ಪ್ರೋಟೀನ್ ಜೈವಿಕ ಸಂಯೋಜನೆಯು ಜೀವಕೋಶಗಳು ಹೊಸ ಪ್ರೋಟೀನ್‌ಗಳನ್ನು ತಯಾರಿಸಿ , ಜೀವಕೋಶದ ಪ್ರೋಟೀನ್‌ಗಳು ಹಾಳಾಗುವುದು ಅಥವಾ ರಪ್ತಿನ ಮೂಲಕ ಕಳೆದು ಹೋದ ಪ್ರೋಟೀನ್‌ಗಳನ್ನು ಪಡೆಯುವ ಮೂಲಕ ಸಮತೋಲನ ಕಾಯ್ದುಕೊಳ್ಳುವ ಪ್ರಕ್ರಿಯೆ .
ಅನುವಾದ ,ರೈಬೋಸೋಮ್‌ಗಳಿಂದ ಅಮಿನೊ ಆಮ್ಲ ಜೊತೆಗೂಡಿಸುವುದು , ಮೆಸೆಂಜರ್ ಆರ್‌ಎನ್ಎ (ಎಂಆರ್‌ಎನ್ಎ ) ಉತ್ಪಾದನೆ , ಟ್ರಾನ್ಸ್‌ಫರ್ ಆರ್‌ಎನ್ಎ (ಟಿಆರ್‌ಎನ್ಎ ) ಅಮಿನೊಅಸಿಲಾಗಿಸುವುದು ಅನುವಾದದ ಜೊತೆಗೆ ರವಾನಿಸುವುದು ಮತ್ತು ಅನುವಾದ ನಂತರದ ಮಾರ್ಪಾಟುಗಳು ಜೈವಿಕ ಸಂಯೋಜನೆಯ ದಾರಿಯಲ್ಲಿನ ಅಗತ್ಯ ಭಾಗಗಳು .
ಪ್ರೋಟೀನ್ ಜೈವಿಕ ಸಂಯೋಜನೆ ಹಲವು ಹೆಜ್ಜೆಗಳಲ್ಲಿ ಕಟ್ಟುನಿಟ್ಟಾಗಿ ನಿಯಂತ್ರಿಸಲ್ಪಟ್ಟಿದೆ .
ಮೂಲಭೂತವಾಗಿ ಲಿಪ್ಯಂತರ (ಡಿಎನ್ಎ ಪಡಿಯಚ್ಚು ಬಳಸಿ ಆರ್‌ಎನ್ಎ ಸಂಯೋಜನೆ ವಿದ್ಯಮಾನ ) ಮತ್ತು ಅನುವಾದ ( ಆರ್‌ಎನ್ಎಯಿಂದ ಅಮಿನೊ ಆಮ್ಲ ಜೋಡಿಸುವ ವಿದ್ಯಮಾನ ) ಈ ಹೆಜ್ಜೆಗಳು .
ಸಿಸ್ಟ್ರಾನ್ ಡಿಎನ್ಎ ಹಲವು ರೀತಿಯ ಆರ್‌ಎನ್ಎ ಮಧ್ಯಂತರಗಳಾಗಿ ಲಿಪ್ಯಂತರಗೊಳ್ಳುತ್ತದೆ .
ಪಾಲಿಪೆಪ್‌ಟೈಡ್ ಸರಪಳಿಯನ್ನು ಸಂಯೋಜಿಸಲು ಪಡಿಯಚ್ಚಾಗಿ ಅದರ ಕೊನೆಯ ಆವೃತ್ತಿಯು ಬಳಸಲ್ಪಡುತ್ತದೆ .
ವಂಶವಾಹಿಗಳು ಪ್ರೋಟೀನ್‌ನನ್ನು ಎಂಆರ್‌ಎನ್ಎದಿಂದ ನೇರವಾಗಿ ಸಂಯೋಜಿಸ ಬಹುದು .
ಪ್ರೋಟೀನ್ ಅಲ್ಪ ಕಾಲಾವಧಿಯಲ್ಲಿಯೇ ಅಥವಾ ದೊಡ್ಡ ಪ್ರಮಾಣದಲ್ಲಿ ಲಭ್ಯವಾಗ ಬೇಕಾಗಿದ್ದಲ್ಲಿ ಅದರ ಪೂರ್ವವರ್ತಿ ತಯಾರಾಗುತ್ತದೆ .
