Commit 5a189e4c authored by Narendra VG's avatar Narendra VG

Upload New File

parent bcc6ac5d
ಆತ್ಮೀಯ ಓದುಗರಲ್ಲಿ ನಂಬುಗೆ ಬದುಕಿನ ನೆಲೆಗಟ್ಟು, ಅದಕ್ಕೊಂದು ಚೌಕಟ್ಟು ಪ್ರೀತಿಯಸೆಲೆ.
ಇಲ್ಲಿ ನಂಬುಗೆಯೇ ಭಕ್ತಿಯಾಗುತ್ತದೆ.
ನಂಬುಗೆಯೇ ಭಯವಾಗುತ್ತದೆ.
ಅದೇ ಬದುಕಿನ ಬಂಧವಾಗುತ್ತದೆ.
ಇಲ್ಲಿ ರಾಗ ಅನುರಾಗಗಳು ಇದ್ದಂತೆ, ಬದುಕಿಗೆ ಸ್ವರ ಅಪಸ್ವರಗಳು ಕೂಡ ಇರುತ್ತದೆ.
ಅಪಸ್ವರದ ಎಳೆ ಇಡೀ ಬದುಕನ್ನ ಛಿದ್ರವಾಗಿಸಿ ಬಿಡುತ್ತದೆ.
ಮನಗಳಲ್ಲಿ ಅರಳಿದ ಮಲ್ಲಿಗೆ ಬಾಡಿಸಿ ಬಿಡುತ್ತದೆ.
ಇಲ್ಲಿ ಎಲ್ಲಾ ಆಕರ್ಷಣೆಗಳು ಸತ್ತು ಒಂದು ವಿಶಾಲಾರ್ಥ ಗೋಚರಿಸುತ್ತದೆ.
ಇದಕ್ಕೆ ಕಾರಣರಾದ ವ್ಯಕ್ತಿಗಳನ್ನ ದ್ವೇಷಿಸದೇ ಅಭಿನಂದಿಸುವುದು ಚಾರುಲತ ಅಂಥವರಿಗೆ ಸಾಧ್ಯವಾಗಬಹುದು.
ನನ್ನ ಕಾದಂಬರಿಗಳ ಪ್ರಕಟಣೆ ಮತ್ತು ಮಾರಾಟದ ಹೊಣೆ ಹೊತ್ತಿರುವ ಶ್ರೀ ಕೆ. ರಾಮಚಂದ್ರಯ್ಯನವರಿಗೂ, ಈ ಕಾದಂಬರಿಯನ್ನು ಪ್ರಕಟಿಸುತ್ತಿರುವ ವಾಸವಾಂಬ ಪ್ರಕಾಶನದವರಿಗೂ, ಮುಖ ಚಿತ್ರಕಲಾವಿದರಾದ ಶ್ರೀ ಎಂ.ಮೋನಪ್ಪನವರಿಗೂ ಮತ್ತು ಅಚ್ಚುಕಟ್ಟಾಗಿ ಮುದ್ರಿಸಿದ ಜಗನ್ನಾಥ ಆಫ್‌ಸೆಟ್‌ ಪ್ರಿಂಟರ್ಸ್‌ರವರಿಗೂ ಮತ್ತು ನಿಮಗೂ ನನ್ನ ಕೃತಜ್ಞತೆಗಳು.
ಕೃಷ್ಣಮೂರ್ತಿ, ಚಾರುಲತಗೆ ಮದುವೆಯಾಗಿ ಒಂಬತ್ತು ತಿಂಗಳಾಗಿತ್ತು.
ಹೊಸದಾಗಿ ಸಂಸಾರ ಹೂಡಿದ್ದರು.
ಅತ್ಯಂತ ಸುಂದರವಾದ ಜೋಡಿಯೆಂದು ಅಕ್ಕಪಕ್ಕದ ಮನೆಯವರು ಹೇಳುತ್ತಿದ್ದರು.
ಬಾಟನಿಯಲ್ಲಿ ಎಂ.ಎಸ್ಸಿ.ಮಾಡಿದ ಮೂರ್ತಿಗೆ ಬಿ.ಎಸ್ಸಿ. ಮಾಡಿದ ಯುವತಿ ಪತ್ನಿಯಾಗಿ ದೊರೆತಿದ್ದು ತೃಪ್ತಿಕರವೇ.
ಅವನಿಗೆ ಓದೋ ಅಭ್ಯಾಸ ಬಿಟ್ಟು ಬೇರೇನು ಹಾಬಿಗಳು ಇಲ್ಲವೆಂದೇ ಹೇಳಬೇಕು.
ಆಗಾಗ ಟೆನ್ನಿಸ್‌ ಆಡಲು ಹೋಗುತ್ತಿದ್ದ.
ಅದು ಕೂಡ ವಿವಾಹದ ನಂತರ ಕ್ಯಾನ್ಸಲ್‌ ಆಗಿತ್ತು.
ಎರಡು ರೂಮಿನ ಪುಟ್ಟ ಮನೆಯಾದರೂ ಎಲ್ಲಾ ರೀತಿಯ ಅನುಕೂಲವೂ ಇತ್ತು.
ಬೋರ್‌ ಇದ್ದುದ್ದರಿಂದ ನೀರಿಗೆ ತಾಪತ್ರಯವಿರಲಿಲ್ಲ.
ಒಂದಿಷ್ಟು ಗಿಡಗಳನ್ನು ಬೆಳೆಸಲು ಕಾಂಪೌಂಡ್‌ನಲ್ಲಿ ಅನುಕೂಲವಿತ್ತು.
ಜೊತೆಗೆ ಬೇರೆ ಬೇರೆ ಜಾತಿಯ ಪಾಟುಗಳನ್ನ ತಂದು ಅಂಗಳವನ್ನ ಅಲಂಕರಿಸಿದ್ದರುಗಂಡ, ಹೆಂಡತಿ.
ಅವನೇನು ಸಂಬಳದಲ್ಲಿ ಒಂದು ಪಾಲನ್ನು ಊರಿಗೆ ಅಂದರೆ ತಾಯ್ತಂದೆಯರಿಗೆ ಕಳುಹಿಸಬೇಕಿರಲಿಲ್ಲ.
ಆರ್ಥಿಕವಾಗಿ ಸುಮಾರಾಗಿ ಅನುಕೂಲವಾಗಿದ್ದ ಕುಟುಂಬ.
ಎರಡು ಮನೆಗಳ ಬಾಡಿಗೆಯ ಜೊತೆ ಸ್ವಂತಮನೆ ಇತ್ತು.
ಒಂದಿಷ್ಟು ಹಣವನ್ನ ತಮ್ಮ ಸಂಬಳದಲ್ಲಿ ಉಳಿಸಿ ಫಿಕ್ಸೆಡ್‌ಗೆ ಹಾಕಿದರು.
ಬಡ್ಡಿ ಬರುತ್ತಿತ್ತು ತಿಂಗಳು ತಿಂಗಳು, ಇದ್ದ ಮಗಳ ಮದುವೆಗಾಗಿ ಕೂಡ ಹಣ ತೆಗೆದಿರಿಸಿದ್ದರಿಂದ ಮಗನ ಮುಂದೆ ಕೈಯೊಡ್ಡುವ ಸ್ಥಿತಿ ಅವರಿಗೆ ಇರಲಿಲ್ಲ.
ಮಗನಿಗೆ ವಿವಾಹ ಮಾಡುವಾಗ ಕೂಡ ನಯಾಪೈಸಾ ವರದಕ್ಷಿಣೆ ತಂಗೊಂಡಿರಲಿಲ್ಲ.
ಕೆಲವು ವಿಷಯಗಳಲ್ಲಿ ಬಹಳ ಪ್ರಿನ್ಸಿಪಲ್ಡ್ ವ್ಯಕ್ತಿ ಯುಗಂಧರ್‌.
ಕೈ ಹಿಡಿದ ಚಾರುಲತ ಬಗ್ಗೆ ಅತ್ಯಂತ ಪ್ರೀತಿ, ಅಭಿಮಾನ ಕೃಷ್ಣಮೂರ್ತಿಗೆ.
ಹೂವಿಡಿದು ಬರುವ ಗಂಡನಿಗಾಗಿ ಕಾದು ನಿಲ್ಲುವ ಹೆಣ್ಣು ಅತ್ಯಂತ ಸರಳೆ.
ಅವಳ ತಂದೆ ಕೂಡ ಸರ್ಕಾರಿ ಚಾಕರಿಯಲ್ಲಿದ್ದು ಈಚಿಗೆ ರಿಟೈರ್ಡ್‌ ಆದವರು.
ಬರೀ ಮನೆ, ಮಡದಿ, ಮಕ್ಕಳು ಎಂದು ಬದುಕಿದ ಸಾಧಾರಣ ಜನ.
ಹಿರಿಯವ ನವೀನ್‌ ಮೆಡಿಸಿನ್‌ ಓದಿಕೊಂಡಿದ್ದು ತನ್ನ ಬುದ್ಧಿವಂತಿಕೆ ಯಿಂದಲೇ ಫೀಜು ವಗೈರೆ ಕೊಟ್ಟಿರಬಹುದೇ ವಿನಃ ಡೊನೇಷನ್‌ ಕೊಟ್ಟು ಓದಿಸಿರಲಿಲ್ಲ.
ಇಂಟರ್‌ಷಿಪ್‌ ಮುಗಿಸಿಕೊಂಡು ನರ್ಸಿಂಗ್‌ಹೋಂನಲ್ಲಿ ಜೂನಿಯರ್‌ ಡಾಕ್ಟರಾಗಿ ಕೆಲಸ ನಿರ್ವಹಿಸುತ್ತಿದ್ದ.
ಅಂತು ಆ ಕುಟುಂಬಕ್ಕೆ ಮಕ್ಕಳು ಎಂದೂ ಸಮಸ್ಯೆಗಳಾಗಿರಲಿಲ್ಲ.
ಆದರೆ ನಾಲ್ಕು ವರ್ಷದ ಹಿಂದೆ ಮನೆಯ ಗೃಹಿಣಿ ತೀರಿಕೊಂಡು ಎಲ್ಲರ ಬದುಕನ್ನು ಕತ್ತಲೆಯಾಗಿಸಿ ಹೋಗಿದ್ದಳು.
ಎಷ್ಟು ದಿನ ನಿಲ್ಲಬಲ್ಲದು, ಕತ್ತಲು.
ಕಾಲ ಎಲ್ಲವನ್ನ ಮರೆಸುತ್ತದೆಯೆನ್ನುವಂತೆ ಆಕೆ ಇಲ್ಲದ ಜೀವನಕ್ಕೆ ಮಿಕ್ಕವರು ನಿಧಾನವಾಗಿ ಯಾದರೂ ಹೊಂದಿಕೊಂಡರು.
ಇಂದು ಕೃಷ್ಣಮೂರ್ತಿ ಮೊದಲ ಸಲ ಹೂ ಮರೆತು ಬಂದಾಗ ಚಾರುಲತಗೆ ಅಚ್ಚರಿಯೆನಿಸಿದರೂ, ಅದರ ಬಗ್ಗೆ ತಲೆ ಕೆಡಿಸಿಕೊಳ್ಳಲಿಲ್ಲ.
ಆದರೆ ಇಂದು ವಿಮನಸ್ಕನಾಗಿದ್ದು ಕಂಡು ಚಿಂತಿತಳಾದಳು.
ಎಂದಿನ ಹಾರುವ ನಡಿಗೆ ಅವನದಾಗಿರಲಿಲ್ಲ.
ಒಳಗೆ ಅಡಿಯಿಟ್ಟ ಕೂಡಲೇ ಪ್ರೀತಿಯ ಉಸುರಿನಲ್ಲಿ ಮಡದಿಯನ್ನು ತೇಲಾಡಿಸಿ ಬಿಡುತ್ತಿದ್ದ ವ್ರತವನ್ನು ಮೊದಲ ಸಲ ಕೈ ಬಿಟ್ಟ.
ಅವನೊಬ್ಬ ಲೆಕ್ಚರರ್‌ ಆದುದ್ದರಿಂದ ಕಾಲೇಜು ಓದಿದ ಚಾರುಲತಗೆ ಅಲ್ಲಿನ ಸಮಸ್ಯೆಗಳ ಅರಿವಿದ್ದರಿಂದ ಸುಮ್ಮನಾದಳು.
ಬಟ್ಟೆ ಬದಲಾಯಿಸಿ ಬಾತ್‌ ರೂಮಿಗೆ ಹೋಗಿ ಬಂದವನು ತುಟಿ ಬಿಚ್ಚದೇ ಪೇಪರೆತ್ತಿಕೊಂಡ.
"ಸಂಜೆಯೇನು ಮಾಡ್ಬೇಡ, ಹೊರ್ಗಡೆ ಹೋಗೋಣ”?
