಸವನ್ನು ಮಾಡಿದರು. +ಪುತ್ತೂರು ಮೇಳ - 3 ವರ್ಷ, ಸುಬ್ರಹ್ಮಣ್ಯಮೇಳ - 3 ವರ್ಷ, ಅರುವ ಮೇಳ - 10 ವರ್ಷ,ಕುಂಬ್ಳೆ ಮೇಳ - 1 ವರ್ಷ, ಬಪ್ಪನಾಡು ಮೇಳ -1 ವರ್ಷ, ತಲಕಳ ಮೇಳ - 6 ವರ್ಷ ಹೀಗೆ ಪತಿಯ ಜೊತೆಯಲ್ಲಿ ಪತಿಯ ಪ್ರೇರಣೆಯಂತೆ ಕಲಾಸೇವೆಯನ್ನು ಮಾಡಿ ಪುರುಷ ಪ್ರಧಾನವಾದ ಯಕ್ಷಗಾನ ಕಲೆಯಲ್ಲಿ ಮಹಿಳೆಯೂ ಕೂಡಾ ಸಮರ್ಥವಾಗಿ ಕಾರ್ಯ ನಿರ್ವಹಿಸಬಲ್ಲಳು ಎಂಬುವುದನ್ನು ತೋರಿಸಿಕೊಟ್ಟರು. +ಗುರುಪ್ರಸಾದ್‌ ಬೈಪಾಡಿತ್ತಾಯ (ವ್ಯಾಪಾರದಉದ್ಯೋಗ), ಅವಿನಾಶ್‌ ಬೈಪಾಡಿತ್ತಾಯ (ವೆಬ್‌ಸೈಟ್‌ಉದ್ಯೋಗಿ) ಎಂಬ ಈರ್ವರು ಮಕ್ಕಳನ್ನು ಪಡೆದಿದ್ದಾರೆ. +ಅವಿನಾಶ್‌ ಬೈಪಾಡಿತ್ತಾಯರು ಮದ್ದಳೆ ಮತ್ತು ಚೆಂಡೆಯ ನುಡಿತ ಬಡಿತಗಳ ಅಭ್ಯಾಸ ಮಾಡಿ ಪ್ರವೀಣರಾಗಿದ್ದಾರೆ. +ಧರ್ಮಸ್ಥಳದ ಲಲಿತ ಕಲಾ ಕೇಂದ್ರದಲ್ಲಿ 10ವರ್ಷಗಳ ಪರ್ಯಂತ ಗುರುವಾಗಿ ಸೇವೆಯನ್ನು ಸಲ್ಲಿಸಿರುವ ಇವರು ಹಲವೆಡೆಯಲ್ಲಿ ಭಾಗವತಿಕೆಯ ತರಬೇತಿಯನ್ನು ನಡೆಸಿದ್ದಾರೆ. +ಅಬ್ಬಕ್ಕ ಪುರಸ್ಕಾರ,ಯಕ್ಷ ಪ್ರಮೀಳ ಪ್ರಶಸ್ತಿ, ಆಗರಿ ಪ್ರಶಸ್ತಿ, ರಾಮ ಗಾಣಿಗಪ್ರಶಸ್ತಿ, ಸಾಹಿತ್ಯ ಸಮ್ಮೇಳನದ ಸಂಮಾನಗಳು ಹೀಗೆ ಹಲವಾರು ಗೌರವಗಳಿಗೆ ಪಾತ್ರರಾಗಿರುವ ಇವರು ಚಲನಚಿತ್ರ ಗ್ರಹಣಕ್ಕೆ ಭಾಗವತಿಕೆಯನ್ನು ಮಾಡಿದ್ದಾರೆ. +ಧಿಗಿಣವೇ ಪ್ರಧಾನವಾಗಿದ್ದು ಪುಂಡುವೇಷ ಮತ್ತು ರಾಜವೇಷಗಳನ್ನು ಮಡುವ ಶ್ರೀ ವೆಂಕಟೇಶ ಆಚಾರ್ಯ ಕಲ್ಪಗುಂಡಿ ಇವರು ಪ್ರಸ್ತುತ ಹೊಸನಗರ ಮೇಳದ ಕಲಾವಿದರಾಗಿ ತಿರುಗಾಟವನ್ನು ನಡೆಸುತ್ತಾ ಇದ್ದಾರೆ. +ಲಿಂಗಪ್ಪ ಆಚಾರ್ಯ ಮತ್ತು ಭವಾನಿ ದಂಪಶಿಯ ಸುಪುತ್ರರಾಗಿ ಕಲ್ಲು ಗುಂಡಿಯಲ್ಲಿ ಜನಿಸಿದ ವೆಂಕಟೇಶ ಆಚಾರ್ಯರಿಗೆ 38 ವರ್ಷಗಳು ಸಂದಿವೆ. +ಪ್ರಾಥಮಿಕ ಹಂತದ ವಿದ್ಯಾಭಾಸವನ್ನು ಪಡೆದಿರುವ ಇವರನ್ನು ಯಕ್ಷಗಾನದ ವೇಶಧಾರಿಯಗುವಂತೆ ದೊಡ್ಡಪ್ಪನಾದ ಮರ್ದಾಲ ಕೃಷ್ಣಪ್ಪ ಆಚಾರ್ಯರು ಪ್ರೋತ್ಸಾಹಿಸಿದರು. +13ನೇ ವಯಸ್ಸಿನಿಂದ ಪಾತ್ರ ನಿರ್ವಹಣೆ ಮಾಡಲಾರಂಭಿಸಿದ ಇವರು ಧರ್ಮಸ್ಥಳ ಕ್ಷೇತ್ರದ ಲಲಿತಕಲಾ ಕೇಂದ್ರದಲ್ಲಿ ಕೆ.ಗೋವಿಂದ ಭಟ್‌ ಮತ್ತು ಕರ್ಗಲ್ಲು ವಿಶ್ವೇಶ್ವರ ಭಟ್ಟರಿಂದ ನಾಟ್ಯಾಭ್ಯಾಸವನ್ನು ಮಾಡಿದರು. +ಆಮೇಲೆ ಕಟೀಲು ಮೇಳವನ್ನು ಸೇರಿ 18 ವರ್ಷಗಳ ತಿರುಗಾಟವನ್ನು ಮಾಡಿರುವ ಇವರು ಇತ್ತೀಚೆಗಿನ 3 ವರ್ಷಗಳಿಂದ ಹೊಸನಗರ ಮೇಳದ ಕಲಾವಿದರಾಗಿ ತಿರುಗಾಟವನ್ನು ನಡೆಸುತ್ತಾ ಇದ್ದಾರೆ. +ಚಂಡ-ಮುಂಡರು, ಯಕ್ಷ,ವೃಷಕೇತು, ಚಂಡ-ಪ್ರಚಂಡರು, ಅಭಿಮನ್ಯು, ವಿದ್ಯನ್ಮಾಲಿ, ದೂಮ್ರಾಕ್ಷ,ಹುಂಡ-ಪುಂಡರು, ಕಮಲಗಂಧಿನಿ, ದಂಡನಾಥೆ,ಬಾಲಸರಸ್ವತಿ, ಮೊದಲಾದ ಪಾತ್ರ ನಿರ್ವಹಿಸಿದ್ದಾರೆ. +ಚೆಂಡೆ ಮದ್ದಳೆ ಬಾರಿಸುವಿಕೆಯ ಆಸಕ್ತಿವುಳ್ಳ ಇವರು ಸಂಪಾಜೆ ಮತ್ತು ಮಾಣಿಯಲ್ಲಿನ ಶಾಲೆಗಳಲ್ಲಿ ತರಬೇತಿಯನ್ನು ನೀಡಿದ್ದಾರೆ. +ಶ್ರೀಮತಿ ಸುಧಾ ಎಂಬವರನ್ನು ವರಿಸಿರುವ ಇವರು ಪುನೀತ್‌ಕುಮಾರ್‌ ಎಂಬ ಸುಪುತ್ರನನ್ನು ಪಡೆದಿದ್ದಾರೆ. +ಉತ್ತಮವಾದ ಮಾತು ಮತ್ತು ನಾಟ್ಯಶೈಲಿಯಿಂದ ಯಕ್ಷಗಾನದ ಕಲಾ ಕ್ಷೇತ್ರಕ್ಕೆ ತನ್ನದೇ ಆದ ಕೊಡುಗೆಯನ್ನು ನೀಡಿ ಪ್ರಸಿದ್ಧರಾದ ಪಾತಾಳ ವೆಂಕಟರಮಣ ಭಟ್ಟರು ಧರ್ಮಸ್ಥಳ ಮೇಳದ ನಿವೃತ್ತ ಕಲಾವಿದರಾಗಿದ್ದಾರೆ. +8-11-1993ರಲ್ಲಿ ರಾಮಭಟ್ಟ ಹಾಗೂ ಹೇಮಾವತಿ ದಂಪತಿಯ ಸುಪುತ್ರರಾಗಿ ಪುತ್ತೂರು ಕಬಕದ ಬ್ಳೆಪದವಿನಲ್ಲಿ ಜನಿಸಿದರು. +ಕಾಂಚನ ಕೃಷ್ಣಭಟ್‌ ಮತ್ತು ಮಾಣಂಗಾವಿ ಕೃಷ್ಣ ಭಟ್ಟರ ನೇತೃತ್ವದಲ್ಲಿ ನೃತ್ಯಾಭ್ಯಾಸ ಮತ್ತು ರಂಗಾನುಭವವನ್ನು ಸಂಪಾದಿಸಿ ಬೆಳೆದರು. +ಕಾಂಚನ ಯಕ್ಷಗಾನ ನಾಟಕ ಕಂಪೆನಿಯಲ್ಲಿ ಸ್ತ್ರೀ ಪಾತ್ರಧಾರಿಯಾಗಿ ಬೆಳೆದು ಮುಂದಕ್ಕೆ ಸೌಕೂರು,ಮೂಲ್ಕಿ ಸುರತ್ಕಲ್‌ ಮತ್ತು ಧರ್ಮಸ್ಥಳ ಮೇಳಗಳಲ್ಲಿ ಮೂವತ್ತು ವರ್ಷಗಳ ಕಲಾಸೇವೆಯನ್ನು ಮಾಡಿ ಕೀರ್ತಿವಂತರಾಗಿರುವರು. +ಸುಭದ್ರೆ, ಚಿತ್ರಾಂಗದೆ, ಮೇನಕೆ, ದಾಕ್ಚಾಯಿಣಿ,ದ್ರೌಪದಿ, ಶ್ರೀದೇವಿ ಮೊದಲಾದ ಪಾತ್ರಗಳನ್ನು ಮಾಡಿರುವ ಇವರು ಬಾವಪೂರ್ಣವಾದ ಅಭಿನಯವನ್ನು ತೋರಿ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾಗಿರುವರು. +ಸ್ತ್ರೀ ಪಾತ್ರಗಳ ಗೌರವಕ್ಕೆ ತಕ್ಕಂತೆ ನಟಿಸ ಬಲ್ಲ ಪ್ರತಿಭೆ ಇವರಲ್ಲಿ ರಕ್ತಗತವಾಗಿದೆ. +ಯಕ್ಷಗಾನದ ಕಮ್ಮಟಗಳಲ್ಲಿ ಸ್ತ್ರೀ ಪಾತ್ರದ ವೇಷ-ಭೂಷಣ, ನಾಟ್ಯ ಹಾಗೂ ಮಾತಿನ ಶೈಲಿಯ ಬಗ್ಗೆ ಪ್ರಾತ್ಯಕಿಕ್ಷೆಗಳನ್ನು ನೀಡಿರುವ ಪಾತಾಳ ವೆಂಕಟರಮಣ ಭಟ್ಟರು ಬೇಲೂರಿನ ಶಿಲಾಬಾಲಿಕೆಯರ ಅಲಂಕಾರ ವಿನ್ಯಾಸದಿಂದ ಪ್ರಭಾವಿತರಾಗಿ ಸ್ತ್ರೀ ಪಾತ್ರಕ್ಕೆ ತನ್ನದೇ ಆದ ಮಾದರಿಯನ್ನು ನೀಡಿದ್ದಾರೆ. +ನಾಡಸಂಸ್ಕೃತಿಯನ್ನು ಬಿಂಬಿಸುವ ಈ ಮಾದರಿಯನ್ನು ಇವರ ಸುಪುತ್ರ ಸ್ತ್ರೀ ಪಾತ್ರಧಾರಿಯಾದ ಅಂಬಾಪ್ರಸಾದರು ಅನುಸರಿಸುತ್ತಿದ್ದಾರೆ. +ಶ್ರೀಮತಿ ಪರಮೇಶ್ವರಿ ಎಂಬವರನ್ನು ವರಿಸಿ ಅಂಬಾಪ್ರಸಾದ್‌, ಶ್ರೀರಾಮ್‌, ಹೇಮಲತಾ, ಸುಕನ್ಯ,ವಂದ್ಯ, ಜಯಲಕ್ಷ್ಮಿ ಎಂಬ ಎರಡು ಗಂಡು ಮತ್ತು ನಾಲ್ಕು ಹೆಣ್ಣು ಮಕ್ಕಳನ್ನು ಪಡೆದಿರುವರು. +ಇವರ ಸಾಧನೆಗೆ ಪ್ರತಿಫಲವಾಗಿ ರಾಜ್ಯೋತ್ಸವ ಪ್ರಶಸ್ತಿ, ಹವ್ಯಾಸಿ ಬಳಗ ಕದ್ರಿಯ ದಶಮಾನ ಸಂಮಾನ ಮುಂತಾದುವುಗಳಲ್ಲದೆ ಹತ್ತು ಹಲವೆಡೆಗಳಲ್ಲಿ ಅಭಿಮಾನಿಗಳಿಂದ ಗೌರವ- ಸಂಮಾನಗಳನ್ನು ಪಡೆದು ಕೀರ್ತಿವಂತರಾಗಿದ್ದಾರೆ. +ಶ್ರೀ ಸಾಲಿಗ್ರಾಮ ಮೇಳದ ಕಲಾವಿದರಾಗಿ ತಿರುಗಾಟವನ್ನು ನಡೆಸುತ್ತಿರುವ ಶ್ರೀ ಸಿದ್ಧಕಟ್ಟೆ ವಿಶ್ವನಾಥ ಶೆಟ್ಟರು ಅರ್ಥಧಾರಿಯಾಗಿಯೂ,ವೇಷಧಾರಿಯಾಗಿಯೂ ಜನಮನ್ನಣೆಯನ್ನು ಪಡೆದಿದ್ದಾರೆ. +ಕೊರಗ ಶೆಟ್ಟಿ ಮತ್ತು ರೇವತಿ ಕೆ.