diff --git "a/Data Collected/Kannada/MIT Manipal/\340\262\265\340\263\207\340\262\244\340\262\250_\340\262\206\340\262\257\340\263\213\340\262\227.txt" "b/Data Collected/Kannada/MIT Manipal/\340\262\265\340\263\207\340\262\244\340\262\250_\340\262\206\340\262\257\340\263\213\340\262\227.txt" new file mode 100644 index 0000000000000000000000000000000000000000..bdd4f04b0db98356a965e1a9e2c25b149e441523 --- /dev/null +++ "b/Data Collected/Kannada/MIT Manipal/\340\262\265\340\263\207\340\262\244\340\262\250_\340\262\206\340\262\257\340\263\213\340\262\227.txt" @@ -0,0 +1,19 @@ +ಭಾರತ ಸರ್ಕಾರದಿಂದ ನಿಯೋಜನೆಗೊಳ್ಳುವ ಈ ಆಯೋಗವು ಕಾಲಕ್ಕನುಗುಣವಾಗಿ ಸರ್ಕಾರಿ ಕೆಲಸಗಾರರ ವೇತನ ಸ್ವರೂಪ ಬದಲಾವಣೆಗೆ ಶಿಫಾರಸ್ಸು ಮಾಡಲೆಂದೇ ರಚಿತವಾಗಿರುತ್ತದೆ . +ಸ್ವತಂತ್ರ ಬಂದಾಗಿನಿಂದ ಇಲ್ಲಿಯವರೆವಿಗೂ ಏಳು ವೇತನ ಆಯೋಗಗಳನ್ನು ರಚಿಸಿ ಅವುಗಳಿಂದ ಸರ್ಕಾರಿ ಕೆಲಸಗಾರರ ವೇತನ ಕುರಿತಾಗಿ ಶಿಫಾರಸ್ಸು ಪಡೆಯಲಾಗಿದೆ . +ಸರ್ಕಾರದ ನಾಗರೀಕ ಸೇವಾ ವಲಯಗಳು ಹಾಗು ದೇಶದ ಸೇನಾ ವಿಭಾಗಗಳಿಗೆ ವೇತನ ಆಯೋಗದ ಶಿಫಾರಸ್ಸು ಬಹು ಮುಖ್ಯವಾಗಿರುತ್ತದೆ . +ವೇತನ ಆಯೋಗದ ಮುಖ್ಯ ಕಚೇರಿ ದೆಹಲಿಯಲ್ಲಿದ್ದು ಭಾರತ ಸರ್ಕಾರ ವೇತನ ಆಯೋಗವನ್ನು ರಚನೆ ಮಾಡುವ ಜವಾಬ್ದಾರಿ ಹಾಗು ಅಧಿಕಾರವನ್ನು ಹೊಂದಿದೆ . +ವೇತನ ಆಯೋಗ ಅಸ್ತಿತ್ವದಲ್ಲಿರುವ ಅವಧಿ ಕೇವಲ ಹದಿನೆಂಟು ತಿಂಗಳುಗಳು ಮಾತ್ರ . +ಆಯೋಗ ರಚನೆಯಾದಂದಿನಿಂದ ಹದಿನೆಂಟು ತಿಂಗಳುಗಳ ಒಳಗೆ ವೇತನ ಆಯೋಗವು ತನ್ನ ಸಂಪೂರ್ಣ ಶಿಫಾರಸ್ಸನ್ನು ಸರ್ಕಾರಕ್ಕೆ ಸಲ್ಲಿಸಬೇಕು . +ಭಾರತದಲ್ಲಿ ಮೊದಲ ಬಾರಿಗೆ ವೇತನ ಆಯೋಗವನ್ನು ೧೯೪೬ರ ಜನವರಿ ತಿಂಗಳಿನಲ್ಲಿ ರಚಿಸಲಾಯಿತು . +ಬ್ರಿಟೀಷ್ ಸರ್ಕಾರ ಚಾಲ್ತಿಯಲ್ಲಿದ್ದಾಗ ರಚಿತವಾದ ಆಯೋಗ ಇದಾಗಿದ್ದು ಅದರ ಶಿಫಾರಸ್ಸು ವರದಿಗಳನ್ನು ೧೯೪೭ ರ ಮೇ ತಿಂಗಳಿನಲ್ಲಿ ಅಂದರೆ ಸ್ವಾತಂತ್ರ್ಯ ಬರುವ ಕೆಲವೇ ತಿಂಗಳುಗಳ ಮೊದಲು ಭಾರತದ ಮಧ್ಯಂತರ ಸರ್ಕಾರಕ್ಕೆ ಸಲ್ಲಿಸಲಾಯಿತು . +ಆಗ ರಚಿತವಾಗಿದ್ದ ವೇತನ ಆಯೋಗಕ್ಕೆ ಛೇರ್ಮನ್ ಆಗಿದ್ದವರು ಶ್ರೀನಿವಾಸ ವರದಾಚಾರಿಯರ್ . +ಒಂಬತ್ತು ಸದಸ್ಯರನ್ನೊಳಗೊಂಡ ಮೊದಲ ವೇತನ ಆಯೋಗವನ್ನು ಬ್ರಿಟಿಷ್ ಸರ್ಕಾರ ನಾಗರೀಕ ಸೇವಾ ವಲಯಗಳಲ್ಲಿನ ಸರ್ಕಾರಿ ಕೆಲಸಗಾರರಿಗೆ ಕೊಡಮಾಡುವ ವೇತನ ಪರಿಷ್ಕರಿಸಲೆಂದೇ ರಚಿಸಲಾಗಿತ್ತು . +ಆರನೇ ವೇತನ ಆಯೋಗದ ವರದಿ . +ಕೇಂದ್ರ ಸರ್ಕಾರಿ ನೌಕರರಿಗೆ ಏಳನೇ ವೇತನ ಆಯೋಗದ ಸುದ್ದಿ ತಾಣ. +ಏಳನೇ ವೇತನ ಆಯೋಗದ ಅಧೀಕೃತ ಜಾಲತಾಣ. +ಏಳನೇ ವೇತನ ಆಯೋಗದ ಇತ್ತೀಚಿನ ಸುದ್ದಿ ಮಾಹಿತಿ. +↑ " ಮೂರನೇ ವೇತನ ಆಯೋಗದ ಶಿಫಾರಸ್ಸು ಅಂಶಗಳು " ( ಪಿಡಿಎಫ್ ವರದಿ ) ( in ಆಂಗ್ಲ ) . +ನವ ದೆಹಲಿ . +೦೬ ಅಕ್ಟೋಬರ್ ೨೦೧೬ ರಂತೆ.CS1 maint : location ( link ) CS1 maint : unrecognized language ( link ) +↑ " ನಮ್ಮ ಕುರಿತಾಗಿ " . +ವೇತನ ಆಯೋಗ , ೧೭ ಸೆಪ್ಟೆಂಬರ್ ೨೦೧೪ ರಂತೆ .