Commit 50282826 authored by Narendra VG's avatar Narendra VG

Upload New File

parent 6afa4d06
ಫಲಿತಾಂಶದ ಆಧಾರಿತ ಶಿಕ್ಷಣ ( Outcome - based education ) ವು ಒಂದು ಶೈಕ್ಷಣಿಕ ಸಿದ್ಧಾಂತವಾಗಿದ್ದು ಶಿಕ್ಷಣ ವ್ಯವಸ್ಥೆಯ ಪ್ರತಿಯೊಂದೂ ಭಾಗವು ಕೆಲವು ಗುರಿಗಳನ್ನು ಹೊಂದಿದೆ .
ಶಿಕ್ಷಣದ ಅನುಭವದ ಕೊನೆಯಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಯು ಈ ಗುರಿಯನ್ನು ಸಾಧಿಸುತ್ತಾನೆ .
ಫಲಿತಾಂಶದ ಆಧಾರಿತ ಶಿಕ್ಷಣದಲ್ಲಿ ಯಾವುದೇ ವಿಶೇಷ ರೀತಿಯ ಬೋಧನೆ ಅಥವಾ ಮೌಲ್ಯಮಾಪನ ಇರುವುದಿಲ್ಲ .
ಬದಲಾಗಿ ತರಗತಿಗಳು , ಅವಕಾಶಗಳು ಮತ್ತು ಮೌಲ್ಯಮಾಪನ ವಿದ್ಯಾರ್ಥಿಗಳಿಗೆ ನಿರ್ದಿಷ್ಟ ಫಲಿತಾಂಶಗಳನ್ನು ಸಾಧಿಸಲು ಸಹಾಯ ಮಾಡುತ್ತದೆ.
ಫಲಿತಾಂಶದ ಆಧಾರಿತ ಶಿಕ್ಷಣವನ್ನು ವಿಶ್ವದ ಶಿಕ್ಷಣ ವ್ಯವಸ್ಥೆಯಲ್ಲಿ ವಿವಿಧ ಹಂತಗಳಲ್ಲಿ ಅಳವಡಿಸಿಕೊಳ್ಳಲಾಗಿದೆ .
ಆಸ್ಟ್ರೇಲಿಯ ಮತ್ತು ದಕ್ಷಿಣ ಆಫ್ರಿಕಾ ದೇಶಗಳು ಫಲಿತಾಂಶ ಆಧಾರಿತ ಶಿಕ್ಷಣ ನೀತಿಯನ್ನು 1990ರ ಪ್ರಾರಂಭದಲ್ಲಿ ಅಳವಡಿಸಿಕೊಂಡಿದ್ದು ಈಗ ಅದನ್ನು ರದ್ದು ಮಾಡಿದೆ.
ಅಮೇರಿಕಾವು ಫಲಿತಾಂಶ ಆಧಾರಿತ ಶಿಕ್ಷಣವನ್ನು 1994ರಲ್ಲೇ ಹೊಂದಿದ್ದು ಅದನ್ನು ಹಲವಾರು ವರ್ಷಗಳಿಂದ ಅಳವಡಿಸಿಕೊಂಡಿದೆ.
2005ರಲ್ಲಿ ಹಾಂಕಾಂಗ್ ದೇಶವು ತನ್ನ ವಿಶ್ವವಿದ್ಯಾನಿಲಯಗಳಲ್ಲಿ ಫಲಿತಾಂಶ ಆಧಾರಿತ ಮಾರ್ಗವನ್ನು ಅಳವಡಿಸಿಕೊಂಡಿತು.
2008ರಲ್ಲಿ ಮಲೇಷಿಯಾವು ತನ್ನ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಫಲಿತಾಂಶ ಆಧಾರಿತ ಶಿಕ್ಷಣ ಪದ್ಧತಿಯನ್ನು ಜಾರಿಗೆ ತಂದಿತು.
ಯೂರೋಪ್ ಒಕ್ಕೂಟವು ಶಿಕ್ಷಣವನ್ನು ಫಲಿತಾಂಶ ಕೇಂದ್ರಿತಕ್ಕೆ ಪಲ್ಲಟಗೊಳಿಸುವ ವಿಚಾರವನ್ನು ಯೂರೋಪ್ ಸಂಸ್ಥಾನಗಳ ಮುಂದಿಟ್ಟಿತು.
1989ರಲ್ಲಿ ಫಲಿತಾಂಶ ಆಧಾರಿತ ಶಿಕ್ಷಣವನ್ನು ಒಪ್ಪಿಕೊಳ್ಳಲು ಅಂತರಾಷ್ಟ್ರೀಯ ಪ್ರಯತ್ನದ ಫಲವಾಗಿ ವಾಷಿಂಗ್ಟನ್ ಅಕಾರ್ಡನ್ನು ಸೃಷ್ಟಿಸಲಾಯಿತು .
ಇದು ಫಲಿತಾಂಶದ ಆಧಾರಿತ ಶಿಕ್ಷಣದ ಮೂಲಕ ಪಡೆದ ಇಂಜಿನಿಯರ್ ಪದವಿಗಳನ್ನು ಸ್ವೀಕರಿಸಲು ಆದ ಒಪ್ಪಂದವಾಗಿದೆ .
