diff --git "a/Data Collected/Kannada/MIT Manipal/Kannada-Scrapped-dta/Book8-\340\262\270\340\262\276\340\262\202\340\262\225\340\263\215\340\262\260\340\262\256\340\262\277\340\262\225_\340\262\260\340\263\213\340\262\227\340\262\227\340\262\263_\340\262\250\340\262\277\340\262\257\340\262\202\340\262\244\340\263\215\340\262\260\340\262\243_\340\262\256\340\262\244\340\263\215\340\262\244\340\263\201_\340\262\244\340\262\241\340\263\206\340\262\227\340\262\237\340\263\215\340\262\237\340\263\201\340\262\265\340\262\277\340\262\225\340\263\206.txt" "b/Data Collected/Kannada/MIT Manipal/Kannada-Scrapped-dta/Book8-\340\262\270\340\262\276\340\262\202\340\262\225\340\263\215\340\262\260\340\262\256\340\262\277\340\262\225_\340\262\260\340\263\213\340\262\227\340\262\227\340\262\263_\340\262\250\340\262\277\340\262\257\340\262\202\340\262\244\340\263\215\340\262\260\340\262\243_\340\262\256\340\262\244\340\263\215\340\262\244\340\263\201_\340\262\244\340\262\241\340\263\206\340\262\227\340\262\237\340\263\215\340\262\237\340\263\201\340\262\265\340\262\277\340\262\225\340\263\206.txt" new file mode 100644 index 0000000000000000000000000000000000000000..21ea869af9ea1ce3d77d53d8692790ea5a4ad38f --- /dev/null +++ "b/Data Collected/Kannada/MIT Manipal/Kannada-Scrapped-dta/Book8-\340\262\270\340\262\276\340\262\202\340\262\225\340\263\215\340\262\260\340\262\256\340\262\277\340\262\225_\340\262\260\340\263\213\340\262\227\340\262\227\340\262\263_\340\262\250\340\262\277\340\262\257\340\262\202\340\262\244\340\263\215\340\262\260\340\262\243_\340\262\256\340\262\244\340\263\215\340\262\244\340\263\201_\340\262\244\340\262\241\340\263\206\340\262\227\340\262\237\340\263\215\340\262\237\340\263\201\340\262\265\340\262\277\340\262\225\340\263\206.txt" @@ -0,0 +1,275 @@ +ಕನ್ನಡ ಪುಸ್ತಕ ಪ್ರಾಧಿಕಾರವು ಅಪರೂಪದ ಹಾಗೂ ಶಾಸ್ತ್ರಸಂಬಂಧ ಕೃತಿಗಳನ್ನು ಪ್ರಕಟಿಸುವುದರ ಜೊತೆಗೆ ವಿವಿಧ ಮಾಲಿಕೆಯಡಿ ಬೇರೆ ಪ್ರಕಾಶಕರು ಅಷ್ಟಾಗಿ. +ಪ್ರಕಟಿಸದ ಪುಸ್ತಕಗಳು ಜನಸಾಮಾನ್ಯರಿಗೆ ಲಭ್ಯವಾಗಬೇಕೆಂಬ ಉದ್ದೇಶದಿಂದ ಪ್ರಕಟಿಸುತ್ತಾ ಬಂದಿದೆ. +ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಕನ್ನಡಭಾಷೆ ಸಾಹಿತ್ಯಿಕವಾಗಿ ಪ್ರೌಢಾವಸ್ತೆಯನ್ನು ತಲುಪಿರುವುದರಲ್ಲಿ ಸಂಶಯವಿಲ್ಲ. +ಸಮಾಜ ಈ ಒಂದು ಶತಮಾನದಿಂದ ಬಹಳ ಶೀಘ್ರಗತಿಯಲ್ಲಿ ಮುಂದುರೆಯುತ್ತಿದ್ದುಆ ವೇಗಕ್ಕೆ ತಕ್ಕಾಗಿ ಕನ್ನಡ ಭಾಷೆಯೂ ಹೊಸ ಪ್ರಯೋಗಗಳನ್ನು ಮಾಡುತ್ತಾ ಹೊಸತನ್ನು ತನ್ನಲ್ಲಿ ಅರಗಿಸಿಕೊಳ್ಳುವುದು ಅನಿವಾರ್ಯ. +ವೈದ್ಯಕೀಯ,ಇಂಜಿನಿಯರಿಂಗ್‌, ವಿಜ್ಞಾನ ಲೋಕಗಳ ಬಗ್ಗೆ ಕನ್ನಡದಲ್ಲಿ ಸಾಕಷ್ಟು ಪುಸ್ತಕಗಳು ಹೊರಬರುತ್ತಿದ್ದರೂ ಈಗಿನ ಕಾಲ ವೇಗಕ್ಕೆ ತಕ್ಕಷ್ಟು ಕನ್ನಡದಲ್ಲಿ ಈ ವಿಭಾಗಗಳಲ್ಲಿ ಪುಸ್ತಕಗಳು ಹೊರಬರುತ್ತಿಲ್ಲ. +ಬಂದಂತಹ ಪುಸ್ತಕಗಳೂ ಕೂಡಾ ಜನಸಾಮಾನ್ಯರಿಗೆ_ ಎಟಕುವ ದರದಲ್ಲಿ ಲಭ್ಯವಾಗುತ್ತಿಲ್ಲ. +ಈ ಕೊರತೆಯನ್ನು ತುಂಬಬೇಕೆಂಬ ಸದಾಶಯದಿಂದ ಕೆಲ ಮಾಲೆಗಳಲ್ಲಿ ಪುಸ್ತಕಗಳನ್ನು ಹೊರತರುವ ಪ್ರಯತ್ನವನ್ನುಮಾಡಿದ್ದೇವೆ. +ಈ ದಿಶೆಯಲ್ಲಿ ಪ್ರಾಧಿಕಾರವು ಹಮ್ಮಿಕೊಂಡಿರುವ ಮಹತ್ವದ ಯೋಜನೆಗಳಲ್ಲಿ ವೈದ್ಯಕೀಯ ವಿಜ್ಞಾನ ಸಾಹಿತ್ಯದ ಮಾಲೆಯೂ ಒಂದು. +ಕನ್ನಡದಲ್ಲಿ ವೈದ್ಯಕೀಯ ಸಾಹಿತ್ಯಕ್ಕೆ ಸಂಬಂಧಪಟ್ಟಂತೆ ಹೆಚ್ಚು ಗ್ರಂಥಗಳು ಲಭ್ಯವಿಲ್ಲದೆ ಇರುವುದನ್ನು ಗಮನಿಸಿದ ಪ್ರಾಧಿಕಾರ ಈ ಮಾಲೆಯನ್ನು ಆರಂಭಿಸಬೇಕೆಂದು ಒಂದು ಸಂಪಾದಕಮಂಡಳಿಯನ್ನು ನೇಮಿಸಿತು. +ಈ ಸಂಪಾದಕ ಮಂಡಳಿಯಲ್ಲಿ ಸಂಪಾದಕರಾಗಿರಲು ನಾಡಿನ ಹಿರಿಯ ವೈದ್ಯರಾದ ಡಾ| ಸಿ. ಆರ್‌. ಚಂದ್ರಶೇಖರ್‌ ಅವರು ಒಪ್ಪಿರುತ್ತಾರೆ. +ಮಂಡಳಿಯ ಸದಸ್ಯರಾಗಿ ಹಿರಿಯ ವೈದ್ಯರುಗಳಾದ ಡಾ|ನಾ.ಸೋಮೇಶ್ವರ,ಡಾ| ವಸಂತ ಕುಲಕರ್ಣಿ, ಡಾ| ಪದ್ಮಿನಿ ಪ್ರಸಾದ್‌, ಡಾ।ವಸುಂಧರಾ ಭೂಪತಿ,ಡಾ| ವಿಜಯಲಕ್ಷ್ಮೀ ಬಾಳೇಕುಂದ್ರಿ, ಡಾ| ಕೆ. ಪಿ. ಪುತ್ತೂರಾಯ ಅವರುಗಳು ಈ ಕಾರ್ಯವನ್ನು ಸುಲಲಿತವಾಗಿ ನೆರವೇರಿಸಿಕೊಟ್ಟಿದ್ದಾರೆ. +ಇವೆರೆಲ್ಲರಿಗೂ ನನ್ನ ಕೃತಜ್ವತೆಗಳು. +ಈ ಮಾಲಿಕೆಯಲ್ಲಿ ಸಾಂಕ್ರಾಮಿಕ ರೋಗಗಳು ನಿಯಂತ್ರಣ ಮತ್ತು ತಡೆಗಟ್ಟುವಿಕೆಕೃತಿಯನ್ನು ರಚಿಸಿಕೊಡಲು ಒಪ್ಪಿ ಹಸ್ತಪ್ರತಿಯನ್ನು ನೀಡಿ ಸಹಕರಿಸಿದ ಡಾ. ಎನ್‌. ವಿಶ್ವರೂಪಾಚಾರ್‌ ಅವರಿಗೆ ಆಭಾರಿಯಾಗಿದ್ದೇವೆ. +ಈ ಮಾಲೆಯ ಪುಸ್ತಕಗಳನ್ನು ಹೊರತರುವಲ್ಲಿ ಪ್ರಾರಂಭದಿಂದ ವಿಶೇಷ ಆಸಕ್ತಿ ವಹಿಸಿದ ಪ್ರಾಧಿಕಾರದ ಆಡಳಿತಾಧಿಕಾರಿಗಳಾದ ಶ್ರೀ ಅಶೋಕ ಎನ್‌ .