1969 ರಲ್ಲಿ ರಾಮನವಮಿಯ ದಿನದಂದು ಭಾರತೀಯ ಶಿಕ್ಷಣ ಮಂಡಲವನ್ನು ಸ್ಥಾಪಿಸಲಾಯಿತು .
ಶಿಕ್ಷಣ ಕ್ಷೇತ್ರದಲ್ಲಿ ರಾಷ್ಟ್ರೀಯ ಪುನರುತ್ಥಾನದ ಉದ್ದೇಶದಿಂದ ಈ ಸಂಸ್ಥೆ ಕಾರ್ಯನಿರ್ವಹಿಸುತ್ತಿದೆ .
ಇದು ಸಮಗ್ರ ಭಾರತೀಯ ದೃಷ್ಟಿಕೋನದ ಆಧಾರದ ಮೇಲೆ ರಾಷ್ಟ್ರೀಯ ಶಿಕ್ಷಣ ನೀತಿ , ಪಠ್ಯಕ್ರಮ , ವ್ಯವಸ್ಥೆ ಮತ್ತು ವಿಧಾನಗಳನ್ನು ವಿಕಸಿಸುವ ಗುರಿಯನ್ನು ಹೊಂದಿದೆ .
ದೇಶದ ಎಲ್ಲಾ ಭಾಗಗಳಲ್ಲಿ ಹಲವಾರು ಶೈಕ್ಷಣಿಕ , ಬೌದ್ಧಿಕ ಮತ್ತು ಪ್ರಾಯೋಗಿಕ ಚಟುವಟಿಕೆಗಳನ್ನು ನಡೆಸಲಾಗುತ್ತಿದೆ ಈ ಮೂಲಕ ರಾಷ್ಟ್ರದ ಒಟ್ಟಾರೆ ಅಭಿವೃದ್ಧಿಯತ್ತ ಗಮನವನ್ನು ಕೇಂದ್ರೀಕರಿಸಿದೆ .
ಇದರ ಕೇಂದ್ರ ಕಚೇರಿ ನಾಗಪುರದಲ್ಲಿದೆ .
ಶಿಕ್ಷಣದ ಗುರಿ - ' ರಾಷ್ಟ್ರೀಯ ಪುನರುತ್ಥಾನದ ಸಂದರ್ಭದಲ್ಲಿ ವಿದ್ಯಾರ್ಥಿಗಳ ಸಮಗ್ರ ವ್ಯಕ್ತಿತ್ವದ ಬೆಳವಣಿಗೆಯಾಗಿರಬೇಕು .
ಭಾರತೀಯ ಸಂಸ್ಕೃತಿಯು ವಿದ್ಯಾರ್ಥಿಗಳ ವ್ಯಕ್ತಿತ್ವದಲ್ಲಿ ಪ್ರತಿಬಿಂಬಿತವಾಗಬೇಕು .
ಶಿಕ್ಷಣ ಕ್ಷೇತ್ರದ ಪಾಲುದಾರರಾದ ಶಿಕ್ಷಕರು , ಶಿಕ್ಷಣ ಸಂಸ್ಥೆಗಳು ಮತ್ತು ಪೋಷಕರು ಈ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಬೇಕು .
ಭಾರತೀಯ ಶಿಕ್ಷಣ ಮಂಡಲವು ಆಗಸ್ಟ 27 , 1969 ರಂದು ರಾಮನವಮಿಯ ದಿನ ಮುಂಬೈನ ಶ್ರೀ ಶ್ರೀರಾಮ್ ಮಂತ್ರಿಯವರ ಮನೆಯಲ್ಲಿ ನಡೆದ ಮೊದಲ ಸಭೆಯಲ್ಲಿ ಸ್ಥಾಪಿತವಾಯಿತು.
ರಾಷ್ಟ್ರೀಯ ಸ್ವಯಂಸೇವಕ ಸಂಘದ ಮೂರನೆಯ ಸರಸಂಘಚಾಲಕರಾಗಿದ್ದ ಬಾಳಾಸಾಹೇಬ್ ದೇವರಸ್ ಮತ್ತು 25 ಶಿಕ್ಷಣ ತಜ್ಞರು ಈ ಸಭೆಯಲ್ಲಿ ಉಪಸ್ಥಿತರಿದ್ದರು .
ನೈತಿಕ ಶಿಕ್ಷಣದ ವಿಷಯದ ಬಗ್ಗೆ ರಾಷ್ಟ್ರೀಯ ವಿಚಾರ ಸಂಕಿರಣವನ್ನು 1974 ರಲ್ಲಿ ಪುಣೆಯಲ್ಲಿ ಆಯೋಜಿಸಲಾಗಿತ್ತು .
ಆ ಸೆಮಿನಾರ್‌ನ ಪರಿಣಾಮವಾಗಿ ನೈತಿಕ ಶಿಕ್ಷಣಕ್ಕೆ ಸಂಬಂಧಿಸಿದ ಸಾರ್ವತ್ರಿಕವಾಗಿ ಅನ್ವಯವಾಗುವ ಯೋಜನೆಯನ್ನು ರೂಪಿಸಲಾಯಿತು ಮತ್ತು ಅದರ ಪ್ರತಿಗಳನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ರವಾನಿಸಲಾಯಿತು .
ಈ ಪಠ್ಯಕ್ರಮವನ್ನು ಕೆಲವು ರಾಜ್ಯಗಳ ಶಾಲೆಗಳಲ್ಲಿ ಜಾರಿಗೆ ತರಲಾಯಿತು .
ಎನ್‌ಸಿಇಆರ್‌ಟಿಯಿಂದ 10 + 2 + 3 ಮಾದರಿಯಲ್ಲಿ ರಾಷ್ಟ್ರೀಯ ಸೆಮಿನಾರ್‌ನ್ನು 1977 ರಲ್ಲಿ ದೆಹಲಿಯಲ್ಲಿ ಕರೆಯಲಾಯಿತು .
ಭಾರತೀಯ ಶಿಕ್ಷಣ ಮಂಡಲದ 10 ರಾಜ್ಯ ಘಟಕಗಳ ಪ್ರತಿನಿಧಿಗಳು ಇದರಲ್ಲಿ ತಮ್ಮ ವಿಚಾರಗಳನ್ನು ಮಂಡಿಸಿದರು .
ಮಂಡಲದ ಹಲವಾರು ಅಮೂಲ್ಯ ಸಲಹೆಗಳನ್ನು ಅಂಗೀಕರಿಸಲಾಯಿತು .
ನಮ್ಮ ಶಿಕ್ಷಣ ಮಾದರಿಯಲ್ಲಿ ಅಗತ್ಯವಾದ ಬದಲಾವಣೆಗಳನ್ನು ತರುವ ನಿಟ್ಟಿನಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ರೂಪಿಸುವ ಬೃಹತ್ ಯೋಜನೆಯನ್ನು ಭಾರತೀಯ ಶಿಕ್ಷಣ ಮಂಡಲ ಕೈಗೆತ್ತಿಕೊಂಡಿದೆ .
1977 ರಲ್ಲಿ ನಾಗ್ಪುರದಲ್ಲಿ ನಡೆದ ಕಾರ್ಯಕರ್ತರ 3 ದಿನಗಳ ಅಖಿಲ ಭಾರತ ಸಭೆಯಲ್ಲಿ ಈ ಯೋಜನೆಯನ್ನು ಮೊದಲು ಪ್ರಾರಂಭಿಸಲಾಯಿತು .
ಈ ಸಭೆಯಲ್ಲಿ ಬಾಳಾಸಾಹೇಬ್ ದೇವರಸ್ ಮತ್ತು ರಜ್ಜು ಭೈಯ್ಯಾ ಅವರು ಹಾಜರಿದ್ದರು .
ಈ ಸಭೆಯಲ್ಲಿ ನೀಲನಕ್ಷೆಯನ್ನು ರೂಪಿಸಲಾಯಿತು ಮತ್ತು ಅದರ ಆಧಾರದ ಮೇಲೆ ಪ್ರಶ್ನಾವಳಿಯನ್ನು ತಯಾರಿಸಲಾಯಿತು .
ರಾಜ್ಯದ ವಿವಿಧ ಭಾಷೆಗಳಿಗೆ ಅನುವಾದಿಸಿದ ನಂತರ ಅದನ್ನು ಶಿಕ್ಷಣ ತಜ್ಞರು ಮತ್ತು ಶಿಕ್ಷಕರಿಗೆ ಕಳುಹಿಸಲಾಯಿತು .
ಪ್ರಶ್ನಾವಳಿ ಸುಮಾರು 3000 ಜನರನ್ನು ತಲುಪಿತು .