2014 ರಂತೆ , ಆಸ್ಟ್ರೇಲಿಯ , ಕೆನಡ , ಥೈವಾನ್ , ಹಾಂಕಾಂಗ್ , ಭಾರತ , ಐರ್ರ್ಲೆಂಡ್ , ಜಪಾನ್ , ಕೊರಿಯಾ , ಮಲೇಶಿಯಾ , ನ್ಯೂಜಿಲೆಂಡ್ , ರಶಿಯಾ , ಸಿಂಗಪೂರ್ , ದಕ್ಷಿಣ ಆಫ್ರಿಕಾ , ಶ್ರೀಲಂಕಾ , ಟರ್ಕಿ , ಬ್ರಿಟನ್ ಮತ್ತು ಅಮೆರಿಕ ಸಂಯುಕ್ತ ಸಂಸ್ಥಾನ ಸಹಿ ಹಾಕಿದ ದೇಶ ಗಳಾಗಿವೆ.
ಸಾಂಪ್ರದಾಯಿಕ ಶಿಕ್ಷಣ ಪದ್ಧತಿಯಲ್ಲಿ ವಿದ್ಯಾರ್ಥಿಗಳಿಗೆ ಗ್ರೇಡ್ ಮತ್ತು ಸ್ಥಾನ ಗಳನ್ನು ನೀಡುತ್ತಿದ್ದು ಅದನ್ನು ಒಬ್ಬರಿಂದ ಒಬ್ಬರಿಗೆ ಹೋಲಿಸಲಾಗುತ್ತಿತ್ತು .
ವಿಷಯ ಮತ್ತು ನಿರೀಕ್ಷಿತ ಕಾರ್ಯ ನಿರ್ವಹಣೆ ಮೂಲಭೂತವಾಗಿ ವಿದ್ಯಾರ್ಥಿಗಳಿಗೆ ಆ ವಯಸ್ಸಿನಲ್ಲಿ ಈ ಹಿಂದೆ ಏನನ್ನು ಕಲಿಸಿರುತ್ತಾರೋ ಅದರ ಮೇಲೆ ನಿರ್ಧಾರವಾಗುತ್ತಿತ್ತು .
ಸಾಂಪ್ರದಾಯಿಕ ಶಿಕ್ಷಣ ಪದ್ಧತಿಯ ಗುರಿ ಬುದ್ಧಿ ಮತ್ತೆ ಮತ್ತು ಕೌಶಲ್ಯ ಗಳನ್ನು ಹಿಂದಿನ ತಲೆಮಾರಿನಿಂದ ಈಗಿನ ತಲೆಮಾರಿನ ವಿದ್ಯಾರ್ಥಿಗಳಿಗೆ ನೀಡುವುದು ಮತ್ತು ವಿದ್ಯಾರ್ಥಿಗಳಿಗೆ ಅವುಗಳನ್ನು ಕಲಿಯುವ ಪರಿಸರವನ್ನು ಸೃಷ್ಟಿಸುವುದು .
ಈ ವಿಧಾನವು ವಿದ್ಯಾರ್ಥಿಗಳಿಗೆ ಯಾವುದೇ ವಿಷಯವನ್ನು ಕಲಿಯುವ ಬಗ್ಗೆ (ತರಗತಿಯಲ್ಲಿ ನಡೆಯುವ ಬೋಧನೆಯನ್ನು ಮೀರಿ ) ಕಡಿಮೆ ಒತ್ತು ನೀಡುತ್ತಿತ್ತು.
ಫಲಿತಾಂಶ ಕೇಂದ್ರಿತವು ಪಾಠಪ್ರವಚನಗಳ ಸರಣಿಯ ಕೊನೆಗೆ ಯಾವುದನ್ನು ಸಾಧಿಸಲು ಅಗತ್ಯವಿದೆಯೋ ಆ ಸ್ಪಷ್ಟವಾದ ನಿರೀಕ್ಷೆಯನ್ನು ಸೃಷ್ಠಿಸುತ್ತದೆ .
ವಿದ್ಯಾರ್ಥಿಗಳು ಅವುಗಳಿಂದ ಏನು ನಿರೀಕ್ಷಿಸಿರುತ್ತಾರೋ ಅದನ್ನು ಅರ್ಥ ಮಾಡಿಕೊಳ್ಳುತ್ತಾರೆ ಮತ್ತು ಶಿಕ್ಷಕರಿಗೆ ತಾವು ಬೋಧನೆಯ ಸಮಯದಲ್ಲಿ ಏನು ಬೋಧಿಸಬೇಕು ಎಂಬುದು ತಿಳಿಯುತ್ತದೆ .
ತಂಡ ಬೋಧನೆ ಒಳಗೊಂಡಾಗ ಶಾಲೆಗಳಲ್ಲಿ ವರ್ಷಗಳು ಕಳೆದಂತೆ ಸ್ಪಷ್ಟತೆ ತುಂಬಾ ಮುಖ್ಯವಾಗಿರುತ್ತದೆ .
ಪ್ರತೀ ತಂಡದ ಸದಸ್ಯ ಅಥವಾ ಶಾಲೆಯ ವರ್ಷದಲ್ಲಿ ಪ್ರತಿ ತರಗತಿಯಲ್ಲಿ ಅಥವಾ ಪ್ರತಿ ಹಂತದಲ್ಲಿ ವಿದ್ಯಾರ್ಥಿಗಳ ಪ್ರಗತಿಗೆ ಏನನ್ನು ಸಾಧಿಸಬೇಕೋ ಅದನ್ನು ಸ್ಪಷ್ಟವಾಗಿ ಅರ್ಥ ಮಾಡಿಕೊಳ್ಳುತ್ತಾರೆ.