ಚಲವಾದಿ, ನನ್ನ ಆಪ್ತ ಕಾರ್ಯದರ್ಶಿ ಶ್ರೀ ಕೆ. ಮುಕುಂದನ್‌, ಪ್ರಾಧಿಕಾರದ ಎಲ್ಲಾಸದಸ್ಯರು ಹಾಗೂ ಸಿಬ್ಬಂದಿ ವರ್ಗದವರಿಗೆ ಆಭಾರಿಯಾಗಿದ್ದೇನೆ. +ಈ ಮಾಲೆಯಎಲ್ಲಾ ಕೃತಿಗಳನ್ನು ಕನ್ನಡ ವಾಚಕರು ತುಂಬು ಹೃದಯದಿಂದ ಸ್ವಾಗತಿಸುತ್ತಾರೆಂದು ಆಶಿಸುತ್ತೇನೆ. +ಒಬ್ಬರಿಂದ ಇನ್ನೊಬ್ಬರಿಗೆ, ಅವರಿಂದ ಎಲ್ಲರಿಗೆ ಹರಡುವ ರೋಗಗಳನ್ನು ಸಾಂಕ್ರಾಮಿಕ ರೋಗಗಳೆನ್ನುತ್ತಾರೆ. +ರೋಗಕಾರಕಗಳಾದ ಬ್ಯಾಕ್ಟೀರಿಯಾ, ವೈರಸ್‌,ಪರಾವಲಂಬಿ ಜೀವಿಗಳು, ಮನುಷ್ಯರನ್ನೇ ವಾಹಕಗಳನ್ನಾಗಿ ಮಾಡಿಕೊಳ್ಳಬಹುದು ಅಥವಾ ಪ್ರಾಣಿ, ಪಕ್ಷಿ, ಕೀಟಗಳನ್ನು ವಾಹಕಗಳನ್ನಾಗಿ ಮಾಡಿಕೊಳ್ಳಬಹುದು. +ಕೆಲವು ರೋಗಾಣುಗಳು ಗಾಳಿ, ನೀರು ಆಹಾರ ಮಣ್ಣಿನ ಮೂಲಕ ಹರಡುತ್ತವೆ. +ಅತಿ ಸಾಮಾನ್ಯ ಸಾಂಕ್ರಾಮಿಕ ರೋಗಗಳೆಂದರೆ ಕಾಲರಾ, ಫ್ಲೇಗ್‌, ಸಿಡುಬು,ಕ್ಷಯ, ಕುಷ್ಟ, ಟೈಫಾಯಿಡ್‌ ಜ್ವರ, ನಾಯಿಕೆಮ್ಮು ದಡಾರ, ಫ್ಲೂ,ಡೆಂಗೂ,ಚಿಕುನ್‌ಗುನ್ಯಾ, ಪೊಲೀಯೋ, ಜಾಂಡೀಸ್‌, ಮಿದುಳ ಜ್ವರ, ಆಮಶಂಕೆ, ಫೈಲೇರಿಯಾ,ಮಲೇರಿಯಾ, ಸಿಫಿಲಿಸ್‌ ಗೊನೋರಿಯಾ, ಏಡ್ಸ್‌ ರೋಗ, ಹೊಟ್ಟೆಯಲ್ಲಿ ಹುಳ,ಹೇನು, ಕೂರೆ, ಕಜ್ಜಿ. +ಪಟ್ಟಿ ದೊಡ್ಡದೇ. +ಹಿಂದೆ ಕಾಲರಾ, ಫ್ಲೇಗ್‌, ಸಿಡುಬು, ಫ್ಲೂ, ಟೈಫಾಯಿಡ್‌ಗಳು ಸಾವಿರಾರುಜನರ ಪ್ರಾಣಗಳನ್ನು ಹರಣಮಾಡುತ್ತಿದ್ದವು. +ಹಳ್ಳಿಹಳ್ಳಿಗಳೇ ನಿರ್ಜನವಾಗುತ್ತಿದ್ದವು. +ಹೀಗಾಗಿ ಈ ಸಾಂಕ್ರಾಮಿಕ ರೋಗಗಳನ್ನು "ಮಹಾಮಾರಿ ಕಾಯಿಲೆ”ಗಳೆಂದು ಕರೆಯುತ್ತಿದ್ದರು. +ಇತ್ತೀಚಿನ ವರ್ಷಗಳಲ್ಲಿ ಈ ಬೃಹತ್‌ ಪ್ರಮಾಣದ ಸಾಂಕ್ರಾಮಿಕಗಳಿಲ್ಲ. +ಆದರೂ ಇತ್ತೀಚೆಗೆ ಚಿಕುನ್‌ಗುನ್ಯಾ, ಡೆಂಗ್ಯೂ, ಎಚ್‌೧ಎನ್‌೧ ಸೋಂಕುಕ್ಷಿಪ್ರಗತಿಯಲ್ಲಿ, ಅತ್ಯಲ್ಪಗತಿಯಲ್ಲಿ, ಅತ್ಯಲ್ಪಕಾಲದಲ್ಲಿ ಪ್ರಪಂಚದಲ್ಲಿ ಹರಡಿರುವುದನ್ನುನೋಡಿದ್ದೇವೆ. +ವೇಗದ ವಾಹನಗಳು ಲಭ್ಯವಿರುವ ಈ ಕಾಲದಲ್ಲಿ ಹೆಚ್ಚು ಜನದೇಶದೊಳಗೆ ಮತ್ತು ದೇಶದಿಂದ ದೇಶಕ್ಕೆ ಪ್ರಯಾಣಿಸುವುದರಿಂದ ಅನೇಕ ರೋಗಗಳುಬಹು ಬೇಗ ಹರಡುವಂತಾಗಿದೆ. +ಲಕ್ಷಾಂತರ ಜನ ಸೇರುವ ಕುಂಭಮೇಳಗಳು,ರಥೋತ್ಸವಗಳು, ಧಾರ್ಮಿಕ ಚಟುವಟಿಕೆಗಳು, ಪುಣ್ಯಕ್ಷೇತ್ರಗಳು ಸಾಂಕ್ರಾಮಿಕರೋಗಗಳನ್ನು ಹರಡುವುದರಲ್ಲಿ ಪಾಲ್ಗೊಳ್ಳುತ್ತವೆ. +ಆಗ ನಾವೆಲ್ಲ ಎಷ್ಟು ಎಚ್ಚರವಾಗಿದ್ದರೆ ಅಷ್ಟು ಒಳ್ಳೆಯದು. +ಸ್ವಚ್ಛತೆ, ನೈರ್ಮಲ್ಯತೆಯ ಅಭಾವ; +ನಾವು ಸೇವಿಸುವ ನೀರು, ಗಾಳಿ,ಆಹಾರ ಮಲಿನಗೊಳ್ಳುವುದು. +ರೋಗಿಯ ಸಂಪರ್ಕಕ್ಕೆ ಬರುವುದು, ರೋಗಿಯ ಎಂಜಲು, ಮೂಗಿನ ಸ್ರಾವ, ಮಲಮೂತ್ರಗಳ ಸಂಪರ್ಕ. +ಮನೆಯೊಳಕ್ಕೆ ಪ್ರಾಣಿಗಳು,ಕೀಟಗಳು ಬರಲು ಬಿಡುವುದು, ನೊಣ-ಸೊಳ್ಳೆ-ಜಿರಳೆ, ಇಲಿ ಹೆಗ್ಗಣಗಳು ಹೆಚ್ಚುವಂತೆಮಾಡುವುದು, ನಿತ್ಯ ಸ್ನಾನ ಮಾಡದಿರುವುದು, ಉಡುಗೆ 'ತೊಡುಗೆಗೆಗಳನ್ನು ಸ್ವಚ್ಚವಾಗಿಡದಿರುವುದು, ಕೊಳಕು ಪರಿಸರ, ಸೋಂಕು ರೋಗಗಳು ಹರಡಿ ಅದು ಸಾಂಕ್ರಾಮಿಕ ರೋಗಗಳಾಗಲು ನಾವೇ ಕಾರಣರಾಗುತ್ತೇವೆ. +ಸ್ವಚ್ಛಂದ ಲೈಂಗಿಕ ಸಂಪರ್ಕದಿಂದ ಲೈಂಗಿಕ ರೋಗಗಳು ಎಲ್ಲೆಡೆ ಹರಡುತ್ತೇವೆ. +ಇವೆಲ್ಲ ತಪ್ಪಬೇಕಾದರೆ, ವೈಯಕ್ತಿಕ ಸ್ವಚ್ಛತೆ, ಮನೆ, ಬೀದಿ, ಊರು ಮತ್ತು ಪರಿಸರ ನೈರ್ಮಲ್ಯವನ್ನು ನಾವೆಲ್ಲ ಕಾಪಾಡಲೇಬೇಕು. +ಸೋಂಕು ರೋಗಿಗಳನ್ನು ಪ್ರತ್ಯೇಕಿಸಿ,ಅವರಿಂದ ರೋಗ ಇತರರಿಗೆ ಹರಡದಂತೆ ಮುಂಜಾಗ್ರತೆ ವಹಿಸಬೇಕು. +ಸ್ವಚ್ಛತೆಯೇ ದೈವತ್ವ ಎಂಬ ನಾಣ್ಮುಡಿಯನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. +ಶ್ರೀ ಎನ್‌.ವಿಶ್ವರೂಪಾಚಾರ್‌ರವರು ವೃತ್ತಿಯಿಂದ ಆರೋಗ್ಯ ಶಿಕ್ಷಕರು. +ಕರ್ನಾಟಕ ಸರ್ಕಾರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಭೋದಕರಾಗಿ ಸೇವೆಸಲ್ಲಿಸಿ ನಿವೃತ್ತರಾದವರು. +ಆರೋಗ್ಯ ಶಿಕ್ಷಣ ಅವರ ಉಸಿರು. +ಕನ್ನಡದಲ್ಲಿ ವೈದ್ಯ ಸಾಹಿತ್ಯ ಕ್ಷೇತ್ರದಲ್ಲಿ ಒಂದು ನೂರಕ್ಕೂ ಹೆಚ್ಚಿನ ಪುಸ್ತಕಗಳನ್ನೂ ಬರೆದ ಮೂವರಲ್ಲಿ ಒಬ್ಬರು (ಇನ್ನಿಬ್ಬರು : ಡಾ|| ಪಿ. ಎಸ್‌. ಶಂಕರ್‌ ಮತ್ತು ಡಾ|ಸಿ. + ಆರ್‌. ಚಂದ್ರಶೇಖರ್‌) + ಉಪನ್ಯಾಸಗಳು, ಸಂವಾದಗಳು, ಲೇಖನಗಳು,ಪುಸ್ತಕಗಳು, ಕಾರ್ಯಾಗಾರಗಳು ಮತ್ತು ಪುಸ್ತಕ ಮಾರಾಟದ ಮೂಲಕ ಜನರಿಗೆ ಆರೋಗ್ಯ ಅನಾರೋಗ್ಯದ ಬಗ್ಗೆ ತಿಳುವಳಿಕೆ ನೀಡಲು ಹಗಲಿರುಳು ದುಡಿಯುತ್ತಿದ್ದಾರೆ. + ತಮ್ಮ ಆರ್ಥಿಕ ಮತ್ತು ಆರೋಗ್ಯ ಸಮಸ್ಯೆಗಳನ್ನು ಮೆಟ್ಟಿನಿಂತು ಕನ್ನಡ ವೈದ್ಯ ಸಾಹಿತ್ಯ ಲೋಕಕ್ಕೆ ತಮ್ಮ ನಿಸ್ವಾರ್ಥ ಸೇವೆಯಿಂದಕೊಡುಗೆಯನ್ನು ನೀಡುತ್ತಿದ್ದಾರೆ. +ಅವರ ಲೇಖನಿಯಿಂದ, ಸಾಂಕ್ರಾಮಿಕ ರೋಗಗಳು ನಿಯಂತ್ರಣ ಮತ್ತು ತಡೆಗಟ್ಟುವಿಕೆ ಹತೋಟಿ ಎಂಬ ಈ ಪುಸ್ತಕವನ್ನು ರಚಿಸಿಕೊಟ್ಟಿದ್ದಾರೆ. +ಕನ್ನಡ ಪುಸ್ತಕ ಪ್ರಾಧಿಕಾರ ಮತ್ತು ಕನ್ನಡದ ಜನತೆ ಅವರಿಗೆ ಕೃತಜ್ಞತೆಗಳನ್ನು ಸಲ್ಲಿಸುತ್ತದೆ. +ವೈದ್ಯ ವಿಜ್ಞಾನ ಸಾಹಿತ್ಯ ಕನ್ನಡ ಭಾಷೆಗೆ ಹೊಸತಲ್ಲ. +ಆಧುನಿಕ ವೈದ್ಯವಿಜ್ಞಾನದ ಬಗ್ಗೆ ಪುಸ್ತಕಗಳು ೧೯ನೇ ಶತಮಾನದಲ್ಲೇ ಹೊರಬಂದವು. +ಶಿವಪ್ಪ ಡಾ| ಡಿ.ವಿ.ರಾವ್‌,ಡಾ। ಶಂಕರ್‌, ಡಾ| ಸಿ.ಆರ್‌.ಚಂದ್ರಶೇಖರ್‌, ಡಾ| ಎಚ್‌ .ಚಂದ್ರಪ್ಪಗೌಡ, ಡಾ| ಸಿ.