Commit 8861e961 authored by Narendra VG's avatar Narendra VG

Upload New File

parent 05443c0e
ಭಾರತದ ಕರ್ನಾಟಕ ರಾಜ್ಯವು ಭಾರತೀಯ ವಿಜ್ಞಾನ ಸಂಸ್ಥೆ , ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ , ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ , ಕರ್ನಾಟಕ , ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಇನ್ಫರ್ಮೇಷನ್ ಟೆಕ್ನಾಲಜಿ , ಧಾರವಾಡ ಮತ್ತು ಭಾರತ ವಿಶ್ವವಿದ್ಯಾಲಯದ ನ್ಯಾಷನಲ್ ಲಾ ಸ್ಕೂಲ್ ಸಂಸ್ಥೆಗಳನ್ನು ಹೊಂದಿದೆ .
ಜೊತೆಗೆ , ವಿಶ್ವೇಶ್ವರಯ್ಯ ಇನ್ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಟೆಕ್ನಾಲಜಿ (VIAT), ಮುದ್ದೇನಹಳ್ಳಿ ಯಲ್ಲಿ ಕಟ್ಟಲಾಗುತ್ತಿದೆ .
2016 ಪ್ರಾಥಮಿಕ ಮಯ್ಯು ಪ್ರೌಢ ಶಾಲೆಗಳುಬಜೆಟ್ನಲ್ಲಿ ಧನ ಮಂಜೂರು
ಉತ್ತಮ ಕರ್ನಾಟಕಕ್ಕೆ ಹಸನಾದ ಶಿಕ್ಷಣ ಹೇತುವಾಗಬೇಕೆಂದರೆ ನಾವು ಪರಿಭಾವಿಸುವ ಶಿಕ್ಷಣ ಗುರಿಗಳು ನಾವು ಉತ್ತಮ ಅಥವಾ ಒಳಿತು ಎಂದು ಭಾವಿಸುವ ಸಂಗತಿಗಳನ್ನು ಅನುರಣಿಸಬೇಕು .
ಇದನ್ನು ನಮ್ಮ ಸಂವಿಧಾನದ ಆಶಯವೇ ಹೇಳುತ್ತಿದೆ.ಎಲ್ಲರನ್ನೂ ಒಳಗೊಳ್ಳುವ ಮಾನವೀಯವೂ ಸುಸ್ಥಿರವೂ ಆದ ಸಮಾಜವೊಂದನ್ನು ಸ್ಥಾಪಿಸುವ ಉದ್ದೇಶವುಳ್ಳ ಸ್ಪಂದನಾಶೀಲ ಪ್ರಜಾಪ್ರಭುತ್ವಕ್ಕೆ ಅಡಿಗಲ್ಲಾಗಬೇಕಿರುವುದು ಶಿಕ್ಷಣ .
ಅರ್ಥಾತ್ ಸಮಾಜದ ಮೂಲ ನೆಲೆಗಟ್ಟಾಗಿರುವ ವ್ಯಕ್ತಿ ತನ್ನ ತೊಡಗಿಸಿಕೊಳ್ಳುವ ಸಾಮರ್ಥ್ಯವನ್ನು ಸಂಪೂರ್ಣವಾಗಿ ಬಳಸಿಕೊಳ್ಳುವ ಪೌರನಾಗಿ ಬೆಳೆಯಬೇಕು.
ಇದು ಸಾಧ್ಯವಾಗಬೇಕೆಂದರೆ ವ್ಯಕ್ತಿಯನ್ನು ಸ್ವತಂತ್ರನಾದ , ಸೃಜನಶೀಲ ಚಿಂತನೆಯುಳ್ಳ , ನೈತಿಕ ಮೌಲ್ಯಗಳನ್ನು ಅಳವಡಿಸಿಕೊಂಡ ಮನುಷ್ಯನನ್ನಾಗಿಸುವ ಶಿಕ್ಷಣ ಬೇಕು .
ಶೈಕ್ಷಣಿಕ ಸಂಸ್ಕೃತಿ ಮತ್ತು ಪ್ರಯೋಗಗಳೆರಡೂ ಮೇಲಿನ ಗುರಿಗಳನ್ನು ಇಟ್ಟುಕೊಂಡಿರುವಂತೆ ವ್ಯಾಖ್ಯಾನಿಸಿಕೊಳ್ಳುವುದು ಅಗತ್ಯ.
