Commit 3982c763 authored by Narendra VG's avatar Narendra VG

Upload New File

parent 5fea524c
ಈ ಕಾಲಘಟ್ಟದಲ್ಲೂ ಮಹಿಳಾ ಸಬಲೀಕರಣ ಎಂಬ ಹೆಸರು ಕೇಳಬೇಕಿರುವುದು ನಮ್ಮೆಲ್ಲರ ದುರ್ದೈವ.
ಸರ್ಕಾರಗಳು ಮಹಿಳೆಯರ ಏಳಿಗೆಗೆ ಹಲವಾರು ಯೋಜನೆಗಳನ್ನು ಜಾರಿ ಮಾಡಿದ್ದರೂ ಅವು ಇನ್ನೂ ಸಂಪೂರ್ಣವಾಗಿ ಮಹಿಳೆಯರ ಮನ, ಮನೆ ತಲುಪಿಲ್ಲ.
ಇದಕ್ಕೆ ಸಾಕಷ್ಟು ನಿದರ್ಶನಗಳು ನಮ್ಮ ಮುಂದಿವೆ.
ಪುರುಷರಿಗೆ ಸೇರಿದ ಮತದಾನದಂತಹ ಮೂಲಭೂತವಾದ ಎಲ್ಲ ಹಕ್ಕುಗಳು ಮಹಿಳೆಯರಿಗೂ ಸಿಕ್ಕಿವೆ.
ಆದರೆ ಆಧುನಿಕತೆಯ ಪರದೆಯಲ್ಲಿ ಮಹಿಳೆಯು ನಾಲ್ಕು ಗೋಡೆಗಳ ಮಧ್ಯ ಸಾಮಾಜಿಕ, ಆರ್ಥಿಕ, ಧಾರ್ಮಿಕ, ರಾಜಕೀಯ,
ಶೈಕ್ಷಣಿಕ, ಮೂಢನಂಬಿಕೆ, ಸಾಮಾಜಿಕ ಅಸಮಾನತೆಯಂತಹ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾಳೆ.
ಕಾಲಾನಂತರದಲ್ಲಿ, ಮಹಿಳೆಯರು ತಮ್ಮ ಶಕ್ತಿಯನ್ನು ಅರಿತುಕೊಂಡರು.
ಅಲ್ಲಿಂದ ಮಹಿಳಾ ಸಬಲೀಕರಣಕ್ಕಾಗಿ ಕ್ರಾಂತಿ ಪ್ರಾರಂಭವಾಯಿತು.
ಬನ್ನಿ ಈ ವಿಷಯದ ಆಳ ಅಂತರಾಳವನ್ನು ಕೂಲಂಕಷವಾಗಿ ಚರ್ಚಿಸೋಣ.
ಮಹಿಳಾ ಸಬಲೀಕರಣ ಎಂದರೇನು?
ಮಹಿಳಾ ಸಬಲೀಕರಣದ ಅರ್ಥ: ಮಹಿಳೆಯರಿಗೆ ಸಾಮಾಜಿಕವಾಗಿ, ಆರ್ಥಿಕವಾಗಿ, ರಾಜಿಕೀಯವಾಗಿ, ಶೈಕ್ಷಣಿಕವಾಗಿ,ಬೌದ್ಧಿಕವಾಗಿ ಮತ್ತು ಇತರೆ ಕ್ಷೇತ್ರಗಳಲ್ಲಿ ಅಧಿಕಾರ ನೀಡುವ ಮೂಲಕ ಸ್ತ್ರೀ ಪುರುಷರೆನ್ನದೇ ಸಮಾನತೆಯಿಂದ ಕಾಣುವುದೇ
ಮಹಿಳಾ ಸಬಲೀಕರಣ ಎಂದು ಹೇಳಬಹುದು.
ಮಹಿಳಾ ಸಬಲೀಕರಣವನ್ನು ಮಹಿಳೆಯರ ಸ್ವ-ಮೌಲ್ಯದ ಪ್ರಜ್ಞೆಯನ್ನು ಉತ್ತೇಜಿಸುವುದು ಎಂದು ವ್ಯಾಖ್ಯಾನಿಸಬಹುದು.
ಅವರ ಸ್ವಂತ ಆಯ್ಕೆಗಳನ್ನು ನಿರ್ಧರಿಸುವ ಸಾಮರ್ಥ್ಯ ಹಾಗೂ ತಮ್ಮ ಮತ್ತು ಇತರರ ಸಾಮಾಜಿಕ ಬದಲಾವಣೆಯ ಮೇಲೆ ಪ್ರಭಾವ ಬೀರುವ ಹಕ್ಕನ್ನು ಇದರಲ್ಲಿ ಉಲ್ಲೇಖಿಸಬಹುದು.