ಅನ್ನಮೂರ್ಣಮೃ ಇತ್ಯಾದಿಹಲವರ ಕೊಡುಗೆ ಅಪೂರ್ವವಾದದ್ದು, ಇದುವರೆಗೆ ಕನ್ನಡದಲ್ಲಿ ೨ಂಂಕ್ಕೂ ಹೆಚ್ಚಿನ ವೈದ್ಯ ಸಾಹಿತ್ಯ ಪುಸ್ತಕಗಳು ಪ್ರಕಟಗೊಂಡಿವೆ. +ಮಾರು ಕಟ್ಟೆಯಲ್ಲಿ ಓದುಗರಿಗೆ "ಲಭ್ಯವಿರುವುದು ಸುಮಾರು ೨00 ಪುಸ್ತಕಗಳು ಮಾತ್ರ ವೈದ್ಯವಿಜ್ಞಾನದ ಬೆಳವಣಿಗೆ ನಾಗಾಲೋಟದಲ್ಲಿ ಸಾಗಿದೆ. +ಅನೇಕ ಆವಿಷ್ಕಾರಗಳು. +ಹೊಸ ಸಂಶೋಧನೆಗಳು, ಪರಿಣಾಮಕಾರಿ ಚಿಕಿತ್ಸೆಗಳ ಬಗ್ಗೆ ಜನರಿಗೆ ಮಾಹಿತಿಬೇಕಾಗುತ್ತದೆ. +ಕಾಯಿಲೆಗಳ ಬಗ್ಗೆ ಅಜ್ಞಾನ, ಮೂಢನಂಬಿಕೆ, ಚಿಕಿತ್ಸೆಗಳ ಬಗ್ಗೆ ಕಂದಾಚಾರಗಳು ಅಪಾಯಕಾರಿ. +ಈ ದಿಸೆಯಲ್ಲಿ ಜನಗಳಿಗೆ ವೈಜ್ಞಾನಿಕ ಮಾಹಿತಿನೀಡುವ ಕಾರ್ಯದಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರವು ಪ್ರಾರಂಭಿಸಿರುವ ಈ ಮಾಲೆ ಅತ್ಯಗತ್ಯವಾದದ್ದು, ಅನುಕರಣಾರ್ಹವಾದದ್ದು. +ಇದಕ್ಕಾಗಿ ಪ್ರಾಧಿಕಾರದ ಅಧ್ಯಕ್ಷರಾದ ಡಾ.ಸಿದ್ದಲಿಂಗಯ್ಯ ಆಡಳಿತಾಧಿಕಾರಿಯಾದ ಶ್ರೀ ಅಶೋಕ ಎನ್‌.ಚಲವಾದಿ ಹಾಗೂ ಅವರ ಬಳಗದವರನ್ನು ಹೃತ್ಪೂರ್ವಕವಾಗಿ ಅಭಿನಂದಿಸುತ್ತೇನೆ. +ಕನ್ನಡಕ್ಕೆ ವೈದ್ಯವಿಜ್ಞಾನ ಪ್ರಸಾರಕ್ಕೆ ಅವರ ಕೊಡುಗೆ ಶ್ಲಾಘನೀಯವಾದದ್ದೆಂದು ನನ್ನಅಭಿಪ್ರಾಯ. +ಭಾರತದಲ್ಲಿ, ಜನರನ್ನು ರೋಗ ಪೀಡಿತರನ್ನಾಗಿ ಮಾಡುವಲ್ಲಿ ಸಾಂಕ್ರಾಮಿಕರೋಗಗಳು ಅಥವಾ ಆಂಟು ರೋಗಗಳು ಮುಖ್ಯವಾಗಿ ಕಾರಣವಾಗಿದೆ. +ಆಸ್ಪತ್ರೆಗಳಲ್ಲಿ ಅಡ್ಮಿಷನ್‌ ಆಗುವ ರೋಗಿಗಳಲ್ಲಿ ಶೇಕಡ 60ರಷ್ಟು ಜನ ಅಂಟು ರೋಗಗಳಿಂದ ನರಳುತ್ತಿರುವುದು ಕಂಡು ಬಂದಿದೆ. +ಇದರಲ್ಲಿ ಶೇಕಡ 25ರಷ್ಟು ಮಂದಿ ಸೋಂಕು ರೋಗಗಳಿಂದ ಮತ್ತು ಪರಾವಲಂಬಿ (ಪ್ಯಾರಾಸಿಟಿಕ್‌ ಡಿಸೀಸಸ್‌) ರೋಗಗಳಿಂದ ಕೂಡಿರುವವರೆಂದು ತಿಳಿದು ಬಂದಿದೆ. +ಬಹಳಷ್ಟು ಈ ರೋಗಗಳನ್ನು ಸರಳ ವಿಧಾನಗಳಾದ ಪರಿಸರ ನೈರ್ಮಲ್ಯದ ಅಭಿವೃದ್ಧಿ, ಸುರಕ್ಷಿತ ನೀರಿನ ಪೂರೈಕೆ,ಮಲಮೂತ್ರಗಳ ಸೂಕ್ತ ವಿಲೇವಾರಿ, ವೈಯಕ್ತಿಕ ಶುಚಿತ್ವ, ರೋಗನಿರೋಧಕ ಚುಚ್ಚುಮದ್ದಿನಿಂದ ಮತ್ತು ಆರೋಗ್ಯ ಶಿಕ್ಷಣದಿಂದ ತಡೆಗಟ್ಟಬಹುದಾಗಿದೆ. +ಸಾಂಕ್ರಾಮಿಕ ರೋಗಗಳನ್ನು ಆರಂಭದ ಹಂತದಲ್ಲೇ ಪತ್ತೆ ಮಾಡಿದರೆ. +ಸುಲಭವಾಗಿ ಚಿಕಿತ್ಸೆಯನ್ನು ಮಾಡಿಸಬಹುದು. +ಅನೇಕ ಅಭಿವೃದ್ಧಿ ಹೊಂದಿರುವ ರಾಷ್ಟಗಳಲ್ಲಿ ಈ ರೋಗಗಳನ್ನು ಪೂರ್ಣವಾಗಿ ನಿಯಂತ್ರಣ ಮಾಡಿರುವುದಲ್ಲದೆ,ಕೆಲವನ್ನು ನಿರ್ಮೂಲವನ್ನು ಮಾಡಿರುತ್ತಾರೆ. +ಅಂತಹ ಸಾಮಾನ್ಯವಾದವುಗಳೆಂದರೆ,ಅತಿಸಾರ ಭೇದಿ, ಆಮಶಂಕೆ ಮತ್ತು ಶ್ವಾಸಕೋಶದ ಸೋಂಕುಗಳು ಅಲ್ಲದೆ ಮಲೇರಿಯಾ, ಕ್ಷಯರೋಗ, ಕಾಲರಾ, ಕುಷ್ಠರೋಗ, ದಡಾರ, ಲೈಂಗಿಕ ರೋಗಗಳು,ಜಾಂಡೀಸ್‌, ನಾಯಿಕೆಮ್ಮು ಧನುರ್ವಾಯು, ಪೋಲಿಯೋ ಮೈಲೈಟಿಸ್‌,ಜಂತುಹುಳುಗಳ ಬಾಧೆ ಮತ್ತು ಚರ್ಮ ರೋಗ ಮೊದಲಾದುವು. +ಆದರೆ, ಭಾರತದಲ್ಲಿ ಸಾರ್ವಜನಿಕರ ಸಹಕಾರದ ಕೊರತೆಯಿಂದಾಗಿ ಅಜ್ಞಾನದಿಂದಾಗಿ, ರಾಜಕೀಯ ಬದ್ಧತೆ ಇಲ್ಲದೆ ಇರುವುದರಿಂದಾಗಿ, ಇತ್ತೀಚೆಗೆ,ಕಾಯಕ ಸಂಸ್ಕೃತಿ ಕಡಿಮೆಯಾಗಿರುವುದರಿಂದ +ಸಾಂಕ್ರಾಮಿಕರೋಗಗಳನ್ನು ನಿಯಂತ್ರಿಸಲು/ನಿರ್ಮೂಲನಾ ಮಾಡಲು ಕಷ್ಟವಾಗುತ್ತಿದೆ. +“ಸಾಂಕ್ರಾಮಿಕ ರೋಗಗಳು' ಪುಸ್ತಕವನ್ನು, ಸಾಂಕ್ರಾಮಿಕ ರೋಗಗಳ ಪರಿಚಯಮಾಡಿಕೊಡುವುದಕ್ಕಾಗಿ ಮತ್ತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದಕ್ಕಾಗಿಯೇ ರಚಿಸಲಾಗಿದೆ. +ನಾನು, ಹದಿಮೂರು ವರ್ಷಗಳ ಕಾಲ ಬೆಂಗಳೂರಿನ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ತರಬೇತಿ ಕೇಂದ್ರದಲ್ಲಿ ಜನಾರೋಗ್ಯ ಬೋಧಕನಾಗಿ ಕಾರ್ಯನಿರ್ವಹಿಸಿದ್ದರ ಅನುಭವ-ಅಧ್ಯಯನದ ಆಧಾರದ ಮೇಲೆ ಈ ಕೃತಿಯನ್ನು ರಚಿಸಿರುತ್ತೇನೆ. +ಸಾರ್ವಜನಿಕರಿಗೆ ಈ ಕೃತಿ ಉಪಯುಕ್ತವಾಗುತ್ತದೆಂದು ಭಾವಿಸಿದ್ದೇನೆ. +ಜನರ ಆರೋಗ್ಯ ವೃದ್ಧಿಯಾಗಲಿ ಎಂಬುದೇ ನನ್ನ ಆಶಯ. +"ಸಾಂಕ್ರಾಮಿಕ ರೋಗಗಳು', ಕೃತಿಯನ್ನು ರಚಿಸಲು ಅವಕಾಶ ಮಾಡಿಕೊಟ್ಟ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾದ ಸನ್ಮಾನ್ಯ ಶ್ರೀ ಡಾ| ಸಿದ್ಧ ಲಿಂಗಯ್ಯನವರಿಗೆ ಆಡಳಿತಾಧಿಕಾರಿ ಶ್ರೀ ಅಶೋಕ ಚಲವಾದಿ ಅವರಿಗೆ ಧನ್ಯವಾದಗಳು. +ಕೃತಿಯನ್ನುರಚಿಸಲು ಮಾರ್ಗದರ್ಶನ ನೀಡಿದ ಖ್ಯಾತ ವೈದ್ಯ ಸಾಹಿತಿ ಡಾ| ಸಿ. ಆರ್‌. ಚಂದ್ರಶೇಖರ್‌, ಕಲಾವಿದ ಸಹೋದರ, ಶ್ರೀ ಎನ್‌.ಕೃಷ್ಣ, ಮತ್ತು ಇ. ರಾಜೇಶ್‌ ಅವರಿಗೆಚಿರಯಣಿಯಾಗಿರುತ್ತೇನೆ. + ಸಾಂಕ್ರಾಮಿಕ ರೋಗ ಶಾಸ್ತ್ರವೆಂದರೇನು? +ಸಾಂಕ್ರಾಮಿಕ ರೋಗಗಳನ್ನು ಇಂಗ್ಲೀಷ್‌ನಲ್ಲಿ Communicable Disease ಎಂದು ಕರೆಯುತ್ತಾರೆ. +ಸಾಂಕ್ರಾಮಿಕವಾಗಿ ಹರಡುವ ರೋಗಗಳನ್ನು ಕುರಿತು ಅಧ್ಯಯನ, ತನಿಖೆ ಮಾಡುವುದನ್ನು ಸಾಂಕ್ರಾಮಿಕ ರೋಗಶಾಸ್ತ್ರವೆಂದು ಕರೆಯುತ್ತಾರೆ. +ಈ ಶಾಸ್ತ್ರದಲ್ಲಿಸಾಂಕ್ರಾಮಿಕ (ಅಂಟು) ರೋಗಗಳು, ಸಾಂಕ್ರಾಮಿಕವಾಗಿ ಹರಡಲು ಕಾರಣಗಳನ್ನು ತಿಳಿದುಕೊಳ್ಳಲಾಗುವುದಲ್ಲದೆ, ತಡೆಗಟ್ಟುವಿಕೆ, ನಿಯಂತ್ರಿಸುವುದರ ಬಗ್ಗೆಯೂ ಕಾರ್ಯಕ್ರಮಗಳನ್ನು ಸಮುದಾಯದ ಸಹಕಾರದೊಂದಿಗೆ, ಆರೋಗ್ಯ ಇಲಾಖೆ ಹಮ್ಮಿಕೊಳ್ಳುತ್ತದೆ. +ಸಾಂಕ್ರಾಮಿಕ ರೋಗಗಳ ಅಧ್ಯಯನದಿಂದ, ಸಾಂಕ್ರಾಮಿಕ ರೋಗಗಳನ್ನು ವೈಯಕ್ತಿಕವಾಗಿ ಮತ್ತು ಸಮುದಾಯ ಮಟ್ಟದಲ್ಲಿ ಹೇಗೆ ನಿರ್ವಹಿಸಬೇಕೆಂಬುದನ್ನು ಅಥೈಣೃಸಿಕೊಳ್ಳಲಾಗುತ್ತದೆ. +ಅಂಟು ರೋಗಗಳು ಹೇಗೆ ಉಂಟಾಗುತ್ತವೆ, ಅದು ಮಾನವ ಜನಸಂಖ್ಯೆಯಲ್ಲಿಹೇಗೆ ಉಂಟಾಗುತ್ತದೆ. + ರೋಗಗಳು