ಪ್ರೊಪ್ರೋಟೀನ್ ಒಂದು ಅಥವಾ ಹೆಚ್ಚು ತಡೆಹಿಡಿಯುವ ಅಥವಾ ಪ್ರತಿಬಂಧಕ ಪೆಪ್‌ಟೈಡ್‌ಗಳಿರುವ ಸಕ್ರಿಯವಲ್ಲದ ಪ್ರೋಟೀನ್ .
ಅನುವಾದ ನಂತರದ ಮಾರ್ಪಾಡಿನಲ್ಲಿ ಪ್ರೋಟೀಯೊಲೈಸಿಸ್ ಎಂದು ಕರೆಯಲಾದ ಪ್ರಕ್ರಿಯೆಯಲ್ಲಿ ಪ್ರತಿಬಂಧಕ ಸರಣಿ ತೆಗೆದು ಹಾಕಿದ ಮೇಲೆ ಪ್ರೋಟೀನ್ ಸಕ್ರಿಯವಾಗುತ್ತದೆ .
ಪ್ರೊಪ್ರೋಟೀನ್‌ನಲ್ಲಿ ಪೊರೆಯ ಒಳಗೆ ಪ್ರವೇಶಿಸಲು ಅಥವಾ ಮೂಲಕ ಹಾಯಲು (ಅಂದರೆ ಸ್ರವಿಸಲು ಅವನ್ನು ಗುರಿ ಮಾಡಿಕೊಂಡಿರುವುದು ) ಅಗತ್ಯವಾದ ನಿರ್ದಿಷ್ಟ ಸಂಕೇತ ಸರಣಿ (ಒಂದು ಎನ್ - ಕೊನೆಯ ಸಂಕೇತ ಪೆಪ್‌ಟೈಡ್ ) ಇರುತ್ತದೆ .
ಸಂಕೇತ ಪೆಪ್‌ಟೈಡ್ ಎಂಡೊಪ್ಲಾಸ್ಮ ಜಾಲತಂತಿಯಲ್ಲಿ ಸೀಳಲ್ಪಡುತ್ತದೆ.
ಪ್ರೊಪ್ರೋಟೀನ್‌ನ ಮುಂಚಿನ ಘಟಕಗಳಲ್ಲಿ ( ಪ್ರಿಪೊಪ್ರೋಟೀನ್‌ಗಳು ) ಎರಡೂ ಸರಣಿಗಳು ( ಪ್ರತಿಭಂದಕ ಮತ್ತು ಸಂಕೇತಗಳು ) ಇನ್ನೂ ಇರುತ್ತವೆ .
ಪ್ರೋಟೀನ್ ಸಂಯೋಜನೆಯಲ್ಲಿ ಒಂದು ಸೂಕ್ತ ಚಾರ್ಜಾದ (ಟಿಆರ್‌ಎನ್ಎ ಪ್ರತಿಕೋಡಾನು ಅಣುವಿಗೆ ಸೂಕ್ತ ಅಮಿನೊ ಆಮ್ಲ ಅಂಟಿಕೊಳ್ಳುವುದು ) ಅನುಕ್ರಮ ಟಿಆರ್‌ಎನ್ಎ ಅಣುಗಳನ್ನು ಎಂಆರ್‌ಎನ್ಎ ಅಣುಗಳ ಜೊತೆಗೆ ತರಲಾಗುತ್ತದೆ .
ಚಾರ್ಜಾದ ಟಿಆರ್‌ಎನ್ಎ ಪ್ರತಿಕೋಡಾನಿಗೆ ಎಂಆರ್‌ಎನ್ಎ ಕೋಡಾನನ್ನು ಪ್ರತ್ಯಾಮ್ಲ ಜೋಡಿಯ ( ಬೇಸ್ ಪೇರ್ ) ಮೂಲಕ ಹೊಂದಿಸಲಾಗುತ್ತದೆ .