ಮಹಿಳಾ ಸಬಲೀಕರಣವು ಜಗತ್ತಿನಲ್ಲಿ ಮಹಿಳೆಯರ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಸ್ಥಿತಿಯನ್ನು ಸುಧಾರಿಸಲು ಕೈಗೊಂಡ ಚಟುವಟಿಕೆಗಳನ್ನು ಸೂಚಿಸುತ್ತದೆ.
ಭಾರತವು ಆಧುನಿಕವಾಗಿ ಎಷ್ಟೇ ಮುಂದೆವರೆದರೂ ಸಹ ಹಲವಾರು ಸಾಮಾಜಿಕ ಸಂಪ್ರದಾಯಗಳು ಮಹಿಳೆಯರನ್ನ ಕಗ್ಗತ್ತಲ ಕೋಣೆಗೆ ತಳ್ಳಿವೆ.
ಹಾಗಾಗಿ ಮಹಿಳಾ ಸಬಲೀಕರಣದ ಅವಶ್ಯಕತೆ ಸಾಕಷ್ಟು ಇದೆ.
ಮಹಿಳಾ ಸಬಲೀಕರಣದ ಅವಶ್ಯಕತೆ ಏಕಿದೆ?
ಸಮಾದಲ್ಲಿ ಮಹಿಳಾ ಸಬಲೀಕರಣ ನಿಜವಾಗಿಯೂ ತುಂಬಾನೆ ಅಗತ್ಯವಿದೆ.
ಇದು ಮಹಿಳೆಯರ ಸ್ವಾಭಿಮಾನಕ್ಕೆ ಮತ್ತು ಸಮಾಜಕ್ಕೆ ಅನಿವಾರ್ಯ.
ಮಹಿಳೆಯರ ಸಬಲೀಕರಣವು ಮಹಿಳೆಯರಿಗೆ ಹಕ್ಕನ್ನು ನೀಡುವುದಾಗಿದೆ.
ಕುಟುಂಬಗಳು, ಸಮುದಾಯ ಮತ್ತು ದೇಶದ ಆರೋಗ್ಯ ಮತ್ತು ಸಾಮಾಜಿಕ ಅಭಿವೃದ್ಧಿಗೆ ಮಹಿಳೆಯರ ಸಬಲೀಕರಣವು ಅತ್ಯಗತ್ಯ.
ಮಹಿಳೆಯರು ಸುಂದರವಾದ ಜೀವನವನ್ನು ನಡೆಸಿದಾಗ ಮಾತ್ರ ಅವರ ಸಬಲೀಕರಣದ ಸಂಪೂರ್ಣ ಸಾಮರ್ಥ್ಯ ಯಶಸ್ವಿಯಾಗುತ್ತದೆ.
ನಾವು ಮಹಿಳೆಯರಿಗೆ ತಮ್ಮ ಪರವಾಗಿ ಮಾತನಾಡಲು ಮತ್ತು ಎಂದಿಗೂ ಅನ್ಯಾಯಕ್ಕೆ ಬಲಿಯಾಗದಂತೆ ಅಧಿಕಾರ ನೀಡಬೇಕಾಗಿದೆ.
ಭಾರತದ ಸಂವಿಧಾನವು ಪುರುಷರಿಗೆ ಸಮಾನವಾದ ಸ್ಥಾನಮಾನವನ್ನು ಮಹಿಳೆಗೆ ನೀಡಿದೆಯಾದೂ ಅದು ಸಂವಿಧಾನದ ಪುಟಗಳಿಗಷ್ಟೇ ಸೀಮಿತವಾಗಿದೆ ಎಂದು ಕೆಲವು ಘಟನೆಗಳೆ ಸಾಕ್ಷಿ.
ಈ ಸಮಾನತೆ ಅಸ್ತ್ರವನ್ನು ಬಳಕೆ ಮಾಡಿಕೊಂಡು ಕೆಲವಷ್ಟೇ ಮಹಿಳೆಯರು ತಮ್ಮ ಪ್ರತಿಭೆ ಅನಾವರಣ ಮಾಡಿದ್ದಾರೆ ಹೊರತು ಇನ್ನೂ ಹೆಚ್ಚಿನ ಮಹಿಳೆಯರು ಈ ವ್ಯವಸ್ಥೆಯಲ್ಲಿ ಮುಕ್ತವಾಗಿ ಹೊರಬರಲು ಸಾಧ್ಯವಾಗುತ್ತಿಲ್ಲ.
ಇವೆಲ್ಲಾ ಕಾರಣಗಳು ಮಹಿಳಾ ಸಬಲೀಕರಣದ ಅವಶ್ಯಕತೆಯನ್ನು ಎತ್ತಿ ಹಿಡಿಯುತ್ತವೆ.
ಹಾಗಾದರೆ ಇದರ ಮೂಲ ಉದ್ದೇಶ ಏನು?, ಇದು ಹೇಗೆ ಸಾಧ್ಯ ಎಂಬಿತ್ಯಾದಿ ಮಾಹಿತಿಯನ್ನು ತಿಳಿಯೋಣ.