ಶೆಟ್ಟಿ ದಂಪತಿಯ ಸುಪುತ್ರರಾಗಿ ಬಂಟ್ವಾಳ ತಾಲೂಕಿನ ಅಜ್ಜಿಬೆಟಿನಲ್ಲಿ 24-7-1957ರಂದು ಇವರು ಜನಿಸಿದರು. +ಪದವಿಪೂರ್ವ ಹಂತದ ವಿದ್ಯಾಭ್ಯಾಸವನ್ನು ಪಡೆದಿರುವ ಇವರು ಬಾಲ್ಯದಿಂದಲೇ ಯಕ್ಷಗಾನ ಕಲೆಯ ಬಗ್ಗೆ ಆಸಕ್ತಿ ಹುಟ್ಟಿದ ಕಾರಣದಿಂದ ಕಲಾವಿದರಾಗಿ ಬೆಳೆದರು. +ಕಾವೂರು ಕೇಶವ ಇವರಲ್ಲಿ ನಾಟ್ಯಾಭ್ಯಾಸವನ್ನು ಮಾಡಿರುವ ವಿಶ್ವನಾಥ ಶೆಟ್ಟರು ಕಟೀಲು ಮೇಳ-1ವರ್ಷ, ಕದ್ರಿ ಮೇಳ-8 ವರ್ಷ, ಕರ್ನಾಟಕ ಮೇಳ-2 ವರ್ಷ, ಮಂಗಳಾದೇವಿ ಮೇಳ-5 ವರ್ಷ ಹಾಗೂ ಸಾಲಿಗ್ರಾಮ ಮೇಳ-15 ವರ್ಷ ಒಟ್ಟು 31 ವರ್ಷಗಳ ಮೇಳ ತಿರುಗಾಟದ ಅನುಭವವನ್ನು ಸಂಪಾದಿಸಿದ್ದಾರೆ. +ಪುಂಡು ವೇಷ ಮತ್ತು ಪೋಷಕ ಪಾತ್ರಗಳನ್ನು ಮಾಡಿರುವ ಇವರು ಸುಧನ್ವ ಕೃಷ್ಣ ವಾಮನ, ರಾಮ,ವಾಲ್ಮೀಕಿ, ಶಲ್ಯ, ಭೀಷ್ಮ ಸಂಜಯ, ಧರ್ಮರಾಯ,ಪರಶುರಾಮ ಮುಂತಾದ ಪಾತ್ರಗಳನ್ನು ನಿರ್ವಹಿಸಿದ್ದಾರೆ. +ಆಕರ್ಷಣೀಯವಾದ ಮಾತಿನ ಶೈಲಿಯಿಂದಲೇ ಪಾತ್ರಗಳಿಗೆ ಜೀವ ತುಂಬಿ ಪ್ರೇಕ್ಷಕರ ಮನವನ್ನು ತಣಿಸಬಲ್ಲ ವ್ಯಕ್ತಿತ್ವ ಇವರಲ್ಲಿದೆ. +ತಾಳಮದ್ಬಳೆಂತು ಅರ್ಥಧಾರಿಯಾಗಿ ನಾಡಿನಾದ್ಯಂತ ಮನ್ನಣೆಯನ್ನು ಪಡೆದಿರುವ ಇವರು ಪ್ರಸಂಗಕರ್ತರಾಗಿಯೂ ಜನಮನ್ನಣೆಯನ್ನು ಪಡೆದಿದ್ದಾರೆ. +ಜಾಣಕ್ಕ ತಂತ್ರ, ವಿಷಮ ಸಮರಂಗ ಮುತಾದ ಪ್ರಸಂಗಗಳನನ್ನು ಇಲ್ಲಿ ಉಲ್ಲೇಖಿಸಬಹುದಾಗಿದೆ. +ಭಾಷೆಯ ಬಗ್ಗೆ ಹಿಡಿತವಿದ್ದು ಸಾಹಿತ್ಯ ಸೌಂದರ್ಯವನ್ನು ಅರ್ಥಗಾರಿಕೆಯಲ್ಲಿ ಇವರು ಮೆರೆಸುವಂತೆ, ಪದ್ಯ ರಚನೆಯಲ್ಲೂ ಮೆರೆಸಿ ಸತ್ಕೀರ್ತಿಗೆ ಪಾತ್ರರಾಗಿದ್ದಾರೆ. +ಶೆಟ್ಟಿ(ಪ್ರಾಧ್ಯಾಪಕ), ಭರತ್‌ ರಾಜ್‌ ವಿ.ಶೆಟ್ಟಿ ಎಂಬ ಮೂವರು ಮಕ್ಕಳನ್ನು ಪಡೆದಿದ್ದಾರೆ. +ಇವರ ಸಾಧನೆಗೆ ಪ್ರತಿಫಲವಾಗಿ ಮಂಗಳೂರು, ಮುಂಬಯಿ,ಬೆಂಗಳೂರು ಹಾಗೂ ಊರಿನ ಹಲವೆಡೆಯಲ್ಲಿ ಸಂಮಾನ ಪುರಸ್ಕಾರಗಳು ಸಂದಿವೆ. +ರಾಜವೇಷ ಮತ್ತು ಬಣ್ಣದ ವೇಷಗಳನ್ನು ಮಾಡುತ್ತಾ ಕಟೀಲು ಮೇಳದ ಕಲಾವಿದರಾಗಿ ಮನ್ನಣೆಗೆ ಒಳಗಾಗಿರುವ ಶ್ರೀವಿಶ್ವನಾಥ ನಾಯಕ್‌ಕಾರಿಂಜ ಇವರು ತಾಳಮದ್ದಳೆಯಲ್ಲೂ ಅರ್ಥಮಾತಾಡುವವರಾಗಿದ್ದಾರೆ. +ಶ್ರೀನಿವಾಸ ನಾಯಕ್‌ ಮತ್ತು ಗುಲಾಬಿ ದಂಪಶಿಯ ಸುಪುತ್ರರಾಗಿ 30-11-1969ರಲ್ಲಿ ನೆಲ್ಲಿಗುಡ್ಡೆ ಮನೆಯೊಳಗೆ ಜನಿಸಿದರು. +ಹತ್ತನೆ ತರಗತಿಯ ತನಕ ಶಾಲಾ ವಿದ್ಯಾಭ್ಯಾಸವನ್ನು ಪಡೆದಿರುವ ಇವರು ಯಕ್ಷಗಾನದ ಪರಿಸರಕ್ಕೆ ಸೇರಿದವರಾಗಿದ್ದ ಕಾರಣ ಬಾಲ್ಯದಿಂದಲೇ ಯಕ್ಷಗಾನದತ್ತ ಆಕರ್ಷಿತರಾಗಿದ್ದರು. +1992ರಲ್ಲಿ ಧರ್ಮಸ್ಥಳದ ಲಲಿತಕಲಾ ಕೇಂದ್ರವನ್ನು ಸೇರಿದ ಇವರು ಕೋಳ್ಯೂರು ರಾಮಚಂದ್ರರಾವ್‌ಅವರಲ್ಲಿ ನಾಟ್ಯಾಭ್ಯಾಸವನ್ನು ಮಾಡಿ 21ನೇವರ್ಷದಿಂದಲೇ ರಂಗ ಪ್ರವೇಶ ಮಾಡಿದರು. +ಮೊದಲ ವರ್ಷ ತಲಕಳ ಮೇಳದಲ್ಲಿ ತಿರುಗಾಟವನ್ನು ಮಾಡಿದ ಇವರು ಆಮೇಲೆ ಕಟೀಲು ಮೇಳವನ್ನು ಸೇರಿ ಈಗಾಗಲೇ 17ವರ್ಷಗಳ ತಿರುಗಾಟವನ್ನು ಪೂರೈಸಿದ್ದಾರೆ. +ದೇವೇಂದ್ರ,ಅರ್ಜುನ, ಅಕ್ರೂರ ಮಯೂರ ಧ್ವಜ, ತಾರಕಾಸುರ,ಶೂರ್ಪನಖಿ ಮುಂತಾದ ಪಾತ್ರಗಳನ್ನು ನಿರ್ವಹಿಸಿದ್ದಾರೆ. +ತಾಳಮದ್ದಳೆಯಲ್ಲಿ ಆಸಕ್ತರಾಗಿರುವ ಇವರು ಅರ್ಥಗಾರಿಕೆಗೆ ಪೂರಕವಾಗಿ ಪುರಾಣ ಜ್ಞಾನ ಸಂಪನ್ಮರಾಗಿದ್ದಾರೆ. +ಯಕ್ಷಗಾನ ಕಲಾಕ್ಷೇತ್ರದಲ್ಲಿ ಬೆಳೆಯಬೇಕೆಂಬ ಹಂಬಲವನ್ನು ಹೊಂದಿರುವ ಇವರು ಶ್ರೀಮತಿ ಅರುಣಾ ಎಂಬವರನ್ನು ವರಿಸಿ ಪ್ರಜ್ಞಾ ಮತ್ತು ಪ್ರಜ್ವಲ್‌ ಎಂಬ ಇಬ್ಬರು ಮಕ್ಕಳನ್ನು ಪಡೆದಿದ್ದಾರೆ. +ತನ್ನದೇ ಆದ ಶೈಲಿಯಿಂದ, ಸ್ತ್ರೀವೇಷ,ಪುಂಡುವೇಷ ಹಾಗೂ ಕಥಾನಾಯಕ ಪಾತ್ರಗಳು ಸೇರಿದಂತೆ ಮುಖ್ಯ ಪೋಷಕ ಪಾತ್ರಗಳನ್ನು ನಿರ್ವಹಿಸುವ ಶ್ರಿ ಕೆ.