ಈ ವಿಷಯದ ಬಗ್ಗೆ ರಾಷ್ಟ್ರೀಯ ವಿಚಾರ ಸಂಕಿರಣವನ್ನು 1971 ರಲ್ಲಿ ದೆಹಲಿಯಲ್ಲಿ ಕರೆಯಲಾಯಿತು ಮತ್ತು ಇದಕ್ಕೆ ಆಗಿನ ಉಪರಾಷ್ಟ್ರಪತಿಗಳಾಗಿದ್ದ ಶ್ರೀ ಬಿ.ಡಿ .ಜತ್ತಿ , ಕೇಂದ್ರ ಶಿಕ್ಷಣ ಸಚಿವರಾಗಿದ್ದ ಪಿ.ಸಿ.ಸುಂದರ್ , ಬಾಪುರಾವಜೀ ಮೊಘೆ , ಕೇದಾರನಾಥ ಸಹಾನಿ ಮತ್ತು ಇತರ ಹಲವಾರು ಪ್ರಖ್ಯಾತ ವ್ಯಕ್ತಿಗಳಿಂದ ಮಾರ್ಗದರ್ಶನ ದೊರಕಿತು .
ಪ್ರಾಥಮಿಕ ಯೋಜನೆ ಮತ್ತು ಸಿದ್ಧಪಡಿಸಿದ ಪ್ರಶ್ನಾವಳಿಯ ಪ್ರತಿಕ್ರಿಯೆಯ ಆಧಾರದ ಮೇಲೆ ರಚಿತವಾದ ಕಿರುಪುಸ್ತಕದ ಬಗ್ಗೆ ವಿವರವಾದ ಚರ್ಚೆಯನ್ನು ನಡೆಸಲಾಯಿತು ಮತ್ತು ರಾಷ್ಟ್ರೀಯ ಶಿಕ್ಷಣ ನೀತಿಯು ಅದರ ಅಂತಿಮ ಸ್ವರೂಪವನ್ನು ಪಡೆದುಕೊಂಡಿತು .
1980 ರಲ್ಲಿ ಪುಣೆಯ ಅಭ್ಯಾಸ ವರ್ಗದಲ್ಲಿ ' ಶಿಕ್ಷಣದಲ್ಲಿ ಭಾರತೀಯತೆ ' ಎಂಬ ಯೋಜನೆಯನ್ನು ಪ್ರಾರಂಭಿಸಲಾಯಿತು .
ಭಾರತದ ಎಲ್ಲಾ ರಾಜ್ಯಗಳ ಶಿಕ್ಷಣ ತಜ್ಞರು ಮತ್ತು ಶಿಕ್ಷಕರಿಗಾಗಿ ಪ್ರಶ್ನಾವಳಿಯನ್ನು ತಯಾರಿಸಿ ವಿತರಿಸಲಾಯಿತು .
ಇದರೊಂದಿಗೆ ಸುಮಾರು 100 ಜಿಲ್ಲೆಗಳಲ್ಲಿ ಸುಮಾರು 200 ಸೆಮಿನಾರ್‌ಗಳು ಮತ್ತು ವಿಚಾರ ಸಂಕಿರಣಗಳು ನಡೆದವು .
ಈ ವಿಷಯದ ಬಗ್ಗೆ ಸೆಮಿನಾರ್‌ಗಳು 1983 ರಲ್ಲಿ ಉತ್ತರದ ರಾಜ್ಯಗಳಿಗೆ ಗ್ವಾಲಿಯರ್‌ನಲ್ಲಿ ಮತ್ತು ದಕ್ಷಿಣ ರಾಜ್ಯಗಳಿಗೆ ಹೈದರಾಬಾದ್‌ನಲ್ಲಿ ನಡೆದವು .
ಪದ್ಮಶ್ರೀ ಡಾ.ವಕಂಕರ್ , ಕೇಂದ್ರ ಸಚಿವ ಶ್ರೀ ಪಿ.ಶಿವಶಂಕರ್ , ಸ್ವಾಮಿ ರಂಗನಾಥಾನಂದ , ರಜ್ಜು ಭೈಯ್ಯಾ , ದತ್ತೋಪಂತ್ ಠೇಂಗಡಿಯವರು ಸಭೆಯಲ್ಲಿದ್ದರು .
ಮೊದಲ ಅಖಿಲ ಭಾರತೀಯ ಅಭ್ಯಾಸ ವರ್ಗವನ್ನು 1980 ರಲ್ಲಿ ಪುಣೆಯಲ್ಲಿ ನಡೆಸಲಾಯಿತು .
12 ರಾಜ್ಯಗಳ 150 ಕಾರ್ಯಕರ್ತರು ಈ 5 ದಿನಗಳ ಅಭ್ಯಾಸ ವರ್ಗದಲ್ಲಿ ಚರ್ಚಿಸಿದರು .
ವಿಧಾನ ಪರಿಷತ್ ಸದಸ್ಯ ಶ್ರೀ ವಿ.ಎಸ್ .ಪೇಜ್ , ಶಿಕ್ಷಣ ನಿಯಂತ್ರಕ ಶ್ರೀ ವಿ.ವಿ.ಚಿಪ್ಲುಂಕರ್ ಮತ್ತು ಪ್ರಖ್ಯಾತ ಶಿಕ್ಷಣ ತಜ್ಞರಾದ ಶ್ರೀಮತಿ ಚಿತ್ರ ನಾಯಕ್ ಅವರು ವರ್ಗದಲ್ಲಿ ಮಾರ್ಗದರ್ಶನ ನೀಡಿದರು .
ಹೊಸ ಶಿಕ್ಷಣ ನೀತಿ 1986 : ಭಾರತೀಯ ಶಿಕ್ಷಣ ಮಂಡಲವು ಹೊಸ ಶಿಕ್ಷಣ ನೀತಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದೊಂದಿಗೆ ವಿವಿಧ ಹಂತಗಳಲ್ಲಿ ಸಕ್ರಿಯವಾಗಿ ಚರ್ಚೆಗೆ ಇಳಿಯಿತು .
ಕೇಂದ್ರ ಸರ್ಕಾರಕ್ಕೆ ದೊರೆತ 12000 ಸಲಹೆಗಳಲ್ಲಿ 3000 ಭಾರತೀಯ ಶಿಕ್ಷಣ ಮಂಡಲದ ಸಲಹೆಗಳಾಗಿದ್ದು , ಚರ್ಚೆಗಳು , ವಿಚಾರ ಸಂಕಿರಣಗಳು ಮತ್ತು ಭಾಷಣಗಳ ಮೂಲಕ ದೇಶಾದ್ಯಂತ ವಿವಿಧ ಹಂತಗಳಲ್ಲಿ ಸಿದ್ಧಪಡಿಸಲಾಗಿದೆ .
ದೆಹಲಿಯಲ್ಲಿ ಅದರ ವಿಧಾನದ ಬಗ್ಗೆ ಒಂದು ವಿಚಾರ ಸಂಕಿರಣ ನಡೆಯಿತು ಇದರಲ್ಲಿ ಡಾ.ಮುರಳಿ ಮನೋಹರ್ ಜೋಶಿ , ಪ್ರೊ .ಜೆ.ವಿ.ರಾಘವನ್ , ಡಾ.ಎಸ್.ಕೆ.ಮಿತ್ರಾ , ಡಾ.ಪ್ರೇಮ್‌ಕ್ರಿಪಾಲ್ಜಿ , ಶ್ರೀ ಕಿಶೋರಿಲಾಲ್ ದಂಡಾನಿಯಾ , ರಜ್ಜು ಭೈಯ್ಯಾ ಪಾಲ್ಗೊಂಡಿದ್ದರು .
ಭಾರತೀಯ ಶಿಕ್ಷಣ ಮಂಡಲದ ಪೋಷಕರ ಸಮಿತಿಯನ್ನು ರಚಿಸಲಾಯಿತು .
ಸ್ವಾಮಿ ಚಿನ್ಮಯಾನಂದ ಮುಂಬೈ , ಸ್ವಾಮಿ ರಂಗನಾಥಾನಂದ , ಡಾ.ಕೆ.ಯ್ಯಂಗಾರ್ ಮದ್ರಾಸ್ , ಮನನೇಯ ಶ್ರೀ ಎಂ.ಪಿ.ಪಂಡಿತ್ ಪಾಂಡಿಚೆರಿ ಆರಂಭದಲ್ಲಿ ಅದರ ಸದಸ್ಯರಾಗಿದ್ದರು .