ಮಹಿಳಾ ಸಬಲೀಕರಣದ ಮೂಲ ಉದ್ದೇಶ ಶಿಕ್ಷಣ:
ಮಹಿಳೆರಿಗೆ ಮಾತ್ರವಲ್ಲ ಪ್ರತಿಯೊಬ್ಬರಿಗೂ ಶಿಕ್ಷಣ ಅತ್ಯಾವಶ್ಯಕ.
ಇದು ಮಾನವನಾಗಿ ಹುಟ್ಟಿದ ಜೀವಿಯನ್ನು ನಿಜವಾದ ಮನುಷ್ಯನನ್ನಾಗಿ ಮಾಡುತ್ತದೆ.
ಮಹಿಳೆಯರು ಶಿಕ್ಷಣ ಪಡೆಯುವುದರಿಂದ ಎಲ್ಲರಂತೆ ದುಡಿಯಬಹುದು, ಪ್ರಶ್ನಿಸಬಹುದು, ಸಮಾನವಾಗಿ ಕೂತು ಮಾತನಾಡಬಹುದು, ಸರಿ-ತಪ್ಪುಗಳ ಬಗ್ಗೆ ವಿವರಣೆ ನೀಡಬಹುದು.
ಹೀಗೆ ಜೀವನದ ಪ್ರಮುಖ ಮೌಲ್ಯಗಳನ್ನು ಅರ್ಥಮಾಡಿಕೊಳ್ಳಬಹುದಾಗಿದೆ.
ವಿಶ್ವ ಜನಸಂಖ್ಯಾ ವರದಿಯ ಪ್ರಕಾರ ತಾಯಿಯ ಶಿಕ್ಷಣವು ತನ್ನ ಕುಟುಂಬವನ್ನು ಚಿಕ್ಕದಾಗಿ ಮತ್ತು ತನ್ನ ಮಕ್ಕಳನ್ನು ಉತ್ತಮವಾಗಿ ಬೆಳೆಸುವ ಏಕೈಕ ಪ್ರಮುಖ ಅಂಶವಾಗಿದೆ.
ಸಾಂಪ್ರದಾಯಿಕ ಜೀವನಶೈಲಿಯನ್ನೇ ಅನುಸರಿಸಿಕೊಂಡು ಬದುಕಬೇಕು ಎನ್ನುವ ಗೊಡ್ಡು ವ್ಯವಸ್ಥೆಗೆ ಶಿಕ್ಷಣವು ರಕ್ಷಣೆಯ ಮೊದಲ ಪ್ರತಿತಂತ್ರವಾಗಿದೆ.
ಲಿಂಗ ತಾರತಮ್ಯದ ನಿವಾರಣೆ:
ಇದು ಸಹ ಪ್ರಮುಖವಾದ ಅಂಶ. ಭಾರತದಲ್ಲಿ ಇಂದಿಗೂ ಈ ವ್ಯವಸ್ಥೆ ಜೀವಂತ ಇದೆ.
ಮಹಿಳೆಯರು ಎಂದರೆ ಮಕ್ಕಳನ್ನು ಹೆರುವುದಕ್ಕೆ, ಮನೆ ಕೆಲಸ ಮಾಡಿಕೊಂಡು ಮನೆಯಲ್ಲೇ ಇರುವುದಕ್ಕೆ ಎಂಬ ಕಾಲಘಟ್ಟದಲ್ಲಿ ಹಲವಾರು ಮಹಿಳೆಯರು ಅದರಿಂದ ಹೊರಬಂದು ಗಂಡಿನಷ್ಟೇ ಬಲಿಷ್ಠಳು ಎಂದು ತೋರಿಸಿಕೊಟ್ಟ ಅದೆಷ್ಟೋ ವೀರ ವನಿತೆಯರು ನಮ್ಮ ನಡುವೆ ಬಂದು ಹೋಗಿದ್ದಾರೆ.
ಮಹಿಳೆಯರು ತಮ್ಮ ಭವಿಷ್ಯವನ್ನು ಯಶಸ್ವಿಯಾಗಿ ರೂಪಿಸಿಕೊಳ್ಳಲು ಸಮಾಜದಲ್ಲಿ ಅವರಿಗೆ ಅರ್ಹವಾದ ಗೌರವ ಮತ್ತು ಸ್ಥಾನಮಾನವನ್ನು ನೀಡಬೇಕು.
ಸಬಲೀಕರಣದ ಗುರಿಯನ್ನು ಸಾಧಿಸಲು ಎಲ್ಲಾ ಹಂತಗಳಲ್ಲಿ ಮತ್ತು ಪ್ರಮುಖ ನಿರ್ಧಾರ ತೆಗೆದುಕೊಳ್ಳುವಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲು ಅವರಿಗೆ ಅವಕಾಶವನ್ನು ಒದಗಿಸಬೇಕು.
ಮಹಿಳಾ ಅಭಿವೃದ್ಧಿ ಕಾರ್ಯಕ್ರಮ, ಕಾಯಿದೆಗಳ ಅನುಷ್ಠಾನ:
ಮಹಿಳೆಯರ ಸಾಮರ್ಥ್ಯವನ್ನು ಅವರಿಗೆ ಪರಿಚಯಿಸುವದರ ಮೂಲಕ ಸ್ವಯಂ ಉದ್ಯೋಗಿಗಳನ್ನಾಗಿ ಮಾಡಬಹುದು.
ವೃತ್ತಿಪರ ಮತ್ತು ಉದ್ಯಮಶೀಲತೆ ಅಭಿವೃದ್ಧಿ ಕಾರ್ಯಕ್ರಮಗಳ ಅಡಿಯಲ್ಲಿ ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸಬೇಕು.
ಹೆಣ್ಣು ಭ್ರೂಣಹತ್ಯೆ ಮತ್ತು ಶಿಶುಹತ್ಯೆಗಳು, ಮದುವೆ, ವಿಚ್ಛೇದನ, ದತ್ತು ಸ್ವೀಕಾರ, ವರದಕ್ಷಿಣೆ ಮತ್ತು ನೈತಿಕತೆಗೆ ಸಂಬಂಧಿಸಿದ ಇತರ ಕಾನೂನುಗಳನ್ನು ಕಠಿಣಗೊಳಿಸಬೇಕು.
ಭ್ರೂಣ ಲಿಂಗ ಪತ್ತೆ, ಮಹಿಳೆಯರ ವಿಮೋಚನೆಗಾಗಿ ಲೈಂಗಿಕ ಕಿರುಕುಳದ ವಿರುದ್ಧ ರಕ್ಷಣೆ ಅಥವಾ ಕಾನೂನನ್ನು ಇನ್ನಷ್ಟು ಕಠಿಣವಾಗಿ ಜಾರಿಗೊಳಿಸಬೇಕು.
ಜಾಗೃತಿ ಕಾರ್ಯಕ್ರಮಗಳ ಆಯೋಜನೆ:
ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದ ಮಹಿಳಾ ಆಯೋಗಗಳು, 11೦೦, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಕಾರ್ಯಗಳು, ಮಹಿಳಾ ಹಕ್ಕುಗಳು, ಮಾನವ ಹಕ್ಕುಗಳ ಬಗ್ಗೆ ಜಾಗೃತಿ ಅಭಿಯಾನವನ್ನು ಕೈಗೊಳ್ಳಬೇಕು.
ಸಮೂಹ ಮಾಧ್ಯಮಗಳು ಪ್ರಭಾವ:
ಮಹಿಳಾ ಸಬಲೀಕರಣದಲ್ಲಿ ಸಮೂಹ ಮಾಧ್ಯಮಗಳ ಪಾತ್ರ ಪ್ರಮುಖವಾಗಿದೆ.
ಈ ಮೂಲಕ ಸ್ವಾಭಿಮಾನ ಮತ್ತು ಆತ್ಮ ವಿಶ್ವಾಸವನ್ನು ಹೆಚ್ಚಿಸಬಹುದು.
ಇನ್ನು ಇದೆಲ್ಲಾ ಹೇಗೆ ಸಾಧ್ಯ ಎಂಬ ಆಲೋಚನೆ ನಿಮ್ಮ ಮನದಲ್ಲಿ ಖಂಡಿತಾ ಮೂಡಿರುತ್ತದೆ.
ಬನ್ನಿ ಅದರ ಬಗ್ಗೆಯೂ ಒಂದಷ್ಟು ತಿಳಿದುಕೊಳ್ಳೋಣ.
ಮಹಿಳಾ ಸಬಲೀಕರಣ ಹೇಗೆ ಸಾಧ್ಯ?
ಮಹಿಳೆಯರನ್ನು ಸಬಲೀಕರಣಗೊಳಿಸಲು ಹಲವಾರು ಮಾರ್ಗಗಳಿವೆ.
ಅದನ್ನು ನನಸಾಗಿಸಲು ಜನ ಮತ್ತು ಸರ್ಕಾರ ಎರಡೂ ಒಗ್ಗೂಡಬೇಕು.
ಅಂತಹ ಕೆಲವು ಮಾರ್ಗಗಗಳನ್ನೂ ತಿಳಿಯೋಣ.
1.ಕಳಪೆ ಆರೋಗ್ಯ ಮತ್ತು ಯೋಗಕ್ಷೇಮದ ಕಾರಣಗಳ ಕುರಿತು ಜಾಗೃತಿ ಮೂಡಿಸುವುದು.
2.ಜೀವನೋಪಾಯಕ್ಕೆ ಕುರಿತಾದ ತರಬೇತಿ ನೀಡುವುದು.