ಕಳೆದ ಕೆಲವು ದಶಕಗಳಲ್ಲಿ ಕರ್ನಾಟಕದ ಶಿಕ್ಷಣ ಕ್ಷೇತ್ರ ಹಲವು ಮುಖ್ಯ ಸಾಧನೆಗಳನ್ನು ಮಾಡಿದೆ .
ಶಾಲೆಗೆ ಸೇರುವ ಮಕ್ಕಳ ಸಂಖ್ಯೆ ಹೆಚ್ಚಾಗಿರುವುದು , ಲಿಂಗ ಸಮಾನತೆ ಮತ್ತು ಪಠ್ಯ ಕ್ರಮದ ಸುಧಾರಣೆಗಳೆಲ್ಲಾ ಈ ಸಾಧನೆಗಳಲ್ಲಿ ಸೇರುತ್ತವೆ .
ಶಿಕ್ಷಣದ ಗುರಿಗಳನ್ನು ಸಾಧಿಸುವುದಕ್ಕೆ ಅತ್ಯಂತ ಅಗತ್ಯವಿರುವ ವಿಚಾರಗಳು .
೧.ಮೊದಲನೆಯದಾಗಿ ನಮ್ಮ ಶೈಕ್ಷಣಿಕ ಯೋಜನೆ ಗಳನ್ನು ಕನಿಷ್ಠ ಹತ್ತು ವರ್ಷದ ಅವಧಿಯನ್ನು ಗಮನದಲ್ಲಿಟ್ಟುಕೊಂಡು ರೂಪಿಸಬೇಕು .
ಇದಕ್ಕೆ ಅಗತ್ಯವಿರುವ ಹಣಕಾಸು ಅಗತ್ಯದ ಬಗ್ಗೆಯೂ ಸ್ಪಷ್ಟ ಕಲ್ಪನೆ ಇರಬೇಕು .
೨.ಎರಡನೆಯದಾಗಿ ,ಒಳ್ಳೆಯ ಉದ್ದೇಶಗಳು ಮತ್ತು ಅತ್ಯುತ್ತಮ ಆಡಳಿತ ನೀತಿಗಳು ನಿಜಕ್ಕೂ ಫಲ ನೀಡುವುದು ಅವುಗಳ ಅನುಷ್ಠಾನದಲ್ಲಿ ಎಂಬುದನ್ನು ನಾವು ಅರಿಯಬೇಕು .
ಇದಕ್ಕೆ ನಮ್ಮ ವ್ಯವಸ್ಥೆಯೊಳಗೊಂದು ಬದಲಾವಣೆಯ ಅಗತ್ಯವಿದೆ .
ಕೇಂದ್ರೀಕೃತ ನಿಯಂತ್ರಣದ ಮಾದರಿಯ ಅನುಷ್ಠಾನ ತಂತ್ರವನ್ನು ಬದಿಗಿರಿಸಿ ಋಜುತ್ವ , ಸಬಲೀಕರಣ ಮತ್ತು ಸಾಮರ್ಥ್ಯ ವೃದ್ಧಿಯ ಮಾದರಿಯನ್ನು ಅನುಸರಿಸಬೇಕು .
೩.ಮೂರನೆಯದಾಗಿ ಸಾರ್ವಜನಿಕ ಶಿಕ್ಷಣ ಅಥವಾ ಸರ್ಕಾರಿ ಶಾಲೆಗಳ ಮೂಲಕ ನೀಡುವ ಶಿಕ್ಷಣಕ್ಕೆ ಒತ್ತು ನೀಡುವ ಅಗತ್ಯವಿದೆ .
ಅಲ್ಲದೆ ಸಾರ್ವಜನಿಕ ಶಿಕ್ಷಣದ ಗುಣಮಟ್ಟ ಸುಧಾರಣೆಗೆ ಅಗತ್ಯವಿರುವ ಸಶಕ್ತ ಯೋಜನೆಯೊಂದಿಗೆ ಸಾಕಾರಗೊಳ್ಳಬೇಕು.
೧.ಬೋಧಕರ ಶಿಕ್ಷಣ ವ್ಯವಸ್ಥೆಯನ್ನು ತಳ ಮಟ್ಟದಿಂದ ಕಟ್ಟುವ ಅಗತ್ಯವಿದೆ .
ನಮ್ಮಲ್ಲಿ ಬಿಎಡ್ ಮತ್ತು ಡಿಎಡ್ ಕೋರ್ಸ್‌ಗಳ ಮೂಲಕ ಶಿಕ್ಷಕರಾಗಬಯಸುವವರಿಗೆ ತರಬೇತಿ ನೀಡಲಾಗುತ್ತದೆ .