ಮಡದಿಯ ತುಟಿಗಳನ್ನು ನೋಯಿಸಿಯೇ ಬೆಳಿಗ್ಗೆ ನುಡಿದಿದ್ದ.
ಅದಕ್ಕಾಗಿ ತಿಂಡಿಯ ಯೋಚನೆಯನ್ನು ಕೈಬಿಟ್ಟು, ರೆಡಿಯಾಗಿ ಕಾದು ನಿಂತಿದ್ದು.
ಆ ಬಗ್ಗೆ ತಲೆ ಕೆಡಿಸಿಕೊಳ್ಳದ ಚಾರುಲತ ನಾಲ್ಕು ಕೋಡುಬಳೆಗಳನ್ನ ಒಂದು ತಟ್ಟೆಗೆ ಹಾಕಿಕೊಂಡು ಬಂದು ಅವನ ಮುಂದಿಟ್ಟಳು.
“ತಗೊಳ್ಳಿ, ಕಾಫಿತರ್ತೀನಿ'' ಎಂದಾಗ, ಪೇಪರನ್ನ ಒರಟಾಗಿ ಎಸೆದು “ನಂಗ್ಳೇಡ, ಕಾಫಿತಂದ್ಬಿಡು'' ಅಂದು ಹಣೆಯೊತ್ತಿಕೊಂಡಾಗ ಗಾಬರಿಯಿಂದ ಹಣೆಯ ಮೇಲೆ ಕೈಯಿಟ್ಟು "ತಲೆ ನೋವಾ ?
ಅಮೃತಾಂಜನಾ ಹಾಕ್ಲಾ ?" ಕೇಳಿದಳು.
ಆ ಕೃೆ ಹಿತವೇ.
ಅರ್ಧ ನೋವು ಕಡಿಮೆಯಾಗಿದೆಯೆನಿಸಿತು.
“ಸ್ವಲ್ಪ ಬಿಗಿಯಾಗಿದ್ದರೇ,ಕೆಲ್ಸ ಸುಗಮ.
ಇದು ನಿನ್ನ ಮನಸ್ಸಿನಲ್ಲಿ ಇರ್ಲೀ'' ತಂದೆ ಬೆಳಿಗ್ಗೆ ಫೋನ್‌ನಲ್ಲಿ ಎಚ್ಚರಿಸಿದ್ದರು.
“ಏನ್ಬೇಡ, ಒಂದಿಷ್ಟು ಕಾಫಿ ತಗೊಂಡ್ಬಾ'' ಅರೆ ಮನಸ್ಸಿನಿಂದ ಹೇಳಿದ.
ಮದುವೆಯಾದಂದಿನಿಂದ ಅವನ ಪ್ರೀತಿಯಲ್ಲಿಯೇ ತೇಲಿದವಳಿಗೆ ತಟ್ಟನೇ ಪ್ರೀತಿಯ ಪ್ರವಾಹವೆ ನಿಂತ ಅನುಭವವಾಯಿತು.
ಈಚೆಗೆ ಓದಿದ ವಿಷಯ ನೆನಪಾಯಿತು.
ಮದುವೆಯಾದ ಮೊದಲ ವಾರ ಹೆಂಡತಿಯನ್ನ ಪಾರ್ಕ್‌ಗೆ ಕರೆದೊಯ್ದ ಗಂಡ ಮುಳ್ಳನ್ನ ನೋಡಿದ ಕೂಡಲೇ ಗಾಬರಿಯಿಂದ ಮಡದಿಯನ್ನುಎಳೆದು ಅಪ್ಪಿಕೊಂಡು "ಮುಳ್ಳಿದೆ ನೋಡು ಚಿನ್ನ, ನಿಂಗೇನಾದ್ರೂ ಗಾಯವಾದರೇ ನನ್ನ ಎದೆಯ ಬಡಿತ ನಿಂತು ಹೋಗುತ್ತೆ" ಅಂತಾನೆ, ಅದೇ ಗಂಡ ಎರಡನೆವಾರ ಮಡದಿಯನ್ನು ಪಾರ್ಕಿಗೆ ಕರೆದೊಯ್ದಾಗ "ಅಲ್ಲಿ ಮುಳ್ಳಿದೆ, ತುಳಿಬೇಡ" ಅಂತ ಎಚ್ಚರಿಸುತ್ತಾನೆ.
ಮೂರನೆ ಸಲ ಪಾರ್ಕಿಗೆ ಕರೆದೊಯ್ದಾಗ "ಮುಳ್ಳಿದೆ,ನಿಂಗೆ ಕಣ್ಣು ಕಾಣೋಲ್ಟಾ " ಗದರಿಸುತ್ತಾನೆ.
ಇದು ಲೌಕಿಕವಾದ ಸುಖ,ಅನುಭವ.
ಚಾರುಲತ ಮುಖದ ಮೇಲೆ ತೆಳುವಾದ ನಗು ಆರಳಿತು.
ಕಾಫಿ ಬಿಸಿ ಮಾಡಿ ತಂದು ಅವನ ಮುಂದಿಟ್ಟು "ತಗೊಳ್ಳಿ, ಸ್ವಲ್ಪ ತಲೆನೋವಾದರೇ ಒಂದಿಷ್ಟು ಮಲ್ಗಿ.
ಹೊರ್ಗೆ ಹೋಗೋ ಪ್ರೋಗ್ರಾಮ್‌ ಬೇಡ" ನವಿರಾಗಿ ನುಡಿದಳು.
ಮುಖ ಗಂಟಿಕ್ಕಿಯೇ ಕಾಫಿ ಕುಡಿದು ಮುಗಿಸಿ ಎದ್ದುಹೋದ ರೂಮಿಗೆ.
ಅವಳು ಹಿಂಬಾಲಿಸಲಿಲ್ಲ.
ಕೆಲವು ಸಮಯ ಒಂಟಿಯಾಗಿ ಬಿಟ್ಟರೇ ತಾನಾಗಿ ಟೆನ್‌ಷನ್‌ ಕಮ್ಮಿಯಾಗುತ್ತದೆ ಯೆಂದು ತಿಳಿದು, ಆರಾಮಾಗಿ ಹೊರಗೆ ಬಂದು ಕಾಂಪೌಂಡ್‌ ಪಕ್ಕದಲ್ಲಿ ಬೆಳೆದು ನಿಂತ ಕನಕಾಂಬರ ಗಿಡಗಳಲ್ಲಿ ಅರಳಿದ ಹೂಗಳನ್ನ ಬಿಡಿಸಿದಳು.
ಅವಳು ಬೆಳೆದಿದ್ದು ಹೆಚ್ಚು ಶ್ರೀಮಂತಿಕೆಯಲ್ಲಿ ಅಲ್ಲ.
ತೀರಾ ಮಧ್ಯಮ ದರ್ಜೆಯ ಜೀವನದ ಎಲ್ಲಾ ಸೂಕ್ಷ ಗಳು ಅವಳಿಗೆ ಅರ್ಥವಾಗಿತ್ತು.
ಹೂ ಕಟ್ಟಿ ಮುಗಿಸಿದ ನಂತರವೆ ರೂಮಿಗೆ ಹೋಗಿದ್ದು.
ಮೂರ್ತಿ ನೋಟ ಛಾವಣಿಯತ್ತ ನೆಟ್ಟಿತ್ತು.
ಮುಖದ ಬಿಗುವು ಕಡಿಮೆಯಾದರೂ ಆಂದೋಳನವಿತ್ತು.
ಪಕ್ಕದಲ್ಲಿ ಕೂತು ಅವನ ಕೈಯನ್ನ ತನ್ನ ಕೈಯೊಳಗೆ ತಗೊಂಡು ಕೆನ್ನೆಗೊತ್ತಿಕೊಂಡು ಮೃದುವಾಗಿ ತುಟಿ ತೆರೆದಳು.
"ಯಾಕೋ ಒಂದು ತರಹ ಇದ್ದೀರಾ ?
ಕಾಲೇಜಿನಲ್ಲಿ ಏನಾದ್ರೂ ಪ್ರಾಬ್ಲಮ್ಮಾ? ವಿದ್ಕಾರ್ಥಿಗಳದಾದ್ರೆ. . . . ಸೀರಿಯಸ್ಸಾಗಿ ತಗೋಬೇಕು.
ಮ್ಯಾನೇಜ್‌ಮೆಂಟ್‌ ಕಿರಿಕಿರಿ ಮಾಮೂಲ್‌.
ಅದ್ನ ಡೀಪಾಗಿ ತಗೋಬೇಡಿ.''
ಬಹಳಷ್ಟು ದನಿ ಮೃದುವಾಗಿಸಿ ಕೇಳಿದ್ದು ಚಾರುಲತ.
ತಟ್ಟನೆ ಬಾಯಿ ಬಿಡಲಿಲ್ಲ ಮೂರ್ತಿ.
ಪ್ರಸ್ತಾಪ ಮುಂದೂಡುವಂತಿರಲಿಲ್ಲ.
ಎರಡು ಸಲ ತುಟಿಯ ಮೇಲೆ ನಾಲಿಗೆಯಾಡಿಸಿದವನು ಸರಕ್ಕನೆ ಅವಳನ್ನ ಎಳೆದುಕೊಂಡ.
“ಅಣ್ಣ ಫೋನ್‌ ಮಾಡಿದ್ರು'' ಎಂದ.
ಇದು ಅವಳಿಗೆ ಸೀರಿಯಸ್ಸಾದ ವಿಷಯವಾಗಿ ಕಾಣಲಿಲ್ಲ.
ಇನ್ನ ಮನೆಗೆ ಫೋನ್‌ ಇರದಿದ್ದರಿಂದ ಆಗಾಗ ಕಾಲೇಜಿಗೆ ಫೋನ್‌ ಮಾಡಿ ಯೋಗ ಕ್ಷೇಮ ವಿಚಾರಿಸುತ್ತಿದ್ದುದು ಸಹಜ.
ಆದರೆ ಇಂದು ಅಷ್ಟೇ ಅಲ್ಲವಾಗಿ ಕಂಡಿತು.
"ಎಲ್ಲಾ ಹೇಗಿದ್ದಾರಂತೆ ?"ವಿಷಯಕ್ಕೆ ಬಂದಾಗ ಅವನ ಮುಖ ಬಿಗಿಯಿತು.
"ನಿಮ್ಮ ಮನೆಗೆ ಹೋಗಿದ್ರಂತೆ.
ನಮ್ಮ ಪೂಜಾ ಏನಾಗಿದ್ದಾಳೆ?" ಅವನ ಮೂಗಿನ ತುದಿ ಕೆಂಪಾಗಿದ್ದು ನೋಡಿ ಒಂದಿಷ್ಟು ಹಿಂದೆ ಸರಿದಳು.
ಮೂರ್ತಿ ಹೇಳದೆಯೇ ಒಂದಿಷ್ಟು ವಿಷಯ ಅರ್ಥವಾಯಿತು.
ನಾದಿನಿ ಒಂದಲ್ಲ ಒಂದು ಕಾರಣ ಹೇಳಿಕೊಂಡು ಮನೆಗೆ ಬರುತ್ತಿದ್ದಾಗ ಅವಳಿಗೆ ಅಷ್ಟಿಷ್ಟು ಅರ್ಥವಾಗಿತ್ತು.
"ನನ್ನ ಪ್ರಶ್ನೆಗೆ ಉತ್ತರ ಸಿಗ್ಗಿಲ್ಲ" ದನಿಯೇರಿಸಿದ.
ಮೊದಲ ಸಲ ಕೈ ಹಿಡಿದವನ ಗಡಸು ಸ್ವರದ ಪರಿಚಯವಾಯಿತು.
ಅನಗತ್ಯ,ಘರ್ಷಣೆ ಬೇಡವೆನಿಸಿತು.
“ಪೂಜಾಗೇನು ದಂತದ ಗೊಂಬೆಯೇ.
ವಿದ್ಯೆಯಲ್ಲಿ, ಬುದ್ಧಿಯಲ್ಲಿ ಸಧ್ಯಕ್ಕೆ ಹೋಲಿಸಲು ನಂಗೆ ಇನ್ನೊಬ್ಬ ವ್ಯಕ್ತಿ ಸಿಕ್ಕಿಲ್ಲ.
ಹಾಗೇ ನೋಡಿದ್ರೆ ಅವಳ್ಗಿಂತ ನೀವು ಡಲ್‌'' ನಗುವು ತುಂಬಿಕೊಂಡು ಉಸುರಿದಳು.
ಸ್ವಲ್ಪ ಬಿರುಸಾಗಿ ಇವಳತ್ತ ನೋಟ ಹರಿಸಿ “ಸ್ವಲ್ಪ ಸರ್ಯಾಗಿ ಕೇಳು !
