From e496dc79b410830df27592ec45e5fbc6be0fb2a2 Mon Sep 17 00:00:00 2001 From: Narendra VG Date: Mon, 26 Sep 2022 05:23:13 +0530 Subject: [PATCH] Upload New File --- ...0\340\263\246\340\263\247\340\263\257.txt" | 95 +++++++++++++++++++ 1 file changed, 95 insertions(+) create mode 100644 "Data Collected/Kannada/MIT Manipal/\340\262\252\340\263\214\340\262\260\340\262\244\340\263\215\340\262\265__\340\262\244\340\262\277\340\262\246\340\263\215\340\262\246\340\263\201\340\262\252\340\262\241\340\262\277__\340\262\256\340\262\270\340\263\202\340\262\246\340\263\206__\340\263\250\340\263\246\340\263\247\340\263\257.txt" diff --git "a/Data Collected/Kannada/MIT Manipal/\340\262\252\340\263\214\340\262\260\340\262\244\340\263\215\340\262\265__\340\262\244\340\262\277\340\262\246\340\263\215\340\262\246\340\263\201\340\262\252\340\262\241\340\262\277__\340\262\256\340\262\270\340\263\202\340\262\246\340\263\206__\340\263\250\340\263\246\340\263\247\340\263\257.txt" "b/Data Collected/Kannada/MIT Manipal/\340\262\252\340\263\214\340\262\260\340\262\244\340\263\215\340\262\265__\340\262\244\340\262\277\340\262\246\340\263\215\340\262\246\340\263\201\340\262\252\340\262\241\340\262\277__\340\262\256\340\262\270\340\263\202\340\262\246\340\263\206__\340\263\250\340\263\246\340\263\247\340\263\257.txt" new file mode 100644 index 0000000..e609a55 --- /dev/null +++ "b/Data Collected/Kannada/MIT Manipal/\340\262\252\340\263\214\340\262\260\340\262\244\340\263\215\340\262\265__\340\262\244\340\262\277\340\262\246\340\263\215\340\262\246\340\263\201\340\262\252\340\262\241\340\262\277__\340\262\256\340\262\270\340\263\202\340\262\246\340\263\206__\340\263\250\340\263\246\340\263\247\340\263\257.txt" @@ -0,0 +1,95 @@ +ಪೌರತ್ವ (ತಿದ್ದುಪಡಿ) ಮಸೂದೆ , ೨೦೧೯ , ೧೯೫೫ರ ಪೌರತ್ವ ಕಾಯ್ದೆಗೆ ತಿದ್ದುಪಡಿ ಮಾಡುವ ಮಸೂದೆಯಾಗಿದ್ದು, ಅಫ್ಘಾನಿಸ್ತಾನ, ಬಾಂಗ್ಲಾದೇಶ ಮತ್ತು ಪಾಕಿಸ್ತಾನದ ಹಿಂದೂಗಳು, ಸಿಖ್ಖರು , ಬೌದ್ಧರು , ಜೈನರು, ಪಾರ್ಸಿಗಳು ಮತ್ತು ಕ್ರೈಸ್ತರಿಗೆ ಪೌರತ್ವ ನೀಡುವ ಉದ್ದೇಶವನ್ನು ಹೊಂದಿದೆ . +ಆ ಆರು ಧರ್ಮದವರು ಭಾರತಕ್ಕೆ ೩೧ ಡಿಸೆಂಬರ್ ೨೦೧೪ ಅಥವಾ ಅದಕ್ಕಿಂತಲೂ ಮೊದಲು ಪ್ರವೇಶಿಸಿದವರಾಗಿದ್ದಲ್ಲಿ, ಅವರೆಲ್ಲರೂ ಭಾರತೀಯ ಪೌರತ್ವಕ್ಕೆ ಅರ್ಹರು. +ಕೇಂದ್ರ ಸಚಿವ ಸಂಪುಟವು ೪ ಡಿಸೆಂಬರ್ ೨೦೧೯ ರಂದು ಮಸೂದೆಯನ್ನು ಮುಂದಿಟ್ಟಿತು . +ಇದನ್ನು ಡಿಸೆಂಬರ್ ೧೦ ರಂದು ಲೋಕಸಭೆಯು ಅಂಗೀಕರಿಸಿತು ಹಾಗೂ ಡಿಸೆಂಬರ್ ೧೧ ರಂದು ರಾಜ್ಯಸಭೆಯು ಇದನ್ನು ಅಂಗೀಕಾರ ಮಾಡಿತು. +ಭಾರತೀಯ ಜನತಾ ಪಕ್ಷವು ಅಫ್ಘಾನಿಸ್ತಾನ , ಬಾಂಗ್ಲಾದೇಶ ಮತ್ತು ಪಾಕಿಸ್ತಾನದ ಹಿಂದೂಗಳು, ಸಿಖ್ಖರು, ಬೌದ್ಧರು, ಜೈನರು, ಪಾರ್ಸಿಗಳು ಮತ್ತು ಕ್ರೈಸ್ತರಿಗೆ ಪೌರತ್ವ ನೀಡುವುದಾಗಿ ಭರವಸೆಯನ್ನು ನೀಡಿತ್ತು. +೨೦೧೪ರಲ್ಲಿ ಬಿಜೆಪಿ ಪಕ್ಷವು, ಚುನಾವಣಾ ಪ್ರಣಾಳಿಕೆಯಲ್ಲಿ, ಹಿಂದೂ ನಿರಾಶ್ರಿತರನ್ನು ಸ್ವಾಗತಿಸಿ ಅವರಿಗೆ ಆಶ್ರಯ ನೀಡುವುದಾಗಿ ಭರವಸೆ ನೀಡಿತ್ತು . +ಪೌರತ್ವ (ತಿದ್ದುಪಡಿ )ಮಸೂದೆ ,೨೦೧೬ ನ್ನು ಲೋಕಸಭೆಯಲ್ಲಿ ಪರಿಚಯಿಸಲಾಯಿತು ಮತ್ತು ಅಂಗೀಕರಿಸಲಾಯಿತು . +ಆದರೆ ಈಶಾನ್ಯ ಭಾರತದಲ್ಲಿ ವ್ಯಾಪಕ ರಾಜಕೀಯ ವಿರೋಧ ಮತ್ತು ಪ್ರತಿಭಟನೆಗಳು ನಡೆದವು. +ಅವರ ಮುಖ್ಯ ಕಾಳಜಿ ಏನಾಗಿತ್ತೆಂದರೆ,ಬಾಂಗ್ಲಾದೇಶದಿಂದ ಜನರು ವಲಸೆ ಬಂದರೆ, ಈಶಾನ್ಯ ಭಾರತದ ಜನಸಂಖ್ಯಾಶಾಸ್ತ್ರವು ಬದಲಾಗುತ್ತದೆ . +ಹಾಗಾಗಿ, ಇದನ್ನು ಅನುಸರಿಸಿ, ಈಶಾನ್ಯ ಭಾರತದ ರಾಜ್ಯಗಳನ್ನು ಮಸೂದೆಯ ನಿಬಂಧನೆಗಳಿಂದ ಹೊರಗಿಟ್ಟು, ೨೦೧೯ ರ ಮಸೂದೆಯನ್ನು ಅಂಗೀಕರಿಸಲಾಯಿತು. +ಪೌರತ್ವ ಕಾಯ್ದೆ ೧೯೫೫ ರಲ್ಲಿ ತಿದ್ದುಪಡಿ ಮಾಡಲು,೨೦೧೬ ರ ಜನವರಿಯಲ್ಲಿ ಪೌರತ್ವ (ತಿದ್ದುಪಡಿ ) ಮಸೂದೆಯನ್ನು ಮಂಡಿಸಲಾಯಿತು . +ಈ ಮಸೂದೆಯನ್ನು ಲೋಕಸಭೆಯಲ್ಲಿ ಜುಲೈ ೧೯, ೨೦೧೬ ರಂದು ಪೌರತ್ವ (ತಿದ್ದುಪಡಿ ) ಮಸೂದೆ , ೨೦೧೬ ಎಂದು ಪರಿಚಯಿಸಲಾಯಿತು . +ಬಳಿಕ ಇದನ್ನು ೧೨ ಆಗಸ್ಟ್ ೨೦೧೬ ರಂದು ಜಂಟಿ ಸಂಸದೀಯ ಸಮಿತಿಗೆ ಉಲ್ಲೇಖಿಸಲಾಯಿತು . +ಅದು ೭ ಜನವರಿ ೨೦೧೯ ರಂದು ತನ್ನ ವರದಿಯನ್ನು ಸಲ್ಲಿಸಿತು . +ಇದನ್ನು ಲೋಕಸಭೆಯು ೮ ಜನವರಿ ೨೦೧೯ ರಂದು ಅಂಗೀಕರಿಸಿತು . +ಆದರೆ,ಇದು ೧೬ ನೇ ಲೋಕಸಭಾ ವಿಸರ್ಜನೆಯೊಂದಿಗೆ ಕಳೆದುಹೋಯಿತು. +ತರುವಾಯ,ಕೇಂದ್ರ ಸಚಿವ ಸಂಪುಟ ೨೦೧೯ ರ ಪೌರತ್ವ (ತಿದ್ದುಪಡಿ ) ಮಸೂದೆಯನ್ನು ೨೦೧೯ರ ಡಿಸೆಂಬರ್ ೪ ರಂದು ಸಂಸತ್ತಿನಲ್ಲಿ ಪರಿಚಯಿಸಲು ತೆರವುಗೊಳಿಸಿತು . +ಈ ಮಸೂದೆಯನ್ನು ೧೭ನೇ ಲೋಕಸಭೆಯಲ್ಲಿ ಗೃಹ ಸಚಿವ ಅಮಿತ್ ಶಾ ಅವರು ೯ ಡಿಸೆಂಬರ್ ೨೦೧೯ ರಂದು ಪರಿಚಯಿಸಿದರು ಮತ್ತು ೨೦೧೯ ರ ಡಿಸೆಂಬರ್ ೧೦ ರಂದು ಬೆಳಿಗ್ಗೆ , ೩೧೧ ಸಂಸದರು ಪರವಾಗಿ ಮತ್ತು ೮೦ ಸಂಸದರು ಮಸೂದೆ ವಿರುದ್ಧ ಮತ ಚಲಾಯಿಸಿದರು. + ಇದನ್ನು ಡಿಸೆಂಬರ್ ೧೧ ರಂದು ರಾಜ್ಯಸಭೆಯು ಅಂಗೀಕರಿಸಿತು. +೨೦೧೪ ರ ಡಿಸೆಂಬರ್ ೩೧ ರಂದು ಅಥವಾ ಅದಕ್ಕೂ ಮೊದಲು ಭಾರತಕ್ಕೆ ಪ್ರವೇಶಿಸಿದ ಅಫ್ಘಾನಿಸ್ತಾನ ,ಬಾಂಗ್ಲಾದೇಶ ಮತ್ತು ಪಾಕಿಸ್ತಾನದ ಹಿಂದೂ ,ಸಿಖ್ಖ ,ಬೌದ್ಧ ,ಜೈನ ,ಪಾರ್ಸಿ ಮತ್ತು ಕ್ರಿಶ್ಚಿಯನ್ನ್ ಅಕ್ರಮ ವಲಸಿಗರನ್ನು ಭಾರತೀಯ ಪೌರತ್ವಕ್ಕೆ ಅರ್ಹರನ್ನಾಗಿ ಮಾಡಲು ೧೯೫೫ ರ ಪೌರತ್ವ ಕಾಯ್ದೆಗೆ ಮಸೂದೆ ತಿದ್ದುಪಡಿ ಮಾಡಿದೆ . +ಈ ಕಾಯಿದೆಯಡಿ, ನೈಸರ್ಗಿಕೀಕರಣದ ಮೂಲಕ ಪೌರತ್ವಕ್ಕಾಗಿ ಒಂದು ಅವಶ್ಯಕತೆಯೆಂದರೆ, ಅರ್ಜಿದಾರನು ಕಳೆದ 12 ತಿಂಗಳಿನಿಂದ ಭಾರತದಲ್ಲಿ ವಾಸಿಸುತ್ತಿರಬೇಕು . +ಅದಲ್ಲದೆ, ಹಿಂದಿನ 14 ವರ್ಷಗಳಲ್ಲಿ ಕನಿಷ್ಠ 11 ವರ್ಷಗಳ ಕಾಲ ಭಾರತದಲ್ಲಿರಬೇಕು . +ಆದರೆ ಈ ತಿದ್ದುಪಡಿಯು , ಮೂರು ದೇಶಗಳ , ಆರು ಧರ್ಮಗಳಿಗೆ ಸೇರಿದ ವ್ಯಕ್ತಿಗಳಿಗೆ ಈ 11 ವರ್ಷದ ಅಗತ್ಯವನ್ನು ಐದು ವರ್ಷಗಳವರೆಗೆ ಸಡಿಲಿಸುತ್ತದೆ . +ಅದಲ್ಲದೆ , ಈ ಮಸೂದೆಯು ಅಸ್ಸಾಂ , ಮೇಘಾಲಯ , ಮಿಜೋರಾಂ , ಮತ್ತು ತ್ರಿಪುರದ ಬುಡಕಟ್ಟು ಪ್ರದೇಶಗಳನ್ನು ಸಂವಿಧಾನದ ಆರನೇ ವೇಳಾಪಟ್ಟಿಯಲ್ಲಿ ಸೇರಿಸಿದೆ . +ಈ ಬುಡಕಟ್ಟು ಪ್ರದೇಶಗಳಲ್ಲಿ ಅಸ್ಸಾಂನ ಕಾರ್ಬಿ ಆಂಗ್ಲಾಂಗ್ , ಮೇಘಾಲಯದ ಗಾರೊ ಹಿಲ್ಸ್ , ಮಿಜೋರಾಂನ ಚಕ್ಮಾ ಜಿಲ್ಲೆ ಮತ್ತು ತ್ರಿಪುರದ ಕೆಲ ಬುಡಕಟ್ಟು ಪ್ರದೇಶಗಳು ಸೇರಿವೆ . +ಅರುಣಾಚಲ ಪ್ರದೇಶ, ಮಿಜೋರಾಂ ಮತ್ತು ನಾಗಾಲ್ಯಾಂಡ್ ಅನ್ನು ಒಳಗೊಂಡಿರುವ ಇನ್ನರ್ ಲೈನ್ ಪರ್ಮಿಟ್ ಮೂಲಕ ನಿಯಂತ್ರಿಸಲ್ಪಡುವ ಪ್ರದೇಶಗಳಿಗೆ ಈ ತಿದ್ದುಪಡಿಯಿಂದ ವಿನಾಯಿತಿ ನೀಡಿದೆ ಹಾಗೂ ಮಣಿಪುರವನ್ನು ಇನ್ನರ್ ಲೈನ್ ಪರ್ಮಿಟ್‌ನಲ್ಲಿ ಸೇರ್ಪಡೆಗೊಳಿಸುವುದನ್ನು ೧೦ ಡಿಸೆಂಬರ್ ೨೦೧೯ ರಂದು ಘೋಷಿಸಲಾಗಿದೆ. +ಭಾರತದ ಸಾಗರೋತ್ತರ ಪೌರತ್ವ (ಓಸಿಐ ) ಹೊಂದಿರುವವರು ನೋಂದಣಿಯಾದ ಐದು ವರ್ಷಗಳಲ್ಲಿ , ಎರಡು ಅಥವಾ ಹೆಚ್ಚಿನ ವರ್ಷಗಳವರೆಗೆ ಜೈಲು ಶಿಕ್ಷೆಯನ್ನು ವಿಧಿಸಿದರೆ ಆಥವಾ ಅಗತ್ಯದ ಸಂದರ್ಭದಲ್ಲಿ ವಂಚನೆಯ ಮೂಲಕ ನೋಂದಣಿಯನ್ನು ಮಾಡಿಸಿದರೆ , ಭಾರತದ ಸಾರ್ವಭೌಮತ್ವದ ಹಿತದೃಷ್ಟಿಯಿಂದ , ಸಾಗರೋತ್ತರ ಪೌರತ್ವ ನೋಂದಣಿಯನ್ನು ರದ್ದುಗೊಳಿಸುವ ಹೊಸ ನಿಬಂಧನೆಗಳನ್ನು ಮಸೂದೆಯು ಒಳಗೊಂಡಿದೆ. +ಯುಎಸ್ ಕಮಿಷನ್ ಆನ್ ಇಂಟರ್ನ್ಯಾಷನಲ್ ರಿಲಿಜಿಯಸ್ ಫ್ರೀಡಮ್ (ಯುಎಸ್ಸಿಐಆರ್ಎಫ್ ) ೯ ಡಿಸೆಂಬರ್ ೨೦೧೯ ರಂದು ಮಸೂದೆಯನ್ನು ಅಂಗೀಕರಿಸಿದ ಬಗ್ಗೆ ಅಮಿತ್ ಶಾ ಮತ್ತು " ಇತರ ಪ್ರಮುಖ ನಾಯಕತ್ವ " ದ ವಿರುದ್ಧ ನಿರ್ಬಂಧಗಳನ್ನು ಕೋರಿತು. + ಇದನ್ನು ಅನುಸರಿಸಿ ಭಾರತ ವಿದೇಶಾಂಗ ಸಚಿವಾಲಯವು ಒಂದು ಹೇಳಿಕೆಯನ್ನು ನೀಡಿದೆ : +ಪಾಕಿಸ್ತಾನದ ಪ್ರಧಾನ ಮಂತ್ರಿ ಇಮ್ರಾನ್ ಖಾನ್ ಅವರು ಉದ್ದೇಶಿತ ಪೌರತ್ವ ಕಾನೂನನ್ನು ಟೀಕಿಸಿದರು ಮತ್ತು ಭಾರತವು , " ದ್ವಿಪಕ್ಷೀಯ ಒಪ್ಪಂದಗಳನ್ನು " ಉಲ್ಲಂಘಿಸಿದ್ದಾರೆ ಎಂದು ಹೇಳಿದರು. + ೨೦೧೯ ರ ಜನವರಿಯಲ್ಲಿ , ರಿಸರ್ಚ್ ಅಂಡ್ ಅನಾಲಿಸಿಸ್ ವಿಂಗ್ (ರಾ ) ಸಂಸತ್ತಿನ ಜಂಟಿ ಸಮಿತಿಯೊಂದಕ್ಕೆ ,ಸಿಎಬಿಯ ಹಿಂದಿನ ಆವೃತ್ತಿಯೊಂದರಲ್ಲಿ " ಭಾರತವನ್ನು ಒಳನುಸುಳಲು ವಿದೇಶಿ ಏಜೆಂಟರು ಸಿಎಬಿ ಅನ್ನು ದುರುಪಯೋಗಪಡಿಸಿಕೊಳ್ಳಬಹುದು " (ಪಾಕಿಸ್ತಾನದ ಐಎಸ್‌ಐನಂತಹ ಸಂಸ್ಥೆಗಳಿಂದ ) ಮತ್ತು ಅದು " ಅವರು ಭಾರತಕ್ಕೆ ನುಸುಳಲು ಬಳಸಬಹುದಾದ ' ಕಾನೂನು ಚೌಕಟ್ಟು ' ಆಗಬಹುದು " ಎಂದಿತ್ತು. +ಮಸೂದೆಯು ಭಾರತದ ಸಂವಿಧಾನದ 14 ನೇ ವಿಧಿಯನ್ನು ಉಲ್ಲಂಘಿಸುತ್ತದೆಯೆ ಎಂದು ಪರಿಗಣಿಸಬೇಕಾದ ಪ್ರಮುಖ ವಿಷಯವೆಂದರೆ ಅಕ್ರಮ ವಲಸಿಗರಿಗೆ ಅವರ ಮೂಲ ದೇಶ , ಧರ್ಮ , ಭಾರತಕ್ಕೆ ಪ್ರವೇಶಿಸಿದ ದಿನಾಂಕ ಮತ್ತು ಭಾರತದಲ್ಲಿ ವಾಸಿಸುವ ಸ್ಥಳದ ಆಧಾರದ ಮೇಲೆ ಮಸೂದೆ ಭೇದಾತ್ಮಕ ಚಿಕಿತ್ಸೆಯನ್ನು ಒದಗಿಸುತ್ತದೆ (ವಿನಾಯಿತಿ ಪಡೆದ ಈಶಾನ್ಯ ಭಾರತ ಪ್ರದೇಶಗಳಿಗೆ ಸಂಬಂಧಿಸಿದಂತೆ ) . +ವಿಧಿ ೧೪ ನಾಗರಿಕರು ಮತ್ತು ವಿದೇಶಿಯರು ಸೇರಿದಂತೆ ಎಲ್ಲಾ ವ್ಯಕ್ತಿಗಳಿಗೆ ಸಮಾನತೆಯನ್ನು ಖಾತರಿಪಡಿಸುತ್ತದೆ . +ಹಾಗೆ ಮಾಡುವ ತಾರ್ಕಿಕತೆಯು ಸಮಂಜಸವಾದ ಉದ್ದೇಶವನ್ನು ಪೂರೈಸಿದರೆ ಮಾತ್ರ ಜನರ ಗುಂಪುಗಳ ನಡುವೆ ವ್ಯತ್ಯಾಸವನ್ನು ತೋರಿಸಲು ಇದು ಕಾನೂನುಗಳು ಅನುಮತಿಸುತ್ತದೆ . +ಪರಿಗಣಿತ ಪ್ರಸ್ತಾವಿತ ಕಾನೂನಿನಲ್ಲಿ ಜನರ ಗುಂಪುಗಳ ವರ್ಗೀಕರಣವು " ಸಮಂಜಸವಾದ ವರ್ಗೀಕರಣ " ದ ಪರೀಕ್ಷೆಯನ್ನು ತೃಪ್ತಿಪಡಿಸುತ್ತದೆ ಮತ್ತು ಇದರ ಪರಿಣಾಮವಾಗಿ 14 ನೇ ಪರಿಚ್ಛೇದದಿಂದ ವಿನಾಯಿತಿ ನೀಡಲಾಗುತ್ತದೆ : +ವರ್ಗೀಕರಣವು ಬುದ್ಧಿವಂತ ಭೇದವನ್ನು ಆಧರಿಸಿದೆ . +ಅದು ಗುಂಪಿನಿಂದ ಹೊರಗುಳಿದಿರುವ ಇತರರಿಂದ ಗುಂಪು ಮಾಡಲ್ಪಟ್ಟ ವ್ಯಕ್ತಿಗಳು ಅಥವಾ ವಸ್ತುಗಳನ್ನು ಪ್ರತ್ಯೇಕಿಸುತ್ತದೆ ಮತ್ತು ಭೇದಾತ್ಮಕತೆಯು ಕಾಯಿದೆಯ ಉದ್ದೇಶದೊಂದಿಗೆ ತರ್ಕಬದ್ಧ ಸಂಬಂಧವನ್ನು ಹೊಂದಿದೆ. +ಸಿಎಬಿನಲ್ಲಿನ ವಸ್ತುಗಳು ಮತ್ತು ಕಾರಣಗಳ ಹೇಳಿಕೆಯನ್ನು ಹೀಗೆ ಹೇಳುತ್ತದೆ : +ಆದ್ದರಿಂದ ಮಸೂದೆಯು ಧರ್ಮದ ಆಧಾರದ ಮೇಲೆ ಮತ್ತು /ಅಥವಾ ಧಾರ್ಮಿಕ ಸ್ವಾತಂತ್ರ್ಯದ ಮೇಲೆ ನಿರ್ಬಂಧಗಳನ್ನು ಎದುರಿಸುತ್ತಿರುವ ಸಮುದಾಯಗಳನ್ನು ರಕ್ಷಿಸಲು ಉದ್ದೇಶಿಸಿದೆ . +ಇದು ಅಫ್ಘಾನಿಸ್ತಾನ ,ಬಾಂಗ್ಲಾದೇಶ ಮತ್ತು ಪಾಕಿಸ್ತಾನದ ಮೂರು ದೇಶಗಳ ರಾಷ್ಟ್ರ ಧರ್ಮದ ಮಾನದಂಡಗಳನ್ನು ಬಳಸುತ್ತದೆ . +ವಜ್ರಯಾನ ಬೌದ್ಧಧರ್ಮವನ್ನು ರಾಜ್ಯ ಧರ್ಮವಾಗಿ ಹೊಂದಿರುವ ಭೂತಾನ್ ಅನ್ನು ಏಕೆ ಹೊರಗಿಡಲಾಗಿದೆ ಎಂಬುದು ಸ್ಪಷ್ಟವಾಗಿಲ್ಲ ; ಏಕೆಂದರೆ ಭೂತಾನ್‌ನಲ್ಲಿರುವ ಕ್ರೈಸ್ತರು ಖಾಸಗಿಯಾಗಿ ತಮ್ಮ ಮನೆಗಳ ಒಳಗೆ ಮಾತ್ರ ಪ್ರಾರ್ಥಿಸಬಹುದು. + ರಾಷ್ಟ್ರಧರ್ಮವನ್ನು ಹೊಂದಿರದ ಮ್ಯಾನ್ಮಾರ್‌ನಲ್ಲಿ , ಮುಸ್ಲಿಂ ಮತ್ತು ಕ್ರಿಶ್ಚಿಯನ್ ಅಲ್ಪಸಂಖ್ಯಾತರ ವಿರುದ್ಧ ತಮ್ಮ ಧರ್ಮವನ್ನು ಆಚರಿಸುವಲ್ಲಿ ಮತ್ತು ಪ್ರಚಾರ ಮಾಡುವಲ್ಲಿ ಸರ್ಕಾರ ತಾರತಮ್ಯ ಮಾಡುತ್ತಿದೆ ಎಂದು ಆರೋಪಿಸಲಾಗಿದೆ. + ಶ್ರೀಲಂಕಾದ ಸಂವಿಧಾನವು ಧಾರ್ಮಿಕ ಸ್ವಾತಂತ್ರ್ಯದ ಹಕ್ಕನ್ನು ಒದಗಿಸುತ್ತದೆ . +ಆದರೆ ಶ್ರೀಲಂಕಾದ ಅಂತರರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯ ೨೦೧೮ ರ ಯುಎಸ್ ವರದಿಯಲ್ಲಿ ಉಲ್ಲೇಖಿಸಲಾಗಿದೆ , +ಇದರ ಪರಿಣಾಮವಾಗಿ , ಮ್ಯಾನ್ಮಾರ್‌ನ ರೋಹಿಂಗ್ಯಾಗಳಂತಹ ಸಮುದಾಯಗಳನ್ನು ಹೊರಗಿಡುವುದು ಜನಾಂಗ ಅಥವಾ ಜನಾಂಗದ ಆಧಾರದ ಮೇಲೆಯೇ ಹೊರತು ಧರ್ಮವೆಂದಲ್ಲ . +ಆದರೆ ಧಾರ್ಮಿಕ ಸ್ವಾತಂತ್ರ್ಯದ ಮೇಲೆ ಅವರು ಎದುರಿಸುತ್ತಿರುವ ನಿರ್ಬಂಧಗಳು ಪ್ರಶ್ನಾರ್ಹವಾಗಿದೆ . +ಶ್ರೀಲಂಕಾದ ಕ್ರಿಶ್ಚಿಯನ್ ಮತ್ತು ಮುಸ್ಲಿಂ ಅಲ್ಪಸಂಖ್ಯಾತರಿಗೂ ಇದೇ ರೀತಿಯ ಪ್ರಶ್ನೆ ಉದ್ಭವಿಸುತ್ತದೆ . +ಅಂತಿಮವಾಗಿ , ಪಾಕಿಸ್ತಾನದಲ್ಲಿ ಅಹ್ಮದಿಯಾ ಮತ್ತು ಬಾಂಗ್ಲಾದೇಶದ ನಾಸ್ತಿಕರನ್ನು ಹೊರಗಿಡುವುದು ಸಹ ಪ್ರಶ್ನಾರ್ಹವಾಗಿದೆ . +ಇವುಗಳು ಸಂಬಂಧಿತ ವಿಷಯವಾದರೂ , ಈ ಮಸೂದೆಯ ವ್ಯಾಪ್ತಿಯಲ್ಲಿಲ್ಲ . +ಶ್ರೀಲಂಕಾದಲ್ಲಿ ಹಿಂದುಗಳು ಅಲ್ಪಸಂಖ್ಯಾತ ಧರ್ಮವಾದವರಾದರೂ ,ಜನಾಂಗೀಯತೆಯ ಆಧಾರದ ಮೇಲೆ ಕಿರುಕುಳವನ್ನು ಅನುಭವಿಸಿರುವ ಶ್ರೀಲಂಕಾದ ತಮಿಳರು ಭಾರತದತ್ತ ವಲಸೆ ಬರುತ್ತಿರುವುದು ಪ್ರಶ್ನಾರ್ಹವಾಗಿದೆ . +" ಶ್ರೀಮಂತ ಮತ್ತು ವ್ಯಾಪಕವಾದ ಚರ್ಚೆಯ ನಂತರ ಲೋಕಸಭೆ ೨೦೧೯ ರ ಪೌರತ್ವ ( ತಿದ್ದುಪಡಿ ) ಮಸೂದೆಯನ್ನು ಅಂಗೀಕರಿಸಿದೆ ಎಂದು ಖುಷಿಪಟ್ಟಿದ್ದೇನೆ " ಮತ್ತು " ಮಸೂದೆ ಭಾರತದ ಶತಮಾನಗಳ ಹಳೆಯ ಒಗ್ಗೂಡಿಸುವಿಕೆ ಮತ್ತು ಮಾನವೀಯ ಮೌಲ್ಯಗಳಿಗೆ ಅನುಗುಣವಾಗಿದೆ " ಎಂದು ಪ್ರಧಾನಿ ಮೋದಿ ಹೇಳಿದರು. +ಲೋಕಸಭೆಯಲ್ಲಿ ಈಶಾನ್ಯ ರಾಜ್ಯಗಳ ಬಹುಪಾಲು ಸದಸ್ಯರು ಮಸೂದೆಯನ್ನು ಬೆಂಬಲಿಸಿದ ಕಾರಣ ಮಸೂದೆಯನ್ನು ಅವರೂ ಬೆಂಬಲಿಸಿದರು. +ಈ ಮಸೂದೆಗೆ ಭಾರತದೇಶದ ಅನೇಕ ಕಡೆ ವಿರೋಧ ಮತ್ತು ಆಕ್ರೋಶ ವ್ಯಕ್ತವಾಗಿದೆ . +ಈಶಾನ್ಯ ಭಾರತದ ಪ್ರಮುಖ ರಾಜ್ಯ ಅಸ್ಸಾಂನಲ್ಲಿ ಹೆಚ್ಚು ವಿರೋದವಿದ್ದು ವ್ಯಾಪಕವಾಗಿದೆ . +ಪಶ್ಚಿಮ ಬಂಗಾಳದಲ್ಲಿಯೂ ಪೌರತ್ವ ತಿದ್ದುಪಡಿ ಕಾಯಿದೆ ವಿರುದ್ಧ ಅಸ್ಸಾಮಿಗರ ಪ್ರತಿರೋಧಕ್ಕೆ ಅದರ ಹಿಂದಿನ ಇತಿಹಾಸದ ಕಾರಣಗಳಿವೆ. +ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ದೇಶದ ಹಲವೆಡೆ ಪ್ರತಿಭಟನೆ ನಡೆಯುತ್ತಿರುವ ಸಂದರ್ಭದಲ್ಲಿಯೇ ಶಿವಸೇನಾ ಸಂಸದ ಸಂಜಯ್ ರಾವುತ್ , ಅಮೆರಿಕ ನಾಯಕ ಮಾರ್ಟಿನ್‌ ಲೂಥರ್‌ ಮಾತುಗಳನ್ನು ಉಲ್ಲೇಖಿಸಿ ಬಿಜೆಪಿ ವಿರುದ್ಧ ಹೀಗೆ ಟೀಕಿಸಿದರು . +ಎಲ್ಲಿ ಧಾರ್ಮಿಕ ಸಮಸ್ಯೆಗಳನ್ನು ರಾಜಕೀಯವಾಗಿ ಪರಿಹರಿಸಲಾಗುತ್ತದೆಯೊ ಆ ದೇಶ ಉತ್ತಮ ಎನಿಸಿಕೊಳ್ಳುತ್ತದೆ . +ಆದರೆ,ಎಲ್ಲಿ ರಾಜಕೀಯವೇ ಧಾರ್ಮಿಕ ಸಮಸ್ಯೆಗಳನ್ನು ಸೃಷ್ಟಿಸುತ್ತದೆಯೊ , ಅಂತಹ ಕಡೆ ಅನರ್ಹರ ಹಿಡಿತದಲ್ಲಿ ದೇಶ ಸಾಗುತ್ತಿದೆ ಎಂದು ನಾವೆಲ್ಲ ತಿಳಿಯಬೇಕು ’ ಎಂದು ಮಾರ್ಟಿನ್‌ ಲೂಥರ್‌ ಹೇಳಿದ್ದರು . +ಅವರ ಮಾತುಗಳನ್ನು ಉಲ್ಲೇಖಿಸಿ ರಾವುತ್ ಟ್ವೀಟ್‌ ಮಾಡಿದ್ದಾರೆ . +ಆದರೆ ಏಕೆ ಮತ್ತು ಯಾವ ವಿಷಯದ ಕುರಿತು ಎನ್ನುವುದನ್ನು ನಿರ್ಧಿಷ್ಟವಾಗಿ ತಿಳಿಸಿಲ್ಲ . +ಸಿಎಎ , ಧರ್ಮದ ಆಧಾರದಲ್ಲಿ ಪೌರತ್ವ ನೀಡುವುದಿಲ್ಲ , ಧಾರ್ಮಿಕ ಕಿರುಕುಳಕ್ಕೊಳಗಾದ ಸಂತ್ರಸ್ತತೆಯ ಆಧಾರದಲ್ಲಿ ಪೌರತ್ವ ನೀಡುತ್ತದೆ ; +ಆದಕಾರಣ ಇಲ್ಲಿ ಸಂವಿಧಾನದ ಉಲ್ಲಂಘನೆಯ ಪ್ರಶ್ನೆಯೇ ಇಲ್ಲ ಅಂತ ಸರ್ಕಾರ ಹೇಳುತ್ತಿದೆ . +ಆದರೆ ಕಾಯ್ದೆಯಲ್ಲಿ ಎಲ್ಲೂ ‘ ಧಾರ್ಮಿಕ ಕಿರುಕುಳಕ್ಕೊಳಗಾದ ’ ಆಧಾರದ ಮೇಲೆ ವಲಸೆಬಂದ ಮುಸ್ಲಿಮೇತರರಿಗೆ ಪೌರತ್ವ ನೀಡಲಾಗುವುದು ಎಂದು ಹೇಳಿಲ್ಲ . +ಅದರಲ್ಲಿ ಪಾಕಿಸ್ತಾನ ,ಬಾಂಗ್ಲಾದೇಶ ಮತ್ತು ಅಫ್ಗಾನಿಸ್ತಾನದಿಂದ ಬಂದ ಹಿಂದೂ , ಬೌದ್ಧ , ಜೈನ , ಪಾರ್ಸಿ , ಸಿಖ್ ಮತ್ತು ಕ್ರೈಸ್ತ ಅಕ್ರಮವಾಸಿಗಳಿಗೆ ಆದ್ಯತೆಯ ಮೇಲೆ ಪೌರತ್ವ ನೀಡಲಾಗುವುದು ಎಂದು ಹೇಳಿದೆ . +ಇದರ ಬದಲಿಗೆ " ಆ ದೇಶಗಳಿಂದ ಧಾರ್ಮಿಕ ಕಿರುಕುಳಕ್ಕೊಳಗಾಗಿ ಬಂದವರಿಗೆ " ಎಂದು ಸ್ಪಷ್ಟವಾಗಿ ಹೇಳಿದ್ದರೆ ಮತ್ತು ಆ ಕಾರಣಕ್ಕೋಸ್ಕರ ಬಹಳಷ್ಟು ಮುಸ್ಲಿಮರು ಈ ಕಾಯ್ದೆಯಡಿ ಅನುಕೂಲ ಪಡೆಯಲು ಅನರ್ಹರಾಗಿದ್ದರೆ , ಆಗ ಸಂವಿಧಾನದ ಉಲ್ಲಂಘನೆಯ ಪ್ರಶ್ನೆಯೇ ಬರುತ್ತಿರಲಿಲ್ಲ . +ಇಡೀ ಪ್ರಕ್ರಿಯೆಯಲ್ಲಿ ದೇಶವಾಸಿಗಳೂ ಅಕ್ರಮವಾಸಿಗಳೆಂದು ಪರಿಗಣಿಸಲ್ಪಟ್ಟು ಇಂತಹ ಬಂಧನಗೃಹ ಕೇಂದ್ರ ಸೇರುವ ಅಪಾಯವೂ ಇದೆ ಎನ್ನುವ ಅಂಶವನ್ನು ಅಸ್ಸಾಂನಲ್ಲಿ ನಡೆದ ಎನ್ಆರ್‌ಸಿ ತೋರಿಸಿಕೊಟ್ಟಿದೆ. +ಎಲ್ಲ ಶ್ರೀಮಂತ ದೇಶಗಳಲ್ಲೂ ಅಕ್ರಮವಾಗಿ ನೆಲೆಸಿದ ಲಕ್ಷಲಕ್ಷ ಭಾರತೀಯರಿದ್ದಾರೆ ‘ ನ್ಯೂಯಾರ್ಕ್ ಟೈಮ್ಸ್ ’ ಪತ್ರಿಕೆಯಲ್ಲಿ ಪ್ರಕಟವಾದ ವರದಿಯಂತೆ ( 2019,ಡಿ .1 ),2010 - 17ರ ನಡುವೆ ಅಮೆರಿಕವೊಂದರಲ್ಲೇ ಅಕ್ರಮವಾಗಿ ಉಳಿದುಕೊಂಡಿರುವವರಲ್ಲಿ ಅತೀ ಹೆಚ್ಚಿರುವುದು ಭಾರತೀಯರು ( 3.30 ಲಕ್ಷ ) . +ಎಲ್ಲ ದೇಶಗಳೂ ಅಕ್ರಮವಾಸಿಗಳ ಬಗ್ಗೆ ಕ್ರೂರ ತೀರ್ಮಾನವೊಂದನ್ನು ಕೈಗೊಂಡದ್ದೇ ಆದರೆ , ಅದಕ್ಕೆ ಅತೀ ಹೆಚ್ಚಿನ ಸಂಖ್ಯೆಯಲ್ಲಿ ತೊಂದರೆಗೆ ಬಲಿಯಾಗಲಿರುವವರು ಭಾರತದ ಹಿಂದೂಗಳೇ ಆಗಬಹುದು. +ಸಿಎಎ ಬಗ್ಗೆ ಈಗಲೂ ಒಂದು ವರ್ಗದ ಜನರಿಗೆ ವಿರೋಧ ಇಲ್ಲ ,ಸಿಎಎ ಜೊತೆ ಎನ್‌ಆರ್‌ಸಿ ((National Register of Citizens)) ಜೋಡಿಸುವುದಕ್ಕೆ ವಿರೋಧ ಇದೆ . +ಎನ್‌ಪಿಆರ್ ಬಗ್ಗೆ ಅಲ್ಲ , ಎನ್‌ಪಿಆರ್‌ನ ಪ್ರಶ್ನಾವಳಿಗೆ ಸೇರಿಸಿರುವ ಹೊಸ ಪ್ರಶ್ನೆಗಳ ಬಗ್ಗೆ ವಿರೋಧ ಇದೆ (ರಾಷ್ಟ್ರೀಯ ಪೌರತ್ವ ನೋಂದಣಿ (ಎನ್ಆರ್‌ಸಿ ), ರಾಷ್ಟ್ರೀಯ ಜನಸಂಖ್ಯಾ ನೋಂದಣಿಗೆ ( ಎನ್‌ಪಿಆರ್‌ ) ) . +ಮುಖ್ಯವಾಗಿ ಭಾರತದಲ್ಲಿ ತಾವು ಭಾರತೀಯರು ಎಂದು ತೋರಿಸಲು ದಾಖಲೆ ಇಲ್ಲದ ಕೋಟಿ ಕೋಟಿ ದಲಿತರು ಹಿಂದುಳಿದವರು ಮೂಲನಿವಾಸಿಗಳು ಇದ್ದಾರೆ . +ಇವರನ್ನೆಲ್ಲಾ ಅವರ ಸಂಸಾರದಿಂದ ಬೇರ್ಪಡಿಸಿ ಬಂಧನಗೃಹದಲ್ಲಿ ಸಾಯುವ ತನಕ ಕೂಡಿಹಾಕುವುದು ಎಷ್ಟು ಸರಿ . +ಈ ಕ್ರೂರತೆಗೆ ಸರಿಸಮಾನ ಉಂಟೆ ? +ಇದು ಯೋಚಿಸಬೇಕಾದ ಪ್ರಶ್ನೆ . +ಷಾ ಹೇಳಿದಂತೆ ವಿದೇಶೀಯರೆಂದು ಅವರನ್ನೆಲ್ಲಾ ಸಮುದ್ರಕ್ಕೆ ಎಸೆಯುವುದು ಅಥವಾ ಬೇರೆ ದೇಶಕ್ಕೆ ಕಳಿಸುವುದು ಸಾಧ್ಯವೇ ? +ಆರ್ಥಿಕ ಸಂಕ್ಷಷ್ಟ ಇರುವಾಗ ಬಂಧನಗೃಹದಲ್ಲಿ ಸಾಯುವ ತನಕ ಅವರಯೋಗಕ್ಷೇಮದ ವೆಚ್ಚಕ್ಕಾಗಿ ೪೦ - ೫೦ ಸಾವಿರ ಕೋಟಿಗೂ ಹೆಚ್ಚು ಹಣ ವ್ಯಯ ಮಾಡುವುದು ಪ್ರಯೋಜನಕಾರಿಯಾಗಬಹುದೆ ಎನ್ನುವುದು ಮುಖ್ಯ ಸಮಸ್ಯೆ . +ಉದಾಹರಣೆ : ರಾಷ್ಟ್ರೀಯ ಜನಸಂಖ್ಯಾ ನೋಂದಣಿ ಪ್ರಕ್ರಿಯೆಯು ಹಿಂದೆಯೂ ಇತ್ತೆಂದು ಸರ್ಕಾರದವರು ವಾದ ಮಾಡುತ್ತಾರೆ . +ಆದರೆ 2010ರಲ್ಲಿ ಇದ್ದ ನೋಂದಣಿಗೂ ಈಗಿನದಕ್ಕೂ ಬಹಳ ವ್ಯತ್ಯಾಸವಿದೆ . +ನಿಮ್ಮ ಜನ್ಮದಾಖಲೆಯ ಜೊತೆಗೆ ನಿಮ್ಮ ತಂದೆ ,ತಾಯಿಯ ಜನ್ಮದಾಖಲೆ,ಅವರು ಯಾವ ಊರಲ್ಲಿ ಹುಟ್ಟಿದವರು ಎನ್ನುವ ದಾಖಲೆಗಳನ್ನೂ ತೋರಿಸಬೇಕು . +ಆ ಬಗೆಯ ದಾಖಲೆ ಸಿಗದವರು ಕೋಟ್ಯಂತರ ಜನ ಇದ್ದಾರೆ . +ಸ್ವತಃ ತಮ್ಮ ದಾಖಲೆ ಸಿಗುವುದೇ ದುರ್ಲಭವಿರುವ,ಗಂಡ ಬಿಟ್ಟ,ಅನಕ್ಷರಸ್ತ ರೇಣುಕಾಳಂಥ ಕೋಟ್ಯಂತರ ಮಹಿಳೆಯರು, ಅವರ ತಂದೆ ತಾಯಿಯ ಹುಟ್ಟಿದೂರಿಗೆ ಹೋಗಿ ದಾಖಲೆಗಳನ್ನು ತರಲು ಪ್ರಯತ್ನ ಆರಂಭಿಸಿದ್ದಾರೆ . +ಸಿಗದೆ ಇದ್ದಾಗ ಏನು ಮಾಡಬೇಕು ? +ಅವಳನ್ನು ಬಾಂಗ್ಲಾ ಎಂದು ಬಂಧನಗೃಹಕ್ಕೆ ನೂಕಬೇಕಾಗಬಹುದು. +ಸಮಸ್ಯೆ :ಕೊಪ್ಪಳದ ಕಾರ್ಮಿಕ ಕಾರಣ್ಣ ಅವರ ಅಳಲು -‘ಅನ್ನ ಅರಸಿ ಬೆಂಗಳೂರಿಗೆ ಬಂದಿದ್ದ ,ಕಡಿಮೆ ಬಾಡಿಗೆ ಎಂಬ ಕಾರಣಕ್ಕೆ ಜೋಪಡಿಯಲ್ಲಿ ಉಳಿದುಕೊಂಡಿದ್ದವನನ್ನು,ಬಾಂಗ್ಲಾದೇಶದ ಪ್ರಜೆ ಎಂಬ ಪಟ್ಟ ಕಟ್ಟಿ ಅವನ ಜೋಪಡಿಯನ್ನೇ ನೆಲಸಮ ಮಾಡಲಾಗಿದೆ. +ಅವನ ಬದುಕು ಬೀದಿಗೆ ಬಂದಿದೆ . +ಹಾಗೆಯೇ ಅಲ್ಲಿ ಸುಮಾರು ೩೦೦ ಭಾರತೀಯ ಕಾರ್ಮಿಕರ ಗುಡಿಸಲುಗಳನ್ನು ನೆಲಸಮಅ ಮಾಡಿದರು ಬಾಂಗ್ಲಾದೇಶದ ಪ್ರಜೆಗಳ ವಿರುದ್ಧ ಕಾರ್ಯಾಚರಣೆ ಆರಂಭಿಸಿರುವ ಬಿಬಿಎಂಪಿ ಅಧಿಕಾರಿಗಳು ಹಾಗೂ ಪೊಲೀಸರು,ದೇವರಬಿಸನಹಳ್ಳಿಯ ಕರಿಯಮ್ಮನ ಅಗ್ರಹಾರದಲ್ಲಿದ್ದ ಸ್ಥಳೀಯ ಕಾರ್ಮಿಕರ ಜೋಪಡಿಗಳನ್ನು 19 ಜನವರಿ 2020 ರಂದು ಏಕಾಏಕಿ ನೆಲಸಮ ಮಾಡಿದರು . +ಅವರ ಬದುಕು ಬೀದಿಗೆ ಬಂದಿದೆ . +ಪಶ್ಚಿಮ ಅಸ್ಸಾಂನ ತಮುಲ್ಪುರದ ಪ್ರಾಥಮಿಕ ಶಾಲಾ ಶಿಕ್ಷಕ 30 ವರ್ಷದ ಗೋಬಿಂದ ನಂದಿ ," ನಾವು ಇಲ್ಲಿ ಜನಿಸಿದ್ದೇವೆ " ಎಂದುಹೇಳಿದರು . +ಕಳೆದ ವರ್ಷ ಬಿಡುಗಡೆಯಾದ ಕರಡು ಪಟ್ಟಿಯು ಅಂದಾಜು 4 ಮಿಲಿಯನ್ (೪೦ ಲಕ್ಷ )ಜನರ ಹೆಸರನ್ನು ರಿಜಿಸ್ಟರ್‌ನಿಂದ ಹೊರಹಾಕಿದೆ . +ಈ ಯೋಜನೆಯಲ್ಲಿ 4 ಮಿಲಿಯನ್ ಭಾರತೀಯರು ಪೌರತ್ವವನ್ನು ಕಳೆದುಕೊಳ್ಳುವ ಅಪಾಯವನ್ನುಂಟುಮಾಡುತ್ತದೆ ,ಎಂದರು . +1971 ರಲ್ಲಿ ರಕ್ತಸಿಕ್ತ ಬಾಂಗ್ಲಾದೇಶದ ಸ್ವಾತಂತ್ರ್ಯ ಸಂಗ್ರಾಮದ ಸಂದರ್ಭದಲ್ಲಿ ರಾಜ್ಯಕ್ಕೆ ಗಡಿಯನ್ನು ದಾಟಿದ ನಂತರ ಅಸ್ಸಾಂನ ಅನೇಕ ಅಲ್ಪಸಂಖ್ಯಾತ ಬಂಗಾಳಿ ಸಮುದಾಯಗಳು ಭಾರತದಲ್ಲಿ ದಶಕಗಳಿಂದ ವಾಸಿಸುತ್ತಿವೆ . +ಇನ್ನೂ ಅನೇಕರು ತಮ್ಮ ಇತಿಹಾಸವನ್ನು ಇನ್ನೂ ಹಿಂದಕ್ಕೆ ಕಂಡುಹಿಡಿಯಬಹುದು,1947 ರಲ್ಲಿ ಭಾರತದ ಸ್ವಾತಂತ್ರ್ಯದ ಮೊದಲು ಆಗಮಿಸಿದರು . +" ಪಟ್ಟಿ ಪ್ರಕಟವಾದ ನಂತರ ಏನಾಗಲಿದೆ ಎಂದು ಯಾರಿಗೂ ನಿಜವಾಗಿಯೂ ತಿಳಿದಿಲ್ಲ "ಎಂದು ಶ್ರೇಯಾ ಮುನೊತ್ ಹೇಳಿದರು . +ಭಾರತದ ಈಶಾನ್ಯ ಅಸ್ಸಾಂನಲ್ಲಿ ಸುಮಾರು 2 ಮಿಲಿಯನ್ (20ಲಕ್ಷ ) ಜನರು ಈ ವಾರಾಂತ್ಯದಲ್ಲಿ ರಾಜ್ಯದ ಭಾರತೀಯ ನಾಗರಿಕರ ಪಟ್ಟಿಯಿಂದ ಹೊರಗುಳಿದಿದ್ದಾರೆ . +ಪ್ರಕಟವಾದ ,ವಿವಾದಾತ್ಮಕ ಹೊಸ ರಾಷ್ಟ್ರೀಯ ನಾಗರಿಕರ ನೋಂದಣಿ (ಎನ್‌ಆರ್‌ಸಿ )-ರಾಜ್ಯದ 33 ದಶಲಕ್ಷದಷ್ಟು ಜನಸಂಖ್ಯೆಯ 1.9 ದಶಲಕ್ಷವನ್ನು ಹೊರಗಿಟ್ಟಿದೆ. -- GitLab