ನಂತರ ಅಮಿನೊ ಆಮ್ಲಗಳನ್ನು ಒಂದಕ್ಕೊಂದು ತಳಕು ಹಾಕಿಕೊಂಡು ಬೆಳೆಯುತ್ತಿರುವ ಪ್ರೋಟೀನ್ ಸರಪಳಿಯನ್ನು ಹಿಗ್ಗಿಸಲಾಗುತ್ತದೆ ಮತ್ತು ಅಮಿನೊ ಆಮ್ಲಗಳಿಲ್ಲದ ಟಿಆರ್‌ಎನ್ಎಗಳನ್ನು ಬಿಡುಗಡೆ ಮಾಡಲಾಗುತ್ತದೆ .
ಈ ಪೂರ್ಣ ಸಂಕೀರ್ಣ ಪ್ರಕ್ರಿಯೆಗಳನ್ನು ರೈಬೋಸೋಮ್ ಆರ್‌ಎನ್ಎ ಎಂದು ಕರೆಯಲಾದ ಎರಡು ಮುಖ್ಯ ಆರ್‌ಎನ್ಎ ಸರಪಳಿಗಳು ಮತ್ತು ೫೦ಕ್ಕೂ ಹೆಚ್ಚು ಬೇರೆ ಬೇರೆ ಪ್ರೋಟೀನ್‌ಗಳನ್ನು ಹೊಂದಿದ ರೈಬೋಸೋಮ್‌ಗಳು ನಡೆಸುತ್ತವೆ .
ರೈಬೋಸೋಮ್ ಎಂಆರ್‌ಎನ್ಎ ಅಣುವಿನ ಒಂದು ತುದಿಗೆ ಅಂಟಿಕೊಳ್ಳುತ್ತದೆ ಮತ್ತು ಅದರ ಉದಕ್ಕೂ ಚಲಿಸುತ್ತದೆ , ಅಮಿನೊ ಆಮ್ಲಗಳ ಭಾರಹೊತ್ತ ಟಿಆರ್‌ಎನ್ಎ ಅಣುಗಳನ್ನು ಬಂಧಿಸುತ್ತದೆ ಮತ್ತು ಅಮಿನೊ ಆಮ್ಲಗಳನ್ನು ಜೋಡಿಸಿ ಹೊಸ ಪ್ರೋಟೀನ್ ಸರಣಿಯನ್ನು ರೂಪಿಸುತ್ತದೆ.
ಪ್ರೋಕ್ಯಾರಿಯೋಟ್ ಮತ್ತು ಯೂಕ್ಯಾರಿಯೋಟ್‌ಗಳಲ್ಲಿನ ಪ್ರೋಟೀನ್ ಜೈವಿಕ ಸಂಯೋಜನೆ ನಡುವೆ ಹೋಲಿಕೆಗಳಿವೆಯಾದರೂ ಕೆಲವು ವ್ಯತ್ಯಾಸಗಳೂ ಇವೆ .
ಲಿಪ್ಯಂತರದಲ್ಲಿ ಜಿನೋಮ್ ಡಿಎನ್ಎಯ ಎರಡು ಸುರುಳಿಗಳಲ್ಲಿ ಒಂದು ಎಳೆಯನ್ನು ಪಡಿಯಚ್ಚಾಗಿಸಿ ಕೊಂಡು ಎಂಆರ್‌ಎನ್‌ಎ ಸರಪಳಿ ತಯಾರಾಗುತ್ತದೆ .
ಇದನ್ನು ಪಡಿಯಚ್ಚು ಎಳೆ ಎಂದು ಕರೆಯಲಾಗಿದೆ .
ಲಿಪ್ಯಂತರವನ್ನು ಮೂರು ಹಂತಗಳಾಗಿ ವಿಂಗಡಿಸ ಬಹುದು : ಆರಂಭ,ಉದ್ದವಾಗುವಿಕೆ ಮತ್ತು ಕೊನೆಗೊಳ್ಳುವಿಕೆ ಮತ್ತು ಪ್ರತಿ ಹೆಜ್ಜೆಯೂ ವಂಶವಾಹಿಯನ್ನು ಸರಿಯಾಗಿ ಲಿಪ್ಯಂತರ ಮಾಡುವ ಹೊಣೆ ಹೊತ್ತ ದೊಡ್ಡ ಸಂಖ್ಯೆಯ ಲಿಪ್ಯಂತರ ಏಜೆಂಟುಗಳಂತಹ ಪ್ರೋಟೀನ್‌ಗಳು ಮತ್ತು ಸಹಸಕ್ರಿಯಕಾರಕಗಳಿಂದ (ಕೊಯಾಕ್ಟಿವೇಟರ್ ) ನಿಯಂತ್ರಿತವಾಗಿದೆ .