ನನ್ಮುಂದೆ ಹೇಳ್ದ ಮಾತುಗಳನ್ನ ನಿನ್ನಣ್ಣನ ಮುಂದೆ ಹೇಳು.
ಈಡಿಯಟ್ ಬೇಡಾ ಅನ್ನೋಷ್ಟು ಪೊಗರು” ರೇಗಿದ.
ಚಾರುಲತ ತಲೆ ಕೊಡವಿದಳು.
ಅವಳಿಗೆ ಇದ್ದಿದ್ದು ಒಬ್ಬನೇ ಅಣ್ಣ ಅವನು ಕೂಡ ಆಯೋಗ್ಯನಲ್ಲ.
ಅಂಥದ್ದರಲ್ಲಿ 'ಈಡಿಯಟ್‌, ಪೊಗರು' ಶಬ್ದಗಳ ಬಳಕೆ ನಾಗರೀಕವೆನಿಸಲಿಲ್ಲ.
ನಿಮ್ಮ ಮಾತಿನ ರೀತಿ ನಂಗಿಷ್ಟವಾಗ್ಲಿಲ್ಲ.
ನಾನು ನಿಮ್ಮುಂದೆ ಹೇಳ್ದ ಮಾತುಗಳು ಉತ್ಪ್ರೇಕ್ಷೆಯದಲ್ಲ, ಎಲ್ಲಿ ಬೇಕಾದ್ರೂ ಹೇಳ್ಬಲ್ಲೆ.
ಯಾರ ಅಣ್ಣನ ಬಗ್ಗೆ ನೀವು 'ಈಡಿಯಟ್‌' ಅನ್ನೋ ಪದ ಏಳಸಿದ್ದು ?
ಅವಳ ನುಡಿಗಳು ನೇರವಾಗಿತ್ತು.
ಚಾರುಲತ ಮನಸ್ಸಿಗೆ ನೋವಾಗಿತ್ತು.
ಗಂಡನ ಬಗೆಗಿನ ಅಭಿಮಾನದ ಪರದೆ ಕಿಂಚಿತ್‌ ಅಲುಗಾಡಿತು.
ಈಗ ಮುಖಾಮುಖಿ ಮಾತಿಗೆ ಇಳಿದ ಮೂರ್ತಿ.
“ಪೂಜಾ, ನಿನ್ನಣ್ಣನ್ನ ಇಷ್ಟಪಟ್ಟಿದ್ದಾಳೆ.
ಅದೊಂದನ್ನೇ ನೆವ ಮಾಡ್ಕೊಂಡ್‌ ಅಪ್ಪ, ಅಮ್ಮ ನಿಮ್ಮ ಮನೆಗೆ ಹೋದ್ರಂತೆ.
ಅವ್ರಿಗೆ ಏನು ಸಿಕ್ತು ಗೊತ್ತಾ ?
ಅಪ್ಪ, ಮಗನ ಕಡೆ ಕೈ ತೋರಿಸಿದ್ರಂತೆ.
ಅವ್ನು ಎದುರು ಮನೆ ಕಡೆ ನೋಡಿಆರಾಮಾಗಿ ಅಲ್ಲಾಡಿಸಿ ಬಿಟ್ಟ ಕೈನಾ.
ಇದು ಎಷ್ಟು ಸರಿ?ರೋಷದಿಂದ ಕೂಗಾಡಿದ.
ಕೈ ಹಿಡಿದು ಅವನನ್ನು ಬಲವಂತದಿಂದ ಕೂಡಿಸಿದ ಚಾರುಲತ "ಬೀ ಕಾಮ್‌.
ಕೂಗಾಡೋ ಅಂಥದೇನಾಗಿದೆ ?
ಇದ್ನ ನಿಧಾನವಾಗಿ ಕೂತು ಮಾತಾಡ್ಬಹುದಿತ್ತು.
ಪೂಜಾ ಬಗ್ಗೆ ಇನ್ನೊಂದ್ಮಾತಿಲ್ಲ.
ಅಮ್ಮ ಸತ್ತಾಗ ನಮ್ಗೇ ತುಂಬ ಸಹಾಯ ಮಾಡಿದ ಶೇಖರ್‌ ಅಂಕಲ್‌ ಮಗ್ಳುನ ಅಂದಿನಿಂದ್ಲೇ ಪ್ರೀತಿಸ್ತಾ ಇದ್ದ.
ಇದ್ಕೆ ಯಾರ್ದೇ ವಿರೋಧವಿಲ್ಲ.
ಇಷ್ಟೇ ವಿಷ್ಯ.
ಪೂಜಾಗೆ ಇನ್ನ ಉತ್ತಮ ಸಂಬಂಧ ಉಡ್ಕಿದರಾಯ್ತು" ಅತ್ಯಂತ ಶಾಂತವಾಗಿ ಹೇಳಿದಳು.
ಮುಖ ಕೊಡವಿ ಮೇಲೆದ್ದ.
ಇದನ್ನ ದೊಡ್ಡ ಅವಮಾನವಾಗಿ ಭಾವಿಸಿದ್ದ ಅವನ ತಂದೆ ಮಗನನ್ನ ತರಾಟೆಗೆ ತಗೊಂಡರು “ಇದು ನನ್ನ ಪ್ರಿಸ್ಟಿಜ್‌ ಕೊಶ್ಚನ್‌ಮಾತ್ರವಲ್ಲ, ಪೂಜಾ ನವೀನ್‌ನ ಮಾತ್ರ ವಿವಾಹವಾಗ್ತೀನೀಂತ ಹಟ ಹಿಡಿದಿದ್ದಾಳೆ.
ಇದು ನಡೀಲೇ ಬೇಕು.
ಮೂಗು ಹಿಡಿದರೇ ಬಾಯಿ ತಾನಾಗಿ ತೆದ್ದುಕೊಳ್ಳುತ್ತೆ.
ನೀನು ಚಾರುಲತಗೆ ಸ್ವಲ್ಪ ಗಟ್ಟಿಯಾಗಿ ಹೇಳು.
ನಿಂಗೆ ಇರೋಳು ಒಬ್ಳೇತಂಗಿ'' ತಂದೆಯ ಮಾತುಗಳು ಅವನ ಮನಸ್ಸಿನ ಮೇಲೆ ವಿಪರೀತ ಪರಿಣಾಮ ಬೀರಿತ್ತು.
"ಡೋಂಟ್‌ ವರೀ, ನವೀನ್‌ ಹಾಗೇ ಅನ್ನೋಕೆ ಸಾಧ್ಯನೇ ಇಲ್ಲ.
ನಾನು ಒಪ್ಪಿಸ್ತೀನಿ” ಭದ್ರವಾದ ಭರವಸೆ ಕೊಟ್ಟಿದ್ದ.
ಇದೆಲ್ಲ ಮೃದುವಾಗಿ ಆಗೋ ಕೆಲಸವಲ್ಲ.
ಸ್ವಲ್ಪ ಬಿಗಿಯಾಗಿರು " ಯುಗಂಧರ್‌ ಮಗನಿಗೆ ಉಪದೇಶಿಸಿದ್ದರು.
ವರದಕ್ಷಿಣೆ ತೆಗೆದುಕೊಳ್ಳದೇ ಚಾರುಲತನ ಸೊಸೆಯಾಗಿ ತಂದುಕೊಂಡು ಆ ಕುಟುಂಬಕ್ಕೆ ದೊಡ್ಡ ಉಪಕಾರ ಮಾಡಿರುವ ಭಾವನೆ ಅವರದು.
ಬಹುಶಃ ಅಂದು ಇರಲಿಲ್ಲವೇನೋ, ಇಂದು ಅದನ್ನ ಬಣವಾಗಿಸಿಕೊಂಡು ಮಗಳ ಆಸೆ ನೆರವೇರಿಸಲು ಕಂಕಣ ಬದ್ಧರಾಗಿದ್ದರು.
ರಾತ್ರಿ ಊಟದ ಸಮಯದವರೆಗೂ ಮಡದಿಯೊಂದಿಗೆ ಮಾತಾಡಲಿಲ್ಲ.
ಸದಾ ವಟಗುಟ್ಟುವ ಗಂಡ ಇಷ್ಟೊಂದು ಸಂಯಮ ವಹಿಸಿದ್ದು ಹೇಗೆ ? ಸ್ವಲ್ಪ ಅಪಾಯವೆನಿಸಿತು.
ಸದಾ ಕಾಡುವ ಅವನಿಂದ ಸ್ವಲ್ಪವಾದರೂ ಪುರಸತ್ತು ಸಿಕ್ಕಿದ್ದು ಸಮಾಧಾನದ ವಿಷಯವೇ.
“ಬೆಳಗಿನ ಟ್ರೇನ್‌ಗೆ ರಿಸರ್ವ್‌ ಮಾಡ್ಲಿದ್ದೀನಿ.
ನಿನ್ನಣ್ಣನಿಗೆ ಸ್ವಲ್ಪ ಬುದ್ಧಿ ಹೇಳು.
ಪೂಜಾ ಅವನನ್ನ ಮದ್ವೆಯಾಗ್ಬೇಕೂಂತ ಹಟ ಹಿಡ್ದು ಕೂತಿದ್ದಾಳಂತೆ.
ಅವಳೊಬ್ಬ ಫೂಲ್‌.
ಅಪ್ಪ ನವೀನ್‌ನ ತಾತನಂಥ ಗಂಡನ್ನ ಹುಡ್ಕಿ ತರುತ್ತಾ ಇದ್ದರು” ಅಭಿಮಾನದಿಂದ ಭುಸುಗುಟ್ಟಿದ ಬೆಡ್‌ರೂಂಗೆ ಹೋಗುವ ಮುನ್ನ.
ಚಾರುಲತ ಕೈಯಲ್ಲಿನ ಮ್ಯಾಗಝೀನ್‌ನ ಮುಚ್ಚಿ “ಬಹುಶಃ ಅವ್ನ ತಾತನ್ನಬೇಕಾದ್ರೆ ತಗಂಡ್‌ ಬರ್ತಾ ಇದ್ದರೇನೋ, ಅವನನ್ನ ಒಪ್ಪಿಸೋಕ್ಕಂತು ಆಗ್ತಾ ಇದ್ಲಿಲ್ಲ.
ಪ್ಲೀಸ್‌, ಸ್ವಲ್ಪ ಅರ್ಥ ಮಾಡ್ಕೊಳ್ಳಿ.
ಈಗಾಗ್ಲೇ ಬಹಳ ದೂರ ಬಂದಿದ್ದಾರೆ.
ಈಗ ಅವ್ರ ಪ್ರೇಮ ಮೊಳಕೆಯ ಮಟ್ಟದಲ್ಲಿಲ್ಲ, ಕಿತ್ತುಎಸೆಯೋಕೆ. . . . . ಗಿಡವಾಗಿದೆ.
ಅನಗತ್ಯವಾಗಿ ಆ ಪ್ರಸ್ತಾಪ ವೆತ್ತೋದೇ ಬೇಡ.
ಪೂಜಾಗೆ ಬೇರೆ ಹುಡುಗನ್ನ ಹುಡ್ಕೋಣ” ಒಂದು ಸಲಹೆ ಕೊಟ್ಟಳು.
ಟೀಪಾಯಿ ಮೇಲಿದ್ದ ಪೇಪರ್‌ಗಳನ್ನೆಲ್ಲ ಎರಚಾಡಿ ಬಿಟ್ಟ ಮೂರ್ತಿ.
ಮದುವೆ ನಂತರ ಒಂಬತ್ತು ತಿಂಗಳಾದ ಮೇಲೆ ಗಂಡನಿಗೆ ಕೋಪ ಬಂದರೇ ಹೇಗೆ ವರ್ತಿಸುತ್ತಾನೆಂದು ತಿಳಿದಳು.
“ಐ ಡೋಂಟ್‌ ಕೇರ್‌, ನಿನ್ನ ಸಜೆಷನ್‌ ಅಲ್ಲ ನಂಗೆ ಬೇಕಿರೋದು.
ಆ ಮೂರ್ಖನ್ನ ವಿವಾಹಕ್ಕೆ ಒಪ್ಪು.
ಬನಶಂಕರಿಯಲ್ಲಿ ಹೊಸ್ಸಾಗಿ ಕಟ್ಟಿರೋ ಮನೆ ಅವ್ರಿಗೆ ವರದಕ್ಷಿಣೆಯಾಗಿ ಅಪ್ಪ ಕೊಡೋಕೆ ಸಿದ್ಧವಾಗಿದ್ದಾರೆ.
ಅದ್ರ ಬೆಲೆ ಈಗಿನ ರೇಟಿಗೆ ಮೂವತ್ತು ಲಕ್ಷವಾಗುತ್ತೆ” ಎಂದ.
