From c42dd78b57394a50781079edc617c0bdefbdc9b6 Mon Sep 17 00:00:00 2001 From: Narendra VG Date: Mon, 17 Apr 2023 15:49:20 +0530 Subject: [PATCH] Upload New File --- ...\340\263\215\340\262\267\340\262\277_.txt" | 91 +++++++++++++++++++ 1 file changed, 91 insertions(+) create mode 100644 "Data Collected/Kannada/MIT Manipal/Kannada-Scrapped-dta/\340\262\227\340\262\277\340\262\243\340\262\277\340\262\257_\340\262\270\340\262\276\340\262\225\340\263\215\340\262\267\340\262\277_.txt" diff --git "a/Data Collected/Kannada/MIT Manipal/Kannada-Scrapped-dta/\340\262\227\340\262\277\340\262\243\340\262\277\340\262\257_\340\262\270\340\262\276\340\262\225\340\263\215\340\262\267\340\262\277_.txt" "b/Data Collected/Kannada/MIT Manipal/Kannada-Scrapped-dta/\340\262\227\340\262\277\340\262\243\340\262\277\340\262\257_\340\262\270\340\262\276\340\262\225\340\263\215\340\262\267\340\262\277_.txt" new file mode 100644 index 0000000..78cc5f1 --- /dev/null +++ "b/Data Collected/Kannada/MIT Manipal/Kannada-Scrapped-dta/\340\262\227\340\262\277\340\262\243\340\262\277\340\262\257_\340\262\270\340\262\276\340\262\225\340\263\215\340\262\267\340\262\277_.txt" @@ -0,0 +1,91 @@ +ಹತ್ತಿರವಿದ್ದ ನೆರೆಹೊರೆಯ ಮನೆಯವರಿಗೆ ಗಿಣಿಯ ಕೀರಲು ಕಿರುಚಾಟ ಕೂಗಾಟ ಸತತವಾಗಿ ಕೇಳಿಬಂದಾಗ ಅವರು ಅಲ್ಲಿಗೆ ಧಾವಿಸಿ ಬಂದಿದ್ದರು. +ಗೌರಿಯು ಕಳೇಬರವಾಗಿ ಬಿದ್ದಿರುವುದು ನೋಡಿ ಅವರಿಗೆ ದಿಗ್ಭ್ರಾಂತಿಯಾಯಿತು. +ಅವಳ ಭುಜದ ಮೇಲೆ ಸದಾ ಸಂತಸದಿಂದ ಹರಟುತ್ತಿದ್ದ ಗಿಣಿ ಅವಳ ಎದೆಯ ಮೇಲೆ ಕುಳಿತು ಕೀರಲು ಧ್ವನಿಯಲ್ಲಿ ರೋದನಗೈಯುತ್ತಿರುವುದು ಎಲ್ಲರ ಕರುಳನ್ನು ಕಲುಕುತಿತ್ತು. +ಗೌರಿಗೆ ಮದುವೆಯಾಗಿ ಕೇವಲ ಒಂದು ವರ್ಷವಾಗಿತ್ತು. +ಅವಳ ಗಂಡ ಆಟೋ ಚಾಲಕನಾಗಿದ್ದು ಕೆಲವು ದುಶ್ಚಟಗಳಿಗೆ ಶರಣಾಗಿದ್ದ. +ಮನೆಯಲ್ಲಿ ಗಯ್ಯಾಳಿ ಅತ್ತೆ, ದುರಾಶೆಯ ಮಾವ ಅವಳ ಬಾಳಿಗೆ ಎಲ್ಲವೂ ಅಸಹನೀಯವಾಗಿದ್ದವು. +ದಿನ ಬೆಳಗಾದರೆ ಮನೆ ರಣರಂಗವಾಗುತ್ತಿತ್ತು. +ಜಗಳ ಕದನದ ಆಕ್ರೋಶದಲ್ಲಿ ಗೌರಿಯ ಹೋರಾಟ ಅಸಹಾಯಕವಾಗುತಿತ್ತು. +“ನಿಮ್ಮ ಅಪ್ಪ ವರದಕ್ಷಿಣೆ ಕೊಡದೆ ನಿನ್ನ ದರಿದ್ರ ಗೌರಿಯಾಗಿ ನಮ್ಮ ಮನೆಗೆ ಕಳಿಸಿದ. +ನೀನು ನಮ್ಮ ಮನೆ, ಮನಗಳನ್ನು ತುಂಬಲಿಲ್ಲ. +ನೀನು ಮನೆ ಹೊಸಿಲೊಳಗೆ ಕಾಲಿಟ್ಟ ದಿನದಿಂದ ನಮಗೆ ದರಿದ್ರ ಲಕ್ಷ್ಮಿ ಮಾತ್ರ ಒಲಿದಿದ್ದಾಳೆ. +ಹೋಗೆ! ನಿಮ್ಮಪ್ಪನ ಹತ್ತಿರ ವರದಕ್ಷಿಣೆ ತೆಗೆದುಕೊಂಡು ಬಾ” ಎಂದು ಕೂದಲೆಳೆದು ತಳ್ಳಿ ಮೂದಲಿಸುತ್ತಿದ್ದರು. +ಮಾವ ಅದಕ್ಕೆ ತಮಟೆ ಬಾರಿಸುತ್ತಿದ್ದ, ಗಂಡ ಅವರ ಮಾತಿಗೆ ಕುಣಿದು ವರದಕ್ಷಿಣೆ ತರದಿದ್ದರೆ ನೀನು ನನ್ನ ಹೆಂಡತಿ ಅಲ್ಲ ಅನ್ನುತಿದ್ದ. +ಅವಳು ತವರು ಮನೆಯಿಂದ ಬರುವಾಗ ಅವಳ ಜೊತೆ ಬಂದಿದ್ದ ಅವಳ ಬಾಲ್ಯದ ಪ್ರೀತಿಯ ಆಸ್ತಿ ಎಂದರೆ ಅವಳು ಸಾಕಿಕೊಂಡ ಗಿಣಿ. +ಅದು ಸದಾ ಅವಳ ಜೊತೆಯಲ್ಲಿರುತ್ತಿತ್ತು ಅವಳು ಅದಕ್ಕೆ ಮಾತನಾಡುವುದನ್ನು