ಅಖಿಲ ಭಾರತೀಯ ತಾಂತ್ರಿಕ ಶಿಕ್ಷಣ ಪರಿಷತ್ತು ( ಎಐಸಿಟಿಇ ) ( All India Council for Technical Education ( AICTE ) ) ಎಂಬುದು ಮಾನವ ಸಂಪನ್ಮೂಲ ಸಂಪನ್ಮೂಲ ಸಚಿವಾಲಯದ , ಉನ್ನತ ಶಿಕ್ಷಣ ಇಲಾಖೆಯ ಅಡಿಯಲ್ಲಿ ತಾಂತ್ರಿಕ ಶಿಕ್ಷಣಕ್ಕಾಗಿ ರಾಷ್ಟ್ರೀಯ ಮಟ್ಟದ ಸಂಸ್ಥೆಯಾಗಿದೆ. [ ೩ ನವೆಂಬರ್ 1945 ರಲ್ಲಿ ಸ್ಥಾಪನೆಯಾದ ಸಲಹಾ ಮಂಡಳಿ ಮತ್ತು ನಂತರ 1987 ರಲ್ಲಿ ಸಂಸತ್ತಿನ ಕಾಯಿದೆಯಡಿ ಶಾಸನಬದ್ಧ ಸ್ಥಾನಮಾನವನ್ನು ನೀಡಲ್ಪಟ್ಟಿತು , ಭಾರತದಲ್ಲಿ ತಾಂತ್ರಿಕ ಶಿಕ್ಷಣ ಮತ್ತು ನಿರ್ವಹಣಾ ಶಿಕ್ಷಣ ವ್ಯವಸ್ಥೆಯ ಸರಿಯಾದ ಯೋಜನೆ ಮತ್ತು ಸಂಘಟಿತ ಅಭಿವೃದ್ಧಿಗೆ ಅಖಿಲ ಭಾರತೀಯ ತಾಂತ್ರಿಕ ಶಿಕ್ಷಣ ಪರಿಷತ್ತು ( ಎಐಸಿಟಿಇ ) ಯು ಕಾರಣವಾಗಿದೆ .
ಎಐಸಿಟಿಇ ( AICTE ) ಯು ಭಾರತೀಯ ಸಂಸ್ಥೆಗಳ ನಿರ್ದಿಷ್ಟ ವಿಭಾಗಗಳ ಅಡಿಯಲ್ಲಿ ಸ್ನಾತಕೋತ್ತರ ಮತ್ತು ಪದವಿ ಕಾರ್ಯಕ್ರಮಗಳನ್ನು ಅದರ ಕಾಯ್ದೆಯ ಪ್ರಕಾರ ಮಾನ್ಯಮಾಡುತ್ತದೆ. [ ೪
ಇದು ಇಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಸ್ನಾತಕ ಆಧ್ಯಯನ , ಇಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಸ್ನಾತಕೋತ್ತರ ಮತ್ತು ಸಂಶೊಧನಾ ಆಧ್ಯಯನ .
ತಾಂತ್ರಿಕ ಶಿಕ್ಷಣ , ಔಷಧೀಯ ಶಿಕ್ಷಣ , ವಾಸ್ತುಶಿಲ್ಪ , ಹೋಟೆಲ್ ನಿರ್ವಹಣೆ ಮತ್ತು ಅಡುಗೆ ತಂತ್ರಜ್ಞಾನ , ಮಾಹಿತಿ ತಂತ್ರಜ್ಞಾನ , ಪಟ್ಟಣ ಮತ್ತು ದೇಶ ಯೋಜನೆ ಮುಂತಾದ ಹತ್ತು ಶಾಸನಬದ್ಧ ಆಧ್ಯಯನ ಮಂಡಳಿಗಳ ಸಹಾಯ ಪಡೆಯುತ್ತದೆ .
ಎಐಸಿಸಿಟಿ ತನ್ನ ನೂತನ ಪ್ರಧಾನ ಕಛೇರಿಯನ್ನು ನೆಲ್ಸನ್ ಮಂಡೇಲಾ ರಸ್ತೆ , ವಸಂತ್ ಕುಂಜ್ , ನವದೆಹಲಿ , 110 067 ಯಲ್ಲಿ ಹೊಂದಿದೆ .
ಇಲ್ಲಿ ಅಧ್ಯಕ್ಷರು , ಉಪಾಧ್ಯಕ್ಷರು ಮತ್ತು ಸದಸ್ಯ ಕಾರ್ಯದರ್ಶಿಗಳ ಕಚೇರಿಗಳು ಇವೆ , ಜೊತೆಗೆ ಇದು ಕಾನ್ಪುರ್ , ಚಂಡೀಗಢ , ಗುರಗಾಂವ್ , ಮುಂಬೈ , ಭೋಪಾಲ್ , ಬರೋಡಾ , ಕೊಲ್ಕತ್ತಾ , ಗುವಾಹಟಿ , ಬೆಂಗಳೂರು , ಹೈದರಾಬಾದ್ , ಚೆನ್ನೈ ಮತ್ತು ತಿರುವನಂತಪುರಂ ನಲ್ಲಿ ಪ್ರಾದೇಶಿಕ ಕಚೇರಿಗಳನ್ನು ಹೊಂದಿದೆ , [ ೫
ತಾಂತ್ರಿಕ ಶಿಕ್ಷಣದ ಗುಣಮಟ್ಟವನ್ನು ಉತ್ತೇಜಿಸುವುದು .
ತಾಂತ್ರಿಕ ಶಿಕ್ಷಣ ವ್ಯವಸ್ಥೆಯ ಯೋಜನೆ ಮತ್ತು ಸಂಯೋಜಿತ ಅಭಿವೃದ್ಧಿ .
ನಿಯಂತ್ರಣಗಳು ಮತ್ತು ನಿರ್ವಹಣೆ ನಿಯಮಗಳು ಮತ್ತು ಮಾನದಂಡಗಳು.ಇ - ಆಡಳಿತ ದಳ
ಅನುಮೋದನಾ ದಳ
ಯೊಜನಾ , ಸಹಕಾರ ಮತ್ತು ಶೈಕ್ಷಣಿಕ ದಳ
ವಿಶ್ವವಿದ್ಯಾಲಯ ದಳ
ಆಡಳಿತ ದಳ
ಹಣಕಾಸು ದಳ
ಸಂಶೋದನೆ , ಸಾಂಸ್ಥಿಕ ಮತ್ತು ಸಿಬ್ಬಂದಿ ಅಬಿವೃದ್ಧಿ ದಳಮೂರು ಪ್ರಮುಖ ಉಪಕ್ರಮಗಳನ್ನು ೨೦೧೬ ರಲ್ಲಿ , ಅಖಿಲ ಭಾರತೀಯ ತಾಂತ್ರಿಕ ಶಿಕ್ಷಣ ಪರಿಷತ್ ( AICTE ) ಕೈಗೆತ್ತಿಕೊಂಡಿತು .
ಅವುಗಳಲ್ಲಿ , ಮೊದಲನೆಯದು , ಮಾನವ ಸಂಪನ್ಮೂಲ ಮತ್ತು ಅಭಿವೃದ್ಧಿ ಮಂತ್ರಾಲಯ ( MHRD ) ನೀಡಿದ ಜವಾಬ್ದಾರಿಯಾದ ಸ್ವಯಂ ( SWAYAM ) [ ೭ ಎಂಬ ರಾಷ್ಟ್ರೀಯ ಬೃಹತ್ ಮುಕ್ತ ಅಂತರ್ಜಾಲ ಪಾಠ ಪ್ರವಚನಗಳ ಸರಣಿ ( Massive Open Online Courses ( MOOCs ) ) ವೇದಿಕೆಯನ್ನು ಸಿದ್ದಪಡಿಸುವುದು .
ಎರಡನೆಯದು , ತಾಂತ್ರಿಕ ಕಾಲೇಜುಗಳ ಯುವ ಜಾಣ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸವಾಲಾದ ೨೯ ವಿವಿಧ ಸರ್ಕಾರಿ ಇಲಾಖೆಗಳ ೫೯೮ ಸಮಸ್ಯೆಗಳನ್ನು ಬಗೆಹರಿಸಲು ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್ - ೨೦೧೭ ( Smart India Hackathon - 2017 ) ನ್ನು ಪ್ರಾರಂಭಿಸುವುದಕ್ಕೆ ಸಂಬಂಧಿಸಿದ್ದು. [ ೮ಮೂರನೆಯದು , ನವೆಂಬರ್ ೧೬ ರಂದು ಸನ್ಮಾನ್ಯ ರಾಷ್ಟ್ರಪತಿಗಳು ರಾಷ್ಟ್ರಪತಿ ಭವನದ ಸಂದರ್ಶಕರ ಸಮಾವೇಶದಲ್ಲಿ ಎ.ಐ.ಸಿ.ಟಿ.ಟಿ.ಯ ವಿದ್ಯಾರ್ಥಿಗಳ ಪ್ರಾರಂಭಿಕೆ ( Start up ) ನೀತಿಯನ್ನು ಕಾರ್ಯಾರಂಭಿಸುವುದು .