ಚಾರುಲತಗೆ ಮಾತಾಡ ಬೇಕೆನಿಸಲಿಲ್ಲ.
ಸುಮ್ಮನೆ ಹೋಗಿ ಮಲಗಿದಳು.
ಮನುಷ್ಯನಲ್ಲಿರೋ ವಿಕಾರಗಳಲ್ಲಿ ಇದು ಕೂಡ ಒಂದೆನಿಸಿತು.
ಅವಳಿಗೆ ಅಣ್ಣನ ಸ್ವಭಾವ ಗೊತ್ತು.
ಜೀವನದಲ್ಲಿ ಕೆಲವು ಮೌಲ್ಯಗಳನ್ನು ಇಟ್ಟು ಕೊಂಡಿದ್ದ.
ಹಣದ ಆಸೆಗೆ ಅವನ್ನು ಬಲಿಗೊಡಲಾರ.
ಅಂಥ ಪ್ರೇರಣೆಯನ್ನು ಹಚ್ಚಲು ಅವಳು ಸಿದ್ಧವಿಲ್ಲ.
ಮಲಗುವ ಮುನ್ನ ಮೂರ್ತಿ “ಲಗೇಜ್‌ ರೆಡಿ ಮಾಡ್ಕೋ.
ಆರು ಗಂಟೆಗೆ ಟ್ರೈನ್‌, ನಾವು ಐದು ಹತ್ತಕ್ಕೆ ಮನೆ ಬಿಡ್ಬೇಕು'' ಸೂಚಿಸಿದ ಬಿಗುವಾಗಿಯೇ.
ಮಂಚದ ಮೇಲೆ ಉರುಳಿಕೊಂಡವಳು ಮೇಲಕ್ಕೆ ಏಳಲಿಲ್ಲ.
ಅಪ್ಪನ ಮನೆ ಮಾವನ ಮನೆ ಒಂದೇ ಊರು.
ಎರಡು ಕಡೆಯು ಅವಳ ಬಟ್ಟೆ ಬರೆಗಳು ಇತ್ತು.
ಇನ್ನ ಪ್ಯಾಕ್‌ ಮಾಡಲು ಏನಿದೆ ?
ಹತ್ತೇ ನಿಮಿಷದಲ್ಲಿ ಮಡದಿಯನ್ನು ಬಾಹುಗಳಲ್ಲಿ ತುಂಬಿ ಕೊಂಡ ಮೂರ್ತಿ.
ಕಣ ಕಣಗಳಲ್ಲಿ ಉಸಿರಾಡಿದ.
ಅದು ಬರೀ ಬಯಕೆಯೆನಿಸಿತು ಚಾರುಲತಾಗೆ.
ಬೆಳಿಗ್ಗೆ ಐದರ ಸುಮಾರಿಗೆ ಬಂದು ಪಕ್ಕದ ಮನೆಯವರು “ನಿಮ್ತಂದೆ ಫೋನಿದೆ” ಕರೆದೊಯ್ದರು ಮೂರ್ತಿಯನ್ನ.
ಐದು ನಿಮಿಷಗಳ ನಂತರ ಬಂದ ಅವನ ಮುಖದಲ್ಲಿ ಕಠಿಣತೆ ಇತ್ತು.
"ಇಂದು ಕೂಡ ನಿಮ್ಮಮ್ಮ ಹೋಗ್ಬಂದ್ಲು.
ಅಪ್ಪ,ಮಗ್ನ ನಿಲುವಿನಲ್ಲಿ ಯಾವ್ದೇ ಬದಲಾವಣೆ ಇಲ್ಲ.
ಪೂಜಾ ನೆನ್ನೆ ಇಡೀ ದಿನ ಏನು ತಿನ್ನಲಿಲ್ಲ.
ಚಾರುಲತ ಇಂದ್ಲೇ ಈ ಕೆಲ್ಸ ಆಗ್ಬೇಕು" ಫೋನ್‌ನಲ್ಲಿ ಮಗನಿಗೆ ಎಚ್ಚರಿಕೆ ನೀಡಿದರು.
ಒಳಗೆ ಬಂದವನೇ ಕ್ರಾಪ್‌ನ ಕೂದಲಲ್ಲಿ ಕೈ ಹಾಕಿ ಕಿತ್ತ ಆರಾಮಾಗಿ ಸಾಗುತ್ತಿದ್ದ ದಾಂಪತ್ಯಕ್ಕೆ ಇಂಥ ಓಂದು ವಿಘ್ನ !
ಅವನಿಗೆ ಪೂರ್ತಿ ತಲೆ ಕೆಟ್ಟಂತಾಯಿತು.
"ಮಾವನವ್ರುಎನ್ಹೇಳಿದ್ರು ?" ಸ್ನಾನ ಮಾಡಿ ತಲೆಗೆ ಟವಲು ಸುತ್ತಿಕೊಂಡುಬಂದ ಚಾರುಲತ ಕೇಳಿದಳು.
ಕೂತಿದ್ದವನು ಎದ್ದು ನಿಂತು, ಮುಷ್ಟಿ ಬಿಗಿಹಿಡಿದು ತೋರು ಬೆರಳೆತ್ತಿ “ಬಿ ಕೇರ್‌ಫುಲ್‌, ಪೂಜಾನ ನವೀನ್‌ ವಿವಾಹವಾಗ್ಲೇಬೇಕು.
ಇಲ್ಲದಿದ್ದರೇ ಪರಿಣಾಮ ನೆಟ್ಟಗಾಗೋಲ್ಲ”' ಎಂದವನು ಟವಲನ್ನು ಹೆಗಲ ಮೇಲೆ ಹಾಕಿಕೊಂಡು ಸಾನ್ನಕ್ಕೆ ಹೋದ.
ತೀರಾ ಅವಿವೇಕಿಯಾಗಿ ಕಂಡ ಮೂರ್ತಿ.
ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿ ವಿವಾಹಗಳು ಎಷ್ಟು ಮುಖ್ಯವೋ, ಸಂಗಾತಿಯ ಆಯ್ಕೆಯಲ್ಲಿ ಅವರವದೇ ಹೆಚ್ಚಿನ ಪಾಲು.
ಇಷ್ಟು ಅರ್ಥವಾಗದೇ ?
ತೀರಾ ಬೇಸರದಿಂದಲೇ ರೆಡಿಯಾಗಿ ಮೂರ್ತಿಗೆ ಒಂದು ಕಪ್‌ ಕಾಫಿ ತಂದಿಟ್ಟಳು.
"ನವೀನ್‌ ಈಗಾಗ್ಲೇ ತನ್ನ ಸಂಗಾತಿಯನ್ನ ಆರಿಸಿ ಕೊಂಡಿದ್ದಾನೆ.
ನಮ್ಮ ಹೋಗುವಿಕೆಯಿಂದ ಯಾವ್ದೇ ಪ್ರಯೋಜನವಾಗ್ದು.
ಪೂಜಾಗೆ ಬೇರೆ ಸಂಬಂಧ ನೋಡೋಣ.
ಒತ್ತಾಯದ ವಿವಾಹಗಳಿಂದ ಯಾರು ಸುಖಿಗಳು ಆಗೋಲ್ಲ."
ಮುಂದಿನ ಚಿತ್ರವನ್ನು ಬಿಡಿಸಿಟ್ಟಳು ಅತ್ಯಂತ ನವಿರಾಗಿ.
ಕಾಫಿಯ ಕಪ್‌ನ ಗೋಡೆಗೆ ಎಸೆದ "ಅದ್ನ ಆಮೇಲೆ ಯೋಚ್ಸೋಣ.
ನವೀನ್‌ ಪೂಜಾ ಮದ್ವೆ ಆಗ್ಲೇ ಬೇಕು.
ಅವ್ಳ ಜೊತೆ ಓಡಾಡಿ ಈಗ ತಪ್ಪಿಕೊಳ್ಳೋಕ್ಕಾಗೋಲ್ಲ" ಕನಲಿದ.
ಮಾತು ಬೇಡವೆನಿಸಿತು ಚಾರುಲತಾಗೆ.
ಆದರೆ ಅವನ ಮಾತಿನ ರೀತಿಗೆ ಗಾಬರಿಗೊಂಡಳು.
ನವೀನ್‌ ಸರಸಿ, ಸರಳ ಮಾತಿನವ ಆಕರ್ಷಕವಾಗಿ ಹರಟುತ್ತಿದ್ದ.
ಇವಳು,ಮೂರ್ತಿಯ ವಿವಾಹ ಗೊತ್ತಾದ ಮೇಲೆ ಪದೇ ಪದೇ ಬರುತ್ತಿದ್ದ ಪೂಜಾ ಅವನನ್ನ ಡ್ರಾಪ್‌ ಮಾಡುವಂತೆ ಗೋಗರೆಯುತ್ತಿದ್ದಳು.
ಕೆಲವೊಮ್ಮೆ ಬಲವಂತಮಾಡಿ ಷಾಪಿಂಗ್‌ಗೆ ಕರೆದೊಯ್ಯುತ್ತಿದ್ದುದುಂಟು.
ಒಂದೆರಡು ಸಲ ಕಾಡಿಬೇಡಿ ಫಿಲಂಗೆ ಕೂಡ ಹೋಗಿದ್ದರು ಜೊತೆಯಲ್ಲಿ.
ಅವನ ಸ್ನೇಹಮಯ ಆಕರ್ಷಕ ವ್ಯಕ್ತಿತ್ವವನ್ನ ಇಷ್ಟಪಟ್ಟಿರಬಹುದು.
ಇಲ್ಲ ಅವನನ್ನ ತಪ್ಪಿತಸ್ಥನನ್ನಾಗಿ ಮಾಡಿ ಶಿಕ್ಷೆ ವಿಧಿಸಲು ಸಾಧ್ಯವೇ ?
ಕಾಫಿ ಅಲ್ಲಿಯೇ ತಣ್ಣಗಾಯಿತು.
ಸ್ಟೇಷನ್‌ಗೆ ಬಂದಾಗ ಟ್ರೈನ್‌ ಹೊರಟು ನಿಂತಿತ್ತು.
ಇಬ್ಬರು ಹತ್ತಿದರು.
ಯಾರ ಮುಖದಲ್ಲು ಗೆಲುವಿಲ್ಲ.
ಹೆಚ್ಚಿನ ಆತಂಕ ಮೂರ್ತಿಗೂ ಇತ್ತು.
ಇಲ್ಲಿ ತಂದೆಯ ಪ್ರೆಸ್ಟೀಜ್‌ ಜೊತೆ ಪೂಜಾಳ ಹಟವನ್ನು ಲೆಕ್ಕ ಹಾಕಬೇಕಿತ್ತು.
ಏನು ಮಾತಾಡಬೇಕೋ ತಿಳಿಯದಾಯಿತು.
ಕಿಟಕಿಯಿಂದ ಹೊರಗೆ ನೋಡುತ್ತ ಕೂತ.
ಇವನಿಗೆ ಕೆಲಸ ಸಿಕ್ಕಾಗ "ಇನ್ನ ಸಾಕು ಒಂಟೀ ಜೀವ್ನ, ಅಕೌಂಟ್‌ ಸೆಕ್ಷನ್‌ನಲ್ಲಿ ಕೆಲ್ಸ ಮಾಡ್ತಾ ಇರೋ ವಾಸುದೇವಯ್ಯನಿಗೆ ಒಬ್ಬ ಮಗ್ಳು ಇದ್ದಾಳೆ.
ಅಂಥ ದೊಡ್ಡ ಅನ್ಕೂಲವೇನಿಲ್ಲ.
ಒಳ್ಳೆ ಜನ, ಹುಡ್ಗೀನು ಚೆನ್ನಾಗಿದ್ದಾಳೆ.
ನಿಮ್ಮಮ್ಮವಿಗೆ ಒಪ್ಪಿಗೆಯೇ, ನಿನೊಮ್ಮೆ ನೋಡಿ ಬಿಡು ಅಂದರು.
ಚಾರುಲತ ನಿಜವಾಗಿಯು ಅವನ ಮನಸ್ಸಿಗೆ ಬಂದಳು.
ಗಂಡಿನ ಕಡೆಯವರು ಏನು ಕೇಳದಿದ್ದರೂ ಸಾಕಷ್ಟು ಚಿನ್ನ ಹಾಕಿ, ಬೆಳ್ಳಿ ಹಾಕಿ ವರನಿಗೆ ಸಂಪ್ರದಾಯಿಕವಾಗಿ ಕೊಡಬೇಕಾದುದ್ದನ್ನ ಕೊಟ್ಟು ವಿವಾಹ ಮಾಡಿದ್ದರು.
ಎರಡು ಮನೆಯ ನಡುವೆಯು ಉತ್ತಮ ಸಂಬಂಧವಿತ್ತು.
ಹೋಗಿ ಬರುವಷ್ಟರ ಮಟ್ಟಿಗಿನ ಸ್ನೇಹ.
ಎಲ್ಲವೂ ಚೆನ್ನಾಗಿದ್ದಾಗ ಹುಟ್ಟಿ ಕೊಂಡಿದ್ದು ಒಂದು ಸಮಸ್ಯೆ.
"ಹೇಳಿದ್ದು ನೆನಪಿದ್ಯಾ ?" ಪಿಸುದನಿಯಲ್ಲಿ ಉಸುರಿದಾಗ ಎದುರಿಗೆ ಕೂತ ನಡುವಯಸ್ಸಿನ ಹೆಣ್ಣು ಇವಳನ್ನ ದಿಟ್ಟಿಸಿದಳು.
"ಏನು ತಿಳ್ಕೋಬೇಡಮ್ಮ ನನ್ಮಗ್ಳು ನಿನ್ನಂಗೆ ಇದ್ಲು, ಇದೇ ವಯಸ್ಸು.
ನಿನ್ನಷ್ಟೇ ನಾಜೂಕಾದ ಹುಡ್ಣಿ ಎರಡ್ವರ್ಷಕ್ಕೆ ಮುನ್ನ ಆತ್ಮಹತ್ಯೆ ಮಾಡ್ಕೊಂಡ್ಸು" ಆಕೆಯ ಕಣ್ಣಿಂದ ಕೆನ್ನೆಯ ಮೇಲೆ ಉರುಳಿದ ಕಂಬನಿಯ ಬಿಂದುಗಳನ್ನು ನೋಡಿ ಷಾಕಾದಳು.
ಅಳ್ಬೇಡಿ, ಹುಟ್ಟಿನ ಜೊತೆ ಸಾವು ಕೂಡ ಖಚಿತವಾಗಿರುತ್ತೆ.
ಇಲ್ಲಿ ಇರೋರು ತಾನೇ ಯಾರಿದ್ದಾರೆ ?
ಏನಾಗಿತ್ತು ? ವಿಚಾರಿಸಿದಳು.
"ಗಂಡ, ಅಪ್ಪ ಇಬ್ರೂ ಸೇರಿ ಕೊಂದ್ಬಿಟ್ರು" ಎಂದ ಆಕೆ ಕಣ್ಣಿಗೆ ಸೆರಗು ಹಚ್ಚಿದಾಗ ವಿಸ್ಮಿತಳಾದಳು.
"ಗಂಡ-ಅಪ್ಪ" ವಿರುದ್ಧ ದಿಕ್ಕಿನ ವ್ಯಕ್ತಿಗಳು.
ನಂಗೆ ಅರ್ಥವಾಗ್ಲಿಲ್ಲ ಮೆಲುವಾಗಿ ನುಡಿದಳು.
ಅಳಿಯನ ಚರಿತ್ರೆ ಗೊತ್ತಿದ್ದು ಕೂಡ ಮಗಳನ್ನು ಧಾರೆಯೆರೆದು ಕೈ ತೊಳೆದುಕೊಂಡಿದ್ದ ಹುಟ್ಟಿಸಿದ ಅಪ್ಪ.
'ನೂರೆಂಟು ಹುಡ್ಕೀ ಮಾಡೋದ್ರಲ್ಲಿ ವಯಸ್ಸು ಆಗಿ ಹೋಗುತ್ತೆ.
ವಿವಾಹವಾದ್ಯೇಲೆ ಸರಿ ಹೋಗುತ್ತೆ' ಹೆಂಡತಿಗೆ ಕೊಟ್ಟ ಉತ್ತರ.
ನಂತರ ಆ ಹೆಣ್ಣು ಅನುಭವಿಸಿದ್ದು ನೂರೆಂಟು ಕಷ್ಟ.
ಕೊನೆಗೊಮ್ಮೆ ಬಂದವಳೇ "ಅಪ್ಪ, ನೀನು ಮನೆ ಕೊಡ್ತೀನೀಂತ ಅವ್ರಿಗೆ ಪ್ರಾಮಿಸ್ ಮಾಡಿದ್ದೀಯಂತೆ.
ಈಗ ಕೇಳ್ಡೋಗೂಂತ ಕಳ್ಳಿದ್ದಾರೆ" ಕಣ್ಣೀರು ಸುರಿಸಿದಾಗ ಅಟ್ಟ ಹಾರುವಂತೆ ಹಾರಾಡಿದ್ದ.
ಮನೆ ಇದ್ದರೂ ಕೊಡಲು ಒಪ್ಪಲಿಲ್ಲ.
ಅಳಿಯ ಮಹಾಶಯ ಬಿಡಲಿಲ್ಲ.
ಕೊನೆಗೆ ಅವಳು ಆತ್ಮಹತ್ಯೆ ಮಾಡಿಕೊಂಡಳು.
ಅವಳ ಸಾವಿಗೆ ಯಾರು ಕಾರಣರಲ್ಲದಿದ್ದರೂ, ಆಕೆಯ ದೃಷ್ಟಿಯಲ್ಲಿಟ್ಬರು ಅಪರಾಧಿಗಳೇ.
ಕಣ್ಣೀರಿನೊಂದಿಗೆ ಆಕೆ ತೆಗೆದುಕೊಂಡ ನಿರ್ಧಾರ ಕೂಡ ತಿಳಿಸಿದಳು.
“ನಾನು ಈಗ ಹಳ್ಳಿಯಲ್ಲಿ ಒಂಟಿಯಾಗಿ ಇದ್ದೇನೆ.
ಮಗ್ಳು ಸತ್ತ ಮೇಲೆ ಅವರಿಬ್ರ ಖಗಳನ್ನ ನಂಗೆ ನೋಡೋಕೆ ಇಷ್ಟವಾಗ್ಲಿಲ್ಲ."
ಹೆಚ್ಚು ಓದು ಬರಹವಿಲ್ಲದ ನಡು ವಯಸ್ಸಿನ ಹೆಣ್ಣು ತೆಗೆದುಕೊಂಡ ನಿರ್ಧಾರಕ್ಕೆ ಚಕಿತಳಾದಳು ಚಾರುಲತ.
ಮುಂದಿನ ಸ್ಟೇಷನ್‌ನಲ್ಲಿ ಮಾರಲು ಬಂದ ಕಿತ್ತಲೆ ಹಣ್ಣು, ಹೂವನ್ನ ಕೊಂಡು ಅವಳ ಕೈಯಲ್ಲಿಟ್ಟಳು.
'ನನ್ನ ಮಗ್ಳುನ ನೋಡಿದಂಗಾಯ್ತು' ಎಂದು ಇಳಿದು ಹೋದಾಗ ಚಾರುಲತಗೆ ತಾಯಿಯ ನೆನಪಾಯಿತು.
ಸ್ಟೇಷನ್‌ನಲ್ಲಿ ಇಳಿಯುವಾಗ ನವೀನ್‌ನ ಕಂಡು ಅವಳಿಗೆ ಆಶ್ಚರ್ಯ.
ಬಹುಶಃ ಬರುವ ವಿಚಾರ ಅವನಿಗೆ ತಿಳಿಸಿರಬಹುದೇ ?
ಮೆಲ್ಲಗೆ ನೋಟ ಮೂರ್ತಿಯತ್ತ ಹರಿಸಿದಾಗ ಅವನು ಬೇರೆಡೆ ನೋಡುತ್ತಿದ್ದ.
ಅದು ನಟನೆಯೆನಿಸಿತು.
ಅವನು ತೀರಾ ಸರಸಿ, ಅವಳಿಗೆ ಬೋರಾದರೂ ಮಾತು ನಿಲ್ಲಿಸುತ್ತಿರಲಿಲ್ಲ, ಅಂಥವನು ಗಪ್‌ಚಿಪ್ಪಾಗಿ ಇದ್ದುದ್ದು ಖಂಡಿತ ಸರಿಯೆನಿಸಲಿಲ್ಲ.
“ಏಯ್‌, ಚಾರು. . . ಒಂದಿಷ್ಟು ವಿಷ್ಯ ತಿಳಿಸ್ದೇ ಸರ್‌ಪೈಜ್‌ ಮಾಡ್ಬೇಕೂಂತ ಬಂದಿರಾ ?
ಥ್ಯಾಂಕ್ಕೂ. . . . ಥ್ಯಾಂಕ್ಕೂ. . . . ಇಲ್ಲೇ ಹಿಡಿದೆನಲ್ಲ'' ಓಡಿ ಬಂದು ಅವಳ ಕೈಯಲ್ಲಿದ್ದ ಬ್ಯಾಗು ಕಸಿದುಕೊಂಡ .
ಏದುಸಿರು ಬಿಡುತ್ತ ನವೀನ್‌ಸಂ ತೋಷದಿಂದ "ಹಲೋ, ಮೂರ್ತಿ.. . ಹೌ ಆರ್‌ ಯು ?"
ಭುಜದ ಮೇಲೆಕೈ ಹಾಕಿದಾಗ ಸ್ವಲ್ಪ ಸರಿಸಿದವನು "ಲಗೇಜ್‌ ಇಳಿಸ್ಕೋ, ಟ್ಯಾಕ್ಸಿ ನೋಡ್ತೀನಿ" ಹೊರಟೇ ಬಿಟ್ಟ.
ನವೀನ್‌ ಬೆಪ್ಪಾದ.
ಮದುವೆ ನಿಶ್ಚಯವಾದ ಮೇಲೆ ಮೂರ್ತಿ, ಅವನು ಫ್ರೆಂಡ್ಸ್‌ ತರಹ ಇದ್ದರು.
ಆರಾಮಾಗಿ ಬೈಕ್‌ ಮೇಲೆ ಸುತ್ತಾಡಿದ್ದುಂಟು.
ಜೊತೆ ಜೊತೆಯಾಗಿ ಮೂವೀ ನೋಡಿದ್ದುಂಟು,.
ಗಂಟೆ ಗಟ್ಟಲೇ ಹರಟೆಯೊಡೆದಿದ್ದುಂಟು.
ತಕ್ಷಣದ ಈ ಬದಲಾವಣೆಗೆ ಕಾರಣವೇನು ?
“ಚಾರು, ಇದೇನಿದು ?ನಿಮ್ಮಿಬ್ಬರ ಮಧ್ಯೆ ಏನಾದ್ರೂ ಪ್ರೇಮ ಕಲಹಾನಾ?"
ಸನಿಹಕ್ಕೆ ಬಗ್ಗಿ ಪಿಸುಗುಟ್ಟಿದಾಗ ಆರಾಮಾಗಿ ನಕ್ಕು ಬಿಟ್ಟಳು.
"ಹೇಳಿ, ಕೇಳಿ ಲೆಕ್ಚರರ್‌ ಅಲ್ವಾ ?"ಅಂದಳಷ್ಟೆ.
ಅವನಿಗೇನು ಅರ್ಥವಾಗಲಿಲ್ಲ.
ಲಗೇಜ್‌ ಟ್ಯಾಕ್ಸಿಯಲ್ಲಿ ಹಾಕಿದ ಮೇಲೆ ಕಾಲರ್‌ ಸರಿ ಮಾಡಿಕೊಂಡು ಮೂರ್ತಿ "ನೀನು. . . . ಬರ್ತೀಯಾ ?"ಎಂದ ನವೀನ್‌ನತ್ತ ತಿರುಗಿ.
ಪಿಚ್ಚೆನಿಸಿತು ಅವನಿಗೆ "ಕಣೀ ಕೇಳು. . . . ನೀವು ಕಂಡ ಮೇಲೆ ಜಗತ್ತಿನಲ್ಲಿ ಎಂಥ ಕೆಲ್ಲವಿದ್ರೂ ಕ್ಯಾನ್ಸಲ್" ತೂರಿ ಕೂತ.
'ಸಾಬ್‌. . . . ' ಎಂದಾಗ ಡ್ರೈವರ್‌, ತಮ್ಮ ಮನೆಯ ಅಡ್ರಸ್‌ ಹೇಳಿದ ನವೀನ್‌.
ತಕ್ಷಣ ಸರಿಪಡಿಸಿದ 'ಬೇಡ, ಮೊದ್ಲು ನಮ್ಮ ಮನೆಗೆ ಹೋಗ್ಬೇಕು,ಅಪ್ಪ ಫೋನ್‌ ಮಾಡಿದ್ರು' ಎಂದ ಬಿಗಿದ ಮುಖದಿಂದಲೇ ಮೂರ್ತಿ.
"ಅದೇ ಕರೆಕ್ಟ್‌. . . ” ಉಸುರಿದ ನವೀನ್‌.
