From e7834ad991479130e0155a3edd2fb6eea40e6e4a Mon Sep 17 00:00:00 2001 From: Narendra VG Date: Mon, 17 Apr 2023 15:43:11 +0530 Subject: [PATCH] Upload New File --- ...\340\262\277\340\262\256\340\262\276_.txt" | 202 ++++++++++++++++++ 1 file changed, 202 insertions(+) create mode 100644 "Data Collected/Kannada/MIT Manipal/Kannada-Scrapped-dta/\340\262\234\340\262\276\340\262\227\340\262\244\340\263\200\340\262\225\340\262\260\340\262\243_\340\262\256\340\262\244\340\263\215\340\262\244\340\263\201_\340\262\270\340\262\277\340\262\250\340\262\277\340\262\256\340\262\276_.txt" diff --git "a/Data Collected/Kannada/MIT Manipal/Kannada-Scrapped-dta/\340\262\234\340\262\276\340\262\227\340\262\244\340\263\200\340\262\225\340\262\260\340\262\243_\340\262\256\340\262\244\340\263\215\340\262\244\340\263\201_\340\262\270\340\262\277\340\262\250\340\262\277\340\262\256\340\262\276_.txt" "b/Data Collected/Kannada/MIT Manipal/Kannada-Scrapped-dta/\340\262\234\340\262\276\340\262\227\340\262\244\340\263\200\340\262\225\340\262\260\340\262\243_\340\262\256\340\262\244\340\263\215\340\262\244\340\263\201_\340\262\270\340\262\277\340\262\250\340\262\277\340\262\256\340\262\276_.txt" new file mode 100644 index 0000000..3171d18 --- /dev/null +++ "b/Data Collected/Kannada/MIT Manipal/Kannada-Scrapped-dta/\340\262\234\340\262\276\340\262\227\340\262\244\340\263\200\340\262\225\340\262\260\340\262\243_\340\262\256\340\262\244\340\263\215\340\262\244\340\263\201_\340\262\270\340\262\277\340\262\250\340\262\277\340\262\256\340\262\276_.txt" @@ -0,0 +1,202 @@ +ಸಿನಿಮಾದ ಶಕ್ತಿ ಅಪರಿಮಿತವಾದುದು. +ಜನರನ್ನು ತಲಪುವ ಮತ್ತು ಜನರ ಮೇಲೆ ಪರಿಣಾಮವನ್ನುಂಟು ಮಾಡುವ ದೃಷ್ಟಿಯಿಂದ ಈ ಮಾತನ್ನು ಹೇಳುತ್ತಿದ್ದೇನೆ. +ಜನಸಮುದಾಯದ ಜೊತೆಗಿನ ಸಂಬಂಧವನ್ನು ಗಮನಿಸಿದಾಗ ಸಿನಿಮಾ, ನಿಜವಾದ ಅರ್ಥದಲ್ಲಿ ಸಮೂಹ ಮಾಧ್ಯಮ. +ಆದ್ದರಿಂದ ಸಿನಿಮಾವನ್ನು ಸಮೂಹ ಸನ್ನಿಯ ಮಾಧ್ಯಮವಾಗದಂತೆ ಎಚ್ಚರವಹಿಸುವ ಸಮೂಹ ಪ್ರಜ್ಞೆಯ ಮಾಧ್ಯಮವಾಗುವಂತೆ ಕ್ರಿಯಾಶೀಲರಾಗುವ ಜವಾಬ್ದಾರಿ ನಮ್ಮ ಮೇಲಿದೆ. +ಬುದ್ಧಿ ಜೀವಿಗಳು ಮತ್ತು ವಿವಿಧ ಸೃಜನಶೀಲ ಮಾಧ್ಯಮಗಳಲ್ಲಿ ಮಗ್ನರಾದ ಕ್ರಿಯಾಶೀಲರು ಸಿನಿಮಾವನ್ನು ಗಂಭೀರವಾಗಿ ಪರಿಗಣಿಸುವ ಅಗತ್ಯವಿದೆ. +ಹಾಗೆ ನೋಡಿದರೆ, ಆರಂಭದ ದಿನಗಳಲ್ಲಿ ಸಿನಿಮಾವನ್ನು ‘ಕಲೆ’ಯೆಂದು ಒಪ್ಪಿಕೊಂಡಿರಲಿಲ್ಲ. +ಸಿನಿಮಾವು ಕೇವಲ ನಕಲು ಮಾಡುತ್ತದೆಯೆಂದೂ, ಅದು ತಂತ್ರಜ್ಞಾನ ಪ್ರಧಾನವೆಂದೂ ಕಾರಣ ಕೊಡುತ್ತ ಕಲೆಯ ಪಟ್ಟಿಯಿಂದ ದೂರ ಇಡಲಾಗಿತ್ತು! +ಕಾಲ ಕಳೆದಂತೆ ಸಿನಿಮಾದ ಸೃಜನಶೀಲತೆಯ ಅರಿವಾಗಿ, ಅದು ಸಹ ಒಂದು ಕಲಾಪ್ರಕಾರವೆಂದು ಪರಿಗಣಿತವಾಯಿತು. +ಆಗ ೧೯೪೦ರಲ್ಲಿ ಆಂಡ್ಯೂರ ಬ್ರೆಜಿನ್ ತನ್ನ ‘The Evolution of the language of Cinema’ ಎಂಬ ಪುಸ್ತಕದಲ್ಲಿ ಕಡೆಗೂ ಚಲನಚಿತ್ರ ನಿರ್ದೇಶಕ, ಕಾದಂಬರಿಕಾರರಿಗೆ ಸಮಾನವೆಂದು ಪರಿಗಣಿತನಾದ ಎಂದು ಸಮಾಧಾನದ ನಿಟ್ಟುಸಿರು ಬಿಡುತ್ತಾನೆ. +ಇದು ಹಳೆಯ ಕತೆ. +ತೀರಾ ಇತ್ತೀಚಿನ ಕತೆ ಕೇಳಿ : ಕನ್ನಡ ಚಿತ್ರರಂಗದ ಮೇಲೆ ಪರಭಾಷಾ ಚಿತ್ರಗಳ ಹಾವಳಿ ಜಾಸ್ತಿಯಾಗಿದೆಯೆಂದೂ ಪ್ರದರ್ಶಕರು ಕನ್ನಡ ಚಿತ್ರಗಳಿಗೆ ಆದ್ಯತೆ ಕೊಡಬೇಕೆಂದೂ ಆಗ್ರಹಿಸಿ ೨೦೦೪ರಲ್ಲಿ ಕನ್ನಡ ಚಿತ್ರರಂಗದ ಅನೇಕರು ಪ್ರತಿಭಟನೆಗೆ ಇಳಿದಾಗ ವಾದ ವಿವಾದಗಳು ನಡೆದವು. +ಆಗ ಆಂಗ್ಲ ಪತ್ರಿಕೆಯೊಂದರಲ್ಲಿ ಪ್ರತಿಕ್ರಿಯಿಸಿದ ಕನ್ನಡದ ಕೆಲವು ಪ್ರತಿಷ್ಠಿತ ಸಾಹಿತ್ಯ ವಿಮರ್ಶಕರು “ಸಿನಿಮಾ ಎನ್ನುವುದು ಸಂಸ್ಕೃತಿಯ ಭಾಗವಲ್ಲ” ಎಂದು ಅಭಿಪ್ರಾಯ ಮಂಡಿಸಿ ಸಿನಿಮಾವನ್ನು ಒಂದು ಸಂಸ್ಕೃತಿ ಎಂದು ಕರೆಯಲಾಗದು ಎಂಬ ನಿರ್ಣಯಾತ್ಮಕ ಹೇಳಿಕೆ ನೀಡಿದರು. +ಬೌದ್ಧಿಕ ವಲಯದ ಕೆಲವರು ಸಿನಿಮಾದ ಬಗ್ಗೆ ತಳೆದಿರುವ ತಪ್ಪು ನಿಲುವು ಮತ್ತು ತಪ್ಪು ಗ್ರಹಿಕೆಗೆ ಇದೊಂದು ನಿದರ್ಶನ. +ನಮ್ಮ ಬೌದ್ಧಿಕ ವಲಯವು ‘ಜನಪ್ರಿಯ ಸಂಸ್ಕೃತಿ’ಯ ಬಗ್ಗೆ ತಳೆಯುತ್ತ ಬಂದ ಅನಾದರಕ್ಕೂ ಇದೊಂದು ಉದಾಹರಣೆಯಾಗಬಲ್ಲದು. +ನಿಜ; ಸಿನಿಮಾ ಒಂದು ಉದ್ಯಮವೂ ಆಗಿದೆ. +ಆದ್ದರಿಂದ ಅದನ್ನು ಸಂಸ್ಕೃತಿಯಲ್ಲಿ, ಸಂಸ್ಕೃತಿಯ ಭಾಗವಲ್ಲ ಎಂದು ಹೇಳಲಾಗದು. +ಅಸಂಖ್ಯಾತ ಜನಸಾಮಾನ್ಯರು ಪ್ರೀತಿಸುವ ಕಾರಣಕ್ಕಾಗಿ ಜನಪ್ರಿಯ ಸಂಸ್ಕೃತಿಯ ಭಾಗವಾದ ಸಿನಿಮಾವನ್ನು ‘ಜನಪ್ರಿಯ’ ಎಂಬ ಕಾರಣಕ್ಕಾಗಿಯೇ ಅಗ್ಗದ ಪ್ರಕಾರವೆಂದು ತುಚ್ಚೀಕರಿಸಲಾಗದು. +ಜನಪ್ರಿಯ ಸಂಸ್ಕೃತಿಯನ್ನು ಗಂಭೀರವಾಗಿ ಪರಿಗಣಿಸಿ ಅದನ್ನು ಜನಪರ ಸಂಸ್ಕೃತಿಯಾಗಿ ಜೀವಂತವಾಗಿಡುವ ಹೊಣೆಗಾರಿಕೆಯು ಬೌದ್ಧಿಕ ವಲಯದ ಮೇಲಿದೆ ಎಂಬುದನ್ನು ಮರೆಯಬಾರದು. +ಯಾಕೆಂದರೆ ಜನಸಾಮಾನ್ಯರು ಮತ್ತು ಜನಪ್ರಿಯ ಸಂಸ್ಕೃತಿಯನ್ನು ಸಮೀಪಿಸದೆ ಸಾಮಾಜಿಕ ಚಲನಶೀಲತೆ ಸಾಧ್ಯವಾಗುವುದಿಲ್ಲ. +ಆದ್ದರಿಂದ, ಸಿನಿಮಾ ಮಾಧ್ಯಮವನ್ನು ಬಂಡವಾಳಿಗರ ಉದ್ಯಮ ಮಾತ್ರವಾಗಿ ಉಳಿಸಲು ನಮ್ಮ ಅನಾದರ ಅವಕಾಶ ಕೊಡಬಾರದು. +ಜಾಗತೀಕರಣದ ಈ ಸನ್ನಿವೇಶದಲ್ಲಿ ನಮ್ಮ ಜವಾಬ್ದಾರಿ ಮತ್ತಷ್ಟು ಗುರುತರವಾದುದು. +ಜಾಗತೀಕರಣವು ಮೂಲತಃ ಬಂಡವಾಳೀಕರಣ. +ಇದರ ಫಲವಾಗಿ ಸಾಮಾಜಿಕ ಸಾಂಸ್ಕೃತಿಕ ಆದ್ಯತೆಗಳು ಪಲ್ಲಟಗೊಳ್ಳುತ್ತವೆ. +ಬಂಡವಾಳವಿಲ್ಲದೆ ಸೃಷ್ಟಿ ಸಾಧ್ಯವಿಲ್ಲದ ಸಿನಿಮಾದ ಸ್ವರೂಪ ಮತ್ತು ಆದ್ಯತೆಗಳ ಮೇಲೆ ಜಾಗತೀಕರಣದ ಸೂಕ್ಷ್ಮಗಳು ಪ್ರಭಾವ ಬೀರುತ್ತವೆ. +ಈ ಚರ್ಚೆಯನ್ನು ಮುಂದುವರೆಸುವುದಕ್ಕೆ ಮುಂಚೆ ಜಾಗತೀಕರಣದ ಮೂಲ ನೆಲೆಯನ್ನು ಕುರಿತಂತೆ ಸ್ಪಷ್ಟ ತಿಳುವಳಿಕೆಯನ್ನು ಪಡೆಯಬೇಕು. +ಯಾಕೆಂದರೆ ನಾನು ಗಮನಿಸಿದಂತೆ ಬೌದ್ಧಿಕ ವಲಯದ ಕೆಲವರು ಕೈಗಾರಿಕೀಕರಣ ಮತ್ತು ಜಾಗತೀಕರಣಗಳ ನಡುವೆ ವ್ಯತ್ಯಾಸವಿಲ್ಲವೆಂಬಂತೆ ಅಥವಾ ವ್ಯತ್ಯಾಸದ ಅರಿವಿಲ್ಲದೆ ಮಾತನಾಡುವುದನ್ನು ಕೇಳಿದ್ದೇನೆ. +ಈ ಹಿನ್ನೆಲೆಯಲ್ಲಿ ನನ್ನ ನಮ್ಮ ತಿಳುವಳಿಕೆಗೆ ದಕ್ಕಿದಷ್ಟು ವಿಷಯಗಳನ್ನು ವಿನಯದಿಂದ ಸಾದರಪಡಿಸುತ್ತೇನೆ. +ನಾನು ಚರ್ಚಿಸಿದ ಅಥವಾ ಮಾತನಾಡಿದ ಸಂದರ್ಭದಲ್ಲಿ ಕೆಲವರು ಭಾವಿಸಿರುವುದು ಹೀಗೆಂದು ಅನ್ನಿಸಿತು . + ಜಾಗತೀಕರಣ ಬಂದು ನಮ್ಮ ಗುಡಿಕೈಗಾರಿಕೆಗಳು ಹಾಳಾದವು; + ಕುಲ ಕಸುಬುಗಳು ನಾಶವಾದವು. +ಯಂತ್ರಗಳು ಮೇಲುಗೈ ಪಡೆದವು. +ಬೆಸ್ತರಿಗೆ ದೋಣಿಯ ಬದಲು ಯಂತ್ರಚಾಲಿತ ವಾಹನಗಳು ಬೇಕಾಗಿ ಬಡ ಬೆಸ್ತನ ಬದುಕು ದುಸ್ತರವಾಯಿತು; +ಕುಂಬಾರರ ಮಡಕೆ ಮಾಡುವ ಕಾಯಕಕ್ಕೆ ಧಕ್ಕೆಯಾಯಿತು. +ಬುಟ್ಟಿ ಹೆಣೆಯುವವರ ಕಸುಬು ಕೈತಪ್ಪಿತು. +ಕೃಷಿಯಲ್ಲಿ ಯಂತ್ರಗಳ ಬಳಕೆ ಪ್ರಧಾನವಾದಂತೆ ಬಡರೈತನಿಗೆ ಬದುಕು ಕಷ್ಟವಾಯಿತು ಇತ್ಯಾದಿ. +ಈ ಎಲ್ಲ ಸ್ಥಿತ್ಯಂತರಗಳು ಆಗಿರುವುದು, ಆಗುತ್ತಿರುವುದು ನಿಜ. +ಆದರೆ ಇವು ಜಾಗತೀಕರಣವೆಂದು ಕರೆಯಲ್ಪಡುವ ಆರ್ಥಿಕ ಉದಾರೀಕರಣದ ಫಲವಾಗಿ ಸಂಭವಿಸಲಿಲ್ಲ. +ಈ ಸ್ಥಿತ್ಯಂತರವು ಕೈಗಾರಿಕೀಕರಣದ ಸಂದರ್ಭದಲ್ಲೇ ಶುರುವಾಯಿತು. +ಆದ್ದರಿಂದ ಕೈಗಾರಿಕೀಕರಣದ ಫಲಿತಗಳನ್ನು ಜಾಗತೀಕರಣಕ್ಕೆ ಆರೋಪಿಸುವ ಗ್ರಹಿಕೆ ಸರಿಯಲ್ಲ. +ಆದರೆ ಕೆಲವರು ಈ ಅಂಶಗಳನ್ನು ಜಾಗತೀಕರಣದ ಫಲವೆಂಬಂತೆ ಬಿಂಬಿಸುವ ಸಿನಿಮಾ ಮತ್ತು ಸಾಹಿತ್ಯ ಸೃಷ್ಟಿ ಮಾಡಿರುವುದೂ ಉಂಟು. +ಹೀಗಾಗಿ ಜಾಗತೀಕರಣ ಮತ್ತು ಕೈಗಾರಿಕೀಕರಣಗಳ ನಡುವಿನ ವ್ಯತ್ಯಾಸವನ್ನು ಅರ್ಥಮಾಡಿಕೊಳ್ಳುವುದು ಅಗತ್ಯ. +ನಾನು ಹೀಗೆ ಹೇಳುವಾಗ ಸ್ಥಿತ್ಯಂತರದ ಸ್ಥಿತಿಯನ್ನು ಅಸತ್ಯವೆಂದು ಪ್ರತಿಪಾದಿಸುತ್ತಿಲ್ಲ. +ಈ ಸ್ಥಿತಿಗೆ ಕಾರಣವಾದದ್ದು ಕೈಗಾರಿಕೀಕರಣವೇ ಹೊರತು ಜಾಗತೀಕರಣವಲ್ಲವೆಂದು ತಿಳಿಸುವುದು ನನ್ನ ಅಪೇಕ್ಷೆ. +ಜೊತೆಗೆ ಕೈಗಾರಿಕೀಕರಣವು ಜಾಗತೀಕರಣದಷ್ಟು ಅಪಾಯಕಾರಿಯಲ್ಲ ಎನ್ನುವುದು ನನ್ನ ಅಭಿಪ್ರಾಯ. +ನಿಜ; ಕೈಗಾರಿಕೀಕರಣ ಮತ್ತು ಜಾಗತೀಕರಣ – ಈ ಎರಡೂ ನೆಲೆಗಳಿಗೆ ಬಂಡವಾಳ ತೊಡಗಿಸುವಿಕೆಯು ಒಂದು ಮುಖ್ಯ ಕ್ರಿಯೆ. +ಆದರೆ ಒಟ್ಟು ಸ್ವರೂಪ ಮತ್ತು ಪರಿಣಾಮದಲ್ಲಿ ಸಾಕಷ್ಟು ಅಂತರವಿರುವುದನ್ನು ಕಾಣಬಹುದು. +ಕೈಗಾರಿಕೀಕರಣವು ಗುಡಿಕೈಗಾರಿಕೆಗಳಿಗೆ ಹಿನ್ನಡೆಯುಂಟು ಮಾಡಿತೆಂಬುದು ಸತ್ಯವಾದರೂ ಕುಲಮೂಲ ಕಸುಬಿನ ಕಲ್ಪನೆಯನ್ನು ದೊಡ್ಡ ಪ್ರಮಾಣದಲ್ಲಿ ಉಲ್ಲಂಘಿಸಲು ಕಾರಣವಾದದ್ದು ಒಂದು ಸಕಾರಾತ್ಮಕ ಬೆಳವಣಿಗೆ ಜಾತಿವ್ಯವಸ್ಥೆಯ ಭಾಗವಾಗಿ ಬೆಳೆದ ಉತ್ಪಾದನಾ ವಿಧಾನಕ್ಕೆ ಕೈಗಾರಿಕೀಕರಣದಿಂದ ಧಕ್ಕೆಯಾದ್ದರಿಂದ ಜಾತಿ ವ್ಯವಸ್ಥೆಗೂ ಪೆಟ್ಟು ಬಿದ್ದಿತು. +ಜೊತೆಗೆ, ಕೈಗಾರಿಕೀಕರಣದ ಫಲವಾಗಿ ಬಂದ ‘ಸಾಮೂಹಿಕ ಉತ್ಪಾದನಾ ವಿಧಾನ’ವು ವಿವಿಧ ಸಾಮಾಜಿಕ ಮೂಲದವರು ಒಂದೇ ಸೂರಿನಡಿ ಕೆಲಸ ಮಾಡುವ ಅನಿವಾರ್ಯತೆಯನ್ನು ತಂದೊಡ್ಡಿತು. +ಕೆಲಸದ ಸಮಯದಲ್ಲಾದರೂ ಅಸ್ಪೃಶ್ಯತೆಯ ಆಚರಣೆ ಸಾಧ್ಯವಿಲ್ಲವಾಯಿತು. +ಮಧ್ಯಮವರ್ಗದ ಹುಟ್ಟಿಗೆ ಕಾರಣವಾಯಿತು. +ಮುಖ್ಯವಾಗಿ, ಕೈಗಾರಿಕೀಕರಣವು ಮುಕ್ತ ಆರ್ಥಿಕ ಪದ್ಧತಿಯ ಸಿದ್ಧಾಂತವನ್ನು ಹೊತ್ತು ಬರಲಿಲ್ಲ. +ನಮ್ಮ ದೇಶದಲ್ಲಿ ಮಿಶ್ರ ಆರ್ಥಿಕ ಪದ್ಧತಿ ಜಾರಿಗೆ ಬಂತು. +ಆರ್ಥಿಕ ಕ್ಷೇತ್ರ ಹಾಗೂ ಉತ್ಪಾದನಾ ವಲಯದಲ್ಲಿ ಖಾಸಗಿ ಸರ್ವಾಧಿಕಾರಕ್ಕೆ ಅವಕಾಶವಿರಲಿಲ್ಲ. +ಆದರೆ ಜಾಗತೀಕರಣದಲ್ಲಿ ಅಂತಹ ಸ್ಥಿತಿಯಿಲ್ಲ. +ಇಲ್ಲಿ ಖಾಸಗಿಯವರದೇ ಮೇಲುಗೈ. +ಕೈಗಾರಿಕೀಕರಣದ ಸಂದರ್ಭದಲ್ಲಿ ದುಡಿಯುವ ಜನರ ಸಂಘಟನೆಗೆ ಮುಕ್ತ ಅವಕಾಶವಿದ್ದರೆ, ಜಾಗತೀಕರಣದ ಸಂದರ್ಭದಲ್ಲಿ ಬಂಡವಾಳಿಗರ ಸಂಘಟನೆಗೆ ಮುಕ್ತ ಅವಕಾಶವಿದೆ. +ಮಿಶ್ರ ಆರ್ಥಿಕ ಪದ್ಧತಿಯ ಬದಲು ಮುಕ್ತ ಆರ್ಥಿಕ ಪದ್ಧತಿ ಜಾರಿಯಲ್ಲಿದೆ. +ಈ ಪದ್ಧತಿಯ ಸ್ವರೂಪವನ್ನು ಕುರಿತು Herbert Aptekar ಅವರು ತಮ್ಮ ‘The Nature of democracy: Freedom and revolution’ಎಂಬ ಪುಸ್ತಕದಲ್ಲಿ ತುಂಬಾ ಸ್ಪಷ್ಟವಾಗಿ ವಿವರಿಸಿದ್ದಾರೆ. +ಅವರು ಸರಿಯಾಗಿ ಗುರುತಿಸಿರುವಂತೆ (ಜಾಗತೀಕರಣದ ಫಲವಾದ) ಮುಕ್ತ ಆರ್ಥಿಕ ಪದ್ಧತಿಯ ಉದ್ದೇಶ ಮತ್ತು ನೀತಿ (Purpose and Policy) ಹೀಗಿದೆ : ‘ಸರ್ಕಾರವು ಬಂಡವಾಳಶಾಹಿಯನ್ನು ನಿಯಂತ್ರಿಸಬಾರದು. +ಆದರೆ ಬಂಡವಾಳ ಶಾಹಿಯು ಸರ್ಕಾರವನ್ನು ನಿಯಂತ್ರಿಸಬಹುದು. +ಆರ್ಥಿಕ ಅಸಮಾನತೆಯು ಸಮಾಜದ ಸಹಜ ಸ್ವಾಭಾವಿಕ ಅಂಶ; +ಸ್ವಾತಂತ್ರ್ಯವೆನ್ನುವುದು ರಾಜಕೀಯಕ್ಕೆ ಮಾತ್ರ ಸಂಬಂಧಿಸಿದ್ದು, ಆರ್ಥಿಕ ವಿಚಾರಗಳಿಗಲ್ಲ. +ಹರ್‍ಬರ್‍ಟಅಪ್ತೇಕರ್ ಅವರು ಪ್ರಸ್ತಾಪಿಸಿದ ಅಂಶಗಳ ಅನುಭವ ನಮಗೀಗ ಆಗುತ್ತಿದೆ. +ಜಾಗತೀಕರಣದ ಫಲವಾಗಿ ಸ್ವಾತಂತ್ರ್ಯ ಮತ್ತು ಸಮಾನತೆಯ ಕಲ್ಪನೆ ಪಲ್ಲಟಗೊಂಡಿದೆ. +ಮೂಲತಃ ಆರ್ಥಿಕ ಕೇಂದ್ರಿತ ಜಾಗತೀಕರಣವು ಒಟ್ಟು ರಾಜಕೀಯ ವ್ಯವಸ್ಥೆಯನ್ನು ಬಂಡವಾಳ ಶಾಹಿ ಪರವಾಗಿ ತಿರುಗಿಸುತ್ತದೆ. +ಮುಕ್ತ ಆರ್ಥಿಕತೆ, ಮುಕ್ತ ಮಾರುಕಟ್ಟೆಗಳ ಪರಿಣಾಮದಿಂದ ಸ್ಥಳೀಯ ಉತ್ಪನ್ನಗಳು ನಿರ್ಲಕ್ಷ್ಯಕ್ಕೆ ಒಳಗಾಗುತ್ತವೆ. +ಇದರ ಫಲವಾಗಿ ರೈತರು, ಬೆಸ್ತರು ಕರ ಕುಶಲಿಗರು ತಕ್ಕ ಮಾರುಕಟ್ಟೆಯಿಲ್ಲದೆ ಅಥವಾ ಮುಕ್ತ ಮಾರುಕಟ್ಟೆಯಲ್ಲಿ ಸ್ಪರ್ಧಿಸಲಾಗದೆ ನರಳುತ್ತಾರೆ. +ಕೈಗಾರಿಕೀಕರಣದ ಫಲವಾಗಿ ಬಂದ ಯಂತ್ರ ನಾಗರಿಕತೆಗೆ ಒಗ್ಗಿಕೊಂಡಿದ್ದರೂ ಜಾಗತೀಕರಣದ ಫಲವಾಗಿ ಬಂದ ಮುಕ್ತ ಆರ್ಥಿಕ ನೀತಿಗೆ ‘ಶ್ರಮ ಸಮುದಾಯಗಳು’ ಬಲಿಪಶುಗಳಾಗುತ್ತಾರೆ. +ಇದು ಜಾಗತೀಕರಣದ ನೇರ ದುಷ್ಪರಿಣಾಮ. +ಆರ್ಥಿಕ ಸುಧಾರಣೆಯ ಹೆಸರಿನಲ್ಲಿ ಭೂಸುಧಾರಣೆ ರಾಷ್ಟ್ರೀಕರಣದಂತ ಕಲ್ಪನೆಗಳು ನೆಲಕಚ್ಚಿ ಖಾಸಗೀಕರಣವು ಮುಕ್ತವಾಗಿ ವಿಜೃಂಭಿಸತೊಡಗಿದಂತೆ ಖಾಸಗಿ ಬದುಕು ಸಹ ‘ಮುಕ್ತ’ವಾಗುತ್ತ ತನ್ನದೇ ಸಾಮಾಜಿಕ-ಸಾಂಸ್ಕೃತಿಕ ಪರಿಣಾಮಗಳಿಗೆ ಕಾರಣವಾಗುತ್ತದೆ. +ಬದುಕಿನ ಆದರ್ಶಗಳು ಪಲ್ಲಟಗೊಳ್ಳುತ್ತವೆ. +ಇದು ವಿಶೇಷವಾಗಿ ಸಿನಿಮಾದಂತಹ ಸಮೂಹ ಮಾಧ್ಯಮಗಳಲ್ಲಿ ಬೇಗ ಪ್ರತಿಫಲಿತವಾಗುತ್ತದೆ. +ಸಿನಿಮಾಗಳಲ್ಲಿ ಕಾಣಿಸಿಕೊಳ್ಳುವ ಹೊಸ ತಾಂತ್ರಿಕ ಸಾಧ್ಯತೆಗಳಿಗೆ ಜಾಗತೀಕರಣವು