3.ಶಿಕ್ಷಣದ ಮೂಲಕ ಅವರ ಸಂಪೂರ್ಣ ಸಾಮರ್ಥ್ಯವನ್ನು ತಲುಪುವಂತೆ ಮಾಡುವುದು.
4.ಸಾಮಾಜಿಕ ಸ್ಥಾನಮಾನದಲ್ಲಿ ಮೇಲೇರಲು ಸಮರ್ಥರನ್ನಾಗಿಸುವುದು.
5.ಶಿಕ್ಷಣ, ಅರಿವು, ಸಾಕ್ಷರತೆ ಮತ್ತು ತರಬೇತಿಯ ಮೂಲಕ ಸಬಲೀಕರಣ ಮಾಡಬಹುದು.
6.ಆರ್ಥಿಕವಾಗಿ ಸಬಲೀಕರಣಗೊಳಿಸುವ ಕಡೆಗೆ ಹೆಚ್ಚಿನ ಗಮನ ಹರಿಸಬೇಕು.
7.ಮಹಿಳೆಗೆ ಸಮಾನ ವೇತನ ನೀಡಬೇಕು.
8.ಮಹಿಳೆಯರ ಅಭಿವೃದ್ಧಿಯಲ್ಲಿ ರಾಜಕೀಯವನ್ನು ಮಾಡಬಾರದು.
9.ಮಹಿಳೆಯರ ವಿರುದ್ಧದ ಸಾವಿರಾರು ಪ್ರಕರಣಗಳು ನ್ಯಾಯಾಲಯಗಳಲ್ಲಿ ಬಾಕಿ ಉಳಿದಿವೆ. ಅವುಗಳನ್ನು ಆದಷ್ಟು ಬೇಗ ಮುಗಿಯುವಂತೆ ಮಾಡಬೇಕು.
10.ಕಲಿಯಲು ಸುರಕ್ಷಿತ ವಾತಾವರಣವನ್ನು ನಿರ್ಮಿಸಬೇಕು
ಗ್ರಾಮೀಣ ಮಹಿಳೆಯರ ಸಬಲೀಕರಣ
ಇದು ತುಂಬಾ ಗಮನಾರ್ಹ ವಿಷಯ.
ಗ್ರಾಮೀಣ ಮಹಿಳೆಯರಿಗೂ ಪಟ್ಟಣದ ಮಹಿಳೆಯರಿಗೂ ತುಂಬಾನೆ ವ್ಯತ್ಯಾಸ ಇದೆ.
ಪಟ್ಟಣದ ಮಹಿಳೆಯರ ಸಬಲೀಕರಣಕ್ಕಿಂತ ಗ್ರಾಮಿಣ ಮಹಿಳೆಯರ ಸಬಲೀಕರಣ ಪ್ರಸ್ತುತ ಕಾಲದಲ್ಲಿ ಅತ್ಯವಶ್ಯಕ.
ಅದರಲ್ಲೂ ರಾಜಕೀಯ ಹಾಗೂ ಔದ್ಯೋಗಿಕ ವಿಷಯದಲ್ಲಿ ಮಹಿಳೆಯರು ಇನ್ನೂ ಹೆಚ್ಚಾಗಿ ಸಬಲರಾಗಬೇಕಿದೆ .
ಈಗಾಗಲೇ ರಾಜಕೀಯವಾಗಿ ಕೆಲವು ಮಹಿಳೆಯರು ಮುಖ್ಯವಾಹಿನಿಗೆ ಬಂದಿದ್ದರಾದರೂ ಅವರ ಹಿಂದೆ ಪುರುಷರ ಪರೋಕ್ಷವಾಗಿ ಆಡಳಿತ ಇರುತ್ತದೆ.
ಲಿಂಗ ಸಮಾನತೆಯನ್ನು ಉತ್ತೇಜಿಸಬೇಕು.
ಯೋಗ್ಯವಾದ ಕೆಲಸವನ್ನು ನೀಡುವ ಮೂಲಕ ನಾವು ಅವರನ್ನು ಸಬಲೀಕರಣಗೊಳಿಸಬಹುದು.
ಉತ್ತಮ ಮತ್ತು ಪೌಷ್ಟಿಕಾಂಶಯುಕ್ತ ಆಹಾರ ದೊರೆಯುವಂತೆ ಮಾಡಬೇಕು.
ಗ್ರಾಮೀಣ ಭಾಗದ ಮಹಿಳೆಯರು ಹೆಚ್ಚಾಗಿ ಸಣ್ಣ ಉದ್ಯಮಗಳಲ್ಲಿ ತೊ ಡಗುತ್ತಾರೆ.
ಇದಕ್ಕೆ ಅವರಿಗೆ ಹಣಕಾಸಿನ ಸಹಾಯ ಸರ್ಕಾರದಿಂದ ದೊರೆಯಬೇಕಿದೆ.
ಜೀವನ ಕೌಶಲ್ಯಗಳಿಗೆ ಸಹಾಯ ಮಾಡುವುದು, ಪ್ರಾರಂಭಿಕ ವ್ಯವಹಾರಗಳಿಗೆ ಕಿರು-ಸಾಲಗಳನ್ನು ಒದಗಿಸುವುದು ಅಥವಾ ಮಾರ್ಗದರ್ಶನ ನೀಡುವುದರಿಂದ ಗ್ರಾಮೀಣ ಮಹಿಳೆಯರನ್ನು ಸಬಲರನ್ನಾಗಿ ಮಾಡಬಹುದಾಗಿದೆ.
ಇವೆಲ್ಲಾದರ ಜೊತೆಗೆ ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿಯೂ ಅಷ್ಟೇ ಮುಖ್ಯವಾಗಿದೆ.
ಇದರತ್ತಾ ಗಮನಕೊಡುವುದು ಬಹಳ ಅವಶ್ಯಕವಾಗಿದೆ.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಎಂದರೆ ಮಹಿಳೆಯರ ಸಾಮಾಜಿಕ, ಆರ್ಥಿಕ, ಆರೋಗ್ಯ ಮತ್ತು ಪೌಷ್ಟಿಕಾಂಶದ ಸ್ಥಿತಿಯನ್ನು ಸುಧಾರಿಸಲು ಇದು ಸಹಕಾರಿ.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯವು ಮಹಿಳೆಯರಿಗೆ ಸಂಬಂಧಿಸಿದ ವಿವಿಧ ವಿಶೇಷ ಕಾನೂನುಗಳನ್ನು ಜಾರಿಗೆ ತಂದಿದೆ.
* ಕೌಟುಂಬಿಕ ದೌರ್ಜನ್ಯದಿಂದ ಮಹಿಳೆಯರ ರಕ್ಷಣೆ ಕಾಯಿದೆ, 2005.
* ವರದಕ್ಷಿಣೆ ನಿಷೇಧ ಕಾಯಿದೆ
* ಕೆಲಸದ ಸ್ಥಳದಲ್ಲಿ ಮಹಿಳೆಯರ ಲೈಂಗಿಕ ಕಿರುಕುಳ ದೌರ್ಜನ್ಯ ತಡೆ ಕಾಯಿದೆಯನ್ನು ಜಾರಿ ತರುವುದರ ಮೂಲಕ ಸರ್ಕಾರಗಳು ಮಹಿಳೆಯ ಅಭಿವೃದ್ಧಿಗೆ ಮುಂದಾಗಿವೆ.
ಹೆಚ್ಚುತ್ತಿರುವ ಹೆಣ್ಣು ಭ್ರೂಣಹತ್ಯೆ, ಹೆಣ್ಣು ಶಿಶುಹತ್ಯೆ ಮತ್ತು ಹೆಚ್ಚಿನ ಪ್ರಮಾಣದ ಶಿಶು ಮತ್ತು ತಾಯಿಯ ಮರಣದ ವಿರುದ್ಧ ಜಾಗೃತಿ ಅಗತ್ಯ.
ಈ ನಿಟ್ಟಿನಲ್ಲಿ ಈಗಾಗಲೇ ಸರ್ಕಾಗಳು, ಎನ್ಟಿಓಗಳು ತಮ್ಮದೇ ಆತ ರೀತಿಯಲ್ಲಿ ಕೆಲಸ ಮಾಡುತ್ತಿವೆ.
* ಮಹಿಳೆಯರ ಸಾಂವಿಧಾನಿಕ ಹಕ್ಕುಗಳನ್ನು ರಕ್ಷಿಸಲು ಸಮಾನ ಸಂಭಾವನೆ ಕಾಯಿದೆ
* ಸತಿ ಆಯೋಗದ ಕಾಯಿದೆ
* ಹೆರಿಗೆ ಪ್ರಯೋಜನ ಕಾಯಿದೆ
* ವರದಕ್ಷಿಣೆ ನಿಷೇಧ ಕಾಯಿದೆ
ಇಷ್ಟೆಲ್ಲಾ ಸವಲತ್ತು ಮಹಿಳೆಯರಿಗೆ ಸಿಗುತ್ತಿದೆಯಾ?
ಎಂಬ ಬಗ್ಗೆ ನಿಮ್ಮಲ್ಲಿ ಖಂಡಿತಾ ಪ್ರಶ್ನೆ ಮೂಡಿರಬಹುದು.
ಅದಕ್ಕೂ ಸಹ ಒಂದು ವ್ಯವಸ್ಥೆ ಜಾರಿ ಮಾಡಲಾಗಿದೆ.
ಅದುವೇ ಕಾನೂನು ವ್ಯವಸ್ಥೆ.
ಈ ಮೂಲಕ ಮಹಿಳೆಯರು ತಮ್ಮ ಹಕ್ಕನ್ನು ಕೇಳಿ ಪಡೆಯಬಹುದು.
