Commit 6747a5cf authored by Narendra VG's avatar Narendra VG

Upload New File

parent 408d239b
ಸುಕನ್ಯಾ ಸಮೃದ್ಧಿ ಖಾತೆ ಹೆಣ್ಣು ಮಕ್ಕಳ ಆರ್ಥಿಕ ಅಭಿವೃದ್ಧಿಗಾಗಿ ಹಾಗು ಅವರ ಭವಿಷ್ಯದ ವಿದ್ಯಾಭ್ಯಾಸ , ವಿವಾಹದಂತಹ ಖರ್ಚು ವೆಚ್ಚಗಳ ವಿಚಾರದಲ್ಲಿ ಪೋಷಕರಿಗೆ ನೆರವಾಗಲು , ಉಳಿತಾಯ ಖಾತೆಯನ್ನು ತೆರೆಯುವ , ಭಾರತ ಸರ್ಕಾರದ ಒಂದು ಯೋಜನೆಯಾಗಿದೆ .
ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಬೇಟಿ ಬಚಾವೋ , ಬೇಟಿ ಪಡಾವೋ ಆಂದೋಲನದ ಭಾಗವಾಗಿ , ಈ ಯೋಜನೆ ತಯಾರು ಮಾಡಿ ಜನವರಿ ೨೨ ೨೦೧೫ ರಂದು ಲೋಕಾರ್ಪಣೆಗೊಳಿಸಿದರು .
ಈ ಯೋಜನೆಯ ಫಲಾನುಭವಿಗಳು ಸದ್ಯ ಖಾತೆಯಲ್ಲಿನ ತಮ್ಮ ಹಣಕ್ಕೆ ೮.೬ % ಬಡ್ಡಿಯನ್ನು ಪಡೆಯುತ್ತಿದ್ದು ತೆರಿಗೆ ಉಳಿತಾಯಕ್ಕೂ ಸಹಕಾರಿಯಾಗಿದೆ .
ಸುಕನ್ಯಾ ಸಮೃದ್ಧಿ ಯೋಜನೆ ಖಾತೆಯನ್ನು ಹೆಣ್ಣು ಮಗು ಹೊಂದಿರುವ ಪಾಲಕರು ಸೂಕ್ತ ಧಾಖಲೆಗಳೊಂದಿಗೆ ಭಾರತದ ಯಾವುದೇ ಅಂಚೆ ಕಛೇರಿ ಅಥವಾ ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿ ತೆರೆಯಬಹುದು .
೨೦೧೫ ರ ಜನವರಿ ೨೨ ರಂದು ಪ್ರಧಾನಿ ನರೇಂದ್ರ ಮೋದಿಯವರು ಈ ಯೋಜನೆಯನ್ನು ಹರಿಯಾಣದ ಪಾಣಿಪತ್ ನಲ್ಲಿ ಲೋಕಾರ್ಪಣೆಗೊಳಿಸಿದರು .
ಭಾರತದ ಯಾವುದೇ ಅಂಚೆ ಕಛೇರಿ ಹಾಗು ಕೆಲವು ಅಂಗೀಕೃತ ಬ್ಯಾಂಕ್ ಗಳಲ್ಲಿ ಖಾತೆ ತೆರೆಯಲು ಅವಕಾಶವಿದೆ .
ಯೋಜನೆ ಆರಂಭವಾದ ಸಮಯದಲ್ಲಿ ಬಡ್ಡಿಯ ದರ ಶೇ.೯.೧ ರಷ್ಟಿತ್ತು ನಂತರ ಶೇ.೯.೨ ಆಯಿತು .
ಆಯಾದ್ರೆ ೨೦೧೬ - ೧೭ ಆರ್ಥಿಕ ವರ್ಷದಿಂದ ಬಡ್ಡಿಯು ೮.೬ % ದರದಲ್ಲಿದೆ .
ಹೆಣ್ಣು ಮಗು ಹುಟ್ಟಿದಂದಿನಿಂದ ಅದಕ್ಕೆ ಹತ್ತು ವರ್ಷ ತುಂಬುವ ವರೆಗೆ ಯಾವಾಗ ಬೇಕಾದರೂ ಸುಕನ್ಯ ಸಮೃದ್ಧಿ ಯೋಜನೆಯ ಖಾತೆ ತೆರೆಯಬಹುದು .
ಒಂದು ಮಗುವಿಗೆ ಕೇವಲ ಒಂದೇ ಖಾತೆ ತೆರೆಯಲು ಅವಕಾಶವಿದೆ .
ಅವಳಿ ಜವಳಿ ಹೆಣ್ಣು ಮಕ್ಕಳಾದ ಸಂಧರ್ಭಗಳಲ್ಲೂ ಒಂದೊಂದು ಮಗುವಿಗೂ ಒಂದು ಖಾತೆ ಹೊಂದಲು ಅವಕಾಶವಿದೆ .
ತೆರೆಯಲಾದ ಖಾತೆಯನ್ನು ಭಾರತದಾದ್ಯಂತ ಯಾವ ಸ್ಥಳಗಳಿಗಾದರೂ ವರ್ಗಾವಣೆ ಮಾಡಿಕೊಳ್ಳಬಹುದಾಗಿದೆ .
ಖಾತೆ ತೆರೆದ ನಂತರ ಪೋಷಕರು ಕನಿಷ್ಠ ಪ್ರತೀ ವರ್ಷ ಒಂದು ಸಾವಿರ ರೂಪಾಯಿಗಳನ್ನು ಖಾತೆಗೆ ತುಂಬಬೇಕು .
ಗರಿಷ್ಠ ರೂ.೧ , ೫೦ , ೦೦೦ ಗಳನ್ನು ಖಾತೆಗೆ ತುಂಬಬಹುದು .
ಕನಿಷ್ಠ ೧೦೦೦ ರೂಪಾಯಿಗಳಿಗಿಂತ ಕಡಿಮೆ ಹಣವನ್ನು ತುಂಬಿದರೆ ಅಥವಾ ಆ ವರ್ಷ ಖಾತೆಗೆ ಹಣವೇ ತುಂಬದಿದ್ದ ಪಕ್ಷದಲ್ಲಿ ರೂ.೫೦ ದಂಡವನ್ನಾಗಿ ಪಾವತಿಸಬೇಕು .
ಹೆಣ್ಣು ಮಗು ಹತ್ತು ವರ್ಷ ಪೂರೈಸಿದ ನಂತರ ಆಕೆಯೇ ಆ ಖಾತೆಯನ್ನು ನಿಭಾಯಿಸಬಹುದು .
ಹೆಣ್ಣು ಮಗುವಿಗೆ ಹದಿನೆಂಟು ವರ್ಷಗಳು ತುಂಬಿದ ಬಳಿಕ ಖಾತೆಯಲ್ಲಿ ಇರುವ ಹಣದ ೫೦ % ಹಣವನ್ನು ಶೈಕ್ಷಣಿಕ ಖರ್ಚುಗಳಿಗೆ ಪಡೆಯಲು ಅವಕಾಶವಿದೆ .
ಈ ಖಾತೆಯು ಹೆಣ್ಣು ಮಗುವಿಗೆ ಇಪ್ಪತ್ತೊಂದು ವರ್ಷಗಳು ತುಂಬಿದಾಗ ಪರಿಪೂರ್ಣವಾಗುತ್ತದೆ .
ಆಗ ಆ ಖಾತೆಯನ್ನು ಮುಕ್ತಾಯ ಮಾಡಬೇಕು .
ಮುಕ್ತಾಯ ಮಾಡದಿದ್ದ ಪಕ್ಷದಲ್ಲಿ ಆ ಖಾತೆಯಲ್ಲಿರುವ ಹಣಕ್ಕೆ ಮುಂದೆ ಯಾವುದೇ ಬಡ್ಡಿಯನ್ನು ನೀಡಲಾಗುವುದಿಲ್ಲ .
ಹೆಣ್ಣು ಮಗುವಿಗೆ ಹದಿನೆಂಟು ವರ್ಷ ತುಂಬಿದ್ದು ಮದುವೆಯಾಗಿಹೋದರೆ ಆ ಮಗುವಿನ ಖಾತೆಯನ್ನು ಮುಕ್ತಾಯ ಮಾಡಬಹುದು .
ಸುಕನ್ಯ ಸಮೃದ್ಧಿ ಯೋಜನೆಯ ಘೋಷಣೆಯ ಆರಂಭದಲ್ಲಿ ಸೆಕ್ಷನ್ ೮೦ಸ ಿ ಆದಾಯ ತೆರಿಗೆ ಕಾಯ್ದೆ ಪ್ರಕಾರ ಕೇವಲ ಖಾತೆಯಲ್ಲಿ ಜಮೆಯಾದ ಹಣಕ್ಕೆ ಮಾತ್ರ ತೆರಿಗೆ ವಿನಾಯಿತಿ ಕೊಡುವುದಾಗಿ ಘೋಷಣೆಯಾಗಿತ್ತು .
ಆದರೆ ೨೦೧೫ ರ ಕೇಂದ್ರ ಬಜೆಟ್ ಮಂಡನೆಯಲ್ಲಿ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಯವರು ಖಾತೆಯಲ್ಲಿರುವ ಹಣಕ್ಕೆ ಸಂದಾಯವಾಗುವ ಬಡ್ಡಿಗೂ ಆದ್ಯ ತೆರಿಗೆಯಿಂದ ವಿನಾಯಿತಿ ಕೊಟ್ಟಿರುವುದಾಗಿ ಘೋಷಣೆ ಮಾಡಿದ್ದಾರೆ .
ಏಪ್ರಿಲ್ ೧ ೨೦೧೫ರ ನಂತರ ಈ ತಿದ್ದುಪಡಿ ಅನುಷ್ಠಾನವಾಗಿದೆ .
ಭೇಟಿ ಬಚಾವೋ , ಭೇಟಿ ಪಡಾವೋ ಆಂದೋಲನದಿ ಫೈನಾನ್ಸಿಯಲ್ ಎಕ್ಸ್ಪ್ರೆಸ್ ಪತ್ರಿಕೆಯ ವರದಿ.
ದಿ ಇಂಡಿಯನ್ ಎಕ್ಸ್ಪ್ರೆಸ್ ಪತ್ರಿಕೆಯ ವರದಿ.
ಸುಕನ್ಯ ಸಮೃದ್ಧಿ ಯೋಜನೆಯ ವೆಬ್ಸೈಟ್.
Markdown is supported
0% or
You are about to add 0 people to the discussion. Proceed with caution.
Finish editing this message first!
Please register or to comment