ಹೇಗೆ ಪ್ರಭಾವ ಬೀರುತ್ತವೆ ಎಂಬ ಸಂಗತಿಗಳ ಬಗ್ಗೆಯು ವಿಷದವಾಗಿ ಸಾಂಕ್ರಾಮಿಕ ರೋಗ ಶಾಸ್ತ್ರ ಶೋಧನೆ-ಪರಿಶೋಧನೆ ಮಾಡುತ್ತದೆ. +ಅಂಟುರೋಗಗಳು (ಕಮ್ಯುನಿಕಬಲ್‌ ಡಿಸೀಸಸ್‌) ಹರಡಲು ಮುಖ್ಯ ಸಂಗತಿಗಳಾವುವು? +ಮನುಷ್ಯನಲ್ಲಿ ರೋಗ ಹರಡಲು ಮೂರು ವಸ್ತುಗಳು ಅಗತ್ಯ. +ಅವುಗಳು ಯಾವುವೆಂದರೆ,ರೋಗಕಾರಕ ಅಥವಾ ಏಜೆಂಟ್‌ . +ಅಶ್ರಯದಾತ ಅಥವಾ ಹೋಸ್ಟ್‌ ಮತ್ತು ಪರಿಸರ ಅಥವಾ ಎನ್ವಿವಿರಾನ್‌ ಮೆಂಟ್‌. +ಈ ಮೂರು ಸಂಗತಿಗಳನ್ನು ಸಾಂಕ್ರಾಮಿಕತೆಯ ತ್ರಿಕೋನ ಎಂದು ಕರೆಯಲಾಗುತದೆ. +ಸಾಂಕ್ರಾಮಿಕ ರೋಗಗಳು ಇವುಗಳಲ್ಲಿ ಯಾವುದೇ ಒಂದು ಇಲ್ಲದಿದ್ದರೂ ರೋಗ ಉಂಟಾಗುವುದಿಲ್ಲ . +ರೋಗ ಉಂಟಾಗಲು ಮೊಟ್ಟಮೊದಲು ಅಗತ್ಯವಾದದ್ದು- ರೋಗಕಾರಕ ಅಥವಾ ಡಿಸೀಸ್‌ಏಜೆಂಟ್‌. +ರೋಗಕಾರಕವು ಸಜೀವಿ ಅಥವಾ ನಿರ್ಜೀವಿ ಆಗಿರಬಹುದು. +ರೋಗಕಾರಕಗಳನ್ನು ಐದು ಗುಂಪುಗಳನ್ನಾಗಿ ವಿಂಗಡಿಸಬಹುದು. +(ಆ) ಚೈವಿಕ ಕಾರಕಗಳು : ಇವು ಸಜೀವಿ ಏಜೆಂಟ್‌ಗಳಾಗಿರುತ್ತವೆ. +ಉದಾಹರಣೆಗೆ ವೈರಸ್‌ಗಳು, ಬ್ಯಾಕ್ಟಿರಿಯಾ, ಫಂಗೈ, ಪ್ರೋಟಾಜೋವಾ. . . ಇತ್ಯಾದಿ ಇವು ಸೋಂಕಿನ ಮೂಲದಲ್ಲಿ ಕಂಡುಬರುತ್ತವೆ. +(ಆ) ಪೌಷ್ಠಿಕ ಕಾರಕಗಳು : ಇವು ಸಸಾರಜನಕ(ಪ್ರೋಟೀನ್‌ಗಳು, ಕೊಬ್ಬುಗಳು (ಫ್ಯಾಟ್ಸ್‌) ಶರ್ಕರಪಿಷ್ಠಗಳು (ಕಾರ್ಬೊಹೈಡ್ರೇಟ್ಸ್‌)ವಿಟಮಿನ್‌ಗಳು, ಖನಿಜಗಳು ಮತ್ತು ನೀರು. +ಪೌಷ್ಠಿಕ ಆಹಾರ ಅತಿಯಾದರೆ ಅಥವಾ ಕೊರತೆ ಉಂಟಾದರೆ, ಪೌಷ್ಠಿಕ ಆಹಾರದ ರೋಗಗಳಿಗೆ ದಾರಿಮಾಡಿಕೊಡಬಹುದು. +(ಇ) ಭೌತಿಕ ಕಾರಕಗಳು : ಇವು ಉಷ್ಣತೆ, ಶೀತ,ಒತ್ತಡ (ಪ್ರೆಶರ್‌), ರೇಡಿಯೇಷನ್‌, ವಿದ್ಯುತ್‌ ಶಕ್ತಿ . +(ಈ) ರಾಸಾಯನಿಕ ಕಾರಕಗಳು : ಇವು ಲೋಹಗಳು (ಉದಾ: ಸೀಸ), ಹೊಗೆ , ಧೂಳು, ಗ್ಯಾಸ್‌ಗಳು ಇತ್ಯಾದಿ. +(ಉ) ಮೆಕ್ಕಾನಿಕಲ್‌ ಕಾರಕಗಳು :ಉಜ್ಜುವಿಕೆ ಪೆಟ್ಟು ಗಾಯಗಳು ಮತ್ತುಮೂಳೆ ಮುರಿತಗಳು. +ಆಶ್ರಯದಾತನ (ಜೀವಿ) ಸಂಗತಿಗಳು :(ಅ) ವಯಸ್ಸು : ಕೆಲವು ನಿಶ್ಚಿತ ರೋಗಗಳು, ನಿಶ್ಚಿತ ಗುಂಪುಗಳಲ್ಲಿ ಹೆಚ್ಚಾಗಿಕಾಣಿಸಿಕೊಳ್ಳುತ್ತದೆ. +ಉದಾ. : ಬಾಲ್ಯದಲ್ಲಿ ದಡಾರ (ಮೀಸಲ್ಸ್‌), ಮಧ್ಯವಯಸ್ಸಿನಲ್ಲಿ ಕ್ಯಾನ್ಸರ್‌, ವೃದ್ಧಾಪ್ಯದಲ್ಲಿ ಅಥೆರೊಸ್ಟ್ಲೀರೋಸಿಸ್‌. +(ಆ) ಲಿಂಗ : ಕೆಲವು ರೋಗಗಳು ಸ್ತ್ರೀಯರಲ್ಲಿ ಹೆಚ್ಚಾಗಿ ಕಂಡು ಬಂದರೆ,ಮತ್ತೆ ಕೆಲವು ರೋಗಗಳು ಪುರುಷರಲ್ಲಿ ಹೆಚ್ಚಾಗಿ ಕಂಡುಬರುತ್ತವೆ. +ಡಯಾಬಿಟೀಸ್‌ ಅಥವಾ ಸಕ್ಕರೆ ಕಾಯಿಲೆ ಹೆಚ್ಚಾಗಿ 40 ವರ್ಷದ ಮೇಲ್ಪಟ್ಟಸ್ತ್ರೀಯರಲ್ಲಿ ಕಂಡುಬರುತ್ತದೆ. +ಮತ್ತು ಹೃದಯ ರೋಗಗಳು ಪುರುಷರಲ್ಲಿ ಹೆಚ್ಚಾಗಿಕಂಡುಬರುತ್ತದೆ. +(ಇ) ಅನುವಂಶೀಯತೆ : ಹಾನಿಕಾರಕ ಜೀನ್ಸ್‌ (ವಂಶವಾಹಿಗಳು)ಗಳು ಶರೀರದಲ್ಲಿದ್ದಾಗ ರೋಗವನ್ನುಂಟು ಮಾಡಬಹುದು. + ಉದಾ : ಹಿಮೋಫೀಲಿಯಾ(ಕುಸುಮರೋಗ), ವರ್ಣ ಅಂಧತ್ವ (ಕಲರ್‌ ಬ್ಲೈಂಡ್‌ನೆಸ್‌) ಆಲ್ಫಿನಿಸಂ ಹುಟ್ಟಿನಿಂದಲೇ ಬಂದಂತಹ ಕೆಲವು ನ್ಯೂನತೆಗಳು. +ಸೀಳು ತುಟಿ, ಸೀಳು ಅಂಗಳು,ಇವೆಲ್ಲವು ಜೆನೆಟಿಕ್‌ ಸಂಗತಿಗಳಾಗಿರುತ್ತವೆ. +ಅಧಿಕ ರಕ್ತದೊತ್ತಡ (ಹೈಪರ್‌ಟೆನ್ಷನ್‌), ಡಯಾಬಿಟೀಸ್‌, ಕೆಲವು ಮಾನಸಿಕ ಕಾಯಿಲೆಗಳು ವಂಶವಾಹಿಗಳ ದೋಷದಿಂದ ಉಂಟಾಗಬಹುದುದೆಂದು ಆಲೋಜಿಸಲಾಗಿದೆ. +(ಈ) ಪೌಷ್ಠಿಕ ಆಹಾರ : ಪ್ರತಿದಿನ ಪೌಷ್ಠಿಕ ಆಹಾರವನ್ನು ಸೇವಿಸದಿದ್ದಾಗ,ಕೆಲವು ಪೌಷ್ಠಿಕ ಆಹಾರದ ಕೊರತೆಯಿಂದ ರೋಗಗಳುಂಟಾಗುತ್ತವೆ. +ಉದಾ. :ಸಾಂಕ್ರಾಮಿಕ ರೋಗಗಳು / ಕ್ವಾಶಿಯಾರ್ಕರ್‌, ಅನೀಮಿಯಾ (ರಕ್ತಹೀನತೆ), ಅತಿಯಾಗಿ ಆಹಾರವನ್ನು ಸೇವಿಸುವುದರಿಂದಲೂ ಕೆಲವು ಕಾಯಿಲೆಗಳು ಬರುತ್ತದೆ. +ಉದಾ. : ಡಯಾಬಿಟೀಸ್‌(ಮಧುಮೇಹ), ಬೊಜ್ಜು (ಒಬಿಸಿಟಿ). +(ಉ) ಉದ್ಯೋಗ : ಕೆಲವು ಉದ್ಯೋಗಗಳನ್ನು ಮಾಡುವುದರಿಂದಲೂ ನಿಶ್ಚಿತ ಉದ್ಯೋಗದ ಕಾಯಿಲೆಗಳು ಉಂಟಾಗಬಹುದು. +ಉದಾ. :ಲೆಢ್ ಫಾಯಿಸನಿಂಗ್(ಸೀಸದಿಂದ ವಿಷಪೂರಿತವಾಗುವುದು),ಸಿಲಿಕೋಸಿಸ್‌,ಅಪಘಾತಗಳು. +(ಊ) ಕೆಲವು ಸಂಪ್ರದಾಯಗಳು ಮತ್ತು ಹವ್ಯಾಸಗಳು : ಧೂಮಪಾನದ ಚಟದಿಂದ ಬಾಯಿ ಮತ್ತು ಶ್ವಾಸಕೋಶದ ಕ್ಯಾನ್ಸರ್‌ ಬರುತ್ತದೆ. +ಬಯಲಿನಲ್ಲಿ ಮಲಮೂತ್ರಗಳ ವಿಸರ್ಜನೆಯಿಂದ ಭೂಮಾಲಿನ್ಯ ಉಂಟಾಗುವುದಲ್ಲದೆ ಪರಾವಲಂಬಿ ಜೀವಿಗಳಿಂದಲೂ ರೋಗಗಳು ಹರಡುತ್ತವೆ. +(ಋ) ಮನುಷ್ಯನ ನಡವಳಿಕೆ : ಶಾರೀರಿಕ ವ್ಯಾಯಾಮವನ್ನು ನಿಯಮಿತವಾಗಿ ಮಾಡದಿರುವುದು, ಮದ್ಯಪಾನದ ಚಟ ಮತ್ತು ಕೆಲವು ಔಷಧಿಗಳ ಸೇವನೆಯ ವ್ಯಸನದಿಂದ ಶಾರೀರಿಕ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಉಂಟಾಗುತ್ತದೆ. +(ಎ)ಪರಿಸರ ಸಂಗತಿಗಳು : ವ್ಯಕ್ತಿ ಮತ್ತು ಸಮುದಾಯ ಚೆನ್ನಾಗಿರಬೇಕಾದರೆ, -ಆರೋಗ್ಯ ಪರಿಸರ ಅತ್ಯಗತ್ಯ ವಿವರಣಾತ್ಮಕ ಉದ್ದೇಶದಿಂದ ಪರಿಸರವನ್ನು ಮೂರುಘಟಕಗಳನ್ನಾಗಿ ವಿಂಗಿಡಸಲಾಗಿದೆ. +ಎ) ಭೌತಿಕ ಪರಿಸರ (ಫಿಸಿಕಲ್‌ ಎನ್ವಿರಾನ್‌ ಮೆಂಟ್‌) : ಭಾರತದಲ್ಲಿ ಬಹಳಷ್ಟು ಅನಾರೋಗ್ಯ ಸಮಸ್ಯೆಗಳು ಉಂಟಾಗಲು ಕಾರಣ ಅನಾರೋಗ್ಯ ಪರಿಸರ. +ಅಂದರೆ,ಸುರಕ್ಷಿತವಲ್ಲದ ನೀರಿನ ಪೂರೈಕೆ, ಕಲುಷಿತಗೊಂಡ ಮಣ್ಣು, ವಾಸಿಸಲು ಸರಿಯ್ಯಾದಮನೆ ಇಲ್ಲದಿರುವುದು. + ಮನುಷ್ಯನ ಮಲಮೂತ್ರಗಳು ಮತ್ತು ಘನರೂಪದ ತ್ಯಾಜ್ಯವಸ್ತುಗಳನ್ನು ಸರಿಯಾಗಿ ವಿಲೇವಾರಿ ಮಾಡದಿರುವುದು. +ಬಿ) ಜೈವಿಕ ಪರಿಸರ (ಬಯಾಲಾಜಿಕಲ್‌ ಎನ್ವಿರಾನ್‌ಮೆಂಟ್‌) : ರೋಗ ಉಂಟಾಗಲು ಜೈವಿಕ ಪರಿಸರವು ಕಾರಣವಾಗಿರಬಹುದು. +ಉದಾ : ಪ್ರಾಣಿಗಳು,ಕೀಟಗಳು, ಇಲಿ, ಹೆಗ್ಗಣಗಳು ಇತ್ಯಾದಿ. +ಸಿ) ಸಾಮಾಜಿಕ ಪರಿಸರ (ಸೋಶಿಯಲ್‌ ಎನ್ವಿರಾನ್‌ಮೆಂಟ್‌) : +ಸಂಪ್ರದಾಯಗಳು, ಹವ್ಯಾಸಗಳು, ಸಂಸ್ಕೃತಿ, ಶೈಕ್ಷಣಿಕ ಗುಣಮಟ್ಟ ಮೊದಲಾದವು ಪ್ರತ್ಯೇಕ್ಷವಾಗಿ ಮತ್ತು ಪರೋಕ್ಷವಾಗಿ ರೋಗ ಉಂಟಾಗಲು ಕಾರಣವಾಗಿರುತ್ತದೆ. +ತಡೆಗಟ್ಟುವ ಹಂತಗಳು :ಈ ಆಧುನಿಕ ದಿನಗಳಲ್ಲಿ ತಡೆಗಟ್ಟುವ ಪರಿಕಲ್ಪನೆಯ ವ್ಯಾಪ್ತಿ ಹೆಚ್ಚಾಗಿದೆ. +ತಡೆಗಟ್ಟುವುದನ್ನು ಮೂರು ಹಂತಗಳನ್ನಾಗಿ ವಿವರಿಸಬಹುದು. +1) ಪ್ರಾಥಮಿಕವಾಗಿ ತಡೆಗಟ್ಟುವಿಕೆ (ಪ್ರೈಮರಿ ಪ್ರಿವೆನ್ಷನ್‌). +2) ದ್ವಿತೀಯವಾಗಿ ತಡೆಗಟ್ಟುವಿಕೆ (ಸೆಕೆಂಡರಿ ಪ್ರಿವೆನ್ಷನ್‌). +3) ತೃತೀಯವಾಗಿ ತಡೆಗಟ್ಟುವಿಕೆ (ಟರ್ಶರಿ ಪ್ರಿವೆನ್ಷನ್‌). + ಪ್ರಾಥಮಿಕವಾಗಿ ತಡೆಗಟ್ಟುವಿಕೆ :ಪ್ರಾಥಮಿಕವಾಗಿ ತಡೆಗಟ್ಟುವಿಕೆ ಎಂದರೆ, ರೋಗ ಉಂಟಾಗುವ ಮೂದಲೇ ಸೂಕ್ತ ಕ್ರಮಗಳನ್ನು ಕೈಗೊಳ್ಳುವುದು. +ಪ್ರಾಥಮಿಕವಾಗಿಯೇ ಮುಂಜಾಗ್ರತ ಕ್ರಮಗಳನ್ನುತೆಗೆದುಕೊಂಡರೆ, ರೋಗ ಉಂಟಾಗುವ ಸಂಭಾವ್ಯತೆಯನ್ನು ತೆಗೆದು ಹಾಕಬಹುದು. +ನಿರ್ದಿಷ್ಟ ನಿರ್ವಹಣಾ ಕಾರ್ಯಕ್ರಮವೆಂದರೆ:ಎ) ಆರೋಗ್ಯದಿಂದಿರಲು ಉತ್ತೇಜನ ನೀಡುವುದು. +ಬಿ) ನಿರ್ದಿಷ್ಟ ರಕ್ಷಣೆಯನ್ನು ನೀಡುವುದು. +ಆರೋಗ್ಯ ಉತ್ತೇಜನ :ನಾವು ಅನೇಕ ರೋಗಗಳನ್ನು ತಡೆಗಟ್ಟಬಹುದು. +ಅವುಗಳಿಂದರೆ, ಕಾಲರಾ,ಟೈಫಾಯಿಡ್‌ ಜ್ವರ, ಕ್ಷಯರೋಗ ಮತ್ತು ಪೌಷ್ಟಿಕ ಆಹಾರದ ಕೊರತೆಯ ಕಾಯಿಲೆಗಳು. +ವೈಯಕ್ತಿಕವಾಗಿ ಮತ್ತು ಸಮುದಾಯದಲ್ಲಿ ಆರೋಗ್ಯದ ಮಹತ್ತ್ವದ ಬಗ್ಗೆ ಅರಿವು ಮೂಡಿಸಿ, ಆರೋಗ್ಯಾಬಿವೃದ್ಧಿ ಬಗ್ಗೆ ಉತ್ತೇಜನವನ್ನು ನೀಡುವುದರ ಮೂಲಕವೇ ಕಾಯಿಲೆಗಳನ್ನು ತಡೆಗಟ್ಟಬಹುದು. +ಅಂತಹ ಕಾರ್ಯಕ್ರಮಗಳು ಯಾವುವೆಂದರೆ,1. ಸಾಕಷ್ಟು ಪೌಷ್ಠಿಕ ಆಹಾರದ ಪೂರೈಕೆ. +2. ಸುರಕ್ಷಿತ ನೀರಿನ ಪೂರೈಕೆ. +3. ಮನುಷ್ಯನ ಮಲ-ಮೂತ್ರಗಳು ಹಾಗೂ ತ್ಯಾಜ್ಯ ವಸ್ತುಗಳನ್ನು ಸುರಕ್ಷಿತರೀತಿಯಲ್ಲಿ ವಿಲೇವಾರಿ ಮಾಡುವುದು. +4.ವೈಯಕ್ತಿಕ ಶುಚಿತ್ವ. +5.ಆರೋಗ್ಯ ಶಿಕ್ಷಣ. +6.ಶಾರೀರಿಕ ವ್ಯಾಯಾಮ. +7.ಅವಧಿಗೊಂದಾವರ್ತಿ ಆರೋಗ್ಯ ತಪಾಸಣೆ. +8.ಜನರ ಜೀವನದ ಗುಣಮಟ್ಟವನ್ನು ಅಭಿವೃದ್ಧಿಪಡಿಸುವುದು. +ನಿರ್ದಿಷ್ಟ ರಕ್ಷ ಣೆ:ನಿರ್ದಿಷ್ಟವಾದ ರಕ್ಷಣೆಯಿಂದ, ನಿರ್ದಿಷ್ಟ ಕಾಯಿಲೆಗಳನ್ನು ನಿರ್ದಿಷ್ಟ ಕ್ರಮಗಳಿಂದ ನಾವು ತಡೆಗಟ್ಟಬಹುದು. +ಉದಾಹರಣೆಗೆ ಸಕಾಲದಲ್ಲಿ ರೋಗನಿರೋಧಕ ಚುಚ್ಚುಮದ್ದುಗಳನ್ನು ಕೊಡಿಸುವುದರಿಂದ ಕ್ಷಯರೋಗ, ಡಿಫ್ಟೀರಿಯಾ, ನಾಯಿಕೆಮ್ಮು,ಧನುರ್ವಾಯು (ಟೆಟನಸ್‌) ಪೋಲಿಯೋ ಮತ್ತು ಮೀಸಲ್ಸ್‌ (ದಡಾರ)ನ್ನು ತಡೆಗಟ್ಟಬಹುದು. +ವಿಟಮಿನ್‌ "ಎ'ಯನ್ನು ಮಕ್ಕಳಿಗೆ ಕೊಡಿಸುವುದರಿಂದ ಕ್ಸೀರಾಫ್ತಾಲಾಮಿಯಾ ಎಂಬ ಕಣ್ಣಿನ ದೋಷ ಉಂಟಾಗುವುದನ್ನು ತಡೆಗಟ್ಟಬಹುದು. +ಪ್ರಾಥಮಿಕ ಹಂತದಿಂದಲೇ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟುವುದು ನಮ್ಮೆಲ್ಲರ ಗುರಿಯಾಗಬೇಕು. +ಅಭಿವೃದ್ಧಿ ಹೊಂದಿರುವ ಅನೇಕ ರಾಷ್ಟ್ರಗಳು ಅನೇಕ ಸೋಂಕು ರೋಗಗಳನ್ನು ಪ್ರಾಥಮಿಕ ಹಂತದಲ್ಲೇ ನಿರ್ಮೂಲನಗೊಳಿಸಿವೆ. +ದ್ವಿತೀಯ ಹಂತದ ತಡೆಗಟ್ಟುವಿಕೆ (ಸೆಕೆಂಡರಿ ಪ್ರಿವೆನ್ಷನ್‌):ದ್ವಿತೀಯ ಹಂತದ ತಡೆಗಟ್ಟುವಿಕೆಯಲ್ಲಿ ರೋಗ ಹರಡುವುದನ್ನು ನಿಲ್ಲಿಸಲು ಸೂಕ್ತ ಕ್ರಮಗಳನ್ನು ಕೈಗೊಳ್ಳುವುದರಿಂದ, ರೋಗದಿಂದ ಉಂಟಾಗುವ ತೊಡಕುಗಳನ್ನು ತಡೆಗಟ್ಟಬಹುದು. +ನಿರ್ದಿಷ್ಟ ನಿರ್ವಹಣಾ ಕ್ರಮಗಳು ಯಾವುವೆಂದರೆ:ಎ) ಬೇಗನೆ ರೋಗವನ್ನು ಪತ್ತೆಮಾಡುವುದು ರೋಗದ ಪ್ರಕರಣವನ್ನು ಪತ್ತೆಹಚ್ಚಲು ಕಾರ್ಯಕ್ರಮ ಕೈಗೊಳ್ಳುವುದು, ಅಗತ್ಯವಾದ ತಪಾಸಣೆಗಳನ್ನು ಮಾಡುವುದು. +ಬಿ) ಅಗತ್ಯವಾದ ಚಿಕಿತ್ಸೆಯನ್ನು ವ್ಯವಸ್ಥೆ ಮಾಡುವುದು. +ಎಲ್ಲ ರೋಗಗಳನ್ನು ವ್ಯಾಕ್ಸಿನ್‌ನಿಂದಲೇ ತಡೆಗಟ್ಟಲು ಸದ್ಯಕ್ಕೆ ಸಾಧ್ಯವಿಲ್ಲ. +ಉದಾ. : ಕುಷ್ಠರೋಗ, ಸಿಫಿಲಿಸ್‌, ಮಲೇರಿಯಾ. +ಆದಷ್ಟು ಬೇಗನೆ ರೋಗವನ್ನು ಗುರ್ತಿಸಿ, ಚಿಕಿತ್ಸೆಯನ್ನು ಕೊಡಿಸುವುದರಿಂದ ಸಾಂಕ್ರಾಮಿಕವಾಗಿ ಹರಡುವುದನ್ನುತಡೆಗಟ್ಟಲು ಸಾಧ್ಯವಾಗುತ್ತದೆ. +ತೃತೀಯ ಹಂತದ ತಡೆಗಟ್ಟುವಿಕೆ (ಟರ್ಶರಿ ಪ್ರಿವೆನ್ಷನ್‌):ಯಾವಾಗ ರೋಗ ಆರಂಭದ ಹಂತವನ್ನು ದಾಟಿ ಪ್ರಗತಿ ಹೊಂದಿದ್ದರೂ,ಮುಂದೆ ಆಗಬಹುದಾದ ತೊಡಕುಗಳನ್ನು ಟರ್ಶರಿ ಪ್ರಿವೆನ್ಷನ್‌ನಿಂದ ತಡೆಗಟ್ಟಬಹುದು. +ತೃತೀಯ ಹಂತದ ತಡೆಗಟ್ಟುವಿಕೆಯಲ್ಲಿ ಅಂಗವೈಕಲ್ಯವನ್ನು ಮಿತಗೊಳಿಸಿ. +ನರಳಿಕೆಯನ್ನು ಕನಿಷ್ಟ ಮಟ್ಟದಲ್ಲಿ ಇಡಲು ಸಾಧ್ಯವಾಗುತ್ತದೆ. +ನಿರ್ದಿಷ್ಟವಾದ ನಿರ್ವಹಣೆಯೆಂದರೆ: +(ಎ) ಅಂಗವೈಕಲ್ಯವನ್ನು ಮಿತಗೊಳಿಸುವುದು. +(ಬಿ) ಪುನರ್ವಸತಿ ಕಾರ್ಯಕ್ರಮ. +ಸಾಂಕ್ರಾಮಿಕ ರೋಗಗಳನ್ನು ಅರ್ಥಮಾಡಿಕೊಳ್ಳಲು ಸಹಾಯಕವಾಗುವ ಪಾರಿಭಾಷಿಕ ಪದಗಳು +(1) ಇನ್‌ಫೆಕ್ಷನ್‌ (ಸೋಂಕು) : ಸೋಂಕು ಕಾರಕಗಳು ಮನುಷ್ಯನ ಅಥವಾ ಪ್ರಾಣಿಗಳ ಶರೀರವನ್ನು ಪ್ರವೇಶಿಸಿ ಮತ್ತು ಅಭಿವೃದ್ಧಿ ಹೊಂದುವುದು ಅಥವಾ ದ್ವಿಗುಣಗೊಳ್ಳುವುದು. +ಸೋಂಕನ್ನು ಹೊಂದಿರುವ ವ್ಯಕ್ತಿ ಕೆಳಕಂಡವುಗಳನ್ನು ತೋರಿಸಬಹುದು. +ಎ) ಸೋಂಕಿನ ರೋಗದ ಚಿಹ್ನಗಳನ್ನು ಮತ್ತು ಲಕ್ಷಣಗಳನ್ನುತೋರಿಸಬಹುದು. +ಬಿ) ಯಾವುದೇ ಚಿಹ್ನೆಗಳನ್ನು ಮತ್ತು ಲಕ್ಷಣಗಳನ್ನು ತೋರಿಸದೇ ಇರಬಹುದು (ಕ್ಯಾರಿಯರ್‌). +ಸೋಂಕನ್ನು, ಪ್ರಯೋಗ ಶಾಲೆಯ ಪರೀಕ್ಷೆಯಿಂದ ಮಾತ್ರ ಪತ್ತೆಹಚ್ಚಬಹುದು. +ಇನ್‌ಪೆಕ್ಷಿಯಸ್‌ ಏಜೆಂಟ್‌ (ಸೋಂಕುಕಾರಕಗಳು): +ರೋಗಾಣು: ಸಾಮಾನ್ಯವಾಗಿ ಸೂಕ್ಷ್ಮ ರೋಗಾಣುಗಳು (ಮೈಕ್ರೋಆರ್ಗಾನಿಸಮ್‌) ಬ್ಯಾಕ್ಟಿರಿಯಾ, ವೈರಸ್‌, ಪರಾವಲಂಬಿ ಜೀವಿಗಳು, ಫಂಗಸ್‌. +ಇವೂ ಸಹ ಸೋಂಕನ್ನು ಉತ್ಪತ್ತಿ ಮಾಡಬಹುದು ಅಥವಾ ಸೋಂಕಿನ ರೋಗವನ್ನುಉಂಟು ಮಾಡಬಹುದು. +ಇನ್‌ಫಕ್ಷಿಯಸ್‌ ಡಿಸೀಸ್‌ (ಸೋಂಕುರೋಗ):ಮನುಷ್ಯನಲ್ಲಿ ಅಥವಾ ಪ್ರಾಣಿಗಳಲ್ಲಿ ಸೋಂಕಿನಿಂದಾಗಿ ರೋಗ ಉಂಟಾಗಿರುವುದು. +(2) ಎಪಿಡೆಮಿಕ್‌ (ಸಾಂಕ್ರಾಮಿಕ, ಸರ್ವತ್ರ ವ್ಯಾಪಿಸಿರುವ, ವ್ಯಾಪಕ):ಸಮುದಾಯದಲ್ಲಿ ಸಾಮಾನ್ಯ (ನಾರ್ಮಲ್‌) ನಿರೀಕ್ಷೆಗಿಂತಲೂ ಅತಿ ಹೆಚ್ಚಾಗಿರೋಗ ತಲೆದೋರಿರುವುದು ಅಥವಾ ಒಂದು ಕ್ಷಣದಲ್ಲಿ ಅನೇಕ ಜನರನ್ನು ಏಕಕಾಲದಲ್ಲಿ ಸಂಭವಿಸಿ ಬಾಧಿಸುವುದು ಅಥವಾ ಯಾವುದೇ ನಿರ್ದಿಷ್ಟ ರೋಗ ದಿಢೀರನೆ ಸ್ಫೋಟಿಸಿ ಹೆಚ್ಚು ಜನರ ಮೇಲೆ ದಾಳಿ ಮಾಡಿರುವುದು. +ಭಾರತದಲ್ಲಿ ಸಾಮಾನ್ಯವಾಗಿ ಹರಡುವ ಸಾಂಕ್ರಾಮಿಕ ರೋಗಗಳು:ಕಾಲರಾ,ಕರುಳಬೇನೆ, ದಡಾರ, ಸೀತಾಳೆ ಸಿಡುಬು (ಚಿಕನ್‌ಪಾಕ್‌), ವೈರಲ್‌ ಹೈಪಟೈಟಸ್‌-ಎ (ಜಾಂಡೀಸ್‌), ಎಂಟ್ರೀಕ್‌ ಫಿವರ್‌ ಮತ್ತು ಸೆರೆಬ್ರೋ-ಸ್ಟೈನಲ್‌ ಮೆನಿನ್‌ಜಿಟಿಸ್‌. +ಇತ್ತೀಚೆಗೆ ಕಂಡು ಹಿಡಿದಿರುವ ರೋಗ ಏಡ್ಸ್‌. +ಇದು ವಿಶ್ವವ್ಯಾಪಿಯಾಗಿ ಹರಡಿರಂವಂತಹಂದು. +ಕೆಲವು ನಾನ್‌ಕಮ್ಯುನಿಕೆಬಲ್‌ ಡಿಸೀಸ್‌(ಅಂಟುರೋಗವಲ್ಲದವು)ಗಳೆಂದರೆ, ಕ್ಯಾನ್ಸರ್‌, ಕರೋನರಿ ಹೃದ್ರೋಗ, ಅಧಿಕ ರಕ್ತದೊತ್ತಡ ಮತ್ತು ಸಂಚಾರಿ ಅಪಘಾತಗಳು. +ಸಾಂಕ್ರಾಮಿಕ ರೋಗಗಳು ಅಭಿವೃದ್ಧಿ ಹೊಂದಿರುವ, ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಲ್ಲಿ ಕಂಡುಬರುತ್ತವೆ. +(3) ಎಂಡೆಮಿಕ್‌ (ಸ್ಥಾನಿಕ):ಒಂದು ನಿರ್ದಿಷ್ಟ ಭೌಗೋಳಿಕ ಪ್ರದೇಶದಲ್ಲಿ ರೋಗ ಸ್ಥಿರವಾಗಿದ್ದರೆ ಅಥವಾ ಒಂದು ನಿರ್ದಿಷ್ಟ ಪ್ರದೇಶದಲ್ಲಿ ಸಾಮಾನ್ಯವಾಗಿ ಅಂಟು ರೋಗ ಎಡಬಿಡದೆ ಬರುತ್ತಿದ್ದರೆ ಅದನ್ನು ಎಂಡೆಮಿಕ್‌ ಅಥವಾ ಸ್ಥಾನಿಕವಾಗಿ ಕಂಡುಬರುವ ಅಂಟುರೋಗ ಎಂದು ಕರೆಯುತ್ತಾರೆ. +ಭಾರತದಲ್ಲಿ ಸಾಮಾನ್ಯವಾಗಿ ಕಂಡು ಬರುವ ಎಂಡೆಮಿಕ್‌ ರೋಗಗಳೆಂದರೆ ಎಂಟ್ರಿಕ್‌ಫಿವರ್‌ (ಕರುಳಜ್ಜರ, ವಿಷಮಜ್ವರ) ಅತಿಸಾರ ಭೇದಿ ಮತ್ತು ಡೀಸೆಂಟ್ರಿ(ಆಮಶಂಕೆ, ರಕ್ತಭೇದಿ), ವೈರಲ್‌ ಹೆಪಟೈಟಿಸ್‌ (ಜಾಂಡೀಸ್‌), ಕುಷ್ಠರೋಗ,ಫೈಲೇರಿಯಾ, ಮಲೇರಿಯಾ, ಕ್ಷಯರೋಗ ಮೊದಲಾದವು. +ಪರಿಸ್ಥಿತಿ ಅನುಕೂಲಕರವಾಗಿದ್ದರೆ ಎಂಡೆಮಿಕ್‌ ರೋಗಗಳು ಅಧಿಕಗೊಳ್ಳುತ್ತವೆ. +ಉದಾ :ಟೈಫಾಯಿಡ್‌ (ವಿಷಮ ಶೀತಜ್ವರ), ಮಲೇರಿಯಾ, ಪೋಲಿಯೊ ಮೈಲೈಟಸ್‌. +(4) ಸ್ಟೊರಾಡಿಕ್‌ :ವಿರಳವಾಗಿ ಅಥವಾ ಚದುರಿದಂತೆ ರೋಗ ಸಂಭವಿಸಿದರೆ ಅದನ್ನು ಸ್ಟೊರಾಡಿಕ್‌ ಅಥವಾ ವಿರಳವಾಗಿ ಹರಡುವುದು ಎನ್ನುತ್ತಾರೆ. + ಉದಾ : ಪೋಲಿಯೊ ಮೈಲೈಟಿಸ್‌. +ಎಪಿಡೆಮಿಕ್‌ ಅಥವಾ ಸಾಂಕ್ರಾಮಿಕತೆಯ ಆರಂಭದ ಅಂಶ ಸ್ಟೊರಾಡಿಕ್‌ ಆಗಿರಬಹುದು. +(5) ಪಾಂಡೆಮಿಕ್‌ ವಿಶ್ವವ್ಯಾಪಿ :ಸಾಂಕ್ರಾಮಿಕ ಕಾಯಿಲೆ, ದೇಶದಿಂದ ದೇಶಕ್ಕೆ ಅಥವಾ ಇಡೀ ಪ್ರಪಂಚದಲ್ಲಿ ಹರಡಿದ್ದರೆ ಅದನ್ನು ಪಾಂಡೆಮಿಕ್‌ ಅಥವಾ ವಿಶ್ವವ್ಯಾಪಿ ಕಾಯಿಲೆ ಎನ್ನುತ್ತಾರೆ. +ಉದಾ : ಏಡ್ದ್‌ನ ಸಾಂಕ್ರಾಮಿಕತೆ, ಈ ಹಿಂದೆ ವಿಶ್ವವ್ಯಾಪಿಯಾಗಿ ಹರಡಿದ್ದ ರೋಗಗಳೆಂದರೆ, ಇನ್‌ಫ್ಲೂಯೆಂಜಾ, ಕಾಲರಾ ಮತ್ತು ಫ್ಲೇಗ್‌. +ಜುನೋಸಿಸ್:ರೋಗಗಳು ಅಥವಾ ಸೋಂಕುಗಳು ಸ್ವಾಭಾವಿಕವಾಗಿ ಬೆನ್ನುಮೂಳೆಯ ಪ್ರಾಣಿಗಳು ಮತ್ತು ಮನ್ಯುಷ್ಯರ ನಡುವೆ ಹರಡುತ್ತವೆ. +ಉದಾ :ರೇಬಿಸ್‌ (ನಾಯಿಹುಚ್ಚು), ಫ್ಲೇಗ್‌, ಬೊವೈನ್‌ ಟಿ. ಬಿ, ಆಂಥ್ರಾಕ್ಸ್‌. +(7) ಕಮ್ಯುನಿಕಬಲ್‌ ಡಿಸೀಸ್‌ (ಅಂಟುರೋಗ):ನಿರ್ದಿಷ್ಟ ಸೋಂಕಿನ ಕಾರಕ (ಏಜೆಂಟ್‌)ಗಳಿಂದ ಅಥವಾ ಅದರ ವಿಷದ ಉತ್ಪನ್ನದಿಂದ ಕೆಲವು ನಿಶ್ಚಿತ ಸ್ಥಿತಿಗಳಲ್ಲಿ ರೋಗ, ವ್ಯಕ್ತಿಗತವಾಗಿ ಸಮುದಾಯದಲ್ಲಿ ಹರಡುವುದನ್ನು ಅಂಟುರೋಗ ಅಥವಾ ಕಮ್ಯುನ್‌ಕಬಲ್‌ ಡಿಸೀಸ್‌ ಎನ್ನುತ್ತಾರೆ. +(8) ನಾನ್‌ಕಮ್ಯುನಿಕಬಲ್‌ ಡಿಸೀಸ್‌ (ಅಂಟುರೋಗವಲ್ಲದ ಕಾಯಿಲೆಗಳು):ಹೃದಯ ರೋಗ, ಸಕ್ಕರೆ ಕಾಯಿಲೆ, ಕ್ಯಾನ್ಸರ್‌, ಒಬ್ಬ ವ್ಯಕ್ತಿಯಿಂದ ಮತ್ತೊಬ್ಬ ವ್ಯಕ್ತಿಗೆ ಹರಡುವುದಿಲ್ಲ. +(9) ಇನ್‌ಕ್ಯಬೇಷನ್‌ ಪಿರಿಯಡ್‌ (ರೋಗಪರಿಪಕ್ವ ಆಗುವ ಅವಧಿ):ರೋಗ ಕ್ರಿಮಿಗಳಿಗೆ, ಮನುಷ್ಯನ ಸಂಪರ್ಕ ಬಂದ ಮೇಲೆ, ರೋಗವು ಪ್ರಾರಂಭವಾಗುವುದು. +ಆದರೂ, ಒಮ್ಮೆಲೇ ರೋಗದ ಲಕ್ಷಣಗಳು ಕಂಡುಬರುವುದಿಲ್ಲ. +ರೋಗ ಕ್ರಿಮಿಗಳು ಬೆಳೆಯಲಾರಂಭಿಸುವುವು, ಆ ಕ್ರಿಮಿಗಳು ಸಾಕಾದಷ್ಟು ಪ್ರಬಲವಾದಾಗ ರೋಗವು ಬಲಿತು ಲಕ್ಷಣಗಳು ಹೊರ ಬೀಳುವುವು. +ಇದಕ್ಕೆ ಸ್ವಲ್ಪ ವೈದ್ಯಕೀಯ ಕಾಲಾವಕಾಶವು ಬೇಕು. +ಸೋಂಕು ತಗುಲಿದಂದಿನಿಂದ ರೋಗ ಬಲಿಯುವ ತನಕದ ಅವಧಿಯನ್ನು ಇನ್‌ಕ್ಯುಬೇಷನ್‌ ಪೀರಿಯಡ್‌ ಅಥವಾ ರೋಗ ಪರಿಪಕ್ವ ಆಗುವ ಅವಧಿ ಎನ್ನುತ್ತಾರೆ. +(10) ಐಸೋಲೇಷನ್‌ (ಪ್ರತ್ಯೇಕ್ಷವಾಗಿ ರೋಗಿಯನ್ನು ಇರಿಸುವುದು):ಸೋಂಕಿರುವ ರೋಗದ ವ್ಯಕ್ತಿಯನ್ನು, ಇತರೆ ಆರೋಗ್ಯವಂತರಿಂದ ಪ್ರತ್ಯೇಕವಾಗಿರಿಸುವುದನ್ನು ಐಸೋಲೇಷನ್‌ ಎನ್ನುತ್ತಾರೆ. +(11) ಕ್ಯಾರಿಯರ್‌ (ರೋಗವಾಹಕ):ಹೊರಗಡೆ ರೋಗಲಕ್ಷಣಗಳು ಕಾಣದೆ, ವ್ಯಕ್ತಿ ರೋಗಾಣುಗಳನ್ನು