ಬನ್ನಿ ಅದರ ಬಗ್ಗೆ ಅರಿಯೋಣ.
ಮಹಿಳಾ ಸಬಲೀಕರಣದಲ್ಲಿ ಸರಕಾರದ ಪಾತ್ರ
ಭಾರತ ಸರ್ಕಾರವು ವಿಭಿನ್ನ ಯೋಜನೆಗಳು ಮತ್ತು ನೀತಿಗಳನ್ನು ಪರಿಚಯಿಸುವ ಮೂಲಕ ಮಹಿಳಾ ಸಬಲೀಕರಣವನ್ನು ಉತ್ತೇಜಿಸಲು ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದೆ.
1.ಬೆಟಿ ಬಚಾವೋ ಬೆಟಿ ಪಡಾವೊ ಯೋಜನೆ
2.ಬ್ಯಾಂಕ್ಗಳ ಸಹಕಾರದೊಂದಿಗೆ ಸರ್ಕಾರವು ಮಹಿಳೆಯರಿಗೆ ಆರ್ಥಿಕ ಸಹಕಾರ ನೀಡಿ, ಅವರನ್ನು ಅಭಿವೃದ್ಧಿಯತ್ತ ಕೊಂಡೊಯ್ಯುತ್ತಿದೆ.
3.ಮಹಿಳೆಯ ಸಬಲೀಕರಣದ ಉದ್ದೇಶದಿಂದ 1992 ರಲ್ಲಿ ರಾಷ್ಟ್ರೀಯ ಮಹಿಳಾ ಆಯೋಗವನ್ನು ರಚನೆ ಮಾಡಲಾಯಿತು.
4.1999 ರಲ್ಲಿ ಮಹಿಳೆಯರಿಗಾಗಿ ಸ್ವಸಹಾಯ ಗುಂಪುಗಳ ರಚನೆ ಮಾಡಲಾಯಿತು.
5.ಅಲ್ಲದೇ ಪ್ರತಿ ವರ್ಷ ಮಾ.8 ರಂದು ಮಹಿಳಾ ದಿನಾಚರಣೆ ಆಚರಿಸುವ ಮುಖ್ಯ ಉದ್ದೇಶವೇ ಮಹಿಳಾ ಸಬಲೀಕರಣ.
6.2001ನೇ ವರ್ಷವನ್ನು ಮಹಿಳಾ ಸಬಲೀಕರಣ ವರ್ಷವೆಂದು ಆಚರಣೆ ಮಾಡಲಾಯಿತು.
7.ಭಾಗ್ಯಲಕ್ಷ್ಮಿ ಬಾಂಡ್‌ ಯೋಜನೆ
8.ಜನನಿ ಸುರಕ್ಷಾ ಯೋಜನೆ
9.ಮೈತ್ರಿ ಯೋಜನೆ
10.ಮನಸ್ವಿನಿ ಯೋಜನೆ
ಇತ್ಯಾದಿವುಗಳನ್ನು ಸರ್ಕಾರ ಮಹಿಳೆಯರ ಅಭಿವೃದ್ಧಿಗಾಗಿ ಜಾರಿಗೆ ತಂದಿದೆ.
ಮಹಿಳಾ ಸಬಲೀಕರಣ ಯೋಜನೆಗಳು
ಪ್ರಪಂಚದಾದ್ಯಂತದ ಹಲವು ದೇಶಗಳು ಮಹಿಳಾ ಸಬಲೀಕರಣಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳಿಗೆ ಹೆಚ್ಚೆಚ್ಚು ಒತ್ತು ನೀಡುತ್ತಿವೆ.
ಮಹಿಳೆಯರ ಮೇಲಿನ ತಾರತಮ್ಯ ಮತ್ತು ದೌರ್ಜನ್ಯವನ್ನು ತಡೆಯಲು ಹಲವಾರು ಯೋಜನೆಗಳನ್ನು ಜಾರಿಗೆ ತಂದಿವೆ.
ಹೀಗಾಗಿ, ಭಾರತ ಸರ್ಕಾರವು ಮಹಿಳಾ ಸಬಲೀಕರಣಕ್ಕೆ ಸಂಬಂಧಿಸಿದ ಕೆಲವು ಸಮಸ್ಯೆಗಳನ್ನು ಗುರುತಿಸಿ, ಕೆಲವು ಕಾರ್ಯಕ್ರಮಗಳನ್ನು ಪ್ರಾರಂಭಿಸಿದೆ.
ಅವುಗಳಲ್ಲಿ ಕೆಲವೆಂದರೆ:
* ಬೆಟಿ ಬಚಾವೋ ಬೆಟಿ ಪಡಾವೊ ಯೋಜನೆ: ಹರಿಯಾಣದಲ್ಲಿ ಭಾರತದ ಪ್ರಧಾನ ಮಂತ್ರಿಯವರು 22 ನೇ ಜನವರಿ 2015 ರಂದು ಇದನ್ನು ಪ್ರಾರಂಭಿಸಿದರು.