ವಿಶ್ವನಾಥ ರೈಯವರು ಪ್ರಸ್ತುತ ಕಟೀಲು ಮೇಳದ ಕಲಾವಿದರಾಗಿ ತಿರುಗಾಟವನ್ನು ನಡೆಸುತ್ತಾ ಇದ್ದಾರೆ. +ಸುಬ್ಬಯ್ಯ ರೈ ಮತ್ತು ಮಂಜಕ್ಕೆ ದಂಪತಿಯ ಸುಪುತ್ರರಾಗಿ 28.02.1949ರಲ್ಲಿ ಬೆಳ್ಳಾರೆಯಲ್ಲಿ ಜನಿಸಿದ ವಿಶ್ವನಾಥ ರೈಯವರು ಪ್ರಾಥಮಿಕ ಹಂತದ ವಿದ್ಯಾಭ್ಯಾಸವನ್ನು ಪಡೆದಿರುವರು. +ಬಾಲ್ಯದಲೇ ಯಕ್ಷಗಾನ ಕಲೆಯಲ್ಲಿ ಆಕರ್ಷಿತರಾದ ಇವರು ಅಚ್ಯುತ ಮಣಿಯಾಣಿ ಎಂಬವರಿಂದ ನಾಟ್ಯಭ್ಯಾಸವನ್ನು ಮಾಡಿರುವರು. +ಕಿರಿಯವನಾಗಿ 9ನೆ ವರ್ಷದಿಂದಲೇ ಯಕ್ಷಗಾನದ ರಂಗಪ್ರವೇಶ ಮಾಡಿದ ಹಿರಿಮೆ ಇವರಿಗಿದೆ. +ರಾಜನ್‌ ಅಯ್ಯರ್‌ ಮತ್ತು ಕೇಶವ ಮಾಸ್ಟರ್‌ಇವರಿಂದ ಭರತ ನಾಟ್ಯವನ್ನು ಅಭ್ಯಾಸ ಮಾಡಿರುವ ವಿಶ್ವನಾಥ ರೈಯವರು ಕರ್ನಾಟಕ ಮೇಳ-35ವರ್ಷ,ಮಧೂರು ಮೇಳ-1 ವರ್ಷ, ಸುರತ್ಕಲ್‌ ಮೇಳ-5ವರ್ಷ, ಕದ್ರಿಮೇಳ-8 ವರ್ಷ, ಬಪ್ಪನಾಡು ಮೇಳ-1 ವರ್ಷ, ಕುಂಟಾರು ಮೇಳ-2ವರ್ಷ, ಎಡನೀರುಮೇಳ-1 ವರ್ಷ, ಕಟೀಲು ಮೇಳ-3ವರ್ಷ, ಹೀಗೆ ತಿರುಗಾಟವನ್ನು ನಡೆಸಿದ್ದಾರೆ. +ಕಾಡಮಲ್ಲಿಗೆಯ ಮಲ್ಲಿಗೆಯಾಗಿ ಪ್ರಸಿದ್ಧಿಯನ್ನು ಪಡೆದಿರುವ ಬೆಳ್ಳಾರೆ ವಿಶ್ವನಾಥ ರೈಯವರ ಪಾತ್ರ ಚಿತ್ರಣ, ಭಾವ ಪೂರ್ಣವಾಗಿದೆ. +ಮಾನಿಷಾದದ ಸೀತೆ, ಸತ್ಯಹರಿಶ್ಚಂದ್ರದ ಚಂದ್ರಮತಿ ಮೊದಲಾದ ಪಾತ್ರಗಳಿಗೆ ಜೀವಕಳೆ ತುಂಬಿದ್ದಾರೆ. +ಕೃಷ್ಣ,ಅಭಿಮನ್ಯು, ಭಾರ್ಗವ ಸುದರ್ಶನ ಮೊದಲಾದ ಪಾತ್ರಗಳಲ್ಲಿ ಉತ್ತಮ, ನಟನೆಯನ್ನು ತೋರಿಸಿದ್ದಾರೆ. +ಶ್ರೀಮತಿ ಕುಸುಮಾವತಿ ಎಂಬವರನ್ನು ವರಿಸಿ ಮಧುಚಂದ್ರ, ರವಿಚಂದ್ರ, ಮಮತಾ ಎನ್ನುವ ಮೂವರು ಮಕ್ಕಳನ್ನು ಪಡೆದಿದ್ದಾರೆ. +ಇವರ ಕಲಾಸಾಧನೆಗೆ ಬಾಲ್ಯದಲ್ಲೇ ನಟ ರತ್ನಾಕರ ಮಾ॥ಹಿರಣ್ಣಯ್ಯರವರಿಂದ ಚಿನ್ನದ ಉಂಗುರದ ಜೊತೆಗೆ ಸಂಮಾನವಾಗಿತ್ತು. +ಮುಂದೆ ಕೋಳ್ನಾಡು ನಾರಾಯಣ ಶೆಟ್ಟಿಯವರಿಂದ ಸಂಮಾನ, ಕದ್ರಿಮೇಳದ ಸಂಮಾನ, ಮುಂಬಯಿ ಅಭಿಮಾನಿ ಬಳಗದ ಸಂಮಾನ ಹೀಗೆ ಗೌರವಗಳು ಸಂದಿವೆ. +ಪಾತ್ರದ ಸ್ವಭಾವಕ್ಕೆ ತಕ್ಕಂತೆ ಸ್ವರಭಾರ,ಮಾತಿನ ಸಾಹಿತ್ಯ, ಹಾಗೂ ನಟನಾ ಶೈಲಿಯನ್ನು ಸಾಕ್ಷಾತ್ಕರಿಸುವ ಶ್ರೀ ಕೆ.ವಿಶ್ವೇಶ್ವರ ಭಟ್‌ ಸುಣ್ಣಂಬಳ ಇವರು ಆಟಕೂಟವೆರಡರಲ್ಲೂ ಪ್ರಭುತ್ವ ಸಾಧಿಸಿದ್ದಾರೆ. +ಪ್ರಸ್ತುತ ಕಟೀಲು ಮೇಳದಲ್ಲಿ ಇದಿರು ವೇಷಗಳನ್ನು ನಿರ್ವಹಿಸುವ ಇವರು ಮೇಳದ ಪ್ರಬಂಧಕರಾಗಿಯೂ ಕಾರ್ಯ ನಿರ್ವಹಿಸುತ್ತಾರೆ. +ನಾರಾಯಣ ಭಟ್‌ ಹಾಗೂ ಪರಮೇಶ್ವರೀ ಅಮ್ಮ ದಂಪತಿಯ ಸುಪುತ್ರನಾಗಿ ಪೆರುವಾಯಿ ಎಂಬಲ್ಲಿ ದಿನಾಂಕ 19-11-1964ರಂದು ಇವರು ಜನಿಸಿದರು. +ತಂದೆ ಹಾಗೂ ಚಿಕ್ಕ ತಂದೆ ಅಂಬೆಮೂಲೆ ಗೋವಿಂದ ಭಟ್‌ ಅರ್ಥಧಾರಿಗಳಾಗಿದ್ದುದರಿಂದ ಇವರಲ್ಲೂ ಯಕ್ಷಗಾನದ ಪ್ರತಿಭೆ ಬೆಳೆದು ಬಂತು. +ಇವರ ಸಹೋದರ ಸುಣ್ಣಂಬಳ ಈಶ್ವರ ಭಟ್‌ ಹವ್ಯಾಸಿ ವೇಷಧಾರಿ ಹಾಗೂ ಅರ್ಥಧಾರಿ. +ಹೀಗೆ ಇವರ ಮನೆತನವು ಯಕ್ಷಕಲೆಯೊಂದಿಗೆ ಬೆರೆತ ಮನೆತನವಾಗಿದೆ. +ಕಲೆಯಲ್ಲಿ ಬೆಳೆಯಬೇಕೆಂಬ ಆಸಕ್ತಿಯಿಂದ ಕೆ.ಗೋವಿಂದ ಭಟ್‌, ಅಳಿಕೆರಾಮಯ್ಯ ರೈ ಮತ್ತು ನರಸಿಂಹ ಭಟ್ಟರಿಂದ ನಾಟ್ಯ ಹಾಗೂ ರಂಗದ ಬಗ್ಗೆ ಅಧ್ಯಯನ ಮಾಡಿದ ಇವರ ಕಲಾ ಜೀವನ ಬೆಳಗುತ್ತಾ ಬಂದಿದೆ. +10ನೇಯ ತನಕ ಶಾಲಾ ಪಾಠಾಭ್ಯಾಸ ಮಾಡಿರುವ ಇವರಲ್ಲಿ ಸಾಹಿತ್ಯಿಕವಾಗಿ ಮೈಗೂಡಿರುವುದು ಪ್ರೌಢ ಚಿಂತನೆಯ ಮನೋಧರ್ಮ. +ಅರಂಭಕ್ಕೆ ಧರ್ಮಸ್ಥಳದಲ್ಲಿ 1ವರ್ಷದ ತಿರುಗಾಟವನ್ನು ಮಾಡಿದ ಇವರು ಪ್ರಸ್ತುತ ಕಟೀಲು ಮೇಳದಲ್ಲಿ 28ನೇ ವರ್ಷದ ತಿರುಗಾಟವನ್ನು ನಡೆಸುತ್ತಾ ಇದ್ದಾರೆ. +ಪುಂಡುವೇಷ, ರಾಜವೇಷ,ನಾಟಕೀಯ ವೇಷಗಳಲ್ಲಿ ಪ್ರೌಢತೆಯನ್ನು ಸಾಧಿಸಿರುವ ವಿಶ್ವೇಶ್ವರ ಭಟ್ಟರು ಅನಿವಾರ್ಯ ಸಂದರ್ಭಗಳಲ್ಲಿ ಸ್ತ್ರೀವೇಷವನ್ನು ಕೂಡಾ ನಿರ್ವಹಿಸಿದ್ದಾರೆ. +ನಂದಿನಿ,ಶ್ರೀದೇವಿ ಮೊದಲಾದ ಪಾತ್ರಗಳನ್ನು ಇಲ್ಲಿ ಉಲ್ಲೇಖಿಸಬಹುದಾಗಿದೆ. +ವಿಷ್ಣು, ರಾಮ, ಕೃಷ್ಣ, ಯಕ್ಷ, ಬಭ್ರುವಾಹನ,ಸುಧನ್ವ, ಈಶ್ವರ, ವಿಶ್ವಾಮಿತ್ರ, ಜಾಬಾಲಿ, ಭೀಷ್ಮಮಾಗಧ, ಅರುಣಾಸುರ, ರಕ್ತಬೀಜ, ಅತಿಕಾಯ,ಕಂಸ ಇತ್ಯಾದಿ ಪಾತ್ರಗಳಿಗೆ ಅರ್ಥಗಾರಿಕೆಯ ಮುಖೇನ ಹೊಸತನದ ಜೀವಸತ್ವವನ್ನು ತುಂಬಿದ್ದಾರೆ. +ಶ್ರಿಮತಿ ಕಮಲಾಕ್ಷಿ ಎಂಬವರನ್ನು ವರಿಸಿ ಪ್ರಜ್ಞಾ ಎಂಬವರನ್ನು ಪಡೆದಿದ್ದಾರೆ. +ಬೇಸಿಗೆ ಮತ್ತು ಮಳೆಗಾಲದಲ್ಲಿ ಬೇಡಿಕೆಯ ಕಲಾವಿದರಾಗಿರುವ ಇವರು ಮೇಳದ ಮತ್ತು ಹವ್ಯಾಸಿ ಕಲಾವಿದರಿಗೆ ರಂಗದ ಅನುಭವದ ಬಗ್ಗೆ ಮಾರ್ಗದರ್ಶನ ಮಾಡಿದ್ದಾರೆ. +ಪ್ರತಿಭೆಗೆ ಪ್ರತಿಫಲವಾಗಿ ಪೆರುವಾಯಿ,ಕದ್ರಿ, ಪಡುಬಿದ್ರೆ, ಮುಂಬಯಿ ಮುಂತಾದ ಕಡೆಗಳಲ್ಲಿ ಅಭಿಮಾನಿ ಬಳಗದಿಂದ ವಿಶ್ವೇಶ್ವರ ಭಟ್ಟರು ಸಂಮಾನಿಸಲ್ಪಟ್ಟಿದ್ದಾರೆ. +ಸ್ತ್ರೀ ಪಾತ್ರಗಳ ಮುಖೇನ ಉತ್ತಮ ನಿರ್ವಹಣೆಯನ್ನು ತೋರಿ ಮನ್ನಣೆಗೊಳಗಾಗಿರುವ ಶ್ರೀ ವಿಶ್ವನಾಥ ಗೌಡ ತೋಡಿಕಾನರು ಪ್ರಸ್ತುತ ಕಟೀಲು ಮೇಳದ ಮುಖ್ಯ ಸ್ರ್ತೀ ಪಾತ್ರಧಾರಿಯಾಗಿ ತಿರುಗಾಟವನ್ನು ನಡೆಸುತ್ತಾ ಇದ್ದಾರೆ. +ಸುಬ್ಬಪ್ಪ ಗೌಡ ಮತ್ತು ರಾಮಕ್ಕ ದಂಪತಿಯ ಸುಪುತ್ರರಾಗಿ ತೋಡಿಕಾನ ಎಂಬಲ್ಲಿ 23-8-1959ರಂದು ಜನಿಸಿದರು. +10ನೇ ತರಗತಿಯ ತನಕ ವಿದ್ಯಾಭ್ಯಾಸವನ್ನು ಪಡೆದಿರುವ ಇವರು ಮಾವ ಕೆ.