ವಿಜಯಪುರ , ಬೆಳಗಾವಿ ಹಾಗೂ ಬಾಗಲಕೋಟೆ ಜಿಲ್ಲೆಗಳ 1.30ಲಕ್ಷ ಎಕರೆ ಪ್ರದೇಶಕ್ಕೆ ನೀರಾವರ ಸೌಲಭ್ಯ ಕಲ್ಪಿಸುವ ಮಹತ್ವಾಕಾಂಕ್ಷೆಯ ಯೋಜನೆಯಾದಗಿದೆ .
ಜಮಖಂಡಿ ತಾಲೂಕಿನ ಕವಟಗಿ ಗ್ರಾಮದ ಹತ್ತಿರ ನಿರ್ಮಿಸಲಾಗಿರುವ ಇಂಟೆಕ್ ಕಾಲುವೆ , ಪಂಪ್ ಹೌಸ್ , ವಿದ್ಯುತ್ ಸ್ಥಾವರಗಳು ತುಬಚಿ - ಬಬಲೇಶ್ವರ ಏತ ನೀರಾವರಿ ಯೋಜನೆಯ ಒಟ್ಟು 3572 ಕೋಟಿ ರೂ.ಗಳ ಮಾರ್ಪಾಡಿತ ಯೋಜನಾ ವರದಿಗೆ ಈಗಾಗಲೇ ಸರ್ಕಾರದಿಂದ ಆಡಳಿತಾತ್ಮಕ ಅನುಮೋದನೆ ದೊರೆತಿದ್ದು ,
ಈ ಯೋಜನೆಯಡಿ 6.30 ಟಿ.ಎಂ.ಸಿ .ನೀರು ಬಳಸಿಕೊಂಡು ವಿಜಯಪುರ ಜಿಲ್ಲೆಯ 28 , ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ 8 ಹಾಗೂ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ 4 ಗ್ರಾಮಗಳ ಒಟ್ಟು 1,30,225 ಎಕರೆ ಪ್ರದೇಶಕ್ಕೆ ನೀರಾವರಿ ಸೌಲಭ್ಯ ದೊರೆಯಲಿದೆ .
ಈ ಯೋಜನೆಯಡಿ ಫೇಸ್ - 1 ಹೆಡ್ವರ್ಕ್ ಕಾಮಗಾರಿಗಳಡಿ ಜಮಖಂಡಿ ತಾಲೂಕಿನ ಕವಟಗಿ ಗ್ರಾಮದ ಹತ್ತಿರ ಇಂಟೆಕ್ ಕಾಲುವೆ , ಪಂಪ್ ಹೌಸ್ ಹಾಗೂ ವಿದ್ಯುತ್ ಸ್ಥಾವರಗಳ ಕಾಮಗಾರಿಗಳು ಪೂರ್ಣಗೊಂಡಿವೆ .
ಅದರಂತೆ ಈ ಯೋಜನೆಯಡಿಯ ಡೆಲಿವರಿ ಚೇಂಬರ್ 1 ಹಾಗೂ ಡೆಲಿವರಿ ಚೇಂಬರ್ 2ರ ಕಾಮಗಾರಿಗಳು ರೈತರ ಜಮೀನುಗಳಿಗೆ ನೀರಾವರಿ ಸೌಲಭ್ಯ ದೊರೆಯಲಿದೆ .
ನಿರಂತರ ಪ್ರಯತ್ನದ ಫಲವಾಗಿ ಹಲವಾರು ಕಾಮಗಾರಿಗಳು ಪೂರ್ಣಗೊಂಡಿವೆ .
ಏರು ಕೊಳವೆ ಮಾರ್ಗ 21.84 ಕಿ.ಮೀ .ಗುರುತ್ವಾಕರ್ಷಣೆ ಕೊಳವೆ ಮಾರ್ಗ 14.76 ಕಿ.ಮೀ .ಸಹ ಪೂರ್ಣಗೊಳಿಸಲಾಗಿದೆ .
220ಕ ೆವ್ಹಿ ವಿದ್ಯುತ್ ಮಾರ್ಗ , 31.77 ಕಿ.ಮೀ .220 ಕೆವ್ಹಿ ವಜ್ರಮಟ್ಟಿ ವಿದ್ಯುತ್ ಸ್ಥಾವರದಿಂದ ಪ್ರಾರಂಭವಾಗಿ ಕವಟಗಿ ಗ್ರಾಮದ ಪಂಪ್ ಹೌಸ್ ಹತ್ತಿರ 220 ಕೆವ್ಹಿ ಸ್ಥಾವರದ ಕಾಮಗಾರಿ ಪೂರ್ಣಗೊಂಡು ಕಾರ್ಯಾರಂಭಗೊಂಡಿವೆ .
ಈ ಯೋಜನೆಯಡಿ 16500 ಹೆಚ್ ಪಿ ಸಾಮಥ್ರ್ಯದ 5 ಪಂಪ್ ಹಾಗೂ ಮೋಟಾರ್ಗಳ ಅಳವಡಿಕೆ ಪ್ರಗತಿಯಲ್ಲಿದೆ .
ಎರಡು ಪಂಪ್ ಹಾಗೂ ಮೋಟರ್ಗಳ ಅಳವಡಿಕೆ ಪೂರ್ಣಗೊಂಡಿವೆ .
ಈ ಯೋಜನೆಯಡಿಯ ಇತರೆ ಎಲ್ಲ ಕಾಮಗಾರಿಗಳನ್ನು ಶೀಘ್ರವಾಗಿ ಪೂರ್ಣಗೊಳಿಸಲು ಕಾಮಗಾರಿ ಭರದಿಂದ ಸಾಗಿದ್ದು ,
ಈ ಯೋಜನೆ ಪೂರ್ಣಗೊಂಡಲ್ಲಿ ಈ ಯೋಜನಾ ವ್ಯಾಪ್ತಿಗೆ ಬರುವ ಗ್ರಾಮಗಳು ಹಾಗೂ ಪ್ರದೇಶವು , ಮಹಾರಾಷ್ಟ್ರದ ಪುಣೆ , ಬಾರಾಮತಿ , ನಾಸಿಕಗಳಿಗಿಂತಲೂ ಅಧಿಕ ಪ್ರಸಿದ್ಧಿ ಪಡೆಯಲಿದೆ .
ಅತಿ ಎತ್ತರದ ತಿಕೋಟಾ ಹೋಬಳಿ ಮಟ್ಟದಲ್ಲಿ ಜಾರಿಯಾಗಿರುವ ರಾಷ್ಟ್ರ ಮಟ್ಟದಲ್ಲಿಯೇ ಏಕೈಕ ಯೋಜನೆ ಇದಾಗಿದೆ .