ನಮ್ಮಲ್ಲಿ ಮಾತ್ರ ಇದರ ಅವಧಿ ಎರಡೇ ವರ್ಷ .
ಈ ಕ್ಷೇತ್ರದ ಸುಧಾರಣೆಯ ಹಾದಿಯಲ್ಲಿ ನಾವಿನ್ನೂ ಬಹುದೂರ ಸಾಗಬೇಕಾಗಿದೆ .
ಪಠ್ಯಕ್ರಮ , ಸಾಂಸ್ಥಿಕ ವ್ಯವಸ್ಥೆ ಮತ್ತು ನಿಯಂತ್ರಣ ಪ್ರಾಧಿಕಾರ ಹೀಗೆ ಎಲ್ಲೆಡೆಯೂ ಬದಲಾವಣೆಯ ಅಗತ್ಯವಿದೆ .
೨.ಎರಡನೆಯ ಹಂತದ ಕ್ರಮಗಳ ಅಗತ್ಯವಿರುವುದು ಈಗಾಗಲೇ ಬೋಧನಾ ಕ್ರಿಯೆಯಲ್ಲಿ ತೊಡಗಿಕೊಂಡಿ ರುವ ಶಿಕ್ಷಕರ ಸಾಮರ್ಥ್ಯ ವರ್ಧನೆಯ ಕ್ಷೇತ್ರದಲ್ಲಿ .
ನಮ್ಮಲ್ಲಿ ನಾಲ್ಕು ಲಕ್ಷ ಮಂದಿ ಶಿಕ್ಷಕರಿದ್ದಾರೆ ಅವರೆಲ್ಲರೂ ಅತ್ಯಂತ ದುರ್ಬಲವಾದ ಬೋಧಕ ತರಬೇತಿ ವ್ಯವಸ್ಥೆಯ ಉತ್ಪನ್ನಗಳು .
ಇವರನ್ನು ಗುರಿಯಾಗಿಟ್ಟು ಕೊಂಡು ತೀವ್ರ ಸ್ವರೂಪದ ಸಾಮರ್ಥ್ಯ ವೃದ್ಧಿಯ ತರಬೇತಿಗಳನ್ನು ರೂಪಿಸಿ ಸುಸ್ಥಿರ ಮಾದರಿಯಲ್ಲಿ ಕಾರ್ಯರೂಪಕ್ಕೆ ತರಬೇಕು .
ಸಾಮಾನ್ಯ ಮಟ್ಟದ ಬೋಧಕ ಅಥವಾ ಬೋಧಕಿಗೆ ಸರಿಯಾದ ಬೌದ್ಧಿಕ ಬೆಂಬಲ ದೊರೆತರೆ ಆತ ಅಥವಾ ಆಕೆ ತನ್ನ ವೃತ್ತಿಗೆ ನ್ಯಾಯ ದೊರಕಿಸುವುದರಲ್ಲಿ ಸಂಶಯವಿಲ್ಲ .
ಈ ಬೋಧಕರನ್ನು ನಾವು ಬದಲಾವಣೆಯ ಬೆಂಬಲಿಗರನ್ನಾಗಿಸುವ ಜೊತೆಗೆ ಅವರನ್ನೇ ಅದರ ಚಾಲಕ ಶಕ್ತಿಯಾಗಿ ಮಾರ್ಪಡಿಸಬೇಕಾಗಿದೆ .
೩.ದೊಡ್ಡ ಪ್ರಮಾಣದಲ್ಲಿ ಶಿಕ್ಷಣ ತಜ್ಞರನ್ನು ಸೃಷ್ಟಿಸುವುದು .
ಅಂದರೆ ಬೋಧಕರ ಶಿಕ್ಷಣ , ಪಠ್ಯಕ್ರಮಗಳನ್ನು ರೂಪಿಸುವುದು , ಮೌಲ್ಯಮಾಪನ ವ್ಯವಸ್ಥೆಯನ್ನು ರೂಪಿಸುವುದು ಮುಂತಾದ ಕೆಲಸಗಳನ್ನು ಮಾಡುವವರ ಸಂಖ್ಯೆಯನ್ನು ಹೆಚ್ಚಿಸಬೇಕು.ಎಲ್ಲಾ ವಿಶ್ವವಿದ್ಯಾಲಯಗಳಲ್ಲಿ ಶಿಕ್ಷಣದ ವಿಷಯದಲ್ಲೇ ಸ್ನಾತಕೋತ್ತರ ಮತ್ತು ಪಿಎಚ್‌ಡಿ ಅಧ್ಯಯನಕ್ಕೆ ಅವಕಾಶವಿರುವ ‘ ಶಿಕ್ಷಣ ವಿಭಾಗ ’ ಗಳನ್ನು ಆರಂಭಿಸಬೇಕು .