ಎರಡು ಕಿಲೋ ಮೀಟರ್‌ ಕ್ರಮಿಸುವ ವೇಳೆಗೆ ಮೂರ್ತಿ ಮನಸ್ಸು ಬದಲಾಯಿಸಿದ "ಬೇಡ, ಮೊದ್ಲು ನಿಮ್ಮ ಮನೆಗೆ ಹೋಗೋಣ"ಎಂದ.
ಟ್ಯಾಕ್ಸಿ ನವೀನ್‌ ಮನೆಯ ಮುಂದೆ ನಿಂತಾಗ ಮೂರ್ತಿ ಇಳಿಯಲಿಲ್ಲ "ಅರ್ಜೆಂಟಾಗಿ ಅಪ್ಪನ್ನ ನೋಡೋದಿದೆ.
ಸಾಧ್ಯವಾದ್ರೆ ಬೆಳಿಗ್ಗೆ ಬರ್ತಿನಿ,ಇಲ್ಲ ನೀನೇ. . . ಬಾ" ಎಂದು ಅವಳ ಬಟ್ಟೆಗಳಿದ್ದ ಸೂಟ್‌ಕೇಸ್‌ ಮಾತ್ರ ಇಳಿಸಿಕೊಟ್ಟ.
ಟ್ಯಾಕ್ಸಿಯ ಚಕ್ರಗಳು ಮುಂದಕ್ಕೆ ಉರುಳಿದವು.
ಎಲ್ಲಾ ಸರಿಯಿಲ್ಲವೆನಿಸಿತು ಅವನಿಗೆ.
ಇತ್ತೀಚಿನ ವಿದ್ಯಮಾನಗಳಿಂದ ಕಾರಣ ಸ್ಪಷ್ಟವಾಗಿತ್ತು.
ಆದರೆ ಇಲ್ಲಿಯವರೆಗೂ ಹೋಗುತ್ತದೆಯೆಂದು ಮಾತ್ರ ತಿಳಿದಿರಲಿಲ್ಲ.
“ಏನಾದ್ರೂ ಬೇಜಾರ ?” ತಂಗಿಯನ್ನ ಕೇಳಿದ.
“ಅಂಥದೇನಿಲ್ಲ !ಅಪ್ಪ ಮನೆಯಲ್ಲಿದ್ದಾರೇ, ತಾನೇ ?”ಕೇಳಿದಳು.
ವಾಸುದೇವಯ್ಯ ಮನೆಯಲ್ಲೇ ಇದ್ದರು.
ಮಗಳನ್ನು ನೋಡಿ ಅವರಿಗೆ ತುಂಬ ಸಂತೋಷವೇ.
ಒಂಟಿಯಾಗಿ ಬಂದಿದ್ದು ಮಾತ್ರ ಸರಿಯೆನಿಸಲಿಲ್ಲ.
"ಮೂರ್ತಿ ಎಲ್ಲಿ ?"ಹಿಂದಕ್ಕೆ ನೋಟ ಎಸೆದಾಗ "ಮೈ ಗಾಡ್‌, ಮಗ್ಳು ನಾನು ಇಷ್ಟುದ್ದ ನಿಮ್ಮ ಮುಂದೆ ನಿಂತಿದ್ದೀನಿ.
ಅದ್ಬಿಟ್ಟು ಅಳಿಯನ ಬಗ್ಗೆ ಕೇಳ್ತೀರಲ್ಲ,ಅಪ್ಪ" ಎಂದು ಎಚ್ಡರಿಸಿದಾಗ ಸ್ವಲ್ಪ ಪೆಚ್ಚಾದರು.
ಮಗ, ಮಗಳಿಗೆ ತಟ್ಟೆಗಳನ್ನ ಹಾಕಿ ಬಡಿಸಿದ ನಂತರ ಇತ್ತೀಚಿನ ವಿದ್ಯಮಾನಗಳನ್ನ ಮಗಳ ಮುಂದಿಟ್ಟರು.
"ದಿವಿನಾದ ಸಂಬಂಧ !ಪೂಜಾ ಒಳ್ಳೆ ಹುಡ್ಗಿ !
ಹಾಗಂತ ಬೇರೊಂದು ಹೆಣ್ಣಿಗೆ ಅನ್ಯಾಯ ಮಾಡೋಕ್ಕಾಗುತ್ತ ?
ಆ ಹುಡ್ಗೀನು ನಮ್ಮ ನವೀನ್‌ನ ನಂಬಿಕೊಂಡಿದ್ದಾಳೆ.
ಎಂದೋ ನಿಶ್ಚಯವಾದ ವಿವಾಹ."
ಚಾರುಲತ ತಲೆ ತಗ್ಗಿಸಿ ಕೂತಳು.
ಯಾವುದು ಹೊಸ ವಿಷಯಗಳಲ್ಲ.
ಇವಳ ಮದುವೆಯಲ್ಲಿನ ಓಡಾಟವೆಲ್ಲ ನೀರದದೆ.
ಇದೆಲ್ಲ ಮರೆಯಲು ಸಾಧ್ಯವೇ?
ನವೀನ್‌ ಕೂಡ ತಂಗಿಯ ಕಡೆ ನೋಡುತ್ತ ಕೂತ.
ಅವಳ ಅಭಿಪ್ರಾಯ ತೀರಾ ಮುಖ್ಯವೇ.
ಒಂದು ರೀತಿಯ ಆತಂಕ ಅವನಿಗೆ.
"ಅದನ್ನೇನು ಬದಲಾಯಿಸ್ಟೇಡಪ್ಪ.
ಆದಷ್ಟು ಬೇಗ ವಿವಾಹ ಮಾಡಿ ಮುಗ್ಸಿ ಬಿಡಿ.
ಇವ್ನು ಎದುರು ಮನೆ ಕಡೆ ನೋಡೋದು ಕಮ್ಮಿ ಆಗುತ್ತೆ" ಛೇಡಿಸಿನಕ್ಕಳು.
ಆದರೆ ವಾಸುದೇವಯ್ಯನಿಗೆ ಸಮಾಧಾನವೆನಿಸಲಿಲ್ಲ.
"ಈಗಾಗ್ಲೇ,ನಿನ್ನ ಅತ್ತೆ ಮಾವನಿಗೆ ನನ್ಮೇಲೆ ಕೋಪ.
ಬಹುಶಃ ಅದ್ಕೇ ಮಗನನ್ನ ಕೂಡ ಕರೆಸಿ ಕೊಂಡಿರ್ಬೇಕು.
ದಂತದ ಗೊಂಬೆಯಂಥ ಹುಡ್ಗಿಗೆ ಗಂಡು ಸಿಗೋದು ಕಷ್ಟನಾ ?
ನಮ್ಮ ನವೀನ್‌ ಬೇಕನ್ನೋ ಹಟ ಯಾಕೆ?" ನೋವಿನಿಂದ ಉಸುರಿದರು.
ಅನ್ಯೋನ್ಯವಾಗಿದ್ದ ಸಂಬಂಧ ವಿರಸಗೊಳ್ಳುವುದು ಬೇಕಿರಲಿಲ್ಲ.
"ನಾನು ಹೇಳ್ತೀನಿ, ಬಿಡು" ಸಮರ್ಥಿಸಿಕೊಂಡಳು.
ಅಷ್ಟು ಸುಲಭವಲ್ಲವೆಂದು ಅರಿವಿಗೆ ಬಂದಿತ್ತು.
ನೀರದ ಮನಸ್ಸು ಬದಲಾಯಿಸಿದರೇ ಮಾತ್ರ ಸಾಧ್ಯವಿತ್ತು.
“ಆ ಬಗ್ಗೆ ತಲೆ ಕೆಡ್ಸಿಕೊಳ್ಳುವುದೇನು, ಬೇಡಪ್ಪ'' ಸಮಾಧಾನ ಪಡಿಸಿ ರೂಮಿಗೆ ಹೋದಳು.
ಹಿಂದೆಯೇ ಬಂದ ನವೀನ್‌ "ಮೂರ್ತಿಗೂ ವಿಷ್ಯ ಗೊತ್ತಿತ್ತು.
ಈ ವಿಷ್ಯದಿಂದ ನೀವಿಬ್ರೂ ಮನಸ್ಸು ಕೆಡ್ಸಿಕೊಳ್ಳೋದ್ಬೇಡ" .
ಅವಳ ಎರಡು ಕೈಗಳನ್ನ ಹಿಡಿದುಕೊಂಡಾಗ ನಕ್ಕುಬಿಟ್ಟಳು .
ಅಂಥದೇನಿಲ್ಲ, ನೀನ್ಯಾಕೆ ತಲೆ ಕೆಡ್ಸಿಕೊಳ್ತಿ.
ನಿನ್ನ ಕೆಲ್ಸದ್ದು ಏನಾಯ್ತು ” ಕೇಳಿದಳು.
“ನರ್ಸಿಂಗ್‌ ಹೋಂಗೆ ಹೋಗ್ತಾ ಇದ್ದೀನಿ.
ನನ್ನ ಖರ್ಚಿಗೆ ಆಗೋಷ್ಟು ಹಣ ಕೊಡ್ತಾ ಇದ್ದಾರೆ.
ಅಪ್ಪನ ಪೆನ್‌ಷನ್‌ನಲ್ಲಿ ಮನೆ ನಡೀತಾ ಇದೆ, ಆರಾಮಾಗಿ.
ಸದ್ಯಕೆ ಏನು ತೊಂದರೆ ಇಲ್ಲ.
ನೀರದ ಅಪ್ಪಿಷ್ಟು ಸಹಾಯ ಮಾಡ್ತಾಳೆ ಮನೆ ಕೆಲ್ಸದಲ್ಲಿ ಅಪ್ಪನಿಗೆ.
ನಾನು ಕೈಯಲಾದ್ದು ಮಾಡ್ತೀನಿ.
ಎಷ್ಟೋ ಜನ ಅಪ್ಪಂದಿರನ್ನ ನೋಡಿದ್ದೀನಿ.
ನಮ್ಮಪ್ಪ ಪೂರ್ತಿ ಸ್ಪಾರ್ಥಿ ಅಲ್ಲ" ಎಂದ ಅಭಿಮಾನದಿಂದ.
ತಂದೆಯ ಬಗ್ಗೆ ಅವನಿಗೆ ಅಪಾರವಾದ ಗೌರವ.
ಅಣ್ಣ, ತಂಗಿ ಬೇರೆಲ್ಲ ವಿಷಯಗಳನ್ನ ಮಾತಾಡಿದರು.
ರಾತ್ರಿ ಒಂದೆರಡು ಸಲ ಫೋನ್‌ನ ಬಳಿಗೆ ಹೋದವಳು ಹಿಂದಕ್ಕೆ ಬಂದಳು.
ಮೊದಲಾಗಿದ್ದರೇ ನಾಲ್ಕು ಅಲ್ಲ ಹತ್ತು ಸಲ ಫೋನ್‌ ಮಾಡುತ್ತಿದ್ದ ಮೂರ್ತಿ ಇಂದು ಗಪ್‌ಚಿಪ್ಪಾಗಿದ್ದ.
ಟ್ಯಾಕ್ಸಿ ಇತ್ತ ತಿರುಗಿದಾಗಲೇ "ಬೇಡ, ಅತ್ತೆ ಮಾವನ್ನ ನೋಡ್ಕೊಂಡು ಬೆಳಿಗ್ಗೆ ಇಲ್ಲಿಗೆ ಬರ್ತಿನಿ" ಎಂದಿದ್ದಳು.
ಅವನದು ಪೂರ್ತಿ ನಿರಾಕರಣೆ “ಬೇಡ,ಅಲ್ಲಿಗೆ ಬೆಳಿಗ್ಗೆ ಬರ್ಬಹುದು" ವಿಚಿತ್ರವೆನಿಸಿದರೂ ತುಟಿ ಎರಡು ಮಾಡಿರಲಿಲ್ಲ.
ಊಟಕ್ಕೆ ಕೂಡುವ ಮುನ್ನ ವಾಸುದೇವಯ್ಯ "ಒಂದ್ಲಲ ಅಳಿಯಂದಿರಿಗೆ ಫೋನ್‌ ಮಾಡು.
ನಾಲ್ಕು ಮಾತಾಡದೇ ನಂಗೆ ಸಮಾಧಾನವಿಲ್ಲ" ಹಾಟ್‌ಬಾಕ್ಸ್‌ತಂದಿಟ್ಟವರು ಹೇಳಿದರು.
ಅದು ಅವಳಿಗೂ ಸರಿಯೆನಿಸಿತು.
ಪ್ರತಿಷ್ಟೆಗಳೇ ಮನುಷ್ಯರಿಂದ ಮನುಷ್ಯರನ್ನ ದೂರ ಮಾಡುತ್ತದೆಯೆಂದು ಅವಳಿಗೆ ಗೊತ್ತು.