ಯಾರು ಪಠ್ಯದ ರಚನೆ ಮತ್ತು ಯೋಜನೆಯನ್ನು ಮಾಡುತ್ತಾರೋ ಅವರು ಫಲಿತಾಂಶವನ್ನು ನಿರ್ಧರಿಸಿದ ನಂತರ ಹಿಂದಕ್ಕೆ ಹೋಗುವ ಕೆಲಸ ಮಾಡಬೇಕಾಗುತ್ತದೆ .
ಅವರು ಜ್ಞಾನ ಮತ್ತು ಕೌಶಲ್ಯಗಳು ಯಾವುದು ಬೇಕೆಂದು ಫಲಿತಾಂಶವನ್ನು ಪಡೆಯಲು ನಿರ್ಧರಿಸುವರು.
ಏನನ್ನು ಸಾಧಿಸಬೇಕೆನ್ನುವ ಸ್ಪಷ್ಟತೆಯನ್ನಿಟ್ಟುಕೊಂಡು ವಿದ್ಯಾರ್ಥಿಗಳ ಅಗತ್ಯತೆಯ ಸುತ್ತ ತಿಳುವಳಿಕೆಗಳ ಪಾಠಗಳ ರಚನೆ ಮಾಡಲು ಸಾಧ್ಯವಾಗುವುದು .
ಫಲಿತಾಂಶದ ಆಧಾರಿತ ಶಿಕ್ಷಣವು ನಿರ್ಧಿಷ್ಟ ತಿಳುವಳಿಕಾ ವಿಧಾನವನ್ನು ಸೂಚಿಸುವುದಿಲ್ಲ .
ಅವರ ವಿದ್ಯಾರ್ಥಿಗಳಿಗೆ ಯಾವುದೇ ವಿಧಾನವನ್ನು ಉಪಯೋಗಿಸಿ ಬೋಧಿಸಲು ಸ್ವತಂತ್ರರು .
ಬೋಧಕರು ಅವರ ತರಗತಿಯಲ್ಲಿ ಬೋಧನೆ ಮತ್ತು ಮೌಲ್ಯಮಾಪನಾ ತಂತ್ರಗಳನ್ನು ಉಪಯೋಗಿಸಿ ವಿದ್ಯಾರ್ಥಿಗಳಲ್ಲಿ ವಿವಿಧತೆಯನ್ನು ಗುರುತಿಸಲು ಸಮರ್ಥರು .
ಫಲಿತಾಂಶ ಆಧಾರಿತ ಶಿಕ್ಷಣವು ವಿದ್ಯಾರ್ಥಿ ಕೇಂದ್ರೀಕೃತ ಕಲಿಕಾ ಮಾದರಿ ಎಂದು ತಿಳಿಯಲಾಗಿದೆ .
ಶಿಕ್ಷಕರು ವಿದ್ಯಾರ್ಥಿಗಳಿಗೆ ಅವಶ್ಯವಿರುವ ವಿಷಯವನ್ನು ಅರ್ಥ ಮಾಡಿಸಲು ಯಾವುದೇ ರೀತಿಯಲ್ಲಿ ಮಾರ್ಗದರ್ಶನ ಮತ್ತು ಸಹಾಯ ಮಾಡುವರೆಂದು ತಿಳಿಯಲಾಗಿದೆ .
ವಿದ್ಯಾರ್ಥಿಗಳ ಕಲಿಕೆ ಸುಗಮವಾಗಲು ಬೋಧಕರು ಉಪಯೋಗಿಸುವ ಕೆಲವು ವಿಧಾನಗಳೆಂದರೆ ಬೇಕಾದ ಬೋಧನಾ ಮಾರ್ಗದರ್ಶಕ (ಸ್ಟಡೀ ಗೈಡ್) ಗಳು ಮತ್ತು ಗುಂಪುಕಾರ್ಯ (ಗ್ರೂಪ್ ವರ್ಕ ) .
ಫಲಿತಾಂಶ ಆಧಾರಿತ ಶಿಕ್ಷಣವು ಸಂಸ್ಥೆಗಳ ನಡುವೆ ಹೋಲಿಕೆ ಮಾಡಲು ಅವಕಾಶ ಮಾಡಿ ಕೊಡುತ್ತದೆ .
ಒಬ್ಬ ವ್ಯಕ್ತಿಯ ಹಂತದಲ್ಲಿ , ಸಂಸ್ಥೆಗಳು ಹೊಸ ಸಂಸ್ಥೆಯಲ್ಲಿ ಯಾವ ಮಟ್ಟದಲ್ಲಿ ಇರಬೇಕೆಂದು ನಿರ್ಧಾರ ಮಾಡಲು,ಫಲಿತಾಂಶದಿಂದ ವಿದ್ಯಾರ್ಥಿಯು ಯಾವ ಹಂತದಲ್ಲಿ ಏನನ್ನು ಸಾಧಿಸಿರುತ್ತಾನೆ ಎಂಬುದನ್ನು ನೋಡಬಹುದು .
ಸಂಸ್ಥೆಯ ಹಂತದಲ್ಲಿ ,ತಮ್ಮ ತಮ್ಮಲ್ಲಿ ಯಾವ ಫಲಿತಾಂಶವು ತಮ್ಮಲ್ಲಿ ಸಾಮಾನ್ಯವಾಗಿದೆ ಎಂಬುದನ್ನು ಹೋಲಿಕೆ ಮಾಡಿಕೊಳ್ಳಬಹುದು ಮತ್ತು ಇತರ ಸಂಸ್ಥೆಗಳ ಫಲಿತಾಂಶದ ಸಾಧನೆಯನ್ನು ನೋಡಿ ಸುಧಾರಣೆಯ ಅಗತ್ಯವಿರುವ ಜಾಗವನ್ನು ಪತ್ತೆ ಮಾಡಬಹುದು .