ಹೊಂದಿದ್ದರೆ ಅಥವಾ ಇತರರಿಗೆ, ಸೋಂಕು ಹರಡುವ ಸ್ಥಿತಿಯಲ್ಲಿದ್ದರೆ ಅವರನ್ನು ಕ್ಯಾರಿಯರ್‌ ಅಥವಾ ರೋಗವಾಹಕ ವ್ಯಕ್ತಿ ಎನ್ನುತ್ತಾರೆ. +(12) ಪೊಮೈಟೆಸ್‌ (ಸೋಂಕು ಹೀರಕಗಳು):ಅಂಟುರೋಗಿ ಉಪಯೋಗಿಸಿದ ಬಟ್ಟೆಬರೆ, ಪಾತ್ರೆ ಇತ್ಯಾದಿ. +(13) ಇನ್‌ಫೆಸ್ಟೇಶನ್‌:ಪರೋಪ ಜೀವಿಗಳಿಗೆ ಸ್ಥಳ ಕೊಡುವಿಕೆ, ಸಂಧಿಪದಿಗಳು ಮನುಷ್ಯನ ಶರೀರ ಅಥವಾ ಪ್ರಾಣಿಗಳು ಅಥವಾ ಬಟ್ಟೆಗಳ ಮೇಲಿರುವುದು. + ಉದಾ :ಸಂಧಿಪದಿಗಳು ಅಥವಾ ಹೆಗ್ಗಣ ಆಶ್ರಯ ಪಡೆಯುವುದು. +(14) ಕಂಟಾಮಿನೇಷನ್‌ (ಕಲುಷಿತತೆ):ಸೋಂಕುಕಾರಕ (ಏಜೆಂಟ್‌) ಶರೀರದ ಮೇಲೆ ಅಥವಾ ನಿರ್ಜೀವಿ ವಸ್ತುಗಳ ಮೇಲಿರುವುದು. +ಅಂತಹವುಗಳೆಂದರೆ, ಗೊಂಬೆಗಳು, ಬಟ್ಟೆಗಳು, ಉಪಕರಣಗಳು,ಆಹಾರ, ನೀರು ಇತ್ಯಾದಿ. +(15) ಕ್ವಾರಂಟೈನ್‌:ಸೋಂಕಿಗೆ ಒಳಗಾಗಿರಬಹುದೆಂಬ ಅನುಮಾನದ ಮೇಲೆ ಪ್ರತ್ಯೇಕಿಸಿಡುವುದು. +(16) ಪ್ಯಾಥೋಜಿನಿಕ್‌:ರೋಗ ಉಂಟು ಮಾಡುವ . +(17) ಪಾರಾಸೈಟ್‌:ಇನ್ನೊಂದು ಜೀವಿಯ ಮೇಲೆ ಇದ್ದು ಜೀವಿಸುವ ಪರೋಪಜೀವಿ. +(18) ಹೋಸ್ಟ್‌ (105):ಯಾರ ಮೇಲೆ ಪರೋಪಜೀವಿಗಳು ಬದುಕುತ್ತವೆಯೋ ಅಂತಹ ಪ್ರಾಣಿ ಅಥವಾ ಮನುಷ್ಯ. +(19) ಡಿಸ್‌ಇನ್‌ಪೆಕ್ಷನ್‌ :ಹಾನಿಕಾರಕ ಸೂಕ್ಷ್ಮಜೀವಿಗಳನ್ನು (ಮಿಣಿಜೀವಿಗಳು) ನಾಶ ಮಾಡುವ ಪ್ರಕ್ರಿಯೆ. +(20) ಡಿಸ್‌ಇನ್‌ಫೆಸ್ಟೇತನ್‌ :ಮನುಷ್ಯನ ಮೇಲೆ ವಾಸಿಸುವ ರೋಗ ಉಂಟುಮಾಡುವ ಕೀಟ ಮುಂತಾದವುಗಳನ್ನು ನಾಶಪಡಿಸುವಿಕೆ. +(21) ಆರ್ತ್ರೊ ಪಾಡ್ಬ್‌ :ಕೀಟಗಳು, ಜೇಡಗಳು ಮತ್ತು ಅವುಗಳ ಸಂಬಂಧಿಗಳು ಸೇರಿದಂತೆ, ಪ್ರಾಣಿಗಳ ಒಂದು ಗುಂಪು. +(22) ಆ್ಯಂಟೀಸೀರಮ್‌ :ನಿರ್ದಿಷ್ಟ ಕಾಯಿಲೆಗಳಿಗೆ, ತಾತ್ಕಾಲಿಕ ಪ್ರತಿ ರೋಧಕತೆ ಕೊಡುವಂತಹ ನಿರ್ದಿಷ್ಟ ಸೀರಮ್‌ಗಳು, ಉದಾಹರಣೆಗೆ ಆ್ಯಂಟೀಡಿಪ್ತೀರಿಯಾ ಸೀರಮ್‌. + ರೋಗಡ ಹರಡಿಕೆ : ಸೋಂಕಿನ ಮೂಲದಿಂದ ಅನೇಕ ಮಾರ್ಗಗಳ ಮೂಲಕ ಈಡಾಗುವ ಆಶ್ರಯ ಜೀವಿಯಿಂದ ಮನುಷ್ಯನಿಗೆ ಹರಡುತ್ತದೆ. +ರೋಗ ಯಾವ ರೀತಿ ಹರಡಿತು ಎಂಬುದು ತಿಳಿದುಕೊಳ್ಳುವುದರಿಂದ, ತಡೆಗಟ್ಟುವಿಕೆ ಮತ್ತು ನಿಯಂತ್ರಣಕ್ಕಾಗಿ ಸೂಕ್ತಕ್ರಮಗಳನ್ನು ಕೈಗೊಳ್ಳಲು ಸಹಾಯಕವಾಗುತ್ತದೆ. +1) ಸೋಂಕಿನ ಮೂಲ :ಅನೇಕ ಪ್ರಕರಣಗಳಲ್ಲಿ ಮನುಷ್ಯನೇ ಸೋಂಕಿನ ಮೂಲವಾಗಿರುತ್ತಾನೆ. +ಆತ ರೋಗವಾಹಕ ಅಥವಾ ಕ್ಯಾರಿಯರ್‌ ಆಗಿರಬಹುದು. +ಕೆಲವೊಮ್ಮೆ ಸೋಂಕಿನಮೂಲ, ಸೋಂಕಿನಿಂದ ಕೂಡಿದ ಪ್ರಾಣಿಯು ಆಗಿರಬಹುದು (ಉದಾ.: ರೇಬಿಸ್‌(ನಾಯಿಹುಚ್ಚು)ನಲ್ಲಿ ನಾಯಿ) +2) ಹರಡಿಕೆಯ ವಿಧಾನಗಳು :ರೋಗ ಹರಡಿಕೆಯ ವಿಧಾನಗಳನ್ನು ಎರಡು ಗುಂಪುಗಳನ್ನಾಗಿ ವಿಂಗಡಿಸಬಹುದು. +ಪ್ರತ್ಯಕ್ಷ ಮತ್ತು ಅಪ್ರತ್ಯಕ್ಷ' ಎಂದು. +1. ನೇರವಾಗಿ ಹರಡುವುದು : +(1) ನೇರ ಸಂಪರ್ಕದಿಂದ . +(2) ತುಂತುರು ಸೋಂಕು . +(3) ಸೋಂಕಿನಿಂದ ಕೂಡಿದ ಮಣ್ಣಿನ ಸಂಪರ್ಕ. +(4) ಚುಚ್ಚುವಿಕೆ ಮೂಲಕ ಚರ್ಮ ಅಥವಾ ಲೋಳ್ಪರೆ ಒಳಕ್ಕೆ ಹೋಗಿರುವುದು. +(5) ಮಾಸು ಮೂಲಕ ಹರಡಿರುವುದು ಅಥವಾ ನೆಟ್ಟ ನಿಲುವಿನ ಮೂಲಕ ಹರಡಿರುವುದು. +2. ಪರೋಕ್ಷ ವಾಗಿ ಹರಡುವುದು : +(1) ವಾಹಕಗಳ ಮೂಲಕ ಹರಡಿಕೆ . +(2) ಸೋಂಕು, ಕೀಟಗಳ ಮೂಲಕ ಹರಡಿಕೆ . +(3) ಗಾಳಿ ಮೂಲಕ ಹರಡಿಕೆ. +(4) ರೋಗಿ ಬಳಸಿದ ವಸ್ತುಗಳ ಮೂಲಕ ಹರಡಿಕೆ +1. ನೇರವಾಗಿ ಹರಡುವುದು(1) ನೇರವಾದ ಸಂಪರ್ಕದಿಂದ :ರೋಗಕಾರಕ ನೇರವಾಗಿ, ಸೋಂಕಿನ ವ್ಯಕ್ತಿಯಿಂದ ಈಡಾಗುವ ಆಶ್ರಯದಾತನಿಗೆ, ಶಾರೀರಿಕ ಸಂಪರ್ಕದ ಅವಧಿಯಲ್ಲಿ ಹರಡುತ್ತದೆ. +ಅಂದರೆ,ಸರ್ಶ, ಚುಂಬನ, ಲೈಂಗಿಕ ಸಂಪರ್ಕದಿಂದ ಸೋಂಕು ಹರಡುತ್ತದೆ. +ನೇರವಾದ ಸಂಪರ್ಕದಿಂದ ಲೈಂಗಿಕ ರೋಗಗಳು, ಚರ್ಮ ರೋಗಗಳು, ಕುಷ್ಠ ರೋಗ ಮತ್ತು ಕಣ್ಣಿನ ಸೋಂಕುಗಳು ಹರಡುತ್ತವೆ. +(2) ತುಂತುರು ಮೂಲಕ ಸೋಂಕು :ಯಾವಾಗ ವ್ಯಕ್ತಿ ಕೆಮ್ಮುತ್ತಾನೋ, ಸೀನುತ್ತಾನೋ ಅಥವಾ ಜೋರಾಗಿ ಮಾತನಾಡುತ್ತಾನೋ ಆಗ ಜೊಲ್ಲಿನ ತುಂತುರು ಮತ್ತು ಮೂಗಿನ ಸ್ರಾವಗಳು ವಾತಾವರಣದಲ್ಲಿ ಸೇರುತ್ತವೆ. +ಯಾವುದೇ ವ್ಯಕ್ತಿ ಸೋಂಕಿನ ವಸ್ತುಗಳ ಸಮೀಪವಿದ್ದಾಗ ಅವುಗಳಲ್ಲಿ ಕೆಲವು ಉಸಿರಿನ ಮೂಲಕ ಶರೀರದೊಳಕ್ಕೆ ಸೇರುತ್ತವೆ. +ಉದಾಹರಣೆಗೆ:ನೆಗಡಿ ಇರುವ ವ್ಯಕ್ತಿಯಿಂದ, ಇನ್‌ಫ್ಲೂಯೆಂಜಾ ಇರುವ ವ್ಯಕ್ತಿಯಿಂದ, ಕ್ಷಯರೋಗ ಹೊಂದಿರುವವನಿಂದ, ದಡಾರ, ಡಿಪ್ತಿರಿಯಾ, ಸೀತಾಳೆ ಸಿಡುಬು, ನಾಯಿಕೆಮ್ಮು ಗದಗಟ್ಟು (ಮಂಪ್ಸ್‌) ಹೊಂದಿರುವ ವ್ಯಕ್ತಿ ಸೀನಿದಾಗ, ಕೆಮ್ಮಿದಾಗ ತುಂತುರು,ಮೂಲಕ ರೋಗಾಣುಗಳು ಸಮೀಪವಿರುವ, ಆರೋಗ್ಯವಂತ ವ್ಯಕ್ತಿಗೆ ಹರಡಬಹುದು. +ಜನಸಂದಣಿ ಇರುವ ಜಾಗಗಳಲ್ಲಿ ತುಂತುರು ಮೂಲಕ ರೋಗಹರಡುವ ಸಾಧ್ಯತೆಗಳು ಹೆಚ್ಚು. +(3) ಸೋಂಕಿನ ಮಣ್ಣಿನ ಸಂಪರ್ಕ :ಉದಾ: ಧನುರ್ವಾಯು (ಟೆಟನಸ್‌). +(4) ಪ್ರಾಣಿ ಕಚ್ಚಿರುವುದು:ಹುಚ್ಚುನಾಯಿ ಕಚ್ಚಿದರೆ ರೇಬಿಸ್‌ ಬರುತ್ತದೆ. +2. ಪರೋಕ್ಷವಾಗಿ ಹರಡುವಿಕೆ(1) ವಾಹಕಗಳ ಮೂಲಕ ಹರಡುವಿಕೆ :ರೋಗಕಾರಕಗಳ ಮೂಲಕ ರೋಗ ಹರಡುತ್ತದೆ. +ಅವುಗಳೆಂದರೆ,ಅ) ನೀರು ಆ) ಆಹಾರ ಇ) ಹಾಲು ಅಥವಾ ಹಾಲಿನ ಉತ್ಪನ್ನಗಳು ಈ) ಐಸ್‌ ಉ) ಸೀರಮ್‌ ಅಥವಾ ಪ್ಲಾಸ್ಮಾ ಅಥವಾ ಇತರೆ ಜೈವಿಕ ಉತ್ಪನ್ನಗಳು. +ಇವುಗಳಲ್ಲೆಲ್ಲಾ ರೋಗ ಹರಡುವುದರಲ್ಲಿ ಕಲುಷಿತಗೊಂಡಂತಹ ನೀರು ಬಹಳ ಮುಖ್ಯವಾದದ್ದು. +ವಾಹಕಗಳ ಮೂಲಕ ಹರಡುವ ರೋಗಗಳೆಂದರೆ,1) ಕಾಲರಾ 2) ಟೈಫ ಫಾಯಿಡ್‌ ಜ್ವರ 