ನಿಧಾನವಾಗಿ ಫೋನ್‌ಬಟನ್‌ಗಳನ್ನೊತ್ತಿದಾಗ ಅವಳ ಅತ್ತೆ ಮೃಣಾಲಿನಿ "ಹಲೋ. . . "ಎಂದರು.
"ಹೇಗಿದ್ದೀರಾ, ಅತ್ತೆ ?"ಕೇಳಿದಳು.
"ಚೆನ್ನಾಗಿದ್ದೀನಿ, ನೇರವಾಗಿ ಇಲ್ಲಿಗೆ ಬರ್ಬೇಕಿತ್ತು.
ಬೆಳಿಗ್ಗೆ ಬರ್ತೀಯಲ್ಲ"ಎಂದಾಗ "ಬರ್ತೀನತ್ತೆ, ಊಟ ಆಯ್ತ ?
ಅವರಿಗೆ ಫೋನ್‌ ಕೊಡಿ" ಹೇಳಿದಳು.
ಎರಡು ನಿಮಿಷ ಸ್ಥಬ್ಧ ನಂತರ ಲೈನ್‌ಗೆ ಬಂದವರು ಆಕೆಯೇ “ಊಟ ಮಾಡ್ತಾ ಇದ್ದಾರೆ.
ಬೆಳಿಗ್ಗೆ ಬರೋಕೆ ಹೇಳಿದ್ದಾನೆ" ಲೈನ್‌ ಕಟ್‌ ಆಯಿತು.
ಎಂದೂ ಈ ರೀತಿ ನಡೆದುಕೊಂಡಿರಲಿಲ್ಲ.
ಆಗಾಗ ಈ ಮನೆ, ಆ ಮನೆಯ ಮಧ್ಯೆ ಫೋನ್‌ಗಳ ವಿನಿಮಯವಾಗುತ್ತ ಇತ್ತು.
ಯುಗಂಧರ್‌, ವಾಸುದೇವಯ್ಕ ಸಾಕಷ್ಟು ಮಾತಾಡುತ್ತಿದ್ದರು.
ಹೋಗಿ ಬರುವುದು ಇತ್ತು.
ಹಬ್ಬಗಳಲ್ಲಿ ತಂದೆ, ಮಗ ಕೈ ಮಸಿ ಮಾಡಿಕೊಳ್ಳುವುದು ಬೇಡವೆಂದು ಅಲ್ಲಿಗೆ ಊಟಕ್ಕೆ ಬರಲು ಆಮಂತ್ರಣ ನೀಡುತ್ತಿದ್ದರು.
ಅಂತು ಅತ್ಯುತ್ತಮವಾದ ಬಾಂಧವ್ಕ. . . ಈ ರೀತಿ ಬದಲಾಗಿದ್ದು ನೋವಿನ ವಿಷಯವೇ.
ತಲೆಯ ಮೇಲೆ ಕೈಯೊತ್ತು ಕೂತುಬಿಟ್ಟರು ವಾಸುದೇವಯ್ಯ.
ಅವರಿಗೆ ಮಗಳ ಭವಿಷ್ಯದ ಬಗ್ಗೆ ಭಯ.
ತಂದೆಯ ಬಳಿ ಬಂದು ಕೂತ ಚಾರುಲತ "ಛೆ, ಇಷ್ಟಕ್ಕೆಲ್ಲ ಈ ರೀತಿ ಕೂತರೇ ಹೇಗೆ ?
ಪೂಜಾಳ ಹಟ ಅವುಗಳ ನೆಮ್ದೀ ಕೆಡಿಸಿದೆ.
ನಾನ್ಹೋಗಿ ಬೆಳಿಗ್ಗೆ ಮಾತಾಡ್ತೀನಿ.
ಊಟ ಮಾಡೋಣ ಬನ್ನಿ " ಬಲವಂತದಿಂದಎಬ್ಬಿಸಿಕೊಂಡು ಹೋದಳು.
ಊಟ ಯಾರಿಗೂ ರುಚಿಸಲಿಲ್ಲ.
ಒಬ್ಬರ ಸಮಾಧಾನಕ್ಕೆ ಮತ್ತೊಬ್ಬರು ತಿಂದರಷ್ಟೆ.
ಅಂದು ರಾತ್ರಿ ಯಾರು ನಿದ್ರಿಸಲಿಲ್ಲ.
ಪದೇ ಪದೇ ಎದ್ದು ಕೂತ ನವೀನ್‌ "ಅವುಗಳ ಒತ್ತಾಯದ ಪ್ರಕಾರ ಪೂಜಾಳನ್ನ ವಿವಾಹವಾಗಿ ಬಿಡಲೇ?"ಎದೆಯೊತ್ತಿಕೊಂಡು ಬಂತು.
ಇವನನ್ನ ನಂಬಿಕೊಂಡಿದ್ದ ನೀರದ ಆತಹತ್ಯೆ ಮಾಡಿಕೊಂಡು ಬಿಡಬಹುದು.
ಬರೀ ಮಾನ, ಮರ್ಯಾದೆಗಾಗಿಯೇ ಬದುಕಿರುವ ಅವಳ ಮನೆಯವರೆಲ್ಲ ಎದೆಯೊಡೆದು ಸತ್ತಾರು - ಇಡೀ ಒಂದು ಕುಟುಂಬದ ದುರಂತಕ್ಕೆ ತಾನು ಕಾರಣವಾಗಬಹುದು .
ಆ ನಿರ್ಧಾರ ಸರಿಯಲ್ಲವೆಂದುಕೊಂಡು ಮತ್ತೆ ಮಲಗಿದ.
ನಾಳೆಗಾಗಿ ಕಾದ, ಬೇಗ ಸ್ನಾನ ಮುಗಿಸಿ ತಾನೇ ಚಟ್ನಿ ಮಾಡಿ ತಂದೆಗೂ, ನವೀನ್ಗೂ ದೋಸೆಹಾಕಿ ಕೊಟ್ಟ ಚಾರುಲತ "ನನ್ನ ಅಲ್ಲಿಗೆ ತಲುಪಿಸಿ, ನೀನು ನರ್ಸಿಂಗ್‌ ಹೋಂಗೆ ಹೋಗು" ಎಂದವಳು ಮನಸ್ಸು ಬದಲಾಯಿಸಿಕೊಂಡು "ನೀನೇನು ಬರೋದ್ಬೇಡ,ನಾನ್ಹೋಗ್ತೀನಿ ಬಿಡು" ಅಂದಳು.
"ಏನಾದ್ರೂ ತಿಳ್ಕೋಬಹುದು" ಎಂದ ಅನುಮಾನದ ಸ್ವರದಲ್ಲಿ.
"ನೀನು ನರ್ಸಿಂಗ್‌ ಹೋಂಗೆ ಹೋದೇಂತ ಹೇಳ್ತೀನಿ."
"ಮಧ್ಯೆ ಪ್ರವೇಶಿಸಿದ ವಾಸುದೇವಯ್ಯ "ಒಬ್ಳು ಹೋಗೊದ್ಬೇಡ. ನಾನ್ಹೋಗ್ತೀನಿ ಜೊತೆಯಲ್ಲಿ. ಒಂದಿಷ್ಟು ವಾತಾವರಣ ತಿಳಿಯಾದರೇ ಸಾಕು" ಎಂದರು.
ಅದು ಇಬ್ಬರಿಗೂ ಸರಿಯೆನಿಸಿತು. . . . ಮೂವರು ಮನೆಯಿಂದ ಜೊತೆಯಾಗಿ ಹೊರಟರು.
ಬೇರೆ ಬೇರೆ ಆಟೋ ಏರಿದರು.
ಯುಗಂಧರ್‌, ಮೃಣಾಲಿನಿ ಸ್ವಲ್ಪ ಖಾರವಾಗಿಯೇ ಅವರನ್ನ ದಂಡಿಸಿದ್ದರು.
"ನಮ್ಮಹುಡ್ಲಿಗೆ ಇದಕ್ಕಿಂತ ಉತ್ತಮವಾದ ಸಂಬಂಧಗಳ್ನ ತರಬಲ್ಲೆ.
ಆದರೆ ಪೂಜಾ ನವೀನ್‌ ಇಷ್ಟಪಟ್ಟಿದ್ದಾಳೆ.
ನೀರದ ನಿಮ್ಮ ಸೊಸೇಂತ ಘೋಷಣೆ ಮಾಡ್ಲಿಲ್ವಲ್ಲ.
ಸುಮ್ನೇ ತಲೆ ಯಾಕೆ ಕೆಡಿಸ್ಕೋತೀರಿ ?
ನನ್ನ ಮಗನಿಗೆ ಲಕ್ಟಾಂತರ ವರದಕ್ಷಿಣೆ ಕೊಡೋ ಜನರಿದ್ರೂ. . . ಒಂದು ಪೈಸೆ ತಗೊಳ್ಬೇ ಸೊಸೆಯನ್ನಾಗಿ ಮಾಡಿಕೊಳಿಲ್ವಾ?"
ಅದೆಲ್ಲ ಮನಸ್ಸಿನಲ್ಲಿ ಇರ್ಲಿ.
ಇದನ್ನೆಲ್ಲ ಮಗಳ ಮುಂದೆ ಹೇಳಿ ಅವಳ ಮನಸ್ಸನ್ನ ನೋಯಿಸಲು ಇಚ್ಛಿಸದ ವಾಸುದೇವಯ್ಯ ಉಗುಳು ನುಂಗುತ್ತ ಅವರ ಮನೆ ತಲುಪುವವರೆಗೂ ಮೌನವಹಿಸಿದರು.
ಬಾಗಿಲಲ್ಲಿ ಭವ್ಯವಾದ ಸ್ವಾಗತವೇ ಸಿಕ್ಕಿತು.
ಇಡೀ ರಾತ್ರಿ ಕುಟುಂಬದವರೆಲ್ಲ ಚರ್ಚಿಸಿ ಒಳ್ಳೆ ಮಾತಿನಿಂದಲೇ ಒಪ್ಪಿಸಲು ನಿರ್ಧರಿಸಿದ್ದರು.
ಒಪ್ಪದಿರುವುದಕ್ಕೆ ಅವರು ಕೊಡುವ ಕಾರಣ ಸರಿಯೆನಿಸಿರಲಿಲ್ಲ.
ಬಗ್ಗಿ, ಅತ್ತೆ ಮಾವಂದಿರ ಕಾಲಿಗೆ ಚಾರುಲತ ನಮಸ್ಕರಿಸಿದಾಗ ಇಬ್ಬರು"ದೀರ್ಫ ಸುಮಂಗಲೀ ಭವ, ಎರಡು ಮಕ್ಕಳನ್ನ ಹೆತ್ತು ಸುಖವಾಗಿರು' ಎಂದು ಮನಃಪೂರ್ತಿಯಾಗಿ ಆಶೀರ್ವದಿಸಿದರು.
ಈ ವಿಷಯ ಪ್ರಸ್ತಾಪವಾಗುವ ಮುನ್ನ ದಿನದವರೆಗೂ ಸೊಸೆಯ ಮೇಲೆ ಬ್ರಹ್ಮಾಂಡವಾದ ಪ್ರೀತಿ ಇತ್ತು,ಅಕ್ಕರೆ ಇತ್ತು.
ಅವಳಪ್ಪ ಅಣ್ಣ ತಮ್ಮ ಮಗಳನ್ನ ನಿರಾಕರಿಸಿದ ಕೂಡಲೇ ಸೊಸೆಯ ಬಗ್ಗೆ ಕೆಂಡಮಂಡಲವಾಗಿದ್ದರು.
ಸ್ವಲ್ಪ ಬಿಗುವಾಗಿಯೇ ವಾಸುದೇವಯ್ಯನವರನ್ನ ಮಾತಾಡಿಸಿದರು.
"ಅಣ್ಣ,ತಂಗಿ ಹೊರ್ಗಡೆ ಹೋಗಿದ್ದಾರೆ.
ತಂಗಿಯೆಂದರೆ ನಮ್ಮ ಮೂರ್ತಿಗೆ ಪಂಚಪ್ರಾಣ” ಮೃಣಾಲಿನಿ ಒತ್ತಿ ಹೇಳಿದ ಉದ್ದೇಶ ತಂದೆ ಮಗಳಿಗೆ ಸುಲಭವಾಗಿ ಅರ್ಥವಾಯಿತು.
ಪೆಚ್ಚು ನಗೆ ಬೀರಿದರು ಇಬ್ಬರು.
"ಕೂತ್ಯೋಪ್ಪ. . . " ಎಂದು ಹೇಳಿದ ಚಾರುಲತ ಒಳಗೆ ಹೋದಳು.
ಹಿಂಬಾಲಿಸಿ ಬಂದ ಮೃಣಾಲಿನಿ "ಬಿಸಿ ಇಡ್ಲಿ ಆಗಿದೆ, ತಗೊಂಡ್ಹೋಗಿ ಕೊಡು" ಎಂದರು.
ಅತ್ತೆಯ ಕಡೆ ತಿರುಗಿದ ಅವಳು ಬ್ಯಾಗ್‌ನಲ್ಲಿದ್ದ ಉಪ್ಪಿನಕಾಯಿ ಬಾಟಲಿಗಳನ್ನ ತೆಗೆದಿಟ್ಟು "ಅಪ್ಪ, ಹಾಕಿದ್ರು, ಮಾವನೋರಿಗೆ ಇಷ್ಟಾಂತ ತೆಗ್ದು ಇಟ್ಟಿದ್ರು" ಎಂದಳು.
ಇದೇನು ಈ ತರಹ ಉಪ್ಪಿನಕಾಯಿ ಬಾಟಲುಗಳು ಬರುತ್ತಿದ್ದುದು ಮೊದಲ ಸಲವಲ್ಲ.
"ನಿನ್ನ ತಂದೆಗೆ ಅವ್ರನ್ನ ಕಂಡರೇ ಬಹಳ ಅಭಿಮಾನ, ಇದು ಹೀಗೇ ಮುಂದುವರಿಯೋದು ಮಾತ್ರವಲ್ಲ, ಮತ್ತಷ್ಟು ಬಿಗಿಯಾಗ್ಬೇಕು" ಅರ್ಥಗರ್ಭಿತವಾಗಿ ಹೇಳಿ ಹಾಟ್‌ ಬಾಕ್ಸ್‌ನಿಂದ ಇಡ್ಲಿಗಳನ್ನ ತೆಗೆದು ಪ್ಲೇಟಿಗೆ ಹಾಕಿದಾಗ ತಡೆದಳು "ತಿಂಡಿ ಆಯ್ತು, ಅತ್ತೆ.
ಬರೀ ಕಾಫಿ ಸಾಕು."
"ಬೇಡ, ಹಾರ್ಲಿಕ್ಸ್‌ ಬೆರೆಸಿ ಕೊಡ್ತೀನಿ.
ಪದೇ ಪದೇ ಕಾಫಿ ಕುಡ್ಯೋದು ಒಳ್ಳೇದಲ್ಲ" ಎಂದು ತಾವೇ ಹಾರ್ಲಿಕ್ಸ್‌ ಬಾಟಲೆತ್ತಿಕೊಂಡಾಗ ಎದೆಯ ಮೇಲೆ ಕೈಯಿಟ್ಟುಕೊಂಡು "ಈ ಶಾಂತಿ ಸದಾ ಇರಲಿ' ಎಂದು ದೇವರನ್ನ ಬೇಡಿಕೊಂಡಿದ್ದು ಭಕ್ತಿಯಿಂದ.
ಹಾರ್ಲಿಕ್ಸ್‌ ಲೋಟಗಳನ್ನ ಒಯ್ದು ತಾನೇ ಆವರ ಮುಂದಿನ ಟೀಪಾಯಿ ಮೇಲಿಟ್ಟಳು.
ಯಾವಾಗ ಸಿಡಿಯುವುದೋ, ಕಾವಲಿಯ ಮೇಲೆ ಕೂತಂಗೆ ಇದ್ದರು ವಾಸುದೇವಯ್ಯ.
ಕಡ್ಡಿ ಎರಡು ತುಂಡಾಗುವಂತೆ ಮಾತಾಡುವ ಸ್ವಭಾವ ಯುಗಂಧರ್‌ದೆಂದು ಅವರಿಗೆ ಗೊತ್ತು.
ಲೋಟಗಳು ಬರಿದಾದ ಮೇಲೆ "ಹಾಗೇ ಒಂದು ಸುತ್ತು ಹಾಕ್ಕೊಂಡು,ಒಂದಿಷ್ಟು ತರಕ್ಕಾಗಿ ಹಿಡಿದು ಬಂದ್ದಿಡೋಣ.
ಅವ್ಳುನ ಕರ್ಕಂಡ್‌ ಹೋದರೇ ನಡು ಮಧ್ಯಾಹ್ನವಾಗಿ ಬಿಡುತ್ತೆ.
ಅವ್ಳ ಚೌಕಾಶಿಯಲ್ಲಿ" ಎದ್ದರು.
ಅಂಥ ಆರಾಮ ಸ್ಥಿತಿಯಲ್ಲಿರಲಿಲ್ಲ ವಾಸುದೇವಯ್ಯ.
"ಇಲ್ಲ, ಇಲ್ಲೊಬ್ಬ ಸ್ನೇಹಿತನ್ನ ನೋಡ್ಬೇಕು.
ಬಹಳ ದಿನದಿಂದ ಈ ಪ್ರೋಗ್ರಾಂ ಮುಂದಕ್ಕೆ ಹಾಕ್ಕೊಂಡು ಬಂದಿದ್ದೀನಿ.
ಇಂದು ಅವಕಾಶ ಮಾಡಿ ಕೊಡಿ"ಎಂದರು.
ಯುಗಂಧರ್‌ ಜೋರಾಗಿ ನಕ್ಕರು "ಆಯ್ತು, ನಿಮ್ಮನ್ನ ಡ್ರಾಪ್‌ ಮಾಡಿನಾನು ಮಾರ್ಕೆಟ್‌ಗೆ ಹೋಗ್ತೀನಿ.
ಹಿಂದಿರುಗೋ ವೇಳೆಗೆ ನಿಮ್ಮಗಳ ಮಾತುಕತೆ ಮುಗಿದಿದ್ದರೇ ಕರ್ಕಂಡ್‌ ಬರ್ತಿನಿ" ಎಂದಿದ್ದಕ್ಕೆ ಹ್ಞೂಗುಟ್ಟಿದರು.
ಫಿಯೆಟ್‌ ಕಾರು ಹೊರಟಾಗ ಅತೆ, ಸೊಸೆ ಒಳಗೆ ಬಂದರು.
ಅಷ್ಟರಲ್ಲಿ ಪಕ್ಕದ ಮನೆಯಾಕೆ ಕೊಬ್ಬರಿ ಮಿಠಾಯಿ ಪಾಕ ತೋರಿಸಿ ಕೊಡಲು ಮೃಣಾಲಿನಿನ ಕರೆದೊಯ್ದಿದರಿಂದ ಕುಕ್ಕರಿಸಿದಳು ಚಾರುಲತ ಸೋತಂತೆ.
ಯುಗಂಧರ್‌ ಬಗ್ಗೆ ಅವಳಿಗೆ ಗೊತ್ತು.
ಸ್ವಲ್ಪ ಪ್ರತಿಷ್ಟೆಯ ಮನುಷ್ಯ,'ನಾನು' ಅನ್ನುವ ಅಹಂಕಾರ ಸ್ವಲ್ಪ ಜಾಸ್ತಿ ಅನ್ನೋದು ಬಿಟ್ಟರೇ ಒಳ್ಳೆಯವರೇ.
ಒಂದು ಪ್ರೈವೇಟ್‌ ಸಿಮೆಂಟ್‌ ಫ್ಯಾಕ್ಟರಿಯಲ್ಲಿ ಒಳ್ಳೆ ಪೋಸ್ಟ್‌ನಲ್ಲಿದ್ದು ರಿಟೈರ್ಡ್‌ಆ ದವರು.
ಒಂದೆರಡು ದೇವಸ್ಥಾನಗಳ ಟ್ರಸ್ಟಿಗಳು. . . ಗಾಯನ ಸಮಾಜದ ಸೆಕ್ರೆಟರಿ.
ಲಯನ್ಸ್‌ಗೆ ಮಾಜಿ ಗೌರ್ನರ್‌.
ಇಂಥ ಹಲವು ಗೌರವಗಳು ಅವರಿಗೆ ಲಭ್ಯ.
ಸ್ವಲ್ಪ ಮುಂಗೋಪ, ಒಂದಿಷ್ಟು ಹಟ - ಅವರ ಸದ್ಗುಣಗಳನ್ನೆಲ್ಲ ಹೋಮ ಕುಂಡಕ್ಕೆ ಎಸೆದು ಬಿಡುತ್ತಿತ್ತು.
ಈ ಸ್ವಭಾವದ ಪರಿಚಿಯ ಚಾರುಲತಗೆ ಇದ್ದುದ್ದರಿಂದ ಹೆದರುತ್ತಿದ್ದಳು.
ಸ್ವಲ್ಪ ಮೂರ್ತಿ ಅವಳ ಪರ ನಿಂತರೆ ಧೈರ್ಯವಾಗಿ ಎದುರಿಸಬಹುದಿತ್ತು.
ತಾತ್ಕಾಲಿಕ ಅನುಮಾನ ಕಾಡುತ್ತಿತ್ತು.
ಮೂರ್ತಿ ವಾಚಾಳಿ ಮಾತ್ರವಲ್ಲ ವಾಗ್ಮಿ ಕೂಡ.
ಯಾವುದೇ ವಿಷಯವನ್ನ ತಗೊಂಡರೂ ಅರ್ಥವತ್ತಾಗಿ, ಆಕರ್ಷಕವಾಗಿ ಮಾತಾಡಬಲ್ಲ.
ಕೆಲವೊಮ್ಮೆ ತಾನು ಅವನಿಗೆ ವಿದ್ಯಾರ್ಥಿಯಾಗಿದ್ದರೇ ಚೆನ್ನಾಗಿರುತ್ತಿತ್ತು ಎಂದುಕೊಳ್ಳುತ್ತಿದುದುಂಟು.
ಮೃಣಾಲಿನಿ ಬರುವ ಮುನ್ನವೇ ಅಣ್ಣ, ತಂಗಿ ಬಂದರು.
ತಬ್ಬಿ ಮುದ್ದಾಡುತ್ತಿದ್ದ ಪೂಜಾ ಇಂದು "ಯಾವಾಗ್ಬಂದಿದ್ದು ಅತ್ತಿಗೆ ?
ನೇರವಾಗಿ ಇಲ್ಲಿಗ್ಬಂದು ಅಲ್ಲಿಗೆ ಹೋಗ್ಬಹುದಿತ್ತು" .
ಸಣ್ಣ ಆಕ್ಷೇಪಣೆ ಎತ್ತಿದಾಗ ಮೂರ್ತಿಯೇ ಉಸುರಿದ “ನಾನೇ ಬಿಟ್ಟು ಇಲ್ಲಿಗ್ಬಂದೆ.
ಸ್ಟೇಷನ್‌ನಲ್ಲಿಯೇ ಕಾರು ಕೊಟ್ಟಂಗೆ ಬಂದಿದ್ದ ನವೀನ್‌,ತಾನು ತಂದಿದ್ದ ಹೊಸ ಡ್ರೆಸ್‌ಗಳ ಪ್ಯಾಕೆಟ್‌ಗಳನ್ನ ಅವಳ ಮುಂದೆ ಬಿಡಿಸಿಟ್ಟ ಪೂಜಾ "ಈ ಕಲರ್‌ ನಂಗೆ ಚೆನ್ನಾಗಿ ಕಾಣೋಲ್ವಾ " ಭುಜದ ಮೇಲೆ ಹಾಕ್ಕೊಂಡು ಕೇಳಿದಾಗ “ನೀನು ಯಾವ ಡ್ರೆಸ್‌ ಹಾಕಿದ್ರು ಚೆನ್ನಾಗೇ ಇರ್ತೀಯಾ!
ಗುಡ್‌ ಪರ್ಸನಾಲಿಟಿ ನಿಂದು'' ಹೊಗಳಿದಳು ಚಾರುಲತ.
ಅದರಲ್ಲಿ ಉತ್ಫ್ರೇಕ್ಷೆಯೇನು ಇರಲಿಲ್ಲ.
ನ್ಯಾಚುರಲ್ಲಾಗಿ ಅವಳು ಚೆನ್ನಾಗಿದ್ದಳು.
"ಅದ್ನ, ನೀವು ನಿಮ್ಮಣ್ಣನಿಗೆ ಹೇಳ್ಬೇಕು" ದಢಾರನೇ ಪ್ಯಾಕೆಟ್‌ಗಳನ್ನ ರೂಮಿಗೆ ಕೊಂಡೊಯ್ದು ಹಾಸಿಗೆಯ ಮೇಲೆ ಎಸೆದಳು.
ಪೂಜಾ "ಸಾರಿ ಪೂಜಾ, ಈಗಾಗ್ಲೇ ನನದ್ವೈ ನಿಶ್ಚಯವಾಗಿದೆ.
ಎದುರು ಮನೆ ನೀರದಾನ ನೀನು ನೋಡಿರಬೇಕಲ್ಲ.
Markdown is supported
0% or
You are about to add 0 people to the discussion. Proceed with caution.
Finish editing this message first!
Please register or to comment