ಕಲಿಸಿದ್ದಳು. +ತನ್ನ ದುಃಖವನ್ನು ಅದಕ್ಕೆ ಹೇಳಿಕೊಳ್ಳುತಿದ್ದಳು. +ಅದು ಎಷ್ಟೋ ಬಾರಿ ಅವಳ ಭಾವನೆಗಳಿಗೆ ಸ್ಪಂದಿಸುತ್ತಿತ್ತು. + ಆಪ್ತ ಗೆಳತಿಯಂತೆ ಗಿಣಿ ಅವಳಿಗೆ ಸಹಾನುಭೂತಿ ತೋರಿಸುತ್ತಿತ್ತು. + ಗೌರಿಯ ಗಯ್ಯಾಳಿ ಆತ್ತೆ ಗೌರಿಯ ಮೇಲೆ ಬೈಗಳನ್ನು ಸುರಿಸಿ ಕೈ ಮಾಡಲು ಬಂದಾಗ ಗಿಣಿ ಹಾರಿ ಹೋಗಿ ಅವಳ ಮುಖವನ್ನು ಪರಚಿ ದೂರ ಓಡಿಹೋಗುವಂತೆ ಮಾಡುತ್ತಿತ್ತು. +ಕತ್ತು ಹಿಸುಕುವ ದ್ವೇಷ ಅವಳಿಗೆ ತನ್ನ ಮೇಲೆ ಇದೆ ಎಂದು ಅರಿತು ಅದು ಹಾರಿ ಅವಳ ಕೈಗೆ ಸಿಕ್ಕದಂತೆ ನುಸುಳಿಕೊಳ್ಳುತ್ತಿತ್ತು. +ಗೌರಿ ಗಿಣಿಗೆ ‘ಸ್ನೇಹಲತಾ’ ಎಂದು ಹೆಸರಿಟ್ಟು ಕರಿಯುತ್ತಿದ್ದಳು. +ಅದರ ಸ್ನೇಹ, ಸಹವಾಸ ಅವಳ ದುಸ್ತರ ಜೀವನಕ್ಕೆ ಸ್ನೇಹಸಿಂಚನ ಗೈಯುತಿತ್ತು. +“ಸ್ನೇಹ! ನನಗೆ ಜೀವನ ಭಾರವಾಗಿದೆ ನಾನು ಮನೆಯವರ ಕಿರುಕುಳ ಸಹಿಸಲಾರೆ” ಎಂದು ಗೋಳಿಡುತ್ತಿದ್ದಳು. +“ಅಕ್ಕಾ! ಅಳಬೇಡ, ಅಳಬೇಡ” ಎಂದು ಹೇಳಿ ಸಂತೈಸುತಿತ್ತು. +ಮನುಷ್ಯರ ಹೃದಯಗಳು ಕಲ್ಲಾದಾಗ ಗಿಣಿಯ ಪ್ರೀತಿ ಸೌಜನ್ಯ ಸ್ನೇಹ ಎಷ್ಟೋ ಮೇಲು ಅನಿಸಿದ್ದುಂಟು. +ಅದು ಅವಳ ಮನದ ಅಳಲನ್ನು ಅರಿತು ಸತತ ಸ್ಪಂದಿಸುತಿತ್ತು. +ಅವಳು ಹದಿನೈದು ವರುಷದ ಹುಡುಗಿಯಾಗಿದ್ದಾಗ ಅವಳ ಅಪ್ಪ ಅವಳಿಗೆ ಗಿಣಿಯನ್ನು ತಂದು ಕೊಟ್ಟಿದ್ದರು. +ಗೌರಿಯ ತಂದೆಗೆ ಸಣ್ಣದೊಂದು ಮಾವಿನ ತೋಪಿತ್ತು. +ಮಾವಿನ ಹಣ್ಣಿನ ಬೆಳೆ ಚೆನ್ನಾಗಿ ಆದಾಗ ಸಂಸಾರಕ್ಕೆ ಸ್ವಲ್ಪ ಆದಾಯ ಸಿಗುತ್ತಿತ್ತು. +ಕೆಲವೊಮ್ಮೆ ಕಳೆ ಸಾಧಾರಣವಾಗಿದ್ದು ಅವರಿಗೆ ಕಷ್ಟ ನಷ್ಟಗಳು ಆಗುತ್ತಿದ್ದವು. +ಒಬ್ಬಳೇ ಮಗಳಾದ ಗೌರಿಯನ್ನು ಅವರ ಮತ್ತು ಅವರ ಪತ್ನಿ ಬಹಳ ಪ್ರೀತಿಯಿಂದಲೇ ಬೆಳೆಸಿದ್ದರು. +ಅವಳಿಗೆ ಗೆಳೆತಿಯರು ಯಾರೂ ಇಲ್ಲವೆಂದು ಅವಳಿಗೆ ಜೊತೆಯಾಗಿದ್ದು ಸಂತಸ ನೀಡಲು ಗಿಣಿಯನ್ನು ತಂದು ಇಟ್ಟಿದ್ದರು. +“ಅಪ್ಪಾಗಿಣಿಯನ್ನು ಎಲ್ಲಿಂದ ತಂದೆ?” ಎಂದು ಆಶ್ಚರ್ಯ ಸಂತಸದಿಂದ ಗೌರಿ ಕೇಳಿದ್ದಳು. +“ಅಮ್ಮಾ! ಮಗಳೆ, ನಾನು ಅದನ್ನು ಬಲವಂತವಾಗಿ ಹಿಡಿದು ತಂದಿಲ್ಲ. +ಅದು ಕಾಲಿಗೆ ಪೆಟ್ಟು ಮಾಡಿಕೊಂಡು ಮೇಲೆ ಮಾವಿನ ಮರಕ್ಕೆ ಹಾರಲಾರದೆ ಕೆಳಗೆ ಕುಂಟುತ್ತಾ ಓಡಾಡುತಿತ್ತು. +ಅದರ ಕಾಲಿಗೆ ಔಷಧಿ ಪಥ್ಯ ಮಾಡಿ ಸರಿಮಾಡೋಣ ಅಂತ ತಂದಿರುವೆ” ಎಂದಿದ್ದರು. +ದಿನವೂ ಅದರ ಕಾಲಿನ ಆರೈಕೆ ಮಾಡಿದ ಗೌರಿಗೆ ಗಿಣಿ ‘ಸ್ನೇಹಲತೆ’ಯಾಗಿ ಹಬ್ಬಿಕೊಂಡಳು ಅವಳ ಒಲವಿಗೆ. +ಅವಳ ಮನೆಗೆ, ಸಂಸಾರದ ಪರಿಸರಲ್ಲಿ ಒಂದು ಮಗುವಂತೆ ಬೆಳೆದು ಗೌರಿಗೆ ಗೆಳತಿಯಾಗಿತ್ತು. +ಅವಳು ಕೊಡುತ್ತಿದ್ದ ಟೊಮೇಟೋ, ಸೌತೇಕಾಯಿ, ಚೇಪೆಹಣ್ಣು, ಭತ್ತ, ಜೋಳ ಎಲ್ಲ ಅದಕ್ಕೆ ಬಹಳ ಪ್ರಿಯವಾಗುತಿತ್ತು. +ಗೌರಿಯ ಒಲವಿನ ಬಂಗಾರ ಪಂಜರ ಬಿಟ್ಟು ಗಿಣಿ ಎಲ್ಲಿಗೂ ಹಾರಿಹೋಗಲಿಲ್ಲ. +ಗೌರಿ ಮದುವೆಯಾಗಿ ಅತ್ತೆ ಮನೆಗೆ ಹೋಗುವಾಗ ಅವಳನ್ನೇ ಹಿಂಬಾಲಿಸಿತ್ತು ಅವಳ ನೆರಳಿನಂತಿದ್ದ ಗಿಣಿ. +ಮನೆಗೆ ಬಂದ ಹೊಸದರಲ್ಲಿ ಗೌರಿಯನ್ನು ಗಿಣಿಯನ್ನು ಆಧರಿಸಿದ ಅತ್ತೆ, ಮಾವ, ಗಂಡ ಬರುಬರುತ್ತಾ ಕಟುಕರಂತಾಗತೊಡಗಿದರು. +ಅವರಿಗೆ ವರದಕ್ಷಿಣೆ ಭೂತ ಬೆನ್ನಟ್ಟಿತ್ತು. +ಗೌರಿಯ ಜೀವ ಹಿಂಡಿಯಾದರೂ ವರದಕ್ಷಿಣೆ ಪಡೆಯುವ ಗುರಿ ಅವರದಾಗಿತ್ತು. +ತನ್ನ ತಂದೆಯ ಬಡತನದಲ್ಲಿ ವರದಕ್ಷಿಣೆ ಕೊಡುವ ಸಾಧ್ಯತೆ ಇರಲಿಲ್ಲವೆಂದು ಗೌರಿಗೆ ಚೆನ್ನಾಗಿ ಗೊತ್ತಿತ್ತು. +ಅವಳು ಅಸಾಹಯಕಳಾಗಿದ್ದಳು. +ಒಂದು ಕಡೆ ಅತ್ತೆ ಮಾವಂದಿರ ತೊಂದರೆ. +ಇನ್ನೊಂದು ಕಡೆ ಗಂಡನ ಕಿರುಕುಳ. +ಅವಳ ಬಾಳಿಗೆ ಯಾವ ನೇರ ದಾರಿಯೂ ಕಾಣಲಿಲ್ಲ. +“ನಾನು ರಾತ್ರಿ ಹನ್ನೆರಡರವರೆಗೂ ದುಡಿದು ಬರುತ್ತೇನೆ. +ಧಣಿಗೆ, ಆಟೋ ಬಾಡಿಗೆಗೆ ಮತ್ತು ಅವನ ಸಿಂಹದ ಪಾಲನ್ನು ಕೊಟ್ಟ ಮೇಲೆ ನಮ್ಮ ಸಂಸಾರಕ್ಕೆ ಉಳಿಯುವುದಾದರೂ ಏನು ಎಂಬುದರ ಪರಿವೆ ಕೂಡ ನಿನಗೆ ಇಲ್ಲ. +ನೀನು ವರದಕ್ಷಿಣೆ ತಂದರೆ ನಮ್ಮದೇ ಆಟೋ ಕೊಂಡುಕೊಳ್ಳಬಹುದಲ್ಲವೇ? ನಾ ದುಡಿದು ಸುಸ್ತಾಗಿ ಬರುವ ಹೊತ್ತಿಗೆ ನೀ ಬಿದ್ದುಕೊಂಡಿದ್ದಿಯಾ? ಏಳು” ಅಂತ ಗೌರಿಯನ್ನು ದಬಾಯಿಸಿ ದಬ್ಬಾಳಿಕೆ ಮಾಡುತ್ತಿದ್ದ. +ಬಲಿಪಶುವಂತೆ ಗೌರಿ ಎಲ್ಲವನ್ನೂ ಸಹಿಸಿಕೊಂಡು ಹಗಲು ರಾತ್ರಿಗಳನ್ನು ನೂಕುತ್ತಿದ್ದಳು. +ಇವಳ ದುಃಖದ ಹಾದಿಯಲ್ಲಿ ಜೊತೆಯಾಗಿರುತ್ತಿದ್ದ ಒಂದು ಜೀವ ಎಂದರೆ ಅವಳ ಗಿಣಿ ಅವಳ ವೇದನೆಗೆ ಮಿಡಿಯುತ್ತಿತ್ತು. +ಅಂದು ಅತ್ತೆ ಮಾವ ಜಮೀನು ನೋಡಿಕೊಂಡು ಬರಲು ಹಳ್ಳಿಗೆ ಹೋಗಿದ್ದರು. +ಅಂದು ಮನೆಯಲ್ಲಿದ್ದವರು ಗೌರಿ ಮತ್ತು ಅವಳ ಗಂಡ ಹಾಗೂ ಗೌರಿಯ ಗಿಣಿ. +ಬೆಳಗಿನ ಝಾವ ನೆರೆಹೊರೆಯವರಿಗೆ ಕೇಳಿಸಿದ್ದು ಗಿಣಿಯ ಗೋಳಿನ ಕಿರಿಚಾಟ. +“ಗೌರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳಂತೆ.” +“ಅಲ್ಲಿ ನೋಡಿ ಅವಳ ಗಿಣಿ ಹೇಗೆ ಗೋಳಿಡುತ್ತಾ ಇದೆ.” +“ಅವಳ ಗಂಡ ನೋಡು ಹೇಗೆ ಸುಮ್ಮನೆ ನಿಂತಿದ್ದಾನೆ.” +“ಅಯ್ಯೋ! ಅವನೇ ನಮಗೆ ಹೇಳಿದ್ದು. +ಅವಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ” ಅಂತ ಇನ್ನೊಬ್ಬರು, ಮತ್ತೊಬ್ಬರು, ಸೇರಿದ ಜನ ಒಬ್ಬೊಬ್ಬರು ಒಂದು ಒಂದೊಂದು ರೀತಿಯಲ್ಲಿ ಹೇಳುತ್ತಿದ್ದರು. +“ಅತ್ತೆ-ಮಾವ ಹಳ್ಳಿಗೆ ಹೋಗಿದಾರಂತೆ ಮತ್ತೆ ಗೌರಿ ಯಾಕೆ ಆತ್ಮಹತ್ಯೆ ಮಾಡಿಕೊಂಡಳು?” ಅಂತ ಒಬ್ಬರು ತರ್ಕಿಸಲು, +ಅಷ್ಟರಲ್ಲಿ ವಿಚಾರಣೆಗೆಂದು ಅಲ್ಲಿ ಪೊಲೀಸರು ಬಂದರು. +ಮಾತನಾಡಲು ಬರುತ್ತಿದ್ದ ಗಿಣಿಯನ್ನು ನೋಡಿ ಅವರಿಗೆ ಆಶ್ಚರ್ಯವಾಯಿತು. +“ಅವನೇ ಕೊಂದ ಪಾಪ ಗೌರಿ ಅಕ್ಕ” ಅಂತ ಪದೇ ಪದೇ ಗಿಣಿ ಹೇಳುತಿತ್ತು. +“ಯಾರು? ತೋರಿಸು ಗಿಣಿ” ಅಂತ ಪೊಲೀಸು ಕೇಳಿದಾಗ ಗಿಣಿ ಹೋಗಿ ಗೌರಿ ಗಂಡನ ಭುಜದ ಮೇಲೆ ಕುಳಿತು “ಇವನೇ ಇವನೇ, ಪಾಪ ಗೌರಿ ಅಕ್ಕ” ಅನ್ನುತ್ತಿತ್ತು. +“ಅಯ್ಯೋ! ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಅಂತ ಗಂಡ ಹೇಳ್ತಾನೆ, ಗಿಣಿ ನೋಡಿದರೆ ಅವನೇ ಕೊಂದ ಅಂತ ಹೇಳುತ್ತೆ” ಅಂತ ಅಲ್ಲಿದ್ದ ಜನರಿಗೆ ಪೊಲೀಸರಿಗೆ ಅತ್ಯಾಶ್ಚರ್ಯವಾಯಿತು. +ಅಂದು ರಾತ್ರಿ ಗಂಡ ಹೆಂಡತಿಗೆ ನಡೆದ ವರದಕ್ಷಿಣೆ ವಸೂಲಿಯ ಸಮರದಲ್ಲಿ ಮಾರಾಮಾರಿ ಯುದ್ಧ ನಡೆದಿತ್ತು. +ಗೌರಿ ಗಂಡನ ನಿಲುವನ್ನು ಪ್ರತಿಭಟಿಸಿದ್ದಳು. +ಗಂಡನನ್ನು ವಿರೋಧಿಸಿ ಗೌರಿ ತಂದೆ ತಾಯಿಯನ್ನು ಬೆಂಬಲಿಸಿದಾಗ ಅವನ ಕೋಪ ನೆತ್ತಿಗೇರಿ ಅವನು ಕಟುಕನಾಗಿ ಅವಳ ಕತ್ತು ಗಟ್ಟಿಯಾಗಿ ಹಿಚುಕಿದ್ದ. +ಅವಳು ಕಿರುಚಲು ಆಗದೆ ಉಸುರು ಕಟ್ಟಿ ಪ್ರಾಣ ಬಿಟ್ಟಿದ್ದಳು. +ಗಿಣಿ ಅವಳನ್ನು ರಕ್ಷಿಸಲು ಮಾಡಿದ ಪ್ರಯತ್ನವೆಲ್ಲಾ ವ್ಯರ್ಥವಾಗಿತ್ತು. +ಗೌರಿ ಸತ್ತು ಬಿದ್ದೊಡನೆ ಅವಳ ಗಂಡ ಭಯಗ್ರಸ್ತನಾಗಿ ಮನೆಯಿಂದ ಹೊರಗೆ ಹೋಗಿ ಬಿಟ್ಟಿದ್ದ. +ರಾತ್ರಿ ಎಲ್ಲಾ ಗಿಣಿ ಅವಳ ಎದೆಯ ಮೇಲೆ ಕುಳಿತು ಅತ್ತು ಗೋಳಿಡುತಿತ್ತು. +ಅವಳಿಗೆ ಹೊದಿಕೆ ಎಳೆದು ಹೊದಿಸಿತ್ತು ಅವಳ ಕೂದಲನ್ನು ನೇವರಿಸಿತ್ತು ಅವಳ ಕೆನ್ನೆಗೆ ಮುದ್ದು ಕೊಡುತ್ತಿತ್ತು. + “ಅಕ್ಕಾ! ಅಕ್ಕಾ! ಗೌರಿ ಅಕ್ಕಾ!” ಎಂದು ರಾತ್ರಿ ಎಲ್ಲಾ ಸತತವಾಗಿ ಜಪಮಾಡಿತ್ತು. + ಅವಳ ಪ್ರೀತಿಯ ಒಲವಿನ ಎದೆಯಿಂದ ಅತ್ತ ಇತ್ತ ಕದಲದೇ ಕುಳಿತಿತ್ತು. + ‘ಅವಳು ಕಣ್ಣು ತೆರೆಯುತ್ತಾಳಾ? ಅವಳು ‘ಸ್ನೇಹಾ’ ಎಂದು ಕರೆಯುತ್ತಾಳಾ? ಅವಳು ಎದ್ದು ತನ್ನ ಕೈಯಲ್ಲಿ ನೇವರಿಸುತ್ತಾಳಾ?’ ಎಂದು ಪರಿತಪಿಸಿ ಒದ್ದಾಡುತ್ತಿತ್ತು. + ಪೊಲೀಸರು ಗಿಣಿಯ ಸಾಕ್ಷಿ ಬರೆದುಕೊಳ್ಳಲು ಹಿಂಜರಿದರು. +“ಗಿಣಿ ಜೊತಿಷ್ಯ ಜನ ನಂಬುತ್ತಾರೆ. +ಗಿಣಿ ಹೇಳೋದನ್ನ ಪೊಲೀಸರು ನಂಬೋದು ತಾನೇ” ಎಂದು ಹೇಳಿ ಚರ್ಚಿಸುತ್ತಿದ್ದರು ಕೆಲವರು. +“ಅಲ್ಲಾರಿ! ನಾಯಿ ವಾಸನೆ ಮೂಲಕ ಯಾರು ಕೊಲೆ ಮಾಡಿದ್ದು ಅಂತ ಹೇಳಲು ಸಹಾಯ ಮಾಡಿದಾಗ ಅದನ್ನು ಪೋಲಿಸರು ಗಣನೆಗೆ ತೆಗೆದುಕೊಳ್ಳುತ್ತಾರೆ. +ಆದರೆ ಗೌರಿಯ ಆಪ್ತ ಗೆಳತಿಯಾಗಿದ್ದ ಗಿಣಿ ಹೇಳಿದ್ದು ನೂರಕ್ಕೆ ನೂರು ನಿಜ ಅಂತ ತಿಳಿಯೋದು ತಾನೆ” ಅಂತ ಇನ್ನೊಬ್ಬರು ಹೇಳುತ್ತಿದ್ದರು. +“ಪ್ರಾಣಿಗಳು ತಮ್ಮ ಬುದ್ದಿವಂತಿಕೆಯಿಂದ ಮನುಷ್ಯನಿಗೆ ಸಹಾಯ ಮಾಡಿದರೂ ಅದರಲ್ಲಿ ಎಷ್ಟು ವೈಜ್ಞಾನಿಕತೆ ಇದೆ ಎಂದು ಶಂಕಿಸುವುದೇ ಕಷ್ಟ?” ಅಂತ ಮತ್ತೊಬ್ಬ ಹೇಳುತ್ತಿದ್ದ. +“ಅಯ್ಯೋ! ಸುಮ್ನಿರಪ್ಪ, ಮನುಷ್ಯರೇ ಸುಳ್ಳು ಹೇಳ್ತಾರೆ, ಮುಚ್ಚಿಡುತ್ತಾರೆ. +ಯಾವುದು ಸುಳ್ಳು, ಯಾವುದು ಅಪ್ಪಟ ನಿಜ ಅಂತ ತಿಳಿಯೋದು” ಅಂತ ಇನ್ನೊಬ್ಬ ವಾದಿಸುತ್ತಿದ್ದ. +ಗೌರಿಯ ಗಂಡನೇ ಕೊಲೆಗಡುಕ ಎಂದು ಪದೇ ಪದೇ ಕಿರಿಚಿ ಗಿಣಿ ಹೇಳುವ ಮಾತಿನ ಸಾಕ್ಷಿಯನ್ನು ಒಪ್ಪಬಹುದೇ? +ಅದರ ಆಧಾರದ ಮೇಲೆ ಅವನನ್ನು ಬಂಧಿಸಿ ನ್ಯಾಯಾಲಯಕ್ಕೆ ಕರೆದೊಯ್ದರೆ ಗಿಣಿ ನ್ಯಾಯಾಲಯದಲ್ಲಿ ಮತ್ತೆ ಅದೇ ಸಾಕ್ಷಿ ದೃಢೀಕರಿಸಬಲ್ಲುದೇ? ಇದನ್ನು ನ್ಯಾಯಾಲಯ ಸ್ವೀಕರಿಸೀತೇ? ಗೌರಿಯ ಆತ್ಮಕ್ಕೆ ಶಾಂತಿ ಸಿಗುವವರೆಗೂ ಗಿಣಿ ಮಾತ್ರ ಸುಮ್ಮನಿರಲಾರದೆಂದು ಜನ ಆಡಿಕೊಳ್ಳುತ್ತಿದ್ದರು. +ಗೌರಿಯ ಬಾಳು ಅಂತ್ಯವಾದ ಎಂಟು ದಿನಕ್ಕೆ ಮತ್ತೊಂದು ಪ್ರಾಣಪಕ್ಷಿ ಹಾರಿಹೋಯಿತು. +ಅದು ಅವಳ ಗೆಳತಿ ಗಿಣಿಯದಲ್ಲದೆ ಮತ್ಯಾರದಾದರು ಇರಲು ಸಾಧ್ಯವೇ? -- GitLab