೪.ಈಗಾಗಲೇ ಎಂಟನೆಯ ತರಗತಿವರೆಗಿನ ವಿದ್ಯಾರ್ಥಿಗಳಿಗೆ ನಿರಂತರ ಮತ್ತು ಸಮಗ್ರ ಮೌಲ್ಯ ಮಾಪನ ಪದ್ಧತಿಯನ್ನು ಅಳವಡಿಸಿಕೊಂಡಿದ್ದೇವೆ .
ಇದೊಂದು ಒಳ್ಳೆಯ ಬೆಳವಣಿಗೆ .
ಶಾಲಾ ಮಟ್ಟದ ಅಂತಿಮ ಹಂತದ ಪರೀಕ್ಷೆಗಳನ್ನು ಸುಧಾರಿಸುವ ಕೆಲಸಕ್ಕೆ ಮುಂದಾಗಬೇಕಿದೆ.ಉರುಹಚ್ಚಿ ನೆನಪಿಟ್ಟುಕೊಂಡ ಜ್ಞಾನದ ಮಟ್ಟವನ್ನು ಪರೀಕ್ಷಿಸುವ ಮಾದರಿಯಿಂದ ವಿದ್ಯಾರ್ಥಿಗಳು ವಿಷಯಗಳನ್ನು ಎಷ್ಟರ ಮಟ್ಟಿಗೆ ಪರಿಕಲ್ಪನಾತ್ಮಕವಾಗಿ ಅರ್ಥ ಮಾಡಿಕೊಂಡಿದ್ದಾರೆ ಎಂಬುದನ್ನು ಅರಿಯುವ , ಅವರ ಚಿಂತನೆಯ ಮಟ್ಟವನ್ನು ಅಳೆಯುವ ಮಾದರಿಯನ್ನು ಅಳವಡಿಸಿಕೊಳ್ಳಬೇಕು .
೫.ನಾವು ನಮ್ಮ ಪೂರ್ವ ಪ್ರಾಥಮಿಕ ಶಿಕ್ಷಣ ಕ್ಷೇತ್ರದಲ್ಲಿ ಗಮನಾರ್ಹ ಪ್ರಮಾಣದ ಹೂಡಿಕೆ ಮಾಡುವ ಅಗತ್ಯವಿದೆ .
ಮೂರರಿಂದ ಐದು ವರ್ಷಗಳ ಮಕ್ಕಳನ್ನು ನೋಡಿಕೊಳ್ಳುವ ಅಂಗನವಾಡಿ ವ್ಯವಸ್ಥೆಯೊಂದನ್ನು ಕಟ್ಟಿದ್ದೇವೆ .
ಆದರೆ ಅದರ ಸ್ಥಿತಿ ಅಷ್ಟೇನೂ ಚೆನ್ನಾಗಿಲ್ಲ .
ಇಲ್ಲಿ ಮೂಲಸೌಕರ್ಯದಿಂದ ಆರಂಭಿಸಿ ಅನೇಕ ಸುಧಾರಣೆಗಳಿಗಾಗಿ ಹೂಡಿಕೆಯ ಅಗತ್ಯವಿದೆ .
೬.ಶೈಕ್ಷಣಿಕ ನಾಯಕತ್ವದ ಅಭಿವೃದ್ಧಿಯತ್ತ ತೀವ್ರವಾಗಿ ಗಮನಹರಿಸಬೇಕಿದೆ .
ಈ ಪ್ರಕ್ರಿಯೆಯಲ್ಲಿ ಶಾಲೆಗಳ ಮುಖ್ಯೋಪಾಧ್ಯಾಯರಿಂದ ಆರಂಭಿಸಿ ಬ್ಲಾಕ್ ಮತ್ತು ಜಿಲ್ಲಾ ಮಟ್ಟದಲ್ಲಿ ಕಾರ್ಯನಿರ್ವಹಿಸುವವರು ಹಾಗೆಯೇ ರಾಜ್ಯ ಮಟ್ಟದಲ್ಲಿರುವ ಅಧಿಕಾರಿಗಳ ಸಾಮರ್ಥ್ಯ ವರ್ಧನೆವರೆಗಿನ ಕೆಲಸಗಳಿವೆ .