ಸಂಸ್ಥೆಗಳ ನಡುವೆ ವ್ಯತ್ಯಾಸವನ್ನು ತಿಳಿಯುವ ಶಕ್ತಿಯು ಹೋಲಿಕೆ ಮಾಡಿಕೊಂಡಾಗ ವಿದ್ಯಾರ್ಥಿಗಳಿಗೆ ಸಂಸ್ಥೆಗಳ ನಡುವೆ ಹೋಗುವುದು ಸಾಪೇಕ್ಷವಾಗಿ ಸುಲಭವಾಗುತ್ತದೆ .
ಸಂಸ್ಥೆಗಳು ಫಲಿತಾಂಶಗಳ ಹೋಲಿಕೆ ಮಾಡಿಕೊಳ್ಳುವುದರಿಂದ ವಿದ್ಯಾರ್ಥಿಗಳಿಗೆ ಕೊಡಬಲ್ಲ ಕ್ರೆಡಿಟ್ ನ್ನು ನಿರ್ಧರಿಸಬಹುದು .
ಸ್ಪಷ್ಟವಾದ ಫಲಿತಾಂಶವು ವಿದ್ಯಾರ್ಥಿಗಳ ಸಾಧನೆಯನ್ನು ಸಂಸ್ಥೆಗಳು ವೇಗವಾಗಿ ಅಳೆಯುವಂತಿರಬೇಕು .
ಇದರಿಂದ ವಿದ್ಯಾರ್ಥಿಗಳ ಚಲನೆಗೆ ಅನುವು ಮಾಡಿಕೊಡುವುದು .
ಈ ಫಲಿತಾಂಶಗಳು ಶಾಲೆಗಳಲ್ಲಿ ಬದಲಾವಣೆಯ ಕೆಲಸವನ್ನು ಮಾಡುತ್ತದೆ .
ಶಕ್ತ ಉದ್ಯೋಗದಾತನು ಶಕ್ತ ಉದ್ಯೋಗಿಯ ದಾಖಲೆಗಳನ್ನು ಪರಿಶೀಲಿಸಿ ಯಾವ ಫಲಿತಾಂಶವನ್ನು ಅವನು ಸಾಧಿಸಿರುತ್ತಾನೆ ಎಂದು ನೋಡಬಹುದು .
ಆ ನಂತರ ಶಕ್ತ ಉದ್ಯೋಗಿಯ ಉದ್ಯೋಗಕ್ಕೆ ಅಗತ್ಯವಿರುವ ಕೌಶಲ್ಯಗಳು ಇವೆಯೋ ಎಂದು ತಿಳಿಯಬಹುದು.
ತರಗತಿಯಲ್ಲಿ ವಿದ್ಯಾರ್ಥಿಗಳ ತೊಡಗಿಸಿಕೊಳ್ಳುವಿಕೆಯು ಫಲಿತಾಂಶದ ಆಧಾರಿತ ಶಿಕ್ಷಣದ ಒಂದು ಮುಖ್ಯವಾದ ಭಾಗವಾಗಿದೆ .
ವಿದ್ಯಾರ್ಥಿಗಳು ಕಲಿಕೆಯನ್ನು ತಾವೇ ಸ್ವತಃ ಮಾಡಿಕೊಳ್ಳಬೇಕಾಗುವುದು ಆಪೇಕ್ಷಣೀಯ .
ಇದರಿಂದ ವಸ್ತುಗಳ ಪೂರ್ಣವಾಗಿ ತಿಳುವಳಿಕೆಯ ಲಾಭವಾಗುವುದು .
ವಿದ್ಯಾರ್ಥಿಗಳ ಹೆಚ್ಚಿಗೆ ತೊಡಗಿಸಿಕೊಳ್ಳುವಿಕೆಯು ,ಅವರುಗಳಿಗೆ ಅವರ ಕಲಿಕೆಯು ತಾವೇ ಜವಾಬ್ದಾರಿಯೆಂದು ಅನ್ನಿಸುವುದು ಮತ್ತು ಅವರು ಹೆಚ್ಚಾಗಿ ಸ್ವಕಲಿಕೆಯಲ್ಲಿ ಕಲಿಯುವರು.
ಪಠ್ಯದ ರಚನೆಯ ಅಥವಾ ಬದಲಾವಣೆಯಲ್ಲಿ , ಪೋಷಕರ ಮತ್ತು ಸಮುದಾಯದ ತೊಡಗಿಸಿಕೊಳ್ಳುವಿಕೆಯು , ತೊಡಗಿಸಿಕೊಳ್ಳುವಿಕೆಯ ಇನ್ನೊಂದು ಆಯಾಮವಾಗಿದೆ .
ಪೋಷಕರು ಮತ್ತು ಸಮುದಾಯದ ಸದಸ್ಯರುಗಳು ಸಮುದಾಯದ ಒಳಗೆ ಶಿಕ್ಷಣದ ಮಟ್ಟವನ್ನು ಎತ್ತಿಹಿಡಿಯಲು ಮತ್ತು ಶಿಕ್ಷಣದ ನಂತರ ಜೀವನ ನಡೆಸಲು ತಯಾರಿಯನ್ನು ಖಚಿತಪಡಿಸಿಕೊಳ್ಳಲು ಅಭಿಪ್ರಾಯವನ್ನು ಕೇಳಲಾಗುವುದು.
ಫಲಿತಾಂಶದ ವ್ಯಾಖ್ಯಾನಗಳ ತೀರ್ಮಾನಗಳು ಅನುಷ್ಟಾನ ಮಾಡುವವರ ಅರ್ಥವಿವರಣೆಗಳಿಗೆ ಒಳಪಟ್ಟಿರುತ್ತವೆ .
ಒಂದೇ ತರಹದ ಫಲಿತಾಂಶಗಳು ಸಾಧಿಸಲ್ಪಟ್ಟಿವೆ ಎಂದು ಹೇಳಲಾಗಿದ್ದರೂ ಸಹ , ವಿವಿಧ ಕಾರ್ಯಕ್ರಮಗಳಲ್ಲಿ ಅಥವಾ ವಿವಿಧ ಬೋಧಕರುಗಳು ಕೂಡ ಫಲಿತಾಂಶಗಳನ್ನು ವಿವಿಧ ರೀತಿಯಲ್ಲಿ ವಿವರಿಸಿ ಶಿಕ್ಷಣದಲ್ಲಿ ವ್ಯತ್ಯಾಸಕ್ಕೆ ಕಾರಣವಾಗುತ್ತದೆ .
ನಿರ್ದಿಷ್ಟ ಫಲಿತಾಂಶಗಳನ್ನು ರೂಪಿಸುವುದರಿಂದ ಕಲಿಕೆಯ ಸಮಗ್ರ ದೃಷ್ಟಿಯು ಕಾಣೆಯಾಗುವುದು .
ಕಲಿಕೆಯು ನಿರ್ದಿಷ್ಟ ,ಅಳೆಯಬಲ್ಲ ಮತ್ತು ಗ್ರಹಿಸಬಲ್ಲ ಕೆಲವೊಂದಕ್ಕೆ ಸೀಮಿತಗೊಳ್ಳಲು ದಾರಿಯಾಗಬಲ್ಲದು .
ಇದರಿಂದಾಗಿ ಫಲಿತಾಂಶಗಳನ್ನು ಯಾವುದನ್ನು ಕಲಿಕೆ ಎನ್ನಲಾಗುವುದೋ ಅದನ್ನು ಪರಿಕಲ್ಪಿಸಲು ವ್ಯಾಪಕವಾದ ಮಾನ್ಯ ಮಾಡುವ ಮಾರ್ಗವಾಗುತ್ತಿಲ್ಲ .
ಫಲಿತಾಂಶ ಸಾಧಿಸಲ್ಪಟ್ಟಿದೆಯೋ ಎಂದು ತಿಳಿಯುವಾಗ ವಿದ್ಯಾರ್ಥಿಯು ಜ್ಞಾನವನ್ನು ಪಡೆದು ಕೊಂಡಿದ್ದಾನೆಯೆ ಎಂದು ನೋಡುವುದರಿಂದ , ಇಂತಹ ಸಂದರ್ಭದಲ್ಲಿ ಮೌಲ್ಯಮಾಪನವು ಯಾಂತ್ರಿಕವಾಗಿರುವುದು .
ವಿವಿಧ ಜ್ಞಾನದ ಉಪಯೋಗ ಮತ್ತು ಅನ್ವಯವಾಗುವ ಸಾಮರ್ಥ್ಯವು ಮೌಲ್ಯಮಾಪನದಲ್ಲಿ ಗಮನಿಸದೇ ಹೋಗಬಹುದು .
ಫಲಿತಾಂಶ ಸಾಧಿಸಲ್ಪಟ್ಟಿದೆಯೋ ಎಂದು ತಿಳಿಯವ ಮೇಲಿನ ಗಮನವು ವಿದ್ಯಾರ್ಥಿಗಳ ತಿಳುವಳಿಕೆ ಮತ್ತು ಕಲಿಕೆಯು ನಷ್ಟವಾಗುವುದಲ್ಲದೆ ,ತಾವು ಗಳಿಸಿದ ಜ್ಞಾನವು ಉಪಯೋಗಿಸುವುದು ಹೇಗೆಂದು ತೋರದೆ ಹೋಗುವುದು.
ತಾವು ಒಗ್ಗಿಕೊಂಡಿರುವುದನ್ನು ಬಿಟ್ಟು , ಮೂಲಭೂತವಾಗಿರುವ ಬೇರೆಯೇ ಪರಿಸರವನ್ನು ನಿರ್ವಹಿಸಲು ಕಲಿಯಬೇಕಾಗುವುದು ಬೋಧಕರು ಎದುರಿಸುವ ಸವಾಲು .
ಮೌಲ್ಯಮಾಪನಾ ಮಾಡುವ ಸಮಯದಲ್ಲಿ ,ವಸ್ತುನಿಷ್ಟವಾಗಿ ಇರುವಾಗ ,ಆ ವಿದ್ಯಾರ್ಥಿಗಳಿಗೆ ಅವರಿಗೆ ತಿಳಿದಿರುವ ಮಾಹಿತಿಯನ್ನು ಪ್ರದರ್ಶಿಸಲು ಆದರ್ಶಕರವಾಗಿ ಆಗಗೊಡಲು,ವಿಶ್ವಾಸನೀಯ ಮತ್ತು ಸಿಂದುವಾದ ಮೌಲ್ಯಮಾಪನವನ್ನು ಸೃಷ್ಟಿಸಲು ಬೇಕಾದ ಸಮಯವನ್ನು ಕಳೆಯಲು ಸಂಕಲ್ಪಿಸ ಬೇಕಾಗುತ್ತದೆ.
ಶೈಕ್ಷಣಿಕ ಫಲಿತಾಂಶಗಳು ನಿರ್ಬಂಧಿತ ಗುಣವುಳ್ಳ ಬೋಧನೆ ಮತ್ತು ಮೌಲ್ಯಮಾಪನದತ್ತ ಕೊಂಡೊಯ್ಯಬಹುದು .