ಲಿಪ್ಯಂತರವು ಡಿಎನ್ಎ ಇರುವ ಜೀವಕೋಶದ ಬೀಜಕಣದಲ್ಲಿ ನಡೆಯುತ್ತದೆ .
ಜೀವಕೋಶದ ಡಿಎನ್ಎ ಎರಡು ತಂತುಗಳಿಂದ ರೂಪಿತವಾಗಿದ್ದು ತಂತು ಅಥವಾ ಎಳೆಗಳಲ್ಲಿ ಸಕ್ಕರೆ ಮತ್ತು ಪಾಸ್ಪೇಟ್‌ಗಳು ಇವೆ .
ಈ ಎಳೆಗಳು ಎದರುಬದುರು ಎಳೆಗಳ ಪ್ರತ್ಯಾಮ್ಲಗಳ ನಡುವಿನ ಜಲಜನಕ ಬಂಧನದಿಂದ ಹಿಡಿದಿಡಲ್ಪಟ್ಟಿವೆ .
ಪ್ರತಿ ಎಳೆಯಲ್ಲಿನ ಸಕ್ಕರೆ ಮತ್ತು ಪಾಸ್ಪೇಟ್‌ಗಳು ಹೆಚ್ಚು ಗಟ್ಟಿಯಾದ ಪಾಸ್ಪೊಡೈಯಿಸ್ಟರ್ ಎರಡು ವೆಲೆನ್ಸಿ ಬಂಧನದಿಂದ ಸೇರಿಸಲ್ಪಟ್ಟಿವೆ .
ಹೆಲಿಕೇಸ್ ಕಿಣ್ವ ಡಿಎನ್ಎ “ ಜಿಪ್ಪುತೆಗೆಯುತ್ತದೆ ” ( ಎರಡು ಭಿನ್ನ ಎಳೆಗಳ ನಡುವಿನ ಜಲಜನಕ ಬಂಧನವನ್ನು ಒಡೆಯುವುದು ) ಮತ್ತು ಒಂದು ನ್ಯೂಕ್ಲಿಯೊಟೈಡ್ ಸರಪಳಿಯನ್ನು ನಕಲಿಸಲು ಮುಕ್ತವಾಗಿಸುತ್ತದೆ .
ಆರ್‌ಎನ್‌ಎ ಪಾಲಿಮರೇಸ್ ಡಿಎನ್ಎ ಎಳೆಯನ್ನು ೩ - ಪ್ರೈಮ್ ( ೩`) ತುದಿಯಿಂದ ೫ - ಪ್ರೈಮ್ ( ೫ ’) ತುದಿಯ ದಿಕ್ಕಿನಲ್ಲಿ ಓದುತ್ತದೆ ಜೊತೆಗೆ ೫ ’ ನಿಂದ ೩ ’ ದಿಕ್ಕಿನ ಮೆಸೆಂಜರ್ ಆರ್‌ಎನ್ಎಯ ಒಂದು ಎಳೆಯನ್ನು ಸಂಯೋಜಿಸುತ್ತದೆ .
ಸಾಮಾನ್ಯ ಆರ್‌ಎನ್ಎ ರಚನೆಯು ಡಿಎನ್ಎ ರಚನೆಯನ್ನೇ ಹೋಲುತ್ತದೆ ಆದರೆ ಡಿಎನ್ಎನಲ್ಲಿನ ತೈಮಿನ್ ನ್ಯೂಕ್ಲಿಯೋಟೈಡ್ (ಸಾಮಾನ್ಯವಾಗಿ Tಯಿಂದ ಸೂಚಿತವಾಗುತ್ತದೆ ) ಬದಲಿಗೆ ಆರ್‌ಎನ್ಎನಲ್ಲಿ ಯುರಾಸಿಲ್ ನ್ಯೂಕ್ಲಿಯೋಟೈಡ್ ( Uಯಿಂದ ಸೂಚಿತವಾಗುತ್ತದೆ ) ಇರುತ್ತದೆ .
ಎಂಆರ್‌ಎನ್ಎ ಒಂದು ಎಳೆ ಬೀಜಕಣ ತೊರೆದು ಬಿಜಕಣ ರಂಧ್ರಗಳ ಮೂಲಕ ಜೀವರಸಕ್ಕೆ ವಲಸೆ ಹೋಗುತ್ತದೆ .
ಲಿಪ್ಯಂತರದ ಮೊದಲ ಉತ್ಪಾದನೆ ಪ್ರೋಕ್ಯಾರಿಯೋಟ್ ಜೀವಕೋಶಗಳಲ್ಲಿ ಯೂಕ್ಯಾರಿಯೋಟ್ ಜೀವಕೋಶಗಳಿಗಿಂತ ಭಿನ್ನವಾಗಿದ್ದು ಅದರ ಎಂಆರ್‌ಎನ್‌ಎಗೆ ಲಿಪ್ಯಂತರ ನಂತರದ ಮಾರ್ಪಾಡುಗಳು ಅಗತ್ಯವಿಲ್ಲ .
ಇದಕ್ಕೆ ಭಿನ್ನವಾಗಿ ಯೂಕ್ಯಾರಿಯೋಟ್ ಜೀವಕೋಶಗಳಲ್ಲಿ ಮೊದಲ ಉತ್ಪಾದನೆಯನ್ನು ಪ್ರಾಥಮಿಕ ಲಿಪ್ಯಂತರ ಎಂದು ಕರೆಯಲಾಗುತ್ತದೆ ಮತ್ತು ಅದಕ್ಕೆ ಲಿಪ್ಯಂತರದ ನಂತರದ ಮಾರ್ಪಾಟಿನ ಅಗತ್ಯವಿದೆ (ಅದರ ಮುಚ್ಚಳವಾಗಿ ೭ ಮಿಥೈಲ್ - ಗ್ವಾನೊಸಿನ್ , ಬಾಲವಾಗಿ ಪಾಲಿ - ಎ ಸೇರಿಸಲಾಗುತ್ತದೆ ) .
ಇಂತಹ ಬದಲಾವಣೆಯ ನಂತರ ಹೆಎಚ್ಎನ್‌ಆರ್‌ಎನ್‌ಎ ( ಹೆಟರೊಜೀನಸ್ ಬೀಜಕಣ ಆರ್‌ಎನ್‌ಎ ) ಬರುತ್ತದೆ ಮತ್ತು ಹೆಚ್ಎನ್ಆರ್‌ಎನ್‌ಎ ನಂತರ ಸ್ಪೈಸಸೋಮ್‌ಗಳ ಮೂಲಕ ವಂಶವಾಹಿಯ ಸಂಕೇತಗಳಲ್ಲದ ಭಾಗಗಳನ್ನು ಒಟ್ಟಿಗೆ ಸೇರಿಸಿದ (ಇವನ್ನು ಇಂಟ್ರಾನ್‌ಗಳು ಎನ್ನಲಾಗಿದೆ ) ನಂತರ ಕೊನೆಯದಾಗಿ ಎಂಆರ್‌ಎನ್ಎ ಉತ್ಪನ್ನವಾಗುತ್ತದೆ .
ಆರ್‌ಎನ್‌ಎಯಿಂದ ಪ್ರೋಟೀನ್ ಸಂಯೋಜನೆಯನ್ನು ಅನುವಾದ ಎಂದು ಕರೆಯಲಾಗಿದೆ .
ರೈಬೋಸೋಮ್‌ಗಳು ಸಣ್ಣ ಮತ್ತು ದೊಡ್ಡ ಉಪಘಟಕಗಳಿಂದ ಕೂಡಿದ್ದು ಅವು ಎಂಆರ್‌ಎನ್ಎಯನ್ನು ಸುತ್ತುವರೆಯುತ್ತವೆ .