೭.ಶಾಲೆ ಎಲ್ಲಿದ್ದರೆ ಹೆಚ್ಚು ಅನುಕೂಲ ಎಂಬುದನ್ನು ನಿರ್ಧರಿಸಬೇಕು .
ಹೀಗೆ ಮಾಡುವುದರಿಂದ ಒಂದಷ್ಟು ಹೊಸ ಮಾಧ್ಯಮಿಕ ಮತ್ತು ಪ್ರೌಢಶಾಲೆಗಳನ್ನು ಹೊಸತಾಗಿ ಆರಂಭಿಸ ಬೇಕಾಗಬಹುದು .
೮.ಭಾಷೆಯ ವಿಚಾರ .ಬೋಧನಾ ಮಾಧ್ಯಮವನ್ನು ನಿರ್ಧರಿಸುವುದಕ್ಕೆ ಸರಳ ಸೂತ್ರವಿದೆ .
ಕಲಿಕೆಗೆ ಅನುಕೂಲವಾಗುವ ಭಾಷೆ ಯಾವುದೋ ಅದು ಬೋಧನೆಯ ಮಾಧ್ಯಮವಾಗಿರಬೇಕು .
ಪುಟ್ಟ ಮಕ್ಕಳು ತಮ್ಮ ಮಾತೃಭಾಷೆಯಲ್ಲಿ ಚೆನ್ನಾಗಿ ಕಲಿಯುತ್ತಾರೆ .
ಆದ್ದರಿಂದ ಪ್ರಾಥಮಿಕ ಹಂತದಲ್ಲಿ ಅಂದರೆ ಐದನೇ ತರಗತಿಯ ತನಕವೂ ಮಾತೃಭಾಷೆಯೇ ಬೋಧನಾ ಮಾಧ್ಯಮವಾಗಿರಬೇಕು .
೯.ಕನ್ನಡ ನಮ್ಮ ರಾಜ್ಯದ ಭಾಷೆ , ಅದು ಪಠ್ಯಕ್ರಮದ ಭಾಗವಾಗಿರಬೇಕು ಎಂಬುದರಲ್ಲಿ ಸಂಶಯವಿಲ್ಲ .
ಇದರ ಜೊತೆಗೆ ಇಂಗ್ಲಿಷ್ ಕೂಡಾ ಇರಬೇಕು ಇದು ಶಿಕ್ಷಣದ ಒಟ್ಟಾರೆ ಗುರಿಯನ್ನು ಸಾಧಿಸುವುದಕ್ಕೆ ಅನುವು ಮಾಡಿಕೊಡುವಂತಿರಬೇಕು .
ಪಠ್ಯಕ್ರಮದಿಂದ ಪುಸ್ತಕಗಳ ತನಕ , ಬೋಧನಾ ತಂತ್ರದಿಂದ ಶಾಲಾ ಸಂಸ್ಕೃತಿವರೆಗಿನ ಎಲ್ಲೆಡೆಯೂ ಇದು ಪ್ರತಿಬಿಂಬಿಸಬೇಕು .
ಅಗತ್ಯ ಪರಿಣತಿ ಇರುವ ತಜ್ಞರನ್ನು ಒಳಗೊಂಡಿರುವ ಸ್ವತಂತ್ರ , ಸ್ವಾಯತ್ತ ಮತ್ತು ಸಶಕ್ತವಾಗಿರುವ ‘ ರಾಜ್ಯ ಪಠ್ಯಕ್ರಮ ಪರಿಷತ್ತಿ ’ ನಂಥ ವ್ಯವಸ್ಥೆ ಇದ್ದರೆ ಈ ಗುರಿಯನ್ನು ಸಾಧಿಸಬಹುದು .
೧೦.ದುರ್ಬಲ ವರ್ಗಗಳ ಸಮಸ್ಯೆ .
ಎಲ್ಲರಿಗೂ ಎಲ್ಲೆಡೆಯೂ ಸಮಾನವಾದ ಶಿಕ್ಷಣವನ್ನು ನೀಡುವ ಗುರಿಯನ್ನು ಇಟ್ಟುಕೊಂಡೇ ಶೈಕ್ಷಣಿಕ ಯೋಜನೆಗಳನ್ನು ರೂಪಿಸಬೇಕು.
Markdown is supported
0% or
You are about to add 0 people to the discussion. Proceed with caution.
Finish editing this message first!
Please register or to comment