ಸೃಜನಶೀಲತೆ ,ಆತ್ಮ ಗೌರವ ,ಬೇರೆಯವರನ್ನು ಗೌರವದಿಂದ ಕಾಣುವುದು ,ಜವಾಬ್ದಾರಿ ಮತ್ತು ಸ್ವಯಂಪೂರ್ಣತೆ ಮುಂತಾದ ಉದಾರ ಫಲಿತಾಂಶಗಳ ಮೌಲ್ಯಮಾಪನಮಾಡುವುದು ಸಮಸ್ಯಾತ್ಮಕವಾಗಬಹುದು .
ವಿದ್ಯಾರ್ಥಿಯು ಫಲಿತಾಂಶಗಳನ್ನು ಸಾಧಿಸಿದ್ದರೆ ,ಅವುಗಳನ್ನು ಕಂಡುಹಿಡಿಯಲು ,ಅಳೆಯಬಹುದಾದ , ಗ್ರಹಿಸಬಹುದಾದ ಮತ್ತು ನಿರ್ದಿಷ್ಟ ಮಾರ್ಗಗಳಿಲ್ಲ .
ನಿರ್ದಿಷ್ಟ ಫಲಿತಾಂಶಗಳ ಗುಣದಿಂದ , ಫಲಿತಾಂಶದ ಆಧಾರಿತ ಶಿಕ್ಷಣ (OBE)ವು ಬಹಳ ಫಲಿತಾಂಶಗಳನ್ನು ಸಾಧಿಸಿದ ಓರ್ವನ ಸೇವೆ ಮಾಡುವ ಮತ್ತು ಸೃಷ್ಟಿಸುವ ಅದರ ಆದರ್ಶಗಳ ವಿರುದ್ಧ ಕೆಲಸ ಮಾಡಬಹುದು.
ಪೋಷಕರ ತೊಡಗಿಸಿಕೊಳ್ಳುವಿಕೆಯು ತೊಡಗಿಸಿಕೊಳ್ಳುವಿಕೆ ವಿಭಾಗದಲ್ಲಿ ಚರ್ಚೆಯಾದಂತೆ ,ಕೂಡ ಒಂದು ನ್ಯೂನತೆಯಾಗಿರುವುದು .
ಪೋಷಕರು ಮತ್ತು ಸಮುದಾಯದ ಸದಸ್ಯರುಗಳು ಶೈಕ್ಷಣಿಕ ವ್ಯವಸ್ಥೆಯ ಗುಣಮಟ್ಟದ ಮೇಲೆ ಅಭಿಪ್ರಾಯವನ್ನು ಕೊಡಲು ಇಚ್ಚಿಸದೆ ಇರುವಾಗ ವ್ಯವಸ್ಥೆಯು ಸುಧಾರಣೆಯ ಅವಶ್ಯಕತೆಯನ್ನು ಕಾಣದೆ ಹೋಗಬಹುದು ಮತ್ತು ವಿದ್ಯಾರ್ಥಿಗಳ ಅಗತ್ಯಗಳಿಗೆ ಬದಲಾಯಿಸಲ್ಪಡದಿರಬಹುದು .
ಪೋಷಕರು ಬಹಳವಾಗಿ ತೊಡಗಿಸಿಕೊಳ್ಳುತ್ತಾ ಹೆಚ್ಚಿನ ಬದಲಾವಣೆಗಳನ್ನು ಬೇಡುತ್ತಾ ,ಬೇರೆಯೇ ಬದಲಾವಣೆಗಳಿಗೆ ಸಲಹೆ ಮಾಡುವುದರಿಂದ ,ಮುಖ್ಯವಾದ ಸುಧಾರಣೆಗಳು ಕಾಣೆ ಯಾಗಬಹುದು .
ಬೋಧಕರು ತಮ್ಮ ಕೆಲಸವು ಹೆಚ್ಚಾಗುವುದನ್ನು ಮನಗಾಣುವರು :ಅವರು ಮೊದಲು ಫಲಿತಾಂಶವನ್ನು ಅರ್ಥಮಾಡಿಕೊಳ್ಳಲು ಕೆಲಸ ಮಾಡಬೇಕಾಗುವುದು ,ನಂತರ ,ಬೇಕಾದ್ದನ್ನು ಪಡೆಯಲು ಪ್ರತಿಯೊಂದು ಫಲಿತಾಂಶದ ಸುತ್ತ ಪಠ್ಯದ ರಚನೆ ಮಾಡಬೇಕಾಗುವುದು .
ಬೋಧಕರು ವಿಶೇಷವಾಗಿ ಪ್ರಾಥಮಿಕ ಶಾಲೆಗಳಲ್ಲಿ ಗುಣನೀಯ ಫಲಿತಾಂಶಗಳನ್ನು ಅಳವಡಿಸಿಕೊಳ್ಳವಿಕೆಯು ಸಮಾನವಾಗಿ ಮಾಡಲು ಕಷ್ಟಕರ ಎಂದು ಕಂಡುಕೊಂಡಿದ್ದಾರೆ .
ಅಲ್ಲದೆ ,ಬೋಧಕರು ವಿದ್ಯಾರ್ಥಿಗಳ ಸಂಪೂರ್ಣವಾಗಿ ಮೌಲ್ಯಮಾಪನ ಮಾಡುವ ಪದ್ದತಿಯನ್ನು ಆಯ್ಕೆ ಮಾಡಿಕೊಂದರೆ ,ತಮ್ಮ ಕೆಲಸದ ಹೊರೆ ಹೆಚ್ಚಾಗುವುದನ್ನು ಮನಗಾಣುವರು .