ನಂತರ ಶ್ರೀ ಟಿ.ಎನ್.ಶೇಷನ್ , ಪ್ರೊ .ಕಿರೀಟ್ ಜೋಶಿ , ಪ್ರೊ.ವಿ.ಕೆ.ಆರ್.ರಾವ್ ಶಿಕ್ಷಾ ಮಂತ್ರಿ ಅವರು ಭಾರತೀಯ ಶಿಕ್ಷಣ ಮಂಡಲಕ್ಕೆ ತಮ್ಮ ಅಮೂಲ್ಯ ಮಾರ್ಗದರ್ಶನವನ್ನು ನೀಡಿದರು .
ಎರಡನೇ ಅಖಿಲ ಭಾರತೀಯ ಅಭ್ಯಾಸ ವರ್ಗವನ್ನು 1985 ರಲ್ಲಿ ಬೆಂಗಳೂರಿನಲ್ಲಿ ನಡೆಸಲಾಯಿತು .
ಭಾರತದ 15 ರಾಜ್ಯಗಳಿಂದ ಸುಮಾರು 200 ಕಾರ್ಯಕರ್ತರು ಅದರಲ್ಲಿ ಭಾಗವಹಿಸಿದ್ದರು .
ಶಿಕ್ಷಣದ ರಾಷ್ಟ್ರೀಯ ರೂಪರೇಖೆ , ವೇದಗಳು ಮತ್ತು ಉಪನಿಷತ್ತುಗಳ ಜ್ಞಾನದ ನಿಧಿ , ಅಲ್ಪಸಂಖ್ಯಾತ ಸಂಸ್ಥೆಗಳಿಗೆ ಒದಗಿಸಲಾದ ಆರಕ್ಷಣೆಯ ದುಷ್ಪರಿಣಾಮಗಳು ಮತ್ತು ಇತರ ಹಲವಾರು ವಿಷಯಗಳ ಕುರಿತು ಚರ್ಚೆಗಳೊಂದಿಗೆ ಕಾರ್ಯಕರ್ತರಿಗೆ ತರಬೇತಿ ನೀಡಲಾಯಿತು .
ಸ್ವಾಮಿ ಚಿದಾನಂದ , ಡಾ.ವಿ.ಕೆ.ಆರ್.ವಿ.ರಾವ್ , ದತ್ತೋಪಂತ್ ಠೇಂಗಡಿ , ಜಾರ್ಜ್ ಮೆನ್ಜೆಸ್ , ಡಾ.ನಾಗೇಂದ್ರ ಮತ್ತು ಇತರರು ಮಾರ್ಗದರ್ಶನ ನೀಡಿದರು .
1987 ರಲ್ಲಿ ಸಾರ್ವಜನಿಕರಿಗೆ ಸ್ಫೂರ್ತಿ ನೀಡುವ ಉದ್ದೇಶದಿಂದ 6 ಅಂಶಗಳ ಕಾರ್ಯಕ್ರಮವನ್ನು ನಡೆಸಲು ಭಾರತೀಯ ಶಿಕ್ಷಣ ಮಂಡಲ ನಿರ್ಧರಿಸಿತು .
ಮಾರ್ಚ್ 28 , 1989 ರಂದು 2000 ಸ್ಥಳಗಳಲ್ಲಿ ಸಭೆಗಳನ್ನು ಆಯೋಜಿಸಲಾಯಿತು .
ಆ 6 ಅಂಶಗಳಿಗೆ ಸಂಬಂಧಿಸಿದ ನಿರ್ಣಯವನ್ನು ಅಂಗೀಕರಿಸಲಾಯಿತು ಮತ್ತು ಅದರ ಪ್ರತಿಗಳನ್ನು ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು , ಶಿಕ್ಷಣ ಸಚಿವರು ಮತ್ತು ಪ್ರಧಾನ ಮಂತ್ರಿಗೆ ಕಳುಹಿಸಲಾಗಿದೆ .
ರಾಜಸ್ಥಾನ ಮತ್ತು ಮಹಾರಾಷ್ಟ್ರದ ಶಿಕ್ಷಣ ಮಂತ್ರಿಗಳು ಇದಕ್ಕೆ ಲಿಖಿತ ಅನುಮೋದನೆ ನೀಡಿದರು .
' ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆ ಮತ್ತು ರಾಷ್ಟ್ರೀಯ ಏಕತೆ ' ಎಂಬ ವಿಷಯದ ಕುರಿತು ಭಾರತೀಯ ಶಿಕ್ಷಣ ಮಂಡಲವು ದತ್ತೋಪಂತ್ ಠೇಂಗಡಿಯವರ ಭಾಷಣವನ್ನು ಆಯೋಜಿಸಿತು .
ಅದರ ಕೆಲವು ಭಾಗಗಳನ್ನು ದೂರದರ್ಶನದಲ್ಲಿ ಪ್ರಸಾರ ಮಾಡಲಾಯಿತು .
ಈ ಭಾಷಣವನ್ನು ಆಧರಿಸಿದ ಕಿರುಪುಸ್ತಕವನ್ನು ಪೂರ್ವ ಉತ್ತರ ಪ್ರದೇಶದ ಲಕ್ನೋದಲ್ಲಿ ಪ್ರಕಟಿಸಲಾಗಿದೆ .
ರಾಮ್ ಮೂರ್ತಿ ಆಯೋಗವು ಭಾರತೀಯ ಶಿಕ್ಷಣ ನೀತಿಯ ನೀಲನಕ್ಷೆ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಮಂಡಿಸಲು ಭಾರತೀಯ ಶಿಕ್ಷಣ ಮಂಡಲವನ್ನು ಆಹ್ವಾನಿಸಿತ್ತು .
ಅದಕ್ಕೆ ಭಾರತೀಯ ಶಿಕ್ಷಣ ಮಂಡಲವು ತನ್ನ ಸಂಪೂರ್ಣ ನೆರವು ನೀಡಿತು .
ಮಹಿಳೆಯರ ವೇದಿಕೆ 1993 ರಲ್ಲಿ ಸ್ವತಂತ್ರವಾಗಿ ಕೆಲಸ ಮಾಡಲು ಪ್ರಾರಂಭಿಸಿತು .
ಮೊದಲ ರಾಷ್ಟ್ರೀಯ ಅಧಿವೇಶನ 2000 ರಲ್ಲಿ ಕಾನ್ಪುರದಲ್ಲಿ ನಡೆಯಿತು .
20 ರಾಜ್ಯಗಳಿಂದ ಒಟ್ಟು ಹಾಜರಾತಿ 500 ರಷ್ಟಿತ್ತು .
ಅವರಲ್ಲಿ ಸುಮಾರು 125 ಮಹಿಳೆಯರು ಇದ್ದರು .
ಭಾರತೀಯ ಶಿಕ್ಷಣ ಮಂಡಲದ ಮಹಾರಾಷ್ಟ್ರ ಘಟಕವು ' ವಿಜ್ಞಾನಕ್ಕೆ ಭಾರತದ ಕೊಡುಗೆ ' ಪ್ರಾಚೀನ ಮತ್ತು ಆಧುನಿಕ ಎಂಬ ವಿಷಯದ ಕುರಿತು ಪ್ರದರ್ಶನವನ್ನು ಆಯೋಜಿಸಿ ಅದರ ಆಧಾರದ ಮೇಲೆ ಪುಸ್ತಕವನ್ನು ಪ್ರಕಟಿಸಿತು .
ಭಾರತೀಯ ಶಿಕ್ಷಣ ಮಂಡಲದ ಎರಡನೇ ರಾಷ್ಟ್ರೀಯ ಅಧಿವೇಶನವನ್ನು 2007 ರ ಜನವರಿಯಲ್ಲಿ ವಿಶಾಖಪಟ್ಟಣಂನಲ್ಲಿ ಆಯೋಜಿಸಲಾಗಿತ್ತು .
ಅಧಿವೇಶನ ಮುಖ್ಯ ವಿಷಯವೆಂದರೆ ' ಶಿಕ್ಷಣದ ಭಾರತೀಯೀಕರಣ ' .
ರಾಷ್ಟ್ರದಾದ್ಯಂತ 22 ರಾಜ್ಯಗಳ 700 ಪ್ರತಿನಿಧಿಗಳು ಭಾಗವಹಿಸಿದ್ದರು .
ಶ್ರೀ ಸುದರ್ಶನಜಿ , ಶ್ರೀ ಸುರೇಶ ಸೋನಿ , ಶ್ರೀ ಗುರುಮೂರ್ತಿ , ಶ್ರೀ ವೆಂಕಟೇಶ್ವರಂ , ಡಾ.ಮೋಹನ್ ಲಾಲ್ ಚೀಪ ಇದರ ಕಾರ್ಯಚಟುವಟಿಕೆಗೆ ಮಾರ್ಗದರ್ಶನ ನೀಡಿದರು .