ಅನುವಾದದಲ್ಲಿ ಮೆಸೆಂಜರ್ ಆರ್‌ಎನ್ಎ ( ಎಂಆರ್‌ಎನ್ಎ ) ಸಂಕೇತವನ್ನು ಬಿಡಿಸಿ ಮುಕ್ಕೂಟ ನ್ಯೂಕ್ಲಿಯೋಟೈಡ್‌ನ ವಂಶವಾಹಿ ಕೋಡ್ ನಿಯಮಗಳ ಪ್ರಕಾರ ನಿರ್ದಿಷ್ಟ ಪಾಲಿಪೆಪ್‌ಟೈಡನ್ನು ತಯಾರಿಸಲಾಗುತ್ತದೆ .
ಇದು ಎಂಆರ್‌ಎನ್ಎ ಸರಣಿಯ ಪಡಿಯಚ್ಚನ್ನು ಮಾರ್ಗದರ್ಶಿಯಾಗಿ ಬಳಸಿ ಪ್ರೋಟೀನಾಗುವ ಅಮಿನೊ ಆಮ್ಲಗಳ ಸರಣಿಯನ್ನು ರಚಿಸುತ್ತದೆ .
ಅನುವಾದ ನಾಲ್ಕು ಹಂತಗಳಲ್ಲಿ ಮುಂದುವರೆಯುತ್ತದೆ :ಸಕ್ರಿಯವಾಗುವಿಕೆ ,ಆರಂಭ ,ಉದ್ದವಾಗುವಿಕೆ ಮತ್ತು ಕೊನೆಯಾಗುವಿಕೆ ( ಎಲ್ಲ ಹಂತಗಳೂ ಅನುವಾದದ ಉತ್ಪಾದನೆಯಾದ ಅಮಿನೊ ಆಮ್ಲ ಅಥವಾ ಪಾಲಿಪೆಪ್‌ಟೈಡ್ ಸರಣಿಯ ಬೆಳವಣಿಗೆಯನ್ನು ವಿವರಿಸುತ್ತವೆ ) .
ಸಕ್ರಿಯವಾಗುವಿಕೆಯಲ್ಲಿ ಸರಿಯಾದ ಅಮಿನೋ ಆಮ್ಲ ಸೂಕ್ತವಾದ ಟ್ರಾನ್ಸಫರ್ ಆರ್‌ಎನ್ಎಯನ್ನು ಸೇರುತ್ತದೆ .
ನಿಜವಾಗಿಯೂ ಇದು ತಾಂತ್ರಿಕ ಅರ್ಥದಲ್ಲಿ ಅನುವಾದ ಹೆಜ್ಜೆಯಲ್ಲವಾದರೂ ಅನುವಾದ ಮುಂದುವರೆಯಲು ಇದು ಅಗತ್ಯ .
ಅಮಿನೊ ಆಮ್ಲ ತನ್ನ ಕಾರ್ಬೊಕ್ಸಿಲ್ ಗುಂಪಿನಿಂದ ಟಿಆರ್‌ಎನ್‌ನ ೩ ` OH ( ೩ ಪ್ರೈಮ್ ಆಮ್ಲಜನಕ ಮತ್ತು ಜಲಜನಕ ) ಎಸ್ಟರ್ ಬಾಂಡ್ ಮೂಲಕ ಸೇರುತ್ತದೆ .
ಟಿಆರ್‌ಎನ್‌ಎ ಹೀಗೆ ಅಮಿನೊ ಆಮ್ಲದೊಂದಿಗೆ ಸೇರಿದಾಗ ಅದನ್ನು ಚಾರ್ಜಾದದ್ದು ಎಂದು ಕರೆಯಲಾಗುತ್ತದೆ .
ಆರಂಭವು ರೈಬೋಸೋಮ್‌ನ ಸಣ್ಣ ಉಪಘಟಕ ಆರಂಭದ ಏಜೆಂಟುಗಳ ಸಹಾಯದಿಂದ ಟಿಆರ್‌ಎನ್ಎನ ೫ ’( ೫ ಪ್ರೈಮ್ ) ತುದಿಗೆ ಸೇರುವುದನ್ನು ಒಳಗೊಂಡಿದೆ ಮತ್ತು ಇದಕ್ಕೆ ಇತರ ಪ್ರೋಟೀನ್‌ಗಳು ಸಹಾಯ ಮಾಡುತ್ತವೆ .