3) ಪೋಲಿಯೋ ಮೈಲೈಟಿಸ್‌ 4) ವೈರಲ್‌ ಹೆಪಟೈಟಿಸ್‌ (ಜಾಂಡೀಸ್‌) 5) ಪರಾವಲಂಬಿ ಜೀವಿಗಳಿಂದ ಹರಡುವ ಜಂತುಹುಳು ಇತ್ಯಾದಿ. +ರೋಗಿಯು ವಿಸರ್ಜಿಸುವ ಮಲದಿಂದಾಗಿ ನೀರು, ಆಹಾರ ಮೊದಲಾದವು ಕಲುಷಿತಗೊಳ್ಳುತ್ತವೆ. +ಮಲಮೂತ್ರಗಳನ್ನು ಸರಿಯಾಗಿ ವಿಲೇವಾರಿ ಮಾಡದೆ ಇರುವುದರಿಂದ, ಮಲ, ನೀರಿನ ಮೂಲಗಳಲ್ಲಿ ಸೇರ್ಪಡೆಗೊಂಡು, ನೀರನ್ನು ಕಲುಷಿತಗೊಳಿಸುವುದರಿ೦ಂದ ರೋಗಗಳು ಹರಡುತ್ತವೆ. +ಆದುದರಿಂದ, ನೀರಿನ ಮೂಲಗಳ ಬಳಿ ಮಲ-ಮೂತ್ರಗಳನ್ನು ವಿಸರ್ಜನೆ ಮಾಡಬಾರದು. +ಕಲುಷಿತಗೊಂಡ ರಕ್ತದ ಮೂಲಕ ವೈರಲ್‌ ಹೆಪಟೈಟಿಸ್‌ (ಜಾಂಡೀಸ್‌),ಮಲೇರಿಯಾ ಹಾಗೂ ಸಿಫಿಲಿಸ್‌ ಕಾಯಿಲೆಗಳು ಹರಡುತ್ತವೆ. +(2) ರೋಗಿ ಉಪಯೋಗಿಸಿದ ಬಟ್ಟೆಬರೆ, ವಸ್ತುಗಳ ಮೂಲಕ ರೋಗ ಹರಡುವಿಕೆ(ಪೊಮೈಟ್ಸ್‌ ಮೂಲಕ):ಅಂಟುರೋಗಿ ಉಪಯೋಗಿಸಿದ ಟವೆಲ್‌ಗಳು, ಬಟ್ಟೆ, ಕರವಸ್ತ್ರ. +ಪಾತ್ರೆಗಳು,ಲೋಟಗಳು, ಚಮಜಗಳು, ಪೆನ್ನು, ಪೆನ್ಸಿಲ್‌ಗಳು, ಪುಸ್ತಕಗಳು, ಗೊಂಬೆಗಳೇ ಮೊದಲಾದವುಗಳಿಂದ ಹರಡುತ್ತದೆ. +ಅಂತಹ ರೋಗಗಳೆಂದರೆ: +ಅಮಿಬಿಯಾಸಿಸ್‌,ಬ್ಯಾಸಿಲರಿಡೀಸೆಂಟ್ರಿ (ಆಮಶಂಕೆ), ಟೈಫಾಯಿಡ್‌ ಜ್ವರ, ಶೀತಾಳೆ ಸಿಡುಬು,ಡಿಪ್ತೀರಿಯಾ, ವೈರಲ್‌ ಹೆಪಟೈಟಿಸ್‌ (ಜಾಂಡೀಸ್‌) ಮತ್ತು ಕಣ್ಣಿನ ಸೋಂಕುಗಳು. +3) ಕ್ರಿಮಿ ಕೀಟಗಳ ಮೂಲಕ ರೋಗ ಹರಡುವಿಕೆ:ಸೊಳ್ಳೆಗಳು, ನೊಣಗಳು, ಚಿಗಟಗಳು, ಉಣ್ಣಿಗಳು ತಮ್ಮ ಶರೀರದಲ್ಲಿ ರೋಗಕಾರಕಗಳನ್ನು ಕೊಂಡೊಯ್ಯುತ್ತವೆ. + ಉದಾ: ಮನೆ ನೊಣ ಆಮಶಂಕೆಯ ರೋಗಾಣುಗಳನ್ನು ಕೊಂಡೊಯ್ಯುತ್ತವೆ. +ಅಂಟು ರೋಗಗಳನ್ನು ತಡೆಗಟ್ಟಲು ಮತ್ತು ನಿಯಂತ್ರಿಸಲು ಸಾಮಾನ್ಯವಾಗಿತೆಗೆದುಕೊಳ್ಳಬೇಕಾದ ಕ್ರಮಗಳು: +ರೋಗಕಾರಕ (ಏಜೆಂಟ್‌), ಆಶ್ರಯದಾತ (ಹೋಸ್ಟ್‌) ಮತ್ತು ಪರಿಸರದಲ್ಲಿ ನಡೆಯುವ ಪ್ರತಿಕ್ರಿಯೆಯ ಫಲಿತಾಂಶದಿಂದ ರೋಗ ಉಂಟಾಗುತ್ತದೆ. +ರೋಗವನ್ನು ತಡೆಗಟ್ಟಲು ಪ್ರತಿಕ್ರಿಯೆ ಉಂಟಾಗುವುದಕ್ಕೆ ಅವಕಾಶವನ್ನು ಕೊಡಬಾರದು. +ಒಮ್ಮೆರೋಗ ಆರಂಭಗೊಂಡರೆ ಆ ರೋಗ, ಮುಂದೆ ಹರಡದಂತೆ, ತಡೆಗಟ್ಟಲುಅಗತ್ಯವಾದ ಸೂಕ್ತ ಕ್ರಮಗಳನ್ನು ತಡಮಾಡದೆ ಕೈಗೊಳ್ಳಬೇಕು. +ಸೋಂಕು ಹರಡುವುದನ್ನು ತಡೆಗಟ್ಟಲು ತೆಗೆದುಕೊಳ್ಳಬೇಕಾದ ಕ್ರಮಗಳೆಂದರೆ:(1) ಸೋಂಕಿನ ಮೂಲವನ್ನು ನಿಯಂತ್ರಿಸುವುದು . +(2)ರೋಗ ಹರಡುವ ಮಾರ್ಗಗಳನ್ನು ಮುಚ್ಚುವುದು . +(3) ಸೋಂಕಾಗುವವರನ್ನು ರಕ್ಷಿಸುವುದು . +ಸೋಂಕಿನ ಮೂಲವನ್ನು ನಿಯಂತ್ರಿಸುವುದು: +ಸೋಂಕಿನ ಸಾಮಾನ್ಯ ಮೂಲಗಳೆಂದರೆ, ಸೋಂಕಿನ ವ್ಯಕ್ತಿಗಳು, ರೋಗ ವಾಹಕ (ಕ್ಯಾರಿಯರ್ಸ್‌)ರಾಗಿರುತ್ತಾರೆ. +ಸೋಂಕಿನ ಮೂಲವನ್ನು ನಿರ್ಮೂಲನೆ ಮಾಡುವುದರಿಂದ ರೋಗ ಹರಡುವುದನ್ನು ಕಡಿಮೆ ಮಾಡಬಹುದು ಅಥವಾ ನಿಯಂತ್ರಿಸಬಹುದು. + ಮನುಷ್ಯನ ಸೋಂಕಿನ ಮೂಲವನ್ನು ನಿಯಂತ್ರಿಸುವ ಸಾಮಾನ್ಯ ಕ್ರಮಗಳೆಂದರೆ, ಬೇಗನೆ ರೋಗವನ್ನು ಪತ್ತೆ ಮಾಡುವುದು. + ರೋಗದ ಬಗ್ಗೆ ವರದಿ ಮಾಡುವುದು (ನೋಟಿಫಿಕೇಷನ್‌). + ಸೋಂಕು ರೋಗಿಯನ್ನು ಪ್ರತ್ಯೇಕ ಕೊಠಡಿಯಲ್ಲಿರಿಸಿ ಆರೈಕೆ ಮಾಡುವುದು. + ಚಿಕಿತ್ಸೆಯನ್ನು ಏರ್ಪಡಿಸುವುದು. + ಸರ್ವೇಲೆನ್ಸ್‌ ಮಾಡುವುದು ಮತ್ತು ಸೋಂಕು ನಾಶ ಮಾಡುವುದು (ಡಿಸ್‌ಇನ್‌ಪೆಕ್ಷನ್‌). +1. (1) ಬೇಗನೆ ರೋಗವನ್ನು ಪತ್ತೆ ಮಾಡುವುದು :ರೋಗದ ಪ್ರಕರಣಗಳನ್ನು ಮತ್ತು ರೋಗ ವಾಹಕರನ್ನು (ಕ್ಯಾರಿಯರ್‌)ಬೇಗನೆ ಪತ್ತೆ ಮಾಡಿ ಚಿಕಿತ್ಸೆಯನ್ನು ವ್ಯವಸ್ಥೆ ಮಾಡುವುದರಿಂದ, ರೋಗವನ್ನು ನಿಯಂತ್ರಿಸಬಹುದು. +ಪ್ರಯೋಗ ಶಾಲೆಯ ಪರೀಕ್ಷೆಗಳ ಮೂಲಕ ರೋಗದ ಖಚಿತತೆಯನ್ನು ತಿಳಿದುಕೊಳ್ಳಬಹುದು. +(2) ನೋಟಿಫಿಕೇಷನ್‌ (ವರದಿ ಮಾಡುವುದು) :ಒಮ್ಮೆ ಸೋಂಕು ರೋಗವೆಂದು ನಿರ್ಧರಿಸಿದ ನಂತರ, ಆ ಬಗ್ಗೆ ತಡಮಾಡದೆ, ಸ್ಥಳೀಯ ಆರೋಗ್ಯ ಪ್ರಾಧಿಕಾರಕ್ಕೆ ವರದಿ ಮಾಡುವುದು ಅತ್ಯಗತ್ಯ. +ವರದಿ ಸ್ವೀಕರಿಸಿದ ಆರೋಗ್ಯಾಧಿಕಾರಿಗಳು ಅಗತ್ಯವಾದ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳುವುದಲ್ಲದೆ ರೋಗಿಗೆ ಸೂಕ್ತ ವೈದ್ಯಕೀಯ ಆರೈಕೆಯನ್ನು ಮಾಡಬೇಕು. + ಆರೋಗ್ಯದ ಬಗ್ಗೆ ಕಾಳಜಿ ಇರುವವರು, ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳಿಗೆ, ರೋಗದ ಬಗ್ಗೆ ಸಕಾಲದಲ್ಲಿ ವರದಿಯನ್ನು ಮಾಡಬೇಕು. +(3) ರೋಗಿಯನ್ನು ಪ್ರತ್ಯೇಕವಾಗಿರಿಸುವುದು :ಸಾಮಾನ್ಯ ತತ್ವವೆಂದರೆ, ಸೋಂಕನ್ನು ಹೊಂದಿರುವ ರೋಗಿಯನ್ನುಮನೆಯಲ್ಲಿ ಪ್ರತ್ಯೇಕ 'ಕೊಠಡಿಯಲ್ಲಿರಿಸಬೇಕು. +ಅಥವಾ ಆಸ್ಪತ್ರೆಗೆ ಸೇರಿಸಬೇಕು . +ಪ್ರತ್ಯೇಕವಾಗಿರಿಸುವ ಉದ್ದೇಶ, ಸೋಂಕಿನ ಹರಡುವಿಕೆಯನ್ನು ಮಿತಗೊಳಿಸುವುದೇ ಆಗಿರುತ್ತದೆ. +ಇಂತಹ ರೋಗದವರನ್ನು ಪ್ರತ್ಯೇಕ ಕೊಠಡಿಯಲ್ಲಿರಿಸಬೇಕು. +ಅವುಗಳಂದರೆ, ಡಿಪ್ತೀರಿಯಾ (ಗಂಟಲು.ಡಿ ರೋಗ), ಕಾಲರಾ ಮತ್ತು ಸ್ವೆಪ್ಪೋಕಾಕಲ್‌- ಶ್ವಾ ಶ್ವಾಸಕೋಶದ ರೋಗಗಳು, ಸೋಲಕಿನ ಅವಧಿಯನ್ನು ಅವಲಂಬಿಸಿ, ರೋಗಿಯನ್ನು ಪ್ರತ್ಯೇಕವಾಗಿರಿಸಲಾಗುವುದು. +(4) ಚಿಕಿತ್ಸೆ :ಯಾವುದೇ ರೋಗವನ್ನು ನಿಯಂತ್ರಿಸಬೇಕಾದರೆ, ಸಮರ್ಪಕ ಚಿಕಿತ್ಸೆ ಅತ್ಯಗತ್ಯ. +ಚಿಕಿತ್ಸೆಯನ್ನು ಕೊಡಿಸುವುದರಿಂದ,ಸೋಂಕು ಹರಡುವುದು ಕಡಿಮೆಯಾಗುತ್ತದೆ. +(5) ಸರ್ವೆಲೆನ್ಸ್‌ (ನಿಗಾ ಇಡುವುದು):ಸೋಂಕು ಹರಡಿರುವುದರ ಬಗ್ಗೆ ನಿಗಾವಹಿಸಬೇಕು. +ಹೊಸ ಪ್ರಕರಣಗಳ ಬಗ್ಗೆ ಸಂಬಂಧಿಸಿದ ಆರೋಗ್ಯಾಧಿಕಾರಿಗಳಿಗೆ ವರದಿ ಮಾಡಬೇಕು.