ಕಾರಣವಲ್ಲ. +ಮುಂದುವರಿದ ಕೈಗಾರಿಕೀಕರಣದ ಶೋಧನಾತ್ಮಕತೆ ಕಾರಣ. +ಆದರೆ ಜಾಗತೀ ಕರಣವು ಸಿನಿಮಾದ ಆತ್ಮಕ್ಕೆ ಲಗ್ಗೆ ಹಾಕುತ್ತದೆ; +ಸಂವೇದನೆಗಳನ್ನು ಬದಲಾಯಿಸುತ್ತದೆ. +ಜಾಗತೀ ಕರಣಕ್ಕೆ ಮುಂಚೆಯೇ ಸಿನಿಮಾದಲ್ಲಿ ಸಂವೇದನೆ Vs ಸಂಪಾದನೆಯ ಅಂಶ ಇತ್ತು. +ಸಿನಿಮಾವನ್ನು ಮಾಧ್ಯಮ ಪ್ರಧಾನವಾಗಿ ಪರಿಗಣಿಸಿದವರು ಸಂವೇದನೆಗೂ, ಉದ್ಯಮ ಪ್ರಧಾನವಾಗಿ ಪರಿಗಣಿಸಿದವರು ಸಂಪಾದನೆಗೂ ಆದ್ಯತೆ ನೀಡುತ್ತ ಬಂದಿದ್ದಾರೆ. +ಈ ತಿಕ್ಕಾಟದ ನಡುವೆ ಮುಖ್ಯವಾಹಿನಿ ಚಿತ್ರಗಳು ಉದ್ಯಮ ಪ್ರಧಾನವಾದ ಅನೇಕ ಮುಖ್ಯವಾಹಿನಿ ಚಿತ್ರಗಳು ಸಾಮಾಜಿಕ ಜವಾಬ್ದಾರಿಯನ್ನು ನಿರ್ವಹಿಸಿವೆ. +ವಿಧವಾ ವಿವಾಹ, ಅಂತರ್ ಜಾತಿಯ ವಿವಾಹ, ವರದಕ್ಷಿಣೆ ವಿರೋಧ, ಮುಂತಾದ ವಸ್ತುಗಳಲ್ಲದೆ ಸಾಮಾಜಿಕ ಸಾಮರಸ್ಯ ಮತ್ತು ಸಮಾನತೆಗಳನ್ನು ಪ್ರತಿಪಾದಿಸಿವೆ. +ಈ ಅಂಶಗಳು ನಮ್ಮ ಸಮಾಜದಲ್ಲಿ ಜಾಗೃತ ಪ್ರಜ್ಞೆಯಾಗಿ ಕೆಲಸ ಮಾಡುತ್ತ ಬಂದದ್ದರ ಫಲವಾಗಿಯೂ ಮುಖ್ಯವಾಹಿನಿ ಚಿತ್ರಗಳು ಸಾಮಾಜಿಕ ಕಾಳಜಿಯ ಕಥಾವಸ್ತುಗಳನ್ನು ಸ್ವೀಕರಿಸಿರಬಹುದು. +ಆದರೆ ಮುಕ್ತ ಆರ್ಥಿಕತೆ, ಮುಕ್ತ ಮಾರುಕಟ್ಟೆಗಳ ಫಲವಾಗಿ ರೂಪುಗೊಳ್ಳುವ ‘ಮುಕ್ತ ಸಂವೇದನೆಗಳು’ ಸಾಮಾಜಿಕ ಕಾಳಜಿಯ ಕಥಾವಸ್ತುವನ್ನು ಕಡೆಗಣ್ಣಿಂದ ನೋಡುತ್ತವೆ ‘ಮುಕ್ತ ನಡವಳಿಕೆ’ಯ ಜೀವನ ಶೈಲಿಯನ್ನು ಆದರ್ಶವಾಗಿ ಸ್ವೀಕರಿಸುತ್ತವೆ. +ಅವುಗಳನ್ನು ರೋಚಕವಾಗಿ, ನವಿರಾಗಿ, ಚಿತ್ರಿಸುವುದರ ಮೂಲಕ ‘ಹೊಸ ಮಾದರಿ’ಗಳಾಗತೊಡಗುತ್ತವೆ. +ಈ ‘ಹೊಸ ಮಾದರಿ’ಗಳ ಸಾಮಾಜಿಕ-ನೈತಿಕ ಆಶಯಗಳು ಅಪ್ರಸ್ತುತವಾಗುತ್ತವೆ. +ನಮ್ಮ ಸಿನಿಮಾಗಳಲ್ಲಿನ ಪ್ರೇಮಿಗಳಿಗೆ ಪಾರ್ಕುಗಳ ಬದಲು ಪಬ್‌ಗಳು ಪ್ರಿಯವಾಗುತ್ತವೆ. +ಪ್ಯೂಡಲ್ ಕುಟುಂಬದ ವಿವಾಹೇತರ ಸಂಬಂಧದಲ್ಲೂ ಅಚಲ ಪ್ರೇಮನಿಷ್ಠೆ ತೋರುತ್ತ ಕುಡುಕನಾದ ಶರಶ್ಚಂದ್ರ ಚಟರ್ಜಿಯವರ ದೇವದಾಸ್ ಬದಲು ಚಟದ ದೇವದಾಸರು ಮುಖ್ಯರಾಗುತ್ತಾರೆ. +ಆರ್ಥಿಕ ಖಾಸಗೀ ಕರಣದಲ್ಲಿ ಖಾಸಗಿಯಾದದ್ದೆಲ್ಲ ಸಾರ್ವಜನಿಕ ಸ್ಥಾನಕ್ಕೆ ಬಂದಂತೆ ವ್ಯಕ್ತಿಯ ಖಾಸಗಿತನವೆಲ್ಲ ಸಾರ್ವಜನಿಕವಾಗುತ್ತದೆ. +ಮುಕ್ತ ಆರ್ಥಿಕತೆಯಂತೆ ಮುಕ್ತ ಮೈ ಬಯಲಾಗುತ್ತದೆ. +ಮುಕ್ತ ಮಾರುಕಟ್ಟೆಯಲ್ಲಿ ಸ್ಪರ್ಧೆಯೇ ಮುಖ್ಯವಾಗಿ ಮನುಷ್ಯ ಮನಸ್ಸು ಸಂಕುಚಿತವಾಗುತ್ತದೆ. +ಕೆಳಮಧ್ಯಮವರ್ಗ ಮತ್ತು ಕೆಳವರ್ಗಗಳ ಹತಾಶೆಯನ್ನು ತಣಿಸುವ ಉಪಾಯವಾಗಿ ‘ಹಿಂಸೆ’ ತೆರೆಯನ್ನು ತುಂಬುತ್ತದೆ. +ಕ್ಲಬ್‌ನಲ್ಲಿ ಮಾತ್ರ ನಡೆಯುತ್ತಿದ್ದ ಕ್ಯಾಬರೆ ನೃತ್ಯ ಬೀದಿಯಲ್ಲಿ ನಡೆಯಲಾರಂಭಿಸುತ್ತದೆ. +ಕ್ಯಾಬರೆ ನರ್ತಕಿಯರ ಸ್ಥಾನಚ್ಯುತಿಯಾಗಿ ನಾಯಕಿಯರೇ ಆ ಸ್ಥಾನವನ್ನು ತುಂಬುತ್ತಾರೆ. +ಊಟಕ್ಕೆ ಪಲ್ಯ ದಂತಿದ್ದ ಅಂಶಗಳೆಲ್ಲ ಊಟವೇ ಆಗುತ್ತವೆ. +ಕೊಲ್ಲುವ ಕ್ರೌರ್ಯದಲ್ಲಿ ಖುಷಿಪಡುವ, ಕಂಡವರ ಹೆಣ್ಣಿನ ಕಾಮದಲ್ಲಿ ಸುಖಿಸುವ ವಿಕೃತಿಗಳು ಆದರ್ಶ ಆಕೃತಿಗಳಾಗಿ ನೋಡುಗರ ಉತ್ಸಾಹ ಉಕ್ಕುತ್ತದೆ. +ಬೇರೆಯವರ ಹೆಂಡತಿಯನ್ನೂ ಬೇರೆಯವರಿಗೆ ನಿಶ್ಚಿತಾರ್ಥವಾದ ಹೆಣ್ಣನ್ನೊ ಪ್ರೇಮಿಸಿ ಪರಿತಪಿಸುವ ನಾಯಕರು ತಾವೇ ಆದಂತೆ ಆನಂದಿಸುವ ಪ್ರವೃತ್ತಿ ಕಾಣುತ್ತದೆ. +ಹಿಂಸೆ, ಕ್ರೌರ್ಯಗಳನ್ನು ಖಂಡಿಸಿದರೂ ಪ್ರೇಮದ ಹೆಸರಲ್ಲಿ ಕಾಮವನ್ನು ಕಟ್ಟಿಕೊಡುವ ನವಿರುತನಕ್ಕೆ ನವಿಲಾಗುವ ವಿಮರ್ಶೆಯ ವಿಲಾಸ ಕುಣಿಯುತ್ತದೆ. +ಈ ಎಲ್ಲ ವಿಲಾಸ ವಿಭ್ರಮಗಳ ಮಧ್ಯೆ ಸ್ಪಷ್ಟ ಸಾಮಾಜಿಕ ಕಾಳಜಿಯ ಸಿನಿಮಾಗಳಿಗೆ ಸಿನಿಕ ನೋಟ ಎದುರಾಗುತ್ತದೆ. +‘ಮನಸ್ಸಿಗೆ ಮೋಸ ಮಾಡುವ ಮಾದರಿಗಳು’ ಮೇಲುಗೈ ಪಡೆದು ಚಿಂತನಶೀಲ, ಸೃಜನಶೀಲ ಸಿನಿಮಾಗಳು ನಿರ್ಲಕ್ಷ್ಯಕ್ಕೆ ಒಳಗಾಗುತ್ತವೆ. +ಇದು ಜಾಗತೀಕರಣದ ಆರ್ಥಿಕ ರಾಜಕೀಯದ ಫಲವಾದರೆ, ಸಿನಿಮೇತರ ಕಾರಣಗಳಿಗಾಗಿ ಕೆಲವು ಸಿನಿಮಾಗಳನ್ನು ಮೆಚ್ಚುವ, ಕೆಲವು ಸಿನಿಮಾಗಳನ್ನು ಕೊಚ್ಚುವ ‘ಸಾಂಸ್ಕೃತಿಕ ರಾಜಕೀಯ’ವು ಮೊದಲಿಂದಲೂ, ಸಂಪ್ರದಾಯಬದ್ಧವಾಗಿ ನಡೆದುಕೊಂಡು ಬಂದಿದೆ. +‘ಪೂರ್ವಾಗ್ರಹ ಪ್ರಭುಗಳು ತಮಗೆ ಇಷ್ಟವಾದ ವ್ಯಕ್ತಿ ಮತ್ತು ವಸ್ತುಗಳ ಸಿನಿಮಾಗಳಲ್ಲಿ ಮಾತ್ರ ಶ್ರೇಷ್ಠತೆಯನ್ನು ಕಾಣುವ ಕ್ಷುಲ್ಲಕ ರಾಜಕೀಯಕ್ಕೇನೂ ಇಲ್ಲಿ ಕಡಿಮೆಯಿಲ್ಲ. +ಈ ಮಧ್ಯೆ ನಿಜವಾದ ರಾಜಕೀಯ ಪ್ರಜ್ಞೆ ಮತ್ತು ಸಾಮಾಜಿಕ ಪ್ರಜ್ಞೆಯ ಸಿನಿಮಾಗಳು ಬದುಕಬೇಕಾಗಿದೆ. +ಸಿನಿಮಾ ರಾಜಕೀಯ ಮತ್ತು ಸಿನಿಮಾದಲ್ಲಿ ರಾಜಕೀಯ – ಎರಡೂ ನೆಲೆಗಳು ಸಿನಿಮಾ ಮಾಧ್ಯಮದ ಭಾಗವಾಗಿವೆ. +ನೇರವಾಗಿ ರಾಜಕೀಯ ವಸ್ತುವನ್ನು ಪಡೆಯದಿದ್ದರೂ ವಿಶಾಲಾರ್ಥದಲ್ಲಿ ಸಿನಿಮಾದ್ದೇ ಒಂದು ರಾಜಕೀಯ ಇರುತ್ತದೆ – ಸಿನಿಮಾಕ್ಕೆ ಒಂದು ಎಕನಾಮಿಕ್ಸ್ ಇದ್ದ ಹಾಗೆ. +ಈ ಅಂಶವನ್ನು ಜೇಮ್ಸ್ ಮೊನೇಕೊ ಅವರು ತಮ್ಮ 'How to read a Film' ಎಂಬ ಗ್ರಂಥದಲ್ಲಿ ವಿವರಿಸುತ್ತಾರೆ. +ಜೇಮ್ಸ್ ಮೊನೇಕೊ ಅವರು ‘ಸಿನಿಮಾದ ರಾಜಕೀಯ’ವನ್ನು ಅದು ಜಗತ್ತಿನ ಜೊತೆ ಪಡೆದ ಸಂಬಂಧದ ಮೂಲಕ ಕಾಣಬಯಸುತ್ತಾರೆ. +ಅಂದರೆ ಒಂದು ಸಿನಿಮಾ ಮಾನವನ ಅನುಭವಗಳನ್ನು ಹೇಗೆ ಒಳಗೊಳ್ಳುತ್ತದೆ ಮತ್ತು ಹೇಗೆ ಪ್ರತಿಫಲಿಸುತ್ತದೆ ಎಂಬ ನೆಲೆಯಲ್ಲಿ ಅದರ ‘ಸಮಾಜೋ ರಾಜಕೀಯ’ ಕಂಡುಬರುತ್ತದೆ. +ಅಥವಾ ಸಿನಿಮಾದ ‘ಸಮಾಜೋ ರಾಜಕೀಯ’ವು ಮಾನವನ ಅನುಭವಗಳನ್ನು ಒಳಗೊಂಡ ಮತ್ತು ಪ್ರತಿಫಲಿಸಿದ ರೀತಿಯನ್ನು ವಿವರಿಸುತ್ತದೆ. +ವೈಯಕ್ತಿಕ ಹಾಗೂ ನಿರ್ದಿಷ್ಟ ಸಂಬಂಧವನ್ನು ಸಿನಿಮಾದ ‘ಮನೋರಾಜಕೀಯ’ವು ವಿವರಿಸುತ್ತದೆ. +ನನಗನ್ನಿಸುತ್ತದೆ : ಎಷ್ಟೋ ಸಿನಿಮಾಗಳು ‘ಸಮಾಜೋ ರಾಜಕೀಯ’ವನ್ನು ಪ್ರಧಾನವಾಗಿ ಪರಿಗಣಿಸದೆ ಇರಬಹುದು ಅಥವಾ ತಮ್ಮ ದೃಷ್ಟಿ ಅದಲ್ಲ ಎಂದು ನಿರ್ದೇಶಕರು ಹೇಳಬಹುದು. +ಹೀಗೆ, ಸಮಾಜೋರಾಜಕೀಯದ ಸಂಬಂಧಕ್ಕೆ ದೂರವಾಗಿರುವುದೇ ಒಂದು ಸಮಾಜೋ ರಾಜಕೀಯ’ – ಎಂದು ನನಗನ್ನಿಸುತ್ತದೆ. +ಯಾಕೆಂದರೆ, ಮನುಷ್ಯನ ಅನುಭವಗಳು ರೂಪುಗೊಳ್ಳುವುದು ಒಂದು ನಿರ್ದಿಷ್ಟ ಸಮಾಜದಲ್ಲಿ ಮತ್ತು ಆ ನಿರ್ದಿಷ್ಟ ಸಮಾಜ ರೂಪುಗೊಳ್ಳುವುದು ನಿರ್ದಿಷ್ಟ ರಾಜಕೀಯ ಸಂರಚನೆಯ ಒತ್ತಾಸೆಯಲ್ಲಿ. +ಸಮಾಜ, ಸಮಾಜ ಸಂರಚನೆಯ ರಾಜಕೀಯ, ಅದರ ಆರ್ಥಿಕ ಆಯಾಮ ಇವೆಲ್ಲವೂ ಪರಸ್ಪರ ಸಂಬಂಧವುಳ್ಳ ಅಂಗಗಳು. +ತನಗೆ ಮತ್ತು ತನ್ನ ಸಿನಿಮಾಕ್ಕೆ ಯಾವುದೇ ಸಾಮಾಜಿಕ ನಿಲುವಿಲ್ಲ, ಯಾವುದೇ ರಾಜಕೀಯ ನಿಲುವಿಲ್ಲ, ತಾನು ನಿರ್ಲಿಪ್ತ ಎಂದು ಹೇಳುವ ನಿರ್ದೇಶಕನದೂ ಒಂದು ರಾಜಕೀಯವೇ ಆಗಿರುತ್ತದೆ. +ನಿರ್ದಿಷ್ಟ ನಿಲುವನ್ನು ನಿರೀಕ್ಷಿಸುವ ಸಿನಿಮಾಗಳಲ್ಲೂ ತಾನು ನಿರ್ಲಿಪ್ತ ಎಂದು ಹೇಳುವ ಮೂಲಕ ಜಾಣತನದ ನಿಲುವನ್ನು ತಳೆದಂತಾಗುವುದರಿಂದ, ಸೂಕ್ಷ್ಮತೆಯ ಸೋಗಿನಲ್ಲಿ ಸರ್ವಮಾನ್ಯತೆ ಪಡೆಯುವ ರಾಜಕೀಯ ತಂತ್ರವಾಗಿ ‘ನಿರ್ಲಿಪ್ತತೆ’ಯು ಬಳಕೆಯಾಗುತ್ತದೆ. +ನಿರ್ಲಿಪ್ತತೆ ನಪುಂಸಕತ್ವವಾಗಬಾರದು. +ಪೂರ್ವನಿಶ್ಚಿತ ನಿಲುವುಗಳ ಮೂಲಕವೇ ವಸ್ತುವೊಂದನ್ನು ಪ್ರವೇಶಿಸುವ ಬದಲು ನಿರ್ಲಿಪ್ತವಾಗಿ ಪ್ರವೇಶಿಸಿ, ಪರಿಶೀಲಿಸಿ, ಆನಂತರ ನಿಲುವೊಂದನ್ನು ತಳೆಯುವುದು, ಪ್ರತಿಫಲಿಸುವುದು ಸರಿಯಾದ ಪ್ರಕ್ರಿಯೆ ಮತ್ತು ನಿರ್ಲಿಪ್ತತೆಯ ಪರಿಕಲ್ಪನೆಯು ವಸ್ತು ಪ್ರವೇಶಕ್ಕೆ ಅನ್ವಯಿಸುವ ಅಂಶವಾಗಿ ಮಾನ್ಯವಾದುದು. +ಯಾವುದೇ ನಿಲುವನ್ನು ತಳೆಯದೆ ನಿರ್ಲಿಪ್ತನಾಗಿದ್ದೇನೆಂದು ಭಾವಿಸುವುದು ಮತ್ತು ಅದನ್ನೇ ಪ್ರತಿಪಾದಿಸುವುದು ಸಮಾಜ ವಿಮುಖತೆಯೂ ಆಗಬಹುದಾದ ಅಪಾಯವಿದೆಯಲ್ಲವೆ? +ಸಮಾಜದ ಅನಾರೋಗ್ಯಕರ ನಿಲುವುಗಳಿಗೆ ಪ್ರತಿ ನಿಲುವು ತಳೆಯದೆ ಹೋದರೆ ಮೌನ ಸಮ್ಮತಿಯ ರಾಜಕೀಯವಾಗುವುದಿಲ್ಲವೆ? +ಈ ಪ್ರಶ್ನೆಗಳು ಪ್ರಬಲ ಸಮೂಹ ಮಾಧ್ಯಮವಾದ ಸಿನಿಮಾ ಸಂಬಂಧದಲ್ಲಿ ಹೆಚ್ಚು ಪ್ರಸ್ತುತವಾಗುತ್ತವೆ. +ನನ್ನ ಮಾತಿಗೆ ಪೂರಕವಾಗಿ ಮತ್ತೆ ಜೇಮ್ಸ್ ಮೊನೇಕೊ ಅವರ ವ್ಯಾಖ್ಯಾನವನ್ನು ಉಲ್ಲೇಖಿಸುತ್ತೇನೆ:“Film is such a wide spread popular phenomenon, it plays a very important part in modern culture, socio politically. +ಜೇಮ್ಸ್ ಮೊನೇಕೊ ಅವರು ಮುಂದುವರೆದು ‘ಸಿನಿಮಾದ ರಾಜಕೀಯ’ದಲ್ಲಿರುವ ವೈರುಧ್ಯಗಳನ್ನೂ ಗುರುತಿಸುತ್ತಾರೆ ಮತ್ತು ಈ ವೈರುಧ್ಯಗಳು ಸಿನಿಮಾದ ರಾಜಕೀಯವನ್ನು ನಿಯಂತ್ರಿಸುತ್ತವೆಯೆಂದು ಹೇಳುತ್ತಾರೆ. +ಸಿನಿಮಾಕ್ಕೆ ಒಂದು ಎಕನಾಮಿಕ್ಸ್ ಇದ್ದ ಹಾಗೆಯೇ ಒಂದು ಪಾಲಿಟಿಕ್ಸ್ ಇರುತ್ತದೆ ಎಂಬ ಅಂಶವು ಸಿನಿಮಾದ ಸ್ವರೂಪಕ್ಕೆ ಸಂಬಂಧಿಸಿದ್ದು. +ಸಿನಿಮಾದ ವಸ್ತುವೊಂದು ನಿರ್ದಿಷ್ಟ ಸಾಮಾಜಿಕ-ರಾಜಕೀಯ ನಿಲುವುಗಳನ್ನು ತಳೆಯುವುದು ಅಗತ್ಯ ಎಂಬ ಅಂಶವು ನಿರ್ದೇಶಕನ ದೃಷ್ಟಿಕೋನಕ್ಕೆ ಸಂಬಂಧಿಸಿದ್ದು. +ಜಾಗತೀಕರಣವು ಮುಕ್ತ ಆರ್ಥಿಕ ಪದ್ಧತಿಯ ರಾಜಕೀಯ ದೃಷ್ಟಿಧೋರಣೆಗಳ ಫಲವಾದ್ದರಿಂದ ಸಿನಿಮಾವನ್ನೂ ಒಳಗೊಂಡಂತೆ ಒಟ್ಟು ಸಾಂಸ್ಕೃತಿಕ ಕ್ಷೇತ್ರವು ನಿರ್ದಿಷ್ಟ ನಿಲುವು ತಳೆಯುವುದು ಮತ್ತು ತಂತಮ್ಮ ಕ್ಷೇತ್ರದ ಸೃಜನಶೀಲಕ್ರಿಯೆಯಲ್ಲಿ ಪ್ರತಿಸ್ಪಂದಿಸುವುದು ಅಗತ್ಯವಾದ ಸಂದರ್ಭದಲ್ಲಿ ನಾವು ನಿಂತಿದ್ದೇವೆ. +ಹಾಗೆ ನೋಡಿದರೆ, ಎಲ್ಲ ಕಲೆಗಳೂ ವಿಶಾಲಾರ್ಥದಲ್ಲಿ ಸಾಮಾಜಿಕ ಸಂಭವಗಳಾದ್ದರಿಂದ, ಈ ಸಂಬಂಧದ ‘ಸಮಾಜೋ ರಾಜಕೀಯ’ ಚರ್ಚೆ ಪ್ರಸ್ತುತವಾಗುತ್ತದೆ. +ಅಷ್ಟೇ ಅಲ್ಲ ಎಲ್ಲ ಕಲೆಗಳೂ ಸಾಮಾಜಿಕ ಜವಾಬ್ದಾರಿಯನ್ನು ನಿರ್ವಹಿಸಬೇಕಾಗುತ್ತದೆ. +‘ಜನಗಳಿಗೆ ಜವಾಬ್ದಾರ’ ಎಂಬುದನ್ನು ಸಾಂಸ್ಕೃತಿಕ ಕ್ಷೇತ್ರ ಮರೆಯಬಾರದು. +ಸಿನಿಮಾವನ್ನು ಜನಗಳಿಗೆ ಜವಾಬ್ದಾರಿಯಾದ ಅಭಿವ್ಯಕ್ತಿಯೆಂದು ನಂಬಿದ ಋತ್ವಿಕ್ ಘಟಕ್ ಅವರ ಮಾತು ಇಲ್ಲಿ ಉಲ್ಲೇಖನೀಯ . +ಎಲ್ಲಾ ಕಲಾಕಾರರೂ (ಸಿನಿಮಾ ನಿರ್ದೇಶಕರನ್ನೂ ಒಳಗೊಂಡಂತೆ) ಒಂದಲ್ಲ ಒಂದು ವರ್ಗಕ್ಕೆ ಸೇರಿದ ರಾಜಕೀಯ ನೆಲೆ ಹೊಂದಿರುತ್ತಾರೆಂಬ ಧ್ವನಿಯನ್ನು ಋತ್ವಿಕ್ ಘಟಕ್ ಅವರ ಮಾತುಗಳಲ್ಲಿ ಗುರುತಿಸಬಹುದು. +ಈ ಕಾರಣದಿಂದಲೇ ಸಿನಿಮಾವನ್ನು ನೋಡುವ, ವಿಮರ್ಶಿಸುವ ನೆಲೆಯೂ ನಿಯಂತ್ರಿತವಾಗುತ್ತದೆಯಲ್ಲವೆ ಎಂಬ ಪ್ರಶ್ನೆಯನ್ನು ಪರಿಶೀಲಿಸುವುದು ಅಗತ್ಯ. +ನಾನು, ನನ್ನದೇ ಚಿತ್ರಗಳ ಮೂಲಕ ಈ ಅಂಶವನ್ನು ಪರಿಶೀಲಿಸಬಯಸುತ್ತೇನೆ. +ನನ್ನ ಎಲ್ಲ ಚಿತ್ರಗಳೂ ಸಮಾಜೋ ರಾಜಕೀಯ ವಸ್ತುಗಳನ್ನು ಪಡೆದಿವೆ. +ಕೆಲವೊಮ್ಮೆ ನೇರವಾಗಿ, ಕೆಲವೊಮ್ಮೆ ಸೂಚ್ಯವಾಗಿ ನಿರ್ದಿಷ್ಟ ನಿಲುವನ್ನು ಪ್ರಕಟಿಸುತ್ತವೆ. +ಪ್ರೇಮ, ಸಾಂಪ್ರದಾಯಿಕ ಸಂಬಂಧ, ಅತಿಭಾವುಕ ಸೆಳೆತಗಳಂತಹ ಸಾಮಾಕೃತ ಅನುಭವಗಳ ಬದಲು ಸಮಾಜದ ನಿರ್ದಿಷ್ಟ ವಲಯದ, ನಿರ್ದಿಷ್ಟ ಅನುಭವದ ನೆಲೆ – ನಿಲುವುಗಳಿಂದ ರೂಪುತಳೆದ ನನ್ನ ಸಿನಿಮಾಗಳನ್ನು ಪ್ರತಿಷ್ಠಿತ ವಿಮರ್ಶಾವಲಯ ಸಂಭ್ರಮದಿಂದೇನೂ ಸ್ವಾಗತಿಸಿಲ್ಲ. +ಕೆಲವರು ಹಾಡಿ ಹೊಗಳುವ ಸಿನಿಮಾಗಳ ಜೊತೆ ನನ್ನ ಸಿನಿಮಾಗಳನ್ನು ಸ್ವವಿಮರ್ಶೆಯ ನೆಲೆಯಲ್ಲಿ ತುಲನೆ ಮಾಡಿ ನೋಡಿದ್ದೇನೆ. +ಕೆಲವೇ ಕೆಲವರ ರಚನಾತ್ಮಕ ವಿಮರ್ಶೆಯ ಹೊರತಾಗಿ ಅನೇಕರ ವಿಚಿತ್ರ ‘ವಾರೆನೋಟ’ಕ್ಕೆ ವ್ಯಕ್ತಿ ಮತ್ತು ವಸ್ತುವನ್ನು ಕುರಿತ ಸಿನಿಕತನ ಮತ್ತು ಅಸಹನೆಗಳೇ ಕಾರಣವೆಂಬ ಅರಿವು ನನಗಾಗಿದೆ. +ಸ್ವಸಮರ್ಥನೆಗಾಗಿ ಈ ಮಾತನ್ನು ಹೇಳುತ್ತಿಲ್ಲ. +ಕನ್ನಡ ಚಿತ್ರರಂಗದಲ್ಲಿ ಸದಾ ಸಾಮಾಜಿಕ – ರಾಜಕೀಯ ಪ್ರಜ್ಞೆಯ ಸಿನಿಮಾಗಳನ್ನು ನಿರ್ದೇಶಿಸುತ್ತಿರುವ ನನಗೆ ಸರಿಯಾದ ವಿಮರ್ಶೆಯ ನ್ಯಾಯ ಸಿಕ್ಕಿಲ್ಲವೆಂಬ ಸತ್ಯ ಸಂಗತಿಯು ವೈಯಕ್ತಿಕ ನೆಲೆಯನ್ನು ಮೀರಿದ ಗಂಭೀರ ಚರ್ಚೆಯನ್ನು ಬಯಸುತ್ತದೆ. +ವ್ಯಕ್ತಿ ಮತ್ತು ವಸ್ತುವನ್ನು ಕುರಿತ ಸಿನಿಕತನ ಮತ್ತು ಅಸಹನೆಗಳಿಗೆ ವೈಯಕ್ತಿಕ ಕಾರಣಗಳಿರುವಂತೆಯೇ ಸಾಮಾಜಿಕ – ರಾಜಕೀಯ ಕಾರಣಗಳು ಇರುತ್ತವೆ ಅಥವಾ ಸಾಮಾಜಿಕ – ರಾಜಕೀಯ ಕಾರಣಗಳಿಂದ ಸಿನಿಕತನ ಮತ್ತು ಅಸಹನೆಗಳು ಪ್ರೇರಿತವಾಗಿರುತ್ತವೆ. +ಕಲಾತ್ಮಕತೆ ಮತ್ತು ಸೌಂದರ್ಯ ಪ್ರಜ್ಞೆಗೆ ಸಂಬಂಧಿಸಿದ ಸಿದ್ಧಮಾದರಿಗಳೂ ಮನಸ್ಸಿನಲ್ಲಿ ಕೆಲಸ ಮಾಡಿರುತ್ತವೆ. +ಸಿನಿಮಾವೊಂದನ್ನು ಮೂಲೆಗೆ ತಳ್ಳಲು ಕಲಾತ್ಮಕತೆ, ತಾಂತ್ರಿಕತೆ ಮುಂತಾದ ಮಾತುಗಳು ಸುಲಭ ಸಾಧನವಾಗಿ ‘ಈ ಚಲನಚಿತ್ರದ ವಸ್ತು ಚೆನ್ನಾಗಿದೆ. +ಆದರೆ ತಾಂತ್ರಿಕ ಕುಶಲತೆ ಇಲ್ಲ’ ಎಂದು ಸಲೀಸಾಗಿ ಪರ್ಮಾನು ಹೊರಡಿಸಲಾಗುತ್ತದೆ. +ಕಲಾತ್ಮಕತೆ, ತಾಂತ್ರಿಕ ಕುಶಲತೆ ಎಂದರೆ ಏನು? +ಆಧುನಿಕ ತಂತ್ರಜ್ಞಾನದ ಪರಿಕರಗಳನ್ನು ಬಳಸಿ ಮಾಡುವ ತಾಂತ್ರಿಕ ಕಸರತ್ತು ಅಥವಾ ಚಮತ್ಕೃತಿ (ಗಿಮಿಕ್ಸ್) ಗಳನ್ನು ಕೆಲವರು ತಾಂತ್ರಿಕ ಪರಿಣತಿ ಎಂದು ಭಾವಿಸುವುದುಂಟು. +ಯಾವುದೇ ವೈಚಾರಿಕ ಒಳ ಸೆಲೆಯಿಲ್ಲದೆ ಸಾಮಾನೀಕೃತ ಅನುಭವಗಳನ್ನು ರಂಜಕವಾಗಿ ನಿರೂಪಿಸಿದರೆ ಕಲಾತ್ಮಕ ಪರಿಣತಿ ಎಂದು ಭಾವಿಸುವವರೂ ಉಂಟು. +ಆದರೆ ಪ್ರಖರ ಸಾಮಾಜಿಕ – ರಾಜಕೀಯ ವಸ್ತುಗಳನ್ನು ಒಳಗೊಂಡ ಸಿನಿಮಾಗಳು ಈ ಮಾದರಿಯ ಕಲಾತ್ಮಕತೆ ಮತ್ತು ತಾಂತ್ರಿಕ ಕುಶಲತೆಗೆ ಹೊರತಾಗಿ ಬೇರೊಂದು ‘ಬಂಧ’ವನ್ನು ಕಂಡುಕೊಳ್ಳಲು ಹವಣಿಸುತ್ತದೆಯಾದ್ದರಿಂದ ಸಿನಿಮಾ ವಿಮರ್ಶೆಯು ಈ ಅಂಶವನ್ನು ಗಂಭೀರವಾಗಿ ಪರಿಗಣಿಸಬೇಕಾಗುತ್ತದೆ. +ತಾಂತ್ರಿಕ ಕುಶಲತೆ ಅಥವಾ ಪರಿಣತಿಗಳು, ತಾಂತ್ರಿಕ ಪರಿಕರಗಳ ಬಳಕೆಗೆ ಮಾತ್ರ ಮೀಸಲಾದರೆ ಸಾಲದು. +ಒಟ್ಟು ಸಿನಿಮಾದ ನಿರೂಪಣಾ ತಂತ್ರ ಮತ್ತು ವಸ್ತು ನಿರ್ವಹಣೆಯ ಸೂಕ್ಷ್ಮ ವಿಧಾನವು ಕಲಾತ್ಮಕ ಮತ್ತು ತಾಂತ್ರಿಕ ಕುಶಲತೆಯ ಪ್ರಮುಖ ಅಂಶವೆಂದು ನನ್ನ ತಿಳುವಳಿಕೆ. +ಸಾಮಾಜಿಕ – ರಾಜಕೀಯ ಪ್ರಜ್ಞೆಯ ಸಿನಿಮಾಗಳಲ್ಲಿ ಈ ಅಂಶಗಳಿದ್ದರೂ ಪೂರ್ವನಿಶ್ಚಿತ ಸಾಮಾಜಿಕ ಸಾಂಸ್ಕೃತಿಕ ಅಭಿಪ್ರಾಯಗಳ ಕಾರಣದಿಂದ ಕೆಲ ವಿಮರ್ಶಕರಿಗೆ ಮತ್ತು ಪ್ರಬುದ್ಧ ಪ್ರೇಕ್ಷಕರಿಗೆ ‘ಪ್ರೀತಿಯ ಪ್ರವೇಶ’ ಸಾಧ್ಯವಾಗದೆ ಹೋಗ ಬಹುದು. +ಇಂಥವರ ಮನಸ್ಸಿನಲ್ಲಿ ನೆಲೆಯೂರಿರುವ ಸೌಂದರ್ಯ ಪ್ರಜ್ಞೆಗೂ ವರ್ಗಪ್ರಜ್ಞೆಗೂ ಸಂಬಂಧವಿರಬಹುದು. +ಆದ್ದರಿಂದ ಪ್ರೇಕ್ಷಕ ಮತ್ತು ವಿಮರ್ಶಕರ ಮನಸ್ಸಿನಲ್ಲಿ ತಮ್ಮನ್ನು ತಾವು ಮೀರಿ ಬೇರೊಂದು ಮಾದರಿಯ ಜೊತೆ ಸಂವಾದಿಸುವ ಸ್ಥಿತಿಯೊಂದು ಬೇಕಾಗುತ್ತದೆ. +ಯಜಮಾನ ಸಂಸ್ಕೃತಿಯಿಂದ ಪ್ರಣಿತವಾದ ಪ್ರಬುದ್ಧ ಜ್ಞಾನವು ಜನವಿರೋಧಿ ಆಶಯಗಳನ್ನು ಒಳಗೊಂಡಿರುತ್ತದೆಯೆಂಬ ಎಚ್ಚರ ಸದಾ ಇರಬೇಕಾಗುತ್ತದೆ. +ನಮ್ಮ ದೇಶದಲ್ಲೂ ಇಂತಹದೇ ಇತಿಹಾಸವಿದೆ. +ಆದರೆ ಈಗ ಎಲ್ಲ ಜನ ವರ್ಗಗಳಿಗೂ ಶಿಕ್ಷಣ ಮತ್ತಿತರ ಸೌಲಭ್ಯಗಳು ಲಭ್ಯವಾಗುತ್ತಿರುವುದರಿಂದ ಸಾಮಾಜಿಕ ಚಲನಶೀಲತೆ ಸಾಧ್ಯವಾಗಿ ಜನವಿಮೋಚನೆಯ ಆಶಯ ಮತ್ತು ಹೋರಾಟಗಳು ದಟ್ಟವಾಗುತ್ತ ಬಂದಿವೆ. +ಆದರೆ ಇದೇ ಸಂದರ್ಭದಲ್ಲಿ ಮುಕ್ತ ಆರ್ಥಿಕ ನೀತಿಯ ರಾಜಕೀಯ ವ್ಯವಸ್ಥೆ ಮೇಲುಗೈ ಪಡೆದು ಜನ ವಿಮೋಚನೆಯ ಆಶಯಗಳಿಗೆ ಹಿನ್ನಡೆಯಾಗುತ್ತಿದೆ. +ವಿಮೋಚನೆಯ ಹೋರಾಟಗಳಲ್ಲಿದ್ದ ಕೆಲವು ದೌರ್ಬಲ್ಯಗಳೇ ದೊಡ್ಡದಾಗಿ ಬಿಂಬಿತವಾಗುತ್ತಿವೆ. +ಜಾಗತೀಕರಣದ ಹೆಸರಲ್ಲಿ ಬಂದ ಆರ್ಥಿಕ ಉದಾರೀಕರಣವೇ ಅಂತಿಮ ಪರಿಹಾರವೆಂಬ ಭ್ರಮೆಯನ್ನು ಬೆಳೆಸಲಾಗುತ್ತಿದೆ. +ಇಂತಹ ಸನ್ನಿವೇಶದಲ್ಲಿ ವಿಮೋಚನೆಯ ಹೋರಾಟಗಳು ಆತ್ಮವಿಮರ್ಶೆಗೆ ತೊಡಗುವುದರೊಂದಿಗೆ ಸೂಕ್ತ ಕಾರ್ಯ ತಂತ್ರಗಳನ್ನು ರೂಪಿಸಿಕೊಂಡು ಜನಪರ ಆಶಯಗಳನ್ನು ಜೀವಂತವಾಗಿಡ ಬೇಕಾಗಿದೆ. +ಸಿನಿಮಾದಂತಹ ಸಮೂಹ ಮಾಧ್ಯಮಗಳು ಕಡೇ ಪಕ್ಷ ಜನವಿರೋಧಿಯಾಗದಂತೆ ಜವಾಬ್ದಾರಿಯನ್ನು ನಿರ್ವಹಿಸಬೇಕಾಗಿದೆ. +ಇದು ಎಲ್ಲ ಕಲೆಗಳ ಕೆಲಸವೂ ಹೌದು. + ಎಪ್ಪತ್ತರ ದಶಕದಲ್ಲಿ ಪ್ರಬಲವಾಗಿದ್ದ ಪ್ರಗತಿಪರ ಚಿಂತನೆಗಳು ಈಗ ಮತ್ತೊಮ್ಮೆ ಹೊಸ ಜೀವಶಕ್ತಿಯಿಂದ ಬೆಳಗಬೇಕಾಗಿದೆ. +ವಿಶೇಷವಾಗಿ, ಸಿನಿಮಾ ಎಂಬ ಶಕ್ತಿಯನ್ನು ನಮ್ಮ ಬೌದ್ಧಿಕ ವಲಯವು ಗಂಭೀರವಾಗಿ ಪರಿಗಣಿಸಬೇಕಾಗಿದೆ. + ಶ್ರೀ ಎಂ.ಬಿ. ಶ್ರೀನಿವಾಸನ್ ಅವರು ೧೯೭೮ರಲ್ಲಿ ಹೇಳಿದ ಮಾತುಗಳು ಇಂದಿಗೂ ಪ್ರಸ್ತುತವಾಗಿವೆ. +ಸಿನಿಮಾ ಮಾಧ್ಯಮವನ್ನು ಅನಾದರದಿಂದ ಕಾಣುತ್ತಿರುವ ಬೌದ್ಧಿಕವಲಯದ ಅನೇಕರು ಈ ದಿಕ್ಕಿನಲ್ಲಿ ಚಿಂತಿಸಬೇಕಾಗಿದೆ. +ಸಿನಿಮಾವನ್ನು ಒಳಗೊಂಡಂತೆ ಜನಪ್ರಿಯ ಸಂಸ್ಕೃತಿಯ ಮಾದರಿಗಳನ್ನು ಪ್ರೀತಿಯಿಂದ ಕಾಣುವ, ಚರ್ಚಿಸುವ, ಸಂವಾದಿಸುವ, ಪರಿವರ್ತಿಸುವ ಪ್ರಕ್ರಿಯೆಗೆ ಹೊಸ ಚಾಲನೆ ದೊರಕಬೇಕಾಗಿದೆ. +ಒಂದು ಪ್ರಶ್ನೆ ಸಹಜವಾಗಿ ಏಳುತ್ತದೆ . +ಸಿನಿಮಾ ಮಾಧ್ಯಮವು ಒಂದಲ್ಲ ಒಂದು ರೀತಿಯಲ್ಲಿ ‘ಸಮಾಜೋ ರಾಜಕೀಯ’ ಆಯಾಮಾವನ್ನು ಪಡೆದಿರುತ್ತದೆಯೆಂಬುದನ್ನು ಒಪ್ಪಬಹುದಾದರೂ ರಾಜಕೀಯ ವಸ್ತುವಿನ ಸಿನಿಮಾಗಳು ಮಾತ್ರ ಮುಖ್ಯವೆ ಮತ್ತು ಜಾಗತೀಕರಣವನ್ನು ಎದುರಿಸಲು ಎಲ್ಲರೂ ರಾಜಕೀಯ ಸಿನಿಮಾಗಳನ್ನೇ ಮಾಡಬೇಕೆ? +ಯಾವುದೇ ಕಲೆಗೆ ಹೀಗೆ ಕಡಿವಾಣ ಹಾಕುವುದಾಗಲಿ, ಕಟ್ಟಪ್ಪಣೆ ವಿಧಿಸುವುದಾಗಲಿ ಸರಿಯಲ್ಲ. +ಏಕಮುಖಿಯಾದ ಸಿನಿಮಾಗಳನ್ನೇ ನಿರ್ಮಿಸಬೇಕೆಂದು ಪ್ರತಿಪಾದಿಸುವುದು ನನ್ನ ಈ ಲೇಖನದ ಆಶಯವಲ್ಲ. +ನನ್ನಲ್ಲಿ ಅಂತಹ ಅಭಿಪ್ರಾಯವೂ ಇಲ್ಲ. +ತಮಗೆ ತಾವೇ ರಾಜಕೀಯೇತರ ಕಲೆಗಾರರೆಂದು ಭಾವಿಸುವವರು ಸಹ ರಾಜಕೀಯದ ಭಾಗವಾಗಿರುತ್ತಾರೆಂದು ಮನವರಿಕೆ ಮಾಡಿಕೊಡುವುದು. + ಸಾಮಾನ್ಯೀಕೃತ ಅನುಭವಗಳ ರೋಚಕ ಸಿನಿಮಾಗಳನ್ನು ವೈಭವೀಕರಿಸಿ ಅಂಥ ಸಿನಿಮಾಗಳೇ ಸಮಕಾಲೀನ ಶ್ರೇಷ್ಠ ಮಾದರಿಗಳೆಂಬಂತೆ ಬಿಂಬಿಸುವುದು ಸರಿಯಲ್ಲವೆಂದು ಸ್ಪಷ್ಟವಾಗಿ ತಿಳಿಸುವುದು. + ನಿರ್ದಿಷ್ಟ ಸಾಮಾಜಿಕ – ರಾಜಕೀಯ ವಸ್ತುವಿನ ಸಿನಿಮಾಗಳಿಗೆ ಆಗುತ್ತಿರುವ ಅನ್ಯಾಯವನ್ನು ತಿಳಿಸಿ ಸಿನಿಮಾದ ಸಾಮಾಜಿಕ ಜವಾಬ್ದಾರಿಯನ್ನು ಪ್ರತಿಪಾದಿಸುವುದು ನನ್ನ ಈ ಲೇಖನದ ಪ್ರಧಾನ ಆಶಯವಾಗಿದೆ. +ಯಾವುದೇ ವಸ್ತುವನ್ನು ಒಳಗೊಂಡಿದ್ದರೂ ಸಿನಿಮಾದಲ್ಲಿ ಅದರ ಆತ್ಮಸಂಬಂಧಗಳನ್ನು ಸಾಮಾಜಿಕವಾಗಿಸುವ ಮೂಲಕ ವೈಯಕ್ತಿಕ ನೆಲೆಯನ್ನು ಮೀರಿದ ಪ್ರಾತಿನಿಧಿಕತೆಯನ್ನು ತಂದು ಕೊಡಬಹುದು. +ಈ ಮೂಲಕ ವೈವಿಧ್ಯಮಯ ವಸ್ತು ಸಂಪತ್ತನ್ನು ನಮ್ಮ ಸಿನಿಮಾದ ಅಮೂಲ್ಯ ಕೊಡುಗೆಯಾಗಿಸಬಹುದು. +ಆದ್ದರಿಂದ, ನೀವು ಯಾವುದೇ ವಸ್ತುವುಳ್ಳ ಸಿನಿಮಾ ಮಾಡಿ; +ಆದರೆ ಜನವಿರೋಧಿ ಆಶಯಗಳನ್ನು ಬಿತ್ತಬೇಡಿ. +ಇದು ನನ್ನ ಮೊದಲ ಮನವಿ. +ಸಮಾಜದಲ್ಲಿ ವಿವಿಧ ವರ್ಗಗಳು, ವಿವಿಧ ಅಭಿರುಚಿಗಳು ಇರುವುದರಿಂದ ಅದಕ್ಕನುಗುಣವಾದ ಸಿನಿಮಾಗಳು ನಿರ್ಮಾಣವಾಗುವುದು ಸಹಜ. +ಇದರ ಫಲವಾಗಿ ಜನವಿರೋಧಿಯಾದ ವಸ್ತುವುಳ್ಳ ಸಿನಿಮಾಗಳು ಬರಬಹುದು; +ಪ್ರತಿಗಾಮಿ ಪ್ರತಿಪಾದನೆಯ ಸಿನಿಮಾಗಳು ನಿರ್ಮಾಣ ವಾಗಬಹುದು. +ಸಾಮಾಜಿಕ ಚಲನಶೀಲತೆಗೆ ವಿರುದ್ಧವಾದ ಜಡಸಂಪ್ರದಾಯ ಹಾಗೂ ಹಿಂಸೆಯನ್ನು ವೈಭವೀಕರಿಸುವ ಚಿತ್ರಗಳು ತಯಾರಾಗಬಹುದು. +ನಾವು ಇವುಗಳ ನಿರ್ಮಾಣವನ್ನು ತಡೆಯಲಿಕ್ಕಾಗದು. +ಆದರೆ ಇಂತಹ ಚಿತ್ರಗಳನ್ನು ಸೂಕ್ತ ವಿಮರ್ಶೆಗೆ ಒಳಪಡಿಸಿ ಜನರನ್ನು ಚಲನಶೀಲಚಿಂತನೆಗೆ ತೊಡಗಿಸುವ ಕೆಲಸವನ್ನು – ಸಿನಿಮಾ ಚಿಂತಕರು, ವಿಮರ್ಶಕರು, ಪತ್ರಕರ್ತರು, ಲೇಖಕರು – ಒಟ್ಟಾರೆ ಸಾಧ್ಯವಾದ ಎಲ್ಲರೂ ಮಾಡಬೇಕಾಗಿದೆ. +ಬಹು ಸುಲಭವಾಗಿ ಮುದಗೊಳಿಸುವ ಜನಪ್ರಿಯ ಮಾದರಿಯೊಂದು ನಮ್ಮಲ್ಲಿದೆ. +ಒಂದು ಪ್ರೇಮಕತೆಯನ್ನು ತೆಗೆದುಕೊಂಡು ಸೂಕ್ಷ್ಮೋಪಾಯಗಳ ಮೂಲಕ ಪ್ರೇಕ್ಷಕರ ಕಾಮನೆಗಳನ್ನು ಬೆಚ್ಚಗೆ ಮಾಡುವುದು ಈ ಮಾದರಿ. +ಪ್ರೇಮಕಥಾವಸ್ತುವಿಗೆ ದೊಡ್ಡ ಪರಂಪರೆಯೇ ಇದೆ. +ಪ್ರೇಮ ಪ್ರಧಾನ ಚಿತ್ರ ಮಾಡುವುದು ತಪ್ಪಲ್ಲ; ಅದರ ಆಶಯ ತಪ್ಪು ದಾರಿ ಹಿಡಿಯಬಾರದು ಅಷ್ಟೆ. +ತಪ್ಪುದಾರಿ ಹಿಡಿದಿದೆಯೆಂದು ಗುರುತಿಸಲಾಗದಂತೆ ನವಿರು ನಿರೂಪಣೆಯ ಸಾಮರ್ಥ್ಯ ಪಡೆದ ಸಿನಿಮಾಗಳಿಂದ ‘ಮೋಸ ಹೋಗದೆ’ ಅವುಗಳ ಸ್ಥಾನ ನಿರ್ದೇಶನ ಮಾಡಬೇಕಾದ್ದು ಪ್ರಬುದ್ಧ ವಿಮರ್ಶೆಯ ಕೆಲಸ. +ಯಾಕೆಂದರೆ ಇಂತಹ ಚಿತ್ರಗಳಿಗೂ ಸಿನಿಮಾರಂಗದಲ್ಲಿ ತನ್ನದೇ ಆದ ಸ್ಥಾನವಿದೆ. +ಇಂತಹ ಚಿತ್ರಗಳು ವಹಿಸುವ ಪಾತ್ರವನ್ನು ಗಂಭೀರವಾಗಿ ಪರಿಗಣಿಸಿ ಚರ್ಚಿಸುವ ಮೂಲಕ ವೈವಿಧ್ಯಮಯ ವಸ್ತುಗಳ ನಡುವೆ ಉತ್ತಮವಾದದ್ದನ್ನು ಹುಡುಕಬೇಕು, ಗುರುತಿಸ ಬೇಕು, ಅರ್ಹತೆಗೆ ತಕ್ಕ ಗೌರವ ನೀಡಬೇಕು. +ಅದು ಬಿಟ್ಟು ಚಿತ್ರರಂಗದಲ್ಲಿ ಕ್ರಾಂತಿ ಸಂಭವಿಸುತ್ತದೆಯೆಂಬಂತೆ ಹುಸಿ ಸಂಭ್ರಮವನ್ನು ಬಿತ್ತುತ್ತ ಬಂಡವಾಳಶಾಹಿ ಸಂಸ್ಕೃತಿಯ ಲಾಭಕೋರ ಸೂಕ್ಷ್ಮಗಳಿಗೆ ಸೋಲುವುದು ಸರಿಯಲ್ಲ. +ಚಿತ್ರರಂಗದಲ್ಲಿ ಹುಸಿ ಉನ್ಮಾದಗಳು ಹೆಚ್ಚಾದ್ದರಿಂದ ಈ ಮಾತು ಹೇಳುತ್ತಿದ್ದೇನೆ. +ಜೇಮ್ಸ್ ಮೊನೇಕೊ ಅವರು ಸಿನಿಮಾಗಳ sociopolitics, psychopolitics ಜೊತೆಗೆ sexual politics ಅನ್ನು ಪ್ರಸ್ತಾಪಿಸುತ್ತಾರೆ. +ಪ್ರೇಮಕತೆಯ ಮೂಲಕ ಸೂಕ್ಷ್ಮವಾಗಿ ಮಾಡುವ ಸಿನಿಮಾಗಳ ವಿಷಯದಲ್ಲಿ ನಾವು – ವಿಶೇಷವಾಗಿ ಚಿಂತಕರು, ವಿಮರ್ಶಕರು ಮೈಮರೆಯಬಾರದು. +ನೇರವಾಗಿ ಸೆಕ್ಸ್ ಸಿನಿಮಾ ಹಣೆಪಟ್ಟಿಯಿಂದ ಬರುವ ಚಿತ್ರಗಳು ಕಡೇ ಪಕ್ಷ ಸ್ಪಷ್ಟವಾಗಿರುತ್ತವೆ. +ಆದರೆ ಸೆಕ್ಸ್ ಅನ್ನು ಸೂಕ್ಷ್ಮ ಸ್ತರಗಳಲ್ಲಿ ಅಳವಡಿಸುವ ಪ್ರೇಮಸಿನಿಮಾಗಳ sexual politics ಬೇರೆ ರೀತಿಯದು. +ಯಾವುದೇ ಮಾನವೀಯ ಮೌಲ್ಯಗಳಿಗೆ ನಿಷ್ಠವಾಗದ ಸಿನಿಮಾಗಳ sexual politics ಬಗ್ಗೆ ಎಚ್ಚರದ ಕಣ್ಣಿರಬೇಕು. +ಜಾಗತೀಕರಣದ ಸಂದರ್ಭದಲ್ಲಿ ಎಲ್ಲರೂ ‘ರಾಜಕೀಯ ಸಿನಿಮಾ’ಗಳನ್ನೇ ಮಾಡಬೇಕೆಂದು ನಾನು ಹೇಳುವುದಿಲ್ಲ. +ರಾಜಕೀಯ ಸಿನಿಮಾಗಳನ್ನು ಸೋಲಿಸುವ, ಸಾಯಿಸುವ, ಸಿನಿಮಾ ರಾಜಕೀಯವಿಲ್ಲದಿದ್ದರೆ ಸಾಕು; +ಸಾಮಾಜಿಕ – ರಾಜಕೀಯ ಪ್ರಜ್ಞೆಯ ಸಿನಿಮಾಗಳಿಗೆ ನ್ಯಾಯ ಸಿಗಬೇಕು. +ಈ ಆಶಯ ಸಿನಿಮಾ ನೋಟಕ್ಕೆ ಸಾರ್ಥಕ ಸಾಧ್ಯತೆಯೊಂದು ಸೇರಿದಂತಾಗುತ್ತದೆ. -- GitLab