ಉದ್ದವಾಗುವಿಕೆ ಪಕ್ಕದ ಅಮಿನೊಅಸಿಲ್ - ಟಿಆರ್‌ಎನ್‌ಎಯು (ಚಾರ್ಜಾದ ಟಿಆರ್‌ಎನ್ಎ ) ಸಾಲಿನಲ್ಲಿ ರೈಬೋಸೋಮ್‌ನ್ನು ಜಿಟಿಪಿ (ಗ್ವಾನೋಸಿನ್ ಟ್ರೈಪಾಸ್ಪೇಟ್ ) ಮತ್ತು ಉದ್ದವಾಗುವಿಕೆ ಏಜೆಂಟುಗಳೊಂದಿಗೆ ಸೇರಿದಾಗ ಆಗುತ್ತದೆ .
ಪಾಲಿಪೆಪ್‌ಟೈಡ್‌ನ ಕೊನೆಯಾಗಿಸುವಿಕೆಯು ರೈಬೋಸೋಮ್‌ನ ಎ ಸೈಟ್ ನಿಲ್ಲಿಸುವ ಕೋಡಾನನ್ನು (ಈ ಕೋಡಾನುಗಳು UAA , UAG ಅಥವಾ UGA ) ಎದುರಿಸಿದಾಗ ಆಗುತ್ತದೆ .
ಹೀಗಾದಾಗ ಯಾವ ಟಿಆರ್‌ಎನ್ಎಯೂ ಈ ಕೋಡಾನನ್ನು ಗುರುತಿಸುವುದಿಲ್ಲ ಆದರೆ ಬಿಡುಗಡೆಯ ಏಜೆಂಟುಗಳು ಅರ್ಥವಿಲ್ಲದ ಕೋಡಾನನ್ನು ಗುರಿಸುತ್ತವೆ ಮತ್ತು ಪಾಲಿಪೆಪ್‌ಟೈಡ್ ಸರಪಳಿಯ ಬಿಡುಗಡೆಗೆ ಕಾರಣವಾಗುತ್ತವೆ .
ಪ್ರೋಟೀನ್ ಜೈವಿಕ ಸಂಯೋಜನೆಯಲ್ಲಿನ ಈ ಅನುವಾದವನ್ನು ಕೆಲಸ ಮಾಡದಂತೆ ಮಾಡುವ ಅಥವಾ ಪ್ರತಿಬಂಧಿಸುವ ಸಾಮರ್ಥ್ಯವನ್ನು ಅನಿಸೊಮೈಸಿನ್,ಸೈಕ್ಲೊಹೆಕ್ಸಿಮೈಡ್ ,ಕ್ಲೋರಾಮ್‌ಫೆನಿಕಾಲ್ , ಟೆಟ್ರಾಸೈಕ್ಲಿನ್ , ಸ್ಟ್ರೆಪ್ಟೊಮೈಸಿನ್ , ಎರಿತ್ರೊಮೈಸಿನ್ , ಪುರೊಮೈಸಿನ್‌ನಂತಹ ಕೆಲವು ಪ್ರತಿಜೀವಕಗಳಲ್ಲಿ (ಯಾಂಟಿಬಯೋಟಿಕ್ ) ಬಳಸಲಾಗಿದೆ .
ಜೈವಿಕ ಸಂಯೋಜನೆಯ ನಂತರದ ಘಟನೆಗಳು ಅನುವಾದ ನಂತರದ ಮಾರ್ಪಾಡುಗಳು ಮತ್ತು ಪ್ರೋಟೀನ್ ಮಡಚಿಕೊಳ್ಳುವಿಕೆಯನ್ನು ಒಳಗೊಂಡಿವೆ .
ಸಂಯೋಜನೆಯ ಸಮಯದಲ್ಲಿ ಮತ್ತು ನಂತರದಲ್ಲಿ ಕೆಲವು ಸಲ ಮಡಿಚಿಕೊಂಡು ಎರಡನೆಯ ಮತ್ತು ಮೂರನೆಯ ಎಂದು ಕರೆಯಲಾದ ರಚನೆಗಳನ್ನು ಪಡೆಯುತ್ತವೆ .