2009 ರಲ್ಲಿ , ಕೇಂದ್ರ ಶಿಕ್ಷಣ ಸಚಿವ ಔಪಚಾರಿಕವಾಗಿ ಅಖಿಲ ಭಾರತೀಯ ತಾಂತ್ರಿಕ ಶಿಕ್ಷಣ ಪರಿಷತ್ ( AICTE ) ಮತ್ತು ಸಂಬಂಧಿತ ಸಂಸ್ಥೆಯಾದ , ವಿಶ್ವವಿದ್ಯಾನಿಲಯ ಧನಸಹಾಯ ಆಯೋಗ ( ಯುನಿವರ್ಸಿಟಿ ಗ್ರಾಂಟ್ಸ್ ಕಮೀಷನ್ ) ( UGC ) ) ವನ್ನು ಮುಚ್ಚುವ ತನ್ನ ಉದ್ದೇಶಗಳನ್ನು ತಿಳಿಸಿದರು. [ ೯ ಇದು ನಂತರ , ಅಖಿಲ ಭಾರತೀಯ ತಾಂತ್ರಿಕ ಶಿಕ್ಷಣ ಪರಿಷತ್ ( AICTE ) ಸಂಸ್ಥೆಗಳಿಗೆ ಅನುಮೋದನೆ ನೀಡುವ ರೀತಿಯಲ್ಲಿ ಸುಧಾರಣೆಗೆ ಮತ್ತು ರಾಷ್ಟ್ರೀಯ ಮಾನ್ಯತಾ ಮಂಡಳಿ ( ನ್ಯಾಷನಲ್ ಬೋರ್ಡ್ ಆಫ್ ಅಕ್ರೆಡಿಟೇಶನ್ ( NBA ) ) ಯನ್ನು ಸ್ವತಂತ್ರ ಸಂಸ್ಥೆಯಾಗಿ ಸ್ಥಾಪಿಸಲು ಕಾರಣವಾಯಿತು , [ ೧೦ 2013 ರ ಹೊತ್ತಿಗೆ ಅಖಿಲ ಭಾರತೀಯ ತಾಂತ್ರಿಕ ಶಿಕ್ಷಣ ಪರಿಷತ್ತು ( AICTE ) ಇನ್ನೂ ಕಾರ್ಯನಿರ್ವಹಿಸುತ್ತಿದೆ .
2017 ರ ಜೂನ್ 6 ರಂದು ಪ್ರಧಾನಿ ನರೇಂದ್ರ ಮೋದಿಯವರು ಅಖಿಲ ಭಾರತೀಯ ತಾಂತ್ರಿಕ ಶಿಕ್ಷಣ ಪರಿಷತ್ತು ಮತ್ತು ವಿಶ್ವವಿದ್ಯಾನಿಲಯ ಧನಸಹಾಯ ಆಯೋಗ ( ಯುನಿವರ್ಸಿಟಿ ಗ್ರಾಂಟ್ಸ್ ಕಮೀಷನ್ ) ( UGC ) ) ರದ್ದಾಗುವುದಲ್ಲದೇ , ಹೈಯರ್ ಎಜುಕೇಶನ್ ಎಂಪವರ್ಮೆಂಟ್ ಎಜೆನ್ಸಿ ( Higher Education Empowerment Regulation Agency ( HEERA ) ) ಎಂಬ ಹೊಸ ಸಂಸ್ಥೆಯಾಗಿ ಬದಲಾಯಿಸಲ್ಪಡುವುದಾಗಿ ತಿಳಿಸಿದರು .
ಇದು ಇವೆರಡು ಸಂಸ್ಥೆಗಳಿಂದ ಉಂಟಾಗುವ ವಿಪರೀತ ನಿಯಮಾವಳಿಗಳನ್ನು ಸರಳಗೊಳಿಸುವ ಒಂದು ಪ್ರಯತ್ನವಾಗಿದೆ .
Regional accreditation
Education in India
DOEACC
Science and technology in India
Indian Institute of Technologyhttps : / / www.aicte - india.org /
↑ Regional Offices Archived 19 January 2010 at the Wayback Machine .
AICTE website .
↑ ೨.೦ ೨.೧ ೨.೨ " Leadership Team " .
www.aicte - india.org .
Retrieved 9 April 2018 .
↑ Technical Education Overview Archived 5 October 2011 at the Wayback Machine .
Department of Higher Education
↑ AICTE Act |
bot = medic } }
↑ National Level Councils Archived 1 February 2010 at the Wayback Machine .
Tech Ed. , Department of Higher Education .
↑ ೬.೦ ೬.೧ [ ೧
↑ https : / / swayam.gov.in /
↑ https : / / sih.gov.in /
↑ " UGC , AICTE to be scrapped : Sibal " .
iGovernment.in .
Archived from the original on 9 October 2011 .
Retrieved 29 November 2011 .
Unknown parameter |
deadurl = ignored ( help )
↑ " AICTE to revamp its approval system next week " .
output_folder: Just give a name (no need to create a folder), an output_folder will be created where the tokenized outputs will be saved file wise in SSF format
language: language codes, please see the list of codes for different languages