ಕಳೆದ 6 ರಿಂದ 7 ವರ್ಷಗಳಲ್ಲಿ ಸುಮಾರು 40 ವಿಷಯಗಳ ಕುರಿತು ಸೆಮಿನಾರ್‌ಗಳನ್ನು ಆಯೋಜಿಸಲಾಗಿದೆ .
ಮಹಾರಾಷ್ಟ್ರದ ವಿವಿಧ ವಿಶ್ವವಿದ್ಯಾಲಯಗಳ ಉಪಕುಲಪತಿಗಳನ್ನು ಸನ್ಮಾನಿಸುವ ವಿಶೇಷ ಕಾರ್ಯಕ್ರಮವನ್ನು ಸೆಪ್ಟೆಂಬರ್ 2012 ರಲ್ಲಿ ನಾಗ್ಪುರದಲ್ಲಿ ಆಯೋಜಿಸಲಾಗಿತ್ತು .
ಮೂರನೆಯ ರಾಷ್ಟ್ರೀಯ ಅಧಿವೇಶನವನ್ನು ನವೆಂಬರ್ - ಡಿಸೆಂಬರ್ 2012 ರಲ್ಲಿ ನಾಗಪುರದಲ್ಲಿ ಆಯೋಜಿಸಲಾಗಿತ್ತು .
ಇದರಲ್ಲಿ 20 ರಾಜ್ಯಗಳ 168 ಜಿಲ್ಲೆಗಳ 1124 ಪ್ರತಿನಿಧಿಗಳು ಭಾಗವಹಿಸಿದ್ದರು .
ಮುಖ್ಯ ವಿಷಯವೆಂದರೆ ' ಸುಸ್ಥಿರ ಅಭಿವೃದ್ಧಿಗೆ ಶಿಕ್ಷಣ ' .
ಶ್ರೀ ಸುರೇಶ್ ಸೋನಿ , ಡಾ.ಜೆ.ಎಸ್.ರಾಜಪೂತ್ , ಶ್ರೀ ಮೋಹನ್ ಭಾಗವತ್ , ಶ್ರೀಮತಿ ಅರ್ಚನಾ ಚಿಟ್ನಿಸ್ , ಮತ್ತು ಶ್ರೀ ಇಟ್ಮುದ್ದೀನ್ ಕಾಟಧರೆ ಮಾರ್ಗದರ್ಶನ ನೀಡಿದರು .
ಸ್ವಾಮಿ ವಿವೇಕಾನಂದರ 150 ನೇ ಜನ್ಮ ದಿನಾಚರಣೆಯ ನೆನಪಿಗಾಗಿ ರಾಷ್ಟ್ರದಾದ್ಯಂತ ಸೆಮಿನಾರ್‌ಗಳು , ಭಾಷಣಗಳು , ಕಾರ್ಯಾಗಾರಗಳು ಮತ್ತು ಸ್ಪರ್ಧೆಗಳಂತಹ ವಿವಿಧ ಕಾರ್ಯಕ್ರಮಗಳು ನಡೆದವು .
16-17 ನವೆಂಬರ್ 2013 ರಂದು ದೆಹಲಿಯಲ್ಲಿ ವಿವಿಧ ವಿಶ್ವವಿದ್ಯಾಲಯಗಳ ಉಪಕುಲಪತಿಗಳ ರಾಷ್ಟ್ರೀಯ ಸಮ್ಮೇಳನ ನಡೆಯಿತು .
ಇದರಲ್ಲಿ 89 ವಿಶ್ವವಿದ್ಯಾಲಯಗಳ ಉಪಕುಲಪತಿಗಳು ಮತ್ತು ಡೀನ್‌ಗಳು ಸೇರಿದಂತೆ 247 ಪ್ರತಿನಿಧಿಗಳು ಭಾಗವಹಿಸಿದ್ದರು.
ಇದು ಐದು ಹಂತಗಳನ್ನು ಹೊಂದಿದೆ - ಸಂಶೋಧನೆ , ತರಬೇತಿ , ಮೇಲ್ವಿಚಾರಣೆ , ಪ್ರಕಟಣೆ , ಸಂಘಟನೆ .