೧೯೯೦ ರ ಪ್ರಾರಂಭದಲ್ಲಿ ಆಸ್ಟ್ರೇಲಿಯದ ಎಲ್ಲಾ ರಾಜ್ಯಗಳು ಮತ್ತು ಪ್ರಧೇಶಗಳು ಅವುಗಳ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ ಬಹಳವಾಗಿ ಫಲಿತಾಂಶದ ಆಧಾರಿತ ಶಿಕ್ಷಣವನ್ನು ಆಧರಿಸಿದ ಉದ್ದೇಶಿಸಿದ ಪಠ್ಯಕ್ರಮ ದಾಖಲೆಗಳನ್ನು ಅಭಿವೃದ್ದಿಪಡಿಸಿದವು.
ಜಾರಿಗೆ ತಂದ ಅಲ್ಪಕಾಲದಲ್ಲಿಯೇ ವಿಮರ್ಶೆಗಳು ಪ್ರಾರಂಭವಾದವು .
ಆಸ್ಟ್ರೇಲಿಯ ಮತ್ತು ಅಮೇರಿಕ ದೇಶಗಳಲ್ಲಿಯೂ ,ಫಲಿತಾಂಶ ಆಧಾರಿತ ಶಿಕ್ಷಣವನ್ನು ದೊಡ್ಡ ಪ್ರಮಾಣದಲ್ಲಿ ಯಶಸ್ವಿಯಾಗಿ ಅಳವಡಿಸಿಕೊಳ್ಳಲು ಯಾವುದೇ ಪುರಾವೆಗಳು ಇಲ್ಲವೆಂದು ವಿಮರ್ಶಕರು ವಾದಿಸುತ್ತಾರೆ .
ಆಸ್ಟ್ರೇಲಿಯದ ಶಾಲೆಗಳ ಒಂದು ಮೌಲ್ಯಮಾಪನವು ಫಲಿತಾಂಶದ ಆಧಾರಿತ ಶಿಕ್ಷಣವನ್ನು ಅಳವಡಿಕೆಯು ಕ‍ಷ್ಟ ಎಂದು ಕಂಡುಬಂದಿದೆ .
ಶಿಕ್ಷಕರು ನಿರೀಕ್ಷಿತ ಸಾಧನೆಗಳ ಫಲಿತಾಂಶಗಳ ಒಟ್ಟು ಮೊತ್ತದ ಬಗ್ಗೆ ಭಾವಪರವಶವಾಗುವರು .
ಶಿಕ್ಷಣ ಕೊಡುವವರು ವಿದ್ಯಾರ್ಥಿಗಳ ಮತ್ತು ಶಿಕ್ಷಕರ ಅಗತ್ಯಗಳನ್ನು ಪಠ್ಯಕ್ರಮ ಫಲಿತಾಂಶಗಳು ಪೂರೈಸಲಾರದೆಂದು ನಂಬುವರು .
ಬಹಳವಾಗಿರುವ ನಿರೀಕ್ಷಿತ ಫಲಿತಾಂಶಗಳು ,ವಿಷಯಗಳ ಕಡಿಮೆ ತಿಳುವಳಿಕೆಯ ವಿದ್ಯಾರ್ಥಿಗಳನ್ನಾಗಿಸುತ್ತವೆ ಎಂದು ವಿಮರ್ಶಕರು ಭಾವಿಸುವರು .
ಆಸ್ಟ್ರೇಲಿಯದ ಈಗಿನ ಬಹಳ ಶೈಕ್ಷಣಿಕ ತತ್ವಗಳು ಫಲಿತಾಂಶದ ಆಧಾರಿತ ಶಿಕ್ಷಣದಿಂದ ದೂರ ಸರಿಯತೊಡಗಿ , ಕಡಿಮೆ ತಿಳುವಳಿಕೆಯ ಹೆಚ್ಚಿನ ಅಡಕಗಳಿಗಿಂತಲೂ ,ಅಗತ್ಯ ಅಡಕಗಳನ್ನು ಸಂಪೂರ್ಣವಾಗಿ ತಿಳಿದುಕೊಳ್ಳುವ ಒಂದು ಕೇಂದ್ರೀಕರಿಸುವತ್ತ ಸಾಗುತ್ತಿವೆ.
ಐರೋಪ್ಯ ಒಕ್ಕೂಟದ ಉದ್ದಗಲಕ್ಕು ೨೩ % ಸಮೀಪ ಇರುವ ಯುವ ನಿರುದ್ಯೋಗ ದರವನ್ನು ಕಡಿಮೆ ಮಾಡಲು ಯುರೋಪಿಯನ್ ಕಮೀಷನ್ ( European Commission )ಒಂದು ಹೊಸ ತಂತ್ರವನ್ನು ಮುಂದಿಟ್ಟಿತು .
ಎಲ್ಲಾ ಐರೋಪ್ಯ ಒಕ್ಕೂಟದಲ್ಲಿ ಯುರೋಪಿಯನ್ ಕ್ವಾಲಿಫಿಕೇಶನ್ ಫ್ರೇಮ್ ವರ್ಕ್ ( European Qualifications Framework )ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ಕಲಿಕೆಯ ಫಲಿತಾಂಶಗಳತ್ತ ಬದಲಾವಣೆ ತರುವಂತೆ ಕರೆಯಿತ್ತಿತು .