ನಾರಾಯಣ ಗೌಡ ಎಂಬವರ ಪ್ರೇರಣೆಯ ಮೇರೆಗೆ ಧರ್ಮಸ್ಥಳದ ಲಲಿತ ಕಲಾ ಕೇಂದ್ರವನ್ನು ಸೇರಿ ಪಡ್ರೆ ಚಂದುರವರಲ್ಲಿ ನಾಟ್ಯಾಭ್ಯಾಸವನ್ನು ಮಾಡಿದರು. +ಕರ್ನಾಟಕ ಮೇಳ - 9 ವರ್ಷ, ಕದ್ರಿ ಮೇಳ- 2 ವರ್ಷ, ಕುಂಬೈ ಮೇಳ - 2 ವರ್ಷ ಹಾಗೂ ಕಟೀಲು ಮೇಳ 20 ವರ್ಷ ಹೀಗೆ ತುಳು ಮತ್ತು ಪುರಾಣ ಪ್ರಸಂಗಗಳ ಪ್ರದರ್ಶನಗಳಲ್ಲಿ ಪಾತ್ರ ನಿರ್ವಹಣೆಯನ್ನು ಮಾಡಿ ಪ್ರೌಢಿಮೆಯನ್ನು ಸಾಧಿಸಿರುವ ಇವರು ಶ್ರೀ ದೇವಿಯ ಪಾತ್ರದಲ್ಲಿ ತನ್ನ ವೈಶಿಷ್ಟ್ಯವನ್ನು ಮೆರೆಸಿದ್ದಾರೆ. +ಚಿತ್ರಾಂಗದೆ, ಪ್ರಭಾವತಿ, ದಮಯಂತಿ, ಸುಭದ್ರೆ,ದಾಕ್ದಾಯಿಣಿ, ಸೀತೆ, ಮಂಡೋದರಿ, ನಂದಿನಿ,ಯಶೋಮತಿ, ಮೋಹಿನಿ ಮುಂತಾದ ಪಾತ್ರಗಳನ್ನು ಸೊಗಸಾಗಿ ನಿರ್ವಹಿಸುತ್ತಾರೆ. +ಮಳೆಗಾಲದಲ್ಲಿ ಕೃಷಿಕರಾಗಿ ಶ್ರಮಿಸುವ ಇವರು ಶ್ರೀಮತಿ ದಮಯಂತಿ ಎಂಬವರನ್ನು ವರಿಸಿ ಶರತ್‌(ಕಂಪ್ಯೂಟರ್‌ ಅಧ್ಯಯನ), ಶಿಶಿರ (ಪಿ.ಯು.ಸಿ)ಎಂಬ ಇಬ್ಬರು ಮಕ್ಕಳನ್ನು ಪಡೆದಿದ್ದಾರೆ. +ಕೀರ್ತಿ ಶೇಷಕಲಾವಿದ ಗುಡ್ಡಪ್ಪ ಗೌಡ, ತೋಡಿಕಾನ ಬಾಬು ಗೌಡ,ಸಂಪಾಜೆ ಜಯಾನಂದ ಈ ಮೂವರು ಕಲಾವಿದರು ಇವರ ದೂರ ಸಂಬಂಂಧಿಗಳಾಗಿದ್ದಾರೆ. +ಇವರ ಕಲಾ ಸಾಧನೆಗೆ ಪ್ರತಿಫಲವಾಗಿ ತೋಡಿಕಾನದ ಪರಿಸರದಲ್ಲಿ 3 ಸಂಮಾನಗಳು ಸಂದಿವೆ. +ಮಾತು ಮತ್ತು ನಾಟ್ಯಾಗಾರಿಕೆಯಲ್ಲಿ ಉತ್ತಮವಾದ ಶೈಲಿಯನ್ನು ಹೊಂದಿದ್ದು ಒಂದನೇ ಪುಂಡು ವೇಷಧಾರಿಯಾಗಿ ಮನ್ನಣೆಗೆ ಪಾತ್ರರಾಗಿರುವ ಶ್ರೀ ವಿಷ್ಣು ಶರ್ಮ ವಾಟೆಪಡ್ಪು ಇವರು ಕಟೀಲು ಮೇಳದ ಕಲಾವಿದರಾಗಿ ಕಲಾಸೇವೆಯನ್ನು ಮಾಡುತ್ತಾ ಇದ್ದಾರೆ. +ಸುಬ್ರಾಯ ಭಟ್‌ ಮತ್ತು ಪರಮೇಶ್ವರಿ ದಂಪತಿಯ ಸುಪುತ್ರರಾಗಿ ವಾಟಿಪಡ್ಪು ಎಂಬಲ್ಲಿ 6-5-1969 ರಲ್ಲಿ ಜನಿಸಿದರು. +10ನೇ ತರಗತಿಯ ತನಕ ವಿದ್ಯಾಭ್ಯಾಸವನ್ನು ಪಡೆದಿರುವ ಇವರು ಅನಿವಾರ್ಯ ಕಾರಣದಿಂದ ಯಕ್ಷಗಾನವನ್ನು ವೃತ್ತಿಯಾಗಿ ಸ್ವೀಕರಿಸಿದರು. +ಕೆ.ಗೋವಿಂದ ಭಟ್‌, ಸುಣ್ಣಂಬಳ ವಿಶ್ವೇಶ್ವರ ಭಟ್‌ ಮತ್ತು ಕುಡಾಣ ಗೋಪಾಲಕೃಷ್ಣ ಭಟ್‌ ಇವರೆಲ್ಲ ಸಂಬ೦ಧಿಕರಾಗಿದ್ದು ಆ ನೆಲೆಯಿಂದ ಯಕ್ಷಗಾನದತ್ತ ಆಸಕ್ತಿಯನ್ನು ಬೆಳೆಸಿದ ಇವರು ಧರ್ಮಸ್ಥಳದ ಲಲಿತಕಲಾ ಕೇಂದ್ರವನ್ನು ಸೇರಿದರು. +ಕೆ.ಗೋವಿಂದ ಭಟ್‌ ಮತ್ತು ಕರ್ಗಲ್ಲು ವಿಶ್ವೇಶ್ವರ ಭಟ್‌ ಇವರಿಂದ ನಾಟ್ಯಾಭ್ಯಾಸವನ್ನು ಮಾಡಿ ಮೇಳ ತಿರುಗಾಟವನ್ನು ಆರಂಭಿಸಿದರು. +ಮೊದಲಿಗೆ ಸುಂಕದಕಟ್ಟೆ ಮೇಳದಲ್ಲಿ 7ವರ್ಷಗಳ ತಿರುಗಾಟವನ್ನು ಮಾಡಿರುವ ಇವರು ಕಟೀಲು ಮೇಳವನ್ನು ಸೇರಿ ಈಗಾಗಲೇ 16 ವರ್ಷಗಳ ತಿರುಗಾಟವನ್ನು ಪೂರೈಸಿದ್ದಾರೆ. +ಲಾಲಿತ್ಯ ಪೂರ್ಣವಾದ ಮಾತಿನಿಂದ ತಾಳಮದ್ದಳೆಯ ಅರ್ಥಧಾರಿಯಾಗಿಯೂ ಮನ್ನಣೆಯನ್ನು ಪಡೆದಿರುವ ಇವರು ವಿಷ್ಣು, ರಾಮ,ಕೃಷ್ಣ, ಸುಧನ್ವ ಹನೂಮಂತ, ವಿಶ್ವಾಮಿತ್ರ, ವಾಲ್ಮೀಕಿ,ಹರಿಶ್ಚಂದ್ರ, ನಳ, ವಿಕ್ರಮ ಮೊದಲಾದ ಪಾತ್ರಗಳನ್ನು ಉತ್ತಮವಾಗಿ ನಿರ್ವಹಿಸುತ್ತಾರೆ. +ಉತ್ತಮ ಪುಂಡು ವೇಷಧಾರಿಯಾಗಿ ತುಳು ಮತ್ತು ಪೌರಾಣಿಕ ಪ್ರಸಂಗಗಳ ಪಾತ್ರಗಳನ್ನು ನಿರ್ವಹಿಸಿ ಜನಮನ್ನಣೆಯನ್ನು ಪಡೆದಿರುವ ಶ್ರೀ ವಿನೋದ ರೈ ಸೊರಕೆ ಯವರು ಮೇಳ ತಿರುಗಾಟದಿಂದ ವಿಮುಖರಾಗಿ ಪ್ರಸ್ತುತ ಹವ್ಯಾಸಿ ಕಲಾ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಾ ಇದ್ದಾರೆ. +ನಾರಾಯಣ ರೈ ಮತ್ತು ಸರಸ್ವತಿ ದಂಪತಿಯ ಸುಪುತ್ರರಾಗಿ ದಿನಾಂಕ 15-3-1968ರಂದು ಬನ್ನೂರು ಆನೆಮಜಲು ಎಂಬಲ್ಲಿ ಹುಟ್ಟಿದರು. +9ನೇ ತರಗತಿಯ ತನಕ ವಿದ್ಯಾಭ್ಯಾಸವನ್ನು ಪಡೆದಿರುವ ಇವರು ಯಕ್ಷಗಾನದ ಪ್ರದರ್ಶನಗಳನ್ನು ನೋಡಿ ಪ್ರಭಾವಿತರಾಗಿ ತಾನೂ ಕಲಿಯಬೇಕೆಂಬ ಹಂಬಲದಿಂದ ತಿಮ್ಮಪ್ಪ ಶೆಟ್ಟಿ, ಕೆ.ಗೋವಿಂದ ಭಟ್‌ಮತ್ತು ಕರ್ಗಲ್ಲು ವಿಶ್ವೇಶ್ವರ ಬಟ್ಟರಿಂದ ನಾಟ್ಯಾಭ್ಯಾಸವನ್ನು ಮಾಡಿದರು. +13ನೇ ವಯಸ್ಸಿನಿಂದಲೇ ಯಕ್ಷಗಾನ ರಂಗವನ್ನು ಪ್ರವೇಶಿಸಿದ ಇವರು ಕಟೀಲು ಮೇಳ - 7 ವರ್ಷ,ಕಾಂತಾವರ ಮೇಳ - 2 ವರ್ಷ, ಕದ್ರಿ ಮೇಳ -12 ವರ್ಷ, ಮಂಗಳಾದೇವಿ ಮೇಳ - 1 ವರ್ಷ,ಪುತ್ತೂರು ಮೇಳ - 1 ವರ್ಷ ಹೀಗೆ ತಿರುಗಾಟವನ್ನು ನಡೆಸಿ ಪ್ರಸ್ತುತ ಮನೆಯಲ್ಲಿನ ಕೃಷಿ ಕಾರ್ಯದೊಂದಿಗೆ ಅವಕಾಶವೊದಗಿದಾಗ ಹೇಳಿಕೆಯ ಮೇರೆಗೆ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾ ಇದ್ದಾರೆ. +ಶ್ರೀಮತಿ ಸುಜಾತ ಎಂಬವರನ್ನು ವರಿಸಿ ಮನೀಷ್‌ ರೈ ಮತ್ತು ಧನೀಷ್‌ ರೈ ಎಂಬ ಇಬ್ಬರು ಮಕ್ಕಳನ್ನು ಪಡೆದಿದ್ದಾರೆ. +ಅಭಿಮನ್ಯು, ಬಬ್ರುವಾಹನ, ಚಂಡ-ಮುಂಡರು, ಕೋಟಿ-ಚೆನ್ನಯರು, ಪರಶುರಾಮ, ಸುದರ್ಶನ,ಮುರಾಸುರ, ದೇವೇಂದ್ರ ಇತ್ಯಾದಿ ಪಾತ್ರಗಳನ್ನು ಮಾಡಿರುವ ಇವರ ಕಲಾಸೇವೆಯನ್ನು ಗುರುತಿಸಿ ಆರ್ಯಪು, ಕುಂಭ್ರ, ಕೆದಂಬಾಡಿ, ಮೊಂಟಿತಡ್ಕ ಮೊದಲಾದಡೆಯಲ್ಲಿ ಸಂಮಾನಿಸಿದ್ದಾರೆ. +ಕದ್ರಿ ಮೇಳದ ಸಂಮಾನ ಕೂಡಾ ಇವರಿಗೆ ಲಭಿಸಿದೆ. +ಪುಂಡುವೇಷ, ರಾಜವೇಷ, ಮತ್ತು ನಾಟಕೀಯ ವೇಷಗಳ ಮುಖೇನ ಕಲಾಸೇವೆಯನ್ನು ಮಾಡುತ್ತಿರುವ ಶ್ರಿ ವಿಠಲ ಸರಪಾಡಿಯವರು ಕಟೀಲು ಮೇಳದ ಕಲಾವಿದರಾಗಿ ಮನ್ನಣೆಯನ್ನು ಪಡೆದಿದ್ದಾರೆ. +ಬಾಬುಶೆಟ್ಟಿ ಪೂವಕ್ಕ ದಂಪತಿಯ ಸುಪುತ್ರರಾಗಿ 11-12-1962ರಂದು ಸರಪಾಡಿಯ ಆರುಮುಡಿಯಲಿ ಹುಟ್ಟಿದರು. +10ನೇ ತರಗತಿಯ ತನಕ ವಿದ್ಯಾಭ್ಯಾಸವನ್ನು ಪಡೆದಿರುವ ಇವರು 18ನೇ ವರ್ಷದಿಂದ ಯಕ್ಷಗಾನದ ಕಲಾಸೇವೆಗೆ ತೊಡಗಿಸಿಕೊಂಡರು. +ಸಹೋದರ ಸೀತಾರಾಮ ಶೆಟ್ಟಿ ಅರ್ಥಧಾರಿಯಾಗಿದ್ದು ಅವರ ಪ್ರೇರಣೆಯ ಮೇರೆಗೆ ಗೋವಿಂದ ಭಟ್‌ ಸೂರಿಕುಮೇರಿಯವರಲ್ಲಿ ನಾಟ್ಯಾಭ್ಯಾಸವನ್ನು ಮಾಡಿದರು. +ಧರ್ಮಸ್ಥಳ ಮೇಳ-1ವರ್ಷ, ಕರ್ನಾಟಕ ಮೇಳ-4 ವರ್ಷ,ಆರುವ ಮೇಳ -2 ವರ್ಷ, ಬಪ್ಪನಾಡುಮೇಳ-2 ವರ್ಷ, ಪುತ್ತೂರು ಮೇಳ-1ವರ್ಷ,ಕಟೀಲು ಮೇಳ -22 ವರ್ಷ, ಹೀಗೆ ತಿರುಗಾಟದ ಹಿನ್ನೆಲೆಯನ್ನು ಹೊಂದಿದ್ದಾರೆ. +ಬಬ್ರುವಾಹನ, ಅಭಿಮನ್ಯು, ಚಂಡ-ಮುಂಡರು,ದೇವೇಂದ್ರ, ಅರ್ಜುನ, ಇಂದ್ರಜಿತು, ಹಿರಣ್ಯಾಕ್ಷ,ಮಧು-ಕೈಟಭ, ದುಶ್ಯಾಸನ ಮುಂತಾದ ಪಾತ್ರಗಳನ್ನು ಮಾಡಿದ್ದಾರೆ. +ತುಳು ಮತ್ತು ಕನ್ನಡ ಪ್ರಸಂಗಗಳಲ್ಲಿ ಪಾತ್ರನಿರ್ವಹಣೆ ಮಾಡಿರುವ ಅನುಭವ ಇವರಿಗಿದೆ. +ಮಳೆಗಾಲದಲ್ಲಿ ಕೃಷಿಗಾರಿಕೆಯಲ್ಲಿ ಶ್ರಮಿಸುವ ಇವರು ಶ್ರೀಮತಿ ಲೀಲಾವಶಿ ಎಂಬವರನ್ನು ವರಿಸಿ,ಧನ್ಯಶ್ರೀ, ಧನುಷ್‌ ಎಂಬ ಇಬ್ಬರು ಮಕ್ಕಳನ್ನು ಪಡೆದಿದ್ದಾರೆ. +ಚೆಂಡೆ - ಮದ್ದಳೆಯ ಕೈ ಚಳಕದಲ್ಲಿ ತನ್ನದೇ ಆದ ಹೆಚ್ಚುಗಾರಿಕೆಯನ್ನು ತೋರಿ ತೆಂಕುತಿಟ್ಟಿನ ಮದ್ದಳೆಗಾರರಾಗಿ ಮನ್ನಣೆಯನ್ನು ಪಡೆದಿರುವ ಪದ್ಯಾಣ ಶಂಕರ ನಾರಾಯಣ ಭಟ್ಟರು ಪ್ರಸ್ತುತ ಶ್ರೀಹೊಸನಗರ ವೇಳದ ಮದ್ದಳೆಗಾರರಾಗಿ ತಿರುಗಾಟವನ್ನು ನಡೆಸುತ್ತಾ ಇದ್ದಾರೆ. +ರಾಮಕೃಷ್ಣ ಭಟ್‌ ಮತ್ತು ಪಾರ್ವತಿ ಅಮ್ಮ ದಂಪತಿಯ ಸುಪುತ್ರರಾಗಿ 27-4-1949ರಂದು ಪದ್ಯಾಣದಲ್ಲಿ ಜನಿಸಿದರು. +ಬಿ.ಎ. ಪದವೀಧರರಾಗಿರುವ ಇವರಿಗೆ ಮನೆತನದ ಹಿನ್ನೆಲೆಯಿಂದ ಯಕ್ಷಗಾನದ ಕಲಾಪ್ರತಿಭೆ ರಕ್ತಗತವಾಗಿ ಬಂದಿದೆ. +ದೊಡ್ಡ ತಂದೆ ಪುಟ್ಟು ನಾರಾಯಣ ಭಾಗವತರು, ಕುಟುಂಬ ಸಂಬಂಧಿ ದಿ।ಮಾಂಬಾಡಿ ನಾರಾಯಣ ಭಾಗವತರು ಮತ್ತು ಅಣ್ಣನಾದ ತಿರುಮಲೇಶ್ವರ ಭಟ್‌ (ಚೆಂಡೆ-ಮದ್ದಳೆ ವಾದಕರು)ಇವರೆಲ್ಲರ ಉತ್ತೇಜನದಲ್ಲಿ ಇವರು ಕಲಾ ಸಾಧಕರಾಗಿ ಬೆಳೆದರು. +ಆರಂಭದಲ್ಲಿ ತಿರುಮಲೇಶ್ವರ ಭಟ್ಟರಿಂದ ಅಭ್ಯಾಸ, ಅನಂತರ ಚಿಪ್ಪಾರು ಕೃಷ್ಣಯ್ಯ ಬಲ್ಲಾಳ್‌ಮತ್ತು ನರಸಿಂಹ ಭಟ್ಟರಿಂದ ಹೆಚ್ಚಿನ ಅನುಭವವನ್ನು ಸಂಪಾದಿಸಿರುವರು. +ಮಾಸ್ಟರ್‌ ಕೇಶವ ಮತ್ತು ಮುರಳೀಕೃಷ್ಣ ಎಂಬವರಲ್ಲಿ ನಾಟ್ಯ ಹಾಗೂ ಭರತನಾಟ್ಯದ ಅಭ್ಯಾಸವನ್ನು ಮಾಡಿರುವರು. +ಕುಂಡಾವು ಮೇಳ - 3 ವರ್ಷ, ಕರ್ನಾಟಕ ಮೇಳ - 2 ವರ್ಷ, ಸುರತ್ಕಲ್‌ ಮೇಳ - 3ವರ್ಷ, ಸುಂಕದಕಟ್ಟೆ ಮೇಳ - 9 ವರ್ಷ, ಕಟೀಲು ಮೇಳ - 10 ವರ್ಷ, ಕದ್ರಿ ಮೇಳ - 3 ವರ್ಷ,ಕುಂಟಾರು ಮೇಳ - 3 ವರ್ಷ, ಎಡನೀರು ಮೇಳ- 1 ವರ್ಷ, ಹೊಸನಗರ ಮೇಳ - 4 ವರ್ಷ ಹೀಗೆ 38 ವರ್ಷಗಳ ತಿರುಗಾಟವನ್ನು ಪೂರೈಸಿದ್ದಾರೆ. +ಆರಂಭದಲ್ಲಿ ಪುಂಡುವೇಷ ಮತ್ತು ರಾಜವೇಷಗಳನ್ನು ಮಾಡಿರುವ ಇವರು ಚಂಡ-ಮುಂಡರು, ದೇವೇಂದ್ರ,ಅರ್ಜುನ ಇತ್ಯಾದಿ ಪಾತ್ರಗಳನ್ನು ನಿರ್ವಹಿಸಿದ್ದಾರೆ. +14ನೇ ವರ್ಷದಿಂದಲೇ ಕಲಾ ಸಾಧನೆಯನ್ನು ಮಾಡುತ್ತಾ ಬೆಳೆದಿರುವ ಇವರು ಕೃಷಿಕ ಮನೆತನಕ್ಕೆ ಸೇರಿದವರಾಗಿದ್ದಾರೆ. +ಶ್ರೀಮತಿ ವನಜಾಕ್ಷಿ ಅವರನ್ನು ವರಿಸಿ ಅರ್ಚನಾ ಮತ್ತು ಅಜೇಯ ಕೃಷ್ಣ(ಇಂಜಿನಿಯರ್‌) ಎಂಬ ಇಬ್ಬರು ಮಕ್ಕಳನ್ನು ಪಡೆದಿದ್ದಾರೆ. +ಇವರ ಸಾಧನೆಗೆ ಪ್ರತಿಯಾಗಿ ದೆಹಲಿ, ಬೆಹರನ್‌,ದುಬಾಯಿ, ಜಪಾನ್‌, ಮಸ್ಕತ್‌, ಮುಂಬಯಿ,ಬೆಂಗಳೂರು ಮುಂತಾದ ಕಡೆಗಳಲ್ಲಿ ಸಂಮಾನಗಳು ಸಂದಿವೆ. +ಎಡನೀರು ಮಠದ ಗೌರವ, ಸಂಪಾಜೆ ಕೀಲಾರು ಪ್ರಶಸ್ತಿ, ಮಂಗಳೂರು ಶ್ರೀ ಕೃಷ್ಣ ಯಕ್ಷಸಭಾದ ಸಂಮಾನ ಇತ್ಯಾದಿ ಪುರಸ್ಕಾರಗಳು ಸಂದಿವೆ. +ಪುರಾಣ ಪ್ರಸಂಗದ ರಾಜವೇಷಕೊಪ್ಪುವ ನಾಟ್ಯ ಶೈಲಿಯಿಂದ ಗುರುತಿಸಲ್ಪಟ್ಟಿರುವ ಶ್ರೀಕಂಜರ್ಪಣೆ ಶಂಭಯ್ಯನವರು ನಾಯಕ ಮತ್ತು ಪ್ರತಿನಾಯಕ ಪಾತ್ರಗಳನ್ನು ಮಾಡುತ್ತಾ ಕಟೀಲು ಮೇಳದಲ್ಲಿ ತನ್ನ ಸ್ವಂತಿಕೆಯನ್ನು ಮೆರೆದಿದ್ದಾರೆ. +ಗೋಪಾಲಕೃಷ್ಣಯ್ಯ ಮತ್ತು ಕೆ.ಚಂದ್ರಮತಿ ಎಂಬವರ ಸುಪುತ್ರನಾಗಿ ಕಂಜರ್ಪಣೆಯಲ್ಲಿ ಜನಿಸಿದರು. +ಕರ್ಗಲ್ಲುಕೃಷ್ಣ ಮೂರ್ತಿ (ಮಾವ) ಬಣ್ಣದ ವೇಷಧಾರಿ ಸುಬ್ಬಣ್ಣಭಟ್‌ (ಮಾವ) ಅರ್ಥಧಾರಿ ಉಡ್ವೆಕೋಡಿ ಸುಬ್ಬಪ್ಪಯ್ಯ(ದೂರ ಸಂಬಂಧಿ) ಮಧ್ದೆಗಾರ ಕಲ್ಕಡ್ಕ ಶಂಕರ (ಭಾವ) ಹೀಗೆ ಆದರ್ಶದ ಮನೆತನದಲ್ಲಿ ಹುಟ್ಟಿದ ಕಾರಣದಿಂದ ಯಕ್ಷಕಲೆಯ ಪ್ರಭಾವ-ಪ್ರೇರಣೆ ಶಂಬಯ್ಯನವರಿಗೂ ಆಗಿದ್ದು. +ಕಲಿಯುವ ಆಸಕ್ತಿಯಿಂದ 1989ನೇ ವರ್ಷದಲ್ಲಿ ಧರ್ಮಸ್ಥಳದ ಲಲಿತಾಕಲಾ ಕೇಂದ್ರವನ್ನು ಸೇರಿದರು. +ಕರ್ಗಲ್ಲು ವಿಶ್ವೇಶ್ವರ ಬಟ್ಟರಿಂದ ನಾಟ್ಯಾಭ್ಯಾಸವನ್ನು ಮಾಡಿದ ಇವರು, 10ನೇ ತರಗತಿಯ ತನಕ ಪಾಠ ಶಾಲೆಗೆ ಹೋಗಿದ್ದಾರೆ. +ವೇಷದ ನಿಮಿತ್ತ ಬಪ್ಪನಾಡು ಮೇಠದಲ್ಲಿ ಅತಿಥಿ ಕಲಾವಿದರಾಗಿ ಭಾಗವಹಿಸಿರುವುದನ್ನು ಹೊರತುಪಡಿಸಿ ಇವರ ತಿರುಗಾಟದ ಏಕೈಕ ಮೇಳವೆಂದರೆ ಕಟೀಲು ಮೇಳ. +ಪ್ರಸ್ತುತ 19ನೇ ವರ್ಷದ ತಿರುಗಾಟವನ್ನು ನಡೆಸುತ್ತಾ ಇದ್ದಾರೆ. +ದೇವೇಂದ್ರ, ಅರ್ಜುನ, ಶಿಶುಪಾಲ, ಹಿರಣ್ಯಾಕ್ಷ,ಇಂದ್ರಜಿತು, ಶತ್ರುಘ್ನ, ಅರುಣಾಸುರ, ಮಧು-ಕೈಟಭ ಇತ್ಯಾದಿ ರಾಜ ಮತ್ತು ನಾಟಕೀಯ ವೇಷಗಳ ಪಾತ್ರಗಳನ್ನು ನಿರ್ವಹಿಸುವ ಇವರು