* ಕೆಲಸ ಮಾಡುವ ಮಹಿಳೆಯರಿಗೆ ಸುರಕ್ಷಿತ ವಸತಿ ಮತ್ತು ಪರಿಸರವನ್ನು ನೀಡುವ ಸಲುವಾಗಿ ವರ್ಕಿಂಗ್‌ ವುಮೆನ್‌ ಹಾಸ್ಟೆಲ್‌ ಗಳನ್ನು ಪ್ರಾರಂಭಿಸಲಾಗಿದೆ.
* OSC ಯನ್ನು ಏಪ್ರಿಲ್‌ 2015 ರಲ್ಲಿ ಪ್ರಾರಂಭಿಸಲಾಯಿತು.
* ಸಾರ್ವಜನಿಕ ಅಥವಾ ಖಾಸಗಿ ಸ್ಥಳದಲ್ಲಿ ದೌರ್ಜನ್ಯಕ್ಕೆ ಒಳಗಾದ ಮಹಿಳೆಯರಿಗೆ ನೆರವು ಮತ್ತು ಬೆಂಬಲ ನೀಡಲು ಇದನ್ನು ಆರಂಭಿಸಲಾಗಿದೆ.
* IRDP - ಸಮಗ್ರ ಗ್ರಾಮೀಣ ಅಭಿವೃದ್ಧಿ ಯೋಜನೆ.
* ಮಹಿಳಾ ಇ-ಹಾತ್‌.
1.ಸ್ತ್ರೀವಾದದ ಅರ್ಥ ಮಹಿಳೆಯರನ್ನು ಬಲಪಡಿಸುವುದು ಎಂದಲ್ಲ, ಮಹಿಳೆಯರು ಈಗಾಗಲೇ ಬಲಶಾಲಿಯಾಗಿದ್ದಾರೆ, ಆದರೆ ಜಗತ್ತು ಆ ಶಕ್ತಿಯನ್ನು ಗ್ರಹಿಸುವ ವಿಧಾನ ಬದಲಾಯಿಸಬೇಕು .
2.ಮನೆಯಿಂದಲೇ ಪುರುಷ ಪ್ರಾಧಾನ್ಯತೆ ಪ್ರಾರಂಭವಾಗುತ್ತದೆ.
ಕಾಲೇಜುಗಳಲ್ಲಿ ಹುಡುಗಿಯರ ಸಂಖ್ಯೆ ಕಡಿಮೆ ಇರುವುದರಿಂದ ರಾಜಕೀಯದಲ್ಲಿ ಕಡಿಮೆ ಮಹಿಳೆಯರಿದ್ದಾರೆ.
ಆರ್ಥಿಕ ಸಶಕ್ತತೆಯಿಂದ ಮಹಿಳಾ ಸಬಲೀಕರಣ ಸಾಧ್ಯ - ಸುಷ್ಮಿತಾ ದೇವ್‌
ಮಹಿಳಾ ಸಬಲೀಕರಣವಿಲ್ಲದೆ ಯಾವುದೇ ದೇಶವು ಸಂಪೂರ್ಣವಾಗಿ ಅಭಿವೃದ್ಧಿ ಹೊಂದಲು ಸಾಧ್ಯವಿಲ್ಲ.
ಮಹಿಳಾ ಸಬಲೀಕರಣವು ಮಹಿಳೆಗೆ ಹೆಚ್ಚು-ಹೆಚ್ಚು ವಿಷಯಗಳನ್ನು ಕಲಿಯಲು ಮತ್ತು ಆಕೆ ಜೀವನದಲ್ಲಿ ಬಲಶಾಲಿಯಾಗಲು ಸಹಾಯ ಮಾಡುತ್ತದೆ.
ಮಹಿಳೆಯ ಸಬಲೀಕರಣ ಕೇವಲ ಸರಕಾರದ ಹೊಣೆಯಲ್ಲ ಸಮಾಜದ ಪ್ರತಿಯೊಬ್ಬ ವ್ಯಕ್ತಿಯ ಹೊಣೆಯಾಗಿದೆ.
ಮಹಿಳೆ ಅಬಲೆ ಅಲ್ಲ ಸಬಲೆ ಎಂಬುದನ್ನು ಎತ್ತಿಹಿಡಿಯಬೇಕಾಗಿದೆ.
ತೊಟ್ಟಿಲನ್ನು ತೂಗುವ ಕೈಯೊಂದು ಜಗತ್ತನ್ನು ತೂಗಬಲ್ಲದು ಎಂಬ ಮಾತು ಸತ್ಯ ಎಂಬುದನ್ನು ನಾವು ನಿರೂಪಿಸಬೇಕಿದೆ.
Markdown is supported
0% or
You are about to add 0 people to the discussion. Proceed with caution.
Finish editing this message first!
Please register or to comment