ವಿದ್ಯಾರ್ಥಿಗಳು ತಮ್ಮ ಶಿಕ್ಷಣವನ್ನು ಮುಗಿಸಿದಾಗ ಅಗತ್ಯವಿರುವ ಕೌಶಲ್ಯಗಳನ್ನು ಕಲಿಯುವುದು ನಿರೀಕ್ಷಿಸಲ್ಪಟ್ಟಿತು .
ಅದು ಕೃತಿ - ಆಧಾರಿತ ಕಲಿಕೆಯ ಮೂಲಕ ಉದ್ಯೋಗಕ್ಕೆ ಬಲವಾಗಿ ಸಂಬಂಧವಿರುವ ಪಾಠಗಳನ್ನು ಹೊಂದುವಂತೆಯೂ ಕರೆ ಇತ್ತಿತು .
ವಿದ್ಯಾರ್ಥಿಗಳ ಕೃತಿ - ಆಧಾರಿತ ಕಲಿಕೆಯ ಈ ವಿದ್ಯಾರ್ಥಿಗಳಿಗೆ ವೃತ್ತಿಪರ ತರಬೇತಿಯ ಅಂಗೀಕಾರಕ್ಕೂ ಕೂಡ ಕಾರಣವಾಗಬೇಕು .
ಕಾರ್ಯಕ್ರಮವು ವಿದೇಶಿ ಭಾಷೆ ಕಲಿಕೆಗೆ ಗುರಿಗಳನ್ನು ಸಹಾ ಇರಿಸುವದಲ್ಲದೆ , ಶಿಕ್ಷಕರಿಗೆ ಮುಂದುವರೆದ ಶಿಕ್ಷಣವಾಗಿರುವುದು .
ಅದು ಕಲಿಕೆಯಲ್ಲಿ ತಂತ್ರಜ್ಞಾನ ಬಳಕೆಯ ಪ್ರಾಮುಖ್ಯತೆಯನ್ನು , ವಿಶೇಷವಾಗಿ ಅಂತರ್ಜಾಲ , ವಿದ್ಯಾರ್ಥಿಗಳಿಗೆ ಸಂಗತವಾಗಿಸಲು ಎತ್ತಿ ತೋರಿಸುವುದು.
ಪಾಕಿಸ್ತಾನವು ೨೦೧೦ ರಲ್ಲಿ ವಾಷಿಂಗ್ಟನ್ ಅಕಾರ್ಡಗೆ ಸಹಿಹಾಕುವ ಮೂಲಕ ತಾತ್ಕಾಲಿಕ ಸದಸ್ಯನಾಗಿದ್ದು , ವಿಶ್ವವಿದ್ಯಾನಿಲಯಗಳು ಫಲಿತಾಂಶದ ಆಧಾರಿತ ಶಿಕ್ಷಣವನ್ನು ಅಳವಡಿಸಿಕೊಳ್ಳುವತ್ತ ಕೆಲಸ ಮಾಡುತ್ತಿವೆ .
ಹಾಂಗ್‍ಕಾಂಗ್ ಯುನಿವರ್ಸಿಟಿ ಗ್ರಾಂಟ್ ಕಮಿಟಿ ( Hong Kong’s University Grants Committee)ಯು ೨೦೦೫ರಲ್ಲಿ ಫಲಿತಾಂಶದ ಆಧಾರಿತ ಶಿಕ್ಷಣ ವಿಧಾನದ ಬೋಧನೆ ಮತ್ತು ಕಲಿಕೆಯನ್ನು ಅಳವಡಿಸಿಕೊಂಡಿತು .
ಭಾರತವು ೧೩ ಜೂನ್ ೨೦೧೪ ರಂದು ವಾಷಿಂಗ್ಟನ್ ಅಕಾರ್ಡಗೆ ಸಹಿ ಹಾಕಿದ ಶಾಶ್ವತ ಸದಸ್ಯನಾಗಿದೆ.
ಭಾರತವು ತನ್ನ ಡಿಪ್ಲಮೋ ಮತ್ತು ಸ್ನಾತಕ ಪದವಿ ತಾಂತ್ರಿಕ ಶಿಕ್ಷಣದಲ್ಲಿ ಫಲಿತಾಂಶದ ಆಧಾರಿತ ಶಿಕ್ಷಣವನ್ನು ಅಳವಡಿಸಿಕೊಳ್ಳುತ್ತಲಿದೆ .
ಭಾರತದಲ್ಲಿ ತಾಂತ್ರಿಕ ಶಿಕ್ಷಣದಲ್ಲಿ ಅಂತರಾಷ್ರ್ಡೀಯ ಗುಣಮಟ್ಟಕ್ಕೆ ಮೇಲೇರಿಸಲು ಇರುವ ಸಂಸ್ಥೆಯಾದ ನ್ಯಾಶನಲ್ ಬೋರ್ಡ ಆಫ್ ಅಕ್ರಿಡಿಶನ್ ( The National Board of Accreditation ) ೨೦೧೭ರಿಂದ ತಾಂತ್ರಿಕ ಶಿಕ್ಷಣದಲ್ಲಿ ಫಲಿತಾಂಶದ ಆಧಾರಿತ ಶಿಕ್ಷಣವನ್ನು ಅಳವಡಿಸಿಕೊಂಡಿರುವ ಡಿಪ್ಲಮೋ ಮತ್ತು ಸ್ನಾತಕ ಪದವಿಗಳನ್ನು ಮಾತ್ರ ಮಾನ್ಯಮಾಡುತ್ತಲಿದೆ.
Markdown is supported
0% or
You are about to add 0 people to the discussion. Proceed with caution.
Finish editing this message first!
Please register or to comment