ಚಂಡ-ಮುಂಡರು, ಚಂಡ ಪ್ರಚಂಡರು, ಬ್ರಹ್ಮ, ಈಶ್ವರ ಮುಂತಾದ ಪಾತ್ರಗಳನ್ನು ಕೂಡಾ ನಿರ್ವಹಿಸುತ್ತಾರೆ. +ಕೊಟ್ಟ ಪಾತ್ರವನ್ನು ಅಚ್ಚು ಕಟ್ಟಾಗಿ ನಿರ್ವಹಿಸಬೇಕೆಂಬ ಉದ್ದೇಶ ಇವರದ್ದಾಗಿದೆ. +ಇತರ ಪಾತ್ರಗಳನ್ನು ಅವಲೋಕನ ಮಾಡುವ ಜೊತೆಗೆ ತನ್ನ ಪಾತ್ರವನ್ನು ಹೇಗೆ ವಿಜೃಂಭಿಸಬೇಕು ಎನ್ನುವುದರ ಬಗ್ಗೆ ಚಿಂತಿಸುವ, ಪರಂಪರೆಯ ಬಗೆ ಕಾಳಜಿವುಳ್ಳ ಶಂಭಯ್ಯನವರು ಯಕ್ಷಗಾನ ಮಿತ್ರ ವೃಂದಕೊಲ್ಲಮೊಗರು, ಹರಿಹರೇಶ್ವರ ಯಕ್ಷಗಾನ ಕಲಾಸಂಘಹರಿಹರ, ಪಲ್ಲತಡ್ಕ ಇಲ್ಲೆಲ್ಲಾ ಯಕ್ಷಗಾನದ ತರಬೇತಿಯನ್ನು ನಡೆಸಿದ್ದಾರೆ. +65 ವರ್ಷಗಳ ತನಕ ಮೇಳ ತಿರುಗಾಟವನ್ನು ಮಾಡಿರುವ ಶ್ರೀ ಪುತ್ತೂರು ಶೀನ ಭಂಡಾರಿಯವರು ಕಿರೀಟ ವೇಷದ ಕಲಾವಿದರಾಗಿ ಪ್ರಸಿದ್ಧಿಯನ್ನು ಪಡೆದಿದ್ದಾರೆ. +ಪ್ರಸ್ತುತ ನಿವೃತ್ತ ಕಲಾವಿದರಾಗಿರುವ ಇವರು ರಾಜ್ಯೋತ್ಸವ ಪ್ರಶಸ್ತಿಯ ಗೌರವಕ್ಕೆ ಪಾತ್ರರಾಗಿರುವ ಹಿರಿಯ ಕಲಾವಿದರಾಗಿದ್ದಾರೆ. +ಕಾಸರಗೋಡಿನ ಪೆರಡಾಲ ಗ್ರಾಮದ ಬಳ್ಳಂಬೆಟ್ಟನ ನೆಲ್ಲಿಕುಂಜ ನಡುಮನೆಯಲ್ಲಿ ದಿ.10-6-1923 ರಂದು ಜನಿಸಿದರು. +ಇವರ ತಂದೆ ದೂಮುಪ್ಪ ಬಂಡಾರಿ, ತಾಯಿ ದಾರಮ್ಮ ಬಾಲ್ಯದಿಂದಲೇ ಯಕ್ಷಗಾನ ಕಲೆಯತ್ತ ಆಕರ್ಷಿತರಾಗಿರುವ ಇವರು ಬೋವಿ ಕಣ್ಣ ಎಂಬವರಲ್ಲಿ ಯಕ್ಷಗಾನದ ಬಗ್ಗೆ ಅಧ್ಯಯನ ಮಾಡಿರುವರು. +ಕದ್ರಿ ಮತ್ತು ಧರ್ಮಸ್ಥಳ ಮೇಳಗಳಲ್ಲಿ ತಿರುಗಾಟವನ್ನು ಮಾಡಿರುವ ಇವರು ಬಳ್ಳಂಬೆಟ್ಟುಹಾಗೂ ಆದಿ ಸುಬ್ರಹ್ಮಣ್ಯ ಮೇಳಗಳನ್ನು ಸ್ವಂತವಾಗಿ ನಡೆಸಿ ಮೇಳದ ಯಜಮಾನಿಕೆಯಲ್ಲಿ ಕೀರ್ತಿಯನ್ನು ಪಡೆದಿದ್ದರು. +ಗತ್ತುಗಾರಿಕೆಗೆ ಹೆಸರಾಗಿರುವ ಶೀನ ಭಂಡಾರಿಯವರು ದೇವೇಂದ್ರ, ಅರ್ಜುನ, ಭಸ್ಮಾಸುರ,ಇಂದ್ರಜಿತು, ರಕ್ತಬೀಜ ಮುಂತಾದ ಕಿರೀಟ ವೇಷಗಳ ಹಾಗೂ ನಾಟಕೀಯ ವೇಷಗಳ ಪಾತ್ರಗಳನ್ನು ನಿರ್ವಹಿಸಿರುವರು. + ಇಷ್ಟಲ್ಲದೆ ಪುಂಡುವೇಷ ಹಾಗೂ ಕಸೆಯ ವೇಷಗಳನ್ನು ಕೂಡಾ ಹೆಚ್ಚಾಗಿ ನಿರ್ವಹಿಸಿ ಕೀರ್ತಿವಂತರಾಗಿದ್ದಾರೆ. +ಶ್ರೀಮತಿ ಸುಂದರಿ ಎಂಬವರನ್ನು ವರಿಸಿ ಮೂವರು ಪುತ್ರರು ಹಾಗೂ ಮೂವರು ಪುತ್ರಿಯರನ್ನು ಪಡೆದಿದ್ದಾರೆ. +ಇವರ ಸುಪುತ್ರರಾದ ಶೇಖರ ಭಂಡಾರಿ,ಶ್ರೀಧರ ಭಂಡಾರಿ ಮತ್ತು ಗಂಗಾಧರ ಭಂಡಾರಿ ಇವರುಗಳು ಉತ್ತಮ ವೇಷಧಾರಿಗಳಾಗಿದ್ದು ಈಗಾಗಲೇ ಜನಮನ್ನಣೆಗೆ ಪಾತ್ರರಾಗಿದ್ದಾರೆ. +ರಾಜ್ಯ ಪ್ರಶಸ್ತಿಯು ಸೇರಿದಂತೆ ನಾಡಿನಾದ್ಯಂತ ಸಂಮಾನಗಳಿಂದ, ಪ್ರಶಸ್ತಿಗಳಿಂದ ಗೌರವಿಸಲ್ಪಟ್ಟಿರುವ ಇವರ ಕಲಾ ಸಾಧನೆ ಅನನ್ಯವಾಗಿದ್ದು ಉಲ್ಲೇಖನೀಯವಾಗಿದೆ. +ಕೂಡಾಟ-ಜೋಡಾಟಗಳಲ್ಲಿ ಹೆಸರು ವಾಸಿಯಾಗಿ ಪ್ರಸಿದ್ಧಿಯನ್ನು ಉಳಿಸುತ್ತಾ ಇಂದಿನ ತನಕವೂ ರಂಗದಲ್ಲಿ ಮೆರೆಯುತ್ತಾ ಇರುವ ಗಂಡುಗತ್ತಿನ ಕಿರೀಟ ವೇಷಧಾರಿ ಶ್ರೀ ಸಂಪಾಜೆ ಶೀನಪ್ಪ ರೈಯವರು ಪ್ರಸ್ತುತ ಶ್ರೀ ರಾಮ ಚಂದ್ರಾಪುರ ಹೊಸನಗರದ ಮೇಳದಲ್ಲಿ ತಿರುಗಾಟವನ್ನು ನಡೆಸುತ್ತಾ ಇದ್ದಾರೆ. +ದಿನಾಂಕ 7-6-1943 ರಂದು ರಾಮಣ್ಣ ರೈ ಮತ್ತು ಕಾವೇರಿ ದಂಪತಿಯ ಸುಪುತ್ರರಾಗಿ ಸಂಪಾಜೆಯಲ್ಲಿ ಶೀನಪ್ಪ ರೈಯವರು ಜನಿಸಿದರು. +ಪ್ರಾಥಮಿಕ ಹಂತದ ವಿದ್ಯಾಭ್ಯಾಸವನ್ನು ಪಡೆದಿರುವ ಇವರು ಸ್ರ್ತೀ ವೇಷಧಾರಿಯಾಗಿದ್ದ ತಂದೆಯವರ ಪ್ರೇರಣೆಯಂತೆ ತಂದೆಯವರಿಂದಲೇ ಯಕ್ಷಗಾನದ ಪ್ರಾಥಮಿಕ ಅನುಭವವನ್ನು ಪಡೆದು ಮುಂದೆ ನಾಟಾಚಾರ್ಯ ಕಾವು ಕಣ್ಣನ್‌ ಎಂಬವರಿಂದ ನಾಟ್ಯಭ್ಯಾಸವನ್ನು ಮಾಡಿದರು. +3ನೇ ವಯಸ್ಸಿನಿಂದಲೇ ಯಕ್ಷಗಾನ ಕಲಾಕ್ಷೇತ್ರವನ್ನು ಪ್ರವೇಶಿಸಿದ ಇವರು ಆರಂಭದಲ್ಲಿ ಪುಂಡುವೇಷವನ್ನು ಮಾಡುತ್ತಿದ್ದರು. +ಬೆಳೆಯುತ್ತಾ ಇದ್ದಂತೆ ಕಿರೀಟ ವೇಷದ ಬಗ್ಗೆ ಆಕರ್ಷಿತರಾಗಿ ನಾಟ್ಯದ ಶೈಲಿ ಮತ್ತು ಮಾತಿನ ಗತ್ತುಗಾರಿಕೆಯನ್ನು ಉತ್ತಮವಾಗಿಸಿ ಜನಾಕರ್ಷಣೆಗೆ ಒಳಗಾಗುತ್ತಾ ಪ್ರಸಿದ್ಧರಾದರು. +ಕುಂಡಾವು ಮೇಳ - 4 ವರ್ಷ, ವೇಣೂರುಮೇಳ - 3 ವರ್ಷ, ಇರುವೈಲು ಮೇಳ - 2ವರ್ಷ, ಸೌಕೂರು ಮೇಳ - 2 ವರ್ಷ, ಚೌಡೇಶ್ವರಿಮೇಳ - 2 ವರ್ಷ, ಕಟೀಲು ಮೇಳ - 32ವರ್ಷ, ಎಡನೀರು ಮೇಳ - 2ವರ್ಷ, ರಾಮಚಂದ್ರಾಪುರ - 4ನೇ ವರ್ಷದ ತಿರುಗಾಟ ಹೀಗೆ 5 ದಶಕಗಳಿಗೂ ಮೀರಿ ತೆಂಕುತಿಟ್ಟಿನಲ್ಲಿ ಕಲಾಸೇವೆಯನ್ನು ಮಾಡುತ್ತಿರುವರು. +ಇವರು ಕಟೀಲು ಮೇಳದಲ್ಲಿದ್ದಾಗ ಇವರದ್ದೇ ಆದ ಚೌಕಟ್ಟಿನಲ್ಲಿ ರಕ್ತಬೀಜನ ಪಾತ್ರ ನಿರ್ವಹಣೆಯನ್ನು ಮಾಡಿ ಒಳ್ಳೆಯ ಕೀರ್ತಿಯನ್ನು ಸಂಪಾದಿಸಿದ್ದಾರೆ. +ಇಂದ್ರಜಿತು, ಹಿರಣ್ಯಾಕ್ಷ, ಕೌ೦ಂಡ್ಲಿಕ, ಶಿಶುಪಾಲ,ತಾಮ್ರಧ್ವಜ, ವೀರ ವರ್ಮ ಮುಂತಾದ ಪ್ರತಿನಾಯಕ ಪಾತ್ರಗಳಲ್ಲಿ ಪ್ರತಿಭೆಯನ್ನು ಮರೆದಿರುವ ಇವರು ಅರ್ಜುನ, ದೇವೇಂದ್ರ ಮೊದಲಾದ ಸೌಮ್ಯ ಸ್ವಭಾವದ ಪಾತ್ರಗಳನ್ನು ಕೂಡ ಚೆನ್ನಾಗಿ ನಿರ್ವಹಿಸುತ್ತಾರೆ. +ಶ್ರೀಮತಿ ಗಿರಿಜಾವತಿ ಎಂಬವರನ್ನು ವರಿಸಿ,ಜಯರಾಮ ರೈ, ರೇವತಿ ಶೆಟ್ಟಿ ಮತ್ತು ರಜನಿ ರೈ ಎಂಬ ಮೂವರು ಮಕ್ಕಳನ್ನು ಪಡೆದಿದ್ದಾರೆ. +ಇವರ ಸುಪುತ್ರ ಜಯರಾಮ ರೈ ಯವರು ಕಿರೀಟ ವೇಷದ ಪಾತ್ರೆಗಳನ್ನು ನಿರ್ವಹಿಸುವ ಹವ್ಯಾಸಿ ಕಲಾವಿದರಾಗಿದ್ದು ತಂದೆಯ ಶೈಲಿಯನ್ನು ಅನುಸರಿಸಿದ್ದಾರೆ. +ಕೃಷಿಕರಾಗಿರುವ ಇವರು ಮಳೆಗಾಲದ ಕಾರ್ಯಕ್ರಮಗಳಲ್ಲೂ ಬೇಡಿಕೆಯ ಕಲಾವಿದರಾಗಿ ಭಾಗವಹಿಸುತ್ತಾ ಇದ್ದಾರೆ. +ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ,ಕೀಲಾರು ಪ್ರತಿಷ್ಠಾನದ ಪ್ರಶಸ್ತಿ, ಹವ್ಯಾಸಿ ಬಳಗ ಕದ್ರಿಯ ದಶಮಾನ ಸಂವತಾನ ಶತಕದ ಸಂಮಾನ ಮುಂತಾದವುಗಳು ದೊರೆತಿರುವುದಲ್ಲದೆ, ಹಲವಾರು ಸಂಘ-ಸಂಸ್ಥೆಗಳ ಗೌರವಕ್ಕೆ ಪಾತ್ರರಾಗಿದ್ದಾರೆ. +ರಾಜವೇಷ ಮತ್ತು ನಾಟಕೀಯ ವೇಷಗಳ ಮುಖೇನ ಪ್ರಸಿದ್ಧಿಯಲ್ಲಿರುವ ಪೌರಾಣಿಕ ಮತ್ತು ತುಳು ಭಾಷಾ ಪ್ರಸಂಗದ ಅನುಭವಿ ಕಲಾವಿದ ಶ್ರೀ ಶಿವರಾಮ ಜೋಗಿ ಬಿ.ಸಿ.ರೋಡ್‌. + ಪ್ರಸ್ತುತ ಹೊಸನಗರ ಮೇಳದ ಹಿರಿಯ ಕಲಾವಿದರಾಗಿ ತಿರುಗಾಟವನ್ನು ನಡೆಸುತ್ತಾ ಇದ್ದಾರೆ. +ಗುರುವಪ್ಪ ಜೋಗಿ ಮತ್ತು ಸೀತಮ್ಮ ದಂಪತಿಯ ಸುಪುತ್ರರಾಗಿ 7-6-1941ರಂದು ಕಾಂಚನ ಎಂಬಲ್ಲಿ ಹುಟ್ಟಿದರು. +ಯಕ್ಷಗಾನದ ಪರಿಸರದಲ್ಲಿ ಹುಟ್ಟಿ ಬೆಳೆದ ಕಾರಣ ಕಲೆಯೊಳಗೆ ಪಳಗಬೇಕೆಂಬ ಉದ್ದೇಶದಿಂದ ಡಾ|ಶೇಣಿ ಗೋಪಾಲಕೃಷ್ಣ ಭಟ್‌. +ಗೋಪಾಲಕೃಷ್ಣ ಜೋಷಿ ಮತ್ತು ಗೋಪಾಲಕೃಷ್ಣ ಭಟ್‌ ಕುಡಾಣ ಇವರೆಲ್ಲರಿಂದ ರಂಗಾನುಭವವನ್ನು ಸಂಪಾದಿಸಿ ಬೆಳೆದರು. +13ನೇ ವಯಸ್ಸಿನಿಂದ ರಂಗಪ್ರವೇಶ ಮಾಡಿದ ಇವರು ಕೂಡ್ಲು ಮೇಳ - 1 ವರ್ಷ, ಮೂಲ್ಕಿಮೇಳ - 1 ವರ್ಷ, ಸುರತ್ಕಲ್‌ ಮೇಳ - 40ವರ್ಷ, ಕರ್ನಾಟಕ ಮೇಳ - 3 ವರ್ಷ,ಮಂಗಳಾದೇವಿ ಮೇಳ - 3 ವರ್ಷ, ಕುಂಟಾರುಮೇಳ - 2 ವರ್ಷ, ಎಡನೀರು ಮೇಳ - 2ವರ್ಷ ಹಾಗೂ ಹೊಸನಗರ ಮೇಳ - 4 ವರ್ಷಹೀಗೆ ತಿರುಗಾಟವನ್ನು ನಡೆಸಿರುವರು. +ಪುಂಡು ವೇಷ, ರಾಜವೇಷ ಮತ್ತು ನಾಟಕೀಯ ವೇಷಗಳನ್ನು ಮಾಡಿರುವ ಶಿವರಾಮ ಜೋಗಿಯವರು ಪ್ರಾಥಮಿಕ ಹಂತದ ವಿದ್ಯಾಭ್ಯಾಸವನ್ನು ಮಾಡಿರುವರು. +ಹಿರಣ್ಯಕಶ್ಯಪ, ಕಂಸ, ಹನುಮಂತ, ಕೌರವ, ದ್ರೋಣ,ಚೆನ್ನಂತು, ಚಂದುಗಿಡಿ, ದುಗ್ಗಣ ಕೊಂಡೆ,ಕಾರ್ತವೀರ್ಯ, ಇಂದ್ರಜಿತು, ಜಮದಗ್ನಿ, ರಾವಣ ಮುಂತಾದ ಪಾತ್ರಗಳನ್ನು ನಿರ್ವಹಿಸುತ್ತಾ ಇದ್ದಾರೆ. +ಬಾಲ್ಯ ಮತ್ತು ಯೌವನದ ಕಾಲದಲ್ಲಿ ಅಭಿಮನ್ಯು,ಅಶ್ವತ್ಥಾಮ, ಚೆನ್ನಯ, ಚಂಡ-ಮುಂಡ ಮುಂತಾದ ಪಾತ್ರಗಳನ್ನು ಮಾಡಿದ್ದಾರೆ. +ಶ್ರೀಮತಿ ಲತಾ ಎಂಬವರನ್ನು ವರಿಸಿರುವ ಇವರು ಶ್ರೀಮತಿ ಸೌಮ್ಯ, ಸುಮಂತ್‌ರಾಜ್‌ (ಆಫೀಸ್‌ಉದ್ಯೋಗಿ) ಎಂಬ ಇಬ್ಬರು ಮಕ್ಕಳನ್ನು ಪಡೆದಿದ್ದಾರೆ. +ಇವರ ಸಾಧನೆಗೆ ಪ್ರತಿಫಲವಾಗಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಕಿಲಾರು ಪ್ರಶಸ್ತಿ, ಉಡುಪಿ ಮಠದ ಸಂಮಾನ,ಎಡನೀರು ಮಠದ ಸಂಮಾನಗಳಲ್ಲದೆ ದೆಹಲಿ,ಮುಂಬಯಿ, ಬೆಂಗಳೂರು ಮುಂತಾಡೆಡೆಗಳಲ್ಲಿ ಹಲವು ಸಂಮಾನಗಳು ನಡೆದಿವೆ. +ಕಟೀಲು ಮೇಳದಲ್ಲಿ ಕಳೆದ 14 ವರ್ಷಗಳಿಂದ ತಿರುಗಾಟವನ್ನು ಮಾಡುತ್ತಿರುವ ಶ್ರೀ ಶಿವಪ್ರಸಾದ್‌ಭಟ್ಟರು ಬಣ್ಣವೇಷದ ಪಾತ್ರಗಳ ನಿರ್ವಹಣೆಯಲ್ಲಿ ಪ್ರೌಢಿಮೆಯನ್ನು ಸಾಧಿಸಿದ್ದಾರೆ. +ದಿ.3-9-1972ರಂದು ಶಿವರಾಮ್‌ ಭಟ್‌ ಮತ್ತು ಶಂಕರಿಯಮ್ಮ ದಂಪತಿಯ ಸುಪುತ್ರರಾಗಿ ಕುಂಡಡ್ಕ ಎಂಬಲ್ಲಿ ಜನಿಸಿದರು. +ಎಂಟನೆಯ ತರಗತಿಯ ತನಕ ವಿದ್ಯಾಭ್ಯಾಸವನ್ನು ಪಡೆದಿರುವ ಇವರು ಬಾಲ್ಯದಿಂದಲೇ ಯಕ್ಷಗಾನದತ್ತ ಆಕರ್ಷಿತರಾಗಿದ್ದರು. +ಕೃಷಿಕರಾಗಿರುವ ಚಿಕ್ಕತಂದೆ ವಿಠಲ ಶರ್ಮರು ಯಕ್ಷಗಾನದ ಕಲಾಸಕ್ತರಾಗಿದ್ದು ಇವರನ್ನು ಸದಾ ಪ್ರೋತ್ಸಾಹಿಸುತ್ತಾ ಬಂದಿದ್ದಾರೆ. +ಸಬ್ಬನಕೋಡಿ ರಾಮ್‌ ಭಟ್‌ ಅವರಲ್ಲಿ ಮೊದಲಾಗಿ ಯಕ್ಷಗಾನ ನಾಟ್ಯಾಭ್ಯಾಸವನ್ನು ಮಾಡಿದ ಇವರು ಮುಂದೆ ಧರ್ಮಸ್ಥಳದ ಲಲಿತಕಲಾ ಕೇಂದ್ರವನ್ನು ಸೇರಿ ಕೋಳ್ಕೂರು ರಾಮಚಂದ್ರ ರಾವ್‌ಅವರ ನೇತೃತ್ವದಲ್ಲಿ ಹೆಚ್ಚಿನ ನಾಟ್ಯಾಭ್ಯಾಸವನ್ನುಮಾಡಿದ್ದಾರೆ. +ಯಕ್ಷಗಾನದ ಹಿರಿಯ ಬಣ್ಣದ ವೇಷಧಾರಿಯಾಗಿರುವ ಪಕಳ ಕುಂಜ ಕೃಷ್ಣನಾಯ್ಕ್‌ ಅವರಲ್ಲಿ ಬಣ್ಣಗಾರಿಕೆಯ ಬಗ್ಗೆ ಅಭ್ಯಾಸವನ್ನು ಮಾಡಿರುವರು. +15ನೇ ವಯಸ್ಸಿನಿಂದಲೇ ಯಕ್ಷಗಾನದ ಪಾತ್ರನಿರ್ವಹಣೆಯನ್ನು ಮಾಡಿರುವ ಇವರು ಹವ್ಯಾಸಿ ಕಲಾವಿದರಾಗಿ ಕಲಾಸೇವೆಯನ್ನು ಮಾಡಿದ ಮೇಲೆ ಕಟೀಲು ಮೇಳವನ್ನು ಸೇರಿ ತಿರುಗಾಟವನ್ನು ನಡೆಸುತ್ತಾ ಇದ್ದಾರೆ. +ಮಳೆಗಾಲದ ಸಮಯದಲ್ಲಿ ನೆಡೆಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿಯಲ್ಲಿ ಕಲಾಸೇವೆಯನ್ನು ನಡೆಸುತ್ತಾ ಇದ್ದಾರೆ. +ಮಂಗಳೂರು, ಹೊಸಪೇಟೆ, ಹೈದರಾಬಾದ್‌,ಮೈಸೂರು, ಚೆನ್ನೈ ಮುಂತಾದ ಕಡೆಗಳಲ್ಲಿ ಸಂಮಾನ ಪುರಸ್ಕಾರಗಳು ಸಂದಿವೆ. +ರಾವಣ, ಮೈರಾವಣ, ಮಹಿಷಾಸುರ, ಭೀಮ,ಶುಂಭ, ಕುಂಭಕರ್ಣ, ಶೂರ್ಪನಖಾ, ತಾಟಕಿ,ಅಜಮುಖಿ ಮಧು, ಕೈಟಭ, ವಿದ್ಯುನ್ಮಾಲಿ ಮುಂತಾದ ಪಾತ್ರಗಳನ್ನು ಇವರು ನಿರ್ವಹಿಸಿದ್ದಾರೆ. +ಬಣ್ಣದ ವೇಷಧಾರಿಯಾಗಿರುವ ಶಿವರಾಮ ಶೆಟ್ಟರು ತೆಂಕು ಮತ್ತು ಬಡಗುತಿಟ್ಟಿನ ಮೇಳಗಳಲ್ಲಿ ತಿರುಗಾಟವನ್ನು ಮಾಡಿ ಹಿರಿತನಕ್ಕೆ ಸಂದಿರುವರು. +ತಿಮ್ಮಪ್ಪ ಶೆಟ್ಟಿ ಮತ್ತು ಕಾವೇರಿ ಶೆಡ್ತಿ ದಂಪತಿಯ ಸುಪುತ್ರರಾಗಿ ಹೊಸನಗರ ತಾಲೂಕಿನ ನಾಗರಕೋಡಿಯಲ್ಲಿ ಇವರು ಜನಿಸಿದ್ದಾರೆ. +ಈಗಾಗಲೇ 53ವರ್ಷಗಳ ವಯೋಮಾನವಂತರಾಗಿರುವ ಶಿವರಾಮಶೆಟ್ಟರು ಬಾಲ್ಯದಲ್ಲೇ ಯಕ್ಷಗಾನ ಕಲೆಯತ್ತ ಆಕರ್ಷಿತರಾಗಿದ್ದು, 15ನೇ ವಯಸ್ಸಿನಿಂದ ಕಲಾಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದ್ದಾರೆ. +ಪಡ್ರೆ ಚಂದು, ಬ್ರಹ್ಮಾವರ ಶ್ರೀನಿವಾಸ ನಾಯ್ಕ ಇವರೀರ್ವರಿಂದ ಪ್ರಭಾವಿತರಾಗಿರುವ ಶಿವರಾಮಶೆಟ್ಟರು ನೋಡಿ ಕಲಿತದ್ದೇ ಹೆಚ್ಚು. +ನಾಗರಕೋಡಿಗೆ ಮೇಳ-2 ವರ್ಷ, ಸುಬ್ರಹ್ಮಣ್ಯ ಮೇಳ-1 ವರ್ಷ,ಪೆರ್ಡೂರು ಮೇಳ-3 ವರ್ಷ, ಮಂದಾರ್ತಿ ಮೇಳ-2 ವರ್ಷ, ಗೋಳಿಗರಡಿ ಮೇಳ-2 ವರ್ಷ, ಕಮಲಶಿಲೆ ಮೇಳ-6 ವರ್ಷ, ಸಾಕೂರು ಮೇಳ-1 ವರ್ಷ,ಅಮೃತೇಶ್ವರಿ ಮೇಳ-1 ವರ್ಷ, ಸಾಲಿಗ್ರಾಮ ಮೇಳ-] ವರ್ಷ, ಮಾರಣಕಟ್ಟೆ ಮೇಳ-6 ವರ್ಷ, ಕಟೀಲು ಮೇಳ 11 ವರ್ಷ ಹೀಗೆ ಹಲವು ಮೇಳಗಳಲ್ಲಿ ತಿರುಗಾಟವನ್ನು ಮಾಡಿರುವರು. +ಆರಂಭದಲ್ಲಿ ಪುಂಡು ವೇಷವನ್ನು ಮಾಡುತ್ತಿದ್ದ ಇವರು ರಾಜವೇಷ ಮತ್ತು ಬಣ್ಣದ ವೇಷಗಳನ್ನು ನಿರ್ವಹಿಸುತ್ತಾ ಇದ್ದಾರೆ. +ಮಹಿಷಾಸುರ, ಮಧು,ಕೈಟಭ, ದೇವೇಂದ್ರ, ಅರ್ಜುನ, ರಾವಣ, ಮೈರಾವಣ ಮೊದಲಾದ ಪಾತ್ರಗಳನ್ನು ನಿರ್ವಹಿಸುತ್ತಿದ್ದಾರೆ. +ಮಳೆಗಾಲದಲ್ಲಿ ಕೃಷಿಕರಾಗಿ ಶ್ರಮಿಸುತ್ತಿರುವ ಇವರು ಶ್ರೀಮತಿ ಸರಸ್ವತಿ ಎಂಬವರನ್ನು ವರಿಸಿ, ಸುಧಾಮ(5ನೇ ತರಗತಿ), ಸುಚೇಮ (4ನೇ ತರಗತಿ) ಎಂಬ ಇಬ್ಬರು ಮಕ್ಕಳನ್ನು ಪಡೆದಿರುವರು. +ಕರ್ನಾಟಕ ಶಾಸ್ತ್ರೀಯ ಸಂಗೀತದ ಅನುಭವವನ್ನು ಯಕ್ಷಗಾನದ ಭಾಗವತಿಕೆಯ ಮುಖೇನ ವಿಸ್ತರಿಸಿ,ತನ್ನದೇ ಆದ ಶೈಲಿಯಿಂದ ಬೆಳೆದು ಕಟೀಲು ಮೇಳದ ಭಾಗವತರಾಗಿರುವ ಕುಬಣೂರು ಶ್ರೀಧರ ರಾವ್‌ ತನ್ನ ಯಕ್ಷ ಪ್ರಭಾ ಪತ್ರಿಕೆಯ ಮುಖೇನ ಹೆಸರುವಾಸಿಯಾಗಿದ್ದಾರೆ. +ದಿನಾಂಕ 17-1-1951ರಲ್ಲಿ ಕೃಷ್ಣಯ್ಯ ಮತ್ತು ರುಕ್ಮಿಣಿ ದಂಪತಿಯ ಸುಪುತ್ರರಾಗಿ ಕುಬಣೂರು ಎಂಬಲ್ಲಿ ಹುಟ್ಟಿದರು. +ಮಾವ ಪರಮೇಶ್ವರ ಬಳ್ಳಕುರಾಯ ಯಕ್ಷಗಾನ ಪೋಷಕರು ಹವ್ಯಾಸಿ ವೇಷಧಾರಿಯೂ ಆಗಿದ್ದುದರಿಂದ ಇವರಲ್ಲಿ ಮನೆತನದ ಪ್ರಭಾವವು ಮೈಗೂಡಿತು. +ಜೊತೆಗೆ ಶಾಲೆಯ ಪರಿಸರವು ಯಕ್ಷಗಾನದ ಮಖೇನ ಬೆಳೆಯಲು ಉತ್ತೇಜನವನ್ನು ನೀಡಿತ್ತು. +12ನೇ ವರ್ಷದಲ್ಲೇ ಯಕ್ಷಗಾನ ಕಲಾ ಪ್ರವೇಶ ಮಾಡಿದ ಇವರು ಉಪ್ಪಳ ಕೃಷ್ಣ ಮಸ್ತರ್‌ ಅವರಿಂದ ನಾಟ್ಯಾಭ್ಯಾಸ, ಅಡ್ಕಸ್ಥಳ ರಾಮಚಂದ್ರ ಭಟ್ಟರಿಂದ ಮದ್ದಳೆವಾದನದ ಅಭ್ಯಾಸ, ಟಿ.ಗೋಪಾಲಕೃಷ್ಣ ಹಾಗೂ ದಿ|ವರಾಂಬಾಡಿ ನಾರಾಂತುಣ ಬಾಗವತರಿಂದ ಭಾಗವತಿಕೆಯ ಅಭ್ಯಾಸವನ್ನು ಮಾಡಿದರು. + ಇಷ್ಟಲ್ಲದೆ ಐ.ರಘು ಮಾಸ್ಟರ್‌ ಎಂಬವರಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ಅಭ್ಯಾಸ ಮಾಡಿದರು. +ನಾಟ್ಯಕ್ಕೆ ಉಪ್ಪಳಕೃಷ್ಣ ಮಾಸ್ತರ್‌, ಮದ್ದಳೆ ವಾದನಕ್ಕೆ ಅಡ್ಕಸ್ಥಳ ರಾಮಚಂದ್ರ ಭಟ್‌ ಇವರು ಗುರುಗಳಾಗಿದ್ದಾರೆ. +ಮಂಗಳೂರಿನ ಕರ್ನಾಟಕ ಪೊಲಿಟೆಕ್ನಿಕ್‌ನಲ್ಲಿ ಡಿಪ್ಲೊಮ ಇನ್‌ ಮೆಕ್ಯಾನಿಕಲ್‌ ಇಂಜಿನಿಯರಿಂಗ್‌ ಪದವಿಯನ್ನು ಪಡೆದ ಇವರು ಮಂಗಳೂರಿನ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗಿಯಾದರು. +6 ವರ್ಷಗಳ ತನಕ ಉದ್ಯೋಗದ ಜೊತೆಗೆ ಹವ್ಯಾಸಿ ಭಾಗವತ ಹಾಗೂ ವೇಷಧಾರಿಯಾಗಿ ಕಲಾಸೇವೆ ಮಾಡಿದರು. +ವಿಶ್ವ ಭಾರತಿಕಲಾವೃಂದ (ರಿ.) ಇದರ ಮುಖೇನ ಯಕ್ಷಗಾನ ಪ್ರದರ್ಶನದ ವ್ಯವಸ್ಥೆ, ರಾಘವೇಂದ್ರ ಕಲಾ ನಿಲಯದ ಮುಖೇನ ಸ್ವಂತ ವೇಷ ಭೂಷಣ ಹಿಮ್ಮೇಳ ಪರಿಕರಗಳ ಬಾಡಿಗೆ ವ್ಯವಸ್ಥೆ ಮಾಡಿ ಬೆಳೆದವರು ಮುಂದೆ ಮೇಳ ತಿರುಗಾಟವನ್ನು ಆರಂಭಿಸಿದರು. +ಕೂಡ್ಲು ಮೇಳ (ಸ್ವಂತಸಂಘಟನೆ) 1 ವರ್ಷ, ಕದ್ರಿ ಮೇಳ - 2 ವರ್ಷ,ನಂದಾವರ ಮೇಳ - 1 ವರ್ಷ, ಅರುವ ಮೇಳ - 1ವರ್ಷ, ಬಪ್ಪನಾಡು ಮೇಳ- 4 ವರ್ಷ, ಕಾಂತಾವರಮೇಳ - 1 ವರ್ಷ, ಕಟೀಲು ಮೇಳ-20 ವರ್ಷ ಹೀಗೆ ತಿರುಗಾಟದ ಹಿನ್ನೆಲೆ ಇದೆ. +ಕಳೆದ 15 ವರ್ಷಗಳಿಂದ ಯಕ್ಷಗಾನಕ್ಕೆ ಮೀಸಲಾಗಿರುವ ಯಕ್ಷಪ್ರಭಾ ಪತ್ರಿಕೆಯ ಸಂಪಾದಕರೂ ಪ್ರಕಾಶಕರೂ ಆಗಿರುವ ಇವರು ಶ್ರೀಮತಿ ಶಾರದಾ ಎಂಬವರನ್ನು ವರಿಸಿ ಶ್ರೀ ವಿದ್ಯಾ ಬಿ.ಎ. ಪತ್ರಿಕೋದ್ಯಮ (ಟಿ. +9 ಬೆಂಗಳೂರು ದೂರದರ್ಶನದ ಕಂಪೆನಿಯಲ್ಲಿ ಉದ್ಯೋಗಿ) ಶ್ರೀಕಾಂತ ಬಿ.ಕಾಂ. (ಕರ್ನಾಟಕ ಬ್ಯಾಂಕಲ್ಲಿ ಉದ್ಯೋಗಿ) ಎಂಬ ಈರ್ವರೂ ಮಕ್ಕಳನ್ನು ಪಡೆದಿದ್ದಾರೆ. +ದಾಶರಥಿ ದರ್ಶನ,ಮನುವಂಶ ವಾಹಿನಿ ಸಾರ್ವಭೌಮ ಸಂಕರ್ಷಣ ಮೊದಲಾದ ಪ್ರಸಂಗಳನ್ನು ರಚಿಸಿರುವ ಇವರ ಪ್ರತಿಭೆ ಮತ್ತು ಪರಿಶ್ರಮಕ್ಕೆ ಪ್ರತಿರೂಪವಾಗಿ ದ.ಕ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಗೋವಾ ಕನ್ನಡ ಸಮ್ಮೇಳನ ಕಾಳಿಂಗ ನಾವಡ ಪ್ರಶಸ್ತಿ, ಅಗರಿ ಭಾಗವತ ಸಂಸ್ಮರಣ ಪ್ರಶಸ್ತಿ, ಮುಂಬಯಿ ಮುಂತಾದ ಐದಾರು ಪ್ರಶಸ್ತಿಗಳು 20ಕ್ಕೂ ಮಿಕ್ಕಿದ ಸಂಮಾನಗಳು ಸಂದಿವೆ.